Categories
ರಚನೆಗಳು

ತಂದೆ ಶ್ರೀನರಹರಿ

೩೧೫
ಓಡಿಬಾರೋ ಶ್ರೀ ಮನ್ಮಥ ಜನಕನೆ ನೀಡುವೆ ತನುಮನವಾ ಪ.
ನೋಡಿ ಮುದ್ದಾಡಿ ಕೊಂಡಾಡಿ ನಾ ಬೇಡುವೆಈಡಿಲ್ಲದ ನಿನ್ನೊಡನಾಡುವ ಸುಖ ಅ.ಪ.
ಕಾಡಿನ ಸುಖಕೆ ಮತ್ತೀಡಿಲ್ಲ ಧರೆಯೊಳುಮಾಡುವೆ ಶಪಥವನುಹಾಡಿಪಾಡಿ ಕೈಜೋಡಿಸಿ ಕುಣಿಯುತಮಾಡಿದೆವೊ ನಾವ್ ರಾಸಕ್ರೀಡೆಯ ೧
ಧ್ವಜ ವಜ್ರಾಂಕುಶ ಚಿನ್ಹಕಂಜ ಸುರೇಖೆಗಳ ಪುಂಜ ಪೂರಿತಪಾದಕಂಜನಾಭ ಹೃತ್ಪಂಜರದೊಳಿಟ್ಟುಮಂಜು ಬಿಡಿಸು ನಿರಂಜನ ಮೂರ್ತೆ ೨
ನೀರಜನಾಭನೆ ತೋರೋಕರಪಲ್ಲವಮೀರಿವೆ ಹೃದಯ ಸಂತಾಪಗಳುಮಾರ ಮೋಹನ ಸಾರುವೆ ನಿನ್ನಯಜಾರ ಬುದ್ಧಿಯ ತಾಪವ ನೀಗಿಸು ೩
ಮಂದಸ್ಮಿತಾನನ ಚಂದ್ರಪೋಲುವ ಸದನಬಿಂದುಮಾಧವಾ ಯಾದವಾವಂದಿಸಿಬೇಡುವ ಸುಂದರಿ ಸುಖ ಮುಖಿಬೃಂದ ಕಮಲ ವಿಹಂಗಮರಾಜ ೪
ನೀನೇ ದಯಾಪರ ನೀನೇ ಭಕ್ತೋದ್ಧಾರನೀನೇ ಗತಿ ಪರನಾರೆರಿಗೆಪಾಣಿಮುಗೆವೆಯಮ್ಮ ವಾಣಿಯ ಲಾಲಿಸಿ ವೇಣುನಾದ ತೋರೊ ತಂದೆ ಶ್ರೀನೃಹರೇ ೫

೩೧೬
ಜೋ ಜೋ ಪ
ಬಾರೆಯ್ಯ ಗೋವಿಂದಾ ಅರವಿಂದ ನಯನಾತೋರೆಯ್ಯ ಇಂದಿರಾ ಚುಂಬಿತಾ ಚರಣಾಸಾರಯ್ಯ ತೊಟ್ಟಿಲ ಶ್ರೀ ದೇವಿ ಮದನಾಸಾಕಯ್ಯ ಬೀದೀಲಿ ಹುಡುಗರ ಕದನಾ ೧
ಬಾಯೆನ್ನ ಕಂದಾ ಬಾ ಎನ್ನ ನಂದಾಬಾ ಇನ್ನು ಮಲಗುವೆ ಮುದ್ದು ಕಂದಾಬಾಯಲ್ಲಿ ತೋರಿದ ಜಗದ ಆನಂದಾಬಾ ಇನ್ನು ತೂಗುವೆ ಮುಚಕುಂದ ವರದಾ ೨
ರತ್ನದ ತೊಟ್ಟಿಲ ಚಿನ್ನದ ಸರಪಣಿಎತ್ತ ನೋಡಿದರತ್ತ ಆಡುವ ಬೊಂಬೆಇತ್ತ ಬಾರಯ್ಯ ಮಾರ ಸುಕುಮಾರಒತ್ತಿತೂಗುವನಯ್ಯಾ ತಂದೆ ಶ್ರೀ ನರಹರಿ ೩

೩೧೭
ಪ್ರೇಮದಿಂದೊಂದಿಸುವೆ ಗುರುವೃಂದಕೆ ಪ
ಕಾಮಧೇನುವಿನಂತೆ ಕೊಡಲೆಮಗಭೀಷ್ಟವನು ಅ.ಪ.
ಸತಿಯ ಬೇಡುವನಲ್ಲಾ ಸುತರ ಬೇಡುವನಲ್ಲಾಅತಿಶಯದ ಭಾಗ್ಯವನು ಕೇಳ್ವನಲ್ಲಾರತಿಪತಿ ಆಟವನು ಖಂಡಿದಿ ಬೇಗದಲಿಮತಿ ತಪ್ಪಲೆನಗೆ ದುರ್ವಿಷಯದೊಳಗೆಂದ ೧
ಶಕ್ತಿ ಬೇಡುವನಲ್ಲ ಯುಕ್ತಿಬೇಡುವನಲ್ಲಾಭಕ್ತಿವಿನಲ್ಲೆಂದು ಕೇಳ್ವನಲ್ಲಮುಕ್ತಿದಾಯಕ ನಮ್ಮ ವಿಠಲನ ಚರಣದಲಿಭಕ್ತಿ ದೃಢವಾಗೆಮಗೆ ಇತ್ತು ರಕ್ಷಿಸಲೆಂದು ೨
ಮಾನ ಬೇಡುವನಲ್ಲ ದಾನ ಬೇಡುವನಲ್ಲಾಹೀನತನ ಬ್ಯಾಡೆಂದು ಕೇಳ್ವನಲ್ಲಾಮಾನನಿಧಿ ನಮ್ಮ ಶ್ರೀ ನರಹರಿಯ ಚರಣವನುಕಾಣಿಸುವ ಜ್ಞಾನವನು ದಾನ ಮಾಡೆಮಗೆಂದು ೩

೩೧೮
ಬಂದಿಹ ನೋಡಿರಿ ಸುಂದರ ಸುಕುಮಾರನಂದ ಸುನಂದನ ಯದು ಕಂದಾ ಪ
ಮಾಧವ ಮಧುಸೂದನಾ ಮಂದಸ್ಮಿತಾನನ ಕುಂದರ ವದನ ಪೂರ್ಣ ಚಂದ್ರ ಶತಾನನ ಗುಣ ಪೂರ್ಣಾ ಅ.ಪ.
ವೇಣುನಾದ ವಿಶಾರದಾ ಗಾನಾಪಹೃತಸ್ತ್ರೀ ಮಾನಾಪಹರಣ ಮಾನಸ ಮಂದಿರ ಸ್ತ್ರೀಲೋಲಾ ೧
ಜಾರ ಚೋರ ಶಿಖಾಮಣಿ ಘೋರದುರಿತಾರಣ್ಯ ಪಾರ ಪದಕ ನಾಮ ಅ ಪಾರ ಮಹಿಮ ಶಿರಿ ಮಾನವ ೨
ಪೂತನಾ ಪ್ರಾಣಾಪಹ ವಾತಾತ್ಮ ಜಾರಿಹರಿ ಪೂತಾತ್ಮಾ ನಾರಿ ಜಾರ ಖ್ಯಾತಾತ್ಮ ನರವೀರ ಪ್ರೀತಾತ್ಮ ೩
ಭೂಧರಾರ ಮಾಧರ ಸುಧಾಪಾನದಿ ಮತ್ತಸದಮಾಲಾ ಚಿತ್ತ ಮುದಾ ಪೂರಿತಗಾತ್ರ ಸರ್ವತ್ರ ೪
ಮಾಧವ ರಾಧಾ ಪ್ರಿಯ ತಂದೆ ಶ್ರೀನೃಹರಿಯೆ ಇಂದೂ ವಂದಿಪೆ ನಿನ್ನ ಬಂಧನ ಬಿಡಿಸೆಯ್ಯ ಗೋವಿಂದ ೫

೩೧೯
ಭೂತರಾಜರ ಸ್ತೋತ್ರ
ಭೂತರಾಜರ ಸ್ತುತಿಸಿ ಖ್ಯಾತಿಗೊಳ್ಳೊ ಪ
ಪ್ರೀತಿ ಇವರಲಿ ಅಧಿಕ ವಾದಿರಾಜರಿಗೆ ಅ.ಪ.
ಆತನಾಜ್ಞೆಯಿಂದ ಧರಿಸಲುಕೋತಿಯಂತೆ ಹುಬ್ಬು ಏಕೆ ಹಾರಿಸುವೆಜ್ಯೋತಿ ಸ್ವರೂಪಕ್ಕೆ ಬೂದಿಯು ಮುಸುಕಲುಪಾತಕಿಯು ತಾ ಮುಟ್ಟಿ ಬೊಚ್ಬಿ ಬಾರಿಸನೆ ೧
ಗುರುಸೇವೆ ಇವರಂತೆ ಮಾಡ್ದವರು ಯಾರುಂಟುಗುರುಕೃಪಾ ಇವರಂತೆ ಪಡೆದವರು ಯಾರೊಅರಿತು ನೋಡಲು ನಿರುತ ರತಿಗೆ ಕಾರಣವುಂಟುನರಕುರಿ ಇದರ ಮರ್ಮವ ತಿಳಿವದುಂಟೆ ೨
ಇಂದಿಗೂ ಸೋದೇಲಿ ಇವರದೇ ಗುರುಪೂಜೆಸುದ್ದಿ ಸುಳ್ಳೆಂದವಗೆ ದೆಬ್ಬೆ ಪೂಜಾಸದ್ದಿಲ್ಲದಿವರಡಿ ಸ್ಮರಿಸುವುದೇ ಗುರುಪೂಜಾತಂದೆ ಶ್ರೀ ನರಹರಿ ಒಪ್ಪುವಾ ಪೂಜಾ ೩

೩೨೦
ಮದಲಗಟ್ಟಿ ಪ್ರಾಣನಾಥಾ ಮುದವನಿತ್ತು ಪಾಲಿಸಯ್ಯ ಪ
ಮದನಜನಕ ಮಾಧವಾನಬೋಧವಿತ್ತು ಕರುಣಿಸಯ್ಯ ಅ.ಪ.
ಪಾಪ ತಾಪ ಪೂರ ನಾವುಪಾಪ ಲೋಪ ಮೂರ್ತಿ ನೀನುದೀಪದಂತೆ ಹೊಳೆದು ಭವದಕೂಪ ದಾಟಿಸಯ್ಯಾ ಭೂಪ ೧
ದೇವ ದೇವೋತ್ತಮನೆ ನೀನುಜೀವದಾನ ಮಾಡಿಸಯ್ಯಪಾವಮಾನಿ ಪರಿಕೆಸೆಮ್ಮಾನೋವನದೂರ ಮಾಡಿಸಯ್ಯಾ ೨
ಅಂಧ ಬಧಿರ ಮೂರ್ಖ ಜನರುಬಂದು ನಿನ್ನ ವಂದಿಸಲುಛಂದದಿಂದ ಅವರ ದುರಿತವೃಂದವನ್ನು ನಾಶಗೈವೆ ೩
ಭೂಸುರೇಂದ್ರ ವ್ಯಾಸರಿಂದಆರು ತುಂಗಾ ಹೃದವ ಬಿಟ್ಟುಭಾವಿಸುವೆ ಇಲ್ಲದೇವಆ ಸಮೀರ ಜಾತ ಶೂರ ೪
ಮುದದಿನಾಥ ಜ್ಞಾನ ವಾತಾಕಂದಧೀಮಂಧ ರಾಮ ದೂತಾಹೃದಯ ಸದನದಲ್ಲಿ ತೋರೋತಂದೆಶ್ರೀನರಹರಿಯ ರೂಪ ೫

೩೨೧
ಶ್ರೀನಿವಾಸ ತೀರ್ಥರು
ಶ್ರೀನಿವಾಸ ತೀರ್ಥನೆ ಜ್ಞಾನವಿತ್ತು ಪಾಲಿಸೋ ಪ
ವ್ಯಾಸ ಶಾಸ್ತ್ರ ನಿನ್ನಿಂದವಿಸ್ತಾರಾಯ್ತು ಭೂಮಿಲಿ ಭಾಷಿಪರೊಜನರು ಲೇಸು ಟಿಪ್ಪಣಿಯೆಂದು ೧
ಅಂತಿಮಾ ಶ್ರಮವ್ಯಾಕೆ ಯಥಾರ್ಥ ಸ್ವರೂಪನೆತೀರ್ಥಪದ ನಿನ್ನಯ ಸಾರ್ಥಕಾಗಿ ಹೋಯಿತೋ ೨
ಒಂದೆ ಮನದಿ ನಿನ್ನಯ ಪಾದ ದ್ವಂದ್ವ ಸ್ಮರಿಸುವೆತಂದೆಶ್ರೀನರಹರಿಯಪೊಂದೊ ಬಗೆ ಪ್ರೇರಿಸೊ ೩

Leave a Reply

Your email address will not be published. Required fields are marked *