Categories
ದಾಸ ಶ್ರೇಷ್ಠರು

ಪ್ರಸನ್ನವೆಂಕಟದಾಸರು

ದಾಸರ ಹೆಸರು : ಪ್ರಸನ್ನವೆಂಕಟದಾಸರು ;
ಜನ್ಮ ಸ್ಥಳ : ಬಾಗಲಕೋಟೆ ; ತಂದೆ ಹೆಸರು : ಕಾಖಂಡಗಿ ನರಸಪ್ಪಯ್ಯನವರು (ಕಾಶ್ಯದ ಗೋತ್ರ) ; ತಾಯಿ ಹೆಸರು : ಲಕ್ಷೀಬಾಯಿ ;
ಕಾಲ : 1680- ; ಅಂಕಿತನಾಮ : ಪ್ರಸನ್ನವೆಂಕಟದಾಸರು ;
ಲಭ್ಯ ಕೀರ್ತನೆಗಳ ಸಂಖ್ಯೆ : 426 ಕೀರ್ತನೆಗಳು ;
ಗುರುವಿನ ಹೆಸರು : ಮುದ್ಗಲ ಜನಾರ್ದನಾಚಾರ್ಯ ;
ಪೂರ್ವಾಶ್ರಮದ ಹೆಸರು : ಜನ್ಮನಾಮ ವೆಂಕಟೇಶ ;
ಮಕ್ಕಳು ಅವರ ಹೆಸರು : ಒಬ್ಬ ಮಗ : ವೆಂಕಟ ಕೃಷ್ಣಾಚಾರ್ಯ ;
ಕೀರ್ತನೆಗಳಲ್ಲದೆ ಇತರ ಲಭ್ಯ ಕೈತಿಗಳು : 426 ಕೀರ್ತನೆಗಳಲ್ಲದೆ 10 ಸುಳಾದಿಗಳು, 7 ಉಗಾಭೋಗಗಳೂ 6 ದೀರ್ಘಕೃತಿಗಳು ಸಿಕ್ಕಿವೆ
ದೀರ್ಘಕೃತಿಗಳು : 1. ಸತ್ಯಭಾಮಾವಿಲಾಸ 2. ನಾರಾಯಣ ಪಂಜರ 3. ಸಮಸ್ತ ನಾಮಮಣಿಗಳ ಷಟ್ಚರಣ ಪದ್ಯಮಾಲಾ 4. ಭೇದ ಮುಕ್ತಾವಲಿ 5. ನಾರದ ಕೊರವಂಜಿ 6. ಶ್ರೀಪ್ರಸನ್ನ ವೆಂಕಟದಾಸರ ಭಾಗವತ. ;
ಒಡಹುಟ್ಟಿದವರು : ಒಬ್ಬ ಅಣ್ಣ ಇದ್ದುದಾಗಿ ತಿಳಿಯುತ್ತದಾದರೂ ಹೆಸರು ತಿಳಿದಿಲ್ಲ ; ವೃತ್ತಿ : ದಾಸರಿಗೆ ಅನೇಕ ಶ್ರೀಮಂತರೂ ಅಧಿಕಾರಿಗಳೂ ಬಾದಾಮಿಯಲ್ಲಿ 3 ಮನೆ, ಬೇರೆ ಬೇರೆ ಕಡೆ ಜಮೀನು ಹಾಗೂ ವರ್ಷಾಕನಗಳನ್ನು ಕೊಟ್ಟಿದ್ದುದರಿಂದ ಜೀವನ ನಿರ್ವಹಣೆಗೆ ತೊಂದರೆ ಇರಲಿಲ್ಲ ;
ಕಾಲವಾದ ಸ್ಥಳ ಮತ್ತು ದಿನ : ಬಾದಾಮಿಯಲ್ಲಿ ಸಕೆ 1674ನೆಯ ಆಂಗಿರಸ ಸಂವತ್ಸರದ ಭಾದ್ರಪದ ಶುದ್ಧ ಏಕಾದಶಿ ಮಧ್ಯರಾತ್ರಿಯಲ್ಲಿ ವೈಕುಂಠವಾಸಿಗಳಾದರು ; ವೃಂದಾವನ ಇರುವ ಸ್ಥಳ : ಬಾದಾಮಿ ಊರಿನ ಪೂರ್ವಕ್ಕೆ ಗುಡ್ಡದ ಅಡಿಭಾಗದಲ್ಲಿ ಒಂದು ಹೊಂಡವಿದ್ದು ಅದರ ಉತ್ತರ ದಡದ ಮೇಲೆ ಇರುವ ಕಟ್ಟೆಗೆ ; ಕೃತಿಯ ವೈಶಿಷ್ಟ್ಯ : ಇವರ ಕೃತಿಗಳ ಮೇಲೆ ಹಿಂದಿನ ದಾಸರ ಪ್ರಭಾವ ಸಾಕಷ್ಟು ಇದ್ದರೂ ವಸ್ತು ಭಾಷೆ, ನಿರೂಪಣೆಗಳಲ್ಲಿ ಅನೇಕ ಕಡೆ ಇವರದೇ ಆದ ಪ್ರತಿಭೆ ಪಾಂಡಿತ್ಯಗಳ ಮುದ್ರುದೆ ಇದಕ್ಕೆ ನಿದರ್ಶನವಾಗಿ ವಾತ್ಸಲ್ಯ ಭಾವದ ಕೀರ್ತನೆಗಳನ್ನು ದೀರ್ಘಕೃತಿಗಳನ್ನು ಗಮನಿಸಬಹುದು. ಭಾಷೆಯನ್ನು ಸಂದರ್ಭಕ್ಕನುಗುಣವಾಗಿ ಬಳಸುವ ಶಕ್ತಿ ಅವರಿಗಿತ್ತು ಅವರು ಶಿಷ್ಟವಾದ ಪೊರುಢವಾದ ಭಾಷೆಯನ್ನು ಬಳಸುವಷ್ಟೇ ಸಮರ್ಥವಾಗಿ ಆಡುನುಡಿಯು ಸರಳತೆಯನ್ನು ತರುತ್ತಾರೆ ವಾತ್ಸಲ್ಯಭಾವದ ಕೀರ್ತನೆಯಲ್ಲಿ ಬಾಲಭಾಷೆಯನ್ನು ಬಳಸುವಷ್ಟೇ ಸಹಜವಾಗಿ ಕೊರವಂಜಿಯ ಮಾತುಗಳಲ್ಲಿ ತಮಿಳನ್ನು ಬಳಸುತ್ತಾರೆ ಅವರ ಸ್ವೋಪಜ್ಞತೆಯ ದ್ರ‍ಟೂಂದ ಅವರ ಭಾಗವತ ತುಂಬ ವಿಶಿಷ್ಟವಾದ ಕೃತಿ.

Leave a Reply

Your email address will not be published. Required fields are marked *