Categories
ರಚನೆಗಳು

ಪ್ರಾಣೇಶದಾಸರು

೪೦
ಮಾತು ಸುಳ್ಳಾಗೊದೆ ದುರಿತಾರಿ | ಯನ್ನನಾಥನಿಂದಿಗೆ ರಕ್ಷಿಸೇ ಗೌರಿ ಪ
ಮಾತೆ ನಿನ್ನಯ ಪಾದ ಪ್ರೀತಿಂದ ಭಜಿಸಿದ್ದ |ಕ್ಕೀತ ಸಿಕ್ಕಿದ್ದನು ಚಾತುರ್ಯ ಪುರುಷ ೧
ಧಾತಾಜನಾಡೀದ ಮಾತೀಗೆ ಕೋಪಾದಿ |ಈ ತೆರ ಮಾಡಿದ ತಾತನು ನೊಂದೂ ೩
ಪೋರಾನಲ್ಲಮ್ಮಿವಾ ಆರೆಂದು ಹೇಳಾಲಿ |ಶೌರಿಯ ಮೊಮ್ಮಗ ನೀರಜ ನೇತ್ರೆ ೩
ಭೃತ್ಯಾರ ಅಭಿಮಾನ ಮತ್ರ್ಯಾಪಗುಂಟಲ್ಲೆ |ಅತ್ತತ್ತವಾದೀನೆ ಹೆತ್ತವ್ವ ನಿನಗೇ ೪
ಪ್ರಾಣೇಶ ವಿಠಲನು ಬಾಣನ ಶಿಕ್ಷಿಸಿ |ತಾನೆ ಯೀವಂದಾಗಿ ನೀನೊಲಿಯವ್ವಾ ೫

೨೧೪
ಮಾರನೈಯ್ಯನೆ ಕೇಳಾ ಕಲಿ ವ್ಯಾಪ್ತಿ ಆದದ್ದು |ಆರಾ ಮುಂಧೇಳಿ, ಎನ್ನುಬ್ಬಸ ಕಳಕೊಳ್ಳಲ್ಯೋ ಪ
ನಳ ಪ್ರಮುಖರು ತೋಟಕ ಬೀಜ ಬಿತ್ತಿ ನೀರೆರ |ಧಾಳು, ನಾಟಲಿಲ್ಲೆಂದವರಾಸಿ ಗೊರವ ಬಾಳು೧
ನಳ ಪ್ರಮುಖರು ಪೂಜಿಸಿದ ಗುಡಿ ಹಾಳು |ಹಲವರು ಬಳಸಲು ಈಚಲ ಹಾಳು ೨
ಜಲ ತೃಣ ದುರ್ಲಭ ವೈದನ ಹಾಳು |ಬೆಳದೀತೆ ಭೂಪುರಾ ಎಂಬಾಸಿ ಹಾಳು ೩
ಹೊನ್ನಹಳ್ಳಿ ದೊಡ್ಡವು ಕಲ್ಲೂರು ಮಣ್ಣೂರು |ಅನ್ನಿಲ್ಲ ದ್ವಿಜರಿಘೊಟ್ಟಿ ತುಂಬಾ ಹೆಸರೂರು ೪
ಊರ ಮುಂದಿದ್ದಷ್ಟೆವೆ ಅಡವಿ ಭಾವಿ ಮೀರಿ |ದೂರ ಹೋದರೆ ಹಾಳ್ಕೇರಿ ನೀರಲಕೇರಿ ೫
ಅಧಮರು ಹೊನ್ನಾಕುಪ್ಪಿ ಛತ್ರವ ಪಡವರು |ಬುಧರ ಸದನಗಳಾದವು ತಿಪ್ಪಿ ತೆವರೂ ೬
ಕನಸವಿ ರಳಮತ ಕೈಯೋಳಗಲಗೂ |ಅನುಚಿತದಿಂದ ವಿಪ್ರರಾದರು ಭಣಗೂ ೭
ಸುಳ್ಳೆಷ್ಟು ಹಾಳಭಾವಿ ಗುಂಡಸಾಗರೆಂಬೋರು |ಎಲ್ಲೆಲ್ಲಿ ನೋಡೆ ಗುಡ್ಡಾ ಇಲ್ಲ ಕಲ್ಲೆಂಬೋರು೮
ಸೊನ್ನವೆಂಬಾರೂರೀಗೆ ಭಂಗಾರ ಗೊಂಡೆಂಬರೂ |ಸಣ್ಣ ಹಳ್ಳಿಗೆ ಚನ್ನ ಪಟ್ಟಣೆಂಬುವರೂ೯
ಬೆಲ್ಲಾದ ಮೊರಡಿ ಹತ್ತಿಗುಡ್ಡಾ ಯಮ್ಮಿಗುಡ್ಡೆಂಬೋರು |ಅಲ್ಲೆಲ್ಲಿ ವ್ರಾತ್ಯರೇವೆ ಬಲುಗಿಂಚರಿಹರು ೧೦
ಹುಲಿಗುಡ್ಡಾ ಕರಡಿ ಚಿರ್ಚಾ ದೇಶದೊಳೆಲ್ಲಾ |ಸಲಹೋದು ನೀ ಬಲ್ಲಿ ಪ್ರಾಣೇಶ ವಿಠಲಾ ೧೧

೯೪
ಮುಖ್ಯ ಪ್ರಾಣನೆ ನಮ್ಮ ಮೂಲ ಗುರುವು |ರಕ್ಕಸಾಂತಕ ಶ್ರೀ ಭಾರತಿಯ ರಮಣನೆಂಬ ಪ
ಅಂಜನಾ ಸುತನಾಗಿ ದಶರಥ ಸುತನಂಘ್ರಿ |ಕಂಜ ಭಜಿಸಿ ರಾವಣಾದಿ ಖಳರಾ ||
ಅಂಜಿಸಿ ಕಪಿಗಳು ಚೇತನ ಕೆಡಲಾಗ |ಸಂಜೀವನವ ತಂದು ಪ್ರಾಣವನುಳುಹಿದ ೧
ಹರಿಗೆ ದ್ವೇಷಿಗಳಾದ ಮಗಧಾದಿ ಕ್ಷಿತಿಪರ |ತರಿದು ದ್ರೌಪದಿಯಳ ಕರವ ಪಿಡಿದು ||
ದುರುಳ ಕೌರವರನ್ನು ಅಳಿದು ದ್ವಾಪರ ಕೊಟ್ಟಾ |ಗರಳ ಭೋಜನ ಮಾಡಿ ವೃಕೋದರನೆನಿಸಿದಾ೨
ವಿಷಯಂಗಳ ತೊರೆದು ಕಾಷಾಯಾಂಬರ ಧರಿಸಿ |ವಸುಧೆಯೊಳಗೆ ದುರ್ಮತವ ಸೋಲಿಸಿ ||
ಅಸಮ ಶ್ರೀ ಪ್ರಾಣೇಶ ವಿಠ್ಠಲ ಪರದೈವವೆಂದು |ಹಸನಾಗಿ ತಿಳಿಸಿದ ಶ್ರೀ ಮಧ್ವಮುನಿಯೆಂಬ ೩

೪೦
ಯಶೋದೆ ನಿನ್ನ ಮಗಗಿದು ಥರವೇವಸುಧೆಯೊಳಗಿಂಥ ಶಿಶುವಿಲ್ಲವೇ ಪ
ಪೆಟ್ಟಿಗೆಯೊಳು ತುಂಬಿ ರೊಟ್ಟಿಯ ದೇವರು |ಇಟ್ಟನೆ ಕಚ್ಚಿನ ಚಟ್ಟಿಗೆಯೊಳು ೧
ಸಡಗರದಿಂದ ಬೆಣ್ಣೆ ಗಡಿಗೆ ಕಾಯಲಿಟ್ಟರೆ |ಬಡಧಾನ ಕೇದಿಗೆ ಪಡಿಯೊಳಗೆ೨
ಆ ಸಣ್ಣ ಕರು ತೊಟ್ಟಿಲ ಹಾಸಿಕೆಯೊಳಗಿಟ್ಟು |ಕೂಸು ಸೋರಿಯೊಳಿಟ್ಟು ಘಾಸಿ ಮಾಳ್ಪ ೩
ಚಿನ್ನಗುಣಲಿಟ್ಟರೆ ಅನ್ನದೊಳಗಿಟ್ಟನೆ |ಸುಣ್ಣದಕಲ್ಲು ಏನ್ಮಣ್ಣು ಹೇಳಲಿ ೪
ನಿದ್ರೆಯೊಳಿರೆ ಸೀರೆ ಒದ್ದಲ್ಲಿ ಬೆಣ್ಣೆಯ |ಮುದ್ದೀನಿಡುವನಿದು ಮುದ್ದುಯೇನೆ ೫
ಬೆಕ್ಕಾನಲ್ಲಿಗೆ ಹಚ್ಚಿ ಇಕ್ಕಿಸಿ ಚಪ್ಪಾಳೆ |ಇಕ್ಕಿಸುವನೆ ಹಿಂಡು ಚಿಕ್ಕವರನ್ನಾ ೬
ನನ್ನ ಪ್ರಾಣೇಶ ವಿಠಲನ್ನಾಟ ಈ ಊರೊಳು |ಘನ್ನವಾಯಿತು ಬಿಡಿಸಿನ್ನು ಮಾತ್ರ ೭

ಶ್ರೀಕೃಷ್ಣಲೀಲಾ ಕೀರ್ತನೆಗಳು
೩೮
ಯಶೋದೆ ಮಜ್ಜಿಗೆ ಮಾಡುತಂ ಮುದದಿಂ-ದಶೋಕನಮಲ ಸುಲೀಲೆಯನು ||
ವಿಶೇಷ ಭಕ್ತಿಂಧಾಡುವಳಾ ಕಥಾ-ರಸ ಯಥಾಮತಿ ರಚಿಸುವೆನು ಪ
ಹತ್ತವತಾರದಿ ಮತ್ತರ ಶಿಕ್ಷಿಸಿಉತ್ತಮರನು ಸಂತೈಸಿದನು ||
ಭೃತ್ಯ ಭವಾರ್ಣವ ಬತ್ತಿಸುವಿವನನುಎತ್ತುವೆನತಿ ಧನ್ಯಳು ನಾನು ೧
ನದಿಜನಕನ ಕೊಡದುದ ಕದೊಳೆರೆವೆನುಮದನಪಿತನ ಸಿಂಗರಿಸುವೆನು ||
ವದನ ತೆರದೆನ್ನ ಬೆದರಿಸಿದನ ಬಲುಹದದಿಂದಿರು ಎಂದಾಡುವೆನು ೨
ಅಣು ಮಹತ್ತೇ ಕಾಲಕೆ ತಿಳಿಯದೆದಣಿದೆನು ಪಾದಗಳನು ಕಟ್ಟಿ ||
ಜನನಿಗೆ ಸಿಕ್ಕದನೆಂಬರ ತೋರಿಸಿಧನಪಜರ ಪೊರೆದ ಮರಕುಟ್ಟಿ ೩
ಅಗಣಿತ ರೂಪಿವನಂಗದಿ ಕಂಡಳುಜಗದಂಬೆಂಬರು ಸಜ್ಜನರು ||
ಮಗುವೆಂದನುದಿನ ಮುದ್ದಿಸಿ ಕೊಂಕಳೊ-ಳಗಿಡುವೆ ಯನಗೇನೆಂಬುವರೊ ೪
ಮೀನಾಂಬರೆ ಈ ಪರಿಯಿಂದಲಿ ಶ್ರೀಪ್ರಾಣೇಶ ವಿಠಲನ ಪಾಡುವಳು ||
ಈ ನುಡಿಯಾದರದಿಂ ಕೇಳಲು ಭವಕಾಣರು ಪರದಲಿ ಸುಖ ಬಹಳ ೫


ಯೋಗಧರ ತಾತ ಕಘ ಲೋಕಪತಿ ದೇವ ಸಿರಿ |ಯೋಗ ನಿನ ಪದಕೆ ಶರಣೆಂಬುವೆನೊ ಕಾಯೋ ಪ
ಯೋಗಾಂಡದೊಳ ಹೊರಗೆ ವ್ಯಾಪ್ತನೆ ಗುಣರಹಿತನೆ |ಯೋಗಾಂಬರ ಧರ ಘ-ಮುಖ ಜನಕ ||
ಯೋಗ ಗಾತ್ರ ಷ ದೂರ ವರ್ಗದ್ವಯ ಅವತಾರ |ಯೋಗ ಪಾಣೀ ಸುತ ಪ್ರಿಯ ಸುಮತಿ ಕೊಡು ಜೀಯ ೧
ಯೋಗರಾಯಗೆ ಅದೇ ಪದವಿ ಕರುಣಿಸಿ ಕೊಟ್ಟೆ |ಯೋಗೇಶಣಾಸ್ತ್ರ ಪಿತ ದಂತಿವರದ ||
ಯೋಗದಲಿ ಮನಸು ನಿಶ್ಚೈಸೊ ಹಾ ಕರ್ತೃತ್ವ |ಯೋಗಫಲ ಸ್ವೀಕರಿಸುತಿಹ ಕಂಜನಾಭ ೨
ಯೋಗನಾಗೆಯೋ ದುರ್ಮತಿಗಳಿಗೆಂದಿಗೂ ನೀನು |ಯೋಗಿ ಜನ ವಂದ್ಯ ಹಾ ನಾರೀಪತಿ ನಿನ್ನ ||
ಯೋಗ ಸೇವಕರೊಳಿಡೋ ಪ್ರಾಣೇಶ ವಿಠ್ಠಲನೇ |ಯೋಗ ಹ್ರಾಸ ವಿವರ್ಜ ಘಟಜ ಕರಪೂಜ್ಯ ೩

೫೫
ರಂಗ ಕೊಳಲನೂದುವ ಮಂಗಳಸ್ವರಕೆ ಮೂಜ-ಗಂಗಳೂ ಮೋಹಿಸುತಿಹವಲ್ಲೇ ನೋಡೆ ಏ ಸಖಿ ಪ
ಗೋಕುಲದಂಗನೆಯರು ಮೈಮರೆದು ತಮ್ಮ ಮನೆ ಕದ |ಹಾಕದೇ ಹರಿಯೆಲ್ಲಿಹನೆಂದರಸುತ ಬಂದರು ||
ಗೋ ಕರುವೇನೆಂದೊಬ್ಬಳು ಹಾಕುವಳೆತ್ತಿಗೆ ದಾಳಿ |ನೂಕು ನೂಕಾಗುತ್ತ ಹಲವಂಗನೆರೋಡಿದರು ೧
ಕಣ್ಣಿಗೆ ಕುಂಕುಮ ಫಣಿಯಲ್ಲಿ ಕಾಡಿಗೆ ಕೆಲವರು |ಬಣ್ಣದ ಸೀರೆಯ ಮಂಡೆಗೆ ಸುತ್ತುತ್ತ ಕೆಲವರು ||
ಚಿನ್ನಗೆ ಹಾಲೆರೆವೆವೆಂದು ಗಂಡರ ಪಿಡಿದು ಒಲ್ಲೆ- |ನೆನ್ನೆ ಕೇಳದಲೆ ನೆಲಕಿಕ್ಕುವರು ಕೆಲವರು ೨
ಹರಿಯ ನೋಡುವ ಭರದಿಂದ ಆಕಳಿವೇಯೆಂದು |ಹರದೇರು ಅತ್ತೇರಿಗೆ ಕುಟ್ಟಿ ಕಣ್ಣಿಯಿಕ್ಕೊರು ||
ಒರಲಿದರೆ ನಾವಾಕಳಲ್ಲವೆಂದು ಕೇಳದಲೆ |ತ್ವರದಿ ಮಾಧವನ ನೋಡಬೇಕೆಂದೋಡಿದರು ೩
ಕಾಲಿಕೆ ಕಟ್ಟಾಣಿ ಆಣಿಮೆಂಟು ಪಿಲ್ಯಾ ಸರ ಮಾಡಿ |ಮಾಲೆಯೆಂದು ಹಾಕುವರು ಕೊರಳಿಗೆ ಕೆಲವರು ||
ಹಾಲಿಗೆ ಮೂಗುತಿ ಕಾನ ಬಾವುಲಿ ಮೂಗಿಗೆ ತಮ್ಮ |ಬಾಲೆರೆಂದಾಕಳ ಕರುವೆತ್ತಿಕೊಂಡೋಡುವರು ೪
ಹೇಳಿದರೆ ಮಾತು ಕೇಳಿ ಕಳ್ಳ ಕೃಷ್ಣಾ ಸಿಕ್ಕೆಂದು ಮೈ |ಘಾಳಿಗೊಂಡಾಳುವರಾ ಕೈ ಕಂಭಕೆ ಕಟ್ಟುವರು ||
ಕೀಲ ಕಂಕಣ ಬಾಗಿಲ ಬೀಗವೆಂಜೋಡಿಸಿ ಲಕ್ಷ್ಮೀ |ಲೋಲನಂಘ್ರಿಯ ಕಾಣಬೇಕೆಂದೆಲ್ಲರು ಓಡಿದರು ೫
ಎಲೆ ಯಶೋದೆಯಮ್ಮ ನಿನ್ನ ಮಗ ಮೊನ್ನೆ ನಿಶಿಯಲ್ಲಿ |ಮಲಗಂಟು ಬಿಚ್ಚಿ ಒಲ್ಲೆನೆನ್ನೆ ಕೇಳಾ ಥರವೆ ||
ಬಲು ಶಬ್ದೆನೆಂದು ಕೇಳಲತ್ತೆಗೊಂದು ಪರಿಯಿಂದ |ತಿಳಿಸಿದೆನೆಂದೊಬ್ಬಳು ಅತ್ತೆಯ ಮುಂದೆ ಹೇಳುವಳು ೬
ಬೀದಿಯೊಳ್ ಹೇಳಿದಂತೆ ನಮ್ಮನಿಗೆ ಬಾಯೆಂದೊಬ್ಬಳು |ಮಾಧವನಿವನೆಂದು ತನ್ನ ಪುರುಷಘೇಳುವಳು ||
ಆ ದಿನ ನಾವೇಕತ್ರದಲ್ಲಿರೆ ಗಂಡ ಬರಲು ಸ್ತ್ರೀ |-ಯಾದಿ ಸೈ ಸೈಯೆಂದೊಬ್ಬಳು ಪತಿಗೇ ಪೇಳುವಳು೭
ಬತ್ತಲೆ ಕೆಲವರು ಸೀರ್ಯುಟ್ಟವರ್ಕೆಲವರು ಉ- |ನ್ಮತ್ತರು ಕೆಲವರು ಪಾಡುತ್ತಲಿ ಕೆಲವರು ||
ನೆತ್ತಿ ಹಿಕ್ಕುವರು ಕೆಲವರು ಹೂಸಿಕೊಂಡವರು |ತುತ್ತು ಬಾಯೊಳಿಟ್ಟವರೂ ತ್ವರದಿ ಓಡಿದರು ೮
ಒಂದಾಡುತೊಂದಾಡುವರು ನಿಂದು ನಿಂದಾಲಿಸುವರು |ಮಂದಿಗಂಜದಲೆ ಹರಿದು ಹರಿದು ಹೋಗುವರು ||ಕಂದಗಳೆತ್ತಿದವರು ಕರುಗಳೆತ್ತಿದವರು |ಚಂದಿರ ವದನೆಯರು ತವಕದಿ ಓಡುವರು ೯
ಹೆಂಣುಗಳಾ ಆವಾವ ಕೆಲಸದೊಳಿದ್ದಿರ್ಯಾ ಹ್ಯಾಂಗೆ |ಬನ್ನಿರೆನ್ನ ಬಳಿಗೆಂಬಂತೆ ವೇಣು ಕೇಳಿಸುವುದು ||
ಪನ್ನಗ ಶಯನನಾಜ್ಞೆಯಂತೆ ಪ್ರವರ್ತಿಸಿದ ಮೇಲೆ |ಅನ್ಯಾಯವೇ ಸತಿಯರದು ಕೇಳಿರಿ ಕವಿಗಳು ೧೦
ಕರಿ ಸಿಂಹಗಳು ಹುಲಿ ತುರು ತುರುಗ ಮಹಿಷಿ |ಮರೆದು ವೈರತ್ವ ಹರಿಸ್ವರ ಕೇಳುತಿಹವು ||
ಕರಗುತಿಹವು ಕಲ್ಲು, ಸುರರಾಕಾಶದಿ ಪುಷ್ಪ |ಸುರಿಸುತಿಹರು, ಗಂಧರ್ವರು ಪಾಡುತಿಹರು೧೧
ಅಂಬುಜಾಕ್ಷಗೆ ಕೆಲವಂಗನೆರು ಆಲಿಂಗಿಸುವರು |ಚುಂಬಿಸುವರು ಕೆಲವರು ನಿಂದು ಪ್ರಾರ್ಥಿಸುವರು ||
ಶಂಬುಪಾಣಿ ಕರುಣಿಸಿ ಇಬ್ಬರಿಗೊಬ್ಬೊಬ್ಬನಾಗಿ |ಹಂಬಲ ಪೂರೈಸುವಂತೆ ರಾಸಕ್ರೀಡೆಯಾಡಲು ೧೨
ಕಾಮನಾ ಪೂರ್ತಿ ಮಾಡುತಿರೆ ಹೆಂಗಳೆರು ಇಂಥ |ಸ್ವಾಮಿಯಮ್ಮ ಕೈ ಸೇರಿದ ನೋಡಿರೆಂದ್ಯೋಚಿಸಲು ||ಭಾಮಿನಿಯರಹಂಕಾರ ತಿಳಿದಾಕ್ಷಣವೊಬ್ಬಳ |ಪ್ರೇಮದಿ ಕೊಂಡೊಯ್ದು ಎಲ್ಲರಿಗೆ ಮಾಯವಾದನು೧೩
ಬಹುರೂಪದೊಳೊಮ್ಮಿಂದ ಒಮ್ಮೆ ಬಂದೂ ರೂಪವಿಲ್ಲ |ಮಹೀಪಾಲನೇನಾದನೋ ಆವಳನ ಕೊಂಡೊಯ್ದನು ||ಅಹಿವೇಣಿಯರೇ ನಿಮ್ಮ ನಿಮ್ಮ ಗುಂಪಿನೊಳಗೆ ಎ- |ಷ್ಟಿಹಿರೊ ನಾರೆರು ಎಣಿಸಿರೆ ಯಂದಾಳೊಬ್ಬಳು ೧೪
ಒಂದೆರಡು ನೂರಿನ್ನೂರೈನೂರು ಸಾವಿರೆಂದೆಣಿಸಿ |ಮಂದಗಮನೆಯೊಬ್ಬಳಿಲ್ಲವಮ್ಮ ನಮ್ಮೊಳೆಂದರು ||ಇಂದ್ರಜಾಲದವಳೇ ಆವನು ಅಂಥ ವಂಚಕನೆ |ಸಂಧಿಸಿತಿಬ್ಬರಿಗೆ ಮುಂದೇನುಪಾಯವೆಂದರು ೧೫
ಹರಿ ಹೋದಕಷ್ಟೊಂದು ಅವಳ ನಾ ವೈದ ದುಃಖೊಂದು |ಸ್ಮರಣೆದಪ್ಪಿ ಗಂಡರೊಡನೆ ಆಡಿದ್ದೊಂದು ||
ಸ್ಮರನ ಬಾಣ ಬಾಧೆಯೊಂದು ಬೆರದಿತಿನಿತು ಕ್ಲೇಶ |ಹರದೆರಚ್ಯುತನರಸುತ ವನ ಹೊಕ್ಕರು ೧೬
ಹರಿ ಒಬ್ಬಳ ಒಯ್ದನು ಕಂಡಿರಾ ಯಿದ್ದಿರ್ಯಾ ಎಂದು |ನರರೆಂಬೊ ಭ್ರಾಂತಿಯಿಂದ ಮರನ ಕೇಳುವರು ||
ಸ್ಮರಣೆ ಬಂದಾಗ ವಮ್ಮೆ ಗಿಡ ಕೇಳುತಿಹವೆಲ್ಲೆ |ಹರಿ ಹರಿ ! ಜೀವಿಸುವದೆಂತು ಹೇಳಿರೆಂಬೊರು ೧೭
ಅತ್ತ ಎಲ್ಲರ ವಂಚಿಸಿ ಯನ್ನ ರೂಪಾಧಿಕ ನೋಡಿ |ಎತ್ತಿಕೊಂಡು ಬಂದ ರಂಗನೆಂಬೊಳಾಕಿ ಮುದದಿ ||
ಸತ್ಯ ಸಂಕಲ್ಪವಳ ಮನತಿಳಿದು ತಿಳಿಯದಂತೆ |ತೊತ್ತಿಗ ನಂದದಿ ಹೆಗಲೊಳಗಿಟ್ಟು ಪೋಗಲು ೧೮
ದಣಿದೆ ಹಸಿದೆ ನೀರಡಸಿದೆನೆಂದರವಳ |ಅಣುಗನಂದದಿಂದಿಳಿಸೇರಿಸಿ ಕೊಂಬುವನು ||
ಗೊನೆ ಹಣ್ಣು ನಿಲಕದೆಂದರೆ ನೀಡಿ ಕೊಡುತಲಿ |ಘನ ಸುಖ ಬಡಿಸುತ ದಕ್ಕಿದಂತಿರುವನು ೧೯
ಸಾವಿರ ಪ್ರಕಾರಾ ಘೋರಿಸಿದರೂ ನಗುತಲೆ ಇಹ |ಕೇವಲ ದಕ್ಕಿದನೆಂದು ನಿಶ್ಚಯ ತಿಳಿದಳು ||
ಮಾ ವಿರಿಂಚೇಶ ಜಂಭಾರಿಗಳನು ವಂಚಿಸುವಂಥ |ದೇವನು ಈ ನಾರಿ ಅಹಂಕಾರವ ತಾಳುವನೆ೨೦
ಸೊಕ್ಕು ಬಂತಿವಳಿಗಿನ್ನು ಶೀಘ್ರ ತಗ್ಗಿಸಬೇಕೆಂದು |ಚೊಕ್ಕ ಮಾವು ಪಿಡಿಸಿ ಅಪ್ರತ್ಯಕ್ಷವಾಗಲಿತ್ತಲು ||ತುಕ್ಕಿ ತುಕ್ಕ್ಯಾರಂಣ್ಯಾ ಹೆಜ್ಜೆ ಪಿಡಿದಿಲ್ಲಿಹ ಅಲ್ಲಿಹ |ರಕ್ಕಸಾರೆನುತ ಬಂದೆಲ್ಲರವಳನು ಕಂಡರು ೨೧
ಜಾರೆ ಚೋರೆ ಕುಲ್ಲೆ ಖೂಳೆ ಕುಲಕಂಟಿಕೆ ನವನೀತ |ಚೋರನೆಲ್ಲಡಗಿಸಿದ್ದೆ ತೋರೆಲೆ ತೋರೆಂದರು ||
ಘೋರ ಪಾತಕಿಯ ಕುಟ್ಟಿರೆಂದು ಕೆನ್ನಿ ಕುಟ್ಟುವರು |ಗಾರು ಮಾಡಿದರೆ ಬಟ್ಟ ಬವಣೆ ಹೇಳಿದಳು೨೨
ಸಮದುಃಖಿಗಳಾಗಿ ಹರಿ ಹರಿಯೆಂದೊದರಲು ಈ |ಶ್ರಮ ನೋಡಿ ಪ್ರಾಣೇಶ ವಿಠಲ ಬಂದಾಲಿಂಗಿಸಿ ||ಸುಮನಗಂಧಿಯರೆ ನಿಮ್ಮಹಂಕಾರ ಬಿಡಿರೆಂದು |ಅಮರೇಶ ಮುಂಚಿನಂತೆಲ್ಲರೊಳಾಡಿದನು ೨೩

೧೧
ರಕ್ಷಿಸೆನ್ನನು ಶ್ರೀ ಪಂಢರೀನಾಥಾ ದೀನಜನದಾತ ವಿಶ್ವ |ಕುಕ್ಷಿ ವಿಖ್ಯಾತಾ ಪ
ಶ್ಲೋಕ :
ಭರ್ಮ ವಸನಧರ ವಿಷ್ಣು ಸೌಂದರ್ಯ ಸಾರ |ಧರ್ಮ ಪ್ರಮುಖ ವೀರ ವಂದ್ಯ ಲೋಕೈಕ ಧೀರ ||
ಕರ್ಮ ವಿತತ ನಾರಾಯಣನೆ ಸುಖ ಪಾರಾವಾರ |ನಿರ್ಮಲ ದಧಿಚೋರ ವಾರಿದ ನಿಭಾಂಗ ಜಾರಾ ೧
ಪದ :
ಮಾ-ತಾ-ಪೀ-ಫಣಿ, ಫಣಿಧರ ನುತ ದಿವ್ಯಚರಿತ ವೃಂದಾರಕ ವೃಂದನಾಥಾ |
ನೇಕ ತಾಪಸರಿಗೆ ಸುಳಿಯೆಯಲ್ಲ ತ್ವರಿಯ ಈ ಗೊಲ್ಲ-ರಿಗೊಲಿದೆಯೊ ಸತ್ಯಾನಲ್ಲ |
ಬೇಕೆಂದು ಶ್ರೀ ದೇವಕಿಯ ಪೊಟ್ಟೆಯಲ್ಲಿ ನೀ ಪುಟ್ಟಿ ವೃಂದಾವ- |
ನಕಾಗಿ ಅಟ್ಟಿಸಿಕೊಂಡು ನಂದನ ಮನೆಯಲ್ಲಿ ಕ್ಷೀರ ಘೃತ ಚೆಲ್ಲಿ ಮೆದ್ದೆ ಪರಿಪರಿಯಲ್ಲಿ2
ಶ್ಲೋಕ :
ಮೀನ ಕಮಠ ಕೋಲ, ಮರ್ತ್ಯ ಮೃಗರೂಪ ಬಾಲ |ಕ್ಷೆÆÃಣಿಪಹ ಸುಶೀಲ ವೇಣುಗಾನ ವಿಲೋಲ ||
ಮಾನಹವಿದುಕೂಲ ಹಯವದನ ಸುಜನಪಾಲ |ಹೀನ ಶಕಟ ಕಾಲನೇಮಿ ಮುಖ ದನುಜ ಕಾಲ3
ಪದ :
ನದೀ ಪಿತ ನೀ ಭಾಂಡಜಲದಿ ಮಿಂದೆ | ಈ ಲೋಕದ ಮಂದಿ-ಯಂತೆ ಫಲವನ್ನು ತಿಂದೆ |
ಸದಾ ತೃಪ್ತ ನಿನ್ನ ಬಂಧಕದೊಳು-ಜಗ, ಕೈಕಾಲುನೀ ಕಟ್ಟಿಸಿಕೊಂಬೆ ಮೇಲು ||
ಬೆದರರೊ ನಿನಗೆ ಕಮಲೆ ವಿಧಿ, ಆ ಗುಮ್ಮನ ಬಾಧೆತೋರಿಸುವಳೊ ಯಶೋದೆ |
ಮದನ ಪಿತನೆ ಕೌಸ್ತುಭಕಿಂತ ಗುಂಜಿಯತ್ಯಂತ ಪ್ರೀತೆ-ಶಾರ್ಙ್ಗ ಅನಂತ4
ಶ್ಲೋಕ :
ತಪನ ಸಖ ಸುನೇತ್ರ ಪರಿಮಳ ಭೂಷ ಗಾತ್ರ |ವಿಪಿನ ನಳಹ ಗೋತ್ರ | ದ್ವಿಟ್ಜ ಸಖ ಶೂರ ಪೌತ್ರ ||
ಸುಫಲದ ಸ್ತುತಿ ಮಾತ್ರಾ ಪಾಪಾಟವೀ ವೀತಿಹೋತ್ರ |ನೃಪತಿಪ ತ್ರಯ ಶಾಸ್ತ್ರ ವೇದ್ಯ ಕಮಲಾ ಕಲತ್ರ ೫
ಪದ :
ಜಲದೊಳಿಹರ ವಸ್ತ್ರವೊಯ್ದೆಯೊ | ವೃಕ್ಷ ಚಿಗಿದೆಯಾ ಎಂಥ ಕರುಣಾಂಬುಧಿಯೋ |
ಬಲವಿಂದೆರಡು ಕೈಯ ಮುಗಿಯೆಂದಿ | ಕೊಡುತಿಹೆನೆಂದಿ ಸರ್ವರನು ಕರತಂದಿ |
ಮಳಲಿಂದ ಕೆರೆಗಟ್ಟಿ ನಾರೇರ ಕೂಡಿ ವಿಹಾರ ಮಾಡಿದೆಯಾ ವಾರಂ ವಾರಾ |
ಫಲ ಭಕ್ಷಕರ ಕೊಂದಿಂದ್ರನ ಗರ್ವ ಬಿಡಿಸಿದೆ ಸರ್ವರುಳಿಸಿದೆ ಪೂಜಿಗರ್ಹಾ ೬
ಶ್ಲೋಕ :
ಕಲ್ಪಸ್ರಚ್ಚಂದ್ರ ಭಾಸ ಅಣು ಮಹತ್ಪೂರ್ಣ ಶೇಷ |ತಲ್ಪ ವಿಗತದೋಷ ಭಕ್ತ ಜನರಾಭಿಲಾಷಾ ||
ಕಲ್ಪತರುವೆ, ಶ್ರೀಶ, ಅಚ್ಯುತ, ಭೀರು ವೇಷ |ಸ್ವಲ್ಪ ಇತರ ಕ್ಲೇಶನಾಶನಾನಂದ ಲೇಶ ೭
ಪದ :
ಕರೆಸಲು ಬಿಲ್ಲು ಹಬ್ಬದ ಬಗೆಯಿಂದ ಮಧುರೆಗೆ |ಅಕ್ರೂರನ ಕೈಯ ಪೋಗೆ |
ಕರಿಯ ಸಂಹರಿಸಿ ಮಲ್ಲರಗುದ್ದಿ, ಕುಬುಜೆಯ ತಿದ್ದಿ ದುಷ್ಟ ಕಂಸನ ವದ್ದಿ |
ಹಿರಿಯುಗ್ರಸೇನಗೆ ಅಭಿಷೇಕ ಮಾಡೆ ನಿಃಶೋಕವೆನಿಸಿದಿ ಭೂಮೀ ನಾಶ |
ವರ ಸಾಂದೀಪಿ ಬಳಿಯೊ ಳೋದಿದೆ, ತಂದು ತೋರಿದೆ ಪುತ್ರನಾಘಪನೋದಿ ೮
ಶ್ಲೋಕ :
ಜನನೀ ಜನಕ ಭಂಗ ಮೋಚಕ ಪಾಂಡುರಂಗ |ಅನುಪಮನೆ ಭುಜಂಗ – ದರ್ಪಹಾ ಸಾಧು ಸಂಗ ||
ಅನವರತ ಅಸಂಗವೀತ ಭೂತಾ ಕೃಪಾಂಗ |ದಿನಪನಿಭ, ವಿಹಂಗ ವಾಹನ, ಜಗದಂತರಂಗ ೯
ಪದ :
ಲಾಲಿಸೆನ್ನಯ ಮಾತ ಭಗವಂತ ಶ್ರೀ ರುಕ್ಮಿಣೀ ಕಾಂತ ನಿತ್ಯಾನಂದ ನಿಶ್ಚಿಂತ |
ಬಾಲಕ ಸ್ತ್ರೀ ಪೋಷಣೆಗೆ ಎಂದೂ ದೇಹ ಬಹು ನೊಂದು ವೇಷ ತಪ್ಪಿಸಿ ತಂದು |
ನಾಲೇಶ ಸುಖವನ್ನು ಬಡಲಿಲ್ಲಾ ಒಂದು ದಿವಸನೂ ನಿನ್ನ ಪೂಜಿಸಲಿಲ್ಲ |
ಕಾಲನವರಿಗೆನ್ನ ಭಿಡೆಯವೆ ನುಡಿ ತಡೆಯವೆ ಎಳ್ಳಿನಷ್ಟು ಸಾಧನವೇ ೧೦
ಶ್ಲೋಕ :
ಕಟಿ ಸ್ಥಿತ ಕರಧಾರಿ ಜಲಜದರ ಪೂತನಾರಿ |ಪಟುತರ ಭುಜ ಶಾರಿ ಚಕ್ರಿ, ಚೈದ್ಯಪಹಾರಿ ||
ಕಠಿಣ ಶುಭವ ವಾರಿನಿಧಿ ಕರಿರಜ – ಉದಾರಿ |ವಿಠಲ ಸುಗದಿದಾರಿ ಕಾಣನ್ಯೋ ಕರೆಯಾ ಸಾರಿ ೧೧
ಪದ :
ಒಡಲಿಗೆರಡು ಕೈಯಾ ಇಕ್ಕುತ – ನುಡಿಗುಕ್ಕುತಕಂಠ ಬಿಗಿದು ಬಿಕ್ಕುತ |
ಕೊಡುವನ ಮೊಗ ನೋಡಿ ನಾಚುತ ಬಾಯ್ದೆರೆಯುತಮರಳೊಮ್ಮೆ ಮುಚ್ಚುತ ||
ಅಡಗಿಸಿ ಕಾಯ ಕಟಕನಲ್ಲಿ ನಾಯಿ ತೆರದಲ್ಲಿಸುಳಿದಾಡುತ ಅಲ್ಲಿ |
ಕಡೆಗೆ ನಿಷ್ಫಲವಾಗ ಸತಿ ಮುಂದೆ ಅನ್ನಲೇನಂದೆಇಂಥ ಶ್ರಮಗಳೊಂದೊಂದೇ ೧೨
ಶ್ಲೋಕ :
ಶಾತ ಮಕುಟವಿಟ್ಟ ಮಧು ಕೈಟಭಾರಿ ಕೃಷ್ಣಾ |ಖ್ಯಾತಿಗವನಿ ಕೊಟ್ಟಾ ಬಲಿಯ ರಸಾತಳದೊಳಿಟ್ಟ ||
ವೀತಭಯ ವಿಶಿಷ್ಟ, ನಾಮ ಮೂರ್ತಿ, ಚತುಷ್ಟ |ವಾತ ವಿನುತ ದುಷ್ಟದೂರ ಸರ್ವತ್ರ ಚೇಷ್ಟಾ ೧೩
ಪದ :
ಯನ್ನ ದೋಷಕ ವಂದು ನೆಲೆಗಾಣೆ ಪರಮಾತ್ಮನೆಸ್ನಾನ ಸಂಧ್ಯಾವಂದನೆ |
ಯನ್ನು ಗೃಹಸ್ಥಾಶ್ರಮದ ಕರ್ಮ ಮಾಡಿದೆನೆ ಧರ್ಮಯಮ ತೆಗೆಸಾನೆ ಚರ್ಮ |
ಅನ್ಯ ಸ್ತ್ರೀಯರ ಮೆಚ್ಚಿ ಕೆಟ್ಟೆನೋ ನಿನ್ನ ಬಿಟ್ಟೆನೋ ಮುಂದುಪಾಯವಿನ್ನೇನೋ |
ಪನ್ನಗ ಶಯನನೆ ಈ ಪರಿ ಮಾಡುವರೆ ದೊರೆ ಜನುಮಗಳೇಸು ಬಾರಿ ೧೪
ಶ್ಲೋಕ :
ಶತಕ್ರತು ಅನುಜಾತ ವಾಮನ ಪಾರ್ಥಸೂತ |ಕ್ಷಿತಿವರ ಯದುನಾಥ ಧಾತ ತಾತ ವಿಧಾತಾ ||
ವ್ರತಿ ಮನ ನತ ಪ್ರೀತ ಅತ್ರಿ- ಅನಸೂಯಾ ಜಾತ |ಸತೀ ಪತಿ ವಿಧು ಸಹಿತ ಗುಣಪೂರ್ಣ ತ್ರಿಗುಣರಹಿತ ೧೫
ಪದ :
ಧರೆಯೊಳು ವೇಷಕ ಕಾ ಪುರುಷರು ಒಂದೆರಡು ಮೂರು ಆಟ ತೋರಲಳುವರು |
ಮರಳೊಮ್ಮೆ ತರಿಸದೆ ಸಮ್ಮಾನ ಮಾಡಿ ಬಹುಧನ ಕೊಡುವರೊ ಮೂರು ಭುವನ |
ದೊರೆ ನಿರ್ಜರಾರಾಧ್ಯ ನಿನ್ನ ಮುಂದೆ, ವೇಷ ಬಹು ತಂದೆ ಕಾಸ ಕೊಡದಿರೊ ತಂದೆ |
‘ನರ ನಿನ್ನ ವೇಷವು ಸಾಕೆನ್ನಬೇಕೋ’ ಪಾವನ್ನ ಮೂರ್ತಿ ದಣಿಸದಿರೆನ್ನ ೧೬
ಶ್ಲೋಕ :
ಗಜ ದ್ರುಪ ತನುಜಿ ರಕ್ಷ ಬಾಲ ಪಾಲನಾಪೇಕ್ಷ |ದ್ವಿಜ ಕುಲವರ ತ್ರ್ಯಕ್ಷ ದುರ್ಯೋಧನಾದಿ ಶಿಕ್ಷ ||
ವಿಜಯ ಪ್ರಮುಖ ಪಕ್ಷ ಸ್ವಾಮಿ ಶ್ರೀವತ್ಸ ವಕ್ಷ |ಅಜಮಿಳನಿಗೆ ಮೋಕ್ಷವಿತ್ತ ಪಾಪಾಹಿತಾರ್ಕ್ಷ್ಯ ೧೭
ಪದ :
ಪುಂಡರೀಶವಗಲೀದಿಲ್ಲಿಗೆ ಬಂದೆ ಬಹು ಬೇಗ ಭಕ್ತರೆಂಬುದು ಹೀಗೆ |
ಕಂಡ್ಯಾ ಯನ್ನವರೊಳು ಕೂಡಿಸೋ ನಿನ್ನ ಪಾಡಿಸೋ | ಆಶೆಯೆಂಬುದ ಬಿಡಿಸೋ |
ದಂಡಜ ವರದ ಶ್ರೀ ಪ್ರಾಣೇಶ ವಿಠ್ಠಲ ನಿರ್ದೋಷ ನಿನ್ನವರಿಗೀಯೋ ಲೇಸಾ |
ಮಂಡಲದೊಳು ನಿನ್ನ ವ್ಯತಿರಿಕ್ತಾರಿಲ್ಲಾಮಿತ ಶಕ್ತ ಪಾಹಿ ಸರ್ವೋದ್ರಕ್ತ ೧೮

೧೪೭
ರಕ್ಷೀಸಬೇಕೆಮ್ಮನನುದಿನದಲ್ಲಿ |ಪಕ್ಷಿರಾಜನೆ ಹರೀಸ್ಯಂದನಾ ಸ್ವಾಮಿ ಪ
ಇಂದ್ರಲೋಕಕ್ಕೆ ಪೋಗಿ ಕಲಹ ಮಾಡಿ ಪೀಯೂಷ |ತಂದನುಜರಿಗಿತ್ತ ಧೀರನೆ |
ಸಿಂಧೂವಿನೊಳಗಿದ್ದ ಕೂರ್ಮ ಗಜ ಮಂದಿಯಾ |ತಿಂದು ದಕ್ಕಿಸಿಕೊಂಡ ವೀರನೇ ೧
ಪಾದಪ ಮುರಿದು ವಾಲಖಿಲ್ಲ್ಯೆರ ಪೋಷಿಸಿ |ಮೋದದಿಂದ ವರವು ಪಡಿಯೋ ||
ಮಾಧವನಂಘ್ರಿ ಕಮಲದೊಳಗೆ ಇಟ್ಟ |ಹೇ ದಯಾಂಬುಧಿ ನಿನಗೆಣೆ ಯಾರೋ ೨
ಅರುಣಾನುಜ ಮಾತೆಯ ಬಯಕೆ ಪೂರೈಸೀದ |ಪರಮ ಸಮರ್ಥ ಭಕ್ತವತ್ಸಲಾ ||
ಉರಗಾಶನನೆ ನಿನ್ನ ಪ್ರಾರ್ಥಿಸುವೆನು ನಿತ್ಯ |ಹರಿಸೇವೆ ವಿನಹ ಮತ್ತೊಂದೊಲ್ಲೆನೊ ೩
ಪ್ಲವಗರ ಪಾಲಿಸಿದೆ ರಘುಜಾನ ಒಲಿಸಿದೆ |ತವಕ ಬಲಿವೈದ ಮುಕುಟ ತಂದೆ ||
ದಿವಿಜರಿಗೆ ಸಹಾಯವಾದೆ ವಿಪ್ರರ ಕಾಯ್ದೆ |ಅವರಾರೇನರಿಯರೊ ನಿನ್ನ ಲೀಲೆ ೪
ಶ್ರೀನಾಥನ ಪಾದಾಬ್ಜದಲ್ಲಿ ನಿರತ ಮನ |ತಾನಿರುವಂತಾಗಲಿ ಖೇಚರಾ ||
ಮೌನಿ ಕಶ್ಯಪ ಜಾತಾ ಲಾಲಿಸುವದೆನ್ನ ಮಾತಾ |ಪ್ರಾಣೇಶ ವಿಠಲನ ನಿಜದೂತ ೫

೧೦೮
ರಾಘವನಾಡಿದ ಮಾತಿಗಾಂಜನೇಯ ಬಿನ್ನವಿಸುವದು |ಈಗ ಪೇಳುವೆ ಸಜ್ಜನರಾಲಿಸುವದು ಪ
ಆ ರವಿನಂದನನು ತಾ ಮೇರೆ ಮಾಡಿ ಅಟ್ಟಿದನು |ವಾನರರುಗಳನು ತಿಂಗಳು ಮೀರಿತಿಂದಿಗೆ ||
ಮಾರುತಿ ಕೇಳೀ ಮಾತು ಇನ್ನಾರ ಕಾಣೆ ಬಲ್ಲಿದರ |ನಾರಿಯೆಲ್ಲಿಹಳೋ ವಾರ್ತೆ ತಾರೋ ನೀ ಪೋಗಿ ೧
ಸ್ವಾಮಿ ಪಾಲಿಸೊ ಅಪ್ಪಣೆ ನಾ ಮುಂಚೆ ಪೋಗುವೆ |ತಡವ ಮಾಡದೆ ಎಲ್ಲೀಗೆನ್ನ ಭೂಮಿಜಾ ರಮಣ ||
ಈ ಮುದ್ರೆ ಕೊಂಡು ಪೋಗೋ ಶಾಮಲಾಪತಿ ದಿಕ್ಕಿಗೆ |ಸಮುದ್ರ ದಾಟಿ ವೇಗ ಪಾವಮಾನಿ ಕೇಳೋ ೨
ಭೂತಲಾಕಾಶ ಲೋಕಾದಿ ಪಾತಾಳದೊಳಗಿರಲಿ |ನಾ ತರುವೇನು ವಾರ್ತೆ ಜಗನ್ನಾಥ ಪರಾಕು ||
ಹೇ ತರಳ ತ್ರಿಲೋಕ ವಿಖ್ಯಾತನಾಗಿಹ ರಾವಣ |ಪಾತಕ ಕೊಂಡು ಪೋಗಿಹ ಸೀತೆಯ ಕೇಳು ೩
ಬುದ್ಧಿದೇವ ನೀ ಕೊಟ್ಟಂಥ ಬುದ್ಧಿಯಿಂದಲೇ ಅವನ |ಗುದ್ದಿ ಸರ್ವ ಬಲವನ್ನೂ ಒದ್ದು ಬರುವೆನೊ ||
ಮುದ್ದು ಕಂದ ರಕ್ಕಸರವಧ್ಯರೋ ವರ ಪಡೆದು |ರುದ್ರನಿಂದ ಮಾಡದಿರೊ ಗದ್ದಲ ಕೇಳೋ ೪
ತಂದೆ ರಾಮಾ ನಿನ್ನ ದಯೆಯಿಂದ ಈಡಲ್ಲವೊ ಯನಗೆ |ನಂದಿಧ್ವಜಾ ಈ ರಕ್ಕಸರೊಂದು ತೃಣವೋ ||
ಕಂದ ಈ ವೇಳೆಯೊಳೇನು ಬಂದುದನು ಭೋಗಿಸಿ ನಾನು |ಕೊಂದು ಹಾಕುವ ದಿನವೂ ಮುಂದುಂಟು ಕೇಳೋ೫
ದೇವಿಯ ನೋಡಿ ಬರುವಾಗ ತಾವಂತು ಕೆಣಕಲು ದಾ- |ನವರು ಸುಮ್ಮನಿರಲೇನು ದೇವದೇವೇಶ ||ಕೋವಿದಾಗ್ರೇಶನೆ ನೀನು ಸಾವಿರಾಳಿಗೆ ಒಬ್ಬನೇ |ಆ ವಿಚಾರ ಮನಕೆ ತರುವದೇ ಕೇಳೋ ೬
ಹೇಳಿದ ಮಾತು ಕಟ್ಟಿದ ಕೂಳು ನಿಲ್ಲವೊ | ಆ ವನ-ದೊಳೇನಹದೊ ಬಲ್ಲೆನೇ ಪ್ರಾಣೇಶ ವಿಠಲಾ ||
ಬಾಲಕ ಹನುಮಂತ ನಿನ್ನೊಳಗೆನ್ನಾ ರಾಣಿಯಲ್ಲಿ- |ಹಳೋ ನೋಡಿ ಬರುವುದಕಾಲಸ್ಯ ಕೇಳೋ ೭

೧೦೯
ರಾಮ ರಾಮಾಯೆಂದು ಮಾರುತಿಯು ನಡೆದು |ಸೋಮವದನೆ ಜಾನಕಿಯನು ಹುಡುಕಾ ಪ
ಹರಿಯಿಂದ ಗುರುತು ಪಡೆದು ತನ್ನ ಶಿಖದಲಿ |ಧರಿಸಿಕೊಂಡತಿಶಯ ಭಕುತಿಯಲಿ ||
ತೆರಳಿ ಮುಂದು ಮುಂದಕೆ ಕಡಲ ಸಮೀಪದಿ ವಾ- |ನರಾಧೀಶ ಮಾಡಿದ ವಾಸವನೂ೧
ರವಿಜನ ಭಯದಿಂದ ಕಪಿಗಳೆ- |ಲ್ಲವು ಎದೆಯನೊಡೆದು ನಗದೊಳು ಕುಳಿತಿರಲು ||
ಪವನಜನು ಬಂದು ವಿಚಾರವ ಮಾಡಲು ಸಾಗ- |ರವ ದಾಟಲೊಬ್ಬಗೊಶವಲ್ಲವೆಂದರೆಲ್ಲರಲ್ಲಿ ೨
ನಮ್ಮನು ರಕ್ಷಿಸೋ ಕುಲಮಣಿಯೆ ವಾಸುದೇವನ |ಮೊಮ್ಮಗನೆ ಎಂದು ಕಪಿಗಳು ಯಾಚಿಸೆ ||
ಗಮ್ಮನೆ ಹಾರಿ ರಕ್ಕಸಿ ಹೊಟ್ಟೆಯ ಹೊಕ್ಕು ದಾಟಿ ಮತ್ತೇ |ಒಮ್ಮೆ ಒಬ್ಬಳನ್ನು ಸೀಳಿ ಪುರಪ್ರವೇಶ ಮಾಡಿದ೩
ಗಿಡಗಿಡ ಚರಿಸುತ ಸ್ಥಳ ಸ್ಥಳದಲಿ ಬಲು |ಹುಡುಕುತ ಮೂಜಗ ಪೂಜಿತನ ||
ಮಡದಿಯಾಕೃತಿಯನು ಕಾಣಲಾಕ್ಷಣದೊಳು |ತಡೆದನಲ್ಲಿಯೇ ಪದಗಳ ಮುಂದಕ್ಕಿಡದಲೇ೪
ಋಷಿಗಳಂದದಿ ಪ್ರಾಣೇಶ ವಿಠಲನೆನುತಿರೆ |ಶಶಿಮುಖಿಯಳು ಆಂಜನೇಯ ಪದ |
ಬಿಸಜಾಂಘ್ರಿಗಳಿಗೆರಗಿ ಜಯ ಜಯವೆಂದು |ಉಸಿರಿದ ರಘುಪತಿಯ ಸುದ್ದಿ ವಿಸ್ತರದಲಿ ೫

ಗಣೇಶ ಪ್ರಾರ್ಥನೆ

ಲಂಬೋದರ ಪಾಹೀ ಪಾಹೀ ಜಗದ್ಗುರು|ಶಂಭುನಂದನ ಸುರಸುತ ಪಾದಾ ಪ
ಯೋಗೀಶಾರ್ಚಿತ ಶ್ರೀ ಪಾರ್ವತಿ ಪುತ್ರ ನತಮಿತ್ರಾ |ಆಗಸವಾಳ್ದ ಮೂಷಕ ರೂಢಾ ||
ನಾಗಶಯನನ ಪಾದ ಧ್ಯಾನದಲ್ಲಿಡು ನಿತ್ಯಾ |ಶ್ರೀ ಗಣಪತಿ ನಿನ್ನ ಬಲಗೊಂಬೆ ೧
ಶ್ರೀವರ ಶ್ರೀರಾಮಚಂದ್ರ ಧರ್ಮರಾಯಾ |ದೇವೇಂದ್ರಾ ನಿನ್ನ ಪೂಜಿಸಿದಾರೋ ||
ಕೇವಾಲಾ ಕಲಿ ದುರ್ಯೋಧನ ಪೂಜಿಸದೆ ಕೆಟ್ಟಾ |ಶ್ರೀ ವಿಘ್ನೇಶ್ವರ ನಿನ್ನ ಬಲಗೊಂಬೆ ೨
ದನುಜಾರ ಮೋಹೀಸೂವದಕೆ ಸಂಕಟ ಚೌತಿ |ಮನಿಸೀ ಪೂಜಿಸಿಕೊಂಬೆ ಖಳರಿಂದಾ ||
ಮುನಿ ವ್ಯಾಸ ಕೃತ ಗ್ರಂಥಾರ್ಥವ ತಿಳಿದು ಬರೆದಾ |ಗಣರಾಜಾ ನಿನ್ನ ಪಾದಾ ಬಲಗೊಂಬೆ ೩
ಶಂಬು ಚಕ್ರಾಂಕಿತಾ ಪಾಶಧಾರನೇ ರಕ್ತ |ಅಂಬರಾದ್ವಯ ಭೂಷಾ ನಿರ್ದೋಷಾ ||
ಶಂಬರಾರಿಪುಶರಾ ವಿಜತಾಮೃದ್ಭವ ಗಾತ್ರಾ |ಅಂಬಾರಾಧಿಪ ನಿನ್ನ ಬಲಗೊಂಬೆ ೪ (ಅಂಬೂಜಾಲಯಜಾನೆ ಬಲಗೊಂಬೆ)
ಏಕವಿಂಶತಿ ಪುಷ್ಪಾನ ಮನ ಮೋದಕ ಪ್ರೀಯ |ನೀ ಕರುಣಿಪುದೂ ನಿನ್ನವಾನೆಂದು ||
ಸಾಕು ವಿಷಯ ಸುಖಾ ಸುಜನಾರೋಳಾಡಿಸೊ |ಏಕಾದಂತನೆ ನಿನ್ನ ಬಲಗೊಂಬೆ ೫
ಏನು ಬೇಡುವೊದಿಲ್ಲಾ ಏನು ಮಾಡುವೊ ಕರ್ಮ |ಶ್ರೀನಿವಾಸನೆ ಮಾಡಿಸುವನೆಂಬೊ ||
ಜ್ಞಾನಾವೆ ಯಂದೆಂದಿಗಿರಲಿ ತಾರಶಾಂತ- |ಕಾನುಜಾ ನಿನ್ನ ಬಲಗೊಂಬೆ ೬
ಪ್ರಾಣಸೇವಕ ಚಾಮೀಕರವರ್ಣ ಗಜಮುಖ |ಪ್ರಾಣೇಶ ವಿಠಲನಾ ಸುಕುಮಾರಾ ||
ನೀನೊಲಿದೆಮಗೆ ವಿಘ್ನವ ಪರಿಹರಿಸುತ |ಪೋಣಿಸು ಸನ್ಮತೀ ಬಲಗೊಂಬೆ ೭

೧೫೭
ವಂದನೆ ಮಾಡಿರೈ ಗುರು ವರದೇಂದ್ರರ ಪಾಡಿರೈ ಪ
ಬಂದ ದುರಿತಗಳ ಹಿಂದೆ ಮಾಡಿ ಸುಖ |ತಂದುಕೊಡುವ ದಯಾ ಸಿಂಧು ಯತೀಂದ್ರರ ಅ.ಪ.
ಮರುತ ಮತಾಂಬುಧಿ ಸೋಮನೆನಿಪ ವಸುಧೇಂದ್ರ – ಸದ್ಗಣ ಸಾಂದ್ರ |ಗುರುಗಳ ಕರ ಕಮಲದಿ ಜನಿಸಿದ ಸುಕುಮಾರಾ – ಕುಜನ ಕುಠಾರಾ ||ನೆರೆ ನಂಬಿದ ಭಕುತರನನುದಿನದಲಿ ಪೊರೆವಾ – ದುರಿತವ ತರಿವಾ |ಧರೆಯೊಳು ತ್ಯಾಗದಿ ಕರ್ಣನ ಮರೆಸಿದ ನೋಡಿ – ವರಗಳ ಬೇಡಿ೧
ಕರಿ ಹಿಂಡೊಳು ಹರಿ ಹೊಕ್ಕ ತೆರದಿ ವಾದಿಗಳ – ಕೀಳು ಮತಗಳ |ವರ ಶಾಸ್ತ್ರಗಳಲಿ ಗೆಲಿದು ಸುಬುದ್ಧಿಯ ವರದ – ಜಗದೊಳು ಮೆರೆದ ||ಶರಭಂಗ ವರದ ಚರಣ ಸರಸೀರುಹ ಭೃಂಗ – ವಿಷಯ ಅಸಂಗ |ಸ್ಮರಣೆಯ ಮಾಡೆ ಪಿಶಾಚ ರೋಗಗಳ ಭಯವೂ – ಮುಟ್ಟದಲಿಹವೂ ೨
ಸಾನುರಾಗದಲಿ ಶ್ರೀ ರಾಘವೇಂದ್ರರ ಸ್ತೋತ್ರ – ಮಾಳ್ಪ ಸುಪಾತ್ರ |ಜಾನಕಿಪತಿ ಆನಂದದೊಳಿವರಿಗೆ ಒಲಿವ – ಹೃದಯದಿ ಸುಳಿವ ||ದೀನ ದಯಾಳು ಅಪರಿಮಿತ ಮಹಿಮ ಗುಣಾಢ್ಯ – ವಾದದಿ ದಾಢ್ರ್ಯಾ |ಧ್ಯಾನಿಸೆ ಮನದೊಳು ಜ್ಞಾನ ಕೀರ್ತಿ ಸುಖ ಕೊಡುವ – ಅಘಗಳ ಕಡಿವ ೩
ವಿಷ್ಣುನ ಲೋಕ ಪ್ರವೇಶ ಮಾಡಿದ ಚರಿಯಾ – ಕೇಳಿರಿ ಪರಿಯಾ |ಶಿಷ್ಟ ಜನರು ವಿಶ್ವಾವಸು ನಾಮಕ ಅಬ್ದ – ಆಷಾಢ ಶುದ್ಧ ||ಷಷ್ಠಿಯು ಕುಜವಾಸರ ಉತ್ತರಾ ನಕ್ಷತ್ರಾ – ವರ ಪುಣ್ಯಕ್ಷೇತ್ರ |ನಟ್ಟ ನಡುವೆ ವೃಂದಾವನ ಮಧ್ಯದೊಳಿರುವಾ – ಸೌಖ್ಯವ ಸುರಿವಾ ೪
ಆನೆ ಹಂಡೆ ವಸನಗಳು ದ್ರವ್ಯವು ನಾನಾ – ಮಾಡಿದ ದಾನಾ |ಆ ನಗರದಿ ಬಹು ಮಂದಿಯು ಭಕುತಿಯಲಿಂದಾ – ಪೂಜಿಪ ಚಂದ ||ಸೂನು ಪಡೆದು ಸುಖ ಪಡುವರು ಸರ್ವರು ನಿತ್ಯ – ಈತನು ಸತ್ಯ |ನಾನೆಂತುಸಿರಲಿ ಪ್ರಾಣೇಶ ವಿಠಲನ ದಾಸಾ, ಮುನಿ ಉತ್ತಂಸಾ ೫

೪೩
ವನಜನಾಭನ ಧಾಳಿ ಘನವಾಯಿತಿಂದಿಲಿಂದಮನೆಯೊಳು ನಿಲ್ಲಲಾರೆವಮ್ಮ ಪ
ಚಿನ್ನನ ಸುದ್ದಿ ನಿತ್ಯ ಹೇಳುವರು ಹತ್ತರಗೂಡಾ |ಹನ್ನೊಂದೆನ್ನ ಬೇಡವಮ್ಮ ||
ಅನ್ಯಾಯದ ಮಾತು ಹುಸಿ ಹುಟ್ಟಿಸಿಯಾಡಿದರೆ ನಮ್ಮ | ಸಣ್ಣವರಾಣೆ ಗೋಪೆಮ್ಮ ೧
ಪೋರರಾಟಿಕೆಯಾದರೆ ಜನನೋಡೆ ನಿರ್ಭಯದಿ |ಕ್ಷೀರವ ಕುಡಿಯಬೇಕಮ್ಮ ||
ಆರೂ ಮನೆಯೊಳಿಲ್ಲದ ಸಮಯದಲ್ಲಿ ಪಾಲು |ಸೋರೆ ಕದ್ದೊಯ್ಯುತಿದ್ದನಮ್ಮ೨
ಚಿಕ್ಕವರನ್ನು ರಂಬಿಸಿ ಸಕ್ಕರೆ ಕೊಟ್ಟು ಕದ್ದು |ರೊಕ್ಕವ ತನ್ನಿರೆಂಬುವನಮ್ಮ ||
ಮಕ್ಕಳಾಟಿಕೆ ಆದರಾಯಿತೆ ನಿನ್ನ ಕಂದ |ರೊಕ್ಕವನೇನು ಮಾಡ್ಯಾನಮ್ಮ ೩
ಏಕಾಂತ ಮನೆಯೊಳು ಸರು ಹೊತ್ತಿನಲ್ಲಿ ಬಂದು |ಶ್ರೀಕಾಂತನಡಗಿದ್ದನಮ್ಮ ||
ಹೇ ಕಾಂತೆ ನಿನ್ನ ಸಲಿಗಿಲ್ಲದೆಂತು ಬಂದನೆಂದು |ಆ ಕಾಂತ ಸಂಗ ಬಿಟ್ಟನಮ್ಮ ೪
ನೀರೊಳು ನೆರಳೆಂದು ತಿಳಿಯದ ಮಗುವಿಗೆ |ಪೋರನೆಳೆದು ತಾಯಂಬೊನಮ್ಮ ||
ಹಾರುತಿರಲು ಸ್ವಾಮಿಯ ದಯೆಯಿಂದ ಕಂಡು ಒಬ್ಬ |ನಾರಿ ಕರಕೊಂಡು ಬಂದಳಮ್ಮ ೫
ತರಳರಿಗೆಲ್ಲ ಇದರಂತೆ ಹತ್ತಿರೆಂದು ಹೇಳಿ |ಹರಿವಂದು ಹತ್ತಿಕೊಂಬೊನಮ್ಮ ||
ಕರುಗಳೆಲ್ಲವು ಹೀಗೆ ಹತವಾಗಿ ಪೋಪವು |ತುರುಗಳ ಗಡಹವಮ್ಮ೬
ಬಾಲನ ಮನೆಯೊಳಗಿರ ಹೇಳಿ ಉದಕವ |ವಾಲಯಕೆ ತರಹೋದೆನಮ್ಮ ||
ಮೂಲೇಶ ಹುಡುಗನ ಕೈಯ ಕಟ್ಟಿ ಮನೆಯೆಲ್ಲ |ಹಾಳು ಮಾಡಿಯೇನೋ ತಂದನಮ್ಮ ೭
ಹುಡುಗರ ಅಂಬೆಯಾಗಿಯೇರಿಸಿಕೊಂಡಾಡಿಸಿ |ಕೆಡಹಿ ಕೈಕಾಲು ಮುರಿದನಮ್ಮ ||
ಬಡವರೆಂದರೆ ಪುನಃ ಬಿಡದಲೆ ತಾ ಹತ್ತಿ |ನಡುವ ನೋಯಿಸೀಹ ನೋಡಮ್ಮ ೮
ಬಾಲೆ ಅದೇನು ಕಾರಣವೋ ತಿಳಿಯದು ನಮ್ಮ |ಮೂಲೆಯಲಡಗಿದ್ದನಮ್ಮ ||
ಛೀ ಲಕುಮೀಶ ನಡೆಯೆಂದೆ ಕೈ ಸಂಧಿಸದಾಕಳ |ಮೊಲೆ ಉಂಡಿದ್ದನಮ್ಮ ೯
ಗಂಡ ಅತ್ತೆಯ ಮನೆಘೋಗಿ ನಡುವ ಹೆಣ್ಣಾ |ಪುಂಡ ಬಂದಪ್ಪಿಕೊಂಡನಮ್ಮ ||
ಕಂಡು ನಾನಿದು ತರವೇನೆಲೆ ರಂಗಾಯೆನ್ನಲು |ಭಂಡು ಮಾಡಿದನು ನೋಡಮ್ಮ ೧೦
ಭ್ರಷ್ಟ ಮಾತಲ್ಲವೆ ಬಾಣಂತಿ ಮಂಚದಡಿ ಕೆಂಡ- |ವಿಟ್ಟರೆ ಕಾಸಿಕೊಂಡನಮ್ಮ ||
ಥಟ್ಟನೆ ಕಂಡಂಜಿ ಪ್ರಾಣಾಂತಿಕ ಆಯಿತು ಪ್ರಾಣೇಶ |ವಿಠಲನಿಂಥವ ಕಾಣಿರಮ್ಮ ೧೧

೨೪೧
ವರುಣಗೂ ನಾರಾಯಣಗು ನೆಂಟತನ ಮಾಡುವದಕೆ |ಸರಿಯೆ ಸಂದೇಹವೇನು ಸಮ್ಮೀಸಿ ನೋಡಿರಿ ಪ
ಹೆಂಡಾರು ಬಹು ಮಂದಿ ಜಾರಾ ಪುತ್ರನು ಒಬ್ಬ |ಪಂಡೀತ ಮಗನೊಬ್ಬ ಸಮನೆಲ್ಲಿ ನೋಡಿ೧
ವಂಶಾ ವಂದೆ ಇಬ್ಬರದು ಛಲದಿಂದ ಕೊಲ್ಲುವಂಥಾ |ಕೂಸು ಪಾಲಿಸಿದಾರು ಸಮನೆಲ್ಲಿ ನೋಡಿ ೨
ಸ್ಥೂಲಾ ವಿಗ್ರಹದವರು ಜಡ ಚೇತನಗಳಿಗೆ |ಆಲಯವಾಗಿಹರು ಸಮನೆಲ್ಲಿ ನೋಡಿ ೩
ಕನಕಾ ಭೂಮಿ ವಜ್ರದಾಹಾರ ಒಬ್ಬಾಗೊಬ್ಬಾಗೆ |ವನಮಾಲಿ ವೈಜಯಂತಿ ಸಮನೆಲ್ಲಿ ನೋಡಿ ೪
ತುಳಿಸೀಕೊಂಡೂ ಕೋಪಿಸದೆಲೆವೇ ಹಿಗ್ಗಿದಾರು |ಕಲುಷಾ ವಿದೂರ ರೂಪ ಸಮನೆಲ್ಲಿ ನೋಡಿ ೫
ದ್ವಾರಕ ಪಟ್ಟಣವ ಪ್ರೀತಿಂದ ಪಾಲೀಸೀ |ಹಾರಾವ ಮಾಡಿದಾರು ಸಮನೆಲ್ಲಿ ನೋಡಿ ೬
ವೃದ್ಧಿ ಹ್ರಾಸಗಳಿಲ್ಲಾ ಅನ್ನಾದಾಪೇಕ್ಷವಿಲ್ಲ |ನಿದ್ರಾ ಶೂನ್ಯರಾಗಿಹರು ಸಮನೆಲ್ಲಿ ನೋಡಿ ೭
ಸರಸೀಜಾ ರೂಪ ಉಳ್ಳವರು ಪೂರ್ತಿ ಮಾಡಿದಾರು |ಸುರರಾ ಮನೋಭೀಷ್ಟಿಯಾ ಸಮನೆಲ್ಲಿ ನೋಡಿ ೮
ವಿಧಿಯಿಂದ ಜನಿಸಿದಾರು ಜನರೀಗಸಹ್ಯವಾಗಿ |ಒದರುವರು ಇದರಿಂದ ಸಮನೆಲ್ಲಿ ನೋಡಿ ೯
ನೂತನ ಯಜ್ಞೋಪವೀತಾವ ಧರಿಸುವರು ಪ್ರ- |ಖ್ಯಾತಿ ವಸ್ತು ಕೊಟ್ಟಾರು ಸಮನೆಲ್ಲಿ ನೋಡಿ ೧೦
ದಾರಿ ತೋರಿದಾರು ವಾನರಾಗಳಿಗೆ ಗುಂಜಿ |ಹಾರಾಯೀಸೂವರಿದು ಸಮನೆಲ್ಲಿ ನೋಡಿ೧೧
ವಾಸಾವಿವರ್ಜಿತಾರು ದ್ವೇಷಿಗಳ ಶರೀರ |ನಾಶಾಗೈಸಿದರಿದು ಸಮವೆಲ್ಲಿ ನೋಡಿ೧೨
ಶೋಧಿಸೀ ನೋಡಿದಾರೆ ಕರ್ದಾಮ ಜಾಲಯಳ |ಭ್ಯೋದಯಕ್ಕೆ ಕಾರಣರು ಸಮವೆಲ್ಲಿ ನೋಡಿ೧೩
ಧರಿಗಾನಂದಾವಿತ್ತಾರಾಲಂಕಾರವಾಗಿ ಖಳರಾ |ತರಿದು ಭಾರವ ಕಳದು ಸಮವೆಲ್ಲಿ ನೋಡಿ ೧೪
ಶ್ರೀನಿವಾಸಾಗೆ ಮಾವನೀತಾ ನೀತಾಗು ಹಾಗೆ |ಪ್ರಾಣೇಶ ವಿಠ್ಠಲನು ಸಮವೆಲ್ಲಿ ನೋಡಿ ೧೫

೨೯
ವಾವಿಯೀ ಪರಮಾತ್ಮಗೊಂದೂ ಇಲ್ಲ |ಶ್ರೀ ವರನೆ ಇದು ಅಲ್ಲವೆಂಬರಿಲ್ಲ ಪ
ಮೊಮ್ಮಕ್ಕಳನ್ನು ವಂಚಿಸಿ ತಾನೆ ಕೊಲ್ಲಿಸಿದ |ಮೊಮ್ಮಗಗೆ ತನ್ನ ತಂಗಿಯನು ಕೊಟ್ಟ ||
ಮೊಮ್ಮಗನ ನಾದಿನಿಯರಲ್ಲಿ ಮಕ್ಕಳ ಪಡೆದ |ಮೊಮ್ಮಗನ ವಹಿಸಿ ಪುತ್ರನ್ನ ಅಳಿದ ೧
ಒಬ್ಬ ಮಾವನ ನೋಡ ನೋಡ ಪ್ರಾಣವ ಕೊಂಡ |ಒಬ್ಬ ಮಾವನ ಕೂಡ ಕಡಿದಾಡಿದ ||
ಒಬ್ಬ ಮಾವನ ಮೇಲೆ ಬಾಣವನ್ನೇರಿಸಿದ |ಒಬ್ಬ ಮಾವನ ಮಗನ ಮಾನ ಕಳೆದ2
ಒಬ್ಬ ಅತ್ತೆಗೆ ತಾನೆ ತಂದೆಯನ್ನಿಸಿಕೊಂಬ |ಒಬ್ಬ ಅತ್ತೆಗೆ ಗಂಡನಾದನಿವನು |
ಒಬ್ಬ ಅತ್ತೆಗೆ ಮಾವನಾದನೀ ಕೇಶವನು |ಒಬ್ಬ ಅತ್ತೆಯ ಬಹಳ ಶ್ರಮ ಬಡಿಸಿದ ೩
ಒಬ್ಬ ಮಗಳನು ತನ್ನ ಹಿರಿಯ ಮಗನಿಗೆ ಕೊಟ್ಟ |ಒಬ್ಬ ಮಗಳನು ತಾನೇ ಮದುವೆಯಾದ ||
ಒಬ್ಬ ಮಗಳಿಗೆ ಒಂದು ರೀತಿಯಲಿ ಮಗನಾದ |ಒಬ್ಬ ಮಗಳನು ಹಲವರಲ್ಲಿರಿಸುವ ೪
ಇವನ ನಿಜ ಭಕ್ತನೆಂಬವನು ತನ್ನ ಸತಿಯನು |ಸವಿಯಾಗಿ ನಾಲ್ವರಿಗೆ ಹಂಚಿ ಕೊಟ್ಟ ||
ಭುವನದೊಳಗೆ ಪ್ರಾಣೇಶ ವಿಠಲನ ಮನೆ ನಡತೆಯಿದು |ಕವಿಗಳೆಲ್ಲರು ತಿಳಿದು ಪೂಜಿಸುತಿಹರು ಮುದದೀ ೫

೨೪೬
ವಾಸುಕಿ ಶಯನನೆ ವೆಂಕಟಗಿರಿ |ವಾಸನೆ ಯಜ್ಞಾದ್ಯವತಾರನೆ |ಮೇಶಾ ನರಸಿಂಹಾ ಹಸಿಗೇಳೂ ಪ
ಬೊಮ್ಮಾ ಶಂಕರ ಮುಖ ವಂದಿತ |ಸಮ್ಮೀರ ವಾಹನ ಗರುಡಧ್ವಜ |ಅಮ್ಮರೇಶಾನುಜ ಶ್ರೀ ಉಪೇಂದ್ರಾ || ಉಪೇಂದ್ರದಾಮೋದರ ಹರಿ | ತಮ್ಮನಾ ತಮ್ಮ ಹಸಿಗೇಳೂ ೧
ವಾಮನ ನಾರಾಯಣ ಅಚ್ಯುತ |ತಾಮಸ ಗುಣ ಜನ ಸಂಹಾರಕ |ಶ್ಯಾಮಾಂಗ ಕೋಟಿ ರವಿತೇಜಾ ||
ರವಿತೇಜಾ ತ್ರೈಲೋಕದ ಗುರುಹೇಮಾಂಗದ ವರದಾ ಹಸಿಗೇಳೂ ೨
ಜಲಜಾಕ್ಷನೆ ಕೌಸ್ತುಭ ಶೋಭಿತ |ಜಲನಿಧಿ ಶಯನನೆ ನರಕಾಂತಕಾ |ಬಲಿ ಬಂಧಿಸೀದನೆ ಪರತತ್ವಾ ||
ಪರತತ್ವ ರವಿದರ ಗದಧರಫಲುಗುಣನಾ ಸಖನೇ ಹಸಿಗೇಳೂ ೩
ಕನಕಾಂಬರ ಕಶ್ಯಪ ರಿಪು ಹರಿ |ಧನಪತಿ ಮಿತ್ರನ ಭಯ ಬಿಡಿಸಿದ |ಇನಪುತ್ರಗೊಲಿದಾ ರಘುಪತೀ ||
ರಘುಪತಿ ಭಕ್ತ ಸುರತರುಮನಸಿಜಾ ಪಿತನೆ ಹಸಿಗೇಳೂ ೪
ಶತಯಾಗನ ಗರ್ವ ವಿಭಂಜನ |ಕ್ಷಿತಿವಂದಡಿ ಮಾಡಿದವನೇ |ಸುತನಲ್ಲಿ ಪಾಲು ಕುಡಿದಾನೆ ||
ಕುಡಿದಾನೆ ರುಗ್ಮಿಣಿ ವಲ್ಲಭಪತಿತಾ ಪಾವನ್ನಾ ಹಸಿಗೇಳೂ೫
ಝಗ ಝಗಿಸುವ ಪೀತಾಂಬರದುಡಿ |ಗಿಗಳಿಂದಲಿ ಹೊನ್ನುಡದಾರದಿ |ಮಿಗಿಲಾದ ವೈಜಯಂತೀ ವನಮಾಲೀ ||
ವನಮಾಲಿ ಕೊರಳೊಳಗೊಪ್ಪುವಜಗದೀಶ ಕೃಷ್ಣಾ ಹಸಿಗೇಳೂ ೬
ಗಂಗೆಯ ಚರಣದಿ ಪಡದಿಹ ಬಹು |ಮಂಗಳ ಮೂರುತಿ ಶ್ರೀ ವಾಮನಾ |ಜಂಗುಳಿ ಹೆಣ್ಣುಗಳಾ ಒಲಿಸೂತಾ ||
ಒಲಿಸುತಾ ಚಿಂತಿಗಳೆಲ್ಲನುಹಿಂಗಿಸುವಾ ದೇವಾ ಹಸಿಗೇಳೂ ೭
ಧ್ರುವ ದ್ರೌಪದಿಯ ಸುರಜ ಪೋಷಕ |ಅವಿವೇಕ ದಶಮುಖ ವಿನಾಶಕಾ |ಲವಣಾಸುರ ಕಂಸಾ ಮುರಾ ಧ್ವಂಸೀ || ಮುರಧ್ವಂಸೀ ಐದೊಂದಬಲೆರಾಧವ ವಾಸುದೇವಾ ಹಸಿಗೇಳೂ ೮
ಕೇಶವ ಸತ್ರಾಯಣ ಸುತ ಪ್ರಾ- |ಣೇಶ ವಿಠ್ಠಲ ದಕ್ಷಿಣ ವಲ್ಲಭ |ದೋಷ ರಹಿತನೆ ಅನಿರುದ್ಧಾ ||
ಅನಿರುದ್ಧಾ ಭಾಗವತರಘನಾಶಾ ಪರಮಾತ್ಮಾ ಹಸಿಗೇಳೂ ೯

೨೫೨
ವಾಸೂಕಿ ಶಯನ ಅಶೋಕ ಪರಾಕೂ |ವಾಸುದೇವಾನಿರುದ್ಧ ಶ್ರೀ ಕೃಷ್ಣ ಪರಾಕೂ ||
ಸಾಸಿರನಾಮದ ಹರಿಯೆ ಪರಾಕೂ |ದೋಷರಹಿತ ರಘುಪತಿಯೆ ಪರಾಕೆಂದು ||
ಮೀಸಲಾರುತಿಯಾ ಬೆಳಗೀರೆ ಪ
ವೃಂದಾವನದೊಳಗಿಹನೆ ಪರಾಕೂ |ತಂದಿ ತಾಯ್ಗಳ ಬಿಡಿಸಿಹನೆ ಪರಾಕೂ ||
ಸಿಂಧುರ ವರದ ಗೋಪಾಲ ಪರಾಕೂ ||ಸಿಂಧುಶಯನ ಪದ್ಮನಾಭ ಪರಾಕೆಂದು ||
ಛಂದದಲಾರುತಿಯಾ ಬೆಳಗೀರೆ೧
ಸತ್ಯಾಭಾಮಿ ರುಗ್ಮಿಣಿ ರಮಣಾ ಪರಾಕೂ |ಮುತ್ಯಗ ಪಟ್ಟಗಟ್ಟಿದವನೆ ಪರಾಕೂ ||
ಭಕ್ತ ಪೋಷಕ ತ್ರಿವಿಕ್ರಮನೆ ಪರಾಕೂ |ಸತ್ಯಸಂಕಲ್ಪ ಹೃಷಿಕೇಶ ಪರಾಕೆಂದು ||
ಮುತ್ತಿನಾರುತಿಯಾ ಬೆಳಗೀರೆ ೨
ಮಾಧವ ಖರ ದೂಷಣಾರಿ ಪರಾಕೂ |ಬಾದರಾಯಣ ಪುರುಷೋತ್ತಮ ಪರಾಕೂ ||
ಯಾದವರೊಳು ಪುಟ್ಟಿದನೆ ಪರಾಕೂ |ವೇದ ಉದ್ಧರ ಮತ್ಸ್ಯರೂಪಿ ಪರಾಕೆಂದು ||
ಮೋದದಲಾರುತಿಯಾ ಬೆಳಗೀರೆ೩
ಇಂದ್ರ ಬಲಿಯನುಂಡಾ ಧೀರ ಪರಕೂ |ಕಂದಗೊಲಿದ ನರಸಿಂಹ ಪರಾಕೂ ||
ನಂದನಂದನ ಶೌರಿ ಪರಾಕೂ |ಮಂದರ ಪರ್ವತ ಧರನೆ ಪರಾಕೆಂದು ||
ಕುಂದಣದಾರುತಿಯಾ ಬೆಳಗೀರೆ ೪
ಜಟ್ಟೇರ ಹುಡಿಗುಟ್ಟೀದವನೆ ಪರಾಕೂ |ದುಷ್ಟ ಕಂಸನ ತರಿದವನೆ ಪರಾಕೂ ||
ಕೆಟ್ಟಾಜಾಮಿಳಗೊಲಿದವನೆ ಪರಾಕೂ |ಅಷ್ಟು ಲೋಕವ ಸಲಹುವನೆ ಪರಾಕೆಂದು ||
ತಟ್ಟಿಯೊಳಾರುತಿಯಾ ಬೆಳಗೀರೆ೫
ಮಾರನಯ್ಯಾ ಪ್ರಾಣೇಶ ವಿಠಲ ಪರಾಕೂ |ನೀರಜಾಂಬಕ ಶ್ರೀನಿವಾಸ ಪರಾಕೂ ||
ದ್ವಾರಕಿ ನಿಲಯ ಮುರಾರೆ ಪರಾಕೂ |ಕ್ಷೀರಾಬ್ಧಿ ಸುತಿಯ ವಲ್ಲಭನೆ ಪರಾಕೆಂದು ||
ನಾರಿಯರಾರುತಿಯಾ ಬೆಳಗೀರೆ ೬

೩೪
ವಿಠಲಯ್ಯ ವಿಠಲಯ್ಯ |ವಟಪತ್ರ ಶಯನ ವಟು ಶ್ರೀ ಪ್ರಾಣೇಶ ಪ
ಗಂಗಾಜನಕ ವಿಹಂಗವಾಹನ ವಿಧು-ಪಿಂಗಳ ಕೋಟಿ ನಿಭಾಂಗನೆ ಪ್ರಾಣೇಶ ೧
ನಂದನವನದಿ ಸಂಕ್ರಂದನ ಮದಹರೈಂದಿರಾ ದಶಮತಿ ಮಂದಿರ ಶ್ರೀ ಪ್ರಾಣೇಶ ೨
ಕಾದುಕೋ ಶರಣರ ವೇದ ವಿನುತಮಧುಸೂದನ ನತಸುರ ಪಾದಪ ಪ್ರಾಣೇಶ3

೩೨
ವೆಂಕಟ ವಿಠಲ ನಿನ್ನಂಕಿತದವನ ಕ-ಳಂಕ ನೋಡದೆ ಪಾಲಿಸೋ ||
ಶಂಖಾರಿ ಗದಾ ಪದ್ಮ ಅಂಕ ವಿಪಾಹಿಪಶಂಕರ ವಿನುತ ಪಾದ ಹೇ ಶ್ರೀದ ಪ
ಜ್ಞೇಯ ಜ್ಞಾನಗಮ್ಯ ಧ್ಯೇಯ ನೀಲಾಂಬುದಕಾಯ ಗರುತ್ಮಾಂಸಗಾ ||
ಆಯುರಾರೋಗ್ಯ ವಿದ್ಯಾ ಯಮ ನಿಯಮವಿ-ತ್ತೀಯವನಿಯೊಳ್ ಯಶಸ್ಸು- ಪಸರಿಸು ೧
ಮರೆ ಹೊಕ್ಕವರ ಮನದರಿಕೆ ಪೂರೈಸುವನೆಂಬ ಬಿರಿದೊಂದೆರಡೆನ್ನಲೇ ||
ಕರಿ, ನಾರಿ, ನೃಪ ಪ್ರಮುಖರಗಣಿತರನು ನೀಪೊರೆದುದು ಸ್ವಲ್ಪವೇನು – ಮಹಾಣು ೨
ಕಿಟಿ ನೀನೇ ಒಲಿದರೆ ಘಟಣವೇ ಘಟಣವೋವಟಪತ್ರ ಪರ್ಯಂಕನೆ ||
ತಟಿದಾನಂತಾಭ ನಿಷ್ಕುಟಿಲ ಶ್ರೀ ಪ್ರಾಣೇಶವಿಠಲ ಭವಾಬ್ಧಿ ಪೋತ-ಸುಚರಿತ೩


ವೆಂಕಟಾಚಲ ವಾಸ ವಂದಿಪೆನೋ ತವ ಪದ |ಪಂಕಜವ ನಿರ್ದೋಷ ವಾರಾಶಿಜಾ ದ್ರುಹಿಣ |
ಶಂಕರ ಪ್ರಮುಖ ಪೋಷ ಶ್ರೀ ಶ್ರೀನಿವಾಸ ಪ
ವೆಂಕಟ ಗದಾ ಸುದರುಶನ ವಿಜಯ |ಅಂಕಿತನೆ ಗಾಂಗೇಯ ಚೈಲ ತ- |
ಳಂಕ ನನುಜ ಪಾಲಿಪುದು ಯನ್ನ ಮೀ |ನಾಂಕ ಜನಕ ಶಶಾಂಕ ಭಾಸ ಅ.ಪ.
ಸ್ವಾಮಿ ಹೇ ನಿರಪೇಕ್ಷ ಝಷ ಕೂರ್ಮ ವರಾಹ |ಹೇಮ ಕಶ್ಯಪು ತೀಕ್ಷ ವಟು ಭೃಗು ಕುಲೋದ್ಭವ ||
ರಾಮ ಪಾಂಡವಪಕ್ಷ ತ್ರಿಪುರಾರಿ ಕಲ್ಕಿ |ಭೀಮವಂದಿತ ತ್ರ್ಯಕ್ಷ ಸಖ ವ್ರತತಿಜಾಕ್ಷ ||
ಕಾಮಿತಪ್ರದ ಕೈರವ ದಳ ಶ್ಯಾಮಸುಂದರ ಕೋಟಿ ಮಾರ ಸು- | ಧಾಮ ಪ್ರಿಯ ಭಯ ವಿಪಿನ ವಹ್ನಿ ಸು ||
ತ್ರಾಮ ನಂದನ ಪ್ರಾಣರಕ್ಷಕ |ಭೂಮಿಯೊಳು ದುರುಳರಿಪು ಸಾಲಿ ||
ಗ್ರಾಮ ಮಂದಿರ ಲಕುಮೀ ಮನೋಹರ |ಸಾಮಜೇಂದ್ರನ ಪೊರೆದ ಸಹಸ್ರನಾಮ ಕಾಳೀಮದಾಹ ದೇವತ್ರ ||
ಈ ಮಾಯಾ ತೃಣಕಾಷ್ಠಾದಿ ವ್ಯಾಪುತ |ಚಾಮೀ ಕರ ಭೂಷಣ ಶೋಭಿತ ||
ಹೇಮಾಚಲ ಮಂದಿರ ಮುನಿಗಣ ಸೋಮಾರ್ಚಿತ ಕರುಣಿಸು ತ್ವರ್ಯಾ ೧
ನೀರ ಚರ ನಗಧರ ಕಿಟಿ ನೃಹರಿ ವಾಮನ |ಧರಣಿಪ ಸಂಹರ ಕೋದಂಡಕರ ಸ- ||
ತ್ಯಾರಮಣ ಅಂಬರ ವರ್ಜಿತ |ತುರಂಗಮವೇರಿ ಕುಂಭಿಣಿ ಭಾರ ವಿಳುಹಿದ ಉದಾರ ||
ಪರಾಶರ ಸುತ ಕಪಿಲರೂಪಿ ಸ- |ಮೀರ ವಂದ್ಯ ಅನಸೂಯ ವರ ಕುಮಾರ ಪು- ||
ಷ್ಕರ ಕೇಶನನುಜ ಮಂದಾರನತ ಜನ ವಿಶ್ವ |ಧರಣ ಶರೀರ ವ್ಯೋಮ ಸಂತ್ಪತಿ ನಘ ತು- ||
ಷಾರ ಗಣ ವೈದುವರೊ ನಿನ್ನಯಾ |ಪಾರಮಹಿಮೆಯ ತಿಳಿಯಲಾರರು ನೀರಜಾಕ್ಷ || ಯ ||
ಪಿತಾಮಾತಾ ಮಹಿಮಯ ||ಕ್ಕಾರಿಂದೊಶ ಅಗ್ನಿಭಯ ನಿವಾರಣ ||ಸಾರೆಗರೆದು ಪೂರೈಸಭಿಲಾಷೆಯ |ಘೋರಿಸುತಿಹ ತಾಪತ್ರಯ ಬಿಡಿಸೊ ರ- |ಮಾರಮಣನೇ ಪ್ರಣತಾರ್ಥಿ ಪರಿಹರ ೨
ವೇದೋದ್ಧರ ಕೂರ್ಮ ಈ ಕ್ಷಿತಿಯ ಮಾಯದಲೊ- |ಯ್ದದುರ್ಮತಿ ಭರ್ಮ ಲೋಚನರ ತರಳ ಪ್ರ- ||
ಹ್ಲಾದ ವರದ ಸುಕರ್ಮಸ್ಥಿತ ಮಾತೃಹಿಂಸಕ |ನಾದ ನಿರಶ ಸುಶರ್ಮ ಪ್ರಮುಖರನ ಮರ್ಮ ||
ಭೇದಿಸೇಳಿದ ಭೈಷ್ಮೀ ವಲ್ಲಭ |ಶ್ರೀದ ಬುದ್ಧ ಖಳಕುಲ ಭಂಜನ ||ಬಾದರಾಯಣ ನಿಗಮವೇದ್ಯನೆ |
ಮೋದಮಯ ಪ್ರಾಣೇಶ ವಿಠ್ಠಲ ||ಕಾದುಕೋ ನಿನ್ನವರನು ಎಂದಾದಿಮಧ್ಯ |
ವಿದೂರ ಯನ್ನ ವಿಷಾದಗುಣಗಳೆಣಿಸದೆ ಕುಬುಜೆಗೆ ||ಮೋದ ತೋರಿದ ದೀನಬಂಧು |
ಶ್ರೀಧರ ಕೌಸ್ತುಭ ವಕ್ಷಸ್ಥಳ ||ದ್ವಾದಶವಪು ಸನ್ನಿಭ ನಿನ್ನಯ ಕ್ರೋಧಿಗಳೊಳು ಸ್ನೇಹವ ಪುನರಪಿ |
ಮೇದಿನಿಯೊಳು ಜನ್ಮವ ಕೊಡದಿರು ೩

೨೪೫
ದೇವರನ್ನು ಹಸೆಗೆ ಕರೆದ ಪದಗಳು
ವೇದ ಉದ್ಧರಿಸೀದಾ ಮತ್ಸ್ಯಾವತಾರನೇ |ಆದಿತ್ಯಾರಿಗೊಲಿದಮೃತ ನೀಡಿದನೇ ||
ಮೇದಿನಿಯನು ಪೊತ್ತ ವರಹವತಾರನೆ |ಆ ದೈತ್ಯನಳಿದು ಪ್ರಹ್ಲಾದಗೊಲಿದನೇ ||
ಭೂ ದೇವಾ ರೂಪೀ ಹಸಿಗೇಳೂ ೧
ಭೃಗು ಕುಲೋದ್ಭವನೇ ಭೀಷ್ಮನ ಬೆಳಸಿದನೇ |ನಗಜ ರಮಣನ ಕಾರ್ಮೂಕ ಮುರಿದವನೇ ||
ಹಗೆಯನಳಿದು ಪಾಂಚಜನ್ಯ ಘಳಿಸಿದನೆ |ಇಗಡ ದೈತ್ಯರ ಬುದ್ಧಿ ಭೇದ ಮಾಡಿದನೇ ||
ಅಗಣಿತ ಮಹಿಮಾ ಹಸಿಗೇಳೂ ೨
ಕುದರೀಯೇರಿ ಕುಜನರಾ ಕುಲ ತರಿದವನೇ |ಬುಧರಗೋಸುಗ ಹತ್ತಾವತಾರವಾದವನೇ ||
ಸುದರೂಶನ ಶಂಖ ಗದ ಜಲಜ ಧರನೇ |ವಿಧಿಪಿತ ಶ್ರೀ ರಮಣ ಪ್ರಾಣೇಶ ವಿಠ್ಠಲನೆ ||
ಸುಧಿಗಡಲಾಲಯನೆ ಹಸಿಗೇಳೂ ೩

೩೬
ವ್ಯಾಸೋಕ್ತಿಯನುಸರಿಸಿ ಹತ್ತು ಅವತಾರವನುಶ್ರೀಶ ಮಾಡಿದ ದಿನದ ಕ್ಲಪ್ತಿಯಂ ಬರೆವೆ ಸಂ- |
ತೋಷದಿಂ ಕೇಳ್ಪುದೆಲ್ಲರು ಪೊರೆವ ಹರಿಯು ಅಭಿ-ಲಾಷೆ ಪೂರೈಸಿ ಬಿಡದೇ ಪ
ಕೃತಯುಗ ಪ್ರಭವ ಮಧು ಶುದ್ಧ ಪ್ರತಿಪದ ಜಲಧಿಸುತವಾರ ರೇವತೀ ವಿಷ್ಕಂಭ ಹಗಲು ಸಂ-
ಯುತ ಹನ್ನೆರಡು ಘಳಿಗೆಗವತರಿಸಿ ಶ್ರೀ ಮತ್ಸ್ಯ ಹತಮಾಡಿ ತಮನೆಂಬನಾ ||
ಚತುರಾಸ್ಯ ವೈವಸ್ವತರಿಗೊಲಿದು ಮೆರೆದ ನೀಕ್ಷಿತಿಯೊಳಗೆ ಮತ್ತಾಯುಗದಿ ಕೂರ್ಮ ರೂಪದಿಂಚ್ಯುತರಹಿತನವತಾರ ಮಾಡಿ ಮಾಡಿದ ಕಾರ್ಯ ಮತಿವಂತರಿಗೆ ಪೇಳೂವೆ ೧
ವಿಭವಾಬ್ದ ಜ್ಯೇಷ್ಠ ಶುಕ್ಲ ದ್ವಿತೀಯ ಬುಧವಾರಶುಭದ ರೋಹಿಣಿ ಋಕ್ಷ ಧೃತಿ ಯೋಗ ದಿವದಲ್ಲಿ
ತ್ರಿಭುವನೇಶ್ವರ ನಾಲ್ಕು ಘಳಿಗೆಗುದಿಸಿಯಮೃತ ಕೃತುಭುಜರಿಗುಣಿಸಿ ಕರುಣದಿಂ ||
ಅಭಯವಿತ್ತನ್ಯರನು ದಣಿಸಿ ಧರಿಸಿದನು ಜಲ-ಜಭವಾಂಡ ಮಂದರಾದ್ರಿಯ ಬೆನ್ನಮ್ಯಾಲಿಂದ ಸುಭುಜಾಹ್ವಯನ ಚರಿತೆ ಸ್ಮರಿಸೆ ಕ್ಲೇಶಹ ಮತ್ತೆ ನಭಗವಹನಾ ಯುಗದಲಿ ೨
ಶುಕ್ಲ ಸಂವತ್ಸರದ ಶುಭ ಮಾಘ ಮಾಸದಲಿಶುಕ್ಲ ಪಕ್ಷದ ಸಪ್ತಮೀ ಭಾನುವಾರದಲಿ
ಅಕ್ಲೇಶಪ್ರದ ಅಶ್ವಿನೀ ಸಾಧ್ಯಯೋಗದಲಿ ಶುಕ್ಲಶೋಣಿತ ವಿದೂರ ||
ಶುಕ್ಲಾಂಬರಧರ ಕಿಟಿರೂಪದಿಂದವತರಿಸಿಹಕ್ಲಾಸುರ ಹಿರಣ್ಯಶನ ತರಿದು ತ್ವರ ತನ್ನ
ಒಕ್ಲಾದವರ ಪೊರೆದ ಹಗಲೆಂಟು ಘಳಿಗೆಯೊಳು ಶುಕ್ಲಾಂಗಆ ಯುಗದಲಿ ೩
ಆಂಗಿರಸವೆಂಬ ಸಂವತ್ಸರದ ವೈಶಾಖತಿಂಗಳದಿ ಸಿತಪಕ್ಷ ಚತುರ್ದಶೀ
ಶನಿವಾರತುಂಗ ಸ್ವಾತಿ ಪರಿಘ ದಿವಾಷ್ಟ ವಿಂಶತಿ ಘಳಿಗೆ ಗಾಂಗೇಯಗರ್ಭನೊರವು ||
ಸಂಘಟನೆವಾಗಲಾ ಸಮಯದೊಳು ಸ್ತಂಭದಿಂಸಂಗರಹಿತ ಹರಿ ಘುಡಿಘುಡಿಸುತಲಿ
ಉದಿಸಿ ನರಸಿಂಗಾಹ್ವಯದಿ ಹೇಮ ಕಶ್ಯಪನ ತರಿದು ತರಳಂಗೆ ಸನ್ಮುದವಿತ್ತನೂ4
ತ್ರೇತಾಯುಗದಲದಿತಿ ದೇವಿ ಭಕುತಿಗೆ ಮೆಚ್ಚಿಧಾತಾಬ್ದ ಭಾದ್ರಪದ ಸಿತಪಕ್ಷ ದ್ವಾದಶೀಖ್ಯಾತಿ ವಿಷ್ಣುಭ ಶುಕ್ರ ಧೃತಿ ಹತ್ತೈದು ಘಟಗೆ ಪೋತಭಾವದಿ ದಿವವಲಿ ||ತಾಂ ತಾಳಿ ಅವತಾರವಂ ತ್ರಿವಿಕ್ರಮನಾಗಿಭೂತಲಾಗಸವಳೆದು ವೈರೋಚಿನಿಯ ತುಳಿದುಪ್ರೀತಿಪಡಿಸುತ ಶಕ್ರನಂ ಸ್ವರ್ನದಿಯ ಪಡೆದ ಈತಗೆಣೆಯಾರೊ ಜಗದಿ ೫
ಅದೆ ಯುಗದಲಿ ಪ್ರಮಾಥಿಯೆಂಬ ಸಂವತ್ಸ-ರದಲಿ ವೈಶಾಖ ಶುದ್ಧ ತೃತೀಯೆ ಸುಕರ್ಮ ಯೋ-ಗದಲಿ ರೋಹಿಣಿ ಮಂದ ಹನ್ನೊಂದು ಘಟರಾತ್ರಿಯೊದಗುತಿರೆಭೂಪತಿಗಳಾ ||ವಧೆಗೆ ವಿಪ್ರರ ವೃಂದವನು ಪೋಷಣೆಯ ಮಾಡು-ವದಕೆ, ಜಮದಗ್ನಿಯಿಂದವತರಿಸಿ ರಾಮ ನಾ-ಮದಲಿ ಪರಶುವ ಧರಿಸಿ ಈ ಧಾತ್ರಿಯೊಳು ಬಹು ಮೆರೆದಮತ್ತು ಆ ಯುಗದಲಿ ೬
ತಾರಣೆಂಬಬ್ಧ ಮಧುಮಾಸ ಶುಕ್ಲ ನವಮಿಯಆರನೇ ತಾಸು ದಿವದಲಿ ಪುನರ್ವಸು ಚಂದ್ರವಾರ ಶೂಲೆಂಬ ಯೋಗದಲಿ ದಶರಥ ನೃಪತಿ ಹಾರೈಸಿದುದಕೆ ಒಲಿದು ||ಶ್ರೀರಾಮನಾಮದಿಂದವತರಿಸಿ ದೈತ್ಯ ಪರಿವಾ-ರ ರಾವಣನ ಸಂಹರಿಸಿ ವಿಭೀಷಣಗೊಲಿದುವಾರಿಜೋದ್ಭವ ಮುಖ ದಿವೌಕಸರಿಗಾನಂದ ತೋರಿಸಿದ ಸೀತಾಪತಿ ೭
ಮೂರನೇ ಯುಗ ವಿರೋಧೀ ಶ್ರಾವಣವದಿ ಅ-ರ್ಧರಾತ್ರಿಯೊಳಷ್ಟಮೀ ರೋಹಿಣೀ ವಜ್ರ ಬುಧವಾರದಲಿ ಅಜನ ಬಿನ್ನಹಕೊಪ್ಪಿ ಕೃಷ್ಣಾವತಾರವನು ತಾಳಿ ಧರೆಗೆ ||ಭಾರವಾಗಿದ್ದ ಕಂಸಾದಿ ಖಲವೃಂದ ಸಂ-ಹಾರಮಂ ಗೈದು ಪಾಂಡವರ ಪೋಷಿಸಿ ವಿಪ್ರಗೋ ರಕ್ಷಣೆಯ ಮಾಡಿ ಧರ್ಮವಂ ಸ್ಥಾಪಿಸಿದ ಶ್ರೀರಮಣ ಮಧ್ವಸದನ ೮
ಕಲಿಖರಾಬ್ಧಾಷಾಢ ಶುದ್ಧ ದಶಮಿ ವಿಶಾಖನಳಿನ ಸಖವಾರ ಶುಕ್ಲಾಹ ಯೋಗ ದಿವಾಷ್ಟಘಳಿಗೆಯೊಳು ಜನನೆಂಬ ದೈತ್ಯನಲ್ಲವತರಿಸಿ ಬಲು ದುರ್ಮತಿಯ ಪ್ರೇರಿಸಿ ||ಕಳೆಗೆಡಿಸಿ ಬುದ್ಧಾವತಾರವೆಂದೆನಿಸಿ ಶಿವ-ಗೊಲಿದು ತ್ರಿಪುರವ ಕೆಡಿಸಿ ಸಜ್ಜನರ ಸಂಶಯವಕಳದು, ಕರುಣಾಂಬುಧಿಯ ಮಹಿಮೆಯಂತಿಳಿಯಲಸದಳಮಾ ವಿಧಿಗೆ ಎಂದಿಗೂ ೯
ದನುಜಪತಿ ಯುಗ ದುರ್ಮುಖಾ ಮಾರ್ಗಶಿರ ಶುದ್ಧ ಶನಿವಾರ ದ್ವಿತೀಯೆ ಪೂರ್ವಾಷಾಢ ವೃದ್ಧಿ ಮೂ-ರನೆ ಘಳಿಗೆ ದಿವದ ಕಲ್ಕ್ಯವತಾರದಿಂಮ್ಲೇಂಛರನು ಸದೆದು ಭೂ ದಿವಿಜರಾ ||ಘನಮೋದ ಪಡಿಸಿ ವಾಜಿಯನೇರಿ ಮೆರೆದಾಡಿಅನಿಮಿಷರ ಕೈಯ್ಯ ಪೂ ಮಳೆಯಂಗರಿಸಿಕೊಂ-ಡನಘ ಬಲ್ಲವರಿಗಲ್ಲಲ್ಲೆ ಇರುತಿಹನು ಪ್ರಣತಜನ ಕಾಮಧೇನೂ ೧೦
ಈ ಪರಿಯಲಚ್ಯುತನ ಅವತಾರ ಚರಿತೆ ಸಂ-ಕ್ಷೇಪದಿಂ ವಿರಚಿಸಿದೆ ಸದ್ಭಕ್ತಿಯಿಂದಿದನುಪಾಪಿಗಳಿಘೇಳದಲೆ ಕಾಲತ್ರಯದಿ ಪಠಸೆ ತಾಪತ್ರಗಳ ಕಳೆದು ||ಈ ಪೊಡವಿಯೊಳಗೆ ಬಹುಮಾನ ಮಾಡಿಸಿ, ತಂದೆ-ಯೋಪಾದಿ ಕ್ಷಣ ಬಿಡದೆ ಸಲಹಿ ಪ್ರಾಂತಕೆ ತನ್ನ ಆ ಪರಂಧಾಮ ವೈದಿಸುವನತಿ ಕರುಣಾಳು ಶ್ರೀಪ ಪ್ರಾಣೇಶ ವಿಠಲಾ ೧೧

೧೫೬
ಶರಣು ನಿತ್ಯಾನಂದ ಸದ್ಗುಣ ಸಾಂದ್ರ, ನಿನ್ನ |ಚರಣ ಕಮಲಂಗಳಿಗೆ ಶ್ರೀ ವರದೇಂದ್ರ ಪ
ನಿನ್ನ ನಂಬಿದ ದಾಸರನವನಿಯೊಳು ಇಂಥ |ಬನ್ನ ಪಡಿಸುವುದುಚಿತವೆ ದಯಾಳು ||
ಅನ್ಯರುಂಟೇ ನೀವಲ್ಲದುದ್ಧರಿಸಲು ಪ್ರ |ಪನ್ನ ಪೋಷಕ ಯನ್ನ ಬಿನ್ನಪ ಕೇಳು ೧
ನರರ ಪಾಡಿಸದಿರೊ ಯತಿರಾಯಾ ಹರಿ |ಸ್ಮರಣೆ ಮಾಡಲು ಮನಕೊಡು ಜೀಯ ||
ಕರಕರೆ ಭಾವದೊಳಗೊಂದುಪಾಯ ಕಾಣೆ |ಹರಿಸಿ ಕ್ಲೇಶವ ಮೋದ ತೋರಿಸಯ್ಯ ೨
ಧರೆಗೆ ಪ್ರಸಿದ್ಧ ಪುಣ್ಯಾಲಯವಾಸ ಕಾಯೊ |ನೆರೆ ನಂಬಿದವರನ್ನ ರವಿಭಾಸ ||
ಹರಿದಾಸರ ಕಾಡುವರನ್ನಾ ಭಾಸ ಮಾಡೊ |ಗುರು ಪ್ರಾಣೇಶ ವಿಠಲನ್ನ ನಿಜದಾಸ ೩

ರುದ್ರದೇವರ ಹರಿಹರಸ್ತೋತ್ರ
೧೨೭
ಶರಣು ನಿನ್ನ ಚರಣ ಕಮಲಗಳಿಗೆ ಶಿವಶಿವಾ |ಕರವ ಪಿಡಿದು ಸುಮತಿಯಿತ್ತು ಪೊರೆಯೊ ಶಿವಶಿವಾ ಪ
ದಂತಿ ಚರ್ಮ ಹೊದ್ದ ಭಸ್ಮಭೂಷ ಶಿವಶಿವಾ |ಚಿಂತಿ ರಹಿತ ಲಯಕೆ ಕರ್ತೃನಾದ ಶಿವಶಿವಾ ||
ಸಂತರಿಂದ ಸತತ ಸೇವೆಗೊಂಬ ಶಿವಶಿವಾ |ಕಂತುಪಿತನ ಪೂರ್ಣ ಪ್ರೀತಿಪಾತ್ರ ಶಿವಶಿವಾ ೧
ಮಂದಮತಿಯ ತಪ್ಪಿನೆಣಿಸಬ್ಯಾಡ ಶಿವಶಿವಾ |ಕುಂದು ನಿನಗೆ ಎಂದಿಗೆಂದಿಗಿಲ್ಲ ಶಿವಶಿವಾ ||
ಮಂದಗಮನೆ ನಿನ್ನ ಮನದೊಳಿಲ್ಲೆ ಶಿವಶಿವಾ |ತಂದುಕೊಂಡ ದಕ್ಷ ವೃಥ ಕುವಾರ್ತಿ ಶಿವಶಿವಾ ೨
ಹೀನರಂತೆ ನಿನಗೆ ಕೋಪ ಸಲ್ಲ ಶಿವಶಿವಾ |ಮಾಣು ಯಜ್ಞ ಸಹಯನಾಗು ದಯದಿ ಶಿವಶಿವಾ ||
ಏನುಪಾಯ ಇದಕೆ ಚಿಂತಿಸುವದು ಶಿವಶಿವಾ |ಪ್ರಾಣೇಶ ವಿಠಲ ನಿನ್ನ ವಶದೊಳಿಹನು ಶಿವಶಿವಾ ೩

೮೮
ಶರಣು ನಿನ್ನ ಚರಣಗಳಿಗೆ ಭಾರತೀಶನೆ |ಕರವ ಪಿಡಿದು ಸಲಹೋ ಬಿಡದೆ ಭಾರತೀಶನೆ ಪ
ಎಲ್ಲ ಕಡೆಗೆ ವ್ಯಾಪ್ತ ನೀನೆ ಭಾರತೀಶನೆ |ಅಲ್ಲಿ ವಿಷವ ಕುಡಿದೆಯೆಂದು ಭಾರತೀಶನೆ ||
ಗೆಲ್ಲಿಸಿದೆಯೊ ಸರ್ವ ಸುರರ ಭಾರತೀಶನೆ |ಬಲ್ಲಿದನು ನಿನಗೆಣೆ ಯಾರೋ ಭಾರತೀಶನೆ೧
ಅಂಜನಾ ಕುಮಾರನಾಗಿ ಭಾರತೀಶನೆ |ಕಂಜನಾಭನಂಘ್ರಿ ಭಜಿಸಿ ಭಾರತೀಶನೆ ||
ಲಿಂಜದು ದಧಿ ದಾಟಿ ಪೋಗಿ ಭಾರತೀಶನೆ |ಸಂಜಿ ಚರರ ಸಂಹರಿಸಿದೆಯೊ ಭಾರತೀಶನೆ೨
ಕುಂತಿ ಜಠರದಿಂದ ಜನಿಸಿ ಭಾರತೀಶನೆ |ಹಂತ ಕೌರವರನ ತರಿದಿ ಭಾರತೀಶನೆ ||
ಕಂತು ಪಿತನ ಕರುಣ ಪಡೆದೆ ಭಾರತೀಶನೆ |ಅಂತಗಾಣೆ ನಿನ್ನ ಮಹಿಮೆಗೆ ಭಾರತೀಶನೆ ೩
ಯತಿಯ ರೂಪ ಇಳಿಯೊಳಾಗಿ ಭಾರತೀಶ£ É |ಮತಿಯ ಸರ್ವ ಬುಧಂಗಿತ್ತೆ ಭಾರತೀಶನೆ ||
ಸತತ ನಿನ್ನ ಪೂಜಿಪರಿಗೆ ಭಾರತೀಶನೆ |ಗತಿಯ ಕೊಡುವೆ ದೋಷ ಕಳೆದು ಭಾರತೀಶನೆ ೪
ಘನ್ನ ಪ್ರಾಣೇಶ ವಿಠಲ ನಾಳೆ ಭಾರತೀಶನೆ |ಬಿನ್ನಪವನು ಲಾಲಿಸುವದೋ ಭಾರತೀಶನೆ ||
ನಿನ್ನ ದಾಸನೆನಿಸಬೇಕೋ ಭಾರತೀಶನೆ |ಅನ್ಯ ವಿಷಯವೊಂದನೊಲ್ಲೆ ಭಾರತೀಶನೆ ೫

೧೨೧
ಶರಣು ಭಾರತೀ ತಾಯೆ | ಕರವ ಬಿಡದಲೆ ಕಾಯೆ ||ಮರುತದೇವನ ರಮಣಿ | ಸುರ ನದಿಯ ಭಗಿನಿ ಪ
ಪ್ರದ್ಯುಮ್ನ ದೇವಸುತೆ | ರುದ್ರಾದಿ ಸುರ ವಿನುತೆ ||ಭದ್ರ ವಿಗ್ರಹೆ ದಯಾ ಸ | ಮುದ್ರೆ ಕುಲಿಶೆ ||
ಅದ್ರಿಯೋಪಮ ದೋಷ | ಕಿದ್ದ ದುರ್ಮತಿ ಕ್ಲೇಶ ||ವೊದ್ದು ನಿನ್ನವನೆನ್ನು | ಬುದ್ಧಿ ಕೊಡು ಇನ್ನೂ ೧
ನೀರಜಾಂಬಕೆ ಯನಗೆ | ತೋರು ಸಾಧನ ಕುನಗೆ |ಜಾರಿಸು ಭಕುತಿಯನ್ನು | ತೋರು ಕರುಣಾ ||
ವಾರಿಧಿ ಹರಿಯ ಪಾದ | ಆರಾಧಿಸಲು ಮೋದ |ವಾರವಾರಕೆ ಈಯೇ | ವಾರಣ ಗಮನೆಯೇ ೨
ಪ್ರಾಣೇಶ ವಿಠಲನ | ಧ್ಯಾನದೊಳಗಿರಿಸು ಮನ |ವಾಣೀ ಪದವೈದುವಳೇ | ಮಾನ ನಿನ್ನದೆಲೆ ||
ಹೀನ ವಿಷಯಗಳೊಲ್ಲೆ | ನೀನೇ ಸ್ವಾಂತದಿ ನಿಲ್ಲೆ |ಕ್ಷೋಣಿಯೊಳಗತಿ ಮಾನೀ | ಜ್ಞಾನೀ ಅಹಿವೇಣೀ ೩

ಭಾರತೀದೇವಿ ಸ್ತೋತ್ರಗಳು
೧೨೦
ಶರಣು ಶ್ರೀ ಮಾರುತನ ರಾಣಿಯೆ |ಶರಣು ಮಂಗಳ ಶ್ರೋಣಿಯೇ ||
ಶರಣು ಸ್ಮಿತ ಮುಖ ಉರಗವೇಣಿಯೆ |ಶರಣು ಸರಸಿಜ ಪಾಣಿಯೇ ಪ
ಇಂದ್ರಸೇನೆ ಪುರಂದರಾರ್ಚಿತೆ |ಇಂದಿರಾಪತಿ ಕೃಷ್ಣನಾ ||
ನಂದದಲಿ ಸೇವಿಸುವ ಭಕುತಿಯ |ಇಂದುಧರನಿಗೆ ಕೊಡುವಳೇ ೧
ಗರುಡನುತ ಪದ ಸರಸೀರುಹೆ ವೃಕೋ |ದರನ ಪ್ರೀತಿಗೆ ಯೋಗ್ಯಳೇ ||
ತರುಣಿ ಶಿರೋಮಣಿ ದುರ್ಮತಿಯ ಕಳೆದು |ಕರುಣದಲಿ ಕರ ಪಿಡಿವುದು ೨
ವಿದ್ಯುನ್ನಾಮಕೆ ಧಾತಜಾತಳೆ |ಶ್ರದ್ಧೆ ದಾತೆ ನಿರಂತರ ||
ತಿದ್ದಿ ಯನ್ನ ವಕ್ರಮತಿಯ ದ್ರುಹಿಣ |ವಿದ್ಯೆ ಪಾಲಿಸೆ ಭಾರತೀ ೩
ಕಾಳೀ ದ್ರೌಪದಿ ಸ್ಥಾಣು ಕನ್ಯಾ |ಶೈಲಜಾದಿ ನಮಸ್ರ‍ಕತೇ ||
ಕಾಲಿಗೆರಗುವೆ ಯನ್ನ ಬಿನ್ನಪ |ಕೇಳಿ ಜ್ಞಾನವ ಪ್ರೇರಿಸೇ ೪
ಗಜಗಮನೆ ನಳನಂದಿನಿ ಅನಘೆ |ಸುಜನ ಹೃದಯ ನಿಕೇತನೆ ||
ತ್ರಿಜಗ ಪತಿ ಪ್ರಾಣೇಶ ವಿಠಲನ |ಭಜನೆಯೊಳು ಮನ ನಿಲ್ಲಿಸೇ ೫

ಶ್ರೀಹರಿ ಸಂಕೀರ್ತನೆ

ಶರಣು ಹೊಕ್ಕೆನೊ ನಿನ್ನ ಜಾತರೂಪಾಂಗದವರದ ಕೈಪಿಡಿಯನ್ನ ಪರಮೇಷ್ಠಿ ವಂದಿತ |
ಚರಣ ಸುರ ಶಿರೋರನ್ನ ಸುಖ ಜ್ಞಾನ ಪೂರ್ಣಾ ಪ
ಉರಗ ಪರ್ವತ ನಿಲಯ ಭಕತರ ಕರೆದು |ವರಗಳ ಕೊಡುವ ವೆಂಕಟ | ಗರುಡವಾಹನ
ಲಕ್ಷ್ಮೀಪತಿ ಮಂದರಧರಾಧರಧಾರ ದೇವ ಅ.ಪ.
ಕಾಮಿತಾರ್ಥದ ರಂಗ ಮಧ್ವಮುನಿ ಪೂಜಿತ |ರಾಮ ಭವಭಯ ಭಂಗ ದಶರೂಪಿ ಶರಧಿಜಾ |
ಪ್ರೇಮ ಸುಜನರ ಸಂಗ ಕೊಡು ಎಂದೆಂದಿಗೂ ||ತಾಮಸ ರಿಪು ಕುರಂಗಾ ಅಂಕ ಸಖ ಸಾಂಗ |
ಹೇಮಗರ್ಭನ ನಾಭೀ ಕಮಲದಿ |ನೀ ಮುದದಿ ಪಡೆದೀ ಚರಾಚರ |
ನೇಮದಿಂದಲಿ ಸೃಜಿಸ ಪೇಳಿದ |ಸ್ವಾಮಿ ನೀ ಸರ್ವರೊಳು ವ್ಯಾಪಿಸಿ |
ಭೂಮಿಯೊಳು ಸಾತ್ವಿಕರು ರಾಜಸ |ತಾಮಸರ ನಿರ್ಮಾಣ ಮಾಡಿ ಸು |
ಧಾಮ ಸಖಿಗತಿ ದುರ್ಗತಿಗಳನು |ಈ ಮರುಳು ಜನರಿಗೀಯುತ |
ನೀ ಮಡಿವಂತನು ಎನಿಸುವೆ ಲೇಸುತ್ರಾಮಾ ವರಜ ಬಲು ಸೋಜಿಗವೊ ಇದು |
ವ್ಯೋಮನ ದೀಪದ ನೀ ಮಾಡಿದ ಮರ್ಯಾದೆಯೋಮರಳ್ಯೊಬ್ಬರು ಪೇಳುವರುಂಟೇ ೧
ಪುಂಡರೀಕದಳಾಕ್ಷ ತನ್ಮಾತ್ರಾ ದೂರ |ಪಾಂಡುರಂಗಘ ಕಕ್ಷ ಗಾಂಗೇಯ ಗೀತ |
ಪಾಂಡುನಂದನ ಪಕ್ಷ ದರ ಚಕ್ರಪಾಣಿ |ಪುಂಡ ಕೌರವ ಶಿಕ್ಷ ಶ್ರೀ ವತ್ಸ ವಕ್ಷ |
ಕುಂಡಲೀಶ ಶಯನ ವಿದುರ ಸಖ | ಮಾ-ರ್ತಾಂಡ ಕೋಟಿ ಪ್ರಕಾಶ ಹರಿವು |
ದ್ದಂಡ ಮಹಿಮನೆ ಕಂಡ ಕಂಡವ |ರಂಡಲೆಯ ಯನ್ನ ಶರೀರವು ||
ಬೆಂಡು ಆಯಿತು ಕಾಣೆ ಕಾಯ್ವರ |ಜಾಂಡೋದರ ನಿನ್ನುಳಿದು ಓರ್ವರ |
ದಂಡಿಸದೆ ಬರುತಿರ್ಪ್ಪ ಜನ್ಮವ |ಖಂಡಿಸಿ ನಿನ್ನ ನಾಮವುಳಿಸೊ ||
ಮಂಡೋದರೀ ವಲ್ಲಭ ಶಕಟ ಪ್ರ |ಚಂಡ ಮುರಾದಿ ಖಳ ಕುಲಾಂತಕ |
ದಂಡಾತ್ಮಜ ರಕ್ಷಕ ಹರಿ ಮೇ |ಷಾಂಡಜ ಸಂಹರ ಕರುಣದಿ ನೋಡೋ2
ಧರಣಿಯೊಳಗಿನ ರಾಯರೆಂಬುವರು ವೇಷಕಾ |ಪುರುಷನಿಗೆ ಬಹು ದ್ರವ್ಯವಿತ್ತಿನ್ನು ವೇಷವ |
ತರಲಿಗೊಡರೆಲೊ ದೇಹ ಬಹು ತಾಳಿ ಬಂದೆನೊ |ಕರುಣವಿಲ್ಲದೆ ಜೀಯ | ಸಾಕೆನ್ನೂ ಮಾಯಾ- ||
ವರನೆ ಅಟವು ಮಾತ್ರ ಹಣ ಕೊಡ- |ದಿರೊ ನಾ ಬಲ್ಲೆನೊ ಕುಡಿದ ಸ್ತನ – ಪಯ |
ಶರಧಿ ದ್ವಿಗುಣವು ಯನ್ನ ಅಸ್ಥಿಯು |ಗಿರಿಗೆ ದ್ವಿಗುಣವಾಗಿಹ್ಯವೊ ಇಂತಿ |
ಕರೆ ಕರೆಯ ನಾನಾರಿಗುಸಿರಲಿ |ಸುರಪತಿ ಪ್ರಾಣೇಶ ವಿಠ್ಠಲ |
ತರುಣಿ ಸುತ ಧನ ಪಶು ಎಂಬುವ ಈ |ಪರಮ ಮೋಹದ ಮಡುವೋಳ್ಬಿದ್ದು ||
ಹರಿ ನಿನ್ನೊಂದಿನ ಸ್ಮರಿಸಿಲ್ಲವೋ ನೀ |ನರಿಯೆ ನಿಂತ್ಯಲ್ಲವೋ ಪರತರ |
ಕರಿವರದಿ ಮ್ಯಾಲೆನರಿದದು ಮಾಡುವ – |ದರಿ ಕರಿಷಂಡ ಮೃಗೇಂದ್ರ ಪರಾಶು || ಶರಣು ೩

೨೨೫
ಶಿರಿರಮಣ ದಯದಿಂದ ಮಂತ್ರಾಘ್ರ್ಯ ಕೊಡುವ ಬಗೆ |ಪರಮೇಷ್ಠಿಗೊಲಿದು ಪೇಳಿದನು ಇಂತೂ ಪ
ಅಷ್ಟಾಕ್ಷರದಿ ಮಂತ್ರಾಘ್ರ್ಯ ಸಾಲಗ್ರಾಮ |ವಿಟ್ಟು ಸದ್ ಭಕ್ತಿಯಲಿ ಶಂಖದಿಂದಾ ||
ಕೊಟ್ಟವಗೆ ಸಂತುಷ್ಟನಾಗಿ ಎನ್ನಯ ಸದನದೋ- |ಳಿಟ್ಟು ಸಂತೈಸುವೆನು ಬ್ರಹ್ಮ ಕೇಳೂ ೧
ಸತ್ಯಭಾಮಾದಿ ಮಿಕ್ಕಾದ ಮಂತ್ರಾಘ್ರ್ಯವನು |ಮತ್ಪಾದ ಜಲದಿಂದ ಪಾತ್ರಿಯಲ್ಲೀ ||
ಹಸ್ತದಿಂ ಕೊಡಬೇಕು ಎನ್ನ ಪ್ರೀತಿ ಎಲೊ ಇದು |ಸತ್ಯಲೋಕಾಧಿಪನೆ ಕೇಳು ಮುದದೀ ೨
ಎನ್ನ ಮಂತ್ರಾಘ್ರ್ಯ ಹಸ್ತದಲಿ ಪಾತ್ರಿಯೊಳೀಯೆ |ಅನ್ಯಾಯವೆಷ್ಟೆಂದು ಪೇಳಲೀಗಾ ||
ವನ್ನಜಾಸನ ಎನಗರಕ್ತವೆರದಂತಹದೊ |ಮುನ್ನವರ ಕ್ಲೇಶಕ್ಕೆ ಎಣಿಕೆ ಇಲ್ಲಾ ೩
ಅದರಿಂದ ತಿಳಿದು ಸಾಲಗ್ರಾಮವಿಟ್ಟು ಶಂ- |ಖದಲಿ ಕೊಡಬೇಕು ಎನ್ನಘ್ರ್ನಗಳನೂ ||
ವಿಧಿ ಕಾಷ್ಟಗತ ವಹ್ನಿ ಮಥಿಸೆ ತೋರ್ವಂತೆ ಸ- |ರ್ವದ ತೋರ್ವೆ ನಾನು ಸಾಲಗ್ರಾಮದೀ ೪
ಶ್ರೀ ನಾರಿ ಪ್ರಮುಖ ಮಂತ್ರಾಘ್ರ್ಯ ಶಂಖದಲಿ ಕೊಡೆ |ನಾನೊಪ್ಪೆನವರ ಭಂಗವ ಬಡಿಸುವೇ ||
ವಾಣೀಶ ತಿಳಿಯಂದು ಸ್ಮಿತ ವದನದಿಂದ ಶ್ರೀ |ಪ್ರಾಣೇಶ ವಿಠಲ ನಿರೂಪಿಸಿದನೂ ೫

೧೩೫
ಶಿವ ಸತ್ತ ಎಂಥ ಆಶ್ಚರ್ಯವು ಇದು ನೋಡಿ |ಕವಿಗಳು ಮನಕ ತಂದು ||
ಭುವನತ್ರಯಗಳಲ್ಲಿ ಪ್ರಖ್ಯಾತವಾಗಿದೆ |ಅವಿವೇಕಿಗಳ ಮಾತಲ್ಲಾ ಪ
ಅಧಮರು ಬಹು ಬಗೆಯಿಂದಲ್ಲಿ ಘಳಿಸೀದಾ |ಬದುಕು ವ್ಯರ್ಥವಾಹದು ||
ಬುಧರ ಪದಾರ್ಥವು ಸಾರ್ಥಕವಾಹದೆಂಬು |ದಿದೆ ಸಾಕ್ಷಿ ಎನಬಹುದೂ ೧
ಭೂಭುಜರಿಗೆ ಭೂಷಣಾದವು ಆಯುಧ |ಈ ಭೂಮಿ ಪೊತ್ತ ವ್ಯಾಳಾ ||
ಆ ಭಿಕ್ಷುಕನ ಕುಟುಂಬವ ರಕ್ಷಿಸುತಿಹ್ಯದು |ಶೋಭಿಸುತಿಹ್ಯ ಕಪಾಲಾ ೨
ಮಂದೀಯ ನಂಜಿಸುತಿಪ್ಪದು | ಆತನಹಿಂದೆ ಮುಂದಿರುವ ಗಣಾ ||
ನಂದೀ ಪಿತೃಗಳಿಗೆ ಕೈವಲ್ಲ್ಯಾ ತೋರಿತು |ಸಂದೇಹವಿನಿತಿಲ್ಲವೂ ೩
ಸೋಮ ಕಂಣಾದ ಜಗತ್ತೆಕ್ಕ ದಿಕ್ಕಿಗೆ |ಸ್ವಾಮಿ ಎನಿಸಿದ ವನ್ಹೀ ||
ಧೀಮಂತರಾತನ ಮಡದೀಯ ಪೂಜಿಸಿ |ಶ್ರೀಮಂತರಾಗೂವರೂ ೪
ಮೌನಿಗಳಿಗೆ ಚರ್ಮ ವೈಷ್ಣವರಿಗೆ ಭಸ್ಮ |ತಾನು ಪ್ರೀಯಕರಾದೀತು ||
ಪ್ರಾಣೇಶ ವಿಠಲಾನೊಳರ್ಧಾಂಗ ವಾಗಭಿ |ಮಾನಿಯೊಳರ್ಧವಿಟ್ಟಾ ೫

೧೩೪
ಶಿವಭಕ್ತನಾಗೋ ಪ್ರಾಣೀ | ಅವನಿಯಲ್ಲಿ ಪರದಲ್ಲಿ ||
ವಿವಿಧ ಭೋಗಗಳ ಕಾಂಬೀ | ಶಿವಭಕ್ತನಾಗೊ ಪ್ರಾಣೀ ಪ
ಲಿಂಗಾಧಾರಣ ಮಾಡಿ ಜಂಗಮರಧಿಕಾರಾ ಸಾರೀ |ಹಿಂಗಿಕೊ ಭವಜನ್ನ್ಯ ದುಃಖ ||
ಸಂಗಾವಾಗಿ ರುದ್ರಾಕ್ಷಿಯಂಗಾಳರ್ಚಿಸೂತಾ | ನಿಃ ಸಂಗನಾಗೊ ದುರ್ವಿಷಯದೀ ೧
ಸುವಿವೇಕಿ ಮನಸಿಲಿಂದಾ ಶಿವಶಬ್ದವ ಶೋಧಿಸಿ |ಕವಿಗಳ ಮುಖದಿಂದ ತಿಳಿಯೋ ||
ನವತ್ರಿಪತ್ರಯುಕ್ತ ಬಿಲ್ವಾ ಸಮರ್ಪಣೆ ಮಾಡೊ |ಸವೆಯಾದಂಥ ಪದವೈದೂವಿ೨
ಭಜಿಸೋ ವೀಭೂತಿಯನ್ನು ದ್ವಿಜಸ್ತೋಮಾಕೆರಗಾದೀರೊ |ಪ್ರಜಗಳಿಗೆ ತೋರದಿರು ಭಾವಾ ||
ಅಜ ಪ್ರಾಣೇಶ ವಿಠ್ಠಲಾನು ಅಜಿನಾಂಬರ ಸಮನೆನಬ್ಯಾಡಾ |ವಿಜಯವಂತನಾಗುವೀ ಜಗದೀ ೩

೨೪೭
ಶೋಭಾನ ಪಾಂಡುರಂಗಗೆ | ಶೋಭನ ಶ್ರೀನಿವಾಸಗೆ |ಶೋಭನ ಉಡುಪಿ ನಿಲಯಾಗೇ ಪ
ಸುಮನಸರಾಳ್ದವನ ವರಜ ಬಾ |ಕಮಲೆ ಸದನ ಮುಖಕಂಜ ರವಿ ಬಾ |
ವಿಮಲ ಗುಣಾರ್ಣವ ನೀಲ ಜಲದನಿಗಾತ್ರಾ ಬಾ ||
ವಾರಿಜನೇತ್ರ ಬಾ ಮಂಗಳ ಸ್ತೋತ್ರ ಬಾ |
ವಹನ ಪತತ್ರಾ ಬಾ ನತಜನ ಮಿತ್ರಾ ಬಾ ಹಸಿಯಾ ಜಗುಲೀಗೇ ೧
ಅಷ್ಟನಾಮ ಒಪ್ಪುವನೇ ಬಾ | ದುಷ್ಟ ದಿತಿ ಸುತ ಮದಹರಣಾ ಬಾ |
ಮುಷ್ಟಿಕ ಪ್ರಮುಖಹ ಗೋವರ್ಧನಧರ ಕೃಷ್ಣಾ ಬಾ ||
ಹರಿಗತಕಷ್ಟಾ ಬಾ ತ್ರಿಜಗಚ್ಚೇಷ್ಟಾ ಬಾ |
ಅಕ್ಷರ ಜೇಷ್ಠಾ ಬಾ ನಿರುತ ವಿಶಿಷ್ಟಾ ಬಾಹಸಿಯಾ ಜಗುಲೀಗೇ ೨
ಮಾತುಳ ರಿಪು ವನ ಅನಳ ಬಾ |ಶ್ವೇತವಹನ ರಥ ಸಾರಥಿ ಬಾ |
ಮಾತಿ ಶಿರ ಕಡಿದು ಬಾಹುಜರೊರಸಿದ ನಾಥಾ ಬಾ ||
ಗೋಕುಲ ತ್ರಾತಾ ಬಾ ಲೋಕೈಕ ದಾತಾ ಬಾ |
ವಸುದೇವ ಜಾತಾ ಬಾ ಸುಪ್ರಖ್ಯಾತಾ ಬಾ ಹಸಿಯಾ ಜಗುಲೀಗೇ ೩
ವಾಮನ ಕೇಶವ ಹಯಮುಖ ಬಾ |ಭೀಮ ವಿನುತ ನಿಃಸೀಮಾ ಬಾ |
ಕಾಮಿನಿಯರ ಚೈಲಹರಣ, ಋಷಿ, ರಣಭೀಮಾ ಬಾ ||
ದಶರಥ ರಾಮಾ ಬಾ ಬಾಣವಿರಾಮಾ ಬಾ |
ಅಜಮುಖ ನಾಮಾ ಬಾ ಕೃಷ್ಣಾ ಪ್ರೇಮಾ ಬಾ ಹಸಿಯಾ ಜಗುಲೀಗೇ ೪
ಕಂದರ್ಪ ಜನಕ ನರಹರಿ ಬಾ |ಅಂದಮೃತವ ತಂದವನೇ ಬಾ |
ಮಂದೇತರ ಮುದ ಘಟಜ ಪ್ರಮುಖ ಮುನಿವಂದ್ಯಾ ಬಾ ||
ಕಸ್ತುರಿ ಛಂದಾ ಬಾ ದೇವ ಮುಕುಂದಾ ಬಾ |
ದೇವಕಿ ಕಂದಾ ಬಾ ಸದ್ಗುಣ ವೃಂದಾ ಬಾಹಸಿಯಾ ಜಗುಲೀಗೆ ೫
ಕ್ಷಿತಿಧರ ಜಿನಧರ ಸಖನೇ ಬಾ |ಅತುಳ ಮಹಿಮನೆ ಅಜಿತನೇ ಬಾ |
ಸತಿಗಮರ ಸದನದ ಕುಸುಮ ತಂದಚ್ಯುತನೇ ಬಾ ||
ಮೂರುತಿ ಸುತನೆ ಬಾ ಲೋಕ ವಿತತನೆ ಬಾ |
ಪೂಜಿಗುಚಿತನೆ ಬಾ ರಕ್ಷಣರತನೇ ಬಾಹಸಿಯಾ ಜಗುಲೀಗೆ ೬
ಪ್ರಾಣೇಶ ವಿಠ್ಠಲರಾಯಾ ಬಾ |ವೀಣಾಪಾಣೀ ಜನಕನೆ ಬಾ |
ಮಾಣದೆ ಭಕ್ತರ ಪೊರವುತಿಹನೆ ಸತ್ರಾಣಾ ಬಾ ||
ಸತ್ಯಾ ಪ್ರಾಣಾ ಬಾ ಶ್ರೀ ಪಾಠೀಣಾ ಬಾ |
ನಿಜ ವಿಜ್ಞಾನಾ ಬಾ ನಿತ್ಯ ಕಲ್ಯಾಣಾ ಬಾ ಹಸಿಯಾ ಜಗುಲೀಗೆ ೭

೯೦
ಶ್ರೀ ಭಾರತೀಶ ನಮೋ ನಮೋ ಬಿನ್ನಪವ ಕೇಳು |
ನಾಭಿನಂದನ ಚರಣ ಸರಸೀರುಹ ಭೃಂಗ ನಮೋ ನಮೋ ಪ
ಸಂಕರ್ಷಣನ ತನಯ ಜಡಜಂಗಮದಿ ವ್ಯಾಪ್ತ |ಶಂಕರಾದಿ ಸಮಸ್ತ ಸುರವಂದಿತ ||
ಕಿಂಕರರವನೋ ನಾನು ದಯದಿ ಕರಪಿಡಿದು ಭವ |
ಪಂಕದೊಳಗಿಹನ ಕಡೆ ತೆಗೆಯೊ ಭಯ ಕಳಿಯೊ ೧
ನೀನಲ್ಲದಾರ ಸಲಹುವರ ಕಾಣೆನೋ ಜೀಯ |ಭಾನುನಂದನ ರಕ್ಷ ದುರುಳ ಶಿಕ್ಷ ||
ಹೀನಮತಗಳ ಸೋಲಿಸಿದ ದಕ್ಷ ಸುರಪಕ್ಷ |ದೀನಜನ ಮಂದಾರ ಪವನ ಸುಕುಮಾರಾ ೨
ಪ್ರಾಣೇಶ ವಿಠಲನಿಚ್ಛಾನುಸಾರ ಧರೆಯೊಳು |ನೀನವತರಿಸಿ ಜಾತಿ ಧರ್ಮವನ್ನು ||
ಜ್ಞಾನಿಗಳ ಸಮ್ಮತಾಹಂತೆ ಆಚರಿಸಿದೆಯೊ |ಮಾನಿ ಮೋಕ್ಷದನೆ ಆರೊಂದು ಸುರವಂದ್ಯ ೩

೧೬೪
ಶ್ರೀ ಮಧ್ವಮತವೆಂಬ ಕ್ಷೀರ ಪಾರಾವಾರ |ಸೋಮನೆನಿಸುತಿಹ ವರದೇಂದ್ರ ಕರಸಂಜಾತ |
ನೀ ಮಹಿಯೊಳಾವಾವ ಪರಿ ಕಾಣಿಸುವ ನೋಡಿರಾಮ ಪದ ಜಲಜ ಭೃಂಗ ಪ
ಕುಂಡಲಿಯೊ ಭಾರತಿಯೊ ಈಶನೊ ಎಂದು ದ್ವಿಜ |ಷಂಡ ತುತಿಸುವುದು ಶ್ರೀ ಭುವನೇಂದ್ರ ರಾಯರಾ |
ಕಂಡು ಪದಯುಕ್ತ ಪುರುಷಾಕಾರ ಶಿಖಾರಹಿತ ಕೂಡದಿದುಯೆನಲು ಪೇಳ್ವೆ ||
ದಂಡಧರ ಯೋಗದಾಢ್ರ್ಯದೊಳು ತಾ ಅಹಿಯಂತೆ |ಪಂಡಿತೇಶನು ವಾಗ್ಬಲದಲಿ ಭಾರತಿಯಂತೆ |
ರುಂಡಮಾಲಿಯ ತೆರದಿ ತೋರುವರು ವೈರಾಗ್ಯದಲಿ ನಿರುತ ಭಜಿಸುವರಿಗೆ ೧
ವಿಧಿಯೊ ಅರ್ಕನೊ ಇಂದ್ರನೋ ಎಂಬ ತೆರದಿಂದ |ಬುಧಜನಕೆ ತೋರ್ವ ನಾಲ್ಮೊಗ ಖಗ ಸಹಸ್ರಾಕ್ಷ |
ಇದು ಯೆಂತು ಸಾಮ್ಯವೆನೆ ಸರ್ವಜನ ಯೋಗ್ಯತೆಯನರಿವಂತೆ ಧಾತನಂತೇ ||
ಮದಡ ಜ್ಞಾನಾಖ್ಯ ತಮವಳಿವಲ್ಲಿ ರವಿಯಂತೆ |ಪದುಮೇಶನ ಗುಣವ ವಿಚಾರಿಸಲನೇಕಾಕ್ಷ |ಚದುರನೆನುವ ಬಗೆಯಿಂದೊಪ್ಪುತಿಹ ನಮ್ಮ ಗುರುವ ತುತಿಸುವೊದಕ್ಕೆನ್ನ ವಶವೆ ೨
ಕಡಲೊ ಸುರಧೇನವೊ ಹಂಸನೋ ಯೆಂಬಂತೆ |ಪೊಡವಿಗೆ ವಿರಾಜಿಸುವ ಉದಕಮಯವಾಗಿಹದು |
ಕಡು ಚತುಷ್ಪಾದಿ ಅಂಡಜ ಜಂತು ಈ ಸಾಮ್ಯ ಸಲ್ಲದೆನೆ ಸಲ್ವ ವಿವರ ||
ಒಡಲಿನೊಳು ಪ್ರಾಣೇಶ ವಿಠಲ ಮಣಿ ಪೊಳೆವುತಿದೆ |ಕೊಡುವ ಬೇಡಿದ ವರವ ಅಮರರಾಕಳಿನಂತೆ |
ಕುಡಿವಂತೆ ಹಂಸ ಪಯ ಜಲವುಳಿದು ದೋಷವೆಣಿಸದೆ ಬಿನ್ನಪವ ಲಾಲಿಪ ೩

೧೭೫
ಶ್ರೀಕಾಂತೊಲಿದ ದಾಸ | ರೀ ಕಲಿಯುಗದಲ್ಲಿ |ಲೇಖಾಂಶರಹುದೇ ತಂಗೀ ||
ಶೋಕ ಬ್ಯಾಡೆಲೆ ನರಲೋಕ ಉಳಿದರೆಂದು |ಈ ಕಂಭದೊಳಗಿಹರೇ ಹೇ ನೀರೇ ಪ
ಆ ಸೇತೂ ಮೊದಲಾದ ಹಿಮಾಶೈಲ ಪರಿಯಂತ |ಸೂಸಿಹದಿವರ ಕೀರ್ತಿ ||
ಯೇಸು ಬಗಿಯಲಿಂದ ಸೋಸಿ ನೋಡಿದರನ್ನ |ಪಾಸಟಿ ಯನಿಸದಲ್ಲೇ | ಯೇ ನಲ್ಲೇ ೧
ನರ ಮೋಹನಾರ್ಥವಾದರು ಲೌಕೀಕೆಂಬುದೂ |ಅರಿಯಾರು ಸ್ವಪ್ನದಲ್ಲೀ ||
ಧರಿಯೊಳಖಿಲ ಸಜ್ಜನರು ಪರೀಕ್ಷಿಸಿಹರು |ಬರಿದೆ ಸ್ತವನವಲ್ಲಾವೆ | ಕೇಳಲವೇ೨
ಹರಿಕೃಪಿ ನೋಡು ಇವರಿಗೆ ಜನರು ಎಷ್ಟು |ಜರಿದಾರು ಮನ್ನಿಪರೂ ||
ಕರಣತ್ರಯದ ಶುದ್ಧರೆರಡು ಮಾರ್ಗವ ಬಲ್ಲ |ವರು ನಿತ್ಯಾಚರಿಸಿದರೂ | ಹಿರಿಯಾರೂ ೩
ಇವರಂದ ನುಡಿಯನು ಭವಕೆ ತಂದರೆ ಲೇಶ |ಭವ ದುಃಖವಾಗದಲ್ಲಾ ||
ಜವ ದೊರವದು ಮುಕ್ತಿ ಜವನ ಬಾಧಿಲ್ಲಾಶು |ಕವಿಕುಲ ತಿಲಕರಿಗೇ | ನೀ ಯರಗೇ ೪
ಖಳಹ ಪ್ರಾಣೇಶ ವಿಠ್ಠಲನ ಚರಿತೆ ಪದ ಗಳಲಿ ಬಣ್ಣಿಸಿ ಸಂತತೀ |
ನಿಲಸಿ ಜ್ಞಾನಿಗಳನ್ನು ತಲಿ ತೂಗಿಸಿದರು ಪೇ |ಳಲು ಎನ್ನ ಮತಿ ಸಾಲದೂ | ಸತ್ಯವಿದೂ ೫

ಶ್ರೀ ಪ್ರಾಣೇಶ ದಾಸರ ತಾತ್ವಿಕಹಿನ್ನೆಲೆಯ ರಚನೆಗಳು
೨೧೯
ಶ್ರೀಪೂರ್ಣ ಬೋಧ ಮತವಾ ನಂಬಿ |ಶ್ರೀ ಪತಿಯ ಒಲಿಸುವವರು ಕೇಳೀ ಪ
ಆದಿಯಲಿಯಾದ ಚರಿತೆಯನ್ನು ಪರ |ಮಾದರದಿ ಕೇಳಿ ಸುಜನಾ ||
ರಾದವರು ಭಕುತಿಯಿಂದಾ ಮಹ ಪ್ರಳಯ |ವಾದ ತರುವಾಯ ಸೃಷ್ಟಿಯಾಗೇ ೧
ಸುರರೆಲ್ಲ ತಮ್ಮ ತಮ್ಮಾ ಸ್ಥಾನದಲಿ |ಸ್ಥಿರರಾಗಿ ಯುವರಾಜ್ಯಕೇ ||
ಅರುಹನಾರೆನಲು ಅದಕೇ ಪೇಳಿದನು |ಹರಿಯು ಇಂತುಪಾಯವ ಕೇಳೀ ೨
ಒಂದು ದೇಹದಿ ಸರ್ವರೂ ಕ್ರಮನುಸಾರ- |ದಿಂದ ತೆರಳಿರಿ ಚೇತನಾ ||
ಕುಂದುವದು ಆವನಿಂದಾ ಅವ ಶ್ರೇಷ್ಠ |ನೆಂದರಿವದೆಂದು ಸರಿದಾ ಕೇಳೀ ೩
ಹರಿ ಆಜ್ಞದಂತೆ ತ್ಯಜಿಸೇ | ಕುಂಟನೂ |ಕುರುಡ ಮೂಕನು ಯನಿಸಿತೂ ||
ಹಿರಿಯ ಪವಮಾನ ಬಿಡಲೂ ಎಲ್ಲರೂ |ಅರಿತರೂ ಕುಣುಪವೆಂದೂ ಕೇಳೀ ೪
ಮತ್ತೆ ಮೊದಲಂತೆಲ್ಲರೂ ವ್ಯಾಪಿಸಲು |ಬಿತ್ತು ಏಳಲಿಲ್ಲವದೂ ||
ಸತ್ಯ ಸಂಕಲ್ಪ ಮರುತಾ ಸೇರಲದು |ತತ್ತಲಿಲ್ಲದೆ ಚಲಿಸಿತೂ ಕೇಳೀ ೫
ಅಂದಿನಾರಭ್ಯವಾಗೀ ತಿಳಿಸಿದನು |ಇಂದಿರೇಶನು ಈತನಾ ||
ವಂದಿಪರಿಗೊಲಿವೆನೆಂದೂ ಇನ್ನಿದಕೆ |ಸಂದೇಹ ಉಂಟೆ ಬಂದೂ ಕೇಳಿ ೬
ಸ್ವಾಮಿ ಶ್ರೀ ರಾಮನಾಗೇ ಅವತಾರ |ವಾ ಮಾಡಿದನು ಮಾರುತಾ ||
ಭೂಮಿಜೆಯ ದನುಜ ಒಯ್ಯಲೂ ಆ ಪುರಕೆ |ಪ್ರೇಮದಿಂದಲಿ ಚಿಗಿದನು ಕೇಳೀ ೭
ರಾಘವನ ಉಂಗುರವನೂ ವನದೊಳಗೆ |ಬ್ಯಾಗೆ ಇಂದಿರಿಗೆ ಕೊಟ್ಟೂ ||
ಆಗಾ ಪೊಳಲನೇ ಸುಟ್ಟೂ ಹಾರಿ ತ್ವರ |ರಾಗಟಿಯ ಒಡಿಯಗಿತ್ತಾ ಕೇಳೀ ೮
ಇಂದ್ರಜಿತು ಮೋಹನಾಸ್ತ್ರಾ ಬಿಡಲಾಗಿ |ಅಂದಗೆಟ್ಟಿತು ಕಪಿ ಕುಲಾ ||
ಇಂದಿರೇಶನ ಆಜ್ಞದಿಂ ಆಗ ತ್ವರ- |ತಂದ ಸಂಜೀವನವನೂ ಕೇಳೀ ೯
ಅನಿಮಿಷರು ಕಪಿಗಳಾಗೀ ನಿರುತ ರಾ- |ಮನ ಭಜಿಪರೀ ಕೆಲಸಕೇ ||
ಅನುಕೂಲರೊಬ್ಬರಲ್ಲಾ ಒಬ್ಬ ಅಂ- |ಜನಿ ಸುತನೆ ಸೇವಿ ಮಾಡ್ದಾ ಕೇಳಿ ೧೦
ಉಪಕಾರ ಒಂದಕೆನ್ನಾ ಕೊಟ್ಟ ಮ್ಯಾ- |ಲೆ ಪರಿಮಿತ ಸೇವಿಗುಚಿತಾ ||
ಸು ಪರೀಕ್ಷಿಸಿದರು ಕಾಣೇ ಭಳಿರೆ ಯಂ- |ದ ಪರಾಜಿತನು ಮೊಗಳಿದಾ ಕೇಳೀ ೧೧
ಈ ವಾಯು ಒಲಿದನೆಂದೂ ಒಲಿದ ಸು- |ಗ್ರೀವ ವಿಭೀಷಣಗೆ ರಘುಜಾ ||
ಶ್ರೀವರನೆ ಕೃಷ್ಣನಾಗೀ ಅವತರಿಸೆ |ಐವರೊಳು ಭೀಮನಾದಾ ಕೇಳೀ ೧೨
ತರಣಿ ಮೊಮ್ಮಗನ ಸೇವೀ ಈ ವೃಕೋ- |ದರ ಮಾಳ್ಪನೆಂದು ಶೌರಿ ||
ನರನ ರಥವನು ನಡಿಸಿದಾ ಇಲ್ಲದಿರೆ |ಥರವೆ ಇದು ಪಾಂಡವರಿಗೇ ಕೇಳೀ ೧೩
ಜೀವೇಶರೊಂದೆ ಎಂದೂ ವಾದಿಗಳು |ಭಾವಿಸಿರೆ ಮಧ್ವಮುನಿಯೂ ||
ತಾ ವಿರಚಿಸಿ ಸುಗ್ರಂಥವಾ ನಿರ್ದೋಷ |ಗೋವಿಂದನೆಂದರುಹಿದಾ ಕೇಳೀ ೧೪
ಈತ ಮಾಡಿದ ಚರಿತೆಯಾ ಕಡೆಯಾಗಿ |ನಾ ತುತಿಸಲಾರೆ ಸ್ವಲ್ಪಾ ||
ವಾತ ಸ್ಮರಣಿಯ ಮಾಡಲೂ ವೈಕುಂಠ |ಆತು ಇಪ್ಪದು ತಪ್ಪದೂ ಕೇಳೀ೧೫
ದೇಶದೊಳು ತುಂಬಿ ಇಹ್ಯದೂ ಶ್ರೀ ಭಾರ- |ತೀಶ ಮಾಡಿದ ಮಹಿಮಿಯೂ ||
ಲೇಶವಾತನ ಚರಿತ್ರೇ ಸ್ಮರಿಸೆ ಪ್ರಾ- |ಣೇಶ ವಿಠ್ಠಲ ಒಲಿವನೂ ಕೇಳೀ ೧೬
ಪ್ರಾಣದೇವರ ಕಥಿಯನು ಕೇಳಿದರೆ |ತಾನೆ ಇಹಪರದಿ ಬಿಡದೇ ||
ಪ್ರಾಣೇಶ ವಿಠಲ ಕಾಯ್ವಾ ಇದಕೆ ಅನು- |ಮಾನ ಲೇಸಿನಿತವಿಲ್ಲವೂ ಕೇಳೀ೧೩

೯೫
ಶ್ರೀವಾಯುದೇವರಿಗೆ ನೀತವಾದ |ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ಪ
ತಾಲು ಜಾನುಗಳು ಸ್ತನ ತುದಿಯು ನಾಸಿಕ ಚಕ್ಷು |ನಾಲಕ್ಕೊಂದು ದೀರ್ಘ ಜಂಘ ಗ್ರೀವ ||
ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ |ಮೇಲಾದ ತ್ವಕು ಬೆರಳು ನಖ ಪಂಚ ಸೂಕ್ಷ್ಮ ೧
ಕಕ್ಷಿ ಕುಕ್ಷಿಯು ವಕ್ಷ ಕರ್ಣ ನಖ ಸ್ಕಂದಾರು |ರಕ್ಷಘ್ನನಿಗೆ ಶೋಭಿಪವು ಉನ್ನತ ||
ಅಕ್ಷಿ ಚರಣ ಕರ ನಖ ಅಧರ ಜಿಹ್ವೇಣು ಜಿಹ್ವೆ |ಮೋಕ್ಷದನ ಈ ಏಳು ಅವಯವವು ರಕ್ತ ೨
ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ |ಉತ್ತಮ ಲಲಾಟ ಉರದ್ವಯ ವಿಸ್ತಾರಾ ||
ಸತ್ಯ ಸಂಕಲ್ಪ ಶ್ರೀ ಪ್ರಾಣೇಶ ವಿಠಲನ |ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ ೩

೫೬
ಸಂಜೆಯೊಳಿಂತು ಬರುವರೆ | ಶಬ್ದ ಹೊರುವರೆ | ಜನಕಂಜದಲಿಹರೆ ಪ
ಸಂಧ್ಯಾಕಾಲವು ಗೋವು ಬಾರವೆ, ವತ್ಸ ಬಳಲವೆ, ಹೀಗೆ ಬರುವುದು ಥರವೆ |
ಅಂದಾರು ಅತ್ತಿ ಅತ್ತಿಗೆಯರು, ಇಷ್ಟು ಸಹಿಸಾರು, ಪತಿಗಳು ಸುಮ್ಮನಿರರು ||
ಕಂದಗಳೆರೆವ ಸಮಯವಿದು, ಬಿಟ್ಟು ಬರುವುದು, ಚರ್ಯೆ ನೋಡಲ್ಕರಿದು |
ಬಂದೊಂಧೆಳಲೆ ಮನೆಯೊಳು ದೀಪ, ಹಚ್ಚದಿರೆ ಪಾಪ, ಮಾಡಬೇಡಿರಿ ಕೋಪ ೧
ಗಂಡನೇ ದೈವ ಹೆಂಗಸರಿಗೆ, ತಿಳಿಯದೆ, ಹೀಗೆ ಬರುವರೆ ಯನ್ನ ಬಳಿಗೆ |
ಬಂಡು ಇದೇನಿರೆ ಬತ್ತಲೆ, ಬಂದಿರೆಲ್ಲೆಲೆ, ಆಭರಣವೆಲ್ಲಿವಲ್ಲೆ ||
ಕಂಡ ಕಂಡಲ್ಲೆ ಹುಡುಕುವರು, ನಿಮ್ಮನ್ನಾಳ್ವರು, ಕಾಣದಲೆ ಮಿಡುಕುವರು |
ತುಂಟಾಟ ಕಲಿಯಬಾರದು ಇಷ್ಟು, ಪೇಳುವಿನೆ ಒಟ್ಟು, ಕೇಳಿರೆ ಮನವಿಟ್ಟು ೨
ಆಯಿತು ನಾ ಗಂಡನಾದೇನೆ, ತಿಳಿಯದರೇನೆ, ಕಂಡವರು ನಗರೇನೆ |
ಕಾಯೋ ಪ್ರಾಣೇಶ ವಿಠಲ ಎಂದು, ಯನ್ನ ಪದರೆಂದು, ನಮಸ್ಕರಿಸಿರೆ ಬಂದು ||
ಈಯಾಟ ಸಲ್ಲ, ನಿಮ್ಮನೆಗೀಗ, ಸಾಗಿರೆ ಬೇಗ, ಪತಿಗಳ ಕೂಡ ಭೋಗ |
ಆಯಾಸವಿಲ್ಲದೆ ಮಾಡಿರೆ, ಮಾತು ಕೇಳಿರೆ, ಭ್ರಾಂತರಾಗಬೇಡಿರೆ ೩

೨೨೩
ಸಜ್ಜನರ ನಡತಿದೊ ಶ್ರೀ |ಅರ್ಜುನ ಸಖನ ಪದಾಬ್ಜ ಭಜಿಸುವದೆ ಪ
ಕುಹಕರ ಸಂಗವ ಮಾಡದೆ ಖೇಚರ |ವಹನನಾಳುಗಳ ಆಳಾಗೀ ||
ಅಹರ್ನಿಶಿಯಲಿ ತತ್ವ ವಿಚಾರಿಸುತಲಿ |ಅಹಲ್ಲಾದವ ಮನದಲಿ ಬಿಡುತಿಪ್ಪುದೆ ೧
ನೀಚ ಸುರ ನರರ ಸೇವಿಸಿ ವರಶನ |ಯಾಚಿಸದೆ ಸ್ವಧರ್ಮವ ಬಿಡದೇ ||
ಖೇಚರಜ ಮತವ ಪೊಂದಿಸು ಕರ್ಮಗ- |ಳಾಚರಿಸುತ ವಿಜ್ಞಾನ ಘಳಿಸುವದೆ ೨
ಪದ್ಮಜಮುಖರಿಗೆ ಕ್ಷಣ ಕ್ಷಣದಲಿ ಶಿರಿ |ಬುದ್ಧಿಯ ಪ್ರೇರಿಸುವಳು ಆರೇ ||
ಪ್ರದ್ಯುಮ್ನನು ಮಾಡುವ ಲೀಲಿಯು ಬಳಿ |ಇದ್ದರು ಒಂದನು ಅರಿಯಳು ಎಂಬುದೆ ೩
ತತ್ವಭಿಮಾನಿಗಳೆಲ್ಲ ಸಮೀರ ಪ್ರ- |ವರ್ತಿಸಿದಂದದಿ ವರ್ತಿಪರೂ ||
ಸತ್ಯವತಿ ಜಗತೊಬ್ಬನೆ ಅಚ್ಛಿನ್ |ಭೃತ್ಯ ಶಿವಾದ್ಯರು ಛಿನ್ನರು ಎಂಬುದೆ ೪
ಮೂಲದಲಿದ್ದ ಮಹತ್ಮಿ ನಿರುತ ಶ್ರೀ |ಲೋಲನ ಅವತಾರದೋಳುಂಟೂ ||
ಕಾಳೀಶಗೆ ಕೊಂಡರೆ ಬರುತಿಪ್ಪುದು |ನೀಲಕಂಠ ಪ್ರಮುಖರಿಗಿಲ್ಲೆಂಬುದೆ ೫
ಚೇತನಚೇತನವಾದ ಜಗತ್ಯವು | ವಾತನಧೀನದೊಳಿರುತಿಹದೂ ||
ಆತನು ರಮೆಯಧೀನವಳು ಹರಿ |ದೂತಳೆಂದು ನಿಶ್ಚಯ ತಿಳಕೊಂಬುದೆ ೬
ಎಲ್ಲ ದಿವಿಜರವಲಕ್ಷಣ ಯುಕ್ತರು |ಬಲ್ಲಿದ ಹರಿ ಮಾರುತ ಮಾತ್ರಾ ||
ಸಲ್ಲಕ್ಷಣರೆನುತಲಿ ತಿಳಿದು ಗಿರಿಜ |ವಲ್ಲಭ ಪ್ರಮುಖರಿಗೊಂದಿಸುತಿಪ್ಪುದೆ ೭
ಅಂಬುಜಭವ ಮೊದಲಾದವರಿಗೆ ಪೀ- |ತಾಂಬರತನ ಪೆಸರಿತ್ಯಹನೂ ||
ಕಂಬಸದನ ತೊಲಿ ಜಂತಿಯು ಮಾಳಿಗಿ |ಎಂಬ ಶಬ್ದವಾಚ್ಯನು ಹರಿ ಎಂಬುದೆ ೮
ಅರಸುಗಳಾದವರನುಗರ ಕೈಯಲಿ |ನರರ ಶೀಕ್ಷಿ ಮಾಡಿಸುವಂತೇ ||
ಹರಿ ವಿಧಿ ಶಿವರೊಳು ತಾನಿಂತಾವಾಗ |ಮರಿಯಾದಿಗಳು ನಡಿಸುತಿಹ್ಯನೆಂಬುದೆ ೯
ಸೃಜಿಸುವ ಜನೊಳಿದ್ದು ಜಗವ ಪೊರವನು |ಭುಜಗ ಭೂಷಣನೊಳಿದ್ದು ಲಯಾ ||
ದ್ವಿಜ ರೂಪಿಯೆ ಮಾಳ್ಪನು ಎಂತಿಳಿಯದ |ಕುಜನರು ನರಕವ ಐದುವರೆಂಬುದೆ ೧೦
ವಂದೊಂಧರಿ ನೇಮದಿ ಬಲ್ಲರು ಮರ |ಳೊಂದನರಿಯರಜಾದಿಗಳೂ ||
ಮಂದರಧರ ಬಹು ಬಲ್ಲನು ಜೀವರ |ಬಂಧಕ ಶಕುತಿಯೊಳಿರಿಸಿಹನೆಂಬುದೆ ೧೧
ಜ್ಞಾನಾನಂದಾದಿ ಗುಣಭರಿತ ಹರಿ |ಹೀನತನವನೆಂದಿಗ್ಯು ಅರಿಯಾ ||
ಕಾಣಿಸಿಕೊಳ್ಳನು ಎಂದಿಗು ಅಧಮರಿ- |ಗೇ ನಳಿನಾಕ್ಷನು ಎಂದುಚ್ಚರಿಪುದೆ ೧೨
ಝಷ ಮೊದಲಾದವತಾರವು ಮಿಥುನೀ |ದೆಶೆಯಿಂದಲಿ ಆಗಿಲ್ಲನಳಾ ||
ಮಸಿಯಲು ಕಾಷ್ಠದಿ ತಾ ತೋರ್ವಂದದಿ |ವಸುದೇವಜನವ್ಯಕ್ತನು ಯಂದರಿವದೆ ೧೩
ಆಪಗ ವನಧಿಯನಳನಿಳ ಶಶಿ ರವಿ |ಈ ಪೊಡವೀ ವನ ನಿರಂತರದೀ ||
ಶ್ರೀ ಪತಿ ಕಟ್ಟಲಿಯೊಳಗಿಹದೆಂದು ಪ- |ದೆ ಪದೆ ನೆನದು ಸುಖಬಡುತಲಿರುವುದೆ ೧೪
ನಿಶಿಯಲಿ ಕಂಡಿಹ ಸ್ವಪ್ನವು ನಿಶ್ಚಯ |ಅಸಮ ಸೃಜಿಸಿದ ಜಗತ್ಯವನೂ ||
ಹುಸಿ ಎಂಬವ ಕುಲಭ್ರಷ್ಟನು ಎಂದಿಗು |ಹಸಗತಿ ಅವನಿಗೆ ಇಲ್ಲಿಲ್ಲೆಂಬುದೆ ೧೫
ಪ್ರಾಣಿಗಳೊಳಗಿದ್ದೆಲ್ಲ ಕೆಲಸವನು |ತಾನೆ ಮಾಡಿ ಮಾಡಿಸಿ ಫಲವಾ ||
ಏನು ನೋಡೆ ನಿರ್ಮಲನಾಗಿಹ ಹರಿ |ಭಾನುಸಖ ಜಲದೊಳಿರುವಂತೆಂಬುದೆ೧೬
ತಾ ಬಂಧಿಸುತಿಹ ಸರ್ವ ಜಗತ್ಯವ |ನೂ ಬದ್ಧನು ಅಲ್ಲವು ಊರ್ಣಾ ||
ನಾಭಿಯ ಜಾಲಿಯ ಹೊರಗಿರುವಂದದಿ |ಶ್ರೀ ಭಗವಂತನು ಇರುತಿಹನೆಂಬುದೆ೧೭
ಭಕ್ತಿಗೆ ಭೇದವು ಜ್ಞಾನಕೆ ಭೇದವು |ಮುಕ್ತಿಗೆ ಭೇದವು ಯಂತಿಳಿದೂ ||
ಸುತ್ಪುರುಷರ ಸ್ನೇಹವ ಸಂಪಾದಿಸಿ |ಮತ್ತೊಂದೊಲ್ಲೆನು ಯಂದಿರುತಿಪ್ಪುದೆ ೧೮
ಸಾಧನತ್ರಯ ಫಲಗಳನು ವಿಚಾರಿಸಿ |ಮಾಧವನ ಗುಣ ಮಹತ್ಮಿಯನೂ ||
ಸಾದರದಿಂ ಜ್ಞಾನಿಗಳ ಮುಖದಲಿ ದಿ- |ನೇ ದಿನೇ ಕೇಳಿ ವಿಜ್ಞಾನ ಘಳಿಸುವದೆ ೧೯
ಕಾಲಿಲ್ಲದೆ ನಡಿಯಲು ಬಲ್ಲನು ಹರಿ |ಕೇಳುವ ಕಿಂವಿಯಿಲ್ಲದೆ ತನ್ನಾ ||
ಲೀಲಿಯು ಹೀಂಗದೆ ಯಂದು ತಿಳಿಪುದಕೆ |ಈ ಲೋಕದಿ ಅಹಿ ಮಾಡಿಹನೆಂಬುದೆ ೨೦
ಚೇತನ ಕೃತ್ಯವ ಮಾಡುತಲಿಪ್ಪವ |ಚೇತನಗಳು ಚಿಂತಾಮಣಿ ದೇ- ||
ವಾತರು ಸಂಜೀವನ ಪರ್ವತ ಶ್ರೀ-ನಾಥನ ಆಜ್ಞವು ಯಿದು ಎಂದರಿವುದೆ ೨೧
ಸತ್ವಾದಿ ಗುಣರಹಿತ ಪರಮಾತ್ಮನು |ಚಿತ್ತು ಜ್ಞಾನಬಲ ಸುಖ ಪೂರ್ಣಾ ||
ಮೃತ್ಯುಂಜಯ ಸಖ ಗುಣಶೂನ್ಯಂಬ ಪ್ರ- |ವರ್ತಕ ಹೀಗೆಂದೂ ತಿಳಿದೀಹದೆ ೨೨
ಯೇಸು ಯೇಸು ಕಲ್ಪಗಳಾದರು ಶ್ರೀ- |ವಾಸುಕಿ ಶಯನಗೆ ಎಂದೆಂದೂ ||
ನಾಶವಿಲ್ಲ ವಿಶೋಕರು ಧರಿಯೊಳು |ಶ್ರೀಶನ ವ್ಯತಿರಿಕ್ತಾರಿಲ್ಲೆಂಬುದೆ ೨೩
ಬ್ರಹ್ಮಾದಿಗಳಿಗೆ ಜನಕನು ಶ್ರೀ ಪರ |ಬ್ರಹ್ಮಗೆ ಒಬ್ಬರು ಸರಿಯಿಲ್ಲಾ ||
ಒಮ್ಮಿಗು ಅಧಿಕರು ಇಪ್ಪರೆ ಶೃತಿಯಲಿ |ಸಮ್ಮತವಾಗದೆ ಈ ನುಡಿಯಂಬುದೆ ೨೪
ಶತಸುಖಿ ವಿಧಿ, ಕೋಟಿ ಸುಖಿ ರಮಾ, ಪರಿ- |ಮಿತಯಿಲ್ಲದ ಸುಖಿ ಕೇಶವನೂ ||
ಕ್ಷಿತಿಯೊಳು ಪರಮೇಶ್ವರನೈಶ್ವರ್ಯಕೆ |ಇತರರು ಆರುಂಟು ಸಮಾನೆಂಬುದೇ ೨೫
ತಾರಿಯು ಗಗನದೊಳೀಸವೆ ಯಂಬುದು |ಧಾರುಣಿಯೊಳಗೆಣಿಸಲಿ ಬಹುದೂ ||
ನಾರಾಯಣನ ಮಹತ್ಮಿ ಗಣಣಿಯನು |ಆರಾರಿಲ್ಲವು ಬಲ್ಲವರೆಂಬುದೆ ೨೬
ವಿಶ್ವಾಸದಿ ದೂರ್ವಿಯ ದಳವಿತ್ತರೆ |ವಿಶ್ವ ಕುಟುಂಬಿಯು ಕೈಕೊಂಬಾ ||
ಅಶ್ವಾದಿ ಮುಖದಿಂ ಪೂಜಿಸಲು ಅ |ವಿಶ್ವಾಸದವರು ಕೊಳ್ಳನು ಎಂಬುದೆ೨೭
ಗೋವಿಂದಗೆ ನಿಜ ನಾಮೆನಿಸುತಿಹವು |ಐವತ್ತೊಂದೂ ವರ್ಣಗಳೂ ||
ಈ ವಿವರವು ತಿಳಿದೂ ನಿಂದಾಸ್ತುತಿಗಳು |ದೇವನ ಗುಣಕಥನಗಳೆಂದರಿವದೆ ೨೮
ದುರ್ಜನರಿಗೆ ಎಂದಿಗೂ ದಯಮಾಡನು |ನಿರ್ಜರೇಶ ಸಂತರಿಗೊಲಿವಾ ||
ದುರ್ಜಯವಾದ ಮನಸು ನಿಶ್ಚೈಸುತ |ಅಬ್ಜ ದಳಾಕ್ಷನ ಒಲಿಸಿರೊ ಎಂಬುದೆ ೨೯
ಯಮ ನಿಯಮಾದಿಗಳಲಿ ದಾರಢ್ಯದಿ |ಕಮಲಾ ಸ್ವಸ್ತಿಕದಾಸನದೀ ||
ಸಮಚಿತ್ತದಿ ರೇಚಕ ಪ್ರಮುಖದಲಿಂ |ಸಮಿರನ ಬಂಧಿಸಿ ಜಪವನು ಮಾಳ್ಪುದೆ ೩೦
ಸ್ವಾಗರ್ಭಕ ಆಗರ್ಭಕ ಎಂಬುವ |ಯೋಗದ ಲಕ್ಷಣ ತಿಳಕೊಂಡೂ ||
ಮೂಗಿನ ತುದಿಯನೆ ಈಕ್ಷಿಸುತಲಿ ಶ್ರೀ |ಭಾಗೀರಥಿ ಪಿತನ ಸ್ಮರಿಸುತಿಪ್ಪುದೆ೩೧
ಅಂಗುಷ್ಠಾರಂಭಿಸಿ ಮಸ್ತಕತನ |ಕಂಗಜ ಜನಕನ ರೂಪವನೂ ||
ಹಿಂಗದೆ ಧೇನಿಸಿ ಮೈರಧರುಷದಿ |ಕಂಗಳಿಂದುದಕ ಸೂಸುತಲಿಪ್ಪುದೆ ೩೨
ಈ ಕರ್ಮವ ಮಾಡಿದೆ ಯನಗೀ ಪರಿ |ಸಾಕಲ್ಲ್ಯೆವು ಆಯಿತು ಎಂದೂ ||
ಲೋಕಕೆ ತಿಳಿಸದೆ ತನ್ನಯ ಭಾವವ |ಜೋಕಿಲಿ ಬಚ್ಚಿಟ್ಟೂಕೊಂಡಿರುವದೆ ೩೩
ಧ್ಯಾನಕೆ ಕುಳಿತರೆ ಮನ ಹರಿದೋಡಲು |ಜಾನಕಿರಮಣನ ಮೂರುತಿಯಾ ||
ತಾನೀಕ್ಷಿಸುತಲಿ ಸರ್ವದ ತತ್ವದ |ರೇಣುದೊಳಗೆ ಮುಣಿ ಮುಣಿಗಿ ಯೇಳುವದೆ ೩೪
ಅಸುರರನಳಿಯಲು ಶಕ್ತನು ಶ್ರೀಹರಿ |ದಶರೂಪವ ತಾಳಿದನ್ಯಾಕೇ ||
ವಸುಧಿಯೊಳಗೆ ಪಾಪಿಷ್ಠ ಜನರ ಮೋ- |ಹಿಸುವದಕೀ ಪರಿ ಲೀಲಗಳೆಂಬುದೆ ೩೫
ಅನ್ಯತ್ರದಿ ಇಂದ್ರಿಯಗಳ ಚಲಿಸದೆ |ತನ್ನೊಶದೊಳಗಿರಿಸನುದಿನದೀ ||
ಪನ್ನಗಶಯನನ ಪೂಜಿಯ ಮಾಡುತ |ಧನ್ಯನು ಈ ನರನೆನಿಸುತಲಿಪ್ಪುದೆ ೩೬
ಕೋಪವ ಬಿಟ್ಟು ನಿರಂತರ ಜ್ಞಾನಿಗ- |ಳಾ ಪದ ಭಜಿಸುತ ಹರಿದಿನದೀ ||
ಲೋಪವ ಮಾಡದೆ ನಿರ್ಜಲ ಜಾಗರ- |ವಾ ಪರಮ ಮುದದಿ ನಡಸುತಲಿಪ್ಪುದೆ ೩೩
ಋಣಕೆ ಕಾಳಕೂಟವ ಕುಡಿವಂತೆ ಮ- |ರಣದಂದದಿ ಸನ್ಮಾನಕ್ಕೇ ||
ಕುಣುಪದಂತೆ ಪರಸ್ತ್ರೀ ನೋಡಲ್ ಭಯ |ವನು ಬಡುವನು ಬ್ರಾಹ್ಮಣನೆಂದರಿವದೆ ೩೮
ಶತಮಖನಿಗೆ ಈಶಬಲ ಅವಗೆ ಬಲ ಮ- |ರುತವಗೆ ಬಲ ಹರಿ ಅವಗೆಂದೂ ||
ಇತರರ ಬಲ ಬೇಕಿಲ್ಲ ಸ್ವತಂತ್ರ |ಚ್ಯುತ ಸರ್ವಜ್ಞ ಸುಗುಣ ಪೂರ್ಣೆಂಬುದೆ ೩೯
ಸಂಸಾರವ ಹೇಯಿಸಿಕೊಂಡಾವಗ |ಕಂಸಾಂತಕನೂಳಿಗವನ್ನೂ ||
ಸಂಶಯವಿಲ್ಲದೆ ಮಾಡುತೊಂದಧಿಕ |ವಿಂಶತಿ ಕುಲ ಉದ್ಧಾರ ಮಾಡುವದೆ ೪೦
ಪ್ರಥಮ ವಯಸದಲಿ ವಿದ್ಯಾಭ್ಯಾಸವು |ದ್ವಿತಿಯದಲ್ಲಿ ಗೃಹಕರ್ಮವನೂ ||
ತೃತಿಯದಿ ಸತ್ತೀಥ್ರ್ಯಾತ್ರಿಗಳನು ಮಾ |ಡುತಲಲ್ಲೆಲ್ಲಿಹ ಮಹಿಮಿ ಕೇಳುವದು ೪೧
ಘೋರತರ ಕುಸಂಸಾರವೆಂಬ ಈ |ವಾರಿಧಿ ತ್ವರ ದಾಟುವದಕ್ಕೇ ||
ಮಾರಮಣನ ನಾಮೋಚ್ಚಾರವೆ ನವ |ತಾರಕವೆಂದುಪದೇಶ ಮಾಡುವದೆ ೪೨
ಜಲದೊಳಗುದ್ಭವಿಸಿದ ಮುತ್ತುದಕ ಮ- |ರಳೆ ಹ್ಯಾಂಗಾಗದೊ ಅದರಂತೇ ||
ಕಲಿಕ್ಯವತಾರನ ಶರಣರು ಎಂಬರು |ಇಳಿಯೊಳು ನರರೆಂದೆನಿಸಲು ಯಂಬುದೆ ೪೩
ದ್ವಾದಶ ನಾಮವ ಪಂಚಮುದ್ರಿಗಳು |ಆದರದಲಿ ಧರಿಸುತ ಪಂಚಾ ||
ಭೇದವ ತಿಳಿದು ನಿರಂತರದಲಿ ದು- |ರ್ವಾದಿಗಳ ಮತವ ಹಳಿವುತಲಿಪ್ಪುದೆ ೪೪
ಮಧ್ವಮತದ ಸರಿ ಮತಗಳು ಸಪ್ತ ಸ- |ಮುದ್ರತನಕ ಹುಡುಕಿದರಿಲ್ಲಾ ||
ಬುದ್ಧಿವಂತರೆಲ್ಲೀತನ ಸೇವಿಸಿ |ಸದ್ವೈಷ್ಣವರೆಂದೆನಿಸಿರೊ ಎಂಬುದೆ ೪೫
ಮಾತಾಪಿತೃರ ಆರಾಧನಿ ಬಲು |ಪ್ರೀತಿಲಿ ಮಾಡುತ ಭಾಸ್ಕರಗೇ ||
ಪ್ರಾತರಾದಿ ಸಂಧ್ಯಾಘ್ರ್ಯವ ಕೊಡುತಲಿ |ಆ ತರುವಾಯ ಜಪಂಗಳ ಮಾಳ್ಪುದೆ ೪೬
ಗುರು ಹಿರಿಯರ ಚರಣವ ವಂದಿಸುತಲಿ |ಪರರಿಗೆ ಉಪದ್ರವನು ಕೊಡದೇ ||
ಮರುತಾಂತರ್ಗತನೋಲ್ಗವನಲ್ಲದೆ |ನರ ಸ್ತೋತ್ರವ ಸ್ವಪ್ನದಿ ಮಾಡದಿಹದೆ ೪೭
ನಡಿಯಲು ದಾರಿಯ ಮನಿಯೊಳಗಿದ್ದರು |ನುಡಿ ನುಡಿಗನಿರುದ್ಧನ ನೆನದೂ ||
ಬಡವರೆ ಗೋಪಾಲನ ಹೊಂದಿದವರು |ಅಡವಿಯೊಳಿದ್ದರು ಧೊರಿಗಳೆ ಎಂಬುದೆ ೪೮
ಪರಮಾಣುಗಳೊಳು ತಾನಿಹ್ಯ ತನ್ನೊಳ- |ಗಿರಸಿಹನಗಣಿತ ಬೊಮ್ಮಾಂಡಾ ||
ಶಿರಿಗೆಂದೆಂದಿಗಸದಳವು ತಿಳಿಯಲು |ಕರಿವರದಿಂಥ ಮಹತ್ಮನು ಎಂಬುದೆ ೪೯
ಹೊತ್ತರಾದಿ ನಿಶಿ ಪ್ರಹರಾಗುವನಕ |ಮೃತ್ತಿಕಿ ಶೌಚಾದಿ ಸುಕರ್ಮಾ ||
ತತ್ತಲವಾಗದೆ ಶ್ರೀ ಮುದತೀರ್ಥರ |ಉಕ್ತ್ಯನುಸಾರಾಚರಿಸುತಲಿಪ್ಪುದೆ ೫೦
ಹಾನಿ ಲಾಭ ಜಯ ಅಪಜಯ ಮಾನಪ- |ಮಾನ ಸುಖಾಸುಖ ಸಮ ಮಾಡೀ ||
ಈ ನರರಿಗೆ ತನ್ನಿಂಗಿತ ತೋರದೆ |ಪ್ರಾಣೇಶ ವಿಠಲನ ಕರುಣವ ಪಡೆವದೆ ೫೧

೮೬
ಬ್ರಹ್ಮದೇವರ ಸ್ತುತಿ
ಸರಸೀಜಾಸನ ವಾಣಿ | ತರುಣೀ ವಲ್ಲಭ ಕ್ಷೋಣಿ |ಗುರುವೆ ಮುಗಿವೆನು ಪಾಣಿ | ಹರಿ ಪಾದದಾಣಿ ೧
ಇನ್ನೊಬ್ಬರಾ ಬಲ್ಲೀನೆ | ಎನ್ನ ಸ್ವರೂಪೋದ್ಧಾರ ||ರನ್ನು ಜಗದೊಳು | ನಿನ್ವೆತಿರಿಕ್ತಾ ೨
ಈ ಕಥಿಗೆ ಮಂಗಳವಾ | ಕರುಣೀಸು ತ್ವರ ||ಲೋಕಾಧೀಶ ಪ್ರಾಣೇಶ | ವಿಠ್ಠಲನ್ನ ದಾಸಾ ೩
(ಈ ಪದವನ್ನು ದಾಸರಾಯರ ಮುಯ್ಯದ ಪದದಿಂದ ಸಂಗ್ರಹಿಸಲಾಗಿದೆ.)

೧೧೯
ಸರಸ್ವತೀ ಶ್ರೀ ಗಾಯತ್ರೀ | ಪರಮೇಷ್ಟಿಜೆ ಸಾವಿತ್ರಿ ||ಸರುವ ವೇದಾತ್ಮಿಕೆ ಪ್ರೀತಿ | ಸರಸ್ವತಾ ದೇವೀ ಪ
ವಾಣೀ ದೇವೀ ಸುವೀಣಾಪಾಣಿ ಕಾಯೆ |ಬ್ರಹ್ಮನ ರಾಣಿ ಗರುಡಾರಾದ್ಯಾರಾಧಿತೇ ||
ಜಾಣೆ ತವ ಪದ ಕಂಜಾರೇಣು ಸೇವಿಪೆ ನಿತ್ಯಪೋಣಿಸಾಬೇಕೆ ಸನ್ಮತಿಯಾ ೧
ಹಂಸ ವರೂಢೆ ಮಾತೆ ಕಂಸಾರಿ ನಿಜದೂತೆಸಂಸೇವಿಸುವರ ದಾತೆ ||
ದೋಷರಹಿತೆ ಯನ್ನಾ ಆಶಿ ಪೂರ್ತಿಸೆ ನಿನ್ನಾನಾ ಸೇವಿಸೂವೇನೆಯೆಮ್ಮಾ ೨
ಶಿರಿ ಪ್ರಾಣೇಶ ವಿಠಲನ ಚರಣಾಂಬುಜ ಷಟ್ಟಾದೆ ಕರವ ಮುಗಿದು ಬಿನ್ನೈಸುವೆ ||
ಬರವ ನುಡಿಗೆ ವಿಘ್ನತೆ ಬರದಂತೆಪಾಲಿಸವ್ವಾ ಕರಣಾ ಸಾಗರೆ ಪವಿತ್ರೆ೩

೯೮
ಸಲಹೋ ಜಡಚೇತನ ನಿಲಯ ಶ್ರೀ ಹನುಮಂತ |ಕಲುಷ ವಿದೂರ ಶಾಂತ ಪ
ಕುಲಿಶ ಬಾಧೆಗೆ ನೀನೆ ಗತಿಯೆಂದು ಮರೆಹೊಕ್ಕೆ |ಕುಲಜ ಪಾಲಕ ಹರಿಕುಲಜ ದಯಾಂಬುಧೇ ಅ.ಪ.
ಕಂಜ ಚರಣ ಗದಾ ಕಂಜಧರನ ಪಾದಕಂಜ ಮಧುಪ ಮುನಿಪ |
ಕಂಜವದನ ನಭ ಕಂಜ ಸುರಪ ರವಿಕಂಜ ವಿನುತ ವಿಚಿತ ||
ಕಂಜಕೇತನ ಕಂಜಪಕ್ಷ ಖಳಸೂದನಕಂಜನಾಶನ ಭಾವೀ ಕಂಜ ದಯಾಂಬುಧೇ ೧
ಕಾಲನೇಮಿಹನಿಚ್ಛೆ ಹೀಗೆಂದು ತಿಳಿದು ಆಕಾಲಜನನುಸರಿಸಿ |
ಕಾಲ ಕಳೆದು ವಿಪಿನಾಜ್ಞಾತವಾಸದಿಕಾಲಾರಿ ಪಾಲಿಸಿದೆ ||
ಕಾಲು ಪಿಡಿದವನ ಶಾಪವ ಕಳೆದೆ ಆವ |ಕಾಲಕು ನೀನೇ ಗತಿ ಜಗಕೆ ದಯಾಂಬುಧೇ ೨
ಪ್ರಾಣಾಪಾನ ವ್ಯಾನೋದಾನ ಸಮಾನ ಹೇ ಜಗ-ತ್ಪ್ರಾಣ ಸಮೀರ ಜ್ಞಾನ |
ಪ್ರಾಣಾಧಿಪೂರ್ಣಾಧಿ ಪ್ರಾಣ ನಂದನ ತಿರಸ್ರ‍ಕತಪಾಂಚಾಲಸುತಾ ||
ಪ್ರಾಣದೊಡೆಯ ನೀನೊಲಿಯದೆ ಎಂದಿಗೂ |ಪ್ರಾಣೇಶ ವಿಠಲನ ಕಾಣೆ ದಯಾಂಬುಧೆ ೩

೫೩
ಸಿಕ್ಕಿರೆನ್ನ ಕೈಗೀಗ ಇನ್‍ತಕ್ಕೊಳ್ಳಿ ಸೀರೆಯ ಬೇಗ | ಎಲೆ ಸಿಕ್ಕಿ ಪ
ಬೀದಿಯೊಳಗೆ ನಿಮ್ಮ ಮೈಗೆ ಸರಿಸಿ ನಾ |ಹೋದರೆ ಮುಟ್ಟಿದನೆಂದು ||
ಬೈದು ಯಶೋದೆಗೆ ಪೇಳಿ ಕೊಲ್ಲಿಸಿದ್ದ- |ಕ್ಕಾದುದು ನೋಡಿರಿ ಇಂದು೧
ಹುಡುಗರೊಡನೆ ನಾನಾಡುತ ಬಂದರೆ |ಬಡಿಯಲಿ ಹವಣಿಸಲಿಲ್ಲೇ ||
ಕುಡಿಯಲು ಪಾಲ್ ಬಾಯ್ತೆರೆದು ಬೇಡಿದರೆ |ಕೊಡದಲೆ ನೂಕಿಸಲಿಲ್ಲೆ ೨
ಬಚ್ಚಲೊಳಗೆ ಮೈದೊಳೆವಲ್ಲಿಗೆ ಬಂದ |ನಚ್ಚುತನೆಂಬುವಿರಲ್ಲೇ ||
ಬಚ್ಚದೆ ಬತ್ತಲೆ ಅಡವಿಯೊಳಿರುವದು |ಹೆಚ್ಚಿದು ಅಹ ಅಲ್ಲಲ್ಲೇ ೩
ಬೆಳ್ಳಕೆ ದಾರೋ ಕಾಣಿಸುತಿಹರು |ಇಲ್ಲಿಗೆ ಬಂದರೆ ಹೇಗೆ ||
ಸುಳ್ಳಲ್ಲವೆ ನಿಮ್ಮಂಣರಾಣೆ |ಇನ್ನೆಲ್ಲಿಗೆ ಹೋಗುವಿರೀಗೆ ೪
ಒಂದೊಂದೇ ನಿಮ್ಮಾಟವು ಮನಸಿಗೆ |ತಂದರೆ ಕೋಪವು ಘನ್ನ ||
ಇಂದಿರೇಶ ಪ್ರಾಣೇಶ ವಿಠಲ ಗತಿ- |ಯೆಂದಿರೆ ವಂದಿನಕನ್ನಾ೫

೮೩
ಸೀತೆ ಸದ್ಗುಣ ಗಣ | ವ್ರಾತೆ ಈರೇಳು ಲೋಕ |ಮಾತೆ ಪ್ರಣತ ಜನ | ಪ್ರೀತೆ ಸಾಗರ ಜಾತೆ ||
ಮಾತು ಮಾತಿಗೆ ರಘು | ನಾಥನ ಸ್ಮರಣೆಯ |ಆತುರದಲಿ ಕೊಡು | ಸಿತಾಂಶು ವದನೆ ||ಪಲ್ಲ||
ಶ್ರೀ ಭೂ ದುರ್ಗಾಂಭ್ರಣೀ ಸ್ವ | ರ್ಣಾಭೆ ರಾಮನ ರಾಣೀ |ಸಾಭಿಮಾನ ನಿನ್ನದ | ಮ್ಮಾ ಬಾಲಕನ ಕರ- ||
ವ ಬಿಡದಲೆ ಸರ್ವ | ದಾ ಬಾದರಾಯಣನಂ- |ಘ್ರಿ ಬಿಸಜ ದ್ವಯವ | ನೇ ಭಜಿಸಲು ಜ್ಞಾನ- ||
ವ ಒಲಿಸುವದತಿ | ಶೋಭನ ವಿಗ್ರಹೆ |ಹೇ ಬಡವನು ಗೈ | ಯ್ವಾ ಬಿನ್ನಪವನು |
ನೀ ಬಿಸುಟದೆ ಬಹ | ಳಾ ಭಯ ಪರಿಹರಿ |ಸೀ ಭಕುತ ಜನರೊ | ಳು ಬೆರಸುವದೇ ೧
ಮಾ ಕಂಜದಳನೇತ್ರೆ | ಶ್ರೀ ಕುಂಭಿಣೀಜೆ ದಾತೆ |ನೀ ಕರುಣದಿ ನೋ | ಡೀ ಕಕುಲಾತಿ ಹಿಂಗಿಸೆ |ಬೇಕು ಸತ್ಸಾಧನವು | ಸಾಕು ದುರ್ವಿಷಯಗಳು |ಲೌಕಿಕಗಳೆಲ್ಲಾ ವೈ | ದಿಕವಾಗಲೆನಗೆ ||
ನಾಕು ಮೊಗನ ಜನ | ನೀ ಕರಿಗಮನೆ ಪ- |ರಾಕು ದಿವಿಜನುತೆ | ಶೋಕರಹಿತೆ ದನು- |ಜಾ ಕುಲ ಸಂಹರೆ | ಈ ಕಠಿಣ ಭವದೊ- |ಳೇಕೆ ದಣಿಸುತಿಹೆ | ನೀ ಕಡೆಗೆತ್ತಲೆ ೨
ದಾತ ಪ್ರಾಣೇಶ ವಿಠಲ | ಸೋತೆನೆಂದು ನಗಲು ನೀ- |ನಾತನ ದಾಯದಿಂ ಪುರು | ಹೂತನ ಸೋಲಿಸಿ ಪ್ರ- |ಖ್ಯಾತೆಯಾದೆ ಉದರೌ | ಜಾತ ಸದನೆ |ಸತ್ರಾಜಿತೆ ಲಕ್ಷ್ಮೀಯಾದಿ ದೇ | ವತೆ ಭಾಸ್ಕರ ಕಾಂತೆ ||
ಭೂತಳದೊಳಗೆ ಅ | ನಾಥರಿಗೆ ವರ ಪ್ರ- |ದಾತೆ ಕೃಪಾ ನಿಧಿ | ಯೇ ತಡೆ ದುರ್ಮತಿ |ಧೌತ ವ್ರಜನಿ ಧರಿ | ಪೋತನಕನಲದೆ |ವಾತ ಪೂಜಿತೆ ರಮೆ | ಪಾತು ಪ್ರತಿಕ್ಷಣದಿ ೩

೨೪೪
ಸುವ್ವಿ ಸುವ್ವಾಲಿ |ಸುವ್ವಿ ಸಾಧ್ವಿಯರು ರಾಘವೇಂದ್ರರ ಪಾಡಿ ಪ
ಅಂದಿನ ಕಾಲದ ಮಧ್ವಶಾಸ್ತ್ರವ ಮನಕೆ ತಂದು |ಅಂದದಿ ಟಿಪ್ಪಣಿ ಮಾಡಿದ ದೇವರಾರು | ಸುವ್ವಿ ||
ಅಂದು ವಾದಿಸುವ ಜನರನ್ನು ಬಾಯಿ ಮುಚ್ಚಿಸಿದ |ಚಂದಿರ ವದನೆ ಈತನಮ್ಮ ಗುರುವು | ಸುವ್ವಿ ೧
ಇವರ ಚರಿತೆಯನ್ನು ತೋರಿದಷ್ಟು ತುತಿಸುವೆ |ಕಿವಿಗೊಟ್ಟು ಕೇಳುವದು ಬುಧ ಜನರು | ಸುವ್ವಿ ||
ಪವನಾಂಶರಿವರು ಕವಲಿಲ್ಲ ಖ್ಯಾತರಾಗಿ |ಅವನಿಯ ಸುರರಿಂದರ್ಚನೆಗೊಂಗುವರು | ಸುವ್ವಿ ೨
ಅಷ್ಟಾಕ್ಷರ ಮಂತ್ರವನು ತಪ್ಪದಲೆ ನಿತ್ಯವಾಗಿ |ನಿಷ್ಠೆಯಿಂದ ಭಜಿಸಲು ಭೂತ ಭಯವು | ಸುವ್ವಿ ||
ಕುಷ್ಠರೋಗ ಕ್ಷಯ ಪಾಂಡು ಜ್ವರ ಸನ್ನಿ ಮೊದಲಾದ |ಅಷ್ಟುಪದ್ರವಾಕ್ಷಣ ಬಿಟ್ಟು ಓಡುವುದು | ಸುವ್ವಿ ೩
ಮೃತ್ತಿಕೆ ಮಾಲೆ ಅಂಗಾರ ದಿವ್ಯ ಮಂತ್ರಾಕ್ಷತೆಯು |ಹತ್ತಿರವಿರಲು ಕ್ಲೇಶವ ಲೇಶ ಕಾಣರು | ಸುವ್ವಿ ||
ಎತ್ತ ಹೋದರು ಜನರಿಗೆ ಜಯಪ್ರದ ತೋರುವದು |ಕತ್ತಲಿಲ್ಲ ಶತಸಿದ್ಧ ಮತ್ತೇನು ಕೇಳಿ | ಸುವ್ವಿ ೪
ಪಂಡಿತರು ಮೊದಲಾಗಿ ಹಸ್ತಿ ಉಷ್ಟ್ರ ಕುದುರೆಯ |ಹಿಂಡುಗಳು ತೃಷೆಯಿಂದ ಬಳಲುತಿರೆ | ಸುವ್ವಿ ||
ದಂಡ ಜಗತಿಗೂರಿ ತೋಯ ತೆಗಿಸಿಯವನೀ |ಮಂಡಲದೊಳಗೆ ಪೆಸರಾದರಿವರು | ಸುವ್ವಿ ೫
ಕಟ್ಟಲಿಯ ಭತ್ತದೊಳು ಭೂಪದಳಯುಕ್ತ ಬರ |ಲಿಟ್ಟುಕೊಂಡು ಉಣಿಸಿ ಉತ್ತಮ ವರವ | ಸುವ್ವಿ ||
ಕೊಟ್ಟು ಕಳಿಸಿದ ಮೇಲೆ ಆವು ಕೊಂಚಿಯಾಗಲಿಲ್ಲ |ಗಟ್ಟಿ ಸಂಕಲ್ಪರಿವರು ಮುನಿವರರು | ಸುವ್ವಿ ೬
ವಿಪ್ರರೆಲ್ಲರು ಹೇಳಿಸಿ ಕಟ್ಟಿಸಿದ ಸದನವ |ಥಟ್ಟನೆ ಕೆಡಿಸಿ ಭೂಪ ಮೆಚ್ಚುವಂದದಿ | ಸುವ್ವಿ ||
ನೆಪ್ಪು ಧರೆಗಾಗಲೆಂದು ಗುರು ಸುಧೀಂದ್ರ ಕುಮಾರ |ಸರ್ಪನ ತೋರಿಸಿ ಸುಪ್ರಖ್ಯಾತರಾದರು | ಸುವ್ವಿ ೭
ದ್ವಿಜರ ಸ್ತೋಮವು ಬಾಯಿ ಬಿಡುತಿರೆ ದಯದಿಂದ |ನಿಜಕಾಷ್ಟವಿಳೆಗೆ ನಿಲ್ಲಿಸಿ ಮರವ | ಸುವ್ವಿ ||
ಸೃಜಿಸಿ ಪಲ್ಲವ ಫಲಯುಕ್ತವಾಗಿ ತೋರಿಸಿದ |ಭಜಿಸಿರಿವರನ್ನು ಮಕ್ಕಳು ಬೇಡುವವರು | ಸುವ್ವಿ ೮
ಮುತ್ತಿನ ಮಾಲಿಕೆ ನೃಪ ಭಕ್ತಿಯಿಂದ ಕೊಡಲಾಗಿ |ಸಪ್ತಜಿಹ್ವಗುಣಿಸಿದ ಸರ್ವರು ನೋಡಿ | ಸುವ್ವಿ ||
ಮತ್ತೆ ಬೇಡಲು ಪಾವಕನಿಗೆ ಪ್ರಾರ್ಥನೆಯ ಮಾಡಿ |ಮತ್ರ್ಯಪಗೆ ಇತ್ತರು ಮೊದಲಂತೆಯೆ ತಂದು | ಸುವ್ವಿ ೯
ಹಿಂದೆ ಮಾಡಿದ ದುಷ್ಕರ್ಮ ತೀರ ಬಂದದನು ನೋಡಿ |ಬಂದಾಕ್ಷಣದಲ್ಲಿ ಅವನ ವಿಚಾರಿಸಿ | ಸುವ್ವಿ ||
ಇಂದಿರೇಶನ ಕಾರುಣ್ಯ ಬಲದಿಂದ ಜನನೋಡೆ |ಸಂದೇಹವಿಲ್ಲದೆ ಸುಲೋಕವನಿತ್ತರು | ಸುವ್ವಿ ೧೦
ತುಂಗಾತೀರ ಮಂತ್ರಾಲಯದಲ್ಲಿ ಶ್ರಾವಣ ಬಹುಳ |ಮಂಗಳ ಬಿದಿಗಿಯಲ್ಲಿ ನಿವಾಸವಾದರು | ಸುವ್ವಿ ||
ಶೃಂಗಾರ ವೃಂದಾವನ ದ್ವಾದಶನಾಮ ಶ್ರೀ ಮುದ್ರೆಯು |ಕಂಗಳು ಸಾಲವು ನೋಡ ಹೊದ್ದ ಶಾಠಿಯ | ಸುವ್ವಿ ೧೧
ಅಂಧಕ ಬಧಿರ ಕುಂಟ ನಾನಾ ರೋಗಿಗಳು ಮತ್ತೆ |ಕಂದ ವಜ್ರ್ಯ ಮೊದಲಾದವರಿಗೆ ಕಾಮ್ಯ | ಸುವ್ವಿ ||
ತಂದುಕೊಡುವರು ಬೇಗ ಇತರ ಸಂಶಯವಿಲ್ಲ |ಮಂದಭಾಗ್ಯರಿಗೆ ಇವರ ಸೇವೆ ದೊರೆಯದೇ || ಸುವ್ವಿ ೧೨
ಕೌತುಕವೇನೆನ್ನಲಿ ಮುಂಜಿ ವಿವಾಹ ಮಾಡಿಸುವರು |ಚಾತುರ್ಮಾಸದೊಳಗೆ ಗ್ರಹಗಳಸ್ತವಾಗೆ | ಸುವ್ವಿ ||
ಧಾತಾ ಪಿತ ನಿಲಯವಿದೇನೋಯೆಂದು ತೋರುವದು |ಪ್ರೀತಿಯುಳ್ಳ ಭಕ್ತರಿಗೆ ಅಧಮರಿಗಲ್ಲ | ಸುವ್ವಿ ೧೩
ಪಾಡ್ಯ ಪೂರ್ವಾರಾಧನೆ ಉತ್ತರಾರಾಧನೆಗೆ |ಒಡ್ಡಿ ಬರುವುದು ಎಂಟು ದಿಕ್ಕುಗಳಿಂದ ಜನವು | ಸುವ್ವಿ ||
ಕಡ್ಡಿ ಹಿಡಿಯದಂಥ ಸಂದಣಿಯೊಳು ಸನ್ಮುಹೂರ್ತದಿ |ದೊಡ್ಡ ರಥವೇರಿ ಮಠವ ಸುತ್ತುವರು | ಸುವ್ವಿ ೧೪
ಇಷ್ಟೇಯೆನ್ನಲು ವಶವಲ್ಲ ಮಹಿಮೆಗಳಿನ್ನೂ ಉಂಟು |ನಷ್ಟ ಮಾಡುವರು ದುರ್ಮತ ದಾರಿದ್ರ್ಯವ | ಸುವ್ವಿ ||
ಸೃಷ್ಟಿಗೊಡೆಯ ಪ್ರಾಣೇಶ ವಿಠ್ಠಲನೆಂದು ಪೇಳ್ವರು |ಎಷ್ಟು ಪೇಳಿದರೂ ಎನ್ನಿಂದಲಿ ತೀರದು | ಸುವ್ವಿ ೧೫

ನದೀದೇವತೆಗಳ ಸ್ತುತಿ
೧೧೬
ಸ್ಮರಿಸುವೆನನುದಿನ ಮುದದಿಂದ | ಈಧರಿಯ ಮ್ಯಾಲುಳ್ಳ ಮಹಾ ನದಿಗಳ ಪ
ಗೌತಮನಘ ಪರಿಹಾರ ಮಾಡಿದ ಗೋದಾ |ಮಾತೆ ಶ್ರೀ ಕೃಷ್ಣವೇಣೀ ಸರಸ್ವತೀ ||
ಆ ತರೂವಾಯ ಶ್ರೀ ಕಾವೇರಿ, ಸರಿಯು ಶ್ರೀ ಯಮುನಾ |ಧೌತ ಪಾತಕೆ ಶ್ರೀ ನರ್ಮದ ತುಂಗಾ ೧
ಸಿಂಧೂ ಭವನಾಶಿನಿ ಕುಮದ್ವತಿ ಶ್ರೀ ವಂಝಾರ |ಸುಂದರ ಭೀಮಾ ತಾಮ್ರಪರಣೀ ಮಲಹಾ ||
ಮಿಂದರೆ ಪಾವನ ಮಾಡುವ ಬಹು ನದಿಗಳ |ಒಂದೇ ಮನಸಿಲಿಂದಾ ಪೊಗಳುವೆ ೨
ವಾರಣೀ ಫಲ್ಗುಣೀ ಶ್ರೋಣ ಭದ್ರಾ ಗಂಡಕಿ ಹೇಮ |ಮೂರು ವೇಣಿ ಗಾಯತ್ರಿ ವೇಗವತೀ ||
ಸೂರಿ ಗಮ್ಯ ಕೌಸಿಕ ಮಣಿಕರಣಿಕ ಗೌತಮಿ ಭಾ |ಗೀರಥಿ ಕಾಗಿನಿ ಶ್ರೀ ವೇತ್ರವತೀ೩
ಹೇಮವತಿ ನೇತ್ರವತಿ ಪಾಪನಾಶಿ ಶ್ರೀ ಸೀತಾ |ಆ ಮಹಾಳಕನಂದಾ ಹಯಗ್ರೀವ ||
ಹೇಮ ಮುಖರ ತಾಪಿನಿ ಕಾಳಿ ಸೌಪರಣಿ ಪಿನಾಕೀ |ಶ್ರೀ ಮತ್ಕಪಿಲ ಜಮದಗ್ನಿ ಪ್ರಣವ ಸಿದ್ಧ೪
ಮರುದ್ವತಿ ಮದಿರ ಮೇನುಕಾ ಸೂನಾಸಿ ಚಕ್ರವತಿ |ಗರುಡ ಶಂಖವತೀ ಕುಹು ಮಹೇಶ್ವರೀ ||
ಸರಯು ಜಯ ಮಂಗಳ ಯೋಗಕೃತು ಮಾಲಾ ಗದಾ |ಧರಿ ಮಾಲಿನೀ ಗಾರ್ಗಿಣೀ ದೇವವತಿ೫
ಸಾವಿತ್ರಿ ಧನ್ಯಮಾಲಾ ಧರ್ಮ ಚಕ್ರತೀರ್ಥ ಹರಿ |ದ್ರಾವತಿ ಇಂದ್ರಾಣಿ ಪಾತಾಳಗಂಗಾ ||
ಶೈವಕುಂಡ ಕುಂಡಿನಿ ನೀರ ಕುಮಾರ ಧಾರೀ ಶು |ಶಾವರ್ತಿ ಮೌಳೀ ಲೋಕಪಾವನೀ ೬
ಸ್ವಾಮಿ ಪುಷ್ಕರ್ಣಿ ಚಂದ್ರ ಪುಷ್ಕರ್ಣಿ ಮಾನಸ ಪುಷ್ಕರ್ಣಿ |ಶ್ರೀ ಮಧ್ವ ಸರೋವರ ಪದ್ಮ ಸರಾ ||
ಸೋಮ ಭಾಗಾ ವ್ಯಾಸ ಸಿಂಧು ಶ್ರೀ ಪಂಪಾ ಸರೋವರ |ವಾಮನ ಶ್ರೀ ಮಯೂರ ಸರೋವರ ೭
ರೋಮ ಹರ್ಷಣ ತೀರ್ಥ ಸೀತಾ ಸರೋವರ ಪುಣ್ಯ |ಧಾಮಾ ಶ್ರೀ ಕಪಿಲತೀರ್ಥ ಧವಳಗಂಗಾ ||
ಭೀಮಸೇನ ತಟಾಕ ಬ್ರಹ್ಮಜ್ಞಾನ ಕನ್ಯಹೃದಯ |ಶ್ರೀ ಮದ್ವಿಶಿಷ್ಟ ತೀರ್ಥ ತಾರಾ ತೀರ್ಥ ೮
ಈ ತೀರ್ಥಗಳ ದಿವ್ಯನಾಮ ನಿತ್ಯ ಪಠಿಸಲು |ಯಾತಕ್ಕಾದರೂ ವಿಘ್ನ ಬಾರದು ||
ಮಾತರಿಶ್ವ ಪ್ರೀಯ ಪ್ರಾಣೇಶ ವಿಠಲನು ಬಹು |ಪ್ರೀತನಾಗಿ ಬಿಡದೆ ಪೊರೆವನು ೯

೨೦
ಸ್ವಾಮಿತ್ವದವರಿಗೆ ಅಯುಕ್ತವೇ ಯುಕ್ತ |ಶ್ರೀಮನೋರಮನೆ ಪೇಳುವೆ ಕೇಳು ಶಕ್ತ ಪ
ಮಾವನಿಗೇ ಮಾವನಾದೆಯಲೊ ಜನ್ಮಾರಭ್ಯ |ನೀವೊಡಲ ಹೊರದೆ ಚೋರತನ ಮಾಡಿ ||
ಕೋವಿದಂಗತಿ ಮೆಚ್ಚು ಜಾರತನ ಮಾಡಿದುದು |ಆ ವನಿತೆ ಮೆದ್ದ ಫಲ ಮೆದ್ದಿ ನಿರ್ದೋಷಿ ೧
ನರಸೇವೆಯ ಮಾಡಿ ಪೆಸರಾದಿ ಮಾತೆಯ ಕೊಂದೆ |ಧರೆಯೊಳಗೆ ಮಾತುಲನ ಕೊಲ್ಲಬಹುದೇ ||
ತಿರುಕಿ ಬೇಡಿಸುವಳರಸರನ ನಿನ್ನಯ ರಾಣಿ |ಪರಿಮಿತಿಯಿಲ್ಲದ ದುರಾಚಾರಿ ನಿನ್ನಯ ಮಗನು ೨
ಮೈದುನನು ಗುರುದ್ರೋಹಿ ಮೊಮ್ಮಗನು ಬಹು ಚಾಡಿ |ಮೇದಿನಿಯೊಳಗೆ ಹೇಳುತಲೆ ತಿರುಗುವ ||
ಶ್ರೀದ ಪ್ರಾಣೇಶ ವಿಠ್ಠಲನೇ ನೀನೇ ದೊರೆ |ಯಾದ ಕಾರಣ ದಕ್ಕಿತಿದು ಇಲ್ಲದರೆ ಸಲ್ಲ ೩

೪೬
ಹರಿ ನಮ್ಮೊಗತನ ಮಾಡಲೀಸನೆ ಕೇಳಮ್ಮ ಇವನಚರಿಯವಾರ ಮುಂಧೇಳುವನೆ ಗೋಪ್ಯಮ್ಮ ಪ
ತನ್ನೊಳು ತಾನೇ ರುದಿಸುತ ಬಂದ ಕಾಣಮ್ಮ | ಯಾಕೆನೆಕಣ್ಣಿನ ಬೇನೆ ಅತಿ ಕಠಿಣೆಂದಾ ಅವನಮ್ಮ |
ಸಣ್ಣನಳುವಳೆ ಮೊಲೆ ಹಾಲ್ತಾ ಎಂದನಮ್ಮ | ನಿನ ಕ-ಯ್ಯನ್ನು ಮುಟ್ಟಿದಿರೆಂದು ಮಾನ ಕೊಂಡನಮ್ಮ ೧
ತರುಗಳ ಬಾಲಕೆ ತರಳರ ಕೈ ಕಟ್ಟುವನಮ್ಮ | ಯನ್ನಕರದಲ್ಲಿ ಹಿಡಿ ಹಿಡಿಯೆಂದು ತೇಳಿಕ್ಕುವನಮ್ಮ ||
ವರಗುವುದೆಲ್ಲಿ ನೀವೆಂದು ಕೇಳುವನಮ್ಮ | ನಿಮ್ಮ ಪುರುಷರು ಕಾಂಬುವಯಿಲ್ಲ ಎಲ್ಲೆಂಬುವನಮ್ಮ ೨
ಜೋಗೀ ರೂಪವ ತಾಳಿ ಮನೆಗೆ ಬಂದನಮ್ಮ | ನಾನುಬಾಗಿ ಸುತರಿಲ್ಲೆಂದವನ ಕೇಳಿದೆನಮ್ಮ ||
ಹೋಗಲಿ ಎಲ್ಲರೂ ಮಂತ್ರವ ಕೊಡುವೆನೆಂದಮ್ಮಾ | ಕೃಷ್ಣನಾಗಿ ಇದುರಿಗೆ ನಿಂತ ಭಂಡು ಕೇಳಮ್ಮ೩
ನಾಕು ಬೆರಳ ತೋರಿ ತಲೆದೂಗುವನಮ್ಮ | ಇಂಥ-ದ್ಯಾಕೊ ಎಂದರೆ ಯೀಸೆ ಹಾಲ್ಕೊಡೆಂದನಮ್ಮ ||
ಕಾಕು ಬುದ್ಧಿಯೊಂದೆರಡೆ ಮೂರೇನಮ್ಮ | ಶ್ರೀ ಪಿ-ನಾಕಿಯಾಣೆ ಕರೆದು ಕೇಳೆ ಗೋಪ್ಯಮ್ಮ೪
ಮತಿಗೆಠ್ಠೆಣ್ಹುಡುಗರ ಕರೆದೊಯ್ದೋಣ್ಯೊಳಗಮ್ಮಾ | ನಾವುಸತಿ ಪುರುಷಾಗ್ಯಾಡುವ ಬಾ ಎಂಬೊನಲ್ಲಮ್ಮ ||
ಪೃಥಿವಿಯ ಹುಡುಗರ ತೆರದರೆ ಚಿಂತಿಲ್ಲಮ್ಮ | ಇವನುಸುತರನು ಪಡೆವದು ಬಲ್ಲನೇ ಸುಳ್ಳಮ್ಮ ೫
ನವನೀತವ ಕೊಳ್ಳೆಂದೊದರುತ ಬಂದನಮ್ಮ | ನಾನುಹವರನ ಕಾಶಿಗೆ ಎಷ್ಟೆಂದು ಕೇಳಿದೆನೆಮ್ಮ ||
ಖವ ಖವ ನಗುತಲಿ ಬದಿಬದಿಗೆ ಬಂದನಮ್ಮ | ತಕ್ಕೊಯುವತಿ ಇದರಷ್ಟೆಂದು ಕುಚ ಮುಟ್ಟುವನಮ್ಮ ೬
ಹಿತ್ತಲ ಕದಕೆ ಶೀ(ಕೀ)ಲ್ಯುಂಟೋ ಇಲ್ಲೆಂಬುವನಮ್ಮ | ನಮ್ಮ-ಅತ್ತೆಯ ಕಣ್ಣು ಹೋಗಲಿ ಎನಬೇಕೇನಮ್ಮ ||
ಉತ್ತರ ಕೊಡದಿರೆ ಒಪ್ಪಿದೆ ಇದಕೆಂಬುವನಮ್ಮ | ಇಷ್ಟೊಂ-ದರ್ಥೆ ಪ್ರಾಣೇಶ ವಿಠಲಗೆ ಯಶೋದೆಯಮ್ಮ ೭

೨೫
ಹರಿಯೆ ನೀನಲ್ಲದಾರ ಕಾಣೆ ಕಾಯ್ವರಮರೆ ಹೊಕ್ಕವರ ಭಯ ಪರಿಹಾರವನು ಮಾಡಿ ಪ
ಶಿವಭಕ್ತಾಗ್ರಣಿ ಬಾರ್ಹ್ಯದ್ರಥ ಗಂಜಾಲೆಮಜಾ ನಿ- |ನ್ನವನಿಂದಳಿಸಿದೆ, ಬಾಣನ ಬಾಗಿಲೂ ||
ಭವ ಕಾಯ್ದಿರಲು ನೀ ತೋಳ್ಗಳನು ಛೇದಿಸುವಾಗ |ಲವ ಮಾತ್ರ ಪ್ರತಿಕೂಲನಾಗಲಿಲ್ಲ ಶಂಕರನು ೧
ಹರಿಯೆಂದುದಕೆ ತಾಳದಲೆ ಬಾಧಿಸುತಲಿರೆ |ತರಳನ ಮೊರೆ ಕೇಳಿ ಕಂಭದಿಂದ ||
ಉರಿಯುಗುಳುತ ಬಂದು ಖಳನುದರವ ಬಗೆದು |ಶರಣ ಪಾಲಕನೆಂಬ ಬಿರುದು ದಕ್ಕಿಸಿಕೊಂಡೆ ೨
ಸ್ಥಾಣುವಿನ ವರ ಬಲದಿಂದಮರರ ಕಾಡೆ |ದಾನವಾನ್ವಯ ಕೊಂದೆ ಭಸ್ಮಾಸು- ||
ರನು ಪಾಣಿಯ ತಲೆಯೊಳಿಡುವೆನೆಂಬೊ ಭರದಿ ಬರಲು |ಪ್ರಾಣೇಶ ವಿಠಲ ನೀ ಶಂಕರನನುಳುಹಿದಿ ೩

೧೧೧
ಹಾಳು ಮಾಡಿದ ಹನುಮ ಸಾಲು ವನಗಳ |ಧಾಳಿ ಕೊಟ್ಟನಿತರ ಜನಕೆ |ಕೇಳಲಿದನು ದನುಜನೆಂದು ಪ
ಚರರು ಪೇಳಲವನು ಖತಿಯ |ಲಿರುವ ದಳವ ಕಳುಹಲದನು ||
ತರಿದ ಭಯವಬಡದೆ ಮುಂದಕೆ |ಚರಣವಿಡದೆ ಬಹು ಸಮರ್ಥ ೧
ಹರಿಜಿತ ಬಲು ಭರದಿ ಬರಲು |ಥರವು ಸಿಗುವದಿವನ ವಶಕೆ ||
ಮೂರೇಳು ಮುಖನ ಕಾಂಬುವೆನೆನುತ |ಕರವ ಮರೆದ ಮರುತ ಕುವರ ೨
ದಾನವ ಪತಿಯಲ್ಲಿ ಪೋಗಿ |ಏನು ಯೋಚನೆಯನ್ನು ಮಾಡದೆ ||
ತಾನು ಗಂಭೀರ ಸ್ವರದಿ ಪೇಳ್ದ |ಪ್ರಾಣೇಶ ವಿಠ್ಠಲನ ಮಹಾತ್ಮೆಯನ್ನು ೩

೧೬
ಹುಚ್ಚು ಹಿಡಿಸಿದೆಯಾ ಮಾಧವ |ನಿಚ್ಚ ನಿನ್ನ ಪಾದಾಂಬುಜವ ಭಜಿಪರಿಗೆ ಪ
ಮತ್ತಗಜವೆಂಟು ಸೊಕ್ಕಿಲಿ ಕೊಲ್ವವು |ಕುತ್ತಿಗೆ ಮುರಿವರಾರು ಮಂದಿಯೂ ||
ಎತ್ತ ಹೋಯಿತೋ ಬುದ್ಧಿ ಕುಳಿತುಕೊಂಡರೆ ಮೇಲೆ |ಹುತ್ತ ಬೆಳದರೆಚ್ಚರಿಕೆಯಿಲ್ಲದಂಥ ೧
ದಾರಾ ಸುತರೆನ್ನದಾರೆಂದು ನೋ |ಡರಾಗಾರ ನಮ್ಮದೆಂದು ಪೋಷಿಸರು ||
ಆರಣ್ಯದಲಿ ಮುಸುಕಿಕ್ಕಿ ಧ್ಯಾನಿಸುವರು |ಶಾರೀರದ ಪರವಿಯನ್ನು ಬಿಟ್ಟಹರು ೨
ಬಿದ್ದು ಯದ್ದ ಕಾಳು ಆದುಕೊಂಡುಂಬರು |ಇದ್ದ ಬದುಕು ಜೋಕೆ ಮಾಡೊಲ್ಲರು ||
ಪ್ರದ್ಯುಮ್ನ ಪ್ರಾಣೇಶ ವಿಠಲನೇ ಇಂಥ |ಬುದ್ಧಿಯ ಪ್ರೇರಿಸಿ ನೋಡಿ ಹಿಗ್ಗುವೆನೀ ೩

೧೦೦
ಹೇ ದಯಾಬ್ಧೇ ಪಾಲಿಸೆನ್ನನು | ಶ್ರೀದ ಹನುಮಂತ ಪ
ಭೂಧವಜ ನದಿಯಲ್ಲಿ ನಿಂತಾ ಕಾಳೀಕಾಂತ ವೀತಚಿಂತಾ ಅ.ಪ.
ರಾವಣಾನುಜನಂತೆ ಮತ್ತಾ ಶೈಲಸುತನಂತೆ |ದೇವತೆಗಳೀಶನಂತೆ ದೇವತೆಗಳಂತೆ ||
ಆವ ವಿಕ್ರಮ ಪಾರ್ಥನಂತೆ ಕಾದಿ ಬಿದ್ದಾ ಕಪಿಕುಲದಂತೆ |
ತಾವರೆಯ ಸಖ ಸೂರ್ಯನಂತೆ ತತ್ಸುತ ಸುಗ್ರೀವನಂತೆ ೧
ಭೂವರಾಧಿಪ ಧರ್ಮನಂತೆ ದ್ರೌಪದಿಯಂತೆ |ಭೂವಿ ಬುಧಸುತನಂತೆ ರಾಕ್ಷಸಿಯಂತೆ ಫಣಿಯಂತೆ ||
ಆ ವಿರಾಟರಾಯನಂತೆ ಪಾರ್ವತಿಯ ನಾಥನಂತೆ |
ನೀ ವಿಜಯನಾಗಲು ಸಹಿಸದಲೆ ಕೋಪಿಸಿದ ಧೃತರಾಷ್ಟ್ರನಂತೆ ||
ಮೋದದಿಂದ ನಿನ್ನ ಪಡೆದಾ ಮಧ್ಯಗೃಹನಂತೆ |ಆದರದಿ ಹರಿಪೂಜೆ ಮಾಳ್ಪಾ ಸೂರಿ ಜನರಂತೆ ||
ಆ ದಿನ ಕಡಲಲ್ಲಿ ಮುಳುಗಿ ಪೋಗುತ್ತಿದ್ದಾ ನಾವೆಯಂತೆ |
ಪಾದ ಹಿಡಿದಾ ಕಾಳೀಸರ್ಪನ ಕಾಯ್ದ ಪ್ರಾಣೇಶ ವಿಠ್ಠಲನಂತೆ ೩

ಉಗಾಭೋಗ
೨೩೩
ಅಪ್ರವಹ ಜಲಸ್ನಾನ ಪಾದಾಭಿಷೇಚನವುವಿಪ್ರರಿಗೆ ಗಾಯತ್ರಿ ಅಘ್ರ್ಯವನ್ನೂ ||
ಅಪ್ರಾಕೃತಾಂಗ ಪ್ರಾಣೇಶ ವಿಠ್ಠಲನವರುಸುಪ್ರಭಾಕರನ ಎದುರಿಗೆ ಮಾಳ್ಪುದೂ ೧

ಉಗಾಭೋಗ
೨೩೫
ಅಲ್ಪ ಧರ್ಮವು ಜ್ಞಾನದಿಂದ ಮಾಡಲು ಬ್ರಹ್ಮ |ಕಲ್ಪ ಪರಿಯಂತ ಸುಖವುಂಟು ನರಗೇಸ್ವಲ್ಪೇತರ ತಿಳಿಯದೆ ಮಾಡಲ್ ಫಲವು ಭುಜಗತಲ್ಪಿ ಪ್ರಾಣೀಶ ವಿಠಲ ಮೆಚ್ಚನೂ ಧಡ್ಡಾನಲ್ಲಾವು ಶ್ರೀ ಪ್ರಾಣೇಶ ವಿಠ್ಠಲನಾಟಾ | ಮಡ್ಡಾರರಿಯಾರಿದನೂ ಬಲ್ಲಾರು ಕವಿಗಳೂ ೧

ಉಗಾಭೋಗ
೨೧೬ ಅ
ಅಲ್ಪಧರ್ಮವು ಜ್ಞಾನದಿಂದ ಮಾಡಲು ಬ್ರಹ್ಮ |ಕಲ್ಪ ಪರಿಯಂತ ಸುಖ ಉಂಟು ನರಗೇ |ಸ್ವಲ್ಪೇತರ ತಿಳಿಯದೆ ಮಾಡಲ್ ಫಲವು ಭುಜಗ |ತಲ್ಪ ಪ್ರಾಣೇಶ ವಿಠ್ಠಲ ಮೆಚ್ಚನೂ ೧

೨೧೬ ಬ
ಫಣಿಯು ನರಪತಿ ಹುಲಿಯು ಯುವತಿಯು ಪೋ |ರನು ಪರರ ಚಿಂಹಪನು ಕಡು ಮೂ |ರ್ಖನು ಮಲಗಿರಲೆಚ್ಚರಿಸೆ ಸಲ್ಲ, ಕ್ಷುಧಿ ತೃಷಿ ಕಾಮಾರ್ಥಿಯನು ವಿದ್ಯಾರ್ಥಿಯ ನಿರುತ ಕೃಷಿ ಪೂರ |ವನ ಅಡಿಗಿ ಮಾಳ್ಪನ ಘಳಿಗಿ ಬಡಿ |ವನ ಎಬ್ಬಿಸಲುಚಿತನಘ ಪ್ರಾಣೇಶ ವಿಠಲನಾಳ್ಗಳಿಗೇ ೧

೮೪ – ಬ
ಏನು ಸ್ನೇಹವನು ಮಾಡಿದಿರಿಯಮ್ಮಾ ಮುಖ್ಯ-ಪ್ರಾಣ ಸಖನ ಬಗೆ ಹೀಗೆಂದು ತಿಳಿಯದೇ ಪ
ಉಣಿಸುವ ಬೇಡಿದುದನೆಂಬಿರಾ ಶ್ರೀವಾ-ಮನನಾಗಿ ತಿರಿದುಂಡ ಬಲಿಯಲ್ಲಿ |
ಘನವಸನವುಟ್ಟೇವೆಂಬಿರಾಅನುದಿನ ದಿಗಂಬರನಾಗಿ ತಿರುಗುವ ೧
ಮಣಿಭೂಷಣವನಿಟ್ಟೇವೆಂಬಿರಾ ಆವಹಣವಿರೆ ಅಡವಿಯೊಳಿರುವಾನೆ |
ತನು ನೋಡಿ ಮರುಳಾದೆವೆಂದಿರಾ ನೀಲಘನದಂತಿರುವ ದೊಡ್ಡ ಚಲುವಿಕೆ ೨
ದುರಿತ ಬಂದರೆ ಕಾಯ್ವನೆಂಬಿರಾ ತಾನೇಕರಕರೆ ಪಟ್ಟ ದನುಜನಿಂದ |
ಪುರುಷನು ಗುಣವಂತನೆಂದಿರಾ ಪಾಲ್ಮೊ-ಸರ ಕದ್ದು ತಿಂಬುವ ವ್ರಜದೊಳು ೩
ಕಡುದಯಾವಂತನೆಂದರಿದಿರ್ಯಾ ಶಿರಕಡಿದ ಮಾತೆಯ ದಯೆ ನೋಡಿರಿ |
ನುಡಿಗೇಳಿ ಮರುಳಾದೇವೆಂದಿರಾ ನಭಪೊಡವಿ ನಡುಗುವಂತೆ ಕೂಗುವ ೪
ಜ್ಞಾನಿ ಈ ಕೃಷ್ಣನೆಂದರಿದಿರಾ ನಿತ್ಯ-ಕಾನನದೊಳು ದನ ಕಾಯ್ವವನು |
ತಾನೇ ಕಾಣದವನು ಮತ್ತೊಬ್ಬರು ಬೇಡ-ಲೇನು ಕೊಡುವನೆಂಬುವರು ಜನರು ೫
ಯನಗೆ ತಿಳಿಯದೇನು ಮಾಯವೋ ಅವನ ಮನೆಯ ಪೊಕ್ಕವರೆಂದು ತಿರುಗಾರು |
ಅನುಗಾಲ ಗೆಳೆತನ ಮಾಡಿದ ಫಾಲಾ-ಕ್ಷನು ಸುಡುಗಾಡೊಳು ಸೇರಿದ ೬
ಎಂತು ಪೇಳಿದರೆ ತೀರೀತಮ್ಮ ನಮ್ಮಕಂತುಪಿತನ ಮಹಾಮಹಿಮೆಯೂ |
ಅಂತಕಜ ಪ್ರಾಣೇಶ ವಿಠ್ಠಲಾ ನಮ್ಮ ಚಿಂತೆಯ ಕಳೆಯೆಂದೆರಗಿರಮ್ಮ ೭

ಉಗಾಭೋಗ
೨೩೬
ಒಂದಾರೊಳುಂಟೆ ಒಂದರೊಳಾ ಘನ್ನೆರಾಡೆನೂ |ವಂದಾರೊಳೆರಡೊಂದೊಂದರೊಳೊಂದೆನೂ |ಇಂದಿರೇಶಾರಲ್ಯಾವ ನಾಮಾದಲಿಹ್ಯರು ಆ |ನಂದ ತೀರ್ಥಾರಾವ ನಾಮದಲಿಹ್ಯರೂ |ವೃಂದಾರಕರು ಅಲ್ಲೆಲ್ಲಿರುತಿಹರೂ ಹದಿನೆಂಟೂ |ಮಂದಿ ಶಿರಿಕೇಶವಾ ಇರುತಿಹರೂ |ಎಂದೂ ತಿಳಿಯದವ ಬಾಳಲ್ಯಾತಕೆ ಹದ್ದಿ- |ನಂದಾದಿ ಬಹುಕಾಲಾ ವ್ಯರ್ಥವಾಗೀ |ಶಿಂಧುಶಯನ ಶ್ರೀ ಪ್ರಾಣೇಶ ವಿಠ್ಠಲಾ ಅವ- |ಗೆಂದೆಂದು ಒಲಿಯಾನು ಕೇಳಿ ಸಜ್ಜನರೂ ೧

ಉಗಾಭೋಗ
೨೩೪
ಕಡ್ಡಿ ಮೇಯಂದೂ ತುಡುಗು ಹೋಗಾಲರಿಯದಂಥಾ |ದೊಡ್ಡಾ ಆಕಳ ಕರವಾ ಹಗ್ಗಾದಿಂದಾ ||
ದುಡ್ಡಿನಗಲಾ ಠಾವಿನೊಳಗೆ ಕಂಭಕೆ ಕಟ್ಟೀ |ವಡ್ಡಿ ಕಾವಲಿಯೊಳು ಮಂದಿ ಇಟ್ಟಿಹ್ಯನೂ ೧

ಉಗಾಭೋಗ
೨೨೯
ತಿಥಿತ್ರಯದಲ್ಲಿ ವಜ್ರ್ಯ ಪದಾರ್ಥಗಳ ವಿವರ
ಪುನಹ ಭೋಜನ, ಕಾಂಶ, ಹಾರಕ |ಚಣಕ, ಉದ್ದಲ, ಸಂಧಿ, ಮಧು, ಮೈ- |
ಥುನ, ಪರಾನ್ನವು, ಶಾಖ ಈ ದಶ ವಜ್ರ್ಯ ದಶಮಿಯಲೀ ||
ದಿನದಿ ನಿದ್ರಿ ಕದಳಿ ಮಧು ದ್ವಿಭೋ |ಜನ ಸ್ತ್ರೀ ತೈಲುದಕಾಂಶ ಈ ಎಂ- |
ಟನು ಬಿಡಲು ದ್ವಾದಶಿಗೆ ಪ್ರಾಣೇಶ ವಿಠಲ ಮೆಚ್ಚುವನೂ ೧

ಉಗಾಭೋಗ
೨೬೭
ದ್ವಯ ಪರ್ವ ನಾಮಿಕ | ಕನಿಷ್ಠಾದಿ ಕ್ರಮ ತರ್ಜ- |ನಿಯ ಮೂಲ ತನಕ ಗಾಯಿತ್ರಿ ಮಂತ್ರಾ ||ನಯದಿಂದ ಶಕ್ತ್ಯಾನುಸಾರ ಜಪಿಸಲು ರಮಾ |ಲಯ ಸು ಪ್ರಾಣೇಶ ವಿಠಲನ ಕಾಂಬರೂ ೧

ಉಗಾಭೋಗ
೨೩೨
ನಾಲ್ಕು ಕರ್ಣದೊಳೊಂದು ಮುಖದೊಳಗೇಕ ನಾಭಿಯೊಳೊಂದು ಶಿರದಲಿಶ್ರೀ ಕರಾರ್ಚಿತ ಪದ ಜಲದಿತ್ರಯ ಅನ್ನದೊಳಗೈದೂ ||ಹಾಕುವದು ಮೂರ್ಭೋಜನೋತ್ತರಸ್ವೀಕರಿಪದಿಂತಷ್ಟ ದಶ ದಳ |ಶೋಕಹರ ಪ್ರಾಣೇಶ ವಿಠಲಗೆ ಅರ್ಪಿಸಿದ ತುಲಸೀ ೧

ಉಗಾಭೋಗ
೨೩೧
ನಿರುಮಲೋದಕ ವೆರಿಯಲಘ ದಶಹರವು ಕ್ಷೀರಕೆ ಶತದಧಿಗೆ ಸಾವಿರ ಮಧುವಿನಿಂದ್ಹತ್ತು ಸಾವಿರ ಘೃತಕೆ ಲಕ್ಷ ಹರಾ ||ನೆರೆಗುಡದಿ ದಶಲಕ್ಷ ಟೆಂಗಿನವರಜಲದಿ ಶತಲಕ್ಷ ಗಂಧಜ-ಲೆರಿಯ ಪ್ರಾಣೇಶ ವಿಠಲ ಪಾಪನಾಶನವೂ ೧

ಉಗಾಭೋಗ
೨೩೭
ಪದ ಕಟಿ ಬೆರಳು ಕಂಠ ಕಿವಿ ಪುಬ್ಬು ಸಂಣವಾರು |ಅಧರ ಕದಪು ರದನಖ ಗುಂಹ್ಯ ದರ ತಿಳುಪಾರು |ಹೃದಯ ಜಘನಾಕ್ಷ ನಾಸಿಕ ಊರುಕೇಶಗಳಾರು ದೊಡ್ಡವು ಈ ಪರೀ ||ಪದಿನೆಂಟು ಶುಭಲಕ್ಷಣಗಳೊಪ್ಪುತಿಹವು ದ್ರೌ |ಪದಿಗೆ ಪ್ರಾಣೇಶ ವಿಠಲನ ಕರುಣಬಲದಿ ಭವ |ಮೊದಲಾದವರಿಗೆ ಒಡತೆಂದಿವಳ ಮಹಿಮಿ ಬಹು ಶೃತಿಸ್ರ‍ಮತಿಗಳಲಿ ಪೇಳ್ವದೂ ೧

ಉಗಾಭೋಗ
೨೧೮
ಪರಸತಿ ಪಡದಮ್ಮನೆಂಬವ ಧನ್ಯ |ಹರದಿ ಮಕ್ಕಳನ ಪೋಷಿಸುವವ ಧನ್ಯ |ಶಿರಿ ಬಂದಿರಲು ನೋಡಿ ನಡದವ ಧನ್ಯ |ಧರಣಿ ಸುರರ ಪೂಜೆ ಮಾಳ್ಪನೆ ಧನ್ಯ |ಇರದಂತೆ ಸಂಸಾರದೊಳಗಿಹ ಧನ್ಯ |ನಿರುತ ಪ್ರಾತಃಸ್ನಾನ ಮಾಳ್ಪನೆ ಧನ್ಯ |ತರಣಿಗೆ ಸಭೆ ಅಘ್ರ್ಯ ಕೊಡುವವ ಧನ್ಯ |ಸುರಮುಖನಿಗೆ ಉಣಿಸುವವನೇ ಧನ್ಯ |ಮರತು ದುರ್ಮತ ನೆನಸದವನೇ ಧನ್ಯ |ಹರಿದಿನ ವೃತ ದೃಢನಾದವ ಧನ್ಯ |ಉರು ಕ್ಷೇತ್ರಗಳ ಯಾತ್ರಿ ಮಾಳ್ಪನೇ ಧನ್ಯ |ಪರ ಪೀಡಿಗಳಿರೆ ಕೊಂಬುವನೇವೆ ಧನ್ಯ |ಪರ ಕಾರ್ಯಂಗಳಿಗೆ ಸಹಯನಾಹ ಧನ್ಯ |ಹರಿಗಿಂದಿರಿಗೆ ಭೇದವೆಂಬವ ಧನ್ಯ |ಹರ ಮುಖ್ಯರಲಿ ಭಕ್ತಿ ಮಾಳ್ಪನೆ ಧನ್ಯ |ಶರಿರಭಿಮಾನವ ಬಿಟ್ಟವ ಧನ್ಯ |ವರ ಪಂಚಭೇದವ ತಿಳಿದವನೆ ಧನ್ಯ |ದುರುಳಾದೇವರ ಪೂಜೆ ಬಿಟ್ಟಾವ ಧನ್ಯ |ನರರಿಚ್ಛೈಸಿದೊಸ್ತು ಕೊಡುವವ ಧನ್ಯ |ಕೊರತಿ ವೃದ್ಧಿಗೆ ಸಮನಿಹಾನೆ ಧನ್ಯ |ಗುರು ಮಧ್ವಾಂತರ್ಗತ ಪ್ರಾಣೇಶ ವಿಠಲಾನ |ಚರಣ ಕಮಲ ಪೊಂದಿ ಬಾಳ್ವನೆ ಧನ್ಯ ||

ಉಗಾಭೋಗ
೨೩೯
ಪ್ರಥಮ ಪೂಜಿ ಆವಾಹನ ಆಸನ |ದ್ವಿತಿಯ ಪಾದ್ಯ ತೃತಿಯಘ್ರ್ಯ ನಾಕು ಸ್ನಾನ |ತುತಿಪಾದು ಐದೆಂದು ವಸನಾ ರೂಪವಿತೇಳು |ಅತಿ ಸುಗಂಧಷ್ಟ ಸುಮನನವ ದಶಧೂಪ |ಚತುರದೀಪ್ಹನ್ನೊಂದು ನೈವೇದ್ಯ ದ್ವಾದಶ |ತೃತಿದಶ ಆಚಮನವು ಸುಫಲಂಗಳು |ಚತುರ್ದಶ ತಾಂಬೂಲ ಹದಿನೈದು ಹದಿನಾರು |ಮತಿವಂತರರಿವದು ಸುಪ್ರದಕ್ಷಿಣೆಯೆಂದೂ |ಪತಿತ ಪಾವನ್ನ ಶ್ರೀ ಪ್ರಾಣೇಶ ವಿಠ್ಠಲಗೆ ಸಂ- |ತತ ಷೋಡಶೋಪಚಾರ ಪೂಜಿಗಳು ಇವೆ |ವೃತಿಗಳೆಲ್ಲರು ಮೆಚ್ಚು ಪಂಚರಾತ್ರಾಗಮಾ |ನುತಿಪದು ಅತಿ ಗೌಪ್ಯ ಸೊಲ್ಲಿವಕೊ ೧

ಉಗಾಭೋಗ
೨೧೭ ಅ
ಬಿಳಿಯಾ ಬಟ್ಟಿಯು ಕೆಂಪು ಡೊಳ್ಳಿನವರು ಬೀದಿ |ಯೊಳು ಬರುತಿರೆ ಕಂಡು ಆಸೆಯಿಂದ |ಸಲೆ ಲಜ್ಜೆಯನು ತೊರೆದು ಬೆನ್ನು ಬಿಡದಲೆ ಹತ್ತಿ |ಕೊಳಬೇಕು ಫಲ ಮಂತ್ರಾಕ್ಷತೆಯಾನೆಂದೂ |ಹಲಬುತ ಕುಣಿ ಕಲ್ಲು ಮುಳ್ಳು ನೋಡದೆ ಓಡೂ |ತಲಿ ಬಂಟರಿಂದಾಗ ತಡಿಸಿಕೊಳುತಾ |ತಿಳಿದುದಾತನು ತೋರಿದಷ್ಟು ಕೊಟ್ಟಾರೆ ಹಿಗ್ಗಾ |ದಲೆ ಜನ್ಮಾರಭ್ಯದಾ ಕಷ್ಟಾ ಸ್ಮರಿಸೀ |ಘಳಿಕೇನು ವೈಚ್ಚೆನೀ ಗೃಹಸ್ಥನಲಿಹ ದ್ರವ್ಯಾ |ನೆಲಿಯಾ ಬಲ್ಲಿನ್ಯುವಂದಕ್ಕಧಿಕಾರೆಂದೂ |ಕೆಲವು ಜನರು ತನ್ನಿಂದಧಿಕಾ ತಂದುದು ನೋಡಿ |ಬಲು ನೊಂದವರೀಗೆ ದೋಷಾರೋಪಿಸಿ |ಇಳಿಯೊಳೀಪರಿ ದುರ್ಮಾರ್ಗದಲಿಹ ಜನಕ್ಕೆ ನೀ |ನೊಲಿವೊದೇತೊ(ಕೊ) ಶ್ರೀ ಪ್ರಾಣೇಶ ವಿಠ್ಠಲಾ ೧

೨೧೭ ಬ
ವನ ಹೀನವಾದ ನದಿಗಳಿದ್ದು ವ್ಯರ್ಥ |ಧನ ಹೀನನಾದ ಸಾವಕಾರ ವ್ಯರ್ಥಾ |ತನುಜಾರು ಇಲ್ಲದ ಮಂದಿರ ವ್ಯರ್ಥಾ |ಹಣ ವಿಷ್ಣು ದ್ರೋಹಿಗೆ ಕೊಟ್ಟದ್ದು ವ್ಯರ್ಥಾ |ಗುಣಹೀನ ಸನ್ನಾಸಿ ವಂದನಿ ವ್ಯರ್ಥಾ |ಘನ ಗರ್ಜಿಸಿದರೇನು ಮಳೆ ಇಲ್ಲ ವ್ಯರ್ಥಾ |ಅನಲಾನು ಧೂಮಯುಕ್ತವಾಗೆ ವ್ಯರ್ಥಾ |ವನುತಿಗೆ ಗಂಡ ಅಂತರಿ ಸಾಲು ವ್ಯರ್ಥಾ |ಮನಿತನದಳಿಯನಾಗುವದಂತು ಬಲು ವ್ಯರ್ಥಾ |ವನಜರಹಿತವಾದ ಕಾಸಾರವು ವ್ಯರ್ಥಾ |ಅನುವಾದ ಮದಹೀನ ಗಜವಾದರು ವ್ಯರ್ಥಾ |ಕುಣಿಯದ ಹಾರದ ಕುದುರಿ ಇದ್ದೂ ವ್ಯರ್ಥಾ |ಸನುಮತ ಸ್ವರಹೀನ ವೇದಪಾಠ ವ್ಯರ್ಥಾ |ತೃಣ ಕಂಟಕಯುಕ್ತ ಮಾರ್ಗವಾದರು ವ್ಯರ್ಥಾ |ಮನಸು ಸಮಹೀನವಾದ ಜ್ಞಾನ ವ್ಯರ್ಥಾ |ಕನಸು ಕಾಸೆಂಬೊದು ಸುಳ್ಳು ಖ್ಯಾತಿ ವ್ಯರ್ಥಾ |ವಣ ಡಂಬಕವಾದ ದಾನಧರ್ಮ ವ್ಯರ್ಥಾ |ಮನಸಿಜ ಪಿತ ಶ್ರೀ ಪ್ರಾಣೇಶ ವಿಠ್ಠಲನಂಘ್ರಿ |ಯನು ಸೇವಿಸದ ಬಂದ ಮನುಜ ಜನ್ಮವು ವ್ಯರ್ಥಾ ||

೮೪ – ಅ
(ಉಗಾಭೋಗ)
ಬೊಮ್ಮನನ್ನೊಲ್ಲೆನವ್ವ ವೃದ್ಧನಾಗಿಹನೆ |ಸಮ್ಮೀರನೊಲ್ಲೆನವ್ವ ನಿಂತು ನುಡಿಸನೆ ||
ಚರ್ಮಾಂಬರ ಶಂಕರನೊಲ್ಲೆನವ್ವ |ಅಮ್ಮಮ್ಮ ರವಿ ನೋಡೆ ಉರಿಯುತ ಬರುವ ||
ಸುಮನಸರ ಪತಿಗೆ ಮೈಯೆಲ್ಲ ರಂಧ್ರ |ಹಿಮ್ಮೆಟ್ಟುವದು ಕಾಂತಿ ದಿನದಿನದಿ ಚಂದ್ರಗೆ ||
ಧಮ್ಮನ ಹೊಟ್ಟೆ ಗಣಪನೊಲ್ಲೆನವ್ವ |ಸಮ್ಮೀಚೀನಲ್ಲಾರು ಮೊಗನನೊಲ್ಲೆನವ್ವ ||
ನಮ್ಮ ಪ್ರಾಣೇಶ ವಿಠಲನೆಲ್ಲ ಸುರರೊಳು |ಸಮ್ಮತನಾಗಿಹನೆಂದು ತುಂಬಿದಾನಂದದಿಂ ||
ರಮ್ಮೆ ನಗುತ ಮಾಲೆ ಹಾಕಿ ನಮಿಸಿದಳು ||

ಉಗಾಭೋಗ
೨೩೮
ವಾಸುದೇವನು ಶುಕ್ಲ ಶ್ರೀ ಶಾಂ- |ತೀಶ ನೀಲಜಯೇಶ ಪಿಂಗಳ |
ದೋಷಹರ ಶ್ರೀ ಪ್ರದ್ಯುಮ್ನ ಹರಿ ತಾಭಾ- ||
ಮೇಶ ನಾರಾಯಣನು ಲೋಹಿತ |ಈ ಸುರೂಪದಿ ಪಂಚನಾಡಿ ಸು- |
ಕೋಶ ನಳ ಪ್ರಾಣರೊಳಗಿಹ ಪ್ರಾಣೇಶ ವಿಠ್ಠಲನೂ ೧

ಉಗಾಭೋಗ
೨೨೮
ಶ್ರೀದೇವರಿಗೆ ನೈವೇದ್ಯ ಇಡುವ ಕ್ರಮ
ಅಮರಾಸ್ಯ ಮೂಲಿಗೆ ಭಕ್ಷ ಪಾಯಸವನ್ನುಸಮನಗೋಲಾರಿ ಕೋಣಿಗೆ ಲೇಹಪೇಹಾದಿಸುಮನಸರಿಪು ಮೂಲಿಯಲಿ ವಾಯು ಕೋಣಿಗೆಸಮೀಚೀನ ಸೂಪ, ಮಧ್ಯದಲಿ ತುಪ್ಪಾನ್ನವುಕ್ರಮದಿಂದ ಮುಂದೆ ತಾಂಬೂಲ ತಕ್ರೋದಕಾವಿಮಲ ಭಕ್ತಿಯಲಿಟ್ಟು ವಿಪ, ದರ, ರವಿ, ಮೇರು,ಅಮರರಾಕಳು ಇಂತು ಪಂಚಮುದ್ರಿಯ ತೋರಿರಮೆ ಮನೋರಮ ಶ್ರೀ ಪ್ರಾಣೇಶವಿಠ್ಠಲನೀಗೆ |ಸಮರ್ಪಿಸೀರನಳ, ದ್ವಿಜರಿಗಿತ್ತುಂಬುವದೆ ಧರ್ಮಾ ೧

೨೧೨
ಸುಳಾದಿ – ೨ ದ್ರುವತಾಳ
ಧ್ಯಾನವ ಮಾಡು ಮನುಜಾ ದೇಹಾಂತರ್ಗತ ಹರಿಯಾ | ಭಾನುಸನ್ನಿಭ ಭಕ್ತವತ್ಸಲದೇವಾ | ಜ್ಞಾನವಂತರು ಎಲ್ಲ ಈ ತನ ಮನದಲ್ಲಿಧೇನಿಸಿ ಅಪವರ್ಗ ಐದುವರೊ | ದಾನವಾಂತಕ ರಂಗ ಆಪ್ತ ಜನನಿಯಂತೆ | ತಾನೇ ಕರುಣದಿಂದ ಕಡುಪಾಲಿಪ | ಈ ನುಡಿ ಸಿದ್ಧವೆನ್ನು ಎಂದಿಗೂ ಪುಶಿಯಲ್ಲ | ಧೇನಿಪ ಮಾರ್ಗವ ಈ ಪರಿ ತಿಳಿವದು | ಈ ನವದ್ವಾರದಿಂದ ಬಲು ಪರಿಶೋಭಿಪ | ನಾನಾ ವರ್ಣವುಳ್ಳ ದೇಹಾಖ್ಯ ನಗರದಿ | ಪ್ರಾಣಾನೆಂಬೋ ಮಂತ್ರಿಯಿಂದ ಲೊಪ್ಪುತದೇವಾ | ಆ ನಳಿನಭವರುದ್ರಾದಿಗಳಿಂದ | ತಾನು ಪೂಜೆಯಗೊಳುತ ದಹರಹೃತ್ಪದ್ಮ ವೆಂಬ | ನಾನಾ ಶೃಂಗಾರ ಸಿಂಹಾಸನದಲ್ಲಿ ಕುಳಿತಿಪ್ಪ | ಜ್ಞಾನಾ ನಾಂದಪೂರ್ಣಬಿಂಬನೋಪಾದಿಯಲ್ಲಿ | ಆ ನಳಿನ ಕರ್ಣಿಕೆಯಲ್ಲಿ ಶ್ರೀ ದೇವಿಯು | ಆನಾಳಾದಲ್ಲಿ ವಾಸಾ ಭೂದೇವಿಯು | ಭಾನುತೇಜ ದಲ್ಲಿ ದುರ್ಗಾದೇವಿಯು ನೀತಿ | ಯಾನು ತಿಳಿ ಕಮಲ ತ್ರಿಸ್ಥಳದಲ್ಲಿ | ಪ್ರಾಣನಿವಾಸ ನಮ್ಮ ಪ್ರಾಣೇಶ ವಿಠ್ಠಲನ್ನ | ಮಾನಸದಲಿ ನೋಡಿ ಸುಖಿಸು ಸತತ ೧
ಮಟ್ಟತಾಳ
ಕಮಲದಿ ಶೋಭಿಪ ಅಷ್ಟಪತ್ರಗಳು | ವಿಮಲಕಾಂತಿಯಿಂದ ವಿದಿಶ ದಿಶಗಳಲ್ಲಿ | ಸಮವಾಗಿಪ್ಪವು ಅದರೊಳು ಶಕ್ತ್ಯಾದಿ | ರಮೆಯರಸನ ನಿತ್ಯ ವಿಮಲ ಮೂರ್ತಿಗಳು | ಶಮಲನಾಶಕವಾಗಿ ಪೊಳೆವವು ಹನ್ನೆರಡು | ಕ್ರಮದಿಂದಲಿ ಪೂರ್ವ ಮೊದಲಾದ ದಿಶಗಳಲಿ | ರಮಿಸುತಿಪ್ಪವು ನೋಡು ಎರಡೆರಡು ಮೂರ್ತಿ | ಪ್ರಮತಿಯಿಂದಲಿ ನೋಡು ಎಂಟಾದವು ನೋಡು | ಭಮಿಸದೆ ತಿಳಿವದು ನಾಲ್ಕು ವಿದಿಶಗಳಲಿ | ಕ್ರಮ ಮೀರದಂತೆ ಪೊಳೆವುತಿವೆ ನಾಲ್ಕು | ಸುಮನಸರಲ್ಲಲ್ಲಿ ದಿಕ್ಪಾಲಕರಾಗಿ | ನಮಿಸುತಿಪ್ಪರು ಕಾಣೊದ್ವಾದಶ (ರೂಪಗಳು) ಮೂರ್ತಿಗಳು | ಅಮಿತತೇಜದ ಶಕ್ತ್ಯಾದ್ದೇಕಾ ದಶರೂಪಗಳು | ಪ್ರಮದಾಕಾರ ಗಳು ತರುವಾಯದಿ ಒಂದು | ಪು (ಪ್ರ)ಮಾಕೃತಿ ಧರಿಸಿನ್ನು ಹೃದಯ ದಿಶೋಭಿಪವು | ಕಮಲ ಸಂಭವ ವಾಯು ಅಧಿಷ್ಠಾನ ದ್ವಯದಲ್ಲಿ | ಕುಮುದ ಪತಿಯತೇಜ ಪ್ರಾಣೇಶ ವಿಠ್ಠಲ | ಸುಮತಿಯಿಂದಲಿನೆನಿಯೆ ಮನದಲ್ಲಿ ಪೊಳೆವನು ೨
ರೂಪಕತಾಳ
ಹೃದಯ ಕಮಲದಲ್ಲಿಪ್ಪ ಕರ್ಣಿಕಾಗ್ರದಲ್ಲಿ | ಸದಮಲ ಅಗ್ರೇಶ ಸದಾವಾಸವಾಗೀ | ಅದುಭೂತಚರ್ಯನು ಆತನೆ ಪ್ರಾಜ್ಞನು ಕಾಣೊ | ತದುತದು ಜೀವರಿಗೆ ಸುಪ್ತಿದಾಯಕನೆನಿಸಿ | ಮುದದಿಂದ ಅಂಗುಷ್ಠಮಾತ್ರರೂಪವ ಧರಿಸಿ | ಮಧುಸೂದನ ಹರಿ ತಾನು ಅದುಭೂತ ಕಾರ್ಯ ಮಾಳ್ಪ | ತದನಂತರದಲ್ಲಿ ಶ್ರೀಪದುಮನಾಭನೆ ಸರ್ವ | ಹೃದಯಾಕಾಶದಲ್ಲಿವೊದಗಿ ತಾ | ಪ್ರಾದೇಶ ಪರಿಮಿತದಲ್ಲಿ | ಸದಾಕಾಲದಲ್ಲಿದ್ದು ಪುರುಷನಾಮಕನಾಗಿ | ಸುದರುಶನಧರನು ತಾನಲ್ಲಿಪ್ಪಬಿಡದಂತೆ | ಪದುಮಕರ್ಣಿಕೆಯ ಮೂಲದೇಶದಲ್ಲಿ ಶ್ರೀ- | ಪದುಮೆಯರ ಸಹರಿ ಮೂಲೇಶನೆನಿಸುತಲಿ | ಮುದಭರಿತನಾಗಿ ಅಂಗುಷ್ಠಾಗ್ರ ರೂಪನಾಗಿ | ಮದನನ್ನ ಜನಕ ವಿಜ್ಞಾನಾತ್ಮಾ ಎಂಬನಾ | ಮದಲಿ ಶೋಭಿಸುತಿಪ್ಪ ಮುರವೈರಿ ಮುದದಿಂದ | ಉದಧಿ ಶಯನ ನಮ್ಮ ಪ್ರಾಣೇಶ ವಿಠ್ಠಲ | ಸದಧೇನಿಪರ ಮನ ಪದುಮಕೆ ತುಂಬೆ ಎನಿಪಾ ೩
ಝಂಪಿತಾಳ
ಮೂಲೇಶ ಹರಿಪಾದ ಕೀಲಾಲಜ ಯುಗಳ | ಮೂಲವೆನ್ನೆಕರದಿ ಮೇಲು ಭಕುತಿಯಿಂದ | ಶೀಲಗುಣ ಭಾರತಿ ಲೋಲ ತಾನಾದರದಿ | ಮೂಲೇಶಗಭಿ ಮುಖದಿ ಶ್ರೀಲಕುಮಿಪತಿ ಗುಣ | ಜಾಲನೆನಿಸುತ ಧರಿಸಿ | ಕಾಲ ಒಂದರ ಘಳಿಗೆ | ಸೋಲದಲೆ ಇದ್ದು ಶಚಿ ಲೋಲದಿಶಗಭಿಮುಖಿಸಿ | ಲೀಲೆ ಯಿಂದಿರುತಿಪ್ಪ ಮೂಲೋಪತಿ ಮುಖ್ಯ ಪ್ರಾಣ | ನಲಿ ಶುಚಿಷತ್ ಮೇಲು ನಾಮದಲಿಂದ ಮೆರೆವ ಶ್ರೀಹರಿ ಇಪ್ಪ | ಳಾಳೂಕ ಪ್ರಾಜ್ಞ ಅಪರಾಜಿತ ವೈಕುಂಠ | ಶ್ರೀಲೋಲನಾದಂಥ ಇಂದ್ರನೆಂಬೋ ನಾಮ | ಮಾಲಿಕೀಯಲಿಂದ ಬಲು ಶೋಭಿಸುತಲೀ | ಪಾಲಸಾಗರ ಶಾಯಿ ಪ್ರಾಣೇಶವಿಠ್ಠಲ | ಮೂಲೇಶನಾಗಿ ತಾ ಲೀಲೆ ಈ ಪರಿಮಾಳ್ಪ ೪
ತ್ರಿವಿಡಿತಾಳ
ಶ್ರೀಮುಖ್ಯ ಪ್ರಾಣನು ಸರಸದಿಂದಲಿ ನಿತ್ಯ | ಈ ಮೂರು ವಿಧ ಜೀವರೊಳಗೆ ಇದ್ದು | ಯಾಮಯಾಮಕೆ ಬಿಡದೆ ತಾಮೇಲು ಕರುಣದಿ | ಶ್ರೀ ಮುಕುಂದನ ಹಂಸ ಮಂತ್ರಗಳ | ತಾಮರಸದಿ ಪೊಂದಿ ಮನವಿಡಿದು ತಿರುಗಿ | ಆ ಮುಹೂರ್ತ ಪರಿಯಂತ ಜಾಗ್ರತೆಯಿಂದ | ತಾಮೀದಂತೆ – ಇಪ್ಪತ್ತೊಂದು ಸಾವಿರ ಮೇಲಾರು ನೂರು ಶ್ವಾಸಂಗಳ | ಶ್ರೀಮಾಧವನ ಸಂಪ್ರೀತಿಗೋಸುಗ ಜಪಿಸಿ | ಈ ಮಹಿಯೊಳು ಯೋಗ್ಯ ಜೀವರಿಂದ | ಸಾಮಜವರ ದರ್ಪಣೆ ಮಾಡಿಸುವ | ಈ ಮಹಿಮನು ತನ್ನ ದ್ವಾರದಿಂದ | ಕಾಮಿತಪ್ರದ ನಮ್ಮ ಪ್ರಾಣೇಶವಿಠ್ಠಲ | ಕಾಮಿತಪ್ರದನಾಹ ಈ ಪರಿಧೇನಿಸೆ ೫
ಅಟ್ಟತಾಳ
ಕುದುರೆ ಬಾಲದ ಕೂದಲು ಶತ | ವಿಧ ವಿಭಾಗವಮಾಡಿ ಅದರೊಳಗೊಂದನು | ಅದರಂತೇವೆ ನೂರು ವಿಧದಿ ವಿಭಾಗಿಸ | ಲದರೊಳಗುಳಿದ ಒಂದಂಶದ ಪರಿಮಿತ ಕಾಣೊ | ವಿಧಿ ಭವಾದಿಗಳ ವಿಡಿದು ತೃಣ ಪರಿಯಂತ | ಒದಗಿ ಜೀವರ ಮಿತಿ ಸದಾಕಾಲ ತಿಳಿವದು | ಇದೆ ಜೀವ ಪವನನ ಪದಕಂಜಗಳ ವಿಡಿದು ಬಲುತಾ ಸಮೀ | ಪದಲಿ ನಿರುತಲಿದ್ದು ಸದ ಸತ್ಕರ್ಮವ ಮಾಳ್ಪ | ಅದುಭೂತ ಸಹಸ ಪ್ರಾಣೇಶ ವಿಠ್ಠಲ | ಸದಮಲನಾಗಿ ಸರ್ವದ ಕಾರ್ಯಗಳ ಮಾಳ್ಪ ೬
ಆದಿತಾಳ
ಹಂಸನಾಮಕನು ಹೃದಯಕಮಲದಲ್ಲಿ | ಹಂಸದಂತೆ ಸಂಚರಿಸುವ ದಳದಲ್ಲಿ | ಕಂಸಾರಿಯು ಅಷ್ಟಭುಜದಲ್ಲಿ | ಹಿಂಸೆ ಇಲ್ಲದೆ ಸದಾ ಧರಿಸಿ ಸುಂದರ ಪದ | ಪಾಂಸುಗಳಿಂದಲಿ ಪರಿಹರಿಸುತಲಿ | ಸಂಸಾರಿಗೆ ದಳಭೇದದಿಂದ ಕರ್ಮಗಳನು ತಾಕೊಡುತಲಿಪ್ಪಹರಿ | ಭ್ರಂಶವಿಲ್ಲದಲೆ ಬಹುವಿಧ ಫಲವೀವ | ಸಂಸೃತಿ ನಾಶ ಪ್ರಾಣೇಶ ವಿಠ್ಠಲಸೀ | ತಾಂಶುವದನ ಪಾಲಿಪ ಪೊಳೆವುತಲಿ ೭
ಜತೆ
ಈ ಪರಿಯಲಿ ನಿತ್ಯ ಶ್ರೀಪತಿಯ ಧೇನಿಸು |ಅಪಾರಮಹಿಮ ಪ್ರಾಣೇಶವಿಠ್ಠಲ ಒಲಿವ ||

೨೧೨
ಸುಳಾದಿ ೩
ಧ್ರುವತಾಳ
ವಿಷಯ ತೃಷ್ಣೇಯ ಬಿಡು ವಿಶ್ವಾದಲ್ಲಿ ಬಾಳು |ಕುಶಲ ತಪ್ಪದು ನಿನಗೆ ಎಂದೆಂದಿಗೂ |ವಸುಧಿ (ಮೇಲಿದ್ದ) ಮೊದಲಾದ ಪ್ರಾಕೃತದ ಪದಾರ್ಥವು |ಬಿಸಜನಾಭಗೆ ಆವಾಸ ಯೋಗ್ಯ |ವಶದೊಳು ನಿತ್ಯದಲ್ಲಿ ಇರುತಿಪ್ಪವು ಕೇಳು |ಹಸನಾಗಿ ಅದರಿಂದ ಪರರ ಆಧೀನವಲ್ಲ |ಪುಸಿಯ ಆಶೆಯ ಮಾಡಿ ರಾಜ್ಯಾದ್ಯರಿಂದಲಿ |ವಸುವ ಪಿಡಿಯದೀರೊ ಸಕಲ ಜೀವರನೆಲ್ಲ |ಹಸನಾಗಿ ಸಲಹುವ ಹರಿಯ ಪರಮ ಇಚ್ಛೆ |ವಶದಿಂದ ಬಂಧನದಿಂದ ಜೀವಿಸೊ ಮನುಜಾ |ವಸುಮತಿಯೊಳಗಿದು ಪರಮ ಸಾಖ್ಯ |ಪುಸಿಯಲ್ಲ ಈ ಸೊಲ್ಲು ಶ್ರುತಿಯಲ್ಲಿ ಸಿದ್ಧವೊ |ವಿಷಯೇಚ್ಛೆ ಎಂಬೋದೆ ವಿಷದ ಪ್ರಾಯ |ಅಸಮ ಮಹಿಮ ಹರಿಯ ಪ್ರೀತಿ ಅಹುದೊ ಇದರಂತೆ ರಾ |ಜಸ ತಾಮಸ ಕರ್ಮ ಕಟ್ಟದಲೇ |ವಿಷಯೇಂದ್ರಿಯಂಗಳೆಲ್ಲ ಹರಿಯ ಆಧೀನ ತಿಳಿದು |ಕುಶಲ ನಿವೃತ್ತ ಕರ್ಮಗಳ ಮಾಡುತ ವ |ರುಷ ಶತ ಪರಿಯಂತ ಜೀವಿಸೆಲೋ |ಹಸನಾಗಿ ಹರಿಯ ಕಾಂಬ ಜ್ಞಾನಿಗಾದರು ಕರ್ಮ |ನೆಸಗದಿದ್ದರೆ ಪಾಪ ಲೇಪವಹದೊ |ಮಿಸುಣಿಯಾದರು ಸರಿ ತಾಪ ವಿರಹಿತವಾಗೆ |ವಸುಧೆಯೊಳಗೆ ರಾಜಿಸದೆ ರಜಲಿಪ್ತವಾಗಿ |ಅಸಮ ಮುಕುತಿ ಪಥಕೆ ವಿಘಾತವಾಗದೊ |ಕುಶಲ ಸತ್ಕರ್ಮದ ಕಾರಣದಿಂದ |ಪುಶಿಯಲ್ಲ ಸಿದ್ಧವೆನ್ನು ಮುಕುತಿಯ ನಿಜಾನಂದಕ್ಕೆ |ಪುಶಿಯ ಬಪ್ಪದು ಸ್ವಲ್ಪ ಹ್ರಾಸವಾಗೀ |ಋಷಿಗಳಿಗಾದರು ಇದೆ ಪರಿ ಅಜ್ಞರಿಗೆ |ನೆಸಗದಿದ್ದರೆ ಸೋಚಿತ ಕರ್ಮ ಪಾಪ ಲೇಪ |ಹಸನಾಗಿ ಬಪ್ಪದು ಆಶ್ಚರ್ಯವೇ |ಅಸಮ ಮಹಿಮ ನಮ್ಮ ಪ್ರಾಣೇಶ ವಿಠ್ಠಲನ ಭ |ಜಿಸುವದು ಎಂದೆಂದು ಸ್ವೋಚಿತದಂತಲೆ ೧
ಮಟ್ಟತಾಳ
ಸರುವ ಸ್ವತಂತ್ರನು ಸಿರಿಯ ರಮಣ ಗುಣ |ಪರಿಪೂರ್ಣ ಹರಿಯ ಮಹಿಮೆ ತಿಳಿಯದಲೆ |ಪರಿ ಮೋಹಿತರಾಗಿ ಪರಿ ಪರಿ ವಿಧದಿಂದ |ಪರಮ ಪುರುಷನ್ನಾವಜ್ಞತೆ ಚಿಂತಿಸುವ |ಪರಮ ಪಾತಕಿ ಜನಕ ಹರಿಹರಿ ಏನೆಂಬೆ |ಪರಮ ಕರುಣ ಶರಧೆ ಹರಿ ತಾ ಕೋಪದಲಿ |ಮರುತನ ಕೈಯಿಂದ ಗದೆಯಿಂದಲಿ ಬಡಿದು |ದುರುಳರ ತನುಲಿಂಗ ಪರಿದತಿ ವೇಗದಲಿ |ಹರುಷ ಲೇಶ ರಹಿತ ದುಃಖ ಪರಿಮಿತವಾದ |ಸುರಪತಿ ರಿಪು ಜನಕೆ ಸಂಪ್ರಾಪ್ಯವಾದಾ |ಸುರಿಯ ನಾಮ ಲೋಕ ಅಂಧಕಾರದಲಿಂದ |ಪರಿಪೂರಿತವಾದ ತಮದೊಳು ಬೇಯಿಸುವ |ಹರಿಯ ದ್ವೇಷಿ ಜನಕೆ ಫಲಗಳು ಈ ಪರಿಯೊ |ಸುರ ನದಿ ಪಿತ ನಮ್ಮ ಪ್ರಾಣೇಶ ವಿಠ್ಠಲ |ಕರದು ಮುಕ್ತಿಯ ಕೊಡುವ ನಿಜರೂಪ ಧೇನಿಪಗೆ ೨
ತ್ರಿವಿಡಿತಾಳ
ವಿರಹಿತ ಭಯರೂಪ ವಿಶ್ವ ಕುಟುಂಬಿಯು |ಪರಮ ಮುಖ್ಯನು ಕಾಣೊ ಜಗಗಳಿಗೆ |ಪರಮ ವೇಗದ ಮನಸಿನಿಂದಲಿ ಅತಿ ವೇಗ |ಸರಸಿಜ ಭವ ರುದ್ರ ಸುರವರರೂ |ಅರಿಯರು ಬಲು ಕಾಲಾ ಚಿಂತಿಸಿದರು ಇವನಾ |ಪರಿಮಿತ ಗುಣ ಸಾಕಲ್ಯಾದಿ |ಹರಿಯು ಸುರರನೆಲ್ಲ ಸ್ವಭಾವ ಜ್ಞಾನದಿ |ಅರಮರೆ ಇಲ್ಲದೆ ಅಖಿಳರ ನೋಳ್ಪನು |ಚರಿಸದೆ ಕುಳಿತು ಓಡುವರನು ಮೀರುವ |ಮರುತನು ನಾನಾ ಜೀವರ ಯೋಗ್ಯತೆಯನು |ಸರಿಸಿ ಮಾಡಿದ ಕರ್ಮಗಳೆಲ್ಲವ |ಭರದಿ ಭಕುತಿಯಿಂದ ಸಮರ್ಪಿಸುವನು |ಪರರನೆಲ್ಲರ ಭಯಪಡಿಸುವ ಭರದಲಿ |ಪರರಿಂದ ಜಾನಾ ಹರಿ ಎಂದೆಂದಿಗೂ |ಸರುವ ವ್ಯಾಪುತ ಚಿಂತ್ಯ ಶಕ್ತಿಯಾದದರಿಂದ |ಹೊರಗೆ ಒಳಗೆ ದೂರ ಸಮೀಪದಿ |ಇರುತಿಪ್ಪ ಅನುಗಾಲ ಹಿಂದು ಕ್ಷಣ ಬಿಡದಲೆ |ಸರುವ ಭೂತಗಳೊಳು ಅಂತರ್ಯಾಮಿಯಾಗಿ |ಪರಮ ಆಕಾಶದಂತಿಪ್ಪನು |ಹರಿಯಲ್ಲಿ ಬಿಡದೆ ಸರ್ವದ ವಿಶ್ವವಿರುವುದು |ಪರಮ ಭಕುತಿಯಿಂದ ಇವನು ಕೇಳಿ |ಸಿರಿಯ ರಮಣ ಶೋಕ ವಿರಹಿತ ಸದಾಲಿಂಗ |ಶರೀರ ವಿದೂರ ಸ್ಥೂಲ ಮೊದಲಿಗಿಲ್ಲಾ |ಪರಿಪೂರ್ಣ ದೇಶ ಕಾಲ ಗುಣದಿಂದಲಿ |ಹರಿಯೆ ಎಲ್ಲರ ಪಾವನ ಮಾಳ್ಪದರಿಂದ |ನಿರುತ ಶುದ್ಧನು ಎಂದೆನಿಸಿಕೊಂಬ |ಪರತಂತ್ರ ಮೊದಲಾದ ಮೋಕ್ಷ ಪಾಪರಹಿತ |ಸಿರಿ ಮೊದಲಿಗೆ ಚೇತನ ಜಡವ |ಪರಿ ಪರಿ ತಿಳುವ ಸರ್ವಜ್ಞ ಕಾರಣದಿಂದ |ಧರಣಿಯೊಳಗೆ ಕವಿಯೆನಿಸಿಕೊಂಬ |ಸಿರಿದೇವಿ ಬೊಮ್ಮಾದ್ಯರ (ಮನು) ಮನ ನಿಯಾಮಕನಾಗಿ |ಸರುವದಾ ಮನೀಷಿ ನಾಮದಲಿಪ್ಪನೂ |ಸುರರ ನರರ ಎಲ್ಲರ ವಶಿಕರಿಸುವ |ಸರುವವು ಈತನ ಪ್ರೇರಣೆಯು |ಪರರ ಅಪೇಕ್ಷಿಸದೆ ಇದ್ದ ಕಾರಣದಿಂದ |ಸ್ವರೂಪ ಪ್ರಮಿತಿ ಪ್ರವರ್ತಿಗಳಲ್ಲಿ ಸ್ವಯಂ ಭೊ |ಸರಸಿಜ ಭವನ ಲಿಂಗದಲಿಂದ ಅನಿರುದ್ಧ |ಶರೀರವ ಜನಿಸುವ ಅದೆ ಮಹತ್ವವು |ಭರದಿ ಆ ತತ್ವದಿಂದ ಎಲ್ಲ ತತ್ವಗಳದು |ಸರಸದಿ ಸೃಜಿಸುವ ಸರ್ವ ಪದಾರ್ಥಗಳ |ಪರಿಯು ಇದೇ ಸಕಲ ಕಲ್ಪಕ್ಕು ಅನಾದಿಯಿಂದ |ಪರಮ ಮಹಿಮನ ಲೀಲೆಯ ಮಾಳ್ಪ |ಪರಮ ಸುಜನರೆಲ್ಲ ಈ ಪರಿ ತಿಳಿದು ಪಾ |ಮರ ಮತಿ ತ್ಯಜಿಸಿ ಮನದೊಳಗೆ |ಹರಿಯ ಧೇನಿಸಿದರೆ ತನ್ನ ರೂಪವ ತೋರಿ |ಪರಮ ಪದವೀನೀವ ಭಯ ಶೋಕ ಅಜ್ಞಾನ |ವಿರಹಿತರಾಗುವರು ಹರಿಯ ಪೊಂದಿದ ಜನರು |ತೊರೆದು ದುರ್ಮತಿಯನು ಈ ಪರಿ ಚಿಂತಿಸು |ಪರಿ ಪರಿ ಗುಣವುಳ್ಳ ಪ್ರಾಣೇಶ ವಿಠ್ಠಲನು |ಶರಣರ ಶರಣರ್ಗೆ ಶಮದಮೆ ಕುಲ ಸಖ ೩
ಅಟ್ಟತಾಳ
ಶ್ರೀ ರಮಣನೆ ದೋಷದೂರ ಸುಗುಣನೆ |ಕಾರು ಮತಿಯಲಿ ಜೀವಾಭೇದ ಸಾಮ್ಯವ |ಸಾರೆ ಮುಕುತಿಯಲಿ ಮುಕ್ತರಭಿಮತೆ |ಚಾರು ಯದಾಪಶ್ಯ ಎಂಬ ಶ್ರುತಿಗೆ |ಸಾರ ಅರ್ಥವನು ಯೋಚಿಸದೆ ಕುಯುಕ್ತಿಲಿ |ನಾರಾಯಣಗೆ ಮುಕ್ತ ಸಾಮ್ಯವ ಪೇಳುವ |ಘೋರ ಪಾಪಿ ಜನಕೆ ಕ್ರೂರ ಅಂಧ ತಮಸು |ಬಾರಿ ಬಾರಿಗೆ ತಪ್ಪದಲೆ ಆಗುವ |ಧೀರನಂತರ್ಯಾಮಿ ಯರಿಯಾಜ್ಞದಿ |ಈ ರೀತಿ ವಾಚಕೆ ಸಂಶಯವಿಲ್ಲವೊ |ಸಾರ ಮತಾರ್ಥವ ತಿಳಿದು ಈ ಕುಮತವ |ಭೂರಿ ಬಾರಿ ಬಾರಿ ನಿಂದಿಪದಿರೆ ಆ |ಕ್ರೂರ ಜನಕೆ ಪ್ರಾಪ್ಯ ತಮಸಿನಿಂದಧಿಕತೀ |ಪಾರ ದುಃಖ ತಮವಾಗುವದೆಲೊ ಈ |ಸಾರ ಮಾತಿಗೆ ಸಂಶಯ ನೀ ಬಡದಲೆ |ಆ ರೀತಿ ಜನರ ನಿಂದಿಸುವ ಸರ್ವದ |ಧೀರ ಬುದ್ಧಿಯಲಿ ಶ್ರೀಹರಿಯ ಸುಜ್ಞಾನದಿ |ಪೂರ್ಣಾನಂದ ಮೋಕ್ಷವನೈದುವ |ಬಾರಿ ಬಾರಿಗೆ ಪಾತಕರ ನಿಂದೆಯಿಂದ |ಭೂರಿ ದುಃಖಾ ಜ್ಞಾನ ಮೋಹಗಳುಳ್ಳ ಸಂ |ಸಾರ ಸಾಗರವ ವೇಗ ದಾಟುವನು |ಈ ರೀತಿಯಿಂದಲಿ ಎರಡು ವಿಧ ಮೋಕ್ಷವರ |ಪೂರೈಸುವದರಿಂದ ಧಾರುಣಿ ಜನರು ವಿ |ಚಾರಿಸೆ ಜ್ಞಾನ ಮಿಥ್ಯಾಜ್ಞಾನ ನಿಂದೆಯ |ವಾರವಾರಕ ಆಚರಿಸಬೇಕು |ಶ್ರೀರಮಣಿಗೆ ಸೃಷ್ಟಿಕರ್ತೃತ್ವವು ಇಲ್ಲೆಂದು |ಸಾರುವರಿಗೆ ಸಿದ್ದ ನಿತ್ಯ ನರಕವು |ಕಾರಣ ಸೃಷ್ಟಿಗೆ ಎಂದು ತಿಳಿದು ಸಂ |ಹಾರ ಕರ್ತೃತ್ವ ಶ್ರೀಹರಿಗಿಲ್ಲವು |ಈ ರೀತಿಯಲ್ಲಿ ತಿಳಿದವರಿಗೆ ಅದಕಿಂತ |ಘೋರ ಅಂಧ ತಮಸು ಸರಣಿ ಕಾಣೊ ಈ |ಕಾರಣದಿಂದ ಸೃಷ್ಟಿ ಸ್ಥಿತಿಗಳಿಗೆ ಸಂ |ಹಾರಾದಿ ನಾನಾ ಕರ್ತೃತ್ವ ತಿಳಿದು |ನಾರಾಯಣಗೆ ಉದ್ಧಾರನಾಗಬೇಕು |ದೂರ ದೋಷನ ಸುಖ ಜ್ಞಾನ ಸೃಷ್ಟಿಗೆ |ಕಾರಣನೆಂದು ತಿಳಿದರೆ ಸುಜ್ಞಾನ |ಸ್ವರೂಪನಾಗುವ ಸಿದ್ಧವಾ ಹೆರಿಗೆ ಸಂ |ಹಾರ ಕರ್ತೃತ್ವವ ತಿಳಿದರೆ ಅಜ್ಞಾನ |ದೂರವಾಗುವದೊ ದುಃಖಾದಿಗಳೆಲ್ಲ |ಈ ರೀತಿಯಲಿ ಸಂತತ ತಿಳಿಯಲಿ ಬೇಕು |ಸಾರ ಹೃದಯ ವಾಸ ಪ್ರಾಣೇಶ ವಿಠ್ಠಲ |ಕಾರುಣ್ಯದಿಂದಲಿ ಕೊಡುವನೊ ಮುಕುತಿಯ |ಸ್ವರೂಪವನ್ನು ಈ ಪರಿ ಧೇನಿಪಂಗೆ ೪
ಆದಿತಾಳ
ವನಜನಾಭನ ಬಿಂಬ ರೂಪ ಸಾಕ್ಷಾತ್ಕಾರ |ಮಿನಗುವ ಮೋಕ್ಷಕೆ ಕಾರಣ ನಿಃಸಂಶಯ |ಘನ ಮಹಿಮನ ರೂಪ ಕಾಂಬುವದಕೆ ಹರಿಯ |ಗುಣ ಕರ್ಮ ಕಥಾ ಶ್ರವಣ ಮನನಾದಿ ಸಾಧನವು |ಸನುಮತಿಯಲಿ ಕೇಳಿ ಇದರೊಳು ಒಂದು ಉಂಟು |ಚಿನುಮಯ ರೂಪನ ಪ್ರಸಾದ ಸಿದ್ಧವಾಗೆ |ತನು ಅಪರೋಕ್ಷ ಮೋಕ್ಷ ಉಭಯವು ಸಿದ್ಧವಹುದು |ಅನುಮಾನ ಸಲ್ಲದು ಇದರೊಳು ವಿವೇಕವು |ಅನುಷ್ಟಿತ ಶ್ರವಣನು ಅಪರೋಕ್ಷವಾಗುವದಕೆ |ದ್ಯುನದಿ ಜನಕನ್ನ ಪ್ರಾರ್ಥಿಪ ಪರಿ ತಿಳಿಯೊ |ಗುಣಪೂರ್ಣ ಮುಖ್ಯ ಜ್ಞಾನ ಜಗನಿಯಾಮಕ |ಮುನಿಜನ ಗೇಯನೆ ವನಜ ಸಂಭವನಿಂದ ವಿಶೇಷಗಮ್ಯನೆ |ಘನ ರಸ್ಮಿನಾಮಕ ಸ್ವರೂಪ ಜ್ಞಾನವನು |ಇನಿತು ಮಾತ್ರವಲ್ಲ ಬಾಹ್ಯ ಜ್ಞಾನವ ಸಹ |ಅನಿಮಿತ್ಯ ಬಂಧುವೆ ವಿಸ್ತರಿಸುವದೆಲೊ |ದನುಜ ದಲ್ಲಣ ನಿನ್ನ ಪರಮ ಕಲ್ಯಾಣ ರೂಪ |ಅನವರತದಿ ನೋಳ್ಪೆ ಕರುಣಿಸಿ ನಿನ್ನ ರೂಪ |ಕನಕಮಯ ಪಾತ್ರವೆನಿಸಿಕೊಂಬುವ ದಿವ್ಯ |ಇನನ ಮಂಡಲದಿಂದ ಅಚ್ಛಾದಿತವಾದದ್ದು |ಎನಗೆ ನೋಡುವದಕೆ ನಿರಾವರಣ ಮಾಡು |ಅನನಂತರ್ಯಾಮಿ ಅಹೇಯ ನಿತ್ಯ ಸತ್ಯ |ಅಣು ಜೀವ ದೇಹದೊಳಗೆ ಇದ್ದರು ನೀನೆ ಆ |ತನುಗಳು ಭಸ್ಮಾತ್‍ವಾದರೂ ಮಹಾಮಹಿಮನೆ ಉಪಹತಿಯಿಲ್ಲ |ಅನಿಳನೊಳಗೆ ನೀನು ಅಂತರ್ಯಾಮಿತ್ವದಿಂದ |ಅನವರತದಲ್ಲಿ ಇದ್ದ ಕಾರಣ ವಾಯು |ಘನ ಜ್ಞಾನದಿಂದಲಿ ಅಮೃತನೆನಿಸಿಕೊಂಬ |ಚಿನುಮಯ ನಿನ್ನಾಶ್ರಿತ ಈ ಪರಿ ಇರಲು |ನಿನಗುಪಹತಿ ಉಂಟೆ ಎಲ್ಲಿ ಇದ್ದರು ಸರಿ |ವನಜಲೋಚನ ನೀನು ಮಾಡಿ ಮಾಡಿಸಿದ ಸಾ |ಧನವನು ಕೈಕೊಂಡು ಅನುಗ್ರಹ ಮಾಡುವದು |ಪ್ರಾಣ ಪ್ರತೀಕ ವ್ಯಾಪ್ತ |ಇನಿತು ಸ್ತೋತ್ರವ ಮಾಡಿ ಹರಿಪ್ರಸಾದಾಖ್ಯ |ಧನ ಸಂಪಾದಿಸಬೇಕು ಇದರ ತರುವಾಯ ಕೇಳು |ತನುವು ಮಾಡಿದ ಮನುಜ ಮೋಕ್ಷಗೋಸುಗ ಪ್ರಾ |ರ್ಥನೆ ಮಾಡುವ ಪರಿ ಏಕಾಗ್ರಚಿತ್ತನಾಗಿ |ತನುಗಳ ನಿಯಾಮಕ ಅರ್ಚಿಷ ಮೊದಲಾದ |ಘನ ಮಾರ್ಗಗಳಿಂದ ಗುಣತ್ರಯ ಶೂನ್ಯ ಮೋಕ್ಷ |ಧನವನೀವದು ದೇವ ಪುನರಾವರ್ತಿರಹಿತ ಪದವಿಗೆ ಕಾರಣ |ವೆನಿಪ ಜ್ಞಾನಂಗಳ ಅನಿತು ಬಲ್ಲಿಯು ನೀನು |ಅನಿರುದ್ಧ ಅದರಿಂದ ಬಿನ್ನೈಸುವೆನು ರಂಗ |ಅನುಪಮ ನಿನ್ನಯ ಅನುಗ್ರಹದಿಂದಲಿ |ಕೊನೆ ಮೊದಲಿಲ್ಲದ ಪೂರ್ವೋತ್ತರ ಪಾಪ |ಅನಭಿಮತ ಪುಣ್ಯ ಸಹಿತ ಪೋದವು ಕರುಣಿ |ಘನ ಪ್ರಾರಬ್ಧವೆಂಬ ಕರ್ಮದ ಕರುಣದಲ್ಲಿ |ಕ್ಷಣದೊಳು ದೂರಮಾಡು ಮಾಡೆನೆಂಬುದು ನಿನಗೆ |ಮನಸಿನೊಳಗೆ ಇತ್ತೆ ಸತ್ಯ ಸಂಕಲ್ಪನೆ |ಅನಿಮಿತ್ಯ ಉಪಕಾರಿ ಇನಿತು ಎನಗೆ ನೀನು |ಕೊನೆಯಿಲ್ಲದುಪಕಾರ ಮಾಡಿದದಕೆ ಆನು |ನಿನಗೋಸುಗ ಜ್ಞಾನ ಭಕುತ್ಯಾದಿಗಳಿಂದ |ನಿನ್ನ ವನಜ ಯುಗಕೆ ಮನವ ಮಾಡುವೇನಲ್ಲದೆ |ಪುನಃ ನಿನ್ನಾಜ್ಞವು ಮೀರುವದುಂಟೆ |ಅನನನುತ ಪ್ರಾಣೇಶ ವಿಠ್ಠಲ ನಮೋ ನಮೊ |ವನಜ ಭವಾದಿಗಳು ನಿನ್ನಾಜ್ಞ ವೀರಲೋಕವೇ ೫
ಜತೆ
ಈ ಪರಿಯಲಿ ದ್ವಿವಿಧ ಬಗೆಯಿಂದ ಯಾಜಿಸೆ ಶ್ರೀಪತಿ ಪ್ರಾಣೇಶ ವಿಠಲ ಮುಕುತಿಯ ಕೊಡುವ ||

ಅಥವಾ
ನಿರತಿಶಯವಾದ ಪ್ರಿಯ ಉಪಕಾರಿಯೇ ನಮೋ |ಪರಿಪೂರ್ಣ ಗುಣನಿಧಿ ಪ್ರಾಣೇಶ ವಿಠ್ಠಲ ||

೨೧೧
ಸುಳಾದಿ – ೧
ದ್ರುವತಾಳ
ಶ್ರೀವಿಷ್ಣುವಿನ ದಿವ್ಯಶ್ರವಣಮನನಧ್ಯಾನ | ಈ ವಿಧವಾದ ವಿಚಾರವನು | ಈ ವಸುಧಿಯೊಳು ತ್ರಿವಿಧಾಧಿಕಾರಿಗಳು | ಭಾವ ಶುದ್ಧಿಯಲ್ಲಿ ಬಹು ಬಗೆ ವಿಚಾರಿಸಿ | ಶ್ರೀವರ ಕರುಣಿಸಿ ತನ್ನ ಪರೋಕ್ಷವಿತ್ತು | ಸ್ಥಾವರ ಚೇತನ ಜಗಕೆ – ಜನ್ನಾದಿ ಕರ್ತ | ಜೀವಭಿನ್ನನು ಕಾಣೊ ಸರ್ವೇಶ | ಪಾವನವಾದ ನಾಲ್ಕು ವೇದ ಭಾರತವರ | ಭಾವುಕ – ಪಂಚರಾತ್ರ ಮೂಲರಾಮಾಯಣ | ಈ ವಿಧವಾದ ಶಾಸ್ತ್ರ ಕಗಮ್ಯ | ಆ ಉಪಕ್ರಮ ಉಪಸಂಹಾರ ಅಭ್ಯಾಸ | ಕೇವಲವಾದ ಉಪಪತ್ತಿ ಮೊದಲಾದ ಲಿಂಗದಿಂದ | ಯಾವದ್ಪೇದಾರ್ಥವ ವಿಚಾರಿಸೆ | ಆವಾವ ಬಗೆಯಿಂದ ಹರಿಯೇ ಸರ್ವೋತ್ತಮ | ಭಾವಜ್ಞ ಜನರೆಲ್ಲ ತಿಳಿದು ನೋಡಿ | ಈ ವಿಧವಾದ ಈ ಕ್ಷತೆ ಕರ್ಮನೆನಿಸುವ | ಈ ವಾಸು ದೇವಗೆ ಸಮಸ್ತ ಶಬ್ದ ವಾಚ್ಯ | ತ್ವವ ಪೇಳದಪಾಪಿಗೆ ಏನೆಂಬೆ | ದೇವೇಶನಾದ ಪ್ರಾಣೇಶ ವಿಠ್ಠಲನ | ಈ ವಿಧ ತಿಳಿವುದು ಕಾವಕರುಣ ೧
ಮಟ್ಟತಾಳ
ಸಕಲ ಶಬ್ದಗಳು ನಾಲ್ಕು ವಿಧವೈಯ್ಯಾ | ಪ್ರಕಟದಿಂದ ತತ್ರ ಪ್ರಸಿದ್ಧ ಕೆಲವು | ಮುಕುತಿವಂತರು ಕೇಳಿ ಅನ್ಯತ್ರ ಪ್ರಸಿದ್ಧ | ಅಖಿಳ ಚತುರ್ವಿದ ವಚನಗಳಿಂದ ಪ್ರಾಣೇಶವಿಠ್ಠಲ | ಅಕಳಂಕತ್ವದಲಿ ವಾಚ್ಯ ಪರಮವಾಚ್ಯ ೨
ತ್ರಿವಿಡಿತಾಳ
ಈ ಶಬ್ದಗಳಿಗೆಲ್ಲ ಯುಕ್ತ ಸಮಯ ಶ್ರುತಿ | ದೋಷಿ ನ್ಯಾಯಾಪೇತ ಶ್ರುತಿಗಳಿಂದ | ಈ ಸೇಸು ವಿರೋಧವು ಹರಿವಾಚ್ಯತ್ವದಲ್ಲಿ | ಸೂಸಿ ಬಂದರು ವೇದವ್ಯಾಸದೇವಾ | ಘಾಸಿ ಇಲ್ಲದಂತೆ ಪ್ರಬಲ ಬಾಧಕ-ಪೇಳಿ | ಘಾಸಿಯ ಬಿಡಿಸಿದ ವಿರೋಧವ | ಈಸೊಲ್ಲು ಪುಸಿಯಲ್ಲಿ ವೇದವಚನ ಸಿದ್ಧ | ಲೇಶಸಂದೇಹಗೊಳಿಸಲ್ಲದು | ತಾಸು ತಾಸಿಗೆ ಇದನೆ ಸ್ಮರಿಸಿ ಅಧಿಕಾರಿಗಳು | ದೋಷರಹಿತ ಜ್ಞಾನಾನಂದ ಪೂರ್ಣ | ಶ್ರೀಶನೊಬ್ಬನೆ ಎಂದು ತಿಳಿದು ಪಾಡಿರೊ ನಿತ್ಯ | ಈಶ ಪ್ರಾಣೇಶ ವಿಠ್ಠಲ ನೋಳ್ಪ ಕರುಣದಿ ೩
ಅಟ್ಟತಾಳ
ಸ್ವರ್ಗಾದಿಗಳಲ್ಲಿ ಗತಿ ಅಗತಿ ಮುಖ್ಯ | ದುರ್ಗಮ ದುಃಖಗಳ ತಿಳಿದು ನಿರ್ವೇದದಿ | ಭಾರ್ಗವಿರಮಣನ ಅತಿಶಯ ಮಹಿಮೆಗಳ | ನಿರ್ಗತದಲಿ ತಿಳಿದು ಹರುಷದಿ ತನು ಉಬ್ಬಿ | ನಿರ್ಗಮವಿಲ್ಲದ ಭಕುತಿ ಸಂಪಾದಿಸಿ | ದುರ್ಗತಿ ಮಾರ್ಗವ ಬಿಟ್ಟಪ | ವರ್ಗಪ್ರದಾ ತನ್ನ ಯೋಗ್ಯತೆ ಅನುಸರಿಸಿ | ನಿರ್ಗಮಿಸದತಿ ಧೇನಿಸಿದರೆ ಕರುಣಾಬ್ಧಿ | ಸರ್ಗದಿ ವಿಮಲ ತನ್ನ ಪರೋಕ್ಷ ಮಾರ್ಗವನೀವನು ಮಿಗೆ ಕಡಿಮೆ ಆಗದೆ | ಸ್ವರ್ಗಾಪವರ್ಗದಿ ಪ್ರಾಣೇಶ ವಿಠ್ಠಲ ವಾ | ಲಗೈಸಿಕೊಂಬನು ಕರುಣಾದಿಂದೀ ಬಗೆ ೪
ಆದಿತಾಳ
ಈ ತರುವಾಯದಿ ಅಖಿಳ ಜನರ ಕರ್ಮ | ವ್ರಾತವ ಕಳೆವನು ವಧು (ಧ) ನವ ಮೊನೆ ಮಾಡಿ | ಶ್ರೀ ತರುಣೀಶನು ಸಕಲ ಜೀವರ ದೇಹ | ಘಾತ ವಿಕ್ರಾಂತಿ (ವ್ಯುತ್ಕ್ರಾಂತಿ) ಭೇದದಿ ಅರ್ಚಿರಾದಿ | ನೀತ ಮಾರ್ಗದಿಂದ ನೀರಜಭವನಿಂದ | ಪ್ರೀತಿಯಿಂದಲಿ ತನ್ನ ಸೇರಿಸಿಕೊಂಬನು | ವೀತಲಿಂಗರಮಾಡಿ ವಿಧಿಮುಖರೆಲ್ಲರ | ಈ ತರುವಾಯ ದಿನ ಭುಂಜಿಸಿರ ಭೋಗ | ಜಾತವ ಕೊಡುತಲಿ ಜನನ ಮರಣನೀಗೆ | ವಾತ ಜನಕ ನಮ್ಮ ಪ್ರಾಣೇಶ ವಿಠ್ಠಲ | ಈ ತೆರದಲಿ ಜೀವಜಾತಕ ಪಾಲಿಪ ೫
ಜತೆ

ದೋಷರಹಿತ ಗುಣಪೂರ್ಣನೆಂದರಿದರೆ |ವಾಸುದೇವ ವೊಲಿವ ಪ್ರಾಣೇಶ ವಿಠ್ಠಲ ||

೨೩೦
ತಿಥಿತ್ರಯ ನಿರ್ಣಯ
ಅಂಧ ತಮಸೆ ಪ್ರಾಪ್ತಿ ನಿಶ್ಚಯಾ | ಶೃತಿ-ಯಂದ ಪ್ರಕಾರವಾಚರಿಸದವರಿಗೆ ಪ
ಹರಿದಿನದಲ್ಲಿ ಆಹಾರ ಬಿಟ್ಟು ಮುದದಿ ಜಾ |ಗರವ ಮಾಡದಲುಂಡು ವರಗೂವಧಮಗೇ ೧
ಹರಿವಾಸರ ವಿನಹಾ ಸರುವ ದ್ವಾದಶಿ ಪಾರ- |ಣಿ ರವಿಯೋದಯಕಾಗದಿರುವ ದುರ್ಮತಿಗೇ ೨
ನಾಲ್ವತ್ತೈದು ಘಟಿ ಮ್ಯಾಲೆ ಕಾದಶಿಯಾಗೆ |ಶ್ರೀಲೋಲವಾಸರಾರೇಳು ಕಳವಂಗೇ ೩
ಪ್ರಥಮ ಕಾಲವ ಮೀರ್ಯಚ್ಯುತನ ಪ್ರಸಾದವ |ಪ್ರತಿ ದ್ವಾದಶಿಯೊಳುಂಬ ಮತಿಗೇಡಿಗಳಿಗೇ ೪
ದಶಪಂಚ ಮ್ಯಾಲೊಂದು ದಶಮಿ ಸಿದ್ಧಾಂತ ವೋ- |ದಿಸಲು ಶ್ರೀವರನ ದಿವಸ ಹಿಂದಾಗುವಗೇ ೫
ವೇಧಿಲ್ಲಾ ದಶಿಮಿಗೆ ದ್ವಾದಶಿ ಪರದಿನ |ಕ್ಹೋದಾರೆ ದ್ವಯ ನಿರ್ಜಲಾದವೆನ್ನದೀರೆ೬
ಪಳಾಧಿಕೈವತ್ತೇಳು ಘಳಿಗಿ ದ್ವಾದಶಿ ವೋದಿ |ಸಲು ಸಾಧನಿದು ಎಂದು ತಿಳಿಯದವನಿಗೇ ೭
ದಶಿಮಿಯೋಳ್ ಹತ್ತು ದ್ವಾದಶಿಯೊಳೆಂಟು ಬಿಡಾದೆ |ಪಶುವಿನಂದದಿ ಬಲು ಹಸಗೆಟ್ಟವನಿಗೇ೮
ಎಲ್ಲಾರು ಸಂದೇಹ ಉಳ್ಳಾರೆ ಮರುದಿನ |ದಲ್ಲೆ ದಶಿಮಿ ಮಾಡದೊಲ್ಲದಿದ್ದವಗೇ ೯
ಅತಿ ಸಾಧನಿರಲು ಆಹುತಿಯನ್ನು ಬಹು ಪೋಷಿ- |ಸುತ ಪಾರಣಿಗೆ ಹೊತ್ತು ವೃಥ ಕಳವವಗೆ ೧೦
ಅನಿವಾರ್ಯ ಬರಲು ಸಾಧನಿಗೆ ತೀರ್ಥವ ಕೊಂಡು |ಅನುಮಾನ ಮ್ಯಾಲೆ ಭೋಜನಕೆ ಮಾಡುವಗೇ ೧೧
ಮಂಕುಬುದ್ಧಿಯಲಿಂದ ಸಂಕಟಲ್ಲದೆ ತೀರ್ಥ- |ಮಂ ಕೊಂಡು ಸಾಧನಿಯಂಕ ತೋರುವಗೇ ೧೨
ಸತಿಗೆ ಶ್ರಾದ್ಧವ ಮಾಳ್ಪ ಸುತಗೊಡಿಯನ ಸೇವೆ |ರತಗೆ ಸಂಕಟವೆನ್ನದತಿ ಮೂಢ ನರಗೇ ೧೩
ಈರಾರು ದಿನ ಹದಿ ಮೂರು ಘಳಿಗಿ ವಿಷ್ಣು |ತಾರವಿದ್ದರೆ ನೀರಾಹಾರ ಮಾಡದಿರೆ ೧೪
ದ್ವಯ ಪಕ್ಷದಲಿ ತಿಥಿತ್ರಯ ಸಮನಾಗೇವೆ |ಭಯಹಾರ ವೃತವೆನ್ನದವಿವೇಕಿಗಳಿಗೇ ೧೫
ತಿಥಿತ್ರಯದಲಿ ಮಾತು ಪಿತು ಸ್ವರ್ಗವೈದಾಲು |ರತಿ ಇಂದೋಪನ ವಾಹ ಪತಿತ ಮಾನವಗೇ ೧೬
ಅನಳಗಾಹುತಿ ಶ್ರಾದ್ಧ ಅನಿಮಿಷಾದ್ಯರಿಗೆ ತ- |ರ್ಪಣ ಕೃಷ್ಣಾಷ್ಟಮಿ ಹರಿದಿನದಿ ಮಾಡುವಗೇ ೧೭
ಸಮಿರ ಮತಸ್ಥಾನು ಅಮರ ಲೋಕೈಯದಾರೆ |ವಿಮಸ್ಥನಿಂದಲಾ ಕ್ರಮವ ಮಾಡಿಸಿದರೆ ೧೮
ದಶಿಮಿ ಶಿವನಿಸಿ ದ್ವಾದಶಿ ಸಾಂಧನಿಶ್ರಾದ್ಧ ಸಂ- |ಧಿಸಿರೆ ವಿಷ್ಣೋಪವಾಸ ಎಸಗುವವನಿಗೆ ೧೯
ಅನಿರುದ್ಧಗರ್ಪಿಸಿ ಅನುದಿನದಲ್ಲಿ ಪ್ರಾ- |ಣನಿಗರ್ಪಿಸದಲುಂಬ ಮನುಜಾಧಮರಿಗೇ೨೦
ಪ್ರಾಣೇಶ ವಿಠಲಾನ ಧ್ಯಾನದೊಳಿರುತಿಪ್ಪ |ಪ್ರಾಣದೇವರ ಉಕ್ತಿಯಾ ನಂಬದವಗೇ ೨೧

೨೦೬
ಅನ್ಯ ಸತಿಗೆ ಒಲಿಯಬಾರದೂ |ಅನ್ಯ ಸತಿಗೆ ಒಲಿದರೊಂದು ||ಘನ್ನತನವ ಕಾಣೆ ಜನರು ಮನ್ನಣಿಡರು ಸದ್ಗತಿಲ್ಲ |ಸಣ್ಣ ಮನುಜನಾಗಬ್ಯಾಡ ಪ
ತಂದಿ ತಾಯಿ ಅಣ್ಣ ತಮ್ಮ |ಬಂಧು ಬಳಗ ತೊರಿಸಿ ತನ್ನ ||ಹೊಂದಿಕೊಂಡ ಶ್ವಾನನಂತೆ |ಹಿಂದೆ ಮುಂದೆ ತಿರುಗಿಸುವಳು೧
ಸ್ನಾನ ಮೊದಲು ಕರ್ಮ ಮಾಡಿ |ಏನು ಉಂಬಿ ಫಲವ ದೇಹ |ಕ್ಷೀಣಗೊಳಿಸಬ್ಯಾಡವೆಂದು |ಹೀನ ಬುದ್ಧಿ ಪ್ರೇರಿಸುವಳು ೨
ಎನ್ನ ಪತಿಯು ಒಬ್ಬ ಮೇಲೆ |ನಿನ್ನ ಸಂಗವಲ್ಲದಿತರ ||ಕಣ್ಣನೆತ್ತಿ ನೋಡೆನೆಂಬ |ಳನ್ಯಕಾರಿ ಜಾರಿ ಕುಲಜೆ ೩
ಪ್ರಾಣದೊಲ್ಲಭನ್ನಕಿಂತ |ನೀನೆ ಅಧಿಕವೆಂದು ಬಹಳ ||ಆಣೆ ಕೊಟ್ಟು ವಗತನವನು |ಹಾನಿ ಮಾಡಿ ತೋರಿಸುವಳು ೪
ಸತಿಯ ಸೇರದಂತೆ ಮಾಡಿ |ಸತತ ಚೋದ್ಯ ಮಾತನಾಡಿ ||ಹಿತವ ತೋರಿ ಮತಿಯ ಕೆಡಿಸಿ |ಅತಿಯಭಾಸ ಮಾಡಿಸುವಳು ೫
ಧನವ ಕೊಡುವತನಕ ಎನ್ನ |ತನುವು ನಿನ್ನದೆಂದು ದಕ್ಕಿ ||ಕೊನಿಗೆ ರಿಕ್ತತನವು ಬರಲು |ಮನಿಯ ಕಡಿಗೆ ಸುಳಿಯಗೊಡಲು ೬
ಇದನು ಮನಕೆ ತಂದು ದಯಾ |ಉದಧಿ ಪ್ರಾಣೇಶ ವಿಠಲನಂಘ್ರಿ ||ಹೃದಯದಲ್ಲಿ ನೆನೆದು ಚಿಂತೀ |ಸುವದು ಸತತ ಸುಖಿಸೊ ಮನುಜ ೭

೧೬೬
ಶ್ರೀಸುಬೋಧೇಂದ್ರರ ಸ್ತುತಿ
ಅಭಯವೀಗಲೆ ಬೇಡೆ ಗುರುಸುಬೋಧೇಂದ್ರಾರ್ಯರ ನೋಡೆ ಸಖಿಪ
ಪಾಪ ಕಳೆವಳಾಕಾಶ ಗಂಗೆ ಬಹು |ತಾಪ ಕಳೆವ ದ್ವಿಜನಾಥ |ಆ ಪಾದಪ ದೈನ್ಯ ಹರೀ ಸುಗುಣವು |ಈ ಪುರುಷರಿಗೊಪ್ಪುವದಲ್ಲೇ ಸಖಿ೧
ಮೀನ ಕೂರ್ಮ ದ್ವಿಜ ನೋಡಿ ಸ್ಮರಿಸಿ ಮುಟ್ಟಿ |ಸೂನುಗಳನು ಸಲಹುವ ತೆರದಿ ||ಸು ನೋಟದಿ ನೆನೆದು ಪಾದಸ್ಪರ್ಶ ವಿ |ತ್ತಾನತರನು ಪೊರೆವರು ಬಿಡದೆ ಸಖಿ ೨
ಈ ಸಂಯಮಿಗಳ ಕೃಪೆಯೊಂದಿರುತಿರೆ |ಏಸು ಸಾಧನ ಇನ್ನೇತಕೆಲೆ ||ನಾಶರಹಿತ ವೈಕುಂಠವೇ ಸರಿ, ಪ್ರಾ |ಣೇಶ ವಿಠಲನಿವರಲ್ಲಿಹದಕೆ ೩

೧೯೨
ಆದದ್ದಾಯ್ತಿನ್ನಾದರು ಒಳ್ಳೇ |ಹಾದಿ ಹಿಡಿಯೊ ಪ್ರಾಣೀ ||ಈ ದುರ್ನಡತಿಂಧೋದರಿಹಪರದಿ |ಮೋದೆಂದಿಗು ಕಾಣೀ ಪ
ನೆಲಾ ಸತೀ ಧನ | ದೊಳಾನವರತ |ಹುಳಾಗಿ ಇರುವೆಲ್ಲೋ | ಹಲಾ ಪಿಡಿದು ವಿಧಿ |ಕುಲಾಚರಣೆ ಬಿಡೆ | ಪಲಾ ತರುವರಲ್ಲ್ಯೊ |ಸ್ಥಳಾಸ್ಥಳರಿಯದೆ | ಕಲಾಪ ಮಾಡೆ ಘ |ಕೊಳಾಗುವುದು ಸಲ್ಲೊ | ಎಲಾ ಕೇಳುವಂ |ತಿಲಾ ಮಾತ್ರ ನೀ ಗೆಲಾಹ ಬಗೆ ಇಲ್ಲೋ ೧
ಶಿಲಾದಿ ವಿಗ್ರಹ | ಥಳಾಸೆ ಹರಿಯಂ |ಬೆಲಾ ಕೇವಲ ಸುಳ್ಳೋ || ಚಲಾ ಪ್ರತಿಮಿ ಪದ |ಗಳಾರ್ಚಿಸದಲೆ | ಮಲಾ ತಿನುತಿಹ್ಯಲ್ಲೋ ||ಕಳಾ ಬಿಡದಿರೆ ಅ | ನಿಳಾನ ಹರಿಮನಿ |ಮೊಳಾಗಿಹದಲ್ಲೋ | ನಳಾ ಭರತ ಮುಖ |ಇಳಾಣ್ಮರಂದದಿ | ಭಲಾ ಯನಿಸಲಿಲ್ಲೋ ೨
ಬಿಲಾ ಸೇರಿ ತಲಿ | ಕೆಳಾಗಿ ತಪಿಸಲು |ಫಲಾ ಲೇಸಿತಿಲ್ಲೋ ಖಳಾರಿ ದಿನ ಬಿಂ |ಜಲಾ ಕುಳ್ಳೆನೆಂ | ಛಲಾ ಮಾಡಲಿಲ್ಲೋ ||ಬಲಾದರದಲಿಂ | ತುಲಾದಿ ಸ್ನಾನ ಮೊ |ದಲಾದ ವೃತವಲ್ಲೋ | ಬಲಾರಿನುತ |ಪ್ರಾಣೇಶ ವಿಠ್ಠಲನ | ಬಲಾ ಘಳಿಸಿಕೊಳ್ಳೋ ೩

೧೯೩
ಇಂಥಲ್ಲಿರಬೇಕು ಜನ್ಮ ಸಾರ್ಥಕ ಮಾಡುವ ನರನೂ |ಎಂಥೆಂತಲ್ಲೆಂದರೆ ಕೇಳ್ವದು ಸುಜನರು ಪೇಳ್ವೆನದನೂ ಪ
ಭಾಗವತಾದಿ ಪುರಾಣ ಸಾತ್ವಿಕರು ಪೇಳುವ ಸ್ಥಳದಲ್ಲಿ |ಭಾಗೀರಥಿ ಮೊದಲಾಗಿಹ ಸತ್ತೀರ್ಥಗಳಿಹ ಭೂಮಿಯಲೀ ||ಯಾಗ ಮಾಡುವಲ್ಲಿ ನಾಗಪಾಲಕನ ಆಲಯವಿದ್ದಲ್ಲೀ |ಯೋಗಿ ಜನರು ಅಹರ್ನಿಶಿಯಲಿ ಭಗವಧ್ಯಾನ ಮಾಡುವಲ್ಲೀ ೧
ಸತ್ಯ ವಚನವಿದ್ದಲ್ಲಿ, ದುರ್ವಿಷಯ ಬಿಟ್ಟ ಪುರುಷರಲ್ಲೀ |ಮತ್ತರಾಗದಲೆ ಬ್ರಹ್ಮಚಾರಿ ಮಾತ್ರಕ ನಮಿಸುವರಲ್ಲೀ ||ವಿತ್ತ ರಾಶಿ ಕಸಕುಪ್ಪಿ ಸಮನೆಂದರಿತು ಇಹರಲ್ಲೀ |ಮತ್ರ್ಯರಾಶ್ರಯಿಸಿ ಬಂದು ಕಾಲಕುಪಜೀವಿಸದವರಲ್ಲಿ ೨
ತತ್ವವರಿತು ನೋಳ್ಪರಿಗೆ ಹುಚ್ಚರಂದದಿ ಇದ್ದವರಲ್ಲೀ |ಉತ್ತಮವಾಗಲಿ ಕೆಟ್ಟದೆ ಆಗಲಿ ನಗುತಲೆ ಇಹರಲ್ಲೀ ||ಕತ್ತಿಯೆ ಮೊದಲಾಗಿಹ ಪ್ರಾಣಿಗಳಲಿ ಸಮ ಕರುಣಿದ್ದಲ್ಲೀಸತ್ಯರಮಣ ಪ್ರಾಣೇಶ ವಿಠ್ಠಲನ ಮೂರ್ತಿ ಕಾಂಬರಲ್ಲೀ ೩

೧೮೭
ಏನು ಸಾರ್ಥಕಾ ಬದುಕಿ ಏನು ಸಾರ್ಥಕಾ |
ಜಾನಕೀಶನ ಧ್ಯಾನ ಮಾಡದೆ ನಾನು ಎಂಬುವ ಹೀನ ಬದುಕಿ ಪ
ಎಳಿ ಎಳಿದೆನಿಯ ತುಳಸಿ |ದಳ ತಂದು ಭಕುತಿಯಿಂದ ||
ಜಲಜನಾಭನ ಚರಣಕಮಲ |ಗಳಿಗೆ ಅರ್ಪಿಸದವನು ಬದುಕಿ ೧
ಹೊತ್ತರೆದ್ದು ಕ್ರಮದಲಿಂದ |ಮೃತ್ತಿಕೆ ಶೌಚಾದಿ ಕರ್ಮ ||
ನಿತ್ಯ ಮಾಡದ್ಹರಟಿ ಬಡದು |ಹೊತ್ತುಗಳೆವುತಿಹನು ಬದುಕಿ ೨
ಪತ್ನಿ ಜರಿದು ಅನ್ಯ ಸತಿಯ |ರತ್ನ ಸಮನ ತಿಳಿದು ಹರಿಯ ||
ನತ್ರ್ನದಿಂದ ಹಾಡಿ ಸುಗತಿ |ಯತ್ನ ಮಾಡದವರು ಬದುಕಿ ೩
ಮಾತೃ ಪಿತೃಗಳಿಗೆ ಮೀರಿ |ಭ್ರಾತೃಗಳೊಳು ವಂಚಿಸುತಲಿ ||
ಶ್ರೋತ್ರಿಯರನು ಹಳಿದು ನಿರಯ |ಪಾತ್ರನಾಗುವವನು ಬದುಕಿ ೪
ಡಂಬಕದಲಿ ಮಡಿಯ ಮಾಡಿ |ನಂಬಿದವರ ಕೆಡಿಸಿ ತಾನೆ ||
ಉಂಬುವದಕ್ಕೆ ಪರರ ಹಾನಿ |ಹಂಬಲಿಸುತಲಿಹನು ಬದುಕಿ ೫
ಭೇದಮತವ ಪೊಂದದಲೇವೆ |ಮೇಧ್ಯ ಮೇಧ್ಯ ಭಕ್ಷಿಸುತ ಕು ||
ಚೋದ್ಯದಿಂದ ತಂದಿ ತಾಯಿ |ಶ್ರಾದ್ಧ ಮಾಡದವನು ಬದುಕಿ೬
ಕಾರ್ತಿಕಾದಿ ಸ್ನಾನ ಹೋಮ |ಪಾರ್ಥ ಸಖನ ದಿವ್ಯವಾದ ||
ಮೂರ್ತಿಗಳಿಗೆ ಧೂಪ ಮಂಗ |ಳಾರ್ತಿ ಮಾಡದವನು ಬದುಕಿ ೭
ಮಾಧವನ್ನ ರೂಪಗಳಿಗೆ |ಭೇದವಿಲ್ಲವೆಂದು ತಿಳಿದು ||
ಸಾದರದಲಿ ಪೂಜಿಸಿ ಪ್ರ |ಸಾದ ಉಣ್ಣದವನು ಬದುಕಿ ೮
ಪ್ರಾಣೇಶ ವಿಠಲ ಪೇಳಿದದನು |ಧ್ಯಾನಕೆ ತರದೆ ಅನ್ಯಶಾಸ್ತ್ರ ||
ಸಾನುರಾಗದಿ ಕೇಳಿ ಸುಖಿಪ |ಹೀನ ಬುದ್ಧಿ ನರನು ಬದುಕಿ ೯

೧೪೯
ಶ್ರೀ ಪದ್ಮನಾಭತೀರ್ಥರ ಸ್ತುತಿ
ಒದಗಿ ಪಾಲಿಸೊ ಭವಾಂಬುಧಿಯ ದಾಟಿಸೊ ಪ
ಮದನ ಜಿತ ಭೂಸುರ ಶರಣ್ಯ |ಪದುಮನಾಭ ಯತಿವರೇಣ್ಯ ಅ.ಪ.
ಸದ್ಯ ದೊಡ್ಡ ಮಾತು ಅಪ್ರ |ಬುದ್ಧನಾ ನುಡಿಯೆ ಕೇಳು ||
ಮಧ್ವ ದ್ವೇಷಿಗಳಲಿ ಎನ್ನ |ವಿದ್ಯೆ ತೋರಿ ಬದುಕದಂತೆ೧
ಒಡಲಿನಾಸೆಗಾಗಿ ಕಂಡ |ಕಡೆಗೆ ತಿರುಗಿ ಪ್ರಾಪ್ತಿಯೆಂಬು ||
ದುಡುಗಿ ಪೋಗಿ ಕೊನೆಗೆ ಮನೆಗೆ |ಮಿಡುಕಿಕೊಳುತ ಬರುವಧಮನ ೨
ಹಾನಿ ಲಾಭ ಕ್ಲೇಶ ಮೋದ |ವೇನು ಆವ ಕ್ಷಣಕೊದಗಲು ||
ಪ್ರಾಣೇಶ ವಿಠಲ ಕರುಣೆಯಿಂದ |ತಾನೆ ಕೊಟ್ಟನೆಂಬ ಸುಮತಿ ೩

೧೯೮
ಒಲ್ಲೇ ಈ ಕುವೃತ್ತಿಗಳ ಒಲ್ಲೇ ಒಲ್ಲೇ |ಎಲ್ಲಾ ಸಜ್ಜನರಿಗೆ ಬಾಗೀ ಬೇಡಿಕೊಂಬೆ ಪ
ಕುಜನರೊಳಗೆ ಸ್ನೇಹ ಎಂದಿಗೆಂದಿಗೇ ಒಲ್ಲೇ |ಸುಜನರ ಅಸಂತೋಷ ಬಡಿಸಲೊಲ್ಲೆ ||
ರಜತಾದ್ರಿ ನಿಲಯ ಸರ್ವೋತ್ತುಮಾನೆನಲೊಲ್ಲೆ |ಭುಜಗ ಶಯನಗೆ ಸಮರು ಉಂಟೆನಲಿವಲ್ಲೆ ೧
ಹರಿದಿನದಲುಂಬೋರ ಮೊಗವ ನೋಡಲಿವಲ್ಲೆ |ಹಿರಿಯಾರರ್ಚಿಸದವರಾ ನೆರಿಯಾ ನೊಲ್ಲೆ ||
ಪರ ಪೀಡೆಯನು ಸ್ವಪ್ನಾದಲ್ಲಿ ನೆನಿಸಾಲೊಲ್ಲೆ |ನರ ಸ್ತೋತ್ರವನು ಮಾಡೀ ಬದುಕಾವಲ್ಲೇ ೨
ಪ್ರಾಣೇಶ ವಿಠಲಾ ಕೊಟ್ಟದನುಪೇಕ್ಷಿಸಲೊಲ್ಲೆ |ಏನೂ ಕೊಡದೀರಲಾಪೇಕ್ಷಿಸಲಿವಲ್ಲೇ ||
ಹೀನಾ ವಿಪ್ರಕುಲಕೆ ಎಂದು ಚಿಂತಿಸಲೊಲ್ಲೆ |ಮೀನಾಂಕನ ಮ್ಯಾಳಾ ಒಲ್ಲೇ ಒಲ್ಲೇ ೩

ವಿವಾಹ ಮಂಗಳಾರತಿ ಪದಗಳು
೨೫೧
ಕರಿವರದಗೆ ಹರಿಯರ್ಧಾಂಗಿಗೆ ಸುರರಂಗನಿಯರು ಬಹು ಹರುಷದಿ ||
ನೆರದು ಆರುತಿಯ ಬೆಳಗೀರೆ | ಶೋಭನವೇ ಪ
ರಾಮಗೆ ದಶರಥನಂದಗೆ ಸು |ಧಾಮನ ಸಖ ಮಧು ಮುರ ಭಂಜಗೇ ||
ಶ್ರೀಮಾಯಾದೇವಿಗೆ ಹರುಷಾದಿ | ಹರುಷದಿ ಮುತ್ತಿನ ಆರತಿ |ಭಾಮಿನಿಯೇರೆಲ್ಲ ಬೆಳಗೀರೆ ೧
ನಾರಾಯಣ ಅಚ್ಯುತ ಕೃಷ್ಣಗೇ |ಪಾರಶರನಾ ಸುತ ವ್ಯಾಸಗೇ ||
ಕ್ಷೀರಾಬ್ಧಿ ಸುತಿಗೆ ಹಿತದಿಂದಾ | ಹಿತದಿಂದ ಹವಳದ ಆರುತಿ |ನಾರಿಯರು ತಂದು ಬೆಳಗೀರೆ ೨
ಕೇಶವಗೆ ತ್ರಿವಿಕ್ರಮನಿಗೆ ಶ್ರೀ |ವಾಸುಕಿ ಶಯನಗೆ ಅನಿರುದ್ಧಗೇ ||
ದೋಷ ವಿರಹಿತೆ ಲಕುಮಿಗೆ | ಲಕುಮಿದೇವಿಗೆ ಆರುತಿಯನು |ಭೇಶಾ ಮುಖಿಯರು ಬೆಳಗೀರೆ ೩
ಗಂಗೆಯ ಪಡದಿಹ ಗೋವಿಂದಗೇ |ಅಂಗಜ ಜನಕಗೆ ಪುರುಷೋತ್ತುಮಗೆ ||
ಮಂಗಳ ದೇವಿಗೇ ಸೊಗಸೀಲಿ | ಸೊಗಸೀಲಿ ಮಾಣಿಕದಾರುತಿ |ಅಂಗನಿಯರೆಲ್ಲಾ ಬೆಳಗೀರೆ ೪
ಜಂಗಮ ಜಡದೋಳು ವ್ಯಾಪಿಸಿಹಗೇ |ರಂಗಗೆ ಸುತ್ರಿಧಾಮಗೆ ವರದಗೇ ||
ಇಂಗಿತಜ್ಞಳಿಗೆ ಜಯಂತೀಗೆ | ಜಯಂತೀಗೆ ರತ್ನದಾರುತಿ |ಹೆಂಗಳೆರೆಲ್ಲಾ ಬೆಳಗೀರೆ ೫
ವಾರಿಧಿ ಆರೊಂದು ಘನೋದಕ |ಮೀರುತ ವಿಪ್ರನ ಬಾಲಕರನು |
ತೋರಿಸಿದವಗೆ ಇಂದಿರಿಗೆ | ಇಂದಿರಿಗೆ ಮಾಣಿಕದಾರುತಿ |ನೀರಜಾಕ್ಷಿಯನು ಬೆಳಗೀರೆ ೬
ದಾಮೋದರ ಪ್ರಾಣೇಶ ವಿಠಲಗೆ |ರಾಮನ ಅನುಜಗೆ ಜಗನ್ಮಾತಿಗೇ ||
ಹೇಮಮಯವಾದಾ ಹರಿವಾಣಾ | ಹರಿವಾಣದೊಳು ಶ್ರಿಂಗರಿಸಿ |ಪ್ರೇಮದಲಿ ತಂದು ಬೆಳಗೀರೆ೭

೧೮೯
ಕೆಡುಬ್ಯಾಡ ಕೆಡುಬ್ಯಾಡವೆಲ ಪ್ರಾಣೀ | ಇನ್ನುಬಿಡು ನಿನ್ನ ದುರ್ಬುದ್ಧಿ ಕಡಿಗಾಣೀ ಪ
ಸತ್ಯ ಮೂರು ಮಾತು ಕೇಳಲ್ಯಾ | ಜ್ಞಾನಭಕ್ತಿ ವೈರಾಗ್ಯವ ಘಳಿಸು, ಕಾಲಾ ||
ವ್ಯರ್ಥ ಕಳಿಯದೆ ದಿನದ ಮಾಲಾ | ವನ್ನುಮೃತ್ಯು ಎಣಿಸುವುದು ತಿಳಿ ಮೂಲಾ೧
ಚೇತಾನ ಒಂದೆನ್ನ ಬಾರದೇ | ಜೀವಆತೂಮ ವೆಂದ್ಯರಡಿಹ್ಯದೋ ||
ಸೀತೇ ಸಮಾ ಸಮವೆಂಬೋದೋ | ನ್ಯೂನಧಾತಾದಿಗಳು ಎಂದು ತಿಳಿವೋದೋ ೨
ಮಧುರಿಪು ಸ್ವಾತಂತ್ರಾದಿ ಗುಣಾ | ಜೀವತದಧೀನ ಸ್ವಾತಂತ್ರ ವರ ಕಾಣೋ ||
ಮದಡಾರ ಮಾತಲ್ಲಾ ಶೃತಿ ಗಾನಾ | ಮಾಡುತಿದೆ ಬಿಡು ನಿನ ಮತದಭಿಮಾನಾ ೩
ತಿಳಿಸಾದೆ ಜಡ ಚೇತನಗಳಲ್ಲೀ | ಶಿರಿನಿಲಯ ನಿಹದು ನೋಡು ಮನದಲ್ಲೀ ||
ಜಲಧಿಯೊಳಿಹ್ಯ ನದಿ ತೆರದಲ್ಲೀ | ಈಹಲವು ಜಗತ್ತಿಹ ಧರಿಯಲ್ಲೀ ೪
ಶೇವ್ಯ ಪ್ರಾಣೇಶ ವಿಠ್ಠಲ ಜಿತಾ | ಕಾಮಅವ್ಯಕ್ತ ಮಹಿಮೆ ಅಪರಿಮಿತಾ ||
ಸವ್ಯಸಾಚಿಗೆ ಭಗವದ್ಗೀತಾ | ‘ಕಶ್ಚಿನ್ಮಾಂವೇತ್ತಿ ತತ್ವಾತ ಯೇನ ದೆ ತಾ೫

೨೦೦
ಕೆಡುವರೊ ವ್ಯರ್ಥ ಈ ಬ್ರಹ್ಮಣ್ಯ ಜನ್ಮ |ಪಡೆದು ಸಾಧನ ಮಾಡಿಕೊಳ್ಳಾರೋ | ವ್ಯರ್ಥ ಪ
ಅಧಮರ ದಾಸೆಂದರಾನಂದಾ | ಶಿರಿಸದನನ ದಾಸೆಂದರತಿ ದುಃಖ ||
ದಿವ್ಯಎದಿಯಲ್ಲಿ ಚರ್ಮಗಳಾನಂದಾ | ತುಲಸಿ ಪದುಮಾಕ್ಷಿ ಧರಿಸಲಿಕ್ಕತಿ ದುಃಖಾ ೧
ಸೂಳೀಯ ಬಳಿಘೋಗಲಾನಂದಾ | ಪಾತ್ರ ರಾಲಯಖೋಗುವದತಿ ದುಃಖ |
ತನ್ನಏಳೆಮ್ಮಿ ತೊಳಿವದಕ್ಕಾನಂದಾ | ಒಂದುಸಾಲಿಗ್ರಾಮದ ಪೂಜಿಗತಿ ದುಃಖಾ ೨
ಬಳುವಾಗ ಶಗಣೀಯನಾನಂದಾ | ಪುಷ್ಪಗಳ ನೋಡಿ ತಾಹೋದಕ್ಕತಿ ದುಃಖಾ ||
ಬಹುಕಲ ಭಾಷೆ ಮಗನೋಳಾನಂದಾ | ನಾಮಗಳ ಉಚ್ಚರಿಸುವುದಕ್ಕತಿ ದುಃಖಾ ೩
ಸತಿಗಂಬರವ ಕೊಂಬದಾನಂದಾ | ನಮ್ಮಚ್ಯುತಗೊಂದು ಗೇಣೋಸ್ತ್ರಕ್ಕತಿ ದುಃಖಾ || ನಿತ್ಯಪತಿತರಿಗೀವುದಕ್ಕಾನಂದಾ | ಸಂಭವಿತರಿಗೆ ಕೊಡುವುಕ್ಕತಿ ದುಃಖ ೪
ಏಸೂರೂ ತಿರುಗೂವದಾನಂದಾ | ಕ್ಷೇತ್ರವಾಸೇಕ ರಾತ್ರೀಗೆ ಅತಿದುಃಖಾ ||
ಇಂಥದೋಷಕಾರಿಗಳಿಗಿಲ್ಯಾನಂದಾ | ಶ್ರೀ ಪ್ರಾಣೇಶವಿಠ್ಠಲಲ್ಲೀವತಿ ದುಃಖ ೫

Leave a Reply

Your email address will not be published. Required fields are marked *