Categories
ರಚನೆಗಳು

ತಂದೆ ಮುದ್ದುಮೋಹನ ವಿಠಲರು

ಶಿಷ್ಯೆಯನ್ನು ಉದ್ದೇಶಿಸಿ
೧೩
ಗುರುವಿನ ಮರೆಯಾದಿರಮ್ಮ ಪ
ಅಂಕಿತವನೆ ಇತ್ತಸಿರಿ ಗುರುವಿನ ನೀನು
ಮನದೊಳು ನೆನೆಯಬೀಕಮ್ಮ ತಂಗಿ ಅ.ಪ
ಗುರುವಿನ ಮರೆತರೆ ನಿನಗೆ ಥರಥರ ನರಕ
ಥರಥರನರಕವ ಅನುಭವಿಸಬೇಕಮ್ಮ ತಂಗೀ ೧
ಜ್ಞಾನಾನಂದಾತ್ಮಕನಾದ ಶ್ರೀಹರಿಯನ್ನು ಗುರು
ವಿನದ್ವಾರಾ ನೀ ತಿಳಿ ಮಂಗಳಾಂಗಿ ೨
ಗುರುವೆ ತಂದೆಯು ಬಂಧು ಬಳಗಾವೆಂದು ಅ
ಕ್ಕರೆಯಿಂದ ನೀ ನೆನೆಯಬೇಕಮ್ಮಾ ೩
ಗುರುವಿನ ಸೇವೆಯ ಮಾಡುತ್ತ ಗುರುಗಳ
ಕೃಪೆಗೆ ಪಾತ್ರರಾಗಿ ಬಾಳಬೇಕಮ್ಮಾ ೪
ಮಂಗಳ ಮಹಿಮ ಶ್ರೀ ತಂದೆಮುದ್ದುಮೋಹನ್ನವಿಠಲ ದಾಸರೆ
ನಿನಗೆ ಸದ್ಗುರು ಎಂದು ತಿಳಿಯಮ್ಮ ತಂಗಿ
ಈ ಮಾತು ಪುಸಿಯಲ್ಲ ಮರೆಯಬೇಡಮ್ಮ ತಂಗೀ ೫

ಪರಮಾತ್ಮನ ಅನುಗ್ರಹಪಡೆಯಬೇಕಾದರೆ
೧೪
ನಿಜವಿರಬೇಕು ಸಜ್ಜನರಿಗೆ ಒಂದು ಪ
ಅಜಜನಕಾನೆ ಈ ತ್ರಿಜಗಕೆ ಒಡೆಯನೆಂದು ಅ.ಪ
ಉದಯಾಸ್ತಮಾನ ಮಾಡುವ ವ್ಯಾಪಾರವು
ಪದುಮಾಕ್ಷ ಕೃಷ್ಣನ ಸೇವೆಯೆಂದು
ಸುದತಿಯೊಡನೆ ಕೂಡಿ ಮಧುರ ಮಾತುಗಳಾಡಿ
ಮಧುವೈರಿ ಚರಿತೆಯ ಮುದದಿ ಕೇಳುವಂಥ ೧
ಮಡದಿ ಮಕ್ಕಳು ತನ್ನ ಒಡಹುಟ್ಟಿದವರೆಲ್ಲ
ಒಡೆಯನ ಅಡಿಗೆ ಸೇವಕರು ಎಂದು
ದೃಢದಿ ತಿಳಿದು ಮೃಡನೊಡೆಯನ ಪಾದವ
ಬಿಡದೆ ಭಜಿಸುವಂಥ ದೃಢ ಬುದ್ಧಿ ಎಂಬುವ೨
ಮಾತಾಪಿತರು ಸುತ ಭ್ರಾತರಿಷ್ಟಾಬಂಧು
ವ್ರಾತ ರೆಲ್ಲರು ಹರಿಗೆ ದೂತರೆಂದು
ಮಾತುಳಾಂತಕ ತಂದೆಮುದ್ದುಮೋಹನವಿಠಲ
ಖ್ಯಾತಾನೆಂದು ಪ್ರೀತಿ ಪೊಂದುವುದಕ್ಕೆ ೩

ಒಬ್ಬ ಪತಿವ್ರತಾಸ್ತ್ರೀಯು
೧೫
ಪತ್ಯಂತರ್ಗತ ನಾರಸಿಂಹ ಎನುತಾ
ಸಕ್ತಿಯಿಂ ಜಪಿಸಬೇಕಮ್ಮ ಪ
ಬತ್ತಿಯ ಮಾಳ್ಪಾಗ ಬಾಲರಾಡಿಸುವಾಗ
ಪ್ರತ್ಯಾಹದಲಿ ಗೃಹ ಕೃತ್ಯವಾಚರಿಸುವಾಗಅ.ಪ
ಪೊಡವಿಯೊಳ್ ನರಜನ್ಮಪಡೆದೂ ಕೆಟ್ಟ
ನಡತೆಯವರ ಕೂಟ ಮರೆದೂ
ದೃಢ ಭಕ್ತಿಯಿಂ ಲಜ್ಜೆ ತೊರೆದೂ
ನುಡಿನುಡಿಗ್ಹರಿ ಎಂದು ಬಾಯ್ದೆರೆದು
ಅಡುಗೆಯ ಮಾಡಿ ಕಾರೊಡೆಯಗರ್ಪಿಸುವಾಗ
ಒಡೆಯಾದಿಗಳಿಗನ್ನ ಬಡಿಸುವಾಗಲು ನಿತ್ಯ ೧
ಪತಿದೈವವೆಂದು ಭಾವಿಸುವ ಸತಿ
ಗತಿಶಯ ಗತಿಸಲ್ಲಿಸುವ
ಪತಿತರ ಪಾವನ ಗೈವ ಲಕ್ಷ್ಮೀ
ಪತಿಯೆ ಸದ್ಭಕ್ತರ ಕಾವ
ಅತಿಹಿತದಿಂದ ಸಂತತ ಹರಿದಾಸರಿ
ಗತಿಸೇವಾರತಿಯಿಂದ ಕೃತಕೃತ್ಯಳಾಗುತ ೨
ಪದ್ಮಸಂಭವೆ ಪದ್ಮಜಾತ ವಾತ
ಪದ್ಮಜ ವಲ್ಲಭ ಎನುತ
ಕದ್ರುಜ ರುದ್ರಾದಿ ವಿನುತ ತಂದೆ
ಮುದ್ದುಮೋಹನ ವಿಠಲ ನೀತಾ
ಅದ್ವಿತೀಯನು ಎಂದು ಬುದ್ಯಾದಿಂದ್ರಿಯದಲ್ಲಿ
ನಿದ್ರೆಯೊಳದರು ನೀ ಮರೆಯ ಬ್ಯಾಡ ೩

ಇದು ಚೂರ್ಣಿಕೆ

ಚೂರ್ಣಿಕೆ
ಶ್ರಿ ಹರಿಯೇ ನಿನ್ನುಪಕೃತಿಯು ಮರೆಯದಂತಿರಿಸೆಮ್ಮ
ಉರಗಾಧಿಶಯನಾ ಕೃಷ್ಣಾ ದ್ವಿಜರಾಜಗಮನಾ
ಕಾಳಿಯ ದಮನಾ ಭುವನತ್ರಯಾಕ್ರಮಣ
ಪದ್ಮಾಲಯಾ ರಮಣ ೧
ಧನದಮಾತಿರಲಿ ಗೋಧನದ ಮಾತಿರಲಿ
ಭೂ ಧನದ ಮಾತಿರಲಿ ಶೌರೀ
ಧನವೆಲ್ಲವೂ ಕರ್ಮವನು ಬೆನ್ಹಿಡಿದು
ಬಹದೆನುತಾಡುವರೊ ಮುರಾರಿ
ತನುವು ನಿನ್ನಯ ಸೇವೆಯನು ಮಾಡುತಿರಲಿ ಕಂಸಾರಿ
ಮನವು ನಿನ್ನಯರೂಪವನು ನೆನೆಯುತಿರಲಿ ದುರಿತಾರಿ
ಈ ಕೃಪೆಯಭೂರೀ ದುರ್ಜನವಿದಾರೀ
ಸುಜನೋಪಕಾರೀ ಗಿರಿನಾಥ ಧಾರೀ
ಪಾಪಹಾರಿ ದಿತಿಜಾರಿ ನಿರ್ವಿಕಾರಿ ಉದಾರಿ ೨
ನಾಕದೊಳಗಿರಲಿ ಭೂಲೋಕದೊಳಗಿರಲಿ
ಅಧೋಲೋಕದೊಳಗಿರಲಿ ನಾನೂ
ಶ್ರೀಕಾಂತ ನಿನಗೆ ಬೇಕಾದವನೆನುತ್ತ
ಸಾಕಬೇಕೆನ್ನ ನೀನೂ ಭಕ್ತಜನಕಾಮಧೇನು
ಹೇಳಬೇಕಾದುದಿನ್ನೇನು ೩
ಬಿದ್ದಿರುವೆನೈ ರಜೋಗುಣದಿ
ಒದ್ಯಾಡುತಿಹೆನೊ ಸಂಕಟದಿ
ಇದ್ದು ಫಲವೇನೊ ಈ ಭವದಿ
ಉದ್ಧರಿಸು ಕೃಪಾಜಲಧಿ ೪
ಬದ್ಧನಾನಯ್ಯ ಈ ಜಗದಿ
ಶುದ್ಧಬುದ್ಧಿಯ ನೀಯೊ ಮುದದಿ
ಕೃದ್ಧನಾಗದಿರೆನ್ನ ದುಷ್ರ‍ಕತದಿ
ಎದ್ದು ಬಾರೆನ್ನಡಿಗೆ ದಯದಿ
ಶ್ರೀ ತಂದೆಮುದ್ದುಮೋಹನ್ನವಿಠಲ ಭಾಗ್ಯನಿಧಿ ೫

ಶ್ರೀ ಮನ್ನಾರಾಯಣನ

ಶ್ರೀ ಗೋವಿಂದ ಭಜನಾವಳಿ
ಶ್ರೀ ನಾರಾಯಣ ಜಯಗೋವಿಂದ
ಸದ್ಗುರು ಸಿಂಧೋ ಜಯಗೋವಿಂದ
ವೈಕುಂಠಾಲಯ ಜಯಗೋವಿಂದ
ಆಶ್ರಿತಬಂಥೋ ಜಯಗೋವಿಂದ
ಲಕ್ಷ್ಮೀನಾಯಕ ಜಯಗೋವಿಂದ
ದೋಷವಿದೂರ ಜಯಗೋವಿಂದ
ಬ್ರಹ್ಮೇಶಾರ್ಚಿತ ಜಯಗೋವಿಂದ
ಮತ್ಸ್ಯಶರೀರ ಜಯಗೋವಿಂದ
ಕಚ್ಛಪರೂಪೀ ಜಯಗೋವಿಂಞ್
ಮ್ಲೇಂಛ ಕುಠಾರ ಜಯಗೋವಿಂದ
ಆದಿವರಾಹ ಜಯಗೋವಿಂದ
ಚಿನ್ಮಯ ದೇಹ ಜಯಗೋವಿಂದ
ಶ್ರೀ ನರಸಿಂಹ ಜಯಗೋವಿಂದ
ವೇದಸುವೇದ್ಯ ಜಯಗೋವಿಂದ
ವಾಮನರೂಪೀ ಜಯಗೋವಿಂದ
ವೆಂಕಟನಾಥ ಜಯಗೋವಿಂದ
ಭಾರ್ಗವರಾಮಾ ಜಯಗೋವಿಂದ
ವೃದ್ಧಿವಿನೋದ ಜಯಗೋವಿಂದ
ರಾವಣ ಶತ್ರು ಜಯಗೋವಿಂದ
ಸಪ್ತಗಿರೀಶ ಜಯಗೋವಿಂದ
ರಾಕ್ಷಸ ಶತ್ರು ಜಯಗೋವಿಂದ
ಅದ್ಭುತಚರ್ಯ ಜಯಗೋವಿಂದ
ಗೋಕುಲಚಂದ್ರ ಜಯಗೋವಿಂದ
ನಾರದಗೇಯಾ ಜಯಗೋವಿಂದ
ಸೀತೆಸಹಾಯ ಜಯಗೋವಿಂದ
ಮಾರುತಿ ಸೇವ್ಯ ಜಯಗೋವಿಂದ
ಬುದ್ಧಶರೀರ ಜಯಗೋವಿಂದ
(ಕಲ್ಕ್ಯಾವತಾರ) ಜಯಗೋವಿಂದ
ಕೇಶವವಿಷ್ಣೋ ಕೃಷ್ಣಮುಕುಂದ
ವಾರಿಜನಾಭ ಶ್ರೀಧರ ರೂಪ
ತಾಕ್ಷ್ರ್ಯತುರಂಗ ಶ್ರೀದಶುಭಾಂಗ
ಸಜ್ಜನ ಸಂಗೇ ಚಂಚಲಪಾಂಗ
ದುರ್ಜನ ಭಂಗಂ ಸಜ್ಜನ ಸಂಗಂ
ದೇಹಿಸದಾಮೇ ದೇವವರೇಣ್ಯ
ಪಾಪವಿನಾಶಂ ಪುಣ್ಯಸಮೃದ್ಧಿಂ
ಕಾಯವಿರಕ್ತಿ ಕರ್ಮಸುರಕ್ತಿಂ
ಪಾದಯುಗೇತೇ ಪಾವನದಾಸ್ಯಂ
ನಿರ್ಮಲ ಭಕ್ತಿಂ ನಿಶ್ಚಲಬುದ್ಧಿಂ
ನಿಸ್ತುಲ ಸೇವಾಂ ದೇಹಿ ಸದಾಮೇ
ದೇವನಮಸ್ತೇ
ಪ್ರಸ್ತುತಿ ದಿವ್ಯಂ ಸ್ವೀಕುರು ತಂದೆ
ಮುದ್ದೂ ಮೋಹನ ವಿಠಲಂ ವಂದೇ

ಶ್ರೀ ಹರಿನಾಮಸ್ಮರಣೆಯ
ಆತ್ಮನಿವೇದನೆ

ಉಗಾಭೋಗ
ಅಪ್ಪಾನನಾಮವನು
ಒಪ್ಪೊತ್ತಾದರು ಭಜಿಸಿ
ಒಪ್ಪೊತ್ತುಂಬೇನಯ್ಯ
ತಂದೆಮುದ್ದುಮೋಹನವಿಠಲಾ


ಉಗಾಭೂೀಗ
ಎನ್ನೊಡೆಯನೆ ಹನುಮ
ಹನುಮನೇಎನ್ನೊಡೆಯ
ಘನ್ನ ಕದರುಮಂಡಲಗಿ ಹನುಮಯ್ಯ
ಎನ್ನ ಒಡೆಯ
ಎನ್ನಯ್ಯ ಶ್ರೀ ತಂದೆ
ಮುದ್ದುಮೋಹನವಿಠಲಭಕ್ತ
ಘನ್ನ ಹನುಮಯ್ಯನೇ ಎನ್ನ ಒಡೆಯಾ

ಕಲಿ, ಕಲಹಗಳ
ಲೋಕನೀತಿ
೧೧
ಉಗಾಭೋಗ
ಕಲಿಇಲ್ಲದ ಸ್ಥಳವಿಲ್ಲ
ಕಲಹವಿಲ್ಲದ ಮನೆ ಇಲ್ಲ
ಕಲಿಭಂಜನ ಭೀಮನೋಡೆಯ
ತಂದೆಮುದ್ದುಮೋಹನವಿಠಲ ಬಲ್ಲ

ಗುರುವಿನ ಮಹತ್ವವನ್ನು ಹೇಳಿದ್ದಾರೆ.
೧೨
ಉಗಾಭೋಗ
ಗುರುಲೀಲೆಯನ್ನು ಪಾಡುತ್ತ
ಹರಸುರಬ್ರಹ್ಮಾದಿಗಳು
ಲಕುಮೀಪತಿಯ ಕೂಗುವರೈಯಾ
ತಂದೆಮುದ್ದುಮೋಹನವಿಠಲಾ

ತಮಗೆ ಎಂದೆಂದಿಗೂ ಅಹಂಕಾರ

ಉಗಾಭೋಗ
ನಾನು ನನ್ನದು ಎಂಬುದಾವ ಕಾಲಕುಬೇಡ
ನೀನು ನಿನ್ನದು ಎಂಬ ದಿವ್ಯಮಂತ್ರವೇ ಇರಲಿ
ಅನುಗಾಲನುಡಿಸಿದನು ಎನ್ನಿಂದ
ಶ್ರೀ ತಂದೆಮುದ್ದುಮೋಹನವಿಠಲಾ

‘ಪರಮಪ್ರಿಯ’ ರೆಂದು

ಉಗಾಭೋಗ
ಪರಮಪ್ರಿಯನೇ ಗುರುವೆಂದ ಮಾತ್ರದಿಂ
ವರ ತಂದೆಮುದ್ದುಮೋಹನವಿಠಲ ಒಲಿವ
ಕರಿಗಿರಿ ಯಾತ್ರೆಮಾಡದವ ಭವ
ಕರಿಕರಿಯ ಪಡುವ
ತಂದೆಮುದ್ದುಮೋಹನವಿಠಲ

ಶ್ರೀ ಲಕ್ಷ್ಮೀ ನಾರಾಯಣನನ್ನು
ಭಗವಂತನ ಸಂಕೀರ್ತನೆ

ಉಗಾಭೋಗ
ಮಾಪತೇ ಶ್ರೀ ಪತೇ
ತಂದೆ ಮುದ್ದುಮೋಹನ್ನ ವಿಠಲ
ಭೂಪತೇ ಮಾಂಪಾಹಿ ರಮಾಪತೇ

ತಾವು ಶ್ರೀವಿಠಲನ ದಾಸರೆಂದು

ಉಗಾಭೋಗ
ರಾಮಕೃಷ್ಣ ಹರಿ ವಿಠಲ
ರಾಮಕೃಷ್ಣ ನರಹರಿ ವಿಠಲ
ತಂದೆ ಮುದ್ದುಮೋಹನ ವಿಠಲ
ದಾಸೋಹಂ ತವದಾಸೋಹಂ

ಶ್ರೀ ರಾಮಕೃಷ್ಣಾದಿ ನಾಮಗಳ

ಉಗಾಭೋಗ
ಶ್ರೀ ರಾಮನಾಮಕೆ ಸರಿ ಇಲ್ಲ
ಶ್ರಿ ಕೃಷ್ಣನಾಮಕೆ ಬೆಲೆ ಇಲ್ಲ
ಶ್ರೀ ನರಹರಿನಾಮಕೆ ಮಿಗಿಲಿಲ್ಲ
ಶ್ರೀ ತಂದೆಮುದ್ದು ಮೋಹನ ವಿಠಲನ
ದಾಸರದಾಸರಿಗೆ ಭಯವಿಲ್ಲ

ಹರಿದಾಸರ ಸಂಗದಿಂದ
೧೦
ಉಗಾಭೋಗ
ಹರಿದಾಸರ ಸಂಗದಿಂದ
ಹರಿನಿನ್ನಸಂಗವಾಯಿತೋ ಎನಗೆ
ತಂದೆಮುದ್ದುಮೋಹನವಿಠಲಾ

ಹಾಡಿನ ಹೆಸರು :ಗುರುವಿನ ಮರೆಯದಿರಮ್ಮ
ಹಾಡಿದವರ ಹೆಸರು :ರಾಘವೆಂದ್ರ ಎಂ., ವಿದ್ಯಾ ಎಂ. ಎಸ್.
ರಾಗ :ರಾಗಮಾಲಿಕೆ
ತಾಳ :ಮಿಶ್ರನಡೆ ತಾಳ
ಸಂಗೀತ ನಿರ್ದೇಶಕರು :ರಾಘವೇಂದ್ರ ಎಂ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *