Categories
ರಚನೆಗಳು

ವರದೇಶವಿಠಲ

ಶ್ರೀ ಗುರುವರದೇಂದ್ರರ ಸ್ತೋತ್ರಗಳು
೨೧
ಅಂದಣೇರಿದ ವರದೇಂದ್ರ ಮುನಿಪರ
ನಿಂದು ಪಾಡುವರಫವೃಂದ ತರಿವರ ಪ
ಅಂದದಿ ಭೂಸುರ ಸಂದಣಿ ಮಧ್ಯದಿ
ಚಂದದಿ ಬಹು ಕರ್ಮಂದಿಗಳರಸ ಅ.ಪ
ಶ್ರೀ ಮಧ್ವಮತಾಂಬುಧಿ ಸೋಮ ನಿಷ್ಕಾಮ
ತಾಮಸಮತಕಜಸ್ತೋಮ ನಿಧೂಮ
ಆ ಮಹಾಭಕ್ತ ಕುಮುದ ಪ್ರೇಮ ಸತ್ಕಾಮ
ಕಾಮಿತ ಕಲ್ಪದ್ರುಮಗುರುಸಾರ್ವಭೌಮ
ರಾಮ ಪದಾಂಬುಜ ಪ್ರೇಮದಿ ಭಜಿಸುವ
ಭೂಮಿಸುರರ ಹೃತ್ತಾಮಸಹಾರಾ ೧
ಉದಿತಾಕರ್ಕಾಶ ವಿಧಿಕುಲಾಧೀಶ
ಮುದದಿ ಭಜಿಸುವ ಭಕ್ತಹೃದಯನಿವಾಸ
ಸದಮಲಭಕ್ತಜ್ಞಾನ ಉದಜವಿಕಾಸ
ವಿಧಿಕುಲದ್ವೇಷಿ ಕುಮುದ ತತಿನಾಶ
ವಿಧವಿಧದಲಿ ಹರಿಪದ ಭಜಿಸುವ ಮತಿ
ವದಗಿ ಪಾಲಿಸು ಹೃದಜನಸದಯಾ ೨
ಕರುಣಾನಿಧಿಯೆ ನಿನ್ನ ಚರಣ ಸೇವಕರ
ಜರಮರಣಾದಿ ದೋಷತ್ವರಿತ ಪರಿಹಾರ
ಮರುತಮತದ ತತ್ವ ಶರಧಿ ವಿಹಾರ
ನಿರುತದಿ ಹರಿಯನಾಮ ಸ್ಮರಿಸುವಧೀರ
ವರದೇಶ ವಿಠಲನ ಕರುಣದಿ ಧರೆಯೊಳು
ಮೆರೆಯುವ ಯತಿಕುಲವರಿಯ ಸುಚರಿಯಾ ೩

 

ಶ್ರೀ ಪ್ರಾಣದೇವರ ಸ್ತೋತ್ರಗಳು
೧೪
ಆನಮಿಸುವೆ ನಿನಗೆ ಶ್ರೀ ಪವಮಾನ ಪಾಲಿಸೆನಗೆ
ಜ್ಞಾನ ಪೂರ್ವಕದಿ ಶ್ರೀನಿವಾಸನಗುಣ
ಗಾನ ಮಾಡುವಮತಿ
ಸಾನುರಾಗದಿ ಕೊಡು ಪ
ಶರಧಿಯ ಲಂಘಿಸಿಧರಿಜೆ ದೇವಿಪದ –
ಕ್ಕೆರಗಿ ಮುದ್ರಿಕೆ ಕೊಟ್ಟಹರುಷದಿ ಹನುಮನೆ ೧
ಹೇಮನಗರ ದಹಿಸಿ
ಸತ್ವರ ರಾಮ ಪದಕೆ ನಮಿಸಿ
ಪ್ರೇಮದಿ ಜಾನಕಿ ಕ್ಷೇಮವ ತಿಳುಹಿಸಿ
ತಾಮರಸಜಪದ ನೇಮದಿ ಐದಿದ ೨
ಕುಂತಿಗರ್ಭದಿ ಜನಿಸಿ
ರುಕ್ಮಿಣಿಕಾಂತನಣುಗನೆನಿಸಿ
ಅಂತಕಾತ್ಮಜನ ಸಂತತ ಸಲಹಿದೆ
ಹಂತಧಾರ್ತೃರಾಷ್ಟ್ರಾಂತಕ ಭೀಮನೆ ೩
ದೇಶಿಕಪತಿಯನಿಸಿ
ಬದರಿನಿವಾಸನ ಪದ ಭಜಿಸೆ
ವಾಸುದೇವಸರ್ವೇಶನೆಂದರುಹಿದೆ
ದೂಷಿತ ಮತ ತಮ ನೇಸರಮಧ್ವನೆ ೪
ಕಾಮಕ್ರೋಧದಿ ಬೆಂದೆ
ನಾ ಬಲು ತಾಮಸದಲಿ ನೊಂದೆ
ಶ್ರೀ ಮನೋಹರ ವರದೇಶ ವಿಠಲನ
ನಾಮ ಬರೆದೆ ಕುಪ್ಪೀ ಭೀಮನೆ ಪಾಲಿಸು ೫

 

ಸುಶೀಲೇಂದ್ರರ ಸ್ತೋತ್ರ
೨೨
ಇಂದು ನೋಡಿದೆ, ಸುಶಿಲೇಂದ್ರ ಗುರುಗಳ
ಕುಂದಣದ ಶಿಖರ ಮೌಕ್ತಿಕದಿಂದ ವಿರಾಜಿಸುವ
ರಜತ ಅಂದಣವನೇರಿ ಸಂಭ್ರಮದಿಂದ
ಮೆರೆದು ಬರುವ ಗುರುಗಳ ಪ
ಧ್ವಜ ಪತಾಕೆಶ್ವೇತ ಛತ್ರ
ರಜತವರ್ಣ ಚವರ ಚಾಮರ
ಭಜಿಪ ಭಟರ ಸಂದಣಿಮಧ್ಯ
ರಜನಿ ಪತಿಯ ತೆರದಿ ಶೊಭಿಪರಿಂದು ೧
ಭೇರಿ ಕಹಳೆ ವಾದ್ಯನೇಕ
ಚಾರುತರ ಶೃಂಗಾರವಾದ
ವಾರಣಗಳು ಎಡಬಲದಲಿ
ಸಾರಿಬರುವ ಸಂಭ್ರಮವನು ೨
ಎಲ್ಲಿನೋಡೆ ಪಾಠಪ್ರವಚ –
ನೆಲ್ಲಿ ನೋಡೆ ವೇದಶಾಸ್ತ್ರ
ಎಲ್ಲಿ ನೋಡಲಲ್ಲಿ ಲಕುಮಿ
ನಲ್ಲನ ಸತ್ಕಥಾಲಾಪವಿಂದುನೋಡಿದೆ ೩
ಆ ಮಹಾಸುಶೋಭಿತಮಾದ
ಹೇಮಮಂಟಪ ಮಧ್ಯಮೂಲ
ರಾಮನಾರ್ಚನೆಗೃವ ವೃಂದ
ಪ್ರೇಮದಿ ನೋಡಿ ಧನ್ಯನಾದೆ ೪
ಈ ಮಹಾಗುರುವರ್ಯರ ಪದ
ತಾಮರ¸ವ ಪೊಂದಿದ ಭಕ್ತರ
ನೇಮದಿಂ ವರದೇಶ ವಿಠಲ
ಕಾಮಿತಾರ್ಥಗರೆವ ಸತ್ಯ ೫

 


ಏಸೇಸು ಕಲ್ಪ್ಪಕ್ಕು ಈಶನು ನೀನಯ್ಯಾ
ಆಸಾಸು ಕಲ್ಪಕ್ಕು ದಾಸನು ಇವನಯ್ಯಾ
ಉದಾಸೀನ ಮಾಡದೆ ಪೋಷಿಸಬೇಕಯ್ಯ
ವಾಸನ ನೀ ಮಾಡಿ ವಾಸನ ಮಯರೂಪ
ಸೋಸಿಲಿ ತೋರಿಸಿ ದಾಸನ ಮಾಡಿಕೊ
ಆಸೆ ಬಿಡಿಸಿ ವಿಶೇಷ ಭಕುತಿ ಜ್ಞಾನ
ಲೇಸಾಗಿ ನೀನಿತ್ತು ಶ್ರೀಶಗುರು ಜಗನ್ನಾಥ ವಿಠಲ ವರ-
ದೇಶ ವಿಠಲನೆನಿಸಿದಾಸನ ಪರಿ ಪರಿ ದೇಶದಲ್ಲಿ ಮೆರಿಸಿ
ಆಶೆಯ ಪೂರ್ತಿಸು ವಾಸವನನುಜಾ

 

ಶ್ರೀ ಮಹಾದೇವರ ಸ್ತೋತ್ರ
೧೯
ಗಿರಿಜಾಪತಿ ತವ ಚರಣಕೆ ಎರಗುವೆ
ಕರುಣದಿಂದೆನ್ನನು ಪೊರೆ ಮಹಾದೇವ ಪ
ನಂದಿವಾಹನ ಸುರವೃಂದ ಸುಪೂಜಿತ
ಇಂದ್ರವಿನುತ ಭಕ್ತಾನಂದದಾಯಕನೇ ೧
ರುಂಡ ಮಾಲಾಧರ ಶುಂಡಾಲ ಮದಹರ
ಚಂಡವಿಕ್ರಮ ಮೃಕಂಡಜ ವರದ ೨
ಭೂಜಗ ವಿಭೂಷ ವಿಜಯ ಸುಪೋಷ
ಅಜಿನಾಂಬರಧರ ತ್ರಿಜಗವಂದಿತನೆ ೩
ಗರಕಂಧರ ಹರ ಸುರಗಂಗಾಧರ
ಸ್ಮರಸಂಹರ ನಿಜ ಶರಣರಪಾಲ ೪
ವರದೇಶ ವಿಠಲನನಿರುತದಿ ಸ್ಮರಿಸುವ
ಕರುಣಾಕರಭವಹರ ಶಂಕರ ಶಿವ ೫

 

ಶ್ರೀಗುರುಪ್ರಾಣೇಶದಾಸರಾಯರ ಸ್ತೋತ್ರ
೩೦
ಗುರು ಪ್ರಾಣೇಶದಾಸರಾಯಾ
ತರುಳನ ಪರಿಪಾಲಿಸು ಜೀಯಾ ಪ
ಶ್ರೀ ಪತಿ ಸದ್ವಂಶೋದ್ಭವನೆ ವರಕವಿ ಪ್ರಾಣೇಶರ ಸುತನೆ
ಕೋಪವಿತಾಪಮೋಹಕ ಜಿತನೆ ಶ್ರೀ ಕಮಲಾಪತಿ ಸೇವಕನೆ
ನೀ ಮಹಾತಾಪಸೋತ್ತ ಮನಾಗಿ
ಭವಜನಿ ತಾಪದಾದಿ ಸಂ –
ತಾಪ ಹರಿಸುತಲಿ ಶ್ರೀಪದ್ಮಜ ಮತ್ತಾಪಿನಾಕಿನುತ
ಶ್ರೀಪರಮಾತ್ಮದಾಸರಿಗೆ ಸದಾಪರೋಕ್ಷ ತೋರ್ದಾ ೧
ರತಿಪತಿ ಪಿತನನಾಮ ಸ್ಮರಣೆಯಲ್ಲಿ ನಲಿ –
ಯುತಸುಖಿಸುವಕರುಣಿ ಬಿಡದೆ ಸಂತತ ಹರಿಗುಣಗಾನಾ-
ದಲ್ಲಿ ಬಲುತರನಿರುತಿಹ ಜಾಣಾನಾನತಿ ಪತಿತನಾಗಿ ಇರುವೆ
ಅತಿ ದುಷ್ರ‍ಕತಿಯನೆಸಗಿ ಸದ್ಗತಿಗೆ ದಾರಿಗಾಣೇ ಪತಿತಪಾವನ
ಶ್ರೀ ಪತಿಯ ತೋರೆನಗೆ ಅತುಲಸುಗುಣವೃಂದ
ನಿಮ್ಮನಾ ತುತಿಪೆನೆ ಮತಿಮಂದ೨
ಕಾಮಕ್ರೋಧಗಳನು ಅಳಿದು ಬಲುತಾಮಸ
ಮತಗಳಹಳಿದು
ರೈಪತಿಭೀಮನ ಮತವಿಡಿದು ಶಿಷ್ಯರ
ಪ್ರೇಮದಿಂದ ಪೊರೆದು
ಬಹುಪರಿ ಈ ಮಹಿಯೊಳು ಮೆರೆದೆ
ಪಾತಕಿ ಪಾಮರನೆನ್ನಗೆ
ರಾಮ ಶ್ರೀವರದೇಶ ವಿಠಲನ ದೂತಮಹಾಮುನಿವರದೇಂ-
ದ್ರಾರ್ಯರ ಪದ, ಸುಮದಿರತಿಯನು
ಪ್ರೇಮದಿ ಕೊಡು ಮುದದಿ ೩

 

ಶ್ರೀಗುರುಜಗನ್ನಾಥದಾಸರಾಯರ ಸ್ತೋತ್ರ
೩೧
ಗುರುವೆ ನೀನೊಲಿದು ಪಾಮರತರನಾದೆನ್ನ
ಹರುಷದಿ ಕರಪಿಡಿದು
ಪರಮ ಕರುಣದಿಂದ ಹರಿದಾಸ್ಯವಿತ್ತು ಉ –
ದ್ಧರಿಸಿದ ಉಪಕಾರ ಮರೆಯಲಾರೆನು ಎಂದೂ ಪ
ವರದೇಂದ್ರಾರ್ಯರು ನಮ್ಮ ಶರಣನು ಇವನಿಗೆ
ಕರುಣಿಸೆಂದಾಜ್ಞಾಪಿಸೆ
ತರುಳನ ಶಿರದಲಿ ಕರವಿಟ್ಟು ಕೃಪೆಯಿಂದ
ಗುರುತು ತೋರಿದಕೆ ನಾ ಪರಮಧನ್ಯನೆಂಬೆ ೧
ಮರುತಮತದತತ್ವ ಹರಿಕಥಾಮೃತಸಾರ
ವರರಹಸ್ಯಗಳೆಲ್ಲವ
ಸರಸವಾಗುತೆಂ ಅರಹುವೆವೆಂತೆಂಬ
ವರವಾಕ್ಯದಂತೆನ್ನ ಪರಿಪಾಲಿಪುದಯ್ಯ ೨
ಹರಿಮುನಿದರು ಗುರುಕರುಣಿಪನೊಮ್ಮಿಗೆ
ಗುರು ಮುನಿಯೆ ಹರಿ ಪೊರೆಯ
ಹರಿಯ ಕೃಪೆಗೆ ಮುಖ್ಯ ಗುರುವೆ ಕಾರಣನೆಂದು
ನೆರೆನಂಬಿರಲು ನೀನರಿಯದಂತಿಪ್ಪುದೆ ೩
ಮರುತ ಮತಾಬ್ಧಿಚಂದಿರ ಗುರುರಾಜರ
ವರಬಲದಿ ಮೆರೆವ
ಹರಿಭಕ್ತಾಗ್ರಣಿ ನಿಮ್ಮ ಚರಿತೆ ಬಣ್ಣಿಸುವೆನಾ
ಹರಿವಲಿಯುವ ತೆರ ಕರುಣಿಸೆನ್ನಯನಿಜ೪
ಬರಿದೆ ಬಾಹ್ಯಾಚಾರ ವಿರಚಿಸದಲೆ ಮನದಿ
ಹರಿರೂಪ ಕಾಂಬತೆರದಿ
ವರದೇಶ ವಿಠಲನ ಸಿರದಾಸ್ಯತನವೆಂಬ
ಗುರುತುತೋರುವುದಯ್ಯ ಗುರುಜಗನ್ನಾಥಾರ್ಯ ೫

 


ಘನ್ನ ಮಹಿಮನೆ ನಿನಗೆ ಇವನು ಅನ್ಯನಲ್ಲವೊ ಸ್ವಾಮಿ
ನಿನ್ನ ವರವನು ಜನ್ಮಜನ್ಮದಿ ಮನ್ನಿಸಿ ಪಾಲಿಸಬೇಕಾ
ಪನ್ನ ಜನರ ಪಾಲಾ ನಿನ್ನುಳಿದು ಮತ್ತಾರಿಲ್ಲವೆಂಬುವದು
ಎನ್ನ ಮಾತಲ್ಲ ದೇವ ಯನ್ನ ಪಿರಿಯರ ಮಾತು
ನಿನ್ನಯ ದಿವ್ಯ ಮನಕೆ ಚನ್ನಾಗಿ ನೀತಂದು
ನಿನ್ನಯ ಜ್ಞಾನ ಭಕುತಿ ವೈರಾಗ್ಯಗಳನ್ನು
ಅನ್ನ ವಸನ ಧನ – ಧಾನ್ಯವೇ ಮೊದಲಾದ
ಘನ್ನ ಸಂಪತ್ತುವಿತ್ತು
ಅನ್ಯಜನಕ ಭಾವದಿಂದ ಮುನ್ನ ಧನ್ಯನಮಾಡು
ಸೊನ್ನೊಡಲ ಪಿತ ಸರ್ವದಾ ತಾ
ಚಿನ್ನಗೊಲಿದ ವರದೇಶ ವಿಠಲನೆ
ಮನ್ನದೊಳಗೆ ಪೊಳೆಯೊಯನ್ನನುಡಿ ಲಾಲಿಸು

 


ದಾಸನೆನಿಸು ಜೀಯಾ ಶ್ರೀ ವರದೇಶ ವಿಠಲರಾಯಾ
ದಾಸರಥಿಯೆ ಯನ್ನಾಶೆ ತಳೆದು ನಿರ್ದೋಷನೆನಿಸಿ
ಬಹು ಮೀಸಲು ಮನವಿತ್ತು ಪ
ವರದೇಂದ್ರರ ಆಜ್ಞಾದಿಂದಲಿ
ಗುರುವರ ಮಹಾಪ್ರಾಜ್ಞಾ
ವರದೇಶ ವಿಠಲೆಂಬ ಗುರುತಿನ ಮುದ್ರಿಕೆ
ಪರಮ ಪಾಮರಗೆ ತ್ವರ ಕರುಣಿಸಿದಕೆ ೧
ಜ್ಞಾನ ಶೂನ್ಯ ನಾನು ಸರ್ವದ
ಹೀನ ವಿಷಯ – ರತನು
ವಾನರನ ತರದಿ ಮಾಣಿಕೆಂಬ ತೆರ
ಹೀನನೆನಿಸದಲೆ ಪೋಣಿಸು ಸನ್ಮತಿ೨
ಏಸು ಪೇಳಲಿನ್ನಾ ಶ್ರೀ ವರ-
ದೇಶ ವಿಠಲ ನಿನ್ನಾ
ದಾಸರ ವಚನಕೆ ದೋಷ ಬಾರದಂತೆ
ಲೇಸು ಭಕುತಿ ಜ್ಞಾನ ದಾಸ್ಯವಿತ್ತು ತವ ೩

 

ಶ್ರೀಶ್ರೀಪ್ರಾಣೇಶದಾಸರಾಯರ ಸ್ತೋತ್ರ
೩೨
ದಾಸರಾಯರ ದಿವ್ಯ ಚರಣ ಭಜಿಸಿ
ಶ್ರೀ ಪ್ರಾಣೇಶದಾಸಾರ್ಯ ಗುರುವರ್ಯಾ ಪ
ದಾಸರಾಯರ ಪಾದ ಭಜಿಪ ಸದ್ಭಕ್ತರ
ಏಸುಜನುಮದ ಪಾಪರಾಶಿ ಪರಿಹರವು
ಶ್ರೀಶನಲಿ ಸದ್ಭಕ್ತಿ ಲೇಸಾಗಿ ಪುಟ್ಟುವದು
ಲೇಶ ಸಂಶಯವಿಲ್ಲ ಆಲಸವು ಸಲ್ಲ ೧
ಮರುತಮತ ತತ್ವದ ತೆರೆಗಳಿಂ ಸೂಸುತ
ಧರಣಿಸುರರಿಗೆ ರಾಮನಾಮಾಮೃತ
ನಿರುತಭಜಿಸಲು ಜ್ಞಾನವೈರಾಗ್ಯ ತರುಮಣಿಯ
ಹರಿಭಕುತಿ ಧೇನುವನ್ನೀವ ಪಾಲ್ಗಡಲೆನಿಪ ೨
ಸುಜ್ಞಾನವೆಂಬಂಥ ಕಿರಣಗಳ ಪಸರಿಸುವ
ಅಜ್ಞಾನತಿಮಿರವನು ದೂರೋಡಿಪ
ಸೂಜ್ಞರೆಂಬುವ ತಾವರೆಗಳರಳಿಸುವಂಥ
ಅಜ್ಞಕುಮುದುಗಳ ಬಾಡಿಸುವ ಭಾಸ್ಕರನೆನಿಪ ೩
ನಮಿಪಜನ ಭವತಾಪಕಳೆದು ಸದ್ಭಕ್ತಿಯಂ –
ಬಮಿತ ಅಹ್ಲಾದವನು ಬೀರುವಂಥ
ಶಮದಮಾದಿಗಳ ಚಂದ್ರಿಕೆಯಿಂದ ಶೋಭಿಸುವ
ವಿಮಲ ಹರಿಜನ ಚಕೋರಕೆ ಚಂದ್ರನೆಂದೆನಿಪ ೪
ದಾಸಕುಲತಿಲಕ ಪ್ರಾಣೇಶರಾಯನ ಕವನ
ಶ್ರೀಶಕಥೆಗಳ ರಾಶಿಮೀಸಲಾಗಿರಲು
ಆ ಸುಭಕ್ತರಿಗೆ ಸಂತೋಷಗೊಳಿಸುಲು ಸರ್ವ
ದೇಶದಲಿ ಮೆರೆಸಿ ಸತ್ಕೀರ್ತಿಯನು ಪಡೆದಂಥ೫
ಈ ಗುರುಗಳ ಪಾದಕೆರಗಿದ್ದ ಶಿರಧನ್ಯ
ಈ ಗುರುಗಳೀಕ್ಷಿಸಿದ ನೇತ್ರ ಧನ್ಯ
ಈ ಗುರುಗಳ ವಾಣಿ ಕೇಳಿದ್ದ ಕಿವಿ ಧನ್ಯ
ಈ ಗುರುಗಳನು ಮನದಿ ನೆನೆವನರ ಧನ್ಯ ೬
ರಾಗದ್ವೇಷಾದಿಗಳ ಗೆದ್ದು ಸದ್ಭಕ್ತಿಯಿಂ
ಶ್ರೀಗುರುಪ್ರಾಣೇಶ ಭಜಕರೆನಿಪ
ನಾಗಪರಿಯಂತ ವರದೇಶ ವಿಠಲನ ಪ್ರೀಯ
ಯೋಗಿ ವರದೇಂದ್ರ ಮುನಿಗಳ ಪಾದ ಭೃಂಗ ೭

 

ಶ್ರೀಹರಿದಾಸವೃಂದ ಸ್ತೋತ್ರ
೩೩
ದಾಸವರ್ಯರಿಗೊಂದಿಪೆ
ದಾಸವರ್ಯರಿಗೆರಗಿ ಜನ್ಮಾಂತರದ
ದೋಷವ ಪರಿಹರಿಸಿಕೊಂಬೆ ಪ
ನಾರದ ಮುನಿಹರಿಯಾಜ್ಞ್ಞೆಯಿಂದಲೆ ಪುರಂ –
ದರ ದಾಸರಾಗಿಜನಿಸಿದ ದಾ –
ನಾರಾಯಣನ ದಿವ್ಯನಾಮದ ಮಹಿಮೆಯ
ಮೂರು ಲೋಕಗಳಲ್ಲಿ ಹರಹಿದ ೧
ಭಜಿಸುವ ಭಕುತರ ಅಗಣಿತದೋಷವ
ನಿಜವಾಗಿ ಪರಿಹರಿಸುವಂಥ ದಾಸ –
ಸುಜನ ಪೋಷಕ ದುಷ್ಟಕುಜನ ಕುಠಾರ ಶ್ರಿ
ವಿಜಯರಾಯರ ಪಾದಕ್ಕೆರಗುವೆ ೨
ಕೋಪರಹಿತಭಕ್ತ ಪಾಪವಿದೂರಕ
ಶ್ರೀಪತಿ ಪಾದಕಮಲ ಭೃಂಗ ದಾ –
ತಾಪ ಸೋತ್ತುಮಭವ ತಾಪನಿವಾರಕ
ಗೋಪಾಲದಾಸರಿಗೆರಗುವೆ ೩
ಧರಿಯಸುರರ ಉದ್ಧರಿಸಲೋಸುಗ ದಿವ್ಯ
ಹರಿಕಥಾಮೃತ ಸಾರಗ್ರಂಥವದಾ –
ವಿರಚಿಸುತಜ್ಞಾನಪರಿಹರಿಸಿದಂಥ
ಹರಿಭಕ್ತಾಗ್ರಣಿ ಶ್ರೀ ಜಗನ್ನಾಥ ೪
ಧರೆಯೊಳು ಹರಿಲೀಲಾಮೃತ ವೃಷ್ಟಿಗರೆಯಲು
ಪರಿಪರಿ ಕಥೆಗಳ ರಚಿಸಿದ ದಾ –
ವರದೇಂದ್ರ ಮುನಿಗಳ ಪಾದಸಾರಸಭೃಂಗ
ಪರನುಸುಚರಿತ ಶ್ರೀ ಪ್ರಾಣೇಶ ೫
ಹರಿಭಕ್ತಿ ಮಾರ್ಗವ ಪರಿಪರಿಶಿಷ್ಯರಿ
ಗರುಹಿ ಕರುಣದಿಂದುದ್ಧರಿಸಿದ ದಾ –
ಪರಮತತಿಮರಕ್ಕೆ ತರಣಿಸ್ವರೂಪ ಶ್ರೀ
ಗುರುಪ್ರಾಣೇಶಾರ್ಯರಿಗೆರಗುವೆ ೬
ಗುರುಪಾದ ಸೇವೆಯ ಪರಿಪರಿಗೈದು ಈ
ಧರಿಯೊಳು ಧನ್ಯರೆಂದೆನಿಸಿದ ದಾ –
ಹರಿದಾಸ ಕುಲರತ್ನ ಸರುವ ಸದ್ಗುಣ ಪೂರ್ಣ
ವರಶ್ರೀಪ್ರಾಣೇಶದಾಸಾರ್ಯ ೭
ಗುರುಪ್ರಾಣೇಶರ ಕರಸರಸಿಜ ಸಂಜಾತ
ಪರಮಭಾಗವತರೆನಿಸಿದ ದಾ
ಮರುತಮತದ ತತ್ವವರಿದಂಥ ಸುಖದ ಸುಂ –
ದರವಿಠಲ ಮೋದ ವಿಠಲರೆಂಬ ೮
ಭೂಮಿಯೋಳ್ ವರದೇಶ ವಿಠ್ಠಲನ ನಿಜಭಕ್ತ
ಸ್ತೋಮಕ್ಕೆ ಶಿರಬಾಗಿ ನಮಿಸುವೆ ದಾ
ಆ ಮಹಾತ್ಮರಪಾದರಜಾದೊಳೆನ್ನನು ದೇವ
ನೇಮದಿಂದಲಿ ಹೊರಳಾಡಿಸೊ ೯

 

ಶ್ರೀಜಗನ್ನಾಥದಾಸರಾಯರಸ್ತೋತ್ರ
೩೪
ದಾಸಾರ್ಯರ ಚರಣ ಕಮಲಕಾನಮಿಪೆ
ಶಿರಬಾಗಿ ಬಿನ್ನೈಪೆ ಏಸು ಜನ್ಮದ ದುಷ್ರ‍ಕತ ಪರಿಹರಿಪೆ
ಕರುಣವನು ಪಡೆದು ಭೂಸುರಜನ್ಮವ ಸಾರ್ಥಕಗೊಳಿಪೆ
ಕೃತಕೃತ್ಯನೆಂದೆನಿಪೆ ದೋಷರಾಶಿಗಳ ನಾಶಗೈಸಿ ವಿ
ಶೇಷ ಮಹಿಮದಿಂಭೂಷಿತ ಜಗನ್ನಾಥ ಪ
ಪ್ರಥಮ ಗಾಂಗೇಯ ವಸನಸಂಜಾತ
ಪ್ರಲ್ಹಾದನಭ್ರಾತ ಮತಿಮಾನಸಹ್ಲಾದ ಸುನಾಮಕನೀತ
ನರಹರಿಸಂಪ್ರೀತ ದ್ವಿತಿಯ ಶಲ್ಯಾಖ್ಯನೃಪತಿ ವಿಖ್ಯಾತ
ಸದ್ಗುಣ ¨ಸ್ರಿತ ತೃತೀಯ ಪುರಂದರ ಸುತನೆನಿಸಿದ ದಸ
ದ್ಯತಿ ವಾದೇಶ್ವರನ್ಹಿತದಲಿ ವಲಿಸಿದ ೧
ನರಸಂಬಂಧಿತ ಪ್ರಾಂತದ ಕ್ಷೇತ್ರದಲಿ ಬ್ಯಗವಟದ ಕರಣಿಕ
ನರಸಾರ್ಯರಗರ್ಭೋದಯ ಗಿರಿಯಲ್ಲಿ
ಜನಿಸಿದ ಬಾಲಾರ್ಕನು
ವರದೇಂದ್ರ ಗುರುವರ್ಯರ ಕರುಣದಲಿ ಶಾಸ್ತ್ರಾಖ್ಯಾಗಸದಿ
ವರವಸಂತ ಋತತರುಣಿ ಕಿರಣದೊಲ್ ಪರಮತಗಳ
ಧಿ:ಕರಿಸಿ ಮೆರೆಯುತಿಹ ೨
ಮೂರು ಭಾಷಾತ್ಮಕ ವಿದ್ಯಾಧ್ಯಾತ್ಮ ಸಂಪಾದಿಸಲೋಸುಗ
ಮಾರಾರಿನಾಮಕದಾಮಹಾತ್ಮರಡಿಯುಗಳನು ಸೇವಿಸಿ
ಮೂರು ರೂಪಾತ್ಮಕನ ವಿಜ್ಞಾನಾತ್ಮ ಅಂಶಗಳನು ತೋರಿಪ
ಮೂರು ಮೂರು ಮೂರು ಮೂರು ಮೂರು ವಂದುಸಾರವ
ಗೃಹಿಸಿದ ಸೂರಿವರಾಗ್ರಣಿ ೩
ವರದೇಶ ಶಾಸ್ತ್ರಾತ್ಮಕಪಯದಿಂದ ಸಂಪೂರಿತವಾದ
ಮರುತಮತ ತತ್ವತರಂಗಗಳಿಂದ ಸಂಶೋಭಿಸುತಿಹ ಶ್ರೀ
ಹರಿಕಥಾಮೃತ ಸಾರದ ಸುಧೆಯಿಂದ
ಭೂಸುರರನು ಪಾಲಿಪ
ಹರಿಯಭಕುತಿಸುರಮಣಿ ತರುವನೀವಪಯ
ಶರಧಿಯನಿಪ ಹರಿ ೪
ಮರುದಾರಿ ತಿಮಿರಪಹಾರಕ ಸೂರ್ಯ ಸದ್ಭುಕುತರೆನಿಸುವ
ಶರಣಜನ ಹೃತ್ಸಂತಾಪಹಭಾರ್ಯ ಕಾಮಕ್ರೋಧಾದಿ
ಅರಿಷಡ್ವರ್ಗವ ಭರ್ಜಿಪಹರಿ ಶೌರ್ಯ ಸತ್ಕವಿಕುಲವರ್ಯ
ವರದೇಶ ವಿಠಲನ ಚರಣಸೇವಕರ ಸುರತರುವಿನ
ತೆರಪೊರೆಯುಂತ ಮೆರೆಯುವ ೫

 

ಶ್ರೀ ರಘುದಾಂತತೀರ್ಥರ ಸ್ತೋತ್ರ
೨೩
ನಮೋ ನಮೋ ಶ್ರೀ ರಘುದಾಂತ ತೀರ್ಥ
ಮುನಿಯ ಮತಮಹಮಸಿರಿಯೆ
ಶಮದಮಾದಿಗುಣ ಪೂರ್ಣರಾಮಪದ
ಭ್ರಮರನೆನಿಪಗುರುವೆ ಪ
ಮಾರಮಣನಪದ ಸಾರಸಷಟ್ಟದ ಸೂರಿಸುಗುಣ ಭರಿತ
ಮಾರುತಮತ ಪಯವಾರಿಧಿ ಶಶಿ ಗಂಭೀರ ವಿಮಲ ಚರಿತ
ಆರಾಧಿಪರಘದೂರಗೈಸುತಿಹ ನೀರಜ ಶರವಿಜಿತ
ಶ್ರೀ ರಘುಪತಿ ತೀರ್ಥಾರ್ಯರ ಕರಸರಸೀರುಹಸಂಜನಿತ ೧
ಆರ್ತಬಂಧು ಸತ್ಕೀರ್ತಿವಂತ ಸರ್ವೋತ್ತಮ ಹರಿಯನಿಪ
ಸೂತ್ರನಾಮಕ ಶಿಖಿನೇತ್ರ ಪ್ರಮುಖ ದೇವೋತ್ತಮನೆಂದೆನಿಪ
ಧಾತ್ರಿಯೊಳಗೆ ಸುಖತೀರ್ಥರೆ ಗುರುವೆಂದು
ಸ್ತೋತ್ರಗೈಯ್ಯುತಿಪ್ಪ
ಗಾತ್ರ ಮರೆದು ಶ್ರೀ ಪಾರ್ಥಸಖನಗುಣಕೀರ್ತಿಸಿ ಸುರಿಪ ೨
ಪರಮತುರಗನಭಚರ ಪತಿಯೆನಿಸುವ ಕರುಣಿ ಕೋಪರಹಿತ
ಶರಣಾಗತಜನದುರಿತರಾಶಿಜಲ ಶರಧಿ ಕುಂಭಜಾತ
ಪರಮ ಭಾಗವತ ಸಿರಿಮುಖ ಕುಮುದಕೆ ಶರನಿಧಿ ಸಂಜಾತ
ಪರತತ್ವದಿ ಪರತರನೆನಿಸುವ ಮುನಿವರ ನಿರ್ಗತದುರಿತ ೩
ಅನಘನಿನ್ನಪದವನಜಜದರಜವನು ವಿನಯದಿರಿಸಿ ಶಿರದಿ
ಜನುಮಜನುಮದಘತೃಣರಾಶಿಯ ಮಧ್ಯಗಳ ಪೊಕ್ಕತೆರದಿ
ಕ್ಷಣದಲಿ ದಹಿಸದೆ ಸನುಮತೆಂದೆನಲು ಅನುಗೃಹಿಸಿ ತ್ವರದಿ
ಸನುಮಾರ್ಗಪ್ರದ, ದರುಶನದು ಪ್ರಕೃತಿನೆನೆವೆನು ಇಹಪರದಿ ೪
ಮಾಮನೋರಮಪದ ತಾಮರಸಂಗಳನೇಮದಿ ಪೂಜಿಪನೆ
ತಾಮಸಖಳಮದ ಸಾಮಜಮೃಗ ಪತಿ ಧೀಮಂತಪ್ರಿಯನೆ
ಈ ಮಹಿಯೊಳುನಿಮ್ಮ ಪಾಮರ ನಾ
ನಿಮ್ಮ ಪ್ರೇಮದಿನಂಬಿಹೆನೆ
ರಾಮನಾಮರತಿ ನೇಮದಿಕೂಡು ವರದೇಶ ವಿಠಲಪ್ರೀಯನೆ ೫

ನಿರ್ಗಮನ

 

೧೫
ಪವಮಾನ ಪಾಲಿಸೆನ್ನ ಸದ್ಗುಣಘನ್ನ ಪ
ಪವಮಾನ ಪೊರಿಯೆನ್ನ ಕವಿಭಿರೀಡಿತ ನಿನ್ನ
ಸ್ತವನಗೈಯುವ ಮಾನವರೊಳಧಮ ನಾನು
ಪವಮಾನ ಪಾಲಿಸೆನ್ನ ಅ.ಪ
ವಿತತಸುಮಹಿಮ ಭಾರತಿ ಪತಿ ಶಿವ ಮುಖ
ದಿತಿಜಾರಿತತಿನುತ ಶ್ರುತಿ ಪ್ರತಿಪಾದ್ಯ ಆ
ನತ ಬಂಧು ತತ್ವಾಧಿ ಪತಿಗಳೊಳುತ್ತಮ
ಪ್ರಥಮಾಂಗ ಹರಿ ಪ್ರೀಯ ದ್ವಿತಿಯುಗದಲಿ ಕಪಿ –
ಸುತನಾಗಿ ನೀರಜ ಪತಿಯಪಾದದ್ವಯ
ಅತಿಹಿತದಲಿ ಸೇವಿಸಿ ಲವಣಾರ್ಣವ
ಶತಯೋಜನವ ಲಂಘಿಸಿ
ರಾಕ್ಷಸಕುಲ ಹತಗೈಸಿ ಪುರದಹಿಸಿ
ದೇವಿಯ ಸುವಾರುತಿಯ ತಿಳಿಸಿ ಭಾವಿದ್ರುಹಿಣನೆಂದೆನಿಸಿ ೧
ಕುರುಕುಲದಲಿ ಕುಂತಿ ತರುಳನೆನಿಸೆ ಯುಧಿ
ಷ್ಟರನನುಜ ವೃಕೋದರ ನಾಮದಲಿಯವ
ತರಿಸಿ ಬಕಾದಿ ದುಷ್ಟರ ಶಿಕ್ಷೆಯನು ಗೈಸಿ
ಹರಿಇಚ್ಛೆಯಲಿ ವನಚರಿಸಿ ಕೀಚಕನ ಸಂ
ಹರಿಸಿ ದುಶ್ಯಾಸನಾದ್ಯರನೆಲ್ಲರಣದೊಳು
ದುರುಳದುರ್ಯೋಧನನಸಾನುಜಗಣ
ತ್ವರಿತಗೈಸಿ ಹನನ ವಿಜಯನಾಗಿ ಪೊರೆದೆ ಧರ್ಮಾರ್ಜುನನ
ತ್ರಿಭುವನದಿ ಸರಿಗಾಣೆ ದ್ವಿಜರಿಪು ಪದುಪಂಚಾನನ ೨
ಮಣಿಮಂತ ಮೊದಲಾದದನುಜರು ಹರಿದ್ವೇಷ –
ವನು ಮಾಡಲೋಸುಗವನಿಯೊಳುದ್ಭವಿಸಿ ನಿ –
ರ್ಗುಣರೂಪ ಕ್ರೀಯ ಬ್ರಹ್ಮನೆನುತ ಹರಿಯತಾ
ನೆನಿಪ ದುರ್ಮತವನ್ನು ಘನವಾಗಿ ಪ್ರಬಲಿಸಿ
ದನುಜಾರಿಯಾಜ್ಞಾದಿ ಮುನಿಮಧ್ಯ ಸತಿಯಲ್ಲಿ
ಮುನಿಮಧ್ವನೆಂದೆನಿಸಿ ಜನಿಸಿ ಕುಮತವನು
ಶಾಸ್ತ್ರದಿ ಖಂಡಿಸಿ ಹರಿಯೆ ಪರನೆನಿಪ ಮತವಸ್ಥಾಪಿಸಿ
ಮೆರೆದೆ ಈ ಧಾರುಣಿಯೊಳು ವರದೇಶ ವಿಠಲನ ವಲಿಸೆ ೩

 

ಶ್ರೀ ಭಾರತೀ ದೇವಿಯ ಸ್ತೋತ್ರ
೧೮
ಪಾಲಿಸೆನ್ನನು ಪವಮಾನನ ರಾಣಿ
ಪಾಲಿಸೆನ್ನ ಸುಗುಣಾಲಯ ಶ್ರೀಹರಿ
ಲೀಲೆ ತಿಳಿಸಿ ಭವಜಾಲವ ಹರಿಸೆ ಪ
ಮಾತರಿಶ್ವ ಸತಿ, ಪ್ರೀತಿಲಿ ಹರಿಪದ
ದೂತನೆನಿಸಿ, ಅನಾಥನ ಪೊರಿಯೆ ೧
ವಿದ್ಯುನ್ನಾಮಕೆ ವಿದ್ವಜ್ಜನಪಾ –
ದದ್ವಯ ಸೇವಿತ ಬುದ್ಧಿಯ ನೀಡೆ ೨
ಲಿಂಗನಿವಾಸಿ ವಿಲಿಂಗಗೈಸಿ ಯನ್ನ
ರಂಗನ ಪದದಲಿ ಭೃಂಗನ ಮಾಡಿ೩
ಜನನಿಯೆ ನಿನ್ನಯ ತನಯಗೆ ಜ್ಞಾನದ
ಸ್ತನವನಿತ್ತು ಪೊರೆ ಹನುಮನರಸಿಯೆ ೪
ಶರಣಾಗತಜನ ಪೊರೆಯುವ ಕರುಣಿಯ
ವರದೇಶ ವಿಠಲನ ಚರಣವ ತೋರೆ ೫

 

ಶ್ರೀ ಪ್ರಾಣೇಶ ದಾಸರಾಯರ ಸ್ತೋತ್ರ
೩೫
ಪ್ರಾಣೇಶ ದಾಸಾರ್ಯರ ಪದಯುಗಗಳ
ಸಾನುರಾಗದಲಿ ಸ್ಮರಿಸುವರ
ನಾನಾಜನುಮದ ಪಾಪ ತರಿದು ಸುಜ್ಞಾನ
ಭಕುತಿಯನ್ನು ಕೊಡುತಿಹರು ಪ
ವರಕಾಶ್ಯೊಪಸದ್ಗೋತ್ರದಿ ಲಿಂಗಸು –
ಗುರು ಕರಣಿಕರಲಿ ಸಂಜನಿಸಿ
ತಿರುಕಾರ್ಯರ ಪರತನುಭವಯೋಗೀಂ –
ದ್ರರು ಯಂಬ ಸುನಾಮದಿ ಕರಿಸಿ ೧
ಕೆಲವುಕಾಲ ಲೌಕಿಕವನುಸರಿಸುತ
ಲಲನೆ ತರಳರಿಂದೊಡಗೂಡಿ
ಬಲು ವಿನಯದಿ ಸಾಧುಗಳರ್ಚಿಸಿ ನಿ –
ರ್ಮಲ ವೈರಾಗ್ಯ ಮನದಿ ಕೂಡಿ೨
ಮೂಜಗದೊಳು ಪ್ರಖ್ಯಾತರೆನಿಸಿದ
ಶ್ರೀ ಜಗನ್ನಾಥಾರ್ಯರ ಪಾದಾಂ –
ಭೋಜ ಭಜಿಸಿ ಪ್ರಾಣೇಶಾಂಕಿತವನು
ತಾಜವದಿಂದವರಲಿಪಡೆದ ೩
ಶ್ರೀಶಪಾದಯುಗ್ಮಗಳಲಿ ಸದ್ರತಿ
ದಾಸಜನಗಳಲಿ ಸದ್ಭಕುತಿ
ಹೇಸಿಭವದ ಸುಖದಾಸೆ ಜರಿದು ಸಂ –
ತೋಷದಿ ಧರಿಸಿಹ ಸುವಿರಕುತಿ ೪
ಕಾಮಾದ್ಯರಿಷಡ್ವರ್ಗವಗೆಲಿದು
ನೇಮದಿ ಯಮನಿಯಮವ ವಹಿಸಿ
ತಾ ಮುದದಲಿ ನಲಿಯುತ ಕೀರ್ತಿಸುತಿಹ
ಶ್ರೀ ಮನೋಹರನ ಸುಗುಣರಾಶಿ ೫
ಪರಿಪರಿ ಹರಿಕಥೆವರ ಪ್ರಮೇಯಗಳ
ಸರ್ವಜ್ಞ್ಞರ ಉಕ್ತ್ಯನುಸರಿಸಿ
ವಿರಚಿಸಿ ಹರಿಮಂದಿರದ ಸುಪಥ ಪಾ –
ಮರರಿಗೆ ಸೌಕರ್ಯವಗೈಸಿ ೬
ವರದೆಂದ್ರರ ಪದಸರಸಿಜ ಸೇವಿಸಿ
ಹರುಷದಲವರ ಕರುಣ ಪಡೆದ
ವರವೃಂದಾವನ ಸಂಸ್ಥಾಪಿಸಿ
ಪರಿಪರಿಯಿಂದಲಿಯಾರಾಧಿಸಿದ೭
ಜ್ಞಾನದಿಲಯವನು ಚಿಂತಿಸುತಾ ಚಿತ್ರ
ಬಾನುಸಪ್ತಮಿ ಯಾಶ್ವಿಜಶುದ್ಧ
ಜಾನಕಿ ಪತಿಪದ ಧೇನಿಸಿಹರಿಪುರ
ಕೀನರ ದೇಹ ಜರಿದು ಸಾರ್ದ ೮
ಪರಮಭಾಗವತರೆನಿಸುವರಿವರನ
ವರ ತನದ ಸುಮಾಲಿಕೆ ಸತತ
ಸ್ಮರಿಸುವ ಭಕುತರ ಪುರುಷಾರ್ಥಗಳನು
ನ ಕೊಡುವ ತ್ವರಿತ ೯

 


ಬಾರೋ ನೂತನ ಗೃಹಕೆ ಹರಿಯೆ ಸಿರಿ
ಮಾರುತ ಮುಖಸುರರೊಡಗೂಡಿ ಧೊರಿಯೆ ಪ
ಯಾರು ಕೇಳದಲಿಹ ಸ್ಥಳವ ನೀನೆ
ಪ್ರೇರಿಸಿ ಗೃಹವ ನಿರ್ಮಿಸಿದೆಯೋ ದೇವ
ನೂರಾರು ಪರಿರೂಪಾಂತರವ ಪೊಂದಿ
ಈ ರೀತಿ ನವಸುಸಂಸ್ರ‍ಕತವಾದ ಗೃಹವ ೧
ಈರಪ್ಪ ಬಡಿಗನೆಂಬುವನು ಮನಿಯ
ಚಾರುತನದಲಿಂದ ನಿರ್ಮಿಸಿರುವನು
ತೋರುವ ಸಿಂಹಾಸನವನು ಮಧ್ಯಾ
ಗಾರದಿನಿನಗಾಗಿ ವಿರಿಚಿಸಿಹನು ೨
ಸುತ್ತಲು ನಿರ್ಭಯವಿಹುದು ವಂ –
ಭತ್ತು ದ್ವಾರಗಳಿಂದ ಶೋಭಿಸುತಿಹುದು
ಹತ್ತಿರೆ ಗುರುಗೃಹ ವಿಹುದು ಮುಂದೆ
ಚಿತ್ತಜನಯ್ಯನ ಮಂದಿರ ವಿಹುದು ೩
ಉತ್ತಮ ಗೃಹವೆನಿಸುವದು ಇ –
ಪ್ತತ್ತುನಾಲಕುವಸ್ತುಗಳಕೂಡಿಹುದು
ಸುತ್ತೇಳು ಪ್ರಾಕಾರವಿಹುದು ಸುತ್ತು
ಮುತ್ತಲು ದ್ವಿಜಜನಹೊಂದಿ ಕೊಂಡಿಹುದು ೪
ಗೃಹವುನಾಲ್ಕು ವಿಧವಿಹುದು ಸೂಕ್ಷ್ಮ
ಗೃಹ ನಿನಗಾಗಿಯೆ ನೇಮಿಸಿಯಿಹುದು
ಬಹಿರದಿ ಪಾಕಗೃಹ ವಿಹುದು ಅಲ್ಲಿ
ಗೃಹಿಣಿಯಿಂ ತ್ರಿವಿಧಾನ್ನ ಪಕ್ವಗೈತಿಹುದು೫
ನಡುಮನೆ ದೊಡ್ಡದಾಗಿಹುದು ಅಲ್ಲಿ
ಸಡಗರದಲಿ ಬ್ರಹ್ಮವೃಂದ ಕೂಡುವದು
ಬಿಡದೆ ಸತ್ಕಥೆನಡೆಯುವದು ಮುಂದೆ
ಪಡಸಾಲೆಯಲಿ ಸರ್ವಜನ ಸಭೆಯಹುದು ೬
ಶ್ವಸನ ಮಾರ್ಗವಲಂಬಿಸಿರುವೆ ಮನಿಯ
ಹಸನ ಮೆಹದೀನಾದಿಯಿಂ ಮಾಡಿಸಿರುವೆ
ಹೊಸಸುಣ್ಣವನು ಹಚ್ಚಿಸಿರುವೆ ಏಕಾ
ದಶ ಸೇವಕರ ನಿನ್ನ ವಶದೊಳಿರುಸುವೆ ೭
ನಾನಾಧನ ನಿನಗರ್ಪಿಸುವೆನು ತನು
ಮಾನಿನಿಸಹ ನಿನ್ನಾಧೀನ ಮಾಡುವೆನು
ಜ್ಞಾನಭಕ್ತಿಯೆ ಇಚ್ಛಿಸುವೆನು ನಿನ್ನ
ಧ್ಯಾನಾನಂದದಿ ಧನ್ಯನೆಂದಿನಿಸುವೆನು೮
ಹರಿಯೆ ಲಾಲಿಸು ಎನ್ನ ಸೊಲ್ಲಾ ಮುಂದೀ –
ಪರಿಗೃಹದೊರೆವುದು ಸುಲಭವೇನಲ್ಲಾ
¨ರೆ ನಿನ್ನ ಬಿಡೆನೊ ಶ್ರೀ ನಲ್ಲಾ ಎನ್ನ
ಮೊರೆಯ ನಾಲಿಸಿ ನೋಡೋ ವರದೇಶವಿಠಲಾ ೯

 

ಶ್ರೀ ಲಕ್ಷ್ಮೀದೇವಿಯ ಸ್ತೋತ್ರ
೧೩
ಭಾಗ್ಯವೆ ಪಾಲಿಸೆನ್ನಗೆ
ಶ್ರೀ ಭಾರ್ಗವಿ ಜನನಿ ಪ
ಭಾಗ್ಯವೆ ಪಾಲಿಸು ಭಾರ್ಗವಿ, ಕಮಲಜ
ಭಾರ್ಗಾದ್ಯನಿಮಿಷ ವರ್ಗಸೇವಿತೆ ಅ.ಪ
ಹರಿಸರ್ವೋತ್ತಮ ಗುರುಸುಖತೀರ್ಥರು
ಹರಫಣಿ ವಿಪಶಕ್ರಾದಿಗಳು
ತರತಮ ಭೇದ ಮೂರೆರಡು ಸತ್ಯ ವೆಂ –
ದರಿತು ಮನದಿ ಬಲು ಹರುಷ ಬಡುತಲಿಹ ೧
ಕಾಮಕ್ರೋಧಗಳ ಗೆಲಿದು ಸತತನಿ –
ಷ್ಕಾಮ ಭಕ್ತಿಯಲಿ ಮನವುಬ್ಬಿ
ರಾಮ ರಾಮ ಎಂದ್ ಪ್ರೇಮದಿ ಪಾಡುತ
ರೋಮಾಂಚಿತ ತನುವಿಲಿನರ್ತಿಪ ಸೌ ೨
ದುರ್ಜನ ಸಂಗ ವಿವರ್ಜಿಸಿ ನಿರುತದಿ
ಸಜ್ಜನಸಂಗಸುಖವ ಬಯಸಿ
ಅರ್ಜುನಸಖನ ಪದಾಬ್ಜಧ್ಯಾನ ದೊಳು
ಗರ್ಜಿಸುತಲಿ ನಿರ್ಲಜ್ಜನೆನಿಪ ಸೌ ೩
ನಾನುನನ್ನದೆಂಬೊಹೀನ ಮತಿಯ ಕಳೆ –
ದೆನು ಮಾಡುತಿಹಕರ್ಮಗಳ
ಶ್ರೀನಿವಾಸನ ಪ್ರೇರಣೆ ಎಂದು ಸ –
ದಾನುರಾಗದಲಿ ಅರ್ಪಿಸುತಿಹ ಸೌ ೪
ಸೂಸುವ ಭಕ್ತಿ ವಿರಕ್ತಿ ಜ್ಞಾನಧನ
ರಾಶಿಯ ಕೋಟ್ಟೀಭವಸುಖದ
ಆಶೆಬಿಡಿಸಿ ವರದೇಶ ವಿಠಲನ
ದಾಸರ ದಾಸರ ದಾಸ ನೆನಿಪ ಸೌ ೫

 

೧೬
ಭಾರತೀರಮಣನೆ ಸಾರಿದೆನು ಚರಣ
ತೋರು ಮನ್ಮನದಲಿ ಭೂರಿಸುಕರುಣ ಪ
ನಾರಾಯಣಾಂಕದಿ ಕುಳಿತಿಹ ಶೂರಾ
ಸೂರಿಸ್ತೋಮತೇಜೊರಂಜಿಪುದಾರಾ
ಮಾರಮಣನಾಜ್ಞಾದಿಂ ಬ್ರಹ್ಮಾಂಡಧಾರಾ
ಧಾರಕಾನಂದ ವಿಠಲನ್ನಚಾರಾ ೧
ದುರುಳರಕ್ಕಸತತಿಯ ದ್ವಿರದ ವಿದಾರ
ಹರಿರಘುವರನಪಾದ ಶರಧಿಜ ಚಕೋರ
ಹರಮುಖ್ಯ ಸುರಸರಸಿರುಹಕೆ ದಿನಕರ
ವರದೇಶವಿಠ್ಠಲನ ಸ್ಮರಿಪ ಸಮೀರ ೨
ಕುರುಕುಲ ಸಂಜಾತ ದ್ರುಪದಜಾನಾಥ
ದುರಿಯೋಧನನ ಊರುತರಿದ ನಿರ್ಭೀತ
ಪರಮ ಭಗವದ್ಭಕ್ತವೃಂದ ಸುಪ್ರೀತ
ವರದೇಂದ್ರ ವಿಠ್ಠಲನ ಪ್ರೀಯ ಸುತನೀತ ೩
ಅದ್ವೈತ ಮತತಿಮಿರ ಧ್ವಂಸನ ಧಿರ
ಶುದ್ಧವೈಷ್ಣವ ಮತಸ್ಥಾಪನಾಪಾರ
ಸದ್ವಾಕ್ಯದಿಂದಲಿ ಹರಿಪಾರವಾರ
ಮಧ್ವಸುಂದರ ವಿಠ್ಠಲನ ಸುಕುಮಾರ ೪
ವರದೇಶವಿಠ್ಠಲ ವರದೇಂದ್ರ ವಿಠಲ ಸುಂ –
ದರ ವಿಠಲ ಆನಂದ ವಿಠ್ಠಲನ್ನ
ಪರಿಪರಿ ವಿಧದಲ್ಲಿ ಕರುಣವ ಪಡೆದಿಹ
ಗುರುಜಗನ್ನಾಥ ವಿಠ್ಠಲನ ನಿಜದೂತ ೫

 

೧೭
ಭಾರತೀಶನೆ ಉದ್ಧರಿಸುವದೆನ್ನ ಪ
ಭಾರತೀಶ ಕಂಸಾರಿ ಪ್ರೀಯ ಸಂ –
ಸಾರ ಬಂಧನ ನಿವಾರಿಸೊ ಜವದಿ ಅ.ಪ
ಅಂಜನಾದೇವಿಯ ಸಂಜಾತನೆ ಭವ
ಭಂಜನ ಹರಿಪದಕಂಜಾರಾಧಕ ೧
ಮಾರುತಿ ನಿನ್ನ ಸುಕೀರುತಿ ತ್ರಿಜಗದಿ
ಸಾರುತಲಿದೆಯುದ್ಧಾರಕನೆಂದು ೨
ಹರಿಕುಲಜಾತನೆ ಹರಿಸಂಪ್ರೀತನೆ
ಹರಿಹಯ ವಿನುತನೆ ಹರಿದುರಿತವನು ೩
ಕಾಮಿತ ಫಲದ ನಿಸ್ಸೀವು ಪರಾಕ್ರಮಿ
ಪ್ರೇಮವ ಕೊಡು ಶ್ರೀ ರಾಮನ ಪದದಿ ೪
ಕುಂತಿ ಕುಮಾರಾದ್ಯಂತ ವಿದೂರನೆ
ಅಂತರಂಗದಿ ಹರಿಚಿಂತನೆಯಕೊಡು ೫
ಧರ್ಮಾನುಜಸದ್ಧರ್ಮ ಸ್ಥಾಪಕನೆ
ಕಿರ್ಮೀರಾಂತಕ ನಿರ್ಮಲ ಚರಿತ ೬
ಭೀಮನೆ ಸುದ್ಗುಣ ಧಾಮನೆ ಕುರುಕುಲ
ಸೋಮನೆ ಸುರಮುನಿಸ್ತೋಮನಮಿತನೆ ೭
ಅರ್ಜುನಾಗ್ರಜನೆ ದುರ್ಜನ ಶಿಕ್ಷಕ
ಧೂರ್ಜಟಿವಂದ್ಯನೆ ಮೂರ್ಜಗ ಕರ್ತಾ ೮
ಆರ್ಯನೆ ಕೃತ ಸತ್ಕಾರ್ಯನೆ ಜಗದೊಳು
ನಾರ್ಯಕುರುಪನೂರು ಶೌರ್ಯದಿ ತರಿದ ೯
ಕರಿವರದನ ಚರಣಾರವಿಂದ ಯುಗ
ನಿರುತ ಸ್ಮರಿಪತೆರ ಕರುಣಿಸು ಭರದಿ ೧೦
ದುಷ್ಟದ್ವಂಸಕನೆ ಶಿಷ್ಟಪಾಲಶ್ರೀ –
ಕೃಷ್ಣನಂಘ್ರಿಯಲಿ ನಿಷ್ಠೆಯ ತೋರೋ ೧೧
ಮಧ್ಯಗೇಹ ಸುತ ಸದ್ವೈಷ್ಣವ ಯತಿ
ಅದ್ವೈತಕರಿ ಹರಿ ಸಿದ್ಧಾಂತ ಕರ್ತಾ ೧೨
ಮಿಥ್ಯಾವಾದಿಬಾಯಿ ಎತ್ತದಂತ ಶ್ರು –
ತ್ಯರ್ಥವ ಪೇಳ್ದ ಸಮರ್ಥನಹುದು ನೀ ೧೩
ಹರಿಸರ್ವೋತ್ತಮ ಸಿರಿಯು ಅಕ್ಷರಳು
ಸುರರೊಳು ನೀನೆ ಪಿರಿಯನು ಸತ್ಯ ೧೪
ಸದಮಲಚರಿತನೆ ಹೃದಯದ ತಿಮಿರವ
ವದೆದು ತರಿವುದಕೆ ಉದಿತ ಭಾಸ್ಕರ ೧೫
ಮೂರು ರೂಪಾತ್ಮಕ ಸಾರಿದೆಯನ್ನಯ್ಯಸ್
ಪಾರದುರಿತ ಪರಿಹಾರವ ಗೈಸೊ ೧೬
ಹೇಸಿಕೆ ಭವದಲಿ ನಾಶಿಲುಕಿಹೆ ವರ –
ದೇಶ ವಿಠಲನ ಸೋಶಿಲಿ ತೋರೊ ೧೭

 

ಶ್ರೀಮೋದವಿಠಲದಾಸರ ಸ್ತೋತ್ರ
೩೬
ಮೋದವಿಠಲದಾಸರಾಯ ನಿನ್ನ
ಪಾದವನಂಬಿದೆ ಪಾಲಿಪುದಯ್ಯ ಪ
ಭೇದಮತಾಬ್ಧಿ ಪಾಠಿನ ಆದು –
ರ್ವಾದಿಮಾಯಿಗಳಿಗೆ ಗಂಟಲಗಾಣ
ಸಾಧುಜನರ ಪಂಚಪ್ರಾಣನೆನಿಪ
ಮೇದಿನಿಯೊಳು ಹರಿಭಕ್ತ ಪ್ರವೀಣ ೧
ಗುರುಪ್ರಾಣೇಶದಾಸರಲಿ ಜ್ಞಾನ
ವರ ಉಪದೇಶವ ಕೊಂಡು ಭಕ್ತಿಯಲಿ
ವರದೇಂದ್ರಾರ್ಯರ ಸನ್ನಿಧಿಯಲಿ ಸತತ
ಹರಿಭಜನೆಯ ಮಾಳ್ಪ ನಲಿನಲಿಯುತಲಿ ೨
ಸ್ನಾನಸಂಧ್ಯಾದ್ಯನುಷ್ಠಾನವನು
ಜ್ಞಾನಪೂರ್ವಕದಿ ಚರಿಸುವ ನಿಧಾನ
ಹೀನಜನಗಳಲ್ಲಿ ಮೌನ ನಿರುತ
ಶ್ರೀನಿವಾಸನ ಮನದಲಿ ಮಾಳ್ಪ ಧ್ಯಾನ ೩
ಬಾಲ್ಯತನದಿ ನಿಮ್ಮಾಜ್ಞ್ಞವನು ಮೀರಿ
ಕಾಲಕಳೆದೆ ದುರ್ವಿಷಯದಿ ನಾನು
ಶ್ರೀಲೋಲನಂಘ್ರಿ ಮರೆದೆನು ಮುಂದೆ
ಪಾಲಿಸೆನ್ನಯ ಮೊರೆ ಶರಣು ಬಂದಿಹೆನು ೪
ಶ್ರೀ ಮರುನ್ಮತಜ್ಞಾನವನು ನಮ್ಮ
ಸ್ವಾಮಿ ವರದÉೀಶವಿಠಲನ ದಾಸ್ಯವನು
ಆ ಮುನಿವರನ ಸೇವೆಯನು ಕೊಟ್ಟು
ನೀ ಮುದದಲಿ ಕರುಣಿಸು ಸುರಧೇನು ೫

 

ಶ್ರೀ ಜಯತೀರ್ಥ ಸ್ತೋತ್ರ
೨೪
ಯತಿಕುಲಮುಕುಟ ಶ್ರೀ ಜಯತೀರ್ಥ
ಸದ್ಗುಣಗಣ ಭರಿತ
ಅತಿಸದ್ಭಕುತಿಲಿ ನುತಿಪಜನರ ಸಂ –
ತತ ಪಾಲಿಸುತಲಿ ಪೃಥಿವಿಲಿ ಮೆರೆವ ಪ
ಶ್ರೀ ಮಧ್ವಮತ ವಾರಿಧಿನಿಜಸೋಮ
ಅಗಣಿತಸನ್ಮಹಿಮ ಆಮಹಾಭಕ್ತಾರ್ತಿಹ ನಿಷ್ಕಾಮ
ಮುನಿಸಾರ್ವಭೌಮ ರಾಮಪದಾರ್ಚಕ
ಈ ಮಹಿಸುರರನು
ಪ್ರೇಮದಿ ಪಾಲಿಪ ಕಾಮಿತ ಫಲದ ೧
ಮಧ್ವಮುನಿಗಳಗ್ರಂಥಕೆ ವ್ಯಾಖ್ಯಾನ
ರಚಿಸಿದ ಸುಜ್ಞಾನ ವಿದ್ಯಾರಣ್ಯನ ಸದ್ವಾದದಿ ನಿಧನ
ಗೈಸಿದಗುಣಪೂರ್ಣ ಅದ್ವೈತಾಟವಿ ದಗ್ಧಕೃತಾನಲ
ಸದ್ವೈಷ್ಣವ ಹೃತ್ಪದ್ಮಸುನಿಲಯ ೨
ಲಲಿತಾ ಮಂಗಳವೇಡಿಪ ರಘುನಾಥ
ವನಿತಾಸಂಜಾತ ಮಳಖೇಡ ಕಾಗಿನಿ ತೀರನಿವಾಸ
ಮಾಡಿಹ ಮೌನೀಶನಲವರದೇಶ ವಿಠಲನ ವಲಿಮೆಯಲಿ
ಇಳಿಯೊಳು ಬೋಧಿಪ ಅಲವ ಬೋಧಾಪ್ತ ೩

 

ಶ್ರೀಯತಿವೃಂದ ಸ್ತೋತ್ರ
೨೫
ಯತಿಗಳ ಸತತ ಸಂಸ್ತುತಿಸುವೆ
ಅತಿತ್ವರಿತದಲಿ ದುರಿತಗಳ ತರಿವೆ ಪ
ಮೋದತೀರ್ಥಾದಿ ಸುಬೋಧೇಂದ್ರ ಪರಿಯಂತ
ಮೋದದಿಂದವರ ಶ್ರೀಪಾದಕ್ಕೆ ನಮಿಪೆ ೧
ಅಜನಪಿತನಪಾದ ಭಜಿಸುವ ಭಕುತ
ನಿಜವಾಗಿ ಪಾಲಿಪ ಸುಜನೇಂದ್ರ ತೀರ್ಥ ೨
ಆನತಜನ ಪಾಪಕಾನನದಹಿಪ ಕೃ
ಶಾನನಂತಿಪ್ಪ ಸುಜ್ಞಾನೇಂದ್ರ ತೀರ್ಥ ೩
ದುರ್ಮತಧ್ವಂಸ ಸದ್ಧರ್ಮ ಸಂಸ್ಥಾಪಕ
ಕರ್ಮಂದಿವರ ಸುಧರ್ಮೇಂದ್ರ ತೀರ್ಥ ೪
ಅಗಣಿತಮಹಿಮ ಮೂಜಗದೊಳು ಪ್ರಖ್ಯಾತ
ನಿಗಮಾಗಮಜ್ಞ ಶ್ರೀ ಸುಗುಣೇಂದ್ರ ತೀರ್ಥ ೫

ಸಸುಪ್ರಸಿದ್ಧ ಮುನಿ ವಿಪ್ರಸಮೂಹವ
ಕ್ಷಿಪ್ರದಿಪಾಲಿಪ ಸುಪ್ರಜ್ಞನಂದ್ರಾಖ್ಯ ೬
ದೋಷವರ್ಜಿತಹರಿದಾಸ ಜನರಪ್ರಿಯ
ಶ್ರೀಶ ಪದಾರ್ಚಕ ಸುಕೃತೀಂದ್ರ ೭
ಮೂಲೋಕ ವಿಖ್ಯಾತ ಶ್ರೀಲೋಲನಂಘ್ರಿ ಕೀ –
ಲಾಲಜಮಧುಪ ಸುಶಿಲೇಂದ್ರ ಮುನಿಪ ೮
ವರದೇಶ ವಿಠಲನ ಪರಿಪರಿ ಪೂಜಿಪ
ಪರಮಹಂಸರ ಪಾದಕ್ಕೆರಗಿ ಬಿನ್ನೈಪೆ ೯

 


ಯಾಚಿಸುವೆನು ನಿನ್ನನಿದಕೆ ಕರುಣಸಾಗರ
ಖೇಚರೇಶ ಗಮನ ಜಗತ್ಪಾಲ ಪ್ರಭುವರ ಪ
ದೈನ್ಯರಾಹಿತ್ಯ ರಹಿತ ಜಾಡ್ಯರಹಿತವು
ನಿನ್ನ ಪಾದ ಕಮಲರತಿ ಸದಾವಕಾಲವು ೧
ಪ್ರಭುವೆ ನಿನ್ನ ಭೃತ್ಯನಾನಾದಿಕಾಲದಿ
ಅಭಯವಿತ್ತು ಪಾಲಿಸೆನ್ನ ಹೇ ದಯಾನಿಧೆ ೨
ತುಷ್ಟನಾದರೇನುರುಷ್ಟನಾರೇನೊಲೊ
ಇಷ್ಟದೈವ ನಿನ್ನ ಹೊರತು ಗತಿಯ ಇಲ್ಲೆಲೊ ೩
ತುಷ್ಟನಾದ ಬಳಿಕ ನೀನೆ ಹೇ ಕೃಪಾಕರ
ಬಿಟ್ಟುನಿನ್ನ ಭಜೀಸಲ್ಯಾಕೆ ಯಿತರಕಾಯ್ವರ ೪
ನೀನೆ ರೋಷವನ್ನು ತಾಳೆ ಸುಜನಬಂಧುವೆ
ದೀನನನ್ನು ಕಾಯ್ವರಾರು ನೀನೆಯಲ್ಲವೆ ೫
ದೋಷ ಕ್ಷಮಿಸುವಲ್ಲಿ ನಿನ್ನ ಪೋಲ್ವ ಅರಸರು
ದೇಶಸರ್ವಗಳಲಿ ಪುಡುಕಲಲ್ಲೆ ದೊರಕರು ೬
ಎನ್ನಸರಿ ಕೃತಘ್ನ ವಂಚನೀಯ ಮಾಳ್ಪನ
ವನ್ನಜಾಭವಾಂಡದೋಳಾವಲ್ಲಿ ಕಾಣೆನಾ ೭
ದೀನ ದಾಸ ನಿನಗೆ ನಾನು ಹೇ ಜಗತ್ಪತೆ
ಮಾಣದೆಲ್ಲಿರಲ್ಲಿ ತೋರಿ ಪ್ರೇಮ ಸಾಮ್ಯತೆ ೮
ಎನ್ನ ವಿಷಯ ಭಯವು ನಿನಗೆ ಲಕ್ಷವಾವುದು
ಮನ್ನಿಸೆನ್ನ ಪೊರೆವ ಸರ್ವಭಾರ ನಿನ್ನದು ೯
ಈಶಪೂರ್ಣಕಾಯ ನಿನಗಸಾಧ್ಯವಾವುದು
ಆಶೆಯನ್ನದಾವಘನವು ನಿನಗೆ ತೋರ್ಪುದು ೧೦
ದಾಸನಾಶೆಪೂರ್ತಿಸಲ್ಕಾಲಸ್ಯವುಚಿತವೋ?
ಅಶಿಶಿಸುವನು ದಾಶಗೈವುದೇನು ನೀತವೋ? ೧೧
ಲೋಕನಾಥ ಕರುಣ ಪೂರ್ಣನೇ ಪರಾತ್ಪರ
ಯಾಕೆ ಯೊನ್ನೊಳಿನಿತು ನೀನು ನಿರ್ದಯಾಪರ ೧೨
ಗರವತಾಯಿತನನುಜಗೀಯೆ ಅವುದೋಗತಿ
ತರುಳನಲ್ಲಿ ಕರುಣಿಸುವದು ಕೃಷ್ಣ ಮೂರುತಿ ೧೩
ನೀನೆ, ಓರ್ವ ಜಗತ್ರಾತ ದಾತ ಜ್ಞಾತನು
ನಿನ್ನ ವಿನಹಾಭಿಷ್ಟಫಲದ ಕರ್ತೃ ಆವನು ೧೪
ಲಕ್ಷ್ಮಿಪತಿಯ ಪೋಲ್ಪೋದಾರ ಸುಗುಣ ಶೀಲನ
ಈಕ್ಷಿಸಲ್ಕೆ ಜಗದೊಳಾರನೆಲ್ಲಿ ಕಾಣೆನಾ ೧೫
ನಿನ್ನ ಔದಾರ್ಯ ಸರ್ವರಲ್ಲಿ ಸಾಮ್ಯವು
ಎನ್ನೊಳಿನಿತ್ತು ನಿನ್ನದ್ಯಾಕೆ ಕಾರ್ಪಣ್ಯವು ೧೬
ಆರ್ತಬಂಧುವೆಂದು ನಿನಗೆ ಶರಣುಬಂದೆನು
ಸಾರ್ಥಕವನು ಮಾಡುವಿಯೊ ಜರಿದೆ ಬಿರುದನು ೧೭
ದೀನ ಬಂಧು ಕರುಣಸಿಂಧು ಸುಹೃದ್ಬಾಂಧವ
ಹೀನ ಭವಾರ್ಣವದಿ ಮಗ್ನನಿರುವೆ ಭೂಧವ ೧೮
ತಾರಿಸೈ ಭವಾಬ್ದಿಯಿಂದ ಇಂದಿರಾವರ
ಸೂರಿಜನರ ಸಂಗವೆನ್ನಗೀಯೋಗಿರಿಧರ೧೯
ಶ್ರೀನೃಸಿಂಹ ಸತತ ನೀನು ಸದಯ ಮೂರುತಿ
ದೀನ ನನ್ನೊಳ್ಯಾಕೆ ನಿರ್ದಯವ ತೋರುತಿ ೨೦
ಸಾಧುಗಳು ನಿರ್ಗುಣಿಗಳಲ್ಲಿ ದಯವ ಮಾಳ್ಪರು
ಸಾದರದಲಿ ಸರ್ವರಲ್ಲಿ ಸದಯರಿಪ್ಪರು ೨೧
ಧನ್ಯಜನಕೆ ನಿನ್ನನೀವುದೇನು ಅಚ್ಚರ
ದ್ಯೆನ್ಯ ಬಡುವನನ್ನು ಪಾಲಿಸುವದು ಪರತರ ೨೨
ಚಂದ್ರಚಾಂಡಾಲಗೃಹದ ಮೇಲೆಯಾದರು
ಚಂದ್ರಿಕೆಯ ಪ್ರಭೆಯ ಹರಹದಿಹನೆ ಸುರತರು ೨೩
ಈತೆರ ಶ್ರೀ ಪತಿಯೆ ಎನಗೆ ಪ್ರೀತನಾಗೆಲೋ
ನೀತವಾಗಿ ಕರುಣದಿಂದ ಕರವಪಿಡಿಯಲೊ ೨೪
ಪುನಃ ಪುನಃ ನಿನ್ನನಿದನೆ ಬೇಡಿಕೊಂಬೆನಾ
ಮನದೊಳು ಪ್ರಸನ್ನನಾಗು ಜನಕಜಾರಮಣ೨೫
ಪಂಚರಾತ್ರಾಗಮೋಕ್ತ ಈಸ್ತುತಿಯನು
ಪಂಚವದನ ವಿನುತ ಶ್ರೀ ರಾಮಚಂದ್ರನು ೨೬
ಮುದದಿ ಮನಸಿನೊಳಗೆ ತಾನೆವದಗಿ ಪೇಳಿದ
ಅದನೆ ಶ್ರೀವರದೇಶ ವಿಠಲ ನುಡಿಸಿ ಬರೆಸಿದ ೨೭

 


ರಾಮ ಹರೇ ಹರೇ ರಾಮ ಹರೇ ಕೃಷ್ಣ
ಹರೇ ಹರೇ ಕೃಷ್ಣ ಹರೇ
ರಾಮ ರಾಮ ಹರೇ ಹರೇ ಹರೇ ಕೃಷ್ಣ
ಕೃಷ ಹರೇ ಹರೇ ಹರೇ ಪ
ಕೌಸಲ್ಯ ವರವಂಶೋದ್ಭವ ಸುರ
ಸಂಸೇವಿತ ಪದರಾಮ ಹರೇ
ಕಂಸಾದ್ಯಸುರರ ಧ್ವಂಸಗೈದಯದು
ವಂಶೋದ್ಭವ ಶ್ರೀ ಕೃಷ್ಣಹರೇ ೧
ಮುನಿಮಖರಕ್ಷಕ ದನುಜರಶಿಕ್ಷಕ
ಘಣಿಧರ ಸನ್ನುತರಾಮಹರೇ
ಘನವರ್ಣಾಂಗ ಸುಮನಸರೊಡೆಯ ಶ್ರೀ –
ವನಜಾಸನ ಪಿತ ಕೃಷ್ಣ ಹರೇ ೨
ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ
ಸುಲಲಿತ ಗುಣನಿಧಿ ರಾಮ ಹರೇ
ಬಲುವಕ್ರಾಗಿದ್ದ ಬಲೆಯ ಕ್ಷಣದಲಿ
ಚಲುವೆಯ ಮಾಡಿದ ಕೃಷ್ಣ ಹರೇ ೩
ಹರಧನುಭಂಗಿಸಿ ಹರುಷದಿಜಾನಕಿ
ಕರವಪಿಡಿದ ಶ್ರೀರಾಮ ಹರೇ
ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ
ಶರಣರ ಪಾಲಕ ಕೃಷ್ಣ ಹರೇ ೪
ಜನಕ ಪೇಳೆ ಲಕ್ಷ್ಮಣ ಸೀತಾ ಸಹ
ವನಕೆ ತೆರಳಿದ ರಾಮ ಹರೇ
ವನಕೆ ಪೋಗಿ ತನ್ನಣುಗರೊಡನೆ ಗೋ –
ವನು ಪಾಲಿಪ ಶ್ರೀ ಕೃಷ್ಣ ಹರೇ೫
ತಾಟಕೆ ಖರಮಧು ಕೈಟಭಾರಿಪಾ
ಪಾಟವಿ ಸುರಮಖ ರಾಮಹರೇ
ಆಟದಿ ಫಣಿಮೇಲ್ ನಾಟ್ಯವನಾಡಿದ
ಖೇಟವಾಹ ಶ್ರೀ ಕೃಷ್ಣ ಹರೇ ೬
ಚದುರೆ ಶಬರಿಯಿತ್ತ ಬದರಿಯ ಫಲವನು
ಮುದದಿ ಸೇವಿಸಿದ ರಾಮ ಹರೇ
ವಿದುರನ ಕ್ಷೀರಕೆ ವದಗಿ ಪೋದ ಶ್ರೀ
ಪದುಮನಾಭ ಜಯ ಕೃಷ್ಣ ಹರೇ ೭
ಸೇವಿತ ಹನುಮ ಸುಗ್ರೀವನ ಸಖಜಗ –
ತ್ಪಾವನ ಪರತರ ರಾಮಹರೇ
ದೇವಕಿ ವಸುದೇವರ ಸೆರೆಬಿಡಿಸಿದ
ದೇವ ದೇವ ಶ್ರೀ ಕೃಷ್ಣ ಹರೇ ೮
ಗಿರಿಗಳಿಂದ ವರಶರಧಿ ಬಂಧಿಸಿದ
ಪರಮ ಸಮರ್ಥ ಶ್ರೀರಾಮ ಹರೇ
ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ –
ಪರನ ಕಾಯ್ದ ಶ್ರೀ ಕೃಷ್ಣ ಹರೇ ೯
ಖಂಡಿಸಿದಶಶಿರ ಚಂಡಾಡಿದ ಕೋ –
ದಂಡಪಾಣಿ ಶ್ರೀ ರಾಮ ಹರೇ
ಪಾಂಡುತನಯರಿಂ ಚಂಡಕೌರವರ
ದಿಂಡುಗೆಡಹಿಸಿದ ಕೃಷ್ಣ ಹರೇ ೧೦
ತವಕದಯೋಧ್ಯಾ ಪುರಕೈದಿದ ತ –
ನ್ಯುವತಿಯೊಡನೆ ಶ್ರೀ ರಾಮ ಹರೇ
ರವಿಸುತ ತನಯಗೆ ಪಟ್ಟವಗಟ್ಟಿದ
ಭವತಾರಕ ಶ್ರೀ ಕೃಷ್ಣ ಹರೇ ೧೧
ಭರತನು ಪ್ರಾರ್ಥಿಸಲರಸತ್ವವ ಸ್ವೀ –
ಕರಿಸಿದತ್ವರದಲಿ ರಾಮ ಹರೇ
ವರಧರ್ಮಾದ್ಯರ ಧರಿಯೊಳು ಮೆರೆಸಿದ
ಪರಮಕೃಪಾಕರ ಕೃಷ್ಣ ಹರೇ ೧೨
ಧರೆಯೊಳಜ್ಞಜನರನು ಮೋಹಿಪುದಕೆ
ಹರನ ಪೂಜಿಸಿದರಾಮ ಹರೇ
ಹರನ ಪ್ರಾರ್ಥಿಸಿವರವನು ಪಡೆದಾ
ಚರಿತೆಯಗಾಧವು ಕೃಷ್ಣ ಹರೇ ೧೩
ಅತುಳಮಹಿಮ ಸದ್ಯತಿಗಳ ಹೃದಯದಿ
ಸತತ ವಿರಾಜಿಪರಾಮಹರೇ
ಸಿತವಾಹನ ಸಾರಥಿಯೆನಿಸಿದ
ಸುರತತಿ ಪೂಜಿತ ಪದ ಕೃಷ್ಣ ಹರೇ ೧೪
ರಾಮ ರಾಮ ಯಂದ್ನೇಮದಿ ಭಜಿಪರ
ಕಾಮಿತ ಫಲದ ಶ್ರೀ ರಾಮಹರೇ
ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ –
ದೇಶವಿಠಲ ಶ್ರೀ ಕೃಷ್ಣ ಹರೇ ೧೫

 


ರಾಮಚಂದ್ರನೆ ನಿನ್ನ ಪದಯುಗ ತಾಮರಸ ನೆರೆನಂಬಿದೆ
ಸೋಮಶೇಖರ ಪೂಜಿತಾಂಘ್ರಿ ಮಹಾಮಹಿಮ
ಪೊರೆಯೆನ್ನನು ಪ
ಜನನ ಮರಣವಿದೂರ ನೀನಾಜನಪತಿಯ ತನುಜಾತನೆ
ಅನಿಮಿಷೇಶರಿಗೊಡೆಯನೆನಿಸಿದೆ ೧
ಶ್ರೀರಮಣಿಯನಾದಿಕಾಲದಿ ನಾರಿಯನಿಪಳು ನಿನ್ನಗೆ
ಮಾರಹರಶರಮುರಿದು ಹರುಷದಿ ವಾರಿಜಾಕ್ಷೆಯ ವರಿಸಿದೆ ೨
ಮೂಜಗತ್ಪತಿಯಂದಿಗೆಂದಿಗು ರಾಜ್ಯತೊಲಗಿದನೆನಿಸಿದೆ
ಈ ಜಗದೊಳಿಹ ಅಜ್ಞ್ಞಜನರಿಗೆ ಸೋಜಿಗವ ನೀತೋರಿದೆ ೩
ಶ್ರೀಲಕುಮಿ ಪತೆ ನಿನ್ನ ಮಹಿಮಾ ಜಾಲದಿವಿಜರು ತಿಳಿಯರು
ನೀಲಮೇಘಶ್ಯಾಮ ಶಿಲೆಬಾಲೆ ಮಾಡಿದು ಚೋದ್ಯವೆ ೪
ಮುತ್ತುರತ್ನ ಕಿರೀಟ ಶಿರದಲಿ ಇತ್ತಿಹ್ಯರ್ಕಶತಪ್ರಭಾ
ನೆತ್ತಿಯಲಿ ಜಡೆಧರಿಸಿ ವಲ್ಕಲ ಪೊತ್ತು ತಿರುಗುವುದುಚಿತವೇ ೫
ಕುಜಭವ ಭವರರ್ಪಿಸಿದ ಎಡೆ ಭುಂಜಿಪುದು ನೀವಿರಲವೋ
ಅಂಜಿಕಿಲ್ಲದೆ ಭಿಲ್ಲಹೆಂಗಳೆಯಂಜಲವ ನೀ ಮೆದ್ದಿಯಾ ೬
ಮಂಗಳಾಂಘ್ರಿಯ ಭಜಿಪಯೋಗಿ ಜನಂಗಳಿಗೆ ನೀನಿಲುಕದೆ
ಹಿಂಗದತಿ ವನವನವ ಚರಿಸುವ
ಮಂಗಗಳಿಗೆ ನೀನೊಲಿದಿಯಾ ೭
ಹಾಟಕಾಂಬರ ತಾಟಕಾರಿ ವಿರಾಟ ಮೂರುತಿ ಎನ್ನಯ
ಕೋಟಲೆಯ ಕಡುತಾಪದಿಂಕಡೆದಾಟಿಸೆನ್ನನು ಜವದಲಿ ೮
ಭಾರವಿಲ್ಲದೆ ಅಖಿಲಜಗಸಂಹಾರ ಮಾಡುವಿಯನುದಿನ
ಕ್ರೂರರಾವಣ ಮುಖ್ಯದನುಜರಹೀರಿ ಬಿಸುಟಿದು ಜೋದ್ಯವೆ ೯
ಹರಿಯೆ ನಿನ್ನಯ ನಾವಇಧ್ಯಾನದಿ ಹರನು
ಶಾಂತಿಯ ಪೆÇಂದಿದ
ಧರಿಯ ದನುಜರ ಮೋಹಿಸಲು ನೀ
ಹರನ ಪೂಜಿಯಗೈದಿಯಾ ೧೦
ವಾರಿಜಾಭವ ಮುಖ್ಯದಿವಿಜರು ಪಾರುಗಾಣದೆ ಮಹಿಮನೆ
ಸಾರಿ ಭಜಿಸುವ ಭಕ್ತರಿಗೆ ಕೈವಾರಿಯಂದದಿ ತೋರುವಿ ೧೧
ತಾಮಸರ ಸಂಗದಲಿ ನೊಂದೆನು ಕಾಮಕ್ರೋಧದಿ ಬೆಂದೆನು
ಈ ಮಹಿಗೆ ನಾಭಾರವಾದೆನು ಪ್ರೇಮದಿಂದಲಿ ಪಾಲಿಸು ೧೨
ನಿನ್ನಧ್ಯಾನವ ತೊರೆದು ನಾಬಲು ಅನ್ಯವಿಷಯದಿ ರಮಿಸಿದೆ
ಎನ್ನ ದೋಷಗಳೆಣಿಸದಲೆ ಕಾರುಣ್ಯಸಾಗರ ಕರುಣಿಸು ೧೩
ಹೀನ ವಿಷಯಾಪೇಕ್ಷೆ ಬಿಡಿಸಜ್ಞಾನತಿಮಿರವ ನೋಡಿಸು
ಮೌನಿ ಮಧ್ವಾರ್ಯರ ಮತದ ವಿಜ್ಞಾನ ತತ್ವವ ಬೋಧಿಸು ೧೪
ಸಾಮಗಾನವಿಲೋಲ ರಘುಜನೆ ನೇಮದಿಂದಲಿನೀಯನ್ನ
ನಾಮವನೆ ಪಾಲಿಪುದು ಸಚಿದ್ಧಾಮ ವರದೇಶ ವಿಠಲನೆ ೧೫

 

ವಿಶೇಷ ಸಂದರ್ಭದ ಹಾಡು
ಶ್ರೀ ವರದೇಂದ್ರಾಖ್ಯಾನ ಉತ್ಸವ ವರ್ಣನೆ
೩೯
ವರದೇಂದ್ರಗುರು ನಿಮ್ಮ ಚರಣ ಸರಸಿರುಹಸಾರಿದೆ
ಪೊರೆಯುವದೈ
ಇರುಳುಹಗಲು ತವಸ್ಮರಿಸುತಲಿಹ ಭಕು –
ತರಿಗಿಹ ಪರಸುಖಸುರಿಸುವ ಶ್ರೀ ಗುರು ಪ
ಲಿಂಗಸುಗುರುನಿವಾಸ ಭಕ್ತ ಜಂಗುಳಿ ದುರಿತವಿನಾಶ
ಮಂಗಳ ಚರಿತ ಮೌನೀಶ ವಿಹಂಗವಾಹನ ನಿಜದಾಸ ೧
ವಸುಧೀಂದ್ರಕರಸಂಜಾತ ಸಿರಿ ವಸುಧಿಜಾಪತಿ ಪದದೂತ
ವಸುಧಿಯೊಳಗೆ ವಿಖ್ಯಾತ ಸುಮನಸರ ಸುವಂಶಜನೀತ ೨
ಚಲುವರಾಮ ಪದಲೋಲ ಶ್ರೀ ತುಲಸೀ
ಸುದರುಶನ ಮಾಲಾ
ಗಳದಿ ಧರಿಸಿಹ ಸುಶೀಲಾಕಲಿ ಮಲದ
ಕಲುಷ ನಿರ್ಮೂಲಾ ೩
ವಾಯುಮತಾಬ್ಧಿವಿಹಾರಾ ಕಾಷಾಯ ಕಮಂಡಲಧಾರಾ
ಮಾಯಿ ಜಲಜ ಚಂದಿರ ಗುರುರಾಯರ ಮಹಿಮೆಯಪಾರಾ ೪
ಪಂಡಿತಮಂಡಲಭೇಶ ಪಾಖಂಡಿಮತೋರುಗವೀಶ
ಪುಂಡರಖಂಡಿಪ ಕುಲಿಶ ತನ್ನ ತೊಂಡನೆಂದವರಘನಾಶ ೫
ಜ್ಞಾನಾನಂದದ ಖಣಿಯೋ ಅಜ್ಞಾನದ ತಿಮಿರ ತರಣಿಯೊ
ಆನತ ಚಿಂತಾಮಣಿಯೋ ಪಾಪಕಾನನ
ಕನಳನೀ ಮುನಿಯೋ ೬
ವೈರಾಗ್ಯದಿ ಪಶುಪತಿಯೊ ಗಾಂಭೀರ್ಯದಿ
ಸುರನದಿಪತಿಯೊ
ಧೈರ್ಯದಿ ಭೂಭತ್ಪತಿಯೊ ಚಾತುರ್ಯದಿ ವರಬ್ರಹ್ಮಸ್ರ‍ಪತಿಯೊ ೭
ದಾನದಿರವಿಜನೆನಿಪನು ಸುವಿಧಾನದಿ ಕ್ಷಿತಿಯ ಪೋಲುವನು
ಮೌನದಿ ಶುಕಮುನಿವರನು ಅಸಮಾನಯೋಗಿ ಎನಿಸುವನು ೮
ಹರಿಸ್ಮರಣಿಯಲಿರುತಿರುವ ನರಹರಿನಿಂದಿಪ ಮತತರಿವ
ಹರಿಪನೆಂಬರೆ ಪೊರೆವ ಶ್ರೀ ಹರಿಯಿವರಗಲದಲಿರುವ ೯
ಪ್ರಾಣೇಶ ದಾಸರೆನಿಪರು ಶ್ರೀ ಶ್ರೀನಿವಾಸನ ವಲಿಸಿಹರು
ಜ್ಞಾನಿಗಳಿಗೆಅತಿ ಪ್ರೀಯರು ಅಸಮಾನದಾಸರೆನಿಸುವರು ೧೦
ವರಕವಿ ಶ್ರೀ ಜಗನ್ನಾಥಾರ್ಯರ ಕರುಣ ಪಡೆದನವರತ
ಧರಣಿಯೊಳಗೆ ವಿಖ್ಯಾತ ನರಹರಿ ಯಸ್ಮರಿಸುತಿಹ ನಿರುತ ೧೧
ಹಿಂದಿನಸುಕೃತದಿ ಫಲದಿ ವರದೆಂದ್ರಾರ್ಯರು ವಂದಿನದಿ
ಚಂದದಿ ದಾಸಗೃಹದಿ ನಡೆತಂದರು ಬಹುಸಂಭ್ರಮದಿ೧೨
ಬಿನ್ನೈಸಿದ ಭಕುತಿಂದ ಮುನಿಮಾನ್ಯದರುಶನದಿಂದ
ಧನ್ಯಧನ್ಯನಾನೆಂದ ಪಾವನ್ನವಾಯ್ತು ಕುಲವೆಂದ ೧೩
ದಾಸಾರ್ಯರ ಭಕುತಿಯನು ನಿರ್ದೋಷವಾದ ಜ್ಞಾನವನು
ಸೋಸಿಲಿ ಗೈವ ಸೇವೆಯನು ನೋಡಿ
ತೋಷಬಡುತ ಮುನಿವರನು ೧೪
ಶ್ರೇಷ್ಠನಾದಯತಿವರನು ಉತ್ರ‍ಕಷ್ಟವಾದಸ್ಥಳವನ್ನು
ಕೃಷ್ಣಾರ್ಪಣವೆನುತಿದನು ಕೊಡೆ ತುಷ್ಟಿಯು
ನಮಗೆನುತಿಹನು ೧೫
ದೇಶಕರಿಂಗಿತವರಿದು ವರದಾಸಾರ್ಯರು ಕೈಮುಗಿದು
ಈ ಶರೀರತಮ್ಮದೆಂದು ಮಧ್ವೇಶಾರ್ಪಣವೆಂತೆಂದು ೧೬
ವಪ್ಪಿದ ತರುವಾಯದಲಿ ಮುನಿಸರ್ಪಶಯ್ಯನ ಸ್ಮರಿಸುತಲಿ
ತಪ್ಪದೆ ಸರ್ವದೇಶದಲಿ ತಾಕಪ್ಪವ ಕೊಳುತಲ್ಲಲ್ಲಿ ೧೭
ಕೆಲಕಾಲದಿ ಪುಣೆಯಲ್ಲಿ ಸಿರಿ ನಿಲಯನಂಘ್ರಿ ಸ್ಮರಿಸುತಲಿ
ಕಳೇವರ ತ್ಯಜಿಸಿದರಲ್ಲಿ ಆಬಳಿಕ ಲಿಂಗಸುಗೂರಲ್ಲಿ ೧೮
ತುಲಸಿ ವೃಕ್ಷರೂಪದಲ್ಲಿ ಇಲ್ಲಿನೆಲೆಸಿಹವೆಂದು ಸ್ವಪ್ನದಲಿ
ಗಂಜಿಯ ಮರಡಿಯಲಿ ಇದ್ದಶಿಲೆ ತರಿಸೆಂದು ಪೇಳುತಲಿ ೧೯
ಬಣವಿಯ ತ್ವರ ತೆಗೆಸುತಲಿ ತರುಮನುಜನಸರಿನೋಡುತಲಿ
ಮುನಿ ವಚನವನಂಬುತಲಿ ಶಿಲೆಯನು ತಂದಿರಿಸಿದರಿಲ್ಲಿ ೨೦
ವರಭುವನೇಂದ್ರ ಮುನಿಪನುಜುಮ್ಲಾ
ಪುರುದಲಾಗಯಿರುತಿಹನು
ತ್ವರದಿಂದಲಿ ಕಳುಹಿದನು ನರಹರಿ ಸಾಲಿಗ್ರಾಮವನು ೨೧
ವರಪುಣ್ಯ ಕ್ಷೇತ್ರದಲಿಂದ ಮುನಿವರ ತಾನಿಲ್ಲಿಗೆ ಬಂಞ್
ಶರಣರ ಪಾಲಿಪೆನೆಂದ ಸುಖಗರೆಯುತ ಅಲ್ಲಿಯೆ ನಿಂದ ೨೨
ಸುಂದರಪಾದುಕೆಗಳನು ಪುಣೆಯಿಂದಿಲ್ಲಿಗೆ ತರಿಸಿದನು
ವಂದಿಸುವವರ ಘಗಳನ್ನು ತ್ವರದಿಂದ ತರಿದು ಪೊರೆಯುವನು ೨೩
ದಾಸಕುಲಾಗ್ರಣಿಯನಿಪ ಪ್ರಾಣೇಶ ಕರಾರ್ಚಿತ ಮುನಿಪ
ದೇಶಿಕ ವರರೆಂದೆನಿಪ ರಘುಜೇಶ ಪದಾಂಬುಜ ಮಧುಪ ೨೪
ವೃಂದಾವನದಿ ನಿಂದಿರುವ ರಾಘವೇಂದ್ರರ ಧ್ಯಾನದಲಿರುವ
ಅಂದಣೇರಿ ತಾಮೆರೆವ ಭಕ್ತವೃಂದವ ಕಾದುಕೊಂಡಿರುವ ೨೫
ಪ್ರತಿಗುರುವಾಸರದಲ್ಲಿ ಜನತತಿ ಸಂಭ್ರಮದಿಂದಿಲ್ಲಿ
ಮಿತಿಯಿಲ್ಲದೆ ಭಕುತಿಯಲಿ ನಲಿಯುತ ವಾಲ್ಗೈಸುವರಿಲ್ಲಿ ೨೬
ಪ್ರತಿ ಪ್ರತಿ ವತ್ಸರದಲ್ಲಿ ಗ್ರೀಷ್ಮಋತು ಆಷಾಢಮಾಸದಲ್ಲಿ
ತಿಥಿ ಷಷ್ಟಿಯ ದಿವಸದಲಿ ದ್ವಿಜತತಿ ಸುಭೋಜನ ವಿಲ್ಲಿ ೨೭
ಮರುದಿವಸದ ಸಂಭ್ರಮವು ಶ್ರಿಂಗರಿಸಿದ ರಥದುತ್ಸವವು
ಪರಿಪರಿ ಜಸಂದಣಿಯು ಇದು ವರಣಿಪುದಕೆ ದುಸ್ತರವು ೨೮
ಯತಿವರ ಪರಮಾನಂದದಿಂದ ರಥವೇರಿ ಬರುವದು ಚಂದ
ಅತಿಹರುಷದಿ ಜನವೃಂದಗುರು ಸ್ತುತಿಮಾಳ್ಪದು ಮುದದಿಂದ ೨೯
ಮ್ಯಾಳದವರ ಗಡಿಬಿಡಿಯು ವಾದ್ಯತಾಳ
ಝಾಂಗಟಿ ದಮ್ಮುಡಿಯು
ಕಾಲುಗೆಜ್ಜೆಕಟ್ಟಿದಡಿಯುದಿವ್ಯ ಮೇಲು ಸರದ ಪದನುಡಿಯು ೩೦
ಭೇರಿ ಭಜಂತ್ರಿ ತುತ್ತೂರಿಗಂಭೀರದಿ ಹೊಡೆವನಗಾರಿ
ಭಾರಿಪಶಂಖನ ಪೂರಿಧ್ವನಿಗಾರದು ಅಂಬರ ಮೀರಿ ೩೧
ಹಲವು ಪುಷ್ಪ ಹಾರಗಳು ಪರಿಮಳ ಪರಿ ಪರಿಧೂಪಗಳು
ಫಲಗಳನೈವೇದ್ಯಗಳು ಮಂಗಳ ಕರ್ಪೂರ ದೀಪಗಳು ೩೨
ಹೊಳೆವ ಚವರ ಛತ್ರಿಗಳು ಥಳ –
ಥಳಿಪ ಪತಾಕಿ ಬೆತ್ತಗಳು
ಮಳೆಗರೆಯುವ ಕುಸುಮಗಳು ಇಳೆಯೊಳಗೀಯುತ್ಸವ
ಮಿಗಿಲು ೩೩
ಸಂತಜನರ ಜಯಘೋಷ ಅತ್ಯಂತ ಮನಕೆ ಸಂತೋಷ
ಮಂತ್ರಮಂದಿರದಂತೆ ಭಾಸ ಇತ ನಿಂತು
ಕುಣಿಯುತಿಹ ಶೀಶ ೩೪
ಕಂತುಪಿತನದಯದಿಂದ ಇಲ್ಲಿ ನಿಂತಿಹ ಸುರರಾನಂದ
ಎಂತೊರಣಿಪೆ ಮತಿಮಂದ ದುರಂತ ನಿಮ್ಮಯ ಗುಣವೃಂದ ೩೫
ಜಯ ಜಯವೆಂದು ಪಾಡುವರು
ಸುವಿನಯದಿಂದ ನಮಿಸುವರು
ಭಯವನು, ಈಡಾಡುವರು ತಮ್ಮಬಯಕೆ ಪೂರೈಸಿಕೊಳ್ಳುವರು ೩೬
ಜ್ವರಛಳಿ ವ್ಯಾಧಿ ಪೀಡಿತರು ಮತ್ತುರಗವೃಶ್ಚಿಕದಂಶಿಕರು
ತರುಳರಿಲ್ಲದ ಬಂಜೆಯರು ಮೂಕಕುರುಡ
ಕುಂಟರು ಬಧಿರರು ೩೭
ಪರಿಪರಿಗ್ರಹಪೀಡಿತರು ಬಹುಪರಿ ಶುಭಕಾಮಿಪ ಜನರು
ಪರಿಪರಿ ಸೇವಿಸುತಿಹರು ತಮ್ಮ ಹರಕೆ
ಪೊರೈಸಿಕೊಂಬುವರು ೩೮
ಸಾಷ್ಟಾಂಗದಿ ವಂದಿಪರು ಅಭಿಷ್ಟೇಯ ಪಡೆದುಕೊಳ್ಳುವರು
ಕಷ್ಟಗಳನು ನೀಗುವರು ಸಂತುಷ್ಟರಾಗಿ ತೆರಳುವರು ೩೯
ಇದುಪುಣ್ಯಕ್ಷೇತ್ರ ವೆನಿಸಿತು ಶ್ರೀಪದುಮೇಶಗಾವಾಸಾಯ್ತು
ಸದಮಲ ದಿವಿಜರು ನಿಂತು ಇಲ್ಲಿ
ಮುದದಿಂದನಲಿಯುವರಾಂತು ೪೦
ಈಸುಪದ ಪೇಳ್ವನೆಧನ್ಯ ಜಗದೀಶನ ತುತಿಸಿದ ಪುಣ್ಯ
ದೇಶಿಕಪತಿ ಮುನಿಮಾನ್ಯ ವರದೇಶ ವಿಠಲಾಗ್ರಗಣ್ಯ ೪೧

 


ವರದೇಶ ವಿಠಲರಾಯಾ ಗುರು
ವರದೇಂದ್ರರ ಪ್ರೀಯಾ
ಮರಿಯದೆ ನೀಯನ್ನ ಕೈಯ್ಯಾ
ಪಿಡಿದು ಪೊರೆಯಬೇಕು ಜೀಯಾ ಪ
ಒಂದು ದಿನ ನಿನ್ನ ಮನದಲಿ
ನೊಂದು ನುಡಿದ ಯನ್ನ
ಮಂದನ್ನ ಮಾಡಿದ್ಯೊ ಇನ್ನ ನಿನ್ನ
ಸುಂದರ ಮೂರುತಿ ತೋರೆಲೋಘನ್ನ ೧
ಏನು ತಿಳಿಯೆ ಮೂಢ ತನದಿ ನಾ
ಹೀನಭವದಿಗಾಢ
ಮಾನವ ಜನರೊಳಕ್ರೀಡಾ –
ಪರನಾ ಜ್ಞಾನಕಳಿಯೊ ಪ್ರೌಢ ೨
ಹರಿಪರಜನಸಂಗ ಮಾಡದೆ
ನರರೊಳಗಾದೆನು ಮಂಗ
ಸುರವರ ಸಹಿತಾಂತ ರಂಗ –
ದೊಳು ವರದೇಶ ವಿಠ್ಠಲರಂಗ ೩

 

ಶ್ರೀರಾಘವೇಂದ್ರರ ಸ್ತೋತ್ರ
೨೬
ವಿನಯಾದಿಂದಲಿ ನಮಿಸುವೆನಾ ವೃಂದಾ
ವನದಿ ರಾಜಿಪ ರಾಘವೇಂದ್ರ ಗುರವಿನ ಪ
ದುರಿತವಾರಣ ಪಂಚಾನನನ ನರ –
ಹರಿರೂಪಸ್ತಂಭದಿ ಪ್ರಕಟಗೈಸಿದನ
ಹರಿಭಕ್ತಾಗ್ರಣಿಯೆಂದೆನಿಪನ ನಾರ –
ದರ ಉಪದೇಶಗರ್ಭದಿ ಕೈಕೊಂಡಿಹನ ೧
ಸಿರಿವ್ಯಾಸತೀರ್ಥರೆನಿಪನ ಪುರಂ –
ದರ ದಾಸಾರ್ಯರಿಗು ಪದೇಶ ಗೈದವನ
ವರಚಂದ್ರಿಕಾ ರಚಿಸಿದನ ದುಷ್ಟ
ಪರಮಾದ್ರಿಗಳಿಗೆ ಕುಲಿಶನೆನಿಪನ ೨
ಶ್ರೀ ಸುಧೀಂದ್ರ ಕರಾಬ್ಜಜನ ದಿವ್ಯ
ಭಾಸುರ ಪರಿಮಳ ಗ್ರಂಥ ಕರ್ತರನ –
ಮೀಸಲ ಮನದಿ ಭಜಿಪರನ ದೋಷ –
ನಾಶನ ಗೈಸಿ ಪೋಷಿಸುವ ಶಕ್ತರನ೩
ವರಮಂತ್ರ ಸದ್ಮನಿಲಯನ ಶ್ರೀ –
ಗುರು ಮಧ್ವಮತ ದುರಂಧರದೆನಿಸುವನ
ಹರಿಪ್ರೀತಿ ಪೂರ್ಣಪಾತ್ರರನ
ಈ ಧರಿಯೊಳು ಬಹುಪರಿ ಮೆರೆವ ಮುನಿಪನ ೪
ತುಂಗಭದ್ರಾತೀರವಾಸನ ಶುಭ
ಮಂಗಲಚರಿತ ಕಮಂಡಲಧರನ
ರಂಗವರದೇಶ ವಿಠಲನ ಪದ
ಭೃಂಗ ಯತಿಕುಲ ಕಂಜಾರ್ಕ ಸನ್ನಿಭನ ೫

 

೨೦
ಶಂಭೋಶಿವಹರ ತ್ರಿಯಂಬಕ ಶ್ರೀಜಗ –
ದಂಬಾರಮಣ ಪರಿಪಾಲಯಾ ಪ
ಅಜಿನಾಂಬರಧರ ಭಜಿಪರಾರ್ತಿಹರ
ತ್ರಿಜಗಪಾವನ ಗಂಗಾಧರ ೧
ನಂದಿವಾಹನ ಸುರವೃಂದ ಸುಪೂಜಿತ
ಇಂದ್ರ ವಂದಿತ ಗರಕಂಧರ ೨
ರುಂಡಮಾಲಧರ ಶುಂಡಾಲಮದಹರ
ಚಂಡವಿಕ್ರಮ ಉಗ್ರೇಶ್ವರ ೩
ದಕ್ಷಾಧ್ವರ ಹರದುಷ್ಟಶಿಕ್ಷಕ ವಿರೂ –
ಪಾಕ್ಷನೆ ವೈರಾಗ್ಯನಿಧೆ ೪
ವಾಮದೇವನೆ ಭಕ್ತಾಕಾಮಿತ ಫಲದನೆ
ಕಾಮಸಂಹರ ಕರುಣಾಕರ ೫
ಮೃತ್ಯುಂಜಯನೆ ಯನ್ನಪಮೃಹಾರಕಹರಿ
ಭಕ್ತಾಗ್ರೇಸರ ಶಿವಶಂಕರ ೬
ರಾಮನಾಮಲೋಲ ತಾಮಸಖಳಕಾಲ
ಧಿಮಂತಜನ ಪರಿಪಾಲಕ ೭
ಗಿರಿಜಾರಮಣ ನಿನ್ನ ಗುರುವೆಂದು ಮೊರೆಹೊಕ್ಕೆ
ಹರಿಭಕ್ತಿಯಲ್ಲಿ ಮನನಿಲ್ಲಿಸೋ ೮
ನಂಬಿದೆ ನಿನ್ನ ಪಾದಾಂಬುಜ ಯುಗಳ ಹೇ
ರಂಭಜನಕ ಪೊರಿಯನ್ನನು೯
ರಜತಾಚಲನಿವಾಸ ರಜನಿಚರ ವಿನಾಶ
ಅಜನಸುತನೆ ದಿಗಂಬರ ೧೦
ಸರ್ವಶ್ರೀ ನ ಸಖ ಮು –
ಪ್ಪುರಹರ ಶ್ರೀ ಮಹಾದೇವ ೧೧

 


ಶ್ರೀ ಪತಿಯೆ ನಿನ್ನ ದಯವೆಂತಾಹದೋ
ಪಾಪಕರ್ಮವ ಮಾಡಿ ಜೀವಿಸುವೆ ನಿರುತ ಪ
ಬಾಲತನವನು ಬಾಲಲೀಲೆಯಿಂದಲಿ ಕಳೆದೆ
ಕೀಳು ಜನರೊಡನೆ ಸ್ನೇಹವ ಬೆರಸಿದೆ
ಹಾಳು ಹರಟೆಗೆ ಹೊತ್ತು ಸಾಲದೋಯಿತು ಯನಗೆ
ಶ್ರೀ ಲೋಲ ನಿನ್ನಡಿಗೆ ದೂರಾದೆ ನಾನು ೧
ಬುದ್ಧಿ ಪೂರ್ವಕದಿ ಸದ್ವಿದ್ಯೆಯನು ಕಲಿಯದಲೆ
ಶುದ್ಧ ತಾಮಸ ವಿದ್ಯದೊಳು ರಮಿಸಿದೆ
ಮಧ್ವಶಾಸ್ತ್ರದಸಾರವನ್ನು ತಿಳಿಯದೆ ನಾನು
ಕದ್ದಕಳ್ಳನ ತೆರದಿ ಬಾಳಿದೆನು ಬರಿದೆ ೨
ಪ್ರಾಯತನವೆ ವಿಷ ಪ್ರಾಯವಾಯಿತು ಎನಗೆ
ಕಾಯಜನ ಉಪಟಳದಿ ಮತ್ತನಾದೆ
ತೋಯಜಾಕ್ಷಿಯರ ದುರ್ಮಾಯ ಜಾಲಕೆ ಸಿಲುಕಿ
ನೋಯಿಸಿದೆ ನಿಜ ಸತಿಯ ಪರಿಪರಿಯಲಿಂದ ೩
ಮದನ ಜನಕನೆ ನಿನ್ನ ಮಧುರನಾಮವ ಮರೆದು
ಸುದತಿಯರ ಅಧರಾಮೃತಕೆ ಬೆರೆದು
ವಿಧಿಕುಲಾಚರಣೆ ಜರೆದ್ಹಗಲಿರುಳು ನಾರಿಯರ
ವದನವನು ನೋಡಿ ಮೋದಿಪನರಾಧಮನೊಳ್ ೪
ಉದರ ಗೋಸುಗ ಪರರ ಹೃದಯ ದ್ರವಿಸುವ ತೆರದಿ
ವಿಧ – ವಿಧದಿ, ಆತ್ಮ ಸ್ತೊತ್ರವನೆ ಪೊಗಳಿ
ಸದ-ಸದ್ವಿ ವೇಕವನು ತೊರೆದನ್ಯರ್ಹಳಿದು ಬಲು
ಚದುರ ನಾನೆಂಧೇಳಿ ಮೋಸಗೊಳಿಸುತ ಜನರ ೫
ಕರಿವರದ ನಿನ್ನ ಸಿರಿ ಚರಣಕ್ಕೆ ಶಿರ ಬಾಗ
ದ್ಹರಿ ಭಕುತರಿಗೆ ವಿನಯದಿಂದೆರಗದೆ
ನಿರುತದಲಿ ನಾಚಿಕಿಲ್ಲದಲೆ ಭೂದನುಜಯ ವಾನರಿಗೆ
ಕರಮುಗಿದು ಜೀವಿಪಖೂಳ ಮನುಜನೊಳು ೬
ಸತ್ಯಧರ್ಮವ ತ್ಯಜಿಸಿ ಮತ್ತೆಯುತ್ತಮರಜಾ –
ನ್ನತ್ಯವನು ಸಹಿಸದಲೆ ತತ್ತಳಿಸುವೆ
ಪೆತ್ತವರ ಸೇವಿಸದೇ ಮಿಥ್ಯವನೆ ಬೊಗಳಿದು –
ಷ್ರ‍ಕತ್ಯದಿಂಬಾಳ್ವ ಉನ್ಮತ್ತನರ ಪಶುವಿನೊಳು ೭
ಹರಿಗೆರಗದಿರುವ ಶಿರ ಹರಿಯ ಸ್ಮರಿಸದ ಜಿಂಹೆ
ಹರಿವಾರ್ತೆಯಾಲಿಸದ ಕರ್ಣಂಗಳು
ಹರಿಯ ಪೂಜಿಸದ ಕರ ಹರಿಯ ನೋಡದ ಚಕ್ಷು
ಸರುವ ಪರಿಯ ಪವಿತ್ರದೇಹಧರಿಸಿದ ನರಗೆ ೮
ಪರರ ಹಿಂಸೆಯಗೈಸಿ ಪರರ ವಿತ್ತ ಪಹರಿಸಿ
ಪರರ ನಿಂದಿಸಿ ಪರರ ಬಲುವಂಚಿಸಿ
ಪರಮೇಷ್ಟಿ ಜನಕನೆ ಪರತರ ಪರಂಜ್ಯೋತಿ
ಪರದೈವನೆಂದರಿಯದಿರುವ ಪಾಮರನಿಗೆ ೯
ನಾಮಾಡದಿಹ ಪಾಪ ವೀಮಹಿಯೊಳೊಂದಿಲ್ಲ
ಸೀಮೆಗಾಣಲು ರವಿಜನಿಗೆ ಸಾಧ್ಯವಿಲ್ಲ
ಆ ಮಹಾನರಕಂಗಳೆನಗೆ ತಕ್ಕವು ಅಲ್ಲ
ಸ್ವಾಮಿ ನೀಪೊರೆಯದಿರೆ ಯನಗಾರು ಗತಿಯಿಲ್ಲ ೧೦
ಏನಾದರೊಳಿತೆ ವರದೇಶ ವಿಠಲ ನಿನ್ನಾ
ಜ್ಞಾನುಸಾರದಿ ಕರ್ಮಗಳ ಮಾಡಿದೆ
ಧೀನರಕ್ಷಕನೆಂಬ ಬಿರಿದು ನಿಜ ವಿದ್ದರಾ –
ದೀನನಾದವನನುದ್ಧರಿಸಲರಿಯಾ ೧೧

 

ಶ್ರೀ ರಘುಕಾಂತ ತೀರ್ಥರ ಸ್ತೋತ್ರ
೨೭
ಶ್ರೀ ರಘುಕಾಂತ ತೀರ್ಥರ ದಿವ್ಯ
ಪದಕಂಜಸಾರಿಭಜಿಪ ಭಕ್ತರ
ಘೋರ ಬಡಿಸುತಿಪ್ಪ ಘಾವಳಿಗನೆಲ್ಲ
ದೂರವೋಡಿಸುವ ಶಕ್ತ ವಿರಕ್ತ ಪ
ದಿನಕರ ಕುಲಜಾತ ವನಜಾರಾಧ್ಯಸು –
ಮನಸವ್ರಾತ ಸನ್ನುತ
ಇನಕೋಟಿಪ್ರಭೆಗಾತ್ರ ಮನಸಿಜ ಪಿತಸ –
ನ್ಮುನಿಗಣನುತ ರಾಮಚಂದ್ರ ಪಾದಭೃಂಗ ೧
ಯತಿಕುಲ ರತುನ ಭಕುತಸುರತರುವೆ ಸ –
ದ್ಗತಿ ದಾತಾ ಜಿತಮದನ
ಪತಿತಪಾವನ ಮುನಿ ಯತಿ ರಘುದಾಂತತೀ
ರಥ ಕರಸನ್ನುತ ಪಾದ ಪಂಕೇಜ ೨
ಕಾಮಿತಫಲದ ನಿಸ್ಸೀಮ ಮಹಿಮ ಭಕ್ತ
ಪ್ರೇಮ ಪಾವನ ಚರಿತ
ಸಾಮಜವರದ ಶ್ರೀ ನ
ಪ್ರೇಮ ಪಾತ್ರ ಮಹಾ ಮಹಿಮ ನಿಷ್ಕಾಮ ೩

 

೨೮
ಶ್ರೀ ರಘುದಾಂತರ ಚಾರುಚರಣಗಳು
ಸೇವಿಪರಘಗಳನು
ದೊರಗೈಸಿ ಕೃತಕೃತ್ಯನಾದೆನಾನು
ಭವಭಯವೆನಗೇನು ಪ
ಹೇಸಿಭವದಿ ಸುಖಲೇಶಕಾಣದಿರಲು
ಬೇಸರವಾಗಲು ದೇಶ ದೇಶದೋಳು ಬರುಪರಿಯರಿತಿರುಗಿ
ಮನದಲಿ ನಾ ಮರುಗಿ ಏಸುಯಾತ್ರೆಗಳ
ಚರಿಸಿ ತೋಷಬಡದೆ
ಸಂಚರಿಸುತ ನಡೆದೆ ಶ್ರೀಶನನುಗ್ರಹದಿವರಡಿಗಳ
ಪಡೆದೆ ಭವ ಬಂಧ ಕಡಿದೆ ೧
ಹೀನಜನರ ಸಂಸರ್ಗದೋಷವನು ಕಲಿಮಲ ಕಲುಷವನು
ಕಾನನ ತೃಣವನು ಅನಳದಹಿಸುವಂತೆ
ದಹಿಪವು ಬಿಡು ಭ್ರಾಂತಿ
ನಾನಾತೀರ್ಥ ಕ್ಷೇತ್ರ ಯಾತ್ರೆಫಲವು ಒದಗಿಸಿಕೊಡುತಿಹವು
ಜ್ಞಾನಭಕುತಿವೈರಾಗ್ಯ ಕೊಡುತಲಿಹವು
ಗುರುಗಳ ಪದಯುಗವು ೨
ಗುರುಪದರಜದ ಮಹಿಮೆಯ ಪರಿಮಿತವು ವರ್ಣಿಸಲಸದಳವು
ಶಿರದಿ ಧರಿಸೆಸಾರಿಸಕುಲಪಾವನವು ಎನಿಪುದು ನಿಶ್ಚಯವು
ಶರೀರಕೆ ಲೇಪಿಸೆ ಸಕಲವ್ಯಾಧಿ ಭಯವು ಪರಿಹರವಾಗುವವು
ನಿರುತಸೇವಿಸೆ ಮುಕುತಿಯೆ ಕರಗತವು ಅಹುದು ಶಾಶ್ವತವು ೩
ಗುರುಪದಪೊಂದದೆ ಹರಿ ಕರುಣಿಸನೆಂದು
ತಿಳಿ ಮನಸಿಗೆ ತಂದು
ಹರಿಮುನಿದರು ಗರುಪೊರೆಯಲು ಸಮರ್ಥ
ಈ ನುಡಿ ಸಿದ್ಧಾಂತ
ಹರಿಯಂದದಿ ಗುರುಶರಣರ ಎಡೆಬಿಡದೆ
ಕರುಣಿಪ ಕೈಬಿಡದೆ
ಗುರುಚರಣಾಶ್ರಯಿಸಲು ಹರಿವಲಿಯುವನು
ಮನದಲಿ ಪೊಳೆಯುವನು ೪
ನೇಮದಿ ಗುರುಪದ ಭಜಿಸಲು ಸಂಪದವು
ಸಂತತ ಲಭಿಸುವವು
ರಾಮನ ಪದಯುಗ್ಮಗಳಲಿ ಸದ್ರತಿಯು
ಪರಿಶುದ್ಧ ಭಕುತಿಯು
ತಾ ಮುದದಲಿ ಕೊಡುವ
ಬಡದಿರು ಸಂಶಯವ
ಪಾಮರ ನರಗುರು ಪದ ನಂಬದೆ ಕೆಡುವ
ಬಹುದುಃಖವ ಬಡುವ ೫

 

೨೯
ಶ್ರೀ ವರದೇಂದ್ರನಿಗೆ ನಮೋ ನಮೋ ಕೋವಿದ
ವಂದ್ಯಗೆ ನಮೋ ನಮೋ
ಸೇವಿಪ ಜನರ ಕೃಪಾವಲೋಕನದಿ ಕಾವಕರುಣಿಗೆ
ನಮೋ ನಮೋ ಪ
ದೇಶಿಕವರ್ಯಗೆ ನಮೋ ನಮೋ
ದೋಷವಿದೂರಿಗೆ ನಮೋ ನಮೋ
ಕಾಷಾಯ ಕಮಂಡಲ ಧಾರಗೆ ನಮೋ
ಭಾಸುರ ಚರಿತಗೆ ನಮೋ ನಮೋ ೧
ವಸುಧೀಂದ್ರರ ಕರಜಾತನಿಗೆ
ವಸುದಿಜೀವರ ಸಂಪ್ರೀತನಿಗೆ
ದಶದಿಶೆಯೊಳು ವಿಖ್ಯಾತನಿಗೆ
ಕಸವರಭಾಂಗ ಪ್ರಖ್ಯಾತನಿಗೆ ೨
ಮರುತ ಮತಾಂಬುಧಿ ಸೋಮನಿಗೆ
ಪರಮತ ತಿಮಿರ ತರಣಿ ನಿಭಗೆ
ವರದೇಶ ವಿಠಲನ ಸ್ಮರಿಸುತ ಲಿಂಗಸು –
ಗುರುಸುಕ್ಷೇತ್ರ ನಿವಾಸನಿಗೆ ೩

 

೧೦
ಶ್ರೀರಾಮ ಜಯರಾಮ ಜಯ ಜಯತು ರಾಮ
ಶ್ರೀರಾಮ ಜಯರಾಮ ಜಯ ಜಯತು ರಾಮ ಪ
ನಮೋ ರಾಮಚಂದ್ರ ಸದಾಪೂರ್ಣಾನಂದ
ನಮೋ ಸುಗುಣ ಸಾಂದ್ರ ಕೌಸಲ್ಯಕಂದ
ನಮೋ ರಾಘವೇಂದ್ರ ಸೀತಾ ಕುಮುದ ಚಂದ್ರ
ನಮೋ ಅಜಭವೇಂದ್ರಾದ್ಯಖಿಲ ಸುರವಂದ್ಯ ೧
ನಿನ್ನ ಉದಯದಿರವಿಯು ಉನ್ನತಿಯನೈದಿಹನು
ಘನ್ನತೆಯ ಪೊಂದಿಹರು ಕೌಸಲ್ಯದಶರಥರು
ನಿನ್ನ ಅನುಜರು ಜಗದಿ ಪರಮ ಪಾವನ್ನರು
ನಿನ್ನರಸಿ ಶ್ರೀಸೀತೆ ತ್ರೈಲೋಕ್ಯ ಮಾತೆ ೨
ನಿನ್ನ ಕರುಣದಿ ಹನುಮ ಬ್ರಹ್ಮತ್ವ ವೈದಿದನು
ನಿನ್ನ ನಾಮದಿ ವ್ಯಾಧ ವಾಲ್ಮೀಕನಾದ
ನಿನ್ನ ಪದರಜ ಸೋಂಕಿ ಶಿಲೆಯಬಲೆಯಾದುದು
ನಿನ್ನ ಪ್ರೇರಣೆಯಿಂದ ಪ್ರಣವೆ ಜ್ವಾಲಾಯಿತು ೩
ನಿನ್ನ ಪ್ರೇಮದಿ ಶಬರಿ ಮುನ್ನ ಸವಿನೋಡಿ ಫಲ
ನಿನ್ನ ಪದಕರ್ಪಿಸಲು ಘನಪದವಿಯಿತ್ತೆ
ನಿನ್ನ ಸಖ್ಯವನೆ ಬೆರಸಿದವ ಸುಗ್ರೀವನು
ಧನ್ಯವಾಗಿರುತಿಪ್ಪ ನಿಹಪರಂಗಳಲಿ ೪
ನಿನ್ನ ದಾಸ್ಯವನೈದಿ ಅನಂತ ಕಪಿವರರು
ಉನ್ನತೋನ್ನತ ಯೋಗ್ಯತೆಗಳ ಪಡೆದಿಹರು
ನಿನ್ನ ದ್ವೇಷದಿ ರಾವಣಾದಿಗಳು ಮಡಿದರು
ನಿನ್ನ ಪೊಂದಿದ ವಿಭೀಷಣ ರಾಜ್ಯಪಡೆದ ೫
ಚತುರಾಸ್ಯ ಮುಖ ಸುರರು ಕೃತ ಪುಟಾಂಜಲಿಯಲ್ಲಿ
ಸ್ಥಿತರಾಗಿ ಇರುತಿಹರು ನಿನ್ನಾಜ್ಞದಿ
ಇತರ ಮನುಜರ ತೆರದಿ ಪಿತನಾಜ್ಞೆ ಪಾಲಿಸಲು
ವ್ರತವನೇ ಕೈಕೊಂಡು ವನಕೈದಿದೆ ೬
ಜಾನಕಿಯು ಅವಿಯೋಗಿ ನಿನ್ನ ಬಳಿಯಿರುತಿರಲು
ವಾನರರ ಭಲ್ಲೂಕಗಳ ಸೇನೆನೆರಹಿ
ಕಾನನವ ಸಂಚರಿಸಿ ಖಳರನ್ನು ಮೋಹಿಸಿದೆ
ಶ್ರೀನಿಧಿಯೆ ತವ ಲೀಲೆ ಬಹು ಚೋದ್ಯವು ೭
ತಾಮಸರ ಸಂಹರಿಸಿ ಭೂಮಿ ಭಾರವನಿಳಿಸಿ
ನೇಮದಿಂ ಕೈಕೊಂಡು ರಾಜ್ಯವನ್ನು
ಪ್ರೇಮದಿಂ ಪಾಲಿಸಿದೆ ಪ್ರಜೆಗಳನು ವಿಧವಿಧದಿ
ತಾಮರಸಜನ ಪ್ರಾರ್ಥನೆಯ ಮನ್ನಿಸಿ ೮
ನಿನ್ನ ರಾಜ್ಯವೆ ಸಕಲ ಸುಖದ ಸಾಮ್ರಾಜ್ಯವು
ನಿನ್ನ ಯಾಙ್ಞವೆ ವೇದವಾಣಿಯಿಂದಧಿಕವು
ನಿನ್ನನಂತವತಾರಗಳ ಚರಿತೆ ಸೋಜಿಗವು
ನಿನ್ನಯವತಾರಕ್ಕು ಮೂಲಕ್ಕಭೇದವು ೯
ನಿನ್ನ ಮಹಿಮಾ ಜಲಧಿಯೊಳು ರಮೆಯು ಮುಳುಗಿಹಳು
ನಿನ್ನ ಸ್ತುತಿಗೈವ ನಾಲ್ಮೊಗನು ನಾಲ್ಮೊಗದಿಂ
ನಿನ್ನ ಧ್ಯಾನದಿ ಸದಾ ಮೋದಿಪನು ಮಾರುತನು
ನಿನ್ನನೇ ಪಾಡುವರು ಅಜಪವನ ಪತ್ನಿಯರು ೧೦
ನಿನ್ನ ನಾಮವ ಸವಿದು ಭವನು ನಲಿನಲಿಯುತಿಹ
ಪನ್ನಗನು ಖಗರಾಜ ರತಿ ವರ್ಣಿಸುವರು
ಚನ್ನೆ ಪಾರ್ವತಿಯು ವಾರುಣಿಯು ಸೌಪರ್ಣಿಯು
ಚನ್ನಾಗಿ ಪಾಡುವರು ನಿನ್ನ ಗುಣಗಳನು ೧೧
ಇಂದ್ರಾದಿ ಸುರರು ನಾರದಾದಿ ಋಷಿವರರು
ವಂದಿಸುತ ಭಕ್ತಿಯಲಿ ನಿನ್ನ ಪದಗಳಿಗೆ
ಅಂದದಲಿ ವೀಣಾ ಸುಗಾನ ಸಂಗೀತದಲಿ
ಒಂದೊಂದೇ ಮಹಿಮೆಗಳ ಪೊಗಳಿ ಕುಣಿಯುವರು ೧೨
ಸುಖತೀರ್ಥಮುನಿರಾಜ ಗುರುರಾಘವೇಂದ್ರಾರ್ಯ
ಅಕಳಂಕ ವಗ್ದೇಂದ್ರ ಯತಿಸಾರ್ವಭೌಮರು
ಮುಕುತಿದಾಯಕ ನಿನ್ನ ಪದಕಮಲ ಪೂಜಿಸುತ
ಪ್ರಖರ ಕಿರಣದಿ ಜಗವ ಬೆಳಗುತ್ತಲಿಹರು ೧೩
ತಾಳತಂಬೂರಿ ಸಮ್ಯಾಳದಿಂದಲಿ ಕೂಡಿ
ಕಾಲುಗೆಜ್ಜೆಯ ಕಟ್ಟಿ ಮೇಲು ಸ್ವರದಿಂದ
ಶ್ರೀಲೋಲ ಪರನೆಂದು ಹರಿದಾಸವರ್ಯರು
ಮೇಲಾದ ಭಕ್ತಿಯಲಿ ವಾಲ್ಗೈಸುತಿಹರು ೧೪
ನಿನ್ನ ಲೀಲೆಯ ಕಥೆಯು ಮುಕ್ತಿಗೆ ಸತ್ಪಥವು
ನಿನ್ನ ನಾಮದ ಮಹಿಮೆ ನಿಗಮಗಮ್ಯ
ನಿನ್ನ ಚರಣೋದಕವು ತ್ರಿಜಗಪಾವನ್ನವು
ನಿನ್ನ ನೇಮವೇ ಸೃಷ್ಟಿ ಸ್ಥಿತಿಲಯಕೆ ಕಾರಣವು ೧೫
ನಿನ್ನ ನಾಮದಿ ಭರದಿ ಶುಕನು ಕುಣಿದಾಡುತಿಹ
ನಿನ್ನ ಧ್ಯಾನದಿ ಯೋಗಿವೃಂದ ಸಂದಿಪು (ದು)
ನಿನ್ನ ತೋಷದಿ ತೃಣವು ಬ್ರಹ್ಮನಿಂದಧಿಕವು
ನಿನ್ನ ರೋಷದಿ ಅಜಭವಾದ್ಯರು ತೃಣರು ೧೬
ನಿನ್ನ ಸುಂದರ ಮೂರ್ತಿ ಕಣ್ಣಿಗಲ್ಹಾದಕರ
ನಿನ್ನಂಘ್ರಿ ಸೇವೆ ಸಾಮ್ರಾಜ್ಯಗಿಂ ಪರತರವು
ನಿನ್ನ ನಾಮದ ಘೋಷ ಕಿವಿಗೆ ಸಂತೋಷವು
ನಿನ್ನ ನಾಮದ ರುಚಿಯು ಅಮೃತಕಿಂತಧಿಕ ೧೭
ನಿನ್ನ ಧ್ಯಾನವೆ ಸಕಲ ಸಾಧನದ ಸಾರವು
ನಿನ್ನ ಗುಣಗಾನವೆ ಶಾಸ್ತ್ರಗಳ ಭೂಷಣವು
ನಿನ್ನ ಮಹಿಮಾರಹಿತ ಕಾವ್ಯವಗ್ರಾಹ್ಯವು
ನಿನ್ನ ಲೀಲಾ ರಹಿತ ಶಾಸ್ತ್ರವೆ ಕುಶಾಸ್ತ್ರ ೧೮
ನಿನ್ನ ನಾಮಧ್ಯಾನವೇ ದೇಹ ಸಾರ್ಥಕವು
ನಿನ್ನ ನಾಮವೆ ವಿವಿಧ ರೋಗನಿರ್ಮೂಲಕವು
ನಿನ್ನ ನಾಮವೆ ದುರಿತರಾಶಿಗೆ ಪಾವಕವು
ನಿನ್ನ ನಾಮವೆ ಸಕಲಭವಬಂಧ ಮೋಚಕವು ೧೯
ನಿನ್ನ ವ್ಯಾಪ್ತತೆಯು ಅಣು – ರೇಣು ತೃಣ ಕಾಷ್ಟದಲಿ
ನಿನ್ನ ದಯಪರಮೇಷ್ಠಿಯಿಂದಿರುವೆಗಳಲಿ
ನಿನ್ನ ಪ್ರೇಮದಿ ನಲಿದ ಮಂದಮತಿ ವಂದ್ಯನು
ನಿನ್ನಲ್ಲಿ ಮಮತೆಯಿಲ್ಲದವದೂಷಿತನು ೨೦
ಅಜಭವಗಿರೀಶಾ ಭಜಕಜನ ದಾಸಾ
ಸುಜನಮನತೋಷಾ ಕುಜನ ಮನಕ್ಲೇಶ
ದ್ವಿಜತತಿಯ ಪೋಷ, ರಜನಿಚರನಾಶ
ರಜತಪುರಧೀಶ, ಭುಜಗಗಿರಿ ವಾಸ ೨೧
ತಂದೆ ತಾಯಿಯು ನೀನೆ, ಬಂಧು ಬಳಗವು ನೀನೆ
ಹಿಂದು ಮುಂದು ನೀನೆ, ಎಂದೆಂದು ನೀನೆ
ಬಂದಭಯ ಪರಿಹರಿಸಿ ಕುಂದದಲೆ ಕಾಯ್ವಸಂ –
ಬಂಧಿಗನು ಆಪ್ತ ಗೋವಿಂದ ನೀನೆ ೨೨
ಸೃಜಿಸಿದವನು ನೀನೆ ಪೋಷಿಸಿದವನು ನೀನೆ
ನಿಜಗತಿಯ ಜೀವರಿಗೆ ನೀಡುವವನು ನೀನೆ
ಅಜಪಿತನೆ ನಿನ್ನ ಪದ ಭಜನೆ ಮಾಳ್ಪವರನ್ನು
ನಿಜವಾಗಿ ಕಾಪಾಡಿ ಪೊರೆವ ಪ್ರಭುನೀನೆ ೨೩
ಕೊಡುವವನು ನೀನೆ ಕೋಳುವವನು ನೀನೆ
ಅಡಿಗಡಿಗೆ ಸುಖದುಃಖ ನೀಡುವವ ನೀನೆ
ಕೊಡುವದಾತನು ನೀನೆ ಕೊಟ್ಟದ್ದು ಕೊಂಡರೆ
ಹೊಡಕೊಂಡು ಅಳುವದ್ಯಾತಕೆ ಮೂಢಪ್ರಾಣಿ ೨೪
ಈ ಪೊಡವಿಯೊಳು ಮೊದಲು ನಾನು ಬಹು ಕಾಲದಿ
ಕೌಪೀನ ಸಹ ಯನ್ನ ಸಂಗಡಿರಲಿಲ್ಲ
ಈ ಪೊಡುವಿಯನು ಬಿಟ್ಟು ನಾ ಪೋಪಕಾಲಕ್ಕು
ಈ ಪರಿಯೆ ಪೋಪೆನೆಂಬುದು ಸಟಿಯು ಅಲ್ಲ ೨೫
ಗಾಡಿ ವಾಜಿಯು ಮತ್ತೆ ಬೆಡಗಿನ ವಸನಗಳು
ಕೇಡುಯಿಲ್ಲದವಾ ಭರಣ ವಸ್ತುಗಳು
ನಾಡಿನೊಳು ಬಹುಮನ್ನಣೆಯು ಯೆಂಬರೆಲ್ಲೆನ್ನ
ಕೂಡಬರಬಹುದಾದುದೊಂದುಯಿಲ್ಲ ೨೬
ಎಷ್ಟುಗಳಿಸಿದರೆನ್ನ ಹೊಟ್ಟೆಗೊಂದೇ ರೊಟ್ಟಿ
ಸೃಷ್ಟಿಪತಿ ನಿನ್ನಂಘ್ರಿ ನಿಷ್ಠೆ ತೊರೆದು
ಕಷ್ಟ ನಷ್ಟಗಳನ್ನು ಸಹಿಸಿ ನಿಷ್ಠ್ಠುರನಾಗಿ
ದುಷ್ಟತನದಿಂದ ನಾನಿಷ್ಟುಪರಿಗಳಿಸಿ ೨೭
ದಾನಧರ್ಮಗಳಿಲ್ಲ ವ್ರತನೇಮಗಳುಯಿಲ್ಲ
ಆನಮಿಸಿಕೊಡಲಿಲ್ಲ ಮಾನಿ ವಿಪ್ರರಿಗೆ
ಧೇನುಪಾಲನೆ ನಿನ್ನಧ್ಯಾನವನ್ನೇ ಮರೆದು
ಶ್ವಾನನಂದದಿ ಕಾದು ಕೊಂಡು ಕುಳಿತಿಪ್ಪೆ ೨೮
ವಾರನಾರಿಯರಲ್ಲಿ ವೇಷಧಾರಿಗಳಲ್ಲಿ
ಸೊರೆಮಾಡಿದೆ ಕರ್ಣನೆನಿಸ ಬೇಕೆಂದು
ಶ್ರೀರಮಾಪತಿ ನಿನ್ನ ಚರಣ ಕಮಲಗಳನ್ನು
ಆರಾಧಿಪರಿಗೆ ನಾರುವ್ವಿ ಕೊಡಲಿಲ್ಲ ೨೯
ಸತಿಸುತರು ಹಿತದವರು ಹಿತವ ಮೇಲ್ತೋರಿದು –
ರ್ಗತಿಗೆನ್ನ ಗುರಿಮಾಡುತಿಪ್ಪರಲ್ಲದಲೇ
ಕ್ಷಿತಿ ಪತಿಯೆ ನಿನ್ಹೊರತು ಹಿತವ ನಿಜ ತೋರಿ ಪರ –
ಗತಿಗೆ ಸಾಧನ ತೋರ್ಪರಾರು ಯನಗಿಲ್ಲ ೩೦
ಈ ಮಹಾಜ್ವರದಿಂದ ನೊಂದು ನಿನ್ನನು ನೆನೆವೆ
ನಾಮಹಾಭಕ್ತಿಯಲಿ ನಂಬಿದವನಲ್ಲ
ನಾ ಮಾಡಿದ ಪಾಪರಾಶಿಗಳ ಪರಿಹರಿಸಿ
ಪ್ರೇಮದಿಂದಲಿ ಪೊರೆಯೋ ಪರಮಕರುಣಿ ೩೧
ರೋಗವನೆ ಹೆಚ್ಚಿಸು ನಿರೋಗಿಯನು ಮಾಡು ಭವ
ರೋಗದಿಂದಗತೀ ಕಡೆದಾಂಟಿಸು
ಯೋಗಿವರ ನಿನ್ನಿಚ್ಛೆ ಹೇಗೆಮಾಡಿದರುಸರಿ
ಆಗದೆಳ್ಳಿನಿತು ಸಂಕೋಚವೆನಗೆ ೩೨
ನೀಕೋಟ್ಟಕವಚವಿದು ನೀ ತೆಗೆದು ಹಾಕಲ್ಕೆ
ನಾಕೆಟ್ಟುದುದುಯೇನು ಕರುಣಾಳುವೆ
ಈ ಕವಚ ಕೆಲಕಾಲ ಬಿಟ್ಟಮಾತ್ರಕೆ ಮುಂದೆ
ನೂಕಬೇಡೆನ್ನ ಮನ ಪಾಪಗಳ ಕಡೆಗೆ ೩೩
ತನುಮನವು ನಿನ್ನದು ಧನಧಾನ್ಯ ನಿನ್ನದು
ವನಿತೆ ನಿನ್ನವಳು ಮನೆ ಮಾರು ನಿನ್ನದು ದೇವ
ಎನಗಾಪ್ತರೆಂಬುವರು ನಿನ್ನದಾಸರು ರಾಮ
ಎನದೆಂಬ ವಸ್ತುವೆಲ್ಲವು ನಿನ್ನದು ೩೪
ನಿನ್ನ ನಂಬಿದಯನೆಗೆ ಪಾಪದಂಜಿಕೆಯಿಲ್ಲ
ಪುಣ್ಯದಾಶೆಯು ಇಲ್ಲ ಪರಮಪುರುಷ
ನಿನ್ನ ಪ್ರೇರಣೆಯಿಂದ ಯನಿ

 

೩೭
ಸ್ಮರಿಸಿ ಬದುಕಿರೋ ಗುರುರಾಯರ ಪದವ
ಕೊಡುವನು ಸಂಪದವ
ತ್ವರಿತದಿ ಭಜಿಸಲು ಹರುಷದಿ ಕರಪಿಡಿವ
ಸುಜ್ಞಾನವ ಕೊಡುವ ಪ
ಪ್ರಥಮದಿ ದ್ವಿಜಕುಲ ತತಿಯಲ್ಲಿ ಅವತರಿಸಿ
ಬಹುಜರನು ವಲಿಸಿ
ಪಿತೃಭ್ರಾತಾಚಾರ್ಯನು ತಾನೆಂದೆನಿಸಿ ಕವಿವರ ನೆಂದೆನಿಸಿ
ಯತಿವರ ರಘುಕುಲವರ್ಯನ ಸೇವೆಯನು
ಬಹುವಿಧದಲಿ ತಾನು
ಅತಿಹಿತದಲಿ ಗೈಯಲು ಸುಸ್ತವವನು
ವರ್ಣಿಸೆ ಮಹಿಮೆಯನು೧
ಸ್ಮರಿಸುವ ಭಕ್ತರ ಪೊರೆವಕರಣಿತಾನು ಸ್ವೀಕರಿಸಿದನದನು
ಹರಿಸಾಕ್ಷಾನನವೆನಿಪಸುವಾಕ್ಯವನು ಸಂಪಾದಿತ ತಾನು
ಹರಿವಿಶ್ವಸುನಾಮದಿ ಭೂತಳದಲ್ಲಿ ಉದಿಸಿದ ಮುದದಲ್ಲಿ
ಪರಿಚಾರ ಕಾಮದಿ ಕರಸ್ನೇಹದಲಿ ಜನಿಸಿದ ಪೂರ್ವದಲಿ ೨
ಸಿರಿಗೋಪಾಲಾಖ್ಯರು ಸುಜ್ಞಾನವನು ಕರುಣಿಸೆ ಮರ್ಮವನು
ಸರಸದಿ ಗ್ರಂಥದವರ ಸುಹಸ್ಯವನು ಸಂಗ್ರಹಿಸಿದ ತಾನು
ಸಿರಿರಘುವರ ಕರುಣದಿ ಧರೆಯೊಳು ಮೆರೆವುಲ್ಲರುವಿಗಿಲ್ಲರುವ
ವರದೇಶ ವಿಠಲನ ಭೃತ್ಯನೆ ತಿಳಿಯುವನು
ಗುರುವಿನ ಮಹಿಮೆಯನು ೩

 

೧೧
ಸ್ಮರಿಸುವೆನು ಸದ್ಭಕ್ತಿಯಲಿ ಶ್ರೀರಾಮನ ಗುಣಧಾಮನ
ಸಿರಿವಿರಿಂಚಾದ್ಯಮರಗಣ ಸಂಸ್ತುತ್ಯನ ಸಂತೃಪ್ತನಾ ಪ
ಆದಿಯಲಿ ಝಷನಾಗಿ ನಿಗಮವ ತಂದನ ಮುನಿವಂದ್ಯನ
ಭೂಧರಾಧರ ದಿವಿಜರಿಗೆ ಸುಧೆಗರೆದನ ಸುರವರದನ
ಕಾದು ಕಿಟರೂಪದಲಿ ಭೂಮಿಯ ತಂದನ ಗುಣವೃಂದನ
ಬಾಧಿಸಿದ ರಕ್ಕಸನ ತರಿದು ಪ್ರಲ್ಹಾದನ ತಾ ಪೊರೆದನ ೧
ಪೊಡವಿ ಮೂರಡಿ ಮಾಡಿಬಲಿಯನು
ತುಳಿದನ ಅವಗೊಲಿದನ
ಕೊಡಲಿ ಪಿಡಿದಾ ಕ್ಷತ್ರಿಕುಲ ವಿರಾಮನ ಭೃಗು ರಾಮನ
ಮೃಡನೊರದಿ ಯುನ್ಮತ್ತ ದೈತ್ಯರು ಬಾಧಿಸೆ ಧರಿ ಪ್ರಾರ್ಥಿಸೆ
ಜಡಜ ಪೀಠಾದ್ಯಮರರಾ ಮೊರೆ ಕೇಳ್ದನ ಧರೆಗಿಳಿದನ ೨
ದಶರಥನ ಸತಿಯುದರದಲಿಯವತರಿಸಿದ ಮುದಗರಿಸಿದ
ಬಿಸರುಹಾಪ್ತನ ವಂಶವನು ಉದ್ಧರಿಸಿದ ಮೈಮರಸಿದ
ದಶದಿಶೆದಿ ಸುರರೆಲ್ಲ ಪೂಮಳೆಗರೆದರು ಸುಖಸುರಿದರು
ಅಸಮಲೀಲೆಯ ತೋರ್ದರಘುಕಲಚಂದ್ರನ ಸುಖಸಾಂದ್ರನ ೩
ಗಾಧಿಸುತನಧ್ವರವ ಕಾಯ್ದ ಸಮರ್ಥನ ಜಗಕರ್ತನ
ವೇದಧನು ಮೊದಲಾದ ಕಲೆಗಳ ತಿಳಿದನ ಮುನಿಗೊಲಿದನ
ಹಾದಿಯಲಿ ಶಿಲೆಯಾದ ಅಹಲ್ಯಳ ಪೊರೆದನ ಸಿರಿವರದನ
ಮೋದದಲಿ ಹರಧನು ಮುರಿದ ಗಂಭೀರನ ಬಹುಶೂರನ ೪
ಜನಕಭೂಪತಿ ತನುಜಳೆನಿಸಿದಸೀತೆಯ ಭೂಜಾತೆಯಾ
ಘನಹರುಷದಲಿ ವಲಿಸಿಕರವನು ಪಿಡಿದನ ಯಶಪಡೆದನ
ದನುಜರುಪಟಳತೋರಲಾಕ್ಷಣ ಸೀಳ್ಪನ ಸುರರಾಳ್ದನ
ತನಗೆ ತಾನೇ ಸೋಲಿಸಿದ ಜನಮೋಹನ ಖಗವಾಹನ ೫
ಜನಕನಾಜ್ಞವ ಪಾಲಿಸಿದ ದಯವಂತನ ಅಘಶಾಂತನ
ಅನುಜಸತಿಸಹ ಪುರದಿ ತಾಪೊರಮಟ್ಟನ ಅತಿಧಿಟ್ಟನ
ವನದಿ ಬಹು ಮುನಿಗಳ ಕಾರಾರ್ಚಿತನಾದನ ಸುಪ್ರಸಾದನ
ಅನುಜ ಭರತಗೆ ದಯದಿ ಪಾದುಕೆ ಕೊಟ್ಟನ ಸಂತುಷ್ಟನ ೬
ಮನುಜರಂದದಿ ಸತಿವಿಯೋಗವತೋರ್ದನ ಕುಜನಾರ್ದನ
ವನಿತೆಯಂಜಲ ಫಲಗಳನು ತಾಮೆದ್ದನ ಶ್ರುತಿಸಿದ್ಧನ
ದನುಜರಿಪು ಹನುಮಂತನನು ಸಾರೆ ಗರೆದನ ಕರುಣಿಸಿದನ
ವನಜ ಸಖಸುತನೊಡನೆ ಸಖ್ಯವ ಮಾಡ್ಡನ ವರನೀಡ್ಡನ ೭
ಲೀಲೆಯಿಂದಲಿ ತಾಳ ಮರಗಳ ಸೀಳ್ದನ ನೆರೆಬಾಳ್ದನ
ವಾಲಿಯನು ಸಂಹರಿಸಿದತಿಬಲವಂತನ ಶ್ರೀಕಾಂತನ
ಮೇಲೆನಿಪ ರಕ್ಕಸರನೆಲ್ಲರ ತುಳಿದನ ಅಸುಸೆಳೆದನ
ಶ್ರೀಲತಾಂಗಿಯ ಕ್ಷೇಮವಾರ್ತೆಯ ಕೇಳ್ದನ ಮುದತಾಳ್ದನ ೮
ಗಿರಿಗಳಿಂದಲಿ ಶರಧಿಯನು ಬಂಧಿಸಿದನ ಸಂಧಿಸಿದನ
ಹರಿಗಳೆಲ್ಲರ ಕೂಡಿಲಂಕೆಯ ಸಾರ್ಧನ ರಣದಿರ್ದನ
ಉರುಪರಾಕ್ರಮಿ ರಾವಣನ ಶಿರಕಡಿದನ ಹುಡಿಗೆಡೆದನ
ವರವಿಭೀಷಣ ಭಕ್ತಗಭಿಷೇಚಿಸಿದನ ಪೋಷಿಸಿದನ ೯
ಸಿರಿಸಹಿತ ಪುಷ್ಪಕವನೇರಿದ ಚಲುವನ ಅತಿ ಪೊಳೆವನ
ತ್ವರದಿಶೃಂಗರಿಸಿದ ಅಯೋಧ್ಯಕೆ ಬಂದನ ಅಲ್ಲಿ ನಿಂದನ
ಭರತ ಪ್ರಾರ್ಥಿಸಲಾಕ್ಷಣದಿ ಮೊರೆ ಕೇಳ್ದನ ಧರಿಯಾಳ್ದನ
ಸರಸಿಜಾಸನ ಪ್ರಮುಖರಾರ್ಚನೆ ಕೊಂಡನ ಕೋದಂಡನ ೧೦
ಮರುತಸುತನಿಗೆ ಅಜನ ಪದವಿಯನಿತ್ತನ ಬಹುಶಕ್ತನ
ಚರಣಸೇವಕ ಜನಕಭೀಷ್ಟದಾತನ ವಿಖ್ಯಾತನ
ನಿರುತ ಸನ್ಮುನಿಹೃದಯ ಮಂದಿರ ವಾಸನ ಜಗದೀಶನ
ಸ್ಮರಣೆ ಮಾತ್ರದಿ ದುರಿತರಾಶಿಯ ತರಿದನ ಸುಖಗರೆವನ ೧೧
ದೇವಕೀ ವಸುದೇವ ಸುತನೆಂದೆನಿಪನ ಜಗಕಧಿಪನ
ಮಾವನನು ಸಂಹರಿಸಿ ಶಕಟನ ಕೊಂದನ ಆನಂದನ
ಗೋವು ಕಾಯುತ ಗಿರಿಯ ಬೆರಳಲಿ ಆಂತನ ಬಹುಶಾಂತನ
ಗೋವ್ರಜದಿ ಗೋಪಿಯರ ವಸನವ ಕಳೆದನ ಅಹಿತುಳಿದನ ೧೨
ಲೋಕನಾಥನು ಪಾರ್ಥಸಾರಥಿಯಾದನ ಸುಪ್ರಮೋದನ
ನೇಕ ಪರಿಭಗವತ್ಸುಗೀತೆಯ ಪೇಳ್ದನ ತಮಸೀಳ್ದನ
ಆ ಕುರು ಕುಲವ ತರಿದ ಪಾಂಡವ ಪ್ರಾಣನ ಸುಪ್ರವೀಣನ
ಆಕುರುಪ ಭೀಷ್ಮನಿಗೆ ಮುಕ್ತಿಯ ಕೊಟ್ಟನ ಅತಿಶ್ರೇಷ್ಟನ ೧೩
ಕಪಟನಾಟಕ ನಗ್ನರೂಪದಿ ನಿಂತನ ನಿಶ್ಚಿಂತನ
ತ್ರಿಪುರದಲಿ ಜಲಜಾಕ್ಷಿಯರ ವ್ರತ ಭಂಗನ ನಿಸ್ಸಂಗನ
ಕೃಪಣವತ್ಸಲ ತುರಗವೇರಿ ತಾನಡೆದನ ಅಸಿಪಿಡಿದನ
ಅಪರಿಮಿತ ಬಹುಕ್ರೂರ ಯವನ ವಿಘಾತನ ಪ್ರಖ್ಯಾತನ ೧೪
ಈ ವಿಧದಿ ಬಹುಲೀಲೆ ಗೈವ ಸುಚರಿತನ ಜಗಭರಿತನ
ಭಾವಶುದ್ಧಿಲಿ ಭಜಿಸುವವರಘಕಡಿವನ ಗತಿಕೊಡುವನ
ಪಾವಮಾನಿ ಮತಾನುಗರ ಕರಪಿಡಿವನ ಭವತಡೆವನ
ದೇವತತಿ ಸದ್ವಿನುತ ವರದೇಶ ವಿಠಲನ ನಿಷ್ಕುಟಿಲನ ೧೫

 

೧೨
ಹರಿನಿನ್ನ ಕರುಣವಿರಾಲಾವ ಭಯವು
ಸ್ಮರಣಿ ಮಾತ್ರದಿ ಸಕಲದುರಿತಗಳ ಪರಿಹರಿಪ ಪ

ಸಣ್ಣ ವಯದಲಿ ಶ್ರೀ ಜಗನ್ನಾಥದಾಸಾರ್ಯ
ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ
ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ –
ಬಿನ್ನಪವನಾಲಿಸಿ ರೋಗಮೋಚನ ಗೈದ ೧
ದಾಸಕುಲರತ್ನ ಪ್ರಾಣೇಶ ದಾಸಾರ್ಯರ
ಆಸುವಂಶದ ತರುಳ ರೋಗದಿಂದಾ
ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು
ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ ೨
ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ
ಇರಳ್ಹಗಲು ನಿಮ್ಮ ನಾಮ ಸ್ಮರಿಸುವಂಥ
ತರುಳ ನೀ ಪರಿ ಪೀಡಿಸುವದುಚಿತವೇನೊ ಶ್ರೀ
ಹರಿ ವಿಚಾರಿಸಿ ನೀನೆಸಿದಯದಿಂದ ನೋಡೊ ೩
ವಾಸವಾದ್ಯಮರನುತ ವಾಸುದೇವನೆ ನೀನು
ಈ ಸಮಯದೊಳಗಿವನ ಕರುಣದಿಂದ
ಪೋಷಿಸಲು ನಿನ್ನ ಪೊಂದಿರುವ ಸದ್ಭಕ್ತರ
ದಾಸನೆಂದೆನಿಸಿ ಜೀವಿಸಲಿಯನವರತ ೪
ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ
ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ
ನಿನ್ನ ಸೇವಕರ ಬಲು ಬನ್ನ ಬಡಿಸಲು ಸಲ್ಲ
ಇನ್ನು ನೀ ಕರುಣಿಪುದು  ೫

 

ಗಿರಿಜಾಪತಿ ತವ ಚರಣಕೆ
ಶ್ರೀ ಮಹಾದೇವರ ಸ್ತೋತ್ರ
೧೯
ಗಿರಿಜಾಪತಿ ತವ ಚರಣಕೆ ಎರಗುವೆ
ಕರುಣದಿಂದೆನ್ನನು ಪೊರೆ ಮಹಾದೇವ ಪ
ನಂದಿವಾಹನ ಸುರವೃಂದ ಸುಪೂಜಿತ
ಇಂದ್ರವಿನುತ ಭಕ್ತಾನಂದದಾಯಕನೇ ೧
ರುಂಡ ಮಾಲಾಧರ ಶುಂಡಾಲ ಮದಹರ
ಚಂಡವಿಕ್ರಮ ಮೃಕಂಡಜ ವರದ ೨
ಭೂಜಗ ವಿಭೂಷ ವಿಜಯ ಸುಪೋಷ
ಅಜಿನಾಂಬರಧರ ತ್ರಿಜಗವಂದಿತನೆ ೩
ಗರಕಂಧರ ಹರ ಸುರಗಂಗಾಧರ
ಸ್ಮರಸಂಹರ ನಿಜ ಶರಣರಪಾಲ ೪
ವರದೇಶ ವಿಠಲನನಿರುತದಿ ಸ್ಮರಿಸುವ
ಕರುಣಾಕರಭವಹರ ಶಂಕರ ಶಿವ ೫

 

ಹಾಡಿನ ಹೆಸರು :ಗಿರಿಜಾಪತಿ ತವ ಚರಣಕೆ
ಹಾಡಿದವರ ಹೆಸರು :
ಶಕುಂತಲಾ ನರಸಿಂಹನ್
ರಾಗ :ಶಾಮ್‍ಕಲ್ಯಾಣ್
ತಾಳ :ಕೆಹರವ ತಾಳ
ಸಂಗೀತ ನಿರ್ದೇಶಕರು :ಶಕುಂತಲಾ ನರಸಿಂಹನ್
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ದಾಸನೆನಿಸು ಜೀಯಾ

ದಾಸನೆನಿಸು ಜೀಯಾ ಶ್ರೀ ವರದೇಶ ವಿಠಲರಾಯಾ
ದಾಸರಥಿಯೆ ಯನ್ನಾಶೆ ತಳೆದು ನಿರ್ದೋಷನೆನಿಸಿ
ಬಹು ಮೀಸಲು ಮನವಿತ್ತು ಪ
ವರದೇಂದ್ರರ ಆಜ್ಞಾದಿಂದಲಿ
ಗುರುವರ ಮಹಾಪ್ರಾಜ್ಞಾ
ವರದೇಶ ವಿಠಲೆಂಬ ಗುರುತಿನ ಮುದ್ರಿಕೆ
ಪರಮ ಪಾಮರಗೆ ತ್ವರ ಕರುಣಿಸಿದಕೆ ೧
ಜ್ಞಾನ ಶೂನ್ಯ ನಾನು ಸರ್ವದ
ಹೀನ ವಿಷಯ – ರತನು
ವಾನರನ ತರದಿ ಮಾಣಿಕೆಂಬ ತೆರ
ಹೀನನೆನಿಸದಲೆ ಪೋಣಿಸು ಸನ್ಮತಿ೨
ಏಸು ಪೇಳಲಿನ್ನಾ ಶ್ರೀ ವರ-
ದೇಶ ವಿಠಲ ನಿನ್ನಾ
ದಾಸರ ವಚನಕೆ ದೋಷ ಬಾರದಂತೆ
ಲೇಸು ಭಕುತಿ ಜ್ಞಾನ ದಾಸ್ಯವಿತ್ತು ತವ ೩

 

ಹಾಡಿನ ಹೆಸರು :ದಾಸನೆನಿಸು ಜೀಯಾ
ಹಾಡಿದವರ ಹೆಸರು :ಶಶಿಧರ್ ಪಿ.
ಸಂಗೀತ ನಿರ್ದೇಶಕರು :ಶಂಕರ್ ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಪಾಲಿಸೆನ್ನನು ಪವಮಾನನ
ಶ್ರೀ ಭಾರತೀ ದೇವಿಯ ಸ್ತೋತ್ರ
೧೮
ಪಾಲಿಸೆನ್ನನು ಪವಮಾನನ ರಾಣಿ
ಪಾಲಿಸೆನ್ನ ಸುಗುಣಾಲಯ ಶ್ರೀಹರಿ
ಲೀಲೆ ತಿಳಿಸಿ ಭವಜಾಲವ ಹರಿಸೆ ಪ
ಮಾತರಿಶ್ವ ಸತಿ, ಪ್ರೀತಿಲಿ ಹರಿಪದ
ದೂತನೆನಿಸಿ, ಅನಾಥನ ಪೊರಿಯೆ ೧
ವಿದ್ಯುನ್ನಾಮಕೆ ವಿದ್ವಜ್ಜನಪಾ –
ದದ್ವಯ ಸೇವಿತ ಬುದ್ಧಿಯ ನೀಡೆ ೨
ಲಿಂಗನಿವಾಸಿ ವಿಲಿಂಗಗೈಸಿ ಯನ್ನ
ರಂಗನ ಪದದಲಿ ಭೃಂಗನ ಮಾಡಿ೩
ಜನನಿಯೆ ನಿನ್ನಯ ತನಯಗೆ ಜ್ಞಾನದ
ಸ್ತನವನಿತ್ತು ಪೊರೆ ಹನುಮನರಸಿಯೆ ೪
ಶರಣಾಗತಜನ ಪೊರೆಯುವ ಕರುಣಿಯ
ವರದೇಶ ವಿಠಲನ ಚರಣವ ತೋರೆ ೫

 

ಹಾಡಿನ ಹೆಸರು :ಪಾಲಿಸೆನ್ನನು ಪವಮಾನನ
ಹಾಡಿದವರ ಹೆಸರು :ಚಿತ್ರಾ *
ರಾಗ :ಅಠಾಣ
ತಾಳ :ಮಿಶ್ರ ಛಾಪು ತಾಳ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು :ರಮಾಕಾಂತ್ ಆರ್. ಎಸ್.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ವರದೇಶ ವಿಠಲರಾಯಾ ಗುರು

ವರದೇಶ ವಿಠಲರಾಯಾ ಗುರು
ವರದೇಂದ್ರರ ಪ್ರೀಯಾ
ಮರಿಯದೆ ನೀಯನ್ನ ಕೈಯ್ಯಾ
ಪಿಡಿದು ಪೊರೆಯಬೇಕು ಜೀಯಾ ಪ
ಒಂದು ದಿನ ನಿನ್ನ ಮನದಲಿ
ನೊಂದು ನುಡಿದ ಯನ್ನ
ಮಂದನ್ನ ಮಾಡಿದ್ಯೊ ಇನ್ನ ನಿನ್ನ
ಸುಂದರ ಮೂರುತಿ ತೋರೆಲೋಘನ್ನ ೧
ಏನು ತಿಳಿಯೆ ಮೂಢ ತನದಿ ನಾ
ಹೀನಭವದಿಗಾಢ
ಮಾನವ ಜನರೊಳಕ್ರೀಡಾ –
ಪರನಾ ಜ್ಞಾನಕಳಿಯೊ ಪ್ರೌಢ ೨
ಹರಿಪರಜನಸಂಗ ಮಾಡದೆ
ನರರೊಳಗಾದೆನು ಮಂಗ
ಸುರವರ ಸಹಿತಾಂತ ರಂಗ –
ದೊಳು ವರದೇಶ ವಿಠ್ಠಲರಂಗ ೩

 

ಹಾಡಿನ ಹೆಸರು : ವರದೇಶ ವಿಠಲರಾಯಾ ಗುರು
ಹಾಡಿದವರ ಹೆಸರು :ಪ್ರತಿಮಾ ಬೆಳ್ಳಾವೆ
ರಾಗ : ಮಿಶ್ರ ತಿಲಂಗ
ತಾಳ :ಕೆಹರವ ತಾಳ
ಸಂಗೀತ ನಿರ್ದೇಶಕರು :ಶಕುಂತಲಾ ನರಸಿಂಹನ್
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *