Categories
ರಚನೆಗಳು

ಪ್ರಾಣೇಶದಾಸರು

೨೫೭
ಅಂಗನಾಕುಲ ಶಿರೋಮಣಿ ಶ್ರೀಮಾ |
ಶೃಂಗಾರ ವನಧಿ ಗರುಡಧ್ವಜೆ ಮಂಗಳಾದೇವಿ ಹಸೆಗೇಳು ಪ
ಕ್ಷೀರಸಾಗರ ಕನ್ಯಾ ವಿಧಿ |ಮಾರಾಂತಕ ಶಕ್ರಕರಾರ್ಚಿತೆ ||
ವಾರಿಜಸದನೆ ಸಿರಿದೇವಿ |ಸಿರಿದೇವಿ ತ್ರೈಲೋಕಕೆ ಜನನೀ ರಕ್ಕಸಾರಿ ಹಸೆಗೇಳು ೧
ಭಾರತಿ ಪಾರ್ವತಿ ಶಾಮಲ ಮುಖ |ನೂರು ಸುರರರಸಿಯರೆಲ್ಲರು ||
ಮೀರಿಧರುಷದಲಿ ಪದಪಾಡಿ | ಹಸೆಯಬರೆದಿಹರೆಲೆ ನಾರಾಯಣನ ರಾಣೀ || ಹಸೆಗೇಳು ೨
ಋಷಿಗಳು ವೇದ ಪುರಾಣಗಳುಪ |ನಿಷದ್ವಾಕ್ಯಗಳಿಂದ ತುತಿಸುವರು ||
ವಸುಧೆಗಾನಂದ ಪಡಿಸಲು | ಶುಭ ಕುಂದರದನೆಆಸಿತಕುಂತಲೆಯೇ ಹಸೆಗೇಳು ೩
ಕಡೆಗಣ್ಣಿನ ನೋಟದಿ ಲೋಕವ |ತಡೆಯದೆ ಪುಟ್ಟಿಸಿ ಪಾಲಿಸಿ ಪುನಃ ||
ಕೆಡಿಸುವೆ ಸ್ವೇಚ್ಛೆಯಲಿ ವೈದರ್ಭೆ ಸತ್ರಾಜಿತೆ ಕೃತಿ |ಯೊಡತಿ ಜಯಮಾಯಾ ಹಸೆಗೇಳು ೪
ಪ್ರಾಣೇಶ ವಿಠಲನೊಳು ದ್ವೇಷಿಪ |ಹೀನರ ಸಂಹರಕೋಸುಗ ಶರ ||
ಪಾಣಿಯಾಗಿಹಳೆ ಶ್ರುತಿ ವೇದ್ಯೆ | ಶ್ರುತಿವೇದ್ಯೆ ದೇವದೇವಿಕ ಅಹಿವೇಣಿ ಶುಕವಾಣಿ | ಹಸೆಗೇಳು ೫

೧೧೩
ಅಂಜಾನೆ ತನಯ ಧ | ನಂಜಾಯನಗ್ರಜ ||ಕಂಜಾಕ್ಷ ಶ್ರೀ ಮಧ್ವ | ಸಂಜಯವಂತಾ ೧
ಮಾರುತಿ ನಿನ್ನಯ | ಕೀರುತಿ ಜಗದೊಳು ||ಬೀರುತಿದ ಕೊ ನಾ | ಸಾರುತೀ ನೀಗಾ ೨
ರಾವಣಾನುಜ ಸು | ಗ್ರೀವಾ ವಿಪ್ರಜಾನಂತೆ ||ಭೂವರನಂತೆ ಕಾಯೋ | ದೇವೇಂದ್ರ ಪಾಲಾ೩
ಪ್ರಸ್ತುತ ಬಿನ್ನಪ | ವಿಸ್ತರಿಪ ಕೃತಿ ಸ ||ಮಸ್ತರೂ ಕೇಳಲಿ | ಆಸ್ಥೀಯಲಿಂದಾ೪
ಪ್ರಾಣೇಶ ವಿಠ್ಠಲಾ ಪ್ರೀ | ತಾನಾಗಬೇಕೀದಕೆ ||ಹೀನ ವಿಷಯಗಳಾ | ನಾನೊಲ್ಲೆ ದೇವ ೫

೯೨
ಅಂಜಿಕ್ಯಾತಕೆ ಮನವೇ ಅಂಜಿಕ್ಯಾತಕೇ ಪ
ಕಂಜಹರನ ಪಿತನ ಪಾದ |ಕಂಜ ನಿರತ ಭಜಿಸುತಿರಲು ||ಅ.ಪ||
ಎರಡು ಒಂದು ಕೋಟಿ ರೂಪ |ಧರಿಸಿ ರಕ್ಕಸರೊಳು ಕಾದಿ ||
ಹರಿಯ ಕರುಣ ಗಳಿಸಿದವನ |ಚರಿತೆಗಳನು ಸ್ಮರಿಸುತಿರಲು ೧
ತಾಸಿಗೆಂಟು ಒಂದು ನೂರು |ಶ್ವಾಸ ಜಪವ ಮಾಡಿ ಜಂತು ||
ರಾಶಿಗಳಿಗೆ ಸತತ ಬೇಡಿ |ದಾಸೆ ಪೂರ್ತಿಸುವವನಿರಲು೨
ಜಂಗಮರಿಗೆ ಪಾಣಿ ಚರಣ |ಕಂಗಳು ಕಿವಿಯಾಡಿಸುತಲಿ ||
ಪಿಂಗಳನಿಭ ಭಾರತೀಶ |ಹಿಂಗದನವರತ ಪೊರೆಯಲು ೩
ಪರಿಹರಿಸುತಲಗ್ನಿ ಭಯವ |ತ್ವರದಿ ಹಿಡಿಂಬ ಕೀಚಕ ಪ್ರಮು ||
ಖರನು ಕುರುಪತಿಯ ಕುಲವ ತರಿದ ಕುಂತೀ ಕುವರನಿರಲು ೪
ಭುಜಕೆ ಗೋಪೀಚಂದನವನು |ವಿಜಯ ಚಕ್ರಗಳನು ಧರಿಸಿ ||
ಕುಜನ ರಿಪು ಪ್ರಾಣೇಶ ವಿಠಲ |ಭಜಕನ ದಯ ಪೂರ್ಣವಿರಲು ೫

೧೯
ಅಂದುಂಟಿಂದಿಲ್ಲೇ ಮಾಧವ ನಿನ್ನ |ಹೊಂದಿದವರ ಭಯ ಕಳೆದು ಪೊರೆವ ದಯೆ ಪ
ಶಂತನು ಭೂಪನರಸಿ ಬಳಲಿ |ಕಂತುಜನಕ ನೀ ಗತಿಯೆನಲೀ ||
ಅಂತರಿಸದೆ ವಿಧವೆರಲಾಕ್ಷಣಸಂತತಿ ನೆಲಸಿದೆ ಮನ್ನಿಸುತಾ ದಯ ೧
ಕಲಿಯಾಳಿಕೆ ಬಹಳಾಗಿರಲು |ಮಲಿನಯುಕ್ತ ಧರೆಯಾಗಿರಲು ||
ತಿಳಿದ ಹದಿನೆಂಟು ಪುರಾಣವ ವಿರಚಿಸಿ |ಸಲಹಿದೆಯುತ್ತಮ ಜೀವರನಾ ದಯೆ ೨
ತಿಳಿಯದೆ ನಿನ್ನೊಲುಮೆಯವಗೆಂದು |ನಳಿನಾನುಜ ನೀ ಬೇಕೆಂದು ||
ಕೊಳಲರಿದರ ಕರದಿತ್ತಾರಣದೊಳು |ಗೆಲಿಸಿದೆ ತೋಂಡನ ಮುದದಿಂದಾ ದಯೆ ೩
ಪಾದಜಲರಸರ ಬದುಕಿಸಿತು |ಪಾದ ಪೆಸರೇ ಪತಿತನ ಕಾಯ್ತು ||
ಪಾದದಮುಂದು ಕುಬೇರಜರೀರ್ವರ |ಪಾದವೇ ಸದ್ಗತಿಗೈದಿಸಿತಾ ದಯ ೪
ಆ ಸೈಂಧವನಳಿದರ್ಜುನನ |ಪೋಷಿಸಿದಂತೆ ಮೃತಾತ್ಮಜನಾ ||
ಭೂಸರಗಿತ್ತಂತೀ ವಿಪ್ರರ ಪ್ರಾ |ಣೇಶ ವಿಠ್ಠಲ ರಕ್ಷಿಸಬೇಕಾ ದಯೆ ೫

೫೨
ಆರ ಮುಂಧೇಳಲಿ ಕರಕರಿಯ ಈ |ಪೋರನು ಕೊಡವಲ್ಲನಲ್ಲೇ ಸೀರೆಯ ಪ
ದಾರಿಯೊಳ್ಹೋಗಿ ಬಹರ್ಯಾರೆನ್ನ ಕಂಡರೆ |ಊರೆಲ್ಲ ಹೋಗಿ ದೂರರೇನೆ೧
ಸಂತಿಗೆ ಹೋಗ್ಯಾಕೆ ನಿಂತರೆಂದುಡುಕುತ |ಕಾಂತನೇ ಬಂದರೇನಂತ ಹೇಳುವಾ ೨
ಬತ್ತಲಾರಾಗಿ ಜಲ ಮತ್ತೀಗ ಸೇರುವಾಗಿ |ಮೃತ್ಯು ಬಂದನಂಬುದರ್ತಿವೇನೆ ೩
ನೀರ ಹಾವುಗಳೆಲ್ಲ ಶರೀರವ ಸುತ್ತುತಿವೆ |ಗಾರಾದೆವಲ್ಲೆ ವಾರಿಜಾಸ್ಯೆ ೪
ಮುಳ್ಳು ತೆಪ್ಪವು ಮೋರೆಗೆಲ್ಲ ಮುಚ್ಚುತಲಿವೆ |ಖುಲ್ಲ ಪೋರಗೆ ದಯೆಯಿಲ್ಲವಲ್ಲೇ ೫
ಜಲ ಜಂತುಗಳೆಲ್ಲ ಗುಳು ಗುಳು ಮಾಡುತವೆ |ಜಲಜಾಕ್ಷಗ್ಯೇತಕೆ ತಿಳಿಯದಮ್ಮ ೬
ಮೀನಾಗಳಲ್ಲಿ ಹತ್ತಿ ಏನೇನೋ ಮಾಡುತವೆ |ಏಣಾಕ್ಷಿ ನಮಗೇ ಏನು ಬಂತೇ ೭
ಹಿಂದತ್ತ ಹೋದರೆ ಕಂಧರದುದ್ದ ನೀರು |ಮುಂದತ್ತ ಬರೆ ಎದೆಗಿಂದ ಕೆಳಗೆ ೮
ಏಡಿಗಳೆಲ್ಲ ಕಾಲು ನೋಡಿ ಕಚ್ಚುತಲಿವೆ |ಮಾಡಲಿನೆ ಮೋರೆ ಬಾಡಿತಲ್ಲೆ ೯
ಮೂಗುತಿ ಮಣಿಯೆಲ್ಲ ಹೇಗೋ ಎಲ್ಲ್ಯೋ ಎನಲು |ಈ ಗತಿಯಾಗೆ ಮನೆಗೆ ಹೋಗೋದ್ಹ್ಯಾಂಗೆ ೧೦
ಏನಾದರಾಗಲಿ ಪ್ರಾಣೇಶ ವಿಠಲಗೆ |ನೀನೇ ಗತಿಯೋ ಕಾಯೊ ಎನ್ನಬೇಕೇ ೧೧

೧೫
ಇಂತಿರುವುದೇನು ಬಗೆ ರಾಮಾ | ಹರಿ ಸ್ವ-ತಂತ್ರ ಶ್ರೀನಿಧಿಯೆಂದು ಪೊಗಳುತಿವೆ ವೇದ ಪ
ವಿಧಿಗೆ ಪದವಿತ್ತವನೇ ವನವ ಚರಿಸುವದೇನೋ |ಪದುಮ ಸದನೆಯ ರಮಣ ಬಡವನಾಗಿಹದೇನೋ ||
ಮದನ ಜನಕನೆ ಋಷಿಗಳಂತೆ ಆಗುವದೇನೋ |ಉದರದೊಳು ಬಹು ಜಗಗಳಿರಲೂ ಪತ್ರ ಸದನವಾಶ್ರಯಿಸಿ-ಕೊಂಡಿರುವಿ ಇದು ಏನೋ ೧
ನಿತ್ಯ ತೃಪ್ತನೆ ಶಬರಿಯೆಂಜಲುಂಬುವದೇನೋ |ಉತ್ತಮ ವಿಹಗವಿರಲು ಕಾಲ್ನಡಿಗೆಯಿದೇನೋ ||
ಭೃತ್ಯರು ದಿವಿಜರು ನೀಂ ಚಾಪವ ಹೊರುವದೇನೋ |ನಿತ್ಯ ಶ್ರೀ ಹೃದಯದೊಳಗಿರಲು ನಿನ್ನ ಪತ್ನಿ ಹೋದಳೆಂದು ಚಿಂತಿಸುವದೇನೋ2
ಸ್ವಾಮಿ ಅಹಿಶಯನ ತೃಣಶಾಯಿಯಾಗುವದೇನೋ |ಭೂಮಿ ನಿನ್ನೊಂದಂಘ್ರಿ ಸೇತು ಕಟ್ಟುವದೇನೋ ||
ಈ ಮರುಳು ರಕ್ಕಸರು ನಿನಗೊಂದೀದೇನೋ |ತಾಮಸರ ಮೋಹಿಸುವದಕೆ, ಭಕ್ತ ಪ್ರೇಮ ಪ್ರಾಣೇಶ ವಿಠ್ಠಲನೆ ಲೀಲೆಯೇನೋ3

೪೨
ಇಂಥ ಬುದ್ಧಿಯಲ್ಲಿ ಸೇರಿತೊ ಕೃಷ್ಣ ಗೋಕುಲದೊಳು ಎಂಥವರೂ ನಿನ್ನ ದೂರು ಹೇಳುತಿಪ್ಪರೊ ಹೀಗಾದರೆ ನಿಲ್ಲರೋ ಪ
ಗಂಡನುಳ್ಳ ನಾರಿಯರಾ ಮಂದಿಯೆಲ್ಲ ನೋಡ ಬಲು ಉ-ದ್ದಂಡತನದಲ್ಲಿ ಸೀರೆ ಸೆರಗ ಪಿಡಿವರೇ ಇಂಥ ದುಡುಕು ಮಾಡುವರೇ ||
ಚಂಡಾಡುವಾಗೆನ್ನವಸನ ಮರೆತೆ ಕೊಂಡು ಪೋಗಲವಳು |ಕಂಡು ಕೊಸರಿಕೊಂಡರಿಂಥ ಸುದ್ದಿ ಹುಟ್ಟಿಸಿ ಪೇಳುವಳಮ್ಮ ಹೊಂದಿಸಿ ೧
ಹಿರಿಯರುಳ್ಳಾ ಸೊಸೆಯ ಕೂಡ ಒಗೆತನವ ಕೆಡಿಸುವಂತೆ |ಸರಸವಾಡುವದು ನಿನಗೆ ಸಲ್ಲುವದೇನೋ ಯನಗೆ ಭೂಷಣವೇನೋ ||
ನಿರುತ ಅವಳ ತಾಯಿ ನಂದಗೋಪಗಣ್ಣಾಯೆಂದು ಕರೆಯ- |ಲರಿತೆನತ್ತೆ ದುಗಳು ನಾದಿನಿಯೆಂದು ಮನಸಿಗೆ ಚರ್ಚೆ ಮಾಡಿದೆನೀ ಬಗೆ೨
ಕುಲದೇವತೆಯ ಮೀಸಲು ತುಪ್ಪ ನೆಲವಿನ ಮೇಲಿಟ್ಟಿರಲು ಮದ್ದು |ಕಲಶವ ಒಡೆದು ಬಾಹುವದೆಲ್ಲ ಚಿನ್ನಾಟವೇನೋ, ಅವರು ಮುದ್ದಿಸುವರೇನೋ ||
ತಿಳಿಯದೆ ನೆಳಲಿದುಯೆಂದು ಕಳ್ಳನ ಒಳಗಿರಿಸಿಹಳೇಕೆಂದು ವಡದೆ |ನೆಲಖರಿಧೋಗುವ ಘೃತ ನೋಡಲೆ ತಿಂದೆನಮ್ಮಯ್ಯ ತಪ್ಪಿರೆ ಕಟ್ಹ್ಯಾಕು ಕಯ್ಯ ೩
ಚಿನ್ನನಂತೆಯಾಗಿಯವರ ಮಗ್ಗುಲೊಳು ಮಲಗಿಯೆಂಥ |ಸಣ್ಣ ಕೃತ್ಯ ಮಾಡಿ ಬಾಹುವೆಂತಲ್ಲೋ ಕಂದ ಕೇಳುವರಿಗೇನು ಛಂದ ||
ನಿನ್ನ ಸಲಿಗೆ ಬಹಳ ಕಂಡು ಇಲ್ಲದ್ದೊಂದೆ ಹುಟ್ಟಿಸುವರು |ಯನ್ನ ದಿಸವಕ್ಕೀ ಜಾರತ್ವ ಕಲಿತಿದ್ದೇನೇನೇ ನಿನಗೇನೂ ತಿಳಿಯದೇನೇ ೪
ಕದ್ದು ಮೊಲೆಯುಂಡು ಕರು ಬಿಟ್ಟು ಹರಕೊಂಡಿತು ನೋಡಿರಿ ಎಂಬೆಯಂತೆ |ದುಗ್ಧವೆ ಮಾರಿ ಬಾಳಿವೆ ಮಾಡುವರೆಂತು ತಾಳುವರೋ ಹೀಗಾದರೆ ನಿಲ್ಲರೋ ||
ಇದ್ದಾ ಮನೆಯವರಿಗೆ ನಂಬವು ಅಂಥಾಲಾಳ ಮೊಲೆಯ ನಾನುಂಡರೆ ಮೋರೆಗೆ |ಒದ್ದರೆ ರೋದನ ಮಾಡುತ ನಿನ್ನ ಬಳಿಗೊಂದಿನ ಬಾರೆನೇ ಹುಡುಗರಿಗಂಬುವ ಮಾತೇನೇ ೫
ಇಡಲುದಕವ ಬೆರಸಿ ಮಜ್ಜನಕೆ ಛಲದಿಂದಲಿ ಚಲ್ಲಿ ಬಾಹುವರೇ |ಬಡಿವೆನೊ ನಾ ತಾಳದೆ, ಮುದ್ದಾದರೆ ಮತ್ತೊಮ್ಮೆಯುಣಬೇಕು ಆಡುತ ಮನೆಯೊಳಗಿರಬೇಕು ||
ಹುಡುಗರ ಸಂಗಡ ಅಣ್ಣನೂ ನಾನೂ ಇದ್ದೆವೆ, ಅಲ್ಲಾಕೆಯ ಮೊಮ್ಮಗನು |ಗಡಿಗೆಯ ಉರುಳಿಸೆ ನಾ ಕಂಡವರಿಗೆ ಹೇಳಿದೆನೆ ಇಷ್ಟಾ ಯನ್ನನು ಕಾಡುವದದೃಷ್ಟಾ ೬
ಎದೆಗಳ ಮುಟ್ಟುವದೇಕೋ ಎರಕೊಂಬುವರಲ್ಲಿಗೆ ಪೋಗಿಯಿನ್ನನ್ನಾ |ಹದದಿಂದಲೆ ಯಿರು ಶಿಕ್ಷೆಯ ಮಾಳ್ಪೆ ಎಚ್ಚರಿಕೆಯಿರಲಿ ಕಾಲ್ಪಡಿದರೆ ಬಿಡೆನೋ ಮರಳಿ ||
ಮುದದಿಂದಲಿ ಚಂಡೊಗೆಯಲು ಅವಳಾ ಬಚ್ಚಲಿಯೊಳು ಬಿತ್ತು ತಕ್ಕೊಂಡೇ |ಹದ ತಪ್ಪಿದರೀ ಹೆಂಗಸರೆಲ್ಲಾ ಪ್ರಾಣೇಶ ವಿಠಲನಾಣೇ ಸುಳ್ಳಲ್ಲವು ಕಾಣೇ ೭

೪೪
ಇಂಥಾ ದೂರುವುದೊಳಿತಲ್ಲವರೆಮ್ಮ ರಂಗಯ್ಯನು, ಹಾವಳಿ |
ಅಂಥಾದು ಏನು ಮಾಡಿದನಮ್ಮ ಎಂದೆಂದಿಗು ನಮ್ಮ ||
ಸಂತತಿಯೊಳು ಗುಣವಂತರೇ ಕೃಷ್ಣ ನಿ-ರಂತರ ಬಡವರನೆಂತು ದಣಿಸುವ ಪ
ಕಣ್ಣೇ ಬಿಡುವನು ಬೆದರಿಸೆ ಮಾತರಿಯ ವನದೊಳಗಡಗಿಹ |
ಮಣ್ಣು ತಿಂಬುವ ಬಾಯ್ದೆರೆವನಾರ್ಯ ಹಿತಕರ್ಮಗಳರಿಯ ||
ಅನ್ನ ತಿನ್ನಲರಿಯ ಬೆಣ್ಣೆ ಮೆಲುವ ಬಲು |
ಹೆಣ್ಣು ನೆರೆದು ಮತ್ತನ್ಯರೊಳು ಕಲಹೆ ೧
ಎಲ್ಲ್ಯಾಡೊದು ದುರ್ಗಂಧವು ಕಠಿಣಾಂಗ ನೆಲಗೆದರುವ ಶ್ರಿಂಗ |
ರಿಲ್ಲದೆ ರಹದೆರೆವರ್ಭಕ ರಂಗ ಪಾಪವರಿಯ, ಮಂಗ- ||
ರೊಲ್ಲಭ ಅಹಿಫಣೆಯಲ್ಲಿ ಕುಣಿದು ವಸ- |ನಿಲ್ಲದೆ ತಿರುಗುವಗೆಲ್ಲಿದೊ ವಾಚಿ೨
ಮೀನ ಕೂರ್ಮದಂತ್ಯುದಕದೊಳಗೆ ಆಡುವ ಕೆಸರೊಳಗೆ |
ಶ್ರೀನಾರಸಿಂಹ ಸಣ್ಣವರೊಳಗೆ ಆಡುವ ತನ್ನೊಳಗೆ ||
ತಾನೇ ಅಗ್ನಿಯ ನುಂಗಿ ನಭಕೇಶಗೆ ಮಾನವ ಕೊಟ್ಟಾನೆ ಪ್ರಾಣೇಶ ವಿಠಲನ ೩

೧೩೬
ಇಂದು ನೋಡಿದೆ ಹರಿಹರನ ದೈತ್ಯ |ವೃಂದಕ ಪ್ರಿಯನ ವರವ ಕೊಡುವನಾ ಪ
ಶಾಮವರ್ಣನ ವಿಷ ಹರನ ಪೂರ್ಣ |ಕಾಮನ ಶಿವನ ಕೇಶವನ ಶಂಕರನ ||
ಕಾಮಿನಿಯರ ಮೋಹಿಸಿದನ ಚಂದ್ರ |ವ್ಯೋಮ ನದಿಯು ಮಸ್ತಕದೊಳೊಪ್ಪುವನ ೧
ಕರಿಬಾಧೆಯನು ಕಳೆದವನ, ಭಸ್ಮ |ಧರನ ಪೀತಾಂಬರ ನಿಭ ಚರ್ಮಾಂಬರನ ||
ಅರಿಧರನ ಶೂಲಕರನ ಲಕ್ಷ್ಮೀ |ವರನ, ಗೌರಿಪನ, ರಕ್ಷಕನ, ಶಿಕ್ಷಕನ ೨
ಸ್ವಾಮಿ ಪ್ರಾಣೇಶ ವಿಠ್ಠಲನ ರಾಮ |ನಾಮವೇ ತಾರಕವೆಂದು ಪೇಳುವನ ||
ಶ್ರೀ ಮಧ್ವ ಮುನಿಗೊಲಿದವನ ಪಾರ್ಥ |ಪ್ರೇಮಕೆ ಮೆಚ್ಚಿ ಬಾಣವನು ಕೊಟ್ಟವನ ೩

೯೭
ಇಂದ್ರಸೇನ ನಾಥ ಹೋ, ತ್ರೈಲೋಕ್ಯ ವಿಖ್ಯಾತ ಹೋ |
ಸವ್ಯಸಾಚಿ ಪ್ರೀತ ಹೋ ಮಧ್ಯಗೇಹ ಜಾತ ಹೋ ಪ
ತರಣಿ ಬಿಂಬಕೆ ಜಿಗಿದೆ ಗದೆಯನು ವಗೆದೆ ಅಸುರಗ ಕರವನು ಮುಗಿದೆ |
ಹರಿಗೆ ವಾರ್ತೆಯ ತಂದೆ ಜರಿಜನ ಕೊಂದೆನೀಂ ಬದರಿಯೊಳ್ನಿಂದೆ ಖಳಕುಲ |
ತರಿದೆ, ವಜ್ರ ಶರೀರ, ಧರಣಿಯ ಭಾರವಿಳುಹಿದುದಾರಮತಿ, ಕಪಿ |
ವರನೊಳತಿ ಕೃಪೆ ಮಾಡಿದೆ ದಾನವ |ಬೇಡಿದೆ ಸುಮತಿಯ ನೀಡಿದೆ ೧
ದಂಡ ಮೇಖಲ ಧಾರ ಕುಜನ ಕುಠಾರ |
ಬ್ರಹ್ಮ ಶರೀರ ಜೈಸಿದೆ ಮಂಡೋದರಿ ವಲ್ಲಭನ ಚರಿಸಿದೆಯೋ ವನ |
ತಂದೆ ಮಾಧವನ ಉಡುಪಿಲಿಚಂಡ ವಿಕ್ರಮ ರಾಮ ಸೇವಕ ಭೀಮ |
ಸದಾಚಾರ ಧಾಮ ಯತಿ ಮೇ |ಷಾಂಡನ ಮೊರೆ ಕೇಳ್ದೆ ಕೀಚಕನನು ಸೀಳ್ದೆ ದ್ವಿಜಕುಲವಾಳ್ದೆ ೨
ಲಕುಮಿಗುಂಗುರವ ಕೊಟ್ಟಿ ರಣಕತಿ ಗಟ್ಟಿಶಾಟಿಯನುಟ್ಟಿ ಶರಧಿಯ ತ |
ವಕದಿ ಕ್ಷಣದೊಳು ಹಾರಿದೆ ಉಗ್ರವ ತೋರಿದೆಜ್ಞಾನವ ಬೀರಿದೆ ಲಂಕೆಯ |
ಸಕಲ ಸೌಖ್ಯವ ಕೆಡಿಸಿ ಪುಷ್ಪವ ಮುಡಿಸಿಐಕ್ಯವ ಬಿಡಿಸಿ, ವಟುವಪು |
ಮುಕುತಿ ಪತಿ ಪ್ರಾಣೇಶ ವಿಠಲನ ದಾಸ ಸಲಹೋ ನಿರ್ದೋಷ೩

೪೮
ಇಕ್ಕೊಳ್ಳಕ್ಕೊ ಸಿಕ್ಕ ರಂಗ ನೋಡು ಈಠಕ್ಕ ಮಾಡಿಹ ಬಹು ಕೇಡು ಪ
ಪೆಟ್ಟಿಗೆಯೊಳು ದೇವರುಗಳು ಗಂಡಸ- |ರಿಟ್ಟಿರಲವ ಅಂಜದಾಲೆ ||
ಮುಟ್ಟಿ ಮನೆಗೊಂದೊಂದೊಗೆದು ಮುರು-ಬಟ್ಟಿ ಮಾಡಿಬಿಟ್ಟನಲ್ಲೆ ೧
ತಾ ಕೆಡಿಸಿ ಒಡೆದಡಕಲಿ ಗಡಿಗೆಗಳನು |ಆಕಳ ಒಳಘೊಗಿಸಿಹ್ಯನೂ ||
ಈ ಕರಕರೆಯರಿಯಳು ನಮ್ಮತೆಯೆಂ-ಬಾಕೆನ್ನನು ಕೊಲ್ಲುವಳಲ್ಲೆ ೨
ಅಡಕಲಿಯೊಳು ದೇವರ ತಾಳಿಯ ಸರ |ತುಡುಗು ಮಾಡಿ ತಕ್ಕೊಂಡು ||
ಗಡಬಿಡಿ ಮಾಡೆಲ್ಲೊಗೆದನೊ ನಾ ಎ- |ಷ್ಠುಡುಕಿದರೂ ಸಿಗವಲ್ಲೆ3
ನೆಲವಿಗೇರಿಸಿದ ಚಟ್ಟಿಗಿಗಳು ಒಂ- |ದಳುಕದೆ ಮೊದಲಂತಿಹವೆ ||
ಇಳುಕಲು ಒಂದಕ್ಕೊಂದಕೆ ತೂತು |ಪಾಲ್ಗಳು ಈಸನಿಲ್ಲವಲ್ಲೆ ೪
ಅಡವಿಯ ದೇವರ ಹೆಸರಿಲಿ ತುಪ್ಪವ |ಮಡಿಯ ಮಾಡಿ ತುಂಬಿರಲು ||
ಕುಡಿದು ಮುಚ್ಚಿ ಮೊದಲಪ್ಪಂದಿಟ್ಟಿಹ |ಕೊಡದೊಳು ಬರಿ ನೀರಲ್ಲೇ ೫
ಅಂಡಜವಾಹನ ಓಕಳಿ ಚಲ್ಲಿಹ |ಪುಂಡತನದಿ ಮಂಚದ ಮೇಲೆ ||
ಭಂಡಿದು ಏನೆಂಧೇಳಲಿ ಮನೆಯೊಳು |ಗಂಡನ ಸಿಟ್ಟು ನೀ ಬಲ್ಲೆಲ್ಲೆ ೬
ಏನೆನರಿಯದವಳಿಗಿದು ಬಂದಿತು |ಕ್ಷೆÆÃಣಿಯೊಳಗೆ ಒಣಹರಲೆ ||
ಮಾನನೀಯಳೆ ಈ ಪರಿ ಮಾಡಿ- |ದನಿಕೋ ಪ್ರಾಣೇಶ ವಿಠಲನೀಗ ೭

೨೪
ಇದರೆನ್ನಧಿಕ ಸುಖವೊಂದವೊಲ್ಲೆಪದುಮನಾಭನೆ ನಿನ್ನ ಪಾದಯುಗ್ಮವೆ ಸಾಕ್ಷಿ ಪ
ಮಧ್ವ ಮತದೊಳಗೆ ಜನಿಸಿ ದ್ವಾದಶನಾಮ |ಮುದ್ರೆ ಶ್ರೀ ತುಲಸಿ ಅಕ್ಷಮಾಲೆ ಧರಿಸಿ ||
ಶುದ್ಧ ಗ್ರಂಥವನೋದಿ ಅದ್ವೈತರನು ಹಳಿದು |ಸದ್ವೈಷ್ಣವನೆಂದೆನ್ನಿಸಿಕೊಂಡರೆ ಸಾಕು ೧
ಹಿರಿಯರಾದವರಿಗೆ ಬಾಗಿ, ದಾನವ ಮಾಡಿ |ನಿರುತ ಸತ್ಕಥೆಗಳ ಕೇಳುತಲಿ ||
ವರಮಂತ್ರ ಜಪಿಸುತ ಪಂಚಯಜ್ಞವ ಮಾಡಿ |ಹರಿದಿನ ವ್ರತವನು ನಡೆಸುತಿಪ್ಪುದೆ ಸಾಕು ೨
ಪ್ರಾಣೇಶ ವಿಠಲ ನೀನೇ ಸರ್ವೋತ್ತಮ, ಬ್ರಹ್ಮ- |ಪ್ರಾಣಾದಿಗಳು ನಿನ್ನ ದಾಸರೆಂಬ ||
ಜ್ಞಾನವೆ ಗಳಿಸಿ ವೈಷ್ಣವರ ಮನೆಯ ಬಾಗಿ – |ಲನು ನಿರುತ ಕಾಯ್ದು ಜೀವಿಸುವದೇ ಸಾಕು ೩

೨೧
ಈ ದುರ್ಮಾರ್ಗಗಳನ್ನು ಪೀಡಿಸಬೇಡೈ |ಮಾಧವನೆ ಇಂದಲ್ಲ ಜನುಮ ಜನುಮದಲೀ ಪ
ಮಾತಾ ಪಿತರರ ಆಜ್ಞೆ ಮೀರಿ ನಡೆಯಿಸಬೇಡ |ಜಾತಿ ಧರ್ಮವ ಬಿಟ್ಟನೆನಿಸಬೇಡ ||
ಈ ತುಚ್ಛ ವಿಷಯದಾಪೇಕ್ಷೆ ಮಾಡಿಸಬೇಡ |ಭೂತೇಶನೇ ಪರಮಾತ್ಮನೆನಿಸಬೇಡ ೧
ಹರಿದಿನದಲಿ ಬಿಂದು ಉದಕ ಕುಡಿಯಿಸಬೇಡ |ಪರದ್ರವ್ಯದಲೀಷ್ಟ ಕೊಡಲು ಬೇಡ ||
ನಿರುತ ಪರರಾ ನಿಂದಾವನ್ನು ಮಾಡಿಸಬೇಡ |ನರರ ಸೇವಿಸಿ ಬದುಕಿಸಲಿಬೇಡ ೨
ಸಣ್ಣ ಮಾನವರ ಸಂಗತಿಯ ಕೊಡಲಿಬೇಡ |ಅನ್ಯ ಶಾಸ್ತ್ರಗಳ ಕೇಳಿಸಲು ಬೇಡ ||
ನಿನ್ನ ದಾಸಾನಾಮತವ ಬಿಟ್ಟು ಇರಿಸಬೇಡ |ಯನ್ನದೀ ಶರೀರಾದಿಯೆನಿಸಬೇಡ ೩
ಉತ್ತಮರ ಪೂಜೆಗೆ ಜಾಗು ಮಾಡಿಸಬೇಡ |ವಿತ್ತವ ಸಜ್ಜನರಿಗೆ ಕೊಡಿಸಬೇಡ ||
ನಿತ್ಯ ಸತ್ಕಥಾ ಶ್ರವಣವಿಲ್ಲದಲ್ಲಿಡಬೇಡ |ಸತ್ಯೇಶ ಯನ್ನ ಮಾತು ಮರೆಯಬೇಡ ೪
ಪ್ರಾಣೇಶ ವಿಠ್ಠಲ ನಿನ್ನನಲ್ಲದೆ ಎಂದೆಂದು |ಹೀನ ದೇವತೆಗಳಿಗೆ ಮಣಿಸಬೇಡ ||
ಮಾನುಷ್ಯೋತ್ತಮಾದಿ ಬ್ರಹ್ಮಾಂತ ದಿವಿಜರಲ್ಲಿ |ನ್ಯೂನ ಭಕುತಿಯನ್ನು ಕೊಡಲಿಬೇಡ ೫

೧೭
ಈ ವಸುಧೆಯೊಳೆಲ್ಲರಿಗಿಂತ ಕೃಷ್ಣನು ಆವುದರಿಂದಧಿಕಾ ಪ
ವಾರಿಧಿ ಮನೆಯಲ್ಲೆ ಈಗಿನರಸರಿಗೆ |ನೀರೊಳಗೇಸೊಂದು ಊರಿಲ್ಲವೇ ||
ಶಾರ್ಙ್ಗ ಧನುವಾದರೇನು ದುರ್ಲಭವಲ್ಲ |ಧಾರಿಣಿಯೊಳು ಮನೆ ಮನೆಯಲ್ಲಿ ಕಾರ್ಮುಖವು ೧
ಲೇಸೇನು ಕೌಸ್ತುಭವೊಂದೆಯೇ ಮಣಿಗಳು |ಏಸೊಂದಿಲ್ಲದೆ ಭಾಗ್ಯವಂತರಲ್ಲಿ ||
ಶೇಷನ ಹಾಸಿಗೆ ಹಾವಾಡಿಸಿ ಹೊಟ್ಟೆ |ಪೋಷಿಸಿಕೊಳ್ಳರೆ ಗಾರುಡಿಗರೆಲ್ಲ ೨
ಪೀತಾಂಬರಂತು ಎಲ್ಲರಿಗಿಹದು ದೊಡ್ಡ |ಮಾತಲ್ಲ ವನಮಾಲೆ ವೈಜಯಂತಿ ||
ಖ್ಯಾತಿಗೆ ಶಂಖಚಕ್ರವು ಹೇಳಿಕೊಳ್ಳಲು |ಜಾತಿಕಾರಗಿಲ್ಲೇ ಬಡಿವಾರವೇತಕೆ3
ಶ್ರೀವತ್ಸ ಶ್ರೀವತ್ಸವೆಂಬರು ಮಂದೆಲ್ಲ |ಆವ ಹುಣ್ಣಿನ ಕಲೆಯಾಗಿಹದೋ ||
ಆವಾನಿ ಹಯರಥ ಮುದಿಹದ್ದುಯೇರುವ |ಕೋವಿದರೆಲ್ಲೇನು ನೋಡಿ ವಂದಿಸುವರೋ ೪
ವೈಕುಂಠ ಮೊದಲಾದ ಮೂರೇ ಊರವನಿಗೆ |ಲೋಕದೊಳರಸರಿಗೇಸೋ ವೂರು ||
ಶ್ರೀಕಾಂತ ಪ್ರಾಣೇಶ ವಿಠಲನ ಸಂಗ |ಬೇಕೆಂದು ಬಯಸುವರೆಲ್ಲರೂ ತಿಳಿಯದೆ ೫

೩೫
ಉದ್ಧಾರ ಮಾಡಿದ ಶ್ರೀರಾಮ ಅಹಲ್ಯಾ | ಉದ್ಧಾರ ಮಾಡಿದ ||
ಪದ್ಮಜಾಂಡದೊಳು ಪ್ರಸಿದ್ಧವಾದ ಮಾತಿದು ಪ
ಮುನಿ ಶಾಪದಿಂದಲಿ ವನದಿ ಕಲ್ಲಾಗಿ ಬಲುದಿನ ಚಿಂತಿಸುತಲಿಹ |ವನಿತೆಯ ದಯೆಯಿಂದ1
ಮಂದಮತಿ ಮಾಟಕೀ ಇಂದುಮುಖಿಗೆ ಇಂಥ ಕುಂದು ಬಂತಲ್ಲಾ |ಎಂದು ಇಂದ್ರರ ಪ್ರಾರ್ಥಿಸುತಿರೆ2
ಮೌನಿ ಮಾತಿಗೆ ಪಾದರೇಣು ಸ್ಪರ್ಶವಿತ್ತು ಮಾನಿನಿಯ ಮಾಡಿದಾ |ಪ್ರಾಣೇಶ ವಿಠಲನು ೩

೧೪
ಉಪಕಾರ ಮರೆವುದುಚಿತವಲ್ಲೋ |ತಪನಾಪ್ತಾಕ್ಷನೆ ನಮ್ಮ ಹಿರಿಯರಂದು ಮಾಡಿದಾ ಪ
ಹರಿಯೆ ನಿನ್ನವರಿಗಮೃತವ ನೀಡುವೆನೆಂದು |ಭರದಿಂದ ಮಥನ ಮಾಡಿಸಿದೆ ಕಡಲ ||
ಗರಳವುದ್ಭವಿಸಲು ದಿವಿಜರಂಜಲು ಆಗ |ತ್ವರದಿಂದ ದರ ಭಯ ಪರಿಹರಿಸಿದರಾರೊ ೧
ಆರಣ್ಯದೊಳು ನೀನಿರಲು ನಿನ್ನೊಲ್ಲಭಿಯ |ಆ ರಾವಣನೊಯ್ಯಲು ಕಪಿಗಳೆಲ್ಲ ||
ಹಾರಲಾರೆವೊ ಸಮೂದ್ರಾ ಎನ್ನಲು ಬೇಗ |ಭಾರತೀ ರಮಣನೇ ಪೋಗಿ ವಾರ್ತೆಯ ತಂದ ೨
ಶರಧಿ ಕಟ್ಟುವುದಕ್ಕೆ ರೋಮ ರೋಮದಿ ಗುಡ್ಡ |ಧರಿಸಿ ತಂದನು ನೊಂದೆನೆನ್ನದಲೆ |ಹರಿಜಿತು ಶರದಿಂದ ಬಿಗಿಯೆ ಪ್ಲವಗರೆಲ್ಲಾ |ಧರಣಿ ಹೊಂದಲು ಸಂಜೀವನ ತಂದು ಉಳುಹಿದ ೩
ವಸುದೇವಜನಾಗಿ ನೀಂ ಜರಿಜನ ಭಯದಿಂದ |ವಸುಧೆಯೊಳಗೆ ನಿಲ್ಲಲಾರದಿದ್ದೆ ||
ಶಶಿಕುಲದಲ್ಲಿ ವಾತ ಜನಿಸಿ ಅವನ ಕೊಂದು |ಕುಸುಮನಾಭನೆ ನಿನ್ನ ಭಯ ಬಿಡಿಸಿದನಲ್ಲೋ ೪
ಮಣಿಮಂತ ಜಗದೊಳು ನಿನ್ನ ಮಹಿಮೆಯನ್ನು |ಮುಣುಗಿಸಿದನು ತ್ವರಿತ ನಮ್ಮ ಗುರುವು ||
ಘನ ಶಾಸ್ತ್ರಂಗಳ ರಚಿಸಿ ದುರ್ಮತವ ಸೋಲಿಸಿ |ಮನಸಿಜ ಪಿತನೇ ಪರನೆಂದು ಮೆರೆಸಿದ5
ಇಷ್ಟು ಸೇವೆಯ ಮಾಡಿ ಮೆಚ್ಚಿಸಿದನು ಗೇಣು |ಬಟ್ಟೆ ಬೇಡಿದನೇನೋ ಆತ ನಿನ್ನ ||
ಬಿಟ್ಟದ್ದಾನಾದಿತು ನಮ್ಮ ವಂಶಕರಿಗೆ |ಕೊಟ್ಟು ರಕ್ಷಿಸುವನು ಸ್ವಾಮಿ ಒಳ್ಳೆವನೆಂದು ೬
ಈಸು ಪರಿಯಿಂದ ನಮ್ಮ ಭಾರತೀಕಾಂತ |ತಾ ಸೋತಿರಲು ನಿನಗೆ ನಮ್ಮನೀಗ ||
ಘಾಸಿ ಮಾಡದೆ ಸಲಹುವದುಚಿತವೋ ಶ್ರೀ ಪ್ರಾ- |ಣೇಶ ವಿಠ್ಠಲರೇಯ ಅಪಕೀರ್ತಿ ಕೊಳಬೇಡ7

೫೮
ಎಂದಿಗೆ ಬಹನೆ ಕೃಷ್ಣ ಮಂದಸ್ಮಿತಾನನೆ |
ಅಂದದಿಂದಿರುವ ತನ್ನಯ ವೃಂದಾವನ ಬಿಟ್ಟಿಲ್ಲಿಗೆ ತವಕದಿ ಪ
ತರುಣೀ, ಗೋಕುಲದೊಳಗಿಹ ಸಖಿಯರು ಎಂಥಾ ಧನ್ಯರೆ |
ಪರಮಾತ್ಮನ ಪೊಂದಿ ಇತರ ಕರಕರಿ ಅರಿಯಳೆ ||
ಹರಿಯಿಂತೊಲಿದಿರಲವರೇನು ಸುರಲೋಕದ ಸ್ತ್ರೀಯರೇ |
ಪರಿಪರಿ ಸುಖ ಸಾಗರದೊಳಗಿರುವರು ಜರಿದು ಮಧುರೆಯಲ್ಲಿಹದೆಂದು ೧
ಅಮ್ಮೆ ಏನೊಳ್ಳೆವರವರಾಳ್ವರು ಸಮ್ಮಾತಾಂತಲ್ಲವೆ |
ನಮ್ಮನೆಯವರವರಂತೆ ಸುಮ್ಮನೆ ಇರುವರೆ ||
ಬೊಮ್ಮನ ಜನಕೆಮೊಲಿಸಿದರೆ ಒಮ್ಮೆಗೆ ಪೇಳಿರೆ |
ಸಮ್ಮಸಿ ಕೊಳ್ಳಲು ಮನದಿ ಸುಕರ್ಮದ ಪ್ರಬಲಿಗೆ ಘಮ್ಮನೆ ಬಹಸಖಿ ೨
ಅಲ್ಲೀ ಸ್ತ್ರೀಯರಕಿಂತಿತಿಶಯ ಚಲ್ವೆರ್ನಾವಲ್ಲವೆ |
ಸುಳ್ಳಲ್ಲಿಂತಾಭರಣಾಂಬರವೆಲ್ಲಿ ಕಂಡಿಹರೆ ||
ಗೊಲ್ಲಿತಿಯರು ನಮ್ಮಂದದಿ ಸೊಲ್ಲಿಸಬಲ್ಲರೆ |
ಮಲ್ಲ ಮರ್ದನ ಪ್ರಾಣೇಶ ವಿಠಲೆಮ್ಮನು ಬಿಟ್ಟೆಲ್ಲಿ ಪೋಗನು ೩

೧೦೭
ಎತ್ತಾರೆ ಹಿಂದಿನ ಮಾತು | ಭಾರತೀಶ ನಿನ್ನಭೃತ್ಯರು ತಮ್ಮನುವರಿತು |
ನೀ ಸಲಹದಿದ್ದರೆ ಹೀಗೆಂದು ಪ
ಮೂಗು ಹಿಡಕೊಂಡು ಕುಳಿತಿದ್ದಿ ನೂರತೊಂಭತ್ತೆಂಟು ಕಲ್ಪ |
ಆಗಲೊಬ್ಬರೂ ನಿನ್ನನಾರೆಂದು ಕೇಳಾರೋ ||
ಈಗ ದೇವರ ದಯೆಯಿಂದ ಹದಿನಾಲ್ಕು ಲೋಕಕ್ಕೆ ಮಂತ್ರಿ |
ಯಾಗಿ ಸಂತೋಷದಿಂದ ಮೇಲು ಮೆರೆವುದಕ್ಕೀ ಗರ್ವವೆಂದು ೧
ಊರ ಸೇರದಲೆ ಕಂಡ ಗಿಡದ ತೊಪ್ಪಲುಗಳ ತಿಂದು |
ಅರಣ್ಯದೊಳು ಬಹುಕಾಲ ಬದುಕಿದ್ದು ಮತ್ತೂ ||
ಶ್ರೀರಾಮನಾಳಾಗಿ ಶಿಲೆಯ ಪೊತ್ತುದು ಜಗವೆಲ್ಲಾ ಬಲ್ಲದು ಮುಂದೆ |
ವಾರಿಜಾಸನ ಪದವಿಯಾಳೆಂದು ಹರಿ ನುಡಿದುದಕೀಗರ್ವವೆಂದು ೨
ತಿರಿದುಂಡು ಹನ್ನೆರಡಬ್ದ ವನವಾಸ ಅಜ್ಞಾತವೊಂದು |
ವರುಷ ಮತ್ಸ್ಯಾಧಿಪನಾಗಾರದಲಿ ಪಾಕ ಮಾಡಿ ||
ತರುಣೀ ಮಾನಭಂಗವ ನೋಡಿ ಸುಮ್ಮನಿದ್ದೆಯಾಗ ಕೃಷ್ಣ |
ತರಿದು ದುರ್ಯೋಧನರ ರಾಜ್ಯ ನಿಮಗಿತ್ತುದಕೀ ಗರ್ವವೆಂದು ೩
ಎಲ್ಲರೂ ಕಂಡದ್ದು ಹುರಳಿ ಗುಗ್ಗರಿ ತಿಂದು ಭಿಕ್ಷಾರ್ಥಿಯಾಗಿ |
ಮುಳ್ಳು ಮರದಡಿಯಲ್ಲಿ ಕುಳಿತದ್ದು ಹಿರಿಬದರಿಯಲ್ಲಿ ||
ಸುಳ್ಳಲ್ಲ ವೇದವ್ಯಾಸಾನಂತ ವೇದಾರ್ಥ ತಿಳಿಸಿ ಸಕಲ |
ಬಲ್ಲವನೆಂದು ಪೆಸರೂ ಕೊಟ್ಟದೆವೇ ಈ ಗರ್ವವೆಂದು ೪
ಏನೆಂಬುವ ಸರ್ವರಲ್ಲಿ ಹೊಕ್ಕು ಬಳಕೆ ಮಾಡುತಿದ್ದಿ |
ಹೀನರು ನಿನಗೀಸು ನೀರ ಹಾಕಂದು ಕೇಳಿ ||
ಪ್ರಾಣೇಶ ವಿಠಲನ್ನ ಭಜಿಸಿ ಪೂರ್ಣ ದಯಕೆ ಪಾತ್ರನಾಗಿ |
ಮೀನಾಂಕಾರಿ ಮುಖರಿಂದರ್ಚನೆಗೊಂಬಕ್ಕೀ ಗರ್ವವೆಂದು ೫

೩೧
ಎಲೊ ರಮಾಪತಿ ಹಕ್ಕಿಗಳು ಬಾಯಿ ಬಿಡುವಂತೆಬಳಲುವೆವೊ ಈಗ ನಾವೆಲ್ಲ | (ನಾವೆಲ್ಲ)
ಈ ಬ್ರಹ್ಮಕುಲದ ಅಭಿಮಾನ ನಿನದಲ್ಲೆ ಪ
ಗೌಡ ಪ್ರಬಲಾಗೆ ತಲೆಗೂಡೆನಿಸಿತೆನಗೆ ನೋಡ ಮನೆಕಡೆಗೆ ಮಡಿವಾಳ | (ಮಡಿವಾಳ)
ಮರ ಹಾಳುಮಾಡುವರು ದ್ವಿಜರೆಂಬನು ಜೀಯ ೧
ಗಡಿಗೆಗಳು ಒಂದನ್ನ ಕೊಡನು ಗ್ರಹಣಗಳು ಹನ್ನೆ-ರಡೂ ಆದರನ್ನಾ ಕುಂಬಾರ | (ಕುಂಬಾರ)
ನಿದ ಸ್ಮರಿಸಿಅಡವಿಯೊಳು ಕುಳಿತು ಆ(ಅ ?)ಳಬೇಕು ೨
ಭಕ್ರಿಯೆಂಬುದು ತುಪ್ಪ ಸಕ್ರಿ ಮಾಡಿದ ಬಡಿಗಾಕ್ರೂರ ವರದ ದಯಾಸಿಂಧು | (ದಯಾಸಿಂಧು)
ಎಂದು ಈಅಕ್ರಮವ ನಿನಗೇ ಉಸಿರುವೆ3
ಕಾಲರಕ್ಷೆಯ ಹೊಲಿಯ ಧಾಳಾಯ ಕೊಡುಯೆಂದುಗೋಳಾಡಿಸುವನು ಅತಿಶೂದ್ರ | (ಅತಿಶೂದ್ರ)
ಈ ದುಃಖಕೇಳುವರೇ ಇಲ್ಲೋ ಪರಮಾತ್ಮ ೪
ಯರಿಬೀಳು ಅದಕೂ ಮತ್ತೇರಿಸುವನೋ ಎಲ್ಲೋ ಎಂ-ದಿರುಳೆಲ್ಲ ನಿದ್ರಿಲ್ಲೋ ಮೇಲ್ಪ್ರತ್ತಿ | (ಮೇಲ್ಪ್ರತ್ತಿ)
ಯೆಂಬುವದುಗುರುತಿಲ್ಲಧೋಯ್ತೋ ಗುರುವರ್ಯ ೫
ಇದ್ದ ಜ್ಞಾತಿಗಳಿಂದೆ ಮುದ್ದ್ಯಾಗಬೇಕೆಂಬಶ್ರದ್ಧೆಯನೇ ಬಿಟ್ಟು ಅವನನ್ನೇ | (ಅವನನ್ನೇ)
ಕೊಂಡಾಡಿಹೊದ್ದಿ ದಿನಗಳದೂ ಬದುಕುವರು6
ಈ ರೀತಿ ನೋಡಲ್ಕೆ ಮೂರನೆ ಕಾಲವೇಂತೋರುವದೊ ಯಮಗೆ ಪ್ರಾಣೇಶ | (ಪ್ರಾಣೇಶ) ವಿಠಲ ಉ-ದ್ಧಾರ ಮಾಡುವದು ನೀ ಬಲ್ಲೆ7

೧೩೩
ಎಷ್ಟೋ ಹರಿ ಮರುತರ ಕೃಪಿ ನಿನ್ನಲ್ಲಿ |
ಕೆಟ್ಟುದೇ ಭೂಷಣವಾಗಿಹುದೋ ಪಾರ್ವತೀ ರಮಣ ಪ
ವಿಷವನ್ನೆ ಭೋಜನ ಮಾಡಿ ಜೀರ್ಣಿಸಿಕೊಂಡಿ |
ವಸನ ಬಿಟ್ಟು ಜಿನಸ್ಥಿ ಭಸ್ಮ ಧರಿಸಿ ||
ವೃಷಭ ವಾಹನನಾಗಿ ಭೂತ ಪ್ರೇತಗಳೊಳು ಸ್ಮ |
ರಿಸದ ಭೂಮಿಯೊಳಿರಲು ಪೂಜಿಪರು ಸುರರೆಲ್ಲ ೧
ತಂದೆ ತಲೆ ಕಡಿದುದಕೆ ಕುಂದು ಹೊಂದದಲಿದ್ದೆ |
ನಿಂದಿತನ ಶಿರದ ಮೇಲಿರಿಸಿಯಿದ್ದೆ ||
ಒಂದೊಂದೆ ನೀನೆ ಪರದೈವ ಎಂದು ಪೇಳ್ದೆ |
ಗೋವಿಂದನಿಂದರ್ಚನೆಯ ಕೊಂಡೆ ಭಳಿ ಭಳಿರೆ ಶಿವ ೨
ಗುರುವೆನಿಸಿಕೊಂಬೆ ಪ್ರಾಣೇಶ ವಿಠಲನೊಳು |
ಮತ್ಸರಿಸುತಿಹ ಖಳರಿಗೆ ಇದಲ್ಪವೇನೊ ||
ಸರಿವಬ್ಬರಿಗೆ ಆಹೆನೆಂಬುವನು ಕೆಡುವ ನೀ |
ಉರುಗನಂತಾಗಬೇಕೆಂದಾಗಿ ಮೆರೆದೆಲವೊ೩

ಶ್ರೀ ಪ್ರಾಣೇಶದಾಸರ ಸಂಪ್ರದಾಯದ ಹಾಡುಗಳು
೨೪೦
ಶ್ರೀದೇವರ ವಿವಾಹ ಮಹೋತ್ಸವದ ಪದಗಳು
ಏನು ನೋಡಿತ್ತ ನೀ ವರಕೆ ಮಗಳಾ |
ಹೀನವಳಿತೆನ್ನದಲೆ ತ್ವರದಿ ಜಲನಿಧಿಯೂ ಪ
ಕಪ್ಪು ರೂಪವು ಇವನ ನೆಲಿ ಒಬ್ಬರರಿಯರೂ |
ಸರ್ಪಶಯನನು ತಿರಿದುಕೊಂಡು ತಿಂಬಾ ||
ಮುಪ್ಪಿನವ ಇವ ಹುಟ್ಟಿದುದನಾರು ಬಲ್ಲವರು |
ತಪ್ಪಿ ಕೊಟ್ಟನೆ ಎಲ್ಲರನು ಜರಿದು ಹೀಂಗೇ ೧
ಕದ್ದು ಪೊಟ್ಟೆಯ ಪೊರೆವ ಎಂಜಲೆನ್ನದೆ ತಿಂಬ |
ಹದ್ದನೇರುವ ಅಡವಿಯೊಳು ಚರಿಸುವಾ ||
ಬುದ್ಧಿಹೀನರ ತೆರದಿ ಹಡದವಳ ಶಿರ ಕಡಿದ |
ಸದ್ಯ ವಸನವ ಕಳದು ಬತ್ತಲಿರುವವಗೇ ೨
ಹೇಸಿಕಿಲ್ಲದೆ ಕರಳ ಮಾಲಿಕಿಯ ಹಾಕಿಹನು |
ದೋಷಕಂಜನು ಜಾರತನವ ಮಾಳ್ಪಾ ||
ದಾಸನಂದದಿ ಬಲಿಯ ಮನಿಯ ಬಾಗಿಲ ಕಾಯ್ದ |
ಆ ಸವ್ಯಸಾಚಿ ತೇರಿಗೆ ಸೂತನಾದವಗೆ ೩
ಹೆಣ್ಣುಗಳ ಅಂಬರವ ಕೊಂಡು ಮರನೇರುವನು |
ತನ್ನ ಮಕ್ಕಳ ತಾನೆ ಹತಗೈಸುವಾ ||
ಮಣ್ಣನೂ ಬೆಂಕಿಯನು ತಿಂಬ ವಾವಿಯನರಿಯ |
ತನ್ನ ಪುತ್ರರಿಗೆ ತನ್ನಯ ಮಕ್ಕಳಿತ್ತವಗೆ ೪
ಪ್ರಾಣೇಶ ವಿಠಲನಲ್ಲಿಹವಿಂಥ ಸುಗುಣಗಳು |
ತಾನೊಂದು ಪೂರ್ತಿ ತಿಳಿಯನು ಸಮುದ್ರಾ ||
ಶ್ರೀ ನಾರಿಯನು ಕೊಟ್ಟ ಅವನ ಬುದ್ಧಿಯೊ ಅಥವ |
ಏನು ವ್ರತ ಸೇವಿಸಿದ್ದಳೊ ಕಮಲ ಮಂದಿರಿಯು ೫

೧೨೬
ಏನು ಮರುಳಾದೆವ್ವ ಎಲೆ ಭಾರತೀ |ನೀನರಿಯೆ ಪವನನಿಂಥವನೆಂಬುದು ಪ
ಕಲ್ಲು ಹೊರುವನು ಮತ್ತೆ ಯಾರಿಂದಲಾಗದವು |ಎಲ್ಲರಂತಲ್ಲ ಕಪಿರೂಪ ನೋಡು ||
ಖುಲ್ಲ ಫಲಪುಷ್ಪಯುಕ್ತ ವನವನು ಕೆಡಿಸಿದನು |ಎಲ್ಲಿಂದ ಒದಗಿದನೊ ಈ ಪತಿಯೊ ನಿನಗೆ೧
ರಕುತವಂ ಪಾನ ಮಾಡಿದನಂತೆ ಕೇಳಿದೆಯಾ |ರಕ್ಕಸೊಬ್ಬಳು ನಿನಗೆ ಸವತಿ ಇಹಳೂ ||
ಮಕ್ಕ ಮಾರಿ ಮಗನುಂಟು ಗಂಡನು ಬದ |ನಕ್ಕೆ ಗತಿಯಿಲ್ಲದೆಲೆ ಭಿಕ್ಷೆ ಬೇಡುವನು ೨
ಹುಟ್ಟು ಬಡವವ ತಾನಾದರೇನಾಗಲಿ ನಿನ್ನ |ಬಿಟ್ಟು ತುರ್ಯಾಶ್ರಮವ ಧರಿಸಿಕೊಂಡು ||
ದೃಷ್ಟಿಗೋಚರನಾಗದೇ ನರರಿಗೆ ಪ್ರಾಣೇಶವಿಠಲನ ಬಳಿಯಲ್ಲಿ ಬದರಿಯೊಳು ಸೇರಿಹನು ೩

೩೯
ಕಣ್ಣು ಮುಚ್ಚೆನ್ನಾ ಆಡಿಸೆಸಣ್ಣವರನ್ನು ಹೊರಗಡಗಿಸೆ ಪ
ಗಟ್ಟಿ ಹುಡುಗರು ಅವರೆಲ್ಲಮಟ್ಟ ಮಾಯಾಗಿ ಹೋದರು ||
ಥಟ್ಟನೆದ್ದು ಯನ್ನ ಕೈಯವರ ಮುಟ್ಟಿಸದಿರೆ ಬಿಡೆ ನಿನ್ನ ೧
ಪಾಯಿಸ ಹೋಳಿಗೆ ಮಾಡಿಬಾಯಿಗೆ ಕೈದೋರೆ ಗೋಪಿ ||
ನಾಯೆರುವಿನೆ ನಿನ್ನ ತಲೆಗೆನೀ ಯೆರಕೊಳ್ಳ ಒಲ್ಲೆನೆನ್ನೆ ೨
ಅಣ್ಣನ ರಂಬಿಸಿ ಕರೆದುಹಣ್ಣುಗಳವಗೆ ಕೊಡಬೇಡೆ ||
ಚಿನ್ನದ ಗೊಂಬೆ ಬಾ ಎಂದುಬಣ್ಣ ಬಣ್ಣದಲೆನ್ನ ಕರೆಯ ೩
ನೀ ಹಾರ ಮಗನೆಂದು ಕೇಳಿಮೇದಿನಿಯೊಳು ನಾ ಹೆಚ್ಚೆನ್ನೆ ||
ಹೋದ ಬಾರಿ ಹೊಟ್ಟಿಗೆ ಮಾರಿ ಹೋದಳೂ ನಿಮ್ಮಮ್ಮನೆನೆ ೪
ಯನಗೆ ಪಾಪ ನೀನಾಗಿ ತಿನಲಿಕ್ಕಪ್ಪಚ್ಚಿ ಬೇಡೇ ||
ಮಣಿಗುಂಡೆನಗೆ ಕೊಡುಯೆಂದುಮುನಸುಗುಟ್ಟೆನ್ನನು ಕಾಡೇ ೫
ದೃಷ್ಟಿ ತಾಕಿತು ಮಗಗೆಂದುಕಟ್ಟಿಸೆ ಯಂತ್ರ ಇನ್ನೊಮ್ಮೆ ||
ಕೊಟ್ಟು ಅಮ್ಮಿಯ ರಂಬಿಸಿತೊಟ್ಟಿಲೊಳಗಿಟ್ಟು ತೂಗೇ ೬
ಏನು ಪುಣ್ಯ ಮಾಡಿದೆನೋಕ್ಷೆÆÃಣಿಗೆ ಹತಾರ್ಥವಾಗಿ ||
ಪ್ರಾಣೇಶ ವಿಠಲನು ನಿನ್ನ ತಾನೇ ಕೊಟ್ಟನು ಯನಗೆನ್ನ ೭

೩೩
ಕಾಯಯ್ಯ ರೋಗ ನಿಕಾಯ ಕಳೆದು ನಿನ್ನಕಾಯಿಕೊಂಡವರ ಕೂಡ ||
ಈ ಯಣಕವೇ ಮೆಚ್ಚರೋ ಯತಿಗಳು ಆದ-ದ್ದಾಯಿತೋ ಶ್ರೀಶ ಗುಣಿ ಹೇ ಕರುಣೀ ಪ
ಮೃತ್ಯುಂಜಯಾರಾಧ್ಯ ಮೃತ್ಯುವಿಗೆ ಮೃತ್ಯುಸತ್ಯ ನೃಸಿಂಹನೆಂದು ||
ಸತ್ಯವತಿಯ ವರಪುತ್ರ ಪೇಳಿರಲು ತಾಮತ್ತೂ ಬರೆದಿಹ ಮಧ್ವ ಪ್ರಸಿದ್ಧ1
ಧನುವಂತ್ರಿ ಧನುವಂತ್ರಿಯೆನೆ ವ್ಯಾಧಿ ಪರಿಹಾರ-ವೆನುತಿಹ ವಚನಗಳು ||
ಗಣನೆಗೆ ಬಾರವೋ ಪ್ರಣತ ಜನರನಿಷ್ಟುದಣಿಸಲು ತಿಳಿದು ನೋಡು ದಯ ಮಾಡು ೨
ಪ್ರಾಣಮತದೊಳಿಪ್ಪ ಪ್ರಾಣಿಗಳಿಗೆ ಬಲಜ್ಞಾನಾರೋಗ್ಯಪ್ರದರಾ ಕ್ಷೆÆÃಣಿಯೊಳಿನ್ನಾರಾ ||
ಕಾಣೆ ನಿನ್ನುಳಿದು ಶ್ರೀಪ್ರಾಣೇಶ ವಿಠಲರೇಯ ಸುಜ್ಞೇಯ ೩

೮೨
ಕಾಯೆ ನಿನ್ನ ಪದ ತೋಯಜಕೆರಗುವೆ |ಮಾಯದೇವಿ ಹರಿ ಕಾಯ ನಿವಾಸೇ || ಕಾಯೇ | ಕಾಯೇ ಪ
ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನ ಸತಿ ||ಕರ್ದಮಜಾಲಯ | ಭದ್ರ ಶರೀರೆ ೧
ಇಂಗಡಲಾತ್ಮಜೆ | ಅಂಗನಾಕುಲ ಮಣಿ ||ರಂಗನ ಪದಕಂಜ | ಭೃಂಗೆ ಕರುಣದಿ ೨
ಪ್ರಾಣೇಶ ವಿಠಲನ | ಮಾನಿನೀ ಯನ್ನಯ ||ಹೀನತೆಯೆಣಿಸದೆ | ಪೋಣಿಸಿ ಮತಿಯ ೩

೧೨೫
ಕಾಯೆ ಭಾರತೀ ನಿನ್ನ ಆರಾಧಿಸುವೆ ಯನ್ನ |ಮಾಯಾ ಮಂದಿರನವರ ಕಿಂಕರನು ಯೆನಿಸೇ ಪ
ವ್ಯೋಮಜ ರಮಣಿ ನಳಿನಭವ ಜಾತೆ ಕೃತಿ ಪುತ್ರೆ |ಸಾಮಜ ಗಮನೆ ಉರಗವೇಣಿ ಕಾಳೀ ||
ಸೋಮಮುಖಿ ಬೇರೊರಸಿ ಯನ್ನ ದುರ್ಮತಿಯಳಿದು |ರಾಮಧ್ಯಾನದಲಿ ಮನ ನಿಲ್ಲಿಸುವದನಿಶ ೧
ಲೋಕನಾಯಿಕೆ ಶೈಲಜಾಪತಿ ಮುಖ ಪೂಜಿತಳೆ |ನೀ ಕರುಣದಲಿ ನೋಡಿ ಕರವ ಪಿಡಿಯೇ ||
ಕಾಕು ಮನುಜರ ಸಂಗವನು ಕೊಡದೆಯೊಂದಿನಕು |ಲೌಕಿಕವ ಸಂಪಾದಿಸಿಸಬೇಡವಮ್ಮ ೨
ಕೃಷ್ಣೆ ನಳನಂದಿನಿ ದ್ರುಪದ ತನುಜೆ ಶಿವಕನ್ಯೆ |ದುಷ್ಟ ಜನ ಗಿರಿಕುಲಿಶೆ ಸ್ವರ್ಣಗಾತ್ರೆ ||
ಕೊಟ್ಟ ಮಾತಿಗೆ ತಪ್ಪದಲೆ ಕಾಯ್ವ ಪ್ರಾಣೇಶ |ವಿಠಲನ ಚರಣಯುಗ ಸರಸೀರುಹ ಭೃಂಗೆ೩

೨೭
ಕಾಯೋ ಕೃಷ್ಣ ಭವ ತೋಯದಿ ಮುಳುಗಿ ಉ- |
ಪಾಯವ ಕಾಣದೆ ಬಾಯ ಬಿಡುವೆನೋ ಕಾಯೋ ಕಾಯೋ ಪ
ಭಾಗವತರ ಪ್ರಿಯ ನಾಗಭೂಷಣ ಸಖ |ನೀಗಿ ಭಯವ ಕರ ಬೇಗನೆ ಪಿಡಿಯೊ ೧
ಇಂದಿರೆಯರಸ ಮುಕುಂದ ಯಶೋದೆಯ |ನಂದನ ಕರುಣಿಸೊ ಇಂದೀವರಾಕ್ಷ2
ಸಿಂಧುಶಯನ ಪೊರೆಯೆಂದು ಕರೆಯ ಕರಿ |ಬಂದು ಸಲಹಿದೆಯೋ ಮಂದ ದಯಾಳು3
ಕುರುಪ ಪಿಡಿಯಲುದ್ಧರಿಸಿದೆ ತರುಣಿಯ |ನರಕಹ ನಿನಗೆ ನಾ ಪರಕೀಯನಲ್ಲೋ ೪
ಜಾನಕೀ ವಲ್ಲಭ ನೀನೇ ಮರೆದುಬಿಡೆ |ಕಾಣೆನೊ ಒಬ್ಬರ ನಾನವನಿಯೊಳು5
ಭಕುತರಿಗೋಸುಗ ಹತ್ತವತಾರವ |ಅರ್ತಿಂದಲಿ ಕೊಂಡುತ್ತಮ ಶ್ಲೋಕ6
ದ್ವೇಷಿಗಳೆನ್ನನು ಘಾಸಿಸದಂದದಿ |ಪೋಷಿಸುವುದು ಪ್ರಾಣೇಶ ವಿಠ್ಠಲನೇ ೭

೧೨೪
ಕಾಳೀ ದ್ರೌಪದಿ ಭಾರತೀನಿನ್ನ ಪಾದ ಕೀಲಾಲಜ ನುತಿಪೆ ಪ್ರತಿ ||
ವೇಳೆಯೊಳಗೂ ಲಕ್ಷ್ಮೀಲೋಲನ ಚರಣಾಬ್ಜ |ವಾಲಗವೀಯೇ ಸುಶೀಲೆ ಸ್ವಯಂಭುಜೆ ಪ
ಇಂದ್ರಸೇನಾ ನಳನಂದಿನಿ ಶಿವಕನ್ಯಾ |ನಂದಪೂರಿತಳೆ ಚಂದ್ರಾ |ನಿಂದಕ ರಿಪು ಜ್ಞಾನಸಾಂದ್ರೆ ಸುಪತಿವ್ರತೆಕಂದುಗೊರಳ ವಾರುಣೀಂದ್ರ ಅಂಡಜಾಧಿಪ ||
ಇಂದ್ರ ನಿರ್ಜರ ವೃಂದ ಮುನಿಗಣವಂದಿತ ಪದಾರವಿಂದೆ ಭವದಲಿನೊಂದೆ ಭಯವಾರೆಂದು(ನಿನ್ನೊಡಿವೆಂದದಲಿ ನಿನ್ನಡಿ ಪೊಂದಿ ಬೇಡುವೆ ನಂದದಲಿ)ಕೊಡೆ (ಅ) ಮಂದ ಕರುಣೆ ೧
ತರಣಿಯಾನಂದ ಭಾಸೆ |ಪ್ರದ್ಯುಮ್ನ ದೇವರ ಸುತೆ ಕ್ಲೇಶ ಹರಿಸೆ |
ಹರಹಿ ಯನ್ನಯ ಮೇಲೆ ಕರುಣಾಪಾಂಗದ ದೃಷ್ಟಿ |
ದುರುಳ ಮತಿ ಪರಿಹರಿಸಿ ತವಕ ಹರಿ-ಗೆರಗೊ ಮನ ಕೊಡು ಪರಮ ಧಾರ್ಮಿಕೆಕರೆವೆ ಬಂದೀಗಿರೆ ಹೃದಯಾಬ್ಜದಿ |
ಉರು ಪರಾಕ್ರಮೆ ಪರ ತರಳೆ ಸದಾಪೊರೆಯೆ ಬಿಡದಲೆ ಕರ ಮುಗಿವೆ ೨
ವಾಣೀ ಸುಂದರಿ ವರದೆ ಸಾಧ್ವೀ |ವೀಣಾಪಾಣಿ ಪೇಳುವೆನೆ ಇದೇ |
ಹೀನ ವಿಷಯವಲ್ಲೆ ಪೋಣಿಸಿ ಸುಮತಿ ಶ್ರೀಪ್ರಾಣೇಶ ವಿಠಲನ ಧ್ಯಾನದೊಳಿಹ ಮ-
ಹಾನುಭಾವರ ಸಂಗ ಪಾಲಿಸೇ ||
ಮಾನಿನೀ ಕುಲ ಮೌಳಿ ಮಣಿ ಚಂ |
ದ್ರಾನನೆ ಮದಗಜಗಮನೆ ಸು-ಶ್ರೋಣಿ ಅಷ್ಟಾಪದ ಸುಕಾಂತೆ ೩

೪೭
ಕೇಳೆ ಯಶೋದೆ ನಿನ್ನ ಬಾಲಕನಾಟಗಳೂ |ಹೇಳಿಕೊಂಡರೆ ಸುಳ್ಳೇ ಕಾಣಿಸಿತಮ್ಮ ಪ
ನೀರೊಳಾಡುವನಲ್ಲೆ, ಪೋರರ ಕೂಡಿಕೊಂಡು |ಮಾರಿಯೆಂಬೊದೇನು ಸಾರಿ ಬಾಹೊದೆ ೧
ಎಲ್ಲರಂತುಂಡು ಮನೆಯಲ್ಲಾಡಬಾರದೆ |ಕಲ್ಲೆತ್ತುವನೆ ಯಂಥ ಬಲ್ಲಿದನಂತೆ ೨
ನಿಮ್ಮ ಹಿತಾರ್ಥನಾಗಿ ಸಮ್ಮೀಸಿ ಪೇಳಿದರೆ |ಬೊಮ್ಮನ ಮಗನಂತೆ ನಮ್ಮನ್ನೇ ಬೈವ ೩
ಮೂರು ಕಣ್ಣವ ಪರ ನಾರೇರ ಮುಟ್ಟಲಾರ |ಊರೊಳಗಿವ ಬಲು ಮೀರಿದನಮ್ಮ ೪
ಸಣ್ಣವನೆನಬೇಡ ನಿನ್ನ ಮಗನ ಗೋಪಿ |ಅನ್ನಿಥವಾಡೆವೆಮ್ಮ ಚಿನ್ನಗಳಾಣೆ ೫
ಬೆಂಕಿಗಂಜದೆ ನಿರಾತಂಕದರೊಳಗಿಹ |ಮಂಕುತನವ ನೋಡೆ ಪಂಕಜನೇತ್ರೆ6
ಇನ್ನೊಂದು ಮಾತು ಕೇಳೆ ಮೊನ್ನೆ ಮೊನ್ನೆ ಒಬ್ಬ |ಹೆಣ್ಣಿನ ಕೊಂದನಲ್ಲೆ ಅನ್ಯಾಯ ನೋಡೆ ೭
ಕಿತ್ತಿದನೊಂದು ಮರ ಮತ್ತೆರಡು ಮೂರೀದ |ಮತ್ತಗಜವ ಕೊಂದುನ್ಮತ್ತನ ನೋಡೆ ೮
ಸದ್ಯ ಹೋಗಲೀನಿತು ಇದ್ದೊಬ್ಬವನು | ಅಪ್ರ-ಬುದ್ಧನಾಗಬಾರದು ಬುದ್ಧಿಯ ಹೇಳೇ ೯
ಅಧಮರೊಡನೆ ನಿತ್ಯ ಕದನ ಮಾಡುವದೇಕೆ |ಮಧುಸೂದನನ್ನು ಒಳ್ಳೆ ಹದನದಲ್ಲೀಡೆ ೧೦
ಕಾಣ ಬಂದದ್ದಾಡಲು ಪ್ರಾಣೇಶ ವಿಠಲಗೆ |ಹೀನ ತೋರುವದಮ್ಮಾ ಏನನ್ನಬೇಕೆ ೧೧

೪೯
ಕೊಡು ಸೀರಿ ಸೀರಿ ಹರಿ |ಕೊಡು ಸೀರಿ ಸೀರಿ ಹರಿಪ
ಮಾಧವ ನೀ ನಮ್ಮ |ಹಾದಿ ಹೋಗಲು ವಾರಿಗ್ಯಾದರೆ ಈಗ ಸರಿ ೧
ಅಕ್ಕರವಲ್ಲಿದು ಫಕ್ಕನೆ ಕಂಡರು |ಚಿಕ್ಕವ ನೀನು ಅರಿ ೨
ಬೇಡಲು ಪಾಲು ನೀಡದೆ ನಾವು |ಆಡಿದ್ದದೆಲ್ಲ ಮರಿ ೩
ನಲ್ಲರು ಹುಡುಕುತ ಇಲ್ಲಿಗೆ ಬಂದರೆ |ಕೊಲ್ಲರೇ ಕಂಡ ಪರಿ ೪
ಪ್ರಾಣೇಶ ವಿಠಲ ನಮ್ಮಾನವ ಕಾಯ್ವರ |ಕಾಣೆವೋ ಹತ್ತಿಗರಿ ೫

೫೦
ಕೊಡುವೆನು ಕೊಡುವೆನು |ಕಡೆಗೆ ಬಂದು ಕೈ ಮುಗಿದರೆ ಸೀರೆಯ ಪ
ಒಂದೇ ಮಾತು ಇನ್ನೊಂದನಾಡೆನಾ |ಮಂದಗಮನೆಯರೆ ಬಂದು ನಿಲ್ಲುವುದು1
ವತ್ಸರವಾದರು ಮಚ್ಛಲ ಗೆಲಿಸುವೆ |ತುಚ್ಛವ ಮಾಡೆನು ಮತ್ಸಾಂಬಿಕಿಯರೇ ೨
ನಾ ಸರ್ವೋತ್ತಮನೇ ಸುಳ್ಳಾಡಿದರೇ |ಸಖಿಯರೆ ಪ್ರಾಣೇಶ ವಿಠಲನೇ ೩

೧೩೧
ಗಂಗಾಧರ ದೇವ ಜಯಗೀಷ ವ್ಯಾನಂಗಾರಿ ಗಿರಿಜಾಧವ |ಮಂಗಳ ಪ್ರದನೆ ಅಮಂಗಳ ಶೀಲ |
ಭುಜಂಗ ರೂಪದಿ ಪಾಂಡು |ರಂಗ ಘಾಸಿಗೆಯಾದ ಪ
ವೈಕಾರಿಕಾಹಂಕಾರ ತತ್ವದೊಡೆಯ, ನಾಕುಮೊಗನ ಕುಮಾರ |
ಶ್ರೀಕಂಠ, ಸ್ಥಾಣು, ವಿಶ್ಖೋಜನಕ, ಚಂದ್ರಶೇಖರ, ಈಶ ಪಿನಾಕಿ ಭಕ್ತವತ್ಸಲ |
ಶೋಕನಾಶಕ ಶಂಭು, ಪಶುಪತಿ, ಹೇ ಕರುಣಿ, ಸದ್ಗುಣ ಸುಖಾರ್ಣವ |
ಪಾಕಶಾಸನ ಪ್ರಮುಖ ವಂದ್ಯ, ವಿಶೋಕ, ಎನ್ನಭಿಲಾಷೆ ಪೂರ್ತಿಸು೧
ಪ್ರಾಣನಂದನ ತೈಜಸಾಹಂಕಾರಾಭಿಮಾನಿ ಶ್ರೀಶುಕ ದೂರ್ವಾಸ |
ಕ್ಷೋಣಿ ಸಂಧೃತ ಧನ್ವಿ, ದಾನವಾಂತಕ, ಶೂಲಪಾಣಿ, ಪ್ರಮಥಾಧಿಪ ಬಾಣವರದಯನ್ನ |
ಮಾನ ನಿನ್ನದು ಚಕ್ರಿ ಪದಕಂಜ ರೇಣು ತೋರಿಸು ತವಕದಿಂದಲಿ |
ದ್ರೌಣಿ, ಶಿವ, ಪ್ರಣತ ಜನ ಸುಮನಸಧೇನು, ತವ ಪದ ಸಾರ್ವೆ ಸತತ ೨
ತಾಮಸಾಹಂಕಾರೇಶ ಸಂಕರ್ಷಣನಾ ಮಗನೇ ಕೊಡು ಲೇಸ ರಾಮನಾಮ ಮಂತ್ರ |
ಪ್ರೇಮದಿ ಜಪಿಸುವ ಸ್ವಾಮಿ, ಅನಲ, ವಹ್ನಿ ಸೋಮಲೋಚನ ಹರ |
ವಾಮದೇವ, ಕಪರ್ದಿ, ಭವ ಭಯ ಭೀಮ ಶ್ರೀ ಪ್ರಾಣೇಶ ವಿಠಲನ |
ಪ್ರೇಮ ಪುಟ್ಟಿಸೋ ರೌಪ್ಯ ಪರ್ವತಧಾಮ ಶ್ರೀ ವಿರೂಪಾಕ್ಷ ಗುರುವೇ ೩

೧೨೯
ಗಂಗಾಧರ ಸುಮತಿ ಪಾಲಿಸೋ | ಪಾಂಡು |ರಂಗನ ಚರಣಾಬ್ಜ ಭಜನೆ ಮಾಡು ನಿತ್ಯ ಪ
ವೈಕಾರಿಕಾದಿತ್ಯ ರೂಪ ದನುಜರಿಗೆ |ಶೋಕ ಕೊಡುವದು ನಿರಂತರದಿ ||
ಲೌಕಿಕವೆಲ್ಲ ವೈದಿಕವಾಗಲೆನಗೆ ಮೈನಾಕೀ |ಹೃತ್ಕಮಲ ಮಾರ್ತಾಂಡ ಭಕ್ತ ವತ್ಸಲ ೧
ವಾಸವಾದ್ಯಮರ ವಂದಿತನೆ ಪದ್ಮಜ ಸುತ |ನೀ ಸಲಹುವದೋ ಕೈಲಾಸವಾಸ ||
ಕ್ಲೇಶ ಮೋದವು ಸಮ ತಿಳಿಸೋ ಅಶ್ವತ್ಥಾಮ |ದೋಷರಹಿತನೆ ದಕ್ಷಾಧ್ವ ರನಾಶಕ ೨
ಪವಮಾನ ತನಯ ನಿನ್ನವರಲ್ಲಿ ಕೊಡು ಸ್ನೇಹ |ದಿಙ ವಸನಾದಿಯಲ್ಲಿ ಎನ್ನಿರವ ಬಲ್ಲಿ ||
ಅವಲೋಕಿಸದೆ ಎನ್ನನೇಕ ಪಾಪಗಳನ್ನು |ತವಕ ಉದ್ಧರಿಸೋ ವಿಯತ್ಪತಿ ಜನಕ ೩
ಸಾಮಜಾಜಿನ ವಸ್ತ್ರ ಭಸ್ಮ ಭೂಷಿತ ದೇವ |ಸೋಮಶೇಖರನೆ ಬಿನ್ನಪವ ಕೇಳು ||
ಪ್ರೇಮದಿಂದಲಿ ಭಾಗವತರ ಸಂಗತಿ ನಿತ್ಯ |ಶ್ರೀ ಮನೋರಮನ ಚರಿತೆ ಪಾಡಿಸುವದಯ್ಯ ೪
ಶ್ರೀಕಂಠ ನೀ ಪೇಳಿದನ್ಯಶಾಸ್ತ್ರಕೆ ಬುದ್ಧಿ |ಸೋಕದೆ ಗುರು ಮಧ್ವ ಮುನಿಮತವೇ ||
ಬೇಕು ಜನುಮ ಜನುಮಕ್ಕೆನಿಸೋ ತ್ರಿಯಂಬಕ |ನಾ ಕೈಯ್ಯ ಮುಗಿವೆ ಪ್ರಾಣೇಶ ವಿಠಲದಾಸ ೫


ಗಂಗಾಪಿತ ರಾಘವ ನಂಬಿದೆ ಶ್ಯಾಮ-ಲಾಂಗ ನಿನ್ನಯ ಪಾದವ ||
ಮಂಗಳೆ ರಮಣ ಭುಜಂಗಧರಾರ್ಚಿತಾ |ನಂಗಜ ಜನಕ ಪಾಲಿಸಿಂಗಡಲೊಡೆಯನೆ ಪ
ಶಫರ, ಕಮಠ, ಕೋಲ ನೃಹರಿ ಬಾಲ |ನೃಪಕುಲ ಪವನ ವ್ಯಾಲ ||
ವಿಪಿನ ಸಂಚರಾ ಕೃಷ್ಣ ವಿಪುಳಾ ಬುದ್ಧ ಕಲ್ಕಿ |ವಪುಧರ ಅನಿರುದ್ಧ ಕೃಪಣ ವತ್ಸಲ ಸ್ವರ್ಪಾ- ||
ದಪನೆ ಹರಿ ಕಾಶ್ಯಪಿಯೊಳಗೆ ಸುರ ರಿಪುಹ | ಶಿವನ ಕ |ರಿಪನ ನರಪತಿ ದ್ರುಪದ ನಂದನೆಯ ಪೊರೆದೀಶ್ವರ |
ಕಪಟ ನಾಟಕ ಕಪಿಲ ರೂಪಿ ೧
ಕುರು ಕುಲೋತ್ತಮನಾಗಾರದೊಳಗೆ ಕ್ಷೀರ |ಸುರಿದೆ ಗೋಕುಲ ವಿಹಾರ ||
ವರ ವಿಪ್ರಜರ ತಂದೆ ಹರಚಾಪ ಹನನ ಈ |ಶರೀರವೇ ನಿನ್ನದು ಸರಿಬಂದದನು ಮಾಡೋ ||
ಕರೆಕರೆಯ ಭವಶರಧಿಯೊಳು ಬಾ- |ಯ್ದೆರೆವೆ ರಕ್ಷಿಸುವರನು ಕಾಣೆನೊಬ್ಬರ ನಿನ್ನುಳಿ- ||
ದುರಗ ಶಯನನೇ ಧರಿಜ ವಲ್ಲಭ ಕರುಣಿ ಕೇಶವ2
ಜನನ ಮರಣ ದೂರ ಇಂದ್ರಾನುಜ |ಮುನಿ ಗೇಯಾ ಚಲಧರ ||
ವನರುಹ ಭವ ಸಂಕ್ರಂದನ ವಂದ್ಯ ವೀತ ಆ |ವನಿ ಮುಖ ತನ್ಮಾತ್ರಾಗುಣ ಪ್ರಾಣೇಶ ವಿಠಲ ||
ಪ್ರನಮಿತಾಘ ಕಕ್ಷಾನಲ ಕಂದರ್ಪನ ಪಿತನೆ |ನಿನ್ನನುಗರೊಳಗಿಡೋ ಮಣಿಯೇ ಅನ್ಯರಿ ||
ಗನಘ ಪಾಲಿಪುದನವರತ ಯನ್ನನು ಬಿಡದಲೆ ೩

೧೦
ಗಂಗಾಪಿತ ವೆಂಕಟ ಪರ್ವತ ನಿಲಯ ಕೌಸಲ್ಯತನಯಾ | ಮಂಗಳ ವಲ್ಲಭ ಭವಕರಕರೆಯ ಪರಿಹರಿಪುದು ತ್ವರಿಯಾ | ಅಂಗಜ ಜನಕನೆ ಸಂಗರಹಿತ ಸತ್ಸಂಗ ಕೃಪಾಬ್ಧಿ ವಿಹಂಗವಾಹನನೇ ಪ
ಸ್ವಾಮಿ ಲಾಲಿಸು ಯನ್ನಯ ಮನದುಸರ ನೀನಲ್ಲದಿತರರ |ಭೂಮಿಯೊಳ್ಕಾಣೆನೋ ಉದ್ಧರಿಸುವರ ನವನೀತ ಚೋರ |ಸಾಮಜ ದ್ರೌಪದಿ ಆ ಮುಚುಕುಂದ ಸುಧಾಮರ ಪೊರೆದ ತ್ರಿಧಾಮ ಮಹಾತ್ಮ ೧
ವಾಸುಕೀ ಶಯನ ದಯಾ ಸಂಪನ್ನ ನಾರಾಯಣ ನಿನ್ನ |ದಾಸರೊಳಗಾಡಿಸೊ ಸದ್ಗುಣ ಪೂರ್ಣ ಸಾರ್ವರಿಗೆ ಪ್ರಸನ್ನ |ಈಸಲಾರೆ ಈ ಸಂಸಾರ ಶರಧಿ ಕೈ ಸೋತಿತೆಲೋ ಪರಾಶರ ತನಯ ೨
ನಿತ್ಯಾನಂದ ನಿಗಮೋದ್ಧಾರ ಪೂತನೀ ಸಂಹಾರ |ಮೃತ್ಯುಂಜಯ ಸಖ ರವಿದರ ಗದಾಧರ ಸುಖ ಪಾರಾವಾರ |ಭೃತ್ಯವತ್ಸಲ ಸುರೋತ್ತಮ ಪಾರ್ಥನ ತೊತ್ತಿಗನಾದಿ ಸುಸತ್ಯ ಸಂಕಲ್ಪ ಗಂಗಾ3
ಮಂದರಾಚಲ ಧರಿಸಿದ ಗೋವಿಂದ ಶ್ರೀ ಯಶೋದಾನಂದ |ನಂದನ ಶ್ರೀ ಕೇಶವ ಮುಕುಂದ ವಾಮನ ಸುಖಸಾಂದ್ರ |ತಂದೆ ಸಲಹೊ ನಿನ್ನ ಬಂಧಕ ಶಕುತಿಯಲಿಂದ ದಣಿಸದೆ ಅರಿಂದಮ ಪ್ರಭುವೇ ೪
ಅಂತರಂಗವ ಬಲ್ಲ ಮಧುದ್ವೇಷಿ ಯನ್ನಯ ಮನದಾಸೀ |ಅಂತು ಪೂರ್ತಿಸಿ ದುಷ್ಕರ್ಮದ ರಾಶಿ ಉಳಿಸದೆ ಪರಿಹರಿಸಿ |ಸಂತತ ಹೃದಯದಿ ನಿಂತು ಪೊಳೆವುದೋ ಅನಂತ ಮುರಾಂತಕ ಚಿಂತಾರಹಿತನೆ ೫
ಶಕ್ರ ವರ ಪೂಜಿತ ಬಲವಂತ ರುಕ್ಮಣೀಪತಿ ದಂತ |ವಕ್ತ್ರಾರಿ ಬಾಧಿಸದಂತೆ ಕೃತಾಂತ ಮಾಳ್ಪುದು ಕೆಡದಂಥ |ಸುಕೃತ ಪೀಡಿಸೋ ತ್ರಿವಿಕ್ರಮ ಮೂರುತಿ ಶುಕ್ರ ಯುಕ್ತಿ ಹರ ಅಕ್ರೂರ ವರದ ೬
ಕಂಕಾನುಜ ಮಂದಿರ ಪ್ರಾಣೇಶ ವಿಠಲ ಗೋಕುಲ ಗೋಪಾಲ |ಪಂಕಜಾಸನ ಜನಕ ಶಕಟ ಕಾಲ ಜಾಂಬವತೀ ಲೋಲ |ಶಂಕರಾದ್ಯಮರರ ಕಳಂಕೆಣಿಸದ ಗರುಡಾಂಕ ಉರಗ ಪರ್ಯಂಕ ಸುಖಾತ್ಮ ೭

೧೫೮
ಗುರು ವರದೇಂದ್ರ ದಯಾಂಬುಧೇ ಶರಣಾಗತ ವತ್ಸಲ ಈಶ |
ಚರಣ ಕಮಲ ಷಟ್ಪದ ಪಾಲಿಸು ಕಾಷಾಯ ವಸನ ಭೂಷಾ ಪ
ದುರ್ಮತ ಭುಜಗ ಕುಘರ್ಮ ವಿನಾಯಕ ಕರ್ಮ ಬದ್ಧ ವ್ರತಾ |
ಶರ್ಮ ತ್ರಿಧರ ಪ್ರಿಯ ಧರ್ಮಾಸಕ್ತನೆ ನಿರ್ಮಲ ಶುಭಚರಿತಾ ||
ಭರ್ಮ ಸಮಾಂಗ ಅಧರ್ಮ ಶಿಕ್ಷ ಕರಿ ಚರ್ಮಾಂಬರ ಪ್ರೀತ |
ಕಿರ್ಮೀರಾರಿ ಸುಶರ್ಮ ತೀರ್ಥ ಸಖ ಕರ್ಮಂದಿಪ ನಾಥ ೧
ಶ್ರೀ ಮನೋರಮ ಸು ತ್ರಿಧಾಮದೇವ ಶ್ರೀರಾಮ ಪದಾಸಕ್ತಾ |
ಕಾಮಿತ ಫಲದ ಧರಾಮರ ವಂದಿತ ಸ್ವಾಮಿ ನಮಿಪ ಭಕ್ತ ||
ಶ್ರೀ ಮಂದಾರ ಅನಾಮಯ ಸದ್ಗುಣಧಾಮನೆ ಸುವಿರಕ್ತಾ |
ಪಾಮರ ದೂರ ಲಲಾಮ ವದಾನ್ಯ ಮಹಾಮಹಿಮನೆ ಶಕ್ತ ೨
ಮಾನಿ ಪೂಜ್ಯ ಸುಜ್ಞಾನಿ ಧೀರ ಸದ್ಭಾನುಚಂದ್ರ ಭಾಸ |
ದೀನ ಪೋಷಕ ನಿಜಾನುಗ ಪಾಲಕ ಕ್ಷೋಣಿಪ ನಿರ್ದೋಷ ||
ಸಾನುರಾಗದಲಿ ಪೋಣಿಸು ಸನ್ಮತಿ ಮೌನಿ ಕುಲಾಧೀಶ |
ನೀನಲ್ಲದೆ ಶ್ರೀ ಪ್ರಾಣೇಶ ವಿಠ್ಠಲ ತಾನೊಲಿಯನು ಲೇಶ ೩

೧೬೨
ಗುರುರಾಯಾ ಗುರುರಾಯಾ |ತರಣಿ ಪ್ರಕಾಶ ಯತಿಪ ವರದೇಂದ್ರ ಪ
ಬೆಂದೆನೋ ಭವದೊಳು | ತಂದೆ ನೀ ಬಹು ತ್ವರೆ ||ಯಿಂದ ಕರಪಿಡಿಯೋ | ಮಂದ ದಯಾಳೋ ೧
ಆರೆನು ಮನುಜರು | ದೂರುವ ಮಾತನು ||ಆರಿಗುಸಿರಲಿ ನಿ | ವಾರಿಸೋ ಸ್ವಾಮಿ೨
ನೀನೊಲಿಯಲು ಭಯ | ಕಾಣಿಸಿಕೊಂಬುದೆ ||ಹೀನ ಮತಾಟವಿ ಕೃ | ಶಾನು ಮಹಾತ್ಮ ೩
ಮೇದಿನಿಪರು ಬೆರ | ಗಾದರು ದಾನಕೆ || ಮೋದಮುನಿ ಮತ ಮ | ಹೋದಧಿ ಚಂದ್ರ ೪
ಕಾಷಾಯ ವಸನಿ | ದೇಶಿಕ ವರ ಪ್ರಾ ||ಣೇಶ ವಿಠಲನವ | ರಾ ಸಲಹುವದೋ ೫

೧೦೧
ಗುರುವೆ ಭಾರತಿನಾಥ | ಶರಣು ಲಾಲಿಸೋ ಮಾತ |ಹರಿ ಪದಾರ್ಚನೆ ಕೊಟ್ಟು ಪೊರೆಯೋ ದಯೆಯಿಟ್ಟು ಪ
ರಾಮ ಸೇವಕನಾಗಿ ವಾನರ ಕಟಕ ನೆರಹಿ |ನೀಂ ಮುದದಿ ಲವಣಾಬ್ಧಿ ದಾಟಿ ಪೋಗಿ ||
ಭೂಮಿ ತನುಜೆಳಿಗೆ ವಾರ್ತೆಯನೆ ಪೇಳಿ | ರಾಗಟಿಯಸ್ವಾಮಿಗರ್ಪಿಸಿದ ಬಲವಂತ ಹನುಮಂತ ೧
ರಾಜಸೂಯವ ಮಾಡುವದಕೆ ಮಾಗಧನ ಕೊಂದೆ |ಮಾಜಿಸಿದೆ ಕುರುಪತಿಯ ಸಂತತಿಯನು ||
ಸೋಜಿಗವು ನಿನ್ನ ಲೀಲೆಯು ಆಯುಜಾತ ಬಿ |ಡೌಜ ರಕ್ಷಕ ದ್ರೌಪದೀಶ ಬಲವಂತ ೨
ಬುಧ ಮಧ್ಯಗೇಹನಲಿ ಅವತರಿಸಿ ಕುಮತಗಳ |ಬೆದರಿಸಿ ತ್ರಿದಶ ಸಪ್ತ ಗ್ರಂಥ ಮಾಡಿ ||
ಸುದಯದಿಂದುತ್ತಮರಿಗಿತ್ತು ಮತವನು ನಿಲಿಸಿ |ಬದರಿಯೋಳ್ ಪ್ರಾಣೇಶ ವಿಠಲನಲ್ಲಿರುವೆ ೩

೧೫೯
ಗುರುವೇ ಶ್ರೀ ವಸುಧೇಂದ್ರ ಕರಜಾತ ಸದ್ಗುಣಸಾಂದ್ರ |ವರದೇಂದ್ರರಾಯ ಜಿತೇಂದ್ರ | ಮರುತ ಮತಾಬ್ಧಿ ಚಂದ್ರ ||
ಶರಣು ನಿನ್ನಯ ಪದ ಸರಸಿಜ ಯುಗಗಳಿಗೆ |ಎರವು ಮಾಡದೆ ಕಾಯೊ ಪರಮ ದಯಾಳು ಪ
ದಾತಾ ಧರಿತ್ರೀ ಸುತೀನಾಥ ಶ್ರೀರಘುಪತಿ |ದೂತ ಭುವನದೋಳ್ ಖ್ಯಾತಿಯೋ ತವ ಸತ್ಕೀರುತಿ ||
ಭೂತ ಭಯ ರೋಗವಾ ತಂದಟ್ಟುವಾ |ನಾಥ ರಕ್ಷಕ ಜಲಜಾತಾಂಬಕನೇ ೧
ದೋಷರಹಿತ ಯನ್ನ ಕ್ಲೇಶ ಹಿಂಗಿಸೊ ಸಂ |ನ್ಯಾಸ ಶಿರೋಮಣಿಯೆ ಮುನ್ನಾ ಆಶೆ ಬಿಡಿಸಿ ನಿನ್ನ ||
ದಾಸನೆನಿಸಿಕೋ ಉದಾಸಿಸದಲೆ ಬಹು |ಘಾಸಿ ಮಾಡದೆ ರವಿಭಾಸ ಗುಣಾಢ್ಯ ೨
ಏನಾದರೇನು ಕೀಳು ಮಾನವರಾಶ್ರಯ ಧರೆಯೊಳು |ನಾನಿಚ್ಛಿಸೆನೊ ಕೃಪಾಳು ಮಾನ ನಿನ್ನದು ಕೇಳು ||
ನೀನೆವೆ ಗತಿಯೆಂದು ಧ್ಯಾನ ಮಾಡುವರಿಗೆ |ಪ್ರಾಣೇಶ ವಿಠಲನ ಕಾಣಿಸಿಕೊಡುವಿ ೩

೫೪
ಗೋಕುಲದೊಳಗೆಲ್ಲ ಕೊಳಲೂದಲು |ಬೇಕಾದ ಧ್ವನಿಗಳು ಕೂಡಿ ಕೃಷ್ಣ-ಗೋ- ||
ಪಿಕಾ ಸ್ತ್ರೀಯರು ತವಕದಿಂದ ನೋಡ- |ಬೇಕೆಂದು ನಡೆಯೆ ನೂಕ್ಯಾಡುತ ಪ
ಎಂತೆಂತು ಪೊರಟರಂತು ನಾರಿಯರು |ಇಂಥ ವಿಪರೀತ ಯಿಂತಿಲ್ಲ ಮುಂದಿಲ್ಲ |
ಸಂತೋಷವಹದು ಚಿಂತೆ ಪೋಗುವುದು |ಸಂತರು ಕೇಳಲು ತಂತು ಮಾತ್ರಾ ||
ಭ್ರಾಂತರಾಗಿ ಯೇನು-ಎಂತು ತಿಳಿಯದೆ |ನಿಂತು ನಿಲ್ಲಲಾರದಂತರದಲೆವೆ |
ಧ್ವಾಂತ ಕಿರಣನಂತಾನ ಮುತ್ತೂರು |ಅಂತರವಿಲ್ಲದ ಸಂತೆಯಂತೆ ೧
ಚಿಕ್ಕಟುಯೆಂದು ಒಬ್ಬಕ್ಕನು ಗಂಡನ |ತೆಕ್ಕೆಲಿ ಪಿಡಿದು ಕಕ್ಕಸ ಬಡುತ |
ಪೊಕ್ಕಳಿಗೆ ಬಟ್ಟನಿಕ್ಕಿ ಒಬ್ಬವಳು |ಅಕ್ಕಿಯ ನುಚ್ಚನೆ ಸಕ್ಕರೆಂದು ||
ಮಕ್ಕಳಿಗೀವುತ ಮಿಕ್ಕವರೆಲ್ಲರು |ನಕ್ಕು ತಂತಮ್ಮೊಳಗೆ ಗುಕ್ಕುತ ತಲೆಯ |
ಹಿಕ್ಕುತ ಬಂದರು ಫಕ್ಕನೆ ಈಕ್ಷಿಸ-ರಕ್ಕಸ ದಲ್ಲಣನಕ್ಕರದಿ ೨
ತತ್ತರಿಸಿ ಕರವೆತ್ತಿಗೆ ಬಿಟ್ಟರು |ಮುತ್ತಿನ ಕಟ್ಟಾಣಿವೊತ್ತಿ ಮುಡಿಗಿಟ್ಟು |
ನೆತ್ತಿಗೆ ಸೀರೆಯ ಸುತ್ತಿಕೊಂಡು ಬರೆ |ಸುತ್ತಲಂಗನೆರು ಬತ್ತಲಾಗಿ ||
ತುತ್ತು ಮಾಡಿ ಮಾಡಿ ಹತ್ತಿಸೆ ಎದೆಗೆ |ಹೊಸ್ತಲಿ ದಾಟಲಿ ಗತ್ತಿಡಲಾರದೆ |
ಹತ್ತೆಂಟು ಮಂದಿಯು ಚಿತ್ತಪಲ್ಲಟಾಗಿ |ಉತ್ತಮಾಂಗನಿಗೆ ಸುತ್ತಿದರೊ ೩
ಹಾಲಿಗೆ ಪಿಲ್ಲೆಯು ಫಾಲವಿದೇಯೆಂದು |ಕಾಲಿಗೆ ಕುಂಕುಮ ವಾಲಿಟ್ಟು ಮೂಗಿಗೆ |
ಮೇಲಾದ ಹೂವಿನ ಮಾಲಿಕೆ ಕಟಿಗೆ |ತೋಲಾದ ಸರಿಗೆ ಬಾಳಿಗಿಟ್ಟು ||
ಹೇಳುವ ಮಾತನು ಕೇಳಿ ಕೇಳದಂತೆ |ಇಳೆಗೆ ಅಗಾಧ ಧೂಳಿಯ ಮುಚ್ಚುತ |
ಜಾಲ ಸಂಭ್ರಮದಿ ವಾಲಯ ಬಂದರು |ಜಾಲಜಾನಾಭನ ವಾಲಗಕ್ಕೆ ೪
ಭೋರೆಂಬ ಶಬ್ದವ ಮರೆತಳೆಮುನೆ |ಗಿರಿಯು ಬ್ಯಾವಿಯೆ ? ತುರುವು ಮೇವನು |
ತೊರೆಯೆ, ಫಣಿಯು ಶಿರವ ತೂಗಿತು |ತೆರೆಯ ಕಟ್ಟಿತು ಶರಧಿಯು ||
ಸುರರು ನಭದಿ ನೆರೆದು ಪೂಮಳೆ |ಗರೆಯೆ ದುಂದುಭಿ ಮೊರೆಯೆ ಸುಖವ |
ಸುರಿಯೆ ಪ್ರಾಣೇಶ ವಿಠಲ ಕೊಳಲ |ತ್ವರ ನುಡಿಸುವ ಸ್ವರಗೇಳಿ ೫

೪೧
ಗೋಪಿ ಹೇಳೆ ರಂಗಗೆ ಬುದ್ಧಿ ಪ
ಗೋಪಿ ಹೇಳೆ ರಂಗಯ್ಯಗೆ ಬುದ್ಧಿ ಪುರದೊಳು |ರಾಪು ಮಾಡುವದು ವೆಗ್ಗಳವಮ್ಮ ಅ.ಪ.
ಪೋರರ ಒಡಗೂಡಿ ಬಂದು ಎಲ್ಲರು ನೋಡಸೀರೆಯ ಸೆರಗು ಪಿಡಿವರೇನೇ ||
ಜಾರೆ ಹೆಂಗಳೆರಾದರೊಳ್ಳತು ತಾಂ ತಡವಲುಈ ರೀತಿಯೆ ಪತಿಯಿದ್ದವರ ಕೂಡ ೧
ಹಿರಿಯಣ್ಣಗಿಟ್ಟಿದ್ದ ಮೀಸಲ ತುಪ್ಪವಸುರಿದು ಗಡಿಗೆ ವಡದೋಡಿದ | ಗೋಪಿ ||
ಥರವೆ ನಿಮ್ಮಮ್ಮನಲ್ಲಿಗೆ ಬಾರೋ ಎಂದರೆಸೆರಗ ಕೊಸರಿ ಮಾನ ಕೊಂಬನೆ | ಗೋಪಿ ೨
ಕತ್ತಲೊಳಗೆ ಮಕ್ಕಳಂತೆ ಸಣ್ಣವನಾಗಿಹತ್ತಿಲಿ ಬಂದೊರಗುವನಮ್ಮ | ಗೋಪಿ ||
ಇತ್ತತ್ತ ಬಾ ಕಂದಯೆಂದಪ್ಪಿಕೊಳಲವಕೃತ್ಯವ ಮಾಡಿ ಓಡುವನಮ್ಮ | ಗೋಪಿ ೩
ಆಕಳ ಮೊಲೆಯುಂಡು ತರುವಾಯ ಕರುಬಿಟ್ಟುತಾ ಕೂಗುವನೆ ಕರಕೊಳಿರೆಂದು | ಗೋಪಿ ||
ಗೋಕುಲದೊಳು ಬಹು ದಿವಸವಾಯಿತು ದುಡ್ಡುತೂಕ ಕ್ಷೀರವ ಮಾರ ಕಾಣೆವೇ | ಗೋಪಿ ೪
ಬಚ್ಚಲೊಳಗೆ ಪ್ರಾಯದವಳು ಕುಳಿತು ಎಣ್ಣೆಹಚ್ಚಿಕೊಂಡೆರಕೊಳ್ಳುತಿದ್ದೆವೆ | ಗೋಪಿ ||
ಎಚ್ಚರಿಸದೆ ಬಂದು ಎದುರಿಗೆ ನಿಲ್ಲುವಹುಚ್ಚನೆ ಬಹು ಜಾಲಗಾರನು | ಗೋಪಿ ೫
ಪುರುಷಗೆ ಸಂಶಯ ನಮ್ಮ ಮನೆಗೆ ಕೃಷ್ಣಬರುವನೆಂಬು ಮಜ್ಜನಕೆ ಜಲ | ಗೋಪಿ ||
ಬೆರಸಿಟ್ಟರೆಲ್ಲವು ಚೆಲ್ಲಿ ಪೋಗುವ ಗಂಡ ಕರೆಕರೆ ಮಾಡುವ ಪರಿಪರಿ | ಗೋಪಿ ೬
ಪೋಗಲಿನಿತೂ ಮುಂದೆ ಪ್ರಾಣೇಶ ವಿಠಲಗೆಹೀಗಿರುಯೆಂದು ನೀ ಪೇಳಮ್ಮಾ | ಗೋಪಿ ||
ಈಗುಸುರಿದ ಮಾತು ಸರಿಬಾರದಿದ್ದರೆಸಾಗಿರೆಂದಪ್ಪಣೆ ಕೊಡಿರೆಮ್ಮ | ಗೋಪಿ ೭


ಜಯ ಪಾಂಡುರಂಗ ಹೋ ಜಲದ ನಿಭಾಂಗ ಹೋ|ಜಗದಂತರಂಗ ಹೋ ಜಯ ಪಾಂಡುರಂಗ ಹೋ ಪ
ನೀಲ ಭೂಧರವಾಸ ಕೌಸ್ತುಭ ಭೂಷ ರಮೆಯಾಧೀಶ ಸುಮನಸ |
ಪಾಲ ಗುಣಗಂಭೀರ ನವನೀತಚೋರ ಕುಜನ ಕುಠಾರ | ನರಹರಿ ||
ಫಾಲಲೋಚನ ಬಂಧು ದೈತ್ಯನ ಕೊಂದು ವೇದವ ತಂದು ದ್ರುಹಿಣಗೆ |
ಮೇಲು ಶರುಣುದಲಿತ್ತೆ, ಮಂದರ ಪೊತ್ತೆ ಸುಂದರ ಮೂರ್ತಿ ೧
ನಿಗಮ ವಂದಿತ ರಾಮ ಹರಿ ಪೂರ್ಣ ಕಾಮ ಸದ್ಗುಣಧಾಮ, ವಾಮನ |
ಮಗನ ಮೂಗಿಲಿ ಪುಟ್ಟಿ, ಹೇಮನ ಕುಟ್ಟಿ, ಅವನಿ ತಂದಿಟ್ಟಿ, ಈರೇಳು ||
ಜಗದಿ ಪೂಜಿತನಾದಿ ಕೈಟಭ ಭೇದಿ ಇಭಪನ ಕಾಯ್ದಿ, ಪ್ರಣತರ |
ಅಘವನೋಡಿಸುತಿಪ್ಪ ಹಲಾಯುಧ ತಲ್ಪ ಮನ್ಮಥನಪ್ಪ ೨
ವೇದ ವಿಸ್ತರ ಮಾಡ್ಡೀ, ದಾನವ ಬೇಡ್ಡೀ, ದನುಜನಿಗ್ಯೋಡ್ಡೀ, ಕುರುಕುಲ |
ಸೂದನ, ಕಿರೀಟ ಸೂತ, ಪವಮಾನ ತಾತ, ದುರ್ಬಲನಾಥ ಎನ್ನನು ||
ಆದರದಿ ಕೈಪಿಡಿಯೋ, ದುರಿತವ ತಡೆಯೊ, ದುರ್ಮತಿ ಕಡಿಯೊ, ಅಗಣಿತ |
ಮೋದ ಪ್ರಾಣೇಶ ವಿಠಲ, ನರಮೃಗ, ನಿಟಿಲನೇತ್ರ, ಅಕುಟಲ3

೨೪೩
(ಒರಳುಕಲ್ಲು ಪೂಜೆಯ ಪದ)
ಜಯ ಹನುಮಂತ ಭೀಮ | ಜಯ ಸರ್ವಜ್ಞಾಚಾರ್ಯ |ಜಯ ಭಾರತೀಶಾ ನಿರ್ದೋಷಾ ||
ನಿರ್ದೋಷ ಶ್ರೀ ವ್ಯಾಸಲಯನೆ ನಿನ್ನಂಘ್ರೀಗೆರಗೂವೆ | ಸುವ್ವಿ ಸುವ್ವೀ ಸುವ್ವಾಲಾಲೆ ಪ
ಮುದದಿಂದಾ ಶ್ರೀ ಹರಿಯಾ | ಮದಿವಿ ಹಮ್ಮೀಕೊಂಡು |ಪದುಮಾಕ್ಷಿಯರೆಲ್ಲಾ ಒರಳೀಗೇ ||
ಒರಳಿಗಕ್ಕಿ ಹಾಕಿಪದ ಪಾಡಿದದನೂ ಬಣ್ಣೀಪೇ೧
ದೇವಕಿ ಯಶೋದೆ ಶ್ರೀ | ದೇವಭೂತೇ ಕೌಸಲ್ಯ ಸ- |ತ್ಯವತಿ ನೀವೆಂಥ ಧನ್ಯರೇ ||
ಧನ್ಯಾರೆ ಪಡದು ಶ್ರೀ |ದೇವೇಶಗೆ ಮೊಲಿಯಾ ಕೊಡುವೀರಿ ೨
ಅಕ್ಷರಳೆ ಪರಮಾತ್ಮನ | ವಕ್ಷ ಸ್ಥಳ ಮಂದಿರೆ |ಲಕ್ಷೂಮಿದೇವಿ ಜಯಶೀಲೆ ||
ಜಯಶೀಲೆ ಎಮ್ಮನು |ಪೇಕ್ಷಿಸಿದೆ ಕಾಯೇ ವರವೀಯೇ ೩
ಅಚ್ಛಿನ್ನ ಭಕ್ತರು ನೀವಚ್ಯುತಗೆ ಮುಕ್ತಿಯಾ |ತುಚ್ಛವೆಂಬುವಿರೆ ಸರಸ್ವತೀ ||
ಸರಸ್ವತಿ ಭಾರತಿ |ನಿಶ್ಚೈಸಿ ಒರಳೀಗೊದಗೀರೆ ೪
ಅಕ್ಕಿ ಥಳಿಸಲಿ ಬಾರೆ | ಅಕ್ಕ ಸೌಪರಣಿ ಶ್ರೀ |ರಕ್ಕಸಾ ವೈರೀ ಮದುವೀಗೇ ||
ಮದುವೀಗೆ ವಾರುಣಿತಕ್ಕೊಳ್ಳೆ ಕೈಲಿ ಒನಕೀಯಾ ೫
ಕೂಸಾಗಿ ಇದ್ದಾಗ ಆ ಶಿವನೆ ಬರಲೆಂದು |ಪೋಷಿಸಿದೆ ದೇಹಾ ತಪಸೀದೆ ||
ತಪಸೀದೆ ಪಾರ್ವತಿನೀ ಶೀಘ್ರ ಬಾರೇ ಒರಳೀಗೆ೬
ಇಂದ್ರ ಕಾಮನ ಸತಿ ಯಾರಿಂದು ಬನ್ನಿರಿ ನಮ್ಮ |ಮಂದರೋದ್ಧರನಾ ಮದಿವೀಗೇ ||
ಮದುವೀಗೆ ಒರಳಕ್ಕಿ |ಛಂದದಿಂದಲಿ ಪಾಡಿ ಥಳಿಸೀರೇ ೭
ಶತರೂಪಿ ನೀ ಪ್ರೀಯ ವ್ರತ ಮೊದಲಾದವರನ್ನ |ಪತಿಯಿಂದ ಪಡದೂ ಅವನೀಯಾ ||
ಅವನೀಯ ಪಾಲಿಸಿದ ಪತಿವ್ರತೀ ಒನಕೀ ಕೈಕೊಳ್ಳೇ೮
ದೇವರಂಗನಿಯರಿಗೆ ಸಾವಧಾನದಿ ಜ್ಞಾನ |ನೀ ವರದೇ ಎಂಥಾ ಗುಣವಂತೇ ||
ಗುಣವಂತೆ ಕರುಣಾಳೆಪ್ರಾವಹೀ ಪಿಡಿಯೇ ಒನಕೀಯಾ ೯
ಅರುವತ್ತು ಮಕ್ಕಳನಾ ಹರುಷದಿಂದಲಿ ಪಡದು |ವರ ನೋಡಿ ಕೊಟ್ಟೀ ಪ್ರಸೂತೀ ||
ಪ್ರಸೂತಿ ನೀನುಹಂದರದ ಮನಿಯೊಳೂ ಇರಬೇಕೂ ೧೦
ಗಂಗಾದೇವಿ ಯಂಥ ಇಂಗಿತಜ್ಞಳೆ ನೀನು |ಹಿಂಗಿಸಿದೆ ವಸುಗಳಪವಾದಾ ||
ಅಪವಾದ ತ್ರಯ ಜಗ-ನ್ಮಂಗಳೇ ಪಿಡಿಯೇ ಒನಕೀಯಾ ೧೧
ಅನಿರುದ್ಧಾಶ್ವಿನಿ ಚಂದ್ರ ಇನಕಾಲಾ ಸುರಗುರು |ವನತಿಯರೆ ಉಳಿದಾ ನವಕೋಟೀ ||
ನವಕೋಟಿ ಸುರರಮಾನಿನಿಯೇರು ಬಂದೂ ಥಳಿಸೀರೇ ೧೨
ಅನ್ಯರನ ಪಾಡಿದರೆ ಬನ್ನ ಬಡಿಸುವ ಯಮನು |ವನ್ನಜಾಂಬಕನಾ ಶುಭ ನಾಮಾ ||
ಶುಭನಾಮ ಪಾಡಿದರೆಧನ್ಯರಿವರೆಂದೂ ಪೊಗಳೂವಾ೧೩
ಈ ವ್ಯಾಳ್ಯದಲಿ ನೋಡಿ ನಾವು ಥಳಿಸೀದಕ್ಕಿ |ಪಾಪನ್ನವಾಗೀ ತ್ವರದಿಂದಾ ||
ತ್ವರದಿಂದ ನಮ್ಮ ಶ್ರೀಗೋವಿಂದನ ಶಾಸೀಗೊದಗಲೀ ೧೪
ಹೆಚ್ಚಿನಂಬರ ಉಟ್ಟು ಅಚ್ಚಿನ ಕುಪ್ಪುಸ ತೊಟ್ಟು |ಪಚ್ಚಾದಿ ರತ್ನಾಭರಣಿಟ್ಟೂ ||
ಇಟ್ಟು ಸುಸ್ವರಗೈದು ಅಚ್ಯುತನ ಪಾಡೋರಿನಿತೆಂದೂ ೧೫
ಲಕ್ಕೂಮಿ ಪತಿಯಾಗಿ ಬಹು ಮಕ್ಕಳನ ಪಡದಿದ್ದಿ |ಇಕ್ಕೊಳ್ಳಿ ಈಗಾ ಮದುವ್ಯಾಕೇ || ಯಾಕೊನತರಾನಂದಉಕ್ಕೀಸುವದಕೆ ರಚಿಸೀದ್ಯಾ೧೬
ಎಂಂದಾಗೆದೊ ಶ್ರೀ ಮುಕುಂದ ನಿನ್ನಾ ಮದುವಿ |ಹಿಂದಿನಾ ಬ್ರಹ್ಮರರಿತಿಲ್ಲಾ ||
ರರಿತಿಲ್ಲ ಅವಿಯೋಗಿಎಂದು ಕರಸುವಳು ಶೃತಿಯೋಳೂ ೧೭
ಶೀಲಿ ಸುಂದರಿ ನಿನ್ನ ಆಳಾಗಿ ಇರುವಳು |ಶ್ರೀ ಲಕ್ಷ್ಮೀ ನೀನು ಸ್ವರಮಣಾ ||
ಸ್ವರಮಣನಾಗೆವಳಮ್ಯಾಲೆ ಮದುಪ್ಯಾಕೊ ಭಗವಂತಾ೧೮
ಆರು ಮಹಿಷಿಯರು ಹದಿನಾರು ಸಾವಿರ ಮ್ಯಾಲೆ |ನೂರು ನಾರಿಯರೂ ಬಹುಕಾಲಾ ||
ಬಹುಕಾಲ ಬಯಸಿದ್ದುಪೂರೈಸಿ ಕೊಟ್ಯೋ ದಯಸಿಂಧು ೧೯
ವೇದನೆಂಥಾ ಪುತ್ರ ವೇದನಂತಾ ಬಲ್ಲ |ವೋದುವಾ ನಿರುತಾ ನಿನ ಪೌತ್ರಾ ||
ಪೌತ್ರೌ ನಿಮ್ಮಣ್ಣ ಸ್ವ-ರ್ಗಾಧಿಪತಿ ಎಂದೂ ಕರಸೂವ ೨೦
ಜಗವ ಪಾವನ ಮಾಳ್ಪ ಮಗಳೆಂಥ ಗುಣವಂತಿ |ಅಗಣಿತ ಜ್ಞಾನವಂತಾರೊ ||
ಜ್ಞಾನವಂತರೊ ನಿನ್ನಯುಗಳ ಸೊಸಿಯರೂ ಪರಮಾತ್ಮಾ೨೧
ಈ ವಸುಧಿಯೊಳಗೆಲ್ಲಾ ಆವ ಶುಭ ಕಾರ್ಯಕ್ಕೂ |ದೇವೇಶ ನಿನ್ನಾ ಸ್ಮರಿಸೋರೋ ||
ಸ್ಮರಿಸುವರೊ ನಿನ ಮದುವಿ-ಗಾಂವೀಗ ನಿನ್ನೇ ನೆನೆವೇವೊ ೨೨
ಅಕ್ಲೇಶಾ ಅಸಮಂಧಾ ಶುಕ್ಲ ಶೋಣಿತ ದೂರಾ |ಹಕ್ಲಾಸುರಾರೀ ದುರಿತಾರೀ ||
ದುರಿತಾರಿ ಅಸಮ ನಿ-ನ್ನೊಕ್ಲಾದವರಗಲೀ ಇರಲಾರೀ ೨೩
ವೇದವೆಂಬದು ಬಿಟ್ಟು ಭೂ ದಿವಿಜಾರಮರಾರು |ಮಾಧವನ ಗುಣವಾ ಪೊಗಳೂವಾ ||
ಪೊಗಳುವಾ ಸುಸ್ವರವಾಶೋಧಿಸೀ ಕೇಳೂತಿರುವಾರೂ ೨೪
ಕಾಮಾದಿಗಳ ಬಿಟ್ಟು ಸೋಮಪರ ರಾಣಿಯರು |ಸ್ವಾಮಿಯ ವಿವಾಹಾ ನಾಳೆಂದೂ || ನಾಳೆಂದರಿಷಿಣದಕ್ಕೀಹೇಮಾಧರಿವಾಣಕ್ಕಿರಿಸೋರೂ೨೫
ಜಯ ಮತ್ಸ್ಯಾ ಕೂರ್ಮಾ ಕಿಟಿ ಜಯ ನರಸಿಂಹಾ ಋಷಿಜ |ಜಯ ರಾಮಕೃಷ್ಣಾ ಶ್ರೀ ಬುದ್ಧಾ ||
ಶ್ರೀ ಬುದ್ಧ ಕಲ್ಕಿ ಜಯಜಯ ದತ್ತಾತ್ರಯ ಶುಭ ಕಾಯಾ ೨೬
ಆನಂದಾದಿಂದಾ ಸುರ ಮಾನಿನಿಯಾರಾಡೀದ |ಈ ನುಡಿಯಾ ಪಾಡೀದವರೀಗೆ ||
ಅವರಿಗಿಹಪರದಲ್ಲಿಪ್ರಾಣೇಶ ವಿಠಲಾ ಒಲಿವೋನೂ ೨೭

೨೪೨
ಜಲಧಿ ತಕ್ಕದೊ ನಿನ್ನಳಿಯಗೂ ನಿನಗೂ |ಹಲವು ಬಗೆಯಿಂದಲಿ ಪರೀಕ್ಷಿಯನು ಮಾಡಿದರೆ ಪ
ಮೊದಲೆ ತಿಳದಷ್ಟು ನಿನ್ನ ಮಹತ್ಮಿ ವರ್ಣಿಸುವೆ |ತುದಿಗಂಡು ಬಲ್ಲೆನೇ ಅಧಮ ನಾನೂ ||ಎದುರಿಗಂಬುವದಾಡಿಕೊಂಡ ಬಗೆ ಬ್ಯಾರೆಲ್ಲೀ |ಮುದದಿಂದ ದಯಮಾಡಿ ಕೇಳೊ ರತ್ನಾಕರನೇ ೧
ನಿನ್ನಿಂದ ಹುಟ್ಟಿಹುದು ವಿಷವು, ಗುರುವಿನ ಪತ್ನಿ |ಯನ್ನು ಸ್ವೀಕರಿಸಿದನು ನಿನ್ನ ಮಗನೂ ||
ಘನ್ನತರ ಮಕರಾದಿಗಳು ನಿನ್ನ ಪರಿವಾರ |ಇನ್ನೆಷ್ಟು ಪೇಳಲಿ ಚರಿತ್ರ ಪಾರಾವಾರ ೨
ನಿನ ಒಡಲಿಗೆಷ್ಟಾದರನ್ನ ಸಾಕೆನಿಸದೂ |ದಣಿದು ಬಂದವರಿಗಾಶ್ರಯವು ಕಾಣೇ ||
ಉಣಲಿಕ್ಕೆ ಅನ್ನೆಂಬದೆಂಟನೆ ರಸದಂತೆ |ಘನ ಖ್ಯಾತಿ ದೂರದಲಿ ಬಳಿಗೆ ಬರಲಿಂತಿಹದು ೩
ಪ್ರೀತಿಯಂ ಬಂದವರು, ಗ್ರಹಣ ವೈಧೃತಿ ವೇತೀ |ಪಾತದಲಿ ನಿನ ದರುಶನಾಗಬೇಕೂ ||
ಭೂತ ಬಡದವರಂತೆ ನಿನ್ನ ಕಲ್ಲುಗಳಿಂದ |ಘಾತಿಸಲಿ ಬೇಕು ನೋಡಲ್ಕೆ ಬಹು ಸೋಜಿಗವು ೪
ತುಳಿದದಕೆ ಹಿಗ್ಗಿದಿಯೋ ಬಹುಮಾನಿ ನೀನೆಲವೊ |ಲಲನಿ ಹಡದೇಳು ಶಿಶುಗಳ ಕೊಂದಳೂ ||
ಬಲು ಭಂಟ ಹಿರಿಯಮಗಗರಸುತನ ಕೊಡಲಿಲ್ಲ |ಇಳಿಯೊಳಗೆ ನೀ ಮಾಡಿದನ್ನ್ಯಾಯಕೆಣಿಯುಂಟೆ ೫
ಸತಿಸಂಗ ಬಿಡಲೊಲ್ಲಿ ಪರ್ವಕಾಲಗಳಲ್ಲಿ |ಸುತಗೆ ಕಡಿಮೆದರಿಂದೆ ಆದಿ ಹ್ಯಾಗೊ ||
ಪತಿವ್ರತಾ ಮಗಳಾದಳೊಂದೆ ಸುಗುಣದರಿಂದೆ |ಕ್ಷಿತಿಯೊಳನವರತ ಪೂಜಿಸಿಕೊಂಬಿ ಜನರಿಂದ ೬
ಜಾಮಾತನಿಗೆ ಇಹವು ಮುಖವು ಹತ್ತೊಂಬತ್ತು |ಆ ಮಧ್ಯ ಗಜಲಪನದಂತೆ ಒಂದೂ ||
ಭೂಮಿಯೊಳಗಾಶ್ಚರ್ಯ ತಾನೆ ಮಕ್ಕಳ ಪಡೆವ |ಈ ಮಗಳು ಬಹುಸುಖವ ಬಡುವಳಿವನಿಂದಲ್ಲಿ ೭
ಬೆರಳು ಚೀಪುವ ನೋಡು ಸುಳ್ಳಲ್ಲ ದಾನ |ಪುರುಷ ಬದುಕುವ ಚೋರತನದಿ ಜಾರಾ ||
ತರುಣಿಯಾಗಿದ್ದ ನಿನ ಬಳಿಯಲ್ಲಿ ನೀ ಬಲ್ಲಿ |ತುರುಗಾಟವ ಕೊಡಲಿ ಕೊಂಡಡವಿಯೊಳಗಿರುವ ೮
ಗುರುಸ್ವಾಮಿ ಪಿತ ಬ್ರಹ್ಮ ವಂಶದ್ರೋಹಿಗಳವನ |ಪರಿವಾರ ಮಕ್ಕಳಿಗೆ ಮಾವನಾದಾ ||
ಉರುಗ ಶಯನಂಡಜಾಧಿಪ ವಹನ ನೀಲಾಂಗ |ಅರಿತ ನೃಪ ಋಷಿಗಳೊಳಗೊಬ್ಬರಿಗ್ಯು ಮಗನಲ್ಲ ೯
ಕುಲಸೂತ್ರವಿಲ್ಲ ಒಂದೇ ರೂಪನಲ್ಲ ನಿ- |ಶ್ಚಲನಲ್ಲ ವತಿ ಕಠಿಣ ವಕ್ರವದನಾ ||
ಬಲು ಕೋಪಿ ತಿರದುಂಬ ಸ್ತ್ರೀಯರಿಬ್ಬರ ಕೊಂದ |ಅಲವ ಜಾರನು, ಬತ್ತಲಿರುವ, ಕಲಹಕೆ ಪ್ರೀಯ ೧೦
ಕೊಟ್ಟೆಲ್ಲ ಅವನಿಗೀ ಕನ್ನಿಕಿಯ ಸವತಿಯರು |ಎಷ್ಟೋ ಮಲಸುತರಿಹರದಕೆ ದಶ ಮಡೀ ||
ಸಿಟ್ಟಾಗ ಬ್ಯಾಡವನ ವಾರ್ತಿ ಕೇಳಲು ಜನರು |ಬಿಟ್ಟು ಸಂಸಾರವೆಂದಿಂದಿಗೊಲ್ಲದಿಹರೂ ೧೧
ನಿನ್ನ ಮಗಳವನಿತ್ತವನ ಮಗಳ ಮದಿವ್ಯಾದಿ |ಕನ್ಯ ವಿಕ್ರಯ ಪರಸ್ಪರವೆನಿಸಿತೂ ||
ಇನ್ನೇಸೊ ನಿಮ್ಮ ನಿಮ್ಮಲ್ಲಿದ್ದ ನಡತಿಗಳು |ಅನ್ಯರಿದು ಕೇಳಿ ಭಜಿಸರೊ ಶುದ್ಧ ಭಕುತಿಯಲೀ ೧೨
ಏನಾದರೇನು ಶ್ರೀ ಪ್ರಾಣೇಶ ವಿಠಲನಿಗೆ |ನೀನೆ ಗತಿ ನಿರ್ದೋಷ ವಸ್ತುವೆಂದೂ ||
ಶ್ರೀನಳಿನ ಭವ ಮುಖರು ನಿತ್ಯ ವಂದಿಸುತಿಹರೊ |ನೀನವನ ಮಾವನಾದಿನ್ನು ಪೂಜಿತನಲ್ಲೆ ೧೩

೧೪೧
ತಾಯಿ ಸೌಪರ್ಣೀದೇವೀ ನೀ |ಕಾಯದೆ ಜರಿಯಲನ್ಯರಾ ||
ನಾನೆಲ್ಲೀ ಕಾಣೆನೆ ಧರೆಯೊಳು |ಮನಸಿರಲೀ ಶ್ರೀ ಅರಸನಲ್ಲೇವೇ ಕೇಳು ಪ
ಕ್ಷೋಣಿಯೊಳಗೆ ಕ್ರಿಯಸ್ತರ |ಆ ನೆಲ್ಲೀ ನೋಡೆ ನಿನ್ನಂತೆ ||
ಆ ನಾಗರಾಜನ ಮಾತೆಯ ಸೇವೆಯೊಳಿದ್ದೆ |ನಾನೆಂತು ಮಾಡಲೆ ಸ್ತುತೀಯಾ೧
ವಾರುಣೀ ಶ್ರೀ ರೇವತಿ |ಯಾ ರೂಪಿ ನಮಸ್ಕರಿಪೇ ||
ನಾರಾಯಣನಾ ತೋರಿಸಮ್ಮಾ ದೋಷಗಳ ನೀ |ವಾರಿಸಿ ರಕ್ಷೀಸಬೇಕಮ್ಮಾ ೨
ಶ್ರೀ ಸತಿ ಪಾರ್ವತೀ ದಕ್ಷ |ಧ್ವಂಸೀ ಶುದ್ಧ ಪತಿವೃತೀ ||
ಆ ಷಣ್ಮುಖನ ಜನನೀ | ಕಾಣಿಸು ಶ್ರೀ ಪ್ರಾ-ಣೇಶ ವಿಠ್ಠಲಾನ ಕರೂಣೀ ೩

೯೬
ತಿಂಗಳಿಗೆ ತಿಂಗಳಿಗೆ ಬರುತಿಹ | ಪಿಂಗಳರ ನಾಮವನು ಬರೆವೆನು |
ಇಂಗಿತಜ್ಞರು ಕೇಳ್ವುದು ಉದಾಶನವ ಮಾಡದಲೆ ಪ
ಧಾತ ಚೈತ್ರಕೆ ಆರ್ಯಮಾಯೆಂಬಾತ ವೈಶಾಖಕೆ ಸುಜೇಷ್ಠಕೆ |
ನಾಥನೆನಿಸುವ ಮಿತ್ರ ಆಷಾಢಕ್ಕೆ ಬಹ ವರುಣ ||
ಖ್ಯಾತನಾಗಿಹ ಶ್ರಾವಣಕೆ ಪುರುಹೂತ ಭಾದ್ರಪದಕೆ ವಿವಸ್ವಾನೆ |
ಭೂತಿಯುತನಾಗಿರುವ ತ್ವಷ್ಟ್ರಾಶ್ವೀನ ಮಾಸದಲಿ ೧
ಹರಿದಿನಪ ಕಾರ್ತೀಕ ಮಾಸದಿ | ಇರುತಿಹನು ಮಾರ್ಗಶಿರದಿ ಸವಿತೃ |
ವರದ ಭಗ ಪುಷ್ಯದಲಿ ಪೂಷಾ ಮಾಘಮಾಸದಲಿ ||
ಸುರನದಿಯೆ ಮೊದಲಾಗಿಹ ಐ | ವರಿಗೆ ಸಮಪರ್ಜನ್ಯ ಫಾಲ್ಗುಣ |
ಕರಿತು ಇಂತು ಯಥಾವಿಧಿಯೊಳಘ್ರ್ಯವನು ಕೊಟ್ಟು ಜಪವ ೨
ಮಾಡುತಿಹ ಧನ್ಯರಿಗೆ ಪಾಪಗ | ಳೋಡಿ ಸುತ ದಯದಿಂದ ಯೇನೇನೆ |
ಬೇಡಿದಿಷ್ಟವ ಕೊಟ್ಟು ಕರ್ಮಕೆ ಸಾಕ್ಷಿ ತಾನಾಗಿ ||
ಮಾಡುವನು ಸಂರಕ್ಷಣೆಯ ಒಡ | ನಾಡುವನು ಬಿಡನೊಂದರೆಕ್ಷಣ |
ಈಡು ಇಲ್ಲದ ಮಹಿಮ ಶ್ರೀ ಪ್ರಾಣೇಶ ವಿಠಲನು ೩

೧೭೪
ತಿಳಿಯನು ಎಂದೆಂದಿಗನ್ಯ | ರಂಗ ಒಲಿದ ದಾಸರು ಜಗನ್ಮಾನ್ಯ ||
ಅಲವ ಮಹಾತ್ಮರೆಂಬ ಪುಣ್ಯ | ಕೀರ್ತಿಗಳ ನಿತ್ಯ ಕೇಳ್ವ ನರ ಧನ್ಯ ಪ
ಹಿರಣ್ಯಕಶ್ಯಪುಜ ಸಹ್ಲಾದನೇವೇ |ಎರಡನೆ ಜನ್ಮ ಶಲ್ಯನಾದ ||
ಗುರು ವಾದಿರಾಜರನರ್ಚಿಸಿದ |ಪುರಂದರ ದಾಸರಾಯರಲ್ಲುದಿಸಿದ೧
ಅಯ್ದನೆಯ ರೂಪವೀಗಿಂದಂತೆ |ಬಹುದು ಏಳು ಜನ್ಮ ಮುಂದಂತೆ ||
ಮೋದಾಭಿವೃದ್ಧಿಗೇನೋ ಅಂತೇ ಎಂಬ |ವಾದಿಗಿದೆಲ್ಲ ಅಂತಿಗಂತೆ ೨
ದಾಸಕೂಟಸ್ಥರಿಗೀ ಮಾತು ಕೆಲವು |ದೇಶಗಳಲ್ಲಿ ಅನುಭವವಾಯ್ತು ||
ಈ ಸುಕಥಾಲಾಪ ವಲ್ಲ್ಯಾಯಿತು ಶ್ರೀ ಪ್ರಾ |ಣೇಶ ವಿಠಲನಲ್ಲಿಹನಾತು ೩

೧೬೧
ತುತಿಸಲಳವೇ ಶ್ರೀ ವರದೇಂದ್ರನಾ ಅಮಿತ ಮಹಿಮ |
ಕ್ಷಿತಿ ಸುರ ಗುರು ಸುಗುಣ ಸಾಂದ್ರನ ಮುನಿಪನ ಪ
ಭಾಗವತರ ಪ್ರಿಯನೆನಿಪನ ಪ್ರಣತ ಜನರ |
ರೋಗ ಕಳೆದು ಸುಖ ಕೊಡುವನ ಕುಮತಗಳನು |
ಬೇಗ ಗೆಲಿದು ಸುಮತಿ ಕೊಡುವನ ದಯಾ ಸಮುದ್ರ |
ಯೋಗಿ ವರ್ಯ ರವಿ ಪ್ರಕಾಶನಾ ಅನಘನ ೧
ರಾಘವೇಂದ್ರರನುಗ್ರಹ ಪಾತ್ರನ ವೈಷಿಕದ ಕು |
ಭೋಗ ತೊರೆದ ನಿಷ್ಪ್ರಪಂಚನ ದುರ್ಮತಿಗಳ |
ಯೋಗಕೊಲಿಯದಿಪ್ಪ ಧೀರನ ಭವ ಭಯವನು |
ನೀಗಿ ಹರಿಯ ಸದನವ ತೋರ್ಪನಾ ವರದನ ೨
ಕಲಿ ಮಲಾಪಹಾರ ಶಕ್ತನ, ಪ್ರಾಣೇಶ ವಿಠಲ |
ನೊಲಿಸಿಕೊಂಡಮಿತ ಸಮರ್ಥನ ಮಾರುತ ಮತ ||
ಜಲಧಿ ಪೆರ್ಚಿಸುತಿಹ ಚಂದ್ರನ ಬೃಹತ್ಸು ತಟ ನೀ |
ನಿಲಯ ಶ್ರೀ ವಸುಧೇಂದ್ರ ಪುತ್ರನ ವಿರಕ್ತನ೩

೩೦
ತ್ವರಿತಾ ಬಾರಯ್ಯ ಹೇ ಶ್ರೀಯರಸ ವೆಂಕಟ ದೀನ |
ಸುರತರುವೆ ದೇವೇಶ ವರಾಹ ಭೂಧರ ಧಾಮ |
ಕರುಣಾ ಪಯೋದಧೆ ಸರ್ವ ರಕ್ಷಿ ಕಂಧರದೊಳ- |
ಗಿರುತಿಹ ನರಗಜ ವದನನೇ ಪ
ಇಳಿಪತಿಗಳ ಕೂಡ ಕಲಹ ಮಾಡಿ ತೋರೆಂದುಅಂಗಲಾಚಲಾ ಕುಂತೀದೇವಿ |
ಗೊಲಿದಾಸೆ ಪೂರ್ತಿಸಿ ಅನಿಲಜನಾಗ ನಿನ್ನ ತೇರೊ-ತ್ತಲು ಹಿಂದಕ್ಕೆ ನೀ ನಗು- |
ತ್ತಲೆ ಮುಂದಕ್ಕೆ ಬಂದಿ ದೂರಲಾಘವವಾದಿಂದಂದೀಗಹಲವು ಜನರು ಬಹು |
ಬಲುವಿಂದ ರಥವನೆಳೆದರೂ ಬಾರದಿದುಖಲು ಸೋಜಿಗವೆಲೆ |
ಹಲಧರನನುಜ ಕಡಲ ಮನೆ ಕಾರವಡಲ ರವಿದಶ ಧರ ಖಳ ವಿಪಿನ ದ್ವಿದಲ ೧
ಬರಬೇಡವೆಲವೊ ನಮ್ಮ ಮಂದಿರಾಕೆಂದು ಬಹಳಾ ಬೈ-ದರೂ ಮುದದಿಂದ ಗೋಪಿ- |
ಯರ ಸದ್ಮಕೆ ಪೋಗುವೆ ಜರಿದು ನಿನ್ನನು ತಾನಾತರಳನ ಕಾಯ್ವೆನೆಂದಾ |
ನರನ ತಪ್ಪೆಣಿಸದೆ ಕರೆಯದಲೆ ಪೋದೆ ನಿ-ನ್ನರಮನೆಯ ತನಕಲಿ |
ಎರಡೇ ಘಳಿಗೆಯೊಳು ಪರಿಪರಿ ಭಕುತ ಜನರುಗಳು ಬಿನ್ನೈ-ಪರು ಬೀದಿಗಳೊಳು |
ಮೆರೆಯುತಲೀಗಲೆ ಸರಸರ ಬರುವದು ಪರಮಾಯಾಸವೇ ೨
ಮೀನಾಕ್ಷಿ ಯಶೋದೆ ನಿನ್ನನು ಪೊತಾನೆಂದುನುಣ್ಣನೆ ತೊಟ್ಟಿಲೊಳಿಟ್ಟು |
ತಾ ನುಡಿಯಲು ಜೋಗುಳಾನು ಕೇಳ್ವೆ ಕಿವಿಗೊಟ್ಟುನಾನಾಗಮ ಸಮ್ಮತ |
ಗಾನ ಮಾಳ್ಪುದು ವಿದ್ವಾಂಸಾನೀಕವೀಗ ನಿನ್ನಧ್ಯಾನಕೆ ಬಾರದೆಯೇನು |
ನಿನ್ನ ಬಗೆ ತಾನರಿಯಳು ಶ್ರೀ ಮಾನಿನಿ ಖಗವಹಶ್ರೀನಿಧೆ ಮೂರೊಂದು |
ಹಾನಿರಹಿತ ಗದಾಪಾಣಿ ಹರಿಯೇ ಶ್ರೀ-ಪ್ರಾಣೇಶ ವಿಠಲನೆ ೩

೫೯
ಥಟ್ಟನೆ ನಡೆ ಗೋಕುಲಕಕ್ರೂರ ಅಸುರಾವೇಶವ ತಾಳು |
ಕೃಷ್ಣನ ಕರ ತಾ ಈ ಬಗೆಯಿಂದಲಿ ಪೇಳ್ವೆ ಉಪಾಯವ ಕೇಳು ಪ
ಮಲ್ಲರ ಕುವಲಯ ಪೀಡಾ ಪಥÀದೊಳು |ನಿಲ್ಲಿಸಿಹನು ಎನಬೇಡ ||
ಬಿಲ್ಲು ಹಬ್ಬಕೆ ಕರೆಸಿಹನೆನ್ನು |ಕೊಲ್ಲುವದುಸರಲಿ ಬೇಡ1
ನಿಮ್ಮಾವನು ನಿನ್ನ ಕಾಣದೆ ಬಳಲುವ- |ವಮ್ಮಿಮ್ಮೆಲ್ಲವು ಎನ್ನು ||
ಸುಮ್ಮನೆ ಆಲಸ್ಯಾತಕೆ ಹೋಗುವ |ಘಮ್ಮನೆ ಬಾ ಬಾ ಎನ್ನು ೨
ಪುಷ್ಟಿ ಮಾಡಿ ಮಾತುಗಳಿಂ ಮೆಚ್ಚಿಸಿ |ನೆಟ್ಟನೆ ಬಹ ಪರಿ ಮಾಡು |
ಬಿಟ್ಟರೆ ನಿನ್ನ ಶ್ರಮ ಬಲ್ಲನು ಪ್ರಾಣೇಶ |ವಿಠ್ಠಲನೆವೇ ನೋಡು ೩

೮೫
ದಾತೆ ಇಂದಿರೆ ಪಾರಿ | ಜಾತ ಮಂದಿರೆ ಲೋಕ |ನಾಥೆ ಸುಖ ಪೂರ್ಣೆ ವಿಖ್ಯಾತೆ ||
ಬಿನ್ನವಿಸುವೆನೆ ಯನ್ನಮಾತು ಮನ್ನಿಪುದೇ ವಿಧಿಮಾತೆ ಪ
ಪಾನೀಯಧಿ ಹರಿಗೆ | ಏನು ಕೊಟ್ಟನೊ ನಿನ್ನ |ಕಾಣಿಸವೆ ಕಣ್ಣು ಕುಲವಿಲ್ಲ ||
ಗೋತ್ರವಿಲ್ಲ ಹೆತ್ತವರ-ಕ್ಷೋಣಿಯೊಳಗೊಬ್ಬರರಿತಿಲ್ಲ೧
ಏನು ಮರುಳಾದೆವ್ವ | ಶ್ರೀನಾರಿಯಿಂಥವಗೆ |ಹೀನಳುಚ್ಛಿಷ್ಟ ಫಲಮೆದ್ದ ||
ಬಡ ಬ್ರಾಹ್ಮಣೊದ್ದರೆ ಮಾನವೇ ಇಲ್ಲಿ ನಗುತಿದ್ದ೨
ಥವ ಚೋರ ಬಹು ಜಾರ | ಸವತಿಯರು ಬಲು ಮಂದಿ |ಅವರಿಗಾತ್ಮಜರು ಹತ್ತತ್ತು ||
ನಿನ್ನೊಗತನದೊಳಿದ್ದಅವಿವೇಕ ಮೂಲೋಕಕೆ ಗುರುತು೩
ಅತ್ತೆ ಮಾವಗಳಿಲ್ಲ | ವೃತ್ತಿ ಕ್ಷೇತ್ರಗಳಿಲ್ಲ |ಹಸಿದರನ್ನಿಲ್ಲ ಮನೆಯಲ್ಲಿ ||
ಈ ಗಂಡನೊಡನೆಯೇ-ನರ್ಥಿ ಪಡುತಿಹೆಯೆ ನೀ ಬಲ್ಲೆ ೪
ಸೇರಿದನು ಪತಿ ನಿನ್ನ | ತೌರು ಮನೆ ನೋಡಲ್ಕೆ | ಧಾರಿಣಿಯೊಳಗೆ ಬಹು ನಿಂದಾ ||
ಭಕ್ತಿಯಿಂದವನ ಹ್ಯಾ-ಗಾರಾಧಿಸುವದೋ ಸುರವೃಂದಾ ೫
ಶಿಶು ಹಿಂಸಕತಿ ಕಠಿಣ | ಹಸನ್ಮುಖನಲ್ಲರ್ಭಕ ಹೆಂ- |ಗಸರಳಿದ ಪುಕ್ಕಾ ಬಹು ಠಕ್ಕಾ ||
ಕಲಹಗಂಟೇನು ಸೇ-ವಿಸಿದ್ಯೊ ವ್ರತಗಳನು ಇವ ಸಿಕ್ಕಾ೬
ಎಲ್ಲೆಲ್ಲಿ ನೋಡಿದರು | ಇಲ್ಲಿ ಪ್ರಾಣೇಶ ವಿ- |ಠಲನಂಥವರೂ ಏನೆಂಬೆ ||
ಮುದದಿಂದ ಬಿಡದೆ ಅವ-ನಲ್ಲಿ ಪೊಂದಿರ್ಪೆ ಜಗದಂಬೆ ೭

೧೦೫
ದೂರ ನೋಡುವುದುಚಿತವಲ್ಲವೋ ವಾರವಾರಕೆ ಬಿಡದೆ ತುತಿಪೆ |
ಮೀರಿದವನೆ ನಾ ನಿನಗೆ ಪವನ ಪ
ರಾಮಚಂದ್ರನ ಸೇವೆಯ ನಿ-ಷ್ಕಾಮದಿಂದ ಮಾಡಿ ಬಹಳ |
ತಾಮಸ ಜನಂಗಳ ತಂದೆ ನೀಂ ಮಹಾ ಸಮರ್ಥನೆಂದೇ ||
ನೀ ಮನೆಯಿಲ್ಲದವನು ಎಂದೆನೆ | ಕೋತಿರೂಪಈ ಮುಖವು ಹೀಗೆ ಅಂದೆನೆ |
ನಗವ ಪೊತ್ತಿಭೂಮಿಯೊಳಗೆ ಕಠಿಣನೆಂದೆನೆ | ಹನುಮನೆ ೧
ಪೊಕ್ಕು ರಣಕೆ ಹೆಜ್ಜೆಯ ಹಿಂದಕೆಯಿಕ್ಕದೆ ಭುಜವ ಚಪ್ಪರಿಸಲಾಗ |
ನಕ್ಕವರ ಬಲ ಹುರಿದು ಹೋಯಿತು |ಅಕ್ಕಟಕ್ಕಟಾ ನೀ ವೀರನೆಂದೇ ||
ರಕುತವ ಕುಡಿದ ನೀಚನೆಂದೆನೇ | ತಿಂದು ತಿಂದಿರಕ್ಕಸಿಯನು ಕೂಡಿದನೆಂದೆನೇ |
ಒಡಲ ಬಾಕಸೊಕ್ಕು ನಿನಗೆ ಬಹಳವೆಂದೆನೇ | ಭೀಮನೇ ೨
ತಿಳಿದು ಪ್ರಾಣೇಶ ವಿಠಲನಿಚ್ಛೆ |ಇಳೆಯೊಳುದಿಸಿ ಹಲವು ಮತವ ||
ನೆಲಕೆವೊರಿಸಿ ಮರುತ ಮತವ |ನಿಲ ಹಾಕಿದ ಗುರುಗಳೆಂದೇ ||
ತುಳುವರಲ್ಲಿ ಪುಟ್ಟಿದೆಯೆಂದೆನೇ | ಬಹಳ ಗುಗ್ಗರಿಮೆಲಿದ ಭೂತ ಮಗುವು ಎಂದೆನೇ |
ಭಾರತೀಶಸಲಹೋ ಬಿಡದತಿಮ್ಮನೆಂದರೆ | ಮಧ್ವನೇ ೩

೧೨೨
ದ್ರೌಪದಿ ಕೃಷ್ಣಾ ಪಾಂಚಾಲಿ | ದೇವಿ |ಗೋಪತಿ ಧ್ವಜ ವಂದ್ಯೆ ಕಾಳಿ |
ಆಹಾ |ಪಾಪಗಳೆಣಿಸದೆಲೇ ಪುನೀತನ | ಮಾಡೆ |ಶ್ರೀ ಪವನನ ಕರುಣಾಪಾತ್ರೆ ಸುಚರಿತ್ರೆ ಪ
ವಾಣಿ ಭಕ್ತಿಗೆ ಅಭಿಮಾನಿ | ತಾಯಿ ನೀನೆ ಗತಿಯೆಲೆ ಸುಶ್ರೋಣಿ |
ಶ್ರೀಶಧ್ಯಾನವ ಮಾಡಲು ಮನ ಪೋಣಿಸುವ |ದೇನನೊಲ್ಲೆನು ಪೂರ್ಣ ಜ್ಞಾನಿ | ಆಹಾ ||
ದೀನ ರಕ್ಷಕೆ ಮಿಕ್ಕ ಹೀನ ದೇವರ ಪಾದ |ಕ್ಕೆ ನಮಿಸುವ ಮತಿಯನೆಂದು ಕೊಡದಿರೆ ೧
ಶಾರದೆ ಹರಿಯ ಕುಮಾರಿ | ನಿನ್ನ |ಸಾರಿದೆ ಕುಜನ ಕುಠಾರಿ | ದಯಾ |ವಾರಿಧೆ ಸುಜನೋಪಕಾರಿ |
ತೋರೆ |ಸಾರೆಗರಿದು ಮುಕ್ತಿ ದಾರಿ | ಆಹಾ ||ಶ್ರೀ ರಮಣ್ಯುಳಿದೆಲ್ಲ ನಾರೀ ಶಿರೋಮಣಿ |
ಆರಾಧಿಸುವೆ ಯೆನ್ನ ದೂರ ನೋಡಲು ಬೇಡ ೨
ಹಲವರಿಗೆಲ್ಲ ಬಾಯ್ದೆರೆದು | ಬೇಡಿ |ಕೊಳುವದೇನದೆ ದಿನ ಬರಿದು | ಸಾಧು |
ನೆಲೆಯದೋರರು ಹತ್ಯಾಗರೆದು | ಬುದ್ಧಿ |ಕಲಿಸೆ ಭಾರತಿಯೆನ್ನ ಮರೆದು | ಆಹಾ |
ಇಳೆಯೊಳು ಶ್ರಮಪಡಿಸಲು ಸಲ್ಲ ದಿತಿಜರ |ನಳಿದ ಪ್ರಾಣೇಶ ವಿಠಲಗಚ್ಛಿನ್ನ ಭಕ್ತಳೆ ೩

೧೮
ಧೊರೆತನ ಮಾಡುವರೀ ಪರಿಯಾಗಲು |ತರವೇ ರುಕ್ಮಿಣೀ ಪತಿ ಕೇಳು ಪ
ಬಲು ಬಲು ಋಷಿಗಳು ತಪವನೆ ಮಾಡಿ ನಿನ್ನ |ನಿಲುವಗಾಣದೆ ಬಳಲುವರು ||
ಘಳಿಗೆ ಬೇಸರದಲೆ ಊಳಿಗದವನಂತೆ |ಬಲಿಯ ಬಾಗಿಲು ಕಾಯ್ವರೇ ೧
ಜಲಜ ಸಂಭವ ಈಶೇಂದ್ರಾದಿ ದೇವತೆಗಳು |ಬಿಡದೆ ನಿನ್ನ ವಂದಿಸುತಿರಲು |
ಬಡವನಂದದಿ ಕರೆದಾಗಲೆ ತಡೆಯದೆ |ನಡಿಸುವರೆ ಪಾರ್ಥನ ರಥವ ೨
ಸಚ್ಚಿದಾನಂದ ನಿತ್ಯ ತೃಪ್ತ ಪೂರ್ಣ ಕಾಮನೆಂದು |ಹೆಚ್ಚಾಗಿ ವೇದ ಕೂಗುತಿರಲು ||
ಹುಚ್ಚು ಪ್ರಾಣೇಶ ವಿಠ್ಠಲನಯ್ಯನೆ ಶಬರಿಯ |ಉಚ್ಚಿಷ್ಠ ಹಣ್ಣ ಮೆಲ್ಲುವರೆ ೩

೮೯
ನಮಿಸೊ ಗಂಧವಹಗೆ ಪ್ರತಿದಿನ ನಿನ್ನ |ಶ್ರಮವ ಕಳೆದು ಅಭೀಷ್ಟಿಯ ಕೊಡುವ ಮನುಜ ಪ
ಹರಿ ಕರುಣಿಸದಿರೆ ಗುರು ಕರುಣಿಸುವನು |ಗುರು ಕರುಣಿಸದಿರೆ ಹರಿ ಜರೆವ ||
ಧರೆಯೊಳು ವಾತಪ್ರಸಾದ ಸಂಪಾದಿಸಿ |ಶಿರಿವಲ್ಲಭಗೆ ಬೇಕಾದವರ ಕೇಳು ಮನುಜ ೧
ಹನುಮನೊಲಿದನೆಂದು ಒಲಿದ ಸುಗ್ರೀವಗೆ |ಮನಸಿಜ ಪಿತನು ತನ್ನಯ ಚರಣ |
ಘನವಾಹ ಸುತ ಭಜಿಸಿದರಿನ್ನವಗೆ ಪ್ರಭಂ |ಜನನೊಲಿಯದಕೆ ಕೊಂದನು ಕೇಳೆಲೊ ಮನುಜ ೨
ದುರ್ಜನಾಂತಕಗೆ ಬೇಕಾದ ಕಾರಣದಿಂದ |ಅರ್ಜುನಾದಿಗಳು ಸುಖವ ಬಿಟ್ಟರು ||
ಅಬ್ಜಾಪ್ತಸುತ ಅಸಮರ್ಥನೆ ರಣದೊಳು |ನಿರ್ಜಿತನಾಗಲು ತಿಳಕೊ ಇದು ಮನುಜ ೩
ಸುರರೆಲ್ಲ ಕೂಡಿ ನ್ಯಾಯವ ಮಾಡಿ ನೋಡಲು |ಸರಿಯಾಗಲಿಲ್ಲವು ಮಾರುತಗೆ ||
ಗಳವುದ್ಭವಿಸಲು ಮಥನ ಕಾಲದಿ ಆದಿತ್ಯರ |ಮೊರೆ ಕೇಳಿ ಪ್ರಾಶನ ಮಾಡಿದ ಮನುಜ ೪
ಶಮೆಯಲ್ಲಿ ದಮೆಯಲ್ಲಿ ಸರ್ವಗುಣದಲ್ಲಿ |ಪವಮಾನಗೆ ಸರಿಯುಂಟಾವನು ಜಗದಿ ||
ಅಮಲ ಪ್ರಾಣೇಶ ವಿಠಲಗಲ್ಲದವನು |ಯಮ ಸದನಕೆ ಯೋಗ್ಯ ಯಮಗಲ್ಲೆಂಬ ಮನುಜ ೫

೧೩೯
ನಮೋ ನಮೋ ಪಾರ್ವತಿ ನಿನಗೇ |ಸಮೀರ ಜನಕ ಒಲಿಯಲೆನಗೇ ಪ
ಬಂದಾ ರಾಯರ ಶಕ್ತಿ ಬಂಧನ ಮಾಡಿ ಯೋಗಾ |ಸಂಧಿಸಿ ಕೊಡು ರಾಮಚಂದ್ರನಿಗೇ ೧
ಕ್ರೂರಾ ರಾವಣ ನಿಂತು ದೂರೆ ಮಾಡಿದ ಮಾತು |ಈ ರಾಯರಿಗೆ ಸ್ರ‍ಮತಿ ಹಾರಿಸಮ್ಮಾ ೨
ಪ್ರಾಣೇಶ ವಿಠಲಾನೆ ಆಣುಮನಾದರೆ |ನಾನೆಂದು ಮರಿಯೆ ನಿನ್ನನು ದೇವಿ ೩

೧೧೦
ನಮೋ ನಮೋ ರಾಮ ಕಳುಹಿಸಿದನಮ್ಮಾ |ಮಮ ಸ್ವಾಮಿ ಬದುಕಿಹನೆ ಪೇಳೋ ತಮ್ಮ ಪ
ವಾಸುದೇವನು ಜಗದ ಸೃಜಿಸುವನು ಕೆಡಿಸುವನು |ನಾಶವೆಲ್ಲಿಹದು ರಘುವರ್ಯಗಮ್ಮಾ ||
ವಾಸವಾಗಿರೆ ವನದಿ ಮೃಗ ತರಲು ಪೋಗಿ ಜಗ- |ದೀಶ ನುಡಿದನು ಕಡೆಯ ಮಾತು ತಮ್ಮ ೧
ಖಳ ಮಾಯೆಯಲಿ ಬರಲು ರಾಘವನು ಸಂಹರಿಸೆ |ನೆಲಕುರುಳಿ ಕೂಗಿದನು ಅವನೇ ಅಮ್ಮಾ ||
ಬಲುವಿಂದ ಲಕ್ಷ್ಮಣನ ಬೈದು ಅಟ್ಟಿದೆ ನಾನು |ಜಲಜಾಕ್ಷನೋರ್ವನಿಹನೇನೋ ತಮ್ಮ ೨
ಅನುಜಯುಕ್ತದಿ ದೇವ ಕಪಿದಂಡು ನೆರಹಿಹನು |ಹನುಮಂತ ನಾ ರಾಮದೂತನಮ್ಮಾ ||
ಇನಿತು ಸತ್ಯವೊ ಅನೃತವೊ ನಂಬಿಗ್ಯಾಗದು |ಮನದ ಅನುಮಾನ ಬಿಡುವಂತೆ ಮಾಡೋ ತಮ್ಮ ೩
ಸಿರಿಕಾಂತ ಶ್ರೀಮಂತ ಕರುಣದಲಿ ಕೊಟ್ಟಿಹನು |ಗುರುತಿನುಂಗುರವನಿದು ನೋಡಿರಮ್ಮಾ ||
ಪರಮಾತ್ಮನಿಗೆ ದೂತನಹುದು ಶುಭ ವಾರ್ತೆಗಳೆ |ಇರುವನೆಲ್ಲೆದು ವಿಸ್ತರಿಸೆಲೊ ತಮ್ಮಾ ೪
ಕಾನನದೆ ಚರಿಸುತ ರವಿಸುತಗೊಲಿದು ಶುಕ್ರಜನ |ಹಾನಿ ಮಾಡಿದನಲ್ಲೇ ಇರುವನಮ್ಮಾ ||
ಜಾನಕಿಯೆಂದೆನ್ನನು ನಿತ್ಯದಲಿ ನೆನೆಸಿ |ಏನು ಮಾಡುವನೊ ಪೇಳುವದೋ ತಮ್ಮ ೫
ನಿನ್ನಗಲಿ ವ್ಯಾಕುಲದಿ ನರರಂತೆ ಕೇಶವನು |ಅನ್ನ ಉದಕವನೆಲ್ಲಾ ಜರಿದನಮ್ಮಾ ||
ಪನ್ನಗಾರಿ ಧ್ವಜನು ದನುಜರ ಗೆಲಿದು |ಯನ್ನ ಕೂಡುವದು ನಾ ಕಾಣೆ ತಮ್ಮ ೬
ತಾಯೆ ರಾವಣನಳಿದು ನಾನೊಯ್ವೆ ನಿನ್ನೀಗ |ನೋಯಿಸದೆ ಹರಿಗೀಡು ಆವನಮ್ಮಾ ||
ನಾಯಕನು ನೀಂ ಭೃತ್ಯರೊಳು ತ್ವರಿತ ಬಹುದೆಂದು |ಕಾಯಜ ಪಿತನಿಗೆ ಬಿನ್ನೈಸೊ ತಮ್ಮ ೭
ಪೋಗಿ ಬರುವೆನು ನಿಮ್ಮ ಗುರುತು ಏನಿದೆ ಕೊಟ್ಟು |ಬೇಗನಪ್ಪಣೆಯೆನಗೆ ಈವದಮ್ಮಾ ||
ನಾಗಶಯನಗೆ ರಾಗಟೆಯನಿತ್ತು ಪದಕೆ ತಲೆ |ಬಾಗಿರುವಳೇಳದಲೆಯೆನ್ನೋ ತಮ್ಮ ೮
ನಳಿನಮುಖಿಯೆ ನಮೋ ನಮೋ ದಯೆಯಿರಲಿ ಸ್ವಲ್ಪ ದಿನ |ದೊಳಗೆ ಬರುವೆವು ಚಿಂತೆ ಬೇಡವಮ್ಮ ||
ಭಳಿ ಭಳಿರೆ ಪ್ರಾಣೇಶ ವಿಠ್ಠಲನ ಪೂರ್ಣ ದಯೆ |ಗಳಿಸಿ ಅಜಪಟ್ಟವನು ಆಳೋ ತಮ್ಮ ೯

೧೪೫
ನಮೋ ನಮೋ ಶಚಿ ವಲ್ಲಭತೇ |ರಮೆಯ ರಮಣನಲಿ ನೀಡು ಮತೆ ಪ
ಹತ್ತು ಕಲ್ಪಗಳಲ್ಲಿ | ಉತ್ತಮ ಶ್ಲೋಕನ ||ತತ್ವ ವಿಚಾರ ಮಾಡ್ದೆ | ಚಿತ್ತಶುದ್ಧದಿ೧
ಮೂರೊಂದರ್ಧಾ ಕಲ್ಪ | ಚಾರು ತಪಸ್ಸು ಮಾಡಿ ||ನಾರಾಯಣನ ಕಂಡ | ಸೂರಿ ಗಮ್ಯಾ ೨
ಪ್ರಾಣೇಶ ವಿಠ್ಠಲನ | ನೀನೊಲಿಸೀದೆ ಪೊಗೆ ||ಯಾನುಂಡು ಕೋಟಿ ವತ್ಸರ ನಾಕದಿ ೩

೯೧
ನಮೋ ನಮೋ ಶ್ರೀ ಭೀಮ | ನಮೋ ನಮೋ ಜಿತಕಾಮ |ಕಮಲಾಕ್ಷ ದಾಸ | ಪೊರೆಯಬ್ಜಾಪ್ತ ಭಾಸ ಪ
ಘನ ಗಿರಿಯೊಳಗೆ ಕುಂತಿ ನಿನ್ನೆತ್ತಿಕೊಂಡಿರಲು |ಧ್ವನಿ ಮಾಡೆ ಹುಲಿ ತಾಯಿ ನಡುಗಿ ಬಿಸುಟೀ ||
ತನುವು ನಿನ್ನದು ಸೋಂಕೆ ನಗವೊಡೆದು ಶತಶೃಂಗ- |ವೆನಿಸಿಕೊಂಡಿತೋ ದ್ವಾಪರದಿ ಬಲವಂತ ೧
ಲೋಕದೊಳು ಮನುಜರಾ ಶಿಶುಗಳಂದದಿ ಬೆಳೆದು |ಪಾಕಶಾಸನಿ ಯಮಜ ಯಮಳರ ಜನನೀ |
ಯಾ ಕೂಡಿಕೊಂಡು ಇಭಪುರಿಗೈದಿ ಮೋದದಲಿ |ಸಾಕಿಕೊಂಡೆಯಂಬಿಕೆಯ ಮಗನಿಂದಾ ೨
ಚಿಕ್ಕವರೊಡನೆ ಚಂಡು ಬುಗುರಿ ಈಸಿರೆ ಓಟ |ತೆಕ್ಕೆ ಮುಷ್ಟಿ ಮರಗಳನೇರುವಲ್ಲಿ ||
ಸೊಕ್ಕಿದವನಿವನೆಂದು ಆವಾಗಲೆಲ್ಲರಿಗೆ |ಬಿಕ್ಕಿ ಬಾಯ್ದೆರೆವಂತೆ ಮಾಡಿ ತೋರಿಸಿದೆ ೩
ಅಹಿತರಾದವರು ನೀರೊಳಗೆ ಕೆಡಹಲು ಎದ್ದೆ |ಅಹಿಗಳಿಂ ಕಟ್ಟಿಸಲು ನೋಯದಿದ್ದೆ ||
ಸಹಿಸದಲೇ ವಿಷಹಾಕಿ ಬದುಕಲ್ಕೆ ಹೊರಘಾಕೆ |ಮಹಮೋಸ ಮಾಡೆ ಗೆದ್ದು ಧರಿಯೊಳು ಮೆರೆದೆ ೪
ಸೋಕಿಯಸುರಿಯ ಮಗನ ಪಡೆದು ಖಲನನು ತರಿದು |ಏಕಚಕ್ರ ನಗರದಲ್ಲಿದ್ದು |
ಬೇಕೆಂದು ನೀನಾಗಿ ಪೋಗಿ ಬಕನನು ಕೊಂದೆ |ಈ ಕುಂಭಿಣೀಯೊಳು ನಿನಗಿದಿರಾರು ದೇವಾ ೫
ಪಾಂಚಾಲಿಯನು ಗಳಿಸೆ ಕೋಪದಿಂ ಬಂದ ಹರಿ |ವಂಚಕರ ದರ್ಪವ ಭಂಗಿಸಿ ಲೀಲೆಯಿಂ |
ಮಿಂಚುವಾ ಗದೆಲಿಹ ನಿಶ್ಚಿಂತ ಬಲವಂತ |ಮುಂಚಿನಜ ಪ್ರಣತ ಸುರಭೂಜ ರವಿತೇಜ ೬
ಈ ಪರಿಯಿಂದ ಕೆಲಕಾಲವಲ್ಲೆಲ್ಲ |ಕಾಪಾಡಿ ವಜ್ರಿಪ್ರಸ್ಥಕೈ ತಂದು ||
ಪಾಪಿ ಜರಿಜನ ಕೊಂದು ರಾಜಸೂಯವ ಮಾಡಿ |ನೀಂ ಪಾಲಿಸಿದೆಯವನಿ ಸದ್ಧರ್ಮದಿಂದ ೭
ದ್ಯೂತವಾಡಿದ ಸಮಯದಲ್ಲಿ ದ್ರೌಪದಿಯಳನು | ಪಾತಕಿ ವಸವೆಳೆಯೆ ಕೋಪದಿಂದ ||
ಘಾತಿಸುವೆನೆಂದಬ್ಬರಿಸಿ ಪಲ್ಗಡಿದು ಲಕ್ಷ್ಮೀ |ನಾಥನಿಚ್ಛೆಂಗೆ ಈಗೇಂದು ಕೈಮರೆದೇ ೮
ತಮೋ ಯೋಗ್ಯನಾ ಪಾಪಪೂರ್ಣದಾಹದಕೆ ಬ- |ಹು ಮಿತಿಯಿಂದ ವನವಾಸ ಪತ್ಕರಿಸಿದೆ ||ಸಮರಾಂಗಣದೊಳಿವರ ಹೀಗೆ ಸವರುವೆನೆಂದು |ಸುಮನಸಾರಾಧ್ಯ ಬಾಹುಗಳೆತ್ತಿ ನಡೆದೆ ೯
ಕಾನನದಿ ಕಿರ್ಮೀರನಂ ಕೊಂದು ಋಷಿಯಿಂದ |ಮಾನವಂ ಕೈಕೊಂಡು ಮತ್ತೆ ಮುಂದೆ ||
ಆ ನಗದಿ ಬಹುಕಾಲ ಸೇರಿಕೊಂಡಿದ್ದಂಥ |ದಾನವರ ಮಡುಹಿ ಸೌಗಂಧಿಕವ ತಂದೆ ೧೦
ನಿನ್ನೊಳಗೆ ನೀಂ ಲೀಲೆ ಮಾಡಿದ್ಯಾ ಸಮಯದಲಿ |ಚಿನ್ನದೋಪಮ ಪುಷ್ಪವೊಂದು ಬೀಳೆ ||
ನಿನ್ನರಸಿಯಿದು ಎನಗೆ ಇಷ್ಟವೆನಲವಳ ನುಡಿ |ಮನ್ನಿಸುತೆ ಪೋಗಿ ಮಣಿಮಂತನೊಂಚಿಸಿದೆ ೧೧
ದ್ವೈತ ವನದೊಳು ಬಂದು ಮೃಗ ಬೇಟೆಯಾಡೆ ಪುರು |ಹೂತ ಪದವಾಳ್ದವನು ಮೆಯ್ಯ ಸುತ್ತಲ್ ||
ನೀ ತವಕ ಬೀಳದೆ ಅವನ ಪುನೀತನ ಮಾಡಿ |ಖ್ಯಾತಿ ತಂದಿತ್ತೆಯಂತಕನ ಸುತಗಂದು ೧೨
ಮತ್ಸ್ಯ ದೇಶಾಧಿಪನ ಮನೆಯಲ್ಲಿ ಇದ್ದಾಗ |ಹೆಚ್ಚಿನಾ ಬಲದ ಮಲ್ಲನ ಕೆಡಹಿದೆ ||
ಅಚ್ಚ ಪಾಪಾತ್ಮ ಕೀಚಕನನ್ವಯ ತಂದೆ |ಅಚ್ಯುತನ ನಿಜದಾಸ ಭಕ್ತರಘನಾಶ ೧೩
ಎಂಟೈದು ವರುಷ ಈ ರೀತಿಯಲಿ ಕಳೆದು ವೈ- |ಕುಂಠಪತಿ ದಯದಿಂದ ಉಪಪ್ಲಾವ್ಯದಿ ||
ಗಂಟು ಹಾಕಿದಿ ದುರಾತ್ಮನ ಕೂಡ ಸಂಗರಕೆ |ಕಂಠೀರವರವದಿಂ ತಲೆದೂಗಿ ನಡೆದೆ ೧೪
ಮುತ್ತೆ ಭೀಷ್ಮಗೆ ವಂದು ಸ್ವಲ್ಪಮಾತ್ರಕೆ ಮಾನ |ವಿತ್ತಂತೆ ತೋರಿ ಎಲ್ಲರ ರಥವನೂ |
ಕತ್ತರಿಸಿ ಹಿಂದಕ್ಕೋಡಿಸಿದೆ ನಿನ್ನಾರ್ಭಟಕೆ |ಹತ್ತು ದಿಕ್ಕಿನೊಳೊಬ್ಬರಿದಿರಾಗಲಿಲ್ಲ ೧೫
ಪ್ರಹ್ಲಾದನವತಾರ ಬಾಹ್ಲೀಕನನು ಗೆದ್ದು |ಮಹೀಜಸುತನಾನಿ ಮಸ್ತಕ ಶೀಳಿದೆ ||
ಬಹು ಖೋಡಿ ಧಾರ್ತರಾಷ್ಟ್ರರ ಕೊಂದು ಹರೆಬಿಟ್ಟ |ಅಹಿಯಂತೆ ರಣರಂಗದಲ್ಲಿ ಸಂಚರಿಸಿದೆ ೧೬
ಕಡು ಕೋಪದಿಂದ ಹೂಂಕರಿಸಿಯುರಿಯುಗುಳುತಲಿ |ಪೊಡವಿ ನಡುಗಿಸಿ ನಭ ಬೇಯಿಸುತ್ತಲಿ ||
ಪಿಡಿದು ದುಶ್ಶಾಸನನ ತೊಡೆಯಲ್ಲಿ ನೆರೆಗೆಡಹಿ |ಒಡಲ ಛೇದಿಸಿ ರಕ್ತಮಜ್ಜನವಗೈದೆ ೧೭
ಕರುಳ ದಂಡೆಯ ಮಾಡಿ ಅರಸಿ ಮಂಡೆಗೆ ಮುಡಿಸಿ |ಖರೆಯ ಮಾಡಿದೆ ಉಭಯತರ ಶಪಥವ ||
ಕರೆದೆ ಕುರು ಪಾಂಡವರ ಬಿಡಿಸ ಬನ್ನೀರೆಂದು |ಮರುಳಗೊಂಡರೆಲ್ಲ ನಿನ್ನ ರೂಪ ನೋಡುತಲಿ ೧೮
ಸ್ವಾಮಿ ಪ್ರಾಣೇಶ ವಿಠಲನ ಆಜ್ಞೆಯ ವಹಿಸಿ |ಭೂಮಿ ಭಾರಿಳುಹುದಕೆ ಅವತರಿಸಿದೆ ||
ನಾ ಮಾಡುವೆನೆ ಪೂರ್ತಿ ನಿನ್ನ ಮಹಿಮೆಯ ಸಮರ |ಭೀಮ ಕರ ಪಿಡಿದು ಸಲಹುವದೋ ಪ್ರತಿದಿನದಿ ೧೯

೨೨೨
ನರಜನ್ಮ ಬಂದುದಕೆ ಇಪ್ಪತ್ತು ಆರು ಕಳೆ |ವರದೊಳಿಹ ಹರಿರೂಪ ಚಿಂತಿಸುವದೂ ಪ
ಎರಡನಂತದ ಮ್ಯಾಲೆ ಒಂಬತ್ತಧಿಕ ನೂರು |ಸ್ವರುಪದೊಳಗಿಹವು ಆಮ್ಯಾಲೆ ಇಚ್ಛಾ ||
ವರಣದಲಿ ಒಂದು ಲಿಂಗದಲಿ ಆರೊಂದಧಿಕ |ಅರುವತ್ತು ರೂಪಗಳು ಉಂಟು ಕೇಳೀ ೧
ಎಪ್ಪತ್ತರೊಂಬತ್ತಧಿಕ ನೂರು ಅವ್ಯಕ್ತ- |ಕಿಪ್ಪವು ಅವಿದ್ಯದೊಳು ಯೇಳು ಅಧಿಕಾ ||
ಇಪ್ಪತ್ತು ಕರ್ಮ ಕಾಮಾವರಣದಲಿ ಮೂರು |ಇಪ್ಪತ್ತು ಮೂರು ಅರುವತ್ತು ಎಂಟೂ ೨
ಮಾರಮಣ ಜೀವ ಪರಮಾಚ್ಚಾದಿಕೆರಡರೊಳು |ಬ್ಯಾರೆ ಬ್ಯಾರಿಪ್ಪ ಒಂಬತ್ತು ರೂಪಾ ||
ನಾರಾಯಣಾದಿ ಐದರೊಳಗೊಂದೊಂದೇವೆ |ತೋರುತಿಹವಜಪಿತನ ವಿಮಲ ಮೂರ್ತೀ ೩
ಎರಡು ಲಕ್ಷೆರಡು ಸಾವಿರದ ನಾನೂರು ಈ- |ರೆರಡಧಿಕ ತೊಂಬತ್ತು ಅನಿರುದ್ಧದೀ ||
ಮೆರವ ಶ್ರೀ ವಾಸುದೇವ ನಾರಾಯಣ ಕವಚದಿ |ಇರುವ ಒಂದೊಂದು ಆನಂದಮಯದೀ ೪
ಇನ್ನು ವಿಜ್ಞಾನ ಮನವಾಙು‌ ಶ್ರೋತೃ ಚಕ್ಷು ಪ್ರಾ- |ಣನ್ನಮಯ ಹೀಗೆ ಯೇಳೊಂದರೊಳಗೇ ||
ವನ್ನಜಾಕ್ಷನ ರೂಪ ಒಂದೊಂದೆ ಇಹವೆಂದು |ಚೆನ್ನಾಗಿ ಭಕ್ತಿಪೂರ್ವಕ ತಿಳಿವದೂ೫
ಸ್ಥೂಲವಾದಂಗದಲಿ ಮೂವತ್ತೆರಡು ಕೋಟಿ |ಯೇಳೂ ಲಕ್ಷದ ಮೇಲೆ ರಮ್ಯವಾಗೀ ||
ಶ್ರೀಲೋಲ ತೊಂಬತ್ತು ಮೂರು ಸಾವಿರದ ಹದಿ- |ನೇಳಧಿಕ ಎಂಟು ಶತರೂಪದಲಿಹಾ ೬
ಈರನಂತ ಮೂವತ್ತೆರಡು ಕೋಟಿ ನವಲಕ್ಷ |ಆರಧಿಕ ತೊಂಬತ್ತು ಸಾವಿರೆಂಟೂ ||
ನೂರು ಐವತ್ತೆಂಟು ರೂಪಗಳು ಸ್ತಂಭಾದಿ |ವಾರಿಜ ಭವಾಂತ ದೇಹಗಳೊಳೀಹವೂ ೭
ಮೋದತೀರ್ಥರ ಮತವ ಪೊಂದಿದವರೀ ರೂಪ |ಸಾದರದಿ ಚಿಂತಿಸುವದೇ ಮೋಕ್ಷಕೇ ||
ಸಾಧನವಿದು ಸಾತ್ವಿಕರಿಗಲ್ಲದಲೆ ಅನ್ಯ- |ವಾದಿಗಳಿಗುಪದೇಶ ಮಾಡಸಲ್ಲಾ೮
ಪ್ರಾಣೇಶ ವಿಠ್ಠಲನ ಸುಮೂರ್ತಿ ಈ ಪರಿಯಿಂದ |ಧ್ಯಾನಕ್ಕೆ ತಂದು ಹಿಗ್ಗದಲೆ ಬರಿದೇ ||
ಏನು ಓದಿದರು ಕೇಳಿದರು ತಪ ಮಾಡಿದರು |ಆನಿ ತಿಂದಕಪಿತ್ಥದಂತೆರಿವದೂ ೯

೨೩
ನಿನಗೆ ತಿಳಿದಂತೆ ಮಾಡುವದಯ್ಯ ಬೇಡೆನಲು |ಯನಗೆ ಸ್ವಾತಂತ್ರ್ಯವುಂಟೇ ||
ಮನಸಿಜ ಪಿತ ನಿನ್ನ ಮೀರಿ, ಸಿರಿ, ವಿಧಿ, ಶರ್ವ |ತೃಣ ಮುರಿಯೆ ಶಕ್ತರಲ್ಲಾ ಹರಿಯೇ ಪ
ಅಪಮಾನ ಮಾಡಿಸೊ ಕೋಪವನೆ ಹೆಚ್ಚಿಸೊ ಕೃಪಣತನದಲ್ಲಿರಿಸೊ |
ಅಪಹಾಸಗೈದಿಸೋ ಡಾಂಭಿಕದವನೆನಿಸೋ ಉಪವಾಸದಲ್ಲೇ ಇರಿಸೊ |
ಕೃಪೆಯುಳ್ಳ ನರನೆನಿಸೋ ಮಾನವೆಗ್ಗಳ ಕೊಡಿಸೊಚಪಲ ಬುದ್ಧಿಯನೆ ಕಲಿಸೊ |
ಅಪರಾಧವನೆ ಹೊರಿಸೊ ಬಲು ಭಯವ ತೋರಿಸೋತ್ರಿಪುರಾಂತಕರ್ಚಿತ ಪದ ಹರಿಯೇ ೧
ಬೈಸು ಬೈದಾಡಿಸೊ ಬಾಂಧವರನಗಲಿಸೊಹೇಸಿಕೆಯು ಲಜ್ಜೆ ತೋರಿಸೊ |
ಗ್ರಾಸವನೇ ಉಣಿಸೋ ನರರಾಲಯವ ಕಾಯಿಸೋಕ್ಲೇಶ ನಿತ್ಯದಲಿ ಬಡಿಸೊ |
ಆಶೆಯನು ಜರಿಸು ಕೈಕಾಲುಗಳ ಕುಂಠಿಸೊದೋಷಕ್ಕೆ ಮನವಂಜಿಸೋ |
ವಾಸುದೇವನೆ ನಿನ್ನ ವ್ರತವ ಮಾಡಿಸುವಂದುದೇಶ ಬಹುಕಡೆಗೆ ತಿರುಗಿಸೊ ಹರಿಯೇ2
ಕವನಗಳ ಪೇಳಿಸೊ ಕರ್ಮ ಬಾಹಿರನೆನಿಸೊಭುವನದೊಳು ಭಂಡನೆನಿಸೊ |
ಕವಿಸು ಅಜ್ಞಾನವನು ಸನ್ಮತಿಯ ಪ್ರೇರಿಸೊಕಿವಿ ಮಾತ್ರ ದೃಢದಲಿರಿಸೋ |
ಜವನ ಸದನದ ಪೊಗಿಸೋ ಬಂಧಾನದೊಳಗಿರಿಸೊತವ ದಾಸರೊಳು ಕೂಡಿಸೊ |
ದಿವಿಜರೊಲ್ಲಭ ನ್ಯಾಯವನ್ಯಾಯವನೆ ಮಾಡುಭವ ಪಂಕದೊಳು ಮುಳುಗಿಸೋ ಹರಿಯೇ ೩
ಹೆತ್ತವರ ಸೇವೆ ಮಾಡಿಸೊ ನೀಚರ ಬಳಿಯತೊತ್ತು ಕೆಲಸವ ಮಾಡಿಸೋ |
ಚಿತ್ತ ಚಂಚಲಗೊಳಿಸೊ ವೈರಾಗ್ಯ ಪುಟ್ಟಿಸೌತ್ತಮರ ನೆರೆಯಲಿರಿಸೊ |
ಮುತ್ತಿನಾಭರಣಿಡಿಸೊ ತಿರುಕೆಯನೆ ಬೇಡಿಸೊವಿತ್ತ ಸಂಗ್ರಹ ಮಾಡಿಸೊ |
ಮುತ್ತೆಗೊಲಿದಿಹನೆ ವಿಷ ಕುಡಿಸೊ ಅಮೃತವುಣಿಸೊಮತ್ತೊಬ್ಬರಾರು ಗತಿಯೋ ಹರಿಯೇ ೪
ಸಾಲಗೊಯ್ಯನ ಮಾಡು ಕಂಡ ಕುಲದಲಿ ತಿನಿಸುಕೀಳು ಮನುಜರ ಪೊಂದಿಸೋ |
ನಾಲಿಗೆಗೆಡಕನೆನಿಸೊ ಸತ್ಯ ವಚನಿಯು ಎನಿಸೊಸ್ಥೂಲ ಪುಣ್ಯವ ಮಾಡಿಸೋ |
ಕೇಳಿಸೋ ಸಚ್ಛಾಸ್ತ್ರ, ನೀತಿಯರಿಯನು ಎನಿಸೋ ಆಲಯದಿ ಸುಖದಲಿರಿಸೋ |
ಮೂಲೋಶ ಪತಿಯೆ ಹರಿ ಕುದುರೆಯೇರಿಸೊ ಮತ್ತೆಕಾಲು ನಡಿಗೆಯಲೆ ನಡೆಸೊ ಹರಿಯೇ ೫
ಅರಸು ಪದವಿಯ ಕೊಡಿಸೊ ಕಾಷ್ಠ ಭಾರವ ಹೊರಿಸೊಪರದೂಷಣೆಯ ಮಾಡಿಸೊ |
ಮರ್ಯಾದೆಗಳು ತಿಳಿಸು ಅತಿಮೂಢನೆಂದೆನಿಸೊನಿರುತ ರೋಗದಲಿ ಇರಿಸೋ |
ಕರೆಕರೆಯ ಹಿಂಗಿಸೊ ದಿವ್ಯ ವಸನವನುಡಿಸೊಸುರಗಂಗಿ ತಡಿಯೊಳಿರಿಸೊ |
ಪರಮಾತ್ಮನೆ ವಂಧ್ಯನೆನಿಸೊ ಸುತರನ್ನೆ ಕೂಡೊಮರಿಸೋ ದುರ್ವಿಷಯಗಳನೂ ಹರಿಯೆ6
ಮಾಕಾಂತ ಪ್ರಾಣೇಶ ವಿಠಲ ನೀನಿತ್ತುದಕೆ ಶೋಕಿಸಲು ಸಲ್ಲದಯ್ಯ |
ಆ ಕುಂಭೀಪಾಕ ಮೊದಲಾದ ನರಕದೊಳೆನ್ನಹಾಕಿದರೂ ಒಳಿತೆ ಜೀಯಾ |
ಈ ಕಲಿಯುಗದಿ ಪಂಚಭೇದ ತಿಳಿಯದ ದೈತ್ಯರಾಕುಲದೊಳಿರಿಸಬೇಡ |
ಶ್ರೀ ಕಾಳೀಕಾಂತನರ್ಚನೆ ಸರ್ವ ಕಾಲದಲಿಬೇಕು ಬಿನ್ನಪ ಲಾಲಿಸೋ ಹರಿಯೇ ೭

೧೪೬
ನೀ ಸಾಹೆಯಾಗು ಯಮಗನುಗಾಲ |ಶೇಷಾದೇವರೆ ರೋಹಿಣಿ ಬಾಲಾ ಪ
ಮೂರುತಿಯಲ್ಲಿ ಪುಟ್ಟಿ | ನಾರಾಯಣನ್ನ ಕೂಡಿ ||ಚಾರು ಬದರಿಯಲ್ಲಿ ತೋರುತಿಹನೆ ೧
ದಶರಥನ ಮಡದಿ | ಬಸುರೀಲಿ ಜನಿಸೀದಿ ||ಕುಸುಮನಾಭನರ್ಚನೆ ಎಸಗಿದಿಯೋ ೨
ಪ್ರದ್ಯುಮ್ನ ಪರಿಯಂಕ | ರುದ್ರಾನಲಂಕಾರ ||ಭದ್ರ ಪ್ರದಾಯಕ ಭಕ್ತ ಪೋಷಾ೩
ನೀಲಾಂಬರವನುಟ್ಟ | ತಾಳಾಂಕ ಬಿನ್ನಪ ||ಲಾಲೀಸೊ ನಿನ್ನವನೆಂದ ನಿಶಾ೪
ಪ್ರಾಣೇಶ ವಿಠಲನ | ಧ್ಯಾನದೋಳಿರುವಂತೆ ||ನೀನೊಲಿವದು ದೂರು ನೋಡದಲೇ ೫

೧೦೪
ನೀನಲ್ಲದನ್ಯರೆ ಸಲಹಲು ಕಾಯೊ |ಜಾನಕೀಪತಿ ದೂತ ಹನುಮಂತ ಪ
ಗುರುವೆ ನಿನ್ನಯ ಪಾದ ಭಜಿಸುವರನ್ನ |ಧರೆಯೊಳು ಬನ್ನಬಡಿಸುವೋರೆ ||
ಗಿರಿಸುತ ನೀ ಗತಿಯೆನಲಾಗ ಬೇಗ |ಪೊರೆದೆಯಾತನ ಜಲಧಿಯೊಳಿಟ್ಟು೧
ರವಿಜ ಶಕ್ರಜನಿಂದ ಬಳಲುತ ಬಂದು |ಪವನ ಪಾಲಿಪುದೆನ್ನಲಾಕ್ಷಣ ||
ಭುವನೇಶನಿಂದ ವಾಲಿ ಕೊಲ್ಲಿಸಿ ಕಾಳೀ |ಧವ ಸುಗ್ರೀವನ ಭಯ ಬಿಡಿಸಿದೆ೨
ತಂದೆ ಪ್ರಾಣೇಶ ವಿಠ್ಠಲನಿಗೆ ನಿನಗಂ |ದುಂಟಿಂದಿಲ್ಲೇ ಈ ಮಹಿಮೆಯು ||
ಬಂದ ದುರಿತ ನಿವಾರಣ ಮಾಡಿ ದಯ-ದಿಂದ ಪಾಲಿಸೋ ನಿನ್ನ ದಾಸರ ೩

೨೨
ನೀನೇಯೆಂದು ಮರೆ ಹೊಕ್ಕೆನೋ ರಂಗ |ದೀನ ಜನರ ಪಾಲಿಪ ದಯಾಸಾಗರ ಪ
ಉತ್ತಮ ದ್ವಿಜರು ಮನೆಗೆ ಬರಲು |ಪ್ರತ್ಯುತ್ಥಾನವ ಕೊಡದಲೆ ಉ ||
ನ್ಮತ್ತತನದಿ ಬಹು ಪಾಪವ ಗಳಿಸಿದೆ |ಚಿತ್ತಜ ಜನಕನೆ ದೋಷನಗ ಕುಲಿಶ ೧
ಪಾತ್ರರ ಸಂಗಡ ಕ್ಷೇತ್ರಗಳ |ಯಾತ್ರೆ ಚರಿಸದೆ ನಿರರ್ಥಕದಿ ||
ಗಾತ್ರವ ಬೆಳಸಿದೆ ರುಕ್ಮಿಣೀವರನೆ ವಿ- |ಧಾತೃ ಕರಾರ್ಚಿತ ಕುಂದನೆಣಿಸದಿರು ೨
ಸ್ನಾನ ಸಂಧ್ಯಾವಂದನೆ ಬಿಟ್ಟು |ಜ್ಞಾನಿಗಳಾದವರನು ಹಳಿವೆನು ||
ಧ್ಯಾನಿಪೆ ಸರ್ವದಾ ಪರರ ಕೇಡನು |ಏನೆಂಧೇಳಲಿ ಯನ್ನಯ ಅವಗುಣ ೩
ಮರೆತಾದರೂ ಹರಿಯೆಂದೊಮ್ಮೆ |ಸ್ಮರಿಸಿದವರ ದುರ್ಗುಣಗಳನು ||
ಪೊರೆವನೆಂಬ ನಿನ ಬಿರುದು ಕೇಳಿ ಪದ |ಸರಸಿಜಕೆರಗಿದೆ ಕರುಣಿಸೋ ಮಾಧವ ೪
ಪುಸಿಯಲ್ಲವೋ ಇದು ಅಜಾಮಿಳ |ಪೆಸರಾಗಿಹ ಪಾಪಿಷ್ಠರೊಳು ||
ವಶ ಮೀರಿ ಸುತನ ಕರೆಯಲಾಕ್ಷಣ |ಪೋಷಿಸಿದೆ ತ್ವರದಿ ಶ್ರೀ ಪ್ರಾಣೇಶ ವಿಠ್ಠಲಾ ೫

೨೨೦
ಪಂಚಭೇದ ತಿಳಿವದು ಪ್ರತಿದಿನದಲೀ |ಮುಂಚಿನಜ ಮಧ್ವಮುನಿ ಮತವನುಸರಿಸಿದವರೂ ಪ
ಜೀವೇಶರಿಗೆ ಭೇದ ಜೀವ ಜೀವಕೆ ಭೇದ |ದೇವರಿಗು ಜಡಕು, ಜಡಕೆ ಜಡ ಭೇದಾ ||
ಆವಾಗ ಜೀವರಿಗೆ ಜಡಗಳಿಗೆ ಭೇದುಂಟು |ಈ ವಿವರವ ಪೇಳ್ವೆ ಯನ್ನಾಪನಿತು ಕೇಳುವದೂ ೧
ಈಶ ನಿತ್ಯ ಅನಾದಿ ಸ್ವರತ ಸರ್ವಗ ಸ್ವಪ್ರ- |ಕಾಶ ಸರ್ವಜ್ಞ ವಿಶ್ವ ವಿಲಕ್ಷಣಾ ||
ಮೇಶ ಅಪರಿಚ್ಛಿನ್ನ ಮೂರ್ತಿ ಪ್ರಾಣಿಗಳಿಂದ |ತಾ ಸಾಕ್ಷಿಯಾಗಿ ಬಹು ಕರ್ಮಗಳ ಮಾಡಿಸುವ ೨
ಶ್ರೀ ಮುಖ ಜಗತ್ಯಕುತ್ಪತ್ಯಾದಿ ಕಾರಣ ಮ- |ಹಾ ಮಹಿಮ ಸರ್ವತಂತ್ರ ಸ್ವತಂತ್ರಾ ||
ಆಮಯ ವಿದೂರ ಜ್ಞಾನಾನಂದ ಬಲ ಪೂರ್ಣ |ಸೀಮೆಯಿಲ್ಲದ ಸುಗುಣ ಕ್ರಿಯಾತ್ಮಕ ಸ್ವರೂಪ ೩
ಸುಖ ದುಃಖ ಭೋಗಿ ಜೀವನು ಅಸ್ವತಂತ್ರ ಬಹು |ಕಕುಲಾತಿ ಉಳ್ಳವನು ದುರ್ವಿಷಯದೀ ||
ಲಕುಮೀಶನಲ್ಲಿ ಭಕ್ತಿ ವಿವರ್ಜಿತನು ಪ್ರತಿ ಕ್ಷ- |ಣಕೆ ಅನಂತ ಅಪರಾಧಿ ಜನ್ಮ ಮೃತಿ ಉಳ್ಳವನು ೪
ಆದಿ ವ್ಯಾಧಿಗಳಿಂದ ಪೀಡಿತನು ಅಜ್ಞಾನಿ |ಮಾಧವನ ಬಂಧಕ ಶಕುತಿಯೊಳಗಿಹ್ಯಾ ||
ತಾ ಧರಿಸಿಹನು ಪ್ರಾಕೃತ ಪ್ರಾಕೃತಾವರಣ |ಭೇದವೆ ಸಿದ್ಧ ಯಿಂಥ ಜೀವಗೂ ಹರಿಗ್ಯೂ ೫
ಒಂದಲ್ಲ ಸರ್ವ ಜೀವರು ಸತ್ವ ರಜ ತಮರು |ಯಂದು ಭೇದಗಳುಂಟವರ ಲಕ್ಷಣಾ ||
ಮುಂದಿನ ಪದದಿ ಪೇಳ್ವೆ ಸಜ್ಜನರು ಕೇಳಿಯಾ- |ನಂದ ಬಡಲೆಂದು ವಿನಯದಲಿ ಬಿನ್ನೈಸುವೆನು ೬
ಛಿನ್ನ ಭಕ್ತರು ಯನಿಪರೆಲ್ಲ ದೇವತಿಗಳ |ಚ್ಛಿನ್ನ ಭಕ್ತರು ವಿಧೀರವರ್ಹೆಂಡರೂ ||
ಚನ್ನಾಗಿ ಮುದದಿ ಈ ನಿರ್ಜರರ ತರತಮ್ಯ |ವನ್ನು ಕೇಳಿಕೊಬೇಕು ಜ್ಞಾನಿಗಳ ಮುಖದಿಂದ ೭
ವಿಧಿ ಮೊದಲು ತೃಣ ಜೀವ ಪರಿಯಂತ ಸಾತ್ವಿಕರು |ಇದರೊಳಗೆ ದೇವ, ಋಷಿ, ಪಿತೃಪ, ನರರೂ ||
ಸುಧಿಗೆ ಯೋಗ್ಯ ರಜಾದಿ ಗೀರ್ವಾಣ ಗಂಧರ್ವ |ತುದಿಯಾಗಿ ಸಾಂಶರು ನಿರಂಶರುಳಿದವರೆಲ್ಲ ೮
ಇವರಿಂದ ಭಿನ್ನ ರಾಜಸರು ಗೋ ಭೂ ನರಕ |ತ್ರಿವಿಧ ಗತಿ ಉಳ್ಳವರು ಪಂಚಭೇದಾ ||
ವಿವರ ತರತಮ ದೇವರ ಮಹತ್ಮಿಯನು ಅರಿಯ |ದವರು ಲಿಂಗಕಳಿಯರು ಧಾಮತ್ರಯ ಪೊಗದವರೂ ೯
ಸಂಸಾರಿಗಳಿಗೆ ಭಿನ್ನರು ತಮೋಗುಣದವರು |ಕಂಸಾರಿಯಲಿ ದ್ವೇಷವರ ಸ್ವಭಾವಾ ||
ಆ ಸುರಾರಿಗಳು ನಾಲ್ಕು ಪ್ರಕಾರ ದೈತ್ಯ ರಾ |ಕ್ಷಸರು, ಪಿಶಾಚರವರನುಗರು, ನರಾಧಮರು ೧೦
ಈ ನಾಲ್ಕು ಬಗೆಯ ಸುರರಿಗೆ ಅರಸು ಕಲಿಯವನಾ |ಹೀನತನವೆಷ್ಟುಚ್ಚರಿಸಲಿ ಮಿಥ್ಯಾ ||
ಜ್ಞಾನಿ ಭೇದವನರಿಯ ಪಂಚ ಮಹಾಪಾತಕಿ ಪು- |ರಾಣ ವೇದಗಳಿಗೆ ವಿರುದ್ಧಾರ್ಥ ಕಲ್ಪಿಸುವಾ ೧೧
ಸುಜನರಾಚರಣೆ ನಡಿಯಗುಡ ದುಃಖ ಬಡಿಸುವ |ಕುಜನರಿಗನೇಕ ಬಗೆ ಸಹಯವಹನೂ ||
ಪ್ರಜಗಳನ ರೋಗನಾ ವೃಷ್ಟಿಯಿಂ ದಣಿಸುವನು |ವೃಜನವನ ವಪು ತಾಯಿ ತಂಗಿಯಂಬರನರಿಯ ೧೨
ಬವರ ಬಂಗಾರ ದ್ಯೂತಾ ಪೇಯ ಅನೃತ ನಟ |ಯುವತಿಯೀಯಾರು ಸ್ಥಳ ನಿಲಯವವರಿಗೆ ||
ನವವಿಧ ದ್ವೇಷಿಗಳಿಗಾಕಾರನೆನಿಸುವನು |ಅವನ ಸಮ ಪಾಪಿಗಳು ಮೂರು ಲೋಕದಲಿಲ್ಲ ೧೩
ಆ ನೀಚನ ಮಲಮೂತ್ರ ವಿಸರ್ಜನದಿ ಘೋರ |ಕಾನನದಿ ಕತ್ತಲಿಯೊಳಗೆ ಸ್ಮರಿಪುದೂ ||
ಕ್ಷೋಣಿಯೊಳವನ ನಿಂದೆ ನಿರುತದಲಿ ಮಾಡುವದೆ |ಶ್ರೀನಾಥನರ್ಚನೆ ಮಹಾಯಜ್ಞವೆನಿಸುವದು ೧೪
ಈ ವಿಧದಿ ಮೂರು ಗುಣದಿಂದ ಪರಸ್ಪರ ಜೀವ |ಜೀವರಿಗೆ ಭೇದ ಯೋಗ್ಯತಿ ಪ್ರಕಾರಾ ||
ಮೂವರಿಗೆ ಪಾಪಮಿಶ್ರಿತ ಕರ್ಮ ಪುಣ್ಯ ಬಹು |ನೋವು ಸ್ವರ್ಗ ನರಕ ಸುಮೋಕ್ಷಾದಿ ಗತಿ ಉಂಟು ೧೫
ಈ ಜೀವರಿಗೆ ಉಳ್ಳನುಭವ ಜಡಗಳಿಗಿಲ್ಲ |ನೈಜವಾಯಿತು ಭೇದ ಜೀವ ಜಡಕೇ ||
ಆ ಜಡ ತ್ರಿ, ನಿತ್ಯಾ ಅನಿತ್ಯನಿತ್ಯಾ, ನಿತ್ಯ |ಮಾಜದವು ಅವ್ಯಾಕೃತ ನಭಶೃತಿ ವರ್ಣಗಳೂ ೧೬
ಪ್ರಾಕೃತ ವಿಕೃತ ವೈಕೃತತ್ರಯ ಅಸ್ಥಿರ ಜಡವು |ಪ್ರಾಕೃತವಜಾಂಡ ಧೊರ ಆವರಣವೂ ||
ಸ್ವೀಕೃತೈವತ್ತು ಕೋಟ್ಯೋಜನ ಸುವರ್ಣಾತ್ಮ |ಕಾಕ್ರಮಿಸಿಹದಜಾಂಡಕಿದು ವಿಕೃತ ಜಡವೆಂದು ೧೭
ಸರಸಿಜ ಭವಾಂಡದೊಳಿಹ ನೆಲ ಜಲಧಿ ಗಿರಿಗಳು |ಎರಡೇಳು ಭುವನ ವೈಕೃತ ಜಡವಿದೂ ||
ಸ್ಥಿರ ಅಸ್ಥಿರ ಜಡತ್ರಯ ವಿಧ ಪುರಾಣಗಳರ್ಥ |ಇರುತಿಹವು ಅಚಲಾಗಿ ಶಬ್ದಗಳ ನಿತ್ಯಾ ೧೮
ಮೂಲ ಪ್ರಕೃತಿಗತ ತ್ರಿವಿಧಾನಂತ ಪರಮಾಣು |ಜಾಲ ಕಾರಣತ ಸುಸ್ಥಿರವೆನಿಪವೂ ||
ಮ್ಯಾಲೆ ಅದರಿಂದಾದ ತತ್ವಗಳ ನಿತ್ಯ ಮಹ |ಕಾಲವೆಂದಿಗ್ಯು ನಿತ್ಯ ಅಣುಕಾಲಗಳ ನಿತ್ಯಾ೧೯
ಹೀಗೆ ಮೂರು ವಿಧ ಜಡ ಒಂದೊಂದೆ ಮೂರು ಮೂ- |ರಾಗಿರಲು ಜಡ ಜಡಕೆ ಭೇದ ಸಿದ್ಧಾ ||
ಭಾಗಾರ ಮಾಡಿ ಗುಣರೂಪ ಕ್ರಯದಿ ನೋಡೆ |ನಾಗಾರಿವಹಗೆ ಜಡಗಳಿಗೆ ಭೇದವೇ ಸತ್ಯಾ೨೦
ಈ ಕಮಲಜಾಂಡವು ಅನಿತ್ಯವಿದರೊಳಗೆ ಎಂ- |ದೂ ಕೆಡದೆ ಸುಖಕಾಂತಿ ಯುಕ್ತವಾದಾ ||
ಶ್ರೀಕಳತ್ರನ ತ್ರಿಧಾಮಗಳು ಕುಕಲಿಗೆ ತಕ್ಕ |ಶೋಕಪೂರಿತವಾದ ನಿತ್ಯ ನರಕಗಳಿಹವು ೨೧
ಈ ಪಂಚಭೇದ ಜ್ಞಾನಿಲ್ಲದವ ಶ್ರೀ ಮುದ್ರಿ |ಗೋಪಿಚಂದನ ಧರಿಸಿದರು ಫಲವೇನೂ ||
ಈ ಪೊಡವಿಯೊಳು ವೇಷಧಾರಿಗಳು ಜೀವಿಸರೆ |ಆ ಪರಿಯ ಭಾಸ ವೈಷ್ಣವನೆಂದರಿಯಬೇಕೂ ೨೨
ಹರಿಗುರುಗಳ ದಯ ಪಡೆವರಿಗೆ ರುಚಿ ತೋರ್ವದಿತ | ರರಿಗೆ ಈ ಕೃತಿಯು ಕರ್ಣ ಕಠೋರವೂ ||
ತರಣಿ ಬರೆ ಸರ್ವರಿಗೆ ಘೂಕಗಾದಂತೆ ಇದು |ಬರಿಯ ಮಾತಲ್ಲ ಶಾಸ್ತ್ರಕೆ ಸಮ್ಮತಾಗಿಹದು ೨೩
ಹೀನರೊಳು ಬೆರಿಯದಲೆ ಪಂಚಭೇದವ ತಿಳಿದು |ಸಾನುರಾಗದಲಿ ಹರಿ ಸರ್ವೋತ್ತುಮಾ ||
ಪ್ರಾಣದೇವರೆ ಗುರುಗಳೆಂದರಿತು ಭಜಿಸುವರು |ಕಾಣರು ಕು ಸಂಸಾರ ಧಾಮತ್ರ ವೈದುವರು ೨೪
ಇಪ್ಪತ್ತೈದು ಪದಗಳಿಂದ ಸಂಗತಿಯಾಗಿ |ಒಪ್ಪುತಿಹ ಈ ಪಂಚಭೇದವನ್ನೂ ||
ತಪ್ಪದಲೆ ನಿತ್ಯ ಪಠಿಸುವರ ಪೊರವವನು ಬೊಮ್ಮ- |ನಪ್ಪ ಶ್ರೀ ಪ್ರಾಣೇಶ ವಿಠಲನಿಹಪರದಲ್ಲಿ ೨೫


ಪಕ್ಷಿವಾಹನ ಶ್ರೀ ವಾಮನ್ನ ಅಂತ- |ರಿಕ್ಷಾಳಕ ಪ್ರಿಯ ಕಾಯೆನ್ನ ||
ಋಕ್ಷಪನಿಭ ಮಾಯಾ ಕಕ್ಷಾಜ್ಞಿ ಹರೆ ಜಗ- |ತ್ಕುಕ್ಷೆ ನಂಬಿದೆನೆನ್ನುಪೇಕ್ಷೆ ಮಾಡಲಿ ಬೇಡ ಪ
ಅಂಜಿನಾಧರಾ ಧರ ಧಾಮ ಹೇ ನಿ |ರಂಜನ ವನಮಾಲಿ ಭೂಮಾ ||
ಅಂಜಲಿ ಪುಟದಿಂದಲಂಜಿ ಬೇಡುವೆ ಬಲ |ಭಂಜನಾನುಜ ವಿತತ ತ್ರಿಜಗ ||
ಮಂಜುಳಾಂಗನೇ ವೀತ ಭೂಮುಖ |ಕಂಜನಾಭನೆ ತರುಣಿ ಶಿವ ನೃಪ ||
ಕುಂಜರ ವರದ ಕರವ ಪಿಡಿಯೊ ೧
ಪಾಠೀಣ ಕಮಠ ವರಾಹ | ನೀಚ ಹಾಟಕಾರಿ ವಟು ಭೂಭುಜ ಹಾ ||
ಖೇಟಾಹ ಬುದ್ಧ ಕಲ್ಕಿ ಘೋಟಕಾನನ ವಿಶ್ವ |ನಾಟಕ ಭೈಷ್ಮೀ ಮುಖ ವಧೂಟನಿಯರ ವಲ್ಲಭ ||
ಕೋಟಿ ಭಾಸ್ಕರ ತೇಜ ನಿನ್ನಯ |ಆಟ ತಿಳಿಯಲು ಕೋಕನದ ಶುಭ ||
ಪೀಠ ಲಕುಮಿ ಅಶಕ್ತರಹರು ಕಿ |ರೀಟ ಸಖ ನಿನ್ನವರೊಳಗಿಡೊ ೨
ಶಂತನುವಿನ ವಂಶ ರಕ್ಷ | ಮಾತುಲಾಂತಕ ಜಲಜದಳಾಕ್ಷ ||
ಮಂಥಾರಿ ಶಿಶುಪಾಲ ದಂತವಕ್ರ ಮುರಾದಿ |ಹಂತ ದಾನವರ ನಿಕೃಂತನಾಹಿಮದ ಹಾ ||
ನಂತಧುನಿಪಿತ ವೇದ ವೇದ್ಯ ಅ |ನಂತ ಮಹಿಮನೆ ಅತ್ರಿ ಸುತ ನಿ- ||
ಶ್ಚಿಂತ ಶ್ರೀ ಪ್ರಾಣೇಶ ವಿಠಲ ದು- |ರಂತ ಶಕ್ತಿ ಭವಾಬ್ಧಿ ಘಟಜಾ ೩

೫೭
ಪದುಮನಾಭನೆ ಏನೆಂತಾಡಿದ್ಯೊ |ವದಗಿ ಬಂದವರಿಗೆ ಎದೆಗಲ್ಲಿನಂತೆ ಪ
ಸ್ವರ ಕೇಳಿದಾಕ್ಷಣ ಸ್ಮರ ಬಾಧೆ ಹೆಚ್ಚಿ ಜ- |ರ್ಝರಿತರಾದೆವೊ ಕೇಳೊ ತರುಣಿಯರೆಲ್ಲ ೧
ಯೋಗೇಶ ನಿನ ನೋಡ ವೇಗದಿಂ ಬಂದೆವೊ |ಹೋಗೆಂದು ನಿನ್ನ ನಾಲಿಗೀಗೆಂತು ಬಂತೋ ೨
ನಾರೆರಲಂಕಾರ ಸೀರಿ ಹಂಬಲ ಬಿಟ್ಟು |ಸಾರಿದರೆಂದು ವಿಚಾರಿಸಲಿಲ್ಲೆ ೩
ಪತಿಗಳು ಹುಡುಕೊರೆಂದತಿ ಕರುಣವರಲ್ಲೆ |ಚ್ಯುತನಾವೆ ನಿನಗೆ ಅಹಿತರಾದೆವೇನೋ ೪
ಆಗಾರ ತೊರೆದು ಸುಭೋಗವಿತ್ತೆವೋ ನಿ- |ನಗೀಗ ಮರದಿ ನಮ್ಮ ಕೈಗುಣವೇನೋ ೫
ವಾರಿಜ ಬಾಣಕ್ಕೆ ಆರಲಾರಿವೊ ದಯಾ |ವಾರಿಧಿ ಕಾಮನಾ ಪೂರತಿ ಮಾಡೋ ೬
ಪ್ರಾಣೇಶ ವಿಠಲ ನೀ ಮಾನವರಂತಲ್ಲ |ಪ್ರಾಣದ ಪದಕ ಈಗೇನು ಕಲ್ಲಾದ್ಯೊ ೭

೧೦೨
ಪವಮಾನ ರಾಯಾ ಪಾವನ ಕಾಯಾ | ಕಾಯೋದಿವಿಷತ್ಪೂಜಿತ ಕವಿಜನ ಗೇಯ ಪ
ಭಕ್ತವತ್ಸಲ ದೇವ ರವಿತೇಜ | ಸರ್ವೋ-ದ್ರಕ್ತ ಪ್ರಣತ ಜನ ಸುರ ಭೂಜ ||
ಶಕ್ತ ಲೋಕೈಕ ಅನಂತಜ | ಭುಕ್ತಿಮುಕ್ತಿದ ದಿತಿಜಾಹಿ ದ್ವಿಜರಾಜ೧
ದುರಿತಾಂಬುಧಿ ಘಾಗಜ ಕಾಳೀಶ | ಸರ್ವಸುರವಂದ್ಯ ಪದಕಂಜ ನಿರ್ದೋಷಾ ||
ಪುರ ರಿಪು ಪಿತ ಪಯೋಧರ ಭಾಸ | ಸಾರೆ-ಗರೆದು ಪೂರ್ತಿಸೊ ಯನ್ನ ಅಭಿಲಾಷಾ ೨
ಪೌಲಸ್ತ್ಯಾನುಜ ಮಾಠ ರಜ ರಕ್ಷ | ಶ್ರೀ ಗೋ-ಪಾಲನವನೆನೀಸುವದುಪೇಕ್ಷ ||
ನೀಲೇಶ ತ(?)ಮಾಡದೆ ತಾ ರಕ್ಷ | ವಂದ್ಯಕಾಲಿಗೆರಗುವೆ ದುರ್ಜನ ಶಿಕ್ಷ೩
ಮಧುಸಖ ಪಾಲಾನುಜ ಪಾದಾರವಿಂದ |ಮಧುಕರ ದಂಡ ಮೇಖಲ ಧಾರ ||
ವಿದುರಾಗ್ರಜ ನಂದನ ಸಂಸಾರಾರಣ್ಯ |ಸುಧನಂಜಯ ವೃಕೋದರ ಸಮೀರ೪
ಕುಟಿಲರಹಿತ ಋಜುಗಣಾಧೀಶ | ಶ್ರೀ ಧೂ-ರ್ಜಟಿವಂದ್ಯ ಭಕ್ತಿಯಿಂ ಪ್ರಾಣೇಶ ||
ವಿಠಲನ್ನ ಭಜಿಸುತ್ತ ಸದ್ಭಾಷ್ಯವನ್ನು |ಪಠನೆ ಮಾಡಿಸೊ ದಯದಿಂದ ನಿಶಾ ೫

ಪಾರ್ವತೀದೇವಿ ಸ್ತೋತ್ರ
೧೩೭
ಪಾರ್ವತಿ ದಕ್ಷಕುಮಾರಿ ನಿನ್ನ | ಸಾರ್ವೆ ಸಂತತ ಕುಜನಾರೀ ||ಆಹಾ||
ದೂರ್ವಾಸನರ್ಧಾಂಗಿ ಸರ್ವಜ್ಞೆ ಯನ್ನಯ ||
ಚಾರ್ವಾಕ ಮತಿ ಕೀಳಿ ತೋರ್ವದು ಸುಪಥವ ಪ
ದುರ್ಗೆ ಭವಾನಿ ರುದ್ರಾಣಿ ಗೌರಿ | ಸ್ವರ್ಗಜಿನಾರಾಧ್ಯ-ಮಾನಿ ||
ಸೇರೆದುರ್ಗುಣದವರ ಸುಜ್ಞಾನಿ | ಭಕ್ತವರ್ಗ ಪೋಷಕ ಶುಕ-ವಾಣೀ ||ಆಹಾ||
ನಿರ್ಗುಣರಾದುತ್ತಮರ್ಗೆವೊಲಿವ ಅಪ |ವರ್ಗದ ನಾಳೆ ನರರ್ಗೆ ಮಣಿಸದಿರೆ ೧
ಚಂಡಿ ಕಾತ್ಯಾಯಿನಿ ಉಮ್ಮಾ ನಾಲ್ಕು | ಮಂಡೆಯವನ ಸೊಸೆ | ಯಮ್ಮಾ |
ನಾಡೆ ಕಂಡು ಭಜಿಪೆ ನಿತ್ಯ ನಿಮ್ಮ | ಪಾದ ಪುಂಡರೀಕ ದ್ವಯವಮ್ಮಾ ||ಆಹಾ||
ಉಂಡು ವಿಷವ ನಿನ್ನ ಗಂಡ ಬಳಲಿ ಕೈ |ಕೊಂಡೌಷಧ ತಂಡ ತಂಡದಲೆನಗೀಯೆ ೨
ಪಾವಕನೊಳು ಪೊಕ್ಕ ಪತಿವ್ರತೆ | ಯಾವಾಗ ಮಾನಿಸತ್ಕಥೆ |
ಯಲ್ಲಿಭಾವನೆ ಕೊಡೆ ಪ್ರತಿ ಪ್ರತಿ | ಜಾವ ಜಾವಕೆ ಷಣ್ಮುಖಮಾತೆ ||ಆಹಾ||
ಕೋವಿದರೊಡತಿ ಕೇಳಾವಾಗ ವೈರಾಗ್ಯ |ವೀವದು ದುರಾಪೇಕ್ಷೆ ನಾವೊಲ್ಲೆನೆಂದೆಂದೂ ೩
ಬೇಡಿದಭೀಷ್ಟವ ಕೊಡುವೆ | ದಯ ಮಾಡಿ ಭಕ್ತರ ಕರಪಿಡಿವೆ |
ದೋಷ ಕಾಡುಳಿಯದಂತೆ ಸುಡುವೆ | ನಿನ | ಗೀಡೆ ಮಹದ್ಭಯಕಡಿವೆ ||ಆಹಾ||
ರೊಢೀಶ ಶಿವನೆಂದು ಆಡಿಸದಿರು ಬುದ್ಧಿ |ಗೇಡಿ ದಾನವರಂತೆ ನೀಡು ಶ್ರೀಹರಿ ಸೇವೆ ೪
ಮೇಶ ಪ್ರಾಣೇಶ ವಿಠ್ಠಲನೆ | ಜಗದೀಶನೆಂಬುವ ದಿವ್ಯ-ಜ್ಞಾನೆ | ಕೊಟ್ಟು |
ಪೋಷಿಪುದೆನ್ನ ಸುಜಾಣೆ | ನೀನುದಾಸಿಸೆ ನಾನಾರಕಾಣೆ ||ಆಹಾ||
ಈಶೆ ಪಂಚ ಮಹಾದೋಷಿ ಬಿಡದೆ ನಿತ್ಯಾ |ಈ ಶರೀರದೊಳಿಹ್ಯ ಘಾಸಿ ಮಾಡುವನನ್ನು ೫

೧೩೦
ಪಾರ್ವತೀ ಪತಿಪಾಹಿ ಹರಹರ ಪ
ಪಾರ್ವತೀಪತಿ ನೀನೊಲಿದು ಮನಸಿನೊಳುತೋರ್ವದು ಕೇಶವನ | ಹರಹರ ||ಅ. ಪ||
ವಿಜಯ ನಿನ್ನೊಳಗಂದು ವಿಜಯಿಸಲಸ್ತ್ರವ |ತ್ರಿಜಗವರಿಯ ಕೊಟ್ಟ ||
ಮಜ ಭಾಪುರೆ ಅಂಬುಜ ಸುತ ನಂದನ |ಗಜ ಚರ್ಮಾಂಬರನೆ | ಹರಹರ ೧
ಜಾತವೇದಸ ಶಶಿ ತರಣಿ ನಯನ |ಮಾತರಿಶ್ವತನಯ ||
ಭೂತ ಗಣಪ ಗುಣವ್ರಾತ ನಿನ್ನವರೊಳು |ಪ್ರೀತಿಯಿಂದಲೆ ಕೂಡಿಸು | ಹರಹರ ೨
ಕ್ಷಿತಿಧರ ಶರ ಮನ್ಮಥ ಪುರ ಹರಣ | ಪ್ರಮಥಾಧಿಪ ಹರಿಣಾಂಕ ||
ನತಿಸುವೆ ನಿನ್ನನು ಪ್ರತಿದಿನದಲಿ | ಸನ್ಮತಿ ಕರುಣಿಸು ತ್ವರಿಯಾ || ಹರಹರ೩
ಸುರಸೇವಿತ ಪದ ಅರವಿಂದ ಅನಘ |ಮುರ ರಿಪು ಸುಖ ಕಪರ್ದಿ ||
ಚರಣವ ನಂಬಿದವರ ಭಯವಾರಿದ |ಮರುತ ಕುಶ ನಂದನನೆ || ಹರಹರ೪
ಖಟವ ಪಾಣಿ ಖಳ ಆಟವಿ ವಹ್ನಿ ಧೂ |ರ್ಜಟ ಹರ ಪ್ರಾಣೇಶ ||
ವಿಠಲನ ಭಜನೆಯು ಘಟಿಕ ತಪ್ಪದಲೆ |ಘಟನೆ ಮಾಡಿಸುವುದೋ || ಹರಹರ ೫

೧೩೮
ಪಾಲಿಸೆ ಶ್ರೀ ಗೌರೀ ಎನ್ನನು ಪ
ಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ ಅ.ಪ.
ಶರಣೆಂದವರನು ಪೊರೆವಳು ಎಂಬುವ |ಬಿರಿದು ನಿನ್ನದು ಎಂದರಿದೆನು ತ್ವರದಿಂ೧
ಸನ್ಮತ ಪುರುಷನ ಯಿನ್ನೆಲ್ಲಿ ಕಾಣೆನೋ |ಮನ್ಮಥನೆಂಬುವ ಬನ್ನಬಿಡಿಪ ಬಲು೨
ಕಾಣೆನು ಶಾಂತಿಯ ಏನೆಂಧೇಳಲಿ |ಪ್ರಾಣೇಶ ವಿಠಲನು ತಾನೆಯೇ ಬಲ್ಲನು ೩

೧೬೦
ಪಾಲಿಸೋ ಪಾಲಿಸೋ || ಕರುಣಾಲಯ ವರದೇಂದ್ರ ಮುನಿ ಸುಖ ಸಾಂದ್ರ ಪ
ಪುಣ್ಯ ಮಂದಿರ ವಾಸ | ಸನ್ನುತ ಜನಪಾಲ ||ಬನ್ನ ಪಡಿಸದಲೆ | ಯನ್ನನುದ್ಧರಿಸೋ ೧
ದೀನ ಸುರದ್ರುಮ | ಹೀನ ಪಂಕಜ ಸೋಮ ||ಮಾನಿ ಸುಜ್ಞಾನಿ ನಿ | ನ್ನೇನು ಬಣ್ಣಿಪೆನೋ ೨
ತ್ರುಟಿ ಮಾತ್ರ ಬಿಡದಲೆ | ಘಟನೆಯ ಮಾಡಿಸೊ ||ಸಟೆಯಲ್ಲ ಪ್ರಾಣೇಶ | ವಿಠಲನ ಸ್ಮರಣೆ ೩

೧೨
ಪಾಲಿಸೋ ವೆಂಕಟಗಿರಿ ರಾಯಾ ಲಕ್ಷ್ಮೀ |ಲೋಲ ನೀಲಾಂಬುದ ಸಮ ಕಾಯಾ ಪ
ಮಾ ಕಮಲಾಸನ ವಾಸವ – ಸುರ |ನೀಶ ಕರಾಧ್ಯ ಕೇಶವ ||
ಲೋಕೇಶ ಯನ್ನಲ್ಲಿ ವಾಸವ-ಮಾಡಿನೂಕು ತುಚ್ಛತರ ಕ್ಲೇಶವ ೧
ಹಿಂದಿನ ಜನುಮಗಳೆಣಿಕಿಲ್ಲ – ದಯಾ |ಸಿಂಧು ಸಾಧನವೀಗಲಿನಿತೆಲ್ಲಾ ||
ಮುಂದಿನ ಗತಿಯೇನೋ ತಿಳಿದಿಲ್ಲ – ಇದ |ರಿಂದಲಂಜುವೆ ಜಾಂಬವತೀ ನಲ್ಲ ೨
ಬಾಲಕನಾದೆ ಕೆಲವು ದಿನ – ಪ್ರಾಯ |ಕಾಲವೊದಗಲು ಪರಾಂಗನಾ ||
ಮೇಲೆ ಅಭಕ್ಷಣೆಯಲಿ ಮನವಿಟ್ಟೆ – ಹೇ |ಳಲೊಂದೆರಡೇ ಯನ್ನವಗುಣ ೩
ಉದಯ ಸ್ನಾನವು ಸಂಧ್ಯಾವಂದನೆ – ಅರ್ಘ್ಯ |ವಿಧಿ ಗುರು ಹಿರಿಯರ ವಂದನೆ |
ಮೊದಲಾಗಿ ಪಿತರಾರಾಧನೆ ಬಿಟ್ಟೆ |ಮದದಿಂದ ಹೀನನೆಂಬುವ ನಾನೇ4
ಅನ್ಯರ ಮನೆ ದ್ವಾರ ಕಾಯ್ವೆನೋ – ಸ್ವಾಮಿ |ನಿನ್ನ ಸ್ಮರಣೆಯ ಕ್ಷಣ ಮಾಡೆನೋ ||
ಅನ್ನಕ್ಕೆ ಬಹುದೂರ ಪೋಪೆನೋ – ಸಾರೆ |ಪುಣ್ಯಕ್ಷೇತ್ರಗಳಿರೆ ನೋಡೆನೋ ೫
ಧನಹೀನನಾದ ಕಾರಣದಿಂದ – ಸತಿ |ಮನೆ ಹೊಂದಿಸಳೋ ಪರಮಾನಂದ ||
ತನುಜರಶನ ವಸನಗಳಿಂದ ಕಾಡು |ವಣು ಮಾತ್ರ ಸುಖವಿಲ್ಲ ಇದರಿಂದ6
ಏಸು ಹೇಳಲಿ ಮಾತ ಲಾಲಿಸೋ – ಶ್ರೀ ಪ್ರಾ- |ಣೇಶ ವಿಠ್ಠಲ ನೀನೇ ತಾರಿಸೋ ||
ಆ ಸತ್ಕರ್ಮದಿ ಮನ ಪ್ರೇರಿಸೋ – ನಿನ್ನ |ದಾಸವರ್ಗದೊಳೆನ್ನ ಕೂಡಿಸೋ ೭

ಯೋಗಧರ ತಾತ ಕಘ ಲೋಕಪತಿ ದೇವ

ಪಾಹಿ ನಾರಾಯಣನೆ ಪಾಹಿ ವಾಸುಕಿಶಯನ |ಪಾಹಿ ಗರುಡಧ್ವಜನೆ ಪಾಹಿ ಕಮಲಾಕ್ಷ ಪ
ಸಂವತ್ಸರಾಂಬರಧರ ನತಜನ ಪಾಲ |ಸಂವತ್ಸರ ಹರೇ ಕಾರುಣ್ಯ ನಿಧಿಯೇ ||
ಸಂವತ್ಸರಕೆ ನಿನ್ನ ಸಮರಾರೊ ತ್ರಿಜಗದಿ |ಸಂವತ್ಸರ ಜಲಜಕೆ ಸಂವತ್ಸರುಪಮಾ1
ಸಂವತ್ಸರಾಕ್ಷಸುತ ಗಜವೈರಿ ಸಂಹರನೆ |ಸಂವತ್ಸರಾದಿ ಸಂವತ್ಸರ ರಿಪು ||
ಸಂವತ್ಸರ ಕುವರನೆ ಸಂವತ್ಸರನೆ ಯನ್ನ |ಸಂವತ್ಸರವಳಿದು ಕೊಡು ಸಂವತ್ಸರ ಮತಿ2
ಸಂವತ್ಸರ ಸಮಗ್ರ ಪ್ರಾಣೇಶ ವಿಠಲನೆ |ಸಂವತ್ಸರ ಸ್ವಾಮಿ ದೋಷ ದೂರ ||
ಸಂವತ್ಸರ ಪಿತ ಸಿರಿ ಸಂವತ್ಸರನೇ ಕ್ಲೇಶ |ಸಂವತ್ಸರ ಮಾಡು ದೀನ ಕಲ್ಪತರು3

೧೭೬
ಶ್ರೀ ಮೋಹನದಾಸರ ಸ್ತೋತ್ರ
ಪಾಹಿ ಪಾಹಿ ಗುರು ಮೋಹನರಾಯಾ ಪಾಹಿ ಪಾಹಿ ಪ
ಪಾಹಿ ಪಾಹಿ ಗುರು ಮೋಹನ ಸಿಂಧುರ ಹರಿಪಾದ ಪಂಕೇರುಹ ಮಧುಪಾ ಅ.ಪ.
ನವ ವಿಧ ಭಕುತಿ ಎಂಬೊ ನವ ನವ ಸರಪಳಿಯೊಳು |ನವ ನವ ರೂಪದಿ ನಲಿವ ಸುಧೀರಾ ೧
ಪದುಮನಾಭನ ಧ್ಯಾನವ ಮದವೇರಿ |ಪದೋ ಪದಿಗೆ ಹರಿ ಪದಾವಗಾಹಿ ೨
ವಿಜಯರಾಯರ ಪಾದರಜವ ಧರಿಸಿ ನೀ- |ರಜ ಪ್ರಾಣೇಶ ವಿಠಲನಲ್ಲೆರಗಿದೊ ೩

೧೬೫
ಪಾಹಿ ಪಾಹಿ ಜಿತಮಾರ |ಪಾಹಿ ಸುಬೋಧೇಂದ್ರ ಸಮೀರ ||
ಮಹಾ ಮತಾಬ್ಧೀಂದು ದೀನಾಮರ |ಮಹಿಜ, ಸುಹಿತ, ಮಹಿತ ಪ
ನಿರ್ಮಲಾತ್ಮ ಸದ್ಗುರು ಧೀರ |ಕರ್ಮ ವಿಷಯಾಪೇಕ್ಷಾ ದೂರ ||
ಧರ್ಮಾಸಕ್ತ ಲೋಕೋದ್ಧಾರ ಶರ್ಮ ಸು |ಶರ್ಮಾದ ಭರ್ಮಾಂಗ ಮರ್ಮಜ್ಞ ೧
ಅರ್ಕ ಮಹಿಮನೆ ಧೀಮಂತ |ಅರ್ಕಜನೊಲಿದಾನೀ ಶಾಂತ ||
ಮರ್ಕಟ ದುರ್ವಾದಿ ಧ್ವಾಂತ ಅರ್ಕ ಕು |ತರ್ಕ ಸಂಪರ್ಕಾಹ ಅರ್ಕಾಭ ಪಾಹಿ ೨
ತೀರ್ಥ ಪಾಲಾ ಭಕ್ತಾಧೀನ |ತೀರ್ಥಾಂಘ್ರಿ ಪ್ರಾಣೇಶ ವಿಠಲನ ||
ತೀರ್ಥದೂತ ನೀನಿದ್ದ ಸ್ಠಾನ ತೀರ್ಥವು |ತೀರ್ಥಪ ತೀರ್ಥಪ ತೀರ್ಥ ಮಾಂ ಪಾಹಿ ೩

೧೧೮
ಪಾಹಿ ಸರಸ್ವತಿ ಸುಗಾಯಿತ್ರಿ ಶ್ರೀ ಸಾವಿತ್ರಿ |ಮಹಾ ದುರಿತಾದ್ರಿಪವಿ ದೀನ ಸುರಧರಿಜೇ ಪ
ಶಿಷ್ಟಜನರ ಪಾಲಿಪಳೆ ದುಷ್ಟ ಜನ ದೂರಳೇ |ಸೃಷ್ಟಿಪತಿ ಸೇವೆಯೊಳಗಿಟ್ಟು ದುರುಳ |ಬಟ್ಟೆ ಹಿಡಿಸದಲೆ ದಯವಿಟ್ಟು ಪಿಡಿವದು ಕೈಯ |ಕಷ್ಟ ನಾಶನ ಮಾಡೆ ಕೊಟ್ಟು ಸುಖ ಪೂಜ್ಯೆ ೧
ಮದನ ಸತಿ ಕೋಟ ಲಾವಣ್ಯೆ ಗುಣಸಂಪನ್ನೆ |ಸುದತೀ ವೃಂದ ಶಿರೋಮಣಿ ಕರುಣಾರ್ಣವೆ ||ಮಧು ಜಿತ್ಪ್ರಿಯನ ರಾಣಿ, ವಾಣೀ ವೀಣಾಪಾಣಿ |ಹೃದಯದೊಳು ಕಮಲನಾಭನ ನಿರುತ ತೋರೇ ೨
ಈಶಾದಿ ಸುಮನಸಾರ್ಚಿತ ಪಾದ ಸರಸೀರುಹೆ |ಲೇಶೀತರಾನಂದೆ ಸುಗುಣೆ ಶ್ರೀ ಪ್ರಾ-ಣೇಶ ವಿಠಲನ ಕೊಂಡಾಡುವರೊಳಗೆ ಸ್ನೇಹ |ಹ್ರಾಸವಾಗದೆ ಈಯೆ ಇಭರಾಜ ಗಮನೆ ೩

೨೮
ಪಾಹಿಮಾಂ ಪಾಹಿಮಾಂ ಕುಜ-ನಾಹಿ ವಿಹಂಗ ಶ್ರೀರಂಗ ಕೃಪಾಂಗ ಪ
ಪಂಕಜೋದ್ಭವನಯ್ಯ ಸಂಕರುಷಣ ಚಕ್ರ |ಶಂಖವ ಧರಿಸಿದ ಪಂಕಜನಾಭ ೧
ನರಕ ವತ್ಸ ಬಕಾಹ ಜರಿಜಾಹ ಮನೋವಾಸ |ನರಸಖ ಪರಮಾತ್ಮ ಗರುಡವಾಹನನೇ2
ಪನ್ನಗ ತಲ್ಪ ಪ್ರಪನ್ನ ಪೋಷಕ ಹರಿ |ಅನ್ನಾದ ಪ್ರಾಣೇಶ ವಿಠಲ ನಿಷ್ಕುಟಿಲ3

೧೦೩
ಪೃಕ್ಷದಶ್ವ ಪಾಲಿಪುದೆನ್ನ ಈ ದು |ರ್ವಿಷಯ ತ್ಯಜಿಸಿ ಶ್ರೀ ಕೃಷ್ಣನ್ನ ||
ಅಸಮ ಪಾದಾಬ್ಜ ಭಜಿಸುವಂತೆ ಪ್ರತಿದಿನ |ಹಸನಾದ ಜ್ಞಾನ ಪ್ರೇರಿಸೊ ಭಕ್ತ ಸುರತರು ಪ
ಪರಿಸರ ಕೃಷ್ಣೇಶ ಗಂಧ ವಹಸಿರಿವಲ್ಲಭ ಪದಾರವಿಂದ ಭೃಂಗ |
ಪುರುಹೂತ ಮುಖ ಸುರವೃಂದ ವಂದ್ಯ |ಗಿರಿಜಾ ಪಾಲಕ ಶತಾನಂದ||ಆಹಾ||
ಎರಡು ಹತ್ತೊಂದು ಸಾವಿರದಾರುನೂರ್ಜಪಸರುವ ಜೀವರೊಳಗೆ ಇರುಳು ಹಗಲು ಮಾಳ್ಪ ೧
ನಾಗಾದಿ ದಶರೂಪ ಧರ ತಲೆಬಾಗುವೆ ನಿನಗೆ ಉದಾರ ವಿಕ್ರ-
ಮಾಘ ಕಾನನ ವೈಶ್ವಾನರ, ಹೇ ಸ-ದಾಗತಿ ಕುಜನ ಕುಠಾರಾ ||ಆಹಾ||
ಮಾಗಧ ರಿಪು ಹೊತ್ತು ಹೋಗುತಲಿದೆ ಈಗ |ಭಾಗವತರ ಸಂಗ ಜಾಗು ಮಾಡದಲೀಯೋ ೨
ದೀನವತ್ಸಲ ಶ್ರೀ ಮಾರುತ ಯಾತು ಧಾನ ಸಂಹರನೆ ಹೇ ಮಾತರಿಶ್ವ |
ಪ್ರಾಣೇಶ ವಿಠಲನ ದೂತ ಚತು-ರಾನನ ಪದಯೋಗ್ಯ ವಾತ ||ಆಹಾ||
ಕ್ಷೋಣಿಯೊಳೆನ್ನಂಥ ಹೀನರಿಲ್ಲವೊ ಪಾಪ |ಕ್ಷೀಣಿಸಿ ಸಲಹೋ ಸುಶೇಣಾದಿಸೂದನ ೩

ಕಕ್ಷಾದೇವತೆಗಳ ಮನನ
೧೧೫
ಪ್ರಾಣ ಪಾಲೀಸಿಂದ್ರಾನ ರಾಣೀ ದಕ್ಷಾನಿರುದ್ಧಾ |ಮಾನಿನಿ ರತಿ ಮನು ಗುರು ವಾಯು ಕೋಲೆ ||
ಮಾನಿನಿ ರತಿ ಮನು ಗುರು ವಾಯು ಯಮ ಸೋಮ |ಮಾನವಿ ಭಾಸ್ಕರಗೆರಗೂವೆ ಕೋಲೆ ೧
ವರುಣ ನಾರದ ವಹ್ನಿ ತರುಣಿ ಪ್ರಸೂತಿ ಭೃಗು |ಸರಸೀಜಾಸನನ ಪುತ್ರರಾರೊಂದು ಕೋಲೆ ||
ಸರಸೀಜಾಸನನ ಪುತ್ರರಾರೊಂದು ಮಂದಿಗಳ |ವರನಾಮ ವಿಸ್ತರಿಸಿ ವಂದಿಪೆ ಕೋಲೆ ೨
ಅಂಗೀರಾ ಪುಲಸ್ತ್ಯ ಅತ್ರಿ ಮಂಗಳಾಂಗ ಪುಲಹ ಕೃತು |ತುಂಗ ವಶಿಷ್ಠಿ ಮರೀಚಿಗೊಂದಿಪೆ ಕೋಲೆ ||
ತುಂಗ ವಶಿಷ್ಠ ಮರೀಚಿ ವಿಶ್ವಾಮಿತ್ರನಿಗೆ ಮತ್ಸ್ಯಾ |ನಂಗ ಕಂಡ ವೈವಸ್ವತಗೊಂದಿಸುವೆ ಕೋಲೆ೩
ನಿರರುತಿ ಪ್ರಾವಾಹಿ ಮಿತ್ರ ಗುರುಪತ್ನೀಗೆ ವಂದಿಸುವೆ |ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಕೋಲೆ ||
ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಅಶ್ವಿನೀಗ |ಳಿರಳೂ ಹಗಲೂ ನಾ ಸ್ಮರಿಸೂವೆ ಕೋಲೆ ೪
ಮರುತೂ ನಾಲ್ವತ್ತೊಂಬತ್ತು ಗುರು ವಿಶ್ವೇದೇವ ಹತ್ತು |ಎರಡು ಅಶ್ವೀನೀ ರುದ್ರರ್ಹನ್ನೊಂದೂ ಕೊಲೆ ||
ಎರಡು ಅಶ್ವೀನೀ ರುದ್ರರ್ಹನ್ನೊಂದೂ ವಸುಯಂಟು |ಎರಡಾರು ಸೂರ್ಯರಿಗೆರಗೂವೆ ಕೋಲೆ ೫
ಭಾರತೀ ಭರತಾಗೆ ಮೂರು ಪಿತೃಗಳಿಗೆ |ಧಾರೂಣೀ ಋಭುವೀಗೆರಗುವೆ ಕೋಲೆ ||
ಧಾರೂಣೀ ಋಭುವೀಗೆರಗೂವೆ ತಿಳೀವದು |ನೂರು ಮಂದೆಂದೂ ಕರಸೋರು ಕೋಲೆ ೬
ಮೂರು ಮಂದೀ ಉಳಿದೂ ಈರೈದು ಒಂದು ಮನು |ಚಾರು ನಾಮಗಳ ವರ್ಣೀಪೆ ಕೋಲೆ ||
ಚಾರು ನಾಮಗಳ ವರ್ಣೀಪೆ ದಯಮಾಡಿ |ಸೂರಿಗಳೆಲ್ಲಾ ಕೇಳ್ವೋದು ಕೋಲೆ ೭
ಸ್ವಾರೋಚೀಷೋತ್ತುಮಾನು ಶ್ರೀ ರೈವತ ಚಾಕ್ಷುಷಾ |ನಾರಾಯಣನ ದಾಸ ಸಾವರ್ಣಿ ದಕ್ಷಾ ಕೋಲೆ ||
ನಾರಾಯಣನ ದಾಸ ಸಾವರ್ಣಿ ದಕ್ಷ ಬ್ರಹ್ಮ |ಮಾರಾರಿ ದೇವ ಧರ್ಮ ಇಂದ್ರ ಸಾವರ್ಣೀ ಕೋಲೆ ೮
ಎಂದಿವರೀಗೊಂದೀಸಿ ಮುಂದೆ ಚವನ ಋಷಿ |ನಂದಾನೋಚಿತ್ಥ್ಯ, ಪಾವಕಾ, ಧೃವ, ನಹುಷ ಕೋಲೆ ||
ನಂದಾನೋಚಿತ್ಥ್ಯ ಪಾವಕ ಧೃವ ನಹುಷ ಶಶಿ |ಬಿಂದೂ ಪ್ರಹ್ಲಾದ ಪ್ರಿಯ ವೃತಗೊಂದಿಸುವೆ ಕೋಲೆ೯
ಶಾಮಲಾ ಗಂಗಾ ಉಷಾ ಸೋಮರಾಣಿ ಸಂಜ್ಞಾ |ಧೀಮಂತ ಪರ್ಜನ್ಯಾಖ್ಯ ಸೂರ್ಯಗೆ ಕೋಲೆ ||
ಧೀಮಂತ ಪರ್ಜನ್ಯಾಖ್ಯ ಸೂರ್ಯಗೆ ವಂದಿಸೀ ಅನ |ಭೀ ಮಾನೀ ಸೂರರನ್ನ ಮನದೊಳು ನೆನವೆನೆ ಕೋಲೆ ೧೦
ಅನಲರಸೀ ಬುಧ ಅಶ್ವಿನಿ ಭಾರ್ಯಾ ಛಾಯಾ ಪುತ್ರ |ಶನಿ ಪುಷ್ಕರಜಾನೂಜ ದೇವತಿಗಳಿಗೆ ಕೋಲೆ ||
ಶನಿ ಪುಷ್ಕರಜಾನೂಜ ಮನ ದೇವತೆಗಳಿಗೊಂದಿಪೆ ಸು |ಪ್ರಾಣೇಶ ವಿಠಲಾನಲ್ಲಿರಲೆಂದು ಕೋಲೆ ೧೧
ಉರುವಸೀ ಮುಖ್ಯ ಅಪ್ಸರ ಸ್ತ್ರೀಯರೀಗೊಂದಿಸೀ |ಹರಿನಾರಿಯರ ಪಾದಕ್ಕೆರಗೂವೆ ಕೋಲೆ ||
ಹರಿನಾರಿಯರ ಪಾದಕ್ಕೆರಗಿ ಪಿತೃಗಂಧರ್ವ |ನರನಾರ ಪತಿ ಮನುಷ್ಯೋತ್ತಮರಿಗೊಂದಿಸುವೆ ಕೋಲೆ೧೨
ಈ ನಿರ್ಜರರ ಧ್ಯಾನವನ್ನು ಮಾಡುತ್ತಾ |ಪ್ರಾಣೇಶ ವಿಠಲನ ಆ ನಾಭಿಯಿಂದ ||
ಪ್ರಾಣೇಶ ವಿಠಲನ ಆ ನಾಭಿಯಿಂದ ಬಂದ |ಜ್ಞಾನಿಗಳ ಸಂತತೀ ನಾ ವರ್ಣಿಸುವೆ ಕೋಲೆ ೧೩

೬೦
ಬಂದನಕ್ರೂರ ವ್ರಜಕೆ ಗೋಪೀ ಕಂದನ ಚರಣಾರ |ವಿಂದ ಕಾಂಬುವೆ ನಿಂದಿನ ದಿನ ಸುದಿನೆಂದು ಪ
ಎಷ್ಟು ಜನ್ಮದ ಸುಕೃತ ಒದಗೀತೋ ಈ |ದುಷ್ಟನ ಸಂಗದಿಂದ ||
ಬಿಟ್ಟು ಇಚ್ಛಾನುಸಾರದಿ ಗೋಕುಲದ ಮಾರ್ಗ |ಮೆಟ್ಟಿದೆ ಹರಿ ದಯೆಯಾದದ್ದು ನೋಡೆಂದು ೧
ಒಂದೊಂದು ಹೆಜ್ಜೆಗಳ ಬರುತ ಕ್ರಮ- |ದಿಂದ ಯಮುನೆಯ ದಾಟಿ ||
ವೃಂದಾವನದ ಭೂಮಿ ಕಾಣುತ ಬಹು ಮುದ- |ದಿಂಧರಿ ಹರಿಯೆಂದು ನಯನೋದ (ಕ)ಸುರಿಸುತ್ತ ೨
ಇಲ್ಲೆಲ್ಲ ಸಂಚಾರವ ಮಾಡಿಹ ಖಳ- |ದಲ್ಲಣನೆಂದು ಧೂಳೀ- ||
ಯಲ್ಲ್ಯುರುಳುತ ಪೊಗಳುತ ಶ್ರೀ ಪ್ರಾಣೇಶ ವಿ- |ಠಲಗೆರಗಿ ಕೈ ಮುಗಿದು ನಿಂದ ತುತಿಸುತ ೩

೧೩
ಬಣ್ಣಿಸಲಳವೆ ನಿನ್ನ | ಪನ್ನಗ ಶಯನ ಪ್ರಪನ್ನ ವತ್ಸಲ ರಂಗ ಪ
ಮಧು ಕೈಟಭಾಂತಕನೆ ಮಧುರಾಪತಿ ಜಿತನೆ |ಮಧು ಸಖ ಜನಕನೆ ಮಧುಮಾಂಶ್ರಿಯಾಂಬಕನೇ1
ಋಷಿ ಪತ್ನಿಯರ ಮೋಹಕ, ಋಷಿ ಪತ್ನಿಯ ತಾರಕ |ಋಷಿ ಪತ್ನಿಯ ನಾಶಕ ಋಷಿ ಪತ್ನೀ ಬಾಲಕ ೨
ಪದುಮ ಸಂಭವನಯ್ಯ ಪದುಮೇಶ ಕವಿ ಗೇಯ |ಪದುಮಾವರದ ಜೀಯ ಪದುಮಜಾಂಡದೊಡೆಯ3
ಭಾನುಕೋಟಿ ಪ್ರಕಾಶ ಭಾನುಲೋಚನಾಧೀಶ |ಭಾನುಪ ಸುತ ಪೋಷ ಭಾನುಪಾಣಿ ನಿರ್ದೋಷ ೪
ಹರಿ ಪ್ರಾಣೇಶ ವಿಠಲಯ್ಯ ಹರಿ ಶಯನ ಮತ್ಪ್ರಿಯ |ಹರಿಯಾಸ್ಯ ನರದೇಹ ಹರಿಸುವುದಘ ತ್ವರಿಯಾ ೫

೩೭
ಬಲ್ಲವರಿಗರಿದಲ್ಲ ಪ್ರಮೇಯವಲ್ಲಬೆಳ್ಳಿ-ಭಂಗಾರಲ್ಲ ಮೆಲುವದಲ್ಲ ಪ
ಕಣ್ಣೆವೆಯನಿಕ್ಕದು ಮತ್ಸ್ಯಾವತಾರನಲ್ಲ |ಘನ್ನ ಕಠಿಣವು ಕೂರ್ಮ ರೂಪಿಯಲ್ಲ ||
ಮಣ್ಣು ತಿಂಬುವದು ಇಟ್ಟಲ್ಲೆ ವರಹನೂ ಅಲ್ಲ |ಇನ್ನು ಬಾಯ್ದೆರೆದಿಹುದು ನರಸಿಂಹನಲ್ಲ ೧
ಮದುವೆಯಾಗಿಲ್ಲವು ವಾಮನಾವತಾರಲ್ಲ |ವದಗಿ ಛೇದಿಸುವದು ಭಾರ್ಗವಲ್ಲ ||
ಮುದದಿಂದ ಅನ್ನವುಣ್ಣದು ದಾಶರಥಿಯಲ್ಲ |ತುದಿ ಮೊದಲು ಕಪ್ಪು ಶ್ರೀ ಕೃಷ್ಣನಲ್ಲ ೨
ಬತ್ತಲೆ ಇರುವದು ಬುದ್ಧಾವತಾರಲ್ಲ |ಕತ್ತರಿಸುವುದು ಬಿಡದೆ ಕಲ್ಕಿಯಲ್ಲ ||
ಸತ್ಯಸಂಕಲ್ಪ ಶ್ರೀ ಪ್ರಾಣೇಶ ವಿಠಲನ |ಭೃತ್ಯರೇ ಬಲ್ಲರೀ ಗೋಪ್ಯ ಸೊಲ್ಲ ೩

೧೨೮
ಬಾಣವದನ ಸಲಹೋ – ನಾ ನಮಿಸುವೆ |ಬಾಣವರದ ನಿನಗೆ | ಹರ ಹರ ಪ
ಕುಧ್ರೇಡ್ಜ ಮುಖ ಕಂದ-ರವಿ ಅಘ |ಅದ್ರಿ ಸಮೂಹ ಋಷಿಜಾ | ಹರಹರ ||
ನಿದ್ರರಹಿತ ವಿಧಿಜಾ ಸತತ ಅ- |ಭದ್ರ ಭಕ್ತರಿಗೆ ಕುಜ ೧
ಗಜಋಷಿ ಅಂಬಕನೆ ಪಶುಪತಿ |ತ್ರಿಜಗದಿ ಪೂಜಿತನೆ | ಹರಹರ ||
ಅಜಿನಾಂಬರ ಧರನೇ ಕರುಣಿಸೊ |ವಿಜಯೇಕ್ಷಣ ಶಿವನೆ | ಹರಹರ ೨
ಕಾಮಾದಿ ಮುಖ ಜನಕ ಧೂರ್ಜಟ |ಭೂಮಿಜ ವೈರಿ ಸಖಾ | ಹರಹರ ||
ಸಾಮಜ ರಿಪು ಧನಿಕ ಮಿತ್ರನೆ |ಕಾಮಿತ ಫಲದಾಯಕ | ಹರಹರ ೩
ಧರಣಿಜೆ ರಮಣ ನಾಮಾ ಸರ್ವದಾ |ಸ್ಮರಿಸುವೆ ನತ ಪ್ರೇಮಾ || ಹರಹರ ||
ಗರಳ ನಾಶನ ಭೀಮ ವಿಕ್ರಮ |ಸರೋಜ ಧ್ವಜ ವಿರಾಮ | ಹರಹರ ೪
ಘನ ನಿಭ ಪ್ರಾಣೇಶ ವಿಠ್ಠಲ |ನನುಗನೆನಿಪುದನಿಶ | ಹರಹರ ||
ಘನ ಮಹಿಮನೆ ಈಶ ಕುಧರ | ಸ-ದನ ನಾಕಜ ಪೋಷ | ಹರಹರ ೫

೫೧
ಬೇಡಬೇಡೆಲಾ ಕೊಡಬೇಡೆಲಾ ಸೀರೆಬೇಡಿದರೆ ದೇವರಾಣೆಲಾ ಪ
ಇನ್ನೆರಡು ಗಳಿಗೆಗೆ ನಿನ್ನ ಉಂಬುವ ಹೊತ್ತು |ಅನ್ನದಕಾಂಕ್ಷೆ ಹುಟ್ಟದೇನಲಾ ||
ಮನ್ನಿಸಿ ಬೇಡಿದರೆ ಉನ್ನತಾಹಂಕಾರ- |ವನ್ನು ತೋರುವೆ ಇಟ್ಟುಕೊಳ್ಳೆಲಾ ೧
ವ್ಯಾಳೆವಾಗಲು ಯಮ್ಮನ್ನಾಳುವವರೇ ಬಹರು |ಹೇಳಿ ನಿನ್ನನೇ ಕೊಲ್ಲಿಸುವೆವೇವಲಾ ||
ಖೂಳ ಪೂತನಿ ಕೊಂದ ಧಾಳಿ ಬಲ್ಲರವರು |ಬಾಲಕನೆನ್ನರು ನಿನ್ನಗೆಲಾ ೨
ಬತ್ತಲರಾಗಿ ಜಲ ವ್ಯರ್ಥ ಸೇರಿದಿರೆಂದು |ವತ್ತಿ ನಮ್ಮನು ಕೊಲ್ಲರವರೆಲಾ ||
ಹತ್ತೆಂಟು ತಲೆಯಿಂದ ವಸ್ತ್ರರಹಿತ ಸ್ನಾನ |ನಿತ್ಯ ನಮ್ಮೊಳು ನಡತೆಲಾ ೩
ಕರಕರಿಗಾರದೆ ಮೈಮರೆದು ಊರಿಗೆ ಹೋಗಿ |ಭರದಿಂದೆಶೋದೆಗೆ ದೂರೆವೆಲಾ ||
ತರುಣಿಯರೆಲ್ಲ ಹಿಂದೆ ಮೊರೆಯಿಡೆ ಲಾಲಿಸಿ |ಒರಳಿಗೆ ಕಟ್ಟಿಸಿದ್ದೆವೆಲಾ ೪
ಲಲನೆಯರೆಲ್ಲ ಕೂಡಿ ಜಲಬಿಟ್ಟು ಬಂದರೆ |ಕೊಳುವೆ ನಿನ್ನಯ ಪ್ರಾಣಾ | ತಿಳಿಯಲೊಗಳಿಸಿ ಸಂಸಾರವ ಸಲುಹುತಿಹರು ನಾವೇ |ಕಳವೇನೊ ಪ್ರಾಣೇಶ ವಿಠಲ ೫

೧೧೭
ಭಾಗೀರಥಿ ದೇವಿ ನಮೋ ||ಭಾಗೀರಥಿ ದೇವಿ ಭಯ ನಿವಾರಣ ಗಂಗೆ |ಸಾಗರನರ್ಧಂಗೆ ಸುತರಂಗೆ ಪ
ವಾಮನ ವಾಮ ಪಾದಾಂಗುಷ್ಟ ನಖ ಸೋಕಿ |ಆ ಮಹ ಬ್ರಹ್ಮಾಂಡ ಸೀಳಾಲೂ | ಭಾಗೀ….. ||
ತಾಮರಸಜ ಲೋಕಕ್ಕಿಳಿದು ಮಜ್ಜನವಾಗಿ |ಸ್ವಾಮಿ ಪಾದೋದಕಳೆನಿಸಿದೆ || ಭಾಗೀ… ೧
ಹರಿಪಾದ ಜಲ ದೊರಕುವದು ದುರ್ಲಭವೆಂದು |ಹರ ಪ್ರಾರ್ಥಿಸಲು ಜಡೆಯೊಳು ನಿಂದೆ | ಭಾಗೀ…. ||
ಮೊರೆಯಿಡೆ ದೇವತೆಗಳಿಗೆ ವೊಲಿದು ಬಂದು |ಸುರನದಿಯೆಂದು ಕರೆಸಿಕೊಂಡೇ | ಭಾಗೀ….. ೨
ಚನ್ನಾಗಿ ಸ್ವರ್ಗದೊಳಗೆ ನಿಂತ ಕಾರಣ |ಸ್ವರ್ನದಿಯೆಂದು ಕರೆಸಿದೆವ್ವ | ಭಾಗೀ…. ||
ಉನ್ನತ ಧೃವ ಮಂಡಲಕ್ಕೆ ಪೋಗಿ ಮುಟ್ಟಿದೆ |ನಿನ್ನಾಕಾಶ ಗಂಗೆ ಎಂಬೋರೆ | ಭಾಗೀ….. ೩
ಭಗೀರಥ ಬಹುಕಾಲ ಪ್ರಾರ್ಥಿಸೆ ಕರುಣದಿಂ |ಜಿಗಳಿ ಹೇಮಾದ್ರಿಗೆ ನಡೆತಂದೆ | ಭಾಗೀ…. ||
ಸೊಗಸಿಲಿಂ ತ್ರಿಪಥಾಗಿ ದಕ್ಷಿಣದಲಿ ಬಂದು |ಸಗರರಾಯನ ಉದ್ಧರಿಸಿದೇ | ಭಾಗೀ….. ೪
ತವಕದಿಂದಲ್ಲಿ ಜಹ್ನು ಋಷಿಯಲ್ಲಿ ಜನಿಸಿ ಜಾ |ಹ್ನವಿಯೆಂದು ಸ್ತುತಿಸೋರೆ ಸುರರೆಲ್ಲ | ಭಾಗೀ…. ||ಭುವನದೊಳೆಲ್ಲರು ಪುನೀತರಾಗೋದು ಸಿದ್ಧ |ತವಪಾದ ಸ್ರ‍ಮತಿ ಮಾತ್ರದಿಂದಲೀ | ಭಾಗೀ…… ೫
ನಂದಿನಿ ನಳಿನಿ ಸೀತಾ ಮಾಲತೀ ಮಲಹ |ಮಂದರ ಧರ ಪದಿ ಶ್ರೀಗಂಗೆ | ಭಾಗೀ…… ||
ಸುಂದರ ತ್ರಿಪಥ ಭಾಗೀರಥಿ ಭೋಗವತಿ |ವಂದೆ ಜಾಹ್ನವಿ ತ್ರಿದಶೇಶ್ವರಿ | ಭಾಗೀ…. ೬
ವಸುಗಳ ಮಾತು ಲಾಲಿಸಿ ರಾಯನಲಿ ಬಂದು |ಬಸುರಿಂದ ಪಡೆದು ಉದ್ಧರಿಸಿದೆ | ಭಾಗೀ…. ||
ಅಸಹ್ಯ ಕರ್ಮವ್ಯಾಕೆಂದೆನಲು ಕುಮಾರನ |ಕೊಸರುತ ನಿಜರೂಪವೈದಿದೇ | ಭಾಗೀ…. ೭
ನಮೊ ನಮೊ ಶುಭಗಾತ್ರೆ ನಮೊ ನಮೋ ಸುಚರಿತ್ರೆ |ನಮೊ ನಮೊ ಶಂತನುವಿನ ಮಿತ್ರೆ | ಭಾಗೀ….. ||
ಶಮ ದಮಾದಿಗಳಿತ್ತು ಪೊರೆ ಅನುದಿನದಲ್ಲಿ |ಅಮರ ವಿನುತ ಪಾದಪಂಕಜೆ | ಭಾಗೀ…..೮
ಕಾಣಲು ಪಾಪಹರವು ಮುಕ್ತಿ ಅಹುದು |ಸ್ನಾನದ ಫಲವು ಬಲ್ಲವರಿಲ್ಲ | ಭಾಗೀ…… ||
ಕ್ಷೋಣಿಯ ಮ್ಯಾಲುಳ್ಳ ಸರಿದ್ವರಳೆನಿಸುವೆ |ಪ್ರಾಣೇಶ ವಿಠಲನ್ನ ದಯದಿಂದ | ಭಾಗೀ….. ೯

೧೨೩
ಭಾರತೀ ದೇವೀ ನಿನ್ನನು ದಿನಾ | ಸಾರುವರ ಕಾಯ್ವೀ ||
ಮಾರಮಣನ ಪಾದ ವಾರಿಜ ಯುಗದಲೀ |
ಚಾರು ಭಕುತಿ ಕೊಡು ನಾರೀ ಶಿರೋಮಣಿ ಪ
ಇಂದ್ರಸೇನಳೆ ವಿಪ್ರ ಕನ್ನಿಕೆ | ಚಂದ್ರೇ ಶ್ರೀಕಾಳೆ |
ನೊಂದೆನೆ ಬಹ ಭವ | ಬಂಧನದೊಳು ವೇಗಾ |
ದಿಂದ ಕಾಯೆ ಕರುಣಾ ಸಿಂಧು ದ್ರೌಪದಿ ದೇವಿ ೧
ಮಾತೆ ಕೇಳೆಲೆ ಭವಟವಗೆ | ವೀತಿಹೋತ್ರಳೆ ||
ಮಾತು ಮಾತಿಗೆ ಜಲಜಾತನಾಭನ ಸ್ತುತೀ |
ಆತುಕೊಂಡಿರಲೆ ಶ್ರೀ | ಮಾತರಿಶ್ವನಾ ರಾಣೀ ೨
ಪತಿತ ಪಾವನೆ | ಶಿವ ಕನ್ಯಾ ಜಗದ್ವಿತತೆ ಜೀವನೆ ||
ನುತಿಸಿ ಬೇಡಿಕೊಂಬೆನೆ | ಕ್ಷಿತಿಯೊಳೆಲ್ಲರೂ ಸನು |
ಮತವನೈದಿ ಈ ಕೃತಿಗೆ ಮಂಗಳವೀಯೆ ೩
ದೋಷ ದೂರಳೇ | ಹರಿಭಕ್ತಿಯಲ್ಲಿ ಮೋಸ ತೋರಳೆ ||
ಕಾಶಿ ನಂದನೆಯನ್ನಾ | ಯಾಸ ಬಡಿಸದಲೀ |
ಶ್ರೀಶನ ಕಥಿಗೆ ವಿಶೇಷ ಬುದ್ಧಿಯನೀಯೆ ೪
ಮಾನ ನಿನ್ನದೆ | ಸತತ ಪೇಳ್ವದೇನು ಮಾಣದೇ ||
ಪ್ರಾಣೇಶ ವಿಠಲನ ಧ್ಯಾನದೊಳಿರುವಂತೆ |
ಪೋಣಿಸುವದು ಮತಿ ಬಾಣ ವರದ ನುತೆ೫

೯೯
ಭಾರತೀ ರಮಣಾ ಪವಮಾನಾ ಜಗದೊಳು ಸುತ್ರಾಣ |
ಘೋರ ದುರಿತಾರಣ್ಯ ದಹನ | ಮಾರ ಕದನ ಜಿತವಾರವಾರಕೆ ಶ್ರೀ ನಾರಾಯಣನ ಪದ ಆರಾಧನೆ ಕೊಡು ಪ
ಮೈಗಣ್ಣಪದವಾಳ್ದವಾತ | ಲೋಕ ವಿಖ್ಯಾತ |ನಾಗಜನಕ ಭಜಕ ಪ್ರೀತ ||
ಯೋಗೇಶ ಜಡಜಂಗಮ ವಿತತ | ಅದ್ಭುತ ಚರಿತ |ಬಾಗುವೆ ಲಾಲಿಸೋ ಮಾತ ||
ಹೋಗುತಲಿದೆ ಹೊತ್ತೀಗಲೆ | ತವಕದಲಿ ಭಾಗವತರೊಳಗೆ ||
ಭಾಗೀರಥೀ ಪಿತನಾ ಗುಣ ಪೊಗಳಿಸೊ | ಜಾಗು ಮಾಡದಲೆ |ನಾಗಾದಿ ರೂಪನೆ ಗರುಡಾರ್ಚಿತ ೧
ಗೀರ್ವಾಣ ವಂದ್ಯ ಹರಿದಶ್ವ | ತೇಜ ಪೃಷದಶ್ವ |ದೂರ್ವಾಸಾರ್ಚಿತ ಮಾತರಿಶ್ವ ||
ಪಾರ್ವತೀಪತಿ ವಂದ್ಯ | ದುಸ್ವಭಾವಗತ ನಭ ಸ್ವ |ತ್ಪೂರ್ವಿಕಾ ದೇವ ಹಂಸಾಶ್ವ ||
ತೋರ್ವುದು ಜ್ಞಾನವ | ಬೀರ್ವುದು ಕರುಣವ |ಪೂರ್ವದೇವ ಸಾರ್ವೆ ನಿನ್ನನು ಯನ್ನ ||
ಚಾರ್ವಾಕ ಮತಿಯನು | ಬೇರೂರೆ ಸಳಿಯಾಲು |ಉರ್ವಿಯೊಳಗೆ ಮತ್ತೋರ್ವರ ಕಾಣೆ೨
ತ್ರಿಗುಣ ವರ್ಜಿತ | ಪ್ರಾಣೇಶ ವಿಠಲನ ದಾಸ |ನಗಪಾಲಾ ಕೊಡು ಯನಗೆ ಲೇಸ ||
ಅಗಣಿತ ಮಹಿಮನೆ | ಕಾಷಾಯ ವಸನ ಭೂಷ |ನಿಗಮವೇದ್ಯನೆ ನಿರ್ದೋಷ ||
ನಗ ಸ್ತೋಮಗಳಿಗೆ | ಪಗೆಯಾಗಿರ್ಪನ |ಮಗನ ಧ್ವಜದಿ ನಿಂದಿ ಗಡಕುರುಜರೆದೆ ||
ಭುಗಿಲೆಂಬುವ ತೆರ ಮೃಗಧ್ವನಿ ಮಾಡಿದನಘ |ಪೊರೆವುದು ಕರವ ಮುಗಿವೆ ಚರಣಕೆ ೩

೧೦೬
ಭಾರತೀರಮಣ ನಂಬಿದೆ ಪಾದವಾರಿಜಾಕರುಣಾ ವಾರಿಧೆ ಯನ್ನನು |
ದೂರ ನೋಡದೆ ನಿನ್ನ ಸಾರೆಗರೆದು ಭಯ ನಿವಾರಿಸಿ ಸಲಹೋ ಪ
ನೀಲಲೋಹಿತನ ಪಿತನೇ ಗೋಪಾಲನ ಸುತಾ |ಕಾಳಕೂಟ ಪಾನಿ ವಿಶಾಲಾಂಬಕಾ ಮಾರರಿಂದ ||
ವೇಳೆ ವೇಳೆಗಳಲ್ಲಿ ವೋಲಗವ ಕೈಕೊಂಬುವ |ಕಾಳೀವಲ್ಲಭ ಭೇಶ ಭಾಸ್ಕರರೋಲು ಸನ್ನಿಭ ||
ಈ ಲೌಕಿಕ ನರರಾಲಯ ಕಾಯಿಸದೆ |ವಾಲಯ ಸುಮತಿಯ ಪಾಲಿಪುದೊಲಿದು ೧
ಜಾನಕೀಪತಿ ಸೇವೆ ಮಾಡಿದೈ ಕಾಣೆನೋ ಪ್ರತಿ |ಯಾ ನಿನಗಾರಾರಾ ಭುವನದೊಳಗೆ ಗಂಧವಹನೆ ||
ಮುದ್ರಿಯ ಕೊಂಡು ಕ್ಷಣದೊಳಗೆ ಜಲಧಿಯನ್ನೆ ಹಾರಿದೆ |ಸೀತೆಗುಂಗುರವನ್ನೆ ತೋರಿದೆ ||
ಆ ನಗರವನು ದಹನಗೈಸಿ ಬಹು |ದಾನವರನಳಿದು ದಶಾನನನೊದ್ದೆ ೨
ಪಾಪದೂರನೆ ವೃಕೋದರ ಶ್ರೀ ದ್ರೌಪದೀಶನೇ |ವಿಪಿನ ಚರಿಸಿ ಕುರುಪತಿಯ ತರಿದು ||
ಕ್ಷಿತಿಪರನ್ನು ಬಿಡಿಸಿದೆಯೈ ಪಾಂಡವರ (ಪರಿ) ಪಾಲಕ |ಕೋಪನಾಶನ ಉದ್ಧರಿಸೆನ್ನ ಚಾಪಭಂಜನ ||
ಶ್ರೀಪತಿ ದ್ವಯ ಪದ ಆಪಜ ಭಜಿಸುವ |ನೇ ಪರಮೇಷ್ಠಿಯ ರೂಪ ಗುಣಾಢ್ಯ ೩
ದೇಶಿಕೋತ್ತಮ ಮಾರುತಿ ಇಂದಿರೇಶನ ಪ್ರೇಮ |ಸಂಪಾದಿಸಿಕೊಂಡತಿಶಯ ಭಕುತಿಯಿಂದಲೀ ಸಮೀಚೀನವಾಗಿ ||
ತ್ರಿಂಶತಿ ಸಪ್ತ ಸಂಖ್ಯಾ ದರುಶನ ಗ್ರಂಥ ವಿರಚಿಸಿ ದು |ರ್ಭಾಷ್ಯವ ಸಂತರಾ ಸಲಹುವರನಾಭಾಸ ಮಾಡಿದೆ ||
ವ್ಯಾಸಭಜಕ ನಿನ್ನ ದಾಸನೆನಿಸಿಕೊಳ್ಳೋ೪
ಅಂಜನಾಸುತ ಪ್ರಾಣೇಶ ವಿಠಲನೆಂಜಲನೊಯ್ಯುತ |ಭುಂಜಿಸಿದಿಯಲೊ ನಿರಂಜನ ಕಪಿ ಪ್ರ- ||
ಭಂಜನ ಕೊಡು ಕೃತಾಂಜಲಿಯಿಂ ಬೇಡುವೆ |ಕಂಜನಾಭನ ಸ್ಮರಣೆ ದಿವಾ ಸಂಜೆಯಲಿ ಘನ ||
ಪುಂಜ ಸುಗುಣಮಣಿ ಮಂಜರಿ ಅರ್ಥ ಪ- |ರಂಜಳ ತಿಳಿಸೋ ಧನಂಜಯ ರಕ್ಷ ೫

೧೧೪
ಭೀಮ ಶ್ಯಾಮ | ಕಾಮಿನಿಯಾದನೂ ಪ
ಹೆಂಗಳೆ ನೂತನ ಶ್ರೀಂಗಾರವಾದನುಉಂಗುರಗೂದಲೊಳಿಂಗಿಸಿ ರಾಗಟಿ ||
ಹಿಂಗೂವ ತೆರ ಕಳಿಂಗನ ವೇಣಿಗೆರಂಗನಿಕ್ಕಿದ ಚವುರಿಂಗೆ ಗೊಂಡೆಯೂ ||
ತಿಂಗಳರ್ಧಾ ಫಣಿ ಮಂಗಾಳ ಕುಂಕುಮ ಕಂಗಳಿಗೆ ಕಪ್ಪು ಭಂಗಾರದೋಲಿಯು ||
ಜಂಗು ಬ್ಯಾಳೀ ಸರ ಅಂಗಾಜ ಸತಿಯಭಂಗೀಪ ಚಲುವ ಅಂಗವಾದ ೧
ಏಕಾವಳಿ ಸರ ತೂಕದ ಸರಿಗೆ |ಲೋಕದೊಳಿಲ್ಲದ ಬೇಕಾದ ಭಾಪುರೆ ||
ಹಾಕೀದ ಚಿತ್ರ ಕಂಚೂಕವ ಬಿಗಿದ-ನೇಕ ಪರಿ ವಸ್ತವೂ ಕರಕೇ ||
ಆ ಕಂಠೀರವನ ಸೋಲಿಪ ಕಟಿಪಟ್ಟಿಸೋಕೆಯಿಳೀ ಸೀರಿ ಮೂಖ ಹರಿದ್ರ ನಾ- ||
ಸೀಕಾದಿ ಮೂಗುತಿಯು ಕಟ್ಟಿದಾ ಗಿಳಿಯಾಕಾನಾ ಬಾವುಲಿಯೂ ಕಿವಿಗೇ ೨
ಲುಲ್ಲುರುಳೀ ಪದದಲ್ಲಿ ಕಡಗಾವುಘಲ್ಲೆಂಬೊ ಗೆಜ್ಜಿಯ ಬಲ್ಲೀದ ಶಬ್ದವು ||
ಎಲ್ಲೆಲ್ಲಿ ಜಗದೋಳಿಲ್ಲದ ಪರೀಯಪಿಲ್ಲ್ಯಾವನ್ನು ಬಟ್ಟಿನಲ್ಲಿಟ್ಟಾನೋ ||
ಕೊಲ್ಲೂವೆನುವ ಆವಲ್ಲಿಹನೆನುತಹಲ್ಲು ತಿನುತಾಲಿ ಸೊಲ್ಲು ಸೊಲ್ಲೀಗೆ ತಾ ||
ಕುಲ್ಲೂತ ಪಾತಕಿದ್ದಲ್ಲಿಗೆ ನಡೆದನಿಲ್ಲಾದೆ ದನುಜ ದಲ್ಲಾಣನೂ ೩
(ಈ ಪದವನ್ನು ದಾಸರಾಯರ ಕೃತ ಭೀಮಸೇನ ವಿಲಾಸದಿಂದ ಸಂಗ್ರಹಿಸಿದೆ.)

೨೧೫
ಭುವನ ವನಾ ಯಂಧ್ಯಾಗಿದ್ದರೆ ಕರ |ಸುವದು ನಿರಂತರ ಲೋಕದಲೀ ||
ಅವಿದಿತ ನಾನು ಅದನ್ನ ಆಪನಿತು |ವಿವರಿಸುವೆನು ಕಲಿಗಳು ಕೇಳೀ ಪ
ರವಿ ಮೂಡವ ಮುಂಚೇಳುತ ಶ್ರೀಮಾ |ಧವನ ಸ್ಮರಿಸುತಿರಲದೆ ಭವನಾ ||
ಯುವತಿಯರಾ ವ್ಯಾಳ್ಯದಲಿ ಮೊಸರು ಮಥ |ನವ ಮಾಡುತಿಹರು ಅದೆ ಭವನಾ ೧
ಶಂಖ ಚಕ್ರ ಮೊದಲಾಯುಧ ಧರಿಸದೆ |ಮಂಕುಗಳಿರುತಿಹರದೇ ವನಾ ||
ಸಂಕಟ ಚೌತೀ ಶಿವನಿಸಿ ಭೂತ ಶ |ಶಾಂಕನ ಪೂಜಿಪರದೇ ವನಾ ೨
ಅಂಗನಿಯರು ತಿಲಕಾಯುಧ ಕುಂಕುಮ |ಶ್ರಿಂಗರವಾಗಿ ಹರದೆ ಭವನಾ ||
ಅಂಗಣದಲಿ ವೃಂದಾವನ ಗೋವ್ಗಳು |ರಂಗವಲಿಕ್ಕುವರದೆ ಭವನಾ ೩
ಸರುವರು ಸರ್ವದ ದುಷ್ಟ ಶಬ್ದ ಉ |ಚ್ಚರಿಸುತಲಿಪ್ಪರು ಅದೇ ವನಾ ||
ಹರಿಗತಿ ಪ್ರಿಯಕರ ತುಲಸಿಲ್ಲದ ಮಂ |ದಿರವೆ ನಿಶ್ಚಯವಾಗಿ ವನಾ ೪
ರಾಮಾರ್ಪಿತದನ್ನವ ಹೋಮಿಸಿದ |ಧೂಮ ವ್ಯಾಪಿಸಿಹದದೆ ಭವನಾ ||
ಭಾಮಿನಿಯರು ಕೆಲಸವ ಮಾಡುತ ಖಳ |ಭೀಮನ ಸ್ಮರಿಸುವರದೆ ಭವನಾ ೫
ದೇವಪೂಜೆ ನೈವೇದ್ಯವು ವೈಶ್ವ |ದೇವ ಯಂಬದಿಲ್ಲದೇ ವನಾ ||
ಆವ ಕಾಲಕೂ ವೇದ ವೇದ್ಯ ಭೂ |ದೇವರು ಬರದಿಹದದೇ ವನಾ೬
ವೇದ ಪುರಾಣದ ಘೋಷವು ಸರ್ವದ |ಭೂ ದಿವಿಜರ ಸಂದಣೆ ಭವನಾ ||
ವಾದಿಗಳ ಹಳಿದು ಮಧ್ವರಾಯರಾ |ರಾಧನೆ ಮಾಡುವರದೆ ಭವನಾ ೭
ಹಿಕ್ಕದೆ ತಲಿ ಕಚ್ಚಿಲ್ಲದೆ ತಿರುಗುತ |ಮಕ್ಕಳನಳಿಸುವರದೇ ವನಾ ||
ಸೊಕ್ಕಿಲಿ ಗಂಡತ್ತಿಗಳಿಗೆ ಬೈತಿಹ |ರಕ್ಕಸಿ ಹೆಂಗಸಿಹದೇ ವನಾ ೮
ತಂಬೂರಿ ತಾಳಂಗಳ ಸುಸ್ವರ |ತುಂಬಹದೆಂದೆಂದು ಭವನಾ ||
ಉಂಬುವಾಗ ಪ್ರತಿ ಪ್ರತಿ ತುತ್ತಿಗೆ | ಪೀ ತಾಂಬರನ ಸ್ಮರಿಪರದೆ ಭವನಾ ೯
ರೌಚ ದಂತ ಧಾವನ ಮೊದಲಾದ ಸ |ದಾಚಾರಿಲ್ಲಲ್ಲದೇ ವನಾ ||
ಯಾಚಕರಿಗೆ ತುತ್ತನ್ನವಿಲ್ಲ ಮ |ತ್ತ್ಯೋಚನಿ ಯಾತಕೆ ಅದೇ ವನಾ ೧೦
ಹರಿದಿನದಲಿ ಸರ್ವರು ನಿರ್ಜಲ ಜಾ |ಗರವನು ಮಾಡುವರದೇ ಭವನಾ ||
ಮರುದಿನ ಭೋಜನ ಸೂರ್ಯೋದಯ ಕಂ |ತರಿಸದೆ ಮಾಡುವರದೆ ಭವನಾ ೧೧
ಉದಯಾಗಿ ತಾಸಾದರನ್ನ ನರ |ಸುದತಿಯರೇಳದ ಮನೇ ವನಾ ||
ಪದುಮನಾಭ ನಾಮೋಚ್ಚಾರಣೆ ಯಂ |ಬದು ಎಂದೆಂದಿಲ್ಲದೇ ವನಾ ೧೨
ಪ್ರತಿದಿನ ಧರ್ಮಕೆ ಪ್ರತಿಕೂಲಾಗದ |ಸತಿ ಸುತರಿದ್ದರೆ ಅದೆ ಭವನಾ ||
ವೃತಗಳು ಸದ್ದಾನಗಳು ತಿಳಿದನವ |ಕತ ಮಾಡುತಿಹ್ಯರದೆ ಭವನಾ ೧೩
ರೊಕ್ಕವಿದ್ದು ಸದ್ವ್ಯಯವಾಗದ ಯಳಿ |ಮಕ್ಕಳಿಲ್ಲದಿಹ ಸದನೇ ವನಾ ||
ಮುಕ್ಕುಂದನ ದಾಸರ ನಿಂದಿಸುತಿಹ್ಯ |ಚಿಕ್ಕ ಮತಿಗಳೀಹದೇ ವನಾ ೧೪
ಮಾರುತ ಮತವನುಸರಿಸುತಲೀ ವ್ಯವ |ಹಾರ ಮಾಡುವದೆ ಭವನಾ ||
ಮಾರುತಿ ಸುತ ಪ್ರಾಣೇಶ ವಿಠ್ಠಲನ ಪ |ದಾರಾಧನೆ ಮಾಡುವರದೆ ಭವನಾ ೧೫

ಮಂಗಳಾರತಿ ಕೀರ್ತನೆಗಳು
೨೫೯
ಮಂಗಳಂ ಜಯ ಮಂಗಳಂ | ಜಯಮಂಗಳಂ ಪರಮೇಷ್ಟಿ ಜನಕ ಉಪೇಂದ್ರಾ ಪ
ವೇದ ಉದ್ಧಾರ ಶ್ರೀ ಬಾದರಾಯಣ ಮಧು |ಸೂದನ ಅಮರರ ಕಾಯ್ದ ದಯಾಬ್ಧೀ ೧
ನಂದಗೋಪಾತ್ಮಜ ಸಿಂಧೂರ ಪಾಲ ಮು- |ಕುಂದ ಪಾಲಿಪುದೆನ್ನ ಇಂದೀವರಾಕ್ಷಾ ೨
ತುಂಗ ವಿಕ್ರಮನೆ ಕಾಳಿಂಗ ಮರ್ದನ ದೇವಾ |ಗಂಗ ಜನಕ ಶ್ರೀ ವಿಹಂಗ ವಾಹನನೇ ೩
ಸಣ್ಣರೂಪದಿ ಬಲಿಯನ್ನು ತುಳಿದ ಶ್ರೀ ವಾ- |ಮನ್ನ ಕ್ಷಿತಿಪಹರ ವನ್ನಜನಾಭಾ ೪
ಪ್ರಾಣೇಶ ವಿಠಲ ಶ್ರೀ ಮಾನಿನಿ ಪ್ರತಿ ಶತ |ಮೀನಾಂಕ ಲಾವಣ್ಯ ಭಾನು ಪ್ರಕಾಶಾ ೫

೨೬
ಮಂಡೆ ಬಾಗಿ ಕರವ ಮುಗಿವೆ ಕಾಯೊ ಹರಿಹರಿ |ಪುಂಡರೀಕ ನಯನ ಮರೆಯಬೇಡವೊ ಹರಿಹರಿ ಪ
ಕರಿ ವರದನೆ ಸರ್ವಾಂತರ್ಯಾಮಿ ಹರಿಹರಿ |ಕರುಣಾಸಾಂದ್ರ ತರುಣಿ ಮಾನಕಾಯ್ದ ಹರಿಹರಿ ||
ಶರಧಿಸುತೆಯ ರಮಣ ದೀನಬಂಧು ಹರಿಹರಿ |ಅರಿಯೆ ನಿನ್ನನುಳಿದು ಕಾಯ್ವರನ್ನು ಹರಿಹರಿ ೧
ಮೀನನಾಗಿ ವೇದಗಳನು ತಂದೆ ಹರಿ ಹರಿ |ಆ ನಗವನು ಪೊತ್ತು ಅಮೃತವೆರೆದೆ ಹರಿ ಹರಿ ||
ನೀನೇ ವರಾಹನಾಗಿಯವನಿಯ ತಂದೆ ಹರಿ ಹರಿ |ದಾನವನುದರವ ಬಗೆದು ಅಂದು ಹರಿ ಹರಿ ೨
ಚಿಕ್ಕ ರೂಪದಿಂದ ಬಲಿಯ ತುಳಿದೆ ಹರಿ ಹರಿ |ಸೊಕ್ಕಿದರಸುಗಳನು ಸವರಿಬಿಟ್ಟೆ ಹರಿ ಹರಿ ||
ರಕ್ಕಸರನು ಕೊಂದು ಸತಿಯ ತಂದೆ ಹರಿ ಹರಿ |ಅಕ್ಕರದಲಿ ಪಾರಿಜಾತ ತಂದೆ ಹರಿ ಹರಿ3
ಅಂಬರವನು ತೊರೆದೆ ಬೌದ್ಧನಾಗಿ ಹರಿಹರಿ |ಕುಂಭಿಣಿಯೊಳು ಕುದುರೆಯೇರಿ ಮೆರೆದೆ ಹರಿ ಹರಿ ||
ಶಂಬರಾಂ ಜನಕ ಧರ್ಮತನಯ ಹರಿ ಹರಿ |ಅಂಬುಜಾಸನಾದಿ ದಿವಿಜವಂದ್ಯ ಹರಿ ಹರಿ4
ಶೌರಿ ರಘುಜ ಮುನಿಜ ಪ್ರಾಣೇಶ ವಿಠಲ ಹರಿ ಹರಿ |ಸಾರಿದ ಶರಣರಿಗೆ ಕಲ್ಪತರುವೆ ಹರಿ ಹರಿ ||
ಘೋರ ದುರಿತವನಕೆ ಧನಂಜಯನೆ ಹರಿಹರಿ |ಭಾರ ನಿನ್ನದೆವೆ ಹೇಳಲ್ಯಾಕೆ ಹರಿ ಹರಿ ೫

೪೫
ಮಧ್ಯರಾತ್ರಿಯೊಳೀಗ ನಾ ನಿದ್ದೆಯೊಳಿರೆ ಬಾಗಿಲು |ಸದ್ದು ಮಾಡಿ ವೊತ್ತಿದವರಾರೈ |
ಬಾಳ್ವರಿಗಿದುಬುದ್ಧೆ ಹೆಣ್ಣೋ ಗಂಡೋ ಪೇಳಿರೈ ಪ
ಮೇದಿನಿಯೊಳು ಪ್ರಸಿದ್ಧವಾದ ತುಂಗಮಹಿಮ ಶ್ರೀ |ಮಾಧವ ಬಂದಿಹೆ ಕೇಳೆಲೆ |
ಆದರೊಳ್ಳಿತು ಮದನನೊಳಾಡಲಿ ಹೋಗೆ ೧
ಹೇ ಸಖಿ ವಿಚಾರ ಮಾಡೆ ವಸಂತನಲ್ಲವೆ | ಸರ್ವದೇಶ ಬಲ್ಲದು ನಾಚಕ್ರಿಯೆ |
ಇಲ್ಲಿ ಬೇಕಿಲ್ಲಆ ಸಂತಿಯೊಳಿಟ್ಟು ಮಾರೊದೈ ೨
ಉತ್ತಮಗಂಬುವದಲ್ಲೆ ವೈತ್ತಿಕೆ ತುಳಿವನೆಂದು ಧರೆ |ಹೊತ್ತವ ಕೇಳೆಲೆ ಸುಂದರಿ |
ಒಳ್ಳೆದು ನಿನ್ನಹುತ್ತಿನೊಳು ವಾಸ ಮಾಡೊದೈ೩
ಸರ್ಪನಲ್ಲವೆ ಅಖಂಡಲ ದರ್ಪ ತಗ್ಗಿಸಿದವ ಸ- |ಮರ್ಪಕವಾಯಿತೇನೆ ಮನಕೆ |
ಮರದ ಗೂಡೊಳುತೆಪ್ಪನೆ ಸೇರುವುದೇ ಬಹು ಲೇಸೈ ೪
ಸೂರಿಗಳೆಲ್ಲರು ಯನ್ನ ಕೀರುತಿ ಬಲ್ಲರುಹುದಲ್ಲ |ನಾರೀಮಣಿ ಹರಿ ಬಂಧಿನಿ ಕೇಳೆ |
ಮನಗಳಲ್ಲಿ ವಿ-ಹಾರ ಮಾಡುವುದೇ ಲೇಸೈ ೫
ತರುಗಳಲ್ಲಿಹೊದಕ್ಕೆ ವಾನರನಲ್ಲೆ ಜನನಾದಿ ದೋಷ |ವಿರಹಿತ ನಾರಾಯಣ ಬಂಧಿನೆ |
ಈ ನಾಮಕ್ಕಿನ್ನು-ತ್ತರವೇನು ಇದ್ದರೆ ಪೇಳೆ ಗುಣಧೀ ೬
ನಾನರಿತೆನೀಗ ದೇವ ಪ್ರಾಣೇಶ ವಿಠಲನೆಂಬೊದು |ಏನಾಡಿದಾಪದ್ಧವನು ಕ್ಷಮಿಸೈ |
ತನುವೆ ನಿನ್ನದುಮಾನದಿಂದೆನ್ನನು ರಕ್ಷಿಸೈ ೭

೯೩
ಮರುತ ದೇವರ ಹೊಂದಿರೋ ಮೂಜಗದ |ಗುರು ಮರುತ ದೇವರ ಹೊಂದಿರೋ ಪ
ಮರುತ ದೇವರ ಹೊಂದಿದವರ ಪಾಪವು ಪೋಗಿ |ಹರಿಮಂದಿರವನೈದುವದಕೆ ಸಂದೇಹವಿಲ್ಲ ||ಅ. ಪ||
ದಶರಥ ಸುತನಂಗನೆಯ ಕದ್ದೊಯ್ದಿರಲಾಗಿ |ದಶಕ ವಾನರ ಸ್ತೋಮ ರವಿಜನಾಜ್ಞಾ ||
ದೇಶದಿಂದೆಲ್ಲರಾಶೆ ಭಯದಲಡಗಿ ರಕ್ಷಿಸೋ |ಶ್ವಸನಾ ಯೆನಲು ಪೋಗಿ ಶೀಘ್ರವಾರ್ತೆಯ ೧
ಕುರುಜನುಪಟಳಕೆ ಪಾರ್ಥಾರಳಲಿ ವನ |ಚರಿಸಲು ತವಕ ಬೀಳದೆ ಪ್ರಾಂತಕ್ಕೆ ||
ದುರುಳರ ಸದೆದು ಭೂಭಾರವ ಕಳೆದು ಸಹೋದ- |ರರ ಪ್ರೀತಿಪಡಿಸಿ ಕೃಷ್ಣನ ದಯೆ ಪಡೆದ ೨
ಗುಣಪೂರ್ಣ ಅನಘ ಶ್ರೀ ಪ್ರಾಣೇಶ ವಿಠಲನ ನಿ- |ರ್ಗುಣನೆಂದು ಅಸುರರು ದುರ್ಮತ ಸ್ಥಾಪಿಸೆ ||
ಘನಶಾಸ್ತ್ರ ವಿರಚಿಸಿ ಐಕ್ಯವ ಬಿಡಿಸಿ ಸ |ಜ್ಜನರ ಪೊರೆವ ಶ್ರೀ ಆನಂದ ಮುನಿಪರೆಂಬ ೩

೧೩೨
ಮಹಾದೇವ ಶಿತಿಕಂಠ ದಾಸ ಕಲ್ಪಮಹೀಜ ಬಿನ್ನವಿಪೆ ನಿರ್ದೋಷ ||ಆಹಾ ||
ಕುಹಕಾರಿ ಹರಿಪಾದ ಮಹಿಮೆ ಕೊಂಡಾಡಿಸೊ |
ಗಹನ ವಿಕ್ರಮ ಭೀಮ ಮಹೀಧರಪ ಜಾಧವ ಪ
ಸ್ಫಟಿಕಾಭ ಶ್ರೀಕಂಠ ದಕ್ಷ ಧ್ವಂಸಿ |
ನಿಟಿಲಲೋಚನ ಸುರಪಕ್ಷ ಹೇ ||
ಧೂ |ರ್ಜಟ ಹೀನ ವಿಷಯಾಖ್ಯ ಕಕ್ಷ ವಹ್ನಿ |
ಕುಟಿಲತ್ವ ಬಿಡಿಸತಿ ದಕ್ಷ ||ಆಹಾ||
ಕಠಿಣ ಸಂಸಾರದಿ ತ್ರುಟಿ ಮಾತ್ರ ಸುಖ ಕಾಣೆ |
ವಟು ರೂಪಿ ಭಕುತರ ಕಟಕದೊಳಿರಿಸೆನ್ನ೧
ಇಳಿರಥ ನಗಶರ ಸೋಮ ಮೌಳಿ |
ನಳನಂದಿನಿಪ ಸುತ ರಾಮ ನಾಮಾ |
ನಲಿದು ಪಾಡುವ ಗುಣಧಾಮ ರೌಪ್ಯಾ |
ಬಲಾವಾಸಾನಂಗ ವಿರಾಮಾ ||ಆಹಾ||
ಹಲವರಾಶ್ರಯಿಸಿ ನಾ ಬಲು ನೊಂದೆನೋರ್ವರು ಕಾಯ್ವ |
ಸುಳಿವು ಕಾಣೆನೋ ಹೇ ಗರಳಕಂಠ ಪೊರೆಯೆನ್ನ ೨
ಪಂಚ ಸುಸ್ಮಿತ ಯುಕ್ತ ವದನಾ ನಿಷ್ಪ್ರ |
ಪಂಚ ಗಜಾಸುರ ಹನನಾ ಏಕಪಂಚಾಸ್ಯ ಜನಕ ಕೇಶವನಾ ಪ್ರೀತಿ |
ಮಂಚ ನೀನಾಹೆ ಖಳರನಾ ||ಆಹಾ||
ಹಿಂಚಾಗಿ ಅಳಿವಂಥ ಹಂಚಿಕೆಯಲಿ ವರ |
ಮುಂಚೆ ಕರೆದು ಕೊಟ್ಟು ವಂಚಿಪೆ ಅತ್ರಿಜ ೩
ಅಹಂಕಾರಾಧೀಶ ನಭೇಶ ತಾತ |
ಮಹಾ ಮುನಿ ವಂದ್ಯಾಮರಾಸ್ಯ ಚಂದ್ರ |
ದಿನಪತೇಕ್ಷಣನೆ ಅಶೇಷಾ ಮೋದ |
ಬಹು ಮೋದ ಸಕ್ತಾಯನ್ನಾಶಾ ||ಆಹಾ||
ದಹಿಸೊ ಜಠರ ಪೋಷ ವಹಿಸಿ ಬೆಂಡಾದೆನೊ |
ಅಹಿ ಮಲಾಂಧಕಾಸುರ ಗುಹಹ ಅಶ್ವತ್ಥಾಮ ೪
ಶಕ್ರಾವರಜ ಶ್ರೀ ಪ್ರಾಣೇಶ ವಿಠ್ಠಲ |
ನಕ್ರಾಹನಂಘ್ರಿಯನಿಶದಲ್ಲಿ |
ವಕ್ರವಿಲ್ಲದೆ ಸೇವಿಪೀಶ ಹೇ ತ್ರಿ- |
ವಿಕ್ರಮ ಕರ ವ್ಯೋಮಕೇಶ ||ಆಹಾ||
ಶುಕ್ರಪೂಜಿತ ಪಾದ ಅಕ್ರೂರಯನ್ನೊಳಿ |
ದ್ದ ಕ್ರಮವೆಣಿಸದೆ ಸುಕೃತವೊದಗಿಸೊ೫

Leave a Reply

Your email address will not be published. Required fields are marked *