Categories
ರಚನೆಗಳು

ರುಕ್ಮಾಂಗದರು

೧೮೦
ಅಂಗನೆ | ನಮ್ಮ ರಂಗನೆ | ಮುನಿದನ್ಯಾತಕೆ ಪ್ರಾಣಲಿಂಗನೆ ಪ
ನಿಜವಾದ ವಾಜಿಯ ಮಾಜುತ ಪೇಳಲು |ಸೋಜಿಗ ಮಾಡಲು ಮಂಗನೇನೆ ? ೧
ಕೊಳಲನೂದಲು ಬಳಲದೆ ಮನವಿಟ್ಟು |ಕೇಳಲು ಮರುಳ ಕುರಂಗನೇನೆ ? ೨
ಬಿಡದೆ ರಮಣಿಯನ್ನು ಎಡದಲ್ಲಿ ಬಿಡುವನು |ಮಡದಿ ಮಾರ್ಗದೊಳು ಹಂಗವೇನೆ ? ೩
ಕೈಯಲ್ಲಿ ನೆರೆಯದೆ ಮೈಯಲ್ಲಿ ತೋರದೆ |ಸುಯ್ಯಲು ಬಿಡಲು ಭುಜಂಗನೇನೆ ? ೪
ತಕ್ಕಾದ ನುಡಿಯನು ರುಕ್ಮೇಶನಾಡದೆ |ಅಕ್ಕ ಮಿಕ್ಕದ ವಿಹಂಗನೇನೆ ? ೫

 

೧೮೨
ಇನ್ನೂ ನೆಲೆಯ ನೋಡುವರೆ | ಮುನ್ನ ಮಾಡಿದ್ದಾಡುವರೇ ||
ಉನ್ನತ ಮಹಿಮ ನಿನ್ನ ನಂಬಿದವರನು ಕಾಡುವರೇ ಪ
ಎತ್ತ ನೋಡಲು ಕತ್ತಲಿ | ಒತ್ತಿ ಕವಿಯಿತು ಸುತ್ತಲಿ |
ಇತ್ತ ಬಾಯೆಂದು ಕರೆದಭಯ ಕರವ ನೀಡುತ ನೋಡುತಲಿ ೧
ರಾಸಿ ರೊಕ್ಕದಾಶೆಗಾಗಿ | ಘಾಸಿ ಆದೆ ಕಾಸಿಗಾಗಿ |
ದಾಸ ಪಾಲಕ ಲಕ್ಷ್ಮೀಶ ತಪ್ಪದಿರೋ ಭಾಷೆಗಾಗಿ ೨
ಮನ್ನಿಸೆನ್ನ ಮಾತು ಹರಿಯೇ | ಇನ್ನು ಮಾತೊಂದು ನಾನರಿಯೆ |
ಬೆನ್ನು ಬಿದ್ದವರ ಕಾಯೋ ರುಕ್ಮೇಶ ನಾರಾಯಣ ದೊರೆಯೇ ೩

 

೧೮೫
ಎಂದೆಂದಿಗೂ ಕುಂದದೆ ಸಲಹು ಎನ್ನ ಪ
ಮಂದರಧರಸುರ ನರ ಹರಿಯೇಇಂದಿರೆಯರಸರವಿಂದ ಲೋಚನಮಂದನು ನಾನೆಂದರಿಯೆ ಅ.ಪ
ಶಿರಿಗರುವದ ಭರದಿಂದ ಬರಸಿ |ಅನ್ಯರೊಳಿರಲು ಬಲು ನಾ ಚರಿಸಿ |
ಶಿರಿಕರ ಕರಿವರ ವರದನ ವಿರುದ್ಧವ |ನಿರುವರ ನೆರೆಯಲಿ ಮೆರಿಸಿ ೧
ಕರುಣಾಘನ ಕರುಣಾಲಯ ವರ್ಣ ಸು – |ಪರ್ಣಯಾನ ಯದುಕುಲ ಮಣಿಯೇ ||
ಶರಣಾಗತ ಪರಿಪಾಲಿಪನೆಂದು |ಪರಿಪರಿ ಪಾಡುತ ನಾ ದಣಿಯೆ ೨
ಬೇರಾಗಿರುವಾರರಿಗಳನಾರಿಸಿ ತರಿಸಿ |ಬಿರುಸುತನದಲಿ ಬಿಡಿಸಿ ||
ನಾರಾಯಣ ಭವ ಭಯ ಮುರಿವದುಚಿತ |ಮರೆಯದೆ ರುಕ್ಮನ ಭವ ಬಿಡಿಸಿ ೩

 

೧೮೭
ಎನ್ನನ್ನು ನೀ ಮರೆವರೆ | ಮೋಹನ್ನ ದೈವತರನ್ನ ವಿಠಲರಾಯಾ ಪ
ಚಿನ್ನದಾಸೆಗೆ ತಿರುಗುವೆ | ನಿರಂತರ ನಿನ್ನ ಚರಣಕೆರಗುವೆಮನ್ನಿಸೆನ್ನಯ ಬಿನ್ನಹವನ್ನು ದೇವಾ ೧
ಬಲ್ಲವರಿಗೆ ನಾನರಿಯೆನು ಪ್ರಭುವೆ | ನೀನಲ್ಲದನ್ಯರಿಗೆಕರೆಯೆನು | ಇಲ್ಲಿದೆಲ್ಲ ಒಲ್ಲೆನಿಸೋ ದೇವಾ ೨
ತಂದೆ ತಾಯೆಂದು ನಂಬಿದೆ ರುಕ್ಮೇಶನ ಹೊಂದಿ ಮುದದಿಂದತುಂಬಿದೆ | ಕಂದನೆಂದು ಬಂದು ಬಿಡಿಸೊ ದೇವಾ ೩

 

೧೭೭
ಕಂಡ ದೈವಕ್ಕೆ ಕಂಗೆಟ್ಟು ಕೈ ಮುಗಿದು | ದಣಿದಿಯಾತಕೋ ಪ
ದಂಡವನು ಪಿಡಿದು ಮಡದಿ ಮಾರ್ಗವ ಮೆಟ್ಟಿ |ದಂಡಕಾರಣ್ಯದಿ ಚರಿಸುತ ಮುನಿಗಳ ಬಿನ್ನಪದಿಂದ |ದಂಡಕೋಣದ ಖಂಡಿಪ | ಚಂಡಕಿರಣ ಕುಲತಿಲಕನಸೇರಿ ಬದುಕುವ ಶರಧಿ ಗರ್ವ ಪರಿಹರನಸೇರಿ ಹೋದ ದಿವಿಜರ ಬಿಡಿಸಿ ಸಿರಿಯಿತ್ತು ಸಲಹಿದಾತನ ೧
ಮರಳು ಭಾವಕೆ ಮೆಚ್ಚಿ ತಾಂ ಶಬರಿಯ ಗುಡಿಸಲನೈದು | ಕಿರುಳ ಬೋರೆ ಹಣ್ಣು ಮೆದ್ದು ಪರಮ ಕರುಣದಿ |ಸರಳಾದ ವಿಮಾನದೊಳು ಕುಳ್ಳಿರಿಸಿ ಸುರರು ಪೊಗಳಲು |ಹುರುಳಿಲ್ಲದ ಭವವನಳಿದು ಪರಮ ಪದವಿಯನಿತ್ತನ ೨
ರಕ್ಕಸರರಸನ ಮನಿಯ ಪೊಕ್ಕು ಶಿಖಿಯನಿಕ್ಕಿ |ಶಿಖರವ ಮುಕ್ಕು ಮಾಡಿ ಬಂದ ಪವನ ತನಯಗೆ ಮೆಚ್ಚಿ |ತವಕದ ಜನ ಪದವ ಕೊಟ್ಟು ಮೊರೆಹೊಕ್ಕ ವೈರಿ ತಮ್ಮಗೆ |ರುಕ್ಮನಗರ ಧಾರೆಯೆರೆದ ಶ್ರೀ ರಾಮಚಂದ್ರನ ೩

 

೧೭೩
ಕಳದೇವಲ್ಲ ಕೈಗೆ ನಿಲುಕಿದ ನಿಧಾನ |ತಿಳಿದು ಬಿಟ್ಟೆವಲ್ಲ ಸ್ವರ್ಗದ ಸೋಪಾನ ||
ಅಳಿದೆವಲ್ಲ ಆತ್ಮಲೋಕದ ವಿಮಾನ |ಸಲೆಯೆಂಬ ಸಮಯ ತುಂಬಿತಲ್ಸಮಾನಾ ಪ
ಮದ್ದು ಮೇಯಿದಂತೆ ಚಿಂತೆಗಳಿದ್ದು ಸೊರಗಿ |ಕದ್ದು ಕಳ್ಳನಂತೆ ಲೋಕದೊಳು ತಿರುಗಿಬಿದ್ದು ಬೈಸಿಕೊಂಡೆ ಧನಿಕರಲಿ ಮರುಗಿ |ಹದ್ದು ಕಾಗೆಯಂತೆ ಕೂಳ ತಿಂದು ಒರಗಿ೧
ಜನದ ಮನದ ನಾಚಿಕೆಗಳೆಲ್ಲ ಬಿಟ್ಟು |ಕನಸಿನಂಥ ವಿಷಯ ಸವಿಗೆ ಸೋಂಕಿ ಕೆಟ್ಟು |ಜನಿಸಿದವರ ಕೂಡ ಮತ್ಸರವ ತೊಟ್ಟು |ಶುನಕನಂತೆ ಬೊಗಳಿ ಬೊಗಳಿ ಗೋಳಿಟ್ಟು ೨
ಉಕ್ಕಿ ಸೊಕ್ಕಿ ಸಾಧು ಸಜ್ಜನರ ದೂರಿ |ನಕ್ಕು ನುಡಿದು ಅವರ ದೋಷಗಳ ಬೀರಿ |ಝಕ್ಕಿಸಲರಿಯಾದವರ ಮಾತುಗಳ ಮೀರಿ |ರುಕ್ಮದಾಶೆ ಹಿಡಿಯದೆ ಹೇಡಿತನವ ತೋರಿ ೩

 

೧೮೬
ಕಾಲ ಕರ್ಮ ಕಾಟಿಗಾಗಿ | ಮೇಲುಗಿರಿರಾಯ ನಿನ್ನ ||ಕಾಲಿಗೆನ್ನ ಶಿರವನಿಟ್ಟೆ | ಸಾಲ ಬೇಡುವವನಂತೆ ಪ
ದಡವ ಸೇರಿಸೆನ್ನ ದೈನ್ಯ | ನುಡುಗಿ ತಡೆಯದೆ ||ಬಡವನೆಂದುದಾಸೀನವ | ಮಾಡಿ ನೋಡದೆ ೧
ಹಲವು ದೇವಂಗಳಿಗೆ ನಾನು | ಹಲುಬಿ ಬಳಲಿದೆನಯ್ಯ ಸ್ವಾಮಿ || ಫಲವ ಗಾಣದೆನೊಂದು ಬೆಂದು | ತಿಳಿಯದಾದೆ ತಪ್ಪು ಎಂದು ೨
ಪುಂಡಲೀಕ ವರದನಾಗಿ | ಪಾಂಡುರಂಗನೆನಿಸಿಕೊಂಡು ||ಗಂಡದೈವ ವೆಂಕಟೇಶ | ಭಂಡು ಮಾಡದೆ ರುಕ್ಮನಾ ೩

 

೧೬೭
ಕೇಳಯ್ಯ ರಂಗಯ್ಯ ಪ
ತಮ್ಮವರೆಂದು ತಾಳಿ | ಸುಮ್ಮನಿರುವವರಲ್ಲ ||ಹಮ್ಮಿಲಿ ಹರಿಸಿ ಬಂದು ನಮ್ಮನೆ ದೂರುವರೋ ೧
ಮೊಸರನ್ನೆಲ್ಲ ಸುರಿದಾನೆಂದುಸುರು ಹಾಕಿದರೆ |ನಮ್ಮ ಹೆಸರಿಗೆ ಮರಗಿ ಮುಖವು ಹಸಿರಿಡುದಯ್ಯಾ ೨
ಬಾಲಕರ ಹೆಗಲನೇರಿ | ಪಾಲನೆಲ್ಲವಕಿತ್ತೆಳೆದು |ಬಾಲೇರ ಬಳಲಿಸುವದು ಬಾಲ ಬೇಕೇನೋ ೩
ಸರಿಯಿಲ್ಲದವರ ಕೂಡ | ಮರೆಯಿಲ್ಲದೆ ಮಾತಾಡಿ |ಸೆರಗ ಸೆಳೆದರೆ ನಮ್ಮ ಹಿರಿಯತನವೇನೋ ೪
ಚಿಕ್ಕತರದವರು ನಮಗೆ | ಸೊಕ್ಕಿನವನೆಂಬುವರು |ರುಕ್ಮಭೂಷಗೆ ಈ ಮಾತು ತಕ್ಕದಹುದೇನೋ ೫

 

೧೯೨
ಕೈಯಲ್ಲಿ ಕಪಾಲ ಪಿಡಿವ ರೋಷದಿ ಬಂದು ವಿಭೂತಿ ಮೈಯಲಿ ತುಂಬಿ ತಾಂಡುವರೇ | ಪ್ರೇತಗಳ ಹುಯ್ಯಲ್ಲಿ ಗೋ ಎಂದು ನಿಡಿದವರೇ ಸುಯ್ಯಲ್ಲಿ ಸೋಂಕಲಿಸದೆ ಘನದ ಯೋಗದಲಿದ್ದು ನೋಡ ಬಂದ ಕಂತುನ ನೋಡಿ ಬೂದಿ ಮಾಡುವರೇ ಪ
ಭಿಲ್ಲನಾಗಿ ಕುಲವ ಕಳೆವರೆ | ನರನ ಬಲವು ಮಲ್ಲಯುದ್ಧ ಮಾಡಿ ತಿರುವರೆ | ಬಲ್ಲಾತನಾಗಿ ಫುಲ್ಲನೇತ್ರಗೆ ರತಿ ಗೆಲುವರೆ || ಸಲ್ಲದಂಗವ ತೋರಿ ನೀ ತಿರುಕನಾಗಿ ತಿರುಗುತ ಮತ್ತೆಲ್ಲ ಮುನಿಗಳ ಸತಿಯರ ಧರ್ಮವನಳಿವರೆ ೧
ಕಣ್ಣಿಲಿ ಕಿಚ್ಚು ಗರೆವರೆ | ವರೇಣ್ಯನಾಗಿಹೆಣ್ಣಿಗೆಯ ರಂಗ ಮಾರುವರೆ ಶ-ರಣ್ಯನಾಗಿ ಸಣ್ಣವನ ಶಿರವ ತರುವರೆ |ಮಣ್ಣಿನ ಭಂಡಿಯನೇರಿ ಕಲ್ಲಿನ ಬಿಲ್ಲನೇರಿಸಿ |ಮುಪ್ಪುರಗಳ ಗೆಲಿದು ಸುಡುಗಾಡ ಸೇರುವರೆ ೨
ಬತ್ತಲೆ ಕುಣಿವುತಲಿರುವರೆ | ಸ್ರ‍ಮತಿಕತ್ತಿನಾಗಿ ಎತ್ತನೇರಿಕೊಂಡು ಮೆರೆವರೆ |ಪುಣ್ಯಾತ್ಮನಾಗಿ | ಸತ್ತನೀ ಚರ್ಮವ ಪೊರುವರೆ |ಉತ್ತಮ ರುಕ್ಮವರ್ಣದ ಜಡೆಯುಳ್ಳ ಸದಾಶಿವನ |ನಂಜಿಗಂಜದೆ ಸವಿಮಾಡಿ ಬಿಗಿಬಿಗಿ ಸುರಿವರೆ ೩

 

೧೬೫
ಚಿಕ್ಕವನೇನೆ ಮಿಕ್ಕಾದಂಥ | ಮಕ್ಕಳಿಲ್ಲೇನೆ, ನಿಮ್ಮವರೊಳು ||
ದಿಕ್ಕಿಲ್ಲವೇನೆ, ಇವಗೆ ತಕ್ಕ |ಬುದ್ಧಿಯ ಕಲಿಸುವವರಿನ್ನು ಪ
ತಂಡ ತಂಡದಿ ಬರುತಿಹ ನಮ್ಮನ |ಕಂಡು ಆಡುವ ಆಟಕಿಯ ಬಿಟ್ಟು ||
ಚೆಂಡು ಪುಟಿದು ಬಂತು ಬಚ್ಚಿಟ್ಟಿರ್ಯಾಕೆಂದು |ದುಂಡ ತೋಳಗಳೆತ್ತಿ ಭಂಡು ಮಾಡುವನಿವ ೧
ಶಿಶುವೆಂದು ಎತ್ತಪ್ಪಿಕೊಂಡು ಮುದ್ದಿಡಲು |ದಶನಗಳಿಂದಧರ ನೋಯಿಸಲು ||
ಆಶೆಯಲಸುವ ಪೀರಿದವನಿವನೆಂದಂಜಿ |ಸೊಸಿಯನ್ನಬ್ಬರಿಸಿ ಬೀದಿಯೊಳಂದು ೨
ಆರಿಲ್ಲದಾಗೊಬ್ಬವನನ್ನು ಬಾಲಕನೆಂದು |ದ್ವಾರವಿಕ್ಕಿ ನೀರೆ ಮೇಲಿರಿಸಿ ||
ಬಾರಯ್ಯ ಮುದ್ದು ಕೊಡಯ್ಯ ಎನೆ ಹದಿ- |ನಾರು ವರುಷದವನಾದ ರುಕ್ಮಭೂಷಾ ೩

 

೧೯೪
ಜಯಮಂಗಳಂ ಮಹಾ ಶುಭ ಮಂಗಲಂ |ಮಂಜುಕರ ಲಾಲಿತ ಕುರಂಗಗೆ ||ಮಂಗಲ ಮೌನಿ ಮಾನಸ ಸಂಗಗೆ |ಮಂಗಲಂ ಮಂದಿರೀಕೃತ ಶೈಲಶೃಂಗಗೆಮಂಗಲಂ ಮಲ್ಲಿಕಾರ್ಜುನ ಲಿಂಗಗೆ ಪ
ಗರುಡಧ್ವಜಪ್ರಿಯಗೆ ಗಜಕೃತ್ತಿ ವಸನಗೆ |ಗಂಗಾ ತರಂಗ ಚಾರು ಕಪರ್ದಿಗೆ ಗುಹ ಗಣಾಧಿಪ ಗುರುಗೆ | ಗೋರಾಜ ವಾಹನಗೆ |ಗಿರಿಜಾಂತರಂಗ ವಾರಿಜಭೃಂಗಗೆ ೧
ಕರ್ಪೂರ ಗೌರಗೆ ಕಲ್ಪಾಂತವೀರಗೆ | ಕಾಲಾಗ್ನಿ ಕಿಲಕಾಲಿತ ಮಾರಗೆ |ಕಾಕೋಲ ಕಂಧರಗೆ ಕಾಶೀ ವಿಹಾರಗೆ |ಕಾಕೋದರಾಭರಣ ಕಮನೀಯಗೆ ೨
ವಿಧು ಶಕಲಾಧಾರಿಗೆ ವಿಶ್ವಹಿತಕಾರಿಗೆ ವಿಯದಟನ ವಿಕಟ ಪುರ ಸಂಹಾರಿಗೆ | ವಿಮಲ ವಿದ್ಯಾನಿಧಿಗೆ |ವಿಧಿವಂದ್ಯ ರುಕ್ಮ ಪಾಡುಕ ಪಾದಗೆ ೩
ಮಂಗಲ ಮಹಿಮನು ಶೃಂಗಾರ ಮಾಧವ |ಮಂಗಳ ಕರತರಂಗನ | ಅರಿತತಿ ಭಂಗವ ಬಿಡಿಸುತಕಂಗಳ ಸದೋದಿತ ರುಕ್ಮ ೪

 

೧೭೧
ತಪ್ಪು ಮಾಡುವದು ಮನುಜ ಧರ್ಮ | ನಮ್ಮದು ಬೇಡುವದು ಕಾಡುವದು ಪ
ನಡೆ ನುಡಿಗೆ ತಪ್ಪು ನೋಡುವದು ನ್ಯಾಯವೇ ನಿನಗೆ ||ಬಡವರಾಟಗಳೆಂದು ಸಲುಹಯ್ಯ | ಮಾಡಲಬೇಡ ತಡವ |ಕಡಿದ್ಹಾಕು ಕಮಳಲೋಚನಾ | ಎನ್ನ ನಿನ್ನಡಿಗೆಸೇರಿಸು | ಕಡಲಶಯನ ಮೋಹನ್ನಾ ೧
ಮಡಹಿ ಮಲ್ಲನ ಕೆಡವಿ | ಜೋಡು ಮತ್ತಿಯ ಮರವ ತಡವಿ | ಮಧು ಮೊದಲಾದವರನ್ನು | ಅಡವಿ ಕಿಚ್ಚವ ನುಂಗಿ | ಕಡುವಿ ಮಡುವ ಧುಮುಕಿ | ಬಡವಿ ಕುಬ್ಜಿಯ ಕೈಪಿಡಿದು ಯಶವ ಪಡೆದಿ ೨
ನಡೆವವನು ಎಡವುವನೆಂದು | ಅಪರಾಧಗಳನುಬಡಿದಾಡದೆ ಒಡಲೊಳಗೆ ಹಿಡಿವ | ಮಡದಿಯನುನಿಮ್ಮ ಜಡೆಯಲಿರಿಸಿದ ಮನೆಯಲಿ ಎನ್ನ |ಸಡಗರದ ರುಕ್ಮದಿಂದಿಡಿದು ಲಾಲಿಸು ೩

 

೧೭೦
ತಮ್ಮನರಿಯದೆ ತಮ್ಮೊಳೀತೆರನಾಡುವರು |ಹಮ್ಮ ಬಿಡದೆ ಪರಬಮ್ಮನ ಜರಿಯುವರು ಪ
ಒಂಬತ್ತು ಛಿದ್ರುಳ್ಳ ಕುಂಭದ ಗಾಲಿಗೆ |ಸ್ತಂಭದಂತೆ ನಿಲಿಸಿ ಸಂಭ್ರಮ ಪಡೆವರು ೧
ಮುಂಡ ಬೋಳವ ಮಾಡಿ ಕಂಡಲ್ಲನ್ನವನುಂಡು |ದಂಡ ಧರಿಸಿ ಮನ ದಂಡಿಸದಿರುವರು ೨
ಕದಲಿಸದೆ ಕಾಯಾ ಹದನದಿಂದಲಿರಿಸಿ |ವೇದದ ಮೊದಲೆಂದು ನಾದಕೆ ಬೆರೆವರು ೩
ಓದಿ ಆಗಮಗಳನು ಭೇದಿಸಿ ತಿಳಿಯದೆ |ಮೇದಿನಿಯೊಳಗೆಲ್ಲ ವಾದಿಸಿ ಮೆರೆವರು ೪
ಪಾಷಾಂಡ ಪಥ ಪಡೆದು ವೇಷ ಪಾಲಟ ಮಾಡಿ |ದೋಷಕಂಜದೆ ರುಕ್ಮ ಭೂಷಗೆ ಮರೆವರು ೫

 

೧೮೧
ದುರಿತಭಂಜನ ನರಹರಿಯೆ |ಪರಿಪರಿಯಿಂದ ಸಲಹು ಶ್ರೀವೈಕುಂಠ ದೊರೆಯೆ ಪ
ನಿನ್ನ ದಾಸರ ದಾಸ ನಾನು |ಎನ್ನವರು ದಾಸರ ದಾಸರಲ್ಲೇನು ||ಇನ್ನು ಒದಗದೆ ಇಹುದೇನು |ಉನ್ನತವಾದ ಬಿರುದಂಗಳ್ನಿನಗಿಲ್ಲವೇನು ? ೧
ತೊತ್ತು ಮೆರಿಸಿಕೊಂಡವನಲ್ಲ |ಹೆತ್ತವರ ಭಾವಗಳನೆಲ್ಲ ಮರೆವನಲ್ಲ ||ಒತ್ತಿ ಆಪತ್ತವು ಬರಲು | ಪೊತ್ತವರಿಗೆ ಮೊರೆಯಿಡೆ ಕಡೆಗೆ ಬಿಡುವನಲ್ಲ ೨
ಬರುತಿಹುದು ಸಂಕಟವೆಂದು |ಹಿರಿಯರು ನಮ್ಮನೆಲ್ಲವನು ಮರೆದರಂದು ||ಮರೆಯದೆ ರುಕ್ಮಗಿನ್ನಿದು |ಮರೆ ಮಾಡುವ ಪೀತಾಂಬರದಿಂದ ಬಂದು ೩

 

೧೯೧
ನಂದನಂದನನೆ ನಿರಾಮಯಾನಂದ ಚಿದ್ಘನನೆ ಶೌರ್ಯ-ಮಂಡಣನೆ ಯಮ ದಮ ಶಮನನೆ…ಮದಹಾರನೆ ನಗ ಯುಗ್ಮ ಮಥನನೆ ನಗವರ ಧರನೆ ನಾಗ ಫಣಿ ವೀರ ನಟನನೆ ೧
ನೀಲ ಕಂದಲನೆ ನಿರಾಮಯ ತುಂದಿಲನೆ | ನೀ ಸೇವಿತ ಸುದಾಮನ ತಂದುಲನೆ ನಿರುಪಮ ಲೀಲನೆ ನಿರ್ಮಲ ಶೀಲನೆ ನೀಷ | ಗೀರ್ಣೂನಲ ಕೀಲನೆ ನೇಮಿತ ಕಾಲನೆ | ನೀರಜ ಮಾಲನೆ ನಿಜ ರುಚಿ ನಿಕೃತ ಮಾಲನೆ ನಿರ್ಜಿತಾಸುರನೆ ನಿವಾರಿತಾನೇಕರ ಜ್ವರನೆ ನಿಕುಂಜ ಭೂಮಂಡಲೇಶ್ವರನೆ | ನಿಃಸಂಸಾರನೆ ನಿರಹಂಕಾರನೆ ನಿರ್ಜರ ಕುಲ ಪರಿವಾರನೆ | ನಿಖಿಲಾಧಾರನೆ ನಿಗಮೋದ್ಧಾರನೆ ನಂದ ಸದಾ ರುಕ್ಮಜನೆ ೨

 

೧೮೩
ನಾಳಿಗಿಲ್ಲವೆಂದು ವ್ಯರ್ಥ ಬಳಲ ಬೇಡಿರೋ |ಕಾಲ ಬೆಳಗು ನೆಚ್ಚಿ ಕೇಡು | ತಿಳಿದು ನೋಡಿರೋ ಪ
ಅಂದಿಗಿದ್ದವರಿಗೆ ಸಾವು | ಇಂದಿಗಿದ್ದವರಿಗೆ ಸಾವು |ಇಂದಿರೇಶನ ಭಕುತರೆಂದೆಂದಿಗೆ ಸಾಯರೋ ೧
ಆರಿಗಾರು ಕೊಡುವರಲ್ಲ | ಮೋರೆ ನೋಡಿ ನಗುವರಲ್ಲ |ಹರಿಗೆ ನಂಬಿದವರೇ ಪರಮ ಧೀರ ಧೂರ್ತರೋ ೨
ಹೆತ್ತ ತಾಯಿ ಗರ್ಭದಲ್ಲಿ | ಹತ್ತು ತಿಂಗಳನ್ನಪಾನ- |ವಿತ್ತ ರುಕ್ಮಭೂಷಗೇತಕ್ಕೆ ಮರೆತಿರೋ ೩

 

೧೬೮
ನಿನ್ನ ಮಗನೇನೇ ನಂದಗೋಪರಾಣಿ |ಇನ್ನು ಇಂಥ ಚಪಲ ಚಿಕ್ಕವನ ಕಾಣೆ ಪ
ಗೊಲ್ಲರಿಗೆ ತಕ್ಕ ತನಯನಿವನಲ್ಲ |ಎಲ್ಲೆಲ್ಲಿಲ್ಲದಂಥ ನಡೆನುಡಿಯ ಬಲ್ಲ ೧
ವಾವಿಲ್ಲದವನ ಸಂಗ ಭಂಗ ಮಳೆ ನಮ್ಮ |ನಾವಿಲ್ಲಿಹುದಿನ್ನು ನಿತ್ಯಲ್ಲ ಕಾಣಮ್ಮ ೨
ಕಣ್ಣಲೆ ಎಲ್ಲರ ಮನವ ಕದ್ದು ಕದಡುವನು |ಕಣ್ಣಲಿಳ್ಳೀ ಕಟ್ಟಿಸಿ ಮೊಗವನು ಗಿರುವವನು ೩
ಮಾರನ ಸಖನಾಗಿ ಹೇಮಗ ತಿರುಗುವವನು |ದೂರ ಬಂದವರಿಗಿಲ್ಲ ದರ ದೂರಾಗಿಹನು ೪
ನಕ್ಕು ಮುದ್ದಿಸಿ ನಮ್ಮ ಸೊಕ್ಕು ತಗ್ಗಿಸುವನು |ರುಕ್ಮದಂತೆ ನಾನಾಕಾರ ಧರಿಸುವವನು ೫

 

೧೭೬
ಪರಮ ಪುರುಷನ ನೆನೆಯಿರೋ | ನರಕ ಭೀತ ಕಳ್ಳನರರೇ ನೀವು || ಶರಣಾಗತಾರ್ಥ ಪಾಲಕನೆಂಬಬಿರುದು ಇವನಿಗಲ್ಲದಿನ್ನೊಬ್ಬಗುಂಟೇ ಪ
ಹರಿಯೆಂದು ಹೃದಯದಲಿ ಸ್ಮರಿಸಿ ಕರಿರಾಜ ಕರವೆತ್ತಿಕರೆಯೆ | ಉರದಲೊರಗಿಹ ಸಿರಿಗೆ ಸರಿಸಿ | ಸಾರಂಗರಿಯ ಧರಿಸಿಗರುಡನ ಮರೆತು | ಬರಿ ಗಾಲಿಲೆ ಬರುವಾ ೧
ಮಂಗಳನು ಜರಿದು ಜಗವು ಕರುಣವಿಲ್ಲದೆ |ಕರಿಣಿಗಳುದಕದ ಹೊಲಸು ಹೇಸಿಕೆಗೆ |ಬೇಸರಗೊಳ್ಳದೆ ಬಂದವನ ಪುಷ್ಕರವೆತ್ತಿ |ಚಕ್ರದಿ ನಕ್ರನ ಮುಖ ಕಡಿವ ೨
ಮರಣಕ್ಯಾಕಂಜಿದೆಂತೆಂದು ಕರಿಯ | ಕಿರಿ ಬೆವರೊರಸಿವರಿಸಿ ಕರದಿ ಸುರರು ಕಿನ್ನರರು ಬೆರಗು ಬೀರುತಲಿರಲುವರ ಚತುರ್ಭುಜ ರುಕ್ಮ ವಸನಗಳು ಕೊಡುವ ೩

 

೧೭೪
ಪುಂಡಲೀಕವರದನೇ | ಕುಂಡಲೀಶಯನನೇ ||
ಗಂಡರಿಗೆ ಗಂಡನಾದ | ಪಾಂಡುರಂಗ ರಾಯನೇ ಪ
ಅಮ್ಮಾ ನಮ್ಮ ಒಡೆಯನೇ | ಬೊಮ್ಮಾದಿಕರ ವಂದ್ಯನೇ ||
ಹಮ್ಮಿನವರ ಹಲ್ಲು ಮುರಿದು | ಸಮ್ಮತರ ಸಲಹುವನೇ ೧
ಕಾಲಕರ್ಮ ರಹಿತನೇ | ನೀಲಮೇಘಶ್ಯಾಮನೇ ||
ಛಲನ ಮಾಡಿ ಬಲಿಯ ಗೆದ್ದ | ಚೆಲುವ ಪದ್ಮನಾಭನೇ ೨
ಅವ್ಯಯ ಸ್ವರೂಪನೇ | ಸವ್ಯಸಾಚಿ ಮಿತ್ರನೇ ||
ಹವ್ಯಕವ್ಯ ಭೋಕ್ತನಾದ | ದಿವ್ಯ ರುಕ್ಮಭೂಷನೇ ೩

 

೧೬೯
ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ ||
ಮಂದರ ಧರ ಗೋವಿಂದನು ಹರಿ ಉಪೇಂದ್ರನು ಲಕ್ಷ್ಮೀವೃಂದಾವನ ಗೋಕುಲ ಪ್ರೀಯಾ ಪ
ಹಿಂಡಾಕಳು ಹೊರ ಹೊರಡಿಸಿ ಕರೆವನು- | ಚ್ಚಂಡಾ ವೃಷಭಕಾದಸುರರು ಹಿಂಡುವ ಗಂಡಾ ಕರ್ಣದಿ | ಕುಂಡಲ ಮಂಡಿತ ಪುಂಡರೀಕಾಕ್ಷಾ ೧
ತೊಟ್ಟಲಲ್ಲೆ ತಾ ಬಟ್ಟನೆ ಚೀಪುತ | ಧಿಟ್ಟಾ ಕೃಷ್ಣನುತಟ್ಟನೆ ಚುಂಬನವ | ಕೊಟ್ಟಾ ವಿಷವನು ಕೊಟ್ಟವಳಸುವನುಧಿಟ್ಟಿಸಿದಾ ಜಗಜಟ್ಟಿಯು ಕೃಷ್ಣಾ ೨
ಬಾಲಕರನು ಹೆಗಲೇರಿಸಿ ಮೇಲಿನ | ನೆಲವಿನ ಬೆಣ್ಣೆಯಕಳವನು ಮಾಡಿ | ಶಾಲಾ ಹುಡುಗರ ಪಾಲಾ ಉಣಿಸುತಲಿವಲಕ್ಷ್ಮೀಲೋಲಾ ರಂಗಯ್ಯಾ ೩
ಫಣಿಮಣಿ ಮೇಲಿಟ್ಟನು ಮಣಿ ರುಣಿ ಝಣಿ- | ರೆನಿಸುವಮಣಿ ಸಜ್ಜನ ಮಾಕೃಷ್ಣನ ಫಣಿ ಫಣಿದಲಿ ಮೆಟ್ಟಿ |ಕುಣಿಕುಣಿದಾಡುತಲಿ ೪
ಮಂಗಲಮಹಿಮನು ಶೃಂಗಾರ ಮಾಧವ | ಮಂಗಲ ಕರತರಂಗನ | ಅರಿತತಿ ಭಂಗವ ಬಿಡಿಸುತ |ಕಂಗಳ ಸದೋದಿತ ರುಕ್ಮ ೫

 

೧೯೩
ಭಜಿಸುವರು ಭಾಗ್ಯವಂತರು | ಭಾಗವತರು ಪ
ನಿಲುಕದೆಂದು ನಿಗಮಗಳು ನೆಲೆಗಾಣದೆ ನಿಲ್ಲಲು |ಮಲಕೀನ ಮಾತುಗಳಿಂದ ಜರಿದು ಕಲಕಾದ ಕರ್ಮನೀರೆರೆದು ನಳಿನಾಕ್ಷ ವಲ್ಲಭ ನೀನೆಂದರಿತು ೧
ಅಳಿದುಳಿದೆಲ್ಲ ನೋಡುತಲಿ ತಳೆದು ಭವದ ಮೂಲವನುಕಳೆದು ಕಾಮಕ್ರೋಧಮದಗಳನು | ಬಳೆಸುತ ಮೈತ್ರಿ-ಕರುಣಾಗಳನು | ಬಳೆಸುತ ಏಳು ಧರಣಿಗಳನು ೨
ಕಡಲೊಳೊರಗುವ ತೆರೆಯಂತೆ | ಒಡಲೊಳಗೆ ರುಕ್ಮ ಕಡಗದಂತೆ ನೆಮ್ಮದೆ ಚಣಿಸಿ | ಪಡದ ರೂಪವನುಜಡವೆಂದೆನಿಸಿ ಕಡಿಗಾಗದಿರೆಂದು ಜಗವನೆನಿಸಿ ೩

 

೧೯೫
ಮಂಗಳಂ ಜಯ ಮಂಗಳಂ ಜಯರುಕ್ಮ ಕಿರೀಟಿಗೆ ಮಂಗಳಂ ಪ
ಮುರಹರ ರಾಣಿಗೆ | ಸುಖಕರ ವಾಣಿಗೆ |ಮುಖರಿತ ವೇಣಿಗೆ ಮಂಗಳಂ ೧
ಕಿಸಲಯ ಪಾಣಿಗೆ | ರಸಲಯ ಜಾಣೆಗೆ |ಬಿಸರುಹ ಬಾಣಿಗೆ ಮಂಗಳಂ ೨
ಮಂದರ ಸದನಿಗೆ | ಕುಂದರ ರದನಿಗೆ |ಚಂದಿರ ವದನಿಗೆ ಮಂಗಳಂ ೩
ಸುರದರಶ ಮುನಿಗೆ | ಹರಗಿರ ಮುನಿಗೆ |ಕರಿವರ ಗಮನಿಗೆ ಮಂಗಳಂ೪
ಕೃತಮತಿವಶಳಿಗೆ | ಶ್ರುತಿನುತಿ ಯಶಳಿಗೆ |ದ್ಯುತಿ ತತಿ ದಿಶಗಳಿಗೆ ಮಂಗಳಂ ೫

 

೧೭೮
ಮದನನಯ್ಯಾ ಮೋಹನ್ನರಾಯಾ ನೀ ಬಾರೋ |ಹದನದಿಂದ ಹೇಳಿದಳು ಮದಗಜಗಾಮಿನಿ ಪ
ಕಾಣದೆ ನಿಲ್ಲಲಾರಳು | ಕನಸನಾದರೂ ಕಾಣಳು |ಗಾಢ ನಿದ್ರೆಯನರಿಯಳು | ಬೆಳಗಾದರೂ ಮರೆಯಳು ೧
ನಿನ್ನ ಮೊನ್ನ ಬರದೆ ಹೋಗಿ | ಭಿನ್ನನುಸರದೆ ಬೆರಗಿ |ಸೊನ್ನೆಗಳ ಮಿತವೆಂದು | ಎನ್ನ ಕೂಡನಾಡಿದಳು ೨
ಆವ ಮೋಹದ ಮಡದಿ | ನಿನ್ನಗಲಿಸಿದ್ದಾಳು |ರುಕ್ಮಭೂಷಾ ಆವಳಾಣಿಗಳ | ನಿನಗೆ ಹಾಕಿ ಹಿಡಿದಾಳು ೩

 

೧೭೨
ಮುಂದೆ ಗಾಣದೆ ದಾರಿ ಮುದಿಗೆ ಬಿದ್ದು | ಹಿಂದು ನೋಡದೆಬಂದದ್ದು ಬರಲೆಂದು ತಾಳದೊ ಕಂದಗಳ ಪ್ಯಾಡುತಲಿದಿನ ಸುಖವೆಂದೆಂದಿಗೂ ಬೇಕೆಂದು ಬೆಂದ ಭವದಂದದಿಗೆ ನಾ ಕುಂದದೆ ನೊಂದೆ ನಿನಗೆ ವಂದಿಸದೆ ೧
ದೇವ ಕಾಯಯ್ಯ ಆವ ದೈವಕ ಬಾಹದೆ | ದಯಾಭಾವಿಸಲ್ಯಾಕ ಭಾವಜಾನಯ್ಯ | ಕಾಮನ ಕಾಟಿಗೆ ಕಂಗೆಡಿಸುವದುರ್ಭಾವಗಳನು ಪರಿಹರಿಸೈ | ಹಾವಿನ ಹಗಿಹಗಳಲಿವಿಹರಿಸುತಿಹ ಜೀವದ ಜೀವನದೊಡೆಯ ೨
ಮೀರಿ ಬಂದದು ಮೋರಿ ದೋರದೆ ವಾರಿ ಆಟಾದು ಧರೆಗೆ ಮಾತು ಸರಿಗೆ ಬಾರದು ಕರಿಹರಿಯನಳಾಪರಿ |ಬರಿ ಗಾಳಿಲಿ ಬರಹೇಳಿದರಂದಾರು ಶಿರಿವರ ರುಕ್ಮನ ಕರ ವಿಡಿದಿಂದುದ್ಫಸದಿಹದು ಬಾಹಳರದು ೩

 

೧೭೯
ರಂಗ ನಿನ್ನ ಸಂಗ ಸೌಖ್ಯಕಾಗಿ ಕುರಂಗ ಲೋಚನೆಯು ತಾನುಭಂಗ ಬಡುವಳಂತರಂಗದಲ್ಲಿ ನಿನ್ನ ಅಂಗ ತಂದು ತೋರೈ ಪ
ಮಸೆದ ಅಂಬುಗಳ ಮಿಸುನಿ ಬಣ್ಣದ ಮಲ್ಲಿಗಿಎಸೆವನು ಮನಸಿಜನು | ಕುಸುಮ ಗಂಧಿಯು ತಾನುಹಸುಮಗಳಲ್ಲವೆ ಪೊಸತಾಪ ಕಾಯಲಿಲ್ಲವೆ ೧
ಕನ್ನೈದಿಲೆ ಸೌವಿಸು ಕಣ್ಣುಗಳಿಂದ ನಿನ್ನರ್ಚಿಸುವೆ ತವಕದಿ |ತನ್ನಾದ ಬೊಂಬೆ ತಾ ಎನ್ನ ನಿಮ್ಮ ಬಳಿಯಲಿಮನ್ನಿಸಿ ಕಳುಹಿದಳೈ ೨
ಮುನಿದಗಲಿರುವದು ಮುನಿಜನ ವಂದ್ಯಗೆ ಮುನಿಗಳೊಪ್ಪರೀ ಮಾತನು ಕನಸಿನೊಳವಳ ಕೂಡ ಅನುಭವಿಸುವಾತಂಗೆಜನದ ನಾಚಿಕೆ ಯಾತಕೈ ೩
ಅಂಚಗಮನಿ ತಾ ಮಿಂಚು ಮಂಚವ ಕಂಡುಸಂಚಿತವನು ನೆನೆವಳ ವಂಚನೆಯ ಬಿಟ್ಟುಮುಚ್ಚಾವಳ ಕೂಡೈ ನೀ ಕೆಂಚಿಯರಸರೊಲ್ಹದು ೪
ಇಂದು ಮುಖಿಯು ತಾ ಕುಂದಿ | ಕುಂದದಳರವಿಂದ ಸರಳ ತಾಪದಿ | ಮಂದರ ಧರನೀಗ ಬಂದು ಸಂಮಿಸುವದು ರುಕ್ಮಕಂದನ ಸೊಲ್ಲಿಗೆ ೫

 

೧೯೦
ವಸ್ತು ತಾ ಬೇರೆ ಅದೆ | ನಿಜವಸ್ತು ಅರಿತವ ಬಲ್ಲಾ ಪ
ನೀರಲಿ ಮುಳುಗಿ ನೇಮ ಮಾಡುವದಲ್ಲ |ಕೈ ಮುಚ್ಚಿ ಮಣಿ ಎಣಿಸುವದಲ್ಲ ||
ಹೊನ್ನು ಹೆಣ್ಣಿಗೆ ಮೆಚ್ಚಿ ಬಣ್ಣದ ಮಾತಾಡಿ |ಚೆನ್ನಿಗ ತನದಿಂದ ತಿರುಗುವದಲ್ಲ ೧
ಮಾನ ಮನ್ನಣೆಗಾಗಿ ಜ್ಞಾನದ ಮಾತುಗಳಾಡಿ |ಧ್ಯಾನ ಮೌನವನು ತೋರುವರು |
ಮನ್ನಣೆಯಾಗದಿರೆ ಛಾನಸತನದಿಂದ ಜನರ ದೂರುವರಲ್ಲ ೨
ಮನವ ಸ್ವಸ್ಥವ ಮಾಡದೆಅನೇಕ ವ್ಯಥೆ ಕೂಡಿ ಕನಕದಾಶೆಗಾಗಿ ಕೆಡಬೇಡ |
ಬಲ್ಲ ರಾಯರ ಪ್ರಭು ರುಕ್ಮಭೂಷಣ ಕೂಡಿಕ್ಷುಲ್ಲಕ ತನವ ಬಿಟ್ಟು ಸುಖಿಸಿರಯ್ಯ ೩

 

೧೮೮
ವೇಳೆಗೊದಗಯ್ಯ | ವೇಳೆ ಬಂದು ಒದಗಿದೆ | ಪರಿಹರಿಸೊ ನೀ ಪ
ಬಳಗುಳ್ಳಿಭಕುತರು ಬಳಲು ತಿರುವದ ಕಂಡು |ಕಳವಳಿಕೆಯಿಲ್ಲದೆ ಕಳೆವರೆ ಕಾಲವ ೧
ಮಳಲು ಹಸಿಯನಗಲಿದಂತೆ ದಾಸರಿಗತಿಶಯವ |ದಣಿಸಿದರೆ ಬಳಿಕಾರುಳಿಸುವರೊ ? ೨
ಹಲವ ಹೆತ್ತ ತಾಯಿ ಮೊಲೆ ಹಾಲನುಣಿಸದೆ |ನೆಲೆಯ ದೋರಿ ನಿನ್ನಲಿ ನಿಲಿಸಯ್ಯ ರುಕ್ಮನ ೩

 

೧೭೫
ಸಕಲ ದಿವಿಜಾರಾಧ್ಯ ಚರಣ ಪ
ಕಂದರ್ಪ ಕೋಟಿ ಮೋಹನ್ನ ಕಾಯಾ | ಕಂಸ ಚಾಣೂರ ಮರ್ದನಕಾಲಿಯ ವಿಷಕಲಿಲ ಸಲಿಲಯಾನಕಲಪ್ರಾಣ ಗೋಗೋಪ ಜೀವನಾ | ಈಯ್ಯಾ ಈಯ್ಯಾ || ಗೋಕುಲದಿ ಗೋಪಿಯರ ಮನೆಗಳಲಿ ಗೋರಸ ಚೌರ್ಯ ಸಂಪನ್ನಾ |ಮಧುರ ಮುರಲಿ ನಿನಾದದಿಂದ ಮೋಹಿಪ್ಪ ||ಮೌನಿಗಳ ಮಾನಸಗಳಲ್ಲಿ | ಸಸ ಸಾನಿಸಾನಿ ನಿಸನಿ |ನಿಸನಿ ಸಾಸನಿನಿ ಸರಿಗರಿ ಮಗಗರಿಸ ನಿಧನಿಧ ನಿಧಪಮ ||
ಧಿಕ್ಕತಾ ಧಿಕ್ಕತಾ ಧಿಮಿ ಧಿಮಿಕಿತಾ ಧಿಮಿಕಿತಾ ಗಿಕಿಟ ತೋಂ |ಗಿಕಿಟ ತೋಂ ಗಿದಿಗದಿಗ ಥೈಯಾ ಥೈಯಾ ||
ಈ ಪರಿ ನಂದನಂಗಳದಲ್ಲಿ ಕುಣಿಕುಣಿದಾಡುವ ಶ್ರೀವಿಠ್ಠಲನಪಾದಾಂಬುಜದ ಭಜನದಿಂದೆ ತರಿಸುವೆನೆಂದು ಪಾಡುವೆನುಗೀತ ಪ್ರಬಂಧ ಬರೆಹಗಾರ ರುಕ್ಮಾಂಗದನು ||

 

೧೬೬
ಹರಿ ಗೋರಸ ಕುಡಿವುದು ನೋಡಿರೋ |ಪರಿ ಪರಿಯ ಸಂಭ್ರಮ ಮಾಡಿರೋ ಪ
ಕಾರಣ ಒರಳಲಿ ವೃತ್ತಿಗುಣದಿ ತಾ |ಇದ್ದು ಯಶೋದೆಯು ಕಟ್ಟಿರಿಸಿ ||
ಸ್ತನವನುಣಿಸುತಿರಲು ನಿಜಕರ್ಮದ |ಬಲದಿ ಬಿಡಿಸಿಕೊಂಡಾಡುತಲಿ ೧
ನಾ ನಾ ಎನುತಾಡುವಾ ಗೋಪಾಲರ |ನೆರೆಸುವರಂತೆ ಕುಣಿವುತಲಿ ||
ನಾನಾ ದ್ವಾರಗಳಿಂದ ಧುಮುಕಿ |ಮುಚ್ಚಿದ ಮಡಿಕೆಗಳ ನೋಡುತಲಿ ೨
ರಾಗ ಪೀಠದಲಿ ಮೋಹದ ಹೆಗಲಲಿ |ನಿಲ್ಲಲು ನೆಲವು ನಿಲುಕುತಿರಲು ||
ಯೋಗ ರುಕ್ಮ ಘಟಿಯನಾ ಛೇದಿಸಿ |ವಿರತಿ ಗೊಲ್ಲತಿಗತಿ ಕಾಡುತಲಿ ೩

 

೧೮೯
ಹರಿಯೇ ಸರ್ವಸಾರವೆಂದು ಸಾರುವರು |ತೆರೆದು ಹೇಳಿ ತತ್ತ್ವವನು ತಾರಿಸುವರು ಪ
ಮೊರೆ ಹೊಕ್ಕವರ ಮನದ ಮಲಕು ಬಿಡಿಸುವರು |ಹರಿದು ಹೋಗುವವಗೆ ಕರೆದು ಕಡೆಗ್ಹಾಕುವರು೧
ಧರೆಯೊಳವರೇ ಸಾಧು ಪುರುಷರೆನಿಸುವರು |ಸಿರಿಗೆ ಸೆರಗೊಡ್ಡಿ ಸಿರಬಾಗಿ ನಡಿಯದವರು ೨
ಬರಿಯ ತರ್ಕದಿಂದ ಖಂಡಿಸದವರು |ಸರಿಗೆ ಬಂದರೆ ಸುಮ್ಮನೆ ಸಹಿಸುವರು ೩
ಕಾಯ ಕದ್ದು ಕರ್ಮಪಾಶ ಕಳೆದವರು |ರಾಯ ರಂಕರಿಗೆ ಸರಿ ತಿಳಿದವರು ೪
ಮಾಯದ ಮೂಲವಾದ ಭೇದವಳಿದವರು |ಲಯದ ಮನೆಯ ಮೆಟ್ಟಿ ಭಯ ಮೀರಿದವರು ೫
ಅರಿತು ಅರಿಯದವರಂತೆ ತೋರುತಿಹರು |ಮರೆತು ಮರವಿಗೆ ತಾವೆ ಮರವಾಗಿಹರು೬
ಗುರು ರುಕ್ಮಭೂಷಣನಂತ ತೋರಿಸುವರು |ತ್ವರಿತದಿ ತಮ್ಮ ನೆಲೆಯ ಕೊಡದವರು ೭

 

೧೮೪
ಹವಣಿಕಿಲಿ ನೀ ಮಾಡು ಸುವಿಚಾರ ಸಾಧನ ಪ
ಮಾಡಿ ನಿನ್ನ ಕಡಿ ಮೋಹ ಬೇಡಿ ಘನ ಗೂಡನ ನಳಿವಗುಡಿ ಸರ್ಕನೆ ||ಪರಿಪರಿಯ ಜನ್ಮಗಳನು ಧರಿಸಿ ಬಟ್ಟೆ ಬಹುಕ್ಲೇಶವನುಪರಸಿ ಕುವರನ ಕರುಣಾ……….ನಿನ್ನ ನೀನರಿತುಕೋ ………………………………………………………………………..ಶ್ವೇತಾ ವಿಮೋರ್ಛಿತಕಿನ್ನುನಿದ್ರಿತ ಕಿಮರ ಮಾತಾಭೂಮಿ ನೀ ಪತಿತ |ರುಕ್ಮವಿಭೂಷಣ ರಹಿತ ಶಾಂತಾ ದಾಂತವಿವಸ್ವಾಂತಬೌದ್ಧೇಯ ಮುನಿಕಾಂತ ||

 

ನಾಳೆಗಿಲ್ಲವೆಂದು ವ್ಯರ್ಥ
೧೮೩
ನಾಳಿಗಿಲ್ಲವೆಂದು ವ್ಯರ್ಥ ಬಳಲ ಬೇಡಿರೋ |ಕಾಲ ಬೆಳಗು ನೆಚ್ಚಿ ಕೇಡು | ತಿಳಿದು ನೋಡಿರೋ ಪ
ಅಂದಿಗಿದ್ದವರಿಗೆ ಸಾವು | ಇಂದಿಗಿದ್ದವರಿಗೆ ಸಾವು |ಇಂದಿರೇಶನ ಭಕುತರೆಂದೆಂದಿಗೆ ಸಾಯರೋ ೧
ಆರಿಗಾರು ಕೊಡುವರಲ್ಲ | ಮೋರೆ ನೋಡಿ ನಗುವರಲ್ಲ |ಹರಿಗೆ ನಂಬಿದವರೇ ಪರಮ ಧೀರ ಧೂರ್ತರೋ ೨
ಹೆತ್ತ ತಾಯಿ ಗರ್ಭದಲ್ಲಿ | ಹತ್ತು ತಿಂಗಳನ್ನಪಾನ- |ವಿತ್ತ ರುಕ್ಮಭೂಷಗೇತಕ್ಕೆ ಮರೆತಿರೋ ೩

 

ಹಾಡಿನ ಹೆಸರು :ನಾಳೆಗಿಲ್ಲವೆಂದು ವ್ಯರ್ಥ
ಹಾಡಿದವರ ಹೆಸರು :ಸಹನಾ ರಾಮಚಂದ್ರ, ಮಾನಸಿ ಪ್ರಸಾದ್
ರಾಗ :ಅಭೇರಿ
ತಾಳ :ತ್ರಿಶ್ರ್ರನಡೆ ಏಕ ತಾಳ
ಸಂಗೀತ ನಿರ್ದೇಶಕರು :ಕೃಷ್ಣಮೂರ್ತಿ ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಪುಂಡಲೀಕವರದನೇ
೧೭೪
ಪುಂಡಲೀಕವರದನೇ | ಕುಂಡಲೀಶಯನನೇ ||ಗಂಡರಿಗೆ ಗಂಡನಾದ | ಪಾಂಡುರಂಗ ರಾಯನೇ ಪ
ಅಮ್ಮಾ ನಮ್ಮ ಒಡೆಯನೇ | ಬೊಮ್ಮಾದಿಕರ ವಂದ್ಯನೇ ||ಹಮ್ಮಿನವರ ಹಲ್ಲು ಮುರಿದು | ಸಮ್ಮತರ ಸಲಹುವನೇ ೧
ಕಾಲಕರ್ಮ ರಹಿತನೇ | ನೀಲಮೇಘಶ್ಯಾಮನೇ ||ಛಲನ ಮಾಡಿ ಬಲಿಯ ಗೆದ್ದ | ಚೆಲುವ ಪದ್ಮನಾಭನೇ ೨
ಅವ್ಯಯ ಸ್ವರೂಪನೇ | ಸವ್ಯಸಾಚಿ ಮಿತ್ರನೇ ||ಹವ್ಯಕವ್ಯ ಭೋಕ್ತನಾದ | ದಿವ್ಯ ರುಕ್ಮಭೂಷನೇ ೩

 

ಹಾಡಿನ ಹೆಸರು :ಪುಂಡಲೀಕವರದನೇ
ಹಾಡಿದವರ ಹೆಸರು :ಸಹನಾ ರಾಮಚಂದ್ರ, ಮಾನಸಿ ಪ್ರಸಾದ್
ರಾಗ : ಸಿಂಧುಭೈರವಿ
ತಾಳ :ತ್ರಿಶ್ರ್ರನಡೆ ಏಕ ತಾಳ
ಸಂಗೀತ ನಿರ್ದೇಶಕರು :ಕೃಷ್ಣಮೂರ್ತಿ ಎಸ್.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬಂದ ನೋಡಮ್ಮ ಗೋಪಿಯ ಕಂದ
೧೬೯
ಬಂದ ನೋಡಮ್ಮ ಗೋಪಿಯ ಕಂದ ಬಂದ ನೋಡಮ್ಮ ||ಮಂದರ ಧರ ಗೋವಿಂದನು ಹರಿ ಉಪೇಂದ್ರನು ಲಕ್ಷ್ಮೀವೃಂದಾವನ ಗೋಕುಲ ಪ್ರೀಯಾ ಪ
ಹಿಂಡಾಕಳು ಹೊರ ಹೊರಡಿಸಿ ಕರೆವನು- | ಚ್ಚಂಡಾ ವೃಷಭಕಾದಸುರರು ಹಿಂಡುವ ಗಂಡಾ ಕರ್ಣದಿ | ಕುಂಡಲ ಮಂಡಿತ ಪುಂಡರೀಕಾಕ್ಷಾ ೧
ತೊಟ್ಟಲಲ್ಲೆ ತಾ ಬಟ್ಟನೆ ಚೀಪುತ | ಧಿಟ್ಟಾ ಕೃಷ್ಣನುತಟ್ಟನೆ ಚುಂಬನವ | ಕೊಟ್ಟಾ ವಿಷವನು ಕೊಟ್ಟವಳಸುವನುಧಿಟ್ಟಿಸಿದಾ ಜಗಜಟ್ಟಿಯು ಕೃಷ್ಣಾ ೨
ಬಾಲಕರನು ಹೆಗಲೇರಿಸಿ ಮೇಲಿನ | ನೆಲವಿನ ಬೆಣ್ಣೆಯಕಳವನು ಮಾಡಿ | ಶಾಲಾ ಹುಡುಗರ ಪಾಲಾ ಉಣಿಸುತಲಿವಲಕ್ಷ್ಮೀಲೋಲಾ ರಂಗಯ್ಯಾ ೩
ಫಣಿಮಣಿ ಮೇಲಿಟ್ಟನು ಮಣಿ ರುಣಿ ಝಣಿ- | ರೆನಿಸುವಮಣಿ ಸಜ್ಜನ ಮಾಕೃಷ್ಣನ ಫಣಿ ಫಣಿದಲಿ ಮೆಟ್ಟಿ |ಕುಣಿಕುಣಿದಾಡುತಲಿ ೪
ಮಂಗಲಮಹಿಮನು ಶೃಂಗಾರ ಮಾಧವ | ಮಂಗಲ ಕರತರಂಗನ | ಅರಿತತಿ ಭಂಗವ ಬಿಡಿಸುತ |ಕಂಗಳ ಸದೋದಿತ ರುಕ್ಮ ೫

 

ಹಾಡಿನ ಹೆಸರು :ಬಂದ ನೋಡಮ್ಮ ಗೋಪಿಯ ಕಂದ
ಹಾಡಿದವರ ಹೆಸರು :ಭರತ್ ಬಿ. ಜೆ.
ಸಂಗೀತ ನಿರ್ದೇಶಕರು :ಪರಮೇಶ್ವರ ಹೆಗಡೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ವಸ್ತು ತಾ ಬೇರೆ ಅದೆ
೧೯೦
ವಸ್ತು ತಾ ಬೇರೆ ಅದೆ | ನಿಜವಸ್ತು ಅರಿತವ ಬಲ್ಲಾ ಪ
ನೀರಲಿ ಮುಳುಗಿ ನೇಮ ಮಾಡುವದಲ್ಲ |ಕೈ ಮುಚ್ಚಿ ಮಣಿ ಎಣಿಸುವದಲ್ಲ ||
ಹೊನ್ನು ಹೆಣ್ಣಿಗೆ ಮೆಚ್ಚಿ ಬಣ್ಣದ ಮಾತಾಡಿ |ಚೆನ್ನಿಗ ತನದಿಂದ ತಿರುಗುವದಲ್ಲ ೧
ಮಾನ ಮನ್ನಣೆಗಾಗಿ ಜ್ಞಾನದ ಮಾತುಗಳಾಡಿ |ಧ್ಯಾನ ಮೌನವನು ತೋರುವರು |
ಮನ್ನಣೆಯಾಗದಿರೆ ಛಾನಸತನದಿಂದ ಜನರ ದೂರುವರಲ್ಲ ೨
ಮನವ ಸ್ವಸ್ಥವ ಮಾಡದೆಅನೇಕ ವ್ಯಥೆ ಕೂಡಿ ಕನಕದಾಶೆಗಾಗಿ ಕೆಡಬೇಡ |
ಬಲ್ಲ ರಾಯರ ಪ್ರಭು ರುಕ್ಮಭೂಷಣ ಕೂಡಿಕ್ಷುಲ್ಲಕ ತನವ ಬಿಟ್ಟು ಸುಖಿಸಿರಯ್ಯ ೩

 

ಹಾಡಿನ ಹೆಸರು :ವಸ್ತು ತಾ ಬೇರೆ ಅದೆ
ಹಾಡಿದವರ ಹೆಸರು :ರಮೇಶ್‍ಚಂದ್ರ
ರಾಗ :ಪರಮೇಶ್ವರಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಬಿ. ವಿ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ