Categories
ರಚನೆಗಳು

ರಾಧಾಬಾಯಿ

ಲಕ್ಷ್ಮಿಯಿಲ್ಲದೆ ನಾನಿರಲಾರೆನೆಂದು ವೈಕುಂಠವ ಬಿಟ್ಟು ಬಂದೆಯಾ

ಅಂದರೇನೋ ಆ ನಾರಿಯರು ನಿನ್ನಂದರೇನೋ ಪ
ಅಂದವರ ಬಾಯಿಗೆ ಅಂಕುಶನಾನ್ಹಾಕುವೆ ಮುದ್ದು
ಕಂದಯ್ಯ ನಿನ್ನಂದಾರೇನೋ ಅ.ಪ
ಬಿಸಿಲೊಳು ಮನೆಕಟ್ಟಿ ಬಿಸಿಬಿಸಿಯಾಗಿ ಹಾಲೆರದೂ
ಶಶಿ ಮುಖಿಯರ ಕೋಲಾಪಿಡಿದೂ
ಕೊಲ್ಲೀಸುವೆ ನೀನಳದಿರಣ್ಣಾ ೧
ನಿನ್ನಾಡಿಕೊಂಬೋರಚೆನ್ನಾಗಿ ಹಿಡಿದೆಳತಂದು
ಬೆನ್ಹಾ ಹೊಯಿಸುವೆನೀನಳಬೇಡವೋ ಚಿನ್ನಾ ೨
ಇನ್ನಾದರೆನ್ನಯ ಮಾತು
ಪೇಳುವೆ ಕೇಳ್ ರಂಗಾ ನಾರಿಯರ ಸಂಗಾ ಪಡಿಸೋಡು
ಬಲುಭಂಗಾ ಪೋಗಾಬೇಡಾ ೩
ಪಾಲು ಮೊಸರನ್ನವ ಕಲೆಸಿ ನಾ ಉಣಿಸುವೆ
ಸದ್ದು ಮಾಡದೆ ಉಂಡು ನಿದ್ರೆ ಮಾಡೆನ್ನ ಕಂದಾ ೪
ಮುದ್ದು ಕಂದಯ್ಯ ನೀನು ಮಡುವ ಧುಮಿಕಿದರೆ
ಮನದಾ ಸಂತಾಪ ಸೈರಿಸಲಾರೆನೋ ೫
ಶೇಷ ಗಿರೀಶನೆ ದಾಸರಧಿನನೇ
ಶೇಷ ಶಯನನೇ ವೇಂಕಟ ವಿಠಲನೇ ೬

 


ಅಂದಾರಮ್ಮಾ ಆ ನಾರಿಯರು ನನ್ನಂದಾರಮ್ಮಾ ಪ
ಗೋಪಾಲರೊಡಗೂಡಿ ಗೋವ್ಗಳ ಕಾಯ್ವಾಗ
ಗೋಪಾಲನೆಲ್ಲಾ ಸೂರೆಗೊಂಬುವೆ ನಂತೇ
ಗೋಪೇರ ಮನೆ ಪೊಕ್ಕು ನೆಲುವಿನ ಪಾಲ್ಮೊಸರ
ಕುಡಿದು ಗಡಿಗೆಯ ಒಡೆದು ತೂತು ಮಾಡಿದೆನಂತೆ ೧
ನಾರೀಮಣಿಗಳೆಲ್ಲ ನೀರಿಗೆ ಪೋಪಾಗ ದಾರಿಗಡ್ಡವಕಟ್ಟಿ
ಪೋಲು ಮಾಡಿದೆನಂತೆ ಕಳ್ಳಾನು ನಾನಂತೇ ಕಾಮಿನಿಯರ
ಕೆಡೆಸಿದನಂತೇ
ಒಳ್ಳೆ ಬುದ್ದಿ ಇಲ್ಲಾವಂತೇ ಯನ್ನ ಹೋಗ್ಹೋಗಂದರಮ್ಮಾ೨
ಮರುಳಾನು ನಾನಂತೆ ಸರಸಿಜಾಕ್ಷಿಯರೆಲ ವರಳಿಗೆ
ಕಟ್ಟಿ ಬರಿದ ಬಾಧಿಸುವರೇ
ಬಲ್ಲೀದ ನಾನಾಂತೆ | ಫುಲ್ಲಾಕ್ಷಿಯರಿಗೆಲ್ಲ ವಲ್ಲಾಭನೆನುತಲಿ
ಸುಳ್ಳಾಡಿ ಕೊಂಬೋರೆ ೩
ಸಣ್ಣಾವನಲ್ಲವಂತೆ | ಬಿನ್ನಾಣಗಿತ್ತಿಯರೆಲ್ಲ
ಸೆಳಕೊಂಡ್ಹೋಗಿ ಬಿಗಿದಪ್ಪಿ ಕೊಂಬೋರೆ
ಮುದ್ದು ಮಾಡಿದಿಯಂತೆ ಬುದ್ಧಿ ಕಲಿಸಲಿಲ್ಲವಂತೆ
ಮೊಸರು ಬೆಣ್ಣೆಗಳನು ಮೆದ್ದು ಓಡುವೆನಂತೆ ೪
ಶಶಿಮುಖಿಯರೆಲ್ಲ ಹಸುಗೂಸು ಎನ್ನ ಮೇಲೆ
ಪುಸಿಮಾತು ಪೇಳೋರು ಕೇಳ ಬೇಡವೆ ತಾಯಿ
ಇಂದುವದನೇರ ಕಾಟಾ ತಡೆಯಲಾರದೆ ದೊಡ್ಡ
ಮಡುವನ್ನಾದರು ಪೋಗಿ ಧುಮುಕುವೆನೇ ತಾಯೆ ೫

 

ದಶಾವತಾರ ವರ್ಣನೆ

ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಪ
ಕಿಂಕರರಿಗೆ ಬಂದ ಸಂಕಟಕಳೆವಾ ಶ್ರೀ ವೆಂಕಟರಮಣನೆಂಬಾನೆ ಅ.ಪ.
ಸಿರಿಯಿಲ್ಲದರಿಲಾರೆನೆಂದಾತುರದಲಿ ಧರೆಗಿಳಿದಾನೇ
ಪಥದೊಳಗೆಲ್ಲ ಹುಡುಕ್ಯಾನೆ | ವಲ್ಮೀಕ ದೊಳು ಅಡಗ್ಯಾನೇ ೧
ಭಕ್ತರ ಸಲಹಲುಹೋಮನ ಮಾಡ್ಯಾನೇ ಬಕುಳೆಮಾತಿಗೆ
ಕಂದ ನಾಗ್ಯಾನೇ ನೆತ್ತಿಯ ಒಡ ಕೊಂಡು ನಿಂತಾನೇ ಬಹುವಿಧ
ಯೋಚನೆ ಮಾಡ್ಯಾನೇ ೨
ಬೇಟೆನಾಡಲು ಹೊರಟ್ಯಾನೆ ದಿಟ್ಟಕುದುರೆಯನೇರ್ಯಾನೇ
ಪಟುತರ ಶ್ರೀಹರಿ ನಡೆದಾನೇ ಮುಂದೆ ಮದಗಜ
ಒಂದನು ಕಂಡ್ಯಾನೇ ೩
ಶನೆ ಬೆನ್ನಟ್ಟಿಕೊಂಡು ನಡೆದಾನೇ ಎಲ್ಲೆಲ್ಲಿಯು
ಕಾಣದೆ ಹೋದಾನೇ ಬಿಸಿಲಲ್ಲಿ ಬಳಲುತ ದಣಿದ್ಯಾನೇ ಅಲ್ಲಿ
ಪದ್ಮಾವತಿಯಳ ಕಂಡಾನೇ೪
ಮನದಲ್ಲಿ ಹರುಷಿತನಾದಾನೇ ಮಾತನಾಡಲು
ಮುಂದೆ ನಡೆದಾನೇ ಕಲ್ಲುಹಳೆಸುವುದ ಕಂಡಾನೇ ತಡ ಮಾಡದೆ
ಹಿಂದೆ ಸರಿದಾನೇ ೫
ಬಕುಳೆ ಮಾತೆಯ ಕರೆದಾನೇ ಸಕಲವೃತ್ತಾಂತವ ತಿಳಿಸ್ಯಾನೇ
ಬೇಗದಿ ಹೋಗಿ ಬಾರೆಂದಾನೇ ಮೌನದಿಂದಲಿ ಮಲಗ್ಯಾನೇ೬
ಮಾತೆ ಬರುವುದ ಕಂಡಾನೇ | ಮುದ್ದದಿಂದಲಿ ಎದ್ದುಕುಳಿತಾನೇ
ತಂದ ಶುಭವಾರ್ತೆಯ ಕೇಳ್ಯಾನೇ
ಮಂದಹಾಸದಿಂದ ನಲಿದಾನೇ೭
ಬಂಧುಗಳೆಲ್ಲರ ಕರಿಸ್ಯಾನೇ ಮುಂದೆ ಮಾಡಿಕೊಂಡು ನಡೆಸ್ಯಾನೇ
ಮದು ಮಗನಾಗಿ ನಿಂತಾನೆ | ಪದುಮಾವತಿ ಕೈ ಪಿಡಿದಾನೇ ೮
ಜಯ ಜಯವೆಂದರು ಸುರಬ್ರಹ್ಮಾದಿಗಳು ವಾಣಿ-ಪಾರ್ವತಿಯರು
ಜಯ ಜಯ ವೆಂದರುಗಗನದಿ ಅಮರರು ಮದುಮಳ
ಮೇಲೆ ಪೂಮಳೆಗರೆದರು ೯
ಮಂಗಳವೆನ್ನಿರೆ ಪದ್ಮಿನಿ ಅರಸಗೆ ಪನ್ನಗ ಶಯನಗೆ
ಮಂಗಳವೆನ್ನಿರೆ ಪರಮ ಕಲ್ಯಾಣಗೆ ಮಂಗಳವೆನ್ನಿರೆ ಶ್ರೀ
ವೇಂಕಟ ವಿಠಲಗೆ ಮಂಗಳಾ ಜಯಮಂಗಳಾ ೧೦

 

೧೨
ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಪ
ಸ್ಮರಿಸಿರಿ ಸ್ಮರಿಸಿರಿ ಸರ್ವರ ರಕ್ಷಿಸುವ ಮುಖ್ಯ ಪ್ರಾಣನೆಂಬಾನೆಅ.ಪ
ವಾಯು ಸುಪುತ್ರ ನೆಂದೆನಿಸ್ಯಾನೇ ವಾರಿಧಿಯನ್ನೇದಾಟ್ಯಾನೇ
ಶಶಿಮುಖಿ ಸೀತೆಯ ಕಂಡಾನೇ ದಶಕಂಠನಗರ್ವ ಮುರಿದಾನೆ ೧
ಪಂಚಪಾಂಡವರ ಮಧ್ಯಾನೆ ಪ್ರಚಂಡ ಪರಾಕ್ರಮಿ ಎನಿಸ್ಯಾನೇ
ವಂಚಿಸಿ ಕೀಚಕನ ಕೊಂದಾನೆ ಪಾಂಚಾಲಿಗೆ ಪ್ರಿಯನಾದನೆ ೨
ಮಧ್ಯಗೇಹ ಭಟ್ಟರೊಳು ಜನಿಸ್ಯಾನೇ
ಮಧ್ವಮತವ ಉದ್ಧರಿಸ್ಯಾನೇ
ಮಧ್ವಮಾನಿ ಎಂದೆನಿಸ್ಯಾನೇ ಮುದ್ದು
ವೆಂಕಟ ವಿಠಲನೆಂಬಾನೆ ೩

 

೧೫
ಎಂಥಾ ಮಹಿಮರು ನೋಡಿ – ಶ್ರೀ ರಾಘವೇಂದ್ರರು
ಎಂಥಾ ಮಹಿಮರೋ ಪ
ಇಂಥಾ ಮಹಿಮರೆಂದು
ಹೇಳಲಳಾವಲ್ಲ
ಕೊನೆಗಾಣೆನಿವರ ಅದಭುತ ಮಹಿಮೆಯನ್ನು ಅ.ಪ.
ದೇಶ ದೇಶಗಳನೆಲ್ಲಾ ಸಂಚರೀಸುತಲೀ
ವರ ಮಂತ್ರಾಲಯದೊಳು ಬಂದು ನಿಂದಿಹರು ೧
ಭಕ್ತಾದಿಗಳೆಲ್ಲಾ ಪರಿಪರಿಯಿಂದ
ನಿಮ್ಮ ಸ್ತುತಿಸಿ ಕೊಂಡಾಡುತಿಹರು ೨
ಒಂದೇ ಮನದಿಂದ ಒಂದು ಪ್ರದಕ್ಷಿಣೆ ನಮಿಸಲು
ಭವಬಂಧಗಳ ಬಿಡಿಸಿ ಆನಂದದಿ ಸಹಲುವರು ೩
ಆದಿವ್ಯಾಧಿಗಳಿಂದ ಬಾಧೆ ಪಡುವಜನ
ಮೊದಲು ನಿಮ್ಮ ಸೇವಿಸೆ ಪಾವನಗೊಳುವರು೪
ಪೀಡೆ ಪಿಶಾಚಿಗಳಿಂದ ಪೀಡಿತರಾಗುತ
ನಿಮ್ಮಡಿಗೆರಗಲು ಕಡುದಯ ಮಾಡುವಿರಿ೫
ಶ್ರೀರಾಘವೇಂದ್ರಾಯ ನಮಃ ಎಂಬ ದಿವ್ಯನಾಮವ ಪಠಿಸಲು
ಪ್ರಭುಗಳು ಪಾವನ ಮಾಡುವರು ೬
ಧರೆಯೊಳು ನಿಮ್ಮ ಸರಿಯಾರಿಹರೊ ಪ್ರಭು
ಗುರುಸಾರ್ವಭೌಮರು | ಶ್ರೀ ರಾಘವೇಂದ್ರರು ೭

 

ಕರಿಯ ಮೊರೆ ಕೇಳಿ ತ್ವರಿತದಿ ಬಂದೆಯಾ

ಎಂದೆಂದಿಗೂ ನಾ ಬಿಡೆ ನಿನ್ನ ಚರಣಾ
ಬಂದೆನ್ನ ಕಾಯೊ ಶ್ರೀ ವೇಂಕಟರಮಣಾ ಪ
ಪಟ್ಟಿ ಪೀತಾಂಬರ ತೊಟ್ಟ ಮುತ್ತಿನ ಹಾರಾ
ಕಟ್ಟಿದ ವೈಜಯಂತಿ ತುಳಸಿಯ ಮಾಲಾ
ಸುಂದರ ವದನ ಶುಭಾಂಗ ಮನೋಹರಾ
ಮಕರ ಕುಂಡಲಧರ ಮೋಹನ ರೂಪಾ೧
ನಿತ್ಯ ತೃಪ್ತನೀನೆ ನಿಜ ಗುಣಪರಿಪೂರ್ಣ ನಿತ್ಯ ಕಲ್ಯಾಣನೆ
ನಿಗಮ ಗೋಚರನೆ ಅಕಳಂಕ ಚರಿತನೆ ಸಕಲರಪಾಲಿಪ
ಅನಂತ ರೂಪಾ ಶ್ರೀ ವೆಂಕಟೇಶಾ೨
ಪಾವನ ಚರಿತನೇ ಪರಮ ಪವಿತ್ರನೇ
ಪರಮ ಕಲ್ಯಾಣ ಗುಣಾರ್ಣವನೇ
ಗರುಡ ಗಮನನೇ ದುರಿತ ವಿದೂರನೆ
ಪರಮದಯಾ ನಿಧೆ ವರಗಿರಿವಾಸಾ ೩
ದೇಶ ದೇಶವ ತಿರುಗಿ ಘಾಸಿ ಗೊಂಡಿಹೆ ಭರದಿ
ಕ್ಲೇಶ ಪಾಶಂಗಳ ಪರಿಹರಿಸಯ್ಯಾ
ವಾಸುದೇವನೆ ನಿಮ್ಮ ನಾಮ ಸ್ಮರಿಸುವಂತೆ
ಲೇಸಾದ ಭಕುತಿಯ ನಿತ್ಯ ಪಾಲಿಸು ಪ್ರಭುವೆ೪
ಸುರಮುನಿ ವಂದ್ಯನೇ ಸುರನರ ಸೇವ್ಯನೇ
ಶರಣರ ಪಾಲಿಪ ಸರ್ವೋತ್ತಮನೇ
ತಿರುಪತಿವಾಸನೆ ತಿರುಮಲೆ ಶ್ರೀಶನೇ
ಶೇಶಗಿರೀಶನೆ ಶ್ರೀ ವೇಂಕಟವಿಠಲನೇ ೫

 

ಲಕ್ಷ್ಮಿ ಇಲ್ಲದೆ ನಾನಿರೆನೆಂದು ವೈಕುಂಠ

ಏನೆಂದು ಕೊಂಡಾಡಿಸ್ತುತಿಸಲೋದೇವಾ
ನಾರಾಯಣ ಕೃಷ್ಣನಂದ ಮುಕುಂದಾ ಪ
ನಿನ್ನ ಪೊತ್ತು ತಿರುಗಿಸಲು ಖಗರಾಜನಲ್ಲ
ನಿನ್ನ ಪದ ಸೇವಿಸಲು ಪವನ ಸುತನಲ್ಲಾ
ನಿನ್ನೆತ್ತಿ ಆಡಿಸಲು ನಂದ ಯಶೋದೆಯಲ್ಲಾ
ನಿನ್ನೆಂತು ಸೇವಿಸುವೆ ಪೇಳು ಇಂದಿರೆರಮಣಾ ೧
ನಿನ್ನೊಡನಾಡುವೆನೆ ಗೋಪಾಬಾಲಕನಲ್ಲಾ
ನಿನ್ನ ಸಹಪಾರಿ ಸುಧಾಮನಾನಲ್ಲಾ
ಪಾಡಿ ಪೊಗಳಲು ಸುರ ಮುನಿಯುನಾನಲ್ಲ
ನಿನ್ನೆಂತು ಸೇವಿಸಲೊ ಯದುಕುಲೋತ್ತಮನೇ೨
ಅಗರು ಚಂದನ ಪರಿಮಳದ್ರವ್ಯಗಳನೆ
ತಂದು ಅರ್ಪಿಸಲು ಕುಬುಜೆಯಲ್ಲಾ
ಆದರದಿ ಪಾಲ ನೀಡೆ ವಿದುರನಲ್ಲಾ
ಅನಂತ ಗುಣಪೂರ್ಣನೇ ಶ್ರೀ ಹರಿ೩
ಗೋವುಪಾಲನು ತಂದು | ನಿನಗ ಭಿಷೇಕ ಮಾಡುವೆನೆ
ಕ್ಷೀರಸಾಗರದಲ್ಲಿ – ಪವಡಿ ಸಿರುವೇ
ವಿಧ ವಿಧ ಪುಷ್ಪಗಳ ತಂದು ಅರ್ಚಿಸಲು
ಪೊಕ್ಕಳೊಳು ಪುಷ್ಪವನೆಪಡೆದಿರುವೆ ಹರಿಯೆ ೪
ಕರಿರಾಜ ನಿನ್ನ ಕರೆಯೆ ಕರುಣದಿಂದ ಬಂದೆ
ಪ್ರಹ್ಲಾದಗೋಲಿದು ಕಂಬದಲಿ ನಿಂತೇ
ದ್ರೌಪದೀ ದೇವಿಗಕ್ಷಯಾಂಬರ ವಿತ್ತೆ
ಅಂತೆ ಎನ್ನಪಾಲಿಸೊ ಲಕ್ಷ್ಮೀಕಾಂತನೇ ೫
ಪರಿಪಯಲಿಭಕ್ತರ ಪಾಲಿಸಿದೆಯೊ ದೇವಾ
ಪರಮ ದಯಾಳುವೆಂದೆನಿಸಿಕೊಂಡೇ
ಪರಮ ಪುರುಷನು ನೀನು ಪಾಮರನು ನಾನಹುದೊ
ದಾರಿ ಕಾಣದೆ ಇರುವೆ ದಯೆತೋರು ಮುರಾರಿ೬
ಭಕ್ತವತ್ಸಲ ನೀನೆ ಭಯನಿವಾರಣ ನೀನೇ
ಭಾಗವತಜನಪ್ರಿಯ ನೀನೆ ಸರ್ವರಕ್ಷಕ ನೀನೆ
ಸರ್ವವ್ಯಾಪಕ ನೀನೆ ಸರ್ವಾಂತರ್ಯಾಮಿ
ಶ್ರೀ ವೇಂಕಟವಿಠಲಾ ೭

 

೧೬
ಕಂಡು ಧನ್ಯನಾದೆ ಶ್ರೀ ರಾಘವೇಂದ್ರರಾ
ಕಂಡು ಧನ್ಯನಾದೆ ಭೂಮಂಡಲದೋಳ್ ಪ
ಅಧಿಕ ಮಹಿಮೆ ತೋರಿ ಮೆರೆಯುತಿರುವ
ಶ್ರೀ ಗುರುಸಾರ್ವಭೌಮ ರಾಘವೇಂದ್ರರಾ ೧
ಕಲಿಯುಗದೋಳ್ ಭಕ್ತಜನರಾ ಉದ್ಧರಿಸಬೇಕು ಎಂಬ ಮನದಿ
ವರಮಂತ್ರಾಲಯದೊಳ್ ಬಂದು ನಿಂದಿಹ ಯತಿವರರಾ ೨
ತುಂಗಭದ್ರೆಯ ಸ್ನಾನವಮಾಡಿ ಅಂಗದ ಕಶ್ಮಲನೀಗಿ
ಮಂಗಳಮೂರುತಿ ರಾಘವೇಂದ್ರರ ಬೃಂದಾವನ ಮನದಣೆಯೆ ೩
ವಿಶಿಷ್ಟ ಜನರ ಕಷ್ಟಗಳನು ನಿಮಿಷಮಾತ್ರದಿ ಕಳೆದು ಸಲಹುವ
ಶ್ರೇಷ್ಟ ಗುರುಗಳ ದಿವ್ಯವಾದ ದರ್ಶನ ಭಾಗ್ಯಾ ದೊರೆಕಿತಿಂದು ೪
ಆದಿವ್ಯಾಧಿಗಳೆಲ್ಲ ಹರಿಸಿ ಅಂಧ ಬಧಿರ ಮೂಕತ್ವ ತೊಲಗಿಸಿ
ಬಂದ ದುರಿತಗಳೆಲ್ಲ ಓಡಿಸಿ ಕಂದನಂದದಿ ಸಲಹುವ ಗುರುಗಳಾ೫
ದಿನದಿನದೊಳ್ ಇವರ ಮಹಿಮೆ ಅಧಿಕವಾಗುತಿರಲು ಕಂಡು
ತಂಡ ತಂಡದ ಜನಗಳೆಲ್ಲ ಹಿಂಡು ಹಿಂಡಾಗಿ ಬರುತಲಿಹರೂ ೬
ಹೆಜ್ಜೆ ಹೆಜ್ಜೆಗೆ ವಂದಿಸುತಲೀ ದಂಡೆ ಮುಡಿ ಉರುಳುತಲೀ
ಮಂಡೆಬಾಗಿ ನಮಿಸತಲಿ ಬಿಡದೆ ರಾಯರ ಕೊಂಡಾಡುತಲೀ ೭
ಸುತ್ತ ಕೋಟಿಯೊಳಗೆ ಮೆರೆಯುತಾ ಸಮಸ್ತ
ಜನರೆನರವ ಕೊಡುತಾ
ಕಾಮಧೇನುವಂತೆ ಹೊಳೆಯುತಾ ಕಾಮಿತಾರ್ಥ
ಕೊಡುವ ದಾತಾ ೮
ನಿತ್ಯ ನಿತ್ಯದಿ ಬ್ರಾಹ್ಮಣರ ವೇದ ಪುರಾಣ ನಡೆಯುತಿರುವುದು
ಕೇಳಿ ಭಕ್ತಿಯಿಂದ ಜನರಾನಂದ ಭರಿತರಾಗುತಿಹರು ೯
ಕೇಳುತಿಹುದು ಮಂತ್ರಘೋಷ ಪೇಳುತಿಹ ಪುರಾಣ ರಹಸ್ಯ
ನೀಡುತಿಹರು ಗುರೂಪದೇಶ ಎಮಗಾಯಿತಿಂದು ಬಹುಸಂತೋಷ೧೦
ಎಲ್ಲಿ ನೋಡಲು ಬೀದಿ ಶೃಂಗಾರಾ ಎಲ್ಲಿ
ನೋಡಲು ಹೂವು ಸಿಂಗರ
ಮತ್ತೆಲ್ಲಿ ನೋಡಲು ಮಂಗಳಕರ ಕಂಡೆ
ಗುರುಗಳ ಮನಸಾರಾ೧೧
ಬಂದ ಭಕ್ತಬೃಂದಕೆಲ್ಲ ಬೇಡಿ ದೊರಗಳ ನೀಡುತ ಸಲಹಿ
ಉಣಿಸಿದಣಿಸಿ ಹರಸಿ ಅವರ ಆನಂದದಿಂದ ಕಳುಹುತಿಹರು ೧೨
ಭಕ್ತರಸವ ಪಾನಮಾಡಿಸಿ ಮುಕ್ತಿ ಮಾರ್ಗಕೆ ದಾರಿ ತೋರಿಸಿ
ಕರ್ತೃ ಶ್ರೀಹರಿ ಹೊರತುಯಿಲ್ಲೆಂದು ಸತ್ಯವಾಕ್ಯ ವ್ಯಾಕ್ತಪಡಿಸುತಿಹರು೧೩
ಭಕ್ತಜನರ ಪೊರೆಯಲಿವರ ಸರಿಗಾಣೆನೀಧರೆಯೊಳಗೆ
ತಂದೆಯಂದದಿ ಬಿಡದೆ ಕಾಯ್ವರು ಸಾರ್ವಭೌಮ ಶ್ರೀ ರಾಘವೇಂದ್ರರು ೧೪
ಎಷ್ಟು ಜನ್ಮದ ಸುಕೃತದ ಫಲವೋ ಶ್ರೇಷ್ಟಗುರುಗಳ ದರ್ಶನವಾಯಿತು
ಕಂಗಳಿಂದಲಿ ಕಂಡು ಮನದ ಕ್ಲೇಶವೆಲ್ಲ ಪರಿಹಾರವಾಯಿತು ೧೫
ಹಿಂದೆ ಪ್ರಹ್ಲಾದರಾಜರೆನಿಸಿ ಬಂದು ಮಂಚಾಲೆಯಾಂಬಿಕೆ ದರ್ಶನ
ಕೊಂಡು ಗುರುಗಳ ದರ್ಶನ ಮಾಡಿಸೆಂದು ಭಕ್ತಿಲಿಜನ ಬೇಡುತಿಹರು ೧೬
ದೇಶ ದೇಶದ ಜನರಿಗೆಲ್ಲ ವಿಸ್ತಾರದಿಂದ ಎಲೆಗಳ್ಹಾಕಿ
ಭಕ್ಷ್ಯ ಪಾಯಸಾನ್ನಗಳನು ತೃಪ್ತಿಯಿಂದ ಉಣಿಸುತಿಹರು ೧೭
ಶ್ರೀ ರಾಘವೇಂದ್ರಾಯ ನಮಃ ಎಂದರೆ ದುರಿತಗಳೆಲ್ಲವದೂರಮಾಳ್ವರು
ಸ್ಮರಣ ಮಾತ್ರದಿ ಸಕಲಪಾಪಗಳೆಲ್ಲ ನಾಶಗೊಳಿಸೋರು೧೮
ಗುರುವಾರ ಪೂಜಾ ಸಂಭ್ರಮದಿಂದ ನಮಗಾಯಿತು ಇಂದು
ಬಹು ಆನಂದ ರಾಯರು ರಥವೇರಿ ಬರುವುದು ಚಂದ
ಮುಂದೆ ನಮಿಸಲು ಭಕ್ತವೃಂದಾ ೧೯
ಜಯ ಜಯತು ಗುರುರಾಜ ಜಯ ಜಯತು ಸುರಭೂಜ
ಜಯ ಜಯತು ಸುಧೀಂದ್ರ ಸುತ ಜಯ
ಜಯತು ಶ್ರೀ ರಾಘವೇಂದ್ರಾ
ಜಯ ಜಯತು ಜಯ ಜಯತು ಜಯ ಜಯಾ ೨೦

 

೧೭
ಕರುಣದಿ ಕಾಯಬೇಕೆನ್ನಾ ನೀಪರಮದಯಾಳು
ವೆಂದೆನುತ ಬಂದೆನು ನಾ ಪ
ಬಂದಾ ಬಂದಜನಕಾನಂದ ಕೊಡುತಲಿ
ಬೃಂದಾವನ ದೊಳು ಬಂದು ನಿಂದಿರುವೇ
ವಂದಿಸಿ ಭಜಿಪರಘಂಗಳ ಕಳೆದು
ಸಲಹುವಿಯೋ ಸದ್ಗುರು ರಾಘವೇಂದ್ರಾ ೧
ಭೂತ ಪ್ರೇತಗಳಿಂದ ಬಾಧೆ ಪಡುವಜನ
ಭೀತರಾಗುತ ನಿನ್ನಡಿಗಳ ಸೇವಿಸಲು
ಆದರದಿಂದಲವರ ಭವ-ಭಯವ ಪರಿಹರಿಸಿ
ಸಲಹಿ ಉದ್ಧರಿಸುವೆ ಗುರುರಾಘವೇಂದ್ರಾ ೨
ದುಷ್ಟ ಜನರು ಕೂಡಿ ಕೆಟ್ಟಯೋಚನೆ ಮಾಡಿ
ಗುಟ್ಟಾಗಿ ನಿಮ್ಮ ಪರೀಕ್ಷಿಸ ಬೇಕೆಂಧು
ಜೀವ ವಿದ್ದವನ ನಿರ್ಜೀವನೆನುತ ತರಲು
ಸತ್ಯದಿ ನಿರ್ಜೀವನನ್ನಾಗಿ ಮಾಡಿದೆ ಪ್ರಭವೆ ೩
ಕುಹಕಿ ಜನರು ಎಲ್ಲಿ ವನಕೆತುಂಡನು ತಂದು
ಚಿಗುರಿಸ ಬೇಕೆನುತಲಿ ಕೇಳಲು
ಕಮುಂಡದೊಳಿದ್ದ ದಿವ್ಯೋದಕ ಪ್ರೋಕ್ಷಿಸಿ
ಚಿಗುರಿಸಿ ಫಲ ಮಾಡ್ದೆ ಅದ್ಭುತ ಮಹಿಮಾ ೪
ಮಾವಿನರಸದೊಳು ಮುಳುಗಿ ಮೃತನಾದಾ
ಬಾಲಕನಿಗೆ ಪ್ರಾಣಗಳನಿತ್ತೆ ದಯದೀ
ಭುವಿಯೊಳು ನಿಮ್ಮ ಮಹಿಮೆಗೆಣೆಕಾಣೆ
ಮಂತ್ರಾಲಯದೊರೆ ಗುರು ರಾಘವೇಂದ್ರಾ ೫
”ಶ್ರೀರಾಘವೇಂದ್ರಾಯ ನಮಃ” ಎಂಬ ದಿವ್ಯನಾಮವ
ಮನುಜನು ಪ್ರತಿದಿನ ಭಜಿಸುತ್ತಲಿರಲು
ಘೋರ ದುರಿತಗಳೆಲ್ಲ ದೂರವ ಮಾಡಿ
ನಿನ್ನ ಚರಣಸೇವಕರನ್ನು ಸಲಹುವಿಯೋಗುರುವೇ೬
ಶ್ರೀ ರಘುರಾಮನ ಪ್ರಿಯಭಕ್ತನಾದ
ಶ್ರೀ ಗುರು ರಾಘವೇಂದ್ರರ ಚರಣ ಭಜಿಸಿರೊ
ನಂಬಿದ ಭಕ್ತರ ಬೆಂಬಿಡದೆ ಸಲಹುವ
ಘನ್ನಕೃಪಾನಿಧಿ ನಮ್ಮ ಗುರು ರಾಘವೇಂದ್ರಾ ೭

ಕರುಣಾದಿ ಕಾಯಬೇಕೆನ್ನಾ ದುಷ್ಟಜನರೂ

 


ಕರುಣೆ ತೋರಬಾರದೇನೋ ಮಾಧವಾ
ಹರಿಯೇ ಧೊರೆಯೇ ಪ
ಕಂದನ ನುಡಿಕೇಳಿ ಕಂಬದಿಂದ ಬಂದೆ
ಅಂದು ಅಹಲ್ಯೆಯ | ಬಂಧನ ಬಿಡಿಸಿದೆ
ಕರಿಮೊರೆಯಿಡಲಾಕ್ಷಣ ಬಂದು ನೀ
ನಕ್ರನ್ನ ಸೀಳಿದ ಚಕ್ರಧರನೆ ನೀನು ೧
ತರಳ ಧೃವನ್ನಾ ತೊಡೆಯಿಂದ ನೂಕಲು
ಕಡುಭಯದಿಂದ ವನದಲ್ಲಿ ಚರಿಸುತ್ತ
ಘನತಪಗೈಯಲು ಧೃಡ ಭಕುತಿಗೆ ಮೆಚ್ಚಿ
ಒಡನೆ ಓಡಿ ಬಂದು ಘನತರ ಸಂಪದವತ್ತೆ ೨
ಪರಿಪರಿಯಲಿ ದೇವ ಭಕ್ತರ ಕಾವ
ಪರಮ ಪುರುಷೋತ್ತಮ ನೀನಲ್ಲವೆ
ಮೊರೆಹೊಕ್ಕೆನು ನಿನ್ನ ಕರುಣಿಗಳರಸನ್ನ
ತ್ವರಿತದಿಂದಲಿ ಕಾಯೊ ವೆಂಕಟವಿಠಲಾ ೩

 

೧೪
ಕೂಸನು ಕಂಡೀರ್ಯಾ ನಮ್ಮ ಕೂಸನು ಕಂಡೀರ್ಯಾ ಪ
ಹತ್ತಾವತಾರದಿ ಭಕ್ತರ ಸಲಹುವ ಚಿತ್ತಜನೈಯ್ಯ
ಶ್ರೀಕೃಷ್ಣನ ಸೇವಿಪ ಅ.ಪ.
ಭೂಮಂಡಲವೆಲ್ಲಾ ತಿರುಗಿ ಬಂದಿಹ ಕೂಸು ದಂಡಕ
ಮಂಡಲ ಪಿಡಿದಿಹ ಕೂಸು
ಬಂದ ಬಂದವರ ಅಭೀಷ್ಟಸಲಿಸುತ ಮಂದಹಾಸದಿ
ನಗುತಿಹ ಕೂಸು ೧
ತುಂಗಾ ತಡಿಯಿಲ್ಲಿ ಬಂದಿಹ ಕೂಸು ಕಂಡ ಕಂಡಲ್ಲಿ
ಕರೆದರೆ ಬರುವಂಥ ಕೂಸು
ಕಾರುಣ್ಯನಿಧಿ ನಮ್ಮ ಗುರುರಾಜರೆಂಬ ಕೂಸು ೨
ಬೇಡಿದವರಗಳ ಬಿಡದೆ ನೀಡುತಲಿ ಭಕ್ತ ಕೋಟಿಗೆ ರವಿ
ಕಿರಣದಂತ್ಹೊಳೆಯುತ
ಮುಕ್ತಿ ಮಾರ್ಗಕೆ ದಾರಿ ತೋರಿಸಿತಿರುವಂಥ
ಭಕ್ತಶಿರೋಮಣಿ ಶ್ರೀ ರಾಘವೇಂದ್ರರೆಂಬೊ ಕೂಸು ೩

 

೧೯
ಗುರುವೆ ನಿಮ್ಮಯ ಪಾದಗಳ ನಂಬಿದೆ ನೈಯ್ಯಾ
ಉದ್ಧರಿಸ ಬೇಕಿನ್ನು ಗುರು ರಾಘವೇಮದ್ರರಾಯಾ ಪ
ನಿನ್ನ ಬಿಟ್ಟರೆ ನನಗಿಲ್ಲ ಬೇರಾರು ಗತಿಯಿಲ್ಲ
ಕಾವ ಕರುಣಿಯು ನೀನೆ ರಾಘವೇಂದ್ರಾ ಅ.ಪ
ನಿನ್ನನ್ನೆ ಸ್ತುತಿಸುವೆನು ನಿನ್ನನ್ನೆ ಸೇವಿಪೆನು
ನಿನ್ನ ವಾನೆನಿಸಯ್ಯ ಗುರುರಾಘವೇಂದ್ರ
ಸಾಧುಸಂಗವನಿತ್ತು ಮೋದ ಪಡಿಸೆಮ್ಮನು
ಆದರಿತಿಪೂದಯ್ಯ ಗುರುರಾಘವೇಂದ್ರಾ ೧
ಒಂದು ದಿನವೂ ನಿಮ್ಮ ನಾಮ ನುಡಿಯಲಿಲ್ಲವೊ ನಾನು
ಮಂದ ಮತಿನಾನಾದೆ ಗರುರಾಘವೇಂದ್ರಾ ಕುಂದುಗಾ
ಳೆಣಿಸದಿರು ನೊಂದೆನೈಯ್ಯಾ ನಾನು ತಂದೆಯಂದದಿ
ಕಾಯೊ ಗುರುರಾಘವೇಂದ್ರಾ ೨
ನಿಂದು ಭೂಸುರರೆಲ್ಲಾ ಜಯ ಜಯಾ ವೆನುತಿರಲು
ಮಂದಹಾಸ ದಲವರ ಪೊರೆದೇ
ನಮೊ ನಮೋಗುರುರಾಜ ನಮೊ ನಮೋ
ರವಿತೇಜ | ನಮೊ ನಮೋ ಸುಧೀಂದ್ರ ಕರಜಾತ |
ನಮೋ ಗುರು ರಾಘವೇಂದ್ರಾ ೩

 

೧೮
ಗುರುವೆ ನೀ ಪಾಲಿಸೋ ನಿನ್ನ ಪಾದವೆ ಗತಿಯೆಂದು
ನಂಬಿ ಬಂದಿಹೆನಯ್ಯಾ ಪ
ಬಂಧುಗಳೆಲ್ಲವು ಬಳಗಗಳೆಲ್ಲವು ಸರ್ವವು
ನೀವೆಂದು ನಾನಂಬಿಹೆ
ಸರ್ವರಕ್ಷಿತ ನಿನ್ಹೊರತು ಇನ್ನಾರಿಹರು ಸರ್ವದಾ
ನಿನ್ನನಾ ಸ್ತುತಿಸಿ ಕೊಂಡಾಡುವೆ ೧
ಕುಂದಿದ ಮನದಲಿ ನಿನ್ನನಾ ನೆನೆಯುದೆ
ಮುಂದೇನುಗತಿ ಎನಗೆಂದು ತಿಳಿಯದೆ
ಹೀನವಾಗಿ ನಾ ಕಾಲಕಳೆದೆಪ್ರಭು
ಇನ್ನಾದರೆನ್ನ ಮನನಿನ್ನಲ್ಲಿ ನಿಲಿಸು ೨
ಕಂಡ ಕಂಡಲ್ಲೆಲ್ಲಾ ಮುಳುಗುತಲೀ ಪ್ರಭು
ಭೂಮಂಡಲವೆಲ್ಲಾ ತಿರುಗಿದೆ ಪ್ರಭುವೇ
ಎಲ್ಲೆಲ್ಲಿಯೂ ಎಮ್ಮ ಕಾಯ್ವರ ಕಾಣದೆ
ನಿಮ್ಮ ಶರಣು ಬಂದಿಹೆ ನಯ್ಯ ಹೇಗುರುವೇ೩
ಎಂತೆಂಥ ಭಕ್ತರು ನಿನ್ನ ಸೇವಿಸುತಿರುವಾಗ
ಸಂತಸದಲ್ಲವರ ಸೇವೆ ಕೈ ಗೊಂಬುವೆ
ಇಂದೆನ್ನ ಮೊರೆಕೇಳಿ ಕೇಳಿಸದಂತಿರುವೆಯಾ ಪ್ರಭುವೆ ೪
ಧರೆಯೊಳು ನಿನ್ನಂಥ ದಾತರಿನ್ನಿಲ್ಲವೊ
ಪರದೇಶಿಯೆನುತೆನ್ನ ಕೈಬಿಡಬೇಡವೋ
ಕೊಡಲು ಎನ್ನುಯ ಕೈ ಹಿಂದಾಯಿತೋ ಪ್ರಭುವೆ
ಬಿಡದೆ ನಿನ್ನಡಿಗಳ ಪಿಡಿದಿಹೆನಯ್ಯಾ ೫
ಎಷ್ಟುದಿನಗಳೀ ಕಷ್ಟ ಪಡಲಾರೆ
ದೃಷ್ಟಿಯಿಂಲಿ ನೋಡಿ ರಕ್ಷಿಸು ನಮ್ಮನು |
ಇಷ್ಟ ಪ್ರದಾತ ನೀನೆನುತ ನಾ ಬಂದೆ |
ಘಟ್ಯಾಗಿ ನಿಮ್ಮಪಾದ ಮುಟ್ಟಿ ನಾ ಭಜಿಸುವೆ೬
ಸಿರಿಯರಸನ ಪ್ರಿಯ ಶ್ರೀ ರಾಘವೇಂದ್ರನೆ
ಸರ್ವಾಪರಾಧವ ಕ್ಷಮಿಸಿ ನೀ ಕಾಯೋ
ಮನ ಬಹು ನೊಂದಿದೆ ತಾಳಲಾರನೊ ಪ್ರಭು
ಕಾಲಮೀರದೆಮ್ಮನು ಪಾಲಿಸಬೇಕಯ್ಯ ೭

 

೨೦
ತಾಳು – ತಾಳು – ತಾಳಬೇಕೆನ್ನುವಿರೋ ಗುರುವೇ ಪ
ಇನ್ನೆಷ್ಟುದಿನ ತಾಳಬೇಕೋ ತಿಳಿಯಾದೋ ಅ.ಪ.
ಆಶ್ರಿತಜನ ರಕ್ಷಕನೆಂದೂ ನಂಬಿದೇನೊ ಪ್ರಭುವೇ |
ಎಂದೆಂದಿಗೂ ಬಿಡೆ ನಿಮ್ಮಯ ಪಾದ ಶ್ರೀ ರಾಘವೇಂದ್ರ ಪ್ರಭವೇ ೧
ತನುವಿನೊಳಗೆ ಬಲವು ಇಲ್ಲಾ ಮನದೊಳಗೆ ಧೃಡಾವಿಲ್ಲ
ಇನ್ನಾದರು ದಯಮಾಡಿ ಸಲಹಯ್ಯ ಪ್ರಭವೇ೨
ದುರಿತ ರಾಶಿಗಳ ನಾಶಗೊಳಿಸೆ ನಿನ್ಹೊರತ್ಯಾರಿಲ್ಲ ಪ್ರಭುವೇ
ತ್ವರಿತದಿ ಕರುಣ ಕಟಾಕ್ಷದಿ ನೋಡು ಶ್ರೀ ರಾಘವೇಂದ್ರ ಗುರುವೇ ೩
ಈ ಸಂಸಾರ ಶರಧಿಯೋಳ್ ಮುಳುಗಿ ಬಳಲಿದೆ ಗುರುವೇ
ಘಾಸಿಗೊಂಡಿಹೆ ಕೃಪೆಮಾಡೈ ಶ್ರೀ ರಾಘವೇಂದ್ರ ಗುರುವೇ ೪
ಈ ವಿಧ ಬವಣೆಯ ಪಡಲಾರೆನೋನಾ ಕರುಣಿಸೈ ಪ್ರಭುವೇ
ತಡೆಮಾಡದೆ ಕಡೆಹಾಯಿಸೋ ಶ್ರೀ ರಾಘವೇಂದ್ರ ಪ್ರಭವೇ ೫

 

೧೧
ತೂಗಿರೆ ರಂಗನ್ನ ತೂಗಿರೆ ಕೃಷ್ಣನ್ನ
ತೂಗಿರೆ ವೇಣು ಗೋಪಾಲನ್ನ
ತೂಗಿರೆ ಅಳಗಿರಿ ಅಪ್ಪ ತಿಮ್ಮಪ್ಪನ್ನ
ತೂಗಿರೆ ಕನಕಾದ್ರಿ ವೆಂಕಟನಾ ಪ
ಪಾಲಗಡಲೋಳು ಆಲದೆಲೆಯಮ್ಯಾಲೆ
ಬಾಲಾನುಮಲಗ್ಯಾನೆ ತೂಗಿರೇ ೧
ಕಂಜದಳಾಕ್ಷನ್ನ ಕಮನೀಯಗಾತ್ರನ್ನ
ಕಮಲಾಕ್ಷಿಯರೆಲ್ಲಾ ತೂಗೀರೇ
ಕಾಮಿನಿಯರುಟ್ಟಿ ಸೀರೆಗಳನೆ ಕದ್ದು
ಕಟಹಾಲ್ದಮರನೇರಿದವನ್ನಾ ೨
ದಶರಥ ತನುಜನ್ನ ದನುಜಸಂಹಾರನ್ನ
ವನಜಾಕ್ಷಿಯಾರೆಲ್ಲಾ ತೂಗೀರಮ್ಮಾ
ಅಶರಥನ ಮಡದಿ ಧರಣಿಸುತೆಯ ತಂದ
ಪವಮಾನನುತರಾಮಚಂದ್ರನ್ನಾ ೩
ಕಿಂಕರರಿಗೆ ಬಂದ ಸಂಕಟ ಕಳೆವನ್ನ
ವೆಂಕಟರಮಣನ್ನ ತೂಗೀರೇ
ಬಿಂಕಾದಿಂದಲಿ ಬಂದು ಬೆಟ್ಟದೊಳ್‍ನಿಂದಹ
ವೆಂಕಟವಿಠಲನ್ನ ತೂಗೀರೇ ೪

 

೨೨
ದಯ ಮಾಡೋ ಗುರುವೇ ದಯ ಮಾಡೋ ಪ
ದಯ ಮಾಡೋ ಗುರುವೇ ನಿನಗೆದುರಾರೀ ಧರೆಯೊಳಗೆ
ಸದಮಲ ಮೂರುತೀ ಶ್ರೀ ರಾಗವೇಂದ್ರಾ ಅ.ಪ
ಭಕ್ತರ ಪೊರೆಯಬೇಕೆಂಬೀಕಾರಣದಿಂದ ಸಿದ್ಧ ಹಸ್ತಾನಾಗಿ
ಬಂದು ನಿಂತಿರುವೇ ಕಂಡ ಕಂಡಾ ದೈವಂಗಳ ಪೂಜಿಸಿ
ಪರಿಪರಿಸ್ತುತಿಸುತ ಬಳಲಿ ಬೆಂಡಾದೆನೈ ಸದ್ಗುರುವೇ ೧
ನಿರುತ ನಿನ್ನಡಿಗಳಬಿಡದೆ ಸೇವಿಸುವಂಥ ಧೃಡ
ಭಕ್ತಿಯಾ ಲಿಟ್ಟು
ಸಲಹು ಸದ್ಗುರುವೇ ಮಂದಾಮತಿಯುನಾನು |
ಮಾಡಿದಪರಾಧಂಗಳ
ಒಂದೆಣಿಸಾದೆ ಎನ್ನನು ಮನಿಸು ಪ್ರಭುವೇ ೨
ಪವನತನಯನ ಪ್ರಭುವಾದ ಶ್ರೀರಾಮನ | ಪ್ರಿಯನಾದ
ಶ್ರೀ ರಾಘವೇಣದ್ರಾ
ಎತ್ತ ಪೋಗಲಿ ನಾನೇನು ಮಾಡಲಿ ದೇವಾ ಎಂತು
ದಾರಿಯಕಾಣೆ ಸಂತೈಸು ಜೀಯಾ ೩
ತಂದೆ ನೀ ಕೈ ಬಿಟ್ಟರಾರೆನ್ನ ಕಾಯ್ವರೊ ಮಂತ್ರಾಲಯ
ಧೊರೆ ರಾಘವೇಂದ್ರಾ
ಹಿಂದೆ ಮುಂದಿಲ್ಲದೆ ತಪಿಸುತಿರುವೆನ್ನ ಕೈ ಪಿಡಿದು
ಕಾಯೋ ಶ್ರೀ ಗುರು ರಾಘವೇಣದ್ರಾ ೪

 

೨೧
ದಯಮಾಡಿ ಬಾರೆನ್ನ ಗುರುವೇ ಮಂತ್ರಾಲಯ ಪ್ರಭುವೇ ಪ
ಧರೆಯೊಳು ಸುಜನರಾ ಪೊರೆಯಲೋಸುಗ ನೀನು
ವರ ಮಂತ್ರಾಲಯದೊಳು ಬಂದು ನಿಂದಿಹೆ ಗುರುವೇ ೧
ಬಹು ವಿಧದಲಿ ನಿನ್ನ ಮಹಿಮೆಗಳ ಕೇಳೀ
ದೇಶ ದೇಶದಿ ಜನರು ಬಂದು ಕಾದಿಹರೋ೨
ಕರೆದಾರೆ ಬರುವಂಥ ಕರುಣಸಾಗರ ನೀನು
ಪರಿ ಪರಿಸ್ತುತಿಸುವೆ ಕಾರುಣ್ಯ ಮೂರ್ತಿಯೆ ೩
ಬೇಡಿದಳಾ ವರಗಳ ಕೊಡುವ ನೀನೆನುತಲಿ
ಧೃಡ ಭಕುತಿಯೊಳು ನಿನ್ನಡಿಗಳ ಸೇವಿ ಸುವರೋ ೪
ಹಗಲು ಇರುಳು ನಿನ್ನ ಬಿಡದೆ ಸ್ತುತಿಸುವಂತೆ
ಮತಿಯ ಪಾಲಿಪುದು – ಶ್ರೀ ಗುರುರಾಘವೇಂದ್ರಾ ೫

 

೨೩
ನಡೆದು ಬಾರಯ್ಯ ಪ್ರಭುವೇ ಶ್ರೀ ರಾಘವೇಂದ್ರ ಪ
ಪರಿಪರಿಯಲಿ ಭಕ್ತ ಜನಗಳೆಲ್ಲಾ ಕರಗಳ ಮುಗಿಯುತ
ಕಾದುನಿಂದಿಹರು ಅ.ಪ
ಕಾರುಣ್ಯಾ ಮೂರ್ತಿನೀ ಕರುಣಿಸದಿದ್ದರೆ ಬೇರಾರ
ಕಾಣೆನೋ ಪ್ರಭುವೇ
ತಡಮಾಡದೆ ಎಮ್ಮ ಮನದ ಸಂತಾಪವ
ಪರಿಹರಿಸಿ ಕಾಯೋ ಗುರುವೇ ೧
ನಿನ್ನ ನಂಬಿದೆನಯ್ಯ ಅನ್ಯಾರ ಬೇಡೆನೊ
ಎನ್ನ ಪಾಲಿಸು ಪ್ರಭುವೇ
ನಿನ್ನ ಸಂಕಲ್ಪವೇನೆಂದು ನಾನರಿಯೆನೋ ಅನ್ಯಥಾ
ತಿಳಿಯದೆ ಸಂತೈಸು ಪ್ರಭುವೆ ೨
ನಿನ್ನಂಥ ದಾತರಿಲ್ಲವೊ ಜಗದೊಳಗೆ ಪಂಥ ಮಾಡದೆ
ಎಮ್ಮಕಾಯೋ
ಸಂತಸದಲಿ ನಿಶ್ಚಿಂತೆ ಎನಗೆ ಕೊಡು ಶಾಂತ ಮೂರುತಿ
ಶ್ರೀ ರಾಘವೇಂಧ್ರಾ೩

 

೨೪
ಪರಿಪಾಲಿಪುದೈ ಗುರುವೆ ನೆರೆನಂಬಿದೆನಯ್ಯ ಪ್ರಭುವೆ ಪ
ಮೋಸ ಹೋದೆನಲ್ಲಾ | ಬಲು ಘಾಸಿ ಗೊಂಡೆನಲ್ಲಾ
ಮಾಯಾ ಪಾಶದಿ ಸಿಲುಕಿದೆನಲ್ಲಾ | ಉ-
ಪಾಯ ವನರಿಯೆ ಪಾಲಿಸೈ ಪ್ರಭವೇ ೧
ಆರಿಗೆ ಮೊರೆಯಿಡಲೋಲಿ ಮತ್ಯಾರನು
ಬೇಡಲೋ ಪ್ರಭುವೇ
ಆರೆನ್ನ ಸಲಹುವರೋ ದಾರಿಯಕಾಣೆನೊ
ಕಾಯೋ ಪ್ರಭುವೇ ೨
ಶರಣೆಂದವರನು ಪೊರೆವಾ ಬಿರುದನು
ಉಳಿಸಿಕೊ ಗುರುದೇವಾ
ನಿರುತದಿ ಮಾಡುವೆ ನಿನ್ನ ಸೇವಾ ಕರುಣಿಸು
ಶ್ರೀ ರಾಘವೇಂದ್ರಾ ೩

 

ಕುಹರಿ ಜನರೂ ಎಲ್ಲಾ ವನಿಕೆ ತುಂಡನು ತಂದು

ಪಾಲಿಸೆಮ್ಮನು ವೆಂಕಟೇಶಾ ನಂಬಿದೆ ನಿನ್ನ ಪಾದಾ
ಸಲಹೋ ಗಿರೀಶಾ ಪಾಲಿಸು ಪನ್ನಗಾ ಚಲವಾಸಾ
ಪಾಲಿಸುವ ನ್ನ ಸರ್ವೇಶಾ ಪ
ಪರಿಪರಿಯಲಿ ನಿನ್ನನಾ ಅನುದಿನ ಕೊಂಡಾಡುವೆನಾ
ಪತಿತ ಪಾವನ ನೀನೇಗತಿಯೆಂದು ನಂಬಿದೆ
ಸನ್ಮತಿಯ ಪಾಲಿಸು ದೇವಾ ಅಹಿಗಿರಿ ನಿಲಯಾ ೧
ಕರುಣಾಳು ನೀನೆನುತಾ ನಿನ್ನ ಬಳಿ ಬಂದೇನು ಬಹು ತ್ವರಿತಾ
ಕರಣಶುದ್ಧನ ಮಾಡಿ ಕರೆದುಕೋ ಯನ್ನನು
ಕರುಣಾಕರ ವೆಂಕರಾಯಾ ಜೀಯಾ೨
ಕಲಿಯುಗದೊಳಗೆ ನಿನ್ನ ಮಹಿಮೆಯ ಪೊಗಳಲೆನ್ನೊಶವೆ
ಮುನ್ನಾ ಅಗಣಿತ ಮಹಿಮನೀನೆನುತಾ ಸಾರುತಲಿರೆ
ಸರಿಯಾರು ನಿನಗೇ ಮೂಲೋಕದ ದೊರೆಯೇ ೩
ಕರೆಕರೆ ಸಂಸಾರದೀ ಕೊರಗುತ್ತ ಮರುಗುತ್ತಲಿಹೆ ಭರದೀ
ಕರುಣಿಗಳರಸನೆ ಕಾರುಣ್ಯ ಮೂರುತಿ
ಕಣ್ದೆರೆದು ನೋಡೆಮ್ಮನು ಕನಕಾದ್ರಿಗೊಡೆಯಾ೪
ಅರ್ಥಿಯಿಂದಲಿ ನಿನ್ನ ಬಲು ಪರಿಯಿಂದಲಿ ನುತಿಪೆನಾ
ಕಡೆಗೆ ನೀನಲ್ಲದೆ ಮತ್ಯಾರಿಹರೊ ದೇವಾ
ಸತ್ಯ ಮೂರುತಿ ನೀನೆ ಹತ್ತಿರ ಕರೆದು ಸಲಹೋ ೫
ಹಿಂದೆ ಪ್ರಹ್ಲಾದನ ನುಡಿಯಾ ಕೇಳಿ ನೀ ಕಂಬದಿಂದೊಡೆದು ಬಂದೆ
ಅಂಧಕಾರದಿ ಮುಳುಗಿ ಮುಂದೆ ಕಾಣದಲಿರುವೆ ಒಡೆಯ
ಬಂದೆನ್ನ ಕಾಯೋ ಶ್ರೀ ಇಂದಿರೆ ರೆಮಣಾ ೬
ಬೆಟ್ಟದ ಮೇಲಿರುವೇಬಂದ ಬಂದವರಿಗನಂತ
ವರವ ಕೊಡುವೇ
ನಿಷ್ಠೆಯಿಂದಲಿ ಮನ ಮುಟ್ಟಿ ಭಜಿಸುವರ
ಇಷ್ಟಾರ್ಥಗಳ ಕೊಡುವೆ ವೆಂಕಟವಿಠಲಾ ೭

 

೨೫
ಬಂದು ನಿಮ್ಮಡಿಗಳ ನಾಶ್ರಯಿಸಿದೆ ಪ್ರಭುವೆ
ಭವ ಬಂಧನಗಳ ಬಿಡಿಸಿ ನೀ ಕಾಯೊ ಸದ್ಗುರುವೇ ಪ
ಎಲ್ಲೆಲ್ಲಿಯೂ ತಿರುಗಿ ಕಾಯುವರ ಕಾಣದೆಲೆ
ಇಂದು ನಿಮ್ಮಯ ಪಾದಗಳ ಪಿಡಿದು ಬೇಡುವೆ ಪ್ರಭುವೇ
ತಡಮಾಡದೆಮ್ಮಯ ದುಗುಡಗಳ ಪರಿಹರಿಸಿ
ಕರುಣದಿಂದಲಿ ಕಾಯೊ ಗುರುರಾಘವೇಂದ್ರಾ ೧
ನಿಶೆ ಹಗಲು ನಿನ್ನನು ಸ್ತುತಿಸಿ ಬೇಡುವೆ ಪ್ರಭುವೆ
ಗತಿಗಾಣೆ ನಿನ್ಹರತು ಈ ಪೃಥುವಿಯೊಳಗೆ
ಅತಿವ್ಯಥೆಯಲೀ ನೊಂದು ಮತಿಯಿಲ್ಲದಂತಿಹೆನು
ತ್ವರಿತದಿಂದಲಿ ಕಾಯೊ ಹೇ ಗುರುರಾಜ ಪ್ರಭುವೇ ೨
ಜಗವೆಲ್ಲ ನಿಮ್ಮ ಮಹಿಮೆ ಸಾರುತಿರುವುದ ಕೇಳಿ
ಭರದಿಂದ ಬಂದೆನೋ ಗುರುರಾಘವೇಂದ್ರಾ
ಇಂದೆಮ್ಮ ಅಪರಾಧಗಳ ಎಣಿಸದೆಲೆ ಸಲಹೈಯ್ಯಾ
ಕಾರುಣ್ಯಮೂರ್ತಿ ಶ್ರೀ ಗುರುರಾಘವೇಂದ್ರಾ ೩

 

೨೬
ಬಾರೈಯ್ಯಾ ಶ್ರೀ ರಾಘವೇಂದ್ರಾ ಭಕ್ತಾರನಿಧಿಯೆ
ಕಾರುಣ್ಯ ಮೂರ್ತಿ ನೀ ಕರುಣಿಸೊ ಪ್ರಭುವೇ ಪ
ಎಲ್ಲೆಲ್ಲಿ ನೋಡಲಲ್ಲಿಲ್ಲಿ ನಿಮ್ಮಯ ಕೀರ್ತಿಯನು
ಮೊರೆಹೊಕ್ಕ ಸುಜನರ ಪೊರೆವರೆಂಬ ಬಿರುದು ಕೇಳಿ
ತ್ವರಿತದಿಂದಲಿ ಬಂದೆನೋ ಭರದೀ ಹಾರೈಸು ಕರುಣಾ ಶರಧೀ ೧
ನಿಷ್ಠೆಯಿಂದಲಿ ಮನ ಮುಟ್ಟಿ ಭಜಿಸುವರ
ಇಷ್ಟಾರ್ಥಗಳನಿತ್ತು ಸಲಹಿದೆ ತುಪ್ಪರಾಗುತಲವರ
ಕಷ್ಟಗಳನೇ ಕಳೆದೆ ಉದ್ಧರಿಸಿದೆ ಅಷ್ಟ ಸೌಭಾಗ್ಯವ
ಕೊಟ್ಟು ರಕ್ಷಿಸಿದೇ – ಕೈಬಿಡದೇ ೨
ಅಡಿಗಳಿಗೆರಗುತಲಿ ನುಡಿ ನುಡಿಗೆ ತುತಿಸಲಿ
ಬಿಡದೆ ನಿನ್ನನು ಕೊಂಡಾಡುತಲಿ ತಡಮಾಡದೆ
ಯಡರುಗಳ ಪರಿಹರಿಸಿದೆ ನಿಮ್ಮ ಮಹಿಮೆಗೆ
ಸರಿಗಾಣೆ ಭೂಮಂಡಲದೊಳಗೇ ಪ್ರಭವೇ ೩

 

ಮಾವಿನ ರಸದೊಳು ಮುಳುಗಿ ಮೃತನಾದಾ

ಭಜನೆಯ ಪದ
ಭಕ್ತ ವತ್ಸಲ ಸ್ವಾಮಿ ಭಯನಿವಾರಣ ದೇವ
ಭರದಿಂದ ಬಂದುದ್ಯಾಕೆ ಪೇಳಯ್ಯಾ ಪ
ನೀರೋಳಗೆ ಮುಳುಗುತವನಿ ಭಾರ ಹೊತ್ತು ಬಂದೆಯಾ
ಕೋರೆದಾಡಿಗಳಿಂದ ಧಾರೂಣಿ ಎತ್ತೀ ತಂದು
ಭಾರ ವಾಯಿತೆಂದು ಬಂದೆಯಾ ೧
ಬಾಲಕಾನಾ ನುಡಿಯ ಕೇಳಿ | ಬೇಗದಿಂದಾ ಬಂದೆಯಾ
ದುರುಳನ್ನ ಕೊಂದು ಕರುಳ ಮಾಲೆಯಧರಿಸಿ ನೀ
ತರಳಗಭಯವಿತ್ತು ಬಂದೆಯಾ೨
ಬಲಿಯ ದಾನಾಬೇಡಿ ನೀನು ಕೊಡಲಿ ಪಿಡಿದೂ ನಿಂತೆಯಾ
ಮಡದಿಯಾ ಕದ್ದವನ ಬಿಡದೆ ಬೆನ್ನಟ್ಟಿಕೊಂಡು
ಸಡಗರದಲಿ ನೀ ಬಂದೆಯಾ ೩
ಮಧರೇಲಿ ಹುಟ್ಟಿ ಮಲ್ಲಾರ ಮಡುಹೀ
ಮಾವ ಕಂಸನ ಕೊಂದು ಬಂದೆಯಾ
ತಂದೆ ತಾಯಿಗಳ ಬಂಧನ ಬಿಡಿಸೀನೀ
ಆನಂದಿಂದಿಲ್ಲಿ ಬಂದೆಯಾ ೪
ವಸನಾ ವಿಲ್ಲದೆ ನೀನು ಪಶುವನ್ನೇರಿಕೊಂಡು ವಸುಧೆಯ
ಒಳಗೆಲ್ಲಾ ತಿರುಗೀದೆಯಾ
ಸ್ಮರಿಸುವ ಜನರಾ ಪೊರೆಯ ಬೇಕೆನುತಲೀ ಅವಸರದಲಿ
ನೀ ಬಂದೆಯಾ೫
ಕರಿಯಾ ಮೊರೆಕೇಳಿ ನೀ ತ್ವರಿತಾದಿಂದಾ ಬಂದೆಯಾ ಮ
ಕರಿನ್ನ ಸಂಹರಿಸಿ ಕರಿಯಾನುದ್ಧರಿಸಿ |
ಕರಿವರದನೆಂದೆನಿಸಿಕೊಂಡೆಯಾ ೬
ಕಷ್ಟ ಪಡುವಾ ಜನರ ಕಂಡು ಕಡುದಯದಿಂ ಬಂದಿಯಾ
ಪಕ್ಷಿವಾಹನನೇ | ಲಕ್ಷಮಿರಮಣನೆ | ಕಟಾಕ್ಷವನೇ ಬೀರುವಿಯಾ ೭
ಹತ್ತವತಾರವ ಎತ್ತಿ ಬೇಸತ್ತು ನೀ ಮತ್ತೆ ನೀನಿಲ್ಲ ಬಂದಿಹೆಯಾ
ಎತ್ತ ಪೋದರು ಸ್ವಾಮಿ ಬಿಟದೆ ನಿನ್ನ ಬೆನ್ನತ್ತಿ
ಬರುವರು ಕಂಡೆಯಾ ೮
ಲಕ್ಷ್ಮಿ ಇಲ್ಲದೆ ನಾನಿರೆನೆನುತಲಿ ವೈಕುಂಠ ಬಿಟ್ಟು ಬಂದೆಯಾ
ಹುತ್ತಾದೊಳಗೆ ಇದ್ದು ನೆತ್ತೀಯ ಒಡಕೊಂಡು
ಭಕ್ತಾರ ಸಲಹಲು ಬಂದಿಹೆಯಾ ೯
ಎಲ್ಲೆಲ್ಲಿಯೂ ನಿನಗೆ ಸ್ಥಳವಿಲ್ಲವೆನುತಲಿ ಗಿರಿಯ
ಮೇಲೇರಿ ನೀಂತಿರುವಿಯಾ
ಜಗದಲ್ಲೆಲ್ಲ ನಿನ್ನ ಕೀರ್ತಿ ತುಂಬಿರಲಾಗಿ
ಹುಡುಕೀಕೊಂಡಿಲ್ಲೇ ಬಂದಿಹೆಯಾ ೧೦
ಪಾಪನಾಶಿನಿ ಸ್ನಾನ ಮಾಡೋರು | ನಿನ್ನ ಧ್ಯಾನ ಬೇಡೋರು
ಮನದಿಕ್ಷ್ಟಾರ್ಥಗಳ ಸಲಿಸಲು | ಆತೂರದಿಂದಲಿ ಬಂದೆಯಾ ೧೧
ನಾನಾದೇಶಗಳಿಂದ ನಾನಾ ಜನರು ಬಂದು ನಾನಾ
ರೀತಿಗಳಿಂದ ಸೇವಿಸುವರು
ನಡೆಮುಡಿ ಹಾಸೋರು ಅಡಿಗಡಿಗೆ ಗೋರು ಬಿಡದೆ
ನಿನ್ನ ಕೆರಂಡಾಡುವರು ೧೨
ದೂರ ದೂರದಿಂದ ದಾರಿನಡೆದು ಬಂದು ಬಳಲುತ್ತ ನಿನ್ನ
ಬಳಿ ಬಂದಿಹರು
ಅಡ್ಡಬಿದ್ದೂ ನಿನಗೆ ಬಡ್ಡಿಸಹಿತಾ ಕೊಟ್ಟು ಶರಗೊಡ್ಡಿ
ಬೇಡುತಾ ನಿಂದಿಹರೂ೧೩
ಕಂಗಳಿಲ್ಲಾದವರು ಅಂಗಾವಿಕಲದವರು ಭಂಗಾವ
ಪಡುತಲಿ ಬಂದಿಹರು
ಮಂಗಳಮೂರುತಿ ಅವರ ಅಂತರಂಗಾ ತಿಳಿದು
ಸಂತಯಿಸಬೇಕೆನುತ ಬಂದಿಹೆಯಾ೧೪
ಮೂಕ ಬಧಿರಾರೆಲ್ಲ ಸಾಕು ಸಾಕುಗುತ್ತ ಬಳಲುತ್ತ ನಿನ್ನ
ಬಳಿ ಬಂದಿಹರೂ
ವ್ಯಾಕೂಲದಿಂದನೇಕಾ ಪಾಪಗಳನೆಲ್ಲ ನೂಕಿ
ಬೀಸಾಡಲೂ ಬಂದಿರುವಿಯಾ ೧೫
ಕಪ್ಪಾಕಾಣಿಕೆಗಳಾ ತಪ್ಪಾದೆತಂದು ನಿನಗೊಪ್ಪಿಸಬೇಕೆಂದು
ಬಂದಿಹರೂ
ಅಪ್ಪಾ, ನಮ್ಮಪ್ಪಾ, ತಿಮ್ಮಪ್ಪಾ ನೀ ಕಾಯೆಂದು,
ನಿನಗೊಂದಿಸುವರೂ ೧೬
ಲಜ್ಜೇಯ ತೊರೆದು ಕಾಲ್ಗೆಜ್ಜೀಯ ಕಟ್ಟಿಕೊಂಡು
ಹೆಜ್ಜೆಗೆ ನಿನ್ನ ವಂದಿಸುತಲೀ
ನೋಡುತ್ತ ಮನದಣಿ ಪರವಶರಾಗುತ್ತ ಆನಂದ
ಬಾಷ್ಟಗಳ ಸುರಿಸುವರೂ ೧೭
ಗೊವಿಂದ, ಗೋವಿಂದ, ಎಂದೆನುತ್ತಜನ ಆನಂದದಿಂದ
ನಲಿಯುವರೂ
ಆಡುತ್ತಾ ಪಾಡುತ್ತ ನಿನ ಕೊಂಡಾಡುತ್ತ ಕುಣಿ
ಕುಣಿ ದಾಡುವರೂ ೧೮
ಮೋಸಾ ವಿಲ್ಲಿದೆ ಒಂದು ಕಾಸೂಬಿಡದೆ ಹಣ
ದೋಬಿಕೊಳ್ಳುತ ನೀ ನಿಂತಿರುವೇ
ಇಲ್ಲಾ ಎನುತ ಜಿನ ಮಳ್ಳುಮಾತಾಡಿದರೆ
ಯಲ್ಲಾನುಕಸಕೊಂಡು ಕಳುಹುವಿಯೇ ೧೯
ನಿನ್ನ ದರ್ಶನದಿಂದ ಮುನ್ನ ಮಾಡಿದ ಕರ್ಮವೆಲ್ಲಾ
ತೀರೀತೆಂದು ತಿಳಿಯುತಲೀ
ಘನ್ನ ಮಹಿಮಾ ನಿನ್ನ ಮನ್ನಾಣೆ ಪಡೆಕೊಂಡು
ಧನ್ಯರಾದೇವೆನುತ ತೆರಳುತಿಹರೂ ೨೦
ಸಾಲುಸಾಲಾಗಿ ಎಲೆಗಳ ಹಾಕುತ್ತ
ಮೇಲಾದ ಭಕ್ಷಗಳ ಬಡಿಸುವೋರು

 

೧೩
ಮರುತಾತ್ಮಜಾ ನಿನ್ನ ಮೊರೆಹೊಕ್ಕ ಮೇಲೆನ್ನ
ಮರೆತು ಬಿಡುವರೇ ಸ್ವಾಮಿ ಪ
ಕರಗಳ ಮುಗಿಯುವೆ ಕಷ್ಟ ಪಡುತಲಿರುವೆ
ಕರಪಿಡಿದೆನ್ನನು ಕಾಯೊ ಮಾರುತಿಅ.ಪ.
ಸೀತೆಗೋಸುಗ ಪೋಗೀ ಶಿರಧಿಯದಾಟಿ ನೀ
ಮಾತೆ ಗುಂಗುರ ವಿತ್ತು ಮೋದ ಪಡಿಸಿದೇ
ಪಾತಕಿ ರಾವಣನಾ ಪುರದ ದಹಿಸಿ ಬಂದು
ಚೂಡಾಮಣಿಯ ತಂದು ಶ್ರೀ ರಾಮರಿ ಗರ್ಪಿಸಿದೇ ೧
ಕುಂತಿಯ ಸುತನಾಗಿ ಬಲಭೀಮನೆಂದೆನಿಸಿನೀ
ಪ್ರಚಂಡ ಕೀಚಕನ ಸಂಹಾರ ಮಾಡಿದೆ
ಕ್ರೂರ ದೈತ್ಯನಾದಾ ಜರಿಯ ಸುತನ ಸೀಳಿ
ಪರಮಾತ್ಮಾ ಶ್ರೀ ಕೃಷ್ಣಗರ್ಪಣೆ ಮಾಡಿದೆ ೨
ಮಧ್ವರಾಯರೆಂಬೊ ಪೆಸರಿನಿಂದಾ
ಅದ್ವೈತವಾದಿಗಳ ಖಂಡಿಸಿ ಮೆರೆದೇ
ಅದ್ಭುತ ಮಹಿಮ ವೇಂಕಟವಿಠಲನ
ಪಾದ ಪದ್ಮಂಗಳ ನಿರುತ ಸೇವಿಸುತಿರಾ ೩

 

೧೦
ಮಾಡಿರೆ ಆರತಿಯಾ ಹರಿಗೋವಿಂದನಿಗೇ ಪ
ನೀರೊಳು ಮುಳುಗಿದಾ ಭಾರ ಬೆನ್ನಲಿ ಪೊತ್ತ,
ಕೋರೆ ದಾಡಿಯ ತೋರಿ ಕಂದನ ಕಾಯ್ದಗೆ ೧
ನೆಲನ ಮೂರಡಿ ಆಡಿ ಛಲದಿ ಕೊಡಲಿ ಪಿಡಿದು
ಶಿಲೆಯ ರಕ್ಷಿಸಿದ ಶ್ರೀ ರಾಮ ಚಂದ್ರಗೇ ೨
ಹಾಲು ಮೊಸರು ಬೆಣ್ಣೆ ಕದ್ದು ಮೆದ್ದವನಿಗೆ
ಬೆತ್ತಲೆನಾದ ಬುದ್ಧ ಮೂರುತಿಗೇ ೩
ವರ ತುರಗವನ್ನೇರಿ ಜಗವನೆಲ್ಲವ ತಿರುಗೀ
ಜಗವರಕ್ಷಿಸುವ ವೆಂಕಟ ವಿಠಲಗೇ ೪

 

ಕರಿಯ ಮೊರೆಕೇಳಿ ತ್ವರಿತದಿ ಬಂದೆಯಾ

ರಕ್ಷಿಸು ಶ್ರೀ ವೆಂಕಟೇಶಾ ನಿನ್ನ ನಂಬಿದೆನೈ ಶ್ರೇಷಗಿರಿವಾಸಾ ಪ
ವರ ಋಷಿಗಳು ಕೂಡೀ ಸರ್ವೋತ್ತಮನಾರೆಂದು
ತಿಳಿಯಲು ಬೇಗಾ ಭೃಗು ಮುನಿತಾ ಬಂದೂ
ಶ್ರೀ ಹರಿ ಮಲಗಿರಲಂದೂ ತಾಡನೆ ಮಾಡಿದನೆಂದೂ ೧
ಅದು ಕೇಳಿ ಸಿರಿದೇವಿ ಸೈರಿಸಲಾರದೆ
ನಡೆದಳು ಕೊಲ್ಲಾಪುರಕೆ ತಾನಾಗಾ
ತಿಳಿದು ಹರಿಬೇಗಾ ಧರೆಗಿಳಿದನು ಆಗಾ ೨
ಪರಿಪರಿಭಕ್ತರಾ ಪೊರೆಯ ಬೇಕೆನುತಲಿ
ಧರೆಗಿಳಿದು ಬಂದೂ ಬೆಟ್ಟದೊಳ್ ನಿಂದಾ
ಸುರಮುನಿವಂದ್ಯ ಶರಣು ಗೋವಿಂದಾ ೩
ದೇಶದೇಶಗಳಿಂದಾ ಭಕ್ತಜನರು ಬಂದೂ
ಕಾಣಿಕೆಗಳ ತಂದೂ ಅರ್ಪಿಸುವರು ದೇವಾ
ಮಹಾನುಭಾವಾ ಪಾಲಿಸುದೇವಾ ೪
ಅಪ್ಪಲು ಅಕಿರಸಿ ಒಪ್ಪದಿಂದಲಿಮಾರಿ
ಕೊಪ್ಪರಿಗೆ ಹಣ ತುಂಬಿಸಿಕೊಂಡು ಸೇವೆಕೈ ಕೊಂಡ್ಯಾ ನಿನ್ನ
ಸರಿಯಾರಿಲ್ಲ ಕಂದ್ಯ ೫
ಮೋಸ ಹೋಗುವನಲ್ಲಾ ಭವಪಾಶ ಬಿಡಿಸಲು ಬಲ್ಲ
ಈಸು ಮಹಿಮೆಗಾರ ಶ್ರೀಲಕ್ಷ್ಮೀನಲ್ಲ ಕೈಬಿಡನಲ್ಲ
ಇದಕೆ ಸಂಶಯವಿಲ್ಲ ೬
ದಾನವಾಂತಕ ನಿನ್ನಾ ದಯವಾದ ಮೇಲಿನ್ನಾ
ಬೇರೆ ದೈವಗಳನ್ನ ಬಯಸಲ್ಯಾತಕೆ ಹೇಳು
ದೀನ ದಯಾಳೂ ಭಕ್ತಕೃಪಾಳೂ ೭
ನಿನ್ನ ಹೊರತು ಪೊರೆವರನ್ಯರಕಾಣೆನು ಘನ್ನ ಮಹಿಮಾ
ಶ್ರೀ ಕರುಣಾ ಸಂಪನ್ನಾ ತಡವ್ಯಾಕೊ ಪ್ರಸನ್ನಾ
ಮನಮಾಡೋ ಮೋಹನ್ನಾ ೮
ಭಕ್ತ ವತ್ಸಲ ನೀನಭಯವಿತ್ತ ಮೇಲೆ ಭಯವ್ಯಾಕೊನಮಗಿನ್ನು
ಭಕ್ತರಭಿಮಾನೀ ಸತ್ಯ ನಿನವಾಣೀ ನಿನ್ನ ಸಮರ್ಯಾರೊದಾನೀ ೯
ಆದರದಿಂಧ ಪೊರೆವಾಪ್ರೇಮಸುಧೆಯ ಕರೆವಾ
ಕಾಮಿತ ಫಲಗಳ ಕರೆದುತಾ ಕೊಡುವಾ
ಕನಕಾದ್ರಿಯೊಳಿರುವಾ ಕೀರ್ತಿಯೊಳ್ ಮೆರೆವಾ ೧೦
ಕಷ್ಟಗಳನೆ ಕಳೆದಿಷ್ಟಾರ್ಥ ಕೊಡುವಾ ಸೃಷ್ಟಿಗೊಡೆಯ ಶ್ರೀ
ವೆಂಕಟವಿಠಲಾ ಕರುಣಾಲವಾಲಾ ಪದ್ಮಿನಿಲೋಲಾ ೧೧

 

೨೮
ರಾಘವೇಂದ್ರರಾಯರೆಂಬ ರತುನ ದೊರೆಕಿತೋ
ಪಾದಸೇವೆ ಮಾಡುವಂಥ ಭಾಗ್ಯ ಲಭಿಸಿತೋ ಪ
ಮಂಗಳಾರಿಗರು ತುಂಗಾತೀರದಿ ನಿಂದಿಹರೋ
ಕಂಗಳಿಂದಲಿ ಕಂಡು | ಮನದಿ ಹರುಷಗೊಳುವರೋ೧
ನಿತ್ಯ ನಿತ್ಯದಿ ಭಕ್ತಾದಿಗಳು ಹಾಡಿ ಪೊಗಳುವರೋ
ತುಷ್ಟ ಬಾಗುತಲವರ ಮನದಿಷ್ಟಗಳನೆ ಸಲಿಸುವರೊ ೨
ಬಂದ ಬಂದ ಜನರಿಗೆಲ್ಲ ಮೃಷ್ಟಾನ್ನ ಉಣಿಸುವರೊ
ಉಣಿಸಿ, ದಣಿಸಿ, ಹರಸಿ, ಅವರನಾದರದಿ ಕಳಿಸಿಕೊಡುವರೋ ೩
ಯತಿಕುಲತಿಲಕರು ರಘುವರ ಪ್ರೀಯರು
ಶ್ರೀ ರಾಘವೇಂದ್ರರೂ
ಅಘಗಳ್ಹರಿಸಿ ದಯಾಸಂಪನ್ನರೂ ಮಹಾ
ನಂತ ಮಹಿಮರೂ ೪
ಅಂದಣವೇರಿ ರಾಯರು ಬರುವಾ ವೈಭವ ನೋಡುತ್ತಾ
ಮುಂದೆ ಬಂದು ಶ್ರೀ ರಾಘವೇಂದ್ರರಿಗೊಂದಿಸೂವರೂ ೫

 

೨೯
ರಾಯ ಬಾರೋ | ತಂದೆ ತಾಯಿ ಬಾರೋ ಅ
ನ್ಯಾಯವಾಗಿ ಕಾಲಕಳೆದೆನು ಕಾಯಬಾರೋ ಪ
ಅನುದಿನದಲಿ ನಿನ್ನ ಸ್ಮರಣೆಯ ಮಾಡದೆ ಕೆಟ್ಟೆನಯ್ಯ
ಕಷ್ಟಗಳನೆ ಕಳೆದಿಷ್ಟವ ಸಲ್ಲಿಸಿ ರಕ್ಷಿಸೊ ನೀನು ೧
ಜಪತಪ ಮಾಡದೆ ಪಾಪವಗಳಿಸಿದೆ ಕೃಪೆ ಮಾಡು ಗುರುವೇ
ತಾಪವ ಹರಿಸು ಪ್ರೀತಿಯ ತೋರಿಸು ಪೋಷಿಸುನೀನು ೨
ಕನಸಿಲಿ ಮನಸಿಲಿ ನಿನ್ನನು ಸ್ತುತಿಸುವೆ ಧನ್ಯನ ಮಾಡೈ
ಮನ್ನಿಸದಿದ್ದರೆ ಅನ್ಯರ ಕಾಣಿಸು ನಿನ್ನ ನಾ ಬಿಡೆನೈ ೩

 

೩೧
ಶ್ರೀ ಗುರು ರಾಜರ ಸೇವಿಸಿರೋ—-
ದಂಡ ಕಮಂಡಲ ಪಿಡಿದಿ ನಿಂದಿಹ ಹಸ್ತ ಭೂ
ಮಂಡಲವೆಲ್ಲಾ ತಿರುಗಿ ಬಂದಿಹ ಹಸ್ತ
ಬಿಡದೆ ಭಕುತರಾ ಸಲಹುವ ಹಸ್ತ
ಪೊಡವಿ ಪತಿ ಶ್ರೀ ರಘು ರಾಮರ ಸೇವಿಪ ಹಸ್ತಾ
ಭಕ್ತಲಿ ತುತಿಪರ ಎತ್ತಿ ಸಲಹುವ ಹಸ್ತಾ
ಮತ್ತೆ ಭೂಸುರರಿಗೆಲ್ಲಾ ಅಭಯವೀಯುವ ಹಸ್ತ
ಮುಕ್ತಿಮಾರ್ಗಕೆ ದಾರಿ ತೋರುತಿಹ ಹಸ್ತ
ಚಿತ್ತಜನಯ್ಯನ ನೆನೆದು ಮನದಲ್ಲಿ ನಲಿಯುವ ಹಸ್ತಾ
ಭೂತ ಪ್ರೇತಗಳನೆಲ್ಲ ಓಡಿಸುತಿಹ ಹಸ್ತ
ಸಕಲವ್ಯಾಧಿಗಳ ಹರಿಸಿರಕ್ಷಿಪ ಹಸ್ತ
ಸುವ ಜನರ ಉದ್ಧಾರ ಗೈಯುವ ಹಸ್ತ
ಸರುವದಾ ಶಿರಿಪತಿಯ ಕೊಂಡಾಡುವ ಹಸ್ತಾ
ಕನಸಿಲಿ ಬಂದು ಕಣ್ಣಪೊರೆ ತೆಗೆದಿಹ ಹಸ್ತ
ಮುದದಲಿ ಮಗಿವಿಗೆ ಮಾತ ಕಲಿಸಿದ ಹಸ್ತ
ರಸದಿ ಮುಳುಗಿ ಜೀವ ಕಳೆದ ಕಂದಗೆ
ಜೀವ ಕಳೆ ತುಂಬಿದ ಹಸ್ತ
ಪರಮ ಪಾವನವಾದ ಶ್ರೀಗುರುರಾಜರ ಹಸ್ತಾ
ಜಗವೆಲ್ಲ ನೋಡೆ ಪ್ರಖ್ಯಾತಿ ಪಡೆದಿಹ ಹಸ್ತ
ನಗುತ ಮಂತ್ರಾಲಯದೊಳು ಬಂದು ನಿಂದಿಹ ಹಸ್ತ
ಅಗಣಿತಮಹಿಮೆ ತೋರಿ ಮೆರೆಯುತಿಹಾ ಹಸ್ತ
ಸರಿಗಾಣೆ ಧರೆಯೊಳು ಶ್ರೀರಾಘವೇಂದ್ರರ ದಿವ್ಯ ಹಸ್ತಾ.

 

೩೨
ಶ್ರೀ ರಾಘವೇಂದ್ರ ಗುರುವೇ ಪರಮ ದಯಾಳು ಪ್ರಭುವೇ ಪ
ನಿರುತಾದಿ ಸೇವಿಸುವರಾ ಕಾಮಿತ ಕಲ್ಪತರುವೇ ಅ.ಪ
ತುಂಗಾ ತೀರದೊಳ್ ಬಂದೂ ಮಂಗಾಳ ಮಹಿಮರು ನಿಂದೂ
ಮಂಗಳಾ ಮೂರುತಿ ಶ್ರೀ ರಾಮಚಂದ್ರನ್ನ ಪೂಜೀಪರಿಂದೂ ೧
ಕಾವೀಶಾಠಿಯನುಟ್ಟೂ ಗಂಧಾಕ್ಷತೆಗಳಿಟ್ಟೂ |
ತಿರ್ದಿ ಹಚ್ಚಿರುವಾನಾಮಾ ಫಣಿಯಲ್ಲಿ ಹೊಳೆಯುತಾಲೀ ೨
ವೀಣಾವಾದನದಿಂದಾ ಗಾನವ ಮಾಡುತಲೀ
ವೇಣುಗೋಪಾಲ ಕೃಷ್ಣನ್ನ ಕುಣಿಸಿ ಕೊಂಡಾಡುತಿಹರು೩
ಭಕ್ತಿಯಿಂದಲಿಸ್ತುತಿಪ ಜನರಾ ಆಪತ್ತುಗಳೆಲ್ಲವ ಕಳೆವಾ
ಸಂಪತ್ತು ಸೌಭಾಗ್ಯವೀವಾ ಶರಣೇಂದವರ ಪೊರೆವಾ ೪
ಸರಿಯಾರು ನಿಮಗೆ ದೇವಾ ಈ ಧರುಣಿಯೊಳರಸೆ ಕಾವಾ
ದೊರಗಳ ನಾ ಕಾಣೆನಯ್ಯ ಶ್ರೀ ರಾಘವೇಂದ್ರ ಜೀಯಾ ೫

 

೩೪
ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ ಶ್ರೀ ರಾಘವೇಂದ್ರ
ಎನ್ನಿರೋ ”ಶ್ರೀ ರಾಘವೇಂದ್ರಾಯನ ನಮಃ” ಎಂಬ ಪ
ನಾಮವ ಸ್ಮರಿಸಿ | ಸುಖಿಯಾಗು ಮನವೇ ಅ.ಪ
ಸಂಸಾರ ಸಾಗರದಿ ಬೆಂದು ಬಳಲಿರುವೇನಯ್ಯ
ಮುಂದೇನು ಗತಿ ಕಾಣೆ ಗಾಡಾಂಧಕಾರದೊಳು
ಮುಳುಗಿ ಬೆಂಡಾದೆನೊ ಕರುಣಿಸೈ ಗುರುರಾಘವೇಂದ್ರಾ ೧
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆಂದು
ನಂಬಿದೆನೈ ಪ್ರಭವೆ ಸಂದೇಹವೇಕಿನ್ನು ಕಂದನೆನು
ತೆಂದು ಕಾಯೋ ಗುರುವೇ ಶ್ರೀ ರಾಘವೇಂದ್ರ ಪ್ರಭುವೆ ೨
ಅಂಧತ್ವ ಮೂಕತ್ವ, ಬಧಿರತ್ವ ಎಕಲಾಂಗಿಗಳ
ಹಿಂದೆ ಪೊರೆದೆ ನೀನೆಂಬ ವಾರ್ತೆಕೇಳಿ ನಿನ್ನ
ನಾ ಮೊರೆ ಹೊಕ್ಕೆ ಎನ್ನನುದ್ಧರಿಸುವುದು
ಘನ್ನಮಹಿಮಾ ಶ್ರೀ ರಾಘವೇಂದ್ರಾ ೩
ನಿನ್ನ ಪಾದೊದಕವ ಸೇವಿಸುವ ಸುಜನರಿಗೆ
ಭವರೋಗ ಗಳೆಲ್ಲ ಪರಿಹರಿವುದೊ
ಸ್ಮರಣೆ ಮಾತ್ರದಿ ಸಕಲ ಪಾಪಗಳನೋಡಿಸಿ
ಪುನೀತರನೆ ಮಾಡುವಿಯೊ ಗುರುವೆ ೪
ಬಿಡೆನು ಬಿಡೆನು ನಿನ್ನಡಿಗಳಿಗೆ ಸೇವಿಸಲು
ದೃಢ ಭಕುತಿಯನೆ ಕೊಡು ಎನಗೆ ಶ್ರೀ ರಾಘವೇಂದ್ರಾ
ಪ್ರಭವೆ ನಿನ್ಹೊರತು ಪೊರೆವರ ನಾ ಕಾಣೆ
ಅಪಾರ ಮಹಿಮ ಶ್ರೀ ರಾಘವೇಂದ್ರಾ ೫

 

೩೩
ಶ್ರೀ ರಾಘವೇಂದ್ರರ ಪಾದವನಂಬಿರೋ ಜಗದ್ಗುರುರಾಜರ
ಸೇವೆ ಮಾಡಿರೊ ಪ
ನಂಬಿದ ಭಕ್ತರ ಪೊರೆಯುವಾ ಹಗಲಿರುಳು
ಬೆಂಬಿಡದಲೆ ಕಾಯುತ್ತಿರುವಾ
ಸಕಲ ಸಂಪತ್ತು ಯಿತ್ತು ಸಲಹುವಾ ನಮ್ಮ ಕರುಣಾ
ದೃಷ್ಟಿಯಿಂದ ನೋಡುತ್ತಲಿರುವಾ ೧
ಬಂದ ಬಂದವರನ್ನು ಮುಂದಕ್ಕೆ ಕರೆವಾ
ಬಂದಾಪತ್ತುಗಳನೆಲ್ಲ ಕಳೆವಾ
ತಂದೆಯಂದದಿ ಕೈ ಪಿಡಿದಿರುವಾ ಇನ್ನೂ ಸಂದೇಹ
ವಿಲ್ಲಿದೆ ರಕ್ಷಿಸುವಾ ೨
ಶ್ರೀ ರಾಮಚಂದ್ರನ ಪ್ರಿಯ ಭಕ್ತರೂ ಶ್ರೀ ರಾಘವೇಂದ್ರರು
ಆಶ್ರಿತ ಜನ ರಕ್ಷಕರಾಗಿಹರೂ ಬಂದು
ಮಂತ್ರಾಲಯದಿ ನೆಲೆಸಿಹರೂ ೩

 

೩೦
ಶ್ರೀಗುರುರಾಜ ಪ್ರಭೋ | ನಮೊ ನಮೊ ಗುರು ರಾಜಪ್ರಭೋ ಪ
ಪರಿಪರಿಯಿಂದಲಿ ನಿನ್ನನಾ ಅನುದಿನಸ್ತುತಿ ಸುವೆನಾ
ಪರಮದಯಾಳು ಶ್ರೀ ಗುರು ರಾಘವೇಂದ್ರಾ
ತ್ವರಿತದಿಂದಲಿ ಎಮ್ಮ ಕರುಣಿಸಿ ಪೊರೆವುದು ೧
ಅಡಿಗಡಿಗೇ ನುಡಿನುಡಿಗೇ ಎಡಬಿಡದೇ ಭಜಿಸುವೆನಾ
ತಡಮಾಡದೆ ದಯೆತೋರುವುದೈ
ಬಿಡೆ ಬಿಡೆ ನಿಮ್ಮಯ ಅಡಿಗಳ ನಾನೆಂದೂ ೨
ಕನಿಕರಿಸೀ ದಯಸುರಿಸೀ ಭಯಹರಿಸೀ ಆದರ
ಪಡಿಸೀ ನಿಮಗೆ
ಸರಿಕಾಣೆನೊ ಧರಣೆಮಂಡಲದೊಳು
ಕರುಣಾಮಯ ಶ್ರೀ ರಾಘವೇಂದ್ರಾ ೩

 

೩೫
ಸಾರಿದೆನೋ ನಿನ್ನಾ ಶ್ರೀ ರಾಘವೇಂದ್ರರನ್ನಾ ಎಂದೆಂದಿಗೂ
ನಿಮ್ಮ ಚರಣ ಬಿಡೆ ಪ್ರಭುವೇ ಪ
ಗಾನವಿಲೋಲನೇ ದೀನ ಜನ ಪಾಲಕನೇ
ಜ್ಞಾನಿಗಳರಸನೇ ಶ್ರೀ ರಾಘವೇಂದ್ರಾ
ಭಕ್ತಿಯಿಂದಲಿ ನಿಮ್ಮ ಆರಾಧಿಪರ ಆಪತ್ತು
ಕಳೆಯುವೆ ಶ್ರೀ ರಾಘವೇಂದ್ರಾ ೧
ನಿಮ್ಮನ್ನು ಸ್ತುತಿಪೆನಾ ನಿಮ್ಮ ಪದಸೇವಿಪೆನಾ
ನಿಮ್ಮ ನಾಮ ವುಚ್ಚರಿದೇ ಶ್ರೀ ರಾಘವೇಂದ್ರಾ
ಜಪತಪ ಮಾಡಿಲ್ಲಾ ವ್ರತನೇಮ ತಿಳಿದಿಲ್ಲಾ
ವ್ಯರ್ಥವಾಯಿತು ಕಾಲ ಶ್ರೀ ರಾಘವೇಂದ್ರಾ ೨
ಎನ್ನಪರಾಧವ ಮನ್ನಿಸಬೇಕಿನ್ನು
ಘನ್ನ ಗುಣಮಣಿ ಶ್ರೀ ರಾಘವೇಂದ್ರಾ |
ಬಗೆಬಗೆಯಿಂದಲಿ ಸ್ತುತಿಸಿ ಬೇಡುವೆ ಪ್ತಭುವೆ
ತಡ ಮಾಡದಲೆ ಕಾಯೊ ಶ್ರೀ ರಾಘವೇಂದ್ರಾ ೩

 

ಆನೆ ಬಂದಿತಮ್ಮಾ ಮರಿ

ಆನೆ ಬಂದಿತಮ್ಮಾ ಮರಿ ಆನೆ ಬಂದಿತಮ್ಮಾ ಪ
ಕಿಂಕರರಿಗೆ ಬಂದ ಸಂಕಟಕಳೆವಾ ಶ್ರೀ
ವೆಂಕಟರಮಣನೆಂಬಾನೆ ಅ.ಪ.
ಸಿರಿಯಿಲ್ಲದರಿಲಾರೆನೆಂದಾತುರದಲಿ ಧರೆಗಿಳಿದಾನೇ
ಪಥದೊಳಗೆಲ್ಲ ಹುಡುಕ್ಯಾನೆ | ವಲ್ಮೀಕ ದೊಳು ಅಡಗ್ಯಾನೇ ೧
ಭಕ್ತರ ಸಲಹಲುಹೋಮನ ಮಾಡ್ಯಾನೇ ಬಕುಳೆಮಾತಿಗೆ
ಕಂದ ನಾಗ್ಯಾನೇ ನೆತ್ತಿಯ ಒಡ ಕೊಂಡು ನಿಂತಾನೇ ಬಹುವಿಧ
ಯೋಚನೆ ಮಾಡ್ಯಾನೇ ೨
ಬೇಟೆನಾಡಲು ಹೊರಟ್ಯಾನೆ ದಿಟ್ಟಕುದುರೆಯನೇರ್ಯಾನೇ
ಪಟುತರ ಶ್ರೀಹರಿ ನಡೆದಾನೇ ಮುಂದೆ ಮದಗಜ
ಒಂದನು ಕಂಡ್ಯಾನೇ ೩
ಶನೆ ಬೆನ್ನಟ್ಟಿಕೊಂಡು ನಡೆದಾನೇ ಎಲ್ಲೆಲ್ಲಿಯು
ಕಾಣದೆ ಹೋದಾನೇ ಬಿಸಿಲಲ್ಲಿ ಬಳಲುತ ದಣಿದ್ಯಾನೇ ಅಲ್ಲಿ
ಪದ್ಮಾವತಿಯಳ ಕಂಡಾನೇ ೪
ಮನದಲ್ಲಿ ಹರುಷಿತನಾದಾನೇ ಮಾತನಾಡಲು
ಮುಂದೆ ನಡೆದಾನೇ ಕಲ್ಲುಹಳೆಸುವುದ ಕಂಡಾನೇ ತಡ ಮಾಡದೆ
ಹಿಂದೆ ಸರಿದಾನೇ ೫
ಬಕುಳೆ ಮಾತೆಯ ಕರೆದಾನೇ ಸಕಲವೃತ್ತಾಂತವ ತಿಳಿಸ್ಯಾನೇ
ಬೇಗದಿ ಹೋಗಿ ಬಾರೆಂದಾನೇ ಮೌನದಿಂದಲಿ ಮಲಗ್ಯಾನೇ ೬
ಮಾತೆ ಬರುವುದ ಕಂಡಾನೇ | ಮುದ್ದದಿಂದಲಿ ಎದ್ದುಕುಳಿತಾನೇ
ತಂದ ಶುಭವಾರ್ತೆಯ ಕೇಳ್ಯಾನೇ
ಮಂದಹಾಸದಿಂದ ನಲಿದಾನೇ ೭
ಬಂಧುಗಳೆಲ್ಲರ ಕರಿಸ್ಯಾನೇ ಮುಂದೆ ಮಾಡಿಕೊಂಡು ನಡೆಸ್ಯಾನೇ
ಮದು ಮಗನಾಗಿ ನಿಂತಾನೆ | ಪದುಮಾವತಿ ಕೈ ಪಿಡಿದಾನೇ ೮
ಜಯ ಜಯವೆಂದರು ಸುರಬ್ರಹ್ಮಾದಿಗಳು ವಾಣಿ-ಪಾರ್ವತಿಯರು
ಜಯ ಜಯ ವೆಂದರುಗಗನದಿ ಅಮರರು ಮದುಮಳ
ಮೇಲೆ ಪೂಮಳೆಗರೆದರು ೯
ಮಂಗಳವೆನ್ನಿರೆ ಪದ್ಮಿನಿ ಅರಸಗೆ ಪನ್ನಗ ಶಯನಗೆ
ಮಂಗಳವೆನ್ನಿರೆ ಪರಮ ಕಲ್ಯಾಣಗೆ ಮಂಗಳವೆನ್ನಿರೆ ಶ್ರೀ
ವೇಂಕಟ ವಿಠಲಗೆ ಮಂಗಳಾ ಜಯಮಂಗಳಾ ೧೦

 

ಹಾಡಿನ ಹೆಸರು  : ಆನೆ ಬಂದಿತಮ್ಮಾ ಮರಿ
ಹಾಡಿದವರ ಹೆಸರು : ದೇವೇಂದ್ರ ಕುಮಾರ್, ಮುಧೋಳ್
ಶೈಲಿ : ಘಜಲ್
ಸಂಗೀತ ನಿರ್ದೇಶಕರು :ರವೀಂದ್ರ ಹಂದಿಗನೂರ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಆನೆ ಬಂದಿತಮ್ಮಾ ಮರಿಯಾನೆ
೧೨
ಆನೆ ಬಂದಿತಮ್ಮಾ ಮರಿಯಾನೆ ಬಂದಿತಮ್ಮಾ ಪ
ಸ್ಮರಿಸಿರಿ ಸ್ಮರಿಸಿರಿ ಸರ್ವರ ರಕ್ಷಿಸುವ ಮುಖ್ಯ ಪ್ರಾಣನೆಂಬಾನೆಅ.ಪ
ವಾಯು ಸುಪುತ್ರ ನೆಂದೆನಿಸ್ಯಾನೇ ವಾರಿಧಿಯನ್ನೇದಾಟ್ಯಾನೇ
ಶಶಿಮುಖಿ ಸೀತೆಯ ಕಂಡಾನೇ ದಶಕಂಠನಗರ್ವ ಮುರಿದಾನೆ ೧
ಪಂಚಪಾಂಡವರ ಮಧ್ಯಾನೆ ಪ್ರಚಂಡ ಪರಾಕ್ರಮಿ ಎನಿಸ್ಯಾನೇ
ವಂಚಿಸಿ ಕೀಚಕನ ಕೊಂದಾನೆ ಪಾಂಚಾಲಿಗೆ ಪ್ರಿಯನಾದನೆ ೨
ಮಧ್ಯಗೇಹ ಭಟ್ಟರೊಳು ಜನಿಸ್ಯಾನೇ
ಮಧ್ವಮತವ ಉದ್ಧರಿಸ್ಯಾನೇ
ಮಧ್ವಮಾನಿ ಎಂದೆನಿಸ್ಯಾನೇ ಮುದ್ದು
ವೆಂಕಟ ವಿಠಲನೆಂಬಾನೆ ೩

 

ಹಾಡಿನ ಹೆಸರು :ಆನೆ ಬಂದಿತಮ್ಮಾ ಮರಿಯಾನೆ
ಹಾಡಿದವರ ಹೆಸರು :ದೇವೇಂದ್ರ ಕುಮಾರ್ ಮುಧೋಳ್
ಶೈಲಿ :ಘಜಲ್
ಸಂಗೀತ ನಿರ್ದೇಶಕರು : ರವೀಂದ್ರ ಹಂದಿಗನೂರ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ತೂಗಿರೆ ರಂಊನ ತೂಗಿರೆ
೧೧
ತೂಗಿರೆ ರಂಗನ್ನ ತೂಗಿರೆ ಕೃಷ್ಣನ್ನ
ತೂಗಿರೆ ವೇಣು ಗೋಪಾಲನ್ನ
ತೂಗಿರೆ ಅಳಗಿರಿ ಅಪ್ಪ ತಿಮ್ಮಪ್ಪನ್ನ
ತೂಗಿರೆ ಕನಕಾದ್ರಿ ವೆಂಕಟನಾ ಪ
ಪಾಲಗಡಲೋಳು ಆಲದೆಲೆಯಮ್ಯಾಲೆ
ಬಾಲಾನುಮಲಗ್ಯಾನೆ ತೂಗಿರೇ ೧
ಕಂಜದಳಾಕ್ಷನ್ನ ಕಮನೀಯಗಾತ್ರನ್ನ
ಕಮಲಾಕ್ಷಿಯರೆಲ್ಲಾ ತೂಗೀರೇ
ಕಾಮಿನಿಯರುಟ್ಟಿ ಸೀರೆಗಳನೆ ಕದ್ದು
ಕಟಹಾಲ್ದಮರನೇರಿದವನ್ನಾ ೨
ದಶರಥ ತನುಜನ್ನ ದನುಜಸಂಹಾರನ್ನ
ವನಜಾಕ್ಷಿಯಾರೆಲ್ಲಾ ತೂಗೀರಮ್ಮಾ
ಅಶರಥನ ಮಡದಿ ಧರಣಿಸುತೆಯ ತಂದ
ಪವಮಾನನುತರಾಮಚಂದ್ರನ್ನಾ ೩
ಕಿಂಕರರಿಗೆ ಬಂದ ಸಂಕಟ ಕಳೆವನ್ನ
ವೆಂಕಟರಮಣನ್ನ ತೂಗೀರೇ
ಬಿಂಕಾದಿಂದಲಿ ಬಂದು ಬೆಟ್ಟದೊಳ್‍ನಿಂದಹ
ವೆಂಕಟವಿಠಲನ್ನ ತೂಗೀರೇ ೪

 

ಹಾಡಿನ ಹೆಸರು :ತೂಗಿರೆ ರಂಊನ ತೂಗಿರೆ
ಹಾಡಿದವರ ಹೆಸರು :ರಶ್ಮಿ ಪುರೋಹಿತ್
ರಾಗ :ಸಿಂಧು ಭೈರವಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಸಾರಿದೆನೋ ನಿನ್ನಾ ರಾಘವೇಂದ್ರ
೩೫
ಸಾರಿದೆನೋ ನಿನ್ನಾ ಶ್ರೀ ರಾಘವೇಂದ್ರರನ್ನಾ ಎಂದೆಂದಿಗೂ
ನಿಮ್ಮ ಚರಣ ಬಿಡೆ ಪ್ರಭುವೇ ಪ
ಗಾನವಿಲೋಲನೇ ದೀನ ಜನ ಪಾಲಕನೇ
ಜ್ಞಾನಿಗಳರಸನೇ ಶ್ರೀ ರಾಘವೇಂದ್ರಾ
ಭಕ್ತಿಯಿಂದಲಿ ನಿಮ್ಮ ಆರಾಧಿಪರ ಆಪತ್ತು
ಕಳೆಯುವೆ ಶ್ರೀ ರಾಘವೇಂದ್ರಾ ೧
ನಿಮ್ಮನ್ನು ಸ್ತುತಿಪೆನಾ ನಿಮ್ಮ ಪದಸೇವಿಪೆನಾ
ನಿಮ್ಮ ನಾಮ ವುಚ್ಚರಿದೇ ಶ್ರೀ ರಾಘವೇಂದ್ರಾ
ಜಪತಪ ಮಾಡಿಲ್ಲಾ ವ್ರತನೇಮ ತಿಳಿದಿಲ್ಲಾ
ವ್ಯರ್ಥವಾಯಿತು ಕಾಲ ಶ್ರೀ ರಾಘವೇಂದ್ರಾ ೨
ಎನ್ನಪರಾಧವ ಮನ್ನಿಸಬೇಕಿನ್ನು
ಘನ್ನ ಗುಣಮಣಿ ಶ್ರೀ ರಾಘವೇಂದ್ರಾ |
ಬಗೆಬಗೆಯಿಂದಲಿ ಸ್ತುತಿಸಿ ಬೇಡುವೆ ಪ್ತಭುವೆ
ತಡ ಮಾಡದಲೆ ಕಾಯೊ ಶ್ರೀ ರಾಘವೇಂದ್ರಾ ೩

 

ಹಾಡಿನ ಹೆಸರು :ಸಾರಿದೆನೋ ನಿನ್ನಾ ರಾಘವೇಂದ್ರ
ಹಾಡಿದವರ ಹೆಸರು :
ಸಂಗೀತ ನಿರ್ದೇಶಕರು :ಪಂಚಾಕ್ಷರಿಸ್ವಾಮಿ ಮತ್ತಿಗಟ್ಟಿ
ಸ್ಟುಡಿಯೋ : ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ