Categories
ರಚನೆಗಳು

ಬಡಣ್ಣಯ್ಯಾಚಾರ್ಯರು

೪೬೪
ವೀರಹನುಮ ಬಹು ಪರಾಕ್ರಮ ಸುಜ್ಞಾನವಿತ್ತು
ಪಾಲಿಸೆನ್ನೆ ಜೀವರೋತ್ತಮ ಪ
ರಾಮದೂತನೆನಿಸಿಕೊಂಡ್ಯೋ ನೀ ರಾಕ್ಷಸರ
ವನವನೆಲ್ಲ ಕೆಡಿಸಿ ಬಂದ್ಯೋ ನೀ
ಭೂಮಿಪುತ್ರಿಗೆ ಮುದ್ರೆಯಿತ್ತು ಜಗತ್ತಿಗೆಲ್ಲ
ಹರುಷವಿತ್ತು ಪ್ರಖ್ಯಾತನಾದ್ಯೋ ನೀ ೧
ಗೋಪಿಸುತನ ಪಾದಪೂಜಿಸಿ ಗದೆಯ ಧರಿಸಿ
ಕೌರವಕುಲವ ಸವರಿದ್ಯೋ ನೀ
ದ್ರೌಪದಿಯ ಮೊರೆಯ ಕೇಳಿ ಕಷ್ಟವೆಲ್ಲ
ಬಿಡಿಸಿ ಭೀಮರೂಪನೆನಿಸಿದ್ಯೋ ನೀ ೨
ಮದ್ಯಗೇಹದಲ್ಲಿ ಜನಿಸಿ ಬಾಲ್ಯತನದ
ಮಷ್ಕರಿಯ ರೂಪಗೊಂಡ್ಯೋ ನೀ
ವೇದ ವಿಠಲವ್ಯಾಸದಾಸನಾಗಿ ಭಾಷ್ಯವನೋದಿ
ಸನ್ಮುದದಿಂದ ಸಂತೆಬಿದನೂರಿನಲ್ಲಿ ನಿಂತ್ಯೋ ನೀ ೩

 

೪೬೫
ದಾವಾದಾರದ ದುರ್ವಿಷಯದಿ ನೀ ಮುಳುಗಿ ಹರಿಯುತಿದ್ದಿ ಪ
ಕೋವಿದರನು ಕೇಳೀಜೀವಕೆ ಸುಖವಾವಾವಾ ತೆರದಿ ಅ.ಪ
ಕಾಲನ ದೂತರು ಕರುಣುಳ್ಳವರೆ ಹಾಳಾಯಿತೆ ಯಮನೂರು
ಭಾಳದೂರ ಹೋಗ್ಯಾರೆ ಬಂದರೆ ನಾಳೆಹೇಳುವರ್ಯಾರು
ತಾಳೆಂದರೆ ತಾಳ್ವರೆ ರವಿಶಶಿಗಳು ಆಳ್ಗಳೆ ನಿನಗವರು
ಚಾಳಕತನವೇನು ಶ್ರುತಿಸ್ರ‍ಮತಿಗಳಲಿ ಪೇಳ್ವರು ನಿನಗ್ಯಾರು ೧
ಮೃತ್ಯುವಿನಾ ಒಯ್ದತಲೆಕುತ್ತಿಗೆ ಒತ್ತಿಬಿಟ್ಟರೆಂತೋ
ಕರ್ತೃಯಮನ ವ್ಯಾಪಾರಹೋಗಿ ಮತ್ತುತ್ತಮವಾಯ್ತೆಂತೋ
ಚಿತ್ರಗುಪ್ತರು ಇತ್ತಣ ವಾರ್ತೆಯ ಮರ್ತುಬಿಟ್ಟರೆಂತೋ
ಚಿತ್ತಕೆ ಚಂಚಲ ತಾ ಬ್ಯಾಡೆಂದೀ ಗುತ್ತಮ ಸಾವೆಂತೊ ೨
ಇಷ್ಟುಬವಣೆ ಮುಂದಿಟ್ಟುಕೊಂಡು ನೀ ಕೆಟ್ಟುಪೋಗಬ್ಯಾಡ
ದೃಷ್ಟಿಒಬ್ಬನಲ್ಲಿಟ್ಟರೆ ಜಗದಲಿ ಕಷ್ಟಾಹುದೆ ನೋಡ
ಥಟ್ಟನೆ ಈ ಭವನಷ್ಟಾಂಗವ ಹಾಂಗಿಷ್ಟು ಮಾಡೊಮೂಢ
ವಿಠಲವೇದವ್ಯಾಸನ ನಿಜವರನಿಷ್ಠೆಯ ಬಿಡಬ್ಯಾಡ ೩

 

(ಅಣ್ಣಾವಧೂತರು)
೪೬೩
ಮನದಿ ನಿನ್ನ ತಪವ ಮಾಡಿಸೊ ಮಾಧವ ಪ
ಅನುದಿನದಲದನೆ ಬಯಸುವೆ ಯಾದವ ಅ.ಪ
ಸ್ನಾನ ಸಂಧ್ಯಾದಿ ಸತ್ಕರ್ಮ ಮಾಡಿಸು ಬಿಡು
ಹೀನ ಸಂಗವ ಕುಡುಕುಡದಲಿರು
ಜ್ಞಾನಿ ಎಂದೆನಿಸು ಅಜ್ಞಾನಿ ಎಂದೆನಿಸು
ನಾನಂಜುವನಲ್ಲ ನಳಿನನಾಭ ೧
ನಿನ್ನಿಂದಲೇ ಸೃಷ್ಟಿ ನಿನ್ನಿಂದಲೇ ಸ್ಥಿತಿಯು
ನಿನ್ನಿಂದಲೇ ಪ್ರಳಯ ನಿಯಮಗಳು.
ನಿನ್ನಿಂದಲೇ ಜ್ಞಾನ ನಿನ್ನಿಂದಲಜ್ಞಾನ
ನಿನ್ನಿಂದಲೇ ಬಂಧಮೋಕ್ಷವೆಂಬ ವಿಧ ೨
ಪ್ರಿಯನೀನೆ ಸರ್ವಜಗಕ್ಕೆಂಬರ್ಥಏನು ಕೃಷ್ಣ
ದಯಮಾಡಿ ನೀ ಪೇಳಿದಂತೆ ನಿತ್ಯ
ದಯವನೆ ಕೊಟ್ಟು ಭವಭೀತಿ ಹರಿಸಲು ಕೃಪಾ
ಮಯವಿಠಲವ್ಯಾಸ ವಿಧಿಒಂದೇ ವಿಭುವೇ ೩

 

೪೬೬
ಹರ್ದಂಬೇ ಪರವಾಹುವಾ ಮೈ ಹರ್ದಂಬೇ ಪರವಾಹುವಾ ಪ
ಅಂಧಾಹೋಕರ್ ಏಕೇಲಾಮೈಫಿರತಾಥಾ ಜಂಗಲ್
ಗುರು ಪೂಕರ ಕಾನ್ಮೇ ಆಖಿಯಾ ಪಾತಕಿಯಾಚೀದಿಲ್ ೧
ಅಪೇ ಖೋಲ್ಕರ್ ಕುಪೂಲ್ ದಿಲ್ ಕಾ ದಿಖಾಯಾವೋಜಾಲ್
ಘುಸಿ ಹೋಕರ್ ಹಮ್ಕು ಕ್ಯಾ ಕರೇಗಾ ಜೀ ಕಾಲ್ ೨
ದಿಯಾ ಸದ್ಗುರು ಮುಝೇ ವಿಠಲವ್ಯಾಸ ನಾಮಕಾಭಾಂಗ್
ಛಾನ ಚಾನಕರ ಪೀಕೋ ಮೈಮಸ್ತಾನ್ ಹುವಾ ಜೀದಂಗ್ ೩

 

ಮನದಿ ನಿನ್ನ ತಪವ ಮಾಡಿಸೊ ಮಾಧವ
(ಅಣ್ಣಾವಧೂತರು)
೪೬೩
ಮನದಿ ನಿನ್ನ ತಪವ ಮಾಡಿಸೊ ಮಾಧವ ಪ
ಅನುದಿನದಲದನೆ ಬಯಸುವೆ ಯಾದವ ಅ.ಪ
ಸ್ನಾನ ಸಂಧ್ಯಾದಿ ಸತ್ಕರ್ಮ ಮಾಡಿಸು ಬಿಡು
ಹೀನ ಸಂಗವ ಕುಡುಕುಡದಲಿರು
ಜ್ಞಾನಿ ಎಂದೆನಿಸು ಅಜ್ಞಾನಿ ಎಂದೆನಿಸು
ನಾನಂಜುವನಲ್ಲ ನಳಿನನಾಭ ೧
ನಿನ್ನಿಂದಲೇ ಸೃಷ್ಟಿ ನಿನ್ನಿಂದಲೇ ಸ್ಥಿತಿಯು
ನಿನ್ನಿಂದಲೇ ಪ್ರಳಯ ನಿಯಮಗಳು.
ನಿನ್ನಿಂದಲೇ ಜ್ಞಾನ ನಿನ್ನಿಂದಲಜ್ಞಾನ
ನಿನ್ನಿಂದಲೇ ಬಂಧಮೋಕ್ಷವೆಂಬ ವಿಧ ೨
ಪ್ರಿಯನೀನೆ ಸರ್ವಜಗಕ್ಕೆಂಬರ್ಥಏನು ಕೃಷ್ಣ
ದಯಮಾಡಿ ನೀ ಪೇಳಿದಂತೆ ನಿತ್ಯ
ದಯವನೆ ಕೊಟ್ಟು ಭವಭೀತಿ ಹರಿಸಲು ಕೃಪಾ
ಮಯವಿಠಲವ್ಯಾಸ ವಿಧಿಒಂದೇ ವಿಭುವೇ ೩

 

ಹಾಡಿನ ಹೆಸರು :ಮನದಿ ನಿನ್ನ ತಪವ ಮಾಡಿಸೊ ಮಾಧವ
ಹಾಡಿದವರ ಹೆಸರು :ವಿಜಯ ಸಾಯಿ
ಸಂಗೀತ ನಿರ್ದೇಶಕರು :ಪರಮೇಶ್ವರ ಹೆಗಡೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *