Categories
ರಚನೆಗಳು

ವಿಜಯದಾಸ – ಭಾಗ – 2

ಈ ಬದುಕಿನಲ್ಲಿ ನಿರಾತಂಕವಾಗಿ ಜೀವಿಸಲು

೪೬
ಧ್ರುವತಾಳ
ಚಿತ್ತವೆ ಚಲಿಸದಿರು ಪ್ರಚಂಡ ಪಂಚ ಮಾರ್ಗದ
ಮೊತ್ತದಲ್ಲಿಗೆ ನೀನು ಸಾಗಿ ಪೋಗಿ
ವಿತ್ತಾದಿಗಳ ಬಯಕೆ ಫಲವಿಲ್ಲ ಫಲವಿಲ್ಲ
ಅತ್ತಲಿತ್ತಲಿ ನೋಡು ತಿಳಿದರಾಗೆ
ತೆತ್ತು ಅನಂತ ಜನುಮಗಳಲ್ಲಿ ಅರಸಿದರು
ಉತ್ತಮಲೋಕಕ್ಕೆ ನೆಲೆಯಾಗುದು
ಹತ್ತು ನೂರಾರು ಕೋಟಿ ಪಿಪಿಲಿಕಾ ಕೂಡಿಡಲು
ಉತ್ತಮ ಗಜಕೇಸರಿ ಕೇಸರಿ ಎನಿಸುವುದೆ
ತತ್ತಳಗೊಳದಿರು ಚನ್ನಾಗಿನ್ನು ವಿಷ್ಣು
ತತ್ವ ವಿಚಾರಿಸು ಸುಜನರೊಡನೆ
ಹತ್ತಿ ಬಾಹೊ ದೋಷದೂರಾಗಿ ನಿಂದಾವು
ಚಿತ್ತಮಾರ್ಗದಲ್ಲಿ ನಲಿದಾಳ್ಪದು
ಹತ್ತಾರು ಕಳೆಗೊಡಿದ ಲಿಂಗದಲ್ಲಿ ಪ್ರಥಮಾವರ್ಕ
ಸುತ್ತುವ ಭಾಗದಲ್ಲಿ ನಿನ್ನವಾಸಾ
ನಿತ್ಯದಲ್ಲಿ ನೀನು ನಿಜ ಪ್ರಕಾಶವೊಡಗೊಡಿ
ಎತ್ತ ನೋಡಿದರತ್ತ ಪೋಪಾದೇನು
ಹೊತ್ತು ಹೊತ್ತಿಗೆ ವಿಷಯ ಧ್ಯಾನವನ್ನು ಮಾಡಿ ಸಂ
ಪತ್ತೆ ಪೋಗಾಡದಿರು ಒಲಿದು ಕೇಳು
ಇತ್ತ ಲಾಲಿಸುವುದು ಬಿನ್ನೈಸುವನು ಮಹಾ
ಕತ್ತಲಿಯೊಳು ಪುಟ್ಟಿ ಬಿದ್ದು ಕಣ್ಣು ಮುಚ್ಚಿ
ಸುತ್ತ ತಿರುಗಿದಂತೆ ಅಲ್ಲದೆ ಎಂದಿಗೂ
ಉತ್ತಮತ್ವವೆ ಇಲ್ಲ ವಿಚಾರಿಸೂ
ಕೀರ್ತಿಮೊದಲಾದ ಗುಣವಗಳಿಸಿ ಭ
ರಿತ ವಾಗಿರು ಭಕುತಿ ಪೂರ್ಣದಿಂದ
ತತ್ವ ವಿಗ್ರಹ ನಮ್ಮ ವಿಜಯ ವಿಠ್ಠಲರೇಯನ
ತುತಿಸಿಕೊಳುತ ಅನಂದ ವನಧಿಯೊಳಿರು ೧
ಮಟ್ಟತಾಳ
ಚಂಚಲನಾಗದಿರು ಚತುರ ತನದಲಿರು
ಪಂಚೇಂದ್ರಿಯಗಳಲಿ ಪರಮ ಪ್ರೀತಿಯಿಂದ
ಸಂಚರಿಸುತ್ತಿರು ಸಾಧ್ಯ ಸಿದ್ದನಾಗಿ
ಕೊಂಚೆಯಿಲ್ಲವೋ ಕಾಣೊ ಕೋಟಿಗಾದರು ಒಂದೆ
ಕಾಂಚನ ಮಯವಾದ ಮಾಣಿಕ ಸಮಮಾತೂ
ವಂಚಕತನ ಬಿಡು ವೇದಸ್ರ‍ಮತಿ ಗುಣಿಸು
ಅಂಚಿಗಂಚಿಗೆ ಗುರುಗಳ ಸ್ಮರಿಸು ಸತತ ತೃಣ
ಗುಂಚಿಕೆಯನು ಬಯಸದೆ ಗುಪ್ತದಿ ನಿನ್ನೊಳಗೆ
ಪಂಚಪರಣ ಕೊಡಿಯ ವಿಜಯ ವಿಠ್ಠಲರೇಯನ
ಲಾಂಛನವನು ಧರಿಸಿ ಲಲಿತದಾಸನಾಗು ೨
ತ್ರಿವಿಡಿತಾಳ
ಸ್ವಸ್ಥದಲ್ಲಿರು ನೀನು ಸಕಲಕಾಲದಲಿ ಸ
ಮಸ್ತ ಗುಣ ಸಂಪೂರ್ಣ ಸುಖವೀರ್ಯ ಸಾರ
ವಿಸ್ತಾರ ಮಹಿಮ ವಿಶೇಷ ಪ್ರಬಲ ಚತುರ
ಮಸ್ತಕ ಜನಕ ಜಗಜೀವನ ಜಿತತಮ
ದುಸ್ತರವಾದ ಭವಾಂಬುಧಿತಾರ ಪರ
ವಸ್ತುವೆ ವಲ್ಲಭ ನಾನಾ
ವಸ್ಥಾ ಪ್ರೇರಕ ಸರ್ವರೂಪ ಅಭೇದನೆ
ಪ್ರಸ್ತುತ ಭಕುತರಜೀವ ಜನಾರ್ದನ
ಹಸ್ತಿವರದ ಕಂಬು ಚಕ್ರ ಗದಾ ಪದುಮ ಸು
ಹಸ್ತ ಚೇತನಾ ಚೇತನ ನಿತ್ಯಾ ನಿತ್ಯ ಸ್ವಾಮಿ
ಪ್ರಸ್ತಾರ ಉದ್ದಾರ ಉದಧಿ ಶಯನ ಉದಯ
ಅಸ್ತಾದ್ರಿ ಪ್ರಕಾಶ ನಿಲಯ ನಿಶ್ಚಿಂತಕಾಯ
ದುಸ್ತರ್ಕವಾದ ಜೀವಿಗಳಿಗೆ ಅನುದಿನ
ಶಾಸ್ತನಾಗಿಪ್ಪ ಹರಿ ಪರನೆ ಎಂದು
ಈ ಸ್ತವನದಿಂದ ಕೀರ್ತನೆ ಮಾಡಿ ಭ
ಯಸ್ಧನಾಗಿದ್ದ ಮಾರ್ಗವನೆ ಬಿಟ್ಟು
ಕಸ್ತೂರಿ ಮಟ್ಟಿಯ ಬೀದಿಗಿಕ್ಕದೆ ತಿಳಿದು
ಮಸ್ತಕದಂತೆ ಪೊಂದಿರು ಚಿತ್ತವೆ
ಹಸ್ತನಂತ ಉಳ್ಳ ವಿಜಯ ವಿಠ್ಠಲರೇಯನ
ಸ್ವಸ್ಥಾನದಲಿ ಇದ್ದು ಶುಭಯೋಗ ಯೋಚಿಸು ೩
ಅಟ್ಟತಾಳ
ಸುಖ ಬಯಸು ನೀನು ಸುಖದ ಕಾರಣ ಮಾಡು
ಆಖಿಳ ಬಗೆಯಲ್ಲಿ ಸುಸಖನಾಗಿಪ್ಪ ಹರಿಯ
ನಖ ಶಿಖ ಪರಿಯಂತ ಮುಖದಿಂದ ಕೊಂಡಾಡಿ
ದು:ಖದಿಂದ ಕಡೆಬೀಳು ಮಖಜಜನು ಉದ್ದರಿಸಿ
ಮಖ ಮಿಕ್ಕಾದರಿಂದ ಸುಖ ಇಂಥದೇ ಇಲ್ಲ
ನಿಖಿಳ ಭುವನೇಶ ವಿಜಯ ವಿಠ್ಠಲನ್ನ
ಅಖಂಡ ಸ್ಮರಣೆಯ ಓಖದಲ್ಲಿ? ಧರಿಸೋ ೫
ಆದಿತಾಳ
ವ್ಯಾಪಾರ ನಿನಗಿದು ಎಲೊ ಚಿತ್ತವೆ ಕೇಳು
ಭೂಪಾರದೊಳಗೆ ಎಲ್ಲಿದ್ದರು ತೊಲಗದೆ
ಆ ಪಾರಮಾರ್ಥಿಕನಾಗಿ ವಖ್ಖಣಿಸಿ
ದೀಪಕಂಜಿಸುವಂತೆ ತತ್ವವಿಚಾರದಿ
ಪಾಪರಹಿತನಾಗಿ ಭವವೆಂದೆಂಬೊ ಮಹಾ
ಕೂಪಾರದಿಂದಲಿ ಅತಿವೇಗ ಯೋಗದಿಂದ
ನೀ ಪಾರಂಗತನಾಗು ಮುಕ್ತರಿಗೆ ಬಾಗು
ಕೋಪ ರಾಗಿಷ್ಟನಾಗಿ ಹರಿ ಪೂಜೆ ಮಾಡಿದರೆ
ತಾ ಪರಮನದಲ್ಲಿ ಪೊಕ್ಕಂತೆ ಎಂದಿಗು
ಕೋಪ ರಹಸ್ಯಪಥಕೆ ಪ್ರತಿ ಬಂಧಕವಹುದು
ರೂಪ ರತದಿಂದ ಬಳಲುವುದು ಬಿಡದು ಬಿಡದು
ಸೂಪಾರವಾದ ಶಯನ ವಿಜಯ ವಿಠ್ಠಲರೇಯನ
ನೀ ಪಾಹಪಾರವಾಗಿ ನಿಶ್ಚಯ ತತ್ವವೆನ್ನು ೬
ಜತೆ
ಚಿತ್ತವೆ ಚಿತ್ತೈಸು ವಿಜಯ ವಿಠ್ಠಲರೇಯನ
ಚಿತ್ತವಿಡಿದು ಬದುಕು ವಿಜಯ ವಿಠ್ಠಲ ನಿನಗೆ ಪರಮಲಾಭ ೭

ರಾಮೇಶ್ವರವನ್ನು ಕುರಿತ ಸುಳಾದಿ ಇದು.

೮೮. ರಾಮೇಶ್ವರ
ಧ್ರುವತಾಳ
ಚಿತ್ರವಿದೇನೊ ಶತಪತ್ರ ನಯನ ಪಾ |
ವಿತ್ರನಾಮಕ ಶ್ರೀ ಕಳತ್ರ ಮುನಿಸ್ತೋತ್ರ |
ಸೂತ್ರಧಾರಕ ಲೋಕತ್ರಯವಂದಿತ |
ಪಾತ್ರರಿಗೆ ಸತ್ಪಾತ್ರ ತ್ರಿದಶಮಿತ್ರ |
ಶತ್ರುಸಂಹಾರ ವೀತಿಹೋತ್ರ |
ನೇತ್ರ ಪ್ರತಿಷ್ಟ ಛತ್ರಗದಾದಿ (ಹಸ್ತಾ)ಂದ ಪರ |
ಮಿತ್ರಪ್ರಕಾಶ ಶ್ವೇತ ಗಾತ್ರ ಮಾಧವಸೇತು |
ಕ್ಷೇತ್ರದಧಿಪತಿ ಧಾತ್ರಿಶಾ ವಿಜಯವಿಠಲರೇಯಾ ಸಾ |
ರ್ವತ್ರರ ಮನೋಹರ ಸುತ್ರಮವಂದ್ಯ ೧
ಮಟ್ಟತಾಳ
ಜಗದೇವನ ನೀನೆ ಜಗವಮೋಹಿಸುವಾನೆ |
ಯುಗಳ ಚರಣಕ್ಕೆ ನಿಗಳ ಹಾಕಿಸಿಕೊಂಡಬಗೆ ಮತ್ತಾವದು |
ಅಗಣಿತ ಹರಬೊಮ್ಮಾದಿಗಳನು ಪಾಶದಲಿ |
ನಗುತ ನಗುತಲಿದ್ದು ಬಿಗಿದುಕಟ್ಟುವ ಚ |
ನ್ನಿಗ ಬಲು ಚಪ್ಪಳಿಗನೆ ಅಘಹರ ವಿಜಯವಿಠಲ ಶೇತು ಮಾಧವ |
ರಘುಕುಲದಲಿ ಬಂದು ಮಗನಾದ ದೈವ ೨
ತ್ರಿವಿಡಿತಾಳ
ಮಧುರಿಯಲ್ಲಿ ಪುಣ್ಯನಿಧಿ ಎಂಬೊ ಭೂಪತಿ |
ಉರಿಸಿ ಈ ದೇಶವ ಒದಗಿ ಆಳುತಲಿರಲು |
ಉದರದಲಿ ಸಂತಾನದುದಭವ ಕಾಣದೆ |
ಮುದದಿಂದಲಿ ಚಿಂತಾ ಉದಧಿಯೊಳಗೆ ಮುಳುಗೆ |
ಬದಿಯಲ್ಲಿದ್ದ ಸಾರಹೃದಯರು ತಿಳಿದು, ಪೇ |
ಳಿದರು ಈಸು ಸಂಗತಿಯಾ ಸುದತಿಯಳ ಸಹಿತ |
ಅದನರಿದರಸು ಬಂದೊದಗಿ ಗಂಧ ಮಾಧವ |
ಬದಿಯಲ್ಲಿ ಸೇರಲು ಪದೊಪದಿಗೆ ಲವಣ |
ಉದಧಿ ತೀರದಲ್ಲಿ ಸಿರಿ ಮದನನಯನ ನೆನಸುತ |
ಸುಧಾ ಸೇತುಮಾಧವ ವಿಜಯವಿಠಲ ನೆನಿ |
ಸಿದ ಕಾಮ್ಯರ್ಥವನೀವ ಮದಗರ್ವವನ ದಾವ ೩
ಅಟ್ಟತಾಳ
ಶಪಥವನಾಡಿ ಸಮೀಪದಲಿ ನಿಲ್ಲಾದೆ |
ನೃಪತಿಗೆ ಮಗಳಾದಳಪರಿಮಿತೆ ಬಂದು |
ತಪವೆ ಸಿದ್ಧಿಸಿತೆಂದು ನೃಪವಿಂದ್ಯಾವಳಿಗಿ |
ಕೃಪೆಯಿಂದರುಹಲು ಉಪಚರಿಸಿದಳಂದೂ |
ಗುಪಿತ ಸೇತು ಮಾಧವ ವಿಜಯವಿಠಲ |
ಕೃಪಣ ವತ್ಸಲ ಬಂದ ಕಪಟ ಭೂಸುರನಾಗಿ ೪
ಆದಿತಾಳ
ನಂದವನದಲ್ಲಿ ದೇವಿ ಇಂದಿರೆ ಸುಖಸುತಿರೆ |
ಮುಂದಿಳಿಯಾದಂತೆ ಪೋಗಿ |
ಇಂದಿರೇಶಾ ನೃಪತಿಯಾ |
ನಂದನಿಯಾ ಕರವ ಪಿಡಿಯೆ |
ಸಂದೋಹವೆಲ್ಲಾ ನೀಡಿ ತಂದು ನಿನ್ನ ಕಾಲಗಳಿಗೆ |
ಬಂಧಿಸಿದರು ನಿಗಳಾ |
ಅಂದು ಮೊದಲಾಗಿ ಇಲ್ಲಿ |
ನಿಂದು ಪುಣ್ಯನಿಧಿಗೆ ಒಲಿದು |
ವಂದಿಸಿದವರಿಗೆ ಬೇಕೆಂದು ಪಾಲಿಸುವೆ ಬಿಡದೆ |
ಇಂದುಧರ ವಂದ್ಯಾ ಸೇತು ಬಂಧ ಮಾಧವನೆ |
ತಂದೆ ವಿಜಯವಿಠಲ ಸಂಬಂಧಿಗನೆ ಭಕ್ತರಿಗೆ ೫
ಜತೆ
ಕಂಡಮಾತುರದಲ್ಲಿ ಭವದ ಶೃಂಖಳವನ್ನು |
ಖಂಡ್ರಿಸುವ ಸೇತು ವಿಜಯವಿಠಲ ಮಾಧವ ೬

ಪಾಂಚ ಭೌತಿಕ ದೇಹದಲ್ಲಿರುವ

೩೩
ಧ್ರುವತಾಳ
ಚಿದ್ದೇಹಾಕಾರ ಆನಂದಮಯವಯ್ಯ |
ಬದ್ಧ ದೇಹಾಕಾರ ವಿಜ್ಞಾನಮಯವಯ್ಯ ಅನಿ |
ರುದ್ಧ ದೇಹಾಕಾರ ಮನೋಮಯವಯ್ಯ |
ಶುದ್ಧ ಪ್ರಾಕೃತಾಕಾರ ಪ್ರಾಣಮಯವಯ್ಯ |
ಶುದ್ಧ ಭೌತಿಕಾಕಾರ ಅನ್ನಮಯವಯ್ಯ ವಾ |
ಸುದೇವಾದಿ ಮೂರುತಿ ನಾರಾಯಣ |
ಚಿದ್ದೇಹದಲ್ಲಿ ತಿಳಿ ಆನಂದಮಯಗೆ |
ಪದ್ಧತಿಯುಂಟು ಉಳಿದದಕೆ ಚತುರನಾಮ |
ವಿದ್ಯುಚ್ಛುಭ್ರ ರಕ್ತ ಪೀತ ಶಾಮವರ್ನ |
ಹೃದ್ಗತ ತತ್ತದ್ದೇಹವಾಸ ಅನಿ |
ರುದ್ಧಾದಿ ಮೂರ್ತಿಗಳ ವ್ಯುತ್ಕ್ರಮದಿಂದ ಗುಣಿಸು ಅ|
ನಾದ್ಯ ವಿದ್ಯಾಕರ್ಮ ಕಾಲ ಗುಣತತ್ವ |
ಹೊದ್ದಿಕೊಂಡಿಪ್ಪವಯ್ಯ ಆಲಿಂಗದಲ್ಲಿ ಅಯ್ಯ ಅಯ್ಯ ಅಯ್ಯಾ |
ಚಿದ್ದೇಹಾತ್ಮಕ ಜೀವನ ಆಕೃತಿ ಅವ್ಯಕ್ತ ಮ |
ಹದ್ದಾಹಂಕಾರ ಚೇತನ ಚಿತ್ತ |
ಬುದ್ಧಿ ಮನಸು ಸರ್ವೇಂದ್ರಿಯಗಳು ಮಾತ್ರ ಭೂತ ಈ ಅ |
ಭಿಧಾನ ಉಂಟು ನಿತ್ಯ ಕರೆಸುವವಯ್ಯ |
ಪದ್ಮಾಲಯ ಆನಂದ ವಿಜ್ಞಾನ ಬೊಮ್ಮ ಪ್ರಾಣ |
ರುದ್ರ ಮನೋಮಯ ಇಂದ್ರಾದ್ಯಮರರು |
ಸದ್ದೇಶ ಮಿತ್ರಾದಿಗಳು ವಿಹಿತ ತಿಳಿದು |
ತದ್ಭಕ್ತಿಯನ್ನು ಮಾಡು ತವಕದಿಂದ |
ಪದ್ಧತಿ ಪಂಚಮೂರ್ತಿ ಪ್ರತ್ಯೇಕ ಪ್ರತ್ಯೇಕ ತ |
ತ್ತ ದೇಹದಲ್ಲಿ ವಾಸ ಎರ ಭಾಗದಲ್ಲಿದ್ದ ಆತ್ಮನಾಮಾಂತರ |
ಸದ್ಗುಣ ಗಣಸಾಂದ್ರ ತುರ್ಯ ಕೃತ್ವಾಸಾ ?ಉ |
ರದ್ದೆಶಯಲ್ಲಿ ಆತ್ಮ ಪ್ರಾಜ್ಞ ಮೂರ್ತಿ |
ನಿರ್ಧರ ಕೇಳಿ ಕಡಿಮೆ ನಾಲ್ಕು ಸ್ಥಾನಗಳು |
ಹೃದ್ಗುಹ ಕಂಠ ಅಕ್ಷಿ ಮೂದ್ರ್ನಿಭಾಗ |
ಇದ್ದ ರೂಪಗಳಿಗೆ ನಾರಾಯಣನೆ ತುರ್ಯ ವಾ |
ಸುದೇವ ವಿಶ್ವ ಸಂಕರುಷಣ ತೈಜಸ |
ಪ್ರದ್ಯುಮ್ನ ಉರಭಾಗದಲ್ಲಿದ್ದ ಆತ್ಮನೆನ್ನಿ ಅನಿ |
ರುದ್ಧ ಭಗವಂತ ಪ್ರಾಜ್ಞನೆನ್ನಿ |
ಈ ಧರೆಯೊಳು ದೇಹ ಧಾರಿಗೆ ಸುಷುಪ್ತಿಯಾ |
ಸಿದ್ಧ ಮೂರ್ಛಾವಸ್ಥಾ ಸ್ವಪ್ನ ಜಾಗ್ರತ |
ವಿದ್ಯ ಅಪರೋಕ್ಷಿಯಿಂದ ಚತುರಾವಸ್ಥಿ ಅನಿ |
ರುದ್ಧಾದಿ ಭಗವದ್ರೂಪ ಪ್ರಾಜ್ಞಾದಿನಾಮ |
ಮಧ್ವವಲ್ಲಭ ನಮ್ಮ ವಿಜಯ ವಿಠ್ಠಲರೇಯ |
ಮೂಧ್ರ್ನಿಗ ಮೇಲೆಯಿಪ್ಪ ತುರ್ಯ ಮುಕ್ತಿ ನೇಮಕ ೧
ಮಟ್ಟತಾಳ
ಲಿಂಗ ಅನಿರುದ್ಧ ಪ್ರಾಕೃತ ಭೌತಿಕ |
ಹಿಂಗದೆ ನಾಲ್ಕಕ್ಕೆ ಪೋಡಶ ಕಳೆಗಳು |
ಸಂಗವಾಗಿವೆ ನೋಡು ಕಣ್ಣಿಗೆ ಕಾಣಿಸವು ಪು |
ಷ್ಪಂಗಳಿಗೆ ಶುದ್ಧ ಗಂಧ ಲೇಪನವಾದಂತೆ |
ಇಂಗಿತವಾಗಿ ಜಡ ಪ್ರಕೃತಿ ಕಲೆ |
ಮಂಗಳ ಕಾಂತಿಯಿಂದ ನಾಮಾಂತರ ಭೇದ |
ಜಂಗಮ ಸ್ಥಾವರಕೆ ನೆಲೆಯಾಗಿಪ್ಪವಯ್ಯಾ |
ತುಂಗ ವಿಕ್ರಮ ಹರಿ ವಿಜಯ ವಿಠ್ಠಲರೇಯ |
ಇಂಗಡ ಮಾಡುವ ಗುಣತ್ರಯಗಳ ಬೆರಸಿ | ೨
ತ್ರಿವಿಡಿ ತಾಳ
ಪ್ರಾಣ ಶ್ರದ್ಧ ರುದ್ರ ಇಂದ್ರಾಗ್ನಿ ವರುಣ ಗ |
ಜಾನನ ಪ್ರವಾಹ ಪಾವಕ ಪರ್ಜನ್ಯ ಕೃ |
ಶಾನನ ಮಡದಿ ಮತ್ತೆ ಚಂದ್ರಸುತ ಉಷಾರವಿ |
ಸೂನು ಪುಷ್ಕರ ಸೋಮ ಹದಿನಾರು ಜನರಾಂಭಿಸಿ |
ಮಾನಿಗಳಾಗಿಹರು ಗುಣಗಳಲ್ಲಿ |
ಈ ನಾಲ್ಕು ಸ್ಥಳದಲ್ಲಿ ವಿಚಾರಾಂಶವೆ ಉಂಟು |
ಜ್ಞಾನಿಗಳು ತಿಳಿದು ನಿತ್ಯದಲ್ಲಿ |
ಧ್ಯಾನವನ್ನೆ ಮಾಡಿ ಭೂತ ಪ್ರಾಕೃತ ಸಂ |
ಧಾನಾನಿರುದ್ಧ ಲಿಂಗವಿಡಿದು |
ನಾನಾ ಪ್ರಕಾರ ಉಪಚಾರಣೆ ಉಪಾಸನ |
ಪ್ರಾಣಾ ಪ್ರಾಣರ ತನಕಾ ಅಪರೋಕ್ಷದಿ |
ಮಾಣದೆ ಸಾಮಾನ್ಯ ಜ್ಞಾನ ಭಕುತಿ ಇನಿತು ಪೂಜಿಸಬೇಕು |
ಶ್ರೀನಾಥ ಪ್ರತಿಮೆ ಬಹುವಿಧ ವುಂಟು ನಿ |
ಧಾನಿಸು ಪರಮಾತ್ಮ ಪ್ರೇರಣೆಯಂತೆ |
ಮೇಣಾವತಾರ ಅಂತರ ಬಾಹಿರ ಸರ್ವ |
ಕಾಣುವ ಬಗೆ ಸಿದ್ಧ ಸಾಧನ ಭೇದ |
ಆನಂದ ಮೂರುತಿ ವಿಜಯ ವಿಠ್ಠಲರೇಯ |
ನೀನೆ ಇಂದವನಿಗೆ ನಿಶ್ಚಯ ಮತಿ ಕೊಡುವ | ೩
ಅಟ್ಟತಾಳ
ಮುಕ್ತ ಜಾಗ್ರತೆ ಸ್ವಪ್ನ ಮೂರ್ಛೆ ಸುಷುಪ್ತಿಯು |
ಉಕ್ತ ಕ್ರಮದಿಂದ ನಿಯಾಮಕನಾಗಿ |
ನಕ್ತ ಹಗಲು ಬಿಡದಾವವ ಕಾಲಕ್ಕೆ |
ವ್ಯಕ್ತ ಮಾಡಿಕೊಡುವ ವೈಚಿತ್ರ ಸಂಪೂರ್ಣ |
ಶಕ್ತ ಸಾರ್ವಭೌಮ ಸತತ ಪ್ರಾಕೃತ ನಿತ್ಯ |
ಮುಕ್ತಳು ಮುಕ್ತರು ತುರಿಯನ್ನ ಧ್ಯಾನವ |
ಮಕ್ತಾ ಪ್ರಾಯರು ಬ್ರಹ್ಮ ರುದ್ರ ಇಂದ್ರಾದ್ಯರು |
ತ್ಯಕ್ತ ಪ್ರಾಯರು ಬ್ರಹ್ಮ ರುದ್ರ ಇಂದ್ರಾದ್ಯರು |
ತ್ಯಕ್ತ ದೋಷರಾಗಿ ದೇಹದೊಳಿಪ್ಪರು |
ಉಕ್ತಿಯ ಕೇಳೋದು ಇವೆ ಮೂರ್ತಿಗಳೆಲ್ಲ |
ಭಕ್ತಿಯಿಂದಲಿ ತಮ್ಮ ಸ್ವದೇಹದಲ್ಲಿ ಆ |
ಸಕ್ತರಾಗಿ ಧ್ಯಾನವ ಮಾಡಿ ಕೇವಲ |
ಭಕ್ತ ಜನರು ಸ್ವಪ್ನದಲಿ ಸಾರಿ ಸಾರಿದರು ವಿ |
ರಕ್ತಿ ಮಾರ್ಗದಿಂದ ರುದ್ರೇಂದ್ರ ಗಣಪರು |
ಭುಕ್ತಶೇಷರು ಕಾಣೊ ಆ ತರುವಾಯ ಅ |
ವ್ಯಕ್ತಾವರಣವೆ ಪಂಚಕೋಶದಲ್ಲಿದ್ದ |
ಭಕ್ತವತ್ಸಲನೈದು ರೂಪವ ಭಜಿಸಿ ಅಭಿ |
ವ್ಯಕ್ತ ಗುಣಗಳಿಂದ ಅಧಿಕಾರಿಗಳಾಗಿ |
ಮುಕ್ತಿ ಸಾಧಿಸುವರು ಬಹು ರೂಪಗಳಿಂದ |
ರಕ್ತ ರಮಣ ನಮ್ಮ ವಿಜಯ ವಿಠ್ಠಲರೇಯ (ನಿಮ್ಮನು) |
ಮುಕ್ತರ ಮಾಡುವ ಧೇನಿಪ ಭಕ್ತರ ಭಕ್ತಿಯ ಕೈಕೊಂಡು ೪
ಆದಿತಾಳ
ಪಂಚ ಪ್ರಾಜ್ಞ ಮೂರ್ತಿಗಳ ಉಪಾಸನೆಯ ಮಾಡು |
ಪಂಚ ಸ್ಥಾನದಲ್ಲಿ ಭೂತಾದಿಯಲ್ಲಿ ತಿಳಿದು |
ಪಂಚಸೂತ್ರ ರೂಪಗಳು ಅನುದಿನ ದೇಹದೊಳು |
ಸಂಚಾರವನ್ನೆ ಮಾಳ್ಪ ಸಾಕಲ್ಲ್ಯವನ್ನೆ ಗ್ರಹಿಸು |
ಕಿಂಚಿತ್ಕಾಲವಾದರು ಆತ್ಮನ್ನ ಮರಿಯದೆ ಸ |
ಕಿಂಚನನಾಗು ಮಹ ಜ್ಞಾನದಿ ವಿತ್ತದಿಂದ |
ಮುಂಚಿನ ಸಂಸ್ಕಾರ ಕೆಡದಂತೆ ಪ್ರವರ್ತಿಸು |
ಪಂಚ ಮುಖಾದ್ಯರು ಸರ್ವ ಪ್ರಾಜ್ಞನ ಭಜಿಸಿ |
ಅಂಚ ಜ್ಞಾನದಿಂದ ತತ್ತ ತತ್ವಾದಲ್ಲಿ ಪ್ರ |
ಪಂಚ ಹಿಂದುಗೈಸಿ ಸುಖಿಸುವರು ಚನ್ನಾಗಿ |
ಚಂಚಲ ಬುದ್ಧಿಯ ಬಿಡು ದೇಹ ದೊಳಗೆ ನಿತ್ಯ |
ಮಿಂಚುವ ದೇವನ್ನ ಸಕಲ ಠಾವಿಲಿ ನೋಡು |
ಕೊಂಚವಲ್ಲವು ಕಾಣೊ ಸುಮ್ಮನೆ ದೊರೆವುದಲ್ಲ |
ಹಿಂಚಿನ ಪುಣ್ಯದಿಂದ ಸಿದ್ಧಿಸುವದು ಇಂದು |
ವಂಚಕರೊಡನಾಡಿ ವಾರ್ಧಿಕನಾಗದಿರು |
ಸಂಚಿತಗಾಮಿ ಬಿಡದು ಈ ಪರಿ ನೆಸಗದಿರೆ |
ಪಂಚ ವರ್ಣವಾಹನ್ನ ವಿಜಯ ವಿಠ್ಠಲನ್ನವಿ |
ರಂಚಿ ಪದಸ್ಥನೊಳು ಧ್ಯಾನಿಸು ಮುನಿಯಾಗಿ | ೫
ಜತೆ
ಅತೀಂದ್ರತಿ ಜ್ಞಾನದಲಿ ದೇಹದೊಳಗೆ ಇದ್ದ |
ಚತುರ ಮೂರುತಿ ಪ್ರಾಜ್ಞ ವಿಜಯ ವಿಠಲನ ನೋಡು ೬

ಬಿಂಬಮೂರ್ತಿಯ ಧ್ಯಾನದ ಬಗೆಯನ್ನು

೩೫
ಧ್ರುವತಾಳ
ಚೇತನಾಚೇತನಾಂತರ್ಗತ ಭಗವದ್ರೂಪ
ಚಾತುರ್ಯದಿಂದ ಉಂಟು ಅಣು ಮಹತ್ತು
ಆತುಮದೊಳು ನೆನೆಸಿ ನಾನಾ ಬಗೆಯಿಂದ
ಗಾತುರ ಇಂದ್ರಿಯಂಗಳ ಕಾರ್ಯ ತಿಳಿದು
ಭೌತಿಕ ನೆಚ್ಚದಿರು ಕಾಯ ನಿಂದಿರದು ಜೀ
ಮೂತ (ಭವ) ಛಾಯವೆನ್ನು ಇಹದ ಸೌಖ್ಯ
ಮಾತು ಈಪರಿ ತಿಳಿದು ಮುದದಿಂದ ಪುಣ್ಯಕ್ಕೆ ಸಂ
ಕೇತ ಮಾಡುವೆ ಮಾಳ್ಪ ಮಂತ್ರಗಳಿಗೆ
ಶ್ವೇತದ್ವೀಪವಾಸಿ ವಾಸುದೇವ ಮುಖ್ಯ
ವಾತ ಖದ್ಯೋತ ಗುರು ಇವರಲ್ಲಿಟ್ಟು
ಆ ತರುವಾಯ ತನ್ನ ಹೃತ್ಕಮಲದಲ್ಲಿದ್ದ
ಶ್ರೀ ತರುಣೇಶನ್ನ ಧ್ಯಾನಗೈದು
ಈತನು ಮಧ್ಯದಲ್ಲಿ ಅನಂತ ಅಂಶಾತ್ಮಕ
ಆತನ್ನ ತಂದು ಏಕ ಚಿಂತನೆಗೈದು
ವಾತ ಸ್ಪರಶವಿಲ್ಲದ ದೀಪದಂತೆ ಕುಳಿತು
ಜ್ಞಾತಾನುಷ್ಠಾನದಿಂದ ಗಮನಾಗಮನವ ನೋಡು
ಕೌತುಕವೆನಿಸುತಿದೆ ಈ ಮಂತ್ರವೊ
ಪೋತತನಾರಭ್ಯ ಯೌವನ ಜರಠವಿಡಿದು
ಪ್ರೇತ ಯಾತನಾ ದೇಹ ನರಕ ಸ್ವರ್ಗ
ಜ್ಯೋತಿರ್ಮಯ ಶರೀರ ಪುನರ್ಜನನ ಮರಣ
ಈ ತೆರದಲ್ಲಿ ಬಲು ಜನುಮ ಬರಲು
ಭೂತದೊಳು ನಾಲ್ಕು ಎಂಭತ್ತು ಲಕ್ಷಯೋನಿ
ಜಾತನಾದ ಕಾಲಕ್ಕೂ ಮೊಳಗಿಪ್ಪದು
ಭೂತ ಕೊಡುವುದಿದು ಅಪ್ರಯತ್ನ ಮಂತ್ರ
ತಾ ತೋರ ಗೊಡದಯ್ಯಾ ಅಜ್ಞಾನಿಗೆ
ಪ್ರಾತಃಕಾಲಾರಭ್ಯ ಅಪರೋದಯ ಪರಿಯಂತ
ಆತುಮದೊಳು ಸಿದ್ಧಾ ಶ್ವೇಚ್ಛಾವೃತ್ತಿ
ಜ್ಞಾತ ಕಾಲಾದಿಯಿಂದ ಗತ ಜನ್ಮಗಳು ಮಿಶ್ರ
ಮಾತೃಗರ್ಭಾದಿ ಸ್ಥಾನಾ ಶೇಷಾರಬ್ಧಾ
ಧೌತವಾಗುವ ತನಕ ಇದೆ ಪ್ರಾಣಮಂತ್ರವೆಂದು
ಪ್ರೀತಿಯಿಂದಲಿ ಜಪಿಸು ಧ್ಯಾನೋಕ್ತದಿ
ಪಾತಕ ನಿನಗಿಲ್ಲ ಕಾಲಕಾಲಕ್ಕೆ ಪುಣ್ಯ
ವ್ರಾತ ಒಂದೊದಗುವುದು ಆನಂದಕ್ಕೆ
ಶಿತಾಂಶುರವಿ ಹಸ್ತ ವಿಜಯ ವಿಠಲರೇಯ
ಭೀತರಹಿತನ್ನ ಮಾಳ್ಪ ಮಂತ್ರಾನುಸಂಧಾನಕ್ಕೆ ೧
ಮಟ್ಟತಾಳ
ಮಂತ್ರ ಮಾಡುವ ಬಗೆ ತಿಳಿವುದು ಚನ್ನಾಗಿ
ತಂತ್ರಸಾರದಿಂದ ಅಂಗಾಂಗುಲಿನ್ಯಾಸ
ಸಂತೋಷದಲ್ಲಿ ಮಾಡು ಧೃಡತರ ಮನಸಿನಲಿ
ಅಂತರಂಗದಲಿ ಸರ್ವ ರೂಪಾತ್ಮಕ
ಮಂತ್ರದೇವತೆ ಮುಖ್ಯ ಪ್ರಣವ ಮೂರುತಿಯ ಏ
ಕಾಂತದಲ್ಲಿ ಹೃತ್ಕಮಲ ಕರ್ನಿಕೆ ಮಧ್ಯ
ಇಂತಿಹ ಕಮಲಕ್ಕೆ ಚತುರಷ್ಟ ದ್ವಾದಶ
ಮುಂತೆ ಚತುರ್ವಿಂಶತಿ ಐವತ್ತೊಂದು
ಚಿಂತಿಸು ದಳಸಂಖ್ಯೆ ತ್ರಿಕೋಣ ಬೀಜಗಳು
ಯಂತ್ರವಾಹಕ ನಮ್ಮ ವಿಜಯ ವಿಠಲ ಸ್ವ
ತಂತ್ರ ಪುರುಷ ಸರ್ವ ಮಂತ್ರ ನಿಯಾಮಕನೊ ೨
ತ್ರಿವಿಡಿತಾಳ
ಮನವೆ ಲಾಲಿಸಿಕೇಳು ಲಬ್ಧ ಮಂತ್ರಕೆ ಜಿತಾ
ಸನನಾಗು ಜಯವೆಂದು ಹರಿಯ ಸ್ತುತಿಸಿ
ಎಣಿಕೆಯಿಂದಲಿ ನೋಡು ಒಂದೊಂದು ಮಂತ್ರಕ್ಕೆ
ಘನವಾಗಿ ವರ್ಣಗಳು ಇಪ್ಪವೇಸೂ
ಎಣಿಸು ಒಂದೊಂದು ದಳದಲ್ಲೊಂದೊಂದು ವರ್ಣ
ಮಿನುಗುವ ಮತಿಯಿಂದ ಇಡಲಾಬಟ್ಟು
ಇನಿತು ಗ್ರಹಿಸು ಇವಕೆ ಒಂದೊಂದು ಹರಿರೂಪ
ಚಿನುಮಯ ಮೂರುತಿ ಸರ್ವಾಭಿನ್ನ
ಗುಣವಂತ ಮಂತ್ರಾತ್ಮಕನನ್ನು ಕೂಡಿಸಿ
ಮಣಿಗಣದಿಂದ ಜಪಿಸು ವಾಗಲಿ
ಅನುಭವವಿರಲಿ ಮಂತ್ರದೇವತೆ ಸಹಿತ
ಕ್ಷಣ ಕ್ಷಣಕೆ ನಿನ್ನೊಳು ವಲಯಾಕಾರ
ಗುಣಿಸು ವರ್ಣಾಖ್ಯರ ಆದ್ಯಮೂರುತಿಯಲ್ಲಿ
ಗಣನೆ ಮಾಡುತ ನಿತ್ಯ ಜಿಹ್ವಾಗ್ರದಿ
ಕೊನೆಯಿಂದ ವಾಕ್ಪ್ರಯೋಗ ಮಾಳ್ಪದರೊಳು
ಮಣಿಯಿಂದ ಮಣಿಗೆ ಬೆರಳ ಚಾಚುವುದು
ಅನ ಭಾರತಿ ಪ್ರೀಯ ವಿಜಯ ವಿಠಲ ಸ
ದ್ಗುಣಿ ಮಣಿ ಖಣಿಯೆಂದು ಅನುದಿನ ನೆನೆ ನೆನೆ ೩
ಅಟ್ಟ ತಾಳ
ಇದೆ ಮಂತ್ರ ಸಾರ್ಥಕ ಇದೆ ಮಂತ್ರಸಿದ್ಧಿಯೊ
ಇದೆ ಇದೆ ಮಂತ್ರವೊ ಇದೆ ಪ್ರಕಾರದಿಂದ ತತ್ತತ್ತು ಮಂತ್ರವ
ವಿಧಿಯಿಂದ ಜಪಿಸುವುದು ಹೃದಯದಲ್ಲಿ ಇಟ್ಟು
ಪದೆ ಪದಗೆ ಬಲುವೊದಗಿ(ರಿ) ಮಾಡುವ ದೇಕೆ
ಮುದ ಭಕುತಿಯಿಂದಲಿದರಂತೆ ಯೊಂದೆ ಸಾ
ರಿದರೆ ಸತ್ಪುಣ್ಯದ ಉದಧಿ ಸೂಸುವದಯ್ಯಾ
ಮಧು ಸೂದನ ಹರಿ ವಿಜಯ ವಿಠಲರೇಯ
ಪ್ರಧಾನವ ಕೊಡುವನೋ ಒಂದೇಯುಚ್ಚಾರಣೆಗೆ ೪
ಆದಿತಾಳ
ಮಧ್ಯ ಮೂರುತಿ ಸುತ್ತ ಸೇವ ರೂಪದಿಂದ
ಪೊದ್ದಿಕೊಂಡಿಪ್ಪವು ಸ್ವ ಮೂರ್ತಿ ಪರಿವಾರ
ಸಿದ್ಧವಿದುದೆ ಕೇಳು ಜಪಿಸಿ ತಿಳಿಯಬೇಕು
ಹೃದ್ಗುಹದಲ್ಲಿ ಇನಿತು ಚಕ್ರಾಬ್ಜ (ಕಾ)ಮಂಡಲ
ಪದ್ಮ ಸುದರ್ಶ ನದಳದ ವಿಚಾರ ತಿಳಿದು
ಪದ್ಧತಿ ತಪ್ಪದಲೆ ಪರಿಭ್ರಮಣವಾಗುವುದು
ಪದ್ಮಬಾಂಧವ ನಮ್ಮ ವಿಜಯ ವಿಠ್ಠಲರೇಯ
ಉದ್ಧರಿಸುವ ಬಿಡದೆ ಉನ್ನತ ಗತಿಯಿತ್ತು ೫
ಜತೆ
ಜನುಮದೊಳಗೆಯೊಮ್ಮೆ ಈ ಪರಿ ಜಪಿಸಲು
ಗುಣತ್ರಯ ನಾಶನ ವಿಜಯ ವಿಠಲ ಪೊಳೆವ ೬

ಕಾಮ, ಕ್ರೋಧ, ಲೋಭ, ಮೋಹ, ಮದ

೩೯
ಧ್ರುವತಾಳ
ಛಲವೆ ಎನ್ನದು ಇಂದು ನೀನು ಪ್ರಾಣನಲ್ಲವೆ
ಉಳಿದ ದೈವಂಗಳೆಲ್ಲ ಸಲ್ಲಿಪವೆ
ಸಲಹುವೆನೆಂದು ಬಂದು ಪತ್ರ ಬಿಂದೋದಕ
ಒಲಿದು ತೆಗೆದುಕೊಂಡು ಭಕುತನಿಗೆ, ಬೆಂ-
ಬಳಿಯಲ್ಲಿ ಇತ್ತು ನಿತ್ಯ ಹೊಣಿಯಾದ ಮ್ಯಾಲೆ, ಕಂ-
ಗಳ ಮೂರುಳ್ಳವನು, ತಡಿಯಾಲಾಪನೆ
ತಲೆ ಕೆಳಗಾಗಿ ಹೊರಳಿದರೆ ಎಂದಿಗೆ ನೀನು
ಸಿಲಕುವನಲ್ಲ ಮೀರಿ ಶಿಲ್ಕಿದರೆ ಓಡಿ
ತೊಲಗುವನಲ್ಲೆಂದು ಸತತ ಅನಂತ ವೇದಾ
ವಳಿಗಳು ಕೂಗುತಿವೆ, ಸುಮ್ಮನಿರದೆ
ಕಲಿಯುಗದಲ್ಲಿ ನಿನ್ನ ನಾಮಾ ಬಂದೊದಗಿದರೆ
ಕಲಿ ಮೊದಲಾದ ಖಳರು ಓಡುವರೂ
ಜಲಜಲೋಚನ ನಮ್ಮ ವಿಜಯ ವಿಠ್ಠಲ ಕೃಷ್ಣ
ಹಲವು ಮಾತೇನು ನಿನ್ನ ಚರಣವ ಬಿಡೆನೊ, ಬಿಡೆನೊ ೧
ಮಟ್ಟತಾಳ
ನಿನ್ನ ನೋಡುವಲ್ಲಿ ಕಾಮವೆ ಎನಗಿರಲಿ
ನಿನ್ನ ಬಿಡೆನೆಂಬೊ, ಲೋಭವೆ ಎನಗಿರಲಿ
ನಿನ್ನ ಚರಣದಲ್ಲಿ ಮೋಹವೆ ಎನಗಿರಲಿ
ನಿನ್ನ ನೆನಸುವಲ್ಲಿ ಮದವೇ ಎನಗಿರಲಿ
ನಿನ್ನ ದ್ವೇಷರ ಕೂಡ ಕ್ರೋಧವೆ ಎನಗಿರಲಿ
ನಿನ್ನ ಕೊಂಡಾಡುವರ ಸಂಗವೆ ಎನಗಿರಲಿ
ನಿನ್ನವನೆಂದೆಂಬೊ, ಕೀರುತಿ ಒಂದಿರಲಿ
ನಿನ್ನ ಕೂಡಾಡುವ ಆಟವೆ ಎನಗಿರಲಿ
ನಿನ್ನ ಹಿತವಾದ ವಂಚನೆ ಎನಗಿರಲಿ
ನಿನ್ನ ಮೂರುತಿ ವಿಜಯ ವಿಠ್ಠಲ ಸಂಪನ್ನ ಪ್ರಸನ್ನ ೨
ತ್ರಿವಿಡಿತಾಳ
ಎತ್ತ ಪೋದರು ಅಂಜೆ ಸುತ್ತಲವರು ಮುನಿದು
ಹತ್ತಿಗರಿಯಾದರೆ ಅಂಜೆ ಅಂಜೆ
ಎತ್ತ ಪೋದರು ಅಂಜೆ ಪಾಪಗಿರಿಗೆ ಅಂಜೆ
ನಿತ್ಯ ಬರುವ ಲಾಭ ಬಾರದಿದ್ದರೆ, ಅಂಜೆ
ಮೃತ್ಯು ತಡೆದರಂಜೆ, ಮಹಾನರಕಕಂಜೆ?
ತುತ್ತು ಸಿಗದಿರೆ ಅಂಜೆ, ತೀವ್ರ ಘೋರಕೆ ಅಂಜೆ
ಚಿತ್ತಾದಲ್ಲಿ ನೀನು ವಾಸವಾಗಿರೆ ಸಾಕು
ಅತ್ಯಂತ ಪುಣ್ಯವಂತನು ನಾನಯ್ಯ
ಭೃತ್ಯರಂಗ ಸಂಗ ವಿಜಯ ವಿಠ್ಠಲರೇಯ
ಎತ್ತಲಾದರು ನಿನ್ನ ಧ್ಯಾನವೆ ಗತಿ ದಾರಿ ೩
ಅಟ್ಟತಾಳ
ಊರಿಂದ ಊರಿಗೆ ಪೋಗುವುದೇ ಲೀಲಿ
ದಾರಿ ಒಕ್ಕರು ವಲ್ಲದೆ ನೀಟು ಉಂಟೇ
ನಾರಾಯಣ ಎನ್ನ ಮನಸ್ಸು ಡೊಂಕಾದರೆ
ಸಾರವಾದ ನಿನ್ನ ಪದ ಸ್ಮರಣೆಯಿಂದ
ಚಾರುವಾಗುವದಯ್ಯ ಚಂಚಲವಿದ್ದರು
ಸೇರುವುದಲ್ಲದೆ ನಿನ್ನ ಬಳಿಗೆ ಬಂದು
ದಾರಿ ಒಕ್ಕರ ವಾಗೆ ಅದರ ಗುಣವೇನೂ
ಊರಿಂದ ಊರಿಗೆ ಹೋಗೋದೆ ಪುರುಷಾರ್ಥ
ಭಾರಿಭಾರಿಗೆ ನಿನ್ನ ನೆನಸುವ ಮಾನವಾ
ಪಾರ ಕರ್ಮಂಗಳು ಮಾಡೆ ಲೇಪನವಿಲ್ಲ
ಸೂರೆ ಭಕ್ತರಿಗೆ ವಿಜಯ ವಿಠ್ಠಲರೇಯ
ನೀರು ಹರಿದು ಡೊಂಕು ಸಾಗರ ಕೊಡೋದು೪
ಆದಿತಾಳ
ಎಂಥಾದೊ ನಿನ್ನ ದಯ ಅಂತು ಬಲ್ಲವರಾರು
ಶಂತನ್ನನಂದ ನಾನು, ನಿಂತಾಡಿದ ಛಲವೆ
ಸಂತೋಷದಿಂದ ಸಲಿಸಿದ ದನು
ಜಾಂತಕ, ಜಗದ್ಭರಿತ, ಅಚಿಂತ್ಯಾತ್ಮಕ ನಿತ್ಯ
ಅಂತರಂಗದಿ ನಿನ್ನ ಚಿತ್ತದಲ್ಲಿಟ್ಟವನು
ಎಂತೆಂತು ನುಡಿದಂತೆ ಪಂಥವೆ ಗೆಲಿಸುವೆ
ಚಿಂತಾಮಣಿ ಸರ್ವ ವಿಜಯ ವಿಠ್ಠಲರೇಯ ಏ
ಕಾಂತ ಭಕ್ತರೊಳು ನಿಂತಾಡುವ ಮಹಿಮೆ ೫
ಜತೆ
ಆವಾನುಪತ್ಯವರಿದರಾಗಲಿ ನೀನೆಕಾವಾದೆ ಬಿಡದಿರು ವಿಜಯ ವಿಠ್ಠಲರೇಯ೬

ಡಾಂಭಿಕ ಭಕ್ತಿಯಿಂದ ಕೊಂಚ ಪುಣ್ಯವೂ

೪೭
ಧ್ರುವತಾಳ
ಜಗದ ವಂಚಕ ನಾನು ಬಲು ಜಾಣತನದಲ್ಲಿ
ಬಗೆ ಬಗೆ ಲೌಕಿಕ ಭೋಗವ
ಅಗಣಿತ ಜನರ ಮುಂದೆ ಹಣವ ಎಬ್ಬಿಸುವ ಗೋ
ಸುಗ ನಾನಾ ಸೊಗಸುಗಳ ಬೀರುತಲಿ
ಲಗ ಬಗೀ ಮಾಗಿಯಲ್ಲೇ ಬಲ್ಲೆ ಕಥೆ ಮಂಡಿಸಿ
ಹಗಲಿರಳು ಸ್ವಾರ್ಥವಾಗಿ ಪೋಗಿ ಪರರ
ಮೊಗವ ಕಣ್ಣು ಮುಚ್ಚದೆ ಈಕ್ಷಿಸಿ ನಿಂದು ಹಸ್ತ
ಯುಗಳ ತಿರುಹಿ ಕಲ್ಪನೆ ರಚಿಸೀ
ರಗಳಿಯತಂದು ಒಡ್ಡಿ ರಾಜ್ಯದವರ ಪಾಡಿ
ವಿಗಡ ಮತಿಯಿಂದ ವಿನಯನಾಗೀ
ತೆಗೆದುಕೊಳ್ಳೆನೆಂಬೊ ಬಾಹಿರದಲ್ಲಿ ಮಹಾ
ಬಿಗುವು ಮಾಡುವೆನಯ್ಯ ಒಳಗೆ ಖೇದನಾಹೆ
ಮುಗದನಾಗಿಯಿಪ್ಪೆ ಮೌನವೃತ್ತಿಯ ತಾಳಿ
ಮಿಗೆ ಹಣ ಸಂಪಾದಿಸಿ ಮಾಯಾದಲ್ಲಿ
ನಗೆಯಿಂದ ಮಾತಿನಿಂದ ಬಂಧುತ್ವ ಸ್ನೇಹದಿಂದ
ಬೊಗಸಿಯ ಒಡ್ಡುವೆ ಭಾವತಿಳಿಯದೆ
ಜಿಗಿ ಜಿಗಿ ಮಾಡುವೆ ಕೊಟ್ಟದರಿಂದ ಅವರ
ಮಗನಾಗಿ ದೇಶದೊಳು ಧರ್ಮವೆಂದೂ
ಪೊಗಳುವೆ ಹರಿನಿನ್ನ ಸರ್ವಸ್ವತಂತ್ರವು
ಮಗುಳೆ ಪೇಳದಲೆ ಮಂದನಾದೆನಯ್ಯಾ
ತ್ರಿಗುಣ ವಿಸ್ತಾರಗೈಸಿದ ವಿಜಯ ವಿಠ್ಠಲರೇಯ
ಮೃಗ ಬುದ್ದಿಯವ ನಾನು ಇಲ್ಲವೆಂದೆನೆ ಬಿಡೇ ೧
ಮಟ್ಟತಾಳ
ಇರಲಿ ಇಲ್ಲದೆ ಪೋಗಲಿ ಪರರ ಸಂಕಟವನು
ಅರಿಯದೆ ಅಕಟಕಟ ಸರಸರನೆ ಪೋಗಿ
ಹಿರಿಯತನಕೆ ನಾನೆ ಸರಿ ಎಂದು ಹೇಳಿ
ಕರಿಕರಿಯನು ಬಡಿಸಿ ಕರುಣವ ಇಲ್ಲದಲೆ
ಹರಿದು ತಿಂಬೆನೊ ಬಿಡದೆ ಗರುವಿಕೆ ಮನದಲ್ಲಿ
ಪುರದ ಹೊರಗೆ ಬಂದು ಧರಿಸುವೆನು ವೇಷ
ಚರಿಸುವೆ ಬಹುಜನಕೆ ಬೆರಗು ತೋರಿಕೊಳುತ
ಕೊರವಿತಿ ಮನಿಮನಿಗೆ ಎರಕ ಪೇಳಿದಂತೆ
ಬರಿದೆ ಮಾತಿನಲಿ ಉತ್ತರ ರಚನೆಮಾಳ್ಪೆ
ದುರುಳರಿಗೆ ದುರಳಾ ವಿಜಯ ವಿಠ್ಠಲ ಕೇಳು
ದುರಿತರಾಸಿಗಳು ಪರಿಹರಿಸುವ ಬಗೆ ಕಾಣೆ ೨
ತ್ರಿವಿಡಿ ತಾಳ
ಪಟ್ಟಧೋತ್ರ ತಂದು ಶುಭ್ರವಾಗಿ ಒಗೆದು
ಉಟ್ಟುಕೊಂಡು ಕಾಲಿಗೆಳೆವಂತೆವೇ
ಪಟ್ಟಿ ನಾಮವ ಬಡಿದು ಮಿತಿ ಇಲ್ಲದೆ ಮುದ್ರೆ
ಇಟ್ಟು ಸಣ್ಣಂಗಾರ ತಿದ್ದಿ ಫಣಿಗೇ
ದಟ್ಟೆಡಿಯಾಗಿ ಕೊರಳಮಾಲೆ ಜಪಮಣಿ
ಒಟ್ಟಿನೊಳಗೆ ಸಿಗಸೀಕೊಂಡು ಕುಳಿತು
ದೃಷ್ಟಿ ಒಂದು ಕಡೆ ಚಂಚಲ ಮನದಲ್ಲಿ
ಇಟ್ಟಣಿಸಿ ಅನ್ಯ ಸತಿಯರನ
ಕೆಟ್ಟಿ ಬೆಂದೆನೆಂದು ತನ್ನ ಮೂ¯ ಗಂಟು
ಇಟ್ಟಂತೆ ಅವಳನ್ನ ಕಣ್ಣ ಸನ್ನೆ
ಗುಟ್ಟು ತೋರದಂತೆ ಕೆಮ್ಮಿ ಖ್ಯಾಕರಿಸಿ ಬ
ಚ್ಚಿಟ್ಟು ಹೊನ್ನುಗಳೆಲ್ಲ ತೆಗೆದು ತಂದು
ಕೊಟ್ಟದ್ದಲ್ಲದೆ ಬಿಡೆನೆಂದೆಂಬೊ ಮನಮಾಡಿ
ಅಟ್ಟುವೆ ಅವರ ಸಂಗಡ ಪುಣ್ಯವ
ನಿಷ್ಟೆ ಉಳ್ಳವನಂತೆ ಬಯಲಾಚಾರದಲ್ಲಿ
ಧಿಟ್ಟನೆನಿಸುವೆ ಎಡಬಲದವರಿಗೆ
ಇಷ್ಟರೊಳಗೆ ಏಕಾಂತದಲ್ಲಿ ಕಾಣೆ
ಸೃಷ್ಟಿಯೊಳಗೆ ನಾನೆ ಧನ್ಯನೆಂಬೆ
ದುಷ್ಟ ಬುದ್ದಿ ಎಂದು ಮುಂಗಾಣದ ಮನ
ಮುಟ್ಟಿ ಮಾಡುವೆನಯ್ಯ ಅನ್ಯ ನಡತೀ
ತುಟ್ಟ ತುದಿಯಲ್ಲಿ ಬಳಲಿಬೆಂಡಾಗುವೆ
ಕಟ್ಟಿ ಮೇಲಿನ ಮಂತ್ರ ಈ ಪರಿಯನೆಯಲ್ಲಿ
ಅಷ್ಟದಿಕ್ಕಿಗೆ ಮನಸು ಓಡುತಿದರೊ
ಇಷ್ಟಾರ್ಥಕಾಣೆನೊ ವಿಜಯ ವಿಠ್ಠಲ ಇಂಥ
ಭೃಷ್ಟ ಮಾನವಗೆ ಆವದೂ ಗತಿ ಮಾರ್ಗ ೧
ಅಟ್ಟತಾಳ
ದೇಶಾವರಕೆ ಪೋಗಿ ದೋಷವೆ ಎಣಿಸುತ್ತ
ಭೇಷಿಜಿವಲ್ಲದೆ ಭೂಷಣವಾವಾದು
ಮೋಸದಲ್ಲಿ ಪರರ ಘಾಸಿಯಗೊಳಿಸುವಿ
ಶೇಷವಾಗಿ ನಾನಾ ಭಾಷೆ ಮುಂದಾಡಿದೆ
ಕ್ಲೇಶವಬಟ್ಟ ಕಸವೀಸಿಗೆ ಒಳಗಾಗಿ
ಆಶೆತೊರೆದ ಮಾನಿಸನಂತೆ ಹೊರಗೆ
ಘೋಷವಲ್ಲದೆ ವ್ಯರ್ಥ ಲೇಸು ದೃಡವು ಕಾಣಿ
ದಾಸನೆಂಬೊ ನಾಮ ದೇಶದಲ್ಲಿ ಮಾತ್ರ
ಸೂಸುತಲಿದೆ ಕೇಳು ಗ್ರಾಸನಿಮಿತ್ಯವಾಗಿ
ಈಸು ಠಕ್ಕತನರಾಸಿಗಳೇ ಉಂಟು
ವೇಷಧಾರಿಯ ಹಿಂದು ಗೈಸುವೆ ಹಿರಿದಾಗಿ
ವಾಸುದೇವ ನಮ್ಮ ವಿಜಯ ವಿಠ್ಠಲ ನಿನ್ನ
ದಾಸನಾದದಕೆ ಉಲ್ಹಾಸ ಮತಿಯೇ ಇಲ್ಲ ೪
ಆದಿತಾಳ
ಚಿತ್ತ ಸ್ವಸ್ಥವಿಲ್ಲಾ ಅನ್ನಕೆ ಕರಿಯದಿರೆ
ವಿತ್ತದಲಿ ಸ್ನೇಹ ಇದ್ದದಾವಲ್ಲಿ ಇಲ್ಲ
ಸುತ್ತುವೆ ಕಂಡಕಡೆ ಬಡವನೆಂದರೆ ಬಿಡದೆ
ಹತ್ತುವೆ ಭೂತದಂತೆ ಚಾಲವರಿದರೇನು
ಅತ್ತಲಿತ್ತ ನೋಡದೆ ನಿಸ್ಪ್ರಹನೆನಿಸಿಕೊಂಡು
ಹತ್ತಿದ ಒಂದು ಕಾಸು ಒಬ್ಬರಿಗೀಯೆ ನಾನು
ಉತ್ತರ ನೋಡಿದರು ಕೇವಲ ಸಜ್ಜನ
ವ್ಯತ್ತಿಯಂತೆ ತೋರುವೆ ಗಾರುಡವಾಗಿಪ್ಪದು
ಉತ್ತಮನಾಗಿ ತೋರಿ ಯತಾರ್ಥವೆಂಬೊ ಹಾಗೆ
ಹತ್ತದು ಒಲ್ಲೆನೆಂಬೊ ಮನಸಿನಲ್ಲಿ ಚಿಂತಿಸುವೆ
ತತ್ತಲಗೊಳುತಿಪ್ಪೆ ಆರಾದರು ಕರೆದು
ಇತ್ತ ಬಾ ಎನ್ನದಿರೇ ಆಂದಿನ ದಿನದಲ್ಲಿ
ತುತ್ತು ಒಳ್ಳೇದು ದೊರಕೆ ನಗುವೆ ಕೆಲದಾಡುವೆ
ಗುತ್ತಿಗೆ ಕಟ್ಟಿದಂತೆ ಅರನಸೇಗೊಡದೆ (?)
ನಿತ್ಯ ಕರ್ಮಗಳಿಲ್ಲವೊ ಪೊಟ್ಟಿಗಾಗಿ ಅ
ನೃತನಾಡುವೆ ಬಲು ವಿಲಕ್ಷಣನಾಗಿ
ಸತ್ಯ ಸಂಕಲ್ಪ ಸಿರಿವಿಜಯ ವಿಠ್ಠಲರೇಯ
ಹೊತ್ತು ಪೋಗಾಡಿದೆನೊ ಉದರಂಭಾರನಾಗಿ ೫
ಜತೆ
ಎನ್ನಂಥ ವಂಚಕ ದಿಗ್ದೇಶದೊಳಗಿಲ್ಲ
ನಿನ್ನಂಥ ಕರುಣಿಯ ಕಾಣಿ ವಿಜಯ ವಿಠ್ಠಲಾ ೬

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿರುವ

೧೮. ಕದರಿ
ರಾಗ:ಭೈರವಿ
ಧ್ರುವತಾಳ
ಜಗದೊಳಗಿದಕೆಲ್ಲಿ ಮಿಗಿಲುಗಾಣೆನೊ ಸರ್ವ |
ನಗರ ಪ್ರದೇಶ ಇದರ ಅಗಲಾ ಸುತ್ತಯೋಜನ |
ಯುಗಯುಗದಲ್ಲಿ ಯಾತ್ರೆಗಳ ಮಾಡಿದ ಪುಣ್ಯ |
ಹಗಲೊಂದು ಕ್ಷಣವಿಲ್ಲಿ ಸುಗುಣನಾಗಿ ಇರಲು |
ಅಗಣಿತದಲ್ಲಿ ಭಕ್ತರಿಗೆ ತಂದು ಕೊಡುವದೂ |
ನಿಗಮಾಸನ್ನ ಹರಿ ಮೊಗನ ಹಗೆಗಳಿಗಿಲ್ಲ |
ಖಗರಾಜಾನಿಲ್ಲಿ ತಪಸಿನಾಗಿ ಕೃಷ್ಣನ |
ಹೆಗಲಲ್ಲಿ ಪೊತ್ತು [ಮಿ]ರುಗುವ ವರವನ್ನು ಪಡೆದು |
ಪೊಗಳಿದ ಜನ[ದ] ಕಣ್ಣಿಗೆ ಸುಳಿವ ಸುಲಭಾ ನರ |
ಮೃಗರೂಪ ವಿಜಯವಿಠಲಾ ಕದರಿನಿವಾಸ |
ಬಗೆಬಗೆಯಿಂದ ಚನ್ನಿ[ಗ]ನಾಗಿ ಮೆರೆವ ೧
ಮಟ್ಟತಾಳ
ಪ್ರಲ್ಹಾದಗೆ ಮೆಚ್ಚಿ ಶ್ರೀಹರಿ ಉದಭವಿಸಿ |
ಅಹಿತದಿತಿಸುತ [ಆ]ವಹದೊಳು ಕೊಂದು |
ಸಾಹವುಳ್ಳ ಸುರರ ದಾನಮಾಡುವೇನೆಂದು |
ಅಹೋಬಲದಿಂದ ಈಮ್ಮಡಿಯೊಳಗೆ ಸ್ತೋತ್ರ |
ಮಹಿಧರಕೆ ಬಂದು ವಹಿಲದಲ್ಲಿ ಕೆಡಹಿಖಳಕೊಂದೂ |
ಗಹಗಹಿಸಲು ವಾರಿರುಹ ಭವಬಂದು ಬಿ |
ನ್ನಾಹ ಮಾಡುತಿರಲು ಬಹುಮಹಿಮನಾದ
ವಿಜಯವಿಠಲರೇಯಾ |
ಮಹಸಂತೋಷದಲಿ ಬಾಹುಬಲದಿ ಮೆರೆದಾ ೨
ತ್ರಿವಿಡಿತಾಳ
ಈ ತೆರದಲಿ ಇಲ್ಲಿ ನರಹರಿ ಇರುತಿರೆ |
ಶ್ವೇತ ಮುನೇಶ್ವರ ಬಂದು ವೇಗ |
ತಾ ತಪವನೆ ಮಾಡಿ ಬೆತ್ತ ನಿರ್ಮ್ಗಳದಲ್ಲಿ |
ಖ್ಯಾ[ತಿ] ಪಡೆದ ವರವಿನಿಂದ |
ಭೂತಳದೊಳಗಿದ್ದು ಅಂದಾರಭ್ಯವಾಗಿ |
ಶ್ವೇತಾರಣ್ಯಕಾಣೊ ನಾಮದಲ್ಲೀ |
ಭೀತಿಯಿಂದಲಿ ಭೃಗನು ಇಲ್ಲಿ ತಪವನೆ ಮಾಡಿ |
ಪಾತಕ ಪರಿಹಾರ ಮಾಡಿಕೊಂಡ |
ಶ್ವೇತವಾಹನನಂದು ಯಾತ್ರಿಮಾಡುವಾಗ |
ನೀತಿನಿಂದಲಿ ಇಲ್ಲೆ ಶುದ್ಧನಾದ |
ಭೂತಾಧಿಪನೆ ಬಲ್ಲ ಇದರ ಮಹಿಮೆಯನ್ನು |
ಪ್ರೀತಿಯಿಂದಲಿ ನಾರದ ಗರುಹೀದ |
ಮಾತುಳ ವೈರಿ ಸಿರಿ ವಿಜಯವಿಠಲಾ ಮಾಂ |
ಧಾತಾನಿಂದಲಿ ಪೂಜೆಗೊಂಡು ವರವನಿತ್ತ ೩
ಅಟ್ಟತಾಳ
ಶ್ವೇತ ಪುಷ್ಕರಣಿಯು ಭವನಾಶಿ ಭೃಗುತೀರ್ಥ |
ಶ್ವೇತವಾಹನ ವಶಿಷ್ಟ ನಾರದತೀರ್ಥ |
ಧಾತಾ ನರಸಿಂಗ ಇಂದ್ರಾದ್ಯಷ್ಟತೀರ್ಥ |
ಪಾಲಕಹರ ಋಣಮೋಚನತೀರ್ಥ ಮ |
ಹಾತಿಶಯವುಳ್ಳ ರಾಮ ಶಂಖಾಚಕ್ರ |
ಶ್ವೇತ ನಾನಾ ತೀರ್ಥಗಳಲ್ಲಿ ಉಂಟು ಶು |
ದ್ಧಾತುಮಾ ಬಂದೊಂದು ಮಜ್ಜನಮಾಡಲು |
ಜ್ಞಾತಿಗಳ ಕೂಡ ಸದ್ಗತಿ ಐದುವ |
ವಾತಾವಿನುತ ಸ್ವಾಮಿ ವಿಜಯವಿಠಲರೇಯಾ |
ಮಾತುಮಾತಿಗೆ ನೆನಿಸೆ ಒಲಿದು ಸಂಗಡ ಬಪ್ಪ ೪
ಆದಿತಾಳ
ಅರ್ಜುನನದಿಯಲ್ಲಿ ಸಜ್ಜನಕೂಡ |
ಮಜ್ಜನವನ್ನು ಮಾಡಿ ಹೆಜ್ಜೆಹೆಜ್ಜೆ[ಗೆ] ನಿ |
ರ್ಲಜ್ಯರಾಗಿ ಹರಿಯಾ ಗರ್ಜನೆಯಲಿ ನುಡಿದು |
ಮೂರ್ಜಗದೊಳು ಬಲು ಪೂಜ್ಯವಂತರಾಗಿ |
ಅರ್ಜುನ ಮರದೆಡಿಯಾ ಇಪ್ಪ ವಿಜಯವಿಠಲ |
ನಿರ್ಜರಾಗಣದೊಡನೆ ಪಾಲಿಸುವಾ ಫಲವರಿತು ೫
ಜತೆ
ಖಾದ್ರಿ ಪುರಾನಿಲಯಾ ನರಶಿಂಗಾ ಭವಭಂಗ |
ಭದ್ರಾ ಮೂರುತಿ ಜನಾರ್ಧನ ವಿಜಯವಿಠಲಾ ೬

ಉತ್ತರಭಾರತದ ಬಿಹಾರ್ ರಾಜ್ಯದಲ್ಲಿರುವ ಗಯಾ

೨೭. ಗಯಾ
ರಾಗ:ಭೈರವಿ
ಧ್ರುವತಾಳ
ಜಗವೆಲ್ಲ ವ್ಯಾಪಿಸಿದ ಬಲು ಅತೀಂದ್ರಿಯಪಾದ |
ಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹರಪಾದ |
ಝಗಝಗಿಸುವ ಪರಮಮಂಗಳ ಖಣಿಯ ಪಾದ |
ನಿಗಮಾವಳಿಗೆ ಇದು ನಿಲುಕದ ಪಾದ |
ಅಗಣಿತಗುಣಪೂರ್ಣ ಸೌಮ್ಯಪಾದ |
ತ್ರಿಗುಣಾತೀತವಾದ ಶೃಂಗಾರನಿಧಿಪಾದ |
ಗಗನ ನದಿಯ ಪೆತ್ತ ಗಂಭೀರ ಪಾದ |
ಖಗರಾಜನ ದಿವ್ಯ ಪೆಗಲಲ್ಲಿ ಪೊಳೆವ ಪಾದ |
ಯುಗಯುಗದಲ್ಲಿ ಇಲ್ಲಿ ಪೂಜೆಗೊಂಬುವ ಪಾದ |
ಬಗೆ ಬಗೆ ವರಗಳ ಕೊಡುವ ಪಾದ |
ಮಿಗೆ [ಸಾಹ]ಸವುಳ್ಳ ಮಿ[ಸು]ಣಿಯಾಭರಣ ಪಾದ |
ಅಘದೂರ ಪಾದ ಅತಿ ಚಿತ್ರ ಪಾದ |
ನಗವೈರಿನುತ ನಮ್ಮ ವಿಜಯವಿಠಲ ಪ |
ನ್ನಗ ಶಾಯಿಯ ಪಾದ ವಿಷ್ಣುಪಾದ ೧
ಮಟ್ಟತಾಳ
ಧರ್ಮಶಿಲಿಯ ಮೇಲೆ ಮೆರೆವ ಮಣಿಯ ಪಾದ |
ಕರ್ಮ ಖಂಡನೆ ಮಾಳ್ಪ ಕಲುಷವಿಗತಪಾದ |
ಕರ್ಮವರ್ಮ ಮರ್ಮ ಕರ್ಮ ಸಂಗದ ಪಾದ |
[ಪ]ರ್ಮೆಯುನ್ನತವಾದ ಪ್ರೇಮ (ಪ್ರಮೆ) ಭರಿತ ಪಾದ |
ಕೂರ್ಮರೂಪ ನಮ್ಮ ವಿಜಯವಿಠಲರೇಯನ |
ಧರ್ಮ ಮೂರುತಿಯ ಪಾದ ಸಿರಿಪಾದ ೨
ತ್ರಿವಿಡಿತಾಳ
ದಹರಾಕಾಶದಲ್ಲಿ ಮಿಂಚುವ ಘನಪಾದ |
ಬಹು ಗಮನವಾಗಿದ್ದ ಭಾಗ್ಯಪಾದ |
ಅಹೋರಾತ್ರಿಯಲಿ ಬಿಡದೆ ಆನಂದದ ಪಾದ |
ಮಹಪುಣ್ಯತಂದೀವ ಮಂತ್ರಪಾದ |
ದ್ರೋಹಿ ಮಾನವರಿಗೆ ದೂರವಾದ ಪಾದ |
ಗಹನವಾದಪಾದ ಗುಪ್ತಪಾದ |
ಸ್ನೇಹಭಾವದಿಂದ ಸಾಕುವ ನಿಧಿಪಾದ |
ರಹಸ್ಯವಾಗಿ ಜಪಿಸುವ ಪಾದ |
ತ್ರಾಹಿತಾವರೆನಯನ ವಿಜಯವಿಠಲ ಸರಸಿ |
ರೂಹ ಪೋಲುವಪಾದ ಆರ್ಜವಪಾದ ೩
ಅಟ್ಟತಾಳ
ಅಸುರಗಯನ ಶಿರದಲ್ಲಿನಿಂದ ಪಾದ |
ಎಸೆವ ಹದಿನೆಂಟು ಪಾದದೊಳಿಪ್ಪ ಪಾದ |
ಶಶಿಮುಖಿ ಗೋಪೇರಮನಕೆ ಮೋಹನಪಾದ |
ವಶವಾಗಿ ಭಕ್ತರ ಬಳೀಯಲಿಪ್ಪ ಪಾದ |
ವಿಷವರ್ಜಿತ ವಿಲಕ್ಷಣ ಪಾದ |
ಬೆಸನೆಲಾಲಿಸಿ ಲಾಲನೆಮಾಡುವ ಪಾದ |
ಅಸಮದೈವ ನಮ್ಮ ವಿಜಯವಿಠಲರೇಯಾ |
ಪೆಸರಾದ ಪಾದ ಪರಮಸೌಖ್ಯಪಾದ ೪
ಆದಿತಾಳ
ಎಲ್ಲರಿಂದಲಿ ಪಿಂಡ ಹಾಕಿಸಿಕೊಂಬ ಪಾದ |
ಮಲ್ಲ ಮೊದಲಾದವರ ಖಳರ ಜೈಸಿದ ಪಾದ |
ಮೆಲ್ಲಮೆಲ್ಲನೆ ಶುದ್ಧಸ್ತೋತ್ರ ಕೈಕೊಂಬ ಪಾದ |
ಸಲ್ಲಲಿತ ಪಾದ ಸರ್ವ ಸೌಕಾರ್ಯ ಪಾದ |
ಎಲ್ಲೆಲ್ಲಿ ನೋಡಿದರೂ ವ್ಯಕ್ತವಾದ ಪಾದ |
ಬಲ್ಲಿದ ಹರಿ ನಮ್ಮ ವಿಜಯವಿಠಲರೇಯ |
ವಲ್ಲಭನ ಪಾದ ವಜ್ರಾಂಕಿತಪಾದ ೫
ಜತೆ
ಫಲ್ಗುಣಿ ತೀರದಲಿ ಮೆರೆವವ ಹತ್ತು ಪಾದ |
ಪಲುಗಣ ಸಾರಥಿ ವಿಜಯವಿಠಲನ ಪಾದ ೬

ಪ್ರಾರಬ್ಧ ಕರ್ಮ ವಶದಿಂದ ಜನ್ಮಗಳುಂಟಾಗಿ

೩೬
ಧ್ರುವತಾಳ
ಜಡ ಕೇವಲತರ ಸೂಕ್ಷ್ಮ ಪ್ರಕೃತಿಯಿಂದ |
ಬಿಡದೆ ಬದ್ಧವಾದ ಜೀವರ ಜೀವರಾಶಿ |
ಕೆಡಲುಂಟೆ ಎಂದಿಗೂ ಅಚ್ಛೇದ್ಯ ಅಭೇದ್ಯವೆಂಬೊ |
ನುಡಿ ಧೃಡವಾಗಿಪ್ಪದು ಸರ್ವಕಾಲ |
ಪೊಡವಿಯೊಳಗೆ ಜೀವ ಪುಟ್ಟುವ ಬಗೆ ಕೇಳು |
ಅಡಿಗಡಿಗೆ ಸಂಸಾರದಲ್ಲಿ ತಂದು |
ಇಡುವುದಕ್ಕೆ ಮುಖ್ಯ ಹರಿಯೊಬ್ಬ ಸ್ವಾತಂತ್ರ |
ತಡಿಯದೆ ಸಿರಿ ದೇವಿ ಆತರುವಾಯ |
ಜಡಜ ಸಂಭವ ವಾಯು ವಾಣಿ ಭಾರತಿಗಳಿಗೆ |
ಎಡಿಗೆಡಿಸಿದು ಲಿಂಗ ಜ್ಞಾನಾಂಶಕ್ಕೆ |
ಮೃಡ ಮಿಕ್ಕಾದವರಿಗೆ ಜ್ಞಾನಕ್ಕೆ ತಿರೋಭಾವ |
ಕೊಡುವಳು ದೇವಿ ಮೂರು ರೂಪದಲ್ಲಿ |
ಕಡೆ ಭಾಗ ದುರ್ಗಾನಾಮ ಭೂ ದೇವಿ ಎಂಬ ನಾಮ |
ನಡುವೆ ಎಣಿಸು ಕೊನಿಗೆ ಶ್ರೀದೇವಿಯು |
ಕಡು ಸಮರ್ಥಳು ಸೃಷ್ಟ್ಯಾದ್ಯಷ್ಟ ಕರ್ತೃತ್ವವು |
ಒಡಿಯಾನಿಂದಲೆ ತಾನೆ ಮಾಡುವಳು |
ಬಿಡದೆ ಸುತ್ತಿದ ಲಿಂಗ ಮೂರು ಪರಿಚ್ಛೇದ ನಿ |
ಬ್ಬಿಡಿಯಾಗಿಪ್ಪದು ಅವಕಾಶವ |
ಕೊಡುತಲಿ ಜೀವಿಗಳ ಅಂಶ ಪ್ರಕಾಶಕ್ಕೆ |
ಒಡನೊಡನೆ ತನ್ನ ಕಾಂತಿ ಮಿಳಿತವಾಗಿ |
ನಡೆವ ನುಡಿವುದೆಲ್ಲ ಭವಕೆ ಕಾರಣವಾಗಿ |
ಕಡಲ ಶಯನನಿಂದ ವಿಸ್ತಾರವೊ |
ಸಡಲಿ ಪೋಗುವುದಲ್ಲ ವಿರಜಾ ಸ್ನಾನದ ತನಕ |
ಎಡೆಬಿಡದೆ ಇಪ್ಪುದು ಇದರ ವರ್ನ |
ನುಡಿವೆನು ನೀಲ ಪದ್ಮರಾಗ ವಜ್ರದ ತೆರದಿ |
ಅಡಿ ಮೇಲಾಗಿ ಉಂಟು ಒಂದಕ್ಕೊಂದು |
ಬಡವರಾಧಾರಿ ನಮ್ಮ ವಿಜಯ ವಿಠ್ಠಲ ಅವ |
ಘಡವನೆ ದಾಟಿಸುವ ಈ ಪರಿ ತಿಳಿದವಗೆ ೧
ಮಟ್ಟತಾಳ
ತ್ರಿವಿಧಾತ್ಮಕವಾದ ಲಿಂಗ ದೇಹದಿಂದ |
ದೀವಿಗೆ ಕುಡಿ ವೇಗವುದರಿದಂತೆ ಬಿದ್ದು |
ಶ್ರೀವರನೀಕ್ಷಿಸಲು ಅತಿ ಪರಮಾಣುಗಳು |
ಆವಾವ ಗಣದಿಂದ ಶಂಕೆ ಯುಕ್ತವಾಗಿ |
ಸಾವಿರ ಶತ ಹತ್ತುವುದರಿಂದ ಒಂದಾಗಿ |
ಕೋವಿದರು ಕೇಳಿ ಗುಣ ವ್ಯೆಷಮ್ಯವಿದು |
ಗೋವರ್ಧನೋದ್ಧರಣ ವಿಜಯ ವಿಠ್ಠಲರೇಯ |
ಪಾವನ ಮೂರುತಿ ಅಲ್ಲಲ್ಲೆ ಇರುತಿಪ್ಪ ೨
ತ್ರಿವಿಡಿ ತಾಳ
ಬಿಂದು ಬಿಂದುಗಳಲ್ಪ ಪರಮಾಣು ಸಮೇತ |
ಒಂದೊಂದು ಸೂಕ್ಷ್ಮ ತತ್ಪಗಳಿಂದಲಿ |
ಮುಂದೆ ಕಾರ್ಯಗಳಯ್ಯ ಅನಿರುದ್ಧ ಶರೀರ |
ಪೊಂದಿಕೊಂಡಿಪ್ಪದು ಲಿಂಗದಂತೆ |
ಹಿಂದಣಾಗಮ ಉಂಟು ಪ್ರಾಂತ್ಯಭಾಗಕೆ ಸ |
ಬಂಧವಾಗಿಪ್ಪವು ಪ್ರಕೃತಿ ಎರಡು |
ಕುಂದದೆ ಪೆಸರುಂಟು ಜೀವ ಪರಮಾಚ್ಛಾದಿಕಾ |
ವೆಂದೆಂಬ ನಾಮಗಳು ಜಡತಮ ವರ್ನ |
ಸಂದಿದೆ ಲಿಂಗ ಅನಿರುದ್ಧ ಮಧ್ಯ |
ಬಂಧಕಾ ದೃಷ್ಟಜನ ಅಲ್ಲಿ ಇಲ್ಲ |
ಇಂದಿದೆ ಅಜ ವಾಯು ಇವರ ಹೆಂಡರು ಆ |
ನಂದಾಭಿಮಾನಿಗಳು ಲಕುಮಿ ನಿತ್ಯ |
ಸಂದೇಹಗೊಳ ಸಲ್ಲ ಅನಿರುದ್ಧ ದೇಹದಲಿ |
ಬಂದು ಪ್ರವೇಶವಾದರು ತತ್ವರು |
ಒಂದೊಂದು ಪ್ರಕೃತಿಯು ಇದ ಕಾವರ್ಕವಾಗಿ |
ಛಂದದಿಂದಲಿ ಇರೆ ಇಲ್ಲಿ ದೃಷ್ಯ (ದುಷ್ಯ)
ಮಂದಿಗಳಿಬ್ಬರು ಸ್ತ್ರೀ ವಾಚಕರಯ್ಯ |
ಅಂದಕೆ ಪಾರಭಿಮಾನರಾಗಿ |
ಸುಂದರ ಗುಣವುಳ್ಳ ವಾಣಿ ಭಾರತಿ ಗಿರಿಯ |
ನಂದನೆ ಶಚಿಯಿವರು ಪ್ರೇರಕರೊ |
ಹಿಂದಿನ ಪರಮೇಷ್ಠಿ ಕಲ್ಪದಲಿ ಆ ಗುಣ |
ದಿಂದ ಈರ್ವರು ಸಾಧನ ಮಾಡಿ ಬಂದು |
ದ್ವಂದ್ವಾಚ್ಛಾದಕದಲ್ಲಿ ಸ್ತ್ರೀಯರು |
ನಿಂದು ಜೀವರಿಗೆ ಪ್ರತಿಕೂಲರವರು |
ಇಂದ್ರ ಯೋನಿ ವಿಡಿದು ಕರ್ನಿಕೆ ಪರಿಯಂತದಲ್ಲಿ |
ಒಂದೊಂದು ಅಣು ಮಾತ್ರ ಅಧಿಕವಾಗಿ |
ಸಂದೇಹ ಬಡಿಸುವರು ಉತ್ತಮರ ಪ್ರೇರಣೆ |
ಯಿಂದ ನೀಚರಿಗೆ ಕೇವಲ ಉಪಹತಿ |
ಕಂದರ್ಪ ಪಿತ ನಮ್ಮ ವಿಜಯ ವಿಠ್ಠಲರೇಯ |
ವೃಂದಾವನ ಪ್ರೀಯ ವೈಕುಂಠ ರಮಣ | ೩
ಅಟ್ಟತಾಳ
ಇದು ಮೂಲಕಾರಣ ಅವಿದ್ಯ ಧರ್ಮವು |
ಇದು ಕಲಿಯಿರಲಿಕ್ಕೆ ಆವಾಸ ಸ್ಥಾನವಾಗಿದೆ |
ಇದು ಮಹ ಪ್ರಬಲವು ಸೂತಕ ಪ್ರಾರಬ್ಧ |
ಒದಗಿ ಬಂದಾಗಲು ಕಲಿಯ ಒಡಗೂಡಿ |
ಅಧಿಕ ಅಧಿಕವಾಗಿ ವ್ಯಥೆ ಬಡಿಸುವದು |
ಮುದದಿಂದ ಬೊಮ್ಮಾಂಡ ಬಾಹಿರದಲಿ ಇದ್ದ |
ತ್ರಿದಶರಲ್ಲಿ ಇವರ ಕಾರ್ಯವೆ ಕೊಳ್ಳದು |
ಪದುಮ ಕಲ್ಪದಲ್ಲಿ ಪದುಮಜನಿಂದ ಪು |
ಟ್ಟಿದ ಜೀವರಾಶಿಗೆ ವ್ಯಥೆ ಕಾರಣವೆನ್ನಿ |
ಇದಕಿಂತ ಮೇಲವತಾರ ಧರ್ಮದಲ್ಲಿ |
ತದುಪರಿ ಮನುಜರಿಗೆಂತು ಪೇಳುವದೇನು |
ವಿಧಿ ಪಿತ ವಿಜಯವಿಠ್ಠಲರೇಯನ ಲೀಲೆ |
ಅದು ಭೂತವಾಗಿದೆ ತುತಿಸಬಲ್ಲವರಾರು ೪
ಆದಿತಾಳ
ಪ್ರತಿ ಪ್ರತಿ ಕಲ್ಪವಾಗಿ ಪ್ರತಿ ಪ್ರತಿ ಯೋಗ್ಯರಲ್ಲಿ |
ಪ್ರತಿ ಪ್ರತಿ ಜೀವದ್ವಯ ಖತಿಗೊಳಿಪರು ಗತಿಗೆ |
ಸತತ ಈ ಪರಿಯುಂಟು ಹಿತ ವಿಶೇಷವುಳ್ಳರೆ |
ಮತಿವಂತರು ಪೇಳುವುದು ನುತಿಸುವೆ ತಲೆಬಾಗಿ |
ಕ್ಷಿತಿಯ ಮಾನವ ಬಹು ಶ್ರುತಿಯಿಂದ ಬಲು ವೇಗ |
ಗತಿಗೆ ಸಾಧನ ಮಾಡುತ ಮುಕ್ತನಾಗುವೆ (ವ) |
ಪತಿತ ಪಾವನ ಸ್ವಾಮಿ ವಿಜಯವಿಠ್ಠಲರೇಯ |
ಚತುರ ಮೂರುತಿ ತನ್ನ ಇಚ್ಛಾವ [ರ್ತಿ]ಸುತಿಪ್ಪ ೫
ಜತೆ
ಜೀವಕೆ ಪ್ರತಿಬಂಧವಾಗಿದ್ದ ಜನರಿವರು |
ದೇವೇಶ ವಿಜಯ ವಿಠ್ಠಲನಿಂದ ತೊಲಗುವರು ೫

ದೇಹವನ್ನು ಉಪವಾಸ, ವ್ರತ, ತೀರ್ಥಯಾತ್ರೆಯನ್ನು

೪೮
ಝಂಪೆತಾಳ
ಜಡದೊಳಗೆ ಮುಳುಗಿ ದಟ್ಟಡಿಯಾಗಿ ಮೂಗನು
ಪಿಡಿದು ನಿಡಿಗಲ್ಲಿನಲಿ ವಾಸವಾಗಿ
ಗಿಡಲತೆ ಎಲೆಮೆದ್ದು ಒಡಲುಸೇದಿ ಬಾಡಿ
ಬಿಡದೆ ತೀರ್ಥಾದಿಗಳ ಸಂಚರಿಸೀ
ಪಿಡಿದು ಉಪವಾಸ ವೃತ ಜಪತಪ ಕೃತುಗಳು
ಕೊಡುವ ಫಲ ಒಂದಿಷ್ಟು ದೇವರಿಲ್ಲದ ಹಾಳ
ಗುಡಿಗೆ ತೋರಣ ಶಿಖರ ರಚಿಸಿದಂತೆ
ಕೊಡಬೇಡ ಕೊಳಬೇಡ ಸುರ ವಿಜಯ ವಿಠ್ಠಲನ್ನ
ಅಡಿಗಳನು ನಂಬಿ ಪಡಿಮುಖನಾಗು ಗತಿಗೆ ೧
ಮಟ್ಟತಾಳ
ಕ್ಷೀರವಾರಿಧಿಯಾ ತೀರದಲ್ಲಿ ಪೋಗಿ
ಸೇರಿದರೆ ತಾನು ಕೋರಿದುದನಿತ್ತು ಒಕ್ಕು
ಧಾರುಣಿಯೊಳಗುಳ್ಳ ಊರು ಊರನೆ ತಿರುಗಿ
ಕ್ಷೀರನು ತಂದರೆ ಕ್ಷೀರಾಬ್ಧಿಗೆ ಸರಿಯೆ
ನಾರಾಯಣನೆಂಬ ಮೂರುತಿಯ ಅಂಗೀ
ಕರಸದಲಪಾರ ಮೂರುತಿಗಳ
ನಾರಾಧಿಸಲೇನು ಪಾರಮಾರ್ಥಗಳಿಲ್ಲ
ಶಾರೀರ ಬೃತು ವಿಜಯ ವಿಠ್ಠಲನ್ನ
ಆರಾದರು ಸಾರೆ ಹಾರೈಸಿದ ಫಲವು ೨
ತ್ರಿವಿಡಿತಾಳ
ತತ್ವಜ್ಞಾನವಿಲ್ಲದೆ ಚಿತ್ತ ಶುದ್ಧಿಯಾಗದೆ
ಚಿತ್ತಜಪಿತ ಸರುವೋತ್ತಮನೆನ್ನದೆ
ಹತ್ತೆಂಟು ಸಾರಿಗೆ ನಾನಾ ವ್ರತವ ಮಾಡೆ
ಸುತ್ತಿದ ಬಳಿಕ ಎತ್ತಲು ಪೊಂದದಲೆ ಪೋಗಿ
ಕತ್ತಲೆಯೊಳು ಬಿದ್ದು ಹೊತ್ತುಗಾಣದೆ ಪಾಪ
ಮೊತ್ತವನುಂಡು ಯಾತನೆ ಬಡುವರು
ಧೃತ್ತಸನನಾಮ ವಿಜಯ ವಿಠ್ಠಲನಾ ದೂ
ರುತ್ತದ್ವೇಷವ, ಬಳಲಿಸಿದವಗೆ ಸಿದ್ಧ ೩
ಅಟ್ಟತಾಳ
ಗಾರ್ಧಬದ ಮರಿಯ ತಂದಾವಿನ ಪಾಲಿಟ್ಟು
ನಿರ್ಧರವಾಗಿ ತುರಗುವ ಮಾಡುವೆನೆಂದು
ಮೂಞ್ರ್ಸ್ನ್ಯವಾಗಿ ನಿದ್ರೆಗೆಟ್ಟು ಕಾಯಲು
ಗಿರ್ಧವಾದರೂ ತೋರಿ ಕಾಣಿ ಪೋದೆ
ವರ್ಧಮಾನಗದು ಕೋಟಿ ಯೋಚಿಸಿದರು
ವಾರ್ಧಿಕ ಪುರುಷಗೆ ಪಂಚಾಮೃತವನುಣಿಸಿ
ಸಾರ್ದು ಪ್ರಾಯಾವಸ್ಥಿ ಎನಿಸುವನೇ ನಿ
ನ್ನರ್ಧ ಮನಸು ಬಿಡು ಜ್ಞಾನದಿಂದಲಿ ವಂಶ
ವರ್ಧನನಾಮ ವಿಜಯ ವಿಠ್ಠಲನ್ನ ನೆನಿಯೆ ಕ್ಷ
ಣಾರ್ಧದೊಳಗೆ ತಡವಿಲ್ಲದೆ ಗತಿ೪
ಆದಿತಾಳ
ಭೂತ ಸಂಖೇ ಹಿತರತಾಚ ಮಾತಿಗಿದು ಶ್ರುತಿವಚನ
ಭೂತಳದಿ ಏಕೋವಿಷ್ಣು ಅಜಾತನೆಂದೂ
ನೀತಿಯೆ ವಿಧಾತವಾತ ಭೂತನಾಥ ಸುರದ್ರಾತ
ಜಾತರೆಂದು ತಿಳಿದು ಸಂಖ್ಯಾತ ಮಾಡಿ ಪ್ರತಿ ದಿನ
ದಾತನೆಂದ ಒಂದು ಪತ್ರವು ಫಲತೋಯ ತಂದು
ಪ್ರೀತಿಯಿಂದರ್ಚಿಸಿ ಜಗನ್ನಾಥ ನೀನೆಗತಿ ಎನಲು
ಮಾತು ಎಂಬನಿತರೊಳು ಪಾತಕವನ್ನು ಹರಿಸಿ
ಭೂತವಾಸ ವಿಜಯ ವಿಠಲ ಆತುಮದೊಳಗೆ ನಿಲುವ
ಈತನನ್ನು ಬಿಟ್ಟು ನೀವು ನೂತನೂಲು ಕೋತಿಕೈಯ್ಯಾ
ಯಾತನೆ ಬಟ್ಟಂತೆ ಯಮನ ಯಾತನೀಯ ಬೀಳದಿರಿ ೫
ಜತೆ
ಡಿಂಬಾ ದಂಡಣೆ ಬಿಟ್ಟು ನಂಬುನಂಬೆಲೊ ಕಮ
ಲಾಂಬಕ ಸುರೇಶ ವಿಜಯ ವಿಠ್ಠಲನ್ನ ೬

ಉತ್ತಮ ವಂಶದಲ್ಲಿ ಹುಟ್ಟಿದರೂ, ಉತ್ತಮ ಗುಣಗಳನ್ನು

೪೯
ಧ್ರುವತಾಳ
ಜನನವ ನೋಡಿಯಾ ಜನನದಲಿ ಹುರುಳಿಲ್ಲ
ಗಣವನ್ನು ನೋಡಿಯಾ ಗಣದಲ್ಲಿ ಹುರುಳಿಲ್ಲ
ಗುಣದಲ್ಲಿ ನೋಡಿಯಾ ಗುಣದಲ್ಲಿ ಹುರುಳಿಲ್ಲ
ಮನವನು ನೋಡಿಯಾ ಮನದಲ್ಲಿ ಹುರುಳಿಲ್ಲ
ತನುವನು ನೋಡಿಯಾ ತನುವಿನಲಿ ಹುರುಳಿಲ್ಲ
ಜನನ ಗಣ ಗುಣ ಮನ ತನವೆಂಬೊದಿನಿತು
ಗುಣವಾದರೂ ಒಂದೆನಲಾಗದು ದಿನ
ದಿನ ಪ್ರತಿದಿನ ಶುದ್ಧನು ಎನಿಸಲಿಲ್ಲ
ಧನವಂತನೆಂಬೊ ಪೆಸುರು ಬರಿದೆ ಒಂದು ಕಾ
ಸನು ಕಾಣದವನಂತೆ ನಾನುತ್ತುಮ ದಾ
ಸನು ಎಂದೆನಿಸುವೆನು ಗುಣವ ನೋಡಲು ಬರಿದೆ
ಅನಿರುದ್ಧ ವಿಜಯ ವಿಠ್ಠಲ ನಿನ್ನ ಶ್ರವಣ
ಮನನ ಧ್ಯಾನ ಮಾಡದೆ ಮನುಜಾಧಮನಾದೆ ೧
ಮಟ್ಟತಾಳ
ಹಸ್ತು ಕಕ್ಕರನಾಗಿ ಪ್ರಸ್ತಮಾಡುವ ಗೃ
ಹಸ್ಥನ ಮನೆಯಲ್ಲಿ ಹೊಸ್ತಿಲ ಕಾಯ್ದು ಪ
ರಸ್ಥಳದವನೆಂದು ಮಸ್ತಕವನು ಬಾಗಿ
ಹಸ್ತಗಳ ಮುಗಚಿ ಸ್ವಸ್ತಿಯನ್ನು ಪೇಳಿ
ಆಸ್ತಿ ಎನಿಸಿಕೊಂಡು ಅಸ್ತಂಗತ ಇದ್ದು
ಸ್ವಸ್ತದಲಿ ತಿಂಬೆ ಅಸ್ತಿ ಹೂಳೋತನಕ
ಸ್ವಸ್ತಿ ದಕ್ಷಣನಾಮ ವಿಜಯ ವಿಠಲರೇಯ
ಹಸ್ತಗಾರಿ ನಿನ್ನೋಪಾಸ್ತಿ ಮಾಡಿದರೆ ಸ
ಮಸ್ತ ಷಡುರಸನ್ನ ನಾಸ್ತಿ ಎನಬಲ್ಲ್ಯಾ ೨
ರೂಪಕತಾಳ
ಪರರನಾಶ್ರಯಿಸಿ ಉದರ ಪೊರೆವೆನೆಂಬೊ
ತಿರುಕ ಬಡಿವಾರವ ಒಂದಲ್ಲದೆ
ಭರದಿಂದ ರುಚಿ ವಸ್ತ ಕಲಿಸಿ ನಾಲಿಗೆಯಲ್ಲಿ
ಇರಿಸಲು ಕೊನೆಯಲ್ಲಿ ತೋರುವುದು ಮಗುಳೆ
ಹೊರಗೆ ಉಗುಳಲು ಇಲ್ಲ ಒಳಗೆನುಂಗಲು ಇಲ್ಲ
ಅರಿವುದು ರುಚಿ ಇಪ್ಪ ತೆರನಂಗಳೂ
ಪರರಬೇಡದೆ ಶ್ರೀ ಹರಿ ನಾಮಾಮೃತವನ್ನು
ಸುರಿದರೆ ಒಳಹೊರಗೆ ಇಹಪರದಲ್ಲಿ
ಪರಿಪೂರ್ಣವಾಗಿ ಸ್ವಾದವನು ಕೊಡುತಲಿಪ್ಪುದು
ಪುರಜತುನಾಮ ಶಿರಿ ವಿಜಯ ವಿಠ್ಠಲನ್ನ ನಂಬಿ
ದರದೆ ನಾನಾ ಕಾದಶ್ಚರಿತಗಳುಂಬೆ ೩
ಝಂಪೆತಾಳ
ಡೊಂಕಕಾಷ್ಠವು ಇರೆ ಬೆಂಕಿ ಇಂದಲಿ ಕಾಸಿ
ಡೊಂಕ ತಿದ್ದಲು ಬಲು ಸರಳಾಗೋದೊ
ವೆಂಕಟಾ ಎನ್ನಂಗ ಅಹಂಕಾರ ಲೇಪನದಿ
ಡೊಂಕಾಗೆ ನಿನ್ನ ನಾಮಾಂಕಿತದಲಿ ಕಾಸಿ
ಡೊಂಕ ತಿದ್ದಲಿಬೇಕು ಕೊಂಕಾಗಗೊಡದಂತೆ
ಮುಂಕಟ್ಟು ಸಂಕಟದೋರದೋಪಾದಿಯಲಿ
ಶಂಖ ಭೃತೆನಾಮ ವಿಜಯ ವಿಠ್ಠಲ ಮೀ
ನಾಂಕಜನಕ ಎನ್ನ ಕೆಳಂಕವ ಹರಿಸೊ ೪
ತ್ರಿವಿಡಿ ತಾಳ
ಪತಿಯೆಗತಿ ಎಂದು ಸತತದಲ್ಲಿ ನಂಬಿ
ಇತರ ಸಂಗತಿಗೆ ಪೋಗದೆ ನುಡಿಸದೆ
ಹಿತದಿಂದ ಪತಿಯನ್ನು ನುತಿಸಿ ನಿಜ
ಪತಿವ್ರತೆಯಾಗಿ ಸಮ್ಮತವಿರಲೂ
ಚತುರರು ನಾರಿಯ ಖತಿಗೊಂಡು ನೂಕಲು
ಪ್ರತಿಮನೆ ಸೇರುವಳೆ ಹತವಾದ ರೂ
ಪ್ರತಿ ದೈವವಿಲ್ಲನದ್ವಿತಿಯ ನೀನೆಂದು ನಿ
ಶ್ಚಿತವಾಗಿ ತಿಳಿದು ನಮಿತನಾದೆನೊ
ಕೃತುನಾಮನೆ ವಿಜಯ ವಿಠ್ಠಲದೇವೋತ್ತಮಾ
ಹಿತ ಮಾಡಿದರೆ ಕೀರುತಿ ನಿನಿಗೆಲ್ಲಿಯದೊ ೫
ಅಟ್ಟತಾಳ
ಹೆಣ್ಣು ಹೀನವಾಗೆ ತವುರ ಮನೆಯೆ ಗತಿ
ಹೊನ್ನು ಹೀನವಾಗೆ ಪಂಚಾಲನೆ ಗತಿ
ಕಣ್ಣು ಹೀನವಾಗೆ ಕುಳಿತ ಸ್ಥಳವೆಗತಿ
ನಿನ್ನ ಸೇವಕನೀಗ ನ್ಯೂನ ಗುಣನಾಗೆ
ನಿನ್ನ ಪಾದವೆ ಗತಿ ಪನ್ನಂಗಶಯನಾ
ಇನ್ನಾರು ಸೇರುವ ಇನ್ನಾರು ಕೇಳುವ
ಚನ್ನಾಗಿ ತೋರದು ಚನ್ನಿಗರಾಯಾ
ಘನ್ನ ಸಿರಿವಂತ ತನ್ನ ಪಡಿಕೊತ್ತಾ
ಅನ್ಯಾರು ಕರಿಯಲು ಕಣ್ಣೆತ್ತಿ ನೋಡರು
ನಿನ್ನ ಬೀತಿಯಿಂದ ಮನ್ನಣೆ ಗೈವರು
ನಿನ್ನ ಸೇವಕಾ ಓರರನ್ನ ವಾಲೈಸಲು
ನಿನ್ನದೆ ಘನವೈ ಪ್ರಚ್ಛಿನ್ನ ಚಿರಕಾಲ
ಘನ್ನಂಗಶಾಯಿ ಶ್ರೀ ವಿಜಯ ವಿಠ್ಠಲರೇಯ
ನಿನ್ನವರಕೊಂಕು ನೀನೆ ತಿದ್ದಲಿಬೇಕೋ ೬
*** ಈ ಸುಳಾದಿ ಅಪೂರ್ಣವಾಗಿದೆ.

ಈ ಸುಳಾದಿಯು ಪಂಢರಾಪುರದ

೭೫. ಪಂಢರಪುರ
ರಾಗ:ವರಾಳಿ
ಧ್ರುವತಾಳ
ಜನನಿ ರುಕುಮಿಣಿ ಜನಕ ವಿಠಲಾ |
ನನಚತುಷ್ಟನು ಭ್ರಾತನು |
ಅನಲನೇತ್ರನು ಆತನ ಸುತ |
ಅನುದಿನ ನಿಜಬಾಂಧವ |
ಅನಿಲದೇವನು ಮುಖ್ಯತ ಗುರು |
ಅನಿಮಿಷರೂ ಬೆಂಬಲಾರೆನ್ನೀ |
ದನುಜ ದೈತ್ಯರು ಹತ್ತಾದವರು |
ಮುನಿಯ ದಾಸಿಯರು ಮಾರಿ ಮೃತ್ಯುಗ |
ಳಿನಿತು ಹರಿದಾಸರಿಗೆ ಅಯ್ಯಾ ಅಯ್ಯಾ |
ಜನನಿ ರುಕುಮಿಣಿ ವನಿಜಾಂಡದೊಳಗೆ ಇವರಿಗೆ |
ಎಣೆ ಇಲ್ಲಾ ಆವಲ್ಲಿ ಎಂಬರೂ |
ಘನ ವಿಜಯವಿಠಲರೇಯನ |
ನೆನವರ ಸುಕೃತವಿನ್ನೆಂತೋ ೧
ಮಟ್ಟತಾಳ
ಕಡಲಶಯನ ನಾಮಾ ನುಡಿ ಎಂಬೋ ಖಡ್ಗಾ |
ವಿಡಿದು ದುರಿತ ರಾಶಿಯಾ ತಡೆದು ತರುಬಿ ನಿಲಿಸಿ |
ಕಡಿಕಡಿ ಎನುತಾಲಿ ಕಡಿದೊಟ್ಟುವರಯ್ಯಾ |
ಸುಡುವ ದಾವಾನ[ಲನ] ಉಡಿಯಲ್ಲಿ ಕಟ್ಟುವರು |
ಪಡಿಗಾಣೆ ಹರಿಯಾ ಅಡಿಗಳ ನಂಬಿದ ದೃಢ ಭಕ್ತರಿಗಿನ್ನು |
ಮೃಡನೊಬ್ಬನೆ ಬಲ್ಲ ಒಡ ಒಡನಾಡುವಾ ವಿಜಯವಿಠಲನ್ನ |
ಒಡನಾಡಿಸಿಕೊಂಬ ಕಡುಗಲಿ ದಾಸರಿಗೆ ೨
ತ್ರಿವಿಡಿತಾಳ
ಉರಿಮಾರಿ ತುತ್ತಿಗೆ ಜಡಭರತನ ಕಟ್ಟಿ |
ದುರುಳಾ ಪಿಡಿದೊಯ್ಯೆ ತರಹರಿಸಲಾರದೆ |
ಮರಳೆ ಉಗುಳಿತು ನೋಡಾ ಹರಿಯಾ ಮಹಿಮೆಯಂತೆ |
ಕರೆದೊಯ್ಯೆ ಪುಷ್ಕರನ ಯಮನಾದೂತರು ತಂದು |
ನರಕಾವೆ ಬತ್ತಿ ಪೋಯಿತು ಮತ್ತೆ ದೂರ್ವಾಸಾ |
ಪರೀಕ್ಷಿತಾ ಬಳಲಿದ ತಪನ ಕುಲಜನಿಂದ |
ಧರೆಯೊಳು ಕೀರ್ತಿಮಾನಿನಿ ಕೆಣಕಿ ಯಮರಾಯಾ |
ಪರಾಜಿತನಾದನು ನಿಜವೆಂದು ತಿಳಿವಾದು |
ಹರಿಶರಣರ ಪ್ರತಾಪಾ[ವ] ಬಲ್ಲರು ಬಲೂ |
ಪರಿಯಲ್ಲಿ ಶೋಧಿಸಿ ನೋಡಲು ನೆಲೆ ಇಲ್ಲಾ |
ಶರಣರಾಡಿದಂತೆ ಆಡುವ ಪ್ರಲ್ಹಾದ |
ವರದ ವಿಜಯವಿಠಲ ಐಶ್ವರಿಯಾ ದೇವಾ ೩
ಅಟ್ಟತಾಳ
ಹರಿದಾಸರು ಒಂದು ಚರಣವಿಡಲು ರಜ |
ಹರಿಯಲು ಸುತ್ತಲು ಧರೆಯಲ್ಲಾ ಪಾವನ |
ಪುರವೆಲ್ಲಾ ಪಾವನ್ನ ನರರೆಲ್ಲಾ ಪಾವನ್ನ |
ಕೇರಿ ಪಾವನ ಹೊಲಗೇರೆಲ್ಲ ಪಾವನ |
ಹರಿ ತನ್ನ ಶರಣನ್ನ ಚರಣರಜಾವನ್ನು |
ಉರದಲ್ಲಿ ಧರಿಸಿದ ಶಿರಿವಾಸಾವಾದಳು |
ಹರಿ ತನ್ನ ಶರಣರ ತಾನೆ ಉದ್ಧರಿಸುವ |
ಪರಮಾತ್ಮ ಪಂಢರಪುರಿ ವಿಜಯವಿಠಲ್ಲಾ ೪
ಆದಿತಾಳ
ಭಜಿಸು ಬೇಕಾದರೆ ಅಜನಪಿತನ ಪಾದಾಂ |
ಬುಜವನನುದಿನಾ ಭಜಿಪಾರು ಭಜಿಪಾರು |
ನಿಜವಾಗಿ ತರತಮ್ಯ ಭಾವ ತತ್ವದಿಂದಲಿ |
ಭಜಿಸು ವರವೃಜ ಮನು ಜಾರರಿದೂ |
ಕುಜನ ಮತನು ಒದ್ದು ಭಜನೆಯಗೆಡಿಸುವರು |
ಸುಜನರಿಗೆ ಪಾದ ರಜವಾಗಿ ಇಪ್ಪಾರು |
ತ್ರಿಜಗದೊಳಗೆ ನಮ್ಮಾ ವಿಜಯವಿಠಲನ್ನಾ |
ನಿಜದಾಸರು ಸದಾ ಪ್ರಜ್ಞಾವಂತಾವೆನಿಸುವರೂ ೫
ಜತೆ
ನಂಬಿದವರಿಗೆ ಕಟಿ ಪ್ರಮಾಣವೆಂದು ಭ |
ವಾಂಬುಧಿಯಾ ತೋರುವಾ ಪ್ರೀಯ ವಿಜಯವಿಠಲಾ ೬

ತತ್ವಶಾಸ್ತ್ರಗಳನ್ನು ಅರಿತು

೪೦
ಝಂಪೆತಾಳ
ಜನಿಸಿದೆನೊ, ಹಿಂದೆ ಕುಜನರ ಗರ್ಭದಲ್ಲಿ ಭೋ-
ಜನ ಮಾಡಿ ದುರುಳ ವಿಷಯಂಗಳಲ್ಲಿ ಭಾ-
ಜನೆಯಾಗಿ ನರಕಕ್ಕೆ ಯಾತನೆಬಟ್ಟು ರಾ-
ಜನ ಬುದ್ದಿಯಲ್ಲಿ ಬಲು ಲೇಪನಾಗಿ
ಜನುಮ ಜನುಮ ಜನಿಸಿ, ಆರಂಶ ಪುಣ್ಯ ಸಂ-
ಜನಿಸಿತೊ ನಿನ್ನ ಕೃಪೆಯಿಂದ ನಾನು ದ್ವಿ-
ಜನಕುಲದಲ್ಲಿ ಬಂದೆ ಬಹುಕಾಲ ತಪದಲ್ಲಿ
ಜನುಮ ವಿಜಯ ವಿಠ್ಠಲ ನೀನೆ ಒಲಿದು ಸ-
ಜ್ಜನವೃತ್ತಿ ಪಾಲಿಸೆ ತಾಮಸಕೆ ಅಂಜೆ ಅಂ-
ಜನಾಸುತನ ಮುಂದೆ ಹಾರೊ ಗುಬ್ಬಿಗಳೇ ೧
ಮಟ್ಟತಾಳ
ನಾನು ನನ್ನದು ಎಂದು ನಾನು ನನ್ನದು ಇಂದು
ನಾನು ನನ್ನದು ತಂದು ನಾನು ನನ್ನದು ಬಂದು
ನಾನು ನನ್ನದು ವಸ್ತ ನಾನೆಂಬುದು ಬಿಡದೆ
ನಾನಿಂದಲಿ ಕೆಟ್ಟೆ ನಾನೆಂಬುದು ಬಿಡಿಸೊ
ನೀನೆ ವಿಜಯ ವಿಠ್ಠಲ ೨
ರೂಪಕ ತಾಳ
ಭೂರುಹದೊಳಗೆ ಪಾವಕ ಪುಟವಾಗಿ
ಬೇರರಸಿ ಆ ಮರ ದಹಿಸುವಂತೆ
ಕ್ರೂರವಾದ ಅಹಂಕಾರ ಗುಣ ಶ-
ರೀರದೊಳಗೆ ಪುಟ್ಟಿ ಎಡೆಗೆಡಿಸಿತಯ್ಯ
ಸೇರಗೂಡದೆ ಪುಣ್ಯದಾರಿಗೆ ಹಾಕದೆ
ವಾರ ವಾರದಲ್ಲಿ ಸುಡುತಲಿವೆ
ಭೂರಿದಕ್ಷಿಣ ನಾಮಾ ವಿಜಯ ವಿಠ್ಠಲ ನಿನ್ನ
ಕಾರುಣ್ಯ ಸೋನಿಯಗರದು ನೋಡೊ ೩
ಧ್ರುವ ತಾಳ
ಈ ದೇಹದಿಂದಲ್ಲಿ ಕ್ರೋಧವೆ ನಾಶನವು
ಈ ದೇಹದಿಂದಲ್ಲಿ ಸಾಧನ ಸಂಪತ್ತು
ಈ ದೇಹದಿಂದಲ್ಲಿ ಭೇದಾರ್ಥದ ಜ್ಞಾನ
ಈ ದೇಹದಲ್ಲಿ ಪೂರ್ಣ ಬೋಧರ ಮತವಿಡಿಯ
ಸಾಧಿಸುವಂತೆ ನೀ ದಯವನು ಹರಹಿ
ಊದೀರ್ಣ ವಿಜಯ ವಿಠ್ಠಲ ಭಕ್ತ ಕೃಪಾಳು
ಈ ದೇಹ ನಿನ್ನ ನಾಮದಿ ನಾದೊ ನಾದೊ೪
ತ್ರಿವಿಡಿ ತಾಳ
ಕರೆದ ಮಾತಿಗೆ ನಿರಾಕರಿಸಿದರೆ ಬಾಯ
ಬೆರಳ ಬೊಬ್ಬಿಯಲಿ ನಿಷ್ಠುರವನೆಬ್ಬಿಸಿ ನಿನ್ನ
ಬರವ ಕಾಣುತಲೇವೆ ಭರದಿಂದ ಈಕ್ಷಿಸಿ
ಚರಣದಡಿಯ ಧೂಳಿ ಶಿರಸಾವಹಿಸಿಕೊಂಡು
ಹೊರಳಿ ಉರುಳಿ ಜನನ ಮರಣಗಳಿಯಾದೆ ತೊ-
ಡರು ಇಡಬಲ್ಲೆನೆ ತೊಂಡ ತೊತ್ತನಯ್ಯ
ಪರಿಗ್ರಹ ವಿಜಯವಿಠ್ಠಲ ನಿನ್ನ ನಂಬಿದೆ
ಪರಿಹರಿಸೊ ಮುಂದೆ ಜನನ ಪಾಶಗಳ೫
ಅಟ್ಟತಾಳ
ಅಂದ ಬಯಕೆ ನೀನಿಂದು ಸಲ್ಲಿಸದಿರೆ
ಒಂದು ಅಡಿಗಳಿಟ್ಟು ಮುಂದಕ್ಕೆ ಪೋಗುವ
ನಂದವಾದರು ಕಣ್ಣಿನಿಂದಲಿ ನೋಡಿ
ಛಂದವ ಬಿಡುವೆನು ತಂದೆ ತಂದೆ ಗೋ-
ವಿಂದ ವಿಜಯವಿಠ್ಠಲೆಂದಿಗೆಂದಿಗೆ ನಿನ್ನ
ನಿಂದಿರಿಸಿ ಬಿಡೆ ಮಂದರ ಧರನೆ ೬
ಆದಿತಾಳ
ಉತ್ತಮ ಜನುಮಕ್ಕೆ ಬಂದೇನೊ ಎಲೆ ದೇವ
ಕತ್ತಲೆಯೊಳು ದಬ್ಬಿ ಕಷ್ಟವ ಬಡಿಸದೆ
ಚಿತ್ತಶುದ್ಧನ ಮಾಡೊ ಚಿರಕಾಲದಲ್ಲಿ ನಿನ್ನ
ಭೃತ್ಯನೆಂದೆನಿಸಯ್ಯು ವಿಜಯವಿಠ್ಠಲರೇಯ ೭
ಜತೆ
ಗಿರಿಯಾ ಶಿಖರದ ತುದಿಗೆ ಏರಿದೆನೊ ನಿನ್ನ ಮೃದು
ಕರವ ತಾರೊ ತಾರೊ ವಿಜಯವಿಠ್ಠಲರೇಯ ೮

ಈ ಸುಳಾದಿಯು ನರಸಿಂಹನನ್ನು

೧೨೩
ಧ್ರುವತಾಳ
ಜಯ ಜಯವೆಂದು ಜಗದೋತ್ಪಾದಕ ವಾಯು
ವಯನಾಯಕಾದ್ಯರು ತುತಿಸೆ ಮಾತಾಡದಿಪ್ಪೆ
ಭಯ ಬಿಟ್ಟವನಂದದಿ ಘನ್ನತನವನ್ನೆ ಬಿಟ್ಟು
ತ್ರಯಲೋಕ ನಗುವಂತೆ ಬಾಯಿ ತೆರೆದೆನೊ
ನಯನಂಗಳು ನೋಡಿದರೆ ವಿಶಾಲಾಯತ ಸೀತಳಾ
ದಯರಸ ಪೂರ್ಣವಾಗಿ ನಿತ್ಯ ಒಪ್ಪುತಲಿವೆ
ವ್ಯಯರಹಿತವಿದೇನೆಂಬೆನೊ ಅಖಿಳರ ಓಡಿಸುವ
ಲಯಕಾರಿಯಂತೆ ಕಿಡಿ ಉದುರಿಪ ಬಗೆ ಏನು
ನಯವಾಗಿ ನಿನ್ನ ಪಾದಗಾಯನ ಗತಿಗೆ ನಿ
ರ್ಣಯ ಮಾಡಲಾರದೆ ಸುರರು ಮರುಳಾಗುತಿಹ್ಯರು
ಅಯುತಾಯುತಾ ನಿಯತಾ ಸಿಡಿಲುಗರ್ಜನೆ ಮಿಗಿಲು
ಸಯವಾಗಿ ಭೋ ಎಂದು ಕೂಗಿ ಕೆಂಗೆಡಿಪದೇನು
ಹುಯಲಿಟ್ಟು ಜಗವೆಲ್ಲ ಒಂದಾಗಿ ಕರೆದರೆ
ಪಯೋಬಿಂದಿನಷ್ಟು ದೂರ ಪೀಠಾ ಬಿಡದು ಮಹಿಮಾ
ಪಯಣಗತಿ ಇಲ್ಲದಲೆ ಒಮ್ಮಿಂದೊಮ್ಮೆ ಬಂದುವು
ದಯವಾದೆ ಸ್ತಂಭದಿಂದ ವಿಚಿತ್ರವೇನು
ಬಯಸಿದವರಾಪತ್ತು ಎಲ್ಲಿದ್ದರು ನಿಲ್ಲದೆ
ಬಯಲಾಗಿ ಪೋಪವೆಂದು ಸುರರು ಕೊಂಡಾಡೆ ನಿತ್ಯ
ಪ್ರಾಯಕೆ ಸಿಕ್ಕಿದಂತೆ ಬಾಲನ ಮೊರೆಗೆ ವಿ
ಜಯವನೀವಗೋಸುಗ ನೀನೆ ಒದಗಿದ್ದೇನೊ
ಪಯೋನಿಧಿಸುತೆ ನಿನ್ನ ಲಕ್ಷಣೋಪೇತ ಚಲುವಿ
ಕಿಯ ನೋಡಿ ಹಿಗ್ಗಿ ಹಿಗ್ಗಿ ಹಿಗ್ಗಿ ಹಾರೈಸುತಿರೆ
ಪ್ರಿಯನೆ ಪರಮಾನಂದ ಸಂಪೂರ್ಣೈಶ್ವರ್ಯ ಚಿ
ನ್ಮಯ ಮೂರುತಿಯೇ ಇಂಥ ಅಂಗವಿಕಾರವೇನು
ಜಯದೇವಿನಾಥ ದೀನನಾಥ ದುರ್ಜಯ ವಿ
ಜಯ ವಿಠ್ಠಲ ನರಸಿಂಹ ನಿನ್ನ ಲೀಲೆಗೆ ನಮೋ ೧
ಮಟ್ಟತಾಳ
ಅರಿದರ ಮೊದಲಾದ ನಾನಾಕೈದುಗಳಿರಲು
ಅರಿಯ ಉದರ ನಖದಿ ಸೀಳಿದ ಪರಿ ಏನೋ
ಸರುವ ಕಾಲರೂಪ ನಿನಗೆ ಮೀರಿದವಿಲ್ಲಾ
ಅರಸದೆ ಸಮಯಾನುಸಾರ ಸಾಕಲ್ಯವೇನೋ
ಇರುಳು ಹಗಲುದೇವಿ ಸಾರುವ ತೊಡಿಮ್ಯಾಲೆ
ದುರುಳಾ ನಿರ್ಜೀವಿಯ ಇಟ್ಟ ಸಂಭ್ರಮವೇನೋ
ಶರಣಾಗತ ವತ್ಸಲ ವಿಜಯ ವಿಠ್ಠಲರೇಯ
ನರಕೇಸರಿ ನಿನ್ನ ಚರಿತೆಗೆ ಸೋಜಿಗವೋ ೨
ತ್ರಿವಿಡಿತಾಳ
ಪರದೇವತಿ ನಿನ್ನ ಗುಣರೂಪ ಕ್ರಿಯಗಳು
ಪರಮ ಶಾಂತವೆಂದು ಸಮಸ್ತರೊಲಿಸೆ
ಭರದಿಂದ ಘುಡಿಘುಡಿಸುತ ಬಂದ ಕಾಲಕ್ಕೆ
ಉರಿ ಮಾರಿ ದೈವವೆಂದೆಲ್ಲಾರೋಡಿದ್ದೇನೋ
ವರಮಣಿ ನಾನಾ ಹಾರಗಳಿರೆ ಕೊರಳಲ್ಲಿ
ಸುರಿವ ಶೋಣಿತ ಹಸಿಗರಳಾ ಹಾಕಿದುದೇನು
ಸಿರೋರಹ ಮಿಗಿಲಾದ ಅವಯವಂಗಳೂ ಮೃದು
ತರವಾಗಿದ್ದರೆ ಮಹಾಕಠಿಣ ತೋರಿದುದೇನೊ
ನರವಲ್ಲ ಮೃಗವಲ್ಲ ಜಗದ್ವಿಲಕ್ಷಣವಾದ
ಶರೀರವ ತೆತ್ತು ಅದ್ಬುತ ಬಿರಿದಾದ್ದೇನೊ
ಪರಮೇಷ್ಟಿ ಶಿವಪುರಂದರ ಸುರರಾದ್ಯರು
ನಿರುತ ನಿನಗೆ ನಿಜಕಿಂಕರರಾಗಿರೆ
ಸುರ ವೈರಿಗಳಿಗೆ ಒಂದೊಂದು ಪರಿಪರಿ
ವರ ಪಾಲಿಸಿದ್ದು ಮನ್ನಿಸಿದಾ ಘನವೇನೊ
ದುರಿತ ಕುಠಾರಿ ವಿಜಯ ವಿಠ್ಠಲ ಘೋರ
ತರ ರೂಪವತಾಳಿದೆ ಸೌಮ್ಯತನವೆ ತೊರದು ೩
ಅಟ್ಟತಾಳ
ಸಂತತ ನಿನ್ನ ಪಾದೈಕಾಶ್ರಯಾ ಏ
ಕಾಂತಿಗಳಿಗೆ ಮೆಚ್ಚಿ ಸುಮ್ಮನಾಗದ ದೈವ
ಎಂತು ಪೇಳಲಿ, ನೋಡಿ ತರಳ ಪ್ರಹ್ಲಾದ
ಮುಂತೆ ನಿಲ್ಲಲು ಸೋತ ಮುಗುಳುನಗಿ ಏನು
ಕಿಂತುಯಿಲ್ಲದ ಸ್ವಾಮಿ ಶುದ್ಧಾತ್ಮಾ ಶ್ರೀ ಲಕುಮಿ
ಕಾಂತ ಸರ್ವಾಂತರ್ಯಾಮಿ ಕರುಣಾಳು
ಚಿಂತಿತ ಫಲದಾಯಾ ದೈತ್ಯಾವಳಿಗೆ ಮಹಾ
ಭ್ರಾಂತೆಗೊಳಿಪ ನಮ್ಮಾ ವಿಜಯ ವಿಠ್ಠಲ ಸ್ವಾ
ತಂತ್ರ ಸರ್ವೋತ್ತಮಾ ನಿನ್ನಾ ಮರಿಯದೆ ಎಂತೊ ೪
ಆದಿತಾಳ
ಕುಟಿಲ ನಿಟಿಲಲೋಚನ ಕರುಳವಕ್ತ ಕರವಾಳಪಾಣಿ
ಕಠಿಣ ಕೋಪಾಟೋಪಪಾಗ್ನಿ ಛಟ ಛಟರಭಸ ಚಂಡಪ್ರತಾಪ
ಕಠೋರಶಬ್ದ ಹಾಹಾಕಾರ ತೀಕ್ಷಣನಖ ವಜ್ರನಾಗೋಪವೀತ
ಝಟಶಠರೋಮ ಕುಚಿತಕರ್ನದಂತೋಷ್ಟ್ರ ಮಿಳಿತವು
ತಟ ಶ್ವಾಸೋಶ್ವಾಸ ನಾಶಿಕ ಪುಟಹುಂಕಾರ ಜ್ವಾಲಾಮಾಲಾ
ಕಣಕಣ ಪ್ರವಾಹ ಭೃಕುಟಿ ತಟಿ
ತಟಿತ್ಕಾಂತಿ ವೀರಾವೇಶ ಕೋಲಾಹಲ ಸಿಂಹ
ಪಟುತರ ಲಂಘಣೆ ಭುಜತೊಡೆ ತಟಕೆ
ಲಟಲಟ ಜಿಹ್ವಾಗ್ರ ಉಗ್ರಾದಿಟ ಅಧಟ ಅಚ್ಚಟ ನಿಚ್ಚಟವು
ತ್ರ‍ಕಷ್ಟ ಅಟ್ಟಹಾಸಾ ಮಿಟಿ ಮಿಟಿ ಮಿಟಿ ಮಿಟಿ ಮಿಟಿ ನೋಟ
ನಟ ನಟ ನಟಣೆ ಅಬ್ಬರ ಉಲ್ಬಣ
ನಿಬ್ಬರ ಅರ್ಭಾಟ ಬೊಬ್ಬಾಟ
ಕಟ ಕಟ ಕಾರ್ಬೊಗೆ ಹಬ್ಬಿಗೆ ಮೊಬ್ಬಿಗೆ ಉಬ್ಬಿಗೆ
ಇದತಬ್ಬಿಬ್ಬಿಗೆ ಜಬ್ಬಿಗೆಲುಬ್ದ
ಭಟರೆದೆ ಇಬ್ಬಗೆ ಇಬ್ಬಗೆ ಆರಾಟಾ
ತುಟಿ ಕದಪು ಭುಜಕಂಧರ ಉರಬಾಹು
ಜಠರ ನಾಭಿ ಜಘನಾ ಕಟಿ ಊರು ಜಾನುಜಂಘೆಗುಲ್ಫಾಂ
ಗುಟ ಪದಕುಣಿಯೇ ಅನುಕಂಪ
ಪುಟಿ ಪುಟಿದಾಡುವ ಅಡಿಗಳು ಬೊಮ್ಮಾಂಡ
ಕಟಹದಲ್ಲಣವು ಭಟ ಸುರಮುನಿ
ಕಟಕ ನೆರೆದುಘೇ ಉಘೇ ಭಳಿರೆ
ಪೂತರೆ ಭಲ್ಲ ಭಲ್ಲರೆ ಸಿಂಗಾ
ಘಟಿತಾಘಟಿತ ಸಮರ್ಥ ನಿಜೈಶ್ವರ್ಯ ಗುಣಪೂರ್ಣ
ಚಟುಲ ನಿರ್ಜರರ ಕಟಕ ಪೂಜಿತ ಸಕಲ ಕ್ರಿಯಾನಂದ
ಹಟ ನಾನಾಚಿತ್ರ ವಿಚಿತ್ರ ಅದ್ಬುತ ಐಶ್ವರ್ಯ ಅಣುಮಹತ್ತು
ತ್ಕಟ ಗುರುಲಘು ಪರಿಮಿತ ವ್ಯಕ್ತಾವ್ಯಕ್ತಾ
ದ್ಧಟ ಅಗೋಚರ ಘೋರ ಯುಗಪದಿ ಪೂರ್ಣನಿರ್ಭೇದದ
ದುರ್ಲಭ ಸುಲಭಾ ಅಲೋಭಾ ಅವಿರುದ್ಧಾಸುವಿರುದ್ಧಾ
ಕರ್ಮವಿಕರ್ಮ ವಿದೂರನೆ
ಸಟಿಯಲ್ಲ ಅನಾದಿ ಸಿದ್ಧ ಇಬ್ಬಗೆ ಅಸುರಾರಿ
ವಟಪತ್ರಶಾಯಿ ಸಿರಿ ವಿಜಯ ವಿಠ್ಠಲ ಕಂಠೀರವ
ಪಠಿಸಿ ಪುಟಾಂಜುಳಿಯಾದವಗೆ
ತೃಟಿಯೊಳು ಪೊಳೆವ, ಪತಿತ ಪಾವನನೇ ೫
ಜತೆ
ಭೃತ್ಯವತ್ಸಲ ನಿನ್ನ ರೂಪಕ್ಕೆ ನಮೋನಮೋ
ದೈತ್ಯಮರ್ದನ ವಿಜಯ ವಿಠ್ಠಲ ಕಟಿತರುವಾಯಾ೬

ಈ ಸುಳಾದಿಯು ಹಯಗ್ರೀವ ರೂಪ

ಹಯಗ್ರೀವ ಸ್ತೋತ್ರ
೧೧೮
ಧ್ರುವತಾಳ
ಜಯಜಯ ಜಾನ್ಹವಿಜನಕ ಜಗದಾಧಾರ
ಭಯನಿವಾರಣ ಭಕ್ತ ಫಲದಾಯಕ
ದಯಾಪಯೋನಿಧಿ ಧರ್ಮಪಾಲ ದಾನವಕಾಲ
ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ
ಶ್ರಯ ಸಂತರ ಕಾಮಧೇನು ಧೇನುಕಭಂಜ
ವ್ಯಯದೂರ ವ್ಯಾಧಿಹರಣ ವ್ಯಾಪ್ತ ವ್ಯಾಕುಲಹಾರಿ
ಪ್ರಿಯ ಪ್ರೇರಕ ಪ್ರಥಮ ಪ್ರಾಪ್ತಿ ಪ್ರಾಣ
ಜಯದೇವಿರಮಣ ಜಯಜಯ ಜಯಾಕಾರ
ಸುಯತಿಗಳ ಮನೋಹಾರ ಮಂದಹಾಸ ಚಂದ್ರೋ
ದಯಭಾಸ ಪೂರ್ಣಶಕ್ತಿ ಸರ್ವರೂಪ
ತ್ರಯಕಾಯ ತತ್ವ ತತ್ವ ತದಾಕಾರ ಮೂರುತಿ
ಕ್ರಿಯ ಗುಣಾನಂತ ರೂಪಾನಂತ ಏಕಾನೇಕ ಸಮಸ್ತ
ಸಯವಾಗಿಪ್ಪ ಸಮಅಸಮ ದೈವಾ
ಹಯಮೊಗಾ ವಾದಿರಾಜಗೊಲಿದ ವಿಜಯ ವಿಠ್ಠಲ
ಪಯೋನಿಧಿ ಶಯನ ಸತ್ವನಿಯಾಮಕ ೧
ಮಟ್ಟತಾಳ
ಶಶಿಮಂಡಲ ಮಂದಿರ ಮಧ್ಯದಲಿ ನಿತ್ಯ
ಮಿಸುಣಿಪ ಶುಭಕಾಯಾ ಯೋಗಾಸನನಾಗಿ
ಎಸುಳುಗಂಗಳ ಚೆಲುವ ಹುಂಕರಿಸುವನಾದ
ಬಿಸಜಾಕ್ಷ ಪುಸ್ತಕ ಜ್ಞಾನ ಮುದ್ರಾ
ಎಸೆವ ಚತುರ ಬಾಹು ಕೊರಳ ಕೌಸ್ತುಭ ಮಾಲೆ
ಶಶಿಮುಖಿಯರು ಒಲಿದು ಸೇವೆಮಾಡುತಲಿರೆ
ಅಸುರರ ಕಾಳಗವ ಕೆಣಕುವ ಕಾಲ್ಗೆದರಿ
ದಶದಿಶ ಕಂಪಿಸಲು ಖುರಪುಟದ ರಭಸ
ಪುಸಿಯಲ್ಲ ನಮಗೆ ಪರದೇವತಿ ಇದೇ
ಕುಶಮೊನೆ ಮನದಲ್ಲಿ ಧ್ಯಾನಮಾಡಲಿ ಬೇಕು
ಹಸನಾಗಿಕೇಳಿ ಮುದದಿ ವಾದಿರಾಜಾ
ಮಸಕರಿಗೆವೊಲಿದ ವಿಜಯ ವಿಠ್ಠಲರೇಯಾ
ಕುಶಲವ ಕೊಡುವನು ಈ ಪರಿ ಕೊಂಡಾಡೆ ೨
ತ್ರಿವಿಡಿತಾಳ
ನಾಶಿಕ ಪುಟದಿಂದ ಸರ್ವವೇದಾರ್ಥಂಗಳು
ಶ್ವಾಸೋಚ್ಛ್ವಾಸದಿಂದ ಪೊರಡುತಿದೆಕೋ
ಏಸುಬಗೆ ನೋಡು ಇದೇ ಸೋಜಿಗವೆಲ್ಲಾ
ಶ್ರೀಶನ್ನ ಸಮಸ್ತ ದೇಹದಿಂದ
ಭಾಸುರವಾಗಿದ್ದ ಸಾಕಲ್ಯ ಶ್ರುತಿತತಿ
ಲೇಶಬಿಡದೆ ಪೊರಟು ಬರುತಿಪ್ಪವು
ಈ ಸಾಮರ್ಥಿಕೆ ನೋಡು ಅನ್ಯದೇವಗೆ ಉಂಟೆ
ಈಶನಯ್ಯಗೆ ಉಪದೇಶ ಮಾಳ್ಪ
ದೇಶ ಕಾಲವೆ ಮೀರಿ ತನಗೆ ತಾನೆ ಇಪ್ಪಾ
ಏಸು ಕಲ್ಪಕೆ ಸರ್ವಸ್ವಾತಂತ್ರನೋ
ಮೋಸ ಪೋಗುವನಲ್ಲ ಆರಾರ ಮಾತಿಗೆ
ಕೇಶವ ಕ್ಲೇಶನಾಶನ ಕಾಣಿರೋ
ದ್ವೇಷ ತಾಳಿ ಆಗಮ ವೈದವನನ್ನು
ರೋಷದಿಂದಲಿ ಕೊಂದ ನಿಷ್ಕಪಟಿಯೋ
ಸೂಸುವ ಬಾಯಿಂದ ಸುರಿಯುವ ಜೊಲ್ಲುಪಿ
ಯೂಷಕ್ಕಧೀಶ ಕಾಣೋ, ಸವಿದುಣ್ಣಿರೋ
ವಾಸುದೇವನೆ ಈತನೆ ಆವಲ್ಲಿಪ್ಪನೆಂದು
ಬೇಸರವಗೊಂಡು ಬಳಲದಿರೀ
ಈ ಶರೀರದಲ್ಲಿ ಜೀವಾಂತರ್ಗತನಾಗಿ
ವಾಸವಾಗಿಹ ಅಣುಮಹ ಕಾಣೋ
ಹ್ರಾಸವೃದ್ಧಿಗಳಿಲ್ಲ ವಿಶೇಷ ಅವಿಶೇಷ
ಈಸು ಬಗೆಯುಳ್ಳವೆ ಸ್ವರೂಪ ಭೂತ
ದೋಷರೂಪಗಳಲ್ಲಿ ಜ್ಞಾನಾನಂದ ಕಾರ್ಯ
ದಾಸರಿಗಾಗಿ ಈ ಪರಿಮಾಡುವ
ಆಶಾಬದ್ಧನು ಅಲ್ಲ ಆಪ್ತಕಾಮನು ಕಮ
ಲಾಸನ್ನ ಜನಕ ಸರ್ವಭೂಷಿತಾ
ಲೇಸು ವಾದಿರಾಜ ವಂದ್ಯ ವಿಜಯ ವಿಠ್ಠಲ
ಸಾಸಿರನಾ ಒಡಿಯ ಹಯವದನಾ ೩
ಅಟ್ಟತಾಳ
ಸುರರಿಗೆ ಹಯವಾಗಿ ಗೆಲಿಸುವನು ಗಂಥ
ರ್ವರಿಗೆ ವಾಜಿಯಾಗಿ ಪೋಗುವ ಮುಂಚಾಗಿ
ದುರುಳದಾನವರಿಗೆ ಅರ್ವನಾಗಿ ತಾನು
ಇರದೆ ಪರಾಭವನಾಗುವ ಸಿಗದಲೆ
ನರರಿಗೆ ಅಶ್ವನೆಂದೆನಿಸಿ ಮಹಾಭಾರ
ಹೊರುವ ದಣಿವಿಕೆ ಇಲ್ಲದೆ ಅವರ
ಪರಮ ಪುರುಷನ್ನ ಅದ್ಭುತಚರಿತೆ ಕೇಳಿ
ಅರಿವುದು ಮನದಲ್ಲಿ ಸರ್ವಜೀವಿಗಳೊಳು
ಇರಳು ಹಗಲು ಈ ಪರಿಯಾಗಿ ಮಾಡುವ
ಮರಿಯಾದೆ ಇಪ್ಪದು ಮರೆಯಾದೆ ಸ್ಮರಿಸಿ ಪಾ
ಮರ ಬುದ್ದಿ ಪೋಗಾಡಿ ತುರಿಯಾಶ್ರಮ ಮಣಿ ವಾ
ದಿರಾಜಯತಿ ಕರದಿಂದರ್ಚನೆಗೊಂಡ ವಿಜಯ ವಿಠ್ಠ
ಲರೇಯಾ ತುರಗಾಸ್ಯನು ಕಾಣೋ ತೃಪ್ತಿಯ ಕೊಡುವನು ೪
ಆದಿತಾಳ
ಶಿತವರ್ನದಲಿ ಸತ್ವಗುಣದಲ್ಲಿ
ಜಾತ ವೇದಸಂಗೆ ಆಹುತಿ ಕೊಡುವಲ್ಲಿ
ಭೂತಳದಲ್ಲಿ ಮತ್ತೆ ಜಠರಾಗ್ನಿಯಲ್ಲಿ
ಆತುಮದಲ್ಲಿ ವಿತ್ತಪತಿಯಲ್ಲಿ ಹೇಳನ
ಪಾತಕ ಪೋಗುವೆಲ್ಲ ವಂಜರ ನದಿಯಲ್ಲಿ
ಸ್ವೋತ್ತಮರಲ್ಲಿ ವೇದ ಓದುವ ಠಾವಿನಲ್ಲಿ
ಮಾತು ಪೂರ್ವರಂಗದಲ್ಲಿ ಭದ್ರಾಶ್ವ ಖಂಡದಲ್ಲಿ
ಜ್ಯೋತಿ ಪ್ರಕಾಶದಲ್ಲಿ ಮನಿಯದ್ವಾರದಲ್ಲಿ
ನೇತುರ ರೇಖೆಯಲ್ಲಿ ನಾಶಿಕ ಪುಟದಲ್ಲಿ
ದಾತನಲ್ಲಿ ಸರ್ವಜೀವರಲ್ಲಿ ನಿವಾಸಾ
ನೀತವಾಗಿ ಎಣಿಸು ನಿರ್ಣೈಸುವುದಕ್ಕೆ
ಶ್ರೀ ತರುಣಿಗಾದರೂ ಗೋಚರಿಸದು ಕಾಣೋ
ಈತನ ನೆನೆದರೆ ಬೇಡಿದ ಪುರುಷಾರ್ಥ
ಮಾತುಮಾತಿಗೆ ತಂದುಕೊಡುವ ಸರ್ವದಾ
ಆತುಮದೊಳಗಿದ್ದು ಆನಂದ ಕೊಟ್ಟು ಪಾಲಿಪ
ಶೇತಾಂಗು ಮಂಡಲವದನ ವಿಜಯ ವಿಠ್ಠಲರೇಯಾ
ಪ್ರೀತಿಯಾಗಿ ಇಪ್ಪಾ ವಾದಿರಾಜಗೆ ಹಯವದನಾ ೫
ಜತೆ
ಗುರು ವಾದಿರಾಜಗೆ ಒಲಿದ ಹಯವದನಾ
ಕರುಣಾಕರ ಮೂರ್ತಿ ವಿಜಯ ವಿಠ್ಠಲರೇಯಾ ೬

ಘಟಿಕಾಚಲ ಒಂದು ಹನುಮಂತನ ಕ್ಷೇತ್ರ.

೨೯. ಘಟಿಕಾಚಲ
ರಾಗ:ನಾಟಿ
ಝಂಪೆತಾಳ
ಜಯಜಯಾ ಜಯಜಯತು ಜಯದೇವಿ ಸಂಭವನೆ |
ಜಯಜಯಾಜಯ ಧನಂಜಯನ ನಿಜಬಾಂಧವನೆ |
ಜಯ ಧನಂಜಯನ ರಥಾಗ್ರದಲಿ ನಿಂದವನೆ |
ಜಯ ಜಯಾ ಜಯಾ ರೋಮಕೋಟಿ ಭವನ |
ಜಯ ಜಯಾ ಜಯಾ ಜಯ ಗುಣನಿಧಿ ಶೀಲಪ್ರಭಾವನೆ |
ಜಯ ಜಯಾ ಜಯ ಜಯನೆ ವಿರೋಧಿಜವನೆ |
ಜಯ ಪವಮಾನ ಜಯಾಪತಿತಪಾವನ ಜಯಾ |
ಜಯವತ್ಸ ಭೂತರಹಿತ ಜಯವೇದ ವಿಖ್ಯಾತ ವಿ |
ಜಯವಿಠಲನ ಭಯ ಭಕುತಿಯಿಂದ ಪೂಜಿಪ |
ಭಯದೂರ ಭವ[ಹ]ರ ಭಕ್ತರಾಧಾರ ಜಯತು ೧
ಮಟ್ಟತಾಳ
ಮುನಿಸಪ್ತರು ಎಲ್ಲ ಶ್ರೀ ನರಸಿಂಹನ |
ಧ್ಯಾನಮಾಡುತ್ತ ಆನಂದದಲಿ ಸಾ |
ಮಾನವಿಲ್ಲದ ಸ್ಥಳವನು ಮನಕೆ ತಂದು |
ಮನದಲಿ ಗಿರಿಸಾನು ಬಳಿಯಲ್ಲಿರೆ |
ಜ್ಞಾನಾಂಬುಧಿ ನಮ್ಮ ವಿಜಯವಿಠಲರೇಯನ |
ಕಾಣುವ ತವಕದಲಿ ಧ್ಯಾನಾದಲ್ಲಿ ಒಲಿಕೆ ೨
ತ್ರಿವಿಡಿತಾಳ
ಮುದದಿಂದ ಮುನಿಗಳು [ಒಂದಾ]ಗಿ ತಪಸುಮಾಡೆ |
ವಿಧಿಯಿಂದ ವರವ ಪಡದು ಪರಮ ಗರ್ವದಲಿ |
ಮಧುವನ ಭುವನರೆಂಬೊ ತ್ರಿದಶ ವೈರಿಗಳೀರ್ವರು |
ಎದುರಾದವರ ಲೆಕ್ಕಿಸದೆ ನಾನಾ ಪರಿಯಲ್ಲಿ |
ಮದಮತ್ಸರದಿ ಸಾರಹೃದಯದ ಸಾಧನ |
ಉದಯಾಸ್ತಮಾನ ನಿಲ್ಲಾದೆ ಕೆಡಿಸುತಿರಲೂ |
ಉದಧಿ ಶಯನನಾದ ವಿಜಯವಿಠಲರೇಯನ |
ಪದವನ್ನು ನೆನಿಸಿ ಸಾರಿದರು ಮೊರೆ ಇಡುತಲಿ ೩
ಅಟ್ಟತಾಳ
ಮುನಿಗಳು ಒಂದು ಘಟಕೆ ಕುಳಿತು ತಮ್ಮ |
ಮನದೊಳು ಏಕಾಂತದಲ್ಲಿ ಧೃಡವಾಗಿ |
ಮನುಜ ಕೇಸರಿಯಾ ನೆನಿಸಲು ತಡಿಯದೆ |
ಚಿನುಮಯರೂಪ ಕ್ಷಣದಲ್ಲಿ ಯೋಗಾ |
ಸನನಾಗಿ ಪ್ರತ್ಯಕ್ಷವನು ಆಗಿ ಬಂದನು |
ದನುಜರ ಉಪಹತಿಯನು ಕಳವೆನೆನು ತಾಲಿ |
ಅನಿಮಿಷರೊಡಗೂಡಿ ವಿಜಯವಿಠಲ ಪಂಚಾ |
ನನದೇವ ಸುರರ ಬೆಸನಕೇಳಿ ಪರೀಕ್ಷಿಸೆ ೪
ಆದಿತಾಳ
ಮುಕ್ಕಣ್ಣ ಮಿಕ್ಕಾದವರು ರಕ್ಕಸನೆದುರಿಗೆ |
ತಕ್ಕವರಾಗಾರಿದಿರೆ ಮುಖ್ಯಪ್ರಾಣನ ಕರೆದು |
ಚಕ್ರವ ಕೊಡಲಾಗ ಸೊಕ್ಕಿದ ದೈತ್ಯರನ |
ಪಕ್ಕಿಯ ತಿವಿದು ಮೇಲಕ್ಕೆ ಹಾರಿಸಿ ಅವರ |
ಕುಕ್ಕರ ಹಾಕಿ ನರಕಕ್ಕ ಸಾಗೀಸಿ ಪವನ |
ನಕ್ಕು ಹರಿ ಸಮ್ಮುಖಕ್ಕೆ ಚಕ್ರವಾ ತಂದಿಡಲು |
ಭಕ್ತನ ಭ[ಕ್ತಿ]ಗೊಲಿದು ಅಕ್ಕರದಿಂದಲಿ ಮೆಚ್ಚಿ |
ಚಕ್ರವ ಧರಿಸೆಂದು ಚಕ್ಕಾನೆ ದಯದಿ ಪೇಳೆ |
ಮುಕ್ತರ ಪ್ರಿಯನಾದ ವಿಜಯವಿಠಲನ ಪಾ |
ದಕ್ಕೆರಗಿ ನಿಂದ ದಿಕ್ಕಿನೊಳು ಮೆರವುತ್ತ ೫
ಜತೆ
ಕರಚತುಷ್ಟಯ[ದಿಂ]ದ ಮೆರೆವ ಹನುಮಾಘಟಿಕಾ |ಗಿರಿವಾಸ ವಿಜಯವಿಠಲನ ಪರಮದಾಸ ೬

ಟೀಕಾಚಾರ್ಯರೆಂದೆ ಖ್ಯಾತರಾದ ಜಯತೀರ್ಥರನ್ನು

ಜಯತೀರ್ಥರ ಸ್ತೋತ್ರ
೧೫೬
ಧ್ರುವತಾಳ
ಜಯರಾಯ ಜಯರಾಯ ಜಯದೇವಿ ಅರಸನ್ನಾ
ಶ್ರಯಮಾಡಿಕೊಂಡಿಪ್ಪ ತಪೋವಿತ್ತಪ
ಭಯವ ಪರಿಹರಿಸಿ ಭವದೂರರ ಹರಿಭ
ಕ್ತಿಯ ಕೊಡು ಜ್ಞಾನವೈರಾಗ್ಯದೊಡನೆ
ದಯದೃಷ್ಟಿಯಿಂದ ನೋಡು ಕಾಪಾಡು ಮತಿನೀಡು
ಲಯವಿವರ್ಜಿತವಾದ ವೈಕುಂಠಕೆ
ಸ್ವಯಮಾಗಿ ಮಾರ್ಗ ತೋರು ಸಜ್ಜನರೊಳಗಿಟ್ಟು
ಜಯವ ಪಾಲಿಸು ಎನಗೆ ಯತಿಕುಲರನ್ನ
ಅಯುತಕ್ಕಾದರು ನಾನು ಐಹಿಕ ಸೌಖ್ಯವನೊಲ್ಲೆ
ಬಯಸುವೆ ಸತತದಲ್ಲಿ ಹರಿಯನಾಮ
ತ್ರಯಗಳೆ ನಾಲಿಗೆಲಿ ನೆನೆದು ನೆನೆದು ಕರ್ಮ
ಕ್ಷಯವಾಗುವಂತೆ ಕ್ಷಿ ಪ್ರದಲ್ಲಿ ಬಿಡದೆ
ಪ್ರಯತ್ನವೆಂಬೋದಿದಕೆ ಸಾರ್ಥಕವಾಗಲಿ
ಪಯೋನಿಧಿಸುತೆ ರಮಣ ಮನದೊಳು ನಿಲ್ಲಲು
ಪಯಃ ಪಾನದಿಂದಧಿಕ ನಿಮ್ಮ ದರುಶನ ಎನಗೆ
ಪ್ರೀಯ ಮತ್ತೋಂದಾವುದಿಲ್ಲ ಇದೇ ಬಲು ಲಾಭ
ಗಯ ಕಾಶಿ ತ್ರಿ ಸಂಗಮ ಮೊದಲಾದ ತೀರ್ಥಕ್ಷೇತ್ರ
ನಯದಿಂದ ಮಾಡಿದ ಫಲವಪ್ಪುದು
ಪಯೋಧರಗಳ ತಿನದಂತೆ ಮಾಳ್ಪುದು ಹೃ
ದಯದೊಳಗಿಪ್ಪದೆನೆಗೆ ಇದೇ ಏಕಾಂತ
ಭಯ ಕೃದ್ಭಯನಾಶ ವಿಜಯ ವಿಠ್ಠಲನ ಸೇ
ವೆಯ ಮಾಡುವ ಸದ್ಗುಣ ಶೀಲ ಸುಜನ ಪಾಲಾ ೧
ಮಟ್ಟತಾಳ
ಆವ ಜನುಮದ ಪುಣ್ಯ ಫಲಿಸಿತು ಎನಗಿಂದು
ರಾವುತನಾಗಿದ್ದ ಜಯತೀರ್ಥರ ಕಂಡೆ
ದೇವಾಂಶರು ಇವರ ಸ್ವರೂಪವನ್ನು
ಭಾವದಿಂದಲಿ ತಿಳಿದು ಕೊಂಡಾಡುವ ಬಲುಧನ್ಯ
ಪಾವಿನ ಪರಿಯಿಂದ ಇಲ್ಲಿ ಇರುತಿಪ್ಪ
ಕಾವುತ ಭಕುತರ ಪಾವನಗೈಸುವ
ದೇವ ದೇವೇಶ ಸಿರಿ ವಿಜಯ ವಿಠ್ಠಲನಂಘ್ರಿ
ತಾವರೆ ಭಜಿಸುವ ನಿಷ್ಯಾಮಕ ಮೌನಿ ೨
ತ್ರಿವಿಡಿತಾಳ
ವೈಷ್ಣವ ಜನ್ಮ ಬಂದುದಕಿದೇ ಸಾಧನ
ವಿಷ್ಣುವಿನ ಭಕುತಿ ದೊರಕಿದುದಕೆ
ನಷ್ಟವಾಯಿತು ಎನ್ನ ಸಂಚಿತಾಗಾಮಿ ಕರ್ಮ
ಕಷ್ಟ ದಾರಿದ್ರಗಳು ಹಿಂದಾದವೋ
ತುಷ್ಟನಾದೆನು ಎನ್ನ ಕಲಕೋಟಿ ಅಹಿತ ಅ
ರಿಷ್ಟಮಾರ್ಗದಿ ಇನ್ನು ಪೋಗೆ ನಾನು
ಸೃಷ್ಟಿಯೊಳಗೆ ಇವರ ದರ್ಶನವಾಗದಲೆ
ಸೃಷ್ಟವಾದ ಜ್ಞಾನ ಪುಟ್ಟದಯ್ಯಾ
ಇಷ್ಟುಕಾಲ ಬಿಡದೆ ಮುಂದೆ ಮಾಡುವ ಬಲು
ನಿಷ್ಟಗೆ ಅನುಕೂಲ ತಾತ್ವಿಕರು
ಶಿಷ್ಟಾಚಾರವನ್ನು ಮೀರದಲೆ ನಿಮ್ಮ
ಇಷ್ಠಾರ್ಥ ಬಯಸುವುದು ಉಚಿತದಲ್ಲಿ
ವೈಷ್ಣವಾಚಾರ್ಯರ ಮತ ಉದ್ಧಾರ ಕರ್ತ
ಭ್ರಷ್ಟವಾದಿಗಳನ್ನು ನುಗ್ಗಲೊತ್ತಿ
ಕೃಷ್ಣವಂದಿತ ನಮ್ಮ ವಿಜಯವಿಠ್ಠಲರೇಯನ
ಅಷ್ಟ ಕತ್ರ್ಕತ್ವ ಸ್ಥಾಪಿಸಿದ ಧೀರಾ ೩
ಅಟ್ಟತಾಳ
ಕುಶರಾಯ ಇಲ್ಲಿ ತಪಸು ಮಾಡಿದಂಥ
ವಸತಿಯ ನೋಡಿ ದಿಗ್ದೇಶ ಜಯಿಸಿ ಮಾ
ನಸದಲ್ಲಿ ತಿಳಿದು ಅಕ್ಷೋಭ್ಯ ತೀರ್ಥರು ಇಲ್ಲಿ
ನಸುನಗುತಲೆ ವಾಸವಾದರು ಬಿಡದಲೆ
ಋಷಿ ಕುಲೋತ್ತಮನಾದ ಜಯರಾಯರು ನಿತ್ಯ
ಬೆಸನೆ ಬೆಸನೆ ಬಂದು ಗುಪ್ತದಲ್ಲಿ ಪೂ
ಜಿಸುವರು ಪ್ರೀತಿಲೆ ಏನೆಂಬೆನಾ ಚರ್ಯ
ಶಶಿ ವರ್ಣದಂತೆ ಪೊಳೆವ ದರುಶನ ಗ್ರಂಥ
ರಸ ಪೂರಿತವಾಗಿ ವಿಸ್ತರಿಸಿದರು ವಿ
ಕಸಿತವ ಮಾಡಿ ಕರದ ಕನ್ನಡಿಯಂತೆ
ಕುಶಲ ಮಾನವರಿಗೆ ಜ್ಞಾನ ಹೆಚ್ಚುವಂತೆ
ವಸುಧೆಯೊಳಗೆ ನಮ್ಮ ವಿಜಯ ವಿಠ್ಠಲರೇಯನ
ವಶವಾಗುವುದಕ್ಕೆ ಪ್ರಸಾದ ಮಾಡಿದರು ೪
ಆದಿತಾಳ
ಈ ಮುನಿ ಒಲಿದರೆ ಅವನೆ ಭಾಗ್ಯವಂತ
ಭೂಮಿಯೊಳಗೆ ಮುಕ್ತಿ ಯೋಗ್ಯನೆನಿಸುವನು
ಭೀಮ ಭವಾಂಬುಧಿ ಬತ್ತಿ ಪೋಗುವುದು ನಿ
ಸ್ಸೀಮನಾಗುವ ಪಂಚ ಭೇದಾರ್ಥ ಪ್ರಮೇಯದಲ್ಲಿ
ತಾಮಸ ಜನರಿಗೆ ಭಕ್ತಿಪುಟ್ಟದು ದುಃ
ಖ ಮಹೋದಧಿಯೊಳು ಸೂಸುತಲಿಪ್ಪರು
ಸ್ವಾಮಿ ಈಗಲೆ ಬಂದು ದುರುಳ ಮನುಜನ ನೋಡಿ
ನಾ ಮೊರೆ ಇಡುವೆನು ಕಾಯೊ ಕರುಣದಲ್ಲಿ
ಯಾಮ ಯಾಮಕೆ ನಿಮ್ಮ ಸ್ಮರಣೆ ಪಾಲಿಸಿ ಉ
ತ್ತಮ ಬುದ್ಧಿಕೊಟ್ಟು ಕೃತಾರ್ಥನ್ನ ಮಾಡು
ರಾಮ ಸುಗುಣಧಾಮ ವಿಜಯ ವಿಠ್ಠರೇಯನ್ನ
ನಾಮ ಕೊಂಡಾಡುವ ಟೀಕಾಚಾರ್ಯ ೫
ಜತೆ
ಮೇಘನಾಥಪುರ ಕಕುರ ವೇಣಿವಾಸ
ರಾಘವೇಶ ವಿಜಯವಿಠ್ಠಲನ್ನ ನಿಜದಾಸ ೬

ಮುಖ್ಯವಾಗಿ ಹನುಮಂತನ ಸ್ತೋತ್ರ

ಹನುಮಂತನ ಸ್ತೋತ್ರ
೧೫೦
ಧ್ರುವತಾಳ
ಜಲಜಸಂಭವನ ಪಟ್ಟಕ್ಕೇರುವ ಗುರುವೆ
ಇಳೆಯೊಳು ಕೋತಿ ಕಾಯ ಧರಿಸಿ ಪುಟ್ಟಿದ್ದೇನೊ
ಬಲು ಪ್ರಳಯದಲ್ಲಿ ಜಾಗ್ರತನಾಗಿದ್ದ ಮರುತ
ಕುಲಿಶ ಧರನಿಂದನೊಂದು ಮೂರ್ಛೆಗೊಂಡಿದ್ದೇನೊ
ಕೆಲಕಾಲ ಸಮಸ್ತ ಶ್ರುತಿ ನಿರ್ಣಯದಂತೆ
ಜಲಜಾಪ್ತನಲ್ಲಿ ನಿಂದು ಓದು ಓದಿದ್ದೇನೊ
ಬಲವಂತನಾಗಿ ಸುರರಕೈಯ ಕಪ್ಪವ ಕೊಂಬುವನೆ
ಒಲಿದು ಸುಗ್ರೀವಂಗೆ ದೂತನಾದದ್ದೇನೊ
ಗಳಿಗೆ ಬಿಡದೆ ಶ್ರೀ ಹರಿಯ ಕೂಡ ಇಪ್ಪಗೆ
ತಲೆಬಾಗಿ ರಾಮನ ಕಂಡನೆನಿಸುವುದೇನೊ
ಛಲದಿಂದ ಖಳಜಾತಿಯ ಕೊಲಿಸುವ ಹರಿಪ್ರಿಯ
ಹುಲುವಾಲಿಯೊಬ್ಬನ್ನ ಕೊಲ್ಲಿಸಿದ ಬಗೆಯೇನೊ
ಜಲಜಜಾಂಡ ಕರತಲದಲ್ಲಿ ಕಾಂಬ ಪ್ರಾಣ
ಚಲುವ ಸೀತೆಯಗೋಸುಗ ಹುಡುಕಲು ಪೋದದ್ದೇನೊ
ಸಲೆ ಆಲೋಚನೆಯಿಂದ ಎಲ್ಲೆಲ್ಲಿದ್ದ ದ್ರವ್ಯ ನೋಳ್ಪನೆ
ಕುಳಿತು ಕಪಿಗಳ ಕೂಡಾಲೋಚನೆ ಮಾಡಿದ್ದೇನೊ
ಪಳಮಾತ್ರ ಕಾಲಭೀತಿ ಇಲ್ಲದ ಪ್ರತಾಪನೆ
ಸುಳಿದೆ ಬಿಡಾಲನಾಗಿ ಲಂಕೆಯೊಳು ಸೋಜಿಗವೇನೊ
ಮಲೆತ ಮಲ್ಲರ ವೈರಿ ವಿಜಯ ವಿಠ್ಠಲನಂಘ್ರಿ
ಜಲಜಾರ್ಚನೆ ಮಾಳ್ಪ ಸೂತ್ರ ನಾಮಕ ವಾಯು ೧
ಮಟ್ಟತಾಳ
ಹರಿಸಿರಿಗೆ ನಿತ್ಯ ಅವಿಯೋಗ ಚಿಂತಿ ಪನೆ
ವರ ಕೋಡಗನಾಗಿ ಮುದ್ರೆ ಇತ್ತದ್ದೇನೊ
ಉರಗನೊಡನೆ ಮೇರುಮಗನ ಕಿತ್ತಿದ ಧೀರ
ತರುಜಾತಿಗಳ ಕಿತ್ತು ಬಿಸುಟಿದ್ದೇನೊ
ಕರಣಾಭಿಮಾನಿಗಳ ಜಯಸಿದ ಜಗಜ್ಜೀವ
ನೊರಜು ದಾನವರ ಗೆದ್ದದ್ದು ಮಹಾ ಸೊಬಗೆ
ಸರುವ ಭುವನ ನಿನ್ನ ವಶವಾಗಿ ಇರಲು
ಪುರುಹೂತನ ವೈರಿಯ ಕೈಗೆ ಸಿಕ್ಕಿದ್ದೇನೊ
ಪರಮಪುರುಷ ರಂಗ ವಿಜಯ ವಿಠ್ಠಲರೇಯನ
ಕರುಣದಿಂದಲಿ ನಮ್ಮನು ಪೊರೆವ ಪ್ರಾಣಾ ೨
ತ್ರಿವಿಡಿತಾಳ
ಗರಳ ಧರಿಸಿ ಸುರರ ಕಾಯ್ದ ಕರುಣಾನಿಧಿ
ದುರುಳ ರಾಮಣನ ಸಭೆಯೊಳಂಜಿದ್ದೇನೊ
ಸರಸಿಜಜಾಂಡವ ಸಖನಿಂದ ದಹಿಸುವನೆ
ಭರದಿಂದ ಲಂಕೆಯ ದಹನ ಮಾಡಿದ್ದದ್ದೇನೊ
ನಿರುತ ಅಮೃತ ಉಂಡು ಸುಖಿಸುವ ಸಮರ್ಥ
ಪರಿ ಪರಿ ಫಲದಿಂದ ಹಸಿವೆ ನೂಕಿದ್ದೇನೊ
ಧರೆ ಚತುರ್ದಶದಲ್ಲಿ ನೀನೆ ಚೇಷ್ಟಪ್ರದನು ವಾ
ನರ ಬಳಗವನ್ನು ಖ್ಯಾತಿ ಮಾಡಿದ್ದೇನೊ
ನೆರೆದ ಕಟಕವೆಲ್ಲ ಕರತಲದಲಿ ದಾಟಿಪನೆ
ಗಿರಿಗಳ ಹೊತ್ತು ತಂದು ಶರಧಿ ಬಿಗಿದದ್ದೇನೊ
ಹರಿಯ ರೂಪಾನಂತ ಸಂತತ ಧರಿಪನೆ
ಧುರದೊಳು ರಾಮನ ಪೊತ್ತನೆನಿಪದೇನೊ
ಕರದಲ್ಲಿ ಮಹಾಗದೆ ಪಿಡಿದಿಪ್ಪ ಪುರುಷನೆ
ಗಿರಿ ತರುಶಾಖದಿಂದ ರಣವ ಮಾಡಿದ್ದೇನೊ
ಸರುವನಿಯಾಮಕನಾಗಿ ವ್ಯಾಪಾರ ಮಾಡಿಪನೆ
ಕರೆದು ವಿಭೀಷಣನ ಪ್ರಶ್ನೆ ಕೇಳುವುದೇನೊ
ಭರಣ ಮಿನುಗುವ ವಸದಿಂದೊಪ್ಪುವ
ವರ ಕೌಪೀನವ ಹಾಕಿ ಚರಿಸಿದ ಬಗೆ ಏನೋ
ತರಣಿ ವಂಶಜ ರಾಮ ವಿಜಯ ವಿಠ್ಠಲರೇಯನ
ಚರಿತೆಯಂದದಿ ನಿನ್ನ ಚರಿಯ ತೋರಿದ ಹನುಮ ೩
ಅಟ್ಟತಾಳ
ದ್ವಿತೀಯ ಕೂರ್ಮನಾಗಿ ಜಗವ ಪೊತ್ತ ಶಕ್ತ
ಭೃತ ಸಂಜೀವನಾದ್ರಿ ಭಾರತರವೇನೊ
ಸತತ ಆರಬ್ಧಾಂತಗಾಮಿ ನೀನಾಗಿದ್ದು
ಜಿತಶಕ್ರನ ಪಾಶದೊಳಗೆ ಬಿದ್ದದೇನೊ
ಅತಿಶಯ ಜ್ಞಾನದಲಿಪ್ಪ ಪವನನೆ
ಖತಿಗೊಂಡು ಮಾಯಾ ಸೀತೆಗೆ ಚಿಂತಿಸಿದ್ದೇನೊ
ಅತಿಶಯ ಕೋಟಿ ರಾವಣಿ ಭಂಗ ನೆರೆದು
ಪತಿಯ ಬಾಣದಲಿಂದ ಅವನ ಕೊಲಿಸಿದ್ದೇನೊ
ಶ್ರುತಿತತಿ ವಿನುತ ಶ್ರೀವಿಜಯ ವಿಠ್ಠಲನ್ನ
ಸ್ತುತಿಸಿ ಕೊಳುತ ಹರಿಗೆ ಪ್ರೀತನೆನಿಸಿದ ಪ್ರಾಣ೪
ಆದಿತಾಳ
ಆ ಮಹಾದೇವಾದ್ಯರಿಗೆ ಪಟ್ಟಕೊಡಿಸಿದವನೆ
ಭೂಮಿಯೊಳಗೆ ವಿಭೀಷಣಗೆ ಪಟ್ಟ ಕೊಡಿಸಿದ್ದು ಘನವೆ
ರೋಮ ರೋಮಕೆ ಕೋಟಿ ಲಿಂಗ ಉದುರಿಸಿದವನೆ
ಆ ಮಹಾ ಕಾಶಿಗೆ ಲಿಂಗ ತರಲು ಪೋದ ಬಗೆ ಏನೊ
ಕಾಮಿಸಿದಲ್ಲಿ ವ್ಯಾಪ್ತನಾಗಿ ಇರುವನೆ ಸು
ತ್ರಾಮ ಸುತನ ರಥದಲ್ಲಿ ನಿಂತದ್ದೇನೊ
ಕೋಮಲಾಂಗನೆ ನಿನ್ನ ವರ್ಣಿಸಲು ಭಾರತಿಗರಿದು
ಈ ಮತ್ರ್ಯಲೋಕದಲ್ಲಿ ಈ ರೂಪವಾದದ್ದೇನೊ
ಸೋಮಾರ್ಕರ ಸೋಲಿಸುವ ಮಾಣಿಕ್ಯ ಮನೆ ಇರಲು
ಧಾಮ ಮಾಡಿದ್ದೇನೊ ಕಿಂಪುರುಷ ಖಂಡದೊಳಗೆ
ಸಾಮ ಗಾಯನಲೋಲ ವಿಜಯ ವಿಠ್ಠಲರೇಯ
ಸ್ವಾಮಿ ಕಾರ್ಯ ಧುರಂಧರ್ಯ ಭಕ್ತ ಸೌಕರ್ಯ೫
ಜತೆ
ಒಡೆಯನಾಜ್ಞಾವ ತಾಳಿ ಕಾರ್ಯ ಮಾಡಿದ ಗುರುವೆ
ಕಡು ಸಮರ್ಥ ವಿಜಯ ವಿಠ್ಠಲನ ನಿಜವಾಸ ೬

ಭಗವದರ್ಚನೆ ಎಂಬುದು ಗುಪ್ತವಾಗಿ ನಡೆಸುವ ಕ್ರ್ರಿಯೆಯೇ

೫೦
ಧ್ರುವತಾಳ
ಜಾತಿಕಾರನು ಒಂದು ಜೋಳಿಗೆ ಮಾಡಿಕೊಂಡು
ಯಾತರ್ಯಾತರ ಮರದ ಬೇರರದು ಚೂರ್ಣ
ವ ತುಂಬಿಕೊಂಡು ನಡುಬೀದಿಯೊಳಗೆ ಬಂದು
ತಾಢು ಎಂತೆಂಬ ಗಾರುಡ ಮಂತ್ರವ
ಮಾತುಗಾರಿಕೆಯಿಂದ ಕಣ್ಣು ಮಸಕನೆ ತೋರಿ
ಬಾತಿ ಬಸಿದು ಪೊಟ್ಟಿಯ ಪೊರೆವ
ಜಾತಿಕಾರನಂತೆ ನಾನೊಬ್ಬ ವೇಷಧರಿಸೀ
ನೂತನ ಮಾಯದ ಬೆಡಗಿನಿಂದ
ಭೂತ ಸೋಂಕಿದ ಮಾನವನಂತೆ ಹಲವು ನೀ
ಕೇತನಗಳನು ತಿರುಗಿ ತಿರುಗೀ
ಆತುಮಾರ್ಥವಾಗಿ ಅಂಗಡಿ ವಿರಚಿಸಿ
ನೋತ ಪುಣ್ಯಗಳೆಲ್ಲ ಬರಿದು ಗೈದು
ಭೂತ ಮಹೇಶ್ವರ ವಿಜಯ ವಿಠ್ಠಲ ನಿನ್ನ
ಪ್ರೀತಿಯ ಬಡಿಸದೆ ಪಾಪಾತುರ ನಾನಾದೆ ೧
ಮಟ್ಟತಾಳ
ಸೂಳೆ ಶೃಂಗಾರವನ್ನು ಮೇಲೂ ಮಾಡಿಕೊಂಡು
ವೇಳ್ಯೆ ವೇಳಿಗೆ ತನ್ನ ಕಾಲವ ಕಳೆವಂತೆ
ಆಳುಡಂಬಕನಾಗಿ ತೋಳು ಹಸ್ತವ ತಿರುಹಿ
ಕೇಳಿಕೆಯನು ಹೇಳಿ ಸಾಲುದಿನವ ಕಳದೆ
ಲೋಲ ಮಹಕೃತುವೆ ವಿಜಯ ವಿಠ್ಠಲ ಕರು
ಣಾಳು ಹೀನವಾಗಿ ಬಾಳಿದೆನೊ ಬಂದೂ ೨
ತ್ರಿವಿಡಿತಾಳ
ಅನ್ನದಾನೀ ಎಂಬೊ ಪೆಸರು ಒಂದಿಲ್ಲದವನ
ಮನೆಯಲ್ಲಿ ಗಂಗಾಮೃತವೇ ವರ್ಜ
ವನ್ನು ಮಾಡಿಕೊಂಡು ಕೀರ್ತಿಯ ಪಡೆದಂತೆ
ಎನ್ನ ಭಾಗವತತನ ಇಂತಿಪ್ಪದಯ್ಯಾ
ಅನ್ಯರ ಕಣ್ಣಿಗೆ ಬಲುರಮ್ಯವಾಗಿ ಪಾ
ವನನೆಸಿಕೊಂಡೆ ಬಹಿರದಲ್ಲಿ
ಬಣ್ಣವಲ್ಲದೆ ಲೇಶ ಅಂತರ ಶುಚಿ ಇಲ್ಲಾ
ಬಿನ್ನಣದಲಿ ಹಗಲಿರುಳು ಪರರ
ಬಣ್ಣಿಸಿ ಹರಿದಾಸನೆಂದೆನಿಸಿದೆನೊ
ಎನ್ನ ನೋಡು ಬೃಹತ್ತ ವಿಜಯ ವಿಠ್ಠಲರೇಯ
ನಿನ್ನಂಘ್ರಿ ಭಕ್ತಿಮಾರ್ಗವನ್ನು ಕಾಣೆನೊ ಜೀಯಾ ೩
ಅಟ್ಟತಾಳ
ಭಕುತಿಯ ತೋರುವೆ ಭಕುತಿಗೋಸುಗ ಪೋಗಿ
ಕಕುಲಾತಿ ತೊರೆಯದೆ ಸಕಲ ಸೊಗಸಿ ನಿಂದ
ಹಕಲ ಮನಸಿನಲ್ಲಿ ಬಕನು ಕುಳಿತು ತನ್ನ
ಭಕುತಿಗೆ ಒಂದು ಕುಯುಕುತಿಯ ನಡಿಸಿ ಉ
ದಕ ತೀರವಿದ್ದಂತೆ ಭಕುತಿಯ ತೋರುವೆನೊ
ಸಕಲ ಜನರ ಮುಂದೆ ಭಕುತಿಯ ತೋರುವೆನು
ಸಕಲೇಶ ಕ್ಷೇತ್ರಙ್ಞ ಶ್ರೀ ವಿಜಯ ವಿಠ್ಠಲರೇಯ
ಅಕಳಂಕನಾಗದೆ ಅಕಟ ಕುಮತಿಯಾದೆ ೪
ಆದಿತಾಳ
ಚೋರನು ಸುಗುಣನಾಗಿ ಊರಒಳಗೆ ತಿರುಗಿ ಪರರ
ಪಾರವಸ್ತು ಅಪಹರಿಸಿ ತೋರುವ ಸಜ್ಜನನಾಗಿ
ಊರು ಕೇರಿಯೊಳಗೆ ನಾನು ಸಾರಹೃದಯನೆನಿಸಿ ವಿ
ಕಾರತನವನು ಎಲ್ಲ ಬೀರಿ ಭಾಗ್ಯವಂತರಲ್ಲಿ
ಸೂರಿಗೊಂಬೆ ಹೊನ್ನು ಹಣವ ಮಾರಿಗೆ ನಿನ್ನ ಮಹಿಮೆ
ಮಾರಿ ಧನ್ಯನಾಗಿ ಉದರ ಪೂರವಾಗಿ ಪೊರೆದೆ ರಂಗ
ಶ್ರೀ ರಮಣ ಮಹಕ್ಷಯ ವಿಜಯ ವಿಠ್ಠಲ ನಿನ್ನ
ಆರಾಧನೆ ಬಿಟ್ಟು ಭಾರವಾದೆ ಧರಣಿಯಲಿ ೫
ಜತೆ
ಗುಪ್ತದರ್ಚನೆ ಕೊಡೊ ಗುಣಗಣ ನಿಲಯಾನೆ
ಸಪ್ತವಾಹನ ನಮ್ಮ ವಿಜಯ ವಿಠ್ಠಲ ನಿರುತಾ ೬

ಜೀವದ ಸ್ವರೂಪ, ಬ್ರಹ್ಮಾಂಡದ ಗಾತ್ರ,

೩೭
ಧ್ರುವತಾಳ
ಜೀವ ಅಚ್ಛೇದ್ಯಾಭೇದ್ಯ ತೋಯ ಗರಳಶಸ್ತ್ರ
ಪಾವಕ ಮಿಗಿಲಾದ ಉಪಹತಿಯಿಂದ
ಸಾವಿಲ್ಲ ಸಾವಿಲ್ಲ ಆವಾವ ಕಾಲಕ್ಕೆ
ಪಾವನ್ನ ವಾಗಿಪ್ಪದು ಪರಮ ಸೂಕ್ಷ್ಮ
ಆವಿರಾನಂದ ಭಾವ ಭರಿತವಲ್ಲದೆ ಇದಕೆ
ನೋವಾಗದು ಕಾಣೊ ನಿಜರೂಪದಿ
ತ್ರಿ ವಿಕಾರದಿಂದ ಪ್ರವೃತ್ತಿ ಮಾರ್ಗ ಕಾಣೊ
ಈ ವಿಧ ತಿಳಿಯೋದು ಸತ್ಪಂಥಕ್ಕೆ
ಜೀವಾಂಗುಟಾಗ್ರ ಮೂರ್ತಿ ಜೀವಾಂಗುಟ ಮೂರ್ತಿ ಈ
ಜೀವದಾಕಾರ ಮೂರ್ತಿ ಪುರುಷ ಮೂರ್ತಿ
ಜೀವೇಂದ್ರಿಯಗಳಲ್ಲಿ ತತು ತತ್ತು ಸ್ಥಾನವಾಸ
ಆವಾವ ರೂಪದಂತೆ ಇಪ್ಪ ಮೂರ್ತಿ
ಜೀವೋತ್ತಮವಿಡಿದು ತೃಣಜೀವ ಪರ್ಯಂತ
ಯಾವತ್ತರೊಳಗಿದ್ದಾನಂತ ಮೂರ್ತಿ
ಶ್ರೀ ವಾಸುದೇವ ಸಂಕರುಷಣ ಪ್ರದ್ಯುಮ್ನ
ಜೀವನಾಮಕ ಅನಿರುದ್ಧ ಮೂರ್ತಿ
ದೇವಿ ಸಹಿತವಾಗಿ ಇನಿತು ಒಪ್ಪುವಾನೇಕ
ಆವರ್ಣ ವುಳದಾದಲ್ಲಿ ಯಿಪ್ಪ ಮೂರ್ತಿ
ಈ ವಿಚಾರವೆ ಗ್ರಹಿಸು ಏಕಾಗ್ರಚಿತ್ತದಲ್ಲಿ
ದೇವಾ ದೇವೇಶನ್ನ ಅಣು ಮಹತ್ತು
ಕೋವಿದ ಪೂರ್ಣಾಂಬುಧಿ ಅಭಿನ್ನವಾದ ರೂಪ
ಜೀವದೊಳಗೆ ಸದಾವಕ್ಕು ಸಿದ್ಧ
ಪಾವಿತ್ರ ತಾನಾಗಿ ಪತಿತರ ಉದ್ಧರಿಪ
ತಾವರೆ ಜಲದಲ್ಲಿ ಇದ್ದ ತೆರದಿ
ಭಾವಿಸು ಎಲೊ ಮನುಜ ಜಿತ ಚಿತ್ತನಾಗಿ ನಿನ್ನ
ಜೀವದೊಳಗೆ ಇದ್ದ ಮೂರ್ತಿಗಳ
ದೈವ ಸ್ವಭಾವ ಕೇಳೊ ಅಚಿಂತ್ಯಾದ್ಭುತ ಶಕ್ತಿ
ಸೇವಿಸು ಭಕುತಿಯಲಿ ಸಮ ಬುದ್ಧಿಲೀ
ದೇವಕಿ ನಂದನ ವಿಜಯ ವಿಠಲರೇಯ
ಕಾವ ಕರುಣದಿಂದ ಧ್ಯಾನಂಗತನ ಮಾಡಿ ೧
ಮಟ್ಟತಾಳ
ಚೇತನದೊಳಗಿದ್ದ ಮೂರ್ತಿಗಳನೆ ತಿಳಿದು
ಮಾತು ಮಾತಿಗೆ ನೆನಸಿ ಕೊಂಡಾಡಿ ಪಾಡಿ
ಜ್ಯೋತಿರ್ಮಯವಾದ ಅನಾದಿಬದ್ಧಲಿಂಗ
ಗಾತುರ ಇರುತಿಪ್ಪ ಸ್ಥಿತಿಗತಿಯಾನು ನೋಡಿ
ಆ ತರುವಾಯದಲಿ ಅಲ್ಲಲ್ಲೆ ಇದ್ದ
ಧಾತನಾಮಕ ಬ್ರಹ್ಮಾ ವಿಷ್ಣು ರುದ್ರಾಭಿದಾನ
ನೀತ (ತಿ) ಪ್ರದಾತ ಪ್ರಮುಖ್ಯ ಮೂರುತಿ ಮೂರು
ಶ್ರೀ ತೈಜಸ ವಿಶ್ವ ಪ್ರಾಜ್ಞನಾಮಕರಾಗಿ
ವಾತ ವಾರಿಜಗರ್ಭ ಸರಸ್ವತಿ ಭಾರತಿ
ಸೋತ್ತಮರು ಇವರು ಪೂಜಿಸುವ ಮೂರ್ತಿ
ಶ್ರೀ ತರುಣಿ ಧರಣಿ ದುರ್ಗಾನಾಮಕಳಪ್ಪೆ
ಭೂತಿ ವಂತಳು ಇಪ್ಪಳು ತ್ರಯ ಭಾಗದಿ ಬಿಡದೆ
ಭಾತಿಗುಣಗಳಿಂದ ನಿತ್ಯಾಭಿಮಾನಿನಿ
ಮಾತ್ರ ಮೊದಲಾದ ಷೋಡಶಕಳೆವುಂಟು
ಪ್ರೀತಿಯಿಂದಲಿ ಇವಕೆ ಒಂದೊಂದು ಮೂ
ರುತಿಗಳುಂಟು ಕೇಶವಾದಿ ಹದಿನಾರು
ಜ್ಯೋತಿಗೆ ಪ್ರತಿಬಂಧಕ ದ್ವಯಾಚ್ಛಾದಿಕ ಜಡದಿ
ಭೀತಿಗೊಳಿಸುವೈದು ತಮ ಮೋಹಾದಿಗಳು
ಪಾತಕ ಮಾಳ್ಪುದಕೆ ಕಾರಣ ಪ್ರಕೃತಿಗಳು
ಮಾತು ಈ ಪರಿ ನೋಡಿ ಕೃದ್ಧೋಲ್ಕಾದಿ ಮೂ
ರುತಿಗಳು ಐದು ಅಂತಃ ಪರಿಚ್ಛೇದ
ಪೂತುರೆ ವಿಶಿಷ್ಟಲಿಂಗ ದೇಹಕ ಖಳರಾ
ಘಾತಿಸುವ ಮೂರ್ತಿ ಜನಾರ್ದನನೆನ್ನು
ದೈತೇಯ ಗಣದ ಪ್ರಸಂಗವೆ ಇಲ್ಲ
ಶ್ವಾತ ಕುಂಭ ಗರ್ಭ ಮಿಕ್ಕಾದ ದಿವಿಜಾ
ವ್ರಾತ ತೃಣ ಜೀವರಿಗೆ ಒಂದೆಸಮನವಿದೆ
ಕೌತುಕ ಕೌತುಕವೊ ಅಂಶಿ ಅಂಶದಸೊಬಗು
ಜಾತರಹಿತ ವಿಜಯ ವಿಠಲನ ಮೂರ್ತಿಗಳ
ಈ ತೆರದಿ ನೆನಿಸಿ ಅಲ್ಲಿಂದಲಿ ಇತ್ತ ೨
ರೂಪಕ ತಾಳ
ಗುಣಸಾಮ್ಯವಾದಾಗ ರಜೊ ಬಿಂದು ಹನ್ನೆರಡು
ಮಿನಗುವ ಸತ್ವದಲಿ ಹತ್ತುವಂದಕೆ ಮಿಳಿತ
ರೆನಿಸುವುದು ತಮೋ ಭಾಗದಲಿ ಒಂದು
ಒಂದನೆ ಪೇಳುವುದು
ತನ್ನದು ಸ್ವರಾಶಿಯಲ್ಲಿ ಇನಿತು
ಬಿಂದುಗಳಿಗೆ ಶಕ್ತ್ಯಾದಿ ಹನ್ನೆರಡು
ಚಿನುಮಯ ದೇವ ಸಿರಿ ಲಕುಮಿಗೆ ಇದೆ ಪೆಸರು
ಗುಣ ವೈಷಮ್ಯವಾಗೆ ಎರಡು ರಾಶಿಯಲಿದ್ದ
ಅಣು ಬಿಂದು ಹನ್ನೊಂದು ತತ್ತದ್ರಾಶಿಲಿವುಳ್ಳ
ಮಣಿವಜ್ರ ಪ್ರಕಾಶ ಭಾಗದಿಂದಲಿ ಉತ್ತಮವಾಗಿ
ರಜೋಬಿಂದು ಈರೈದು ಬರುವಾಗ
ವಿನಯದಿಂದಲಿ ತತ್ಪರಿಮಿತ ಬಿಂದುಗಳು
ಗುಣ ಸತ್ವ ಸ್ಥಳದಿಂದ ಹತ್ತು ಪೊರಡಿಸಿಕೊಂಡು
ಜಿನಗು ಒಂದೊಂದಕ್ಕೆ ಹತ್ತು ಯುಕ್ತವಾಗಿವೆ
ಎಣಿಕೆ ನೋಡುವುದು ತಮದಲ್ಲಿದ್ದಾ ಒಂ
ದನೆ ಬಿಂದು ಕೊಂಡು ತನ್ನಲ್ಲಿ ಪ್ರವೇಶಿಸಿತು
ವನಜರಾಗ ವರ್ಣ ಪರಿಚ್ಛೇದದಲ್ಲಿ ಸೂ
ಚನೆ ಸತ್ವ ಬಗೆ ಬಿಂದು ಹತ್ತು ತಮೊ ಬಿಂದೊಂದು
ಇನಿತು ಈರೈದೊಂದು ಸ್ವರಾಶಿವು ಹನ್ನೆರಡು
ಗುಣ ವೈಷಮ್ಯವೆಂದು ಲಿಂಗದಲ್ಲಿ ಆಯಿತು
ಗುಣವಂತ ವಿಜಯ ವಿಠಲರೇಯ ಅಲ್ಲಲ್ಲಿ
ವಿನಿಯಾಮಕನಾಗಿ ಇಪ್ಪ ಮತ್ಸ್ಯಾದಿ ರೂಪದಲ್ಲಿ ೩
ಝಂಪೆ ತಾಳ
ಅರುಣ ಗುಣದಲಿ ಬಂದು ಬಿದ್ದ ಸತ್ವತಮೊ
ಎರಡು ರಾಶಿಯಬಿಂದು ಹತ್ತು ಒಂದು ಸ್ಥಿರ ರ
ಜೋರಾಶಿಯಲಿ ವೈಷಮ್ಯವಾದ ಹನ್ನೆರಡು
ಬಿಂದುಗಳು ಮುಂದಕ್ಕೆ ಸಾಗಿ
ತೆಗ್ಳಿದವು ಹತ್ತರಿಂದಲಿ ಹತ್ತು ಹತ್ತಾಗೆ
ಎರಡ್ಯೆವತ್ತು ಸತ್ವ ಸಂಬಂಧ
ನಿರಿಕ್ಷಿಸು ಒಂದೊಂದು ಬಿಂದುಗಳಿಗೆ
ಸಾವಿರ ವಿಶಿಷ್ಟವಾದ ಬಿಂದುಗಳೆನ್ನು
ಅರುಣ ಭಾಗದಿಂದ ನೂರುಯುಕ್ತದಲಿ ಹ
ನ್ನೆರಡು ಬಿಂದುಗಳು ಬಂದವು ಕಾಣಿರೊ
ಕರುವಿನ ದೆಶೆಯಿಂದ ಹತ್ತು ಯುಕ್ತವಾಗಿ
ಪೊರಟಿತೊಂದೇ ಬಿಂದು ವೇಗದಿಂದ
ನೆರೆದು ಶತತ್ರಯೋದಶ ಬಿಂದುಗಳೇಕವಾಗಿ
ಕರಿಸಿಕೊಂಡಿತು ಅವ್ಯಕ್ತವೆಂದೂ
ಮರುತ ಸತಿ ಸರಸ್ವತಿ ಸೂತ್ರನಾಮಕ ಪ್ರಾಣ
ಪರಮೇಷ್ಠಿಗಳು ಇದಕೆ ಅಭಿಮಾನ್ಯರೂ
ಸಿರಿ ಲಕುಮಿ ರೂಪಗಳುಂಟು ಹದಿಮೂರು ಶತ
ನಿರುತ ಮಾನಿಯಾಗಿ ಒಪ್ಪುತಿಹಳು
ಪುರುಷನಾಮಕ ಹರಿಯ ರೂಪಗಳು ಪೊಳೆಯುತಿವೆ
ವರ ವಿಶ್ವಾ ಅನಿರುದ್ಧ ನಾರಾಯಣಾದಿ
ಸ್ಮರಿಸು ಒಂದಕೆ ಮೂಲ ಮೂರ್ತಿಯ ಬಿಡದಲೆ
ಕರಣ ಶುದ್ಧಿಯಲಿ ಕೊಂಡಾಡಿ ಸುಖಿಸು
ಹರ ಮೊದಲಾದವರು ಅವ್ಯಕ್ತದಲಿ ಇಲ್ಲ
ಕುರುಹು ತಿಳಿವದು ಅನಿರುದ್ಧದಲಿ
ಸಿರಿ ತತ್ವದಲಿಯಿದ್ದ ಬಿಂದುಗಳ ದೆಸೆಯಿಂದ
ತೆರಳಿದವು ಮೂರು ಪ್ರಕಾರದ ವರ್ನಾ
ಮರಳೆ ಸತ್ವದ ಬಿಂದುಗಳು ಒಂದೊಂದಕ್ಕೆ ಸಾ
ವಿರ ಪ್ರಕಾರ ಗುಣಿಸಿ ಲಕ್ಷವಾಗೆ
ಅರುಣ ಬಿಂದುಗಳಿಗೆ ನೂರರೆಂತೆಣಿಸೆ ಹನ್ನೆರಡಕ್ಕೆ
ಹನ್ನೆರಡು ನೂರಾದವು ಕರಿಯ ಬಿಂದೊಂದಕ್ಕೆ
ಹತ್ತು ವೆಗ್ಗಳಿಸಿದವು
ಪರಮ ಜ್ಞಾನಿಗಳು ಗುಣಿತವೆ ಮಾಡಿ
ಗುರುಕೃಪೆಯಿಂದ ಪೇಳದಿರೆ ಲಕ್ಷ
ಹನ್ನೆರಡುನೂರರ ಹತ್ತು ನಿಶ್ಚಯ
ಭರದಿಂದ ಅವ್ಯಕ್ತದಿಂದ ವ್ಯಕ್ತವಾಗಿ
ಕರೀಸಿಕೊಂಡಿತು ಅನಿರುದ್ಧ ದೇಹಾ
ಶರಣವಾಗಿಪ್ಪದು ಅವ್ಯಕ್ತಲಿಂಗಕ್ಕೆ ಮಿರಿ ಮಿರಿ
ಮಿಂಚುವ ಕಾಂತಿಯಿಂದ
ಗರುಡನರ ಹರ ಸುರಪ ಸ್ಮರ ಮರುತ ಸ್ಮರಜ ಗುರು
ಮರೀಚಿ ತರಣಿ ಜಾತ ತರಣಿ ಹಿಮಕರಾಪ್ಪೆ
ಸುರದೂತ ಮಿತ್ರಾ ನಿರಋತಿ ವೈದ್ಯ ಕರಿವದನ
ಹರಸಖ ಜಯಂತ ಪಂಚ ಮರುತಾ
ಧರಶನೈಶ್ಚರ ಪುಷ್ಕರ ಮೊದಲಾಗಿದ್ದು
ಸುರರು ತಾತ್ವಿಕರ ಕೇವಲ ಸೂಕ್ಷ್ಮ ಮಾ
ತರ ತಮರಾಗಿ ದೇಹವಧರಿಸಿ ಅನಿರುದ್ಧ
ಶರೀರದಲ್ಲಿ ಇಪ್ಪರು ತಮ ತಮ್ಮ
ವರಸ್ಥಾನದಲಿ ವ್ಯಾಪಾರಗಳ ಮಾಡುತ್ತ
ಪರಮ ಸಂಭ್ರಮದಿಂದ ಹರಿನೇಮದಿ
ದುರುಳರು ಅಲ್ಲಿ ವಾಸವಾಗಿಹರು
ಚರಿತೆಯನು ಮಾಡಿಪರು ಕಾಲವ್ಯವಧಾನಗಳ
ಪರೀಕ್ಷಿಸಿ ತೀವ್ರದಲಿ ತಿರಿಗಿಸುತ್ತಾ
ಹರಿ ರೂಪಗಳು ಉಂಟು ವಿಶ್ವಾದಿ ನೂರು ಬಗೆ
ಸಿರಿ ರೂಪಗಳು ಇದೇ ಪರಿ ತಿಳಿವುದು
ಪರಮೇಷ್ಟಿ ಮರುತ ಭಾರತಿ ಸರಸ್ವತಿ ಮಿಕ್ಕಾ
ಸುರರು ಅಂಶಿ ಅಂಶಾ ತೆರದಲಿ ಇಪ್ಪರು
ಕರಣ ನಿಯಮಾಕರು ಇವರೆಲ್ಲ ಸರ್ವದಾ
ಕಿರಿಯರೊಳಗೆ ಹಿರಿಯರು ಪ್ರವೇಶ
ಪೊರಟ ಬಿಂದುಗಳೆಲ್ಲ ಮೂಲದಿಂದಲಿ ವಿಡಿದು
ಎರಡೆಂಟು ಕಳೆಗಳ ಸಂಬಂಧವೊ
ಪರಿಣಮಿಸಿತು ಕೇಳಿ ಅನಿರುದ್ಧದ ವೊಳಗೆ ಪ
ದರುಂಟು ಒಂದಕ್ಕೊಂದಧಿಕವಾಗಿ
ಎರಡೈದಾವರ್ಣ ಅನಿರುದ್ಧ ಪ್ರಕೃತಿಯಲ್ಲಿ ಚ
ತುರ ವಿಂಶತಿ ತತ್ವ ಜಾಂಡದಂತೆ
ಗುರುತ ಮಾತುರ ಈ ಕಾಯದಲಿ ಬಿಂದುಗಳು
ತರುವಾಯ ಅರುಹು ಕಾಣೊ ನಿರುತ ಪಂಚ
ಕೋಶನ್ನ ಮಾಯಾದಿ ವಿಗ್ರಹಾ
ಕರೆಸಿದವು ನಾರಾಯಣೈದು ಪೆಸರು
ವರ ವಿಶ್ವ ತೈಜಸ ಪ್ರಾಜ್ಞ ಮೂರು ಮೂರುತಿ ಅವ
ತರಸಿದವು ಮೂಲದಿಂದತ್ಯತನಕ
ಪರಮೇಷ್ಠಿ ರೂಪ ಲಿಂಗದ ಕೊನಿಸುತ್ತಿನಲಿ
ಇರುತಿಪ್ಪ ಮುಂದತ್ತ ಸಂತರಿಸುವ
ಸರಿಯೆನ್ನಿ ಜಡಕೆ ಚೇತನವೆಲ್ಲಿದೆಂಬಿಯಾ
ಹರಿ ಯಿಚ್ಛೆ ಇಂಥಾದ್ದೆ ಬಲು ವಿಚಿತ್ರಾ
ಕರುಣ ಸಾಗರ ನಮ್ಮ ವಿಜಯ ವಿಠಲರೇಯ
ತರತಮ್ಯ ಗುಣಗಳ ವ್ಯಕ್ತ ಮಾಳ್ಪಾ ೪
ತ್ರಿವಿಡಿ ತಾಳ
ಹೃದಯ ನಿಮ್ನದ ಮಧ್ಯ ಮಧ್ಯನಾಡಿಯ ಮಧ್ಯ
ಹುದಿಗಿಪ್ಪದನಿರುದ್ಧ ದೇಹವದಕೆ
ಹದಿನಾಲ್ಕು ದಳವುಳ್ಳ ಪೊಳೆವ ರಕುತವರ್ಣ
ಇದೆ ಅಷ್ಟದಳವೆಂದು ಎನಿಸಿತಿದಕೋ
ಅದರ ಕರ್ನಿಕೆ ಮೇಲೆ ರಾಮ (೩) ಮೂರುತಿಗಳುಂಟು
ಮೊದಲಗ್ರ ಮಧ್ಯ ಮೂಲೇಶ ಭಗವಾನ್
ಮುದದಿಂದ ಮೂಲೇಶನ ಪಾದಂಗುಟದಲ್ಲಿ
ವಿಧಿ ಪಟ್ಟಕ್ಕೆ ಸಾರುವ ಪ್ರಾಣವಾಸಾ
ಇದನೆ ಗ್ರಹಿಸಿ ಈತನ ಪಾದ ಮೂಲಾಶ್ರಯ
ಕದಲಾದಂತೆ ಜೀವ ಇಪ್ಪ ನೋಡು
ಪದುಮಾಷ್ಟದಳದಲ್ಲಿ ಲೋಕ ಪಾಲಕರುಂಟು ಸ
ನ್ನಿಧವಾಗಿಪ್ಪರು ತಮ್ಮ ಸೇವಕರೊಡನೆ
ಪದೆ ಪದಿಗೆ ಉಪೇಂದ್ರರಾಮ ಭಾರ್ಗವ ರಾಮ
ಅದು ಭೂ ಜನಾರ್ಧನ ಮತ್ಸ್ಯತುರಂಗಾ
ವದನ ಕಲ್ಕಿ ನೃಕೇಸರಿಯ ಪೂಜಿಪರಯ್ಯಾ
ಬುಧರು ಒಂದಾಗಿ ವಸುಗಳೇಳು ಜನ
ಸುದರುಶನ ಶಂಖ ಖಡ್ಗ ಚರ್ಮ ಗದ
ಪದುಮ ಕಾರ್ಮುಕ ಬಾಣ ಧರಿಸಿ ಅಷ್ಟಾ
ಯುಧ ನಾಲ್ಕೆರಡು ಬಾಹುವುಳ್ಳ ನಾರೇಯಣ
ಪದುಮೆ ಕೂಡಲಿ ಪಹರಿಯೆ ತಿರುಗುವ
ಪದುಮ ವಿಕಿಸಿತವಾಗೆ ಜಾಗ್ರತೆ ಎಂದೆನ್ನಿ
ಪದುಸ್ವಲ್ಪು ಮುದುರಿದರೆ ಸ್ವಪ್ನಕಾಲ
ಮುದುರಿ ಪೋದರೆ ಸುಪ್ತಿ ಜೀವ ಪ್ರಾಜ್ಞದೇವನ್ನ
ವದನದೊಳಗಿಳಿದರೆ ನಿಜೀಷ್ಟನೋ
ಇದರಂತೆ ಮೂರಾವಸ್ಥೆಯಾದಡೆ ವ್ಯಾಪಾರ
ಚದುರಾವೃತ್ತಿಯಲ್ಲಿ ಯಾಗುವುದು ಸಿದ್ಥಾ
ಪದುಮ ಈ ಪರಿಯಲ್ಲಿ ಐದುಕಡೆಇಪ್ಪದು

ಜೀವನ ಸ್ವರೂಪ ಮತ್ತು ಜೀವರ ತಾರತಮ್ಯವನ್ನನುಸರಿಸಿ

೫೧
ಧ್ರುವತಾಳ
ಜೀವ ಸಚ್ಚಿದಾನಂದ ಶರೀರ ಪರಾಧೀನ ಆವಕಾಲಕ್ಕು ಆಗಿಪ್ಪದು
ಜೀವಾಂಗುಷ್ಟ ವಿಶಿಷ್ಟ ಅಂತರಾತ್ಮ ಜ್ಞಾನಾತ್ಮ
ಈ ವಿಧ ಮೂರ್ತಿಗಳುಂಟು ಮಿಕ್ಕ
ಠಾವಿನಲ್ಲಿ ತತ್ತಸ್ಥಾನದಲ್ಲಿ
ಆ ವಿಶ್ವಾದಿಗಳುಂಟು ನಿಬಿಡಿಯಾಗಿ
ಜೀವಕ್ಕೆ ಎಂದೆಂದಿಗೆ ತೊಲಗದ
ಭಾವಜ್ಞಾನ ಕೇವಲ ಸ್ವರೂಪಭೂತವೆನ್ನಿ
ಪಾವಕ ಮಧ್ಯದಲ್ಲಿ ದ್ರವ್ಯ ಒಂದಿಡಲಿದಕೆ
ಕಾವದದೆ ಬಿಡದಯ್ಯಾ ಇದ್ದನಿತು
ಜೀವಕ್ಕೆ ಲಿಂಗದೇಹ ಈ ಪರಿ ಇದ್ದರಾಗೇನು
ನೋವಾ ನೋವಾಗದಲೆ ಸುಮ್ಮನಿರದು
ಈವದು ಈಬಗೆ ಸುಖ ದು:ಖ ಲಿಂಗದೇಹ
ಜೀವ ಸ್ವರೂಪವೆಲ್ಲ ಭಿನ್ನವಹುದು
ಸಾವು ಪುಟ್ಟುವದಕ್ಕೆ ಕಾರಣವಾಗಿಪ್ಪದು
ಯಾವತ್ತು ಕರ್ಮವು ಉಣಿಸಿಕೊಳುತ
ಈ ವೃತ್ತಿ ಜ್ಞಾನವದು ಪೋಗದಲೆ ನಿಜ
ಭಾವದಲ್ಲಿ ನಿಲ್ಲದು ನಿಧಾನಕ್ಕೆ
ಜೀವ ಪ್ರಕಾಶ ಬಂದು ಲಿಂಗಮಿಶ್ರಿತವಾಗಿ
ಆವವ ಕಾಯವ ಹಿಂದುಗಳಿದು
ತಾ ವ್ಯಾಪ್ತವಾಗಿಪ್ಪುದು ಸ್ಥೂಲೇಂದ್ರಿಯೊಳು ಪೊಕ್ಕು
ಧಾವಂತಾ ಬಹಿರದಲ್ಲಿ ಬಡಿಸುವದು
ತ್ರಿವಿಧ ಗುಣವುಳ್ಳ ಬದ್ದ ಪ್ರಕೃತಿ ಸ್ಥಿತಿ
ಆ ವಿರಿಂಚಿಗೆ ಮಾತ್ರ ದಗ್ಥಪಟವೋ
ಅವಿಷ್ಟನಾಗಿ ಕಲಿ ಅಲ್ಲಿಲ್ಲ ಆತನೊಬ್ಬ
ಪವಿತ್ರ ಕಾಣೋ ಸದಾ ವಾಯು ಸಹಿತ
ಭಾವಜ ವೈರಿ ವಿಡಿದು ಮಿಗಲಾದ ಚೇತನಕ್ಕೆ
ಕೈವಲ್ಯಯೋಗ್ಯರಿಗೆ ಸ್ವರೂಪ ಕ್ಲೇಶ ಪುಸಿ
ನೋವಾದರೂ ಭಿನ್ನ ಭಿನ್ನ ಕಾಣೋ
ಕಾವಳ ಯೋಗ್ಯರಿಗೆ ಚಿದ್ರೂಪಿಗಳಂತೆ
ಕೇವಲವಾದ ನಿಜ ಸುಖವೆ ಇಲ್ಲಾ
ಆ ವೃತ್ತಿ ಸುಖವುಂಟು ಲಿಂಗಭಂಗಾಂತರದಲ್ಲಿ
ಬೇವೋದು ಶತಸಿದ್ದ ನಿಜ ದು:ಖದೀ
ಸೇವಕರೊಡಿಯ ಶ್ರೀ ವಿಜಯ ವಿಠ್ಠಲರೇಯ
ಪಾವಮಾನಿಯಿಂದ ಎಲ್ಲರ ಕಾವುತಿಪ್ಪ ೧
ಮಟ್ಟತಾಳ
ಅಂತರಾತ್ಮ ಮೂರ್ತಿ ಜೀವರ ಸ್ವರೂಪ
ದಂತೆ ಇಪ್ಪದು ಕಾಣೊ ಎಲ್ಲೆಲ್ಲಿ ನೋಡಿದರು
ಅಂತರಿಲ್ಲದೆ ನಿತ್ಯ ಅವರವರ ಚೇಷ್ಟೆ
ಯಂತೆ ವ್ಯಾಪಾರವನ್ನು ಮಾಡಿ ಮಾಡಿಸುತಿಪ್ಪ
ಅಂತರಂಗದೊಳೀತ ಮಾಡುವ ಪರಿ ಅ
ನಂತ ಮೂರುತಿಗಳು ಒಂದೇ ಕಾಲದಲ್ಲಿ
ನಿಂತು ಕುಳಿತು ಮಲಗಿ ನಾನಾ ಬಗೆಯಿಂದ
ಸಂತತ ಸ್ವರೂಪ ಕರಣ ಮಿಶ್ರವಾಗಿ
ಭ್ರಾಂತಿಗೊಳಿಪ ಕಾಯ ತದಾತ್ಮಕದಲ್ಲಿ
ನಿಂತವರೊಳಗಿದ್ದು ಚರಿಯ ಮಾಳ್ಪಲೀಲೆ
ಯಂ ತಿಳಿದು ಗುಣಿಸು ಈತನನೀಕ್ಷಿಸದೆ
ಸಂತರಿಗೆ ಗತಿ ಸೇರುವ ಬಗೆ ಇಲ್ಲ
ಹಂತರಿಗಾದರು ಈತನ ಕಾಣದಲೆ
ಸಂತಾಪವ ಬಡುವ ಗತಿಯಾಗದು ಕೇಳಿ
ಕಂತು ಜನಕನ ದ್ವೇಷಿಗಳಿವರೆನ್ನು
ಅಂತವಿಲ್ಲದ ಮಹಿಮ ವಿಜಯ ವಿಠ್ಠಲರೇಯ
ಎಂತೆಂತು ನೋಡಿದರು ಅದರಂತೆ ಫಲವೀವ ೨
ತ್ರಿವಿಡಿತಾಳ
ಬೊಮ್ಮನಾರಂಭಿಸಿ ಪುಷ್ಕರ ಪರಿಯಂತ
ತಮ್ಮ ತಮ್ಮ ಮೂರ್ತಿಯಾರಾಧನೆ
ಸುಮ್ಮಾನದಲಿ ಮಾಡಿ ಕಾಣುತಲಿಪ್ಪರು
ಅಮ್ಮಹಾ ಎರಡು ಘಳಿಗೆ ತನಕ
ರಮ್ಮೇಶನಪಾದ ಸ್ಪಷ್ಟತ್ವದಲಿ ಭೇದ
ಘಮ್ಮನೆ ನೋಳ್ಪರು ಪೊಳೆವಬಿಂಬಾ
ಈ ಮಹಾತ್ಮರ ಬಿಟ್ಟು ಉಳಿದಾದವರ ಕೇಳಿ
ಒಮ್ಮನದಲ್ಲಿ ದೇವ ಗಂಧರ್ವರು
ಸಮ್ಮತರಹುದು ಕರ್ಮಪ ನಿಂದಿತ್ತಲೊ
ಸಮ್ಮಾಧಿಯಲಿ ಮಾತ್ರ ಪಾದದನಿತು
ಕ್ರಮ್ಮಾನುಸಾರದಲ್ಲಿ ವ್ಯಾಪ್ತದರ್ಶಿಗಳಾಗಿ
ತಮ್ಮ ತಮ್ಮೊಳಗೆ ದೇವನ ನೋಳ್ಪರು
ಹಿಮ್ಮೆಟ್ಟಿದಿಪ್ಪರು ಇದಕೆ ಸಂಶಯ ಸಲ್ಲ
ಅಮ್ಮೆಸುಯಿವರೆಲ್ಲ ಸಾಂಶರೆಂದು
ಈಮ್ಮಹಿಯೊಳಗಿರುವ ಅಪ್ರತಿ ಕಾಲಂಬನರು
ಅಮ್ಮಿಶ್ರ ತತ್ವಧಿಕಾರಿಗಳಲ್ಲ
ರಮ್ಮೆಯರಸ ನಮ್ಮ ವಿಜಯ ವಿಠ್ಠಲರೇಯ
ಸಮ್ಮಂದಿಗನಹುದೊ ಭಜಿಸುವ ಜನಕೆ ೩
ಅಟ್ಟತಾಳ
ಮುನಿ ಮನುಗಳು ಪಿತೃ ಮನುಜೋತ್ತುಮ
ದಿನಪರಿ ಮುಕುತಿಯೋಗ್ಯರು ತಮ್ಮು ತಮ್ಮಪಾ
ಸನೆ ಮಾಡುವರು ಪಾದಮಾತ್ರೆ ಪಿಡಿದು ವಂ
ಚನೆ ಇಲ್ಲದೆರಡು ಘಳಿಗೆ ಪರಿಯಂತ
ವನಜನಾಭನ ನೋಡುವರು ತಾರತಮ್ಯ
ವನುಸರಿಸಿ ನಿಂತು ಸ್ತೋತ್ರವನು ಮಾಡುತ
ದಿನದಲ್ಲಿ ಧ್ಯಾನ ಮರಿಯದ ಮನಸಿಲಿ
ಅನಿಮಿಷರೆಲ್ಲರು ಪ್ರವಾಹ ತೆರದಂತೆ
ಇನಿತು ಪೇಳಿದ ಪ್ರಕಾರ ಹರಿಮೂರ್ತಿ
ಯನು ಕಾಂಬುವರಯ್ಯಾ ಇದಕೆ ಸಂಶಯವಿಲ್ಲ
ಚಿನುಮಯ ಮೂರುತಿ ವಿಜಯ ವಿಠ್ಠಲರೇಯ
ತನಗೆ ತಾನೇ ಈಪರಿಯಲ್ಲಿ ಕರುಣಿಪಾ ೪
ಆದಿತಾಳ
ತಮ ತಮ್ಮ ಸ್ಥಾನದಲ್ಲಿ ತಮತಮ್ಮ ಬಿಂಬವನು
ಶಮದಮ ನಿಷ್ಠೆಯಿಂದ ಭಜನೆಯ ಮಾಡುವರು
ತ್ತುಮ ಸ್ಥಾನದಲ್ಲಿದ್ದ ಪರಮಾತ್ಮನ ನಿತ್ಯ
ಮಮತೆಯ ತೊರೆದು ಜ್ಯೋತಿಯಂದದಿ ಅನೂ
ತ್ತಮರು ಕಾಣುವರು ಇನಿತು ಸರ್ವರು ಕೇಳಿ
ಸಮಗುಣಾಂಬುಧಿ ನಮ್ಮ ವಿಜಯ ವಿಠ್ಠಲರೇಯ
ತಮೋ ಯೋಗ್ಯರಿಗೆ ಇದರಂತೆ ದ್ವೇಷ ಹೆಚ್ಚಿಸುವಾ ೫
ಜತೆ
ಅವರವರ ಯೋಗ್ಯತದಂತೆ ನಡೆಸುವನು ನಮ್ಮಾ
ಪವಮಾನಂತರ್ಯಾಮಿ ಶ್ರೀ ವಿಜಯ ವಿಠಲ ಸ್ವಾಮಿ ೬

ಶ್ರೀಮುಷ್ಣವನ್ನು ಕುರಿತ ಸುಳಾದಿ ಇದು.

೯೨. ಶ್ರೀಮುಷ್ಣ
ಧ್ರುವತಾಳ
ಜೀವನ್ನ ಭಿನ್ನ ಗಗನಾವನ್ನಾ ಜನಕಾ ತ್ರಿ |
ಭುವನ್ನ ಸಂಜೀವನ್ನ ಕಾವನಯ್ಯಾ |
ಪಾವನ್ನ ಕಾಯ ಕಂಬುಗ್ರೀವನ್ನ ವರವಾ |
ನೀವನ್ನ ಅಘವನ ದಾವನ್ನ ಧರುಣಿ |
ಧಾವನ್ನ ಸುರತತಿ ಕಾವನ್ನ ಸರಸಿಜಾ |
ಭಾವನ್ನ ನಾಸದುದು ಭಾವನ್ನಾ ನಮಿತರ |
ನೋವನ್ನ ಕಾವನ್ನ ಶ್ರೀ ವನ್ನಜಾ-ನಯ |
ನಾ ವಿಜಯವಿಠಲಾ ದೇವನ್ನ ಪಾದ |
ರಾಜೀವನ್ನವಾ ನಂಬಲು |
ಜೀವನ್ನಾದ್ಯಾರೊಪ್ಪುವರೂ |
ಈವನ್ನಾ ನುತಿಸೆ ಮತ್ತಾವನ್ನ ವಶವೆ ೧
ಮಟ್ಟತಾಳ
ಕನಕಾಕ್ಷನ ಮಡುಹಿ ಅನಿಮಿಷ ಗಣದವರ |
ಕ್ಷಣದೊಳು ಪಾಲಿಸಿ ಮನದಿಚ್ಛೆಯಲ್ಲಿ |
ಮನಸುಖಿರಾಯನು ಜನರಗೋಸುಗಡುಳ್ಳಿ |
ವನದ ಮಧ್ಯದಲಿ ಮನೋಹರವಾಗುತ್ತ ತನಗೆ ತಾನೆ ನಿಂದಾ |
ಘನ ಹರುಷದಲಿ ಪುತ್ತನು ಒಪ್ಪುತಿರಲು |
ಅನಿಲಾವಂದಿತ ವರಹಾ ವಿಜಯವಿಠಲರಾಜಾ |
ನನ ಮಂಡಲದಂತೆ ಮಿನುಗುತ ಮುದದಿಂದ ೨
ರೂಪಕತಾಳ
ಪದಜಾ ಸುಶರ್ಮನೂ ಸದರಾವಿಲ್ಲದೆ ಧಾನ್ಯ |
ಒದಗಿ ಬೆಳಿಸುತಿರೆ ಅದನರಿದು ಲಕುಮೀಶ |
ಮದವಾದಾ ರೋಮ ಶಾಬದದಂತೆ ಪ್ರತಿದಿನ |
ಮದದು ಪೋಗುತಲಿರಾಲದ ನೋಡಿ ಅವನಂದು |
ಕದನಾ ಮಾಳಿಪೆನೆಂದು ಹುದಗಿಕೊಂಡಿರಲಾಗಿ |
ತ್ರಿದಶಾವಂದಿತ ಶ್ವೇತವರಹಾ ವಿಜಯವಿಠಲಾ |
ಪದಜಾಗೆ ಒಲಿದು ತೋರಿದನು ಆನಂದವಾ ೩
ಝಂಪೆತಾಳ
ಪೆಸರಾದನಂದು ಮೊದಲಾಗಿ ಸೂಕರನು ಈ |
ವಸುಧಿಯೊಳಗೆ ಸ್ವಯಂ ವ್ಯಕ್ತನೆಂದೂ |
ಹಸನಾಗಿ ತೋರಿದನು ಅಬುಜಭವಾದ್ಯರಿಗೆ |
ಮಿಸುನಿಪ ಕಾಂತಿಯಲಿ ಶೋಭಿಸುತಲೀ |
ಪಸರಿಸಿದವು ಬೀದಿ ಪ್ರಾಕಾರಗೋಪುರ, ಗ |
ಳೂಸುರಲಳವೆ ಉರಗಾಧಿಪಗಾದರೂ |
ಶ್ವಸನ ದೇವರು ತನ್ನ ಮಂದಿರದಲ್ಲಿ ಪೂ |
ಜಿಸಿದ ಶ್ವೇತವರಹ ವಿಗ್ರಹವನೂ |
ನಸುನಗುತ ನಿಲ್ಲಿಸಿದ ಸುರರುಘೆ ಎಂದೆಚ್ಚ |
ಕುಸುಮ ವರುಷಾಗರಿಯೆ ಗಮಕದಲ್ಲೀ |
ಅಸುರಾರಿ ಶ್ರೀಮುಷ್ಟವರಹಾ ವಿಜಯವಿಠಲ |
ವಸತಿಯಾದನು ಬಿಡದೆ ಕಲ್ಪಕಲ್ಪಾದಲ್ಲಿ ೪
ತ್ರಿವಿಡಿತಾಳ
ಪಾವನ್ನಾ ವಿಮಾನಾ ಪವನಾ ಸಂಬಂಧವೆನ್ನಿ |
ದೇವನಂಗದಾ ಬೆವರೇ ತೀರ್ಥಾವೆನ್ನಿ |
ಪಾವನವಾದಾ ವೃಕ್ಷವೆ ಎಡಗಣ್ಣಿಂದ |
ತಾ ಉದುಭವಾವಾದಶ್ವತ್ಥವೆನ್ನಿ |
ಪಾವನಕ್ಷೇತ್ರವಿದು ಪರಮ ಪವಿತ್ರವೆನ್ನಿ |
ಜೀವನಮುಕ್ತರಿಗೆ ಸಿದ್ಧಾವೆನ್ನಿ |
ದೇವರದೇವ ವಿಜಯವಿಠಲ ವರಹಾ |
ಪೋವೊಂದೇರಿಸಿದರು ಗತಿಯಾ ಪಾಲಿಪಾನೂ ೫
ಅಟ್ಟತಾಳ
ತ್ರಯಯೋಜನ ಸುತ್ತ ಪುಣ್ಯಭೂಮಿ ಕಾಣೊ |
ಭಯಭಕುತಿಲಿಂದ ಆವನಾದರು ಬಂದು |
ತ್ರಯದಿನದಲ್ಲಿ ನುತಿಸಿ ಪಾಡಲು ಜಗ |
ತ್ರಯದೊಳಗಾವನು ಶುದ್ಧಾತ್ಮನೆನಿಸುವ |
ಗಯ ಪ್ರಯಾಗ ಕಾಶಿ ಮಾಡಿದ ಫಲಗಳು |
ಕ್ರಯಕೆ ಕೊಂಬುವದು ಕೊಂಬುವದು ಶತಸಿದ್ಧಾ |
ಲಯ ವಿವರ್ಜಿತ ಪಂಚಸೂಕರ ದೇವ ವಿ |
ಜಯವಿಠಲನ್ನ ನಿಜಯಾತ್ರಿಗೈಯಾಲು |
ಅಯೋ ನಿಜನಾಗಿ ಅರ್ಚಿಸುವಾ ಹರಿಯಾ ೬
ಆದಿತಾಳ
ನೀತಿಯಿಂದ ಮಣಿಮುಕ್ತ ಶ್ವೇತಸಂಗಮದ ಸ್ನಾನ |
ಪ್ರೀತಿಯಿಂದ ಷೋಡಶನದಿ ತೀರಥವನು ಮಾಡಿ |
ಶ್ವೇತವರಹ ದರುಶನ ವಾತನಂತರ್ಗತವೆಂದು |
ಮಾತು ಪೇಳುವಪಿತರೊಳು ಪಾತಕವೆ ಪರಿಹಾರಾ |
ನೇತುರ ವದನ ನಾಸಾ ಶೋತುರಹಸ್ತಾಸರುವ |
ಗಾತುರ ಪವಿತೂರವೂ ಯಾತರ ದುಶ್ಚಿತ್ತಾವಣಿ |
ಮಾತುರ ಸಂಶಯವಿಲ್ಲ ಗೋತುರಕ್ಕೆ ಗತಿ ಉಂಟು |
ಶ್ವೇತದ್ವೀಪದ ರಾಶಿವರಹ ವಿಜಯವಿಠಲನು ಈ |
ಕ್ಷೇತುರ ಒಮ್ಮೆ ನೋಡಲು ಕಾತುರವ ಬಿಡಿಸುವ ೭
ಜತೆ
ನಿತ್ಯ ಪುಷ್ಕರಣಿಯಾ ವಾಸಾ ಶ್ರೀನಿವಾಸ |
ಭೃತ್ಯವರ್ಗವ ಪಾಲಾ ವರಹಾ ವಿಜಯವಿಠಲಾ ೮

ಅನುಸಂಧಾನ ಬೋಧೆ ಗೈಯುವುದು

೩೮
ಧ್ರುವತಾಳ
ಜ್ಞಾನ ವೆಂಬೋದಿದೆ ಕೇವಲಾಧಿಕಾರಿಗಳಿಗೆ
ಮೌನದಲ್ಲಿಪ್ಪೊದು ಮುಖ್ಯವಯ್ಯಾ
ಕಾನನ ಪಟ್ಟಣ ಸಮವಾಗಿ ತಿಳಿದ
ಜ್ಞಾನಿ ಯಂತಿರಬೇಕು ನೊಳ್ಪರಿಗೇ
ಏನೇನು ಅನ್ಯರಿಂದ ಮಾತು ವೆಗ್ಗಳಿಸಲು
ಸ್ಥಾಣೋಪಾದಿಯಲ್ಲಿ ತೋರಬೇಕು
ಕಾಣಿಸಿ ಕೊಳದಲೆ ಇರಬೇಕು ಕಂಡರು
ನಾನಲ್ಲವೆಂದು ಜಗದೀಶ ಹರಿಯ
ಧ್ಯಾನ ಮಾಡಲು ಬೇಕು ಅಡಿಗಡಿಗೆ ಮರೆಯದಲೆ
ಪ್ರಾಣೇಂದ್ರಿಗಳೆಲ್ಲ ನಿತ್ಯದಲಿ ಏನೇನು ಮಾಡುವ
ವ್ಯಾಪಾರ ಧರ್ಮಂಗಳು
ವಾಣಿಯರಸ ಮಿಕ್ಕ ಸುರರಾದ್ಯರು
ಕಾಣುವುದು ಪಿಡಿದು ಬಗೆ ಬಗೆ ವೃತ್ತಿಗಳು
ಶ್ರೀನಾಥ ತಾರತಮ್ಯವನ್ನೆ ಇತ್ತು
ತಾನಾಗಿ ದಯದಿಂದ ನಡಸುವಾನಂದದಲ್ಲಿ
ಮಾಣದೆ ಒಂದೊಂದು ಕರ್ಮಕಟ್ಟಿ
ಅನುಜ್ಞದೊಳಗಿಟ್ಟು ಲೇಶವಾದರಿವಗೆ
ಮೇಣದ ಬೊಂಬೆ ಮಾಡುವ ಸ್ವಾತಂತ್ರ
ಅನಂತ ಕಲ್ಪಕ್ಕೆ ಇಲ್ಲದಂತೆ ವಂಚಿಸಿ
ತಾನೊಳಗಿದ್ದು ಪ್ರವರ್ತಕ ಮಾಳ್ಪನೊ
ಹಾನಿ ವೃದ್ಧಿಗಳಿಗೆ ಇವರನ್ನೆ ಗುರಿ ಮಾಡಿ
ಕಾಣಿಸಿ ಕೊಳದಲೆ ತಿರುಗುತಿಪ್ಪಾ
ತ್ರಾಣನಾದರೂ ಹರಿ ಜೀವರ ಚೇಷ್ಟೆಯಂತೆ
ನಾನಾ ವಿಧದಲ್ಲಿ ಅನುಸಾರಿಯಾಗಿ
ತಾನೆ ನಡಿಸಿ ನಡಕೊಂಬಕಾಲ ಮೀರದೆ
ಏನೆಂಬೆನಯ್ಯಾ ಹರಿಯ ವಿಚಿತ್ರಕ್ಕೆ
ಏನಿನಿತು ಇನ್ನು ತಿಳಿದು ತಿಳಿಸಿ ಕೊಟ್ಟದದರಿಂದ
ನಾನೆಂಬ ಸೊಲ್ಲು ಹರಿ ಇತ್ತದೆಂದು
ಜ್ಞಾನಿ ಯಾದವಗಿಂತು ಇದ್ದರೆ ಅವನಿಗೆ
ಹೀನವೆಂಬೊದೆಲ್ಲ ಎಲ್ಲಿದೊ ಗುಣಿಸಿದರು
ನೀನು ನಾನೆಂಬೊದಲ್ಲಿ ಈ ವಿಧ ಮುಕ್ತಿ ಸಿದ್ಧವೆಂದು
ಶ್ರೀನಿವಾಸನ ಸ್ತೋತ್ರ ಗೈಯುತಲಿ
ಆನಂದಾದಿಂದಲಿ ಸರ್ವಕಾಲದಲ್ಲಿ ಮ
ದ್ದಾನೆಯಂದದಿ ನಲಿದು ತಿರುಗಿ ತಿರುಗಿ
ಮಾನವರೊಳು ಮೆಲ್ಲ ಮೆಲ್ಲನೆ ಜುಣಿಗಾಡುತ
ಕೇಣಿ ಸಂತೋಷವನ್ನು ಬೇಡಿಕೊಳ್ಳದೆ
ಕಾಣಿ ಮೊದಲಾದ ಲಾಭವ ಬಯಸದೆ
ಏನು ದೊರೆತದ್ದು ಭುಂಜಿಸುತ್ತ
ರಾಣಿ ಮಿಕ್ಕಾದವರು ಹರಿಯ ಸೇವಕರೆಂದು
ಮಾನಸ ಕಾಯಾ ವಾಚದಲಿ ನುಡಿದದ್ದು
ಗಾನ ನಟನೆ ನಗೆ ವಕ್ರಗತಿಯ ಸೊಬಗು
ಗೇಣೊದರದ ಚಿಂತೆ ಹಚ್ಚಿಕೊಳ್ಳದೆ
ಜ್ಞಾನ ಪರಿಪೂರ್ಣ ವಿಜಯವಿಠ್ಠಲನಂಘ್ರಿ
ರೇಣು ಕೊಂಡಾಡುವ ಭಾಗವತನಾಗೋ ೧
ಮಟ್ಟತಾಳ
ಭೂತಪ್ರಾಣಿಗಳೆಲ್ಲ ಹರಿಯ ಪ್ರತಿಮೆಯೆಂದು
ಮಾತು ಮಾತಿಗೆ ತಾನು ಮರೆಯದೆ ಸ್ಮರಿಸುತ್ತ
ಈ ತೆರದಲ್ಲಿ ಸಾಂಖ್ಯಶಾಸ್ತ್ರ ನಿಶ್ಚೈಸಿ
ಸೀತೋಷ್ಣ ಸಮವೆಂದು ಸಂತತ ತಿಳಿದು ಪ್ರ
ಖ್ಯಾತಿಯಾಗದೆ ಜಗಕೆ ಪೊಳಿಯದೆ ಗುಪ್ತದಲ್ಲಿ
ಗಾತುರ ಮಲಿನನಾಗಿ ಸಂಚರಿಸುತಲಿದ್ದು
ಶ್ರೀ ತರುಣಿ ಸರ್ವ ಜೀವರಾಶಿಗಳು ಅ
ಜಾತನಾದ ಹರಿಯ ಅಧೀನವೆಂದು
ಆತುರದಲಿ ಅತಿಶಯವನೆ ತಿಳಿದು
ಆತುದುದೊಳಗನುಭವಕೆ ತರಲು ಬೇಕು
ಶೀತಾಂಶು ವದನ ವಿಜಯ ವಿಠ್ಠಲರೇಯನ
ದೂತರ ಸಂಗಡ ಲೋಲಾಡಲಿಬೇಕು ೨
ತ್ರಿವಿಡಿತಾಳ
ನಿಂತಲ್ಲಿ ಕುಳಿತಲ್ಲಿ ನೆರೆ ಮಾತನಾಡುವಲ್ಲಿ
ಬಂದು ಪೋಗುವಲ್ಲಿ ತಿರುಗುವಲ್ಲಿ
ನಿಂದ್ಯ ಬೀಳುವಲ್ಲಿ ನಿಶ್ಚಿಂತನಾದಲ್ಲಿ
ವಂದನೆ ಗೈವಲ್ಲಿ ವಾಕ್ಯದಲ್ಲಿ
ಮಂದಿ ನೆರೆದಲ್ಲಿ ಮುದದಲ್ಲಿ ಇದ್ದಲ್ಲಿ
ಮಂದಿರದಲ್ಲಿ ಕೆಲಸ ಮಾಡುವಲ್ಲಿ
ತಂದು ಕೊಡುವರಲ್ಲಿ ತೆಗೆದು ಕೊಂಬುವರಲ್ಲಿ
ಬಂಧನವಾದಲ್ಲಿ ಭಾಗ್ಯದಲ್ಲಿ
ಗಂಧ ಪೂಸುವನಲ್ಲಿ ಹಚ್ಚಿಸಿಕೊಂಬಲ್ಲಿ
ಅಂದವೇರಿ ನಗುತ ಬರುವಲ್ಲಿ
ಮಂದಹಾಸದಲ್ಲಿ ಮೇಳವಾಡುವಲ್ಲಿ
ದುಂದುಭಿವಾದ್ಯಗಳು ಕೇಳುವಲ್ಲಿ
ಕಣ್ದೆರೆದು ನೋಡುವಲ್ಲಿ ಕವಳಮೆಲುವಲ್ಲಿ
ಗಂಧಾ ಕೊಂಬುದರಲ್ಲಿ ತರ್ಕೈಪರಲ್ಲಿ
ಮುಂದೆ ಪಿಡಿವಲ್ಲಿ ಗುಹ್ಯಕರ್ಮದಲ್ಲಿ
ಒಂದೊಂದು ಬಗೆಯ ವ್ಯಾಪಾರದಲ್ಲಿ
ಪೊಂದಿಕೊಂಡಿಪ್ಪರಲ್ಲಿ ದೂರ ಬಿಟ್ಟವರಲ್ಲಿ
ಹಿಂದೆ ಅಟ್ಟುವರಲ್ಲಿ ಹಿತದವರಲ್ಲಿ
ಸಂದೇಹ ವಿಡಿಯದೆ ವಿಜಯವಿಠಲಮೂರ್ತಿಯ
ಎಂದೆಂದು ನೆನೆಸುವದು ಮನದೊಳು ತಂದಿವನ ೩
ಅಟ್ಟತಾಳ
ಪಶು ವಾಜಿ ಗಜ ಮತ್ತೆ ಶಿಶು ಮಡದಿ ಮಗ
ಕುಶಲ ಮನುಜ ಮಿತ್ರ ಸೊಸೆ ಬಂಧು ಬಳಗ ರಾ
ಜಿಸುವ ನಾನಾಪರಿ ವಶವಾಗಿದ್ದ ಮಾನಿಸರು ಮಿಕ್ಕ ಜೀವ
ಪ್ರಸರಗಳಿಗೆ ನಿತ್ಯ ರಸ ರಸಾಯನ ಉ
ಣಿಸುತ ಉತ್ತಮವಾದ ವಸನಭೂಷಣಾದಿ ದಿವ್ಯ
ಕುಸುಮ ತರುವಾಯ ಎಸೆವ ಧಾನ್ಯಗಳು
ಹಸನಾದ ತೃಣ ಸರ್ವ ವಸುಧೆಯೊಳಗೆ ಇದ್ದ
ದಶ ದಿಕ್ಕಿನೊಳಗುಳ್ಳ ಪೆಸರುಳ್ಳ ದ್ರವ್ಯವ
ನಸು ನಗುತ ಸಿರಿ ಬಿಸಿಜನಾಭಗೆ ಸಮ
ರ್ಪಿಸಿ ಜೀವಗಣಕೆಲ್ಲ ಬೆಸನೆ ಕೊಡುತ ಪಾಲಿಸಬೇಕು ನಿರುತದಿ
ಬಸಿರೊಳಗೆ ಲೋಕವಿಟ್ಟ ವಿಜಯ ವಿಠ್ಠಲ
ಅಸಮ ದೈವವೆ ನಡೆಸುವ ಭಾರವ ತಿಳಿ ೪
ಆದಿತಾಳ
ಭಜನಿಯ ಮಾಡು ಬಿಡದೆ ಬಂದೆ ಭಕುತಿಯಲಿ
ಗಜ ತುರಗ ಮೊದಲಾದ ನಾನಾ ಠಾವಿನಲಿ
ಅಜದೇವಾರಭ್ಯವಾಗಿ ಮುಕ್ತಾಮುಕ್ತರಲ್ಲಿ
ನಿಜವಾಗಿ ಮಾಡುವ ಹರಿಯ ವ್ಯಾಪಾರವನ್ನು
ಋಜುವಾಗಿ ತಿಳಿದು ಸಂತತ ಹಿಗ್ಗು ದುರಿತದ
ವ್ರಜವನೊದೆದು ಬಲು ಸುಖ ವನಧಿಯೊಳಿರುವ
ತ್ರಿಜಗ ಮಧ್ಯದಲಿ ಯಾವಜ್ಜನ್ಮತನಕ ವಿ
ರಜನಾಗು ಸರ್ವದ ಆವದಾದರು ಗ್ರಹಿಸಿ
ಸುಜನ ವಂದಿತ ನಮ್ಮ ವಿಜಯ ವಿಠಲರೇಯನ
ಭುಜಬಲವನ್ನು ಪೊಗಳು ಪರಿಹಾರ ಭವಂಗಳು ೫
ಜತೆ
ನೀಚಾಧಿಷ್ಟಾನದಲಿ ಹರಿಯ ಪೂಜಿಸದಿರು
ಯೋಚಿಸು ವಿಜಯ ವಿಠ್ಠಲನಧಿಕಾರಿಯಲ್ಲಿ ೬

ಸುಖ ಬಂದಾಗ ಹಿಗ್ಗದೆ ದುಃಖ

೪೧
ಧ್ರುವತಾಳ
ಜ್ಞಾನಿಯೆ ನಾನಲ್ಲ ದಾನಿಯೆ ನಾನಲ್ಲ
ಸ್ನಾನ ಸಂಧ್ಯಾನದ ಮೌನಿಯೆ ನಾನಲ್ಲ
ನಾನಾ ಉತ್ತಮರ ಸ್ಥಾನದಲಿ ಪೋಗಿ
ನೀನಾಡಿದ ಕಥೆಯನರಿದವನಲ್ಲಾ
ಹೀನ ಯೋನಿಗಳೊಳು ನಾನು ಪ್ರಾಕೃತವಿಡಿದು
ಹಾನಿವೃದ್ಧಿಯ ನಡುವೆ ಬೇನೆಯವನಾಗಿ
ಏನೇನು ಸತ್ಕರ್ಮದಾಚಾರವನ್ನು ಬಿಟ್ಟ
ದೀನನು ನಾನಯ್ಯ ದೀನ ಬಂಧು
ಅನಂತ ಪ್ರದಿಪವರ್ನ ವಿಜಯ ವಿಠ
ಲಾನು ಮಾಡಿದ ಪುಣ್ಯ ಕಾಣೆನೊ ಎಳ್ಳಿನಿತೂ ೧
ಮಟ್ಟತಾಳ
ಪಾತಕದವ ನಾನು ಯಾತನೆಯವ ನಾನು
ಮಾತುಮಾತಿಗೆ ಧರ್ಮವ್ರತ ಮರೆದವನೊ ನಾನು
ಯಾತಕ್ಕೆ ಬಾರದ ಜಾತಿಹೀನನು ನಾನು
ಈ ತೆರದಲಿದ್ದವಗೆ ವಿಜಯವಿಠ್ಠಲ ಸ್ವಾಮಿ
ಪ್ರೀತಿಬಡುವಂಥಾ ನೀತಿಗಳೇ£ಯ್ಯ ೨
ತ್ರಿವಿಡಿ ತಾಳ
ಇಂಥ ಮಂದಮತಿಯ ಕರುಣಾಳುಗಳು ನೋಡಿ
ಸಂತರಿಸೀ ಬಲು ಸಂತೋಷವಾಗುವುದೇನೊ
ಚಿಂತಾಯಕ ನಿನ್ನ ನಂಬಿ ಬಿಡದೆ ಪಾದ
ಕ್ರಾಂತನಾದ ಶುದ್ಧ ಭಕ್ತರನ
ಎಂಥವರು ಕಂಡು ಸ್ನೇಹಿತರಾಗುವರು
ಎಂತು ಪೇಳಲಿ ನಿನ್ನ ಮಹಿಮೆಗಳ
ಅಂತಗಾಣೆನೊ ಎಲ್ಲಿ ವಿಜಯವಿಠ್ಠಲನೆ ನೀ
ಶಾಂತ ವೈಕುಂಠನೆ ವೈಷಮ್ಯವಿಲ್ಲದ ದೈವಾ ೩
ಅಟ್ಟತಾಳ
ದರಿದ್ರ ಕುರೂಪಿಯು ಅದುರುಷ್ಟ ವಶದಿಂದ
ಧಾರುಣಿಪತಿ ಕೈವಿಡಿದು ಮನ್ನಿಸಲು
ಧಾರುಣಿಯೊಳಗಿದ್ದ ನಾನಾ ಬಗೆಯವರು
ಊರು ಕೇರಿಯವರು ಮನ್ನಿಪರು
ಭೂರಮಣ ನಮ್ಮ ವಿಜಯವಿಠ್ಠಲ ನಿನ್ನ
ಸೇರಿದವರ ಭಾಗ್ಯವಾರು ಬಣ್ಣಿಪರೋ ೪
ಆದಿತಾಳ
ಸೋತ್ತುಮ ಮಿಕ್ಕಾದವರು ತುತಿಸಿ ವಂದನೆ ಗೈಯಲು
ನಿತ್ಯತೃಪ್ತಿ ನಿನಗೆನಿಸುತ್ತ ಎನ್ನವೆಣಿಸದಿರೋ
ಎತ್ತಿ ಕರ ಮುಗಿವೆ ಉತ್ತರೋತ್ತರಮಾಡು
ರತ್ನಗರ್ಭದೊಡಿಯ ವಿಜಯವಿಠ್ಠಲ ವಿಧಾತೃವಿನುತಾ೫
ಜತೆ
ಎನಗಲ್ಲಾ ಎನಗಲ್ಲಾ ಆರುಮಾಡಿದ ಮಾನಾ
ನಿನಗೆಂದು ಒಡಂಬಡುವೆ ಈಶ ವಿಜಯವಿಠ್ಠಲಾ ೬

ರು ಉಡುಪಿಯ ಶ್ರೀ ಕೃಷ್ಣನನ್ನು

೧೩೫
ಧ್ರುವತಾಳ
ತಡಿಯಾ ಕೊಡುವುದಿಂದು ಒಡೆಯಾ ಕರುಣದಲ್ಲಿ
ತಡವ ಮಾಡಿದರೆ ಬಲು ಅಪಕೀರ್ತಿಯು
ತಡಿಯಾದೆ ಬರುವುದು ಬಿಡದೆ ನಿನಗೆ ಇಂದು
ಬಡವರಾಧಾರಿ ಎಂಬೊ ನಿನ್ನ ಬಿರಿದು
ಪೊಡವಿಯೊಳು ತುಂಬಿದೆ ನಾನೊಬ್ಬ ಪೇಳಲಿಲ್ಲ
ಪೊಡ ಮಾಡುವೆನು ನಿನ್ನಯ ಚರಣಕ್ಕೆ
ಕಡೆಗಣ್ಣಿನಿಂದ ನಮ್ಮನ್ನ್ಯಾಕೆ ನೊಡುವೆ ಹೀಂಗೆ
ಅಡಗಾಣಿಸಿ ನಿಲ್ಲಸುವುದು ಧರ್ಮವಲ್ಲ
ಒಡವೆ ಬೇಡ ಬಂದಿದ್ದಿಲ್ಲ ಸ್ವಾಮಿ
ಒಡಲ ಉಮ್ಮಳಿಕೆಯಲ್ಲಿ ನಿರ್ದೋಷ ನಿನ್ನ
ಅಡಿಗಳ ನೋಡಿ ದೋಷವ ಪೋಗಾಡಿ
ಅಡಿಗಡಿಗೆ ಅಧಿಕವಾಗಿ ಎಂದೆಂದಿಗೆ ಸುಖ
ಬಡುವೆನೆ ಬಲು ಬಗೆಯಿಂದ ನಾನು
ಜಡಮತಿಯಾದರು ನೀನೆವೆ ಗತಿಯೆಂದು
ನಡೆದು ಬಂದಿರೆ ಈ ಪರಿಯಾಹುದೆ
ಕಡಗೋಲು ಪಿಡಿದ ಸಿರಿ ವಿಜಯ ವಿಠ್ಠಲ ಕೃಷ್ಣ
ಪಡುವಲಗಡಲವಾಸ ಯಾದವೇಶ ರಮೇಶ ೧
ಮಟ್ಟತಾಳ
ನಾರಾಯಣ ಕೃಷ್ಣ ನರಹರಿ ಗೋವಿಂದ
ವಾರಿಜನಯನ ಗುಣವಾರಿಧಿ ವಾಮನ್ನ
ಶೌರಿಮುರಾರಿ ಶ್ರೀ ಕರ ಮೂರುತಿ ರಾಮ
ಧಾರುಣೀಧರ ದಾನ್ನವಾರಿ ವಾಸುದೇವ
ಮಾರಜನಕನೆಂದು ಘೋರ ಪಾತಕನಾಗಿ
ಸಾರಿದರೆ ಬಿಡದೆ ಹೊರುವ ಭವರಾಶಿ
ಹಾರಿ ಪೋಗುತದೆಂದು ಸಾರಿಸಾರಿಗೆ ವೇದ
ಸಾರಿ ಪೇಳುತಿವೆ ಕಾರುಣ್ಯವನಧಿ ವಿಜಯ ವಿಠ್ಠಲ ಕೃಷ್ಣ
ಹಾರೈಸಿ ನಿನ್ನ ಸಾರೆ ಬಂದವನಿಗೆ
ಶಾರೀರಕೆ ಇನಿತೆ ಈ ಶಾರೀರಕೆ ಇನಿತೆ ೨
ತ್ರಿವಿಡಿತಾಳ
ಹಸಿದು ಬಂದು ನರನು ತುತ್ತನ್ನವ ಬೇಡೆ
ಬಿಸಿಲೊಳು ಒಯ್ದು ಕುಳ್ಳಿರಿಸಿದಂತಾಯಿತು ದೇವ
ವಸುಧಿಯೊಳಗೆ ಮಿಕ್ಕ ಕ್ಷೇತ್ರಗಳಲ್ಲೆ ಅ
ರ್ಚಿಸುವರು ಅನುದಿನ ಹರಿ ಗುರುಗಳ
ದ್ವಿಷಗಳಿಲ್ಲಾದಿಲ್ಲವೆಂಬೋದೆ ತಿಳಿದು ನೀ
ಕ್ಷಿಸಿದದಕೆ ನೀನೊಲಿದು ಕೃಪೆ ಮಾಡಿದೆ
ಪೆಸರಾದೆ ರಜತ ಪೀಠಪುರಸ್ಥಾನವೊ
ಶ್ವಸನ ದೇವನೆ ಮಧ್ವಮುನಿಯಾಗಿ ನಿನ್ನ ಪೂ
ಜಿಸಿದನೆಂಬೊ ಮಹಾಖ್ಯಾತಿ ಕೇಳಿ
ಬೆಸನೆ ನಿನ್ನಂಘ್ರಿಯಾ ಹರುಷದಿಂದಲಿ ದ
ರುಶನವ ಮಾಡುವೆನೆಂದು ಬಂದಾದಿನಿತು
ಹಸನಾದ ಪ್ರಯಾಣ ಸಾಗಗೊಡದಂತೆ ಸು
ತ್ತಿಸುವುದು ನಿನಗೆ ವಿಹಿತವಲ್ಲವೊ
ವಸುದೇವಸುತ ಕೃಷ್ಣ ವಿಜಯ ವಿಠ್ಠಲನೆ ವಂ
ಚಿಸದಲೆ ಎನ್ನ ಮನೋಭೀಷ್ಟವನ್ನೀಯೊ ೩
ಅಟ್ಟತಾಳ
ಬಲು ಜನ್ಮದ ಭವರೋಗ ಕಳೆವನಿಗೆ
ಹುಲು ರೋಗ ಕಳೆವುದು ಸೋಜಿಗೆ ನಿನಗಲ್ಲ
ಎಲೊ ದೇವ ಎನ್ನಯ ಕರ್ಮವೀಪರಿಯಿರೆ
ಫಲ ಅನುಭವಿಸದೆ ಬಿಡದೆಂಬುದು ನೀನೆ
ತಿಳಿದು ಸ್ವಲ್ಪದ ಮ್ಯಾಲೆ ಪರಿಹರಿಸುವೆನೆಂದು
ಗೆಳೆಯನಾಗಿ ಸಂಗಡವಾಗಿ ಇಪ್ಪ ನಿ-
ಶ್ಚಲ ಕೋಮಲಕಾಯ ಬಳಲಿಸದೆ ಇನ್ನು ಬಂದ ರೋಗವ ಅ
ಟ್ಟುಳಿ ಮಾಡದಂತೆನ್ನ ಪ್ರತಿಪಾಲಿಸಿ ದಿನ
ಕಳೆಯದಂತೆ ನಿನ್ನ ದರುಶನಕೆ ಸಾ
ಗಲಿ ಪ್ರಯಾಣಂಗಳು ಪರಮ ವಿನೋದನೆ
ಸುಲಭ ಮೂರುತಿ ಕೃಷ್ಣ ವಿಜಯವಿಠಲ ನಿನ್ನ
ಬಲವಾದ ಮ್ಯಾಲೆ ಅನ್ಯರ ಬಲವೇನೊ ೪
ಆದಿತಾಳ
ಸ್ತೋತ್ರ ಮಾಡಬಲ್ಲೆನೆ ಚಿತ್ರ ಚಾರಿತ್ರ ಮಹಿಮನೆ
ಸೂತ್ರಧಾರಕ ಶಾಮಗಾತ್ರ ಗಂಗಾಜನಕ
ಮಿತ್ರ ನೀನಾದರಿಷ್ಟ ಮಾತ್ರವೆ ಬೇಡು ಸ
ರ್ವತ್ರರಿಗೆ ನಿನ್ನ ಕ್ಷೇತ್ರ ಮೆಟ್ಟಿಸಿ ಪ-
ವಿತ್ರರನ್ನ ಮಾಡುವುದು ಛತ್ರದಂತೆ ಒಲಿದು
ಯಾತ್ರಿ ನಾಮಕ ಕೃಷ್ಣ ವಿಜಯ ವಿಠ್ಠಲ ಕಾ
ಲತ್ರಯನೆ ನಮಿಪೆ ಸುತ್ಪುತ್ರರ ಗುರುವೆ ೫
ಜತೆ
ಇದರಿಂದ ನಿನಗೆ ನಿನ್ನಾಳಿಗೆ ಬಲುಕೀರ್ತಿ
ಒದಗಿ ಬರುತಲಿದೆ ವಿಜಯ ವಿಠ್ಠಲ ಕಾಯೊ ೬

ಕೇಶವಾದಿ ಇಪ್ಪತ್ತನಾಲ್ಕು ನಾಮಗಳ

೪೦
ಧ್ರುವತಾಳ
ತತು ಪೂರ್ವದಲ್ಲಿ ಎನಗೆ ಹಿತವಾದ ಹಿರಿಯರು |
ಪ್ರತಿಯಿಲ್ಲದ ಧನ ಸ್ಥಾಪಿಸಿರಲು |
ಕ್ಷಿತಿಯ ಶೋಧಿಸಲಿಲ್ಲ ಕಂಡ ಕಡೆ ತಿರುಗಿ |
ಮತಿ ಭ್ರಮಣನಾಗಿ ಅರಸಲಿಲ್ಲ |
ಸಥೆ ಯಿಲ್ಲಿಟ್ಟಂತೆ ಬರುತಲೆ ಗುರುತ ಕಂಡೆ |
ಮಿತಿ ಯಾವುದು ಎನ್ನ ಅತಿಶಯಕೆ |
ಚತುರ ಬಾಹು ನಾಮ ವಿಜಯ ವಿಠ್ಠಲನ್ನ|
ನುತಿಸುವ ಭಾಗ್ಯ ಸುಕೃತ ಧನವೆಂತೊ ೧
ಮಟ್ಟತಾಳ
ಚತುರ ವಿಂಶತಿ ಹಳೆ ನಾಣ್ಯಗಳಯ್ಯ |
ಪ್ರತಿ ಪ್ರತಿ ಪೆಸರುಗಳು ಒಂದು ಒಂದರ ಮ್ಯಾಲೆ |
ಪ್ರಥುವಿಗೆ ನೂತನದ ಶುದ್ಧ ಮುದ್ರೆ ಪಡಿ |
ಶ್ರುತಿಯಲ್ಲಿ ಶೋಧಿಸಲು ಆದಿಯಲ್ಲಿ ಉಂಟು |
ಚತುರ ಮೂರುತಿ ನಾಮ ವಿಜಯ ವಿಠ್ಠಲನ್ನ |
ನತಜನಾಶ್ರಯವೊ ಎನ್ನ ಪುಣ್ಯಭಾಗ್ಯವೊ ೨
ರೂಪಕ ತಾಳ
ಬಣ್ಣ ನೋಡಲು ಪೋಡಶ ಬಣ್ಣಾಧಿಕಾನೇಕ |
ಚಿನ್ನವಾದರು ಒರೆಗಲ್ಲಿಲಿ ನೋಡಲಿ ಸಲ್ಲ |
ಚಿನ್ನಿವಾರರು ಇದಕೆ ಬೆಲೆಗಟ್ಟಲಾರರು |
ಕಣ್ಣಿಂದ ಈಕ್ಷಿಸಿ ಪರಿಪರಿ ವರ್ನಗಳು |
ತನ್ನಿಂದ ತಾನೆ ಉದ್ಭವವಾದುದಲ್ಲದೆ |
ಅನ್ಯರಿಂದಲಿ ನಾಣ್ಯ ಕಲ್ಪಿತವಾದುದಲ್ಲ |
ಚನ್ನ ಸುವರ್ನ ವರ್ನ ವಿಜಯ ವಿಠ್ಠಲ |
ಚಿನ್ನಿ ವಾರನೆ ಇದರ ಮೂಲಾಗ್ರವನು ಬಲ್ಲ ೨
ಝಂಪಿತಾಳ
ಕಾಸುವುದಲ್ಲ ಕಂಡವರು ಅಲ್ಪರಿದರೆ |
ಕಾಶಿನಷ್ಟು ಕಡಿದು ಕೊಡುವುದಲ್ಲ |
ಕಾಶಿ ರಾಮೇಶ್ವರ ದೇಶವನು ತಿರುಗಿದರೆ |
ಬ್ಯಾಸತ್ತು ಹೊರಲಾರೆನೆಂಬೊದಲ್ಲ |
ಏಸು ದಿನ ಇದ್ದರು ಭಾರ ಕಿಂಚಿತು ಇಲ್ಲ |
ಬೀಸ ಬಿಸುಟರೆ ಕೆಳಗೆ ಬೀಳುವದಲ್ಲ |
ವಿಶೋಧನನಾಮ ವಿಜಯ ವಿಠ್ಠಲನ್ನ |
ಪೋಷಿಸುವಿ ನೀ ನಾಣ್ಯ ಸೇರಿದವರ ೪
ತ್ರಿವಿಡಿ ತಾಳ
ಒಂದು ನಾಣ್ಯದಿಂದ ಇಂದ್ರಾದಿ ನಿರ್ಜರರ |
ಮಂದಿರ ಸಹಿತ ಬೆಲೆಗೊಳಲಿ ಬಹುದು |
ಹಿಂದೆ ಮುಂದೆನ್ನ ನೂರೊಂದು ಕುಲದವರಿಗೆ |
ಬಂದ ದೋಷ ದಾರಿದ್ರ ಕಳೆಯಬಹುದು |
ಮಂದಮತಿ ಯೆಂಬೊ ಬಡತನ ಬಿ (ಬ) ಡದಿರೆ |
ಒಂದು ಕ್ಷಣದಲ್ಲಿ ಬಿಡಿಸಬಹುದು |
ಸಂದೇಹವಿದಕಿಲ್ಲ ಸಮ ವಿಜಯವಿಠ್ಟಲ |
ಬಂಧು ಬಾಂಧವನಾಗುವ ಇಂದರ ದೆಶೆಯಿಂದ ೫
ಅಟ್ಟತಾಳ
ನೃಪತಿ ಚೋರ ಪಾವಕನ ಭಯವೆಯಿಲ್ಲ |
ಸ್ವಪನದಲ್ಲ್ಯಾದರು ತೊಲಗಿ ಪೋಗುವುದಲ್ಲ |
ತಪಶಿಗೆಯಾದರು ವೇಗ ಸಿಗುವುದಿಲ್ಲ |
ಜಪಿಸಿದ ಹಾಗೆಲ್ಲ ಸಾಧ್ಯವೆ ಪುಸಿಯಲ್ಲ |
ತಪಿಸುವ ದುರಿತಾನಲಕೆ ಶಾಂತನಾಗಿ |
ಉಪಕಾರವೆಂಬೋ ಸೋನೆ ಕರೆವುದು|
ಸ್ವಪನ ನಾಮ ವಿಜಯ ವಿಠಲನ ಚರಣ ಸೇ |
ವಿಪ ಮನುಜರಿಗೆ ಸವಿೂಪದಲ್ಲಿಪ್ಪುದು ೬
ಆದಿತಾಳ
ಸಂಚಿತಾರ್ಥ ಪುಣ್ಯದಿಂದ ವಂಚನೆಯಿಲ್ಲದೆ ಹಾಗೆ |
ಸಂಚಿತಾದ ಮಂಗಳಧನ ಕೊಂಬೆಯಾಗದಂತೆ ಮನಕೆ |
ಹಂಚಿಕೆ ಬೇಡುವುದಿಲ್ಲ ಪಂಚರಾತ್ರಿಯನಸಲ್ಲ |
ಅಂಚೆ ಅಂಚೆ ಜನುಮಕ್ಕೆ ಪ್ರಾಪಂಚ ಬಿಡದಲ್ಲಿಪ್ಪುದು |
ಮುಂಚೆ ಇದ್ದಲ್ಲಿದ್ದರ ಮಹಿಮೆ ಕಿಂಚಿತಾದರು ತಿಳಿಯದಿದ್ದೆ |
ಹಿಂಚಿನ ಸುಕೃತದಿಂದ ಸಂಚಾರ ಫಲಿಸಿತು |
ಪಂಚ ಮೊಗ [ದವ] ನ ವಿಷ್ಣು ವಿಜಯ ವಿಠ್ಠಲನ್ನ |
ಪಂಚ್ಯದಲ್ಲಿ ಸೇರುವಂಥ ಚಂಚಲ ಘನವಾಯಿತು ೭
ಜತೆ
ಕುಕ್ಷಿಯೊಳು ಸ್ಥಾಪಿಸಿ ಈ ಕ್ಷಿತಿಯೊಳು ಬೀರಿ |
ಅಕ್ಷಯಾ ವಿಜಯ ವಿಠಲ [ನು]ಬಡ್ಡಿಗೆ ಈವ ೮

ರು ಬಾಲ್ಯದಿಂದ

೪೧
ಧ್ರುವತಾಳ
ತತುವ ಮೂರುತಿ ಪರತತುವ ಮೂರುತಿ
ಸತುವ ಮೂರುತಿ ಶುದ್ಧ ಸತುವ ಮೂರುತಿ
ತತುವೇಶರೊಳಗೆ ಅಗತವಾದ ಮೂರುತಿ
ತತುರೂಪಾದಾ ತತು ತತು ಮೂರುತಿ
ಅತಳಧೋಭುವನ ವ್ಯಾಪುತವಾದ ಮೂರುತಿ
ಕ್ಷಿತಿ ಸ್ವರ್ಗ ಸತ್ಯ ಪೂರಿತವಾದ ಮೂರುತಿ
ದ್ಯುತಿ ಐರಾವತಿಗೆ ಆಶ್ರಿತವಾದ ಮೂರುತಿ
ಸಿತಾಸಿತ ಪೀತ ರಕುತ ವರ್ನ ಮೂರುತಿ
ಶ್ರುತಿ ಸ್ರ‍ಮತಿಯಲ್ಲಿ ಭರಿತವಾದ ಮೂರುತಿ
ಚತುರಾಶತಿ ಚತುರವಿಂಶತಿ ನಾಮ ಮೂರುತಿ
ಅತುಳ ಅಜಾದಿಯು ಶತಸಹ ಸ್ರ ಮೂರುತಿ ಅ
ಮಿತ ಮೂರುತಿ ಅಪರಿಮಿತವಾದ ಮೂರುತಿ
ಶತಿ (ತತಿ) ಆವರ್ಣ ಉತ್ಪತ್ತಿಗೈಸಿದ ಮೂರುತಿ
ದಿತಿಜ ಅದಿತಿಜ ಸಂತತಿಯಾಳುವ ಮೂರುತಿ
ಪ್ರತಿಯಿಲ್ಲೇಕಮೇವ ಅದ್ವಿತೀಯ ಶ್ರೀಮೂರುತಿ
ಪ್ರತಿ ಬೊಮ್ಮಾಂಡದಲ್ಲಿ ಪ್ರಕೃತಿಯೊಡನೆ ಮೂರುತಿ
ಚಿತು ಸದಾಶಾಶ್ವತ ವಿಜಯ ವಿಠ್ಠಲರೇಯ ಅಪ್ರಾ
ಕೃತಕಾಯ ಕಾಲ ಅತೀತನಾದ
ಉನ್ನತ ಮಹಿಮ ಗತಿ ಪ್ರದಾ ೧
ಮಟ್ಟತಾಳ
ಪರಮೇಷ್ಠಿ ಮಾನದಿಂದ ನೂರು ವರುಷ ಪರ್ಯಾಂ
ತರ ಲಯಕಾಲ ಎರಡೊಂದು ರೂಪದಲ್ಲಿ
ಸಿರಿ ಸೇವಿಯೆ ಮಾಡುತಿರಲು ನೀನಂದು
ಧರಿಸಿದ ಅವತಾರ ಪರಮ ರೂಪಗಳಿಂದ
ಮಿರುಗುವ ತತ್ವ ನಿಯಾಮಕವಾದ ರೂಪಗಳಿಂದ |
ಪರಮ ಪುರುಷ ನೀನೆ ಏಕೀಭೂತನಾಗಿ |
ಚರಿಸಿದ ಅನಂತ ಜೀವರಾಶಿಗಳನ್ನು |
ದರದಲ್ಲಿ ಪೊಂದಿಟ್ಟು ಮೆರೆವ ದೇವರ ದೈವ |
ವಿಜಯ ವಿಠ್ಠಲರೇಯ |
ಶರಧಿ ಯೊಳಿಟ್ಟಂತೆ ಅಚ್ಛೇದ್ಯಾಭೇದ್ಯಾ ೨
ತ್ರಿವಿಡಿ ತಾಳ
ದೀಪದಿಂದಲಿ ದೀಪಾ ದೀಪಾಂತರ ತೆರದಿ ಮೂಲ |
ರೂಪದ ದೆಶೆಯಿಂದ ಮತ್ತೆ ಅವತಾರ |
ರೂಪಗಳು ಪ್ರಾದುರ್ಭಾವಿದಾತ್ಮ ಸೃಷ್ಟಿ |
ಈ ಪರಿತಿಳಿ ಈಶಗೆ ವಿಕಾರವಿಲ್ಲ |
ರೂಪವಂತೆ ಲಕುಮಿ ತಾನೆ ನಗುತಾನೇಕ |
ರೂಪಾ ಧರಿಪುದು ಪರಾಧೀನ ವಿಶೇಷ |
ವ್ಯಾಪುತ ಸೃಷ್ಟಿ ಕೇವಲ ಹರಿಯಾಧೀನ |
ತಾ ಪೇಳಿಸುವಳು ಲಕುಮಿ ಕಾಲತ್ರಯದಲ್ಲಿ |
ಶಾಪಾನುಗ್ರಹ ಶಕ್ತ ವಿಜಯವಿಠ್ಠಲರೇಯ |
ಅಪಾರ ಸುಖಸಾಂದ್ರ ಅನಂತ ಲೀಲಾ ೩
ಅಟ್ಟತಾಳ
ಮುಂದೆ ನಿತ್ಯ ವಸ್ತು ಬಾಹ್ಯವಸ್ತಕೆ ಸಂ |
ಬಂಧವಾದರೆ ಇದು ಮಿಶ್ರ ಸೃಷ್ಟಿಯು ಎಂ |
ತೆಂದು ಪೇಳುತಿದೆ ಕೇವಲಾ ಸೃಷ್ಟಿಯು |
ಹಿಂದೆಯಾಗುವ ವಸ್ತುಗಳಿಗೆ ಉತ್ಪತ್ತಿ |
ಎಂದೆಂದಿಗೆ ಇದು ಸಿದ್ಧವೆನ್ನಿರೊ ಮೂ |
ರೊಂದು ಬಗೆ ಸೃಷ್ಟಿ (ನೆ) ರದು ಪರಮಾತ್ಮ |
ಒಂದಾದಿಂದಲಿ ವಾಸುದೇವಾದಿರೂಪಗ |
ಳಿಂದ ಧರಿಸಿದನು ಅಪತರೂಪ |
ಇಂದಿರೆ ಮಾಯಾ ಜಯಾದಿ ನಾಮದಲ್ಲಿ |
ಅಂದವಾದ ರೂಪ ಅನಂತವಾದಳು |
ಅಂದು ಮುಕುತಾಜಾದಿ ಜೀವರಾಶಿಗ |
ಳಿಂದ ಲಕುಮಿಯಿಂದ ಕ್ರೀಡನೆ ಆಡ ಬೇ |
ಕೆಂದು ಸ್ವಾಭಾವನೆ ಇಚ್ಚೆ ಮಾಡಿದ ಗೋ |
ವಿಂದನು ಅಪೂರ್ಣ ಅತೃಪ್ತನಲ್ಲದದೆ |
ಪೊಂದಿದವರಿಗೆ ಅಧಿಕ ಸುಖಾ |
ತಂದು ಕೊಡುವನು ತನಗೆ ಬೇಕಾದದ್ದು |
ಒಂದಾದರು ಇಲ್ಲ ಬೇಸರಿಕೆಯವನಲ್ಲಾ |
ಒಂದೇ ಸಮದೈವ ವಿಜಯ ವಿಠ್ಠಲನಿಗೆ |
ವಂದಿಸಲು ಭವ ಬಂಧನ ಪರಿಹಾರಾ ೪
ಆದಿತಾಳ
ತತೋಬೌಧ್ಧ್ಯಾಯಸಿ ಯೆಂಬ ಶ್ರುತಿವಚನ ಇದೆ ಅರ್ಥ |
ಪ್ರತಿದೈವ ತನ್ನ ನಿಜ ಸತಿಯ ಸಂಗಡ ನಾನಾ |
ರತವನ್ನು ಸುಖಿಸಿ ಸಂತತ ಗೋಮತಿಗೆ ಬಲು |
ನ್ನುತ ಪ್ರೇಮವ ನೀವೆ ಅತಿಶಯವಾಗಿ ಅಬ್ಜ |
ಸುತಸರ್ವ ಜನರ ಮುಕುತಿಯಲ್ಲಿ ಅವರವರ |
ಹಿತದಂತೆ ಪ್ರೇರಿಸಿ ಭಕುತಿ ಪೆಚ್ಚುವಂತೆ ಮಾಡಿ |
ರಥ ಹಯ ಗಜಾಂದಣಕೆ ರಥಿಕಾ ರಾವುತನು ಮಾ |
ವುತನಾಗಿ ಆಡುವನು ಚತುರತನದಿ ಮತ್ತೆ |
ಮಿಥುನ ಭಾವಾದಲ್ಲಿ ಅಚ್ಯುತ ತನ್ನ ವರ ಕೂಡ |
ಮಿತಿಯಲ್ಲದೆ ಮಿಸಿ ನಗುತ ಕ್ರೀಡಿಯಾಡುವನು |
ಕಥೆ ರಾಮಾಯಣ ಭಾರತ ಮುಂತಾದ ರಹಸ್ಯ |
ಚತುರಮೊಗಗೆ ಶಾಶ್ವತವಾಗಿ ತಿಳಿಸು ಮು |
ಕುತಿಲಿ ಸುಖಿಸುತಿಪ್ಪ ಮತಿವಂತರ ಮನಕೆ ದೂರಾ |
ರತಿ ಪತಿ ಪಿತ ನಮ್ಮ ವಿಜಯ ವಿಠ್ಠಲಾ ಉ |
ತ್ಪತ್ತಿ ಸ್ಥಿತಿಲಯ ಕರ್ತ ಸುತ್ತಿಸೆ ಸವಿೂಪ ನಿಲುವ ೫
ಜತೆ
ಮುಕ್ತೀಲಿ ಈ ಪರಿ ಕ್ರೀಡೆಯಾಡುವ ಸರ್ವ |
ಶಕ್ತಿಗುಣಪೂರ್ಣ ವಿಜಯ ವಿಠ್ಠಲ ಕಾಣೊ ೬

ತಿರುಪತಿಯ ಶ್ರೀನಿವಾಸನ ಭಕ್ತವಾತ್ಸಲ್ಯವನ್ನು

೪೭. ತಿರುಪತಿ
ರಾಗ:ಭೈರವಿ
ಧ್ರುವತಾಳ
ತನುವಾರೋಪಿಸಿದೆನೊ ಮನವಾರೋಪಿಸಿದೆನೊ |
ದಿನ ಪ್ರತಿದಿನ ಬಿಡದೆ ಮಾಳ್ಪ ಲಾಭವಲಾಭ |
ಗುಣವಾರೋಪಿಸಿದೆನೊ ಗಣನೆಯಿಲ್ಲದೆ ಎನ್ನ |
ಜನುಮ ಜನುಮಾದಲ್ಲಿ ನೆನೆದು ಮಾಡಿದವೆಲ್ಲ |
ನಿನಗೆ ತಪ್ಪದು ಕಾಣೊ ವನಜನಾಭನೆ ನಮಗೆ |
ಜನನಿ ಜನಕ ನೀನೆಂದೆನಿಸಿದ ತರುವಾಯ |
ಅನುಮಾನಯೆನಗೆ ಎಳ್ಳನಿತು ಪುಟ್ಟದು ಕಾಣೊ |
ಗುಣ ಅವಗುಣನೆಂದು ಎಣಿಸಿ ದೂರಿಟ್ಟಾರೊಳಿತೆ |
ಘನವೆ ನಿನ್ನದು ಯಮನು ಮುನಿಯಾಮಿಕ್ಕಾ ಮಾತಿಗೆ |
ಮಣಿವೆನೆ ವಜ್ರದ ಖಣಿಸಿಕ್ಕತೆರನಾಗೆ |
ಕನಕಾದ್ರಿಸದನ ವೆಂಕಟ ವಿಜಯವಿಠಲ |
ನಿನಗಲ್ಲದನ್ಯತ್ಯಜನಕೆ ಶರಣುಪೋಗೆ ೧
ಮಟ್ಟತಾಳ
ಬಂಟರ ಮನೋಹರ ಬಂಟರಿಗೆ ವೈ |
ಕುಂಠಪತಿ ನೀನೆ ಬಂಟನಾಗಿ ಅವರ ಕಂಟಕ ಕಳವುತ್ತ |
ಅಂಟಿಸಿದ ಮಾತು ಉಂಟು ಮಾಡಿಕೊಳುತ |
ಗಂಟು ಬಡ್ಡಿಗೆ ಸೋತ ನೆಂಟನಂತೆ ದುಡಿವ |
ಬಂಟನೊ ಅಸುರರ ಗಂಟಲಗಾಣನೊ |
ಎಂಟು ದಿಕ್ಕಿನೊಳು ವಂಟಿರಗಾರ ವೈ |
ಕುಂಠ ಶೈಲವಾಸ ವಿಜಯವಿಠಲ ಕಂಬು |
ಕಂಠ ತಿರ್ಮಲ ನಿತ್ಯಾಭಂಟರ ಬಲುಕಾವ ೨
ತ್ರಿವಿಡಿತಾಳ
ಎನ್ನಯ್ಯ ಎನ್ನಪ್ಪ ಎನ್ನ ಜೀವನದೊಡಿಯಾ |
ಎನ್ನ ಪಾಲಿಪ ಘನ್ನರನ್ನ ಸಂಪನ್ನನೆ |
ಇನ್ನು ನಿನ್ನವನೆಂದ ಮನುಜಾ ಮರೆದಿರೆ |
ಅನಂತ ಜನುಮ ಜನುಮದೊಳಗೆನ್ನ |
ನಿನ್ನಗೆ ನೀನೆ ನೆನಪನ್ನು ತಂದುಕೊಂಡಂತೆ |
ಚೆನ್ನಾಗಿ ಇಪ್ಪ ಪ್ರಸನ್ನವದನ್ನಾ |
ಚನ್ನಾಗಿ ಕರುಣಾವನ್ನಿಧಿ ತಿರ್ಮಲಾ |
ಪನ್ನಗಾ ಗಿರಿವಾಸನೆ ವಿಜಯವಿಠ |
ಲನ್ನು ಮಾನಾವಿಲ್ಲದವನ್ನು ಮನೋಹರ ೩
ಅಟ್ಟತಾಳ
ಭಕುತರುಂಡದ್ದು ನೋಡಿ ಭಕುತರುಟ್ಟದ್ದು ನೋಡಿ |
ಭಕುತರಿಟ್ಟದ್ದು ಭಕುತರಂದದ್ದು ನೋಡಿ |
ಭಕುತಾರು ಭುಂಜಿಸೆ ಭಕುತೀಲಿನೀನಾದ |
ಭೋಕುತನಾಗುವೆ ವಿರಕುತಿಗಳಿಂದಲಿ |
ಭಕುತರಿಚ್ಛಿದ ಭಕುತರುದ್ಧರನೆ |
ಭಕುತರಂದದ್ದೆ ಸತ್ಯ ಭಕುತರಾಡಿದ್ದೆ ಸತ್ಯ |
ಭಕುತರಂದದೆ ಅಂಬೆ ಭಕುತರುಂಬುದೆ ಉಂಬೆ |
ಭಕುತರಿಗಿದ್ದ ಸ್ವಾತಂತ್ರ ನಿನಗಿಲ್ಲ ಭಕುತರಿಚ್ಛೆಗಾರ |
ರಕುತಾದ್ರಿ(?) ಆಗಾರ ಅಖಿಲೇಶಾ ವೆಂಕಟ ವಿಜಯವಿಠಲ ನಿಜ |
ಭಕುತರಗಲದಿಪ್ಪ ಭಕುತರ ದೈವ ೪
ಆದಿತಾಳ
ಜನಿತವಾದೆನೊ ನಿನ್ನಿಂದ ಬಿಡದಲೆ |
ಜನುಮ ಜನುಮ ದೇಹ್ಯತೆತ್ತು ತವಕದಿಂದ |
ಮನುಜ ದೇಹಕೆ ಬಂದೆ ಮಾಧವರಾಯಾ ಕೇಳು |
ವನಚರ ಮೊದಲಾದ ತನುವೆ ಬಂದಾಗಲಿ |
ಮನದಣಿಯೆ ನಿನ್ನ ಪ್ರಸಾದವನು ಉಂಡವನಲ್ಲ |
ವನಜಾಕ್ಷ ಬಹುದಿನದ ತಪವೆ ಫಲಿಸಲು ಈ |
ಮನುಜ ಕಾಯವೆ ನೀನು ತಂದಿತ್ತ ಕಾರಣ |
ಎನಗೆ ಸ್ವಾತಂತ್ರವು ನಿನಗಿತ್ತೆ ದ್ರವ್ಯವೆಲ್ಲ |
ತಿನಲಿ ಕರ್ತಾನೆಂಬೊದೆ ನೀನರಿದದು ಕಾಣೆ |
ಅನುಮಾನಾ ಎನಗಿಲ್ಲ ವಿಜಯವಿಠಲ ತಿಮ್ಮ |
ನಿನಗಂಜುವೆ[ನು] ದಯಮಾಡಿ ಪಾಲಿಸೊ ೫
ಜತೆ
ಕಾರುಣ್ಯನಿಧಿ ನಿನಗೆ ಕಡೆ ಹುಟ್ಟಿ ಮಗ ನಾನು |
ಬೇರೆ ನೋಡದೆ ಕಾಯೊ ವಿಜಯವಿಠಲ ತಿಮ್ಮ ೬

ಈ ಸುಳಾದಿಯೂ ಕಂಚಿ ವರದರಾಜನನ್ನು

೧೭. ಕಂಚಿ
ಧ್ರುವತಾಳ
ತಮ್ಮನನ್ನ ಕೊಂದು ಆಗಮವ ಬಿಡಿಸಿತಂದು |
ಸುಮನಸರಿಗೆ ಸುಧೆ ಕ್ರಮದಿಂದಲೆರದೇ |
ಕುಮತಿ ಹೇಮಾಕ್ಷನ ಗಮಕವ ಮುರಿದೆ |
ಸು[ದ]ತಿಯ ಮೊರೆ ಕೇಳಿ ಅಮರಾರಿಯ ಸೀಳಿ |
ಅಮಮಯೋಮಕೆ ಬೆಳದು ನಮಿತನ್ನತುಳಿದು |
ಜಮದಗ್ನಿ ನಿಜಜಾತ ಸಮರದೊಳು ನಿರ್ಭೀತಾ |
ಉಮೆ ಅರಸನ್ನ ಪ್ರೀತಾ ಕಮಲಾಪ್ತಕುಲಜಾತಾ |
ಯಾಮಾದಿಯಾ ಗೆದ್ದು ಸುರದ್ರುಮವತಂದ ಗಂಭೀರ |
ರಮಣೀರ ವ್ರತವಾಕ್ರಮಿಸಿದ ಬಲುದೇವಾ |
ವಿಮಲಾ ತುಂಗಾ ತುರಂಗಾ ಗಮನ ದುರಿತಭಂಗಾ |
ಅಮಿತಮಹಿಮ ಕಂಚಿವರದ ವಿಜಯವಿಠಲ |
ಸಮರಾರು ನಿನಗನುಪಮಚಿತ್ತ ಚರಿತ್ರಾ ೧
ಮಟ್ಟತಾಳ
ಪುಣ್ಯಶ್ಲೋಕರಾಯಾ ಪುಣ್ಯಮೂರ್ತಿರಾಯಾ |
ಪುಣ್ಯವಂತರಾಯಾ ಪುಣ್ಯಕೀರ್ತನೆರಾಯಾ |
ಪುಣ್ಯಮಹಿಮರಾಯಾ ಪುಣ್ಯಸಾಧನರಾಯಾ |
ಪುಣ್ಯಪೂರುತಿರಾಯಾ ಪುಣ್ಯಕೋಟಿರಾಯಾ |
ಪುಣ್ಯರಿಗೆ ಸತ್ಪುಣ್ಯಕೊಡುವರಾಯಾ |
ಪುಣ್ಯತೀರ್ಥರಾಯ ವಿಜಯವಿಠಲರಾಯಾ |
ಪುಣ್ಯಕ್ಷೇತ್ರ ಕಂಚಿ ಪುಣ್ಯವರದರಾಯಾ ೨
ತ್ರಿವಿಡಿತಾಳ
ಅಜನು ಸಭಾಸ್ಥಾನಾ ನೆರಸಲು ವಾಲಗಕೆ |
ಭುಜಗಾಭರಣ ಇಂದ್ರ ಸುರಮುನಿ ವ್ರಜವೆಲ್ಲ |
ನಿಜವಾಗಿ ಬಂದು ವಾರಿಜ ಕರವನೆ ಮುಗಿದು |
ಅಜನ ಪೊಗಳಲು ನೀನೋಡಿ ಹರಷದಿಂದ |
ತ್ರಿಜಗದೊಳಗೆ ಉತ್ತಮ ಸಾಧನಕೆ |
ಸುಜನರೊಂದಾಗಿ ಬೆಸಸೆನಲು ವಶಿಷ್ಠಮುನಿ |
ಅಜಗರುಹಿದನು ಭೂತಳದೊಳಿಗಿದನು |
ವಿಜಯವಿಗ್ರಹ ಕಂಚಿವರದ ವಿಜಯವಿಠಲ |
ಭಜಿಸಲು ಒಲಿದಾನು ಭಕ್ತರಿಗಾವಾಗಾ ೩
ಅಟ್ಟತಾಳ
ಮುನಿನುಡಿದ ಮಾತನು ಮನ್ನಿಸಿ ಬಂದು |
ವನಜಸಂಭವನು ಸಜ್ಜನರಿಗೆ ಮನೋರಥ |
ವನು ಮಾಡುವೆನೆಂದು ನೆನೆದು ಯಾಗವ ಮಾಡೆ |
ದನುಜಾರಿ ಮೆಚ್ಚಿ ಬಂದನು ಝಗಝಗಿಪ ರ |
ತುನಮಯ ಪುಣ್ಯಕೋಟಿಯನು ಏರಿಕೊಂಡು |
ಝಣಝಣಝಣ ಡಂಢಣವೆಂಬೊ ಘಂಟೆ |
ಘಣಲೆಂದು ಕೂಗಲು ಅ[ನ]ಲಾಮಧ್ಯದಿಂದ |
ತನಗೆ ತಾನೆ ಪೊಳೆದಾ ಅನಿಮಿಷರಾಡಲು |
ಘನ ಕಂಚಿವರದ ಶ್ರೀ ವಿಜಯವಿಠಲರೇಯಾ |
ಮನಕೆ ಬಂದರೆ ಸಾಧನವಾ ಪೂರೈಸುವ ೪
ಆದಿತಾಳ
ಅಂದು ಮೊದಲಾಗಿ ಇಲ್ಲಿ ಚಂದದಿಂದ ಉದುಭವಿಸಿ |
ಬಂದ ಬಂದವರಿಗೆಲ್ಲಾ ನಂದದಿಂದ ವರವನೀವುತ್ತಾ |
ಕುಂದಾಗೊಡದೆ ಭಕ್ತರನ್ನ ಸಂದೇಹವಿಲ್ಲದೆ ಪೊರೆದು |
ಪೊಂದಲಿಟ್ಟು ಕೊಂಡು ಪಾದದ್ವಂದ್ವದಾಸೇವಿಯನೀವಾ |
ಕಂದರ್ಪನಯ್ಯಾ ಕಂಚಿವರದ ವಿಜಯವಿಠಲಾ |
ಎಂದೆಂದು ಗುಣಪೂರ್ಣ ಸಾಂದ್ರಸುಖದ ದಯಾಳು ೫
ಜತೆ
ಕಂಚಿಯ ನಿಲಯಾ ನೀಲವರ್ನ ಶ್ರೀವತ್ಸ |ಲಾಂಚನ ವರದಾ ಶ್ರೀ ವಿಜಯವಿಠಲ ಮೆರೆದಾ ೬

ಭಂವಂತನ ಕೃಪೆಯನ್ನು ಪಡೆಯುವ

೩೯
ಝಂಪೆ ತಾಳ
ತರ ತರ ತರ ತರ ತರ ತರ ತರನೆ ನಿನ್ನ ನಡುಗಿಸಿ
ಕರ ಕರ ಕರ ಕರ ಕರ ಕರ ಕರೆದು ನಿನ್ನ ನಿಲಿಸಿ
ಸರ ಸರ ಸರ ಸರ ಸರ ಸರ ಸರನೆ ನಿನ್ನ ಒಲಿಸಿ
ವರ ವರ ವರ ವರ ವರ ವರ ವರಗಳನು
ಪಡಿಯದಲೆ ಬಿಡುವೆ[ನೆ]
ಸಿರಿವೊಡೆಯ ಸುರರೊಡಿಯಾ ಎನ್ನೊಡಿಯಾ ಜಗದೊಡಿಯಾ
ಮರಿಯದಲೆ ನೋಡು ತಡಿಯ
ದಿರು ಮುಂದೆ ಎನಗೊಂದು ಪೇಳು
ತ್ತರವ ಇಂದೆ ಇರುಕೊಡದೆ ಬಿಡುವೆನೆ ಜಗದ ತಂದೆ
ಪರ ಮುಖ ನೀನಾಗೆ ನಿನ್ನಯ ಚರಣದಡಿಗಳಲಿ
ಸಿರಸಾ ಪವಡವನು ಕೊಡುವ ಜೀಯಾ
ಕರುಣೆ ನೀನೆಂದು ಮೊರೆಹೊಕ್ಕು ಬೇಡಿದರೆನ್ನ
ಸರಕು ಮಾಡದಲೆ ತೊಲಗುವುದು ಏನೋ
ಪರಿ ಪೂರ್ಣ ಗುಣ ನಿಧಿ ವಿಜಯ ವಿಠ್ಠಲ ನಿನ್ನ
ಚರಣದುಂಗುಟದ ಮಂದಿರದ ನೆಳಲೆ ಬೇಕು ೧
ಮಟ್ಟತಾಳ
ಭಂಡು ದೇವರಿಗೆ ಲೆಂಡ ಪ್ರತಿ ಎಂಬೋದು
ಮಂಡಲದೊಳಗಿದು ಸಹಜ ನೀತಿ
ಭಂಡು ದೇವನೆ ನೀನು ನಂದ ಗೋಕುಲದಲ್ಲಿ
ಲೆಂಡ ಗೊಲ್ಲತಿಯರು ಅವರೆ ನಿನಗೆ ಮಟ್ಟು
ತೊಂಡನಾಗಿ ನಿನ್ನ ಕೊಂಡಾಡಲು ಶಿ
ಖಂಡಿಯಾಗಿ ಬುದ್ಧಿ ನಿನಗೆ ಅವರೆ ಮಟ್ಟು
ಕುಂಡ ಗೋಳಕರ ಮಂಡೆ ಮೇಲೆ ಇದ್ದು
ಭಂಡುಗಾರ ಗೊಲ್ಲ ವಿಜಯವಿಠಲಾ ೨
ತ್ರಿವಿಡಿ ತಾಳ
ಕದ್ದಾ ಶುದ್ಧಿಗೆ ದಧಿ ಪಾಲಾಗೆ ವಶವಾಗೆ
ಬದ್ಧಾದಿಂದಲಿ ಬಂದು ಅವನು ಕೇಳಿದ ಮಾತು
ಸಿದ್ಧಾಂತವೆಲ್ಲಾ ಬಳಿಕ ಪೇಳುವರಾರು.
ಈ ಧರೆಯೊಳಗೆ ಧರ್ಮಕೆ ಕಾಲಾ ನಡೆಯದೂ
ನಿರ್ಧಾರವಾಗಿದೆ ಎನಗೆ ನೋಡಲಿ ಇಂದು
ಅಬ್ದಿಶಯನ ನಿನ್ನ [ವ]ರ್ಮ[ಮ]ರ್ಮಗಳಾ
ಇದ್ದಾವು ಅಲ್ಲಲ್ಲಿ ದೂರಾದಲ್ಲದೆ ನೀನ
ಹೊದ್ದಿ ಇಪ್ಪುದು ಸಟಿ ವಿಜಯ ವಿಠ್ಠಲ ಸಿರಿ
ಮುದ್ದು ಮುಖದ ಚಲುವ ಸಿದ್ಧ ಪ್ರಸಿದ್ಧ ೩
ಅಟ್ಟತಾಳ
ಪಾವ ಮಾನಿಯಂತೆ ಹರಿವಾ[ಣ][ಒಯ್ಯ]ಬೇಕು
ಗೋವಳರಂತೆ ಎಂಜಲು ಕಲನಲಿಬೇಕು
ರಾವಣಾನುಜನಂತೆ ನಿನ್ನ ಹೊತ್ತು ತಂದಿಡಬೇಕು
ದೇವ ನದಿಜನಂತೆ ಕದನ ಮಾಡಲಿ ಬೇಕು
ದೇವತಾ ಗಣದಂತೆ ಭಾರ ಹೊರಿಸಬೇಕು
ಈ ವಿಚಾರವಿರಲು ಆವಲ್ಲಿ ಪೋಗಾದೆ
ಕಾವುತ್ತಲಿತ್ತವರಾವಾದರು ಬೇಡೆ
ದೇವೇಶ ವಿಜಯ ವಿಠ್ಠಲ ನಿನ್ನ ಮಹಿಮೆಯ
ಆವಾವ ಬಲ್ಲನು ನಮೋ ನಮೋ ಎಂಬೆ
ಹಾವಿಗೆ ತಡೆ ಬೇರು ಇದ್ದಂತೆ ಇರಬೇಕು ೪
ಆದಿತಾಳ
ದೂರಿದ ಭಕ್ತರ ದೂರ ಮಾಡುವಿ ಪಾಪ
ದೂರ ಬೇಕು ನಿನ್ನ ದೂರಬೇಕು ನಿನ್ನ
ದೂರದಲೆ ಎನ್ನ ದೂರು ಮುಟ್ಟುವದಿಲ್ಲ
ದೂರಿದನೆ ಸಿರಿ ವಿಜಯ ವಿಠ್ಠಲ ವಿ
ದುರವಂದಿತ ಪಾದ ದೂರದೋಷ ಬಲು
ದೂರ ನೋಡದೆ ಎನ್ನ ದುರಿತ ಬಿಡಿಸೋ ೫
ಜತೆ
ಹರನ ಶಿರ ಮುಕುಟ ನಿನ್ನ ಪಾದ ಪೀಠವೊ ರನ್ನ
ಪೊರೆವುದು ದಯದಿಂದ ವಿಜಯ ವಿಠಲ ಎನ್ನ ೬

ಸೂರ್ಯನ ಹೆಂಡತಿಯಾದ ಸಂಜ್ಞಾ,

೩೦. ಛಾಯಾ
ಧ್ರುವತಾಳ
ತರಣಿ ತರುಣಿ ತನ್ನ ತವರಮನಿಗೆ ಪೋಪ |
ಭರದಿಂದ ಸ್ವಚ್ಛಾಯಾವಾ ನಿರ್ಮಾಣವನ್ನೆ ಮಾಡಿ |
ಸರಿಸಾದಲ್ಲಿ ಇಟ್ಟು ಗುಪ್ತ ಮಾರ್ಗದಲಿಂದ |
ತೆರಳಿ ಪೋಗಲು ಇತ್ತ ಛಾಯಾವೆಂಬೊ ನಾಮದಲಿ |
ಕರಿಸಿಕೊಳುತಲಿಪ್ಪ ಪ್ರಮದ ಮಲಮಕ್ಕಳೊಡನೆ |
ನಿರುತ ಮೆಲ್ಲಮೆಲ್ಲನೆ ಮತ್ಸರ ಮಾಡಲಾಗೆ |
ಅರಿತು ಆದಿತ್ಯದೇವ ನುಡಿದವಳ ಕೂಡ |
ಪರಿ ಏನೆಂದು ಪೂರ್ವೋತ್ತರ ತಿಳಪಲಾಗಿ ಕೇಳಿ |
ಇರದೆ ಕೋಪವ ತಾಳಿ ಶಾಪವನಿತ್ತು ನಿನಗೆ |
ನರಯೋನಿ ಬರಲಿ ಎಂದು ಗಹಗಹಿಸುತ್ತ ಬಂದು |
ಮರಳೆ ಮಾತಾಡಿದಳು ಗಂಡನ್ನ ಪ್ರಾರ್ಥಿಸಿ |
ಕರುಣಿಸು ವಿಶಾಪವಾಗುವಂತೆ ಎನಲು |
ಹರಿ ನಾರಿರೂಪ ಧರಿಸಿ ಬರಲಾಗಾ ಕಂಡ ಮಾ |
ತುರದಿಂದಾ ಮೋಕ್ಷಾವೆಂದು ಅಭಯಾಕೊಡಲು, ಛಾಯಾ |
ಪರಿಯಾಳಾಗಿ ಸಂಜ್ಞಾದೇವಿಗೆ ವಿಸ್ತರಿಸಿ |
ಪೊರಟು ಬಂದಳು ನಾನಾ ದೇಶಗಳ ಚರಿಸುತ್ತ |
ಸರಿಯಿಲ್ಲ ಇಲ್ಲಿ ಎಂದು ಪೂರ್ವದಲ್ಲಿ ಬಂದು |
ನರನಾರಾಯಣಾಶ್ರಮ ಸೇರಿ ಬಹುಕಾಲ |
ತರಗೆಲೆ ಮೆದ್ದು ಬಲು ತಪವನೆ ಮಾಡಿದಳು |
ಸುರರಾ ವರ್ಷ ನೂರಾರು ಹಿಂದಾದವಯ್ಯ |
ಪರಮಪುರುಷ ನಮ್ಮ ವಿಜಯವಿಠಲರೇಯ |
[ಶ]ರಣಳ ಮನೋರಥ ಈ ಕ್ಷೇತ್ರದಲಿ ಮಾಳ್ಪ ೧
ಮಟ್ಟತಾಳ
ಶನೇಶ್ವರನ ಜನನಿ ತಪವನೆ ಮಾಡುತಿರೆ |
ಮುನಿನಾರದನು ಬಂದು ವೃತ್ತಾಂತವ ತಿಳಿದು |
ನಿನಗೆ ಬದರಿಯಲ್ಲಿ ಶಾಪವಾದದು ಮೋ |
ಚನವಾಗದಿಪ್ಪದು ಸಿದ್ಧಾಂತವ ಪೇಳುವೆನು, ದ |
ಕ್ಷಿಣ ದಿಕ್ಕಿನಲ್ಲಿ ಒಂದು ಉತ್ತುಮ ಸ್ಥಾನ |
ಗಣನೆ ಗಾಣೆನೊ ಅದಕೆ ಅಲ್ಲಿಗೆ ನೀ ಪೋಗಿ |
ಸನುಮತದಿಂದಲಿ ಹರಿಯನು ಒಲಿಸುವುದು |
ವನಧಿಶಯನ ನಮ್ಮ ವಿಜಯವಿಠಲರೇಯಾ |
ನಿನಗೆ ಪೊಳೆವ ವೇಗ ಮುಂದೆ ಬಂದು ನಿಂದೂ ೨
ರೂಪಕತಾಳ
ದೇವ ಹೃದಯವೆಂಬೊ ತೀರ್ಥಕ್ಕೆ ಬಂದಳಾ |
ದೇವಿ ವಿನೋದದಲಿ ಭಕ್ತಿ ಉದ್ರೇಕವ |
ಆವಾಗ ತಾಳಿ ಈ ರಮ್ಯವಾದದು ನೋಡಿ |
ಭಾವ ಶುದ್ಧದಲಿ ತಪವನೆ ಮಾಡಿದಳು ಅಂದು |
ದೇವತ ವರುಷ ಅರವತ್ತು ಸಾವಿರವಾಗೆ |
ಕಾವನಯ್ಯನು ಮೆಚ್ಚಿ ಬಯಕೆ ಸಲ್ಲಿಪೆನೆಂದು |
ಧಾವಂತಗೊಳಿಸಿ ಮಹರುದ್ರ ನೋಡ್ಯಾಡಿಸಿ |
ತಾ ವಧುರೂಪದಲಿ ಒಂದು ಪಾದವನಿಟ್ಟು |
ಜೀವನ ಮುಕ್ತರಿಗೆ ಸಾಧ್ಯಮಾಡಿಕೊಟ್ಟು |
ಕಾವ ಕರುಣದಿಂದ ಒಂದು ದಿನ ನೋಡಿದರೆ |
ದೇವದೇವೇಶ ಸಿರಿ ವಿಜಯವಿಠಲರೇಯಾ |
ಈ ವಸುಧಿಯೊಳು ಅಧಿಕಾವಾಗಿಲ್ಲಿಪ್ಪ ೩
ಝಂಪೆತಾಳ
ವರವಕೊಟ್ಟನು ದೇವ ಛಾಯಾದೇವಿಗೆ ಒಲಿದು |
ಧರಿಯೊಳಗೆ ಈ ಕ್ಷೇತ್ರ ನಿನ್ನ ಪೆಸರಿನಲಿ |
ಕರಸಿಕೊಳ್ಳಲಿ ಎಂದು ಪೇಳಿ ಅಂತರ್ಧಾನ |
ಹರಿಪೋಗಲು ಇತ್ತ ತನ್ನ ನಿಜಸ್ವರೂಪ |
ಹರುಷದಿಂದಲಿ ಐ[ದಿ] ನರಜನ್ಮವನೆ ಬಿಟ್ಟು |
ಪರಮಸೌಖ್ಯದಲಿ ಗಂಡನಕೂಡ ನಲಿದು |
ಇರುತಿರೆ ಇಲ್ಲಿಗೆ ಸರ್ವದೇವತೆಗಳು |
ಪರಿಪರಿಯಿಂದಲಿ ಪೊಗಳಿ ಪೂಮಳೆಗರೆದು |
ಮರಳೆ ಈ ಕ್ಷೇತ್ರದಲಿ ವಾಸವಾದರು ಬ್ರಹ್ಮ |
ಗಿರಿ ಇದು ಎಂದು ಸಾಧನ ಮಾಡುತ್ತ |
ಸರಿಗಾಣೆ ನಾನೆಲ್ಲಿ ಛಾಯ ಭಗವತಿಯೆ ಶ್ರೀ |
ಹರಿ ನಾರಾಯಣೀ ರೂಪವೆನ್ನಿ ಜನರೂ |
ಸುರರೊಡಿಯ ರಾಮ ಶ್ರೀ ವಿಜಯವಿಠಲರೇಯಾ |
ತರತಮ್ಯ ತಿಳದವಗೆ ಗತಿ ಕೊಡುವನು ಇಲ್ಲಿ ೪
ತ್ರಿವಿಡಿತಾಳ
ಅನಘ ದೇವ ಸೂರ್ಯ ಚಂದ್ರ ಕನ್ಯ ಬ್ರಹ್ಮ |
ವನಜ ಸಂಭವ ವಿಷ್ಣುಯೋನಿ ಮತ್ತೆ |
ಮುನಿವಶಿಷ್ಠ ವಿಶ್ವಾಮಿತ್ರ ಸಾಲಿಗ್ರಾಮ |
ವನಜ ಸ್ವರ್ಗಧಾರ ನರಕದ್ವಾರ |
ಧನಸ್ಸುಕೋಟಿ ಕಪಿಲಾ ಗದಾರಾಮ ಸುದರು |
ಶನ ಮೊದಲಾದ ತೀರ್ಥಂಗಳುಂಟೂ |
ಇನಿತು ತಿಳಿದು ಇಲ್ಲಿ ಜ್ಞಾನಪೂರ್ವಕದಿಂದ |
ಕ್ಷಣ ಮಾತುರ ಅನುಷ್ಠಾನಮಾಡೆ |
ಮನುಜನ್ನ ದುರಿತಗಳು ಜನುಮಾ ಜನುಮದಿಂದ |
ಘನವಾಗಿ ಇದಕ್ಕಿಲ್ಲಾ ಕೇಳಿ ಅಕ್ಷಯ ತ್ರಿತಿಯಾ |
ದಿನದಲ್ಲಿ ಪ್ರತ್ಯಕ್ಷ ಹರಿಛಾಯಿಗೆ |
ಮುನಿ ವಿಶ್ವಾಮಿತ್ರನು ಕೋಪಾ ಪೋಗಾಡಿ ವಂ |
ದನೆ ಮಾಡಿದ ಅರುಂಧತಿಯ ಪತಿಗೆ |
ಪ್ರಣವ ಮೂರುತಿ ನಮ್ಮ ವಿಜಯವಿಠಲರೇಯನ |
ನೆನಸಿದವಗೆ ಸೂರ್ಯಲೋಕದಲ್ಲಿ ಮಾರ್ಗ ೫
ಅಟ್ಟತಾಳ
ಚಿತ್ರಕೂಟದಿಂದ ರಾಮಚಂದ್ರನು ಬಂದು |
ಪುತ್ರನಾದದಕೆ ದಶರಥರಾಯಗೆ |
ನಿತ್ಯ ನೈಮಿತ್ಯಕ ಮಾಡಿದ ಜನರಂತೆ |
ಸತ್ಯ ಸಂಕಲ್ಪ ತನ್ನ ಪತ್ನಿಯ ಕೂಡ |
ಸುತ್ತ ಯೋಜನ ಒಂದು ಕ್ರೋಶ ಪರಿಯಂತ |
ಕ್ಷೇತ್ರವೆನಿಸುತಿದೆ ಛಾಯಾವಿಡಿದು ಮುನಿ |
ಪೋತ್ತುಮ ಮಯೂರ ತೀರ್ಥವೆ ಕಡೆಮಾಡಿ |
ಇತ್ತಂದ ಇತ್ತಂಡವಾದ ಕೃಷ್ಣವೇಣಿ |
ಚಿತ್ರ ಮಾರ್ಕಂಡೆಯ ಜಾತಿ ಸ್ರ‍ಮತಿ ಅಗಸ್ತ್ಯ |
ತತ್ತಳಿಸುವ ಈ ಮಧ್ಯದಲ್ಲಿ ವಿ |
ಚಿತ್ರ ತೀರ್ಥಂಗಳುಂಟು ನಾಮ ನಾಮಂಗಳು |
ಪ್ರತ್ಯೇಕವಾಗಿ ಕರೆಸಿಕೊಳ್ಳುತಲಿದ್ದು |
ಸ್ತುತಿಸಿದವರಿಗೆ ಮನ ನಿರ್ಮಳವಕ್ಕು |
ಉತ್ತರವಾಹಿನಿ ಸಂಗಮದಲಿ ಇದ್ದು |
ಸೋತ್ತುಮ ಜನಸೇವೆಮಾಡಿ ಧನ್ಯರಾಗಿ |
ಉತ್ತಮೋತ್ತಮ ನಮ್ಮ ವಿಜಯವಿಠಲರೇಯಾ |
ಹತ್ತಿಲಿ ಇರುತಿಪ್ಪ ಇಲ್ಲಿ ಬಂದವನಿಗೆ ೬
ಆದಿತಾಳ
ಒಂದು ತೀರ್ಥದಲ್ಲಿ ಸ್ನಾನಮಾಡುವಾಗನುಸಂ |
ಧಾನವಿರಬೇಕು ಈ ಪರಿ ಇರಬೇಕು |
ಮಂದರಧರ ಶಿ[ರಿ]ಮುಕ್ತರು ದ್ರವರೂಪ |
ವೆಂದು ತಿಳಿಯಬೇಕು ಅಪ್ರಾಕೃತವಾಗಿ |
ಪೊಂದಿ ಕೊಂಡಿಪ್ಪಾರು ಪರಿಚ್ಛಿನ್ನ ಪರಿಚ್ಛಿನ್ನ |
ದಿಂದಲಿ ಎಂತೆಂತು ನೋಡಿದರದರಂತೆ |
ಮುಂದೆ ಬೊಮ್ಮಾದಿಗಳು ಸಪರಿವಾರ ಸಮೇತ |
ಕುಂದದಲ್ಲಿಪ್ಪರು ಅಂಶ ಅಂಶಗಳಾಗಿ |
ಒಂದಾನಂತರೂಪ ಧರಿಸಿ ಅಧಿಷ್ಠಾನ |
ಸಂಧಿಸಿಕೊಂಡಿಹರು ಚತುರವಿಂಶತಿಯಲ್ಲಿ |
ಒಂದೆ ಪ್ರಾಕೃತ ದ್ರವರೂಪವಾದರು ನೋಡೆ |
ಅಂದವಾಗಿದೆ ಸರ್ವತತ್ವ ಮಿಳಿತವೆನ್ನಿ |
ತಂದುಕೊಂಡು ಚಿತ್ತಕ್ಕೆ ಅಲ್ಲೆಲ್ಲಿ ಅಲ್ಲಿ ಇದ್ದ |
ವೃಂದಾರಕರ ಚಿಂತೆಮಾಡಿ ಏಕವಾಗಿ |
ಸಂದೇಹ ತೊರೆದು ಸರ್ವದಲಿ ಸಂಚರಿಸಿದ |
ಮಂದಿಯ ಪುಣ್ಯಕ್ಕೆ ಕಡೆ ಮೊದಲು ಇಲ್ಲ |
ನಿಂದಕಗೆ ಗತಿ ಇಲ್ಲ ವಿಜಯವಿಠಲ ಬಲ್ಲ |
ಸಂದೋಹದೊಡನೆ ಇಲ್ಲಿಗೆ ಬಂದವ ಯೋಗ್ಯ ೭
ಜತೆ
ಛಾಯವಾಗಿಪ್ಪ ಛಾಯಾಕ್ಷೇತ್ರ ನಿತ್ಯ |
ತಾಯಿ ನಮಗೆ ಎನ್ನಿ ವಿಜಯವಿಠಲ ಒಲಿವಾ ೮

ತಿರುಪತಿಯ ಶ್ರೀನಿವಾಸನ ಅಲಂಕಾರವನ್ನು

೪೮. ತಿರುಪತಿ
ರಾಗ:ಶಂಕರಾಭರಣ
ಝಂಪೆತಾಳ
ತರಣಿ ಶತಕೋಟಿ ರುಚಿಗಧಿಕವೆಂದೆನಿಸುವ |
ತಿರುಪತಿವಾಸನ ವರಕಿರೀಟವ ಕಂಡೆ |
ಶಿರದಲ್ಲಿ ಮುಡಿದಿದ್ದ ಪರಿಪರಿಯ ಕುಸುಮಗಳು |
ಅರಳಿ ಪರಿಮಳಿಸುತ್ತ ಹರಿಯುತಿವೆ ದೆಸಿದೆಸಿಗೆ |
ಹರಿಣ ಕುರುಹಿನ ತೆರದಿ ನೊಸಲ ಕಸ್ತೂರಿ ತಿಲುಕ |
ಸರಸಿಜ ದಳವ ಧಿಕ್ಕರಿಸುವ ನಯನನನ ಕಂಡೆ |
ಸ್ಮರನ ಕರದಿಂದ ನ್ಯಾವರಿಸಿದ ಚಾಪವೆನೆ |
ಇರಡು ಪೆರ್ಬು[ಬ್ಬು]ಗಳ ತಿರುಹು ತಿಪ್ಪದ ಕಂಡೆ |
ಭರದಿಂದ ತೂಗುವತಿ ಮಕರ ಕುಂಡಲ ಕಾಂತಿ |
ಮಿರುಗುತಿರೆ ಗಲ್ಲದಲ್ಲಿ ಸರಳನಾಸಿಕ ಕಂಡೆ |
ಎರಡುನಾಲ್ ಪಂಕ್ತಿದಂತಗಳೆಸಿಯೆ ಕರ್ಪೂರ |
ಕರಡಿಗೆ[ಯಂ]ದದಲಿ ವದನ ಎಳೆನಗೆ ಕಂಡೆ |
ಗಿರಿಯ ತಿರುಮಲ (ಸಿದ್ಧ) ಸಿಂಧು ವಿಜಯವಿಠಲನ್ನ |
ಸುರಿವಧರಾಮೃತ ಕಂಡೆ ಉತ್ಸವದಲ್ಲಿ |
ಕಿರಿಬೆವರು ಮೊಗದಲ್ಲಿ ಬರಲು ಮೌಕ್ತಿಕದಂತೆ |
ಶಿರಸ ಮೊಗಪರಿಯಂತೀ ಪರಿಯಲ್ಲಿ ಕಂಡೆನಾ ೧
ಮಟ್ಟತಾಳ
ಕಂಬುಕಂಠ ಕೊರಳ ಶ್ರೀರೇಖೆ |
ಕಂಬುಚಕ್ರಪಿಡಿದ ಹಸ್ತತಾಮ್ರಮಯದ ಕರತಳಕಾಂತೆ |
ಅಂಬುಜನಾಭ ವಿಜಯವಿಠಲ |
ಸಂಭ್ರಮದಿಂದ ಪೊಳವದು ಕಂಡೆ |
ಅಂಬುಜನಾಭಾರತುನ ಭಾಸಾಪೊಳವದು ಕಂಡೆ ೨
ರೂಪಕತಾಳ
ಕಡಗ ಕಂಕಣ ಮೇಲು ಕೈಯ್ಯ ಸರಪಳಿ ಬಳೆ |
ಜಡಿತದುಂಗುರು ಬೆರಳೊಳಗೆ ಒಂದೊಂದು |
ನಿಡಿದೋಳು ಬಂದಿ ತಾಯತ ವಂಕಿ ರಂಜಿಸಿ |
ಕೊಡುವ ಮಾಣಿಕ ಹಸ್ತ ಕಟಕರ ಶೃಂಗಾರ |
ಪಡಿಗಾಣೆ ನಾನು ಮತ್ತಾವಲ್ಲಿ ಚತುರ್ದಶ |
ಪೊಡಿವೀಶ ಸುಂದರ ವಿಜಯವಿಠಲನ |
ಕಡುತೇಜ ವಿಗ್ರಹನ ಬಿಡದೆ ನಾ ಕಂಡೆ ೩
ಧ್ರುವತಾಳ
ಸೋಲು ಮುಡಿಯ ಪೂವ ಸಿರಿದೇವಿಯ ನಿಜ |
ಮಾಲೆ ಕೌಸ್ತುಭಹಾರ ಉರ ವಿಶಾಲನ ಕಂಡೆ |
ತಾಳೆಸರ ಎಳೆದುಳಿಸಿ ಹೀರಹಾರ ಪದಕ |
ಏಳುಸರಿಗೆ ಉದರ ಏಳುಲೋಕವ ಕಂಡೆ |
ಸಾಲತ್ರಿವಳಿ ಡೊಳ್ಳು ಕಿರಿ ಬೊಜ್ಜೆ ಕೆಳನಾಭಿ |
ಮೇಲಾದ ಕಿಂಕಿಣಿ ಕಾಂಚಿಧಾಮನ ಕಂಡೆ |
ವೀ ಲೋಚನಾ ನಾಮ ವಿಜಯವಿಠಲ ಭಕ್ತಾ |
ಪಾಲಾಯ ದಯಾಳಿನ ಆಳುವವನ ಕಂಡೆ ೪
ತ್ರಿವಿಡಿತಾಳ
ಪೀತಾಂಬರ ಕಿರಿದೊಡೆ ಜಾನುಜಂಘೆ |
ಜ್ಯೋತಿರ್ಮಯದ ಪೆಂಡೆ ಸರಪಳಿ ಪೊಂಗೆಜ್ಜೆ |
ಜಾತಿವರ್ನದಂದಿಗೆ ದುಷ್ಟದನುಜರ |
ಘಾತಿಸಿದ ಪಾದ, ಗಂಗೆ ಪಡದ ಪಾದ |
ಜೋತಿ ಗಣೇಶ್ವರ ವಿಜಯವಿಠಲ ಪ್ರ |
ಖ್ಯಾತ ಮೂರುತಿಯ ಪ್ರಜ್ಯೋತಿಯ ಕಂಡೆ ೫
ಅಟ್ಟತಾಳ
ಅನಂತ ಜನುಮಕ್ಕೆ ಯಾದಡಂ |
ಮಾನುಷೋತ್ತುಮನಾಗಿ ನೋಡಿದಡಂ |
ಜ್ಞಾನದಲ್ಲಿ [ಒ]ಮ್ಮೆ ಪಾಡಿದಡಂ |
ಧ್ಯಾನದಲ್ಲಿ ಒಮ್ಮೆ ಕೂಡಿದಡಂ |
ಮೌನದಲ್ಲಿ ನಿಂದು ಕರದಡಂ |
ಪಾನ ಚರಣಾಂಬು ಕೊಂಡಾದಡಂ |
ಶ್ರೀ ನೈವೇದ್ಯವ ಮೆದ್ದುದಡಂ |
ಏನು ಕೊಡದಲೆ ನೆನದಡಂ |
ಈ ನಿಧಿಯಲ್ಲೀಗ ಇದ್ದಡಂ |
ಶ್ರೀನಿವಾಸನ ದ್ವಾರ ಕಾದಡಂ |
ಹೀನಭವರೋಗವಾದಡಂ |
ಬೇನೆ ಬಡಿಸುತ್ತಲದ್ದಡಂ |
ಆ ನರಗೆ ಪಂಚಪ್ರಾಣವಾಗಿ ಇಪ್ಪ |
ಅನಂತಾತ್ಮ ನಮ್ಮ ವಿಜಯವಿಠಲನೀತಾ |
ಕಾಣುತ ಲಪವರ್ಗ ಕೊಡವನಂ ೬
ಆದಿತಾಳ
ಅಂಬಾರಾವನ್ನು ಮೀಟಿ ಅಂಬುಜ ಜಾಂಡವನೊಡದು |
ಅಂಬುಜ ಚರಣದಲ್ಲಿ ಅಂಬುವೇಗದಿಂದ ಪಡಿಯೆ |
ಅಂಬುಜ ಸಂಭವ ತೊಳಿಯೆ |
ಅಂಬುಕತ್ರಯನು ಧರಿಸೆ |
ಅಂಬರಾದ್ಯರು ಒಲಿಸೆ ತುಂಬರಾಧ್ಯರು ತುತಿಸೆ |
ಎಂಬ ಮೂರುತಿ ಇದೆ ನೋಡಿ |
ಅಂಬುಧಿಯೊಳಗೆ ಚರಿಸಿದ[ವ] ಧರಿಸೀದ |
ಕುಂಭಿಣಿಯ ಅಣುಗನ ಉದ್ಧರಿಸಿದ |
ಕುಂಭಿಣಿಯಳೆದ ನೃಪರನಳಿದ |
ಅಂಬುಧಿ ಮಾರ್ಗವ ಬಿಗಿದು ಪೋದ |
ಅಂಬರ ಪುರಗಳು ಹುತ ರಾವುತ |
ಎಂಬ ದಶಾವತಾರನೀತ |
ಸಂಭ್ರಮ ವಿಭುವೆ ವಿಜಯವಿಠಲ |
ನಂಬಿದವರಿಗೆ ಗತಿ ಪ್ರದಾತ ೭
ಜತೆ
ವೈಕುಂಠ ಇದೆಯೆಂದು ಮೆರೆವ ತಿರುವೆಂಗಳ |
ವೈಕುಂಠನಾಮ ಸಿರಿ ವಿಜಯವಿಠಲ ವರದಾ ೮

ಪಂಢರಾಪುರದ ವಿಠಲನನ್ನು ಪ್ರತಿಯೊಬ್ಬ

೭೬. ಪಂಢರಪುರ
ರಾಗ:ಭೈರವಿ
ಧ್ರುವತಾಳ
ತರುಣ ಅರುಣ ಕಿರಣದಂತೆ ಪೋಲುವ ಚರಣ |
ತರಣಿ ಹರಿಣಾಂಕರನು ಧರಣ ಮಾಡುವ ಚರಣ |
ವರುಣ ವಾರುಣ ನಿತ್ಯಾಚರಣೆ ಮಾಡುವ ಚರಣ |
ತರುಣಿ ದ್ರೌಪದಿಯ ಭಯ ನಿವಾರಣ ಮಾಡಿದ ಚರಣ |
ಧರಣಿಯೊಳು ಪುಟ್ಟಿ ಸಂಚರಣವಾಗುವ ಚರಣ |
ಕರುಣಾದಲ್ಲಿ ದಾಸರನಾದರಣೆ ಮಾಡಿದ ಚರಣ |
ಸ್ಮರಣೆಮಾಡುವರಿಗೆ ಸಾಭರಣವಾಗುವ ಚರಣ |
ಕರುಣಾಗತಿ ಸತತ ಪಂಢರಿಪುರವಾಸ |
ವಾರಣವಾಗಿ ಎನ್ನ ಹರಣ ಉಳ್ಳನಕ ನಿನ್ನ |
ಚರಣ ಸಂದರುಶನ ಲೇಸಾಗಿ ಈವುತ್ತ |
ಶಿರದಲ್ಲಿ ಇಡುವುದು ಶಿರಿ ರಮೆಯ ಸಿರಿ |
ವರ ಕರುಣಿ ವಿಜಯವಿಠಲರೇಯ ನಿರುತ |
ಪರಣ ನಿನ್ನದು ಸದಾ ಪರಿಣಾಮನೆನಿಸೊ ೧
ಮಟ್ಟತಾಳ
ಭಕುತರಾಪತ್ತು ಪರಿಹರಿಸುವ ಚರಣ |
ಲಕುಮಿಯ ಮೊಗಕ್ಕೆ ಕನ್ನಡಿಯಾದ ಚರಣ |
ತ್ವಕುವೇಂದ್ರಿಗಳನ್ನು ತುಳಿದು ನಿಲ್ಲಿಪ ಚರಣ |
ಮುಕುತ ವಂದಿತ ವಿಜಯವಿಠಲ ನಿನ್ನ ಚರಣ |
ಸಕಲ ಪಾಪಂಗಳಿಗೆ ಪ್ರಾಯಶ್ಚಿತ್ತದ ಚರಣ |
ಭಕುತರಾಪತ್ತು ಪರಿಹರಿಸುವ ಚರಣ ೨
ತ್ರಿವಿಡಿತಾಳ
ಕಂಸನ ಉದರದಲ್ಲಿ ನಾಟ್ಯವಾಡಿದ ಚರಣ |
ಹಂಸಡಿಂಬರನಾ ಭೂತಳಕೆ ಒರೆಸಿದ ಚರಣ |
ಹಂಸವಾಹನನ ಮನದಲ್ಲಿ ಪೊಳೆವ ಚರಣ |
ಸಂಸಾರಾಂಬುಧಿಯನ್ನು ಉತ್ತರಿಸುವ ಚರಣ |
ಪುಂಸಪುಂಗವ ನಮ್ಮ ವಿಜಯವಿಠಲ ಕರುಣೀ |
ಅಂಶಾದಿಂದಲಿ ಜಗವ ಬೆಳಗುವ ಸಿರಿಚರಣ ೩
ಅಟ್ಟತಾಳ
ಇದೆ ಚರಣವು ಇದೆ ಚರಣವು |
ಹೃದಯದೊಳಗೆ ಬಂದು ವದನಕ್ಕೆ ಒದಗಲಿ |
ಇದೆ ಚರಣ ಸಕಲ ಸದಾ ಸಂಪದವಿಗೆ ಪರಿಪರಿ |
ಸಾಧನ ತೋರಲು ಇದೆ ಚರಣವು |
ಸದನವಾಗಲಿ ಎನಗೆ |
ಅಧಿಕ ದೈವವೆ ರಂಗಾ ವಿಜಯವಿಠಲ ನಿನ್ನ |
ಸದಮಲಚರಣ ಸದಾನಂದ ಚರಣ ೪
ಆದಿತಾಳ
ಇಟ್ಟಿಗೆ ಗದ್ದಿಗೆ ಮೆಟ್ಟಿನಿಂದ ಚರಣ |
ಜಟ್ಟಿಗಳೆಲ್ಲರ ಕುಟ್ಟಿ ಕೆಡಹಿದ ಚರಣ |
ಪುಟ್ಟಗೆಜ್ಜೆ ಪೊನ್ನಂದಿಗೆಯಿಟ್ಟ ಚರಣ |
ಕಟ್ಟುಗ್ರ ದೈವವೆ ವಿಜಯವಿಠಲ ನಿನ್ನ ಚರಣ ೫
ಜತೆ
ಬೇಡಿದಿಷ್ಟಾರ್ಥವೇಗ ಕೊಡುವ ಚರಣ |
ಗೂಢ ಮಹಿಮ ವಿಜಯವಿಠಲ ರಂಗನ ಚರಣ ೬

ಭಗವಂತನ ಸ್ಮರಣೆ, ಅರ್ಚನೆ, ವಂದನೆ,

೪೨
ಧ್ರುವತಾಳ
ತಾತ್ಸಾರ ಮಾಡುವೆ ಎನಗಿಂತನೀಚರಲ್ಲಿ
ಮತ್ಸರಿಪೆನು ಎನ್ನ ಸಮಾನಿಕರ ಕೂಡ
ಉತ್ಸಾಹ ಜ್ಞಾನಿಗಳಿಗ ಪಮಾನವಾದರು
ಮತ್ ಶರೀರದಲ್ಲಿದ್ದ ಗುಣಗಳಿವೆ
ಸತ್‍ಸಂಗತಿಗೆ ಮನಸು ಎರಗದು ದುಷ್ಟ ಮ
ಹೋತ್ಸವಲ್ಲದೆ ಲೇಶ ಧರ್ಮವಿಲ್ಲ
ಜೋತ್ಸದೊಳಗೆ ಮಂದಸತ್ತಿಗೆ ನೆಳಲೀಲಿದ್ದು
ತತ್ಸಮಾನಾನಂತೆ ಎನ್ನ ಯುಕುತಿ
ವತ್ಸರದೊಳಗೊಂದು ದಿವಸವಾದರು ಭಕುತ
ವತ್ಸಲ ನಿನ್ನ ಚರಣಧ್ಯಾನ ಮಾಳ್ಪ
ತತ್ಸಮ್ಮಂದಿಗನಾಗಿ ಸಾಧು ಗೋವಿನ ಹಿಂದೆ
ವತ್ಸ ಪೋದಂತೆ ಪೋಗಿ ಸುಖಿಸಲಿಲ್ಲ
ವತ್ಸನಾಭಿ ಎಂಬೊ ಸಂಸಾರದಲ್ಲಿ ಬಿದ್ದು
ತತ್ ಸಮೀಪಕ್ಕೆ ಬಲು ದೂರಾಗುವೆ
ಮತ್ಸ್ಯವತಾರ ಹರಿ ವಿಜಯವಿಠ್ಠಲ ಪುಳ
ಕೋತ್ಸಹವಾಗುವಂತೆ ಪೊಳೆದು ಪಾಪವಳಿಯೊ ೧
ಮಟ್ಟತಾಳ
ಧ್ಯಾನ ಮಾಳಿಪೆನೆಂದು ಮೌನದಲ್ಲಿ ಕುಳಿತು
ಮಾನವರ ಮುಂದೆ ಏನೇನು ಸೋಜಿಗವ
ನಾನು ತೋರಿಸಿ ಕೊಳುತ ನಾನು ಎಂಬುದು ಬಿಡದೆ
ಹೀನ ವೃತ್ತಿಯಲ್ಲಿ ಮಾನವಾಧಮನಾದೆ
ಜ್ಞಾನ ಸುಧೃಡ ಭಕುತಿ ಆನಂದ ವಿರಕುತಿ
ಏನಾದರು ಲೇಶಾ ಕಾಣೆನು ಸರ್ವೇಶಾ
ನೀನೆ ಭಕುತರಾಧೀನವೆಂಬ ಬಿರಿದು
ನಾನಾ ಬಗೆಯಿಂದ ಕ್ಷೋಣಿಯೊಳಗೆ ಇಪ್ಪ
ದಾನುಬಲ್ಲೆನೊ ಸ್ವಾಮಿ ಸಾಣಿ ಪಿಡಿದಾಸುರಿಗೆ
ಅನಂತ ಕಲ್ಪದಲಿ ದಾಸವರ ಕುಲಕೆ ವಿಜಯವಿಠ್ಠಲ ನೀನೆ
ನಾನಪರಾಧಿಗನೊ ಎಣಿಸದಿರವಗುಣವ ೨
ತ್ರಿವಿಡಿ ತಾಳ
ಏಳು ಸಾಗರಕಧಿಕ ಭವಸಾಗರವೆಂಬುದು
ಆಳುದ್ದಗಲ ನೋಡೆ ಪರಿಮಿತಿ ತೋರದು
ಕೇಳುವುದಲ್ಲದೆ ಕಣ್ಣಿಗೆ ಕಾಣಿಸದು
ಹೇಳುವವರೆಲ್ಲ ದಾಟುವದರಿದು
ಬೀಳುವುದಕೆ ಕಿಂಚಿತು ತಡವಾಗದು
ಏಳುವುದಕೆ ಬಲು ದಿವಸ ಬೇಕು
ಆಲಿಸಿ ನೋಡಲು ಅತಿ ಸುಲಭವೆನಿಸುತಿದೆ
ಏಳಲವಲ್ಲವೊ ಗರ್ವವಿರೆ ಪಾ
ತಾಳಕದ್ದುವುದೈ ಸುಳಿಯೊಳಗಿಳುಹಿ
ತಾಳುವುದೆಂತು ನೀನೊಲಿಯದಿರೆ
ಹೋಳಲೆಯಿಂದ ಪೋಗುವದಲ್ಲ ಇದು ಹರಿ
ಗೋಲು ಹಾಕುವುದರಿಂದ ದಾಟುವುದಲ್ಲ
ಸಾಲ ತಿದ್ದುವುದಲ್ಲ ಕಂಡವರನ ಕಾಯ್ದು
ವಾಲಗ ಮಾಡಿ ಹೀಗಳವದಲ್ಲ
ಆಲೋಚನೆ ಮಾಡಿ ಕಳ ಕೊಂಬುವುದಲ್ಲ
ಆಳುತನ ಬಿಗಿವಿಡಿದು ಕೆಡುವುದಲ್ಲ
ಕೋಲಿಲ್ಲದ ಕೋತಿ ದಾಮಯಿಲ್ಲದ ಆವು
ಬಲು ಕಾಣೊ ಭವದ ಸುಖದುಃಖವು
ಚೇಳಿನಾ ಗಾದಿಗೆಯೊಳಗಿಳಿದಂತೆ ಹೀ
ಯಾಳಿಗೆಯಲ್ಲದೆ ಕಟ್ಟಕಡಿಗೆ
ಸೂಳೆ ಶೃಂಗಾರವೊ ಜರೆ ಬರಲವಳಿಗೆ
ಕಾಳೊಂದಾದರು ಕೊಟ್ಟು ಮನ್ನಿಪರೆ
ಕಾಲಗಾಣದ ಸಂಸಾರವೆ ಅನಿತ್ಯ
ನಾಳಿಗೆಂಬೊ ಚಿಂತೆ ತೊಲಗದಿದು
ಪಾಲಸಾಗರ ಶಾಯಿ ವಿಜಯವಿಠ್ಠಲ ನೀನೆ
ಆಳು ಮಾಡಿಕೊಳದೆ ಎನಗಾವ ಗತಿಯಿಲ್ಲ ೩
ಮಟ್ಟತಾಳ
ರತುನ ಬೆಲೆಯ ಹಾಕಿ ಪಲ್ಯವ ಕೊಂಡಂತೆ
ಗತಿಗೆ ಸಾಧನವಾದ ನಿನ್ನ ನಾಮಂಗಳು
ಕ್ಷಿತಿಯೊಳು ಶಾರೆ ತೌಡಿಗೆ ಬೀರಿ ಬಲು ಅನು
ಚಿತ ಕರ್ಮಂಗಳೆಲ್ಲ ಉಚಿತಹುದೆಂದು ನ
ಗುತ ಕಾಲ ಕಳೆವೆನೊ ಉದರಂಭರನಾಗಿ
ಮತಿಭ್ರಷ್ಟ ಮತಿಭ್ರಷ್ಟ ನಾನಯ್ಯ ನಾನಯ್ಯ
ಸತಿಯಿಲ್ಲದವನಿಗೆ ಮೊಮ್ಮಗನಿಹನೆಂದು
ಅತಿಶಯವಾಗಿ ಕೇಳಿದ ಮೂರ್ಖನಂದದಿ
ಕ್ಷಿತಿಯೊಳು ನಾನೊಬ್ಬ ಜ್ಞಾನ ಭಕುತಿ ವಿರ
ಕುತಿ ಯಿಲ್ಲದತಿ ಗತಿಯ ಕೇಳುವೆ ನೋಡು
ಕೃತಿ ಕಾರ್ಯನಾಗಿ ನಿನ್ನನು ಬೇಡಿದರೆ ಮು
ಕುತಿಗೆ ಮಾರ್ಗವೆ ಸರಿ ಅದು ಬಿಟ್ಟು ಧರ್ಮಕ್ಕೆ
ಪ್ರತಿಕೂಲವಾಗಿ ಸಜ್ಜನ ವೃತ್ತಿ ತೊರೆದು ಉ
ನ್ನತ ಕಾರ್ಯದಲ್ಲಿ ಸಂಚರಿಸದೆ ಮದದಲ್ಲಿ
ಪ್ರತಿಕಕ್ಷಿ ನಿನಗಿಲ್ಲ ವಿಜಯವಿಠ್ಠಲ ಶಾ
ಶ್ವತ ಮನದೊಡೆಯನೆ ನಿನ್ನವನೆಂತಾಹೆ ೪
ಆದಿತಾಳ
ಮನದ ಮಲಿನ ತೊಳೆಯದು
ಮನಸಿಜನಯ್ಯ ಕೇಳು
ತನುವೆ ನಿನ್ನದಾಗದೆ ಘನತೆ ಮತ್ತಾರದಲ್ಲಿ
ಇನಿತು ಮಾತಲ್ಲದೆ ಗುಣವ ನೋಡಿದರೇನು
ಫಣಿ ಸಂಚಾರವೆ ವಕ್ರ ಅನುದಿನವಾಗೆ ಪು
ತ್ತನು ಪೋಗುವಾಗಲು ನೆಟ್ಟಗೆ ಪೋಗಿ ಸೇರುವುದು
ಮನುಜ ನಾನು ವಿಷ ಪುಂಜನು ವಕ್ರ ನಡತೆಯವನು
ಬನಗು ಭವದ ಭವಣಿಯೊಳು ಚರಿಸುತಿಪ್ಪೆ
ಧನವೆ ಮೊದಲಾದ ಸೊಕ್ಕಿನಲಿ ತಿರುಗಿ ಕೆಟ್ಟೆ
ಕೊನೆಗೆ ನಿನ್ನ ಸ್ಮರಣೆಯಿಂದ ನಿನ್ನ ಪ
ಟ್ಟಣ ಸೇರುವುದಕ್ಕೆ ಕೊಂಕನು ಬಾರದಂತೆ ಮಾಡು
ಜನನ ಮರಣದೂರ ವಿಜಯವಿಠ್ಠಲ ಕೃಪಾ
ವನಧಿಯ ನಿನ್ನದೊಂದೆ ಅನುಗ್ರಹವಾಗಬೇಕು ೫
ಜತೆ
ಕರುಣಾಳು ವಿಜಯವಿಠ್ಠಲ ನಿನ್ನ ದಯವಾಗೆ
ಚರಣ ಹೊಳಿಯ ಗಾದೆವೈಭವೆಂಬೊವಾರಿಧಿ? ೬

ಮಂತ್ರ ಪುನಶ್ಚರಣೆಯಿಂದ ಅಗಾಧ

೫೩
ಧ್ರುವತಾಳ
ತಾರ ಮಂತ್ರವೆ ಜಪಿಸು ತವಕದಿಂದಲಿ ಭವ
ತಾರವಾಗುವದು ಲಾಲಿಸು ಚನ್ನಾಗಿ
ಈರೆರೆಡು ಶೀರ್ಷ ಪಿಂಡಿಕೃತವಾದ ಓಂ
ಕಾರ ನಿರಂತರಸಾರವೆನ್ನು ಏಕಾವರ್ಣ
ಶ್ರೀರಮಣ ನಾರಾಯಣನ ಪ್ರತಿಪಾದಿಸುತ್ತಿದೆ
ಮೀರಿದ ದೈವವೆಂದು ಒಲಿಸಿ ಒಲಿಸೀ
ತಾರತಮ್ಯವೆ ಉಂಟು ಇದನೆ ಗ್ರಹಿಸುವಲ್ಲಿ
ಆರಾರ ತಕ್ಕ ಯೋಗ್ಯತ ಸಾಧನ
ಭಾರತದಲ್ಲಿ ಕೇಳು ವೈದಿಕ ಲೌಕಿಕ ವ್ಯವ
ಹಾರ ಮಾತಿಗೆ ಇದೆ ಪ್ರಥಮ ವ್ಯಕ್ತಿ
ಕಾರಣ ಕಾರ್ಯದಲ್ಲಿ ವ್ಯಾಪ್ತವಾಗಿದೆ ವಿ
ಸ್ತಾರ ಬೊಮ್ಮಾಂಡದೊಳು ನಿಬಿಡಿಯಾಗಿ
ದ್ವೀರಷ್ಟ ಪಂಚ ಪಂಚ ಚತುರಷ್ಟಾ ಚಮುತಾಗಿ(?)
ಚಾರು ಪ್ರಕಾಶದಿಂದ ಅಭಿವ್ಯಕ್ತಿಯೊ
ಆರು ಎರಡರಿಂದ ತಿಳಿಯಬೇಕು
ಮೂರುತಿ ವಿಶ್ವ ತೈಜಸ ಪ್ರಾಙ್ಞ ತುರ್ಯಾತ್ಮ ಅಂ
ತರಾತ್ಮ ಪರಮಾತ್ಮ ಜ್ಞಾನಾತ್ಮ ಹರಿಯಾ
ಈ ರೀತಿಯಲ್ಲಿ ನೆನೆಸು ಒಂದೊಂದು ಸ್ಥಾನದಲ್ಲಿ
ವಾರವಾರಕೆ ಬಿಡದೆ ಹೃದಯಾದಲ್ಲಿ
ನಾರಾಯಣ ದೇವ ವಿಜಯ ವಿಠ್ಠಲರೇಯ
ಪಾರತಂತ್ರರಹಿತ ಸರ್ವಭೂತಸ್ಥ ಕಾಣೋ ೧
ಮಟ್ಟತಾಳ
ಪ್ರತಿ ಪ್ರತಿ ಮಂತ್ರಕೆ ಪ್ರಣವ ನುಡಿಯಬೇಕು
ಅತಿಶಯವನೆ ಕೇಳು ಆನಾದಿ ಇದೆ ಸಿದ್ಧ
ಯತಿಗಳಿಗೆ ಪ್ರಣವ ಮುಖ್ಯ ಸಾಧನ ಕಾಣೋ
ಇತರಾಶ್ರಮ ಜನಕೆ ಯೋಗ್ಯತೆ ತಕ್ಕ ನಿತು
ಸತತ ಚರಿಸಬೇಕು ಮನ ನಿರ್ಮಳರಾಗಿ
ಕ್ಷಿತಿಯೊಳಗೆ ಕೇಳಿ ಒಂದಾರಂಭಿಸಿ
ಚತುರ್ದಶ ಪರಿಯಂತ ಪ್ರಣವ ಪೇಳಲಿಬೇಕು
ಅತುಳ ಉಚ್ಚಾರಣೆ ಸಗರ್ಭ ಅಗರ್ಭವೊ
ಗತಿ ಚಿಂತಿಸುವುದು ಆದಿ ಮದ್ಯಾಂತದಲಿ
ಕೃತ ಭುಜರೊಡೆಯ ಸಿರಿ ವಿಜಯ ವಿಠ್ಠಲರೇಯನ
ತುತಿಸಿ ಕೊಂಡಾಡುವದು ಸಮೂತ್ರ್ಯಾದಿವೊಡನೆ
ತ್ರಿವಿಡಿತಾಳ
ಪ್ರಣವದಿಂದಭಿವ್ಯಕ್ತಿ ವ್ಯಾಹೃತಿ ನಾರಾ
ಯಣ ಮಂತ್ರ ಈರ್ವದಲ್ಲಿ ವಾಸುದೇವ ಮಂತ್ರ
ತ್ರಿಣಿ ವ್ಯಾಹೃತಿ ಬಿಟ್ಟು ಗಾಯತ್ರಿ ಮಾತೃಕ
ಗುಣಪೂರ್ಣ ಪೂಂಸೂಕ್ತ ವಿಷ್ಣು ಪರಮ ಮುಖ್ಯ
ಇನಿತಷ್ಟ ಮಹಾಮಂತ್ರ ನಾಲ್ಕೆಂಟು ಹನ್ನೆರಡು
ಮುನಿ ಸಪ್ತಾದಶ ನಾಲ್ವತ್ತೆಂಟು ಮ್ಯಾಲೆರಡು
ಎಣಿಸು ಹತ್ತು ಹತ್ತು ಆರು ಭಗವದ್ರೂಪ
ದಿನದಿನದಲಿ ವರ್ಣ ದೇವತಿಗಳನ್ನು ನೆನೆಸು ಅನುಕ್ರಮದಿಂದ
ಗುಣಪೂರ್ಣ ಹರಿ ನಾರಾಯಣ ವಾಸುದೇವ ಸವಿತೃನಾಮಕವ
ರಣಾಖ್ಯ ನಾಮಕ ಪುರುಷ ವಿಷ್ಣುದೈವವ, ಉಚ್ಚ
ರಣೆಯಿಂದ ಮಂತ್ರಸಿದ್ದಿ ಮುನಿಛಂದಸ್ಸು ಉಂಟು ಪ್ರತ್ಯೇಕ ಪ್ರತ್ಯೇಕ
ವಿನಿಯಂತ ಶಿರಸು ಮುಖ ಹೃದಯದಲ್ಲಿ ದೇವತೆ
ಮನೋವಾಚ ಕಾಯದಲ್ಲಿ ಧ್ಯಾನಗೈದು
ಮಿನುಗುವ ರವಿಕಾಂತಿ ದ್ವಯ ಚತುರ್ಭುಜ ಸುದ
ರ್ಶನ ಕಂಬು ಗದಾಂಬುಜ ಅನ್ಯಹಸ್ತ
ಮಣಿ ಭೂಷಣ ಸಚ್ಚಿದಾನಂದ ಗಾತ್ರ ಧ
ರಣಿ ರಮಾ ಉಭಯ ಪಾಶ್ರ್ವದಲ್ಲಿ ವೊಪ್ಪೆ
ವನಜ ಭವಾದ್ಯರು ಸೇವಿಸಿ
ಜನನ ಶೂನ್ಯ ನಮ್ಮ ವಿಜಯ ವಿಠ್ಠಲರೇಯನ
ಘನವಾಗಿ ಯೋಚಿಸುವುದು ಶ್ಯಾವವರ್ನಾ ೩
ರೂಪಕತಾಳ
ಇದಕಿಂತ ಮೊದಲೆ ಆಸನ ಶುದ್ಧಿ ಕರಶುದ್ಧಿ
ಪದೋಪದಿಗೆ ಬರುವ ಭೂತೋಚಾಟನೆ ಮುದದಿಂದ
ಉದಕಸ್ಪರಿಶ ಪ್ರಣವ ಮಿಗಿಲಾದ ವಿಧಿಗಳು ತಿಳಿದು
ವಿಧಿ ಪೂರ್ವಕದಿ ಸದಮಲ ಮೂಲಗುರುಗಳ ನಾಮದಿಂದಲಿ
ಒದಗಿ ನಮಸ್ಕರಿಸಿ ರೇಚಕ ಪೂರಕ
ತದನಂತರದಲ್ಲಿ ಕುಂಭಕ ಮೂರರಲ್ಲಿ ವಿಷ್ಣು
ವಿಧಿ ಶಂಭು ದೇವತೆಗಳ ಭಜಿಸಿ
ಇದಕೆ ಅವರವರ ಸಂಪ್ರದಾಯವೆ ಉಂಟು
ಉದಧಿಯಂದದಿ ಕಾಣೊ ಕವರ್ಇಗತಿಯು
ಮದ ಮತ್ಸರ ಬಿಟ್ಟು ತಮ್ಮ ಗುರಗಳು ಪೇ
ಳಿದ ತೆರದಿ ಪ್ರವರ್ತನ ಮಾಡಲು
ಪದವಿ ಅಹುದು ಸಿದ್ದ ಇದಕೆ ಸಂಶಯ ಸಲ್ಲ
ಹೃದಯದಲಿ ವಿಷ್ಣು ಬುದ್ಧಿ ಇರಲಿಬೇಕು
ಯದುಕುಲೋತ್ತಮ ನಮ್ಮ ವಿಜಯ ವಿಠ್ಠಲನು ಸ
ನ್ನಿಧಿಯಾಗಿ ಇಪ್ಪಾನೊ ಪಂಚಭೇದದ ಮತಿಗೆ ೪
ಝಂಪೆತಾಳ
ಮಂತ್ರೋಚ್ಚಾರಣ ವಿಹಿತಾ ಇಂತು ಇಪ್ಪದಾದಿ
ಅಂತೆ ನಾಮ:ಸ್ವಾಹ:ತದ್ಧೇವ ತ್ರಿಪಾದ
ಮುಂತೆ ಸೂಕ್ತಗಳು ಏಕೇಕಾವರ್ಣಾಭಿದಾನ
ಸಂತತ ಪ್ರಣವ ಸಂಯೋಗದಿಂದ ಕೆಲವು
ಇಂತಿವೆ ಕೆಲವು ವಿಹಾಯ ಪ್ರಣವದಿಂದ
ಸಂತ ಸಾರಹುದು ಮಧ್ಯತಾರಕವುಂಟು
ಸಂತ ಜನ ಜಪಿಸುವುದು ಯಾವತ್ತು ಪ್ರಕಾರ
ಕಂತುಪಿತರ ಸಂಬಂಧ ನಾರಾಯಣಾದಿ
ಪಿಂತೆ ಶ್ರೀ ಅಜ ವಾಯು ವಾಣಿ ಭಾರತಿ ಗರುಡ
ಮುಂತಾದ ದಿಕ್ಪಾಲಕ ಷಣ್ಮೊಗ ಗಣಪ ಪರಿ
ಯಂತ ಇತರ ಉನ್ನತ ಅಧಿಕಾರ ತಾರತಮ್ಯ
ಚಿಂತಾಮಣಿ ನಮ್ಮ ವಿಜಯ ವಿಠ್ಠಲ ಬಂದು
ಅಂತರಂಗದಲ್ಲಿ ಪೊಳೆವ ಕರ್ನಿಕೆಯಲ್ಲಿ ೫
ಅಟ್ಟತಾಳ
ಅಂಗ ಅಂಗುಲಿ ನ್ಯಾಸ ಹೃಚ್ಛಿರ ಸರ್ವಾಂಗ
ಇಂಗಡ ನಾಲ್ಕೈದು ಆರೆಂಟು ಹತ್ತು ಸಹಿತ
ತುಂಗವಾಗಿ ಗಾತುರದಿಂದಲಿ ದ್ವಾತ್ರಿಂಶತಿ
ಇಂಗಿತವಾಗಿ ನ್ಯಾಸಗಳು ಬಗೆ ಬಗೆ
ಮಂಗಳವಾಗಿ ದೇಹಾಧಾರದಲಿ ಕೃದ್ಧೋಲ್ಕಾದಿ
ತುಂಗಮಂತ್ರ ವರ್ಣ ಏಕೇಕಾದಿವ್ಯ ರೂ
ಪಂಗಳು ವಿಶ್ವಾಕಾಶವ ಕೇಶವಾದಿ
ಕಂಗೊಳಿಸುತಿಪ್ಪ ಜ್ಞಾನ ಐಶ್ವರ್ಯಾದಿ
ಶ್ರಿಂಗಾರ ಸೂಕ್ತ ತತ್ತ ಮಾತೃಕಾನ್ಯಾಸ
ಸಂಗೀತ ಲೋಲ ಶ್ರೀ ವೈಷ್ಣವೋಕ್ತಿಗೆ ಉಂಟು
ಸಾಂಗೋಪಾಂಗದಿಂದ ಅನ್ಯ ಮಂತ್ರಕೆ ಕೆಲವು
ತಿಂಗಳಿನಂತೆ ಶೋಭಿಸುತಿವೆ ಈ ಮಂತ್ರ
ಮಂ

ಮಧ್ವಸಿದ್ಧಾಂತದ ಪ್ರಕಾರ ದೇವತಾ ತಾರತಮ್ಯ ಮತ್ತು ದೈತ್ಯ

೫೨
ಧ್ರುವತಾಳ
ತಾರತಮ್ಯವೆ ಕೇಳಿ ನೀಚಕ್ರಮಾನುಸಾರ
ಮೂರಾರು ಭಕುತಿ ಭೇದ ಜ್ಞಾನದಿಂದ
ಮೂರು ಮೂರು ಮೂರು ವಿಧದೊಳು ನಿತ್ಯ ಸಂ
ಸಾರಿಗಳುಂಟು, ಸ್ವರ್ಗ ನಿರಯ ಭೂ ಪ್ರಾಚುರ್ಯರು
ಧಾರುಣಿಯೊಳಗಿವರಿಗಭಿಧಾನವಿಲ್ಲಾ ವಿ
ಸ್ತಾರ ರಾಜಸದವರು ಪ್ರಸಿದ್ಧ
ಘೋರ ತಾಮಸಿಗಳಿಗೆ ತಾರತಮ್ಯವೆ ಉಂಟು
ಬೀರುವೆ ಮತ್ತೊಂದು ಬರೆಹದಲ್ಲಿ
ಸಾರುವೆ ತಿಳಿ ಸರ್ವಜೀವಿಗಳೊಳು ಅ
ಪಾರ ನೀಚನು ನೀಚತಮ ಕಲಿಯು
ಸಾರುವೆ ಇಲ್ಲಿಂದಿತ್ತ ಮುಕ್ತಿಯೋಗ್ಯ ಜನರನ್ನು
ಹಾರೈಸಿ ಮನೋವಾಚಾ ಕಾಯದಲ್ಲಿ
ಬಾರಿ ಬಾರಿಗೆ ಇದನೆ ಪಠಿಸಿದವರಿಗೆ ವಿ
ಕಾರವಿಲ್ಲಾ ಕಾಣೊ ಇದ್ದ ಜ್ಞಾನ
ವೈರಾಗ್ಯ ಪುಟ್ಟುವುದು ಅಶೇಷವಾಗಿ, ತತ್ತ
ದ್ವಾರದಿಂದಲಿ ಬಿಂಬ ಕಾಂಬುವರು
ಸಾರಿರೈ ಸಾರಿ ಕೆಲಸಾರದೆ ಹರಿ ಬಂದು
ಸಾರೆದಲ್ಲಿ ಪೊಳೆವ ಅಡಿಗಡಿಗೆ
ಆರಾದರೇನು ಮತ್ತಾವನಾದರೆ ಏನು
ತಾರತಮ್ಯ ತಿಳಿಯದಲೆ ಮುಕ್ತಿ ಇಲ್ಲಾ
ವಾರಿಯ ನೆಲೆಗಂಡು, ತಿರುಗಾಡಿದಂತೆ:ವಿ
ಚಾರ ಲೇಶಾವಿಲ್ಲಾ ಚಿತ್ತಾದಲ್ಲಿ
ಮಾರುತ ಮೆಚ್ಚುವನು ಮುದದಿಂದ ಪಾಲಿಸುತ್ತ
ಸೇರಿಸುವನು ವೇಗ ಸುಜನರೊಡನೆ
ನಾರಾಯಣ ಸರ್ವಾಧಿಷ್ಠಾನದಲ್ಲಿ ಎನ್ನ
ಶಾರೀರದೊಳು ನಿಂದು ನುಡಿಸಿದ ಮಾತು
ಸ್ವಾರಸ್ಯವಾಗಲಿ ಆಗದೆ ಪೋಗಲಿ ಉ
ದ್ದಾರ ಮಾಡುವುದು ತಪ್ಪು ತಿದ್ದಿ
ಸೇರದು ಇದು ಮೂಲ ದುಷ್ಟ ಜನರ ಮನಕೆ
ಬಾರದು ಚನ್ನಾಗಿ ಒಲಿಸಿ ಪೇಳೆ ಭಾವ
ಓರಂತೆ ಎಲ್ಲ ಕೇಳಿ ಮುಕ್ತರ ಸ್ವಭಾವ
ಮೀರಿದಾನಂದದಿಂದ ಹಿಗ್ಗುತಿಹರು
ಮೂರಾರುಲಕ್ಷ ಕೋಟಿ ಸಂಖ್ಯೆ ಇಲ್ಲದ ನಮ
ಸ್ಕಾರ ಮಾಡುವೆನು, ತ್ರಿಕರಣದಿ
ಮೂರು ಭುವನದೊಳು ಸತ್ಕೀರ್ತಿವಂತರಾದ
ಧೀರ ಶ್ರೀಪಾದರಾಯ ವ್ಯಾಸರಾಯ
ಚಾರು ವಿಜ್ಞಾನ ದೀಪ್ತಾ ಪುರಂದರ ರಾಯ ಈ
ಮೂರು ಮಂದಿಯ ಪರಿಪೂರ್ಣವಾದ
ಕಾರುಣ್ಯದಳತಿಗೆ ಅರ್ಹನಾಗಿ ಹರಿಯ
ಚರಿತ್ರೆ ಪೇಳುವಂತೆ ಹರಕೆ ಇತ್ತು
ವಾರವಾರಕ್ಕೆ ಗುಣವಂತನ್ನ ಮಾಡುವ
ಭಾರ ನಿಮ್ಮದು ಎಂದೆಂದಿಗಾದರು
ಆರುವರ್ಗದಿ ಗೆದ್ದು ಪೂರ್ವೋತ್ತರವ ತಿಳಿವ
ದಾರಿಯ ತೋರುವುದು ಬಡುವೆ ದೈನ್ಯ
ವಾರಣದಿಂದಲಿ ತೃಣಲತೌಷಧ ಗುಲ್ಮ
ಭೂರುಹ ಇವು ಸ್ಥಾವರವೆನಿಪವು
ವಾರಿಸಂಚಾರ. ಕ್ರಿಮಿ ಪಕ್ಷಿ ಮೃಗಂಗಳೆಲ್ಲ
ನೂರು ಗುಣಕಾಧಿಕ, ಸ್ಥಾವರ ನೋಡೆ
ಬ್ಯಾರೆ ಬ್ಯಾರೆ ಎಣಿಸೆ ಒಂದರಿಂದಾರಂಭಿಸಿ
ನೂರು ಪರಿಯಂತರ ಸಾಗುತಿದೆಕೋ
ಈ ರೀತಿಯಲ್ಲಿ ಉಂಟು ಇವು ಜಂಗಮಗಳೆನ್ನಿ
ಪೂರುತಿಯಲ್ಲಿ ಎಲ್ಲಾ ಮುಂದೆ ಕೇಳಿ
ಮೂರೊಂದು ಜಾತಿ ವರ್ನ ಮನಜೋತ್ತಮರೆ ಉಂಟು
ಹಾರುವ ರಾಜನ್ಯ ವೈಶ್ವ ಶೂದ್ರ
ಆರೈದು ಕೇಳುವುದು ಅನುಲೋಮ ಪ್ರತಿಲೋಮ
ವಾರಿತಿ ಎಂಬೋದಕ್ಕು ಇವರಿವರೊಳಗೆ
ತುರಿಯಾಶ್ರಮ ವಾನಪ್ರಸ್ಥ ಗೃಹಸ್ಥ ಬ್ರಹ್ಮ
ಚಾರಿ ಎಂಬೋದಿಪ್ಪುದು ಪರಿಪರಿ ವಿಧದಿ
ವಾರಣದಿ ಜಂಗಮರ ನೋಡೆ ಮನುಜೋತ್ತಮರು
ನೂರು ಗುಣದಿಂದ ವೆಗ್ಗಳರು
ಧಾರುಣಿಪತಿಗಳು ಇವರಿಗಿಂತಲಿ ನಿತ್ಯ
ನೂರುಗುಣದಿಂದ ಉತ್ತಮರು
ನಿರಂಶವುಳ್ಳ ಮನುಜ ಗಂಧರ್ವರೆಲ್ಲಾ ಒಂದು
ನೂರು ಗುಣದಿಂದಧಿಕ ಕ್ಷಿತಿಪರ ನೋಡೆ
ನಾರದಾಮುನಿವಂದ್ಯ ವಿಜಯ ವಿಠ್ಠಲರೇಯ
ಆರಾಧಿಸಿ ಕೊಂಬನೀ ಪರಿ ಇವರಿಂದ ೧
ಮಟ್ಟತಾಳ
ಸುರ ಗಂಧರ್ವರೊಳು ಅಷ್ಟೋತ್ತರ ಜನರಾ
ವಿರಹಿತನ ಮಾಡಿ ಉಳಿದವರನೆ ಸ್ತುತಿಸಿ
ನರ ಗಂಧರ್ವ ನೋಡಿ ಕೊಳಲಾಗಿ
ಎರಡೈವತ್ತು ಗುಣಕೆ ಉತ್ತಮರೆನ್ನಿ
ಚಿರಪಿತೃಗಳು ಶತಗುಣದಿಂದಧಿಕರಯ್ಯ
ಹರಿಯಂಗಸಂಗ ಗೋಪಿಕಾಜನ ಉತ್ತ
ಮರು ಕಾಣೊ ನೂರು ಗುಣ ಇವರಿಗಿಂತ
ತರುವಾಯ ಅಜಾನಜ ದೇವತೆಗಳು
ಸುರ ಗಂಧರ್ವರೊಳು ಪೇಳಿದ ಶತ ಜನರು
ಎರಡೈವತ್ತು ಕಡಿಮೆ ನೂರು ಕೋಟಿ
ಪರಮ ಋಷಿಗಳು ಸರಿಯೆನ್ನಿ ಅಜಾನಜರಿಗೆ
ಹಿರಿದಾಗಿ ತಿಳಿ ಗೋಪೀ ಜನರಿಗಿಂತ
ಎರಡು ಗುಣದಿಂದ ಉತ್ತಮರು ಇವರು
ಎರಡೆಂಟು ಸಾವಿರ ಮೇಲೆ ನೂರು ಮಂದಿ
ಸುರಮೊಗನ ಮಕ್ಕಳು ಕೃಷ್ಣನ ಸತಿಯರು
ಅರಿವುದು ಮೂವತ್ತು ಜನ ಚಾರಣರು, ದೈ
ತ್ಯರು ಇಷ್ಟೇಮಂದಿ ಸರುವ ಜಾತಿಗಳೊಳಗೆ
ಮಿರುಗುತಿಪ್ಪರು, ಎಪ್ಪತ್ತು ಜನರುವೊಂದೆ
ಸರಿಗುಣದವರಯ್ಯಾ ಅಜಾನರ ಸಮರು
ಮರೆಯದಿರಿವರೊಳಗೆ ಸಿದ್ಧರು ನೂರು ಜನ
ಶರಣ ವತ್ಸಲ ನಮ್ಮ ವಿಜಯ ವಿಠ್ಠಲರೇಯ
ಮರೆಯದೆ ಇನಿತು ಮಾಡಿ ಕೊಡುತಲಿಪ್ಪ ೨
ರೂಪಕ ತಾಳ
ಪುಷ್ಕರ ಪರ್ಜನ್ಯನ ಮಡದಿ ಕೆಲವು ಸುಮ
ನಸರು ಉತ್ತಮರು ಅಜಾನಸುರರ ನೋಡೆ
ಬಿಸಜಮಿತ್ರನ ಪುತ್ರ ಶನೈಶ್ಚರನೆಂಬುವನು
ದಶಗುಣವೆಗ್ಗಳನು ಎಂದೆಂದಿಗೆ
ಉಷಾದೇವಿ ಉತ್ತಮ ಶನಿಕಿಂತ ಲಾಲಿಪುದು
ಶಶಿತನುಜ ಬುಧನು ಇರುತಿಪ್ಪನು ಸ್ವಲ್ಪದಲ್ಲಿ
ವಸುಜೇಷ್ಠನ ನಾರಿ ಸ್ವಾಹಾದೇವಿ ಉಷಾಗಿಂತ
ದಶಗುಣಕೆ ಉತ್ತಮಳು ಕೆಲವು ದೇವತಿಗಳು
ಬೆಸವೆ ಕಿಂಚಿತು ವೆಗ್ಗಳರಕೆಯ ನೋಡೆ
ಪೆಸರುಳ್ಳ ಜಯಂತ ಇವರಿಗೆ ಸಮಗುಣನು

ತಿರುಪತಿಯ ಶ್ರೀನಿವಾಸನನ್ನು ಪರಮಭಕ್ತಿಯಿಂದ

೪೯. ತಿರುಪತಿ
ರಾಗ:ನಾಟಿ
ಧ್ರುವತಾಳ
ತಿಮ್ಮಯ್ಯಾ ನಿನ್ನ ಪಾದವ ಒಮ್ಮೈಸಿದೆನೊ ನಾನು |
ಸುಮ್ಮನಿರದಿರು ರಮ್ಮೆಯರಸಾ |
ನಮ್ಮದು ಎಂದೆಂದು ಈ ಮನದಲಿ ಬಲು |
ಹಮ್ಮಿಲಿ ತಿರಿಗಿದೆ ಹಿಮ್ಮೆಟ್ಟಿದೆ |
ಹೆಮ್ಮನೆ ಹಿತ್ತಲಿ ಹೆಮ್ಮಕ್ಕಳ ಹೊನ್ನು |
ಹಮ್ಮೆಣಿವುಳ ಸಂಭ್ರಮದಲ್ಲಿ |
ಒಮ್ಯಾದರೂ ನಿನ್ನ ನೆಮ್ಮದೆ ಆವಾಗ |
ವಿಮ್ಮಡಿ ದುಷ್ಕರ್ಮ ರಮ್ಮಿಸಿದೆ |
ಉಮ್ಮಳಿಕೆಯಿಂದ ಹಮ್ಮತಿಯೊಳಗಿದ್ದು |
ಗಿಮ್ಮನೆ ಸುತ್ತಿದೆ ಮಮ್ಮಾಡಿಯಲಿ |
ನಮ್ಮಯ್ಯಾ ಬ್ರಾಹ್ಮಣಪ್ರಿಯ ವಿಜಯವಿಠಲ |
ದಮ್ಮಯ್ಯಾ ನಮಿಸುವೆ ಎಮ್ಮನುದ್ಧರಿಸೊ ೧
ಮಟ್ಟತಾಳ
ನಿನ್ನ ಚರಣ ಮೋಹನ್ನ ಚರಣ ನಿನ್ನ ಚರಣ ಸಂಪನ್ನ ಚರಣ |
ನಿನ್ನ ಚರಣ ಬಲುವಂತ ಚರಣ ನಿನ್ನ ಚರಣ ಪ್ರಸನ್ನ ಚರಣ |
ನಿನ್ನ ಚರಣ ರತುನ್ನ ಚರಣ ನಿನ್ನ ಚರಣ ಪಾವನ್ನ ಚರಣ |
ವನ್ನು ಧ್ಯಾನಿಸಲು ಎನ್ನಘಪಾಶ ಕಣ್ಣಿನ ಕುಣಿಕೆ |
ತನ್ನಿಂದಲಿ ತಾನೆ ಭಿನ್ನವಾಗುವದು |
ಅನಂತರೂಪ ವಿಜಯವಿಠಲ |
ಕಣ್ಣಿಗೆ ತೋರೊ ನಿನ್ನ ಚರಣ ೨
ತ್ರಿವಿಡಿತಾಳ
ಜಗದೊಳಗುಳ್ಳ ನದಿಗಳು ಕ್ಷೇತ್ರಂಗಳು |
ಗಗನ ನಾಗಲೋಕದಲ್ಲಿದ್ದವೊ |
ಅಗಣಿತ ಮಹಿಮ ನಿನ್ನುಗರಾಶ್ರಯವ ತೊ |
ಲಗದೆ ಮಾಡಿಕೊಂಡಿಪ್ಪದೆಂದು |
ನಿಗಮ ತತಿಗಳು ಪೊಗಳುತಲಿವೆ ಹಿಂ |
ದೆಗೆಯದೆ ಮನ ಬಲು ಉಬ್ಬಿನಲ್ಲಿ |
ಭಾಗಘ್ನನಾಮ ಸಿರಿ ವಿಜಯವಿಠಲ ನಾನು |
ಮಿಗಿಲಾವದು ಕಾಣೆ ನಿನ್ನ ಪಾದವಲ್ಲದೆ ೩
ಅಟ್ಟತಾಳ
ಮೂರುವರೆ ಕೋಟಿ [ತೀರಥ]ದಲ್ಲಿ ಪೋಗೆ |
ವಾರವಾರ ಒಂದೆ ಸಾರಿಗೆಯಲಿ ಮುನ್ನಾರು ಕಲ್ಪದಲ್ಲಿ |
ಮೀರದೆ ಸ್ನಾನಾದಿ ಪೂರೈಸಿ ಮಾಡಲು |
ಧಾರುಣಿ ಸುರನಾಗಿ ನಾರಾಯಣ ಶೃಂ |
ಗಾರದ ಪಾದವ ಧಾರಣೆಯಿಂದಲಿ |
ಸಾರಿದ ಮಾತುರಪಾರ ಫಲವುಂಟು |
ಆರಾದರು ಸಾರಲೌಂಪರೊ ಶ್ರೀ |
ನಾರಾಯಣನ ವಿಸ್ತಾರ ಮಂಗಳ ವಾರ್ತಿ |
ಕೀರುತಿ ಸತ್ಕೀರ್ತಿ ವಿಜಯವಿಠಲ ನಿನ್ನ |
ಶೇರಿದೆ ಎನ್ನಯ ಭಾರ ವಿನ್ನಾರದು ೪
ಆದಿತಾಳ
ಅಚ್ಚುತ ನಿನ್ನ ಚರಣ ನಿಚ್ಚ ಬಿಡದೆ ಸ್ಮರಣೆ ಮಾಡೆ |
ಬೆಚ್ಚಿಸಿದ್ದ ಪಾಪಗಳು ಕೊಚ್ಚಿ ಹರಿದು ಪೋಗುವವು |
ಅಚ್ಚಗತಿಗೆ ನೆನದಾಗ ನಿಚ್ಚಣಿಕೆ ಎನಿಸುವದು |
ಅಚ್ಚುತ ಅಚ್ಚುತ ನಿನ್ನ ನೆಚ್ಚದಾಗದೆ ಬರಿದೆ ಪೋಪೆ |
ಅಚ್ಚ ದೈವ ವಿಜಯವಿಠಲ ಬಚ್ಚಲಗಲ್ಲನು ಮಾಡಿ |
ಮೆಚ್ಚಿನಿಂದ ನಿನ್ನ ನಿತ್ಯ ಮೆಚ್ಚಿ ಭಜಿಸುವಂತೆ ನೋಡೋ ೫
ಜತೆ
ತೀರ್ಥಾದಿಗಳು ನಿನ್ನ ಪಾದದಲ್ಲಿ ಉಂಟಯ್ಯಾ |
ಅರ್ಥಾ ವಿಜಯವಿಠಲ ನಿನ್ನ ಚರಣ ಬಿಡೆನಯ್ಯಾ ೬

ರು ಭಾರತದ ಮುಖ್ಯನದಿ

೧. ತೀರ್ಥಸ್ತೋತ್ರ
ಧ್ರುವತಾಳ

ತೀರ್ಥಾಭಿಮಾನಿಗಳಿರೇ ವಂದಿಸುವೆನು ನಿಮಗೆ |
ಸ್ವಾರ್ಥಕ ಮತಿಬಿಡಿಸಿ ನಿತ್ಯ ಪಾರ |
ಮಾರ್ಥಿಕ ಜ್ಞಾನವ ಕೊಟ್ಟು ಕರುಣದಿಂದ |
ಸಾರ್ಥಕ ಮಾಡಿಸುವುದು ಸಕಲ ಪುಣ್ಯ |
ತೀರ್ಥಕ್ಷೇತ್ರ ಮೂರ್ತಿಯಲ್ಲಿದ್ದ ಭಗವಂತ |
ಸಾರ್ಥಿಯಾಗಲಿ ಎನಗೆ ದಿನ ಪ್ರತಿದಿನ |
ಸಾರ್ಥಿಕನಂತೆ ಮಾಡಿದ ಕರ್ಮಕಲಕಾಲ |
ವ್ಯರ್ಥವಾಗುವ ಪರಿ ಮಾಡದಿರೀ |
ಅರ್ಥ ಆತುಬಿಡಿಸಿ ಭಗವದ್ಗೋಸುಗ ಅ |
ನರ್ಥಾಂತರ ಜ್ಞಾನ ಪಾಲಿಸಬೇಕು |
ಪ್ರಾರ್ಥನೆ ಮಾಡುವೆ ಪ್ರಯಾಸವಾಗದಂತೀ |
ಪಾರ್ಥಿವದೊಳಗಿದ್ದು ಧನ್ಯನ ಮಾಡೀ |
ಆರ್ಥ ಪಂಚಮಿಕ್ಕಮಾನಿಗಳು ಯ |
ತಾರ್ಥ ಜ್ಞಾನವೆ ಕೊಡಲಿ ನಿಮ್ಮಿಂದಲೀ, ಮೂ |
ಹೂರ್ತವಾದರು ಕಾಲ ಬರಿದಾಗದಂತೆ, ಕೃ|
ತಾರ್ಥನ್ನ ಮಾಡುವುದು ಎಲ್ಲಿದ್ದರೂ |
ತೀರ್ಥಪಾದ ನಮ್ಮ ವಿಜಯ ವಿಠಲ, ಸ|
ರ್ವಾರ್ಥ ಪ್ರದಾತನೆಂಬೊ ಮುಖ್ಯಜ್ಞಾನವೆ ಇರಲಿ ೧
ಮಟ್ಟತಾಳ
ಆವಾವ ತೀರ್ಥದಲಿ ವಾಸವಾಗಿದ್ದ |
ದೇವತತಿಗಳಿರೇ ಧೈರ್ಯವನೆ ಇತ್ತು |
ಪಾವನ ಮಾಡುವುದು ಸ್ನಾನಾದಿ ಎಲ್ಲಿದ್ದ |
ದೈವವಶದಿಂದ ಬೇಡಿಕೊಂಬೆನೊ ನಿಮ್ಮ ನಾ |
ಸಾವಂಶರಾಗಿ ಸಂಚರಿಸುವ ಯೋಗ |
ಆವಾವ ಕಾಲಕೆ ಅಪ್ರತಿಯಾಗಿದೆ |
ದೇವದೇವೇಶ ಸಿರಿ ವಿಜಯವಿಠಲನ್ನ |
ಭಾವದಲ್ಲಿ ಭಜಿಪ ಭಾಗ್ಯವಂತರೆ ಸತತ ೨
ತ್ರಿವಿಡಿತಾಳ
ದಶ ಇಂದ್ರಿಯಂಗಳಲ್ಲಿ ಬಲು ಬಊದೆ ಬಗೆಯಿಂದ |
ದಶ ದಿಕ್ಕುಗಳ ತಿರುಗಿ ಮರೆಯಾದೆ ಇಲ್ಲದೆ |
ಅಶನ ಉದಕ ದ್ರವ್ಯ ವಸ್ತ್ರ ಮುಂತಾದ ಘ |
ಪ್ರಸರ ಕೋಟಿಯೊಳಗೆ ಮುಣಿಗಿ ತೇಲಿ |
ಕುಶಲಗತಿಯ ಮರದು ಕೈಕೊಂಡು ದೇಹ ಪಾ |
ಲಿಸಿಕೊಂಡೆ ನಾನು ನನ್ನದು ಎನುತಲಿ |
ಬೆಸನ(ನೆ) ಕೇಳಿ ಸರ್ವತೀರ್ಥವಾಸಿಗಳೆ ಮಹ |
ಪುಶಿ ಮೊದಲಾದ ಪಾಪ ಪ್ರವರ್ತಕ |
ತ್ರಿಸರೇಣು ಕಾಲವಾದರು ಪುಣ್ಯ ಮಾಧವ |
ಪಶುಮನುಜನು ನಾನು ಎನ್ನ ನೋಡಿ |
ಉಸರಲೇನು ಇನ್ನು ನಾಲಿಗೆಂಬೋದಿಲ್ಲ |
ಯಶಸು ನಿಮ್ಮದು ಮುಂದೆ ಪೊರೆವ ಭಾರ |
ವಸುಧಿಯೊಳಗೆ ಆವಪರಿಯುಂಟೊ ತಿಳಿಯೆ ವಂ |
ದಿಸುವೆನೊ ತಲೆವಾಗಿ ತವಕದಿಂದ |
ಋಷಿ ಛಂದಸ್ಸು ದೇವತ ಗೋಳಕ ಚಿಂ |
ತಿಸುವ ಮತಿ ಕಾಣೆನೊ ತೀರ್ಥದಲ್ಲಿ |
ಹಸಿವೆಗೋಸುಗ ಅನ್ನ ಉಂಡಂತೆ ಅಲ್ಲದೆ |
ಬೆಸಸೂವೆ ಎನ್ನ ಕರ್ಮಾಚರಣೆ |
ದಶಮೂರ್ತಿ ವಿಜಯವಿಠಲರೇಯನ ಪಾದ |
ವಶಮಾಡಿಕೊಂಡಿಪ್ಪ ಜ್ಞಾನಯೋಗಿಗಳೆ ೩
ಅಟ್ಟತಾಳ
ಮುಗ್ಧ ಜನರೊಳಿದ್ದು ಮಾಡಿದ ಕರ್ಮವ |
ದಗ್ಧ ಮಾಡುವುದು ದಯದೃಷ್ಟಿಯಲಿ ನೋಡಿ |
ದಿಗ್ದೇಶದೊಳು ನಿಮ್ಮ ಮಹಿಮಿಗೆ ಎಣೆಗಾಣೆ |
ದಿಗ್ದಂತಿಗೆ ಅಂಕುಶ ಒಂದು ಸಾಲದೆ |
ದಿಗ್ದಂಡಮಾಡು (ವೆ) ಅತಿ ಪ್ರತಾಪರಿಗೆ ಈ |
ಳುಗ್ಧಳ ಹಿಂದು ಮಾಡುವದು ಅರಿವೆ |
ದುಗ್ದಾಬ್ಧಿಶಯನ ವಿಜಯ ವಿಠಲನಂಘ್ರಿ |
ಹೃದ್ಗಣಿ ನೋಡುವ ದೇವದಾಸಕ್ಕೆ ನಮೊ ೪
ಆದಿತಾಳ
ಪ್ರತಿ ಪ್ರತಿ ತೀರ್ಥದಲ್ಲಿ ಪ್ರತಿ ಪ್ರತಿ ದಿವಸದಲ್ಲಿ |
ಪ್ರತಿ ಪ್ರತಿ ಸ್ನಾನಂಗಳು ಮಾಡುವ ಜಲಂಗಳು |
ಪ್ರತೀಕಾವೆ ನಿಮಗೆಂದು ತಿಳಿದು ಆಮೇಲೆ ಮಿ |
ಳಿತ ಚತುರ್ಬಗೆ ಗ್ರಹಿಸಿ ಮತ್ತೆ ತೇಜೋಮಯ |
ಗತಿ ತಪ್ಪದಂತೆ ನೋಡಿ ಆ ತರುವಾಯ ಮ|
ರುತ ದೇವ (ತ) ಸಂದ್ಗತ ಲಕ್ಷ್ಮಿ ನಾರಾಯಣ |
ಇತರಾಲೋಚನೆ ಸಲ್ಲಾ ದ್ರವರೂಪ ಸರ್ವವೆಂದು |
ಮತಿಯಿಂದ ತಿಳಿವಂತೆ ಭಕುತಿಯ ಕೊಡುವುದು
ಮಜ್ಜನಾದಿ ಕಾಲಕ್ಕೆ |
ನುತಿಸುವಿ ಎನ್ನ ಕಲಿಕಲ್ಮಷವ ಕಳೆದು |
ಹಿತವಾಗಿ ಕಾವುದೆಲ್ಲಾ ಸಾರ್ಥ ತ್ರಿಕೋಟಿ ದೇವ|
ರತಿ ಪತಿ ಪಿತ ನಮ್ಮ ವಿಜಯವಿಠಲರೇಯಾ | ೫
ಜತೆ
ಎಲ್ಲೆಲ್ಲಿ ಎನ್ನ ಬೆಂಬಲವಾಗಿ ಇದ್ದು ಭೂ |
ವಲ್ಲಭ ವಿಜಯವಿಠಲನ್ನ ತೋರಿಸುವುದು ೬

ತೃಣ ಜೀವರಿಂದ ಹಿಡಿದು ಬ್ರಹ್ಮ ದೇವರವರೆಗೆ

೫೪
ಧ್ರುವತಾಳ
ತೃಣ ಪ್ರಾರಂಭ ಮಾಡಿ ಪರಮೇಷ್ಠಿ ಪರಿಯಂತ
ಎಣಿಸಿ ಗುಣಿಸುವುದು ತಾರವ್ಮ್ಯದಿ
ಗಣನೆ ಉಂಟು ಕೇಳೊ ಒಂದೊಂದು ಬೊಮ್ಮಾಂಡಕ್ಕೆ
ಅನುಮಾನ ಮಾಡಸಲ್ಲಾ ಗುಣವಂತರು
ಜನಿಸುವರು ಚರ್ಮ ಭಾವಿ ಯೋಗ್ಯತ ಸಾ
ಧನ ಜೀವಿಗಳು ಪ್ರವಾಹದಂತೆ
ವನಜಸಂಭವನೊಬ್ಬ ಸಂಪೂರ್ಣ ಬಿಂಬ ದ
ರ್ಶನ ಕಾಂಬಾ ಸರ್ವದಾ ಬಹುಪ್ರಕಾರ
ಅನಿಲ ದೇವನು ಮುಖ್ಯ ಉಳಿದವರಿಗಿಂತ
ಮನದಿಚ್ಛೆಯಲ್ಲಿ ಸ್ಪಷ್ಟತ್ವ ಭೇದ
ದಿನದಿನದಲ್ಲಿ ಎನ್ನಿ ಮಿಕ್ಕಾದ ತೊಂಭತ್ತೆಂಟು
ಜನರು ಲಾತವ್ಯರೆಂದು ಕರೆಸುವರು
ಎಣಿಕೆ ಮಾಡಿ ಇಲ್ಲಿಗೆ ಶತ ಜನರನ್ನು ನಿತ್ಯ
ಘನವಾಗಿ ಯೋಗ್ಯತಾ ಅಪರೋಕ್ಷವೋ
ಇನಿತು ನೋಡಿರೊ ಮಿಗಿಲಾದ ಶತ ಜನ ಸಾ
ಧನ ದೇಹದವರೆಂದು ಕೊಂಡಾಡಿರೊ
ಅನಿಲ ವಿರಂಚಿ ಹರಿಯಿಂದಲೆ ಉತ್ಪತ್ತಿ
ಜನನ ಇಲ್ಲವೊ ಕಾಣೊ ಅನ್ಯರಿಂದ
ವನಜ ಸಂಭವ ವಾಯು ಇದ್ದಲ್ಲಿ ಸರ್ವರು
ಮನೆ ಮಾಡಿಕೊಂಡಿಪ್ಪರು ಹರಿ ಕೃಪೆಯಲಿ
ತೃಣ ಸ್ವರೂಪದಲ್ಲಿ ಅನಲವ ಕಾಲ ಬಿಡದೆ
ಗುಣರೂಪ ಕ್ರಿಯಾದಲ್ಲಿ ಹರಿ ದರುಶನ
ವನಜ ಭವಾಂಡದೊಳಗೀರ್ವರಿಗೀರ್ವರಿಗಧಿಕಾರ
ಅನುವಾಗಿ ಇಪ್ಪದು ತತ್ವ ಸಹಿತ
ಗುಣತ್ರಯ ಪರಿಯಂತ ಅಂಶಿ ಪ್ರಕಾಶ ವ್ಯಾಪ್ತಿ
ಸನುಮತ ಮೇಲೆ ಅಂತ:ಕರುಣ ಜನ್ಯ
ಜನನವೆ ಇನ್ನೂರು ಜನಕೆ ಉಳಿದ ಋಜು
ಗಣವೆಲ್ಲ ಅಸೃಜ್ಯರಾಗಿಪ್ಪರೊ
ಅನುದಿನ ಇವರೆಲ್ಲ ಜ್ಞಾನವಂತರೊ ಸ
ಜ್ಜನ ಶಿರೋಮಣಿಗಳೊ ನಿರ್ದೋಷರೊ
ಗಣನೆ ಇಲ್ಲದ ರೂಪ ತೆತ್ತಕಾಲಕ್ಕು ಸು
ಗುಣ ವಾರಿಧಿಗಳೆನ್ನು ಪ್ರಳಯ ಸಹಿತ
ಕ್ಷಣ ಒಂದಾದರು ಈ ಜನಕೆ ಲೇಶ ಮಾತ್ರ
ದನುಜಾರಾವೇಶವಿಲ್ಲ ಎಲ್ಲಿದ್ದರು
ಇನಕೋಟಿ ತೇಜಾ ನಮ್ಮ ವಿಜಯ ವಿಠ್ಠಲನಂಘ್ರಿ
ವನಜ ಧ್ಯಾನವನು ಮಾಳ್ಪರು ಆಧಿಕಾಧಿಕವಾಗಿ ೧
ಮಟ್ಟತಾಳ
ಗರುಡ ಶೇಷಾದಿಗಳ ಗಣ ವುಂಟು ಪು
ಷ್ಕರ ಪರಿಯಂತವು ಎಣಿಕೆ ಮಾಡಿದರು ವಿ
ಸ್ತರ ಮಹಿಮೆಗಳನ್ನು ಇವರಿವರ ಜನನ
ತರತಮ್ಯದನುಸಾರ ಅಪರೋಕ್ಷ ಸಾಧನ
ಶರೀರಗಳೆನ್ನು ಒಂದಾನಂತವಾಗಿ
ಪರಿಮಿತ ಅಂಶಗಳು ಮನಸ್ತತ್ವದ ತನಕಾ
ನಿರುತ ವ್ಯಾಪ್ತಿಗಳಯ್ಯಾ ಇದರೊಳು ಖಗ ಸರ್ಪೇ
ಶ್ವರ ಅಹಂಕಾರದಲ್ಲಿ ಸ್ಥಿರವಾಗಿ ಇದ್ದು ತತ್ತದ್ವ್ಯಾಪಾರ
ತಿರೋಭಾವನೆ ಇಲ್ಲ ಕಲ್ಪವೆ ಭೇದ
ಹರಿ ದರ್ಶನದಲ್ಲಿ ಕ್ರಮೇಣ ಅಭಿವೃದ್ಧಿ
ಚರಮ ಶರೀರಕ್ಕೆ ಪೂರ್ಣ ಭಕುತಿ ಯೋಗ್ಯರು
ಅರಿವುದು ಇವರಿಗೆ ಅಸೃಜ್ಯಾ ಕಾಲಕ್ಕು
ಗರುವತನವೆ ಇಲ್ಲ ಅವತಾರಾವೇಶ
ಧರೆಮೇಲೆ ಬಂದಾಗ ಅನುರಾವೇಶದಿಂದ ಮಾನಿಸಾನ್ನ ಉಣಲು
ಮರೆವು ಪುಟ್ಟುವುದು ಅವರವರ ಯೋಗ್ಯತ ಕಾಲ ಭೇದವೆನ್ನಿ
ಪರಮ ಮುಖ್ಯಸ್ವಾಮಿ ವಿಜಯ ವಿಠ್ಠಲರೇಯ
ಸರಸಿಜಾಂಡದೊಳು ಈ ಪರಿ ವ್ಯಾಪಾರ ಮಾಳ್ಪ ೨
ತ್ರಿವಿಡಿ ತಾಳ
ಗರುಡ ಪನ್ನಗ ಜೀವರು ಅಷ್ಟಶತ ಈರ್ವರು
ಸರಿ ಎನ್ನಿ ಗುಣ ರೂಪ ಕ್ರೀಯಾದಿಗಳಲ್ಲಿ
ತರ ತಮ್ಯವೆ ಉಂಟು ಭಿನ್ನ ಚರಿತೆ ನೋಡು
ಚರಿಸುವರು ಒಂದೊಂದು ನೀತಿಯಲ್ಲಿ
ಸುರಪಸ್ವರ ಪದಸ್ಥರು ನಾಲ್ವತ್ತು ಜನ ಅಹಂ
ಮರುತ ಮೂವತ್ತಾರು ಜನರು ಸಿದ್ಧಾ
ಗುರು ಮನು ಮುಂತಾದ ಜನಪದಸ್ಥರು ಮೂವ
ತ್ತೆರಡು ಸಿದ್ಧ ಮೇಲೆ ಇಪ್ಪತ್ತು ನಾಲ್ಕು ಜನ
ಮರೀಚೆಗಳೆನ್ನ ಸೂರ್ಯಾದ್ಯರು ಇಪ್ಪತ್ತು
ವರುಣ ನಾರದ ವಿಡಿದು ಮಿತ್ರಾದಿಗಳ ತನಕ
ನೆರೆದರೈ ಹದಿನೆಂಟು ಹದಿನೆಂಟು ಜನರು
ತರುವಾಯ ಉಕ್ತ ಶೇಷರು ಹದಿನಾರು ವಿ
ವರಿಸುವೆ ಇವರೊಳು ಗುಣ ತಾರತಮ್ಯವೋ
ಪರಮೇಷ್ಠಿ ಮಾನಸ ಪುತ್ರರು ಹದಿನಾಲ್ಕು
ಪರಿಜನ್ಯರಾರಂಭಿಸಿ ಪುಷ್ಕರಾಂತ
ಯೆರಡಾರು ಜನರೆನ್ನು ಸಮ ಜೀವರೊಂದೊಂದು
ಮರಳೆ ಕರ್ಮ ದೇವತೆಗಳೀರೈದರೋ
ಅರಸುಗಳೊಬ್ಬಬ್ಬರೆಂಟು ಮಂದಿ ಗಣಿತ
ಅರಿಕೆ ಯಿಲ್ಲದೆ ಸುರರು ಅಗ್ನಿ ಪುತ್ರರು ಮಿಕ್ಕ
ವರು ಬ್ಯಾರೆ ಬ್ಯಾರೆ ಆರೇಳು ಮಂದಿ
ಸುರಗಂಧರ್ವರು ನಾಲ್ಕು ಮತ್ರ್ಯಾಂತ ತೃಣ ಜೀವಕ್ಕೆ
ಪರಿಮಿತ ಇಲ್ಲವೋ ನಿರಂಶರೊ
ಹರಿಯೇ ಈ ಪರಿಯಿಂದ ಕಲ್ಪ ಕಲ್ಪಕೆ ನಿಂ
ದಿರದೆ ಪುಟ್ಟಿಸುತಿಪ್ಪಾ ಅಸೃಜ್ಯರಾ
ಕರುಣಾಕರ ಮೂರ್ತಿ ವಿಜಯ ವಿಠ್ಠಲರೇಯ
ನಿರವೈರರ ಕೂಡ ಇಂತು ನಲಿದಾಡುವಾ ೩
ಅಟ್ಟತಾಳ
ಇದರೊಳು ಕ್ರಮವುಂಟು ಒಂದೊಂದು ಜನತಮ್ಮ
ಪದವೀಯಸಾರಿ ವಿಲಿಂಗರಾದ ಮೇಲೆ
ಒದಗಿ ಬಾಹೋರು ಸಲಿಂಗರು ವೇಗದಿ
ನದಿ ಪ್ರವಾಹದಂತೆ ಕಾಲ ವ್ಯವಧಾನ
ವಿಧಿಶಿವ ಮಿಕ್ಕಾದ ಜನರೆಲ್ಲ ಜತ್ತಾಗಿ
ಮುದದಿಂದ ಸೋಪಾನ ಬಂದಂತೆವೋ
ಇದರಲ್ಲಿ ಪೂರ್ಣ ವಿಭೂತಿ ಲಕ್ಷಣ ನವ
ವಿಧ ಭಕುತಿಯುಳ್ಳ ಚರಮ ಶರೀರಿಗ
ಳುದುಭವಿಸುವರು ಒಬ್ಬರೊಬ್ಬರ ಮುಂದು
ಇದರ ತರುವಾಯ ಅಪರೋಕ್ಷವಾದ ಗಣದ ಮಧ್ಯದಲ್ಲಿಗೆ
ಸದಮಲ ಸಂಖೈಗೆ ಒಂದೊಂದು ಕಡಿಮೆ ಚೇತ
ನದ ಲೆಕ್ಕವ ನೋಡು ಸ್ಪಪ್ಟತ್ವದಲ್ಲಿ ಭೇದ
ಇದರಲ್ಲಿ ಸಾಧನ ಸಾಧ್ಯ ಪದಸ್ಥ ತ್ರಿ
ವಿಧವೆನ್ನು ಬಿಂಬಾ ಬಿಂಬೋಪಾಸನೆ ಅಧಿ
ಕಾಧಿಕವಾಗಿ ಮಾಡುತಲಿಪ್ಪರು
ಪದುಮ ಭವಾಂಡ ಸಮೇತ ತೃಣಾದ್ಯರ

ತೃಣ ಜೀವರಿಂದ ಬ್ರಹ್ಮ ದೇವರವರೆಗೆ

೫೬
ಧ್ರುವತಾಳ
ತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು
ವನಚರ ಖಗ ಮೃಗ ನಾನಾ ಪರಿಯೂ
ಮನುಜ ಕ್ಷಿತಿಪ ಮನಜ ಗಂಧರ್ವ ಪರಿಯಂತ
ಎಣಿಕೆ ಮಾಡಿದರಾಗೆ ಅವಿಭೋಕ್ತರು
ಗುಣಿಸಿ ನೋಡಲು ಇದರ ಗಣಿತ ಅಪರಿಮಿತ
ಕೊನೆ ತಿಳಿದವನಿಲ್ಲ ಎಂದೆಂದಿಗೆ
ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು
ಜನನ ಪ್ರಭೇದದಿಂದ ಪ್ರಾಚುರ್ಯರು
ಗುಣದಿಂದ ಓರ್ವರೋರ್ವರಧಿಕವಾಗಿಪ್ಪರು
ಜನುಮ ಜನುಮದಲ್ಲಿ ವೃತ್ತಿ ಜ್ಞಾನ
ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ
ದಿನ ಪ್ರತಿದಿನ ಕರ್ಮವಶದಿಂದಲಿ
ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ
ದಿನ ಪ್ರತಿದಿನ ಕರ್ಮವಶದಿಂದಲಿ
ತನು ಸಮೇತವಲ್ಲದೆ ಏಕಾಂಶದಲ್ಲಿ ಸಲ್ಲಾ
ಅನುಮಾನ ಇದಕಿಲ್ಲ ಇವರಿಗೆ ಪೆಸರು ಕಾಣೋ
ಮನದೊಳು ತಿಳಿ ಇವರ ತರುವಾಯದಿ
ಅನಿಮಿಷ ಗಂಧರ್ವ ಬೊಮ್ಮಾದಿವಿಡಿದು ಯೋ
ಚನೆ ಮಾಡು ಮೂವತ್ತು ಮೂರು ಕೋಟಿ
ಮಿನಗುತಿಪ್ಪರು ಎಲ್ಲಿ ಸಾಂಶರು
ನೆನೆದು ಧನ್ಯನಾಗೊ ನಾನಾ ಪರಿಯಿಂದ
ಅನುನಯದಲಿ ನಾಲ್ಕು ಬಗೆಯಲಿಪ್ಪಾ
ಜನರುಂಟು ಮುಖ್ಯಾಮುಖ್ಯ ತಾತ್ವಿಕ ಯೋ
ಚನೆ ಮಾಡು ಆತಾತ್ಮಿಕರಾಜಾನಜರ
ಗಣನೆಯಾದುದಕೆ ಒಕ್ಕಣಿಸು ವರ್ತಮಾನ
ವನಜ ಸಂಭವನಿಡಿದು ಋಭು ಗಣಾಂತ
ತನವು ಧರಿಪ ಸಂಖ್ಯೆ ಮೂವತ್ತು ಮೂರುನೂರು
ಇನಿತರೊಳು ಎರಡು ವಿಧವೊ ಪ್ರಾಮುಖ್ಯರು
ಘನವಂತ ಜನ ವಿಂಶತಿ ಶತ ಉಳಿದಾದವರು
ಸನುಮತ ಋಭುಗಣ ತ್ರಿಸಹಸ್ರದ ಮೇಲೆ
ಎಣಿಸು ನೂರೆಂಭತ್ತು ಜನರು ಒಂದೇ
ವಿನಯದಿಂದಲಿ ಮುಂದೆ ಅಮುಖ್ಯ ತಾತ್ವಿಕ
ಗಣವೆನ್ನಿ ಇವರು ಕರ್ಮಜ ಸುರರು
ಎಣಿಕೆ ಮಾಡು ಇಂತು ಮುನ್ನೂರು ಕಡಿಮೆಯಾಗಿ
ಗುಣ ಸಹಸ್ರರೆನ್ನು ಮಧ್ಯಮರ
ಗುಣ ಪೂರ್ಣ ವಿಜಯ ವಿಠಲರೇಯನ ಪಾದ
ವನಜ ಧ್ಯಾನವ ಮಾಡು ಇವರಿವರ ಮಧ್ಯದಲ್ಲಿ ೧
ಮಟ್ಟತಾಳ
ಮೊದಲಿಗೆ ಪೇಳಿದ ಶತಸ್ಥರೊಳಗಿದ್ದ
ಪದುಮ ಬಾಂಧವನೊಬ್ಬ ಪರ್ಜನ್ಯ ನಾಮಕನು
ಇದರೊಳಗೆ ಗಣನೆ ಸಿದ್ದವಾಗಿದೆ ಸತ್ಯ
ಮುದದಿಂದಲಿ ತತ್ವಾಭಿಮಾನಿಗಳ
ಲ್ಲದೆ ದೇವತೆಗಳ ಪೆಸರು ಕೊಂಡಾಡುವುದು
ಉದಕ ಪೂರಿತವಾದ ತೀರ್ಥಾಭಿಮಾನಿಗಳು
ಅದರ ತರುವಾಯ ಪುಷ್ಕರ ಕರ್ಮಾಭಿಮಾನಿಗಳು
ಒದಗಿ ಎಣಿಸಬೇಕು ನವ ಕೋಟಿ ಸಂಖ್ಯಾ
ಭವಸಾಗರ ಹಾರಿ ವಿಜಯ ವಿಠಲರೇಯ
ಪವಣೆಯಿಂದಲಿ ಇವರ ಈಪರಿ ನಿರ್ಣೈಪ ೨
ತ್ರಿವಿಡಿತಾಳ
ಅಮರರ ಕುಲದಿಂದ ಪುಟ್ಟೆದನಾಖ್ಯರು
ಕ್ರಮದಿಂದ ತಿಳಿವುದು ಚತುರ ವಿಂಶತಿ ಕೋಟಿ
ದ್ರುಮಲತೆ ಫಲ ಪುಷ್ಪ ಮಿಕ್ಕಾದವಕೇ ಉ
ತ್ತಮರಾಗಿ ಇಪ್ಪರು ಅಂಶದಿಂದ
ಅಮರಮೊಗ ಪುತ್ರರು ಹದಿನಾರು ಸಾವಿರ
ರಮಣೀಯರಾದ ಅಪ್ಸರ ಸ್ತ್ರೀಯರು ನೂರು
ವಿಮಲ ತುಂಬರಾದಿ ಶತ ಗಂಧರ್ವ ಸಹ
ಸಮನಾಗಿ ಇಪ್ಪರು ಇವರೆ ಅಜಾನಜರಯ್ಯಾ
ನಮಿಸಿ ಕೊಂಡಾಡುವುದು ಶತಕವ್ಯಭೋಕ್ತರ
ಶಮ ದಮೆ ಗುಣವುಳ್ಳ ಸಿದ್ದ ಸಾದ್ಯರು ಸರ್ವ
ಸಮುದಾಯ ಭೃತ್ಯಾದಿ ಕರ್ಮಕಾರರು ಮತ್ತೆ
ಅಮಿತ ಪಿತೃ ಗಂಧರ್ವ ಅಪ್ಸರ ಜನರೊಡನೆ
ಕಮಲ ಕರ್ನಿಕೆ ವಿಜಯ ವಿಠ್ಠಲ ಸರ್ವೋ
ತ್ತಮ ಚತುರ ವಿಂಶತಿ ಕೋಟಿ ಜನರ ಪಡೆದ ೩
ಅಟ್ಟತಾಳ
ಇಪ್ಪತ್ತು ನಾಲ್ಕು ಕೋಟಿ ದೇವ ಕುಲೋದ್ಭವ
ಒಪ್ಪದಿಂದಲೆ ಉಂಟು ಪ್ರಸಿದ್ಧಾ ಪ್ರಸಿದ್ದಾ
ತಪ್ಪದೆ ತಮ ತಮ ಕಾರ್ಯವ ಮಾಡುತ್ತ
ಮುಪ್ಪು ಇಲ್ಲದೆ ಚರಮ ಭವಿಗಳಯ್ಯಾ
ಇಪ್ಪರು ಇವರಿಗಿಂತ ನವಕೋಟಿ
ಸುಪ್ಪವರ್ಣರು ತ್ರಿವಿಧ ಅಧಿಕಾರರು
ಒಪ್ಪತಾ ಪ್ರತಿದಿನ ಹರಿಗೆ ಸರ್ವಸ್ವ ಸ
ಮರ್ಪಣೆ ಮಾಡೋರು ಸಕಲ ವಿಷಯದಲ್ಲಿ
ಸರ್ಪಶಯನ ನಮ್ಮ ವಿಜಯ ವಿಠ್ಠಲ ಜಗ
ದಪ್ಪನಾಗಿ ಅವರವರ ಪಾಲಿಸುವ ೪
ಆದಿತಾಳ
ಋಷಿಗಳು ಸಹಿತವಾಗಿ ಗಣನೆ ಮಾಡಿ ಎ
ಣಿಸು ನೂರಾಮೂವತ್ತು ಮೂರು ಕೋಟಿಗಳನ್ನು
ಹಸನಾಗಿ ಇವರಿವರ ಭಕ್ತಿ ಜ್ಞಾನ ಕರ್ಮ
ಬೆಸನೆ ತಿಳಿದು ಪ್ರಸನ್ನೀಕರಿಸಿ ಕೊಂಡುಬಾಳು
ಎಸೆವ ಸಪ್ತಭವನ ಮೇರು ಧ್ರುವ ಲೋಕ ರಂ
ಜಿಸುವ ಸ್ವರ್ಗಾದಿ ಸರ್ವ ಬೊಮ್ಮಂಡಾವರಣ ತನಕ
ಎಸಳು ಮತಿಯಿಂದ ತಮ ತಮ್ಮ ಯೋಗ್ಯ ಸ್ಥಾನ
ವಸತಿಯಾಗಿಪ್ಪರು ಅನೇಕ ಬಗೆಯಿಂದ
ಮಿಸುಕದೆ ನೋಡುವದು ಪ್ರಧಾನ ಸ್ಥಳವೆರಡು
ಬಿಸಿಜಾಪ್ತ ಮಂಡಲ ಶರೀರಸ್ಥರೆಂದು
ಕುಶಲ ಮತಿಯಿಂದ ಭಜನೆ ಮಾಡೆಲೋ ಮನುಜಾ
ಪುಸಿಯಲ್ಲ ಇದೆ ಇದೆ ಸಾಧನಸಾಧ್ಯ ಸಿದ್ದ
ವಶವಾಗುವುದು ಸುಲಭ ವಿದ್ಯ ಪ್ರಾಪ್ತಿಯನ್ನು
ಪಶು ಪಾಲಕ ನಮ್ಮ ವಿಜಯ ವಿಠಲರೇಯ
ಶಿಶುಗಳಂತೆ ಇಂತು ನೆನೆದವರ ಸಲಹುವಾ ೫
ಜತೆ
ತೃಣಾಂತ ವಿಡಿದು ಬೊಮ್ಮಾದಿ ಪರಿಯಂತೆ ನೆನೆದು
ಧನ್ಯನಾಗೋ ವಿಜಯ ವಿಠಲನಿಂದ ೬

ಜೀವರ ಗುಣ ತಾರತಮ್ಯವನ್ನು ವಿವರಿಸುವ ಸುಳಾದಿ ಇದು.

೫೫
ಧ್ರುವತಾಳ
ತ್ರಿಜಗ ವಂದಿತ ತ್ರಿಗುಣ ರಹಿತಾ ಲಕುಮಿನಾಥಾ
ಅಜವಾತ ತಾತಾ ಅಂಡಜ ರಾಜಾ ವರೂಥಾ
ಭುಜಗ ತಲಪನೀತಾ ಭುಜಗ ಭೂಷಿತ ದಾತಾ
ಭುಜಗೋತ್ತಮ ಖ್ಯಾತಾ ವಿಜಯ ವಿಠ್ಠಲ ಪ್ರೀತಾ
ಸುಜನರ ಮನೋರಥಾ ನಿಜ ದೈವತಙ್ಞ ೧
ಮಟ್ಟತಾಳ
ಅಶೇಷ ದೋಷ ದೂರ ಗುಣ ಪರಿಪೂರ್ಣ
ಅಶೇಷ ಅವತಾರ ಅಗಣಿತ ವರ್ನ
ಅಶೇಷವಾನಂದ ಅದ್ಭುತ ಘನ್ನ
ಸುಷೇಣನಾಮಾ ವಿಜಯ ವಿಠ್ಠಲನು
ಈಶ ಬೊಮ್ಮಾದ್ಯರಿಗೆ ವಿಶೇಷ ಮಹಿಮಾ ೨
ರೂಪಕತಾಳ
ಇಂದಿರೇ ತರುವಾಯ ವಿಧಿಯು ಮಾರುತರು
ಒಂದು ಕೋಟಿ ಗುಣದಿಂದ ಕಡಿಮೆ ಅವ
ರಿಂದಲವರ ಸ್ತ್ರೀಯರು ಒಂದು ನೂರು ಗುಣ
ದಿಂದಲಿ ಅಧಮರು ಎಂದು ತಿಳಿವುದ
ಲ್ಲಿಂದ ಗರುಡ ಶೇಷ ಇಂದುಧರರಿವರು ಮೂವರು
ಒಂದು ಹತ್ತುಗುಣಯೆಂದು ಕಡಿಮೆ ಯೆಣಿಸು
ದ್ವಂದ್ವರೊಳಗೆ ಮಿತ್ರವಿಂದಾದಿಗಳುಂಟು
ಇಂದಿರಾಪತಿ ವಿಷ್ಣು ವಿಜಯ ವಿಠ್ಠಲನಾರು
ಮಂದಿ ಸ್ತೀಯರು ಎಂದು ವಂದಿಸುವರು ಬಿಡದೆ ೩
ಝಂಪೆತಾಳ
ಸುರಪ ಕಾಮರು ಸಮ ಸೌಪಣ್ರ್ಯಾದಿಯ ನೋಡೆ
ಎರಡೈದು ಗುಣಕೆ ನ್ಯೂನವೆಂದು ತಿಳಿವುದು
ತರುವಾಯ ಅಹಂಕಾರ ಪ್ರಾಣ ನೆಂಬುವನು
ತ್ವರಿತದಿ ಈರೈದು ಗುಣಕಡಿಮೆಯೆನ್ನಿ
ಸ್ಥಿರವಹುದು ಅನಿರುದ್ದರತಿ ಸ್ವಾಯಂಭುವ ಮನು
ಗುರುದಕ್ಷಶಚಿಗಳಿವರಾರು ಮಂತ್ರಿ ಸಮಾನ
ಮರುತ ಅಹಂಕಾರಗೆ ಹತ್ತುಗುಣಕೆ ನೀಚಾ
ರರಿವುದು ಪ್ರವಹ ಮರುತನೆಂಬುವನು
ವರ ಅನಿರುದ್ಧಗಿಂತ ಐದು ಗುಣಕಧಮನೀ
ಪರಿ ಇದು ಯಮ ಮಾನವೀ ಚಂದ್ರ ಸೂರ್ಯರು ಸಮ
ಸರಿ ಪ್ರವಹನಿಗಿಂತ ಎರಡು ಗುಣಕೆ ನೀಚಾ
ವರುಣ ದೇವರು ಧರ್ಮಾದಿಗಳ ದೆಶೆಯಿಂದಲಿ
ಅರೆವೊಂದು ಗುಣ ಕಡಿಮೆ ಚೆನ್ನಾಗಿ ತಿಳಿವುದು
ಸುರ ಮುನಿ ನಾರದನು ಅಪಂತೆ ಎಣಿಸಲು
ತರುವಾಯ ಇದರಂತೆ ಎಣಿಸುವುದು ಜ್ಞಾನಿಗಳು
ಉರಗಾದ್ರಿ ವಿಜಯ ವಿಠ್ಠಲನ್ನ ದಯದಿಂದ ವಿ
ಸ್ತರಿಸುವೆನು ಕಾಮ ಇಂದ್ರಗೆ ಸ್ವಲ್ಪ ನೀಚಾ ೪
ತ್ರಿವಿಡಿತಾಳ
ಋಷಿಪುಂಗವ ಭೃಗು ಅನಲಕುಲೇಂದ್ರನು
ಪ್ರಸೂತಿ ಮೂವರು ವಿಷಮರಲ್ಲ
ರಸಾಧಿಪತಿಯ ನೋಡೆ ಪಾದ ಗುಣಕೆ ನ್ಯೂನರು
ಉಸರುವೆ ಕೌಶಿಕಾ ವಿಧಿಯಸುತರಾ
ಪೆಸರಾದ ಮರೀಚಿ ಅತ್ರಿ ಮುನಿಪಾಂಗಿ
ರಸ ಪುಲಹ ಕೃತು ವಸಿಷ್ಠಾನು ರಂ
ಜಿಸಿ ವೈವಸ್ವತ ಮನು ಇಂತೆಂಟೊಂದು ಜನಾ
ಮಿಸುಕದ ಸಮಾನರು ನಿಜ ಭೃಗ್ವಾದಿಗಳ
ದೆಸೆಯಿಂದ ಸ್ವಲ್ಪ ನೀಚರು ಗುಣದಲಿ ಮುಂದೆ
ಬಿಸಜ ಮಿತ್ರ ತಾರೆ ನಿಋಋತಿ ಪ್ರಾವಹಿ
ಶ್ವಸನನ ಮಡದಿ ಸ್ವಾಹಾ ನಾಲ್ವರು ಸಮಾನರು
ಋಷಿ ಮರೀಚ್ಯಾದ್ಯರಿಗೆ ದ್ವೌಗುಣಕಧಮರು
ಶಶಿರ ನಾಮಾ ಸಿರಿ ವಿಜಯ ವಿಠ್ಠಲನ್ನ
ಬಿಸಿಜಪಾದಕ್ಕೆ ನಮಿಸುವೆ ಕುಶಲರೆನ್ನಿ ೫
ಅಟ್ಟತಾಳ
ವಿಮಲ ವಿಷ್ಟಕ್ಸೇನ ನಾಸತ್ಯ ಗಣಪತಿ
ಅಮಲ ಧನೇಶ್ವರ ಮರುತುಗಳು ಅ
ರ್ಯಮರು ರುದ್ರಕ ವಸು ವಿಶ್ವೇದೇವತಿಗಳೂ
ಅಮಮ ಗಗನ ಧರೆ ಪಿತರಾದ್ಯರು ಸರಿ
ಸಮರೆಂದು ಗುಣಿಪುದು ಇದರೊಳು ಉಕ್ತ
ಕ್ರಮ ತಾರತಮ್ಯವು ನಮಿಸುವೆ ಚ್ಯವನಾದಿ ಋಷಿ ಪೃಥೂ
ತ್ತಮ ಕಾರ್ತವೀರ್ಯ ಶಶಿಬಿಂದ್ವಾದಿ ಸಾರ್ವ
ಭೌಮರು ಸಮಾನರು ಅಶ್ವಿನ್ಯಾದ್ಯರು
ಕ್ರಮದಲ್ಲಿ ಇವರು ಕಿಂಚಿತು ಗುಣನ್ಯೂನರು
ಅಮರ ತಟನಿ ಪರ್ಜನ್ಯ ಸಂಙ್ಞಳು
ಹಿಮಕರನಂಗನೆ ಶಾಮಲೆ ವಿರಾಟಿಯ
ಸಮರು ಗಣಪತಿಗಿಂತ ದ್ವಿಗುಣ ಹೀನ
ಸುಮನಸರ ಮುಖನಂಗನೆ ಸ್ವಹಾದೇವಿ
ಶಾಮಲಾದ್ಯರ ನೋಡೆ ಕಿಂಚಿತು ಗುಣ ಹೀನ
ಹಿಮಕರ ನಂದನ ಅಗ್ನಿ ರಾಣಿಗೆ ಹೀನ
ಶಮದಮೆ ಉಷಾದೇವಿ ಬುಧಗಿಂತಲಿ ಕ
ಡಿಮೆ ಎರಡು ಗುಣಾಶನಿ ಪುಷ್ಕರನೆಂಬೂ ಕ
ರ್ದಮ ದೇವತಿ ಗಳಿಗಿಂತ ಆಜಾನಜರು
ಪ್ರಮೇಯದಿ ತಿಳಿವುದು ಶತಗುಣಕಧಮರು
ಪ್ರಮೋದನಾಮ ಶ್ರೀ ವಿಜಯ ವಿಠ್ಠಲನ್ನ
ನಮಿಸಿ ಇವರ ಅನುಕ್ರಮ ಗುಣ ಅರಿವುದು ೬
ಆದಿತಾಳ
ದೇವ ಗಂಧರ್ವರು ಕೆಲರು ಅಪ್ರತಿ ಋಷಿ ನೂರು
ಆ ಊರ್ವಶ್ಯಾದ್ಯಪರ ಸ್ತ್ರೀಯರೆಣಿಸು ಕರ್ಮ
ದೇವತಿಗಳಿಗೆ ಸಮಾನರೆಂದು ಇತ್ತ ಗಂ
ಧರ್ವಮಿಕ್ಕ ಮುನಿಗಳು ಆಜಾನಜರಿಗೆ ಸ
ಮವೆಂದು ತಿಳಿದೀಗ ಚಿರ ಪಿತೃಗಳ ಗು
ಣಾವಳಿ ಅಜಾನಜರಿಗೆ ನೂರು ಮಡಿ ಕಡಿಮೆಂದು
ಭಾವಿಸೋದು ಪಿತುರ ನೋಡೆ ಉಳಿದ ದೇವತಿಗಳು
ಯಾವತ್ತು ನೂರು ಮಡಿ ಹೀನರೆನ್ನಿ ಮನುಷ್ಯ ಗಂ
ಧರ್ವರು ಅವರು ನೋಡಾ ನೀಚರು ನೂರು ಗುಣಕೆ
ಇವರ ನೋಡೆ ಕ್ಷಿತಿಪರು ಅವರಂತೆ ತಿಳಿವುದು
ಭೂವಲ್ಲಭರ ನೋಡಾ ಮನಷ್ಯೋತ್ತಮರಿದೆ ಸಂಖ್ಯೆ
ಇವರಿಂದ ತಾರತಮ್ಯ ಉಂಟು ಪಶ್ವಾದಿಯ
ಜೀವರವರವರೊಳಗವಾಂತರ ತಾರತಮ್ಯ
ಕೋವಿದಳು ನೋಡಿ ಪಶ್ವಾದಿ ಜೀವಿಗಳ ನೋಡೆ ವೃಕ್ಷ
ಸ್ಥಾವರ ಜಂಗಮ ನ್ಯೂನರು ಎಂದು ತಿಳಿದು ತೃಣ
ಜೀವರು ಕಡಿಮೆ ಇವರು ಸತ್ಯಾಸತ್ಯವೆಂದು ಅರಿದು
ಈ ವಿಚಾರದಲ್ಲಿ ನಡೆದು ಮುಕ್ತಿ ತರತಮ್ಯವೆಂದು
ಪಾವಮಾನೀ ಮತದಲ್ಲಿ ಪರಿಪೂರ್ಣ ಚಿತ್ತವಿಟ್ಟು
ಭಾವನಾಮ ವಿಜಯ ವಿಠ್ಠಲ ಜೀವಾಖಿಲ ಭಿನ್ನವೆಂದು
ಆವಾವ ವಾಕ್ಯದಲಿ ಸಿದ್ಧವೆಂದು ಭಜಿಸು &ಟಿಬ್ಸ್ಠಿ

ಈ ಸುಳಾದಿಯೂ ತಾಮ್ರಪರ್ಣಿಯನ್ನು ಕುರಿತದ್ದೇ ಆಗಿದೆ.

೩೨. ತಾಮ್ರಪರ್ಣಿ
ಧ್ರುವತಾಳ
ತ್ರಿಭುವನದೊಳಗೆ ನಿನ್ನ ವೈಭವಕ್ಕಿದಿರಾರು |
ನಾಭಿಯಲಿ ಮಗನ ಪೆತ್ತ ಶೋಭನ ದೇವ |
ಶ್ರೀ ಭೂದುರ್ಗೇರ ಕೂಡ ವೈಭೋಗದಿಂದ ಮೆರೆದ |
ವಿಭುವೆ ವಿಶ್ವ ಮಹಿಮಾ ವಿಭವ ವರದ |
ವಿಬುಧರ ಕೈಯಾ ಸುಲಭಾದ ಗೆಳಿಯಾ |
ಅಭಿಮುಖದವರಿಗೆ ಅಭಯ ಪರಿಪಾಲಿಪನೆ |
ಲೋಭಿಗಳರಸೆ ವಿಜಯವಿಠಲರೇಯಾ |
ದ್ವಿಭುಜನಾಗಿ ಹೃದಯಾಂಬುಜದ ನಿಲಯಾ ೧
ಮಟ್ಟತಾಳ
ವೈಕುಂಠನಾಥ ವಿಜಯಾಸನ ದೇವ |
ಲೋಕಪರಿಪಾಲಾ ದೇವದೇವೇಶ |
ಆ ಕಂಜದಳ ನಯನಾ ಶ್ರೀ ಚೋರನಾಟ್ಯ |
ಶ್ರೀ ಕರನಿಕ್ಷೇಪ ಮಕರಾಯತ ಲಕ್ಷ್ಮೀಕಾಂತ ಶ್ರೀ ಆದಿನಾಥಸ್ವಾಮಿ |
ನೀ ಕರುಣದಿಂದ ಕಾಪಾಡುವುದು |
ಲೋಕರಕ್ಷಾಮಣಿ ವಿಜಯವಿಠಲರೇಯಾ |
ನೇಕ ಮಹಿಮನೆಂದು ವಾಕುಮಾಣದೆ ಪೇಳಿ ೨
ತ್ರಿವಿಡಿತಾಳ
ಈ ತಾಮ್ರಪರನಿಯಾ ಸ್ನಾನಮಾಡಿದ ನರನ |
ಪಾತಕಾ ಓಡಿ ಘೋಳಿಡುತ ಪೋಗುವದು |
ಭೂತಳದೊಳಗಿದರ ಸರಿಸಮಾನವಿಲ್ಲ |
ಪ್ರೇತ ಸಂಸ್ಕಾರವಿಲ್ಲದವರ ವಂಶಜಾ |
ಪ್ರೀತಿಯಲಿ ಸ್ನಾನವ ಮಾಡಲವರೂ |
ಪೀತಾಂಬರದುಡಿಗೆ ಶಂಖಚಕ್ರವ ಧರಿಸಿ |
ನೀತಿ ಪದವಿಯಲ್ಲಿ ಸುಖಬಡುವರು |
ದಾತಾ ವಿಜಯವಿಠಲ ನವತಿರುಪತಿವಾಸಾ |
ಮಾತಿಗೆ ಮನಸೋತು ಮಹಪುಣ್ಯನೀವನು ೩
ಅಟ್ಟತಾಳ
ಅನಂತಜನುಮದ ಪುಣ್ಯಫಲಿಸಿದರೆ |
ಈ ನದಿಯಲ್ಲಿ ಒಂದು ಸ್ನಾನ ದೊರಕುವದು |
ಈ ನಿಧಿಗಳಾದ ನವತಿರುಪತಿ ದರು |
ಶನವಾಗುವದು ಒಂದೆ ವಾಸರದಲ್ಲಿ |
ಮಾನಷೋತ್ತು ಮರಿಗಲ್ಲಾದಲೆ ಮೊದಲಾದಾ |
ಹೀನಜನರಿಗೆ ಸಾಧ್ಯವಾಗದೆನ್ನಿ |
ಈ ನುಡಿ ಸತ್ಯವು ವಿಜಯವಿಠಲ ಬಲ್ಲಾ |
ಜ್ಞಾನದಿಂದಲಿ ಸರ್ವರಿಗೆ ಸಾಕಲ್ಯಾ ೪
ಆದಿತಾಳ
ಹರಿ ಸಿರಿ ವಿರಿಂಚಿ ಮರುತಗರುಡಶೇಷಾ |
ಹರ ಇಂದ್ರ ಸ್ಮರಾದ್ಯರ ತರುವಾಯ ತಿಳಿದು |
ತರತಮ್ಯ ಮನದಿಂದ ಚರಿಸಿ ಯಾತ್ರೆಗೈಯಾಲು |
ಮರಳೆಬಾರನು ಇಹಕ್ಕೆ ವರವೇದ ಸಿದ್ಧಾವೆನ್ನಿ |
ಪರತತ್ವನಾದ ನಮ್ಮ ವಿಜಯವಿಠಲ ನವ |
ತಿರುಪತಿಯಲ್ಲಿ ಇದ್ದು ಪೊರೆವ ನಂಬಿದವರ ೫
ಜತೆ
ವೈಕುಂಠಾದಿ ಧ್ಯಾನಾ ತಾಮ್ರಪರ್ಣಿಯ ಸ್ನಾನಾ |
ಏಕ ಚಿತ್ತದಿ ಮಾಡಲು ಒಲಿವ ವಿಜಯವಿಠಲ ೬

ಕರ್ನಾಟಕವನ್ನು ರಾಜ್ಯಭಾರಮಾಡಿದ

೯೮. ಹಂಪೆ
ರಾಗ:ಅಭೇರಿ
ಧ್ರುವತಾಳ
ದಕ್ಷಿಣ ವಾರಣಾಸಿ ಕ್ಷೇತ್ರವೆನಿಸುವದು |
ಯಕ್ಷೇಶನಾಪ್ತ ಇಲ್ಲಿ ವಾಸವಯ್ಯಾ |
ಅಕ್ಷರ ಒಂದು ನುಡಿವ ಹೊತ್ತು ಮನುಜಾ ಬಂದು |
ಈ ಕ್ಷೇತ್ರದಲ್ಲಿ ಇದ್ದ ಫಲಕೆ ಇಲ್ಲಿ |
ನೀಕ್ಷಿಸಿ ನೋಡಲು ಎಣಿಸಲಿನ್ನಾರಳವೆ |
ನಿಕ್ಷೇಪವೆನ್ನಿಸದಾ ವಂಶಾವಳಿಗೇ |
ನಕ್ಷತ್ರ ಮಳಲು ಮಳಿಯ ಹನಿಕಡಲ ತೆರೆ |
ವೃಕ್ಷ ಜಾತಿಗಳೆಲೆ ಎಣಿಸಬಹುದು |
ಲಕ್ಷಣವುಳ್ಳ ಪುಣ್ಯಗಣನೆ ಮಾಡುವರಾರು |
ಅಕ್ಷಯವಾಗುತಿಪ್ಪದು ದಿನದಿನಕೇ |
ಕುಕ್ಷಿಗೋಸುಗ ಇಲ್ಲಿ ಬಹುಕಾಲವಿದ್ದರೂ |
ಮೋಕ್ಷಸಾಧನವಲ್ಲ ದುರುಳರಿಗೆ |
ದಕ್ಷಿಣಾಧೀಶ ಈ ಪರಿ ಇದ್ದವರವೈದು |
ಶಿಕ್ಷಿಸುವನು ಜನುಮಜನುಮದಲ್ಲಿ |
ಚಕ್ಷುಶ್ರವಣಶಾಯಿ ವಿಜಯವಿಠಲನಂಘ್ರಿ |
ರಕ್ಷೆಯಿಂದ ದಾಸನ್ನ ರಕ್ಷಿಸುವ ಉಮೇಶ ೧
ಮಟ್ಟತಾಳ
ಒಂದು ದಿವಸ ಮುಕುಂದನು ತನ್ನಯ |
ಮಂದಗಮನೆ ಸಹಿತಾನಂದದಲ್ಲಿ ಖಗೇಂದ್ರವಾಹನನಾಗಿ |
ಬಂದನು ಸಕಲ ವಸುಂಧರೆ ಚರಿಸುತಲಿ |
ಅಂದವಾದೀ ಧರೆಯ ಅಂದು ನೋಡಿದನಲ |
ವಿಂದ ಶಿರಿಯೊಡನೆ ನಿಂದನು ಕರಕಮಲ |
ದಿಂದ ಗುಲಗುಂಜಿ ಒಂದು ಪಿಡಿದು ಕಾಶಿ |
ಗಿಂದಧಿಕ ಫಲವುತಂದುಕೊಡುವೆನೆನುತ |
ನಂದನಗೊಲಿದ ಶ್ರೀ ವಿಜಯವಿಠಲ ಮಾಧವ |
ನೆಂದೆಂಬೋ ನಾಮದಲಿ ಇಂದ್ರಾದ್ಯರು ಪೊಗಳೆ ೨
ರೂಪಕತಾಳ
ಶ್ರೀ ತರುಣೇಶನು ವಿನಯದಿಂದಲೀ ಬಂದೀ |
ಭೂತಳದಲಿ ನಿಂದ ವಾರ್ತಿಯನ್ನು |
ಭೂತಾಧಿಪನು ನಾರದನಿಂದಲಿ ಕೇಳಿ |
ಕೌತುಕವಹುದೆಂದು ತಲೆಯದೂಗಿ |
ಕಾತುರದಲಿ ಹರಿಯಸೇವೆ ಮುಟ್ಟಿಪೆನೆಂದು |
ಪಾತಾಳೇಶ್ವರನಾಗಿ ಇಲ್ಲಿನಿಂದ |
ಈ ತೆರದಲಿ ಇತ್ತಲಿರುತಿರೆ ಆಪರ್ನಾ |
ಭೂತಳಗೋಸುಗ ಹರಿ ವರಹನಾಗೇ |
ಆತನಾ ದಾಡಿಂದ ಬಂದ ತುಂಗೆ ಇರಲು |
ಆ ತೀರದಲಿ ಪೋಪನಾಮದಿಂದ |
ತಾ ತಪವನೆ ಮಾಡತೊಡಗಲಾಕ್ಷಣ ಅತ್ತ |
ಜಾತವೇದಸನೇತ್ರ ಪ್ರತಿರೂಪದೀ |
ಚಾತುರ್ಯದಲಿ ಬಲು ಬ್ಯಾಟಿಮಾರ್ಗದಲಿ |
ಕಿರಾತನಂದದಿ ಬಂದ ಹಂಪನೆನಿಸೀ |
ಗೋತುರ ಜಾತಿಯ ಕಂಡು ಮಾನವನಂತೆ |
ಸೋತು ನೀನಾರೆಂದು ಮಾತಾಡಿಸೇ |
ನೀತವಲ್ಲೆಂದು ಆ ಪಂಪನಾಮಕ ಗಿರಿಜೆ |
ಭೀತಿ ತೋರಿದಳು ಅನ್ಯರೋಪಾದಿಲಿ |
ಯಾತಕೆ ಸಂಶಯ ಎನ್ನಲ್ಲಿವುಳ್ಳ ಮಹ |
ಭೂತಿ ನಿನ್ನದು ಎಂದು ಸತಿಯಾಮದನಾ |
ರಾತಿ ಒಡಂಬಡಿಸಿ ಪಾಣಿಗ್ರಹಣವ ಮಾಡೆ |
ಭೂತ ಪ್ರಮಥಗಣ ಪೊಗಳುತಿರೆ |
ಜೋತಿರ್ಮಯಾರೂಪ ವಿಜಯವಿಠಲರೇಯನ |
ಮಾತು ಮಾತಿಗೆ ನೆನಿಸಿ ಪುಳಕೋತ್ಸದಲ್ಲಿದೆ ೩
ಝಂಪೆತಾಳ
ಹರಿಯ ನಿರೂಪದಲ್ಲಿ ಪರಮೇಷ್ಟಿಸುರನಿಕರ |
ಪರಮ ಹರುಷದಲಿ ನಿಂದಿರದೆ ಬಂದು |
ನೆರೆದು ಸಕಲರು ವೇದ ಹಿರಿದು ಮಂತ್ರಗಳಿಂದ |
ಚಿರವಕ್ಕುಮಾಮಹೇಶ್ವರಗೆ ಕಾಶಿಯ ದಳಿದು [?]
ಮೊರಗಿದವು ಭೇರಿ ಅಬ್ಬರಿಸಿ ನಾನಾ ವಾದ್ಯ |
ಸುರರು ಕುಸುಮ ವರುಷ ಗರಿಯೆ ಮಹೋತ್ಸಹ ದಲ್ಲಿ |
ಕರಿಸಿಕೊಂಡನು ಪುರಹರನಂದಿನಾರಭ್ಯ |
ವರ ಪೊಂಪಾರಮಣ ಪೆಸರಿನಿಂದಲಿ |
ಮೆರೆದುದೀಭೂಮಿ ವಿಸ್ತರದಿಂದ ಪೊಂಪಾಕ್ಷೇ |
ತುರು ಆದಿಯುಗವಿಡಿದು ಕರಿಸಿತಿದೆಕೊ |
ಸರಿ ಇಲ್ಲವೆಂದಿದರ ಅರಿದು ಶಂಖಶಕಟ |
ಶರಭ ಮಾರ್ಕಾಂಡೇಯ ದೇವರತಿ ಕಪಿಲಾ |
ಪರಿ ಪರಿ ಮುನಿಗಳು ಪರಮ ಸಮಾಧಿಯಲಿ |
ಹರಿಹರರ ಪೂಜಿಸಿದರು ಗುಣಗಳ ತಿಳಿದು |
ಸುರಪಾಲ ವಿಜಯವಿಠಲನೆ ಸರ್ವೊತ್ತಮಾ |
ಅರಿದವಗೆ ಕೈವಲ್ಯ ಸರಿಸದಲೆ ಉಂಟು ೪
ತ್ರಿವಿಡಿ ತಾಳ
ಪಿತ ಮಹದೇವನು ಅತಿಶಯದಲಿ ಇಲ್ಲಿ |
ಕೃತವ ಮಾಡಿದನು ಅಮಿತಬಗೆಯಲ್ಲಿ |
ಕ್ಷಿತಿಯೊಳಿ ಐವರು ಪರ್ವತದೆಡೆಯಲಿ ರಚಿಸಿ |
ಚತುರಾಸ್ಯ ಪೋಗೆ ಕಾಲತೀತವಾಗಲು ಬಹು |
ಕ್ಷಿತಿ ಪರಾಳಿದರು ಉನ್ನಲೀಲೆಯಲ್ಲಿ ಅವರು |
ಗತವಾದ ತರುವಾಯ ಶತ ಮೋದನಂದನನು |
ಪ್ರತಿವಿಲ್ಲವೆನಿಸಿ ಸುಪುತದ್ವೀಪದೊಳು ಮೆರಿಯೆ |
ದಿತಿಸುತ ನಿಂದರ್ಕಸುತರೊಡನೆ ವಾಲಿ |
ಹಿತತಪ್ಪಿ ನಡೆದು ದುರ್ಮತಿಯಲ್ಲಿ ಸಂಚರಿಸೆ |
ಪತಿತರಾವಣ ವಿಬುಧತತಿಗಳಟ್ಟಲು ಅವರ |
ಸ್ತುತಿಗೆ ಪುಟ್ಟಿದ ಸಿರಿಪತಿ ದಶರಥನಲ್ಲಿ |
ಚತುರ ಮಾರುತ ತನ್ನ ಪತಿಸೇವೆ ಗೋಸುಗ |
ಸುತನಾದಂಜನಿಗೆ ಸಂಗತಿಯೆಲ್ಲ ತಿಳಿದು |
ಸತಿಪೋದ ವ್ಯಾಜದಲಿ ಕ್ಷಿತಿಪನಲ್ಲಿಗೆ ಬರಲು |
ನತವಾಗಿ ಭಾಸ್ಕರನಾ ಸುತನ ನೆರಹೆ ವಾಲಿಯ |
ಹತವಮಾಡಿ ರಘುಪತಿ ಇಲ್ಲಿ ಮೆರೆದ ಪ |
ರ್ವತ ಮೂಲ್ಯವಂತದಲ್ಲಿ ವ್ರತತೊಟ್ಟ ನರನಂತೆ |
ನುತಿಸಿ ವರವಬೇಡಿ ಮತಿ ತಾರ ತಮ್ಯದಲಿ |
ಮತವನ್ನೆ ಬಿಡದೆ ಶಾಶ್ವತ ಫಲವನುದಿನ |
ಯತಿಗಳ ಮನೋಹರ ವಿಜಯವಿಠಲ ಹರಿಯ |
ಕೃತದ್ವಂಶಿ ತನ್ನೊಳಗೆ ಪ್ರತಿಕಾಲ ಜಪಿಸುವ ೫
ಅಟ್ಟತಾಳ
ಮನುಮಥ ಕೊಂಡು ವಶಿಷ್ಟ ಲೋಕ ಪಾ |
ವನೆ ಅಗಸ್ತ್ಯ ತೀರ್ಥ ಪೊಂಪಾಸಾಗರ ಸೀತಾ |
ಋಣ ಮೋಚನ ತೀರ್ಥಪೊಳೆವುದು ಸುದರು |
ಶನ ತೀರ್ಥಕೋಟಿ ಕಪಿಲತೀರ್ಥ ಮಾರ್ಕಾಂಡೇಯಾ |
ಮುನಿತೀರ್ಥ ನಾನಾ ತೀರ್ಥಂಗಳು ಇಲ್ಲಿ ಉಂಟು |
ಅನುಮಾನ ಬಿಡಿ ಸಾಧನ ಮಾನವರೆಲ್ಲ |
ಮನಶುಚಿಯಾಗಿ ನಾನು ನೀನೆಂಬ ಮಾ |
ತನು ಪೇಳಲಾಗದು ಹಣ ಮಣ್ಣು ಒಂದೆ ಯಾದರೆ ಅಂಗಡಿ[ಗ]ಮ |
ಣ್ಣನ್ನು ಕೊಟ್ಟು ಉದರಕೆ ತರಬಾರದೇ ಧಾನ್ಯ |
ನಿನಗೆ ಅವಗೆ ಭೇದಾ ಇಲ್ಲವಾದರೆ ನಿನ್ನಾ |
ವನಿತೆಯಾ ಮತ್ತೊಬ್ಬ ಹಿಡಿದು ವೈದರೇನು |
ಗುಣ ಪರಿಪೂರ್ಣವ ಬೊಮ್ಮಗೆ ಪೇಳಿನಿ |
ರ್ಗುಣನೆಂದು ನುಡಿವುದು ಅಪಸಿದ್ಧಾಂತವು |
ಜನನಿಯ ಬಳಿಯಲ್ಲಿ ಗರ್ತಿಯೆಂದು ಪೇಳಿ |
ಜನರ ಮುಂದೆ ಹಾದರಗಿತ್ತಿ ಎಂದಂತೆ |
ಗುಣವುಂಟು ಗುಣವಿಲ್ಲಾವೆಂದು ಯಮನ ಯಾ |
ತನೆಯಿಂದ ಬಹುಕ್ಷೇಶವನು ಬಡುವದು ಸಲ್ಲಾ |
ಕನಸು ಎಂದರೆ ಇದು ಮನಕೆ ತಾರ ಕಾಂಣ್ಯಾ |
ಕಣಿ ತಂದು ಬಿತ್ತಲು ಜನಿಸುವದೆ ಸಸಿ |
ಬಿನಗು ಮಾರ್ಗವ ಬಿಟ್ಟು ಗುಣವಂತ ನಾಗಿ ಭ |
ಜನೆ ಮಾಡು ಸರ್ವತೀರ್ಥವನೆ ಮಿಂದು ವಟತರು |
ವಿನಲಿ ಗೋತ್ರ ಏಳನು ಉದ್ಧರಿಪದು |
ಅನಲಾಕ್ಷಗೆ ಬಂದನು ತಂದು ಅಭಿಷೇಕ |
ವನೆ ಮಾಡಲವನೆ ಧನ್ಯನುಕಾಣೊ ಜಗದೊಳು |
ಎಣಿಸಲು ಸುತ್ತಯೋಜನ ಕ್ಷೇತ್ರವೆನ್ನಿ |
ಹನುಮವಂದಿತ ನಮ್ಮ ವಿಜಯವಿಠಲನ ಶ |
ರಣಗಲ್ಲದೆ ಪುಣ್ಯ ಭಣಗುಗಳಿಗುಂಟೆ ೬
ಆದಿತಾಳ
ನರಗೊಂದು ಸೌರಿ ಇಹಪರದಲ್ಲಿ ಹರಿಗೆ ಕೆಂ |
ಕರನೆನಿಸಿ ಕೊಂಡವ ಹರಿದು ಇಲ್ಲಿಗೆ ಬಂದು |
ಗಿರಿಸುತ ರಮಣನ್ನ ದರುಶನವನು ಮಾಡಿ |
ಕರಣ ಶುದ್ಧಿಯಲ್ಲಿ ಸ್ತೋತ್ತರಗೈದು ಮತಿಯಲ್ಲಿ |
ವರ ಪೊಂಪಾಕ್ಷೇತ್ರದ ಅರಸು ಗುಲಗಂಜಿ |
ಧರ ಮಾಧವಂಗೆ ನೀರೆರದು ಸಮರ್ಪಿಸೆ |
ಕೊರತೆಯಾಗದಂತೆ ಪರಿಪೂರ್ಣವನು ಮಾಡಿ |
ಪೊರೆವನು ಯಾತ್ರಿಯ ಚರಿಸದೆ ಮಾನವನು |
ಹರನು ಪರಮ ಲೌಕಿಕ ಗುರುವೆಂಬೋದೆ ಸಿದ್ಧಾ |
ಅರಿತವಂಗೆ ಮನಸ್ಥಿರವಾಗಿ ನಿಲ್ಲಿಸುವ |
ಧರೆಯೊಳಗಿದು ಭಾಸ್ಕರ ಕ್ಷೇತ್ರ ವೆನಿಸೋದು |
ಸುರರು ಇಲ್ಲಿ ಪ್ಪರು ವಾಸರ ಒಂದು ಬಿಡದಲೆ |
ಪರಮ ಪುರುಷ ನಮ್ಮ ವಿಜಯವಿಠಲ ಹರಿಯ |
ಸ್ಮರಣೆ ಮಾಡುತ ಈ ಕ್ಷೇತುರ ಮಹಿಮೆ ತಿಳಿವುದು ೭
ಜತೆ
ಜನುಮದೊಳಗೆ ಒಮ್ಮೆ ಪಂಪಾಕ್ಷೇತ್ರದ ಯಾತ್ರಿ |
ಮನಮೆಚ್ಚಿ ಚರಿಸಲು ವಿಜಯವಿಠಲ ಒಲಿವಾ ೮

ಈ ಸುಳಾದಿಯು ದತ್ತಾತ್ರೇಯ

ದತ್ತಾವತಾರ ಸ್ತೋತ್ರ
೧೧೭
ಧ್ರುವತಾಳ
ದತ್ತಾ ಯೋಗೀಶ ಯೋಗಿ ಯೋಗಶಕ್ತಿಪ್ರದ
ದತ್ತಾ ಪ್ರಣತರಿಗೆ ಪ್ರಣವಪ್ರತಿಪಾದ್ಯ
ದತ್ತ ಸ್ವತಂತ್ರದಿಂದ ಜಗಕೆ ಸತ್ಕರ್ಮ ಪ್ರ
ದತ್ತ ಮಾಡಿಕೊಡುವ ದೀಪ್ತಾ ಚೂಡಾ
ದತ್ತಾ ಚೀರಾಂಬರಗೇಯಾ ವಲ್ಕಲವಾಸ
ದತ್ತಾ ದುರ್ವಾಸ ಚಂದ್ರ ಸಹಭವ ಭವ್ಯಹಂಸಾ
ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ
ಅತ್ರಿನಂದನ ಕೃಷ್ಣಾಂಜನ ಬ್ರಹ್ಮಸೂತ್ರ ಪ
ವಿತ್ರ ಧಾರಣದೇವಾ ದೇವವಂದ್ಯಾ
ಸತ್ಯಕ್ರಿಯಾ ಸತತ ಸಾವಿರ ಹಸ್ತವರದ
ದೈತ್ಯ ಮೋಹಕ ರೂಪಾಘನ ಪ್ರತಾಪಾ
ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ ಸ
ರ್ವೋತ್ತಮ ಮಹಾ ಪ್ರಭುವೆ ಸ್ವಪ್ರಭಾವಾ
ಕೀರ್ತಿ ಪಾವನವಪುಷ ವೈಕುಂಠವಾಸ ತಪೋ
ವಿತ್ತ ಸುಚಿತ್ತಾ ಸಚ್ಚಿದಾನಂದಾತ್ಮಾ ಉತ್ತುಂಗ
ವ್ಯಾಪ್ತ ಗೋಪ್ತಾ ಪ್ರಾಪ್ತಾ ಸಂತೃಪ್ತಾ
ತಪ್ತ ಕಾಂಚನಗಾತ್ರಾ ನಿರ್ಜರಾಪ್ತಾ
ಚಿತ್ರ ವಿಚಿತ್ರ ಕರ್ಮ ವಿಜಯ ವಿಠ್ಠಲರೇಯಾ
ದತ್ತಾವತಾರ ಭಗದತ್ತಾಯುಧದಾರಿ ೧
ಮಟ್ಟತಾಳ
ದತ್ತ ಜ್ಞಾನದತ್ತಾ ದತ್ತ ಭಕುತಿದತ್ತಾ
ದತ್ತ ಶ್ರವಣದತ್ತಾ ದತ್ತ ಮನನದತ್ತಾ
ದತ್ತ ದಾನದತ್ತಾ ದತ್ತಾ ಸಾಧನದತ್ತಾ
ದತ್ತ ಚಿತ್ತದತ್ತಾ ದತ್ತಾವಿರಕ್ತಿ ದತ್ತಾ
ದತ್ತ ಮಾರ್ಗದತ್ತಾ ದತ್ತಾ ದತ್ತಾ ಇಷ್ಟದತ್ತಾ
ದತ್ತ ಸರ್ವದತ್ತಾ ದತ್ತ ಭೋಗದತ್ತಾ
ದತ್ತಾ ನಂದದತ್ತಾ ದತ್ತ ತನ್ನನೆದತ್ತಾ ದತ್ತಾತ್ರೇಯ
ದತ್ತ ಮೂರುತಿ ನಮ್ಮ ವಿಜಯವಿಠ್ಠಲರೇಯಾ
ದತ್ತನೆಂದನಿಗೆ ದತ್ತ ಮಗನಾಹಾ ೨
ತ್ರಿವಿಡಿತಾಳ
ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ
ಅನುಸೂಯ ವರಸೂನು ಕರ್ದಮ ದೌಹಿಣಜಿಡಿ
ಗುಣಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ
ಜನಿಸುವ ಬಗೆಯಿಲ್ಲ ಇಳಿಯೊಳಗೆ
ನೆನೆಸಿದವರ ಮಸ್ತಕದಲ್ಲಿ ಸುಳಿವ
ಮನಸಿಜ ಜನಕ ಜಗನ್ಮೋಹನಾ
ಕನಸಿನೊಳಾದರೂ ಕಳವಳಿಕಿಯಿಂದಾಡೆ
ಮನ ಸೂರೆಗೊಡುವಾನು ಮಂದಹಾಸಾ
ಅನುಸರಿಸಿ ತಿರುಗುವ ಭಕ್ತರೊಡನೆ ದತ್ತಾ
ಘನ ಶುದ್ದಾತ್ಮನು ಕಾಣೊ ಗೌರವರ್ಣಾ
ಉಣಿಸುವ ತನ್ನಯ ನಾಮಾಮೃತವ ಒ
ಕ್ಕಣಿಸುವಂತೆ ನಿತ್ಯ ಪ್ರೇರಿಸುವಾ
ಜನ ಸುಮ್ಮನಿರದಲೆ ಜಪಿಸಿ ಈತನ ನಾಮಾ
ಮಣಿಸಾರಿಸಾರಿಗೆಲಿ ಎಣಿಕೆ ಗೈಯೊ
ಗುಣ ಸಾರಾತರ ನಮ್ಮ ವಿಜಯವಿಠ್ಠಲರೇಯಾ
ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ೩
ಅಟ್ಟತಾಳ
ಯೋಗಾಸನಾ ಅಕ್ಷಮಾಲಾ ಜ್ಞಾನ ಮುದ್ರ
ಯೋಗಶಾಸ್ತ್ರ ಕರ್ತ ವರ್ತಮಾನಕಾಲ
ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ
ಶ್ರೀಗುರು ಅಜಗುರು ಸರ್ವಜಗದ್ಗುರು
ಭಾಗೀರಥಿ ತೀರ ಬದರಿನಿವಾಸ ಆ
ಯೋಗ ಕರ್ಮಹಾರಿ ದತ್ತ ದಾನವರಿಗೆ
ಭೋಗ ಶಾಯಿ ಮುಕ್ತಾಭೋಗ ಭಾಗಾಧೇಯಾ
ಭಾಗ ತ್ರಯಗುಣ ನಾಶ ಗುಣಾಂಬುಧಿ
ರಾಗವಿದೂರ ಸರಾಗ ಮಣಿ ನಖಾ
ಪೂಗರ್ಭನೆನಿಸುವ ಈ ತನ್ನ ತಾತನ್ನ
ಆಗಸದಲಿ ನೋಡಿ ತಾತನ್ನ ಐಶ್ವರ್ಯ
ಯಾಗಾ ತೀರ್ಥಯಾತ್ರಿ ನಾನಾ ಪುಣ್ಯ ಸಂ
ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ
ಜಾಗು ಮಾಡದೆ ಮಾಡೆ ಮುದದಿ ಬಂದೊದಗೋದು
ಜಾಗರತನದಿಂದ ಮಹಪುಣ್ಯ ಪ್ರತಿದಿನ
ಸಾಗರ ಮಂದಿರ ವಿಜಯ ವಿಠ್ಠಲ ಭವ
ರೋಗದ ವೈದ್ಯ ವೈಲಕ್ಷಣ್ಯ ೪
ಆದಿತಾಳ
ಜಯ ಜಯವೆಂದು ದತ್ತಮಂತ್ರವ
ನಯಮತಿಯಿಂದ ಜಪಿಸಲು
ತ್ರಯ ಪರಿಚ್ಛೇದಕ ಛೇದನಾ
ಭಯಪರ್ವತ ವಿಭೇದನಾ
ಅಯುತದುರಿತ ರೋದನಾ
ಕ್ಷಯರಹಿತ ಸನ್ಮೋದನಾ
ಜಯಜಯವೆಂದು ದತ್ತ ಮಂತ್ರಾ
ಪ್ರಿಯವಾಗಿಪ್ಪದು ಪ್ರಾರಭ್ಧಾ
ಜಯಜಯವೆನ್ನನೊ ಬಲುಲಬ್ಧಾ
ತ್ರಯ ಜಗದೊಳವನೆ ತಬ್ಧಾ
ಸುಯತಿಗಳು ನುಡಿದ ಶಬ್ದಾ
ದಯಪೂರ್ಣ ನಮಗೆ ವಿಜಯ ವಿಠ್ಠಲ ದತ್ತ
ಬಯಕೆ ಕೊಡುವುದು ಒಲಿದು ಬಿಡಬ್ಧ ಅಬ್ಧಾ ೫
ಜತೆ
ದತ್ತ ಪ್ರಧಾನ ವಿದ್ಯಾ ಸಪ್ರದಾತಾ ಪಾರ
ತಂತ್ರರಹಿತ ವಿಜಯ ವಿಠ್ಠಲ ಪ್ರಜ್ಞಾ ೬

ರು ತಮ್ಮ ಧರ್ಮ ಪತ್ನಿಯಾದ

೪೩
ಧ್ರುವ ತಾಳ
ದಯಮಾಡೊ ಎನ್ನೊಡೆಯಾ ದಾಸಿಗೊಲಿದು ಇಂದು
ಭಯವೆ ಪರಿಹರಿಸಿ ವೇಗದಿಂದಲಿ ಬಿಡದೆ
ಬಯಲಾಸೆಮಾಡಿ ಮುಂಗಾಣದೆ ಕಂಡ ಕಡೆಗೆ
ಪಯಣಗತಿಯಲ್ಲಿ ಪ್ರಯಾಸ ಬಡಲ್ಯಾಕೆ
ಅಯುತ ಅಪರಾಧಗಳು ಮಾನವರು ಎಸಗಿದರು
ಪಯೋನಿಧಿಸುತೆ ರಮಣ ನಿನ್ನ ನಾಮ
ತ್ರಯದಿಂದ ದೂರಾಗಿ ನಿರ್ಮಳದಲ್ಲಿ ನಿತ್ಯ
ಜಯಪ್ರದವಾಗುವುದು ಜಗವರಿಯೆ
ವಿಯದ್ಗಂಗೆ ಮೊದಲಾದ ನದ ನದಿಗಳಿಗೆ ಪೋಗಿ
ಮೀಯಬೇಕೆಂದು ಪೇಳುವ ಉಕ್ತಿಯು ನಿ
ಶ್ಚಯವಲ್ಲ ನಿನ್ನ ಶ್ರೀ ಪಾದಪದ್ಮದಲ್ಲೀಗ
ತ್ರಯಕೋಟಿ ಸಾರ್ಥಕ ತೀರ್ಥಂಗಳು ನಿರುತಾ
ಶ್ರಯವಾಗಿ ದೇವಗಣದೊಡನೆ ನಿ
ರಯದೂರನೆ ಕೇಳು ಮಹ ಸೋಜಿಗ
ವ್ಯಯವಾಗವೆ ಮಹಾತಾಪ ಜ್ವರ ವ್ಯಾಧಿಗಳು
ತ್ರಯ ಬಗೆಯಿಂದಟ್ಟಿದ ಮಾಯಾ
ಹುಯ್ಯಲಿಡುವೆ ನಿಂದು ಸೊಲ್ಲು ಲಾಲಿಸದಿರೆ ನಿ
ರ್ದಯವಂತನೆಂದು ಸರ್ವದ ದೂರುವೇ
ನಯನದಲಿ ನೋಡು ಉಡುಪಿಲಿ ಇತ್ತ ಮಾತನು ಹೃ
ದಯದೊಳಗೆ ಮರೆತಿಲ್ಲ ಎನಗೆ ಸ್ವಾಮಿ, ಉ
ದಯಾಸ್ತ ಮಾನ ತನಕ ಇದೇ ಸ್ಮರಿಸುತ್ತ
ಹಯದಂತೆ ಕುಣಿಕುಣಿದು ನಲಿದಾಡುವೇ
ಶ್ರೀಯರಸ ವಿಜಯವಿಠ್ಠಲ ಎಂದವಗೆ
ಜಯಂಗಳಲ್ಲದೆ ಪ್ರತಿ ಕೂಲವಲ್ಲ ೧
ಮಟ್ಟತಾಳ
ಈ ರೋಗವು ನಿನ್ನ ಮೂರು ನಾಮಗಳೊಮ್ಮೆ
ಸಾರಿದರೆ ಇರದೆ ಬೇರರಸಿ ಕಿತ್ತಿ
ಕ್ರೂರರ ಸಹಿತದಲಿ ದೂರಾಗಿ ಪೋಗುವುದು
ಆರಿಗೆ ಪೇಳದಲೆ ಹಾರವೀವುದು ನಮಗೆ
ಭಾರಕರ್ತನಾದ ವಿಜಯವಿಠ್ಠಲ ನಿನ್ನ
ಆರಾಧಿನರ್ಧ ಶರೀರಕೆ ಪೀಡೇ ೨
ತ್ರಿವಿಡಿ ತಾಳ
ಉಪೇಕ್ಷಾ ಮಾಡದಿರು ಉತ್ರ‍ಕಷ್ಟ ಮಹಿಮನೆ
ಅಪೇಕ್ಷಾ ಎನೆಗುಂಟು ಅನುದಿನದಲ್ಲಿ
ಆಪನಾ ಯಾತ್ರಿಗೆ ಈರ್ವರನ ಕರೆದೊಯ್ದು
ಪಾಪ ಮುಕ್ತರ ಮಾಡು ಮುಂದೆ ಬರುವ
ಆಪತ್ತುಗಳ ತಡಿ ತಡ ಮಾಡದೆ ಜ್ಞಾನ
ದೀಪ ಪ್ರಕಾಶದಲಿ ಚರಿಸುವಂಥ
ಸುಪಂಥವೆ ಕೊಡು ಶುದ್ಧ ಮನಸು ಉಳ್ಳ
ತಾಪಸ ಸಜ್ಜನರ ಸಮೀಪವೀಯೋ
ಆಪಾದ ಮಸ್ತಕ ಪರಿಯಂತ ಭವವ್ಯಾಧಿ
ಲೇಪಿಸಿಕೊಂಡಿರೆ ನಿನ್ನ ನೆನಸಿ
ಪೋಪುದೆ ನಿಲ್ಲುವದೆ ಕಾಲಾ ಕ್ಲಪ್ತಿಯುಂಟೆ
ನೀ ಪಾಲಿಸದಿರೆ ಕಾಣೆ ಪರರಾ
ಆಪಾರ ಔಷಧ ನಾನಾ ಮಾತ್ರಿಗಳ್ಯಾಕೆ
ಮಾ ಪತಿ ನಿನ್ನ ನಾಮ ವ್ಯರ್ಥವೆ
ವ್ಯಾಪಾರ ನಿನಗಿದೆ ಎಲ್ಲೆಲ್ಲಿ ಇದ್ದರೂ
ಆಪನ್ನ ಜನರ ಸಾಕುವುದಲ್ಲದೆ
ಭೂ ಪಾರದೊಳಗೆ ಮತ್ತೊಂದು ಮಾತೆ ಇಲ್ಲ
ಕೋಪವಿಲ್ಲದ ದೈವಾ ದೀನ ಮಾತೆ ಇಲ್ಲ
ಚಾಪಧರಾಗ್ರಣಿ ವಿಜಯವಿಠ್ಠಲ ನಿನ್ನ
ರೂಪ ದೇಹದೊಳಿರೆ ಅನ್ಯ ಪ್ರತಿಮೆ ಪೂಜೆ ೩
ಅಟ್ಟತಾಳ
ಶ್ವಾನನ್ನ ಕೊಲಿಗೆ ಬಣ್ಣದ ಕೋಲು ಬೇಕೇನೊ
ಆನಂದ ಪದವೀವ ನಿನ್ನ ನಾಮಗಳೀ
ಬ್ಯಾನಿಗೆ ಬೇಕೇನೊ ಭಕ್ತರ ಮನೋರಥ
ಏನೆಂಬೆನಯ್ಯ ನಿನ್ನ ಭಕ್ತರ ಪಾದ
ಧ್ಯಾನದೊಳೊಮ್ಮಿಡೆ ತಿರುಗಿ ನೋಡದೆ ಪಲಾ
ಯಾನವಾಗೋದು ಬಲು ಕಾಲದ ರೋಗ
ಹಾನಿಯಾಗಿ ಪೋಗಿ ಹಿತವಕ್ಕು ಕಾಯಕ್ಕೆ
ಈ ನಿರಂತರ ಅನುಭವಿಸಿದ್ದು ಸಾಲದೆ
ನೀನೊಲಿದು ರೋಗ ಪೋಗುವ ಕಾರಣ
ನಾನು ತಿಳುಹಿದ ಕಾಲ ಕ್ಲಪ್ತಿ ನೋಡಿ
ನಾನೆ ತುತಿಸಿದೆ ಗುರುಗಳ ದಯದಿಂದ
ದಾನಪತಿ ವಂದ್ಯ ವಿಜಯವಿಠ್ಠಲ ಎನ್ನ
ಮಾನಸಾ ನುಡಿ ಕಾಯೊ ಮನ್ನಿಸಿ ಬಿಡದೆ ೪
ಆದಿತಾಳ
ಆಲಸ್ಯ ಮಾಡದಿರು ಅತಿದೂರಕೆ ಹಾಕಿ
ವ್ಯಾಳಿ ವ್ಯಾಳಿಗೆ ನಿನ್ನ ಚರಣ ಸೇವಿಗೆ ಅನು
ಕೂಲವಾಗಲಿ ಬೇಕು ನೀ ಮನಸು ಇತ್ತಾಗ
ಭೂಲೋಕದೋಳು ತಿಳಿದು ಸಾಧನ ಮಾಡುತ
ನಾಲಿಗೆಯಿಂದಲಿ ಹರಿ ಶರಣರ ಸ್ತೋತ್ರ
ವಾಲಯದಿ ಪಠಿಸುತ್ತ ಸುಖದಲ್ಲಿಪ್ಪಂತೆ ಮಾಡು
ಬಾಲ ಭಾಷೆಗಳೆಲ್ಲ ಮನಸಿಗೆ ತಾರದೆ
ಪಾಲಿಸಬೇಕು ಎನ್ನ ದೇಹ ಸಂಬಂಧವ
ಕಾಲಿಗೆ ಎರಗುವೆ ಕಠಿಣ ತನವೆ ಬಿಡು
ಬಾಳುವಂತೆ ಮಾಡಿ ಭಕ್ತಿ ಮಾರ್ಗವೆ ಇತ್ತು
ಮೂಲೋಕ ಪರಿಪಾಲಾ ವಿಜಯವಿಠ್ಠಲರೇಯ
ಆಳಾಗಿ ಎಲ್ಲರ ಅತಿ ಮೋಹದಲ್ಲಿ ಕಾವಾ ೫
ಜತೆ
ಅಟ್ಟಿದೆ ನಿನ್ನ ನಾಮಗಳಿಂದ ಮಹಾವ್ಯಾಧಿ
ವಿಠ್ಠಲ ವಿಠ್ಠಲ, ವಿಜಯವಿಠ್ಠಲ ಕರುಣೀ ೬

ನಾಮಮುದ್ರೆಗಳನ್ನು ಧರಿಸಿ ದಾಸರ ಶಿಷ್ಯನಾಗಿ

೫೭
ಧ್ರುವತಾಳ
ದಾಸನಾಗುವುದು ಅಶೇಷ ಜನ್ಮದ ಪುಣ್ಯ
ರಾಶಿ ಬಾರದಲೆ ಫಲಿಸೋದೇನೋ
ಸಾಸಿರ ಕೋಟಿ ಧನ ತಾಸೂರೆ ಬಿಟ್ಟರು
ಕಾಶಿ ರಾಮೇಶ್ವರ ತಿರುಗಿದರು
ಮಾಸ ಮಾಸ ಉಪವಾಸವನ್ನೆ ಮಾಡಿ
ದೇಶ ಪ್ರದೇಶವನ್ನು ಸುತ್ತಿದರೂ
ವಾಸರೋಸರ ಬಿಡದೆ ಶರೀರ ದಂಡಿಸಿ
ಘಾಸಿಯಾಗಿ ಪಲ್ಲು ಗರಿದರೇನು
ವಾಸುದೇವನ ಪಾದಸೇವೆ ದೊರಿಯದು
ಸಾಸಿವಿ ಕಾಳಿನಿತು ಸಂಶಯ ಯಾಕೋ
ಸಾಸಿರಾರ್ಚಿಸೆ ನಾಮ ವಿಜಯ ವಿಠ್ಠಲನ್ನ
ದಾಸನಾಗುವ ಭಾಗ್ಯವಾಸುಕಿ ಎಣಿಸುವನು ೧
ಮಟ್ಟತಾಳ
ಅಂದಣವನು ಏರಿ ಅರಸು ಎನಿಸಿಕೊಂಡು
ಹಿಂದೆ ಮುಂದೆ ಹಿತದ ಪರಿವಾರದವರ
ಸಂದಣಿ ಸಹಿತದಲಿ ಮೆರೆದು
ಕುಂದದೋಲಗವನ್ನು ಕುಶಲದಿ ಕೊಳಬಹುದು
ಇಂದು ಮೋಹನ ಗುರು ವಿಜಯ ವಿಠ್ಠಲ
ಎಂದಿಗೆಂದಿಗೆ ಭಕುತಿ ಈಯನೋ ಪರೀಕ್ಷಿಸದೆ ೨
ತ್ರಿವಿಡಿ ತಾಳ
ಷಡುರಸಾನ್ನವ ಕೊಡುವ ಒಡವೆ ವಸ್ತು ಒಳ್ಳೆ
ಉಡಗಿ ವಸನಾಭರಣ ತಡಿಯದೆ ಕೊಡುವ
ಮಡದಿ ಮಕ್ಕಳು ತನ್ನ ಒಡನೊಡದೆ ಬಂದ ಸುಖ
ಬಡುವ ಬಾಂಧವರನ್ನ ಎಡೆಬಿಡದಲೆ ಕೊಡುವ
ಅಡಿ ತೊಲಗದಲೆ ಅನೇಕ ಕಡಿಯಲಿಂದ
ಕಡೆ ಇಲ್ಲದ ಭಾಗ್ಯ ಸಡಿಲಾದಂತೀವ
ಕಡು ಮುದ್ದು ಚತುರ್ಭಾವ ವಿಜಯ ವಿಠಲ ರಂಗ
ದೃಢ ಭಕುತಿ ಕೊಡನಯ್ಯಾ ಅಡಿಮೇಲಗಳಲಿದರು ೩
ಅಟ್ಟತಾಳ
ದಾಸನಾಗುವೆನೆಂದು ಆಶೆಯ ಮಾಡಲು ಕ್ಲೇಶವ ಬಡಿಸುವಾ
ಭಾಸವ ಮಾಡಿಸುವ ನಾಶನ ಮಾಡಿಸುವ ಸಕಲ ಐಶ್ವರ್ಯವ
ಗ್ರಾಸವಾಸಕೆ ತರಲೀಸಾನು ಪರರಿಂದ
ದ್ವೇಷವ ಮಾಡಿಸುವ ಮಾನಿಸರ ಕೈಯಿಂದ
ಮೋಸವಾದ ಭವಪಾಶದಲ್ಲಿ ಬಿಗಿವ
ಬೀಸಿ ಬೀಸಾಟುವ ಕಾಸಿನವನಮಾಡಿ
ಲೇಸು ಜೋತಿಷಿನಾನು ವಿಜಯ ವಿಠ್ಠಲನ್ನ
ದಾಸನಾಗುವನಿಗೆ ಕ್ಲೇಶ ಬಡಿಸದೆ ಒಲಿಯನು ೪
ಆದಿತಾಳ
ಏನು ಹೀನ ಹಾನಿ ಬರಲು ತಾನಳುಕಿ ಹಿಂದಾಗದಲೆ
ನೀನು ನೀನು ನಿನ್ನದೆಂದು ಮಾನಸ್ಥಾನ ಮೌನ ಧ್ಯಾನ ಜ್ಞಾನ
ನಾನೀಗ ನಿನ್ನವನೆ ಎಂದು ಮಾನಾನಂದ ನಾ
ಪ್ರಾಣಧಿಟ್ಟ ತ್ರಾಣನಾಗಿ ನೀನೆ ನೀನೆ ನೀನೆ ಎಂದು
ಆನಿಗಾನೆ ಪೊಸದಾಡಿ ಏನು ವಿಪರೀತದನ್ನ
ನಾನೆ ನಿನ್ನ ಬಿಡೆನೆಂಬೊ ಜಾಣತನವೊಂದಿರಲಿ
ತ್ರಾಣಗೆಡನೆಂದು ಪ್ರಮಾಣನಾಮ ವಿಜಯ ವಿಠ್ಠಲ
ಗೇಣುದರ ಪೋಗದಲ್ಲೆ ಪ್ರಾಣಪದಕವಾಗಿಪ್ಪ ೫
ಜತೆ
ಶ್ರಮವೇನು ಬಂದರೆ ಬಿಡೆನೆಂಬೊ ದಾಸಗೆ
ಯಮನಾಮ ವಿಜಯ ವಿಠ್ಠಲನು ತೆತ್ತಿಗನೋ ೬

ಈ ಸುಳಾದಿಯಲ್ಲಿಯೂ ದಾಸರ

೪೫
ಆದಿತಾಳ
ದಾಸನು ನಾನಲ್ಲ ದಾಸತ್ವ ಎನಗಿಲ್ಲ
ದೆೀಶದೊಳಗೆ ಆಭಾಸ ದಾಸ ನಾನು
ಹೇಸಿಕೆ ಒಡಲಿಗೆ ಗ್ರಾಸ ಪುಟ್ಟಿಪೆನೆಂದು
ಏಸೇಸು ಬಗೆಯಲ್ಲಿ ವೇಷ ಧರಿಸಿಕೊಂಡು
ಕಾಸಿಗಾಗಿ ಪರರ ವಾಸರದಲ್ಲಿಗೆ ಪೋಗಿ
ಆಶೆಯಲ್ಲಿ ವಾಸರವ ಕಳೆಯುವೆನೊ
ಕೂಸಿನ ಕರದೊಳಗಾಸಿಯ ತೋರಿಸಿ
ಭೂಷಣವೆಬ್ಬಿಸಿ, ಮೋಸಗೊಳಿಸುವಂತೆ
ಲೇಸಾಗಿ ಬಪ್ಪ ಪುಣ್ಯರಾಶಿಯ ಬಿಸಟುವರು
ಆಶಿಸುವೆ ಜ್ಞಾನ ಲೇಶವಿಲ್ಲದರಿಂದ
ಲೇಸು ಹೊಲ್ಲೆಂಗಳಿಗೆ ತಾ ಸುಮ್ಮನಿಪ್ಪುದು
ದೋಷ ಸುಕೃತವೆಂಬೊ ಆಶೆ ಪಂಥವ ತಿಳಿದು
ಗ್ರಾಸ ಮಾಡಿಕೊಂಡೆ ಮೀಸಲ ಸಂಪದವಿ-
ದೋಷವರ್ಜಿತ ನಮ್ಮ ವಿಜಯವಿಠ್ಠಲ ಎನ್ನ
ಆಶೆಯೆಂಬುದು ಘಂಟಾ ಘೋಷವಾಗುತಿದೆ ೧
ಮಟ್ಟತಾಳ
ಹಲವು ಯೋಚನೆ ಮಾಡಿ ಮಳೆ ಬಂದರೆ ಬ-
ರಲು ಜಲ ನಿಲಿಪೆನೆಂದು ಹಲಬರ ಕೂಡಿಟ್ಟು
ಇಳಿಯ ಅಗಲಕೆ ದೊಡ್ಡ ಮಳಲ ಕೆರಿಯ ಕಟ್ಟಿ
ಸಲೆ ನಲಿದು ಕಡೆಗೆ ಹಲುಬಿ ಪೋಗುವನಂತೆ
ಇಳಿಯೊಳು ನಾನೊಬ್ಬ ಬಲು ಮೂರ್ಖನು ದೇವ
ಸಲಿಗೆಯಿಂದಲಿ ಪೋಗಿ ಸುಳಿದು ಪರರ ಮನೆಯ
ಒಳಗೆ ಕುಳಿತು ಗಂಟಲು ಒಡೆವ ಸುದ್ದಿ ತಿಳಿಯದಲೇ ತವಕದಲಿ
ಬೆಳಗು ಕಳೆವೆ ಹಣವ ಘಳಿಸುವ ಸಂಭ್ರಮದಿ
ಕೊಳೆತ ಫಲಕೆ ಹೆಣಗಿ ತಲೆ ಒಡಕೊಂಡ ಬಾಲ-
ರೊಳಗೆ ವೆಗ್ಗಳ ಮೂರ್ಖನು ನಾನು
ಕಳಕಾಷ್ಟದೊಳಗೆ ನಿನ್ನಯ ಪಾದ ಪಾದ
ನಿಲಿಸಿಕೊಂಡು ನಿತ್ಯ ಒಲಿಸಿಕೊಳಲಿಲ್ಲ
ಸುಲಭ ಮಾರ್ಗವ ಬಿಟ್ಟು ವಿಜಯವಿಠ್ಠಲರೇಯ
ಕೆಲಕಾಲವು ತಿರುಗಿ ಮುಳವು ಮಾಡಿಕೊಂಡೆ ೨
ತ್ರಿವಿಡಿ ತಾಳ
ಪರರ ಒಡವೆಯನು ಹರಿ ನಿನ್ನ ಮುದಕ್ಕೆ
ತರದೇಳಿರಿಸಿಕೊಂಡು ಸರಸರನೇ ನೋಡಿ
ಕರವೆತ್ತಿ ಮುಗಿದು ನೀರೆರದು ಮುಸಕನಿಟ್ಟು
ಬೆರಳನೆಣೆಸಿ ಉಚ್ಚರಿಸುವೆ ಪಿಟಿ ಪಿಟಿ
ಎರಡು ತುಟಿಯ ಬಿಚ್ಚಿ ನರರಿಗೆ ತೋರಿಸುತ
ಮರಳು ಮಾಡುವೆ ಎನ್ನುದರ ಪೋಷಣೆಗೋಸುಗ
ಭರದಿಂದಂಗಡಿಯಿಟ್ಟು ಸರಕು ಮಾರುವನಂತೆ
ನೆರೆದವರಿಗೆ ಮಹ ಹರುಷ ಬಡಿಸಿ
ಕರೆದು ಕಾಗೆಯು ತನ್ನ ಪರಿವಾರಕ್ಕುಣಿಸುವಂತೆ
ತೆರವಿಲ್ಲದಲೆ ಸ್ತ್ರೀ ಸುತರ ಉಣಿಸುವೆನು
ಬರಿದೆ ಪೋಯಿತು ಜನ್ಮ ಹರಿ ನಿನ್ನಾರಾಧನೆ
ಪರಮ ಗುಪ್ತದಲ್ಲಿ ವಿಸ್ತರಿಸಲಿಲ್ಲ
ಧರೆಯೊಳು ನಾನೊಬ್ಬ ಹರಿದಾಸನೆನಿಸಿ ಅ
ನ್ಯರನು ಕೊಂಡಾಡಿದೆ ಇರುಳು ಹಗಲು
ಹರವಿದ ಭವದ ಶರಧಿಯೊಳಗೆ ಬಂದು
ಹರಳು ಹಾಕಿದರಿಂದ ಶರಧಿಗಾಗದು ಆಧಿಕ
ಕೊರತೆ ಎಂದಿಗೂ ಇಲ್ಲ
ಕಿರಿನಗಿಯಲಿ ಇಪ್ಪ ವಿಜಯವಿಠ್ಠಲರೇಯ
ಪರಿಪೂರ್ಣ ಕಾಮನಾದರೆ ಎನ್ನಿಂದೇನಾಹುದೊ೩
ಅಟ್ಟತಾಳ
ಪ್ರೀತಿಯಿಂದಲಿ ಮಧುರಾನ್ನವ ಭುಂಜಿಸಿ
ಯಾತರಿಂದಲಿ ಕೈಯ ಬಾಯ ತೊಳೆದಂತೆ
ಆ ತೆರನಾಯಿತು ಎನ್ನ ದಾಸತನ
ಯಾತಕ್ಕೆ ಬಾರದು ಪುಣ್ಯವಂತನಾಗದೆ
ಭೂತಳದೊಳು ಪುಟ್ಟಿ ಪೊಟ್ಟಿಗೆ ತಿರುಗಿದೆ
ಪ್ರಾತರ ಕಾಲ ಅಸ್ತಮಾನ ಪರಿಯಂತೀ
ಭೀತಿ ಎಣಿಸಲಿಲ್ಲ ಮೈಲಿಗೆಯ ಮನ
ಭ್ರಾಂತಿ ಬಡಿಸಿ ಭಂಗ ಬಡಿಸುವುದು
ನೀತಿಯಿಂದ ವೈರಾಗ್ಯ ತೊಡಲಿಲ್ಲ
ಪೋತತನದಲ್ಲಿ ರಿಪುಗಳ ಕೊಂದ ಅ
ಜಾತ ವಿಜಯವಿಠ್ಠಲನಂತೆ ರೂಪ ೪
ಆದಿತಾಳ
ನೆರೆ ಹೊರೆ ಮನೆಯಲ್ಲಿ ಇರುತಿಪ್ಪ ಪದಾರ್ಥ
ತರಿಸಿ ತುತ್ತು ಮಾಡಿ ಹರಿ ನಿನ್ನ ಬಾಯೊಳು
ಇರಿಸಿ ಉಣಿಸಲಿಲ್ಲ ಬರಿದೆ ಡಂಬಕವಲ್ಲದೆ
ಪೊರೆವೆನೊ ಎನ್ನ ಪೊಟ್ಟಿ ಕರಕರಿಗಾರದೆ
ಹರಿ ನಿನ್ನ ಹೃದಯಾಂಬರದಲ್ಲಿ ನೋಡಿ ತಿಳಿದು
ಧರಿಸಲು ಸಕಲ ಪುಣ್ಯ ಬರುವುದು ತಡಿಯದೆ
ನರನು ವಾಸರ ದಣಿಯದೆ ತೋರದು ಏಕಾಂತದಲ್ಲಿ
ನಿರುತ ಈ ಪರಿಯಿಂದಾಚರಣೆ ಮಾಡಲು ವೇಗ
ಪೊರೆವ ಪ್ರತಿದಿನ ವಿಜಯವಿಠ್ಠಲರೇಯ ೫
ಜತೆ
ತನ್ನಲ್ಲಿ ಸರ್ವ ಅನುಕೂಲವಾಗಿದೆ
ಅನ್ಯರಾಶೆಯು ಸಲ್ಲ ವಿಜಯವಿಠ್ಠಲರೇಯ ೬

ರು ತಮ್ಮ ಗುರುಗಳಾದ

೧೬೧
ಧ್ರುವತಾಳ
ದಾಸರ ಮಹಿಮೆಗೆ ಅನಂತ ನಮೋ ನಮೋ
ದೇಶದೊಳಗೆಲ್ಲಿ ಸರಿಗಾಣೆನೋ
ವಾಸುದೇವನ ಪಾದ ಹೃದಯಮಧ್ಯದಲಿಟ್ಟು
ಲೇಸಾಗಿ ಪೂಜಿಪರು ಭಕುತಿಯಲ್ಲೀ
ಲೇಶವಾದರು ಕಾಮಕ್ರೋಧಾದಿಗಳು ಇಲ್ಲಾ
ಸಾಸಿರ ಜನ್ಮವೆತ್ತಿ ಬಂದ ಕಾಲಕ್ಕೂ ನಾನು
ಈ ಸುಲಭ ಗುರುಗಳಿಗೆ ಆವಲ್ಲಿ ಸರಿಗಾಣೆ
ಏಸುಬಗೆಯಿಂದ ಕರುಣವ ಮಾಡುವರು
ಈ ಶರೀರವೆ ಅವರ ಸದನದಲ್ಲಿ ಇಪ್ಪ
ದಾಸನು ದಾಸರ ಯುಗಳಪಾದಕ್ಕೆ ನಿವಾ
ಳಿಸಿ ಬಿಸುಟುವೆನು ಅನಂತ ಜನುಮದಲ್ಲಿ
ಈ ಸುಖ ತಪ್ಪದೆ ಎನಗಾಗಲಿ ಬಿಡದೇ
ಕೇಶವ ವಿಜಯ ವಿಠ್ಠಲ ದಯದಿಂದ
ದಾಸ ಪುರಂದರ ಗುರುಗಳು ಒಲಿಯೇ ೧
ಮಟ್ಟತಾಳ
ಕೇವಲ ದೃಢವಾಗಿ ಶ್ರೀ ವಲ್ಲಭನ ರಾ
ಜೀವ ಪಾದವನ್ನು ಭಾವದಲ್ಲಿ ನಿಲಿಸಿ
ಪಾವನವಾಗಿಪ್ಪ ಪಾವಮಾನಿ ಮತದ
ಕೋವಿದರನುಸರಿಸಿ ಹೇವ ವಿಜಯ ವಿಠ್ಠಲ ಒಡೆಯನೆ
ಸರ್ವಜೀವರಿಗೆ ಭಿನ್ನಾ ದೇವರೆ ಜಗಕೆಂದು
ದೇವರೆ ಜಗಕೆಂದೂ ೨
ತ್ರಿವಿಡಿತಾಳ
ಈ ಪರಿಯಲಿ ವಿಜಯನಗರದಲ್ಲಿ ಇದ್ದು
ತಪಸಿಗಾರಗುರುವ ಗುರು ವ್ಯಾಸರಾಯ ಮು
ನಿಪನ್ನ ಮನಮೆಚ್ಚುವಂತೆ ಸೋಜಿಗ ತೋರಿ
ಭೂಪಾಲಕರ ಮಿಗಿಲಾದವರ ತೃಣವೆಂ
ದಾ ಪತಿಕರಿಸದೆ ತುಚ್ಛಮಾಡಿ
ಅಪಾರ ಮಹಿಮೆಯ ತೋರುವ ಶ್ರೀ ಹರಿಯ
ರೂಪವ ಮನದೊಳಗಿಟ್ಟು ನಲಿವಾ
ಗೋಪಾಲ ವಿಜಯ ವಿಠ್ಠಲನ ದಾಸರೊಳು
ಈ ಪುರಂದರ ದಾಸರಿಗೆ ಸಮನುಂಟೆ೩
ಅಟ್ಟತಾಳ
ಇವರಾಡಿದ ಭೂಮಿ ಎನಗದು ವೈಕುಂಠ
ಇವರಿದ್ದ ಸ್ಥಾನ ಎನಗೆ ಶ್ವೇತದ್ವೀಪ
ಇವರಿದ್ದದೆ ಎನಗೆ ಅನಂತಾಸನ
ಇವರಿದ್ದ ಅವನಿ ಎನಗೆ ತ್ರೈಲೋಕ
ಇವರು ಮಾಡಿದ ಲೀಲೆ ಎನಗೆ ವೇದೋಕ್ತಿಯು
ಇವರ ಚರಿತೆ ಎಲ್ಲಾ ಎನಗದು ಪುರಾಣ
ಇವರ ಪಾದಾಂಗುಟದಲ್ಲಿ ಸರ್ವ ತೀರ್ಥಾ
ಇವರ ಪಾದಾಂಗುಟಿದಲ್ಲಿ ಸರ್ವಕ್ಷೇತ್ರಾ
ಇವರ ಪಾದರೇಣು ಎನಗೆವಜ್ರ ಪಂಜರ
ಇವರಿಂದಲಿ ದೇಹ ಉದ್ಧಾರವಾಗೋದು
ಇವರ ಪಾದ ಹೆಜ್ಜೆ ಬಿದ್ದಲ್ಲಿ ಈ ಕಾ
ಯವನು ಮಾಡೆ ಹೊರಳಿಸಿ ತೆಗೆವೆನೊ
ಅವನೀಶ ವಿಜಯ ವಿಠ್ಠಲನ್ನ ನಂಬಿದಾ
ಹವಣರಾ ಪೊಳೆವ ಪಾದವನು ಸೇರುವೆನೊ೪
ಆದಿತಾಳ
ತಂದೆ ತಾಯಿಗಳೆ ದಾಸರು, ಬಂಧು ಬಳಗವೆ ದಾಸರು
ಹಿಂದೆ ಮುಂದೆ ಕಟ್ಟು ಕಾವಲಿಯಿಂದ ಸಾಕುವರೆ ದಾಸರು
ಅಂದು ಇಂದು ಬಿಡದಲೆ ಬಂದ ಬಂಧನಗಳೆಲ್ಲಾ
ಪೊಂದದಂತೆ ಮಾಡೆ ಪುಣ್ಯ ತಂದು ಕೊಡುವರೆ ದಾಸರು
ಸಂದಿದೆನೊ ಸಂದಿದೆನೊ ಎನ್ನ ಕುಲಸಹಿತ ಪು
ರಂದರ ದಾಸರ ಪಾದ ದ್ವಂದ್ವದಲ್ಲಿಗೆ ಪೋಗಿ
ಮಂದರಾದ್ರಿ ಧರ ನಮ್ಮ ವಿಜಯ ವಿಠ್ಠಲ ಹರಿಯಾ
ಮಂದಿರಕೆ ಸೋಪಾನ ಸಂದೇಹ ತೊಲಗಿತು೫
ಜತೆ
ದಾಸರೆ ಮನೆದೈವ, ದಾಸರೆ ಮನದೈವಾ
ದಾಸರಲ್ಲದೆ ಇಲ್ಲಾ ವಿಜಯ ವಿಠ್ಠಲ ಬಲ್ಲಾ೬

ಸಂಪಾದಿಸಿದ ಐಶ್ವರ್ಯವೆಲ್ಲವನ್ನು ನಾವೇ

೪೨
ಧ್ರುವ ತಾಳ
ದಾಸರಾ ನಿಜ ಕಾರುಣ್ಯ ಪಾತ್ರನು ನಾನು
ದಾಸರಾ ಹೆಬ್ಬಾಗಿಲ ಮುಂದೆ ಕಾಯ್ವವ ನಾನು
ದಾಸರಾ ಮನೆಯಲ್ಲಿ ಅಂಗಣಾ ತೊಳಿವಾವಾ ನಾನು
ದಾಸರಾ ಭೋಜನಶಾಲೆ ಸಂಮ್ಮೂರ್ಜನಿಗಾ ನಾನು
ದಾಸರಾ ಸದನಕ್ಕೆ ಜಲವಾಹಕ ನಾನು
ದಾಸರಾ ಪೂಜಾ ಸಾಧನ ದ್ರವ್ಯತರುವಾವನಾನು
ದಾಸರಾ ಉಠಾ ದೆಡೆಯಂಜಲತಗಿವಾವಾನಾನು
ದಾಸರಾ ಬಳಿಯಲ್ಲಿ ಸಮ್ಮೊಗಾದವಾ ನಾನು
ದಾಸರುಂಡದೆ ಉಂಡು ದಾಸರುಟ್ಟದ್ದೆ ಉಟ್ಟು
ದಾಸರಾಡಿದ್ದೆನಗ ವೇದವಾಕ್ಯವೆಂದು
ಲೇಸಾಗಿ ಪೇಳಿ ಕೊಳುತಾಲಿದ್ದಾವರಾ ಸಂಗಾ
ಲೇಶಾ ಬಿಡದೆ ಕಲಾಕಳೆವ ಜ್ಞಾನಿಗಳವರಾ
ದಾಸದಾಸೀ ಜನರಾಯಲ್ಲಿಗೆಲ್ಲಿಗೆ ನಿಜಾ
ದಾಸಾನು ದಾಸನು ನಾನು ಅನಂತಾ ಜನುಮಾದಲ್ಲಿ
ಭೂಷಣಾ[ವಾ]ಗಿದೆ ಮತ್ತಾವ ಸಂಪತ್ತು
ಸೂಶಿ ಪ್ರಾಪುತವಾಗಾಲದರಿಂದಾ ಲÁ ಭ ವೇನು
ದಾಸಜನ ಪ್ರೀಯ ವಿಜಯ ವಿಠಲರೇಯನ
ದಾಸನಾದವನಿಗೆ ಆವುದು ಕೊರತೆ ಕಾಣೆ ೧
ಮಟ್ಟತಾಳ
ಸುಣ್ಣಕೆ ಗತಿ ಇಲ್ಲದ ಮನುಜ ಪಾಮರಗೆ
ಮುನ್ನೆ ಕುಳಿತಲ್ಲಿ ರನ್ನದೊಜ್ರದಖಣಿ ತನ್ನಿಂದಲಿ ತಾನೆ
ಕಣ್ಣಿಗೆ ಪೊಳೆದಂತೆ ಚನ್ನಾಗಿ ಬಳಿಯಲ್ಲಿ
ಬಣ್ಣಿಸಲರಿದು ಘನ್ನದುರಿತವೋ ಚನ್ನವಾದದಕೆ
ಎನ್ನ ಪುಣ್ಯವಲ್ಲಾ ಎನ್ನ ಸಾಧನವಲ್ಲಾ
ಮನ್ನಿಸಿ ಪಿರಿಯಾರು ಇನ್ನಿನಿ ಪಾಲಿಸಲು ಇನ್ನು ವೆಗ್ಗಳವಿದೆ
ಜನಾರ್ದನ ದೇವಾ ವಿಜಯ ವಿಠಲರೇಯನ
ಸನ್ನು[ತಿ]ಪರ ಮಹಿಮೆ ಬಣ್ಣಿಸುವರಾರೊ ೨
ತ್ರಿವಿಡಿ ತಾಳ
ಅರವಿಂದಾ ಬೆಳೆಯಲ್ಲಿ ಖದ್ಯೋತಾ ಕ್ರಿಮಿ ಒಂದು
ಹರಿದಾಡತಿರಲಾಗ ಅದೆ ಕಾಲಾದಲ್ಲಿ
ತರಣಿ ಉದಿತಾವಾಗೆ ಮುದುರೀದಾ ಸರಸೀಜಾ
ಅರಳಾಲು ಕಾಣುತಲಾ ಖದ್ಯೋತವು
ಹರುಷಾ ಪಡುವುದೆಂದು ನರನು ನುಡಿಂಇಇಲದರಾ
ಚರಿತೆ ತಿಳಿಯಾದೇನೋ ನೋಳ್ಪರಿಗೆ
ಮರುಳೆ ಮನವೆ ಕೇಳು ಕವನಾ ನಿನ್ನಾ ಕೃತಿ
ಹಿರಿದಾಗಿಪ್ಪುದೆಂದು ಹಿಗ್ಗದಿರು ಎರಡು ಹೆಸರು ಒಂದಾ
ದರು ಮಹಾಖ್ಯಾತಿ ಬರುವುದು
ಕರುಣಿಗಲ್ಲಿದೆ ಖದ್ಯೋತಕ್ಕೆ ಏನಾ
ಗರುವಿತಿತ ನಾಸಲ್ಲಾ ವಿಜಯ ವಿಠಲರೇಯನ
ಶರಣಾರ ಕೃಪೆ ಇಂದಾ ಭಾಗ್ಯಾ ನಿಜಾವೆನ್ನಿ ೩
ಅಟ್ಟತಾಳ
ಪರಮ ದಾರಿದ್ರಾನು ಸ್ಥಿರ ರೋಗಿಷ್ಟಾನು
ನಿದ್ರಾಕಾಮ[ಸ]ದುಃಖಿಷ್ಯ ಎಂದಿಗು
ಕುರುಡಾನು ಕುಂಟಾನು ಕಿವಡಾ ಮೂಕ ನಾನಾ
ಪರಿವ್ಯಾಧಿ ವ್ಯಾಕುಲದವ ಆರು ಇಲ್ಲದಿಪ್ಪ
ಪರದೇಶಿ ಕೇವಲ ಕೃಷಿ ಪೀಡಿತಾ ಸುಧಾ
ತುರನಾಗಿ ಬ್ಯಾಸಿಗೆ ಬಿಸಲೊಳೂ ತಪಿಸುತ್ತಾ
ಸ್ಮರಣೆ ಇಲ್ಲದೆ ನೀರು ಇಲ್ಲಾದಾರಾಉ್ಯದಿ
ಇರುತಿಪ್ಪ ಮಂದ ಮಾನವನ ತತ್ಕಾಲದಿ
ಭರದಿಂದ ಕೊಂಡೊಯ್ದು ಸಂಜೆವನಾದ್ರೀಲಿ
ಸುರ ತರುವಿನಾ ತಂಪನೆಳೆಲೊಳಾಗಿಟ್ಟು
ಪರಿಯಂತೆ ಎನಗಿಂದು ಸೋತ್ತುಮಾರಿಂದಾಲಿ
ದೊರಕೀತು ಇದೆ ಸುಖಾ ಸೌಖ್ಯವೆನ್ನು ಮನವೆ
ಧರಿಯೊಳೆ ದೈವವಾದ ವಿಜಯ ವಿಠಲನ್ನ
ಮರಿಯಾದೆ ಭಕ್ತಿಯಲಿ ಕೊಂಡಾಡು ನಲಿದಾಡು ೪
ಆದಿತಾಳ
ಉಪಜೀವನಾಗಿದೆ ಎಲೊ ಮನವೆಕೇಳು
ಗುಪಿತಾದಲ್ಲಿ ಚರಿಸು ಅಂತಾರಂಗಾದಲ್ಲಿ
ಸುಪಥವಾಬಯಸುತಿರು ಸುಜನಾರಾ ಬಿಡದಿರು
ಅಫಲಾ ನಾನು ಅತಿ ಉಗ್ರಾ ಕರ್ಮಾ ಬಿಡು
ಉಪಚಾರವೆನ್ನಾದಿರು ಹರಿದಸರು ಒಲಿದು
ಕೃಪೆಮಾಡಿದಲ್ಲಾದೆ ಬರಿದೆ ಬಾಹುದೆ ಸುಖ
ವಿಪುಳಾದೊಳಗೆ ಹರಿದಾಸನಾಗುವುದಕ್ಕೆ
ಅಪರಿಮಿತವಾಗಿ ಸಾಧನಾ ದೊರಿಯಾಗಬೇಕು
ಉಪದೇಶ ಕರ್ತಾ ನಮ್ಮಾ ವಿಜಯ ವಿಠ್ಠಲರೇಯನ
ಜಪತಪಾಧ್ಯಾನದಿಂದಾ ಪಾಪಾ ಪೋಗಾಡುವುದು ೫
ಜತೆ
ಇಂದ್ರನಾಮಕರಾದ ದಾಸರೊಲಿದಾ ಮ್ಯಾಲೆ
ಚಂದ್ರ ಪ್ರಕಾಶಕ ವಿಜಯಾ ವಿಠಲಾ ಪೊಳೆವಾ ೬

ಈ ಸುಳಾದಿಯೂ ತೋತಾದ್ರಿಯನ್ನು

೭೦. ತೋತಾದ್ರಿ
ಧ್ರುವತಾಳ
ದೀನ ಬಂಧು ನಿನ್ನನೆ ನೆರೆ ನಂಬಿದೆ |
ಜ್ಞಾನಾಂಬುಧಿ ಯೊಳಗಾನಂದ ಪ ಡಿಸು |
ಭಾನುವಿನ ಕೋಟಿ ಭಾನುವಿನಂತೆ ದಿ |
ಕ್ಕನು ಪ್ರಕಾಶಿಸುವ ಮೌನಿಗಳೊ ಡಿಯಾ |
ಏನು ಪೇಳಲಿ ನಿನ್ನ ನಾಟಕ ತನವು |
ಕಾಣುವರಾರು ಗೀರ್ವಾಣರೊಳು |
ಅನಂತ ಜನುಮದಲಿ ನಾನೆ ನಿನ್ನವನಯ್ಯಾ |
ಮಾಣಾದೆ ಸಾಕುವದು ಮಾನದಿಂದ |
ಈ ನಾಡಿನೊಳಧಿಕ ತೋತಪರ್ವತ ವಾಸ |
ಶ್ರೀ ನಾರಿಯರಸ ವಿಜಯ ವಿಠಲ ಸುರ |
ಧೇನು ಚಿಂತಾಮಣಿ ನೀ ನೊಲಿದವರಿಗೆ ೧
ಮಟ್ಟತಾಳ
ತೋತನೆಂಬವ ಕಿರಾತನು ಪ್ರತಿದಿನ |
ಭೂತಳದೊಳು ತನ್ನ ಜಾತಿ ಧರ್ಮದಿಂದ |
ತಾ ತಿರುಗುತಲಿರೆ ಸೂತನ ತಾತನು |
ಪ್ರೀತಿ ಯಿಂದಲಿ ಬರಲಾತಗೆ ಅವನಂದು |
ಭೀತಿಯ ತೋರಿದನು ಭೀತಿಯ ತೋರಿದನು |
ನೂತನಾಂಗ ದೇವ ವಿಜಯ ವಿಠಲನ್ನ |
ಮಾತು ಮಾತಿಗೆ ನೆನದ ಮಾತುರ ಭೀತಿಹರ ೨
ತ್ರಿವಿಡಿತಾಳ
ಮುನಿರೋಮಹರಷನ ತನು ಮನವನು ಕಂಡು |
ವನಚರ ತಿಳಿದು ಕರುಣವ ಮಾಡಿದನು |
ಎನಗೆ ನೀನು ನಿಂದು ನೆನದಾತನ ತೋರಿ |
ಮನಕೆ ಸಮ್ಮತ ಬಡಿಸೆಂದನಲಾಗಿ ನಸುನಗುತ |
ವನ ಕರೆದು ಹರಿಮಹಿಮೆಯನು ಪೇಳಿದನು ಇತ್ತ |
ಮುನಿ ಸಮಾಧಿಯಲಿ ಸಾಧನದಿಂದ ಒಪ್ಪಿದನು |
ಅನಿಮಿಷರೊಡಿಯಾ ನಮ್ಮ ವಿಜಯವಿಠಲರೇಯನ |
ವನಜಯುಗಳ ಚರಣಾವನು ಮನದಲಿನೆನಿಸಿ ೩
ಅಟ್ಟತಾಳ
ಬಲುಕಾಲಾಮುನಿ ಇಲ್ಲಿ ಒಲಿಸಿ ಧ್ಯಾನವಮಾಡೆ |
ಜಲಜ ಲೋಚನ ಮೆಚ್ಚಿ ಒಲಿದು ಬಂದನು ತಾ |
ಇಳಿಯೊಳು ಮಹೇಂದ್ರಾಚಲದ ತಪ್ಪಲಲ್ಲಿ |
ಲಲಿತವಿಗ್ರಹನಾಗಿ ಥಳಥಳ ಪೊಳೆವುತ್ತ |
ದಳದಳಸುರರು ಪೊಮಳೆಯನ್ನು ಕರಿಯಲು |
ತಿಳಿಯ ಕಸ್ತುರಿಯ ತಿಲಕ ಮಕುಟ ಕುಂಡಲ |
ಸುಳಿಗುರುಳು ಕೊರಳ ಹಾರ ಕೌಸ್ತುಭ |
ಥಳಕು ಪದಕ ಪಚ್ಚೆವಳಿತ್ರಯ ಸುಳಿನಾಭಿ |
ಬೆಲೆಯಿಲ್ಲ ದುಡಧಾರಾ ರುಳಿಗೆಜ್ಜೆ ಅಂದಿಗೆ
ಘಲಕೆಂಬೊ ಪೆಂಡೆಯು |
ಚಲುವ ದೇವರ ದೇವ ತೋತ ಗಿರಿ ಸದಾ |
ನಿಲಯಾನೆ ವಿಜಯ ವಿಠಲನೆ ಹಮ್ಮಿ ನದೈವ ೪
ಆದಿತಾಳ
ಆ ಮುನಿಗೆ ವರವಿತ್ತಾ | ಭೂಮಿಯೊಳಗಾವ ಮನುಜಾ |
ತಾಮಸವ ಕಳೆದುನಿ | ಘ್ಯಾಮದಲಿ ಬಂದು ಇಲ್ಲಿ |
ಯಾವವಾದರು ವಾಸವಾಗಿ | ರೋಮ ಹರುಷ ತೀರ್ಥದಲ್ಲಿ |
ರೋಮಾ ಒಂದಾದರದ್ದಲು | ರೋಮಾಂಚನುಬ್ಬಿ ಕ |
ಣ್ಣು ಮನಕೆ ಸುಖಾ ಬಪ್ಪದು | ಆ ಮಹಾ ಮೂರುತಿಯನ್ನು |
ಪ್ರೇಮದಿಂದ ನೋಡಲಾಗಿ | ತಾ ಮರಳಿ ಬಾರನಯ್ಯಾ |
ಭೂಮಿ ಮೇಲಣ ಲೀಲೆಗೆ | ಶೀಮೆಯೊಳು ತೋತ ಶೈಲಾ |
ಧಾಮಾ ವಿಜಯ ವಿಠಲನ್ನಾ |
ನಾಮ ನೆನೆಯೆ ಪಾಪವೆಂಬಾ |
ರಾಮಾ ದಹಿಸಿ ಪೋಗುವಾದು ೫
ಜತೆ
ಪರಮೇಷ್ಟಿಯಿಂದಾರ್ಚನೆಗೊಂಡ ತೋತಾದ್ರಿ |
ವರಮಂದಿರವಾಸ ವಿಜಯವಿಠಲ ಧೀಶಾ ೬

ಭಗವಂತನ ಮಹಿಮೆ ಎಂಬುದು

೪೩
ಧ್ರುವ ತಾಳ
ದೀನ ಮಾನವನಿಗೆ ನೀನೇನು ಕರುಣಿಸಿದರೂ
ತಾನಿಲ್ಲಾದೆ ಪೋಗಿ ಹೀನವಾಗುವುದೊ
ಅನಂತ ದಿನಕೆ ನಿದಾನ ನಿಕ್ಷೇಪ ಸಂಪಾ
ದನೆ ಸವಿಯದಂತೆ ಆನಂದವಾಗಿರಲು
ನಾನೋತ ಪುಣ್ಯದಿಂದಾಧೀನವಾಗಿರಸದೆ
ಮೇಣು ಪೋಗಾಡಿದೇನು ದೀನ ಬಂಧೂ
ಜೇನು ಕಾನನದೊಳು ತಾನಿಟ್ಟು ಉಣದಂತೆ
ನಾನುಂಡು ಸುಖಿಸದೆ ನಾನಿದ್ದೆ ಬರಿದೇ
ದಾನವಾಂತಕ ಎನ್ನ ಪ್ರಾಣ ವಿಜಯ ವಿಠ್ಠಲ
ಧೇನು ನೀನಿರಲು ಯೋಚನೆ ಎನಗಿಷ್ಟು ಮಾಡ ಸಲ್ಲಾ ೧
ಮಟ್ಟತಾಳ
ನಾಯಿಗೆ ಶಾವಿಗೆ ಪರಮಾನ್ನದ ತುತ್ತು
ಬಾಯೊಳಗಿಡಲದು ಉಂಡು ಜೀವಿಸುವುದೇ
ಶ್ರೀ ಯರಸ ನಿನ್ನ ಸೊಬಗಿನ ನಾಮದ
ಪೀಯೂಷವ ಕುಡಿಯೆ ದಕ್ಕುವುದೇ ಎನಗೆ
ಅಯೋಗ್ಯನು ನಾನು ಅಪ್ರಬುದ್ಧನು ನಾನು
ಕಾಯದೊಳಗೆ ಭರಿತಾ ವಿಷ ಪುಂಜರ ನಾನು
ಪಯೋನಿಧಿ ಶಯನ ವಿಜಯ ವಿಠ್ಠಲ ಎನ್ನ
ಕಾಯುವ ಬಿರಿದುಳ್ಳ ಕಪಟನಾಟಕ ರಂಗಾ ೨
ತ್ರಿವಿಡಿ ತಾಳ
ಉದ್ಧಾರ ಮಾಡುವಲ್ಲಿ ಜ್ಞಾನಿ ನೀನಿರಲಿಕ್ಕೆ
ಕುದ್ದು ವ್ಯಾಕುಲದಿಂದ ನಾನಳಲುವದ್ಯಾಕೆ
ಇದ್ದವಿಲ್ಲದವೆಲ್ಲಾ ನೀನೆ ಪೇಳಿಸಿ ಕೃತಿ
ಸಿದ್ಧವೆಂದೆನಿಸಿದೆ ಸಕಲರಿಂದಾ
ಪದ್ಮನಾಭನೆ ನಿನ್ನ ಕಾರುಣ್ಯವನು ಪಡೆದು
ಇದ್ದವನಿಗೆ ಇಲ್ಲ ಸುಲಭ ಕಾಣೋ
ಬಿದ್ದು ಹೋಹೆ ಪತ್ರದ ಮೇಲೆ ಬರೆದರೆ
ಪೊದ್ದಿರದೆ ಪೋಗೋವು ತನಗಲ್ಲದೇ
ಮುದ್ದು ಮೋಹನ ರಂಗ ವಿಜಯ ವಿಠ್ಠಲ ಕರು
ಣಾಬ್ಧಿಯೆ ನೀನೊಲಿಯೆ ಯಾತರಾಲೋಚನೆ ೩
ಅಟ್ಟತಾಳ
ಒಳಗೆ ಪ್ರೇರಕನಾಗಿ ಒಲಿಮೆಯಿಂದಲಿ ಕಲಾ
ಘಳಿಗಿರಗೊಡದಲೆ ತಿಳುಹಿ ಕೊಡುತಾ ಬಪ್ಪಾ
ಚಲುವ ನಿನ್ನಯ ಪಾದಜಲಜಕೆ ನಮೋ ನಮೋ
ಬಲು ದಯುರಸ ಭಕ್ತಾವಳಿಗೆ ನೀನಲ್ಲಾದೇ
ಇಳೆಯೊಳು ಮತ್ತೊಂದು ನೆಲೆಬಲ್ಲ ದೇವತೆ
ಗಳು ಎಲ್ಲಿ ಕಾಣೆನೋ ಕೆಲಕಾಲ ನೋಡಲು
ಬಲವಂತ ಜಗದಯ್ಯಾ ವಿಜಯ ವಿಠ್ಠಲರೇಯಾ
ಸುಳಿ ಸುಳಿದಾಡು [ವೆ]ಗ್ಗಳಿಯಾ ದೇವೇಶ ೪
ಆದಿತಾಳ
ದಾತಾ ನೀನಾಗಿರೆ ಯಾತರಾಲೋಚನೆ
ಮಾತು ಮಾತಿಗೆ ಸಂಪ್ರೀತಿಯ ಬಡಿಸುತ
ಈ ತನುವ ಮನವ ಭೀತಿಗೊಳದ ತೆರದೀ
ತಾತ ನೀನಾಗಿರೆ ನೀ ತಡಿಯದಲೆ ಪೊರೆವುತಿರೆ ಎನ್ನದೇನು
ಪಾತಕ ಹರ ನಮ್ಮ ವಿಜಯ ವಿಠ್ಠಲ ಎನಗೆ
ಮಾತಾಪಿತನು ನೀನೆ ಭೂತಳಾಧೀಶಾ ೫
ಜತೆ
ಮುಗ್ಗಿದಲ್ಲಿಗೆ ಬಂದು ಒದಗುವ ಕರುಣಾಳು
ಕುಗ್ಗಗೊಡದೆ ಕಾಯೋ ವಿಜಯ ವಿಠ್ಠಲರೇಯಾ ೬

ದುಸ್ಸಂಗವನ್ನು ಬಿಡಿಸಿ ಪಾಪದೂರನನ್ನಾಗಿ

೪೭
ಧ್ರುವತಾಳ
ದುರಿತ ರಾಶಿಯ ಬಿಡಿಸು ದುಸ್ಸಂಗವನು ಕೆಡಿಸು
ನಿರುತ ನಿನ್ನವರೊಳಗೆ ಸುಖ ಪಡಿಸೊ
ಪರಮ ವಚನವ ನುಡಿಸು ಸುಮಾರ್ಗದಲ್ಲಿ ನಡೆಸು
ಪರಮ ರಹಸ್ಯ ಉಪದೇಶ ಕೊಡಿಸು
ಚರಣದಲ್ಲಿ ರತಿ ಇಡಿಸು ನಾಮಾಮೃತವ ಕುಡಿಸು
ಪರಿ ಪರಿ ಕ್ಲೇಶ ಬಂಧನವ ಕೆಡಿಸು
ಸ್ಥಿರ ಭಕುತಿಯನು ಪಿಡಿಸು ನಿರ್ಮಾಲ್ಯವನು ಮುಡಿಸು
ವರ ಪ್ರಸಾದಕೆ ಮನ ಒಡಂಬಡಿಸು
ಶರಣರಕ್ಷಕ ಶರ್ವ ವಿಜಯ ವಿಠ್ಠಲ ನಿನ್ನ
ಕರುಣ ಕವಚವ ತೊಡಿಸು ಜನನ ಎಡೆಗೆಡಿಸು ೧
ಮಟ್ಟತಾಳ
ಬಂದೆನೊ ಬಂದೆನೊ ನಿಂದೆನು ನಿಂದೆನೋ
ಸಂದಿದೆ ಸಂದಿದೆನೊ ಪೊಂದಿದೆ ಪೊಂದಿದೆನೊ
ಮುಂದೇನೊ ಮುಂದೆನೊ ಹಿಂದಿನ ಹಿಂದಿನ
ದ್ವಂದ್ವ ದುರಿತ, ಮಂದ ದ್ವಂದ್ವಗಳೋಡಿಸು
ಚಂದನ್ನಾ ಗತಿ, ವಿಜಯವಿಠ್ಠಲ ನಿನ್ನ
ದ್ವಂದ್ವ ಚರಣಾರವಿಂದವನು ನಿತ್ಯ
ಸಂದರುಶನ ಕೊಡು ಕಂದೆರದು ನೋಡು ೨
ತ್ರಿವಿಡಿ ತಾಳ
ಸಾಕು ಕುಜನುಮ ಹೇಸಿಕೆಯೊಳು ಬಂದು
ಶೋಕಾತಿಶಯದಲ್ಲಿ ಕಾಕನಾಗಿ
ಲೋಕದವರನವಲೋಕನ ಮಾಡುತ್ತ
ವಾಕು ಪೊಳ್ಳು ಮಾಡಿಕೊಂಡು ತಿರಿದೆ
ಲೋಕನಾಮ ಸ್ವಾಮಿ ವಿಜಯ ವಿಠ್ಠಲ ನಿನ್ನ
ಶ್ಲೋಕಾರ್ಥವನು ಕೇಳದಲೆ ಬರಿದಾದೆ ೩
ಅಟ್ಟತಾಳ
ನೊಂದು ನೊಂದು ನಾನು ಬೆಂದು ಬೆಂದು ನಾನು
ಒಂದೇ ಪ್ರಕಾರ ಬಂಧನದೊಳಗಾಗಿ
ಬಿಂದು ಮಾತುರ ಸುಖದಿಂದ ತೃಪ್ತಿಯನೀವ
ಒಂದಾದರು ನಾನೆಂಬೋ ದೇವರ ಕಾಣೆ
ಪೊಂದಿದೆ ನಾನೆತ್ತ ಪೋಗಲಾರದೆ ಹರಿ
ಚಂದ್ರಾಂಶು ನಾಮ ಶ್ರೀ ವಿಜಯವಿಠ್ಠಲ ಎನ್ನ
ನಿಂದರಿಸೊ ಇಲ್ಲಿ ಎಂದೆಂದು ಬಿಡದಲೆ ೪
ಆದಿತಾಳ
ನಾಯಿಗೆ ತಕ್ಕ ಹಲ್ಲಣ ಹಾಕಿ ಕಾಯಬೇಕು ಕರಿವರದ
ಆಯುಷ್ಯಾರ್ಧವಾಗಬಂತುಪಾಯವನ್ನು ತೋರಿಕೊಟ್ಟು
ಮಾಯಿಮದ ಗರ್ವ ಬಿಡಿಸಿ ದಾಯಿಗರಿಗೆ ತೋರಿಕೊಟ್ಟು
ಮಾಯದ ಗರ್ವ ಬಿಡಿಸಿ ದಾಯಿಗರಿಗೆ ಒಪ್ಪಿಸದಲೆ
ವಾಯು ವಾಹನ ವಿಜಯವಿಠ್ಠಲರೇಯ
ಸ್ಥಾಯವಾಗಿ ಪ್ರತಿದಿನ ಕಾಯಬೇಕು ಕರುಣಾದಲ್ಲಿ೫
ಜತೆ
ಆಶೆಯಲ್ಲಿ ಬಂದು ಬಾಗಿಲ ಕಾಯ್ದೆನೊ
ಆ ಸಂಖ್ಯ ವಿಜಯವಿಠ್ಠಲ ದಾಸನೆನಿಸೊ ೬

ಲಕ್ಷ್ಮಿಯು ಶ್ರೀ, ಭೂ, ದುರ್ಗ ರೂಪಗಳಿಂದ

ದುರ್ಗಾಸ್ತೋತ್ರ
೧೪೬
ಧ್ರುವತಾಳ
ದುರ್ಗಾ ದುರ್ಗೆಯ ಮಹದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮಯವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲುಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವುದೇನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೇ ದುರ್ಗೆ ಮಹಾದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯೆ ದುರ್ಧಷೆ ಶಕ್ತಿ
ದುರ್ಗ ಕಾನನ ಗಹನ ಪರ್ವತ ಘೋರ ಸರ್ಪ
ಗರ್ಗರ ಶಬ್ಧ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತನಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರು
ಸುರ್ಗಣ ಜಯಜಯವೆಂದು ಪೊಗಳು ತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿಭೂತೆ
ನೀರ್ಗುಡಿದಂತೆ ಲೋಕಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ
ದುರ್ಗಾಶ್ರಯಮಾಡಿ ಬದುಕುವಂತೆ ಮಾಡು ೧
ಮಟ್ಟತಾಳ
ಅರಿದರಾಂಕುಶ ಶಕ್ತಿ ಪರಶು ನೇಗಲಿ ಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜಭವ ರುದ್ರ
ಸರುವ ದೇವತೆಗಳ ಕರುಣಾ ಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪಸುಖ ಕೊಡುವ
ಸಿರಿ ಭೂಮಿದುರ್ಗಾ ಸರುವೋತ್ತಮ
ನಮ್ಮ ವಿಜಯ ವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ೨
ತ್ರಿವಿಡಿತಾಳ
ಸ್ತುತಿಮಾಡುವೆ ನಿನ್ನ ಕಾಳಿ ಮಹಾಕಾಳಿ ಉ
ನ್ನತ ಬಾಹು ಕರಾಳವದನೆ ಚಂದಿರಮುಖೆ
ಧೃತಿಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾಭದ್ರೆ ಭಕ್ತವತ್ಸಲೆ ಭವ್ಯೇ
ಚತುರಷ್ಟದ್ವಿಹಸ್ತೆ ಹಸ್ತಿ ಹಸ್ತಿಗಮನೆ ಅ
ದ್ಭುತ ಪ್ರಬಲೆ ಪ್ರವಾಸಿ ದುರ್ಗಾರಣ್ಯವಾಸೆ
ಕ್ಷಿತಿಭಾರ ಹರಣೆ ಕ್ಷೀರಾಬ್ಧಿತನಯೆ ಸ
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲ ಭೇದೆ ಪೂರ್ಣ ಭೋಧೇ ರೌದ್ರೆ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯ ಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತಪಾತ್ರ ಪರಮಾನ್ನ ತಾಂಬೂಲಹಸ್ತೆ ಸು
ವ್ರತೆ ಪತಿವ್ರತೆ ತ್ರಿನೇತ್ರೆ ಶಕ್ತಾಂಬರೆ
ಶತಪತ್ರನಯನೆ ನಿರುತ ಕನ್ಯೆ ಉದಯಾರ್ಕ
ಶತಕೋಟಿ ಸನ್ನಿಭೆ ಹರಿಯಾಂಕ ಸಂಸ್ರೆ
ಶ್ರುತಿ ತತಿ ನುತೆ ಶುಕ್ಲ ಶೋಣಿತ ರಹಿತೆ ಅ
ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತಿ ಸ್ಥಿತಿಲಯ ಕರ್ತೆ ಶುಭ್ರ ಶೋಭನ ಮೂರ್ತೆ
ಪತಿತಪಾವನೆ ಧನ್ಯೇ ಸರ್ವೋಷಧಿಯಲಿದ್ದು
ಹತಮಾಡು ಕಾಡುವ ರೋಗಂಗಳಿಂದ
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿ ಇತ್ತು
ಸತತ ಕಾಯಲಿಬೇಕು ದುರ್ಗೆದುರ್ಗೇ
ಚ್ಯುತದೂರ ವಿಜಯ ವಿಠ್ಠಲರೇಯನ ಪ್ರೀಯೆ
ಕೃತಾಂಜಲಿಯಿಂದಲಿ ತಲೆಬಾಗಿ ನಮಿಸುವೆ ೩
ಅಟ್ಟತಾಳ
ಶ್ರೀ ಲಕ್ಷ್ಮಿ ಕಮಲಾ ಪದ್ಮಾ ಪದ್ಮಿನಿ ಕಮ
ಲಾಲಯೆ ರಮಾ ವೃಷಾಕಪಿ ಧನ್ಯ ವೃದ್ಧಿ ವಿ
ಶಾಲ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯನಿತ್ಯಾನಂತ ತ್ರಯಿ ಸುಧಾ
ಶೀಲೆ ಸುಗಂಧ ಸುಂದರಿ ವಿದ್ಯಾಸುಶೀಲೆ
ಸುಲಕ್ಷಣ ದೇವಿ ನಾನಾ ರೂಪಗಳಿಂದ ಮೆರೆವಮೃತ್ಯುನಾಶೆ
ವಾಲಗಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕೆ ಎನ್ನ ಭಾರವೊಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳಿ ಬಂದೆ ಕೇವಲ ಈ ಮನ
ಗಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಏಳಲ ಮಾಡದೆ ಉದ್ಧಾರ ಮಾಡುವ
ಕೈಲಾಸ ಪುರದಲ್ಲಿ ಪೂಜೆಗೊಂಬ ದೇವಿ
ಮೂಲ ಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರ ಶಾಯಿ ವಿಜಯವಿಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ೪
ಆದಿತಾಳ
ಗೋಪಿನಂದನೆ ಮುಕ್ತೆ ದೈತ್ಯಸಂತತಿ ಸಂ
ತಾಪವ ಕೊಡುತಿಪ್ಪ ಮಹಾಕಠೋರೆ ಉಗ್ರ
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಾಪತ್ರಯ ವಿನಾಶೆ ಓಂಕಾರ ಹೋಂಕಾರೆ
ಪಾಪಿಕಂಸಗೆ ಭಯ ತೋರಿದೆ ಬಾಲಲೀಲೆ
ವ್ಯಾಪುತೆ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಪ್ನದಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತುಬಂದಿರಲು ಹಾರಿ ಪೋಗೊವು ಸಪ್ತ
ದ್ವೀಪ ನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತಜನಕೆ ಪುಣ್ಯ
ಸೋಪಾನ ಮಾಡಿಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲ್ಲಿ ನಿಂದು ದುಃಖ
ಕೂಪದಿಂದಲಿ ಎತ್ತಿ ಕಡೆಮಾಡು ಜನ್ಮಂಗಳು
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದಮೌಳಿ ತನಕ ಭಜಿಸಿ ಭವ್ಯರಾದರು
ನಾ ಪೇಳುವುದೇನು ಪಾಂಡವರ ಮನೋಭೀಷ್ಟೆ
ಈ ಪಾಂಚಭೌತಿಕದಲ್ಲಿ ಆವ ಸಾಧನ ಕಾಣೇ
ಶ್ರೀಪತಿನಾಮ ಒಂದೇ ಜಿಹ್ವಾಗ್ರಹದಲಿ ನೆನೆವ
ಔಪಾಸನ ಕೊಡು ರುದ್ರಾದಿಗಳ ವರದೇ
ತಾಪಸಜನ ಪ್ರೀಯ ವಿಜಯ ವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪ ಶ್ರೀ ಭೂ ದುರ್ಗಾವರ್ಣಾಶ್ರಯ ೫
ಜತೆ
ದುರ್ಗೆ ಹಾ ಹೆ ಹೊ ಹಾ ದುರ್ಗೆ ಮಂಗಳ ದುರ್ಗೆ
ದುರ್ಗತಿ ಕೊಡದಿರು ವಿಜಯ ವಿಠ್ಠಲ ಪ್ರೀಯೇ ೬

ನೈಚ್ಯಾನುಸಂಧಾನದಿಂದ ಆರಂಭಗೊಳ್ಳುವ

೪೬
ಝಂಪೆತಾಳ
ದುರ್ಜನ ಶಿಖಾಮಣಿ ನಾನಯ್ಯ ಎನ್ನಯ್ಯ
ಮೂರ್ಜಗದೊಳಗೆ ಮತ್ತಾರು ಇಲ್ಲ್ಲ
ಮಜ್ಜನಾದಿಯ ತೊರೆದು ಮಹದುರುಳ ನಡತೆಯಲಿ
ಸಜ್ಜನರ ನಿಂದಿಸಿದೆ ಸತತ ಬಿಡದೆ
ಹೆಜ್ಜೆ ಹೆಜ್ಜೆಗೆ ಶತಾನಂತ ತಪ್ಪುಗಳನ್ನು
ಬೆಜ್ಜರಿಕೆ ಇಲ್ಲದಲೆ, ಆರ್ಜಿಸಿದೆನೊ
ದುರ್ಜೀವಿಗೆ ಇನಿತು ಪೊಂದಿರ್ದ ಪಾಪಗಳು
ಉಜ್ಜಿ ಬಿಡುವುದಕ್ಕೆ ಒಂದು ಉಂಟು
ದುರ್ಜಯ ವಿಜಯವಿಠ್ಠಲನೆ ನಿನ್ನ ನಾಮ
ವಜ್ರಾಂಗಿಯಾಗಿರಲು, ಪಾಪಗಿರಿಗಳು ಸೋಂಕೆ
ಯಜ್ಞಾ ಬೀಳುವುದೇನು ನಿರ್ಜರೇಶ ೧
ಮಟ್ಟತಾಳ
ನಿನ್ನವ ನಿನ್ನವನೊ, ಇನ್ನೇನಿನ್ನೇನೊ
ಎನ್ನನು ಎನ್ನನು ಮನ್ನಿಸು ಮನ್ನಿಸು
ಘನ್ನ ಪನ್ನಂಗನ್ನ ಕೆನ್ನಯ ತುಳಿದ ಪಾ
ವನ್ನ ವಿಜಯವಿಠ್ಠಲನ್ನಂತ ಗುಣಪೂರ್ಣ ಚನ್ನಪ್ರಸನ್ನ ೨
ರೂಪಕತಾಳ
ನಿನ್ನ ಭಕುತಿಲ್ಲದ ತನುವೆ ವಿಷದ ಮೊಟ್ಟೆ
ನಿನ್ನಾಂಕಿತವಿಲ್ಲದ ಕವಿತಾ ವಿಷಪೂರಿತಾ
ನಿನ್ನ ಕೊಂಡಾಡದ ಬಾಯಿ ಇಪ್ಪೇ ಕಾಯಿ
ನಿನ್ನ ಪೊಂದದವನ ಕುಲಕೆ ನರಕದ ಬಟ್ಟೆ
ನಿನ್ನನ್ನೆ ಬಿಡದಲಾವಾಗ ಪಾಡುವ ನರಗೆ
ಇನ್ನಿದರೊಳಗೆ ಕಿಂಚಿತು ಮಾತುರವುಂಟೆ
ಪನ್ನಿರಾಧಿಷ್ಟಾ ಶ್ರೀ ವಿಜಯವಿಠ್ಠಲರೇಯ
ನಿನ್ನ ಕರುಣವಾಗೆ ಎನಗಾವ ಭಯವೊ ೩
ಧ್ರುವತಾಳ
ದಾಸರ ಪಾದಧೂಳಿ ವಂಶಾದಲ್ಲುದುಭವಿಸಿ
ಆಸಿಯಿಂದುಳಿದರಯ್ಯ ನಿನ್ನಂಥವನ ನೋಡಿ
ಮೀಸಲ ತನುವ ಪಾಲಿಸಿದರೆ ಲೇಸೆ
ದೇಶದೊಳಗೆ ಅಪಹಾಸ ಮಾಡಿದರೊಳಿತೆ
ಏಸೇಸು ಜನುಮಕ್ಕೆ ಈ ಶರೀರವು ನಿನ್ನ
ದಾಸರ ಮನಿ ಮುಂದೆ ಆ ಸಾರಮೇಯದ
ಕೂಸಿನಂತಿಪ್ಪುದು ಲೇಸುಹೊಲ್ಲೆಗಳು ಶ್ರೀ
ವಾಸ ವಿಜಯವಿಠ್ಠಲೇಶ ನಿನ್ನದು ಕಾಣೊ೪
ತ್ರಿವಿಡಿತಾಳ
ಕುಬುಜಿ ಡೊಂಕನು ತಿದ್ದಿ ಆಬುಜ ಮುಖಳ ಮಾಡಿ
ಕಬರಿಯ ಪಿಡಿದವಳ, ಚುಬುಕಾಗ್ರವನು ಸವಿದೆ
ಇಭವರದ ನೀ ದಯಾಂಬುಧಿಯಾದರೆ ಅವ
ಶ್ವಬಚನಾದರೆ ಏನು, ನಭದವರ ಕೊಡುವ
ಕುಭಲೇಶಘ್ನ ಸಿರಿ ವಿಜಯವಿಠ್ಠಲ ಎನ್ನ
ಶುಭದ ಸಾರುತಿ ನೀನು ಅಭಿವಂದಿಸುವೆ ನಾನು ೫
ಅಟ್ಟತಾಳ
ಸತಿಯಳೊಬ್ಬಳ, ಪತಿಯು ಕರೆದು
ಸುತರ ಪಡೆದು, ಗತಿ ಕಾಣೆನಲು
ಪತಿಯ ಮಾತನು ಪತಿಕರಿಸಿ
ಸತತ ಪತಿವ್ರತೆ ಪಂಚರಿಸೆ
ಪತಿತ ದೋಷ ಗರತಿಗುಂಟೆ
ಮತಿಯನಿತ್ತು ಒಳಗೆ, ಆ
ಗತ ನೀನಾಗಿ ಪೇಳಿಸಿದೆ
ಕೃತಿಗೆ ದೋಷ ಉಂಟೆ, ಶ್ರೀ
ಪತಿಯ ನಾಮ ವಿಜಯವಿಠ್ಠಲ
ಹಿತವೆ ತೋರಿ ಸಕಲ, ಸ
ಮ್ಮತವೆಂದೆನಿಸು ಸಾಧುಗಳಿಗೆ
ಪ್ರತಿದಿನದಲಿ ನಮಿಪೆ ನಾನು ೬
ಆದಿತಾಳ
ಗೋಣಿಯನೊಪ್ಪಿಸಿಕೊಟ್ಟೆ ಏನು ಇದ್ದ ಸುಂಕವ
ನೀನೆ ನೋಡಿಕೊಳ್ಳು ಜಾಣಗೋವಳರಾಯ
ಪ್ರಾಣಮಾನವೆನ್ನು ನಿನ್ನಾಧೀನವನ್ನು ಮಾಡಿದೆ
ನಾನು ಯಾತರವನಲ್ಲ ಭಾನು ವಿಜಯವಿಠ್ಠಲ
ಏನಾದರು ನಿನ್ನಾಧೀನಕೆ ಬಳಗಾನು ೭
ಜತೆ
ವೃಕೋದರನೊಡೆಯಾ, ಉಣಿಸು ಸುಧಾರಸದೆಡೆಯಾ
ಕಾಕೋದರ ಶಯನ ಶ್ರೀ ವಿಜಯವಿಠ್ಠಲರೇಯ ೮

ನಿಜವಾದ ಭಕ್ತನ ಚರ್ಯೆಯನ್ನು ದಾಸರು

೫೮
ಧ್ರುವತಾಳ
ದುರ್ಲಭವಿದು ಕಾಣೋ ಎಲ್ಲರಿಗೆ ದೊರಕೊ
ದಲ್ಲವಲ್ಲವೊ ಶ್ರೀ ವಲ್ಲಭನ ಭಜನೆ
ಗೆಲ್ಲಬೇಕು ಕಾಮನ್ನ ನಿಲ್ಲಿಸಬೇಕು ಮನ
ಮೆಲ್ಲ ಮೆಲ್ಲನೆ ವಿನಯದಲ್ಲಿ ನಿರಂತರ
ಕೊಲ್ಲಬೇಕು ಕೋಪವ ಚಲ್ಲಬೇಕು ದುರಾಸೆ
ಒಲ್ಲೆನೆಂದೆನಬೇಕು ಹೊಲ್ಲೆ ಇಂದ್ರಿಯಂಗಳ
ಕಲ್ಲಾಗಬೇಕು ಹರಿಗೆ ಸಲ್ಲದ ಮಾನವರಿಗೆ
ಬಿಲ್ಲಾಗಬೇಕು ಹರಿಗೆ ಸಲ್ಲಿದ ಸುಜನರಿಗೆ
ಬೆಲ್ಲದಂತಿರಬೇಕು ಸಲ್ಲುವ ಬಾಂಧವರಿಗೆ
ಸೊಲ್ಲು ಮರಿಯಾದೆ ಬೇಕು ಬಲ್ಲವನಾಗಬೇಕು
ಹುಲ್ಲು ಮಾನವನಾಗಿ ಎಲ್ಲರಿಗೆ ತೋರಬೇಕು
ಎಲ್ಲಿ ಇದ್ದರೂ ಕೈವಲ್ಯದಾಸಿ ಇರಬೇಕು
ಮಲ್ಲರಾಳಿದ ಧೀರ ವಿಜಯ ವಿಠಲನಂಘ್ರಿ
ಪಲ್ಲವಯುಗಳಕ್ಕೆ ಸಲುವನಾಗಬೇಕು ೧
ಮಟ್ಟತಾಳ
ಗುರು ಉಪದೇಶ ಇರಲಿ ಬೇಕು
ಹಿರಿಯರ ದಯ ಇರಲಿ ಬೇಕು
ಹರಿದಾಸರ ಸಂಗ ಇರಲಿ ಬೇಕು
ತರತಮ್ಯ ತತ್ವ ಇರಲಿ ಬೇಕು
ವರ ತಾತ್ಪರ್ಯ ಇರಲಿ ಬೇಕು
ಮರುತ ಮತದೊಳು ಇರಲಿ ಬೇಕು
ಇರುಳು ಹಗಲು ಬಿಡದೆ ವಿಜಯ ವಿಠಲರೇಯನ
ಸ್ಮರಣೆ ಮಾಡಲಿಬೇಕು ವರವೈಷ್ಣವನಾಗಿ ೨
ತ್ರಿವಿಡಿತಾಳ
ದೃಗಯುಗ ನೀರೇರಿ ತುಟಿಯ ನಡುಗುತ ಶಿರ
ಬಿಗಿದು ತೊದಲು ನುಡಿಗಳ
ಮುಗುಳೆ ಸುರಿವ ಅಶ್ರು ಜಲದಲ್ಲಿ ಮೈಯ ಪುಂ
ಡ್ರಗಳನ್ನು ತೊಳೆದು ಮಾತುಗಳೇಳದಿರಲು
ಜಗಳುವ ನೀಲ ರೋಮಗಳುಬ್ಬಿ ಪುಳಕೋತ್ಸವ
ಅಗಣಿತ ಕಂಪನವಾಗೆ ಕಾಯಾ
ಗಗನವೆತ್ತಲೊ ಭೂಮಿ ದಿಕ್ಕುಗಳೆತ್ತಲೋ
ಜಿಗಿದು ಜಿಗಿದು ಹಾರಿ ಅಟ್ಟಹಾಸ[ದಿ]
ನಗುವ ತರುವ ಹುಚ್ಚು ಹಿಡಿದಂತೆ ತಿರುಗುತ್ತ
ಜಗದೊಳು ಯಾತಕ್ಕೆ ಬಾರದವನಾಗಿ
ಜಗಪತಿ ವಿಜಯ ವಿಠ್ಠಲನ್ನ ಪಾದಕ್ಕೆ
ಜಿಗುಳಿ ಹತ್ತಿದಂತೆ ಮನಸು ಹತ್ತಿಸಬೇಕು ೩
ಅಟ್ಟತಾಳ
ಭಗವಂತನ ಲೀಲೆ ತಿಳಿದ ಚಾಂಡಾಲನು
ಭಗವದ್ಬಕ್ತನೆಂದು ಕರೆಸುವನೊ
ಭಗವಂತನ ಲೀಲೆ ತಿಳಿಯದ ವಿಪ್ರಮಾ
ದಿಗನೆಂದು ಸರ್ವದಾ ಎನಿಸಿಕೊಂಬಾ
ಹಗಲಿರುಳು ನಿನ್ನ ಹಗೆ ಮಾಡಿಕೊಂಡಾರು
ನಗಧರ ಸರ್ವೋತ್ತಮ ಸಿರಿಯ ತರುವಾಯ
ಮಿಗಿಲಾದವರು ನಾಲ್ಕು ಮೊಗದ ಸಹಿತ ದೇವಾ
ದಿಗಳು ತರತಮ್ಯ ಭಾವದಿಂದ
ಮುಗುಳು ನಗೆಯಿಂದ ಸಿದ್ದವಹುದು ಮಾಧ
ವಗೆ ಪರಿಚರರೆಂದು ಪೇಳುತಿರೂ
ಸುಗುಣರ ಮನೋಹರ ವಿಜಯ ವಿಠ್ಠಲರೇಯ
ವಿಗಡದ ಸಂಸಾರ ನಿಗಳಹರಿಸುವ ೪
ಆದಿತಾಳ
ತಾಳದಂಡಿಗೆ ಕರದಲ್ಲಿ ಧರಿಸಿ ಕಾಲಂದಿಗೆ ಕಿರಿಗೆಜ್ಜೆ
ಫಾಲದಲ್ಲಿ ಊಧ್ರ್ವ ತಿಲುಕ ಲೋಲನಾ ಕೊರಳೊಳು
ಮಾಲೆ ತುಲಸಿ ಜದುಮಹಾರ ವಾಲಯ ಸಂತರ ನೆರೆಯಲ್ಲಿ
ತಾಳಿಮಿಕೆ ಎಲ್ಲಿ ನಡೆದು ಸರ್ವದ ಆಲೋಚನೆ ಹರಿ ಪಾದವ
ಕಾಲ ಕಾಲಕೆ ಬಿಡದೆ ವಿಜಯ ವಿ
ಠ್ಠಲನ್ನ ನಂಬಿ ವಿಶ್ವಾಸದಲ್ಲಿ ೫
ಜತೆ
ಈ ಪರಿ ಇರಲು ವೈರಾಗ್ಯಾದಿಯನಿತ್ತು
ಶ್ರೀಪತಿ ವಿಜಯ ವಿಠ್ಠಲನು ಒಡನಾಗುವ ೬

ರ ಭಕ್ತಿಯ ಛಲ

೪೮
ಧ್ರುವತಾಳ
ದೂರವಿದ್ದರೆ ಬಿಡೆನೊ ಅತಿ ದೂರವಾದರೆ ಬಿಡೆನೊ
ಸಾರೆ ನಿಲ್ಲದೆ ಕೆಲಸಾರೆನೆ ಬಿಡೆನೊ
ತೋರದಲಡಗಲು ಪೋಗಲು ಬಿಡೆನೊ
ಮಾರುತ್ತರ ಪೇಳದಿದ್ದರೆ ಬಿಡೆನೊ
ವಾರಿಧಿಯೋಳಗೆ ಸುತ್ತಲು ಬಿಡೆನೊ
ಆರಿಗಾದರು ಪೇಳು ಆರ ನಾದರೆ ಕೇಳು
ಆರಾದರು ನಿನ್ನ ಕಾಯ್ವವರುಂಟೆ
ಗಾರು ಮಾಡುವ ಸಂಸಾರ ಬಿಡಿಸದಿರೆ
ದೂರದೆ ಬಿಡುವೆನೆ ದೂರತರನೆ
ಆರಿಲ್ಲದವಗೆ ಬಡಿವಾರ ಘನವಾಗಿದೆ
ಆರಂಶದವನೊ ನೀನಾರ ಮಗನೊ
ದೂರವಾಸ ನಮ್ಮ ವಿಜಯ ವಿಠ್ಠಲರೇಯ
ಆರವನಾಗಿದ್ದಿ ಭಕುತರ ತೊರೆದು ೧
ಮಟ್ಟತಾಳ
ಕಣ್ಣು ಬಿಚ್ಚಲು ಬಿಡೆ ಕಲ್ಲಡಿಯಾ ಏರಿ
ಮಣ್ಣು ಕಚ್ಚಲು ಬಿಡೆ ಆಲ್ಪರೆದರೆ ಬಿಡೆ
ಕಣ್ಣು ಚುಚ್ಚಲು ಬಿಡೆ ಕುಲನಳಿದು ಸಮರ
ಹಣ್ಣಿಕೊಂಡರೆ ಬಿಡೆ ಗೊಲ್ಲನೆಂದರೆ ಬಿಡೆ
ಉನ್ನತಾದರೆ ಬಿಡೆ ಅಲಗು ಕರದಿ ಪಿಡಿದು
ಎನ್ನನಂಜಿಸಿದರೆ ನಿನ್ನನಾ ಬಿಡೆನೊ
ಚನ್ನ ಮೂರುತಿ ತೋರೋ ಇನ್ನು ತೋರದಿರೆ
ಎನ್ನ ಸಹಿತ ಎನ್ನವರಲ್ಲಿ ಇರಸಲ್ಲ
ದಾನ್ನವನರಿಪು-ಸುಧನ್ವಿ ವಿಜಯ ವಿಠ್ಠಲ
ನಿನ್ನನೆ ಬಿಟ್ಟರೆ ಎನ್ನ ಜನನ ವ್ಯರ್ಥ ೨
ತ್ರಿವಿಡಿ ತಾಳ
ಷೋಡಶಾತ್ಮಕವಾದ ಲಿಂಗದೇಹ ಎನ್ನ
ಕಾಡುತಿದೆ ಬಿಡದಾನಾದಿಯಿಂದ
ನೋಡಿಕೊಳಲುದೇವ ನೀನಿತ್ತ ಸ್ವರೂಪ
ಆಡಲೇನದು ನಿರ್ಮಳವಾಗಿದೆ
ನಾಡೊಳು ಪರಿವ ನಿರ್ಮಲ ಜಲದೊಳು ಬಲು
ರಾಡಿಕೂಡಿ ಸಾಗಿ ಪೋಗುವಂತೆ
ನೋಡೋದಾಡುವುದು ಮಾತಾಡಿ ಕೇಳುವುದೆಲ್ಲ
ಪ್ರೌಢವಲ್ಲವೆಯಿನಿತು ಹೀನವಿಲ್ಲ
ಬೀಡಾಗಿದ್ದಲಿಂಗ ಕಾಯದಿಂದಲಿ ಎನಗೆ
ಕೇಡು ತೋರುವುದು ಅಜ್ಞಾನದಿಂದ
ನೋಡು ಹರೆ ಸಾರಿದೆ ವಿಷ್ಣು ವಿಜಯ ವಿಠ್ಠಲ
ಗಾಢಾಂಧಕಾರವ ಓಡಿಸಿ-ಪೊರೆಯೊ ೩
ಅಟ್ಟತಾಳ
ಆರಲ್ಲಿಗೆ ಪೋಗಿ ಅನುಗಾಲ ಬಿಡದಲೆ
ಸೇರುವಾನಂದವು ಮರಿಯದೆ ಪೇಳು
ಆರುಭಕ್ತರು ನಿನಗೆ ತೋರೆಲವೊ ರಂಗ
ವಾರಿಧಿ ತನುಜೆ ಮಿಕ್ಕವರಲ್ಲದೆ
ಆರಾಧಿಸುವವರಲ್ಲದೆ ಹಳಿಯಾರು
ಬ್ಯಾರೆ ಭಕ್ತರು ನಿನಗೊಬ್ಬರಿಲ್ಲ
ದೂರ ತಿಳಿದುಕೊ ಭಕ್ತರೆಲ್ಲ ಒಂದೆ
ತಾರತಮ್ಯದಿಂದ ಭಜಿಸುವರು
ಪಾರು ಮಾಡದರೆ ಎನ್ನ ಹಿರಿಯರಿಗೆ
ಸಾರಿ ಪೇಳುವೆನತಿ ಚೋರನೆಂದು
ದೂರಾರಿಘ್ನನಾಮ ವಿಜಯ ವಿಠ್ಠಲರೇಯ
ವಾರವಾರಕ್ಕೆ ವಿಚಾರವಿನ್ನಿಲ್ಲ ೪
ಆದಿತಾಳ
ಹಿಂದಿನ ಭಕ್ತರು ನಿನಗೆ ತಂದು ಕೊಟ್ಟರೇನು ಧನ
ಅಂದವರು ಜಪಿಸಿ ಜಪಿಸಿ
ತಂದೆಯಾದರು ನಿನಗೆ ಕಾಣೊ
ನಂದನಾನೀಗ ಭಕ್ತರ
ಬಂಧನವ ಪರಿಹರಿಸಿ
ಪೊಂದಿಸಿದೆ ಸಕಲ ಸುಖ
ಸಿಂಧುವಿನೊಳಗೆ ಇಟ್ಟು
ತಂದೆ ತಾಯಿ ಭಕ್ತರಲ್ಲದೆ
ತಂದೆ ತಾಯಿ ನಿನಗುಂಟೆ
ತಂದುಕೊ ನಾನಂದ ಮಾತು
ಎಂದಿಗೆ ಪುಶಿಯಲ್ಲವೊ
ಬಂಧು ಬಳಗ ಹಿಂದು ಮುಂದೆ
ವಂದಿಸುವ ಎನ್ನ ಸ
ಮ್ಮಂದಿಗಳು ಕೇಳು ನಿ
ನ್ನಿಂದ ಪುಟ್ಟಿದರಂದು
ಇಂದು ಮೊದಲಾಗಿಂದ ಜೀವ ವಿಜಯ ವಿಠ್ಠಲ
ಸಂದೇಹಗೊಳಿಸದೆ
ಮಂದ ಮತಿ ಬಿಡಿಸಿ ಕಾಯೊ ೫
ಜತೆ
ದೂರುವೆ ಬಿಡದೆ ಪೊರೆಯದಿದ್ದರೆ ಎನ್ನ
ದೂರ ನೋಡದೆ ಕಾಯೊ ತೃಪ್ತ ವಿಜಯ ವಿಠ್ಠಲ೬

ಹರಿದಾಸರು ಬೋಧಿಸಿರುವ ತತ್ವ

೪೪
ಧ್ರುವತಾಳ
ದೇವ ನಿನ್ನ ಮಹಿಮೆಯನ್ಯಾವನರಿವನು
ಅವನ ಚರಣಕ್ಕೆ ಶರಣು ಎಂಬೆ
ಪಾವನಾಮೃತ ಸಂಜೀವನ ಈ ಶರೀರ
ಪಾವಿನ ತುಳಿದ ಪರಮ ಪುರುಷಾ
ಗೋವರ್ಧನಗಿರಿ ಪೂವಿನೋಪಾದಿಯಲ್ಲಿ
ಆ ವರುಷ ಗರಿಯಲು ಬೆರಳಲೆತ್ತಿ
ಗೋವಳರಾವುಗಳ ಪಾಲಿಸಿ ಗೀರ್ವಾಣ
ದೇವನ ಗರ್ವಾದ್ರಿ ಭಂಗಿಸಿದೆ
ಸೇವಕ ಜನರಿಗೆ ಆವಾಗ ಪಂಚಪ್ರಾಣ
ವಾವನೋ ನಿಧನ ರಹಿತ ಈ ವಸುಧೆಯೊಳು
ಗೋವಿಂದ ಅಚ್ಯುತ ಕೇಶವ ಅಂತೆಂದು ನೆನಿಯದವನು
ಕೀವು ಮೊದಲಾದ ನರಕದಲ್ಲಿ ಬಿದ್ದು
ಸಾವು ಪುಟ್ಟಿಲ್ಲದೇ ಮಿಡುಕುವನು
ನಿವರ್ತಾತ್ಮ ನಾಮ ವಿಜಯ ವಿಠ್ಠಲ ನಿನ್ನ
ಕಾವ ಸೋಜಿಗವು ಸರ್ವರಿಗೆ ಸಾಧ್ಯ ೧
ಮಟ್ಟತಾಳ
ಏನು ಪೇಳಲಿ ಇಂದು ನೀನು ಪಾಲಿಪ ಲೀಲೆ
ಮಾನವ ಮುನಿ ನಿರ್ಜರನಿಕರ ಬಲ್ಲುದೆ
ನಾನು ನಾನು ಇಂದು ನಾನಾ ಜನ್ಮದಲ್ಲಿ
ಕೇಣಿಗೊಂಬುವ ಹೀನ ಕಾಣಲಾಪಪೆನೆ ನಿನ್ನ
ಶ್ವಾನಗೆ ಶಾವಿಗೆ ಏನು ಉಣಿಸಿದರೇ
ತಾನುಂಡು ಸಂತೋಷವನು ಪಡಬಲ್ಲುದೇ
ದೀನ ಜನೋದ್ಧಾರ ದೀನಜನಾಧಾರ
ದೀನ ವತ್ಸಲ ಧರ್ಮ ವಿಜಯ ವಿಠ್ಠಲರೇಯಾ
ನೀನು ಮಾಡುವ ಕರುಣ ನಾನೇನು ಬಲ್ಲೆನೊ ೨
ತ್ರಿವಿಡಿ ತಾಳ
ನಿನ್ನ ಪ್ರಸನ್ನೀಕರಿಸಿಕೊಳ್ಳದ ನರನಜನ್ಮವೆ ಸುಡು ಸುಡು
ಇನ್ನ್ಯಾತಕೆ ದೇಹ ಎನ್ನ ಪೋಲುವ ಪಾಪಿಯನ್ನು ಆರಿಸಿದರೆ
ಅನಂತಾವಾನಂತದಲ್ಲಿ ಇಲ್ಲಾ ಕಣ್ಣಿದ್ದು ಕುರುಡನಾಗಿ ದಾ
ರಿ ನಡೆದ ಮೂರ್ಖನಂತೆ ಬದುಕಿದ ಘನ್ನ ಗರ್ವದಲ್ಲಿ
ಖನ್ನ ಸಂವಾದ ಸಂಸಾರದ ಮಣ್ಣಿನೊಳಗೆ ಹೊರಳಿ
ಭಿನ್ನಜ್ಞಾನದಲಿ ಸುಖಿಸುವೆನೋ
ಪೊನ್ನಾಂಬರನಯ್ಯಾ ವಿಜಯ ವಿಠ್ಠಲರೇಯಾ
ಬಣ್ಣಿಸಲಾಪೆನೆ ನಿನ್ನ ಪರಮ ಶಕ್ತಿ ೩
ಅಟ್ಟತಾಳ
ವೀಂದ್ರವಾಹನ ರಾಮಚಂದ್ರನೆ ಗೋಕುಲ
ಚಂದ್ರನೆ ಅಖಿಳ ಕಮಲ ಜಾಂಡವ ಸೂಜಿ
ರಂಧ್ರ ದೊಳಗೆ ಪೋಗಿಸಿ ತಗೆವ ಮಾಯಾ
ಇಂದ್ರಸುರಾದ್ಯರು ಬಲ್ಲರೇನು ಉ
ಪೇಂದ್ರ ನಿನ್ನಯ ತವ ಘಟಿತವು
ನಿಂದ್ರಲಾಪವೆ ವೇದಾಸ್ತುತಿಸಿ ಸಹಜವೆಂದು
ಇಂದ್ರಿಗಗೋಚರ ಚಂದ್ರಾರ್ಕಾನುತ ಸೈ
ಳೇಂದ್ರಿಯ ಕಾಯ್ದು ಕಪಟನಾಟಿಕ ದೇವಾ
ತ್ರೀಂದ್ರಿಯನಾಮ ಶ್ರಿ ವಿಜಯ ವಿಠ್ಠಲ ಸ
ರ್ವೇಂದ್ರಿ ವ್ಯಾಪಾರಕ್ಕೆ ಮೀರಿದ ದೈವವೇ ೪
ಆದಿತಾಳ
ಶ್ರೀ ಲಕುಮಿಗೆ ಪೇಳದೆ ಗಜೇಂದ್ರ ಕೇಳುವನಿತರೊಳು
ಆಲಸವಿಲ್ಲದ ಗಮನಾ ಆಳುಗಳು ಕೂಗಲು ನೀ
ಪಾಲಿಸುವ ಚತುರತನವೊ ಪೇಳಲೇನು ಬರುವ ಭಾರವ
ಬಾಲಲೋಲ ವಿನೋದನೆ ಕಾಲ ಕಾಲಕ್ಕೆ ನೆರೆ ನಂಬಿ
ದಾಳುಗಳ ಭಾರಕರ್ತಾ ಮೂಲೋಕದೊಳಗೆ ನಿನ್ನ
ಆಳುತನ ಮಾಯಾಶಕ್ತಿ ಮೇಲೆ ಗಮನ ವ್ಯಾಪಾರದಿ
ಸ್ಥೂಲ ಸೂಕ್ಷ್ಮವೆಲ್ಲಾ ಭೇದ ಶ್ರೀ ಲೋಲ ನಿನ್ನ ಮಹಿಮೆ
ಹೇಳಿ ಕೇಳುವರ ಕರ್ನಕ್ಕೆ ಆಲಯದ ಮಧುರ ಪಾನಾ
ಮೇಲಗಿರಿ ತಿಮ್ಮಾ ಬ್ರಹ್ಮಾ ವಿಜಯ ವಿಠ್ಠಲ ದೇವಾ
ಸೋಲದವರೇ ನಿನಗಿಲ್ಲಾ ನಿನಗಿಲ್ಲಾ
ಕಾಲದೇಶ ಪಾತ್ರಪೂರ್ಣ ೫
ಜತೆ
[ಆ]ವ ಧ್ಯಾನವೊ ನಿನ್ನದಾವ ಕ್ರೀಡೆಯೋ ತಿಳಿಯದು
ಆವ ನೂತನವು ಮಹಾ ಭೋಗಾ ವಿಜಯ ವಿಠ್ಠಲಾ ೬

ಭಗವಂತನ ನಾಮಸ್ಮರಣೆಗೆ

೯೬
ಝಂಪೆತಾಳ
ದೊರಕುವುದೆ ಹರಿನಾಮಾ ದೊರಕಿದರೆ ನಿಲುಕದು
ದೊರಕಿದರೆ ಅವ ಬಲು ಧೊರಿಯೇ ಧೊರಿಯೇ
ದೊರಕುವದನಂತ ಧರಣಿಸುರ ಜನ್ಮಗಳು
ದೊರಕದಲ್ಲದೆ ನಾಮ ದೊರಿಯದಯ್ಯಾ
ದೊರೆತವನ ಸುಖಕೆ ವಿಸ್ತರಿಸಲೇನು ಸಪ್ತ
ಶರಧಿ ದ್ವೀಪಸಹಿತ ಆಳುವಂಥ
ದೊರಿಯ ಸುಖಕಿಂತ ನೂರ್ಮಡಿ ಮಿಗಿಲು ಅಧಿಕವು
ಮೊರೆಮೊರೆದು ಕೂಗುತಿವೆ ಬಿರಿದು ಘೋಷಾ
ದೊರಿಯದೊ ದೊರಿಯದೊ ಧರಣಿಯೊಳು ಹರಿನಾಮ
ಸ್ಮರಣೆ ಮಾಡಿದನೆ ನೋಡಲಾಗಿ ಧರಾಧರ ಬಲ್ಲ
ಧರಧರನ ನಾಮ ರುಚಿಕರವಾಗಿ ಸವಿದು ಸುಂ
ದರವೆಂಬುದು ಅರಿಧರ ಸಂಕ್ಷಿಪ್ತ ವಿಜಯ ವಿಠ್ಠಲನ್ನ
ಸ್ಮರಣಿ ಒಂದಕ್ಕೆ ಎಲ್ಲ ಸರಿ ಎಂದೆನಿಸಾದು ೧
ಮಟ್ಟತಾಳ
ಕಾಲಸೂತ್ರವಾದ ಮೇಲಾದ ನರಕದಲಿ
ಗೋಳಿಡುತಲಿ ವಂಶಾವಳಿ ಮಿಡುಕುತಿರೆ
ಭೂಲೋಕದಲಿ ಓರ್ವ ಬಾಲಕನು ಪುಟ್ಟಿ
ಶೀಲಗುಣನಾಗಿ ಕಾಲಕಾಲಕೆ ಹರಿಯಾ
ನಾಲಿಗಿಂದಲಿ ನೆನೆಸಿ ಶ್ರೀಲೋಲಾರ್ಪಿತವ
ವ್ಯಾಳೆ ವ್ಯಾಳೆಗೆ ಅಂದ ಘಾಳಿ ಬೀಸಲು ಸಾಕಾ
ಶೀಲಿ ಅವನಕುಲಕೆ ವಾಲಯವಾಗುವುದು
ವಾಲಯದಲ್ಲಿ ವಿಶಾಲ ವೈಕುಂಠದಲಿ
ಶೀಲ ಬ್ರಹ್ಮನ ಪ್ರೀಯಾ ವಿಜಯ ವಿಠ್ಠಲರೇಯಾ
ಬೀಳಲೀಸನು ತನ್ನ ಆಳುಗಳಾ ೨
ತ್ರಿವಿಡಿತಾಳ
ನಾಮವೆ ಜೀವನಾ ನಾಮವೆ ಪಾವನಾ
ನಾಮವೆ ಸಕಲಘಾ ಹೋಮವೆವೆಂಬೋದು
ನಾಮವೆನಲು ಸುರಸ್ತೋಮವೆ ಭಜಿಸುವುದು
ನೇಮವೆ ತಿಳಿವುದು ಪ್ರೇಮವೆ ಎನುತಲಿ
ನಾಮವೆ ಉತ್ತಮ ಹೇಮವೆಂದು ಕಾಯಾ
ಧಾಮವೆ ಮಾಡಿ ಸಕಾಮವೆ ಬಯಸದೆ
ಸಾಮವೇದಲೋಲ ವಿಜಯ ವಿಠ್ಠಲನ್ನ
ನಾಮವೆ ನೆನಿಯೆ ನಿಷ್ಕಾಮವೆ ನುಡಿವುತ್ತಾ ೩
ಅಟ್ಟತಾಳ
ಅಪ್ಪ ತಿಮ್ಮಪ್ಪನ ನಾಮವ ನೆನಸಲು
ತುಪ್ಪ ಸಕ್ಕರೆ ಹಣ್ಣು ಹರಿವಾಣದಲ್ಲಿ
ಒಪ್ಪಾಚಾರದಿಂದ ಸವಿದಂತೆ ಕಾಣಿರೋ
ಅಪ್ತಾಕೃತದ ರಸಕೆ ಪಡಿಯುಂಟೆ
ಸುಪ್ರಸಾದನಾಮ ವಿಜಯ ವಿಠ್ಠಲನ್ನ
ತಪ್ಪದೆ ನಾಮಾ ಗುಪ್ತದಲಿ ನೆನಸೊ ೪
ಆದಿತಾಳ
ನಾಮ ಒಂದು ಬಲವಾಗಿ ಸೀಮೆಯೊಳಗುಳ್ಳ ಬಲು
ತಾಮಸರು ಬಂದು ಎನ್ನ ರೋಮ ಬಾಗಿಸುವರೆ
ಗೋಮತಿ ಮಿಕ್ಕಾದ ನದಿಯ ಮಿಂದು ಬಂದರೇನು
ನಾಮಕ್ಕನಂತ ಕಡಿಮೆ ಫಲವಧಿಕವಿಲ್ಲ
ಈ ಮಾತು ಮನ್ನಿಸೆ ಸುಕಾಮಿಸಿ ಹರಿಯ ಪಾದಾ
ನಾಮವೆ ಬಿಡದೆನೆನಸೆ ರೋಮರೋಮಾ ದುರಿತನಾಶ
ಕ್ಷೇಮಾಕೃತೆ ವಿಜಯ ವಿಠ್ಠಲನ ನಾಮ ಮುದ್ರಾಂಕಿತದವಗೆ
ಭೂಮಿಯಾಕಾಶಕ್ಕೆ ಒಂದೇ ಸುಮಾರ್ಗವೆಂದು ಪೇಳೋ ೫
ಜತೆ
ಹರಿನಾಮ ಸರಿಯಾದ ಕುರುಹು ನಾನರಿಯನು
ಅರಿದವರಿಗೆ ನಮೋ ಶ್ರೀಶ ವಿಜಯ ವಿಠ್ಠಲಾ ೬

ಒಮ್ಮೆ ತಾವು ಮಹಾಪಾಪಿ

೪೯
ಧ್ರುವತಾಳ
ದೋಷ ಎನಗೆ ಉಂಟೆ ಕ್ಷೇಶ ಎನಗೆ ಉಂಟೆ
ನಾಶ ಎನಗೆ ಉಂಟೆ ಮೊರೆ ಹೊಗಲು ನಿನ್ನ
ಆಶೆ ಮಾಡಿದ ಮಾನಿಸನು ಭವಾಂಬುಧಿ
ಈಸುವದರಿದೇನೋ ಕ್ಲೇಶವನೆನಲಾಗಿ
ಸಾಸಿವಿ ಕಾಳ ಲಂಘಿಸಿದಂತಿಪ್ಪದು
ಏಸೇಸು ಜನ್ಮದ ಸಂಸಾರ ಎಂಬುವುದು
ಕಾಸುವೀಸಾ ಸಂಪಾದಿಸಿಕೊಂಬೋದಲ್ಲ
ಕಾಸಾವೀಸಿಯಿಂದ ಘಾಸೆ ಬೀಳುವದಲ್ಲ
ಲೇಶವಾದರು ತಾಮಸ ಧಾವತಿ ಇಲ್ಲ
ನೀ ಸಲಹುವುದು ಮನಸು ಬಂದಲ್ಲಿ ಇಟ್ಟು
ಕ್ಲೇಶನಾಶನ ನಮ್ಮ ವಿಜಯ ವಿಠ್ಠಲ ತಿಮ್ಮ
ಭೂಷಣ ವಾರ್ತಿ ವಿಶೇಷ ನಿನ್ನದಲ್ಲದೆ ೧
ಮಟ್ಟತಾಳ
ಪಾಪಾತ್ಮನ ಮಾಡು ಪುಣ್ಯವಂತನ ಮಾಡು
ದೀಪದವನ ಮಾಡು ದೀನನರನ ಮಾಡು
ತಾಪಸಿಗನ ಮಾಡು ತಾಪತ್ರಯದಿ ಸಂ
ತಾಪದಲಿ ನರಕ ಕೂಪದೊಳಗೆ ಪೊಗಿಸು
ಕುಚ್ಛಿತ ಫಲವನುಣಿಸು
ಅಪವರ್ಗದಲಿ ಸಲ್ಲಾಪವನ್ನೆ ಬಡಿಸು
ಮಾಪತಿ ನಿನ್ನಯ ಪಾಲಿಗೆ ಬಂದವನೊ
ನಾ ಪೇಳುವುದೇನೋ ಅಪಾರ ಗುಣನಿಧಿ
ಪಾಪರಹಿತ ಪೂರ್ಣ ವಿಜಯ ವಿಠ್ಠಲರೇಯ
ನೋಡಿ ಸಮಸ್ತವು ನಿನದಲ್ಲವೇನೋ ೨
ತ್ರಿವಿಡಿ ತಾಳ
ಮಾನವಾವುದು ಅವಮಾನವಾವುದು ಎನಗೆ
ಜ್ಞಾನವಾವುದು ಅಜ್ಞಾನವಾವುದು ಎನಗೆ
ಸ್ಥಾನವಾವುದು ಎನಗಾ ಸ್ಥಾನಾವಾವುದು ಎನಗೆ
ಹಾನಿ ವೃದ್ಧಿಗಳೇನು ಹೀನಾ ಸನ್ಮಾನೇನು
ಕಾನನವೇನು ಗ್ರಾಮನುಗ್ರಾಮಗಳೇನು
ನೀನೊಲಿದು ನಿನ್ನಯ ಧ್ಯಾನವಿತ್ತವರಿಗೆ
ಆನಂದವಾದ ಸಾಧನವಲ್ಲದೆ ಮಿಗಿ
ಲಾನು ಚಿಂತಿಪುದೇನು ಶ್ರೀನಿವಾಸನೆ ಎನಗೆ
ನೀನೀಯಾದವನಿಗೆ ಆನೆ ಸಾಲು ಬಂದರೆ
ನಾನದ ನೋಡದೆ ಶ್ವಾನನ ಪರಿ ಎಂಬೆ
ಶ್ರೀನಿಧಿ ವಿಜಯ ವಿಠ್ಠಲ ಕರುಣಾಂಬುಧಿ
ನೀನಿತ್ತದೆ ಪಥ್ಯ ವಿಷ ಸುಧೆಯಾಗಲಿ ೩
ಅಟ್ಟತಾಳ
ಕರ್ಮವಾಗಲಿ ಸುಕರ್ಮವಾಗಲಿ ನೀನು
ನಿರ್ಮಾಣವನು ಮಾಡಿ ನಿರ್ಣೈಸಿದಲ್ಲಿಗೆ
ಧರ್ಮವೆ ಎನಗದು ಅನಂತ ಜನ್ಮಕ್ಕೆ
ದುರ್ಮತಿ ಎನಗಿಲ್ಲ ಸುರರಾ ದುರ್ಲಭನೆ
ಧರ್ಮ ಕೃತೇನಾಮ ವಿಜಯ ವಿಠ್ಠಲರೇಯ
ಚರ್ಮಪಾಲನಾದರೇನೋ ನಿನ್ನವನೋ ೪
ಆದಿತಾಳ
ಘನ್ನ ಪಾಪವಾದರು ಸತ್ಪುಣ್ಯ ಕಾಣೊ ಎನಗದು
ನಿನ್ನ ಪಾದ ಕಂಡ ಮೇಲೆ ಅನ್ಯಥ ಪ್ರಪಂಚ ಉಂಟೆ
ರನ್ನದೇವ ವಿಜಯ ವಿಠ್ಠಲ ಇನ್ನು ಸಂಶಯವು ಮಾಡೆ
ಎನ್ನ ಚಿಂತೆ ಅನುದಿನ ನಿನ್ನದಲ್ಲವೇನೊ ರಂಗ ೫
ಜತೆ
ಅರಸನೊಲಿದವನಿಗೆ ಎಂತಾದರೆ ಏನು
ಸರಸವಾಗಿಪ್ಪುದು ವಿಜಯ ವಿಠ್ಠಲರೇಯ ೬

ಮಾನವನಿಗೆ ದೇಹವನ್ನು ಭಗವಂತನು

೫೦
ಧ್ರುವತಾಳ
ದೋಷರಾಶಿಯ ಕಳೆದಮಲನ ಮಾಡುವುದೆನ್ನ
ಸಾಸಿರ ಪ್ರಣಾಮವನು ಮಾಡುವೆನೆಲೊ ರಂಗ
ಆಶೆಯಾ ಮುರಿಯಾದಿರು ಅತಿಬಡವ ನಾನೀಗ
ಏಸು ಕಾಲದಲಿಂದ ನಿನ್ನ ಪಾದ ಹಂಬಲಿಸಿ
ಈ ಶರೀರವ ಪೊತ್ತೆ ಇನ್ನು ದಯದಪ್ಪದಿರು
ವಾಸುದೇವ ನಾಮ ವಿಜಯ ವಿಠ್ಠಲ ನಿನ್ನ
ದಾಸರ ಪದ ಸನ್ನಿವಾಸದೊಳಿರಸಯ್ಯ ೧
ಮಟ್ಟತಾಳ
ನಿನ್ನ ಒಲಿಮೆಯಿಲ್ಲದ ಮಂತ್ರ
ನಿನ್ನ ಒಲಿಮೆಯಿಲ್ಲದ ಜ್ಞಾನ
ನಿನ್ನ ಒಲಿಮೆಯಿಲ್ಲದ ಭಕುತಿ
ನಿನ್ನ ಒಲಿಮೆಯಿಲ್ಲದ ಕ್ರಿಯೆ
ಯನ್ನು ಎಲ್ಲ ಮಾಡಲೇನು
ಕುನ್ನಿಯಮರಿಗೆ ರನ್ನದ ಉಡಿಗೆ
ಯನ್ನು ತೊಡಿಸಿದಂತೆ ಕಾಣಿರೊ
ಘನ್ನ ಪದವಿಯನೀಯಬಲ್ಲವೆ
ಚೆನ್ನಾಗಿರದೆ ಭಿನ್ನವಾಗೋವು
ಪುಣ್ಯನಾಮಾ ವಿಜಯ ವಿಠ್ಠಲ
ನಿನ್ನ ಒಲಿಮೆಯನ್ನು ಪಾಲಿಸಿ
ಇನ್ನು ಎನ್ನ ಮನ್ನಿಸುವುದು
ನಿನ್ನ ಒಲುಮೆಯನ್ನು ಪಾಲಿಸಿ
ಇನ್ನು ಎನ್ನ ಮನ್ನಿಸುವುದು ೨
ಝಂಪೆತಾಳ
ಹದಿನಾಲ್ಕು ವತ್ಸರ ಮೀರಲು ಒಂದು ಕ್ಷಣ
ಬದುಕಲು ದಶಾವರ ಜನುಮ ಬರುವುದಕ್ಕೆ
ಒದಗುವುದು ಕರ್ಮ ಏನೆಂದು ಉಸುರುವೆನಯ್ಯ
ಉದುಭವಿಸಿದವೇಸು ಉದಿಸುವುವು ಮುಂದೇಸು
ತುದಿ ಮೊದಲಿಲ್ಲವು ಎನ್ನಾಪರಾಧಕ್ಕೆ
ಇದಕೊಂದೆ ಮದ್ದು ನಿನ್ನಯ ನಾಮವು ತ್ರಿ
ಪದನಾಮ ನಮ್ಮ ವಿಜಯ ವಿಠ್ಠಲನೆ ಶ್ರುತಿತತಿನುತ
ಉದಕ ಮಾತ್ರದಲಿ ಪಾವನವ ಮಾಡೊ ೩
ಅಟ್ಟತಾಳ
ಪಾಪಕರ್ಮನು ನಾನು ಪಾಪಸಂಭವ ನಾನು
ಪಾಪಕಾಯ ನಾನು ಪಾಪಿಷ್ಠನು ನಾನು
ಪಾಪಿಗಳ ಸಂಗ ಪ್ರಾಪುತ ನರನಾನು
ಈ ಪರಿಯವಗುಣ ಶತ ಸಾವಿರವುಂಟು
ಅಪಾರ ಜಿತನಾಮ ವಿಜಯ ವಿಠ್ಠಲ ನಿನ್ನ
ಶ್ರೀಪಾದವನು ತೋರಿ ರೂಪ ಉದ್ಧರಿಪುದು ೪
ಆದಿತಾಳ
ನೋಯಲೀಸದೆ ಎನ್ನ ಪರರ ಬಳಿಯ ಸೇರಾ
ಲೀಯ ಗೊಡದೆ ಎನ್ನ ನಿನ್ನ ಮಂಗಳವಾದ
ಗಾಯನ ಸರ್ವದ ಮರಿಯಾಲೀಸದೆ ಒಮ್ಮೆ
ಬಾಯಿಗೆ ಬರುವಂತೆ ಕಡೆಗಣ್ಣಿಲಿಂದ ನೋಡು
ನೀಯಾಮಯಾ ನಾನು ವಿಜಯ ವಿಠ್ಠಲ ದೇವ
ಕಯ್ಯ ಬಿಡದೆ ಸಲಹೊ ಕಾಲಕಾಲದಲ್ಲಿ ಒಲಿದು ೫
ಜತೆ
ಅಂದು ಇಂದು ಮಾಡಿದ್ದ ದೋಷವೆಣಿಸದೆ
ಸ್ಕಂಧಧರ ನಾಮ ವಿಜಯ ವಿಠ್ಠಲ ಕಾಯೊ ೬

ಬದುಕಲು ಐಶ್ವರ್ಯ ಅಗತ್ಯವೇ ವಿನಾ ಐಶ್ವರ್ಯಕ್ಕಾಗಿ

೫೯
ಝಂಪೆತಾಳ
ಧನಗಳಿಪೆನೆಂದು ಕ್ರೋಧನ ಬಳಸಿ ಹಗಲಿರುಳು
ಧನ ಪಿಶಾಚಿಯಂತೆ ತಿರುಗಿತಂದು ಆ
ಧನವ ಸ್ಥಾಪಿಸಿ ವೇದನೆಯಿಂದ ಕೆಲಕಾಲ
ಧನ ಚಿಂತೆಯಲಿ ಬಡವಾಗಿ ನೊಂದು
ಧನವೆ ಪೋಗಲು ರೋದನಕೆ ಆರಂಭಿಸಿ
ಧ್ವನಿಮಾಡಿ ಆರ್ಜಿತವನೆನಿಸಿಕೊಂಬೆ
ಧನದಾಸೆ ಬಿಡು ನಿರ್ಧನ ಪುರುಷನಾಗಿ ಸಾ
ಧನಕೆ ಮನವೆರಗಿ ಗುಣವಂತನಾಗೋ
ಧನುಪಾಣಿ ವಿಜಯ ವಿಗ್ರಹನ ಆರಾ
ಧನವೆ ಲೇಸಾಗಿ ಮರಿಯದಲೆ ಮಾಡೊ
ಧನದಿಂದ ಗತಿ ವಿರೋಧನವೆ ನಿಶ್ಚಯದೆಲ್ಲ
ಧನವುಳ್ಳ ದರ್ಯೋಧನನು ಏನಾದನೂ
ಧನುರ್ವೇದ ವಿಜಯ ವಿಠ್ಠಲನ್ನ ನಾಮ
ಧನವೆ ಸಂಪಾದಿಸಿ ಧನಿಕ ನೀನಾಗೋ೧
ಮಟ್ಟತಾಳ
ಉಂಟಾದರೆ ನೀ[ಈ]ಯೊ ಉಂಟಾದರೆ ನೀ[ಈ]ಯೊ
ಉಂಟು ನಿನಗೆ ವೈಕುಂಠ ಪುರದ ದಾರಿ
ಗಂಟನು ಕರುಳನು ಗಂಟಕ್ಕಿ ಕೊಂಡು
ಎಂಟುಮಡಿ ಗಳಿಸೆ ಕಂಟಕವಾಗುವುದು
ಶುಂಠನಾಗದೆ ದಶಕಂಠಾನುಜಪಾಲ ವಿಜಯ
ವಿಠ್ಠಲನ್ನ ನೆಂಟರ ಸುಖಬಡಿಸಿ ಬಂಟನೆಂದೆನಿಸೊ ೨
ತ್ರಿವಿಡಿತಾಳ
ಧನವಪೇಕ್ಷ ಉಳ್ಳಂಥ ಮಾನವರಿಗೆ
ಕನಸಿನೊಳಗಾದರು ದುರ್ದೆಶ ಬಿಡದೊ
ದಿನ ಪ್ರತಿದಿನ ನಿದ್ರಿವಿರಹಿತನಾಗಿ
ತನ್ನ ಗುರು ಬಂಧುಗಳ ಸ್ನೇಹ ತೊರೆದು
ಅನುಜಾಗ್ರಜರೊಡನೆ ಹಗೆ ಸಾರಿ ಒಂದೊಂದು
ಹಣಕೆ ಪ್ರಾಣವೊಪ್ಪಿಸಿ ಕೂಡಿಹಾಕೇ
ಧನೇಶ್ವರ ನಾಮ ವಿಜಯ ವಿಠ್ಠಲನ್ನ
ನೆನವೆ ಮರೆದರೆ ಈ ಧನವೆ ಕಾಯ್ವದೆ ಮರುಳೆ ೩
ಅಟ್ಟತಾಳ
ಧನದಿಂದ ತನುವಿಗೆ ಹಾನಿ
ಧನದಿಂದ ಧರ್ಮಕ್ಕೆ ನಾಶ
ಧನದಿಂದ ಪರಗತಿಗೆ ಕೇಡು ಧನದಿಂದ ಅಹಂಕಾರ ಪ್ರಾಪ್ತಿ
ಧನದಿಂದ ಪುಣ್ಯಕ್ಕೆ ದೂರ ಧನವಧಿಕವಾಗೆ ಮನುಮಥ ಹೆಚ್ಚುವ
ಮನುಜ ಮದ ಹೆಚ್ಚುವುದು
ಅನಿಮಿಷ ವಿಜಯ ವಿಠ್ಠಲನು ಒಲಿಯಾನು
ದನುಜರೊಳಗೆ ಗುಣಿಸಿ ಎಣಿಸುವನು ೪
ಆದಿತಾಳ
ಲೋಷ್ಟ ಕಾಂಚನ ಸಮವೆಂದು
ನಿಷ್ಠೆಯಿಂದಲಿ ನೋಡುತಲಿರು
ದೃಷ್ಟಿಯಲ್ಲಿ ಕಂಡು ಪದದಲಿ
ಮೆಟ್ಟಿದರು ಬಿಟ್ಟುಬಿಡು
ಕೊಟ್ಟರು ಸ್ವಲ್ಪದರಿಂದ
ತೃಷ್ಟನಾಗಿ ತೃಪ್ತಿಬಿಡು
ತುಷ್ಟ ವಿಜಯ ವಿಠ್ಠಲನ್ನ
ಕಷ್ಟಾರ್ಜಿತದಿಂದಲಿರ್ಚಿಸು ೫
ಜತೆ
ಧನ ಮನ ತನು ಮನೆ ಮಾನಿನಿ ತನುಜರೇನೇನು
ಅನಿರ್ವಿಣ್ಯ ವಿಜಯ ವಿಠ್ಠಲಗಿತ್ತು ಸುಖಬಡು ೬

ವಾಯುದೇವರ ಸ್ತೋತ್ರವಿದು.

ವಾಯುದೇವರ ಸ್ತೋತ್ರ
೧೪೮
ಧ್ರುವತಾಳ
ಧಾತ್ರಿತ್ರಯಕೆ ಗುರು ಸೂತ್ರನಾಮಕ ವಾಯು
ಪುತ್ರನು ಜಯಸಂಕರುಷಣ ದೇವಗೆ
ನೇತ್ರ ತ್ರಯಾದಿಗಳು ಪರಮಶಿಷ್ಯರು ಈತಗೆ
ಸುತ್ರಾಮ ವಿಬುಧರು ದನುಜಬಲ ಒಂದಾಗಿ
ಮಿತ್ರ ಭಾವದಲಿ ಮಂದರ ತಂದು ಮರ್ದಿಸಲು
ಗಾತ್ರವಾದ ಮಹ ಹಾಲಾ ಹಾಲ ಉದಭವಿಸ
ಗಾತ್ರವನು ಬಚ್ಚಿಟ್ಟು ದಾನವಮರರೋಡೆ
ಚಿತ್ರವೇಗದಲಿ ಶ್ರೀಹರಿ ಚರಣಾನುಗ್ರಹ
ಪಾತ್ರವೆಂದೆನಿಸಿ ಮಂಗಳವಾದ ತಪನೆಯ
ಪಾತ್ರಿಯೊಳಗೆ ಕಾಳಕೂಟವೆ ಭುಂಜಿಸಿ
ಮಾತ್ರದಲ್ಲಿ ತೇಗಿದನು ಜೀರ್ಣಮಾಡಿಕೊಂಡು
ಚಿತ್ರ ಚಾರಿತ್ರ ಅಚ್ಯುತ ವಿಜಯ ವಿಠ್ಠಲನ್ನ
ಸ್ತೋತ್ರನು ಭಾರತಿ ಕಳತ್ರ ಶುಚಿಮಿತ್ರ ೧
ಮಟ್ಟತಾಳ
ಪಶುಪತಿ ಮೂರೂರ ಅಸುರರ ಗೆಲಪೋಗೆ
ಅಸಮನಾತನು ಸರಸಿಜಸಂಭವನು ರಾ
ಜಿಸುವ ಸುವಾಸು ಮೇರುಧನಸು ನಾರಾಯಣ
ಅಸಿ ಮಾರ್ಗಣನು ತ್ರಿದಶ ಬಲರುವೇದ
ಎಸೆವ ವಾಜಿಗಳು ಸಾಹಸಿಗನು ತಾನಾಗಿ
ವಶದಲ್ಲಿರುತಿರೆ ಅಸುರಾರಿ ಗೆಲಿಸೆ
ಅಸಹಾಯ ಶೂರ ಹನುಮಾ ಬಿಸಿನಿಧಿಗೆ ಹಾರಿ
ದಶಶಿರನ ಭಂಜಿಸಿ ನಗರವ ಉರುಪಿ
ಅಸುರುಹ ಕೋಟಿಲಿಂಗ ಅಸಮ ವಿಜಯ ವಿಠ್ಠ
ಲ ಸದನನ್ನ ನಾಮ ರಸವಾಗುಂಬೊ ಪರಶುಪಗಿಂದಧಿಕ೨
ರೂಪಕ ತಾಳ
ಮುಂದೆ ಈತನು ಬ್ರಹ್ಮಾ ವಾಯರ್ವೈ ಬ್ರಹ್ಮಾ
ಎಂದೆಂಬೊ ನಿಗಮಾರ್ಥವ ಪೇಳುತಲಿವಕೊ
ಸಂದೇಹ ಸಲ್ಲದು ತದ್ವೇಷವ ಮರೆದು
ಪೊಂದಿ ವೈಷ್ಣವರಾಗಿ ವಾತನ್ನ ಪಾದ
ವಂದಿಸಿ ಪಾಪವಿಮುಕ್ತರಾಗುವುದು
ತಂದೆ ತಾಯಿ ಮತ್ತೆ ಬಂಧು ಬಳಗ ಗುರು
ವೆಂದರೆ ಇವರೇ ನಮಗೆ ಸರ್ವರಿಗೇ
ಮಂದಮಾರ್ಗವ ಬಿಡು ಮನವೀತನಲ್ಲಿಡು
ಸ್ಕಂದನಾಮ ಸಿರಿ ವಿಜಯ ವಿಠ್ಠಲನ್ನ
ದ್ವಂದ್ವಪಾದ ತೋರಿ ಸಾಂದ್ರಸುಖವೀವ ೩
ಝಂಪಿತಾಳ
ಹನುಮನ ನಂಬಿದ ಸುಗ್ರೀವನು ಗೆದ್ದ
ಹನುಮನ ನಂಬಿದ ವಿಭೀಷಣ ಪ್ರಸಿದ್ಧ
ಹನುಮನ ನಂಬಿದರೆ ಸರ್ವ ಕಾರ್ಯವೆ ಬದ್ಧ
ಹನುಮನ ನಂಬಿದವ ಪಾಪದಲಿ ಬಿದ್ದ
ಹನುಮ ಹನುಮನೆಂಬೋದು ಜ್ಞಾನಕೆ ಶಬ್ದ
ಹನುಮನೆ ಮಹತತ್ವಕ್ಕಭಿಮಾನಿಯೆ ಸಿದ್ಧ
ಹನುಮಗೆ ವನಜ ಸಂಭವಗೆ ಅಭೇದ
ಮನೊಜೀವ ವಿಜಯ ವಿಠ್ಠಲನಲ್ಲಿ ಇದ್ದ ೪
ತ್ರಿವಿಡಿತಾಳ
ಖಗನು ಕಲಶವ ತಂದು ಜಗದೊಳು ಪೆಸರಾದ
ಗಗನಾಂಗಣದಲಿ ಸಂಜೀವ ನಗವ
ಬಗದು ತೃಣವಮಾಡಿ ಎಗರಿಸಿಕೊಂಡು ಎಳೆ
ನಗಿಯಿಂದ ದಾಣಿಕಲ್ಲಂತೆ ಹಾರಿಸುತ್ತ
ಹಗೆಯಿಂದ ಮಡಿದ ಕಪಿಗಳನೆಬ್ಬಿಸಿ ಮೂರು
ಜಗದಪತಿಗೆ ಸೇವೆ ಅರ್ಪಿಸಿದನು
ಜಗಸೇತುವೆ ನಾಮ ವಿಜಯ ವಿಠಲ ಬಲ್ಲ
ಮಿಗಿಲಾರು ಹನುಮಗೆ ಯುಗ ಯುಗದೊಳಗೆ ೫
ಅಟ್ಟತಾಳ
ರಣದೊಳು ಫಣಿಪನ್ನ ಅವತಾರವಾದ ಲ
ಕ್ಷ್ಮಣನು ಬಿದ್ದಾಗ ಮೂಲರೂಪ ಸ್ಮರಿಸಿರೆ
ಗಣನೆಯಿಲ್ಲದೆ ಒಂದು ಕರದಲ್ಲಿ ಎತ್ತಿ ರಾ
ವಣನು ಸೋಜಿಗ ಪೊಂದಿ ಹನುಮನ ಪೊಗಳಿದಾ
ಎಣೆಯಾರು ಈ ಹನುಮಗೆ ಸುರಾಸುರ
ಗಣದೊಳು ವಿಕ್ರಮಗೆ ನಿಜನಾಮ
ರಣಪ್ರಿಯ ವಿಜಯವಿಠ್ಠಲದಾಸರ ಪ್ರೇಮಗೆ
ರಣದೊಳು ಫಣಿಪನಾದಾ ೬
ಆದಿತಾಳ
ಭೀಮನಾದ ಹಿಡಿಂಬಾದಿ ಆ ಮಾಗಧನ ಸೀಳಿದ
ಭೂಮಿಯನೀಯೆನೆಂಬೊ ನೃಪನ ಯಮಪುರಿಗೆ ಕಳುಹಿದ
ಕಾಮನಯ್ಯನ ಪ್ರೀತಿ ಬಡಿಸಿ ತಾಮರಸ ಪರಿಹರಿಸಿದ
ಶ್ರೀಮದಾಚಾರ್ಯರಾಗಿ ಕುಮತಗಳ ದಹಿಸಿದ
ಆ ಮಹಾತತ್ವದ ಸುರಳಿ ಹರಹಿ ವೈಷ್ಣವರ ಉದ್ಧರಿಸಿದ
ಕಾಮನಾಮ ವಿಜಯ ವಿಠಲ ಈ ಮಹಿಯೊಳಗೆ ಮೆರೆಸಿದ೭
ಜತೆ
ವನಜಜಾಂಡಗಳೆಲ್ಲವನು ದಿನದಿನ ಪಾಲಿಪ
ಧನುರ್ಧರ ವಿಜಯ ವಿಠ್ಠಲನ ಪ್ರೇಮದ ದಾಸಾ೮

೪೬
ಧುವತಾಳ
ಧ್ಯಾನವ ಮಾಡು ಮನವೆ ದೈನ್ಯವೃತ್ತಿಯಿಂದ
ನಾನೆಂಬೊ ಮಾತು ಮುಕ್ತಿಯಲ್ಲಿಪ್ಪದು
ಮಾಣಾದಿರೀ ಸೊಲ್ಲು ಸತ್ಯವೆ ಸಿದ್ಧ ದುರಭಿ
ಮಾನವಲ್ಲವು ಕಾಣೊ ಸ್ವರೂಪ ಭೂತಾ
ಈ ನುಡಿಯಲ್ಲದಿರೆ ಸೇವಕನೆಂಬೊ ನ್ಯಾಯ
ತಾ ನಿಲ್ಲದು ಕೇಳಿ ಸ್ವಾಮಿ ಭೃತ್ಯ
ಅನಂತ ಅನಂತ ಕಲ್ಪಕೆ ಇರಲೆ ಇರಲೇ ಬೇಕು
ಮೇಣು ಪುಸಿಯಾದರೆ ಜೀವೇಶ್ವರ
ಏನೆಂಬೆ ಇದೆ ಇದೆ ಸಂಸಾರವಸ್ಥಿಯಲ್ಲಿ
ಜ್ಞಾನ ವೈರಾಗ್ಯ ಭಕ್ತಿ ಎರಡು ವಿಧವು
ಆ ನಳಿನ ಸಂಭವ ತೃಣಜೀವರತನಕ ನಿ
ದಾನದಿಂದಲಿ ಉಂಟು ತರತಮವು
ಪ್ರಾಣ ಪ್ರಕೃತಿ ಪುರುಷ ಇವರಿಂದ ಈ ಜಗತ್ತು
ವೇಣಯಂದದಲಿ (?) ಪ್ರವಾಹವಕ್ಕು
ಪ್ರಾಣ ತ್ರಿ ಬಗೆವುಂಟು ಜಾತಿಭೇದದಿಂದ
ಶ್ರೀ ನಾರಿ ಅಭಿಮಾನಿ ಸಕಲಕ್ಕು ನಿತ್ಯ
ಇನಿತು ತಿಳಿವುದು ಇಂದಿರಾದೇವಿಗೆ
ಜ್ಞಾನ ಶರೀರವಹುದು ಶ್ರುತಿ ಸಿದ್ಧವೋ
ಪ್ರಾಣಿ ಮಾತುರಗಾಗೆ ಲಿಂಗದೇಹವೆ ಸಿದ್ಧ
ಅನಾದಿಯಿಂದ ಬಂದ ಪ್ರತಿಬಂಧಕ
ಏಣಿಸಿ ನೋಡುವುದು ಅವರವರ ಯೋಗ್ಯತ
ಆನಂದ ಮಿಶ್ರದುಃಖ ಬಾಧ್ಯಕರೋ
ಧ್ಯಾನವ ಮಾಡೂ ಮನವೆ ಮನೋಹರದಿಂದ ನೀ
ನೆನೆದು ಧನ್ಯನಾಗು ಪ್ರಥಮದಲ್ಲಿ ಸಿರಿ
ಪ್ರಾಣನಾಥನದ ನಾರೇಯಣ
ನಾನಾವತಾರಾವೇಶ ಅಂಶ ಅಂಶಿ ಅಧಿ
ಷ್ಠಾನವನ್ನು ಚಿಂತಿಸು ಅಪ್ರಾಕೃತ
ಆ ನಖಾಂಗುಲಿಯ ರೇಖ ಪಾರ ಪರಡು ಜಂಘೆ
ಜಾನೂರು ಜಘನ ಕಟಿನಾಭಿ ಉದರ ಪಾಶ್ರ್ವ
ಪಾಣಿ ರೇಖೋಪರೇಖೆ ಹಸ್ತಾಂಗುಲಿಯು ನಖರ
ಗೇಣು ಗೋಕರ್ಣ ಪ್ರದೇಶ ತೋಳು
ಗೋಣು ಸ್ಕಂಧ ಬಾಹು ಉರ ಉದರ ತಳ ವದನ
ಆನನ ನಾಸಾಕ್ಷಿ ಶ್ರವಣ ಕದಪು
ವಾಣಿ ಕುಂತಳ ಪುಬ್ಬು ಓಷ್ಠ ದಂತ ಪಕ್ತಿ ಮೃದು
ವಾಣಿ ಮಂದಹಾಸ ನೋಟ ನಟನೆ
ಗಾನವ ಸೊಗಸಾದ ಶಾಂತ ಘೋಷಣೆ ಕೋಪ
ತ್ರಾಣ ಅಹಂಬುದ್ಧಿ ಚಿತ್ತ ಮನಸು
ಪ್ರಾಣೇಂದ್ರಿಯಗಳೈಶ್ವರ್ಯ ಪ್ರಭೆ ತೇಜ ಶಕ್ತಿ ಕಾಂತಿ
ಜ್ಞಾನ ವೈರಾಗ್ಯ ಕರುಣ ವಿದ್ಯಾ ನಿದ್ರಾ
ಧ್ಯಾನ ಜಾಗರ ಶಬ್ದ ಸ್ಪರುಶ ರೂಪ ರಸ ಗಂ
ಧಾನುಲೇಪನ ಗಮನ ಕಾಲ ಶೌರ್ಯ ಧೈರ್ಯ
ಮೌನ ವಿಲಾಸ ಭೋಗ ನೀತಿ ನಿರ್ಣಯ ನಾಮ
ದಾನ ವ್ಯಾಪಾರ ಮತ್ತೆ ತನು ಶಿರೋರುಹ
ಏನೇನು ಇದ್ದವೆಲ್ಲ ಸರ್ವವು ಪರಿಪೂರ್ಣ
ಆನಂದಮಯವಯ್ಯಾ ಜ್ಞಾನ ಕಾರ್ಯಾ
ದೀನ ನಾಥ ಸಿರಿ ವಿಜಯವಿಠಲನಂಘ್ರಿ
ಧ್ಯಾನವ ಮಾಡುವುದು ಈ ಪರಿಯಲಿ ಗ್ರಹಿಸೋ ೧
ಮಟ್ಟತಾಳ
ಜಡ ಜೀವ ವಿಧಿ ಸಿರಿ ರೂಪಗಳಾನಂತಾ
ಬಿಡದೆ ಇಪ್ಪದು ನೋಡಿ ಬಲ ಪರಿಯಿಂದಲಿ
ಕಡಲ ಶಯನ ಹರಿಯ ರೂಪಗಳಾನಂತ
ಅಡಿಗಡಿಗೆ ಉಂಟು ದ್ರವ್ಯ ಪೂರುತಿಯಾಗಿ
ಪಡಿಯಿಲ್ಲದೆ ಜಗದೊಳು ತುಂಬಿ ಕೊಂಡಿಹವಯ್ಯಾ
ತಡಿಯದೆ ದೇವನ್ನ ಮಹಿಮೆಯನ್ನು ತಿಳಿ
ಕೊಡುವನು ಪದದಿಂದ ನೋಡುವ ಕರದಿಂದ
ಪಿಡಿಯುವನು ಕಿವಿಯಿಂದ ಕೇಳುವ ಕಣ್ಣಿನಿಂದ
ನಡೆವನು ಮೂಗಿನಿಂದ ಓಡುವ ಜಿಹ್ವೆಯಿಂದ
ನುಡಿವನು ಬೆನ್ನಿಂದ ಹಾರುವ ಮುಖದಿಂದ
ಬಿಡುಬಿಡು ಇದು ಯಾತರ ಮಾತೆ ಪೇಳಲಿ ಸಲ್ಲ
ನುಡಿ ಮೊದಲಾದ ವ್ಯಾಪಾರಂಗಳ
ಸಡಗರದಲಿ ಸ್ವಾಮಿ ಯುಗಪದಿ ಮಾಡುವನು
ಕಡೆಗೆ ಅಣುವಾಗಿ ಅನಂತ ಬ್ರಹ್ಮಾಂಡ
ಒಡಲೊಳಿಟ್ಟುಕೊಂಬ ಪ್ರಯಾಸವಿಲ್ಲದೆ
ಜಡಜ ಸಂಭವ ಮಿಕ್ಕ ಸರ್ವ ಜೀವಿಗಳಒಂದೆ
ಡೆಯಲಿ ಮೇರುವಿಗೆ ಸಣ್ಣ ಇರುವಿನಂತೆ
ಉಡಿದು ಬೀಳದೆ ನೋಡಿ ಕಡುಸಾಹಸ ಮಲ್ಲ
ಅಡಿ ಶಿರ ಮೇಲಾಗಿ ನಾನಾಪರಿ ಸಂ
ಗಡಲೆ ದೇಶಕಾಲ ವ್ಯವಧಾನಗಳಾಗ
ನೋಡದೆ ಪೂರ್ಣವಾಗಿ ಸರ್ವಸ್ವತಂತ್ರದಲಿ
ಒಡನೊಡನಿರುತಿಪ್ಪ ಕಾಣಿಸಿಕೊಳದಿಪ್ಪ
ಜಡದಂತೆಯಿಪ್ಪ ಚೇತನದಂತಿಪ್ಪ
ತೊಡರು ಯಿಲ್ಲದೆ ಮಹಾಮಹಾ ಚೇತನವಾಗಿಪ್ಪ
ಕುಡಿ ವ್ಯಾಳಿಗೆ (ವೇಳೆಗೆ) ನಿತ್ಯ ಮಹಾ ಮಹತ್ತಾಗಿ
ಅಡಗಿಪ್ಪನು ಬಹು ದೇವತೆಗಳ ಸಹಿತ
ಗಿಡ ಫಲ ಮರ ಬಳ್ಳಿ ನಾನಾ ವೇಷವಧರಿಸಿ
ಮಡದಿಯರ ಬೆರಸಿ ಸರಸವಾಡುವ ಮೂರ್ತಿ
ಬಡವನಲ್ಲವ ಕಾಣೊ
ಮಾಡಿದದೇ ಮಾಟಾ ಭಳಿರೆ ಭಳಿರೆ ರಾಯಾ
ಪೂತುರೆ ಪೂತುರೆ ಜಯ ಜಯ ಜಗಜ್ಯೋತಿ
ನಮೊ ನಮೊ ಅನಿಮಿತ್ಯ ತ್ರಾಹಿ ತ್ರಾಹಿ ಕರುಣ
ಪಾಹಿ ಪಾಹಿ ಫಲದಾ ಅಹೊ ಅದು ಭೂತನೆ
ಅತಿ ವೈಚಿತ್ರಕನೆ ಅರೆರೆ ಪರ ಸುಹೃತು
ಅಚ್ಚರ್ಯ ಕಾರ್ಯ ಅಲೌಕೀಕ ವಸ್ತು
ಬಹು ವೈಲಕ್ಷಣ್ಯ ಒಂದು ಮೊದಲು ಮಾಡಿ
ಅನಂತ ಪರಿಯಂತ ಶಿಖನಖ ಸಮಸ್ತವುಳ್ಳ
ಉದಧಿ ಶಯನ ಇಂದು ನಲಿವ ಜಾಣ
ಸ್ವಲ್ಪಾಕಾಶದಲ್ಲಿ ನಿಂತು ಭಕ್ತರ ಕೈಯಲಿ ಪೂಜೆಕೊಂಬ ರಾಜ
ಕೊಡುವ ಬೇಡಿದ ವರವ ವಿಜಯ ವಿಠಲರೇಯನ
ಅಡಿಗಳ ಕೊಂಡಾಡಿ ಮನ ಮುಟ್ಟಿ ನೋಡಿ ೨
ತ್ರಿವಿಡಿ ತಾಳ
ನಿನ್ನ ಬಿಂಬನ ಸ್ಮರಿಸಿ ಇದೆ ಇದೆ ಅನಂತ
ಚಿನ್ಮಯ ರೂಪಗಳು ಸಿದ್ಧವೆಂದು
ಭಿನ್ನ ಜೀವರೊಳು ಇದ್ದ ಮೂರ್ತಿಗಳಲ್ಲಿ
ಚನ್ನಾಗಿ ನಿನ್ನ ಬಿಂಬನ ಅಂಶವ
ಮುನ್ನೀಗ ಪೊಗಿಸಿ ಏಕೀಭೂತವ ನೆನೆದು
ಸನ್ನುತಿಸಿ ತಿರಿಗಿ ಭಿನ್ನರ ಮಧ್ಯದಲಿ
ಮನ್ನಣೆಗೊಳುತಿಪ್ಪ ಅಗ್ರೇಶರೊಳಗೆ ಸಂ
ಪೂರ್ಣವಾಗಿದ್ದ ಅಂಶಗಳ ತೆಗೆದು
ನಿನ್ನ ಬಿಂಬನ ಕೊಡ ಕೂಡಿಸಿಕೊಂಡು ಸಂ
ಪನ್ನ ಭಕುತಿಯಿಂದ ಪೂಜೆ ಮಾಡೊ
ಇನ್ನು ಈ ಮಾತಿಗೆ ಸಂಶಯ ಬಡ ಸಲ್ಲ
ಗಣ್ಯ ಇಲ್ಲದೆ ಮನಸು ಮಾಡಲ್ಯಾಕೆ
ತನ್ನೊಳು ತಾನೆವೇ ತಿಳಿದು ಈ ಪರಿ ಭಕುತಿ
ಯನ್ನು ಮಾಡು ಸರ್ವ ಸ್ಥಾನದಲ್ಲಿ
ಸ್ತನ್ಯ ಪಾನದಿ ಹತ್ತದೆಂಬೊದಿದ್ದರೆ
ಪುಣ್ಯವೆ ಸಂಪಾದಿಸು ಅತಿ ತೀವರ
ಕಣ್ಣಿಗೆ ಕಾಂಬುವದಲ್ಲ ಅಂತರಂಗದ ಪೂಜೆ
ಘನ್ನ ಸುಲಭವೆನ್ನು ಸುಲಭ ವಿದ್ಯಾ
ಪುನ್ನಾಡಿಯೊಳು ಇದು ರಚಿಸಬೇಕು
ಅನುಗುಣ್ಯವಾದ ತತ್ವೇಶರ ನೆನೆದು
ಚನ್ನಾಗಿ ಕೇಶವಗೆ ಪೂಜಾ ಭಾಗಿಗಳೆಂದು
ಅನ್ನೋದಕ ಅಭಿಮಾನಿ ಜನರಾ
ಇನ್ನಿತು ನಮಿಸಿ (ನೇಮಿಸಿ) ಆತ್ಮನ್ನ ಅರ್ಚನೆ
ಬಿನ್ನಣದಲಿ ಮಾಡು ಧೃಡತರದಲ್ಲಿ
ಬಣ್ಣ ಬಣ್ಣದವರ್ಣ ಇಲದ್ದಂತೆ ಕಲ್ಪಿಸಿ
ಬಣ್ಣಿಸುವುದು ಹರಿಯ ಮುಂಭಾಗದಿ
ಮುನ್ನ ಮನು ಸನಕಾದಿ ದೇವತಿಗಳು ಅಬ್ಧಿ
ಕನ್ಯ ಇದನೆ ಮಾಡಿ ಸುಖಿಸುವರು
ನಿನ್ನ ಯೋಗ್ಯತದಷ್ಟು ಮಾತು ಬಿಡುವದಲ್ಲ
ಭಿನ್ನವಾದರು ಹರಿಯ ಮೆಚ್ಚಿಸಬೇಕು
ಅನ್ಯಥಾ ಉಪಾಯವು ಮತ್ತೊಂದುಇಲ್ಲ ಪ್ರ
ಸನ್ನನಾಗುವ ಹರಿವೊಳಗೆ ಪೊಳೆದು
ಉನ್ನತವಾಗಿ ಮಾಣಿಕ ಕನಕ ಕೋಟಿ
ಕನ್ಯಾದಾನ ವಸ್ತ್ರಗ್ರಹಾರಾಮ ಅಶ್ವ ಹಿ
ರಣ್ಯಗರ್ಭ ಕ್ಷೇತ್ರ ಮಿಕ್ಕಾದ
ಸನ್ಯಾಸ ಮೊದಲಾದ ವರಣಾಶ್ರಮ
ನಾನಾರಣ್ಯ ವೇದಾದಿಗಳು ಒಲಿಸಿದರಾಗೆ
ಧನ್ಯನಾಗನು ಕಾಣೊ ಹರುಷ ತೀರಿದ ಮೇಲೆ
ಬನ್ನ ಬಡಲು ಬೇಕು ವಿಮುಖನಾಗಿ
ಘನ್ನ ಪಾತಕವಲ್ಲದೆ ನೆಲೆಯಿಲ್ಲ ಗತಿಇಲ್ಲ
ಶೂನ್ಯನಾಗುವ ಅವನು ಜ್ಞಾನದಿಂದ
ಮನ್ಯು ವಿನಾಶ ನಮ್ಮ ವಿಜಯ ವಿಠಲ
ಕಾರುಣ್ಯ ಮೂರ್ತಿಯ ರೂಪಗುಣ ಕ್ರೀಯ ಯೋಚಿಸು ೩
ಝಂಪೆ ತಾಳ
ಈ ಪರಿ ನಿನ್ನ ಮೂರ್ತಿಯೊಳಗೆ ಸರ್ವ
ರೂಪಾತ್ಮಕ ಹರಿ ಮೂರ್ತಿಯ ಸುಂದರ
ಆಪಾದ ಮೌಳಿ ಮಸ್ತಕ ಪರಿಯಂತರ
ಆಪಾರ ಮಹಿಮ ಅದುಭೂತ ಶಕ್ತಾ ಬಲು
ಶ್ವೇತದ್ವೀಪ ನಿವಾಸ ನಿತ್ಯ ಕಲ್ಯಾಣ ಗುಣ ನಿ
ರ್ಲೇಪಾಭಿಮಾನಿಯು ಸುಪ್ತಿ ಪ್ರೇರಕ ಕರು
ಣಾಪಯೋನಿಧಿ ಎಂದು ಸ್ತುತಿಸಿ ಎಂದಿಗೆ ನಿನ್ನ
ಆಪನ್ನ ನಾನೆಂದು ಇದಕೆ ಪ್ರೇರಕನೆಂದು
ಆಪತ್ತು ನಾಶವಾಗುವುದಕೆ ಇದೆ
ಪ್ರಾಪ್ತವಾಗದಲೇವೆ ಏನು ಫಲವಿಲ್ಲ
ಶ್ರೀಪತಿ ಸುರಪತಿ ಜಗಪತಿ ಯುಗಪತಿ
ತಾಪಸಪತಿ ಯಜ್ಞಪತಿ ಮುಕ್ತಪತಿ ಗೋಪತಿ
ಗುಣಪತಿ ವೇದಪತಿ ಗಗನಪತಿ
ಚಾಪ ಸುದರುಶನ ದರಗದಾ ಪದುಮ ಸ
ಲ್ಲಾಪ ಚರ್ಮ ಖಡ್ಗ ಶರ ಮಿಕ್ಕಾದಾಯುಧ
ದೀಪ ಪ್ರಭೆ ಸೋಲಿಪ ಕಾಂತಿಮಿಗೆ
ಭೂಪಾರ ತುಂಬಿದೆ ಬುಧ ಜನಪ್ರೀಯನ
ತಾಪಭಂಜನಗೆ ಘೋಡಶದಶ ಪೂಜೆಯ
ವ್ಯಾಪುತ ತಿಳಿ ಒಂದರಿಂದ ಸರ್ವಕ್ಕೆ
ಆಪಾರ್ಥ ಪಾರ್ಥಿವ ಲಿಂಗಂತಲಿಮೇಲೆ
ತಾಪುಷ್ಪ ಭಕುತಿಯಿಂದಲಿ ಬಿದ್ದು ವ್ಯಾಧ
ರೂಪನಾಗಿದ್ದವನ ಗೆಲುವೆನೆಂದು ಸಂ
ತಾಪದಿಂದಲಿ ಶಶಿ ಆತನ್ನ ಶಿರದಲ್ಲಿ
ಈ ಪುಷ್ಪ ಕಂಡೆನೆಂಬೊದೇನು ಪುಸಿಯೇನು
ಗೋಪತಿ ಕೇತಕಿ ಈ ಪರಿ ಇರಲಿಕ್ಕೆ
ಆ ಪರಮಾತ್ಮಗೆ ಇಪ್ಪದರಿಂದೆ (ಇಪ್ಪದು ಅರಿದೆ)
ನೀ ಪರಮ ಭಕುತಿಯಿಂದಲಿ ಅಂತರಂಗದ
ಸೋಪಾನ ಮಾಡುವುದು ವೈಕುಂಠಕ್ಕೆ
ಗೋಪಾಲ ವಿಜಯ ವಿಠ್ಠಲರೇಯನ ನಿತ್ಯ
ವ್ಯಾಪಾರವನೆ ನೆನೆಯಾ ಗುಣರೂಪ ಕ್ರಿಯಗಳೊಮ್ಮೆ ೪
ರೂಪಕ ತಾಳ
ಮೇರು ಮಹಾಸಿಂಹಾನ ಧಾರುಣಿ ಮಂಟಪ
ತೋರಣ ಮಕರ ಮಹಾಲಕುಮಿಯನ್ನು ಕುದುರೆ
ಮೋರೆ ಎರಡು ತಥಾಸ್ತು ಎಂಬುವರಯ್ಯಾ
ಚಾರು ಮಂದಿರ ವಾಸ್ತು ದೇವತೆಗಳು ರಜತ ಭಂ
ಗಾರ ಚಂದ್ರ ಭಾಸ್ಕರರಾಗಿಪ್ಪರು
ಹೀರಾ ಮೊದಲಾದ ಮಣಿಗಳಿಗೆ ಹಿಮವಂತ
ವಾರಿಧಿಯಾಗಿಪ್ಪ ಸುತ್ತು ರಂಜಿಸುತಲಿ
ವಾರುಣಿಪತಿ ಹಾಸುಗೆ ನಿನ್ನಿಂದಲಿ
ಆರಾಧನೆಗೊಂಬ ವಿಗ್ರಹವನೆ ನಿಲ್ಲಿಸಿ
ದ್ವಾರಪಾಲಕರನ್ನು ಪೆಸರ್ಗೊಂಡು ಜಯಾದಿಗಳ
ಮೂರೊಂದು ಬಾಗಿಲಲ್ಲಿ ತಿಳಿದು ಕೊಂಡಾಡುವುದು
ಹಾರೈಸು ಧ್ಯಾನ ಮೊದಲಾದ ಬಗೆಯನ್ನು
ಮೂರು ಮೂರುತಿಗಳ ಕೂಡಿಸಿ ಅಭೇದ
ಕಾರಣವನು ನೋಡಿ ಪೂಜಾ ಸಾಧನವೆಲ್ಲ
ವಾರಿಜ ಮೊದಲಾದ ದ್ರವ್ಯಗಳ ಚಿಂತಿಸಿ
ಬೇರೆ ಬೇರೆಯೊಬ್ಬ ದೇವತಿಗಳು ಸಿದ್ಧ
ತಾರತಮ್ಯವೆ ಉಂಟು ಕೇಳು ಗ್ರಹಸ್ಥನಲಿ
ವಾರಿಜ ಭವನೇವೆ ಪ್ರಧಾನ ಅರ್ಚಕನು
ಈ ರೀತಿಯಲ್ಲದೆ ಇನ್ನೊಂದುಪಾಯವೇ
ಚಾರು ಚರಿತ ನಮ್ಮ ವಿಜಯ ವಿಠಲರೇಯನ
ಆರೆರಡು ಕರ್ತೃತ್ವ ತಿಳಿದು ನಿನ್ನೊಳು ಹಿಗ್ಗು ೫
ಧ್ರುವತಾಳ

ಪಂಚಕೋಶ ಹಾಗೂ ತದಭಿಮಾನಿ

೪೭
ಧ್ರುವತಾಳ
ಧ್ಯಾನ(ವ)ಮಾಡು ಮಾನವೆ ಧ್ಯಾನಂಗತನಾಗಿ
ದಾನ ವಾರಿಯ ನಖವನು[ಪಿ]ಡಿದು ಸುಂದ
ರಾನನ ಪರಿಯಂತ ಜ್ಞಾನಲೋಚನದಿಂದ
ಮಾನಸದಲ್ಲಿ ಪೂಜಿಯನು ಗ್ರಹಿಸು ಬಿಡದೆ
ಭಾನು ಮಂಡಲದಂತೆ ತಾನಿಪ್ಪನು ಹೃದಯ
ಅನಂತದಲ್ಲಿ ನಿಧಾನ ಪರಮ ಪುರುಷ
ನೀನರಿಯೊ ಪ್ರಾದೇಶ ಮಾತುರ ಮೂರುತಿಯ
ಸಾನಂದ ವಿಜಯ ವಿಠಲ ಪರಬೊಮ್ಮ
ಮೀನಾಂಕನಯ್ಯ ಎನ್ನ ಮಾನದ ಧೊರಿಯೆ ಎನ್ನು ೧
ಮಟ್ಟತಾಳ
ಅರಿ ದರ ಗದ ಪದುಮ ಧರಿಸಿದ್ದು ಚ
ತುರಕರ ಪ್ರಸನ್ನ ವರ ವದನ ತಾ
ವರೆ ನಯನ ಸುಂದರದ ಪಿಶಾಂಗಂಬರ ಪೊಳೆವಹಾರ
ಮಿನಗುವ ಕನಕ ಬಾಪುರಿ ಬಲು ವಿಚಿತ್ರ
ಸುರಮಣಿ ಮಕುಟ ವಿಸ್ತರಿಸುವ ಕುಂಡಲ
ಧರಿಸಿದ ಕರುಣಾಕರ ವಿಜಯ ವಿಠಲಂ
ತರದೊಳು ನಲಿದೊಲಿವಾ ೨
ತ್ರಿವಿಡಿ ತಾಳ
ಬಾಡದ ವನಮಾಲೆ ಉರದಲ್ಲಿ ಸಿರಿ ತೂ
ಗಾಡುವ ಕೌಸ್ತುಭ ರತ್ನ ಕಂಧರ ಭೂಷಾ
ನೋಡು ಮೇಖಲ ಮತ್ತೆ ಬೆರಳ ಉಂಗುರವೊ ಇ
ನ್ನಾಡಲೇ ನೂಪುರ ಕಂಕಣಾದಿಗಳು
ಪಾಡುವರಾರು ಅಮಲ ಸುಳಿಗುರುಳು
ತೀಡಿದ ಕಸ್ತೂರಿ ನಗೆ ಮೊಗದ ಸೊಗಸು
ಆಡುವ ಪ್ರತಿದಿನ ವಿಜಯ ವಿಠಲರೇಯನ
ಬೇಡು ಸೇವಿಯನು ಸಂತತದಲಿ ಮರಿಯದೆ ೩
ಅಟ್ಟತಾಳ
ಅಪಾದಮಸ್ತಕ ಪರಿಯಂತ ಈಕ್ಷಿಸಿ
ಅಪಾರ ಮಹಿಮನ್ನ ಚಿಂತಿಸು ಹೃದಯಾಬ್ಚ
ವಾ ಪಸರಿಸಿ ಕರ್ನಿಕೆ ಮಂದಿರದೊಳು
ತಾಪಸಿಯಾಗಿ ಕಾಲಾ ಕಾಲಾ ಕಳಿಯದೇ
ನೀ ಪ್ರೀತಿಯಲಿ ಪಾದದಿ ಮೊದಲು ಮಾಡಿ
ರೂಪವ ನಿನ್ನೊಳು ನಿಲಿಸುತ್ತ ಜಿತವಾಗಿ
ಮಾಪತಿ ವಿಜಯ ವಿಠಲನಲ್ಲಿ ರತಿಯಿಟ್ಟು
ಪಾಪ ರಹಿತನಾಗು[ಪ್ರ]ಪಂಚ[ವ] ನೀಗೂ
ಆದಿತಾಳ
ಒಂದೊಂದು ಸ್ಥಾನದಲ್ಲಿ ನಿಂದು ಕೇವಲವಾಗಿ
ಒಂದೊಂದು ಜಿತವಾಗಿ ಬಂದ ತರುವಾಯದಲ್ಲಿ
ಇಂದಿರಾರಮಣ ಗೋವಿಂದನ್ನ ಒಲಿಸಿಕೊಂಡು
ಹಿಂದಣ ದೋಷದ ಸಂಬಂಧಗಳೋಡಿಸಿನ್ನು
ಮುಂದಣ ಮಾರ್ಗಕೆ ಅನುಸಂಧಾನವನ್ನು ತಿಳಿದು
ತಂದೆ ತಾಯಿ ಎಂದಿಗೆ ವಿಜಯ ವಿಠಲನೆಂದು
ಒಂದೇ ಭಕುತಿಯಲ್ಲಿ ಇಹದಿಂದ ದೂರನಾಗೋದೊ ೫
ಜತೆ
ಬಿಂಬ ಮೂರುತಿ ಧ್ಯಾನ ಇಂಬಾಗಿ ಮಾಡಲು
ಇಂಬು ತೋರುವನಲ್ಲಿ ವಿಜಯ ವಿಠಲಪೊಳೆದು ೬

ಈ ಸುಳಾದಿಯೂ ಶ್ರೀನಿವಾಸನ ಪಾದ

೫೧. ತಿರುಪತಿ
ರಾಗ:ಭೈರವಿ
ಧ್ರುವತಾಳ
ಧ್ವಜ ವಜ್ರಾಂಕುಶ ಸುಧಾಂಬುಜದಿಂದೊಪ್ಪುವ ಚರಣ |
ಬುಜಪಾಣಿ ಹಸ್ತಾದಲಿಪೂಜೆಗೊಂಬ ಚರಣ |
ಅಜನ ಪೊಕ್ಕಳಿಂದಲಿ ಸೃಜಿಸಿ ಅರಿಸಿದ ಚರಣ |
ರಜತಗಿರಿವಾಸನು ಭಜಿಪ ಸುಂದರ ಚರಣ |
ತ್ರಿಜಗದೊಳಗೆ ವಿರಜವಾಗಿಪ್ಪ ಚರಣ |
ಭುಜ[ಗ]ಗಿರಿವಾಸ ತಿರಿವೆಂಗಳೇಶ |
ವಿಜಯವಿಠಲ ಪೂರ್ಣಾದ್ವಿಗುರಾಜನಂತೆ ಪೋಲುವ |
ಅಜಸುತಾರ್ಚಿತ ಚರಣ ೧
ಮಟ್ಟತಾಳ
ಕಾಳಿಂಗನ ಪೆಡಿಯ ತುಳಿದ ಚರಣ |
ಬಾಲಿಯರ ಕೈಯ್ಯಾವಾಲಗಗೊಂಬೊ ಚರಣ |
ಮೇಲುಲೋಕವ ಒಡದಲೋಲವಾದ ಚರಣ |
ಗಾಳಿನಂದನನ ಕರದಿ ಮೆರೆವ ಚರಣ |
ಮೇಲುಗಿರಿ ತಿಮ್ಮ ವಿಜಯವಿಠಲರೇಯಾ |
ಊಳಿಗದವರನ್ನ ಉದ್ಧರಿಪ ಚರಣ ೨
ತ್ರಿವಿಡಿತಾಳ
ದಾನವಾರೆದೆಯಲ್ಲಾ ಒದೆದು ನಲಿದ ಚರಣ |
ಕಾನನವೆಂಬೊ ದುರಿತದಹಿಸಿಬಿಡುವ ಚರಣ |
ವಾಣಿಸ್ತುತಿಲಂದು ಲೇಶತೋರದ ಚರಣ |
ಮಾಣದೆ ಭಕುತರಿಗೆ ಗೋಚರವಾಗುವ ಚರಣ |
ದಾನವ ಬೇಡಿದ ಒಗನವಡೆದ ಚರಣ |
ಧ್ಯಾನದಲ್ಲಿ ಪೊಳೆವ ಶೋಭನ ಚರಣ |
ಏನೆಂಬೆ ಚದುರ್ದಶಲೋಕಬೆಳಗುವ ಚರಣ |
ದೀನನಾನೆಂದೆನಲು ದಯಮಾಡುವ ಚರಣ |
ಭಾನುವಿನನಂತ ಕಿರಣ ಮೀರಿದ ಚರಣ |
ಭೂನಾಥವರಗಿರಿ ವಿಜಯವಿಠಲ ತಿಮ್ಮಾ |
ಆನಂದ ಕೊಡುತಿಪ್ಪ ಐಶ್ವರ್ಯಕರ ಚರಣ ೩
ಅಟ್ಟತಾಳ
ಅಸುರನ್ನ ಕೊಂದ ಸುಧಾಮಯಾದ ಚರಣ |
ಎಸಳು ಬೆರಳು ಪಙ್ತಯಿಂದಲೊಪ್ಪುವ ಚರಣ |
ಶಶಿಮುಖಿಯ ಪಾವನಗೈಸಿದ ಚರಣ |
ಹಸುಮಕ್ಕಳೊಡನೆ ಕುಣಿದಾಡಿದಾ ಚರಣ |
ವಿ[ಷ]ವರ್ಜಿತನಾದ ವೈಲಕ್ಷಣ ಚರಣ |
ನಸುನಗೆ ತಿರ್ಮಲ ವಿಜಯವಿಠಲ ಕರುಣಿ |
ಸಿ ನಂಬಿದವರಿಗೆ ಫಲವೀವ ಚರಣ ೪
ಆದಿತಾಳ
ಕಾರುಣ್ಯಸೋನಿಯ ಗರೆವದು ಈ ಚರಣ |
ಆರಾದರಾಗಲಿ ಭಕುತಿಗೆ ಒಲಿವಾ ಚರಣ |
ಬಾರಿಬಾರಿಗೆ ಜಗವ ಪಾಲಿಸುವ ಚರಣ |
ಸಾರಲು ಸಂಸಾರ ಬಿಡಿಸುವ ಸಿರಿ ಚರಣ |
ದೂರಕ್ಕೆ ದೂರವಾಗಿ ನಿಲುಕದಿಪ್ಪ ಚರಣ |
ಮಾರಿಗಳಿಗೆ ಮಸೆದ ಶೂಲವಾದ ಚರಣ |
ಭೇರಿ ದುಂದುಭಿಯಿಂದ ವಾಲಗವಾದ ಚರಣ |
ವಾರವಾರಕೆ ಎನಗೆ ಪ್ರಸನ್ನವಾದ ಚರಣ |
ಶ್ರೀ ರಮಾರಮಣ ತಿಮ್ಮ ವಿಜಯವಿಠಲ ಸರ್ವಾ |
ಧಾರವಾಗಿ ಎಲ್ಲ ವ್ಯಾಪಿಸಿದ ಚರಣ ೫
ಜತೆ
ಗರುಡನ ಶೃಂಗಾರ ಕರದಿ ಒಪ್ಪುವ ಚರಣ |
ಗಿರಿಯ ತಿಮ್ಮ ವಿಜಯವಿಠಲರೇಯನ ಚರಣ ೬

ರು ತಿರುಪತಿಯ ಶ್ರೀನಿವಾಸನ ಪಾದ

೫೦. ತಿರುಪತಿ
ರಾಗ:ಮಾರವಿ
ಧ್ರುವತಾಳ
ಧ್ವಜವಜ್ರಾಂಕುಶ ಪಂಕಜ ಕುಂಕುಮಾಂಕಿತ |
ನಿಜರೇಖೆಯಿಂದೊಪ್ಪುವ ಸೃಜಿತರಹಿತ ಪಾದ |
ದ್ವಿಜಪನ್ನ ಪೆಗಲಲ್ಲಿ ಚರಿತವಾದ ಪಾದ |
ದ್ವಿಜರಾಜನಂದದಿ ವಿರಾಜಿಸುವ ಪಾದ |
ಭುಗನ್ನ ಶಿರದಲ್ಲಿ ನೃತ್ಯವಾಡಿದ ಪಾದ |
ಅಜಹರಾದಿಗಳಿಂದ ಭಜನೆಗೊಂಬುವ ಪಾದ |
ಸುಜನರ ಮನದಲ್ಲಿ ಚಂಚಲಿಸುವ ಪಾದ |
ವೃಜನಂದನವನಿಯಲ್ಲಿ ಸಂಚರಿಸಿದ ಪಾದ |
ತ್ರಿಜಗಮೋಹನ್ನ ಪಾದ ತ್ರಿಗುಣರಹಿತ ಪಾದ |
ವಿಜಯಾತ್ಮನಾಮಾ ಸಿರಿ ವಿಜಯವಿಠಲ ತಿಮ್ಮ |
ಭುಜಗ ಗಿರಿಯಮೇಲೆ ಶೋಭಿಸು[ವ] ಪಾದ ೧
ಮಟ್ಟತಾಳ
ಧರೆಯನಿತ್ತು ನೃಪನ ಬೆರಗುಮಾಡಿದ ಪಾದ |
ಕುರು ಸಭೆಯನ್ನು ಹೇರುರುಳಿಸಿದ ಪಾದ |
ದುರುಳ ಶಕಟನ್ನ ಮುರಿಯಲೊದೆದ ಪಾದ |
ಮರುತನ ಕರದಲ್ಲಿ ಮೆರೆವ ಸುಂದರ ಪಾದ |
ಕರಿವ[ರ]ದ ವಿಕ್ಷರ ವಿಜಯವಿಠಲ |
ಪರಿಪೂರ್ಣ ಮೂರುತಿಯ ಅರುಣವರುಣ ಪಾದ |
ಸುರ ವಿರೋಧಿಗಳ ಶಿರದಿ ಹಾವಿಗೆ ಮೆಟ್ಟಿ |
ಭರದಿ ನಡೆವ ಪಾದ ಅರವರ್ಜಿತ ಪಾದ ೨
ರೂಪಕತಾಳ
ರಣದೊಳಗೆ ವೇಗ ಫಲ್ಗುಣನ ವರೂಥವ |
ಅಣಗೊತ್ತಿ ಫಣಿ ಬಾಣ ಕಣಿಯ ಮುರಿದ ಪಾದ |
ಇನತನುಜನನು ಸರಿಸಿ ದನುಜನ ಕಳೆವರ |
ತೃಣಮಾಡಿ ಗಗನಾಂಗಣಕೆ ಮೀಟಿದ ಪಾದ |
ಘಣ ಮಣಿಸಿದ ಕಂಸನ ತನುವಿನ ಮೇಲೆ |
ಅಣಕ ಪಾಡುತ ಕುಣಿಕುಣಿದಾಡಿದ ಪಾದ |
ಗುಣಗಣನಿಲಯ ನಿರ್ಗುಣ ವಿಜಯವಿಠಲ |
ಅಣೋರಣಿ ಮೂರ್ತಿ ಎಂದಿನಿಪನ್ನ ಪಾದ ೩
ಝಂಪೆತಾಳ
ಪೊಂಗೆಜ್ಜೆಪೆಂಡೆ ನೂಪುರ ಪೂರಿತದಿಂದ |
ಶೃಂಗಾರವುಳ್ಳ ಸೊಬಗದ ಪಾದ |
ಗಂಗೆಯನು ಪಡೆದು ಗಾಂಭೀರ್ಯದಲಿ ತ್ರಯ ಜ |
ಗಂಗಳನುದ್ಧರಿಸಿದ ಪಾವನ್ನ ಪಾದ |
ಸಂಗೀತದಲ್ಲಿ ತುಂಬುರ ನಾರದರಿಂದ |
ಹಿಂಗದೆ ಸ್ತೋತ್ರ ಕೈಕೊಂಬ ಪಾದ |
ಮಂಗಳ ಮಹಶೃಂಗ ವಿಜಯವಿಠಲ ಎನ್ನ |
ಸಂಘ ದುರಿತ ಕಳೆವ ಸೌಮ್ಯವಾದ ಪಾದ ೪
ತ್ರಿವಿಡಿತಾಳ
ಮುನಿ ಪತ್ನಿಶಿಲೆಯಾಗಿ ಘನದಿನ ಬಿದ್ದಿರೆ |
ಕ್ಷಣ ಮಾತ್ರದೊಳು ಮಾನಿನಿಯ ಮಾಡಿದ ಪಾದ |
ಅನುವರದೊಳು ಗುರುತನುಜನ[ಸ್ತ್ರ]ವಬಿಡೆ |
ಅನಲವನಡಿಗಿಸಿ ಜನರ ಸಾಕಿದ ಪಾದ |
ಪ್ರಣವ ಮೂರುತಿ ಸಿದ್ಧ ವಿಜಯವಿಠಲರೇಯ |
ಪ್ರಣತ ಜನರು ಬಿಡದೆ ಎಣಿಸಿ ಪಾಡುವ ಪಾದ ೫
ಅಟ್ಟತಾಳ
ಒರಳನೆಳಿದು ಅತ್ತಿ ಮರವ ಮುರಿದ ಪಾದ |
ಶಿರಿದೇವಿ ಉರದಲ್ಲಿ ಕುರುಹ ತೋರುವ ಪಾದ |
ಕರುಣಾದಿಂದಲಿ ಭಜಕರನ ಪೊರೆವ ಪಾದ |
ಧರಣಿಯೊಳಗೆ ಗಯಾಸುರನ ಮೆಟ್ಟಿದ ಪಾದ |
ಕರದವರಿಗೆ ಮುಕ್ತಿ ಸುರುಸುವದೀ ಪಾದ |
ಪರಕೆ ಪರಾ ತತ್ವವಾಗಿ ಪೊಳೆವ ಪಾದ |
ಪರಮ ಕ್ಷಿತೀಶನೆ ವಿಜಯವಿಠಲ ಸರ್ವ |
ಸುರರೊಳು ಮೆರೆದು ಸದ್ಭರಿತವಾಗುವ ಪಾದ ೬
ಆದಿತಾಳ
ಯೋಗಿಗಳ ಮನಕೆ ಅಗೋಚರವಾದ ಪಾದ |
ಆಗಮ ತುತಿಸಲಾರದ ಪೊಗಳಿ ಹಿಗ್ಗುವ ಪಾದ |
ಭಾಗವತ ಜನರಿಗೆ ವೇಗ ನಿಲುಕುವ ಪಾದ |
ಆಗಾಮಿ ಸಂಚಿತ ಭವರೋಗ ಓಡಿಪ ಪಾದ |
ರಾಗ ದ್ವೇಷಗಳ ಕಳೆದು ಆಗತಾವಾಗುವ ಪಾದ |
ಜಾಗರದಿಂದಲಿ ಸರ್ವ ಭೂಗೋಳ ವ್ಯಾಪಿಪ ಪಾದ |
ಶ್ರೀ ಗರ್ಭಾ ವಿಜಯವಿಠಲ ಜಾಗುಮಾಡಿದೆ ಪೊಳೆವ ಪಾದ |
ಶ್ರೀಗಂಧ ಪುಷ್ಪ ವೈಭೋಗದಿಂದ ನಲಿವ ಪಾದ ೭
ಜತೆ
ತಿರ್ಮಲೇಶನ ಪಾದ ಶ್ರೀಮತೇಯನ ಪಾದ |
ಕರ್ಮನಾಶನ ಮಾಡುವ ವಿಜಯವಿಠಲನ ಪಾದ ೮

ಸಾಂಸಾರಿಕ ಜೀವನದ ಸುಖವು ಶಾಶ್ವತವೆಂದು

೬೦
ಧ್ರುವತಾಳ
ನಂಬದಿರು ಸಂಸಾರವೆಂಬೋದೆ ಕಾಳಕೂಟ
ದಂಬುಧಿಗೆ ಅತಿಮಿಗಿಲು ಹಂಬಲಿಸದಿರು
ಡಿಂಬವು ತ್ರಿವಿಧವೆಂಬೋದು ವೇದಸಿದ್ಧ
ಡಂಭಕ ಮಾಯಕದಂಬ ತಿಳಿಯಲೊಶವೆ
ಶಂಬರಾರಿ ಕುಟುಂಬಕ್ಕೆ ಸಿಲುಕಿ
ಗುಂಭವಾದ ಜ್ಞಾನ ಭಕುತಿಯ ಮರೆದು
ಉಂಬೊ ತಿಂಬದರಲ್ಲಿ ಸಂಭ್ರಮವಾಗಿ ನಲಿವೆ
ಕುಂಭಿಣಿಯೊಳು ವಿಷವೆಂಬೊದೆ ಬಯಸುತ
ಅಂಬುಜ ಪಾಣಿ ಸದಾ ವಿಜಯ ವಿಠಲನ ಪಾ
ದಾಂಬುಜ ನೆನೆಯದೆ ಕುಂಭಿಪಾಕಕ್ಕಿಳಿವೆ ೧
ಮಟ್ಟತಾಳ
ಉಸಗಿನ ಮನೆ ಮಾಡಿ ಕುಸಿಯಗುದ್ದಿದರದು
ವಸುಧಿಗೆ ಬೀಳದಲೆ ಹಸನಾಗಿ ನಿಲ್ಲುವುದೆ
ಅಸುವು ನಿನ್ನದು ಎಂದು ಅಸುರ ವಿಜ್ಞಾನದಲಿ
ಅಸಜ್ಜನ ನಡತೆಯಲಿ ಕುಶಲದಲ್ಲಿರದಿರೂ
ಅಸುರಾಂತಕ ದಾತ ವಿಜಯ ವಿಠ್ಠಲ ಹರಿಯಾ
ರಸನೇಂದ್ರಿಯದಲಿ ನೆನಸದಿದ್ದಡ ಮಾ
ಹಿಷಗಮನನು ಖಂಡ್ರಿಸದಿಪ್ಪನೆ ಮರುಳೆ ೨
ತ್ರಿವಿಡಿ ತಾಳ
ಆದಿಮೂಲ ಮೂರ್ತಿ ನಾರಾಯಣ ಜಗ
ದಾದಿ ಕರ್ತ ಸಿದ್ಧ ಸರ್ವಸಮರ್ಥ
ಕ್ರೋಧನಲ್ಲ ದಯಾವಂತನೊಬ್ಬರಿಗಲ್ಲ
ಭೇದವ ಖಿಳ ಜೀವಕಪಾರ ಮಹಿಮನು
ಸಾಧನವರಿತು ಅವರವರಿಗೆ ಫಲವೀವಾ
ವ್ಯಾದಿಶ ನಾಮರಂಗ ವಿಜಯ ವಿಠ್ಠಲರೇಯನ
ಆದರಿಸಿ ಸಂಸಾರ ರೋದನ ಗೆಲ್ಲು ೩
ಅಟ್ಟತಾಳ
ಶರೀರಧರಿಯಾದ ಮೇಲೆ ದೋಷ
ಪಾರವಾಗಿ ಒಂದು ತೊಲಗದಲ್ಲಿಪ್ಪವು
ಘೋರ ಕರ್ಮದ ನಿಬಡಿಯಾರಾಧಿಸಲು ಪುಣ್ಯ
ಜಾರಿ ಪೋಗುವುದು ಪ್ರಾಪುತ ವಾಗದೆ
ನಾರಾಯಣನ ಪಾದವಾರಿಜ ಮರೆದರೆ
ತೀರದು ಸಂಸಾರ ಬಂಧನವು
ಕ್ರೂರ ವಿಷಯಂಗಳ ದಾರಿಯ ಮೆಟ್ಟದೆ
ಸೊರೆಗೊಡು ಮನ ಸದ್ಭಕ್ತಿಗೆ
ಭೀರು ಸ್ವಭುನಾಮ ವಿಜಯ ವಿಠ್ಠಲನೆಂದು
ಪಾರಾಗು ಸಂಸಾರ ವಾರಿಧಿ ವೇಗ ೪
ಆದಿತಾಳ
ಕಂಡದೇವರಿಗೆ ಬಾಗೆ ಮಂಡೆ ಪರಟಿಗಟ್ಟುವುದು
ಪಿಂಡಾಂಡದಲ್ಲಿ ಬಂದು ಭಂಡುಬೀಳೋದು ತಪ್ಪದು
ತಂಡ ತಂಡದ ಸಂಸಾರ ದಂಡಕೊಳದಿ ಬಾಳಬೇಕು
ಮಂಡಲೇಶನೆ ಗ್ರೋಧ ವಿಜಯ ವಿಠ್ಠಲರೇಯಗೆ
ದಂಡಾಕಾರವಾಗಿ ನಮಿಸೆ ಹಿಂಡು ಪಾಪದಿಂದ ಮುಕ್ತಿ ೫
ಜತೆ
ನಮ್ಮ ಭೂತನಾಗೆ ಸಂಸಾರ ಪರಿಸುವಾ
ಅಮೃತಾಶನ ನಾಮ ವಿಜಯ ವಿಠ್ಠಲಸ್ವಾಮಿ ೬

ಭಕ್ತಿ ಮತ್ತು ವಿರಕ್ತಿ ಎಂಬುದು

೯೭
ಧ್ರುವತಾಳ
ನಂಬಿದೆ ಎಲೊ ಹರಿ ಅಂಬರ ರೂಪಕಾರಿ
ಬೆಂಬಲವಾಗು ಭವರೋಗ ನೀಗು
ಡಿಂಬವುಳ್ಳನಕ ಕ್ಲೇಶ ಬಡಿಸುವ ಶೋಕ
ಎಂಬುದ ಕಾಣಿಸದಿರು ಕೈಯ್ಯಾ ತೋರೊ
ಕುಂಭಿಣಿಯೊಳು ನೀನೆಂಬ ಮಾನವರಿಗೆ
ಅಂಬುಧಿಯಾ ಪೋಷಣ್ಯಾಗದೇನೊ
ತಿಂಬೆನೆಂಬಾ ಮೃಗವಾ ಅಡವಿಯೊಳು
ಅಂಬೆಯಾ ತಡೆದಂತ ತೆರನಾಗಿದೆ
ಮುಂಬಿಡಿಸುವರಿಲ್ಲ ಮುದ್ದು ಲಕುಮಿನಲ್ಲಿ
ಅಂಬುಜಭವಗಾದರು ನೀನೆ ಗತಿಯೊ
ಜಂಭಾರಿನುತ ವಿಷ್ಣು ವಿಜಯ ವಿಠ್ಠಲ ಕರು
ಣಾಂಬುಧಿಯೊ ನೀನು ನಮಿಸುವೆ ನಾನು ೧
ಮಟ್ಟತಾಳ
ಅಪಮೃತ್ಯು ಸಮೀಪಿಸಿದೆ ಎನ್ನ ಅಪಹಾಸಲ್ಲವೊ
ಕೃಪೆಯಿಂದಲಿ ನೋಡು ಪರನು ಪರಮ ಮಹಿಮ
ತಪಸಿಗಳ ಒಡೆಯಾ ಕಪಿ ವಿಜಯ ವಿಠ್ಠಲ
ಉಪಶಮನ ಗೈಸೊ೨
ತ್ರಿವಿಡಿತಾಳ
ಅಕಾಲ ಮೃತ್ಯುವಿನ ಗಂಟಲ ಗಾಣನೆಂದು
ನಾಕಾದಿ ಲೋಕದಲಿ ಪೊಗಳುತಿದೆ ಪದ
ಸೋಕಲು ಪಾಷಾಣ ಪೆಣ್ಣಾಗಿ ಮೆರೆದದು
ಲೋಕ ಈರೇಳರೊಳು ಬಲ್ಲರೆಲ್ಲ
ಲೋಕಾಧ್ಯಕ್ಷನಾಮಾ ವಿಜಯ ವಿಠ್ಠಲದೇವ
ನೂಕುವುದು ಬಂದ ಅಪಮೃತ್ಯುಗಳನು ೩
ಅಟ್ಟತಾಳ
ಭಕುತಿ ವಿರಕುತಿ ನಿಜ ಶಕುತಿಬೇಕು ನಿನ್ನ ಭಜಿಸಿ
ಮುಕುತಿಯನ್ನು ಪಡೆವವಂಗೆ
ಯುಕುತಿಯೆಂದು ಯುಕುತಿವಂತರು
ಮುಕುತಾರ್ಥ ಪೇಳುವವರು
ರಿಕುತ ನಿನ್ನ ಮಾತು ಲಾಲಿಸಿ
ಭಕುತಿರಕುತಿ ಶಕುತಿಯೆಲ್ಲ
ಭಕುತಿ ಮಿತಿಗೆ ಪಾಲಿಸಯ್ಯಾ
ಶಕುತಿಮತ ಶ್ರೇಷ್ಠ ನಾಮಾ ವಿಜಯ ವಿಠ್ಠಲ
ಸಕಲರೊಡಿಯಾ ಸುಕುತಾರ್ಥತೋರಿಸಯ್ಯಾ
ಸತತ ನಿನ್ನ ನೆನೆಸುವಂತೆ ೪
ಆದಿತಾಳ
ನಿನ್ನ ದಿವ್ಯ ಚರಣವನ್ನು ಇನ್ನು ಪಿಡಿದ ಮ್ಯಾಲೆ
ಎನ್ನ ದುಷ್ಕರ್ಮಗಳಿನ್ನು ಪೋಗದಿರಲು
ಇನ್ನು ನಿನ್ನ ಬರಿದೆ ನಾ ಮುನ್ನೆ ಭಜಿಸಲು ಯಾಕೆ
ಮಣ್ಣು ಕಸ್ತೂರಿಯಾ ಕೂಡೆ ಬಣ್ಣ ಪ್ರತಿಕುರುಹವೇನೊ
ಚನ್ನಿಗ ನಿನ್ನಂಘ್ರಿಯ ಪ್ರಸನ್ನೀಕರಿಸಿಕೊಂಡ ಮೇಲೆ
ಎನ್ನ ಕರ್ಮ ಬೆನ್ನು ಬಿಡದೆ ಸನ್ನಿಧಿಯಾಗಿಪ್ಪುದೆ ಪ್ರ
ಸನ್ನಾತ್ಮನಾದ ದೇವ ರನ್ನ ವಿಜಯ ವಿಠ್ಠಲ
ನಿನ್ನ ನಾಮಾನೆನಸಿ ದೂರನ್ನ ಮಾಡೊ ಪಾಪದಿಂದ೫
ಜತೆ
ಜತೆ ತಪ್ಪದಂತೆ ಜತನವ ಮಾಡಿ ನಿಜ ಭಾಗ
ವತರೊಳು ಇಡು ನಮ್ಮ ವಿಜಯವಿಠ್ಠಲ ದಕ್ಷ೬

ಲೌಕಿಕ ಮತ್ತು ಆಧ್ಯಾತ್ಮಿಕ ರಂಗಗಳಲ್ಲಿ ಅನುಭವಿಸುವ

೬೨
ಧ್ರುವತಾಳ
ನಡಗುವುದ್ಯಾಕೆ ಮನವೆ ನುಡಿ ನಡತೆಗೆ ನೀನು
ಒಡೆಯ ರಂಗಯ್ಯ ಬೆಂಬಿಡದಲೆ ಕಾಯುತಿಪ್ಪ
ಅಡಿಗಡಿಗೆ ಶ್ರೀಹರಿ ಒಡನೆ ಇರುತಲಿರೆ
ದೃಢ ಸಾಲವೆಂದು ಕಂಗೆಡುವ ಬಗೆಯಾವುದು
ಹಡಗ ವಾರಿಧಿ ಮಧ್ಯ ನಡಿಸುವ ಮಹ ಚತುರ
ಕೊಡಲು ಆಭಯ ಭಯಬಡುವ ನಿನ್ನಾವುದು
ಅಡಸಿ ಪೊಕ್ಕಪಮೃತ್ಯು ಬಿಡಿಸುವನನುಗಾಲ
ಪಡಿಗಾಣೆನೀತನ ಒಡೆತನಕ್ಕಾವಲ್ಲಿ
ಮಡದಿ ಮಕ್ಕಳು ಸರ್ವ ಒಡಿವೆ ವಸ್ತಕೆ ಮೋಹ
ವಿಡಿಯದೆ ರಂಗನ್ನ ಪಡಿತೊತ್ತುಗಳು ಎನ್ನು
ಬಿಡಿ ಬೀಸದಲೆ ಕರ ಪಿಡಿದು ನೀನುಳ್ಳನಕ
ತಡಿಯದೆ ಪಾಲಿಸುವ ಒಡಿಯ ರಂಗನ್ನಪಾದ ನಂಬು
ಸಡಗರ ದೈವವೆ ವಿಜಯ ವಿಠ್ಠಲನಿರುತಿರೆ
ದೃಢಗುಂದದಿರು ನಿನ್ನ ನುಡಿ ಸಲ್ಲಿಸಿ ಕಾಯ್ವಾ ೧
ಮಟ್ಟತಾಳ
ನರಹರಿ ದುರಿತಾರಿ ಮುರ ನರಕ ವೈರಿ
ಸುರರಿಗೆ ಬಲು ಮೀರಿ ಇರುತಿಪ್ಪ ಮಹಾಕಾರಿ
ಪರಮ ಮಂಗಳ ದಾರಿ ಇರುಳು ಹಗಲು ತೋರಿ
ಪೊರೆವನು ಶ್ರೀ ನಾರಿಯರಸನಂಘ್ರಿಯ ಸಾರಿ
ಪೆ ಮರೆಯದೆ ಪರಿ ಪರಿ ಪುರುಷಾರ್ಥ ಕೋರಿ
ಚರಿಸು ಮಹಿಮೆಯ ಬೀರಿ ದುರಿತರಾಸಿಯ ಹಾರಿ
ಪರಿತೋಷವ ಸೇರಿ ನಿರಂತರ ಉಪಕಾರಿ ವಿಜಯ ವಿಠ್ಠಲ ಹರಿ
ಚರಣಾಂಬುಜ ವಾರಿಧರಿಸೆ ಮುಟ್ಟವು ಮಾರಿ ೨
ಅಟ್ಟತಾಳ
ನಡಗುವುದ್ಯಾತಕೊ ಎಲೊ ಮನವೆ ನಡಗುವುದ್ಯಾತಕೊ
ಕಡಲ ಶಯನನ ನಾಮ ಬಿಡದ್ವಜ್ರಪಂಜರ ನಡುಗವದ್ಯಾತಕೆ
ಕೊಡುವಿತ್ತು ನಿನ್ನ ಸಂಗಡಲೆ ತಿರುಗತಿಪ್ಪ
ಕೊಡಗಯ್ಯ ಕಾರುಣ್ಯನಿಧಿ ಒಲಿದಿರಲಿಕ್ಕೆ
ನಡಗುವುದ್ಯಾಕೆ ಬಿಡವನಲ್ಲ ನಮ್ಮ ವಿಜಯ ವಿಠ್ಠಲ ದೊರೆ
ಕುಡಿ ಪಲ್ಲವಿಸಿದಂತೆ ತಡೆಯದೆ ಬೆಳೆಸುವ ೪
ಆದಿತಾಳ
ಹರಿ ಇತ್ತದು ಸರ್ವ ಹರಿದಾಸರು ಎಂದು
ಅರೆಮರೆ ಇಲ್ಲದೆ ಹರಿಯಾಧೀನವೆ ಎನಲು
ಹರಿ ನಿನ್ನವರ ಪರಿಪೂರ್ಣಾಯುರ ಮಾಡಿ
ಪೊರೆವನು ಪೊಂದಲಿಟ್ಟು ಪರಿಪರಿ ವಿಧದಲ್ಲಿ
ಹರುಷವೀವುತ್ತ ತನ್ನ ಶರಣರ ಮಾಡಿ ಭಕ್ತಿ
ಪರಮ ಜ್ಞಾನದಿಂದಾದರದಲಿ ರಕ್ಷಿಸುವ
ಸರಸ ಮೂರುತಿ ದೇವಾ ವಿಜಯ ವಿಠ್ಠಲನಂಘ್ರಿ
ನೆರೆ ನಂಬಿದವರಿಗೆ ಉಗುರು ಮಾಸದು ಕಾಣೋ ೫
ಜತೆ
ಫಣಿಶಾಯಿ ಸರ್ವದ ಹೊಣೆಯಾಗಿರಲಿಕ್ಕೆ
ಅನುಮಾನ ಬಿಡುವುದು ವಿಜಯ ವಿಠ್ಠಲನೊಲಿಸು ೬

ಜೀವನಿಗೆ ಕರ್ಮವನ್ನು ಮಾಡಲು ಸ್ವಾತಂತ್ರ್ಯವಿಲ್ಲ.

೬೫
ಧ್ರುವತಾಳ
ನನ್ನದಲ್ಲ ನನ್ನದಲ್ಲ ಏನೇನು ಚರಿಸುವ
ನಾನಾ ವ್ಯಾಪಾರವು ಅನಂತ ಕಲ್ಪದಲ್ಲಿ
ನೀನೆ ವ್ಯಾಪಕನಾಗಿ ನಾನಾ ಪರಿಯಲ್ಲಿ
ನೀನಾಡಿಸುವೆ ಅಭಿಮಾನದೊಡಿಯನಾಗಿ
ಸ್ನಾನ ಸಂಧ್ಯಾವಂದನೆ ಮೌನ ದಾನ ಜಪವ
ಎಣಿಸುವುದು ಸರ್ವ ನಾನಾ ಪ್ರಪಂಚಗಳು
ಆನಂದ ಶ್ರವಣ ಮನನ
ಧ್ಯಾನ ಮೂರುತಿ ಉಪಾಸನ ಗಾಯನ ಜ್ಞಾನ
ದ್ಯುನಾಥ ಉಡುಪ ಗ್ರಹಣ ಪರ್ವಣಿ ಗಂಗೆ
ಭಾನು ನಂದನೆ ಕೃಷ್ಣವೇಣಿ ವಾಣಿ ಕಾವೇರಿ
ಆ ನರ್ಮದಾ ಗೋದೆ ಭವನಾಶಿ ತುಂಗೆ ಮಿಕ್ಕಕ್ಕೆ
ದಾನಾದಿ ಮತ್ತೆ ಕುಂಭಕೋಣ ಗಯಾ ಪ್ರಯಾಗ
ಆನಂದವನ ಸೇತು ಆನೆ ಪರ್ವತ ಶ್ರೀ ರಂಗನಾಥ ಹೇಮಗಿರಿ
ಅನಂತ ಶಯನ ಜನಾರ್ಧನ ನಾನಾ
ಪುಣ್ಯನಿಧಿ ಪಾಪ ಸಂತಾಪವನು ಚರಿತವ್ರತ
ವಾನಪ್ರಸ್ತ ಮುಂತಾದ ಏನೇನು ಧರ್ಮ ಸರ್ವ
ನೀನನಕೂಲವಾಗಿ ದೀನ ನರಗೆ ಮುಖ್ಯ
ಪ್ರಾಣನಿಂದಲಿ ನಿತ್ಯ ಮಾಡಿಸಿದರಿಂದ ನಾನೆ ಧನ್ಯನು
ಬಲು ಅನಂತ ಜನುಮದಲ್ಲಿ
ದಾನವ ಮರ್ದನಾ ವಿಜಯ ವಿಠ್ಠಲರೇಯ
ನಾನೆ ಸ್ವತಂತ್ರನೆಂಬ ನುಡಿ ಎಂತಾಹುದೊ ೧
ಮಟ್ಟತಾಳ
ಉಣಿಸಿದರೆ ಉಣಿಪೆ ಉಡಿಸಿದರೆ ಉಡಿಪೆ
ಕುಣಿಸಿದರೆ ಕುಣಿಪೆ ಮಣಿಸಿದರೆ
ಮಣಿಪೆ ನಗಿಸಿದರೆ ನಗುಪೆ
ಞ್ಣಿಸಿದರೆ ದಣಿವೆ ಧರಿಸಿದರೆ ಧರಿಪೆ
ಅನಿಸಿದರೆ ಅನಿಪೆ ಅರಿಸಿದರೆ ಅರಿವೆ
ಗುಣಿಸಿದರೆ ಗುಣಿಪೆ ಗುಟಿಸಿದರೆ ಗುಟಿಪೆ
ಎಣಿಸಿದರೆ ಎಣಿಪೆ ಇಡಿಸಿದರೆ ಇಡಿಪೆ
ಮನಸು ಮೊದಲಾದ ಇಂದ್ರಿಯ ವೊಳಪೂಕ್ಕು
ದ್ವ್ಯಣುಕೆ ಮಿಗಿಲಾದ ಕಾಲ ಭೇದಗಳಿಂದ
ಇನಿತು ಎನ್ನಿಂದಲಿ ಪರಿ ಪರಿ ವ್ಯಾಪಾರ
ದಿವಸ ದಿವಸದಲ್ಲಿ ಬಿಡದೆ ಮಾಳ್ಪ
ಜಾಣ ವನಜಭವನಪೆತ್ತ ವಿಜಯ ವಿಠ್ಠಲರೇಯ
ನಿನಗಲ್ಲದೆ ಎನಗೆ ಸ್ವಾತಂತ್ರ ಉಂಟೇ ೨
ತ್ರಿವಿಡಿತಾಳ
ನಾನೆ ಸರ್ವದಾ ಸ್ವಾತಂತ್ರದವನಾದರೆ
ಹೀನವಾದ ಜನುಮ ಧರಿಸಿ ಬಂದೂ
ಶ್ವಾನ ಸೂಕರ ಗಾರ್ಧ ಗೃಧ್ರ ಜಂಬುಕ ಮಿಕ್ಕ ನಾನಾ
ಯೋನಿಯೊಳಗೆ ಬಂದು ದು:ಖಪೆನೇ
ಹಾನಿ ವೃದ್ಧಿಯಲ್ಲಿ ಬಳಲಿ ಬೆಂಡಾಗಿ ನಿ
ತ್ಯ ನೆಲೆಗಾಣದಲೆ ಅಳಲುವೇನೊ
ನೀನೆ ಗತಿ ಎಂದು ಆರ್ತನಾಗೆ ನಿಂದು
ಮಾಣದೆ ಮೊರೆ ಇಟ್ಟು ಬೇಡುವೆನೆ
ಕಾಣುದವನಾಗಿ ಕಂಡಲ್ಲಿ ತಿರುಗತ್ತ
ದೀನ ಮಾನವರಿಗೆ ಆಲ್ಪರಿದು
ಗೇಣುದರ ಪೊರೆದು ಗತಿಗೆಟ್ಟು ಪುಣ್ಯವ
ನಾನೀಗಿದೆನೆಂಬೊ ಸೊಲ್ಲು ಮತ್ತೆಲ್ಲಿದೊ
ನಾನು ನಿನ್ನಾಧೀನ ಇಲ್ಲದಿರಲು ನಿತ್ಯ
ಅನಂತ ಸುಖವನು ಪಡಿಪೆನಯ್ಯ
ನೀನೆ ಸರ್ವ ಜಗತ್ಕಾರಣನಾಗಿದ್ದು
ಪ್ರಾಣಿಗೆ ನಡತಿ ತಪ್ಪಿದನು ಎಂದು
ಯೋನಿಯೋನಿಲಿ ಪೊಗಿಸಿ ಬಳಲಿಪುದುಚಿತವೆ
ನೀನರಸಾದ ಕಾರಣದಿಂದೆ ಸಲ್ಲಿತು
ಬಾಣ ಹಸ್ತಾಂತಕ ವಿಜಯ ವಿಠ್ಠಲರೇಯ
ನಾನುಣಬಲ್ಲೆನೆ ನೀ ಮಾಡಿಸಿದ ಕರ್ಮಾ ೩
ಅಟ್ಟತಾಳ
ಆವಲ್ಲಿ ನೋಡಲಿ ಆವಲ್ಲಿ ಆಡಲಿ
ಆವಲ್ಲಿ ಉಣಲಿ ಆವಲ್ಲಿ ಪೋಗಲಿ
ಆವಲ್ಲಿ ತಿರುಗಲಿ ಆವಲ್ಲಿ ಎರಗಲಿ
ಆವಲ್ಲಿ ಕಾಡಲಿ ಆವಲ್ಲಿ ಬೇಡಲಿ
ಆವಲ್ಲಿ ನಗಲಿ ಆವಲ್ಲಿ ಮಲಗಲಿ
ಆವಲ್ಲಿ ಪೇಳಲಿ ಆವಲ್ಲಿ ಕೇಳಲಿ
ಆವಲ್ಲಿ ಬಯಸಲಿ ಆವಲ್ಲಿ ಮೀಯಲಿ
ಆವಲ್ಲಿ ಕೂಗಲಿ ಆವಲ್ಲಿ ಸಾಗಲಿ
ಆವಾವದಾವದೊ ಆವಾವದಾದರು
ದೇವೇಶನೆ ನೀನು ಭಾವದಲಿ ನಿಂದು
ಯಾವತ್ತು ಪ್ರೇರಣೆ ನೀವೊದಗಿ ಮನ
ವೀವುತ್ತ ಮಾಣಿಗೆ ಆವದೋಷ ಗುಣಾವಳಿ ಎನಗಿಲ್ಲಾ
ದೇವಕಿನಂದನ ವಿಜಯ ವಿಠ್ಠಲರೇಯ
ಪಾವನ ಚರಿತ ಪಾವನ ನಾನಿಂದು ೪
ಆದಿತಾಳ
ಉಚಿತವಾಗಲಿ ಮತ್ತನುಚಿತವಾಗಲಿ ಮನಸು
ಪ್ರಚುರ ಮಾಡಿ ನೀನೆ ವಚನಾದಿ ಕರ್ಮಗಳ
ನಿಚಯ ಮಾಳ್ಪುದು ಖಚಿತವಾಗಿ ಎನಗೆ
ಸಚರಾಚರದಲ್ಲಿ ರುಚಿ ಅರುಚಿ ಪದಾರ್ಥ
ರಚಿಸಿರೆ ನಾನು ಸವಿಯೆ ಪಚನಗೈಸುವ ನೀನೆ
ಅಚಲ ಮೂರುತಿ ರಂಗ ವಿಜಯ ವಿಠ್ಠಲರೇಯ
ಮುಚಕುಂದಗೊಲಿದ ನಮುಚಿಸೂದನ ಪಾಲಾ ೫
ಜತೆ
ನಿನ್ನಂಘ್ರಿ ನಂಬಿದಾ ದಾಸನು ದಾಸಗೆ
ಇನ್ನು ಪಾಪಗಳುಂಟೇನಯ್ಯಾ ವಿಜಯ ವಿಠ್ಠಲ ೬

ತಿರುಪತಿಯ ಶ್ರೀನಿವಾಸನನ್ನು ಕುರಿತ ಸ್ತೋತ್ರ

೫೨. ತಿರುಪತಿ
ರಾಗ:ಮುಖಾದಿ
ಧ್ರುವತಾಳ
ನಮೋ ನಮೋ ನಾರಾಯಣ ಮೂಲಶ್ರುತಿ ನಾರಾಯಣ |
ನಮೋ ನಮೋ ವೆಂಕಟ ಸಂಕಟಹರಣ |
ನಮೋ ನಮೋ ಪರತಂತ್ರ ಕರಣಿ ಸರ್ವ ಸ್ವಾತಂತ್ರ |
ನಮೋ ನಮೋ ವೈಕುಂಠ ಭಕ್ತರ ಭಂಟ |
ನಮೋ ನಮೋ ಸಪ್ತ ಸಾಮ ಗಣ ನಿಸ್ಸೀಮ |
ನಮೋ ನಮೋ ಅಪ್ರಮೇಯ ಸುರಗೇಯ ಗಿರಿರಾಯ |
ನಮೋ ನಮೋ ಅಪ್ರತಕ್ರ್ಯ ಅಘತಿಮಿರಾರ್ಕ |
ನಮೋ ನಮೋ ಉಪಜೀವ್ಯ ನವನವ ನಿತ್ಯಭಾವ್ಯ|
ನಮೋ ನಮೋ ಲೋಕಾಶ್ರಯ ನಿರಾಶ್ರಯ |
ನಮೋ ನಮೋ ಸರ್ವಾಕಾರಾ ಸಮರ್ಥ ನಿರ್ವಿಕಾರ |
ನಮೋ ನಮೋ ಕರುಣಾ ಸಿಂಧು ದೀನ ಬಂಧು |
ನಮೋ ನಮೋ ನಿಜಾನಂದ ಮೂರುತಿ ಮುಕುಂದ |
ನಮೋ ನಮೋ ದಾನವಾರಿ ಭಯ ನಿವಾರೀ |
ನಮೋ ನಮೋ ದೈವ ಕಾಲಾಗುಣಕರ್ಮಾಭೀದಸೀಲ |
ನಮೋ ನಮೋ ಮನೋರಥವೆ ಗತಿಸತ್ಪಥವೆ |
ನಮೋ ನಮೋ ವಿಜಯವಿಠಲ ತಿರುವೆಂಗಳಪ್ಪ ಕೋಲಾ |
ನಮೋ ನಮೋ ನಮ್ಮನ ಸಾಕುವ ಸೊಬಗೆ ೧
ಮಟ್ಟತಾಳ
ಅಪ್ಪಾರ ಮಹಿಮ ಅನು ಪಮ್ಮ ಚರಿತ |
ಸುಪ್ಪಾರ ನಿನ್ನ ಸುಪ್ಪರನ ವ[ಹ]ನ್ನ |
ಅಪ್ಪಾ ತಿಮ್ಮಪ್ಪ ಎನ್ನಪ್ಪ ತಿರುವೆಂಗಳಪ್ಪ |
ಅಪ್ಪಾರ ಮಹಿಮ ಸುಪ್ಪಾರ ಸದಾ (ಸುಪ್ರಸಾದ) |
ಅಪ್ಪಾ ಇತ್ತರೆ ತಪ್ಪಾ ವಿಜಯವಿಠಲ ಸಾ |
ರಪ್ಪ ಗಿರಿವಾಸ ಸುಪ್ಪಾರವಾಣೇಶಾ ೨
ತ್ರಿವಿಡಿತಾಳ
ಆಯಾಸ ದುಃಖ ಸೌಭಾಗ್ಯ ಚಿಂತಾ ಸಂತಾ[ಪಾ]ದಿ ಅ |
ಸೂಯ ಈರಿಷ ಪೀಡಾ ಕಾಮ ಕ್ರೋಧಾ |
ಮಾಯಾ ಮದ ಮತ್ಸರ ಲೋಭ [ಮಂದಾ]ಲಸ್ಯಾ |
ಸೂಯ ದುರ್ಗುಣ ರೋಗ ಭಯಾ ಅಜ್ಞಾನ |
ವೈಯಾರ ದುರಿತ ಪುಣ್ಯಲೇಪಪರಾಭ[ವ] |
ಶ್ರೇಯಸ್ಸು ವಿರೋಧ ಆಯಾಸ ಆಶಾ |
ಶ್ರೇಯ್ಯಹಾನಿ ನಿದ್ರಾ ಪಿಪಾಸ ಕ್ಷುಧಿ ಅ |
ನ್ಯಾಯ ಕಂಪನ ಶೋಕ ನಾನ ಇನಿತು |
ಕಾಯದೊಳಗೆ ಉಳ್ಳ ಮಂದಮತಿಗೆ ಮತ್ತೆ |
ಜಾಯಾದಿಗಳಿಂದ ಬರುವ ಮಮತೆ |
ಪ್ರಾಯ ಜರಠ ಬಿಡದೆ ಶಕ್ತಿದ್ದವಗೆ ಎಂತೊ |
ಶ್ರೀಯರಸ ನಿನ್ನ ಕಾಂಬುವದು ಕಾಣೆ |
ವಾಯು ಪೊರಟು ಒಳಗೆ ಪೋಗುವಾನಿ ತಮದ್ಯ |
ಆಯು ನೆಚ್ಚಿಕೆ ಇಲ್ಲ ಈ ಪರಿ ಇರಲು |
ಈ ಅವನಿಯಲ್ಲಿ ಬಹುಕಾಲ ಬದಕುವಲಉ |
[ಪ್ರಾ]ಯ ಮಾಡವೆನಯ್ಯಾ ನೆರೆಹೊರೆಯಲಿ |
ಮಾಯಾವರ್ಜಿತ ನಮ್ಮ ವಿಜಯವಿಠಲ ವೆಂಕಟ |
ರಾಯಾ ನಿನ್ನಂಘ್ರಿಯ ಎನ್ನಲಿ ನಿಲಿಸೊ ೩
ಅಟ್ಟತಾಳ
ಅರಿ ದರಗದ ಪದ್ಮನಾಮ ಶರಶಕ್ತಿ |
ವರ ಅಂಕುಶ ಪ್ರಾಸ ತೋಮರ ಹಲ ಅಮೃತ |
ಮರಳೆ ಗೋ ವಿದ್ಯಾ ತಿಲ ಗೋಧುಮ ಚಾ |
ಮರ ಛತ್ರ ತೋರಣ ಧ್ವಜ ಊಧ್ರ್ವವ್ಯಜನವ |
ಜ್ವರ ಕರಿ ಅಂದೋಳ ವಾಜಿ ಮಚ್ಛ ಕೂರ್ಮ |
ಹರಿ ವೃಷ ರತ್ನ ಧನಧಾನ್ಯ ಕಾರ್ಮು[ಕ] |
ಪರಿಪರಿ ಮಂಗಳಕರವಾದ ರೇಖೆಗ |
ಳಿರುತಿಪ್ಪ ಇಂಥ ಸುಂದರ ಪಾದ ಎನ್ನ |
ಹೃತ್ಸರಸಿಜ ಕರ್ನಿಕೆ ಮಧ್ಯದಲ್ಲಿ ಇಟ್ಟು |
ನಿರುತ ಚಂಚಲವಾಗಿ ಪೋಗುವ ಮನಸು ನಿಂ |
ದಿರುವಂತೆ ಮಾಡಿ ದುಸ್ತರ ದುರಿತರಾಸಿ |
ಪರಿಹರಿಸುವುದು ವ್ಯವಧಾನವಾಗದಂ |
ತರ ಭವಾಬ್ಧಿಗೆ ತರಿಯೆ ಶಿರಿಯೆ ಎನ್ನ |
ದೊರೆಯೆ ನಿನಗೆಲ್ಲಿ ಸರಿಯೆ ಎಂದಿಗೆ ನಿನ್ನ |
ಮರಿಯೆ ಒಬ್ಬರ ಹೀಗೆ ಕರಿಯೆ ಹಸ್ತದಲ್ಲಿ |
ಬರಿಯೆ ಹರಿಯೆ ಈ ಪರಿಯ ನಂಬಿಹೆ ನಾ |
ನರಿಯೆ ಅನ್ಯರನ್ನಾ ಸರ್ವಥಸರ್ವದ ಶೇಷ |
ಗಿರಿರಾಯ ವೆಂಕಟ ವಿಜಯವಿಠಲರೇಯಾ |
ಕರುಣಿಸು ಎನಗೆ ಪೊಳೆವ ನಿನ್ನ ಚರಣಾ ೪
ಆದಿತಾಳ
ಅಪಾಪ ಅಪ್ರತಿ ಚರಣ ಅಪೂ[ರ್ವ] ವಂದಿತ ಚರಣ |
ಅಪೂರ್ವ ಅನಾದಿ ಚರಣ ಅಪಾರ ಪ್ರಕಾಶ ಚರಣ |
ಅಪ್ಪಟ ಸದ್ಗುಣ ಚರಣ ಅಪಾತ್ರದಲ್ಲಣ ಚರಣ |
ಅಪೂರ್ತಿವಾಗದ ಚರಣ ಅಪಾಪ ಅಪ್ರತಿ ಚರಣ |
ಅಪ್ರಾಕೃತ ಚರಣ ಅಪ್ಪಾ ಅಪಾಗ ವೆಂಕಟಗಿರಿನಾಥ |
ಆಪತ್ತುನಾಶ ವಿಜಯವಿಠಲ ನಮಗೆ |
ಆ ಪದು[ಮುಕ್ತಿ] ಕೊಡುವದೀ ಚರಣ ೫
ಜತೆ
ನಮೊ ನಮೊ ನಿನ್ನ ವಾರ್ತಿಗೆ ಕೀರ್ತಿಗೆ ಮೂರ್ತಿಗೆ
ಸುಮನಸಾದ್ರಿ ರಾಯ ವಿಜಯವಿಠಲ ವೆಂಕಟ ೬

ದ್ವೈತ ವೇದಾಂತದಲ್ಲಿ ಭಗವಂತನನ್ನು ಒಲಿಸಿಕೊಳ್ಳಲು

೬೩
ಧ್ರುವತಾಳ
ನಮೋನಮೋ ಸಮಸ್ತ ತತ್ವಾಭಿಮಾನಿಗಳಿರಾ
ನಿಮಗೆ ಹಸ್ತವ ಮುಗಿದು ಕೊಂಡಾಡುವೆ
ಕ್ರಮದಿಂದ ಬಿನ್ನಪವ ಲಾಲಿಸಿ ಕೇಳುವುದು
ಅಮರ ನಿಮ್ನಗ ಮಜ್ಜನ ಗೋಸುಗ
ಅಮಲಮತಿ ಇತ್ತು ಜ್ಞಾನ ಭಕ್ತಿಯಿಂದ
ರಮೆಯರಸನ್ನ ನೋಳ್ಪಸಾಧನ ತೋರಿ
ಗಮನಾದಿ ಮೊದಲಾದ ವ್ಯಾಪಾರ ನಿಮ್ಮಾಧೀನ
ಶ್ರಮ ಸಾದ್ಯವಾಗದಂತೆ ಪೈಣವಿತ್ತು
ತಮೊರಜಗುಣದವರ ಬಾಧಿಯ ತಪ್ಪಿಸಿ ಉ
ತ್ತವಇ ಯಾತ್ರಿ ಮಾಡಿಸುವುದು ತ್ರಯ ಕ್ಷೇತ್ರದ
ಕುಮತ ಪೊಂದಿದ ನಿತ್ಯ ಕುಮತಿ ಜನರ ಸಂಗ
ನಿಮಿಷವಾದರೆ ಕೊಡದೆ ಪಾಲಿಸಬೇಕು
ಯಮನೇಮ ಮಿಗಿಲಾದ ಸತ್ಕರ್ಮಾಚಾರದಿಂದ
ಸಮಚಿತ್ತ ಭೇದದಿಂದ ಇರಲಿ ಎನಗೆ
ನಮೊನಮೊ ಸಮಸ್ತ ತತ್ವಾಭಿಮಾನಿಗಳಿರಾ
ಕುಮತಿಯ ಬಿಡಿಸುವದು ನಾನೆಂಬೊ ಮಾತಿನಲ್ಲಿ
ಭ್ರಮಣವಲ್ಲದೆ ಲೇಸ ಲೇಸು ಕಾಣೆ
ರಮೆಯರಸ ನಮ್ಮ ವಿಜಯ ವಿಠ್ಟಲನಂಘ್ರಿ
ಕಮಲ ಹೃತ್ಕಮಲದಲ್ಲಿ ಪೊಳೆವಂತೆ ಕೃಪೆ ಮಾಡು ೧
ಮಟ್ಟತಾಳ
ತನುವೆನ್ನದೆಂಬೆನೆ ತನುವೆನ್ನದಲ್ಲ
ಮನವೆನ್ನದೆಂಬೆನೆ ಮನವೆನ್ನದಲ್ಲ
ಧನವೆನ್ನದೆಂಬೆನೆ ಧನವೆನ್ನದಲ್ಲ
ಜನವೆನ್ನದೆಂಬೆನೆ ಜನವೆನ್ನದಲ್ಲ
ತನು ಮನ ಧನ ಜನವು ಅನುದಿನದಲ್ಲಿ ನೋಡೆ
ವನಜಭವಾದಿಗಳೆ ಎಣಿಸಿ ಪೇಳುವುದೇನು
ಕೊನೆ ಮೊದಲು ನಿಮ್ಮಾಧೀನವಯ್ಯಾ ಬಿಡದೆ
ಇನಿತು ಪೊಂದಿರಲಿಕ್ಕೆ ಮಣಿದು ಹೇಳುವ ಮಾ
ತಿನ ಉಪಚಾರ್ಯಾಕೆ ಘನಮೂರುತಿ ನಮ್ಮ ವಿಜಯ ವಿಠ್ಠಲನ್ನ ಪ್ರೇ
ರಣೆಯಿಂದಲಿ ನಿಮ್ಮ ಸಕಲ ಚೇಷ್ಟಾಪ್ರದವೊ ೨
ತ್ರಿವಿಡಿತಾಳ
ಭೀತಿಪ್ರದ ಜೀವಜಡಗಳೆಲ್ಲ ನಿಮ್ಮ
ಚಾತುರ್ಯ ಪ್ರೇರಣೆ ಸಿದ್ದವಾಗಿರಲಿಕ್ಕೆ
ಭೂತಳದೊಳು ನಾನಾಯಾತ್ರಿ ಚರಿಸುವಾಗ
ಭೀತಿ ಬಡಲ್ಯಾಕೆ ತಾತ್ವಿಕರೆ ದೈತ್ಯರ ಗಣದಿಂದ ಇಂತಾಗುವುದಲ್ಲ
ಪ್ರೀತಿವಂತರು ನೀವು ನಾನನ್ಯನೇ
ಜಾತಕರ್ಮಾರಭ್ಯ ಅಂದಿನ ಪರಿಯಂತ
ಯಾತಕಾಲೋಚನೆ ಸರ್ವರಿರಲು
ಆತುಮದೊಳಗೆ ಸತ್ವ ರಾಜಸ ತಾಮಸ
ಗಾತುರ ಗೋಳಕ ನಿಮ್ಮ ದೇಹ
ಈ ತೆರದಲಿ ಮೂರು ವಿಧವಾಗಿ ಸಮಸ್ತ
ಭೂತದೊಳಗೆ ನೀವು ಪೊಂದಿರಲು
ಭೀತಿ ಎನಗೆ ಉಂಟೆ ಎಲ್ಲಿದ್ದರು ಕೇಳಿ
ಮಾತ್ರಕಾಲವಾಗಿ ಬಲು ಸೌಖ್ಯವೆ
ಗೋತುರತರು ಗುಹವನಾರಣ್ಯ ಪೊದೆಮಿಕ್ಕ
ಭೀತಿಗಳಿರಲೇನು ನಿಮ್ಮ ಒಲವು
ಸ್ವಾತಂತ್ರ ಪುರುಷ ಶ್ರೀ ವಿಜಯ ವಿಠಲರೇಯನ
ದೂತನಾದವನಿಗೆ ಭಯವಿಲ್ಲ ಭಯವಿಲ್ಲ ೩
ಅಟ್ಟತಾಳ
ದೇಶ ಕಾಲ ಕರ್ಮಗುಣ ವಿಚಾರಾಚಾರ
ಭಾಷೆ ರೂಪ ಕ್ರಿಯಾಭೇದವಾದರೇನು
ದೋಷದೂರರೆ ನೀವು ತತ್ತತ್ ಸ್ಥಾನದಲ್ಲಿ
ವಾಸವಾಗಿದ್ದು ನಂಬಿದ ಜನರ ಮನೋ
ಪಾಸನೆ ಪ್ರಕಾರದಲ್ಲೀ ಸುತಿರಲಿಕ್ಕೆ
ಏಸುಬಗೆಯಿಂದ ಚಿಂತಿಸೆ ಸಲ್ಲದು
ಈ ಶರೀರವೇ ನಿಮ್ಮ ಚರಣಕ್ಕೆ ಅರ್ಪಿಸಿ
ದಾಸದಾಸನೆಂದು ತಲೆವಾಗಿ ಕೊಂಡಿಪ್ಪೆ
ಲೇಸು ಹೊಲ್ಲೆಗಳೆಲ್ಲ ನೀವಿತ್ತದಹುದು
ದೇಶ ಕಾಲಾದಿಯ ಗೊಡಿವೆ ಎನಗೆ ಯಾಕೆ
ಭಾಸುರ ಕೀರ್ತಿ ಅಪಕೀರ್ತಿ ನಿಮ್ಮದೆ ಸರಿ
ಈಸು ದಿವಸ ನಾನು ಬದುಕಿದಕೆ ಎ
ನ್ನಾಶೆ ಸಿದ್ಧಿಸಲಿ ಉತ್ತಮರ ಸಂಗತಿಯಿಂದ
ಕೋಶ ಭಂಡಾರಾದಿ ಐಹಿಕ ಬೇಡುವುದಿಲ್ಲ
ಸಾಸಿರಕೆ ನಿಮ್ಮ ಪ್ರಸಾದವಾಗಲಿ
ಸಾಸಿವೆ ಕಾಳಷ್ಟು ನಿಮ್ಮವಿನಾವಾಗಿ
ದ್ವೇಷ ದೂಷಣೆ ಸ್ನೇಹಮಾಡುವರೆ ಇಲ್ಲಾ
ಲೇಶ ಕಾಲದಿಂದ ಮಹಕಾಲ ಪರ್ಯಂತ
ಈಶನೊಬ್ಬನು ಕಾಣೊ ಸರ್ವರ ಪ್ರೇರಕ
ಕಾಶಿಪುರಾಧೀಶ ವಿಜಯ ವಿಠಲ ಸ
ರ್ವೇಶನ ತೋರಿಸಿ ಕೊಡುವುದು ಸರ್ವದಾ ೪
ಆದಿತಾಳ
ಶರಣು ಜಯಂತ ಮಿತ್ರ ಮನು ಪ್ರಾಣ
ಧರುಣಿ ವರುಣ ಮರುತ ಬಾಂಧವ ವಾಯು ಗಣಪ ಪಂಚ
ಮರುತ ತರಣಿ ದಿಗ್ದೇವ ದಕ್ಷ ಅಶ್ವಿನಿಯರು ಇಂದ್ರ
ಹರ ಶೇಷ ಗರುಡ ವಾಯು ಬ್ರಹ್ಮ ಲಕುಮಿ ದೇವಿ
ಪರಮ ಕರುಣದಿಂದ ಪ್ರತಿ ಪ್ರತಿ ದಿನದಲ್ಲಿ
ಪೊರೆವುತ್ತ ಬರುವುದು ಭಕ್ತಗೆ ಒಲಿದು ಎಲ್ಲ
ಚಿರಕಾಲದಲಿ ನಿಮ್ಮ ಸ್ಮರಣೆ ಪಾಲಿಸಿ ಪುಣ್ಯ ಶರಧಿಯೊಳಿಡುವುದು
ಹರಿ ಮೆಚ್ಚುವಂತೆ ಎನ್ನ
ಕರಚರಣಾದಿಗಳಲ್ಲಿ ವ್ಯಾಪಾರ ನಿಮ್ಮದು
ಹಿರಿದಾಗಿ ಪೇಳುವುದೇನು ತಾತ್ವಿಕ ಜನರೆ
ಮೊರೆ ಹೊಕ್ಕಿ ನಿಮ್ಮ ಪಾದಮನೋವಾಚ ಕಾಯದಲಿ
ತ್ವರಿತದಲಿ ಎನ್ನ ಮನೋಭಿಷ್ಟೆಯಾಗಲಿ
ಪುರಂದರನುತ ನಮ್ಮ ವಿಜಯ ವಿಠಲರೇಯನ
ಚರಣ ಕಾಣುವ ಯೋಗ ತೋರಿಸಿಕೊಡುವುದು ೫
ಜತೆ
ಜಗತ್ತಿನ ವ್ಯಾಪಾರ ನಿಮ್ಮಿಂದಾಗುವುದು ಪ
ನ್ನಗಶಾಯಿ ವಿಜಯ ವಿಠಲನಲ್ಲಿ ಮನವಿರಲಿ ೬

ಪ್ರಪತ್ತಿ ಮಾರ್ಗದಲ್ಲಿ ಕ್ರಮಿಸುವುದೇ

೫೧
ಧ್ರುವತಾಳ
ನಮ್ಮಪ್ಪ ನಮ್ಮೊಡಿಯಾ ನಮ್ಮಣ್ಣ ನಮ್ಮಯ್ಯ
ನಮ್ಮಗುರು ನಮ್ಮ ಬಾಂಧವನೆ ನಮ್ಮಾಯಿ ನಮ್ಮರಸೆ
ನಮ್ಮ ಕಟ್ಟು ಕಾವುಲಿ ನಮ್ಮೊಳಗಿಪ್ಪ ನಿತ್ಯ
ನಮ್ಮೊಶ ನಮ್ಮೊಡವೆ ನಮ್ಮ ಸಂಬಂಧಿ ಗಾ
ನಮ್ಮ ಓವಿಗನೆ ನಮ್ಮಧಾರಕ ಕರ್ತಾ
ನಮ್ಮ ಕಾರ್ಯಕಾರಣ ನಮ್ಮಾನಂದವೆ ದೇವ
ನಮ್ಮೈಶ್ವರ್ಯವೆ ಬಲು ನಮ್ಮ ಜ್ಞಾನವೆ ಭಕುತಿ
ನಮ್ಮ ವೈರಾಗ್ಯ ಭಾಗ್ಯ ನಮ್ಮ ಪ್ರೇರಕ ಸ್ವಾಮಿ
ನಮ್ಮ ನೇಮವೆ ನೇಮ ನಮ್ಮಾಚಾರವೆ ಸಿದ್ಧ
ನಮ್ಮನುಕೂಲವೆ ನಮ್ಮ ಅಧೀನನೆ
ನಮ್ಮಂತೆ ಆಡುವನೆ ನಮ್ಮನಮ್ಮಗೆ ಸ್ನೇಹ

ಸಮ್ಮಂಧ ಮಾಡಿಸುವನೆ ನಮ್ಮೊಳ ಹೊರಗಿರುವ
ನಮ್ಮ ಬಿಂಬ ಮೂರುತಿ ವಿಜಯ ವಿಠ್ಠಲರೇಯಾ
ನಮ್ಮೊಡನೆ ಇಪ್ಪನೆ ನಮ್ಮೊಡನೆ ಬಪ್ಪನೇ ೧
ಮಟ್ಟತಾಳ
ಸಿರಿಗೋಚರನೆ ಸರಸಿಜ ಸಂಭವ ಶಿವ
ಸುರರಿಗೆ ದೂರನೆ ಕರುಣ ಅಪಾರನೇ
ಪರಮ ಮುನಿಗಳ ಸ್ತೋತ್ತರಕಸಾಧ್ಯನೆ
ನಿರುತ ವೇದಗಳುತ್ತರಕೆ ನಿಲುಕದವನೆ
ಹರಿ ನಿನ್ನ ಮಾಯವು ಅರಿತವನಾವನು
ಅರಸುವರು ಕಡಿಗೆ ಅರಸಿನ ಮಹಾಮಹಿಮೆ
ಕುರುಹು ತಿಳಿಯದೆಂದು ಚರಿಸುವರು ತಮಗೆ
ದೊರೆತನಿತು ಮನದಿ ನಿರೀಕ್ಷಿಸಿ ಪ್ರತಿದಿನ
ಶರಣರಾಭರಣವೆ ವಿಜಯ ವಿಠ್ಠಲ ನಿನ್ನ
ಪರಿಪಾಲಿಸುವ ಆತುರಕೆ ನಾನೇನೆಂಬೆ ೨
ತ್ರಿವಿಡಿತಾಳ
ಭಕುತರಿಗುಣಿಸಿ ನೀ ಕಡೆ ಮೊದಲಿಲ್ಲದ
ಸುಖವೆ ತಂದುಕೊಟ್ಟು ನೋಳ್ಪೆನೆಂದು
ಮುಕುತಾಮುಕುತ ಭಾಗದಲ್ಲಿ ಈ ಪದಾರ್ಥ
ಸಕಲ ಬಗೆಯಿಂದ ನೋಡಿದ ಕಾಲಕ್ಕೂ
ಸಿಕ್ಕಲರಿಯದೆಂದು ಇಹಲೋಕದಲ್ಲಿ ಸೇ
ವಕರನ್ನ ಪುಟ್ಟಿಸಿ ಈ ತೆರದಲ್ಲಿ
ಅಕಟ ನೀನೆ ಪೋಗಿ ನೆರೆಯವರಿಗೆ ಪ್ರೇ
ರಕನಾಗಿ ಸರ್ವದಾ ಉಣಪೇಳಿಸೀ
ಭಕುತಿಗೆ ಎನ್ನನು ಸ್ವಾತಂತ್ರನೆನಿಸಿ ನೀ ಜ
ನಕೆ ತೋರಿಸಿ ಕೊಡುವಿ ಬಾಹಿರದಲ್ಲಿ
ಮುಕುತಾರ್ಥ ನೀನಿಲ್ಲದಿಲ್ಲದಾಗದು ಒಂದು
ಕುಕ್ಕುಲಾತಿ ಇನ್ನುಂಟೆ ಎಲ್ಲಾದರೂ
ಮುಕುಳಿತವಾಗಿದ್ದ ಕುಸುಮ ಇದ್ದರೆ ಇ
ದಕೆ ಪರಿಮಳ ತಾನೆ ಹೊರಬೀಳ್ವುದೆ
ಲಕುಮಿರಮಣ ನೀನು ಸುಮ್ಮನಿದ್ದರೆ ಊ
ಟಕ್ಕೆ ಕರಿಯಲು ಅವರು ಸ್ವಾತಂತ್ರರೇ
ಅಖಿಳಜೀವರೊಳು ವ್ಯಾಪ್ತನೆಂಬುವ
ವಾಕು ತಕ್ಕದಯ್ಯ ನಿನಗೀ ಪೊಗಳುತ ಬಿರಿದು
ಪ್ರಕಟವ ಮಾಡಿ ಎಲ್ಲೆಲ್ಲಿಗೆ ಕರೆದೊಯ್ದು
ಅಕಳಂಕದವರ ಕೂಡ ಉಣಿಸಿ ಪೊರೆವೆ
ಸಕಲ ಕಾಲಗಳಲ್ಲಿ ಕ್ಷಣ ಬಿಡದೇ
ಭಕುತಿಗೆ ವಶವಾದ ವಿಜಯ ವಿಠ್ಠಲ ನಿನ್ನ
ಭಕುತವತ್ಸಲ ತನಕೆ ಸುರರು ಬೆರಗೇಗುವರು ೩
ಅಟ್ಟತಾಳ
ಆರನ್ನ ಆರೋದಕ ಆರ ಮನ್ನಣೆ
ಆರೆಡೆ ಆರ ಸದನ ಆರ ಸಹವಾಸವೊ
ಆರರ್ಥ ಆರಾಟ ಆರ ದಯವೋ
ಆರಾಲಾಪವೊ ಆರಾ ವಾಸಸ್ಥಾನವೋ
ಆರಟ್ಟಹಾಸವೋ ಆರ ಆನಂದಾತಿ [ಶಯ]
ಆರನಾ ಪೂರ್ವಕ ಆರದೋ ಮತ್ತಾರದೋ
ಆರದೊ ಇನ್ನು ಆರರಿತವರಿಲ್ಲ
ಆರಿಂದ ಅವರಿಗೆ ಕೊಡಿಸಿ ಅನುದಿನ
ಆರನ್ನಾಡಿಸುವೆ ಆರನ್ನುಬ್ಬಿಸಿ
ಆರನು ಪೊಗಳಿಸುವೆ ಆರಾರುಚಿತ್ತವಿದು
ಆರತಿಶಯವಿದು ಆರಿಂದಲಿ
ಆರಿಗೆ ಮಾನ ಬಹುಮಾನವೋ
ಆರು ಮಾಡಿಸುವರು ಆರು ಕೈಕೊಂಬರೊ
ಆರಾದರು ಜನ ಮೂರರೊಳಗೆ ಉಂಟೆ
ಆರದಲ್ಲಿ ಇದು ಆರಾರದಲ್ಲಿಲ್ಲವೊ
ಆರರ್ಥಿ ಆರಿಂದ ಆದದೆನಸಲ್ಲಾ
ಆರಾರು ಬಯಸುವರೊ ಆರಂಗೀಕರಿಸೋರೋ
ಆರುವರ್ಜಿತ ಕಾಯ ವಿಜಯ ವಿಠ್ಠಲರೇಯಾ
ಆರಂತರ ಬಹಿರದಲ್ಲಿ ನೀನೆ ೪
ಆದಿತಾಳ
ಜಲಚರ ತೃಪ್ತಿಯಾಗಿ ಬಂದು ತನ್ನಯ ಕಂಗಳಿಂ
ದಲಿ ತನ್ನ ಮರಿಯ ನೋಡಲು ಅದು
ಸಲೆ ತೃಪ್ತಿಯಾಗಿ ಇಪ್ಪಸುಖ ಕ್ಷುಧಾತುರ
ಕಳಕೊಂಡು ಹರುಷದಿಂದ ಬೆಳೆದು ಸಂಚರಿಸಿದಂತೆ
ಬಲು ದಯದಲಿ ನೀನು ಅರ್ಪಿಸಿದ ಪದಾರ್ಥ
ಸುಲಭ ರಸಗಳೆಲ್ಲ ಕರುಣಾದೃಷ್ಟಿಯಿಂದ
ಒಲಿದು ಸ್ವೀಕರಿಸಿ ಪರಮ ಶಾಂತದಿ ನೋಡೆ
ಒಳಗಿದ್ದವರು ಸಹ ತೃಪ್ತಿಯಾಗುವರೆನ್ನ
ಕುಲಕೋಟಿ ಸಹವಾಗಿ ಎನಗೆ ತೃಪ್ತಿಯಾಗುವುದು
ಜಲಜನಾಭನೆ ನೀನೆ ಸುವಿದಿತ್ತನ್ನವ ಸವಿದು
ನಲಿದುಂಡು ಬೆಳೆದವಗೆ ದುರಿತಗಳಿಪ್ಪವೇನಯ್ಯ
ಕೆಲಕಾಲಕೆ ನಿತ್ಯತೃಪ್ತ ವಿಜಯ ವಿಠ್ಠಲ ನಿನ್ನ
ಒಲುಮೆಯಾಗಲಿ ಬೇಕು ಮಿಗಿಲಾದುದೇನು ಕಾಣೆ೫
ಜತೆ
ಈ ಪರಿ ಇದ್ದವನು ಬತ್ತಲಚ್ಚಂದಿಯೊಡೇ?ಪಾಪ ಲೇಪವಿಲ್ಲ ವಿಜಯ ವಿಠ್ಠಲ ಅವಗೆ ೬

ಸಾಧನೆಯ ಕೆಲವು ವಿವರಗಳನ್ನು ಈ ಸುಳಾದಿಯು ಒಳಗೊಂಡಿದೆ.

೬೪
ಧ್ರುವತಾಳ
ನರ ಚಕ್ರವರ್ತಿ ಪಿತೃ ಋಷಿ ದೇವತಾ ಜನ
ತರತಮ್ಯ ಪಂಚವಿಧ ಮುಕ್ತಿ ಯೋಗ್ಯ
ಪರಸ್ಪರ ಉಂಟು ಇಲದಕೆ ಅಂಶ ರಹಿತ ಅಂಶ
ಧರಿಸುವಾನಂತಾನಂತ ಗುಣ ಭೇದದೀ
ಚರಿಸುವರು ಯುಗ ಮನುದಿನ ಮಹಾಕಲ್ಪ
ಶರೀರವ ಧರಿಸಿ ನೀಚೋಚ್ಚವೆನದೆ
ಮರಳೆ ಮರಳೆ ಸ್ವಸ್ವ ಕರ್ಮಾನುಸಾರದಿಂದ
ಪರಿ ಭ್ರಮಣರಾಗಿ ಪೂರ್ವರಭ್ಯ ವಿಡಿದೂ
ನರಕ ಸ್ವರ್ಗ ಭೂಮಿಯು ನಾನಾ ದು:ಖ ಸುಖ
ಸರಿ ಮಿಗಿಲಾಗಿ ವುಂಡು ಹಿಂಗಳದೂ
ಹಿರಿದಾಗಿ ಮುಂದೆ ಗತಿಗೆ ಅಭಿಮುಖ ವಾಹದಕ್ಕೆ
ಬರುವದು ವಿಶಿಷ್ಟ ಕುಲದಲಿ ಜನ್ಮಾ
ತರುವಾಯ ಸ್ವಶಾಖಾ ಸರ್ವಶಾಖಾಧ್ಯಯನ
ಮಿರುಗುವ ಸಾಧನ ಇದೆ ಮೊದಲು
ಗುರು ವುಪದೇಶ ಮಾರ್ಗ ತತ್ತದ್ವರಣಾಶ್ರಮ
ವರ ಕರ್ಮಾಚಾರ ವಿಚಾರ ಕಾರತ್ವ
ಹರಿಯಾಧೀನ ಜ್ಞಾನ ಭಗವತ್ ಸಮರ್ಪಣೆ
ನಿರುತ ಈ ಪರಿಯಿಂದ ಎಸಗಿದರಾಗೆ ವಿ
ಸ್ತರ ಕರ್ಮ ಪ್ರಬಲ ದೌರ್ಬಲ್ಯ ವಿವಿಧ
ಚರಕ ಕಾರಕನಾಗಿ ಸಂಪಾದಿಸು ಜ್ಞಾನ
ಪರಮ ವಿಶ್ವಾಸದಲ್ಲಿ ಮಾಡಬೇಕು
ದುರಿತ ಕುಠಾರಿ ನಮ್ಮ ವಿಜಯ ವಿಠ್ಠಲನ ಸ
ತ್ಕರುಣವ ಪಡೆಯಲಾಗಿ ಮುಂದೆ ಅಧಮ ಪ್ರಸಾದಾ ೧
ಮಟ್ಟತಾಳ
ಚಿತ್ರ ವಿಚಿತ್ರದಲ್ಲಿ ಕಾಮ್ಯ ಪುಣ್ಯ ಪಾಪ
ನಿತ್ಯವಾಗಿ ಮಾಡೆ ತದನುಸಾರ ವಿ
ರಕ್ತಿ ಭಕುತಿ ಅಭಿವೃದ್ಧಿ ಭಗವಂತಾ
ತತ್ವಾದಿಗಳ ಜಿಜ್ಞಾಸ ಸಾಮಾನ್ಯ ತರ
ಮತ್ತೆ ಶ್ರವಣ ಮನನ ನಾನಾ ಪರಿ ಸರ್ವ
ಶಾಸ್ತ್ರ ನಿರ್ಣಯ ಜಿತಾಸನ ಅಭ್ಯಾಸ ಕಾ
ಲತ್ರಯ ವಿಶೇಷ ಮನನವು ಅಜ್ಞಾನ
ಮಿಥ್ಯಾಜ್ಞಾನಗಳು ನಿವಾಸ ಸರ್ವದಲ್ಲಿ
ತತ್ವ ನಿಶ್ಚಯ ಬಲು ಪ್ರತಿ ದಿನ ವರ್ಧಮಾನ
ಸತ್ಯ ವೈರಾಗ್ಯ ಭಾಗ್ಯ ಭಕುತಿ ಜ್ಞಾನಯೋಗ
ಚಿತ್ತಜಪಿತ ನಮ್ಮ ವಿಜಯ ವಿಠ್ಠಲನ್ನ
ಚಿತ್ತದಲ್ಲಿಟ್ಟು ಭಜಿಸಿ ಶುದ್ಧರಾಗಿ೨
ತ್ರಿವಿಡಿತಾಳ
ವೇಗದಿಂದ್ಯಮ ನಿಯಮಾಸನ ಪ್ರಾಣಾಯಾಮ ಚ
ನ್ನಾಗಿ ಪ್ರತ್ಯಾಹಾರ ಧಾರಣ ಸಮಾಧ್ಯಾಖ್ಯ
ಯೋಗ ಪರಿಪಾಕದಿಂದ ಧ್ಯಾನವಗೈದೂ
ನಾಗಶಯನ ಕ್ಷೀರಸಾಗರ ವಾಸಿಯ
ಶ್ರೀ ಗುರು ಪರಮಗುರು ಸೂರ್ಯ ಮಂಡಲ
ಜಾನು ಮಾಡದೆ ತಮ್ಮ ಯೋಗ್ಯತಾ ಸಾಧನ
ಭಾಗಂಗಳು ತಿಳಿವುದು ಮಾಡುವ ಬಗೆವುಂಟು
ತ್ರೈಗುಣ್ಯ ವರ್ಜಿತ ಶ್ರೀ ಕೃಷ್ಣನ ರೂಪ
ಈಗ ಸಂಪಾದಿಸು ಕಿಶೋರ ಪರಿಮಿತ
ಬಾಗಿ ಭಕುತಿಯಿಂದ ಶರಣೆಂದು ನೋಡಿ ಲೇ
ಸಾಗಿ ಧ್ಯಾನಿಸುವುದಂಗುಟ ಮಸ್ತಕತನಕಾ
ಆಗಮೋಕ್ತಿಯಿಂದ ತೃಣ ಬ್ರಹ್ಮ ಪರಿಯಂತ
ನೀಗುವರೆಲ್ಲರೂ ಆತ್ಮನೆಂಬೊ ಭಜನೆ
ಈ ಗುಣೋಪಾಸನೆ ಸರ್ವ ಸಾಧಾರಣ
ಭಾಗವುಂಟು ಯಿಲ್ಲಿ ತತ್ವಭೇದ ಗುಣ
ತ್ಯಾಗವಿಲ್ಲದೆ ಮಾಳ್ಪ ಯೇಕ ಚತುರಪಂಚ
ವಾಗಿ ಸಪುತ ದಶ ಚತುರ ವಿಂಶತಿ ಮಿಗಿ
ಲಾಗಿ ಈ ತೆರದಿ ಬಹು ಅಖಿಳೋಪಾಸಕರು ಇ
ಬಾಗಿ ಈಶನ ಚಿಂತೆಯೊಳಗಿಪ್ಪರು
ಭಾಗವತರಾಗಿ ಗುಣರೂಪ ಕ್ರೀಯಾ ಶುದ್ಧ
ವಾಗಿ ಸಾಮಾನ್ಯ ವಿಶೇಷ ವಿಶಿಷ್ಟದಲ್ಲಿ
ಆಗುವದೀಪರಿ ಜ್ಞಾನ ಮಧ್ಯಮ ಪಾಕಾ
ಜಾಗರ ಪುಟ್ಟುವುದು ಮನುಜಾದಿ ಸಾರರಿಗೆ
ಸಾಗುವದೀಮನಸು ಸ್ವಲ್ಪ ದೇಹಾಂತರ
ವಾಗುವದಾಮೇಲೆ ಪ್ರತೀಕದಲ್ಲಿ
ಯೋಗಿಗಳಿಗೆ ಪ್ರಚಾರ ಹೃದಯದಲ್ಲಿ ಎನ್ನಿ
ತಾಗುವುದು ಸ್ವಲ್ಪ ಪ್ರತೀಕದಲ್ಲಿ
ರಾಗದೂರರು ದೇವತಿಗಳು ಮಾಳ್ಪದು
ಭಾಗ ಪಂಚಕವಿಡಿದು ತತ್ವಾಂತಕೆ
ಭಾಗಿಗಳು ಕಾಣೊ ವ್ಯಾಪ್ತದರ್ಶಿಗಳು ಮುಂ
ದಾಗಿ ಒಂದೊಂದು ರೂಪವಧರಿಸಿ
ಆಗಾರಮೇಧಿ ಮಿಕ್ಕಾದಾಶ್ರಮ ವರ್ಣ(?)
ಲೋಗರದೊಳಗಿದ್ದು ಕ್ರಮಾನುಕ್ರಮದೀ
ತೂಗುವ ಬಗೆಯಂತೆ ಹೃದಯ ಗಗನ ಪ್ರತೀಕ
ವಾಗುವದಿವರಿಗೆ ಕದಾಸಿತು ಮನಸು
ಹೀಗೆ ನುಡಿದವರೊಳು ಶತಶತ ಪೃಥಕು
ಯೋಗಿರಾಯರು ಗಂಧರ್ವಗಳೆನ್ನ ಧ್ಯಾನದಲ್ಲಿ
ರೋಗನಿವಾರಣ ವಿಜಯ ವಿಠಲ ಕೃಪಾ
ಸಾಗರನೊಲಿಯೆ ಮುಂದೆ ಮಧ್ಯಮ ಪ್ರಸಾದಾ ೩
ಅಟ್ಟತಾಳ
ತನ್ನಯ ಯೋಗ್ಯತೆ ಉಪಾಸನೆ ಅಭ್ಯಾಸ
ಮುನ್ನೆ ಭಗವತ್ಪಾದ ಲಗ್ನ ಮನ
ಭಿನ್ನವಿಲ್ಲದೆ ನಿಶ್ಚಲವಾದ ಸಂಭ್ರಮ
ಇನ್ನು ಸಂಪ್ರಜ್ಞಾಸಂಪ್ರಙ್ಞ ಧ್ಯಾನಲ್ಲದೆ
ಮುನ್ನೆ ವಾಸನಮಯ ಭಗವತ್ಪ್ರತಿಮೆ ದರು
ಶನ್ನವಾಗಲು ಇದೆ ಉಪಾಸನಾ ಪರೋಕ್ಷಾ
ಪನ್ನೆ ಪೇಳಿದ್ದು ಅಪರೋಕ್ಷ ಸಾಧನೆ
ಘನ್ನವಾಗಿದೆ ಅಪರೋಕ್ಷಕಾಲ ಧ್ಯಾನ
ಇನ್ನಿತು ಬಗೆಯಿಂದ ಪುನರಾವರ್ತಮಾನ
ಸನ್ಮಾನ ಸ್ವಸ್ವಾನುಕೂಲ್ಯಾನುಸಾರ ಶ್ರೀ
ಚನ್ನರಾಮಕೃಷ್ಣ ಹಯಗ್ರೀವ ನರಹರಿ
ಮುನ್ನೆ ಕಪಿಲವ್ಯಾಸ ದತ್ತಾದಿ ಮೂರ್ತಿಯ
ಬಣ್ಣಿಸಿ ಸುವಿಶೇಷನಿರ್ಭೇದ ಗುಣಪೂರ್ಣ
ವನ್ನು ತಿಳಿದು ಆ ತರುವಾಯ ಸಚ್ಛ್ಯಾಸ್ತ್ರ
ವನ್ನೆ ಸದ್ಗುರು ಮುಖದಿಂದ ಪ್ರವಚನ
ಅನ್ನುದಿನ್ನದಲ್ಲಿ ಶ್ರವಣ ಮನನ ಧ್ಯಾನ
ಬನ್ನ ಬಡದೆ ಮಾಡಿ ಮನಸಾಪರೋಕ್ಷಿ ಪಾ
ವನ್ನ ಎರಡು ಬಗೆ ಪ್ರಸಿದ್ಧ ಧ್ಯಾನೋಪಾ
ಸನ್ನವೊಂದು ಶಾಸ್ತ್ರೋಪಾಸನ ಒಂದು
ಬಿನ್ನಣ ಬಹುತರ ಅಭ್ಯಾಸ ಬಲದಿಂದ
ಅನ್ನೋದಕ ನಿದ್ರೆ ಪರಿಮಿತ ವಿಹಾರ

ಶ್ರೀಕೃಷ್ಣನಿಗೆ ಮಾಡಿರುವ ಅಲಂಕಾರದ ವರ್ಣನೆ

೧೩೬
ಝಂಪೆತಾಳ
ನವ ರತುನದಿಂದಲೆಸೆವ ಮುಕುಟದೊಳಗೊಂದು
ರವಿಯ ಹರಳಿನ ಕಾಂತಿ ಪೇಳಲಳವಲ್ಲ
ಭುವನ ಪಾತಾಳ ಗಗನವನು ಭೇದಿಸಿಕೊಂಡು
ಛವಿಕವಿದು ಮುಸುಕಿದುದು ಕವಿಗಳೆಣಿಸಲೋಶವೇ
ದಿವಿಜಜೇಷ್ಟನು ಪವನ ದಿವಿಜ ಪವನಾಶನ
ಶಿವ ವೃಧ್ಧ ಶ್ರವನಗ್ನಿ ಜವನಸುರ ವೈಶ್ರವಣ
ದಿವಿಜ ರವಿಯಾದಿಗಳ ಅವಯವಾದಿಗಳಾಭರಣ
ಛವಿಗೆ ಅಪಾರ ಪ್ರಭೆ ಥಳಥಳಿಸೆ
ಎವೆದೆಗಿಯಾದತಿ ಸೂಜಿಗವನು ಪೊಂದಿ ನಿಂದರು
ಕವಿನಾಮ ವಿಜಯ ವಿಠ್ಠಲ ನಿನ್ನ ಸಿರಿಧೊರೆ
ಅವನಿಯೊಳಗಿಲ್ಲದಿರೆ ಈ ಪರಿ ರೂಪವನ್ನು
ತವಪಾದಕೆ ನಮೋ ನಮೋ ಮಾಯಾ ಲೀಲಾ ೧
ಮಟ್ಟತಾಳ
ಪ್ರಳಯಾದಲಳುವಿಲ್ಲಾ ಚಳಿಬಿಸಿಲು ಇಲ್ಲಾ
ಮಳಿಗಾಳಿ ಇಲ್ಲಾ ತಳಲಿದ ವನಗಳು
ಫಲಪುಷ್ಪದಲಿ ಮೀಸಲು ಗುಂದದಲೇವೆ
ಕಳೆ ಕಾಂತಿಗಳಿಂದ ಥಳ ಥಳ ಪೊಳೆವಂಥ
ಹೊಳಲಾದಾ ವೈಕುಂಠ ನೆಲೆಯವನು ತೊರೆದು
ಇಳಿಯೊಳು ಬಂದು ಗೋಕುಲದಲ್ಲಿ ಜನಿಸಿ ಗೋ
ವಳನಾದದೇನು ವಿಜಯ ವಿಠ್ಠಲ ನಿನ್ನ
ನೆಲೆ ತಿಳಿಯದೆಂದು ಬಳಲುವರು ಸುರರು ೨
ತ್ರಿವಿಡಿತಾಳ
ಮುಕುತಾ ವನದಲಿ ಮುಕುತ ಶುಕ ಹಂಸೆ
ಪಿಕ ಭೃಂಗ ನಾನಾ ಪಕ್ಷಿಗಳಾ
ನಿಕರ ಕಿಲಿ ಕಿಲಿ ಶಬ್ದ ಸದಾ ಮುಕುಳಿದ ನಗೆಯಲ್ಲಿ
ಕಕ ಕಕ ಕಾಯೆಂದು ಝೇಂಕರಿಸುತಿರೇ
ಮುಕುತಾಮುಕುತ ಬೊಮ್ಮರ
ಭಕುತಿರಸದಿಂದ ಹಸ್ತಕರಾಗಿ ನಿಂದು ಭ್ರಾ
ಮಕರಾಗಿ ತುತಿಸೆ ವಿಕಸಿತ ಕಮಲಾ
ಬಕದ ಕೊನೆಯಿಂದ ಮುಕುತಾ
ಮುಕುತರನ್ನು ನೋಡುವ ದೇವಾ
ಅಕಳಂಕನಾಗಿ ಇದೇ ಗೋಕುಲದಿ ಜನಿಸೇ
ಸಕಲ ಗೋಮಕ್ಕಳ ಕೈಯ್ಯ ಬೈಸಿಕೊಂಡದ್ದೇನೊ
ಅಖಿಲ ಜೀವಕೆ ಭಿನ್ನ ಶಾಶ್ವತ ವಿಜಯ ವಿಠ್ಠಲ
ಸುಖಸಾಂದ್ರ ನಿನ್ನ ಮಕ್ಕಳಾಟಿಕೆ ಸೋಜಿಗವೋ ೩
ಅಟ್ಟತಾಳ
ಮೀಸಲಾಭರಣ ಭೂಷಣ ನಾನಾ
ಲೇಸಾದ ಪುಷ್ಪದ ಮಾಸದ ಮಾಲಿಕೆ
ಭಾಸಿತ ಪೀತ ವಸನ ಶೋಭಿಸುತಿರೆ
ಏಸು ಶಿಂಗಾರ ಬಿಟ್ಟು ಗೋಸಂಕುಲ ಕಾಯ್ದು
ವೇಷಧಾರಕನಾಗಿ ಕೀಸಲಯದ ಬಳ್ಳಿ
ನೀಸುತ್ತಿ ಶಿರಕೆ ಮಾನೀಸನಾಗಿ ಜೀವ
ರಾಸಿ ಕೊಡಾಡಿದೆ ಕೇಶವ ವಿಜಯ ವಿಠ್ಠಲ ನಿನ್ನಲೀಲೆಯ
ಏಸೇಸು ದಿನಕೆ ಎಣಿಸಲು ಮಿತಿಯುಂಟೇ ೪
ಆದಿತಾಳ
ಜಗತ್ತಿನೊಳಗೆ ಇದ್ದ ಗುಣಕೆ
ಮಿಗಲಯ್ಯ ನಿನ್ನ ಗುಣಗಳು
ಅಗಣಿತ ರಾಶಿಗಳು ಬಗೆಬಗೆಯಿಂದ ಇರಲು
ಮಗುವಿಗೆ ಎಲ್ಲಾರೊಳು ಹಗಲಿರಳು ನಗೆಯಿಂದ
ಹಗರಣವಾದಾನೆಂಬೊ ಜಗದೊಳಗಾಶ್ಚರ್ಯವೇನೋ
ಖಗಗಮನಾ ವಿಶ್ವಾತ್ಮ ವಿಜಯ ವಿಠ್ಠಲ ನಿನ್ನಾ
ವಿಗಡ ನಾಟಕಕ್ಕೆ ಕೈಮುಗಿದು ಶರಣೆಂಬೆ ೫
ಜತೆ
ಅಪ್ರಾಕೃತನಾಗಿ ಪ್ರಾಕೃತದಲಿ ಮೆರೆದೆ
ಅಪ್ರಮೇಯ ನಾಮಾ ವಿಜಯ ವಿಠ್ಠಲ ಆನಾದಿ೬

ಭಗವಂತನಿಗೆ ಸಕಲ ಚೇತನಾಚೇತನ

೪೮
ಧ್ರುವತಾಳ
ನವಪಂಚ ಪಂಚ ಮೇಲೆ ಆರಂಗುಲ ಪ್ರಮಾಣ |
ಅವಯವಂಗಳ ಸಹಿತ ಇಪ್ಪಗಾತ್ರ |
ಸ್ನವಕೋಟಿ ರೋಮದಿಂದ ಯುಕ್ತವಾಗಿಪ್ಪುದು |
ನವಕೋಟಿ ದೇವತೆಗಳು ಅಭಿಮಾನ್ಯರು |
ಇವರು ಶತಸ್ಥರೊಳು ಪಂಚಪ್ರಾಣರ ತರುವಾಯ |
ಭವದೂರರಾಗಿ ಸರ್ವದಲ್ಲಿಪ್ಪರು|
ನವದ್ವಿದ್ವಾರಗಳಿಂದ ಶೋಭಿಸುತಿದೆ ನೋಡೆ |
ತ್ರಿವಿಧ ಗುಣಗಳುಂಟು ಒಂದು ಕ್ಷಣಕೆ |
ನವದ್ವಿಯಿಂದ್ರಿಂಗಳು ಅಲ್ಲಿಗಲ್ಲಿಗೆ ಇಪ್ಪ |
ವಿವರವನ್ನೆ ತಿಳಿವುದು ಇವು ತೈಜಸದಿ |
ದಿವಿಜೋತ್ತರು (ಮಾರುತ) ತತ್ತ ದ್ವ್ಯಾಪಾರವನ್ನೆ ಬಿಡದೆ |
ತವಕದಿಂದಲಿ ಮಾಳ್ಪರು ಹರಿ ಪ್ರೇರಣೆ |
ಸುವಿರುದ್ದವಾದರು ಇವರಿಗೆ ದೋಷವಿಲ್ಲ |
ಕವಿಗಳು ಕಾಣೋ ಸದಾ ಸಾಂಶರು |
ಭುವನದ ಹೊರಗೆ ಇವರು ತಮ ತಮ್ಮ ತತ್ವದಲ್ಲಿ |
ಅವಿಕಾರವಾಗಿಪ್ಪರು ಅಣುಮಹದಲ್ಲಿ |
ಅವಕಾಶ ಪ್ರದರಾಗಿ ಒಬ್ಬೊಬ್ಬರೊಳಗೆ |
ಕವಲಾ ಬುದ್ಧಿಯಿಲ್ಲದೆ ಪೊಂದಿಪ್ಪರು |
ಇವು ಪೇಳಿದವು ಉಳಿದ ವಾಗ್ವಾದಿ ತತ್ವಸಂಖ್ಯ |
ಪವನನಾಧಾರದಿಂದ ಬೆಳಗುತಿವಕೊ |
ತ್ರಿವಿಷ್ಯಪ ರಂಗ ವೈಕಾರಿಕದಿಂದ ನಿರ್ಮಾಣ |
ಹವಣಿಸಿ ಇಪ್ಪನು ಹರಿ ಸ್ವತಂತ್ರ |
ಇವೆ ದೇಹದೊಳು ತಿಳಿ ಮಿಶ್ರಭಾವದಿ ಉಂಟು |
ಶ್ರವಣಾದಿಗಳ ವ್ಯಾಪಾರ ಉತ್ತುಮವಾಗೆ |
ಸವೆಯಾದ ಪದವಿಗೆ ಸಾಧನೆ ವೈಯ್ಯಾ |
ಜವನಗೇರಿಗೆ ಸಲ್ಲ ಪುಣ್ಯವೆ ಮಾಡುತ್ತ |
ದಿವಸ ದಿವಸ ಕೀರ್ತಿವಂತನಾಹ |
ದಿವಿಜ ವೈರಿಗಳು ವಿಪರೀತ ಕರ್ಮ ಮಾಡಿಸೆ |
ಅವಿರಕ್ತನಾಗುವ ಮತಿದೂರನು |
ಅವಕ್ರೀಯನಾಗಿ ಕೆಟ್ಟು ಪೋಗುವ ಶ್ರೀ |
ಧವನ ನಾಮಾಮೃತ ಮರೆದು ಬಿಡುವ |
ಇವಕ್ಕೆಲ್ಲ ಶ್ರೀಹರಿ ಮುಖ್ಯಕರ್ತನು ತಾನೆ |
ಅವರವರ ಸಂಸಾರದಂತೆ ನಡಿಸಿ |
ಪವಮಾನ ಶಿವ ಪಾರ್ವತಿ ಇಂದ್ರಾರ್ಕ ಮಿಕ್ಕಾ |
ದವರ ಭವದೆಡಿಗೆ ಜೀವನವ ಒಯ್ಯದಂತೆ |
ನವ ಭಕುತಿಯಿಂದ ಸಾಧನವ ಮಾಡುವಂತೆ ಕೇ |
ಶವನು ಸುರರಿಗೆ ನೇಮಿಸಿ ದೈತ್ಯರಿಗೆ |
ಅವಕೃಪೆಯಿಂದ ಶಿಕ್ಷಿಸಿ ಸಜ್ಜನರ ಮಾ |
ರ್ಗವನ್ನು ಪೋಗದಂತೆ ಮಾಡುವನು |
ಪವನಂತರ್ಯಾಮಿ ನಮ್ಮ ವಿಜಯ ವಿಠ್ಠಲರೇಯ |
ರವಿಯಂತೆ ಪೊಳೆವನು ಮಧ್ಯನಾಡಿಯಲ್ಲಿ ೧
ಮಟ್ಟತಾಳ
ಅನ್ನಮಯ ಪ್ರಾಣಮಯ ಮನೋವಿ |
ಜ್ಞಾನಮಯ ಆನಂದ ಮಯವೊ |
ಇನಿತು ಪಂಚಕೋಶ ತನುವಿನೊಳಗೆ ಉಂಟು |
ಘನವಾಗಿ ತಿಳಿದು ಗುಣಿಸು ನಿರಂತರದಿ |
ಚಿನುಮಯ ಮೂರುತಿ ವಿಜಯವಿಠ್ಠಲರೇಯ |
ಇನಿತು ಪೆಸರಿನಿಂದ ಕರಿಸಿ ಕೊಂಬುವನು ಬಿಡದೆ ೨
ತ್ರಿವಿಡಿ ತಾಳ
ಭೂಮಿ ಉದಕದಿಂದ ಅನ್ನಮಯವಾಗಿಪ್ಪುದು |
ಆ ಮಾರುತ ಭೂತ ಅನಲಾಕಾಶದಲ್ಲಿ ಪ್ರಾ |
ಣಾಮಯ ಮನ ಮತ್ತೆ ಅಹಂಕಾರದಿಂದ ಮ |
ನೋಮಯ ಮಹದಿಂದ ವಿಜ್ಞಾನಮಯವಯ್ಯ |
ಕಾಮ ಜನನಿ ತತ್ವದಿಂದ ಆನಂದ ಮಯವೊ |
ನಾಮವೆಯಿದು ಸಿದ್ಧ ವೊಂದೊಂದು ಬೆಚ್ಚಿಕೆ |
ಶ್ರೀ ಮಾಯಾರಮಣನು ಯಿದೆ ಯಿದೆ ಪೆಸರಿನಲಿ |
ಪ್ರೇಮದಿಂದಲಿ ಕರಿಸಿಕೊಳುತಲಿಪ್ಪ |
ನಾಮಂಗಳುಂಟು ಮತ್ತೆ ಅನಿರುದ್ಧಾದಿ ಐದು |
ಈ ಮಹ ಪಂಚ ಕೋಶದಲ್ಲಿ ವಾಸ |
ಭೂಮಿ ಶನೇಶ್ವರ ವರುಣ ಅನ್ಮಯದಲ್ಲಿ |
ಆ ಮರೀಚಿ ವಾಯು ಅಗ್ನಿ ಗಣಪ ಪ್ರಾ |
ಣಾ ಮಯದಲ್ಲಿ ಇಂದ್ರ ರುದ್ರ ಮನೊಮಯದಲ್ಲಿ |
ತಾಮರಸ ಪೀಠ ವಿಜ್ಞಾನ ಮಯದಲ್ಲಿ |
ಸೋಮ ಸೋದರಿ ಲಕುಮಿ ಆನಂದ ಮಯದಲ್ಲಿ |
ಕೋಮಲ ನಡತಿಯಲ್ಲಿ ವಾಸವಕ್ಕು |
ಈ ಮೂರೆರಡು ಜಡದ್ರವ್ಯದಲ್ಲಿ ಇವರು |
ಸ್ವಾಮಿಯ ಪೂಜಿಪರು ಅನಿರುದ್ಧಾದಿಗಳ |
ಈ ಮಾತು ಲಾಲಿಸಿ ತಿಳಕೊಂಡ ಜನರಿಗೆ |
ಯಾಮ ಯಾಮಕೆ ಬುದ್ಧಿ ನಿರ್ಮಲಿನ |
ತಾಮಸ ಜನ ವೈರಿ ವಿಜಯ ವಿಠ್ಠಲರೇಯ |
ನೇಮಿಸಿ ಈ ಪರಿ ವಾಲಗ ಕೊಳುತಿಪ್ಪ ೩
ಅಟ್ಟತಾಳ
ಧರೆಯೊಳು ಮಾನವ ಉದಕಾನ್ನ ಉ |
ದರದಲ್ಲೆರದರೆ ಅದರಲ್ಲಿ ಚತುರವಿಂಶತಿ ತತ್ವ |
ಇರುತಿಪ್ಪಪು ಕೇಳಿ ಮಿಶ್ರ ಭಾವದಿಂದ |
ಪರಮಾಣು ಅತ್ಯಣು ಒಂದನಂತವಾಗಿ |
ಪರಿ ಪರಿ ಅಂಶಿ ಅಂಶಗಳಿಂದ ತತ್ವೇ |
ಶರ ಸಹಿತವಾಗಿ ಉಪಚಯ ಕೊಡುತಲಿ |
ಸ್ಮರಿಸಿ ಮಹಾತತ್ವ ವಿಜ್ಞಾನಮಯ ಈಶಮಾಯದಿಂದ |
ಧರಣಿಯೊಳಗೆ ವ್ಯಾಪಿಸಿ ಕೊಂಡಿಪ್ಪವು ನೋಡಿ |
ಅರಿದವ ಬಲು ಧನ್ಯ ತತ್ವ ಭಾಗಂಗಳು |
ಅರಹುವೆ ಪೃಥ್ವಿ ಗಂಧ ಘ್ರಾಣ ಉಪಸ್ಥ |
ತರುವಾಯ ಜಲ ರಸ ಜಿಂಹ್ವೆ ವಾಯು ನಾ |
ಲ್ಕೆರಡು (೮) ತತ್ವಂಗಳು ಅನ್ನಮಯ ಕೋಶಕ್ಕೆ |
ನಿರುತ ಉಪಚಯ ಯೇರೆ ಭೂತವಿದೆ |
ಸರಿಯೆನ್ನು ತೇಜಸ್ಸು ರೂಪ ಚಕ್ಷುಸ ಪಾದ |
ಚರಿಸುವಮಾರುತ ಸ್ಪರಿಶ ತ್ವಕು ಪಾಣಿ |
ಮಿರಗುವ ಗಗನ ಶಬ್ದ ಶ್ರೋತ್ರ ವಾಕು ಹ |
ನ್ನೆರಡು (೧೨) ತತ್ವಂಗಳು ಪ್ರಾಣ ಮಯದಲ್ಲಿ |
ಇರುತಿಪ್ಪವು ಕೇಳಿ ಉಪಚಯವಾಗುತ್ತ |
ಮರಳೆ ಮನಸು ಅಹಂಕಾರ (೨) ಮನೋಮಯ |
ಬೆರೆಸಿಕೊಂಡಿಪ್ಪುದು ಉಪಚಯಕೊಡುತಲಿ |
ಸ್ಮರಿಸಿ ಮಹಾತತ್ವ (೧) ವಿಜ್ಞಾನ ಮಯದಲ್ಲಿ |
ಭರಿತ ವಾಗಿಪ್ಪದು ದಿನಪ್ರತಿ ಉಪಚಯ |
ಪರಮ ಶೋಭಿತವಾದ ಅವ್ಯಕ್ತ ತತ್ವ (೧) ನಿಂ |
ದಿರದೆ ಆನಂದಮಯದಲ್ಲಿ ಸೇರೋದು |
ಸ್ಥಿರವಕ್ಕು ಈ ಪರಿ ತತ್ವಭಾಗದಲ್ಲಿ ವಿ |
ವರಗಳ ತಿಳಿವುದು ಸ್ಥೂಲ ಸೂಕ್ಷ್ಮವೆಂದು |
ಪುರುಷೋತ್ತಮ ನಮ್ಮ ವಿಜಯ ವಿಠ್ಠಲರೇಯ |
ಕರುಣಾಕರನಾಗಿ ಸರ್ವರೊಳಗೆ ಇಪ್ಪ ೪
ಆದಿತಾಳ
ತತು ತತು ತತ್ವ ಭಾಗ ತತು ತತು ಮಯದಲ್ಲಿ |
ಸತತವಾಗಿ ಪೋಗಿ ವಿಲೀನವಾಗುವುವು |
ಗತಿ ತಪ್ಪದಂತೆ ನಿತ್ಯ ಗಾತ್ರದೊಳಗೀಪರಿ |
ಮಿತವುಂಟು ಕಾರಣ ಕಾರ್ಯ ತತ್ವಗಳೆಂದು |
ಅತಿಶಯವಾದ ಸ್ಥೂಲವಿಟ ಮೂತ್ರ ಮಜ್ಜಾಸ್ಥಿಯು |
ಭೌತಿಕದಲ್ಲಿ ಇದ್ದು ಕೋಶದಲ್ಲಿ |
ಅತಿ ಸೂಕ್ಷ್ಮ ಕಾರ್ಯ ತತ್ವ ನಿಕರ ಅನಿರುದ್ಧದಲ್ಲಿ |
ಹಿತವಾಗಿಪ್ಪದು ಅಲ್ಲಿಂದಾಚೇಲಿ ಲಿಂಗದಲ್ಲಿ |
ಚತುರವಿಂಶತಿ ತತ್ವ ಕಾರಣ ರೂಪವಾಗಿ |
ಪ್ರತಿ ಪ್ರತಿ ದಿವಸಕ್ಕೆ ಕೊಡುತಿಪ್ಪವು ಭ |
ರಿತವಾದ ಕಾಲಕ್ಕು ಹೆಚ್ಚು ಕುಂದುಗಳಿಲ್ಲ |
ತುತುವೇಶರು ಇಲ್ಲ ಮುಖ್ಯಾಭಿಮಾನಿ ಲಕುಮಿ |
ಶತಾನಂದ ವಾಯು ಸರಸ್ವತಿ ಭಾರತಿಗಳುಂಟು |
ತೃತೀಯ ಪರಿಚ್ಛೇದವಾಗಿದ್ದು ಲಿಂಗ ದೇಹ |
ಸಿತದಲ್ಲಿ ಅವ್ಯಕ್ತ ಮಹ ಅಹಂಕಾರ ಮನಸು ರ |
ಕುತ ವರ್ಣದಲ್ಲಿ ಹತ್ತು ಉಂದ್ರಿಯಂಗಳು ಇ |
ನ್ನತ ಕಪ್ಪಿನಲಿ ಪಂಚತನ್ಮಾತ್ರಿಗಳು ಭೂತ |
ತತಿಗಳುಂಟು ಇವು ಪ್ರಾಚುರ್ಯದಲಿ ನೋಡಿ |
ಮತಿವಂತರು ಕೇಳಿ ಇವು ಅನಾದಿಯಿಂದ |
ಜಿತವಾಗಿ ಹತ್ತಿಕೊಂಡಿಪ್ಪವು ಲಿಂಗದೊಡನೆ |
ಇತರ ಕಾರ್ಯಭಾವಕ್ಕೆ ಇವೆ ಮುಖ್ಯ ಇವೆ ಮುಖ್ಯ |
ಖತಿಗೊಳದಿರಿ ಜನರು ಸಿದ್ಧಾಂತವೆನ್ನಿ ಮುಂದೆ |
ತತುವ ವಿಭಾಗವ ಮಾಡಿ ವ್ಯಾನನೆಂಬೊ ಮಾ |
ರುತ ಸೇರಿಸುತಿಪ್ಪನಲ್ಲಿಗಲ್ಲಿಗೆ ಒಯಿದು |
ಪತಿತ ಪಾವನ ನಮ್ಮ ವಿಜಯ ವಿಠ್ಠಲರೇಯ ಸ |
ದ್ಗತಿಯನೆ ಕೊಡುವನು ಇಹನು ತಿಳಿದವಂಗೆ ೫
ಜತೆ
ಪಂಚಕೋಶಗಳಲ್ಲಿ ಇಂಥ ಮಹಿಮೆಯುಂಟು ವಿ |
ರಿಂಚಿ ಜನಕ ವಿಜಯ ವಿಠಲನೆ ನಿಯಾಮಕ ೬

ಜೀವರಿಂದ ಪುಣ್ಯ ಪಾಪ ಕರ್ಮಗಳನ್ನು ಮಾಡಿಸುವ

೬೬
ಧ್ರುವತಾಳ
ನಾ ನಡೆವವನಲ್ಲ _ ನಾ ಪಿಡಿದವನಲ್ಲ
ನಾ ನುಡಿದವನಲ್ಲ _ ನಾ ಕೇಳಿದವನಲ್ಲ
ನಾ ನೋಡಿದವನಲ್ಲ _ ನಾ ಕೂಡಿದವನಲ್ಲ
ನಾ ನಾಳಿವನಲ್ಲ _ ನಾ ಪೋದವನಲ್ಲ
ನಾ ನುಂಡವನಲ್ಲ _ ನಾ ಬೇಡ ಬರಲಿಲ್ಲ
ನಾ ಸುಟ್ಟವನಲ್ಲ _ ನಾ ಬಿಟ್ಟವನಲ್ಲ
ನಾ ನಪಿದವನಲ್ಲ _ ನಾ ಕಟ್ಟಿದವನಲ್ಲ
ನಾ ನಿಲಿಸಿದವನಲ್ಲ _ ನಾ ಕಳುಹಿದವನಲ್ಲ
ನಾ ನಲಿದವನಲ್ಲ _ ನಾ ಕೋಪದವನಲ್ಲ – ನಾ ಸಾರಿದವನಲ್ಲ
ನಾನಾ ಬಗೆಯಿಂದ ಏನೇನೆಸೆಗುವ
ಅನಂತ ಶುಭಾಶುಭ ಮಾನಸಾದಿಯ ಕರ್ಮ
ವಾಣಿಯರಸ ರುದ್ರ ಆ ನಿರ್ಜರ ನಾಯಕ
ಪ್ರಾಣ ನಿರುದ್ದಮನು ಮೇಣು ಬೃಹಸ್ಪತಿ ದಕ್ಷಾ
ಭಾನು ಚಂದ್ರಾದಿ ಅಭಿಮಾನಿಗಳಿಪ್ಪರು
ಮಾಣಾದೆ ಸ್ತ್ರೀಯರೊಡನೆ ಅನಂತ ಬಗೆ ಕರ್ಮಕೆ
ಜಾಣತನರಾಗಿ ಹೀನವೆಮಗಿಪ್ಪರು
ದಾನವಕುಲ ವೈರಿ ವಿಜಯ ವಿಠ್ಠಲರೇಯ
ನೀನಿತ್ತ ಸಲಿಗೆಯಿಂದ ಆನಂದವೊ ಸುರರಿಗೆ ೧
ಮಟ್ಟತಾಳ
ದುಷ್ಟ ವ್ಯಾಪಾರಕ್ಕೆ ಕಲಿಯಾದಿ ಖಳರ
ಇಟ್ಟು ಅವರಿಂದ ಆವಾವ ಸಂಶಯ
ಬಿಟ್ಟು ಖೇದಗೊಳಿಪ ಮಾಯಾ ನಿಬಿಡಿಮಾಡಿ
ಇಷ್ಟ ಬಗೆಯಲ್ಲಿ ಪಾಪಕ್ಕೆ ಮನೆ ಎನಿಸಿ
ಸೃಷ್ಟಿಯೊಳಗೆ ನಿನ್ನ ಬಂಧಕ ಶಕುತಿಗೆ
ಕಟ್ಟು ಕಂಡವನಾರು ಕರುಣಿಗಳ ದೇವ
ವಿಷ್ಣು ವಿಶ್ವಬಾಹ್ಯ ವಿಜಯ ವಿಠ್ಠಲರೇಯ
ಘಟ್ಟಿ ದೈವವೆ ಎನ್ನನು ಪೊರೆವ ಧೊರಿಯೆ ೨
ತ್ರಿವಿಡಿ ತಾಳ
ದೇವ ದಾನವರಲ್ಲಿ ಬಾಹಿರಂತರವಾಗಿ
ದೇವ ವ್ಯಾಪುತ ಸರ್ವ ಸ್ವಾತಂತ್ರನೊ ನೀನು
ಆವು ಪೇಳುವುದೇನು ಎನ್ನೊಳು ಅವರಿಗೆ
ಶ್ರೀ ವಿಭುವೆ ನೀನು ಆವರೊಳಗೆ
ಝಾವ ಝಾವಕೆ ಬಿಡದೆ ಯಾವತ್ತು ಚೇಷ್ಟಿಯ
ಆವಾವ ನೋಳ್ಪ ಬಲವಂತನೊ
ಭಾವದಲಿ ನೋಡೆ ಬಲು ವಿಚಿತ್ರ ಕರ್ಮ
ಠಾವಿ ಠಾವಿನಲಿ ಸ್ಥಾಯಿ ವೈಯ್ಯಾ
ಕಾವವನಾರು ಸುಮ್ಮಗೆ ಇಪ್ಪವನಾರು
ಪಾವನ ಮಾಳ್ಪನಾರು ಕೆಡಿಪನಾರು
ದೇವತಿಗಳಲ್ಲಾ ದೈತ್ಯರೆ ಮೊದಲಲ್ಲಾ
ನಾ ಒಂದನರಿಯೆ ಅನ್ಯಥ ಕರ್ಮವ
ಕಾವ ಜನಕ ನಮ್ಮ ವಿಜಯ ವಿಠ್ಠಲರೇಯಾ
ಕೈವಲ್ಯದಾಯಕ ದುರಿವ್ವನ ಕುಠಾರ ೩
ಅಟ್ಟತಾಳ
ಸುರರಿಗೆ ಪ್ರೇರಿಸಿ ಶುಭ ಕರ್ಮ ಮಾಡಿಸಿ
ಪರಮ ಸದ್ಗತಿಗೆ ಸಾಧನ ಮಾಳಿಪೆ
ದುರುಳರಿಗೆ ಪ್ರೇರಿಸಿ ದುಷ್ಟ ಕರ್ತವ್ಯ
ಚರಿಸುವಂತೆ ಮಾಡಿ ಕ್ಲೇಶ ಗಳಿಪೇ
ಸುರರು ದಾನವರಿಂದ ಎನಗೆ ಈ ಪರಿಯಾವ
ಚರಿತೆ ಕಾಣುತಲಿರೆ ಹಗಲಿರಳೂ
ಪರಮ ಭಕುತಿ ಸಜ್ಜನ ವ್ಯಾಪಾರಂಗಳು
ನಿರುತ ಮಾಡುವೆನೆಂದರೆ ಕೂಡದು
ಪರಮೇಷ್ಠಿಗಲ್ಲದೆ ಮಿಕ್ಕಾದವರಿಗೆ ದುರುಳ ಕಲಿ ವಾಸವಾಗಿರಲು
ನಿರಯ ಕರ್ಮಂಗಳು ಒಲ್ಲೆನೆಂದರೆ ಆವಾ
ಇರುತಿಪ್ಪ ವ್ಯಾಪಾರ ವ್ಯರ್ಥವಲ್ಲೇ
ಹರಿಯೆ ವಿಚಾರಿಸು ತಮೊಗುಣದ ಕಾರ್ಯ
ಹಿರಿದಾಗಿ ಮಾಡುವ ಬಗೆ ಯಾವುದು
ಸರಸಿಜಭವ ಕಲಿ ಮತ್ತೆ ಪುರಂಜಯ
ಇರಲಾಗಿ ಎರಡೊಂದು ಗುಣ ವ್ಯಾಪಾರ
ಅರಘಳಿಗೆ ನಿಲ್ಲದೆ ಸುತ್ತಿ ಸುತ್ತಿವೇ
ಸಿರಿ ತ್ರಯರೂಪದಿ ಅಲ್ಲಿ ಇರಲು ನೀ ನೀ
ಪರಿ ಕ್ರೀಡಾ ಮಾಡಲು ನಮ ನಮ್ಮದೆ
ಎರಡೊಂದಾವಸ್ಥಿಯಾಗುವುದು ಯಾದವೇಶ
ಶರಣು ನಿನ್ನ ದ್ವಯಪದ ಪದ್ಮಕ್ಕೆ
ಕರುಣಾಕರ ಗುರು ವಿಜಯ ವಿಠ್ಠಲರೇಯ
ಸ್ಮರಿಸಿದವರ ಮನೋಭೀಷ್ಠೆ ಮಾಡಿದ ದೈವ ೪
ಆದಿತಾಳ
ಎಲ್ಲೆಲ್ಲಿ ಪೋದರೇನು ಎಲ್ಲೆಲ್ಲಿ ಇದ್ದರೇನು
ಎಲ್ಲೆಲ್ಲಿ ನಿಂದರೇನು ಎಲ್ಲೆಲ್ಲಿ ನೋಡಲೇನು
ಎಲ್ಲೆಲ್ಲಿ ಉಂಡರೇನು ಎಲ್ಲೆಲ್ಲಿ ಆಡಲೇನು
ಎಲ್ಲೆಲ್ಲಿ ಕೇಳಲೇನು ಎಲ್ಲೆಲ್ಲಿ ತಿರುಗಲೇನು
ಸಲ್ಲನು ಸಲ್ಲನು ನರಕಕ್ಕೆ ನರಕಕ್ಕೆ
ಬಲ್ಲವ ಬಲ್ಲವ ಸರ್ವ ಹರಿಲೀಲೆ
ಬಲ್ಲಿದನೆ ನೀನಾದಿಯಲ್ಲಿ ಮಾಡಿದ ಕ್ಲಿಪ್ತಿ
ಯಲ್ಲದೆ ಪೊಸಬಗೆ ಮತ್ತೊಂದಾವುದು ಪೇಳು
ಸಲ್ಲದೆಂದು ನಿನ್ನ ಕ್ಲಿಪ್ತಿ ಮೀರಿ ನುಡಿಯೆ
ಎಲ್ಲ ಯತನಗಳು ಯಥಾರ್ಥವಾಗುವುದು
ಫುಲ್ಲಲೋಚನ ರಂಗಾ ವಿಜಯ ವಿಠ್ಠಲ ಸಿರಿ
ವಲ್ಲಭ ನಿನ್ನ ಕ್ಲಿಪ್ತಿಯಲ್ಲದೆ ಅಧಿಕ ಉಂಟೆ ೫
ಜತೆ
ಭಕ್ತರ ವಶವಾಗಿ ಬಹು ಚೇಷ್ಟೆ ಮಾಡಿಸುವ
ಶಕ್ತ ಕ್ರಿಯಾ ವಿಜಯ ವಿಠ್ಠಲ ದೀನ ಉದ್ಧಾರ ೬

ಆಸೆಯನ್ನು ಜಯಿಸುವುದು ಸುಲಭವಲ್ಲ

೫೨
ಧ್ರುವತಾಳ
ನಾಡೊಳಗೆ ಎನಗೆ ಈಡಾದ ಕರ್ಮಿಯ
ನೋಡಿದರಿಲ್ಲ ಏಸೇಸು ಕಾಲಕ್ಕೆ
ಮಾಡುವಾಚಾರವ, ನೋಡಲು ಕಂಡವರು
ಜೋಡಿಲ್ಲವೆಂದು ಕೊಂಡಾಡುವರು
ಗೂಡಿನೊಳಗೆ ಪಾಪ ಗೂಢವಾಗಿಪ್ಪುದು
ಕೂಡಿ ಹಾಕಿದರೆ ನೂರು ಮಡಿ ಮೇರುವಿಗೆ
ಆಡಲೇನದು ಎನ್ನ ಮೂಢ ವಿಧಿಗಳು
ಕಾಡಿಗೆ ಕಾಳ, ಬೆಳದಿಂಗಳಯ್ಯ
ನೀಡಿ ಕೈ ಚಾಪವ ಹೂಡಿ ಬಾಣವನೆಚ್ಚು
ಕಾಡುವ ಪಾಪದ ಗೂಡ ಕತ್ತರಿಸು
ಮೂಡಲಗಿರಿಸದನ ವಿಜಯ ವಿಠ್ಠಲ ಎನ್ನ
ಹೂಡಿ ನಿನ್ನವರೊಳು ಪಾಡು ಪಂಥವಬಿಡಿಸಿ ೧
ಮಟ್ಟತಾಳ
ಶಬ್ದಾದಿಗಳಲ್ಲಿ ಉಬ್ಬಿ ಉತ್ಸಹನಾಗಿ
ಮಬ್ಬು ಕವಿದಂತೆ ಗಬ್ಬು ದೇಹದಲ್ಲಿ
ಹಬ್ಬಿದ ಪಾಪದ ನಿಬ್ಬಡಿ ತಿಳಿಯದೆ
ಶಬ್ದ ಸಿಂಹಾಸನ ವಿಜಯ ವಿಠ್ಠಲ ನಿನ್ನ
ಶಬ್ದವನು ಬಿಟ್ಟು ಕೊಬ್ಬಿದವನಾದೆ ೨
ತ್ರಿವಿಡಿತಾಳ
ಕಾಷ್ಟಕ್ಕೆ ತೈಲವ ಪೂಸಿ ಪರಿಪರಿಯಲ್ಲಿ
ಕೋಷ್ಟದೊಳಗೆ ಮೆರೆಸಿ ಪ್ರೇಮದಿಂದ
ವಿಷ್ಣುಪದಿಯೊಳಗದ್ದಿ ತೆಗೆದರೆ ಏನು
ಪುಟ್ಟುವುದೇನದಕೆ, ಪ್ರತಿ ಪೆಸರು
ಭ್ರಷ್ಟ ಮಾನವ ನಾನು ಎಷ್ಟು ಮಾಡಿದರೇನು
ನಿಷ್ಠೆನಾಮ, ವಿಜಯ ವಿಠ್ಠಲ ಎನ್ನಂಗದ
ಕಿಟ್ಟವ ಕಳೆದು ಪುಟವ ಹಾಕಿಸುವರು ೫
ಅಟ್ಟತಾಳ
ಆಶೆಯೆಂಬುದು ಆಕಾಶಕ್ಕೆ ಮುಟ್ಟುತಿದೆ
ವಾಸುದೇವ ನಿನ್ನ ನೆನೆಸುವೆನೆಂದರೆ
ಬ್ಯಾಸರಿಕೆ ಪುಟ್ಟಿ ಬೈದುಕೊಂಬೆನಯ್ಯ
ಈ ಶರೀರವು ಎಲ್ಲಿ ಬಂತು ಎಂದು
ವಾಸುದೇವ ನಾಮ ವಿಜಯ ವಿಠ್ಠಲ ನಿನ್ನ
ವಾಸನೆ ಎಂದಾರು ಬೀಸುವುದೆ ಸರಿ೪
ಆದಿತಾಳ
ಆವಕಾವ ಗೋವ, ಚಾಲವರಿದು ಕೂಗಿ ಶುದ್ಧ
ಲಾವಕರಟ್ಟುಳಿ ಬಿಡಿಸು, ದೇವ ದೇವ ದೇವ ನೀನೆ
ಪಾಲು ಉಳಿಯೆ ಚೆಲ್ಲಿ ಚಿನ್ನಾಟವಾಡುವುದಯ್ಯ
ಪಾಲಿಗಿಂದಧಿಕ ಶ್ರೀ ಹರಿ ನಿನ್ನ ನಾಮಗಳು
ಆಳಾಗಿ ಸವಿಯಲು ವಶವಾಗದೆ
ಕೇಳೊ ಎನ್ನ ಯೋಗ್ಯತದಷ್ಟು ಫಲಿಸಿತು
ಮೇಲಾಗಿದ್ದದ್ದೆಲ್ಲ ಧರಿಯೆಲ್ಲ ತುಂಬಿತು
ಬೋಳೈಪ ಬಲ್ಲನೆ ಹರಿವ ಪ್ರವಾಹವ
ಲಾಲಿಪದು ಎನ್ನ ಬಿನ್ನಪವ
ಕಾಳು ಕಾಣದಲಿದ್ದು ಬಳಲುವಂಥ ಒಂದು
ಕೋಳಿಯ ರಾಶಿಗೆ, ಕಾಯಲಿದೆ
ಆಳಿದವನ ಮಾತು ಮನ್ನಿಸಿ ಮತಿಯಿಂದ
ಕಾಲ ಘಳಿಗಿ ಸುಮ್ಮನೆ ಇಪ್ಪುದೆ
ಕಾಲಿನಿಂದಲಿ ಕೆದರಿ ತನ್ನ ಸುತ್ತಲು ಇದ್ದ
ಕೋಳಿಗೆ ತಿನಿಸದೇ ಬಿಡಬಲ್ಲದೆ
ಬಾಲ ಮತಿಯು ನಾನು ನಿನ್ನ ಗುಣಗಳೆಂಬೊ
ಸಾಲು ರಾಶಿಗಳಿರೆ ಅದರೊಳೊಂದು
ಆಳಾಗಿ ಇದ್ದು ನಿತ್ಯ ಕಾಯೆಂದಡೆ ಎನ್ನ
ನಾಲಿಗೆ ತಾ ಸುಮನಿಪ್ಪುದೆಂತೊ
ಊಳಿಗದವನಾದೆ ಇದಕಲ್ಲದೆ ಇತರ
ಆಲೋಚನೆಯಿಲ್ಲ ಮನದೊಳಗೆ
ನೀಲಮೇಘ ಶ್ಯಾಮ ವಿಜಯ ವಿಠ್ಠಲನೆ, ದ-
ಯಾಳೆ ಎನ್ನ ಫಾಲಲಿಪಿ ಇಂತುಂಟೆ ದೇವ ೩
ಅಟ್ಟತಾಳ
ವಾರಿಧಿಗೆ ಪೋಗಿ ವಾರಿದನು ಬೇಗ
ವಾರಿ ತುಂಬಿ ತಂದು ಧಾರುಣಿಯೊಳಗೆ ವಿ-
ಸ್ತಾರ ಮಳಿಯನು ಸಾರಿ ಸಾರಿಗೆ ಕರೆದರೆ ಬೇಸರತನವೆ
ಆರಿಗಾದರು ಪುಟ್ಟಿ ಸಾರಲಿ ಎಂಬುದು
ನಾರಾಯಣ ನಿನ್ನ ಚಾರು ನಾಮದರಸ
ಧಾರುಣಿಯೊಳು ನಾನು ಬೀರಿದರೆ ಕೆಲ
ಸಾರಿಗೆ ಸಾಕೆಂದು ಮೋರೆ ತಿರುವೋರೆ
ಆರಿಗಾದರು ಸಂಸಾರ ನಿವರ್ತಿಯಾ
ವಾರಿದಗೇನು ವಿಕಾರತನವುಂಟೆ?
ವಾರಿಜಪತಿ ನಮ್ಮ ವಿಜಯ ವಿಠ್ಠಲ ನಿನ್ನ
ದೂರಿದೆನೇನೊ ಉದ್ಧಾರನಾಗುವೆನೆಂದು ೪
ಆದಿತಾಳ
ಇದ್ದ ಗುಣಂಗಳೆ ಬುದ್ಧಿಗೆ ಪೊಳೆದಷ್ಟು
ಬದ್ಧವಾಗಲಿ ಅಪಶಬ್ಧವಾಗಲಿ ಇದೆ
ಸಿದ್ಧವಾಗಲಿ ಅಪ್ರಸಿದ್ಧವಾಗಲಿ ಪ್ರಮೇಯಾ
ಪದ್ಧತಿಗಳು ನುಡಿವೆ ಪೊದ್ದಿಕೊಂಡು ನಿನ್ನಂಘ್ರಿ
ಪದ್ಮವನನುದಿನ ಹೃದ್ವನಜದೊಳಗಿಟ್ಟು
ಶುದ್ಧಮತಿಯಲ್ಲಿ ಊಧ್ರ್ವಗತಿ ಬಯಸುವೆ
ನಿದ್ರಾರಹಿತ ದೇವ ವಿಜಯ ವಿಠ್ಠಲ ಜಗ
ದೋದ್ಧಾರ ನೀನೊಲಿಯದಿದ್ದರೆ ಗತಿಯಿಲ್ಲ ೫
ಜತೆ
ಈ ಕ್ಷಣದಲಿ ಏನು ಫಲಸಿದ್ಧ ಫಲವಯ್ಯ
ನಿಕ್ಷೇಪ ಅಹುದಯ್ಯಾ ವಿಜಯ ವಿಠ್ಠಲ ಎನಗೆ ೬

ಜೀವರಿಗೆ ದತ್ತ ಸ್ವಾತಂತ್ರ್ಯವೆಂಬುದುಂಟೆಂದು

೬೭
ಧ್ರುವತಾಳ
ನಾನಲ್ಲ ನಾನಲ್ಲ ನಾನಾ ಕ್ರಿಯಾ ಕರ್ಮಂಗಳು
ಅನಾದಿಯಿಂದ ಎನಗೆ ಕವರ್ಇದಾಧಾರ ಮಾಡಿ
ಹಾನಿ ವೃದ್ಧಿಗಳೆಲ್ಲ ಕಲ್ಪಿಸಿ ಕಂಗೆಡಿಸಿ
ಯೋನಿ ಯೋನಿಗಳಲ್ಲಿ ಜನಿತನೆನಿಸಿ
ನೀನೆ ಈ ದೇಹದೊಳಗೆ ವ್ಯಾಪ್ತಬಲ್ಲವನಾಶಿ
ನಾನೆಂಬೋದು ನುಡಿಸಿ ತಿಳಿಯಗೊಡದೆ
ನಾನಾ ನರಕಗಳಲ್ಲಿ ಹಾಕಿ ನೀನೊಡನಿದ್ದು
ಬೇನೆ ಬಡಿಸಿದ ಬಲು ವಿನೋದ
ತ್ರಾಣವಂತನೆಂದರೆ ನೀನಲ್ಲದಿಲ್ಲಾ ಗೀ
ರ್ವಾಣಾದ್ಯರ ಮಧ್ಯದಲ್ಲಿ ನೋಡೆ
ಪ್ರಾಣನಾಗಿದ್ದು ಎನ್ನ ದು:ಖ ಸ್ಪಷ್ಟನ್ನ ಮಾಡಿ
ಈ ನಿರಂತರ ಇನಿತು ಮಾಡಿಸಿದೆ
ಏನೆಂಬೆನಯ್ಯಾ ನಿನ್ನ ಮಹಾವ್ಯಾಪಾರಕ್ಕೆ
ನಾನಿದೆ ಪೂರ್ವದಲ್ಲಿ ತಿಳಿಯದಾದೆ
ಜ್ಞಾನವಜ್ಞಾನವೆರಡು ನಿನ್ನಾಧೀನವಾಗಿದೆ
ನಾನು ನನ್ನದೆಂಬೊ ಉತ್ತರಗಳು
ಹೀನ ಉತ್ತಮವಾದ ನುಡಿಗಳಾಡುವಾಗ
ಮನದಲ್ಲಿ ಇದಂತಾಗದೇನೊ
ನೀ ನಡಿಸಲು ನಡಿವೆ ನೀನು ನುಡಿಸಲು ನುಡಿವೆ
ಈ ನುಡಿ ಹಿರಿಯರು ಪೇಳಿಪ್ಪರು
ಶ್ರೀನಿವಾಸ ರಂಗ ವಿಜಯ ವಿಠ್ಠಲರೇಯ
ಕಾಣಿಸಿ ಕೊಳ್ಳದಲೆ ಇನಿತು ಸುತ್ತಿಸ್ಯಾಡಿದೆ ೧
ಮಟ್ಟತಾಳ
ಎನಗೆ ಕರ್ತತ್ವವು ಕೊನೆ ಮಾತುರ ಉಂಟು
ಅನುದಿನದಲಿ ನಿನ್ನಾಧೀನವೆಂಬೊ ಮಾತು
ಸನುಮತವೆ ಸರಿ ಸನಕಾದಿಗಳೊಡಿಯ
ಇನಿತಾದರು ನೀನೆ ಎನಗೆ ಪ್ರೇರಿಸದಲೆ
ಅನಬಲ್ಲನೆ ನಾನು ಕನಸಿಲಿ ಮನಸಿಲಿ
ಕನಿಕರಿಸಿದಾಗ ಅನಿಮಿಷ ದಾನವಗಣದ ಜೀವಿಗಳೊಳು
ಮನೆ ಮಾಡಿಕೊಂಡಿದ್ದು ಕ್ಷಣ ಕ್ಷಣಕೆ ಪ್ರೇ
ರಣೆ ಮಾಡಿ ಅವರಿಂದ ಘನ ಪುಣ್ಯ ಪಾಪ
ವನು ಮಾಡಿಸಿ ಅದನೆ
ಅನುಭವಿಸ ಮಾಯವನೆ ನೇಮಿಸಿ ನಗುವ
ಘನ ಕೃಪಾವನಧಿ ಎಣೆಗಾಣೆನು ನಿನ್ನ
ಮನ ಉತ್ಸಾಹಕೆ ಎಣಿಸಿ ಕಡೆಯ ಮಾಡಿ
ಗುಣವ ಪೇಳುವರಾರು
ಅಣುದೊಳಗತ್ಯಣವೆ ವಿಜಯ ವಿಠ್ಠಲರೇಯ
ಘನ ಘನ ಮಹಾ ಘನಕೆ ಘನವಾದ ದೈವಾ ೨
ತ್ರಿವಿಡಿ ತಾಳ
ಹಲವು ಜನರು ಕೇಳಿ ಹರಿಯ ಪೂರ್ಣ ಶಕ್ತಿ
ಬಲುಪರಿ ಪೊಗಳಲು ಸವೆವಿಯಾದವಯ್ಯಾ
ಒಳಗೆ ಹೊರಗೆ ತಾನೆ ಸರ್ವವ್ಯಾಪುತನಾಗಿ
ಕೆಲಕಾಲ ನಡಿಸುವ ತೊಲಗದಲೇ
ಹುಲ್ಲು ಜೀವಿಗಳ ಶಕ್ತಿ ಎಣಿಸಿದರಲ್ಲೇನೊ
ಫಲವಿಲ್ಲವು ಕಾಣೊ ಕಂಡ ಮಾತು
ತಿಳಿ ಆದಿ ಸೃಷ್ಟಿಲಿ ತಾತ್ವಿಕರು ಕೂಡಿ
ನೆಲೆಗಾಣದಲೆ ಪೋದರ್ಯಾಕೊ ಪೇಳೂ
ಬಲವಂತರಾದರೆ ಒಬ್ಬರ ಮೊರೆ ಬಿದ್ದು
ಸಲಹೆಂದು ನಮಿಸಿ ಕೊಂಡಾಡಲ್ಯಾಕೆ
ಜಲಜನಾಭನು ತನ್ನ ಕೃಪೆಯಿಂದ ಜೀವಿಗಳ
ಉಳಹಿಕೊಂಡಿಪ್ಪನು ಮಹಿಮೆ ತೋರಿ
ಮೃತು ಎದಿರುನಿಂತ ಶಕ್ತಮಹರುದ್ರನ್ನ
ಶಿಲಿಯಂದದಿ ಮಾಡಿ ನಿಶ್ಚೇಷ್ಟದಿ
ನಿಲಿಸಿದನು ನೋಡು ಮಹಾ ಪ್ರಬಲವಂತ
ಹಳಿದು ಬಿಡುವನೇನು ಮಾಳ್ಪಮಾಟ
ಜಲನಿಧಿಶಯನನು ಮುಳಿದು ನಗೆಯಿಂದ
ಕೊಲ್ಲುವೆನೆಂದರೆ ಅಲ್ಲಿ ಲೇಶ ಮಾತ್ರಾ
ಉಳಿದು ಮತ್ತೆನಿತು ಯೋಚಿಸಿ ನೋಡಿದರು
ಒಲಿದು ಕೇಳಿ ಜನರು ಹರಿಯ ಲೀಲೆ
ಸುಲಭ ಜಗತ್ಪಾಲಾ ಉದಾಸೀನ ಮಾಡಿ
ನೆಲೆಗೊಳೆಸಿ ಇಪ್ಪ ಎಂದೆಂದಿಗು
ನೆಲದ ಮೇಲೆ ಶಿಶುವು ಬೀಳುವಾಗಲದಕೆ
ತಿಳಿದು ನೋಡಿದರೆಷ್ಟು ಸ್ವಾತಂತ್ರವೊ
ನೆಲೆಯಾಗಿಪ್ಪದು ಅಷ್ಟನಾದರು ಕೇ
ವಲ ಹರಿಯಾಧೀನವೆನ್ನಿ ಬಿಡದೆ
ಗಲಭೆಯೊಳಗೆ ವಾಸ ವಿಜಯ ವಿಠ್ಠಲರೇಯ
ಉಳಹಲು ಉಳಿವೇವು ಸತ್ಯ ಸಂಕಲ್ಪನು ೩
ಅಟ್ಟತಾಳ
ಸುಜನರ ಕೈಯಿಂದ ಪಾಪವ ಮಾಡಿಸಿ
ನಿಜ ಬುದ್ದಿಯನು ಕೊಟ್ಟು ಸದ್ಗತಿ ಪಾಲಿಪ
ಕುಜನರ ಕೈಯಿಂದ ಸತ್ಕರ್ಮ ಮಾಡಿಸಿ
ಭಜನೆಗೆಡಿಸಿ ಐದುಸುವ ಪಾಪದ ಮಾರ್ಗ
ಸುಜನಕ್ಕೆ ಕುಜನಕ್ಕೆ ದೃಷ್ಟಾಂತರ ಉಂಟು
ತ್ರಿಜಗದೊಳಗಿದು ಸಿದ್ಧಾಂತವೊ
ಅಜಮಿಳ ನೋಡು ಕೆಟ್ಟು ಹೋಗಿದ್ದರು
ರಜದೂರನ ಮಾಡಿ ಹರಿ ಕಾಯಿದ
ಕುಜನ ಬುದ್ಧರ ಸುನ್ಮಾರ್ಗದಲ್ಲಿರೆ ದ
ನುಜರಿಪು ಬುದ್ಧನಾಗಿ ಕೆಡಿಸಿದ
ಗಜವರದ ಇಂತ್ಯಾಕೆ ಮಾಡಿದನೆನೆ
ಅಜಪಿತನ ಇಚ್ಛೆ ಅಂಥಾದೆ ಆಂಥಾದೆ
ಅಜರಾ ವೈಚಿತ್ರಕಾಲೋಕಾ ವೈಲಕ್ಷಣ
ವಿಜಯ ವಿಠ್ಠಲರೇಯಾ ನಿಜ ಇಚ್ಛೆ
ನಿಜ ಕ್ರೀಡೆ ನಿಜ ಜ್ಞಾ ನಂದಾ ೪
ಆದಿತಾಳ
ತನಗೆ ತಾನೆ ತರ್ಕೈಸಿ ಸುಜನಕೆ ಸುಖವನೀವ
ತನಗೆ ತಾನೆ ತರ್ಕೈಸಿ ಖಳರಿಗೆ ಕ್ಲೇಶ ಕೊಡುವ
ಅನಿಮಿಷರಿಗೆ ಪ್ರಿಯ ದೈತ್ಯರಿಗಪ್ರಿಯ
ಅನುದಿನ ಅವರವರ ಜನನಮರಣ ಪರಿಯಂತ
ಇನ ವಂಶಜ ರಾಮಾ ಭೃಗುವಂಶಜ ರಾಮಾ
ನೆನಿಸಿಕೊಂಡು ಕಾದಿ ಖಳರ ಸಂಹರಿಸಿದ
ಸನುರುಚಿಯಾದ ಜನರ ಇದರಂತೆ ಪಾಲಿಸುವ
ಅನುಮೈಸುವದು ಹರಿಯ ಪದ ಭಕುತಿ ಬಲ್ಲವರಾರು
ಎನಗಾವ ಸ್ವಾತಂತ್ರ ಇದ್ದರಾದರು ಪ್ರಯೋ
ಜನಕೆ ಬಾರದಿರೆ ಇದ್ದರು ಇಲ್ಲ ಕಾಣೊ
ವನಜನಾಭನೆ ನೀನೆ ಸ್ವಾತಂತ್ರ ತೆಗೆದು ಕೊ
ಟ್ಟನು ಎಂದು ವೇದದಲಿ ಸಾರಿ ಪೇಳುತಿದೆ
ಎನಗೆ ಮೊದಲಿದ್ದಿಲ್ಲದೆ ಇತ್ತದರಿಂದಲಿ
ನಿನಗೆ ಕಡಿಮೆ ಎಂದು ಯೋಚನೆ ಪುಟ್ಟುತಿದೆ

ರು ಪರಮಭಕ್ತಿಯಿಂದ

೭೭. ಪಂಢರಪುರ
ರಾಗ:ಪಂತುವರಾಳಿ
ಧ್ರುವತಾಳ
ನಾನಾ ಪರಿಯಿಂದ ನಿನ್ನ ಚರಣಾಬ್ಜಾ |
ಮಾನಸದಲ್ಲಿ ಧ್ಯಾನಿಸೆ ಕಾಣಿಸದಿಪ್ಪ ಕಪಟವೇನಯ್ಯಾ |
ನಾನು ಬಲು ಅಪರಾಧಿಯೋ ಸ್ನಾನ ಸಂಧ್ಯಾವಿಲ್ಲದಿರೇ ವಿಪ್ರ |
ಯೋನಿಯಿಲ್ಲವೆ? ಜಾತಿಯು ಭಾನುಕೋಟಿತೇಜಾ ಭಕ್ತರ |
ಧೇನು ಸಂತತ ದಯಾಂಬುಧಿ |
ಹೀನಯೋನಿಜ ಮಾನವರು ನಿನ್ನ ಏನು ತುತಿಪಾರು ಕೇಳಿದಯ್ಯಾ |
ನೀನೆ ತಾವೆ ಎಂದು ಭಜಿಸಿ ಇಂಥ |
ಅಜ್ಞಾನ[ದಿ] ಕುಣಿವಾರತಿ ಏನೆಂಬೆ ನಿನ್ನ ಮಾಯಾಶಕ್ತಿಗೆ |
ಆನು ವಿಸ್ಮಿತನಾಗುವೆ ಶ್ರೀ ನಾರಿಪತಿ ಬೊಮ್ಮನಯ್ಯಾ ಕೃ |
ಶಾನು ನೇತ್ರನ ತಾತನೆ ಆನಿರ್ಜರಾದಿ ವಂದ್ಯ ಮಮ ಸ್ವಾಮಿ |
ಈ ನುಡಿ ನಿನಗದೋ ಮಾಣಿ ನಿನ್ನ ಸ್ವಭಾವ ಎಂದಿಗೂ |
ಮಾಡಿಯಲ್ಲಾವೆ ಪಿರಿಯನೆ ಮಾಡಿತಾ ಕಾಣಿಕೆ ಇತ್ತು |
ದೀನತನದಲ್ಲಿ ಬಾಯಿದೆರೆದು ಪ್ರಾಣನಾಗಿ ಇರು ಎಂದರೆ |
ನಾನೊಲ್ಲೆನೆಂಬೋಗಾದಿಯೋ |
ಕಾಣಿಗಾಗದ ಕಾಡಗಲ್ಲಾನು ಪಾಣಿಯೊಳು ತೋರಾಲು |
ಮೌನದಲ್ಲಿ ಬಂದು ಅವನ ಬಳಿಯಲ್ಲಿ ಮಾನವಂತ ನಿಲವಂತೆ |
ಹೂಣ, ಕಂಕ ಕಿರಾತ ಪುಲಕಸ ಹೀನಜಾತಿಗಳಿಂದಾದ |
ನೀನೆ ಪರದೈವ ಸರ್ವೋತ್ರ‍ಕಷ್ಟನೆಂಬೋ |
ಜ್ಞಾನ ಬಂದಿರಬ್ಯಾಡವೇ ನಾನಾ ಪರಿಯಲಿ ನಿನ್ನ ಚರಣಾಬ್ಜಾ |
ಏನೂ ತಿಳಿಯದಾ ಪಶುವಿಗಳಿಗೆ |
ನೀನೆ ಒಲಿವೊದು ಎಂತಯ್ಯಾ ಆನಂದ ಪಂಢರಿಪುರಿರಾಯಾ |
ಮಾನಿಸರೂಪ ವಿಜಯವಿಠಲ ನಾನು ನಿಗಲ್ಲದವನೇನೊ ೧
ಮಟ್ಟತಾಳ
ಭಕುತಿಭಾರಣೆಯಿಂದ ನಿನ್ನರ್ಚನೆ ಮಾಡಿದ |
ಭಕುತಜನ[ರಿ]ಗಿಂತ ಮಾಯಾದ ಸೊಬಗೆ |
ಅಖಿಳ ಶಕ್ತಿ ಉಳ್ಳ ಅನಿಮಿತ್ಯ ಬಂಧು |
ಲಕುಮಿವಲ್ಲಭ ನಮ್ಮ ವಿಜಯವಿಠಲರೇಯಾ |
ಮುತ್ತಾ ಕೇಳಿಗೆ ಒಲಿದ ಪಂಢರಪುರಿರಾಯಾ ೨
ತ್ರಿವಿಡಿತಾಳ
ಎಲ್ಲಾರಿಗೆ ಇಂತು ಮೋಹಾವೆ ಕಲ್ಪಿಸಿ |
ಗಲಭೆ ಎಬ್ಬಿಸಿ ನಾನಾ ಪರಿಯಿಂದ |
ಸೊಲ್ಲುಗಳಾಡಿ ಕಂಡಲ್ಲೆ ತಿರುಗುತಿಹರು |
ಎಲ್ಲಾ ಮಾತೆಂಬಿಯಾ ತ್ರಿವಿಧ ಜೀವರ ಭೇದ |
ಇಲ್ಲದಂತಾಗುವದಲ್ಲೋ ಜೀಯಾ |
ಎಲ್ಲೆ ಸ್ತೋತರವಿದು ಕರ್ನಕ್ಕೆ ಕಠೋರ |
ನಿಲ್ಲಾದೆಯಾಗುತಿದೆ ನಿರ್ದೋಷನೆ |
ಬಲ್ಲೆನೋ ನಾ ನಿನ್ನ ವಂಚಕತನವು, ಶ್ರೀ |
ವಲ್ಲಭ ಕೇಳೆಲೋ ಜಾರಚೋರ |
ಕೊಲ್ಲುವ ಮೃಗಗಳಿಗೆ ಪರಿಪರಿವಿಧದಿಂದ |
ಹುಲ್ಲು ನೀರೆರೆದು ಸಂತೋಷಬಡಿಸಿ |
ಎಲ್ಲಾ ಪರಿಯಿಂದ ಮೆಚ್ಚಿಸಿ ಕೊನೆಗೆ, ತಾ |
ನೊಲ್ಲದೆ ಹಿಂಸೆಯಾ ಮಾಡುವಂತೆ |
ಇಲ್ಲಿಗೆ ಬರುವ ಮಾನನರಿಗೆ ಇದರಂತೆ |
ಮೆಲ್ಲನೆ ಸವಿತೋರಿ ಐಹಿಕ ಸುಖವ |
ಅಲ್ಲಿಗಲ್ಲಿಗೆ ಇತ್ತು ಕಡಿಗೆ ಕೆಡಿಸುವ ಯೋಗಾ |
ಮಲ್ಲಮರ್ಧನ ನಿನ್ನದು ನಿಶ್ಚಯಾ |
ಖುಲ್ಲಾ ಏಕಲವ್ಯ ಗುರುಭಕ್ತಿ ಮಾಡಿ ಘನ |
ಬಿಲ್ಲು ವಿದ್ಯವ ಕಲೆತು ಕೆಡಲಿಲ್ಲವೇ |
ಹೊಲ್ಲೆ ಜೀವರು ಭಕುತಿಮಾಡಿದರು ಫಲವಿಲ್ಲ |
ಇಲ್ಲವೊ ಏಸು ಜನುಮಕ್ಕೆ ದೇವ |
ಗೊಲ್ಲವಲ್ಲಭ ನಮ್ಮ ಸ್ವಾಮಿ ವಿಜಯವಿ |
ಠಲ ಪಂಡರಿರಾಯಾ ನಿನಗೆ ನಮೋ ನಮೋ ೩
ಅಟ್ಟತಾಳ
ಕಲಿಯುಗದೊಳಗಿಂದ ಧರ್ಮ ಹೆಚ್ಚಿತು ಕಾಣೋ |
ತಲೆದೂಗಿ ಪಾಡೋದು ಪೂರ್ವೋತ್ತರಾ ಜ್ಞಾನ |
ಕೆಲವು ಕೆಲವು ಇಲ್ಲದಲೆ ಸರಿ ಬಂದಂತೆ |
ಜಲಜನಾಭನೆ ನೀನೆ ಇದರೊಳಗಾವವ |
ನೆಲೆವಂತರಿಪ್ಪಾರೋ ತಿಳಿದಪ್ಪ ಚನ್ನಾಗಿ |
ಚಲುವ ಅಪ್ರಾಕೃತಗಾತುರ ಎನಗಿಂತು |
ತಿಳಿದಿಪ್ಪದು ಪಂಚಭೇದ ತತ್ವಜ್ಞಾನ |
ಒಳಿತಾಗಿ ಒಲಿಸಿ ಸಂಪಾದಿಸದೆ [ಉ]ನ್ನತ |
ಸುಲಭ ಮುಕುತಿಯಾಗದೆಂದು ಅನುದಿನ |
ಬಲವಂತ ವಿಜಯವಿಠಲ ಪಂಢರಿಪುರ |
ನಿಲಯಾ ನಿನ್ನಿಚ್ಛೆ ಮತ್ತಾವುದೂ ಕಾಣೆ ೪
ಆದಿತಾಳ
ಅವರಂತಿರಲಿ ನೀ ನನಗೆ ಸರಿಬಂದ ಗತಿಯಾಕೊಡು |
ತವಕದಿಂದಲಿ ಎನ್ನ ಬಿನ್ನಪ ಲಾಲಿಸಯ್ಯಾ ದಿವಸ |
ದಿವಸಕ್ಕೆ ಕ್ರಮಾನುಸಾರವಾಗಿ |
ನವನವರೂಪವನ್ನು ತೋರುತ್ತ ಸಲಹಬೇಕೋ |
ಅವಗುಣ ಎಣಿಸದಲೆ ಕರಪಡಿದು ಉದ್ಧರಿಸು |
ಭವದೂರ ಭಕುತವತ್ಸಲಾ ದಿವಿಗಂಗಾಸ್ನಾನ ಪಾದದರುಶನ |
ಲವಲವಿಕೆಯಿಂದ ಸುಜನರ ಸಂಗವಿತ್ತು |
ಪವನಾಂತರಯಾಮಿ ಮಾಡಿಸೋ, ನಿರ್ವಿಘ್ನ |
ಅವನಿ, ಜಲ, ತೇಜ, ವಾಯು, ಗಗನದಲ್ಲಿ ನೀನೆ |
ವಿವರಿಸಿ ಪೇಳುವುದೇನು ವಿಶ್ವಂಭರ ಕೃಷ್ಣ |
ಶಿವನಂದನ ವಾಸ ವಿಜಯವಿಠಲರೇಯ |
ಕವಿ ಪುಂಡರೀಕ ವರದ ಪಂಢರಿಪುರರಾಯಾ ೫
ಜತೆ
ಶರಣು ಶರಣು ನಿನ್ನ ಚರಣಾಬ್ಜಯಗಳಕ್ಕೆ |
ಕರುಣ ಪಂಢರಿಪುರಿ ವಿಜಯವಿಠಲರೇಯಾ ೬

ಪ್ರಪಂಚದಲ್ಲಿ ಎಲ್ಲರಿಂದಲೂ ಪೂಜೆಗೊಂಬುವವನು

೬೮
ಧ್ರುವತಾಳ
ನಾನು ಯಾತರ ಪೂಜ್ಯವಾನನೊ ವಾಸುದೇವ
ನೀನೊಲಿದು ನಡಿಸಲಾನು ಬಲು ಪ್ರತಿಷ್ಠ
ದೀನ ನರರಿಗೆ ಶುದ್ಧ ಪಾನ ಪಾಡಿಸಿ ದಿವ್ಯ
ನಾನಾ ಪರಿಮಳ ಲೇಪನ ಮಾಡಿ ಕೊರಳಿಂಗೆ
ಮಾಣಿಕ್ಯಹಾರವು ಪ್ರಸೂನಾ ಮಾಲಿಕೆಗಳೂ
ತಾನಿಡಲಿತ್ತು ಕಾಂಚನ ಭೂಷಣ ವ
ಸನದಿಂದಲಿ ಅವನಿಗೆ ಮೇಣು ಉತ್ಸಾಹ ಗೈಸಿ
ಪಾಣಿಯೊಳಗೆ ದರ್ಪಣ ಪಿಡಿಯಲಿತ್ತು
ಮಾನಿನೀ ಸಹಿತಾಲಿ ನೀ ನೋಡಿಕೊಂಡು ಸುಖ
ವಾನುಬಡುವದೆಂದು ದೀನನ್ನ ಪರಿಪಾಲಿಸಿ
ಆನಂದ ತೋರಿದಂತೆ ನೀನನುದಿನ ಕರುಣವ ಮಾಡಿ
ಅದನೆ ನಡಿಸಾನು ಕೃತಾರ್ಥನೊ
ನೀನಿತ್ತ ಪುಣ್ಯವಿದು ನೀನಿತ್ತ ಫಲವಿದು
ನೀನೀಯದಿರೆ ಒಂದನು ಒಂದಾದರೂ
ತಾನಾಗಿ ಬಂದೂ ಎನಗಿನಿತು ಇಪ್ಪವೆ
ಗಾನ ಮಾಡಲು ನಾನೆಲ್ಲಿ
ಪ್ರಾಣನಾಯಕ ನಮ್ಮ ವಿಜಯ ವಿಠ್ಠಲರೇಯಾ
ನೀನಾಧಾರವಾಗೆ ನಾನಾ ಸಂತೋಷ ಎನಗೆ ೧
ಮಟ್ಟತಾಳ
ಜ್ಞಾನೇಂದ್ರಿಯದಲ್ಲಿ ನೀನೆ ವಾಸವಾಗಿ
ಕರ್ಮೇಂದ್ರಿಯದಲ್ಲಿ ನೀನೆ ವಾಸ
ಜ್ಞಾನ ಕರ್ಮೇಂದ್ರಿಯಗಳಲ್ಲಿ ನುಡಿಸುವ ನಡೆಸುವ
ಸ್ಥಾನದಲಿ ಸರ್ವ ಬಿಡದೆ ನೀನೆ ವಾಸ
ನೀ ನೋಡಿದರಾನು ನೀ ಪಿಡಿದರಾನು ನೀ ನಡದರಾನು
ನೀನೆ ನಾನಾ ಇಂದ್ರಿಯದೊಳಗೆ ಇದ್ದು
ಏನೇನು ಪರಿಮಾಡೋ ನಾನದರಂತೆ ಚರಿತೆಯೊಳಗಿಪ್ಪೆ
ನೀನಲ್ಲದೆ ಸ್ವತಂತ್ರ ಪುರುಷರುಂಟೆ
ನೀನೆ ನಿರ್ದೊಷ ವಿಜಯ ವಿಠ್ಠಲರೇಯ
ನೀನೆ ಕಾರಣ ಸರ್ವ ಜಗತ್ತ್ಯಕ್ಕೆ ೨
ತ್ರಿವಿಡಿ ತಾಳ
ಯೇಧ ಮಾನಾದ್ಪಿಟು ಎಂಬ ಬಿರಿದು ನಿನ್ನದು
ಆದಿವಿಡಿದು ಸಿದ್ಧವಾಗಿದುದೆ ಎಲೊ ದೇವ
ನೀ ದಯವನು ಮಾಡಿ ಯಾವತ್ತು ಪ್ರೇರಿಸಿ
ಸಾಧನ ಮಾಡಿಸಲದರಿಂದ ಮುಕುತಿಗೆ
ಹಾದಿಯಾಗುವುದು ಕ್ಲಿಪ್ತಿಗೆ ಕಡಿಮೆನಿಸದು
ಸಾಧುಗಳಿಗೆ ಇದೆ ಸಾಧ್ಯವಾದರೆ ಸಾಕು
ಅಧಿಕ್ಯವೆಲ್ಲೆದೊ ಆಧಿಕ ಮಹಿಮಾ
ಆದಿತ್ಯ ಶಶಿಗಳಿಗೆ ಪುಣ್ಯವೆಗ್ಗಳಿಸಲು
ಸಾಧಿಸಿ ನೀನೆ ಕೊರತೆ ಮಾಡಿದೆ
ಏ ದಯಾಂಬುಧಿಯೇ ಇವರಿಗಿನಿತು ಫಲ
ನಾದಾವ ಎಡೆವನೊ ಎನ್ನ ಯೋಗ್ಯತಾವೆಷ್ಟು
ಈ ಧರೆಯೊಳು ಪುಟ್ಟಿ ನಾನಾ ಬಗೆ ಅಪರಾ
ಧದವನೊ ನಾನು ಯಾದವೇಶಾ
ಓದನಗೋಸುಗ ಕ್ರಮಣ ಮಾಡುವಾನಾ ಆ
ರಾಧನೆಯಲ್ಲಿ ಮುಟ್ಟುವದೋ ಹರಿಯೆ ಕ್ರೋಧ
ತೊರಿಯದವನ ಪುಣ್ಯ ವ್ಯರ್ಥವೆಂದು
ವೇದಶಾಸ್ತ್ರದಲ್ಲಿ ಪೇಳುತಿದೆಕೋ
ವೈದಿಕ ಮಾರ್ಗ ಲೇಶವಾದವರು ಇಲ್ಲಾ
ಸಾಧು ಕರ್ಮಗಳು ಎನಗೆತ್ತಲೋ
ಪಾದದಲ್ಲಿ ತೀರ್ಥ ಪೆತ್ತ ವಿಜಯ ವಿಠ್ಠಲ
ಆದುದೇನೆನ್ನಿಂದ ನೀನೊಲಿಯದಿರೆ ೩
ಅಟ್ಟತಾಳ
ದೇವರಿಲ್ಲದ ಗುಡಿ ಆವಲ್ಲಿದ್ದರೇನು
ಆವನಾದರು ಬಂದು ಸೇವಿಯ ಮಾಡೋನೆ
ದೇವಾ ನೀನೆ ಬಂದು ಭಾವದಲಿ ನಿಂದು ಕಾವುತಲಿರೆ
ಮಾನವರು ಈಕ್ಷಿಸಿ
ಆವುದಾವುದೋ ಸೋಜಿಗವಾಯಿತೆಂದು
ತಾವು ಒದಗಿ ನಿತ್ಯ ಈ ವಿಧ ಮಾಳ್ಪರೊ
ದೇವರಿದ್ದ ಗುಡಿಗೆ ಭಾವುಕ ಸರ್ವದ
ಆವಾವ ನಮಸ್ಕಾರವು ಪ್ರದಕ್ಷಿಣೆ
ಆವಾವ ಸ್ತೋತ್ರವು ಆವನಾದಡೆ ಗೈಯೆ
ದೇವರಿಗಲ್ಲದೆ ದೇವಾಲಯದಲ್ಲಿದ್ದ
ಗ್ರಾವಕೆ ಏನಯ್ಯ ಯಾವತ್ತು ದಿನವಿರೆ
ದೇವಕಿ ನಂದನ ವಿಜಯ ವಿಠ್ಠಲ ಕರು
ಣಾವನಧಿಯೆ ಎನಗಾವದು ನಿಜವೆಂದು ೪
ಆದಿತಾಳ
ನಿನ್ನೊಳಗಿಪ್ಪೆಪೊ
ನಿನ್ನೊಳು ನಡಿವೆವೊ
ನಿನ್ನೊಳಗಾಡುವೆ
ನಿನ್ನೊಳು ಮಲಗುವೆವೊ
ನಿನ್ನೊಳು ಸಂಸಾರ
ವನ್ನೆ ಮಾಡುವೆವಯ್ಯಾ
ನಿನ್ನೊಳಗೂ ನೀನೆ
ಎನ್ನೊಳಗೆ ವ್ಯಾಪ್ತಾ
ವನ್ನೆವಾಗಿಪ್ಪ ಪ್ರ
ಸನ್ನ ಮೂರ್ತಿ ಸತತ
ಚನ್ನಾಗಿ ನೀನು ಮಾರ್ಗ
ವನ್ನೆ ಕೊಟ್ಟು ನಡಿಸು
ವನೆನಿವಾನವಿರೆ
ಎನ್ನ ಉಪಾಯವೇ
ಘನ್ನ ಮಹಿಮ ನಮ್ಮ ವಿಜಯ ವಿಠ್ಠಲರೇಯಾ
ಸನ್ಮುನಿಗಳ ಕೂಡ
ಮನ್ನಣೆ ಕೈ ಕೊಂಬೆ ೫
ಜತೆ
ಭಕ್ತಿ ಸುಧೆಯೊಳು ಮಣುಗಿದ ಮನುಜಗೆ
ಮುಕ್ತಿಗೊಡವೆ ಏನೊ ವಿಜಯ ವಿಠ್ಠಲ ಮೂರ್ತಿ ೬


ಕೃತಿಯುಗದಲ್ಲಿ ಧ್ಯಾನ, ತ್ರೇತಾಯುಗದಲ್ಲಿ

೬೯
ಧ್ರುವತಾಳ
ನಾಮವೆ ನೆನೆಯೋದು ನಾಮಧಾರಿಯಾಗಿ
ನೇಮವ ಬಿಡಬೇಕಾಮೇವ ಹರಿಯೆಂದು
ಕಾಮ ಕ್ರೋಧ ಮತ್ಸರಾದಿ ಮರಿಯಾದಿಗಳ
ನೀ ಮರೆದು ನಿತ್ಯ ರೋಮಾಂಚನದಿಂದ
ತಾಮನ ಗುಣಗಳ ಕಾಮಿಸದಲೆ ನಿ
ಷ್ಠಾಮದಲ್ಲಿ ಬಾಷ್ಪೋದಕ ಸುರಿಸುತ್ತ
ಶ್ರೀ ಮಾರುತನ ಮತದಾ ಮಹೋದಧಿಯೊಳು
ತ್ತಮ ಮನಸಿನಲ್ಲಿ ಶ್ರೀ ಮುದ್ರಿಯನ್ನೆ ಧರಿಸಿ
ಕೋಮಲ ನೀನಾಗಿ ತುಲಸಿ ಮಾಲಿಕೆಯಿಂದ ಶ್ರೀ
ರಮಣ ವಿಜಯ ವಿಠ್ಠಲ ಸರ್ವ
ಸ್ವಾಮಿಯ ಒಂದೆ ಸಾರಿ ನಾಮವೆ ನೆನೆವುದು ೧
ಮಟ್ಟತಾಳ
ಕೃತಯುಗದೊಳಗೆ ಅಪರಿಮಿತ ಧ್ಯಾನವನ್ನು
ಮಿತಿ ಇಲ್ಲದಂತೆ ಸತತ ಮಾಡಿದರನ್ನ
ತ್ರೈತಿಯುಗದೊಳಗುನ್ನತ ದಾನದಿಂದ
ಅತಿಶಯವಾಗಿ ಸಮ್ಮತವೆನಿಸಿದರನ್ನ
ಚತುರ ದ್ವಾಪರದಲ್ಲಿ ಪ್ರತಿದಿನ ಬಿಡದಲೆ
ಹಿತವಾಗಿ ಕರ್ಮ ಪ್ರತಿ ಇಲ್ಲದಲೆ ಮಾಡೆ
ಗತಿಗೆ ಸಾಧನವಲ್ಲ ಪ್ರತಿಕೂಲವಲ್ಲದಲೆ
ಮತಿವಂತರ ಪ್ರೀಯ ವಿಜಯ ವಿಠ್ಠಲನ್ನ
ಕಥನಾ ನಾಮಾಮೃತಕ್ಕೆ ಪ್ರತಿಗಾಣೆ ಕಲಿಯುಗದಿ ೨
ತ್ರಿವಿಡಿ ತಾಳ
ಧ್ಯಾನಮಾಡುವೆನೆನಲು ಹೀನವಲ್ಲದೆ ಮನಸು
ತಾ ನಿಲ್ಲದು ಒಂದು ಕ್ಷಣವಾದರು
ದಾನಮಾಡುವೆನೆ ನಿಧಾನಿಸಲು ದ್ರವ್ಯ
ಏನೇನು ಶುಚಿಯಿಲ್ಲ ಅನಂತ ಕಾಲಕ್ಕು
ಆನಂದದಿಂದಲಿ ಭಾನು ಉದಯಾಸ್ತ
ಮಾನ ಪರಿಯಂತ ಮಾಣದಲೆ ಕರ್ಮ
ಜಾಣತನದಿಂದಲಿ ತಾನೆಸಗಿದರು
ಕ್ಷೀಣವಲ್ಲದೆ ಇದು ಪೂರ್ಣವಿಲ್ಲ
ಧ್ಯಾನ ದಾನ ಕರ್ಮವನು ಕೈ ಕೊಂಡರು
ಆನಂದವಾದ ಸೋಪಾನಕ್ಕೆ ಪಥವಲ್ಲ
ಶ್ರೀನಾಥ ವಿಜಯ ವಿಠಲನ ನಾಮಕ್ಕೆ
ಕಾಣೆನೊ ಪ್ರತಿಕಕ್ಷೆ ಆವಕರ್ಮಾದಿಯಲ್ಲಿ ೩
ಅಟ್ಟತಾಳ
ಧ್ಯಾನ ದಾನ ಕರ್ಮ ಏನೇನು ಮಾಡಲು
ಊನವಲ್ಲದೆ ಸಂಪೂರ್ಣವಾಗದು ಕಾಣೋ
ಕ್ಷೋಣಿಯೊಳಗೆ ಸಮಾನವಿಲ್ಲದ ನಾಮ
ದೀನನಾಗಿ ನಿಂದು ದಿನಕೊಮ್ಮೆ ನೆನೆದಡೆ
ಧ್ಯಾನ ದಾನ ಕರ್ಮ ಆವಾವಕಾಲಕ್ಕೆ
ತಾನೆಸಗಿದ ಫಲಕೆ ನೂರು ಮಡಿ ಉಂಟು
ದಾನವಾಂತಕ ರಂಗ ವಿಜಯ ವಿಠ್ಠಲನ್ನ
ಚೂಣಿಗೆ ನೆನೆಸಲು ಮಾಣದಲೆ ಗತಿ ೪
ಆದಿತಾಳ
ಆವ ಸವಿಯೋ ಆವ ರುಚಿಯೋ
ಆವ ಆನಂದವೋ ಆವ ರಸವೋ
ಆವ ಸೌಖ್ಯವೋ ಆವ ಮೋಹವೋ
ಆವ ಹಿತವೋ ಆವ ಕುರುಹವೋ
ಆವ ಮಹತ್ವವೋ ಆವ ಅಣುವೋ
ಆವ ಚಂದವೋ ಆವ ತರುವೋ
ಆವ ಧೇನುವೋ ಆವ ರಸವೊ
ಆವ ಮೂಲವೋ ಆವ ವರ್ನವೋ
ಆವದೋ ಶ್ರೀ ಹರಿಯ ನಾಮಾ ಪಾವನವಾದ ಮಹಿಮೆ
ಶ್ರೀ ವಿಭವೇ ವಿಜಯ ವಿಠ್ಠಲ
ದೇವನಂಘ್ರಿ ನಂಬು ಮನವೆ ೫
ಜತೆ
ನಾಮದಿಂದಾದ ಗತಿ ಮಿಕ್ಕಾದದೊಂದಿಲ್ಲಾ
ರಾವಇನಾಮ ನೆನೆಯೋ ವಿಜಯ ವಿಠ್ಠಲರೇಯನ ೬

ಹರಿಭಕ್ತರ ನಿಂದೆಯನ್ನು ಮಾಡುವುದರಿಂದ ಗಳಿಸಿದ

೬೧
ಧ್ರುವತಾಳ
ನಿಂದಿಸದಿರು ಮನವೆ ಮಧ್ವಮತವೆ ಗತಿ
ಎಂದು ನೆರೆನಂಬಿದರೆ ವೈಷ್ಣವರ
ಮುಂದೆ ನಿನಗೆ ಪುಣ್ಯ ಬಾರದು ದೊರಕದು
ಹಿಂದೆ ಎಸಗಿದ ಸುಕೃತ ಬಯಲಾಹುಹದೋ
ಇಂಧನ ಪೋಗಿ ಅಗ್ನಿ ಮೇಲೆ ಬಿದ್ದಂತೆವೊ
ಮಂದನಾಗಿ ಕೆಡದಿರು ಮೂರ್ಖ ಮನವೆ
ನಿಂದಿಸೀದ ಮೇಲೆ ಜನರ ಬಳಿಗೆ ಪೋಗಿ
ವಂದಿಸಿ ಮಾತನಾಡಿದರೆಂತಹದೋ
ಮುಂದಲೆ ಕೊಯ್ದು ಮುಡಿಹುವ್ವನಿಟ್ಟಂತೆ ಕಾಣೊ
ನಂದವಾಗವುದೇನೊ ತಿಳಿದು ನೋಡು
ಕೆಂದವು ಬಿಳಪು ಕಪ್ಪು ಕಪಿಲ ಮೊದಲಾಗಿ
ಒಂದೊಂದು ಬಣ್ಣದ ಗೋವುಗಳಿರಲು
ನಿಂದ್ಯಕ್ಕೆ ಯೋಗ್ಯವಾದ ಗೋವುಮತ್ತಾವದೊ
ಇಂದು ನಿನ್ನೊಳಗೆ ನೀನೆ ವಿಚಾರಿಸೂ
ಸಂದೇಹಗೊಳಸಲ್ಲ ಸತತ ನೀನೆಸಗುವ
ನಂದವ ಕೇಳೆಲೊ ಪಶುವಿಗೆ ಪೋಗಿ
ವಂದನೆ ಮಾಡಿ ಪುಣ್ಯ ಸಂಪಾದಿಸುವುದೇನೊ
ಅಂದವಾಗಿದ್ದ ಭೂಮಿಸುರನ ನೋಡಿ
ನೊಂದು ಸೈರಿಸಲಾರದೆ ದೂಷಿಸುವುದೇನೊ
ಎಂದಿಗೆಂದಿಗೆ ನಿನಗೆ ಪುಣ್ಯವಿಲ್ಲ
ಅಂದು ಬ್ರಾಹ್ಮಣನೊಬ್ಬ ಜಾತಿ ಹೀನನಾಗಿ
ಕುಂದದೆ ಕಿರಾತ ಸ್ರೀಯಳಲ್ಲೀ
ನಂದ£ರನ್ನು ಪಡೆದು ಇರುತಿರೆ ವೈನತೇಯ
ತಂದೆ ಅಙ್ಞದಿಂದ ವೇಗ ತೆರಳಿ
ಬಂದು ಅವನ ನುಂಗೆ ಗಂಟಲಸುಟ್ಟು ಅಹಾ:
ಎಂದು ನುಗುಳಿದ ನೋಡು ಸಮಸ್ತರ
ತಂದೆ ಪೇಳಿದ ಮಾತು ನೆನಿಸಿಕೊಂಡು ಮನಕೆ
ತಂದಾ ಬ್ರಹ್ಮ ಬೀಜದ ಪೌರುಷವ
ನಂದನ್ನ ಕಂದ ಶಿರಿ ವಜಯ ವಿಠ್ಠಲರೇಯನ
ಪೊಂದಿದ ದಾಸರ ನಿಂದ್ಯವೆ ಹರಿಯ ನಿಂದ್ಯಾ ೧
ಮಟ್ಟತಾಳ
ಸಲ್ಲದು ಸಲ್ಲದು ಭಯಹಾರಿಯೆ ಭಕ್ತರ
ನಿಲ್ಲದೆ ದೂಷಿಸುವ ನಿಷ್ಟುರ ವಚನಗಳು
ಎಲ್ಲಿದ್ದರೆ ಏನು ಎಂದು ನಡೆದರೇನು
ಬಲ್ಲಿದರು ಕಾಣೊ ಅವರು ಜಗತ್ತಿನೊಳು
ಸಲ್ಲಿವರು ಹರಿಯ ಪಾದಪಲ್ಲವ ಸೇವಿಗೆ
ಬಲ್ಲವರು ಎನ್ನು ಯೋಗ್ಯತಾನುಸಾರ
ಕಲ್ಲು ಮರನ ತೆರದಿ ಕಾಣಿಸಿಕೊಳುತಿಪ್ಪರು
ಎಲ್ಲ ಕರ್ಮಕೆ ಹರಿತಾನೆ ಪ್ರೇರಿಸುವನು
ಮಲ್ಲ ಮರ್ದನ ನಮ್ಮ ವಿಜಯ ವಿಠ್ಠಲ ನಿತ್ಯ
ವಲ್ಲಭ ನಮಗೆಂದು ನಲಿದಾಡುವರೂ ೨
ತ್ರಿವಿಡಿ ತಾಳ
ಇಂತಿಪ್ಪ ಭಗವದ್ಭಕ್ತರ ನಿಂದ್ಯ ಮಾಡುವವ
ಹಂತ ಮಾನವರ ಗತಿಯ ಕೇಳು ಎಲೆ ಮನವೆ
ಸಂತತಿ ಸಹವಾಗೆ ನರಕದಲ್ಲಿ ಬಿದ್ದು
ಸಂತತದಲಿ ಬಳಲಿ ಆ ತರುವಾಯದಲ್ಲಿ ಪುಟ್ಟಿ
ಕಾಂತಾರದಲಿ ಪಿಶಾಚಿ ದೇಹವತೆತ್ತು
ಸಂತಾಪದಲಿ ಬೇಂದು ಹೊರಳುವರು
ಪಿಂತೆ ಪಾರ್ವತಿ ಪತಿಯ ನಿಂದಿಸಿ ದಕ್ಷನು
ಎಂತಾದನು ನೋಡುಸುರರ ಮಧ್ಯ
ಮುಂತೆ ಯುದುಕುಲದವರು ಮುನಿಯ ವಂಚಿಸಲಾಗಿ
ಅಂತಕನ ಸಾರಿದರು ತಮಗೆ ತಾವೇ
ನಿಂತ ಗೋಷ್ಪಾದೋದಕ ದಾಟಲಾರದಲಿದ್ದ
ಮಂತ್ರೋಕ್ತ ಮುನಿವಾಲಿಖಿಲ್ಯಾ ಜನರ
ಭ್ರಾಂತಿಯಿಂದಲಿ ಇಂದ್ರ ಆಭಾಸ ಮಾಡಲು
ಚಿಂತೆಯಿಂದಲಿ ಬಲುವ್ಯಾಕುಲ ಐದಿದನು
ಸಂತಜನರ ನಿಂದ್ಯ ಒಳಿತಲ್ಲ ಒಳಿತಲ್ಲ
ಜಂತುಗಳ ಅಂತಃಕರಣವ ಪರಿಯಲ್ಲಿ
ಸಂತಿಹ್ಯದೊ ಬಲ್ಲವರಾರೊ ವೃತ್ತಿ
ಎಂಥವನಾರೊ ಉತ್ತಮರ ಹಳಿದರೆ
ಶಾಂತನಾಗದೆ ಪೋಗಾ ಜ್ಞಾನಿಯಾಗೇ
ಪಂಥವೆ ಬಿಡು ಬಿಡು ಹೃದಯದೊಳಗೆ ಇದ್ದ
ಗ್ರಂಥಿಯ ಕೆಳಕೊಂಬ ಯೋಗವಲ್ಲ
ಕಿಂತು ಬುದ್ಧಿಯಲಿಂದು ಕೆಟ್ಟು ಪೋದರೆ
ಸತ್ಪಂಥ ದೊರಕದು ಕಾಣೊ ನಾನಾ ಕರ್ಮ
ತಂತ್ರ ಮಂತ್ರಗಳಿಂದ ಮಾಡಿದ ಕಾಲಕ್ಕೂ
ಇಂತು ಮಹಾತ್ಮರ ನಿಂದ್ಯೆ ಒಂದೇ
ಅಂತರಂಗದಲ್ಲಿ ಯೋಚಿಸಲು ಸ್ವಹಾ
ಕಾಂತಾ ಮೆಲುವನಯ್ಯಾ ಎಲ್ಲಾ ಪುಣ್ಯ
ಸಂತೋಷದಲಿ ಮನುಜ ರತ್ನ ಭಾಂಡವರಚಿಸಿ
ಶಾಂತವಾಗಿದ್ದ ಕಪಿಲಾವಿನ ಹಾಲು
ಕ್ಲಾಂತಾರಹಿತನಾಗಿ ತುಂಬಿದ ಮೇಲೊಂದು
ತಂತಿ ಮನಿಯಲಿ ಅದ್ದಿ ಮದ್ಯದ ಬಿಂದು
ಪ್ರಾಂತಿಗೆ ಹಾಕಲು ಶುದ್ಧವಾಹದೆ ಅದ
ರಂತೆ ತಿಳಿಯಬೇಕು ಮಾಳ್ಪ ಪುಣ್ಯ
ಕಂತು ಜನಕ ನಮ್ಮ ವಿಜಯ ವಿಠ್ಠಲರೇಯ
ಎಂಥ ಮಾತಿಗೆ ಒಲಿಂಇಇ ಇದು ಇಲ್ಲವಗೆ ಊಳಿಗ ೩
ಅಟ್ಟತಾಳ
ಸ್ನಾನ ಸಂಧ್ಯಾನ ಜಪತಪ ವ್ಯಾಖ್ಯಾನ
ಮೌನ ಶ್ರವಣ ನೀತಿ ಸ್ಮರಣೆ ಕೀರ್ತನೆ ಸೇವೆ
ಜ್ಞಾನ ಭಕುತಿ ನಿರ್ವೇದ ಯಾಗಯೋಗ
ಗಾನ ಯಾತ್ರೀತೀರ್ಥ ನಾನಾಪರಿ ಪರಿ
ದಾನ ವಿದ್ಯಾಭ್ಯಾಸ ಶಿಷ್ಯ ಸಂತತಿ ಸಂ
ತಾನ ಶರೀರ ಕಾಂತಿ ಭೂಷಣ
ಮನ ಮಂದಿರ ವಸ್ತ್ರ ಮಿತ್ರ ಬಂಧುಬಳಗ
ಯಾನ ಮೃಷ್ಟಾನ್ನಭೋಜನ ಗಜಾಶ್ವ ಗೋವು
ಧಾನ್ಯ ಧನ ವೃತ್ತಿ ಕ್ಷೇತ್ರ ವನತಟಾಕ ವಾಪಿ
ಕ್ಷೋಣೆ ವಿಬುಧ ಸ್ತೋತ್ರ ಜನಕ ಜನನಿ ಭ್ರಾತೃ
ಆನಂದ ಅತಿಶಯ ಧನಧಾನ್ಯ ಆಶ್ರಯ
ತ್ರಾಣ ಪ್ರೀಣಾ ಸರ್ವಜಾತಿ ಭೂತದಯ
ಪಾಣಿ ಚರಣ ಮಿಕ್ಕ ಇಂದ್ರಿಯ ವ್ಯಾಪರ
ಏನೇನು ವೈದಿಕ ಲೌಕಿಕ ಧರ್ಮವು
ಶ್ರೀನಿವಾಸಗೆ ಪ್ರೀತಿಕರವಾಗಿ ನಿರುತಾರ
ಆನಂದ ತೀರ್ಥರ ಗ್ರಂಥ ಸಮ್ಮತದಿಂದ
ಅನಂತಾನಂತ ಈ ಬಗೆಯಲಿ ಇದ್ದರೂ
ನಾನಲ್ಲ ಇದಕೆಲ್ಲ ಹರಿಯೆ ಕರ್ತನೆಂದು
ನಾನೆಂಬುದು ಉಂಟು ಹರಿ ಇತ್ತದು ಎಂದು
ನಾನೇ ಅಸ್ವಾತಂತ್ರ ಹರಿ ಏಕಾ ಸ್ವಾತಂತ್ರ
ಸಾನುರಾಗದಿಂದ ಅಧೀನ ಚಿಂತಿಸಿ
ಅನಾದಿ ಕಾಲಕ್ಕೆ ಇದು ಸತ್ಯ ಇದು ಸತ್ಯ

ದ್ವೈತವೇದಾಂತದಲ್ಲಿ ದೇವತಾ ತಾರತಮ್ಯಕ್ಕೆ ತುಂಬ ಮಹತ್ವವಿದೆ.

೭೦
ಧ್ರುವತಾಳ
ನಿತ್ಯ ಮೂಲಪ್ರಕೃತಿ ಅಭಿಮಾನಿ ಶ್ರೀ ಭೂದುರ್ಗಾ
ಸತ್ಯವಾಗಿಪ್ಪಳು ಅಪ್ರಾಕೃತಗಳು
ಸತ್ವ ರಾಜಸ ತಮೊ ಮೂರು ಗುಣ ಮಿಳಿತ
ತತ್ವೇಶರಲ್ಲಿ ಇಲ್ಲ ನಿಧಾನಿಸು
ಅತ್ಯಂತವಾಗಿ ವಿಷ್ಣು ಬ್ರಹ್ಮ ರುದ್ರಾಭಿಧಾನ
ಕರ್ತೃ ಭಗವಂತ ನಿಯಾಮಕಾ
ಇತ್ತ ಲಾಲಿಸುವುದು ಕಾರಣದಿಂದ ಮುಂ
ದತ್ತ ಬರಲು ಕಾರ್ಯ ಗುಣತ್ರಯವೊ
ಸತ್ವಗುಣಕೆ ವಾಸುದೇವ ಹಯವದನ ಮಿಕ್ಕ
ಮೂರ್ತಿಗಳೆನ್ನ ರಜೋಗುಣ ಪ್ರ
ವರ್ತಕ ಜಾಮದಗ್ನಿ ಮಿಗಿಲಾದ ರೂಪ ತಮ ಪ್ರ
ವರ್ತಕ ರೂಪಂಗಳು ವರಹಾದಿಯು
ಸುತ್ತಿಸುವ ಮೂರು ಗುಣ ಬಹುಪರಿ ಪೊಳ
ವುತ್ತಲಿವೆ ಸೂಕ್ಷ್ಮ ಮದ್ಧ್ಯ ಸ್ಥೂಲಾ
ಪ್ರತ್ಯೇಕ ಪ್ರತ್ಯೇಕ ಇದಕಭಿಮಾನಿಗಳು
ತತ್ವೇಶರು ಉಂಟಾನಂತ ರೂಪಾ
ಎತ್ತ ನೋಡಿದರತ್ತ ನೀಜಾಭಿಮಾನಿಗಳಿಗೆ
ಸೋತ್ತಮ ಜೀವಿಗಳು ಪ್ರೇರಕರೊ
ಹತ್ತೆರಡು ನಾಲ್ಕು ತತ್ವಾಂತರದಲಿ ಗುಣ ಪರಮಾಣು
ಪೂರ್ತಿಯಾಗಿವೆ ನೋಡಿ ಕ್ರಮದಿಂದಲಿ
ಇತ್ತಂಡದಲ್ಲಿ ಇನಿತು ಬೆರೆತಿಪ್ಪ ಯೋಗವಕ್ಕು
ತತ್ವಾದಿ ಗುಣಕೆ ಸರ್ವರು ಅಭಿಮನ್ಯರು
ತತ್ವಂಗಳ ಲೆಖ್ಖ ಅವ್ಯಕ್ತ ಮಹಾನಹಂ
ತತ್ವ ಮನಸು ಜ್ಞಾನಕರ್ಮೇಂದ್ರಿಯು
ಹತ್ತು ಇವು ಕಾಣೋ ಇದರ ತರುವಾಯತ
ನ್ಮಾತ್ರಗಳೈದು ಇಷ್ಟೇ ಭೂತಂಗಳು ನಿ
ಮಿತ್ತವಾಗಿಪ್ಪುವು ಎಲ್ಲ ಕೂಡಿಸಿ ಯಿ
ಪ್ಪತ್ತು ನಾಲ್ಕು ತತ್ವ ಪ್ರಸಿದ್ಧವೊ
ಸತ್ವ ಸತ್ವ ಸತ್ವರಾಜಸ ಸತ್ವ ತಮ
ಮತ್ತೆ ರಾಜಸ ಸತ್ವ ರಜೋರಾಜಸ ವೃತ್ತಿ
ರಾಜಸ ತಮ ತಮ
ಸತ್ವ ತಮರಾಜಸ ತಮತವು ಯಿಬಗೆ ಗುಣದ
ಉತ್ತಮೋತ್ತಮರೆಲ್ಲ ವಿವರಿಸಿ ವಿಸ್ತರಿಸಿ
ಆರ್ತ ದೂರಾಗುವರು ತ್ರಯ ಭಾಗದೀ
ಆತ್ಮದೊಳಗೆ ತಿಳಿದು ಉಪಾಸನೆ ಮಾಡುವರು
ವೃತ್ತಿ ನಿವೃತ್ತಿ ಮಾರ್ಗವನುಸರಿಸಿ
ತತ್ವ ತಾತ್ವಿಕರ ಉಪಾಸನೆ ಮಾಡುವರು
ಅತ್ಯಣು ಆರಂಭಿಸಿ ಮೂಲ ತನಕಾ
ಸತ್ವಾದಿ ಗುಣಂಗಳು ಉನ್ನ ತೋನ್ನತ ತಿಳಿದು
ನಿತ್ಯ ಧ್ಯಾನ ಸ್ಮರಣೆ ಮಾಡು ಮನುಜಾ
ರತಮ್ಯವೇ ಉಂಟು ಉಳಿದ ಜನಕೆ
ಪೃಥ್ವಿ ಆರಂಭಿಸಿ ಗುಣತ್ರಯದ ವುಪಾಸ್ತಿ
ತತ್ತತ್ತದಾಕಾರ ಅವಾಂತರ ವ್ಯಾಪ್ತಿ
ಆತ್ಮ ಮೊದಲಾದ ಹರಿಯೋ ಜಾಸ್ತಿ(?)
ಪ್ರತ್ಯಕ್ಷಾಗಮ ಅನುಮಾನದಿಂದ ಗ್ರಹಿಸಿ
ಸತ್ವಾದಿ ಗುಣ ಶೂನ್ಯ ವಿಜಯ ವಿಠಲ ತನ್ನ
ಭೃತ್ಯರಿಗೆ ಇಂತು ಪ್ರೇರಿಸುವನು ದಯದಿ ೧
ಮಟ್ಟತಾಳ
ಮೂಲಾವತಾರ ಅಂಶಿ ಅಂಶ ಸರ್ವ
ಕಾಲ ಪ್ರಕೃತಿ ಕರ್ಮ ಶ್ರುತಿ ಅವ್ಯಾಕೃತ
ಜಾಲ ಚೇತನ ರಾಶಿ ಸೃಜ್ಯಾಸೃಜ್ಯಾದಲಿ
ಮೂಲಶ್ರುತಿ ಭಾಗವತ ರಾಮಾಯಣ
ವಾಲಯ ದಂಚರಾತ್ರ ಬ್ರಹ್ಮತರ್ಕ ಯೋಗಶಾಸ್ತ್ರ
ಮೇಲೆ ಭಾರತ ಭಾಗವತ ಪುರಾಣಗಳು
ಮೇಲುಶಾಖ ಕರ್ಮ ಭೇದಾಷ್ಟಕ ಅಧ್ಯಯನ
ಕೇಳಿ ಸಮಸ್ತ ಸಚ್ಛಾಸ್ತ್ರ ನಿರ್ಣಾಯಕ ಸ
ಮ್ಮೇಳ ಬ್ರಹ್ಮ ಮೀಮಾಂಸ ಮಿಗಿಲಾದ
ಕಾಲ ಕಾಲಕೆ ನುಡಿವ ಪ್ರಣವ ಮಂತ್ರಗಳೊಡನೆ
ಶೀಲ ಗುಣ ರನ್ನ ಮಹಲಕುಮಿದೇವಿ
ಆಲಸವಿಲ್ಲದಲೆ ಒಂದೊಂದರೊಳಗಾನಂತಾ
ಮಾಲಾಕಾರಾದಲ್ಲಿ ವೇದೋಕ್ತದಲ್ಲಿ ವೇದಾನುಕ್ತದಲ್ಲಿ ವಿ
ಶಾಲ ಜ್ಞಾನದಿಂದ ಸದಾ ಅತಿರೋಹಿತದಿ
ಆಲೋಚನೆಯಿಂದ ಗುಣ ರೂಪ ಕ್ರಿಯ
ಜಾಲ ಸಮೂಹದಲ್ಲಿ ಧ್ಯಾನ ಮಾಡುವಳು ಕರು
ಣಾಳುಗಳ ಒಡತಿ ತಾಳಿ ಭಕುತಿ ರಸವ ಸರ್ವಪ್ರಕಾರದಲ್ಲಿ
ಊಳಿಗ ಕೈಕೊಂಡು ನಾನಾ ರೂಪವ ಧರಿಸಿ
ಸಾಲವಿಡುವುದು ಎಣಿಸಿ ಅಂತಗಾಣದೆ ರಮಾ
ತೇಲುತ್ತ ತೇಲುತ್ತಲಿ ಮಹಾನಂದವಾದ
ಕೀಲಾಲ ನಿಧಿಯೊಳಗೆ ಬೆರಗಾಗಿ ನಿಂದಿಹಳು
ಪಾಲಸಾಗರಶಾಯಿ ವಿಜಯ ವಿಠ್ಠಲರೇಯನ
ಕಾಲುಗರ ಕಾಂತಿ ಎಣಿಸಿ ಗುಣಿಸುತಲಿ ೨
ತ್ರಿವಿಡಿತಾಳ
ಆನಂದ ಗುಣ ಪೂರ್ಣ ಉತ್ರ‍ಕಷ್ಟ ಆಖಿಲೇಶಾ
ಅನಂತ ಶಕ್ತ್ಯಾತ್ಮ ಸಮಸ್ತ ಪ್ರೇರಕ
ಜ್ಞಾನಮಯ ಶರೀರ ಸತ್ಸುಖ ವಾರಿಧಿ
ನಾನಾ ರೂಪಾತ್ಮಕ ನಿರ್ಭೇದ ಕಲ್ಯಾಣ
ಅನಂತ ಶಿರಸಾ ಪಾದಾದಿ ರೋಮ ಪೂರ್ಣ
ನಾನಾ ಮಹಿಮೆ ಸ್ವಯಂ ಪ್ರಕಾಶ ವ್ರತಿರಹಿತಾ
ಹಾನಿ ವೃದ್ಧಿ ವರ್ಜಿತ ಸರ್ವೋಪಾಸ್ಯನೆಂದು
ಶ್ರೀ ನಾರಿ ಭಜಿಸುವಳು ಸರ್ವದಾ ಮನದಲ್ಲಿ
ಧ್ಯಾನ ಮಾಡುವಳು ನವವಿಧ ಭಕುತಿಯಿಂದಲಿ
ಅನಂತಾನಂತ ಕಾಲದಲ್ಲಿ ಬಿಡದೆ
ಏನೆಂಬೆ ಇದರಂತೆ ಉಪಕ್ರಮೋಪ ಸಂಹಾರ
ತಾ ನೆನೆದು ಶ್ರೀ ಹರಿಯ ಮೆಚ್ಚು ಮಾಡಿ
ಅನಾದಿ ಕಾಲದಿಂದಲಿ ಸುಖ ಪೂರ್ಣಳು
ನಾನಾ ರೂಪದಿಂದ ಪ್ರಕೃತಿ ಭಿನ್ನ
ಗೌಣವೆಸರಿ ಸರ್ವಜೀವರು ಲಕುಮಿಗೆ
ಎಣಿಕೆ ಗೈವುದು ಬ್ರಹ್ಮವಿಡಿದೂ
ಮಾಣದೆ ಚತುರಾಸ್ಯ ಗುಣ ರೂಪ ಕ್ರಿಯಾದಲ್ಲಿ
ಧ್ಯಾನಮಾಡುವ ಜ್ಞಾನ ಪೂರ್ಣನಾಗಿ
ಆ ನಿಟಿಲ ನೇತ್ರಾದಿ ಸುರರು ತಮ ಯೋಗ್ಯೋಪಾ
ಸನೆ ಮಾಡುವರಯ್ಯಾ ಒಂದೊಂದುಪಸಂಹಾರ
ಪ್ರಾಣ ನಾಯಕ ನಮ್ಮ ವಿಜಯ ವಿಠ್ಠಲನಂಘ್ರಿ
ರೇಣು ಕಾಣದಲೆ ಸರ್ವರು ಅಪೇಕ್ಷಿಸುವರು ೩
ಅಟ್ಟತಾಳ
ಹರಿ ಗುರುವೆ ಸರ್ವ ಶ್ರೀ ದೇವಿ ಉಪಾಸ್ಯ
ಪಿತ ಗುರುವೆ ನಿಖಿಳ ಪ್ರಾದುರ್ಭಾವನೆಂದು
ಪಿತಾ ಮಹನುಪಾಸ್ಯ ಮತ್ತೆ ಕೆಲವುಂಟು

ಭಗವಂತನಿಗೆ ನಿವೇದಿಸಿದ ಆಹಾರ

೭೧
ಧ್ರುವತಾಳ
ನಿತ್ಯ ಸಂತೃಪ್ತ ಸರ್ವಸಾರಭೋಕ್ತ ಪುರು
ಷೋತ್ತಮ ಅಚಿಂತ್ಯ ಮಹಿಮ ಭಕ್ತವತ್ಸಲ
ಸತ್ಯ ಸಂಕಲ್ಪ ಹರಿಗೆ ನಾನೋಪ ಚಾರದಿಂದ
ಭಕ್ತಿವೆಗ್ಗಳನಾಗಿ ಮಜ್ಜನಾದಿಯ ಮಾಡಿ
ಚಿತ್ತ ನಿರ್ಮಳದಿಂದ ನಾನಾ ಸೌಖ್ಯವಾಗಿದ್ದ
ಉತ್ತಮ ಪದಾರ್ಥ ಸ್ವಪಕ್ವಗೈಯಿಸಿ
ಆತ್ಮನ ಮುಂಭಾಗದಲ್ಲಿ ಇಡಿಸಿ ಸ್ತೋತ್ರಗಳಿಂದ
ತುತ್ತು ಸಮರ್ಪಿಸಿ ಧ್ಯಾನ ಮಾಡಿ
ತೆತ್ತಿಗನಾನೆಂದು ಅಡಿಗಡಿಗೆ ಹಿಗ್ಗಿ ತನ್ನ
ಸತ್ವ ಪ್ರವೃತ್ತಿಗಳಿಗೆ ಹರಿ ಎಂದು
ವಿಸ್ತಾರವಾಗಿ ತಿಳಿದು ನಿಜವಾಗಿ ಶ್ರೀ ಬ್ರಹ್ಮದೇ
ವತ್ತಿಗಳಿಗೆ ಸನಕಾದಿಗಳಿಗೆ
ಮತ್ತೆ ಶುಕ ಮೊದಲಾದ ಅವತಾರ ಜನಕ್ಕೆ ತಾ
ರತಮ್ಯದಿಂದ ಕೊಡಲಿಬೇಕು ಮನುಜಾ
ಇತ್ತರೆ ನಿನ್ನಿಂದ ಅವರವರು ಕೈಕೊಂಡು ಮಾ
ಡುತ್ತ ಪರಿಯಂತ ಒಪ್ಪಿಸಿ ಕೊಡುವರು
ಅತ್ತಣಕಾರ್ಯ ಕೇಳಿ ಲಕುಮಿದ್ವಾರದಿಂದ
ಉತ್ತಮಶ್ಲೋಕ ಕೈ ಕೊಂಬನಯ್ಯಾ
ಪುತ್ತೀಕಾಲದಲ್ಲಿ(?) ಮನಸು ಅಗ್ನಿಯಲ್ಲಿ ವಾಕು
ಆತ್ಮದಲ್ಲಿ ಗಾತ್ರ ಧ್ಯಾನ ಅವಧಾನ ಭುಕ್ತಿ
ಚಿತ್ರ ವಿಚಿತ್ರವುಂಟು ಇದರೊಳಗನುಭವ
ಪುತ್ರ ಜನಕನೊಬ್ಬ ಸುಂದರನಾರಿಯ
ಹತ್ತಿಲಿಯಿದ್ದವಳ ಸ್ಪರ್ಶ ಮಾಡಿದರಾಗೆ
ಇತ್ತಂಡ ಮಾನವರ ಮನಸಿನ ಪ್ರೇಮ ಬೇರೆ
ಮಾತೃ ಭಾವನೊಬ್ಬನಿಗೆ ಪತ್ನಿ ಭಾವನೊಬ್ಬನಿಗೆ
ಅತ್ಯಂತವಾಗಿಪ್ಪದು ವಿವೇಕರಿಗೆ
ತತ್ವೇಶ ಜೀವಿಗೆಲ್ಲಾ ಸಮಸ್ತ ರಸದ ಜ್ಞಾನ
ಪ್ರತ್ಯೇಕ ಪ್ರತ್ಯೇಕ ಇಪ್ಪದಯ್ಯಾ
ಚಿತ್ತದಲ್ಲಿ ನೋಡು ನೋಡುವದನು ಭಾವ
ಮಾತ್ರ ಬೇರೆ ಉಂಟು ವಿರೋಧವಿಲ್ಲಾ
ಹೊತ್ತು ಹೊತ್ತಿಗೆ ಇದನೆ ಸ್ಮರಿಸಿ ವೇಗದಿಂದಲಿ
ತೀರ್ಥದಾನವ ಮಾಡಿ ಜ್ಞಾನಿಗಳೊಡನೆ
ಸುತ್ತು ಬಳಗದ ಕೂಡ ಕುಳಿತು ಭಗ
ವತ್ಪದಿಯ ಪೆತ್ತ ದೇವನ್ನ ಸ್ಮರಣೆ ಮಾಡಿಕೊಳುತ
ಆತ್ಮಯಙ್ಞವ ಮಾಡು ತುಲಸಿ ಮಿಶ್ರಿತದಲ್ಲಿ
ಹತ್ತೆಂಟು ದಳ ನಿನಗೆ ಸತತಬೇಕು
ಹತ್ತದೆನ್ನಸಲ್ಲಾ ಕ್ಲೇಶಾದಿ ದೋಷಗಳಿಂದ
ಮೃತ್ಯು ಬರುತಿರಲು ನಿವಾರಣ
ಸತ್ವ ಮಾನವನೆನ್ನಿ ತುಲಸಿ ಮಿಶ್ರಿತ ರಹಿತ
ತುತ್ತು ತೆಗೆದುಕೊಂಡರೆ ವಮನ ಸರಿಯೋ
ಎತ್ತಲಾದರೇನು ತುಲಸಿ ಕರ್ನಂಗಳಲ್ಲಿ
ನಿತ್ಯ ಧರಿಸಿದ್ದರು ಆ ಮನುಜ
ಉತ್ತಮನೆ ಸರಿ ಚಂಡಾಲ ಸ್ಪರಶವಾಗೆ
ತತ್ತಳ ಗೊಳಿಸುವುದು ಪವಿತ್ರ ಕಾಣೊ
ಅರ್ಥಿಪುರುಷ ನಮ್ಮ ವಿಜಯ ವಿಠ್ಠಲರೇಯನು
ಮುಕ್ತಿ ಕೊಡುವನು ಈ ಪರಿ ಚಿಂತಿಸಿದರೆ ೧
ಮಟ್ಟತಾಳ
ಭೋಜನ ಪಾತ್ರೆಯ ಮಂಡಿಸಿ ಅದರೊಳಗೆ
ರಾಜಿಸುವ ಅನ್ನ ಶಾಖಾದಿಗಳಿಡಲು
ತೇಜದ ತರುವಾಯ ಪುಟ್ಟಿದ ಭೂತವನ್ನು
ಭ್ರಾಜಿಸುವ ಕರತಳದಲ್ಲಿ ಇಟ್ಟು
ಬೀಜ ಭೂರಾದಿ ತ್ರಿಚತುರ ವಿಂಶತಿ ವರ್ಣದಿ
ರಾಜೀವನೇತ್ರನ್ನ ನೆನದು ಅಭಿಮಂತ್ರಿಸಿ
ತೇಜ ಮೊದಲಾದ ಪದಾರ್ಥಗಳ ಮೇಲೆ
ಮಾಜದೆ ಪ್ರೋಕ್ಷಿಸಿ ಮೌನ ಮಾನಸದಲ್ಲಿ
ವಾಜಿವದನ ಭಾರ್ಗವ ಕೃಷ್ಣದೇವರ ನೆನೆದು
ಮೂಜಗದೊಳಗೆ ಚೇತನ ಜಡದ ವ್ಯಾಪ್ತಿಯ ತಿಳಿದು
ಸೋಜಿಗ ಸೋಜಿಗವೊ ಭಗವಂತನ ಮಹಿಮೆ
ವಾಜಿಪೇಯ ಯಜ್ಞ ಮಾಡಿದ ಫಲಬರುವದು ಜನಕೆ
ಭೋಜಕುಲಾಧೀಶ ವಿಜಯ ವಿಠ್ಠಲ ಮೆಚ್ಚುವ
ಭೋಜನ ವಿಧಿಯನ್ನು ತಿಳಿದರೆ ಇಹಪರದಿ ೨
ತ್ರಿವಿಡಿ ತಾಳ
ಸಾರ ಹೃದಯನಾಗಿ ಶುದ್ಧ ಸಾಲಿಗ್ರಾಮದ
ವಾರಿಯ ಹಸ್ತದೊಳಗೆ ಧರಿಸಿ
ನಾರಾಯಣ ಮಂತ್ರದಿಂದ ಅನ್ನಕ್ಕೆ ಹಾಕಿ
ಆರೆರಡಾವರ್ತಿಯಲ್ಲಿ ಜಪಿಸಿ
ನೀರು ತೆಗೆದುಕೊಂಡು ಸುತ್ತತಿರುಹಿ ಮನೋ
ಹರದಿಂದಲಿ ಮೂರುಲೋಕದ ಶಬ್ಧ
ತಾರಕ ಮಂತ್ರದಿಂದ ತ್ರಿಪಾದ ದೇವಿಯ
ಹಾರೈಸು ಪಾತ್ರಿಗೆ ಚತುರಾಂಗುಲಿ ಬಿಟ್ಟು
ಬೇರೆ ಬೇರೆ ಇದ್ದ ಸಂಪ್ರದಾಯಕ ತಿಳಿದು
ಪೂರೈಸು ಚಿತ್ರಗುಪ್ತಾದ್ಯರಿಗೆ ಆಹಾರಾ
ಭೋರೆ ಫಲದನಿತು ಕೊಟ್ಟು ನೀರೆರೆದು ವಿ
ಚಾರವಗಯ್ಯೋ ಆಹುತಿಕೊಂಬೊ ದಿಕ್ಕುಗಳು
ಆರಂಭದಲ್ಲಿ ತಕ್ಕೊ ಅಂಗುಟಕಾ ತರ್ಜಿನಿ ಮಧ್ಯಮಾ
ಮೂರು ಬೆರಳಿನಿಂದ ಪೂರ್ವಭಾಗದ ಅನ್ನ
ಸಾರಿದೆ ಮಧ್ಯಮಾ ಅನಾಮಿಕಾ ಅಂಗುಟದಿಂದ
ಧೀರ ದಕ್ಷಿಣ ದಿಕ್ಕಿನಲ್ಲಿ ಗ್ರಾಹ್ಯವೋ
ಮೀರದಲೆ ಅನಾಮಿಕಾ ಅಂಗುಟದಿಂದ
ನೀರೇಶದೇವನ್ನ ದಿಕ್ಕಿನಲಿ ಸಾಧಿಸಿರೊ
ತೋರುವ ಕನಿಷ್ಟ ತಜ್ರ್ಯನ್ನಾಂಗುಟದಿಂದ
ಮಾರಾರಿ ಸಖನ ದಿಕ್ನಿನಲಿ ಕೊಳ್ಳಿರೋ
ಈ ರೀತಿ ಆದ ಮೇಲೆ ಪಂಚಾಂಗುಲಿಯಿಂದ
ಸೇರಿಸಿರೋ ಊಧ್ರ್ವಭಾಗದ ಓದನ
ಮಾರುತ ಐವರು ಪ್ರಾಣಾಪಾನಾದ್ಯರ
ಶಾರೀರದೊಳು ಸ್ಥಾನಭೇದ ತಿಳಿದು
ಮೋರೆ ಹೃದಯ ನಾಭಿ ದಕ್ಷಿಣೋತ್ತರದಲ್ಲಿ
ಮಾರುತಸಖನೊಳಗೆ ಹೋಗಿಸುವದು
ಸಾರಿರಯ್ಯಾ ಶಾಂತಿ ಕೃತಿ ಜಯಮಾಯಾ ಲಕ್ಷ್ಮೀಮನೋ
ಹರ ಮೂರ್ತಿಗಳು ಅನಿರುದ್ದಾದಿಯು
ಮೂರೆರಡುರೂಪಗಳು ಸ್ಮರಿಸಿ ಪ್ರಾಣಾಹುತಿ
ದ್ವಾರದಿಂದಲಿ ತತ್ವಜನ ಸಮೇತದಲ್ಲಿ
ವಾರವಾರಕ್ಕೆ ವೈಶ್ವಾನರ ನಾಮದಿಂದಲಿ
ಬೇರೆ ಬೇರೆ ಪೆಸರುಗೊಂಡು ಸುಖಿಸು
ಅರಾಧನೆಯೆಂದು ತಿಳಿದು ರೇಚಕ ಕ್ರಮದಿ
ವಾರಿಜಭವ ವಿಷ್ಣು ಮಹಾದೇವರ
ಮೂರುನಾಡಿಯಲ್ಲಿ ನೋಡು ಪಿಂಗಳ ಇಡಾ
ಧಾರಳ ಸುಷುಮ್ನಾನಾಡಿ ಮಧ್ಯದಲ್ಲಿ

ಮಾನವ ಜನ್ಮ ಸಾರ್ಥಕವಾಗಬೇಕಾದರೆ

೭೨
ಧ್ರುವತಾಳ
ನಿನಗಲ್ಲದ ಶಿರ ಎಂದಿಗು ಬಲುಭಾರ
ನಿನಗಲ್ಲದ ಆಕ್ಷಿ ಹಾಳುಗವಾಕ್ಷಿ
ನಿನಗಲ್ಲದ ಕಿವಿ ರಕ್ಷಿಯ ಹಿಂಗಿವಿ
ನಿನಗಲ್ಲದ ಮೂಗು ಹಸಿಯಾಕಾಗೊ
ನಿನಗಲ್ಲದ ವದನ ಲಾಳೀಯವದನ
ನಿನಗಲ್ಲದ ನಾಲಿಗೆ ಕೆರಹಿನ ನಾಳಿಗೆ
ನಿನಗಲ್ಲದ ಕರ ಮೊರದ ಬೊಂಬಿಯ ಕರ
ನಿನಗಲ್ಲದ ಪಾದ ನಾಯಿ ನರಿಯ ಪಾದ
ನಿನಗಲ್ಲದ ಗಾತ್ರ ಜೀರ್ಣವಾದ ಪತ್ರ
ನಿನಗಲ್ಲದವಯವಂಗಳು ಜನಕ್ಕಿದು ಫಲವೇನು
ಬಿನಗಡಿದು ಭೂತಾದಿಗಣಕೆ ಕೊಡಲಿಬಹುದು
ಅನಿಲನಾಮಕ ನಮ್ಮ ವಿಜಯ ವಿಠ್ಠಲ ನಿನ್ನ
ನೆನಸದಿದ್ದ ಮನುಜ ಅವನೇ ನಿಜದನುಜಾ ೧
ಮಟ್ಟತಾಳ
ಪವಮಾನ ಮತದಲ್ಲಿ ದಿವರಾತ್ರಿ ಬಿಡದೆ
ನವವಿಧ ಭಕುತಿ ನವವಿಧ ದ್ವೇಷ
ತ್ರಿವಿಧ ಜೀವಿಗಳ ವಿವರವ ತಿಳಿದು
ಭುವನದೊಳಗೆ ಭೇದವನೈದು ತಿಳಿ
ನವನೀತ ಹೃದಯದವನಾಗಿ ಇದ್ದು
ತ್ರಿವಿಕ್ರಮ ವಿಜಯವಿಠ್ಠಲನ್ನ
ಸವಿಯದ ಪದವಿ ಸವಿಗೊಳದವನು
ಅವನೀಗ ಜೀವನಾ ಶವನೆ ಕಾಣಿರೋ
ಅವನಿಯೊಳು ತ್ರಿಭುವನದೊಳಗೆ ೨
ತ್ರಿವಿಡಿ ತಾಳ
ಹರಿ ನಿನ್ನ ಪರ ದೈವವೆಂದು ತಿಳಿಯದವನು
ಹೊರಗಿನವಗೆ ಜನನವೆಂಬೊದು ಶತಸಿದ್ದ
ಹರಿ ನಿನ್ನ ದ್ವೇಷವ ಮಾಳ್ಪನ ಮೊಗ ನೋಡೆ
ಮರಳೆ ರವಿಯ ನೋಡದಲೆ ಶುಚಿ ಇಲ್ಲ
ಹರಿ ಮರುತನ ದ್ರೋಹಿಗಳ ಮಂದಿರದಲ್ಲಿ
ಮರೆದು ನೀರು ಕೊಳಲು ಚರಿಸು ಚಾಂದ್ರಾಯಣ
ಹರಿನಾಮ ವಿಜಯ ವಿಠ್ಠಲ ನಿನ್ನ ಪಾದವ
ಸ್ಮರಿಸದ ಹಿರಿಯನು ಬಲುಕಾಲದ ಗೂಗಿ ೩
ಅಟ್ಟತಾಳ
ವಾರವಾರಕ್ಕೆ ಆಚಾರವಂತನಾಗಿ
ವೀರ ವ್ರತಗಳಪಾರವ ಚರಿಸಿ
ಮೂರೇಳು ಸಾರಿಗೆ ವಾರಣಾಸೀ ಪುಣ್ಯ
ತೀರಥಗಳ ಮಿಂದಾರಾಧನೆಯ ಮಾಡಿ
ನಾರಾಯಣಂಗೆ ತಾರತಮ್ಯದಿಂದ
ನೀರೆರದು ಉದ್ಧಾರನಾಗದಿರೇ
ನೀರ ಮೇಲೆ ಬರಹ ರಚಿಸಿದಂತೇ
ತೋರದೆ ಸತ್ಕರ್ಮ ಹಾರಿ ಹೋಗುವದಯ್ಯಾ
ಧಾರಣ ನಾಮಕ ವಿಜಯ ವಿಠ್ಠಲ ನಿನ್ನ
ಕಾರುಣ್ಯ ಪಡೆಯದಿರೆ ತೃಣವೊಂದು ಮೇರು ೪
ಆದಿತಾಳ
ಆ ಕಪರ್ದಿ ಮುನಿ ಪೋಗಿ ತಾ ಕಪಟದಿಂದಲಿ ಪಾಂ
ಡು ಕುಮಾರನಲ್ಲಿ ಗ್ರಾಸ ಬೇಕೆಂದಾಗ ಅಡಿಗಡಿಗೆ
ಹಾ ಕೃಷ್ಣನೆಂದು ಪಾಂಚಾಲ ಕುಮಾರಿ ಕರಿಯೆ ಸ್ವಲ್ಪು
ಶಾಕದಳ ಉಂಡು ತಾನೇಕ ಜನ ತೃಪ್ತಿ ಬಡಿಸಿ
ಲೋಕದೊಳಗೆ ಪೂರ್ಣ ಕಮಲಾಕಾಂತನ ಒಲಿಮೆ ಆಪ
ತ್ತು ಕಡಿಗೆ ಪುಣ್ಯ ತೂಕವೆನಿಸುವ ಮೇರುವಿಗೆ
ಆಖಂಡ ಪುರುಷನಾಮ ವಿಜಯ ವಿಠ್ಠಲರೇಯನ
ಯಾಕೆ ಭಜಿಸದೆ ಲೋಕ ಶೋಕಿಸುವುದು ನರಕದಲ್ಲಿ ೫
ಜತೆ
ಗಾಳಿಗೆ ಬೆವರಿಲ್ಲ ನಿನ್ನವರಿಗೆ ಕೇಡಿಲ್ಲ
ವ್ಯಾಳ ವಿಜಯ ವಿಠ್ಠಲ ನಿನ್ನ ಬಿಟ್ಟವ ಕೆಟ್ಟ ೬

ಸ್ವತಂತ್ರನಾದವನು ಭಗವಂತ

೫೪
ಧ್ರುವತಾಳ
ನಿನ್ನ ಇಚ್ಛೆಯಿಂದ ಬಂದ ನಾನಾ ಭೋಗಂಗಳು
ಘನ್ನವಾದರೂ ಪತಿಕರಿಸಬೇಕು
ಎನ್ನ ಸತಿಪುತ್ರರು ಸುತ್ತಣ ಪರಿವಾರ
ಅನ್ನಂತ ಕಾಲದಲ್ಲಿ ಬಳಿಯಲ್ಲಿ ಇದ್ದರು
ಎನ್ನವರಲ್ಲವೊ ಎಂದೆಂದಿಗೆ ಪ್ರ-
ಸನ್ನವದನ ಪಾವನ್ನ ಭಾಗ್ಯಸಂಪನ್ನ
ನಿನ್ನಾಧೀನದವರೊ ನಿನ್ನ ಸೂತ್ರದಲ್ಲಿ
ಚೆನ್ನಾಗಿ ತಿರುಗುವರು ನಾನಾ ಪ್ರಕಾರವಾಗಿ
ಮುನ್ನೆ ಮಂದಿರ ಪಶು ಬಗೆಬಗೆ ದ್ರವ್ಯಗಳು
ಉನ್ನತವಾಗಿರೆ ಮಮತೆಯ ಕಲ್ಪಿಸಿ
ಬಿನ್ನಣದಲಿ ಹಚ್ಚಿ ಹೇರಳವಾಗಿ ಇನಿತು
ಬಣ್ಣನೆ ತೋರಿಸುವುದು ಬಹುಕಾಲದಲ್ಲಿ ಮಾಯಾ
ಬಣ್ಣಕೆ ಏನೆಂಬೆ ಕುಶಲದ ಗತಿಯನ್ನು
ಎನ್ನದೆಂದರಿಷ್ಟೆ ಚಿಂತೆ ಮಾಡಲಿಬೇಕು
ಇನ್ನು ಸಂಶಯವಿಲ್ಲ ಮನೊವಾಕ್ಕಾಯದಲಿ
ನಿನ್ನ ಸರಿ ಬಂದಂತೆ ಮಾಡೊ ಮಹಮಹಿಮ
ನಿನ್ನಿಂದಾದದ್ದೆ ಸಕಲ ವ್ಯಾಪಾರ ಅಪಾರ
ಎನ್ನ ಸ್ವತಂತ್ರವೇನು ವಿಜಯ ವಿಠ್ಠಲರೇಯ
ನಿನ್ನ ಪಾದವೆ ಹೃದಯದೊಳಗೆ ನಿರುತ ೧
ಮಟ್ಟತಾಳ
ಒಬ್ಬರನ್ನೊಬ್ಬರಿಗೆ ವಶಮಾಡಿ ಮೋಹ
ಹಬ್ಬಿಸಿ ಹಗಲಿರುಳ ಅಬ್ಬರ ವೃತ್ತಿಯಲಿ
ಮಬ್ಬು ಕವಿಸಿ ಭವದ ಉಬ್ಬಲೊಳಗೆ ಹಾಕಿ
ಉಬ್ಬಸವ ಬಿಡಿಸಿ ಉಬ್ಬಿಡಿ ಕೊರಳಿಗೆ
ಕಬ್ಬಿಣ ಪಾಶದಲಿ, ಶಬ್ದಾದಿ ವಿಷಯ
ನಿಬ್ಬರ ಕರ್ಮದಲಿ ತಬ್ಬುಬ್ಬಿಗೊಳಿಸುತ
ಉರ್ಬಿಯೊಳಗೆ ಎನ್ನ ಇಬ್ಬಗೆ ಮಾಡುವುದು
ಹೆಬ್ಬಗೆತನವೇನೋ ಅಬ್ಜನಾಭ
ಅಬ್ಜಪಾಣಿ ನಮ್ಮ ವಿಜಯ ವಿಠ್ಠಲರೇಯ
ಅಬ್ಬಿದವರಿಗೆ ಪ್ರಾರಬ್ಧ ತೀರಿಸಿ ಬಿಡುವೆ ೨
ತ್ರಿವಿಡಿ ತಾಳ
ಎನ್ನ ಮೇಲಪರಾಧ ಲೇಶ ಮಾತುರ ಇಲ್ಲ
ಅನ್ಯಾಯದವನಲ್ಲ ನಾನು ದೇವ
ಇನ್ನು ಮಾತನು ಕೇಳು ನೆರದು ಜನರು ನಿತ್ಯ
ನಿನ್ನದಾಸದಾಸಿಯರು ನಿಜವೆಂಬೆನೋ
ನಿನ್ನ ಲೀಲೆ ಅಲ್ಲದೆ ಪ್ರತಿ ಕಾಣೆನೊ
ಧನ್ಯನ ಮಾಡಿ ಪೊರೆವನಾರು ಜಗದೊಳು
ಅನ್ಯಥವೆನಿಸ ನೋಡುವನಾವನಾರೈ
ಕಣ್ಣಿಲಿ ಮನಸಿಲಿ ಕಾಣದ ಭೋಗಗಳು
ಅನ್ನಂತವಾಗಿ ಕೊರತೆಯಿಲ್ಲದೆ
ಉಣ್ಣಿಸಿ ಆನಂದ ಕೊಡುವ ವಿಚಿತ್ರವ
ಬಣ್ಣಿಸಿ ಪೇಳಲೊಶವೆ ನರರಿಗೆ
ಜನ್ಯಜ್ಞಾನವ ಕಳೆವ ವಿಜಯ ವಿಠ್ಠಲ ಪಂಚ-
ಜನ್ಯಗಲ್ಲದೆ ಕೇವಲತಿದಾಸರ ಪೊರಿದೆ ೪
ಅಟ್ಟ ತಾಳ
ಆರು ಮುಖ್ಯರೆ ಇಂದು ನೆರೆದ ಜನರೊಳು
ಆರಿಂದ ಈ ಭಾಗ್ಯ ದೊರಕಿಯಿಪ್ಪುದು ಕಾಣೊ
ಆರಿಂದ ಮಹಕೀರ್ತಿ ಬರುವುದು ಮೆರೆವುದು
ಆರು ಪುಣ್ಯಕೆ ಮುಖ್ಯರು ಮುದದಿಂದಲಿ
ಆರಾರೊ ಇದರೊಳು ಅತಿಶಯವಂತರೊ
ಆರಾದರೇನಯ್ಯ ಬಗೆ ಬಗೆ ಪರಿ ನಿನ್ನ
ಆರಾಧನೆ ನಡೆದರೆ ಸರಿಯಲ್ಲದೆ
ಧಾರುಣಿಯೊಳು ನಮ್ಮ ಉದರ ತುಂಬಿಕೊಂಡು
ಶರೀರ ರಕ್ಷಿಸಿ ಕೊಂಬ ತೆರದಲ್ಲಿ
ಊರೂರು ತಿರುಗಿದರೇನು ನಿನ್ನಯ
ಮೂರುತಿಯ ಧ್ಯಾನ ಮಾನದಲ್ಲಿದ್ದರೆ ಸಾಕು
ಭಾರಕರ್ತನಾದ ವಿಜಯ ವಿಠ್ಠಲರೇಯ
ಸಾರಿ ಸಾರಿಗೆ ನಿನ್ನ ಕರುಣವೆ ಘನಪದವಿ ೪
ಆದಿತಾಳ
ಹತ್ತದೆಂಬುದ್ಯಾತಕೆ, ಹರಿಯೆ ಲಾಲಿಸು ನಿನ್ನ
ಚಿತ್ತದಲ್ಲಿದ್ದುದೆ ಸಂಕಲ್ಪವಿದೆ ಸರಿ
ಹತ್ತುಜನರ ಕೂಡ ಚರಿಸಬೇಕೆಂಬೊ ಕರ್ಮ-
ಮತ್ತೆ ಮತ್ತೆ ಇರಲಿಕ್ಕೆ ಬರಿದೆ ಯೋಚಿಪದೇನು
ಎತ್ತ ಪೋದರೇನು ಬಿಡುವುದೆ, ಸಂಸ್ಕಾರ
ಹತ್ತಿಕೊಂಡಿಪ್ಪುದು ಮಹಜ್ಞಾನಿಗಾದರು
ಅತ್ಯಂತವಾಗಿ ಅನುಭವಿಸದೆ ಬಿಡದು
ಸತ್ಯಸಂಕಲ್ಪ ನಮ್ಮ ವಿಜಯ ವಿಠ್ಠಲ ನೀನೆ
ನಿತ್ಯದಲ್ಲಿ ನಡೆಸಿದಂತೆ ನಡೆಯಬೇಕು ೫
ಜತೆ
ಎಲ್ಲಿದ್ದರೇನಯ್ಯ ನಿನ್ನ ಕ್ಲಪ್ತಿಗೆ ಕಡಿಮೆ
ಎಳ್ಳಿನಿತೆಯಿಲ್ಲ ವಿಜಯ ವಿಠ್ಠಲರೇಯ ೬

ಹರಿದಾಸರಿಗೆ ಭಗವಂತನ ನಾಮಭಜನೆ

೯೮
ಧ್ರುವತಾಳ
ನಿನ್ನ ನಾಮ ಪೀಯೂಷಾನ್ನವೊ ಜ್ಞಾನಿಗಳಿಗೆ
ನಿನ್ನ ನಾಮವೆ ರುಚಿ ಅನಂತಕಾಲದಲ್ಲಿ
ನಿನ್ನ ನಾಮವೆ ಸವಿದುಣ್ಣಲು ಸುಖಾ
ನಿನ್ನ ನಾಮದ ನೆಲೆಯನ್ನು ಬಲ್ಲ ಮಾನವ
ಅನ್ಯ ರಸಗಳಿಗೆ ಮನಸು ಎರಗಿಸಾ
ನಿನ್ನ ನಾಮವೆ ತಿಳಿದು ತನ್ನೊಳಗೆ ತಾನೆ ನಲಿದು
ಚನ್ನಾಗಿ ನಾಮಸುಧೆಯನ್ನು ನಾಲಿಗೆಯಲ್ಲಿ
ಕಣ್ಣೆವೆ ಹಾಕುವ ಅನ್ನಿತದೊಳಾದರು ಮನ್ನಿಸಿ ಹರಿಯ ಕಾ
ರುಣ್ಯ ನಾಮಾಮೃತ ಬಿನ್ನಾಣದಲ್ಲಿ ಸುರಿದ
ವನ್ನ ಸೌಭಾಗ್ಯಕ್ಕೆ ಇನ್ನು ಎದಿರುಂಟೆ ಅನಂತ ಜೀವಿಯೊಳು
ಜನ್ಮಾದಿರಹಿತ ಶ್ರೀ ವಿಜಯ ವಿಠ್ಠಲರೇಯಾ
ನಿನ್ನ ಶರಣಾಗತರು ಧನ್ಯರೋ ತ್ರಿಜಗಕ್ಕೆ ೧
ಮಟ್ಟತಾಳ
ಹರಿ ನಿನ್ನನಾಮ ಕರಣಶುದ್ಧಿಯಲ್ಲಿ ಪರೀಕ್ಷಿಸಿ ಪ್ರತಿದಿನ
ಸುರಿಸುರಿದು ಬಹಳ ಹರುಷನಾಗುವ ನರನು
ಧರಣಿಯೊಳಗೆವುಳ್ಳ ಚರಿಸುವ ರಸಂಗಳ
ಸರಕು ಮಾಡನು ಕಾಣೊ ಅರಿದು ಬಿಡುವಾ
ನಿರಾಕರಣೆಯನು ಮಾಡಿ ಪರಲೋಕಕೆ
ಸುಖಕರವಿದು ಅಲ್ಲೆಂದು ಹರಿ ನಿನ್ನ ಸಿರಿಚರಣ
ಶರಣರ ಮನೋಗತ ನರನಾದರೂ ಒಮ್ಮೆ
ಅರಿಯಲಾರರು ಕಾಣೊ ಪರತತ್ವ
ವರರಂಗ ವಿಜಯ ವಿಠ್ಠಲ ನಿನ್ನ
ಪರಮ ನಿರ್ಮಳ ನಾಮದಾರುರಸ ಬಲು ಸವಿಯೋ ೨
ತ್ರಿವಿಡಿತಾಳ
ಮನಸಾರ ಹರಿ ನಿನ್ನ ನಾಮಾಮೃತವ ಬಿಡದೆ
ನೆನೆಸುತ್ತ ಸವಿದುಂಡ ಮಾನವಗಾದರೂ
ಕನಸಿನೊಳಾದರೂ ಹಸಿವಿ ತೃಷೆಗಳಿಲ್ಲ
ಮನುಜೋತ್ತಮನಾಗಿ ಬಾಳುವನೋ
ಜನ ಸರತಿಯಲಧಿಕಾ ಕುಂದನುಡಿಗಳಿಲ್ಲ
ಮನಸಿಜನುಪಹತಿ ಇರಲಿಸಲ್ಲ
ಅನುಸರಿಸಿ ಅನ್ಯರನ್ನು ಬೇಡಿ ಕಾಡುವುದಲ್ಲ
ಅನುಶುಚಿಯಕಲ್ಲದೆ ಕ್ಲೇಶವಿಲ್ಲಾ
ಅನಿಶ ಬಿಡದೆ ಕಾಯುವ ವಿಜಯ ವಿಠ್ಠಲರೇಯಾ
ಘನ ಸಮರ್ಥನ ನಾಮಸುಧಿ ಉಂಡವನೇ ಧಿಟ್ಟಾ ೩
ಅಟ್ಟತಾಳ
ಧರೆ ಸುತ್ತಿ ಹಣಸಾಲಕೊಟ್ಟು ತರುವುದಲ್ಲ
ಮರೆಸಿ ಮೋಸದಲ್ಲಿ ವ್ಯವಹಾರ ಮಾಡುವುದಲ್ಲ
ಇರಿಸಿದ ಪದಾರ್ಥ ಪೋಯಿತು ಎನೆಸಲ್ಲ
ಬೆರಿಸಿದೆಡೆಯಲ್ಲಿ ಅದೆ ಇಲ್ಲೆಂಬುದಲ್ಲ
ತರಿಸುವುದಲ್ಲ ಅನ್ಯರಿಂದ ಕೇಳಿ
ಧರಿಸುವುದಲ್ಲ ಶಿರದಮೇಲೆ ಅನುದಿನ
ಅರಸರ ಬಾಗಿಲು ಕಾಯಿದು ಕೇಳುವುದಲ್ಲ
ಮೆರೆವ ಸುರರೊಳು ವಿಜಯ ವಿಠ್ಠಲನ್ನ
ವರ ಸಮೀಪದಲ್ಲಿ ಸುಖ ಬಡಿಸುವುದಿದು ೪
ಆದಿತಾಳ
ಒಗರು ವಿಷ ಖಾರ ಹುಳಿ ಕಟು ಷಡುರಸಕೆ
ಮಿಗಿಲೆನಿಸುವುದು ಅನಂತಾನಂತ ಮಡಿ
ಹಗಲು ಇರಳು ಸವಿದುಣ್ಣಲು ಬೇಸರಿಕೆ ಇಲ್ಲ
ಹೊಗೆ ಉರಿಯಿಂದ ಪರಿಪಕ್ವವಾಗುವುದಲ್ಲ
ಉಗುಳಿ ಕಳೆವುದಲ್ಲಾ ಹೇಶಿಕೆ ಪುಟ್ಟಿತೆಂದು
ತೆಗೆಯೆಂದು ಒಬ್ಬರಿಗೆ ದೈನ್ಯ ಪಡುವುದಲ್ಲ
ಜಗದೊಳು ನಾಮರಸ ಸುರಿಯೆ ಅವನ ವಂಶ
ಅಘದಿಂದ ದೂರರಾಗಿ ನಿತ್ಯತೃಪ್ತಿ ಪಡುವರು
ಅಘದೂರ ವಿಜಯ ವಿಠ್ಠಲನ ನಾಮಸುಧಿ
ವಿಗಡನಾಗದೆ ಸುರಿಯೆ ರಗಳೆ ಭವದನಿಗಳ ಹರ ೫
ಜತೆ
ಹರಿನಾಮಾಮೃತವನ್ನು ಉಣಬಲ್ಲ ಜ್ಞಾನಿಗೆ
ಬರಿದೆ ನೆಚ್ಚನು ವಿಷಯಾ ವಿಜಯ ವಿಠ್ಠಲ ಒಲಿವಾ ೬

ಈ ಪ್ರಪಂಚವೆಲ್ಲವೂ ಪ್ರಳಯಕ್ಕೊಳಗಾಗಿ

೪೯
ಧ್ರುವ ತಾಳ
ನಿನ್ನಾಧೀನ ಈ ಜೀವದೊಳಗಿದ್ದ ಪೂರ್ಣ ಶಕ್ತಿ
ನಿನ್ನಾಧೀನ ಲಿಂಗ ಗುಣತ್ರಯ ಷೋಡಶಾತ್ಮಕ ಕಳೆಗಳು
ನಿನ್ನಾಧೀನ ಅನಾದಿ ಅವಿದ್ಯಾ ಕಾಮ ಕರ್ಮ ಸಕಲವು
ನಿನ್ನಾಧೀನ ಜೀವಾಚ್ಚಾದಿಕ ಪರಮಾಚ್ಛಾದಿಕ ಬಂಧಕಾ
ನಿನ್ನಾಧೀನ ಕಾಲ ಪ್ರಕೃತಿ ವೇದ ವರ್ಣ ಅವ್ಯಾಕೃತಾ
ನಿನ್ನಾಧೀನ ರಮೆ ಪರಿ ಪರಿ ರೂಪದಲ್ಲಿ ಅಲ್ಲೆಲ್ಲಿ
ನಿನ್ನಾಧೀನ ಸೃಷ್ಟಿ ಸ್ಥಿತಿಲಯ ಸೂಕ್ಷ್ಮ ತರಸೂಕ್ಷ್ಮ ಮಹತ್ತು
ನಿನ್ನಾಧೀನ ಗುಣ ಸಾಮ್ಯ ವೈಷಮ್ಯ ತತ್ತತ್ಪ್ರಭೇಧಾ
ನಿನ್ನಾಧೀನ ಸರ್ವ ತಾತ್ವಿಕರ ವರ ಸಾಮರ್ಥಿಕೆ
ನಿನ್ನಾಧೀನ ಬೊಮ್ಮಾಂಡ ಪಿಂಡಾಂಡ ಅಂತರ ಬಾಹಿರ ವ್ಯಾಪಾರ
ನಿನ್ನಾಧೀನ ಒಂದೆ ಎರಡೆ ಪ್ರಕೃತಿ ಪ್ರಕೃತಿ ವಿಕೃತಿ ವೈಕೃತ
ಇನ್ನಿತು ಪೇಳಿದರೊಳಗೆ ಅನಂತ
ನಿನ್ನಿಂದ ದತ್ತವಾದ ಸ್ವಾತಂತ್ರ ಈ ಬಗೆಯಲಿ
ಕಣ್ಣೊಳಗಿದ್ದ ಮೂರುತಿಯ ಪ್ರಸನ್ನೀಕರಿಸಿ ಹೃದಯದಿ
ಉನ್ನಾಹದಿಂದಲಿ ವಿಜಯ ವಿಠ್ಠಲಗೆ
ಬಿನ್ನೈಸಿ ಭಕುತಿ ಸಂಪಾದಿಸಿ ೧
ಮಟ್ಟತಾಳ
ಮುಕುತಿ ಬೇಕಾದವರು ಮುಕುಂದನ ಚರಣ
ನಿಖಿಳ ಕರ್ಮವ ತೊರೆದು ನಿಸ್ಸಂಗವೃತ್ತಿಯಲಿ
ಸಕಲ ಠಾವಿನಲಿ ಯೋಚಿಸು ಪರವಾಗಿ
ರುಕುಮಿಣಿ ಪತಿ ನಮ್ಮ ವಿಜಯವಿಠ್ಠಲರೇಯನ್ನ
ಅಕಳಂಕ ಸ್ವಭಾವ ವರ್ನಿಸಿ ಪೂಜಿಸು ೨
ತ್ರಿವಿಡಿತಾಳ
ಇನ್ನೇನೀತನ ಕರುಣಕ್ಕೆ ಎಣೆಗಾಣೆ
ಘನ್ನ ಕಾರಣ್ಯ ಸಾಗರ
ನಿನ್ನಾಧೀನವೆಂದು ಒಮ್ಮೆ ನುಡಿಯಿರೋ
ಘನ್ನ ಕಾರುಣ್ಯಸಾಗರ
ಬನ್ನ ಬಡಿಸು ಭವದಿಂದೆತ್ತುವ
ಘನ್ನ ಕಾರುಣ್ಯಸಾಗರ
ಮುನ್ನೆ ಮಾಡಿದ ದೋಷ ಓಡಿಸುವಾ
ಘನ್ನ ಕಾರುಣ್ಯಸಾಗರ
ಘನ್ನ ಘಾತಕರ ಸದೆ ಬಡಿವ ನಿತ್ಯ
ಘನ್ನ ಕಾರುಣ್ಯಸಾಗರ
ಅನಂತಾನಂತ ಜನುಮವಾದರೂ
ಘನ್ನ ಕಾರುಣ್ಯಸಾಗರ
ತನ್ನ ಜ್ಞಾನವನಿತ್ತು ಸಲಹುವಾ
ಘನ್ನ ಕಾರುಣ್ಯಸಾಗರ
ಬೆನ್ನು ಬಿಡದಲೆ ಭಾಗ್ಯ ಉಣಿಸುವಾ
ಘನ್ನ ಕಾರುಣ್ಯಸಾಗರ
ಘನ್ನ ಮೂರುತಿ ವಿಜಯ ವಿಠ್ಠಲ
ಘನ್ನ ಕಾರುಣ್ಯಸಾಗರ ೩
ಅಟ್ಟತಾಳ
ಯಮನಿಯಮ ಮೊದಲಾದ ಅಷ್ಟಾಂಗಯೊಗ
ಕ್ರಮದಿಂದ ಸಂಪಾದಿಸಿ ಭಗವಂತನ
ವಿಮಲ ಗುಣಗ[ಳ] ಕೊಂಡಾಡಿ ಚನ್ನಾಗಿ
ಸಮ ಬುದ್ಧಿಯಲಿ ಸರ್ವದ ಸತ್ಪ್ರಕೃತಿ
ಪ್ರಮೇಯ ಭಾಗಗಳು ತಿಳಿದು ತಾರತ[ಮ್ಯ]
ಗಮ ತತಿಯಿಂದ ಭಗವದೋಪಾಸ
ನೆ ಮಾಳ್ಪ ಮಾಳ್ಪದು ಮನದಲ್ಲಿ
ಮಮಕಾರ ಅಹಂಕಾರ ಬಿಟ್ಟು ಸುನಿಶ್ಚಿತ್ತ
ಸುವನಸರೊಡಿಯ ವಿಜಯ ವಿಠಲರೇಯ
ನಮೊ ನಮೊ ಎಂದವಗೆ ಕಣ್ಣ ಮುಂದಾಡುವ ೪
ಆದಿತಾಳ
ಗುಣರೂಪ ಕ್ರೀಯಾ ಅಂಗಬದ್ಧ ದ್ವಿವಿಧವೆನ್ನಿ
ಅನ ರಾಮಾ ಸಹಾ ಪೂರ್ಣ ವೈಲಕ್ಷಣ್ಯ ನರಸಿಂಹ
ದಿನಿತು ಬಗೆಯಿಂದ ಉಪಾಸನ ಭೇದ ತಿಳಿದು
ಮನುಜಾದಿಗಳು ಮರೆ ಅವರವರ ತಕ್ಕಂತೆ
ಧನ ಕನಕ ವಸ್ತುವಾಹನ ಲೋಕ ಸತಿಸುತರ
ಅನುವಾಗಿ ಇತ್ತು ಅವರ ಪೊರೆದು ಪ್ರತಿದಿವಸ
ಗುಣವಂತರ ಮಾಡಿ ಪ್ರತ್ಯೇಕ ನದಿಯಲಿ
ಮುಣುಗಿ ಮುಕ್ತಿಯ ಕೊಡುವ ನಿನ್ನಾಧೀನವೆಂದರೆ
ತೃಣವಾದರು ಚಲಿಸಲಿ ಸಮರ್ಥರಾರೂ
ವನಜನಾಭನೆ ಸೃಜ್ಯಕಾಲಕ್ಕೆ ಜೀವರೊಳು
ಅನಿರುದ್ಧ ಅಂಶದಿಂದ ಪೊಕ್ಕು ಈ ಪರಿ ಚರಿಯ
ಪ್ರಣುತರಿಂದ ಮಾಡಿಸಿ ಮುಕುತರ ಮಾಡುವ
ಜನುಮಾದಿ ವಿರಹಿತ ವಿಜಯವಿಠ್ಠಲರೇಯ
ಗಣನೆ ಇಲ್ಲದೆ ಲಿಂಗ ಪ್ರಕೃತಿಯ ಮನೆಮಾಳ್ಪಾ ೫
ಜತೆ
ನಂಬಿರೊ ನೆರೆನಂಬಿ ಜಗದಂಬಿಕೆ ನಾಥನ
ಇಂಬು ಕೊಡುವ ಈತನೆ ವಿಜಯವಿಠಲಾಧೀನಾ ೬

ಸಕಲವೂ ಹರಿಯ ಅಧೀನವೆಂದು ತಿಳಿದು

೭೩
ಧ್ರುವತಾಳ
ನಿನ್ನಾಧೀನ ದೇಹ ಪ್ರಾಣೇಂದ್ರಿಯ ಕರ್ಮಾಚರಣೆ
ನಿನ್ನಾಧೀನ ಜ್ಞಾನ ಇಚ್ಛೆ ಪ್ರಯತ್ನ ಪರಿ ಪರಿ
ನಿನ್ನಾಧೀನ ಬುದ್ಧಿ ಮತಿ ಧೈರ್ಯ ಕೀರ್ತಿ ಶಕ್ತಿ
ನಿನ್ನಾಧೀನ ಜಪ ತಪೋದಾನ ಧ್ಯಾನನಿದಾನಾ
ನಿನ್ನಾಧೀನ ಆಭಯ ವಿರೋಗ ಯೋಗ ಭೋಗ
ನಿನ್ನಾಧೀನ ಉಕುತಿ ಯುಕುತಿ ಭಕುತಿ ಮುಕ್ತಿ
ನಿನ್ನಾಧೀನ ವೈರಾಗ್ಯಭಾಗ್ಯ ವಸನ ಭೂಷಣ
ನಿನ್ನಾಧೀನ ದೇಶ ಕೋಶ ಓದು ಮಾಧುರ್ಯ
ನಿನ್ನಾಧೀನ ಬಾಲ್ಯ ಯೌವನ ವಾರ್ಧಿಕ್ಯ
ನಿನ್ನಾಧೀನ ಇಷ್ಟಾನಿಷ್ಟ ಪಾಪ ಪುಣ್ಯ
ನಿನ್ನಾಧೀನ ಪ್ರಕೃತಿ ಕಾಲ ವೇದ ಜೀವರು
ನಿನ್ನಾಧೀನ ಅಮಿಶ್ರ ಮಿಶ್ರಾ ತತ್ವ ತತ್ಪದಾರ್ಥ
ನಿನ್ನಾಧೀನ ಕಾರ್ಯ ಕಾರಣ ಕಾರ್ಯ ಸಂಗತಿ
ನಿನ್ನಾಧೀನ ನಾನಾ ವ್ಯಾಪಾರ ವ್ಯಕ್ತಾ ವ್ಯಕ್ತ
ನಿನ್ನಾಧೀನ ಯಾವತ್ತು ಬೊಮ್ಮಾಂಡ
ಅನಂತಾನಂತ ಕಲ್ಪ ಕಲ್ಪಾ ನಿನ್ನಾಧೀನ
ನಿನ್ನಾಧೀನ ನಿನ್ನಾಧೀನ ನಿನ್ನಾಧೀನ ಒಂದೊಂದೆ ಎರಡೆ
ಏನೆಂತ ಪೇಳಲಿ ಎನ್ನೊಶವಲ್ಲ ಎಲೊ ದೇವರ ದೇವ
ಪನ್ನಗ ಶಯನ ವಿಜಯ ವಿಠ್ಠಲ
ಬಣ್ಣಿಸಲಾರೆನು ಭಕುತ ವತ್ಸಲ ೧
ಮಟ್ಟತಾಳ
ಜನುಮ ಜನುಮಂಗಳು ನಿನ್ನಾಧೀನ
ಹೊಣೆಯಾಗಿದ್ದ ಹಗಲಿರುಳು ನೀನೆ
ಅನುಭವಕೆ ತಂದಿತ್ತದ್ದು ಇತ್ತದೊ
ಮನೋಜಯವಾಗಲಿ ಅನ್ಯವಾಗಲಿ
ತೃಣಯೋಗಿ ಬಂದರು ತೊಲಗಬಲ್ಲದು ಏನೊ
ಘನ ಮೂರುತಿ ನಮ್ಮ ವಿಜಯ ವಿಠ್ಠಲ ರೇಯ
ನಿನಗಿದು ಸರ್ವದ ಲೀಲೆ ಲೋಕದಲಿ ೨
ತ್ರಿವಿಡಿತಾಳ
ಎಲ್ಲ ನಿನ್ನಾಧೀನವಾಗಿವೆ ಅನ್ಯಥ
ಇಲ್ಲವಲ್ಲವಯ್ಯಾ ಇದರೊಳಗೊಂದು
ಬಲ್ಲವನಾರಯ್ಯಾ ವ್ಯವಧಾನ ಕಾಲಗಳು
ಎಲ್ಲೆಲ್ಲಿ ಪೋಗಿ ತಿರಗುವ ಸಂಭ್ರಮ
ಸಲ್ಲುವುದೇನೋ ಸ್ವಾತಂತ್ರ ಒಬ್ಬರಿಗಾದರು
ಕಲ್ಲು ಕವಣೆ ನಿನ್ನಾಧೀನ ಕಾಣೋ
ತಲ್ಲಣಿಸುತಲಿದೆ ನಿನ್ನ ಭೀತಿಗೆ ಪ್ರತಿ
ಸೊಲ್ಲನಾಡುವರುಂಟೆ ಸುರರಾಧ್ಯರು
ಒಲ್ಲೆನೆಂದರೆ ಪಾರ್ಥನ ರಣರಂಗದಲಿ
ನಿಲ್ಲಿಸಿ ವ್ಯಾಪಾರ ಮಾಡಿಸಿದೆ
ಹುಲ್ಲು ಮಾನವರ ಪಾಡೇನು ನಿನ್ನ ಇಚ್ಛೆ
ಯಲ್ಲದೆ ಮತ್ತೊಂದು ಕಾರಣ ಉಂಟೆ
ಅಲ್ಲಿ ಇಲ್ಲಿ ಇಪ್ಪನೆಂಬೊ ಸಂಶಯವ್ಯಾಕೆ
ಎಲ್ಲಿ ಪೊಂದಿಸಲಲ್ಲಿ ಇರಬೇಕು
ಬಲ್ಲಿದ ಬಲವಂತ ವಿಜಯ ವಿಠ್ಠಲ ಲಕುಮಿ
ನಲ್ಲ ನಾರಾಯಣ ನಾನಾವತಾರನೆ ೩
ಅಟ್ಟತಾಳ
ಇಂತು ಇಂತು ನಿನ್ನಾಧೀನವಾಗೆ
ಎಂತು ಎಂತು ಎನ್ನಾಧೀನವು
ಮುಂತೆ ತಿಳಿಯದು ಮಾಡುವಾಲೋಚನೆ
ಭ್ರಾಂತಿ ಜೀವನ ಸಮರ್ಥನೆ
ಸಂತತ ನಿನ್ನಾಧೀನವಾಗಿರೆ
ಮಂತ್ರಜ್ಞ ಮನುಜಂಗೆ ಮೃಗ ಮರುಳಾದಂತೆ
ತಂತುಗಾರ ನಿನ್ನ ತ್ರಾಣ ಇನ್ನಾವದೊ
ಅಂತರಂಗದಲ್ಲಿ ಆಡುವನೆ
ಸಂತೋಷ ಮೂರುತಿ ವಿಜಯ ವಿಠ್ಠಲದೈ
ತ್ಯಾಂತಕ ಭಕುತ ಬಂಧು ಆನಂದ ೪
ಆದಿತಾಳ
ಮಡದಿ ಮಕ್ಕಳು ನಿನ್ನಾಧೀನ
ಒಡವೆ ವಸ್ತ್ರ ನಿನ್ನಾಧೀನ
ಪಡಿಬಾನವು ನಿನ್ನಾಧೀನ
ಒಡೆತನವು ನಿನ್ನಾಧೀನ
ಬಡತನ ಭಾಗ್ಯ ನಿನ್ನಾಧೀನ
ಬಡಿವಾರ ಸೌಮ್ಯ ನಿನ್ನಾಧೀನ
ಕೊಡುವೋದು ಕೊಂಬುವುದು ನಿನ್ನಾಧೀನ
ನಡತಿ ನುಡತಿ ನಿನ್ನಾಧೀನ
ಪಿಡಿವುದು ಬಿಡುವುದು ನಿನ್ನಾಧೀನ
ಉಡುವುದು ಹೊದುವುದು ನಿನ್ನಾಧೀನ
ಅಡಿ ಇಡುವುದು ನಿನ್ನಾಧೀನ
ಕಡಿಗೆ ನಾನೇ ನಿನ್ನಾಧೀನ
ಪೊಡವಿಪತಿ ಸಿರಿ ವಿಜಯ ವಿಠ್ಠಲ
ಒಡನೊಡನೆ ಎನ್ನನು ಪಾಲಿಪನೆ ೫
ಜತೆ
ನಿನ್ನಾಧೀನವಾಗಿ ಸಕಲ ವಸ್ತುಗಳಿರೆ
ಎನ್ನದೆಂಬೋದೇನೊ ವಿಜಯ ವಿಠ್ಠಲ ಸ್ವಾಮಿ ೬

ಜೀವರು ಶ್ರೀಹರಿಯ ಅಧೀನರೆಂದೂ, ಭಗವಂತನ

೭೪
ಧ್ರುವತಾಳ
ನಿನ್ನಾಧೀನನಾದವನೊ ನಿತ್ಯದಲಿ ನಾನು
ಮನ್ನಿಸು ದಯದಿಂದ ಮಾತು ಕೇಳಿ
ಇನ್ನಾವ ಯೋಚನೆಯೊ ನಿರ್ಧರವಾಗಿ ನುಡಿದೆ
ಎನ್ನ ಭಾರವು ನಿನ್ನದಲ್ಲವೇನೈ
ಅನಂತ ಜನ್ಮಗಳು ಧರಿಸಿದ ಕಾಲಕ್ಕು
ಅನ್ಯ ಶರಣನಲ್ಲವೊ ಅಮಿತ ಮಹಿಮ
ಮನ್ನಣೆ ಇತ್ತು ಬಹು ಜನರಿಂದ
ಈ ಪರಿ ಬಣ್ಣನೆ ಮಾಡಿಸುವುದು ಬೇಕಾಗದೆ
ಮುನ್ನೆ ನಿನ್ನ ಪಾದಕ್ಕೆ ಕೇವಲ ದೈನ್ಯದಲ್ಲಿ
ಬಿನ್ನಪ ಮಾಡಿದ್ದು ಮನಕಾಗದೊ
ಬಿನ್ನಣದಲ್ಲಿ ಇನಿತು ನಡಿಸಿದದರಿಂದ
ಎನ್ನ ಸಾಧನಕೆ ವಿಳಂಬಾಗದೆ
ಬನ್ನ ಬಡಿಸಿದರೆ ಸಹ ನಾವಿಲ್ಲೆಂಬೋದು
ನಿನ್ನ ಮಹಮನಸಿಗೆ ತಿಳಿದೇನಯ್ಯಾ
ಛಿನ್ನ ಭಕ್ತನಾದರು ನೀನಿತ್ತ ಧೈರ್ಯದಿಂದ
ಖಿನ್ನವಾಗದಿಪ್ಪ ನಂಬಿದವರು
ಆನಂದವಲ್ಲದೆ ಏನೇನು ಬಂದರು
ಸನ್ನುಮತವೆ ಸರಿ ಏನು ಕಷ್ಟ ಬಂದರು
ಮನಕಾನಂದವಹುದು ನೀನೊಲಿಯೆ
ಚಿನ್ನಗರ್ಭಾಂಡ ಪೆತ್ತ ವಿಜಯ ವಿಠ್ಠಲರೇಯ
ನಿನ್ನ ವ್ಯಾಪಾರಕ್ಕೆ ಮಿತಿಯ ಕಾಣೆನೊ ಎಣಿಸಿ ೧
ಮಟ್ಟತಾಳ
ಬೆಟ್ಟದ ಮೇಲಿರಿಸು ಭಾಗ್ಯವ ಪೋಗಾಡು
ಕಟ್ಟು ಕಾವರೆಲೆ ಮಾಡು ಕಳ್ಳತನವೆ ಹೊರಿಸು
ಮಟ್ಟ ಮಾಡುವ ಪುಣ್ಯಮಹ ಬಂಧನ ಕಲಿಸು
ಕೆಟ್ಟ ಮಾತು ನುಡಿಸು ಕಾಸಿನವನ ಮಾಡು
ಅಟ್ಟಿ ಸೋಮಾರಿಗಳ ಅತಿ ಸೌಖ್ಯವ ಕೊಡು
ಬಟ್ಟಿಯ ತಪ್ಪಿಸು ಸತ್ಪಂಥವ ಪಿಡಿಸು
ಬಟ್ಟೆ ಕಾಣದಲಿಪ್ಪ ಬಹುಕ್ಲೇಶವ ಬಡಿಸು
ಇಟ್ಟದು ಪೋಗುವ ಯೋಚನೆ ಕಲ್ಪಿಸು
ತಟ್ಟಲಿ ಪ್ರತಿಕೂಲ ದೇದೀಪ್ಯನ ಮಾಡು
ಧಿಟ್ಟ ಮತಿಯ ಕೊಡು ಧರಣಿಯೊಳಗೆ ಅರಸು
ಪಟ್ಟವೆ ಕಟ್ಟಿಸು ತಿರಕಿಯ ಬೇಡಿಸು
ಪೆಟ್ಟುಗಳನೆ ತಿನಿಸು ಪ್ರೀತಿಭೋಜನ ಉಣಿಸು
ಕಷ್ಟವನ್ನೆ ಬಡಿಸು ಕಾಲಕಾಲಕ್ಕೆ ಸಂ
ತುಷ್ಟ ನರನ ಮಾಡುತ್ತುಂಗ ಗುಣವ ಕೊಡು
ಎಷ್ಟೆ ದಿವಸವಾಗೆ ಎನ್ನ ವದನದಲ್ಲಿ
ಕೃಷ್ಣರಾಮನೆಂಬೊ ಸ್ಮರಣೆ ಮರೆಸದಿರು
ಅಷ್ಟ ಸೌಭಾಗ್ಯನೆ ವಿಜಯ ವಿಠ್ಠಲರೇಯ
ಅಷ್ಟಷ್ಟೇನಯ್ಯಾ ನಿನ್ನ ಮನಕೆ ಬಂದ
ಚೇಷ್ಟಿಯ ಮಾಡಿಸೊ ಈ ಚೇತನ ಕೈಯಿಂದ ೨
ತ್ರಿವಿಡಿತಾಳ
ಅಂಗಡಿ ಹರಹಿಕೊಂಡು ಊರು ಕೇರಿಯ ತಿರುಗಿ
ಹಿಂಗದೆ ಪರರ ಮನೆಗೆ ಪೋಗಿ ಬಲು
ಸಂಗತಿಯನೆ ಹಚ್ಚಿ ಸಾಕಲ್ಯವಾಗಿ ಸು
ಖಂಗಳ ಬಯಸುವ ವ್ಯಾಜ್ಯ ಮಾಡಿ
ಭಂಗಾರ ಮೊದಲಾದ ದ್ರವ್ಯಂಗಳ ಪಿಡಿದು
ಭಂಗಾರ ಕಳಕೊಂಬ ವ್ಯವಹಾರವೆಂಬ
ರಂಗರಾಯನೆ ನೀನು ಇನಿತು ನುಡಿದ ಮಾತು
ಸಂಗೀತ ಜನರು ಮೆಚ್ಚುವರೇನೊ
ಜಂಗಮ ವರದಲ್ಲಿ ನಿನ್ನ ವ್ಯಾಪ್ತಿ
ಕಂಗೊಳಿಸುತಿದೆ ಕಡಿಮೆ ಇಲ್ಲ
ಅಂಗದಂಡಣೆ ಮಾಡಿ ಸಾಧನದವನಾಗಿ
ಗಂಗಾದಿ ಯಾತ್ರೆಯ ಚರಿಸದಲೇ
ಸಂಗನಾಗಿ ನಾನು ಬಲು ಜನರಿಂದ ಪಾ
ಪಂಗಳ ಸಂಪಾದಿಸುವ ಸ್ವತಂತ್ರನೇ
ತುಂಗ ವಿಕ್ರಮ ನಮ್ಮ ವಿಜಯ ವಿಠ್ಠಲರೇಯ
ಶೃಂಗಾರ ಮೂರುತಿ ಸತತ ಸತ್ಕೀರುತಿ ೩
ಅಟ್ಟತಾಳ
ನಾನಾ ಭೋಗಂಗಳು ಪಡುವವ ನಾನಲ್ಲ
ನಾನಾ ಜನರ ಕೂಡಾ ಚರಿಸುವ ನಾನಲ್ಲ
ನಾನಾ ನಡತಿಯನ್ನು ನಡಿವವ ನಾನಲ್ಲ
ನೀನೆ ಎನ್ನೊಳಗಿದ್ದು ಬಹುಮಾನವರ ಕೈಯಾ
ಅನವರತ ಮನ್ನಣೆ ಕೊಂಬುವ ನೀನೆ
ಅನುಮಾನವ್ಯಾತಕೆ ಯೋಚನೆ ಮಾಡಲಿ
ಆನಂದವಿತ್ತರೆ ಒಳಿತೆ ದು:ಖವನ್ನು
ಅನಂತಾನಂತವಾಗಿ ತಂದಿತ್ತರು ಲೇಸು
ಅನುಭೋಗಿಸದಲೆ ಒಲ್ಲೆನೆಂಬುವನಲ್ಲ
ಅನಂತಶಾಯಿ ಶ್ರೀ ವಿಜಯ ವಿಠ್ಠಲರೇಯ
ನೀ ನಡಿಸಿದಂತೆ ನಿತ್ಯ ಸಂಚರಿಸುವೆ ೪
ಆದಿತಾಳ
ದೇ ವನೀ ಪೂರ್ವದಲ್ಲಿ ಮಾಡಿದ ಸಂಕಲ್ಪ
ಆವಾವನೋ ಬಿಡಿಸಿ ಕೊಂಬ ಸಮರ್ಥನಾ
ನಾ ಬಲ್ಲೆನೆಂಬೊದಕ್ಕೆ ಸ್ವತಂತ್ರತನವುಳ್ಳ ಮಾ
ನವನಲ್ಲವಯ್ಯಾ ಮಾತ್ರ ಕಾಲಮಾತುರ
ಕೈವಲ್ಯನಾಥಾ ನಮ್ಮ ವಿಜಯ ವಿಠ್ಠಲರೇಯ
ಕಾವ ದಾತ ನೀನಿರೆ ಅನ್ಯ ಚಿಂತೆಗಳ್ಯಾಕೆ ೫
ಜತೆ
ನಿನ್ನಿಂದಾಗುವ ವ್ಯಾಪಾರಕ್ಕೆ ನಾನಡ್ಡನೊ?
ಚನ್ನಿಗ ವಿಜಯ ವಿಠ್ಠಲ ಸರ್ವಾಧಿಷ್ಠನೆ ೬

ಶ್ರೀಹರಿಯು ನಿರ್ದೋಷನು ಅನಂತ ಕಲ್ಯಾಣ ಗುಣ

೭೫
ಧ್ರುವತಾಳ
ನಿರ್ಗುಣೋಪಾಸ್ಯನಾಗು ನಿತ್ಯ ಸತ್ಯಾನಂದ
ವರ್ಗದಲ್ಲಿ ಇಪ್ಪ ಪರಮ ಪುರುಷ ಪೂರ್ಣಗುಣಾಬ್ಧಿ
ಸ್ವರ್ಗದಿಂದಿತ್ತವುಳ್ಳ ಅನುಭವಿಸುವ ಪುಣ್ಯ
ನಿರ್ಗುಣದಲ್ಲಿ ಬಂದದ್ದೆಲ್ಲವನು
ದುರ್ಗಾಧರಣಿ ಶ್ರೀ ತ್ರಿಗುಣದ ವ್ಯಾಪಾರ
ದುರ್ಗತಿಗೆ ಬೀಳಸಾದು ಕಾಣೊ
ದುರ್ಗೆಯಾದ ಲೋಕಕ್ಕೆ ಸ್ವರಮಣ ಗುಣಕೆ ಮನ
ನಿರ್ಗಮನಾಗದೇ ದೊರಿಯದಯ್ಯಾ
ದುರ್ಗುಣಾರಾಧನಿಗೆ ಕೇವಲ ಕಷ್ಟ ಬಡುವ
ದುರ್ಗಂಧ ಪಾದಾದಿ ಮತ್ತಾವಗಾಗೋದು
ಮಾರ್ಗಬೇಕಾದರೆ ಗತಿಗೆ ಲಾಲಿಸು ಪಂಚ
ಮಾರ್ಗಣನೈಯನೇ ಸರ್ವಕೊಡಿಯ
ಭಾರ್ಗವಿ ಮಾತುರ ನಿತ್ಯ ಮುಕ್ತಳು ಬೊಮ್ಮ
ದುರ್ಗಾಪತಿಯಾದ ಕೈಲಾಸ ಪತಿದೇವ
ವರ್ಗಾದಿಗಳು ತಾರತಮ್ಯಾನುಸಾರ ತಿಳಿದು
ಕುರ್ಗಣಿಗೆ ರಥ ತುಳಿದ ವಿಜಯ ವಿಠ್ಠಲನಂಘ್ರಿ
ದುರ್ಗಾಶ್ರಯವ ಮಾಡಿದವನೆ ಜೀವನ್ಮುಕ್ತ ೧
ಮಟ್ಟತಾಳ
ವ್ಯಭಿಚಾರದ ಭಕುತಿ ಏನೇನು ಮಾಡಿದರು
ಶುಭಲೋಕಕೆ ಗತಿಯಾಗದಯ್ಯ
ಇಭವರದನ ಪಾದದಬುಜದಳವನ್ನು
ಅಭಯನಾಗಿ ಭಜಿಸಿ ಕೊಂಡಾಡದಲೆ ಸು
ಲಭ ಜ್ಞಾನ ಬಂದು ಪ್ರಾಪುತವಾಗದು
ಕುಬುಜಿಯ ಪ್ರಿಯನಾದ ವಿಜಯ ವಿಠ್ಠಲರೇಯ
ನಭದಲ್ಲಿ ಪೊಳೆವನು ಪದುಮ ಕೋಶದಲ್ಲಿ ೨
ತ್ರಿವಿಡಿತಾಳ
ಭಗವತ್ಕರ್ತತ್ವವ ತಿಳಿದು ಇರುಳು ಹಗಲು
ತ್ರಿಗುಣಾತೀತನಾಗು ತವಕದಿಂದ
ಹಗೆಗೊಂಬ ನರನಲ್ಲಿ ಸಂಶಯಾದವನಲ್ಲಿ
ಮುಗುಳೆ ಕೊಂಡಾಡುವ ಸುಗುಣನಲ್ಲಿ
ಜಗದತ್ಯಂತ ಭಿನ್ನನಾಗಿದ್ದ ವಸುದೇವ
ಮಗನೆ ಮೂಲನಾರಾಯಣ ದೇವನು
ಬಗೆ ಬಗೆ ವ್ಯಾಪಾರ ಅಂತರ್ಯಾಮಿಯಾಗಿ
ನಗುತ ಮಾಡಿಪನೆಂದು ಪ್ರತಿ ಕ್ಷಣದಲಿ
ಮಿಗೆ ಜ್ಞಾನದಲಿ ನಿತ್ಯ ಸಮವಾಗಿ ನೋಡುತ್ತ
ನಿಗಮ ಶ್ರೀ ಹರಿಯೆ ಗುಣಾನುಸಾರ
ಅಗಣಿತದಿಂದಲಿ ಆತನ್ನ ಚರಿತೆಯ
ಬಿಗಹು ತೆಗೆಯದಲೆ ನುಡಿವಾವೆಂದು
ಹಗೆ ಮಿತ್ರರವರಲ್ಲ ಹರಿತಾನೆ ಪರಸ್ಪರ
ಜಗಳಾಡುವನು ಸ್ನೇಹ ಮಾಡುವನು
ಖಗ ಮೃಗ ಉರಗ ಅಂಡಜವು ಮಿಕ್ಕ ಜೀ
ವಿಗಳ ಚೇಷ್ಟಾಚೇಷ್ಟಾ ನಿಬಿಡಿಯಾದೆ
ತ್ರಿಗುಣವನ್ನು ಸರಿಸಿ ಮಾಡುವ ಪರಿ ಕ
ಣ್ಣಿಗೆ ಪೊಳಿದವು ಪೊಳೆಯದಿದ್ದವು
ಯುಗಳಾಭಾವದಲಿ ಮಾಡುವ ಕಡಿಗೆವೊ
ಬಗೆಯಲ್ಲದೆ ಪ್ರತಿ ತಂತ್ರವಿಲ್ಲ
ಬುಗರಿಯಂದದಿ ಲೋಕ ತಿರುಗಿಸುವನು ಸಾಹ
ಸಿಗನು ಪ್ರಳಯಾದೂರ ಪ್ರಣವಪಾದ್ಯ
ಸಿಗನು ಒಳಗಿದ್ದು ತನ್ನ ಕುರುಹ ಅನ್ಯ
ರಿಗೆ ಪ್ರೇರಿಸುವನೆಂದೆಂದಿಗೆ ಹೀನಾಯ
ಹೀಗೆ ಎನಲಾಗದು ವಸ್ತಾ ನಿರ್ಧಾರ ಗ
ತಿಗೆ ಮಾರ್ಗ ಮಾಡುವ ಬಲು ಅಂದದಿಂದಲಿ
ನಿಗಮ ಶಯನಾ ನಮ್ಮ ವಿಜಯ ವಿಠ್ಠಲ ಕಾ
ಯಂಗಳ ಮನೋವಾಚಾ ಕಾಯದಲ್ಲಿ ನೋಡು ೩
ಅಟ್ಟತಾಳ
ತದಾಕಾರ ತದ್ವರ್ನ ತದ್ರೂಪ ತತುಶಬ್ದ
ತದು ವಿಸ್ತೀರ್ಣ ತತುತತು ಉನ್ನತ
ತದಾಗತ ತನ್ನಿಯಾಮಕ ತನ್ನಾಮಕ
ತದು ವ್ಯಾಪಾರವು ತತು ತತು ತಕ್ಕದು
ವಿಧಿ ನಿಷೇದಾ ಸರ್ವ ಪ್ರಾಕೃತ ಸ್ವರೂ
ಪದ ದೇಹದಲಿ ಹರಿ ತತುತತು
ಇಂದ್ರಿಯಂಗಳಲಿ ವಾಸವಾಗಿ
ಪದೋಪದಿಗೆ ಒಂದಾನಂತ ರೂಪದಲ್ಲಿದ್ದು
ಸುದತಿ ಶ್ರೀಯೊಡನೆ ಅನೇಕ ಬಗೆಯಿಂದ
ಸದಮಲನಾಗಿದ್ದು ನಡೆಸಿ ನುಡಿಸಿ ಕೋ
ವಿದ ರಾಯಾ ಜಗವೆಲ್ಲಾ ವ್ಯಾಪಿಸಿ ಕೊಂಡಿಪ್ಪಾ
ಉದಕ ಬಿಂದು ವಸ್ತ್ರದ ಮೇಲೆ ಇಡಲಾಗಿ
ಅದರಂತೆ ಹೊರಗೆ ಒಳಗೆ ಸಾಂದ್ರವಾಗಿ
ಪದರು ಬಿಡದಲೆ ಪ್ರತಿಬಂಧ ವೆನಿಸದೆ
ಅದುಭೂತ ಶಕ್ತನು ಸರ್ವರಿಗೆ ಮೀ
ರಿದ ದೈವಾ ಅನಾದಿ ಸಿದ್ಧ ಪ್ರಸಿದ್ಧ
ದಧಿಯೊಳು ನವನೀತವಿದ್ದ ತೆರದಿ ಕಾಣಿ
ಸದಲಿಪ್ಪ ಅವ್ಯಕ್ತನಾಗಿ ಪ್ರತಿದಿನ
ಮದಗರ್ವ ಬಿಟ್ಟು ದಂಡಾದಿಂದ ಕ
ಡಿದರೆ ಪರಮಾತ್ಮ ವ್ಯಕ್ತನಾಗುವನು
ಹೃದಯದೊಳಗೆ ತಿಳಿಯದೆ ಉಪಾಸನೆ
ಇದನೆ ಒಳಗೆ ಹರಿ ಪ್ರೇರಿಸಿದಾನೆಂದೂ
ಮುದದಿಂದ ನಲಿದಾಡು ನಿವ್ರ್ಯಾಜರ ಕೂಡಾ
ಪದುಮನಾಭ ನಮ್ಮ ವಿಜಯ ವಿಠ್ಠಲನ್ನ
ಮೊದಲು ತುದಿ ಮತ್ತಾವದು ಬಿಡದೆ ಎಣಿಸೋ ೪
ಆದಿತಾಳ
ಪ್ರತಿಮೆ ಜಡಗಳನ್ನು ಹಿತನುಡಿಗಳು ವೇದ
ತತಿ ಉಕ್ತಾವೆನ್ನೊ ಸಂತತ ಕುಡಿವಾ ನೀರು ತೀ
ರಥವೆನ್ನು ನಡೆವಾ ಅಮಿತ ಹೆಜ್ಜೆ ಯಾತ್ರೆ ಎನ್ನು
ಕಥೆಕಲ್ಪ ಇತರ ಆಡುತಲಿಪ್ಪ ಮಾತು ಮಂತ್ರ ಎನ್ನು
ಮಿತ ಭೋಜನಾ ನೈವೇದ್ಯ ಅಮೃತ ಪ್ರಾಶನವೆನ್ನು
ಸಿತ ವಸ್ತ್ರ ಹೊದುವಾದಚ್ಚುತನ ನಡುಮಡಿಯೆನ್ನು
ಸತು ಪರಿಮಳ ಅಲಂಕೃತ ನಾನಾ ಪುಷ್ಪಾ
ನಿರುತ ಧರಿಸಿದವೆಲ್ಲಾರಿತ ಹರಿ ಧರಿಸಿದವೆನ್ನು
ಪಿತ ಮಾತಾ ಸಹೋದರ ಸತಿಸುತಾ ಉಭಯ
ಸಂತತಿ ಪರಿವಾರ ಭಕುತರೆನ್ನೂ ದೃಢವಾಗಿ
ಕ್ಷಿತಿ ಸುರರಾರಾಧನೆ ಹುತವಹನಿಗೆ ಆ
ಹುತಿ ಹಾಕುವುದು ಶ್ರೀಪತಿಗೆ ಕವಳಾವೆನ್ನು
ಗತಿಗೆ ಪೋಗುವುದಕೆ ಅತಿಶಯವಾದ ಸಂ
ಗತಿಯನು ಪೇಳುವೆ ಚತುರಬಗೆ ತಿಳಿ
ಮತಿವಂತನಾಗು ಶ್ರೀ ವಿಜಯ ವಿಠ್ಠಲ ಸರ್ವ
ಗತ ಸರ್ವಭೋಕ್ತ ವ್ಯಾಪುತ ವ್ಯಕ್ತಾವ್ಯಕ್ತಾ ೫

ನಿವರ್ತಿ ಸಂಗಮ ಎಂಬ ಕ್ಷೇತ್ರಕ್ಕೆ ಸಪ್ತಗಂಗೆ’

೭೨. ನಿವರ್ತಿಸಂಗಮ
ಧ್ರುವತಾಳ
ನಿವರ್ತಿ ಸಂಗಮಕ್ಕಾವನಾದರು ಬಂದು |
ಭಾವ ಶುದ್ಧದಲಿನ್ನು ಸೇವಿಸಲೂ |
ಹ್ಯಾವರಿಕೆ ಸಂಸಾರವಸ್ತಿ ಪರಿಹಾರ |
ಝಾವಾದೊಳಗೆ ಮಾನವನುತ್ತುಮಾಗೆ |
ಜೀವನ ಮುಕ್ತಿ ಸಿದ್ಧವಾವಬಗೆಯಲ್ಲಿ |
ಕಾವ ಕರುಣದಿಂದ ಕಾವನಯ್ಯಾ |
ಈ ವಸುಧೆಯೊಳೀ ಪಾವನ ಕ್ಷೇತ್ರಕ್ಕೆ |
ಸಾವಿರಾಕ್ಷನು ಬಯಸುವನು ವಾಸ |
ದೇವ ಋಷಿ ಗಂಧರ್ವಾವಳಿಗಳು ನಿತ್ಯ ವಾಲ |
ಗವ ಬಿಡದೀ ವಿಧಿ ಮಾಡುವರು |
ವೈವಸ್ಥನಾಮ ನಮ್ಮ ವಿಜಯ ವಿಠಲ |
ದೇವನು ಮನಮೆಚ್ಚಿ ಫಲವೀವನು ೧
ಮಟ್ಟತಾಳ
ಕಾಶಿಯ ಪುರದಲ್ಲಿ ಭೂಸುರನ ಮಡದಿ |
ಹೇಸದೆ ನಿತ್ಯ ಒಬ್ಬ ಶ್ವಪಚನಲಿ ಪೋಗಿ |
ವಾಸರೋಸರದಲ್ಲಿ ದೋಷರಾಶಿಯ ವಾರ |
ಣಾಸಿಯೊಳಗೆ ಮಿಂದು ನಾಶವಗೈಸುತಿರೆ |
ಭಾಸುರ ಸುರ ಗಂಗೆ ದೋಷಕೆ ಗದಗದಿಸಿ |
ಲೇಶಾದ ಊರ್ಜಿತ ಕಾ[ಶಿ] ನಾಮಕ ವಿಜಯ ವಿಠಲನ |
ಮೀಸಲ ಮನದಲ್ಲಿ ಪೂಜಿಸಿ ಪಡೆದಳಭಯಾ ೨
ತ್ರಿವಿಡಿತಾಳ
ಶೃತಿವಾಕ್ಯವೆಂದು ಶ್ರೀಪತಿ ಪೇಳಿದನು ತನ್ನ |
ಸುತೆಗೆ ನಿವೃತ್ತಿ ಸಂಗಮಾಖ್ಯಾನ |
ಅತಿ ವೇಗದಲಿ ಸಮ್ಮತವಾಗಿ ಪೋಗಿ ಸ |
ನ್ನುತಿಸಿ ಮಿಂದು ಪಾಪಾಹತಗೈಸುವದೆನಲು |
ಪತಿಕರಿಸಿ ಮಾತು ಹಿತವೆಂದರಿದು ಭಾಗಿ |
ರಥೀ ಬರಲುದ್ಯೋಗ ಮಾಡಿದಳು ಅ |
ಮಿತ ವಿಕ್ರಮ ನಮ್ಮ ವಿಜಯ ವಿಠಲನ್ನ |
ಸತತ ಹೃದಯದೊಳು ಮಿತಿಯಲ್ಲಿ ನೆನವುತ ೩
ಅಟ್ಟತಾಳ
ಅಂದು ಮಂದಾಕಿನಿ ವಂದಿಸಿತಾ (ವಂದಸಿತಾ) ವಾಯಿ |
ಸಂದಾದಿಂದಲಿ ನಿತ್ಯ ಗಂಧವಾಹನ ಯೋಗಾ |
ವಿಂದಲಿ ಬಿಡದಲೆ ಬಂದು ಶುಚಿಯಾಗಿ |
ಮಿಂದು ಪೋಗುತಲಿರಲ್ಲೊಂದು ದಿವಸ ಮು |
ನೇಂದ್ರಾನು ನೀಕ್ಷಿಸಿ ಸುದರುಶನ ಮಾಡಿ |
ಅಂದಾಗ ನುಡಿಸಿದ ಇಂದು ನಿನ್ನ ರೂಪೇ |
ನೆಂದು ಬೆಸೆಗೊಳಲಂದು ಪೇಳಿ ಪಾಪ |
ದಿಂದ ಮುಕ್ತಳಾದಳೆಂದು ತಿಳಿದು ಭಕ್ತಿ |
ಇಂದಾನು ಸರಿಸಿ ವಂದಿಸಿ ಸದ್ಭಕ್ತಿಲಿ ವಿಜಯ ವಿಠಲನ |
ಬಾಂಧವನೆಂದು ಮುಂದಣವನು ಕೇಳಿ ೪
ಆದಿತಾಳ
ಯಮನ ತನುಜಾದಿಗಳು ಸಮರದೊಳಗೆ ಭೀ |
ಷಣ ಮೊದಲಾದ ಪರಾಕ್ರಮರ ಸದೆ ಬಡಿದಾ ಉ |
ತ್ತುಮ ಪಾಪವನ್ನು ಉಪಶಮನವನು ಪದಕ್ಕೊಂದು |
ಅಮಲಶುಭ ವಸನ ತಮಕೇರಿ ನೊಳಗದ್ದಿ |
ಶಮದಮೆಯಲ್ಲಿ ಅನುಕ್ರಮದಿರಿಸ ಪುಣ್ಯಕ್ಷೇತ್ರ |
ಅಮಿತದಲ್ಲಿ ಚರಿಸಿ ಅಮಲೋಸನಾಗದಿರೆ |
ನಮಿಸಿ ಪಾಂಡವರು ನಿಗಮದರ್ಥ ತಿಳಿದು |
ಸಮ್ಮುದದಲ್ಲಿ (ಸಂಗಮ) ಮೀಯೆ ದೋಷ |
ತಿಮಿರ ಪೋಯಿತು ಪ |
ರಮ ಶುಭ್ರವಾಗಿ ವಸ್ತ್ರ ಹಿಮಕರನಂತೆ ಪೊಳಿಯೇ |
ಅಮರರು [ಎ]ದ್ದು ಕುಸುಮವೃಷ್ಟಿಗರಿಯೆ ಮುನಿ |
ಸಮವಿಷಮರೆಲ್ಲ ಸಂಗಮವ ಕೊಂಡಾಡುತಿರೆ |
ಕ್ಷಮಿಹನಾಮಾ ವಿಜಯ ವಿಠಲರೇಯನ |
ಸಮಚಿತ್ತದಲ್ಲಿ ನೆನದು ಹಿಮಕರಾ ನ್ವಯರಾಲಿ [ವ] ೫
ಜತೆ
ಸಪ್ತಗಂಗಿಯ ಸ್ನಾನಾ ಗೈಯೆ ಕ್ಲಿಪ್ತಾವರಿತು ಸಿರಿ |
ಆಪ್ತನಾಗುವ ಸಪ್ತ ಜಿಂಹ್ವಾ ವಿಜಯ ವಿಠಲ | ೬

ಶ್ರೀಕೃಷ್ಣನನ್ನು ಕುರಿತ ಸ್ತೋತ್ರ

೧೩೭
ಧ್ರುವತಾಳ
ನೀ ಕಾಯದಿರೆ ಎನ್ನ ಕಾಯುವರಾರೋ ಕೃಷ್ಣ
ಬೇಕೋ ನೀನೆ ಕಾಯಬೇಕೊ ಕಾಮಧೇನು
ವಾಕು ಲಾಲಿಸೊ ಲಾವಕರ ತೊಲಗಿಸೊ
ನೂಕು ಭವಾಂಬುಧಿ ಈಯೊ ಸುಗುಣ ಬುದ್ದಿ
ಯಾಕಯ್ಯಾ ಯಾಕಯ್ಯ ನೀ ಕೈಯ ಬಿಡುವುದು
ಸಾಕುವ ಬರಿದು ಈ ಲೋಕ ಲೋಕದೊಳು
ರಾಕಾಬ್ಜವದನ ಪಿನಾಕಿವಂದಿತ ಪಾದನೆ
ಏಕಾತ್ಮ ವಿಜಯ ವಿಗ್ರಹನೆ, ಒಲಿದು ಎನ್ನ
ನೀ ಕಾಯೊ ನಿನ್ನಯ ಸೇವಕನಿವನೆಂದು
ಈ ಕಾಲಕೆ ನಿಜಕರ ಮುಗಿದು ಬೇಡಿಕೊಂಬೆನು ದೇವ
ಕೋಕಿಲಾವಳಿಯೊಳು ಕಾಕ ಇದ್ದಂತೆ, ವಿ-
ವೇಕ ರಹಿತ ನಾನು ಕೇಳೊ ದೇವಾ-
ನೇಕ ಮೂರುತಿ ವಿಜಯ ವಿಠ್ಠಲರೇಯ ನಿ-
ಜಾಕಾರ ಪುರುಷ ನೀ ಸೋಕಲು ಪರುಶ ೧
ಮಟ್ಟತಾಳ
ನೆನೆದು ನೆನೆದು ಅನ್ಯ ನೆನವಿಲಿ ಈತನು
ನೆನೆನೆದು, ನಿನ್ನ ನೆನವಿಗೆ ನಾ ಉದಾಸೀನವನ್ನು ಮಾಡಿ
ಬಿನಗು ಮನುಜನಾದೆ ಅನಯ ವಿಜಯ ವಿಠ್ಠಲನು
ಅನಿಮಿತ್ತ ಬಂಧು ೨
ರೂಪಕತಾಳ
ಕಲ್ಲು ನೀರೊಳು ಹಾಕಿ ನಿಲ್ಲೋಡೆ ಮಧ್ಯದಿ
ಎಲ್ಲೆ ಮಾತು ಇಂತೆಲ್ಲ ಪೇಳುವರಾರು
ಫುಲ್ಲ ಲೋಚನ ನಿನ್ನಲ್ಲಿ ಸೇರಿದ ಮೇಲೆ
ಕಲ್ಲು ಮಾನವ ನಾನಲ್ಲವೊ ಅಲ್ಲವೊ
ಅಲ್ಲಕೆದೆ ಅಲ್ಲಲಿತವಾದ ಪಲ್ಲವಾರುಣ ಪಾದ
ಮೆಲ್ಲನೆ ತೋರಿಸಿ ಎಲ್ಲ ಕಾಲದಲ್ಲಿ
ಬಲ್ಲಿದ ವಿಜಯ ವಿಠ್ಠಲ ವಿಶ್ವ ಮೂರುತಿ
ಎಲ್ಲಾರೊಡೆಯ ಶ್ರೀ ವಲ್ಲಭ ಕಾಯೊ೪
ತ್ರಿವಿಡಿ ತಾಳ
ಹಾಗ ಕಾಸೂವೀಸ ಹಂಚಿಕೊಡು ಎಂದು
ಭಾಗದೇಯನಾಗಿ ನಾ ಬೇಡಲಿಲ್ಲ
ಕೂಗಿ ಬೆಟ್ಟಕ್ಕೆ ಪಿರಿದಾಗಿ ಸೌಭಾಗ್ಯ ಬೇಡಿ
ಪೋಗಗೊಡದೆ ನಿನ್ನ ತಡಿಯಾಲಿಲ್ಲ
ಬಾಗಿ ಬೇಡಿದೆನೊ ದೃಢವುಳ್ಳ ಭಕ್ತರ ಮನೆಯ
ಬಾಗಿಲು ಕಾಯುವಂಥ ಸೇವೆಯನ್ನು
ಯೋಗಿ ಹೃದಯ ಸಂಯೋಗ ವಿಜಯ ವಿಠ್ಠಲ
ನೀ ಗರುವಿಸಿದರೆ ರೇಗದೆ ಒಡಲೊಳು ೪
ಝಂಪಿತಾಳ
ಆರಿಗಾಲವರಿಲಿ ಆರನಾಶ್ರೈಸಲಿ
ಆರಿಗಂಜಲಿ ಮತ್ತಾರಿಗಡಗಲಿ
ಆರಳಾ ಸೇರಿ ಆರಿಗೆ ದುಡಿಯಲಿ
ಆರನಪ್ಪಾ ಎಂದು ಹಾರೈಸಲಿ
ಆರಿಗಿನ್ನಳುಕಲಿ ಆರೋಷವಾಗಿ ಆರಾ ಕೇಳಲಿ
ಆರನರ್ಚಿಸಲಿ ಆರುವಾರು ಎನಗೆ ವಿಜಯ ವಿಠ್ಠಲ ಹರಿ
ಆರನಾದರು ಕಾಯಲಾರೆ ನಾನಾರೆನೊ ೫
ಅಟ್ಟತಾಳ
ಊರದೇವತೆಗಳನಾರಾಧಿಸಲು ನಿತ್ಯ
ನೀರೊಳು ಯಜ್ಞವ ಮಾಡಿದ ತೆರನಂತೆ
ಆರನೆ ಪೊಂದದೆ ಹಾರಿ ಹೋಗುವದಯ್ಯಾ
ನೀರಡಿಸಿ ತೆವರಾನು ತೋಡಿದಂತೆ
ಪೂರಣವಾದದು ವಿಜಯ ವಿಠ್ಠಲ ವಿ-
ಸ್ತಾರ ಮಹಿಮನೆಂದು ಸಾರಿದೆ ಕೂಗಿದೆ
ಕಾರುಣ್ಯವನೆ ಮಾಡು ಕರುಣದಿಂದಲಿ ನೋಡು ೬
ಆದಿತಾಳ
ಧೂಪ ದೀಪದಿಂದ ಇನ್ನು ಬೇಡಿಕೊಂಡವನಲ್ಲ
ಅಪ್ಪ ಅಪ್ಪ ಎಂದು ನಿನ್ನ ಬಲಿಸಿಕೊಂಡವನಲ್ಲ
ಪಾಪವೆಂಬೊರಳಿನಲ್ಲಿ ಅಪಸಾಪ ಬೀಳದೇನೆ
ಶ್ರೀ ಪತಿಯೇ ನಿನ್ನ ನಾಮ ಲೇಪಿಸೆನ್ನ ನಾಲಿಗಿಯಲಿ
ನೀ ಪರಮ ಪ್ರೀತಿಯಲಿಹಾಕುನೆವೆನೆ ಎರಡು
ಪೋಪಗಳಾದ ಹೀನ ಸ್ವರೂಪ ಉದ್ದಾರವ ಮಾಡೊ
ಗೋಪತಿಯೆ ವಿಜಯ ವಿಠ್ಠಲ
ನೀ ಪಾಲಿಸಯ್ಯಾ ಬಿಡದೆ ೭
ಜತೆ
ಬಡವರ ಮನೆಯಲ್ಲಿ ಒಡೆಯತನಕಿಂತ
ಬಡಿವಾರೊಂದೆ ಸಾಕು ವಿಜಯ ವಿಠ್ಠಲನೆಂಬೊ೮

ಭಗವಂತನ ಕೃಪೆಗೆ ಪಾತ್ರರಾದವರು

೫೫
ಧ್ರುವತಾಳ
ನೀ ಕೈಯ ಕೃಪೆಯಿಂದ ಪಿಡಿದರೆ ತೊಲಗದೆ
ಲೋಕದೊಳಗೆ ನಿರ್ಭಾಗ್ಯರುಂಟೆ
ಸಾಕುವರನುದಿನ ಸರ್ವದೇವತೆಗಳೂ
ಬೇಕೆಂದು ಮುಂದೊಲಿದು ಪ್ರೀತಿಯಿಂದ
ಜೋಕೆ ಮಾಡುವರಯ್ಯ ಆವಾವಾಪತ್ತುಗಳಾ
ನೇಕವಾಗಿ ಬಂದರೆ ಬೆಂಬಿಡದೆ
ಶ್ರೀಕಾಂತ ನಿನ್ನಾಣೆ ಅಜ್ಞಾನ ಮೀರದ ದೈವವುಂಟೆ
ಲೌಕಿಕ ವೈದಿಕದಲ್ಲಿ ಕೂಡ
ಕಾಕುಲಾತಿಯಿಂದ ನಾನೆಂದು ಕೊಂಡಾಡುವ
ವ್ಯಾಕುಲದಿಂದಲಿ ಕಡೆ ಬೀಳನು
ನೀ ಕರುಣಿ ನೀನೆ ಸ್ವಾಮಿ ನೀನೆ ನಿಯಾಮಕ ನೀನೆ
ಸಾಕುವ ದಾತನೆಂದು ಮೊರೆಯಿಡಲು
ಬಾಕುಳಿಕನಾಗಿ ಬದಿಯಲ್ಲಿ ನಿಂತು ಬೀದಿಗೆ
ಹಾಕದಲೆ ರಕ್ಷಿಸುವ ಹರಿಯೇ
ಏಕಮನಸಿನಲ್ಲಿ ನೆರೆನಂಬಿ ನಂಬಿದವ
ವಾಕು ಪೇಳಿದ್ದದ್ದೆಲ್ಲ ಪುಶಿಯಾಗದು
ಶೋಕವೆಂಬೋದೆ ಕಾಣೆ ನಿಜಭಕ್ತನವನೆ ಪುಣ್ಯ
ಶ್ಲೋಕನಾಗಿಪ್ಪ ನಿನ್ನ ಪೊಂದಿ
ಕುಕರ್ಮ ನಾಶಾ ಸಿರಿ ವಿಜಯ ವಿಠ್ಠಲ ವಿ
ವೇಕ ಮೂರುತಿ ನಿನ್ನ ಕರುಣಾತನಕೇನಂಬೆ ೧
ಮಟ್ಟತಾಳ
ವನಧಿ ಪರ್ವತ ಗಗನ ಅನಲ ಧರಣಿ ವರುಷ
ಅನಿಲ ಉರಗ ವ್ಯಾಘ್ರ ಘನಕರಿ ಕಾದೆಣ್ಣೆ
ಮೊನೆ ಶಸ್ತ್ರಾಸ್ತ್ರಗಳು ವನ ನದಿ ಮಹನಂಜು
ಗಣನೆ ಇಲ್ಲದ ಭೂತ ದನುಜ ನಿಕರವೆಲ್ಲ
ಇನಿತಿನಿತರ ಬಾಧೆ ಕ್ಷಣ ಮಾತುರ ಬಿಡದೆ
ಎನಗೆ ತನಗೆ ಎಂದು ದಣಿಸಿದ ಕಾಲಕ್ಕೂ
ಮನೆ ಮಾಡದ ದೇವಗಣದವರು ನಿಂದು
ಅನುಮಾನ ಮಾಡದಲೆ ಅನಿಮಿತ್ತರಾಗಿ
ವನಜನಾಭನೆ ನಿನ್ನ ಅನುಕಂಪನದಿಂದ
ತನುರೂಹಗಳಿಗೆ ಯಾತನೆ ಯಾಗದಂತೆ
ವನ ಕಾಪಾಡುವರು ಗುಣ
ಗಣ ಸುಖಸಾಂದ್ರ ವಿಜಯ ವಿಠ್ಠಲರೇಯ
ನಿನಗೆ ನಮಿಸಿದವನ ತನುವೆ ಸರ್ವದ ಸುಖ ೨
ತ್ರಿವಿಡಿತಾಳ
ಗೇಣುದ್ದ ಜಲದೊಳು ಅದರ ಇಮ್ಮಡಿಯಾದ
ಮೀನು ಬಿದ್ದು ಬಲು ಸಂಕಟ ಬಡುವಂತೆ
ನಾನು ಈ ಭವದಲ್ಲಿ ಪೊಕ್ಕು ನೆಲೆಗಾಣದೆ
ಹೀನ ಮತಿಯಲ್ಲಿ ಬಳಲುವೆನು
ಏನೆಂಬೆನಯ್ಯ ಈ ಸಂಸಾರವೆಂಬೋದೆ
ಮೇಣು ಬಿಟ್ಟವನಲ್ಲ ಬಿಡದಿದ್ದವನಲ್ಲ
ಮೀನನಂತೆ ನಿತ್ಯ ತಳಮಳವು ಗೊಳುತಿದ್ದು
ಧ್ಯಾನ ಕಾಣದೆ ಪೋದೆ ನಿನ್ನ ಪದದ
ಜ್ಞಾನವಂತರು ನಿನ್ನ ಮೊರೆಪೊಕ್ಕು ಉಳಿದದ್ದು
ಆನಂದವಾಗಿ ನಾ ಕೇಳಿ ಕೇಳಿ
ಸ್ಥಾಣುವಿನಂದದಿ ನಾನು ಬಾಳಿದೆನೊ
ವಾಣಿಯರಸನಯ್ಯ ವಿಜಯ ವಿಠ್ಠಲ ಬಹು
ಮಾನವಾಗಬೇಕೆಂದು ತಿರುಗಿದೆ ನಿನ್ನ ಮರೆದು೩
ಅಟ್ಟತಾಳ
ಅಡವಿ ಪಟ್ಟಣ ಕಂಡ ಗಿಡವೆ ಕಲ್ಪತರು
ಮಡುವುಗಳಮೃತಗಡಲವೆಂದೆನಿಪವು
ಖಡುಗ ಪೂವಿನ ಮಾಲೆ ಸಿಡಿಲು ರನ್ನದ ಕ
ನ್ನಡಿಯಾಗಿ ತೋರೋದು ತಡದ ಮಾರಿಗಳ ಸಂ
ಗಡಲೆ ಬಾಂಧವರಯ್ಯಾ ಕಡುಕೋಪದವ
ರೊಡನೆ ತಿರುಗುವರು ಕುಡಿದ ಗರಳ ಕಾ
ಲೆಡಿಸದು ಅನುದಿನ ನಡೆದ ನಡತಿ ಸುಖ
ಬಡಿಸುವದು ವೇಗ ಹಿಡದದ್ದೆಲ್ಲ ಸಾಧ್ಯ
ಪೊಡವಿಯೊಳಗೆ ಸುಧಾಗಡಲ ತಲ್ಪನೆ ನಿನ್ನ
ಅಡಿಗಡಿಗೆಲ್ಲೆಲ್ಲಿ ಬಿಡದೆ ಧೇನಿಸುವಂಥ
ದೃಢ ಭಕ್ತನಿಗೆ ಬಾಧೆ ಅಡಗಾಣಿಪದುಂಟೆ
ನುಡಿ ನುಡಿ ತಿಳಿದು ನಾ ಜಡವಾಗಿ ಭವವೆಂಬೊ
ಮಡುವಿನೊಳಗೆ ಬಿದ್ದು ಕಡೆಗಾಣದೆ ಪೋಪೆ
ಕಡುರಾಯ ವಿಜಯ ವಿಠ್ಠಲರೇಯ ಕರುಣಿಸು
ನಡತಿ ತಪ್ಪಿದ ಮಾನವ ನಾನು ಗತಿ ತೋರೋ೪
ಆದಿತಾಳ
ನಿನ್ನ ಪೆಸರ್ಗೊಂಡರೆ ತತ್ತದಭಿಮಾನಿಗಳು
ಘನ್ನವಾಗಿ ಒಲಿದು ಅಲ್ಲಲ್ಲಿ ತಾವೆ ಇದ್ದು
ಬೆನ್ನು ಬಲವಾಗಿ ಲೇಶ ಮಾತುರವಂಗೆ
ಖಿನ್ನ ತೋರದಂತೆ ಸಂರಕ್ಷಿಸುವರು
ನಿನ್ನ ಧೊರೆತನದ ಭಯದಿಂದ ಸಮಸ್ತರು
ಅನ್ಯಥಾಗಗೊಡದೆ ಕಾದುಕೊಂಡಿಪ್ಪರು
ಇನ್ನೇನು ಪೇಳಲಿ ಇಂಥ ವೈಚಿತ್ರಕ್ಕೆ
ಎನ್ನಿಂದಾಗದು ಸ್ವಾಮಿ ಕರ ಮುಗಿದು ನಮೋ ಎಂಬೆ
ಘನ್ನ ಮೂರುತಿ ನಮ್ಮ ವಿಜಯ ವಿಠ್ಠಲರೇಯ
ನಿನ್ನ ನಂಬಿದವಗೆ ಕೇಡಿಲ್ಲ ಕೇಡಿಲ್ಲ ೫
ಜತೆ
ಇವನೆ ಭಾಗ್ಯವಂತ ಮೂರು ಲೋಕದೊಳಗೆ
ಕವಿಗಳ ಮನೋಹರ ವಿಜಯ ವಿಠ್ಠಲರೇಯ ೬

ಶ್ರೀಹರಿಯನ್ನು ಸರ್ವಶಬ್ದವಾಚಕ ಎಂದು ಬ್ರಹ್ಮ ಸೂತ್ರ ಹೇಳುತ್ತಿದೆ.

೭೬
ಧ್ರುವತಾಳ
ನೀ ನಡೆದರಾವು ನಡಿವೆವಯ್ಯಾ
ನೀ ನುಡಿದರಾವು ನುಡಿವೆವಯ್ಯಾ
ನೀ ಪಿಡಿದರಾವು ಪಿಡಿವೆವಯ್ಯಾ
ನೀನು ತಡೆದರಾವು ತಡಿವೆವಯ್ಯಾ
ನೀ ನಿರ್ದಯವಾಗೆ ಅಜಭವ ಸುರಾದಿಗಳು
ಕಾಣಿಗೆ ಬಾರದೆ ಪೋಗುವರೊ
ನೀನೆ ಸ್ವಾತಂತ್ರ ಅನಾದಿ ಸ್ವಭಾವ
ನೀನೆ ಸೂತ್ರಮಣಿಗಣ ಎಂಬೋದೆ ಸಿದ್ಧ
ನೀನೆ ಜ್ಞಾನಗಮ್ಯ ವಿಜಯ ವಿಠ್ಠಲರೇಯ
ನೀ ನಡದರಾವು ನಡಿವೆವಯ್ಯಾ ೧
ಮಟ್ಟತಾಳ
ನಿನ್ನೊಳು ನೀನೆ ಎನ್ನೊಳು ನೀನೆ ಅನ್ಯರೊಳು ನೀನೆ
ಅನ್ಯೋನ್ಯನು ನೀನೆ ಚಿನ್ಮಯನು ನೀನೆ
ತನ್ಮಯನು ನೀನೆ ಘನ್ನ ಮಹಿಮನೆ ವಿಜಯ ವಿಠ್ಠಲನೆ
ಅಣುರೇಣು ನೀನೆ ಪರಮಾಣು ನೀನೆ ೨
ರೂಪಕ ತಾಳ
ಬಂದವನು ನೀನೆ ಭಕ್ತರ ಹೃದಯಾಬ್ಜ
ಮಂದಿರದೊಳು ವಿಠಲ ಮೂರುತಿಯಾಗಿ
ನಿಂದವನು ನೀನೆ ಶೇಷ ಪರ್ವತದಲ್ಲಿ
ಚಂದದಿಂದ ಸುಂದರ ತಿರುವೆಂಗಳನಾಗಿ
ಸಂದರುಶನವ ನಿನಗೆ ನೀನೆ ಮಾಡುತ್ತ
ಕುಂದದಲೆ ತರ್ಕೈಸಿಕೊಂಬೆ
ಒಂದೆ ಮೂಲವೆರಡು ಅವತಾರವೆಂದೆನಿಸಿ
ಮಂದಮತಿಗೆ ಆಶ್ಚರ್ಯ ತೋರಿದೆ
ನಂದಿನೆ ವಿಜಯ ವಿಠ್ಠಲ ತಿರುವೆಂಗಳ
ಒಂದಕೊಂದಾನಂತಾನಂತಾ ಒಂದೆ ೪
ಝಂಪಿ ತಾಳ
ನಿನಗೆ ನೀನೆ ಐಕ್ಯಾ ನಿನಗೆ ನೀನೆ ಭೇದ
ನಿನಗೆ ನೀನೆ ಮಾತು ನಿನಗೆ ನೀನೆ ಸ್ತ್ರೀ
ನಿನಗೆ ನೀನೆ ಪುರುಷಾ
ನಿನಗೆ ನೀನೆ ಕೂಟಾ
ನಿನಗೆ ನೀನೆ ರಮಣಾ
ನಿನಗಲ್ಲದೀಲೀಲೆ ಬಿನಗು ದೈವರಿಗುಂಟೆ
ಅನಯ ವಿಜಯ ವಿಠ್ಠಲ ನಿನಗೆ
ನೀನೆ ಆಳು ನಿನಗೆ ನೀನೆ ಧೊರೆಯೊ ೫
ತ್ರಿವಿಡಿತಾಳ
ನಯೇಸ:ಕ್ಕುಂಚಿತ ಕರ್ಮಾನು ಎಂದೆಂಬೊ ಈ ಅರ್ಥ ರುತುಪ್ರ
ಳಯಾದಲ್ಲಿ ಪೇಳುತಲಿದೆ
ಆಯ ಶರೀರ ವಾಕ್ಯ ಅವ್ಯಾಕೃತವಾಣಿ
ಆಯಬ (ಆ ಭಭವ=ಬ್ರಹ್ಮ) ಭವಗೆ ತಪತಪನ ಎಂಬೊ ಸಂಗತಿಗೆ
ಈ ಅರ್ಥವನೆ ತಿಳಿದು ಹರಿಪರ ದೈವಾವೆಂದು
ಶ್ರೇಯಸ್ಸುವನು ಬೇಡಿ ಸತತ ಸಜ್ಜನರು
ಪ್ರಿಯ ಕೃತು ವಿಜಯ ವಿಠ್ಠಲ ತಿರುವೆಂಗಳ
ನೀಯಾಡಿಸಿದಂತೆ ನಾಲಿಗೆಂದಾಡುವೆ ೬
ಅಟ್ಟತಾಳ
ಜಡಕಾಷ್ಟದೊಳಗಿದ್ದು ನಡಿಸುವನು ನೀನೆ
ಕಡಲ ತೆರೆಯ ರಭಸವ ಗೈಸುವನು ನೀನೆ
ಗಿಡಕೆ ಹಾರುವ ಖಗದಲ್ಲಿ ಕೂಗುವ ನೀನೆ
ಅಡವಿಯ ಮೃಗಗಳಲ್ಲಿ ಧ್ವನಿಗೈಸುವ ನೀನೆ
ಗುಡಿಗಿರಿಯೊಳು ಪೇಳೆ ಪ್ರತಿ ಶಬ್ದನು ನೀನೆ
ಕಡಿಗೆ ಸರ್ವ ಶಬ್ದ ವಾಚ್ಯಕನು ನೀನೆ
ಬಡಿದು ಬಾಲಗೆ ಹಾಲು ಕುಡಿಸಿದಂತೆ ಎನ್ನ
ತಡಿಯದೆ ಕರತಂದೆ ತವರು ಮನೆಯಂದದಿ
ಕಡುದೈವ ವಿಜಯ ವಿಠ್ಠಲ ನಿನ್ನ ನಂಬಲು
ಬಡವ ಬಹು ಸೌಭಾಗ್ಯವಂತನಾಹನಯ್ಯಾ ೬
ಆದಿತಾಳ
ಸಿರಿ ಅರಸನೇ ಪರಮೇಷ್ಟಿ ಮಗನೇ
ಗರುಡನು ರಥವೆ ಉರಗ ಮಂಚವೆ ಪುರಹರ ಮೊಮ್ಮಗನೆ
ಸುರರು ಸೇವಕರೆ ಇವರು ನಿನಗೆ ಬೇಕೆ
ಬರಿದೆ ಮಾಯ ಹಚ್ಚಿ ಮರಳು ಮಾಡುತಿಪ್ಪಿ
ಗಿರಿಯ ಮೀಟುವವಗೆ ಹರಳೊಂದಾನೀಕೆ
ಅರಿಯರೆ ನಿನ್ನ ಮಹಿಮೆ ಸಿಯಾದ್ಯರು ಸ್ವಾಮಿ
ನೊರಜು ನರಗುರಿ ನಾನೇನು ಬಲ್ಲೆನೊ
ಧರಾಧರ ವಿಜಯ ವಿಠ್ಠಲ ನೀನೆ ದಯಾಳು
ಕರದವಗಳು ಕಂದಿ ವರಕಲ್ಪ ಕಲ್ಪಕೆ ೭
ಜತೆ
ಈಶ ಜೀವರೊಳು ಲಕುಮಿಗೆ ಭೇದ ಬಲ್ಲಂಥ
ದಾಸರೊಳಿಡುವುದು ವಿಜಯ ವಿಠ್ಠಲ ಬಂಧು ೮

ಸೃಷ್ಟಿಯ ವಿವರವನ್ನು ನೀಡುವ ಸುಳಾದಿ ಇದಾಗಿದೆ.

೫೩
ಧ್ರುವತಾಳ
ನೀ ಪ್ರಕಾಶಿತನಾಗೆ ನಾ ಪ್ರಕಾಶನಾಗುವೆ
ನೀ ಪ್ರಕಟವಾಗೆ ನಾ ಪ್ರಕಟವಾಗುವೆ
ನೀ ಪ್ರಾಚುರ್ಯನಾಗೆ ನಾ ಪ್ರಾಚುರ್ಯನಾಗುವೆ
ನೀ ಪ್ರಜಾವಂತನಾಗೆ ನಾ ಪ್ರಜಾವಂತನಾಗುವೆ
ನೀ ಪ್ರಣುತನಾಗೆ ನಾ ಪ್ರಣುತನಾಗುವೆ
ನೀ ಪ್ರಾಣನಾಗೆ ನಾ ಪ್ರಾಣನಾಗುವೆ
ನೀ ಪ್ರತಿ ಕೂಲವಾಗೆ ನಾ ಪ್ರತಿಕೂಲನಾಗುವೆ
ನೀ ಪ್ರಧಾನನಾಗೆ ನಾ ಪ್ರಧಾನ ನಾಗುವೆ
ನೀ ಪ್ರತಿಷ್ಠನಾಗೆ ನಾ ಪ್ರತಿಷ್ಠನಾಗುವೆ
ನೀ ಪ್ರೀತನಾಗೆ ನಾ ಪ್ರೀತನಾಗುವೆ
ನೀ ಪ್ರದಾತನಾಗೆ ನಾ ಪ್ರಪೂಜ್ಯನಾಗುವೆ
ನೀ ಪ್ರಬಲನಾಗೆ ನಾ ಪ್ರಬಲನಾಗುವೆ
ನೀ ಪ್ರಭೂನಾಗೆ ನಾ ಪ್ರಮುಖ್ಯನಾಗುವೆ
ನೀ ಪ್ರಥಮನಾಗೆ ನಾ ಪ್ರಥಮನಾಗುವೆ
ನೀ ಪ್ರವರ್ತಕನಾಗೆ ನಾ ಪ್ರವರ್ತಕನಾಗುವೆ
ನೀ ಪ್ರವಾಸನಾಗೆ ನಾ ಪ್ರವಾಸನಾಗುವೆ
ನೀ ಪ್ರವೇಶನಾಗೆ ನಾ ಪ್ರವೇಶನಾಗುವೆ
ನೀ ಪ್ರಮೋದನಾಗೆ ನಾ ಪ್ರಮೋದನಾಗುವೆ
ನೀ ಪ್ರಶಾಂತನಾಗೆ ನಾ ಪ್ರಶಾಂತನಾಗುವೆ
ನೀ ಪ್ರಸಾದನಾಗೆ ನಾ ಪ್ರಸಾದನಾಗುವೆ
ನೀ ಪ್ರೌಢನಾಗೆ ನಾ ಪ್ರೌಢನಾಗುವೆ
ನೀ ಪ್ರೇರಿಸಿದಂತೆ ನಾ ಪ್ರೇರಣೆಯಿಂದ
ಈ ಪೃಥಿಯೊಳಗೆ ನಾ ಪ್ರಪಂಚದಲ್ಲಿ ಇಪ್ಪೆ
ಶ್ರೀ ಪ್ರಕೃತಿರಮಣ ವಿಜಯ ವಿಠ್ಠಲರೇಯ
ನೀ ಪ್ರತಿಭಟಿಸಲು ನಾ ಪ್ರತಾಪವುಳ್ಳವನೇ ೧
ಮಟ್ಟತಾಳ
ಸ್ವಾತಂತ್ರ ನಾನಾಗಿ ಜನಿಸಿ ಉಳ್ಳರೆ ನಿನಗೆ
ಯಾತಕೆ ಮೊರೆ ಇಡುವೆ ಕರುಣಿ ಪಾಲಿಪುದೆಂದು
ಸ್ವಾತಂತ್ರ ಎನಗಿಲ್ಲ ಸರ್ವದಾ ನೋಡಿದರು
ಯಾತನೆ ಬಡುವುದಕೆ ನಾನೇ ಎಂದು ಕೊಂಬೆ
ಮಾತು ಪೇಳುವಾಗ ನಾಲಿಗೆ ಕಡಕೊಂಡು
ಬಾತು ಬಸಿದು ಬಲಲಿ ಹಾಹಾ ಎಂಬೆನೇನೊ
ಗಾತುರ ರೋಗ ಬಂದು ಪ್ರಾಪುತವಾಗೆ
ಧಾತುಗೆಡುವೆನೊ ಹರಿಯೆ ಕಾಯೊ ಎಂದು
ಆತುಮದೊಳು ನೀನು ವ್ಯಾಪುತನಾಗಿದ್ದು
ಸೂತ್ರನಡಿಸಿದಂತೆ ನಾನು ಸಂಚರಿಸುವೆ
ನೇತುರ ಶ್ರವಣ ನಾಲಿಗಿ ನಾಸವದನ
ಪ್ರೀತಿಯಾದ ಹಸ್ತಚರಣ ಪಾಯೋಪಸ್ಥ
ಈತ್ವಕು ಮನಮಿಕ್ಕ ಇಂದ್ರಿಯ ಒಳವಳಗೆ
ನೀ ತಿರುಗದಲೇ ಅನ್ಯಥ ವ್ಯಾಪಾರವೆ
ವಾತ ಪೊರಡುವದು ತಿರುಗಿ ಬರುವದು
ಜಾತನಾಗುವದು ಬಾಲ ಯೌವನ ವೃದ್ಧ
ಖ್ಯಾತಿಯಲ್ಲಿ ಇದ್ದು ಸತಿಸುತರೊಡನೆ
ಜಾತಿ ಉತ್ತಮನೆಂದು ಪರರುಪೇಳುವದು
ಖ್ಯಾತಿಯಾಗುವುದು ಸರ್ವಚೇಷ್ಟೆಗಳು
ಭೂತಳಾಧಿಪ ನಮ್ಮ ವಿಜಯ ವಿಠ್ಠಲ ನೀನೆ
ಆತುಮದೊಳಗಿದು ್ದ ಪ್ರೇರಿಸದಲೆ ಇಲ್ಲಾ ೨
ತ್ರಿವಿಡಿ ತಾಳ
ಮಾಡಿದಾ ಕರ್ಮದಿಂದಲಿ ಪಾಪ ಪುಣ್ಯವ
ಕೋಡಾಗಿ ಉಣದಲೆ ಬಿಡದೆಂಬಿಯಾ
ಆಡಲೇನು ಕರ್ಮ ಜಡವಲ್ಲದೆ ಲಾಭ
ಕೇಡು ಕೊಡುವುದಕ್ಕೆ ಸ್ವಾತಂತ್ರವೇ
ನಾಡೊಳು ಹರಿಗೋಲು ಸರಿತೆಯೊಳಗೆ ನಿತ್ಯ
ಆಡದೆಂಬೋರು ಅದಕೆ ಒಂದು
ನಾಡಿಯಾದರು ಚೇತನ ವ್ಯಾಪಾರ ಉಂಟೇ
ನೋಡುವುದೊಬ್ಬರ ಅಧೀನವೋ
ಮೂಢ ಸದನದೊಳಗಲ್ಲಿಂದ ಅಲ್ಲಿಗೆ
ಓಡಾಡಿ ತಿರುಗಿದರೆ ಫಲವಹುದೇ
ಈಡಾರ ನಿನಗೆ ಕರ್ಮಾಧಿಷ್ಠಾನದಲಿ
ಕೂಡಿಕೊಂಡು ಪುಣ್ಯ ಪಾಪಂಗಳ
ನೀಡಿ ಈ ಪರಿಯಿಂದ ಅನಿತ್ಯವಾಗಿದ್ದ
ಬೀಡಿನೊಳಗೆ ಇಟ್ಟು ತಿರುಗಿಸುವೆ
ಆಡಲೇನು ಅಂದು ಮರುತ ಪಾವಕರು
ಕೂಡಿ ಪ್ರತಾಪದಲ್ಲಿ ತೃಣ ಬಂದನು ಅ
ಲ್ಲಾಡಿಸಲಾರದೆ ಸುಮ್ಮನಾದರು ದೇವ
ಬೇಡೆಂದು ನಿಲಿಪಾರೇ ನಿನ್ನ ಮಹಿಮೆ
ಆಡಿನ ಕೊರಳೊಳು ಸ್ತನವುಳ್ಳ ತೆರದಂತೆ
ನಾಡದೈವಂಗಳ ಮಹಾ ಬಿಂಕವು
ಜಾಡಮಯ್ಯಾನಂತೆ ಉಪಾಯದಲಿ ನೀ
ನಾಡುವ ಸೋಜಿಗ ಪೊಗಳಲಳಲವೇ
ಬೇಡಿಕೊಂಡು ಪೊಟ್ಟಿಪೊರೆವ ಮಂದ ಮನುಜ
ಮಾಡಬಲ್ಲನೆ ನಿತ್ಯ ಸ್ವಾತಂತ್ರವ
ರಾಡಿಕಲೆತ ನೀರಿನಂತೆ ನಾನಿಪ್ಪೆನೋ
ಗೂಡಿನೊಳಗೆ ಬಂದು ನೆಲೆಗಾಣದೆ
ಕೋಡಗದ ಮರಿ ನಾನು ನಿನಗೆ ನೀನು
ಬಿಡಾಲನಂದದಿ ಎನಗೆ ಕಾಣೋ
ಕಾಡದೆ ಬಿಡೆನಯ್ಯಾ ನಾಮಸ್ಮರಣೆಗಳು
ಪೀಡಿ ಪಿಡಿದವನಂತೆ ಕೂಗಾಡುವೆ
ಹಾಡು ಪಾಡುವಂಗೆ ಪಾಪಪುಣ್ಯಗಳೆರಡು
ಮಾಡಿಸಿದರೊಳಿತೆ ಏನಾದರೆ ಏನು
ಚಾಡಿ ಬೇಡುವರೊಡಿಯಾ ವಿಜಯ ವಿಠ್ಠಲರೇಯಾ
ಹೋಡಿನವ ನಾನಲ್ಲ ಪಡಿದೊತ್ತಿನ ತೊತ್ತಿನದಾಸ ೩
ಅಟ್ಟತಾಳ
ಮೊದಲಿಗೆ ಉತ್ಪತ್ತಿ ಸ್ಥಿತಿ ಲಯ ನೇಮವಾ
ಅದರ ತರುವಾಯ ಜ್ಞಾನ ಅಜ್ಞಾನ ವಿ
ಮದ ಬಂಧ ಮೋಕ್ಷ ಈ ಪರಿಯಲ್ಲಿ ಕಲ್ಪಿಸಿ
ತುದಿ ಪರಿಯಂತ ತೊಲಗಿ ಪೋಗದಂತೆ ನೀ
ನಿದನು ಮಾಡಿಯಿರಲಾಗಿ ನಾನು ಚಿಂತಿಪುದೇನು
ತ್ರಿದಶ ಮಿಕ್ಕಾದ ಜನರೊಳಗೊಬ್ಬರು
ಎದಿರು ನಿನಗೆ ಮತ್ತಾರಾದರು ಇಲ್ಲ
ಇದೆ ಧೈರ್ಯದಲಿ ಎನ್ನನು ಬಳಲಿಸುತಿಪ್ಪೆ
ಪದುಮ ನಾಭನೆ ಧರ್ಮವಲ್ಲವು ಕೇಳು
ಹೃದಯದೊಳಗೆ ನೀನೆ ಪ್ರೇರಣೆ ಯಾಗದೆ
ವಿಧಿ ನಿಷೇಧವ ಮಾಡ ಬಲ್ಲೆನೋ ಸ್ವಾಮಿ
ಅದೃಷ್ಟ ಯೋಗ್ಯತ ಪ್ರಯತ್ನ ನಾನಾ
ವಿಧ ಕರ್ಮಗಳು ಭಕುತಿ ವಿರಕುತಿಯು
ಸದಾಕಾಲದಲ್ಲಿ ನಿನ್ನ ಅಧೀನವಾಗಿದೆ
ಮದಡ ಮಾನವ ಎನಗಾವುದು ಸ್ವಾತಂತ್ರ
ಪದ ಬಂದಿಡಲು ಕಾಯ ಆರದಾರದು ತಿಳಿಯೋ
ಸುದರಶನ ಪಾಣಿ ವಿಜಯ ವಿಠ್ಟಲರೇಯಾ
ನಿಧಿಯೆ ಎನ್ನ ಕುಲಕೋಟಿಗೆ ನಿದಾನಾ ೪
ಆದಿತಾಳ
ಅಪವಾದದವನ ಮಾಡಿ ಅಪರಾಧ ಹೊರಿಸಿದರು
ನೃಪತಿ ಚರಿಸಿದಂತೆ ಪ್ರಜೆಗಳ ವ್ಯಾಪಾರ
ಚಪಲಾ ನೀನಹುದೋ ಎಲ್ಲರೊಳಗಿದ್ದರು
ಅಪಯನವಾದ ಪಾಪದ ಭಯವಿಲ್ಲಾ
ಸಪುತಾರ್ಚಿ ಸ್ಥಂಭಬಲ್ಲ ಬಲವಂತ ಮನುಜಗೆ
ಅಪರಿಮಿತವಾದ ಕೊಳ್ಳಿಯ ಭೀತಿಯುಂಟೆ
ಕಪಟ ನಾಟಕ ದೇವಾ ವಿಜಯ ವಿಠ್ಠಲರೇಯಾ
ಅಪವರ್ಗ ಸ್ವರ್ಗ ನರಕಾದಲ್ಲಿ ನೀನೆ ವ್ಯಾಪುತಾ ೫
ಜತೆ
ಪಾಪ ಪುಣ್ಯಗಳೆರಡು ನಿನ್ನಧೀನವಯ್ಯಾ
ಶ್ರೀಪತಿ ವಿಜಯ ವಿಠ್ಠಲ ವಿಶ್ವದಾಧಾರಾ ೬

ಈ ಮಾನವದೇಹ ಸಾರ್ಥಕವಾಯಿತೆನಿಸಿ

೫೬
ಧ್ರುವತಾಳ
ನೀ ಬಾರದಿರೆ ಈ ಕಳೇಬರ ವ್ಯರ್ಥ ನಾ
ನು ಬದುಕಿ ಪಡುವ ಲಾಭ ಮತ್ತಾವುದು
ಶೋಭನ ತರಣಿಸನ್ನಿಭಕೋಟಿಕಾಯ
ಸುಬಲ ನೀನು ದೀನಭಾಂಧವ ನೀನು
ಕುಬುದ್ಧಿಗನು ನಾನು ಲೋಭಿಗನು ನಾನು
ನೀ ಬಲ್ಲವನೆಂದು ಬಯಸಿದೆ ನಿನ್ನ
ಪ್ರಭಾವವನು ಕಾಯಿ ಬಳ್ಳಿಗೆ ಬ
ಲು ಭಾರವೇನು ರಂಗ ಶ್ರೀ ಭೂರಮಣಾಂಬುಜ
ನಾಭನೆ ನೀನು ಮೂರು ಭುವನದೊಳಗೆ
ಸೌಭಾಗ್ಯನಾಗಿ ಎನ್ನ ಅಭಾಗ್ಯನ್ನ ಮಾಡೋರೆ
ಬೀಭತ್ಸು ಪಾಲವಸ್ತಿ ವಿಜಯ ವಿಠ್ಠಲರೇಯ
ಶೋಭಿಸುವ ಪಾದ ಭಕುತಿಯನೀಯೊ ೧
ಮಟ್ಟತಾಳ
ಬೇಡೆನೂ ಬೇಡೆನೊ ಬ್ಯಾಸರಿಸಿ ನಿನ್ನ
ಕಾಡೆನೊ ಕಾಡೆನೊ ಕ್ರಮಗೆಡಿಸಿ ನಿನ್ನ
ಆಡೆನೊ ಆಡೆನೊ ಅವರಿವರ ಮುಂದೆ
ನೀಡೆನೊ ನೀಡೆನೊ ಅನ್ಯರಿಗೆ ಕೈಯ್ಯ
ನೋಡು ನೋಡುವುದು ಕಾಪಾಡು ದಯದಿಂದ
ಗೂಢ ಮಹಿಮ ಅಜನೆ ವಿಜಯ ವಿಠ್ಠಲರೇಯ
ಪಾಡುವೆನು ಕರವ ಜೋಡಿಸಿ ದೈನ್ಯದಲಿ ೨
ತ್ರಿವಿಡಿ ತಾಳ
ಎಂದಿಗಾದರೂ ನಿನ್ನ ಪೊಂದಿದ ಭಕುತರ
ವಂದಿಸುವರ ಬಾಯ ತೊಂಬಲನು ನಿತ್ಯ
ತಿಂದು ಕಾಲವ ಕಳೆವ ಕಂದ ಕಂದನೊ ನಾನು
ತೊಂದರೆ ಕೊಡದಿರೊ ಇಂದಿರಾರಮಣ
ಕುಂದು ನೋಡದೆ ಸರ್ವಸಹ ವಿಜಯ ವಿಠ್ಠಲ
ತಂದೆ ನೀನು ಎನಗೆ ಬಂದು ಪೊಳೆವುದು ೩
ಅಟ್ಟತಾಳ
ಅಪರೂಪ ನಿನ್ನ ಚರಣ ಸ್ಮರಣೆ ಎನಗೆ
ಅಪರೂಪ ನಿನ್ನ ಸಂದರುಶನ ಎನಗೆ
ಅಪರೂಪ ನಿನ್ನ ದಾಸರ ಸಂಗ ಎನಗೆ
ಅಪರೂಪ ಎಂದು ಬಯಸಿ ಬೇಡಿದೆ ನಿನ್ನ
ಅಪರೂಪ ಮೂರುತಿ ವಿಜಯ ವಿಠ್ಠಲ ಇಂದು
ಅಪರೂಪವಾಗಿ ಅಪಹಾಸಗೊಳಿಸದಿರೊ ೪
ಆದಿತಾಳ
ದುರ್ದೇಹವಲ್ಲ ಇದು ನಿರ್ದಯವಾಗದಿರು
ನಿರ್ಧಾರವಾಗಿ ನರಕಾರ್ದನ್ನ ಎನ್ನ ಮನಸು
ಮರ್ದಿಸಿ ನಿನ್ನ ಸೇವೆ ಸಾರ್ದು ಬದುಕುವಂತೆ ಮಾಡಿ
ನಿರ್ಧೂತ ಪಾಪವೆನಿಸು ದುರ್ದೆಸೆಯಲ್ಲಿಡದೆ
ದುರ್ಧರ ನಾಮದೇವ ವಿಜಯ ವಿಠ್ಠಲ
ನಿಮಿಷಾರ್ಧದಲ್ಯಾರು ನಿನ್ನ ಪೊದ್ದಿದವರಲ್ಲಿಡೊ ೫
ಜತೆ
ಭಕುತಿ ಮಾತುರ ಕೊಡೊ ಭವ ದುರಿತ ಹಾರಿ
ಶಕುತಾ ವಿಜಯ ವಿಠ್ಠಲ ಸತತ ಭಾಗ್ಯನಿಧಿ ೬

ಭಗವಂತನಿಗೆ ಸರ್ವ ಸಮರ್ಪಣೆ

೫೧
ಧ್ರುವತಾಳ
ನೀನಾದಿ ಮೂರುತಿಯಾಗಿ ಅವ್ಯಾಕೃತಾಕಾಶದಲ್ಲಿ |
ಸ್ವಾನಂದಾತಿಶಯವಾಗಿ ಪ್ರಕೃತಿ ವಿೂರಿ |
ನಾನಾ ವ್ಯಾಪಾರದಿಂದ ಪೂರ್ಣ ಪರಬೊಮ್ಮ |
ಜ್ಞಾನ ಸ್ವರೂಪ ರೂಪ ವಿಶ್ವರೂಪ |
ಮಾನವ ಮೊದಲಾದ ವೇಷವ ಧರಿಸಿ ಸು |
ಮ್ಮಾನದಿಂದಲಿ ಕ್ರೀಡೆಯಾಡುತಿಪ್ಪೆ |
ನೀನೆ ಸರ್ವಕರ್ತ ತ್ರಿಗುಣವ ಮನೆಮಾಡಿ |
ಅನಾದಿಯಿಂದ ಬಿಡದೆ ಲೀಲಾ ಮಾತ್ರ |
ಅನಂತಾನಂತ ಕಾರಣ ಕಾರ್ಯದಿಂದಲಿ |
ಏನೆಂಬೆ ಚತುರಾಸ್ಯ ಮಿಕ್ಕ ತತ್ವ |
ಮಾಣದೆ ನಿರ್ಮಾಣವ ಮಾಡಿದೆ ಚಮತ್ಕಾರ |
ವೇಣು ಬಣ್ಣಿಪರಾರು ಗುಣಿಸಿ ಗುಣಿಸಿ |
ಆನಾವುದು ನಿನ್ನ ಮಾಯವ ನೋಡಿ ಕಡೆ |
ಗಾಣೆನೋ ಸರ್ವದ ಅಪರಿಚ್ಛಿನ್ನ |
ನೀನೆ ಅಂತರ ಬಾಹಿರನೊಬ್ಬನೆಂಬೋದೆ ಉ |
ತ್ತಾನುಪಾದಿ ನೋಡಬಲ್ಲ ತಪಸಿನಲ್ಲಿ |
ಪ್ರಾಣ ವದನ ನೇತ್ರ ಕರ್ನ ರಸನನಾಸ |
ಜಾನು ಜಂಘ ಚರಣ ಉದರ ನಾಭಿ |
ಪಾಣಿ ಕಂಧರ ಬಾಹು ರೋಮ ಸರ್ವ ಶರೀರ |
ಏಣಿಕೆಗೆ ಭಿನ್ನ ಅರ್ಚಿಪುದಕೆ |
ಪ್ರಾಣಮಾಳ್ಪ ವ್ಯಾಪಾರ ರೋಮಾದಿಗಳಿಗುಂಟು |
ಸ್ಥಾನಸ್ಥಾನಕೆ ನಿನಗೆ ಐಕ್ಯವಹುದು |
ನೀನಂದು ಕೃಷ್ಣನಾಗಿ ಜನಿಸಿದ್ದು ರೋಮವೆಂದು |
ಆ ನಿರ್ಜರಗಣ ಪೇಳುತಿದಕೊ |
ಧಾನವಾಂತಕ ನಿನ್ನ ಕರ್ನ ಮಾಡೊ ವಿವರ |
ಪಾಣಿ ನಖಾದಿಗಳು ಮಾಳ್ಪವಯ್ಯ |
ಈ ನಾಡಿನೊಳಗೆ ನಿನಗೊಬ್ಬಗೆ ಸಲ್ಲುವುದು |
ಯೋನಿಜರಿಗೆಯಿದೆ ಒಪ್ಪದೇನೊ |
ಆ ನೀರೊಳು ವಟಪತ್ರಶಯನನಾದ |
ಶ್ರೀ ನಾರಾಯಣ ಯೋಗನಿದ್ರ |
ನೀನೇ ಬಾಲಕನಾಗಿ ಏಳು ಕೋಟಿಯೋ |
ಜಾನ (ಜನ) ಪ್ರಮಾಣದಿನಿತು ನಲಿದಾಡುವೆ |
ಅನಂತಾನಂತ ಕಾರ್ಯ ರೂಪಕ್ಕೆಯಿದೆ ಪ್ರ |
ಧಾನ ಮೂರುತಿ ಕಾಣೊ ಇದಕೆ ಮಿಗಿಲು |
ತಾನೆ ತಾನಾಗಿಯಿಪ್ಪ ಅಮಿಶ್ರ ವ್ಯಾಪ್ತನೆಂದು |
ಶ್ರೀ ನಾರಿ ನೋಡುವಳು ಬೆರಗಾಗುತ |
ವಾಣಿಯ ತಗ್ಗಿಸಿ ತನಗಗೋಚರನೆಂದು |
ಅನಂತಾನಂತ ಮಡಿ ವೇದಾನುಕ್ತ |
ಧೇನಿಸಿ ಮನೋವಾಚ ಕಾಯದಿಂದಲಿ ಬಲು |
ಗಾನವನು ಮಾಡಿ ನೆಲೆಗಾಣಳು |
ಹೇನು ಇರುವೆ ನೊಣ ಜಲಚರ ಪಕ್ಷಿಗಳು |
ಆನೆ ಶಾರ್ದೂಲ ಸಿಂಹ ಶರಭಸರ್ಪ |
ಮಾನವ ಯಕ್ಷ ರಕ್ಷ ಗಂಧರ್ವ ಸಿದ್ಧಸಾಧ್ಯ |
ದಾನವಾಮರ ತಾತ್ವಿಕರ ವಿೂರಿ |
ಅ ನೀರಜಮಂದಿರ ನೋಡಲಾಗಿ ಮೇಲು |
ನಿನೇ ಘನ್ನ ಘನ್ನ ಘನ ಘನ ಮಹ ಘನ್ನ |
ಈ ನುಡಿಯಂತೆ ಅಣುತ್ವ ತಿಳಿದು ಆರಾ |
[ಧ]ನೆ ಮಾಡಿದವನು ಸತತದಲ್ಲಿ |
ಜ್ಞಾನಿಗಳೊಳು ಶ್ರೇಷ್ಠ ಹರಿಯೆರಡು ಕಡೆಯಲ್ಲಿ |
ನೀನಲ್ಲದೆ ಅನ್ಯರಾರಿಲ್ಲ ನಿತ್ಯ |
ಧೇನುವಿನಿಂದ ಬೇಡಿದಾರ್ಥವ ಕೊಡಿಸುವ ಸ |
ತ್ರಾಣನೆ ನಿನಿಗಿದಾಶ್ಚರ್ಯವಲ್ಲ |
ಅನಾಥ ಬಂಧುವೆ ಏಕಮೇವದ್ವಿತೀಯ |
ಆನಂದ ಬೊಮ್ಮಮಯ ಆನಂತಾತ್ಮ |
ಅನಾದಿಲಿಂಗ ಬದ್ಧಜೀವಿಗಳ ಮುಖ್ಯ |
ಪ್ರಾಣನಿಂದಲಿ ಕೈಕೊಂಡವರ |
ಶೋಣಿತ ಶುಕ್ಲ ಸಂಬಂಧಿಗಳನ್ನು ಮಾಳ್ಪ |
ಜಾಣತನವನ್ನು ವ್ಯಕ್ತ ಮಾಡಿ |
ಶ್ರೇಣಿಕ ಕರ್ಮಗಳನ್ನೆ ನೋಡಿದೆ ಜೀವರ ಅ |
ಧೀನದಲಿ ಕಾಯ ತಂದು ಕೊಡುವ |
ವಾಣಿಯರಸನೈಯ್ಯ ವಿಜಯವಿಠ್ಠಲರೇಯ |
ನೀನಾಡುವ ಲೀಲೆ ತಿಳಿಯದವರೆಗೆ ಕಠಿಣ ೧
ಮಟ್ಟತಾಳ
ಜಗವೆಲ್ಲ – ಶಿರಸ ಜಗವೆಲ್ಲ ಫಾಲ ಜಗವೆಲ್ಲ ನಯನ |
ಜಗವೆಲ್ಲ ಕರ್ನ ಜಗವೆಲ್ಲ ವಾಸ ಜಗವೆಲ್ಲ ವದನ |
ಜಗವೆಲ್ಲ ರಸನ ಜಗವೆಲ್ಲ ರದನ ಜಗವೆಲ್ಲ ಕಂಠ |
ಜಗವೆಲ್ಲ ಬಾಹು ಜಗವೆಲ್ಲ ಹಸ್ತ ಜಗವೆಲ್ಲ ವಕ್ಷ |
ಜಗವೆಲ್ಲ ಉದರ ಜಗವೆಲ್ಲ ನಾಭಿ ಜಗವೆಲ್ಲ ಕಟಿ |
ಜಗವೆಲ್ಲ ಊರು ಜಗವೆಲ್ಲ ಜಾನು ಜಗವೆಲ್ಲ ಜಂಘೆ |
ಜಗವೆಲ್ಲ ಪರುಡು ಜಗವೆಲ್ಲ ಪಾದ |
ಜಗವೆಲ್ಲ ಬೆರಳು ಜಗವೆಲ್ಲ ನಖ
ಜಪವೆಲ್ಲ ಇನಿತು ಬಗೆ ತುಂಬಿದೆ ನೋಡಿ |
ಜಗವ ಪುಟ್ಟಿಸಿದವನೆ ಜಗದಾಧಿಷ್ಠನೆ ಜಗದ್ಗಾಧಾರನೆ |
ಜಗನ್ಮಾಯನ್ಮಯನೆ ಜಗತ್ತಿನ ಭೇದನೆ |
ಜಗದಂತರ್ಯಾಮಿ ವಿಜಯ ವಿಠ್ಠಲನೆಂದು |
ಪೊಗಳಿದವರನ ತೊಲಗದೆ ಸಾಕುವ ದೈವ ೨
ತ್ರಿವಿಡಿ ತಾಳ
ಶ್ರೀವಾಸುದೇವ ಸಂಕರುಷಣ ಪ್ರದ್ಯುಮ್ನ |
ದೇವ ಅನಿರುದ್ಧ ಚತುರ ಮೂರುತಿಯಾಗೆ |
ಈ ವಿಧ ಹರಿ ನೀನೆ ರೂಪವ ಧರಿಸಲು |
ದೇವಿಲಕುಮಿತಾನೆ ಮಾಯಾಜಯಾಕೃತಿ |
ಜೀವರ ಪಡೆದ ಶಾಂತಿಯೆಂಬೊ ಪೆಸರಿಲಿ |
ಪೂದಿನ ಮಗನನ್ನ ವಾಸುದೇವ ಪೆತ್ತ |
ಭೂವನ ಜೀವನ ನೇಗಲಿ ಧರನೈಯ್ಯಾ |
ಆ ವಾಣಿ ಭಾರತಿ ಇಬ್ಬರನ್ನ ಪ್ರದ್ಯುಮ್ನ |
ಮೂವರಿಂದಲಿ ಇನಿತು ಪಡೆದನಂದು |
ವಿವಾಹ ಮಾಡಿದ ಅಜ ಸರಸ್ವತಿಗೆ ಮ |
ತ್ತಾ ವಾಯು ಭಕ್ತ್ಯಾಭಿಮಾನಿನಿಗೆ |
ಕೋವಿದರಾಯನು ತನಗೆ ತಾನೇ ಬೀಗ |
ವಾವಿಲಿ ನಡಕೊಂಡು ಸುಖಿಸುವನೊ |
ಸಾವಿಲ್ಲದ ದೈವ ವಿಜಯ ವಿಠ್ಠಲರೇಯ |
ಆವುಗಳ ಕಾಯ್ದ ಅಣುವೆ ಕೊಂಡಾಡಿ ದಣುವೆ ೩
ಅಟ್ಟತಾಳ
ಇವರಿಂದಲಿ ಇವರು ಪುಟ್ಟಿದರು ಮ |
ತ್ತಿವರಿಂದ ಸರ್ವ ದೇವತೆಗಳು ಉದ್ಭವ |
ಅವರ ಪೆಸರು ನೋಡು ಖಗರಾಜ ಉರಗೇಂದ್ರ |
ಶಿವ ಮೊದಲಾಂಥ ದಿವಿಜಾದ್ಯರು ಪುಟ್ಟಿದ |
ರವರಿಂದರವರಂದು ಊಚೋಚ್ಚಭಾವದಿ |
ಭವದಲ್ಲಿ ಇವರನ್ನು ಇಟ್ಟು ಮರುಳು ಮಾ |
ಡುವ ಮಹ ವಇಹಾತ್ಮ ನಿನಗೆಣೆ ಆವಾವ |
ಭುವನದೊಳಗೆ ಕಾಣೆ ಇಂದೆಂದಿಗೂ |
ತ್ರಿವಿಧಾತ್ಮಕವಾದ ಗುಣದಿಂದ ಸರ್ವ ತ|
ತ್ವವನು ನಿರ್ಣೈಸಿದ ಪ್ರಭುವೆ ಪ್ರಳಯ ದೂರ |
ನವ ನವ ಗುಣವುಳ್ಳ ವಿಜಯವಿಠ್ಠಲರೇಯ |
ನವ ವಿಧ ಭಕುತಿಯ ಕರುಣಿಸೊ ಎನಗೆ |
ಆದಿತಾಳ
ಮೊದಲು ಗುಣತ್ರಯ ಆಮೇಲೆ ಮಹತತ್ವ |
ಅದರ ತರುವಾಯ ಅಹಂಕಾರ ಆಕಾಶ |
ಇದರಿಂದತ್ತವಾಯು ಅನಳೋದಕ ತತ್ವ |
ತದನಂತರದಲ್ಲಿ ಪೃಥಿವಿ ಬೊಮ್ಮಾಂಡ ಖರ್ಪ |
ರದಕೆ ಲೆಖ್ಖವೆನ್ನಿ ತುದಿಯಲ್ಲಿ ಇಪ್ಪದೆಂದು |
ಅಧಿಕಾಧಿಕ ತಿಳಿಯದೆ ನೀಚ ಕ್ರಮಾನು ವಂ |
ದದಕೆ ಈರೈದು ಮಡಿ ಕಡಿಮೆಯಾಗಿಪ್ಪದೆಂದು |
ಪದುಮಜಾಂಡದೊಡಿಯ ವಿಜಯವಿಠ್ಠಲ ಮುಂದೆ |
ಅದು ಭೂತ ಮಾಳ್ಪನೆಂದು ಸ್ತುತಿಸಬೇಕು ನಿನ್ನ ೫
ಜತೆ
ಸಕಲಕ್ಕೂ ಕಾರಣ ಕಾರ್ಯರೂಪನು ನೀನೆ |
ಲಕುಮಿ ವಲ್ಲಭ ನಮ್ಮ ವಿಜಯ ವಿಠ್ಠಲರೇಯ ೬

ಭಕ್ತರನ್ನು ಭಗವಂತನು ಎಂದಿಗೂ ಕೈ ಬಿಡುವುದಿಲ್ಲವೆಂಬ

೭೭
ಧ್ರುವತಾಳ
ನೀನಾಳುವ ಬಂಟರ ಕಣ್ಣೆತ್ತಿ ನೋಡಿ ಬದುಕಿ
ಬಾಳುವ ದುಷ್ಟ ದೇವತೆಗಳುಂಟೇ
ತ್ರಿಲೋಚನಾದಿಗಳು ನಿನ್ನವರೆಂದಡೆ
ಮೇಲಾಗಿ ಕಾವುತಿಪ್ಪರು ಭೀತಿ ತಿಳಿದು
ಪೇಳಲೇನಯ್ಯಾ ಕಟ್ಟಾಳೆ ಎಣಿಸುತ್ತ
ಕೇಳುತ್ತ ಕೇವಲ ಬೆರಗಾಹರೋ
ಏಳೇಳು ಲೋಕವನ್ನು ಆಳುವ ಸಮರ್ಥರು
ಶ್ರೀ ಲೋಲ ನಿನ್ನ ದಾಸರೆಂದಾಗ ಪಾಲಿಸುತಿಪ್ಪರು
ಎಲ್ಲೆಲ್ಲಿ ಚರಿಸಿದರು ವಾಲಯಬೆನ್ನ ಬಿಡದೆ ನಿತ್ಯ
ಕೀಳು ದೈವಂಗಳ ಭೀತಿಗಂಜುವನಾರು
ಏಳಲವಲ್ಲದೆ ನಿನ್ನವರಿಗೆ ಊಳಿಗವೆಂದರೆ ಪೊಂದಿ ಮಾಳ್ಪ
ಉಳಿಗವಲ್ಲದೆ ಮತ್ತಾವುದೈ
ತೇಲಿಸಬೇಕಾದರು ಈಸುಗಾಯಿಯಲ್ಲದೆ
ತೇಲಿಸುವುದೇ ಕಲ್ಲು ಕಟ್ಟಿ ಕೊಳಲು
ಬಾಲ ಕ್ರೀಡೆಯಾಡುವ ವಿಜಯ ವಿಠ್ಠಲ ನಿನ್ನ
ಪೋಲುವ ದೈವ ಕಾಣೆ ಪೊಡವಿಯೊಳಗೆ ೧
ಮಟ್ಟತಾಳ
ಪೃಥಿವಿ ಪಾಲನ ಪುತ್ರ ಶತ ದಡ್ಡನಾದರು
ಪ್ರತಿ ದಿನದಲ್ಲಿ ಪಂಡಿತ ಪಾಮರರು
ಅತಿಶಯವಾಗಿ ಅಂಜುತಲಿಪ್ಪರು ಕೆಲವರು
ಸ್ತುತಿಸುವರೂ ಕೆಲವರು ದ್ವಿಗತಿದಾತ ಲಕ್ಷುಮಿ
ಪತಿ ನಿನ್ನ ಪಾದವ ನುತಿಸುವ ಮಾನವನು
ಚತುರನಾಗಲಿ ಅಚತುರನಾಗಲಿ ಅವನ
ಹಿತದೊಳಗೆ ದೇವತೆಗಳು ಇದ್ದು ಸಂ
ತತ ಕೊಂಡಾಡುವರು ಖತಿಗೊಳಿಸುವ ದುರುಳ
ತತಿಗಳು ಇವನ ಕಾಣುತಲೆ ಪಲಾಯನ ಪ್ರತಿ
ಮಾತಾಡದಲೆ ಯತಿಗಳ ಮನೋಹರ ವಿಜಯ ವಿಠ್ಠಲ ನಿನಗೆ
ಸುತರೆಂಬರು ಭಕುತ ಜನವಲ್ಲದೆ ಇತರಾದಿಗಳಾರು ೨
ತ್ರಿವಿಡಿತಾಳ
ನಡೆವುದು ನುಡಿವುದು ಕೊಡುವುದು ಕೇಳುವುದು
ಹಿಡುವುದು ಬಿಡುವುದು ಇಡುವುದು ತಡೆವುದು
ಕೊಡುವುದು ತೊಡುವುದು ಕೆಡುವುದು ಉಳಿವುದು
ಅಡಿಯಿಟ್ಟು ಮತ್ತಡಿ ತೆಗೆದು ಮುಂದಿಡುವುದು
ಬಡತನ ಭಾಗ್ಯವು ಕಡು ದು:ಖ ಸುಖಂಗಳು
ಅಡಿಗಡಿಗೆ ನಾನು ಪಡೆದ ಕಾರಣಗಳು
ಕಡಲ ತೆರೆ ಒಡಗೂಡಿ ಬರುತಿಪ್ಪ ಸಡಗರವೆಲ್ಲವು
ಒಡಿಯಾ ನಿನ್ನಾಧೀನ ಉಡಿಯಲ್ಲಿ ಶಿಶುವಿನ
ಕೆಡಹಿ ಕಟ್ಟಿಕೊಂಡು ಪಡದ ಜನನಿ ಸಾಕು
ತ್ತಡಿಗಡಿಗೆ ನಸುನಗುವಂತೆ
ಜಡಮತಿಹರ ನಮ್ಮ ವಿಜಯ ವಿಠ್ಠಲ ನೀನೆ
ದೃಢ ಭಕುತರಿಗೆ ಬಿಡದೆ ಲಾಲಿಸಿ ಪಾಲಿಸಿ ೩
ಅಟ್ಟತಾಳ
ಮನೆಯ ಕಟ್ಟಿಸಲಿಲ್ಲ ಮಾಳಿಗೆ ತೊಯಿಸಲಿಲ್ಲ
ಹಣ ತರಿಸಲಿಲ್ಲ ಉಪವಾಸವಿಡಲಿಲ್ಲ
ಧನಿಕನೆನಿಸಲಿಲ್ಲ ಬಡವನ್ನ ಮಾಡಲಿಲ್ಲ
ವನಜನಾಭವೆ ನಿನ್ನ ನೆನೆದ ಭಕ್ತರಿಗೆ
ಅಣುಮಾತ್ರ ಪ್ರಯಾಸವನೆ ತಂದು ಕೊಡದಲೆ
ಅನುದಿನ ಸಲಹುವ ಅನಿಮಿತ್ತ ಬಂಧು
ಮನ ಮೆಚ್ಚಿ ಫಲವೀವ ವಿಜಯ ವಿಠಲ ತನ್ನ
ಕನಸಿಲೆ ಕೊಂಡಾಡೆ ಮನಸಿಲಿ ನಿಲುವ ೪
ಆದಿತಾಳ
ಸ್ವಾತಂತ್ರ ನಮ್ಮ ಸ್ವಾಮಿ ಮತ್ತಾವನಾದರುಂಟೆ
ಈತನ ಸೇವಕರಾಗಿ ಪಾತಕ ಕಳಕೊಳ್ಳಿ
ಯಾತಕೆ ಸಂಶಯ ಮಾಡುವುದೇ ಸಲ್ಲ
ಭೀತಿ ನಿಮಗೆ ಇಲ್ಲ ಭೂತಳದೊಳಗೆಲ್ಲ
ಪೀತಾಂಬರಧರ ವಿಜಯ ವಿಠ್ಠಲರೇಯನ
ದೂತನಾದವಂಗೆ ದುಷ್ಕರ್ಮ ನಿಲ್ಲೋವೆ ನೋಡಾ ೫
ಜತೆ
ದೊರೆ ಎಂದರೆ ನಮ್ಮ ಸಿರಿ ಅರಸನೆ ದೊರೆ
ದೊರಕುವಂತೆ ಭಜಿಸಿ ವಿಜಯ ವಿಠಲನ ಪಾದಾ ೬

ತೇನ ವಿನಾ ತೃಣಮಪಿ ನ ಚಲತಿ

೫೨
ಧ್ರುವ ತಾಳ
ನೀನಿತ್ತ ತನುವೋ ನೀನಿತ್ತ ಮನವೋ
ನೀನಿತ್ತ ಸದನವೋ ನೀನಿತ್ತ ವ[ನಿ]ತೆ ನಂದನರತಿಘನವೋ
ನೀನಿತ್ತ ಚೇತನವೊ ನೀನಿತ್ತ ಮನವೋ
ನೀನಿತ್ತ ಸಕಲೇಂದ್ರಿಯಗಳ ಅಭಿಮಾನವೋ
ನಾನಾವುದು ಬೇಡಿ ನಾನಿಂತು ಬೇಕೆಂದು
ನಾನಿಂತು ಬಿನ್ನೈಸಿ ನಾನಿಂತು ಕೇಳಿದೆನೆ
ನಾನಾನೇಕದಾ ನಾನಾವಸ್ಥಿಯಾ
ನಾನಾವಾಬಗೆ ನಾನಾವೆನಿಸಿ
ನೀನಿತ್ತ ಬಾರದೆ ನೀನಿತ್ತ ಪೋಗದು
ನೀನಿತ್ತವಯ್ಯಾ ಪಾ[ವ]ನಯ್ಯಾ
ನಾನೆತ್ತ ಪೊಂದಲಿ ನಾನಾರಸದಲ್ಲಿ
ನಾನಾ ಮಾಯದ ನಾರಾಯಣ
ದಾನವನಾಶಾ ರಂಗ ವಿಜಯ ವಿಠ್ಠಲ ಸ್ವಾಂಗಾ
ನೀನನಾದಿ ಎಂದು ನಾನಾದೆ ದಾಸಾ ೧
ಮಟ್ಟತಾಳ
ಆರು ಇಲ್ಲದ ಒಬ್ಬ ಊರಾ ಪರದೇಶಿಯ ಒಯ್ದು
ನೀರೊಳಗೆ ಹಾಕಿ ತೀರದಲ್ಲಿ ಇರದೆ
ದೂರದಲ್ಲಿ ನಿಂದು ಮೋರೆ ನೋಡುವರೇನೊ
ಆರಾದರೆ ಏನು ವಾರವಾರಕೆ ತಮ್ಮ
ವಾರಣದ ವಾರ್ತೆ ಹಾರೈಸುವವರಯ್ಯಾ
ಸಾರಿ ಸಾರಿಗೆ ಸಂಸಾರದೊಳಗೆ ಬೀಳೆ
ತೈರಕೆಯಯವನಾಗಿ ದೂರ ನೋಡುತ ಲಿಪ್ಪ
ಚಾರುತನವೇನೋ ವೀರ ವಿಜಯ ವಿಠ್ಠ
ಲಾರು ಮೆಚ್ಚುವರು ಈ ಗಾರುಡದಾಟಕ್ಕೆ
ಭಾರಕ ನೀನೆಲ್ಲಾ ಧಾರುಣಿಯೊಳಗೆಲ್ಲಾ ೨
ರೂಪಕತಾಳ
ಹಂಗು ಹರಿದ ಮೇಲೆ ಲಿಂಗದ ಪರಿವೆ ಎ
ನ್ನಂಗವ ನಿನ್ನಯ ಅಂಘ್ರಿಗೊಪ್ಪಿಸಿದೆ ಈ
ಅಂಗದ ಪರವೇನು ಅಂಗಜಪಿತ ತಿರು
ವೆಂಗಲನಿಹ ಲಾವಾಂಗವ ಹರಿ ಬಿಡೆ
ಕೆಂಗಡದಲೆ ನಿನ್ನಂಗುಟ ಬಾಯಲ್ಲಿ
ಹಿಂಗದೆ ಕಚ್ಚಿ ಹೀನಂಗಳ ನೂಕುವೆ
ಹಿಂಗಳದಡೆ ನಿನ್ನ ನಿನ್ನಂಗನಿರಲು ದಿವ
ಸಂಗಳು ಪೊತ್ತು ಪೆತ್ತದು ಬರಿ ದೇವ
ನಂಗ ವಿಜಯ ವಿಠ್ಠಲಂಗುಸುರುವೆನು ಈ
ಅಂಗಿಯ ಬಿಡಿಸೆನ್ನ ಅಂಗೀಕರಿಸಿಕೊಳ್ಳೊ ೩
ಝಂಪೆ ತಾಳ
ಬಿಂದು ಮೊದಲು ಅವ್ಯಾಕೃತಾಕಾಶ ಪರಿಯಂತ
ಒಂದು ಸ್ಥಳವೆನ್ನದಲೆ ವ್ಯಾಪ್ತನಾಗಿ
ಎಂದೆಂದಿಗೆ ಇಲ್ಲವೆಂದು ಎನ್ನಯ ಮುಂದೆ
ಬಂದು ನಿಂದಿರಲಾಪ್ಯಾ ಇಂದಿರಾರಮಣಾ
ಮಂದ ಮತಿಯು ಇಂದ ನಿಂದಿಸಿ ಕೊಳದೆ
ಪೊಂದಿ ಬಾಂಧವನಾಗಿ ದೋಷಂಗಳ ಪಾಶಾ
ಬಂಧನವೆ ಪರಹರಿಸು ಒಂದೆ ದೈವವೆ ಶರ
ಣೆಂದೆನೊ ವಿಜಯ ವಿಠಲಾ ನಂದಕಿ ನಾಮಾ ೪
ತ್ರಿವಿಡಿ ತಾಳ
ನೀ ಕಲ್ಪಿಸದವು ನೀ ಕಡೆ ನೋಟಾ
ನೀ ಕರುಣದಿಂದ ನೀ ಕಾಯದಿರಲು
ನಾ ಕಾಣೆನವನಿಯೊಳು ನಾಕಾದಿ[ಲೋಕ]ದೊಳು
ನಾ ಕಂಡೇನಂದು ಪಿನಾಕಿಯ ಕಾಯ್ದದ್ದು
ಈ ಕಾಮೇಂದ್ರಿಗಳು ಎನ್ನ ಕಾಯದೊಳಗಿದ್ದ
ರಾ ಕೂಡಿ ಇರಲಿ ವಿವೇಕದಲಿ ನಿತ್ಯ
ನಾ ಕೈಯಾ ಮುಗಿದು ಈ ವಾಕು ಬೇಡುವೆ ವಿ
ವೇಕ ನಾಮಾ ನಮ್ಮ ವಿಜಯ ವಿಠ್ಠಲರೇಯಾ
ನೀ ಕಡೆ ಮಾಡದೆ ಸಾಕು ದಯದಿಂದ ೫
ಅಟ್ಟತಾಳ
ಹೃಷಯಂಗಳಿಗೆ ನೀನರಸನಾದ ಕಾರಣ
ಹೃಷಿಕೇಶನೆಂದು ದಿವ್ಯಪೆಸರು ಪೆಸರಿತಯ್ಯ
ಘಸಣೆ ಮಾಡುವ ಮುನ್ನ ಸಮಹೃಹಿಕಾದಿಗಳು
ಅಸುವಿಂಗೆ ಸುತ್ತಿ ಉಬ್ಬಸವ ಬಡುಸುತಿರೆ
ಅಸುರಾರಿ ವೇಗ ಹಾರಿಸದಿದ್ದರೆ ನಿನಗೆ
ಹೃಷಿಕೇಶನೆಂಬೊ ಮಹಾ ಪೆಸರು ಪುಶಿಯಾಗದೆ
ಉಸಿರಿದವೆಲ್ಲಿ ಮೇಹಾ ಬಸುರೊಳಗಿದ್ದರೇನು
ಕೇಶಘ್ನಿ ವಿಜಯ ವಿಠಲೊಶವಾಗಿ ನಿನ್ನವನೆನಿಸು ೬
ಆದಿತಾಳ
ಬದುಕಲಾರೆನೆಂದು ಇಂದರೊಳಗೊಂದಾದರು
ಬದಿಗೆ ಬಂದು ಎನಗೆ ಒದಗಲಿ ಎಂದೆನೇ
ಉದುಭವಿಸುವಾಗ ಚದುರಮತಿಯಲಿದ್ದೆ
ಬೆದರಿಸುವರಿದರ ಅದುಭೂತವರಿಯನು
ತುದಿಗಾದರು ಒಳಿತು ಹೀನದಲಿ ಒಮ್ಮೆ ನಿನ್ನ
ಉದರದೊಳಗೆ ನಿದ್ರೆ ಪದರದೆ ಗೈವೆನೋ
ಇದಕೆ ಸಂಶಯ ಸಲ್ಲಾ ವಿಜಯವಿಠ್ಠಲ ವಿರಜಾ
ಎದೆಗುದೆ ಎನಗಿಲ್ಲಾ ಯಾದವ ಶಿರಿನಲ್ಲಾ ೭
ಜತೆ
ಸ್ವಾರ ವಿತ್ತಮ ಸಂವರ ನಿನ್ನ ಸದನವು ?
ಸರಿ ಬಂದಲ್ಲಿಡು ಧಾತಾ ವಿಜಯ ವಿಠ್ಠಲರೇಯಾ ೮

ಮಧುರೆಯ ಬಳಿ ಇರುವ ಅಳಗಿರೀಶನನ್ನು

೮೩. ಮಧುರೆ (ಅಳಗಿರಿ)
ಧ್ರುವತಾಳ
ನೀಲಾ ಮಾಣಿಕಾ ವಜ್ರಾರತ್ನ ಪಚ್ಚೆ ವೈಡೂರ್ಯ ಪ್ರ |
ವಾಳ ಗೋಮೇಧ ಮೌಕ್ತಿಕ ಪುಷ್ಯರಾಗದಿಂ |
ಕೀಲಿಸಿದ ಮಲಕು ಝಳ ಝಳ ಥಳ ಥಳಾಯಮಾನ |
ಮೌಳಿಯಾ ಕಂಡೆನಾ ಕಣ್ಣಿಲಿ ತಿಮ್ಮನಾ |
ಘಾಲ ಮೃಗ ನಾಭಿ ಸುತ್ತಿವ ಪಟ್ಟಿಸುತ್ತಾ ಪೂ |
ಮಾಲೆಗಳು ತೂಗುತಿರೆ ನವಪರಿಮಳವೂ ಕ |
ಪೋಲಾ ಚಿತ್ರಾ ಬರದಾ ಕದಪು ಪಚ್ಚಿದಾ ಕಪ್ಪು |
ನೀಲಾ ಕುಂತಳ ಕೇಶ ಮೃದ ಕೋಮಲಾ ಕಾಂತಿ |
ಭ್ರೂಲಲಿತಾ ಬಾಲಾ ಲತೆ ಚಿಗುವಾರುಯೊ ಕಂಡೆ |
ಮೇಲು ಕುಂಡಲಾ ಮಕರ ಕರ್ನಂತ್ತಾದಿಪ್ಪಾವಿ |
ಶಾಲಾಯುತ ಸೀತಳ ಕರುಣರಸ ಪೂರ್ಣ |
ಥಾಳಿಸುವ ನಯನಾ ಕಾಂಚಾನ ನಾಸಾನನ ಕಂಡೆ |
ಸಾಲು ದಂತ ಪಂಙÂ್ತ ಬಿಗಿ ಮುಗುಳನಗೆ ಚಂದ್ರಿಕಾ |
ಏಳೇಳು ಲೋಕವನು ಮುಸುಕಿರಲಾ ಬಿಂಬೋಷ್ಟ್ರ |
ಲಾಯ ರವಿ ಚಂದ್ರ ವಂದೆಶೆಯಲ್ಲಿ ದ್ದಂತೆ |
ಪೋಲುತಿದೆ ಸ್ವರ ಎಳೆ ವತ್ಸರನ ಸೋಲಿಸೆ |
ಬಾಳೆ ತಿಳಕ್ಯೆಳಸಾಗೆ ಬೆನ್ನು ಒಪ್ಪಾಲು ಕಂಡೆ |
ನೀಲ ಲೋಹಿತ ವರದ ವಿಜಯ ವಿಠಲಾವೃಷಭ |
ಶೈಲವಾಸಾ ಅಳಗಿರಿ ರಾಯನ ಕಂಡೆ ೧
ಮಟ್ಟತಾಳ
ಚತುರಭುಜ ಬಾಹು ಹಸ್ತಾಂಗುಲಿ ಮುದ್ರೆ |
ರತುನ ಕಂಕಣ ಕಡಗ ಕೇಯೂರ |
ಸತತ ಧರಿಸಿದ ಶಂಖಾರಿಗದ |
ಶತಪತ್ರಾಯುಧಾ ಶೋಭಿಸುತಿರೆ ಕಂಡೆ |
ಶತ ಧೃತಿ ಜನಕ ಶಿರಿ ವಿಜಯವಿಠಲ ವೃಷಭ |
ಕ್ಷಿತಿಧರ ನಿವಾಸಾ ನಿಗಮವಂದ್ಯನ ಕಂಡೆ ೨
ತ್ರಿವಿಡಿತಾಳ
ಉರ ಉದರಾ ಸುನಾಭಿ ಕಂಬುಕಂದರ ದಿವ್ಯ |
ಶಿರಿ ವತ್ಸ ಕೌಸ್ತುಭ ತುಲಸೀ ದಾಮಾಹಾರ |
ಸರಿಗೆ ನ್ಯಾವಳ ವನಮಾಲೆ ವೈಜಯಂತಿ |
ಹಾರ ಹೀರ ಪಚ್ಚ ಪದಕಾ ಮುತ್ತಿನಹಾರ |
ಧರಿಸಿದವನ ಕಂಡೆ ನಾನಾ ಪುಷ್ಪವ ಕಂಡೆ |
ಕಿರಿ ಘಂಟೆಗೆಜ್ಜೆ ಕಾಂಚಿ ಬಡ್ಯಾಣಾ ವಸನ |
ಕಿರಿಬಟ್ಟಿನಾ ಕೆಳಗೆ ಒಪ್ಪುತಿರಲಾ |
ಮರುಗುವಾ ಕಠಾರಿ ನಡುವಿನಲಿ ಕಿಕ್ಕಿರಲು |
ಬರಿದು ಮಲ್ಲರ ಗಂಡ ಮಲ್ಲಾಗಂಟೂ |
ಭರದಾ ಉಡಿಗೆ ತೊಡಪು ವುಲಿವಾಬಾವಲಿ ಧೀರಾ |
ಪುರುಷ[ಪ]ರಾಕ್ರಮನ ಕಂಡೆ ಮನದಿ |
ಅರೆರೆ ಚೋರರಗುರು ವಿಜಯ ವಿಠಲ ವೃಷಭಾ |
ಗಿರಿವಾಸಾ ತಿಮ್ಮಯ್ಯ ಅಳಿಗಿರಿರಾಯಾ ೩
ಅಟ್ಟತಾಳ
ಊರು ಜಾನು ಜಂಘ ಗುಲ್ಫ ಪ್ರಪದ ಪಾದ |
ತೋರುವಾ ನಖಕಾಂತಿ ಸುರಗಣ ಶಿರದಲ್ಲಿ |
ಭಾರಣೆಯಾಗಿದ್ದ ಮಕುಟ ಪ್ರಕಾಶವ |
ಮೀರಿ ತಿರೋಭಾವ ಗೈಸಲು ಸಂದಣಿ |
ತಾರು ದಟ್ಟಡಿಯಾಗೆ ಉದರಿದರವೆ ವಿಸ್ತಾರುವೇಗಾ |
ತಿರಮಳಲಂತೆ ಶೋಭಿಸಿ |
ಚಾರು ಮುತ್ತಿನ ಪಿಂಡೆ ನೂಪುರಾ ಕಡಗಾ ಬಂ |
ಗಾರದ ಗೆಜ್ಜೆ ಸರಪಳಿ ಪದ ತಳ |
ವಾರಿ ಜಾದಿ ರೇಖೆ ಪರಿಪರಿ ಬಗೆಯಿಂದ |
ಸಾರ ಸುಂದರ ನಿತ್ಯ ಬೇಡಿದಾರ್ಥವನೀವ |
ಆರಾಧಿ ಪರಿಗೆ ಅನುಗಾಲಾ ತಪ್ಪದೆ |
ಕಾರುಣ್ಯ ಮೂರುತಿ ವಿಜಯವಿಠಲದೇವ |
ವರೇಣ್ಯ ವೃಷಭಾದ್ರಿ ನಿಲಯಾ ಶುಭಕಾಯಾ ೪
ಆದಿತಾಳ
ಸುಂದರಾ ರಾಜಾ ರಾಜತೇ ಜಾ |
ಇಂದಿರಾ ನಾಥಾ ಪಾವನ ಪಥಾ |
ಅಂದಿಗೆ ಇಂದಾಲಿ ಆನಂದದಲಿ |
ಅಂದು ಪಡದನಾ ಕಂಡೆ |
ಸುಂದರ ರಾಜರಾಜತೇಜಾ |
ಇಂದು ತುರಗ ವಾಹನ ನಾಗಿ |
ಅಂದಾ ವಿಮಾನದಾ ಮಧ್ಯದಲ್ಲಿ |
ಚಂದಾದಿ ಮೆರೆಯುತ ಬರುವನ ಕಂಡೆ |
ಮುಂದೆ ಉರಗ ವಾಹನ ನಾಗಿ |
ಬಂದನು ಪೂಜಿಯಗೊಳು ತಾಲಿ ಅಲ್ಲಿಂ |
ದಾಂಪದದೊಳು ಕುಳಿತದು ಕಂಡೆ |
ವೃಂದಾವನ ಪ್ರೀಯ ವಿಜಯವಿಠಲ ದೀನಾ |
ಬಂದು ವೃಷಭಾದ್ರಿ ವಾಸನ ಕಂಡೆ ೫
ಜತೆ
ಋಷಿ ಮಂಡೂಕ ವರದ ವಿಜಯವಿಠಲ ತಿಮ್ಮಾ |
ವೃಷಭಾದ್ರಿ ನಿಲಯ ಅಳಗಿರಿರಾಯನ ಕಂಡೆ ೬

ಶ್ರೀಹರಿಯ ಗುಣವಿಶೇಷಗಳ ವರ್ಣನೆ ಈ ಸುಳಾದಿಯಲ್ಲಿದೆ.

೭೮
ಧ್ರುವತಾಳ
ನುಡಿಸುವೆ ನಿರ್ಣಯದಲ್ಲಿ ನಿನ್ನ ಕ್ರೀಡೆಯ ತಿಳಿದು
ಸಂಕಿರುಣ ಉಳ್ಳವರ ಕೈಯ ಪಿಡಿದು
ಪೂರ್ಣಗಣ್ಯಗುಣಾರ್ಣವ ನವ ಮೋಹನ್ನ
ಸ್ವರ್ಣಜ್ಯೋತಿ ಸಕಲ ಜೀವ ಜಡರ ಒಡಿಯಾ
ವರ್ನಿಸಬಲ್ಲೆನೆ ನಿನ್ನ ಮಾಯಾ ನಿತ್ಯ
ವರ್ನಾದಲ್ಲಿ ತತುನಾಮಾದಲ್ಲಿ ವರ್ನಾ
ವರ್ನದಿಂದ ಕರೆಸಿಕೊಂಬುವನೆ
ಸೂಪರ್ನವಾಹನ ಧರ್ಮಸ್ಥಾಪ ಚತುರ
ವರ್ಣಾಶ್ರಮದಲ್ಲಿ ನೀನೇ ನೇಮನನಾಗಿ
ನಿರ್ಣಯ ಕರ್ಮಂಗಳ ಮಾಡಿ
ದುರ್ನಡತಿಯ ಬಿಡಿಸಿ ಸಾಧನ ಸಂಪತ್ತು
ಪೂರ್ಣವಾಗಿ ಮಾಡಿಸುವ ಮಧುಸೂದನ
ಕರ್ನದ್ವಾರದಿ ಪೊಕ್ಕ ಬಲುಕಾಲದ ಕರ್ಮ
ಚೂರ್ನ ಮಾಡಿ ಕಳೆವ ಚತುರ ವಟದ
ಪರ್ನ ಪರಿಯಂಕ ವಿಜಯ ವಿಠ್ಠಲ ಸು
ವರ್ನ ಸಂತತ ಮುಖ್ಯ ಪ್ರತಿಪಾದ್ಯವೇದ್ಯಾ ೧
ಮಟ್ಟತಾಳ
ನಿನ್ನ ಕಿರೂತಿ ನಿನ್ನ ಮೂರುತಿ
ನಿನ್ನ ಕೀರ್ತನೆ ನಿನ್ನ ಪ್ರಾರ್ಥನೆ
ನಿನ್ನ ಚರಿತೆ ನಿನ್ನ ವಾರುತೆ
ನಿನ್ನ ಶಕುತಿ ನಿನ್ನ ಯುಕುತಿ
ನಿನ್ನ ವ್ಯಾಪುತಾ ನಿನ್ನ ಗುಪುತ
ನಿನ್ನ ವ್ಯಕ್ತಿ ನಿನ್ನ ಭಕುತಿ
ನಿನ್ನ ಧೈರ್ಯ ನಿನ್ನ ಶೌರ್ಯ
ನಿನ್ನ ಕಾರ್ಯ ನಿನ್ನ ಚರಿಯ
ನಿನ್ನ ಧೊರೆತನ ನಿನ್ನ ಹಿರೆತನ
ನಿನ್ನ ರೂಪ ನಿನ್ನ ಸಲ್ಲಾಪ
ನಿನ್ನ ದಯ ನಿನ್ನ ಸಹಾಯ
ನಿನ್ನ ಸ್ನೇಹ ನಿನ್ನ ಮೋಹ
ನಿನ್ನ ನಿರ್ಗುಣ ನಿನ್ನ ತ್ರೈಗುಣ
ನಿನ್ನ ಧರ್ಮ ನಿನ್ನ ಮರ್ಮ
ನಿನ್ನ ಧೈರ್ಯ ನಿನ್ನ ವೀರ್ಯ
ನಿನ್ನ ಸಿದ್ಧಿ ನಿನ್ನ ಬುದ್ಧಿ
ನಿನ್ನ ವಿನೋದಾ ನಿನ್ನಾನಂದಾ
ನಿನ್ನ ನೋಟ ನಿನ್ನ ಆಟ
ನಿನ್ನ ಭಯವು ನಿನ್ನ ನಯವು
ನಿನ್ನ ಪೊಳವು ನಿನ್ನ ಕಳವು
ನಿನ್ನ ಹಮ್ಮು ನಿನ್ನ ಸೊಮ್ಮು
ನಿನ್ನ ಕೋಪ ನಿನ್ನ ತಾಪ
ನಿನ್ನ ಕುರುಹು ನಿನ್ನ ಅರುಹು
ನಿನ್ನ ಕರುಣ ನಿನ್ನ ಕರಣ
ನಿನ್ನ ಬಗೆ ನಿನ್ನ ನಗೆ
ಇನ್ನು ಎಣಿಪರಾರು ಅನಂತ ಅನಂತ
ಆನಂದನಂದಾ ಅನ್ನ ಆನಂದ
ಪುಣ್ಯಗ್ರಗಣ್ಯ ಅನಿರ್ವಣ್ಯ
ಧನ್ಯವನಧಿ ಕನ್ಯಾಪತಿ
ಸೌಜನ್ಯ ಅನುಗುಣಾ ಮಾನ್ಯ ಚನ್ನಾಗಿಪ್ಪ
ವಿಜಯ ವಿಠಲ ಅನಂತರೂಪ ಅನಂತ ರಮಣ ೨
ತ್ರಿವಿಡಿತಾಳ
ಹಿಂದೆ ಈ ಶರೀರದರೊಳು ಮನ ಹತ್ತು
ಇಂದ್ರಿಯಂಗಳು ಆಲ್ಲಿ ತದ್ಗತವಾಗಿಪ್ಪ
ನಂದ ತಾತ್ವಿಕರಯ್ಯಾ ಬೊಮ್ಮಾದಿಗಳ ಸಹಿತ
ಒಂದೊಂದು ವ್ಯಾಪಾರದಲ್ಲಿ ಸ್ಥಿರವಾಗಿ
ಪೊಂದಿದ್ದರಲ್ಲದೆ ತೊಲಗಿ ಪೋದವರಲ್ಲ
ಅಂದೆ ಇಂಥಾದ್ಯಾಕೆ ಆಗಾದನೊ
ಇಂದಿರಾಪತಿ ನೀನೆ ಇದ್ದು ಇಲ್ಲದಂತೆ
ಮಂದಮತಿಗೆ ತಿಳುಪದಲಾಡಿದೊ
ಇಂದು ವ್ಯಕ್ತನ ಮಾಡಿ ಎನ್ನೊಳಗೆ ನೀನು
ನಿಂದು ಪೂಜೆಗೊಂಬೆನೆಂಬ ಹರುಷದಲಿ
ಕುಂದದೆ ಜಗದೊಳು ತೋರಿದಂತಾಯಿತು
ಅಂದಿದ್ದವನಲ್ಲದೆ ಪೊಸದಾದಿನೆ
ಸಂಧೇಹ ಸಲ್ಲದು ಎನಗೆ ನಿನ್ನ ಲೀಲೆ
ಬಿಂದು ಮಾತುರ ನೀನೆ ತಿಳುಹಲಾಗಿ
ಗಂಧ ಕಸ್ತೂರಿಲೇಪಾ ವಿಜಯ ವಿಠಲ ಹೃದಯ
ಮಂದಿರದೊಳಗಿಪ್ಪ ಪರಮ ಪಾವನ ರೂಪ ೩
ಅಟ್ಟತಾಳ
ಇದರಿಂದಲಿ ಜನರು ಕರೆದು ನಿತ್ಯಾ
ಮಧುರೋಕ್ತಿಯಿಂದ ಭೋಜನ ಮಾಡಿಸಿದರೆ ಹತ್ತದು
ಎಂದು ನಾನಿದ ಬಿಟ್ಟರೆ ಮೊದಲಿಗೆ ಸುಖ ಬಂದು
ಅದನು ಬಲ್ಲೆನೆಂಬ ಮನುಜ ಮತ್ತಾವಾವಾ
ಚದುರಾ ನೀನಹುದೊ ಏನೆಂಬೆನೆ ನೀನು ಮಾ
ಡಿದ ಮಾಟಕ್ಕೆ ಬಲು ಸೋಜಿಗವಾಗಿದೆ
ಇದೆ ಸುಖಬೇಕೆಂದು ಹಾರೈಸಿದವ ನಾನಲ್ಲ
ಅಧಿಷ್ಠಾನದಲಿ ಬಂದು ಮಾಡಿ ಮಾಡಿಸುವೆ
ಸದರವಿಲ್ಲದ ಸುಖತರವಾದರೇನು ಮ
ತ್ತೆ ದು:ಖವಾದರು ಮಹ ಒಳಿತಯ್ಯಾ
ಇದು ಅದು ಎನ್ನ ಸ್ವಾತಂತ್ರವೆಂದೆನಲಾರೆ
ಒದಗಲಾರವು ಕೇಳು ಪಾಪಪುಣ್ಯವೆರಡು
ಪದುಮೇಶ ವಿಜಯ ವಿಠಲ ವಿಶ್ವರೂಪ
ಸದಮಲಾನಂದ ಸಜ್ಜನಪ್ರಿಯ ಮುನಿಗೇಯ ೪
ಆದಿತಾಳ
ಒಂದು ಹೆಜ್ಜೆ ಇಡಲು ಒಂದು ಮಾತಾಡಲು
ಒಂದು ವಸ್ತ್ರಾ ಪಡಿಯಲು ಒಂದು ತುತ್ತು ಮೆಲ್ಲಲು
ಒಂದೊಂದು ಈ ಪರಿ ಅಂದವಾದರು ನಿನ್ನ ನಿನ್ನಿಂದಾದೆನೊ
ಚಂದವಾಗಿ ನೋಡೊ ಒಂದೊಂದರೊಳಗೆ ಬಹು
ಮಂದಿಯ ವ್ಯಾಪಾರ ಪೊಂದಿರಲಾಗಿ ನೀ
ನಂದ ಬಗೆ ಏನೊ ವಂದಿಸುವೆನೊ ನಮ್ಮ ವಿಜಯ ವಿಠಲರೇಯ
ಮಂದನಾದವನಿಗೆ ಬಂಧನದೊಳಗಿಡುವೆ ೫
ಜತೆ
ವಿಷಯಂಗಳಲ್ಲಿ ಚರಿಸಿದರೇನೊ ನಿನ್ನ
ಪೆಸುರುಗೊಂಡರೆ ಪುಣ್ಯಾ ವಿಜಯ ವಿಠಲರೇಯಾ ೬

ದಾಸತ್ವವನ್ನು ಪಡೆದಿರುವುದೇ

೫೩
ಧ್ರುವತಾಳ
ನ್ಯಾಯವ್ಯಾತಕೆ ದೇವ ಎನ್ನ ಕೂಡಲಿ ನಿನಗೆ
ಶ್ರೇಯಸ್ಸು ಬರುವುದೇನು ಇನಿತಾದರು
ಕಾಯೊ ಕರುಣದಿಂದ ಭವದಲ್ಲಿ ಬಲು ನೊಂದು
ಬಾಯಬಿಟ್ಟೆನಲ್ಲದೆ, ಮಲತವನೆ
ತಾಯಿ ತಂದೆ ನೀನೆ ಅನಂತ ಕಲ್ಪಕ್ಕೆ ಪರ-
ಕೀಯರ ಕಾಣೆನೋ, ನೋಡಲಾಗಿ
ನೋಯಕ್ಕೆ ಹಾಕದಿರು, ಶರಣು ಪೊಕ್ಕವನ್ನ, ತ್ರಿ-
ಕಾಯವ ಪೋಗುವಂತೆ ಮತಿಯ ಕೊಡೊ
ಮಾಯ ನಿನ್ನದಯ್ಯಾ ವಿಚಾರಿಸೆ
ಭೂವ್ಯೋಮ ಪಾತಾಳ ದಶದಿಕ್ಕು ಸರ್ವದ
ನೀಯಾಡಿಸಿದಂತೆ ನಿಲ್ಲದೆ ಚಲಿಪವು
ನಾಯಿ ಸಂಗಡ ಸಿಂಹ ಮತ್ಸರ ಮರೆದು, ಉ-
ಪಾಯದಿಂದಲಿ ತನ್ನ ಶಕ್ತಿತೋರೆ
ಪ್ರೀಯವಾಗಿ ಕೇಳೆ ಸಹ ಸಕಲವಾದೆ
ಶ್ರೀಯರಸನೆ ನಿನ್ನ ನಗೆ ಒಂದು ಬಗೆಯಾಗಿ
ಕಾಯಾದೊಳಗೆ ಎನಗೆ ತೋರುತಿದೆ
ವಾಯುವಂದಿತ ನಮ್ಮ ವಿಜಯ ವಿಠ್ಠಲ ನಿನ್ನ
ಕಾಯಕಾರ ಪೊಂದಿದವನೊ ನಾನು ೧
ಮಟ್ಟತಾಳ
ಬಿಡು ನಿನ್ನ ಬಿಂಕ ಭಕ್ತರೊಳಗೆ ಇದೆ
ನಡೆಯದು ನಾನಾ ಬಗೆಯಿಂದ ನೋಡಿದರು
ಬಿಡರು ನಿನ್ನ ಪಾದ ನಿತ್ಯದಲ್ಲಿ ಭಜಿಸಿ
ಅಡಿಗಡಿಗೆ ಕೂಗಿ ಸೊರಗಿ ಬೀಳುವರಯ್ಯ
ಒಡೆಯ ಬಿನ್ನಪ ಕೇಳೋ ಅವರ ಮನೋಧೈರ್ಯ
ಬಿಡಿ ಮಾತುಗಳಲ್ಲ ನೋವು ಬಂದರಾಗೆ
ತಡೆವರು ಭಯತೋರಿ, ಬಿರಿದನು ಕೊಂಡಾಡಿ
ದೃಢ ದೇವನೆ ನಮ್ಮ ವಿಜಯ ವಿಠ್ಠಲ ಎನ್ನ
ಕಡೆಯವನೆನ್ನದಿರು ಅವರ ದಾಸರ ದಾಸ ೨
ತ್ರಿವಿಡಿತಾಳ
ತೋರಿ ನುಡಿವುದೇನು ಬಲ್ಲ ಮಾತಿಗೆ ದೇವ
ಸಾರಿದಂತೆ ವರವ ಕೊಟ್ಟರೊಳಿತೇ
ಮೀರಿದರಾದಡೆ ನಿನಗೆ ಹರಕೆಯ ಕೊಡುವೆ
ಆರಾದರು ಏನು ಮೆಚ್ಚದಿರಲು
ಕಾರಣವಾಗುವುದು ಪೇಳುವೆ ನಿಜವಾಗಿ
ದೂರದಲೆ ನಿನ್ನ ತೊಲಗ ಬಿಡೆ
ಶಾರೀರವೆ ನಿಜ ಕಂಪಾಗಲಿ?
ಮೋರೆಯೆತ್ತದಂತೆ ವಾರಿಯೊಳಗೆ ಮುಣುಗೊ, ಗುಡಿ
ದಾರೆ ನಿನಗೆ ಮಣ್ಣೆ ಪ್ರಾಪ್ತವಾಗಲಿ
ಪೊರಗಾಗಿ-ಮೋರೆ ಸೊಟ್ಟಾಗಲಿ
ಸೇರಿ ಕಾಲವ ಕಳಿಯೊ ಪರರ ದ್ವಾರದಲಿ
ಧಾರುಣಿ ತ್ಯಾಗವಾಗಿ ನೀ ಪೋಗಯ್ಯ
ಅರಣ್ಯ ಪಾಲಾಗಿ ನಿಲ್ಲದೆ ಚಲಿಸುವುದು
ಜಾರ ಚೋರನಾಗು ತಿರುಗಿ ತಿರುಗಿ
ನಾರಿಯರ ಮುಂದೆ ಲಜ್ಜೆಗೇಡಿಗನಾಗು
ವೀರನಾಗೆಲೊ ಕಾಸು ದೊರೆಯದಲೆ
ಈ ರೀತಿಯಲಿ ನಿನಗೆ ಎಂದಿಗೆಂದಿಗೆ ತಪ್ಪದೆ
ವಾರವಾರಕೆ ಕರ್ಮ ಕಾಡುತಿರಲಿ
ಆರನ್ನ ಕಾಣದೇ ಪರದೇಶಿಯಾ ಇಂಥ
ಘೋರದೊಳಗೆಯಿಟ್ಟು ಬಳಲಿಸುವೆ
ಸಾರಿದವರ ನೆಂಟ ವಿಜಯ ವಿಠ್ಠಲ ನಿನ್ನ
ಕಾರುಣ್ಯತನವಿನ್ನು ಎಲ್ಲಿ ಪೋಯಿತೂ ದೇವ ೩
ಅಟ್ಟತಾಳ
ಲವತೃಟಿ ಕಳಕಾಷ್ಟಾ ಆವಾವ ಕಾಲಕ್ಕೆ
ಅವನಿಯೊಳಗೆ ನಾನೆ ಪುಟ್ಟಿ ಬಂದು ಈಗ
ಭವದಲ್ಲಿ ಇದ್ದು ಮಾಡುವ ಕರ್ಮಂಗಳು
ಶ್ರವಣದಿ ಎಸಗುವ ಚೇಷ್ಟೆ ಚೇಷ್ಟಯು
ಪವನೇಶ ನೀನೆ ಸಾಕ್ಷಿ ಭೂತನಾಗದೆ
ತವಕದಿಂದಲಿ ನಾನೊಬ್ಬ ಮಾಡಿದರೇನು
ಕವಿಗಳು ನಿನಗೆ ಹೇಳುವ ಮಾತು ಕೇಳಲು
ನವನವ ಬಗೆಯೆಂದು ನಗದೆಯಿಪ್ಪರೆ ದೇವ
ರವಿತೇಜ ಆನಂದ ವಿಜಯ ವಿಠ್ಠಲರೇಯ
ತ್ರಿವಿಧಗುಣಂಗಳು ನಿನ್ನಾಧೀನವೊ ೪
ಆದಿತಾಳ
ಇದೆ ಸಾಕು ಎನಗೆ ಮತ್ತಿದಕೆ ವೆಗ್ಗಳ ಉಂಟೆ
ಪದೊಪದಿಗೆ ನಿನ್ನ ದಾಸನೆನಿಸಿಕೊಂಬೋದು
ಅದು ಪರಮ ಲಾಭವಯ್ಯ, ಅನಂತಾನಂತ ಜನುಮಕ್ಕೆ
ಒದಗಿ ಬಂದು ಪೆಸರು ಪೋಗುವುದನು ಪೇಳೋ
ಮುದದಿಂದ ಕರೆಸಿಕೊಂಡು ಹಿಂದಾಗಿ ಪೋದಕಾಲ
ಪದುಮನಾಭನೆ ನೀನು ತಿರುಗಿ ತರಿಸಲಾಪೊಎ ಯಾ
ಇದೇ ಧೈರ್ಯವಿಡಿದು ನಿನ್ನ ಕೊಂಡಾಡಿದೆನಯ್ಯ
ಪದವಿಲಿ ಸುಖಬಡುವ ಜ್ಞಾನವ ಕೊಡು ಜೀಯ
ಮದನ ಜನಕ ನಮ್ಮ ವಿಜಯ ವಿಠ್ಠಲರೇಯ
ಸದಮಲ ನಿನ್ನ ಪಾದ ನೆನೆಸುವ ಭಾಗ್ಯವನು ೫
ಜತೆ
ನಿನಗಂಜುವನಾರು ಮನಮುಟ್ಟಿದ ಮ್ಯಾಲೆ
ಘನಕೃಪಾವನಧಿ ಶ್ರೀ ವಿಜಯ ವಿಠ್ಠಲರೇಯ ೬

ಡಾಂಭಿಕ ಭಕ್ತಿಯಿಂದ ಭಗವಂತನು ಕೃಪೆ

೭೯
ಧ್ರುವತಾಳ
ಪಂಗನಾಮವ ಬಡಿದು ತಿದ್ದಿ ಪರಿ ಪರಿ ಮುದ್ರೆ
ಅಂಗಕ್ಕೆ ಚಿತ್ರ ಬರೆದಂತೆ ಧರಿಸೀ
ಅಂಗಾರ ಫಣಿಯಲ್ಲಿ ಸಣ್ಣದಾಗಿ ಇಟ್ಟು
ಶೃಂಗಾರಕೆ ನೊಂದು ಮಣಿಯ ಮಾಲೆ
ಹಿಂಗದೆ ಹಾಕಿ ಹಿತದವನೆಂದು ತೋರುತ್ತ
ಕಂಗಳಿಗೆ ಗೋಚರಿಸುವಂತೆ ಸುಳಿದೂ
ಮುಂಗಲಿ ಮುಖವ ತೋರಿ ಅಡಗುವಂದದಲಿ ಸೋ
ಗಂಗಾಳನೇ ಪರಿ ಪರಿ ಬೀರಿ ಪರರ
ಬಂಗಾರ ಮೊದಲಾದ ದ್ರವ್ಯಂಗಳನೆಬ್ಬಿಸಿ
ಹಂಗಿನವನಲ್ಲನಿವನೆಂಬೊ ತೆರದೀ
ಗಂಗಾದಿ ತೀರ್ಥಯಾತ್ರೆಗಳ ವ್ಯಾಜ್ಯವಮಾಡಿ
ಮಂಗಳ ಪುರುಷನೆಂದು ಅನ್ಯರಿಂದ
ತುಂಗತನದಲಿ ಪೊಗಳಿಸಿಕೊಂಡು ನಿರುತ ಬಹಿ
ರಂಗ ಮಿಂಚಾಗಿ ನುಡಿ ನಡತೆ ತಿಳುಪೀ
ಅಂಗಡಿ ಅಧಿಕವಾಗಿ ರಚಿಸಿದರೇನಾಹದೊ
ರಂಗನ ಪಾದದಲ್ಲಿ ನಿಷ್ಠೆ ಅಂತಾ
ರಂಗದಲ್ಲಿ ಭಕ್ತಿ ಪೂರ್ವಕ ಇಲ್ಲದನಕ
ಸಂಗರಹಿತನಾಗ ಧರಣೆಯೊಳಗೆ
ಭಂಗವಲ್ಲದೆ ಅವಗೆ ಮೀಸಲು ಪದವಿ ಇಲ್ಲ
ಡಂಗುರ ಸಾರುತಿದೆ ಶೃತಿಗಳಲ್ಲೀ
ಸಂಗೀತಲೋಲ ಶಿರಿ ವಿಜಯ ವಿಠಲರೇಯನ
ಡಿಂಗರಿಗನಾಗದೆ ಸಕಲ ಸೌಖ್ಯಬಾರದು ೧
ಮಟ್ಟತಾಳ
ಹೇಯದ ಗುಳಿಗೆಯನು ಮಾಡಿ ಭಾಗೀರಥಿ
ತೋಯದ ಮಧ್ಯದಲ್ಲಿ ಹಾಕಿದರೇನು ಅದು
ಛ್ಯಾಯವಾದರೂ ಸ್ವಲ್ಪ ಪವಿತ್ರಕರವೇ
ಶ್ರೀಯರಸ ನಮ್ಮ ವಿಜಯ ವಿಠ್ಠಲ ಶಿರಿ
ರಾಯನ್ನ ಭಕುತಿಯು ಇಲ್ಲದ ಮನುಜನ್ನ
ಕಾಯ ಶುಚಿಯಿಲ್ಲ ಸಾಧನೆ ಮುನ್ನಿಲ್ಲ ೨
ತ್ರಿವಿಡಿ ತಾಳ
ಧನದಪೇಕ್ಷಿಯು ಬಿಡದೆ ತನ್ನಾಧೀನವಿದ್ದ
ಮನಸುನಿಲ್ಲಿಸದೆ ನಿಶ್ಚಲವಾಗಿ ನಿತ್ಯ ಸ
ಜ್ಜನರ ಸಮ್ಮತಿ ಬಡಿಸದೆ ಸರ್ವಕಾಲದಲ್ಲಿ ಯೋ
ಚನೆ ಭಕ್ತಿ ಮಾಡದೆ ಬಹಳವಾಗಿ
ಮಣಿ ತುಲಸಿಯಮಾಲೆ ಭುಜದಲ್ಲಿ ಮುದ್ರೆಗಳು
ಫಣಿಯಲ್ಲಿ ಪುಂಢ್ರ ದ್ವಾದಶನಾಮಗಳು
ಇನಿತು ಧರಿಸಿಕೊಂಡು ಉದಯಾಸ್ತಮಾನದಲಿ
ಮನೆ ಮನೆ ತಿರುಗಿ ಅನ್ಯರು ಮೆಚ್ಚುವ
ಗಣನೆ ಇಲ್ಲದ ಮಾತು ಕರವ ತಿರುಹಿ ಪೇಳಿ
ಎಣೆಗಾಣೆ ಎನಿಸಿಕೊಂಡರೆ ಏನಯ್ಯ
ಪೆಣಕೆ ಶೃಂಗರಿಸಿ ಎಣಿಸಿ ನೋಡೆ ವ್ಯರ್ಥವೆನ್ನು
ವನಧಿಶಯನ ನಮ್ಮ ವಿಜಯ ವಿಠ್ಠಲರೇಯನು
ಅನುದಿನದಲಿ ಭಕ್ತಿ ಇಲ್ಲದೆ ಒಲಿಯಾ ೩
ಅಟ್ಟತಾಳ
ವೈರಾಗ್ಯ ಜ್ಞಾನವಿದ್ದರೇನದು ಭಕುತಿ ಇಲ್ಲದನಕಾ
ಅವಗೆ ಭಕುತಿ ಇಲ್ಲದನಕಾ
ವೈರಾಗ್ಯ ಭಕುತಿ ಇದ್ದರೇನು ಜ್ಞಾನವಿಲ್ಲದನಕಾ
ಅವಗೆ ಜ್ಞಾನವಿಲ್ಲದನಕಾ
ಸಾರಭಕುತಿ ಜ್ಞಾನವಿದ್ದರೇನು ವಿರಕುತಿ ಇಲ್ಲದನಕಾ ಈ
ಮೂರುಳ್ಳರೇನು ಮುನಿ ಶಿರೋಮಣಿಯಿಂದ
ಮಾರುತಿ ಮತ ಪೊಂದದನಕಾ
ಚೀರಿ ಹಾರಿ ಕೂಗಿ ಬಾಲವರಿದು, ವಿ
ಹಾರವನ್ನು ಮಾಡಿ ವಿಲಕ್ಷಣವನ್ನೆ ತೋರಿ
ಶರೀರ ದಂಡಿಸಿ ನಾನಾ ಪರಿ
ಪರಿತಾಪ ತಾ ಪಡಲು ತೆರಳಿಯಲ್ಲದೆ ಎಲ್ಲ
ದಾರಿಯಾಗದು ಕಾಣೊ ವೈಕುಂಠಕ್ಕೆ
ಮಾರಾರಿನುತ ಶಿರಿ ವಿಜಯ ವಿಠ್ಠಲ ಮೊಗ
ತೋರನು ಎಂದೆಂದಿಗೂ ಎಂದಿಗೂ ಸಿದ್ಧ ೪
ಆದಿತಾಳ
ಹೃದಯ ಶುದ್ಧಿ ಇಲ್ಲದ ಭಕುತಿ ಗ್ರಾ
ಮದ ಸೂಕರ ಭಕುತಿ ನೋಡೊ
ಅದು ಯಾತರ ಉಕುತಿ ತಿಳಿಯೊ ಅದು ಯಾತಕೆ ಬಾತಿ
ಮದುವೆಯ ಮನೆಯೊಳು ಶ್ವಾನ ಕುಳಿತರೆ
ಮದುವಣಿಗನೆನಿಸುವುದೆ
ಪದುಮನಾಭನ ಪಾದ ಪದುಮವನ್ನು
ಪದೋ ಪದಿಗೆ ವಿಮಲ ಭಕುತಿಯಲ್ಲಿಟ್ಟು ನೆನೆ
ಯದವ ದೇಶದ ಮೇಲೆ ಹರಿದಾಸನೆನಿಸಲೇನು
ಪದವಿಗೆ ಸಲ್ಲನು ಪದವಿಗೆ ಸಲ್ಲನು ಭೂತ ಚರಿತೆಯೆ ತೋ
ರಿದರೇನವ ಮಾತಿನ ದಾಸದಾಸ
ಮೃದುವೃತ್ತಿಯಲ್ಲಿ ನಡೆದರೇನೊ ಹಣ ಗಳಿಸುವ ದಾಸ ದಾಸ
ಉದರಗೋಸುಗ ಅಂತರ ವಂಚನೆ ಸ್ಥಿರವಾಗಿಪ್ಪದಯ್ಯಾ
ಕಂದರು ಇಲ್ಲದ ಮನೆಯೊಳಗಿದ್ದಂತೆ ಅವನ ಪುಣ್ಯ ವ್ಯರ್ಥ
ತ್ರಿದಶರೊಂದ್ಯ ಶಿರಿ ವಿಜಯ ವಿಠ್ಠಲರೇಯ
ಬದಿಯಲ್ಲಿ ನಿಲ್ಲ ನಿಲ್ಲ ಹುದುಗಿಪ್ಪಾ ೫
ಜತೆ
ಎಲುವಿನ ಹೊರೆ ತಂದು ಬದಿಯೊಳಿಟ್ಟಂತೆ
ಒಲಿಯಾ ವಿಜಯ ವಿಠ್ಠಲ ಭಕುತಿ ಮಾಡದನಕಾ ೬

ಕಾಶಿಯ ವಿಚಾರವನ್ನು ಮಹಾತ್ಮ್ಯೆಯನ್ನು ವಿವರಿಸುವ ಸುಳಾದಿ ಇದು.

೨೧. ಕಾಶಿ
ಧ್ರುವತಾಳ
ಪಂಚಗಂಗಿಯ ಯಾತ್ರಿ ಮಾಡುವುದು ಚನ್ನಾಗಿ |
ಕೊಂಚವಲ್ಲವು ಕಾಣೊ ತ್ರಿಜಗದೊಳೂ |
ಸಂಚಿತಾ [ಪ್ರಾ]ರಬ್ಧಾಗಾಮಿ ನಾಶವಾಗುವುದು ವಿ |
ರಂಚಿ ಜನಕ ರಂಗ ಒಲಿವ ಬಂದು |
ಮುಂಚು ಮುಂಚಾಗಿ ಜ್ಞಾನಪಿಚ್ಚುವದೂ ಪ್ರಾ |
ಪಂಚದೊಳಗಿದ್ದರು ನಿರ್ಲಿಪ್ತನೋ |
ಕಿಂಚಿತು ಕಾಲಾ ಇಲ್ಲಿ ವಾಸಾವಾಗಿರಲು ಸಂ |
ಕಿಂಚಿನನಾಗುವ ಜ್ಞಾನಧನದೀ |
ಚಂಚಲತನ ಬಿಟ್ಟು ಏಕಭಕುತಿಯಿಂದ |
ಸಂಚಗಾರವನೀಯೊ ಹರಿ ಭಟರಿಗೆ |
ಪಂಚ ಭಗವದ್ರೂಪ ಮನದೊಳು ನಿಲಿಸಿರಿ |
ಪಂಚ ಬುದ್ಧಿಯಿಂದ ಉತ್ತಮರೊಳಗೆ |
ಸಂಚಾರವನೆ ಇದೆ ಸಾಧನವೇ ಎಂದು |
ಮಿಂಚುವ ಕಾಯದಲ್ಲಿ ನಲಿದಾಡುತಾ |
ಪಂಚಗಂಗಿಯ ಸ್ನಾನ ಸುಲಭವಲ್ಲವೊ ಮರುಳೆ |
ಪಂಚ[ಮೊ]ಗನ ಕರುಣಾ ಪಡಿಯಬೇಕು |
ಅಂಚಿ ಅಂಚಿಗೆ ಈತ ಒಲಿಯಾದಲ್ಲದೆ ಅ |
ಮಂಚಾ ಉಳ್ಳ ದೇವೇಶನೀಕ್ಷಿಸುವನು |
ಪಂಚಪ್ರಾಣಾನೊಳಗೆ ಇಪ್ಪಾ ವಿಜಯವಿಠಲನ |
ಮುಂಚಾಗಿ ನೆನಸಲು ಸರ್ವಸಾಧ್ಯಾ ೧
ಮಟ್ಟತಾಳ
ಭೂತಳದೊಳು ಗಂಗಾ, ಯುಮುನ, ಸರಸ್ವತಿ ಉಂಟು, ಕಾಶಿ |
ಕ್ಷೇತ್ರದ ಮಧ್ಯಾ ಮಾತು ಮಾತಿಗೆ ಇದನೆ ಕೊಂಡಾಡಿದ ನರನ |
ಪಾತಕ ಪರಿಹಾರಾ ಪರಮಜ್ಞಾನವೆ ಪ್ರಾಪ್ತಿ |
ಭೂತಪ್ರೇತಾದಿಗಳ ದೇಹ ಬಂದಿದ್ದಾರಾಗೆ |
ವಾತ ಮುಖದಿಂದಾ ಕಣ ಸೋಕಿದರಾಗಲೆ |
ಜೋತಿರ್ಮಯಾ ಕಾಯಾ ಬರುವದು ಸಿದ್ಧವಯ್ಯಾ |
ಸೀತಾನದಿ ಜನಕಾ ವಿಜಯವಿಠಲರೇಯಾ |
ಕೌತುಕಮಾಡಿಪ್ಪ ಪುಣ್ಯಪಾಪಗಳಿಲ್ಲಾ ೨
ತ್ರಿವಿಡಿತಾಳ
ಉರ್ಜಾಮಾಸಾದಲ್ಲಿ ಪಂಚಗಂಗಿಸ್ನಾನಾ |
ಸಜ್ಜನರೊಡಗೂಡಿ ಮಾಡಲವಗೆ |
ಮುರ್ಜಗದೊಳು ಬಿಡದೆ ಸರ್ವಪುಣ್ಯಗಳು ತಾ |
ಹೆಜ್ಜಿ ಹೆಜ್ಜಿಗೆ ಎಸಗೆ ಬಲುಕಾಲಾವು |
ತಜ್ಜಾತಿಗಿಂದಧಿಕಾ ದಶಮಾಡಿ ಪುಣ್ಯಗಳು |
ಆರ್ಜವಗುಣದಿಂದ ಬರುವವಾದಕೂ |
ನಿರ್ಜರಾವಳಿ ಇವನ ಕೊಂಡಾಡುವು[ದು] ಪಾಪ |
ವರ್ಜಿತನಾಗಿ ಬಾಳುತಲಿಪ್ಪನೊ |
ಪ್ರಜ್ವಲಿಸುವ ನಾನಾ ದೇಶದಲಿ ಕೀರ್ತಿ |
ಪರ್ಜನ್ಯ ವ್ಯಾಪಿಸಿಕೊಂಡಿಹದೊ |
ವಜ್ರಪಾಣಿಯಾ ಲೋಕಾಸೇರುವಾರು ಮೀರಿ |
ಘರ್ಜನೆಮಾಡುವ ಮೇಲು ಮೇಲೂ |
ದುರ್ಜನಹರ ನಮ್ಮ ವಿಜಯವಿಠಲರೇಯಾ |
ಮಜ್ಜನಮಾಡಿಸುವಾ ವಿರಜಾನದಿಯಲಿ ೩
ಅಟ್ಟತಾಳ
ಭೂಸುರ[ಜಾ]ಮಿಳ ಜಾತಿ ಭ್ರಷ್ಟನಾಗಿ |
ದಾಸಿಯಾನೆರದು ಕಾಲಾಂತರದಲ್ಲಿ |
ವಾಸವಾದನು ಪಂಚಗಂಗೆಯ ತೀರದಿ |
ಲೇಶಾವಾದರು ಪುಣ್ಯಮಾಡದೆ ಬಲು ಮಹಾ |
ದೋಷಾಕಾರಿಯಾಗಿ ಇರುತಿರೆ ಕಾರ್ತಿಕಾ |
ಮಾಸ ಪ್ರಾಪುತವಾಗೆ ಪಂಚತ್ವಗೈಯ್ಯಲು |
ಆ ಸಮಯದಲ್ಲಿ ಯಮದೂತರು ಬಂದೂ |
ಘಾಶೆಮಾಡುತಿರೆ ಪಂಚಗಂಗೆಯಲೀ |
ವಾಸಾಮಾಡಿದ ಪುಣ್ಯಸುಪ್ರಭಾವದಿಂದಾ |
ಕೇಶವದೂತರು ಬಂದು ಕಟ್ಟಿದ ದುಷ್ಟಾ |
ಪಾಶವ ಬಿಡಿಸಿ ದುರಿತದೂರನ ಮಾಡಿ |
ಲೇಸು ಪಾಲಿಸಿದರು ಮುಕ್ತಿಪಥವ ತೋರಿ |
ದೇಶದೊಳಗೆ ಇದೆ ಏನೆಂಬೆನಾಶ್ಚರ್ಯ |
ಮೀಸಲಮನದಲ್ಲಿ ಈ ಗಂಗೆಯಲಿ ಬಂದು |
ಲೇಶ ಸಾಧನ ಮಾಡೆ ಆವಾವಾದೇಹಿಗೆ |
ನಾಶವಿಲ್ಲದಾ ಪುಣ್ಯಬಾಹುದು ತಡಿಯಾದೆ |
ಶ್ರೀಶಾ ಮೂರುತಿಪತಿ ವಿಜಯವಿಠಲ ಹೃ |
ದ್ದಾ ಸರೋವರದಲಿ ಕ್ರೀಡೆಯಾಡುವ ಬಂದು ೪
ಆದಿತಾಳ
ಆದಿಯುಗಾದಲ್ಲಿ ಧರ್ಮಾನದಿ ತ್ರೈತಾ |
ವೇದಶಿರನ ಮಗಳು ಧೌತಪಾಪರೆನ್ನಿ |
ಆ ದ್ವಾಪರದಲಿ ಬಿಂದು ಸರೋವರ |
ವಾದದ್ದು ಕಲಿಯುಗಕೆ ಪಂಚನದಿ ಎನಿಸುವುದು |
ಸಾಧುಜನಾ ಇನಿತು ತುತಿಸಿ ವಂದಿಸುವರು |
ಈ ಧರೆಯೊಳಗಿದೆ ವಾಸಕ್ಕೆ ಯೋಗ್ಯವೆನ್ನಿ |
ಮಾಧವನ್ನ ಸನ್ನಿಧಿ ಕಾಶಿಕ್ಷೇತ್ರ ಮಧ್ಯಾ ೫
ಜತೆ
ಪಂಚಗಂಗೆಯ ಯಾತ್ರೆಮಾಡಿ ಭಕುತಿಯಿಂದ |
ಪಂಚರೂಪಾತ್ಮಕಾ ವಿಜಯವಿಠಲ ಒಲಿವ ೬

ಎಲ್ಲ ಕರ್ಮಗಳನ್ನು ಶ್ರೀಹರಿಯೇ ಮಾಡಿ

೮೦
ಧ್ರುವತಾಳ
ಪರತರ ಸೂಕ್ಷ್ಮಕಾಲ ಅನುಭವಕೆ ತಂದುಕೊಂಬ
ಪರಿಯ ತಿಳಿಯಬೇಕು ಎಣಿಸಿ ಗುಣಿಸೀ
ಸರಸಿಜ ಎಲೆದಳಗಳು ಜೋಡಿಸಿ ಶತಸಾವಿರ
ತ್ವರಿತದಿಂದಲಿ ಸೂಜಿ ಕೊನೆ ಪೋಣಿಸಿ
ಇರದೆ ಅದೆ ಕಾಲದಲ್ಲಿ ಸಮಸ್ತ ವನಜದಳವು
ಧರ ಧರ ಒಂದೊಂದಕ್ಕೆ ಪ್ರತ್ಯೆಕವು
ಭರದಿಂದ ಛಿದ್ರಗಳು ಬೀಳೋವು ಇದರೊಳಗೆ
ನಿರೀಕ್ಷಿಸು ಆದಿ ಮಧ್ಯಂತವೆಂದೂ
ಕರಿಸಿಕೊಳ್ಳುತಲಿಪ್ಪವು ಕಾಲ ವ್ಯವಧಾನವಾಗಿ
ಅರಿತು ನೋಡೆಲೊ ಮನುಜ ಮೊದಲಿಗಿಂತ
ಎರಡನೇ ಛಿದ್ರಕ್ಕೆ ದೇಶ ವ್ಯವಧಾನವೆನ್ನು
ಸ್ಮರಿಸತಕ್ಕದ್ದು ಪೇಳಲಿ ಕೂಡದೂ
ಗುರುತು ಮಾತ್ರ ಇದೆ ತೋರಿಸಿಕೊಟ್ಟದ್ದು
ತಿರುಗಿ ಈ ಪ್ರಕಾರದಲ್ಲಿ ಎಣಿಕೆ ಮಾಡೆ
ಪರಮಾಣು ಕಾಲ ಮೀರಿ ಹೋಗುವುದು ಸಿದ್ಧ
ಹರಿ ಮಹಿಮೆ ಮಹಾ ಮಹಾ ವೈಚಿತ್ರವೊ
ಧರಣಿಯೊಳಗೆ ಬಂದು ಪುಟ್ಟಿದ ಮಾನವ
ಮರಳೆ ಅನಂತದೋಷ ದೂರ ಮಾಡಿ
ಕರಣ ಶುದ್ಧನಾಗಿ ಸಾಧನಗೈದು ನಿಂದಿರದೆ ವೈಕುಂಠ
ಸೇರುವ ಮಾರ್ಗವ
ಅರಘಳಿಗೆಯೊಳಗೆ ಮಾಡಿಕೊಂಡು ಪೋಗಲಿಬಹುದು
ಸರಸಿಜಭವನ ಕಲ್ಪ ಪರಿಯಂತರಾ
ನರಗೆ ಸಾಧನಮಾಳ್ಪ ಯೋಗ್ಯತಾವಿರಲು
ಪರಮ ರಹಸ್ಯ ಉಂಟು ಈ ಕಾಲವೆ ಸಾಧಿಸಿ
ತರತಮ್ಯ ಗುಣದಿಂದ ಸರ್ವಾ
ಎರಡೊಂದು ವಿಧಿಯುಳ್ಳ ಜೀವರ ವಿವಿಧ ಬಗೆ
ಪರಿ ಪರಿ ಗುಣರೂಪ ಕ್ರೀಯಂಗಳೂ
ಚರಿಸುವಾಚರಣೆ ಮಾಳ್ಪಾ
ಚರಣೆ ಮಾಳ್ಪ ಅಣು ಮಹತ್ತಕೆ ಸರಿ
ಹರಿಮೂರ್ತಿ ಬಿಂಬ ತಿಳಿದು ಪ್ರತಿಬಿಂಬವಾ
ಸುರ ಮೊದಲಾದವರ ನೋಡಿ ತಿಳಿದು ಕೇಳಿ
ನಿರುತ ಈ ಮಾತಿನಂತೆ ಚಿಂತೆಗೈಯೋ
ಪರಮ ಪುರುಷ ರಂಗಾ ವಿಜಯ ವಿಠ್ಠಲ ರೇಯನ
ಅರಸುತನಕೆ ನಾನೆಲ್ಲಿ ಎದಿರುಗಾಣೆ ೧
ಮಟ್ಟತಾಳ
ಇಂಥ ಕಾಲ ಕ್ಲಿಪ್ತಿ ಪೇಳಿದೆನಿದರೊಳಗೆ
ಅಂತರಂಗದಲ್ಲಿ ಚಿತ್ತ ಶುದ್ದನಾಗಿ
ಚಿಂತೆಯನು ಮಾಡು ಜ್ಞಾನಪೂರ್ವಕದಿಂದ
ನಿಂತಲ್ಲಿ ತಿರುಗಿ ಬರುತ ಕುಳ್ಳಿರುವಲ್ಲಿ
ಮಂತೆ ಶಯನದಲ್ಲಿ ಇದರಂತೆ ಸರ್ವ
ಜಂತುಗಳಲ್ಲಿ ಜಡ ವಿಕಾರತನದಲ್ಲಿ
ಎಂತೆಂತು ಎಂತೊ ಎಂದು ಯೋಚನೆ ಮಾಡದೆ
ಸಂತತ ಶ್ರೀ ಲಕುಮಿಕಾಂತನ ವ್ಯಾಪಾರ
ಸಂತರ ಕೂಡಿಕೊಂಡು ಸುಖ ದು:ಖ ಪ್ರದಾ
ನಂತ ಕಾಲಕೆ ತಾನೆ ನಿಯಾಮಕ ಸರ್ವಸ್ವ
ತಂತ್ರ ಪುರುಷ ಹರಿ ಅನಾದಿ ಗುಣಪೂರ್ಣಾ
ನಂತ ಮೂರುತಿ ನಿ:ಶೇಷ ದೋಷದೂರಾ
ಶಾಂತ ವೈಭವ ಆಖಿಳಲೋಕ ವಿಲಕ್ಷಣ
ಕಂತು ಜನಕ ವಿಜಯ ವಿಠ್ಠಲ ಪರಬೊಮ್ಮ
ಸಂತರಿಸುತಿಪ್ಪ ತನ್ನವರನು ಬಿಡದೆ ೨
ತ್ರಿವಿಡಿ ತಾಳ
ಮುಕ್ತಿ ತಮೋಯೋಗ್ಯರ ಬಿಂಬ ಹರಿಯಾದಡೆ
ಸಕಲ ಕರ್ಮಗಳು ಹರಿ ಉಣಲಿಬೇಕು
ಯುಕುತಿ ಕೈಕೊಳ್ಳದು ಎಂಬ ಮಾತೆ ಸಲ್ಲಾ
ಉಕುತಿಯ ಲಾಲಿಪುದು ಉತ್ತಮ ಜನರೂ
ಪ್ರಕಟವಾಗಿದೆ ಕೇಳಿ ಸರ್ವಜನ ಬಲ್ಲದು
ಮಕ್ಕಳ ಪಡೆದ ತಂದೆ ಅವರಿಗೆ ವೈವಾಹ
ಸುಖದಿಂದ ಮಾಡುವ ಮಾಡುತಿಹ್ಯ
ಅಕಟ ಉಳಿದವರೆಲ್ಲ ಮದುವಣಿಗನ ಸಹಿತ
ವಿಕಟಿತನವಿಲ್ಲದೆ ಮಾಡುತಾನೆ ಎಂದು
ಅಖಿಳ ನ್ಯಾಯದಿಂದ ಆಡುವರೂ
ಮುಕುತಾರ್ಥ ಇವರ್ಯಾರು ಭೋಗಿಸುವುದೇನು
ಅಕಳಂಕರಾಗಿ ಬಾಳುತಿಪ್ಪರೋ
ಸಕಲ ಭೋಗಂಗಳು ಆ ಸತಿ ಸಂಗಡ
ಸುಖಬಡುವ ಮಾಡಿಕೊಂಡವನೊಬ್ಬನೆ
ಕಕುಲಾತಿ ಮಾಡುವುದೆ ಇದಕೆ ಶಂಕಿಸಿ ಮಹ
ಶಕುತ ಅಚಿಂತ್ಯಾದ್ಭುತ ಶಕ್ತಗೆ
ಪ್ರಕೃತಿಬದ್ಧರ ತೆರದಿ ಚರಿಯಾ ಮಾಡಿದರು ಬಾ
ಧಕವಿಲ್ಲ ಕಾಣೊ ತದ್ವ್ಯಾಪಾರದ
ಸುಕುಮಾರ ಇವರ ಗುಣಾದಿಯೊಳಗೆ ತನ್ನ
ಶಕುತಿ ಮಿಕ್ಕಾದ ಸ್ವರೂಪ ಭೂತಾ
ನಿಕರಾನಂತ ಸತ್ಯವಾಗಿದೆ ತದಾಕಾರ
ತಕತಕದ್ದು ಅಲ್ಲಿ ಪ್ರವೇಶಿಸಿ
ಅಖಂಡವಾಗಿ ನಿಂದು ಮಾಡುವ ಕರುಣಿಗೆ
ದು:ಖ ರಹಿತನು ಕಾಣೊ ಸರ್ವಕರ್ತಾ
ಮುಖದಿಚ್ಛೆ ಇದೆಯಲ್ಲ ವೇದಶಾಸ್ತ್ರದಲಿ ಕ
ರ್ಮಕೆ ಸ್ವಾತಂತ್ರ್ಯ ಉಂಟೆ ಉಭಯದಲ್ಲಿ
ಮುಕುತರಿಗೆ ಹರಿ ಸ್ವಾಮಿ ತಮೋಯೋಗ್ಯರಿಗಲ್ಲವೇ
ಭಕುತ ಭಕ್ತರಿಗೆ ಪ್ರೇರಕ ನಿಶ್ಚಯ
ಸಖನಾಗಿ ನಮ್ಮ ವಿಜಯ ವಿಠ್ಠಲರೇಯಾ
ಮುಖ ಮಿಗಿಲಾದ ಕರ್ಮಕೆ ಶಕ್ತಿಯ ಕೊಡುವಾ ೩
ಅಟ್ಟತಾಳ
ಹರಿ ಬಿಂಬನಾದರೆ ಸಮಸ್ತ ಜೀವಿಗಳಿಗೆ
ನರಕ ಮುಕುತಿ ಎಂಬ ಭೇದವ್ಯಾತಕೆ
ನಿರಂತರ ಸುಖವೆ ಅಥವಾ ದು:ಖವಾದರೂ
ತೆರವಿಲ್ಲದೆ ಅನುಭವಿಸಬೇಕಾಹುದೋ
ಧರೆಯೊಳಗೀ ಬಗೆ ಸುಖದು:ಖಸಮವ್ಯಾಕೆ
ಹರಿಬಿಂಬವ್ಯಾತಕೆ ತಮ ತಮ್ಮ ಸ್ವಾತಂತ್ರ
ಪರರಾಗಿ ಕರ್ಮವು ಮಾಳ್ಪರೆಂದನಬೇಕು
ಸರಿಯನೆ ಈ ಮಾತು ಸತ್ಯವಾದರೆ ಕೇಳಿ
ಎರಡಾರು ಸ್ತೋತ್ರದಲ್ಲಿ ಮಧ್ವರಾಯರ
ವರವಾಕ್ಯಗಳು ಉಂಟು ನಚಕರ್ಮಾದಿಗಳೆಂದು
ಸುರ ನರೋರಗರೆಲ್ಲ ತಲೆದೂಗುತಲಿದೆ
ಅರಿಯಗೊಡದಂತೆ ಅವರವರ ಕರ್ಮವ
ಹರಿತಾನೆ ಪ್ರೇರಿಸಿ ಮಾಡಿಸುವನು ಇಂಥ
ಪರತತ್ವ ಪರತತ್ವ ತಿಳಿದು ಕೊಂಡಾಡಲು
ನಿರಯ ದೂರನಾಗಿ ಸೇರುವ ಸದ್ಗತಿ
ಉರಗಶಾಯಿ ನಮ್ಮ ವಿಜಯ ವಿಠ್ಠಲರೇಯಾ

ಭಗವಂತನಿಗೂ ಭಕ್ತನಿಗೂ ಇರುವ

೫೪
ಧ್ರುವತಾಳ
ಪರನ ಪರಿಯಂಕ [ನಿಂದ] ಅಂಭೃಣಿ ಸ್ತುತಿಗೆ ಮೆಚ್ಚಿ |
ಪುರುಷನಾಮಕ ದೇವ ಜನಿಸಿದನು |
ತರುವಾಯ ಇವನಿಂದ ವಾಸುದೇವ ಮೂರ್ತಿ ಸಂ |
ಕರುಷಣ ಪ್ರದ್ಯುಮ್ನ ಅನಿರುದ್ಧನು |
ವರವಾಸುದೇವನಿಂದ ಮಾಯಾದೇವಿಯಲ್ಲಿ |
ಪುರುಷನಾಮಕ ವಿರಂಚಿ ಜನಿಸಿದನು |
ಮರುಳೆ ಈತನೆ ನಾನಾ ಅಂಶಂಗಳು ಚನ್ನಾಗಿ |
ಧರಿಸಿದನು ದಿವ್ಯರೂಪಂಗಳ |
ವರಣಾತ್ಮಕವೇದ ಕಾಲಮೂಲಕೃತಿ |
ಇರದೆ ಆಕಾಶಲಿಂಗ ಕಳೆಗಳಿಗೆ |
ಮಿರುಗುತಿಪ್ಪ ವಿರಂಚಿ ಅಭಿಮಾನಿಯಾದನು |
ಸ್ಮರಿಸಿ ಅತಿ ಸೂಕ್ಷ್ಮ ತರತಮ ಕಾಯನೊ |
ಪುರುಷನಾಮಕನಾಗಿ ಪುಟ್ಟಿದ ಬ್ರಹ್ಮನು |
ಸರುವ ಜೀವರಿಗೆ ಅಭಿಮಾನಿಯಾದ |
ಭರದಿ ಪ್ರಳಯದಲ್ಲಿ ವ್ಯುತ್ಕ್ರಮದಿಂದ ಲಯವು |
ಪುರುಷ ಕಾಲದಲ್ಲಿ ವಿಲಯನಾಗುವನೀತ |
ವರಮಾಯಾ ದ್ವಾರದಿಂದ ವಾಸುದೇವನಲ್ಲಿ |
ಇರುತಿಪ್ಪ ಕಾಲನಾಮಕ ಬ್ರಹ್ಮರಾಯಾ |
ಪರಿಮಿತ ಉಂಟು ಮೊದಲು ಸರ್ಗಕ್ರಮದಲ್ಲಿ |
ಪುರುಷ ಪುಟ್ಟುವ ಪ್ರಳಯದಲ್ಲಿ ವಾಸಾ |
ಸರುವ ಅಂಶಗಳೆಲ್ಲ ಮಿಳಿತವಾಗಿದ್ದ ಅವಾಂ |
ತರ ಪುರುಷ ವಿರಂಚಿಯ ನುಂಗುವನು |
ಪರಮ ಜ್ಞಾನಿಗಳು ಈ ಕಾಲನಾಮಕ ಅಜನ |
ಅರಿತು ಕೊಂಡಾಡಬೇಕು ಪ್ರಳಯ ಸರ್ಗ |
ಗುರುತು ಪೇಳುವೆನಿದಕೆ ಮೂಲಮರುತನ್ನ ಅಂಶಾ |
ಹರಿಕಂಡಾ ಹನುಮ ಭೀಮ ಮಧ್ವರಾಯಾ |
ಎರಡೊಂದು ಸಿದ್ಧವೆನ್ನಿ ಯುಗಗಳಲ್ಲಿ ಅವ |
ತರಿಸಿದನು ಹನುಮಾನ್ ಮೊದಲು ದ್ವಿತೀಯ ಭೀಮ |
ಮರುಳೇ ಪ್ರಳಯದಲ್ಲಿ ಭೀಮನೊಳಗೆ ಹನುಮ |
ಇರುತಿಪ್ಪದೇನು ಪೇಳಿ ಅಂಶ ಇನಿತು |
ಸರಿ ಬಂದಂತೆ ಯಲ್ಲಾದೆ ಹರಿ ಇಚ್ಛೆ ಅಂಥಾದೆ |
ನರರು ಎಣಿಸಿದರೆ ಸಿಗಬಲ್ಲದೇ |
ವರಮೂರ್ತಿ ಮೋದ ನಮ್ಮ ವಿಜಯವಿಠ್ಠಲರೇಯ |
ಕರುಣದಿಂದಲಿ ಪ್ರಜಸರ್ವವ ಮಾಡಿದನು ೧
ಮಟ್ಟತಾಳ
ಜಯ ಸಂಕರುಷಣಗೆ ಸೂತ್ರನಾಮಕ ತ |
ನಯನಾದನು ಕಾಣೊ ಮುಂದಣಾಗಮ ಕೇಳಿ |
ಭಯ ರಹಿತ ಪ್ರದ್ರುಮ್ನ ದೇವನಿಂದ |
ತ್ರಯ ಗುಣದಭಿಮಾನಿ ಪ್ರಧಾನ ಪ್ರಕೃತಿ ನಿ |
ರಯದೂರ ಶ್ರದ್ಧ ಎಂದೆಂಬೊ ನಾಮ |
ದಯವಂತರೀರ್ವ ಜನ ಪುಟ್ಟಿದರು ಯೇಕ |
ಭಯ ನಿವಾರಣ ನಮ್ಮ ವಿಜಯ ವಿಠ್ಠಲರೇಯ |
ಪ್ರಿಯನಾಗಿ ತನ್ನ ಭಕ್ತರನ ಪೊರೆವ ೨
ತ್ರಿವಿಡಿ ತಾಳ
ಪುರುಷನಾಮಕ ಬ್ರಹ್ಮ ಪ್ರಕೃತಿನಾಮಕಳಾದ |
ಸರಸ್ವತಿಯಲಿ ಜೀವನಾಮಕ ಸರ್ಪ |
ಮರುತ ಸೂತ್ರ ಶ್ರದ್ಧಳೆಂಬೊ ಭಾರತಿಯಲ್ಲಿ |
ಗರುಡನು ಜನಿಸಿದ ಜೀವ ಕಾಲನಾಮಕನೆಂದು |
ಮರಳೆ ಪ್ರಮೇಯ ತಿಳಿ ಪುರುಷನಾಮಕ ವಿರಂಚಿ |
ಸರಸ್ವತಿದೇವಿಗೆ ಪುಟ್ಟಿದ ಬಲಾಖ್ಯದಲಿ |
ಮರುತಂ ದೇವನು ತನ್ನ ಅರ್ಧಾಂಗಿನಿ ಸಹಿತ |
ಚರಿಯಾದಲ್ಲಿ ಮೆರದ ಬಲನೆಂಬೊ ಮಾರುತಗೆ |
ತಿರುಗಿ ಪುಟ್ಟಿದ ಜೀವ ಅಜನಿಂದ ಪುಟ್ಟಿದವ |
ಅರಿತು ಪೂಜಿಯ ಮಾಡಿ ಈತನೆ ಫಣಿರಾಜ |
ವರ ವಾಸುದೇವನಲಿ ಪುಟ್ಟಿದ ಬ್ರಹ್ಮ |
ಹರಿರೂಪ ಪ್ರದ್ಯುಮ್ನ ಕೃತಿಗೆ ಕುವರನಾದ |
ಪರಮ ರಹಸ್ಯವೊ ಇದೆ ಬ್ರಹ್ಮನಿಜತಳೋ |
ದರಿಯಾದ ಸಾವಿತ್ರಿಯು ಸರಸ್ಪತಿಯೆಂದೆಂಬೊ |
ಎರಡೊಂದು ರೂಪವ ಧರಿಸಿರೆ ಅಮೋಘ ವೀರ್ಯವಿಟ್ಟು |
ಎರಡೊಂದು ರೂಪವು ಒಂದೆಯಾಗಿ ನಿಂದು |
ಹೆರದಾಳೆ ಬೊಮ್ಮ ವಾಯುಗಳೀರ್ವರ |
ಚರಿಯ ತೋರಿದ ತನ್ನ ಹೆಂಡತಿಯಲಿ ತಾನೆ |
ತರಳನಾಗಿ ಪುಟ್ಟಿ ಮೆರದ ಮಹಿಮ |
ಕುರುಹು ತಿಳಿಯಬೇಕು ತನಗೆ ತಾನೆ ಜನಿಸಿದ |
ಸುರಜೇಷ್ಠ ತನ್ನ ಹೆಂಡತಿ ಗಾಯತ್ರಿ |
ನೆರದು ಪ್ರಾಣನಿಂದ ಪುಟ್ಟಿದ ಜೀವ ನಾಮಕ |
ಉರಗೇಂದ್ರ ಮತ್ತೆ ವೈಕಾರಿಕರುದ್ರ |
ಸರಿಯಾಗಿ ಜನಿಸಿದರು ತಮ್ಮ ಹೆಂಡರ ಸಹಿತ |
ಸ್ಥಿರವೆನ್ನು ಬ್ರಹ್ಮನಿಗೆ ಪುಟ್ಟಿದ ಬಲನಿಂದ |
ಗರುಡನೆಂಬೊ ಕಾಲ ತೈಜಸರುದ್ರನು |
ತರುಣೇರ ಒಡಗೂಡಿ ಉದ್ಭವರಾದರು |
ಸರಿಸಿಜೋದ್ಭವನಿಂದ ಪುಟ್ಟಿದ ಜೀವನಾಮಕ |
ಉರಗನಿಂದಲಿ ತಾಮಸ ರುದ್ರ ಪಾರ್ವತಿ |
ಭರದಿಂದ ಜನಿಸಿದರು ಅಂಶಿ ಅಂಶಗಳಿಂದ |
ಇರುತಿಪ್ಪವು ಅವರವರ ರೂಪಂಗಳ |
ಪರಮೇಷ್ಠಿಗೆ ಮೂರು ಮರುತಗೆ ಇದರಂತೆ |
ಗರುಡಶೇಷಗೆ ಈ ವಿಧ ತಿಳಿವೊದು |
ಹರಗೆ ಕಮಲಾಸನ ಪ್ರಾಣ ಪನ್ನಗನಿಂದ |
ಎರಡೊಂದು ರೂಪಗಳಾದವದಕೋ |
ಕರಸಿಕೊಂಡವು ವೈಕಾರಿಕ ತೈಜಸ ತಾಮಸವೆಂದು |
ನಿರುತ ಕೃತು ಭೋಕ್ತ ವಿಜಯ ವಿಠ್ಠಲರೇಯ ತಾನೆ ಉತ್ಪ |
ತಿ ರಹಿತನಾಗಿ ಸರ್ಗವನು ಮಾಡಿದ ಕೇಳಿ ೩
ಅಟ್ಟ ತಾಳ
ಶಿವನು ತ್ರಿರೂಪ ಧರಿಸಿದ ವಿಷ್ಣು ಕಂಜೋ |
ದ್ಭಸವ ಬ್ರಹ್ಮೇಶಾನೆಂದು ಗುಣ ಪ್ರಾಚುರ್ಯದ ರುದ್ರ |
ಕುವರರ ಪಡೆದನು ಬುದ್ಧಿಗಭಿಮಾನಿ |
ಯುವತಿಯ ಸಂಗಡ ರಮಿಸಿ ಪ್ರೇಮದಿಂದ |
ದಿವಿಜೇಶ ಮನುಮಥ ಅಹಂಕಾರಿಕ ಪ್ರಾಣ |
ದಿವಿಜ ಕುಲಾಚಾರ್ಯ ಶಚಿ ಶಕ್ರ ಅನಿರುದ್ಧ |
ಪವಮಾನ ಸಖನಿಋರತಿ ಗಣಪತಿ ವೈ |
ಶ್ರವ ರುದ್ರರು ಸ್ವಹ ಸ್ವಧಾ ಬುಧ ಅವಿರುದ್ಧ ಕರ್ಮಪ |
ಅವನಿ ಪಿತೃರು ಗಂಧರ್ವ ಸಮಸ್ತ |
ಪ್ರವರ ಜೀವರ ಮುಕ್ತಿ ಯೋಗ್ಯರ ಪಡೆದ ವಿಷ್ಣುನೆಂ |
ಬವ ರುದ್ರ ಪ್ರತ್ಯೇಕವಾಗಿ ಜನಿಸಿದರು |
ಪವನ ಸೂತ್ರನಾಮ ಭಾರತಿಯಲಿ ಸಂ |
ಭವಿಸಿದರು ಮತ್ತೆ ಗರುಡ ಇಂದ್ರಾದ್ಯರು |
ಪವಿತ್ರವಾದಂಥ ಯಾಗಾಭಿಮಾನಿನಿಲೋಕ |
ಢವಳಾಸ್ಯ ಸೌಪರಣಿ ದೇವಿಗೆ ಹರಿಯ ದ್ವಾರ |
ದವರು ಜಯಾದ್ಯರು ವಿಷ್ವಕ್ಸೇನ ಮಿಕ್ಕಾ |
ದವರು ಮಕ್ಕಳಾಗಿ ಸಮಸ್ತರು ಒಪ್ಪೆ |
ಸದೆದು ಪೋದವು ಹತ್ತು ಅಜನ ಶಬ್ಧಯಿಲ್ಲಿಗೆ |
ವಿವರವ ತಿಳಿವದು ಚತುರಾನನ ಉ |
ದ್ಭವಿಸಿದ ಎರಡು ಸಂವತ್ಸರ ಪೋಗಲು |
ಪವಮಾನ ಪುಟ್ಟಿದನೀತ ಪುಟ್ಟಿದ ಮ್ಯಾ |
ಲಿವರು ಸರಸ್ವತಿ ಭಾರತಿದೇವೇರು |
ದ್ಭವವಾದರು ಕೇಳಿ ಎರಡೊಂದು ವರುಷಕ್ಕೆ |
ಇವರ ತರುವಾಯ ಜೀವ ಕಾಲಾಖ್ಯರು |
ಲವಲವಿಕೆಯಿಂದ ಎರಡುವತ್ಸರಕೆ ದೇ |
ಹವ ಧರಿಸಿದರೆಂದು ತದನಂತರದಲ್ಲಿ ತ್ರಿ |
ಭುವನ ಶ್ರೇಷ್ಠನು ಪ್ರದ್ಯುಮ್ನ ಕೃತಿಗೆ ಮತ್ತೆ |
ಕುವರನಾದನು ಒಂದುವತ್ಸರಕೆ ವೇಗ |
ಅವಸರವಾಗಿದೆ ಇಲ್ಲಿಂದಿತ್ತಲು ಕೇಳು |
ತ್ರಿವಿಧ ಅಹಂಕಾರ ಉತ್ಪತ್ತಿ ಜೀವಾದ್ಯರು |
ಶಿವನು ವೈಕಾರಿಕ (ವಿಷ್ಣು) ರೂಪ ಧರಿಸಿ ಕ್ರೀಡೆಯಿಂದ |
ದಿವಿಜೇಶವಿಡಿದು ಗಂಧರ್ವ ಪರಿಯಂತ |
ಪವಮಾನನಿಂದ ಪುಟ್ಟಿದ ಇಂದ್ರಾದ್ಯರು |
ಕವಿಯಿಂದ ನೋಡಲು ಜೀವಕಾಲಾಖ್ಯರು |
ದ್ಭವಿಸಿದ ಎರಡುವತ್ಸರಕೆ ಇವರು ಕಾಣೊ |
ವಿವರಿಸೆ ಹತ್ತು ವರುಷ ಲೆಖ್ಖದಿಂದಲಿ |
ನವ ನವ ಮೋಹನ್ನ ವಿಜಯ ವಿಠ್ಠಲನ್ನ |
ಸ್ತವನ ಮಾಡುವರು ತಮ್ಮ ಸಾಧನದಿಂದ ೪
ಆದಿತಾಳ
ಸ್ವಾಮಿ ಪ್ರದ್ಯುಮ್ನ ಮೂರ್ತಿ ಅರ್ಧನಾರಿ ವೇಷ |
ಪ್ರೇಮದಿಂದಲಿ ಧರಿಸಿದ ವರ್ಣ ಭೇದದಿಂದ |
ತಾಮರಸ ಪೀಠ ವರುಣ ಅನಲ ಮರಿಚ್ಯಾದಿ |
ಆ ಮಾರುತ ಶಂಭು ಇಂದ್ರ ಚಂದ್ರಾದಿಗಳು |
ನೇಮದಿಂದಲಿ ರುದ್ರ ವಸುಗಳು ಮಿಗಿಲಾದವರು |
ಭೂ ಮೃತ್ಯು ನಿಋರತಿ ಕಾಲಾದ್ಯರನ್ನ ದಕ್ಷಣ |
ವಾಮ ಭಾಗದಿಂದ ಪೆತ್ತನು ಇಲ್ಲಿಗೆ |
ಭೂಮಿಸುರ ಭೂಭುಜಾ ವೈಶ್ಯ ಶೂದ್ರರಾದರು |
ಕಾಮಿಸು ಹತ್ತು ವರುಷಾ ಸಂದಿ ಪೋಯಿತು ನೋಡು |
ಸಮಸ್ತ ಜೀವಿಗಳು ಉತ್ಪತ್ತಿ ಕ್ರಮ ಗ್ರಹಿಸು |
ಕೋಮಲಾಂಗರು ಅತಿ ಸೂಕ್ಷ್ಮಗಾತುರದಿಂದ |
ಈ ಮರಿಯಾದಿಯಲ್ಲಿ ಜನಿತವಾದರು ಮುಂದೆ |
ನೀ ಮನಸು ಮಾಡು ಬೊಮ್ಮಗೆ ಪತ್ತು ವರುಷ |
ತಾ ಮೀರಿ ಪೋದವು ಪೂರ್ವಾರಭ್ಯವೆವಿಡಿದು |
ಈ ಮೂಲ ಪ್ರಕೃತಿ ಗುಣಸಾಮ್ಯ ವ್ಯೆಷಮ್ಯ |
ಆ ಮಹ ಅಹಂಕಾರ ಮನಸು ಸರ್ವೇಂದ್ರಿಯಗಳು |
ವ್ಯೋಮಾದಿ ಮೊದಲಾದ ಸರ್ವವರ್ಣಗಳು |
ಈ ಮಧ್ಯದಲ್ಲಿ ರುದ್ರನ್ನ ಸೃಷ್ಟಿ ಹದಿನಾಲ್ಕು ವರುಷ |
ತಾಮಸ ತೈಜಸ ವೈಕಾರಿಕದಿಂದ |
ಸೌಮನಸರ ಪಡೆದ ಮೂರು ವಿಕಾರದಲ್ಲಿ |
ಸಾಮರ್ಥನಾಹದು ಕಾಣೊ ಒಂದು ವರುಷ ತಪವಂಗೈದ |
ಈ ಮ್ಯಾಲೆ ಬೊಮ್ಮಾಂಡ ಆವರಣ ಹತ್ತು ವರುಷ |
ಹೇಮಕಾಂತಿಯಂತೆ ನಿರ್ಮಾಣವಾಯಿತು |
ಶ್ರೀ ಮನೋಹರ ನಮ್ಮ ವಿಜಯ ವಿಠ್ಠಲ ಸುರರಿಗೆ |
ಧಾಮವೆ ಮಾಡಿಕೊಟ್ಟು ಬೊಮ್ಮಾಂಡದಲ್ಲಿ ಪೊಗಿಸಿ ೫
ಜತೆ
ಬಾಹ್ಯಾಂಡ ಸರ್ಗ ಸೂಕ್ಷ್ಮಸ್ಥೂಲವೆ ತಿಳಿದು |
ದೇಹದೊಳಗಿದ್ದ ವಿಜಯ ವಿಠಲನ ನೋಡು | ೬

ಶ್ರೀಹರಿಯ ಸ್ತೋತ್ರ ರೂಪದ ಈ ಸುಳಾದಿಯಲ್ಲಿ

೮೧
ಧ್ರುವತಾಳ
ಪರಮ ಕರುಣಾಕರ ಪರದೈವ ಸ್ವಾತಂತ್ರ
ಪುರುಷ ಸದ್ಗುಣ ಪೂರ್ಣ ಸುಖವಾರಿಧೀ
ಹರಿಯೆ ವಿಶ್ವಂಭರ ಭೂಭಾರಹರಣ
ಹರಿಣಾಂಕವದನ ಸುಂದರ ಮೂರುತಿ
ಮುರವೈರಿ ಮುಚಕುಂದವರದ ವಾಸುದೇವ
ವರತೀರ್ಥ ಪೆತ್ತ ಪ್ರಣತಾರ್ತಿ ದೂರ
ಕರಿಭಯವಿನಾಶ ಕರುವುಗಳ ಕಾಯ್ದ
ಚೀರವಸನಗೇಯ ಚಿತ್ತಜನಯ್ಯ ಪಾ
ಮರ ಜನ ಉದ್ಧಾರ ಮಾಡು ಧರಣಿಧರ
ಥರ ಥರ ವರ್ನ ಸುಪರ್ನವಾಹನ ಚ
ತುರದಶ ಭುವನಾಧೀಶ ಶ್ರೀಶಾ
ತರಣಿ ಕೋಟಿಪ್ರಕಾಶ ಪ್ರಭುವೆ ನಮ್ಮ ವಿಭುವೆ
ನರಕಾಂತ ಕಾವ ನರಪತಿ ಮಹಾ
ನರಕಭಂಜನ ಙ್ಞನಪುಂಜ ನಿರಂಜನ
ನರಮಿತ್ರ ನರನಕೂಡ ಜನಿಸಿಪ್ಪನೇ
ಸ್ಮರಿಸಿ ಧೇನಿಸಿ ಸೇವಿಸಿ ಕೊಂಡಾಡಿ ಉ
ಚ್ಚರಿಸಿ ಲಾಲಿಸಿ ನಿನ್ನ ಮಹಿಮೆಯನ್ನು
ಪರಿ ಪರಿ ಬಗೆಯಿಂದ ಪರರಿಗೆ ಒರದೊರದು
ಅರಘಳಿಗೆ ನಿಲ್ಲದಲೆ ಸರ್ವಾತ್ಮದಿ
ಇರದೆ ಗ್ರಹಿಸಿದರು ದಣಿಯದು ಈ ದೇಹ
ಹರಿ ನಿನ್ನ ಚರಿತಕ್ಕೆ ನಮೊ ನಮೊ
ಸುರ ನರೋರಗ ಸರ್ವಜನರೊಳಗೆ ನಿನ್ನ
ಕರುಣಾಪಾಂಗಕೆಣಿಸಿ ಗುಣಿಸಿದರೂ
ಸರಿಗಾಣೆ ಎಲ್ಲೆಲ್ಲಿ ಸಂತತ ಅರಿಸಿದರೂ
ನಿರುಮಲ ನಿಸ್ಸಂಗ ಗರುವ ದೇವರದೇವ
ಗುರುಕುಲಾಂಬುಧಿ ಚಂದಿರಗೆ ಆಶ್ರಯವಾದ ಅನಂತಾತ್ಮಾ
ಸಿರಿವಂತ ಬಲವಂತ ಭವದೂರ ಭವನುತಾ
ದುರುಳಮರ್ದನ ದಿವ್ಯ ಗೋವರ್ಧನಾ
ಧರಣಿ ದಾಸರ ಪ್ರಾಣಾ ದಾರಿದ್ರ ಛೇದನಾ
ಅರಿಕಂಬು ಕೌಮೋದಕಿ ಸರಸೀಜಪಾಣಿ
ಮೆರೆವ ಮನುಜವೇಷ ಕೈವಲ್ಯವಾಸ
ಸಾಗರಶಾಯಿ ಸಂಗೀತಲೋಲ ಶೀಲಾ
ಕರಣಂಗಳಲಿ ತಾತ್ವಿಕರ ಒಡಗೊಂಡು
ನಿರುತ ಜೀವಿಗಳಿಂದ ಪಾಪಪುಣ್ಯ
ತೆರವಿಲ್ಲದೆ ಮಾಡಿಸಿ ಅವರವರ ತಕ್ಕದು
ಪರಿಪರಿಗತಿಯನ್ನು ಪಾಲಿಪನೆ
ಶರಣವಾಗಿಪ್ಪ ನಮಗೆ ವಿಜಯ ವಿಠಲ ನಿನ್ನ
ತರುವಾಯ ಮಿಕ್ಕಾದ ಜನರ ಸ್ನೇಹ ಒಲಿಸು ೧
ಮಟ್ಟತಾಳ
ಎನ್ನಿಂದಲಿ ನಿನಗೆ ಆಗುವ ಉಪಕಾರ
ಅನ್ಯಥ ಕಾಣೆನೊ ಎಲ್ಲೆಲ್ಲಿ ಜನಿಸಿದರು
ಅನಂತ ಕಾಲಕ್ಕೆ ಅನಿಮಿತ್ತ ಬಂಧು
ಮನ್ನಿಸಿ ಭಕುತರ ಭರಣ ಮಾಡುವಲ್ಲಿ
ಸನ್ಯಾಯವೆ ಸರಿ ಸರಸಿಜಭವಗರಿದೊ
ಬಣ್ಣಿಸಿ ಪೇಳಿದರು ಕರದೊಳಗೆ ಇದ್ದ
ಕನ್ನಡಿ ತೆರದಂತೆ ಭಜಿಸುವ ಜನ
ರನ್ನ ರಕ್ಷಿಸುವುದು ಕಾಲಕಾಲಕೆ ಬಂದು
ನಿನ್ನ ಮಾಯಾಶಕ್ತಿ ನಿಶ್ಚಯವಾಗಿ
ಪಾವನ ಮತಿಯಿತ್ತು ಸಾಧನ ಪ್ರೇರಿಸುತ
ಚನ್ನಲಕುಮಿರಮಣ ವಿಜಯ ವಿಠಲರೇಯ
ಚನ್ನಾಗಿ ನಿತ್ಯ ಬಿಡದೆ ಸಾಕುವ ಧೊರಿಯೊ ೨
ತ್ರಿವಿಡಿತಾಳ
ನಿಸ್ಸಂಗ ನೀನಾಗಿ ಲಕುಮಿಗೆ ನೀನೇವೆ
ವಶವಾಗದಲೆ ಸುತ್ತಿಸುತ್ತಿಪನೆ
ಬೆಸವ ಕೇಳಯ್ಯಾ ಸಂಸಾರದೊಳಗೆ ಜ
ನಿಸಿ ಬಂದು ಬಲು ಸಂಗದಲ್ಲಿ ಇದ್ದು
ವಸುಧಿಯೊಳಗೆ ಚರಿಸಿ ದಿನಪ್ರತಿದಿನ ನಾನಾ
ವಿಷಯಂಗಳನುಭವಿಸಿ ಕಡೆಗಾಣದೇ
ದೆಶೆಗೆಟ್ಟು ತಿರುಗುವ ಮನುಜನಾನಾದರು
ಬಿಸಿಜನಾಭನೆ ಕೇಳು ನಿನ್ನ ಒಲಿಸೀ
ಮಿಸುಣಿಪ ಭಕ್ತಿ ಪಾಶದಿಂದ ನಿನ್ನ ಬಂ
ಧಿಸಿ ಎನ್ನಮನದೊಳು ನಿಲಿಸಿಕೊಂಡು
ಕೊಸರಿದರೆ ಬಿಡದೆ ಕೇವಲವಾಗಿ ರಂ
ಜಿಸುವ ದೇವ ನಿನ್ನ ನಿಸ್ಸಂಗವ
ಪುಶಿಯದೆ ಬಿಡಿಸಿ ನಮ್ಮನ ಸಾಕುವಲ್ಲಿ
ಕುಶಲವಂತರು ನಿನ್ನ ಭಕ್ತರಲ್ಲದೆ ಲಾ
ಲಿಸು ಜಗದೊಳಗೆ ಮತ್ತಾರು ಉಂಟೊ
ಪಶು ಪಾಲಕ ನಮ್ಮ ವಿಜಯ ವಿಠಲರೇಯ
ಅಸಮಾ ನೀನಾದರು ಭಕ್ತರಿಗೆ ಓವಿಗಾ ೩
ಅಟ್ಟತಾಳ
ಸಂಗರಹಿತನಾಗಿ ಎಲ್ಲೆಲ್ಲಿ ಇಪ್ಪನೆ
ಡಿಂಗರಿಗರ ಪ್ರತಾಪವನ್ನೆ ನೋಡು
ಹಿಂಗದೆ ನಿನ್ನ ಸಂಸಾರಿಕನ ಮಾಡಿ
ಕಂಗೆಡದಲೆ ತಾವು ಸುಖದಲ್ಲಿ ಇಪ್ಪರು
ಮಂಗಳ ಮಹಿಮನೆ ನಿನಗಂಜದೆ ಜ
ನ್ಮಂಗಳು ತೆತ್ತರು ನಾಮದ ಬಲದಿಂದ
ಭಂಗವಾಗಲಿ ಸಂತೋಷವಾಗಲಿ ನಿನ್ನ
ಸಂಗಡ ನಲಿದಾಡುವರು ಬಲು ಹಿಗ್ಗಿ
ರಂಗ ಮೂರುತಿ ಸಿರಿ ವಿಜಯ ವಿಠಲರೇಯ
ಸಂಗೀತರರಸ ನಾಸಾಗ್ರದಪ್ಪನೆ ೪
ಆದಿತಾಳ
ಬೇಡಿದರ್ಥವ ಕೊಡುವ ಕಡೆಯವನೆನ್ನದಲೆ
ಈಡಾರು ಈತನ್ನ ಕರುಣಾ ಕಟಾಕ್ಷಕ್ಕೆ
ನಾಡೊಳು ಚರಿಸುವ ಜನರು ಒಂದೆ ಸಾರಿ
ಪಾಡಿದರೆ ತಿಳಿದು ಗತಿಗೆ ಮಾರ್ಗವನೀವಾ
ಖೇಡರಾಗದಿರಿ ಭಕ್ತಿಯ ಮಾಡಿದರೆ
ಕೂಡಿಕೊಂಡು ತಿರುಗುವ ಆವಲ್ಲಿ ಪೋದರು
ನೋಡಿ ಚನ್ನಾಗಿ ಇಂದು ನೆರೆಹೊರೆಯವರನ್ನ
ಆಡಲೇನಯ್ಯಾ ಹರಿಯ ಮಹಿಮೆ ಎನ್ನ
ಕಾಡಿಬೇಡುವರೊಡೆಯ ವಿಜಯ ವಿಠ್ಠಲರೇಯ
ಮಾಡಿಸುವನು ಮುಕ್ತಿಯೋಗ್ಯರಿಂದ ಸತ್ಕರ್ಮ ೫
ಜತೆ
ಮುಖ್ಯಧರ್ಮ ಕಾಣೊ ವಿಜಯ ವಿಠ್ಠಲನ್ನ
ಸಖ್ಯನಾಗಿಪ್ಪದು ಇಹಪರಲೋಕದಲ್ಲಿ ೬

ಭಗವಂತನನ್ನು ಕಾಲನಿಯಾಮಕ ಎಂದು ಕರೆಯಲಾಗಿದೆ.

೫೫
ಧ್ರುವತಾಳ
ಪರಮ ಪಾಪಿಗ ನಾನು ಪತಿತ ಪಾಮರ ನಾನು
ದುರುಳರೊಳಗೆ ಬಲು ದುರುಳ ಮಾನವ ನಾನು
ಪರಮ ಪುಣ್ಯಾತ್ಮಾ ನೀನು ಪತಿತ ಪಾವನ ನೀನು
ಗುರುವಾದೇವನು ನೀನು ಗಾಂಭೀರ್ಯ ನೀನು
ನಿರುತ ಕಠಿಣ ನಾನು ನಿರಿಯದನುಭವ ನಾನು
ಪರಿಪರಿ ಸುಜನರ ನಿಂದಕ ನಾನು
ಹರಿಯೆ ಸುಲಭ ನೀನು ನಿರಯವಿದೂರ ನೀನು
ಚರಿತ ಸುಚರಿತ ನೀನು ವಿಮಲ ನೀನು
ಮರವುವುಳ್ಳವನು ನಾನು ಬಲು ಕ್ಷುಧಾತುರ ನಾನು
ಪರಮ ದಾರಿದ್ರ ನಾನು, ದೀನವಂತನು ನಾನು
ಮರಹುರಹಿತ ನೀನು, ನಿತ್ಯತೃಪ್ತನು ನೀನು
ಸಿರಿವಂತನು ನೀನು, ಔದಾರ್ಯನು ನೀನು
ಜರಾಮರಣ ಭಯ ನಾನು, ಜಡ ಮಂದಮತಿ ನಾನು
ನರಕಾ ನರಕದಲ್ಲಿ ಚರಿಪೆ ನಾನು
ಜರಾಮರಣ ಶೂನ್ಯ ನೀನು ನಿರಭಯವಂತ ನೀನು
ಹಿರಿದಾದ ಮತಿ ನೀನು, ನರಕಾನರಕಗಳ ಸಂಹಾರಕ ನೀನು
ಶರಣಪಾಲಕ ನಮ್ಮ ವಿಜಯ ವಿಠ್ಠಲರೇಯಾ
ಪರಿಪೂರ್ಣ ಗುಣನಿಧಿ ನೀನು, ನಿರ್ಗುಣ ನಾನು ೧
ಮಟ್ಟತಾಳ
ಲೇಸುವುಳ್ಳವ ನೀನು, ಲೇಸುಬಯಪೆ ನಾನು
ದೇಶವ್ಯಾಪುತ ನೀನು, ದೇಶಿಗನು ನಾನು
ಆಶೆ ಬಿಟ್ಟವ ನೀನು, ಆಶೆ ಬಡಕ ನಾನು
ಕ್ಲೇಶನಾಶಾ ನೀನು, ಕ್ಲೇಶಬಡುವೆ ನಾನು
ದೋಷವರ್ಜಿತ ನೀನು, ದೋಷಕಾರಿ ನಾನು
ದ್ವೇಷಿಗಳಗಂಡ ವಿಜಯ ವಿಠ್ಠಲರೇಯಾ
ನೀ ಸರ್ವೋತ್ತಮಾ ನಾ ಸರ್ವರ ದಾಸಾ ೨
ತ್ರಿವಿಡಿ ತಾಳ
ಮನೆಮನೆಗಳಿಗಾನು ಉಣಲಿ ಬಂದವನಲ್ಲಾ
ಜನುಮ ಸಾರ್ಥಕ ಸಾಧನಮಾಡ ಬೇಕೆಂದು ಅನು
ದಿನದಲಿ ಬಯಸಿ ಭಣಗು ಕರ್ಮಗಳು ನಾ
ಶನ ಗೈಸುವವೆ ಎಂದು ಗುಣದಲ್ಲಿ ಬಂದಿರಲು
ಮನ ಸ್ಥಿರ ಮಾಡದೆ ಕಂಡಕಂಡಾ ವಂಚನೆಯಿಂದ ಎನ್ನನ್ನು
ಇನಿತು ನಡಿಸಿ ಪ್ರಣವಾದಿಗಳಿಗೆ ಪ್ರೇರಣೆಯಾಗಿದೆ ನಿತ್ಯ
ಮನೆ ಮನೆ ಸವಿದುಂಬೋದನೆ ನೇಮಿಸಿ
ಎನಗೊಂದು ಸತ್ಕರ್ಮ ದಕ್ಕದಂತೆ ಯೋ
ಚನೆ ಮಾಡಿದಿ ಏನೊ ಮನದೊಡಿಯಾ
ತನುಜ ಗರ್ಭನು ಎನ್ನ ಫಣಿಯಲ್ಲಿ ಈ ಲಿಪಿ
ಯನು ಬರದನೇನೊ ಕರುಣವಿಲ್ಲದೆ
ಋಣವ ತೀರಿಸುವೆನೋ ಮುಂದೆ ಜನಿಸಿ ಬಂದು
ಋಣವ ತಿದ್ದಿಪುದುಂಟೇ ದನುಜಾಂತಕಾ
ಶುನಕನು ನಾನು ಹಿಂದಿನ ದೇಹದಲ್ಲಿ ಪಾ
ವನ ಮತಪೊಂದಿದ್ದ ಜನರುಂಡ ಎಂಜಲಾ
ಗಣನೆಯಿಲ್ಲದ ಎಡೆ ಬಿದ್ದಿರಲು ನೆಕ್ಕಿದ ಕಾ
ರಣದಿಂದ ಈ ಜನ್ಮ ಪ್ರಾಪ್ತವಾಗಿ
ದಿನದಿನದಲಿ ಸುಓದನ ಷಡುರಸಗಳು
ಎಣಿಕೆಯಿಲ್ಲದೆ ನೀನು ಉಣಲಿತ್ತದೋ
ಎನಗಾವದು ಇದರ ಕೊನೆಮೊದಲು ದೊರೆಯದು
ಹೊಣೆಗಾರ ನೀನೆ ಎಲ್ಲವನು ಬಲ್ಲವ
ಕ್ಷಣದೊಳು ಗತಿಈವ ವಿಜಯವಿಠ್ಠಲರೇಯಾ
ಮಣಿದು ಬೇಡಿಕೊಂಬೆ ಎನಗಾವದೋ ಪುಣ್ಯ ೧
ಅಟ್ಟತಾಳ
ನಿನ್ನಾಧೀನದವ ಮನ್ನುಜನು ನಾನು
ಮನ್ನಿಸಿ ಮಾತುಕಪಾವನ್ನು ಮಾಡಿದರೊಳಿತೆ
ಎನ್ನಿಂದಲಾಗುವ ಅನ್ಯಥಾ ಬಂದಲ್ಲಾ
ಕಣ್ಣು ತೆರಿಯದ ಕುನ್ನಿ ಹುಲಿಯ ಕೂಡಾ
ಹಣ್ಣಿಕೊಂಡು ಯುದ್ಧವನ್ನು ಮಾಡಿದರುಂಟೆ
ಪುಣ್ಯಶ್ಲೋಕ ರಾಯಾ ವಿಜಯ ವಿಠ್ಠಲರೇಯಾ
ಎನ್ನಿಂದ ಅಘಾದ ನಿನ್ನ ಮಹಿಮೆ ಪೇಳಿಸೊ ೪
ಆದಿತಾಳ
ಜನರಿಗೆ ನೀನೆ ಪ್ರೇರಣೆಯಾಗದಿದ್ದರೆ
ಎನಗವರಿಗೆ ಮಾತಿನ ಸಂಬಂಧವೇನೋ
ದಿನ ದಿನದಲಿ ಪರರ ಮನಿಗಳಿಗೆ ಪೋದವನು
ನಾನಲ್ಲವೊ ಎನಗ್ಯಾತರ ದೋಷಾ
ಜನರಿಗೆ ಎನಗೆ ಪ್ರೇರಣೆಯಾಗದಿದ್ದರೆ ಸುಮ್ಮ
ನೆ ನಮಗೆ ನಾವೆ ಉಣಬಲ್ಲೆವೇನೋ
ಕನಸಿನೊಳಗಾದರು ಎನಗೆ ಸ್ವತಂತ್ರವೆಂಬೊ
ದನು ಕಾಣೆ ಅನಂತ ಜನ್ಮದಲ್ಲಿ ನೋಡಲು
ನಿನಗೆ ನೀನೆ ಬಲ್ಲಿ ವಿಜಯ ವಿಠ್ಠಲರೇಯಾ
ಎನಗೆ ಗುಣಾವದು ಗುಣವಿಲ್ಲದಾವದು ೫
ಜತೆ
ಎಷ್ಟು ಪಾತಕದವ ನಾನಾದರು ವಿಜಯ
ವಿಠ್ಠಲ ನಿನ್ನ ನಾಮ ಪಾವನ್ನ ಮಾಡುವುದು ೬

ಎಲ್ಲ್ಲ ಧರ್ಮಗಳೂ ಭಗವಂತನನ್ನು

೫೬
ಧ್ರುವತಾಳ
ಪರಮಾಣ್ವಾದ್ವಿಪರಮಾಣು ಮಹಕಾಲಾಂತ ಕಾಲಸ್ತೆ |
ನಿರುತ ತತ್ಕಾಲ ಕ್ರೀಯ ಪ್ರವರ್ತಕ |
ಹರಿಯೆ ತತ್ ಶಬ್ದವಾಚ್ಯ ಮಂಗಳ ಪುರುಷ |
ಇರುತಿಪ್ಪಾ ಉದಯಕಾಲಾಸ್ತಮಾನ |
ಪರಿಯಂತ ಒಂದೊಂದು ನಾಮಾಂತರದಿಂದ |
ಮೆರೆವ ವೈಭವಮೂರ್ತಿ ಪಾಪದೂರ |
ಇರುಳು ಹಗಲು ಇಂತು ನಮ್ಮ ರಕ್ಷಿಸುವ |
ಸರಿಗಾಣೆ ಈತನ ಕರುಣಾತನಕೆ |
ನಿರೀಕ್ಷಿಸು ಉದಯಕಾಲದಲ್ಲಿ ಕೌಮೋದಕಿ |
ಧರಕೇಶವ ಸ್ವಾಮಿ ಸಂಗಮ (ವ) ಕಾಲ |
ಸ್ಮರಿಸು ವೇಣುಧರ ಗೋವಿಂದಾತ್ಮನಲ್ಲಿ |
ಸಿರಿನಾರಾಯಣನಿಪ್ಪ ಪ್ರಾಣ ಕಾಲ |
ಅರಿಪಾಣಿ ವಿಷ್ಣು ದೇವ ಮಧ್ಯದಿನ ಕಾಲಕ್ಕೆ |
ತರುವಾಯ ಅಪರಾನ್ಹ ಕಾಲಕ್ಕೆ ಚಾಪ |
ಧರ ಮಧು ಸೂದನವಾಗಿ ಇಪ್ಪ ದಿನಾಂ|
ತರಕೆ ಮಾಧವ ಮೂರ್ತಿ ಮಹ ವಿನೋದ |
ಪರಮ ಭಕುತಿಯಿಂದ ಕಾಲವ ಕಳೆಯುತ್ತ |
ಹರಿಯ ಮೂರ್ತಿಗಳನ್ನೆ ನೆನೆಸಲಾಗಿ |
ಸುರರಾಶಿ ಒಲಿದು ಶುಭಮಾರ್ಗ ಪ್ರೇರಿಸಿ |
ಪೊರೆವುತಿಪ್ಪರು ಗತಿಗೆ ಅಭಿಯೋಗಮಾಡಿ |
ಪರಮ ಪುರುಷ ನಮ್ಮ ವಿಜಯ ವಿಠ್ಠಲ ತನ್ನ |
ಶರಣಗಾಗಿ ತಾನೆ ಕಾಲದೊಡ ಇಪ್ಪ ೧
ಮಟ್ಟತಾಳ
ದೋಷಕಾಲದಲ್ಲಿ ಹೃಷಿಕೇಶಮೂರ್ತಿ |
ನೀಶೀಥ ಅರ್ಧರಾತ್ರಿ ಕಾಲದ್ವಯಕೆ ಕಮ |
ಲಾಸನನ ಪುಟ್ಟಿಸಿದ ಪದ್ಮನಾಭ ಕಾಣೊ |
ಬೆಸಸೂವೆ ಅಪರಾತ್ರಕಾಲಕ್ಕೆ ಶ್ರೀವತ್ಸ |
ಹಸನಾಗಿ ಗ್ರಹಿಸು ಕಾಲ ವಿಚಾರವನು |
ಪಶುಪತಿಪ್ರಿಯದೇವ ವಿಜಯ ವಿಠ್ಠಲರೇಯ |
ಕುಶಲನು ಕಾಣೋ ನಾನಾ ಬಗೆಯಿಂದ ೨
ತ್ರಿವಿಡಿ ತಾಳ
ಪ್ರಾತುಷಕಾಲದಲ್ಲಿ ದೇವ ಜನಾರ್ಧನ |
ತುತಿಪೆ ಅನುಸಂಧ್ಯಾ ಕಾಲದಲಿ ದಾಮೋದರ |
ಗತಪದನ ಕಾಲಕೆ ನಾರಾಯಣನೆನ್ನು |
ಹಿತವಹದು ಪ್ರಭಾತದಲ್ಲಿ ವಿಶ್ವಾತ್ಮಕ |
ಆತಪಪತಿ ಉದಯ ಕಾಲಕೆ ಮತ್ಸ್ಯಮೂರ್ತಿ |
ಕ್ಷಿತಿ ವಾರಿ ಗಗನ ಕಾನನ ಜೀಮೂತ ದುರ್ಗ |
ಅತುಳಮತ್ಸ್ಯಾ ವಾಮನ ತ್ರಿವಿಕ್ರಮ ಅ|
ದ್ಭುತ ನಾರಸಿಂಹ ರಕ್ಷಿಸುತಿಪ್ಪನು |
ಕ್ಷಿತಿಧರಣ ವಿಜಯ ವಿಠ್ಠಲರೇಯ ಪರಮಾತ್ಮ |
ಪ್ರತಿಕೂಲವಾಗದೆ ನಡೆಸಿಕೊಳುತಿಪ್ಪ ೩
ಅಟ್ಟತಾಳ
ಉದಯಾತ್ಪೂರ್ವದಲ್ಲಿ ಪಶ್ವಾಧಾರಕ |
ಪ್ರದ್ಯುಮ್ನನಿಪ್ಪನು ವಾಸುದೇವಮೂರ್ತಿ |
ಉದಯ ಕಾಲದಲ್ಲಿ ಪಠಿಸು ತೃಣಾಶ್ರಯ |
ತದು ಪರಿಸಂಗವ ಕಾಲಪೇಕ್ಷಾಶ್ರಯ (?) |
ಮುದದಿಂದವರಹನು ಮಧ್ಯಾಹ್ನ ಕಾಲಕ್ಕೆ |
ತ್ರಿದಶರಾಶ್ರಯಮೂರ್ತಿ ನಾರಾಯಣನೆನ್ನು |
ತದ ನಂತರದ ಕಾಲದಲ್ಲಿ ಗರ್ಭಾಶ್ರಯ |
ಅಧಟ ಅನಿರುದ್ಧ ಗರ್ಭಾತ್ ಪ್ರಜಾಪಾತ |
ಇದನೆ ಚಿಂತಿಸು ದೋಷಕಾಲದಲ್ಲಿ ಸ |
ರ್ವದ ಅರಣ್ಯಾಶ್ರಯ ನರಸಿಂಹ ದೇವನು |
ಪದುಮ ಬಾಂಧವ ಅಸ್ತನಾಗಲು ಕೊಂಡಾಡು |
ವುದು ಪಿತ್ರಾಶ್ರಯ ಸಂಕರುಷಣನೆನ್ನು |
ಪದುಮಿ ವಲ್ಲಭ ನಮ್ಮ ವಿಜಯವಿಠ್ಠಲರೇಯ |
ಹೃದಯದಲ್ಲಿ ಬಂದು ತಿಳುಪುವ ಭಕ್ತರಿಗೆ ೪
ಆದಿತಾಳ
ಪುರುಷ ಪುರುಷ ಪ್ರಕೃತಿ ಪ್ರಕೃತಿ ಪ್ರಕೃತಿ ಸರ್ವ |
ಪರಂಪರ್ಯದಲ್ಲಿ ವ್ಯಾಪ್ತಿ ಆವ್ಯಾಪ್ತಿಯೆನ್ನು |
ಅರಿದು ಉದಯಸ್ತಮಾನ ಕಾಲ ಪ್ರವಾಹ ನೋಡಿ |
ಪರಿಶಬ್ದ ಪರಿಯಂತ ವಿಚಾರಿಸಿ ಅಲ್ಲಿದ್ದ |
ಹರಿಮೂರ್ತಿಗಳ ನೆನದು ಧನ್ಯನಾಗಲಿ ಬೇಕು |
ನಿರುತ ಸತ್ಕರ್ಮವನ್ನು ಆವಾವ ಕಾಲದಲ್ಲಿ |
ಚರಿಸುವಾಗಲೆ ಇದೆ ಅನುಭವ ಇರಬೇಕು |
ಪರಮಾಣು ಕಾಲ ದೇಶ ಗುಣ ಕರ್ಮ ಶುಭವಕ್ಕು |
ದುರಿತರಾಶಿಗಳೆಲ್ಲ ಪರಿಹಾರವೊ ಪುಶಿಯಲ್ಲ |
ತರಣಿ ಮಂಡಲದಲ್ಲಿ ಪ್ರದ್ಯುಮ್ನ ವಾಸುದೇವ |
ವರಹ ನಾರಾಯಣ ಅನಿರುದ್ಧ ಮೂರುತಿ |
ನರಸಿಂಹ ಸಂಕರುಷಣ ಸಪ್ತಮೂರುತಿಗಳು |
ಸ್ಥಿರವಾಗಿ ಇಪ್ಪವು ಈ ಪ್ರಕಾರ ಚಿಂತಿಸು |
ತರಣಿಗೆ ನಾಲ್ಕುವರ್ನ ಈ ಬಗೆಯ ಸೂರ್ಯನ್ನ
ಪರಮ ಭಕುತಿಯಿಂದ ವರ್ನ ಭೇದದಲ್ಲಿ ಭೂ |
ಸುರ ಕ್ಷತ್ರ ವೈಶ್ಯ ಶೂದ್ರ ಜನರು ಆರಾಧಿಸುವರು |
ನಿರಯವಿದೂರ ನಮ್ಮ ವಿಜಯ ವಿಠ್ಠಲರೇಯ |
ಕರುಣಾಂಬುಧಿ ಕಾಣೊ ಕರವಿಡಿದು ಸಾಕುವ ೫
ಜತೆ
ಕಾಲಾದಿಷ್ಠಾನದಲ್ಲಿ ಕಾಲನಾಮಕನಾದ |
ಶ್ರೀ ಲೋಲ ವಿಜಯ ವಿಠ್ಠಲನ ಧ್ಯಾನವ ಮಾಡು ೬

ಮಂಗಳೂರಿನ ಪ್ರಾಂತ್ಯದಲ್ಲಿರುವ ಒಂದು

೯೭. ಸುಬ್ರಹ್ಮಣ್ಯ
ರಾಗ:ಸಾವೇರಿ
ಧ್ರುವತಾಳ
ಪರಮಾಧಿಕಾರಿಗೆ ದೊರಕುವುದೀ ಯಾತ್ರಿ |
ಹರಿಗುರು ವಿಶ್ವಾಸಾನಿರುತ ಉಳ್ಳವರಿಗೆ |
ಪರದೈವನಾದ ಸಿರಿ ಪರಶುರಾಮನ ಕ್ಷೇತ್ರ |
ಧರೆಯೊಳಗಿದೆ ಕನ್ಯಾಕುವರಿ ಗೋಕರಣಾ |
ಪರಿಯಂತ ಕುರುವಾಹದಿದರ ಮಧ್ಯ |
ಪರಿಮಿತಿ ಉಂಟು ತೌಲ |
ಅರಿಶಿನ ದೇಶ ತು[ಳು ವರಿವ]ರೆಂದು ಕರೆಸುವರು |
ಮರಳೆ ಇದು ಸಿಂಹಗಿರಿ ಎನಿಸುವುದು|
ಸ್ಮರಣೆ ಮಾಡಿದರೆ ದುಸ್ತರ ಭವಾಂಬುಧಿ ಉ |
ತ್ತರಿಸುವುದಾಕ್ಷಣ ಕರಣಶುದ್ಧನ ಮಾಡಿ |
ಗರುಡನ ಜನನಿಯಾ ಸೆರೆಯಬಿಡಿಸಿ ಪಗೆ |
ಧರಿಸಿ ನಿರ್ದಯದಿಂದ ಉರಗಗಳನ್ನು ಸದೆದು |
ಭರದಿಂದ ವಾಸುಕಿಯಾ ಎರಗಿ ತುಂಡದಿ ಕಚ್ಚಿ |
ತೆರಳೆ ಗಗನಾದಲ್ಲಿ ಹರಿದು ಪೋಗೆ ಕಶ್ಯಪ |
ಕರೆದು ಬುದ್ಧಿಯ ಪೇಳೆ ಶಿರಿಬಾಗೆ ವೈನತೇಯ |
ಅರಿಯಾ ಬಿಸಾಟು ಕಿರಾತರ ನುಂಗಿದೊಂದೆಶೆಯಲ್ಲಿ |
ನಿರುಪಮ ನಿಸ್ಸಂಗ ವಿಜಯವಿಠಲರೇಯನ |
ಚರಣ ಪೂಜಿಪ ಸಿದ್ಧರಲ್ಲಿ ವಾಸಕಾಣೊ ೧
ಮಟ್ಟತಾಳ
ಉರಗವಾಸುಕಿಯನ್ನು ಕರೆದು ಕಶ್ಯಪಮುನಿ |
ಕರೆದಿಂದಲಿ ತಡವರಿಸಿ ಮನ್ನಿಸಿ ನಿಲ್ಲಿಸಿ |
ಗರುಡ ಕಂಡರೆ (ನಿನ್ನಾ) ತಿರಗಿ ಬಿಡನು
ತೀವರದಿಂದಲಲಿ ಪೋಗಿ |
ಹರನಕುರಿತು ಸಿಂಹಗಿರಿಯ ತೊಪ್ಪಲಲ್ಲಿ |
ವರತಪವನೆ ಮಾಡಿ ಉರುಕಾಲಭೀತರಹಿತನಾಗೆಂದು |
ಅರುಹಲು ಕೈಕೊಂಡು ಅರಿ ಉಪಟಳ |
ಪರಿಹರ ಮಾಳ್ಪೆನೆಂದು ಪರಮತ್ವರಿತದಲ್ಲಿ |
ಬರುತ ಇದನೆ ಕಂಡ ಉರಗ ವಾಸುಕಿ ಅಂದು |
ಸಿರಿ ಅರಸ ನಮ್ಮ ವಿಜಯವಿಠಲರೇಯನ್ನ |
ಹಿರಿಯ ಮಗನ ಕುವರನ ಒಲಿವೆನೆಂದ ೨
ತ್ರಿವಿಡಿತಾಳ
ವಾತೋದಕ ಪರ್ಣಾಶನದಿಂದ ವಾಸುಕಿ |
ತಾ ತಪವನೆ ಮಾಡಿ ಬಹುಕಾಲಕ್ಕೆ |
ಭೂತನಾಥನ ಒಲಿಸಿ ಚರಣಯುಗ್ಮಕ್ಕೆರಗಿ |
ಶೀತಾ ನಾನಾಭೀತಿ ಬಿಡಿಸೆನಲೂ |
ಆತ ಕೇಳುತ ಶಿರದೂಗಿ ಸರ್ಪನ ಕೂಡ |
ಮಾತನಾಡಿದ ಒಂದು ಕ್ರೋಶದಷ್ಟು |
ಭೀತರಹಿತನಾಗಿ ಇಲ್ಲೆ ಇಪ್ಪದು ಎನ್ನ |
ಜಾತ[ಬ]ಪ್ಪನು ಮುಂದೆ ಕಾಲಾಂತರಕ್ಕೆ |
ಆತನ ಒಡಗೂಡಿ ಇಲ್ಲಿಯ ಪೂಜಿಯಗೊಂಡು |
ಭೂತಳದೊಳು ಖ್ಯಾತಿಯಾಗೀರೆಂದೂ |
ಭೂತ ಪ್ರಮಥರೊಡನೆ ಅಂತರ್ಧಾನನಾಗಿ |
ಗೋತುರಸುತೆ ಅರಸಾ ತೆರಳಲಿತ್ತ |
ಆತುಮಂತರಾತ್ಮ ವಿಜಯವಿಠಲಹರಿಗೆ |
ಪ್ರೀತಿಯಾಗಿಪ್ಪಾದೀ ಕ್ಷೇತುರಜಗದೊಳೂ ೩
ಅಟ್ಟತಾಳ
ಇನಿತಿರೆ ಕಾಲಾಂತರಕೆ ತಾರಕನೆಂಬಾ |
ದನುಜನು ಕ್ರೌಂಚ ಪರ್ವತದೆಡೆಯಲ್ಲಿದ್ದೂ |
ವನಜ ಸಂಭವನು ಮೆಚ್ಚುವಂತೆ ಮಹಾ ತಪ |
ವನು ಮಾಡಿದನು ತಲೆಕೆಳಗಾಗಿ ವಜ್ರದ |
ಕೊನೆಯಲ್ಲಿ ಅನೇಕ ವರ್ಷ ವಾಸವಾಗಿ |
ಅನಿಮಿಷನಿಕರ ಮಿಕ್ಕಾದ ಜನರಿಂದ |
ಅಣುಮಾತರ ಸೋಲದಂತೆ ಘೋರವೆಂ |
ದೆನಿಸುವ ವರವನ್ನು ಬೇಡಲು ನಿಲ್ಲದೆ |
ನೆನೆದು ಮಹತತ್ವದ ಅಭಿಮಾನಿ ಈಶನಾ |
ತನುಜಾನಿಂದಲಿ ನಿನಗಪಜಯವಾಗಲಿ |
ಎನಲು ದಾನವನು ಲೋಕೇಶಗೆರಗಿದ |
ಎನಗ್ಯಾರು ಸಮನೆಂದು ಸ್ವರ್ಗಪಾತಾಳದ |
ಜನರಿಗೆ ಮುನಿ ಸಮುದಾಯಕ್ಕೆ ಉಪಹತಿ |
ಯಾನುಮಾಡೆ ದೇವಾದಿಗಳು ಪೋಗಿ ಕಮಲಾ |
ಸನಗೆ ಬಿನ್ನೈಸಲು ಕೇಳಿಪೋದನು ತನ್ನ |
ಜನಕಗೆ ಪೇಳೆನಗುತ ನುಡಿದನಂದು |
ಮಾನುಮಥನಿಂದ ಪುರಾರಿಯ ಹಿಮವಂತ |
ತನುಜೆಯ ನೆರವಂತೆ ಮಾಳ್ಪದು ಅವರಿಗೆ |
ತನುಜನಾಗಿ ಮನುಮಥ ಪುಟ್ಟಿ ಅ |
ವನ ಸಂಹರಿಸುವೆನೆಂದು ಪೇಳಲು ಅ |
ಪ್ಪಣೆಗೊಂಡು ಬಂದಿತ್ತ ಸುರರೆಲ್ಲ ಒಂದಾಗಿ |
ಅನಳಾಕ್ಷನಲ್ಲಿಗೆ ಪೂಶರನಟ್ಟಲು |
ವಿನಯದಿಂದಲಿ ಪೋಗಿ ಚಾಪವ ಹೂಡಿಸರನೆ |
ಬಾಣ ಎಸೆಯಲು ಪಿನಾಕಿ ಚಂಚಲ |
ಮಾನದಲ್ಲಿ ಗೌರಿಯಕೂಡಿದ ಇತ್ತಲು |
ಮನಸಿಜ ನೆನಿಸೀದ ಕಾಮನೆಂದಾರಭ್ಯ |
ಜನಸೀದಾ ನಾನಾ ಠಾವಿನಲ್ಲಿ ಪ್ರಾಂತಕ್ಕ |
ಷಣ್ಮೊಗನಾಗಿ ಇಂದ್ರಾದ್ಯರ ಸಹವಾಗಿ |
ದನುಜಾ ತಾರಾಕನೊಳು ಕಾದಿ ಅವನ ಕೊಂದು |
ಅನಿಮಿಷ ಸೈನ್ಯಕ್ಕೆ ನಾಯಕನೆನಿಸಿದ |
ಪಣವದುಂದುಭಿ ಭೇರಿ ಮೆರಿಯಲುಕೊಂಡಾಡೆ |
ಗುಣನಿಧಿ ವಿಜಯವಿಠಲರೇಯನ ಪುತ್ರ |
ಮನು ಮದನವತಾರ ಸ್ಕಂದನು ಕಾಣಿರೊ ೪
ಆದಿ]ತಾಳ
ದಿತಿಜನ ಕೊಂದು ವೇಗದಿಂದಲಿ ಪಾರ್ವತಿ |
ಸುತನು ತನ್ನ ಪೆತ್ತವನ ಕೇಳಲು ಸಿಂಹ ಪ |
ರ್ವತದಲ್ಲಿ ಪೋಗಿ ತಪವನು ಮಾಡೆನಲು ಹೃ |
ದ್ಗತನಾಗಿದ್ದ ಹರಿಲೀಲೆ ಸ್ಮರಿಸುತ್ತಾ ನಡೆತಂದ |
ಅತಿಶಯದಿಂದಲಿ ತಪವ ಮಾಡೆನಲು ತಾರಾ |
ಪಥದಲ್ಲಿ ಶಬ್ಧವಾಗೆ ಲಕ್ಷ ಭೋಜನ ಸು |
ಘ್ರ‍ರತ ಸಮೇತ ಏಕಾಪೋಶನನ ಒಂದೆ ದಿನ |
ಹಿತವಾಗಿಗೈಸಿ ಉಚ್ಚಿಷ್ಠದಲಿ ಹೊರಳಿ ನೀನು |
ಶಿತಮನನಾಗೆನಲು ಕ್ಷಿತಿಯೊಳಗಿದೆ ನಿ |
ರ್ಮಿತವಾಯಿತು ತಿಳಿವುದು |
ಕೃತಭುಜರು ನಲಿದಾಡೆ ಚತುರಾದ್ವಿಮೊಗನು ಇಲ್ಲಿ |
ಪ್ರತಿವಾರ ಬಿಡದಲೆ ಮತಿವಂತನಾಗಿ ಶಾ |
ಶ್ವತ ಕಾಲಾ ನೆಲಸೀದ ಖತಿಗೊಳ್ಳದರಿ ಶೋ |
ಭಿತ ಮತ್ಸ್ಯ ಸುಪಟ ತೀರಥ ರುದ್ರಪಾದ ಮೂರು |
ಪಥದ ಕುಮಾರಧಾರಿ ರತಿವುಳ್ಳ ಶಂಖ ತೀ |
ರಥ ನಾನಾ ಬಗೆ ಉಂಟು ಪ್ರತಿಕೂಲವಾಗದೇಪ |
ರ ರೀತಿಯ ತಿಳಿದು ಭಕುತಿಯಿಂದಲಿ ಮಿಂದು ಅ |
ಮೃತ ಭೋಜನ ದುಚ್ಚಿಷ್ಟಾ ಗತಿ ಎಂದು ಹೊರಳೆ ಪ |
ವಿತ್ರನಾಗುವ, ಭಾಗೀರಥಿ ಸ್ನಾನಕ್ಕೆ ಒಂದು |
ಶತಸಾರೆ ಪೋದಫಲ ಪ್ರಾಪ್ತತವಾಗುವದು ಕಾಣೊ |
ಶತಸಿದ್ಧವೆನ್ನಿ ಉನ್ನತ ಕುಷ್ಟರೋಗಗಳು |
ಹತವಾಗಿ ಪೋಗುವುದು ಪತಿತನಾದರು ಬಂದು |
ತತುವ ಮಾರ್ಗದಲ್ಯುಚಿತವುದನ್ನು ತಿಳಿಯೆ ಮು |
ಕುತಿವಂತ ಸತತದಲ್ಲಿ |
ನುತಿಸಿದವರಿಗೆ ಶ್ರೀ ವಿಜಯವಿಠಲರೇಯಾ |
ಚತುರದವರ ಸಂಗತಿಯಲ್ಲಿ ಪೊಂದಿಸುವ ೫
ಜತೆ
ಸುಬ್ರಹ್ಮಣ್ಯದ ಯಾತ್ರೆ ಎಂಥಾದೊ ತಿಳಿಯಾದು |
ಶುಭ್ರಾವರಣ ವಿಜಯವಿಠಲ ನರಹರಿಬಲ್ಲಾ ೬

ಮನುಷ್ಯನನ್ನು ಆಹಾರದಿಂದ ತೃಪ್ತಿ

೫೭
ಧ್ರುವತಾಳ
ಪರರಾಧೀನವಾದ ದ್ರವ್ಯಂಗಳ ಬಯಸಿ
ಬರಿದೆದೆಗದಗಲಿ ನೋವಾನೋವೆ
ಕರಕೆ ಪ್ರಾಪುತವಾಗದಿರಲು ಕುದಿದು ಕುದಿದು
ಇರಳು ಹಗಲು ಕೋಪದಿ ತೋವಾ ತೋವೆ
ದೊರೆತರೆ ಲೋಭದಿಂದ ಮತ್ತಾರಿಗುಸುರದೆ
ಗುರಿಯಾದೆ ಬಿಚ್ಚಿಟ್ಟು ಸಾವಾಸಾವೆ
ಸರಿಯಾದಲಿದ್ದರು ಎನಗಾವ ದೇಶದಲ್ಲಿ
ಸರಿಯಿಲ್ಲವೆಂದೆನುತ ಜೀವಾ ಜೀವೆ
ಧರೆಯೊಳಗೆನಗಿಂದ ಬಡಿವಾರ ಕಂಡರೆ ಮ-
ತ್ಸರಿಸಿ ನಿಷ್ಠುರ ಮಾತ ನೀವೆ ಈವೆ
ಕರಣ ನಿರ್ಮಲವಿಲ್ಲದೆ ಡಂಭಕ ವೃತ್ತಿಯಲ್ಲಿ
ಚರಿಸಿ ಅಹಂಕೃತಿಯಲ್ಲಿ ಬೇವಾ ಬೇವೆ
ನರರೋತ್ತಮರ ಬಿಟ್ಟು ಪಾಮರ ಮಾನವರ
ಕರೆದು ಬೇಡದಿರಲು ಕಾವಾ ಕಾವೇ
ಪರಮ ಧರ್ಮದಲ್ಲೀಗ ಮನಸು ಮಾಡದಲೆ ವಿ
ಸ್ತರವಾಗಿ ವಿಘ್ನವ ಗೈವೆ ಗೈವೆ
ನಿರುತ ಸ್ವಧರ್ಮದಲ್ಲಿ ನಡೆ ಎಂದು ಬುದ್ಧಿ ಪೇಳೆ
ಗರುವಿಕೆಯಿಂದವರನು ಬೈವಾ ಬೈವೇ
ಗುರುಹಿರಿಯರ ಮನ್ನಿಸಿ ಎಳ್ಳನಿತತಾದರು
ಚರಿಸುವೆ ದುರಾಚಾರಾ ನಾನಾ ಕಾತುರದಲ್ಲಿ
ಹರಿ ಇಂಥ ದುಷ್ಯರ್ಮಿಗೆ ನಿನ್ನ ದರುಶನ ಧ್ಯಾನ
ಚಿರವಾಗಿ ಇಪ್ಪುದೆಂತೊ ವ್ಯಾಕುಲನಿಗೆ
ನಿರಯಕ್ಕೆ ಮಾರ್ಗ ಮಾಳ್ಪೆ ನಿನ್ನ ಜ್ಞಾನವೆಂಬೋದ ಕಾಣೆ
ದುರುಳಾರ ಸಂಗತಿಯಲ್ಲಿ ಉಬ್ಬಿ ನಡೆವೆ
ಗರುಡವಾಹನ್ನ ನಮ್ಮ ವಿಜಯ ವಿಠ್ಠಲ ನಿನ್ನ
ಚರಣ ಸಂದರುಶನದಲ್ಲಿ ಮನಮಾಡೆ ೧
ಮಟ್ಟತಾಳ
ನಾನೆ ಉತ್ತಮನೆಂಬೊ ಅಹಂಕಾರದಿಂದ
ಜ್ಞಾನಿಗಳ ನಿತ್ಯ ನಿಂದ್ಯ ಮಾಡುತಲಿಪ್ಪೆ
ಏನೆಂಬೆನು ಎನ್ನ ಸಜ್ಜನ ವೃತ್ತಿಯನು
ನೀನೆ ಬಲ್ಲದೆ ಸರಿ ಪೇಳುವ ಬಗೆಯಿಲ್ಲ
ಹೀನ ಬುದ್ಧಿಯ ಬಿಡದೆ ಹಿತವ ಚಿಂತಿಪೆನೆಂಬ
ದೀನರಾದವರಿಗೆ ಬೆರಗು ತೋರುವೆನಯ್ಯ
ಮಾನವಂತನಾದ ವಿಜಯ ವಿಠ್ಠಲರೇಯ
ಕಾಣಿಸಗೊಡೆ ಅನ್ಯರಿಗೆ ಮಾಡುವ ದೋಷ ೨
ತ್ರಿವಿಡಿ ತಾಳ
ಲೋಕಾಂತರದಲಿ ನಾನು ಕುಳಿತಾಗ ಬಾಯಿಲಿ
ಬೇಕಾದ ತತ್ವವ ವಿಸ್ತಾರವಾಗಿ
ವಾಕು ನಿಲವಿಲ್ಲದೆ ಕಂಡ ಜನರಿಗೆ ವಿ-
ವೇಕಿ ಎನಿಸಿಕೊಂಡೆ ಡಂಭದಿಂದ
ಏಕಾಂತವಾದಡೆ ಎನ್ನ ಮನಸು ಬಲು
ತಾಕುವುದು ಪೋಗಿ ಕಂಡಕಡಿಗೆ
ಕಾಕು ವೃತ್ತಿಯನ್ನು ನೆನದು ಸುತ್ತಲು ಜನರ
ನಾ ಕಾಣೆನೆಂದು ವಿಕಾರ ಮಾಳ್ಪೆ
ಲೋಕದೊಳಗೆ ಸರ್ವ ಠಾವಿಲಿ ಬಿಡದೆ ತಾ-
ತ್ವಿಕರು ಇಪ್ಪುದು ಮರೆದು ಇಂಥ
ವ್ಯಾಕುಲದಲಿ ನಡದೆ ಮುಂಗಾಣದೆ ಪುಣ್ಯವ
ಜೋಕೆ ಮಾಡಿಕೊಳ್ಳದೆ ಅಂಧತ್ವದಿ
ಲೋಕ ನಾಯಕ ನಮ್ಮ ವಿಜಯ ವಿಠ್ಠಲರೇಯ
ಪೋಕತನದ ಬುದ್ಧಿ ಬಿಡೆ ಅಂತರಂಗದಲ್ಲಿ ೩
ಅಟ್ಟತಾಳ
ಸುರಕ್ಷಿತವಾಗಿ ಮೃಷ್ಟಾನ್ನ ನೀನುಣಿಸಲು
ಪರಮ ಸುಖದಲ್ಲಿ ಬಾಳಿ ನಿನ್ನಂಘ್ರಿಯ
ಚರಣವ ಭಜಿಸುವ ಉತ್ತಮರ ಕೂಡ
ಬೆರಸಿ ನಿನ್ನ ನಾಮ ಗಾಯನ ಕಥೆಗಳ
ಪರಿಪರಿ ಬಗೆಯಲಿ ಕೊಂಡಾಡಿ ಪೊಂದಿದ
ದುರಿತಂಗಳೆಲ್ಲವ ನಾಶಗೈಸುತ್ತ
ಧರೆಯೊಳಗೀ ಮತಿಯಲಿ ಇರಲರಿಯದೆ ಇಂಥ
ದುರುಳ ನಡತೆಗಳ ಚರಿಸುವೆ ದಮ್ಮಯ್ಯ
ಕರುಣಿ ನೀನೊಲಿದು ಸಜ್ಜನ ಮಾರ್ಗಕೆ ಮನ
ತಿರುಗಿಸದಲೆ ನಾನು ಕಡೆ ಬೀಳುವದಿಲ್ಲ
ಶರಣ ವತ್ಸಲ ನಮ್ಮ ವಿಜಯ ವಿಠ್ಠಲರೇಯ
ಮೊರೆಯ ಲಾಲಿಸಿ ಮದಂಧಕಾರ ಕಳೀ ೪
ಆದಿತಾಳ
ಉದಯ ಕಾಲದಲೆದ್ದು ಅಸ್ತಮಾನತನಕ
ಇದೆ ಯೋಚನೆ ಅಲ್ಲದೆ ನಿನ್ನ ಧ್ಯಾನವೆ ಒಂದು
ಪದಮಾತುರವೆ ಇಲ್ಲ ಮನನಿರ್ಮಳ ಕಾಣೆ
ತುದಿಗೆ ಎಲ್ಲೆಲ್ಲಿ ಪೋಗಿ ವಾಸವಾಗುವೆನು
ಹೃದಯದೊಳಗೆ ನೀನೆ ಇದ್ದ ಮೇಲೀಪರಿ
ಚದರಿ ಪೋಗಲಿ ಬಹುದೆ ಮನಸು ದುರ ವೃತ್ತಿಗೆ
ಮದನ ಜನಕರಂಗ ವಿಜಯ ವಿಠ್ಠಲ ನಿನ್ನ
ಪದಗಳ ನಂಬಿಹೆನೊ ಪಾಪಕ್ಕೆ ಹಾಕದಿರು ೫
ಜತೆ
ಮನೋವ್ಯಾಪಾರ ನೋಡಲು ಬಲು ಕಠಿಣ
ಎನಗೆ ನಿಲ್ಲದು ದೇವ ವಿಜಯ ವಿಠ್ಠಲರೇಯ೬

ಶ್ರೀಹರಿಯ ಗುಣ ವಿಶೇಷಗಳನ್ನು

೯೯
ಧ್ರುವತಾಳ
ಪರಿಪೂರ್ಣ ಕಾಮ ವಿಸ್ತರ ಮಹಿಮ ಪರಂಧಾಮ
ಶರಣರ ಸುರದ್ರುಮ ಸುರಸಾರ್ವಭೌಮಾ
ಮಿರುಗುವನಂತರ್ಯಾಮಿ ಕಿರಣ ಧಿಕ್ಕರಿಪ ಪ್ರೇಮ
ಪರಿಪರಿ ಗುಣನಾಮ ಭರಿತವಾದ ರಾಮಾ
ದುರುಳ ದೈತ್ಯ ವಿರಾಮ ದುರಿತಾಂಬುಧಿಗೆ ಭೀಮ
ಪುರುಷೋತ್ತಮ ನಿಸ್ಸೀಮ ಸುರಗಣ ಲಲಾಮಾ
ಪರಮ ಶುದ್ಧ ಅನುಪಮಾ ಚರಿತ ಸುಂದರ ಶಾಮಾ
ಕರುಣಾ ಜಲಧಿ ಜನನ ಮರಣ ರಹಿತ ನೇಮಾ
ಹರಿ ಪರಾಪರ ಬೊಮ್ಮ ಮೆರೆವ ಜಗದುತ್ತಮ
ಸರಿಗಾಣೆ ನಿಗಮಾಗಮ ಸರಸಿಜಭವ ಕಾಮಾ
ದ್ಯರ ಪೆತ್ತ ನಿತ್ಯ ನಿಗಮಾ ಪರಿಪಾಲ ಭಕ್ತ ಸ್ತೋಮ
ಶರಧಿಗೆ ರಾಕಾಬ್ಜಸೋಮಾ ಪರಾಪರದಲ್ಲಿ ಸಮಾ
ಅರರೆ ಒಂದೊಂದು ರೋಮಾ ತೆರವಿಲ್ಲದಾಗ ಬೊಮ್ಮಾ
ದ್ಯರ ತುರುಗಿದ ಹೇಮಾಂಬರ ಕಾಂಚಿದಾಮಾ
ಧರಿಗೆ ಸಾಧಾರ ಹೇಮಗಿರಿಯ ಧರಿಸಿದ ಪದುಮಾ
ವರನೆ ವಿಜಯ ವಿಠ್ಠಲ ನರನೊಳು ನಾನಾಧಮಾ
ನಿರುತ ನಿನ್ನ ಉತ್ತಮ ಚರಣವನ್ನು ನಿಷ್ಕಾಮ
ಕರನಾಗಿ ಭಜಿಸಿ ಕ್ಷೇಮವರವೆಂತು ಪಡಿವೆ ಸುಧಾಮಾ ೧
ಮಟ್ಟತಾಳ
ನಿತ್ಯ ತೃಪ್ತನು ನೀನು ನಿತ್ಯಾನಂದ ನೀನು
ನಿತ್ಯ ಭೂಷಿತ ನೀನು ನಿತ್ಯ ನಿರ್ಮಳ ನೀನು
ನಿತ್ಯ ವ್ಯಾಪಕ ನೀನು ನಿತ್ಯ ನಾಟಕಿ ನೀನು
ನಿತ್ಯ ಮಂಗಳ ನೀನು, ನಿತ್ಯ ಭಾಗ್ಯನು ನೀನು
ನಿತ್ಯ ಮಾನಿತ ನೀನು, ನಿತ್ಯ ಕ್ರಿಯನು ನೀನು
ನಿತ್ಯ ವಸ್ತುವೆ ನೀನು, ನಿತ್ಯ ನಿತ್ಯದಲ್ಲಿ
ನಿತ್ಯ ಭರಿತ ನೀನು, ನಿತ್ಯ ಮೋಹನ ನೀನು
ನಿತ್ಯೋಪಾಸ ನೀನು, ನಿತ್ಯ
ಮುಕ್ತಾಶ್ರಯ ವಿಜಯ ವಿಠ್ಠಲ ಸದಾ
ನಿತ್ಯ ದೈವವೆ ಅನಿಮಿತ್ತ ಬಾಂಧವ ನೀನೆ ೨
ತ್ರಿವಿಡಿತಾಳ
ಸುರನದಿ ಪೆತ್ತವಂಗೆ ನಿನಗೀ ಮಜ್ಜನವೆ ಪಾ
ಲರಮನೆ ಮನೆ ಉಳ್ಳವಗೆ ಕ್ಷೀರಾಭಿಷೇಕವೆ
ಸರಸಿಜ ಕುಸುಮ ಶ್ರೀತುಲಸಿ ಪಡೆದ ದೈವವೆ
ಧರೆಯೊಳಗಿದ್ದ ಕುಸುಮಾದಿ ನಿನಗೆ ಮೆಚ್ಚೆ
ಸಿರಿ ಉರದಲ್ಲಿ ಗಂಧ ಪರಿಮಳ ಎಸೆವನೆ

ಪರಿಪರಿ ಪರಿಮಳ ಗಂಧದಿಂದೇನಯ್ಯಾ
ಪರಮೇಷ್ಠಿಯಿಂದಘ್ರ್ಯ ಕೈಕೊಂಡವನೆ ನಿನ್ನ
ಚರಣ ತೊಳೆದು ಸುಖ ಪಡಿಸಲಾಪೆನೆ ನಾನು
ಎರಡು ಕಂಗಳಿಂದ ಲೋಕ ಬೆಳಗುತಿಪ್ಪನೆ
ವಿರಚಿಸಿದ ದೀಪದಿಂದ ವೆಗ್ಗಳವೇನೊ ನಿನಗೆ
ಕರುಣಿಸಿ ದ್ರೌಪದಿಗೆ ವಸನಗಳಿತ್ತವಂಗೆ
ನರ ನಾನು ನಿನಗೊಂದು ವಸ್ತ್ರ ಈಯಬಲ್ಲೆನೆ
ವರ ಪ್ರಳಯದಲಿ ಸರ್ವವು ದಹಿಸುವನೆ
ಹಿರಿದು ಧೂಪಾರತಿಯ ಎತ್ತುವುದು ಘನವೆ
ಕರದೊಳು ಮುನಿಗೆ ರಸಾಯನ ಉಣಿಪಂಗೆ
ತರಿಸಿ ತೋರಿಸಿದ ಪದಾರ್ಥದಿಂದೇನಯ್ಯಾ
ಎರಡೈದು ಸಾಗರ ಪೋಷಣಗೊಂಬವಗೆ
ಎರದ ನೀರಿನಿಂದ ಪೋಷಣೆ ನಿನಗೇನೊ
ಸರಿಗಾಣೆ ನಿನ್ನ ನಖದ ಕಾಂತಿಗೆ ಎಲ್ಲೀ
ಮರುಳೇ ಎತ್ತುವ ಮಂಗಳಾರತಿಯ ಬೆಳಗ್ಯಾಕೆ
ಹರಸಖ ಕುಬೇರ ನಿನ್ನವನಾಗಿರೆ
ಬರಿದೆಯಲ್ಲವೆ ಎನ್ನ ಸುವರ್ಣ ಪುಷ್ಪವು
ಪರಿವಾರವೆಲ್ಲ ಸರ್ವ ಸುರರಾದಿಗಳು ನಲಿಯೆ
ವರಮಂದ ಮತಿಯಿಂದ ನಿನಗೇನು ವಾಲಗವೆ
ಗರುಡವಾಹನ ನಮ್ಮ ವಿಜಯ ವಿಠ್ಠಲರೇಯಾ
ಎರಗಿ ಕೈಮುಗಿವೆನೊ ತರುಳತನದಲಿ ನಾನು ೩
ಅಟ್ಟತಾಳ
ನಿಗಮಗಳಿಗೆ ನಿಲುಕದಿಪ್ಪ ಮನದ ದೈವ
ಅಗಣಿತ ಸ್ತೋತ್ರಗಳಿಂದ ಹೀಯಾಳಿಕೆ
ಝಗಝಗಿಪ ಭೂಷಣ ಧರಿಸಿದ ದೈವನೆ
ಮಿಗಿಲೇನೂ ನಿನಗೆ ಈ ಲೋಕರಾಭರಣವು
ಖಗರಾಜ ಉರಗ ವಾಹನ ಹಾಸಿಕೆ ಇದೆ
ಮಗುಳೆ ನಾ ನುಡಿದ ವಾಹನ ಹಾಸಿಕೆ ಬೇಕೆ
ಬಗೆಬಗೆಯ ಗಾಯನವ ನಾರದಾದ್ಯರು ಪಾಡೆ
ಪೊಗಳ ಬಲ್ಲೆನೆ ನಿನ್ನ ಬಲುಪರಿ ಮಹಿಮೆಯ
ಸುಗುಣ ಸಾಹಸ ಮಲ್ಲ ವಿಜಯ ವಿಠ್ಠಲ ರೇಯಾ
ಗಗನ ಮಣಿಯಂತೆ ಪೊಳೆವ ಅನಾದಿ ಕರ್ತಾ ೪
ಆದಿತಾಳ
ಸಕಲ ಪೂಜೆಯು ಈ ಪರಿ ಇರಲು ಮತ್ತೆ
ಲಕುಮಿ ಪೂಜಿಸುವಳಾಲಕುಮಿಗೆ ನೀನೆ ಪ್ರೇ
ರಕನಾಗಿ ಒಳಗೆ ನಿಂದು ನಿನಗೆ ನೀನೆ ಅ
ರ್ಚಕನಾಗಿ ಅನುಗಾಲ ಸುಖಿಸುವ ಹೆದ್ದೈವ
ಭಕುತರಿಂದಲಿ ನಿನಗೆ ಆವುದೊ ಪರಿಪೂರ್ಣ
ಮುಕುತಾ ಮುಕುತ ರೊಳು ಎಣಿಸಿ ಗುಣಿಸಿದರು
ಭಕುತ ರೊಳಗೆ ನಾನೊಬ್ಬ ಅಲ್ಪರಿಗೆ ಆಲ್ಪರಿವೆನಯ್ಯ
ಅಕುಟಿಲನಾಗಿ ನಿನ್ನ ಮೆಚ್ಚಿಸ ಬಲ್ಲೆವೆ
ಅಖಿಳ ಜೀವರೊಳು ವ್ಯಾಪ್ತನಾಗಿ ಇದ್ದು
ಸುಖನಾಗಿ ಪ್ರತಿದಿನ ಪಾಲಿಪ ಪರಮಾತ್ಮ
ಲಕುಮಿ ಮಿಕ್ಕಾದ ತಾರತಮ್ಯ ಭಾವದಿಂದ
ಭಕ್ತರರ್ಚನೆ ಮಾಡೆಲೇಶ ಬೇಕಾದುದಿಲ್ಲಾ
ಸಕಲಾಭರಣ ವಿಟ್ಟು ಮರುಳೆ ಮರಳೆ ತನ್ನ
ನಖಶಿಖ ಪರಿಯಂತೆ ನಸುನಗೆಯಲಿ ನಿತ್ಯ
ಮುಕುರದೊಳಗೆ ಪ್ರತಿಬಿಂಬ ನೋಡಿಕುಳುತ
ಸುಖವ ಬಟ್ಟಂತೆ ನಮಗಲ್ಲದೇ ನಿನಗೇನು
ಲಕುಮಿ ವಲ್ಲಭ ನಮ್ಮ ವಿಜಯ ವಿಠ್ಠಲರೇಯಾ
ಭಕುತರಿಗೆ ನಿನ್ನ ಇಚ್ಛೆ ಯಾಗದಲೆ ಗತಿಯಿಲ್ಲಾ ೫
ಜತೆ
ನಿನಗೆ ನೀನೆ ಪೂಜೆ ಮಾಡಿಕೊಂಬದೇವ
ಎನಗಾವ ಸಥಿಯಿಲ್ಲಾ ವಿಜಯ ವಿಠ್ಠಲ ಒಲಿಯೋ ೬

ಆಸೆಯನ್ನು ನಿಯಂತ್ರಿಸಿಕೊಳ್ಳುವ ಶಕ್ತಿಯನ್ನು

೫೮
ಧ್ರುವತಾಳ
ಪಾದ ತೋರಿಸು ತೀರ್ಥಪಾದನೆ ಎನಗಿಂದು
ಪಾಥೆಯಾಗಲಿ ಸಂಪದವಿಗೆ ಜ್ಞಾಪದಲ್ಲಿ ಇಡು ತಾ
ಪಾದಲ್ಲಿ ಬುದ್ದಿ ಮಾಡೆ ಪದಾರ್ಥ ರೂ
ಪಾ ದಹಿಸುವುದೇ ಶಾಪಾದಲ್ಲಿ ಬಿದ್ದರು
ಪಾದಾ ಸತಿಯನ್ನು ಪಾದರಜದಲ್ಲಿ
ಪಾದಾದಲ್ಲಿ ಚಾಪಧಾರನೆ
ಪಾದದಳತೆಯಲ್ಲಿ ಪೋಪುದಯ್ಯ ಅಹಿಸ್ಯಾ-
ಪಾದಾದು ಕಳದೆ ಪಾದಾಬ್ಜನಲ್ಲಿ ಕ-
ಪ್ಪಾದು ಭವದ ಕೂಪದಲ್ಲಿಂದಲಿ ಬ-
ಪ್ಪಾದ ಬಿಡಿಸೊ ಶ್ರೀಪಾದಜ
ಪದ್ಮವ ತೋರೊ ವಿಜಯ ವಿಠ್ಠಲ ಗೋ
ಪಾದದನಿತು ತಂಪಾದ ನೆಳಲೀಯೊ೧
ಮಟ್ಟತಾಳ
ಉತ್ತಮನೆಂದೆಂಬೊ ಪೆಸರಿಡಿಸಿಕೊಂಡು
ಸುತ್ತಿದೆ ಜಗದೊಳು ಉ ಮೊದಲೆ ಕಳದು
ಮತ್ತೆ ಉಳಿದ ಸಂಖ್ಯೆಯಿಂದಲಿ ಚರಿಸಿ ಉ-
ನ್ಮತ್ತ ನಾನಾದೆ ವೃತ್ರಾರಿವಿನುತ ವಿಜಯ ವಿಠ್ಠಲರೇಯಾ
ಹಿತ್ತಲೆಯೊಳಗೆ, ಕರ್ಗೊರ್ತಿ ಬೆಳೆದಂತೆ
ಮುತ್ತಿದ ಮನದಲ್ಲಿ ಪುರುಷಾರ್ಥವ ಮರೆದೆ ೨
ತ್ರಿವಿಡಿ ತಾಳ
ಮೊಳಕೈಯಿಗೆ ಬೆಲ್ಲ ಪಚ್ಚಿಕೊಂಡೀಗ
ನಿಲಕಿಸಿ ರುಚಿ ಕೊಂಬೆನೆಂದೆನುತ
ನಲಿದು ನಾಲಿಗೆಯಿಂದ ಸವಿದು ತಿಂದವನೆಂದು
ಇಳಿಯೊಳು ಬಲವನ್ನು ಪೇಳಿಕೊಂಡು
ಸುಳಿದಾಡಿ ಕಂಡಲ್ಲಿ ಹಳವಾರಿಯಾಗಿ ಹ –
ಕ್ಕಲವಾಗಿ ತಿರುಗಿದ ಮೂಢ ನಾನು
ಮಲ ಮೂರು ಪೋಗಗಳಿಯದೆ ನಿತ್ಯ ನಿ-
ಶ್ಚಲ ದಾಸನೆಂದು ವೆಗ್ಗಳ ಕೂಗಿದೆ
ಸುಲಭರ ಒಡೆಯಾ ಶ್ರೀ ವಿಜಯ ವಿಠ್ಠಲರೇಯ
ಹುಳವಿಗಂಜಿ ಹುತ್ತಿನೊಳು ಪೊಕ್ಕಂತಾದೆನೊ೩
ಅಟ್ಟತಾಳ
ದೇಶವಾಳೆನೆಂಬೊ ಆಶಾ ಪೋಗದು ಶ್ರೀನಿ-
ವಾಸನೆ ನಿನ್ನಯ ದಾಸರಿಂದಲಿ ವಿಶೇಷದ್ವಯಾಕ್ಷರ
ಭೂಷಣವಾಗಿದ್ದಾ ದೇಶವ ಕೊಳದಲೆ
ಘಾಶಿಯಾದೆನೊ ದುರಾಶೆಯಿಂದಲಿ ನೊಂದು
ಕ್ಲೇಶವ ಬಡುತಲಿ ದೇಶಾವರದು ಭಾಗ್ಯ
ಕೋಳವಾರದು ಪರದೇಶಿಯಲ್ಲದೆ ತಾನಾ ಸಮಯದಲ್ಲಿ
ಕೋಶನಿಧಿ ನೀನೆ ವಿಜಯ ವಿಠ್ಠಲ ಎನ್ನ
ಪೋಷಿಸುವರ ಭರವಸೆ ಮತ್ತಾರದೊ ೪
ಆದಿತಾಳ
ಸುಲಭ ಭಾಗ್ಯವೆ ನಿನ್ನ ಸಲಿಲ ಪದವಲ್ಲದೆ
ಸುಲಭ ಎನಗೆ ಒಂದು ಕೆಲಕಾಲ ಕಾಣಿಸದು
ಸಲೆ ಹುಲ್ಲು ಕುಟೀರದೊಳಗೆ ಸಾಧು
ಎಳೆಧೇನು ಕಟ್ಟಿರಲು ಕುಲಸಹಿತ ಉಂಡು ಓ-
ಕಳಿಯಾಡಲೊಲ್ಲದಲೆ ಬಲು ಕಾನನದೊಳಗೆ
ಹುಲಿ ನಿಂದಿರಲು ಕೊರಳಿಗೆ ಕೈಯ್ಯನ್ನು ಹಾಕಿ
ಪಲುದೆರೆದು ಪೋದಂತೆ ಸುಲಭ ನೀನಿರಲಾಗಿ
ಕೆಲವು ದೈವಂಗಳೆಂಬೊ ಹಲವು ಕೊಂಬಿಗೆ ಹಾರಿ
ನೆಲಕುರುಳಿ ಹೊರಳಿದೆನೊ
ಚಲುವ ಲಕುಮಿನಲ್ಲ ವಿಜಯ ವಿಠ್ಠಲ ಎನ್ನ
ಬಳಲಿಕೆ ಪರಿಹರಿಸೊ ಅಳಲಿಕೆ ಪುಟ್ಟದಂತೆ ೫
ಜತೆ
ಪಾದವೆ ಎನಗೊಂದು ಪರಲೋಕಕ್ಕೆ ಸಾಧನ
ಪಾದಜ್ಯಾಲೋಚನ ವಿಜಯ ವಿಠ್ಠಲರೇಯ ೬

ಮನುಷ್ಯನು ತಾನು ಸುಖವಾಗಿರುವುದರೊಡನೆ

೫೯
ಝಂಪಿತಾಳ
ಪಿಂಡಾಂಡದಿಂದ ಪೊರಗಾಗಿ ಪೋಗಿ ಪುರುಷ
ಪಿಂಡಾಂಡದೊಳು ತ್ರಿಮಾಸ ವಾಸವಾಗಿ
ಭಂಡಾಟದಲ್ಲಿ ಜರಿದು ಶುಕ್ಲ ಶೋಣಿತವಾದ
ಭಾಂಡದೊಳಗೆ ಬಿದ್ದು ನವಮಾಸವಿದ್ದು
ಅಂಡಲೆದು ಮಜ್ಜಮಾಂಸ ಕೀವು ರಕ್ತದಲ್ಲಿ
ತಂಡ ತಂಡದ ಮಲಿನ ಮಲ ಭೋಜನ
ಉಂಡು ಪೂರ್ವದ ಭಾವವನುಭವಿಸಿ ಸರಸರನೆ
ಮಂಡಲ ತಿಳಿದು ಸಿಗದಳಲಿ ವಿಜಯ ವಿಠ್ಠಲ
ದಂಡವಾಯಿತು ನಿನ್ನ ಕೊಂಡಾಡದಲೆ ಮನ ೧
ಮಟ್ಟತಾಳ
ತರುಣ ನೆನಸಿಕೊಂಡು ಚರಿಸದೆ ಹತ್ತೆಂಟು
ವರುಷದ ಪರಿಯಂತ ಹಿರಿಯರ ಸಹಿತದಿಂದ
ಜರಿದೆನು ಆಮೇಲೆ ಗುರುಹಿರಿಯರನ್ನ
ದುರುಳ ಮತಿಯಲ್ಲಿ ಭರದ ಯವ್ವನನಾಗಿ
ಮರೆವೆನು ಧರೆಯೊಳು ಸರಿಯಾರು ಎಂದು
ಶರಭ ವಿಜಯ ವಿಠ್ಠಲ ಮರೆದೆನೊ ಧರ್ಮವನು
ಪರಗತಿ ಬಯಸದೆ ಮರದೆನೊ ಧರ್ಮವನು ೨
ತ್ರಿವಿಡಿತಾಳ
ಮಡದಿ ಮಕ್ಕಳಿಗಾಗಿ ಅಡವಿ ಗಿಡವನು ತುಕ್ಕಿ
ಒಡನೆ ಪರರಿಂದ ಕೆಡನುಡಿಸಿಕೊಂಡು
ಬಿಡದೆ ಪೀಡಿತನಾಗಿ ಪೀಡೆಯಂತೆ ಹತ್ತಿ
ಕೊಡದಲೆ ಪೋಗೆನೆಂಬೆ ದೈನ್ಯದಿ
ಸಡಗರದಲಿ ಶರಗುವಿಡಿದು ಬೇಡಿಕೊಂಡು
ಪಡಿಯಾ ತಂದು ಎನ್ನ ಒಡಲವರ ಪೊರೆದೆನೊ
ಬಡವರಾಧಾರಿ ಶುಚಿ ವಿಜಯ ವಿಠ್ಠಲ ನಿನ್ನ
ಅಡಿಗೆ ಮನವೆರಗದೆ ಬಡುವಿನೊ ಭಂಗವ ೩
ಅಟ್ಟತಾಳ
ಒಂದು ಘಳಿಗೆ ಗ್ರಾಸ ದೊರಕದಿದ್ದರೆ ಓಣಿ
ಸಂದಿ ಗೊಂದಿಯನ್ನು ಕೋಡಗದಂತೀಗ
ನಿಂದಿರದೆ ತಿರುಗಿ ಅವರಿವರೆನ್ನದೆ
ಮಂದಿರವ ಪೊಕ್ಕು ಮಹ ಕ್ಲೇಶವಬಡುವೆನೊ
ಬೆಂದೊಡಲಿಗೆ ಚಾಲವರಿದಂತೆ ಚೆನ್ನಾಗಿ
ಬಂದು ನಿಮಿಷ ನಿನ್ನ ಚಿಂತೆಯ ಮಾಡದೆ
ಮುಂದುಗಾಣದೆ ಪೋದೆ ಮುರಾರಿ ದೇವಕಿ
ನಂದನ ವಿಜಯ ವಿಠ್ಠಲನೆ ದೀನ ಬಂಧು
ಮುಂದುಗಾಣದೆ ಪೋದೆ ಮುಂದುಗಾಣದೆ ಪೋದೆ೪
ಆದಿತಾಳ
ವಾರ್ಧಿಕತನ ಬರಲು ಸಾರ್ದು ಅನ್ಯರಿಂದ
ಗಾರ್ಧಭ ಮುದಿಹದ್ದು ಎಂದು
ಗರ್ಧನಿಂದ ನುಡಿಸಿಕೊಂಡೆ
ನಿರ್ದಯವಾಗದಿನ್ನು
ವರ್ಧನ ವಿಜಯ ವಿಠ್ಠಲ
ನಿರ್ಧಾರವಾಗಿ ಎನಗೆ
ಊಧ್ರ್ವಲೋಕಾಪೇಕ್ಷಾ ವೀಯೊ ೫
ಜತೆ
ನಿನ್ನಂಘ್ರಿ ತೋರೊ ನಿರ್ವಾಣ ವಿಜಯ ವಿಠ್ಠಲ
ಎನ್ನಂಗವನು ಪರಮ ಪಾವನಮಾಡೊ ೬

ಶ್ರೀಹರಿಯು ಸರ್ವ ಕಾಲಗಳಲ್ಲಿ ಸರ್ವ ಚೇತನಾಚೇತನ

೮೨
ಧ್ರುವತಾಳ
ಪುಣ್ಯಪಾಪಗಳೆರೆಡು ಹರಿ ಮಾಡಿದಂತೆ ಜೀವ
ಗಣ್ಯರು ಮಾಡುವರು ಜನುಮ ಜನುಮ
ಅನ್ಯಾಯವೆನ್ನದಿರಿ ಗ್ರಂಥ ಸಮ್ಮತವಿದಕೆ
ಅನ್ಯಥ ನುಡಿಸಲ್ಲ ಎಂದೆಂದಿಗೆ
ಧನ್ಯರಾದವರಿಗೆ ಮನೋವಾಕ್ಕಾಯ
ಅನುಗುಣ್ಯವಾಗಿಪ್ಪದೊ ಹರಿಯ ಶಕ್ತಿ
ಕಣ್ಣಿವೆ ಇಕ್ಕುವುದು ಜೀವರ ಸ್ವತಂತ್ರವೆ
ಸನ್ಯ್ಯಾಯವಲ್ಲವಲ್ಲಯವೆ ಇಡದಿರಲಿ ಕಾಲಮೀರಿ
ಕನ್ಯಾರತುನ ಲಕುಮಿ ಜೀವಕೋಟೀಶ ಹಿ
ರಣ್ಯ ಗರ್ಭಾದಿಗಳು ನಿಶ್ಚೇಷ್ಟರೊ
ಅನ್ಯರೊಬ್ಬರ ಕಾಣೆ ಬಹಿರಂತರವಿ ಕಾ
ರುಣ್ಯ ಮೂರುತಿ ಹರಿ ನಿಯಾಮಕ
ಸನ್ಯಾಸ ಮೊದಲಾದ ಆಶ್ರಮಧರರಾಗೆ ಅ
ರಣ್ಯ ರೋದನ ಕಾಣೊ ತಿಳಿಯದಿರಲು
ಮನ್ಯು ಮಾಡುವನ್ಯಾರು ಕಾಲಕಾಲಕೆ
ದೈನ್ಯಬಿಡುವನ್ಯಾರು ಜೀವಿಗಳೆ
ಗಣ್ಯವೆ ಶ್ರೀಹರಿಯ ಅಚಿಂತ್ಯಾದ್ಭುತ ಕಾರ್ಯ
ಅನ್ಯೋನ್ಯ ಭಾವದಿಂದ ನಡಿಸುವನು
ಶೂನ್ಯ ಗುಣನಲ್ಲ ಸತತ ವ್ಯಕ್ತನು ಲಾ
ವಣ್ಯನಂತಾನಂತ ರೂಪಾತ್ಮಕ
ಹನ್ನೆರಡು ಎರಡು ಭುವನದೊಳಗೆ ಅಗ್ರ
ಗಣ್ಯನಾಗಿ ಮೆರೆವ ನಿರ್ದು:ಖದಿ
ಜನ್ಯದಿಂದಲಿ ಜನ್ಯವಾಗುವವಸ್ತ ಪ
ರ್ಜನ್ಯ ಮಿಕ್ಕಾದಲ್ಲಿ ಹರಿಸಂಗಡ
ಮನುಗಳಲಿಪ್ಪ ತತ್ತತ್ಕಾಲಕ್ಕೆ ಸ
ಜ್ಜನರಾ ದುರ್ಜನರ ಕುಣಿಸುವನು
ಪಾಂಚಜನ್ಯ ಪಾಣಿ ನಮ್ಮ ವಿಜಯ ವಿಠ್ಠಲ ನಿ
ರ್ವಿಣ್ಯನಲ್ಲವೊ ಬಲು ವಿಚಿತ್ರ ಸಮರ್ಥ ೧
ಮಟ್ಟತಾಳ
ಜೀವಕ್ಕೆ ಆವರಣ ಲಿಂಗ ಶರೀರವು
ಆವಾವಕಾಲಕ್ಕೆ ಇದ್ದದ್ದೇ ಸರಿ ಇದ್ದರೆ
ನೋವಿದ್ದಿಲ್ಲವೊ ಭವಿಷ್ಯೋತ್ತರದಲ್ಲಿ ತಾ
ವ್ಯವಧಾನದಲಿ ತಗಲಿಸುತಿಪ್ಪದು
ಆವ್ಯಾಳ್ಯದಲಿ ಜ್ಞಾನೇಚ್ಛಾ ಪ್ರಯತ್ನ
ಜೀವಕೆ ಸ್ವರೂಪಭೂತವಾದರು ಸ್ವಸ್ವ
ಭಾವಾಚರಣೆ ಮಾಡದೆ ಸಮ್ಮನಿದ್ದದ್ದೇನು
ದೇವದೇವೇಶನ್ನ ಉತ್ತಮ ಕ್ರೀಡೆಗೆ ಆವನು ತುತಿಸಿ ನೆಲೆಗಂಡವನಾರು
ಕೋವಿದರರಸ ವಿಜಯ ವಿಠ್ಠಲರೇಯ
ಜೀವರ ವಿಭಕ್ತವ ಮಾಡುವ ಬಗೆ ನೋಡೊ ೨
ತ್ರಿವಿಡಿತಾಳ
ಒಣಗಿದ ಗಜಗಿನ ಕಾಯೊಳದರ ಬೀಜ
ಅನುಸರಿಸಿ ಇದ್ದಂತಾನಾದಿಯಿಂದ
ಗುಣತ್ರಯಾತ್ಮಕವಾದ ಲಿಂಗದೊಳಗೀ ಚೇ
ತನ ಪೊಂದಿಪ್ಪದೊ ಅಸಂಬಂಧದಲ್ಲಿ
ಮಿನುಗುವ ಕರ್ಮವ ಪ್ರಕೃತಿ ಕಾಲವೆಲ್ಲ ಸಾ
ಧನ ಮಾಡಲಿಲ್ಲೇಕೆ ಅಂದಿನಲ್ಲಿ
ಗುಣವಂತನಾದವ ಕರ್ಮಾದಿಗಧಿಕ್ಯ
ವೇನು ಪೇಳುವನೆ ಶ್ರೀ ಹರಿಯ ತೊರೆದು
ವನಜನಾಭನು ಸೃಷ್ಟಿ ಪ್ರಾರಂಭದಲ್ಲಿ ಜೀವ
ರನ್ನೆ ಪುಟ್ಟಿಸುವ ಲಿಂಗ ದೇಹದಿಂದ
ಘನವಾಗಿ ಜೀವಕೆ ಬಿಡದಂತೆ ತೋದವಾ
ಸನ ದೋಷಾದಿಯಲ್ಲಿ ಪಚ್ಛಿಸುವ
ತನುವಿನ ನೆಳಲಂತೆ ಹರಿಯಾಡಲು ಜೀ
ವನ ಪ್ರವರ್ತಿಸುವುದು ದ್ವಿವಿಧ ಕರ್ಮ
ವನಜಾಸನನಿಗೆ ಮುಖ್ಯ ಒಳಗೆ ಹೊರಗೆತಾನೆ
ಅನುದಿನ ವ್ಯಾಪಾರ ಮಾಳ್ಪ ಮಿಕ್ಕ
ಅನಿಮಿಷಾದಿಗಳಿಗೆ ತತ್ತದ್ವಾರರಿಂದ
ತಾನೆ ಚೇಷ್ಟಪ್ರದನಾಗಿ ಕರ್ತೃವೆನಿಪಾ
ಮನುಜನೊಬ್ಬನು ನೋಡು ಬಲು ವಿಧವಾದ ರಸ
ವನು ಕುಡಿಸಿ ಪಾನಪ್ರಭೇದವ
ಅನುವಾಗಿ ಮಾಡಿ ತಂದು ಹಚ್ಚಿ ವಸ್ತ್ರಕ್ಕೆ ದೀಪ
ವನೆ ಮುಟ್ಟಿಸಿದರದು ವಸನ ಸುಡದು
ಎಣೆಗಾಣೆ ಒಂದು ರಸ ವಿಶೇಷದಲಿ ಇಂಥ
ಗುಣ ಉಂಟಾಗಿದೆ ನೋಡು ಪ್ರತ್ಯಕ್ಷವು
ಗುಣಗಣಾಂಬುಧಿ ನಿತ್ಯ ನಿರ್ದೋಷ ಪ್ರಬಲ ಲ
ಕ್ಷಣ ಪೂರ್ಣ ವಿಙಙ್Áನ ನಿರ್ವಿಕಾರ
ತನಗೆ ತಾನೆ ಕುಣಿದು ಜೀವಿಗಳ ಕುಣಿಸುವ
ಅನಿಮಿತ್ತ ಬಾಂಧವ ಸರ್ವ ವ್ಯಾಪ್ತ
ಜನನ ಮರಣ ಅಹಿತ ವಿಜಯ ವಿಠ್ಠಲರೇಯ
ಚಿನುಮಯ ಮೂರುತಿ ಚೇತನಾಚೇತನ ಸ್ವಾಮಿ ೩
ಅಟ್ಟತಾಳ
ದೇಶ ಆಕಾಶ ವ್ಯಾಪಿಸಿಕೊಂಡು ಇದ್ದಂತೆ
ಶ್ರೀಶ ಜೀವನೊಳು ವ್ಯಾಪ್ತನಾಗಿದ್ದು ಸಂ
ತೋಷ ಪೂರ್ಣನು ಪ್ರಕೃತಿಯನು ಮನೆ ಮಾಡಿ
ಆ ಸೂಕ್ಷ್ಮ ದೇಹಕೆ ಲಿಂಗವ್ಯಾಜದಿಂದ
ಮೋಸವಗೊಳಿಸುವ ಮಾಯವ ಕಲ್ಪಿಸಿ
ತಾ ಸುಮ್ಮನಿರನೊ ಒಂದು ಕ್ಷಣವಾದರು
ಲೇಶ ಬಿಡದೆ ಬಹುಚರ್ಯ ಮಾಡುವನು
ವಾಸವವಂದಿತ ನಮ್ಮ ವಿಜಯ ವಿಠ್ಠಲ ಸ್ವಪ್ರ
ಕಾಶಕೆ ಪ್ರತಿಕೂಲ ಉಂಟೇನು ಮರುಳೆ ೪
ಆದಿತಾಳ
ವಾಙ್ಮನೋಗೋಚರ ಜ್ಞಾನಿಗಳಿಗೆ ಇದು
ರಾಗ ತೊರೆಯದವಗೆ ಮನಸಿಗೆ ಹತ್ತದು
ಹೀಗೆ ಹಾಗ್ಯಾಕೆಂದು ತಂದು ವಾದಿಸಿದರೆ
ಆಗುವುದೇನಯ್ಯ ಅವರಿಂದ ಫಲಿತಾರ್ಥ
ಭಾಗೀರಥಿ ಜನಕ ಪುಣ್ಯ ಪಾಪಕೆ ಕರ್ತ
ನಾಗಿಪ್ಪನು ನಿತ್ಯ ಸರ್ವಙ್ಞ ಶಿಖಾಮಣಿ
ಆಗಮ ಶ್ರುತಿಯಲ್ಲಿ ಒರದೊರದು ಪೇಳಿದೆ
ಭೋಗಿಸಬೇಕು ಜೀವ ಹರಿ ಇತ್ತ ದ್ವಿವಿಧ ಕರ್ಮ
ಜಾಗು ಮಾಡದೆ ತಳಿ ಪರಮಾತ್ಮ ಪಾಪದೂರ
ಭೂಗೋಳದೊಳಗೆ ವಿವರಿಸಿ ಪೇಳುವುದಕ್ಕೆ
ಸಾಗಿ ಸಾಗದು ಬುದ್ಧಿ ಸುಳಿಯಂತೆ ಸುತ್ತುತಿದೆ
ವೇಗದಿಂದಲಿ ಇನಿತು ಪೇಳಿದ ಕೃತಿ ಎಲ್ಲ
ಯೋಗೇಶ್ವರ ಹರಿ ಒಳಗಿದ್ದು ನುಡಿದದ್ದೆ
ಈಗಾಗ ಎನಸಲ್ಲ ವೈದಿಕ ಲೌಕಿಕ ಸರ್ವ
ಥಾ ಗುಣದಲ್ಲಿ ಗುಣಿಸಿ ಮೌನ ಪಿಡಿಯಬೇಕು
ನಾಗವೈರಿವಾಹನ ವಿಜಯ ವಿಠ್ಠಲ ಸುಮ್ಮ
ನಾಗಗೊಡನು ಸುಮ್ಮನಿಡುವನು ಇಚ್ಛೆ ಬೆರಿಸಿ ೫
ಜತೆ

ಹರಿಭಕ್ತರಾದವರು ಭಗವಂತನ ಅಪರೋಕ್ಷಾನುಭವದ

೮೩
ಧ್ರುವತಾಳ
ಪುಣ್ಯಪುರುಷರೆಲ್ಲ ಪರಮ ಸಂತೋಷದಲ್ಲಿ
ಮನ್ಯು ಮಿಕ್ಕಾದ ನಡತಿ ದೂರಮಾಡಿ
ಸನ್ಯಾಯದಲ್ಲಿ ಕೇಳಿ ಸತತ ಹಸ್ತವ ಮುಗಿವೆ
ಧನ್ಯನ ಮಾಡುವುದು ನಿತ್ಯದಲ್ಲಿ ಕಾ
ರುಣ್ಯದಳತೆಯಲ್ಲಿ ಕಡೆಯವನೆನ್ನದಿರೀ
ಶೂನ್ಯವಾದಿ ಮಾಯಾಮತದವನೆಲ್ಲಾ
ಅನ್ಯಥ ಪರರಿಗೆ ಚಾಲವರಿಯೇ
ದೈನ್ಯಪಾತ್ರಾ ಬಡುವೆ ಸುಜನರಿಗೆ
ಕಣ್ಣೆವೆ ಹಾಕುವಷ್ಟು ಕಠಿಣ ಉತ್ತರ ಸೌ
ಜನ್ಯರಿಗೆ ಸಲ್ಲ ತಿಳಿದು ನೋಡಿ
ಗಣ್ಯವೆ ಆದ್ಯರು ನಾರಾಯಣ ಯೋಗಿ
ಸನ್ಯಾಸಿ ವ್ಯಾಸಮುನಿ ವಾದಿರಾಜಾ
ಅನ್ಯೋನ್ಯವಾಗಿ ಕವನ ಪೇಳಿದರು ಆ
ನನ್ಯ ಭಕುತಿಯಿಂದ ಕ್ಷೀರವನಧಿ
ಕನ್ಯಾಪತಿಯ ಮನದಣಿಯ ಪಾಡಿ ಕೊಂಡಾಡಿ
ನ್ಯೂನವಾಗದಂತೆ ಅರ್ಚಿಸುತ್ತ
ಘನ್ನವಾದ ಪದವಿಯಲ್ಲಿ ಸೇರಿದರು
ಮುನ್ನೆ ದಾಸರು ಅವರ ಮಕ್ಕಳ ಸಹವಾಗಿ
ಚಿನುಮಯನ ನಾನಾ ಬಗೆ ಬಗೆ ಸ್ತುತಿಸಿ
ಚೆನ್ನ ಸದ್ಗತಿಗೆ ಐದಿದರು
ಅನಾಥ ಬಂಧು ಸಿರಿವಿಜಯ ವಿಠಲರೇಯನ್ನ
ಬಣ್ಣಿಸುವುದಕ್ಕೆ ಆವ ವಿಧವಾದರೇನು ೧
ಮಟ್ಟತಾಳ
ಯತಿ ಪ್ರಾಸ ವಡಿ ವಿಷಮ ಅಕ್ಷರಗಳು
ಅತಿಶಯ ಗಣಕೂಟ ಛಂದಸ್ಸು ಬಿಂದುನಾದ
ಮತಿ ಗುರುಲಘುವು ಆದಿ ಅಂತ್ಯವರಣ
ತತುತತು ಸ್ಥಾನಗಳು ಭೇದ ಪದಾರ್ಥವೆಲ್ಲ
ಕ್ಷಿತಿಯೊಳಗವರೆಲ್ಲ ಆವದು ನೋಡಿದರು
ರತಿಪತಿ ಜನಕನ್ನ ಕರುಣ ಕವಚ ತೊಟ್ಟು
ಸತತ ಕಾಮಾದಿಗಳ ಜಯಿಸಿದರು ನೋಡಾ
ಮಿತಿ ಇಲ್ಲದ ವಿಜಯ ವಿಠ್ಠಲನ್ನ
ನುತಿಸುವ ಜನರಿಗೆ ಮತ್ತಾವುದು ಭೀತಿ೨
ರೂಪಕ ತಾಳ
ಇಂಥ ಮಹಾತ್ಮರ ದಿವ್ಯ ಕವನದೊಳ
ಗೆಂತುಂಟೊ ಅಪಶಬ್ದ ಅಪ್ರಯೋಗಂಗಳ
ಕಂತು ಜನರನ್ಯ ಗ್ರಂಥದಲ್ಲಿಗೆ ಮನಸು ಮಾಡುವರೆ
ಎಂತಾಹುದೊ ನಮ್ಮ ಮಧ್ವಮತ ಪೊಂದಿದ
ಸಂತರು ವಿಮತಸ್ಥ ಪೇಳಿದದ್ದು
ಚಿಂತೆಗೆತಾರರು ಮದಸೊಕ್ಕಿ ತಿರುಗುವ
ದಂತಿಯಂದದಿ ಲೋಕ ಸಂಚರಿಪುದೊ
ಇಂತುಗುಣ ಮಿಕ್ಕಾದ ಬಗೆ ಬಗೆ ಲಕ್ಷಣಾ
ನಂತವಿದ್ದರೆ ಏನುಲೆಕ್ಕಿಸಾರೊ
ಚಿಂತಿತ ಫಲದಾಯ ವಿಜಯ ವಿಠ್ಟಲರೇಯನ
ಮಂತ್ರ ಪಠಿಸುವಂಗೆ ಮಾರಿಗಳ ಭಯವೇನೊ ೩
ಝಂಪಿತಾಳ
ಪ್ರತ್ಯೇಕ ಶೂರರು ಒಬ್ಬರ ಮೊರೆ ಬಿದ್ದು
ವಿತ್ತ ಗಳಿಸಿ ಬಿರಿದು ಪಡಕೊಂಬರೆ
ಎತ್ತಣತ್ತಣದೊ ಈ ಮಾತು ಕೇಳಿದರೆ ಸ
ಮ್ಮತವಾಗದು ಕಾಣೊ ಬಲ್ಲವರಿಗೆ
ಉತ್ತಮ ಶ್ಲೋಕನ್ನ ಕಂಡ ನಿಜದಾಸರಿಗೆ
ಹತ್ತು ದಿಕ್ಕಿನ ಒಳಗೆ ಎದರು ಉಂಟೇ
ಮುತ್ತಿಗೆಯೊಳಗೆ ಬಿದ್ದು ಎಣಿಸಿಗುಣಿಸದೆ ಸುರಗಿ
ಕಿತ್ತಿಕೊಂಡು ಪೋಗಿ ವೈರಿ ಬಲವ
ಒತ್ತಿ ಬೆಂಬೊತ್ತಿ ಕಂಡಕಡಿಗೆ ಓಡಿಸಿ
ಮುತ್ತಿನ ತುರಾಯ ಕಾಲ ಪೆಂಡೆ
ಮತ್ತೆ ಮುಂಡಾಸ ಪಾವಡ ಚಾಮರಛತ್ರ
ಮೊತ್ತ ಬಿರಿದುಗಳು ಲೆಖ್ಖವಿಲ್ಲದೇ ಪೊತ್ತು
ಪ್ರಥ್ವಿಯೊಳಗೆ ಜಿಗದಾಡಿ ಹರಿದಾಡಿ
ಹೊತ್ತು ಹೊತ್ತಿಗೆ ಪೂರ್ಣಬೋಧ ಲಕುಮಿಪತಿಯ
ಚಿತ್ತದಲಿ ಇಟ್ಟು ಯತಿವಡಿ ಗಣಗಳಲಿ ಇದ್ದ
ದೈತ್ಯರನೆಲ್ಲ ಅಳಿಸುವರು ಆಟಕೊಡದೇ
ಉತ್ತಮರು ವಿಕಲ್ಪರಾಗರೆಂಬುದು ಸಿದ್ಧ
ಶೃತ್ಯರ್ಥದಲ್ಲಿ ನಿರುತ ಪೇಳುತಿವರೋ
ಕತ್ತಲೆಯೊಳಗೆ ನಾಣ್ಯವನು ನೋಡಿ ಕೊಂಡಾಡುವವರು
ಅತ್ಯಂತ ಬೆಳಗಿನಲಿ ನೋಡುವದರಿದೆ
ತತ್ತಳಗೊಂಬುವುದೇನು ಅವನಾದರು ಹೀನ
ಉತ್ತರವನಾಡಿದರೆ ಅಲ್ಲಿ ವಾಸಾ
ತತ್ವನಿರ್ಧಾರಕರು ಆಧ್ಯರು ಮಿಗಿಲಾದ
ಸೋತ್ತಮರು ಪೇಳಿದ ನಾಮದಲ್ಲಿ
ಅರ್ಥವಾದವ ಮಾಡಿ ಶಂಕಿಸಿದರೆ ದೇ
ವತೆಗಳು ಮೆಚ್ಚರೊ ಸಂಗಡದಲೇ
ಮೃತ್ಯುದೇವತೆ ಹಲ್ಲು ಕಟಿದು ಕೇವಲವನ
ಹತ್ತಿಲೀ ಸುಳಿದು ಮಹಾಕೋಪದಲ್ಲೀ
ನಿತ್ಯ ಮುಕ್ತಾಶ್ರಯ ವಿಜಯ ವಿಠಲರೇಯನ
ಭೃತ್ಯರುಗಳ ಲೀಲೆ ಎಣಿಸಿದವನೇ ಮೂರ್ಖ ೪
ತ್ರಿವಿಡಿತಾಳ
ಹರಿದಾಸರು ಎಲ್ಲ ಒಂದಾಗಿ ಎನಗೆ
ಹರಿಯನಾಮಸ್ಮರಣೆ ಮಾಡಲಿಕ್ಕೆ
ಹಿರಿದಾಗಿ ಒಲಿದು ಮಹಹಿತವೆ ಚಿಂತಿಸಿ ಹೀಗೆ
ಕರುಣಾ ಮಾಡಿದರಯ್ಯಾ ಕರವ ಪಿಡಿದು
ಪರಮ ವಿಶ್ವಾಸದಲಿ ನುಡಿದೆ ಈ ಕವನವು
ಸರಿಬಂದರೆ ನೋಡಿ ಒಪ್ಪುವುದೂ
ಅರೆಮರೆ ಬಿಡದಿರೀ ನಾನೆಂಬುದು ತಾಳಿ
ದರೆ ಗತಿ ಇಲ್ಲವೊ ಎಂದೆಂದಿಗೇ
ಪರಮಾತ್ಮನ ಪದವ ಸೇರುವ ಜನರಿಗೆ
ಎರುಗುವುದು ಮನಕೆ ಹರುಷ ವರುಷಾ
ಸುರಗಂಗೆ ಯಾತ್ರಿಗೆ ಪೋಗುವಾಗಲಿ ಮನುಜ
ಭರದಿಂದ ಮಾರ್ಗವ ತಪ್ಪೆ ಲೋಕಾ
ಮರುಳಾರಿದರೇನು ಅವಗೆ ಯಾತ್ರೆ ಫಲ
ಬರುತ್ತದೊ ಇಲ್ಲೊ ಜಾಣರು ಪೇಳಿರೋ
ಹರಿಯ ನಾಮಸ್ಮರಣೆ ಪೇಳುವಾಗಲಿ ಬಂದು
ಚರಣ ಛಂದಸ್ಸು ಯತಿಪ್ರಾಸ ಭಂಗ
ಕೊರತೆಯಾದರೇನು ಇದರಿಂದಲಿ ಎನಗೆ
ದುರಿತ ಬಂಹಟ್ಟದು ಹರಿಯೇ ಬಲ್ಲಾ
ಅರಸುದೇಶ ಅನ್ಯಸ್ತ್ರೀಯರ ವರಣನೆ
ಪರಿ ಪರಿ ವಿಧದಿಂದ ವರ್ಣಿಪಂಗೆ
ಅರಸೂವ ನಾನಾ ಪುಸ್ತಕ ಪ್ರಮಾಣವ ನೋಡಿ
ಬರದು ಕಾಸಾವಿಸಿ ಬಟ್ಟು ಬಟ್ಟೂ
ತರುವಾಯ ಫ್

ಭಗವಂತನಾದ ಶ್ರೀಹರಿಯು ಎಂದಿಗೂ ಏಕಾಂಗನಾಗಿರುವುದಿಲ್ಲ.

೮೪
ಧ್ರುವತಾಳ
ಪುಣ್ಯವೆ ಪೋಯಿತೆಂಬ ನುಡಿಸಲ್ಲಾ ಎಲೊ ನಲ್ಲಾ
ಪುಣ್ಯವೆಂಬೊದು ಎಂತೊ ತಿಳಿಯದಯ್ಯಾ
ಪುಣ್ಯ ಪೋಗುವುದೆಂತೊ ಆವಾಗ
ಕಣ್ಣಿಗೆ ಕಾಣಿಸದು ಶಬ್ದಮಾತ್ರ
ಇನ್ನಿತು ಪುಣ್ಯವೆಲ್ಲ ಜ್ಞಾನಕಾರ್ಯವು ಮತ್ತೆ
ಘನ್ನ ಪಾಪಗಳು ಅಜ್ಞಾನ ಕಾರ್ಯ
ಅನಂತಕಾಲಕ್ಕೆ ಧ್ವಿ ವಿಧ ರೂಪಕೆ ನೋಡೆ
ಉನ್ನತವಾಗಿ ನೀನೆ ಸರ್ವದಲ್ಲಿ
ಬನ್ನ ಬಡಿಸುವ ಅಜ್ಞಾನ ಜ್ಞಾನಕ್ಕೆ ಸಂ
ಪನ್ನಾ ನಿರ್ದೋಷ ಮೂರ್ತಿ ನೀನೆ ವಿಷಯಾ
ಇನ್ನಿತಾಗಿರಲಿಕ್ಕೆ ಮಾಡಿದಾ ಪುಣ್ಯ
ಮುನ್ನೆ ಪೋಯಿತೆಂಬ ವಿನೋದವೆ
ಇನ್ನು ನಾನೇನೆಂಬೆ ಈ ಮಾತಿಗೆ ಪ್ರ
ಸನ್ನ ವದನಾಂಭೋಜ ವಿಮಲ ನಯನಾ
ಅನ್ಯ ಜನರರಿಂದ ಪಾಪ ಪುಣ್ಯವೆ ತಂದು
ಉಣ್ಣಿಪದಾಗುವದೆ ವಿಚಾರಿಸೆ
ಜನ್ಮಾದಿಗಳು ನಿನ್ನ ಅಧೀನವಾಗಿರಲೂ
ಇನ್ನೇನೊ ಇನ್ನೇನೊ ಮುಂದಣ ವಾರ್ತಿ
ಎನ್ನ ಮೊದಲು ಮಾಡಿ ಸರ್ವಜೀವರ ಮಧ್ಯ
ಚಿನ್ಮಯ ರೂಪದಿಂದ ಪ್ರವೇಶಿಸಿ
ಚೆನ್ನಾಗಿ ಅವರವರ ಸ್ವಭಾವದಂತೆ ಕಾ
ರುಣ್ಯದಿಂದಲಿ ನೀನೆ ಚೇಷ್ಟಿಗಳ
ಬಣ್ಣ ಬಣ್ಣದಲಿಂದ ಮಾಡಿಸುವನೆಂದು
ಅನಂತ ವೇದಗಳು ತುತಿಪವಲ್ಲೊ
ಬಿನ್ನಣದಲಿ ಅಂದು ಭೀಷ್ಮನಿಂದಾದಲಿ ಧರ್ಮಾರಾಯಾ
ಎನ್ನ ಒಡಂಬಡಿಸಿದೆ ಪ್ರಶ್ನೋತ್ತರಾ
ಬಣ್ಣಿಸ ಬಲ್ಲನೆ ನಿನ್ನ ಲೀಲೆಗೆ ಕೆಲವ
ರನ್ನ ಗೆಲಿಸುವೆ ಕೆಲವರ ಸೋಲಿಸಿ
ನಿನ್ನೊಳು ನೀನೆ ಕ್ರೀಡೆಯಾಡುವೆ ಎಲ್ಲ ಕಾಲ
ಮನುಜ ನಾನಾ ವಿಧ ರೂಪ ಧರಿಸೀ
ಅನ್ನಗೋಸುಗ ತಿರುಗ ಬೇಕಾದರೆ ರಾ
ಜನತನಕ ಪೋಗಿ ಕೇಳಲ್ಯಾಕೆ
ಮನೆ ಮನೆ ಬೇಡಿಕೊಂಡು ಪೊಟ್ಟಿಯ ಪೊರೆದು
ಧನ್ಯನಾದೆನೆಂದು ಇರಬಾರದೆ
ನಿನ್ನ ಸ್ಮರಣೆ ನಿನ್ನಾಧೀನವೆಂದು
ಬಿನ್ನಹ ಮಾಡಿಕೊಳಲ್ಯಾಕೆ ಜೀಯಾ
ಪುಣ್ಯ ಶ್ಲೋಕಮೂರ್ತಿ ವಿಜಯ ವಿಠ್ಠಲರೇಯಾ
ಮನ್ನಿಸು ಮುದದಿಂದ ಅಪರಾಧವೆಣಿಸಾದೆ ೧
ಅಟ್ಟತಾಳ
ತೃಣ ಔಷಧ ಗುಲ್ಮ ವನಸ್ಪತಿ ಮೊದಲಾದ
ಇನಿತು ಪದಾರ್ಥದಲ್ಲಿ ತತ್ವೇಶರ ಒಡನೆ
ವನಿತೆ ಸಂಗಡ ಬಿಡದೆ ವಾಸವಾಗಿ ಇದ್ದು
ದಿನ ದಿನಕೆ ಅದರ ಕಾರ್ಯ ನಡಿಸಿಕೊಡುವಾ
ಗುಣ ನಿಯಾಮಕ ಸದ್ಗುಣಗಣ ಸಂಪೂರ್ಣ
ವನಧಿ ಪಾಲಕ ಹರಿ ವಿಜಯ ವಿಠ್ಠಲರೇಯಾ
ಜನರ ಕುಣಿಸಿ ಜಗವ ಜೋಕೆ ಮಾಡುವ ದೈವಾ ೨
ತ್ರಿವಿಡಿತಾಳ
ನೀನುಂಡು ಮಿಕ್ಕದ್ದು ನಿನ್ನೊಡನೆ ಉಣುತಿಪ್ಪ
ಮಾನವ ವೈಷ್ಣವಗೆ ವಿಕಾರವೆ
ಮಾನುಷ್ಯನ್ನ ದೋಷವೆಂದಿಗಾದರು ಇಲ್ಲಾ
ಜ್ಞಾನಕ್ಕೆ ತಿರೋಹಿತ ವಾಗದಿದಕೋ
ಆನಂದ ಚಿತ್ತಕೆ ಆವಾಗ ಇದ್ದ ಅ
ಜ್ಞಾನ ಓಡುವುದಯ್ಯಾ ಸಾರೆ ಇರದೂ
ಧ್ಯಾನ ಪುಟ್ಟಿಸಿ ಕೊಟ್ಟು ಹರಿಯ ಪೂಜಿಸುವ ವಿ
ಜ್ಞಾನ ತಂದೀವುದೂ ಕೊಂಡಾಡಲೂ
ಪ್ರಾಣೇಂದ್ರಿಯಂಗಳ ತೃಪ್ತಿ ಸಂತೋಷ ಮನಸಿಗೆ
ಕಾಣ ಬಾರದ ಫಲವು ಪ್ರಾಪ್ತಿಯುಂಟು
ಇನಿತು ಇರಲಿಕ್ಕೆ ಜಡದಿಂದ ತೃಪ್ತಿಯೆಂದು
ನಾನಾ ಭವಣೆಬಡುವ ಮೂರ್ಖನವನೋ
ದೀನ ವೃತ್ತಿಯಿಂದ ಇಂತು ಭೋಜನ ಗೈಯೆ
ಹಾನಿ ಎಂಬೊದೆಲ್ಲೊ ಪುಣ್ಯಗತಿಗೆ
ಮಾಣದೆ ಬಿನ್ನೈಪೆ ತನ್ನ ಸಹಿತ ಸರ್ವ
ಪ್ರಾಣಿಗಳು ಉಂಬ ವಿಹಿತವೆಲ್ಲಾ
ನೀನೆ ಇತ್ತದ್ದು ಎಂದು ನೀನೆ ಉಂಡವನೆಂದು
ಮಾನವನೀ ಪರಿ ತಿಳಿದನಾಗೆ
ಏನೆಂಬೆ ಸಂಸ್ಕಾರ ಪುಟ್ಟಿದ ಮಾತುರದಿಂದ
ಮೇಣು ಸತ್ಪುಣ್ಯವು ಬರುವುದೊ
ಭಾನು ಒಂದೆಸೆಯಲ್ಲಿ ಉದಯವಾದ ಮೇಲೆ
ನಾನಾ ಠಾವಿಗೆ ರವಿಯ ಉದಯವ್ಯಾಕೆ
ಜ್ಞಾನಿಯಾದವ ನೋಡು ನಿಶ್ಚಯದಲಿ ತನ್ನ
ಮಾನಸದಲಿ ತಿಳಿದು ಜಪಿಸಬೇಕು
ಈ ನುಡಿಯಂತೆ ಸಮಸ್ತರಲ್ಲಿ ಸಿದ್ಧಾ
ಏಣಿಸಿ ತನ್ನಂತೆ ಗುಣಿಸುವರೂ
ದಾನವಾಂತಕರಂಗ ನಾನುಂಡ ಅನ್ನಕ್ಕೆ
ಹೀನಾಯವಾಹುದೇನೊ ಸೋಜಿಗವೊ
ದಾನಿಗಳರಸ ಸಿರಿ ವಿಜಯ ವಿಠ್ಠಲ ನಿ
ದಾನಿಸಲು ವಸ್ತ ನೀನಿಲ್ಲದೊಂದಿಲ್ಲಾ ೩
ಅಟ್ಟತಾಳ
ಮೊದಲು ನಮ್ಮವರಿಗೆ ಬಾಲಕನಾಗಿ ಪೋಗಿ
ಉದ್ದರಿಸಿದ ಮಾತಿಗೆ ನಗುತಲಿ ಅಂದೂ
ಪದವಿಯ ಒಲಿದಿತ್ತೆ ನಾನಾ ಪ್ರಕಾರ
ಅದು ಅಂಗೀಕರಿಸಿದೆ ತಿರುಗಿ ಬಿಡಲು ನೀನೆ
ಮುದದಿಂದ ಇತ್ತದ್ದು ಒದಗಿ ಭೋಗಿ
ಸದೆ ಪೋಗದು ಎಂಬೊ ಕಥೆಯಿಂದ
ವಿಧಿಯನ್ನೆ ತಿಳಿದು ಮತ್ತಾ ಭಾಗ್ಯ ಉಣಿಪನೆ
ಪದೋಪದಿಗೆ ಎನ್ನ ಪುಣ್ಯದಿಂದಾಗೋದೆ
ಪದುಮನಾಭ ನಿನ್ನ ಸಂಕಲ್ಪಕೆ ಎಂದು
ಎದುರಿಲ್ಲ ಮಹಾಙಙ್Áನಿಗಳ ನಿಷ್ಠಾ ಪುಣ್ಯ
ನಿಧಿಯಾಗಿ ಬಂದು ಸಹಾಯವಾಗಿದೆ ಕೃಪಾ
ನಿಧಿಯೆ ನಿನ್ನ ಭಕ್ತರ ದಯದಿಂದ
ಬದಿಯಲ್ಲಿಪ್ಪರು ಕೆಲಸಾರದೆ ಇದಕ್ಕೆ
ತ್ರಿದಶರಭಿಮಾನಿಗಳಾಗಿ ಇಪ್ಪರು
ಕ್ಷುಧೆಯ ಗೋಸುಗ ತುತ್ತುಮೆದ್ದ ಒಂದರಲಿ
ತದತದ ರಸಗಳು ಏಸಕ್ಕು ಮೆಲುವಾಗ
ವದನದೊಳಗೆ ವದನ ಪೊಂದಿ ಕೊಂಡಿಪ್ಪದು
ಮಧುರಾನ್ನದಲಿ ನಾರಾಯಣನಿರುದ್ಧ
ಇದರಂತೆ ನಿನ್ನ ಮೂರ್ತಿಗಳು ಸರ್ವವು ಉಂಟು
ಉದಯಾರ್ಕ ಸನ್ನಿಭ ವಿಜಯ ವಿಠ್ಠಲ ನೀನೆ
ಅಧಿಷ್ಠಾನದಲಿ ನಿಂದು ಮಾಡಿಸಲು ದೋಷವಾಹುದೆ ೪
ಆದಿತಾಳ

ತಿರುಪತಿಯ ಬೆಟ್ಟಕ್ಕೆ ಆನಂದಾದ್ರಿ, ವೆಂಕಟಾಚಲ

೫೩. ತಿರುಪತಿ
ರಾಗ:ಭೈರವಿ
ಧ್ರುವತಾಳ
ಪುಷ್ಕರಾದ್ರಿಯ ನೋಡಿ ಪುಣ್ಯವಂತರ ಕೂಡಿ |
ದುಷ್ಕರ್ಮಗಳ ಅಳಿದು ದುರ್ಜನ ಸಂಗ ಹಳಿದು |
ನಿಷ್ಕಾಮ ವರವೆ ಉಂಟು ನಿತ್ಯಾ ಮುಕ್ತಿಗೆ ಗಂಟು |
ದುಷ್ಕಾಲ ನಿಮಗಿಲ್ಲ ದುರ್ಲಭವೆನಿಸಲ್ಲಾ |
ನಿಷ್ಕಂಟಕರಾಗಿ ನಿರಯ ಗೆದ್ದು ಚನ್ನಾಗಿ |
ಪುಷ್ಕರಾವಿಡಿದು ಸತ್ಪುಣ್ಯಾರ ಕ್ರಮ ತಿಳಿದು |
ಪುಷ್ಕರಾದಿ ಕ್ಷೇತ್ರ ಎಂಟರೊಳಗೆ ಇದು |
ಪುಷ್ಕರಾಜಾಪ್ತಾನಂತೆ ಧರೆಯೊಳುವೊಪ್ಪುತಿದೆ |
ಪುಷ್ಕರಾದಿ ದ್ವೀಪಾ ತಿರಗಿದ ಫಲವು ನ |
ಮಸ್ಕಾರ ವಂದೇ ಪ್ರದಕ್ಷಿಣೆಯಿಂದ ಯಿಂದೀವದು |
ಪುಷ್ಕರಾಕ್ಷಾ ತಿಮ್ಮಾ ವಿಜಯವಿಠಲ ಕುಡಿತಿ |
ಪುಷ್ಕರಾನಿಯಮತಿ ಪುಷ್ಕಳವಾಗಿ ಕೊಡುವಾ ೧
ಮಟ್ಟತಾಳ
ಇದೇ ವಾರಣಾಸಿ ಉಧಧಿ ಬಂಧನಾ |
ಇದೇ ದ್ವಾರಕಾಪುರಿ ಪದುಮನಾಭಾ |
ಇದೇ ಗಯಾ ಪ್ರಯಾಗಾ ಯದುಕುಲ ಪತಿಕ್ಷೇತ್ರಾ |
ಇದೇ ರಾಮನ ನಗರಿ ಮಧುರಾ ಗೋಕುಲ |
ಇದೇ ಕುಂಜರಗಿರಿ ಸದಮಲ ಕುರುಕ್ಷೇತ್ರ |
ಇದೇ ಮಾಯಪಡುವಲಾ ಉದ ತೀರದ ಪುರು |
ಇದೇ ಸಕಲಕ್ಷೇತ್ರ ಇಧೆ ನಿರ್ಮಳ ಯಾತ್ರಾ |
ಇದಕೆ ಅಧಿಕವಿಲ್ಲ ಇದಕೆ ಸಮಾನವಿಲ್ಲ |
ಇದೇ ನಿರ್ವಾಣಕೆ ಮೊದಲು ಸೋಪನವೂ |
ಇದರಿಂದಾದ ಫಲ ಒದಗವು ಮತ್ತೆಲ್ಲಿ |
ಪದುಮಗರ್ಭನೈಯ್ಯಾ ವಿಜಯವಿಠಲತಿಮ್ಮಾ |
ಹದುಳವ ಕೊಡವನು ಪದೊಪದೊದಿಗೆ ನೆನಸೆ ೨
ತ್ರಿವಿಡಿತಾಳ
ಕೃತಯುಗದಲಿ ಇದೆ ವೈಕುಂಠವೆನಿಸೋದು |
ತ್ರೇತಾಯುಗದೊಳು ಅನಂತಾಸನ |
ಅತಿಶಯ ದ್ವಾಪರದಲ್ಲಿ ಶ್ವೇತದ್ವೀಪ |
ಚತುರಯುಗದಲ್ಲಿ ವರಗಿರಿಯೆ ಸಿದ್ಧ |
ಮತಿವಂತರು ಇನಿತು ತಿಳಿದು ಪೂಜಿಪರು ಭಾ |
ರತ ಖಂಡದೊಳು ಏಕಾಭಕುತಿಯಲ್ಲಿ |
ಕ್ರತು ಜಪತಪ ತೀರ್ಥ ಯಾತ್ರಿ ದಾನಾ ನಾನಾ |
ವ್ರತಗಳು ತತ್ತತ್ವಿಚಾರಾದಲ್ಲಿ |
ಶತಕಲ್ಪಮಾಡಿ ಶ್ರೀಕೃಷ್ಣಗರ್ಪಿಸಿದವಗೆ |
ಹಿತವಾಗುವುದೊಮ್ಮೆ ಶೇಷಾದ್ರಿಯಾತ್ರಿದು |
ರ್ಮತಿಗಳಿಗಾದರು ನಿಷ್ಫಲವೂ |
ಚತುರ ಮೊಗನು ಇದರ ಮಹಿಮೆಯೆಣಿಸಿ |
ಗತಿತಪ್ಪಿದವನಂತೆ ನಿಲ್ಲುವನು |
ಕ್ಷಿತಿಯ ಮಾನವರಿಗೆ ಸಾಧ್ಯವೆ ಎಣಿಸಾಲು |
ನುತಿಸಿ ಮಾತುರ ಪುಣ್ಯ ಪಡಕೊಂಬೋದು |
ಪತಿತ ಪಾವನ ತಿಮ್ಮಾ ವಿಜಯವಿಠಲ ಇಲ್ಲಿ |
ಸತತ ನೆಲಸಿ ಇಪ್ಪತಿರುವೆಂಗಳೆನಿಸಿ ೩
ಅಟ್ಟತಾಳ
ಗಿರಿಯ ಶೃಂಗಾರವ ವಿವರಿಸುವರಾರಿನ್ನು |
ಮಿರುಗುತಿದೆ ಪುಟಾಯರದ ಬಣ್ಣದ ಚಾಮಿ |
ಕರದಂತೆ ಸುತ್ತಲು ಚರಿಸುವ ಮೃಗ ಜಲ |
ಚರ ಖಗತತಿ ವಿಸ್ತರವಾಗಿವೊಂದೊಂದು |
ಪರಿ ಪರಿ ವರ್ಣವು ತರುಗಿರಿ ಫಲ ಬಳ್ಳಿಭರಿತವಾಗಿಪ್ಪವು |
ಸರಸವಾಗಿದ್ದ ಹೊದರು ಗುಂಡ್ಯಾ ಒಳ್ಳೇ ಪು |
ಷ್ಕರಣಿಗಳೆಲ್ಲಾ ಸುಂದರ ಶೃಂಗಗಳು ನೋಡೆ |
ಮೆರೆವುತಿದೆ ಸುರ ಗರುಡ ಗಂಧರ್ವ ಕಿ |
ನ್ನರ ಸಿದ್ಧ ಸಾಧ್ಯ ಕಿಂಪುರುಷ ಯಕ್ಷ ವಿದ್ಯಾ |
ಧರ ಮನು ಮನಿ ಭೂಸುರ ರಾಯರು ಎಲ್ಲ |
ಚರಿಸುತಿಪ್ಪರು ಈ ಪರ್ವತದೆಡೆಯಲ್ಲಿ |
ಪರಿಪರಿರೂಪವ ಧರಿಸಿಕೊಂಡು ಭಾ |
ಸುರ ವಿರಕುತಿಯಲ್ಲಿ ಸರಿಗಾಣೆ ಇಲ್ಲಿದ್ದ | ನರಗೆ ಭುವನೊಳು |
ಪರಿಪೂರ್ಣಗುಣಾಂಬುಧಿ ವಿಜಯವಿಠಲ ತಿಮ್ಮಾ |
ನಿರುತ ವೈಭವದಿಂದ ಹಿರಿದಾಗಿ ನಲಿವಾ ೪
ಆದಿತಾಳ
ಅನಂತ ಜನುಮಕೊಮ್ಮೆ ಆನಂದಗಿರಿಯ ಯಾತ್ರಿ |
ಆನಪೂರ್ವಕದಿಂದ ಮಾನವನು ಮಾಡಲು |
ಜ್ಞಾನವೆ ಕೊಡುವದು ಜ್ಞಾನಾದ್ರಿ ಇದು ಕಾಣೊ |
ಹೀನವಾಗಿದ್ದ ಪಾಪ ಕಾನನ ಸುಡುವದು |
ಶ್ರೀನಿವಾಸನೆ ಕೃಪೆ ತಾನೆ ಮಾಡಿ ಅವನ |
ಮಾಣದೆ ಪಾಲಿಸುವ ಈ ನಿಧಿಯಲಿ ಪಂ |
ಚಾನನ ದೇವತೆಗಳು ಜ್ಞಾನಾದಿಯಿಂದ ಮದ್ಯ |
ಪಾನಾದಿ ಪಾತಕವ ಹಾನಿಮಾಡಿಕೊಂಡು ನಿ |
ಧಾನರಾಗಿ ಒಪ್ಪಿದರು ಏನೆಂಬೆನಯ್ಯಾ ಇದರ |
ವೇಣು ವಿಚಿತ್ರಕ್ಕೆ ಪ್ರಾಣ ನಾಯಕ ತಿಮ್ಮಾ |
ವಿಜಯವಿಠಲ ಸದಾ |
ದಾನಿಗಳರಸನು ನೀ[ಯೆ]ನೆ ಸಾಕುವ ೫
ಜತೆ
ಅಪ್ರತಿಯಾತ್ರೆ ಇದು ಕಂಡವರಿಗಾಗದು |
ಸ್ವಪ್ರಕಾಶ ವಿಜಯವಿಠಲ ವೆಂಕಟಬಲ್ಲ ೬

ಎಲ್ಲ ಅನರ್ಥಗಳಿಗೂ ಮಾನವನ

೬೧
ಧ್ರುವತಾಳ
ಪೂ ಬಾಡದಂತೆನ್ನ ಕ್ಷೋಭಿಯನು ಪರಿಹರಿಸಿ
ಪೂಬಾಣನಯ್ಯ ಕುಬೇರವಂದ್ಯ
ನೀ ಬಂದು ವಾರಂವಾರ ಬಿಡದೆ ನಿನ್ನ ಮೃದು
ಶೋಭಾನ ಕಾರದಿಂದ ತಡವರಸಿ
ಶ್ರೀ ಬಿಂಬ ಮೂರುತಿಯ ಬಳಿಗೆ ಸುಳಿವಾಗೆ
ಲಾಭವೆ ಕೋಟಿ ಕೋಟಿ ಅರ್ಬುದವು
ಕ್ಷೋಬಾಣ ವಿಜಯ ವಿಠ್ಠಲನೆ ನಿನ್ನ ನಾಮ
ಆಭರಣಗಳೆ ಎನ್ನ ಕರ್ಣಯುಗಳಕ್ಕೆ ೧
ಮಟ್ಟತಾಳ
ಕಡಿಯಲು ಕೊನೆಯಿಂದ, ಬುಡನಾಶನವಲ್ಲ
ಬುಡ ಹೊಯ್ದರೆ ಕೊನೆ ಒಡನೆ ಒಣಗುವದು
ದೃಢವಾದ ಅಹಂಕಾರ ಕಡಿದರೆ ಬಿಂಕದ
ಬಿಡಿ ಪಾಪಗಳೆಲ್ಲ ಅಡಗಿ ದೂರಾಗೋವು
ತಡಿಯದೆ ವಿಶಿಷ್ಟ ವಿಜಯ ವಿಠ್ಠಲ ನಿನ್ನ
ಅಡಿಗಳ ರುಚಿದೋರಿ ಬಿಡಿಸುವದಹಂಕಾರ೨
ರೂಪಕತಾಳ
ಅಹಂಕಾರವೆಂಬೊ ಪಾಪಿಯ ಬೆನ್ನು ಬಿದ್ದರೆ
ಅಹಂಕಾರವಲ್ಲದೆ ಒಂದಿಷ್ಟು ಸುಖವಿಲ್ಲ
ಅಹಿವಾನು, ತಾನಾಗಿ, ಧರ್ಮದಾಯದ ಗುಣ
ವಿಹಿತವಾಗಿದ್ದ ಕರ್ಮವ ತಪ್ಪಿಸಿ
ಗೃಹ ದೇಹ ಎನ್ನದು ಎನ್ನದು ಎಂದೆಂಬೊ
ಕುಹಕ ನುಡಿಗಳಿಂದ ನರಕಕ್ಕೆ ಹಾಕುವುದು
ಮಹಶಕ್ತಿ ವಿಜಯ ವಿಠ್ಠಲ ನಿನ್ನ ಕರುಣ
ನೇಹದಲ್ಲಿ ಇನ್ನು ನಿನ್ನವನೆನಿಸೊ ೫
ಝಂಪೆತಾಳ
ನೀನಿತ್ತ ಸುಕೃತವೊ ನೀನಿತ್ತಾಗ್ರಜನನ
ನೀನಿತ್ತ ಸೌಭಾಗ್ಯ ನೀನಿತ್ತ ಪದವಿ
ನೀನಿತ್ತ ಸತಿಸುತರು ನೀನಿತ್ತ ಸಂಬಂಧ
ನೀನಿತ್ತ ತುರಗಾದಿ ಸಕಲ ಒಡವೆ
ನಾನು ಭುಂಜಿಸಿ ನಿನಗೆ ಅರ್ಪಿಸುವೆನೆಂದೆನುತ
ಆನಂದದಲಿಯಿದ್ದ ಜೀವನವನ್ನು
ತಾ ನೂಕಿ ತಾನೆ ಧೊರೆ, ತನ್ನ ಪೌರುಷವೆಂದು
ಹೀನ ಶ್ರೇಷ್ಠತ್ವದಲಿ ಬಾಳುತಿದೆಕೊ
ಪ್ರಾಣನಿಲಯ ನಾಮ ವಿಜಯ ವಿಠ್ಠಲ ನೀನೆ
ಮಾಣಿಸೊ ಅದಕ್ಕೆ ನಾನೆಂಬುದ ಬಿಡಿಸೊ ೪
ತ್ರಿವಿಡಿ ತಾಳ
ಅವನಾದರೆ ಇನಿತು ಕೇಡಿಲ್ಲ
ಇವನು ಇದ್ದರೆ ಸುಮ್ಮನಿರುವನಲ್ಲ
ಇವನ ಸಹಾಯದಿಂದಲೆ ಕಾಮಾದಿಗಳು
ಆವಾವ ಕರ್ಮಕ್ಕೆ ಎಳೆದೊಯ್ದು ಇಡು-
ತಿವೆ ಆ ಭಾಗ್ಯ ಒಲ್ಲೆ ಇವನ ಉಪಹತಿ
ಕಾವು ತಗ್ಗಿಸುವುದು ಇಲ್ಲದಿರೆ ಎನಗೆ
ಬೇವು ತಿಂದು ಬಿಸಿನೀರು ಕುಡಿಸಯ್ಯ
ಭಾವ ವಿಜಯ ವಿಠ್ಠಲ ಈ ವಿಚಾರ ಸಿದ್ಧ೫
ಅಟ್ಟತಾಳ
ಪೋಗು ಎಂದರೆ ಪೋಗುವುದಲ್ಲ ಕಂಡಲ್ಲಿ
ನೀಗುವೆನೆಂದರೆ ತನ್ನ ವಶವಲ್ಲ
ತ್ಯಾಗವಿತ್ತೆನೆನೆ ವಸ್ತಾ ಒಡಿವೆಯಲ್ಲ
ಸಾಗಿಸುವೇನೆನೆ ಭಾರ ಕಾಣಿಪುದಿಲ್ಲ
ಆಗಾರದೊಳಗೊಂದು ಮದದಾನೆ ಸೇರಿಕೊಂ
ಡಾ ಗಿಡಗಳನೆಲ್ಲ ಕೆಡಿಸುವಂತೆ
ಪೂಗೋಲ ಉಳಿದಾದ ದುರುಳರ ಒಡಗೊಂಡು
ತಾ ಗರ್ವದಿಂದ ಇಂತಿದಕೊ
ವೇಗವತಿ ನಾಮ ವಿಜಯ ವಿಠ್ಠಲ ವೇಗ
ಮೂಗುದಾಣ ಇಕ್ಕಿ ಮೊಗ ಮಾಡಿಪುದು೬
ಆದಿತಾಳ
ಮದವಾದ ಪದವಿಯನೊಲ್ಲೆ
ಪದಾರ್ಥ ಒಲ್ಲೆ ಪೌರುಷ ಒಲ್ಲೆ
ಒದಗಿದ್ದ ಬಾಹಿರದಲ್ಲಿ ಈಗ ಅಧಿಕ ಐಶ್ವರ್ಯಗಳೊಲ್ಲೆ
ಬದಿಯಲ್ಲಿ ಇದ್ದ ಅಹಂಕಾರವನು ಒದೆದು
ಹುದುಗಿಸಿ ಮೊಗದೋರದಂತೆ
ಇದೆ ಭಾಗ್ಯವ ಬೇಡಿ ಬರುವೆ
ಮುದದಿಂದ ಕರುಣಿಸಬೇಕು
ಪದುಮಗರ್ಭ ವಿಜಯ ವಿಠ್ಠಲ ಸದಮಲ ಮೂರ್ತಿ ನಿನ್ನ
ಪದುಮ ಪಾದ ಸೇವೆಯನುಗಾಲ
ಹೃದಯದಲ್ಲಿ ದೊರೆಯಲಿ ೭
ಜತೆ
ಮಂಡೆಯಲಿ ಮುಡಿದ ಪೂಮಾಸದಂತೆ ಕಾಯೋ ಉ-
ದ್ದಂಡ, ವಿಜಯ ವಿಠ್ಠಲ ಅಹಂಕಾರವ ಕುಟ್ಟಿ೮

ಯಾವ ಬಗೆಯಾದ ಪೂಜೆಯನ್ನು

೬೦
ಧ್ರುವತಾಳ
ಪೂಜೆ ಯಾವುದು ನಿನಗೆ ಮಾಜದೆ ಪೇಳು ಸರ
ಸೀಜ ನಾಭನೆ ಪೂರ್ಣ ತೇಜೋಮಯನೆ
ಗೀಜಗನ ಕೈಯಿಂದ ಮೂಜಗ ಇರುವಂಥ
ರಾಜಧಾನಿ ಮಾಡೆನಲು ಸೋಜಿಗವಲ್ಲೊ
ಈ ಜಗದೊಳಗುಳ್ಳ ಜಡದ್ರವ್ಯದಿಂದ
ಗೋಜು ಬೀಳಲಾರೆನೊ ಜೂಜುಗಾರ
ಭೋಜಕುಲದೊಡೆಯ ವಿಜಯ ವಿಠ್ಠಲ ನಿನ್ನ
ಬೀಜ ಮಂತ್ರ ಉಳ್ಳರೆ ಕುಜನನಾ ನೀಗುವೆನೊ ೧
ಮಟ್ಟತಾಳ
ಈ ಯಗ್ರೋದಕವೆ ಈಯಭಿಷೇಕವೆ
ಈ ಯಂಬರದೊಳಗೆ ಈಯಾಭರಣವೆ
ಈಯಡವಿಯ ತುಲಸಿ ಈಯಾರೋಗಣೆಯ
ಈಯಾರತಿಯೇ ಈಯಾರಾಧನಿಯೇ
ಈಯತಿಶಯಗಳೆ ಈಯ ಬಲ್ಲವೆ ಗತಿ
ಮಾಯಾರಮಣ ಹರಿ ವಿಜಯ ವಿಠ್ಠಲ ನಿನ್ನ
ಮಾಯಾಬಾರದನಕ ಮಾಯ ಬಿಡದು ಕಾಣೊ ೨
ತ್ರಿವಿಡಿ ತಾಳ
ಆಚಾರವನು ಮಾಡೆ ಅದರಿಂದ ಫಲವಿಲ್ಲ
ವಾಚಾವಂತನಾದಡೆ ಏನು ಫಲವೊ
ಊಚನಾಗಿ ಬೆಳೆದು ಹರಿಯ ನೆನಸಿದರಿಲ್ಲ
ಸೂಚನೆ ತಿಳಿದು ಸಂಚಾರ ಮಾಡಲು ಇಲ್ಲ
ಲೋಚನಗಳು ಮುಚ್ಚಿ ತಪಸು ಗೈದರೆ ಇಲ್ಲಾ
ಲೋಚನೆ ಹಗಲಿರುಳು ಮಾಡೆ ಇಲ್ಲ
ಭೂಚೋರಹರ ಸವ್ಯಸಾಚಿ ಸಾರಥಿವೇದ
ಗೋಚರ ಗೋವಿಂದ ವಿಜಯ ವಿಠ್ಠಲ ನಿನ್ನ
ಯೋಚನೆ ಯೋಚನೆ ಒಳಗುಳ್ಳ ಭಕುತಿ ದೊರೆಯದನಕ೨
ಅಟ್ಟತಾಳ
ಭಕುತಿಯ ಕಾರಣ ಮುಕುತಿದಾ
ಯಕ ನಿನ್ನರ್ಚಕನಾಗುವುದಕ್ಕೆ
ಅಖಿಳ ಕರ್ಮಂಗಳ
ನಿಕರದಿಂದಲಿ ಸಾಧಕವಲ್ಲವೆಂದಿಗೂ
ಶುಕ ಪುಂಡರೀಕ ಶತಮಖ ಶೌ
ನಕ ಬಲಿ ರುಕುಮಾಂಗದ ಕಪೀಶ
ಸುಖದ ಸನಕಾದಿಗಳಕಳಂಕ ವಿದೂರ ಕ-
ನಕ ಕಶ್ಯಪ ಕುಮಾರ
ನಕುಲ ಜನಕ ಭೂಪಾ
ಲರ ಭೀಷ್ಮ ಅಕುಹಕ ರಕ್ಕಸನಾಯಕ ಧ್ರುವ
ಸಕಲ ಭಕುತರೆಲ್ಲ ಲಕುಮಿನಾಯಕ ಪೂರ್ಣ
ಭಕುತಿ ವಿರಕುತಿಲಿ ಮುಕುತಾರ್ಥ ಸುಖದಯ್ಯ
ಸಕಲ ಭಕುತನಾನಕಟನಾದರೆ ಮೌ
ಕ್ತಿಕದ ಸರಕೆ ಬಂದದರೆಧಾರಾ
ಏಕವೂ ಮನಕೆ ಬಪ್ಪದು ಕಾಯೊ
ಬಕಾಸುರಾಂತಕನುತ ವಿಜಯ ವಿಠ್ಠಲ
ಲೋಕಾಂಬಕ ಪ್ರಕಾಶಿತ ಮಹಿಮ ೪
ಆದಿತಾಳ
ಶ್ರೀಶ ಪುರಂದರ ದಾಸರ ಪಾದವನ್ನು
ಏಸೇಸು ಜನ್ಮದಿಂದ ಲೇಸಾಗಿ ನಂಬಿದಂಥ
ದಾಸನು ನಾನಯ್ಯ ಹಲವು ಬಗಯಿಂದ
ಘಾಕಿ ಬೀಳಲಾರೆ ಕರ್ಮ
ಬ್ಯಾಸರಿಕೆಯಿಂದಲಿ ಮನಸು ನಿಲಿಸಲಾರೆ ದೇವ
ಸಾಸಿರಕ್ಕಾದರು ನಿನ್ನ ಮೀಸಲ ನಾಮವ ನೆ
ನೆಸುವಂತೆ ಭಕುತಿಯಿತ್ತು
ನೀ ಸಲಹ ಬೇಕು ಒಡೆಯ
ದೇಶದೊಳಗೆ ನಾನೊಬ್ಬನೆ ಬಲು
ದೋಷಿ ಆಶಾ ಪಾಶಬದ್ಧ
ಕ್ಲೇಶನಾಶ ಬಿಡಿಸುವಲ್ಲಿ
ನೀ ಸಮರ್ಥನು ಕಾಣೊ
ದಾಸರಿಗೆ ನಿತ್ಯ ಕರುಣಿ ವಿಜಯ ವಿಠ್ಠಲರೇಯ
ಈಸು ಬಗೆಯಿಂದಲಿ ಬಿನ್ನೈಸಿದೆನೊ ಲಾಲಿಪುದು೫
ಜತೆ
ಬೀಜ ಮಂತ್ರವ ಭಕುತಿಯಿಂದ ನೆನೆದ ಮೇಲೆ
ಪೂಜೆ ಎಂಬುದೇನೊ ವಿಜಯ ವಿಠ್ಠಲದಾತ ೬

ಭಗವಂತನ ಶಕ್ತಿ, ಸಾಮಥ್ರ್ಯ,

೧೦೦
ಧ್ರುವತಾಳ
ಪೂರ್ಣಗಣ್ಯಾ ಗುಣಾರ್ಣವ ನವಮೋಹನ್ನಾ
ಸ್ವರ್ಣಜ್ಯೊತಿ ಸಕಲ ಜೀವಜಡರ ಒಡೆಯಾ
ವರ್ಣಿಸಬಲ್ಲೆನೆ ನಿನ್ನ ಮಾಯಾ ನಿತ್ಯಾ
ವರ್ಣದಿಂದ ಕರಿಸಿಕೊಂಬುವನೇ ಸೂ
ಪರ್ಣ ವಾಹನಾ ಧರ್ಮಸ್ಥಾಪ ಚತುರಾ
ವರ್ಣಾಶ್ರಮದಲ್ಲಿ ನೀನೆ ನೇಮನನಾಗಿ
ನಿರ್ಣಯ ಕರ್ಮಂಗಳ ಮಾಡಿಸುವೆ
ನಿರ್ನಯದಲ್ಲಿ ನಿನ್ನ ಕ್ರೀಡೆಯ ತಿಳಿದು ಸಂ
ಕೀರ್ಣವುಳ್ಳವರ ಕೈಯ ಪಿಡಿದು
ದುರ್ನಡತಿಯ ಬಿಡಿಸಿ ಸಾಧನಸಂಪತ್ತು
ಪೂರ್ಣವಾಗಿ ಮಾಡಿಸುವ ಮಧುಸೂದನಾ
ಕರ್ನದ್ವಾರದಿ ಪೊಕ್ಕು ಬಲುಕಾಲದ ಕರ್ಮ
ಚೂರ್ಣ ಮಾಡಿ ಕಳೆವ ಚತರಾವಟದ
ಪರ್ನ ಪರಿಯಂಕ ವಿಜಯ ವಿಠ್ಠಲ ಸೂ
ವರ್ನ ಸಂತತ ಮುಖ್ಯಪ್ರತಿಪಾದ್ಯ ವೇದ ವೇದ್ಯಾ ೧
ಮಟ್ಟತಾಳ
ನಿನ್ನ ಕೀರುತಿ ನಿನ್ನ ಮೂರುತಿ
ನಿನ್ನ ಕೀರ್ತನೆ ನಿನ್ನ ಪ್ರಾರ್ಥನೆ
ನಿನ್ನ ಚರಿತೆ ನಿನ್ನ ವಾರಿತೆ ನಿನ್ನ ಶಕುತಿ ನಿನ್ನ ಯುಕುತಿ
ನಿನ್ನ ವ್ಯಾಪುತ ನಿನ್ನ ಗುಪತಾ ನಿನ್ನ ವ್ಯಕುತಿ ನಿನ್ನ ಭಕುತಿ
ನಿನ್ನ ಧೈರ್ಯ ನಿನ್ನ ಶೌರ್ಯ
ನಿನ್ನ ಕಾರ್ಯ ನಿನ್ನ ಚರಿಯಾ
ನಿನ್ನ ದೊರೆತನ ನಿನ್ನ ಹಿರೇತನ
ನಿನ್ನ ರೂಪ ನಿನ್ನ ಸಲ್ಲಾಪ
ನಿನ್ನ ಮಾಯಾ ನಿನ್ನ ಸಹಾಯಾ
ನಿನ್ನ ಸ್ನೇಹಾ ನಿನ್ನ ಮೋಹಾ
ನಿನ್ನ ನಿರ್ಗುಣಾ ನಿನ್ನ ತ್ರಯಗುಣಾ
ನಿನ್ನ ಧರ್ಮಾ ನಿನ್ನ ಮರ್ಮಾ
ನಿನ್ನ ಧೈರ್ಯ ನಿನ್ನ ವೀರ್ಯಾ
ನಿನ್ನ ಸಿದ್ಧಿ ನಿನ್ನ ಬುದ್ದಿ
ನಿನ್ನ ವಿನೋದಾ ನಿನ್ನ ಆನಂದಾ
ನಿನ್ನ ನೋಟಾ ನಿನ್ನ ಆಟಾ
ನಿನ್ನ ಭಯವು ನಿನ್ನ ನಯವು
ನಿನ್ನ ಪೊಳವು ನಿನ್ನ ಕಳವು
ನಿನ್ನ ಹಮ್ಮು ನಿನ್ನ ಸೊಮ್ಮು
ನಿನ್ನ ಕೋಪಾ ನಿನ್ನ ತಾಪಾ
ನಿನ್ನ ಕುರುಹು ನಿನ್ನ ಅರುಹು
ನಿನ್ನ ಕರುಣಾ ನಿನ್ನ ಕರುಣಾ
ನಿನ್ನ ನಗೆ ನಿನ್ನ ಬಗೆ ಇನ್ನು ಎಣಿಪರಾರು
ಅನಂತ ಅನಂತ ಆನಂದ ನಂದಾ
ಅನ್ನ ಆನಂದ ಪುಣ್ಯಾಗ್ರಗಣ್ಯ ಅನಿರ್ವಿಣ್ಯ
ಧನ್ಯಾ ವನಧಿ ಕನ್ಯಪತಿ ಸೌ
ಜನ್ಯ ಅನುಗಣ್ಯ ಮಾನ್ಯ ಮಾನ್ಯ ಬೇ
ಬೆನ್ನಾಗಿಪ್ಪ ವಿಜಯ ವಿಠ್ಠಲಾ
ಅನಂತ ರೂಪಾ ಅನಂತ ರಮಣಾ ೨
ತ್ರಿವಿಡಿ ತಾಳ
ಹಿಂದೆ ಈ ಶರೀರವಿದರೊಳು ಮನ ಹತ್ತು
ಇಂದ್ರಿಯಂಗಳು ಅಲ್ಲೆ ತದ್ಗತವಾಗಿಪ್ಪ
ನಂದಾ ತಾತ್ವಿಕರಯ್ಯಾ ಬೊಮ್ಮಾದಿಗಳ ಸಹಿತ
ಒಂದೊಂದು ವ್ಯಾಪಾರದಲ್ಲಿ ಸ್ಥಿರವಾಗಿ
ಪೊಂದಿದ್ದರಲ್ಲದೆ ತೊಲಗಿ ಪೋದವರಲ್ಲ
ಅಂದೆ ಇಂಥಾದ್ಯಾಕೆ ಆಗದ್ದೇನೋ
ಇಂದಿರಾಪತಿ ನೀನೆ ಇದ್ದು ಇಲ್ಲದಂತೆ
ಮಂದಮತಿಗೆ ತಿಳಿವುದಲ್ಲಾಡಿದೋ
ಇಂದು ವ್ಯಕ್ತನಮಾಡಿ ಎನ್ನೊಳಗೆ ನೀನು
ನಿಂದು ಪೂಜೆಯಗೊಂಬೆನೆಂಬ ಹರುಷದಲ್ಲಿ
ಕುಂದದೆ ಜಗದೊಳು ತೋರಿದಂತಾಯಿತು
ಅಂದಿದ್ದವನಲ್ಲದೆ ಪೊಸದಾದುದೇನು
ಸಂದೇಹ ಸಲ್ಲದು ಎನಗೆ ನಿನ್ನಲೀಲೆ
ಬಿಂದು ಮಾತುರ ನೀನೆ ತಿಳುಹಲಾಗಿ
ಗಂಧ ಕಸ್ತೂರಿ ಲೇಪ ವಿಜಯ ವಿಠ್ಠಲ ಹೃದಯ
ಮಂದಿರದೊಳಗಿಪ್ಪ ಪರಮಪಾವನ ರೂಪಾ ೩
ಅಟ್ಟತಾಳ
ಇದರಂದದಲಿ ಶುದ್ದ ಜನರು ಕರೆದು ನಿತ್ಯಾ
ಮಧುರೋಕ್ತಿಯಿಂದ ಭೋಜನ ಮಾಡಿಸಿದರೆ ಹ
ತ್ತದು ಎಂದು ನಾನಿಂದು ಜರಿದು ಬಿಟ್ಟಿದ್ದೇನೆ
ಮೊದಲಿಗೆ ಸುಖ ಬಂದು ಪ್ರಾಪುತವಾದರೆ
ಅದನು ಬಲ್ಲೆನೆಂಬ ಮನುಜ ಮತ್ತಾವನಾ
ಚದುರಾ ನೀನಹುದೋ ಏನೆಂಬೆ ನೀನು ಮಾ
ಡಿದ ಮಾಟಕ್ಕೆ ಬಲು ಸೋಜಿಗವಾಗಿದೆ
ಇದೆ ಸುಖ ಬೇಕೆಂದು ಹಾರೈಸಿದವನಲ್ಲಾ
ಅಧಿಷ್ಠಾನದಲ್ಲಿ ನಿಂದು ಮಾಡಿ ಮಾಡಿಸುವೆ
ಸದರವಿಲ್ಲದೆ ಸುಖತರವಾದರೇನು ಮ
ತ್ತದು ದುಃಖವಾದರು ಮಹಾ ಒಳಿತಯ್ಯಾ
ಇದು ಅದು ಎನ್ನ ಸ್ವಾತಂತ್ರವೆಂದೆನದಲೆ
ಒದಗಲಾರವು ಕೇಳು ಪಾಪಪುಣ್ಯವೆರಡು
ಪದುಮೇಶ ವಿಜಯ ವಿಠ್ಠಲ ವಿಶ್ವರೂಪಾ
ಸದಮಲಾನಂದ ಸಜ್ಜನ ಪ್ರೀಯಾ ಮುನಿಗೇಯಾ ೪
ಆದಿತಾಳ
ಒಂದು ಹೆಜ್ಜೆ ಇಡಲು ಒಂದು ಮಾತಾಡಲು
ಒಂದು ವಸ್ತ್ರ ಪಿಡಿಯಲು ಒಂದು ಪರಿಮಳ ಕೊಳ್ಳಲು
ಒಂದು ಸಂಗತಿ ಐದಲು ಒಂದು ತುತ್ತು ಮೆಲ್ಲಲು
ಒಂದೊಂದು ಈಪರಿ ಅಂದವಾದರು ನ
ನ್ನಿಂದವಾದುದೇನೋ ಚಂದವಾಗಿ ನೋಡು
ಒಂದೊಂದರೊಳಗೆ ಬಹುಮಂದಿಯ ವ್ಯಾಪಾರ
ಪೊಂದಿರಲಾಗಿ ನೀನಂದ ಬಗೆಯೇನು
ವಂದಿಸುವೆನು ನಮ್ಮ ವಿಜಯ ವಿಠ್ಠಲರೇಯಾ
ಮಂದನಾದವನಿಗೆ ಬಂಧನದೊಳಗಿಡುವೆ ೫
ಜತೆ
ವಿಷಯಂಗಳಲ್ಲಿ ಚರಿಸಿದರೇನು ನಿನ್ನ
ಪೆಸರುಗೊಂಡರೆ ಪುಣ್ಯ ವಿಜಯ ವಿಠ್ಠಲರೇಯಾ ೬

ಪ್ರದಾನ ಮಂತ್ರ ಎಂದರೆ ಓಂ ಕಾರ

೫೭
ಧ್ರುವ ತಾಳ
ಪೆತ್ತಾ ಸಾವಿತ್ರಿ ತನ್ನ ತನುಜಂಗೆ ಪ್ರೀತಿಯಿಂದ
ಎತ್ತಲು ಪೋಗಗೊಡದೆ ಹಸಿದಾನೆಂದು
ಉತ್ತಮಾನ್ನವ ಮಾಡಿ ಕುಳ್ಳಿರಿಸಿಕೊಂಡು ಬಿಡದೆ
ತುತ್ತುಗಳನ್ನು ಮಾಡಿ ಉಣಿಸುತ ತಾನು
ಹತ್ತಾದುಯೆಂದು ತಲೆದೂಗಿ ಎದ್ದು ಪೋಗಲು
ಮತ್ತೆ ಕರತಂದು ನ್ಯಾವರಿಸೀ
ಅತೀಶಯವಾಗಿ ರಂಬಿಸಿ ನಾಲ್ಕು ಕಡೆ
ಸುತ್ತಲು ತೋರಿ ತೋರಿ ಒಂದೊಂದು ತುತ್ತಾ
ತುತ್ತನೆ ಮಾಡಿ ಒಲ್ಲೆನೆಂದರೆ ಅವನ
ನೆತ್ತಿಯ ಪಿಡಿದು ಚಂಡಿಕೆ ನೆವದಿಂದ
ಇತ್ತ ಪೇಳಾದೆ ಕವಳಾ ಬಾಯಿಗೆ ನ
ಗುತ್ತ ಮೋಹದಲ್ಲಿ ಬೇಸರದೆ
ಚಿತ್ತಜನಯ್ಯಾ ನೀನೆ ಆವಾವಕಲ್ಪಕ್ಕೆ
ಹೆತ್ತತಾಯಿಯಂತೆ ಇಪ್ಪ ಮಹಿಮಾ
ಎತ್ತಣ ಪ್ರಯೋಜನವಿಲ್ಲಾ ಅದೃಷ್ಟವೆ
ರತ್ತುನವೇ ವ್ಯಾಪ್ತಿ ವಿಷ್ಣುರಹಸ್ಯದಿ
ಬಿತ್ತರಿಸಿ ನಿನ್ನ ಬಗೆ ಬಗೆಯಿಂದ ನಾನು
ತುತ್ತಿಸಿ ಕೊಂಡಾಡಿದೆ ಎನಗೆ ಇನಿತು
ವೃತ್ತಿಯ ಕಲ್ಪಸಿದ್ದು ಆಗದೆಂದು ಬಿನ್ನೈಸೆ
ಚಿತ್ತಕ್ಕೆ ತಾರದಿಪ್ಪ ಬಗೆ ಆವುದೋ
ಹತ್ತಿಲಿಯಿದ್ದ ತಾಯಿ ಮಗನಿಗೆ ಉಣಿಸಿದಂತೆ
ನಿತ್ಯ ತೊಲಗಲೀಯದೆ ಉ[ಣಿಪ] ದೇವಾ
ತತ್ತಳಗೊಂಬಾದೇನು ಸರ್ವಕಾಲದಲ್ಲಿ ನೀ
ನಿತ್ತದ್ದು ಉಂಡು ತೀರಿಸಲೇಬೇಕು
ಬತ್ತಿಯ ಚಾಚಿದಂತೆ ದಿನದಿನಕೆ ಎನ್ನ ಭಾರ
ಪೊತ್ತು ಅತ್ಯಂತ ಶಕ್ತ ಸರ್ವೋತ್ತುಮಾ
ಭೃತ್ಯವತ್ಸಲ ನೀನಲ್ಲದೆ ಒಬ್ಬರಿಲ್ಲಾ
ಸತ್ಯವೆ ನುಡಿದೆ ನುಡಿದೆ ಇದು ಸಿದ್ಧಾಂತವೋ
ವಿತ್ತ ಗೋ ಧಾನ್ಯ ನಾನ ವಸ್ತುಗಳೆಲ್ಲ ಅಲ್ಲಾ
ವಿತ್ತರೆ ಬಾರವಯ್ಯಾ ಇದು ಸೋಜಿಗಾ
ಸುತ್ತುವ ಸುಳಿಗೆ ಕೊನೆ ಮೊದಲಾವುದು ಕಾಣೆ
ಉತ್ತಮ ಶ್ಲೋಕ ನೀನು ಕೊಡುವದೆಂತೊ
ಚಿತ್ರವಾಗಿದೆ ಎನಗೆ ಎಂದೆಂದಿಗೆ ನೋಡೆ
ಚಿತ್ರಾ ಚಿತ್ರಾವೆಂದೆಂಬೆ ಬಲು ವಿಚಿತ್ರಾ
ಕೀರ್ತಿ ಪುರುಷ ನಮ್ಮ ವಿಜಯ ವಿಠ್ಠಲ ನಿನ್ನ
ಕೀರ್ತನೆ ಮಾಡುವದು ಒಂದೇ ಮರವಾಗದಿರಲಿ ೧
ಮಟ್ಟತಾಳ
ಜನಕನ ಉದರದಲ್ಲಿ ತಂದಿಟ್ಟವನಾರು
ಜನನಿಯ ಗರ್ಭದಲ್ಲಿ ಪೊಗಿಸಿದವನಾರು
ದಿನ ದಿನಕೆ ಅಲ್ಲಿ ಅವಯವಗಳ ತಿದ್ದಿ
ತನುವ ಬೆಳೆಸಿ ಕಡಿಗೆ ಹಾಕಿದವನಾರು
ಕ್ಷಣ ಕ್ಷಣಕೆ ಸ್ನೇಹ ಪೆಚ್ಚಿಸಿ ಎನ್ನ ರ
ಕ್ಷಣೆಯನು ಮಾಡಿ ಸಲಹಿದವನಾರು
ಮನೆ ಮನದಲಿ ಇದ್ದು ನಾನಾ ಬಗೆಯಿಂದ
ಇನಿತು ಪಾಲಿಸುವ ಮಹಾ ಮಹಿಮ ಭಕ್ತರ ಪ್ರಿಯ
ಕನಸು ಸುಷುಪ್ತಿಯಲಿ ಅನುಭವಗಳು ಸಾಕ್ಷಿ
ನಿನಗೆ ನೀನೆ ನಲಿವ ವಿಜಯ ವಿಠ್ಠಲರೇಯಾ
ಮನದಲಿ ನಿಂದು ಬಲು ಚರಿತೆ ಮಾಳ್ಪೆ ೨
ತ್ರಿವಿಡಿ ತಾಳ
ಏನು ಹೇಳಲಿ ಹರಿ ಈ ಪರಿ ಸೌಖ್ಯಗಳ
ನಾನೇ ಅನುಭವಿಸುವೆನೆ ತಿಳಿಯೊ ನೋಡು
ಕಾಣ ಬಂದ ಮಾತು ತೋರಿ ನುಡಿದೆ ಉದಾ
ಸೀನ ಮಾಡಿದಂತೆ ಸುಮ್ಮನಿದ್ದು
ನಾನಾಪರಿಯಲ್ಲಿ ಆಣೆಗಳಿಟ್ಟು ಸ
ನ್ಮಾನವಲ್ಲೆನೆಂದು ಚಾಲುವರಿಯೇ
ನೀನೆ ಈ ಪರಿಯಿಂದ ಎಲ್ಲೆಲ್ಲಿ ಇದ್ದು ಸೋ
ಪಾನವೇರಿದಂತೆ ವಿಷಯಂಗಳಾ
ಭಾನು ಉದಯ ಅಸ್ತಮನ ತೊಲ ಗಲೀಯದೆ
ನೀನುಣಿಪದು ನಿನಗೆ ಬಲುಧರ್ಮವೇ
ಅನಂತ ಕಾಲಕ್ಕೆ ಇದನೇ ನೇಮಿಸಿದರೆ
ಜ್ಞಾನವಿರುವುದೆಂತೊ ಜ್ಞಾನಾಂಬುಧಿ
ಮಾಣಿಸು ನಮಿಸುವೆ ಇನ್ನೊಂದು ವರವನ್ನು
ಮಾನಸದಲಿ ಬೇಡಿ ಕೊಂಡಾಡುವೆ
ಕಾಣಿ ಮೊದಲಾದ ಆಶಿಯ ಬಿಡಿಸಿ ನಿ
ದಾನದಲಿ ನಿನ್ನ ಚರಣಯಗಳ
ಧ್ಯಾನಮಾಡಿ ಏಕಾಂತದಲಿ ಇದ್ದು
ಮಾನವರಿಗೆ ಗೋಚರಿಸುವಂತೆ
ಆನಂದ ಕಾನನದೊಳಗಿದ್ದು ಪರಿಯನ್ನು
ಶ್ರೀ ನಿವಾಸನೆ ಮಾಡು ಅನಾಥ ಬಂಧು
ಶ್ವಾನನಂತೆ ನಾನು ಗಣಿ ಗಣಿಕಾ ಶೂದ್ರ
ಹೀನಾಳು ತವಕರಜ ವೈರಿಗಳು
ಯೋನಿ ವಿಕ್ರಮ ಶೂದ್ರ ಬ್ರಹ್ಮ ವಿಘಾತಕ
ನಾನಾ ದೋಷಿಗಳ ಮನೆ ಅನ್ನೋದಕ
ಕೇಣಿಗೊಳದೆ ತಿಂದೆ ದಶಮಿ ದ್ವಾದಶಿ ಅ
ಯನ ಪರ್ವಣಿ ಪುಣ್ಯ ಕಾಲದಲ್ಲಿ
ಈ ನುಡಿ ಕೇಳಯ್ಯಾ ಮುಣುಗಿದೇ
ಮುಣಗಿದೆ ಮೇಣು ಮುಣುಗಿದೆ ಮತ್ತು ಮುಣುಗಿದೆನೊ
ನೀನುದ್ಧರಿಸದಿರೆ ಎನಗಾವನು ದಿಕ್ಕು
ಈ ನಾಡಿನೊಳಗೆ ಎಲ್ಲೆಲ್ಲಿ ನೋಡೇ
ನಾನೋತ ಫಲವಿಂತೊ ನಿನಗೆ ಕರುಣವಿಲ್ಲೊ
ಏನಯ್ಯಾ ಮೊರೆಯಿಡಲು ಸುಮ್ಮನಿಪ್ಪೆ
ಜ್ಞಾನಿಗಳರಸ ಶ್ರಿಶ ವಿಜಯ ವಿಠ್ಠಲ ನಿನ್ನ
ಧ್ಯಾನಗಾನ ಮಾಳ್ಪದಕೆ ಸತತ ಸಂತತಿಯಾಗೋ ೩
ಅಟ್ಟತಾಳ
ಉಣಿಸು ಉಣಿಸು ನಿನ್ನ ಸರಿಬಂದ ತೆರದಂತೆ
ಮನೋ ಇಂದ್ರಿಯಂಗಳು ಪ್ರಾಣ ನಿನ್ನಾ ಧೀನ
ಎನಗಾವ ಸ್ವಾತಂತ್ರ ಲೇಶ ಮಾತ್ರವು ಇಲ್ಲ
ಒಣಗಿದ ವೃಕ್ಷ ಪಲ್ಲೈಸಿದ ಬಗೆಯಾಗಿ
ದಿನ ಪ್ರತಿದಿನದಲ್ಲಿ ಕಾಣಿಸುತಿಪ್ಪದು
ಜನುಮ ಜನುಮದಲ್ಲಿ ಬಾಹಿರಂತರ ದರು
ಶನ ಕೊಡುತಲಿ ಎನ್ನಸಾಕುವ ದಾತಾರ
ಘನ್ನ ಮೂರುತಿ ನಮ್ಮ ವಿಜಯ ವಿಠ್ಠಲರೇಯಾ
ಎಣೆಗಾಣೆ ನಿನ್ನ ಲೀಲೆಗೆ ನಮೋ ಅನಂತ ನಮೋ ೪
ಆದಿತಾಳ
ಆರ ಓದನ ಉಂಬೆ ಆರ ವಸ್ತ್ರವ ಉಡುವೆ ತೊಡುವೆ
ಆರಿಂದ ಸುಖ ಬಡುವೆ ಆರಿಂದ ದೇಹ ತೆತ್ತು ಉದ್ಧಾರನಾಗುವೆ
ಆರಿಂದ ಬಾಳಿ ಬದುಕಿ ಕಾಲಕ್ರಮಣ ಮಾಡುವೆ
ಆರಾದರೂ ಉಂಟೇ ಈ ಜಗತ್ತಿನೊಳಗೇ
ಶ್ರೀ ರಮಣ ನೀನೆ ಅಲ್ಲವೆ ಅನ್ಯರೊಬ್ಬರ ಕಾಣೇ
ಸಾರಿಸಾರಿಗೆ ನಾನೇ ಅನುಭವಿಸುವ ಸೌಖ್ಯ
ಆರದಲ್ಲಾ ಆರದಲ್ಲಾ ನಿನ್ನದೇ ಸತ್ಯ ಸತ್ಯ
ಕ್ರೂರ ಜನರ ವೈರಿ ವಿಜಯವಿಠ್ಠಲ ನಿನ್ನ
ಕಾರುಣ್ಯವಿರಲಾಗಿ ಸರ್ವಾನುಕೂಲ ನಿತ್ಯಾ ೫
ಜತೆ
ಅಡಿಗಡಿಗೆ ಚಿಂತಿಸಿ ಬಡವಾಗುವುದ್ಯಾಕೆ
ಒಡಿಯಾ ನೀನೆ ಗತಿಯೋ ವಿಜಯ ವಿಠ್ಠಲಸ್ವಾಮಿ ೬

ಭಾದ್ರಪದ ಮಾಸದ ಕೃಷ್ಣಪಕ್ಷವನ್ನು ಪಿತೃಪಕ್ಷ

೮೫
ಧ್ರುವತಾಳ
ಪೈತ್ರಿಕವಾರದಲ್ಲಿ ದೇವಾಂಶ ಅಂಶಿಗಳ
ಸ್ತೋತ್ರ ನಾಲಕು ಯುಗದವರ ಸೇವಾ
ಸೂತ್ರನಾಮಕ ಪ್ರಾಣ ಮೊದಲಾದ ದೇವತೆಗಳ
ಚಿತ್ರ ವಿಚಿತ್ರ ಮಹಿಮೆ ತಿಳಿದು ತಿಳಿದು
ಪುತ್ರ ಪೌತ್ರ ಪ್ರಪೌತ್ರ ವಂಶಾಭಿವೃದ್ಧಿಯಿಂದ
ಗಾತ್ರ ನಿರ್ಮಳರಾಗಿ ಬಾಳುವರೋ
ಗೋತ್ರ ನೂರೊಂದು ನಾನಾ ಜನುಮ ಧರಿಸಿದ ವಿ
ಹೋತ್ರಾದಿ ಲೋಕದಲ್ಲಿ ಇದ್ದ ಜನರು
ಪಾತ್ರ ಸತ್ಪಾತ್ರರಾಗಿ ತೃಪ್ತಿಯಾಗುವುದು ಕಾ
ಲತ್ರಯ ಬಿಡದಲೆ ಊಧ್ರ್ವಗತಿಗೆ
ನೇತ್ರುತ್ಸಹದಿಂದ ಸಾಗಿ ಸಾರುವರು ಸ
ಗೋತ್ರದೊಡನೆ ಹರಿಯ ಕೊಂಡಾಡುತ
ಶ್ರೋತ್ರದಿಂದಲಿ ಇದ್ದು ಕೇಳಿದವನ ವಂಶ
ಕ್ಷೇತ್ರಾದಿಯಲ್ಲಿ ಇರಲು ಗತಿಗಭಿಮುಖ
ಧಾತ್ರಿಯೊಳಗೋರ್ವ ಜ್ಞಾನಿ ಪುಟ್ಟಲು ಮೇರು
ಗೋತ್ರ ಸಮ ತುಲ್ಯಪುಣ್ಯ ತಂದು ಕೊಡುವ
ಮಾತ್ರಕಾಲವಾದರು ನೆನಿಸಿ ನೆನಿಸಿ ಸುಹೃ
ನ್ಮಿತ್ರನಾಗೆಲೋ ನಿನ್ನ ಬಾಂಧವರಿಗೆ
ಛತ್ರಚಾಮರ ನಾನಾ ಭೋಗದಿಂದಲಿ ಸ
ರ್ವತ್ರ ಬಾಳುತಲಿಪ್ಪ ಜ್ಞಾನಿಯಾಗಿ
ರಾತ್ರಿಚರರು ಇವನ ಮುಟ್ಟಲಂಜುವರು ಇದ್ದ
ಪಾತ್ರಿ ಪಾತ್ರ ಪದಾರ್ಥ ಮೊದಲಾದವು
ಸೂತ್ರ ಮೀಟಿದಂತೆ ಸತ್ಪಥವಾಗುವುದು
ಪಾತ್ರ ಭವಾಂಬುಧಿಗೆ ದಿವಿಜ ವ್ರಾತಾ
ನೇತ್ರತ್ರಯನ್ನ ಅವತಾರ ಆರಂಭಿಸಿ
ಮಾತ್ರಭೂತ ಕರ್ಮಜ್ಞಾನ ಲಿಂಗ
ಗಾತ್ರ ಷೋಡಶಕಳಾ ಕಾಲ ವೇದಶಾಸ್ತ್ರ ಪ
ವಿತ್ರ ವಸ್ತು ಸಮಸ್ತ ಲೋಕಾವರಣಾ
ಈ ತ್ರಿಧಾಮಾ ಸಹಾಯದಲ್ಲಿದ್ದ ದೇವಾದಿಗಳ
ನಿತ್ರಾಣನಾಗಿ ಎಣಿಸಿ ಕೂಡಿಸು
ಯಾತ್ರ ಮಿಕ್ಕಾದ ಚೇಷ್ಟೆ ಹರಿಗೆ ಸಮರ್ಪಿಸಿ
ತ್ರಾತಾತ್ಮಾ ಎಂದು ಹಸ್ತ ಮುಗಿದು ಬಾಗಿ
ನೇತ್ರನಾಗಿ ಲೋಕಕ್ಕೆ ಇಪ್ಪನೋರ್ವನು ಸತಿ ಕ
ಳತ್ರ ನಾಮಕನೋರ್ವ ವಶ ಓರ್ವನೋ
ಈತ್ರಿಬಗೆಯವರ ಅಂತರದಲ್ಲಿರೊ
ಪತ್ರಯ ಎನಿಸೊ ಪ್ರದ್ಯುಮ್ನಾದಿ ಮೂರ್ತಿ
ಅತ್ರಿ ನೇತ್ರೋದ್ಭವ ಕುಲ ವಿಜಯ ವಿಠಲ
ಕ್ಷೇತಜ್ಞ ಸ್ತುತಿಗೆ ಮೆಚ್ಚಿ ಕುಲ ಉದ್ಧಾರ ಮಾಡುವ ೧
ಮಟ್ಟತಾಳ
ಶುಚಿ ಮಾರ್ದವ ಸ್ವಾದರುಚಿ ಅಮೃತ ಸಾರಾ
ರಚನೆ ಮನೋಹರ
ಅಚಲ ಅವಿರೋಧ ಪಚನ ಶುಭ್ರ ವರ್ನ
ನಿಚಯ ಮಿಳಿತ ರಹಿತ ಪ್ರಚುರ ಪ್ರಚುರ ಸಮ
ಸುಚರಿತ ಸರ್ವದಲಿ ಅಚಿರ ಕಾಲ ಪ್ರಾಪ್ತಿ
ಸಚರ ಚರಪಾಲಾ ವಿಜಯ ವಿಠ್ಠಲ ನಾನಾ
ಉಚಿತ ಧರ್ಮಗಳೆಲ್ಲಾ ಉಂಟವಗೆ ಮಾಳ್ಪಾ ೨
ತ್ರಿವಿಡಿ ತಾಳ
ಹನುಮನ್ನ ಭೀಮ ಮಧ್ವ ಶುಕ ದುರ್ವಾಸ ಗುರು
ತನುಜ ಅಶ್ವತ್ಥಾಮ ಲಕ್ಷ್ಮಣ ಬಲರಾಮ
ವನಚರ ವಾಲಿ ಅರ್ಜುನ ಭರತ ಪ್ರದ್ಯುಮ್ನ
ಷಣ್ಮುಖ ಸಾಂಬ ಸರ್ವೋತ್ತುಂಗ ಶತೃಘ್ನ
ಅನಿರುದ್ಧ ತಾರಾ ಉದ್ಧವ ದ್ರೋಣಾಂಗದ ಸುಗ್ರೀ
ವನು ಕರ್ನ ಜಾಂಬುವಾನ್ನ ಧರ್ಮ ವಿದುರ ಶಂ
ತನು ಸುಷೇಣ ಮಹಾಭಿಕ್ಷಕ ನಾರದ ಭೃಗು
ಗುಣವಂತ ಲವ ನೀಲಾದ್ಯುಷ್ಟದ್ಯುಮ್ನ ಭೀಷ್ಮ
ಕನು ದುರ್ಮುಖ ಘಟೋತ್ಕಚ
ಗಣಪ ಚಾರುದೇಷ್ಣ ಎಣಿಸು ಕ
ತ್ಥನ ಭಗದತ್ತ ವಿವಿಧ ಮೈಂದ
ವನು ನಕುಲ ಸಹದೇವ ಬಬ್ರುವಾ
ಹನ ಮನು ಶುಚಿ ಕೌಶಿಕ ಪ್ರಲ್ಹಾದ ಬಾಲ್ಹಿಕ
ಜನಪ ಶರಭ ವಸದೇವ ದೇವಕಿ ಗೋವ
ರ್ಧನ ಪರ್ವತ ನಂದಗೋಪ ಗೋಕುಲವೃಂದಾ
ವನ ಗೋಪಿ ಗೋಪಾಲ ಕಾಳಿಂದಿ ಮಧುರಾ ಪ
ಟ್ಟಣ ಶಕುನಿ ಜನಕ ಉಗ್ರಸೇನ ಅಕ್ರೂರ
ಘನ ಪರಾಕ್ರಮ ಭೀಷ್ಮಸತ್ಯ ಶಮಂತಕ
ಮಣಿ ಕುಬ್ಜಿ ಕೃತವರ್ಮ ಸತ್ರಾಜಿತು ಪಾಂಡು ರು
ಗ್ಮಿಣಿ ಬಲಿ ಭರತ ಯಯಾತಿ ಯದು ಸಾತ್ಯಕಿ
ಧನುರ್ಧಾರಿ ಅಭಿಮನ್ಯು ಯುಯುತ್ಸು ಸಂಜಯ
ಮುನಿವ್ಯಾಸ ಯೋಜನಗಂಧಿ ಮಾದ್ರಿಕುಂತಿ
ಸನಕಾದಿ ಗಾಂಧಾರಿ ಕೃಪಾ ಕೃಪಿ ಪಾಂಚಾಲಿ
ತನುಜರೈವರು ದ್ರುಪದ ವಿರಾಟ ಮಾದ್ರೇಶ
ಅನಿಮಿಷನದಿ ಸರ್ವ ಪ್ರವಾಹ ರೇವತಿ
ವನಧಿ ಸಪುತ ನಾನಾ ದ್ವೀಪ ಖಂಡ ಕ್ಷೇತ್ರ
ವನ ಪರ್ವತಯಾಗ ವರ್ಣಾಶ್ರಮ ಜಾತಿ
ಇನ ಚಂದ್ರಮ ವಂಶ ಪಾರಂಪರೆ ಗ್ರಹಿಸು
ವನ ಗೋಚರ ವಾನರ ಯದು ವಂಶದಲಿ ಬಂದು
ಜನಿಸಿದ ಸ್ತ್ರೀ ಪುರುಷ ಇವರ ಈರ್ವಗೆ ತಿಳಿದು
ತೃಣವೆ ಮೊದಲು ನುಡಿ ಮುಕ್ತಿ ಯೋಗ್ಯರನಾ
ಇನಿತು ಬಿಡದೆ ಪಿತೃ ಪುಣ್ಯಕಾಲದಲ್ಲಿ ಯೋ
ಚನೆ ಮಾಡಿ ಮತಿಯಿಂದ ಕೊಂಡಾಡಿದ ಭಕ್ತಿ
ಮನುಜನ್ನ ಸುಕೃತಕ್ಕೆ ಕಡೆಗಾಣೆ ಪಡೆಗಾಣೆ
ಗಣನೆ ಇಲ್ಲದೆ ಮಹಾಕುಲ ಉದ್ಧಾರ
ಧನಧಾನ್ಯ ವಿದ್ಯಾದಿ ವಿಜಯ ವಿಠಲರೇಯ
ಕುಣಿ ಕುಣಿದಾಡುವ ಪಿತೃ ರೂಪಗಳಿಂದ ೩
ಅಟ್ಟತಾಳ
ಮಲಿನ ವಸನ ಮಾತು ಪುಶಿ ಪೇಳುವ ನೀಚ
ಕಲಹ ಕಠಿಣೋಕ್ತ ಕಾಮುಕ ಚೋರ ಚಂ
ಚಲ ಬ್ಯಾಡ ಜಲ್ಪ ಧರ್ಮಧ್ವಜ ದ್ವಿಜನಿಂದೆ
ಜಲವಾಹ ಪಾಚಕಾ ಕಾರ್ಷಿಕಾ ಗಣತಜ್ಞ
ಕುಲಭ್ರಷ್ಟ ಅನಾಚಾರಿ ಛುದ್ರ ಜೀವ ಹಿಂಸ
ಕೊಲೆಗಡಿಗ ನಾನಾ ಧನಧಾನ್ಯ ರಸ ದು
ರ್ಮಲ ಕ್ರಿಯಾ ವಿಕ್ರಯ ಸಾರ್ಥಿಕ ಚಾರ್ವಾಕ
ಕೇಲವ ಹೀನಂಗ ಚೆನ್ನಿಗದರ ಚುಲ್ಲಕಾ
ಹಳಿವಾದಿ ವೃತದೂರ ನಿತ್ಯಕರ್ಮ ಶೂನ್ಯ
ಮಲಗಿಪ್ಪ ವಿಚಂಡ ಊರು ಊರು ಸಂಚಾರಿ
ಬಲುತ್ಕರ ಪ್ರತಿಗ್ರಹಾಸ್ತ್ರೇಣ್ಯ ಪ್ರತಿಷ್ಠಹ ಶ್ರುದ್ಧಾಬೋಕ್ತ
ಗೋಳಕ ದೇಶಾಂತರ ಪರಿಚಿತರಹಿತ ತ್ವಂ
ಬಲು ಸರ್ವರಾಧಾರಿ ಅಸ್ನಾಯಿ ರೋಗಿಷ್ಟ
ಅಳಲುವ ಇಂದ್ರಿ ಲೋಲುಪ್ತ ಮಾರ್ಗ ತಶ್ರಾಂತ
ಹೊಲೆ ಕೋಪ ಸಂತಪ್ತ ಮದ ಮತ್ಸರ ಲೋಭಿ
ತಳಮಳ ನೆಲೆಗಳ್ಳ ಪರದಾರ ಸಾಲಿಗಾ ದಾಕ್ಷಣ್ಯ

ಶ್ರೀಹರಿಯು ಕೃಪಾಕಟಾಕ್ಷವನ್ನು

೬೨
ಧ್ರುವತಾಳ
ಪೊರೆಯೊ ಕರುಣದಲೆನ್ನ ಪೊರೆಯದಿದ್ದರೆ ನಿನ್ನ
ದುರುಳತನಗಳೆಲ್ಲ ದೂರದೆ ಬಿಡೆನಲ್ಲ
ಪೊರೆಯೊ ಕೀರ್ತಿಯ ಪೊತ್ತು ಪೊರೆಯೊ ಮತಿಯನಿತ್ತು
ಸರಿಯಿಲ್ಲ ನಿನಗೆಲ್ಲಿ ವರ ಪರಾಪರದಲ್ಲಿ
ಮರಿಯದಿರೆಲೊ ನಮ್ಮ ಗಿರಿಯ ಮೇಲ್ ಗಿರಿತಿಮ್ಮ
ಶರಣೆಂಬೆ ಶಿರವಾಗಿ ಕರವೆತ್ತಿ ನಿನಗಾಗಿ
ಹರಣವ ಒಪ್ಪಿಸುವೆ ನಿರುತ ಸಮರ್ಪಿಸುವ
ಶರೆಯಾಗಿ ಸಂಸಾರವೆಂಬೊ ಮಹ ಗರಳ
ಶರಧಿಯೊಳಗಿರಲಾರೆ ಶರಧಿ ಶಯನ ಹರೆ
ಗುರುವೆ ಬ್ರಹ್ಮವರ್ಧನ ವಿಜಯ ವಿಠ್ಠಲ
ಎರದು ನಿನ್ನ ನಾಮ ನಾಲಿಗೆಯಲಿ
ಎರಕಾ ಹೊಯ್ದಂತಿರಲಿ ಎರವೆನ್ನದಿರು ನಿನ್ನ
ಚರಣ ಯುಗಕೆ ಸಾವಿರ ಕೋಟಿ ಪ್ರಮಾಣ ೧
ಮಟ್ಟತಾಳ
ಹರಿದಾಸನ ಮಾಡು ಹರಿದಾಸರ ಮಾಡು ಹರಿಕರುಣದಿಂದ
ಹರಿದಾಸನಾಗುವ ಹರಕೆಯನು ತೋರಿ
ಹರಿ ಹರಿದಾಡುವ ಹರುಷಾಂಬುಧಿಯೊಳಗೆ
ಹರಿ ನಿಲಿಸಿ ಎನ್ನ ಹರಿದಿಂಬ ದುರಿತದ
ಹರಿಬಕೆ ನೀನೊದಗಿ ಪರಿ ಪಾಲಿಸು
ದರ್ಶನ ನಾಮ ವಿಜಯ ವಿಠ್ಠಲ ಎನ್ನ
ಹರಿಮಾರುವ ದೈವ ಹರಿ ಬಲ್ಲವರಿಗೆ ೨
ತ್ರಿವಿಡಿ ತಾಳ
ಮಜ್ಜ ಮಾಂಸ ರಕ್ತ ತ್ವಕು ಚರ್ಮಾಸ್ತಿಗಳಲ್ಲಿ
ರಜ್ಜಾ ದೊಳಗೆ ಶಿಲ್ಕಿ ನೋವಾದೆನೊ
ಮಜ್ಜಿಗಿಂದಲಿ ಪಾಲು ಹೆಪ್ಪು ಗೊಟ್ಟಂತೆನ್ನ
ಸಜ್ಜನರೊಳು ಕಲೆಸು ಕಮಲನಾಭ
ಮೂಜ್ಜಗ ಮಧ್ಯದಲಿ ನಿನ್ನ ಪೋಲುವ ದೈವ
ಸಜ್ಜಾಗಿ ನೋಡಲು ಕಾಣೆನಯ್ಯ
ಮಜ್ಜಿಗಿ ಕದ್ದ ಸವಿತ ವಿಜಯ ವಿಠ್ಠಲ
ಅಜ್ಜುಗಾರನು ನೀನೆ ಅನಂತ ಕಾಲದಲ್ಲಿ ೩
ಅಟ್ಟತಾಳ
ಹೆಜ್ಜೆ ಹೆಜ್ಜೆಗೆ ನಿನ್ನ ಮರೆದರೆ ನಿನ್ನ ಪಾ
ದಾಬ್ಜಗಳಾಣೆ ಜನನಾದಿ ವಿರಹಿತ
ಕಜ್ಜಾಯಕೆ ಮುರಿದದೆ ನಿನ್ನ ಪಾ
ದಾಬ್ಜದ ಭಕ್ತಿಗೆ ತಿಳಿದಾದೆ ಮಾರ್ಗ
ಲಜ್ಜಗೇಡಿ ಸ್ವಸ್ಥ ವಿಜಯ ವಿಠ್ಠಲ
ಗುಜ್ಜಿಗೊಲಿದ ಮಹ ಗಾರುಡ ಮಹಿಮ ೪
ಆದಿತಾಳ
ಆನು ನಿನ್ನ ಬಯಸಿ ಬಂದೆ ಏನು ಇನ್ನೇನು
ನೀನು ದಯ ಮಾಡದಿರಲೇನು ಮುಂದೇನು
ಬೋನಿನೊಳು ಕುರಿಯಿರಲು ಪುಲಿ ಪೋಗಿ ಸಿಕ್ಕಂತೆ
ಹೀನ ಸಂಸಾರಕ್ಕೆ ಬಿಡದೆ ಪ್ರಾಣವನ್ನು ಒಪ್ಪಿಸುವೆ
ಏನು ಇನ್ನೇನು ಸ್ವಾಮಿ ಏನು ಇನ್ನೇನು
ಜಾನಕೀಶ ಚತುರ್ಭಾವ ವಿಜಯ ವಿಠ್ಠಲರೇಯ
ಯೋನಿ ಮುಖಕೆ ಬಾರದಂತೆ
ಪೋಣಿಸುವುದು ಹಾರದೊಳಗೆ ೫
ಜತೆ
ಅಭಯವನೀಯೊ ಸ್ವಾಭುಜ ವಿಜಯ ವಿಠ್ಠಲ
ಅಭಿಪ್ರಾಯವರಿತು ಸಾಕುವ ಅನಿಮಿಷಾಧೀಶ೬

ಧ್ಯಾನವನ್ನು ಮಾಡುವ ಬಗೆಯನ್ನು ತಿಳಿಸುವ ಸುಳಾದಿ ಇದು.

೮೬
ಧ್ರುವತಾಳ
ಪ್ರಣವ ಪೂರ್ವಕದಿಂದ ಆಸನವಿಟ್ಟು ಮೂರರೊಳೊಂ
ದನೆ ತಿಳಿದು ವಾಯುಧಾರಣೆಮಾಡು ವಿವೇಕನಾಗಿ
ಬಿನಗು ಇಂದ್ರಿಯಗಳು ಮನದಲ್ಲಿ ಕೂಡಿಟ್ಟು
ಅನುನಯದಿಂದ ಸಾಧನಕೆ ಮಾರ್ಗವ ಬಯಸೊ
ಘನೀಭೂತವಾದ ಭಕುತಿಯನು ಸಂಪಾದಿಸಿ ನಿತ್ಯ
ತನುವೆ ನಿರ್ಮಲವಾಗಿ ಜನರಹಿತ ಸ್ಥಳದಲ್ಲಿ
ಅನುದಿನ ದುಷ್ಟಯೋಚನೆಗಳ ತೊರೆದು
ಚಿನುಮಯನಾಗಿಪ್ಪ ವಿಜಯ ವಿಠ್ಠಲನ್ನ
ಮನದಣಿಯ ನೀಕ್ಷಿಸುವಾಲೋಚನೆಯ ಮಾಡು ಬಿಡದೆ ೧
ಮಟ್ಟತಾಳ
ಹಿರಿಯ ನಾಡಿಯಿಂದ ಮರುತನ ಮೆಲ್ಲನೆ
ಶಿರಸ ಪರ್ಯಂತ ತರಲುಪಾಯವನ್ನು
ಅರಿದು ಎರಡು ಎಂಟು ಪರಿಮಿತವಾದ ಮಾ
ತುರತನಕ ರೇಚಕ ಆ ತರುವಾಯದಲಿ ಮೂವ
ತ್ತೆರಡು ಮಾತುರ ತನಕ ವರಪೂರಕ ತಿಳಿದು
ಅರವತ್ತು ನಾಲಕು ಮೆರೆವ ಮಾತ್ರಕದನಿತು
ಇರುತಿಪ್ಪ ಕುಂಭಕ ಎರಡು ಅದರ ಅರ್ಧ
ಪರಿಯಾಯವ ನೋಡೀ ಪರಿಯಲಿ ಸಾಧಿಸುತ್ತ
ನಿರುತ ಬಿಡದಲೆ ವರಸಮಾಧಿಯಲ್ಲಿ
ಕರಣಶುದ್ಧನಾಗೀ ಪರಿಚಿಂತಿಸಬೇಕು
ಪರಮಮೂರ್ತಿ ಧ್ಯಾನ ವಿಜಯ ವಿಠ್ಠಲ ಹರಿಯ
ಕುರುಹನೀಕ್ಷಿಸಿ ಪತಿಕರಿಸಿ ಸಜ್ಜನಸಂಗ ೨
ತ್ರಿವಿಡಿ ತಾಳ
ಇದಕಿಂತ ಮೊದಲಿಗೆ ತುರಿಯ ನಾಮಕನ ಶ್ರೀ
ಪದದಲ್ಲಿ ವನಧಿಯ ಸತಿಯನ್ನು ನೆನೆದು
ಒದಗಿ ಹನ್ನೊಂದನೆ ದ್ವಾರದಲ್ಲಿ ಇಳಿಸಿ
ಹೃದಯದಾಕಾಶಕ್ಕೆ ಕೊಂಡು ಒಯ್ದು
ಮುದದಿಂದ ಮಂಗಳ ಸ್ನಾನವನ್ನೆ ಗೈದು
ಉದರದೊಳಗಿದ್ದ ಕಾಮಾದಿಗಳ ಕಳೆದು
ಗುದು ಭಾಗ ವಿಡಿದು ಶಿರದ ಮೂಲ ಪರಿಯಂತ
ತುದಿ ಮೊದಲು ಒಂದೇ ಸಮಾನವಾಗಿಪ್ಪ
ಸದಮಲ ಪ್ರಧಾನ ನಾಡಿಯ ಮಧ್ಯದಲಿ
ಪದುಮರಾಗ ಮಯವಾದ ಎಂಟು ದಳದಿ
ಅಧೋ ಮೊಗವಾಗಿ ಇರುತಿಪ್ಪ ಪದುಮಾನೆತ್ತಿ
ಉದಯ ಭಾಸ್ಕರನೆಂಬೊ ಜ್ಞಾನದಿಂದ
ಚದುರ ಮನಸಿನಿಂದ ವಿಕಸಿತ ಮಾಡೋದು
ಇದೆ ಬಿಂಬ ಮೂರುತಿ ಇಪ್ಪಸ್ಥಾನ
ಸದಾಚಾರನಾಗಿ ಶ್ರೀ ವಿಜಯ ವಿಠ್ಠಲನ್ನ
ಅದುಭೂತ ಅಣುರೂಪ ಧ್ಯಾನ ಪಡಿಯಬೇಕು ೩
ಅಟ್ಟತಾಳ
ಅರೆಗಣ್ಣು ಮಾಡು ಪಲ್ಲುಗಳ ಕೂಡಿಸದಲೆ
ಕೊರಳುಬಾಗದೆ ಕದಲದಂತೆ ಕುಳಿತು
ಕರಗಳು ತೊಡಿಯ ಮೇಲಿಟ್ಟು ತೀವ್ರದಿಂದ
ಬೆರಳುಗಳು ಸ್ವಲ್ಪು ಮಾತ್ರ ತಗ್ಗಿಸಿ
ನಿರುಪದ್ರವಾಗಿದ್ದ ಭೂಮಿಯನ್ನು ಸೇರಿ
ಸರಿಸದಲ್ಲಿ ತನ್ನ ಮೂರ್ತಿ ಎದುರಿಲಿಟ್ಟು
ಮರಳೆ ನಾಸಿಕ ಕೊನೆಯಲ್ಲಿ ದೃಷ್ಟಿ ಇಟ್ಟು
ಪರಬೊಮ್ಮನಾದ ಶ್ರೀ ವಿಜಯ ವಿಠ್ಠಲನ್ನ
ಚರಣ ಮೊದಲ ಮಾಡಿ ಸ್ಮರಿಸು ನಿನ್ನೊಳಗೆ ೪
ಆದಿತಾಳ
ಮಧ್ಯ ಮಧ್ಯದಲ್ಲಿ ಮನ ಎದ್ದುಪೋಗಲಾಗಿ
ಅರ್ಧೈಯವಿಲ್ಲದೆಯಿದ್ದು ವಿನಯದಿಂದಲಿ
ತಿದ್ದಿ ಮನ ಮೆಲ್ಲನೆ ಪೊದ್ದಿಸಿಕೊಂಡು ದುರಾಸಿಯಗೆದ್ದು
ಸ್ವಧರ್ಮ ಬಿಡದೆ ಸಿದ್ದನಾಗೋ ಧ್ಯಾನದಲ್ಲಿ
ಶುದ್ಧ ಮೂರುತಿ ನಮ್ಮ ವಿಜಯ ವಿಠ್ಠಲರೇಯ ಪೊಳೆದು
ಉದ್ದರಿಸುವ ತನ್ನ ಚಿದ್ರೂಪವ ತೋರಿ ಕೊಳುತ ೫
ಜತೆ
ಬಹಿರ ಶೂನ್ಯವಾಗಿ ಚರಿಸು ಅಂತರದಲ್ಲಿ
ಮಹದೈವ ವಿಜಯ ವಿಠ್ಠಲನ ಪಾದವ ಕಾಣು ೬

ಬ್ರಹ್ಮನಿಗೆ ಹತ್ತು ವರ್ಷವಾಗುವ

೫೮
ಧ್ರುವತಾಳ
ಪ್ರಣವ ಮಂತ್ರವ ಗ್ರಹಿಸು ಪ್ರಣುತನಾಗಿ ಸ
ಜ್ಜನರುಪದೇಶದಿಂದ ಅನುಗ್ರಹ ನೋಡುವುದು |
ಅನಾದಿಯಿಂದ ಬಂದ ಅನುಭವ ಸಿದ್ಧ ಜನಕೆ ಅಮೃತಾಶನ |
ಪ್ರಣವತಾರಕ ತಾರ ಪ್ರಥಮ ವ್ಯಾಹೃತಿ ಶೀರ್ಷ |
ಘನ ಓಂಕಾರ ಆದ್ಯೋಚ್ಚರಣೆ ಬೀಜ |
ಇನಿತಾಭಿಧಾನದಿಂದ ಒಪ್ಪುತದಲೆ ನಿತ್ಯ |
ಅನಂತ ವರ್ಣಾತ್ಮಕ ಜಡ ಪ್ರಭೇದ |
ಮನುಜಾದಿವಿಡಿದು ಬ್ರಹ್ಮಸಿರಿತನ ಕಾಲೋ |
ಚನೆ ಮಾಡುವರು ತಮ್ಮ ಯೋಗ್ಯತದನಿತು |
ಪ್ರಣವೆ ಮಂತ್ರವೆ ಗ್ರಹಿಸು ಎಲೊ ಮನವೆ |
ಗುಣಕಾಲ ಕರ್ಮ ವರ್ಣಾಶ್ರಮ ಧರ್ಮ ರೂಪ ಕ್ರೀಯ |
ಮನೊ ವಾಚ ಕಾಯದಲ್ಲಿ ನಿರ್ಮಳನಾಗಿ |
ಎಣಿಸಬೇಕು ಅನುಕ್ರಮದಿಂದಲಿ |
ಪ್ರಣವ ಧ್ಯಾನವಮಾಳ್ಪ ಇದರ ವಿಸ್ತಾರವ |
ವನಜ ಸಂಭವನಿದಕೆ ಆಧಿಕಾರನೊ |
ಗುಣತ್ರಯ ಮೊದಲು ಮಾಡಿ ಧರತತ್ವ ಪರಿಯಂತ |
ಕ್ಷಣ ಬಿಡದೆ ಎಣಿಪ ಬಹು ಅಂಶಿ ಅಂಶ |
ತೃಣ ಜೀವನಾದಿ ವಿಡಿದು ಅಂತರಬಾಹಿರ |
ಚಿನುಮಯ ಮೂರುತಿ ವಿಜಯ ವಿಠ್ಠಲರೇಯ |
ಪ್ರಣವ ಪ್ರತಿಪಾದ್ಯನೊ ಅಶೇóಷಗುಣಧಾರಕ ೧
ಮಟ್ಟತಾಳ
ಆ ಉ ಮ ನಾದ ಬಿಂದು ಘೋಷ ಶಾಂತಾತಿಶಾಂತ |
ಈ ವರುಣಗಳುಂಟು ಪ್ರಮಾಣಾತ್ಮಕವೆನ್ನಿ |
ಈ ವಿಧವನೆ ತಿಳಿದು ಅಕಾರ ಅಷ್ವರಲಿ |
ಆ ವರ್ಗವೆಯೆಂಟು ಉದುಭವಿಸಿದವೆನ್ನು |
ಕೋವಿದನಾಗಬೇಕೊ ತಿಳಕೊಂಡು ಮಾತ್ರ |
ಸಾವಿರ ಶಿರನಮ್ಮ ವಿಜಯ ವಿಠ್ಠಲರೇಯನ |
ಭಾವದಲಿ ನಿಲಿಸಿ ಒಲಿಸಿ ವಿಶ್ವಾದಿಗಳ ೨
ತ್ರಿವಿಡಿ ತಾಳ
ಆ ವರ್ಗ ಹದಿನಾರು ಕ ಪ ವರ್ಗವೆ ಐದು |
ಈ ವಿಧ ಅಯಿದೈದು ಇಪ್ಪತ್ತೆದು |
ಯ ವರ್ಗನಾಲ್ಕು ಕವರ್ಗ ಪಂಚಕೂಡೆ |
ಈ ವರ್ಣ ಎಣಿಸಲು ದಶಪಂಚಪೊ |
ಪಾವಿತ್ರವಾಗಿದೆ ಕ ಷ ಕೂಡಿಸಲಾಗಿ |
ಕ್ಷ ವರಣವಾಯಿತು ಒಂದೈವತ್ತು |
ಆ ವಿಶ್ವಗೆ ಹದಿನಾರು ತೈಜಸಂತರಾತ್ಮ |
ದೇವಗಳಿಗೆ ಇಪ್ಪತ್ತೈದು ಸಿದ್ಧ |
ಪಾವನ ಪರಮಾತ್ಮ ಜ್ಞಾನಾತ್ಮಗೆ ಒಂಭತ್ತು |
ಸೇವಿಸುವದು ಇವು ದ್ವಿತಿಯವರಣಾ |
ಯಾವತ್ತು ಸ್ವರವರಣ ಒಂದೊಂದು ಬಗೆಯಿಂದ |
ಆವಾವ ಸ್ವರದಲಿ ಕೂಡಿಸಲು |
ಕವರ್ಗಾದಿಗೆ ದೀರ್ಘ ಹ್ರಸ್ವ ಕನ್ನೆ ಮಾತ್ರ |
ವೊವತ್ತು ಬಿಂದು ವಿಸರ್ಗದಿಂದ |
ಮೂವತ್ತೈದಕೆ ಕೇಳು ವೊಂದಕೆ ದ್ವಿಷಟ್ ಪರಿಯು |
ಈ ವಿಧ ತಿಳಿ ವಿಂಶತಿ ಚತುರಶತ |
ದೇವ ದೇವೇಶ ನಮ್ಮ ವಿಜಯ ವಿಠ್ಠಲರೇಯ |
ಜೀವೋತ್ತಮನಿಂದ ಪೂಜೆಗೊಂಬನಿಲ್ಲಿ ೩
ಅಟ್ಟತಾಳ
ಆ ಓಂಕಾರಬೀಜ ಎಂಟರಿಂದಲಿ ಸತ್ಯ |
ಈ ವರ್ತಮಾನಕ್ಕೆ ಅಭಿವ್ಯಕ್ತಿಯಾಯಿತು |
ಆ ವರ್ಗಮಿಗಿಲಾಗಿ ಎಂಟು ವರ್ಗಗಳ್ಯೆದು |
ಕ್ಷಮೊಂದ ಕೂಡಿ ಸೆ ಏಕ ಪಂಚಾಶತಿ |
ಸೂವರ್ನವಾಗಿ ಒಪ್ಪುತಿವೆಯಿವು ವ್ಯಾಪ್ತಿ |
ಠಾವುಠಾವಿಲಿವುಂಟು ಸ್ವರ ಸಂಯೋಗವಾಗೆ |
ಮೂವತ್ತು ಹತ್ತು ಮೇಲೆ ನೂರು ಇಪ್ಪತ್ತು |
ಈ ವರ್ಣಗಳೆಲ್ಲ ಗುಣಿತ ಮಾಡಲಾಗಿ |
ಭಾವಿಸುವುದು ವರ್ಣೋವರ್ಣ ಸಂಯೋಗ |
ಕವೊಂದಕ್ಕೆ ನೋಡು ಮೂವತ್ತೈದರಂತೆ |
ಈ ವಿಚಾರ ಮಾತ್ರಕೆ ಎಣಿಸಾಲು ಹದಿನಾಲ್ಕು |
ಸಾವಿರದೇಳು ನೂರು ಲೆಖ್ಖವನ್ನು |
ಶ್ರೀವಲ್ಲಭ ನಮ್ಮ ವಿಜಯ ವಿಠ್ಠಲರೇಯ |
ಕಾವುತಲಿಪ್ಪನು ಈ ಪರಿ ತಿಳಿದವನ ೪
ಆದಿತಾಳ
ಇದರೊಳು ಇನ್ನುವುಂಟು ಪಾದರ್ಧದಿ ಉಚ್ಚಾರಣೆ |
ಯಿದೆ ಅನಂತಾನಂತ ವರ್ಣಗಳಾಗೋವು |
ಇದರಲ್ಲಿ ಉಪನಿಷತು ಸರ್ವ ವೇದ ಪುರಾಣ |
ಮುದದಿಂದ ಪಂಚರಾತ್ರ ಬಹ್ಮ ತರ್ಕ ರಾಮಾಯಣ |
ಸುಧಿಯಾದಿ ಭಾಗವತ ಯೋಗಶಾಸ್ತ್ರ ಭಾರತ |
ಪದೊಪದಿಗೆ ಕರ್ಮಭೇದ ವಿೂಮಾಂಸ ಸಕಲ ನಿರ್ಣಯ |
ಒದಗಿ ತುಂಬಿಹವು ವೈದಿಕ ಲೌಕಿಕ ಶಬ್ದ |
ಇದರಿಂದ ಕಮಲಾಸನ ಹರಿಯಲ್ಲಿ ಸಮನ್ವಯ
ಉದಯಾಸ್ತಮಾನ ಬಿಡದೆ ದುಃಖಶಬ್ದಾ ತುಚ್ಛಾ |
ಮೊದಲಾದ ವಾಕ್ಯದಿಂದ ಮಾಡುವ ಮಹಾಜ್ಞಾನಿ |
ಆದಕಾರಣ ಹರಿ ಅಖಿಳವರಣಾತ್ಮಕ |
ನಿಧಿಯಾದ ಓಂಕಾರ ಪ್ರತಿಪಾದ್ಯನೆನಿಸುವ |
ಪದುಮೆ ವಿರಂಚಿ ವಾಯು ಖಗ ಶೇಷ ರುದ್ರೇಂದ್ರ |
ಮದನ ಸೂರ್ಯೇವಂದು ಮಿಕ್ಕ |
ತ್ರಿದಶಮಹಾಮುನಿ ಸರ್ವ ಚೇತನಕೆ ಕೂಡೋದಯ್ಯ |
ಉದಧಿ ದರ್ಶನದಂತೆ ಎಲ್ಲರಿಗೆ ಸಾಧ್ಯವೆನ್ನು |
ಸದಮಲ ಮೂರುತಿ ವಿಜಯವಿಠ್ಠಲರೇಯ |
ಯದು ಕುಲೋತ್ತಮ ಕಾಣೊ ಭಕ್ತರ ಸಲಹುವ ೫
ಜತೆ
ತಾರವಿಚಾರ ವಿಚಾರತನದಲಿ ಗ್ರಹಿಸು |
ಧಾರಕ ಶಕುತಿಯಿಂದ ವಿಜಯವಿಠ್ಠಲ ಬಲ್ಲ ೬

ಭಗವಂತನಲ್ಲಿ ಭಕ್ತಿಯನ್ನು ಮಾಡಿ ಬೇಡಬೇಕಾದುದೇನೆಂಬ

೮೭
ಧ್ರುವತಾಳ
ಪ್ರತಿ ಪ್ರತಿ ದಿವಸಕ್ಕೆ ಬೇಡುವ ಬಗೆಯುಂಟು
ಅತಿಶಯವಲ್ಲ ಕೇಳು ಅನಾದಿಯ
ಪತಿತಪಾವನ ನೀನು ನಿನಗೆ ಬಿನ್ನೈಪುದೇನು
ಗತಿಮಾರ್ಗ ಒಂದಲ್ಲದೆ ಅಧಿಕ ಉಂಟೆ
ಕ್ಷಿತಿಯೊಳು ನೋಡಿದರು ನಿತ್ಯವಾದ ವಸ್ತುಗಳು
ಸತತದಲ್ಲಿ ಕಾಣೆಯಾಲೋಚಿಸಿ
ಅತಳಾದಿ ಏಳುಲೋಕ ಸಪ್ತಸಮುದ್ರ ಸ
ಪುತದ್ವೀಪ ಮೇಲು ಶೈಲಾಗ್ರ ಭಾಗ
ದ್ವಿತೀಯ ಭವನ ಸ್ವಾಹ ಮಹಜನೋತಪೊ ಸತ್ಯ
ಮಿತಕಾಲವಲ್ಲದೆ ಮೆಚ್ಚ ಸಲ್ಲ
ಚ್ಯುತನಾಗಿ ಪೋಗುತಿದೆ ಕ್ಲಪ್ತಕಾಲ ದೇವ
ಹಿತವಾಗುವದೇ ಮಹಾಯೋಗಿ ಜನಕೆ
ಶತಧೃತಿ ಮಹಪದವಿ ನಿಶ್ಚಯವಲ್ಲ ಸರ್ವ
ಶೃತಿಯಲಿ ಪೇಳುತಿದೆ ನಂಬುವುದಲ್ಲ
ಕ್ಷಿತಿಪ ಚಕ್ರವರ್ತಿಗಳು ಮಹಾಸಂಪತ್ತಿನಿಂದ
ಶತ ಸಹಸ್ರ ನೂರುಲಕ್ಷ ಕೋಟಿವರುಷ
ಪ್ರತಿರಹಿತರಾಗಿ ಏಕ ಛತ್ರಾಧೀಶ್ವರರೆನಿಸಿ
ಕೃತಕಾರ್ಯದಿಂದಲ್ಲಿ ಇದ್ದರು
ಕೃತಯುಗಾದಿಯಲ್ಲಿ ನಿಂದಿರಲಿಲ್ಲ
ಹತಭಾಗ್ಯ ಮಾನವರನೆಣಿಸಿಲ್ಯಾಕೆ
ಸತಿಪುತ್ರ ಬಂಧು ಬಳಗ ಮಿಗಿಲಾದವರು ಸಂ
ಗತಿಕಾಣೋ ಇಹದಲ್ಲಿ ತಮ್ಮ ಸುಖಕ್ಕೆ
ಗತಿಗೆ ಕಾರಣವಲ್ಲ ನಶ್ವರ ಲೋಕ ಪ್ರ
ಕೃತಿಬದ್ದ ಜೀವರಯ್ಯಾ ಲಾಭದವರೇ
ರತಿ ಪತಿ ಜನಕ ವಿಜಯ ವಿಠ್ಠಲ ನಿನ್ನ
ತುತಿಸುವ ಸೌಭಾಗ್ಯ ಅನಂತ ಕಾಲಕ್ಕೆ ಕೊಡು ೧
ಮಟ್ಟತಾಳ
ಭಗವಂತನೆ ಕೇಳು ಅವರಿವರನ ತೋರಿ
ಮಗುಳೆ ಮಗುಳೆ ನುಡಿದು ಬೇಡಿಕೊಂಬುವುದ್ಯಾಕೆ
ಜಗದೊಳಗೆನಗೀ ಸಂಸಾರಾಂತರದಿ
ಮಿಗೆ ಮನಸಿಗೆ ಅನುಭವವದು ಕೇಳು
ಮಗನು ಪೋದದು ಕಂಡೆ ಕಂಡೆ ಮನಕೆ ಒಪ್ಪುವ ಶಿಷ್ಯ
ಜಿಗಳಿ ಪೋದುದು ಕಂಡೆ ಕಾಯದಲ್ಲಿರತಕ್ಕೆ
ನಗುತ ನಗುತ ಇನಿತು ಆಗಿ ಪೋದುದಕೆ ಕೈ
ಮುಗಿದು ವಂದಿದೆನಯ್ಯಾ ಭವದೊಳು ಸುಖವಿಲ್ಲಾ
ಗಗನಗಮನ ಸಿರಿ ವಿಜಯ ವಿಠ್ಠಲರೇಯ
ತ್ರಿಗುಣ ಕಾರ್ಯಗಳಿಂದ ತಿರುಗುವುದೇ ಸಿದ್ದ ೨
ತ್ರಿವಿಡಿತಾಳ
ಅನ್ಯ ಖಂಡಗಳಲ್ಲಿ ಹತ್ತುಸಾವಿರ ವರುಷ
ಪುಣ್ಯ ಪ್ರಭಾವದಿಂದ ದೇವಮಾನ
ಗಣ್ಯವಿಲ್ಲದೆ ಬದುಕಿ ಬಲವಂತರಾಗಿ ಸು
ವರ್ಣ ಪೋಲುವ ಕಾಂತಿಯುಕ್ತರಾಗಿ
ಇನು ವನಿತೆಯರಿಂದ ನಾನಾ ಕ್ರೀಡೆಗಳಿಂದ
ಚೆನ್ನಾಗಿ ಸುಖಿಸಿ ಸಂತಾನ ಪಡೆದು
ಮನ್ನಣೆ ಮುದದಲಿ ಇದ್ದ ಜನರು ತಮ್ಮ
ಪುಣ್ಯತೀರಿದ ಮೇಲೆ ಭಾರತದಲ್ಲೀ
ಜನ್ಮತೆತ್ತುವರಾಗಿ ಸಂಸಾರದಲ್ಲಿ ಸಿಲ್ಕಿ
ಬನ್ನಬಡಲಿಬೇಕು ಇಹಲೋಕದಿ
ಮುನ್ನೆ ಚತುರಯುಗ ಬಾಳಿದವರು ಮತ್ತೆ
ಸನ್ನದ್ಧರಾಗಿದ್ದ ತ್ರಯೋದಶ ಮನು
ಛಿನ್ನ ವಿಲ್ಲದಲೆ ಎಪ್ಪತ್ತೊಂದು ಮಹಾಯುಗ
ವನ್ನ ಭೂಮಿಪರಾಗಿ ಇದ್ದವರು
ಕಣ್ಣೆವೆಯನು ಹಾಕಿ ತೆಗೆವ ಕಾಲದೊಳು ಸಂ
ಪನ್ನ ಭಾಗ್ಯಬಡನೆ ಕೊಂಡಯ್ದರೆ
ನಿನ್ನಿಚ್ಛೆಯಲಿ ತಾನೆ ಪೋಗುವ ಐಶ್ಚರ್ಯ
ತನ್ನಿಂದಲಿ ತಾನೆ ನಿಲ್ಲಬಲ್ಲದೇ
ಅಣಕವು ಆಗಿದೆ ನಿನಗೆ ಈ ಪರಿಯಲಿ
ಬನ್ನ ಬಡುವವ ನಾನೆ ಬಲ್ಲೆನಯ್ಯಾ
ಮನ್ನಿಸು ಮಹಾರಾಯ ವಿಜಯ ವಿಠ್ಠಲರೇಯ
ವಿಣ್ಮೂತ್ರದೊಳು ಬಂದು ಹೊರಳಲಾರೆನೊ ನಾನು ೩
ಅಟ್ಟತಾಳ
ಎಂಥೆಂಥ ರಾಯರು ಏನಾದರು ನೋಡು
ಎಂಥೆಂಥ ಮನುಗಳು ಇಂದ್ರ ಚಂದ್ರಾದ್ಯರು
ಪಂಥವುಳ್ಳ ರುದ್ರ ಸರಸಿಜ ಸಂಭವ
ಇಂಥ ಇಂಥವರಿಗೆ ಸಂಸಾರ ನಿತ್ಯವೆ
ಸಂತೆ ಕೂಟದ ಪ್ರಜೆಯಾರಿಗಾದರು ನೋಡು
ಕಂಥೆನೆ ಸೂತ್ರ ಹಾಕಿದಂತೆ ಇಪ್ಪದು
ಪಂಥದಲ್ಲಿ ಬಾಳುವುದಕೆ ಕಾರಣ
ಅಂಥಾದ್ದೆ ಸರಿ ದೇವ ಇಹ ಹೇಯವೆಂದು
ಗ್ರಂಥ ಮೂಲದಲ್ಲಿ ಪೇಳಿದೆ ಪೇಳಿದೆ
ಮಂಥನವನು ಮಾಡಿ ಸಂಕೀರ್ತನೆ ಸ
ತ್ಪಂಥವ ಪಿಡಿದು ಹೃದಯದೊಳಗಿದ್ದ
ಗ್ರಂಥಿ ಹರಿಸಿಕೊಂಬ ಯೋಗಮಾರ್ಗವೆ ಬೇಕು
ಚಿಂತಿತ ಫಲದಾಯ ವಿಜಯ ವಿಠ್ಠಲರೇಯ
ಸಂತರ ಮನೋಹರ ಸಕಲ ಯೋಗೇಶ್ವರ ೪
ಆದಿತಾಳ
ಶ್ವಾಸದಂತೆ ಗಾತ್ರದಿವಸ ದಿವಸ ದಿವಸ ಬಿಡದೆ
ನಾಶನವಾಗುತಿದೆ ಕಣ್ಣಿಗೆ ಕಾಣಿಸದು
ದೋಷ ಪುಂಜದಿಂದ ಭರಿತವಾಗಿದೆ
ಹೃಷಿಕೇಶನೆ ಬಿನ್ನಹ ಲಾಲಿಸು ಈಕ್ಷಿಸು
ಈ ಶರೀರ ಸ್ಥಿತಿ ಈ ಪರಿ ಇರಲಿಕ್ಕೆ
ಆಶೆಮಾಡು ಮನುಜ ಅವನೇವೇಬಲು ಮೂರ್ಖ
ದೇಶದೊಳಗೆ ಸರ್ವ ವಿಚಿತ್ರ ಪದಾರ್ಥ
ಏಸೇಸು ಇದ್ದರೇನು ನೆಚ್ಚಿಕೆ ಇಲ್ಲವೊ
ವಾಸುದೇವನೆ ನಿನ್ನ ಕರುಣ ವುಂಟೆ ಸತ್ಯ
ಸುಷುಪ್ತಿ ಕಾಲದ ಪುಣ್ಯ ಬರುವಂತೆ ಮಾಡು
ಭೂಷಣ ಭೂತಿಮನ ಬಹುಮಾನ ಬಲತೇಜ
ಭಾಸುರ ಕೀರ್ತಿ ಧೈರ್ಯ ನಾನಾ ಸಂಪತ್ತು ನಿನ್ನ
ದಾಸೋಹಂ ಎಂದೆನಿಪೆ ಮಾತಿನೊಳಗೆ ಅಕ್ಕು
ಲೇಶವಾದರು ಇದಕೆ ಪ್ರತಿಕೂಲ ಬಾರದಂತೆ
ಈಶ ಇಂದಿರೇಶ ಪಾಲಿಸು ಬೇಡಿಕೊಂಬೆ
ಭೂಸುರ ದೇಹವಿರಲಿ ಇದೇ ಮತದ ಜ್ಞಾನದಿಂದ
ಶೇಷ ಪೂರ್ತಿಯಾಗಲಿ ಸಾಧನ ಸರ್ವೇಶ
ವಾಸ ವಿಲಾಸ ಉಲ್ಲಾಸ ವಿಜಯ ವಿಠ್ಠಲ
ಮೀಸಲ ಮನದೈವ ನಿನ್ನಿಚ್ಛೆ ಎಂತಾಹುದೊ ೫
ಜತೆ
ಸಂಪತ್ತು ಸ್ಥಿರವಲ್ಲ ಇಹದಲ್ಲ ಬಯಸೋದು
ಸಂಪೂರ್ಣ ಷಡೈಶ್ವರ್ಯ ವಿಜಯ ವಿಠ್ಠಲ ಕೃಷ್ಣಾ&ಟಿ

ಇದೊಂದು ಸ್ತೋತ್ರ ಪ್ರಧಾನ ಸುಳಾದಿಯಾಗಿದೆ.

೫೯
ಧ್ರುವ ತಾಳ
ಪ್ರಳಯೋದಕದಲ್ಲಿ ಏಕೋ ನಾರಾಯಣ |
ಮಲಗಿದಾ ತನ್ನಯಾ ಲಲನೆ ಸಹಿತ |
ಜಲಜ ಮಿತ್ರನ್ನ ಬಳಿಯಾಕಳ ನಿಧಿಯಿದ್ದಂತೆ |
ನಳಿನನಾಭನ್ನ ಬಿಗಿದಪ್ಪಿ ಆತನ್ನ ತೋಳ |
ಕೆಳಗೆ ಇಪ್ಪಳು ಲಕುಮಿ ಪೊಳಿಯಾದಲೆ |
ಸುಲಭಾ ಪರಮ ಮಂಗಳನಾದಾ ಅಗಣಿತಾಂ |
ಬಳುತಾ ದೋಷಗಂಧ ದೂರ ಸುಗುಣ
ಜಲಧಿ ಶ್ರೀ ಬ್ರಹ್ಮಾದಿ ಚೇತನ ರಾಶಿಗೆ ನಿ |
ಚ್ಚಳ ನಿರವಧಿಕಾ ಸರ್ವೋತ್ತಮ |
ಬಲುಜೀಗಾತನು (?)ಸ್ವಉದರಲ್ಲಿ ನಾಭಿ ವಾಮಾ |
ಬಲಭಾಗ ವಿಡಿದು ಮುಕ್ತಾಮುಕ್ತರ |
ನಿಲಿಸಿ ಕೊಂಡು ನಲಿವಾ ತಿವಿಧ ಜೀವಿಗಳನ್ನು |
ಥಳ ಥಳಿಸುತ ಸಣ್ಣಬಾಲಕನಂತೆ |
ಹಲವು ಮಾತೇನು ಕೇಳಿ ಪರಶಬ್ದ ವಾಚ್ಯವರುಷ |
ಗಳ ಪರಿಯಂತ ಕೇವಲ ಪ್ರಳಯಾ |
ತಿಳಿವಾ (ದದ) ದಾರೊಳಗೆ ಅಷ್ಯಮ ಭಾಗಾ ಮುಂದೆ |
ಬೆಳಗುವುದಕ್ಕೆ ಇರೆ ಶ್ರೀಸ್ತುತಿಸೆ |
ಮಲಗಿದವನು ಎಚ್ಚತ್ತೋಪಾದಿಯಲಿ ಸ |
ಕಲ ಭಾಗ್ಯವಂತಾ ಸೃಷ್ಟಿಕಾಲಾ ನೋಡಿ |
ಕೆಲಕಲಾ ಅವ್ಯಾಕೃತಾ ಗಗನ ಏಕ ಪಂಚಾ |
ತಲೆಪೋಗಲಾಗಿ ಅದಕೆ ವ್ಯತ್ಕ್ರಮಾ |
ಉಳಿದನಾಮಾವರ್ಣಾ ಮೂಲ ಜಡ ಪ್ರಕೃತಿ |
ಅಳಿಯಾದಿಪ್ಪಾವು ಕಾಲಾ ವೇದ ಸಹಿತ |
ಅಲವಾ ಮೂರುತಿ ಸಿರಿ ವಿಜಯ ವಿಠ್ಠಲ ಇ |
ರಳು ಕ್ರೀಡೆಯಾಡಿದ ಸಲೆಮುಕ್ತರ ಸಂಗದಲ್ಲಿ ೧
ಮಟ್ಟತಾಳ
ಚತುರ ಚತುರ ವಿಂಶತಿ ದಶರೂಪ |
ಶತ ಸಾಸಿರ ರೂಪಾ ಹಿತದಿಂದಲಿ ಶ್ರೀ |
ಪತಿಯಾಗಿ ಈ ಲಕುಮಿ ಅತಿಶಯದಲಿ ಅ|
ಪ್ರತಿರೂಪಗಳನಿತ್ತು ಚತುರೆಧರಿಸಿ ಅ|
ಚ್ಚುತನು ಹಯನಾಗಿ ರತುನಾಕರನಸುತೆ ಇದೆ ಧೇನಿಸಿದಳು |
ಮಿತಿಯಿಲ್ಲದೆ ದೇವತಿ ಗಂಧರ್ವರು ಅತುಳ ರಾಕ್ಷಸ ಯಕ್ಷ |
ಮತಿಗುಂಹ್ಯಕ ಸಂತತಸಿದ್ಧರು ಮುನಿ |
ಖತಿಗೊಳದಾಪ್ಸರ ಸತಿಂಇಇರು ಮೊದಲಾಗಿ |
ಚಿತು ಶರೀರಗಳು ಶತಾನಂದ ತಮ್ಮ ತಮ್ಮ |
ಸತಿಸಮ್ಮೇಳವಾಗಿ ಮಿತಿಯಿಲ್ಲದ ರೂಪಾ |
ಧೃತರಾಗಲು ಇತ್ತ ಕೃತಲೀಲಾ ನಮ್ಮ ವಿಜಯ ವಿಠ್ಠಲ ಅ |
ದ್ಭುತ ಶಕ್ತಿ ತುತಿಪರಿಗೆ ಪೊಸದೋ ೨
ರೂಪಕ ತಾಳ
ಹರಿಯಿಚ್ಛಾನುಸಾರ ಸುರರಾದಿಗಳು ರೂಪ |
ಧರಿಸಿದ ತರುವಾಯಾ ಹರಿಶುದ್ಧ ಸತ್ವದಲಿ |
ಸರಿತ ಪರ್ವತ ವೃಕ್ಷ ರತುನಾ ಹೇಮಾ ರಜತ |
ಧರುಣಿ ನಾನಾ ಸ್ವರ್ಗ ಶರಧಿ ಮೊದಲಾಗಿ |
ವಿರಚಿಸಿಯದರೊಳು ಹರಿತಾನೆ ಸಿರಿ ಸಹಿತ ಜಲ |
ಚರ ರೂಪಗಳು ಶಿರುನಗೆಯಿಂದಲಿ |
ಕರುಣಾಕರ ದೇವ ಧರಿಸಲು ಬೊಮ್ಮಾದಿ ಮು |
ಕ್ತರು ಧರಿಸಿದರು ತರುವಾಯ ಶಿಲ್ಪ ಶಾಸ್ತ್ರವನು ತನ್ನ |
ವರಿಗೆ ಅರುಹಿದಾ ಕ್ಷಣದಲ್ಲಿ ಗ್ರಾಮಾರಣ್ಯ ಪಶು |
ಅರಸು ಸಾಮಂತ ರೂಪಗಳೆಲ್ಲ ಧರಿಸೀದ |
ಹರಿತಾನೆ ಬೊಮ್ಮನ ಪ್ರಧಾನಿಯ ಮಾಡಿ |
ಪರಮಉತ್ತುಮರ ಪ್ರಜೆಗಳಂತೆ ಕಲ್ಪಿಸಿ |
ನಿರುತತ ಮಸಿನಲ್ಲಿ ಬಿದ್ದ ದುಷ್ವ ದೈ |
ತ್ಯರ ಕಳ್ಳನ ಮಾಡಿ ಅವರವರಿಗೆ ನಿ |
ಷ್ಠುರವನ್ನು ಹಚ್ಚಿಸಿ ಖಳರ ಸದೆ ಬಡಿದು |
ಮೆರೆದಾ ವಾಣಿ[ಜ್ಯ] ಮಿಕ್ಕಾದ ಕರ್ಮಗಳಲ್ಲಿ |
ಕರುಣಾ ಸಾಗರ ಹರಿ ಅನೇಕ [ಸ್ತ್ರೀ] ರೂಪ |
ಧರಿಸಿದಾ ಸುರರೆಲ್ಲ ಅದರಂತೆಯಾದರು |
ಪರಿ ಪರಿ ರೂಪಗಳು ಪುನರಪಿ ಅಡಗಿಸಿ |
ಪುರುಷ ರೂಪನಾದ ಭಕ್ತರವೊಡಗೂಡಿ |
ವರಯಾಗಧ್ಯಯನ ಇತಿಹಾಸಾ [ಪು]ರಾಣಾ |
ಸರಿ ಸರಿ ಬಂದಂತೆ ಹರಿಯೇ ಸೇವಿಸಿ ಎಲ್ಲ |
ಪರಮ ಭಾಗವತರ ಪ್ರೀಯಾ ವಿಜಯ ವಿಠ್ಠಲ |
ಮರಿಯಾದೆಯಲ್ಲದ ಚಿತ್ರ ವೈಚಿತ್ರ
ಝಂಪಿ ತಾಳ
ರಾತ್ರಿ ಕಡೇ ಭಾಗದಲ್ಲಿ ವೇದಾಭಿಮಾನಿ ದುರ್ಗ |
ಸ್ತೋತ್ರ ಮಾಡಿದಳು ಪುನರಪಿಯಲ್ಲಿ |
ಪಾತ್ರ ಅಪಾತ್ರ ಜೀವರ ನೋಡಿ ಅವರಿಗೆ |
ಗಾತ್ರವನು ತಂದಿತ್ತು ಮಾಡಿಪದೆಂದೊ |
ಘಾತ್ರಲಘು ಕರ್ಮ ಇದ್ದರೆ ವಿಸ್ತಾರ |
ಧಾತ್ರಿಯೊಳು ಹರಹಿ ಸೃಜಿಸೆನಲು |
ಸತ್ರಾಣ ತಾನಹುದೊ ಸತ್ಯ ಸಂಕಲ್ಪ ಪ |
ವಿತ್ರ ಭಕ್ತರ ಮ್ಯಾಲೆ ದಯವ ನೆನದೂ |
ಈ ತ್ರಿವಿಧ ಜೀವರ ಸ್ವರೂಪ ಪ್ರಕಟಿಸಿ |
ಮಾತ್ರಾಕಾಲಾ ಪ್ರಭೇದದಿಂದ ನಡಿಸಿ |
ಮೈತ್ರಿತನಲಿ ಪೊರೆದು ಅವರವರ ಕರ್ಮಕಂ |
ನ್ಯತ್ರವಾಗೊಡೆನೆಂದು ವೈಹಿಸಿ (ವಹಿಸಿ) |
ಸೂತ್ರ ನಾಮಕ ಮರುತ ನಿಣ್ರ್ಯೆಸಿದಂತೆ ಸ |
ರ್ವತ್ರರನು ಕರುಣಿಸುವ ಕಪಟಲೀಲಾ |
ಸೂತ್ರಧಾರಿ ನಮ್ಮ ವಿಜಯ ವಿಠ್ಠಲ ಲೋ |
ಕತ್ರಯದಲ್ಲಿ ಪ್ರಾಣನಾವಶವಾಗಿಯಿಪ್ಪ ೪
ತ್ರಿವಿಡಿ ತಾಳ
ಹರಿಯ ರೂಪಗಳ ಅಭಿವ್ಯಕ್ತಿ ಆ ತುಮ ಸೃಷ್ಟಿ |
ಸಿರಿಯಾಗುವುದು ಎರಡನೇ ಸೃಷ್ಟಿ |
ಮೂರನೇ ಜಿವರಿಗೆ ಸ್ಥೂಲದೇಹ ಕೊಡುವುದು |
ಎರಡೊಂದು ಸೃಷ್ಟಿ ಮಿಶ್ರಾಯೆನಿಸುವದು |
ಅರಿವದು ಘಟಾದಿಗಳ ಸೃಷ್ಟಿ ನಾಲಕನೇದು |
ಕರೆಸಿಕೊಳ್ಳುತಲಿದೆ ಕೇವಲಾಯೆಂದು |
ಪುರುಷ ರೂಪಾಗು ಸಲೆ ವಾಸುದೇವ ಸಂ |
ಕರುಷಣ ಪ್ರದ್ಯುಮ್ನ ಅನಿರುದ್ಧನು |
ಮಿರಗುವ ನಾಲ್ಕು ಮೂರ್ತಿಯ ವ್ಯಾಪಾರ ವಿ |
ಸ್ತರಿಸುವೆ ಗತಿಕರ್ತ ಉತ್ಪತ್ತಿ ಸ್ಥಿತಿ ಸಂ |
ಹರಕೆ ಒಡೆಯರಾಗಿ ಜಗವೆಲ್ಲ ತುಂಬಿ ಸ |
ಚರಾಚರದಲಿ ಬಿಡದೆ ನಡಿಸುವರು |
ಎರಡೆಂಟು ಕಳೆವುಳ್ಳ ದೇಹಕೆ ಕಾರಣ |
ವಿರಜಾನದಿಯ ಪಡೆದಾ ವಾಸುದೇವ |
ಶರೀರ ಬೆವರಿನಿಂದ ಸಿದ್ಧಸಾಧನ ಜೀ |
ವರಿಗೆ ಉಪಕಾರ ಒಲಿದು ಕೇಳಿ |
ಹರಿತಾನೆ ಚತುಮೂರ್ತಿಯಾಗಲು ಪದ್ಮಮಂ |
ದಿರೆ ಮಾಯಾ ಜಯಾಕೃತಿ ಶಾಂತಿ ರೂಪ |
ಧರಿಸಿ ಪ್ರಥುಕರಾಗಿ ತನ್ನ ಗಂಡನ ಕೂಡ |
ನೆರದು ಸಂತಾನ ಪಡೆದಳಂದು |
ಪುರುಷನಾಮಕ ಬ್ರಹ್ಮ ಸೂತ್ರಾಖ್ಯವಾಯು ಮಿಗಿ |
ಲಾರನ ಪೆತ್ತಳಯ್ಯಾ ಕ್ರಮದಿಂದಲಿ |
ಸರಸ್ವತಿಯೆಂದೆಂಬೊ ಪ್ರಕೃತಿ ಮತ್ತೆ ಶ್ರದ್ಧ |
ವರ ಕನ್ನಿಕಿಗಳ ಕೃತಿಯಾಗಿ ಪಡೆದೆ |
ಚರಿತೆ ಏನಂಬಿನೊ ಅವರವರಿಗೆ ಮದುವೆ |
ಸರಸದಿಂದಲಿ ಮಾಡಿ ನಿಮ್ಮೊಳು ನೀವೆ |
ಸರಿಯಾಗಿ ಬೀಯಾ ಬಿಜ್ಜರ ತೆರದಿಂದ |
ಪರಿ ಪರಿ ಲೀಲೆಯ ತೋರುತಲಿ |
ತರುಳನಾಗಿಯಿಪ್ಪ ವಿಜಯವಿಠ್ಠಲನಿಗೆ |
ಸರಿಯಾದ ಧೊರೆಗಳ ನಾನೆಲ್ಲಿ ಕಾಣೆ ೫
ಅಟ್ಟತಾಳ
ಪುರುಷ ನಾಮಕ ಬೊಮ್ಮಪುಟ್ಟಿದ ಎರಡನೆ |
ವರುಷಕೆ ಪ್ರಧಾನ ಮಾರುತ ಪುಟ್ಟಿದನಯ್ಯಾ |
ಮರಳೆ ಬೊಮ್ಮನರಾಣಿ ಶ್ರದ್ಧಾದೇವಿ ಈ |
ರ್ವರು ತ್ರಯವರುಷಕೆ ಜನಿಸಿದರು ನಾ |
ಲ್ವರು ತತ್ವಾಭಿಮಾನಿಗಳು ಕಾಣೊ |
ಸರಸ್ವತಿ ಪುಟ್ಟಿದ ಎರಡನೆ ವರುಷಕೆ |
ಉರಗಾಕಾರ ಜೀವ ಕಾಲನಾಮಕನೆಂಬೊ |
ಗರುಡನುಧ್ಬವಿಸಿದರಜವಾಯುವಿನಿಂದ |
ಸರಿಯಿಲ್ಲದೆ ವಾಸುದೇವನ್ನ ತನುಜಗೆ |
ವರುಷ ಏಳಾದವು ಅಹಂಕಾರ ತತ್ವಕೆ |
ಕರಸಿಕೊಂಡರು ಅಭಿಮಾನಿಗಳು ಅಂದು |
ಹರಿಗೆ ಹಾಸಿಕೆ ವಾಹನರಾಗಿ ಜಗದೊಳು |
ಮೆರದಾರು ಇತ್ತಲೊಂದು ಚರಿತೆವುಂಟು |
ಪುರುಷಾಖ್ಯನೆಂಬಜನಿಂದ ಬಲಾತ್ಮಕ |
ಮರುತ ಸೂತ್ರನು ಭಾರತಿ ಜನಿಸಿದರು |
ಮರಳೆ ಇವರಿಗೆ ಗರುಡಶೇಷ ಪುಟ್ಟಿ |
ದರು ಇವರೀರ್ವಾರು ಒಂದು ದೆಶೆಯಲ್ಲಿ |
ಪರಮ ಪುರುಷನಾದ ವಿಜಯವಿಠ್ಠಲ ಹರಿಯ |
ಪರಿ ಪರಿ ಸೋಜಿಗವ ಎಣಿಸಲಾರಳವೆ ೬
ಆದಿತಾಳ
ಖಗ ಶೇಷರುತ್ಪತ್ಯವಾದ ಒಂದು ವರುಷಕೆ |
ಜಗದೀಶ ಹರಿ ಇಚ್ಚೆಯಿಂದ ಆದ್ಯಬೊಮ್ಮ |
ಮಗನಾದನು ಪ್ರದ್ಯುಮ್ನಗೆ ಪುನರಪಿ |
ತ್ರಿಗುಣಾಭಿಮಾನಿಯು ವಾಣಿಯಲ್ಲಿ ತಾನೆ |
ಮಗನಾದ ಸೂತ್ರನಾಮಕ ವಾಯು ಸಮ್ಮತ |
ತ್ರಿಗುಣದಲ್ಲಿ ಒಂದೊಂದು ಬ್ಯಾರೆ ಬ್ಯಾರೆ ಮೂರು |
ಬಗೆ ರೂಪಾದನು ರುದ್ರವೈಕಾರಿಕ |
ಮಿಗೆ ತ್ಯೆಜಸ ಅಹಂಕಾರನು ಎಂದೆಂಬೊ |
ಪೊಗಳಾಲಳವೆ ತನ್ನ ಸ್ತ್ರೀ ಸಹ ಪುಟ್ಟಿದ ಪ |
ನ್ನಗ ಜೀವ ಮುಖ್ಯ ಪ್ರಾಣಾ ಪುರುಷನಾಮಕ ಬೊಮ್ಮ ನಾಲ್ಕು |
ಮೊಗನಿಂದ ಕ್ರಮವಿಡಿದು ಒಂದೊಂದು ಗುಣಧರಿಸಿ |
ಅಗಣಿತ ಲೀಲೆಯನ್ನು ತೋರಿದ ಮಧ್ಯದಲ್ಲಿ |
ವಿಗಡ ವಿಷವನುಂಡ ಮೂಲ ವಾಯು ಮತ್ತೆ |
ಖಗನೆಂಬೊ ಕಾಲನಿಂದ ವಿಷ್ವಕ್ಸೇನ ಜಯಾ |
ದಿಗಳು ಪಾರ್ಷದರು ಪುಟ್ಟಿದರಯ್ಯಾ ಜೀ |
ವಿಗಳು ಸ್ಥೂಲದೇಹ ಇಚ್ಧೈಸುವರಾಗಿ |
ನಿಗಮವಿನುತ ಶ್ರೀಹರಿಯ ಅನುಜ್ಞದಿಂದ |
ಅಗಣಿತ ಜೀವರು ತಮ್ಮ ತಮ್ಮ ಅಂಶದಿಂದ |
ಸೊಗಸಾಗಿ ಪ್ರದ್ಯುನ್ನು ದೇವರ ಉದರವ |
ನಗುತಾ ಪ್ರವೇಶವಾದರದು ಪೇಳುವರಾರು |
ಭೃಗು ಮುನಿಬಲ್ಲಾ ನಮ್ಮ ವಿಜಯ ವಿಠ್ಠಲರೇಯ |
ಯುಗ ಯುಗದಲ್ಲಿ ನಿಜ ಭಕ್ತರ ಪರಿಪಾಲಿಪ ೭
ಜತೆ
ಸೂಕ್ಷ್ಮಾಸೃಷ್ಟಿಯೆನ್ನೀ ಅಜಗೆ ಹತ್ತನೆ ವರುಷ |
ಈಕ್ಷ್ಮಾಧರದೇವಾ ವಿಜಯ ವಿಠ್ಠಲರೇಯಾ ೮

ಈ ಸುಳಾದಿಯು ವಾಯುದೇವರನ್ನು

೧೪೯
ಧ್ರುವತಾಳ
ಪ್ರಾಣ ಅಪಾನ ವ್ಯಾನ ಸಮಾನ ಉದಾನ
ಜ್ಞಾನಮಯಾ ಸತ್ವಶರೀರ ಸಮೀರ
ಆನಂದಸಾಂದ್ರ ಹರಿನಂದ ಪವಮಾನ
ಮಾನದಭಿಮಾನಿಯ ವಾಣಿಪ್ರೀಯಾ
ನೀನೆ ಸರ್ವರಲ್ಲಿ ಗೀರ್ವಾಣರಿಗೆ ಮೊದಲು
ನಾನಾ ಪ್ರಕಾರ ಜೀವಿಗಳಾಧಾರಾ
ಸ್ನಾನ ಜಪತಪ ಹೋಮ ಮೌನ ತೀರ್ಥಯಾತ್ರೆ
ನೀ ನಡೆಸಲದರಿಂದ ಸಿದ್ಧಿಪವು
ನೀನೆಲ್ಲೋ ಅಲ್ಲಿ ಶ್ರೀ ನಾರಾಯಣನು ಇಪ್ಪ
ಏನೆಂಬೆ ನಿನ್ನಯ ಕರ್ತೃತನಕೆ
ಕ್ಷೋಣಿ ವಿಕ್ಷೋಣಿಯಲ್ಲಿ ಸರ್ವವ್ಯಾಪಾರ ಪಂಚ
ಪ್ರಾಣಜನಕ ವಾಯು ನಿನ್ನದಯ್ಯಾ
ದಾನವಾಮರರ ಮಧ್ಯ ಬಂದು ಅಘೋರ ವಿಷ
ಪಾನವನ್ನು ಮಾಡಿದ ಪ್ರಭಂಜನಾ
ದೀನ ವತ್ಸಲ ನಮ್ಮ ವಿಜಯ ವಿಠ್ಠಲನಂಘ್ರಿ
ರೇಣು ಶಿರದಲ್ಲಿಟ್ಟ ರೈರಮಣಾ ೧
ಮಟ್ಟತಾಳ
ಸುರರು ತಮ್ಮೊಳು ತಾವೇ ನೆರೆದು ಯೋಚಿಸಿದರು
ಮರುತನು ನಮಗೆಲ್ಲಿ ಹಿರಿಯನು ಅಹುದೆಂಬ
ಗರುವಿಕೆತನವೇನು ಸರಿ ಸರಿ ಬಂದಾಗು
ತ್ತರವನಾಡುತಿರೆ ಹರಿ ಅರಿದು ಒಂದು
ಶರೀರವನು ಮಾಡಿ ಪರಿ ಪರಿಯ ತ
ತ್ವರ ಒಳಗೆ ಪೋಗಿಸಿದ ಮರುತನ ಸಹವಾಗಿ
ಪುರುಷ ನಾಮಕ ದೇವ ವಿಜಯ ವಿಠ್ಠಲರೇಯ
ಸುರರಿಗೆ ಪ್ರಾಣನಿಗೆ ಪರೀಕ್ಷಿಸಿ ತೋರಿದಾ ೨
ತ್ರಿವಿಡಿತಾಳ
ಚರಣದಿಂದಲಿ ಇಂದ್ರ ಸೂನು ಪೋಗಲು ಹೆಳವ
ಕರಗಳಿಂದಲಿ ದಕ್ಷ ಪೋಗಲು ಕರಹೀನ
ಮರಳೆ ನಯನದಿಂದ ಭಾನು ಪೋಗಲು ಕುರುಡ
ತರಣಿಮಕ್ಕಳು ಪೋಗೆ ಪರಿಮಳವಾಗದು
ವರುಣ ಪೋಗಲು ರುಚಿಯೆ ತೋರದು ಕಾಣೋ
ಮರುತ ಸಖನು ಪೋಗೆ ಮೂಕ ನಾಹಾ
ತೆರಳಿದಿಗ್ದೇ ವತಿಗಳು ಪೋಗೆ ಕಿವುಡನು
ಅರಣಿ ಸ್ವಾಯಂಭು ಪೋಗಲು ಅಲ್ಲಿಯೋ ನಿಲ್ಲ
ಮರುತನು ಪೋಗಲು ಮೈ ಸ್ಮರಣೆಯು ಇಲ್ಲ
ಗರುಡ ಶೇಷರುದ್ರ ಪೋಗಲು ಹಾನಿಲ್ಲ
ಇರದೆ ಗಣೇಶಾದಿ ಪೋಗೆ ಆದೇಹ ಅನಿಸಲಿಲ್ಲ ಪೆಣನೆಂದು
ವರ ಮುಖ್ಯ ಪ್ರಾಣ ಸ್ಥಾನದಿಂದಲಿ ವೇಗಾ
ತೆರಳಿ ಪೋಗಲು ದೇಹ ಪೆಣನೆಂದೆನಿಸಿತು
ಪರೀಕ್ಷಿಸಿ ತಿಳಿದು ನಾಚಿಕೆ ಉಳ್ಳವರಾಗಿ
ಮರಳೆ ಪ್ರವೇಶಿಸೀ ಏಳಾದಿರೇ
ಹರಿಗೆ ಕೇವಲ ಮುಖ್ಯದಾಸ ಮುಖ್ಯಪ್ರಾಣ
ತಿರುಗಿ ಬಂದು ಹೋಗಲು ಚೇತನಾಗೆ
ಸುರರು ತಮ್ಮೊಳು ತಾವು ನೋಡಿಕೊಳ್ಳುತಲೆ
ಮರುತದೇವನೆ ನಮಗೆ ಹಿರಿಯನೆಂದು
ಕರವ ಮುಗಿದು ನಿಂದು ಜಯವೆಂದು ಕೊಂಡಾಡಿ
ಗುರುವೇ ನೀನೆಂದು ಪವನನ ಕೊಂಡಾಡೇ
ಮಿರಗುವಾಂಬರಧರೆ ವಿಜಯ ವಿಠ್ಠಲನ
ಶರಣರೊಳಗೆ ಮುಖ್ಯಶರಣ ಈತನು ಕಾಣೊ ೩
ಅಟ್ಟತಾಳ
ತಂದೆ ಈತನು ಕಾಣೊ ತಾಯಿ ಈತನು ಕಾಣೊ
ಬಂಧು ಬಳಗ ಸರ್ವಾರ್ಥವು ಈತನು
ಹಿಂದು ಮುಂದೆ ನಮಗಾಧಾರ ಈತನು
ಎಂದೆಂದಿಗೆ ಸಂಬಂಧಿಗನೀತನು
ಚಂದದ ರಸಾಯನ ಭೋಕ್ತನು ಈತನು
ಇಂದ್ರಿಯಂಗಳಿಗೆ ಪ್ರತಿದಿನ ನಿಯಾಮಕಾ
ನಂದ ಮೂರುತಿ ನಮ್ಮ ವಿಜಯ ವಿಠ್ಠಲನಂಘ್ರಿ
ನಿಂದಿರಾದರ್ಚಿಪ ಗರಳ ಭರಿತನದೇವಾ ೪
ಆದಿತಾಳ
ತರಣಿ ಅಯನುತ್ತರ ಗೌರ ಪಕ್ಷ ಹಗಲು
ನರ ಭೂತವಾಯು ವ್ಯೋಮಾದಿಯಲ್ಲಿ ನೀನೆ
ಇರುಳು ವಲ್ಲಭೆ ದಕ್ಷಿಣಾಯನ ಕೃಷ್ಣ ಪಕ್ಷ
ಇರುಳು ಸ್ತ್ರೀ ತೇಜಾದಿಯಲ್ಲಿ ನಿನ್ನ ರಮಣಿ
ಪರಿಪೂರ್ಣವಾಗಿ ನೀವಿಬ್ಬರು ಸರ್ವದಾ
ಹರಿ ಅಜ್ಞೆಯಿಂದ ವ್ಯಾಪಾರ ಮಾಳ್ಪರು
ಕರಣಶುಧ್ಧಿಯಲ್ಲಿ ಈ ಪರಿ ತಿಳಿದವರಿಗೆ
ದುರಿತಗಳೋಡಿಸಿ ವರ ಪದವಿಯ ನೀವೆ
ಸರಿಗಾಣೆ ನಿನ್ನ ಅದ್ಭುತ ಲೀಲೆಗೆ ನಾನು
ಎರಗಿ ನಮೋನಮೋ ಎಂಬೆ ಮರುತ ಪ್ರಧಾನನೆ
ಸಿರಿಯರಸ ವಿಜಯ ವಿಠ್ಠಲನ್ನ ನೆಚ್ಚಿದ
ಪರಮಭಕ್ತನು ನೀ ಎನಗೆ ಭರದ ಭಕ್ತಿಯಕೊಡು೫
ಜತೆ
ಮೂರವತಾರದ ಗುರುವೆ ಸುರ ತರುವೆ
ವಾರವಾರಕ್ಕೆ ವಿಜಯ ವಿಠ್ಠಲನ್ನ ಪ್ರತಿಬಿಂಬಾ೬

ಶ್ರೀಪಾದರಾಜರ ಶಿಷ್ಯರಾರ ಶ್ರೀವ್ಯಾಸರಾಜರ ಸ್ತೋತ್ರವಿದು.

ಶ್ರೀವ್ಯಾಸರಾಯರ ಸ್ತೋತ್ರ
೧೫೮
ಧ್ರುವತಾಳ
ಬಂದು ದಿವಸ ನಾರಂದ ಮುನೀಶ್ವರ
ನಂದ ಗೋಪನ ಕಂದ ಇಂದಿರಾರಮಣನ
ಸಂದರುಶನ ಮಾಡಿ ಬಂದ ಹರಿವರ್ಷ
ವೆಂದೆಂಬೊ ಖಂಡದೊಳಾನಂದ ಗಾಯನದಿಂದ
ನಿಂದು ನರ ಮೃಗಗೆ ವಂದಿಸಿ ತೆರಳುತಿರೆ
ಅಂದು ಪ್ರಹ್ಲಾದನು ದ್ವಂದ್ವ ಪಾದಕೆರಗಿ
ಇಂದು ದ್ವಾರಕೆ ಪುರದಿಂದ ಪೊರಟು ನಡೆ
ತಂದ ವಾರ್ತೆ ಎನಗೊಂದುಸರಲಿಲ್ಲ ದೀನ
ಬಂಧು ಎನಿಸಿ ಕೊಂಬ ವೃಂದಾರಕ ಮುನಿ
ಮುಂದುಗಾಣದಲೆ ಕಣ್ಣಿಂದ ಬಾಷ್ಪೋದಕ
ಬಿಂದುಗಳುದರಿಸುತ ನಂದನಂದನ ಚರಿತೆ
ಒಂದೊಂದು ಪೇಳಲದರಿಂದ ಮೈಮರೆದು ಹೋ
ಎಂದು ಶಿರವದೂಗಿ ಮುನಿಗೆ ಎರಗಿ
ಕಂಧರ ಬಾಗಿ ನಾನೆಂದಿಗೆ ಕೃಷ್ಣನ
ವಂದಿಸುವೆನೆನಲು ಮಂದಹಾಸದಿಂದ
ಮಂದರೋದ್ಧರ ವಿಜಯವಿಠ್ಠಲ ಯಶೋದೆ
ಕಂದನ ಲೀಲೆಯಾನಂದ ಪೇಳೆನ್ನ ಮುನಿ
ಅಂದು ವಿವರಿಸಿದ ಅಂದವಾಗಿ ನಲಿದು ೧
ಮಟ್ಟತಾಳ
ಸಕಲದೇವರೊಳು ರುಕ್ಮಿಣಿ ಅರಸನ್ನ
ಸುಖಸಮುದಾಯಕೆ ಅಕಟ ನಾನೇನೆಂಬೆ
ಸಕಲಭೂಷಣ ಸುರನಿಕರ ಸಂದಣಿಯಲ್ಲಿ
ಮುಕುತಾಮುಕುತರ ಸೇವಕರ ಕರದಿಂದ
ಅಕಳಂಕನಾಗಿ ಸಕಲ ಸೇವಿಯಗೊಂಬ
ಮಕ್ಕಳಮಾಣಿಕ ರಂಗ ವಿಜಯ ವಿಠ್ಠಲನ್ನ
ಭಕುತರೊಳಗ್ರಣಿ ಯುಕುತಿಯಲಿ ಪೇಳಿದನು ೨
ತ್ರಿವಿಡಿತಾಳ
ಹರಿಯ ಪಾದಕ್ಕೆರಗಿ ವರಪ್ರಹ್ಲಾದನು
ಎರದೊಂದು ಮಾರ್ಗದಲ್ಲಿ ಕೃಷ್ಣನ ಮೂರುತಿಯ
ಪರಿಪರಿಯಲ್ಲಿ ಭಜಿಸಿ ಧನ್ಯನಾಗುವೆನೆಂದು
ಸುರ ಮುನಿಗೆರಗಿ ನಿಂದಿರಲಾಗಿ ನಾರದ
ಕರುಣದಿಂದಲಿ ಉತ್ತರವ ಪೇಳಿದ ನಾನೀ
ಧರೆಯೊಳು ಜನಿಸುವ ವರವ ಪಡೆದು ಇಪ್ಪೆ
ಪರಮ ಭಾಗವತರ ರಮಣಿಯೆ ನೀನು
ಧಾರುಣಿಯೊಳಗವತರಿಸಿ ಅಧಿಕವಾದ
ಮಾರುತ ಮತದೊಳಗೆ ಚರಿಸಿ ಕೃಷ್ಣನ ಪೂಜೆ
ನಿರುತ ಬಿಡದೆ ಮಾಡಿ ಹರುಷ ಬಡೆಂದೆನಲು
ಕರುಣವಾರಿಧಿ ನರಹರಿ ವಿಜಯ ವಿಠಲನ್ನ
ಸ್ಮರಿಸಿ ಶೇಷಾಂಶ ಧರಿಸಿ ದೇಹವ ತಾಳ್ದಾ೩
ಅಟ್ಟತಾಳ
ಬನ್ನೂರು ಸ್ಥಳದಲ್ಲಿ ಜನಿಸಿದರು ಬ್ರ
ಹ್ಮಣ್ಯ ತೀರ್ಥರಪಾವನ್ನ ಕರದಲ್ಲಿ
ಸನ್ಮನವಾಗಿ ಪಾಲನವಾದರು ಮುನಿ
ರನ್ನ ಶ್ರೀ ಪಾದರಾಯನ್ನ ಬಳಿಯಲ್ಲಿ
ಚನ್ನಾಗಿ ವಿದ್ಯಾ ಸಂಪನ್ನವಾದರು ಬಲು
ಅನ್ಯಮತವ ಬೇವಾಟನ್ನ ಮಾಡಿ ಸುಪ್ರ
ಸನ್ನ ಹರಿಯ ಕಾರುಣ್ಯವ ಪಡೆದರು
ಚನ್ನಾಗಿ ಕೃಷ್ಣ ಶ್ರೀ ವಿಜಯ ವಿಠಲನ್ನ
ಸನ್ನುತಿಸಿ ಧ್ಯಾನವನ್ನೆ ಕೈಕೊಂಡ ೪
ಆದಿತಾಳ
ಗುರು ವ್ಯಾಸಮುನಿಯೆಂದು ಧರಣಿಯೊಳಗೆ ಪೆಸರಾಗಿ
ನೆರದು ಸಜ್ಜನರಿಗೆರೆದು ನ್ಯಾಯಶಾಸ್ತ್ರ
ಅರುಹಿ ವೈಷ್ಣವಮತ ಅದರಿಂದ ಉದ್ಧರಿಸಿ
ಪೊರೆದು ನಂಬಿದವರ ಎರಡೊಂದು ಜನ್ಮ
ಸುಂದರ ಗರ್ಭದಲಿ ಬಂದು
ಪರಿಪೂರ್ಣ ಜ್ಞಾನಭಕ್ತಿ ವೈರಾಗ್ಯದಲ್ಲಿ ನಡೆದು
ಎರಡೊಂದು ಉತ್ತಮ ಗುರುಸಂತತಿಯೊಳಗೆ
ಚರಿಸಿ ಚತುರಾಶ್ರಮ ಧರಿಸಿ ಚತುರರಾಗಿ
ಭರತ ಖಂಡದೊಳು ಪಸರಿಸಿ ಕೀರ್ತಿಯ ಪಡೆದು
ಭರದಿಂದ ವಾಲಗವ ಸುರರಿಂದ ಕೈಕೊಳುತ
ಪರಲೋಕದಲಿ ಒಪ್ಪಿ ನಿರಾಮಯ
ಗುಣನಿಧಿ ವಿಜಯವಿಠ್ಠಲರೇಯನ
ನೆರೆನಂಬಿ ಪ್ರತಿದಿನ ಮೆರೆದು ಮೂರ್ಧನ್ಯರಾಗಿ೫
ಜತೆ
ಪ್ರಹ್ಲಾದನೇ ವ್ಯಾಸಮುನಿಯೇ ರಾಘವೇಂದ್ರ
ಅಹುದೆಂದು ಭಜಿಸಿರೋ ವಿಜಯ ವಿಠ್ಠಲ ಒಲಿವಾ೬

ಪ್ರತಿಯೊಂದು ತಾಳ ಸಾಹಿತ್ಯದ ಕೊನೆಯ

೧೦೧
ಧ್ರುವತಾಳ
ಬಂದು ನಿಂದವನಾರು ಎನ್ನ ಹೃದಯಾಬ್ಜ
ಮಂದಿರದೊಳು ಮಹಾ ಅಣುವಾಗಿ ತೋರುತ
ಮಂದಹಾಸದಿಂದ ವೈಯಾರದಿಂದ ಅರ
ವಿಂದ ಕರಗಳನ್ನು ತಿರುಹಿ ಸನ್ನೆಯಲ್ಲಿ
ಪೊಂದಿದ ಭಕುತರನ ಪಾಲಿಸಿ ಅವರ
ಬಂಧನ ಪರಿಹರಿಸಿ ಸಾಕುವೆನೆನುತಲಿ
ಒಂದೆ ಸಾರಿಗೆಯಲಿ ನೆನೆಸಲು ನಿಲ್ಲದೆ
ಅಂದು ಇಂದೆನ್ನದಲೆ ಚನ್ನಾಗಿ ಬರುವೆ
ನೆಂದು ಕೃಪೆಯಿಂದೆ ಪೇಳುವ ಜಾಣನು
ಇಂದ್ರಾದಿಗಳ ಮನಕೆ ಸಿಗದಾ ಮಹಾಮಹಿಮನೋ
ಚಂದಿರವದನ ಸಿರಿ ವಿಜಯ ವಿಠ್ಠಲ ಪು
ರಂದರ ದಾಸರಿಗೆ ಒಲಿದ ಸರ್ವೇಶನೋ ೧
ಮಟ್ಟತಾಳ
ಸುರರೊಡಿಯಾ ಪಂಢರಿಪುರವಾಸನೊ
ತಿರುವೆಂಗಳೇಶನೊ ಗಿರಿಯ ತಿರುಮಲನೊ
ಗರುಡಾದ್ರೀಶನೊ ವರಕಾಂಚಿ ಪುರದಾ
ವರದರಾಜನೊ ಪುರುಷೋತ್ತಮನೊ ಬದರಿ
ನಾರಾಯಣನೊ ವಾರಣಾಸಿ ಮಧ್ಯದಲ್ಲಿ
ವರ ಬಿಂದು ಮಾಧವನೋ
ಸಿರಿ ರಂಗನೊ ರಜತಪುರಿಯವನೊ
ಪರಮಾತ್ಮ ಸರ್ವಾಂತರ್ಯಾಮಿ ದೇವನೋ
ಪರಿಪೂರ್ಣ ಕರುಣಿ ವಿಜಯ ವಿಠ್ಠಲ ಎನ್ನ
ಗುರು ಪುರಂದರ ದಾಸರಿಗೊಲಿದ ಧೀರನೋ೨
ತ್ರಿವಿಡಿತಾಳ
ಒಂದೊಂದು ರೂಪದಲಿ ಮೊಳೆದು ಪೊಳೆದು ಮೊದ
ಲಂದದಲಿ ರೂಪವ ತೋರಿ ನಗುವ ಚಲುವ
ನೊಂದೆನೊ ಭವಾಂಬುಧಿ ಮಡುವಿನೊಳಗೆ ಬಿದ್ದು
ಮುಂದೆ ಸೇರಲಾರೆ ಮಾಯಾದೊಳು
ಹಿಂದೆ ನೊಂದದ್ದೆ ಸಾಕು ಸಾಕುವದಾ ತಾರಾ
ಬಂದು ನೀನೆ ಪೊಳೆಯಲಿನ್ನು ಸಂಶಯವುಂಟೆ
ಕಂದರ್ಪ ಕೋಟಿಲಾವಣ್ಯ ವಿಜಯ ವಿಠ್ಠಲ?
ಅಂದು ಪುರಂದರನ ಮುಂದೆ ಆಡಿದ ದೈವಾ೩
ಅಟ್ಟತಾಳ
ಎಂಥ ಕರುಣಾನಿಧಿ ನೀನು ಎಂಥ ದಯವಂತಾ
ಎಂಥ ಕಾಯಾದೊಳಗಂತಂತೆ ಇಪ್ಪನೆ
ಪಿಂತೆ ದಾಸರಿಗೆ ಬಂತೆಂಬ ಪ್ರಾರಬ್ಧ
ಅಂತಿಜನಲ್ಲಿಗೆ ಸಂತೋಷದಲ್ಲಿ ಪೋಗಿ
ಅಂತರಗೊಳಿಸದೆ ಚಿಂತೆ ಯಾತಕೆನೆ ನೀ
ನೆಂತು ಪರಿಹರಿಸದೆ ಅಂತು ಬಲ್ಲವರಾರು
ಶಾಂತ ಮೂರುತಿ ನಮ್ಮ ವಿಜಯ ವಿಠ್ಠಲ ಭಕ್ತ
ರಂತರಂಗದೊಳು ನಿಂತಾಡುವ ದೈವಾ ೪
ಆದಿತಾಳ
ಕಿರೀಟ ಕುಂಡಲ ಕುರುಳಗೂದಲು
ಕೊರಳ ಹಾರ ಕೈಮುದ್ರೆ ಪರಿ
ಪರಿ ಭೂಷಣ ಶೋಭನ ವಸನ
ಚರಣ ನೂಪುರ ಕಡಗ ಗೆಜ್ಜೆ
ಗರುವ ದೇವರದೇವ ಸಾ
ವಿರನಯನ ವಿಜಯ ವಿಠ್ಠಲ
ಕರುಣಿ ಪುರಂದರದಾಸರಿಗೆ
ನಿರುತ ಒಲಿದ ನಿರ್ಮಳ ರೂಪ ೫
ಜತೆ
ಧನ್ಯನಾದೆನು ಇಂದು ದಾನವಾರಿಯ ಕಂಡು
ಪುಣ್ಯಸಂಪಾದಿಸಿದೆ ವಿಜಯ ವಿಠ್ಠಲನಿಂದಾ೬

ಚಿತ್ತ ಚಾಂಚಲ್ಯವನ್ನು ದೂರಮಾಡಿ

೬೩
ಧ್ರುವತಾಳ
ಬಂದೆನೊ ಎಲೊ ಹರಿ ಬಂದದುರಿತದ ಉರಿ
ನಂದಿಸೊ ನಿನ್ನ ದಯಾಸಿಂಧು ತೆರ ಸೂಸು
ಮುಂದೀಸುವುದು ನನ್ನಿಂದಾಗದೊ ಗೋವಿಂದ
ಹಿಂದೇಸು ಜನನ ಬಂದಾಗಲಿ ಸಾಧನ
ಬಂದು ಮಾಡಿಕೊಳ್ಳದೆ ದ್ವಂದ್ವ ಪಾಪಕ್ಕೆ ಉಳಿದೆ
ಎಂದಿಗಾದರು ಪುಣ್ಯ ಮಾಡೆ ದೇವವರೇಣ್ಯ
ಮಂದ ಮಾರ್ಗದೊಳು ನಿಂದು ಬಾಳಿದೆ ಕೇಳು
ಇಂದು ಎನ್ನ ಮೊರೆ ಲಾಲಿಸು ಧೊರಿಯೇ
ಬಂದುಂಟು ಇದಕ್ಕೆ ನಿನ್ನ ರಜವು ಸೋಂಕೆ
ಬೆಂದು ಕರ್ಮಾ ಪೋಗವೆ ಓಡಿ ಬಯಲಾಗವೆ
ತಂದೆ ನಿನಗೆ ನಿತ್ಯ ವಂದಿಸಿದೆನು ಸತ್ಯ
ಸಂಧಾನಾಮಾ ವಿಜಯ ವಿಠ್ಠಲರೇಯಾ
ಬಂದು ನೀನಾದಡೆ ಎನಗಾರು ಈಡೆ
ಸಂದೇಹ ಮಾಡುವುದೇನು ಕಣ್ದೆರೆದು ನೋಡೊ ೧
ಮಟ್ಟ ತಾಳ
ನಂಬಿದೆ ನಂಬಿದೆನೂ ಅಂಬುಜಧರ ವಿಶ್ವಂಭರಯರಸನೆ
ಗಂಭೀರ ಪುರುಷನೆ ಕಂಭದ ಸೂತ್ರದ
ಡಿಂಬದೊಳಗೆ ಇದ್ದು ಉಂಬುವ ಪಾಪಗಳು
ಕುಂಭಿಯ ಪಾಕಕ್ಕೆ ಇಂಬಿಲ್ಲದೆ ಇಲ್ಲ
ಶಂಭು ನಾಯಕನೆ ವಿಜಯ ವಿಠ್ಠಲರೇಯ
ಶುಂಭನ ಕರವಾಲಂಬನ ಮಾಡಯ್ಯಾ ೨
ರೂಪಕ
ಎತ್ತಲೆತ್ತಲು ಸ್ವಾಮಿ ಚಿತ್ತ ಪಲ್ಲಟವಾಗಿ
ಮತ್ತೆಲ್ಲಿಗೆ ಪೋಗಿದೆ ನಿನ್ನಯ ಮನ
ಹತ್ತಿಲಿ ನಿಂದು ದೇವೋತ್ತಮನೆಂದರೆ
ಅತ್ತಲಿಲ್ಲವೆ ಎನ್ನತ್ತೆ ಹಂಬಲವಿಲ್ಲ
ಇತ್ತಲಿತ್ತಲಿ ಮೊಗವಿತ್ತು ಮಾತನಾಡೊ
ಚಿತ್ತದೊಲ್ಲಭನೆ ಮಾರುತ್ತರಕೆ ಕಿವಿಗೊಡೊ
ಉತ್ತಮ ಶ್ರೀದನೆ ವಿಜಯ ವಿಠ್ಠಲ ಎನ್ನ
ಮತ್ತ ಸಂಸಾರದಿಂದೆತ್ತು ಧಡಿಗೆ ೩
ಝಂಪೆತಾಳ
ನೀನೆ ಪುರುಷನಾಗಿ ನಿಜದಲ್ಲಿ ಇರಲಿಕ್ಕೆ
ನಾನು ಪರರಿಗೆ ಶರಣು ಹಾಕಬಹುದೆ
ಮಾನಿನಿಗೆ ಪತಿಯಾದವನು ಆಜ್ಞವ ಕೊಟ್ಟು
ತಾನೆ ಮುನಿದು ಬಿಡಲು ಅವಳು ಪೋಗಿ
ನಾನಾ ಪರಿಯಲ್ಲಿ ತಿರದುಂಡರಾ ಪತಿಗೆ
ಶಾನೆ ಸೌಭಾಗ್ಯಗಳು ಇದ್ದರೇನು
ನೀನೆ ನೇಮಿಸಿದ ಕಾಯ ಧರಣಿಯೊಳು ನೂಕೆ
ಹೀನಾಯದವನೆಂದು ಬಿಡಿ ಬೀಸಲು
ನೀನೆ ಮಿಕ್ಕಾದವರ ಪೊರೆದೆನೆಂಬೊ ಬಿರದು
ಅನಂತಾನಂತ ಧರಿಸಿದರೆ ಏನು
ಮಾನ ದಾತವ್ಯ ವಿಜಯ ವಿಠ್ಠಲ ಬಂದು
ಗೇಣಿಗಳಿದಾ ಮಾನಾ ಕ್ಷೋಣಿಯಾನಿತ್ತರೇನು೪
ತ್ರಿವಿಡಿ ತಾಳ
ಇದೆ ಮನಸು ದೃಢವಾಗಲಿ ನಿನ್ನಯ
ಮುದದಿಂದ ತಿಳಿವಂಥ ಜ್ಞಾನಾವೊಂದು
ಒದಗಲಿ ಆಮ್ಯಾಲೆ ಭಕುತಿ ಚಂಚಲವಿಲ್ಲದೆ
ತದನಂತರದಲ್ಲಿ ವೈರಾಗ್ಯತೊಟ್ಟು
ಪದೊಪದಿಗೆ ನಿನ್ನ ಪದಗಳನೆ ಕೊಂಡಾಡಿ
ಬೆದರಿಸುವ ದುರಿತ ಅಧೋಮುಖವಾಗಲಿ
ಇದೆಯಲ್ಲದೆ ಎನ್ನ ಹೃದಯಾದಲ್ಲಿ ಮತ್ತೆ
ಅಧಿಕಾವಿದ್ದರೆ ನಿನ್ನ ಪದ ಪದುಮಗಳಾಣೆ
ಯದುಕುಲ ಪಾಲ ಸಾಧುವೆ ವಿಜಯ ವಿಠ್ಠಲ
ಇದಕಿಂತಾಧಿಕವಿತ್ತರೆ ನಿನಗೆ ಎನ್ನಾಣೆ ೫
ಅಟ್ಟತಾಳ
ಕಣ್ಣಿನಿಂದಾದರು ನಿನ್ನ ನೋಡಿಪೆನೇನೆ
ಚನ್ನ ವಸ್ತಕೆ ವೇಗನೆ ಎರಗೋದು
ಸನ್ನುತಿಯಿಂದಲಿ ನಿನ್ನ ಸ್ತುತಿಪೆನೇನೆ
ಅನ್ನದಗೋಸುಗ ಅನ್ಯರ ಪೊಗಳೋದು
ಕರ್ನದಲ್ಲಿ ವಾರ್ತೆಯನು ಕೇಳಿಪೆನೇನೆ
ಅನ್ಯಥ ವಾರ್ತಿಗೆ ನಿಮ್ಮನೆನಿಗರೋವು
ಸನ್ನಿಧಾನನಾಗಿ ಕರವ ಮುಗಿಪೆನೇನೆ
ಉನ್ನತ ಪಗಡಿ ಪಂಜಿನಾಡಾ ಪೊಗೋವು
ನಿನ್ನ ಪ್ರಸಾದ ಭೋಜನ್ನ ಗೈಪೆನೆನೆ
ತಿನ್ನಲೋಡಿದೆ ಸಾಧನ್ನ ಬಿಟ್ಟು ನೆರೆ
ನಿನ್ನ ಪೂಜಿಸಿದ ಪೂವನ್ನ ಘ್ರಾಣಿಪೆನೆನೆ
ಕನ್ಯರ ಮುಡಿದಿದ್ದವನ್ನಪೇಕ್ಷಿಸುವುದು
ಪುಣ್ಯ ನಿಧಿಗಳು ಇನ್ನು ಮೆಟ್ಟುವೆನೇನೆ
ಕುನ್ನಿಕಾಲನಂತೆ ಕಂಡಲ್ಲಿ ತಿರಗೋವು
ಎನ್ನಿಂದ ಒಂದು ಸಾಧನ ಒಂದಿಲ್ಲಾ ಇಲ್ಲ
ನಿನ್ನ ದಯವೊಂದಲ್ಲದೆ ಗತಿಯಿಲ್ಲ
ಛಿನ್ನ ಸಂಶಯ ನಾಮ ವಿಜಯ ವಿಠ್ಠಲ ಪಾ
ವನ್ನ ಮೂರುತಿಯೆಂದು ಚಿಣ್ಣಾನಂತೆರಗಿದೆ ೬
ಆದಿತಾಳ
ತೊತ್ತು ತೊತ್ತೇರ ಬಳಿಯಾ ಭತ್ತವ ಕುಟ್ಟುವವರು ಮನೆ
ಹಿತ್ತಲಿಯಾ ಹೊರಗೆ ಕಸವೆತ್ತುವರ ಮನೆಗೆ ನೀರು
ಹೊತ್ತು ಬರುವರ ದೀಪದ ಬತ್ತಿಯಾ ಚಾಚುವರ
ಸುತ್ತಲಿದ್ದವರಿಗೆ ನಿತ್ಯ ಬುತ್ತಿ ಒಯ್ವ ಸೇವಕರ
ಹತ್ತಿಲಿ ಸೇರಿದ ಜನರ ತೆತ್ತಿಗರ ಬೋನಾದವರ
ಚಿತ್ತ ಪಿಡಿದಿದ್ದ ದಾಸೋತ್ತುಮರು ಉಂಡುಮಿಕ್ಕ
ತುತ್ತಿನೊಳಗೆ ಒಂದು ತುತ್ತನಿತ್ತು ಸಲಹಬೇಕು ಎನ್ನ
ಮತ್ತೆ ವಿಷಯದಲ್ಲಿ ಹಾಕದೆ ಉತ್ತರ ವಿಜಯ ವಿಠ್ಠಲ
ಚಿತ್ತ ನಿನ್ನಲ್ಲಿಡಿಸಿ ಕಾಯೊ ತೊತ್ತಿನ ತೊಂಬಲು ತಿಂಬೆ೭
ಜತೆ
ಹಿಂದಣ ದುಷ್ಕರ್ಮ ಕಳೆಯಿತೇನೋ ಇಂದು ನಿನ್ನ
ಕಂಡೆ, ಕರ್ತೃ ವಿಜಯ ವಿಠ್ಠಲ ೮

ಪಂಢರಾಪುರದ ವಿಠಲನನ್ನು ಕುರಿತು

೭೮. ಪಂಢರಪುರ
ರಾಗ:ವಸಂತ
ಧ್ರುವತಾಳ
ಬಂದೆನೊ ಎಲೊ ಹರಿಯೆ ಪಂಢರಪುರಿಧೊರಿಯೆ |
ಇಂದೆನ್ನ ಪಾಲಿಸೊ ಬಿನ್ನಪವ ಲಾಲಿಸೋ |
ಮಂದನು ನಾನಯ್ಯಾ ಮಹಾತ್ಮ ನೀನಯ್ಯಾ |
ಮಂದಾಕಿನಿ ಜನಕ ಲಿಂಗ ಭಂಗದತನಕ |
ಒಂದು ಸಾಧನ ಕಾಣೊ ನಿನ್ನ ಸ್ಮರಣೆ ಮಾಣೆ |
ಬಂಧು ಬಳಗ ನೀನೆ ಭಕ್ತಾರಮರಧೇನು |
ಎಂದೆಂದಿಗೆ ನಿನ್ನ ಪಾಡಿದವಗೆ ಬನ್ನಾ |
ಪೊಂದಪ್ಪವೆಂದು ಪ್ರತಿದಿನದಲಿ ನಿಂದು |
ವೃಂದಾರಕ ವೃಂದ ಪೊಗಳೀದರಾನಂದ |
ನಂದನಾಗಿ ಕೇಳಿ ಘನಸಂತಸತಾಳಿ |
ಬಂದಿನೊ ಎಲೊ ಹರಿಯೆ ಪಂಢರಪುರಿಧೊರಿಯೆ |
ಬಿಂದು ಮಾತುರ ಪುಣ್ಯ ಇಲ್ಲವೊ ಕಾರುಣ್ಯ |
ಸಿಂಧು ಪುಂಡರೀಕವರದ ನಿಷ್ಕಳಂಕ |
ಚಂದಿರ ಭಾಗ ಭೀಮಾತೀರ ಗೋವಾಗಾ |
ನಂದ ವಿಗ್ರಹ ವಿಜಯವಿಠಲ ಮುನಿಗೇಯ |
ವಂದಿಸುವೆನು ನಾರಂದಮುನಿ ಹೃದ್ಭಾನು ೧
ಮಟ್ಟತಾಳ
ದೋಷಿ ಮಾನವರಿಗೆ ದಯಮಾಡುವೆನೆಂದು |
ದೇಶದೊಳಗೆ ನಿನ್ನ ಕೀರ್ತಿ ವ್ಯಾಪಿಸಿ ಇಪ್ಪದು |
ದೋಷ ವಿದೂರ ದುರ್ಜನದೂರ |
ದೋಷ ಭಾವಗಳೆಲ್ಲ ನರರಂತೆ ಕೈಕೊಂಡು |
ದೋಷಿ ಜನರ ಸಂಗಡ ಮಾಡಿ ಅವರ ಪಾಪ |
ಲೇಶ ಉಳಿಯದಂತೆ ಅಪಹರಿಸಿದ ದೇವ |
ಲೇಸು ನಿನ್ನ ಮಹಿಮೆ ಪೊಗಳಲು ಅತಿ ಚಿತ್ರಾ |
ಏಸು ಬಗೆಯಿಂದ ಒಲಿಸಿದ ಕಾಲಕ್ಕು |
ಆಶೆ ತೀರದು ಕಾಣೊ ಅನಿಮಿತ್ಯ ಬಂಧು |
ವಾಸ ಪಂಢರಪುರಿ ವಿಜಯವಿಠಲ ಗೋವ |
ಳೇಶ ಇಟ್ಟಗಿ ಮೇಲೆನಿಂದ ಮುಕ್ಕುಂದ ೨
ತ್ರಿವಿಡಿತಾಳ
ದೇವರೆಂಬುವರೆಲ್ಲ ನಿನ್ನ ತರುವಾಯ |
ಆವಾವ ದೇಶದಲ್ಲಿ ನೋಡಿದರು |
ಕಾವ ನೀತಿಯಲ್ಲಿ ಕೊಡುವಲ್ಲಿ ಕೊಂಬಲ್ಲಿ |
ಭೂವಲಯದಲ್ಲಿ ಸರಿಗಾಣೆನೋ |
ಪಾವನ್ನ ಮೂರ್ತಿಯೆ ನಿನ್ನ ನಂಬಿದೆ ಇನ್ನಾವ |
ದೈವಗಳನ್ನು ಸ್ತುತಿಸಲರಿಯೆ |
ಪೂವಿನೊಳಗೆ ಇಟ್ಟು ನಮ್ಮನ ಸಲಹುವ |
ಗೋವರ್ಧನುದ್ಧರಣ ಕಲಿಹರಣ |
ಭಾವೆ ವಂದನೆ ಕೇಳೊ ನಿರ್ವಿಘ್ನದಾಯಕನೆ |
ದೇವಗಂಗಿಯ ಸ್ನಾನ ಮಾಡಿಸಯ್ಯಾ |
ಸೇವಕ ನುಡಿದದ್ದು ಸತ್ಯ ಮಾಡುವಿ ವಸು |
ದೆವನಂದನ ಪಂಢರಪುರಿರಾಯನೆ |
ಶ್ರೀವತ್ಸಲಾಂಛನ ವಿಜಯವಿಠಲ ಎನ್ನ |
ಜೀವನೋಪಾಯವೇ ಜೀವ ಜೀವೇಶಾ ೩
ಅಟ್ಟತಾಳ
ಹೂಣ, ಪುಳಿಂದ , ಪಲ್ಕಸ, ಕುಂಕ, ಕಿರಾತ |
ಕಾಣ, ಅಭೀರ, ಯವನ, ನಾನಾ ವಿಜಾತಿ |
ಯೋನಿ ಜನರಿಗೆ ನೀನೆ ಒಲಿದಂತೆ ಕರುಣಾಳೆ |
ನಾನಂತು ವೈಷ್ಣವ ಸತ್ಕುಲ ಪ್ರಸೂತ |
ಆನಂದ ತೀರ್ಥರ ಮತದಲ್ಲಿ ಪೊಂದಿಪ್ಪೆ |
ಏನಾದರವಗುಣ ಇದ್ದರಾದಡೆ ನೀನೆ |
ಎಣಿಸಾದೆ ಎನ್ನ ಪಾಲಿಸು ಪರದೈವ |
ಕಾಣಿ ಮಿಕ್ಕಾ ದ್ರವ್ಯದಿಂದ ನಿನ್ನಂಘ್ರಿ |
ಮಾನಸದಲಿ ಪೂಜೆ ಮಾಡಲಿಲ್ಲ ಪ್ರಭುವೆ |
ಮಾನಿಸವೇಷನೆ ವಿಜಯವಿಠಲರೇಯಾ |
ಜ್ಞಾನವಕೊಡುವೆ ಮಹಭಾಗ್ಯವಕೊಡುವೆ ೪
ಆದಿತಾಳ
ನಿನ್ನ ನುಡಿದೆ ನಾನು ನಿನ್ನ ಪಾಡಿದೆ ನಾನು ನಿನ್ನ ಕಾಡಿದೆ ನಾನು |
ನಿನ್ನ ಮುಂದೆ ಎನ್ನ ಬಡತನ ಪೇಳಿಕೊಂಡು |
ಅನಂತ ಬಗೆಯಿಂದ ಕೊಂಡಾಡುವೆನೊ ವಿಠಲಾ |
ಎನ್ನಭಾರ ನಿನ್ನದು ಕ್ಷಣ ಅನಂತ ಕ್ಷಣಕ್ಕೆ |
ಮುನ್ನೆ ಪೇಳುವದೆಲ್ಲಾ ಉಪಚಾರವೊ ಸ್ವಾಮಿ |
ಘನ್ನ ಪಂಢರೆರಾಯಾ ವಿಜಯವಿಠಲರೇಯಾ |
ರನ್ನ ಪ್ರಸನ್ನ ಸಂಪನ್ನ ಮತಿಯಕೊಡು ೫
ಜತೆ
ಮನೋರಥ ಸಿದ್ಧ ಮಾಡಯ್ಯ ಮನ್ಮಥನಯ್ಯಾ |
ಅನುಭವದಿಂದಲಿ ವಿಜಯವಿಠಲ ಪಂಢರಿ ೬

ನಾನಾ ಬಗೆಯ ಪಶು, ಕ್ರಿಮಿ, ಕೀಟಾದಿಗಳ

೬೪
ಝಂಪಿತಾಳ
ಬಂದೆನೊ ಬಲು ತೊಳಲಿ ಬಲು ಯೋನಿ ಮುಖದಲ್ಲಿ
ನೊಂದ ನೋವಂಗಳಾರಿಗೆ ಉಸಿರಲಿ
ಹಿಂದೆ ಉದರದಲ್ಲಿ ಜಗವ ಪೊಂದಲಿಟ್ಟು ಜನನಿ
ಎಂದೆನಿಸಿಕೊಂಡೆ ಪ್ರಳಯಾಂಧದಲ್ಲಿ
ತಂದೆ ರೂಪವಾಗಿ ಒಂದೊಂದು ಪರಿಯಲ್ಲಿ
ಬಂದು ಸಂರಕ್ಷಿಸಿದೆ ಇಂದಿರೇಶ
ಮುಂದೆ ಸಹೋದರನಾಗಿ ನಿಂದು ಎಡಬಲಕೆ ಕೃಪೆ
ಯಿಂದ ಪಾಲಿಸಿದೆ ಸಂಕ್ರಂದ ವಿನುತ
ಒಂದೆ ಮನಸಿನಲಿ ನಮೋ ಎಂದ ಕಿಂಕರರ ನೂ
ರೊಂದು ಕುಲೋದ್ಧರಿಸೆ ಕಂದನಾಗಿ
ಬಂದಡರುವಾಪತ್ತು ಸಂದೋಹಗಳ ಕಳೆದು
ಬಂಧು ಎಂದೆನಿಸಿದೆ ಸಿಂಧುಶಯನ
ಅಂಧಕಾರದ ಜ್ಞಾನ ಸಂಧಿಸಿರೆ ಉಪದೇಶ
ದಿಂದಲ್ಲಿ ಪೋಷಿಸಿದೆ ಗುರುವೆನಿಸೀ
ಒಂದೆ ಎರಡೇ ಏನೆಂದು ಪೇಳುವೆನೆ ಎ
ನ್ನಿಂದಾಗುವ ಸಕಲ ಛಂದವನ್ನು
ತಂದೆ ಅಮೃತನಾಮ ವಿಜಯ ವಿಠ್ಠಲ ನಿನ್ನ
ಸಂದರುಶನಾಗಲು ಮಂದ ಮತಿಯುಂಟೆ ೧
ಮಟ್ಟತಾಳ
ಇರಳು ಹಗಲು ಬಿಡದೆ ದುರುಳ ಮನಸು ಸುತ್ತಾ
ಮರದ ನೆರಳು ತಿರುಗಿ ತಿರುಗಿದಂತೆ ನಿತ್ಯ
ಎರಗುವುದು ಮನಸು ಎರಕ ಬೆಚ್ಚಿಸಿದ ಈ
ಪರಿಯಲಿ ವಿಷಯಕ್ಕೆ ಸರಿಯದು ಸರಿಯದು
ಪರಿಯೆ ಸುಕೃತನಾಮ ವಿಜಯ ವಿಠ್ಠಲ ನೀನೆ
ಕರುಣ ದೈವವೆಂದು ಅರವು ಮಾಡಿದೆನಯ್ಯ ೨
ತ್ರಿವಿಡಿತಾಳ
ತಂದೆಯ ಉದರದಲಿಂದ ಜನನಿಯಲ್ಲಿ
ಬಿಂದು ಜಿಗುಳಿ ಬೀಳಲಂದೆ ನೀನೊಲಿದು
ಬಂದು ನಸುಲಾಲಿಸಿ ಒಂದೆ ಸಾರಿಗೆಲಿ
ಕುಂದಾಗದಂತೆ ಸರ್ವಾಂಗವನು ಬರಿದೆ
ಇಂದು ಗ್ರಾಸಕೆ ನಾನೆಂದರೆ ಚಿಂತಿಸಿ
ತಂದು ಶರಗಿಲಿ ಪಡಿ ಅಂದು ಕೊಟ್ಟಂತಿರೆ
ಮುಂದಾವುದು ಒಲ್ಲೆ ಕ್ಷಮ ವಿಜಯ ವಿಠ್ಠಲ
ಛಿಂದಿ ಛಿಂಧಿಯ ಮಾಡು ಬಂಧನಾಖ್ಯಗಳ೩
ಅಟ್ಟ ತಾಳ
ಆಳುಗಳಿಗೆ ಆವಾವ ಬಗೆಯಲಿ ಬಾ
ಕೂಳಿಗೆ ನೀನಾಗಿ ಬಾಗಿಲು ಕಾಯ್ವುತ್ತ
ಕಾಲ ಕಾಲಕ್ಕೆ ಭಕ್ತರಿಗೆ ಬಂದುಪ
ಟಳವಗಡಿದು ನೀನಾಳಾಗಿ ದುಡಿವೆ
ಆಳುಗಳಿಂದ ನಿನಗೇನು ಸುಖವೊ
ಆಳುಗಳಿಂದ ನಿನಗೇನು ಸಂತೃಪ್ತಿ
ಆಳಿನ ಅವಗುಣ ಎಣಿಸದಲೆ ನೀನು
ಆಳಾಗಿ ದುಡಿದು ಸೋಜಿಗವ ತೋರುವಿ
ಆಳು ಎನ್ನನು ಸ್ವಸ್ತಿನೆ ವಿಜಯ ವಿಠ್ಠಲ
ಪೇಳೆನೆಂದರೆ ಎನ್ನ ನಾಲಿಗೆ ಸಾಲದು ೪
ಆದಿತಾಳ
ಸಾಕು ಬಂದ ನರಜನ್ಮ ಲೋಕವಾರ್ತಿ ತೊರೆದು ವಿ
ವೇಕದಲ್ಲಿ ನಿನ್ನ ನಾಮ ಬೇಕು ನಿನ್ನಯ ಪ್ರಸಾದ
ಸ್ವೀಕರಿಸಿ ಈ ಮನ ಸಾಕಲ್ಯವಾಗಿ ನಿಂದು
ವಾಕು ಮರೆಯದಂತೆ ಗಮಕದಿಂದೊದಗಲಿ
ನೂಕು ಜನನ ನಿಲಿಸು ಜೋಕೆಯಿಂದಲೆ ಸಲಹು ಬಿಡದೆ
ಸೋಕಿ ಎನ್ನೊಡನೆಯಿದ್ದು ಪಾಕ ಶುದ್ಧನೆಂದೆನಿಸು
ಹಾಕದಿರು ಗರ್ಭದಲ್ಲಿ ತಾಕರ ವಿಜಯ ವಿಠ್ಠಲಾ
ನೇಕ ಮಹಿಮ ಅಪ್ರತಿದೈವ ನಾಕಾದಿ ಶಿರೋಮಣಿ೫
ಜತೆ
ಅನಂತ ವಿಲಕ್ಷಣವುಳ್ಳ ಪರಮಪುರುಷ
ಅನಂತ ಶ್ರೀ ವಿಜಯ ವಿಠ್ಠಲ ಮನ್ನಿಸು ಎನ್ನ೬

ಭವವನ್ನು ಬಂಧನ ವೆಂದು ಹರಿದಾಸರು

೬೫
ಧ್ರುವತಾಳ
ಬಂದೆನೊ ಭವರೋಗ ಬಂಧನದೊಳಗೆ
ನೊಂದೆನೊ ಸಂಸಾರ ಸಿಂಧುವಿನೊಳಗೆ
ಸಂದೆನೊ ಬಲುಕಾಮಾಂಧದ ಒಳಗೆ
ನಿಂದೆನೊ ನರಕ ಸಮ್ಮಂಧದ ಒಳಗೆ
ಮುಂದೇನು ಗತಿ ಕಾಣೆ ಮೂಲೋಕದೊಳಗೆಣೆ
ಎಂದೆಂದಿಗೆ ನಿನಗಿಲ್ಲವಲ್ಲ ಇಂದುಶೇಖರ
ವಂದಿತ ವಿಜಯ ವಿಠ್ಠಲರೇಯ
ಕುಂದುಗಳೆಣಿಸದೆ ಕಂದನಂತೆ ಕಾಯೊ ೧
ಮಟ್ಟತಾಳ
ರೋಮ ರೋಮಾಂಗದಲಿ ಕಾಮಪೂರಿತನಾಗಿ
ನಾಮವೇರಿದಂತೆ ತಾಮಸವ ಕವಿದು
ಪಾಮರ ನಾನಾಗಿ ನಾ ಮರೆದನು ನಿನ್ನ
ನಾಮವಾದರು ಒಂದು ಯಾಮವಾದರೆ ನೆನೆಯೆ
ರೋಮ ಕೋಟಿಲಿಂಗ ನಾಮದ ಒಡೆಯಾನೆ
ರಾಮ ವಿಜಯ ವಿಠ್ಠಲ ಮಹದೈವಾವೆ ೨
ರೂಪಕ ತಾಳ
ಕಾಯಿ ಎಲೆಯ ಮರೆಯಲ್ಲಿ ಕಾಯಿದಂತೆ ಇರದೆನ್ನ
ಕಾಯ ದಂಡಿಸಿ ಪರರ ಕಾಯವ ವರ್ಣಿಸಿ
ಕಾಯೆಂದು ಉದರವ ತೋರಿ ಬಾಯಿದೆರದು ಕ
ಗ್ಗಾಯಿಯಂದದಿ ವ್ಯರ್ಥ ಪ್ರಯಾಸವನು ಬಟ್ಟೆ
ಕಾಯದೊಳಡಗಿದ ಕಾಯಜ ಪಿತ ನಿನ್ನ
ಕಾಯ ಕಣ್ಣಿಲಿ ನೋಡಿ ಕಾಯ ಸಾಧನ ಗೈಯ್ಯೆ
ಕಾಯುವ ಬಿರಿದು ಪೊತ್ತು ಏಕ ವಿಜಯ ವಿಠ್ಠಲ
ಕಾಯ ಸೋತಂತೆ ನಿಕಾಯದೊಳಿಡದಿರು ೩
ಝಂಪಿತಾಳ
ದಾಸನು ನಾನೆಂದು ಧರಣಿಯೊಳಗೆ ಮಾಯ
ವೇಷವನು ಧರಿಸಿ ವ್ಯವಹಾರ ಮಾಡುತ್ತ
ಕಾಸುಕಾಸಿಗೆ ಕಾಲು ಸುಟ್ಟ ಬೆಕ್ಕಿನಂತೆ
ದೇಶದೊಳಗೆನ್ನ ಸರಕನು ತೋರುತ್ತ
ಕಾಶಿ ರಾಮೇಶ್ವರದ ಯಾತ್ರೆಗೆ ಪೋದ ವಿ
ಶೇಷರು ನಾವೆಂದು ಸಟೆಯ ಪೇಳಿ
ದೋಷಕ್ಕೆ ಗುರಿಯಾದೆ ವಿಜಯ ವಿಠ್ಠಲ ತಂದೆ
ನೀ ಸುಲಭನೆಂದು ಎಣಿಸದೆ ಗುಣಸದೆ ೪
ತ್ರಿವಿಡಿ ತಾಳ
ಜಗದೊಳು ನಿನ್ನ ಸೇವಕನಾದ ಮೇಲೆ
ಅನ್ನಿಗರನ್ನ ಬೇಡುವೆ ಬಸವಳಿದು
ಮುಗುಧಾನು ನಾನಯ್ಯ ಮೂಲ ಪಾಪಕ್ಕೆ ಪ್ರಧಾ
ನಿಗನಾಗಿ ತಿರುಗಿದೆ ತಿಗರಿಯಂತೆ
ರಗಳಿಲಿ ದಿನಗಳೆದೆ ಹಗಲಿರುಳು ಹೀಗೆ
ಹಗರಣವಾಯಿತು ಹಲವು ಬಗೆಯಿಂದ
ಮೊಗೆಯ ಸಂದಿಲಿ ಕೆಲದಾಡಿದಂತೆ ಇಂದು
ನಗೆಗೇಡಾಯಿತು ಎನಗೆ ವಿಜಯ ವಿಠ್ಠಲ ೫
ಅಟ್ಟತಾಳ
ಮಾರುವುದು ನಿನ್ನ ತೊತ್ತಿನ ಮಕ್ಕಳಿಗೆ
ಮಾರುವುದು ನಿನ್ನ ಪಾಗಾಣತಿಯರಿಗೆ
ಮಾರುವುದು ನಿನ್ನ ಬೋನಗಾರ್ತಿಯರಿಗೆ
ಮಾರುವುದು ನಿನ್ನ ನೀರು ಪೊತ್ತವರಿಗೆ
ಮಾರಮಾರು ನಿನ್ನ ಮಾರಕೊಂಬವರಿಗೆ
ಮಾರದಿರು ಎನ್ನ ಮಾರಿಗೆ ಗುರಿ ಮಾಡಿ
ಮಾರಜನಕ ಕೃಷ್ಣ ವಿಜಯ ವಿಠ್ಠಲ ಎನ್ನ
ಮಾರುದೋದರೆ ನಿನ್ನ ಮನೆಯಲ್ಲಿ ಶೆರೆಯಿಡೊ ೬
ಆದಿತಾಳ
ನಿನ್ನ ನಾಮವ ಕದ್ದ ಕುನ್ನಿಯ ಎಳೆ ಮರಿಯ
ನಿನ್ನವರಿಂದ ದಂಡಿಸಿ ರನ್ನದ ಸಂಕದಾಲಿಯ
ಎನ್ನ ಕಾಲಿಗೆ ಹಾಕಿಸಿ ನಿನ್ನ ಪುರದೊಳಿಟ್ಟು
ಸನ್ನಿವಾಸ ವಿಜಯ ವಿಠ್ಠಲ
ನಿನ್ನ ಚಿನ್ಹೆಯವನೆನಿಸು ೭
ಜತೆ
ಮಂದ ಮತಿಗೆ ಒಂದು ದಾರಿಯ ತೋರಯ್ಯ
ಸಂಧಾತ ವಿಜಯವಿಠ್ಠಲ ರುಗ್ಮಿಣಿನಲ್ಲ ೮

ಭಗವಂತನಿಗೆ ಅಭಿಷೇಕ, ಅರ್ಚನೆ,

೬೬
ಧ್ರುವ ತಾಳ
ಬಂಧು ನಿನಗೆ ಎನದೊಂದಾದರೂ ಪೂಜೆ
ಬಿಂದುಮಾತುರ ಕಾಣೆ ಎಂದೆಂದಿಗೆ
ಒಂದಾದರೂ ಇಲ್ಲ ವೃಂದಾರಕರ ನಲ್ಲ
ಸಂದುವುದೆಂತೊ ನಿನ್ನ ದ್ವಂದ್ವ ಪಾದಕ್ಕೆ
ಅಂದು ಮೊದಲಾರಭ್ಯ ಇಂದಿನ ಪರಿಯಂತ
ಕುಂದಾದೆ ಯೋಚಿಸಿ ಮುಂದೆ ನೋಡೆ
ತಂದರ್ಪಿಸುವದಾದರೂ, ಒಂದಾದರೂ ಕಾಣೆ
ನಿಂದು ಒಲಿಸುವೆನೆ ಇಂದುವದನ
ಇಂದ್ರ ನಾಮಕದೇವ ವಿಜಯ ವಿಠ್ಠಲ ಎನ
ಗೊಂದು ದಾರಿಯ ತೋರಿ ಮಂದವನು ಕಳಿಯೊ ೧
ಮಟ್ಟತಾಳ
ತುಳಸಿ ಮೊದಲಾದ ಕಲಶೋಧಕ ಗಂಧ
ತಳಿತಕ್ಷತೆ ಕುಸುಮ ಫಲಿತ ಓದನಾದ
ಕೆಲಕಾಲದಲಿ ವೆಗ್ಗಳವಾಗಿ ಕೊಡುವೆನೆಂ
ದೊಲಿದಿತ್ತರೆ ವೆಗ್ಗಳವಾಗಿ ಕೊಡುವೆನೆಂ
ದೊಲಿದಿತ್ತರೆ ನಿನಗೆ ಬಲುದಣಿಯಾಗುವುದೆ
ಬಲು ದೈವವೆ ನಮ್ಮ ವಿಜಯ ವಿಠ್ಠಲ ನಿನ್ನ
ಜಲಜ ಪಾದಕೆ ನಿತ್ಯ ತಲೆ ಬಾಗಿ ನಿಲುವೆ ೨
ತ್ರಿವಿಡಿ ತಾಳ
ಸ್ನಾನದಿಂದಲಿ ನಿನ್ನ ಒಲಿಸುವೆನೆಂಬೆನೆ
ಜಾನ್ಹವಿ ನಿನ್ನ ಪಾದೋದಕವಾದಳು
ನಾನಾ ಭೂಷಣ ತೊಡಿಸಿ ನೋಡುವೆನೆ ನಿನಗೆ
ಆನಂದವಾದ ಅಪ್ರಾಕೃತ ಆಭರಣ
ಏನಾದರಾಗಲಿ ವಸನ ಉಡಿಸುವೆನೆಂದು
ಧ್ಯಾನಿಸಲು ನಿತ್ಯ ದಿವ್ಯ ವಸನ
ದೀನರಪಾಲ ಶ್ರೀ ವಿಜಯ ವಿಠ್ಠಲ ನಿನಗೆ
ಆನಾವ ಬಗೆಯಿಂದ ಮೆಚ್ಚಿಸುವೆನಯ್ಯ ೩
ಅಟ್ಟತಾಳ
ಗಂಧಪರಿಮಳ ಪಚ್ಚಿಪೆನೆಂಬೆನೆ
ಗಂಧವಾಗಿ ನಿನ್ನಂಗ ಒಪ್ಪುತಲಿದೆ
ತಂದು ತುಲಸಿ ಪುಷ್ಪದಲಿ ಪೂಜಿಪೆನೆನೆ
ಕುಂದಮಂದಾರಮಾಲೆ ಸದಾ ನಿನ್ನ ಕೊರಳಿಲಿ
ಒಂದೊಂದು ಪರಿ ಧೂಪಾರತಿ ಮಾಡುವೆನೆನೆ
ಇಂದು ಕೋಟಿಯಂತೆ ನಿನ್ನ ಪ್ರಕಾಶವು
ಒಂದೆ ದೈವವೆ ಈಶ ವಿಜಯ ವಿಠ್ಠಲರೇಯ
ಮಂದಮತಿ ಎನಗೊಂದು ಸಾಧನವಿಲ್ಲ ೪
ಆದಿತಾಳ
ಓದನಾದಿಯಲ್ಲಿ ನಿನ್ನ ಮಾಧುರ್ಯವಾದ ದಯಸಂ
ಪಾದಿಸುವೆನೆಂದು ನೋಡೆ ಆದುದಿಲ್ಲ ಎನ್ನ ಕೈಯ್ಯ
ಆದಿಯಂತೆ ನಿತ್ಯತೃಪ್ತಿ ಆದಿತ್ಯ ಶತಕಿರಣ
ಶ್ರೀದೇವಿ ನಿನಗೆ ತಳೋದರಿಯಾಗಿಪ್ಪಳು
ಈ ಧರೆಯೊಳು ನಿನ್ನಾರಾಧನೆಗೆ ಮಿತಿಯಿಲ್ಲದೆ
ಶೋಧಿಸಿ ನೋಡಿದರೆ ಒಂದಾದರು ಕಾಣೆನೋ ರಂಗ
ಯಾದವೇಶ ವಿಜಯ ವಿಠ್ಠಲ ನೀ ದಯವಾಗಿ ಎನ್ನ
ಆದರಿಸಿ ಕಾಯೊ ಪ್ರಸಾದವಾದರೆ ಬದುಕುವೆನೊ ೫
ಜತೆ
ಕಾಯ ದಂಡಿಸಿ ನಿನ್ನ ಕಾಣಲಾರೆನೊ ಎನ್ನ
ಕಾಯಾದೊಳಗೆ ಮೆರೆಯೊ ವಿಜಯ ವಿಠ್ಠಲ ದೊರೆಯೆ ೬

ಉಡುಪಿಯ ಶ್ರೀಕೃಷ್ಣನನ್ನು ಕುರಿತ

೧೩. ಉಡುಪಿ
ರಾಗ:ಕಲ್ಯಾಣಿ
ಝಂಪೆತಾಳ
ಬದುಕಿದೆನು ಬದುಕಿದೆನು ಬಲುಜನ್ಮದ ಪುಣ್ಯ |
ಒದಗಿತೆನಗಿಂದು ಗುರುಗಳ ದಯದಿಂದ |
ಸದಮಲ ನಾನಾದೆ ಸತತ ಮಾಡಿದದುರಿತ |
ಉದಧಿ ಬತ್ತಿತು ಕಲ್ಯಾದಿಗಳು ನೋಡಿ |
ಎದೆ ಒಡದು ಎತ್ತಪೋಗುವೆವೆಂದು ಯೋಚಿಸಿ |
ಗದಗದನೆ ನಡುಗಿ ಭಯವೆ ಪೊಂದಿಪ್ಪರು |
ತ್ರಿದಶರೆಲ್ಲರು ನೆರದು ತಮತಮ್ಮೊಳು ಕುಣಿದಾಡಿ |
ಪದೊ ಪದೆಗೇ ಮಹೋತ್ಸವದಲ್ಲಿಪ್ಪರು |
ಇದೆ ಸತ್ಯ ಎನ್ನ ನೂರೊಂದು ಕುಲಗೋತ್ರಜರು |
ಮುದದಿಂದ ಗತಿಗಭಿ ಮೊಗವಾದರೂ |
ಬೆದರಲ್ಯಾತಕೆ ಇನ್ನು ಮುಂದಿನ ಜನನಕ್ಕೆ |
ಯದು ಕುಲೇಶನ ದಿವ್ಯ ಪಾದಗಳೆಂಬೊ |
ನಿಧಿಯು ದೊರಕಿದ ಮೇಲೆ ಆದನಾದರು ಪೋಗಿ |
ಉದರಕ್ಕೆ ಎಂಜಲೆಡೆ ಶೋಧಿಸುವನೆ |
ಹದುಳವೇ ಸರಿ ಇಲ್ಲಿ ಲೇಶಕ್ಲೇಶವು ಇಲ್ಲ |
ಎದುರಿಲ್ಲ ಉಡುಪಿನ ಶ್ರೀ ಯಾತ್ರೆಗೆ |
ಪದವಿಯಲ್ಲಿ ಇದ್ದ ಸುಖಕಿಂತ ಇಲ್ಲಿಯ ಸುಖ |
ಅಧಿಕವಾಗಿದೆ ನೋಡು ಎಲೊ ಮನವೇ |
ಹೃದಯಾಂಬರ ನಿವಾಸ ವಿಜಯವಿಠಲ ಕೃಷ್ಣನ |
ಪದಗಳ ನಂಬಿದ ವಿದುರ ಭಾಗ್ಯವ ನೋಡು ೧
ಮಟ್ಟತಾಳ
ಹರಿದಾಸರ ಸಂಗ ಹರಿಕಥಾ ಪ್ರಸಂಗ |
ಹರಿನಾಮಾಮೃತ ಹರಿಯ ಪಾಡಿದ ಗೀತ |
ಹರಿಯ ಮನನ ಧ್ಯಾನ ಹರಿಯ ಸಂದರುಶನ |
ಹರಿಸ್ತುತಿ ವಂದನೆ ಹರಿಯ ಪಾದಾರ್ಚನೆ |
ಹರಿ ಪಾದೋದಕ ಹರಿಗುಣಿಸಿದ ಶಾಕ |
ಪರಿ ಪರಿ ಓದನ ಪರಿಮಿತ ಸಾಧನ |
ಧರೆಯೊಳಗಿಲ್ಲದಾಶ್ಚರ್ಯವಾಯಿಂದಿನಲಿ |
ನಿರೀಕ್ಷಿಸಿದೆ ಎನಗೆ ದೊರಕಿತು ಬಲು ಲಾಭಾ |
ಪರಮ ಪುರುಷ ಕೃಷ್ಣ ವಿಜಯವಿಠಲ ಹರಿಯಾ |
ಕರುಣದಳತೆಯನ್ನು ಅರಿತವರಾರಯ್ಯ ೨
ತ್ರಿವಿಡಿತಾಳ
ದುರನ್ನ ದುಷ್ಟ ಪರಿಗ್ರಹ ದುಸ್ಸಂಗ ದುರಾಚಾರ
ದುರ ವಾಕ್ಯ ದುಶ್ಚಿತ್ತಾ ದುರಾಶೆಯು ನಿರು[ತ]ಬಿಡದೆ ಆ |
ಚರಿಸಿದ ಮನುಜಂಗೆ ಸುರರ ಸೇವಿಪಯಾತ್ರೆ |
ದೊರೆತಾದೇನು ಮನವೆ ಹಿರಿದು ಜನ್ಮಾದಿ ನಮ್ಮ |
ಹಿರಿಯರು ಪುಣ್ಯವಂತರು ಕಾಣೊ ಇದನೆಲ್ಲ |
ಹರಿಬಲ್ಲನೊ ಬರಿದಾಗದು ಮತ್ತೆ |
ಗುರುಗಳ ಕೃಪೆ ವಿಸ್ತರವಾಗಿದಿದಕಿದೆ ಗುರುತು ಕಾಣೊ |
ಸುರಗಂಗೆ ಮೊದಲಾದ ಸರಿತು ಸೇತು ಎಲ್ಲ |
ತಿರುಗಿದ ಫಲಂಗಳಮರುತಾ (ದೇವ)ನಿಂದ |
ಹರಿತಾನೆ ವೈಕುಂಠಕ್ಕೆ ಸರಿಯಾದಾಜಾರಂಣ್ಯ |
ಪುರದ್ಯಾತ್ರಿ ಫಲಸಿತೋ ಭರದಿಂದ ದಾಸರ |
ಪೊರೆವ ಪುರುಷೋತ್ತಮ ಸರಿಸಾದಲ್ಲಿ |
ಇರಳು ಹಗಲು ಇಪ್ಪ ಉಡುಪಿನ ಕೃಷ್ಣನ್ನ |
ಸ್ಮರಣೆ ಮಾಡಿದ ಪುಣ್ಯಕ್ಕೆ ಸರಿಯಾವದೂ |
ದುರುಳರಿಗತಿ ದೂರಾ ವಿಜಯವಿಠಲರೇಯಾ |
ಎರವು ಮಾಡದೆ ಕಾವಾ ಕರದು ಕಳೆವ[ನೋ]ವ ೩
ಅಟ್ಟತಾಳ
ನಿರ್ಮಾಲ್ಯ ವಿಸರ್ಜನೆ ಬೆಳಗಿನ ಪೂಜೆ |
ಪರಮ ಪಂಚಾಮೃತ ಉದ್ವಾರ್ಚನೆ ಪೂಜೆ |
ಶಶತ್ಕಾಲ ಚಂದ್ರನ ಸೋಲಿಪ ಬೆಣ್ಣೆ ಸಕ್ಕರಿ ನೈವೇದ್ಯ ಸುಂ |
ದರ ತೀರ್ಥ ಪೂಜೆ ವಿಚಿತ್ರಲಂಕಾರವ |
ಸರಪೂಜೆ ಮಹಪೂಜೆ ಮಹಪೂಜೆ ಈ ಬಗೆ ನವ ವಿಧ |
ಮರುತವತಾರ ಮಧ್ವಮುನಿಗಳಂದು |
ವಿರಚಿಸಿ ಪೂಜಿಮಾಡಿದ ಸಂಭ್ರಮವೊ |
ವರಸತ್ವ ಸ್ಥಳವಿದು ಭಕುತಿಯಿಂದಲಿ ಬಂದು |
ಎರಗಿವಂದೆ ಸಾರಿ ಕೊಂಡಾಡಿ ಕೊಂಡಾಡಿ ತೃಣ ಮಾ |
ತುರದಿಂದ ಯತಿಗಳ ಕರವಿಂದಾರಾಧನೆ |
ಹರುಷದಿಂದಲಿ ನೋಡೆ ಮುಂದೆ ಆ ಮನುಜನು |
ದುರಿತಕ್ಕೆ ಬೀಳನು ಹರಿಕಾವುತಲಿಪ್ಪ |
ನಿರುಯಾದೂರನು ಪುಣ್ಯತೊಲಗದೆ ಇಹನೂ |
ಧರಧರವರ್ಣಾ ವಿಜಯವಿಠಲ ಕೃಷ್ಣಾ |
ಪರಣನಾಗಿ ಸಾಕುವ ಕೇಳು ಮನುವೆ ೪
ಆದಿತಾಳ
ಷಡುರಸ ಕೂಡಿದ ಮಹಾಪ್ರಸಾದವೆ ಉಳ್ಳ |
ಎಡೆಯ ಕಣ್ಣಿನಿಂದ ಕಂಡಾಗತೀ ದೋಷ |
ಸುಡುವದು ಶುದ್ಧ ಬಹುಭಕುತಿ ಕೊಡುವದು |
ತಡಿಯಾದೆ ಅಡಿಗಡಿಗೆ ಹರಿನಾಮಾ |
ನುಡಿಸುವದು ಜ್ಞಾನದಲ್ಲಿ |
ಒಡನೆ ಬಂದು ತುತ್ತುಕೊಂಡವನ ಭಾಗ್ಯಕ್ಕೆ |
ಕಡೆಗಾಣಿ ಲೋಕದೊಳಗವನೆ ಮಹಾಧನ್ಯನು |
ಒಡಲಾ ತುಂಬ ಮೆದ್ದವಗೆ ವರಗಳ ಹರಿ ಏನು |
ಕೊಡಲಿ ಎಂದು ತನ್ನ ಸತಿಯ ಕೂಡಾಡುವ |
ಪಡಿಗಾಣೆ ಭಾರ್ಗವ ಕ್ಷೇತ್ರದೊಳಿದಕೆಲ್ಲಿ |
ಉಡುಪಿ ಎಂದೆನಿಸಿತು ಚಂದ್ರನ್ನ ದೆಶೆಯಿಂದ |
ದೃಢವಾಗಿ ಇದ್ದು ಮನ[ವೆ] ಯಾತ್ರಿಯ ಪೂರೈಸು |
ಬಿಡನು ಯಾದವ ಕೃಷ್ಣ ಅನಂತ ಜನುಮಕ್ಕೆ |
ಪೊಡವಿರಮಣ ನಮ್ಮ ವಿಜಯವಿಠಲರೇಯ |
ಜಡಮತಿಗಾದರು ತನ್ನವನೆನಿಸುವ ೫
ಜತೆ
ಬೀಜ ಯಾತ್ರೆ ಇದು ಕರ್ಮದ ಘಸಣಕ್ಕೆ |
ತೇಜೋಮಯ ಕೃಷ್ಣ ವಿಜಯವಿಠಲ ಮನವೆ ೬

ಸತ್ಕರ್ಮಾಚರಣೆಗಳಾದ ಸಂಧ್ಯಾವಂದನೆ,

೮೮
ಧ್ರುವತಾಳ
ಬಲವಾರು ಎನಗೆ ಪ್ರಬಲವಾಯಿತು ಕಲಿ
ಬಲು ಹೆಚ್ಚಿ ಬಿಡದೆ ದುಂಬಲ ಬಿದ್ದಿದೆ
ಬಲದಲ್ಲಿ ಉಳ್ಳ ಸುರರು ಬಲರು ನಿರ್ಬಲರಾಗಿ
ಬಲಗುಂದಿದಂತೆ ತೊಲಗಿ ನಿಂದಾರೆ
ಬಲವಂತ ನೀನು ಅಬಲೆ ಬಾಲಕರಿಗೆ ಬೆಂ
ಬಲವಾಗಿ ಸಾಕಿದ ಸುಬಲಾನೆಂದು
ಬಲಗೊಂಡು ನಿನ್ನ ಹಂಬಲವ ಮಾಡಿದೆ ನಂ
ಬಲು ಬಡವರಿಗೆ ಬಾಂಧವನೆ ದೇವ
ಬಲು ದಯಾದಿಂದೆಡಬಲದಲ್ಲಿ ಕಾಪಾಡು
ಬಲದೇವನನುಜಾ ಬಲಾರಾತಿ ದಾತ
ಬಲಿ ಭಂಜನೇಶ್ವರ ವಿಜಯ ವಿಠ್ಠಲ
ಬಲು ದೀನ ನಾನು ತೊಂಬಲಿಗೆ ಬಪ್ಪಂತಿರಲಿ ೧
ಮಟ್ಟತಾಳ
ಕರಿಯ ರೂಪದ ಪಾಪಿ ಅರುಣನಯನ ಐ
ದರಿಯಿಂದ ಉದುಭವಿಸಿ ಪರಿ ಪರಿಯ ಉಪ
ದುರಿತಾಂಗ ರೋಮ ಕರವಾಳ ಹಲಿಗೆ
ಕರದಲ್ಲಿ ಪಿಡಿದು ಶಿರಕೆಳಗಾಗಿ ಈ
ಪುರಿಯಳು ಎಡದಲ್ಲಿ ಪರಿಶೋಭಿಸುತಿಪ್ಪ
ಕರಣಕೆ ಭೀತಿಯನು, ಸುರಿದು ಕೆಂಗೆಡಿಸುವ
ಸುರರಿಪು ರಿಪುನಾಮ ವಿಜಯ ವಿಠ್ಠಲ ನಿನ್ನ
ದೊರೆತನ ಭೀತಿ ಅರಿಯದ ದುರುಳಾನು ೨
ರೂಪಕ ತಾಳ
ಮೂರು ಹುರಿಯುನಿಟ್ಟಾ ಪಾಶದಲ್ಲಿ ಕಲಿಯಾ
ಆರು ಕೋಣೆಗೆ ಶೆಳತಂದು ನಿಲ್ಲಿಸಿ
ಭೋರನೆ ಬೀಸುವ ಸಮೀರನಲ್ಲಿ ಅವನ
ಶರೀರ ಶೋಷಿಸಿ ಮೇಲಕ್ಕೆ ಎಳತಂದು
ಕ್ರೂರ ಪುರುಷನಾಕಾರವ ನೆಗಳಿ
ಧಾರನಾಕೃತಿಯಿಂದ ದಹಿಸಿ ಕಳೆಯಾ
ವಾರಣ ನಾಮ ಸಿರಿ ವಿಜಯ ವಿಠ್ಠಲ ಸುಧಾ
ಧಾರಿಯಾ ಮ್ಯಾಲಿಂದಗರದು ಶುದ್ಧನ ಮಾಡು ೩
ಝಂಪಿತಾಳ
ಪತಿಯ ಮಗ್ಗಲವೊಳಗೆ ಪತಿವ್ರತೆ ಕುಳಿತಿರಲು
ಪತಿತನೊಬ್ಬನು ಬಂದು ಸೆರಗನೆಳೆಯೆ
ಮತಿವಂತಳಿಗೆಷ್ಟು ಖತಿಯಾಗುವದದಕೆ
ಶತ ಪಾಲು ಅಧಿಕವಾಗಿದೆ ದಾತಾರ
ಪತಿಗಳೈವರು ಇರಲು ಹಿತವಂತನಾಗಿ ದ್ರೌ
ಪದಿಯ ಕಾಯಿದೆಯಯ್ಯ ಕಾರುಣ್ಯ ಸಿಂಧು
ಶತ ಮೂರುತಿ ನಾಮ ವಿಜಯ ವಿಠ್ಠಲ ನೀನೆ
ಪತಿಯಾದ ಬಳಿಕೆನ್ನ ಪತಿತಗೊಪ್ಪಿಸುವರೆ ೪
ತ್ರಿವಿಡಿತಾಳ
ಸ್ವಸ್ತಿ ಶ್ರೀಮತು ಎಂದು ನಿನಗೆ ನಾಚಿಕೆ ಸ
ಮಸ್ತ ಲೋಕದ ಒಡತಿ ಶ್ರೀ ವಿರಂಚಿ ಮಗ
ಮಸ್ತಕದಲ್ಲಿ ನಿನ್ನ ಪಾದೋದಕ್ಕವಿಟ್ಟ
ಹಸ್ತಿ ಚರ್ಮಾಂಬರ ಸುರರಾದ್ಯರು ನಿನಗೆ
ಹಸ್ತಿಯಂತೆ ಭಕ್ತರಿರಲಿಕ್ಕೆ ನೊಣದಿಂದ
ಆಸ್ತಿಯಾಗುವದೇನು ಎಂದೆಂಬೆಯಾ
ವಿಸ್ತರಿಸುವೆ ಸ್ವಸ್ತಿ ವಿಜಯ ವಿಠ್ಠಲ ದೇವಾ
ಹಸ್ತಾವ ಮುಗಿದು, ವಿಸ್ತಾರ ಬಿನ್ನಹವು ೫
ಅಟ್ಟತಾಳ
ಸಾಧು ಭಾಗ್ಯವನು ಸಮಾರಾಧನೆ ಮಾಡಲು
ಆದರದಿಂದ ಸಹೋದರ ಬಾಂಧವ
ಪೋದವರನೆ ಕಾಯಾದಿಗಳು ಬಲು
ಮಾಧುರ್ಯದಲಿ ಪಂಕ್ತಿ ಸಾಧಿಸಿ ಕುಳಿತರೆ
ಮಾಧುಕಾರದವಾ, ಪೋದಾಕ್ಷಣದಲ್ಲಿ
ಮಾಧ ಕಾರದವನ್ನಾ ಆದರಿಸಿ ಕೊಡಿಸಿ
ಸಾಧುಗಳುಣಿಸುವ ಗಾದೆಯಂತೆ ಎನಗೆ
ನೀ ದಯವನು ಮಾಡಿ ಬಾಧಿಸು ಪಾಪಿಯ
ಬಾಧಿಯ ಪರಿಹರಿಸು
ಆದಿತ್ಯ ವಿಜಯ ವಿಠ್ಠಲ ನಿನ್ನ ಪ್ರಸ್ತದ
ಮಾದಕಾರದವನೆಂದು ಅಭಯಗೀವರವನೀಯೋ ೬
ಆದಿತಾಳ
ಕೊಟ್ಟರೆ ಒಳ್ಳೇದು ಸುಖ ಬಿಟ್ಟು ನಿನ್ನ ನೆನವೆ ಮನ
ಮುಟ್ಟಿಯಿಲ್ಲದಿರೆ ಮುಂದೆ ಇಟ್ಟು ನೋಡು ಒಂದು ಹೆಜ್ಚೆ
ದಿಟ್ಟ ಗುರುವಿನ ಗೆರೆ ಇಟ್ಟುಬಿಡುವೆ ದಾಟದಂತೆ
ಕೆಟ್ಟವಗೆ(ಅಟ್ಟದವಗೆ) ಉಂಟು ಮೂರು ಬಟ್ಟೆಯಿಲ್ಲದೆ ಕಡಿಮೆಯಿಲ್ಲ
ಇಟ್ಟ ತೊಟ್ಟ ಹೊಂದಿಕೆ ವಸ್ತ ಪೆಟ್ಟಿಗೆಯೊಳಗಿಟ್ಟರನ್ನ
ಮೆಟ್ಟುವ ಪಾಪೋಸು ದೂರ ಬಿಟ್ಟುಬಿಡುವರೆ ರಂಗ
ಸ್ಪಷ್ಟ ಅಕ್ಷರ ವಿಜಯ ವಿಠ್ಠಲ ಭಕ್ತರ ಪ್ರೀಯ
ಮೊಟ್ಟ ಮೊದಲಿಗಿಂದು ನನಗೆ
ಕೊಟ್ಟ ಕೊನೆತನಕ ಬಿಡದು ೭
ಜತೆ
ಸಂತತ ಕ್ರೂರನ್ನ ಕೊಂದು ನಿನ್ನ ನಾಮ
ಅಂತೆ ಕಾಲಕೆ ಈಯೋ ಶಾಂತ ವಿಜಯ ವಿಠ್ಠಲ ೮

ಈ ಸುಳಾದಿಯು ಪಂಚತಿರುಪತಿ ಎಂಬ ಕ್ಷೇತ್ರವನ್ನು ಕುರಿತದ್ದಾಗಿದೆ.

೨೪. ಕುರಂಗ (ಪಂಚತಿರುಪತಿ)
ಧ್ರುವತಾಳ
ಬಲಿಗೊಲಿದು ಬಂದದೊಂದು ಮೂರುತಿ |
ಕಳಸಾಜಾಗೊಲಿದದೊಂದು ಮೂರುತಿ |
ಭಳಿರೆ ಭೃಗಗೊಲಿದದೊಂದು ಮೂರುತಿ |
ಸಲೆ ನಾರದಗೊಲೆದದೊಂದು ಮೂರುತಿ |
ಚೆಲುವ ಸಪ್ತರಿಗೊಲಿದದೊಂದು ಮೂರುತಿ |
ಇಳಿಯೊಳು ಮಹೇಂದ್ರಾಚಲದಲ್ಲಿ ಮೆರೆವಾ |
ಗ್ಗಳಿ ದೈವವಾದ ಪಂಚ ಮೂರುತಿ |
ಒಲಿದವರಿಗೆ ಸುಲಭವಾ ಮಾನಾದಿರೂಪಾ |
ಛಲದಂತಾ ವಿಜಯವಿಠಲ ಮೂರುತಿ |
ಬಲಗೊಲಿದು ಬಂದಾದೊಂದು ಮೂರುತಿ ೧
ಮಟ್ಟತಾಳ
ಲೋಕವಾಹಕನಾಗಿ ಕಾಕುಸ್ಥವಂಶಜನು |
ಸ್ವಕಾಂತಿಯನಗಲಿ ಲೌಕಿಕನ ತೆರದಿ |
ವ್ಯಾಕುಲದಲಿ ದಿವಾಕರ ನಂದನನತಾಕಲತಾ ನೆನಸಿ |
ಆ ಕಪಿ ಬಲವನು ಸಾಕಾರವಾಗಿ |
ಭೂ ಕುಮಾರಿಯನು ಏಕವಾಗಿ ನೋಡಬೇಕೆಂದು ಪೇಳಲು |
ಶ್ರೀಕಾಂತ ವಿಠಲಾ ರ |
ಘು ಕುಲೋತ್ತಮನಾ |
ವಾಕು ಕೇಳುತಲೀವೆ ಶಾಕಮೃಗಾದಿಗಳು |
ಮೇಖಿಗೆ ಹರಿದು ಜೋಕೆಯಿಂದಲು ಬರಲು |
ಲೋಕ ಮೋಹಕವಾಗೀ ೨
ರೂಪಕತಾಳ
ಹನುಮಾಂಗದ ನೀಲ ವನಜಸಂಭವನಂದನ ಜಾಂಬವಂತಾನು |
ಘನವಾದ ಕಪಿಗಳು ಇನತನಯನ ಆಜ್ಞಾ |
ವನು ಕೈಕೊಂಡು ದಕ್ಷಿಣ ದಿಕ್ಕಿಗೈದಿದರೂ |
ಜನಕ ಸುತೆಯ ನೋಡಾಲನುವಾಗಿ ಹತ್ತೊಂದ್ಯೊ |
ಜನವುಳ್ಳ ಮಹೇಂದ್ರಾವನ ಸರೋವರ ಲಕ್ಷಣ ಉಳ್ಳಾಕ್ಷೇತ್ರ |
ಮನಕೆ ಶೋಭಿಸಲಾಗಿ ಹನುಮಾದಿಗಳು ನಿಂದು |
ಮಣಿದು ಪೊಗಳಿದರು ವಾಮನ ಮಿಕ್ಕಾದ ಮೂರ್ತಿಗಳ |
ಗುಣನಿಧಿ ವಿಜಯವಿಠಲ ಪಂಚತಿರುಪತಿ |
ನೆನದವರಿಗೆ ನಂಬಿ ಎನಿಸುವಾ ದೈವ ೩
ಝಂಪೆತಾಳ
ವೇಗದಲಿ ಹನುಮಂತ ದಿಕ್ಕು ನೋಡುವೆನೆಂದು |
ಈ ಗಿರಿಯ ಮೇಲೆ ತುಳಿದು ಈಕ್ಷಿಸಿ |
ಆಗಲೀ ಪರ್ವತ ಹತ್ತುಯೋಜನವಿಳಿದು |
ಪೋಗಲಾಯಿತು ಧರಿಗೆ ಏನಂಬೆನೋ |
ಆಗ ಪುಟ್ಟಿತು ಕ್ಷೀರನದಿ ಹನುಮನದಿ ಎಂದೂ |
ಯೋಗಿಗಳು ಭಜಿಸಿದರು ವಿನಯದಿಂದ |
ಭಾಗವತರಿಗೆ ಒಲಿದು ನಂಬಿ ವಿಜಯವಿಠಲ |
ಸಾಗರಶಯನ ಪಂಚ ತಿರುಪತಿ ವಾಸಾ ೪
ತ್ರಿವಿಡಿತಾಳ
ಕೂರಂಗನೆಂಬುವ ಕ್ರೂರ ದೈತ್ಯನು ಇಲ್ಲಿ |
ಸೇರಿಕೊಂಡಿದ್ದು ಸಂಚಾರ ಮಾಡುತಲಿರೆ |
ಧಾರುಣಿಯೊಳಗೊಬ್ಬ ಪರಮ ಭಾಗವತನು |
ವಾರವಾರಕ್ಕೆ ಈ ಕ್ಷೇತ್ರಕ್ಕೆ ಬರುತಿರಲು |
ಕ್ರೂರದೈತ್ಯನು ಬುಧನಾಹಾರ ಮಾಡುವೆನೆನಲೂ |
ಮಾರಿಗಭಯನಿತ್ತು ಶ್ರೀ ರಮಣನಾ ಚರ |
ಣಾರವಿಂದವ ನೋಡಿ ಪೋಗಿ ನಿಲ್ಲಲು ದೈತ್ಯ |
ಮೇರೆದಪ್ಪಿ[ರ]ಲೀ ನಾರದಾವಿನುತಾನು |
ಕಾರುಣ್ಯದಲಿ ನಿಂದು ಮೂರುತಿ ತೋರಿದಾ |
ಸಾರಾ ಹೃದಯಗೊಲಿದು ಘೋರತನವೆ ಬಿಡಿಸಿ |
ಕೂರಂಗನಾ ಸಾಕಿ ಧಾರುಣಿಯೊಳಗಿದ್ದು |
ಕೂರಂಗಕ್ಷೇತ್ರ ವಿಸ್ತಾರವೆಂದೆನಿಸಿದ |
ಕಾರುಣ್ಯಕೋಟೀಯಾ ತೀರ[ದ]ವಾಸಾ |
ಮಾರಾರಿವಿನುತಾ ಶ್ರೀ ವಿಜಯವಿಠಲರೇಯಾ |
ಸಾರಿದವರ ಪೊರವ ಕ್ಷೀರಸಾಗರನಂಬಿ ೫
ಅಟ್ಟತಾಳ
ವಾಯಸ ಬಂದು ಕೋಟಿತೀರ್ಥದೊಳು |
ಮಿಯಾಲು ಹೇಮಾ ವಾಯಸವಾದುದು ಕೇಳಿ |
ಆ ಇಂದ್ರಸೇನನು ಮೊದಲಾದವರಲ್ಲಿ |
ಶ್ರೀ ಅರಸನ ಒಲಿಸಿದರು ಭಕುತಿಯಲ್ಲಿ |
ಭೂವ್ಯೋಮಾ ಪಾತಾಳದೊಳಗೆ ಎದುರುಗಾಣೆ |
ಈ ಯವನಿಗೆ ನೋಡಿದರು ಅನುಗಾಲಾ |
ತಾಯಿ ಮಕ್ಕಳನ್ನ ಪೊರೆದಂತೆ ಪೊರೆವುತಾ |
ಶ್ರೇಯಸ್ಸು ತಂದುಕೊಡುವುದು ಶುಭದಲ್ಲಿ |
ಬೀಯಗೆ(?)ವೊಲಿದ ವಿಜಯವಿಠಲರೇಯ ತುರಂಗ
ಕ್ಷೇತ್ರನಿವಾಸ ೬
ಆದಿತಾಳ
ನಿಂದ ಮೂರುತಿ ಕುಳಿತ ಮೂರುತಿ |
ಇಂದುಧರಗಭಿ ಮುಖವಾಗಿ |
ಚಂದದಲಿ ಮಲಗಿದ್ದ ಮೂರುತಿ |
ಸಿಂಧು ತಡಿಯದಲ್ಲಿ ಅಂದದಿಂದಾನಿಂದ ಮೂರ್ತಿ |
ಕುಂದದಲೆ ಮಹೇಂದ್ರ ಗಿರಿಯೊಳು |
ನಂದ ಮಾಡುತ ತಾಪೊಳೆವಾ ಮೂರುತಿ |
ಸಿಂಧುರಿಪು ಭೃಗುಮುನಿ ವರನಾರಂದಾ
ಬಲಿ ಸಪ್ತ ಋಷಿಗಳಿಗೆ |
ವಂದನೆಗೈಯಲು ದಯದಿಂದಲಿದ್ದ ಐದುಮೂರ್ತಿ |
ಒಂದೆ ಕಾಣೊ ವಿಜಯವಿಠಲ ಹಿಂದೆ ಇದ್ದ
ನರಹರಿ ಮೂರುತಿ ೭
ಜತೆ
ರಂಗರಾಜಾನೆ ಸಂಗೀತರಲೋಲಾ ಕು |
ರಂಗಕ್ಷೇತ್ರ ಪಂಚ ನಂಬಿ ವಿಜಯವಿಠಲ ೮

ಭಗವಂತನನ್ನು ಒಲಿಸಿಕೊಳ್ಳುವುದು ತುಂಬ

೮೯
ಧ್ರುವತಾಳ
ಬಲ್ಲವನಿಗೆ ಭವಾಬ್ಧಿ ನೆಲ್ಲಿಕಾಯಿಯಂತೆ
ಮೆಲ್ಲನೆ ಇಡುವ ಹೆಜ್ಜೆಗೆ ಸಾಲದೋ
ಬಲ್ಲವನ ಉದರದೊಳಗೆ ಸರ್ವತೀರ್ಥಯಾತ್ರೆ
ಬಲ್ಲವನ ಉದರದೊಳಗೆ ಸಕಲ ಕ್ಷೇತ್ರಾ
ಬಲ್ಲವ ಎಲ್ಲಿರೆ ಅಲ್ಲೆ ನಾರಾಯಣ
ವಲ್ಲಭೆ ಸಹಿತನಾಗಿ ನಲಿದಾಡುತಿಪ್ಪ
ಬಲ್ಲವನ ಬಳಿಯಲ್ಲಿ ಸರ್ವ ದೇವತೆಗಳು
ಸಲ್ಲಲಿತವಾಗಿ ನಿಂದಿಪ್ಪರಯ್ಯಾ
ಬಲ್ಲವಗೆ ಸ್ವರ್ಗಾಪವರ್ಗದ ಪರವೇನೂ
ಬಲ್ಲವಗೆ ಇಲ್ಲೆ ಶ್ರೀವೈಕುಂಠವೊ
ಬಲ್ಲವನಾವನೊ ವಿಜಯ ವಿಠ್ಠಲರೇಯನ
ಬಲ್ಲವನೆ ಬಲ್ಲನು ಸರ್ವಕಾಲದಲ್ಲೀ ೧
ಮಟ್ಟತಾಳ
ಸಿರಿ ಆತಗೆರಾಣಿ ಸರಸಿಜೋಧ್ಬವ ಕುವರ
ಗರುಡ ಭುಜಂಗಮರು ವರರಥ ಪರಿಯಂಕ
ಗಿರಿಜೇಶನು ಮೊಮ್ಮಗನು ಸುರರು ಪರಿವಾರ
ಹರಿಗಿದು ನಿಜವೆಂದು ತರತಮ ಭಾವದಿಂದ
ಅರಿದು ನಡೆದವನು ಧರೆಯೊಳು ಬಲ್ಲವನು
ಸರಿಯಿಲ್ಲ ಅವನಿಗೇ ದುರಿತ ಕು
ಠಾರನು ವಿಜಯ ವಿಠ್ಠಲರೇಯ
ಕರೆದು ಮನ್ನಿಪನವನ ಕರೆದಲ್ಲಿಗೆ ಬಂದು ೨
ತ್ರಿವಿಡಿತಾಳ
ಹೊಯ್ಯಲು ಡಂಗುರ ಡಿಂಗರಿಗನಾಗಿ
ಕೈಯ ಬಾಯಿ ಮರಿಯದೆ ಕೂಗಿ ಚಪ್ಪಳೆ ಇಕ್ಕಿ
ಕೈಟಭಾರಾತಿಯೆ ಜಗಕೆ ಒಡೆಯನೆಂದು
ಥೈಯೆಂದು ಕುಣಿವುತ್ತ ತವಕದಿಂದಲಿ ಬೀರಿ
ಬಯಗೂ ಬೆಳಗು ಹೀಗೆ ಬಲ್ಲವನಾಗಿದ್ದು
ಗೈಯಾಳ ಮತದವರ ಹಾರ ಪಾದೀ
ದೈವಪುಂಗವ ಹರಿ ವಿಜಯ ವಿಠ್ಠಲನ್ನ
ಜಯಸುವನಿಲ್ಲೆಂದು ಐದು ಬಲುಜ್ಞಾನದಲಿ ೩
ಅಟ್ಟತಾಳ
ಹರಿಗುರು ವಿಶ್ವಾಸವುಳ್ಳ ವೈಷ್ಣವನೀಗ
ಹರಿದು ತೀರ್ಥಯಾತ್ರೆ ತಿರುಗಿ ತಿರುಗಲೇನು
ನಿರುತ ಜಲದಲಿ ಮುಣುಗಿ ಮುಣಗಲೇನು
ಪರಿ ಪರಿ ದಾನವ ಈಯದಿದ್ದರೆ ಏನು
ಅರಿಯದೆ ನರವರುಗೆ ಏನೆಂದರೆ ಏನು
ಗರುಡನ ಪಕ್ಕದೊಳಿರಬಲ್ಲ ಜಾಣಂಗೆ
ಉರಗನ ಬಳಗದ ಭಯವೆತ್ತಣದೊ ದೇವ
ಅರಗಿನ ಪರ್ವತಕ್ಕೆ ಉರಿಯಿಕ್ಕೆ ನಿಲ್ವುದೆ
ಹರಿ ಶರಣರಿಗೆ ದುರಿತವೆತ್ತಲಿಹುದೊ
ಪರತತ್ವ ವಿಜಯ ವಿಠ್ಠಲನ್ನ ಪೊಂದಿದವರ
ನರನೆಂದವರೆ ನಿತ್ಯನರಕವಾಸಿಗಳು ೪
ಆದಿತಾಳ
ಇಂತು ನಡೆದವನು ಸಂತತ ಶುಚಿಯನ್ನು
ಅಂತಕನಿಗೆ ಇವ ಸ್ನೇಹಿತನೆನ್ನಿ ಯೋಗಾ
ಪಂಥ ಬಲ್ಲವನೆನ್ನಿ ವೈಕುಂಠ ನಗರಿಗೆ
ಚಿಂತೆಯ ಬಿಟ್ಟ ನಿಶ್ಚಿಂತನಿವನೆನ್ನಿ
ಮುಂತೆ ಪುಟ್ಟುವ ಜನನ ನೀಗಿಕೊಂಡವನೆನ್ನಿ
ಎಂಥ ದುರಿತವೆಲ್ಲ ಗೆದ್ದವನೆನ್ನಿ
ಚಿಂತೀತದಾಯಕ ನಮ್ಮ ವಿಜಯ ವಿಠ್ಠಲ ಹರಿಯ
ಪಂಥ ಬಯಸುವಂಥ ಧೀರನು ಇವನೆನ್ನಿ ೫
ಜತೆ
ಬಲ್ಲವಗೆ ವಿದ್ಯಾ ಬಯಲಾಗಿ ತೋರೋದು
ಅಲ್ಲವೆಂಬುದು ಸಲ್ಲಾ ವಿಜಯ ವಿಠ್ಠಲ ಬಲ್ಲ ೬

ಭಗವಂತನ ಸ್ತೋತ್ರವನ್ನು ಸಾವಿರಾರು

೬೭
ಧ್ರುವತಾಳ
ಬಳಲಿಪುದು ಸಲ್ಲ ನಿಶ್ಚಲ ಮೂರುತಿ ಕೇಳು
ಕೆಲಕಾಲ ನಿನ್ನ ಹಂಬಲಿಸಿದವನೊ
ಛಲವ್ಯಾಕೆ ಎನ್ನೊಡನೆ ಶ್ರೀಹರಿಯೇ
ಬಲವಂತನೆಂಬೊ ವೆಗ್ಗಳದ ಗರ್ವಿಕೆಯೊ, ಸ-
ಕಲ ಲೋಕ ನಿನ್ನ ವಶವೆಂಬೊ ಬಿಗುವೊ
ಜಲ, ಅನಿಲ, ಅನಳ, ಬಯಲ ಮಿಕ್ಕಾದ ವಸ್ತುವಿ
ನೊಳಗೆ ವ್ಯಾಪುತನೆಂಬಗ್ಗಳಿಕೆ ಏನೋ
ಹಲವು ಬಗೆಯಿಂದಲಿ, ಬಲದೈವ ನೀನೆಂದು
ಸಲೆ ಸ್ತುತಿಸಿದರೆ ಕೇಳದಲೆ ಇಪ್ಪ ಪರಿಯೇನೊ
ಎಲೊ, ಶ್ರೇಷ್ಠ ಕೃಷ್ಣ ಎನ್ನಯ್ಯಾ, ಕುಲಗೋತ್ರ ಆವಾವ-
ಬಳಗಕ್ಕೆ ಬಳ್ಳದಲ್ಲಿ ಹೊನ್ನು ಹಣಗಳು
ಅಳೆದುಕೊಟ್ಟು ಬಿಡದಲೆ ಸಲಹಬೇಕೆಂದು
ನಿಲಿಸಿ ಪೋಗಗೊಡದಲೆ, ನಿಂದನೇ
ಒಲಿದು ನಿರಂತರ ಸುಳಿದು ಎನ್ನೊಳಗೆ, ಮಹ
ಸುಳಿಯಾ, ಮಧ್ಯದಿಂದ ಶೆಳೆದು ತೆಗೆಯೊ
ಹುಳವು ನಾನು ಎನಗೆ ಸುಳಿ ದಿವಸವಿದ್ದರು
ಕಳೆಯೊ, ಕರುಣದಿಂದ ಅಲಾಪು ಮಾಡಿ
ಹೊಲಗೇರಿ ಸೂರೆಯಾಗಲು ಅರಸನಾದವನು
ಗೆಲಲಾರೆನೆಂದು, ಅತ್ತಲೆ ಉಳಿವನೆ
ಸುಲಭ ಕೋರಿದೆನೊ, ಬೆಂಬಲವಾಗಿ ಅನುದಿನ
ಅಲಸದಂತೆ ಸ್ನೇಹ ಬಳಸು ಎಂದು
ಹಲುಬಿ ಅವಸರಿಸದೆ, ಒಲಿಸಿ ಬೇಡಿದರೆ, ಆ-
ಗಲಿ ಎಂಬೊದೇನೊ, ಮಂಗಳ ಮೂರುತಿ
ಕುಲಿಶಧರುನುತ ವಿಜಯ ವಿಠ್ಠಲ ಎನ್ನ ಬಿನ್ನಪ
ಸಲಸದಿರೆ ನಿನ್ನ ಗುಣಾವಳಿಗಳು ದೂರದೆ ೧
ಮಟ್ಟತಾಳ
ಈ ಕಲಿಯುಗದಲಿ ಮೂಕನಾದವಗೆ, ಬದುಕುವ ಬಗೆ ಎನ್ನ-
ತಾ ಕಾಣನು ಎಂದು, ಲೋಕ ಜನರು ಇನಿತು
ವಾಕು ಪೇಳುತಲಿದೆ, ಲೌಕಿಕವೇ ಸತ್ಯ
ನೇಕ ಬಗೆಯಿಂದ ನೀ ಕರುಣಿಯು ಎಂದು
ಏಕಾಂತದಲಿ ನಾ ಕೊಂಡಾಡಿದಕೆ
ವಾಕು ಕೇಳದಲೆ ನಿರಾಕರಣೆ ಮಾಡಿ
ಯಾಕೆ ಸುಮ್ಮನೆಯಿಪ್ಪೆ ಗೋಕುಲದೊಳು ಪುಟ್ಟಿ
ಆಕಾರವಡಗಿಸಿ, ಹೋಕೆತನದಲ್ಲಿ
ಹಾಕ್ಯಾಡುತ ಗೊಲ್ಲರ ಕೂಡ ಬೆಳೆದು
ಆಕಳನು ಕಾಯ್ದು ಕಾಕುಲಾತಿಯಿಂದ
ಡೋಕಾರಿಗನಾಗಿ ನೂಕಲು ಭಯ ಬಡದೆ
ಬೇಕೆಂದು ಮನೆ ಮನೆ ನೀ ಕಳವು ಮಾಡಿ
ಲೋಕದೊಳಗೆ ಮೆರದೆ, ಸಾಕು ನಿನ್ನಬ್ಬರ
ಸಾಕುವ ಧೊರೆತನಕೆ, ನಾಕಾದ್ಯರು ಪೊಗಳೆ
ಶಾಕವ ಸವಿದುಂಡೆ ಸಾಕುವ ದಾತಾರ ವಿಜಯ ವಿಠ್ಠಲರೇಯಾ
ತಾ ಕಾಣದಿರಲಾನೇಕರ ಸುಖವೇನೊ ೨
ತ್ರಿವಿಡಿ ತಾಳ
ತುಡುಗುತನದಿಂದ ಹುಡುಗರ ಕೂಡಲಿ
ಕಡೆಯಿಲ್ಲದೆ ಪರರ ಮಡದೇರ ಮೆಚ್ಚಿಸಿ
ಕುಡಿದು ಹಾಲು ಮೊಸರ, ಗಡಿಗೆ ಒಡೆದು ಬಿಸುಟು
ಅಡಿಗಡಿಗೆ ಲಜ್ಜಿಯಾಗೆಡಿಸಿ ಹಗಲಿರಳು
ಮಡುವಿನೊಳಗೆ ಇದ್ದ, ಮಡದೇರ ಮೈಲಿಗೆ
ತುಡಿಕೆ ಏರಿದೆ ಒಂದು ಕಡಹದ ಮರವನು
ಕೊಡಲಾರದೆ ಭಂಗ ಬಡಿಸಿ ಮಾನವ ಕೊಂಡ
ಉಡುಗಿಗಳ್ಳನೆ ಕಂಡ, ಎಡೆಯಂಜಲುಂಡವನೆ
ಬಿಡು ನಿನ್ನ ದೈವವ ಸಡಗರತನವನ್ನು
ಒಡನೆ ಸುರರು ನಿತ್ಯ ನುಡಿವುದ್ಯಾತಕೆ ನಿನ್ನ
ಭಿಡಿಯಾ ಸಲ್ಲದು ಎನಗೆ ಕೊಡದ ಮ್ಯಾಲೆ ತಿಳಿ
ಬಡಿವಾರವೇನು ಭಯ ಬಡುವವ ನಾನಲ್ಲ
ಗಿಡದ ಮೇಲಿನ ಹಕ್ಕಿ ಒಡನೆ ಸಿಗುವ ಬಲಿಯಾ
ನಡುವೆ ಬಿದ್ದಂತೆ, ಅವಘಡವ ಭವದೊಳು
ಕಡೆಗಾಣದೆ ನಾನೆ ಕೆಡುತಲಿರಲು ನಿನಗೆ
ಬಡಲ್ಯಾಕೆ ದೈನ್ಯವ ಅಡಿಗಡಿಗೆ
ಒಡೆಯ ನಿನ್ನಯ ಕೂಡ ತೊಡಕಿದಾಗಲೆ ಭಕ್ತ
ಕಡೆಬೀಳನು ನೂರು ಕಡೆಗಾಲ ಕಂಡರು
ಹಡದ ತಾಯಿ ಮಾವ, ಒಡ ಹುಟ್ಟಿದವ ತಂಗಿ
ಒಡಲಿಂದ ಬಂದವ, ಒಡನಾಡಿದವರ
ಕಡು ಸ್ನೇಹದವರ ಬೆಂಬಿಡದೆ ಓದಿದವನ
ಕಡು ಮುಳಿದು ತರಿದು, ಸಂಗಡಲೆ ನಗುವ ದೇವ
ತಡಿಯದೆ ಸರ್ವವು, ಕಡಿಯಾಗಲಿಕೆ ನಿನ್ನ
ಒಡಲೊಳಿಟ್ಟುಕೊಂಬ, ಬಡವರಯ್ಯಾ
ಪಿಡಿತುಂಬ ಅವಲಿಗೆ ಕಡು ಮೆಚ್ಚಿದವನೆ ಬ-
ಚ್ಚಿಡಲ್ಯಾತಕೆ ಹರಿ, ನಿನ್ನ ನಡತಿನುಡತಿ
ಎಡೆಯಾವಲ್ಲದ ದೈವ ವಿಜಯ ವಿಠ್ಠಲ ನಿನಗೆ
ಅಡಗುವುದೇನೊ, ನೀರಡಿಯಲ್ಲಿ ಪಡೆದವನೆ ೩
ಅಟ್ಟತಾಳ
ಹಣುವವನಲ್ಲ, ಸುಮ್ಮನೆ ಬೇಡಿದರೆ ನೀನು
ಮಣುವವನಲ್ಲ ಯೋಚನೆಯಿಂದ ನೋಡಲು
ದಣುವವನಲ್ಲ, ಮಾತಿನಲಿ ನಿರುತ್ತರ
ಅನುದಿನದಲಿ, ಲೋಚನದಿಂದ ಈಕ್ಷಿಸೆ
ಅಣು ಅಣು ಮಹತ್ತುವೆನಿಸುತಿರೆ ತೋರಿ
ಹಣ ಹೊನ್ನು ವಾಹನದಿಂದಲಿ ನೀನು
ದಣಿವವನಲ್ಲ ಸಾಧನವೆಂಬೋದೆ ಕಾಣೆ
ಎನಗೊಂದುಪಾಯವು ಮನಕೆ ತೋರುತಿದೆ
ಘನ ಭಕುತಿಯ ನೇಣನೆ ಮಾಡಿ, ನಿನ್ನಾ ಚ-
ರಣಕೆನ್ನ ಕೊರಳಿಗೆ, ಸನುರುಚಿಯಿಂದ ಗಂಟನೆ ಹಾಕಿಕೊಂಡು
ತೊನಗದೆ ಬಿಡೆನೊ ನಿನ್ನನು ಎಂದೆಂದಿಗೆ
ಮನಕೆ ನಮೊನಮೊ, ವಿಜಯ ವಿಠ್ಠಲರೇಯ
ಎನಗೆ ಸರ್ವದ ಕಾರಣಕರ್ತ, ಕಾರಣ ಕರ್ತ ನೀನೆ ೪
ಆದಿತಾಳ
ಸಾರಿದ ಭಕ್ತರ ಸಾರೆದಲ್ಲಿಪ್ಪನೆ
ಸಾರಬೇಕು ನಿನ್ನ ಸಾರಬೇಕು ನಿನ್ನ
ಸಾರಿದಲ್ಲದೆ, ಸಂಸಾರದ ಭೀತಿ, ಪ್ರಾ-
ಸಾರವೆಂಬುದು, ನೀರವಾಗದು ಕಾಣೊ
ಸಾರಿ ಸಾರಿಗೆ, ಕಂಸಾರಿ ನಿನ್ನ ದಯದ, ದಾ-
ಸರ ಮನೆಯ ಮುಂದೆ, ಸಾರಮೇಯನಾಗಿ
ಸಾರುತಲಿ ವಾಸರ ಕಳೆದೆ ಪಿಂತೆ
ಸಾರದೈವವೆ ಅನುಸಾರಣೆಯಲ್ಲಿ ಮನ-
ಸಾರ ನಾನು ಕೆಲಸಾರದೋಪಾದಿಲಿ
ಸಾರಹೃದಯರ ಸಾರೆವಿಡಿಸು, ನರ
ಸಾರಥಿ ಸುಮನಸರ ಪಾಲಾಯತ
ಸಾರದಲಿನಿತೆ ಸಾರನೆ ಮಾಡಿ, ಪ್ರತಿಸಾರವ ಹರಿಸೋದು
ಸಾರಸಲೋಚನ ವಿಜಯ ವಿಠ್ಠಲ ಸರ್ವ
ಸಾರಭೋಕ್ತ, ತಮಸಾ ರವಿಮೂರ್ತಿ ೫
ಜತೆ
ರಾಶಿ, ಗುಣಗಳುಳ್ಳ ರಮೆಯರಸ ನಮ್ಮ
ದೇಶಾಪತಿ ವಿಜಯ ವಿಠ್ಠಲ ಕರುಣಾಳು ೬

ಈ ಸುಳಾದಿಯು ಬಿಂಬೋಪಾಸನೆಗೆ

೬೦
ಧ್ರುವತಾಳ
ಬಾ ಎನ್ನ ಭಾಗ್ಯನಿಧಿ ಭಕುತರ ಬೆಂಬಲವೆ
ಬಾ ಎನ್ನ ದೈವ ಭವವನದಾವಾ
ಬಾ ಎನ್ನ ಕುಲಸ್ವಾಮಿ ಸಕಲಂತರಿಯಾಮಿ
ಬಾ ಎನ್ನ ನಿಜ ತಪವೆ ಅಮೃತ ವಪುವೆ
ಬಾ ಎನ್ನ ಕರ್ನಾಮೃತವೆ ಅನುದಿನದಲ್ಲಿ ಹಿತವೆ
ಬಾ ಎನ್ನ ಸುರಧೇನು ಸಂತತ ಜ್ಞಾನಸೋನೆ
ಬಾ ಎನ್ನ ಸುರತರುವೆ ಬಣ್ಣಿಸಿ ನಿನ್ನ (ನಿಂದು) ಕರೆವೆ
ಬಾ ಎನ್ನ ಚಿಂತಾ ರತುನ ನಾನಾಯತುನ
ಬಾ ಎನ್ನ ಹೃತ್ಕುಮುದ ಚಂದ್ರ ಚನ್ನಿಗ ಮುದಾ
ಬಾ ಎನ್ನ ಶಬದಾಸುತಾ ನಿತ್ಯ ಅಜಾತಾ
ಬಾ ಎನ್ನ ಕರತಳದಲ್ಲಿ ಕನ್ನಡಿಯಾದ
ಬಾ ಎನ್ನ ಬೆಳವಗಿಯ ಬೆಳಸುವ ಮಹಾಪ್ರೀಯಾ
ಬಾ ಎನ್ನ ಭಾರಕರ್ತಾ ಮತ್ತರಿಗೆ ಸಮರ್ಥಾ
ಬಾ ಎನ್ನ ಅಂತರಂಗ ಕರುಣಕೃಪಾಂಗ
ಬಾ ಯದುಕುಲ ತಿಲಕ ವಿಜಯ ವಿಠಲರೇಯ
ಬಾ ಎನ್ನ ಧ್ಯಾನದಲ್ಲಿ ನಿಲುವ ಬಿಂಬ ಮೂರುತಿ ೧
ಮಟ್ಟತಾಳ
ಹೃದಯಾಕಾಶದಲ್ಲಿ ಅಧೋ ಮುಖವಾಗಿದ್ದ
ಪದುಮಾಷ್ಟದಳ ಅದರೊಳಗೆ ಇಪ್ಪ
ಪದತಳ ಮೇಲಾಗಿ ಸದಮಲಶರೀರಾ
ಮದನ ಜನಕ ಹರಿ ವಿಜಯ ವಿಠಲ ಎನ್ನ
ಪದೋ ಪದಿಗೆ ನೀನು ಬಿಡದೆ ಸಾಕುವ ಧೊರಿಯೆ ೨
ತ್ರಿವಿಡಿತಾಳ
ಚಿಂತಿಪುದೆಂತೊ ಸಮಾಧಿಯಲಿ ಕುಳಿತು
ಅಂತರಾತ್ಮಾತ್ಮಾ ಪ್ರಜ್ಞಾನಘನ ಅನಿರುದ್ಧ
ಮಂತ್ರ ತಂತ್ರಗಳಿಂದ ಮೆಚ್ಚಿಸಿ ನಿನ್ನ ನಾನು
ಸಂತೋಷ ಬಡಿಸುವೆನೆ ಸರ್ವದಾ ಸರ್ವ
ತಂತ್ರ ಸ್ವಾತಂತ್ರಾ ನೀನೆ ನೀನಲ್ಲದೊಂದಿಲ್ಲ
ಚಿಂತಾಯಕ ಚಿನ್ಮಯರೂಪ ಪ್ರತಾಪಾ
ಅಂತಾವುದೊ ನಿನ್ನ ಅರ್ಚಿಸುವ ಭಕುತಿ
ಸಂತರಿಗೆ ಬಹು ಬಗೆ ಮಾರ್ಗವೋ
ಪ್ರಾಂತಕ್ಕೆ ನೀನೆ ಗತಿ ಅನಂತ ಜನುಮಕ್ಕೆ
ಇಂತೀ ನುಡಿಗಳು ಪುಸಿ ಒಪ್ಪವೆ
ಸಂತತ ರಮಣ ಶ್ರೀ ವಿಜಯ ವಿಠಲ ಏಕಾ
ನಿಂತಿಪ್ಪ ಮೂರುತಿ ಜೀವಾಕಾರಾ ೩
ಅಟ್ಟತಾಳ
ಪ್ರಣವ ಜಪ ತಪ ಪ್ರಣಾಮ ಪ್ರದಕ್ಷಿಣೆ
ಧನದಾನ ದೀಪ ವಂದನೆ ತೀರ್ಥ ಯಾತ್ರ ಓ
ದನ ಯಾಗ ಭೂರಿ ಭೋಜನ ಪಂಚಾನಲ ಅನು
ದಿನ ಚಾಂದ್ರಾಯಣ ಅನಿಮಿಷನದಿ ಸ್ನಾನ ವನವನ ಸಂಚಾರ
ಮುನಿ ವೇಷಾ ಔಪಾಸನ ನಾನಾಧರ್ಮವ
ಘನ ವ್ರತಗಳು ಒಂದೊಂದನು ಒಬ್ಬರಿಗೆ ಸಾ
ಧನ ಮಾಡಿ ಇಂತು ಆಕ್ಷಣ ಜ್ಞಾನ ಭಕುತಿ
ಯನು ಮಿಳಿತವಾದದನು ನೀನೆ ಪಾಲಿಸು
ತನು ಕ್ಷೇಶವ ಬಿಟ್ಟು ವೇಗನೆ ಗತಿಗಳುವಾ ಘನಕೃಪೆ ಮಾಡುವ
ಘನ ವರ್ಣಕಾಯಾ ಶ್ರೀ ವಿಜಯ ವಿಠಲರೇಯ
ಎನಗೊಂದೆ ಈ ಸಾಧನದಿಂದ ಗತಿವುಂಟು ೪
ಆದಿತಾಳ
ನೀರು ತುಲಸಿಯಿಂದ ಆರಾಧನೆ ಮಾಡುವೆ
ಸಾರಭೋಕ್ತನೆ ಕರುಣಾವಾರುಧಿ ಲಾಲಿಸಯ್ಯಾ
ತೋರುವುದಿದೆ ಪೂಜೆ ಬೇರೆ ನಾನೊಂದು ಕಾಣೆ
ಧಾರಣಿಯೊಳಗೆ ಅಪಾರ ಸಾಧನವುಂಟು
ತೂರಿ ಯೋಗಿ (ಗ್ಯ)ತ ರಾಶಿ ಸೂರೆ ಬಿಡಲು ಎನಗೆ
ನೀರು ತುಲಸಿಯಿಂದ ಏರಿಸಿ ನಿನ್ನ ಚರಣ
ಸೇರುವಂಥ ಯೋಗ್ಯತಾ ಕೈ ಸೇರಿತಯ್ಯಾ ಎನಗಿಂದು
ಹಾರವಾಗಿದೆ ಇದಕೆ ವಾರ ವಾರಕೆ ಪೊಳೆದು
ಸಾರಿ ಸಾರಿಗೆ ನಿನ್ನ ರೂಪ ತೋರುವುದು ಎನ್ನೊಳಗೆಲ
ವಾರಿಧಿಶಯನ ನಮ್ಮ ವಿಜಯ ವಿಠಲರೇಯಾ
ಚಾರು ಮನೋಹರ ಉದ್ಧಾರಮಾಡು ಮುದದಿಂದ ೫
ಜತೆ
ಎನ್ನಿಂದ ಈ ಪೂಜೆ ಕೈ ಕೊಂಡನ್ಯ [ನೆ] ರವದು
ಇನ್ನೊಂದು ನಾನರಿಯೆ ವಿಜಯ ವಿಠಲ ವಾಮನೆ ೬

ಭಗವಂತನನ್ನು ತಮ್ಮ ಮನಸ್ಸಿನಲ್ಲಿ

೬೮
ಧ್ರುವ ತಾಳ
ಬಾ ಎನ್ನ ಭಾಗ್ಯನಿಧಿ ಭಕುತರ ಬೆಂಬಲವೆ
ಬಾ ಎನ್ನ ಮನದೈವ ಭವವನ ದಾವಾ
ಬಾ ಎನ್ನ ಕುಲಸ್ವಾಮಿ ಸಕಲರಂತರ್ಯಾಮಿ
ಬಾ ಎನ್ನ ನಿಜತಪವೆ ಅಮೃತವಪುವೆ
ಬಾ ಎನ್ನ ಕರ್ನಾಮೃತವೆ ಅನುದಿನದಲಿ ಹಿತವೆ
ಬಾ ಎನ್ನ ಸುರಧೇನು ಸಂತತ ಜ್ಞಾನಸೋನೆ
ಬಾ ಎನ್ನ ಸುರತರುವೆ ಭಜಿಸಿ ನಿನ ಕರೆವೆ
ಬಾ ಎನ್ನ ಚಿಂತಾರುತನ ನಾನಾಯತನ
ಬಾ ಎನ್ನ ಹೃತ್ಕುಮುದಚಂದ್ರ ಚನ್ನಿಗಮುದಾ
ಬಾ ಎನ್ನ ಶಬದಸುತ ನಿತ್ಯ ಅಜಾತ
ಬಾ ಎನ್ನ ಕರತಳದಲಿಪ್ಪ ಕನ್ನಡಿಯಾದ
ಬಾ ಎನ್ನ ಬೆಳವಿಗಿಯಾ ಬೆಳೆಸುವ ಮಹಾಪ್ರೀಯ
ಬಾ ಎನ್ನ ಭಾರಕರ್ತ ಮತ್ತರಿಗೆ ಸಮರ್ಥ
ಬಾ ಎನ್ನ ಅಂತರಂಗ ಕರುಣಾಪಾಂಗ
ಬಾ ಯದುಕುಲ ತಿಲಕ ವಿಜಯ ವಿಠ್ಠಲರೇಯ
ಬಾ ಎನ್ನ ಧ್ಯಾನದಲ್ಲಿ ನಿಲುವ ಬಿಂಬ ಮೂರುತಿ ೧
ಮಟ್ಟತಾಳ
ಹೃದಯಾಕಾಶದಲಿ ಆಧೋಮುಖವಾಗಿದ್ದ
ಪದುಮಾಷ್ಟದಳ ಅದರೊಳಗೆ ಇಪ್ಪ
ಪದತಳ ಮೇಲಾಗಿ ಸದಮಲ ಶರೀರ
ಮದನ ಜನಕ ಹರಿ ವಿಜಯ ವಿಠ್ಠಲ ಎನ್ನ
ಪದೊಪದಿಗೆ ನೀನು ಬಿಡದೆ ಸಾಕುವ ಧೊರಿಯೆ ೨
ತ್ರಿವಿಡಿತಾಳ
ಚಿಂತಿಪುದೆಂತೊ ಸಮಾಧಿಯಲ್ಲಿ ಕುಳಿತು
ಅಂತರಾತ್ಮ ಪ್ರಾಜ್ಞಾ ಘನ ಅನಿರುದ್ದ
ಮಂತ್ರ ತಂತ್ರಗಳಿಂದ ಮೆಚ್ಚಿಸಿ ನಿನ್ನ ನಾನು
ಸಂತೋಷ ಪಡಿಸುವೆನೆ ಸರ್ವದ ಸರ್ವ
ತಂತ್ರ ಸ್ವಾತಂತ್ರ ನೀನೆ ನೀನಲ್ಲದೊಂದಿಲ್ಲ
ಚಿಂತಾಯಕ ಚಿನ್ಮಯ ರೂಪ ಪ್ರತಾಪ
ಅಂತಾವುದೊ ನಿನ್ನ ಅರ್ಚಿಸುವ ಭಕುತಿ
ಸಂತರಿಗೆ ಬಹು ಬಗೆ ಮಾರ್ಗವೊ
ಪ್ರಾಂತಕೆ ನೀನೆ ಗತಿ ಅನಂತ ಜನುಮಕ್ಕೆ
ಇಂತಿನುಡಿಗಳು ಪುಶಿ ಬಪ್ಪವೆ
ಸಂತತ ರಮಣ ಶ್ರೀ ವಿಜಯ ವಿಠ್ಠಲ ಏಕಾ
ನಂತಿಪ್ಪ ಮೂರುತಿ ಜೀವಾಕಾರ ೩
ಅಟ್ಟತಾಳ
ಪ್ರಣವ ಜಪತಪ ಪ್ರಣಾಮ ಪ್ರದಕ್ಷಿಣೆ
ಧನದಾನ ದೀಪ ವಂದನೆ ತೀರ್ಥಯಾತ್ರೆ ಓ
ದನಯಾಗ ಭೂರಿ ಭೋಜನ ಪಂಚಾನಲ
ಅನುದಿನದಿ ಚಾಂದ್ರಾಯಣವ್ರತ
ಅನಿಮಿಷನಡಿಸ್ನಾನ ವನವನ ಸಂಚಾರ
ಮುನಿವೇಷ ಔಪಾಸನ ನಾನಾ ಧರ್ಮವ
ಘನವ್ರತಗಳು ಒಂದೊಂದು ಒಬ್ಬರಿಗೆ ಸಾ
ಧನ ಮಾಡಿ ಇಂತು ಆ ಕ್ಷಣ ಜ್ಞಾನ ಭಕುತಿ
ಯನು ಮಿಳಿತವಾದುದನ ನೀನೆ ಪಾಲಿಸು
ತನು ಕ್ಲೇಶವ ಬಿಟ್ಟುವೇಗನೆ ಗತಿಗಳು ಘನಕೃಪೆ ಮಾಡುವ
ಘನವರ್ಣಕಾಯ ಶ್ರೀ ವಿಜಯ ವಿಠ್ಠಲರೇಯ ೪
ಆದಿತಾಳ
ನೀರು ತುಲಸಿಯಿಂದ ಆರಾಧನೆ ಮಾಡುವೆ
ಸಾರಭೋಕ್ತನೆ ಕರುಣಾವಾರಿಧಿ ಲಾಲಿಸಯ್ಯ
ತೋರುವುದಿದೆ ಪೂಜೆ ಬ್ಯಾರೆ ನಾನೊಂದು ಕಾಣೆ
ಧಾರುಣಿಯೊಳಗೆ ಅಪಾರ ಸಾಧನವುಂಟು
ತೂರಿ ಯೋಗ್ಯತರಾಸಿ ಸೂರಿ ಬಿಡಲು ಎನಗೆ
ನೀರ ತುಲಸಿಯಿಂದ ಏರಿಸಿ ನಿನ್ನ ಚರಣ
ಸೇರುವಂಥ ಯೋಗ್ಯತ ಕೈ ಸೇರಿತಯ್ಯಾ ಎನಗಿಂದು
ಹಾರವಾಗಿದೆಯಿದಕೆ ವಾರವಾರ ಪೊಳೆದು
ಸಾರಿಸಾರಿಗೆ ನಿನ್ನ ರೂಪ ತೋರುವುದು ಎನ್ನೊಳಗೆ
ವಾರಿಧಿಶಯನ ನಮ್ಮ ವಿಜಯ ವಿಠ್ಠಲರೇಯ
ಚಾರು ಮನೋಹರ ಉದ್ಧಾರ ಮಾಡು ಮುದದಿಂದ ೫
ಜತೆ
ಎನ್ನಿಂದ ಈ ಪೂಜೆ ಕೈಕೊಂಡು ನೆರೆವುದು
ಇನ್ನೊಂದು ನಾನರಿಯೆ ವಿಜಯ ವಿಠ್ಠಲವಾಮನ ೬

ಆಗಬೇಕಾದ ಕಾರ್ಯ ಆಗದಿದ್ದರೆ

೬೯
ಧ್ರುವತಾಳ
ಬಾರದಿರೆ ನೋಡು ಈ ಶರೀರವ ನಿನ್ನ ಪಾದ
ವಾರಿಜ ದಳದಲ್ಲಿ ಸೂರೆಗೊಡುವೆ
ಕಾರಣವೇನೊ ಮೊಗದೋರದೆ ಎನ್ನ ಮನೋ
ಹಾರ ಮಾಡದಿಪ್ಪ ವಾರುತೇನೊ
ವಾರ ವಾರಕೆ ಪೊರೆವಾಪಾರ ಭಾರಗಳು ಮ
ತ್ತಾರವೈ ಈರೇಳು ಧಾರುಣಿಯಲ್ಲಿ
ತೋರು ನಿನ್ನ ಸಮ ಸರಿಯಾದ ದೈವಗಳ
ನಾರಾಧಿಸುವೆನೊ ಅನ್ಯರ ಸರಿ
ಆರಿನರಿನೋ ಎಂದು ಗಿರವನು ತೊರದಾರೆ
ಶಾರಲಾಗದು ಮನ ಮಂದಿರದೊಳು
ದಾರಾಸುತಾದಿಗಳು ನಿನ್ನವರೆಂದು ವಿ
ಸ್ತಾರವಾಗಿ ಕೂಗಿ ಸಾರಿದೇನೊ
ಕೋರಿದೆನು ಎಲ್ಲ ಕಿಂಕರರು ನಿನಗೆಂದು
ಮಾರುತ್ತರಾಡದೆ ಧಾರಾಳವಾಗಿ
ಮಾರುತಿ ಪ್ರೀಯ ವಿಕ್ರಮ ವಿಜಯ ವಿಠ್ಠಲ
ಪೂರೈಸದಿರೆ ಎನ್ನ ಕಾಯ ಇರಬಲ್ಲುದೆ ೧
ಮಟ್ಟತಾಳ
ಹಿಂದೆ ಭಕುತ ಮುಚುಕುಂದನ ಪರಿಯಂಕ
ಸಂದಿಲಿ ತಲೆದೂರಿ ಬಂದಡಗಿದವನಾರು
ಎಂದಿಗಿದ್ದರು ನಿನ್ನ ಛಂದವು ಒಂದು ಪರಿ
ಮಂದಿಯೊಳಗೆ ಲಜ್ಜೆ ಒಂದಿಷ್ಟು ಇಲ್ಲ
ನಂದ ನಂದನ ಸೂರ್ಯ ವಿಜಯ ವಿಠ್ಠಲ ಎನ್ನ
ಮಂದಿರದೊಳಗಿರೆಂದರೆ ಮನವಿಲ್ಲ ೨
ತ್ರಿವಿಡಿ ತಾಳ
ಎತ್ತಲಡಗಿದೆ ಎನ್ನ ಚಿತ್ತದ ವಲ್ಲಭನೆ
ತತ್ತಳಗೊಳಿಸುವುದು ಸೋತ್ತುಮತನವಲ್ಲ
ಹೊತ್ತು ಹೊತ್ತಿಗೆ ನಿನ್ನ ಬ್ಯಾಸರಿಸಿ ಬಲು
ವಿತ್ತ ಸಂಪಾದಿಸಿ ಕೊಡು ಎಂದೆನೆ ದೇವ
ಭಕ್ತ ನೀರು ಹಾಕಿ ಹೊರೆ ನಿತ್ಯ ತಪ್ಪದಂತೆ
ಹೊತ್ತು ತಂದು ಹಾಕಿ ಪೊರೆ ಎಂದಿದೆ
ಕಿತ್ತಿ ಬಿಸಟುವ ಪಾಪ ವೀತಭಯ ವಿಜಯ ವಿಠ್ಠಲ
ತೆತ್ತಿಗನ ಮಾಡಿ ನಿಜ ತೊತ್ತಿನವನೆನಿಸೆಂದೆ ೩
ಅಟ್ಟತಾಳ
ಮುನಿಸು ಯಾತಕೆ ಎನ್ನ ಮನಸಿನ ಅರಸಗೆ
ಕನಸಿನೊಳಗೆ ಬಂದು ಆಡುವ ಕರುಣಿಗೆ
ಕನಿಕರದಿಂದ ತರ್ಕೈಸುವ ದೇವಗೆ
ದಣಿಸುವ ಚಕ್ಷುರೇಂದ್ರಿಯಗಳಿಗೆ ಪೊಳೆವುತ್ತ
ತನುಶುದ್ಧಿನಾಮ ಭಕುತಿ ಲಕ್ಷಣದಿಂದ
ನೆನಸುವಂತೆ ಮಾಡೊ ನಾನಾ ಪ್ರಕಾರದಿ
ಘನ ದೈವ ಸರ್ವಜ್ಞ ವಿಜಯ ವಿಠ್ಠಲ ಎನ್ನ
ತನು ಸಂಬಂಧವೆ ಎಣಿಸಿ ಎನ್ನದು ಎಂದು ೪
ಆದಿತಾಳ
ಸ್ವಾಮಿ ನಿನ್ನ ಚರಣಕ್ಕೆ ಭ್ರಮರಾಗುವೆನು
ನೇಮ ನಿತ್ಯ ಕಥೆಸಂಗ ಧಾಮದೊಳು ಎಸಗಿದರು
ಈ ಮನಸು ಪೊಂದಿ ನಿಷ್ಕಾಮದಿಂದ ನಿನ್ನ ಸೇರಲಿ
ಪಾಮರ ಬುದ್ಧಿ ಕೊಡದೆ ಪ್ರೇಮದಲ್ಲಿ ಪ್ರೀತಿ ಬಡಿಸೊ
ಕಾಮದೇವ ನಾಮದೇವ ವಿಜಯ ವಿಠ್ಠಲ ನಿ
ನ್ನ ಮೂರುತಿ ಪೂಜಿಸುವೆ ನಿತ್ಯದಲ್ಲಿ ಎನ್ನ ಕಾಯೊ ೫
ಜತೆ
ಸಂಸಾರ ಸೇರಿ ಗತಿ ಪಡೆದವರಾರುಂಟು ಪ್ರಾ
ಗ್ವಂಶ ವಿಜಯ ವಿಠ್ಠಲ ಎನ್ನ ತೊಲಗದಿರೊ ೬

ದಕ್ಷಿಣ ಭಾರತದ ತಮಿಳುನಾಡಿನ

೮೫. ಮನ್ನಾರ್
ಧ್ರುವತಾಳ
ಬಾಲಾ ಗೋಪಾಲ ಗುಣಶೀಲಾ ವಿಶಾಲ ಮಹಿಮಾ |
ಕಾಲಾ ದೇಶತಃ ಪೂರ್ಣ ನೀಲವರ್ಣಕಾಳಿಂಗಮದಭಂಗ |
ಕಾಳಿಂದಿಯಾ ರಮಣ ಮೂಲಾವತಾರಾಭೇದ |
ಲೀಲಾ ವಿನೋದ ಏಳೇಳು ಲೋಕವ ಆಳುವ ಬಲುದೈವ |
ಪಾಲು ಮೊಸರು ಕದ್ದ ಲಾಲಾಸುರಿವ ಶುದ್ಧ |
ಆಳಿನ ಮನೋರಥ ಫಾಲಲೋಚನ ವಿನುತ |
ಬಾಲೆರ ಮಾನಭಂಗ ಮೌಳಿ ಮುಕುಟ ತುಂಗ |
ಲೋಲ ಮನ್ನಾರಿಗುಡಿ ಪಾಲಾ ವಿಜಯವಿಠಲಾ |
ಸೋಳಾಸಾಸಿರ ವಾಮಲೋಚನೇಶ ಪ್ರೀಯಾ ೧
ಮಟ್ಟತಾಳ
ಅರಿಧರ ಶಿರಿಧರ | ಧರಾಧರ ಗಿರಿಧರ |
ಸುರಹರ ಸುರವರ | ಮುರಹರ ನರವರ |
ಕರಿವರತ್ಪರಾತ್ಪರ | ವಿಜಯವಿಠಲ ಪೀತಾಂ |
ಬರದಂಬರ ಧರ | ನಿರುತರ ಪರಿಪೂರ್ಣ |
ಶಿರಿಮನ್ನಾರಾದಾ | ವರನಿಲಯಾ ಕೃಷ್ಣಾ ೨
ತ್ರಿವಿಡಿತಾಳ
ಋಷಿ ಹರಿತಾನೆಂಬಾಂಗಿರಸ ಕುಲದುದಭವಾ |
ವಸುಧಿಯನು ಶೋಧಿಸಿ ಕೊಳು[ತ] |
ಹಸನಾದ ನೆಲವೆ ಕಾಣಿಸದೆ ಇರಲುತಾ |
ಪಸಿಗಾನು ಬಂದಿಲ್ಲಿ ನಸುನಗುತ |
ವಸುದೇವ ಸುತನ ಮೆಚ್ಚಿಸುವೆನೆಂದು ಮನಸು |
ವಶಮಾಡಿಕೊಂಡು ರಚಿಸಿದನು ತಪವನು [ತ] |
ವಸುಮತೀಶ್ವರ ನಮ್ಮ ವಿಜಯವಿಠಲನಾ ಸ್ಮ |
ರಿಸುತಲೀ ಪರಿಯಾ ದಿವಸ ಕಳೆಯುತಿರೆ ೩
ಮಟ್ಟತಾಳ
ಮನ್ಯು ಅಧಿಕವಾದ ಮನ್ನಾಸುರ ದೈತ್ಯ |
ತನ್ನೆದುರಿಲಿ ಒಬ್ಬರನ್ನು ಕಾಣೆನೆಂದೂ |
ಉನ್ಮತ್ತದಿಂದ ಸನ್ನು ಮುನಿಯ ತಪ |
ವನ್ನೆ ಕೆಡಿಸಲಾಗಿ ಖಿನ್ನಮನಿಸಿನಲ್ಲಿ |
ತನ್ನೊಳು ತಾನೆ ಕಾವನ್ನನಯ್ಯನ ಪಾದ |
ವನ್ನು ನೆನಿಸಲು ಸನ್ನಿಧಿಯಾದನು |
ಅನ್ನಾಥರೊಡಿಯಾ ವಿಜಯವಿಠಲನು ಬಂದು |
ಮನ್ನಿಸಿದನು ಋಷಿ ಅನ್ನವಾದವನು ೪
ಆದಿತಾಳ
ಮರುಳ ಮನ್ನಾಸುರನ | ಒರೆಸಿ ಮುನಿಯ ಕಾಯ್ದ |
ಹರಿಪೆಸರಾದ ಮನ್ನಾರಿ | ಕೃಷ್ಣನೆಂದು ಇಲ್ಲಿ |
ಕರಿಸಿಕೊಂಡು ಮೆರದನು | ತರುಣೇರಸಹಿತದಲ್ಲಿ |
ಹರಿದ್ರಾ ನದಿಯೊಳು | ಪರಿಪರಿ ಲೀಲೆ ಅ |
ಪರಿಮಿತವಾಗಿ ಆಡಿ ಸುರರು ಭೂಸುರರಿಂದ |
ಹಿರಿದು ಸೇವೆಕೊಳುತ್ತ ಧರಿಗೆ ದಕ್ಷಿಣದ್ವಾರಾಕಾಪುರವೆಂದೆನಿಸಿದೆ |
ಸರಿಯಾರು ನಿನಗೆ ಸುರತರುವೆ ಕಿಂಕರರಿಗೆ |
ಕರುಣಿ ಮನ್ನಾರಿ ಗುಡಿ ವರರಾಜಗೋಪಾಲಾ |
ಮರವಿಭುವ ವಿಜಯವಿಠಲಾ ಅರಿದವರೊಡನಿಪ್ಪ ೫
ಜತೆ
ಮಾವಾರಿ ಮನ್ನಾರಿ ನಿಲಯಾ ರಾಜಗೋಪಾಲ |
ಗೋವಋಷಿಗೆ ಒಲಿದ ವಿಜಯವಿಠಲರೇಯಾ ೬

ಭಕ್ತಿ ಎಂಬುದು ಅಂತರಂಗದ

೯೦
ಧ್ರುವತಾಳ
ಬಾಹಿರದಂಗಡಿ ಬಲುವೆಗ್ಗಳ ಮಾಡಿ
ಅಹಂಕಾರದಲ್ಲಿ ತಿರುಗಿ ತಿರುಗಿ
ರಹಸ್ಯವೆಲ್ಲವ ಕಂಡವರಿಗೆ ಬೀರಿ
ಮೋಹ ಪುಟ್ಟುವಂತೆ ಒಲಿಸಿಕೊಂಡು
ದೇಹ ಪುಷ್ಟಿಕರವಾಹದಕೆ ನಾನಾ
ಆಹಾರ ಭಕ್ಷಿಸಿ ದಿನವ ಕಳದೂ
ಗುಹಾಶ್ರಯವ ನೋಡಿ ಮನ್ನಿಸದಲೆ ನಿತ್ಯ
ತ್ರಾಹಿವೆಂದೆಂಬೆನೊ ಸರ್ವರಿಗೆ
ವಿಹಂಗಮಗಮನ ವಿಜಯವಿಠ್ಠಲರೇಯ
ಮಹಿಸುರರಾಜನದಲಿ ಬಂದರು ಬರಿದೆ ೧
ಮಟ್ಟತಾಳ
ಕೈಬಾಯಿ ಮತ್ತೆ ಒಂದು ನ್ಯಾಯದಲ್ಲಿ ಇರಸದಂಥ
ನಾಯಿ ಮನುಜರೇನು ಕರ್ಮ ಉಪಾಯದಿಂದ ಮಾಡಲೇನು
ಈಯದೊ ಫಲ ಈಯದೊ ಪುಣ್ಯ ಈಯದೊ ಹರುಷ
ಶ್ರೀಯರಸ ವಿಜಯವಿಠ್ಠಲರಾಯ ಮೆಚ್ಚ ಕಾಮನಯ್ಯಾ ೨
ತ್ರಿವಿಡಿತಾಳ
ಆರ್ಥಜಙ್ಾನವಿಲ್ಲದೆ ಅರ್ಥದಾಸೆ ತೊರಿಯದೆ
ತೀರ್ಥಯಾತ್ರೆಗಳಲ್ಲಿ ತಿರುಗಲದೇನಯ್ಯಾ
ವ್ಯರ್ಥವಲ್ಲದೆ ಪುಣ್ಯ ಸಾರ್ಥಕವಾಗದು
ತೀರ್ಥಧರಗಾದರೂ ಯಥಾರ್ಥವೆನ್ನಿ
ಮತ್ರ್ಯರು ಮಾಡಿ ಕೃತಾರ್ಥರಾದೆವೆಂಬಲ್ಲಿ
ಸಾರ್ಥ ಮರುಳಾಟವಲ್ಲ ಮುಕ್ತಾರ್ಥವಲ್ಲಾ
ಪಾರ್ಥಪಾಲಕ ನಮ್ಮ ವಿಜಯ ವಿಠ್ಠಲನ ಪ
ದಾರ್ಥ ತಿಳಿಯದವ ದು:ಖಾರ್ಥನವನು ಕಾಣೊ ೩
ಅಟ್ಟತಾಳ
ಕೋಡಗದ ಕೈಗೆ ಕನ್ನಡಿ ಸಿಕ್ಕರೆ
ನೋಡಿಕೊಂಡು ಸುಖಪಡಬಲ್ಲುದೆ
ಮೂಢಜನರಿಗೆ ಭೂಸುರಜನ್ಮ ಬಂದರೆ
ರೂಢಿಯೊಳಗೆ ಬಲಾನಂದದಲ್ಲೀ
ಗಾಢವಾಗಿದ್ದು ಶ್ರೀ ಹರಿಯಾ ಗುಣಂಗಳ
ಹಾಡಿ ಪಾಡಿ ಧನ್ಯನೆನಿಸುವನೇ
ದಾಡಿಲಿ ಧರೆಯನೆತ್ತಿದ ವಿಜಯ ವಿಠ್ಠಲ
ನೋಡಿ ನಗುತಿಪ್ಪ ಮಾನವರಾಟಕ್ಕೆ ೪
ಆದಿತಾಳ
ಕಳ್ಳಿಯ ಹಾಲನು ಕರತಂದು ಮಜ್ಜಿಗೆ
ಯಲ್ಲಿ ಹೆಪ್ಪುಗೊಡಲು ಫಲಿಸೋದೆ ಮರುಳೆ
ನಿಲ್ಲಾದು ನಿಲ್ಲಾದು ಆಶೆ ಬಿಡದ ನರಗೆ
ಎಲ್ಲ ತೀರ್ಥಯಾತ್ರೆ ತಿರುಗಿದ ಪುಣ್ಯ
ಫುಲ್ಲದಳಲೋಚನ ವಿಜಯ ವಿಠ್ಠಲನಿಗೆ
ಅಲ್ಲದವನಾಗಿ ಅರಸಾಗಿ ಪೋಪ ೫
ಜತೆ
ಆಶೆ ಬಿಡದ ಮನುಜ ದಾಸನಾದರೆ ಏನು
ಮೀಸಲಗತಿ ಇಲ್ಲ ವಿಜಯ ವಿಠ್ಠಲ ಬಲ್ಲ ೬

ಭಗವಂತನ ಸಾಕ್ಷಾತ್ಕಾರಕ್ಕೆ ಜ್ಞಾನ, ಭಕ್ತಿ,

೬೧
ಧ್ರುವತಾಳ
ಬಿಂಬ ಮೂರುತಿ ನಿನ್ನ ಕಾಂಬೆನೆಂದು ನಾನು
ಹಂಬಲಿಸಿ ಬಲು ಹಲುಬಿ ಡಿಂಬದೊಳಗೆ
ಬಂದು ಸುಳಿದು ಪೊಳೆದು ನಿಲುವ
ಇಂಬ ನಿರೀಕ್ಷಿಸಿ ಬಲು ಬಡವಾಗಿದೆ
ತುಂಬೂಡಿದ ಬಿದ್ದಹಣ್ಣು ಆರುವಲ್ಲದಾ
ಎಂಬೊಗಾದೆ ಪೋಲುವ ತೆರನಾಗಿದೆ
ಅಂಬುಜೇಶ ಈಶ ವಿಜಯ ವಿಠಲ ಹೃದ
ಯಾಂಬರದೊಳು ನೀಲಾಂಬುದಾ ಬಾರೋ ೧
ಮಟ್ಟತಾಳ
ಅಂಬುಜ ಸಂಭವನು ಬಿಂಬದರುಶನ ಕಾಂಬನು ಮನದಿಚ್ಛೆ
ಅಂಬರನದಿಧರನು ಬಿಂಬದರ್ಪಣದಿ
ಕಾಂಬನು ಪ್ರತಿಬಿಂಬ ಅಂಬರ ಸಂಚರರು
ಅಂಬುಜ ಸಖನಂತೆ ಬಿಂಬ ಕಾಂಬುವರು
ಎಂಬ ಮಾನುಷ್ಯರು ಅಂಬುದ ಮಿಂಚಿನೆಂಬಂತೆ
ಬಿಂಬಾ ಕಾಂಬರು ಸಿದ್ಧ ನಂಬಿದೆನೆ ಪೀ
ತಾಂಬರ ಅವರಿಗೆಂಬೋದು ಎನಗುಂಟೆ
ಡಂಭಕ ಭಕ್ತಿಗೆ ಸಂಭವನಾಮ ವಿಜಯ ವಿಠಲ
ಡೊಂಬನ ಅರಿತು ನಂಬಿಗೆನೀಯೊ ೨
ರೂಪಕ ತಾಳ
ಹೃದಯ ಸ್ಥಳದಲ್ಲಿ ನೇಗಲಿಧರನು
ವಧೆ ಮಾಡುತಿರಲು ದೋಷಕಾರಿಯ
ಅದೆ ಸಮಯದಲ್ಲಿ ನಿನ್ನ ಕರದೊಯಿದು
ಅಧಿಕ ನಾಡಿಯಲ್ಲಿ ಊಧ್ರ್ವದಲ್ಲಿ ಯಿಟ್ಟೆ
ಮದಗರ್ವ ಪುರುಷನಾ ಭಾಸಮಾನ ತ್ಯಾಗ ಮಾಳ್ಪ
ಹದನ ತಿಳುಪದೆ ವದನ ತೋರದೆ
ತದನಂತರದಲ್ಲಿ ಮೊದಲು ಮಂದಿರಕೆ ಬಾ
ರದಿಪ್ಪದೇನೋ ಪಾವನ ಸುರಧೇನು
ಪದುಮ ಗರ್ಭನಾಮ ವಿಜಯ ವಿಠಲ ಎನ್ನ
ಹದುಳೆಲೆ ನಿನ್ನ ಮಾಡಿದೆ ಸುರತರುವೆ ೩
ಝಂಪೆ ತಾಳ
ಅಧೋಮುಖವಾಗಿದ್ದ ಪದುಮಅರುಳವ ಬಗೆ
ವಿದಿತವಿದು ಕಾಣೊ ಇಂದಿರೇಶ
ಮೊದಲು ಶ್ವಾಸದಲ್ಲಿ ಊಧ್ರ್ವ ಮುಖವ ಮಾಡಿ
ಮುದದಿಂದ ನಿಲವಿಡಿದು ಜ್ಞಾನಕಾರ್ದಾ
ಉದಯಾದ್ಫಾಸ ಸಮ ಭಾಸವೆಂಬೊ ಮಂ
ತ್ರದಲಿ ಕರಿವೆನು ಜೀಯಾ ಕೇಳೊ ಮುಂದೆ
ಅದುಭೂತ ನಾಮ ಸಿರಿ ವಿಜಯ ವಿಠಲ ನಿನ್ನ
ಸದಾ ಮೂರ್ತಿಗಳ ನಿಬಿಡಿ ನಿನ್ನೊಳಗಿರಲಿ ೪
ತ್ರಿವಿಡಿ ತಾಳ
ಸಿರಿದೇವಿರಮಣ ಭಕ್ತರಪರಣ
ಶರನಿಧಿಶಯನ ಶ್ರುತಿಶಿರೋರನ್ನ
ಮೊರೆ ಪೊಕ್ಕೆನೋ ಜೀಯಾ ಮರುತನ ಅಯ್ಯಾ
ಅರಿದವರಿಗೆ ಹೊಣಿಯೆ ಸದಾ ಚಿಂತಾಮಣಿಯೆ
ಸ್ಮರಿಸಿದೆ ಬಹು ಮೂರ್ತಿ ವೊಂದು ಮೆಟ್ಟಿಕೆ ನಿಲಿಸಿ
ಪರಮ ಗುರುವಿನ ಮೂರ್ತಿಳ ಒಗೆ ತಂದು
ಇರಿಸುವೆನಲ್ಲಿಂದ ಸ್ವಗುರು ಮೂರುತಿಯೊಳಗಿಟ್ಟು
ಭರದಿಂದ ಪ್ರಾಜ್ಞನೆ ನಿನ್ನಲ್ಲಿ ಚಿಂತಿಸುವೆ
ಸರಿ ಪೇಳು ಇಲ್ಲಿಗೆ ಮುಂದಿನಾಲೋಚನೆ
ಅರವಿಂದಾಕ್ಷ ನಾಮ ವಿಜಯ ವಿಠಲ ನೀನೆ ೫
ಅಟ್ಟತಾಳ
ವರ ಮೂರ್ತಿಯೊಳಗೆ ನಿನ್ನ ಚಿಂತನೆ ಪತಿ
ಕರಿಸುವೆನೆಂದಲ್ಲಿ ಪುಷ್ಪ ಸಂಕಾಶಾಂಬರ
ಧರನೆ ಮೇಣು ಅಂತರಂಗದೊಳು ತರುವಾಯ ವರುಣ
ಸರಸಿಜದಳವಷ್ಟಾಕರನಿಕೆ ಪೀಠದ ಮೇಲೆ ಶೋಭಿತವಾಗಿ
ಹರಿ ಪಾಲಕರು ಪರಿವಾರ ಸುತ್ತಲು
ಕರಗಳು ಮುಗಿದು ಪರಾಕು ಪೇಳುತಿರೆ
ಧೊರೆಯಾಗಿ ಸ್ವಮೂರ್ತಿಗಣ ಮಧ್ಯದಲ್ಲಿ
ಮಿರಗುವ ಪ್ರಕಾಶ ವಿಜಯ ವಿಠಲ ದೇ
ವರದೇವ ಸಂಜೀವ ಅಘವನದಾವಾ ೬
ಆದಿತಾಳ
ಲೋಕದೊಳಗಿದ್ದವೆಲ್ಲಾನೇಕವಾಗಿ ನೋಡೆ ಪರ
ಲೋಕಕ್ಕೆ ಸಾಧನವಲ್ಲಾ ವಾಕು ಇದು ಪುಸಿ ಅಲ್ಲಾ
ಏಕೋಭಾವದಲ್ಲಿ ನಾಶಿಕದಲ್ಲಿ ದೃಷ್ಟಿಯಿಟ್ಟು
ಕಾಕು ದೈವಂಗಳ ಬಿಟ್ಟು ಆ ಕಮಲ ಪೀಠದಲ್ಲಿ
ಅಖಂಡ ಧ್ಯಾನನಾಗಿ ಏಕೋಮೇವನ ಪೂಜಿಯಾ
ನೇಕ ದಿನದಲ್ಲಿ ಮಾಳ್ಪೆನೇಕ ಮಾಯಾ ವಿಜಯ ವಿಠಲ
ಸಾಕುವನು ಬೇಕಾದನಿತ್ತು ೭
ಜತೆ
ನಿ[ನ್ನ]ದರುಶನವಾಗೆ ಜನನದ ಭಯವಿಲ್ಲ
ಉದುಭವ ನಾಮ ಸಿರಿ ವಿಜಯ ವಿಠಲ ಪೊಳಿಯೊ ೮

ಭಕ್ತರಿಗೂ ಭಗವಂತನಿಗೂ ಇರುವ

೭೦
ಧ್ರುವತಾಳ
ಬಿಡದಹಂಕಾರ ಬಲು ಬಡಿವಾರದಲ್ಲಿ ಸುಖ
ಪಡುವೆನು ದುರುಳ ನಡತೆಗಳಾಚರಿಸಿ
ಒಡಲಿಗೆ, ಮನೆಗೆ ಪಟ್ಟಿ ಬಡೆದಂತೆ ನಾಮಗಳ
ಎಡ ಬಿಡದೆ ಚೆನ್ನಾಗಿ ತಿದ್ದಿಕೊಂಡು
ಪಿಡಿದು ಜಪಸರ ಕೊರಳೊಳಗಿಟ್ಟು ಗಾ
ರುಡಿಗ ಕವಡೆಯ ಸರವ ಧರಿಸಿದಂತೆ
ಕೊಡೆಗೈಯ್ಯವಹ ಬಳಿಗೆ ನುಡಿಯುತ್ತ ಅಪಶಬ್ದ
ತಡೆಯದಲೇ ಪೋಗಿ ಆದರದಿ ನೀನೆ ಎಂಬೆ
ಒಡಲ ತೊರಿಸಿ ಮತ್ತೊಡನೊಡನೆನ್ನ ಕುಲ
ದೊಡೆಯಾನೆಂದು ಹಿಗ್ಗಿ ಪೊಗಳಿ ನಿಲುವೇ
ಜಡಮತಿ ಒಮ್ಮೆ ನೆನದರೆ ಗತಿಯೆ ನೀನು ನಿ-
ನ್ನಡಿಗಳ ಮರೆದು ಮಂದೆನಾದೆನಯ್ಯಾ
ಪೊಡವಿಯೊಳು ಬಹಳಾದ ಗ್ರಾಮದಲಿ, ಅಂ
ಗಡಿಹಾಕಿ ಲಾಭವನು, ಪಡೆವೆನೆಂಬ
ಕಡುಮೂರ್ಖನಂತೆ ನಾನಾಗಿ ಪಾತಕಕಿಳಿದೆ
ಬಡವಾನೆಂದಿನಿಸಾದೆ ಬ್ರಹ್ಮೇತಿ ಎನಿಸಿದೆ
ಬಿಡಿಸುವುದು ಜೀಯ ದುರಾಶೆ ಪಾಶಗಳು ಎ
ನ್ನೊಡೆಯ ಸಿದ್ಧಾತ್ಮ ಸಿರಿ ವಿಜಯ ವಿಠ್ಠಲ ಪರಿ ೧
ಮಟ್ಟತಾಳ
ಅನ್ನವೆಂದು, ಅನ್ಯರನ್ನ, ಸನ್ನುತಿಯಿಂದ, ಬಿನ್ನಗೈಸಿ
ತಿನ್ನಲೋಡಿ ನಿನ್ನ ನಾಮ, ಹಾನಿಕೆಯನ್ನು ತೊರೆದ
ಹಾನ್ಯಹಾನ್ಯಯನ್ನನಾಗಿ, ಖಿನ್ನನಾಗಿ ನಿನ್ನ ಮರೆದೆ
ಚನ್ನ ಸುಪ್ರಸನ್ನ, ದೇವರನ್ನೆ, ವಿಜಯ ವಿಠ್ಠಲನ್ನೆ
ನಿನ್ನ ನಾಮ ಮರದೆ, ನಿನ್ನ ಎನ್ನ ನೋಡೊ ಎನ್ನನೋಡೊ ೨
ಝಂಪಿತಾಳ
ಸೇವಕ ಮಾಡಿದ ಶತನೂರು ಅಪರಾಧ
ವಾ, ವಹಿಸಿ, ಪೊರೆವ ದೈವಗಳುಂಟೆ
ಸೇವೆ ಕೊಂಬಲ್ಲಿ ಕೊಡುವಲ್ಲಿ ಕೊಳುವಲ್ಲಿ
ಆವಾವ ಬಗೆಯಲ್ಲಿ ನೋಡುವಲ್ಲಿ
ಮೂವರನು ನೋಡುವೆನೆಂದು ಭೃಗುಮುನಿ ಬಂದು
ನೋವು ಮಾಡಲು ಮೆಚ್ಚಿ ಅರ್ಚಿಸಿದೆ
ಸಾವಿರ ಜನ್ಮದ ದೋಷರಾಶಿಗಳಿರಲು
ಕಾವ ಕರುಣಿಯೆಂದು ಒಮ್ಮೆ ನೆನೆಯೆ
ನಾವಾಗಿ ಭವಾಬ್ಧಿಯನು ದಾಟಿಸುವನು ನಮ್ಮ
ಗೋವ ನಾಮ ವಿಜಯ ವಿಠ್ಠಲ ಓವಿಗನು ೩
ಅಟ್ಟತಾಳ
ಚರಣಕೀರ್ತನೆ, ಚರಣಸೇವೆ, ಚರಣಧ್ಯಾನ
ಚರಣಸ್ಮರಣೆ, ಚರಣಪೂಜೆ, ಚರಣ ಸಂ-
ದರುಶನವೇ ಕೊಡುತಲಿ, ಚರಣ ಚರಣದಲ್ಲಿ ಸಂ-
ಚರಣವನ್ನು ಮಾಡುವಂಥ ಚರರ ಬಳಿಯಿಟ್ಟು ಖೇ
ಚರ ಸುಪಥವ ತೋರಿಸಿ, ಚರಾಚರದಲ್ಲಿ ಗೋ-
ಚರ ನೀನಾಗಿ ಎನ್ನ ನಿಶಾಚರದ ಗುಣವ ಬಿಡಿಸಿ ಉಪ-
ಚರಿಸುವಂಥ ಮಂಗಳಾಚರಣೆಯಿಂದ, ಗುರುಗಳ
ಚರಿತವನ್ನು ನಿತ್ಯ, ಉಚ್ಚರಿಸುವಂತೆ ಮಾಡು ಸಂ-
ಚರಾಚರ ವಿಜಯ ವಿಠ್ಠಲ ೪
ಆದಿತಾಳ
ಆದಿ ಅನಾದಿ ನೀನೆಂದು ಪಾದವನ್ನು ಪಿಡಿದೆನು
ಭೇದವನ್ನು ಮಾಡದಲೆ ಕಾಯ್ದು ಕೊಳ್ಳೈ ಕಮಲನಾಭ
ತೇದ ಗಂಧ ಪೂರ್ವದಂತೆ, ಆದುದೇನೊ ನಿನ್ನ ದಾಸ-
ನಾದೆನೆಂದು ಒಂದು ಸಾರಿ ಸಾಧುಗಳು ನುಡಿಯೆ ಜ-
ನ್ಮಾದಿ ದುಃಖದಿಂದ ಬಾಹು ಬಾಧೆ ಕಷ್ಟಾ ಕರ್ಮಲೇಶ-
ವಾದರು ಎನಗೆ ಉಂಟೆ? ವ್ಯಾಧಿಭವರೋಗವೈದ್ಯ
ವೇದಾಂಗ ನಾಮಧೇಯಾ ವಿಜಯ ವಿಠ್ಠಲ ಜೀಯಾ
ನೀ ದಯವಾಗೆ ಹಾರಲೂದುವೆನು ದುರಿತರಾಶಿ ೫
ಜತೆ
ಅತಂತ್ರ ನಾನಾಗಿ, ನಿನ್ನ ಬಯಸಿ ಬಂದೆ
ಸ್ವಾತಂತ್ರ ಸ್ವಾಭಾವ ಕಾಯಾ ವಿಜಯ ವಿಠ್ಠಲ ೬

ದೇಹಾಭಿಮಾನವನ್ನು ಬಿಡುವುದರ ಜೊತೆಗೆ

೯೧
ಧ್ರುವತಾಳ
ಬಿಡಿ ದೇಹದಭಿಮಾನ ಪಿಡಿಯದಿರು ಸಯವೆಂದು
ಒಡವೆ ವಸ್ತುವನ್ನ ಪಡೆದವರು
ಮಡದಿ ಸುತರಾದಿಗಳು ಒಡೆತನದ ಸೊಬುಗೆ ಎ
ನ್ನೊಡನೊಡನೆ ಸಯವೆಂದು ನುಡಿಯದಿರು
ಗಡೆತೆಗಿಯಲು ಸಂಗಡಲೆ ನುಡಿಯಲ್ಲಿ
ಎಡೆಎಡಿಗೆ ಹಿಗ್ಗಿಮುಗ್ಗಿ ಪಡಗಾದಿರು
ಅಡಿ ಬಂದರ್ಧದೊಳಗೆ ಕಡೆಯಿಲ್ಲದ ದು:ಖ
ಬಡುವುದಕ್ಕೆ ಎಳ್ಳಿನಿತು ಕಡೆಮೆ ಇಲ್ಲಾ
ಸಡಲಿಪೋಗದ ಮುನ್ನೆ ಕ್ಷಮೆ ವಿಜಯ ವಿಠ್ಠಲ
ಒಡೆಯನ ಕರುಣ ಪಡೆದು ಪಡೆ ಸಹಿತ ಸೇರೋ ೧
ಮಟ್ಟತಾಳ
ಉಳ್ಳಾಗಲು ನಿನ್ನ ಉಳ್ಳಪ್ಪನೆಂದು ಎಲ್ಲ ಬಳಗ ಬಂಧು
ಸೊಲ್ಲುಸೊಲ್ಲಿಗೆ ಪಾಡೆ ಬೆಲ್ಲಕ್ಕೆ ನೊಣಗಳು
ವಲ್ಲಡಿಯಂತೆ ಒಳ್ಳೇ ತನದಲ್ಲಿ
ಉಲ್ಹಾಸರಾಗಿ ಗಲ್ಲಭೆಯಿಂದಲಿ
ಚಲ್ಲವರಿದಿಪ್ಪರು ಮೆಲ್ಲ ಮೆಲ್ಲನೆ ಸಿರಿದೇವಿ
ವಲ್ಲಭ ವಿಜಯ ವಿಠ್ಠಲ ದಯದಪ್ಪೆ
ಎಲ್ಲ ಮಾನವರು ನಿಲ್ಲದೆ ಪೋಗುವರು ೨
ತ್ರಿವಿಡಿತಾಳ
ಜರೆ ನರೆ ಅರೆ ಮರವು ಹರಿಯ ತಪ್ಪಿಸಿ ಉ
ಸರು ಕೊರಳಲ್ಲಿ ಸಿಕ್ಕಿ ತಿರುಗದೆ ಉಬ್ಬಸ ಬರೆ
ಸಿರ ನಡುಗಿ ಪರರ ಕರವ ಪಿಡಿದು ಅಡಿಗಿ
ಮರುವಾಗಿ ಕರ್ನಂಕಂಗಳ ರೋತಿಯ ಸೋರೆ
ಗುರು ಗುರು ಗುಟ್ಟುತಗಲ್ಲ ಸುಕ್ಕಿ
ಹರಳ್ಹೋದು ಗೆಜ್ಜೆ ಬಾಯದೆರದಂತೆ
ತೆರೆದು ಅಲ್ಪರಿಗೆ ಚಾಲ್ವರಿದು ಮು
ಸರಿ ಎಂಜಲೆನ್ನದೆ ಕರಣಿಯ ಲೆಂದು ಉ
ದರ ಪೊರಿವಿಯಲ್ಲದೆ ಸ್ಮರಣೆ ತಪ್ಪಲು ಯಮನ
ಪುರುಕೆಳದೊಯ್ವ ಬಹುಶಿರಸು ವಿಜಯ ವಿಠ್ಠಲನ್ನ
ಸ್ಮರಣೆ ಬಾರದು ಕಾಣೊ ೩
ಅಟ್ಟತಾಳ
ತನುವೆ ಬೀಳಲು ಉಳ್ಳ ತನುಸಂಬಂಧಿಗಳೆಲ್ಲ
ಎನಗೇನು ತನಗೇನು ಗತಿ ಎನುತಲಿ
ಧನವಾರಿಗೆ ನಿನ್ನ ಮನಿಯಾರಿಗೆ ಎಂದು
ಮಣಿದು ಧೊಪ್ಪನೆ ಬಿದ್ದು ಹೊರಳುವರಾ
ಕ್ಷಣವಿರಗೊಡದೆ ಹೊತ್ತನ್ನು ಹೋಯಿತೆಂದು
ಪೆಣನೆಂದು ತೆಗೆದು ಬೀಡನು ಬಿಡಿಸುವರು
ಮನಿಯೊಳಗಿದ್ದ ಕಾಷ್ಠೇನುವಾದರೆ ಒಂದು
ಹಣವಾದರೂ ಇವನ ಕೂಡ ಹಾಕರು
ಭಣಗು ಸಂಸಾರವು ಕ್ಷಣಭಂಗುರ ಕಾಣೊ
ಜನುಮ ಮೃತ್ಯು ಜರಾತಿಗ ವಿಜಯ ವಿಠ್ಠಲ
ಮನದೆಗಿಯೆ ನಿನಗಿನಿತು ಸಾಧನವಿಲ್ಲಾ ೪
ಆದಿತಾಳ
ಕಾಲುಕೈ ಜವಗುಂದಿ ಕಾಲವ ತಿಳಿಯದಲೆ
ಕಾಲಕರ್ಮ ಒದಗಲು ಕಾಲನದೂತರು ಕೋಪದಲ್ಲಿ
ಕಾಲುಕೈ ಬಿಗಿದು ಕಟ್ಟಿ ಕಾಲು ಕಾಲಿಲೆ ಒದ್ದು ನೂ
ಕಲು ಬೇಡ ಬೇಕೆಂದು ಕಾಲಕಡ್ಡ ಬರುವರಿಲ್ಲಾ
ಕಾಲ ಪ್ರಿಯ ಪುಷ್ಪಹಾಸ ವಿಜಯ ವಿಠ್ಠಲನ್ನ
ಕಾಲಕಾಲಕೆ ನೆನೆದು ಪಂಕಾಲಯ ನಿಲ್ಲದೆ ದಾಟು ೫
ಜತೆ
ಗರ್ಭೋತ್ಪತ್ಯಾರಭ್ಯ ಮರಣ ಪರ್ಯಂತ
ಭೂರ್ಭವಸ್ವಸ್ತಿರೆ ವಿಜಯ ವಿಠ್ಠಲಗೆ ನಮಿಸೋ ೬

ಭಗವಂತನ ಧ್ಯಾನವನ್ನು ಭಕ್ತಿ

೬೨
ಝಂಪಿತಾಳ
ಬಿಡು ಬಿಡು ದೇಹವ ದಂಡಿಸಿ ಮಾಡಿದ ಕರ್ಮ
ಕೊಡತಕ್ಕವಲ್ಲವು ದೃಢವಾದ ಪದವಿಗಳು
ಕಡು ಸಾಹಸವ ಬಿಟ್ಟು ಎಸಗಿದರೆ ಸ್ವರ್ಗಾದಿ
ಒಡನೆ ತಿರುಗಿಸಿ ಫಲಪುಡಿಯಾಗಿ ಪೋಗುವುದು
ಮಿಡುಕುವುದೆ ಸಿದ್ಧ ಶತಕಲ್ಪ ಮಾಡಿದರೆನ್ನ
ನುಡಿಗೆ ಸಂಶಯ ಸಲ್ಲಕೇಳಿ ಮರುಳಾಗದಿರಿ
ಪಡಿ ಇಲ್ಲದಾ ದಾರಿ ತೋರುವರು ಹಿರಿಯರು
ದೃಢನಾಮ ವಿಜಯ ವಿಠ್ಠಲನ ಶ್ರವಣ ಮನನ
ಅಡಿಗಡಿಗೆ ಲಾಲಿಸಿ ಪಡೆಯೊಂದು ಧ್ಯಾನಾ ೧
ಮಟ್ಟತಾಳ
ಧ್ಯಾನಾದೊಳಗೆ ಸ್ನಾನವಡಕಾ
ಧ್ಯಾನಾದೊಳಗೆ ಮೌನ ಅಡಕಾ
ಧ್ಯಾನಾದೊಳಗೆ ದಾನವಡಕಾ
ಧ್ಯಾನಾದೊಳಗೆ ಜಗವಡಕಾ
ಧ್ಯಾನಾದೊಳಗೆ ದೇವರಡಕಾ
ಧ್ಯಾನಾದೊಳಗೆ ಸರ್ವಾ ಅಡಕ
ಧ್ಯಾನಾವನ್ನು ಘಳಿಸಿ ಕೊಂಡು
ಧನ್ಯ ವಿಜಯ ವಿಠಲನ್ನ
ಧ್ಯಾನವನ್ನು ಮಾಡು ನೀ
ದಾನದಿಂದ ಭಕುತಿಯಲ್ಲಿ ಧ್ಯಾನವನ್ನು ಬಿಟ್ಟ ನರಗೆ
ಏನು ಇರಲಿ ಎಲ್ಲ ಒಡಕ ೭
ರೂಪಕ ತಾಳ
ಧ್ಯಾನರಹಿತನಾದ ಮನುಜ
ರೇನು ಕರ್ಮವ ಮಾಡಲೇನು
ಆನೆ ಕಪಿತ್ಥ ನುಂಗಿದಂತೆ
ಹೇನು ಬಿಡದೆ ವಾಸನಿಯ
ತಾನು ನಿರುತಾ ಶ್ರೈಸಿದಂತೆ
ಜಾಣನೊಬ್ಬ ಕಿನ್ನರಿ ಧರಿಸಿ
ಕೋಣನಲ್ಲಿ ಮೀಟಿದಂತೆ
ಗಾಣದೊಳಗೆ ಮಳಲು ತುಂಬಿ
ಭಾನು ಮುಣಿಗಿ ಸುತ್ತಿದಂತೆ ಕಾಣಿರೊ
ಧ್ಯಾನ ಜ್ಞಾನ ಸಂಗತಿಯಿಂದ
ವಾನರನ್ನ ಮುಷ್ಟಿಯಂತೆ
ದೀನನಾಗಿ ಒಂದು ನಿಮಿಷಾ
ಧ್ಯಾನವನ್ನು ಮಾಡಲು
ಶ್ರೀನಿವಾಸ ವಿಜಯ ವಿಠ್ಠಲ
ಆನಂದವಾಗಿ ಒಲಿವನು
ಧ್ಯಾನದಿಂದ ಗತಿಗೆ ಸೋ
ಪಾನವಾಗಲಿ ವಿರಚಿಸೂ ೩
ಧ್ರುವತಾಳ
ಅನಂತ ಕಲ್ಯಾಣ ಗುಣಪರಿಪೂರ್ಣ ನಿತ್ಯನಿರ್ದೋಷಾ
ಜ್ಞಾನಾನಂದಾತ್ಮಕ ವಿಷ್ಣುರ್ಮೇಸ್ವಾಮಿ ತ್ರಿಲೋಕಕರ್ತಾ
ನೀನೆ ಸ್ವಾತಂತ್ರ ಬೊಮ್ಮಾದಿಗಳು ನಿನ್ನ ದಾಸಾನುದಾಸರು
ಅನಂತ ಅನಂತ ಕಾಲದಲ್ಲಿ ನಿಜವೆಂದು ಪೇಳುತ್ತ
ಮಾನುಷೋತ್ತಮ ಹೀಗೆ ಬಲುಕಾಲವರ್ಚಿಸಲು
ಮನದೊಳಗೆ ವಿಜಯ ವಿಠ್ಠಲನು
ಕೃಪೆಯಿಂದ ಧ್ಯಾನಕೆ ಪೊಳೆವ ೪
ತ್ರಿವಿಡಿ ತಾಳ
ಚತುರ ಗುಣದಲ್ಲಿ ಚತುರ ಸಾಸಿರ
ಚತುರ ನೂರು ವರುಷ ಧ್ಯಾನಂಗಳ
ಚತುರದಿಂದಲಿ ಮಾಳ್ಪ ಮತಿಗೆ ದೇಮೋತ್ತಮ
ಚತುರವೇದ ವಿಜಯ ವಿಠಲನು
ಚತುರನಾಗಿ ಬಿಂಬ ಮೂರುತಿ ಸುಳಿದು
ಚತುರತನದಲ್ಲಿ ಬಂದು ಚರಿಸುವನು ೫
ಅಟ್ಟತಾಳ
ಹೊನ್ನೆ ಹುಳುವಿನಂತೆ ಕಣ್ಣಿಗೆ ಸುಳಿವನು
ತನ್ಮಯ ಗುಣನಿಧಿ ತನ್ನಾಮಕ ದೇವ
ತನ್ನಿಚ್ಛೆ ಸ್ವಭಾವ ಮುನ್ನೆ ಧ್ಯಾನದಲ್ಲಿ
ಜನ್ನಿತ ಜ್ಞಾನಕ್ಕೆ ಮನ್ನಿಸುವನು ಇವನ
ಮುನ್ನಿನ ಮಾರ್ಗಕ್ಕೆ ಮಾನ್ಯ ವಿಜಯ ವಿಠ್ಠಲನ್ನದಯದಿಂದಾ
ಪನ್ನನೀವನೆಂದು ಚನ್ನಾಗಿಒಲಿದು ೬
ಆದಿತಾಳ
ಆಗಮ ಸಂಚಿತ ಹರಿಸಿ
ಆಗುವ ಪ್ರಾರಬ್ಧಗಳ
ವೇಗಾನುಸಾರ ತೀರಿಸಿ
ತಾಗಿದ ದುಃಖ [ಸ್ವ]ರುಶಾ
ಪೋಗಲಾಡಿಸಿ ಅವರವರ
ಯೋಗ್ಯತಾವರಿದು ಸುಖವ ಪಾಲಿಸಿ
ಭಾಗವತರನ ಮಾಡಿ
ಶ್ರೀ ಗುರು ವಿಜಯ ವಿಠಲ
ಮುಗುತಿಯನೀವ ೭
ಜತೆ
ಧ್ಯಾನ ದಿಂದಲಿ ಮನಸು ನಿಲಿಸಿ ಜ್ಞಾನವ ಪಡೆದು
ಅನಂತ ವಿಜಯ ವಿಠಲನ ಲೋಕವ ಸೇರೋ ೮

ಮಾನವ ಜನ್ಮಕ್ಕೆ ಅತ್ಯಧಿಕ ಪ್ರಾಶಸ್ತ್ಯ ದಾಸರು

೯೨
ಝಂಪೆತಾಳ
ಬಿಡು ಬಿಡು ಮಾಯವನು ಕಡಿಗೆ ನಿನ್ನನು ಒಯ್ದು
ತಡಿಯದಲ್ಲಿಡುವುದು ನರಕದಲ್ಲೀ
ದುಡಿಯದಿರು ವ್ಯರ್ಥ ನಿನ್ನ ಒಡಲಿಗೆ ಘನವಸ್ತ
ಒಡಿವೆ ಘಳಿಸೆನೆಂಬ ಸಡಗರದಲಿ
ಜಡರಿಗೆ ಬೇಸರಿಕೆ ಕೊಡುತಲಿ ಅವರಿಂದ
ನುಡಿಸಿಕೊಂಡು ಕ್ಲೇಶಬಡುವುದೇನೊ
ಕೊಡುವ ಕಾಸಿಗೆ ಪೋಗಿ ತುಡುಗತನ ಮಾಡಲು
ಕೊಡ ಮೀಸಲ ಪಾಲು ನಾಯಿ ಬಂದು
ಕಂಡಂತೆ ಯಾಗುವುದು ಕಡು ನಿರ್ಭಾಗ್ಯನೆ
ಪೊಡವಿಸುರ ಜನುಮವು ಬಿಡದೆ ಬಂದಿರಲಾಗಿ
ಕೆಡಿಸಿಕೊಂಡು ಪಾದದೆಡೆಯಾಗವೆ
ಅಡಿಗಡಿಗೆ ವಿಜಯ ವಿಠ್ಠಲನ ನೆನೆದಡೆ ಭಂಗ
ಬಡದ ಪದವಿ ನಿನ್ನ ಪಡವಣಿಗೆ ಲೇಸೊ ೧
ಮಟ್ಟತಾಳ
ಅನಂತ ಜನುಮದಲ್ಲಿ ಅನಂತ ಜೀವಿಗಳ
ಯೋನಿ ಯೋನಿಗಳಲ್ಲಿ ಹೀನಾಯದಲ್ಲಿದ್ದು
ಏನು ಕಾಣದೆ ಬಳಲಿ ನೀನಿದ್ದುದರಿಂದ
ಜ್ಞಾನ ಒಂದಾದರೂ ನೀನರಿಯಲಿಲ್ಲ
ಅನಂತ ಗುಣಪೂರ್ಣ ವಿಜಯ ವಿಠ್ಠಲನ್ನ
ಧ್ಯಾನಕ್ಕೆ ದೂರವಾಗಿ ಮಾನವಾಧಮನಾದೆ ೨
ತ್ರಿವಿಡಿತಾಳ
ಅವಕುಲದ ಪುಣ್ಯವೊ ಆವ ಸುಕೃತ ಫಲವೊ
ಆವಜನ್ಮದಲಿ ಮಾಡಿದ ಸಿದ್ಧಸಾಧನವೊ
ಆವಧರ್ಮದಲಿ ಬಂದ ಜನನವೆ ಭೂ
ದೇವ ಗರ್ಭದಲ್ಲಿ ನೀನವತರಿಸಿ
ಕೋವಿದನಾಗಿ ಶ್ರೀ ಹರಿಯ ನಂಬದೆ ಬರಿದೆ
ಧಾವತಿಯನು ಮಾಡಿ ನೋವನೊಂದೂ
ಆವಕಡಿಗೆ ಪೊಂದದಲೆ ವ್ಯರ್ಥ ನಮ್ಮಯ್ಯಾ
ಶ್ರೀ ವಿಜಯ ವಿಠ್ಠಲನ್ನ ಭಾವದಲಿ ಕಾಣೀ ೩
ಅಟ್ಟತಾಳ
ಮಡದಿ ಮಕ್ಕಳು ನಿನ್ನ ಎಡಬಲದವರಿಗೆ
ಉಡುವ ವಸ್ತ್ರವಿಲ್ಲವೆಂದೊಡೆಯಲ್ಲಿ ಕಾಣುತ್ತ
ಕಡುನೊಂದು ಪೋಗಿ ಅಂಗಡಿ ಎಲ್ಲ ತಿರುಗಿ
ತಡಿಯದೆ ತಂದಿಪ್ಪೆ ಬಿಡದೆ ನಿನ್ನನು ಸಾಕುವ
ಒಡಿಯ ರಂಗಯ್ಯಗೆ ಬಿಡಿವಸ್ತ್ರ ಮಾಡೆನಲು
ಮಿಡಕುತ್ತ ಧರಣಿಯ ಪಿಡಿದು ಬೇಡಾಗುವೆ
ಕಡಲಶಯನ ನಮ್ಮ ವಿಜಯ ವಿಠ್ಠಲರೇಯ
ಕೊಡನೆಂದು ದೂರಲು ಒಡನೆ ಬಪ್ಪದೇನೊ ೪
ಆದಿತಾಳ
ಮಾಯಾವನ್ನೆ ತೊರಿಯಬೇಕು
ಮಾಯವನ್ನೆ ಬಿಡಲಿಬೇಕು
ಮಾಯಾಶಕ್ತಿ ಬಂಧದಲ್ಲಿ
ನೋಯದಲೆ ಇರಲಿಬೇಕು
ಮಾಯಾಶಕ್ತಿ ಬಂಧನವು
ಶ್ರೀಯರಸನಾಧೀನಾ
ನ್ಯಾಯದಲ್ಲಿ ಅರ್ಚಿಸಲು
ಪಾಯದಲ್ಲಿ ಹರಿಯಕಂಡು
ಮಾಯವನ್ನು ದಾಟುವುದೂ
ದಾಯವನ್ನು ಬಯಸದಲೆ
ಮಾಯಾಧರ ವಿಜಯ ವಿಠ್ಠಲ
ರಾಯನಲ್ಲಿ ಮನವಿಟ್ಟು
ವಾಯುವುಳ್ಳಾಗಲಿ ನಿನ್ನ
ಆಯು ಸಾರ್ಥಕವೆನಿಸೊ ೫
ಜತೆ
ಈ ದೇಹದಲಿ ಜ್ಞಾನ ಈ ದೇಹದಲ್ಲಿ ಮಾನ
ಈ ದೇಹದಲಿ ನಮ್ಮ ವಿಜಯ ವಿಠ್ಠಲನ ಕಾಣೊ ೬

ಗೋವಳೇಶ ಎಂದೇ ಪ್ರಸಿದ್ದನಾದ

೧೩೮
ಧ್ರುವತಾಳ
ಬಿನ್ನಪ ಲಾಲಿಸಯ್ಯಾ ಭಕುತ ವತ್ಸಲದೇವ
ನಿನ್ನ ಸುರತರು ಪಾವನ್ನ ನೆಳಲು
ಚೆನ್ನಾಗಿ ನಂಬಿದವನೋ ಚನ್ನಿಗ ಗೋವಳೇಶ
ಅನ್ನಾಥ ಬಂಧುವೆಂಬೊ ಘನ್ನದೆಂತೋ ಘನ್ನ ನಿನ್ನದು
ಗಣ್ಯವಿಲ್ಲದೆ ತ್ರಿಭುವನ್ನದೊಳು ತುಂಬಿದೆ
ಎನ್ನ ಪ್ರಾಣದೊಡಿಯಾ ಪನ್ನಗಶಯ್ಯ
ಅನ್ಯಾಯವಾಗಗೊಡದೆ ಮನ್ನಿಸಿ ನಿನ್ನ ಅಮೃ
ತಾನ್ನ ಇತ್ತ ಕೈಯಿಂದ ಅಭಯಾಕೊಟ್ಟು
ಬೆನ್ನು ಕಾಯಲಿಬೇಕು ಬೀಸಿ ಬಿಸಾಟದಲೆ
ಅನ್ನಂತ ಕರ್ಮದಾಧಾರ ಧೀರ
ಹುಣ್ಣಿಗೆ ಕ್ರಿಮಿ ಹತ್ತಿದಂತೆ ಅವನ ರೋಗ
ಬನ್ನಾ ಬಡಿಸುತಿದೆ ಬಲು ಬಗೆಯಲ್ಲಿ
ಮುನ್ನೆ ಆಯುತಾ ಕರುಣಾರಸ ಪೂರ್ಣಭ್ಯಾಂ ಲೋ-
ಚನ್ನ ದಿಂದಲಿ ನೋಡು ಭವವಿದೂರ
ನಿನ್ನ ನಾಮ ನೆನೆಸಲು ಘನ್ನ ರೋಗಗಳೆಲ್ಲ
ಛಿನ್ನವಾಗಿ ಪೋಗೋವು ಮಹಶಕ್ತನೆ
ಬೆಣ್ಣೆಯೊಳಗಿನ ಕೂದಲು ತೆಗೆದಂತೆ
ಸಣ್ಣವನ ಕ್ಲೇಶ ಕಡಿಗೆ ಮಾಡು
ಅನ್ನುಮಾನ ಸಲ್ಲ ಅಸಾಧ್ಯವೆನ್ನದೆ ಪ್ರ
ಸನ್ನ ವದನನಾಗು ಸಮ್ಮಂಧಿಗಾ
ಅನ್ಯರ ಸೇವಿಸುವೆನೆ ತಿಳಿದ ಮಾತಿಗೆ ಸಂ-
ಪನ್ನ ಮೂರುತಿ ಪ್ರಪನ್ನ ಪಾಲಾ
ಚಿನ್ಮಯವಿಗ್ರಹ ವಿಜಯ ವಿಠ್ಠಲರೇಯ
ಅನ್ನಾ ಕೊಡುವಲ್ಲಿ ಕಡಿಮೆ ನಿನ್ನಾಗುಂಟೆ ೧
ಮಟ್ಟತಾಳ
ಪರದೈವವೆ ನೀನೆ ಭುವನ ಜೀವನ ಪರಮ
ಗುರುವಾದರೆ ಎನ್ನ ನುಡಿಗಳು ನಿಲಲೆಂದು
ಶರಣನ ಗೋಸುಗ ಮುಂಡಿಗೆ ಹಾಕಿದರು
ಹರಿಯೆ ಕೇಳುವುದೆನ್ನ ಮನಸಿನ ಹಾರ್ದವ
ದುರುಳ ಜನಕೆ ಬಲು ವಿಶ್ವಾಸವ ತೋರಿ
ಸರ್ವೋತ್ತಮವೆಂಬೊ ಬಿರಿದು ಧರೆಯೊಳಗೆ
ಹಿರಿದಾಗಿ ಪೊಗಳಿ ಹಿಗ್ಗುವ ಬಗೆಯಿಂದ
ಕರಣ ಶುದ್ದಿಯಲಿ ಪೇಳಿದೆನಲ್ಲದೆ
ಹರಿದೈವವಲ್ಲ ಸೂತ್ರನಾಮಕ ವಾಯು
ಗುರುವಲ್ಲವೆಂದು ದೂರಿದವನಿವನಲ್ಲ
ದುರಿತ ಕಾಡುತಿರೆ ಸಲಿಗೆಯಿಂದಲಿ ಬಂದು
ಎರಗಿದ ಕಾಲವನ್ನು ನೋಡಿ ಸ್ತುತಿಸಿದೆನೋ
ಮರಣರಹಿತ ನಮ್ಮ ವಿಜಯ ವಿಠ್ಠಲರೇಯ
ಕಿರಿಯನ ಭಾರ ಪೂರ್ಣವಾಗಿ ವಹಿಸು ೨
ತ್ರಿವಿಡಿತಾಳ
ಇವನಿಂದ ಎನಗೇನು ಉದ್ದಾರವಾಗುವ
ಹವಣು ಉಂಟೆಂದು ನಿನ್ನ ಪಾದಕ್ಕೆ
ವಿವರಿಸಲಿಲ್ಲಯ್ಯಾ ಮತ್ತೊಂದು ಪರಿವುಂಟು
ತವಕದಿಂದಲಿ ಕೇಳು ಕರುಣದಿಂದ
ಅವನಿಯೊಳಗೆ ಮಧ್ವಮತದಲ್ಲಿ ಬಂದು ಉ-
ದ್ಭವನಾದ ಕಾರಣ ಬಹಳ ಕಾಲ
ತವಪಾದಾರ್ಚನೆ ಸೇವೆ ಸ್ಮರಣೆ ಕೀರ್ತನೆ ಮಹ
ಶ್ರವಣಾದಿಗಳು ಮಾಡಿಕೊಂಡ ಅವನು
ದಿವಸ ಸಾರ್ಥಕ ಮಾಡಿಕೊಂಡದರಿಂದಲಿ
ಲವಪುಣ್ಯವಾದರೂ ಬರುವುದಯ್ಯಾ
ವಿವಿಧವಾದರೆ ಲೇಸು ಇಲ್ಲದಿದ್ದರೆ ದೊಡ್ಡ
ಕವಿಗಳ ಮಹಿಮೆಯಾದಿನದೊಳೊಮ್ಮೆ
ಅವನ ಶ್ರವಣಕ್ಕೆ ಬಿದ್ದ ಕಾರಣದಿಂದ
ಪವಿತುರನಾಗುವ ಭವ ಪೊಗಾಡಿ
ಅವನಿಮ್ಯಾಲೆ ಬದುಕಿ ಈ ಪರಿ ಸಾಧನ
ಅವಗುಣನಾದರು ಮಾಡಿಕೊಳಲಿ
ಜವನದೂತರನೊದೆವ ವಿಜಯ ವಿಠ್ಠಲರೇಯ
ಜವಗೆಡಿಸದಿರು ಜತನವ ಮಾಡಯ್ಯ ೩
ಅಟ್ಟತಾಳ
ಲೇಸುಕೊಡು ಸರ್ವ ಔಷಧಿಪತಿಯೆ
ದೇಶದೊಳಗೆ ನಿನ್ನ ದಾಸರು ಕೊಟ್ಟ
ಭಾಷೆ ತಪ್ಪದೆಂದು ಸೂಸುತಿದೆ ಮಾತು
ಕೇಶವ ನೀನಿತ್ತ ಭಾಷೆ ತಪ್ಪುವುದೇನೊ
ವಾಸುದೇವ ಕೃಷ್ಣ ವಿಜಯ ವಿಠ್ಠಲರೇಯ
ನೀ ಸಲಹದಿರೆ ಪ್ರತಿದಾತರ ಕಾಣೆ ೪
ಆದಿತಾಳ
ಪ್ರತಿಕೂಲವುಂಟೆ ನಿನ್ನ ಕರುಣಕಟಾಕ್ಷಕ್ಕೆ
ಗತಿ ನೀನೆ ಗತಿ ನೀನೆ ದೇಹಾನುಬಂಧಿಗಳಿಗೆ
ಮೃತವಾದ ಗುರುಸುತನ ಹಿತವಾಗಿ ತಂದು ಇತ್ತೆ
ಖತಿಗೊಳಿಸುವ ರೋಗ ಕಳೆವದಾಶ್ಚರ್ಯವಲ್ಲ
ಸಥೆಯಿಂದಲಿ ಬಿನ್ನೈಸಿದೆ ಯಾತಕ್ಕೆ ಆಲಸ್ಯ
ಲತೆ ಪಲ್ಲೈಸುವ ಬಗೆ ಮಾಡೊ ಪ್ರೀತಿಯಲಿ
ಪತಿತಪಾವನ ರಂಗ ವಿಜಯ ವಿಠ್ಠಲರೇಯ
ನೃತ ಮಾಡು ವೇಗ ಈ ಕೃತಿಯ ಸಿದ್ಧನೆನಿಸಿ ೫
ಜತೆ
ಬಲವಂತನ ಬಳಿಯಲಿದ್ದ ಮಾನವರ
ಕುಲಕೆ ಬಳಲಿಕೆ ಇಲ್ಲ ವಿಜಯ ವಿಠ್ಠಲರೇಯ ೬

ಶ್ರೀಕೃಷ್ಣನು ಗೋಪಾಲಕರೊಡನೆ ಹಾಗೂ

೧೩೯
ಧ್ರುವತಾಳ
ಬೆಳಗಪ್ಪಾ ಝಾವದಲಿ ಮಲಗಿ ಮಲಗದಂತೆ
ಪೊಳಲು ಪೊರಮಟ್ಟು ಪೋಗನ್ಯಪೋರರಾ
ಬಳಗವ ಒಡಗೊಂಡು ಬಳಿ ವಿಡಿದು ಉಟ್ಟ
ತಳಲ್ಲರಿ ಪೊಂಬಟ್ಟೆ ಧಟ್ಟಿ ಬಿಗಿದು
ಗೆಳೆಯರ ಕೂಡಿ ಕೂಗದೆ ಮೆಲ್ಲಮೆಲ್ಲನೆ
ಝಳಿವೆಂದು ಹೆಜ್ಜೆಯ ಇಡದೆ ಸಾಗುತ್ತಾ
ಕಳವು ಮಾಡುವುದಕ್ಕೆ ಕದವ ನೂಕಿ ಗೋಪ
ಬಾಲಿಯರು ಮಲಗಿರೆ ಕುಚವ ತಟ್ಟೀ
ಕಳಲುಮಜ್ಜಿಗೆ ಹಾಲುಮೊಸರು ಬೆಣ್ಣೆ ತುಪ್ಪ
ನೆಲವಿಗೆ ಹಾಕಿದ ಬಲಿಯ ಹರಿದೊ
ನೆಳಲು ಬೀಳದಂತೆ ಸುಳಿ ಸುಳಿದಾಡಿ ಕೈ
ತಳದಿಂದ ಸುರಿದು ಎಲ್ಲವರಿಗಿತ್ತು
ಕೆಲವು ಚಲ್ಲಿ ಕೆಲವು ಹಾರಿಸಿ ಕೆಲವು ಓ
ಕಳಿಯಾಡಿ ಕೆಲವು ಉಳಿಹಿ ಉಗಳೀ
ಒಳಮೂಲೇ ಹೊರಾಂಗಣ ಏಕಾಕಾರವಾಗಿ
ಕಲೆಸಿದ ಕೆಸರಂತೆ ಒಪ್ಪುತಿರೇ
ತುಳಿದು ಇಂತು ಗಲಭೆ ಮಾಡಲು ಗೊಲ್ಲ
ಲಲನೇರು ಎಚ್ಚತ್ತು ಕಳವಳಿಸೇ
ಮಲದೂರ ವಿಜಯ ವಿಠ್ಠಲರೇಯನ ಲೀಲೆ
ಹೊಲಬುಗೊಂಡವನಾರು ಸುರರು ತೊಳಲುತಿರೆ ೧
ಮಟ್ಟತಾಳ
ಬೆಳಕು ಮರೆಯಲ್ಲಿಟ್ಟು ಕಿಲಕಿಲನೆ ಗೋ
ಕುಲನಾಥ ನಗುತ ಚಲವಗಂಗಳ ಹೆಂ
ಗಳಿಯರ ನೋಡಿ ಚಪ್ಪಾಳಿಯನ್ನೆ ಹೊಯ್ದು
ಹಲಬರ ಮೇಲೆ ತೊಂಬಲ ರಸವನೇ ಉಗುಳಿ
ಹಲಬರ ವಸನಗಳ ಸೆಳದು ಬೀದಿಗೆ ಬಿಸುಟು
ನಳಿ ತೋಳಿಲಿ ಅಪ್ಪಿ ಕಲೆಗಳ ಸಂತೈಸೀ
ಕಲ ಕಲವೆಬ್ಬಿಸಿ ಬಾಗಿಲ ಪೊರಟ ಚೋರ
ಕಲಿಭಂಜನ ನಮ್ಮ ವಿಜಯ ವಿಠ್ಠಲರೇಯಾ
ಕೆಲದಾಡಿದನು ಗೋವಳೆಯರ ಕೂಡ ೨
ತ್ರಿವಿಡಿ ತಾಳ
ಗುಲಗಂಜಿ ಗುಪ್ಪೆಂದೆ ಬಿಲ್ಲೆ ಹರಳುಬಿಲ್ಲು
ಜಿಲಿಬಿಲ್ಲಿ ಜಿಂಕೆ ಭೋಗರಿ ಚಂಡು ಚಕ್ರಾ
ಸುಳಿದಾಟ ಚಿಣಿಕೋಲು ಕುಣಿಗಾಳು ತುರಗಾಟ
ಶಳೆಗೋಲು ಜತೆಲಗ್ಗೆ ಕೊಂಬು ತುತ್ತೂರಿ ನಾದಾ
ಮಳಲುಕುಪ್ಪೆ ಗುಬ್ಬಿಮನೆ ಕಣ್ಣು ಮುಚ್ಚಣಿಕೆ
ಬೆಳದಿಂಗಳ ಕುಪ್ಪೆ ಉಯ್ಯಾಲೆ ಜೋ ಜೋ
ಅಳವಾಳ ಗೊಟ್ಟಿಗೆ ಅಟ್ಟಿಗೆ ಮುಟ್ಟಿಗೆ ಚ
ಕ್ಕಳ ಗುಕ್ಕಳ ಗೋಲಿ ತೇವು ಅಪ್ಪಚ್ಚಿಯು
ತಲೆ ಡಿಕ್ಕಿ ಆನೆ ಏಕಾಂತ ಒಗೆವ ಕಲ್ಲು
ಹುಲಿಕಟ್ಟು ಹುಡಗಾಟ ಗೊಟ್ಟಗುಣಿ ಹರಿಕಳ್ಳ
ಬೆಳಸುರಾಸಿ ಅರಸು ಪ್ರಧಾನಿ ಪರಿವಾರ
ಫಲ ಸರಕು ಮಾರುವ ಬೀದಿ ಅಂಗಡಿ ಸಾಲು
ಹೊಲ ಮರಿಯದ ಮಾತುಗಳು ಮುನಸು ನಾನಾ
ಮಲಗಿ ಏಳುವ ಲೀಲೆ ಗಂಡಹೆಂಡಿರ ನೀತಿ
ಬಲುಪರಿ ಒಂದೊಂದು ಬಾಲಾಟದಲಿ ನಲಿದು
ಒಲುಮೆಯಿಂದಲಿ ನೋಡಬಂದ ಯೌವನ ಸ್ತ್ರೀಯರ
ನಿಲಿಯ ಬಿಡಿಸಿ ಭಂಡುಭೂತ ಮಾಡೀ
ಬಳಿಯ ಇಡುವೆನೆಂದು ಕೈಪಿಡಿದು ಹಿಸಿಕೀ
ಮೊಲೆಗೆ ಕರಚಾಚುವ ಮುಖ ತಗ್ಗಿಸೀ
ಎಲೋ ಕೃಷ್ಣ ಎಂದರೆ ಬೆದರಿ ಓಡಿಪೋಗಿ
ಪಲ್ಲುದೆರೆದು ಅಣಿಕಿಸುವ ಅಟ್ಲಾಡಿಸೀ
ತಲುವರಿತನದಿಂದ ಕ್ರೀಡೆಯಾಡುತಲಿರೇ
ಬಲವೈರಿ ಸುತರೆಲ್ಲ ಅಹೋ ಎನುತಾ
ತಲೆದೂಗಿ ತಮ್ಮಿಂದ ಬಣ್ಣಿಸಲರಿದೆಂದು
ಪುಲಿದೊಗಲಾ ಬ್ರಹ್ಮನು ಬೆಸಸಿದರು
ನೆಲೆಗಾಣೆವು ಎಂದು ಅವರು ಮೌನವಾಗೆ
ಜಲಜಲೋಚನೆ ಲಕುಮಿ ಹಸ್ತ ಮುಗಿಯೇ
ಕುಲದೈವ ವಿಜಯ ವಿಠ್ಠಲರೇಯಾ ನಂದಗೋ
ಕುಲದಲ್ಲಿ ಜನಿಸಿ ಗೋಪಿಯ ಮನೆಯಲ್ಲ್ಯಾಡಿದಾ೩
ಅಟ್ಟತಾಳ
ಚಿಕ್ಕದಲ್ಲಕ್ಕಿದ ಬುತ್ತಿ ಪೆಗಲಿಲ್ಲ
ಪಕ್ಕೆಯೊಳಗೆ ಕೋಲು ಕರಗದಲ್ಲಿ ತಳಿಹಗ್ಗಾ
ಚಿಕ್ಕ ಗೋಮಕ್ಕಳ ಸಂಗಡ ತುರುವಿಂಡು
ಅಕ್ಕೊ ಇಕ್ಕೋ ಎಂದು ತೋರುತ ಪೊರಡಿಸಿ
ಅಕ್ಕರದಿಂದ ಸಂಗವ ಕಲೆವ ಸಮಯಕ್ಕೆ
ಬುಕ್ಕುತ ಮುಕ್ಕುತ ಉಡಿಯ ಗುಗ್ಗರಿ ಹೆಜ್ಜೆ
ಇಕ್ಕುತ ಸಾಗಲು ಭೂಮಿ ನಮೋ ಎನ್ನ
ಪಕ್ಕೆಯ ಗರಿ ನವಿಲ ಪಿಂಚಾಕುಂಚಿಗೆ
ಸಿಕ್ಕಿಸಿದಾ ಎಲೆಬಳ್ಳಿ ಕುಸುಮ ನಾನಾಜಾತಿ
ಚೊಕ್ಕಾಟ ಗುಲಗುಂಜಿ ದಂಡೆ ಬರಹ ಮಣ್ಣಾ
ಚುಕ್ಕಿ ದೇಹದಲ್ಲಿ ಎಳೆದುಳಸಿ ದಾಮಾ
ಚಕ್ಕಂದವಾಡುತ್ತ ಗೋಪಾಲರ ಮಧ್ಯ
ತಕ್ಕಥೈ ಥೈ ಎಂದು ಕುಣಿದಾಡಿ ಹಾರಾಡಿ
ಕಕ್ಕನ ಗುಂಪಿಲೀ ವಿಮಾನವೇರಿ ದೇ
ವಕ್ಕಳು ಈ ಲೀಲೆ ಒಖ್ಖಣಿಸುತಿರೇ
ನಕ್ಕು ನಕ್ಕು ತಮ್ಮೊಳು ತಾವೆ ತಲೆದೂಗಿ
ಅಕ್ಕಟ ಹೆದ್ದೈವ ಹುಡಗಾಟನೆಸಗಿದೆ
ತಕ್ಕದು ನೋಡೆಂದು ಮುಕ್ತಿ ಪ್ರದಾತನೋ
ಪೊಕ್ಕಳ ಹೂವಿನ ವಿಜಯ ವಿಠ್ಠಲ ಕೃಷ್ಣ
ಸಿಕ್ಕಿದ ಬಗೆ ನೋಡು ಧನ್ಯ ಗೋಕುಲ ಗೋಪಿ೪
ಆದಿತಾಳ
ಕೊಳಲ ಗೋಪಾಲ ನಸುನಗುತ ಕೈ
ಕೊಳಲು ಒಂದೇ ಸ್ವರ ಗೈಯೆ
ಪೊಳಲು ಪೊರಟು ಗೋಪೇರು
ಬಳಲುತ ವಿರಹ ತಾಪದೀ
ಕಳಲು ತ್ಸವದಿ ಕದಡುತ್ತ
ತಳಲ ತಾಪಕೆ ಬಾಡಿದಂತೇ
ಮಳಲು ತುಳಿಯುತ್ತ ತೊಳಲುತ್ತ
ಘಳಿಲು ಶಬ್ದದಿ ಬರುತಿರೆ
ನೆಳಲು ನೆಮಿ ಕೃಷ್ಟಯ್ಯಾ
ತಿಳಿಲು ಮಾತಿಲಿ ಬಳಿಗರೆದು
ಹೆಳಲು ಪಿಡಿದು ತಕ್ಕೈಸಿ
ಬಳಲುತಾಪಾ ತೀರಿಸಿ
ಅಳಿಕುಂತಳಗೋವ ವಿಜಯ ವಿಠ್ಠಲ
ಪೊಳಲಿಗೆ ಬಂದ ರಜನಿಮುಖ ಕಾಲಾ ೫
ಜತೆ
ಚಿಕ್ಕಮಕ್ಕಳ ಕೂಡ ನಲಿದಾಡಿದ ಸ್ವಾಮಿ
ಲಕ್ಕುಮಿರಮಣಾ ವಿಜಯ ವಿಠ್ಠಲ ಕೃಷ್ಣ೬

ರು ತಮ್ಮ ಎದುರು

೭೧
ಧ್ರುವತಾಳ
ಬೇಡುವೆನು ನಿನ್ನನಿದನೇ ಭಕುತಿಲಿ ತಲೆವಾಗಿ
ಮಾಡು ಕಾರುಣ್ಯ ಮನ್ಮಥ ಲಾವಣ್ಯ
ನಾಡೊಳಗಿದ್ದ ನಾನಾ ಭಾಗ್ಯವನ್ನೆ ಬೇಡಿ
ಕಾಡುವುದಿಲ್ಲ ಕರುಣಿಗಳರಸ
ನೋಡು ಇನಿತು ಎನ್ನ ಬಿನ್ನಹ ಕೇಳು ಆ
ರೂಢ ಜನ್ಮವನು ಕಳಿಯದಿರು
ಗೂಡಿನೊಳಗೆ ಇದ್ದರಿದ್ದರೆ ಉಪಕಾರವಿದೆ
ಆಡಲೇನಯ್ಯ ನಿನಗೆ ತಿಳಿಯದಿಪ್ಪದೊ
ಮಾಡು ಕಾರುಣ್ಯವ ಮನ್ಮಥ ಲಾವಣ್ಯ
ಹಾಡಿ ಪಾಡಿದರೇನು ಆವಾವ ಬಗೆ ಕುಣಿ
ದಾಡಿದರೇನಯ್ಯ ಹಗಲಿರುಳು
ನಾಡಿ ನಿರ್ಮಳ ಕಾಣೆ ನಿನ್ನ ಮಾಯಾ ಬಲು
ಗೂಢವಾಗಿದೆ ದೇವ ದೇವತಿಗಳಿಗೆ
ಈಡು ನಿನಗೆ ಇಲ್ಲ ಎನ್ನನು ಉದ್ಧಾರ
ಮಾಡುವ ಮನುಜರಿಲ್ಲ ಫಲರಹಿತ
ಓಡುವುದು ಮನಸು ಕಂಡಲ್ಲಿ ಹಂಬಲಿಸಿ
ನೀಡುವ ದಾತಾರ ತಿಳಕೊಳ್ಳದೆ
ಬಾಡಿ ನೆನೆಸುವರ ಪ್ರಾಣ ವಿಜಯ ವಿಠ್ಠಲ ಎನ್ನ
ಬೇಡದಂತೆ ಮಾಡು ಅಶುಭ ಜೀವರ ಬಳಿಯ ೧
ಅಟ್ಟತಾಳ
ನಿನ್ನನೆ ಬೇಡುವೆ ನಿನ್ನನೆ ಕಾಡುವೆನು
ನಿನ್ನನೆ ಹೋರುವೇನು ನಿನ್ನನೆ ಸಾರುವೆನು
ನಿನ್ನನೆ ತುತಿಸುವೆನು ನಿನ್ನನೆ ನುತಿಸುವೆನೊ
ನಿನ್ನನೆ ಕಾಂಬೇನೊ ನಿನ್ನನೊ ಅಂಬೆನೊ
ನಿನ್ನವರು ಎನಗೆ ಘನ್ನ ತೋರಿದರಯ್ಯ
ಇನ್ನು ಮರೆದುದುಂಟೆ ಇನ್ನು ಮರೆದುದುಂಟೆ
ಎನ್ನ ಜನ್ಮ ಬರಿದೆ ಅನ್ನಂತ ಕಾಲಕ್ಕೆ
ನಿನ್ನನೆ ಮೊರೆ ಹೊಕ್ಕೆ ಅನ್ಯರು ಯಾತಕ್ಕೆ
ಘನ್ನಸಿರಿ ರಮಣ ವಿಜಯ ವಿಠ್ಠಲರೇಯ
ನಿನ್ನ ಪಾದವೆಗತಿ ಜನ್ಮ ಜನ್ಮಾಂತರಕ್ಕೆ ೨
ತ್ರಿವಿಡಿ ತಾಳ
ಶ್ರುತಿ ಶಾಸ್ತ್ರ ಪುರಾಣ ಓದಿಕೊಂಡವನಲ್ಲ
ಕ್ರತು ಮೊದಲಾಗಿದ್ದ ಯಾಗ ಮಾಡಲಿಲ್ಲ
ಕ್ಷಿತಿಯೊಳಗಿಪ್ಪ ಯಾತ್ರಿಗಳ ಚರಿಸಲಿಲ್ಲ
ಸತತ ಗಂಗಾನದಿಯ ಮಜ್ಜನವೇ ಇಲ್ಲ
ವ್ರತ ದಾನ ಧರ್ಮಂಗಳು ಒಂದಾದರು ಇಲ್ಲ
ಶ್ರುತಿ ಶ್ರವಣನಾಗಿ ಸತ್ಕಥೆಯ ತಿಳಿಯಲಿಲ್ಲ
ಪ್ರತಿ ದಿನದಲಿ ನಿನ್ನ ಆರಾಧನೆ ಇಲ್ಲ
ಮತಿವಂತರ ಸೇವೆ ಬಿಡದೆ ಮಾಡಲಿಲ್ಲ
ಗತ ಪುಣ್ಯನಾಗಿ ಕಂಡ ಕಂಡ ವಿಷಯಕ್ಕೆ
ಅತಿಶಯವಾಗಿ ಹಂಬಲಿಸುವೆ ದಮ್ಮಯ್ಯ
ಗತಿ ತಪ್ಪೆ ಚರಿಸುವ ಮನುಜನಾನಾದಡೆ
ಚ್ಯುತದೂರ ನೀನೆ ದಯಾನಿಧಿಯಲ್ಲವೆ
ಸುತ ಧಡ್ಡನಾಗಿದ್ದು ಉಪನಯನಕೆ ಮೀರೆ
ಪಿತಗೆ ಚಿಂತೆಯಲ್ಲದೆ ಅನ್ಯರಿಗುಂಟೆ
ಪತಿತ ನಾನಾದರು ಎನ್ನ ಚಿಂತೆ ನಿನಗೆ
ಶತ ಸಾಸಿರಕ್ಕು ಸಿಧ್ಧವಾಗಿದೆ
ಇತರಾಲೋಚನೆ ಯಾಕೆ ಪಕ್ವಕಾಲಕೆ ಸಕಲ
ಹಿತವೆ ಮಾಡಿಸಿ ಕೊಡುವೆ ಜ್ಞಾನ ಮಾರ್ಗ
ಖತಿಗೊಳಲ್ಯಾಕೆ ನೀ ನುಡಿದ ಮಾತಿಗೆ ಇನಿತು
ತುತಿಸಿ ಬಿನ್ನಪವನ್ನು ಮಾಡಿದೆನಯ್ಯಾ
ಪತಿತ ಪಾವನ ನಮ್ಮ ವಿಜಯ ವಿಠ್ಠಲ ಎನ್ನ
ಸಿತ ಚಿತ್ತನ್ನ ಮಾಡು ಇದನೆ ಬೇಡಿಕೊಂಬೆ ೩
ಅಟ್ಟತಾಳ
ಕೇಳನೆ ನಾ ನಿನ್ನ ಮಾತು ಪುಶಿಯಾದೆಂದು
ಕೇಳಿದೆ ಕಮಲಾಕ್ಷ ಕರವ ಮುಗಿದು ನಿಂದು
ಹೇಳುವುದೇನು ಹೇರಳವಾಗಿ ಸಮಸ್ತ
ಕಾಲದಿ ಆಭಿಪ್ರಾಯ ಬಲ್ಲವನೆ ನಿತ್ಯ
ಕೇಳುವೆ ನಾನಿಂದು ನಿನ್ನ ಚರಣ ಭಕ್ತಿ
ಮ್ಯಾಲೆ ತರತಮ್ಯ ಜ್ಞಾನ ವಿರಕುತಿ
ಮೇಲು ಸರ್ವದ ಸರ್ವಥಾ ಅನುಸೂಯರಾಗಿ
ಬಾಳುತಲಿಪ್ಪ ವೈಭವ ನೈರ್ಗುಣ್ಯ
ವಾಲಯ ಈಯೋ ಮತ್ತೊಂದು ಮನದಲ್ಲಿ
ಮಾಲಕಾರದಂತೆ ಭುವನ ಮಂಗಳವಾದ
ಶ್ರೀಲೋಲ ನಿನ್ನಂಘ್ರಿನಾಮ ಸ್ಮರಣೆ ಕೊಡು
ನಾಲಿಗೆಯಲಿ ನೀನು ವಾಯುವಾಹನಾಗಿ
ನಾಳೆ ನಾಡದು ಯಿಂದು ಈಗಲಾಗಲೆ ಆವ
ಕಾಲಕ್ಕಾದರು ಸ್ವಾಮಿ ಸ್ವೇಚ್ಛಾನುಸಾರದಿ
ಬೀಳುಗೆಡಹಿ ದೇಹದಿಂದ-ಪೊರಡುವಾಗ
ಏಳಲ ಮಾಡದೆ ದೋಷಗಳೆಣಿಸದೆ
ಪಾಲಿಸು ಬಳಿಯಲ್ಲಿದ್ದವರವರ ದುಃಖ
ಜಾಲವೆಲ್ಲ ಹಾರಿ ಪೋಪಂತೆ ಕೂಗನು
ಖೂಳ ದಾನವ ನಾಶ ವಿಜಯ ವಿಠ್ಠಲ ನಿನ್ನ
ಆಳುತನವೆ ಬಲ್ಲೆ ಬಲು ತುತಿಪುದೇನೊ ೪
ಆದಿತಾಳ
ಗುಣದೇಶ ಕಾಲಕರ್ಮ ವರ್ಣಾಶ್ರಮ ವಯಸು
ದಿನಪ್ರತಿ ದಿನದಲ್ಲಿ ಏಸು ಬಗೆಯಿದ್ದರೇನು
ಎನಗೊಂದು ಪ್ರಯೋಜನವಲ್ಲವೊ ಸಾಧನ
ಇನಿತರಿಂದಾಗೋದೆ ಬಹು ಜನ್ಮ ತೆತ್ತರೇನು
ಅನಿಮಿತ್ತ ಬಂಧು ನೀನೆ ಪರಮ ಮುಖ್ಯ ಸ್ವಾತಂತ್ರ
ಅನುಕೂಲವಿರಲಾಗಿ ಅನ್ಯಥ ನಿಯಮಗಳೆ
ಪ್ರಣತಾರ್ಥಿಹರಮೂರ್ತಿ ನರಕಂಠೀರವ ನಾರಾ
ಯಣ ವಿಶ್ವರೂಪ ಕೃಷ್ಣ ಕೃಷ್ಣನೆಂದೆಂಬ ಸಂಕೀ
ರ್ತನೆ ಮಾಡುವ ಬುದ್ಧಿ ಪ್ರೇರಿಸು ಆಗಲಾಗ
ಮನವಾಕ್ಕುತನು ನಿನ್ನಾಧೀನವೊ
ಗಣನೆಯಿಂದಲಿ ಎಣಿಸಿ ಪೇಳುವುದೇನಯ್ಯಾ
ಪ್ರಣವ ಮೂರುತಿ ನಮ್ಮ ವಿಜಯ ವಿಠ್ಠಲರೇಯ
ನಿನಗೆ ನಮಿಸಿ ಇಂಥ ಅಭಯ ಬೇಡಿಕೊಂಬೆ ೫
ಜತೆ
ಚಿತ್ತದೊಲ್ಲಭ ನಮ್ಮ ವಿಜಯ ವಿಠ್ಠಲ ನಿನ್ನ
ಚಿತ್ತಕ್ಕೆ ಬಂದದ್ದು ಮಾಡೋ ನಾ ನಿನ್ನವನು ೬

ರು ಬರೆದಿರುವ ಅತ್ಯಂತ ದೀರ್ಘವಾದ

೯೩
ಧ್ರುವತಾಳ
ಬೊಮ್ಮ ಜನಕ ಪರಮ ಮಂಗಳ ಮೂರ್ತಿ ಪರ
ಬೊಮ್ಮ ಬೊಮ್ಮಾಂಡ ಕರ್ತರಿಪು ಭೈರವ
ರಮ್ಮೆಯರಸ ಸರ್ವ ಜೀವಾಂತರ್ಯಾಮಿ ನಿತ್ಯ
ಮಮ್ಮತ ಪೂರ್ಣ ಅಂತರಾತ್ಮ ರಾಜಾಧಿರಾಜೋ
ತ್ತುಮ್ಮ ತುಂಗ ಮಹಿಮ ವೃದ್ಧಿ ಹ್ರಾಸ ವರ್ಜಿತ
ಸಮ್ಮೋದಾ ಮೋಹ ಭಕ್ತಜನ ವರ್ಗಕೆ
ಅಮ್ಮಿಶ್ರ ಪರಾಕ್ರಮ ಸರ್ವಾವಸ್ಥಾ ಪ್ರೇರಕ
ನಿಮ್ಮಿತ್ತ ಬಂಧು ಭವಾರ್ಣಭವ ತಾರಕಾ
ಸಮ್ಮೋಹ ಕಲ್ಪಿಸಿ ಜಗವ ವಂಚಿಸುವನೂ
ಪಮ್ಮ ಚಿತ್ರ ಚರಿತ ಜ್ಞಾನೈಶ್ವರ್ಯ
ದುಮ್ಮಾನ ದೂರ ದುರ್ಧರಷ ಶೀಲಾಗ್ರಣಿ ಪ
ರಮ್ಮಾತ್ಮ ಸಮಸ್ತಾವಸ್ಥಾಭೇದ
ಅಮ್ಮಿರಿತ ದಾತಾ ಜಾತ ಪ್ರಖ್ಯಾತನೀತಾ
ಅಮ್ಮಿಯ ಸವಿದ ಬಾಲ ಮುದ್ದ ಶೀಲಾ
ಚಮ್ಮತ್ರ‍ಕತಿಯಿಂದ ವುತ್ಪತ್ತಿ ಮೊದಲಾದ
ಸಮ್ಮತಿಳಿಸಿ ಮಾಡುವ ಮಹಾಭಾಗ
ಅಮ್ಮೆಯಿಲ್ಲದೆ ನಾನಾ ಶಕ್ತಾ ವ್ಯಕ್ತ ಕ್ರಿಯಾ
ಒಮ್ಮೊಮ್ಮೆ ನೆಸಗುವ ನಾರಾಯಣ
ಸಮ್ಮತ ನೆನಿಸುವ ಅವರವರ ಸಂಗಡ
ಸಮ್ಮಂಧವಾಗಿದ್ದು ನಿರ್ಲೇಪದಿ
ನಿರ್ಮಿಷ ಮಾತ್ರದೊಳು ಅತ್ಯಣುಣವಾಗಿ ಬಲು
ಬೊಮ್ಮಾಂಡವನ್ನು ಕೊನಿಯ ಉಗರಿನಿಂದ
ಚಿಮ್ಮುವ ಚಿನ್ನಾಂಬರ ಚನ್ನ ಅಚ್ಛಿನ್ನ ದೈವಾ
ಗಮ್ಯ ಗರುಡಗಮನ ಗಂಗಾಜನಕ
ಅಮ್ಮಿತ ಜೀವಿಗಳ ಅಂಶಿ ಅಂಶಾವೇಶ
ಸುಮ್ಮರ್ಪಕವಾಗಿ ನಡೆವ ತೆರದಿ
ಕ್ರಮ್ಮಾನುಸಾರದಿಂದ ಸಂಸಾರಾವಸ್ಥಿ ಮುಕ್ತಿ
ಇಮ್ಮಹಿಯಲ್ಲಿ ಯೋಗ್ಯತಾದಂತೇವೆ
ಸುಮ್ಮತಿಯಿಂದ ಸತ್ಯ ಮುಕ್ತಿಯಲಾವೇಶ ಯಾಕೆ
ಹಮ್ಮು ಸಂಸಾರಾವಸ್ಥೆಯಲ್ಲಿ ವುಂಟು
ಹಿಮ್ಮೆಟ್ಟದಲೆ ನೀಚೋಚ್ಚ ಆವೇಶ ಬೇಕು
ತಮ್ಮ ತಮ್ಮೊಳಗೆ ವೈಷಮ್ಯ ಒದಗೆ ಉ
ತ್ತುಮ್ಮ ಮಧ್ಯಮ ಜನಕೆ ಆವೇಶವಕ್ಕು ಮನಜೋ
ತ್ತುಮ್ಮ ಮಿಕ್ಕಾದ ಇದೇ ಗಂಧರ್ವರಿಗೆ
ಒಮ್ಮಿಗಾದರು ಪ್ರಯೋಜನವಿಲ್ಲ ಅಂಶಗಳಿಲ್ಲವು
ತುಮ್ಮರಾವೇಶ ನೀಚರೊಳು ಸ್ವಭಾವಾ
ದಮ್ಮರಿಗೆ ಬಪ್ಪದು ವರಬಲದಿಂದ ತಾರ
ತಮ್ಯವೆ ಕೇಳುವದು ಒಲಿದು ಸುಜನ
ತಮ್ಮೋ ಯೋಗ್ಯರಾವೇಶಾ ಮುಕ್ತಾರೊಳಗೆ ಉಂಟು
ಹಮ್ಮಿನಿಂದಲಿ ಕರ್ಮ ಮಾಳ್ಪರಯ್ಯ
ಬೊಮ್ಮ ಮಾತುರ ಓರ್ವ ಅಚ್ಚ ಬುದ್ಧಿಯಲಿಪ್ಪ
ನಮ್ಮಿಸಿಕೊಂಬ ಜೀವ ಕೋಟೀಶನು
ಸೌಮ್ಯ ಗುಣಾಂಬುಧಿ ವಿಜಯ ವಿಠ್ಠಲ
ಪುರುಷೋತ್ತಮ ಏಕಮೇವ ಸರ್ವಗುಣಾಧಿಕನು
ಮಟ್ಟತಾಳ
ಹರಿ ಸರಸಿಜ ಸದನೆ ಅವತಾರಾವೇಶ
ಪರಿಪೂರ್ಣವೆನ್ನಿ ಜ್ಞಾನಾದಿಯಲ್ಲಿ
ಶಿರ ನಖ ಮೊದಲಾಗಿ ರೋಮ ರೋಮವೊಳಗೆ
ಪರಿಭೇದಗಳಿಲ್ಲ ಒಂದೊಂದು ಠಾವಿನಲಿ
ಸರುವ ವ್ಯಾಪಾರವಕ್ಕು ಸಂತತ ಗುಣಿಸಿದರು
ಪರಿಮಿತ ಕಾಣಿಸರು ಅಧಿಕಾರಿಗಳೆಣಿಸೆ
ಹರಿಯಿಂದಲಿ ಲಕುಮಿ ಅನಂತಾನಂತ
ಪರಮಾನಂತ ಗುಣಕ್ರೀಯಾನಂದ
ಪರಿ ಪರಿ ಸೌಖ್ಯದಲ್ಲಿ ನೀಚಳೆನಿಸುವಳು
ನಿರುತ ಮುಕ್ತಳು ಮುಕ್ತಾಮುಕ್ತರ ಕೈಯಿಂದ
ಪರಿಚಾರಕತನವು ಕೊಳುತಲಿಪ್ಪಳು ನೋಡಿ
ಎರಡೊಂದು ಗುಣಗಳಿಗೆ ಅಭಿಮಾನಿನಿಯಾಗಿ
ಜರೆಮರಣ ಜನನ ಶೂನ್ಯಳಪ್ರಾಕೃತ
ಶರೀರಳತಿಕಾಂತಿ ವರ ದಕ್ಷಣಯಙ್ಞ ಅಂಭ್ರಣಿ ಹ್ರೀದೇವಿ
ಸಿರಿ ಲಕುಮಿ ಶ್ರೀಧರ ದುರ್ಗ ಮಾಯಾ
ತರುವಾಯ ಜಯಕೃತಿ ಶಾಂತಿ ಜಯಂತಿ
ಧರಣಿಯಿಂದಲಿ ಬಂದ ಜಾನಕಿ ರುಗ್ಮಿಣಿ
ಕರುಣಿ ಸತ್ಯಭಾಮ ವೇದವತಿ ದೇವಿ
ಕರೆಸಿ ಕೊಂಬಳು ಒಂದಾನೇಕ ನಾಮಗಳಿಂದ
ಹರಿ ಅವತಾರಗಳು ಏಸೇಸಾಗುತಿರೆ
ಸಿರಿದೇವಿ ಆತನ್ನ ಅನುಸರಿಸಿಕೊಂಡು
ಧರಿಸುವಳು ರೂಪ ಕಲ್ಪಕಲ್ಪಕೆ ಬಿಡದೆ
ಸಿರಿ ಹರಿ ರೂಪಕ್ಕೆ ವ್ಯಕ್ತಿ ಸ್ಥಾನಭೇದ
ಅರೆಮರೆ ಇಲ್ಲದಲೇ ಅನುಭವ ಏಕವೆನ್ನಿ
ಕರತಳದೊಳಗಿದ್ದ ರೇಖೆಯಂತೆ ಜಗವ
ನಿರಿಕ್ಷಿಸುವಳು ತನ್ನ ಜ್ಞಾನ ದೊಳಗಾನಂತ
ಪರಿಮಿತದೊಳಗೊಂದು ಒಂದು ಪ್ರದೇಶದಲ್ಲಿ
ಹರಗೋಲು ಮಹಾ ಪ್ರಳಯಸಾಗರ ಮಧ್ಯ
ಅರಿದಂತೆ ನೋಡಿ ಪಾಲಿಸುತಿಪ್ಪಳು
ಸರಿಸಿಜ ಭವರುದ್ರ ಇಂದ್ರಾದಿಗಳ ತೀ
ವರದಿಂದಲಿ ಪುಟ್ಟಿಸುವ ಪ್ರಬಲ ದೇವಿ
ಹರಿ ಪರಮಾನುಗ್ರಹ ಲಕುಮಿ ಮೇಲಲ್ಲದಲೆ
ಚರಾಚರದಲಿ ಬಪ್ಪ ಆನಂದಾತಿಶಯವು
ಕರುಣಿಸಿ ಇಪ್ಪ ತಾನೆ ಮುಂದು ಮುಂದು ಗೊಲಿದು
ಬರುವ ಲಾಭಗಳೊಂದೆ ಸಾರಿಗೆಯಲಿತ್ತಂತೆ
ವಿರಿಜಾತ್ಮಕ ಶ್ರೀಭಾಗ ಮಹಾಬ್ಧಿಯಲಿ
ತರು ಜಲ ಮಹಾಂಧಕಾರವಾಗಿಪ್ಪಳು
ಸ್ವರೂಪ ಭೂತದಲಿ ನಾನಾ ಪ್ರಕಾರ ಸುಂ
ದರ ನೀತಿಯಲಿ ಭೂಷಣ ವಸನ ದಿವ್ಯಾ
ಚರಣೆ ಮಾಡುವಳು ಸುದೃಢತರ ಭಕ್ತಿಯಲಿ
ಎರಡೊಂದು ವಿಧದವರ ಯೋಗ್ಯತಾ ಇದ್ದನಿತು
ಚರಿಯ ಮಾಡಿಸುವಳು ಲಿಂಗಾಂತರದಲಿ
ಸರಸ ಮಿಗೆ ನಿತ್ಯವಾದ ವಸ್ತುಗಳಿವು
ಅರುಹುವೆ ಜಡ ಪ್ರಕೃತಿ ನಿಗಮ ದೇಶಕಾಲಾ
ಇರುತಿರೆ ಇವಕೆಲ್ಲ ನಿತ್ಯಾಭಿಮಾನಿನಿ
ಶರಧಿನಂದನೆ ನಿಜವೊ ಸುರ ಅಸು
ರರ ಒಡಿಯ ವಿಜಯ ವಿಠ್ಠಲರೇಯ
ಎರಗಿದವರ ಮನದಿ ನಲಿ ನಲಿದಾಡುವನು ೨
ರೂಪಕ ತಾಳ
ಇಂದಿರಾದೇವಿಗಿಂತಲು ನೋಡೆ
ಒಂದು ಕೋಟಿ ಜ್ಞಾನ ಗುಣದಲಿ ಕಡಿಮೆ ಆ
ನಂದದಲಿ ತಿಳಿ ಅನಂತಾನಂತಧಿಕ
ವೆಂದೆನಿಸುವಳು ಲಕುಮಿದೇವಿ ನಿತ್ಯದಲಿ
ಕುಂದದಲೆ ಪ್ರಕೃತಿ ಮಹಾತತ್ವ ಮೊದಲಾಗಿ
ಒಂದೊಂದು ಬಣ್ಣದಲಿ ಈರ್ವಜನಯಿಪ್ಪರು

ಭಕ್ತರಾದವರಿಗೆ ನಾನಾ ಬಗೆಯ

೧೦೩
ಧ್ರುವತಾಳ
ಭಕುತರಿಗಾಪತ್ತು ಬರಲೀಸಾ ಬರಲೀಸಾ
ಭಕುತರಿಗಪಮೃತ್ಯು ಬರಲೀಸಾ ಬರಲೀಸಾ
ಭಕುತರಿಗೆ ಕ್ಲೇಶ ಬರಲೀಸಾ ಬರಲೀಸಾ
ಭಕುತರಿಗೆ ಭಯ ಬರಲೀಸಾ ಬರಲೀಸಾ
ಭಕುತರಿಗೆ ಪೀಡೆ ಬರಲೀಸಾ ಬರಲೀಸಾ
ಭಕುತರಿಗೆ ಅಧರ್ಮ ಬರಲೀಸಾ ಬರಲೀಸಾ
ಭಕುತರಿಗೆ ದೋಷಾ ಬರಲೀಸಾ ಬರಲೀಸಾ
ಭಕುತರಿಗೆ ಸಮೀಪಾ ದೂರದಿಂದ
ಭಕುತಿ ಪಾಶಕೆ ಶಿಲ್ಕಿ ಬಂದೊದಗುವ ದೇವಾ
ಭಕುತರಿಗೆ ಪಂಚಪ್ರಾಣ ನಾಯಕಾ
ಭಕುತರಪೇಕ್ಷೆಯನ್ನು ಸಲಿಸಿ ಸೋತು ಬಿಡುವಾ
ಭಕುತೇಶ ಮುಕುತೇಶ ಮುಕ್ತಾಮುಕ್ತ ನಿಯಾಮಕ
ಭಕುತರಿಗೊಲಿವುದು ಆವ ಗಂಭೀರತನವೋ
ಭಕುತರ ಆತನಿಗೆ ಏನು ತಂದಿತ್ತರು ಕಾಣೊ
ಭಕುತರನ ಕಾಣದೆ ಇರುತಿಪ್ಪ ವಿಶ್ವರೂಪಾ
ಭಕುತರನ ಪಕ್ಕೆಯೊಳಗಿಟ್ಟು ಸಾಕುವ ಗುಣನಿಧಿ
ಭಕುತರು ಪಾಲಿಪುದು ಆತಗೇನಾನಂದವೊ
ಭಕುತರು ಹೇಳಿದಂತೆ ಕೇಳಿಕೊಂಡು ಇಪ್ಪಾ
ಶಕುತನೆ ನಿಸ್ಸಂಗಾ ಇಂದ್ರಿಯ ಗೋಚರಾ
ಸಕಲೈಶ್ವರ್ಯಾತಗೆ ಪರಿಪೂರ್ಣವಾಗಿರೆ ನಾ
ಟಕವಾಡುವಾ ತನ್ನ ನಿಜಸ್ವಭಾವವೊ
ಭಕುತರನ ಸಲೆ ಬಿಟ್ಟು ಅವರಂತೆ ಆಡುವಾ
ಅಕಳಂಕ ಅಖಂಡ ವ್ಯಾಪ್ತದೀಪ್ತಾ
ಅಖಿಳ ಬೊಮ್ಮಾದ್ಯರು ಅನಂತಾನಂ
ತ ಕಲ್ಪಕೆ ತೊಲಗದೆ ತನ್ನ ಒಂದು ರೋಮದೊಳು ಎ
ಣಿಕೆ ಅನಂತಾನಂತಾಂಶಾ ಮೂಡಲೀಪರಿ ಅ
ಧಿಕವ ಗುಣಿಸಲು ಅಂಥಾದಂಥಾದಂಥಾದೆ
ಉಕುತಿ ನಿಲುವಾ ಪರಿಯಂತ ಯೋಚಿಸಿ ಅ
ದಕೆ ಏಕ ಪ್ರದೇಶದಲ್ಲಿ ಹತ್ತಿಕೊಂಡು ತಮ್ಮ
ಸುಖಸಾಂದ್ರದಿಂದ ನಾನಾ ರೂಪವ ಧರಿಸಿ ಬಾ
ಧಕವಿಲ್ಲದಂತೆ ವಿಸ್ತಾರ ಸಂಚರಿಪರೂ
ಭಕುತರು ಈ ಪರಿ ತನ್ನೊಳಗಿರಲಿಕ್ಕೆ
ಮಕ್ಕಳಾಟಿಕೆಯಂತೆ ಮಾಯಾವ ಹಚ್ಚಿಕೊಂಡು
ಅಕುಟಿಲ ಧೈವವೆ ಅನಾದಿಯಿಂದಲಿ
ಭಕುತರಿಗೆ ಬಂಟನಾಗಿ ಇಪ್ಪುದು ಇದೇನು ಸೋಗು
ಪ್ರಕಟ ಅಪ್ರಕಟ ಆತನ ಮುಕುತಿಗೆ ದೇ
ವಕ್ಕಳೆಲ್ಲ ಎದುರಿಲ್ಲಾ ಎಂದೆಂದಿಗೆ ನೋಡೆ
ಭಕುತರಿಗಾಗಿ ನೀಚ ವೃತ್ತಿ ಕೈಕೊಂಡು
ವಿಕುತಸಖನಾಮನಿಗೆ ಸಮಸ್ತಲೋಕ ಪಾ
ಲಕ ಬಂದು ಮನ್ನಿಸಿ ವಂದನೆ ಕೊಂಡಂತೆ
ಭಕುತ ಜನಕೆ ತಾನೆ ಕೈವಶವೋ
ಭಕುತರೆಲ್ಲಿದ್ದರಲ್ಲೆ ಮಂಗಳಪ್ರದನಾಗಿ
ನಿಖಿಳಕಾಲಕೆ ನಿರ್ದುಃಖಿ ಎನಿಸಿಕೊಂಬ
ಭಕುತರ ಅರಭಾರ ವಹಿಸುವ ಹರಿ ಚನ್ನಾಗಿ
ಭಕುತರ ಭಾಗ್ಯವೆಂತೋ ಅಹಾಹಾ ಹೊ ಹೊ ಹೊ
ಭಕುತರಾಶೇಷವನ್ನು ಕೊಂಬ ವಿಚಿತ್ರ ಪುರುಷಾ
ಭಕುತರ ವಿಶೇಷವೇನಯ್ಯಾ ಲಕುಮಿ ಇರಲು
ಭಕುತರು ತನ್ನ ಉದ್ಧಾರಕರ್ತರೇನೊ
ಭಕುತರು ನಾನಾ ಪರಿ ಅಪರಾಧವೆಸಗೆ ಪಾ
ಪಕೆ ಹಾಕದಲೆ ತನ್ನ ಕೂಡಾಡಿಸುವಾ
ಭಕುತಿಗೆ ಸಾಧ್ಯವಾದಂತೆ ಸರ್ವೋತ್ತಮಾ
ಮಖ ತೀರ್ಥಯಾತ್ರಿ ಕನ್ಯಾಕಾಂಚನ ದಾನಕೊಟ್ಟು
ದಕೆ ಒಲಿಯನು ಕಾಣೋ ಕೇವಲ ರಹಸ್ಯ
ಭಕುತರಿಗೆ ಸ್ವಾಮಿ ಸರ್ವದಾ ಸುಲಭಾ
ವಿಕಳಮಾನವ ಇಂಥ ಅತಿಶಯ ಬಿಟ್ಟು ಲೌ
ಕಿಕವೆಲ್ಲಾ ಬ್ರಹ್ಮಸ್ವರೂಪವೆಂದು ವೈಕಾ
ರಿಕ ಮಾರ್ಗ ಕಾಣದವ ಅವನೆ ಮೊಳೆಸೋಗನೊ
ರಕ್ಕಸ ವೇಷದವ ಬಹು ಜನುಮ ಜನುಮದಾಗೆ
ಕಕುಲಾತಿಯಿಂದ ಪೋಗಿ ಅನುಸರಿಸಿದಿರೆ ಸುಜನಾ
ಭಕುತ ವತ್ಸಲ ನಮ್ಮ ವಿಜಯ ವಿಠ್ಠಲನ ಪಾದ
ಭಕುತಿ ದೊರಿಯದ ತನಕ ಕರ್ಮ ಹಿಂದಾಗದು ೧
ಮಟ್ಟತಾಳ
ಭಕುತರಿಗಾಗಿ ಮಹಾತತ್ವ ಮೊದಲಾದ
ಸಕಲ ತತ್ವಂಗಳು ಪುಟ್ಟಿಸಿದನು ಗಡಾ
ಭಕುತರಿಗಾಗಿ ಚತುರ್ದಶ ಲೋಕವನು
ಅಕಟಕಟಾ ವೇಗ ಮಾಡಿದಾ ನೋಡುಗಡಾ
ಭಕುತರಿಗಾಗಿ ಸಪುತ ಶರಧಿ ಉ
ದಕ ಪೂರಿತವಾಗಿ ಸೃಜಿಸಿದನು ಗಡಾ
ಭಕುತರಿಗಾಗಿ ಮೇರು ಮಂದಾರ ಶೈಲಾ
ದಿಕ್ಕು ದೇಶ ಕೋಶ ಮಾಡಿ ಇಟ್ಟನು ಗಡಾ
ಭಕುತರಿಗಾಗಿ ತೀರ್ಥ ಪುಣ್ಯಕ್ಷೇತ್ರ
ಸಕಲ ಪದಾರ್ಥಗಳು ಇಡಲಾಪಟ್ಟನುಗಡಾ
ಭಕುತರಿಗಾಗಿ ಏನು ಬೇಡಿದ್ದು
ಭಕುತಿಯ ಕಲ್ಪಿಸಿ ಧರಿಗೆ ತುಂಬಿದ ಗಡಾ
ಭಕುತರಾಧೀನ ನಮ್ಮ ವಿಜಯ ವಿಠ್ಠಲ ತನ್ನ
ಭಕುತರಿಗಾಗಿ ನಾನಾ ಪಾಟುಬಡುವಾ ೨
ತ್ರಿವಿಡಿತಾಳ
ತಂದೆಯಾಗಿ ತಾಯಿಯಂದದಿ ಸಾಕುವ
ಬಂಧು ಬಳಗವಾಗಿ ಸಾಕುವ ಸಾಕುವಾ
ಹಿಂದೆ ಮುಂದೆ ಇದ್ದು ಸಾಕುವ ಸಾಕುವಾ
ಕಂದನಾಗಿ ಬಿಡದೆ ಸಾಕುವ ಮುಖ್ಯ ಸಂ
ಬಂಧಿಗ ತಾನಾಗಿ ಸಾಕುವಾ ಸಾಕುವಾ
ಕುಂದಗೊಡದೆ ಒಲಿದು ಸಾಕುವಾ ಸಾಕುವಾ
ಸಂದಣಿಯೊಳಗಿರಲು ಸಾಕುವ ಸಾಕುವ
ಸಂದಣಿಯೊಳಗಿರಲು ಕರಣಾದಿಂದಲಿ ಒದಗಿ
ಬಂದು ಸಾಕುವಾ ಬಹು ಚತುರತನದಲ್ಲಿ
ನಿಂದಲ್ಲಿ ಕುಳಿತಲ್ಲ ಮಲಗಿ ಏಳುವಲ್ಲಿ
ಒಂದುಕ್ಷಣ ಬಿಟ್ಟು ಇರದೆ ಸಾಕುವನಯ್ಯಾ
ಎಂದೆಂದಿಗೆ ಶರಣ ಬೇಡಿದ ಭೀಷ್ಟೆಯನ್ನು
ತಂದು ಕೊಡುವ ತವಕದಿಂದಲಿ ಮೀರದಲೆ
ಇಂದಿರಾರಮಣನ ಕರುಣಾತನಕೆ ಏ
ನೆಂದು ಪೇಳಲಿ ಮನಸು ಸಾಲದು ಸಾಲದು
ನಂದು ಬೇಕಾದರೆ ಆ ತನ್ನ ಪಾದವನ್ನು
ಪೊಂದಿರೋ ಪುಶಿಯಲ್ಲ ಪುಣ್ಯವೇ ಫಲಿಸೋದು
ಪುಣ್ಯಾತ್ಮಕ ದೇವಾ ವಿಜಯ ವಿಠ್ಠಲರೇಯಾ
ಭಿನ್ನಾಂಶನಾಗಿ ನಮ್ಮೊಳಗಿಪ್ಪ ಜಗದಪ್ಪ ೩
ಅಟ್ಟತಾಳ
ದೇವ ದೇವೇಶನು ತನ್ನ ಇಂದ್ರಿಯಗಳೆಲ್ಲಾ
ಜೀವರ ಸ್ವರೂಪೇಂದ್ರಿಯೊಳಿಗಿಟ್ಟು ತ
ದ್ಭಾವ ನಡೆಸುವ ನಿರ್ದೋಷನಾಗಿ
ತ್ರಿವಿಧ ಗುಣದಲ್ಲಿ ಮರಳೆ ಮಿಶ್ರವಾಗಿ
ಪಾವನ ಪಾವನ ಮತಿಯನೆ ಕೊಡುತಲಿ
ಕಾವಾ ಕೊಲ್ಲುವುದಕ್ಕೆ ಕರ್ತಾನೆನಿಸಿಕೊಂಡು
ಜೀವರಿಗೆ ಲೇಶ ತಿಳಿಯಗೊಡಲಾಹಂ
ಭಾವವೆ ಕಲ್ಪಿಸಿ ಭಕುತಿಯ ಪುಟ್ಟಿಸಾ
ಕೋವಿದರಿಗೆ ತಾನೇ ಒಲಿಯ ಬೇಕಾದರೆ
ಆವಾಗೆ ಅವರಿಗೆ ತನ್ನನೇ ತೋರುವಾ
ದೇವಕ್ಕಿನಂದನ ವಿಜಯ ವಿಠ್ಠಲರೇಯಾ
ಕೈವಲ್ಯದಾಯಕ ಆನಂದ ಭರಿತಾ ೪
ಆದಿತಾಳ
ಬೊಮ್ಮ ಮರುತ ಗರುಡ ಶೇಷ
ಉಮ್ಮೆಯರಸಾ ಇಂದ್ರ ಕಾಮಾ
ಈ ಮಹಾತ್ಮರವಿಡಿದು ಮನುಜೋ
ತ್ತುಮ ತೃಣ ಪರಿಯಂತ ಇದೆ ಇದೆ ಪೆಸರಿನಲಿ
ಮಮ್ಮತಾರಹಿತರಾಗಿ ಆ
ತುಮ್ಮದೊಳಗೆ ವಾಸವಾಗಿದ್ದು
ಒಮ್ಮಿಗಾದರು ತೊಲಗದೆ
ಘಮ್ಮನೆ ಕರ್ಮ ಮಾಡಿಸುವಾ
ಹಮ್ಮುಯಿಲ್ಲದ ದೈವ ವಿಜಯ ವಿಠ್ಠಲರೇಯಾ
ಇಮ್ಮಡಿ ಮುಮ್ಮಡಿ ನಡೆಸುವಾ ೫
ಜತೆ
ಭಕುತರ ಮನೋಹರಾ ಸೌಭಾಗ್ಯವಂತ ವಿ
ರಕ್ತರ ಪ್ರೀಯಾ ಸಿರಿ ವಿಜಯ ವಿಠ್ಠಲರೇಯಾ ೬


ದತ್ತಸ್ವಾತಂತ್ರ್ಯ ಸ್ವರೂಪವನ್ನು ತುಂಬ ಸರಳವಾಗಿ

೯೪
ಧ್ರುವತಾಳ
ಭಕ್ತರಂದದಕೆ ನೀ ಬರಿಗಣ್ಣು ಬಿಟ್ಟು ನುಡಿದ
ಉಕ್ತಿಗೆ ತಲೆಬಾಗಿ ಹಲ್ಲು ಮಸಿದರೆ ಭಯವೇ
ರಕ್ತ ನೇತ್ರದಿಂದ ಹುಂಕಾರವನೆಬ್ಬಿಸಿ
ಶಕ್ತಿಯ ತೋರಿದರೆ ನಮಗೆ ನಿನ್ನ ಗಣನೆ
ರಿಕ್ತಾನಂದದಿ ಬಂದು ಬೇಡಿಕೊಂಡರೆ ಬಿಡೆವು
ಮುಕ್ತಾರ್ಥ ಪರ್ವತವಾಸನೆನಿಪಲ್ಯಾಕೆ
ಭಕ್ತಿ ತೊರದರಯ್ಯಾ ನಮಗೇನು ಉಪಕಾರ
ರ(ನ)ಕ್ತದೊಳಗೆ ಸಂದಿ ಬಿದ್ದು ಪೋದವನಲ್ಲವೆ
ವ್ಯಕ್ತನಾಗದಿದ್ದರೆ ನಿನಗೆ ನೀನೆ ಇದ್ದಿ
ಭಕ್ತಪಾಶದಲ್ಲಿ ಕುದುರೆ ಸಹಿತ ಬಿಗಿವೆ
ಶಕ್ತನಹುದೊ ಅನಾದ್ಯನಂತ ಕಾಲದಲ್ಲಿ
ಭಕ್ತರ ಮೇಲೆ ನಿನ್ನ ಪ್ರಯತ್ನ ನಡೆಯದು
ಯುಕ್ತಿಯ ಸಾಧಿಸು ನಾನು ಪೇಳಿದ ಒಂದು
ಉಕ್ತಿಗೆ ಒಡೆಯನೆ ಶರಣು ಮಾಡುವೆ ನಿನಗೆ
ಮುಕ್ತಾಮುಕ್ತಾರಂತಿರಲಿ ಅವರಂಘ್ರಿಯಲ್ಲಿ ಆ
ಸಕ್ತನಾದ ಬಿ(ಚಿ)ಟ್ಟಿಗಾ ಎನ್ನ ಪರಾಕು ಕೇಳು
ಮುಕ್ತಿ ಬಯಪುದಿಲ್ಲಾ ತಿಳಿದಿದೆ ಇದ್ದ ಕರ್ಮ
ಭೋಕ್ತಾನಂತರದಲ್ಲಿ ಕೃಪೆ ಮಾಡುವೆ ನೀನೆ
ಭಕ್ತ ವತ್ಸಲ ಕೃಷ್ಣಾ ವಿಜಯ ವಿಠ್ಠಲ ವಿ
ರಕ್ತರಾದ ದಾಸರು ತೋರಿ ನುಡಿಯದಿಪ್ಪರೆ ೧
ಮಟ್ಟತಾಳ
ಇವನ ಪ್ರಕಾಶದೊಳು ಎಳೆ ಬತ್ತಿಯಲ್ಲಿ
ಮಿಣಿಮಿಣಿಗುಟ್ಟುವ ದೀಪವ ರಚಿಸಲು
ಜನರಿಗೆ ಕಾಣಿಸದು ಕಾಣಿಸಿದರೆ ಪ್ರಯೋಜನಕೆ ಬಾರದು ಸು
ಮ್ಮನೆ ನಾಮವೆ ಉಂಟು ಅಕಾರ್ಯಕವಾಗಿ
ಎನಗಿದ್ದ ಸ್ವಾತಂತ್ರ ಅನಾದಿಯಲ್ಲಿಂದ
ಇನಿತು ಇಪ್ಪದು ಕಾಣೆ ಇದು ನಿನ್ನಾಧೀನಾ
ಅನುಗಾಲ ಬಿಡದೆ ಅದೆ ಯೆಂದರೆ ಅದೆ
ಕ್ಷಣವಾದರೂ ಲೇಸು ಹೊಲ್ಲೆಯಂಗಳ ನಡತಿ
ಅನುಭವಿಪನೆಂದು ಯೋಚಿಸಿದರೆ ಇಲ್ಲ
ತನುಮನ ಕರಣಗಳು ಇಲ್ಲದಾಗಿ ಇವೆ
ಜನನ ಮರಣವಿಲ್ಲ ಜರೆ ಯೌವನವಿಲ್ಲ
ಚಿನುಮಯ ನಾನಹುದೊ ಛಿದ್ರರಹಿತ
ವೆಂದೆನಿಸುವುದೆ ಸಿದ್ಧ ಏನಾದರೂ ಕಡಿಗೆ
ನಿನಗೆ ನಮಿಸಬೇಕು ಅಣು ಅತೀಂದ್ರಯನೆ
ಘನ ಮೂರುತಿ ನಮ್ಮ ವಿಜಯ ವಿಠ್ಠಲರೇಯ
ಸನುಮತವಾದರೆ ಉತ್ತರ ಲಾಲಿಸು ೨
ತ್ರಿವಿಡಿ ತಾಳ
ಕ್ಷೀರಾಬ್ಧಿತೀರದಲ್ಲಿ ಇರಿವಿಗೆ ತೃಷೆಯಡಗದ
ನೀರು ಚಿಲುಮೆ ಒಂದು ಇದ್ದಂತೆಯೊ
ಮೇರು ಪರ್ವತದೆಡೆಯ ಪಾದಕಾಣಿಯ ತೂಕ
ಹೀರದ ರವೆ ಒಂದು ಇದ್ದಂತೆವೊ
ನೂರಾರು ಕೋಟಿ ಮಂದಿಗೆ ಉಣಿಸುವಗೊಂದು
ಚೂರು ತಂಡುಲ ಹಾಕಿ ಇದ್ದಂತೆವೊ
ಈ ರೀತಿ ಎನ್ನಯ ಸ್ವಾತಂತ್ರ್ಯವೆಂದೆಂಬುದೆ
ಸ್ವರೂಪ ಭೂತವೆಂದೆಂಬೊದೆ ಸಿದ್ಧ
ಬೇರೆ ಪೇಳುವುದಲ್ಲ ಜ್ಞಾನಮಯ ಜೀವ
ಓರಂತೆ ಸರ್ವವು ಸರ್ವದಲ್ಲಿ
ಮಾರುತ್ತರವೆ ಇಲ್ಲ ಇಂಥ ಸ್ವಾತಂತ್ರದಿ
ಧಾರುಣಿಯೊಳಗೆ ಪ್ರಖ್ಯಾತವೇನೋ ಕಾರ್ಯ
ಕಾರಣವಲ್ಲ ಪೂರ್ವದಿಂದಲಿ ಪೊಂದಿರಲು ಪತಿ
ಕರಿಸಬೇಕಾಗಿದೆ ಈರೊಂದು ಕೂಡಿದ ಬಲು ಸೂಕ್ಷ್ಮವಾದ ಶ
ರೀರ ಕೊಟ್ಟವರಾರು ಅಂದೆ ನಾನೇ
ಮೀರದೆ ನಿನ್ನಾಧೀನವಾಗಿಪ್ಪೆ ವಿ
ಚಾರಂಶವಾಕ್ಕೆ ವಿಶ್ವನಯನ
ಪ್ರೇರಣೆ ನಿನ್ನದು ಹರಿ ನಿನ್ನವಿನಾ ಮ
ತ್ತಿನ್ನಾರದಲ್ಲವೆಂದು ದೃಢ ಭಕ್ತಿಲಿ
ಸಾರಿಸಾರಿಗೆ ಬಿಡದೆ ಆಣಿ ಖಡ್ಡಿಯನಿಟ್ಟು
ಸಾರುವೆ ಹಿಂದುಳಿಯದೆ ಜಗದೊಳು
ಚೋರನು ಬಂದು ನೋಡುತಿರೆ ಕದ್ದು ವೈ
ಯಾರ ಮಾಡಿದವರವಗೆ ತಪ್ಪುವುದೆ
ದೂರದಲ್ಲಿದ್ದರು ಒಪ್ಪಗೊಂಬವು
ವಿಸ್ತಾರ ವ್ಯಾಪ್ತನೆ ಕೇಳು ಬಿನ್ನಪವ
ಶ್ರೀ ರಮಣನೆ ಇದೆ ಮಾತುಗಳು ಮನಕೆ
ಬಾರದೆಂದು ಉದಾಸೀನ ಮಾಡಲು
ಮೂರು ಲೋಕದೊಳಗೆ ವ್ಯಾಪ್ತ ಇದ್ದುದಕೆ ನಾ
ಮೀರದೆ ದೂರುತ ನಿನಗೆ ಬಿಡದೆ
ಭಾರ ಕೊಡದೆ ತೊಲಗೆ ಆದದ್ದೆಲ್ಲಾಗಲಿ
ಆರಾದರು ನಿನ್ನ ವಹಿಸಿ ಕೊಂಬುವರಿಲ್ಲ
ಕ್ಷೀರದೊಳಗೆ ಇಟ್ಟು ಜಡದೊಳು ತಗಿಯದಿ
ದ್ದರೆ ಭಕ್ತನ ಮೇಲೆ ಕರುಣ ಬಾರದು ಕಾಣೆ
ಮೋರೆದಿರುಹದಿರು ದಯ ದೃಷ್ಟಿಯಲಿ ನೋಡು
ಅರಿವೆನೆಂದು ನೀ ಎನಲಾಗದು
ತೋರಿ ನುಡಿವೇನಯ್ಯಾ ಇದಕೆ ಅಂಜಿದರೆ ನಿನ್ನ
ಆರಾಧಿಸುವುದೆಂತೊ ಅಮೃತ ಹಸ್ತಾ
ಭಾರಕರ್ತನಾದ ವಿಜಯ ವಿಠ್ಠಲ ನಿನಗೆ
ಹಾರಾವಾಗಿದೆ ಏನೊ ಎನ್ನ ಸ್ತುತಿಸುವುದು ೩
ಅಟ್ಟತಾಳ
ಕುಣಿ ಹೋಗಿ ಮುಸಕೆನೊ ಗುಣಗಣ ಪೂರ್ಣನೆ
ಎನಗೆ ಸ್ವಾತಂತ್ರ ಎಳ್ಳಿನಿತಾದರೆ ಇಲ್ಲ
ಕೊನಿಗೆ ಕೊರಳಿಗೆ ಗಂಟನೆ ಇಕ್ಕದೆ ದೇವ
ತೊನಗಾ ಬಿಡೆನೆಂಬೊ ಘನತನ ಉಳ್ಳರೆ
ಧನವು ಕಶದು ಮಾರ್ಗಣವ ಬಿಟ್ಟರೆ ಪೋಗಿ
ಮೊನೆ ಮೊದಲು ತಾಕಿ ತಿನಿಸುವದಲ್ಲದೆ
ದಿನ ದಿನಕೆ ತ್ರಯಗುಣದಲ್ಲಿ ವ್ಯಾಪಾರಾ
ವನೆ ಮಾಡುವಲ್ಲಿ ಮುಂದಿನ ಬಲು ಭರದಾಗ
ಮನವೆ ನಿನ್ನದಯ್ಯಾ ತನು ಮನಕೆ ಸಾಕ್ಷಿ
ಅನುಭವವೆ ಸಿದ್ಧಾ ಅನುಮಾನ ಮಾಡೇನು
ಮಿನಗುವಾ ರಕ್ಷಿಪ ಜನರು ಪಾದದಿ ಮೆಟ್ಟಿ
ಮನೆ ಮನೆ ಪೋಗಿ ಒಡನೆ ತಿರುಗುವುವು
ಜನುಮ ಜನುಮಕೆ ವಂದನೆ ಮಾಡುವ ವಂದನೆ ಪೇಳು
ವೆನು ಪ್ರೇರಣೆ ಯಾವ ತೆರದಲ್ಲಿ
ಅಣುವಾಗಲಿ ಮತ್ತೆ ಘನವಾದ ಪ್ರಯೋ
ಜನವೆಲ್ಲ ನೆಸಗುವೆ ಮನೋವಾಕು ಕಾಯದಿ
ಋಣಮೋಚನ ನಮ್ಮ ವಿಜಯ ವಿಠ್ಠಲರೇಯ
ಪಣವು ಕಟ್ಟುವದಲ್ಲಾಪ್ಪಣೆಯಲ್ಲಿದ್ದವ ನೊಡಿಯಾ ೪
ಆದಿತಾಳ
ಚಿತ್ತೈಸು ಮುನಿಗೇಯ ಉತ್ತಮಾಂಗಕೆ ಹಸ್ತ
ಎತ್ತಿ ಮುಗಿವೆ ಎನ್ನತ್ತ ಮೊಗವ ಮಾಡಿ
ಉತ್ತರ ಕೊಡೊ ಜೀಯಾ ಎತ್ತಣವನಿವನೆಂದು

ಭಾರತದಲ್ಲಿ ಹಿಂದೂ ದೇವಾಲಯಗಳು

೧೦೨
ಧ್ರುವತಾಳ
ಭಕ್ತರಿಗೋಸುಗ ನಿನ್ನ ಮೂರುತಿಗಳು
ಭಕ್ತರಿಗೋಸುಗ ನಿನ್ನ ಗುಣಂಗಳು
ಭಕ್ತರಿಗೋಸುಗ ನಿನ್ನವತಾರಗಳು
ಭಕ್ತರಿಗೋಸುಗ ನಿನ್ನ ಮಹಿಮೆಗಳು
ಭಕ್ತರಿಗೋಸುಗ ನಿನ್ನ ಚರಿತೆಗಳು
ಭಕ್ತರಿಗೋಸುಗ ನಿನ್ನ ಭಾಗ್ಯವಯ್ಯಾ
ಭಕ್ತರಿಗೋಸುಗ ನಿನ್ನ ಮಂದಿರಗಳು
ಭಕ್ತರಿಗೋಸುಗ ನಿನ್ನ ನಡತೆ ನುಡತಿ
ಭಕ್ತರ ನೆಲೆಮಾಡಿ ಅವರಿಗೆ ಪ್ರೇರಿಸಿ
ಭಕ್ತವತ್ಸಲನೆಂಬೊ ಬಿರಿದು ಪಡೆದೆ
ಮುಕ್ತ ನಾಮ ಪರಮಾಂಗತಿ ವಿಜಯ ವಿಠ್ಠಲ
ಭಕ್ತರಿಂದಲಿ ನೀನು ಭಾಗ್ಯವಂತನು ೧
ಮಟ್ಟತಾಳ
ವೇದಗಳು ರಚಿಸಿ ಆದರದಿಂದಲಿ
ಆಧಾರವನು ಮಾಡಿ ಆದಿಮಧ್ಯಾಂತದಲಿ
ಆದಿ ಮೂರುತಿಯಾಗಿ ಭೇದಾರ್ಥವ ತಿಳುಹಿ
ಭೋಧರ ಕೈಯಿಂದ ತ್ರಿಧರೆಯೊಳು ಮೆರೆದೆ
ವಿಧಾತನಾಮ ವಿಜಯ ವಿಠ್ಠಲರೇಯಾ
ವೇದಗಳು ರಚಿಸಿ ಆದರದಿಂದಲಿ ೨
ತ್ರಿವಿಡಿತಾಳ
ಬಿಸಿಜಜಾಂಡ ಪುಟ್ಟಿಸಿ ಪಂಚ ಭೂತಾತ್ಮದ
ವಸುಧಿಯ ನಿರ್ಮಾಣವನ್ನು ಮಾಡಿ
ಬಸುರಿಲಿದ್ದವರನ್ನು ಒಂದೊಂದು ರೂಪದಲಿ
ಅಸುವ ನೇಮಿಸಿ ಚೇತನಂಗಳಿತ್ತು
ವಿಷಜೀವಿಗಳಿಗೆ ತಾಮಸ ದಾರಿಯ ತೋರಿ
ಕುಶಲ ಬುಧರಿಗೆ ಶೋಭಿಸುವ ಮತಿ
ವಿಶುದ್ಧಾತ್ಮನಾಮ ಸಿರಿ ವಿಜಯ ವಿಠ್ಠಲ ನೀನು
ವಶವಾಗಿ ಭಕ್ತರ ಕೂಡಲಿರುತಿಪ್ಪೆ ೩
ಅಟ್ಟತಾಳ
ಮೇರು ಮಂದರಗಿರಿ ಮೊದಲಾದ ಪರ್ವತ
ಧಾರುಣಿಯೊಳಗುಳ್ಳ ಸಕಲ ತೀರ್ಥಂಗಳು
ನೂರೆಂಟು ಸ್ವಯಂ ವ್ಯಕ್ತವಾದ ಪುಣ್ಯನದಿ
ವಾರಿಧಿ ಪರಿಯಂತ ಮರ್ಯಾದೆ ಮಾಡಿ
ಪಾರಮಾರ್ಥ ಸಾಧನವಲ್ಲಿಗಲ್ಲಿಗೆ
ಕಾರುಣ್ಯದಲಿ ಸೃಜಿಸಿ ಕಿಂಕರರಿಂದ
ಆರಾಧನೆಗೊಂಡು ಅವರಿಗೆ ಸದ್ಗುಣ
ತೋರಿಕೊಡು ಧ್ವನಿ ವಿಜಯ ವಿಠ್ಠಲರೇಯಾ ೪
ಆದಿತಾಳ
ಬಿಸಿಲೊಳಗೆ ತಪಿಸಿ ಬಂದ ತೃಷೆಯಾದ ಮನುಜಗೆ
ರಸದಾಳಿಕಬ್ಬು ಕೂಲಿಗೆ ಹಸನಾಗಿ ತಿನಿಸಿದಂತೆ
ವಿಷದಲ್ಲಿ ತಪಿಸುತಾ ವಸುಧಿಯೊಳಗಿರುತಿರೆ
ವಸುದೇವಸುತನೆಂಬೊ ರಸದಾಳಿ ಕಬ್ಬುಕೂಲಿಗೆ
ಎಸಳ ಮೆದ್ದಂತೆ ಕಾಣೊ ಅಸುರಾರಿ ನಿನ್ನ ನಾ
ಮ ಸುಧೆಯ ಕುಡಿಸಿ ಕೂಲಿಗೆ ಅಸಮ ಸಂಪದವನೀವೆ
ಅಸಂಭಾವಿತರಾಗದಂತೆ ವೃಷ ವಿಜಯ ವಿಠ್ಠಲ
ಅಸಮದೈವವೆ ನೀನು ಹಸುಗಳ ಪಾಲಿಸುತ
ಪೆಸರ ಪಡೆವನಂತೇ ೫
ಜತೆ
ದಾಸರಾಡಿದ ಲೀಲೆ ನಿನಗೆ ಸಂತೃಪ್ತಿಯೊ
ಭೂಷಣ ನಾಮ ಸಿರಿ ವಿಜಯ ವಿಠ್ಠಲ ಒಡೆಯಾ ೬

ಭಗವಂತನನ್ನು ನಂಬಿದವರಿಗೆ ಯಾವ

೬೩
ಧ್ರುವತಾಳ
ಭಗವಧ್ಯಾನ ಮಾಡು ಭಕುತಿ ಪೂರ್ವಕದಿಂದ
ಅಗಣಿತ ಗುಣನಿಧಿ ಅಪ್ರಮೇಯಾ
ಬಗೆ ಬಗೆ ವ್ಯಾಪಾರಮಾಡುವ ಮಹಾಮಹಿಮ
ಜಗದತ್ಯಂತ ಭಿನ್ನ ಜಗದ್ವ್ಯಾಪ್ತಾ
ನಿಗಮ ಮಂಗಳಗೇಯ ನಿಖಿಲ ಜಗತ್ಸೇವ್ಯ
ತ್ರಿಗುಣರಹಿತ ಸುಗುಣಿ ನಿರ್ಭೇದ ಕಲ್ಯಾಣ
ಅಘದೂರ ಅನಂತಾನಂತ ರೂಪ ಪರಮಾ
ಯುಗ ಮಹಾಯುಗ ಮನುಕಲ್ಪದಿನ ಪ್ರಳಯ
ಮಗುಳೆ ಮಹಾ ಪ್ರಳಯಾಕಾಲ ತಿಳಿದು
ಭಗವಧ್ಯಾನಮಾಡು
ಋಗುಯಜು :ಸಾಮ ಅಥರ್ವಣಾಗಮದಂತೆ
ಗಗನಮಣಿರಶ್ಮಿ ಚತುರ ವಿಭಾಗ
ಮಿಗೆ ವಾಸುದೇವ ಸಂಕರುಷಣ ಪ್ರದ್ಯುಮ್ನ
ಜಗನ್ಮಯ ಅನಿರುದ್ಧ ನಾರಾಯಣ
ಮೃಗರೂಪ ಕೋಲ ಮೂರುತಿ ವಾಮನ ನರ
ಮೃಗ ಯಜ್ಞ ಪುರುಷೋತ್ತಮ ವಾಸುದೇವ
ಪಗೆದಲ್ಲಣ ನಾರಾಯಣ ವಟು ಅನ್ನಮಯಾ
ದಿಗಳು ಹರಿ ವಿಷ್ಣು ಶೇಷಶಯನ ಶ್ರೀಶ
ಮಗನ ಪೆತ್ತಬ್ಜನಾಭ ವೈಕುಂಠನಾಮಾ ಮನುಜ
ಮೃಗ ಅನಿರುದ್ಧಾದಿ ಪಂಚಮೂರ್ತಿ
ಮೃಗಲಾಂಛನ ವದನ ವಿಜಯ ವಿಠಲನ ಮೂ
ರ್ತಿಗಳ ಕೊಂಡಾಡೋದು ಪಾದಾಂತ ಪ್ರಣವದಲ್ಲಿ ೧
ಮಟ್ಟತಾಳ
ನರ ನಾರಾಯಣ ಹಯಗ್ರೀವ ಕಪಿಲ
ವರ ದತ್ತ ವ್ಯಾಸ ಅನಿರುದ್ಧ ಪ್ರದ್ಯುಮ್ನ ಸಂ
ಕರುಷಣ ವಾಸುದೇವ ಹರುಷ ಉತ್ರ‍ಕಷ್ಟ ಜ್ಞಾನರೂಪತ್ವ
ಹರಿಯೆ ಗುಣಪೂರ್ಣ ಪೂರ್ಣ ವಿಭೂತಿ
ಪರಿಮಿತ ರಹಿತ ಸುಖಸಂಗೀತ ಜನಪಾಲ
ಸುರನುತ ನಾರಾಯಣ ವಾಸುದೇವ ವೈಕುಂಠ
ವರ ಅನಿರುದ್ಧ ಸಂಕರುಷಣ ಪ್ರದ್ಯುಮ್ನ
ತರುಣಿ ರಮಾಂತರ್ಗತ ವಾಸುದೇವ ದೇವ
ಪರಶುರಾಮ ಮುಸಲಧರ ಪ್ರದ್ಯುಮ್ನ
ನಾರಾಯಣ ಅನಿರುದ್ಧ ಕರಿಸಿಕೊಂಬವಿವೇ ವಾಸುದೇವ ಸಹಿತ
ಮಿರುಗುವ ಪಂಚರಾತ್ರಾ ಅವಕಾಶಪ್ರದಕೆ
ಸ್ಮರಿಸು ಈ ಮೂರ್ತಿಗಳ ನಾಮ ಕೀರ್ತನೆ ಮಾಡು
ಸರುವ ವ್ಯಾಪ್ತಸ್ವಾಮಿ ವಿಜಯವಿಠಲರೇಯ
ಪರಿ ಪರಿ ಬಗೆಯಿಂದ ಪ್ರತಿಪಾದ್ಯನಾಗಿಪ್ಪಾ ೨
ರೂಪಕ ತಾಳ
[ಅ]ನಂತ ಅನಂತರೂಪ ಸಚ್ಚಿದಾನಂದ ದೇಹ
ಅನಂತ ಶೀರ್ಷ ಪಾದದಿ ಸರ್ವಾಂಗ
ಅನಂತ ಗುಣಗಣ ಮಹಾತ್ಮ ಪುರುಷ
ಏನೆಂಬೆ ವರಹ ನರಸಿಂಹ ವಾಮನ
ಮಾನಸೋತ್ತರ ಶೈಲ ಸ್ಥಿತ ವಾಸುದೇವಾದಿ
ಆನನ ಚತುಷ್ಟಯ ನೀಲ ವರುಣಾಗ್ನಿ ಸೋಮ
ಭಾನು ಉರಗದೇವ ಇವರಂತರ್ಗತ
ಶ್ರೀನಿವಾಸರೂಪ ವಾಸುದೇವ ವಿಷ್ಣು
ಭಾನು ಭಾರ್ಗವ ವಟುನಾರಾಯಣ ಜಯಾನಾಥ
ಈ ನೀತಿ ಹಯವದನ ನರಸಿಂಹ ಪ್ರದ್ಯುಮ್ನ
ಜ್ಞಾನ ಮತ್ಸ್ಯನು ಕೋಲ ಕೂರ್ಮ ಮೂರುತಿ ಮತ್ತೆ
ಜಾನಕಿರಮಣ ಬದರಿನಾರಯಣ
ರೇಣಕಾನಂದನ ಜಯಂತ ನರಸಿಂಹ
ಈ ನವ ವರುಷ ಸರ್ವ ದ್ವೀಪದಲ್ಲಿ ನೋಡು
ಜ್ಞಾನಗಾತುರ ಹರಿ ವಿಜಯ ವಿಠ್ಠಲರೇಯ
ನಾನಾ ರೂಪಗಳಿಂದ ಅರ್ಚನೆ ಕೈಕೊಂಬಾ ೩
ಝಂಪೆತಾಳ
ಸಿರಿ ಮಾಧವ ವೀರನಾರಾಯಣ ಕೃಷ್ಣ
ತರಣಿ ಮೊಮ್ಮಗ ರಾಮಚಂದ್ರ ಮಹಾವಿಷ್ಣು ವರಹ ಕ್ಷೀರ
ಶರಧಿಶಯನ ನರಹರಿ ತ್ರಿವಿಕ್ರಮ ದೇವ
ಹರಿಗ್ರೀವ ಶ್ರೀಧರಾನಂತ ಜನಾರ್ದನ
ಪರಮೇಷ್ಟಿ ಈಶದೇವ ಕೇಶವಾದಿ
ವರದತ್ತಾತ್ರಯ ವೇಂಕಟೇಶ ಕೋಲ ಗದಾ
ಧರ ಲಕ್ಷೀ ನಾರಾಯಣಚ್ಯುತ ಚಕ್ರಿ
ಸ್ಥಿರ ವಾಸುದೇವ ವಿಷ್ಣು ನಾರಾಯಣದೇವ
ಪರ ವಿಷ್ಣು ಬ್ರಹ್ಮೇಶ ಪರಮಪುರುಷ
ಮೆರೆವ ವಾಸುದೇವ ಸಂಕರುಷಣ ಕೃತಿಪ
ವರ ಅನಿರುದ್ಧ ರೂಪಗಳ ನೆನೆಸು
ತಿರುಗಿ ಇದೆ ರೂಪಗಳು ನಾರಾಯಣ ಸಹಿತ
ಎರಡೊಂದು ಗುಣ ವಾಸುದೇವ ರಾಮ
ವರಹ ಪ್ರವರ್ತಕ ವಿಶ್ವ ತೈಜಸ ಪ್ರಾಜ್ಞ
ಭರಿತ ವಿಮಲಾದಿಶಕ್ತಿನವ ರಾಜರಾಜೇ
ಶ್ವರಿ ವಿಭೂತಿರೂಪ ಪ್ರತ್ಯಕ್ಷ ಪರಂಪರೆ
ಇರತಕ್ಕವು ಇತ್ತ ತತ್ತತ್ಕಾಲ ಅಭಿದಾನ
ಪರಮಾಣು ಮಹಾಕಾಲ ಒಪ್ಪುತ ಗದಾ
ಧರ ಕೇಶವಾತ್ಮಕ ಗೋವಿಂದ ನಾರಾಯಣ
ಅರಿಧರ ವಿಷ್ಣು ಮಧುಹಾ ಮಾಧವ
ಕರಣೇಶಾಂಬುಜನಾಭ ಶ್ರೀವತ್ಸದೇವ ಸುಂ
ದರ ಜನಾರ್ದನ ದಾಮ ಜಠರ ವಿಶ್ವ
ಶರ ಸಂಚಾರ ವಟು ತ್ರಿವಿಕ್ರಮ ನೃಸಿಂಗ ಭೂ
ವರಹ ಭಾರ್ಗವ ಲಕ್ಷ್ಮಣಾಗ್ರಜ ರಾಮ
ನರ ನಾರಾಯಣ ನರ ದತ್ತ ಕಪಿಲ ಮುನೇ
ಶ್ವರ ಸನತ್ಕುಮಾರ ಹಯವದನ
ಹರಿ ಮಿತ್ರಾ ಮಹಿದಾಸ ಅಮರ ಮೂರುತಿ ದನ್ವಂ
ತರಿ ವೃಷಭಯಜ್ಞ ಬಲಭದ್ರ ವ್ಯಾಸ
ನಿರುಪಮ ಬುದ್ಧ ಕಲ್ಕಿ ಗಂಗೆಯ ಪೆತ್ತನ
ಸ್ಮರಿಸು ಪಾಷಾಂಡಗಣಾತ್ಪ್ರಮಾದಕ್ಕೆ
ಪರಮ ಪಾವನ ರಂಗ ವಿಜಯವಿಠ್ಠಲರೇಯ
ಸರುವ ಕಾಲದಲ್ಲಿ ಭಕ್ತರಿಗೊಲಿದಿಪ್ಪಾ ೪
ತ್ರಿವಿಡಿ ತಾಳ
ಸದಮಲ ಅಜ ಅಣಿಮಾ ಯಜ್ಞ ಅಚ್ಯುತ ಹಯ
ವದನ ಕೇಶವ ಈಶಸ್ವಾತ್ಮ ವಿಷ್ಣೂರುರುಕ್ರಮ
ಮುದದಿಂದ ಕೇಶ್ವರ ಚಕ್ರಿ ಗದಿ ಧನುರಾಸ್ಯ
ಮಧುಸೂದನ ಇಂದ್ರವರ ಜಾತ ರಕ್ಷಾತ್ಮ
ಚದುರ ಹಲಧರ ಹೃಷೀಕನಾಥ ನಾರಾಯಣ
ಉದಧಿನಿವಾಸ ಯೋಗೇಶ್ವರ ಪ್ರಶ್ನಿಜ
ಒದಗಿ ಪರಮಪುರುಷ ಗೋವಿಂದ ಮಾಧವ
ನಿಧಿ ವೈಕುಂಠಾತ್ಮಕ ಶ್ರೀ ಪತಿಯು ಯಜ್ಞ
ಇದರ ತರುವಾಯ ವಿಶ್ವೇಂದ್ರ ನಾಮಕ
ಪದವೀವ ಪ್ರಾದೇಶ ನಾಮಕಂಗಟ ಮಾತ್ರ ಜೀವಸ್ಥ
ತದುಪರಿ ಏಕಪಂಚಾಶನ್ಮುರ್ತಿಗಳೆನ್ನು
ಮಧು ವಿದ್ಯಾವಾಸಿಗಳ ಚಿಂತಿಸು ಬಿಡದೆ
ಹದಿನಾಲ್ಕು ಮನ್ಮಂತರದಲ್ಲಿ ಅವತಾರಗಳು
ಪದೋಪದಿಗೆ ಪೊಳೆವುತಿದೆ ಪೆಸರಿನಿಂದ
ಮೊದಲು ಯಜ್ಞ ವಿಭು ಸತ್ಯಶೇನ ತಾಪಸ
ಇದೆ ಸಿದ್ಧ ವೈಕುಂಠ ಅಜಿತಾಖ್ಯ ವಾಮನ
ಅಧಟ ಸಾರ್ವಭೌಮ ವೃಷಭ ಶಾಂತಾಖ್ಯಾ
ನಿಧಿ ಧರ್ಮಸೇತು (ಶ್ವೆತು) ಸ್ವಧಾಮ ಯೋಗೇಶ್ವರ
ತುದಿಗೆ ಬ್ರಹದ್ಭಾನು ಗುಣಿ ಎ[ನಿ]ಸಿ ಮುಂದೆ
ಉದಯಾರ್ಕ ಸನ್ನಿಭ ವಿಜಯ ವಿಠ್ಠಲರೇಯ
ಹೃದಯದೊಳಗೆ ಪೊವ ಕಾರುಣ್ಯವನು ಮಾಡಿ ೮
ಅಟ್ಟತಾಳ
ಅವನಿಯೊಳಗೆ ಕೇಳು ಮನು ಮುನಿನ್ನಪರಲ್ಲಿ
ಅವತರಿಸಿದ ರೂಪ ಮನ್ವಾದಿಯಲಿ
ಸ್ತವನ ಮಾಡಿದ ರೂಪ ಹದಿನಾಲ್ಕರಲಿ ನಾ
ವಿವರಿಪೆ ಮಹಿದಾಸ ದತ್ತ ವೇದವ್ಯಾಸ
ರವಿಜಾತ್ಮ ಕೃಷ್ಣ ನರನಾರಯಣ ಹರಿ
ರವಿಕುಲಾಗ್ರಣಿ ರಾಮ ಪ್ರಶ್ನಿಗರ್ಭ ಯಾ
ದವ ವಿಷ್ವಕ್ಸೇನ ಭಾರ್ಗವ ಬುದ್ಧ ಕಲಿಕೆ ಮೆ
ರೆವ ಶಿಂಶುಮಾರ ಧನ್ವಂತರಿ ಋಷಭ ಮಹಾ
ಕವಿ ಕಪಿಲ ಮಿಕ್ಕಿ ಹರಿಯವತಾರ ಮಾ
ನವರಲ್ಲಿ ಉದ್ಭವವಾದ ಮಹಿಮೆ ಮ
ತ್ತಿವಕೊ ಮತ್ಸ್ಯ ಕೂರ್ಮ ವರಹ ನರಸಿಂಹ
ಧವಳ ವರ್ನ ಹಂಸ ಹಯಗ್ರೀವ ನಾನಾ ಪ್ರಾದು
ರ್ಭಾವ ಯುವತಿ ನಾರಾಯಣಿ ರೂಪ ಬಲರ ರೂಪ
ಭುವಿ ತತ್ವ ನಾನಾ ವರ್ಣ ಮಂತ್ರ ದೇವತಾ
ಅವಕಾಶ ಪರ್ಯಂತ ಭಗವದ್ರೂಪಗಳೆನ್ನು
ನವ ನವ ಮೋಹನ್ನ ವಿಜಯ ವಿಠ್ಠಲರೇಯ
ಭವದಿಂದ [ಎ]ತ್ತುವ ಇನಿತು ಭಜನೆಮಾಡೆ ೬
ಆದಿತಾಳ
ಸಕಲ ಪ್ರತಿಪಾದ್ಯ ಸರ್ವದ ಸ್ಥಿತಿ ನಿಯಾ
ಮಕ ಅವತಾರ ಪ್ರಾದುರ್ಭಾವ ಆವೇಶ ಪ್ರವ
ರ್ತಕ ಉಪಾಸ್ಯ ಆಶ್ರಯ ಏಕೈಕಾಭೀಷ್ಟ ಪ್ರದ
ಮುಕುತ ವಾಲಗ ಕರ್ಮ ಮೋಚಕ ಭೋಕ್ತ ಭೋಗ
ಅಖಿಲ ಆಧಾರ ಶಕ್ತಿ ಸರ್ವಲೋಕಾಶ್ರಯ
ಅಕಳಂಕ ನಾನಾರೂಪ ಸರ್ವದ ನಿರ್ಭಿನ್ನ
ಲಕುಮಿರಮಣನಲ್ಲದೆ ಅನ್ಯರಿಗೆ ಈ ಮಹಿಮೆ
ಪ್ರಕಟ ಗುಪುತನಾಗಿ ಅಂತಿಕ ದೂರದಲಿ
ಭಕುತರನ ಸಲಹುವ ಕಾರಣ ಕಾರ್ಯದಲ್ಲಿ
ತಕ್ಕ ತಕ್ಕ ಸೂಕ್ಷ್ಮ ಸ್ಥೂಲ ಕಾಲದಿ ಜಡದಲಿ
ಸುಖಪೂರ್ಣ ಜ್ಞಾನನಾಗಿ ವ್ಯಾಪಾರಮಾಡಿಸುವ
ಸಖನಾಗಿಯಿಪ್ಪ ಸರ್ವಜೀವರ ಸಾಧನಕ್ಕೆ
ದುಃಖ ಬಡದಂತೆ ಕಾವ ಇರಳು ಹಗಲು ಒಲಿದು
ಮಕ್ಕಳಾಟಿಕೆಯಂತೆ ಲೀಲೆ ಮಾಡುವ ಸ
ನ್ಮುಖನಾಗಿ ಸತ್ವಾದಿಗುಣ ಉಪಾದಾನದಿಂದ
ನಖಶಿಖ ಪರಿಯಂತ ಸಾರ ಸುಂದರೋಪೇತ
ಸಕಲಾಭರಣ ಭೂಷಿತ ಜ್ಞಾನಾದಿ ಬಲಕಾಯ
ವಿಕಸಿತ ಚಿತ್ತದಲ್ಲಿದೆ ಧ್ಯಾನವಮಾಡು ಆರಂ
ಭಕೆ ಚಿಂತಿಸಿ ನೀನು ಸರ್ವರೂಪಾತ್ಮಕನಾ
ನಿಖಿಲ ಬಗೆಯಿಂದ ಹೃದಯಾಕಾಶಕ
ರ್ನಿಕೆಯಲ್ಲಿ ಪೂಜಿಸು ಒಂದಾನಂತನೆಂದು
ಋಕ್ ಯಜುಸ್ಸಾಮಾಥರ್ವಣ ವೇದದಲ್ಲಿ ನಿತ್ಯ
ಅಕದಳಂಕವಾಗಿದೆ ಇದೆ ಸಿದ್ಧಾಂತ ಮಹಾಪ್ರಮೇಯ
ರುಕುಮಿಣಿಪತಿ ನಮ್ಮ ವಿಜಯ ವಿಠ್ಠಲ ಪ್ರೇ
ರಕನೆಂದು ನಿತ್ಯ ನಂಬು ನಂಬು ನಾನಾ ವಿದ್ಯಾ ಬಪ್ಪುದು ೭
ಜತೆ
ದಿನ ದಿನಕಿನಿತಿನಿತು ಧ್ಯಾನಮಾಡಲು
ನಿನಗೆ ಪ್ರಣವ ಮೂರುತಿ ವಿಜಯವಿಠ್ಠಲ ಪೊಳೆದು ನಿಲುವ ೮

ಭಕ್ತನಾದವನು ಎಷ್ಟೇ ಜ್ಞಾನಿಯಾದರೂ

೯೫
ಧ್ರುವತಾಳ
ಭಜಿಸಬಲ್ಲೆನೆ ನಿನ್ನ ಬಹು ಬಗೆಯಿಂದ ಎನ್ನ
ಸೃಜಿಸಿದ ಪೂರ್ಣೈಶ್ವರ್ಯ ಅಮಿತ ಶೌರ್ಯ
ಅಜ ಹಸ್ತಿ ಚರ್ಮಾಂಬರ ಗಜವಾಹನರ ಗೀರ್ವಾಣ
ವ್ರಜಗಳಿಗೆ ದೂರತರ ದೂರನೇ
ನಿಜ ಆನಂದ ವೈಭವ ಭಯದೂರ ಸರ್ವ
ತೇಜಗಳೊಳಗೆ ಇಪ್ಪ ಪೂರ್ಣಶಕ್ತಾ
ತ್ರಿಜಗ ಮಧ್ಯದಿ ನಿನ್ನ ಅರ್ಚಿಸಿ ಮೆಚ್ಚಿಸುವ
ಸುಜನರ ಕಾಣೆನಯ್ಯಾ ನಿಯಾಮಕಾ
ರಜಭಕುತಿ ರಜಜ್ಞಾನ ರಜವೈರಾಗ್ಯದ ಮಾರ್ಗ
ಭಜಿಸುವ ಮಾರ್ಗತಿಳಿಯೆ ತ್ರಿಗುಣಾತೀತಾ
ಗಜ ಇರುವು ಮಿಕ್ಕ ಜನನದೋಪಾದಿಯಲಿ ಮ
ನುಜ ದೇಹ ತೆತ್ತು ಸಂಚರಿಸಿದೆನೋ
ರಜೋತಮಗುಣದ ವ್ಯಾಪಾರವಪೇಕ್ಷಿಸಿ
ಕುಜನ ಸಂಗತಿಯನ್ನು ಬಯಸುತಿಪ್ಪೆ
ಯಜಮಾನ ನಾನೆಂಬೊ ಗರ್ವದಿಂದಲಿ ಇದ್ದು
ಗಜರಾಜವರದನ ಪೂಜೆ ತೊರೆದೆ
ದ್ವಿಜರಾಜಧ್ವಜ ನಮ್ಮ ವಿಜಯ ವಿಠ್ಠಲರೇಯ
ಭಜನೆಮಾಡುವರ ಹೃತಮಲವಾಸಾ ೧
ಮಟ್ಟತಾಳ
ಪ್ರಕೃತಿದೆಶೆಯಿಂದ ನಿನ್ನ ಇಚ್ಛೆಯಾಗೆ
ಸಕಲಪದಾರ್ಥ ಸರ್ವಜಗದೊಳಗೆ
ಅಖಿಳಬಗೆಯಿಂದ ತುಂಬಿ ತುಳುಕುತಿವೆ
ಅಕಟನೊ ನಾನೊಬ್ಬ ಸಮರ್ಪಣೆ ಬಗಿಯಾ
ಸುಖದಿಂದಲಿ ತಿಳಿದು ಈಯಬಲ್ಲೆನೆ ದೇವ
ಮುಕುತಿಯೋಗ್ಯರು ಯಥಾರ್ಥವೆಂದರಿದು
ಲಕುಮಿರಮಣ ನಿನಗೆ ಅರ್ಪಿಸಿ ಅನುದಿನ
ಭಕುತಿಯನು ಮಾಡಿ ನಲಿದಾಡುವರು
ರುಕುಮಿಣಿಪತಿ ರಂಗ ವಿಜಯ ವಿಠ್ಟಲರೇಯ
ಅಕಳಂಕ ಚರಿತ ಆರಭಾರ ಕರ್ತಾ ೨
ತ್ರಿವಿಡಿತಾಳ
ಮಂದಿರವನೆ ರಚಿಸಿ ವೇದಿಕೆಯನೆ ಮಾಡಿ
ಚೆಂದುಳ್ಳ ಗದ್ದುಗೆ ತತುವುಪರಿ
ಸುಂದರವಾಗಿದ್ದ ಅಹಿತಾ ಪ್ರತಿಮಿಯ
ತಂದು ಕುಳ್ಳಿರಿಸಿ ಜಯಜಯವೆನುತ
ಮುಂದೊರೆದು ಪೇಳಿ ಅಲ್ಲಿ ವಿಧವತಿಳಿದು
ಕುಂದದೆ ಪಂಚಾಮೃತವ ಎರೆದು
ಚಂದದಿಂದಲಿ ವಾರಿಮಜ್ಜನ ಮಂತ್ರೋಕ್ತ
ಕುಂದಣಾಂಬರಾಭರಣ ಪರಿಪರಿಯೂ
ಗಂಧಕುಸುಮ ಧೂಪ ದೀಪ ಎತ್ತುವ ಸೊಬಗು
ಅಂದವಾಗಿದ್ದ ನೈವೇದ್ಯವೆಲ್ಲಾ
ತಂದಿಟ್ಟು ಪಾನೀಯಯಾಚಮನ ಪೋಷಣೆ
ಗಂಧ ವಿಳ್ಯವು ಪಾದುಕ ಮಿಕ್ಕಾದ
ಒಂದೂಬಿಡದೆ ನಿನಗೆ ಸಮರ್ಪಿಸುವ ಬಗೆ
ಅಂದ ನಾನರಿಯೆನು ವಿಚಾರವ
ಮುಂದೆ ಬಾಹಿರದಾರ್ಚನೆಯ ತಿಳಿಯೆ ಧ್ಯಾನ
ದಿಂದ ಪೂಜಿಪದೆಂತೊ ಹೃದಯದಲ್ಲಿ
ಮಂದಮತಿಗ ನಾನು ಡಂಭಿಕವನೆ ತೋರಿ
ಮಂದಿಯ ಕಣ್ಣಿಗೆ ನಿರ್ಮಳನೋ
ಎಂದಿಗೆಂದಿಗೆ ಇದೆ ಆಧಮಾಧಮ ಪೂಜೆ
ಎಂದೆನಿಸದಿರು ಹರಿ ನಿನ್ನ ಪರವೈ
ಇಂದಿನ ಜನುಮಕ್ಕೆ ಈ ಪರಿಯಾದರೂ
ಮುಂದಿನ ಜನುಮಕ್ಕೆ ಒಲಿದು ನೀನೆ
ಬಂದು ಸೋತ್ತಮರಾದ ಗುರುಗಳ ಮುಖದಿಂದ
ಅಂದು ತಿಳುಹಿಕೊಡುವ ಕರುಣಿ ನೀನೆ
ವೃಂದಾರಕರ ವಂದ್ಯ ವಿಜಯ ವಿಠ್ಠಲ ನೀನೆ
ಬಂಧು ಎನಗಿರಲಾಗಿ ಎಲ್ಲ ಸೌಭಾಗ್ಯವಹುದು ೩
ಅಟ್ಟತಾಳ
ಆವ ಪದಾರ್ಥವೊ ಆವಾವರಸಗಳೋ
ಆವಾವ ತಾತ್ವಿಕ ದೇವತೆಗಳುಂಟೋ
ಆವ ಸ್ವಮೂರ್ತಿಯೊ ಆವಾವ ಗುಣವಧಿಕವಾಗಿಪ್ಪದೋ
ಆವಾವ ಸ್ಥಾನದಲ್ಲಿ ಪುಟ್ಟುವುದೋ ಮ
ತ್ತಾವಾವದಿಂದಲಿ ತಿರುಗಿ ಸೇರುವುದು
ಆವಾವದೇವರು ಆವುದು ಮಾಳ್ಪರು
ಆವಾನು ಎತ್ತುವ ಅವನು ಭುಂಜಿಪ
ಅವನಿಂದಲಿ ಅವಕಾಶಪ್ರದ ಉಂಟು
ಆವಾವ ಭಾಗವೋ ಆವಲ್ಲಿ ಸೇರೊವೋ
ಆವಾವ ಸ್ಥಾನದಲ್ಲಿ ಅವನಾದರು ಕರ್ತಾ
ಆವನು ನೋಡುವ ಆವನಿಂದಲಿ ಕ್ಷುಧಿಜೀವಕ್ಕೆ ಒದಗೋಡು
ಆವನ ಭಯದಿಂದ ಯಾವತ್ತು ಜೀರ್ಣ
ಪಾವನ ಮೂರುತಿ ವಿಜಯ ವಿಠ್ಠಲರೇಯ
ಈ ವಿಧ ತಿಳಿದು ಕೊಡುವಾವರ್ಪಣೆ ಅರಿಯೆ ೪
ಆದಿತಾಳ
ಸೃಷ್ಟಿ ಪ್ರಾರಂಭದಲ್ಲಿ ಸರ್ವರಸಂಗಳು
ಸೃಷ್ಟಾ ನಿನ್ನಿಂದಲಿ ನಿರ್ಮಾಣವ ಮಾಡಿದನೆಂದು
ಅಷ್ಟರಒಳಗೆ ತಾತ್ವಿಕ ದೇವತೆಗಳ
ಇಟ್ಟು ಇಪ್ಪನೆಂದು ಅಲ್ಲಿ ನೀನೆ ವಾಸಾ
ಎಷ್ಟು ಶುಭರಸಾಯನ ಉಳ್ಳ ಪದಾರ್ಥದಲ್ಲಿ
ತುಷ್ಟನಾಹ ಹರಿ ನಿತ್ಯತೃಪ್ತನೆಂದು
ಇಷ್ಟೆ ಮಾತುರ ಬಲ್ಲೆ ಇದಕ್ಕಿಂತಧಿಕವರಿಯೆ
ಸ್ಪಷ್ಟವಾಗಿದ್ದ ವೇದಮಂತ್ರಬಾರದು
ಪೊಟ್ಟಿಯೊಳಗಿನ ಅನ್ನ ಹರಿ ಪಚನ ಮಾಡವ ವಂ
ದಿಷ್ಟು ಬಿಡದೆ ಸರ್ವ ಜೀವರಲ್ಲಿ ಎಂದು
ಅಷ್ಟು ಕರ್ತೃತ್ವ ದೇವ ವಿಜಯ ವಿಠ್ಠಲ ಅಂ
ಗುಷ್ಟದಿ ಪೂರ್ಣನೆಂದು ಆವಾಗಾದರು ನೆನಿವೆ ೫
ಜತೆ
ಒಂದರಿತರೆ ಒಂದು ತಿಳಿಯೆ ಭಕ್ತ ವತ್ಸಲ
ತಂದೆ ವಿಜಯ ವಿಠಲ ನಿನ್ನವರೊಳಗಿಡು ೬

ಇತರ ಹರಿದಾಸರು ತಮ್ಮ ಅನೇಕ

೬೪
ಧ್ರುವತಾಳ
ಭಯವ್ಯಾಕೆ ನಿನಗೆ ನಿರ್ಭಯನಾಗು ಎಲೋಪ್ರಾಣಿ ಭವ
ಭಯದೂರ ಶ್ರೀ ಹರಿಯಾ ಕರುಣಾಕಟಾಕ್ಷ
ಸಯವಾಗಿ ಇರಲು ಸಹಾಯಕೆ ಮತ್ತೊಬ್ಬರನ್ನು
ಬಯಸುವುದಲ್ಲ ಅಪಜಯಗಳು ಎಂದಿಗಿಲ್ಲ
ಹಯಗಮನನಾಗಿ ಕತ್ತೆಯನ್ನು ಹಾರೈಸುವಂತೆ
ಬಯಲಾಶೆ ಬಿಡುಬಿಡು ಹುಯಲಿಡಾದಿರು ದುರಮ
ತಿಯಲಿಪ್ಪ ಮತಾಶ್ರಯಮಾಡಿ ಪರರಿಗೆ ನೊಯಿಸದಿರು
ತ್ರಯಲೋಕನುತ ವಿಜಯವಿಠ್ಠಲನೆಂಬೊ ಕ
ರೆಯಮಣಿ ಕಟ್ಟಿರೆ ಭಯವೆತ್ತಣದೋ ಪೇಳು ೧
ಮಟ್ಟತಾಳ
ಆವಪಿತನು ಸಾಕಿದನು ಪ್ರಹ್ಲಾದನ್ನಾ
ಆವಜನನಿ ಸಾಕಿದಳು ಧ್ರುವನ್ನ
ಆವ ಅಣ್ಣ ಸಾಕಿದನು ವಿಭೀಷಣನ್ನ
ಆವ ಪುರುಷ ಸಾಕಿದನು ಪಾಂಚಾಲಿಯ
ಆವ ಬಂಧು ಸಾಕಿದ ಪರೀಕ್ಷಿತನ್ನ
ಆವ ದೈವ ಸಾಕಿತು ಗಜೇಂದ್ರನ್ನ
ಆವ ಧೀರ ಸಾಕಿದ ಫಲ್ಗುಣನ್ನ
ಆವ ಭಟ ಸಾಕಿದ ಉಗ್ರೇಶನನ್ನು
ಆವ ರಾಯ ನಾರಿಯರ ಬಿಡಿಸಿದವನು
ಆವ ಜಾತಿ ಸಾಕಿತು ಅಜಮಿಳನ
ಆವಾವನಾವವನೊ ನೋವು ಕಳೆದು ಭಕು
ತಾವಳಿಗೆ ವೇಗ ಕೈವಲ್ಯ ಪಾಲಿಪ
ದೇವನೆಂಬವನು ಮತ್ತಾವವನಾವವನೊ
ಈ ವಿಚಾರವನ್ನು ಭಾವದಲ್ಲಿ ತಿಳಿದು
ಭಾವಜನ ಪೆತ್ತ ವಿಜಯ ವಿಠ್ಠಲ ನಂಘ್ರಿ
ದಾವರೆ ಯುಗಳದಲಿ ಪಾವನನಾಗುವದು ೨
ತ್ರಿವಿಡಿ ತಾಳ
ಒಡಲೊಳು ಅಬುಜಭವಾಂಡ ಕೋಟಿಯ ಕೋಟಿ
ಅಡಗಿಸಿಕೊಂಡಿಪ್ಪ ಮಹಾಮಹಿಮನ
ಒಡನೆ ತೊಟ್ಟಿಲೊಳು ಪವಳಿಸಿದನೆಂಬ
ನುಡಿ ಎತ್ತಣದೋ ಬಲು ಸೋಜಿಗವೊ
ನುಡಿಗಗೋಚರನಾದ ದೇವಂಗೆ ಜೋಗುಳ
ಬಿಡದೆ ಪಾಡಿದುದೇನೊ ಮೋಹಕವೋ
ಪೊಡವಿ ಸಾಗರ ದ್ವೀಪದಾಧಾರ ಕರ್ತನು
ನಡೆನುಡಿ ಕಲಿತನೆಂಬುವುದು ಏನೋ
ಎಡಿಯವಲ್ಲದ ನಿತ್ಯತೃಪ್ತನು ಮೊಲೆ ಪಾಲು
ಗುಡಿದನೆಂಬುವದಿದು ನಿಜವೆನ್ನಿರೋ
ಪಡೆಧರ ಗರುಡರಿಗೆ
ಬೆಡಗು ತೋರುವ ಹರಿಯ
ಮಡದೆರೆತ್ತಿದರೆಂಬೊ ಘನವಾವುದೋ
ಅಡಿಗಳೊಳಗೆ ಕ್ಷೋಣಿ ಅಡಗಿಸಿದ ಧಿಟ್ಟ
ಸಡಗರದ ದೈವ ಒಲಿದಿರಲು
[ಪ]ಡದಿರು ದೈನ್ಯವ ಒಬ್ಬರ ಬಳಿಯಲ್ಲಿ
ಕೊಡರು ಮನಸಿನಂತೆ ನೆನೆಸಿದ ಫಲ
ಬಡವರಾಧಾರ ಶ್ರೀ ವಿಜಯ ವಿಠ್ಠಲ ಕರುಣಿ
ಬಿಡನು ನಿನ್ನವನೆಂದು ನುಡಿದರೊಮ್ಮ್ಯಾದರು ೩
ಅಟ್ಟತಾಳ
ಜನನದ ಭಯ ಮರಣದ ಭಯ ಬರುತಿಪ್ಪ
ಮನೋ ಇಂದ್ರಿಯಂಗಳು ಎರಗುವ ಭಯ ದು
ರ್ದಿನಭಯ ಬಲುರೋಗ ಕೊಡಕುವ ಭಯಕಾ
ಲನ ಭಯ ತನಗಿಕ್ಕುವ ವಿಷದ ಭಯ ತೀವ್ರವಾದ ತಮ
ಸಿನ ಭಯ ನಾನಾ ಭಯಗಳು ಬಂದರು
ಗಣನೆ ಮಾಡಲು ಕಾಣೊ ಹರಿಯ ನಂಬಿದ ಜನ
ರನು ಮಾನ ಸಲ್ಲದು ಸತತ ತಿಳಿದದು
ಜನುಮಾದಿ ಕರ್ತ ವಿಜಯ ವಿಠಲನ್ನ ಅ
ರ್ಚನೆ ಮಾಡು ಅನುದಿನ ಭಯಗಳ ನೀಗು ೪
ಆದಿತಾಳ
ದುರಿತಗಿರಿಗೆ ವಜ್ರ ಹರಿನಾಮ ಭಕ್ತರಿಗೆ
ನಿರುತ ವಜ್ರದ ಜೋಡು ಭಯವಿಟ್ಟು ನಡಗುವಂಗೆ
ಸುರಿವುದು ಮಧುರಪಾನ ಬಿಡದೆ ನೆನೆವಂಗೆ
ನೆರೆ ನಂಬಿದವರಿಗೆ ಸುತ್ತ ತಿರಗುವ ಪ
ಹರೆ ಕರೆಯಲು ವೈಕುಂಠ ಕರತಳದಿ ಇಪ್ಪದು
ಹರಿಯೆಂದು ನೆನೆದವರ ಸಂಗತಿಯಲ್ಲಿ ಕ್ಷಣ
ವಿರಲು ಮುಕ್ತಿಗೆ ಮಾರ್ಗ ಬಯಲಾಗಿ ತೋರುವುದು
ಹರಿ ಪಾದದಲಿ ಆಸಕ್ತನಾಗಿದ್ದವನಿಗೆ
ಇರಳು ಹಗಲು ಮೃತ್ಯು ಕಾಯ್ದೇನು ಮಾಡುವುದು
ಅರಿಭಯಂಕರ ನಮ್ಮ ವಿಜಯ ವಿಠಲೇಶ ೫
ಜತೆ
ಉಂಟುಂಟು ವಿಜಯ ವಿಠ್ಠಲನೆಂದವಗೆ ಭಯದ
ಗಂಟಲನೊದೆದು ವೈಕುಂಠ ಪುರದ ಗತಿ ೭

ಸಾಧಕನ ಬದುಕಿನಲ್ಲಿ ಭಕ್ತಿ, ಜ್ಞಾನ,

೯೬
ಧ್ರುವತಾಳ
ಭಯವ್ಯಾಕೊ ಮನವೆ ನಿನಗೆ ಭಕ್ತರಾಧೀನ ನಳಿನ
ನಯನ ನಾರಾಯಣ ಬೆಂಬಿಡದಲೆ
ಪಯಣ ಗತಿಯಲ್ಲಿ ಪಾಲಿಸಿಕೊಳ್ಳುತ ಬರುವ
ದಯ ವಾರಿಧಿ ದಾನಿ ತನ್ನ ಬಿರಿದು ಬಿಡದೆ
ಬಯಲೇನು ಗಿಡವೇನು ಅದ್ರಿಕಾನನವೇನು
ತ್ರಯ ಲೋಕದೊಳಗೆ ಹರಿಯೆ ನಮ್ಮ ಸ್ವಾಮಿ
ಜಯವೆ ಕೊಡುತಲಿಪ್ಪತನ್ನ ಪಾದವಾ
ಶ್ರಯ ಮಾಡಿದ ಮನುಜಂಗೆ ತಪ್ಪಗೊಡದೆ
ಹುಯಲಿಟ್ಟ ಕವಿರಾಜನ್ನ ಆಪತ್ತು ಬಿಡಿಸಿದ
ಬಯಸಿದಂತೆ ಬಂದು ಕಾವ ವನಧಿ
ಶಯನ ಸವಾಂತರ್ಯಾಮಿ ದೈತ್ಯಮರ್ದನ ವಿ
ಜಯ ಸಖ ಸುಖಪೂರ್ಣ ಮನುಜ ಲೀಲಾ
ಪ್ರಿಯವಂತನಾಗಿ ನಮ್ಮನ್ನು ಸಾಕುವನು ಹೃ
ದಯದೊಳಗೆ ತನ್ನನು ತೋರಿಕೊಳುತ
ಭಯದೂರ ಭವ ಬಂಧನ್ನ ವಿಮೋಚನ
ವಿಯದ್ಗಂಗಾ ಪಿತ ನಮ್ಮ ವಿಜಯ ವಿಠ್ಠಲರೇಯ
ಸುಯತಿಯ ಮನೋಹರ ಪರಮ ವಿನೋದ ಮೂರ್ತಿ ೧
ಅಟ್ಟತಾಳ
ಕುರುಪಾಂಡವರ ಸಂಗರದೊಳು ಪಕ್ಕಿಯ
ಮರಿಯ ಕಾಯಿದ ನೋಡೈ ಧರಣೆಯೊಳಗೆ
ಹರಿಯ ಕರುಣಾಳು ತನಕೆ ಸರಿಯಿಲ್ಲ ಇಲ್ಲ
ಸುರರಿಗೆ ಸೋಜಿಗವೊ ಪರಮ ಪುರುಷ
ಹರಿ ವಿಜಯ ವಿಠ್ಠಲರೇಯ
ಶರಣ ಜನರ ಪೊರೆವ ಬಿರಿದು ಬಿಡನು ಕಾಣೊ ೨
ತ್ರಿವಿಡಿತಾಳ
ತನ್ನ ಉನ್ನತ ಭಕ್ತ ಮಾರುತ ದೇವನ್ನ
ಇನ್ನೀ ಸಂಕಲ್ಪಕ್ಕೆ ಲೇಶ ಕೊರೆತ ಮಾಡ
ಮುನ್ನೆ ರುದ್ರಾದಿಗಳು ಮಾಡಿದ ಸಂಕಲ್ಪ
ಛಿನ್ನ ಮಾಡಿ ಬಿಡುವ ನಿಮಿಷದೊಳಗೆ
ಘನ್ನ ಪರಾಕ್ರಮ ಕಾವ ಕರುಣಿ ತನಕೆ
ಮನೋ ವಾಚಾಯ ಎಣಿಸೆ ಸಿಗದು
ತನ್ನ ಇಚ್ಛೆ ಬಂದ ತೆರೆದಂತೆ ಮಾಡಿಸುವ
ಅನ್ಯರನು ಲೆಕ್ಕಿಸ ಕ್ಷಣವಾದರು
ಪನ್ನಗಧರ ಮಿಕ್ಕ ಸುರರೆಲ್ಲ ಅವರುಗಳ
ಚನ್ನಾಗಿ ಕೊಡುವಾಗ ಹರಿ ಪ್ರೇರಣೆ
ಎನ್ನಿಂದ ಕೊಡಿಸಿದನೆಂದು ತಿಳಿದರೆ ಅವರ
ಮನ್ನಿಸಿ ಪಾಲಿಸುವ ವಿನಯದಿಂದ
ಗಣ್ಯ ಇಲ್ಲದೆ ತಮ್ಮ ಸ್ವಾತಂತ್ರದಲಿ ಅವರ
ಉನ್ನತೋನ್ನತ ಕೊಡಲು ಕೆಡಿಸಿ ಬಿಡುವ
ಅನ್ನ ಕಲ್ಪಕ್ಕೆ ತನ್ನದೇಧೊರೆತನ ಹಿ
ರಣ್ಯ ಕೇಶಾದಿಗಳ ಬತ್ತಿ ಆಳ್ವ
ಬಣ್ಣಿಸಲಳವಲ್ಲ ಲಕುಮಿಕಾಂತನ ಮಹಿಮೆ
ಅನ್ಯಾಯದವನಲ್ಲ ನಿರ್ದೋಷನೋ
ನಿನ್ನೊಳಗೆ ನೀನು ತಿಳಿದು ಭೀತಿಯನ್ನು ಬಿಡು
ಬಿನ್ನಹವನೆ ಮಾಡು ಮನೋಧರ್ಮವ ಆಣು
ರಣುಮೂರ್ತಿ ವಿಜಯ ವಿಠ್ಠಲ ಪ್ರ
ಸನ್ನವದನ ತನ್ನ ನಂಬಿದವರು ಬಿಡನೋ ೩
ಅಟ್ಟತಾಳ
ನಂಬು ನಂಬು ಶ್ರೀ ಹರಿಯ ಪಾದಾಂಬುಜ
ನಂಬಿದ ಜನರಿಗೆ ಆವಾವಕಾಲಕ್ಕೆ
ಇಂಬಾಗಿ ಕ್ಷೀರಾಂಬುಧಿ ತಟಾಕದಲಿ
ತಂಬಾಲತನದಿಂದ ಇದ್ದಂತೆ ಕಾಣಿರೋ
ಹಂಬಲಿಸು ಹಗಲಿರಳು ನಿನ್ನೊಳಗೆ ಕು
ಟುಂಬಿ ಪಾಲಕ ನಾನ ವಿಚಿತ್ರಮಹಿಮನ್ನ
ಬೆಂಬಿಡದೆ ನಂಬು ನಂಬು ಭಯ
ವೆಂಬೊದೆ ನನಗಿಲ್ಲ ಲೇಶಮಾತುರ ಕೇಳು
ಕುಂಭಿನಿಪತಿ ನಮ್ಮ ವಿಜಯ ವಿಠ್ಠಲರೇಯ
ಡಿಂಬಿನೊಳಗೆ ನಿಂದು ಪಾಲಿಸುವನು ನಿತ್ಯ ೪
ಆದಿತಾಳ
ಧರಣಿ ರಮಣ ದಾಮೋದರ ವರಪ್ರದ ವಾರಿದವರ್ನ
ಸರಸಿಜನಾಭ ಸರ್ವೋತ್ತಮ ಶರಧಿಶಯನ
ಶರಣವತ್ಸಲ ಪರಮಪುರುಷ ಪಾವನ
ಹರಿ ನಾರಾಯಣ ಹಯಗ್ರೀವ ಸುರಾರ್ಚಿತ ಸುಖ
ಚರಣ ಗರುಡವಾಹನ ಗಂಗಾಜನಕ
ಅರದೂರ ಅನಂತರೂಪ ಸಿರಿಧರ ವಿಜಯ ವಿಠ್ಠ
ಲರೇಯನ ಸ್ಮರಣೆ ಮಾಡೆಲೊ ಈ
ಪರಿ ನಿನಗೆ ಕರಣಶುದ್ಧಿ ಭಯಗಳಿಲ್ಲವೊ ೫
ಜತೆ
ಜಯಶೀಲ ವಿಜಯ ವಿಠ್ಠಲನಂಘ್ರಿ ಬಿಡದಿರು
ಭಯವೆ ಕಾಣಿಸದಿದಕೊ ಎಲ್ಲಿದ್ದರಾದರು ೬

ಭಗವಂತನ ದರ್ಶನಕ್ಕಾಗಿ ಹಲವು

೭೨
ಝಂಪಿತಾಳ
ಭವರೋಗ ಪರಿಹರಿಸೋ ಭವ ರೋಗ ವೈದ್ಯ
ಭವಣೆ ಬಡಲಾರೆನೊ ಭವದೊಳಗೆ
ಭವದಿಂದ ಬಂದು ಸಂಭವನಾದೆ ನಾನಾಕ
ಭವನದೊಳಗೆ ಉದುಭವನಾಗುತ
ಭವಲಿಪ್ತರಾದ ಗುಂಭವನು ನೋಡಿದರೆ ಶು
ಭವನು ಕಾಣೆನೊ ವೈಭವದರಸೆ
ಭವತಾಪಕೆ ಭವನು ಪೋಗಲು ಸುಖಾನು
ನುಭವನು ಮಾಳ್ಪವರಾರು ಭವಸುರರೊಳು
ಭವ ವಿರಹಿತಕಾಯ ವಿಜಯ ವಿಠ್ಠಲ ದುರ್ಲ-
ಭವವನು ಮಾಡದಲೆ ಲಾಭವನೆನಿಸಿ ತೋರೋ ೧
ಮಟ್ಟತಾಳ
ಕಾಲಕರ್ಮ ಕಾಮ ಸ್ವಭಾವದಲ್ಲಿಂದ
ಮೇಲಾಗೇನೆಸಗಿದರು ಪೋಗದು ಭವರೋಗ
ಫಾಲದಲಿ ಬರೆದ ಬರೆದ ಲಿಖಿತಗಳು
ಶ್ರೀಲೋಲನೆ ನಿನ್ನ ಪಾದಾರ್ಚನೆ ಮಾಡೆ
ಮೂಲ ದುರ್ಲಿಪಿಗಳು ಜನುಮ ಜನುಮ ಭವ
ಮಾಲಿಕೆಗಳು ನಿವಾರಣವಾಗವೇನು
ಕಾಲಾದಿ ನಾಮಕನೆ ವಿಜಯ ವಿಠ್ಠಲ ನಿನ್ನ
ಆಳಾಗದಲೇವೆ ಆವ ಸಾಧನವಿಲ್ಲ ೨
ತ್ರಿವಿಡಿ ತಾಳ
ವರ ಪ್ರಲ್ಹಾದ ನಾರದ ಮುನಿಶುಕಪರಾ
ಶರನು ರುಕುಮಾಂಗದ ಗಂಗಾತನಯಾ
ನರ ಪುಂಡರೀಕ ಶೌನಕನಂಬರೀಷನು
ತರುಳ ಧ್ರುವನು ವಿದುರ ವಿಭೀಷಣಾ
ದ್ಯರು ನಿನ್ನ ಪಾದವ ನೆರೆನಂಬಿ ಭಜಿಸಿ ದು
ಸ್ತರವಾದ ಭವಾಂಬುಧಿ ಉತ್ತರಿಸಿದರು
ಕರಿರಾಜ ವರದ ಶ್ರೀ ವಿಜಯ ವಿಠ್ಠಲ ನಿನ್ನ
ಕರೆದಾರಲ್ಲದೆ ಭಾಗ್ಯ ಸುರಿದವರಾರಯ್ಯ ೩
ಅಟ್ಟತಾಳ
ಆವ ಭಕುತ ನಿನಗಾವ ವಸ್ತವನಿತ್ತ
ಆವ ಭಕುತ ನಿನಗಾವ ಪುರವನಿತ್ತ
ಆವ ಭಕುತ ನಿನಗಾವ ವಸನವಿತ್ತ
ಆವ ಭಕುತ ನಿನಗಾವಲ್ಲಿ ಉಣಿಸಿದ
ಆವ ಭಕುತ ನಿನಗಾವೆಡೆ ಸಲಹಿದ
ಆವಾವರಾದರು ಆವಾದಿತ್ತದು ಕಾಣೆ
ದೇವ ಎನಗೆ ಕರುಣಾವಲೋಕನದಿಂದ
ಸೇವೆಯ ಕೈಕೊಂಡು ಪಾವನ್ನ ಮಾಡುವುದು
ಮಾವ ಮರ್ದನರಂಗ ವಿಜಯ ವಿಠ್ಠಲರೇಯ
ಗೋವಿಂದನೆಂದೆಂಬೊ ಜೀವಾಳ ಭಕ್ತರಿಗೆ ೪
ಆದಿತಾಳ
ನಾರದ ಮನದಲ್ಲಿ ಅಕ್ರೂರನ್ನ ಮಾಡುವುದು
ಪಾರಾಶಾರಾಮಕ್ಕೆ ವಿದೂರನೆಂದೆನಿಸೋದು?
ಘೋರ ಕರ್ಮದ ತತಿಗೆ ತೋರು ವಿಭೀಷಣನಂತೆ
ವಾರವಾರದಲ್ಲಿ ಪಂಚ ಕ್ರೂರರಿಗೆ ಭೀಷ್ಮನೆನಿಸು
ಆ ರುಕುಮಾಂಗದ ವಿಟ್ಟಿಸಾರಿಗೆ ಎನ್ನ ಹೃದಯ
ವಾರುಣ ಪುಂಡರೀಕ ಸೇರಿ ಶುಕನಂತೆ ಪೊಳೆದು
ಮೂರುತಿಯ ಕಾಣಿಸುತ್ತ ಚಾರು ಪ್ರಲ್ಹಾದನಂತೆ ಮಾಡೊ
ಭಾರಿ ದೈವವಂಬರೀಷ ಕಾರುಣ್ಯದಲ್ಲಿ ನಿನ್ನ
ಆರಾಧಿಸುವ ನಿನಗೆ ಮಾರಿ ಮೃತ್ಯು ಭವದ ಭೀತಿ
ದೂರವಲ್ಲದೆ ಸಾರೆವುಂಟೆ
ವಾರಿಧಿ ಶಯನ ನಮ್ಮ ವಿಜಯ ವಿಠ್ಠಲ ನಿನಗೆ
ಆರಾದರೂ ನಿತ್ಯವಾರಡಿಯಿಲ್ಲದವರು ೫
ಜತೆ
ಅವರವರರಿತು ಕಾಯುವ ವಿಜಯ ವಿಠ್ಠಲ
ಅವನೀಶಾ ಎನ್ನರಿತು ಪೊರೆದು ಪಾವನ ಮಾಡೊ ೬

ಭಗವಂತನೆಂಬ ಭೂತ ಸೋಕಿದೆ

೬೫
ಧ್ರುವತಾಳ
ಭಾರತಾಖ್ಯದ ಕಥೆ ಭೂರಿಜನರು ಕೇಳಿ
ಸಾರಲು ನಿತ್ಯ ಸಂಸಾರದಿಂದಲಿ ಬಲು
ದೂರನಾಗಿ ದುಃಖ ನಿವಾರಣದಲ್ಲಿ ಗತಿಗೆ
ದಾರಿಯಾಗುವುದು ವಿಸ್ತಾರವಾದ ಸುಂ
ದಾರ ಜ್ಞಾನ ಭಕುತಿ ವೈರಾಗ್ಯ ಫಲಿಸಿ ಉ
ತ್ತರಿಸುವುದು ಮತಿಯಾ ದಾರಾಪುತ್ರಾದ್ಯರಿಂದ
ನಾರಾಯಣನು ಭೂಭಾರ ಇಳುಹುವೆನೆಂದು
ಕಾರುಣ್ಯದಲ್ಲಿ ಸುರವರ ಮಿಕ್ಕಾದವರಿಗೆ
ನಿರೂಪಿಸಿದ ಕರ್ಮ ಧಾರುಣಿಯೊಳಗವ
ತಾರವ ಮಾಡಿರೆಂದು ಸಾರಿ ಬೀಳ್ಕೊಟ್ಟು ತಾನೆ
ಸುರರಾಯನ ಕುಮಾರಗೊಲಿದು ಅವ
ತಾರ ಮಾಡಿ ಯಶೋದಾಗರದಲ್ಲಿ ಬೆಳೆದು
ಜಾರ ಚೋರನೆನಿಸಿ ನಾರಿಯರ ಸಂಗಡ
ಪಾರ್ಯಾಡಿ ಗೋಕುಲ ಉದ್ಧಾರಗೈಸಿದ ದೇವ
ಕ್ರೂರ ದೈತ್ಯರ ಸಂಹಾರವ ಮಾಡಿ ವೇಗ
ನೀರ ನಿಧಿಯೊಳಗೆ ದ್ವಾರಕಾಪುರ ಬಿಗಿದು
ಸಾರಿ ಸಾರಿಗೆ ಹದಿನಾರು ಸಾವಿರ ಸತಿಯರ ಕೂಡಲಿ ಸಾ
ಕಾರದಿಂದಲಿ ನೆರದ ವಾರಿಜಗಲ್ಲದ ಚಾರುವಂಶಕ್ಕೆ ಅಂದು
ಕೌರವ ಪಾಂಡವರು ಬ್ಯಾರೆ ಬೆಳೆದರಯ್ಯಾ
ವೈರಾವೆ ಪೆಚ್ಚಿ ಮತ್ಸರದಲಿ ಮಸಗಿ
ವಾರ ವಾರಕೆ ಬಿಡದೆ ವಾರಣಾವತಿಯಲ್ಲಿ
ಕ್ರೂರರು ಸಜ್ಜನರು ಈ ರೀತಿಯಲ್ಲಿ ಇದ್ದಾ
ಪಾರವಾಗಿ ಸಂಚಾರ ಮಾಡಿದರವರು
ಶ್ರೀ ರುಕ್ಮಿಣಿಯರಸ ವಿಜಯ ವಿಠ್ಠಲರೇಯಾ
ಪರಾಶರನ ಕುಮಾರ ಮನ್ನಿಸಲಾಗಿ ೧
ಮಟ್ಟತಾಳ
ಕುರುವಂಶದವರು ಹರುಷದಿಂದಲಿ ಬೆಳೆದು
ಗುರುದ್ರೋಣನಲ್ಲಿ ಶರಧನುಸಿನ ವಿದ್ಯಾ
ಅರಿತರು ಐವರು ಎರಡೈವತ್ತು ಜನರು ಸಹವಾಗಿ
ಪರಿ ಪರಿ ಬಗೆಯಿಂದ ಕುರುಪಿತಾಮಹನ
ಕರುಣದಿಂದಲಿ ಎಲ್ಲಾ ಸರಿ ಸರಿ ಬಂದಂತೆ
ಇರುತಿರೆ ಸರ್ವದಾ ಭರತಕುಲದವರು
ಅರಿತನ ಬಳಸುತ ಬೆಳಸುತ್ತಾ
ಮರಳೆ ಕುಂತಿಸುತರೆ ಸುರಪನ ಪ್ರಸ್ತದಲಿ
ಅರಗಿನ ಮನೆಯೊಳಗೆ ಇರಿಸಿ ಕಿಚ್ಚನೆ ಹಚ್ಚೆ
ಪರಿಘ ಪರಿಹರಿಸಿ ವೃಕೋದರನು ವನದೊಳು
ಸುರವೈರಿಯ ಕೊಂದು ವರಕುವರನ ಪೆತ್ತಾ
ಬರುತ ಏಕ ಚಕ್ರನಗರದಲ್ಲಿ
ತಿರಿದುಂಡು ಮಹಾದುರಳ ಬಕಾಸುರನ
ವರಿಸಿ ಭೂಸುರನಿಗೆ ಹರುಷವ ತೋರಿ ಆ
ಪುರವ ಪಾಲಿಸಿ ಐವರು ಅಲ್ಲಿಂದಲಿ
ತೆರಳಿ ಬರುತಲಿದ್ದು ಸರಿತೇಲೆ ಅಂಗಾರಾ
ವರಮನ ಭಂಗಿಸಿ ಧರಣಿ ಸುರರವೇಷ
ಧರಿಸಿ ಪಾಂಚಾಲನಪುರಕೆ ನಡೆ ತಂದು
ಅರಸರುಗಳು ಬಂದಿರಲು ಸ್ವಯಂವರಕೆ
ಶಿರವ ತೂಗಿ ನೋಡಿ ಪರಿಹಾಸ್ಯ
ಮಾಡಿದರು ಮನದೊಳಗೆ
ಹರಿಪಾದಂಗಳ ಸ್ಮರಿಸುತ್ತ ಗುಪ್ತದಲ್ಲಿ
ಅರರೆ ಇತ್ತಲು ಮಹಾ ಶರಾಸನವನು ಎತ್ತಿ
ಸರಿಯಾ[ಗಿ] ಹೊಡೆದು ತೀವರ ಗೆಲುವೆಂದು
ಪರಿಕ್ರಮದಲಿ ಶಲ್ಯ ತರಣಿ ತನಯಕರ್ನ
ಬಿರಿದಿನ ನಾನಾ ಅರಸುಗಳು ಎತ್ತಿ ತರಹರಿಸಿಕೊಳ
ಲರಿಯದೆ [ಧಾ]ರುಣಿಗೆ ಹೊರಳಿ ಲಜ್ಜಿತರಾಗಿ
ತಿರುಗಿ ಪೋಗಲು ಇತ್ತ ನರನು ಭೀಮನ [ಆ] ಜ್ಞೆ
ಧರಿಸಿ ಬಿಂಕವ ತಾಳಿ ಭರದಿಂದಲಿ ಎದ್ದು
ನಿರೀಕ್ಷಿಸಿ ಚಾಪವ ಕರದಲ್ಲಿ ಪಿಡಿದು ಸರಸದಿಂದಲಿ ನಗುತ
ಪರಮಸಖನಾದ ವಿಜಯ ವಿಠ್ಠಲನ್ನ
ಸ್ಮರಿಸಿದ ಮರಿಯಾದೆ ಕರಣ ಶುದ್ಧನಾಗಿ
ರೂಪಕ ತಾಳ
ಬಿಲ್ಲು ಏರಿಸಿ ಹೊಡೆದು ನಿಲ್ಲಲೀಯದೆ ಸ್ವಾಹಾ
ವಲ್ಲಭಾ ಉ[ದ್ಭ]ವಳಾ ಸೊಲ್ಲಿಲಿ ಮೆಚ್ಚಿಸಿ
ಎಲ್ಲೆ ಕೌತುಕವೆಂದು ಶಲ್ಯಾದಿಗಳು ಬರಲು
ಜೊಳ್ಳು ತೂರಿದಂತೆ ಎಲ್ಲರ ಓಡಿಸಿ
ಅಲ್ಲಿಂದ ಜನನಿಯ ಸೊಲ್ಲಾನೆ ಲಾಲಿಸಿ
ಬಲ್ಲಿದರು ತಾವು ಬಲ್ಲದೇ ಕೈಕೊಂಡು
ಉಲ್ಲಾಸದಲಿ ಬದರಿಯಲ್ಲಿಯಿಪ್ಪನ ದಯ
ದಲ್ಲಿ ಕೃಷ್ಣೇಕರ ಪಲ್ಲವ ಪಿಡಿದರು
ಎಲ್ಲ ಲೋಕಂಗಳು ತಲ್ಲಣಿಸುವಂತೆ
ಸಲ್ಲಲಿತ ವಾದ್ಯದಲ್ಲಿ ಧ್ವನಿ ತುಂಬೆ
ಬಳ್ಳಿತಾದ ಒಂದು ಹಲ್ಲಿನ ಗಜವಿಂಡು
ಹಲ್ಲಣಿಸಿದ ವಾಜಿ ಬೆಳ್ಳಿ ಹೇಮ ರತುನಾ
ಪಲ್ಲಕ್ಕಿ ಪೊಂಬಟ್ಟಿಮಲ್ಲರು ಕಾಲಾಳು
ಸೊಲ್ಲು ಪೇಳುವ ಭಟರು ಚಲ್ಲಕಂಗಳ ಚಲುವ
ಮಲ್ಲಿಗೆ ಮುಡಿಯುವರು ಖುಲ್ಲರ ಬಡಿದ ಪ್ರತಿ
ಯಿಲ್ಲದಾಯುಧ ನಾನಾ ಉಳ್ಳ ದ್ರವ್ಯ ಬಳಗೆ
ದಲ್ಲಿ ದ್ರುಪದರಾಯಾ ನಿಲ್ಲಾದೆ ಐವರಿಗೆ
ಸಲ್ಲಿಸಿ ಬೀಳ್ಕೊಡಲು ನಲ್ಲಳ ಕೊಡಿಕೊಂ
ಡಲ್ಲಿಂದ ಗಜಪುರದಲ್ಲಿ ಬಂದು ತಾ
ವೆಲ್ಲರು ಸುಖ ಬಡೆ ಮಲ್ಲರ ಬಲರೆದೆ
ದಲ್ಲಣ ವಿಜಯ ವಿಠ್ಠಲ ದಯದಿಂದ ಎಳ್ಳನಿತಳುಕದೆ ೩
ಝಂಪೆತಾಳ
ದುರುಳರು ಪಾಂಡವರ ಪರಮ ಸೌಖ್ಯ[ವ]ನೋಡಿ
ಧರಿಸಲಾರದೆ ಕುಹಕ ಚರಿತೆಯನು ನೆನೆದು ಸೋ
ದರ ಮಾವ ಶಕುನಿಯಿಂದ ಬೆರಸಿ ಯಮತನುಜನ್ನ
ಕರಿಸಿ ಪಣವನು ಮಾಡಿ ಸರಸರನೆ ಪಗಡಿಯನು
ಹಿರಿದಾಗಿ ವಂಚಿಸಿ ದುರ್ಯೋಧನನು ಹಿಂದೆ
ಅರಸುಯಾಗದಾ ಭಂಗ ಸ್ಮರಿಸಿಕೊಳ್ಳುತ ಲೆತ್ತ
ವಿರಚಿಸಿ ಹಾಕಿ ನಿಂದಿರದೆ ಸೋಲಿಸಿ ಯುಧಿ
ಷ್ಟರನ ಹರಿಗೊಂಡವರಾ ತುರಗಾದಿ ಸಂಪತ್ತು
ಭರದಿಂದ ಶೆಳೆದೆಗದು ಪರಾಭವೈದಿಸಿ
ತರಿಸಿ ದ್ರ್ರೌಪದಿಯ ಎಳೆತರಿಸಿ ಸಭೆಯೊಳಗೆ ಅಂ
ಬರವನ್ನು ಸುಲಿಯಲೀ ಹರಿಯೇ ದ್ವಾರಕಾಪುರದ
ಅರಸೇ ಪಾಲಿಪುದೆಂದು ಮೊರೆಯಿಡಲು ಅಕ್ಷಯ
ಕರುಣದಿಂದಲಿ ಈಯೇ ಪರಿಪರಿ ವಸನಗಳು
ಧರೆಮೇಲೆ ಸುಮೇರುಗಿರಿಯಂತೆ ಕಾಣಿಸಲು
ಅರಿದಾಗಿ ಸಕಲ ಸುಜನರ ಪೊಗಳಿ ಮೈಮುರಿಯೆ
ಕುರುಹು ಇಡುವನಾರು ಸಿರಿಪತಿಯ ಲೀಲೆಗೆ
ವರವೃಕೋದರರು ಅಬ್ಬರಿಸೀ ಬೊಬ್ಬಿರಿದರೀ
ಕುರುಪತಿ ಮಿಕ್ಕಾದಾ ಅರಸುಗಳನಾ ರಣದಲಿ
ಒರಸದಲೆ ಬಿಡೆವೆಂದು ಗರಗರನೆ ಪಲ್ಲಡಿಯೆ
ತರಹರಿಸಲಾರದೆ ಕರೆದು ಪಾಂಚಾಲಿಯ
ತೆರೆದು ತೊಡೆಗಳಲ್ಲಿ ಕುಳ್ಳಿರು ಬಾ ಎಂದು ಮೂರ್ಖ
ಬಿರದು ನುಡಿಯಿಂದ ಉತ್ತರವಾಡಲಾಕ್ಷಣ
ಉರಗಾದಿಗಳಿಗೆಲ್ಲ ಪಿರಿಯಳೆನಿಸಿದ ದೇವಿ
ಕೆರಳಿದಳು ಎಲೋ, ನಿನ್ನ ಮರಣ ತೊಡೆತಗಳಿಂದ
ಬರಲೆಂದು ಶಾಪಿಸಿ ಮೊಗದಿರುಹಿ ಘುಡಿಘುಡಿಸಿದಳು
ತರುವಾಯ ಪಾಂಡವರು ತೆರಳಿದರು ಕಾನನಕೆ
ಪರಿಜನರಾಗ ಸಹಿತ ನಿಂದರು ಒಂದು ಸ್ಥಳದಲ್ಲಿ
ಪರಮ ಋಷಿಗಳು ತಮ್ಮ ಪುರೋಹಿತರೊಡನೆ ನಿತ್ಯ
ವರ ಅಕ್ಷಯ ಪಾತ್ರಿ ಹರಿಯಿತ್ತದಾರಿಂದ
ತರಿಸಿ ನಿರ್ಮಳ ಭೂಮಿಸುರರಿಗೆ ಉಣಿಸುತ್ತ
ಸುರಲೋಕಕ್ಕಿಂತಧಿಕ ಧರಿಗೆ ತೋರಿಸಿದರು
ಪರಿಣಾಮವೇನೀವಾ ವಿಜಯ ವಿಠ್ಠಲರೇಯನ
ನೆರೆನಂಬಿ ಹನ್ನೆರಡು ವರುಷ ವ್ರತವ ಧರಿಸಿದರು ೪
ತ್ರಿವಿಡಿ ತಾಳ
ಗ್ರಾಸಗೋಸಗ ಅತ್ರಿ ಋಷಿಯ ನಂದನ ದೂ
ರ್ವಾಸ ಶಿಷ್ಯರ ಸಹಿತ ಬಂದು ಬೇಡೆ
ಆ ಸಮಯದಲಿ ಚಿಂತಿಸಿ ಪಾಂಡವರ ಸತಿ
ವಾಸುದೇವನೆ ಗತಿ ಎಂದು ಕರಿಯೇ
ಲೇಶವಾದರು ತಡಿಯದೇ ಬಂದು ಆ ಕ್ಷಣ
ಭಾಸಾದಿಂದೊಪ್ಪುವ ಪಾತ್ರಿಯೊಳಗೇ
ಮೀಸಲ ಬಂದು ಶಾಕದಳ ಕಲ್ಪಿಸಿ
ತಾ ಸವಿದು ಮುನಿಗೆ ತೃಪ್ತಿಯ ಬಡಿಸೀ
ಲೇಸು ಮಾಡಿ ರಂಗಾ ಭಕ್ತರಿಗೆ ವರವಿತ್ತು
ವಾಸಕ್ಕೆ ಪೋಗಲು ಇತ್ತಲಾದ ಚರಿತೆ
ಈಶನೊಡನೆ ಕಾದಿ ಪಾರ್ಥ ಭಕ್ತಿಲಿ ಒಲಿಸಿ
ಪಾಶುಪತಾಸ್ತ್ರವ ಪಡೆದು ಸ್ವರ್ಗಕ್ಕೆ ಪೋಗಿ
ಕ್ಲೇಶ ಬಡಿಸುವ ನಿವಾತಕವಚರ ಸದದು
ದೋಷವ ತೋರಿ ಊರ್ವಶಿಯ ಗೆದ್ದು
ದೇಶ ದೇಶಗಳ ತೀರ್ಥಯಾತ್ರಿಯ ಚರಿಸಿ
ವಾಸವಾಗಿ ಹಿಂದೆ ದ್ವಾರಿಕೆಯಲ್ಲಿ ಯತಿ
ವೇಷದಿಂದ ಪಾರ್ಥಾ ನಾಲ್ಕು ಮಾಸಾ
ಮೋಸ ಮಾಡಿ ಸುಭದ್ರೆಯಿಂದ ತಂದಾತಾ
ಸಾಸಿರಾಕ್ಷನ ಸುತಾ ಅಗ್ರಜರ ಬಲಗೊಂಡಾ
ದೋಷಿ ಸೈಂಧವನನ್ನು ಪಿಡಿದು ರಥಕೆ ಕಟ್ಟಿ
ಪಾಶವ ದ್ರೌಪದಿ ಪದದಿಂದ ಬಿಡಿಸಿ ನಗುತ
ಘಾಸಿಯಾಗಿ ಚಿತ್ರರಥನ ಕೈ ಸೇರಿದಾ
ಆ ಸುಯೋಧನ ಕರ್ನಾದಿಗಳ ಕಾಯ್ದು
ವಾಸಿಯಿಂದಲಿ ಧರ್ಮನಂದನ ತಿರುಗಿದ
ಕಾಶಿ ರಾಮೇಶ್ವರ ಮಿಕ್ಕ ಯಾತ್ರೀ
ಏಸೇಸು ಬಗೆಯಿಂದ ಮಾಡಿ ಮುನಿಗಳ ಕೂಡ
ರಾಸಿ ಪುಣ್ಯವನು ಗಳಿಸಿಕೊಂಡೂ
ದೋಷತಟ್ಟಿದ ನಹುಷನೃಪನ ಶಾಪವ ಕಳೆದು
ದ್ವೇಷ ತಾಳಿದ ವಿಹಂಗಮನ ಒಡಂಬಡಿಸಿ
ರೋಷದಿಂದಲಿ ಭೀಮ ಮಣಿಮಂತನ ಕೊಂದು
ಸುಸೌಗಂಧಿ ಪುಷ್ಪ ಸತಿಗೆ ಇತ್ತಾ
ಈಸುಬಗೆ ಧರ್ಮಾವೃತ ವೃತಂಗಳು ವೇದ
ವ್ಯಾಸನಿಂದಲಿ ತಿಳಿದು ರಹಸ್ಯದಲ್ಲಿ
ಶ್ರೀಶನ ಕೃಪೆಯಿಂದ ಸೈರಂದ್ರಿ ಸಹಿತ ಮ
ತ್ಸ್ಯೇಶನ ಪುರದಲ್ಲಿ ಕಾಲಕಳೆದೂ
ಭೀಷಣನಾಗಿದ್ದ ಕೀಚಕನ್ನ ನೆಲಕೆ
ಬೀಸಿ ಬಿಸುಟು ಭೀಮಾ ಮೆರದ ಕೀರ್ತಿಯನು
ದ್ವೇಷವ ತಾಳಿ ದುರ್ಯೋಧನ ಕರ್ಣ
ದುಃಶಾಸನ ಒಂದಾಗಿ ಬಲವೇರಿಸೀ
ಭಾಷೆಗಳಾಡಿ ಗೋವಿಂಡು ತಿರುಹಲಾಗಿ
ಸುಶರ್ಮನ ಪಿಡಿದು ಮತ್ಸ್ಯನ್ನ ಬಿಡಿಸಿದರು
ವಾಸವಸುತ ಪೋಗಿ ಒಂದೇ ರಥದಲ್ಲಿ
ಭೀಷ್ಮದ್ರೋಣ ಕರ್ಣಾದ್ಯರ ವಂಚಿಸಿ
ಭೂಷಣವೆಬ್ಬಿಸಿ ಗೋಗ್ರಹಣದಲ್ಲಿ ವೀರ
ವೇಷವ ತೊಟ್ಟು ತಟ ಮಾಡದೇ
ಘೋಶಬ್ದ ಆಕಾಶದಲ್ಲಿ ಪುಟ್ಟಿ ಆಕಳ ಶರೆ
ಹಾಸಮೊಗದಲ್ಲಿ ಪಾರ್ಥಾ ಬಿಡಿಸಿ ತಂದೂ
ದೇಶದೊಳಗೆ ಪ್ರ[ಕ]ಟರಾಗಿ ರಾಯ ಸಿಂ
ಹಾಸನ ಹತ್ತಿದ ಸುತ್ತಾ ವಾಲೈಸಲು
ಆ ಸೌಭದ್ರಂಗೆ ವಿರಾಟನ್ನ ತನುಜಿಯಾ
ಶಾಶಿದಳಿದರು (?)ಶುಭ ಮುಹೂರ್ತ ನೋಡಿ
ಕೋಶ ತುರಗ ಗಜ ಮುಂತಾದ ಭಾಗ್ಯದಲ್ಲಿ
ಶಾಶ್ವತ ಮತಿಯಲ್ಲಿ ಮೆರಿಯೆ ವಾದ್ಯ
ಘೋಷಣಪೆಚ್ಚಿ ಸತ್ಕೀರ್ತಿ ತುಂಬಿತು ನಾನಾ
ದೇಶದೊಳಗೆ ಅಂದು ಧರ್ಮಜರಿಗೆ
ಭೂಸುರರು ಬಂದು ಜಯವಾಗಲಿಯೆಂದು
ಆಶೀರ್ವಾದವ ಮಾಡಿ ಮಂತ್ರಪೇಳೆ
ಕೇಶವ ಮುರಹರ ವಿಜಯವಿಠ್ಠಲ ತನ್ನ
ದಾಸರ ಪಾಲಿಪ ಬಳಿಯಲ್ಲಿ ಇದ್ದೂ ೫
ಧ್ರುವತಾಳ
ಮಂದರಧರ ಕುಂತಿ ನಂದನರ ವನವಾಸ
ಹಿಂದುಗಳೆವೆನೆಂದು ಅಂದು ನೆನೆದು ಅವ
ರಿಂದ ಮನೋಧರ್ಮವ ಒಂದೊಂದು ತಿಳಿದು ಆ
ನಂದ ಮಯನು ನಡೆತಂದ ಅಲ್ಲಿಂದ ಮುನಿ
ವೃಂದಗಳೊಡಗೂಡಿ ಶ್ಯಂದನವೇರಿ ನಲ
ವಿಂದ ಹಸ್ತಿನಾವತಿಗೆ ಸಂಧಿಗೋಸುಗ ತೆರಳಿ
ಒಂದು ಶ್ರೀ ಹರಿ ದಾಸಿ ನಂದನನ ಮನೆಯಲ್ಲಿ
ಒಂದು ಕುಡುತೆ ಪಾಲಿನಿಂದ ಹಸಿವೆ ಕಳೆದು
ಬಿಂದು ನೋಡಲು ಮಹಾ ಸಿಂಧು ಮಾಡಿ ತೋರಿದೆ
ಅಂಧ ನೃಪನ ನಿಜ ಕಂದನ್ನ ಉಪಚಾರ
ಒಂದೂ ಕೈಕೊಳ್ಳದಲೆ ಕುಂದುಗಳೆಣಿಸಿದೆ

ಭಗವಂತನು ಭಕ್ತನಿಗೆ ಒಲಿಯುವನೊ?

೭೩
ಧ್ರುವತಾಳ
ಭೀತಿಗೊಳಿಪುದೇನೊ, ಭವದೂರ ಎನ್ನ ಕೂಡ
ನೀತವಲ್ಲವು ಕಾಣೋ ನಿನಗಿನಿತು
ಮಾತು ಮಾತಿಗೆ ನಿನ್ನ ಪದನಖಗುಣ ಒಂದು
ಮಾತರ ಬಿಡದಲೆ ನೆನೆಸುತಿಪ್ಪೆ
ಆತುರದವ ನಾನು ಅನಂತ ಜನುಮದಲ್ಲಿ
ಯಾತಕೆನ್ನಯ ಕೂಡ ಈ ತೆರನೋ
ಪ್ರೀತಿಯಾದವನೆಂದು ಪರಿ ಪರಿ ಭಕುತರು
ನೀತಿಯಿಂದಲಿ ಪೊಗಳಿ ಹಿಗ್ಗಿ ಹಾರೈಸೆ
ನಾ ತಡಿಯಾದೆ ಬಂದೆ ನಾನಾವತಾರನೆ
ಸೋತವನ ಕೂಡ ವಿಜಯವೇನೊ
ಮಾತಾಪಿತರು ಸರ್ವ ಬಂಧು ಬಳಗವೆಲ್ಲ
ಭೂತಳದೊಳಗೆ ನೀನಲ್ಲದೇ ಇಲ್ಲ
ಖ್ಯಾತಿ ಪೋಗಾಡದಿರು ಕ್ಷುದ್ರನ್ನ ಬಳಲಿಸಿ
ಮಾತು ಮಾಣಿಕ ಕಾಣೊ ಬಲ್ಲವರಿಗೆ
ನಾ ತಡಹೇನೊ ನೀನು ಎನ್ನ ಮಾತಾಲಿಸೊ
ದಾತ ಭಕ್ತವತ್ಸಲ ಬಿರಿದುಳ್ಳ ದೊರೆಯೆ
ನೂತನದೇನಾದರು ಕೈಕೊಂಡು ಉದ್ಧರಿಸೊ
ಜಾತರಹಿತ ಶಿರಿ ವಿಜಯ ವಿಠ್ಠಲ ಹರಿ ೧
ಮಟ್ಟತಾಳ
ಅರಿಯದಲ್ಲಿ ಆಗಾರದೊಳಗೆ ಒಂದು
ಹಿರಿಯ ಮೃಗಸಿಂಹ ತಿರುಗಿದೋಪಾದಿಯಲಿ
ಧರಣಿಯೊಳಗೆ ಎಲ್ಲರಿಗೆ ಬಲ್ಲಿದನಾಗಿ
ಹಿರಿಯ ದೈವವೆಂದು ಕರೆಸಿಕೊಂಡು ನಿತ್ಯ
ಮೆರವೋದು ಬಲು ಘನತನವೊ ಹರಿ ಕೇಳು ನಿನ್ನ
ನಿರುತ ಭಜಿಪ ಭಕ್ತರ ಬಳಿಯಲಿ ನಿಂ
ದಿರುದು ನಿನ್ನ ಮಾಯ ಪರಿಪರಿ ಒಂದರಘಳಿಗೆ ಬಿಡದೆ
ಸ್ಮರಣೆಯ ಕೈಕೊಂಡು ಮರೆ ಮೋಸದ ಮಹಾ
ಶರಧಿಯ ದಾಟುವುದು, ಅರಿತವರ ಮುಂದೆ ಗರುವಿಕೆ ತಾಳಿದರೆ
ಪರಾಕು ಮಾಡದೆ ಬಿಡರು ಚರಿಸಿದ ನಡತೆಗಳ
ಕರುಣಾ ಜಲನಿಧಿ ವಿಜಯ ವಿಠ್ಠಲನೇ ದಾ-
ಸರ ಕೊಡಲಿ ನಿನ್ನ ಸರಕು ಮಾರದು ಕಾಣೊ ೨
ತ್ರಿವಿಡಿತಾಳ
ಹುಬ್ಬಿನ ನಡುವೆ ಪುಟ್ಟಿದ ಭಕ್ತನು ನಿನ್ನ
ಗಬ್ಬಿನಾರಿಯ ರೂಪ ಬಯಸೀದನದಕೊ
ಅಬ್ಧಿಯೊಳಗೆ ಸುರರು ಕುಗ್ಗಿ ನಿನ್ನ ಕರದು
ಅಬ್ಬರದಲಿ ಬೆಟ್ಟ ಹೊರಸೀದರದಕೊ
ಶಬ್ದದ ಬಿಗಿವಿಲಿ ಹೆಣ್ಣಿಗೋಸುಗ
ತಬ್ಬಿಬ್ಬಿ ಭೀಷ್ಮನು ಗೋಳಿಸೀದನದಕೋ
ಹಬ್ಬೀಗಿಕ್ಕಿ ತಮ್ಮ ಮನಸಿಗೆ ಬಂದಂತೆ
ಯಬ್ಬಟೆಗೊಲ್ಲರು ಆಡಿದರದಕೊ
ಮಬ್ಬುಚರನು ಅಲ್ಪದಾನವನ್ನೇ ಇತ್ತು
ಹೆಬ್ಬಾಗಿಲ ಮುಂದೆ ಇಟ್ಟನದಕೊ
ಉರ್ಬಿಯೊಳಗೆ ನಿನ್ನ ಮಾವನು ಮಾಣಿಕ
ಎಬ್ಬಿಸಿದಾನೆಂದು ನುಡಿದನದಕೊ
ಈ ಬಗೆ ಮಾಡಿದ ಭಕುತ ಜನಕೆ ನೀನು
ದಬ್ಬಿದರು ಪೋಗದಲೆ ಒಡನಾಡುವೆ
ಗುಬ್ಬಿಯಾ ಮರಿಯಂತೆ ಮುದುಡಿಕೊಂಡು ನೀರ
ಬೊಬ್ಬುಳಿ ತೆರನಂತೆ ದೇಹಸಿದ್ಧ
ಅಬ್ಬಿದನತಿ ಸ್ಮರಣೆ ಮಾಡಿ ಮುಕುತಿಗೈವ
ನಿಬ್ಬಣದವರೊಡನೆ ಇಪ್ಪರನ
ಶಬ್ಧಕ್ಕೆ ಮೈಗೊಡದೆ ಅಡಗಿ ಅಂಜುವುದೇನು
ಅಬ್ಬರ ದೈವವೆ, ನೆಚ್ಚಿದವರ ನೆಂಟ
ಅಬ್ಧಿಶಯನರಂಗ ವಿಜಯ ವಿಠ್ಠಲ, ಎ
ನ್ನೊಬ್ಬನ ಕೂಡಲಿ ನಿನ್ನ ಕಪಟತನವೆ ೩
ಅಟ್ಟತಾಳ
ಮಾಡಿದವರು ಎಲ್ಲ ಮಾಡಿ ಹೋದರು ಇಂದು
ನೋಡಿದವರು ಏನೇನು ಮಾಡಿದರೆಂಬ ಗಾದೆ
ನಾಡೊಳಗಾಯಿತು ಆಡಲೇನು ನಾನು
ಬೇಡಿ ಕಾಡಿ ನಿನ್ನ ಆಡಿಕೊಂಬುವರ
ನ್ನಾಡಿ ಬಿಡದೆ ಕೊಡಲಾಡಿದ ದೇವ
ಈಡಾರು ನಿನಗೆ ನೀ ಮಾಡಿದ ಚೇಷ್ಟಿಗೆ
ಈಡಾವುದೊ ಮಾತನಾಡೆನೊ, ಇದಿರಾಗಿ
ಗೂಢ ಮಹಿಮ ನಮ್ಮ ವಿಜಯ ವಿಠ್ಠಲರೇಯ
ಕೂಡದು ನಿನಗೆನ್ನ ಕೂಡಮಾಡುವುದು ೪
ಆದಿತಾಳ
ಥಳ್ಕಾನೆ ಪೊಳೆದು ಒಳಗೆ ಬೆಳ್ಕಾನೆ ಮಾಡುವುದು ಕಿಂ-
ಜಲ್ಕಾವಾಸನೆ ಮನದ ಮಲ್ಕಾನೆ ವಿಂಗಡಿಸುತಾ-
ಕಿಲ್ಕಿಲಿ ನಗುತಾ, ಜಗವ ಗುಳ್ಕಾನೆ ನುಂಗವ ದೇವ
ನಿಲ್ಕಾದು ನಿನ್ನ ಮಹಿಮ, ಬಲ್ಕುಣಿದು ತುತಿಸಿದರು
ಕೊಳ್ಕಮತಿ ಬಿಡಿಸಿ, ಬಲು ಪುಳ್ಕೋತ್ಸಹದಲಿ ಇಟ್ಟು
ಶಿಲ್ಕಿದ ಮಾನವನ್ನ ತಳ್ಕಿಕ್ಕು ಭಕುತಿಯೊಳು
ತಿಲ್ಕಾಣೆ ಅಷ್ಟಾದರೊಂದು ಘಲೆನಿಸುವರುಂಟೆ
ತಳ್ಕದು ನಿನ್ನಯ ಸ್ತೋತ್ರ ಕಲ್ಕಾಲಾ ಗುಣಿಸಾದು
ವಲ್ಕಾಂಬರಧರ ಪ್ರೀಯ ವಿಜಯ ವಿಠ್ಠಲರೇಯ
ಬಳ್ಕುತ ಭಕ್ತರ ಮುಂದೆ ಘಲ್ಕೆನುತ ಕುಣಿದಾಡುವನೆ ೫
ಜತೆ
ಆರಾ ಜ್ಞಾನವೇನೊ, ಎನಗದರ ಗೊಡವ್ಯಾಕೆ
ದೂರ ನೋಡದೆ ಕಾಯೊ ವಿಜಯ ವಿಠ್ಠಲರಂಗ೬

ಇದು ಭೀಮಸೇನನ ಸ್ತೋತ್ರವಾಗಿದೆ.

ಭೀಮಸೇನ ಸ್ತೋತ್ರ
೧೫೪
ಧ್ರುವತಾಳ
ಭೀಮಸೇನನೆ ಪೂರ್ಣ ಕಾಮನೆ ಸುರಸಾರ್ವ
ಭೌಮನೆ ಸತತ ಭೂಮಿಭಾರವ ಹರಣಾ
ಸೀಮಾರಹಿತ ಗುಣ ಮಹೋದಧಿಯೇ ನಿ
ಷ್ಕಾಮ ಫಲವನೀವ ಭಾವಿ ಬೊಮ್ಮ
ಭೀಮಾವತಾರ ಸ್ಮರಾನನ ಪ
ರಮ ರಾಜೇಶ್ವರ ರಣರಂಗ ಧೀರ
ಕೋಮಲ ಕಾಯ ಮೂಲಾವತಾರ ಭಿನ್ನ
ಸೋಮ ಕುಲೋದುಭವ ಪಾಂಡವ ಕುವರು
ತ್ತಮಾಂಗ ಮರಕತ ಮಕುಟಧರಾ
ಕಾಮಿನಿಗೆ ಸೌಗಂಧಿಕ ಕುಸುಮವನಿತ್ತ
ಸಾಮ ವಿಖ್ಯಾತರಿಪು ಸಾಮಜ ಬಲವ
ವ್ಯೋಮಕ್ಕೆ ತೆಗಿದಿಟ್ಟ ಎಲ್ಲರೊಳಗೆ ಧಿಟ್ಟ
ಶ್ರೀ ಮರುತನೆ ದ್ವಾಪರದ ಚರಿತ
ತಾಮಸ ಲೋಕಕ್ಕೆ ಕೆಡಹುವ ವೀರ್ಯಾ
ಕುಮತಿ ಕೀಚಕ ಕಿರ್ಮೀರ ಬಕ ಹಿಡಿಂ
ಬ ಮಣಿಮ ಮಾಗಧ ವೈರಿ
ಮಾಮನೋವಲ್ಲಭ ವಿಜಯ ವಿಠ್ಠಲ ಕೃಷ್ಣನ
ನಾಮವನೆನಿಪ ಪೂರ್ಣಾನಂದ ಮಹಿಮಾ ೧
ಮಟ್ಟತಾಳ
ಗುರುವೆ ಮೂಲ ಗುರುವೆ, ಗುರುವೆ ಪರಮ ಗುರುವೆ
ಗುರುವೆ ಜಗದ್ಗುರುವೆ, ಗುರು ವಿಶ್ವ ಗುರುವೆ
ಗುರುವೆ ನಿತ್ಯ ಗುರುವೆ ಗುರುವೆ ಲಕ್ಷಣ ಗುರುವೆ
ಗುರುವೆ ಶಾಂತ ಗುರುವೆ ಗುರುವೆ ಎನ್ನ ಗುರುವೆ
ಗುರುಗಳಿಗೆ ಗುರುವೆ ಗುರುರಾಜವರ್ಯಾ
ಗುರುಕುಲೋತ್ತಂಗ ಗುರುಶಿರೋಮಣಿ
ಗುರುದಾತ ನಮ್ಮ ವಿಜಯ ವಿಠ್ಠಲನ್ನ
ಗುರುಲಘು ಮೂರ್ತಿಯ ಗುರು ಎಣಿಪ ಗುರುವೇ೨
ತ್ರಿವಿಡಿತಾಳ
ವಿಷದ ಲಡ್ಡಗಿ ಸವಿದು ದಕ್ಕಿಸಿಕೊಂಡ ಮಹಬಲ ಎನ್ನ
ವಶವೇ ಪೊಗಳಲು ನಿನ್ನ ಅಸಮಶೌರ್ಯ
ವಸುಧಿಯೊಳಗೆ ನಿನ್ನ ಪೆಸರೇ ಅನ್ಯರಿಗೆ ಕ
ರ್ಕಶವಾಗಿದೆ ನೋಡು ಅಸುಗ ದೈವಾ
ಕುಶಲ ಮತಿಯಲಿ ಅರ್ಚಿಸಿದ ಜನಕೆ ಪೀ
ಯೂಷ ಪಾನದಧಿಕ ಸಂತಸವಾಗೋದು
ಬೆಸಸ ಬಲ್ಲೆನೆ ರಕ್ಕಸರೆದೆ ಶೂಲನೇ
ಹಸನಾಗಿ ಎನ್ನ ಪಾಲಿಸಬೇಕೋ ಜೀವೇಶ
ಅಸುರಧ್ವಂಸಿ ನಮ್ಮ ವಿಜಯವಿಠಲನಂಘ್ರಿ
ಎಸಳು ಬಿಡದೆ ನೆನೆಸುವ ವೃಕೋದರಾ ೩
ಅಟ್ಟತಾಳ
ರೋಷದಿಂದಲಿ ದುಃಶ್ಶಾಸನ್ನ ಸಂಗಡ
ನೀ ಸಮರದಿ ವೀರ ವೇಷವ ಧರಿಸಿ ದು
ಮೋಸದ ಗುಣ ಕುಲನಾಶಿಕ ಕರ್ಮಿಯಾ
ಬೀಸಿ ಗದೆಯಿಂದ ಲೇಸಾಗಿ ಹೊಡೆದಪ್ಪ
ಳಿಸಿ ನೆಲಕೆ ಬೀಳಲೀಸಿದ ಈಗವನ ಭಂ
ಗಿಸಿ ಮುಂದುರವಣಿಸಿ ಅಂದಿನ ಮಾತೆ
ಣಿಸಿ ರೋಷಗಡಿ ಸಂತೋಷದ ಕೇಳಿಕೆ
ಈ ಸಮಸ್ತರು ಒಪ್ಪಿಸಿ ಕೊಟ್ಟರು ನಿನ್ನ
ಬೀಸರಕ್ಕೆ ಒಬ್ಬ ಆಶೆಯಾಗುವನಲ್ಲ
ದೇಶವೆಲ್ಲಿದೊ ರಾಣಿವಾಸವೆಲ್ಲಿದೊ ಬಹು
ಕೋಶವೆಲ್ಲಿದೊ ವಾದ್ಯ ಘೋಷವೆಲ್ಲಿದೊ ಇಂದು
ದ್ವೇಷಿಗ ಮಾರಿಗೆ ಗ್ರಾಸವಾಗು ಪೋಗು
ಈ ಸಮಯದಲ್ಲಿ ಬಿಡಿಸುವರಾರೆಂತೊ
ವಾಸುದೇವ ಕೃಷ್ಣ ವಿಜಯ ವಿಠ್ಠಲನಂಘ್ರಿ
ದಾಸನು ಅವನ ಆಭಾಸ ಮಾಡುತಲಿಪ್ಪ೪
ಆದಿತಾಳ
ಪದತಳದಿಂದ ಒರೆಸಿ ಕದನದಲ್ಲಿ ವೈರಿಯ
ಬದಿ ಬಗಲನು ತಿವಿದು ವದನದೊಳಗೆ ಉಗಳಿ
ರದನದ ಮುರಿದಿಟ್ಟು ಕುಟ್ಟಿ ಮ್ಯಾಲೊದದು ಅಟ್ಟಹಾಸದಲಿ
ಎದಿಯ ಮೇಲೆ ಕುಣಿದು ಉದರವನ್ನೇ ಬಗೆದು
ಮಿಂದು ಕರುಳ ತೆಗೆದು ಭೂಮಿಗೆ ಈಡಾ
ಡಿದನು ಅರ್ಥಿಯಲ್ಲಿ ಸುದತಿ ನೋಡುತಿರೆ
ಅದುಭುತ ಚರಿತ ಅವನ ರುಧಿರವ ಪಿಡಿದು ಸವ
ರಿದ ಸರ್ವರು ನೋಡಲು ಸದಮಲ ದೇವಿಯ
ಹೃದಯ ತಾಪವೆ ಕಳೆದು ಪದೋಪದಿಗಾನಂದ
ಉದಧಿಯೊಳಗೆ ನೋಡೆ ಎದಿರಾರೀತಗೆ
ತ್ರಿದಶರೊಳಗೆ ಇಲ್ಲ ಕದನ ಮಧ್ಯದಲ್ಲಿ ಮೌ
ನದಲ್ಲಿ ಎಲ್ಲರೂ ಇರೆ ಹೃದಯನಿರ್ಮಳ
ನಮ್ಮ ವಿಜಯವಿಠ್ಠಲಗರ್ಪಿ
ಸಿದ ತನ್ನ ಸಾಹಸವ ಮುದದಿಂದ ನಲಿಯುತಾ೫
ಜತೆ
ಅರಿ ಭಯಂಕರ ಭೀಮ ವಿಜಯವಿಠ್ಠಲ
ನರಹರಿ ಮನಮೆಚ್ಚಿ ನಡೆದಾ ಭೀಮಾವತಾರಾ೬

ಪಾಂಚಭೌತಿಕವಾದ ದೇಹದ ಸೃಷ್ಟಿಯ

೬೬
ಧ್ರುವ ತಾಳ
ಭೂತ ಸೋಕಿತು ಕಾಣೋ ಯಾತರ ವರ್ನಾವೊ
ಮಾತು ಲಾಲಿಸೆ ವಿಪರೀತವೆನಿಸುತಿದೆ
ಜಾತಿ ಮತ್ತಾವದೊ ಜಾತವೆಂಬೊದೆ ಇಲ್ಲಾ
ಗಾತುರ ನೋಡಿದರೆ ಭೀತಿ ನಿರ್ಭೀತಿ ಬಪ್ಪದು
ಶಾತಕುಂಭದವನ ಜಾತ ಭವಾಂಡದ ಸ
ಪೂತಾವರಣ ಅವ್ಯಾಕೃತ ಗಗನ ಸಮೇತ ತೊಲಗದೆ
ವ್ಯಾಪುತವಾಗಿವೆ ಇದರ ಭೀತಿಗೆ ಬ್ರಹ್ಮಾದ್ಯರು
ಧಾತುಕೊಡುತಲಿರೆ ಭೂತಳದೊಳಗುಳ್ಳ
ರಾತಿ ಆರಾತಿಗಳಿಗೆ ದ್ವೈತ ಅದ್ವೈತವೆಂದು
ತಾ ತಿಳುಪೀರ್ವಾರೊಳು ಪಾತಕಕೊಬ್ಬನ ಮು
ಕುತಿಗೆ ಒಬ್ಬನ ಈ ರೀತಿಯಲ್ಲಿ ಕಳುಹಿ
ಪ್ರೀತನೆನಿಸುವದು ಚೇತನ ಅಚೇತನ
ವಾತದೊಳಗೆ ಮಹದ್ಭೂತವಾಗಿಪ್ಪ ವಿಖ್ಯಾತ ಭೂತ ಕಾಣೋ
ಜ್ಯೋತಿ ಸ್ವರೂಪ ನಮ್ಮ ವಿಜಯ ವಿಠ್ಠಲ ಸರ್ವ
ಭೂತರ ಮಧ್ಯದಲಿ ಭೂತಿ ಉಳ್ಳದು ಎನ್ನು ೧
ಮಟ್ಟತಾಳ
ಶಿರನಯನ ಕರ್ನ ವರ ನಾಶಿಕ ವದನ
ಕರತೋಳು ಭುಜ ಕಂಠ, ಉರ ಉದರ ನಾಭಿ
ಶಿರಸ ಕಟಿ ಊರು ಮೆರೆವ ಜಾನುಜಂಘ
ಚರಣ ಬೆರಳುಗಳು ಮಿರಗುವಾಭರಣ ಸ
ದ್ಭರಿತ ಜ್ಞಾನಾನಂದ ಸುಂದರ ಶಾಮವರ್ನಾ
ಪರಿಪೂರ್ಣ ಮಹಿಮ ಪರಕೆ ಪರಾತ್ಪರ
ಸರಿ ಸರಿ ಬಂದಂತೆ ನಿರೀಕ್ಷಿಸಲು ಇದರ
ಕುರುಹು ಕಂಡವರಾರು ಪರೋಕ್ಷದಲ್ಲಿ ಕೇಳಿ
ಚರ ಮನಕೆ ದೂರ ಅ
ಪರೋಕ್ಷದಲ್ಲಿ ಸ್ತುತಿಸಿದರೆ ಧ್ಯಾನಕ್ಕೆ ದೂರ
ಪರಿ ಪರಿ ನೋಡಿದರೆ ಪರಿಮಿತವಾದ ಸು
ಚ್ಚರಿತ ನಿರ್ಮಳ ಕಾಯ ಪರಿ ಪರಿಯಲ್ಲಿವೆ
ಸುರರ ಮಸ್ತಕ ಮಣಿ ವಿಜಯ ವಿಠ್ಠಲನೆಂಬೊ
ಗರುವ ಭೂತಕೆ ಎಲ್ಲಿ ಸರಿಗಾಣೆ ಜಗದೊಳು ೨
ತ್ರಿವಿಡಿ ತಾಳ
ಏಕೋವಿಷ್ಣು ಮಹದ್ಭೂತನೆಂಬೊ ಭೂತ
ಸೋಕಿದ ಮನಜನ ಭಾಗ್ಯಕ್ಕೆ ಕಡಿಯಿಲ್ಲಾ
ಲೋಕದೊಳಗುಳ್ಳ ಭೂತ ಪ್ರೇತದ ಗಂಡಾ
ತಾಕ ಬಾರದಿದು ತಾಕಿದರೇ ಬಿಡದು
ಆಕಾರ ನೋಡಿದರೆ ಆರಿಗೆ ವಶವಲ್ಲಾ
ಆಕಾಶಕೆ ನೂರ್ಮಡಿ ಒಂದೇ ಎನಿಸುತಿದೆ
ನಾಕಾದಿ ಜನರಿಗೆ ಮೀರಿದ ಭೂತಾ ಅ
ನೇಕ ಕೈ ಕಾಲು ಕಿವಿ ವದನದಲ್ಲಿಪ್ಪದು
ಲೌಕಿಕದಲಿ ನೋಡೆ ಲಕ್ಷಣೊಂದು ಪರಿ
ನಾ ಕಾಣೆ ನಾ ಕಾಣೆ ಭೂತದುಚ್ಚಾರಣೆ
ಕಾಕುಲಾತಿ ಇದಕೆ ಎಳ್ಳಿನಿತು ಇಲ್ಲಾ
ತಾ ಕೊಡುವದು ಹೊಡಿಸಿಕೊಂಡವರಿಗೆ ಪುರುಷಾರ್ಥ
ಪ್ರಾಕೃತದೊಳಗಿದ್ದದಲಿ ಈ ಭೂತ ಬೇರೆ
ಶೋಕ ಕಳೆವದು ಸಾರಿದವರಿಗೆ ಪುಣ್ಯ
ಶ್ಲೋಕ ಭೂತ ವಿಜಯ ವಿಠ್ಠಲ ಇಂದೆ
ಏಕಾರಣವಾದರೂ ಸಾಕದು ಬಿಡದು ೩
ಅಟ್ಟತಾಳ
ಮಂತ್ರಕೆ ಹಣಿಯದು ಯಂತ್ರಕೆ ಹಣಿಯದು
ಎಂಥೆಂಥ ದಿಗ್ಬಂಧ ಅಂತಂತೆ ಮಾಳ್ಪುದು
ಪಂಥವಾಡಿದವರ ತಂತುಗೆಡಿಸುವುದು
ಸಂತತ ಸಂತರ ಅಂತರಂಗದೊಳಿದ್ದು
ಚಿಂತೆಗೆ ಇಕ್ಕಿ ಏಕಾಂತಕ್ಕೆ ಎಳೆವುದು
ಭ್ರಾಂತಿಯಗೊಳಿಸಿ ನಿಶ್ಚಿಂತನ ಮಾಡೋದು
ದಾಂತ ಭೂತವಿದು ಶಾಂತ ಭೂತದು
ಅಂತಕನಾಳಿಗೆ ಅಂತಕನಾಗಿದೆ
ಪಿಂತೆ ಮುಂತೆ ಸರ್ವತಂತು ಬಲ್ಲದು ಕಾಣೊ
ಹೊಂತಕಾರಿ ಇದರಂತದ ಸಂದಿಲಿ
ನಿಂತೀಗ ಮುಕುತಿವಂತರು ಬೊಮ್ಮಾಂಡ
ಅಂತ ಗಾಣರು ತಾವೆಂತು ಎಣಿಸಲು
ಎಂಥ ಭೂತವಿದು ಜಂತುಗಳಿಗೆ ಒಂದು
ತಂತಿಯನ್ನೆ ಹೂಡಿ ಗ್ರಂಥಿಯ ಬಿಗಿದು ಆ
ದ್ಯಂತ ಕಾಲದಲ್ಲಿ ಸಂತಿಗೆ ಬಂದವರಂತೆ ಕೂಡಲಿಟ್ಟು
ತಂತಿಯ ಬಗಿದಾಡುವಂತೆ ಮಹಾಭೂತ
ನಿಂತಲ್ಲಿ ನಿಲ್ಲದು ಚಿಂತಿಗೆ ಸಿಗದು
ಪಂಥಗಾರರರಸ ವಿಜಯ ವಿಠ್ಠಲ ಭೂತ
ಚಿಂತಾಮಣಿಯೋ ನೆನೆವರ ಅಂತರಂಗದಲ್ಲಿ ೪
ಆದಿತಾಳ
ಹೊಡೆಯೆ ಈ ಭೂತ ಬಿಡದು ಎಂದೆಂದಿಗೆ
ಕೆಡಹಲಾಹದು ಭವದ ಮಡುವಿನೊಳು ನಮ್ಮನ್ನು
ಒಡನೆ ತಿರುಗುವದು ಒಡಲಿಗೆ ಬೇಡದು
ತಡಿಯದೆ ನಾಮಾಮೃತ ಕುಡಿಸುವುದೊಲಿದು
ಅಡಿ ಬಂದು ತೊಲಗದೆ ಹಿಡಕೊಂಡು ಇಪ್ಪದು
ಎಡೆಗಿಡಿಪ ಭೂತಕ್ಕೆ ಘುಡಿಸಿ ಹುಂಕರಿಪದು
ತೊಡೆ ಕಾಲು ಮತ್ತೊಂದರ ತೊಡಕಗೊಡದೆ ಬೆನ್ನು
ಬಿಡದೆ ತನ್ನ ಮನಿಯ ವಡಿವೆಂದು ಕಾಯುವುದು
ನಡೆ ನುಡಿ ತಪ್ಪಿದರು ಬಡಿಬೀಸಿ ಬೀಸಾಟದೆ
ಕೊಡುವುದು ಅಭಯದವರೊಡೆ ಪೋಗಲೀಸಾದು
ಕಡು ದಯಾನಿಧಿ ಭೂತ ಪೊಡವಿಯೊಳಿದು ಕಾಣೊ
ಉಡಲುಂಟು ಉಣಲುಂಟು ಇಡಲುಂಟು ತೊಡಲುಂಟು
ಬಿಡದಿರಿ ಬಿಡದಿರಿ ಕೆಡದಿರಿ ಕೆಡದಿರಿ
ಸಡಿಲಿದ ಮ್ಯಾಲದರ ಪಿಡಿಯಲೊಶವಲ್ಲ
ದೃಢಮನವ ಮಾಡಿ ಸಂಗಡಲೆ ಕೈವಲ್ಯವ
ಕೊಡುವುದು ತಡೆಯದಲೆ ಮೃಡಾದಿಗಳಿಗೆ
ಬಡವ ಬಲ್ಲಿದ ನೆನದೆ ಕಡೆ ಮಾಡುವುದು ಒಮ್ಮೆ
ನುಡಿದರೆ ವೇಗದಿಂದ ಒಡಲೊಳಗೆ ಪೊಂದಿ
ಕಡಲ ಶಯನ ನಮ್ಮ ವಿಜಯ ವಿಠ್ಠಲಭೂತ
ಬಡಿಯದಿದ್ದರೆ ದುಃಖ ಪಡಬೇಕು ನಿತ್ಯದಲ್ಲಿ ೫
ಜತೆ
ಭೂತ ಸೋಕಿದವಗೆ ದೂಷಣ ಭೂಷಣವೇನು
ವಾತವಂದಿತ ವಿಜಯ ವಿಠ್ಠಲ ಬಲ್ಲದೇ ಸರಿ೬

ಇದು ವರಹಾವತಾರವನ್ನು ವಿವರಿಸುವ

ವರಾಹ ಸ್ತೋತ್ರ
೧೧೪
ಧ್ರುವತಾಳ
ಭೂವರಾಹ ಅವತಾರ ಶೃಂಗಾರ ಗುಣಾಕಾರಾ
ದೇವರ ದೇವನೆ ಧಾರುಣೀಧರ ದಾ-
ನವರ ವಿಪಿನ ಕುಠಾರ ಕಲುಷಹರಾ
ಸ್ಥಾವರ ಜಂಗಮ ಜಠರದೊಳಗೆ ಇಟ್ಟ
ಶ್ರೀವರ ಸರ್ವಸಾರಭೋಕ್ತ ಶ್ರೀಮದನಂತ
ಜೀವರಾಖಿಳರಿಗೆ ಬಲು ಭಿನ್ನ ದಯ ಪಾ-
ರಾವಾರ ಮೂರುತಿ ಸುರನರೋರಗ ಪಾ-
ರಾವಾರ ವಿನುತಾ ವಿನುತಜ ಗಮನಾ ಕ್ಷೀರ
ವಾರಿಧಿ ಶಯನಾ ವಾರಿಜನಯನಾ ಇಂ-
ದೀವರ ಶ್ಯಾಮ ಶ್ರೀ ವಿಜಯ ವಿಠ್ಠಲರೇಯಾ
ತಾವರೆ ಜಲದೊಳಗಿದ್ದಂತೆನ್ನೊಳಗಿಪ್ಪಾ
ಭೂವರಹಾವತಾರಾ ೧
ಮಟ್ಟತಾಳ
ಸುರರನು ಬೆಂಬುತ್ತಿ ಧರಣಿಯನು ಕಿತ್ತಿ
ಸುರುಳಿಯ ಮಾಡಿ ಸುತ್ತಿ
ಭರದಿಂದಲಿ ಎತ್ತಿ ಇರಿಸಿದ ದುರ್ಮತ್ತಿ
ಧರುಣಿಯ ನಿಜಪತ್ತಿ ವಿಜಯವಿಠ್ಠಲ ಮೂರ್ತಿ-
ಮೆರೆದನು ಸತ್ಕೀರ್ತಿ ಧರುಣಿಯ ನಿಜಪತ್ತಿ೨
ರೂಪಕ ತಾಳ
ಅಸುರ ಕನಕಾಕ್ಷನು ವಸುಧಿಯಾ ಎಳೆದೊಯ್ದು
ರಸಾತಳದೊಳಗೆ ಇರಿಸಿದನಂದೂ
ರಸಹೀನವಾಗೆ ವೀರಸರಾಗಿ ಪೋಗಿ, ಸುಮ-
ನಸರು ಚಿಂತೆಯಲಿ ಕಾಣಿಸದೆ ಪುಣ್ಯ-
ಬಿಸಜಭವನೆಡೆಗೆ ಅಸುರರಿಪುಗಳು ಪೋಗಿ
ಪುಸಿಯಾದೆ ಬಿನ್ನೈಸಿ ವಸುಧಿಯಾ ಸ್ಥಿತಿಯಾ
ಪಶುಪತಿ ಪಿತ ತಿಳಿದು ವಿಜಯ ವಿಠ್ಠಲರೇಯಗೆ
ಹಸುಳೆಯಂದದಲಿ ಉಬ್ಬಸವ ಪೇಳಿದನು೩
ಝಂಪಿತಾಳ
ಸೂಕರ ರೂಪವತಾಳಿ ಕೋರಿದಾಡಿಲಿಂದ
ಭೀಕರ ಶಬ್ದದಿ ದಶದಿಶೆಗಳೆಲ್ಲ ಬೀರುತ್ತ
ಭೂಕಂಪಿಸುವಂತೆ ಘುಡಿಘಡಿಸೆ ಘೋಷವ
ಲೋಕೇಶ ಮುಖ್ಯರು ಸುರರೆಲ್ಲ ಸುಖಬಡಲು
ಶೋಕವಾಯಿತು ದೈತ್ಯಾವಳಿಗೆ ವೇದಗಳು
ವಾಕು ತೊದಲನುಡಿ ಗದಗದನೆ ಕೊಂಡಾಡೆ
ವೈಕುಂಠಪತಿ ನಮ್ಮ ವಿಜಯ ವಿಠ್ಠಲನು ವಿ
ವೇಕರನೊಡಗೂಡಿ ನೂಕಿದನು ಬಲವಾ ೪
ತ್ರಿವಿಡಿ ತಾಳ
ಇಳಿಯಾ ಬಗಿದು ರಸಾತಳಕೆ ನಿಲ್ಲದೆ ಪೋಗಿ
ಪೊಳೆವ ದಾಡಿಲಿಂದ ಖಳನ ಕುಕ್ಕಿರಿದೊ
ಕೋಳಾಹಳವೆಬ್ಬಿಸಿ ನೆಲಕೆ ಅಪ್ಪಳಿಸಿ
ಬಲು ಬಲವಂತನಾದವನಾ
ಅಳಿದು ಅಕ್ಷಣದಲ್ಲಿ ನೆಲಕೆ ಕೆಡಹಿ
ನೆಲನಾ ಪಲುದುದಿಯಲಿ ಪೊತ್ತುಕಿಲಿ
ಕಿಲಿ ನಗುತಾಲಿಪ್ಪ ಹಲವು ಮಾತಿಲಿ
ಜಲಜನಾಭನೆ ನಮ್ಮ ವಿಜಯ ವಿಠ್ಠಲರೇಯಾ
ವೊಲವಕಿಟಿದೇವಾನೆ ಇಳಿಯ ಭಾರಹರಣಾ೫
ಅಟ್ಟತಾಳ
ನಾರಾಯಣ ಕೃಷ್ಣ ಅಚ್ಚುತ ಗೋವಿಂದ
ನಾರದ ವರದ, ಗೋವಿಂದಾನಂತಾ
ಶೌರಿ ಮುರಾರಿ ಮುಕುಂದ ಸದಾನಂದಾ
ಶ್ರೀ ರಮಣನೆ ಜ್ಞಾನಪುಂಜಾನೆ ಕುಂಜರ
ದಾರುಣ ದೈತ್ಯಾರಿ ಕಾರುಣ್ಯ ಮೂರುತಿ
ಈ ರೀತಿಯಲಿ ಸ್ತೋತ್ರ ಧಾರುಣಿದೇವಿ ಅ
ಪಾರವಾಗಿ ಮಾಡೆ ಮಾರಜನಕ
ಹರಿ ವಿಜಯ ವಿಠ್ಠಲರೇಯಾ
ಗೀರವಾಣರ ಪ್ರತಿ ಸಾರವ ಹರಿಸಿದಾ ೬
ಆದಿತಾಳ
ದುಂದುಭಿ ಮೊರೆಯೆ, ಮೇಲೆ ಮಂದರ ಮೊಗ್ಗೆಗರಿಯೆ
ಗಂಧರ್ವಾದಿಗಳು ನಾರಂದ ತುಂಬುರಾರು ನಿಂದು
ಛಂದಾಗಿ ಪಾಡುತ್ತ ನಂದಾದಿಂದ ನಲಿದಾಡೆ
ಇಂದುವಿನೊಳು ಕಳಂಕ ಪೊಂದಿದಂತೆ ದಾಡೆತುದಿಗೆ
ಸುಂದರ ವಸುಂಧರವು ಛಂದದಿಂದ ಒಪ್ಪುತಿರೆ
ಮಂದಾಕಿನಿಜನಕ ವಿಜಯ ವಿಠ್ಠಲ ಉರ
ಗೇಂದ್ರ ಗಿರಿಯಲ್ಲಿ ಬಂದು ನಿಂದ ನಿಗಮಗೋಚರ ೭
ಜತೆ
ಸ್ವಾಮಿ ಪುಷ್ಕರಣಿಯವಾಸಿ ಕ್ರೋಡವೇಷಾ
ಭೂಮಿರಮಣ ನಮ್ಮ ವಿಜಯ ವಿಠ್ಠಲ ತಿಮ್ಮಾ ೮

ಭಗವಂತನು ನಮ್ಮ ದೇಹೇಂದ್ರಿಯ

೬೭
ಧ್ರುವತಾಳ
ಭೌತಿಕಾತ್ಮಕ ದೇಹ ಬಹು ಜನ್ಮ ಕರ್ಮದಿಂದ |
ಭೂತಳದೊಳು ಬಂದ ಸ್ಥಿತಿಯ ನೋಡು |
ಚಾತುರ್ಭಾಗ ಪ್ರಥಿವಿ ತ್ರಿಭಾಗವಾರಿ ಬಂದು |
ಜ್ಯೋತಿರ್ಭಾಗದಿಂದ ಸುತ್ತುತಿದಕೊ |
ಧಾತು ಸಪ್ತಗಳುಂಟು ಪಂಚಕೋಶಾತ್ಮಕ ಈ |
ಗಾತುರ ಸಪ್ತೆರಡು ಸಾವಿರ ನಾಡಿ |
ಮಾತ್ರಾ ಸ್ಪರ್ಶ ಕರ್ಮ ಜ್ಞಾನೇಂದ್ರಿಯ ಕಾಲ ಯೋಗ |
ವಾತ ಗಗನ ವ್ಯಾಪ್ತಿಯಿಂದ ಸಿದ್ಧ |
ಶ್ವೇತ ರಕುತ ನೀಲ ವರ್ಣಗುಣತ್ರಯ |
ಶೀತೋಷ್ಣ ಸೂಕ್ಷ್ಮ ಸ್ಥೂಲ ಜ್ಞಾನಾ ಜ್ಞಾನಾ |
ತಾತ್ವಿಕ ಮೊದಲಾದ ದೇವತೆಗಳಿಪ್ಪರು |
ಸಾತ್ವಿಕ ರಾಜಸ ತಾಮಸ ದೇಹದಿ |
ಪೂತುರೆ ಒಂದೊಂದು ರೂಪಾಂತರ ಆ |
ಧ್ಯಾತುಮ ಅಧಿದ್ಯೆವ ಅಧಿ ಭೌತಿಕ |
ಖ್ಯಾತರಾಗಿ ಒಂದಂಗವ ಧರಿಸಿ ಪ್ರ |
ಜ್ಯೋತಿಯಂತ ಪೊಳೆವುತ ತ್ರಿಸ್ಠಾನದಿ |
ಆತುಮ ಕರಣ ಭೂತ ಪ್ರವೇಶಿಸಿ ಕೊಂಡು |
ವ್ರಾತ ಕರ್ಮಗಳೆಲ್ಲ ಮಾಡಿಸುವರೊ |
ಧಾತ ವಾತರೊಂದಾಗಿ ರುದ್ರಗೆ ರುದ್ರ ಪುರು |
ಹೂತ ಈ ಕ್ರಮದಿಂದ ಗ್ರಹಿಸು ಗುಣಿಸು |
ಭೂತಾದಿ ಹತ್ತೊಂಭತ್ತು ತತ್ವಂಗಳು ವಿ |
ಜಾತಿ ಪೆಸರಿನಲ್ಲಿ ಕರೆಸುತಿವಕೋ |
ಪ್ರಾತಃ ಕಾಲಾದಿವಿಡಿದು ದಿನಾಂತ ಕಾಲಕ್ಕೆ |
ಈ ತೆರದಲಿ ತಿಳಿ ನಾಡಿಯೊಳಗೆ |
ಶ್ರೌತ ನಿರ್ಣಯದಿಂದ ನಿಶ್ಚಯ ಮಾಡಿ ನಿ |
ರ್ಭೀತನಾಗೆಲೊ ಮನುಜಾ ಬದ್ಧದಿಂದ |
ತಾತ ತುಂಗ ಮಹಿಮ ವಿಜಯ ವಿಠ್ಠಲರೇಯ |
ಪ್ರೀತನಾಗುವ ಸತತ ಇನಿತು ಕೊಂಡಾಡಲು ೧
ಮಟ್ಟತಾಳ
ಏಕೋತ್ತರ ಶತನಾಡಿಗಳು ಮುಖ್ಯ |
ಲೋಕಾಂತರದ್ವಯಕೆ ಪೋಪ ಪೋಗಿ ಬರುವ |
ಸಾಕಾರ (ಸೌಕರ್ಯ) ಮಾರ್ಗ ಸಿದ್ಧವಾಗಿದೆ ನೋಡು |
ಈ ಕಾಯದೊಳಗೆ ಪಂಚ ಪ್ರಭೇದ ವಿ |
ವೇಕ ಮತಿಗಳಿಗೆ ತ್ರಿವಿಧ ತೋರುತಲಿದೆ |
ಏಕ ದ್ವಿತೀಯ ತೃತೀಯ ನಾಲ್ಕು ತತ್ವಾತ್ಮಕ ನಾಡಿಗಳೆನ್ನಿ |
ವಾಕು ಮೊದಲು ಮಾಡಿ ಇಂದ್ರಿಯಂಗಳಿಗೆ |
ಆಕಾರವಾಗಿ ಪೊಳೆವುತಲಿವೆ ಭೌ |
ತೀಕ ಸಂಬಂಧದ ತತ್ವ ಭಾಗ ಪ್ರಚುರ |
ಪ್ರಾಕೃತ ಬಾಹ್ಯದಲಿ ಸುತ್ತಿಕೊಂಡಿದೆ ನಿತ್ಯ |
ಶಾಖಾನಾಡಿಗಳನೇಕವಾಗಿವೆ ಬಲ ಎಡಭಾಗವೆ ವಿಡಿದು |
ಶ್ರೀಕಾಂತ ನಮ್ಮ ವಿಜಯ ವಿಠ್ಠಲರೇಯ |
ನಾಕ ಜನರೊಡನೆ ವಾಸವಾಗಿಯಿಪ್ಪ ೨
ತ್ರಿವಿಡಿ ತಾಳ
ಪ್ರಧಾನ ನಾಡಿಗಳು ಐದು ಅದರ ಮುಸುಕಿ |
ಭೇದನಾಡಿಗಳು ಸಪ್ತೆರಡು ಸಹಸ್ರ |
ಆಧಾರವಾಗಿವೆ ಶರೀರದಲಿ ಮಹ |
ಬೂೀಧಮಾನವರೆಲ್ಲ ಗ್ರಹಿಸಬೇಕು |
ಈ ದೇಹದಲಿದ್ದ ನವಕೋಟಿ ಛಿದ್ರಗಳು |
ಸಾದಿವಿಡಿದುವುಂಟು (?) ನಾಡಿಗಳಲ್ಲಿ |
ಶೋಧಿಸಿ ನೋಡಿದರು ಒಂದೊಂದರಲಿ ರಂಧ್ರ |
ಪಾದಾದಿ ವಿಡಿದು ಮಸ್ತಕ ತನಕ |
ಐದೈವತ್ತು ಮ್ಯಾಲೆ ಭಾವಿಸು ಅಹರ್ನಿಶಿ |
ಮೋದ ಧ್ಯಾನದಿಂದ ಗುಣಿಸು ಎಣಿಸು |
ಹಾದಿಯಾಗುವುದು ಇಹದಲ್ಲಿ ಸಾಧನಕೆ ಪಾ |
ಪೋದಧಿ ಬತ್ತುವುದು ತಡವಿಲ್ಲದೆ |
ಸಾಧಾರಣವಲ್ಲ ಕಂಡವರಿಗೆ ಪ್ರಾಪ್ತಿ |
ವೈದೀಕ ಬಲ್ಲವಗೆ ಬಲು ಸುಲಭವೊ |
ಮೇಧ ನಾನಾದಾನ ವ್ರತ ಧರ್ಮ ಸರ್ವದ |
ಮೇದಿನಿಯೊಳು ಬಲುನೆಸಗಲೇನು |
ಸಾಧನವಾಗೊ (ಗ) ದು ಅಪರೋಕ್ಷಕೆ ಜ |
ನ್ಮಾದಿಗೆ ಇದುಕಾರಣ ವಹದು |
ಆದಿ ಮೂರುತಿ ನಮ್ಮ ವಿಜಯ ವಿಠ್ಠಲನ್ನ ಪ್ರ |
ಸಾದವಾಗದೆ ಇದು ದೊರಕಬಲ್ಲದೆ ಮರುಳೆ ೩
ಅಟ್ಟತಾಳ
ಮನಸು ತ್ರಿವಿಧವೆನ್ನು ಇದೆ ಅನಂತವಾಗಿ |
ಅಣು ಮಾತ್ರವಾದರು ವ್ಯಾಪಿಸಿಕೊಂಡಿದೆ ಅಂಶ ಅಂಶಿಗಳಿಂದ |
ಕ್ಷಣ ಪ್ರತಿಕ್ಷಣಕೆ ಪಾಪ ಪುಣ್ಯ ಮಾಳ್ಪದು |
ದನುಜಾರಮರಲ್ಲಿ ಅಭಿಮಾನಿಗಳೆನ್ನು |
ಅನಿತರೊಳಾಗೆ ಕೇಳಿ ತಿಳಿವ ಬಗೆಯುಂಟು |
ಅನುಮಾನ ಇದಕಿಲ್ಲ ಅಂದಾಂತರ ಬಾಹ್ಯ |
ಮನಸು ಸೂಕ್ಷ್ಮ ಸ್ಥೂಲ ಪೂರ್ವೋತ್ತರ ಕ್ರಮ |
ಅನಿಮಿಷ ಗಣ ತಾರತಮ್ಯ ಸಾಂಶರು |
ಕ್ಷಣ ಲವ ತೃಟಿ ಕಾಲ ಕಾಷ್ಠಾ ನಿಮಿಷ ಮೂಹೂರ್ತ |
ದಿನ ವಸ್ತ ಮಾನವ ಪಕ್ಷಮಾಸ ಋತು ಅ |
ಯನ ಸಂವತ್ಸರ ವತ್ಸರ ಇಳ ಪರಿ |
ಅನುವತ್ಸರ ಅರುವತ್ತು ಪುರಾವರ್ತಿ ಜನನ |
ಯೋನಿಗಳ ಭೇದ ತತ್ತದ್ದೇಹ ಗತಿ |
ಇನಿತು ಯುಗ ಮಹಯುಗ ಮತ್ತೆ ಚತುರ್ದಶ |
ಮನುದಿನ ಬ್ರಹ್ಮಾಯು ಪರಿಮಿತದ ಕಾಲ |
ಘನವಾಗಿ ತಿಳಿವುದು ಕಲ್ಪಭೇದಗಳಿಂತು |
ಎಣಿಸು ಈ ಪರಿಕರ್ಮ ಸಾಧನ ಮಾಡೋದು |
ಜನುಮ ಜನುಮಾಂತರ ಸಂಸ್ಕಾರ ಸಂಸ್ಕಾರ |
ಮನವೆ ಕಾರಣವೆನ್ನು ಇದರಲ್ಲಿಪ್ಪ ದು |
ರ್ಜನ ಸಜ್ಜನರನುಗಾಲಾ |
ಹೂಣಿಕೆ (ಹೊಣಿಕೆ) ಯಿಂದಲಿ ಮಾಡಿಸುವರು ಏನೆಂಬೆ |
ತನುವಿನ ವಿಚಾರ ಬಹುಜನಕಾಶ್ರಯ |
[ಅನಿ] ಮಿತ್ತ ಬಂಧು ಶ್ರೀ ವಿಜಯ ವಿಠ್ಠಲರೇಯ |
ಕುಣಿಸಿ ನೋಡುವ ಸರ್ವ ಜೀವರೊಳಗೆ ಯಿದ್ದು ೪
ಆದಿತಾಳ
ನಿತ್ಯ ಮೂರುತಿ ನಿತ್ಯ ಕೀರುತಿ |
ನಿತ್ಯ ಹತ್ತವತಾರನೊ ನಿತ್ಯಾನಂತವತಾರನೊ |
ನಿತ್ಯ ಶ್ರುತಿ ಗಿರಿ ಕ್ಷಿತಿ ದ್ಯೆತ್ಯಪುತ್ರ ಉದ್ಧಾರನೊ |
ನಿತ್ಯ ಬಲಿಯಾಗ ಭಿಕ್ಷಕನೊ ನಿತ್ಯನೃಪಕುಲ ರಾವಣ ಕಂಸ |
ಪುತ್ರ ತ್ರಯ ದುಷ್ಟ ಸಂಹಾರನೊ |
ನಿತ್ಯ ಭಕ್ತರ ಕಾವನೊ ನಿತ್ಯ ಸತ್ಯವತಿ ನಂದನ |
ನಿತ್ಯ ಸಷ್ಟ್ಯಾದ್ಯಷ್ಟ ಕರ್ತ |
ನಿತ್ಯ ಜ್ಞಾನಮಯ ಶರೀರ ನಿತ್ಯ ನವ ನೀತ ಚೋರ |
ನಿತ್ಯ ಗೋಪಿ ಜನ ಜಾರ |
ನಿತ್ಯ ಮಾತೃ ನಿತ್ಯ ಪಿತೃ ನಿತ್ಯ ಭ್ರಾತಾ ನಿತ್ಯ ಬಂಧು |
ನಿತ್ಯ ಗುರುವೆ ನಿತ್ಯ ಸ್ವಾಮಿ ನಿತ್ಯನಿತ್ಯ ನಿತ್ಯನೆ |
ನಿತ್ಯ ಮನೋಪಾದಾನದಿಂದ |
ನಿತ್ಯ ವ್ಯಾಪಾರ ಮಾಡುವ |
ನಿತ್ಯ ಪುಟ್ಟಿಸಿ ಬಡಿದಾಡಿಸುವ |
ನಿತ್ಯ ಲೀಲಾವಿನೋದ ನಿತ್ಯ ನಿರ್ದೋಷ ಸ್ವತಂತ್ರ |
ನಿತ್ಯ ಅಚಿಂತ್ಯಾದ್ಭುತ |
ಸತ್ಯ ಸಂಕಲ್ಪ ವಿಜಯ ವಿಠಲ |
ನಿತ್ಯ ಸರ್ವೇಶ ಸಾಕಾರ ೫
ಜತೆ
ಚಿಂತಿಸು ಈ ಪರಿ ಮನದಲ್ಲಿ ಸೃಷ್ಟಿಯ |
ಸಂತತ ವಿಜಯ ವಿಠಲ ಮಾಡುವನೆಂದು ೬

ಮನುಷ್ಯ ತನ್ನ ಬಾಳಿನ ಬಹು

೭೪
ಝಂಪಿತಾಳ
ಮಂಜು ಕಿವಿ ಕಣ್ಣು ಕವಿದಾವು ಊರಾ
ಹಂಜಾವಾರ್ತಿಯ ತೊಲಗದು
ಮುಂಜೆರಗು ಹೆಂಗಳೆ ಬೀಸಲು
ಮುಂಜೋಣಿ ನೋಟವು ತಪ್ಪದು
ಸಂಜೆಯತನಕ ತಿನಲು ಹೀನರ
ಎಂಜಲಾಪೇಕ್ಷ ತಗ್ಗದು ತಗ್ಗದು
ಖಂಜಾತನವು ಬಂದು ಪ್ರಾಪ್ತನಾದಡೆ
ಅಂಜನಾ ಸ್ಪರ್ಶಾ ಬಯಸುವೆ
ಮಂಜು ಕವಿ ಕಣ್ಣು ಕವಿದಾವು
ಅಂಜಿಕೆಯಿಲ್ಲ ಹಾಳು ಹರಟೆಗೆ
ಅಂಜುಳಿ ಮುಗಿದಾಡುವೆ
ಬಂಜೆ ಮನ ಇನ್ನು ದಣಿಯದು
ರಂಜಕ ಮುಟ್ಟಿಸಿದಂತೆ ಭವ
ಪಂಜರದೊಳಗಾವಿಷ್ಟಾ
ರಂಜಣಿಗಿಯಲ್ಲಿ ಮಹಿಷಿ ಮೊಗವದ್ದಿ
ಗಂಜಿಮುಸರಿ ತೊಳೆಯದನೀರು
ಎಂಜಲಾ ದುರ್ವಾಸನೆ ಹೇಯಾ
ಗುಂಚಿಕೊಂಡು ಕುಡಿದಂತೆ
ನಂಜಿ ನಂಜಿ ಇರದೆ ವಿಷಯ
ಪುಂಜ ಸಮಗ್ರ ಸೇವಿಪೆ
ರಂಜಿಸುವ ಸುಕೃತ ಫಲ ಗುಲ
ಗಂಜೆ ತೂಕ ಮಾಡಲಿಲ್ಲ
ಕಂಜನಾಭ ನಮ್ಮ ವಿಜಯ ವಿಠ್ಠಲ ನಿ-
ರಂಜನ ನೀನೆ ಗತಿಯೊ ೧
ಮಟ್ಟತಾಳ
ಜೋಲು ಬಿದ್ದವು ಹುಬ್ಬುಕಾಲು ಹಸ್ತದ ಚರ್ಮ
ಜೋಲುತದೆ ಸಂಧಿ ಕೀಲುಗಳು ಸುಡಲಿ
ಕಾಲು ಕೋಲಾಯಿತು ನಾಲಿಗೆ ತೊದಲು ಜರೆ-
ಕಾಲಸುಕ್ಕಿದ ಗಲ್ಲ ಬೀಳುವಂತೆ ತಲೆ
ಓಲ್ಯಾಡುವ ಹುಡುಗು ಬಾಲತನದ ಬುದ್ಧಿ
ಲೋಲುಪ ಭವದ ಲೀಲೆ ಹಗಲು ಇರಳು
ಜೋತಿಯೊಳಗೆ ಬಿದ್ದು ವ್ಯಾಳ್ಯೆ ತಿಳಿಯದಲೆ
ಮೂಲ ವಿಚಾರಿಸದೆ ಜಾಲದುಷ್ಕರ್ಮ ವಿ-
ಶಾಲ ಮಾಡುವೆ ಇನಿತು ಏಳುವಾ ಬಗಿಯ ಹಾಳಾದೆ ಕಾಲಕ್ಕೂ
ಆಳುತನದಿಂದ ಮೂಲೋಕವ ಬಿಡದೆ
ಆಳಬೇಕೆಂಬ ಆಲೋಚನೆ ಮನ-
ಏಳಲು ಬಗೆದೆಯ್ಯ ಪೇಳಿಕೊಂಬುದೇನು
ಪಾಲಸಾಗರ ಶಾಯಿ ವಿಜಯ ವಿಠ್ಠಲರೇಯ
ಕಾಲ ಕಾಲಕೆ ಮನೋಧಾಳಿ ನಿಲ್ಲಿಸಲರಿದು೨
ತ್ರಿವಿಡಿ ತಾಳ
ಗುಟುಕ ತಟಕು ಎರಡು ಸ್ವರ್ಗ ಪಾತಾಳಕ್ಕೆ
ಕಠಿಣವಾಗಿದ್ದ ಬಂಧನವಾದ ಕಾಲಕ್ಕೆ
ಕುಟೀರದೊಳಗಿದ್ದು ಬಳಲೂವ ಕಾಲಕ್ಕೆ
ನೆಟ್ಟನೆ ದೇಹಕ್ಕೆ ರೋಗ ಪ್ರಾಪ್ತವಾದ ಕಾಲಕ್ಕೆ
ಪಠಿಸುತ್ತ ಮಹಶಾಸ್ತ್ರ ಓದಿದ ಕಾಲಕ್ಕೂ
ಜಠರ ಭೂಮಿಗೆ ತಾಕಿ ಚರಿಸುವ ಕಾಲಕ್ಕೂ
ತುಟಿ ನಡುಗಿ ಮೈಯೆಲ್ಲ ಶೋಷಿಸಿದ ಕಾಲಕ್ಕೂ
ಜಟೆ ಧರಿಸಿ ಯತಿ ಜೋಗಿ ಎನಿಸಿದ ಕಾಲಕ್ಕೂ
ತಟಿನಿ ಸ್ನಾನವ ಮಾಡಿ ಜಪ ಮಾಳ್ಪ ಕಾಲಕ್ಕೂ
ಜೊಟ ಜೊಟನೆ ಮೈಯಲ್ಲಿ ಕ್ರಿಮಿ ಸುರಿದ ಕಾಲಕ್ಕೂ
ಕಟ್ಟಳೆಯಿಂದಲಿ ಬಹುರೋಗ ಭೋಗವಿದ್ದ ಕಾಲಕ್ಕೂ
ಪುಟ್ಟೆ ಶ್ವಾಸ ಬಂದು ಕಂಠಗತವಾಗಿ
ಗುಟು ಗುಟು ಗುಟು ಎನುತಾ ತೆರಳುವ ಕಾಲಕ್ಕೂ
ಗುಟುಕು ತಟಕಿನ ಚಿಂತೆ ತೊಲಗದಯ್ಯಾ
ತಟಿ ವ್ಯಾಕುಲ ವೃತ್ತಿ ಪ್ರಸಕ್ತಿ ಸಂ-
ಪುಟದೊಳಗಿದ್ದಂತೆ ಕಾಣಿಸದು
ಕಥಕ ವಿಷಯದಲ್ಲಿ ಕವಚ ಮಾಡಿಸಿ ಅಂ-
ಗುಟಶಿರಪರಿಯಂತ ತೊಡಸಿದರು
ಧಿಟ ಮನಸಿಗೆ ಸಾಕು ಎಂಬೋದೆ ಸೊಲ್ಲು
ಸಟಿಯಾಗಿ ಒಮ್ಮಿಗಾದರು ಬಾರದು
ಹಟ ಇದೆ ಸರ್ವದ ಸ್ಥಿರವಾಗಿ ಇದೆ ಇಂಥ
ಲೊಟಿವಿಡಿ ಸಂಸಾರ ಹೇಯವೆನ್ನಿ
ನಿಟಿಲದಲ್ಲಿ ಒಂದು ಕಣ್ಣು ತಂದಿಟ್ಟರು
ಘಟಕವಾದರು ಮನಸು ಹಿಂದಾಗದೂ
ಕಟಕ ಕೇಯೂರ ಹಾರ ವಿಜಯ
ವಿಠಲ ನಿನ್ನಂಘ್ರಿಯ ನಂಬಿದೆ ದಮ್ಮಯ್ಯ
ಅಟ್ಟತಾಳ
ಸಪ್ಪಡಿ ಮೆಲುವಾಗ ಉಪ್ಪಿನ ಯೋಚನೆ
ಉಪ್ಪು ದೊರೆತಾಗ ಸೊಪ್ಪಿನ ಯೋಚನೆ
ಸೊಪ್ಪು ದೊರಕಿದಾಗ ತುಪ್ಪದ ಯೋಚನೆ
ತುಪ್ಪ ದೊರಕಿದಾಗ ಕುಪ್ಪೆಯ ಯೋಚನೆ
ಕುಪ್ಪೆ ದೊರಕಿದಾಗ ಕೊಪ್ಪರಿಗೆ ಯೋಚನೆ
ಕೊಪ್ಪರಿಗೆ ಉಂಟಾಗೆ ಸಪ್ತದ್ವೀಪದ ಚಿಂತೆ
ಇಪ್ಪದು ಈ ಪರಿ ತಪ್ಪದೆ ಒಂದೊಂದು
ಅಪ್ಪರ ಯೋಚನೆ ಇಪ್ಪವು ಸಾವಿರ
ಇಪ್ಪತೊಂದು ಆರು ಒಪ್ಪದಿಂದಲಿ ಶ್ವಾಸ
ದರ್ಪಗುಂದುವ ತನಕ ಪೋಗದು ಯೋಚನೆ
ಸರ್ಪಶಾಯಿ ನಮ್ಮ ವಿಜಯ ವಿಠ್ಠಲರೇಯ
ಮುಪ್ಪಾದರೇನಯ್ಯ ತಪ್ಪದು ತಾವತ್ತನಕ ೪
ಆದಿತಾಳ
ಸಾಧನವೆಂತಾಹುದೊ ಇಂದ್ರಿಯ ಲೋಲುಪ್ತಗೆ
ಆದರದಲಿ ಅಪರಾಧ ಸಹಸ್ರ ಸಂ-
ಪಾದಿಸಿ ಪ್ರವರ್ತಕ ಮಾಡಿದೆ ಮರಿಯಾದೆ
ಮೇದಿನಿಯೊಳು ಪುಣ್ಯವೆಂಬದು ತಿಳಿಯೇ ಮಧು-
ಸೂದನ ನಿನ್ನ ಚರಣದಲ್ಲಿ ಭಕುತಿ ಎಂತೊ
ಸಾಧಿಸಿ ಕಾಡುತಿವೆ ವಿಷಯಂಗಳು ನಿತ್ಯ
ಬಾಧೆ ಬಡಿಸುತಿವೆ ಬಿನ್ನಹ ಮಾಡುವುದೇನು
ಆದರಿಸಿ ನೀನೆ ಭಕುತಿ ಜ್ಞಾನ ಪ್ರ-
ಸಾದವೆ ಪಾಲಿಸಿ ಪ್ರೀತಿಯಿಂದಲಿ ನಿನ್ನ
ಪಾದವೆ ತೋರಿಸಯ್ಯ ಆನಂದವಾಗಲಿ
ಮೋದ ಮೂರುತಿ ನಮ್ಮ ವಿಜಯ ವಿಠ್ಠಲ ಎನ್ನಾ-
ರಾಧನೆ ಎಂಬೋದೇನು ನಿನ್ನ ನೇಮನ ಮುಖ್ಯ೫
ಜತೆ
ಸಕಲ ಪ್ರಾಕು ಪ್ರಾಕು ಪ್ರಾಕೂ ಪಾವ ಪ್ರಾಯಶ್ಚಿತ್ತ
ರುಕಿಮಿಣಿ ಪತಿ ವಿಜಯ ವಿಠ್ಠಲ ನಿನ್ನ ನಾಮ

ಮಂತ್ರಗಳನ್ನು ಜಪಿಸುವುದರಿಂದ ವಿಶಿಷ್ಟವಾದ

೯೭
ಮಧ್ರುವತಾಳ
ಮಂತ್ರ ಮಾಡೆಲೊ ಮನುಜಾ ಮನೊವಾಚಕಾಯದಲ್ಲಿ
ಸಂತತ ಮೂರು ಬಗೆ ಗುಣವ ತಿಳಿದು
ತಂತು ಬಲಿಸಿದಂತೆ ತ್ವಕುವೇಂದ್ರಿ ಮೊದಲಾದ
ಇಂತಿಪ್ಪ ಕರ್ಣಂಗಳು ಪಿಂಡಿ ಮಾಡಿ
ಚಿಂತೆ ಸಂತಾಪ ಲೇಪ ದೂರ ದುರ್ಜಯ ಸಿರಿ
ಕಾಂತನ್ನ ಪಾದ ಪದ್ಮ ಕ್ರಾಂತನಾಗಿ
ಮುಂತೆ ಬರುವ ಜನುಮ ಕಳಕೊಂಬೊದೊಂದೆ ಮರಳೆ
ಪಿಂತೆ ದುಷ್ಕರ್ಮವೆಂಬೊ ಮಹಾಸಾಗರ
ಶಾಂತವಾಗುವುದೊಂದು ಈರ್ವಗೆ ಯೋಗ ಏ
ಕಾಂತ ಭಕ್ತಿ ಸಂಪಾದಿಸಿ ಜಪಿಸು ಮಂತ್ರ
ಅಂತರಂಗದಲ್ಲಿ ಸದ್ಗುರು ರವಿ ಮಂಡಲ
ಮಂತ್ರಿ ಪ್ರಧಾನ ಮುಖ್ಯ ಪ್ರಾಣನಲ್ಲಿ
ಅಂತರಾತುಮ ಶ್ವೇತ ದ್ವೀಪ ನಿವಾಸಿಯಲ್ಲಿ
ಚಿಂತಿಸು ಉತ್ತರೋತ್ತರ ಶುಭತರಂಗ
ಮಂತ್ರಾರ್ಥವನ್ನೆ ತಿಳಿದು ಹೃದಯಾದಲ್ಲಿ ತತ್ತನ್ಮೂರ್ತಿಗ
ಳಾಂತು ಧ್ಯಾನವಿಪ್ಪದೊ ತತ್ಪ್ರಕಾರ
ಸಂತು ಸದ್ವಿಚಾರ ಮಾಡುವ ಬಗೆ ಅನಾ
ದ್ಯಂತ ಕಾಲದಲ್ಲಿ ಪ್ರತ್ಯೇಕವೊ
ಸಂತಿವೆ ಪಂಚಾಶದ್ವರ್ಣಗಳೊಂದೊಂದು
ಅಂತು ಮೊದಲು ಇಲ್ಲದೆ ಗುಣಕಾಲದಿ
ಎಂತೆಂತು ವ್ಯಾಪ್ತಿಯುಂಟು ಅಲ್ಲಲ್ಲಿ ಪರಿ
ಯಂತ ಸಮಸ್ತವರ್ಣ ಸಮವ್ಯಾಪ್ತಿಯ
ಚಿಂತಿಸು ಮೊದಲಾವರ್ಣ ಆತಿ ವಿಚಿತ್ರಾನಂದಾ
ನಂತ ಗುಣ ಸಂಪೂರ್ಣ ಉಂಟಾಗಿದೆ
ಎಂತು ಪೇಳಲಿ ಒಂದೊಂದು ವರ್ಣದ ಮಹಿಮೆ
ಅಂತರ ಬಾಹಿರ ಭರಿತವಕ್ಕು
ಭ್ರಾಂತಿಯಿಲ್ಲವೊ ಕಾಣೊ ಪ್ರಳಯದಲ್ಲಿ ನಿತ್ಯ
ಎಂಥವೆಂದರೆ ಗುರುತು ಪೇಳಲೊಶವೆ
ಎಂಥವೊ ಚಕ್ಷುರಾದಿ ಇಂದ್ರಿಯಂಗಳು ಕಾಣವು
ಇಂಥ ವರ್ಣಾಗಳಿಂದ ಭಾರತಾದಿ ಸರ್ವ
ಗ್ರಂಥಗಳಿಹವು ಅತಿ ವಿಸ್ತಾರ
ಪಂಕ್ತಿ ಭ್ರಮಣವಾಗೆ ಪಾಪ ಪ್ರಾಪುತ ಸ
ತ್ಪಂಥವಾಗದು ಕಾಣೊ ಎಂದೆಂದಿಗೆ
ಇಂಥ ವರ್ಣಾತ್ಮಕ ವೇದಂಗಳೆನ್ನು ಅ
ನಂತ ಸ್ವರಾತ್ಮಕ ಶಬ್ದ ಜನ್ಯಾ
ಇಂಥಾದ್ದೆ ಸ್ವತಂತ್ರ ಸ್ವಶಕ್ತಿ ಪುರುಷ ಅನಾಮಕ
ಸಂತು ಜನ ವರಣಾತ್ಮಕ ಏಕೈಕ ವಿಧವಾದ
ಮಂತ್ರ ಜಪಿಸಿ ಬದ್ಧವಾದ ಹೃದಯಾ
ಗ್ರಂಥಿ ಬಿಡಿಸಿಕೊಂಡು ಕೈಹೊಯ್ದು ಕೈಹೊಯ್ದು
ಸಂತತಿ ಸಮೇತ ನಗುನಗುತ
ಅಂತಕನಾಳಿಗೆ ಸೋಜಿಗ ತೋರುತ್ತ
ಅಂತಕ ದೇವನೆಂದು ಭಳಿರೆ ಎನೆ
ದಂತಿ ತೂಗುವಂತೆ ತೂಗುತ್ತ ನಡುವುತ್ತ
ನಿಂತಲ್ಲಿ ನಿಲ್ಲದಲೆ ಹರಿಗೆರಗುತ್ತ
ಸಂತೋಷದಲ್ಲಿ ಪೋಗೆ ಮುಕ್ತಿಯಾ ಸಾರುವರು
ಮಂತ್ರಾಭಿಮಾನಿಗಳು ಜಯಜಯವೆನೆ
ಕಂತು ಜನಕ ನಮ್ಮ ವಿಜಯ ವಿಠ್ಠಲನ ನಿ
ರಂತರ ಜಪಿಸುವುದು ಅನುಭವ ಸಿದ್ಧನಾಗಿ ೧
ಮಟ್ಟತಾಳ
ವರಣಾಭಿಮಾನಿಗಳ ನೆನಸು ಆರಂಭದಲ್ಲಿ
ಸಿರಿಭೂಮಿ ದುರ್ಗಾ ವಾಣೀ ಭಾರತಿಷಟ್ ಸ್ತ್ರೀ
ಯರು ಸೌಪರಿಣಿ ವಾರುಣಿ ರುದ್ರಾಣಿ
ಗುರು ಸಮ ನಾರಿಯರು ಚಂಡಿಚಾಮುಂಡಿ ಕ
ಸರುವ ನಾರಿಯರು ಅಭಿಮತದವರೆಂದು
ಪರಿ ಪರಿಯಿಂದಲಿ ಕೊಂಡಾದುವುದಿದಕೊ
ಹರಿ ರೂಪಗಳುಂಟು ಒಂದೊಂದು ನಾಮದಲಿ
ಕರೆಸಿಕೊಳುತಲಿವೆ ಅನಾದಿಯಲ್ಲಿ ಸಾಮ್ಯ
ಇರುತಿಪ್ಪದು ನೋಡಿವರಣ ವ್ಯತ್ಯಾಸಗಳೆ ಸೃಷ್ಟಿ ಎನಿಸುವುದು
ತರುವಾಯ ಕ್ರಮದಿಂದ ಕೊಡುವುದೆ ವಿಲೀನ
ವರಣ ನಿಯಾಮಕ ವಿಜಯ ವಿಠ್ಠಲರೇಯ
ವರಣ ನಾಮಕಾ ವರಣ ರೂಪ ಭಿನ್ನಾ ೨
ತ್ರಿವಿಡಿತಾಳ
ಆದಿಯಲ್ಲಿ ನೀನು ಮೂರು ಬೀಜಗಳಿಂದ
ಕ್ರೋಧನ್ನ ಸಂಹರಿಸು ಇದರೊಳು ತಿಳಿದು
ಭೇದಜ್ಞಾನದಿಂದ ಭಕ್ತಿಯ ಮಾಡಿ ಸಂ
ಪಾದಿಸು ಪುಣ್ಯಪುರುಷ ಧ್ಯಾನವ
ಈ ದೇಹದಲ್ಲಿ ತಿಳಿದು ಮಂತ್ರಕ್ಕೆ ಮ
ಹದೋಷ ಕಾದಿಪ್ಪವು ಎಂಟು ಈಕ್ಷಿಸು ಮನುಜಾ
ಶೋಧಿಸು ಪೆಸರುಗಳು ಮೃತ ಸುಪ್ತ ಮೂಕನೆಂ
ಬೋದು ನಗ್ನಾ, ವೀರ್ಯ ಹೀನ, ಶೂನ್ಯ, ಭುಜಂಗ
ವೃಥಾಯಿತ:ಕ್ಷರಾಹಿ, ಅರಿತವೆನ್ನಿ, ಕೀಲಿತಾ
ಹೃದಯದಲಿ ಎಣಿಸು ಈ ಪರಿ ತೊರೆದು
ಸಾಧನ ಸಾದ್ಯ ಸಿದ್ಧನಾಗೆಲೊ
ಪಾದ ಮಂತ್ರಗಳಿಂದ ಮಾಡಿದ ಜಪಕೆ ಕ
ಲ್ಲ್ಯಾದಿಗಳುಪಹತಿ ಬಾರದದಕೊ
ಈ ದೋಷ ಗುಣ ಮಂತ್ರಮಾಡಿದರೆ ವಿ
ಷಾದವಲ್ಲದೆ ಲೇಶಲಾಭ ಕಾಣೆ
ಬಾಧೆಯಲ್ಲದೆ ಅವಗೆ ಎಂದೆಂದಿಗು ಮನಸು ಪ್ರ
ಸಾದವಾಗದು ಹಗಲಿರಳು ಜಪಿಸೆ
ಹಾದಿಹಿಡಿದು ಪೋಗಿ ಮಹಾರಣ್ಯ ಸೇರಿದಂ
ತಾದದಲ್ಲದೆ ನಿರ್ಭಯನಾಗನೊ
ಮೈದೋರನೋ ವರಣ ಮಂತ್ರ ದೇವತ ಸ್ವಾಮಿ
ಸಾಧುಜ್ಞಾನಿಯ ಕೇಳು ಪುಶಿಯಲ್ಲವೊ
ಪಾದ ಮಸ್ತಕ ಸರ್ವಾಂಗ ಪರಿಪೂರ್ಣ ಜ್ಞಾ
ನೋದಧಿ ಹರಿಮಂತ್ರ ಸಂತೇಸರಕೆ
ವೇದ ವಂದಿತ ನಮ್ಮ ವಿಜಯ ವಿಠ್ಠಲರೇಯನ
ಪಾದವೆ ನೆರೆನಂಬಲು ಒಂದೆ ಮಂತ್ರವ ಜಪಿಸು ೩
ಅಟ್ಟತಾಳ
ವಮನದೊಳಗೆಯಿದ್ದ ಷಡ್ರಸದಂತೆ ಈ
ಕ್ರಮವನು ತಿಳಿದು ಮಾಡದ ಮಂತ್ರ ಸಮಸ್ತಾ
ಅಮಿತ ತೇಜಸನಾಗಿ ಪ್ರಾರಂಭದಲಿ ಹೃ
ತ್ಕಮಲದ ವಿಚಾರ ವಿಸ್ತಾರ ಸಂಗ್ರಹಿಸಿ
ಗಮನಾಗಮನ ಸಂಧಿ ಕಾಲವೆ ಗ್ರಹಿಸಿ
ಅಮರೇಶಾದಿ ವಾಸ ಏಕಾದಶ ಭಾಗ
ದಮೆ ಶಮೆ ಗುಣದಿಂದ ದ್ವಾದಶ ಸಂಕೇತ
ಅಮಲಪ್ರಭಾ ಮೂರ್ತಿ ಹೃಷೀಕೇಶಗೆ ಮುಂಚೆ
ನಮಿಸಿ ನಿರ್ಮಳ ಮನದವನಾಗು ಸರ್ವದಾ
ತುಮದೊಳು ಉಳದೇಂದ್ರಿಯಂಗಳು ಕೂಡಿಸಿ

ಹೃದಯಾಬ್ಜ ಮಂಡಲದಲ್ಲಿರುವ

೬೮
ಧ್ರುವತಾಳ
ಮಂದಮತಿ ಮನಸು ಮಂಗನಂತೆಯಾಗಿ
ಸಂದೇಹ ಬಿಡದಲೆ ಸಂಶಯದಲ್ಲೀ
ಮುಂದೆ ಉಳ್ಳಾವಸ್ತಾ ಎಡಹಿ ಮುಂಗಾಣದಂತೆ
ಅಂಧಕ ನಾನಾದೆ ಅಕಟಕಟಾ
ಹಿಂದಣ ಸಂಚಿತವೊ ಮುಂದೆ ಯಾಗುವಾಗಮವೊ
ಇಂದನುಭವಿಸುವ ಪ್ರಾರಬ್ದವೊ
ಒಂದೆ ಒಂದೆ ದೈವದಿಂದಾ ಬಿಂಬ ಮೂರುತಿ
ಇಂದು ಹೃದಯಾರವಿಂದದೊಳು
ಅಂದವಾಗಿರೆ ಮನ ಪೊಂದದಲೆ ಬರಿದೆ
ಸಂದರುಶನವಿಲ್ಲಾ ಇಲ್ಲಾವೆಂದೂ
ಕುಂದಿ ಬೆಂಡಾಗುವದು ಏನೆಂಬೆ ಎಲೊ ಜೀಯ
ಬಂದ ವ್ಯಾಕುಲ ಇನ್ನು ತೊಲಗದಲ್ಲಾ
ಪೊಂದಿದೆನು ಶಶಿ ಬಿಂದು ವಿಜಯ ವಿಠ್ಠಲ
ವಂದಿಸುವೆನು ನಿನ್ನ ದ್ವಂದ್ವಾಬ್ಜಪದಕೆ ೧
ಮಟ್ಟತಾಳ
ಅಂತರಂಗದಲ್ಲಿ ಅಂತರಾತ್ಮಕ ನೀನು
ಸಂತತ ಪೊಳೆವುತ್ತ ನಿಂತು ಸೊಬಗಿನಿಂದ
ಸಂತೋಷದ ಮೂರ್ತಿವಂತನಾಗಿ ಇರಲು
ಕಾಂತ ವಿಜಯ ವಿಠ್ಠಲ ಚಿಂತೆ ಪೋಗದಲ್ಲೊ ೨
ರೂಪಕ ತಾಳ
ಒಳಗೊಂದು ಮೂರುತಿ ನೆಲೆಯಾಗಿ ಇರಲಾಗಿ
ನೆಲೆಯನ್ನು ತಿಳಿಯದೆ ಕಲಿಮತ ಬಿಡದಲೆ
ಕೆಲಸಾರಿ ಬಲು ಹಾರಾ ಬಳಿಯಲ್ಲಿ ಇಪ್ಪವಾ
ಚಲ ಮೂರ್ತಿಗಳಿಗಾಗಿ ಬಳಲಿ ಬಳಲಿ ನಾನು
ಅಲಸೀದೆ ಅನುಗಾಲ ಬೆಳಗುವಿಡಿಯ ಪೋಗಿ
ಕಳಕೆಳಗಾದಂತೆ ಅಳಲೀದೆನೊ ಅನು
ಕುಲ ವಿಜಯ ವಿಠ್ಠಲನೆ ಗಳದ ಸತ್ವ ಮೀರಿ
ಸಿಲಚೆಯ (?) ಪೊತ್ತಂತೆ ಇಳಿಯೊಳಗತಿ ಮೂರ್ಖ
ಕುಲಶಿರೋಮಣಿಯಾದೆ ೩

ಸಮೀಪದಲ್ಲಿದ್ದ ಸಡಗರದ ಚಲುವ
ಅಮೃತಾನ್ನದ ಎಡೆ ಆದರಣಿ ಇಲ್ಲದಲ್ಲಿ
ಸಮ್ಮತವಾಗಿರಲು ಕಾಲ ಕಾಲಕೆ ಸವಿದು
ಅಮೃತವ ಬೇಡದಲೆ ಬಲು ಅನಾದರದಲ್ಲಿ
ಹಮ್ಮು ತೊರಿಯದಲೇವೆ ದೂರಿದ್ದ ಎಂಜಲ
ವೊಮ್ಮುಸುರೆ ಎಡೆ ಬಯಿಸಿ ಬಯಿಸಿದಂತೆ
ಇಮ್ಮನ ನಾನಾಗಿ ಅಜ್ಞಾನದಲ್ಲಿನ್ನು
ಅಮೃತ ವಿಜಯ ವಿಠ್ಠಲ ವಿಶ್ವಮಾಯಕನೆ
ಹೆಮ್ಮೆಯಿಂದಲಿ ಬಾಳಿ ಗತಿರಹಿತನಾದೆ ೪
ತ್ರಿವಿಡಿ ತಾಳ
ಆಕಾಲವಾಗಿ ಅರ್ಚನೆಗೊಂಬ ದೈವವು
ಸಕಾರವಾಗಿ ಸಂಪತ್ತು ಪಾಲಿಸುತ ರವಿ
ಯಾಕಾರದಂತೆ ರಂಜಿಸುತಾ ಮನಿಯೊಳಗಿರೆ
ಪ್ರಾಕಾರಾಶಿಲಿಗಳಿಗೆ ಕೈಯಾ ಮುಗಿದು ವರ
ವಾ ಕರುಣಿಸು ಎಂದು ಮಡೆ ಹೊರಳಿ ಪೂಜಿಸುವ
ವಿಕಾರ ಮನುಜಗೆ ಸಂಪ್ರೀತಿಯಾಗುವುದೇ
ಪ್ರಾಕಾರ ಕಲ್ಲುಗಳು ವರಕೊಡಬಲ್ಲವೆ
ಏಕಪಾದ ನಾಮ ವಿಜಯ ವಿಠ್ಠಲ ನಿನ್ನ
ವಾಕರಿಸೀ ಅನ್ಯರನ ಹಂಬಲಿಸುವೆನೋ ೫
ಅಟ್ಟತಾಳ
ಬಿಂಬ ಮೂರುತಿಯ ಪರೋಕ್ಷವಾಗದೆ ಗತಿ
ಯೆಂಬದು ಸಲ್ಲಾದು ಎಲ್ಲರಿಗೆ
ಬಿಂಬನೆಂಬ ಪ್ರಾಜ್ಞನನುಭವ ತಿಳಿದು
ನಂಬುವಂತೆ ಮಾಡು ವಿಜಯ ವಿಠ್ಠಲರೇಯಾ ೬
ಆದಿತಾಳ
ನಿತ್ಯನೈಮಿತ್ಯಗಳು ಆವಾವ ಕರ್ಮಗಳು
ಕೃತಾರ್ಥನಾಗಿ ಸಂಚರಿಸಿದರು
ನಿತ್ಯ ತನ್ನೊಳಗಿದ್ದ ಬಿಂಬಗೆ ಆವಾಹನಿಸಿ
ಭೃತ್ಯನು ನಾನು ಎಂದು ಪೂಜಿಸಿದಲೆ
ನಿತ್ಯಪದವಿ ಇಲ್ಲಾ ಶ್ರುತ್ಯರ್ಥದಲ್ಲಿ ಪೇಳೆ
ಅತ್ಯಂತದಲ್ಲಿ ಕೇಳಿ ಮೊರೆ ಬಿದ್ದನೊ
ಸತ್ಯಧರ್ಮ ಪರಾಕ್ರಮ ವಿಜಯ ವಿಠ್ಠಲರೇಯಾ
ಮಿಥ್ಯ ಸಂಗವನೀಯದೆ ಕೃತ ಕೃತ್ಯ ಎನ್ನ ಮಾಡೊ ೭
ಜತೆ
ಅಂಗುಟ ಪರಿಮಿತಿಯಾಗಿ ಎನ್ನೊಳು ನಿಂದೂ
ಶ್ರಿಂಗಿಣಿ ವಿಜಯ ವಿಠ್ಠಲ ಎನ್ನ ಕರುಣಿಸೊ ೮

ರು ತಿರುಪತಿಯ ಶ್ರೀನಿವಾಸನ

೫೪. ತಿರುಪತಿ
ರಾಗ:ಕಲ್ಯಾಣಿ
ಧ್ರುವತಾಳ
ಮಕರ ಕುಂಡಲದಿಂದ ಝಗಝಗಿಸುವ ಕರ್ನ |
ಲಕುಮಿ ಬಿನ್ನೈಸಲು ಲಾಲಿಸುವ ಕರ್ನ |
ಆಖಿಳ ಜೀವದು ಮೊರೆಯಿಡಲು ಕೇಳುವ ಕರ್ನ |
ಚಿಕ್ಕಮಕ್ಕಳಿಂದಲಿ ಲಿಚ್ಚಿಪಿಡಿಸಿದ ಕರ್ನ (?) |
ಸುಖಸಾಂದ್ರವಾಗಿದ್ದ ಸುರಳಿತವಾದ ಕರ್ನ |
ಮಕ್ಕಳಮಣಿ (ಸರ್ವ) ಸು ನಿಲಯಾ ವಿಜಯವಿಠಲ |
ಭಕ್ತರಿಗಗೋಚರರವಾದ ಸೂವರ್ನ ಕರ್ನ ೧
ಮಟ್ಟತಾಳ
ಪಂಜರದೊಡಿಯನು ಧರಿಸಿದ ಶುಭ ಕರ್ನ |
ಕುಂಜರಪತಿಕೂಗೆ ಕೇಳಿದ ಮಹ ಕರ್ನ |
ಆಂಜನೆಯನ ಕೂಡೇ ಕಾಂತವಾಡಿದ ಕರ್ನ |
ನಂಜೇಶನ ಮೈಗೆ ಪೊಂದಿಪೊಳೆವ ಕರ್ನ |
ಮುಂಜಿಕೇಶಾಕ್ಷಮಣ ವಿಜಯವಿಠಲನ ನಿ (?) |
ರಂಜನ ನಿರ್ಗುಣನಿರಾಧಾರ ಕರ್ನ ೨
ತ್ರಿವಿಡಿತಾಳ
ವನಜ ಸಂಭವನು ಸ್ತ್ರೋತ್ರವಮಾಡೆ ಕರುಣದಲಿ |
ಅನ[ವರತ] ಲಾಲಿಸುವ ಅಗಣಿತಗುಣ ಕರ್ನ |
ತೃಣಮನುಜರು ಕೈಮುಗಿದು ವಂದನೆ ಮಾಡೆ |
ಅನುಮಾನ ಇಲ್ಲದಲೆ ಪಾಟಿಸುವ ಕರ್ನ |
ಅಣುಮಹತ್ತಾದರು ಒಂದೇ ಸಮಾನವಾಗಿ |
ವಿನಯದಿಂದಲಿ ಕೇಳಿ ಸಂರಕ್ಷಿಸುವ ಕರ್ನ |
ದನುಜಾರಿ ಹತ್ತು ಭುಜಾ ವಿಜಯವಿಠಲ ರಾಜಾ |
ಮನದಂತೆ ಮಾಗಾಯಿಲಿಂದ ಒಪ್ಪುವ ಕರ್ನ ೩
ಅಟ್ಟತಾಳ
ಸಾಧು ಜನರು ನಿಂದು ಆದರಣೆಯಿಂದ |
ಆದರಿಸೆ ಜ್ಞಾನಯಾದಿ ಪಾಲಿಪ ಕರ್ನ |
ಕ್ರೋಧದಿಂದಲಿ ವಿವಾದವನ್ನು ಪೇಳೆ |
ವೈದು ನರಕದಲ್ಲಿ ಬಾಧೆಗಿಡುವ ಕರ್ನ |
ಕಾದ ಬಂದ ಸುರರ ಮಾತಿನಿಂದಲಿ ಶಕ್ತಿ |
ಸೇದಿಕೊಂಡು ನಿತ್ರಾಣಗೈಸುವ ಕರ್ನ |
ಆದಿಮೂಲ ಸ್ವಸ್ತಕೃತೆ ವಿಜಯವಿಠಲ |
ಆದಿತ್ಯಗಣದವರು ಪೋಗಿಬರುವ ಕರ್ನ ೪
ಆದಿತಾಳ
ಉರವಣಿಸಿ ಸಾಸಿರ ಸಾವಿರವೇದಗಳು ನಿಂದು |
ಕರದುಕೊಂಡಾಲೂಪರವೆ ಮಾಡಿದ ಕರ್ನ (?) |
ಸರಿಬಂದವರು ಕೂಗೆ ದೂರದಲ್ಲಿದ್ದರೆ ಕೇಳುತ |
ವರಗಳನಿತ್ತು ಮನೋ ಬಯಕೆ ಸಲ್ಲಿಪ ಕರ್ನ |
ಸರಿಬಾರದವರೆಷ್ಟು ಕರದು ಬೊಬ್ಬಿರಿದರೆ |
ಅರಿದು ಅರಿಯಾದಂತೆ ಸುಮ್ಮನಿಪ್ಪ ಮಾಯ ಕರ್ನ |
ಹರಿಕೂರ್ಮ ಮತ್ಸ್ಯವರಹ ತುರಗ ವೇಷದ ಕರ್ನ |
ಸರಸಿಜ ತನತನುಜಾಂಡ ಧರಿಸಿದದ್ಭುತ ಕರ್ನ |
ಪರದೈವ ಯಜ್ಞಗುಹ ವಿಜಯವಿಠಲ ಮಹ |
ಪುರುಷ ಚೌಕಳಿ ಬಿಡಿ ಮುತ್ತಿನೊಂಟೆ ಇಟ್ಟ ಕರ್ನ ೫
ಜತೆ
ದುರ್ಜನರಿಗೆ ನಿತ್ಯ ನರಕಕೊಡುವ ಕರ್ನ |
ಊರ್ಜಿತ ವಿಜಯವಿಠಲನ ಸುಂದರ ಕರ್ನ ೬

ಮಡಿ ಮಾಡುವುದು ಒಂದು ಬಾಹ್ಯಾಚರಣೆ,

೯೮
ಧ್ರುವತಾಳ
ಮಡಿಮಾಡುವುದೊ ಮಾನವ ನಡತಿ ನುಡತಿ ತಿಳಿದು
ಬಿಡದೆ ಪ್ರತಿದಿನ ನಿರ್ಮಳದಲ್ಲಿ ಮಡಿನೀರೊಳಗೆ ಒಗೆದು
ಮಡಿಸಿ ಬಗೆಬಗೆಯಿಂದ ಮಡಿಕಿಹಾಕಿ ಉಟ್ಟರೆ
ಮಡಿಯಲ್ಲ ಮಡಿಯಲ್ಲ ಮಡಿವಾಳನಂತೆ ಮಲಿನ
ಕಡೆಮಾಡಿದರೆ ವಸ್ತ್ರ ಬಿಡು ಶುಚಿ ಆಗುವುದೆ
ದೃಢದಲ್ಲಿ ತಿಳಿದು ನೋಡು ಮಡಿ ನೀರೊಳಗೆ ಇಲ್ಲ
ಮಡಿ ವಸನದೊಳಗಿಲ್ಲ ಮಡಿ ದೇಶದೊಳಗಿಲ್ಲ
ಮಡಿ ನಭದಲ್ಲಿ ಇಲ್ಲ ಮಡಿಮಾಡುವ ಉಪಾಯ
ಒಡನೆ ತನ್ನಲ್ಲಿ ಉಂಟು, ಪೊಡವಿ ತಿರುಗಿ ಸಲ್ಲ
ಅಡಿಗಡಿಗೆ ದಣಿವುದಲ್ಲ, ಅಡಿಗಳಿಟ್ಟು ನೋಡಿ
ನಡೆದರೆ ಮಡಿ ಅಲ್ಲ, ಮಡಿಯಾಗಿಪ್ಪನೆಂದು
ಉಡಿಗೆ ಮುದರಿಕೊಂಡು ಎಡೆಗಡಿಗ್ಹಾರಿದರೆ
ಮಡಿಯಾಗುವುದೇನೊ ಮಾನವ
ಕಡುಮುದ್ದು ಮೋಹನ್ನ ವಿಜಯ ವಿಠ್ಠಲರೇಯನ
ಅಡಿಗಳಿಗೆರಗದವನ ಮಡಿ ಯಾತಕೆ ಬಪ್ಪದೊ ೧
ಮಟ್ಟತಾಳ
ಕಾಮ ಕ್ರೋಧದಲ್ಲಿ ತಿರುಗಲು ಮಡಿಯಲ್ಲ
ಕಾಮನ ಬಳಗಕ್ಕೆ ಸೋಲಲು ಮಡಿಯಲ್ಲ
ತಾಮಸ ಮಡಿಯಲ್ಲಿ ಇದ್ದರು ಮಡಿಯಲ್ಲ
ಹೇಮದ ಬಯಕೆಯಲಿ ಚರಿಸಲು ಮಡಿಯಲ್ಲ
ಸ್ವಾಮಿದ್ರೋಹವ ಮಾಡಿ ನಡೆದರೆ ಮಡಿಯಲ್ಲ
ಯಾಮಯಾಮಕೆ ಹರಿಯ ಮರೆದರೆ ಮಡಿಯಲ್ಲ
ನಾಮ ಧರಿಸದಿದ್ದರೆ ಅದು ಮಡಿಯಲ್ಲ
ನೇಮ ನಿತ್ಯಗಳ ತೊರೆದರೆ ಮಡಿಯಲ್ಲ
ಭೂಮಿಪಾಲಕ ನಮ್ಮ ವಿಜಯ ವಿಠ್ಠಲರೇಯನ
ನಾಮವನು ಮರೆದವನು ಎಂದಿಗೂ ಮಡಿಯಲ್ಲ ೨
ತ್ರಿವಿಡಿತಾಳ
ಹಸುವ ಕಾಲಲಿ ಒದೆದರೆ ಮಡಿಯಲ್ಲ
ಹಸುಮಕ್ಕಳ ನೂಕಿಬಿಟ್ಟರೆ ಮಡಿಅಲ್ಲ
ವಶವಾದ ನಾರಿ ತೊರೆದರೆ ಮಡಿಯಲ್ಲ
ವಸುಧಿಸುರರ ಕಂಡು ಬೈದರೆ ಮಡಿಅಲ್ಲ
ವಿಷವಿಕ್ಕಿ ಜನರ ಕೊಲ್ಲಲು ಮಡಿಅಲ್ಲ
ನಿಸಿಯಲ್ಲಿ ಉಂಡವನು ಎಂದಿಗೆ ಮಡಿಅಲ್ಲ
ಹುಸಿಯ ಬೊಗಳುವಂಗೆ ಆವದು ಮಡಿಅಲ್ಲ
ಅಸೂಯ ಬಟ್ಟಕೊಂಡರೆ ಅದು ಮಡಿಅಲ್ಲ
ಅಸುರಕರ್ಮವು ಆಚರಿಸಲು ಅದು ಮಡಿಅಲ್ಲ
ಅಶನಘಾತಕನಾಗಿ ಇದ್ದವಗೆ ಮಡಿಅಲ್ಲ
ದಶಮಿ ದ್ವಾದಶಿ ಕನ್ಯಾದಾನಮಾಡೆ ಮಡಿಯಲ್ಲ
ಕುಶಲ ಮೂರುತಿ ನಮ್ಮ ವಿಜಯ ವಿಠ್ಠಲರೇಯನ
ಬೆಸನೆ ಭಕುತಿಯ ಬೇಡದಿದ್ದರೆ ಮಡಿಅಲ್ಲ
ಅಟ್ಟತಾಳ
ಸಕೇಶಿ ಕೈಯಿಂದ ಉಂಡರೆ ಮಡಿಯಲ್ಲ
ಸಿಕ್ಕಿದವರ ಬಳಲಿಸಿದರೆ ಮಡಿಯಲ್ಲ
ವಾಕುಬದ್ದವಿಲ್ಲದವನಿಗೆ ಮಡಿಯಲ್ಲ
ಶ್ರೀಕಾಂತನ ಸ್ಮರಣೆ ಮರೆದರೆ ಮಡಿಅಲ್ಲ
ಹೇಕೆತನ ಕಲಿತವಗೆ ಮಡಿಅಲ್ಲ
ಬೇಕೆಂದು ದುರಾನ್ನ ಉಂಡರೆ ಮಡಿಅಲ್ಲ
ಏಕಾಂತ ಧ್ಯಾನವು ಇಲ್ಲದೆ ಮಡಿಅಲ್ಲ
ಪಾಕಶಾಸನ ವಂದ್ಯ ವಿಜಯ ವಿಠ್ಠಲರೇಯ
ಸಾಕುವನೆನ್ನದಿರೆ ಸಚೈಲ ಮಡಿ ಅಲ್ಲ ೪
ಆದಿತಾಳ
ಗುರುಗಳಿಗೆ ನಮಿಸದಿದ್ದರದು ಮಡಿಅಲ್ಲ
ದುರುಳ ಜನರ ಸಂಗತಿ ಇದ್ದರೆ ಮಡಿಅಲ್ಲ
ಕರ ಕೆರೆ ಸತಿಯಿಂದ ಧ್ಯಾನಾದಿಗೆ ಮಡಿಅಲ್ಲ
ತರಳೆ ದೃಷ್ಟಣಿಗೆ ಕೇವಲ ಮಡಿಅಲ್ಲ
ಹರಿ ನೈವೇದ್ಯವನು ಕೊಳದಲೆ ಮಡಿಯಲ್ಲ
ನೆರೆಮನೆ ಸೇರಿಕೊಂಡವನಿಗೆ ಮಡಿಯಲ್ಲ
ಪರಮಶುದ್ದ ವಿಜಯವಿಠ್ಠಲನ
ಚರಣದಲಿ ರತಿ ಇಲ್ಲದಲೆ ಮಡಿ ಅಲ್ಲ ೫
ಜತೆ
ಕೋಪದವನ ಸಂಗಡಲಿರೆ ಮಡಿಯಲ್ಲ
ಶ್ರೀಪತಿ ವಿಜಯವಿಠ್ಠಲನೊಲಿಯದಿರೆ ಮಡಿಯಲ್ಲ ೬

ಈ ಸುಳಾದಿಯನ್ನು ‘ಹಸ್ತ ಸ್ತೋತ್ರ’ವೆನ್ನಬಹುದು.

೫೫. ತಿರುಪತಿ
ಝಂಪೆತಾಳ
ಮಣಿ ಮಯಾ[ದಿ ಕಿರಣ ಕಂಕಣ ಶೋಭಿತದ ಹಸ್ತ |
ಘನ ಮಹಿಮ ಲಕುಮಿ ತಕ್ಕೈಸುವ ಹಸ್ತ |
ಮನುಜ ವಿಗ್ರಹನಾಗಿ ನಂದವ್ರಜದಲ್ಲಿ ಮಾ |
ನುನಿಯರ ಮನಿಯಾ ನವನೀತ ಕದ್ದ ಹಸ್ತ |
ಅನು ವಾರದೊಳು ಫಲ್ಗುಣಗೊಲಿದು ದಿವ್ಯತೇ |
ರನು ಪಿಡಿದು ವಾಜಿಯನು ನಲಿದು ನಡಿಸಿದ ಹಸ್ತ |
ಘನಗಿರಿಯ ವಾಸಾ ಸರ್ವೇಶ ತಿರ್ಮಲೇಶ |
ಎನಗೊಲಿದಾ ವಿಜಯವಿಠಲದೇವನ ಹಸ್ತ ೧
ಮಟ್ಟತಾಳ
ಬಿಲ್ಲು ಮುರಿದ ಹಸ್ತ ಚಳ್ಳುಗುರಿನ ಹಸ್ತ |
ಪಲ್ಲವಾರುಣ ಹಸ್ತ ಮಲ್ಲಮರ್ದನ ಹಸ್ತ |
ತಲ್ಲಿ ಸವದ ಹಸ್ತ ಜಲಧಿ ಎ[ಸೆ]ದ ಹಸ್ತ(?) |
ಬಲ್ಲಿದ ವಿಜಯವಿಠ್ಠಲದೇವನ ಹಸ್ತ ೨
ರೂಪಕತಾಳ
ಕಮಲ ಸಂಭವಗೆ ಆಗಮವನಿತ್ತ ಹಸ್ತ |
ರಮಣಿಗೋಸುಗ ಪಾರಿಜಾತ ತಂದ ಹಸ್ತ |
ಸುಮನಸರಿಗೆ ಸುಧೆ ಉಣಬಡಿಸಿದ ಹಸ್ತ |
ಸಮರದೊಳಗೆ ದಿನಕರನ ಮುಚ್ಚಿದ ಹಸ್ತ |
ಹಿಮಕರನ ಪಿಡಿದು ಈಕ್ಷಿಸಿ ಕಳುಹಿದ ಹಸ್ತ |
ಸಮಯಾತ್ಮ ವಿಜಯವಿಠಲನ್ನ ಹಸ್ತ |
ಅಮಿತಗುಣಪೂರ್ಣವಾದ ಹಸ್ತ ಹೃ |
ತ್ಕಮಲದೊಳಗೆ ನಿಂದು ಪೊಳೆವ ಹಸ್ತ ೩
ಝಂಪೆತಾಳ
ದಾನವನುದರ ಬಗಿದು ಕರುಳ ಕಿತ್ತಿದ ಹಸ್ತ |
ದಾನವನು ಕೈಕೊಂಡ ದಿವ್ಯಹಸ್ತ |
ಆನೆಯನು ಸೀಳಿ ರಜಕನ್ನ ಮಡಹಿಡಿದ ಹಸ್ತ |
ವಾನರೇಶಗೆ ಬೊಮ್ಮಪದವಿ ಕಟ್ಟಿದ ಹಸ್ತ |
ನೀವೆ ಗತಿ ಎಂದೆನಲು ಬಿಡದೆ ಸಾಕುವ ಹಸ್ತ |
ಶ್ರೀನಾಥ ವಿಜಯವಿಠಲ ತಿಮ್ಮನ ಹಸ್ತ |
ಮಾನಸ ಪೂಜೆಯಲಿ ಧ್ಯಾನಕೆ ನಿಲುವ ಹಸ್ತ |
ಮಾನಿನಿ ಪ್ರತಿವ್ರತದಿ ತೃಪ್ತಿ ಬಡಿಸಿದ ಹಸ್ತ ೪
ತ್ರಿವಿಡಿತಾಳ
ವಿದುರನ ಮನೆಯಲ್ಲಿ ಕ್ಷುಧಿಗೆ ಪಾಲ್ಗುಡಿದ ಹಸ್ತ |
ಸುದರುಶನ ಕಂಬುಗದ ಪದುಮದ ಹಸ್ತ |
ಸುಧಾಮನ ಅವಲಿಗೆ ಚದುರವೊಡ್ಡಿದಾ ಹಸ್ತ |
ಇದೆ ಕುಬಜಿಯ ತಿದ್ದಿದ (ಚದುರ) ಸುಂದರ ಹಸ್ತ |
ಸುಧಾ ತಿರುವೆಂಗಳಾ ವಿಜಯವಿಠಲ ಸೂ |
ಹೃದಯರಿಗೆ ಕೈವಲ್ಯ ತೋರುವ ಹಸ್ತ ೫
ಅಟ್ಟತಾಳ
[ಮುದ್ರೆ]ಗಳಿಂದಲಿ ಬಲುರಮ್ಯವಾದ ಹಸ್ತ |
ಅದ್ರಿಯ ನೆಗೆಹಿದ ಅಗೋಚರವಾದ ಹಸ್ತ |
[ಕಾ] ಕಾದೃವೆ ತುಳಿವಾಗ ಅಭಿನಲಿಸುವ ಹಸ್ತ |
ಅಧೃತ (ಅದ್ವೈತ) ವಿಜಯವಿಠಲ ತಿರುವೆಂಗಳ |
ಭದ್ರ ಗಜರಾಜ ವರದನ್ನ ಹಸ್ತ ೬

ಆದಿತಾಳ
ವೈಕುಂಠವೆಂದು ತೋರುವ ಹಸ್ತ |
ಲೋಕವ ಪಾಲಿಪ ಲಾವಣ್ಯ ಹಸ್ತ |
ಸಾಕಾರವಾದ ಸ್ವತಂತ್ರ ಹಸ್ತ |
ಏಕಮಯನ ಹಸ್ತ ಆ ಕಟಿಕರ ಹಸ್ತ |
ಶ್ರೀಕರ ವಿಜಯವಿಠಲ ಸನಕಾದಿಗಳ ಪಾಲಿಪ ಹಸ್ತ ೭
ಜತೆ
ದುಷ್ಟ ಮರ್ದನ ಹಸ್ತ ಶಿಷ್ಟಪಾಲಕ ಹಸ್ತ |
[ಶಿ]ಷ್ಟೇಶ ವಿಜಯವಿಠಲ ತಿಮ್ಮನ ಹಸ್ತ ೮

ಇದು ಪ್ರಧಾನವಾಗಿ ಮಧ್ವಾಚಾರ್ಯರ

. ಉಡುಪಿ೧೪
ಧ್ರುವತಾಳ
ಮಧ್ವಮತದ ಭಾಗ್ಯ ಎಂಥದೊ ಎಂಥದೊ |
ದುಗ್ದಾಬ್ಧಿಯಂತೆ ಪ್ರಕಾಶವಾಗಿ |
ದಿಗ್ದೇಶದೊಳು ತುಂಬಿ ಸೂಸುತಲಿದೆ ಇದೇ |
ಸಿದ್ಧಾಂತ ಪ್ರಮೇಯವನು ಪ್ರತಿದಿನದಲಿ |
ನಿರ್ಧಾರವಾಗಿ ಗುಣಿಸಿ ಪೇಳುವುದಕೆ ನಿತ್ಯ |
ರುದ್ರಾದಿಗಳಿಗಿದು ಅದ್ಭೂತವೊ |
ಭದ್ರಗತಿ ಬೇಕಾದ ಮನುಜ ಇಲ್ಲಿಗೆ ಬಂದು |
ಶುದ್ಧಾತ್ಮನಾಗಿ ಒಮ್ಮೆ ಸ್ಮರಿಸಲಾಗೀ |
ನಿರ್ದೋಷನಾಗುವನೇ[ನೆಂ]ಬೆನಯ್ಯಾ ಕರು |
ಣಾಬ್ಧಿಯೇ ಕಾಣೊ ನಮ್ಮ ಗುರುರಾಯರು |
ಅಬ್ಧಿಮೇಖಳದೊಳು ಅಜ್ಞಾನ ವ್ಯಾಪಿಸಿ |
ಬದ್ಧಭವದೊಳು ನೆಲೆಗಾಣದೇ |
ಬಿದ್ದು ಹೊರಳುತಿರೆ ಜೀವೇಶ ಒಂದೆಂದು |
ಶ್ರದ್ಧೆಯಿಲ್ಲದೆ ಸುಜನ ಬಳಲುತಿರಲು |
ಉದ್ಧರಿಸುವೆನೆಂದು ಅತಿ ತೀವ್ರದಲಿ ಅ |
ವಿದ್ಯಾ ಕಾಮಕರ್ಮ ತತಿಗಳನು |
ಒದ್ದು ಕಡಿಗೆ ನೂಕಿ ಭೇದಾರ್ಥಮಾರ್ಗ ತೋರಿ |
ಸದ್ವೈಷ್ಣವರಾಗಿ ಮಾಡಿ ನಗುತ್ತಾ ತಪ್ತಾ |
ಮುದ್ರೆಯನಿತ್ತು ಮೋದದಿಂದಲಿ ಪರಮ ಮುಖ್ಯ |
ವಿದ್ಯರಚಿಸಿ ವಿಶೇಷ ಮಾರ್ಗದ |
ಪದ್ಧತಿಯನ್ನು ತೋರಿ ಪರಿ ಪರಿ ಮತವೆಂಬೊ |
ದಿಗ್ದಂತಿಗಳಿಗೆ ಅಂಕುಶವೆನಿಪ |
ಮಧ್ವರಾಯರ ಮತದ ಭಾಗ್ಯವೆ ಸೌಭಾಗ್ಯ |
ಇದ್ದಲ್ಲಿ ಸುಧಾವರ್ಷಗರೆವುತಿದಕೋ |
ಖದ್ಯೋತ ಉದಿಸಲು ಸರ್ವಜಾತಿಗೆ ನೋಡು |
ಉದ್ದಿನಷ್ಟು ಖೇದ ಪುಟ್ಟದು ಕಾಣೋ |
ಬುದ್ಧಿವಂತರಾಗಿ ತಮ ತಮ್ಮ ಸಾಧನ |
ಇದ್ದದ್ದೆ ಮಾಡಿ ಸುಖಿಸುವರು |
ಈ ಧರೆಯೊಳು ಕೇಳು ತನ್ನಿಂದ ಉಪಕಾರ |
ಪದ್ಮ ಬಾಂಧವನಿಗೆ ಅಣುಮಾತ್ರವು ಇಲ್ಲ |
ತದ್ವೇಷವನ್ನೆ ಮಾಡಿ ಅಪಕಾರದಿಂದ ರವಿಗೆ |
ಬದ್ಧಗೈಸುವ ಶಕ್ತಿ ಮೊದಲೇ ಇಲ್ಲ |
ಪೊದ್ದಿಕೊಂಡು ಬಂದು ಹೊದರಿನೊಳಗೆ ಅಡ |
ಗಿದ್ದಾಗಿ ತರುವಾಯಾ ಇದೆ ನಾಮದ |
ಇದ್ದ ಶಕುನಿ ವ್ಯರ್ಥ ದೂಷಿಸಲೇನಹುದೊ |
ಹೃದರೋಗವಲ್ಲದೆ ಅದರಂತೆವೋ |
ಮಧ್ವರಾಯರ ಮತದ ಭಾಗ್ಯವೆ ಸೌಭಾಗ್ಯ |
ನಿದ್ರೆಯೊಳಗಾದರು ಎಚ್ಚತ್ತು ನೋಡಿದರು |
ಉದ್ರೇಕ ಆನಂದ ಮುಂದೆ ವರ್ಣಿಸಲರಿಯೇ |
ಶಬ್ದಮಾತುರ ಕೇಳಿ ಬರಲು ಈ ಪರಿ ಸಾ |
ನಿಧ್ಯವಾಗಿದ್ದ ಜನರ ಪುಣ್ಯವೆಂತೊ |
ಮಧ್ವವಲ್ಲಭ ನಮ್ಮ ವಿಜಯವಿಠಲ[ನ]ಲ್ಲಿ |
ಇದ್ದ ಸೊಬಗುನೋಡು ಆನಂದತೀರ್ಥರಿಂದ ೧
ಮಟ್ಟತಾಳ
ತತ್ವವಿಚಾರವನು ತಿಳಿದ ಮನುಜ ಮನುಜಾ |
ಉತ್ತುಮ ಉತ್ತುಮನು ಆವಾವ ಜನುಮಕ್ಕೆ |
ವೃತಿರೂಪದಲ್ಲಾದರು ಜೀವನ್ಮುಕ್ತನು |
ನಿತ್ಯನಿತ್ಯವನು ಧ್ಯಾನವಮಾಡುವನು |
ತತ್ತಳಿಸುವ ಮಧ್ವಮತವ ಪೊಂದಿದನು |
ಮೃತ್ಯುವಿಗಂಜಿ ಕಾಲಗೆ ಭಯಪಡನು |
ಮತ್ರ್ಯಲೋಕದಲ್ಲಿ ಅವನೇ ಸಿದ್ಧಪುರುಷ |
ಎತ್ತಲಾದರು ಅವನು ಇದ್ದದಿಕ್ಕಿಗೆ ಹಸ್ತಾ |
ವೆತ್ತಿ ಮುಗಿದು ಮಹಾಧನ್ಯನಾಗಲಿಬೇಕು |
ಇತ್ತಕೇಳು ಮನವೆ ಶ್ರುತಿ ಪುಶಿಯೆಂಬವನ |
ಉತ್ತರ ನಿಜವೇನೊ ಗರ್ತಿ ಮಗನೊ ಎಂದರೆ ವಾದಿಸುವನ ಕೂಡ |
ಹೊತ್ತುಹೊತ್ತಿಗೆ ಬಡದಾಡಿದರೇನುಂಟೋ |
ಕೀರ್ತಿಪುರುಷ ನಮ್ಮ ವಿಜಯವಿಠಲರೇಯನ್ನ |
ಚಿತ್ತದಲ್ಲಿ ಇಟ್ಟ ಮಧ್ವರಾಯರೆ ಗುರುಗಳೆನ್ನಿ ೨
ತ್ರಿವಿಡಿತಾಳ
ಎಂಥಾ ಕರುಣಾಳೊ ಸರ್ವಜ್ಞರಾಯರು |
ಚಿಂತಾಮಣಿಯ ಕಾಣೊ ಚಿರಕಾಲ ನಮಗೆಲ್ಲ |
ಶಾಂತರಾಗಿ ಲೋಕಮಲಿನ ದರ್ಪಣದಂತೆ |
ಭ್ರಾಂತಿಯಲ್ಲಿ ನಿತ್ಯ ಮುಳುಗಿರಲು |
ಮಂತ್ರೋಪದೇಶಿಸಿ ಅಮೃತಗರೆವ ಮಹಾ |
ಗ್ರಂಥಗಳ ಮಾಡಿ ಮಂದಜನಕೆ |
[ಚಿಂತೆ] ಪೋಗಾಡಿಸಿ ಅನಾದಿಯಿಂದ ಬಂದಾ |
ಗ್ರಂಥಿಯನು ಬಿಡಿಸಿ ತತ್ವಾನುಸಾರ |
ಎಂತೆಂತು ಮನಸೀಗೆ ಸೌಕರಿಯವಾಗುವಾ |
ಪಂಥ ತೋರಿದರಯ್ಯಾ ಭೇದಾರ್ಥದಿ |
ಪಿಂತೆ ಮಂತೀಗ ನೂರಾರು ಕೋಟಿ ಕುಲಕೆ |
ಅಂತಕನ ಬಾಧೆಯಿಲ್ಲದಂತೆ ವೆ |
ಸಂತೋಷವಿತ್ತು ಎಂದಿಗೇ ಪ್ರತಿಕೂಲಾದ |
ಕಾಂತಾರಕಡಿವ ಕುಠಾರ ಕಾಣೊ |
ಇಂತು ಸಜ್ಜನರನ್ನು ಪಾಲಿಸಿ ಅತಿ ತೀವ್ರ |
ಸಂತರಿಗೆ ನವವಿಧ ಭಕ್ತಿ ಪುಟ್ಟು |
ವಂತೆ ಕೇವಲ ಸಾಧನಕೆ ದ್ವಾರಕಿಯಲ್ಲಿ |
ನಿಂತಿದ್ದ ನಿಗಮಗೋಚರ ರುಕ್ಮಿಣಿ |
ಕಾಂತನ ವಿಗ್ರಹ ನಿಲ್ಲಿಸಿ ಲಕ್ಷಣದಿಂದ |
ತಂತ್ರ ಸಾರೋಕ್ತದಿ ಪೂಜೆ ಮಾಡಿದರು |
ಎಂಥ ಗುರುಗಳೋ ಮಧ್ವಮುನಿರಾಯರು |
ಅಂತುಗಾಣೆನು ನಾನು ರಜತ ಪೀಠದ ಮಹಿಮೆ |
ಎಂತೆಂತು ಪೊಗಳಿದರೆ ಪೊಸ ಬಗೆಯೂ |
ಕಂತು ಪಿತನು ಇಲ್ಲಿ ನೆಲೆಯಾದ ನಾನಾ |
ವೃತ್ತಾಂತ ಸ್ಕಂದನಿಗೆ ಶಿವನು ಪೇಳಿಪ್ಪನೋ |
ದಂತ ಕಥೆಯಲ್ಲ ಧರಣಿಯೊಳಗೆ ಆ |
ದ್ಯಂತ ಕಾಲದಲ್ಲಿದೆ ಸಿದ್ಧವೆನ್ನಿ |
ಅಂತರಂಗದ ಸ್ವಾಮಿ ವಿಜಯವಿಠಲ ಸ್ವ |
ತಂತ್ರ ಪುರುಷ ಮಧ್ವಮುನಿ ಹೃದಯಮಂದಿರ ೩
ಅಟ್ಟತಾಳ
ಏನು ಸುಕೃತವೋ ಮತ್ತಾವ ಸಾಧನವೊ |
ಆನಂದತೀರ್ಥರ ಕರವಾರಿಜದಿಂದ |
ಭಾನುವಿನಂತೆ ಪ್ರಕಾಶಮಯನಾಗಿ |
ಈ ನಿಧಿಯಲ್ಲಿ ನಿಲ್ಲಿಸಿದ ಬಾಲರೂಪ |
ಮಾನವ ವೇಷ ಭಕುತರ ಲಾಂಛನ |
ಮಾನಸದಲ್ಲಿ ನೋಡಿ ಧನ್ಯನಾದೆನೊ |
ಎನ್ನಾ ಏನು ಸುಕೃತವೋ ನಾನು |
ನನ್ನ ಗೋತ್ರರ ದೇಹ ಈ ಜನ್ಮ |
ನಾನಾ ಪ್ರಕಾರದಿ ಮಾಡಿದ ಕರ್ಮವು |
ಅನಂತ ಯೋನಿಯಲ್ಲಿ ಬಂದು ಮಾಡಿದ ಬಗೆ |
ಕಾನನ ಗಿರಿಗ್ರಾಮ ಕ್ಷೇತ್ರ ಸರೋವರ |
ಧನಭವನ ಮೃಗ ಪಕ್ಷಿವಾರಿಚರ |
ಮಾನವ ತರುಜಾತಿ ನಾಮದಲ್ಲಿಪ್ಪವು |
ಏನೆಂಬೆ ಎಲ್ಲೆಲ್ಲಿ ಇದ್ದ ವಸ್ತುಗಳೆಲ್ಲಾ |
ಭಾನುಪ್ರಕಾಶದ ಪರಿಯಂತ ಚನ್ನಾಗಿ |
ಆನೇನಾದದು ನೋಡಿ ಹೇಳಿ ಕೇಳಿ ಆ |
ಘ್ರಾಣಿಸಿ ಮೆದ್ದದ್ದು ಇದರ ವಿಸ್ತಾರವೆಲ್ಲಾ |
ಪುನೀತವಾಗಲಿ ನಿರಂತರ ಬಿಡದಲೆ |
ಆನಂದತೀರ್ಥರ ಕರುಣಕೆ ಎಣಿಯೆ |
ಜ್ಞಾನ ಪರಿಪೂರ್ಣ ವಿಜಯವಿಠಲರೇಯ |
ಧ್ಯಾನ ಮಾಡುವ ಜನಕೆ ಅತಿ ಸುಲಭ ಸಾಧ್ಯ ೪
ಆದಿತಾಳ
ಶ್ರೀ ಮದುಡುಪಿನ ಯಾತ್ರಿಯೆ ಯಾತ್ರಿ |
ಶ್ರೀ ಮದಾನಂದ ತೀರ್ಥ ಗುರುಗಳ ಗುರುಗಳು |
ಭೂಮಿಯೊಳಗೆ ಇದಕ್ಕೆ ಸಮಾ ಆಧಿಕ್ಯಕಾಣೆ |
ರೋಮಾರೋಮಾದಲ್ಲಿ ಪುಣ್ಯ ತುಂಬಿ ತುಳುಕುವದು |
ಶ್ರೀ ಮದ್ವೈಷ್ಣವ ಜನುಮವೆ ಜನ್ಮವೆನ್ನಿ |
ಶ್ರೀಮದ್ಭಾಗವತ ಶ್ರವಣವೆ ಶ್ರವಣವೆನ್ನಿ |
ಶ್ರೀಮದ್ವಿಷ್ಣು ಭಕ್ತಿ ಇದೆ ಮಹ ಭಕ್ತಿಯೆನ್ನಿ |
ಯಾಮಯಾಮಕೆ ಸ್ಮರಿಸೆ ಸಕಲ ಸಂಪದವಕ್ಕು |
ಈ ಮನೋ ಉತ್ಸಹ ಇಲ್ಲೆ ಪುಟ್ಟಿಂದೆ |
[ವ್ಯೋ]ಮ ಗಂಗಾದಿ ಕ್ಷೇತ್ರ ನೋಡಲು ಆಗದಿದಕೊ |
ತಾಮರಸ ಪೀಠನ್ನ ಲೋಕಕ್ಕೆ ಸಮವಿಬುಧ |
ಸ್ತೋಮ ಕೊಂಡಾಡದೆ ಸರ್ವಾಗಮದಿಂದ |
ತಮಬುದ್ಧಿ ನಾಶವಹುದು ಚರಮಯಾತ್ರಿ ಇದೆ |
[ಶ]ಮದಮ ಗುಣದಲ್ಲಿ ಮುಕ್ತರೊಳಗಿಪ್ಪ |
ರಮೆ ಮನೋಹರ ನಮ್ಮ ವಿಜಯವಿಠಲರೇಯಾ |
ನೇಮ ನಿತ್ಯದಲ್ಲಿ ಮನಸು ಕೊಡುವನು ನಿತ್ಯದಲ್ಲಿ ೫
ಜತೆ
ಮಧ್ವರಾಯರ ಕರುಣ ಪಡೆದು ಪಾವನರಾಗಿ |
ಸಿದ್ಧನಾಗುವದು ವಿಜಯವಿಠಲನ ಪೊಂದಿ ೬

ಉತ್ತರಾದಿಮಠದ ಯತಿವರೇಣ್ಯರಿಂದ ಪೂಜೆಗೊಳ್ಳುತ್ತಿರುವ

೧೨೮
ಧ್ರುವತಾಳ
ಮಧ್ವವಲ್ಲಭ ಜಯ ಸದ್ವೈಷ್ಣವರ ಪ್ರಿಯಾ
ಅದ್ವೈತ ಮಹಿಮ ಜಗದ್ವಿಲಕ್ಷಣ ರಾಮಾ
ಸದ್ವರ್ಣ ಭೂತ ಭವಿಷ್ಯದ್ವರ್ತಮಾನ ಬಲ್ಲ
ವಿದ್ವಾಂಸರೊಡಿಯಾಘ ಪ್ರಧ್ವಂಸ ಅಪ್ರಮೇಯ
ಸದ್ವೀರ ಏಕಮೇವ ಅದ್ವಿತೀಯಾ ಪಾ
ದದ್ವಯನೆನಿಸುವ ಸದ್ವಾಣಿವುಳ್ಳ ಗು
ರು ದ್ವಾರ ಸಾರಿದವರ ಹೃದ್ವನಜದಲ್ಲಿದ್ದು
ಸದ್ವಿಚಾರ ನಡೆಸುವ ತದ್ವಿಪರೀತ ಕಾರ್ಯ
ಅಧ್ವರ ಭೋಕ್ತ ನಮ್ಮ ವಿಜಯ ವಿಠ್ಠಲರೇಯಾ ಮ
ರುದ್ವಂಶರಿಂದ ನಿತ್ಯ ಸದ್ವಾಲಗಕೊಂಡ ಮೂರ್ತಿ ೧
ಅಟ್ಟತಾಳ
ಪೆರ್ಮೆಯಿಂದಲಿ ವಿಶ್ವಾಕರ್ಮನಿಂದಲಿ ಅಂದು
ನಿರ್ಮಿತವಾಗಿದ್ದ ನಿರ್ಮಳ ಶರೀರ
ಧರ್ಮಬೋಧಕ ರಾಮಾ ನಿರ್ಮಯನೆ ಚ
ತುರ್ಮಾಗ ನಿತ್ಯ ನಿಷ್ಕರ್ಮ ಭಾವದಲ್ಲಿ
ನಿರ್ಮತ್ಸರನಾದ ವಿಜಯ ವಿಠ್ಠಲರೇಯನ
ನಿರ್ಮಲ ಚಿತ್ತದಲ್ಲಿ ಅರ್ಚನೆ ಮಾಡಿದೆನೋ ೨
ತ್ರಿವಿಡಿತಾಳ
ಬಲುಕಾಲ ಲೋಕೇಶ ತನ್ನ ಮನಿಯಲ್ಲಿ
ಚೆಲುವ ರಾಮನಪೂಜೆ ಮಾಡುತಿರಲು
ಒಲಿದು ಜಾಬಾಲಿಮುನಿ ಪ್ರಾರ್ಥನೆ ಯಿಂದಲಿ
ಜಲಜ ಸಂಭವನ ಮೆಚ್ಚಿಸಿ ಬೇಡಲು
ಸಲಿಸಿ ಮಾತನು ಋಷಿಗೆ ಈ ಪ್ರತಿಮೆ ಕೊಡಲಾಗಿ
ಒಲಿಸಿಕೊಂಡಲ್ಲಿಂದ ಶಿವಗೆ ಕೊಡಲು
ಸುಲಭದಿಂದ ಶಿವನು ತನ್ನಯ ನಿಜ
ಲಲನಿಗೆ ಕೊಡಲಾಗಿ ವಿನಯದಿಂದ
ಕೆಲವು ದಿವಸ ಗಿರಿಜೆ ಪೂಜಿಸಿ ಆಮೇಲೆ
ತಿಳಿದು ದಕ್ಷನ ಯಾಗದಲ್ಲಿಗೆ ಬಂದು
ಇಳಿದು ಪೋಗುವಾಗ ಸೈಮುನಿ ಋಷಿ ಕೈ
ಯಲ್ಲಿಕೊಟ್ಟ ತರುವಾಯ ರಾಮ ಪ್ರತಿಮೆಯನ್ನು
ಜಲಜಗರ್ಭನ ವಶಕೆ ತಂದು ಕೊಡಲು
ಪೊಳೆವ ಸುಮೇರು ಪರ್ವತದಲ್ಲಿ ಇಟ್ಟು ನಿ
ಶ್ಚಲ ಪೂಜೆ ಮಾಡುತಿದ್ದಾನೆಂದೂ
ಬಲುದೈವ ವಿಜಯ ವಿಠ್ಠಲ ಜಾನಕಿಪತಿ
ಬಲವಂತ ಭಕ್ತರ ಪ್ರಿಯ ಸುಜನಗೇಯಾ ೩
ಅಟ್ಟತಾಳ
ತಪಮಾಡಿ ಇಕ್ಷ್ವಾಕು ಬ್ರಹ್ಮಗೆ ಮೆಚ್ಚಿಸಿ
ಕೃಪೆಯಲ್ಲಿ ಮೂಲರಾಮನ ಕೊಡಲಿತ್ತಲು
ಕ್ಷಿತಿಯೊಳಗೆ ಅಯೋಧ್ಯದಲ್ಲಿ ಪೂಜಿಸಲಾಗಿ
ಅತಿಶಯವಾಗಿ ರಾಮಚಂದ್ರ ಪರಿಯಂತೆ
ಮಿತಿ ಇಲ್ಲದ ವಾಲಗದಲ್ಲಿ ಒಪ್ಪಲು
ಕ್ಷಿತಿಸುತೆ ತಾನೆ ಪೂಜಿಸಿ ಹನುಮಂತನಿಗೆ
ಪ್ರತಿಮೆಯ ಪಾಲಿಸೆ ಅಲ್ಲಿಂದ ಮಾರುತ
ಸುತನು ಜಾಂಬುವಂತನಿಗೆ ದಯಮಾಡಿದಾ
ಸತತ ಮಂಗಳಕಾಯಾ ವಿಜಯ ವಿಠ್ಠಲ ರಾಮಾ
ನುತಿಸಿ ಕೊಳುತಲಿದ್ದಾ ಸುರರಾದಿ ಕೈಯಾ ೪
ಆದಿತಾಳ
ವೇದಗರ್ಭನೆಂಬೊ ಭೂಸುರ ರಾಮನ್ನ
ಪಾದ ಸಂದರ್ಶನವಾಗದಲೆ ಅ
ನ್ನೋದಕ ಕೊಳದಿರೆ ರಾಘವ ಭಕ್ತನಿಂ
ದಾದ ಪ್ರತಿಜ್ಞೇಯನು ತಿಳಿದು ತನ್ನ ಮೂರ್ತಿಯ
ಆದರದಿಂದಲಿ ಕೊಟ್ಟು ಕಳುಹಲಿತ್ತಾ
ಭೂದೇವ ಬಹುಕಾಲ ಸೀತಾರಾಮ ಪ್ರತಿಮೆಯ
ಮೇದಿನಿಯೊಳು ಬಿಟ್ಟು ಪೋಗಲಾಗಿ ಇತ್ತ
ಸಾಧುಗುಣವುಳ್ಳ ಮುಕುಂದವರ್ಮನೆಂಬ
ಮೇದಿನಿಪತಿಯಾಗಿ ಒಡ್ಡಿ ದೇಶದಲ್ಲಿರೆ
ಆದುದು ಅಶರೀರವಾಕ್ಯ ಆತಗೆ ಕೇಳಿ
ಆದಿತ್ಯವಂಶಜ ವಿಜಯ ವಿಠ್ಠಲ ರಾಮಾ
ರಾಧನೆಗೊಳುತಿದ್ದ ಅಜನಿಂದ ಕೋಶದಲ್ಲಿ೫
ಜತೆ
ನರಹರಿತೀರ್ಥರಿಗೆ ಒಲಿದ ವಿಜಯ ವಿಠ್ಠಲ
ಸ್ಮರಿಸಿದವರ ಕಾವಾ ನಿತ್ಯ ರಘುರಾಮಾ ೬

ವೇದ ವೇದಾಂತಗಳನ್ನು ಹತ್ತಾರು ವರ್ಷಗಳ ಕಾಲ ಅಭ್ಯಾಸ

೯೯
ಧ್ರುವತಾಳ
ಮನದುಸ್ಸಂಗತಿ ಯೋಚನೆ ಮಾಡಿದರೆ ಯೋ
ಚನ ಮಾಡಲೀಸಯ್ಯಾ ಯೋ
ಚನೆ ಮಾಡಿದರೆ ಅಲ್ಲಿ ಎರಗಲೀಸಯ್ಯಾ
ಮನವೆರಗಿದರೆ ಅತ್ತ ಪೋಗಲೀಸಯ್ಯಾ ಅ ಅ ಅ ಆ
ಕ್ಷಣ ಪೋದರೆ ಅಲ್ಲಿ ನೋಡಲೀಸಯ್ಯಾ
ನೆನಿಸಿ ನೋಡದಿರು ನಿಲ್ಲದೆ ಕುಳ್ಳಲೀಸಯ್ಯಾ
ಮನ ದುಸ್ಸಂಗತಿಗೆ ಅನುವಾಗಿ ಅಲ್ಲೆಲ್ಲಿ ಮಾತಾಡಲೀಸಯ್ಯ
ಬಿನಗು ಮಾತಾಡಿದರು ಅಪವಾದ ಬರಲೀಸಯ್ಯಾ
ಜನರಪವಾದವು ಬಂದರು ಭಕ್ತನಿಗೆ ಇರಲೀಸಯ್ಯಾ
ಘನಪಾಪಂಗಳು ಪ್ರದ್ವಂಸಮಾಡುವ ದೇವ
ನಿನಗಾವದೆದುರೆ ನಿನಗೆಣೆಗಾಣೆ ನಿನ್ನ
ಮಣಿ ಭೂಷಣಂಘ್ರಿಗಣೆಗಾಣೆ
ನಿನಗೆ ನಮೋ ನಿನ್ನ ಗುಣಕರ್ಮಂಗಳಿಗೆ ನಮೋ
ಎನಿತು ನಿನ್ನ ಮಹಿಮೆ ಮನಮೆಚ್ಚು ಭಕ್ತರಿಗೆ
ಉಣಿಸಿ ಉಡಿಸಿ ನೋಡಿ
ಮನಎರಗಿದ ವಂಚನೆ ಪ್ರಯೋಜನಗಳು
ಅಣಗೊತ್ತಿ ಕಾವುತಿಪ್ಪ ಅಣೋ
ರಣಿ ಆಹಾ ವಿಭುವೆ ವಿಜಯ ವಿಠ್ಠಲರೇಯ
ಮನದುಸ್ಸಂಗತಿಗೆ ಯೋಚನೆ ಮಾಡಲೀಸಯ್ಯಾ ೧
ಮಟ್ಟತಾಳ
ಭಕುತಿ ಎಂಬೊ ಕರ್ದಮದೊಳಗೆ
ಅಖಿಳ ಬಲವಂತ ಹರಿತಾಸಿಗೆಬಿದ್ದು
ದಿಕ್ಕುಗೆಡುವನಯ್ಯಾ
ಭಕುತಿ ಎಂಬೊ ಪಾಶಕ್ಕೆ ವಶವಾಗಿ
ಲಕುಮಿವಲ್ಲಭ ಒಂದಡಿ ಇಡಲಾರ
ಭಕುತಿ ಎಂಬೊ ತೊಡರಿಗೆ ತಗಲಾಗಿ
ಮುಕುತೇಶ ಕೃಷ್ಣ ತೊಲಗದೆ ಇಪ್ಪನಯ್ಯಾ
ಭಕುತಿ ಎಂಬೋದು ಮಾವುತನೋಪಾದಿ
ಅಕಟ ದಿಕ್ಕರಿಯಂತೆ ಹರಿ ಕೇಳುತಲಿಪ್ಪ
ಭಕುತಿ ಎಂದೆಂಬೊ ವಸ್ತ್ರ ಬಚ್ಚಿಟ್ಟುಕೊಳ್ಳಿ
ಕಕುಲಾತಿಯಿಂದ ಹರಿ ಬೆಂಬಲವಾಹ
ಭಕುತಿಗೆ ಈಡಿಲ್ಲ ಭಕುತಿಗೆ ಕೇಡಿಲ್ಲ
ಭಕುತಿಯ ಸಂಪಾದಿಸಿರೊ ಭಕುತಿ ಉಳ್ಳ ಮನುಜ
ಮುಕುತನೊ ಮಕುತನೋ
ಭಕುತಿಗೆ ಒಲಿದಂತೆ ಮತ್ತಾವುದು ಅಲ್ಲ
ಅಕಳಂಕ ಚರಿತ ವಿಜಯ ವಿಠ್ಠಲರೇಯ
ಭಕುತಿಗೆ ಮನ ಸೋತು ಮೌನವಾಗಿ ನಿಲುವಾ ೨
ತ್ರಿವಿಡಿತಾಳ
ಭಕುತಿಗೆ ಸಿಗಬಿದ್ದು ಭಂಡಿ ನಡಿಸಿದ ನೋಡು
ಭಕುತಿಗೆ ತೊಲಗದೆ ಮುನಿಯ ತೇರನೆ ಎಳೆದಾ
ಭಕುತಿಗೆ ವಶವಾಗಿ ಸೌಭಾಗ್ಯವನೆ ಇತ್ತಾ
ಭಕುತಿಗೆ ಮರುಳೆನಿಸಿ ಆಳಾಗಿ ಸೇವಿಸಿದಾ
ಭಕುತಿಗೆ ಮೀರದೆ ವಿದುರನಲ್ಲಿ ಉಂಡಾ
ಭಕುತಿಗೆ ಒಳಗಾಗಿ ತನಗೆ ತಾನೆ ಸೋತಾ
ಭಕತಿ ಉಳ್ಳವರಿಂದ ಹರಿ ಮಾರಿಸಿಕೊಂಬ
ಭಕುತಿ ಎಂಬೊದೊಂದು ಬಲವುಳ್ಳರೆ ಹರಿ
ಶಕುತ ನಾದರು ಹೇಳಿದಂತೆ ತಾ ಮಾಡುವ
ಭಕುತಿಯೆ ಪಾಪಾ ಬೀಜಕೆ ಕಾರಣ ಸುಡುವಲ್ಲಿ
ಭಕುತಿಯೆ ಪುಣ್ಯ ಬೆಳಸಿಗೆ ಅಮೃತ ವೃಷ್ಟಿ
ಭಕುತವತ್ಸಲ ನಮ್ಮ ವಿಜಯ ವಿಠ್ಠಲನಲ್ಲಿ
ಭಕುತಿಯ ಮಾಡಿರೊ ಭಕುತರೊಡಗೂಡಿ ೩
ಅಟ್ಟತಾಳ
ದಾನ ಧರ್ಮಕ್ಕೆ ಶಿಲುಕ ಸ್ನಾನ ಮೌನಕೆ ಶಿಲುಕಾ
ಗಾನ ಯಾಗಕೆ ಶಿಲುಕಾ ಜ್ಞಾನ ಯೋಗಕೆ ಶಿಲುಕಾ
ಧ್ಯಾನಕ್ಕೆ ಕುಣಿತಕ್ಕೆ ಶಿಲುಕ ಕಾಣಿಕೆ ಕೊಟ್ಟರೆ ಶಿಲುಕಾ
ಏಣಿಸಿ ಜಪಿಸಲು ಶಿಲುಕ ಕ್ಷೋಣಿ ಚರಿಸಲು ಶಿಲುಕಾ
ನಾನಾವ್ರತ ಮಾಡಲು ಶಿಲುಕ ಏನೇನು ಕರ್ಮಕೆ ಶಿಲುಕಾ
ಮಾಣದೆ ದೃಢಭಕ್ತಿ ಮಾತುರವಿದ್ದರೆ
ತಾನಾಗಿ ಕರೆಯದೆ ಬಳಿಯಲ್ಲಿ ಬಂದೀಗ
ಕಾಣಿಸಿಕೊಂಬನು ಭಕ್ತನಿಗೆ ಅನುದಿನ
ಏನೆಂಬೆನೊ ಶಿರಿಯರಸನ್ನ ಲೀಲೆಗೆ
ಅನಿರ್ಜರರಂದು ಗುಣಿಸಿ ಎಣಿಸುವರು
ನಾನೆ ಎಂದವನಿಗೆ ಎಂದಿಗೂ ಒಲಿಯನು
ಮೀನಕೇತನಯ್ಯಾ ವಿಜಯ ವಿಠ್ಠಲರೇಯಾ
ಮಾನಸ ಭಕುತಿಗೆ ಲೇಶ ಆಲಸವಿಲ್ಲಾ ೪
ಆದಿತಾಳ
ಸಿರಿಗೆ ಹೇಳದೆ ಕರಿಯಕಾಯ್ದ ಸಿರಿಯ ಹಂಗೇನೈ
ಪರಮೇಷ್ಟಿ ಅರಿಯದೆ ಪಾರ್ಥನ ಸಲುಹಿದಾ
ಪರಮೇಷ್ಟಿ ಹಂಗೇನೈಹರನ ಓಡಿಸಿ ಅಂ
ಬರೀಷನ ಕಾಯ್ದಾಹರನ ಹಂಗೇನೈ
ಸುರಪನ ಭಂಗಿಸಿ ಗೋಕುಲಕಾಯದಾ
ಸುರಪನ ಹಂಗೇನೈ ಶರಣರಿಗಾಡಲು ತನ್ನವರಾದರು
ಜರಿದು ಬಿಡುವನೆಯ್ಯಾ ಶರಣರಿಗೆ ಪಂಚಪ್ರಾಣನಾಗಿ ಹರಿ
ಪೊರೆವನು ಪ್ರತಿದಿನ ಮೈ
ದುರುಳತನದಲ್ಲಿ ಅಜಮಿಳ ಕೆಟ್ಟರೆ
ಸ್ಮರಣೆಗೆ ಕಾಯ್ದ ನೋಡೈ
ಹರಿ ಮತ್ತೊಂದನು ಬಲ್ಲನು ಭಕುತಿ ಪರಮ ಸುಸಾಧ್ಯನೈ
ಪರಮಪುರುಷ ನಮ್ಮ ವಿಜಯ ವಿಠ್ಠಲಾ
ಶರಣರಿಗೆ ಆಳಾಗಿ ತಿರುಗುವ ಬೆಂಬಲ ಬಿಡದೆ
ಭಕುತಿಗೆ ಮರುಳಾಗಿ ಬಂದೂ ೫
ಜತೆ
ಭಕುತಿಗೆ ಮುಕುತಿಯೊ ಮುತ್ತಾವದಕ್ಕಿಲ್ಲ
ಶಕುತ ವಿಜಯ ವಿಠ್ಠಲ ಸಂಬಳ ಇಲ್ಲದ ಬಂಟ ೬

ಪ್ರಪಂಚದ ಜೀವನವನ್ನು ನೋಡಿದರೆ ಅನೇಕ

೧೦೦
ಧ್ರುವತಾಳ
ಮನವೆ ಕಂಗೆಡದಿರು ಒಡನೆ ನೆರೆದು ಬಂದ
ಜನಕೆ ಸುಗ್ರಾಸವೆಂತಹುದೆಂದೂ
ಅನುಮಾನ ಹಚ್ಚಿಕೊಂಡು ಬಡವಾಗದಿರಲೋ ಯೋ
ಚನೆ ಮಾಡು ನಿನ್ನೊಳಗೆ ಮರಳೆ ಮರಳೆ
ಘನ ಮಹಿಮನಾರಾಯಣ ಅನಾದಿ ಸ್ವಭಾವಿಕ
ಚಿನುಮಯ ಸತ್ಯ ಸಂಕಲ್ಪ ದೇವ
ಇನಿತು ಜೀವಿಗಳಿಗೆ ತಂತುಕಾಲಕ್ಕೆ
ತೃಣ ಮೊದಲಾದ ಗ್ರಾಸ ಮಾಡಿ ಇಪ್ಪ
ಕ್ಷಣ ಮೀರಗೊಡದೇ ಆವಲ್ಲಾದರು ಇದ್ದರು
ಉಣಿಸುವ ಉಚಿತಾವನ್ನೆ ತಿಳಿದು ನೋಡಿ
ದಿನ ದಿನಕೆ ನಿರ್ಮಾಣ ಮಾಡಿದಂತೆ ಬ್ರಹ್ಮ
ಫಣೆಯಲ್ಲಿ ಬರೆದಿಪ್ಪ ಆಯುಕರ್ಮ ವಿದ್ಯಾ
ಧನ ನಿದಾನ ನೇಮಿಸಿ ಹರಿ ಆಙಙ್Áನದಲ್ಲಿ
ಜನಿಸುವಾಗಲಿ ಅವರವರ ಪಡಿಪಾನ
ಕೊನೆ ಶರಗಿನಲ್ಲಿ ಕಟ್ಟಿ ಕಟ್ಟಿಹನೊ
ನಿನಗೆ ಕಾಣಬಾರದು ವೇದಶಾಸ್ತ್ರಗಳಿಂದ
ಗುಣಿಸಿ ನೋಡಿದರು ತಾರಕಣ್ಯವಹದು
ಅಣು ಮಾತರ ನಿನ್ನಿಂದಾಗುವ ಕಾರ್ಯವೇನೊ
ಅನುಭವಕೆ ತಂದುಕೊಂಡು ಜ್ಞಾನಿಯಾಗೊ
ಬಿನಗು ಚಿಂತೆಗಳಿಂದ ಬರುವ ಲಾಭವ ಕಾಣೆ
ತನುವೆ ಶೋಷಿಸಿ ವ್ಯರ್ಥ ದಾವತಿಯಾಕೆ
ಧನವಂತ ಸಿರಿ ನಮ್ಮ ವಿಜಯ ವಿಠ್ಠಲರೇಯಾ
ಮನುಜಾದಿ ದೇಹಿಗಳಿಗೆ ಸ್ವಾಮಿಯಾಗಿ ಇಪ್ಪ ೧
ಮಟ್ಟತಾಳ
ಹಿಂದಿನ ಜನುಮದಲ್ಲಿ ಇವರಿವರು ತಮ್ಮ ಸಂ
ಬಂಧಿಗಳ ಕೂಡ ಸುಖಿಸಲಿಲ್ಲವೇನೊ
ಇಂದು ನೀನವರಿಗೆ ಒಡೆಯನು ನಾನಹು
ದೆಂದು ಗರ್ವವ ತಾಳಿ ಹಿಗ್ಗುವುದು ಸಲ್ಲಾ
ಅಂದು ನೀನಾವದೇಶ ಇವರು ಮತ್ತಾವಲ್ಲಿ
ಪೊಂದಿಕೊಂಡಿದ್ದರೊ ಪೇಳುವುದೆಲೊ ಮನವೆ
ಮಂದತನವೆ ಬಿಟ್ಟು ಸರ್ವಬಗೆಯಿಂದ
ಇಂದಿರೇಯರಸನೆ ಭಾರಕರ್ತನೆನ್ನು
ನಂದ ಮೂರುತಿ ನಮ್ಮ ವಿಜಯ ವಿಠ್ಠಲರೇಯನ
ಅಂದವನ್ನು ತಿಳಿದು ನಿಸ್ಸಂಗನಾಗೊ ೨
ತ್ರಿವಿಡಿತಾಳ
ಜನನಿ ಜನಕನಾಗಿ ಅನುಜ ಭ್ರಾತೃವಾಗಿ
ತನುಜ ಮೊಮ್ಮಗನಾಗಿ ಆರ್ಯನಾಗಿ
ತನು ಸಂಬಂಧಿಗನಾಗಿ ಸಖನಾಗಿ ಗುರುವಾಗಿ
ಜನಪಾಲಕನಾಗಿ ಜಾಮಾತನಾಗಿ
ಮನೆ ಸೇರಿದವನಾಗಿ ಮಹಾತ್ಮನಾಗಿ ಯೋ
ಚನೆ ಪೇಳುವನಾಗಿ ದೂತನಾಗಿ
ಹಣವ ಕೊಡುವನಾಗಿ ಮಾವ ಮಾತುಳನಾಗಿ
ಮುನಿಯಾಗಿ ಮೈದುನ ಭಾವನಾಗಿ
ಗುಣವ ಪೇಳುವನಾಗಿ ಗುರುತು ತೋರುವನಾಗಿ
ಅನುಸಾರಿ ನರನಾಗಿ ಆತ್ಮನಾಗಿ
ಎಣಿಸಿ ನುಡಿವುದೇನೊ ನಾನಾ ರೂಪನಾಗಿ
ತನುವೆ ಧರಿಸಿ ತಾನೆ ಸಾಕ್ಷತ್ಕಾರಾ
ಕ್ಷಣ ಬಿಡದಲೆ ಪಾಲಿಸುವ ಯುಗಯುಗದಂತೆ ಮಾ
ತನು ಲಾಲಿಸುವುದು ಇವರೊಳಗೆ ತಾನೆ
ಗುಣ ಪೂರ್ಣನಾಗಿ ನಿಂದಿರಿದು ನಿರುತ ಪ್ರಯೋ
ಜನ ಮಾಳ್ಪಾ ಜೀವಿಗಳ ವಿಶ್ವಂಭರನೊ
ತೃಣ ಒಂದಾದರು ನಾರಾಯಣನ ವಿರಹಿತವಾಗಿ
ಮಣಿಸಬಲ್ಲರೆ ಪೇಳೊ ಸಿರಿಯಾದ್ಯರು
ಇನಿತು ಪರಿ ಇರಲಿಕ್ಕೆ ನೀನಾವ ಸ್ವಾತಂತ್ರ
ತನ ಪಚ್ಚಿಕೊಂಡದ್ದು ಸೋಜಿಗವೊ
ಶುನಕ ಹಮ್ಮಿಲಿ ಪೋಗಿ ಬಾಲಾ ನೆಟ್ಟಿಕೆ
ಮಾಡಿ ಘನಗಿರಿ ಎತ್ತೆನೆಂಬೊ ಗಾದಿಯಾ
ಎಣಿಕೆ ಮಾಡೆಲೊ ಮನವೆ ನಿನ್ನ ಪೌರುಷ ಉಳ್ಳರೆ
ತನು ಕ್ಲೇಶದಿಂದಲಿ ಬಳಲುವುದೇನೊ
ಮನೆ ಮಂದಿರವೆ ತಿರುಗಿ ದೈನ್ಯ ವೃತ್ತಿಯ ಬಿಟ್ಟು
ಪ್ರಣತನಾಗಿ ಸರ್ವರನು ಕೇಳಿ(ಳು)ವಿ
ನಿನಗೆ ಪಡಿ ಹಾಕಿದ ದೈವವೆ ಇವರಿಗೆ
ಅನಿಮಿತ್ತನಾಗಿ ಹಾಕುತಲಿಪ್ಪ
ಕನಕೋದರನಯ್ಯಾ ವಿಜಯ ವಿಠ್ಠಲರೇಯಾ
ಅನುಕೂಲನಾಗಿ ಗ್ರಾಸವಾಸ ಕೊಡುವನೊ ೩
ಅಟ್ಟತಾಳ
ಭೂತಳ ಪಾತಾಳ ಸ್ವರ್ಗಾದಿ ಲೋಕದಿ
ಜಾತನಾಗಿದ್ದ ಪ್ರಕೃತಿಬದ್ದ ಜೀವಿಗೆ
ದಾತನೊ ಸಂಪೂರ್ಣ ಬಲ ವೀರ್ಯ ಔದಾರ್ಯ
ಭೂತಿವಂತನೊ ಕರುಣಾಳು ಮನೋಹರ
ಭೀತಿರಹಿತ ಜಗದಾಧಾರ ಗುಣಶೀಲ
ಪಾತಕ ಹರ ಪ್ರಭು ಪತಿತಪಾವನ ಪ್ರ
ಧ್ಯೋತ ಸನ್ನಿಭ ಶುಭಲಕ್ಷಣ ಕರ್ತಾ ಕಾ
ರ್ಯ ತಾ ಪ್ರೇರಕ ಸಾಕ್ಷಿ ಸರ್ವಾ
ಭೂತಗಳಾಳುವ ಭವ್ಯಗಾತುರ ಮಹ
ತ್ಯಾಗಿ ಕೀರ್ತಿವಂತ ಜ್ಞಾನಾನಂದ ಸಕ
ಲಾತಿಶಯ ಉಳ್ಳ ಹರಿಯೆ ಸ್ವಾತಂತ್ರ ಸ್ವಾ
ತಂತ್ರ ಪುರುಷ ನಿರ್ದೋಷ ಶಿಖಾಮಣಿ
ಈ ತೆರದಲಿ ನಿತ್ಯ ಪೊಗಳಿಸಿಕೊಳುತಿಪ್ಪ
ಪ್ರೀತನು ಈಕ್ಷಿಸಿ ಸಾಕದೆ ಬಿಡುವನೆ
ನೀತರವ ನೀ ತಿಳಿ ಭೂಮಿ ಮೇಲಣ ಸರ್ವ
ಜಾತಿಗೆ ಆಹಾರವ ನೀನೆ ಕೊಡುವನೇನೊ
ಮಾತು ಲಾಲಿಸು ಪುಟ್ಟದ ಮುನ್ನೆ ಅವರವರ
ಶೀತೋಷ್ಣ ಸುಖದು:ಖ ನಿರ್ಮಾಣ ಮಾಡಿಪ್ಪ
ಗೋತುರ ಧರ ಸಿರಿ ವಿಜಯ ವಿಠ್ಠಲರೇಯ
ತಾ ತಿರುಗುವನೊ ಅನ್ನೋದಕವನ್ನು ಪೊತ್ತು ೪
ಆದಿತಾಳ
ಕೋಟಿ ದ್ರವ್ಯ ಇದ್ದ ಮಾನವಾ
ಕಾಟಿ ಕಾಣದೆ ಮರುಗುವ
ಮೀಟು ಕವಡೆ ಇಲ್ಲದವನು
ಊಟ ಮಾಡುವ ನಾನಾ ಸೌಖ್ಯಾ
ಘೋಟಕಾಸ್ಯನ ಮಾಯವೊ ಇದು
ಆಟವಲ್ಲವೊ ಪೇಳಿದ ಮಾತು
ದಾಟದಿರು ನಿಧಾನವೆನ್ನು
ಕೋಟಲೆ ಬಿಡು ನಾನೆಂಬೊದು ಬಲು
ಬೂಟಕ ಕಾಣೊ ಗೋಡಿ ಮೇಲಿನ
ಓಟದಂತೆಯಾಗುವದೊ
ನೀಟು ಬಯಸು ಸತತ ಬಹುಜನ

ಪುಣ್ಯ ಪಾಪಗಳನ್ನು ಮಾಡುವ ಸ್ವಾತಂತ್ರ್ಯ ನಮಗುಂಟೆಂದು

೧೦೧
ಧ್ರುವತಾಳ
ಮನವೆ ನಿನಗಿನಿತು ತೃಣವಿತ್ತು ಪೇಳ್ವೆ ಕಾ
ಮನ ಮಿಕ್ಕ ಮೋಹನಕ್ಕೆ ಜಣಗುತಿಪ್ಪೆ
ಮನೆಯೆಲ್ಲ ಇಲ್ಲೆ ಸುಮ್ಮನೆ ಎರಡು ದಿನ ಕ್ರ
ಮಣೆ ಮಾಳ್ಪೆನಂದು ಬಂದದೆ ಗುಣಿಸಿಕೊ
ಮನುಗಳನು ನೋಡು ರತುನ ಗರ್ಭದಲ್ಲಿ ಪುಟ್ಟಿ
ಇನಿತು ಕಾಂಚನ ರತುನ ವೈದರೆನೊ
ಬಿನಗುತನ ಬಿಡದಿರಲನಿಬರು ಬಂದು ನಿನ್ನ
ಘನತೆಯನು ಪಿಡಿದು ಯಮನಿಗೆ ಒಪ್ಪಿಸೆ ಸು
ಮ್ಮನೆ ಗಾಣಾಗಸಿ ಮಾಡಿ ನರಕಕ್ಕೆ ಕೆಡಹುವ
ಅನುಮಾನವಿಲ್ಲ ಸಜ್ಜನರ ಕೇಳೊ
ಮುನಿವಿನುತ ಸ್ಥಾವರ ವಿಜಯ ವಿಠ್ಠಲನ್ನ
ವನಜಾಂಘ್ರಿ ಮಧುರಲೋಚನದಿಂದ ಸುರಿಯೊ ೧
ಮಟ್ಟತಾಳ
ವನದೊಳಗೆ ವನಜಾದಿಯ ಹಾಕಿದಂತೆ
ಅನುನಯದಲಿ ಇದ್ದು ಅನುಭವಿಸುವುದೀ
ತನುವಿನೊಳಗೆ ನೀ ವನದೊಳಗೆ ಪಂಚಾ
ನನ ಶೋಭಿಸುವಂತೆ ಭಣಗು ಮಹದುರಿತ
ಗಣಕೆ ಭಯವ ತೋರು ಗುಣಭೃತೆನಾಮ ವಿಜಯ ವಿಠ್ಠಲನ್ನ
ದಣಿ ದಣಿ ದಣಿ ನೋಡು ಮಣಿ ಮಣಿ ಮಣಿದಾಡೊ ೨
ರೂಪಕ ತಾಳ
ಆರ್ಯರ ಸೇವಿಸಾಕಾರ್ಯವ ತೊರೆದು
ಧೈರ್ಯದಿಂದಲಿ ಯೋಗಾಧುರ್ಯವನರಿದು
ವೀರ್ಯದಲ್ಲಿ ಶುದ್ಧ ಮರ್ಯಾದೆ ತಪ್ಪದೆ
ತೂರ್ಯ ಗುಣದಲ್ಲಿ ಕೂರ್ಯಾನೆಂದೆನಿಸಿ
ಸೂರ್ಯನಾಮಕ ದೇವ ವಿಜಯ ವಿಠ್ಠಲನ ಚಾ
ತುರ್ಯದಿಂದ ಸ್ತುತಿಸಿ ಧೈರ್ಯಮತಿಯಾಗೊ ೩
ಝಂಪಿತಾಳ
ಪುಣ್ಯ ಪಾಪದ್ವಯವು ನನ್ನವೆನ್ನುವ ಎಂದು
ಮುನ್ನೆ ಹಿಗ್ಗಲಿಸಲ್ಲ ಅಳಲಸಲ್ಲ
ಪುಣ್ಯ ಪಾಪದವರು ನಿನ್ನ ಎಡಬಲದಲ್ಲಿ
ಚನ್ನಾಗಿ ಕುಳಿತಿಪ್ಪರು
ಘನ್ನ ನೋಡೊ
ಪುಣ್ಯವಧಿಕವಾಗೆ ಸುರರಿಗೆ ಕೊಡುವನು
ಘನ್ನ ಪಾಪವು ಹಚ್ಚೆ ದೈತ್ಯರಿಗೆ ಈವ
ಪುಣ್ಯ ಪಾಪಗಳಧಿಕ ನಿನ್ನ ವೆಂದೆನಿಸನು
ಕನ್ಯ ಲಕುಮಿ ರಮಣ ದೈತ್ಯಹರಣ
ತನ್ನ ಪೊಂದಿದವರ ತಾನೆ ದಯದಿಂದ ಕಾವ
ಪುಣ್ಯ ಕೀರ್ತನ ನಾಮ ವಿಜಯ ವಿಠ್ಠಲಧೀಮಾ ೪
ತ್ರಿವಿಡಿತಾಳ
ರುದ್ರ ಮೊದಲು ಕರ್ಮ ದೇವತೆ ಪರಿಯಂತ
ವೃದ್ದಿಹ್ರಾಸುಂಟು ಕೇಳು ಮನವೇ
ಸಿದ್ದಿ ಸೋತ್ತಮ ದ್ರೋಹದಿಂದಲವರ ಪುಣ್ಯ
ವೃದ್ಧಿಯಾಗದು ತಿರುಗಿ ಸೇರದೊ
ಇದ್ದು ಮಾನಸೆ ನಿನ್ನ ಅಧಿಕಾರ ನೀನೆಷ್ಟು
ಹೊದ್ದಿರು ಕಂಡಕಡೆ ಹಂಬಲಿಸದೆ
ರುದ್ರಾತ್ಮ ವಿಜಯ ವಿಠ್ಠಲನೆ ಮೋಹನ ರೂಪಾ
ಚಿದ್ರೂಪ ಆರಾರವಧಿಕಾರದಂತೀವ ೫
ಅಟ್ಟತಾಳ
ಮೂಲೇಶ ಮೂರ್ತಿಯ ಪಾದಾಂಗುಟದಲ್ಲಿ
ವಾಲಯ ಬಿಡದೆ ಎನ್ನವಾಸ ನೋಡೊ
ಕಾಲಕಾಲಕೆ ಗುರು ಎನಗೆ ದಯದಿಂದ
ಪೇಳುವ ಮಂತ್ರಾನಂದವ ನೋಡೊ
ಸಾಲದೆ ಈ ಭಾಗ್ಯ ನೀಮಾತುರ ಪೊಂದಿ
ಸಲೇನು ಮಿಗಿಲಾದ ಇಂದ್ರಿಯಂಗಳಿಗೆ
ವಾಲಗವಾಗೋದು ಸಂಸ್ಥಾನ ವಿಜಯ ವಿ
ಠ್ಠಲನ್ನ ದಾಸರಾ ತೊತ್ತೇರ ಬಳಿಯಾ ೬
ಆದಿತಾಳ
ಲಕ್ಷ ಎಂಭತ್ತುನಾಲ್ಕು ಪಕ್ಷಿ
ಮಿಕ್ಕಾದ ಜೀವದ
ಕುಕ್ಷಿಯೊಳು ಬಂದು ಬಂದು
ಪೇಕ್ಷದಲಿ ಬದುಕಿದಾಗ
ಅಕ್ಷಿ ಕರ್ನ ಘ್ರಾಣ ಜಿಹ್ವೆ
ಕುಕ್ಷಿಕಾರ ಯ ಸರ್ವದಲ್ಲಿ
ಅಕ್ಷಯ ಪುಣ್ಯವೆಂಬೋದು
ಈ ಕ್ಷಣದಿಂದರಿಯಾ
ಈ ಕ್ಷಿತಿಯೊಳಗೇ ಅಧ್ಯಕ್ಷವಾಗಿ ಅಗ್ರ ಜನ್ಮ
ಮೋಕ್ಷ ಸಾಧನಕ್ಕೆ ಬಹಳಾಪೇಕ್ಷವೆಂದು ವೇದಮತ ಶು
ಭೇಕ್ಷಣ ವಿಜಯ ವಿಠ್ಠಲ
ಆಕ್ಷರಾಕ್ಷರ ಪುರುಷ
ಶಿಕ್ಷ ಕರ್ತಾ ಎನಗೆ ನಿನಗೆ ಸಹಿತವಾಗಿ ಮನವೆ ನೋಡು ೭
ಜತೆ
ಮನದಾನಿಗೆ ರುದ್ರ ಮಾವುತಂಕುಶ ಜನಾ
ರ್ದನ ನಾಮವೇ ನಿಜ ವಿಜಯ ವಿಠ್ಠಲ ಒಲಿವಾ ೮

ಜೀವಿತಾವಧಿಯನ್ನು ಹರಿಪೂಜೆ, ಹರಿಸ್ಮರಣೆ,

೧೦೨
ಧ್ರುವತಾಳ
ಮನವೆ ನಿನಗೆ ಸಾಧನವೆ ತೋರುವೆನು ಯಾ
ತನೆಯಾಗದಂತೆ ಯಮನ ಪುರದಲ್ಲಿ
ಅನುದಿನದಲೆ ಮಾತನು ಮೀರದಲೆ ಈ
ತನುವ ಪಾಲಿಸುವುದು ಎನಗೊಲಿದು
ದಿನರಾತ್ರಿಯೊಳಗೊಂದು ಕ್ಷಣವಾದರೂ ನಾರಾ
ಯಣನ ಚರಣ ಸ್ಮರಣೆಯನು ಎಸಗಿ
ಗಣನೆ ಕಾಣದೆ ಬಂದ ಜನುಮಜನುಮದ ಪಾಪ
ಗಣವು ಪೋಗದು ಚೇತನ ಉಳ್ಳಾಗ
ಘನಪುರುಷ ಯಙÁ್ಞಂಗ ವಿಜಯ ವಿಠ್ಠಲನ್ನ
ನೆನಹ ಬಾಹದಕೆ ಸಜ್ಜನರ ಒಡನಾಡು ೧
ಮಟ್ಟತಾಳ
ತಿಳಿದಾದರೊಮ್ಮೆ ತಿಳಿಯದಾದರೊಮ್ಮೆ
ಇಳಿಯೇಶ ನಾಮಾವಳಿಗಳು ಕೊನೆ ನಾಲಿಗೆಲಿ ನೆನೆದರೆ
ಹಲವು ಜನ್ಮದಲ್ಲಿದ್ದ ಹೊಲೆ ಪಾಪಗಳೆಲ್ಲ
ಆಳಿವುದು ನಿಶ್ಚಯವೊ ಉಳಿಯವು ಎಳ್ಳಿನಿತು
ಕಾಲಕಾಲಕೆ ಭರ್ತ ವಿಜಯ ವಿಠ್ಠಲನಿಗೆ
ತೊಳಲುವುದು ನಿತ್ಯ ಸಲೆ ಸಲಹು ಎಂದು ೨
ತ್ರಿವಿಡಿತಾಳ
ಪದದ್ವಯ ನೆನೆಸು ಪುಣ್ಯ ಕ್ಷೇತ್ರಗಳ ಮೆಟ್ಟಿ
ಉದರ ನೆನಸು ಹರಿ ಪ್ರಸಾದದಲ್ಲಿ
ಸದಾ ಕರಗಳ ನೆನಸು ವಿಧಿತ ದಾನದಲಿ
ವದನ ನೆನಸು ಉತ್ತುಮ ವಚನದಲ್ಲಿ
ಪದೋ ಪದಿಗೆ ಸಂಗೀತದಲ್ಲಿ ನೆನಸು ಜಿಹ್ವೆ
ಸದಮಲ ಅಕ್ಷಿಯ ನೆನಸು ಶ್ರೀ ಹರಿ ಪಾದದಲ್ಲಿ
ಮುದದಿ ನೆನಸು ಎರಡು ಕರ್ನ ಶ್ರವಣದಲ್ಲಿ
ಹೃದಯ ನೆನಸು ಬಿಂಬಧ್ಯಾನದಲ್ಲಿ
ಪದುಮನಾಭ ನಮ್ಮ ವಿಜಯ ವಿಠ್ಠಲನ
ಉದಯಾಸ್ತಮಾನದಲಿ ಈ ದೇಹ ನೆನಸೂ ೩
ಅಟ್ಟತಾಳ
ವನದೊಳಗೆ ಪೋಗಿ ಮುಣಿ ಮುಣಿಗಿದರೆ
ತನುವಿನ ದುರ್ಗಂಧವದು ಪೋಗೋದಲ್ಲದೆ
ನೆನಿಯದೊ ನೆನೆ ಮನವು ಮನದ ಮಲಿನ ಹೊರ
ಗಿನ ಜಲದಲ್ಲಿ ನಿರ್ಮಲಿನವಾಗದು ಕಾಣೊ
ದಿನಪ್ರತಿ ತೊಳೆದರೆ ದನುಜಾರಿ ವಿಶ್ವಧ್ರು ವಿಜಯ ವಿಠ್ಠಲನ್ನ
ವನಜ ಚರಣ ಧ್ಯಾನವನು ಮಾಡೊ ಮರುಳೆ ೪
ಆದಿತಾಳ
ಶ್ರೀಧರನ್ನ ನಾಮವನ್ನು ಸಾಧಿಸಿ ನಾಲಿಗೆ ತುದಿಗೆ
ಆದರದಿಂದೆರಕ ಹೊಯ್ದು ತೋದು ತೋದು ನಾಭಿ ತನಕ
ಭೇದಿಸಿ ಪಾಪದ ಬಟ್ಟೆ ಛೇದಿಸಿ ಪುಣ್ಯದ ಗತಿಯ
ಹಾದಿಯನ್ನು ಮೆಟ್ಟಿ ಆಹಲ್ಲಾದನಾಗೊ ನಿನ್ನೊಳಗೆ
ಆದಿ ದೇವ ಸಾಸಿರಪರಾಧವಿರಲು ಹಿಂದು ಕಳೆದು
ಕಾದುಕೊಂಬ ಕರುಣದಲ್ಲಿ ೫
ಜತೆ
ಎಲ್ಲಿ ನೆನೆದರೆ ಫಲವಿಲ್ಲ ನಿರುತದಲ್ಲಿ
ಬಲ್ಲಿದ ವಿಜಯ ವಿಠ್ಠಲನ ನೆನೆಯಲರ್ಥಿ ೬

ಮನ್ಮಥನ ಹಿಡಿತಕ್ಕೆ ಸಿಕ್ಕ ಮನುಷ್ಯನಾಗಲಿ,

೧೦೩
ಝಂಪೆತಾಳ
ಮನವೆ ನೀ ನೆನೆಸದಿರು ಮನಸಿಜನ ಮರುಳಾಟ
ಕನಸಿನೊಳಗಾದರೂ ಎಂದೆಂದಿಗೂ
ಧನಸೂರೆ ಮತಿಹಾನಿ ಗತಿಕಂಡಲ್ಲಿ ಕೆಡಗು
ಜನ ಸುಡಿಗೆ ಕುಳಿತಕಡೆ ಜಗದೊಳಗೆ
ತನು ಶುದ್ದವಾಗದು ಎಣಿಸುವನು ಯಮರಾಯ
ಇನಶಶಿ ಉಳ್ಳಪರಿಯಂತ ನರಕಾ
ಗುಣಿಸು ನಿನ್ನೊಳು ಸುಮನಸ ವಿಜಯ ವಿಠ್ಠಲ
ಘನ ಸುಲಭನೆಂದು ವಖ್ಖಣಿಸು ದಾಸನೆನಿಸು ೧
ಮಟ್ಟತಾಳ
ದಶೇಂದ್ರಿಯಗಳ ನಿನ್ನೊಶ ಮಾಡಿಕೊಂಡು
ದಶದಿಕ್ಕಿಗೆ ಒಯಿದು ಹಸಗೆಡಿಸಿ ದು
ವ್ರ್ಯಸನಕ್ಕೆ ಹಾಕದೆ ಹಸನಾಗಿ ಇರು ಸ್ವ
ವಶ ವಿಜಯ ವಿಠ್ಠಲ ಅಸಮ ದೈವವೆಂದು ೨
ತ್ರಿವಿಡಿತಾಳ
ದೀನ ಮನುಷ್ಯರು ಏನೇನು ಮಾಡುವ
ಸ್ನಾನಾದಿಗಳಿಗೆ ಪ್ರಧಾನವೆ ಮನವೆ
ನೀನೆ ನಿಲ್ಲಲು ಎನಗೆ ಧ್ಯಾನ ಪೂರ್ವಕದಿಂದ
ಜ್ಞಾನಕ್ಕೆ ಅಧಿಕಾರಿ ಎನಿಸುವೆನೊ
ನೀನೆ ನೀನೆ ಎಂದು ಸ್ತುತಿಸಿದೆನೊ
ನೀನೊಲಿದು ಸರ್ವಜ್ಞ ವಿಜಯ ವಿಠ್ಠಲನ್ನ
ಕಾಣಿಸುವುದು ಎನ್ನ ಹೃದಯ ಮದ್ಯದಲ್ಲಿ ೩
ಅಟ್ಟತಾಳ
ಹುಲಿಯ ಕಟ್ಟಲಿಬಹುದು ಕಲಿಯಬಂಧಿಸಲಾಪೆ
ಜನನಿಧಿಯೊಳ ಪೊಕ್ಕು ನೆಲೆಯ ತರಲಿ ಉಂಟು
ಸುಳಿಯುವಘಾಳಿಯನು ಹೊಕ್ಕಳಿಸಿ ತರಬಲಾಪೆನೆ
ಕುಲಗಿರಿಗಳು ಪಿಡಿದೊಲಿದು ಅಲ್ಲಾಡಿಪೆ
ಒಳಗಿದ್ದ ಮನವೆ ನಿನ್ನಳವೀಗ ತಿಳಿಯದು
ಗೆಳೆಯ ನೀನಾಗು ಶುಭಾಂಗ ವಿಜಯ ವಿ
ಠ್ಠಲನ ಕೂಡ ಬೆರೆದಾಡು ಭರವಸ ಸಾರೂ ೪
ಆದಿತಾಳ
ಕಾರಣ ಬಂಧ ಮೋಕ್ಷಕ್ಕೆ ಕಾರ್ಯಕಾರಣ ನೀನು
ಹಾರಿ ಹಾರಿ ಹೋಗದೆ ಸೇರಿಕೊಂಡು ಎನ್ನೊಳು
ಪಾರಮಾರ್ಥವ ಬಯಸಿ ವೀರ ವಿಜಯ ವಿಠ್ಠಲನ್ನ
ಸೇರಿ ಸತತದಲ್ಲಿ ನೋಡು ನೋಡು ನೋಡು
ನೋಡು ನೋಡು ೫
ಜತೆ
ಎತ್ತ ಪೋಗದಲೆ ಸಾರಥಿಯಾಗಿ ಅನುದಿನ
ಉತ್ತರ ವಿಜಯ ವಿಠ್ಠಲನಲ್ಲಿ ಸೇರುವ ೬

ಜ್ಞಾನ, ಭಕ್ತಿ ಮತ್ತು ವೈರಾಗ್ಯ ಪೂರ್ಣ

೧೦೪
ಧ್ರುವತಾಳ
ಮನವೆ ಲಾಲಿಸಿ ಕೇಳು ಬಿನ್ನೈಸುವೆ ನಿನಗೆ
ಚಿನುಮಯ ಮೂರ್ತಿಯ ಗುಣನಾಮ ಕೀ
ರ್ತನೆ ಮಾಳ್ಪ ಬಗೆಯು ನಿನಗೆ ತಿಳಿಪುವೆನೋ
ಘನವಾದ ಸುಸಾಧನವೆಂದು ತಿಳಿದು ತ್ರಿಕರ್ಣಪೂರ್ವಕವಾಗಿ
ಘನ ಮಹಿಮ ನಾರಾಯಣನ ಅಚಿಂತ್ಯಾದ್ಭುತ ಶಕ್ತಿ
ಅನುಭವಕೆ ತಂದು ಕೊಂಡು ಸುಖಿಸುವುದು
ಮನವೆ ಮೊದಲಾದ ಸರ್ವ ಇಂದ್ರಿಯಂಗಳೆಲ್ಲ
ವನ್ನು ಪಾದದಲ್ಲಿ ಇಟ್ಟು ಕೀರ್ತನೆ ಗೈಯಾ
ನಿನಗಿದೆ ಮುಖ್ಯವಾದ ಗತಿ ಎಂದು ಸಾರಿದೇ
ಅನುಮಾನ ಮಾಡಸಲ್ಲ ಎಂದೆಂದಿಗೇ
ಬಿನಗು ದೈವಂಗಳ ಕಾಲಿಲೊದೆದು ಮಧ್ವ
ಮುನಿ ಮತದಲ್ಲಿ ದೀಕ್ಷ ಬದ್ದನಾಗೋ
ಕುನರರ ನೆರಹಿಕೊಂಡು ಕುಚೇಷ್ಟೆ ಕಥೆಯ ಪೇಳಿ
ಘನ ಅಂಧಂತ ಮಸಿನೊಳು ಬೀಳದಿರೂ
ವನಜ ಭವಾಂಡದೊಳು ಬೀಳದಿರೂ
ವನಜಭವಾಂಡದೊಳು ಹರಿದಾಸತ್ವ ದೀಕ್ಷ ಬಲುಕಷ್ಟ ಕಾಣೊ
ಮನುಜಾಧಮರಿಗಿದು ಸುಲಭವಲ್ಲಾ
ಇನಿತು ತಿಳಿ ಇದರೊಳು ತ್ರಿವಿಧ ಬಗೆ ಉಂಟು
ಗುಣವಂತನಾಗಿ ಕಾಲಕ್ರಮಣ ಮಾಡು
ಅನು ದಿನದಲ್ಲಿ ಹರಿಸೇವಿಗೆ ವಿಮುಖನಾಗದೆ
ಮನಮುಟ್ಟಿ ಒಬ್ಬನೆ ಏಕಾಂತದಲ್ಲಿ ಕುಳಿತು
ತನು ರೋಮಾಂಚನೆ ಉಬ್ಬಿ ಆನಂದಬಾಷ್ಪಗಳಿಂದ
ಗಾನವನ್ನೆ ಮಾಡು ಘನಙಙ್Áನ ಪುಟ್ಟುವುದು
ಅನಿಮಿಷೇಶನ ಪ್ರೀತಿ ದಿನದಿನಕೆ ವೆಗ್ಗಳವಾಗುವುದು
ನಿನಗಿದೇ ಸಿದ್ದ ಪೇಳಿದೆ ಶುದ್ದ ಸತ್ವದ ಸ್ವಭಾವವನ್ನು
ಮನಸಿಗೆ ತಂದುಕೊಂಡು ಜ್ಞಾನಿಯಾಗೋ
ಗುಣಗಣಾಂಬುಧಿ ನಮ್ಮ ವಿಜಯ ವಿಠ್ಠಲನು
ಅನುಸಾರಿಯಾಗಿ ತಾನು ಹಿಂದೆ ತಿರುಗುತಿಪ್ಪ ೧
ಮಟ್ಟತಾಳ
ಉದಯಕಾಲದಲೆದ್ದು ಮುದದಿಂದ ಹರಿಯನಾಮ
ಒದಗಿ ಆರತನಾಗಿ ವದನದಿ ಕೊಂಡಾಡಿ
ವಿಧಿ ಪೂರ್ವಕದಿಂದ ಸ್ನಾನಾದಿ ಕರ್ಮಮುಗಿಸಿ
ಬುಧರಲ್ಲಿಗೆ ಪೋಗಿ ಕಥಾಶ್ರವಣವ ಮಾಡಿ
ಅದರ ತರುವಾಯ ಉದರಗೋಸುಗ ಪೋಗಿ
ಸಾಧುಗಳ ಮನೆಯಲ್ಲಿ ಶುಧ್ದ ವೃತ್ತಿಯ ಮಾಡಿ
ಇದ್ದನಿತರೊಳು ಸಾಕ್ಷಿ ಭೂತದಿಂದ
ಮೆದ್ದು ಸತಿ ಸುತರೊಡನೆ ಮಮತೆ ರಹಿತನಾಗಿ
ಇದ್ದು ಸತ್ಕಾಲವನ್ನು ಕಳೆಯಬೇಕು ಮನುಜ
ಪದ್ದತಿ ತಪ್ಪದಂತೆ ಈ ಧರೆಯೊಳು ಹೀ
ಗಿದ್ದವನೇ ನಿಜದಾಸ ಕಾಣಿರೊ
ಮುದ್ದು ಮೋಹನರಂಗ ವಿಜಯವಿಠಲಗೆ
ಮುದ್ದಾಗುವನವನೆ ನಿಜದಾಸನು ಕಾಣಿರೋ ೨
ತ್ರಿವಿಡಿತಾಳ
ಯಾಮರಾತ್ರಿಯೊಳಗೆ ಸತ್ಕರ್ಮದ
ನೇಮವನು ಮುಗಿಸಿ ನಿತ್ಯ ಭಕುತಿಯಿಂದ
ಶ್ರೀ ಮುಕುಂದಗೆ ಅರ್ಪಣೆಮಾಡಿ
ವಾಮಭಾಗದಿ ತನ್ನ ಸತಿಯಿಂದ ಒಡಗೂಡಿ
ಶ್ರೀ ಮನೋಹರನ ತುತಿಸಿಕೊಳ್ಳುತ
ಯಾಮ ಎರಡರಲ್ಲಿ ನಿದ್ರೆ ಕಳೆದು ಈ ಪರಿಯಲ್ಲಿ
ಕಾಮುಕನಾಗಲು ಹರಿ ಒಲಿವಾ
ಕಾಮಿನಿಯಳ ಬಿಟ್ಟು ಪೃಥಕ ಶಯ್ಯನಾಗೆ
ಭೂಮಿಯೊಳಗೆ ಅವನೆ ಪಾಮರನೋ
ಯಾಮ ಮೀರಿ ಸತ್ಕರ್ಮಮಾಡಿದ ಪುಣ್ಯ
ಆ ಮಹಾದೈತ್ಯರು ಶಳಕೊಂಬೊರು
ಶ್ರೀರಮಣ ದಿನದಲ್ಲಿ ಮಾತ್ರ ಅವರ
ಸ್ವಾಮಿತ್ವ ನಡೆಯುವುದಿಲ್ಲವು ಕೇಳಿರೋ
ಭೂಮಿಜಪತಿ ತನ್ನ ಚಕ್ರವತಿರುಗಿಸುವ
ಕಾಮುಕ ದೈತ್ಯರ ಅಳೆಯುವದಕ್ಕೆ
ಪಾಮರ ಮನುಜರು ದಾಸವೇಷವು ಧರಿಸಿ
ನೇಮ ನಿತ್ಯಗಳೆಲ್ಲ ಪೋಗಾಡಿಸಿ
ಕಾಮಚಾರಿಗಳಾಗಿ ಕಂಡಲ್ಲಿ ತಿರುಗಿ ಹಂಬಲಿಸಿ
ಉಮಾ ಮನೋಹರನ ಲೀಲೆ ಪೇಳಿದರೇನು
ತಾಮಸದಾಸನೆಂದು ತಿಳಿಯೊ, ಘೋರ
ತಮಸ್ಸುವಾಗುವುದವಗೆ ಸಂದೇಹವಿಲ್ಲವೊ
ಈ ಮಹಿಯೊಳು ಮೃಷ್ಟಾನ್ನ ಭೋಜನವಸನ ಇ
ರೆ ಮಹಫಲವೆಂದು ಹಿಗ್ಗಿ ಕೊಟ್ಟು ಪೋಗುವನೊ
ಕಾಮಿತಪ್ರದ ದೇವ ಇಂಥದೆ ಅವನಿಗೇ
ನೇಮಿಸಿ ಇಪ್ಪನುಗಡಾ ಅವನ ಯೋಗ್ಯತೆಯಂತೆ
ಸ್ವಾಮಿ ತನ್ನ ನಿಜದಾಸರೆಂಬವರಿಗೆ
ನಾಮ ಸುಧೆಯನುಣಿಸಿ ಸಲಹುತಿಪ್ಪ
ಈ ಮಹಾಭಾಗ್ಯಕ್ಕೆ ಎಣೆಗಾಣೆ ಎಣೆಗಾಣೆ
ಭ್ರಾಮಕನಾಗಿ ನೀ ಕೆಡಬೇಡವೋ
ಕಾಮಜನಕ ನಮ್ಮ ವಿಜಯ ವಿಠ್ಠಲನ ಹೃದಯ
ಧಾಮದೊಳಗೆ ಪೂಜೆಮಾಡಿ ನಲಿದಾಡುವದು ೩
ಅಟ್ಟತಾಳ
ನಿರುಪಾಧಿಕವಾಗಿ ಹರಿಸೇವೆ ಮಾಳ್ಪದಕೆ ಜ
ನರನ ನಿರೀಕ್ಷಿಸಿಕೊಂಡು ಕುಳ್ಳಿರುವ ಮಾನವನು
ಹರಿದಾಸನವಲ್ಲ ನರವಾನರಕಾಣೊ
ಪರಮ ಭಕುತಿಯಿಂದ ಭರದಿಂದ ಹರಿಸೇವೆ ಮಾಡುತ
ಸುರಿಯಬೇಕು ಸುಖ ತನ್ನೊಳಗೆ ತಾನೆ
ಪರಮ ಗುಪ್ತನಾಗಿ ಇರಬೇಕು ತನ್ನ ಸ್ವರೂಪ ತೋರಗೊಡದಂತೆ
ದುರುಳ ಜನಕೆ ದುರಾಚಾರಿ ಎಂಬೊ ಹಾಗೆ
ಚರಿಸಬೇಕು ಅವರು ಕೆಟ್ಟು ಪೋಗುವಂತೆ
ನೆರೆ ಜಾಣನಾದವ ಈ ಹರಿದಾಸರ
ಚರಣ ರಜವನ್ನು ಧರಿಸುವ ಶಿರದಲ್ಲಿ
ಪರಮ ಯೋಗ್ಯನಾಗಿ ಮುಕುತಿ ಕೈ ಕೊಂಬನು
ವರ ಕಲಿಯುಗದಲ್ಲಿ ಇಂಥವರೆ ದುರ್ಲಭರಯ್ಯಾ
ಕರುಣಾಕರ ರಂಗ ವಿಜಯ ವಿಠಲಗೆ
ಪರಮ ಪ್ರೀಯರಿವರೆ ಹರಿದಾಸರು ಕಾಣೊ ೪
ಆದಿತಾಳ
ಒಂದು ಪದವ ಪಾಡುತಲದನು
ಹಿಂದುಗಳೆದು ಮತ್ತೊಂದು ಪಾಡಲು
ನೊಂದುಕೊಂಬೊರೊ ವರ್ಣಭಿಮಾನಿಗಳು
ಸಂದೇಹಙಙ್Áನ ಉಳು ಹರಿದಾಸನಿವನು ಕಾಣೊ
ಒಂದೆರಡು ಸ್ಥಳದಿಂದ ತಿರುಗಿ ತಿರುಗಿ ಪುಟ್ಟುವ
ಬಂದು ಪಡುವನು ನಾನಾ ಸೌಖ್ಯಂಗಳು
ಇಂದಿರೇಶನು ಇವಗೆ ಇದೆ ಕ್ಲಪ್ತಿಮಾಡಿಪ್ಪ

ಭಗವಂತನನ್ನು ನಂಬಿದ ಬಹು ಜನ

೬೯
ಧ್ರುವತಾಳ
ಮನು ಮೂರ್ತಿ ಇಪ್ಪ ಮೂಲ ಸ್ಥಾನದಲ್ಲಿ ಬಂದು
ಮಿನುಗುವ ಕಂದವುಂಟು ಅದರಿಂದಲಿ
ಜನಿಸಿದ್ದ ನಾಳಾ ಗಗನಾದಲ್ಲಿಗೆ ಮುಟ್ಟು ವಾಗ್ಯೆ
ಎಣಿಸಿ ಹೃಷಿಕೇಶಾಂಗುಲಿಯ ಇಟ್ಟು
ಎಣಿಕೆ ಮಾಡಲಲ್ಲಿಗೆ ಅಷ್ಟದಳ ಪದುಮ
ಕನಕವರ್ಣದ ಕದಳಿಕುಸುಮದಂತೆ ಒಪ್ಪುತ್ತ
ಮೊನೆ ಅಧೋಮುಖವಾಗಿ ಚಂದ್ರ ಪ್ರಕಾಶದಂತೆ
ಘನ ಕೋಮಲ ಪೂರ್ಣ ವಿಶಾಲ ದಿಶ ದಶ
ವನ್ನು ಶೋಭಿಸುತಿಪ್ಪದು ನೋಳ್ಪರಕಂಗಳಿಗೆ
ಗುಣಿಸು ಕೇಸರಿಗಳ ಅನುಮಾನ ಮುನಿಯ ಲಕ್ಷಣ
ವೆನ್ನು ಸುತ್ತ ಕೆಂಜಲ್ಕ ಮಧ್ಯ ಕರ್ನಿಕೆ
ಅನಿಮಿಷರಲ್ಲಿ ವಾಲಗ ಅಷ್ಟಹಸ್ತ ನಾರಾ
ಯಣ ಶ್ರೀ ಭೂ ಸಹಿತ ಪ್ರಹರಿಯ ಮಾಡುವ
ಮನುಜಾದಿಗಳವಿಡಿದು ಶರ್ವ ಪರಿಯಂತ
ಕ್ಷಣ ಕ್ಷಣಕೆ ಒಂದೊಂದು ಬುದ್ದಿಕೊಡುತ
ವನಜ ಕರ್ನಿಕೆ ಮೇಲೆ ಇನಶಶಿ ಪಾವಕ
ತ್ರಿಣಿ ಮಂಡಲವಕ್ಕು ತದುಪರಿಯು
ಅನುವಾಗಿ ಪ್ರವಳ ಸ್ಪಟಿಕಕದಕಂಭ ನೂರು
ಕನಕರಕ್ತ ಸಂಯುಕ್ತವಾದ
ಇನಕರನೇಕ ಸಂಕಾಶ ವಿಮಾನಸುತ್ತಾ
ಹಣಿದ ಚಿನ್ನದದಾಮಾ ವಿರಾಜಿಸೆ
ಗಣ ಗಣ ಘಂಟಿ ಗೆಜ್ಜಿ ನಾದ ಕಟ್ಟಿದ ಮು
ತ್ತಿನ ಗೊಂಚಲಗಳು ಮಕರ ತೋರಣಗಳು
ವಿನಯಾ ವಿಚಿತ್ರ ಧ್ವಜ ಪತಾಕೆ ಮೇಲು ಕಟ್ಟು
ಮಣಿಗಣದಿಂದ ಬಿಗಿದ ವಲಕುಗಳು
ಚಿಣಿ ಚಿಣಿಯಾಂಬರ ಜೋಡಿಸಿದ ಕೀಲು
ಕನಕ ಸಮ್ಮಯವಾದ ಕಳಸ ಪೊಳೆವುತಿರೆ
ಪ್ರಣವಾಕಾರ ವಿಮಾನ ಮಧ್ಯದಲ್ಲಿ
ಅನುದಿನ ವಿಚಿತ್ರ ವೈಚಿತ್ರಕವಾದ
ಗುಣರೂಪವುಳ್ಳ ಹರಿ ತ್ರಿಗುಣಾತೀತ
ಚಿನುಮಯ ಸರ್ವ ವಸ್ತುಗಳಿಂದ ಭಿನ್ನ ಮಹಾ
ಅಣು ಜ್ಯೋತಿರ್ಮಯವಾದ ಕಾಂತಿಯಿಂದ
ದಿನ ದಿನದಲಿ ಮೆರೆವ ವಿಜಯ ವಿಠಲರೇಯ
ಘನ ಮಹಿಮ ವಾಸವಾಗಿಪ್ಪ ಜಗದಪ್ಪಾ ೧
ಮಟ್ಟತಾಳ
ತೇರಿನ ಮಧ್ಯದಲಿ ಚಾರುವಾದ ಜಗಲಿ
ಈರೆರಡು ಮೂಲೆ ತೋರುತಿದೆ ಕಲ್ಪತರುವೆ ಅದರ ಮೇಲೆ
ಸಾರ ರತುನ ಸಂಕೀರಣವಾದ ಶತನೂರು ಫಣವುಳ್ಳ
ವಾರಣದಾ ಪ್ರಭಾಪಾರ ಕಾಂತಿಗೆ ಬಲು
ಮೀರಿದ ಸಿಂಹಾಸನ ಹೀರಮಯವಾದ ಶೃಂಗಾರದ ಮಂಟಪ
ಶ್ರೀರಮಣ ನಮ್ಮ ವಿಜಯ ವಿಠಲರೇಯ
ಆರಾಧನೆಗೊಂಬ ಸಾರ ಹೃದಯದಿಂದ
ರೂಪಕ ತಾಳ
ಮಲ್ಲಿಗೆ ಕುಂದ ಮಂದಾರ ಕೇತಕಿ ಮರುಗ
ಎಲ್ಲ ಪೂವಿನ ಅಲಂಕಾರವಿರೆ
ಅಲ್ಲಿ ಶ್ರೀ ಹರಿ ತನ್ನ ಮಡದೇರ ಒಡಗೂಡಿ
ಸಲ್ಲುವಾ ವಾರಿಜ ನೆಲಿಸಿದಲ್ಲಿ
ಸಲ್ಲಲಿತ ಮಕುಟ ಶ್ರೀ ವತ್ಸ ಕೌಸ್ತುಭ
ಜಲ್ಲಜಪುಷ್ಪ ಶ್ರೀ ಗಂಧ ತುಳಸಿಹಾರ
ಉಲ್ಹಾಸ ಕನಕಾಂಬರ ಕಟಿಸೂತ್ರ ಕುಂ
ಡಲ ಬ್ರಹ ಸೂತ್ರ ವೈಜಯಂತೆ ಮಾಲೆ
ಘುಲ್ಲು ಘುಲ್ಲುವೆಂಬ ಕಂಕಣ ಕಡಗ ನೂಪುರ
ಬೆಲ್ಲೆಗಾಣದ ಫಣೆಯಲ್ಲಿ ಮೃಗನಾಭಿ
ತಿಲ್ಲುಕ ಕೇಯೂರ ಭುಜಕೀರ್ತಿ ರಸಸುಲಿ
ಪಲ್ಲು ಕರ್ಪೂರ ಪರಿಮಳದಿಂದ ಎಸೆವ
ಮೆಲ್ಲುವ ತಾಂಬೂಲ ಸುಲಕ್ಷಣ ಪುರುಷ
ನಿಲ್ಲದೆ ಕೈವಲ್ಯ ಭಜಕರಿಗೆ ಪಾಲಿಸುವ
ಮ[ಲ್ಲ]ಮರ್ದನ ನಮ್ಮ ವಿಜಯ ವಿಠಲರೇಯ
ಸೋಲ್ಲಿನಿಂದಲಿ ತೃಪ್ತಿಬಡುವ ಕರಪಿಡಿವ ೩
ಝಂಪೆತಾಳ
ವರದ ಅಭಯಹಸ್ತ ಶಂಖ ರಥಾಂಗ ಚ
ತುರ ಪ್ರಸನ್ನ ವದನ ಮಂಗಳ ಮನೋ
ಹರ ದಯಾ ಮೂರ್ತಿ ಮಂದಹಾಸ ಮುಖಾಂಬುಜ
ಧರ ಕಂಧರ ವಕ್ಷ ವಿಶಾಲೋನ್ನತ ಬಾಹು
ಸರಿಗಿ ನ್ಯಾವಳ ಕಂಠಿ ಮೇಲೆ ಬೆರಳುಂಗರ
ಪರಿ ಪರಿ ಅಲಂಕೃತವ ಧರಿಸಿ ನಿಂದು
ಹರಿ ಅಣಿಮಾದಿ ಅಷ್ಟೈಶ್ವರ್ಯ ಮೂರುತಿ
ಎರಡೆರಡು ನಾಲ್ಕು ಕರ್ತೃತ್ವವುಳ್ಳ
ಹರಿ ಪರಮ ಪುರುಷ ಪುರುಷೋತ್ತಮ
ಶರಣರಿಗೆ ಆ ಹರಿಯ ಚರಣ ಶರಣ
ಸರಸಿಜಭವ ಶಿವ ಇಂದ್ರಾದ್ಯರಣಿಯಾಗಿ
ನೆರದು ಅಂಜಲಿಯಿಂದ ಸ್ತುತಿಪರು
ಸುರಮುನಿ ನಾರದಾದಿಗಳು ಹಸ್ತವ ಮುಗಿದು
ಸ್ವರವೆತ್ತಿ ಗಾನವನು ನಲಿದು ಪಾಡೆ
ಭರದಿಂದ ಕುಣಿವ ಊರ್ವಶಿ ಮೇನಕಿ ರಂಭೆ
ಕರ ತಿರುಹಿ ಕುಣಿ ಕುಣಿದು ಕೊಂಡಾಡಲು
ಪರಮ ಹಂಸರು ಸನಕ ಯೋಗಿಗಳು ಎ
ದಿರಿಲಿ ನಿಂದು ಸೂತಮಾಗದ ಬಂಧಿಯೂ
ಇರದೆ ತಮ ತಮ್ಮ ಬಲ್ಲದನು ಗುಣದಿಂದ
ನಿರುಪಮನ ನಿರ್ಲಜ್ಞೆಯಿಂದಲಿ ಪೊಗಳೆ
ಸರುವಾಭರಣದಿಂದ ಉಭಯ ಪಾಶ್ರ್ವದಲಿ ಇ
ಬ್ಬರು ನಾರಿಯರು ಚಾಮರ ಡಾಳಿಸೆ
ಪರಮಾತ್ಮ ಭಕ್ತವತ್ಸಲ ವಿಜಯ ವಿಠಲನ
ನಿರುತ ಈ ಪರಿ ಧ್ಯಾನವ ಮಾಡಿರೋ ೪
ತ್ರಿವಿಡಿ ತಾಳ
ಮೂಲನಾಭಿಯಿಂದ ಹೃದಯ ಪರಿಯಂತ
ನಾಳದವರ ಮೇಲೆ ಕಮಲ ಎಂಟು
ದಳಯುಕ್ತವಾಗಿ ಮಧ್ಯದಿ ಕರ್ನಿಕ
ಮೇಲು ತ್ರಿಮಂಡಲದಲ್ಲಿ ತೇರು
ಕೇಳಿ ತೇರಿನ ಮಧ್ಯ ಚಿತ್ರಮಂಟಪ ಪೂ
ಮೂಲೆಗಳಿಂದ ಶೋಭಿಸುತಿದಕೊ
ನಾಲ್ಕು ಮೂಲೆ ಜಗುಲಿ ಕಲ್ಪವೃಕ್ಷ ವಿ
ಶಾಲವಾ[ದ]ದರ ಕೆಳಗೆ ಸಿಂಹಾಸನ
ಕೀಲು ಮಣಿಗಳಿಂದ ಜಡಿತವಾಗಿದೆ ಅಲ್ಲಿ
ಶ್ರೀ ಲಕುಮಿ ಭೂರಿಂದ ಹರಿ ಕುಳಿತು
ವಾಲಗ ಕೊಳುತಿಪ್ಪ ಮುಕ್ತಾಮುಕ್ತರ ಕೈಯ್ಯ
ಲಾಲಿಸಿ ಸಹಸ್ರ ಫಣ ಸಂಯುಕ್ತಾ
ನೀಲ ಮೇಘ ಶ್ಯಾಮ ಅಂಗುಷ್ಟ ಮಾತ್ರ ಮೂರ್ತಿ
ವಾಲಯ ಸಮಾಧಿಯಲ್ಲಿ ಉಪ್ಪುವ
ಪೋಲುವರಿಲ್ಲ ಈತಗೆ ತ್ರಿಭುವನದೊಳು
ಬಾಲಾರ್ಕನಂತೆ ಪ್ರಕಾಶಿಸುವ
ಜಾಲಗಾರನಂತೆ ತನ್ನ ಮಾಯದೊಳು
ತ್ರಿಲೋಕವನು ಇಟ್ಟು ಸ್ತುತಿಸುವ
ಶೀಲ ಜನರಿಗೆ ಕೈಹಿಡಿಕಿಯಾಗಿಪ್ಪ
ಕಾಲನಂದದಲಿಪ್ಪ ದುಷ್ಟ ಜನರಿಗೆ ನಿ
ರ್ಮಲನು ಕಾಣೋ ತ್ರಿ ಬಗೆಯಿಂದಲಿ
ಆಳುವ ನಮ್ಮ ವಿಜಯ ವಿಠ್ಠಲ ಅನು
ಗಾಲ ಅನುಕೂಲ ಆಪನ್ನ ವೆಂದನ
ರೂಪಕ ತಾಳ
ಹೃದಯಾಂಬರದಲ್ಲಿ ಅಧೋಮುಖವಾಗಿದ್ದ
ಪದುಮ ಎತ್ತುವುದೊಂದು ವಿಧವನ್ನು ಗ್ರಹಿಸಿ
ಮುದದಿಂದ ಪ್ರಾಣವನ್ನು ಉದರದಲ್ಲಿ ತುಂಬಿ
ಉದಯಾರ್ಕವೆಂಬೊ ಜ್ಞಾನದಲ್ಲಿ ಬೆಳಕು ಮಾಡಿ
ಅದರ ತರುವಾಯ ಒದಗಿ ಫಾಳಿಯ ಬೀಸಿ
ಪದುಮ ನಿಮ್ಮವಾಗಿದ್ದದನೆ ಸರಳಮಾಡಿ
ಸದಮಲ ಬಿಂಬನೆ ಅದೆ ಅವಸ್ಥಾ ಪ್ರೇರಕ
‘ಹೃದಯಸ್ಥ ಹರೇರ್ಮೂರ್ತೇಃ ಜಿವೋಯತ್ಪ್ರತಿಬಿಂಬಕಾ
ಯದ್ವಸೆ ವರ್ತತೇ ಜೀವಃ ಸಾತು ಜೀವ ಕಳಾಸ್ರ‍ಮತಃ’
ಇದೆ ಮಂತ್ರವನು ಧೇನಿಸಿ ಪದುಮನಾಭನ ದಿವ್ಯ
ಪದಗಳರ್ಚನಿಗೆ ನಂದದಲಿ ಮನಸುಮಾಡಿ
ಪದವಿ ಪ್ರದಾತ ಶ್ರೀ ವಿಜಯ ವಿಠಲರೇಯ
ನಿದರುಶನವಾಗುವ ಮದಗರ್ವ ನೀಗುವಾ ೬
ಝಂಪೆ ತಾಳ
ನೋವಿಲ್ಲದೆ ಕಮಲವನ ವಿಕಸಿತವನು ಮಾಡಿ
ಆವ್ಹಾನಾಸನ ಅಘ್ರ್ಯ ಪಾದ್ಯ ಆಚಮನವ
ದೇವಗಂಗೆಯಲಿ ಮಜ್ಜನ ಸುವಸನ
ಪಾವಿತ್ರ ಉಭಯಾಚಮಾನ ಒಮ್ಮೊಮ್ಮೆ
ಶ್ರೀ ವಿಭುವಿಗೆ ಗಂಧ ಪುಷ್ಪದೀಪಧೂಪ
ನೈವೇದ್ಯ ಮತ್ತೆ ಉಪಸ್ಪರ್ಶ ತಾಂಬೂಲ ನಾ
ನಾ ವಿಧದ ಉಪಚಾರ ಪ್ರದಕ್ಷಿಣೆ ನಮಸ್ಕಾರ
ತವಕದಿಂದ ಸ್ತೋತ್ರ ತೈಲಾಜ್ಯವರ್ತಿಗಳ
ಹವಣಿಸಿ ಜ್ಯೋತಿ ಹಲವು ಮಂಗಳಾರ್ತಿ
ದೇವ ಮಾರುತಪಿತಗೆ ಎತ್ತಿ ನಿತ್ಯ ಸ್ಮರಿಸಿ
ಪಾವನನಾಗಿ ಜ್ಞಾನದಲಿ ನೋಡಿ
ಲಾವಣ್ಯ ವಿಗ್ರಹ ವಿಜಯ ವಿಠಲನ ಪಾದ
ತಾವರೆ ಹಿಡಿದು ಮೌಳಿತನಕ ನಿಲಿಸೋ ೭
ಶುದ್ಧ ಸೂಕ್ಷ್ಮ ನಿರ್ವಿಕಾರ ನಿರಂಜನ
ಅದ್ವೈತ ಮಹಿಮ ಶ್ರೀನಿವಾಸ ಅಪ್ರಮೇಯ
ಸಿದ್ಧಾ ಪ್ರಮೇಯ ಸಂಪೂರ್ಣ ಸಚ್ಚಿದಾನಂದಾತ್ಮಕ
ಉದ್ಧರಿಸು ಅನಿರುದ್ಧ ಕ್ಷೀರ ಸಮುದ್ರ ಶಯನ
ಆದಿ ಮದ್ಯಾಂತ ರಹಿತ ಅ
ಚ್ಛೇದ್ಯ ಅಭೇದ್ಯ ಜೀವ ಭಿನ್ನ ಭವರೋಗ
ವ್ಯೆದ್ಯ ಚ್ಯೆದ್ಯ ವಿನಾಶ ವಿಶ್ವಾಸ ಫಲದಾಯ
ಪದ್ಮ ಪದ್ಮಜ ರುದ್ರ ತ್ರಿದಶ್ಯಾದರು ಪ್ರ
ಬುದ್ಧರ ಮಾಡಿ ಭವ ಬಂಧ ಒದ್ದು ಬಿಡಿಸುವೆ
ಶುದ್ಧ ಭವಾಬ್ದಿಯೊಳು ಪೊಂದಿಪ ಎನ್ನ ಅನಾದ್ಯವಾ
ಗಿದ್ದ ಅವಿದ್ಯ ಕರ್ಮಗಳ ಒದ್ದು ಕಡಿಗೆ ಮಾಡಿ
ಉದ್ಧರಿಸು ಎಂದು ಎದ್ದು ಅಂಜಲಿ ಪುಟಬದ್ಧ ದಲಿನಿಂದು
ಹೃದ್ಗತನಾಗಿದ್ದ ಉದ್ದಂಟ ದೇವನಂಘ್ರಿ
ಪದ್ಮದ್ವಯಕೆ ಬಿದ್ದು ಭಕುತಿಯಿಂದಾ
ಭದ್ರಗತಿಯನ್ನು ನಿರ್ಧಾರವಾಗಿ ಬೇಡಿ
ಮುದ್ರಧಾರರೊಡನೆ ಪದ್ಧತಿವುಳ್ಳ ಮನೋ ಬುದ್ದಿರ ಕೊಡು ಎಂದು
ಶುದ್ಧವಾದಾನಂತ ಅಬ್ಧಿಯೊಳಗೆ ಇದ್ದು
ಕೃದ್ಧಾ ಪೊದ್ದು ವೋಡಿಸಿ
ಮಧ್ವರಮಣ ನಮ್ಮ ವಿಜಯ ವಿಠಲರೇಯಗೆ
ತದ್ಧಾಸಾನೆಂದರೆ ಇದ್ದಲ್ಲಿ ಶುಭಯೋಗಾ ೮
ತ್ರಿವಿಡಿ ತಾಳ
ಈ ಪರಿಯಿಂದಲಿ ಹೃದಯ ದೊಳಗೆ ಬಿಂಬ
ರೂಪವನ್ನ ಪೂಜಿಸಿ ಯೋಗ್ಯತದಿನಿತು
ಅಪಾರ ಜನುಮ ಜನುಮದಲಿಂದ ಮಾಡಿದ
ಅಪರಾಧಂಗಳ ಉಚ್ಚರಿಸಿ
ಖ್ಯಾಪಿ ಖ್ಯಾಪಿಗೆ (?)ಹರಿಯ ಸ್ಮರಿಸಿ ಅಹಹಾ ಎಂದು
ರೂಪಾತಿಶಯ ಕಣ್ಣು ತೆರೆದು ಮುಚ್ಚಿ
ಲೋಪ ಮನಮಾಡದೆ ಸಾಧಾರಣ ವಾಗಿ
ವ್ಯಾಪುತನಾಗಿದ್ದ ಹರಿಯ ನೆನಿಯೋ
ತಾಪತ್ರಯವ ಕಳೆವ ವಿಜಯ ವಿಠಲರೇಯ
ಆಪತ್ತು ಕಾಲ ಬಾಂಧವ ಕಾಣಿರೋ ೯
ಅಟ್ಟತಾಳ
ಅಪರೋಕ್ಷವಾಗದೆ ಸಂಚಿತಾಗಾಮಿಯ
ನಿಪತನವಾಗದು ಪ್ರಾರಬ್ಧಕರ್ಮವು
ಉಪಶಮದಿಂದ ಭೋಕ್ತವಾಗದು ಕಾಣೊ
ಕಪಟನಾಯಕ ಹರಿಯ ರೂಪವ ಬಾಹಿರ
ಅಪರೋಕ್ಷವಾಗಲು ಅದು ನಿಮಿತ್ಯವಲ್ಲಾ
ಚಪಲ ಸದೃಶವಾದ ಮೂರ್ತಿಯ ಆವಾಗ
ಅಪರೋಕ್ಷೀಕರಿಸಿ ಮನದಲ್ಲಿ ಕಾಂಬೋದು
ಅಪವರ್ಗಕಕ್ಕೆ ಕೇವಲ ಸಾಧನವೆನ್ನು
ತಪನೀಯ ಗರ್ಭಾದಿ ದೇವತಿಗಳಿಗೆ
ಅಪರಿಮಿತ ಜನ್ಮ ಸಾಧನವಾಗದೆ
ಅಪರೋಕ್ಷವಾಗದು ಹರಿಯ ಕೂಡಾಡುವ
ಗುಪಿತ ಮಹಿಮ ನಮ್ಮ ವಿಜಯ ವಿಠಲರೇಯ
ಜಪ ತಪರೆ ಒಲಿವನು ಭಕುತಿಯಿಲ್ಲದಲೆ ೧೦
ಆದಿತಾಳ
ಅನಂತ ಜನುಮಕ್ಕೆ ಒಮ್ಮೆ ನಿನ್ನವನೆಂದು
ಧ್ಯಾನಾದಲ್ಲಿ ತಿಳಿದು ಮನಮುಟ್ಟಿ ನುಡಿದರೆ
ನಾನಾ ಸತ್ಕರ್ಮಂಗಳ ಮಾಡಿದಧಿಕ
ಏನೆಂಬೆನವಗೆ ಎಲ್ಲಾ ಸುಲಭ ಸಾಧ್ಯ
ಹೀನ ಯೋನಿಜನಾಗಿ ಜನಿಸಿದರಾದರೂ

ದಕ್ಷಿಣ ಭಾರತದ ತುತ್ತ ತುದಿಯಲ್ಲಿರುವ

೭೧. ದರ್ಭಶಯನ
ರಾಗ:ತೋಡಿ
ಧ್ರುವ ತಾಳ
ಮಬ್ಬು ಬಯಲಾಯಿತು ಉಬ್ಬಿತು ಎನ್ನ ಮನ |
ಹಬ್ಬಿತು ಎಳೆಬಳ್ಳಿ ಅಬ್ಬರದಿಂದಲಿ
ಅಚ್ಚಿನಾಭನ ಪದಾಬ್ಜವೆಂಬದಕೆ ಬಲು |
ದೊಬ್ಬ ದೊಲಗಾದಂತೆ ಲುಬ್ಧು ತನವಿಲ್ಲಾದೆ |
ಹಬ್ಬವಾಯಿತು ಇಂದು ಗುಬ್ಬಿಗೆ ಮಣಿಗುಂ (ಜಿ) ಪೆ |
ಸುಬ್ಬದ ತೆರದಿಂದ ಅಬ್ಬಿತಯಾವು |
ಬೊಬ್ಬಿರಿವಾ ದೋಷಾ ಇಬ್ಬಾಗಿ ಯಾಯಿತು |
ನಿಬ್ಬರದ ಪುಣ್ಯ ಇಮ್ಮಡಿ ಫಲಿಸಿತು |
ಒಬ್ಬರೆನರಿವರು ಶಬ್ದಗಾಗೋಚರ |
ದರ್ಭಾಶಯನನಾದ ವಿಜಯವೆಠಲರೇಯಾ |
ಅಬ್ಬುಧಿವಾಸವಾದಾ ಹೆಚ್ಚಾಗೆ ಮಹಿಮೆ ೧
ಮಟ್ಟತಾಳ
ವಿಶ್ವಸ್ಕಜಿ ಬಂದು ವಿಶ್ವಂಭರೆ ಯೊಳು |
ಅಶ್ವನೆಯ ಗೂಡ ಅಶ್ವತ್ಥದ ಬೀಜಾ |
ವಿಶ್ವಾಸದಿ ತರಿಸಿ ಈಶ್ವರ ಮೊದಲಾದ |
ವಿಶ್ವದೇವರೊಳು ಸಪ್ತಾಶ್ವನಂತೆ ಮೆರೆದಾ |
ವಿಶ್ವರ್ಯದಲಿ ಸ್ವೇತ ಸಾರಥಿ ನಮ್ಮ ವಿಜಯ ವಿಠಲ ಅನಾ |
ದಿ ಸ್ವಾಭಿವ ದರ್ಭಶೇನಾವಾಸಾ |
ಅಶ್ವಮೇಧವ ಪುಣ್ಯಾಪಶ್ವಾದಿಗೆ ಈವಾ ೨
ತ್ರಿವಿಡಿತಾಳ
ಅನಾಸತ್ಯರು ಬಂದು ಧ್ಯಾನವ ತಂದೀಯೆ |
ಆನಂದಾದಲಿ ವನಜಾಸೂನು ಸ್ಥಾಪಿಸಿದಾನು |
ಈ ನೆಲದಲಿ ವೃಕ್ಷ ತಾನೆ ಗಳಾಲಿದರ |
ಭಾನುಸುತ್ತ ಹರಿಯೆ ಏನಂಬೆ ಸೋಜಿಗವ |
ತಾನೊಲಿದು ಸುರ ಜೇಷ್ಟಮಾಣದಲೆ ತಪ |
ವಾನು ರಚಿಸಿದನು ಈ ನಿಧಿಯಲಿ ಕುಳಿತು |
ಶ್ರೀ ನಾರಯಣದೇವಾ ವಿಜಯ ವಿಠಲ ರೇಯಾ |
ಕ್ಷೇಣಿಯೊಳಗೆ ಬಂದು ನಿಲ್ಲಾ ಬೇಕೆಂದು ೩
ಅಟ್ಟತಾಳ
ಕಾಲಾಂತರಕ್ಕೆ ದಶಮೌಳಿ ಜನಿಸಾಲು |
ನೀಲಮೇಘ ಶ್ಯಾಮಾ ತಾಳಿದನವ ತಾರ |
ಭೂಲೋಕದಲಿ ನರಲೀಲೆ ಮಾಡುತ ಬಂದು |
ಆ ಲೋಕೇಶನು ಪಾಲಿಸಿದ ಶ್ವತ್ಥ |
ಮೂಲದಲ್ಲಿ ರಾಮಾ ವಾಲಗವಾದನು |
ಶ್ರೀ ಲೋಲ ವಿಜಯ ವಿಠಲ ದರ್ಭ ಶಯನಾ |
ಈ ಲವಣಾಬ್ಧಿಯಲಿ ಮೇಲಾಗಿ ಮೆರೆದಾ ೪
ಆದಿತಾಳ
ಕೃಣತಲ್ಪ ನಾಗಿ ವರುಣನ್ನ ಭಂಗಿಸಿ ರಾ |
ವಣನ ಪುರಕೆ ಪಥವನೆ ಬಿಗಿದ ವೇಗದಲಿ |
ಮಣಿದ ಕಿಂಕರ ವಿಭೀಷಣಗೆ ಪಟ್ಟವಗಟ್ಟಿ |
ಇನಕುಲೋತ್ತುಮ ರಾಮಾನಿಲ್ಲ ಮಣಿ ಮಯ ಪೀಠದಲ್ಲಿ |
ಜನಕಾಸುತೆ ಸಮೇತ ಅನಿಮಿಷರೊಡನೆ ಅ |
ಗಣಿತ ಬಗೆಯಲ್ಲಿ ಘನ ಪದವಿಯೊಳುತ್ತ |
ಹನುಮವಂದಿತರಾಮಾ ವಿಜಯ ವಿಠಲ ದ |
ಕ್ಷಿಣ ವನನಿಧಿವಾಸಾ ಮುನಿಸುರ ಪರಿಪಾಲಾ |
ಮಿನುಗುವ ದರ್ಭಶಯನಾ ಕೇತುವಿನ ಧೊರಿಯೆ ೫
ಜತೆ
ಫುಲ್ಲಾ ಮುನಿಗೆ ಒಲಿದಾ ಬಲಿದಾ ಜಗನ್ನಾಥ |
ಹುಲ್ಲುಹಾಸಿಕೆಯಲ್ಲಿ ಇಪ್ಪ ವಿಜಯ ವಿಠಲ್ಲಾ ೬

ಬರಗಾಲ ಬಂದ ಸಂದರ್ಭವೊಂದರಲ್ಲಿ

೧೦೪
ಧ್ರುವತಾಳ
ಮರುಳನ್ನ ಪರಿಹರಿಸೊ ದುರ್ಗಾರಮಣ ಹರಿ
ಉರಗಾಭರಣ ರುದ್ರನಾಮಕ ನಾರಾಯಣ
ಸರಳೊಂದು ಎಚ್ಚೆ ಸಪ್ತ ತೃಣರಾಜ ತರುಗಳ
ಧರಣಿಗೆ ಒರಗಿಸಿದ ಧೈರ್ಯಶಾಲಿ
ಇರಳು ಹಗಲು ನಿನ್ನ ಶರಣಂಗೆ ಪ್ರೀತಿಯಾದ
ನರರಿಗೆ ಮನೋವಾಚ ಕಾಯದಲ್ಲಿ
ಅರ ಎಳ್ಳಿನಿತಾದರು ವಿಪತ್ತು ಎಂಬೊದುಂಟೆ
ಕರುಣಾಕರ ದೇವ ಅಮೃತ ಹಸ್ತ
ಗರಳುರಿ ಮಧ್ಯದಲ್ಲಿದ್ದ ಸಸಿಯಂತೆ ಜೀ
ವರು ಇಪ್ಪರು ಕೇಳು ಕಡೆ ಹಾಯಿಸೊ
ಪರಮ ಮೂರ್ಖರಾದರು ಶೋಧಿಸಿ ನೋಡಿದರು
ಹರಿ ನಿನ್ನ ಲೀಲೆ ಕಾಣೆ ತಿಳಿದು ಬಲ್ಲೆ
ಪರರಿಗೆ ಈ ಪರಿ ಸಾಹಸ ಎಂತೆಂಬಿಯಾ ಭಕ್ತಜನರ
ಪೊರೆವ ಬಿರಿದು ನಿನ್ನದಲ್ಲವೇನೈ
ಅರಿಯದವನಂತೆ, ಸುಮ್ಮನಿರಲಾಗದೊ
ಪರಿಪಕ್ವಕಾಲ ಬಂದಿದೆ, ಈಗಲೇ
ಮೊರೆ ಹೊಕ್ಕೆನಯ್ಯಾ ನಿನ್ನ ಚರಣಾಬ್ಜಯುಗಳ
ನೆರೆ ಮಾತು ಲಾಲಿಸು ಮನಕೆ ತಂದು
ಬರಿದಾಗೆ ಪೋಗದಂತೆ ಮಾಡೊ ಮಹಾ ಪ್ರಬಲ
ತುರಗವೇರಿದ ಕಲ್ಕಿ ಖಳಮರ್ದನ
ಪರೀಕ್ಷೆ ಮಾಡುವ ಕಾಲ ಸ್ವಲ್ಪವಾದರು ಇಲ್ಲ
ಸರುವ ಬಗೆಯಿಂದ ವಿಚಾರಿಸೆ
ಕೊರಳಗತಾರ್ತರಾಗಿ ಕೇವಲ
ನಿರವಿಣ್ಯ ಪರರಾಗಿ ದೈನ್ಯವೃತ್ತಿಬಡುತಿಪ್ಪರೊ
ವರ ಅಭಯ ಮೂರ್ತಿಯಿಂಥ ಸಮಯಕ್ಕೆ ನಿನ್ನ
ಚರಿತ್ರೆ ತೋರದಿದ್ದಡೆ ಇನ್ನಾವಗ ತೋರ್ಪೆ
ಹಿರಿಯರು ಪಿಂತೆ ರಾಯರಿಗೆ ಬಂದ ಕುಹೂಯೋಗ
ಪರಿಹರಿಸಿ ಕೀರ್ತಿಪೊತ್ತು ನಿನ್ನವರಾಗಿ
ಧರಣಿಯೊಳಗೆ ಮೆರೆದು, ಜಯವಂತರೆನಿಸಿ ಡಂ
ಗುರವ, ಹೊಯಿಸಿ ನಿನ್ನ ಒಲಿಸಲಿಲ್ಲೆ
ನೆರೆ ಹೊರೆಯವನಲ್ಲ ನಾನವರ ಶಿಷ್ಯರ
ಕರುಣಾಕಟಾಕ್ಷಕ್ಕೆ ಯೋಗ್ಯನಹುದೊ
ಹರಿ ನೀನೆ ಉಪೇಕ್ಷ ಮಾಡಿದರೆ ನಿಂ
ದಿರೆ ಮಾರ್ಗ ಕಾಣೆನೊ ಪರಮ ಮಿತ್ರ
ಹರುವ ಹೆದ್ದೊರೆಯೊಳುಕ್ಕಾಸು ಈಸುಕಾಯಿ
ಹರಗೋಲು ತಪ್ಪಿ ಕೈಸೋತು ಕಡಿಗೆ
ಬರುವ ಮನುಜ ನಡುವೆ ಮುಣುಗುವ ಪರಿಯಂತೆ
ತೆರನಾಗಿದೆ, ಇನ್ನೇನುಳಿದೆ ಇಲ್ಲ
ಸುರಪಾಲಾನುತ, ಸಿರಿ ವಿಜಯ ವಿಠ್ಠಲ ನಿನ್ನ
ಕರುಣವಾದರೆ ಕೋಟಿ ಪ್ರತಿಬಂಧಕ ಹರವು ೧
ಮಟ್ಟತಾಳ
ಕಣ್ಣಿಲೆ ಕೊರ ಜೀವ ಹಿಡಕೊಂಡು ಜನರು
ಖಿನ್ನರಾಗಿ ಬಹಳ ಖೇದ ಬಡುತಲಿಹರೊ
ಮುನ್ನೆ ಉಪಾಯಗಳು ಒಂದಾದರು ಅವರು
ಇನ್ನು ಕಾಣರು ಕಾಣೊ, ಇತ್ತ ಮೊಗವಾಗೊ
ಬಿನ್ನೈಸುವೆನೊ ಮುಂದಣ ವಿಚಾರ, ಪ್ರ-
ಸನ್ನ ವದನ ಒಲಿದವರ ಚಿತ್ತಾಪಹಾರಿ
ಘನ್ನ ಮಹಮಹಿಮ ವಿಜಯವಿಠ್ಠಲ, ದೈತ್ಯಾ
ರಣ್ಯವ ಸವರುವ, ಸಂತತಗುಣಶೀಲ ೨
ತ್ರಿವಿಡಿ ತಾಳ
ಪ್ರಜೆಗಳ ಕ್ಷೋಭಿಯ ನೋಡಲಾರದೆ ನಿನಗೆ
ಭಜನೆಯಿಂದಲೆ ನಾನು ಮೊರೆಯಿಟ್ಟೆನಯ್ಯಾ
ಗಜರಾಜ ಎಲ್ಲರಿಗೆ ಮೇಲು ಪಂಙÂ್ತಯ ಹಾಕಿ
ತ್ರಿಜಗದೊಳಗೆ ಇಂತು ತೋರಿ ಕೊಟ್ಟ
ದ್ವಿಜರಾಜ ಧ್ವಜನೆ ಸಂಭವಾಮಿ ಯುಗೆ ಯುಗೆ
ನಿಜವಾಕ್ಯ ಭಕ್ತಿರ್ಗೆ ದೊರೆತಿಪ್ಪದೊ
ರಜದೂರ ನಿನ್ನವತಾರ ಕೃತ್ಯವೆ ಭೂ
ಭುಜರ ಶಕ್ತಿ ನಿನ್ನದಲ್ಲವೇನೈ
ಯಜಮಾನ ಸಕಲಕ್ಕೂ ನೀನಾದ ಕಾರಣ ಯೋ
ನಿಜರು ಪೌರುಷ ಪೇಳಿ ವ್ಯರ್ಥವಹರೆ
ವೃಜದಲ್ಲಿ ಕಾಲಾನಳನು ನುಂಗೆ ಗೋಗೋಪ
ವೃಜಗಳ ಕಾಯ್ದ ವೈಭವ ಪ್ರಭುವೆ
ದ್ವಿಜದೇವ ವೃತ್ತಿಕ್ಷೇತ್ರ ಧರ್ಮ ಮೊದಲಾದ
ಯಜನಾದಿಗಳು ನಿರುಪದ್ರವಾಗಿ
ಸುಜನರು ಸಂತೋಷದಿಂದಲಿಪ್ಪರು ನಿತ್ಯ
ವಿಜಯವಾಗಿಪ್ಪುದು ನೋಳ್ಪರಿಗೆ
ಕುಜನರ ಪಾಪ ಪೂರತಿಯಾಗುವತನಕ
ಅಜನಯ್ಯ ಎನಗೆ ಈ ಮಾತು ದೊರಕುವುದೇನೊ
ಭುಜಗೇಂದ್ರಶಯನ, ಸಿರಿ ವಿಜಯ ವಿಠ್ಠಲ ಎನ್ನ
ರುಜುವಾಕ್ಯವೆಂಬೋದೆ ಬಾಣಪ್ರಯೋಗವು ೩
ಅಟ್ಟತಾಳ
ಆಲಸ್ಯ ಮಾಡೋದು ಸಲ್ಲ ಶ್ರೀನಲ್ಲ ಬಲು
ಬಾಲಮತಿಯವ ನಾನು ಸುರಧೇನು ನಿನ್ನ
ಪಾಲಿಗೆ ಬಂದಿಹೆನಯ್ಯಾ ಪಿಡಿ ಕೈಯ್ಯ ಇಂದು
ನಾಲಿಗೆಯಿಂದ ಬಂದ ಬಲು ಛಂದ ಮಾತು
ಪಾಲಿಸು ಪರಮ ಪಾವನ್ನ ಮೋಹನ್ನ ದೇವಸ್ವಾಮಿ
ಹೇಳಿದ್ದು ಪೊಳ್ಳಾಗಗೊಡದೆ ಹೀಗೆ ಬಿಡದೆ ಸತ್ಯ
ವಾಲಯವಾಗಲಿ ಸ್ವಾಮಿ ಅಂತರ್ಯಾಮಿ ಇದು
ಕೇಳೊ ಎನ್ನಂತೆ ಕರ್ನದಲ್ಲಿ ಕಾಲ
ಕಾಲಕೆ ಅನ್ಯಾಪೇಕ್ಷಿಸದೆ ಉಪೇಕ್ಷಿಸದೆ ಹರಿ
ವಾಲಗ ಮತ್ತೊಂದರಿಯೆ, ಎನ್ನ ಧೊರಿಯೆ, ದೇಶ
ಕಾಲಗುಣ ಪರಿಪೂರ್ಣ ನಾನಾವರ್ಣ ತೇಜ
ಪಾಲಸಾಗರ ಸರ್ಪಶಾಯಿ, ನಮ್ಮ ತಾಯಿ ದಿವ್ಯ
ಮೇಲು ಮೇಲು ನಿನ್ನ ಶಕ್ತಿ, ಎನ್ನ ಉಕ್ತಿ ನಿಜ
ತಾಳಿದೆ ಹತ್ತಾವತಾರ, ಭವತಾರ ನಿ
ನ್ನಾಳಿಗೆ ಬರುವುದು ಕೀರ್ತಿ ನಿನ್ನ ವಾರ್ತಿಭವ್ಯ
ಕೇಳಿದರಿಂದ ಮುಕ್ತಿ, ಸದ್ಯ ಭುಕ್ತಿ ಭಕ್ತಿ
ಮೇಲು ಸುಜ್ಞಾನ ವೈರಾಗ್ಯವೆಂಬೊ, ಭಾಗ್ಯ ಕೃಷ್ಣ
ನೀಲಾಂಗ ವಿಜಯ ವಿಠ್ಠಲ ಅಕುಟಿಲ, ಸುಖ, ದಿವದಿ
ಬಾಳಿದೆ ನಿನ್ನಂಘ್ರೀ ಸೇರಿ ಮನಸಾರಿ ೪
ಆದಿತಾಳ
ಭೂಮಿಸುರರು ನಿಂದು ಮಾಡಿದ ಜಪ ತಪ
ನೇಮನಿತ್ಯಂಗಳೇಸು ಕಾಮ್ಯಕರ್ಮ ಮಾಡಲು
ಯಾಮ ಯಾಮಕೆ ಮಾತ್ರ ಸಿದ್ದಿಯಾಗಲಿ, ನಿ-
ಷ್ಠಾಮಕವಾಗಲಿ ಎನಗೆ ನುಡಿದು ಲಿಪಿಸಿದ ಪ್ರತಿ
ಭೀಮ ಪರಾಕ್ರಮ, ದುಷ್ಟನಿಗ್ರಹ ಸುರ
ಪ್ರೇಮ ಫಲಪ್ರದ ಪ್ರಾಕೃತ ಪಾದ, ವಿಜಯ ವಿಠ್ಠಲರೇಯ
ತಾಮಸ ಖಂಡಿಸಿ, ಎಲ್ಲರಿಗೆ ಸುಖವನೀಯೋ ೫
ಜತೆ
ಉಭಯಾರ್ಥಕ್ಕಿದೆ ಸ್ತ್ರೋತ್ರ ಮಾಡಿ ಅರ್ಪಿಸಿದೆನೋಶುಭ ಮೂರುತಿ ನಮ್ಮ ವಿಜಯ ವಿಠ್ಠಲ ಬಾರೋ೬

ಈ ಸುಳಾದಿಯೂ ಅನಂತಶಯನ

೪. ಅನಂತಶಯನ
ಧ್ರುವತಾಳ
ಮಲಯಾ ಮಧ್ಯದಲ್ಲಿಪ್ಪುದೇನೊ ಪಾವಿನ ಮೇಲೆ
ಮಲಗಿ ಮುದದಿಂದ ನಸುನಗುವದೇನೊ |
ಪೊಳೆವ ವೈಕುಂಠಾದಿ ಹೊಳಲಾ ತೊರದು ಈ |
ನೆಲದಲ್ಲಿ ವಾಸವಾಗಿಪ್ಪದೇನೊ |
ವಲಯಾಕಾರದ ಜಂಬುದ್ವೀಪದೊಳಗೆ ಉತ್ತುಮ |
ನಿಲಯಾ ನೋಡಿಕೊಳದೆ ಬಂದಾಬಗಿ ಏನೋ |
ಜಲಜ ಸಂಭವಾದ್ಯರು ಒಲಿದು ಪೂಜಿಸುತಿರಲು |
ಇಳೆಯೊಳೀ ನರರಿಂದ ಪೂಜೆಗೊಂಬುವುದೇನೊ |
ಸುಲಭ ಸಾಧ್ಯ ವಿಜಯವಿಠಲ ಭೋಗಾನಂತ |
ಚಲುವ ದೇವರದೇವ ಒಲಿದವರಿಗೆ |
ಗಲಭೆ ಮಲಿಯಾ ಮಧ್ಯವಿಪ್ಪದೇನೊ ೧
ಮಟ್ಟತಾಳ
ಎವೆ ಇಡದಲೆ ನಿನ್ನಾ ನೋಡುವ ಭಾಗ್ಯ |
ಅವನಿಯೊಳಗೆ ನಿನ್ನಾ ನೋಡುವ ಭಾಗ್ಯ |
ಯಾವತ್ತು ನಿನ್ನಾ ನೋಡುವ ಭಾಗ್ಯ |
ಅವಯವಂಗಳು ಇಂದು ನೋಡುವ ಭಾಗ್ಯ |
ದಿವಿಜಾದಿಗಳಿಗೆ ಮನಕೆ ದೂರ |
ಭವ ಮನುಜಾ ನಿನ್ನಾ ನೋಡುವ ಭಾಗ್ಯ |
[ಪವಣ]ವಾದದು ಪಾವನಕಾಯ |
ನವಮೋಹನ ವಿಜಯವಿಠಲಾನಂತ |
ಕವಿಗಳ ಮನೋಹರಾ ಭವಭಯವಿದೂರ |
ದಿವಾಕರ ವರದ ದಿವಾಕರಕುಲಜಾತ ೨
ತ್ರಿವಿಡಿತಾಳ
ಒಂದು ಬಾಗಿಲಲ್ಲಿ ಆನಂದವಾದಾ ಪಾದಾ |
ದ್ವಂದರವಿಂದವಾ ಬಿರುದಿನಾ ಪೆಂಡೆಯಾ |
ಅಂದಿಗೆ ಪೊಂಗೆಜ್ಜೆ ಪರಡು ಬೆರಳಾ ಮುದ್ರೆ |
ಇಂದು ಲಜ್ಜಿತನಾದ ಚಂಧಾ ಪಾದದ ಉಗುರು |
ಮಂದಾಕಿನಿಯ ಪಡದಾ ಉಂಗುಟಾಗ್ರ ಜಂಘೆ |
ಪೊಂದಿ ಪೊಳವಾಜಾನು ವಸನಪಾಟಿಸಿ ನೋಡುವ |
ಇಂದಿರೆಯರಸಿ ಪಾದಾರ್ಚನೆ ಮಾಡುತ್ತ |
ಒಂದೊಂದು ಪರಿಯಲ್ಲಿ ಎಣಿಸಿ ಗುಣಿಸುತಿರೆ |
ಇಂದಾನಂತತಲ್ಪ ವಿಜಯವಿಠಲರೇಯನ |
ಸಂದರುಶನವಾಗಿ ಇಂದು ಈ ಪರಿ ಕಂಡೆ ೩
ಮಟ್ಟತಾಳ
ಮಧ್ಯಬಾಗಿಲಲನಿರುದ್ಧನ್ನ ನಾಭಿಯ |
ಪದ್ಮವನ್ನು ಕಟಿ ತಿದ್ದಿದ ಉಡಿದಾರ |
ಮುದ್ದು ತ್ರಿವಳಿ ಹೇಮಾ ಅದ್ದಿದ ಶರಗು, ಪ್ರ |
ಸಿದ್ಧ ಉದರ[ವ]ಕ್ಷಶುದ್ಧ ಕೌಸ್ತುಭಮಣಿ |
ಪದ್ಧತಿ ಸು[ರುಚಿ]ರ ಪದ್ಮವನ್ನು ಪಿಡಿ |
ದಿದ್ದು ಮನದಲ್ಲಿ ಇದ್ದವನಾ ಕಂಡೆ |
ಉದ್ಧಂಡ ವಿಜಯವಿಠಲ ಭೋಗಾನಂತ |
ಉದ್ಧಾರಮಾಳ್ಪ ಕ್ಷೀರಾಬ್ಧಿಶಯನನೀತಾ ೪
ಆದಿತಾಳ
ಎರಡೊಂದನೆ ದ್ವಾರದಲ್ಲಿ ಶಿರಸಾಪೊಳವ ಮುಕುಟಾ |
ಸರಸಕುಂಡಲ ಕರ್ನಧರ ವಕ್ತ್ರನಾಸರಿದ ಪೂ |
ಸರಸಿಜನಯನ ಕಸ್ತುರಿನಾಮ ಫಣೆಯಲ್ಲಿ |
ವರಪುಬ್ಬು ಮತ್ತೆ ಒಂದು ಕರವು ಶೃಂಗಾರದಿಂದ |
ಪರಿಶೋಭಿಸಲು ಈ ಪರಿಯಲ್ಲೀ |
ಉರಗನ್ನ ಪರಿಯಂಕದಲ್ಲಿ ಮಲಾ |
ಗಿರುತಿಪ್ಪ ಪರಮಾತ್ಮ ಸಿರಿಯರಸಾ ವಿಜಯವಿಠಲ |
ಪರಮಭೋಗಾನಂತ ಪರಮರೂಪಶಾಂತ ೫
ಜತೆ
ಪೊಕ್ಕಳಿಂದಲಿ ಮಗನಾ ಪೆತ್ತ ಪದುಮನಾಭಾ |
ರಕ್ಕಸರಿಪು ವಿಜಯವಿಠಲಾ ಭೋಗಾನಂತಾ ೬

ಮಹಾನಂದಿ ಎಂಬ ಕ್ಷೇತ್ರದಲ್ಲಿ

೮೬. ಮಹಾನಂದಿ
ಧ್ರುವತಾಳ
ಮಹಾ ನಂದಿನಿ ಕ್ಷೇತ್ರ ಮಹಿಯೊಳು ಪ್ರತಿಗಾಣೆ |
ಅಹಿಪತಿ ವರ್ಣಿಸಲಾರನಯ್ಯಾ |
ಮಹ ಪುರುಷಾರ್ಥ ಪರ ಇಹದಲ್ಲಿ ಸಿದ್ಧ |
ಅಹಿಭೂಷಣನಿಲ್ಲಿ ನಲಿಯುತಿದ್ದ |
ಅಹಂಕಾರವೆನಿಳಿದು ವಿಹಿತದಿಂದಲಿ ಯಾತ್ರಿ |
ರಹಸ್ಯದಲ್ಲಿ ಮಾಡಿದ ನರಗೆ |
ದೇಹ ನಿರ್ಮಳ ಪಂಚದ್ರೋಹಗಳೊಡೋವು |
ಶ್ರೀ ಹರಿ ದಯದಿಂದ ಪಾಲಿಸುವ |
ಮಹಯಜ್ಞನಾಮ ವಿಜಯವಿಠಲನ ದಾ |
ಸೋಹಂನಾಗದತಿ ಫಲವಾಹದೆ ಮರುಳ ೧
ಮಟ್ಟತಾಳ
ಶಿಲವೆಂಬೋವಿಪ್ರಾ ಬಲುಕಾಲಾದಲಿ |
ಒಲಿದು ತಪವಮಾಡಿ ಪುಲಿದೊಗಲಾಂಬರನಾ |
ಒಲಿಸಿ ಮಕ್ಕಳ ಪಡೆದ ಬಲವಂತರೀರ್ವರನು |
ಇಳಿಯೊಳ ‘ಪೆಸರಾದಾ’ ಬಲವಂತ ಮಹಕರ್ಮ ವಿಜಯವಿಠಲನ್ನಾ |
ಒಲುಮೆಯಿಂದಲಿ ಕ್ಷೇತ್ರಾಪೊಳೆವುದು ನಿತ್ಯದಲಿ ೨
ತ್ರಿವಿಡಿತಾಳ
ನಂದನರಾದರು ಸಿಲನೆಂಬೊ ಭೂಸುರಗೆ |
ನಂದನಾಪರ್ವತರೆಂಬೊರಿಬ್ಬರು ಮಹಾ |
ನಂದಾದಿಂದಲಿ ತಪವ ಮಾಡಾಲು ಪರ್ವತ |
ನೆಂದೆಂಬುವನು ಪೋಗಿ ಶ್ರೀಗಿರಿಯಲಿ ನಿಂತ |
ನಂದನನೆಂಬವ ಮನಸು ಧೃಡವಾಗಿ |
ನಂದಾನಲ್ಲಿಗೆ ಬರಬೇಕೆಂದಪೇಕ್ಷಿಸಿ |
ಒಂದೆ ಭಕುತಿಯಲ್ಲಿ ತಪವನ್ನು ಮಾಡಲು |
ಕಂದರ್ಪಪಿತ ಮಹಶಕುತಿ ವಿಜಯವಿಠಲ |
ನಂದಾ ಮೂರುತಿಯಾ ಕೃಪೆಯಿಂದವಾಯಿತು ಸಾಧ್ಯ ೩
ಅಟ್ಟತಾಳ
ಭೂಸುರನೆಸಗಿದ ತಪಸಿಗೆ ಬಲುಮೆಚ್ಚಿ |
ಕಾಶಿಯಲಿದ್ದ ಉತ್ತರವಾಹಿನಿ ವಾರ |
ಣಾಸಿ ಗಂಗೆ ಮಧ್ಯ ಬೊಮ್ಮನಾಳದಿಂದ |
ತಾ ಸುಲಭಾದಲ್ಲಿ ಗುಪ್ತಗಾಮಿನಿಯಾಗಿ |
ಶೇಷಪರ್ವತಕೆ ಬಂದಳು ವಿನಯಾದಿಂದ |
ವಾಸರ ನಾಲ್ವತ್ತರೊಳಗೆ ಕೃಷ್ಣಭವ |
ನಾಸಿಮಿಕ್ಕಾದ ಪಂಚತೀರ್ಥವೊಡಗೂಡಿ |
ದೋಷವರ್ಜಿತ ಸಿರಿ ವಿಜಯವಿಠಲನ ಪಾ |
ದಾ ಸಲೀಲಲ್ಲಾದೆ ಅನ್ಯತ್ರವಿಲ್ಲಾ ೪
ಆದಿತಾಳ
ಅಂದಿನಾರಭ್ಯವಾಗಿ ವೃಂದಾರಕಾ ಸರ್ವಸಿದ್ಧ |
ಗಂಧರ್ವರೆಲ್ಲ ನಾರಿ ವೃಂದಗಳು ನಿತ್ಯ ನಿತ್ಯ |
ಬಂದು ರಾತ್ರಿಯಲ್ಲಿ ಪರಮಾನಂದದ ಲೀಲೆಯಾಡುತ್ತ |
ಇಂದುಧರಾ ಸಹಿತಾ ಗೋವಿಂದನಾ ಧ್ಯಾನದಲ್ಲಿ |
ಅಂದು ಮೊದಲಾಗಿ ಮಹಾನಂದಿನಿ ಪೆಸರಿನಿಂದ |
ಮಂದಾಕಿನಿ ಕರಿಸಿಕೊಂಡು ಚಂದದಿಂದಲಿ ನಲಿವಳು |
ಬಂದು ನಿಂದು ಮಿಂದು |
ಬಂದು ವಂದನೆ ಎಂದವರಿಗೆ |
ಬಂದು ವಿಜಯವಿಠಲಾನು |
ಎಂದಿಂದಿಗೆ ಬಿಡದೆ ಪೊರೆವ ೫
ಜತೆ
ಧೇನು[ಗರೆ]ದುದೆ ಸಾಕ್ಷಿ ಈ ಕಥೆಯನು ತಿಳಿದೂ |
ಈ ನಿಧಿಯಲಿ ವಿಜಯವಿಠಲನ್ನ ಕೊಂಡಾಡಿ ೬

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ

ಶ್ರೀವಾದಿರಾಜರ ಸ್ತೋತ್ರ
೧೫೯
ಧ್ರುವತಾಳ
ಮಾಧವನಂಘ್ರಿ ನಿತ್ಯ ಮೋದದಲ್ಲಿ ಭಜಿಪ
ಸಾಧು ಸನ್ಮುನಿವರ್ಯ ಸಮ್ಮೋದ ತೀರ್ಥಕರಪಾದ
ಸಾದರದಿಂದ ಭಜಿಸಿ ಮೇದಿನಿಗೆ ಭಾರ
ವಾದ ಮಾಯಾವಾದಿಗಳ ಗೆದ್ದೆ
ವಾದಿರಾಜರ ಮಹಿಮೆ ವರ್ಣಿಸಲರ್ಹನಲ್ಲಾ
ಮಾಧವ ವೇದವೇದ್ಯ ವಿಜಯವಿಠ್ಠಲ ತಾನು
ಆದರದಿಂದವರ ಭುಜದಿ ಹಯವಕ್ತ್ರನಾಗಿ
ಪಾದವನ್ನು ಇಟ್ಟು ಸ್ವಾದುವಾದ
ಕಡಲಿ ಹೂರಣವನು ಉಂಡ
ಶ್ರೀಧರನ ಮಹಿಮೆ ಸಾಧುಜನರು ಕೇಳಿ ೧
ಮಟ್ಟತಾಳ
ಕಡಲಲ್ಲಿ ಪವಡಿಸಿದ ಒಡಿಯ ತಾ ಪೊಡವಿಯಲಿ
ಮೃಡನುತ ಗೋವಿಂದ ಜಡದ ಹರಿವಾಣದಲ್ಲಿ
ಕಡಲಿ ಸಕ್ಕರೆ ಬೆರಿಸಿ ಲಡ್ಡುಗೆಯ ಮಾಡಿದ
ಸಡಗರದ ಭಕ್ಷ ಪಾಯಸ ಘೃತ ನೀಡೆ
ಒಡೆಯನು ಬ್ರಹ್ಮಾದಿ ಪರಿವಾರ ಸಹಿತುಂಡು
ಕಡಗೋಲು ನೇಣು ಪಿಡಿದುಡುಪಿಲಿ ನಿಂದ
ಉಡುರಾಜಮುಖ ನಮ್ಮ ವಿಜಯ ವಿಠ್ಠಲನು
ಬೆಡಗು ಕಾರ್ಯವನ್ನು ನಡೆಸಿದ ಬಗೆ ಕೇಳಿ ೨
ತ್ರಿವಿಡಿತಾಳ
ತಾಮಸಗುಣವುಳ್ಳ ಪಾಮರ ಜನರಿಗೆ
ಈ ಮಹಿಮೆ ದೊರಕುವುದೇ ಸ್ವಾಮಿ ಸಿಲಕುವನೆ
ಕಾಮಿಸಿ ಕೋಟಿ ವರುಷ ನಾಮನುಡಿಯೆ ಪರಂ
ಧಾಮ ದೊರಿಯದು ಭೂಮಿಯೊಳಗಿದ್ದ
ಭ್ರಾಮಕ ಜನರಿಗೆ ವಾಮದೇವನೆ
ಹಿರಿಯನೆಂದು ಬುದ್ಧಿಯಕೊಡುವ
ಕಾಮಾರಿ ವಂದ್ಯ ನಮ್ಮ ವಿಜಯ ವಿಠ್ಠಲನು
ಸಾಮಾನ್ಯ ಜನರಿಗೆ ದೊರಕುವನೆ ಕೇಳಿ ೩
ಅಟ್ಟತಾಳ
ಅಜ ಸತ್ಯಲೋಕಾಧಿಪತ್ಯವನ್ನು ಮಾಡಿ ದಿ
ಗ್ವಿಜಯ ಮಾಡಲು ಪುರಕೆ
ನಿಜಸುಜ್ಞಾನ ಪೂರ್ಣಪ್ರಜ್ಞರೆಂಬೋ ಮುನಿಯು
ಅಜಪದಕೆ ಬಂದು ಅಖಿಳರನಾಳಿದಾ
ನಿಜವಾಯು ಹನುಮ ಭೀಮ ಮಧ್ವನೆನಿಸಿದ
ವಿಜಯಸಾರಥಿ ಪಾದರಜದ ಮಹಾತ್ಮೆಯಿಂದ
ಗಜವೈರಿ ಭಂಜನ ವಿಜಯವಿಠಲನ್ನ
ಭಜನಿಯ ಗೈಯುತ ಬಹುಕಾಲದಿ
ಋಜುಗಣ ಪಂಕ್ತಿಯೊಳಗೆ ಕುಳಿತಾ
ನಿಜ ನಿರ್ಮಲ ಸುಜ್ಞಾನ ಧ್ಯಾನದಿಂದ
ಜ್ಞಾನಪಕ್ವಾದ ಮಾನವುಳ್ಳ
ಸುಜನ ಶಿರೋಮಣಿ ವಾದಿರಾಜನು ತಾ
ನಿಜವಾಗಿ ಬೊಮ್ಮಾಂಡ ಪುರಾಣ ಸಾಧಕದಿಂದ
ಅಜಪದ ಸಲ್ವದು ಲೇಶ ಸಂಶಯಬೇಡಿ
ನಿಜ ನಿಜ ನಿಜವೆಂದು ನಿತ್ಯದಿ ಕೊಂಡಾಡಿ೪
ಆದಿತಾಳ
ಮನಶುದ್ಧರಾಗಿ ಮಾಧವನಂಘ್ರಿಯನು
ದಿನ ದಿನದಲ್ಲಿ ನಂಬಿ ಕೊಂಡಿಪ್ಪರೆ
ಅನವರತಾನಂದ ಗುರು ಮಧ್ವರಾಯರ ದಿವ್ಯ
ವನಜ ಪಾದಂಗಳ ಸ್ಮರಿಸಲು
ಹನುಮೇಶ ನಮ್ಮ ಸಿರಿ ವಿಜಯವಿಠ್ಠಲ ತಾನು
ಮುನಿವಾದಿರಾಜರು ಸಾಮಾನ್ಯರೆಂತೆಂದು
ಎಣಿಸಿದವರನ್ನು ಘನವಾಗಿ ಶಿಕ್ಷಿಪ
ಇನತನೂಧ್ಬವ ಕೋಪದಿಂದೀ ಕಾರಣ ಮಹಿಮೆ
ಯನು ಕೊಂಡಾಡಿ ಅನುದಿನ ಸುಜನರು ೫
ಜತೆ
ಮೋದ ತೀರ್ಥ ಮತ ಸೇನಾಧಿಪತಿಯಾದ
ವಾದಿರಾಜ ಮುನಿಯು ವಿಜಯವಿಠ್ಠಲದಾಸಾ೬

ಜ್ಷಾನ, ಭಕ್ತಿ, ವೈರಾಗ್ಯಗಳು ಸಾಧನೆಗೆ

೭೦
ಧ್ರುವತಾಳ
ಮಾನಸ ಪೂಜೆ ಮಾಡು ಧ್ಯಾನ ಪೂರ್ವಕದಿಂದ
ಜ್ಞಾನ ಲೋಚನದಲ್ಲಿ ನೀ ನಡೆದು ನಡೆದು
ಶ್ವಾನ ಸೂಕರ ನಾನಾ ಯೋನಿಗಳಲ್ಲಿ ಬಂದ
ಹೀನಾಯ ಕಳೆದು ಮುಂದಿನ ಜನನವಳಿದು
ಮಾಣು ಪ್ರಾರಬ್ಧವ ಕಾಣಿಸು ಮತಿ ಮಾರ್ಗ
ಮೇಣು ಸಾಧನವಕ್ಕುದಾಸೀನವ ಮಾಡದಲೆ
ಮಾನವಾಧೀಶ ನಮ್ಮ ವಿಜಯ ವಿಠಲನ್ನ
ಏನಾದರು ಬಿಡದೆ ನೀ ನೋಡುವುದು ಮನುಜಾ ೧
ಮಟ್ಟತಾಳ
ತತ್ವ ತಾರತಮ್ಯ ತಾತ್ಪರ್ಯವು ತಿಳಿದು
ಸತ್ವಗುಣದಲ್ಲಿ ಸತ್ಯದಲ್ಲಿ ನಡೆದು
ನಿತ್ಯವಧಿಕ ಜ್ಞಾನ ಭಕ್ತಿ ವೈರಾಗ್ಯದ
ಉತ್ತಮೋತ್ತಮನಾಗಿ ಉತ್ತರೋತ್ತರದಲ್ಲಿ
ಚಿತ್ತದ ಮಧ್ಯದಲ್ಲಿ ಚಿತ್ತಜಪಿತನನ್ನು
ಸ್ತೊತ್ರವ ನೆಸಗುತ್ತ ಆತ್ಮನಿರ್ಮಳನಾಗು
ಸಾತ್ವಿಕ ದೈವವೆ ವಿಜಯ ವಿಠಲ ಸ
ರ್ವೋತ್ತಮನೆಂದು ಸಾರುತ್ತ ಸಂತತದಲ್ಲಿ ೨
ರೂಪಕ ತಾಳ
ಅವಲೋಕ ವಾಗದೆ ನಾಸವನು ನೋಡಿ ಕೊಳುತಾ
ಗ್ರೀವನು ನಿಲ್ಲಿಸಿ ದೇಹವನ್ನು ಚಂಚಲಿಸದೆ
ಪವನಾದಿಗೆ ನಮಿಸಿ ಹವಣಿಸಿ ಪದುಮಾಸ
ನವನಿಟ್ಟ ಲೌಕಿಕ ತವಕದಿಂದಲಿ ತೊರೆದು
ಭವ ಮನದಲ್ಲಿ ಶ್ರೀಧವ ವಿಜಯ ವಿಠಲನ
ನವ ಕುಸುಮ ಚರಣವ ನೋಡು
ಹರಿಯ ಮಹಿಮೆಯೆಂತು ಕರದೊಯ್ಯೆ ಪು
ಷ್ಕರನ ಯಮನದೂತರಂದು ನರಕವೇ ಬತ್ತಿಪೋಯಿತು ೩
ಝಂಪೆತಾಳ
ದೇಹ ಜೀವಾಂಗುಟಾ ತತು ಪರಿಮಿತಾ
ಈ ಹ್ಯದು ಹೃದಯ ಸ್ಥಾನದಲ್ಲಿ ಬಿಂಬಾ
ಈ ಹದನವನು ತಿಳಿದು ಅಧೋಮುಖಾವಾದಂಬು
ರೂಹಷ್ಟ ಷಟದಳಾರುಣ ಶುಕ್ಲವರಿದೂ
ಮಹ ನಾಡಿಯ ಮೂಲಾ ಧಾರಾಳವನು ನೋಡಿ
ಸಹ ವಾಯು ಬೀಜದಿಂದ ಕಮಲವನೆತ್ತಿ
ಮಿಹಿರಾ ಯೆಂಬೊ ಜ್ಞಾನದಿಂದಲಿ ಅರಳಿಸಿ
ಶ್ರೀ ಹರಿಯ ಕರ್ನಿಕೆ ಮಧ್ಯದಲ್ಲಿ ಕಂಡು
ತ್ರಾಹಿ ತ್ರಾಹಿಯೆಂದು ವಿಜಯ ವಿಠಲಗೆರಗಿ
ದೇಹಿ ಎನುತಲಿ ತತ್ವರನು ಕೊಂಡಾಡೊ ೪
ತ್ರಿವಿಡಿ ತಾಳ
ಏಕಾಂತಧ್ಯಾನವ ಕೈಕೊಂಡು ದ್ವಾರಗಳಾ
ನೇಕ ಬಗೆಯಿಂದ (ನಿ) ವಿರೋಧಿಸಿ
ಸಾಕಾರ ಸಕ್ರೀಯಾ ಲೌಕೀಕ ವಸ್ತದ
ಆಕಾರವನು ದ್ವಯ ಸ್ಥಳದಲರಿದೂ
ಜೋಕೆಯಿಂದಲಿ ಜೀವಾಂತರ ಕಳೆಯನು ತಂದು
ಲೋಕ ಮೋಹನವಾದ ಮೂರ್ತಿಯಲ್ಲಿ
ನೀ ಕೂಡಿಸಿ ನಿನ್ನ ಉಪಾಸ್ತಿ ದೈವವ
ಸಾಕು ಬೇಕೆಂದು ದೈನ್ಯದಿ ಪಾಡುತ್ತ
ಏಕ ಮೇವಾ ನಮ್ಮ ವಿಜಯ ವಿಠಲನ ಅ
ನೇಕ ರೂಪಗಳು ಪೂರ್ವಾಪಾರ ಸ್ಮರಿಸುತ್ತಾ ೫
ಅಟ್ಟತಾಳ
ಪರಮ ಗುರುವಿನ ಮೂರುತಿಯನ್ನು ಸ್ಮರಿಸಿ
ಇರದೆ ಮೊದಲಾ ವಿಗ್ರಹಗಳಾವ್ಹಾನ್ನಿಸಿ
ಶರಧಿ ತೆರೆಯಂತೆ ಐಕ್ಯವ ಚಿಂತಿಸಿ
ಕರೆದು ತನ್ನಯ ಗುರುವಿನ ಮೂರುತಿ ಯೊಳು
ಪರಮ ಗುರುವಿನ ಮೂರುತಿಯನ್ನು ಪೊಗಿಸಿ
ಪರಮ ಹರುಷದಿಂದ ಹಾರಿ ಹಿಗ್ಗುತಲಿನ್ನು
ಮರಿಯಾದೆ ನಿನ್ನಯ ವರ ಮೂರುತಿಯೊಳು
ಪರಿ ಚಿಂತಿಸು ಆ ಮೂರುತಿಯ ರೂಪ
ಪರಮ ಪುರುಷ ಹರಿ ವಿಜಯ ವಿಠಲನ ತ್ರಿ
ಕರಣ ಒಂದಾಗಿ ಬಿಂಬಾ ಮೂರುತಿಯ ಮಾಡೊ ೬
ಆದಿತಾಳ
ಧ್ಯಾನ ಶ್ಲೋಕವನ್ನು ಪೇಳು ಆನಂದದಾನಿಯನ್ನು
ಶ್ರೀ ನಖಪಿಡಿದು ಸುಂದರಾನನ ಪರಿಯಂತ
ಮಾನಸದಲಿ ನೋಡಿ ಧ್ಯಾನವನ್ನು ಮಾಡು ಒಂದೊಂದ
ನು ನಿರೀಕ್ಷಿಸಿ ದೃಢವನು ತಿಳಿದು ಖಚಿತದಲ್ಲಿ
ನೀನರಿದು ಧನ್ಯನಾಗು ಶ್ರೀನಿವಾಸನ ಗುಣವ
ಧ್ಯಾನ ಜ್ಞಾನ ಗಾನ ಸನ್ಮಾನ ಬಾಹ್ಯ ರಂಗದಲ್ಲಿ
ಏನೇನು ಇದ್ದ ಪೂಜೆಯನು ಮಾಡು ಒಳಗೆ ನಲಿದು
ಮಾನಸದಲ್ಲಿ ಸೃಜಿಸಿ ದೀನದಲ್ಲ್ಯುದ್ಧಾರನಾಗು
ಭಾನುಕೋಟಿ ತೇಜ ಕಾಯಾ ವಿಜಯ ವಿಠಲನಂಘ್ರಿ
ಧ್ಯಾನವನ್ನು ಬಿಡದಲೆ ಜಾಣನಾಗು ನಿರುತದಲ್ಲಿ ೭
ಜತೆ
ನಿಷ್ಕಾಮದಲಿ ಭಜಿಸಿ ನೀರೆರೆದು ಸುಖಬಡು
ನಿಷ್ಕಳಂಕ ರೂಪ ವಿಜಯ ವಿಠಲರೇಯಾ ೮

ಭಗವಂತನು ಭಕ್ತರ ಭಕ್ತಿಯನ್ನು

೭೧
ಧ್ರುವತಾಳ
ಮಾನಸ ಪೂಜೆಮಾಡು ಮನೋಹರ ಗುಣದಿಂದ
ಜ್ಞಾನ (ವೈರಾಗ್ಯ) ವಿಜ್ಞಾನ ತೈಲಧಾರಿ ಭಕುತಿ
ಧ್ಯಾನವಗೈಯೊ ಶ್ರುತಿಗೆ ಅಪ್ರಮಾಣ ಬರಲೀಯದೆ
ಕಾಣು ಶ್ರೀ ಹರಿಪಾದ ತಾತ್ವಿಕರೊಡನೆ
ಭಾನು ಮೊದಲದ ಚೇತನಾ ಚೇತನದಲ್ಲಿ
ಮಾಣದೆ ನೋಡಿ ತಿಳಿಯೊ ಪೂಜಾ ವಿಧವೊ
ದಾನವಾರಿಯ ರೂಪ “ಚಲಂಚಾಲಮೇವ ಚ”
ಆನಂದತೀರ್ಥರ ವಾಕ್ಯ ಸಿದ್ಧಾ
ಮಾನವ ಮಾನಿಗಳಿಗೆ ಅರ್ಚನೆಗೆ ಯೋಗ್ಯವಾದ
ಮೇಣು ಶಾಸ್ತ್ರೋಕ್ತಿಯಲ್ಲಿ ಪೇಳಿದ ಪ್ರತೀಕ
ನೀನೊಲಿದು ಕೇಳುವುದು ಚಲದಲ್ಲಿ ವಿವರಣ
ಆ ನಳಿನ ಸಂಭವ ತೃಣಜೀವಾಂತಾ
ಏಣಿಸಿ ನೋಡಲು ಇದರೊಳಗನೇಕ ಉಂಟು
ಗೌಣ ಅಧಿಕ ಅಧಿಷ್ಠಾನ ಗ್ರಹಿಸೊ
ಯೋನಿಭೇದದಿಂದ ಭಗವಂತನ ಪೂಜಾ ಫಲವೋ
ಜ್ಞಾನಿ ಚಿಂತಿಸು ಜಂಗಮ ಸ್ಥಾವರ ನಿತ್ಯ
ಕಾಣಿಸದಿಪ್ಪರು ಕೆಲವು ಬ್ರಹ್ಮಾದಿಗಳು
ಎಣಿಸಬೇಕು ಇವರ ಚರ್ಯತನವೂ
ಏನು ಉಳದದ್ದು ಆಗಮ ಉಕ್ತಿಲಿ ನಿ
ದಾನಿಸಿ ತಿಳಿಯಬೇಕು ಅಜ್ಞಾನದೃಷ್ಟಿ
ಅನಪರೊಕ್ಷಕಾಲ ಇನಿತು ಸಾ
ಧನಗೈಯೋ ಜ್ಞಾನ ಪ್ರಾಪುತವಾಗೆ ಪ್ರತ್ಯಕ್ಷವೋ
ಈ ನುಡಿ ಹಿಂಗಳೆದು ಉಳಿದ ವಿಚಾರ ಕೇಳು
ಪ್ರಾಣಿಗಳಲ್ಲಿ ಸಂಚರಿಸುತಿಹರೊ
ಅನಂತಾನಂತ ದ್ವಿವಿಧಕರ್ಮ ಮಾಡುತಿಪ್ಪರು
ಕಾಣಿಸುತಿಪ್ಪರು ನೋಡಿದರಾನೆ
ನೀನು ತಿಳಿಯೊ ಒಬ್ಬನಂತೆ ಕರ್ಮಗಳನು
(ಮಾ)ಮನದಿಂದಲಿ ಇದೆ ಪ್ರಮಾಣವೊ
ಧ್ಯಾನವ ಮಾಡು ಮನ ಚಲ ಮೂರುತಿಯ
ಏನೆಂಬೆ ಇದರೊಳು ತರತಮ್ಯವಕ್ಕು ಭರದಿ
ತಾನು ತನ್ನಯ ಗುರು ಸರ್ವಭೂತ
ಶೇಣಿಯಲ್ಲಿ ಅರ್ಚಿಸು ನಿಚೋಚ್ಚಭಾವನೆಮಾಡಿ
ಆನಂದವಾಗು ಸ್ಥಾವರದಲ್ಲಿ ಇನಿತು
ಧ್ಯಾನವ ಮಾಡು ಮನವೆ ಚಲ ಪ್ರತೀಕವ
ಮಾನಸಹಂಸ ನಮ್ಮ ವಿಜಯ ವಿಠ್ಠಲರೇಯನ
ಕಾಣುವ ಯೋಗ್ಯತೆ ಸಂಪಾದಿಸು ಸಜ್ಜನರ ಕೂಡ ೧
ಮಟ್ಟತಾಳ
ಚಲಪ್ರತೀಕದೊಳೂ ತರತಮ್ಯವೆ ಉಂಟು
ತಿಳಿದು ಜ್ಞಾನಿಗಳು ನಾನಾ ಪ್ರಕಾರ
ಕೆಲವು ಕಣ್ಣಿನಿಂದ ಹಸ್ತ ಶ್ರವಣದಿಂದ
ಕೆಲವು ಕೆಲವು ವಾಕ್ಯದಿಂದ ಗಾತ್ರದಿಂದ
ಕೆಲವು ಮನಸಿನಿಂದ ಹರಿಯ ತೃಪ್ತಿಯಬಡಿಸಿ
ಕೆಲಕಾಲ ಗುಣಿಸು ವಂದನಾದಿ ಕರ್ಮ
ಜಲ ತೃಣ ಮೃಷ್ಟಾನ್ನ ಇಷ್ಟವಾದವೆಲ್ಲ
ಜಲಜನಾಭನೆ ಕೈಕೊಂಬ ಕರುಣದಿಂದ
ಸ್ಥಳ ವಿಶೇಷದಿಂದ ನಾಮಭೀದಗಳಕ್ಕು
ಸುಲಭ ಮೂರುತಿ ನಮ್ಮ ವಿಜಯ ವಿಠ್ಠಲರೇಯನ
ಒಲಿಸಿ ಸಂತತ ಸರ್ವಸ್ಥಾನದಲ್ಲಿ ಪೂರ್ಣಾ ೨
ತ್ರಿವಿಡಿ ತಾಳ
ಪೂಜಿಸು ಈ ಪರಿ ಚಲಪ್ರತಿಮ ಮಧ್ಯ
ಮೂಜಗತ್ಪತಿ ಹರಿಯ ರೂಪವೆಂದೂ
ರಾಜೀವ ಪೀಠ ಮಿಕ್ಕಾ ದೇವತೆಗಳು (ಚೇತನಗಳು)
ಭೋಜನ ಮಾಡುವ ಚೇಷ್ಟಾದಿಯೂ
ರಾಜಿಸುತಿಪ್ಪವು ತದ್ಭಿನ್ನವಾಗಿವೆ
ಸೋಜಿಗವೇನಂಬೆ ಹರಿ ಅಧೀನ
ರಾಜ್ಯದೊಳಗೆ ಕೇಳು ಮುಖ್ಯ ಪುರುಷ ಕಾರಣ (ಕರುಣ)
ಸ್ತ್ರೀ ಜನ ಪ್ರಸೂತವಾದರೆಂಬೊದೇನಯ್ಯಾ
ಈ ಜೀವಿಗಳು ಮಾಡುವ ನಾನಾ ವ್ಯಾಪಾರ
ರಾಜೀವ ನೇತ್ರ ಮಾಳ್ಪನಾಗೆ
ಮಾಜದೆ ಖ್ಯಾತಿ ಜೀವರಿಗೆ ಬಂದದು ಕಾಣೊ
ಬೀಜಮಾತಿಲಿ ನೋಡೆ ಬಿಂಬ ಕ್ರೀಯಾ
ವಾಜಿ ಕಟ್ಟಿದ ತೇರು ಬಂದರಾದಡೆ ಪೆಸರು
ವಾಜಿಗೆ ಪೇಳರು ಬಂತೆಂಬವರು ತೇರು
ಭೂ ಜಡವಾದರೂ ಬೆಳಿಯಿತೆಂಬರು ಇದಕ್ಕೆ
ನೈಜವಾಗಿದ್ದ ಪರ್ಜನ್ಯಗೆ ಪೆಸರ್ಯಾಕೆ
ಈ ಜಗದೊಳಗೆ ಪ್ರಧಾನವಿದ್ದರು ಕೀರ್ತಿ
ರಾಜಿಸುತಿವೆ ಅಪ್ರಧಾನ ಮಾತು
ಸುಜನರು ಬಲ್ಲರು ಇದರ ವೃತ್ತಾಂತ ವಿ
ರಾಜದೇಹದತನಕ ಗುಣಿಸಿದರೂ
ಭೋಜಕುಲೋತ್ತಮ ಕೃಷ್ಣನಲ್ಲದೆ ಅನ್ಯ
ರಾಜನ್ಯ ಮಿಕ್ಕಾದ ಜೀವಿಗಳೆಲ್ಲರು
[ಆ]ಜನ್ಮವಾರಭ್ಯ ಇಂತು ತಿಳಿದು ಹೃತ್ಸ
ರೋಜದಲಿ ಇದ್ದ ಬಿಂಬನ್ನ ಪಾಡುವರು
ಕುಜನರು ಇದರಂತೆ ಕೊಂಡಾಡದಲೆ ಬಲು
ವ್ಯಾಜದಿಂದಲಿ ನರ ಕಸೇರುವರು
ರಾಜರಾಜೇಶ್ವರ ವಿಜಯ ವಿಠ್ಠಲ ಯೋಗ
ರಾಜೀವ ಮಿತ್ರನ್ನ ಚಿಂತಿಸು ಚೇತನದಲ್ಲಿ ೩
ಅಟ್ಟತಾಳ
ಇದರೊಳು ಅಜ್ಞಾನ ಜ್ಞಾನವಾಗಿದ್ದ ದ್ವಿ
ವಿಧವುಂಟು ಚಲಮೂರ್ತಿ ಒಂದಾನಂತವಾಗಿ
ಮುದದಿಂದ ಧೇನಿಸು ಚನ್ನಾಗಿ ತರುವಾಯ
ಸದಮಲ (ವಾಗಿ) ದಲಿಪ್ಪ ಅಚಲ ಪ್ರತಿಮೆಯನ್ನು
ಸುಧಿಯಿಂದ ತಿಳಿವುದು ಭಕುತಿಯಿಂದಲಿ ಬಲು
ವಿಧ ಪೂಜೆಗೊಳುತಿಪ್ಪ ವ್ಯಕ್ತಾ ವ್ಯಕ್ತಕಾಯ
ಉದಧಿ ಮೇಖಲದೊಳು ಅಪರೋಕ್ಷಿ ಬ್ರಾಹ್ಮಣ
ಮೊದಲಾದ ಚಾಂಡಾಲ ಜಾತಿಯವರು ಮು
ಟ್ಟಿದರೆ ದೋಷವಿಲ್ಲ ಸರ್ವದ ಪವಿತ್ರ
ಬುಧರಿಗೆ ಸಮ್ಮತ ಅವ್ಯಕ್ತ ಭಗವಂತ
ಅಧಿಷ್ಠಾನವುಳ್ಳ ಸಾಲಿಗ್ರಾಮ ಮುಖ್ಯ
ಸನ್ನಿಧಿಯಾಪ್ಪನು ಲೋಕಪಾವನ ಕಾಣೊ
ಸುದರಶನದಿಂದ ಅಭಿಧಾನ ಪ್ರಭೇದ
ಅಧಮಾಧಿಕಾರನು ಇದರಲ್ಲಿ ಅಪರೋಕ್ಷ
ಒದಗಿ ಕಾಂಬರು ಮತ್ತೆ ಅನ್ಯತ್ರದಲಿ ಉಂಟು
ಬದರಿ ದ್ವಾರಕಿ ಮಾಯಾ ಕಾಶಿ ಪ್ರಯಾಗ ಪ್ರ
ಪದವೀವಾ ಗಯಾಕ್ಷೇತ್ರ ಅಯೋಧ್ಯ ಜಗನ್ನಾಥ
ಯದುಗಿರಿ ತೋತಾದ್ರಿ ಶ್ರೀ ಮುಷ್ಣ ಮನ್ನಾರ
ಪದುಮನಾಭಾನಂತ ವೆಂಕ[ಟಾ]ಚಲ ಪುಣ್ಯ
ನಿಧಿಯಲಿ ನಿಲಿಸಿದ್ದ ಪ್ರತಿಮೆ ಕ್ರಮದಿಂದ
ವಿಧಿ ಶಂಭು ಮಿಗಿಲಾದವರು ಪೂಜೆಸಿದರೆನ್ನು
ಪದೋಪದಿಗೆ ಯಾತ್ರಿಮಾಡುತ ನೋಳ್ಪದು
ಇದರಂತೆ ನಿರೀಕ್ಷಿಸು ಮನುಷ್ಯಕೃತ ದಶ
ವಿಧಪ್ರತಿ ಮೆಗಳ ಸ್ವರ್ನಾದಿ ರೂಪವು
ಪದನಖ ಮಸ್ತಕ ಲಕ್ಷಣವಾಗಿದೆ
ಚದುರತೆಯಿಂದ ಪೂಜಿಸು ದ್ರವ್ಯಗಳಲ್ಲಿ
ಉದಯಾರ್ಕ ವಿಧು ತಾರಾಮಂಡಲ ಪಾವಕ
ನದಿ ನದಿ ಸಾಗರ ಪರ್ವತ ಸರೋವರ
ಹೃದಯ ಗಗನ ಸಮಸ್ತ ಸೂಕ್ಷ್ಮ ಸ್ಥೂಲ
ದಧಿ ಶಬ್ದ ಮುಂತಾದ ನಾನಾ ಅಚಲಗಳು
ಮೃದು ಮಾರ್ಗದಿಂದಾಗಲಿ ಮನೋಹರನಾಗು ಮು
ನ್ನಿದಕೆ ನಿಸ್ಸಂದೇಹ ಯೋಚಿಸು ನಿರುತಾ
ಸದಮಲ ಮೂರುತಿ ನಮ್ಮ ವಿಜಯ ವಿಠ್ಠಲರೇಯನ
ಪದಗಳ ಬಿಗಿದಪ್ಪ ಮನಸಿನಲಿ ನೆನೆದೂ ೪
ಆದಿತಾಳ
ಬೊಮ್ಮಾಂಡದೊಳಗಿನಿತು ವ್ಯಕ್ತಾವ್ಯಕ್ತ ಮೂರ್ತಿ
ಒಮ್ಮನದಲಿ ತಿಳಿ ತದಾಕಾರ ತದ್ವರ್ನ
ಚಿನ್ಮಮಯರೂಪನ್ನ ಅಚಲಕೋಟಿ ಮಧ್ಯ
ಒಮ್ಮೆ ಒಮ್ಮೆ ನೆನೆದು ನಾನಾ ಪೂಜೆಯ ಮಾಡು
ರಮ್ಮೆ ತತ್ವದತನಕ ಇನಿತು ರಚಿಸಿ ವೇಗ
ದುಮ್ಮಾನಗಳು ಎಲ್ಲ ಕಡಿಗೆ ನೂಕಲಿಬೇಕು
ಅಮ್ಮಮ್ಮ ಈ ಬಗೆ ಪೂಜಾ ಸಾಧನ ಧ್ಯಾನ
ನಿಮ್ಮ ನಿಮ್ಮ ಮನಸಿನಲಿ ಮಾಡಿರೊ ಎಂದು ಸಾರಿ
ಸನ್ಮತಿಯಿಂದಲಿ ಜನಕೆ ಪೇಳಲಿಬೇಕು
ತಮ್ಮ ತಮ್ಮ ಯೋಗ್ಯತ ಪೂರ್ವಿಕರುಮಾಡಿ
ಅಮ್ಮಿರಿತ ಲೋಕ ವಾಸವಾದರು ಮನವೆ
ಅಮ್ಮಿಶ್ರ ನೀನಾಗು ನೀಚವೃತ್ತಿಯ ಬಿಟ್ಟು
ಅಮ್ಮಹ ಭಕ್ತಿಲಿ ನಲಿನಲಿದಾಡು ಓಲಾಡು
ಬೊಮ್ಮನಯ್ಯಾ ನಮ್ಮ ವಿಜಯ ವಿಠ್ಠಲರೇಯ
ಸಮ್ಮೊಗವಾಗುವ ಸಂಚಿತಾಗಮ ಕಳೆದೂ ೫
ಜತೆ
ಚಲ ಅಚಲಾಂತರದಲಿ ನಿತ್ಯ ಸೇವಿಸು ಮಹಾ
ಬಲವಂತ ವಿಜಯ ವಿಠ್ಠಲ ನಾನಾ ರೂಪ ೬

ತಿರುಪತಿಯನ್ನು ಕುರಿತು ಅನೇಕ ಸುಳಾದಿಗಳನ್ನು

೫೬. ತಿರುಪತಿ
ಧ್ರುವತಾಳ
ಮಿರುಗುವ ಉರಗಗಿರಿಯ ಶಿಖರವನು ಕಂಡೆ ನಾ |
ಪರಮ ಧನ್ಯನಾದೆ ಗುರುಗಳ ಕರುಣದಿಂದ |
ಧರಣಿಯೊಳಗಿದಕೆಲ್ಲಿ ಸರಿಗಾಣೆ ನಾನಾ ಬಗೆ |
ಅರಿಸಿದರು ಸರ್ವಶ್ರುತಿಗಳಲ್ಲಿ ತಿಳಿದೂ |
ಅರರೆ ಮತ್ತಾವನೋ ಈ ಯಾತ್ರಿಯ ಪುಣ್ಯ |
ಬರೆದು ಕಡೆಗಂಡು ಗುಣಿಸೆಣಿಪನಾರು |
ತಿರುವೆಂಗಳಪ್ಪನಿಪ್ಪ ಕ್ಷೇತ್ರದ ಮಹಿಮೆಯನು |
ಇರಳು ಹಗಲು ವರ್ಣಿಸಲಿ ಸವೆಯದು |
ಸುರರು ಮೊದಲಾದವರು ರೂಪಾಂತರವ ತಾಳಿ |
ಹರುಷಬಡುವರು ನೋಡಿ ಜ್ಞಾನಿಗಳು |
ತರುಲತೆ ಖಗಮೃಗ ಜಲಚರಾದಿಗಳಾಗಿ |
ಚರಿಸುತಿಪ್ಪರು ಸಾಧನವ ಮಾಡುತಾ |
ದುರುಳ ಜನಕೆ ಇಲ್ಲನಂತ ಜನುಮಕ್ಕೆ |
ಕರುಣ ಶುದ್ಧ ಭಕ್ತಿ ಪುಟ್ಟದಯ್ಯಾ |
ಮರುಳೆ ದೊರೆತರೆ ಲೋಹದ ಮೇಲೆ ಹೇಮದ |
ಎರಕ ಹೊಯಿದಂತೆ ನಿಂದಿರಲರಿಯದು |
ವರ ತತ್ವ ತಾರತಮ್ಯದ ತಿಳಿದು ವಂದೆ ವಾ |
ಸರದೊಳಗೆ ಒಮ್ಮೆ ಈ ಗಿರಿಯನೆನಸೆ |
ದುರಿತರಾಶಿಗಳೆಲ್ಲ ಪರಿಹಾರವಾಗುವುದು |
ಪರಗತಿಗೆ ಬಲು ಸುಲಭ ಸಂತತದಲ್ಲಿ |
ಶರಣರಿ[ಗೆವ]ಜ್ರ ಪಂಜರ ವಿಜಯವಿಠಲ |
ಮೆರೆವವ ಬಹುಬಗೆಯಿಂದ ವರಗಳನೆ ಕೊಡುತ ೧
ಮಟ್ಟತಾಳ
ಕೋಡಗಲ್ಲಿನ ನೋಡೆ ಬಲದೇವನೆಂದು |
ಮಾಡಿದ ಬ್ರಹ್ಮಹತ್ಯಾ ಓಡಿಪೋಯಿತು ನಿಲ್ಲದೆ |
ಆಡಲೇನು ಇದಕೆ ಅನುಮಾನವೆ ಸಲ್ಲಾ |
ನಾಡೊಳಗೆ ಮಹ ಬಕುತಿ ದೊರೆಯದಲೆ |
ಕೂಡದು ಈ ಯಾತ್ರಿ [ಆ]ವನಾದರೇನು |
ಬಾಡಿ ಒಣಗಿ ಪೋದ ಮರಕೆ ನದಿಯ ಉದಕ |
ಗೂಡೆಯಿಂದಲಿ ಯೆತ್ತಿ ಕಾಲವ ಕಳೆದಂತೆ |
ಮೂಢ ಜ್ಞಾನಿಗಳಾಗಿ ಪರಿಪರಿಯಿಂದ |
ಕೊಂಡಾಡಿ ಕುಣಿಯಲೇನು ಗತಿ ಸಾಧನವಲ್ಲ |
ಕೇಡಿಲ್ಲದ ದೈವ ವಿಜಯವಿಠಲರೇಯ |
ಪಾಡಿದ ಮನುಜಂಗೆ ಪಾವನ ಮತಿಯೀವ ೨
ರೂಪಕತಾಳ
ಹರಿದ್ರವರೂಪದಲಿ ಕಪಿಲತೀರ್ಥದಲ್ಲಿ |
ನಿರುತದಲ್ಲಿ ಇಪ್ಪ ತನ್ನಾಮಕನಾಗಿ |
ಸ್ಮರಿಸಿ ನೈಮಿತ್ಯಕ ತನ್ನ ವಂಶಗಳ ಉದ್ಧರಿಸಿ |
ಭೂಸುರರ ಸುಖ ಬಡಿಸಿ ದಾನಗಳಿಂದ |
ಗುರು ಹಿರಿಯರ ಸಹಿತ ಗಿರಿಯ [ಪ್ರ]ದೇಶಕ್ಕೆ |
ತೆರಳಿ ಬಂದೂ ನಿಂದು ಸೌಪಾನದೆಡೆಯಲ್ಲಿ |
ವರ ಸಾಲಿಗ್ರಾಮವನು ಮುಂಭಾಗದಲಿ ಇಟ್ಟು |
ಕರವ ಜೋಡಿಸಿ ಸಾಷ್ಟಾಂಗ ನಮಸ್ಕಾರವನು |
ಭರದಿಂದ ಮಾಡಿ ಕುಳಿತು ಉತ್ತಮವಾದ |
ಹರಿಕಥೆಯನು ಕೇಳಿ ತತ್ವಗಳನುಸರಿಸಿ |
ಪರಮ ಭಾಗವತರಿಂದ ಗಾಯನವ ಲಾಲಿಸಿ |
ಕರೆದು ಸಜ್ಜನರ ಸಂಗಡಲೆ ಕುಣಿದು |
ಬರುತಾ ನೂರು ನೂರು ಪಾವಟಿಗಿಯಲ್ಲಿದೇ |
ತೆರದಿಂದ ಮಾಡುತ ತಡವಾಗದಂತೆ[ಯೇ] |
ನರಸಿಂಹ ಮೂರುತಿಯ ದರುಶನವು ಮಾಡಿ ಸು |
ದರುಶನ ತೀರ್ಥದಲ್ಲಿ ಮಿಂದು ತುತಿಸಿ ನಿಂದು |
ಕರತಳ ಶಬ್ದದಲಿ ಹೋಯೆಂದು ನಲಿದಾಡೆ |
ಸಿರಿವರ[ತ]ರರಸಾ ತಿರ್ಮಲ ವಿಜಯವಿಠಲ |
ಪರದೈವವೆಂದು ಪೊಗಳಿ ಹಿಗ್ಗಲಿಬೇಕು ೩
ಝಂಪೆತಾಳ
ಏರುತೇರುತ ಬಂದು ಮಾರುತನ್ನ ನೋಡಿ ಮಹ |
ದ್ವಾರದ ಬಳಿಯ ಸಾರ್ದು ಅತಿ ಮೋದದಿ |
ಸಾರಿ ಶ್ರೀ ಹರಿಯ ಗುಣಾವಳಿಯ ಉಚ್ಚರಿಸಿ |
ಈರಾರು ಪ್ರದಕ್ಷಿಣೆಯನು ಮಾಡಿ |
ಭೋರನೆ ಮತಿಕೊಡುವ ಸ್ವಾಮಿ ಪುಷ್ಕರಣಿಯಾ |
ತೀರದಲಿ ನಿಂದು ಸ್ನಾನವನು ಮಾಡಿ |
ಚಾರು ಮನಸಿಂದ ಸವ್ಯದಲಿ ಬಂದು ವಿ |
ಸ್ತಾರ ಭಕುತಿಯಲ್ಲಿ ದ್ವಾರವನೆ ಪೊಕ್ಕು |
ಭೂರಮಣನ ಪಾದ ನಿರೀಕ್ಷಿಸಿ ಆಮೇಲೆ |
ಆರಾಧಿಸು ಗುಪ್ತದಲಿ ಬಿಡದೆ |
ಮೀರಿದ ಮಹಾ ಮೂರ್ತಿ ವಿಜಯವಿಠಲ ವೆಂಕಟ |
ಸೂರೆಗಾಣೊ ಕಂಡ ಜನರಿಗೆ ಪ್ರತಿದಿನ ೪
ತ್ರಿವಿಡಿತಾಳ
ಮೂರೊಂದು ಬೀದಿಯಾ ತಿರುಗಿ ವೆಂಕಟನ ಮಹಾ |
ದ್ವಾರವ ಪೊಕ್ಕು ಗರುಡಗಂಬದ ಬಳಿಯಾ |
ಪಾರಮಾರ್ಥಕನಾಗಿ ಕುಳಿತು ಹರಿಯಾ ವ್ಯಾ |
ಪಾರವ ಚಿಂತಿಸು ಅಡಿಗಡಿಗೆ |
ತಾರತಮ್ಯದಿಂದ ಸುರರಾದಿ ಗುಣ ತಿಳಿದು |
ಚಾರು ಪೀಠಾವರ್ಣ ಪೂಜೆ ವಿಧವ |
ಪೂರೈಸಿ ಮಾಡಿ ಸಮ್ಮೊಗದಿ ನಿಂದು ಬಂ |
ಗಾರ ಬಾಗಿಲನೆ ಪ್ರವೇಶ ಮಾಡಿ |
ಹಾರೈಸು ಅಲ್ಲಿಂದ ಹೊನ್ನ ಹೊಸ್ತಲ ಬಳಿಯ |
ಸೇರಿ ಸಾಕಲ್ಯದಲಿ ಹರಿಮೂರ್ತಿಯಾ |
ಕಾರಣಿಕವ ಗ್ರಹಿಸಿ ಗೋಳಕವ ಚಿಂತಿಸಿ |
ಗಾರು ಮಾಡದೆ ನಿನ್ನ ಒಳಗೆ ಇಪ್ಪ |
ಮೂರುತಿಯಾ ಇಟ್ಟು ಏಕಿಭೂತವೆಂದು |
ನಾರಾಯಣನ ವ್ಯಾಪ್ತತ್ವ ತಿಳಿದು |
ಶಾರದ ಪತಿ ಪ್ರೀಯ ವಿಜವಿಠಲ ತಿಮ್ಮನ |
ಪಾರ ಗುಣಗಳು ತುತಿಸಿ ಕೊಂಡಾಡಿ ೫
ಅಟ್ಟತಾಳ
ರಾಜರಾಜೇಶ್ವರನೆ ರಣರಂಗ ಧೈರ್ಯನೆ |
ತೇಜೋಮಯ ಕಾಯ ಬೊಮ್ಮಾದಿಗಳಿಂದ |
ಪೂಜಿತ ಪುಣ್ಯಶ್ಲೋಕ ಮುಕ್ತಿ |
ಬೀಜನೇ ಭವದೂರ ಬಲು ಲೀಲಾವಿನೋದ |
ಮೂಜಗತ್ಪತಿ ಮೂಲ ಪುರುಷ ಪರಮೇಶ |
ಸೋಜಿಗ ತೋರುವ ಸಿದ್ಧಾಂತ ಮಹಿಮಾ ಸ |
ರೋಜ ನಯನ ಬಲಜ್ಞಾನಾನಂದ ಪೂರ್ಣ |
ಹೇ ಜಲಧರವರ್ನ ಹೇಮಾಂಬರಧರ |
ರಾಜರಾಜರನುತ ರಾಗ ವಿದೂರಾಯೋ |
ನಿಜ ನಿಶ್ಚಿಂತ ನಿರ್ಮಳಾ ನಿತ್ಯ ತೃಪ್ತ ಪ್ರ |
ಯೋಜನವಿಲ್ಲದೆ ಜಗವ ಪುಟ್ಟಿಸುವ ವಿ |
ರಾಜಿತ ಸತ್ಕೀರ್ತಿ ದೈತ್ಯವಿದಾರಣ |
ಭೋಜಾ ಕುಲೋತ್ತುಮ ವಿಜಯವಿಠಲ ವೆಂಕಟ |
ಮಾಜದೆ ಪೊರೆಯೆಂದು ಧ್ಯಾನ ಮಾಡುತಲಿರು ೬
ಆದಿತಾಳ
ಸರ್ಪಗಿರಿಯ ಯಾತ್ರಿ ಮುಪ್ಪರಾರಿ ಗರಿದು |
ತಪ್ಪದೆ ಮಾಡಲಾಗಿ ಬಪ್ಪುಪ್ಪಗೊಂಬುವ ಹರಿ |
ಅಪ್ರೀತಿಯಿಲ್ಲದ ತಪ್ಪುಗಳಿರೆ ಒಲಿದು |
ಕಪ್ಪು ಉಳಿಯದಂತೆ ಅಪಹರಿಸಿ ಇವನಾ |
ಅಪ್ಪಡಿಯಾಗಿ ಸಾಕಿ ಅಪವರ್ಗವ ಕೊಡುವ |
ಒಪ್ಪಿಡಿ ಅವಲಿಗೆ ಭಾಗ್ಯವಿತ್ತನ್ನ ಪಾದಾ |
ರೆಪ್ಪಿ ಹಾಕದೆ ನೋಡಿ ಮನದಲ್ಲಿ ನಿಲಿಸೋದು |
ಸುಪ್ರಕಾಶ ನಮ್ಮ ವಿಜಯವಿಠಲ ವೆಂಕಟ |
ನಿಪ್ಪ ಕ್ಷೇತ್ರದ ಮಹಿಮೆ ನಾನಾ ಬಗಿ ವರ್ಣನೆ ೭
ಜತೆ
ಕಾಮಿತಾರ್ಥಪ್ರದಾಯಕ ತಿರುವೆಂಗಳ |
ಸ್ವಾಮಿ ವೆಂಕಟರನ್ನ ವಿಜಯವಿಠಲನೊಲಿವ ೮

ತಿರುಪತಿಯ ಶ್ರೀನಿವಾಸನು ಸ್ವಯಂ

೫೭. ತಿರುಪತಿ
ರಾಗ:ಭೈರವಿ
ಧ್ರುವತಾಳ
ಮೀನನಾಗಿ ಕಮಠನಾಗಿ ಸೂಕರನಾಗಿ |
ಮಾನವನಾಗಿ ಮತ್ತೆ ಸಿಂಗನಾಗಿ |
ದಾನವ ಬೇಡುವನಾಗಿ ಇದನೆ [ಈ]ವನಾಗಿ ಕಾ |
ನನ ವಾಸಿಯಾಗಿ ಗೊಲ್ಲನಾಗಿ ದಿಗಂಬ |
ರನಾಗಿ ರಾವುತನಾಗಿ ತಿರಿಗಿ ತಿರಿಗಿ |
ನಾನಿಪ್ಪೆ ಬಲು ಜನುಮಾ ಧರಿಸಿ ಬಿಡದೆ |
ಈ ನಾಗಾಗಿರಿಯಲ್ಲಿ ನಿನ್ನ ಸೇವೆಗೋಸುಗ |
ಜ್ಞಾನ ಪೂರ್ವಕದಿಂದ ಸಂಚರಿಸುವೆ |
ಶ್ರೀನಾಥ ಭೂನಾಥ ಸುರನಾಥ ಜಗನ್ನಾಥ |
ದೀನ ಬಾಂಧವ ದಾನವಸೂದನ |
ಏನೆಂಬೆನಯ್ಯಾ ಎನಗಿದೆ ಕರುಣಿಪುದು |
ನಿನೀದರಿವಿನಾ ವರವೆಗ್ಗಳ |
ಧ್ಯಾನಾದಲ್ಲಿ ಬೇಡಿ[ದೆ]ನೊ ನಿನ್ನ ಪಾದವೆ ಸಾಕ್ಷಿ |
ಹಾನಿ ವೃದ್ಧಿಗಳಿಗೆ ಅಂಜುವುದೇನೊ |
ನೀನೆ ತಂದೆಯಾದರೆ ತನಗೆ ತಾನೆ ಬಾರವು |
ಅನಿರ್ಜರಾದ್ಯರಿಗೆ ಒಮ್ಯಾದರೂ |
ಧೇನು ಕರಿಯುವುದೆ ಬಂದು ಬಾಯೊಳಗೆ ಪಾಲು |
ತಾನಾಗಿ ಕರವುತಿರೆ ಗುಟಕರಿಸಾದೆ |
ಓಣಿಯೊಳಗೆ ಪರಿವಾ ಕುಶ್ಚಿತೋದ ಬಯಸಿ |
ಪಾಣಿಯಲ್ಲಿ ಪಿಡಿದು ಕುಡಿವ ಮಂದ |
ಮಾನವ ನಾನಾಹೆ ನಿನ್ನ ದಾಸರ ಚರಣ |
ರೇಣು ಸೋಕಿದ ಮೇಲೆ ಎಂದಾದರೂ |
ಶ್ರೀನಿವಾಸಾದ್ರಿವಾಸ ವಿಜಯವಿಠಲ ವೆಂಕಟ |
ಪ್ರಾಣನಾಗಿಪ್ಪ ಪ್ರೀಯಂಗೆ ಪ್ರೀಯ ೧
ಮಟ್ಟತಾಳ
ಆವಾವ ಜನುಮಗಳು ಬಂದರಾದಡೆ ನಿನ್ನ |
ಸೇವೆಯೊಳಗಿಪ್ಪ ಜ್ಞಾನವೆ ಪಾಲಿಪದು |
ಪೂವು ಫಲ ಮಿಕ್ಕಾ ದ್ರವ್ಯಂಗಳಿಂದಲಿ |
ದೇವ ನಿನ್ನ ಪದಕೆ ಸಲ್ಲುವಂತೆ ಮಾಡಿ |
ಪಾವನ ಮಾಡುವದು ಪತಿತನ ಉದ್ಧರಿಸಿ |
ಶ್ರೀವರ ತಿರುವೆಂಗಳ ವಿಜಯವಿಠಲ ಕೃಷ್ಣಾ |
ಕಾವಕರುಣನಿಧಿ ನೀಲಗಿರಿಯವಾಸ ೨
ತ್ರಿವಿಡಿತಾಳ
ದಯಮಾಡಿದೆನ್ನೊಡಿಯಾ ದಾಸಗೊಲಿದು ಬಂದು |
ಭಯವೆ ಬಿಡಿಸುತಿಪ್ಪ ಭವವೆಂಬ ಮಾರಿಯ |
ಭಯಕೆ ಒಳಗಾಗಿ ಇದ್ದ ಮಾನವಂಗೆ ಅ |
ಭಯವಿತ್ತು ವಿಪತ್ತು ಪರಿಹರಿಸುವೆ |
ತ್ರಯಲೋಕದೊಳು ನಿನಗೆ ಈಡಾರು ಭಕ್ತರ |
ಹುಯಲಿಗೆ ಒದಗಿ ಬಂದಾಕ್ಷಣದಲ್ಲಿ |
ಕ್ರಯವಾಗಗೊಡದೆಂತೆ ಅವನ ಪಾಲಿಸುವೆ ಅ |
ಕ್ಷಯ ಮೂರುತಿ ನಿನ್ನ ಶಕ್ತಿ ಏನು ಬಲ್ಲೆ |
ಬಯಲಾಗಿ ಪೋಗೋವು ಕ್ರೂರ ಗ್ರಹಗಳೆಲ್ಲ |
ಅ[ಯ]ತವಾದರೆ ನಿಮಿಷಮಾತ್ರದಲ್ಲಿ |
ಜಯ ಜಯ ಜಯದೇವ ನಿನ್ನವರಿಗೆ ಅಪ |
ಜಯ ಉಂಟೆನೋ ನೂರು ಕಲ್ಪವಾಗೆ |
ಭಯದೂರ ವೆಂಕಟಗಿರಿವಾಸ ಸಿರಿ ವಿ |
ಜಯವಿಠಲರೇಯಾ ಸತ್ಕೀರ್ತಿಪುರುಷ ೩
ಅಟ್ಟತಾಳ
ದೇಶದೊಳಗೆ ನಿನ್ನ ದಾಸನೆಂದರು ದಾವದಾವದು ಭಯವೊ |
ಲೇಶ ಬಿಡದೆ ಎನ್ನ ಪಾಲಿಸಿದರೆ ಲೇಸು |
ಲೇಸು ನಿನಗೆಂಬುದು ಭೂಷಣ ಒಪ್ಪುವುದು ಸಕಲ ಸುರರೊಳು |
ದಾಸರ ಪೊರೆವ ಕರುಣಿ ಎಂದು |
ಏಸೇಸು ಕಲ್ಪಕ್ಕೆ ಇದಕನ್ಯವಾದ |
ಕೋಶ ಮತ್ತಾವದು ಕಾಣೆನೊ |
ಶೇಷಾದ್ರಿವೆಂಕಟ ವಿಜಯವಿಠಲರೇಯಾ |
ಕೇಶವ ಕ್ಲೇಶವಿನಾಶನ ೪
ಆದಿತಾಳ
ಇಂದೆಯಾಗಲಿ ಮುಂದೆಯಾಗಲಿ |
ಎಂದೆಂದಿಗೆಯಾದರು ಒಂದೊಂದಾಗಿ ಅನೇಕ ಜನುಮ |
ಬಂದು ಪ್ರಾಪುತವಾದರು ಇಂದಿರೇಶ ನಿನ್ನಂಘ್ರಿ |
ಪೊಂದೋದು ಜ್ಞಾ[ನ] ದೃಢವಿರಲಿ |
ಮಂದನಾಗಿ ದುರ್ಜನರೊಡನೆ |
ಸಂದುವ ಮಾರ್ಗವ ಕೊಡದಿರು |
ಸುಂದರ ಗಿರಿವಾಸ ವೆಂಕಟಾದ್ರಿ ವಿಜಯವಿಠಲ ದಾತಾರ |
ವಂದಿಸುವೆ ನಿತ್ಯದಲ್ಲಿ ಸುಖ ಸಿಂಧುನೊಳಗಿಡು ನಿನ್ನಾ ೫
ಜತೆ
ರಕ್ಷಿಯಾದರು ವೀರವೈಷ್ಣವರ ಪಾದಕಾಹೆ |
ಮೋಕ್ಷಾದ್ರಿ ವೆಂಕಟವಿಜಯವಿಠಲರೇಯ ೬

ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತದಲ್ಲಿ

೭೨
ಧ್ರುವತಾಳ
ಮೀಸಿಯಾ ತಿದ್ದಿ ಬಹು ಬೆಳಸಿದರಂಜುವೆನೆ
ಪಾಷಾಣ ಪೊತ್ತು ನಿಂದಾರೆ ಅಂಜುವೆನೆ
ವಿಷಾಣ ಕೋಟಿಯನ್ನು ಮನೆ ಮಾಡಿದರಂಜೆನೊ
ಘೋಷವೆಬ್ಬಿಸಿ ಚೀರಿದರಂಜೆನೊ
ವೇಷಾ ಚೊಕ್ಕಟ ತೋರಿದರಂಜೆನೊ
ಭೂಸುರ ಧರ್ಮ ತೋರಿದಂಜೆನೊ
ಕೇಶ ಜಡೆಗಟ್ಟಿ ಬಿಲ್ಲುಧರಿಸಾಲಂಜೆ
ಭೇಷಜವನ್ನೆ ತೋರಿ ಉರಿಯ ನುಂಗಿದರಂಜೆ
ಕೂಸಾಗಿ ವಂಚನೆ ಮಾಡಿದರಂಜೆನೊ
ದೋಷಕ್ಕೆ ಹೇಸಾದೆ ಖಡ್ಗ ಝಳಪಿಸಾಲಂಜೆ
ಏಸೊಂದು ರೂಪಗಳು ಧರಿಸಾಲಂಜೆ
ವಾಸುದೇವ ನಿನ್ನ ಭೀತಿಗಾನಂಜೆನೊ
ಈ ಶರೀರವೆ ನಿನ್ನಾಧೀನವೆಂಬೊದೊಂದೆ
ಏಸೇಸು ಬಗೆ ಕರ್ಮ ಆನೆ ಉಣಲಿಬೇಕು
ದಾಸಾನಾದ ಕಾಲಕ್ಕೂ ತೊಲಗದಯ್ಯಾ
ಲೇಸಾಗಿ ನೀನೆ ಒಲಿದು ಕರುಣಾ ಮಾಡಿದರಾಗೆ
ಈ ಸಮಸ್ತ ಗರ್ಭದಲಿ ಜನಿಸಿ ಬಂದು
ಲೇಶಾಲೇಶವಾದರು ಕರ್ಮ ಉಣಲಿಯಿತ್ತು
ನಾಶಗೈಸುವೆನೆಂಬ ಪ್ರತಾಪ ಘನವಕ್ಕು
ಶೇಷಶಾಯಿ ನಮ್ಮ ವಿಜಯ ವಿಠ್ಠಲ ನಿನ್ನ
ಈಶ ತನಕೆ ಅಂಜಿ ತಲೆಬಾಗಿತುತಿಸಬೇಕು ೧
ಮಟ್ಟತಾಳ
ನಿನಗಂಜುವನಾರು ನಿನಗಳಕುವನಾರು
ನಿನಗೆ ಹಸ್ತವನೆತ್ತಿ ಮಣಿದು ಪಾಡುವನಾರೂ
ನಿನಗೋಸುಗ ನಿತ್ಯ ವನ ಭವನ ಭುವನಾ
ದಿನ ದಿನ ತಿರುಗಿ ಸುಮ್ಮನೆ ಅರಸುವನಾರೂ
ವನಜ ಜಾಂಡದೊಳಗೆ ನಿನಗೆ ಪೂರ್ಣವಾಗಿ
ಗುಣಗಣಗಳ ಪೇಳಿ ದಣಕೊಂಬುವನಾರೂ
ಮುನಿ ಮೊದಲಾದವರು ಚಿನುಮಯ ಮೂರುತಿ
ಅಣು ಮಹತ್ತು ನಿನ್ನನೆ ಬಾಹಿರದಲ್ಲಿ
ಕುಣಿಸಿ ಕುಣಿಸಿ ನೋಡಿ ಮಿನುಗುವ ಅಪರೋಕ್ಷಕೆ ಕಾ
ರಣವಲ್ಲವೆಂದೂ ಅನುಭವಿಸಿದ್ದರೂ ಯೋ
ಚನೆ ಮಾಡಿ ಸಾರುತಿರೆ ಮನದಲಿ ತಿಳಿದು ಆ
[ನಿ]ನಿತು ಉತ್ತರನಿತ್ತೆ ಜನುಮಾ ಜನುಮಾ
ಜನಕ ವಿಜಯ ವಿಠ್ಠಲ ಎನ್ನು
ಜನನ ನೀಗೂವ ಮೂರುತಿ ನೀನಲ್ಲವು ಕಾಣೋ
ತ್ರಿವಿಡಿ ತಾಳ
ಅಧಿ ದೈವದವನಲ್ಲಾ ಅಧಿ ಭೂತದವನಲ್ಲಾ
ಪದೋಪದಿಗೆ ಹೊರಗೆ ತೋರುವನಲ್ಲಾ
ಒದಗಿ ನಾನಾ ಸೌಖ್ಯ ಉಣಿಸುವನೆ ನೀನಲ್ಲಾ
ಮುದದಿಂದ ಸ್ವ[ಪ್ನ]ದಲಿ ಪೊಳೆದವ ನೀನಲ್ಲ
ಇದರ ತರುವಾಯ ಮತ್ತೊಂದುಂಟು ಸ್ಥೂಲ
ಹೃದಯದಲ್ಲಿ ಸುಳಿದು ನಿಂದಾಡಿದವನ¯್ಲ
ಸದಮಲ ಮೂರುತಿ ಎನಗೊಂದು ನಿಜವಲ್ಲಾ
ಇದರಿಂದ ಏನಾಗುವ ಕಾರ್ಯವಾದರೂ
ನಿದರುಶನವಾಗಲಿಲ್ಲಾ ಹರಿಯೇ
ಅದು ಭೂತ ದೈವವೆ ತಿರಿಗಿ ತಿರಿಗಿ ನೀನೆ
ಎದಿರಿಲಿ ನಿಂದು ಈ ಬಗೆ ರೂಪವ
ಉದಯಾಸ್ತಾಮಾನದಲ್ಲಿ ಪೂಜಿಸು ಎನುತಂಜಿ
ಸಿದರೆ ನಾನಂಜುವನಲ್ಲಾ ಕಾಣೊ
ಯದುಕುಲೋತ್ತಮ ನಿನ್ನ ರೂಪಗಳಿಗೆ
ಮೊದಲಾರಭ್ಯ ಕಡಿಗೆ ಭೇದವಿಲ್ಲಾ
ವಿಧಿ ಇಂತು ಇರಲಿಕ್ಕೆ ಏನು ಕಾರಣವೆನೆ
ಮದಮತ್ಸರ ರಹಿತಾ ಜ್ಞಾನಿಗಳೂ
ಹೃದಯದಲಿ ತಿಳಿದು ಪೇಳೀ ಪರಿ ಕಥೆ
ವಿದಿತವಾಗಿದೆ ನೋಡು ಆಗಮದಲ್ಲಿ
ಚದುರಾ ಮೂರುತಿ ನಮ್ಮ ವಿಜಯ ವಿಠ್ಠಲ ನಿನ್ನ
ಪದಕೆ ಬೀಳುವೆನಯ್ಯಾ ಪದವಿಗೆ ಪಥ ಬೇಕೂ ೩
ಅಟ್ಟತಾಳ
ಅನಂತಕಾಲಕ್ಕು ಲಿಂಗಾದಿ ವಿಡಿದು
ಅನಂತರೂಪಗಳು ಒಂದೊಂದು ಬಿಡದಲೆ
ಆನಂದದಿಂದಲಿ ನೋಡಿ ಕುಣಿದಾಡಿ
ಏನೇನು ಬಗೆಯಿಂದ ಪೂಜಿಸಿ ಪರಿ ಪರಿ
ಧ್ಯಾನ ಮಾಡಿದರಾಗೆ ಮಾನವಗೆ ಇದು ಬಿಂಬವಲ್ಲವೆಂದೂ
ಜ್ಞಾನವಂತರು ಪೇಳಿ ಸಾಧನ ಮಾಳ್ಪರು
ಆನೊಬ್ಬನೆ ಪೊಸಬಗೆ ಮಾಡಿದೆನೆ
ಶ್ರಿನಾಥ ಕೇಳೆಲೊ ಜಗದೊಳು ಪ್ರಸಿದ್ದ
ಭಾನು ಇಪ್ಪದು ಸತ್ಯಾ ಈತನ ಪ್ರಕಾಶ
ನಾನಾ ಲೋಕದಲಿ ತುಂಬಿದೆ ಸಮಸ್ತ
ಪ್ರಾಣಿಗಳಿಗೆ ಬಲು ಹಿತವಾಗಿ ನಿತ್ಯಾನು
ಷ್ಠಾನಕ್ಕೆ ಸಾಕ್ಷಿಭೂ[ತ]ವಾಗಿ ಇರುತಿದೆ
ಈ ನುಡಿ ನಿಜವೆಂಬೆ ಸಕಲರು ಬಲ್ಲದ್ದು
ಆ ನಳಿನ ಮಿತ್ರನಿದ್ದರೂ ನೇತ್ರಾಭಿ
ಮಾನಿಯಾದ ಚಕ್ಷುರ್ನಾಮಕ ಸೂರ್ಯನು
ತಾನಿಲ್ಲದಿರೆ ಸರ್ವ ಲೋಕದ ಪದಾರ್ಥ
ಕಾಣಿಸಿ ಕೊಡುವನೆ ಪಸಿದ್ಧ ಭಾಸ್ಕರ
ಸ್ಥಾನ ಭೇದದಿಂದ ವ್ಯಾಪಾರಂಗಳು ಭೇದ
ನೀನೆ ಮಾಡಿ ಇಪ್ಪೆ ತತ್ತತ್ಕಾಲಕ್ಕೆ ದೇವಾ
ನಾನಿದೆ ಕಲ್ಪಿಸಿ ಪೇಳಿದವನಲ್ಲಾ
ಮೌನವಾಗಿರಸಲ್ಲಾ ಮಾತಾಡು ಸಿರಿನಲ್ಲಾ
ಈ ನಿರಂತರ ನಿನ್ನ ಬಾಹಿರ ರೂಪಂಗ
ಳಾನು ಕೊಂಡಾಡಿ ನೋಡಿದದಕೆ ಮ
ತ್ತೇನು ಫಲವಿಲ್ಲಾ ಇದರ ರಹಿತವಾಗಿ
ಕ್ಷೋಣಿಯೊಳಗೆ ಎಂಭತ್ತು ನಾಲ್ಕು ಲಕ್ಷ
ಯೋನಿಯಲ್ಲಿ ಬಂದು ಸಾಧನಂಗಳ ಗೈದು
ಅನಂತಾನಂತ ನಿನ್ನ ಮೂರುತಿ ನೋಡಿ
ಏಣಿಸಿ ಗುಣಿಸಿ ನಿಧಾನಕ್ಕೆ ಒಂದಕ್ಕು
ಶ್ರೀ ನಾರಿಯರಸನೆ ಚಿತ್ತುವಿನೊಳಗಿದ್ದ
ಪೂರ್ಣ ಗುಣಾ;ರ್ಣ ನಿನ್ನ ಚಿದ್ರೂಪವ
ಕಾಣದಲೆ ಆವ ಜೀವಿಗಾದರೂ
ಆನಂದಾ ವಿರ್ಭಾವ ಇಲ್ಲವೊ ನೀನು
ಈ ಪರಿ ಸಂಕಲ್ಪವೇ ಮಾಡಿದ್ದು
ವೇಣು ಹುಡುಗನಂತೆ ಅಂಜಿಪುದೇನಯ್ಯಾ
ಆನಂದಾ ಸರ್ವಾಂಗಾ ವಿಜಯ ವಿಠ್ಠಲರೇಯಾ
ನೀನು ಮಾಡಿದ ಕ್ಲಪ್ತಿ ನಿನಗೆ ತಿಳಿಯದೇನೂ ೪
ಆದಿತಾಳ
ಸಜ್ಜನಾಂಬುಧಿ ಚಂದ್ರಾ ಸಕಲ ಸದ್ಗುಣಸಾಂದ್ರಾ
ನಿರ್ಜನ ಪರಿ ಪಾಲಕ ಯಾದವಕುಲತಿಲಕಾ
ದುರ್ಜನಕುಲ ಕಾಲ ದುರ್ಗ ಭೂ ಲಕ್ಷ್ಮೀಲೋಲ
ವರ್ಜಿತ ಲಯ ಮಾಯಾ ನವ ವಾರಿಧರಕಾಯಾ
ಅರ್ಜುನ ಸಾರಥಿ ಸತತ ಸತ್ಕೀರುತಿ
ಗು[ಜ್ಜಿ]ಗೊಲಿದರಂಗಾ ದುರಿತ ಮಾತಂಗ ಸಿಂಗಾ
ಮೂರ್ಜಗದೊಳಗೆನ್ನ ಸಾರುವ ಸುಪ್ರಸನ್ನ
ವಜ್ರ ಪಂಜರ ಚರಣಾ ಜನಕೆ ನೀನೆ ಕರುಣಾ
ಮಜ್ಜನಾದಿಯ ಕರ್ಮ ಏನೇನು ಸ್ವಧರ್ಮ
ಎಜ್ಜವಾಗಿದ್ದರು ಎಣಿಸದಿರು ಎಣಿಸದಿರು
ಗೆಜ್ಜಿ ಕಟ್ಟಿಸಿ ನಿಲಿಸಿ ಕುಣಿಸಿದರಂದು ಒಲಿಸಿ
ಸಜ್ಜೀವಿಗಳು ನಿಂದು ಬಿಂಬ ಕಾಣಬೇಕು
ಹೆಜ್ಜಿ ಹೆಜ್ಜಿಗೆ ಪೊಳೆದು ಇನಿತೆಂಬ ಮಾತು ಕಳೆದು
ಬೆಜ್ಜರಿಸುವದೇನು ಭಕುತರ ಕಾಮಧೇನು
ರುಜುವೆಂಬೊ ಜ್ಞಾನ ಪುಟ್ಟಿದ ಮೇಲೆ ಅವನ
ತಜ್ಜಾತಿಗೆ ಸೌಖ್ಯ ಸಿದ್ಧವಾಗಿದೆ ಮುಖ್ಯ
ಆರ್ಜನೆ ಮಾಡವೆನು ವಿಸ್ತರಿಸಿ ಕೇಳು ಇನ್ನು
ಆರ್ಜವಗತಿ ತೋರೊ ಗುಣ ಕಡೆಮಾಡು ಮೂರು
ವ್ಯಾಜವೆ ಎನ್ನ ಕೂಡ ಎಂದಿಗೆ ಮಾಡಬೇಡ
ರಾಜ್ಯದೊಳಗಪಾರ ನಿನಗಿದೆ ವ್ಯಾಪಾರ
ಪೂಜ್ಯನಾದ ಮೇಲೆ ಹಿಂದಾಗುವದು ಮೇಲೆ
ಅಬ್ಜ ಚಕ್ರಾಂಕಿತ ವಿಜಯ ವಿಠ್ಠಲ ಹೃದ
ಯಾಬ್ಜದಲ್ಲಿ ಪೊಳಿಯೊ ಸತತ ಸಂಯೋಗ ಬಿಂಬಾ ೫
ಜತೆ
ಎತ್ತಲಾದರು ಎನಗೆ ಇಷ್ಟ ಪುಣ್ಯದಿಂದ
ನಿತ್ಯ ಸತ್ಯಮೂರ್ತಿ ತೋರೊ ವಿಜಯ ವಿಠ್ಠಲಾ ೬

ಮುಕ್ತಲೋಕದಲ್ಲಿರುವವರ ಜೀವರ ಸ್ವರೂಪ,

೧೦೫
ಧ್ರುವತಾಳ
ಮುಕುತಿಯಾದವರ ಪ್ರಕರಣವ ತಿಳಿಯಬೇಕು
ಭಕುತಿಯಿಂದಲಿ ಭಾವ ಶುದ್ದನಾಗಿ
ಮುಕುತರೊಳಗೆ ತಾರತಮ್ಯವೇ ಉಂಟು ಆ
ಸಕುತರಾಗಿಪ್ಪರು ಹರಿ ಪದದಿ
ಕಕುಲಾತಿ ಮೊದಲಾದ ದೋಷರೂಪಗಳಿಲ್ಲ
ಅಕಟಕಟ ಇವರೀಗ ವಿಲಿಂಗರು
ಸಕಲರೊಳಗೆ ಬ್ರಹ್ಮ ಉತ್ತಮ ದೇವತಿ
ಅಕಳಂಕನಯ್ಯ ಸಂಸಾರದಲ್ಲಿ
ಪ್ರಕಟ ಜ್ಞಾನವೇಸರಿ ವ್ಯಕ್ತವಾಗುವುದು ಬಾ
ಧಕವಿಲ್ಲ ಋಜುಗಣಸ್ಥ ಜನರಿಗೆ
ಮುಕುತಿಲಿ ಯಿಶಾದ ನ್ಯತ್ರ ಜಗದ್ವಿಷಯ ಜ್ಞಾನ
ಶಕಲ ವಿಲ್ಲದೆ ಅನಾಲೋಚನೆಯಿಲ್ಲ
ಲಕುಮಿಗೆ ಸಾಮ್ಯ ಬಂತು ಎನದೀರಿ ಸದಾವಕ್ಕು
ಉಕುತಿಯ ಲಾಲಿಸುವುದು ಬೊಮ್ಮಗಿಂದಲಿ ಶ್ರೀ
ಲಕುಮಿಯ ಜ್ಞಾನ ಈಶ ಸರ್ವ ಪದಾರ್ಥದಲ್ಲ್ಯ
ಧಿಕ ವಾಗಿಪ್ಪದು ಈಶಕೋಟಿ ಗಣನೆ
ವಿಕಸಿತವಾದ ಶ್ರೀ ಹರಿಯ ಜ್ಞಾನಕ್ಕೆ ಎ
ಣಿಕೆ ವುಂಟೆ ಆವಾವ ಕಾಲಕ್ಕು ಗುಣಿಸಿದದರು
ಮುಕುತರು ತಮ್ಮ ತಮ್ಮ ಯೋಗ್ಯತೆ ಉಳ್ಳನಿತು
ಸುಖಸಾಂದ್ರರಾಗಿ ಗರುಡ ಶೇಷಾದ್ಯರು ಗುಣ
ನಿಕರದಲ್ಲಿ ನಿತ್ಯ ಸರ್ವವು ವಶಕರವು
ರಕ್ಕಸಾರಿಯ ಇಚ್ಛಾವರ್ಕ(?) ಒಂದುಂಟು ಇವರಿಗೆ
ತ್ವಕು ಮೊದಲಾದಿಂದ್ರಿಯಗಳು ಸ್ವರೂಪ ಭೂತವೆನ್ನಿ
ರುಕುಮಾಭರಣ ವಸನ ದಿವ್ಯ ತೇಜೋಮಯರು
ಅಖಿಲ ಜೀವರು ವೈಕುಂಠ ಆರಂಭಿಸಿ
ತಕತಕ ಸ್ಥಾನದಲ್ಲಿ ಇಪ್ಪರು ಮೇರುವಿಡಿದು
ಮುಕುತಾರ್ಥ ಅಂಶರಹಿತವಾದ ಮುಕ್ತರು ತಾ
ತ್ವಿಕರಾತಾತ್ವಿಕರಂತೆ ಸಮರ್ಥರಲ್ಲ ಮಾ
ಲಕುಮಿಗೆ ಮಿಗಿಲಾದ ಅಂಶಿ ಅಂಶಗಳೆಲ್ಲ
ಪ್ರಕಟವಾಗುವರು ಅನೇಕ ರೂಪಗಳು ಧಾ
ರಕರಾಗಿ ನಾನಾ ಕ್ರೀಡೆಯಾಡುವರಿಚ್ಛೆಯಲ್ಲಿ
ಅಕುಟಿಲರಲ್ಲದೆ ಒಬ್ಬರೊಬ್ಬರಿಗೆ ಕು
ಹಕತನವಿಲ್ಲದೆ ಅಧೀನವಾಗಿಪ್ಪರು
ಮುಕುತಿದಾಯಕ ನಮ್ಮ ವಿಜಯ ವಿಠ್ಠಲ ನಿಯಾ
ಮಕ ಕಾಣೊ ಸರ್ವಜನಕೆ ಅನಂತ ಕಲ್ಪಕ್ಕೆ ೧
ಮಟ್ಟತಾಳ
ಮೂರೊಂದು ವಿಧದ ಮುಕುತಿಯು ಸಾಲೋಕ್ಯ
ಸಾರುಪ್ಯ ಸಾಮಿಪ್ಯ ಮಾಣದೆ ಸಾಯುಜ್ಯ
ಸಾರಿಷ್ಟಿಯುವುಂಟು ಕಡಿಯಣ ಪ್ರಭೇದ
ವಾರಿಜ ಸಂಭವಗೆ ಹರಿಯ ಸರ್ವಾಂಗದಲಿ ಶ
ರೀರ ಧರಿಸಿ ವೊಂದೊಂದೆ ಸಾರಿಷ್ಣ್ಯ
ಮಾರಾರಿ ಮುಖ್ಯ ತತ್ವೇಶರಜನ
ದ್ವಾರದಲಿ ತಮ್ಮ ತತ್ತಸ್ಥಾನದಲಿ
ಸೇರುವುದೆ ಇದು ಸಾಯುಜ್ಯ ವೆನಿಸುವುದು
ಬೇರಿ ಬೇರಿಯವರಿಗೆ ಅಂಗ ಸಾಯುಜ್ಯವು
ನಾರಾಯಣರೂಪ ವಾಸುದೇವನೊಳಗೆ ಇ
ರೀತಿಯು ವುಂಟು ಧಾರುಣಿಪತಿಯಾದಾ ಪರೀಕ್ಷಿತವಿಡಿದು
ಸಾರುವೆ ಸಾಮಿಪ್ಯ ವೆಂಬುದು ಸಾ_ಅಂಶ
ವಾರಿತ ಪ್ರತೀಕಾಲಂಬರಿಗೆಯೆನ್ನು
ಸಾರುಪ್ಯವೆ ಕೇಳಿ ಅಂಶಗಳಿಲ್ಲದ
ಧೀರರಿಗೆ ಸಿದ್ಧ ಋಷಿ ಪಿತ್ರಾದ್ಯರಿಗೆ
ಮೇರು ಪರ್ವತದಿಂದ ವೈಕುಂಠ ಪರಿಯಂತ
ಚಾರು ಸಾಲೋಕ್ಯಗಳು ಮನುಜೋತ್ತಮರಿಗೆ
ಹಾರವಾಗಿಪ್ಪರು ಇವರಿವರೊಳಗೆ
ತಾರತಮ್ಯವೆ ತಿಳಿ ವೈಷಮ್ಯಗಳಿಲ್ಲ
ಸಾರಭೋಕ್ತ ನಮ್ಮ ವಿಜಯ ವಿಠ್ಠಲನ್ನ
ಆರಾಧಿಸುವರು ನಿಷ್ಕಾಮಕರಾಗಿ
ರೂಪಕ ತಾಳ
ತತ್ವೇಶರಿಗೆ ಉಂಟು ಚತುರವಿಧ ಮುಕ್ತಿ
ಮತ್ತೆ ಕ್ರಮದಿಂದಲಿ ಮೂರೆರಡು ಒಂದು ಮನು
ಜೋತ್ತಮರ ತನಕ ಸಿದ್ದವಾಗಿಪ್ಪುದು
ಪತ್ನಿ ಉಳ್ಳವರುಂಟು ಒಬ್ಬರಿಬ್ಬರು ನೂರು
ಹತ್ತುಸಾವಿರ ಅನೇಕ ಮಂದಿಯ ಕೂಡ
ಪತ್ನಿ ಯಿಲ್ಲದವರು ಇಪ್ಪರು ಇವರೊಳಗೆ
ನಿತ್ಯ ಬ್ರಹ್ಮಚಾರಿ ಸ್ವೇಚ್ಛೆ ಕಾಮುಕರು
ಇತ್ಥಂಡದವರೆನ್ನಿ ಇಚ್ಛೆ ಐಕ್ಯರು ಎಲ್ಲ
ಎತ್ತ ನೋಡಿದರತ್ತ ಆನಂದಭರಿತದಲ್ಲಿ
ಸುತ್ತುವರು ಒಂದೊಂದು ಸ್ಥಾನ ನಿರ್ದೇಶರಲ್ಲಿ
ಉತ್ತಮ ಸಾ_ಅಂಶ ಜನರು ಸಂಚರಿ
ಸುತ್ತಲಿಪ್ಪರು ಬಹುರೂಪಂಗಳು ಧರಿಸಿ
ತಥ್ಥಳಿಸುವ ಮೂಲ ಸ್ವರೂಪ ದೇಹದಲ್ಲಿ
ತತ್ವೇಶರಿಗೆ ಇವೆ ಆಂಶಗಳುಂಟು
ಪ್ರತ್ಯೇಕವಾಗಿ ಎಲ್ಲರೆ ತಕ್ಕವೆ ವಲ್ಲ
ಅನಿತ್ಯವೆನಿಸುವುವು ಇವರ ಅಂಶರೂಪ
ಸತ್ಯಸಂಕಲ್ಪ ಶ್ರೀ ವಿಜಯ ವಿಠ್ಠಲ ರೇಯನ
ನಿತ್ಯ ಅಂಶಿ ಅಂಶ ರೂಪಗಳೆನ್ನು ೩
ಝಂಪಿತಾಳ
ಮನುಜ ಗಂಧರ್ವ ಮಿಕ್ಕಾದ ನಿರಂಶರಿಗೆ
ಚಿನು ಶರೀರದಿ ಚತುರ ಮುಕ್ತಿಯುಂಟು
ಗುಣವಧಿಕವುಳ್ಳಂಥ ಉತ್ತರೋತ್ತರ ಜನಕೆ
ಘನ ಅಂಶಾಂಶಗಳಿಂದ ವ್ಯಕ್ತವಯ್ಯಾ
ವನಜ ಭವ ಮೊದಲಾದ ಮುಕ್ತರು ನಿಯಾಮಕರು
ಅನುದಿನ ತಮತಮಗಿಂತ ನೀಚರಿಗೆ
ತನುವಿನೊಳಗಲ್ಲದೆ ಬಾಹಿರದಿಯೆನ ಸಲ್ಲ
ಅನಿಲನೇ ಮೋಕ್ಷದಲಿ ಬ್ರಹ್ಮದೇವಾ
ತ್ರ್ರಿಣಿನೇತ್ರ ಸತಿವಿಡಿದು ಚತುರಾನನ ತನಕ
ಗುಣ ಕ್ಲಿಪ್ತಗಣನೆ ಆಧಿಕಾಧಿಕವಾಗಿ
ಎಣಿಸು ಇದರೊಳಗೆ ವೈಚಿತ್ರವುಂಟು ಇದೆ
ಎನಿಸುವುದು ಸಜಾತಿನಾಮದಲಿ
ಮಿನಗುವುವು ವಿಜಾತಿ ವುಳ್ಳವನಂತವಾಗಿ
ಅನಿಮಿಷನಾಥನಿಂದಿತ್ತ ಬ್ಯಾರೆ
ಎಣಿಕೆ ಮಾಡಲು ಸಲ್ಲ ಇದ್ದ ಪರಿಮಿತವೆನ್ನಿ
ಅನುಕೂಲವಾಗಿ ಸುಖದಲಿ ಇಪ್ಪರು
ಮಣಿಮಯ ನಿಕೇತನ ವಿಜಯ ವಿಠ್ಠಲನಂಘ್ರಿ
ನೆನೆಸಿ ಪುಳಕೋತ್ಸವದಲ್ಲಿ ಪೂರ್ಣ ಯೋಗ್ಯತ ಭಕ್ತಿ ೪
ತಾಳ ತ್ರಿವಿಡಿ
ಸತ್ವಗುಣದರಾಶಿ ವೈಕುಂಠ ಪುರದಲಿ
ನಿತ್ಯವಾಗಿಪ್ಪದು ಅಮಿಶ್ರತನದಲಿ

ತಿರುಪತಿಯ ಶ್ರೀನಿವಾಸನು ಸಕಲರಿಂದಲೂ

೫೮. ತಿರುಪತಿ
ರಾಗ:ಭೈರವಿ
ಧ್ರುವತಾಳ
ಮುಕ್ತಾಮುಕ್ತಾರಿಂದರ್ಚನೆಗೊಂಬ ಚರಣ ವೀ |
ರಕ್ತಾರ ಮನದಲ್ಲಿ ನಿಂದಿಹ್ಯ ಚರಣ ಸೂ |
ರಕ್ತಾವರ್ನ ನಖದಿಂದಲೊಪ್ಪುವ ಚರಣ |
ಭಕ್ತಿಗೆ ಒಲಿದೊಲಿದು ಭಾಗ್ಯಕೊಡುವ ಚರಣ |
ಭಕ್ತವತ್ಸಲನೆಂಬೊ ಮಹಾ ಪ್ರತಾಪದ ಚರಣ |
ವ್ಯಕ್ತವಾಗಿ ಲೋಕಾಪೂರ್ಣವಾದಾದಿ ಚರಣ |
ಉಕ್ತಿಗೆ ಮೈದೋರದ ಉನ್ನತೋನ್ನತ ಚರಣ |
ಶಕ್ತಿ ಪ್ರದವಾದ ಜ್ಞಾನಾನಂದ ಚರಣ |
ತ್ಯಕ್ತಾ ವೈದಿಕಾ ಸಿದ್ಧ ಸಾರಸುಂದರ ಚರಣ |
[ಭ]ಕ್ತಿ ಭೂಷಣವಿತ್ತು ಪಾಲಿಸುವ ಚರಣ |
ಶಕ್ತಿ ಉದರದಲ್ಲಿ ಅಂಕಿತವಾದ ಚರಣ |
ಸಿಕ್ತೋದಕ ಧರಿಸೆ ಸಿರದಲ್ಲಿ ಪೊಳೆವಾ ಚರಣಾ |
ಮುಕ್ತಿ ಕೊಡುತಿಪ್ಪ ಮದನ ಲಾವಣ್ಯ ಚರಣ |
ನಕ್ತೇ (ಚಂದ್ರ) ಶನಂದದಲಿ ಥಳಥಳಿಸುವ ಚರಣ |
ಮುಕ್ತಾಭರಣ ರಂಗಾ ವಿಜಯವಿಠಲರೇಯಾ |
ಮುಕ್ತಗಿರಿಯ ವೆಂಕಟ ಶ್ರೀನಿವಾಸನ ಚರಣ ೧
ಮಟ್ಟತಾಳ
ಈ ಚರಣ ಸಮಸ್ತರಿಗೆ ಸುಲಭಸಾಧ್ಯ |
ಈ ಚರಣ ಜ್ಞಾನ ಭಕುತಿ ಕೊಡುವುದು |
ಈ ಚರಣ ಅಹಂಕಾರ ಬಿಡಿಸುವುದೂ |
ಈ ಚರಣ ಕರಣಶುದ್ಧಿಯ ಮಾಡುವದು |
ಈ ಚರಣ ದುರಿತ ರಾಶಿಯ ದಹಿಸುವದು |
ಈ ಚರಣದಿಂದ ಪ್ರಸಾದತ್ರಯವೊ |
ಈ ಚರಣಾರ್ಚನೆಯ ಮಾಡಿದ ಅಜಭವರು |
ಗೋಚರಿಸುವರು ತಮ್ಮ ಪದವಿಯಲ್ಲಿ ನಿತ್ಯ |
ಈ ಚರಣ ನೆನಿಸಿದವನ ಭಾಗ್ಯವೆ ಭಾಗ್ಯ |
ಈ ಚರಣ ಕರ್ಮಜ್ಞಾನಾನಂದಕೆ |
ಸೂಚನೆ ಕಾಣಿರೊ ಗುರುಗಳ ಕೃಪೆಯಿಂದ |
ಈ ಚರಣವೆ ದೈತ್ಯವನ ಸವರುವ ಕೊಡಲಿ |
ಈ ಚರಣ ದೋಷ ವಿರಹಿತ ಸಂಪೂರ್ಣ |
ಈ ಚರಣೇ ಚರಣಾ ಆಲೋಚನೆಯ ಮಾಡೆ |
ಮೋಚಕವಾಗುವುದು ಲಿಂಗಾಶರೀರವೂ |
ವಾಚಸ್ಪತಿ ಜನಕ ವಿಜಯವಿಠಲ ವೆಂಕಟ |
ಲೋಚನಕೆ ಪೊಳೆವ ಅಪ್ರಾಕೃತ ಚರಣ ೨
ತ್ರಿವಿಡಿತಾಳ
ಬನ್ನಿ ಬನ್ನಿರೊ ಜನರಿ ಭಾಗ್ಯಪ್ರದಾತನ್ನ |
ಘನ್ನ ಚರಣಾವಿಡಿದು ಮೌಳಿಯ ಪರಿಯಂತ |
ಚನ್ನಾಗಿ ತಿಳಿದು ಧಾನ್ಯವಮಾಡಿ ವೆಂಕಟನ್ನ |
ರನ್ನ ಮಕುಟ ಕುಂಡಲ ಕರ್ಣನೊಸಲಾನಾಮಾ |
ಬಂಣಿಸಾಲರಿದು ಮುಖನಯನನಾಸಾವದನ |
ಕೆನ್ನೆಕಪೋಲಾ ಸುಲಿಪಲ್ಲು ಸುಧಾಸುರಿಯೆ |
ಚಿನ್ನದ ಸರಿಗೆ ನಾನಾಹಾರ ಕೌಸ್ತುಭಾ |
ಸನ್ನಿಭಾ ರವಿಯನ್ನೆ ಕೊರಳ ತ್ರಿವಳಿಕಾಂತಿ |
ಕನ್ನೆಲಕುಮಿ ಇಪ್ಪಉರ ಚತುರ್ಭುಜ ಬಾಹು |
ಉನ್ನತಕೇಯೂರ ಹಸ್ತ ಕಂಕಣಂಗೂಲಿ |
ಹನ್ನೆರಡು ಎರಡುಲೋಕಾ ಉಳ್ಳವುದರ |
ಫನ್ನಂಗನ ಕಾಯ ಸೋಲಿಸುವ ಕಟ್ಟಿಸೂತ್ರಾ |
ಗಣ್ಯಗಣದ ಪೀತಾಂಬರವೂರು ಪಾ |
ವನ್ನ ಜಾನು ಜಂಘೆ ಪರಡು ಪಾದಾಂಗುಲಿ |
ಬನ್ನಾದಿ ಪಡದ ನಖಾ ರೇಖಾಂಕಿತ ಬಲುಪರಿ |
ಭಿನ್ನಾವಿಲ್ಲದೆ ಇಪ್ಪ ಸರ್ವಾವಯಂಗಳೂ |
ಇನ್ನೂ ಈ ವಿಧದಲಿ ನಿಮ್ಮ ಚಿತ್ತದಲ್ಲಿ ಸಂ |
ಪನ್ನ ಈ ಮೂರ್ತಿಯ ನಿಲಿಸಿ ಆತ್ಮನೆಂದೂ |
ಬನ್ನಾಬಡದಿರಿ ಅಲ್ಲೆಲ್ಲಿ ಇಹನೆಂದೂ |
ಕಣ್ಣು ಮುಂದಾಡುವ ಪರಿಮಳ ಯಸವುತ್ತ |
ಪುಣ್ಯಶ್ಲೋಕರಾಯ ವಿಜಯವಿಠಲ ವೆಂಕಟ |
ಮನ್ನಿಸಿ ಮುದದಿಂದ ಪ್ರಸನ್ನನಾಗುವ ೩
ಅಟ್ಟತಾಳ
ವಿಶ್ವಮಂಗಳನೀತ ವಿಶ್ವಕಾಯನೀತ |
ವಿಶ್ವಕುಟುಂಬ ಪಾಲಕನೀತ ಪ್ರಭು ನೀತ |
ವಿಶ್ವಧಾರಕನೀತ ವಿಶ್ವ ವಿಶ್ವನೀತ |
ವಿಶ್ವೇಶ್ವರನೀತ ವಿಶ್ವಾಸುಗುಣನೀತ |
ವಿಶ್ವನಾಟಕನೀತ ವಿಶ್ವಪ್ರೇರಕನೀತ |
ವಿಶ್ವಕರ್ಮನೀತ ವಿಶ್ವಕಾಲನೀತ |
ವಿಶ್ವದ್ರವ್ಯನೀತ ವಿಶ್ವಭಿನ್ನುನೀತ |
ವಿಶ್ವಮೂರುತಿ ಈತ ವಿಲಕ್ಷಣನೀತ |
ವಿಶ್ವಾಂಬರೆಯೊಳಗೆ ವಿಶ್ವಾಸದಲಿ ಶ್ವೇ |
ತಶ್ವನ್ನ ಮಿತ್ರನ್ನ ಸುಸ್ವರದಲಿ ಪಾಡಿ |
ಈಶ್ವರ ನಾನೆಂಬ ನಶ್ವರ ಮತಿಬಿಟ್ಟು |
ಭಾಸ್ವರ ಸಂಪೂರ್ಣ ಐಶ್ವರ್ಯಾನಾಗೋ |
ವಿಶ್ವಗಿರಿವಾಸ ವಿಜಯವಿಠಲ ವೆಂಕ |
ಟೇಶ್ವರ ಭಕ್ತರ ವ್ಯಾಧಿಗಳ ಕಳೆವಾ ೪
ಆದಿತಾಳ
ದಿವ್ಯಧರ್ಮಮೂರ್ತಿ ಭವ್ಯಫಲದ ಭಯಹಾರಿ |
ನವ್ಯಾ ಭೂಷಣನಂದ ಪೋಷಣ |
ಅವ್ಯಕ್ತವ್ಯಕ್ತಗಾತ್ರ ದಿವ್ಯತೇಜ ದಿವಿಜರಾಜ |
ಅವ್ಯಯ ಆನಂದಮಯ ಹವ್ಯಾದಿಕ್ರಿಯಾ ನಿಯಾಮಕ |
ಸವ್ಯಸಾಚಿ ಪ್ರೀಯ ಜೀಯ್ಯ ಭವ್ಯಗಿರಿರಾಯ ವಿಜಯವಿಠಲ್ಲಾ |
ಸೇವ್ಯಮಾನನೊ ಸುರರಿಂದ ವೆಂಕಟ ೫
ಜತೆ
ವೆಂಕಟಗಿರಿ ಸ್ವಾಮಿ ಪುಷ್ಕರಣಿನಿವಾಸ |
ಪಂಕಜಾಪತಿ ವಿಜಯವಿಠಲನ್ನ ಕೊಂಡಾಡು ೬

ಹದಿನಾರು ನುಡಿಗಳಿರುವ ಅತ್ಯಂತ

೭೩
ಧ್ರುವತಾಳ
ಮುಕ್ತಿಲಿ ಪಂಚಭೇದ ಜಡ ಜೀವ ಪರಮಾತ್ಮ |
ಶಕ್ತಿ ಈಶಾಕೋಟಿ ಗಣನೆ ನಿತ್ಯ |
ಮುಕ್ತಳು ಬೊಮ್ಮ ವಾಯು ಮುಂತಾದ ಸುರರಿಗೆ |
ಮುಕ್ತಿಯ ಕೊಡುವಳು ಈಶಾವಶಳು |
ಮುಕ್ತಾ ಮುಕ್ತರ ಒಡಿಯಾ ವೈಕುಂಠ ನಾಮಕ |
ಶಕ್ತನೊಬ್ಬನು ಕಾಣೋ ತ್ರಿಲೋಕಕ್ಕೆ |
ಭಕ್ತಿ ಯೋಗ್ಯತವರಿತು ಭವ ಹರಿಸಿ ಚತುರವಿಧ |
ಮುಕ್ತಿಲಿ ಸುಖವೀವ ಸುಂದಾರಾಂಗ |
ಸೂಕ್ತಾದಿಗೆ ನಿಲುಕನು ಮೂಲಾವತಾರಾ ಭಿನ್ನ |
ರಕ್ತಾದಿವರ್ನ ರಾಜೀವ ಲೋಚನ ಶುಕ್ಲ |
ರಕ್ತ ರಹಿತ ಪೂರ್ಣೇಂದು ವದನ |
ವ್ಯ[ಕ್ತಾ]ವ್ಯಕ್ತಾ ವ್ಯಾಪಾರಾ ಅಚಿಂ[ತ್ಯಾ]
ಮಹಾ ಮಹಿಮಾ |
ಭಕ್ತವತ್ಸಲ ಕರುಣಿ ಸರ್ವಸಾರಾ |
ಭೋಕ್ತನು ಆದಿಮಧ್ಯಾಂತರಹಿತ ದ್ಯೆವ |
ಮೌಕ್ತಿಕ ಹಾರಾ ರತುನಾದಿ ಭೂಷ |
ಉಕ್ತ ತಾರತಮ್ಯ ತತ್ವಕೆ ದೂರ ದೂರ |
ರಿಕ್ತರಿಗತಿಪ್ರೀಯ ಶ್ರೀ ಭೂದುರ್ಗಾಪತಿ ವಿ
ರಕ್ತರ ಮನೋವಾಸ ವಿಜಯ ವಿಠ್ಠಲಯನ್ನ |
ಉಕ್ತಿಗೆ ಸಹಯವಾಗು ದಾಸರ ಪ್ರೀಯ ೧
ಮಟ್ಟತಾಳ
ಹರಿ¥ರಂಜ್ಯೋತಿ ಹರಿಪರದೈವತಿ |
ಹರಿ ಸರ್ಮೋತ್ತಮ ಹರಿ ಪುರುಷೋತ್ತಮ |
ಹರಿಪೊರಬೊಮ್ಮ ಹರಿಜ್ಞಾನಗಮ್ಯ |
ಹರಿ ವಿಶ್ವಾ ಮೂರ್ತಿ ಹರಿಚಕ್ರಾವರ್ತಿ |
ಹರಿ ಪರಂಧಾಮಾ ಹರಿ ಸಾಸಿರ ನಾಮಾ |
ಹರಿ ಸಾರ್ವಭೌಮ ಹರಿಭಕ್ತರ ಪ್ರೇಮ |
ಹರಿ ಪರಿಪೂರ್ಣ ಹರಿ ನಾನಾ ವರ್ನ |
ಹರಿ ಗುಣಗಣಾಂಬೋಧಿ ಹರಿ ಸರ್ವ ಸಿದ್ಧಿ |
ಹರಿ ಸರ್ವದಾವೀರ್ಯ ಹರಿವಿ ಬುಧರವರ್ಯ |
ಹರಿ ಪಾವನ ಕಾಯ ಹರಿಭುವನ ಮಾಯ |
ಹರಿ ಪರಮಾತ್ಮ ಹರಿ ಉತ್ತ ಮೋ[ತ್ತಮ]
ಹರಿ ಪರತತ್ವ ಹರಿನಿರುತ ಸತ್ವಾ |
ಹರಿ ನಿತ್ಯಾನಂದಾ ಹರಿಸಿರಿ ಗೋವಿಂದ |
ಹರಿ ನಿತ್ಯಾತೃಪ್ತ ಹರಿ ಸಕಲ ವ್ಯಾಪ್ತ |
ಹರಿ ವಿರಹಿತಜಾತ ಹರಿ ಜಗನ್ನಾಥ |
ಹರಿ ಏಕಮೇವ ಹರಿ ಅಘವನದಾವಾ |
ಹರಿ ನಿರ್ಭಯಶೂರ ಹರಿನಾನಾವತಾರ |
ಹರಿ ಬಹುಲಾವಂಣ್ಯ ಹರಿ ಸದಾ ತಾರುಣ್ಯ |
ಹರಿಯಲ್ಲದೆ ಮತ್ತೆ ಹರಿಯ ಬಲ್ಲವರುಂಟೆ |
ಹರಿಯವತಾರ ಶ್ರೀ ವಿಜಯ ವಿಠ್ಠಲರೇಯ |
ಹರಿಯೆ ತ್ರಿಭುವನ ಧೊರೆಯೆಂದವ ಜ್ಞಾನಿ ೨
ತ್ರಿವಿಡಿ ತಾಳ
ಶೂನ್ಯ ನಾಮಕನಾಗಿ ಹರಿ ವಟದೆಲೆಯಲ್ಲಿ |
ಸಣ್ಣವನೋಪಾದಿ ಬೊಮ್ಮಾಂಡ ನಾಯಕ |
ಕನ್ಯಾರತುನವಾದ ಶ್ರೀಯಾಲಂಗನಿಯಿಂದ |
ತನ್ನಿಚ್ಛೆಯಲೆ ತಾನೇ ಪವಡಿಸಿದ್ದು |
ಮುನ್ನೆ ಬೊಮ್ಮನ ಮಾನಾ ತುಂಬಿ ಬೀರುತಲೀರೆ |
ಹನ್ನೆರೆಡುವರೆ ವರುಷಾವಿರೆ |
ಮನ್ಯುನಂತೆ ತೋರಿ ನಾಟ್ಯವನಾಡಿ ಹಿ |
ರಣ್ಯ ಗರ್ಭಾದಿಗಳಾ ಉಳಿಯಗೊಡದೆ |
ಕಣ್ಣಿಂದ ಉರಿಕಿಡಿ ಉದುರಿಸಿ ನೆರೆದವಾ |
ರನ್ನೆ ಕವಳ ಮಾಡಿ ಭೂಷಣ ಧರಿಸೀ |
ಅನ್ಯರ ಸಂಚಾರ ಜಗದೊಳಿಲ್ಲದಂತೆ |
ಉನ್ನತ ಮಹಿಮನು ವೇದ ಪಾಲಾ |
ಅನ್ಯಾಯಾವೆನಿಸಾದೆ ಉತ್ಪತ್ತಿಸ್ಥಿತಿ ಲಯ |
ವನ್ನೆ ಮಾಡುತಲಿಪ್ಪ ವಿನಯಾದಲ್ಲಿ |
ಅನಂತ ಜೀವಿಗಳ ಒಡಲೊಳಡಗಿಸಿಯಿಪ್ಪ |
ಅಂಣೋರಣಿಯರೂಪ ವಿಜಯ ವಿಠಲರೇಯ |
ಸನ್ನುತಿ [ಸ]ಲು ಬಂದು ಸನ್ನಿಧಿಯಾಗುವ ೩
ಅಟ್ಟತಾಳ
ಪ್ರಳಯೋದಕದಲ್ಲಿ ಜಲಜನಾಭನು ನಿ |
ಶ್ಚಲ ವರವೈಕುಂಠ ಪೊಳಲಲ್ಲಿ ಶ್ರೀ ಭಾಗ |
ಸ್ಥಳದಲ್ಲಿ ಪವಳಿಸಿ ಬಲುವೇಗ ನಿದ್ರಾ |
ಲಲನೆ ಕೂಡಾಲಿರೆ ಬೆಳಗುವುದಕೆ ಮೊ |
ದಲು ಪೇಳಿದಂತೆವೆ ತಿಳಿವೋದು ಶುದ್ಧಾರು |
ಲಲಿತಾಂಗಿ ಅಂಭ್ರಣಿಯ ಒಲಿಸಿ ವೇಗಾದಿಂದ |
ಸಲೆಸ್ತೋತ್ರವ ಮಾಡೆ ಒಲಿದು ಪುರುಷದೇವ |
ಸುಲಭದಿಂದಲಿ ತಮ ಉಳಿಯಾಲೀಸದೆನುಂಗಿ |
ಮಿಳಿತವಾಯಿತು ವಟಜಲ ಶ್ರೀ ಭೂ ದೇವಿಯ |
ಒಳಗೆ ಏಕೀಭೂತ ಮಳಲುಗೂಡನು
ಕಟ್ಟಲು ಮನ ಮಾಡಿದ |
ತಲುವರಿಯಾನಂತೆ ಬಲು ಪ್ರಯಾಸಿಲ್ಲದೆ |
ಬಲು ಹರುಷದಿಂದ ಸಲ್ಲಿಸಿದ ತನ್ನಯ ಲಲನೇಯ ಬಿನ್ನಹ |
ಚಲುವ ದೇವರದೇವ ವಿಜಯ ವಿಠ್ಠಲರೇಯ |
ನಲಿನಲಿದಾಡುವ ಹಲವು ಕಾಲದ ದೈವಾ ೪
ಆದಿತಾಳ
ಚತುರ ವಿಧ ಸೃಷ್ಟಿ ನೆನೆದು ಹಿತವಾಗಿ ತನ್ನ ನಿಜ |
ಸತಿ ಮುಕ್ತಾರೊಡನೆ ಸಂತತ ಕ್ರೀಡೆ ಮಾಡುವಂಥ |
ಚತುರ ನಾನಾ ಮೂರುತಿಯಾಗಿ ಬೆಳಗುತಿಪ್ಪ |
ತತುವ ನಿಯಮಕ ಸ್ವಭಾವಿತ ಕಾರ್ಯ ಅನುಪಮ |
ದ್ವಿತಿಯಾನಿರ್ಗುಣಾ ಸಗುಣ ಸತುವಾದಿಗಣದಿ ಉ |
ತ್ಪತ್ತಿ ಯಾಗುವಂತೆ ಪಂಚಾಶತ ಕೋಟಿ ಯೋಜನ ಪರಿ |
ಮಿತ ಬೊಮ್ಮಾಂಡವ ರಚಿಸಿ ಚತುಂರಮೊಗನು ಸುರ |
ತತಿಮಿಕ್ಕ ಜೀವರ ಪ್ರಕೃತಿಯಿದಾ ಪುಟ್ಟಿಸಿ ಭ |
ರಿತ ವಾಗುವಂತೆ ಸಾಕಿ |
ಪತಿತ ಪಾವನರಂಗ ವಿಜಯ ವಿಠ್ಠಲ ತನ್ನ |
ತುತಿಸಿದವರಿಗೆ ಸಂತತಿ ಕಾಣೊ ಇಹಪರಾ ೫
ಜತೆ
ಜಗತ್ಸತ್ಯಾ ಅನಿತ್ಯಾ ಎನಿಸುವುದು ಕಡೆಗೆ |
ಜಗದೈವ ವಿಜಯ ವಿಠ್ಠಲನೆ ಎಂದಿಗೆ ಸತ್ಯಾ ೬

ಕೃಷ್ಣನನ್ನು ಕುರಿತ ಈ ಸುಳಾದಿಯಲ್ಲಿ

೧೪೦
ಝಂಪಿತಾಳ
ಮುತ್ತು ನವರತ್ನಮಯ ಪವಳ ಸಂಗತಿಯಿಂದ
ಕೆತ್ತಿಸಿದ ಮುಕುಟ ಶಿರದಲ್ಲಿ ಧರಿಸಿಪ್ಪದೇನೋ
ನೆತ್ತಿಗೆ ಗಿಡದೆಲೆ ನಾನಾ ಬಳ್ಳಿಗಳು
ಸುತ್ತಿ ಸಣ್ಣವರೊಡನೆ ಪಾರಾಡುವುದೆತ್ತ
ಹತ್ತುಸಾವಿರ ವೇದ ಸ್ತುತಿಸಿ ಬಾಯಾರಿ ಬೇ
ಸತ್ತು ಸುಮ್ಮನೆ ನಿನ್ನ ಮಹಿಮೆ ಅರಸುವುದೇನೋ
ಚಿತ್ತಕ್ಕೆ ಬಂದಂತೆ ಗೋಮಕ್ಕಳ ಕೈಯ್ಯಾ
ಹತ್ತು ನೂರಾರುಗಳು ಬೈಸಿಕೊಂಬುವದೆತ್ತ
ನಿತ್ಯ ತೃಪ್ತ ಪರಮ ನಿತ್ಯಾನಂದನೆಂದು
ತೆತ್ತೀಸ ಕೋಟಿ ಆದಿತ್ಯರು ಪೊಗಳಲೇನು
ಹೊತ್ತು ಹೊತ್ತಿಗೆ ಕಲ್ಲಿಬುತ್ತಿ ಉಣಲು ಸಾಲದೆ
ತತ್ತಪಸಿಗಳ ಯಾಗದಲ್ಲಿ ಉಂಡದ್ದೇನೋ
ಉತ್ತಮೋತ್ತಮ ವೈಕುಂಠವನ್ನು ಬಿಟ್ಟು
ಮತ್ರ್ಯ ಲೋಕದಲ್ಲಿ ನಿನ್ನ ಲೀಲಾವಿನೋದವೇನೋ
ಸತ್ಯಸಂಕಲ್ಪ ಸಿದ್ಧ ವಿಜಯ ವಿಠ್ಠಲ ನಿನ್ನ
ಚಿತ್ತಕ್ಕೆ ಬಂದದ್ದಲ್ಲದೇ ಪ್ರತಿಯುಂಟೇ ೧
ಮಟ್ಟತಾಳ
ಜನನ ಮರಣ ದೋಷವಿದೂರ
ಎನಿಸಿಕೊಂಡು ಮೆರೆವುದೇನೋ
ಮನುಜಕಾಯಧರಿಸಿ ದೇವಕಿ
ತನುಜನಾಗಿ ಪುಟ್ಟುವುದೆತ್ತ
ವಿನಯತಾ ಸಾಕ್ಷಿ ವಿಜಯ ವಿಠ್ಠಲ
ಅಣುಮಹತ್ತೆ ಗುಣಗಣ ನಿಲಯಾ ೨
ರೂಪಕ ತಾಳ
ದನುಜದಲ್ಲಣನೆಂಬೊ ಘನಪೆಸರು ನಿನಗೇನು
ದನುಜಗಂಜಿ ಪೋಗಿ ವನಧಿಯೊಳಡಗಿದೆ
ಸನಕಾದಿಗಳು ನಿನ್ನ ಬಿಡದೆ ಕಾಯುವುದೇನೋ
ವಿಜಯದಿಂದಲಿ ನೀನು ದನಗಾವಿಗನೆನಿಸಿದೆ
ವನಜಭವಾದಿಗಳು ನಿನ್ನದಾಗಲವೇನು
ಧನಂಜಯಗೆ ನೀನು ರಥವನು ನಡೆಸುವುದೇನು
ವಿನಯೋಜನಾಮ ಸಿರಿ ವಿಜಯ ವಿಠ್ಠಲ ನೀನು
ನೆನದಾಟವಲ್ಲದೇ ಅನಿಮಿಷರು ಬಲ್ಲರೇ ೩
ಝಂಪೆತಾಳ
ಸಿರಿಗೆ ನಿನಗೆ ನೋಡೆ ಎಂದಿಗೆ ವಿಯೋಗವಲ್ಲ
ಭರದಿಂದ ರುಕ್ಮಿಣಿಯ ತಂದೆ ನಂಬುವದೇನೋ
ಸರಸಿಜಜಾಂಡಗಳೆಲ್ಲ ಹೊತ್ತ ಮಹಮಹಿಮನೆ
ಗಿರಿಧರಿಸಿದನೆಂಬ ಕೀರ್ತಿ ಪಡೆದದೇನೋ
ವರವೇದಗಳ ಸೆರೆ ಬಿಡಿಸಿದ ಧೀರಗೆ
ತರುಣೇರ ಬಿಡಿಸಿದ್ದ ಸೋಜಿಗವೆ ನಿನಗೆ
ಸರಿಯಾದ ದೈವಂಗಳು ಇಲ್ಲದ ಕಾರಣದಿಂದ ಬೆರಗು
ತೊರುವಿ ಜಗಕೆ ಸತ್ವ ವಿಜಯ ವಿಠ್ಠಲಾ ೪
ತ್ರಿವಿಡಿತಾಳ
ಅನಿಲಾಸನನ ಮೇಲೆ ಯೋಗನಿದ್ರೆವುಳ್ಳವಗೆ
ಮನದೊಳು ಕಂಡಲ್ಲಿ ಮಲಗಿ ಏಳುವುದೇನೋ
ಮಣಿಕಾಂಚನ ವಸನ ಉಟ್ಟು ಉನ್ನತನೆ ರ
ತುನಗಂಬಳಿ ಚಲ್ಲಣದ ಶೃಂಗಾರವೇನೋ
ಚಿನುಮಯನಾಗಿ ಕಾಣಿಸದಿಪ್ಪ ದೈವವೇ
ಮನೆಮನೆ ಪೊಕ್ಕು ನವನೀತ ಕದಿವುದೇನು
ಸನಾತ್ಸನಾತನ ನಾಮ ಸಿರಿ ವಿಜಯ ವಿಠ್ಠಲರೇಯಾ
ಅಣುವಾಗಿ ಎಲ್ಲರೊಳು ಜುಣುಗಿಯಾಡಿದದೇನೋ೫
ಅಟ್ಟತಾಳ
ಸ್ವರಮಣ ನೀನಾಗಿ ಸುಖಿಸುವ ದೈವವೇ
ಕರಡಿಯ ಮಗಳನು ಕೂಡಿದ ಬಗೆ ಏನೋ
ಸುರ ಪಾರಿಜಾತ ಮಂದಾರ ಪುಷ್ಪ ಮುಡಿದಿಪ್ಪ
ಧರಿಸಿದ ಮಾಲಾಗಾರರು ಹಾರುವನು ತಾರೆ
ಶರಧಿಯೊಳಗೆ ಬಂದು ಸುಧಿಯನೆರದವನೆ
ಕರದ ನೊರೆಪಾಲು ಕುಡಿದನೆನಸಿದನೇನೋ
ಸುರುಚಿರ ನಾಮ ನಮ್ಮ ವಿಜಯ ವಿಠ್ಠಲ ನಿನ್ನ
ಚರಿತೆ ಒಂದೊಂದು ಉಚ್ಚರಿಸಲೆನ್ನಳವೇ ೬
ಆದಿತಾಳ
ಪರಾಪರಾವ ಪ್ರಾಕೃತ ಶರೀರವೆನಿಸುವುದೇನು
ಜರಾಮರಣನೆಂದು ತೋರಿದರಿಗೆ ಎನಿಸುವುದೇನು
ಹರಿ ನಿನ್ನ ಮಾಯಾಲೀಲೆ ಆವಾದಾವದಾವದಯ್ಯಾ
ಅರಿದರಿ ಚೇತನ ಅಚೇತನದೊಳಗೆ ಇಲ್ಲಾ
ಚರಾಚರದಲ್ಲಿ ನಿತ್ಯವರಸಿ ನೋಡಿದರೊಂದು
ಪರಿಗೆ ಅನಂತಪರಿ ನೂತನವೆನಿಸುತಿದೆ
ಸುರೇಶ್ವರನಾಮ ಸಿರಿ ವಿಜಯ ವಿಠ್ಠಲ ನಿನ್ನ
ತರುಳತನದ ಲೀಲೆಗಳು ದನುಜರ ಕುಲಕೆ ಕೃಷ್ಣಾ೭
ಜತೆ
ನಿಮ್ಮ ಮಹಿಮೆಗೆ ಅನಂತಾನಂತ ನಮೋ
ಬೊಮ್ಮಗೆ ಪರಬೊಮ್ಮ ಗಹನ ವಿಜಯ ವಿಠ್ಠಲಾ ೮

ತಿರುಪತಿಯ ಶ್ರೀನಿವಾಸನನ್ನು ಕುರಿತು

೫೯. ತಿರುಪತಿ
ರಾಗ:ಭೈರವಿ
ಧ್ರುವತಾಳ
ಮುಪ್ಪು ಇಲ್ಲದ ಅಪ್ಪ ತಿರುಪತಿ ತಿಮ್ಮಾಪ್ಪ |
ಮುಪ್ಪು ಇಲ್ಲದ ತಾಯಿ ಅಲುಮೇಲು ಮಂಗಾಯಿ
ಮುಪ್ಪು ಇಲ್ಲದ ಗುರು ಶ್ರೀಮದಾಚಾರ್ಯರು |
ಮುಪ್ಪು ಇಲ್ಲದ ಬಾಂಧವರು ಹರಿಭಕ್ತರು |
ಮುಪ್ಪು ಇಲ್ಲದ ಧನ ಹರಿನಾಮ ಸಾಧನ |
ಮುಪ್ಪು ಇಲ್ಲದ ಸದನ ದಿವ್ಯಾನಂತಾಸ |
ಮುಪ್ಪೆ ಮುಪ್ಪೆ ಇಲ್ಲ ಎಮ್ಮ ಸೌಭಾಗ್ಯಕ್ಕೆ |
ಮುಪ್ಪುರದೊಳಗೆ ಹರಿದಾಸರಿಗೆ ಎಣಿಯೆ |
ಮುಪ್ಪುರವಗಿಲಿದ ಅನಘ ವಿಜಯವಿಠಲರೇಯ |
ಅಪ್ಪಾ ಭಕ್ತ ಒಡನಾಡುವದು ತಪ್ಪಾ ೧
ಮಟ್ಟತಾಳ
ಉಡಲಿ ಉಣಲುಂಟು ಕೊಡಲು ಕೊ[ಳ]ಲುಂಟ |
ಅಡಗಾಣಿಪ ಭಮ ಗಢ ಲಾಯಸವನು |
ಬಡದೆ ದಾಟಲಿವುಂಟು ಸಡಗರದಲಿ ದ |
ಟ್ಟಡಿ ಹರಿನಾಮವ ಹಡಗವೆಂಬುದು ಕೈ |
ವಿಡಿದು ಸುಖವನ್ನು ಪಡದು ವಿಜಯವಿಠಲ |
[ಒ]ಡಿಯನ ಪಾದವ ಬಿಡದೆ ನೆರೆನಂಬೆ |
ಕೆಡುವದು ವಿಪತ್ತು ೨
ತ್ರಿವಿಡಿತಾಳ
ಅಚ್ಚುತನ್ನ ನಾಮಾ ಅಚ್ಚು ಹೊಯಿದಂತೆ |
ಅನಂತನ ನಾಮಾಕೊನಿ ನಾಲಿಗೆಯಲ್ಲಿ |
ಪಚ್ಚಿಸಿಕೊಂಡು ಆ ಪರಮಾನಂದದಿಂದಾ |
ಕೆಚ್ಚೆದಿಯ ಯಮಭಟರ ಠಾವಿಗೆ |
ಕಿಚ್ಚು ಬೀರುತಲಿ ವೈಷ್ಣವರ ಸುಮತವೆಂಬೊ |
[ವ]ರಚ್ಚಿಯಾ ಬಿಡದೆ ಬಲು ಬಿಂಕಾದಲ್ಲೀ |
ವಾಚಸ್ಪತಿ ವಿಜಯವಿಠಲನ ಭಕುತಿಗೆ |
ಚೊಚ್ಚಲ ಮಗನಾಗಿ ಚರಿಸು ಜಾಣನಾಗಿ ೩
ಅಟ್ಟತಾಳ
ಈತನು ಈತನು ಈತನು ಪುಟ್ಟಿಸಿದ |
ಈತನು ಈತಗೆ ಸಂತರ್ಪಣೆ ಮಾಡಿ |
ಈತನ ಪೂಜಿಪ ದೂತರ ಬೆರದಾಡು |
ಈತನು ಒಳಗಿದ್ದ ವಿಷಯಾದಿಗಳ ಬಿಟ್ಟು |
ಈತನು ನೆಚ್ಚದೆ ಇಷ್ಟಾರ್ಥ[ವ]ನೀವ ಪು |
ರಾತನ ವಿಜಯವಿಠಲನ ಪಾದದಲಿ |
ಈತನು ವಿ[ಡಿ]ದು ವರಗಳ ಬೇಡೊ ೪
ಆದಿತಾಳ
ಹರಿಸರ್ವೋತ್ತುಮನಹುದೆಂದು |
ಅರಮರೆ ಇಲ್ಲದಲೆ ಬಿ[ರು]ದನು[ವ]ಹಿಸಿ |
ಉರಗನ ತುಳುಕಿ ತೊರಿಯದೆ ಬಿಂಕವ |
ಧರೆಯೊಳಗೆ ಡಂಗುರವನು ಸಾರಿ |
ಪರಮೇಶ್ವರ ವಿಜಯವಿಠಲನ್ನ |
ಶರಣರಿಗೆ ಭಯಗಳು ಇಲ್ಲೆಂದು ೫
ಜತೆ
ಮಾತುಮಾತಿಗೆ ತಿರುವೆಂಗಳೇಶಾ ಎನ್ನು |
ಭೂತ ಕೃತು (ನಾಮಾ) ವಿಜಯವಿಠಲನ ಪಾದವ ಕಾಣೊ ೬

ಕಾಲಮಾನಗಳಿಗೆ ತಕ್ಕಂತೆ

೭೫
ಧ್ರುವತಾಳ
ಮುಸರಿಯಾ ಕರಣಿ ವಸುಧಿಯೊಳಗೆ ಪು-
ಟ್ಟಿಸಿದ್ದೇನೊ ಪಾಪದ ಮಿಶರದಲ್ಲಿ
ಅಸುವ ಕಲ್ಪಿಸಿ ಮತ್ತಾ ಪ್ರಸರದಲ್ಲಿ ನಿತ್ಯ
ಅಸುರಾರಿ ಎಂದು ಕರೆವ ನೊಸಲಿಗೆ ಚಾಚಿದರೆ
ಮುಸಿ ಮುಸಿ ನಗುವರೇನು ಅಸಮ ದೈವ
ಪುಶಿಯಲ್ಲ ಎನಗಿದು ಹೊಸ ಪರಿ ತೋರುತಿದೆ
ಹಸಿವಿ ವೆಗ್ಗಳ ಮಾಡಿ ಘಸವಳಿಸುವ ಬಗೆ
ಭಸುಮಾಸುರಹರ ವಿಜಯ ವಿಠ್ಠಲ ನಿನ್ನ
ರಸರಸಾಯನ ನಾಮ ಉಣಿಸು ಉಚಿತದಲ್ಲಿ ೧
ಮಟ್ಟತಾಳ
ಓದನಕೆ ಹಲವು ಸಾಧನ ಸಂಪತ್ತು
ಸಾಧಿಸಿ ನಾನಾ ಬಾಧೆ ಪಡುತಲಿದೆ
ಹೇ ದಯಾಂಬುಧಿಯೆ ನಾ ಯಾರನ ಸೇರಿ
ಆದರಿಸಲಿನ್ನು ನೀ ದೂರ ನೋಡಿದರೆ
ಮಾಧವ ಯಾದವನೆ ವಿಜಯ ವಿಠ್ಠಲರೇಯ
ಈ ದುರಾಶೆಯಲ್ಲಿ ಪೋದೆನೆ ಹಿಂದಾಗಿ೨
ತ್ರಿವಿಡಿ ತಾಳ
ಕೃತ ತ್ರೇತಾದ್ವಾಪರ ಯುಗದಲ್ಲಿ ಉತ್ತಮರು
ಸತತ ವಾತಾಂಬು ಭಕ್ಷಿಸಿ ಬಹುಕಾಲದಲಿ
ಪ್ರತಿಯಿಲ್ಲದಂಥ ನಾನಾ ತಪಸು ಮಾಡಿ
ಕೃತ ಕೃತ್ಯರಾದರು ನಿನ್ನ ಸುಳುವು ಕಿಂಚಿತ
ಮಾತುರವರು ಕಾಣುವರೋ ದುರ್ಲಭವೆಂದು
ಶ್ರುತಿ ತತಿಗಳು ಬಿಡದೆ ಕೂಗುತಿದೆಕೊ
ತುತಿಗಾಗೋಚರ ನಮ್ಮ ವಿಜಯ ವಿಠ್ಠಲ ಬೊಮ್ಮ
ಪಿತನೆ ಬಾಗಿರಲಾಗಿ ಮತಿಗೆಡಿಸುವರೆ ೩
ಅಟ್ಟತಾಳ
ಅತಿ ಸುಲಭ ಕಲಿಯುಗದಲ್ಲಿ ಸಾಧನ
ಕ್ಷಿತಿಸುರ ಒಂದು ನಿಮಿಷ ನಿನ್ನ ಪಾದ
ರತಿಯಾಗಿ ಮನಸು ದೃಢವಾಗಿ ನಿಲ್ಲಿಸಿ
ನುತಿಸಲು ತಡೆಯದೆ ನಿನ್ನ ಮಂದಿರಕೆ
ಪಥವಾಗುವುದೆಂದು ಕೇಳದೆ ಚನ್ನಾಗಿ
ಹಿತವ ಮಾಡದಲೇವೆ ಅತಿ ಕ್ಷುಧೆಯಿಂದಲಿ
ಗತಿಗೆಡಿಸುವರೇನೊ ಮತಿಯು ಮುಂದೋರದಂತೆ
ಚತುರ ಚಾತುರ್ಯನೆ ವಿಜಯ ವಿಠ್ಠಲ ಎನ್ನ
ಪ್ರತಿ ಪಾಲಿಸಿ ಮನ ಜಿತಮಾಡು ಪೂಜೆಯಲಿ ೪
ಆದಿತಾಳ
ಉಳ್ಳವನಾಗೆ ಲೇಸು ಹೊಲ್ಲೆಯರ ಠಕ್ಕೆಯುಂಟೆ
ನಿಲ್ಲದೆ ನಿನ್ನೊಳು ನೀನೆ ಮೆಲ್ಲನೆ ನಗುವ ಪರಿ
ಬಲ್ಲವರಾರು ಶ್ರೀವಲ್ಲಭನೆ ಎನಗೆ ಇಂಥ
ತಲ್ಲಣ ಪೆಚ್ಚಿಸಿ ಮನ ನಿಲ್ಲದಂತೆ ಮಾಡಿ ಸರ್ವ
ದಲ್ಲಿ ಚಿಂತಿ ಕಲ್ಪಿಸಿದೆ ಒಲ್ಲೆನೊ ಇಹದಲ್ಲಿ ಬಂದು
ಎಲ್ಲ ಪಾಟು ಬಡುವದು ಬಲ್ಲಿದ ವಿಜಯ ವಿಠ್ಠಲ ೫
ಎಲ್ಲಿ ನಿನ್ನಂಥವನ ಕಾಣೆ
ಜತೆ
ನಿಮಿಷಾರ್ಧವಾದರು ನಿನ್ನಂಘ್ರಿಯಲಿ ಮನ
ಸಮನೆನಿಸಿ ಪಾಲಿಸೊ ವಿಜಯ ವಿಠ್ಠಲ ಧೊರಿಯೆ ೬

ದೇಹದಲ್ಲಿರುವ ನಾಡಿಗಳು, ನಾಡಿಗತ

೭೪
ಧ್ರುವತಾಳ
ಮೂಲ ಮೂರುತಿಯಾಗಿ ಏಕಾರ್ಣವದೊಳಗೆ |
ಲೀಲೆಯಿಂದ ಸಣ್ಣ ಬಾಲನಾಗಿ |
ಆಲದೆಲಿಯ ಮ್ಯಾಲೆ ಮಲಗಿದ್ದು ಉದರದೊಳು |
ಮೂಲೋಕವಿಟ್ಟ ಮುದ್ದು ಮೋಹನರಾಯ |
ಕಾಲಾದಿಗಳ ಗೆದ್ದ ಸುಪ್ರತಾಪನೆ ನಿತ್ಯ |
ಶ್ರೀಲತಾಂಗಿಯ ಕೂಡ ಸರಸ ಮಾಳ್ಪ |
ಪಾಲ ಸಾಗರ ಶಾಯಿ ಪರಮ ಕಾರುಣ್ಯ ನಿಧಿಯೆ |
ಮೇಲು ಮೇಲು ನಿನ್ನ ಮಾಯಾಶಕ್ತಿ ಪೇಳಿ |
ಕೇಳುವನಾರು ಅನಂತ ವೇದದಲ್ಲಿ |
ನಾಲಿಗೆ ಸಾಲದೆ ಹಿಂದಹರೊ |
ಜಾಲ ಕರ್ಮಗಳಲ್ಲಿ ಬಿದ್ದ ಜೀವಿಗಳನ್ನು |
ಪಾಲಿಸಬೇಕೆಂದು ದುರ್ಗಾದೇವಿಯು ವೇಗ |
ವಾಲಗ ಮಾಡಿದಳು ಸರ್ವ ದೇವಾದಿ ದೇವನ |
ವಾಲಯ ಶ್ರುತಿಗಳಿಂದ ಕೊಂಡಾಡುತ್ತ |
ಕಾಲವನ್ನೆ ತಿಳಿದು ಅಜನಬ್ದ ದ್ವಾದಶಾರ್ಧ |
ಶೀಲಿಸಿ ಇರಲಾಗಿ ಆರಂಭಿಸಿ |
ಲಾಲಿಸಿ ಹರಿ ತಾನು ಪತ್ನಿಯ ಮಾತಿಗೆ ಹೀ
ಯಾಳಿ ಯಿಂದಲಿ ನಕ್ಕು ಮಲಗಿದವನು |
ಏಳುವನಂತೆ ಕಣ್ಣು ತೆರೆದು ನೋಡಿದ ಅನು
ಕೂಲವಾದನು ಸಿರಿಯ ಭಕ್ತಿಗೊಲಿದು |
ನಾಲ್ಕು ಬಗೆಯ ಸೃಷ್ಟಿ ರಚಿಸುವೆನೆಂದು ಗೋ
ಪಾಲನೆನದನಂದು ಜ್ಞಾನಾನಂದ |
ಆಲೋಚನೆಯ ಮಾಡು ಎಲೊ ಮಾನವನೆ ನೀನು |
ತಾಳಿದ ಪ್ರಥಮದಲ್ಲಿ ಶುದ್ಧ ಸೃಷ್ಟಿ |
ಶೀಲಗುಣ ಸಂಪನ್ನ ನೀನೆ ನಿನಗೆ ನಿತ್ಯ |
ಬಾಳುವೆನವತಾರಗಳನು ಮಾಡಿ |
ಶ್ರೀ ಲಕುವಿ ಮುಕ್ತರಿಗೆ ಪರಾಧೀನ ವಾಪ್ತ ಸೃಷ್ಟಿ |
ಪೇಳುವ ದೇಯಿದೆ ದ್ವಿತಿಯಾ (ಸೃಷ್ಟಿ)ರ್ಥವೋ |
ಸ್ಥೂಲ ದೇಹ ಸಂಯೋಗ ಸಲಿಂಗರಾದ ವಿವಿಧ |
ಆಳುಗಳಿಗೆ ಇದೆ ತೃತೀಯ ಸೃಷ್ಟಿ |
ಸ್ಥೂಲ ಸಂಸಾರದೊಳು ಇಪ್ಪುದಕೆ ಮಿಶ್ರವೆನ್ನಿ |
ನಾಲ್ಕನೆ ಸೃಷ್ಟಿ ಕೇವಲ ನಾಮವೊ |
ಕಾಲ ಕರ್ಮಾದಿ ಯಲ್ಲ ನಿರ್ಮಾಣವಾಗುವುದು |
ಏಳೇಳು ಭುವನದಲ್ಲಿ ಇನಿತು ಜನನ |
ಏಳಲ ಮಾಡದಿರು ಮಿಶ್ರ ಕೇವಲದೊಳಗೆ |
ಕೇಳು ಪ್ರಾಕೃತ ವೈಕೃತ ಸೃಷ್ಟಿಯ |
ಮೇಲೆ ದಿವಿಜಾದ್ಯರಿಂದ ಆಗುವುದೊಂದು ಕೂಡಿದರೆ |
ನಾಲ್ಕು ಮೇಲಾರು ಸೃಷ್ಟಿಯ ವಿವರ |
ನೀಲ ಮೇಘಶ್ಯಾಮ ವಿಜಯ ವಿಠ್ಠಲರೇಯ |
ಬಾಲ ಕ್ರೀಡನಂತೆ ಬೊಮ್ಮಾಂಡ ಪುಟ್ಟಿಸುವ ೧
ಮಟ್ಟತಾಳ
ಬೊಮ್ಮಂಡದ ಹೊರಗಿನ ಪ್ರಾಕೃತ ಗುಣವೈ |
ಷಮ್ಯ ಮಹತತ್ವ ಅಹಂಕಾರ ವೈಕಾರಿಕ |
ಸುಮ್ಮನಸರ ಮನಸು ಜ್ಞಾನ ಕರ್ಮೆಂದ್ರಿಯಗಳು |
ಅಮ್ಮಹ ಪಂಚಭೂತಗಳು ತನ್ಮಾತ್ರಗಳೈದು |
ಬೊಮ್ಮಾಂಡಾಂತರದಿ ಸ್ಠಾವರ ಪಶ್ವಾದಿ |
ಘಮ್ಮನೆ ತಿಳಿವುದು ಪ್ರಾಕೃತ ವೈಕೃತ |
ರಮ್ಮೆಯರಸ ನಮ್ಮ ವಿಜಯ ವಿಠ್ಠಲರೇಯನ |
ಒಮ್ಮೆಗಾದರು ನೆನೆದು ಈ ಪರಿ ಕೊಂಡಾಡಿ ೨
ರೂಪಕ ತಾಳ
ಮತ್ತೆ ದೇವತೆಗಳ ಸೃಷ್ಟಿ ಉಂಟು ಬಗೆ ದೇ |
ವತ್ತೆಗಳು ಸರ್ವ ಪುರುಷಾದ್ಯರ ವಿಡಿದು |
ಪಿತೃ ಋಷಿಗಳು ದಾನವ ಗಂಧರ್ವಾಪ್ಸರ ಸ್ತ್ರೀಯರು |
ಪ್ರತ್ತ್ಯೇಕ ಸಿದ್ಧರು ಯಕ್ಷ ರಕ್ಷ ಚಾರಣ |
ಉತ್ತುಮರಾಗಿಪ್ಪ ಇವರೊಳು ಎಣಿಸು ದೇ |
ವತ್ತೆಗಳು ಎಲ್ಲ ನೂರು ಜನ ಋಷಿಗಳು |
ಪಿತೃಜನ ನೂರು ಮಂದಿ ದಾನವರೊಳು ಮೂ |
ವತ್ತು ಜನ ಗಂಧರ್ವರಿನ್ನೂರು ಇದರಷ್ಟೆ |
ನೃತ್ಯವಾಡುವ ಅಪ್ಪರ ಸ್ತ್ರೀಯರು ಯಕ್ಷ ಎ |
ಪ್ಪತ್ತು ಜನ ಇವರಂತೆ ರಕ್ಷ ಚಾರಣರು ಮೂ |
ವತ್ತು ಜನ ಸಿದ್ಧರು ಇನ್ನೂರು ಜನ ಎ
ಪ್ಪತ್ತು ಎಪ್ಪತ್ತು ಜನ ಸರ್ವ ಜಾತಿಗಳೊಳಗೆ |
ತತ್ವ ಈ ಪರಿ ತಿಳಿದು ನೀಚ ಕ್ರಮದಿಂದ |
ಭಕ್ತಿಯ ಮಾಡು ನೀ ಮನ ಮುಟ್ಟಿ ಮನುಜಾ |
ವಿಸ್ತರಿಸುವೆ ಇದರ ಸಂಗತಿಯು ಮುಂದೊಲಿಸಿ |
ಇತ್ತಲಾದ ಸೃಷ್ಟಿ ಕ್ರಮದಿಂದಲಿ |
ಪತ್ರ ಶಾಯಿ ಶೂನ್ಯ ನಾಮಕ ನಾರಾಯಣ |
ಮೂರ್ತಿ ತಾನೇವೆ ಪುರುಷನಾದನಯ್ಯ |
ಮತ್ತೆ ರೂಪ ಧರಿಸಿ ವಾಸುದೇವನೆಂಬೊ |
ಕೀರ್ತಿಯಿಂದಲಿ ಮಾಯಾ ದೇವಿಯಲ್ಲಿ |
ಪೆತ್ತನು ಪುರುಷ ನಾಮಕ ವಿರಂಚಿಯ ತ |
ತ್ಪತ್ನಿ ಪ್ರಧಾನ ತ್ರಿರೂಪಾತ್ಮಕಳ |
ಸೂತ್ರ ನಾಮಕ ಪ್ರಾಣ ಜಯ ಮುಸಲ ಧರಗೆವು |
ತ್ಪತಿಯಾದನು ಬ್ರಹ್ಮನ ಯೆರಡು ವರುಷಕ್ಕೆ |
ಇತ್ತಲಾದರು ಪ್ರದ್ಯುಮ್ನ ಕೃತಿಗೆ ಸಾ |
ವಿತ್ರಿ ಗಾಯತ್ರಿ ಸರಸ್ಪತಿನಾಮವು |
ಪ್ರತ್ಯೇಕವಾಗಿದ್ದ ಪ್ರಕೃತಿ ಶಬ್ದ ಭಾ |
ರತಿ ಶ್ರದ್ಧೆ ಯೆಂಬೊ ನಾಮವ ಧರಿಸಿ |
ಉತ್ತಮ ಗುಣದಲ್ಲಿ ಈರ್ವರು ಜನಿಸಿ ಸಂ |
ಪತ್ತು ಪಡೆದ ಕಾಣೋ ಅಜ ಪ್ರಾಣರ |
ಪತ್ನಿಯರು ತಾವಾಗಿ ಪ್ರಜಾವಂತರಾದರು ದೇ |
ವತ್ತಿಗಳ ಚರಿಯ ಎಣಿಸಾ ಸಲ್ಲ |
ಸೂತ್ರ ನಾಮಕ ವಾಯು ಜನಿಸಿದ ತರುವಾಯ |
ಅರ್ಥಿಯಿಂದಲಿ ಮೂರು ನಯನ ಶಿವರು |
ಅತ್ಯಂತ ಜಗದ್ಭರಿತ ವಿಜಯ ವಿಠ್ಠಲರೇಯ |
ಪುತ್ರ ಪುತ್ರಿಗಳಿಗೆ ವೈವಾಹ ಮಾಡಿದ ೩
ಝಂಪಿ ತಾಳ
ಮೂರು ವಿಧವಾದ ಅಹಂಕಾರ ತತ್ವವು ವೈ |
ಕಾರಿಕ ತೈಜಸ ತಾಮಸ ಸೂಕ್ಷ್ಮಗಳು |
ಭಾರತಿ ಸರಸ್ವತಿ ಪುಟ್ಟಿದ ವರುಷ ಎರಡು |
ಮೀರಿ ಹೋಗಲು ಪುರುಷ ಪ್ರಕೃತಿಯಲ್ಲಿ |
ವಾರುಣಿ ಪತಿ ಶೇಷ ಜೀವನಾಮಕನಾಗಿ |
ಈರ ಭಾರತಿಗೆ ಕಾಲ ನಾಮಕ ಗರುಡ |
ಈರ ಜನ ಜನಿಸಿದರು ಪ್ರದ್ಯುಮ್ನ ಕೃತಿಯ ಕು |
ಮಾರಿಗಳ ನೋಡೆ ಎರಡೂ ವರುಷಕೆ |
ನೆ[ರೆ]ದ ಕಾಲನಾಮಕ ಗರುಡ ಪರ್ಯಂಕ |
ವಾರುಣಿ ಪತಿಯರು ಹರಿಯ ಸೇವಿಸುತ್ತ |
ವಾರಿಜ ಸಂಭವನ ವರುಷಗಳು ಇಲ್ಲಿಗೆ |
ಆರೊಂದು ಸವೆದವು ಈ ಮಧ್ಯದಲಿ ಈ |
ಮಾರುತನು ಭಾರತಿಯು ಈರ್ವರು ಪುಟ್ಟಿದರು |
ಈರೆರಡು ಶಿರದವನ ಉದರದಲ್ಲಿ |
ಶಾರೀರವನೆ ತೆತ್ತು ಬಲಾಖ್ಯ ನಾಮದಲಿ |
ನಾರಿ ಕೊಡಲಿ ಮೆರೆದ ಮುಖ್ಯ ಪ್ರಾಣ |
ಮಾರ ವೈರಿಯ ಸಮ ಜೀವ ನಾಮಕನು ಈ |
ಮಾರುತನಿಂದಲಿ ಪುಟ್ಟಿ ಪುನಹ ತಾನೆ |
ಪೂರುವದ ಜಯಸುತನ ಗರ್ಭದಲ್ಲಿ ಬಂದ ವಿ |
ಹಾರದಲಿ ಕಾಲನೊಡನೆ ಉರಗೇಶ |
ಸಾರುವೆನು ಜೀವ ಕಾಲಖ್ಯರಾದೊಂದು ವರುಷಕ್ಕೆ |
ವಿರಿಂಚಿ ಬೊಮ್ಮನು ಪ್ರದ್ಯುಮ್ನ ಕೃತಿಗೆ ಕು |
ಮಾರನಾದನು ಒಂದು ವತ್ಸರಕ್ಕೆ |
ಈ ರೀತಿಯನು ತಿಳಿ ಬೊಮ್ಮರಾಯಗೆ ಇಲ್ಲಿಗೆ |
ಆರೆರಡು ವರುಷ ಹೋದವು ಹಿಂದಾಗಿ |
ಸಾರ ಹೃದಯರ ವಾಸ ವಿಜಯ ವಿಠ್ಠಲರೇಯ |
ತಾರತಮ್ಯವ ಮಾಡಿ ಸಕಲರನು ಸಾಕುವಾ ೪
ರೂಪಕ ತಾಳ
ಇದೆ ಅಜನು ತನ್ನ ಪತ್ನಿಯಾದ ವಾಣಿಯ ತ್ರಿ |
ವಿಧ ರೂಪದಲಿ ಅಮೋಘ ವೀರ್ಯವಿಟ್ಟು |
ಅದನ್ನೆಲ್ಲ ಏಕತ್ರಯ ಮಾಡಿ ಗಾಯತ್ರಿ |
ಉದರದೊಳಗೆ ಇಟ್ಟು ಅವಳಿಂದ ತಾನೆವೆ |
ಉದುಭವಿಸಿದನು ಬ್ರಹ್ಮನೆಂಬೊ ನಾಮದಲಿ |
ಮುದದಿಂದ ಸೂತ್ರನಾಮಕ ವಾಯು ರೈ ವಾಣಿ |
ವಿಧಿ ಕೂಡ ಜನಿಸಿದರು ಪುನಹ ಮುಂದೆ ಈ |
ಪದುಮ ಗರ್ಭನು ಪ್ರಥಮ ರೂಪಳಾದ ಸ |
ತ್ವದ ಗಾಯತ್ರಿಯಲ್ಲಿ ವೀರ್ಯವಿಟ್ಟು |
ತದುಪರಿ ಬಲನೆಂಬೊ ಪ್ರಾಣನಿಂದಲಿ ಜನಿ |
ಸಿದ ಜೀವನಾಮಕ ಶೇಷ ದೇವ |
ಮೊದಲು ಉದುಭವಿಸಿದ ವೈಕಾರಿಕ ರುದ್ರ |
ತದ ನಂತರದಲ್ಲಿ ಈರ್ವರ ಹೆಂಡರು |
ಸದಮಲನಾಗಿ ಪುಟ್ಟಿಸಿದನು ಯಿತ್ತಲು ಗಾಯಿ |
ತ್ರಿ ದೆಶೆಯಿಂದ ಬಂದ ವಾಯು ಭಾರತಿಯಲ್ಲಿ |
ಒದಗಿ ಪುತ್ರರಾದರು ಉತ್ಸಹದಲಿ ರಜ ಲಿಂ |
ಶದಲಿ ಗರುಡ ರುದ್ರ ಕಾಲ ತೈಜಸರೆಂದು |
ಸುದತಿಯರೊಡನೆ ಪುಟ್ಟಿದರು ಗಡ ಆಮೇಲೆ |
ವಿಧಿಯಿಂದ ಜನಿಸಿದ ಜೀವನಾಮಕನಿಂದ |
ಉದಿತರಾದರು ತಾಮಸರುದ್ರ ಪಾರ್ವತಿ |
ಮದನ ಕೋಟಿ ಲಾವಣ್ಯ ವಿಜಯ ವಿಠ್ಠಲರೇಯ |
ಅದು ಭೂತ ಶಕ್ತನು ಯೋಗಿಯೋಗೇಶ್ವ ರ ೫
ಧ್ರುವತಾಳ
ಚತುರಾಸ್ಯ ಸೂತ್ರ ಜೀವನಾಮಕ ಶೇಷರಿಗೆ |
ಸತುವ ರಾಜಸ ತಮೊ ಗುಣಾಂಶ ಸೂಕ್ಷ್ಮದಿ |
ಉತ್ಪತ್ತಿಯಾದ ರುದ್ರರ ಮೂರು ರೂಪಗಳು |
ನ್ನತವಾಗಿ ಮೆರೆದವು ವಿಷ್ಣು ಬ್ರಹ್ಮೇಶ ಎಂದು |
ತತು ತತು ಗುಣದಿಂದ ಕರೆಸಿದವಿದರೊಳು |
ಸತುವ ಪ್ರಾಚುರ್ಯವುಳ್ಳ ವಿಷ್ಣುನಾಮಕ ರುದ್ರ |
ಸುತರನ್ನು ಪಡೆದನು ಬುಧ್ಯಭಿಮಾನಿಯಲ್ಲಿ |
ಚತುರರು ತಿಳಿವುದು ಅವರವರ ಪೆಸರು |
ರತಿ ಪತಿ ಸಮನೀತ ಅಹಂಕಾರಿಕ ಬೃಹ |
ಸ್ಪತಿ ಯಿಂದ್ರಾಣಿ ಶುಕ್ರ ಅನಿರುದ್ಧ ರುದ್ರರು ಸು |
ಮತಿವಂತ ನಿಋರತಿ ಮೂಷಕವಾಹ ವಿತ್ತ |
ಪತಿ ಸ್ವಾಹಾ ಸ್ವಧಾ ಬುಧ ಉಷ ಶನಿ ಪುಷ್ಕರ |
ಪಿತರು ಗಂಧರ್ವ ಸಮಸ್ತ ಮುಕ್ತಿ[ಯೋಗ್ಯ]ಜನರು |
ಪ್ರತ್ಯೇಕವಾಗಿ ಜನಿಸಿದರು ಆಗಮ ಕೇಳಿ |
ಪ್ರತಿ ಮಾತು ಇನಿತರೊಳು ಸೂತ್ರ ನಾಮಕ ಭಾ |
ರತಿ ಪತಿಯಲ್ಲಿ ಜನಿಸಿದರು ವಿ |
ಪತಿ ಕಾಲ ನಾಮಕ ಇಂದ್ರ ಮೊದಲಾದವರು |
ಕೃತು ಅಭಿಮಾನಿಗಳು ನಿಜವೆನಿಸಿ ಸೂಕ್ಷ್ಮ ಸೃಷ್ಟಿ |
ಶಿತ ಮೊಗ ಸೌಪರಣಿಗೆ ಜಯ ವಿಷ್ವಕ್ ಸೇನಾದಿ |
ಸುತರಾದರು ಕಾಣೊ ಉಚ್ಛ ಕ್ರಮಾನುಸಾರ |
ಹಿತವೆನ್ನು ಪುನರಪಿ ಸಮಸ್ತ ಪುಟ್ಟಿದ ದೇ |
ವತೆಗಳು ಸ್ಥೂಲ ದೇಹ ಇಚ್ಛೈಸುವರಾಗಿ |
ಅತಿಶಯದಿಂದಲ್ಲಿ ತಮ್ಮ ತಮ್ಮ ಅಂಶ ಮಿ |
ಳಿತವಾಗಿ ಶ್ರೀಹರಿಯಾಜ್ಞಾನು ಸಾರದಿ |
ಕೃತಿ ಪತಿಯಾದ ಪ್ರದ್ಯುಮ್ನ ಸ್ವಾಮಿಯ ಉದರ |
ಗತಿ ತಪ್ಪದಂತೆ ಪ್ರವೇಶವಾದರು ಮುಂದೆ |
ಕೃತು ಭುಜ ಸಾವಿರ ವರುಷ ತನ್ನ ಗರ್ಭದಿ ಅ |
ಚ್ಯುತನು ಇಟ್ಟು ಕೊಂಡು ಆಮೇಲೆ ಶಾಂತಿಯ |
ಪತಿಯ ಕೈಗೆ ಕೊಡಲು ಸರ್ವ ಜೀವರ ನೋಡಿ |
ಚತುರ ಮೂರುತಿ ಸ್ಥೂಲ ಗಾತ್ರವನ್ನೆ ನಿ |
ರ್ಮಿತ ಮಾಡಲಾಗಿ ಪ್ರದ್ಯುಮ್ನ ತನ್ನ ಗರ್ಭದಿ ನ |
ಗುತ ಪೊಂದಲಿಟ್ಟುಕೊಂಡ ಇಲ್ಲಿಗೆ ಅಜನಬ್ದ |
ಮಿತವಾದವು ಕೇಳಿ ಜೀವಕಾಲರ ಉ |
ತ್ಪತಿಯಾರಂಭಿಸಿ ಧ್ವಯ ಸಂದಿದವು ಎಲ್ಲ |
ಚತುರ ವಿಧ ಸೃಷ್ಟಿ ಮೊದಲು ಮಾಡಿ ಇಲ್ಲಿಗೆ |
ಚತುರಾನನನ ವರುಷ ಹತ್ತು ಸಂದಿ ಪೋದುವು |
ಪ್ರತಿಯಿಲ್ಲದ ದೈವ ವಿಜಯ ವಿಠ್ಠಲರೇಯ |
ಸ್ತುತಿಸಿದವರಿಗೆ ಈ ಪರಿಯಿಂದ ಪ್ರೇರಿಸುವ ೬
ಝಂಪಿ ತಾಳ
ಸರಸಿಜ ಸಂಭವನ ಹನ್ನೊಂದನೆಯ ವರುಷ |
ಬರಲಾಗಿ ಪ್ರದ್ಯುಮ್ನ ಅರ್ಧನಾರಿಯ ರೂಪ |
ಧರಿಸಿದನು ವರ್ಣಭೇದದಿಂದಲಿ |
ಸರುವ ಜೀವರನು ಸೃಜಿಸಿದನು ಹೆಂಗಳ ಪೂಂಸ |
ಇರುತಿಪ್ಪದು ವಿಸ್ತಾರವಾಗಿ |
ಅರಿಯಬೇಕು ಸವ್ಯಾಪಸವ್ಯದಿಂದ ಚ |
ತುರ ಸ್ಥಾನವ ತಿಳಿದು ಮುಖ ಬಾಹು ಉರಂಘ್ರಿ |

ಹನ್ನೆರಡು ನುಡಿಗಳುಳ್ಳ ವಿಸ್ತಾರವಾದ

೭೫
ಧ್ರುವತಾಳ
ಮೂಲಾಧಾರದಲ್ಲಿ ಚತುರ ದಳ ಪದುಮ ಪ್ರ
ವಾಳ ಮಣಿ ಮರ್ಣದಂತೆ ಇಪ್ಪದು
ಏಳು ಮರುತ ಜನ ಅಲ್ಲಿ ವಾಸಾ
ನಾಲ್ಕು ವೇದಂಗಳು ಒಂದೊಂದು ದಳದಲ್ಲಿ
ಮೇಲಾಗಿ ಇರುತಿಪ್ಪವು ಪೊಳೆವುತ್ತಲ್ಲೀ
ವಾಲಯ ಬ್ರಹಸ್ಪತಿ ಸೋಮಜ ಸೋಮ ಶನಿ
ಕಾಲ ಪೋಗಾಡದೆ ನಿರುತ ಅಲ್ಲಿ
ಶೀಲ ಗುಣರಾಗಿ ಭಗವಧ್ಯಾನವ ಮಾಳ್ಪರು
ಆಳುಗಳಾಗಿ ತಮ್ಮಿಂದುತ್ತಮರಿಗೆ
ಶ್ರೀಲೋಲ ಅನಿರುದ್ಧ ನಿಯಾಮಕ ಮಿಕ್ಕ
ನೀಲ ವರ್ಣಾದಿ ಮೂರ್ತಿ ಅಲ್ಲಿವುಂಟು
ಕಾಲ ಚಕ್ರದಂತೆ ಜಡವಾಯು ಸಂಚಾರ
ಮೇಲದೋಭಾಗ ಬಿಡದೆ ತಿರಗುವದು
ಪೇಳುವೆ ಸ್ವಾಯಂಭುವ ಇದಕ್ಕೆ ಅಭಿಮಾನಿಯಾಗಿವಿ
ಶಾಲ ಚಿತ್ತದಲ್ಲಿ ಅನಿರುದ್ಧನ್ನ
ಆಲಸ್ಯವಿಲ್ಲದೆ ಆರಾಧಿಸುವ ಕರು
ಣಾಳಿನ ಭಕ್ತಿಯಲಿ ಲೋಲಾಡುತ
ಬಾಲ ಗೋಪಾಲ ವಿಜಯ ವಿಠಲರೇಯ
ಪಾಲ ಸಾಗರ ಶಾಯಿ ಅಪ್ರತಿಹತನಯ್ಯಾ ೧
ಮಟ್ಟತಾಳ
ಪೊಕ್ಕಳ ಭಾಗದಲಿ ಆರುದಳ ಕಮಲಾ
ರಕ್ತ ನೀಲ ವರ್ಣ ಸಪ್ತವಾಯುಗಳಲ್ಲಿ
ತಕ್ಕವರು ಆರುಜನ ಹರಿ ರಾಣಿಯರು
ಮುಕ್ಕಣನ ಪುತ್ರ ಗಣಪತಿ ಅಭಿಮಾನಿ
ಚಕ್ಕನೆ ವಿಶ್ವಮೂರ್ತಿಯ ಪೂಜಿಸುವ
ಲಕುಮಿಯ ರಮಣ ಪ್ರದ್ಯುಮ್ನ ನಿಯಾಮಕನು
ರಕ್ಕಸರಿಪು ಸಿರಿ ವಿಜಯ ವಿಠಲರೇಯ
ಪಕ್ಕಿ ಹಾರುವ ದೇಶ ನಿರ್ಮಿಸಿ ಇಪ್ಪ ೨
ತ್ರಿವಿಡಿ ತಾಳ
ಹೃದಯದಲ್ಲಿ ಎಂಟುದಳದ ಕಮಲವು ಉಂಟು
ಉದಯಾದಿತ್ಯ ವರ್ಣದಂತಿಪ್ಪದು
ಅದರಲ್ಲಿ ಅಷ್ಟು ವಸು ದಿಕ್ಪಾಲಕರುಂಟು
ಮುದದಿಂದ ಸಪ್ತ ಸಮೀರವಾಸ
ತ್ರಿದಶ ನಾಯಕ ಇದಕೆ ಅಭಿಮಾನಿಯಾಗಿ ನಿ
ತ್ಯದಲಿ ಉಪೇಂದ್ರನ ಪೂಜಿಸುವಾ
ಇದರ ನಿಯಾಮಕ ಸಂಕರುಷಣ ಎನ್ನಿ
ಪದೊಪದಿಗೆ ಖಳನ ದಹಿಸುವನು
ಸದಮಲರಾಗಿ ಲಕುಮಿ ನಾರಾಯಣ
ಎದಿರಲಿ ಇಪ್ಪ ಪ್ರಾಜ್ಞಾನೆಂಬ ರುದ್ರ
ಸುದರಶನ ಶಂಖ ಗದಾ ಪದುಮ ಧರಿಸಿ ಚತುರಹಸ್ತ
ಹದುಳ ಕೊಡುತಲಿಪ್ಪ ಭಕ್ತಜನಕೆ
ಪದವಿಗೇ ಈತನಿಂದಲಿ ಅಪರೋಕ್ಷ ವಾ
ಗದೆ ಬಿಂಬನ ಕಾಂಬುವ ಮಾರ್ಗವಿಲ್ಲಾ
ಇದೆ ಮೂರುತಿ ಮುಕುತಿ ಯೋಗ್ಯ ಸ್ವರೂಪದಂತೆ
ತದನಂತರದಲ್ಲಿ ತನ್ನಾ ಕಾರವಾ
ಹೃದಯಾದೊಳಗೆ ಒಳಗೊಳಗೆ ಪೊಳೆದು ಸ
ನ್ನಿಧಿಯಾಗಿಪ್ಪದು ಲಿಂಗದೊಳಗೇ
ಇದೆ ಪೋಗಲು ವಿರಜಾನದಿಯ ಸ್ನಾನದಿಂದ
ಒದಗಿ ಜೀವನದಂತೆ ದೇವನಿಪ್ಪಾ
ಪದುಮನಾಭ ನಮ್ಮ ವಿಜಯ ವಿಠಲರೇಯ
ತ್ರಿದಶ ಲೋಕದಲ್ಲಿ ಸುರರ ಕೂಡಾಡುವ ೩
ರೂಪಕ ತಾಳ
ಉರದಲ್ಲಿ ದ್ವಾದಶ ದಳವುಳ್ಳ ಸರಸಿಜ
ಮಿರಗುತಿದೆ ನೋಡಿ ಮುತ್ತಿನ ವರ್ಣದಲ್ಲಿ
ಉರುಕ್ರಮ ಸಹಿತ ದ್ವಾದಶ ಅಂಶು ಮಾಲೆಗಳು
ಮರುತ ಜನ ಜನ ಸಪ್ತರು ಮಹಾರುದ್ರ ಅಭಿಮಾನಿ
ನರಸಿಂಹ ಮೂರುತಿಯ ಪೂಜೆ ಮಾಡುತಲಿಪ್ಪ
ಗಿರಿಜೆ ಸಮೇತದಲಿ ಮುಂದೆ ಅಹಿಪತಿಯೆಂದು
ಹರಿನಾಮಕ ಪರಮಾತ್ಮ ನಿಯಾಮಕನಾಹಾ
ಸುರರು ವಾಲಗದಿಂದ ಜಯ ಜಯವೆನುತಿಹರು
ಮೆರೆವ ವೈಭವದಿಂದ ವಿಜಯ ವಿಠಲ ಮಹಾ
ಧರಣಿಗೊಡೆಯನಾಗಿ ಗತಿಕೊಡುವ ನಮಗೆ ೪
ಝಂಪೆ ತಾಳ
ಇಂದ್ರ ಯೋನಿಯಲ್ಲಿ ಷೋಡಶ ದಳವುಳ್ಳ ಅರ
ವಿಂದ ಧವಳ ವರ್ಣದಂತಿಪ್ಪದು
ಚಂದ್ರ ಕಲಾಭಿಮಾನಿಗಳು ಅಲ್ಲಿ ವಾಸಾ
ಮುಂದೆ ದಧಿವಾಮನನ್ನು ಧ್ಯಾನಿಸುವ
ಅಂದವಾಗಿ ಸಪ್ತ ಮರುತಗಳು ಉಂಟು
ಘಣೀಂದ್ರನು ಅಭಿಮಾನಿ ಆ ಸ್ಥಾನದಲ್ಲಿ ವಾಸಾ
ನಂದ ಮೂರುತಿ ಲಕುಮಿರಮಣನ್ನ ಪೂಜಿಸುವ
ಪೊಂದಿಪ್ಪ ನಾರಾಯಣ ನಾಮಕ ಪರಮಾತ್ಮ
ಸಂದೇಹವಿಲ್ಲ ನಿಯಾಮಕನಾಗಿ ಗುಣ
ವೃಂದದಲ್ಲಿ ಪಾಲಿಸುವ ಸರ್ವರನ್ನು
ನಂದ ಗೋಪನಕಂದ ವಿಜಯ ವಿಠಲರೇಯ
ಎಂದೆಂದಿಗೆ ನಿತ್ಯ ತೃಪ್ತ ಜನರಲ್ಲಿ ವಾಸಾ ೫
ಧ್ವಿದಳವುಂಟಾದ ಕಮಲ ಭ್ರೂಮಧ್ಯದಿ
ಮಧು ಪುಷ್ಪ ವರ್ಣದಂತಿಪ್ಪದು ಆವಾಗ
ಪದುಮ ಸಂಭವ ವಾಯುವಾಸ ದ್ವಯಭಾಗ
ಪದುಮನಾಭನ ವಹನ ಅಲ್ಲಿ ಅಭಿಮಾನಿ
ಸದರವಿಲ್ಲದೆ ಕೃಷ್ಣನ ಧೇನಿಸುವ ಜ್ಞಾ
ನದಲಿ ಕೊಂಡಾಡುತ ಸಪ್ತ ಮರುತ ಜನ
ಮೊದಲಾದವರು ಸೇವಿಸುವರು ಹರಿಪಾದ
ಇದಕೆ ನಿಯಾಮಕ ಕೃಷ್ಣನೆಂಬ ಮೂರುತಿ
ಅದುಭೂತ ಮಹಿಮನೆ ವಿಜಯ ವಿಠಲರೇಯ
ಉದಯ ಭಾಸ್ಕರನಂತೆ ತಪಕೆ ಮೆಚ್ಚಿ ಪೊಳೆವಾ ೬
ಆದಿತಾಳ
ಸಾಸಿರ ದಳವುಳ್ಳ ಕಮಲ ಶಿರಸಿನಲ್ಲಿ
ಲೇಸಾಗಿ ಒಪ್ಪುತಿದೆ ವಜ್ರ ಪ್ರಕಾಶದಂತೆ
ವಿಶ್ವಾದಿ ರೂಪಗಳು ಒಂದೊಂದು ದಳದಲ್ಲಿ
ವಾಸವಾಗಿಪ್ಪ ತನ್ನಾಮಕ ಪ್ರಾಣ
ಸೂಸಿದ ಭಕ್ತಿಯಿಂದ ಭಜನೆ ಮಾಡುವ ನಿತ್ಯ
ವಾಸವಾದ್ಯರಿಂದ ಸ್ತುತಿಸಿಕೊಳ್ಳುತ
ಲೇಶ ಬಿಡದೆ ಇಲ್ಲಿ ಲೋಕೇಶ ಅಭಿಮಾನಿ
ಮೀಸಲ ಮನದಲ್ಲಿ ರಂಗನ್ನ ಧ್ಯಾನಿಸುವ
ವಾಸುದೇವ ನಾಮಕ ಪರಮಾತ್ಮ ನಿಯಾಮಕ
ದಾಸೋಹಂ ಎಂದವಗೆ ಸರ್ವದಳದಲ್ಲಿ ಪೊಳೆವ
ವಾಸುಕಿ ಶಯನ ನಮ್ಮ ವಿಜಯ ವಿಠಲರೇಯ
ಮೋಸವಿಲ್ಲಿದೆ ತನ್ನ ಸ್ಥಾನದಲ್ಲಿಟ್ಟು ಪೊರೆವಾ ೭
ಜತೆ
ಬ್ರಹ್ಮನಾಡಿಯೊಳಗೀ ಪರಿ ವಿಧ ಉಂಟು
ಬ್ರಹ್ಮಾತೀತ ನಮ್ಮ ವಿಜಯ ವಿಠಲಸ್ವಾಮಿ ೮

ಭಗವಂತನು ಭಕ್ತನು ಕೊಡುವ

೭೬
ಧ್ರುವತಾಳ
ಮೇರು ಪರ್ವತ ಲಕ್ಷ ಯೋಜನೋಚ್ಚಿತ ಹದಿ |
ನಾರು ಸಾವಿರ ಯೋಜನ ಭೂಮಗ್ನಾ |
ಚಾರುವಾಗಿಪ್ಪದು ಕನಕ ಮಯದಿಂದ |
ಸಾರಿರೈ ಉಳಿದ ಲೆಖ್ಖ ಊಡಸ್್ರ್ವ ಭಾಗ ವಿ |
ಸ್ತಾರವಾಗಿದೆ ನಾಲ್ಕು ಎಂಭತ್ತು ಸಹಸ್ರ ವಿ |
ಚಾರ ಯೋಜನವಲ್ಲಿ ಸುರ ಮಂದಿರ |
ಈರೆರಡು ನಾಲ್ಕು ಶೃಂಗದಿಂದೊಪ್ಪುವುದು ಶೃಂ |
ಗಾರ ವನಗಳುಂಟು ವಾಪಿಕೂಪ |
ವಾರಿಜಸಂಭವಸದನ ಈರೈದು ಸಾ |
ವೀರ ಯೋಜನದಗಲ ಮಧ್ಯ ಗಂಗೆ |
ಹಾರಿ ಯೋಜನ ಪರಿಮಿತ ಧುಮುತಿ ವಿ |
ಹಾರದಿಂದಲಿ ಚತುರ ಭಾಗವಾಗಿ |
ವಾರಿಧಿ ಕೂಡಿಗಳು ಪೂರ್ವದಿಕ್ಕಿನಲ್ಲಿ |
ಮೂರೊಂದು ನಾಮ ಭೇದ ನಿರ್ಮಿಳನಾಗಿ |
ಐರಾವತಗಮನ ದಿಕ್ಪಾಲಕರ ಆ |
ಗಾರ ಸಹಸ್ರ ಎರಡುವರೆ ಯೋಜನ |
ಸೂರ್ಯನ ರಥದ ಕೀಲು ಕವಿಸಿದೆ ಈ ಗಿರಿಗೆ |
ವಾರವಾರಕ್ಕೆ ಸುತ್ತ ತಿರುಗುವುದೊ |
ಆರೆರಡಾದಿತ್ಯ ಜನ ಮಾಸ ಮಾಸಕ್ಕೆ ವ್ಯಾ |
ಪಾರ ಮಾಡುವರು ಕರ್ಮ ಸಾಕ್ಷಿ |
ನಾರಾಯಣ ಗುಣ ಪೂರ್ಣ ಮೇರುವಿಗೆ ತಾನೆ ಆ |
ಧಾರವಾಗಿ ಇಪ್ಪುದು ಶಿಂಶುಮಾರ |
ಮೂರುತಿಯಾಗಿ ಮುದದಿ ಪೊಳೆವ ಯೋಜನ ಮುವ್ವ |
ತ್ತಾರು ಲಕ್ಷ ಪರಿಮಿತ ನಾನಾ ಮಹಿಮ |
ಸೇರಿಕೊಂಡಿಪ್ಪ ತನ ವಾಲಾಗ್ರದಲ್ಲಿ ಮಂತ್ರ |
ಈರಾರು ವರಣ ಜಪಿಸಿದ ಬಾಲಕ |
ಆರಿಗೆ ವಶವಲ್ಲ ಆ ಪದವಿ ಮಗುವಿಗೆ |
ನಾರದ ಮುನಿಯಿಂದ ಪ್ರಾಪ್ತವೆನ್ನಿ |
ಈ ರೀತಿಯನ್ನೆ ಗ್ರಹಿಸು ಇತ್ತ ಲಾಲಿಸು |
ಮೇರು ಶೈಲದ ಅಧೋಭಾಗದಲ್ಲಿ |
ಪೌರಸ್ತ ಮಿಗಿಲಾದ ಚತುರ ಕಕುಭದಲ್ಲಿ |
ಈರೈದು ದಳ ಕೇಸರ ಪರ್ವತ |
ಬ್ಯಾರೆ ಬ್ಯಾರೆ ಒಂದೊಂದು ನಾಮದಿಂದದೊಪ್ಪುತಿವೆ |
ಕುರಂಗ ಕುರವ ವೈಕಂಕ ಕುಸುಂಭಕಾದ್ರಿ |
ಮೂರು ಕೂಟ ಸಮೇತ ಇಂದ್ರದಿಶೆಗೆ |
ಸಾರು ಪತಂಗ ಶಿಖರ ಉತ್ಸಂಗ ನಿಷೇದ ಮತ್ತೆ |
ತೋರುವ ಶಿತ ವಾಸುಕಿ ದಕ್ಷಿಣ ದಿಶೆಗೆ |
ಸಾರು ಪತಂಗ ಶಿಖರ ಉತ್ಸಂಗ ನಿಷೇದ ಮತ್ತೆ
ತೋರುವಶಿತ ವಾಸುಕಿ ದಕ್ಷಿಣದಿಶಿಗೆ |
ವಾರೀಶನ ಕಾಷ್ಟಕ್ಕೆ ಕಪಿಲ ಶಂಖ ವೈಪಡೂರ್ಯ |
ಚಾರುಧಿ ಹಂಸವೆಂಬೊ ಪರ್ವತಾವೈದು |
ಓರಂತೆ ಗುಣಿಸು ವೃಷಭ ನಾಗ ಕಾಲಾಂಜನ |
ನಾರದಾಖ್ಯಗಿರಿ ಚಂದ್ರನ ಕಣಿವೆಗೆ |
ದಾರಡ್ಯಮಾದ ಕೇಸರ ಪರ್ವತಗಳನಿತು |
ವಾರಿತಿ ಕೇಳು ಮುಂದೆ ಮಂದರಾದ್ರಿ ಮೇರು ಮಂ |
ದರ ಪಾಶ್ರ್ವ ಕುಮುದ ನಾಮದಿಂದ |
ಮೂರೊಂದು [ಕು]ಲಗೋತುರ ಸಿದ್ಧವೆನ್ನಿ |
ಬ್ಯಾರೆ ಏ[ತ]ಕ್ಕೆ ಲೆಖ್ಖ ಹತ್ತು ಸಾ |
ವೀರ ಯೋಜನ ಉನ್ನತ ನೋಡಿರೊ |
ಕಾರಣವಾಗಿವೆ ಇಷ್ಟು ಯೋಜನ ಸುತ್ತ |
ಭಾರಣೆಯಾಗಿರ್ದ ಜಂಬು ಚೂತ ಕದಂಬ |
ಚಾರು ನ್ಯಗ್ರೋಧ ಯಿತ್ತ ಗಿರಿಗಿರಿಯಲ್ಲಿ |
ಭೂರುಹ ಉಂಟಾಗಿದೆವೆ ಉಂದೊಂದು ಹನ್ನೊಂದು |
ನೂರು ಗಾವುದ ಉದ್ದ ಶಾಖೆಯಿಂದ |
ಕ್ಷೀರ ಮಧು ದಿವ್ಯ ಘೃತ ಶುದ್ಧೋದಕ ಹೃದ |
ನೂರು ಗಾವುದ ವೊಂದೊಂದು ಕಾಣೊ |
ಸರೋರವು ನಾಲ್ಕು ಅರಣೋದೆಯು ಭದ್ರೆ |
ಚಾರು ಸೀತೋದೆ ಮಾನಸವೆಂದು |
ನೀರೆ ಹೊಳೆವ ಸನಂದನ ಚಿತ್ರರಥ ವಿಭ್ರಾಜಿಕ |
ವಿೂರಿದ ಸರ್ವತೋಭದ್ರ ಪೆಸರು |
ಚಾರು ಸುರರಿಂದೊಪ್ಪುವ ಚೂತಾದಿ ವೃಕ್ಷ ನಿತ್ಯ |
ಕೋರಿದ ಜನಕೆ ಮನೋಭಿಷ್ವ ಸಲಿಸಿ |
ದಾರಾದಿ ಮೊದಲಾದ ಬಂಧು ಬಳಗ ಪರಿ |
ವಾರದೊಡನೆ ಸರ್ವದೇವಾದ್ಯರು |
ತಾರತಮ್ಯದಿಂದ ಕ್ರೀಡಿಸುವರು ಭಂ |
ಗಾರ ಭೂಷಣ ನಾನಾ ಭೋಗದಿಂದ |
ವೈರತ್ವವನ್ನು ಮರೆದು ಖಗ ಮೃಗ ಜೀವಿಗಳು |
ಭೋರನೆ ಆಡುತಿವಕೊ ತತ್ಕಾಲಕ್ಕೆ |
ತೇರು ಶೃಂಗರಿಸಿದಂತೆ ವನಗಳ ಸಂಭ್ರಮ |
ಆರಿಗಾದರು ಸರಿಯೆ ತುತಿಸ ಸಲ್ಲ |
ಮ್ಯಾರೆದಪ್ಪದೆ ನಾಲ್ಕು ಕೀಲ ಪರ್ವತದಂತೀ ವಿ |
ಚಾರ ವೆಣಿಸೆ ಮುಂದೆ ಪರಿಸ್ತೀರ್ಣದ |
ಧಾರಣಿಧರಗಳು ಎರಡೆರಡು ಇವೆ ಇವು |
ಈರಾರು ಸಾವಿರ ಯೋಜನ ಅಗಲ ಉದ್ದ |
ಮೂರು ಮೂರು ಒಂಭತ್ತು ಯುತ ಯೋಜನದಿಂದ |
ಪಾರುಗಂಡಿವೆ ಪೂರ್ವ ದಿಶಿಗೆ |
ಹಾರೈಸು ಜಠರ ದೇವ ಕೂಟ ಕೈಲಾಸ ಕರ |
ವೀರ ಪವನ ಪರಿಯಾತ್ರ ಸೃಂಗ |
ಪೂರಿತ ಮಕರ ಭೂಭ್ರುತು ನಾಲ್ಕು ಪರಿ |
ಸ್ತೀರ್ಣಾ ಸುಮೇರುವಿಗೆ ಸುತ್ತ ಶೋಭಿಸುತಿವಕೊ |
ಗೌರೀಶ ಕೈಲಾಸದಲ್ಲಿ ವಾಸವಾಗಿ |
ಶ್ರೀರಾಮ ಧ್ಯಾನವ ಮಾಡಿವನೊಲಿದು |
ಆರಾರು ಕಡಿಮೆ ಯೆರಡು ಸಹಸ್ರ ಯೋಜನೆ ವಿ |
ಸ್ತಾರ ಚತುರಶ್ರವಾದ ಮಧ್ಯಖಂಡ |
ಧಾರಳಾ ಇಳಾವೃತ್ತ ವೆಂಬೊ ಪೆಸರು ಉ |
ದ್ಧಾರವಾಗಿದೆ ಪಿಂತೆ ನುಡಿದುದೆಲ್ಲ |
ಶೌರಿ ಪಾದೋದಕಧರ ಶಂಭು ಈ ವರ್ಷದಲ್ಲಿ |
ವಾರುಣಿ ಪತಿಯಂತರ್ಗತವಾಗಿರ್ದ |
ಮಾರುತ ಜನಕನ್ನ ಸಾಸಿರ ವದನನ್ನ |
ಆರಾಧನೆ ಮಾಳ್ಪ ಮಾನಸದಲ್ಲಿ |
ಮಾರಾರಾತಿಗೆ ಮುಂದೆ ಶೇಷ ಪದವಿ ಒಪ್ಪೋದು |
ಮೂರನೇ ಈಶ್ವರ ನೀತ ಕಾಣೊ |
ಶಾರದಾ ಪತಿ ಪಿತ ವಿಜಯ ವಿಠ್ಠಲರೇಯನ |
ಕಾರುಣ್ಯದಿಂದಲಿ ಮುಂದಗಾಗಮ ಕೇಳು ೧
ಮಟ್ಟತಾಳ
ಪೊಳೆವ ಇಳಾವೃತ್ತ ಖಂಡದ ಸುತ್ತಲು |
ಉಳಿದ ಅಪ್ವವರ್ಷ ಉಂಟಾಗಿವೆ ನೋಡು |
ತಿಳಿವುದು ಭದ್ರಾಶ್ವ ಕೇತುಮಾಲ ಉಭಯ |
ನೆಲೆ ಮೂವತ್ತೊಂದು ಸಾವಿರ ಯೋಜನ ವೆ |
ಗ್ಗಳ ಗುಣಿಸು ಪೂರ್ವ ಪಶ್ಚಿಮ ದಿಕ್ಕು ಭಾಗ |
ನಿಲವರ ಹರಿವರ್ಷ ಕಿಂಪುರುಷ ನಾಭಿ |
ಜಲಜಾಪ್ತನ ಸಂತನ ಭಾಗಕೆ ಉತ್ತರಕೆ |
ತಿಳುಪುವೆ ರಮ್ಯ ಹಿರಣ್ಮಯ ಕುರುಖಂಡ |
ನೆಲೆ ಒಂದೊಂದು ಉದಧಿ ಪರಿಯಂತ |
ಸಲೆ ಒಂಭತ್ತು ಸಾವಿರ ಯೋಜನಗಣನೆ |
ಬಲಿಸಿ ಕೊಂಡಿಪ್ಪವು ಆರು ವರುಷ ಇನಿತು |
ಬಳಿ ಬಳಿಯಲ್ಲ ಪೂರ್ವ ಪಶ್ಚಿಮ ದೀರ್ಘ |
ಒಳಿತಾಗಿ ಒಂದೊಂದು ಧನುರಾಕಾರವು |
ಉಳಿದ ನಾಲ್ಕು ಖಂಡ ಸ್ವಲ್ಪು ಸಮ ವಿಷಮಾ |
ಜಲಜನಾಭ ರಂಗ ವಿಜಯ ವಿಠ್ಠಲರೇಯ |
ಸುಲಭ ಮತಿಗಳಿಗೆ ಮನದಿಂದ ನುಡಿಸುವನು ೨
ರೂಪಕ ತಾಳ
ಮರಿಯಾದೆ ಪರವತ ಮೊಂದೊಂದು ವರ್ಷಕ್ಕೆ |
ಸ್ಥಿರವಾಗಿಪ್ಪವು ಕೇತುಮಾಲಾ ಭದ್ವಶ್ವ |
ಎರಡು ಖಂಡಕ್ಕೆ ಮಾಲ್ಯವಂತ ಗಂಧ ಮಾದನ |
ಗಿರಿಗಳಿವೆ ಉದ್ದ ವಿಸ್ತಾರ ದ್ವಯ ಸಾ |
ವಿರ ಯೋಜನ ನೀಳ ಮೂವತ್ತು ನಾಲ್ಕು |
ಇರತಕ್ಕ ಯೋಜನ ಇಳಾವರ್ತದಂತೀವೆ |
ಪರಿಮಿತ ದಕ್ಷಣೋತ್ತರ ಕೈಲಾಸದ |
ಗಿರಿಯ ತಪ್ಪಲ ವೈಶ್ರವಣನ ಮನೆಯುಂಟು |
ಮಿರುಗುವ ಮಹ ಬದರಿ ಕಾಶ್ರಮದಲ್ಲಿ ಶ್ರೀ |
ಹರಿ ಅವತಾರ ವೇದವ್ಯಾಸ ನಿಜ |
(ಹ) ನರಸಿಂಹ ಕಾಣೊ ಯಿಂದ್ರಾದಿಗಳೆಲ್ಲ ವೋದುವರು ವಿದ್ಯ |
ಗುರುತು ಗಂಧ ಮಾದನಗರಿ ಪೂರ್ವಕ್ಕೆ |
ಮರಳಿ ಮಿಕ್ಕಾರು ಖಂಡಕ್ಕೆ ಉಳಿದ ಮರಿಯಾದೆ |
ಗಿರಿಗಳು ಯಿದರಲ್ಲಿ ದಕ್ಷಣ ಭಾಗಕೆ ನಿಷಧ |
ಸರಿ ಹೇಮ ಕೂಟ ಹಿಮಾಲಯ ಪೆಸರು ಉ |
ತ್ತರಕೆ ನೀಲ ಶ್ವೇತ ಶೃಂಗ ಮಾಲ್ಯವಂತ ವೆಂದು |
ಕರೆಸಿ ಕೊಳುತಿಪ್ಪವು ಮೊಂದೊಂದು ಯೋಜನ |
ಎರಡು ಸಾವಿರ ವುದ್ಧ ವಿಸ್ತೀರ್ಣ ಅಷ್ಯೆ ನಿಂ |
ದಿರದೆ ನೀಳ ಲಕ್ಷ ತೊಂಭತ್ತಾರು ಸಾ |
ವಿರ ಮತ್ತೇ ವೊಂದಕ್ಕೆ ಹತ್ತು ಕಡಿಮೆ ಲೆಖ್ಖ |
ಚರಿಯವಾಗಿದೆ ಪೂರ್ವ ಅಪರಭಾಗಕೆ ಆರು |
ಶರಧಿ ಪರಿಯಂತ ಸಮ್ಮಂಧವಾಗಿವೆ |
ಭರತ ಖಂಡಗಳಲ್ಲಿ ಪಾಪ ಪುಣ್ಯಗಳಿಂದ |
ನರರಿಗೆ ಸಾಧನ ಸ್ವರ್ಗಾ ಪವರ್ಗ ಬಲು |
ನರಕಕ್ಕೆ ಆವಾವ ಸುಖದುಃಖಾನುಭವಕೆ |
ಸುರರಾದಿಗಳು ಪುಟ್ಟಿ ಕರ್ಮ ತೀರುವುದಕ್ಕೆ |
ಹರಿ ಅವತರಿಸಿ ನಾನಾ ಲೀಲೆ ತೋರುವ |
ಭರತ ಖಂಡ ಕರ್ಮಭೂಮಿ ಕಣೊಯಿಲ್ಲಿ |
ಸುರನದಿ ಮಿಗಿಲಾದ ನದಿ ಪುಣ್ಯಕ್ಷೇತ್ರಗಳು |
ವರತೀರ್ಥರಾಜ ವೆಂದೆನಿಸುವ ಪ್ರಯೊಗ |
ಪರಿ ಪರಿ ವ್ರತ ದಾನ ಆಚಾರ ವಿಚ್ಯಾರ |
ಕರಣ ಶುದ್ಧಿಗೆ ಯಿಲ್ಲಿ ಸಂಸಾರದಲಿ ಬೇಕು |
ಹರಿಯ ಕಾಂಬುವದಕ್ಕೆ ಯಿದೆ ಮಹ ವುತ್ತಮ |
ಧರಣಿ ಕಾಣುವರು ಜ್ಞಾನ ಭಕ್ತಿ ವೈರಾಗ್ಯಗಳು |
ಗರುದ್ವಾರದಿಂದಲಿ ದೊರಕುವವು ನಿತ್ಯ |
ತರುವಾಯ ಕೋಲ ಕಮಠ ಮತ್ಸ್ಯ ಹಯಗ್ರೀವ |
ನರಸಿಂಹ ರಾಮ ನರ ನಾರಾಯಣ ಪ್ರದ್ಯುಮ್ನ |
ವರ ಮೂರ್ತಿಗಳಕ್ಕು ಧರಣಿ ಆರ್ಯಮ ಮನು |
ಅರಸು ಬಧ್ರಾಶ್ವ ಪಲ್ಹಾದಾಂಜನೇಯ |
ಸುರ ಮುನಿ ನಾರದ ರತಿದೇವಿ ಯಿವರೆಲ್ಲ |
ಪರಮ ಭಕುತಿಯಿಂದ ವೊಂದೊಂದು ಖಂಡದಲಿ |
ಹರಿಯ ಪೂಜಿಸುವರು ಪಂಚ ಭೇದದಿಂದ |
ಎರಡೇಳು ಖಂಡಾ ತುಮಕ ಜಂಬುದ್ವೀಪಕ್ಕೆ |
ಪರಿಪೇಷ್ಯವಾಗಿದೆ ಲಕ್ಷ ಯೋಜನ ಲವಣ |
ಶರಧಿ ಯೆನಿಸುತಿದೆ ಯಿದರ ಮಧ್ಯದಲಿನ್ನು |
ಪುರಗಳೆಂಟು ಉಪದ್ವೀಪ ನಾಮವೆಂದು |
ಕರೆಸಿ ಸ್ವರ್ಣ ಪ್ರಸ್ಥ ಚಂದ್ರ ಶುಕಾವರ್ತನ |
ಉರಗ ಸೇರಿದರಮಣಕ ಮುದಹರಣ ಆಮ್ಯಾಲೆ |
ವಿರಚಿಸುವ ಪಾಂಚಜನ್ಯ ಸಿಂಹಲ ಮುಖದಶ |
ಶಿರನು ಆಳಿದನಗರ ಲಂಕಾ ದ್ವೀಪವು ಸತ್ಯ |
ತುರಗ ವರಸಲಿ ಪೋಗಿ ಸಗರನ ಮಕ್ಕಳು |
ಅರವತ್ತು ಸಾವಿರ ಜನವೊಂದಾಗಿ ಅಂದು |
ಶರನಿಧಿ ಖನನವ ಮಾಡಿ ಹಾಕಿದ ಮೃತ್ತಿಕೆ |
ಯಿರ ತಕ್ಕವಾದವು ಉಪದ್ವೀಪಗಳೆಂದು |
ಕರುಣಿಗಳು ಕೇಳಿ ಜಂಬೂದ್ವೀಪದ ಮಹಿಮೆ |
ಸರುವ ಬಗೆಯಿಂದ ವಿಸ್ತರಿಸ ಬೇಕಾದರೆ |
ಮರಿಯಾದೆ ಕಾಣಿನೊ ಪೇಳಿದರೆ ಉಂಟು |
ಉರಗಶಾಯಿ ನಮ್ಮ ವಿಜಯ ವಿಠಲನ್ನ |
ಚರಣಾಬ್ಜ ಬಲಗೊಂಡು ಪ್ಲಕ್ಷ ವರ್ಣಿಸಬೇಕು ೩
ಝಂಪಿತಾಳ
ದ್ವಿತೀಯ ದ್ವೀಪವು ನೋಡು ಪ್ಲಕ್ಷವೆಂಬೋ ನಾಮ |
ಅತಿಶಯವಾಗಿ ಜಂಬುದ್ವೀಪದ ದ್ವಿಗುಣ |
ಕ್ಷಿತಿರುಹಯಿದೆ ಪೆಸರಿನಿಂದ ಒಪ್ಪುತಿದೆ |
ಶತಯೇಕಾದಶ ಯೋಜನ ವುನ್ನತ |
ಮಿತಿಯಾಗಿವೆ ವರ್ಷ ಪರ್ವತ ನದಿಗಳು ಸ |
ಪುತ ಸಂಖ್ಯವೊಂದೊಂದು ಪ್ರಥುಮ ನಾಮ |
ತುತಿಸುವದು ಶಿವ ಈಶ ಸುಭ್ರದ್ರ ಶಂತನು ಕ್ಷಮ ಅ |
ಮೃತ ಅಭಯವೆಂತೆಂಬೊ ಏಳು ಖಂಡ |
ಹಿತವಹುದು ಮಹಿ (ಣಿ)ಕೂಟ ಪವಿಕೂಟ ಯಿಂದ್ರ ಶಯನ |
ಜತೆ ಜ್ಯೋತಿ ಭಾನು ಧೂಮ್ರವರ್ಣ ಪ್ರ |
ಕಾಶಿತ ಹಿರಣ್ಯಗ್ರೀವ ಮೇಘ ಮಾಲಾ ಪ |
ರ್ವತಗಳು ಅರುಣ ವಿಮಲ ಅಂಗಿರಸ ಸುಶೋ |

ಹಂಪೆಯಲ್ಲಿರುವ ಯಂತ್ರೋದ್ಧಾರಕ

೯೯. ಹಂಪೆ
ರಾಗ:ಸಿಂಧುಭೈರವಿ
ಧ್ರುವತಾಳ
ಯಂತ್ರೋದ್ಧಾರಕ ಹನುಮಾ ಸುರಸಾರ್ವಭೌಮಾ |
ಯಂತ್ರ ಧಾರಕ ಎನಗೆ ಮನಸಿನೊಳಗೆ |
ಯಂತ್ರ ವಾಹನನ ಪೂರ್ಣದಯದಿಂದ ಸಕ |
ಲಾಂತರಿಯಾಮಿಯಾಗಿ ಚರಾಚರದಿಲ್ಲೀ |
ತಂತ್ರವನು ನಡಿಸುವ ಮಂತ್ರಿ ಈತನು ಕಾಣೊ ಸ್ವಾ |
ತಂತ್ರ ಪುರುಷ ವಿಜಯವಿಠಲನ್ನ ನಿಜ ಭಕ್ತ |
ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ ೧
ಮಟ್ಟತಾಳ
ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಜ |
ದ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು |
ಆ ಸಮಯದೊಳು (ನೀ) ಸುಳಿದು ನಿಂದು |
ಈ ಶಿಲೆಯೊಳಗೆ ಪ್ರಕಾಶ ಮಾನವಾಗೆ |
ತ್ರಿಸಾಮಾ ವಿಜಯವಿಠಲವ ಸೇವೆ ಹಾ |
ರೈಸಿ ಇಲ್ಲೆ ಮೆರದೆ ದಾಸರನ ಪೊರದೆ ೨
ತ್ರಿವಿಡಿತಾಳ
ಮೂರುಕೋಟಿ ಬೀಜಾಕಾರಾ ಮಂತ್ರವ ಜಪಿಸಿ |
ಧಾರಿಯನು ಎ[ರೆ]ದು ನಿನ್ನಯ ಸುಂದರ |
ಮೂರುತಿಯನು ನಿರ್ಮಾಣವನು ಮಾಡಿದರು |
ಆರುಕ್ಷೋಣಿ ವಲಯಾ ಕಾರಾ ವಾನರ ಬದ್ಧ |
ಚಾರು ಶೋಭಿತ ತುಂಗಾತೀರದಲ್ಲಿ ವಾಸ |
ವೀರಾ ವಿಜಯವಿಠಲನ್ನ |
ಕಾರುಣ್ಯದ[ಲೀ]ಗನುಗುಣ್ಯವಾಗಿ ನಿಂದೆ ೩
ಅಟ್ಟತಾಳ
ಒಂದು ಕೋಟಿ ಬೀಜ ಮಂತ್ರ |
ದಿಂದ ಸುತ್ತ ಯಂತ್ರವ ಬರಿಸಿ |
ಅಂದು ಪ್ರಾಣ ಪ್ರತಿಷ್ಠೆಯ ಮಾಡಿ |
ನಿಂದಿರಿಸಿದರು ನಿನ್ನ ಮಂದಹಾಸದಿ ವ್ಯಾಸ ಮುನಿಗಳು |
ಒಂದು ಕರದಲಿ ಜಪಮಾಲೆ |
ಒಂದು ಕರಾ ನಾಭಿ ಕೆಳಗೆ |
ಚಂದದಿಂದ ಪದು ಮಾಸನ |
ದಿಂದ ಕುಳಿತು ನಿತ್ಯ ನಿತ್ಯಾ |
ನಂದ ವಿಜಯವಿಠಲನ್ನ |
ವಂದಿಸಿ ವರಗಳ ಕೊಡುತ |
ಬಂದ ನರರ ಪಾಲಿಸುತ್ತ ೪
ಆದಿತಾಳ
ಭೂತ ಪ್ರೇತ ಪಿಶಾಚ ಪೀಡೆ |
ವಾತ ಶೀತ ಜ್ವರ ಮಿಕ್ಕಾದ |
ಯಾತನೆ ನಾನಾ ಕಠಿಣ ಭೀತಿ ಮತ್ತೆ |
ಯಾತರ್ಯಾತರರ್ಧಪೇಕ್ಷಿತ ತೆರದಲೆ |
ಆತುರದಿಂದಲೆ ಕೊಟ್ಟು ಪಾತಕವ ಹರಿಸಿ |
ಭೂತಭೃತೆ ವಿಜಯವಿಠಲನ |
ದೂತರೊಳು ಶ್ರೇಷ್ಠನೀತಾ ೫
ಜತೆ
ವ್ಯಾಸಮುನಿ ಪೂಜಿಪ ಯಂತ್ರೋದ್ಧಾರಕ ಹನುಮಾ |
ಈಶಾನಾ ವಿಜಯವಿಠಲನ ದಾಸರ ಪ್ರೇಮಾ ೬

ವಿಷ್ಣುವಿನ ಮತ್ತೊಂದು ಅವತಾರವಾದ

ವೇದವ್ಯಾಸ ಸ್ತೋತ್ರ
೧೪೪
ಧ್ರುವತಾಳ
ಯತಿಗಳ ಶಿರೋರತುನಾ ಸತಿಯ ಅವಿಯೋಗಿ
ರತಿಪತಿಜನಕಾ ಸ್ವರತ ಸ್ವಪ್ರಕಾಶ
ಅತೀತಾದ್ಬುತ ಮಹಿಮ ಪತಿತಪಾವನ ನಾಮಾ
ನತಜನ ಸುರಧೇನು ದಿತಿಜ ತಿಮಿರಭಾನು
ಅತಿದೂರ ದೂರ ಸಂತತ ದಯಾಪರ
ಚತುರ ನಾನಾಸುರತತಿ ಕರಕಮಲಾ
ರ್ಚಿತಪಾದ ಸುಂದರ ದೀನಮಂದಾರ
ಪ್ರತರ್ದನನಾಮ ನಮ್ಮ ವಿಜಯ ವಿಠ್ಠಲ ಸತ್ಯ
ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ ೧
ಮಟ್ಟತಾಳ
ಜ್ಞಾನಮಯಾಕಾರ ಜ್ಞಾನಮಯಾನಂದಾ
ಜ್ಞಾನಮಯೈಶ್ವರ್ಯ ಜ್ಞಾನಮಯ ವರ್ನ
ಜ್ಞಾನಮಯತೇಜಾ ಜ್ಞಾನಮಯ ಶಕ್ತಿ
ಜ್ಞಾನಮಯಾಂಬುಧಿ ಜ್ಞಾನವಿಲೋಲ ನಾ
ಮಾನಿ ವಿಜಯವಿಠ್ಠಲನೆ ನಿನಗೆ ಸಮಾ
ಮೌನಿವೃತ ಧೃತನೆ ಜ್ಞಾನಸುಖಸಾಂದ್ರಾ ೨
ತ್ರಿವಿಡಿತಾಳ
ಕಲಿಯ ವ್ಯಾಪಾರ ವೆಗ್ಗಳವಾಗಿ ವ್ಯಾಪಿಸಿ
ಸಲೆ ಧರ್ಮಾವಳಿಗಳು ಅಳಿದು ಪೋಗಿರಲಾಗಿ
ಸುಲಭ ಜ್ಞಾನವೆಲ್ಲ ಮಲಿನದಿಂದಲಿ ಕೆಟ್ಟು
ಇಳಿಯೋಳು ಉತ್ತಮ ಸಂಪ್ರದಾಯರಿದಾ
ಸುಳುವು ಕಾಣದೆ ಪೋಗಿ ಅಳಲಿ ಗೀರ್ವಾಣರು
ಜಲಜ ಸಂಭವನು ಒಂದಾಗಿ ನಿಂದೂ
ತಲೆವಾಗಿ ಉಸಿರಲು ಬಲವಾಗಿ ವಶಿಷ್ಟ
ಕುಲದಲ್ಲಿ ಜನಿಸೀದ ಬಲುದೈವವೇ
ನಳಿನಾಕ್ಷಮಹ ಸಿರಿ ವಿಜಯವಿಠ್ಠಲ ಬದರಿ
ನಿಲಯ ನಿನ್ನ ಲೀಲೆಗೆ ನೆಲೆ ಯಾವುದೋ ಜೀಯಾ೩
ಅಟ್ಟತಾಳ
ಪರಾಶರನ ಉದರದಲ್ಲಿ ಬಂದು
ಮೂರಾರು ಪುರಾಣವಿರಚಿಸಿ ಅದರೊಳು
ಆರುಸತ್ವ ಆರುರಾಜಸ ತರುವಾಯ
ಆರುತಾಮಸ ಇನಿತಷ್ವಾದಶವೆಂದು
ಧಾರುಣಿ ತುಂಬಲು ಕರುಣದಿಂದ
ಸೂರಿ ಮುಕ್ತರಿಗೆ ನಿತ್ಯ ಸಂಸಾರಿಗೆ
ಘೋರ ತಮಸಿಗೀ ಮೂರು ಪರಿಮಾಡಿ
ಕಾರಣವೆನಿಸಿ ಪ್ರತಿಷ್ಠಿಸಿ ಕಲಿಯ ನಿ
ವಾರಣವನು ಮಾಡಿದ ಭಾರಕರ್ತನೆ ಸುಜ
ನರಿಗೆ ಜ್ಞಾನವ ಬೋಧಿಸಿ ಸುಕೃತದ
ದಾರಿಯ ತೋರಿದ ದ್ವಯಪಾಯನ ಮುನಿ
ಈರೇಳು ಭುವನದೊಳಾರು ನಿನಗೆ ಎಣೆ
ಕಾರುಣ್ಯನಿಧಿ ಪುಣ್ಯ ವಿಜಯ ವಿಠ್ಠಲಮುನಿ
ವರೇಣ್ಯ ಸುರರಗ್ರಣ್ಯ ನಿರ್ವಿಣ್ಯಾ ೪
ಆದಿತಾಳ
ತಮಸಂಬಂಧವ ಕಳೆದು ವಿಮಲ ಜ್ಞಾನವನ್ನು
ಅಮರರಿಗೆ ಪಾಲಿಸಿದೆ ಅಮಿತ ತೇಜಸದಿಂದ
ಕಮಂಡುಲು ದಂಡಕಾಷ್ಟ ಸಮೀಚೀನವಾದ ಕರ
ಕಮಲದಲ್ಲಿ ಧರಿಸಿದಮಲಕಾಷಾಯಾಂಬರಾ
ಗಮದರ್ಥ ಶಿಷ್ಯರಿಗೆ ಪ್ರಮೇಯಗಳ ಪೇಳುತ
ಕ್ರಮ ನೂರಾರು ಮಾಡಿದ ಕುಮತಿಯ ಪರಿಹರಿಸಿ
ದ ಮಯತೆನಾಮಯತಿ ವಿಜಯ ವಿಠ್ಠಲನನು
ಪಮ ರಾಜ್ಯವನು ಕ್ರಿಮಿಯಿಂದ ಆಳಿಸಿದ ೫
ಜತೆ
ಬಾದರಾಯಣ ಸುಖಕಾರಣ ಭಕುತರಿಗೆ
ವೇದವ್ಯಾಸನೆ ವಿಷ್ಣು ವಿಜಯವಿಠ್ಠಲವ್ಯಾಸ ೬

ಮನಸ್ಸು ಕುದುರೆ ಇದ್ದಂತೆ;

೧೦೬
ಧ್ರುವತಾಳ
ಯಾಕೆ ಜೀವನವೆ ವಿವೇಕಮತಿ ಸಾಲದೆ
ಲೋಕದೊಳು ಎನ್ನ ದೂರುವುದೇನೂ
ಸಾಕುವ ನೃಪತಿ ಸೇವಕರಿಗೆ ಸಂಬಳ
ಬೇಕಾದನಿತ್ತು ತಡಮಾಡದೆ
ವಾಕು ಪೇಳಲು ನಿರಾಕರಿಸಿದರೆ ಪಾ
ತಕವಾದವರಿಗೆ ಬಾರದೇನೊ
ತಾಕಲಾರದೆ ಬಿದ್ದು ಭೂಮಿಯ ಬೈದ ವಿ
ವೇಕನಂತೆ ನೀನು ಬಾಳೋರೇನೊ
ನೈಕ ಕರ್ಮಕೃತು ವಿಜಯವಿಠ್ಠಲಗೆ ನೀ
ಬೇಕಾದವನೆ ನಾ ಬೇಕಾದವನೆ ೧
ಮಟ್ಟತಾಳ
ಬಲ್ಲಿದ ರಾವುತನು ಇಲ್ಲದೆ ಇರಲು
ಹಲ್ಲಣಕ್ಕೆ ವಾಜಿ ನಿಲ್ಲುವುದೇನೊ
ಎಲ್ಲಕಾಲದಲ್ಲಿ ನಿನ್ನಲ್ಲಿ ದೃಢವಿಕೆ
ಸೊಲ್ಲು ಉಲ್ಲಂಘಿಸಲು ಸಲ್ಲುವುದೆ ಎನಗೆ
ಪುಲ್ಲಶರನಯ್ಯ ವಿಜಯ ವಿಠ್ಠಲ ಮಾರ್ಗ
ಎಲ್ಲರಿಗೆ ದಯದಲ್ಲಿ ತೋರಿ ಕೊಡುವ ೨
ತ್ರಿವಿಡಿತಾಳ
ಉತ್ತಮರನು ಕಂಡು ಎತ್ತಿ ಕರಗಳು ಮುಗಿಯೊ
ಚಿತ್ತದಲ್ಲಿ ಪಾಪದತ್ತ ಪೋಗದಿರು
ಹೊತ್ತು ವಾರ್ತಿಗೆ ಕಿವಿಯಿತ್ತು ಕೇಳದಿರು
ಸೋತ್ತಮರ ಕೂಡ ಪುಶಿಯಾಡದಿರು
ಆತ್ಮ ಸ್ತುತಿಯ ಬಿಡು ಎತ್ತದಿರು ಪರರ ನಿಂದೆ
ತೊತ್ತು ಬಡಕರಿಗೆ ತತ್ವ ಉಸಿರದಿರು
ಜಿತಮನ್ಯು ವಿಜಯ ವಿಠ್ಠಲನ್ನ ಚರಣ ಪರಿ
ಸುತ್ತಲಿದ್ದರೆ ನಾನೆತ್ತ ಪೋಗೆನೊ ಜೀವಾ ೩
ಅಟ್ಟತಾಳ
ಹಿಂದೆ ನೀನು ಸುಮ್ಮನೆ ನಿಂದು ಇರಲಾಗಿ
ಇಂದಿರಾರಮಣನು ತಂದು ನಮ್ಮನ್ನೆಲ್ಲ
ಪೊಂದಿಸಿ ಕೊಡಲಾಗಿ ಅಂದು ಮೊದಲು ನೀ
ನೊಂದ ಸಾಧನದಿಂದ ಬೆಲೆಗಾಂಬೀ
ಇಂದ್ರಕರ್ಮನಾನು ವಿಜಯವಿಠ್ಠಲ ಬೇ
ಡೆಂದರೆ ನಿಲ್ಲವು ಒಂದು ದಿನಾದರೂ ೪
ಆದಿತಾಳ
ಹಾದರ ಬೇಡೆಂ ಬೊಗರ್ತಿ ಮಾದಿಗನ್ನ ಪೋದಂತೆ
ಓದು ಕಲಿತ ಪಂಡಿತ ಏಕಾದಶಿಲಿ ಉಂಡಂತೆ
ನೀ ಧಾರಾಳವಾಗಿರದೆ ಪೋದವು ಇಂದ್ರಿಯಗಳೆಂದು
ಬೀದಿ ಬೀದಿ ದೂರಿದೂರಿ ತೋದ ವಸ್ತ್ರವಾಗದಿರಲು
ವೇದಾತ್ಮ ನಾಮ ವಿಜಯ ವಿಠ್ಠಲನ್ನ ಲೀಲಾ ಸ
ತ್ಪದವನು ನಂಬಿ ಸರ್ವಸಾಧನಕ್ಕೆ ಅನುಕೂಲ ೫
ಜತೆ
ಸಕಲರೊಂದಾಗಿ ಸಂಗ್ರಹ ವಿಜಯವಿಠ್ಠಲನ್ನ
ಭಕುತರೆಂದೆನಿಸಿ ವಿಮುಕುತಿಲಿ ಸುಖಬಡುವ ೬

ವಿಜಯ ದಾಸರು ಬರೆದಿರುವ

೭೭
ಧ್ರುವತಾಳ
ಯಾಕೆ ಮುನಿಸು ಸರ್ವಲೋಕದ ಒಡಿಯನೆ
ಕಾಕನರನ ಕೂಡ ಈ ಕಪಟವೇ ಬಾಕುಳಿಗನು ನಿನ್ನ
ಪಾಕ ಶಾಲೆಯಲ್ಲಿ ಬಿದ್ದ ಕಾಳರಾಶಿತಿಂಬ ಲೆಂಕಿಗನು
ವಾಕು ಪುಸಿಯಲ್ಲಾ ಲೇಖಿಗೆ ತಾನೇ ಬಲ್ಲಾ
ಲೋಕದೊಳಗೆ ನಾನು ಏಕನೇ ರಿಕ್ತಾ
ಗೋಕುಲಾಂಬುಧಿ ಚಂದ್ರ ನೀ ಕಂಡದಕ್ಕೆ ನೋಡು
ನಾ ಕೊಡುವೆನು ತುಲಸೀಕ ಬಂಧ ನೀ ಕರುಣದಲಿ
ಕೈಕೊಂಡು ಪುಷ್ಪದಲಿ ಸ್ವೀಕರಿಸಿ ವೇಗ ಸಾಕಬೇಕು
ಕೋಕನದನಯನ ವಿಜಯ ವಿಠ್ಠಲ ನೀನೆ
ಬೇಕೆಂದೊಲಿದು ಅವಲೋಕವೇ ತೃಣಮೇರು ೧
ಮಟ್ಟತಾಳ
ನೀರನೆ ನೈವೇದ್ಯ ತಂದಿಟ್ಟರೆ ನೀನು
ಮೋರೆ ತಿರುಹಿಕೊಂಡು ನೋಡದ ಬಗೆ ಏನೋ
ಧಾರುಣಿಯೊಳು ನಿನ್ನ ತೃಪ್ತಿಮಾಡುವ ವಸ್ತು
ಆರೈದು ನೋಡಿದರು ಆವಲ್ಲಿ ಕಾಣೆನೋ
ಮೀರಿದ ಮಹಾ ಮಹಿಮ ವಿಜಯ ವಿಠ್ಠಲ ಎನ್ನ
ಗಾರ ಮಾಡುವುದಲ್ಲದೇ ಮಿಗಿಲಿಲ್ಲಾ ೨
ತ್ರಿವಿಡಿ ತಾಳ
ಪೇಳುವುದು ನಿನ್ನ ತೃಪ್ತಿಯ ಪರಿಮಿತ
ಏಳಾರು ಖಂಡಗವೆ ಮತ್ತೆ ಅಧಿಕಬೇಕೇ
ಕೇಳುವೆ ಕಾವಿಯಲ್ಲಿ ಸುಮ್ಮನಿರದೆ ಪರರ
ಆಳಾಗಿ ದುಡಿದು ಅನುಗಾಲ ತಪ್ಪದೆ
ಕಾಲ ಕಾಲಕೆ ಬಿಡದೆ ಪಂಚಾವೃತವೇ ತಂದು
ವಾಲಯದಲ್ಲಿ ಸಮರ್ಪಿಸುವೆನು ರಾಶಿಗಳು
ಮೂಲೋಕದರಸ ನೀನೆ ವಿಜಯವಿಠ್ಠಲ ಪಾಂ
ಚಾಲಿ ನಿನ್ನಯ ಕರದಲ್ಲಿ ಎರಡದೇನೋ ೩
ಅಟ್ಟತಾಳ
ಉದಕವಾದರೇನು ಉಚಿತ ಪದಾರ್ಥವು
ಅಧಿಕ ಅಧಿಕವಾಗಿ ಮೇರುಪರ್ವತದಷ್ಟು
ಪದೋಪದಿಗೆ ನಿನ್ನ ಮುಂದೆ ಸುರಿದರೇನು
ಇದರಿಂದ ನಿನಗಿಂದು ಕಾಲಕ್ರಮೆಣವೆಂದು
ಉದರ ಪೋಷಣನಾಗಿ ದಿನವ ಕಳೆವನಲ್ಲಾ
ಸದಾ ನಿತ್ಯತೃಪ್ತನೆ ವಿಜಯ ವಿಠ್ಠಲ ನಿನಗೆ
ಇದು ಅದು ಎಂಬೋದು ವೈಷಮ್ಯವಿಲ್ಲದ ದೈವಾ ೪

ನೀರೇವೆ ಪಾವನ ನೀರೇನೇ ಜೀವನ
ನೀರೇವೆ ಸಕಲಕುಟುಂಬಿಗೆ ಆಧಾರ
ನೀರೇವೆ ಕಟ್ಟಕಡೆಗೆ ಒಂದೇ ಇಪ್ಪದು
ನೀರೇವೆ ಇಲ್ಲದಿರೆ ನಿಲ್ಲಲಾರದು ಲೋಕಾ
ನೀರೇರುಹ ನಾಭಾ ವಿಜಯವಿಠ್ಠಲ ನೀನೆ
ನೀರೊಳು ವಟಿ ಪತ್ರದಲ್ಲಿ ಮಲಗಿಪ್ಪೆ ೫
ಜತೆ
ನೀರೇವೆ ನೋಡಲು ನಾನಾ ಕುಭೋಜನಾ
ಸಾರವಾಗುವದಯ್ಯಾ ವಿಜಯ ವಿಠಲ ಪ್ರೀಯಾ ೬

ಭಕ್ತನನ್ನು ಸನ್ಮಾರ್ಗದಲ್ಲಿ ನಡೆಸಿ

೭೬
ಧ್ರುವತಾಳ
ಯಾಕೆ ಸೇರಿದೆ ಎನ್ನ ಸಾಕುವ ಭಾರಕರ್ತ
ಲೋಕದೊಳಗೆ ಅನೇಕ ಭಕುತರುಂಟು
ಲೌಕಿಕದೊಳು ನಾನು ಲೋಕೇಶ ನಿನ್ನ ಪಾದ
ನೇಕ ಭಕುತಿಯಿಂದ ವಾಕು ಪೇಳಲಿಲ್ಲ
ನೀ ಕೇಳು ಭಾವವೆಂಬೊ ಶಾಕದಾಶ್ರಯ ಮಾಡಿ
ಶೋಕದಿಂದಲಿ ಧನಿಕನೆಂದೆನಿಸಿದೆ
ಸಾಕಾರ ವಿಗ್ರಹ ಸಕಲರೊಳಗೆ ವಿ-
ವೇಕವರಿತ ನಾನು ಆ ಕಾಲಾ ಈ ಕಾಲ ಎನದೆ
ನೀ ಕರುಣಿ ಎಂದುದಕಾವಾದರು ಸಮ
ರ್ಪಕಾವೆ ಮಾಡಿ ಪರಾಕು ನುಡಿಯಲಿಲ್ಲ
ಮ್ಯಾಕೆಯಂತೆ ಕಂಡುದಕ್ಕೆ ಓಡಿ ಪೋಗಿ
ಈ ಕಾಯಕ್ಕೆ ಬಂದವರ ಸಾಕುವೆನೆಂಬೋ ಮಹ
ವ್ಯಾಕುಲದಲ್ಲಿ ತಿರುಗಿ ಚಾಕಾನಾಗದೆ ಪೋದೆ
ಭೇಕ ಕಾಯದ ನಮ್ಮ ವಿಜಯ ವಿಠ್ಠಲರೇಯ
ವಾಕು ಲಾಲಿಸುವ ಕನಿಕರಿಸದೆ ಎನ್ನ ೧
ಮಟ್ಟತಾಳ
ಮಂಗಳವಾದ ಸ್ಥಾನಂಗಳು ಸುವಸನ
ಭಂಗಾರಾಭರಣ ಶೃಂಗಾರ ಮಯದ
ಹಿಂಗದೆ ತುಲಸಿ ಪುಷ್ಪಂಗಳು ಧೂಪಾರ್ತಿ
ಕಂಗೊಳಿಸುವ ದೀಪ ಮಂಗಳಾರತಿ ಓದ
ನಂಗಳು ನಾನಾ ಭಕ್ಷಂಗಳು ಪರಮಾನ್ನ
ಇಂಗಿತವಾದ ಶಾಕಂಗಳು ನಾನಾ ರ-
ಸಂಗಳು ಪರಿ ಪರಿ ಮಂಗಳ ಮಹಿಮ ನಿ –
ನ್ನಂಘ್ರಿಗೆ ಅರ್ಪಿಸಿ ಸಂಗೀತ ಪಾಡಿ ದಿ-
ನಂಗಳು ಕಳೆದು ಸುಖಂಗಳು ಕೊಡುವಾಲೋ-
ಕಂಗಳ ಬಯಿಪಾ ಮಾರ್ಗಂಗಳು ಮಾಡದೆ
ಭಂಗಬಡುವ ದುಃಖಂಗಳು
ಪಂಗಳೊಳಗೊಂದು ರಾಗ ಶಾ-
ರಂಗಧರ ವಿಜಯ ವಿಠ್ಠಲ ನಿನ್ನಾ
ತುಂಗ ಯುಗಳ ಚರಣಂಗಳನು ಎನ್ನ
ಕಂಗಳಿಂದಲಿ ನೋಡಿ ಡಿಂಗರಿಗರ ಕೊಡ
ಡಿಂಗರರಿಗ ನಾಗಲಿಲ್ಲ ೨
ತ್ರಿವಿಡಿತಾಳ
ಬಡತನದಲಿ ಹುಚ್ಚು ಹಿಡಿದು ತಿರುಗುವ ಮಗನು
ಅಡವಿ ಅಡವಿ ತಿರುಗಿ ತಿರುಗುತಿರಲು
ಹಡೆದ ತಾಯಿ ಬಹು ಮೋಹಪಾಶದಲ್ಲಿ
ಅಡಿಗಡಿಗೆ ಅವನ ರಕ್ಷಿಸುತಿಪ್ಪಳೊ
ಒಡೆಯಾ ಕೇಳುವುದು ಅವನಿಂದಲಿ ಜನನಿಗೆ
ಒಡಲು ಪೋಷಣವು ಲೇಶವಾದರುಂಟೆ
ಬಡವನು ನಾನು ಬಲು ಹುಚ್ಚು ಹಿಡಿದು ಚರಿಪ
ಕಡು ಮೂರ್ಖನೋ ದೇವ ನಿನ್ನವನೊ
ಪೊಡವೀಶ ನಿನಗೊಂದು ಬಿಂದೋದಕವನು
ತಡೆಯದೆ ತಂದು ಅರ್ಪಿಸದಲೇವೆ
ಒಡಲ ತುಂಬಿದೆ ನಾನು ಎನ್ನದೆಂಬೊ ಗರ್ವ
ನುಡಿಯಿಂದಾ ತೀರಿತೀಕ್ಷಣ ಮತಿಯಲ್ಲಿ
ಕಡು ದಯಾಳೊ ನಿನ್ನ ನೆಚ್ಚಿದವರ ಸಂ-
ಗಡ ಬಪ್ಪಾ ಉನ್ಮಾದವನೊ ಕಾಮವ
ಬಿಡಿಸಿ ಬೀಸಾಟವೆ ಅವನ ಜನನಿ ಸಾಕುವಂತೆ
ಒಡನೆ ಪಾಲಿಸುವುದು ದುರ್ಮತಿಯಾ ಬಿಡಿಸಿ
ದೃಢ ದೈವ ವಿಜಯ ವಿಠ್ಠಲರೇಯ ನಿನಗೆ ನಾನು
ಕೊಡದವನೆಂತೆಂದು ಕಡೆ ಮಾಳ್ಪದು ಸಲ್ಲ ೩
ಅಟ್ಟತಾಳ
ನಿಚ್ಚ ಜನನಿ ಬಲು ಹುಚ್ಚು ಹಿಡಿದ ತನ್ನ
ಕಚ್ಚುವ ಮಗನಿಗೆ ಬಚ್ಚಿಟ್ಟು ಪದಾರ್ಥ
ಮುಚ್ಚಿಕೊಂಡು ಬಂದು ಎಚ್ಚರಿಸಿ ಪೊಟ್ಟೆ
ಕಿಚ್ಚು ಪೋಗುವುದಕ್ಕೆ ಚಚ್ಚರದಲಿ ಸ್ನೇಹ
ಪೆಚ್ಚಿಸಿಕೊಂಡು ತಾ ಬಿಚ್ಚದೆ ಅವನನ್ನ
ಮುಚ್ಚುಕುಂದ ಸುಚ್ಚರಿತ ಅಚ್ಚ ಮಹಿಮ ಮುಕ್ತಿ
ವೆಚ್ಚಮಾಡುವನೆ ಎಚ್ಚದವನ ಪಾಲ
ಮುಚ್ಚುಕುಂದ ಪ್ರೀಯ ವಿಜಯ ವಿಠ್ಠಲ ಭಕ್ತ
ರಿಚ್ಚಿಯಗಾರನೆ ಎಚ್ಚರಿಕೆ ಕೇಳೊ ೪
ಆದಿತಾಳ
ಉತ್ತಮ ಭಕುತರಿಂದ ಪೂಜೆಯಗೊಂಬುವನೆ
ನಿತ್ಯ ಎನ್ನ ಬಳಿಯಲ್ಲಿ ಇರಲು ಇನ್ನಾವ ಫಲ
ಮತ್ರ್ಯಲೋಕದಲ್ಲಿ ಈ ಪರಿ ಹುಚ್ಚು ಹಿಡಿದ ಮಗನಿಗೆ
ಪೆತ್ತ ಜನನಿಗೆ ಸಾಮ್ಯ ದೃಷ್ಟವಾಗಿದೆ
ಮತ್ತೆ ನೀನೆ ಅದರಂತೆ ಎನ್ನ ಪಾಲಿಸುತಿಪ್ಪೆ ಮತ್ತೆ
ಎತ್ತಿ ಕರವ ಮುಗಿವೆನಯ್ಯ ಯದುಕು-
ಲೋತ್ತಮ ತಿಲಕ ಎತ್ತಲಾದರೇನು ಇವನು
ಭಕ್ತರೊಳಗೆ ಗಣನೆ ಎಂದು ಅತ್ಯಂತ ಭಕ್ತ
ರಿತ್ತ ಎಡೆಯಿಂದ ತೃಪ್ತನಾಗಿ
ಇತ್ತ ಬಂದು ಕಲಕಾಲ ಒಂದು ನಿಮಿಷ ತೊಲಗದಲೆ
ಹತ್ತಿ ಬಿದ್ದು ಪ್ರತಿ ದಿನ ಸಾಕುವ ಸುಲಕ್ಷಣ ಪುರುಷ
ತೆತ್ತಿಗರ ಮನೋರಥನೆ ವಿಜಯ ವಿಠ್ಠಲಗೊಂದು
ತುತ್ತು ಬೇಕಾಗಿಲ್ಲ ದೀಪ್ತಾ ನಿತ್ಯತೃಪ್ತ ಪರಂಜ್ಯೋತಿ ೫
ಜತೆ
ಕೊಡುವೆನೆಂದು ನಿಂದು ನಿಲ್ಲಲಾಡಿದ ಮೇಲೆ
ಕೊಡದಿರಬಹುದೆ ವಿಜಯ ವಿಠ್ಠಲ ಸತ್ಯ ೬

ಭಗವಂತನು ಅನಂತಾನಂತ ರೂಪಗಳಿಂದ

೭೮
ಝಂಪೆ ತಾಳ
ಯಾಕೆಲವೋ ನಿಗಮಮಣಿ ಈ ಕುಟಿಲತನವೇನೋ
ಜೋಕೆ ಮಾಡುವುದು ನಿನ್ನಿಂದ ಆಗದೇ
ಸಾಕೆ ಸಾಕುವ ಬಿರಿದು ಭಕುತ ವತ್ಸಲನೆಂಬ
ವಾಕು ಬೇಕಾಗಿಲ್ಲವೇನೋ ಪೇಳೋ
ಏಕಮೇವಾನೆಂದು ಸ್ತುತಿಸಿದರೆ ನಿನ್ನ ಮೊಗ
ವಾಕಾಶ ನೋಡುತಿದೆ ಗರ್ವದಲಿ
ಬಾ ಕುಳ್ಳಿರಿಲ್ಲಿ ನಿನ್ನ ದೇವ ದೈವತನವೇನೋ
ಆಕಳನು ಕಾಯಿದಿ ಪೋಕತನದ
ಲ್ಲೇಕಿಕನಾಗಿ ಆರಿಸಿದ ಹಣ್ಣು ಹಂಪಲೆ
ನಾಕಜನ ನೋಡುತಿರೆ ಮೆಲಲಿಲ್ಲವೇ
ಈ ಕಥೆಯನಾರಾದರರಿಯದವರೇ ಇಲ್ಲ
ನಾ ಕಠಿಣ ಉತ್ತರ ಪೇಳಲೇಕೆ
ಪ್ರಕಾಶಾತ್ಮ ನಾಮ ವಿಜಯ ವಿಠ್ಠಲ ಎನ್ನ
ವಾಕ ಬರದದ್ದು ನೀನು ಬಿಡಿಸಲಾಪೆಯೋ ದೇವ ೧
ಮಟ್ಟತಾಳ
ಭೂತ ಭೂತವೆಂದು ಭೀತಿಗೊಂಡರೆ ಆ
ಭೂತವೆ ಮಹದೊಡ್ಡ ಭೂತವಾಗಿ ತೋರಿ
ಆತುಮದೊಡನೆ ಸಂಗಾತ ತಿರುಗಿದಂತೇ
ತಾ ತೊಡಕಿಕೊಂಡು ಭೀತಿಗೊಳಿಸುವುದು
ಭೂತ ನಾಮಕ ದೇವಾ ವಿಜಯ ವಿಠ್ಠಲ ನಿನಗೆ
ಸೋತೆ ವೆಂದವರಿಗೆ ಭೂತನಾಗಿ ನಿಲುವೆ |೨
ತ್ರಿವಿಡಿ ತಾಳ
ಎದೆ ಮೇಲೊದದು ಅಂಜದಲೆ ನುಡಿಸಿದವನ
ಮುದದಿಂದಲರ್ಚಿಸಿ ಒದಗಿ ಬಿನ್ನೈಸಿದೆ
ಹುದಗಿ ಗದಗದ ನಡುಗಿ ಬೆದರಿ ನಿಂದವನಿಗೆ
ಬಧಿರನಂತೆ ಮಂದನಾಗಿ ಕೇಳದಲಿಪ್ಪೆ
ಪದೋಪದಿಗೆ ನಿನ್ನ ಪದಗಳ ನೆರೆನಂಬಿ
ಕದಲದಲೆ ನಿತ್ಯ ಹೃದಯದೊಳು
ಮೃದುವಾದ ಮನದಲ್ಲಿ ವಂದಿಸಿ ಕೊಂಡಾಡೆ
ಚದರಿ ದೂರಾಗಿ ಪೋಗುವುದು ಏನೋ
ಎದುರಿಲಿ ನಿಂದು ತಿರುಗದ ಭಕ್ತರಿಗೆಲ್ಲಾ
ವಹನದಿಂದಲಿ ಸೋಲಬಾರದ ಮುನ್ನ
ಬದಿಯಲಿ ನಿಂದು ಪರಿಪಾಲಿಸಿ ತೊಲಗದೆ
ಮದುವೆ ತೆತ್ತಿಗನಂತೆ ಇರಳು ಹಗಲು
ಪದುವುನಾಭನೆ ನಮ್ಮ ವಿಜಯವಿಠ್ಠಲ ಸ
ರ್ವದ ನಿನ್ನ ನೆನೆದವಗೆ ವಿಧಿ ನಿಷೇಧವಿಲ್ಲಾ ೩
ಅಟ್ಟತಾಳ
ಬಿಟ್ಟರೆ ಸಿಗನೆಂಬೊ ದಿಟ್ಟತನವೇನೋ
ಇಟ್ಟಣಿಸಿ ನಿನ್ನ ಅಟ್ಟುಳಿಂದಲಿ ಬೆನ್ನಟ್ಟಿ ಬಿಡದೆ ಬಂದು
ಉಟ್ಟ ಪೀತಾಂಬರ ದಟ್ಟಿಯ ಶರಗನು
ದಟ್ಟಡಿಯಿಂದಲಿ ನಿನ್ನ ಮುಟ್ಟಿ ಪಿಡಿದು ಒಳ
ಗಿಟ್ಟು ಕೊಂಡು ಜಗಜಟ್ಟಿ ಚಿತ್ತದಲ್ಲಿ ಕಟ್ಟಿಹಾಕುವವೆನು
ಅಟ್ಟಹಾಸದಲ್ಲಿ ರಟ್ಟು ಮಾಡಿಬಿಡುವೆ
ಇಷ್ಟದೈವವೆ ವಿಜಯ ವಿಠ್ಠಲರೇಯನೇ
ಪುಟ್ಟದಂತೆ ಪಾಪ ನಷ್ಟವ ಮಾಡೋ ೪
ಆದಿತಾಳ
ತಿಲವನ್ನು ಕರತಳದಲ್ಲಿ ಇಟ್ಟುಕೊಳ್ಳಲು
ಸುಲಭತನದಿಂದಲಿ ತೈಲ ಫಲಿಸೋದೆ ಎಲೋ ದೇವಾ
ಸಲಿಗೆಯಿಂದಲಿ ನಿನಗೆ ಪಲ್ಲುದೆರೆದು ಬೇಡಿದರೆ
ಒಲಿದು ಕೊಡುವದು ಗಣಾವಳಿಗಳು ನಿನ್ನವಲ್ಲ
ಒಳಗೆ ನಿಲಿಸಿಕೊಂಡು ಸಲೆ ಭಕುತಿಯಿಂದ
ಕೆಲಸಕ್ಕೆ ಪೋಗಗೊಡದಲೆ ಸಿಗಿಸಿಕೊಂಡು
ಚಲುವ ಕ್ಷೇತ್ರಜ್ಞ ವಿಜಯ ವಿಠ್ಠಲ ನಿನಗೆ
ಬಲವಂತ ನಾಗದಲೆ ಅಲಿಯವು ಪಾಪಾ ೫
ಜತೆ
ನಾ ಮುಂದೆ ನೀ ಹಿಂದೆ ಗುರುವಿಕೆ ನಿನಗೇಕೋ
ಸಾಮಗ ವಿಜಯ ವಿಠಲನೆ ನಿನ್ನಾಧೀನಾ ೬

ಹರಿದಾಸತ್ವ ಸಾಂದ್ರಗೊಳ್ಳಲಿಲ್ಲವೆಂಬ

೭೭
ಧ್ರುವತಾಳ
ಯಾತರ ಶರಣನಯ್ಯ ಯಾತರ ಭಕುತನಯ್ಯ
ಯಾತರ ದಾಸನಯ್ಯ ಯಾತರ ಶುದ್ಧನಯ್ಯ
ಯಾತರ ಜನನ ಪಂಚ ಭೂತಾತ್ಮವಾಗಿ
ಪೂತಿಗಂಧದೊ¼ಗೆ ಬಳಲುತಿಪ್ಪ
ತಾ ತರುಣದಲ್ಲಿ ಲೇಪ ಲೇಪನವಾಗಿ
ವಾತ ಭ್ರಮಣವಾಗಿ ತೊಳಲುವೆನೊ
ಯಾತ ಎತ್ತುವಾಗ ಬಿಲ್ಲೆ ಒದರಿದಂತೆ
ಮಾತು ಮಾತಿಗೆ ನಿನ್ನ ನೆನೆಸುವೇನೊ
ಆತುಮದೊಳಗೆ ಯಾವತ್ತು ಶುಚಿಯಿಲ್ಲ
ಹೋತಿಗೆ ಬಲು ಘನತೆ ಇದ್ದ ತೆರದಿ
ನೀತಾಚಾರ ಪೇಳಲಿ ಬಲ್ಲೆನೇನಯ್ಯಾ
ಪಾತಕದಲ್ಲಿಗೆ ಎರಗುತಿಪ್ಪೆ
ಭೀತಿರಹಿತ ಯಙ್ಞಗುಹ ವಿಜಯ ವಿಠ್ಠಲ
ಯಾತರ ನಿನ್ನವನೊ ಯಾತರ ನಿನ್ನವನೊ ೧
ಮಟ್ಟತಾಳ
ದೇಹ ಎನ್ನದು ಎಂದು ಗೇಹ ಎನ್ನದು ಎಂದು
ಮೋಹ ಮೋಹ ಬಿಡದೆ ಆಹಾರ ಇಂದ್ರಿಯಗಳ
ಗಹನದೊಳಗೆ ಬಿದ್ದು ಅಹಸ್ಸು ಕಳೆವೇನೊ
ಮಹಾದುರ್ಮತಿ ನಾನು
ಮಹಾದ್ರಿಧೃತ ನಾಮ ವಿಜಯ ವಿಠ್ಠಲರೇಯ
ಬೇಹಿಗಾರಕೂಡ ಅಹೋ ನೊಂದೆನು ೨
ತ್ರಿವಿಡಿತಾಳ
ಎಲ್ಲಿಯ ಜ್ಞಾನ ಎನಗೆಲ್ಲಿಯ ಭಕುತಿ ಎನಗೆ
ಎಲ್ಲಿ ವೈರಾಗ್ಯ ಎನಗೆಲ್ಲಿಯಾಚಾರವೊ
ಇಲ್ಲಾವಿಲ್ಲವೊ ನಿನ್ನಲಿ ಬಿಂದು ಮಾತುರ
ನಿಲ್ಲಿಸಿ ಮನ ದೃಢದಲ್ಲಿ ಪೂಜಿಪುದು
ಸಲ್ಲುವೆನೆ ಸಲ್ಲುವೆನೆ ಬಲ್ಲಿದವರ ಕೂಡ
ಅಲ್ಲದೊಸ್ತವ ಬಯಸಿ ಕುನ್ನಿ ತಾ ಪೋದಂತೆ
ಕಲ್ಲು ಕಟದು ತಿಂದು ಹಲ್ಲು ಮುಕ್ಕಾದಂತೆ
ಎಲ್ಲಾ ಕಾಲದಲ್ಲಿ ನಾನು ಅಪರಾಧಿಯೊ
ಮಲ್ಲಗೋಡಿಗೆ ಕೊಟ್ಟಂತಿಪ್ಪೆನಯ್ಯಾ
ಸೊಲ್ಲು ಪಾಲಿಸು ಯಙ್ಞ ಮೋಹನ ವಿಜಯ ವಿಠ್ಠಲ
ಬಲ್ಲನ ನೀನು ನಾನೆಲ್ಲ ಬಿನ್ನೈಸಿದೆನು ೩
ಅಟ್ಟತಾಳ
ಕಾಮ ಕ್ರೋಧವ ಬಿಡೆ ಕಾಮಕ್ರೋಧವ ಬಿಡೆ
ಕಾಮಿನಿಯರಿಗೆ ಹಲುಬುವುದ ಬಿಡೆ
ಹೇಮವಾದರೂ ಎನ್ನ ಪ್ರಾಣ ಹೋದರು ಬಿಡೆ
ಸಾಮದಂಡ ಮಾಯ ಭೇದೋಪಾಯ
ತಾಮಸ ಪದವಿಗೆ ಈ ಮನವೆರಗುವುದು
ಭೀಮ ನಾಮ ನಮ್ಮ ವಿಜಯ ವಿಠ್ಠಲನೆ ದು
ರ್ನಾಮ ಪಾತ್ರನು ನಾನು ನೀ ಮರಿಯದಿರು೪
ಆದಿತಾಳ
ಕರುಣಿ ಎನ್ನ ಸ್ವರೂಪ ಇರಹು ನೀನೆ ಬಲ್ಲವನು
ಅರಿಯದರಿಗಾದರೆ ವಿಸ್ತರಿಸಬೇಕು
ಚರಿಸುವ ಚರಿಸುವ ಪರಿಪರಿ ಗುಣಕರ್ಮ
ತರಳ ಯಾವನಾತನ ಜರೆಯಲ್ಲಿ ಎಸಗಿದ
ಪರಿಮಿತ ನೀನೆ ಬಲ್ಲೆ ಅರಸರಿಗರಸು
ಧೊರೆ ಎನಗಿರಲಾಗಿ ಪಾಮರರ
ಉಸುರಲ್ಯಾಕೆ ಬರಿದೆ ನೊಂದು
ಸುರರೊಡಿಯ ವಿಕ್ಷರ ಶ್ರೀ ವಿಜಯ ವಿಠ್ಠಲ ನಿನ್ನ
ಕರುಣದಳತೆಯನ್ನು ಗುರುದಯದಿಂದ ಅರಿವೆ೫
ಜತೆ
ಹರಿವು ಡೊಂಕಾದರೆ ಹರಿವ ನೀರು ಡೊಂಕೆ ನಿನ್ನಸ್ಮರಣೆ ಡೊಂಕಲ್ಲವೊ ಮಾರ್ಗ ವಿಜಯ ವಿಠ್ಠಲ೬

ಭಗವಂತನನ್ನು ಒಲಿಸಿಕೊಳ್ಳಲು

೭೮
ಧ್ರುವತಾಳ
ಯಾತರಿಂದಲಿ ನಿನ್ನ ನಿಲಿಸಿಕೊಂಬೆನೊ ರಂಗ
ಯಾತರಿಂದಲಿ ನಿನ್ನ ಒಲಿಸಿಕೊಂಬೆನೊ ರಂಗ
ಯಾತರಿಂದಲಿ ನಿನ್ನ ಮೆಚ್ಚಿಸುವೆ ರಂಗ
ಯಾತರಿಂದಲಿ ನಿನ್ನ ನೆಚ್ಚಿಸುವೆನು ರಂಗ
ಯಾತರಿಂದಲಿ ನಿನ್ನ ಪೂಜಿಸುವೆನು ರಂಗ
ಯಾತರಿಂದಲಿ ನಿನ್ನ ಸೋಲಿಸುವೆನು ರಂಗ
ಯಾತರಿಂದಲಿ ಶೋಧಿಸಿ ನೋಡಿದರು
ದಾತ ನಿನ್ನ ತುತಿಸುವಾರ್ಚನೆ ಕಾಣೆನೊ
ಜಾತಿ ಧರ್ಮಕುಲಗೋತ್ರವಾವುದು ಯಿಲ್ಲ
ಭೂತಳದೊಳಗೆ ಮತ್ತಾರದೆನೆಸಲ್ಲ
ಪ್ರಾತಃ ಸಾಯಮಾರಭ್ಯವೆರಸಿ ತೊಳಲೆದಾರು
ನಾಥನೆ ನಿನ್ನನು ಒಲಿಸುವ ಬಗೆ ಏನು
ಭೂತಭಾವನ ನಮ್ಮ ವಿಜಯವಿಠ್ಠಲ ಎನ
ಗಾತುಮದೊಳಗೆ ಮೂರುತಿ ಕಾಂಬುವುದೆಂತೊ ೧
ಮಟ್ಟತಾಳ
ಉತ್ತಮ ಜಾತಿ ಉತ್ತಮ ಕುಲ
ಉತ್ತಮ ಗೋತ್ರ ಉತ್ತಮ ಧರ್ಮ
ಉತ್ತಮವಿದರೊಳಗಾಗುತ್ತಮವಾವುದು
ಎತ್ತಲು ತಿಳಿಯದೆ ಸುತ್ತಲು ಸುತ್ತಿದೆ
ತುತ್ತಿಸುವ ನಿನ್ನ ಉತ್ತಮೋತ್ತಮ ದೇವೋತ್ತಮನೆಂದು
ತುತ್ತಿಪರಲ್ಲದೆ ಚಿತ್ತಜಪಿತ ನಿನ್ನ ಚಿತ್ತಜದಲ್ಲಿಟ್ಟವರು
ಮತ್ತೆ ನಿನ್ನಯ ಜಾತಿ ಗೋತ್ರ ಕುಲಧರ್ಮ
ಮತ್ತಾವದು ಎಂದು ತತ್ತಳಗೊಳುವರು
ಚಿತ್ತದ ಒಡಿಯಾ ಸಿರಿ ವಿಜಯವಿಠ್ಠಲರೇಯ
ಎತ್ತಿ ಕರವ ಮುಗಿವೆ ಚಿತ್ತವಧರಿಸುವದು ೨
ತ್ರಿವಿಡಿತಾಳ
ಜಗವ ಸಾರಿಡುವುದು ಜಗವು ಸಾರಿಕ್ಕುವುದು
ಜಗವಾಡುವುದು ಈ ಜಗವೇ ಏಳುವುದು
ಹಗಲಿರುಳೆನ್ನದೆ ಅಗಣಿತ ದಿನದಲ್ಲಿ
ಬಗೆ ಬಗೆ ವ್ಯಾಪಾರ ನಿನ್ನವಾಗಿರಲು
ಜಗದೀಶಾ ನಿನ್ನಯ ಉಗುರು ಕಾಣದವರು
ಉಗುಳಿದಾ ತೊಂಬಲು? ನಾನು ನಿನ್ನ
ಯುಗಳ ಪಾದಗಳನ್ನು ಸುಗುಣನಾಗಿ ಅ.ಪ
ಬಗೆಯಿಂದರ್ಚಿಸುವೆನೊ ಮಗಳಮಾವಾ
ಖಗಗಮನ ವಿಜಯವಿಠ್ಠಲ ಪೂರ್ಣೇಂದುವದನ
ಗಗನಕ್ಕೆ ಹೊದಿಸಿ ಬಿಸಿಲು ತೆಗೆಸುವವನಾರೊ ೩
ಅಟ್ಟತಾಳ
ಕುಲಗೋತ್ರ ಮೊದಲಾವ ಸುಳಿಯೊಳಗೆ ಪೊಕ್ಕು
ನೆಲೆಯಗಾಣುವೆನೆಂದು ಬಲುದೂರ ನೋಡಲು
ತಿಳಿಯದು ತಿಳಿಯದು ಬಲವಂತರಿಗೆ ನೋಡು
ಕೆಲಕಾಲ ಮುನಿಗಳು ತಲೆ ಕೆಳಗಾದರು
ಜಲಜನಾಭನೆ ನಿನ್ನ ಕುಲಗೋತ್ರವೆಂಥಾದ್ದೊ
ಭಳಿರೆ ಹೆಮ್ಮಿನ ದೈವ ವಿಜಯವಿಠ್ಠಲರೇಯ
ಗೆಳಿಯನೆನಿಸಿದೆ ನೀನೊಲಿದ ಭಕ್ತರಿಗೆ ೪
ಆದಿತಾಳ
ಅತಿ ಬೆಡಗು ತೋರಿಕೊಳುತ
ಪ್ರತಿಯಿಲ್ಲದ ದೇವರೆನಿಸಿ
ಕ್ಷಿತಿಯೊಳಗಾಡುತ ಸತತ ಮತಿವಂತರಿಗೆ
ಗತಿಯಿತ್ತುದೆಂತೊ ನಿನ್ನ ಸ್ತುತಿಸಿದವರಾರೆಂತೂ
ಮಿತಿ ತಪ್ಪಿ ನೋಡಿದರು ನಿನಗೇನು ಬಂದು ಗು
ರುತು ಕಾಣೆ ಕಮಲನಾಭ ವಿಜಯವಿಠ್ಠಲ ನಿನಗೆ
ಪತಿತ ಪಾವನನೆಂಬೊ ಅತಿ ಬಿರದು ಒಂದಲ್ಲದೆ೫
ಜತೆ
ಜಾತಿ ಗೋತ್ರದಲಿ ಕರೆಯಲು ನೆಲೆಗಾಣೆ
ತಾತ ನೀನೆ ಒಲಿಯೊ ವಿಜಯವಿಠ್ಠಲ ಧೊರಿಯೆ೬

ರು ಈ ಸುಳಾದಿಯಲ್ಲಿ

ಹರಿದಾಸರ ಸ್ತೋತ್ರ
೧೬೨
ಧ್ರುವತಾಳ
ಯಾತರೊಳಗೆ ಗಣನೆ ಎನ್ನಯ ಸ್ವರೂಪ ಬಲು
ಜಾತಿಯಲ್ಲಿ ಪುಟ್ಟಿ ಬಂದದಿದಕೋ
ಪಾತಕ ಪುಂಜವಾದ ಪಾಮರ ನಾನಾಗಿ
ಪೋತತನದಾರಭ್ಯ ಪುಣ್ಯವರಿಯೇ
ಯಾತಕ್ಕೆ ಬಾತಿಯಲ್ಲ ಮೂರಕ್ಕೆ ವಶವಾಗಿ
ಸೋತು ತಿರುಗುತಿಪ್ಪೆ ಜಾತುರದಲ್ಲಿ
ಚೇತನ ಮತ್ತಾವುದೋ ಅವಿದ್ಯಾವರ್ಕವಾಗಿ
ಈ ತೆರದಲ್ಲಿ ಬಿಡದೆ ಸುತ್ತಿಪ್ಪದದಕೊ
ಮಾತು ಒಂದು ಪೇಳುವ ಸ್ವಾತಂತ್ರ್ಯತನ ಕ್ಷಣ
ಮಾತುರ ಎನಗುಂಟೆ ಪೇಳಿರಯ್ಯಾ
ಭೂತಳದೊಳಗಾನು ಜನುಮಜನುಮ ಪಂ
ಡಿತ ವ್ಯಾಖ್ಯಾನ ವಿದ್ಯಾವಂತನಲ್ಲಾ
ನೀತ ಗಾಯಕನಲ್ಲಾ ಧರ್ಮದಾನಗಳಿಲ್ಲ
ಗಾತುರ ದಂಡಿಸಿ ಯಾತ್ರೆ ತೀರ್ಥ
ವಾ ತಿರುಗಲಿಲ್ಲ ಆಚಾರವಂತನಲ್ಲ
ಚಾತುರ್ಮಾಸಾದಿ ವ್ರತಗಳೊಂದು ಇಲ್ಲ
ಯಾತಕ್ಕೆ ಹೊಂದದ ಕೇವಲ ಮೂಢ ನಾನು
ಆತುಮ ಯಾತರದೂ ಆದಿಯಲ್ಲಿ
ಮಾತಿಗುತ್ತರವರಿಯೆ ಆರಾರರ್ಚಿಸುವ ಮೂ
ರುತಿಯನೀಕ್ಷಿಸಿ ಪೇಳಲೊಶವೇ
ಸೋತ್ತಮನವನಯ್ಯಾ ಈ ಪರಿ ನಿರ್ಣಯ
ವಾರ್ತೆ ತಿಳಿದು ಪೇಳುವನಾಗೆ ಗು
ಪುತದಲ್ಲಿಪ್ಪನು ಬಾಹಿರಕ್ಕೆ ಬಾರದು
ಖ್ಯಾತಿ ಆಗನು ಕಾಣೊ ಜಗದೊಳಗೆ
ಆತುಮಸ್ತುತಿ ಇಲ್ಲ ಒಬ್ಬರ ನಿಂದಿಸನು
ವಾತದೇವನ ಮತ ಸಾರಿಯಿಪ್ಪಾ
ಈ ತೆರದಲ್ಲಿ ಕಾಲ ಕಳೆದವನೇ ಧನ್ಯಾ
ದಾತನು ಅವ ನಮ್ಮ ಕುಲಕೋಟಿಗೆ
ಶಾತಕುಂಭವರ್ನವಿಜಯ ವಿಠ್ಠಲ ಬೆ
ನ್ನಾತು ಕಾವುತಲಿಪ್ಪ ಈ ಪರಿ ಉಳ್ಳವರ೧
ಮಟ್ಟತಾಳ
ಮೇದಿನಿಯೊಳಗೆಂದು ವ್ಯಾಸಮುನಿ ನಿತ್ಯ
ಮೋದ ಮನಸುಉಳ್ಳ ಪುರಂದರದಾಸರು
ವಾದಿರಾಜ ಸ್ವಾಮಿ ಬಲುಜನ ಆದ್ಯರು
ಭೇದ ಸಿದ್ಧರು ಶ್ರೀ ನಾರಾಯಣ ಯೋಗಿ
ವೇದ ವೇದಾಂತರು ಇವರು ಕಾಣೊ
ಸಾಧು ಜನರು ಎನ್ನಿ ಇವರವರಿಂದಲಿ
ಆದ ಶಿಷ್ಯರು ಮತ್ತೆ ಕೆಲವರು ನಂದನರು
ಮೇಧಾದಿಗೆ ಅಧಿಕ ಎನಿಸುವ ಶ್ರೀ ಹರಿಯ
ಪಾದ ಸ್ಮರಣೆ ಎಂಬೊ ಪರಿ ಪರಿ ಬಗೆಯಾ
ಸಾಧನಮಾಡಿ ಭಕುತಿಯಿಂದಲಿ ಬೇ
ಕಾದುದನೆ ಸವಿದು ಮಿಕ್ಕ ಪದಾರ್ಥ
ಈ ಧರೆ ಮೇಲಿಟ್ಟು ಮುಂದಣಗತಿ ತಿಳಿದು
ಪೋದರು ಸದ್ಗತಿಗೆ
ಮಾಧವ ಮೂರುತಿ ವಿಜಯ ವಿಠ್ಠಲ ಜಗಕೆ
ಆದಿದೈವವೆಂದು ಕೊಂಡಾಡಿ ನಗುತಾ ೨
ತ್ರಿವಿಡಿತಾಳ
ಹರಿನಾಮ ರಸವೆಂಬೋ ರುಚಿ ಪದಾರ್ಥಂಗಳು
ಗುರುವ್ಯಾಸಮುನಿ ಮಿಕ್ಕಾದ ಸುಜನರು
ಮರುತ ಪ್ರೇರಣೆಯಿಂದ ಸುರಿದು ಮದವೇರಿದ
ಕರುವಿಂಡಿನಂತೆ ಚರಿಸಿದರು ಕಾಣೊ
ದುರುಳರೆದಿಯ ಮೆಟ್ಟಿ ದುಸ್ಸಂಗವನು ಜರಿದು
ಹರಿ ಸರ್ವೋತ್ತಮನೆಂದು ಕೂಗುತಲಿ
ಹರಿದಾಡಿ ಓಡ್ಯಾಡಿ ಬೀದಿ ಬೀದಿಯೊಳಗೆ
ತಿರುಗುತಲಿಪ್ಪ ಕರಿಗಳಂದದಲಿ
ಧರೆ ಮೇಲೆ ಸುರಿದ ಆ ಪದಾರ್ಥದ ಚೂರು
ಇರುವು ಮೊದಲಾದ ಜೀವರಾಶೀ
ಹರಿದು ಪೋಗುತ ನಿಂದಿರಿಸಿಕೊಂಡು ಸವಿದುಂಡು
ಪರಮ ತೃಪ್ತಿಯಾಗಿ ಬಾಳಿದಂತೆ
ಧರೆ ಮೇಲೆ ಕವನ ಪೇಳುವ ಬಲುಜಾಣರು
ಅರಿಯರು ಹೊಸಬಗೆ ಮಾತುಗಳು
ಪರಪರಿ ಚಾತುರ್ಯದಿಂದ ಪೇಳಿದರೇನು
ಹಿರಿಯರಂದದರೊಳಗಿದು ಸಿದ್ಧವೋ
ಇರುವೆ ಮೆದ್ದದರಿಂದ ಕರಿವಿಂಡಿಗೇನು
ಕೊರತೆಯಾಗದು ಕೇಳಿ ಜ್ಞಾನಿಗಳು
ಶರಣರ ಪರಿಪಾಲ ವಿಜಯ ವಿಠ್ಠಲರೇಯ
ಎರವು ಮಾಡದೆ ಕಾವಾ ಹಿರಿಯರ ಪೊಗಳಲು೩
ಅಟ್ಟತಾಳ
ವ್ಯಾಸ ಮುನಿ ಮಿಕ್ಕಾದ ಹರಿದಾಸರು
ಬೀಸೂರಿಗೆ ಎಣ್ಣುರಿಗೆ ಶಾವಿಗೆ
ಸೂಸಲಗಡಬು ಮಂಡಿಗೆ ಭಕ್ಷ ಅಪ್ಪಾಲು
ಲೇಸಾದ ಗುಳ್ಳೋರಿಗೆ ಮೆತ್ತನ ದೋಸೆ
ರಾಸಿ ದಧ್ಯನ್ನ ಪರಮಾನ್ನಾ ವಾರನ್ನ
ಆಸರಾಳಿಗೆ ಮತ್ತೆ ಗವಲಿ ಪರಡಿ ಫೇಣೆ
ಸೀ ಶಾಖಾ ಮಿಕ್ಕಾದ ಮೊದಲಾದ ಪದಾರ್ಥಂಗಳು ಎಲ್ಲ
ತಾ ಸವಿದರು ಅದರೊಳಗೆ ಪುರಂದರ
ದಾಸರು ಗೋಘೃತವೆಂಬೊದೆ ತೃಪ್ತಿಯಾಗಿ
ದೇಶದೊಳಗಿದ್ದು ಹೆಚ್ಚಾದವರ ಪೀ
ಯೂಷ ಹರಿನಾಮವೆಂಬೊ ಪದಾರ್ಥ ಉ
ಳಿಸಿ ಪೋದರು ಕಾಣೊ ಭೇದ ಬಲ್ಲವರಿಗೆ
ಲೇಶ ನಾನದರೊಳಗವರವ ಉಂಡದ್ದು
ಮೀಸಲವಾಗಿರೆ ನೋಡಿ ತೆಗೆದುಕೊಂಡು
ಲೇಸಾಗಿ ಘೃತದ ಸಂಗಡ ಭುಂಜಿಸುವೆನಯ್ಯಾ
ಈ ಸುಖ ಕಂಡವರಿಗೆ ದೊರಕುವುದೇನೋ
ಶಾಶ್ವತ ಮೂರುತಿ ವಿಜಯ ವಿಠ್ಠಲರೇಯ
ನಾಶವಿಲ್ಲದ ಜ್ಞಾನಕೊಟ್ಟು ರಕ್ಷಿಸುವ೪
ಆದಿತಾಳ
ಇಂಥ ಹರಿದಾಸರು ಮಿಗಿಸಿದ್ಧ ಪ್ರಸಾದ
ಇಂತು ಎನಗೆ ಬಂದು ಪ್ರಾಪುತವಾದಮೇಲೆ
ಚಿಂತಿ ಯಾತಕೆ ಮನವೇ ಆನಂದ ತೀರ್ಥರ
ಗ್ರಂಥದಲ್ಲಿಗೆ ಸಮ್ಮತವಾಗಿ ಇಪ್ಪದು
ಪಂಥವಾಡುವ ಜನರು ಆಡಿಕೊಳ್ಳಲವರ
ಪಂಥ ಪೋಗದಲಿರು ಕಂಡರೆ ಕೆಲಸಾರು
ಕಂತು ಜನಕ ರಂಗ ವಿಜಯ ವಿಠ್ಠಲ ತಾನೆ
ಚಿಂತಿ ಮಾಡುವ ತನ್ನ ನೆನೆಸಿದ ಭಕ್ತನಿಗೆ೫
ಜತೆ
ಹರಿ ಪ್ರಸಾದವಾದವಗೆ ಆವುದಾದರು ಕಡಿಮೆ
ನರರಿಗೆ ಆಗುವುದೆ ವಿಜಯ ವಿಠ್ಠಲ ಪೊಳೆವಾ೬

ದಕ್ಷಿಣಭಾರತದ ಸಮುದ್ರದ ತಡಿಯಲ್ಲಿರುವ

೯೧. ಶುಚೀಂದ್ರ
ಧ್ರುವತಾಳ
ಯೋಗದಭ್ಯಾಸ[ರಿ]ಗೆ ಜಾಗರ ಉಳ್ಳ ಕ್ಷೇತ್ರ |
ಆಗಮ ಸಿದ್ಧಾಂತದಲ್ಲಿ ನೋಡಿ |
ಯೋಗಿ ಜನರು ಇಲ್ಲಿ ಭೋಗದಾಶಿ ತೊರಮಾ |
ಲಾಗಿಸುವರು ಭವರೋಗ ವನಧಿ |
ಭೂಗೊಳಾದೊಳಗೋರ್ವ ರಾಗದ್ವೇಷವೇ ಬಿಟ್ಟು |
ಜಾಗು ಮಾಡಿದಿಲ್ಲಿಗೆ ಸಾಗೀ ಬಂದೂ |
ಬಾಗಿ ಕೇವಲ ದೃಢವಾಗಿ ಪ್ರಜ್ಞಾತೀರ್ಥದಲ್ಲಿ |
ತಾಗುಪ್ತದಲ್ಲಿ ಮಿಂದಾಗಲೆ ಕರ್ಮನಾಶ ಭಾಗೀರಥಿ [ನದಿ] |
ಸಾಗರದಲ್ಲಿಗೆ ಪೋಗಿ ಪುಣ್ಯಾಪಡದೂ |
ಯಾಗಾದಿಗಳ ಮಾಡಲಾಗಿ ಆವಫಲ |
ವಾಗುವದದಕೆ ನೂರಾಗುವದು ಸಿದ್ಧ |
ಮೂ[ಗ]ಣ್ಣನೊಬ್ಬ ಬಲ್ಲ |
ನಾಗಶಯನ ವಿಜಯವಿಠಲ ಸುಧೀಂದ್ರ |
ಆಗರಾ ವಾಸನ ನಾಗ ಗಮನ ಭಜಿಸೀ |
ನೀಗಿಕೊಂಡನು ಬಂದ ಭೋಗ ವ್ಯಾಕುಲಾ ೧
ಮಟ್ಟತಾಳ
ಪರಸತಿಗೆ ಅಳು[ಪಿ] ಹರಿಯನುಶಾಪಾ |
ಧರಿಸಿದನು ತನ್ನ ಶರೀರಾವಾದ್ಯಂತಾ |
ದುರಿಯೋನಿಯಲ್ಲಿ ಪರಮ ದುಶ್ಚಿತ್ತನಾಗಿ |
ಥರವಲ್ಲದೇ ಪೋದಾ ವರಸಭಾ ಸ್ಥಾನಕ್ಕೆ |
ಮರಳೆ ತನ್ನೊಳು ತಾನೇ ಮರುಗಿಕೊಳುತಲಿರೇ |
ಸುರಮುನಿ ನಾರದನು ಭರದಿಂದಲಿ ಬರಲೂ |
ಎರಗಿದ ಚರಣಕ್ಕೆ ಕರಗಳನು ಮುಗಿದು |
ಪರಮಪುರುಷರಂಗ ವಿಜಯವಿಠಲನ್ನ |
ಶರಣಗೆ ತನ್ನಯಲ್ಲಾ ಬಿನ್ನೈಸೆ ೨
ರೂಪಕತಾಳ
ಬೆಸನ ಕೇಳುತಮಾನಿ ನಸುನಗುತಾ ಪರಸತಿಯಾ |
ಘಸನಿ ಪೋದವನ ಮನ್ನಿಸದಲ್ಲ ಜಗವೆಲ್ಲ |
ಹಸಗೇಡಿಯಾಗಿ ಸುಮನಸ ತತಿ ಕೇಳಿದ |
ಕುಶಲಕ್ಕೆ ಉಪಾಯ ಪುಶಿಯದಂತೀಗಾಲ |
ವಸುಧಿಯೊಳಗೆ ರಂಜಿಸುವ ಮಹೇಂದ್ರಾದ್ರಿ |
ಪಸರಿಸುತ್ತಾ ಬಲು ಪಸರಾಗಿದೆ ಅತ್ರಿ |
ಋಷಿ ಆಶ್ರಮಾ ಉಂಟು |
ಉಸರಿಕ್ಕಾದಲೆ ಪೋಗಿ |
[ಲೇಸಿನಾ] ಮನದಲ್ಲಿ ಭಜಿಸು ಮಧುಸೂದನನ |
ಹಸನಾಗಿ ವಿಶಾಪ ವಶದಿಂದ ಕಡಿಬಿದ್ದು |
ಲಸತು ಕಾಯದಲಿ ಶೋಭಿಸುತಪೋಗು ಎನಲಾಗಿ
ಬಿಸಜನಯನ ನ್ಮ ವಿಜಯವಿಠಲನ ನೆ |
ನೆಸುತ ಬಂದನು ಅತ್ರಿಋಷಿ ಇದ್ದ ಭೂಮಿಗೆ ೩
ಝಂಪೆತಾಳ
ಬಂದು ಇಂದ್ರನು ತಪಸಿಗೆ ಕುಳಿತನು ಗ |
ಜೇಂದ್ರನ್ನ ಕರದು ಉದಕವ ತರ ಪೇಳಲು |
ಅಂದು ಐರಾವತನು ಕೈಕೊಂಡು ಮಲಯಾದ್ರಿ[ಯ] |
ಲಿಂದ ಪುಟ್ಟಿದ ತಾಂಬ್ರ ಪರ್ಣಿಯದತ್ತ |
ಲಿಂದ ಮಾರ್ಗವ ಮಾಡಿ ತನ್ನ ಒಡಿಯನಿದ್ದಾ |
ಮುಂದೆ ಬಿಟ್ಟದು ಬಲು ಭಕುತಿಯಿಂದ |
ತಂದ ವಿಚಾರವನು ನೋಡಿ ವೃತ್ರ ವೈರಿ |
ಮಿಂದು ಶುಚಿಯಾಗಿ ಮುದದಿಂದಲಿ ಕೊಂಡಾಡಿ |
ಮಂದರಧರದೇವ ವಿಜಯವಿಠಲ ಸೂ |
ಧೇಂದ್ರ ಸ್ವಾಮಿಯ ಪಾದ ದ್ವಂದ್ವವನು ನೆನಸುತ್ತ ೪
ತ್ರಿವಿಡಿತಾಳ
ಆಸನವನು ಹಾಕಿ ಶ್ವಾಸೋಚ್ಛ್ವಾಸವ ಬಂಧಿಸಿ |
ಲೇಶವಾದರು ಕಾಯದಾಶಿಯಾ ಮಾಡದೆ |
ಬ್ಯಾಸಿಗೆ ಬಿಸಲೆನದೆ ಬ್ಯಾಸರಕಿಯ ಬಿಡದೆ |
ವಾಸವ ಕುಳಿತು ಸಂತೋಷದಲ್ಲಿ |
ಕೇಶವ ಮಧುಸೂದನ ಶ್ರೀಶನಂಘ್ರಿಯ ಒಂದು |
ವಾಸರ ಬಿಡದರ್ಚಿಸಲಾಗೀ |
ದೇಶಾಧಿಪ ಸುಧೇಂದ್ರವಾಸ ವಿಜಯವಿಠಲ |
ದಾಸಗೆ ಒಲಿದು ಬಂದ ಸತಿಯ ಕೂಡ ೫
ಅಟ್ಟತಾಳ
ಗೌತುಮನ್ನ ಸತಿ ಪತಿವ್ರತೆ ಅಹಲ್ಯಾ |
ಕಾತುರದಲ್ಲಿ ಪುರುಹೂತನ ಶಾಪಿಸಿರೆ |
ಸೋತ್ತುಮರಿಗೆ ಬಲು ಪಾತಕ ಬಂದರೆ |
ಚಾತುರ್ಯದಲಿ ಅಜಾತು ಮಹಾವಿಷ್ಣು |
ಪ್ರೀತಿಯಲ್ಲಿ ತಿಳಿದ ತಾನು ಭಕುತರ |
ಭೀತಿಯ ಹರಸುವ ಮಾತು ಪೇಳದ ಮುನ್ನ |
ಭೂತಳದೊಳು ಮಧುಘಾತಿ ಸುಧೇಂದ್ರಾನಿಲ |
ಕೇತನ ವಿಜಯವಿಠಲಾತುಮದೇವ ೬
ಆದಿತಾಳ
ಪೊಂದಿದ ಕಲುಷ ಕಳೆದು ಇಂದ್ರನುದ್ಧರಿಸಿದ |
ಅಂದು ಮೊದಲಾಗಿ ದೇವೇಂದ್ರ ಸಾಸಿರ ನಯನಾ |
ನೆಂದು ಕರಿಸಿಕೊಂಡು ಸುಖದಿಂದ ವಾಲಗವಾಗದ |
ಸಂದೇಹ ತೊರದು ನರರು ಬಂದು ಯಾತ್ರಿಮಾಡಲು ಗೋ |
ವಿಂದನು ಕರುಣಾರಸದಿಂದ ಸಾಕುವನವರ |
ಎಂದೆಂದು ಬಿಡದೆ ಸುಧೇಂದ್ರಸ್ವಾಮಿ ಮಧುವೈರಿ |
ವೃಂದಾವನ ಪ್ರೀಯ ವಿಜಯವಿಠಲರೇಯನ |
ಸಂದರುಶನವಾಗೆ ಮಂದ ಬುದ್ಧಿ ಪೋಪುವುವು ೭
ಜತೆ
ದಕ್ಷಿಣ ಸಾಲಗ್ರಾಮಕ್ಷೇತ್ರ ಸುಧೇಂದ್ರಾ |
ಅಕ್ಷಯಾಬ್ಧಿವಾಸಾ ವಿಜಯವಿಠಲಧೀಶಾ ೮

ಭಗವಂತನ ದರ್ಶನವೆಂದರೆ ಕುಮುದ

೭೯
ಧ್ರುವತಾಳ
ರಂಗ ನಿನ್ನ ಚರಣಂಗಳ ನಂಬಿದೆನೊ
ಮಂಗಳಾಂಗನೆ ದುರಿತ ತಮಕೆ ಪತಂಗ
ಜಂಗುಳಿ ಜನ್ಮಗಳಲಿ ಅಂಗೈಸಿದ ಪಾಪ
ಸಂಘಗಳು ಸುತ್ತಿ ಅಂಗಕ್ಕೆ ಲೇಪಿಸಿ
ಹಿಂಗದಲೆ ವ್ಯಾಧಿ ರೂಪಂಗಳು ಬೆಂಬಿಡದೆ
ಭಂಗ ಬಡಿಸುತಲಿರೆ ಮಂಗಳ ಮಹಿಮ
ಗಂಗೆ ಮಧ್ಯದಲ್ಲಿ ಹರಿಗೋಲು ಮಹಾ ಘನತ-
ರಂಗದೊಳಿದ್ದಂತೆ ಮುಂಗಾಣದೆ
ಕೆಂಗಡಿಕೆಯಿಂದ ದಿಕ್ಕರಿಗಳನು ಕಾಣದ
ಕಂಗಳನಂತೆ ಆಗಿ ಯಂಗಾದಿನೊ
ಸಂಗೀತಲೋಲ ಸುರಂಗಳ ಪಾಲ
ರಥಾಂಗಪಾಣಿ ವಿಜಯವಿಠ್ಠಲೇಶ
ಜಂಗಮ ಸ್ಥಾವರ ಕರ್ತ ಸರ್ವಭೋಕ್ತ
ತಿಂಗಳಾಗು ಎನ್ನಂತರಂಗ ಕುಮುದಕ್ಕೆ ೧
ಮಟ್ಟತಾಳ
ಪುನರೇವ ಪಾಪಿ ಪುನರೇವ ಕರ್ಮಿ
ಪುನರೇವ ದೋಷಿ ಪುನರೇವ ದಾರಿದ್ರಿ
ಪುನರೇವ ಜನನ ಪುನರೇವ ಕಷ್ಟಿ
ಪುನರೇವನಾಗಿ ಪುನಹ ಪುನಹ ಉಣುತ
ಅನುತ್ತಮ ನಾಮ ವಿಜಯವಿಠ್ಠಲನೆ
ಪುನೀತ ನಾನಾಗಿ ನೆನಸದೆ ನಿನ್ನ ಪು ನರಕದಲ್ಲಿ
ಪುನರಪಿ ಬೀಳುತ್ತ ಮುಣುಗಿ ತೇಲುವೆನೊ ೨
ತ್ರಿವಿಡಿ ತಾಳ
ಭೂರಂತರವ ತಿಳಿಯದೆ ಮೂರು ರಹಿತವಾದ
ಭೂರಮಣನ ಲೀಲೆ ತಿಳಿಯದಿರಲು
ದ್ವಾರ ಪ್ರವೇಶಿಸಿ ತಿರುಗಿ ಬಾರದಲಿಪ್ಪ
ಕಾರಣವಾವುದು ಇಲ್ಲಿ ಒಬ್ಬ
ಜಾರ ಸ್ತ್ರೀಯಳು ಉಂಟಾವಳ ಪತಿ ಪೆಸರೇನು
ಮಾರಾಳ ಪಕ್ಷಿಯ ನಾಮವಾವುದು ಎಂದು
ಧಾರುಣಿಯೊಳಗೊಂದು ನಾರಿ ಉಭಯ ದಿಕ್ಕಿಗೆ
ಪಾರುವುದೆಂದು ಪೇಳುವರೋ
ಈರಾರು ಕೂಡಿದ ಚಕ್ರ ಸಂಚರಿಸೆ ವಿ
ಚಾರ ಪಂಚ ಪಂಚ ಮನಿಗಳುಂಟು
ಆರಿಗೆ ವಶವಲ್ಲವಿದು ತಿಳಿಯೆಂದು ನಿನ್ನ
ವರನ್ನಾರಾಧಿಸು ಭಕ್ತರೆಂಬೋರು
ಚಾರು ಚರಿತ ನಿಗ್ರಹ ವಿಜಯವಿಠ್ಠಲ
ತೋರಿಕೊಡುವ ಇದರ ತಾರತಮ್ಯವನು ೩
ಅಟ್ಟತಾಳ
ಮನೆಯೊಳಗಿದ್ದ ವರ್ತಮಾನ ತಿಳಿಯದೆ
ದಿನ ದಿನ ನೆರೆ ಮನೆಯವರನ್ನು ನಿಂ
ದನ ಮಾಡುತಲಿ ತೃಣವೆಂದು ಪರರನ್ನು
ಗಣನೆ ಮಾಡದೆ ಅವಗುಣದಲ್ಲಿ ನುಡಿವೆನೊ
ಗುಣಿತ ಆವುದೊ ಈ ಮಾನಿಗೆ ಸುತ್ತಿಕಾ ಬಟ್ಟೆ
ಇನಿತು ಪ್ರಾಕೃತದಲ್ಲಿ ಪೋಗಿ ಬಂದ ಲೇಸು
ಘನ ಮೂರ್ತಿ ದಕ್ಷಣ ವಿಜಯವಿಠ್ಠಲರೇಯ
ಕೊನಿ ಮೊದಲಾದವು ಮನಿ ಅಹಂಕಾರಕ್ಕೆ ೪
ಆದಿತಾಳ
ಪ್ರಾಚೀನ ಕರ್ಮಗಳು ವಾಚಾ ಮಾನಸಾ ಕಾಯದಲ್ಲಿ
ನೀಚ ಗುಣನಾಗಿ ದುರಾಲೋಚನೆಗೆ ಒಳಗಾಗಿ
ಲೋಚನ ಹಸ್ತ ಚರಣದಾ ಚೇಷ್ಟೆಯಲ್ಲಿ ಮಾಡಿದ
ಯೋಚಿಸಿ ನೋಡಲು ಮಾಯಾ
ಪಾಚಿಸಿಂದಾಪಾರ ಲೀಲ
ವಾಚಾಮ ಗೋಚರ ಎನಗೆ ನಾಚಿಕೆ ಮುಂದಾದರಿಲ್ಲ
ಈ ಚೇತನದಲ್ಲಿ ಪಾಪ
ಮೋಚನ ಎನಿಸಲಿಲ್ಲ
ವಾಚಸಪತಿ ನಾಮ ವಿಜಯವಿಠ್ಠಲ ಬಂಧು
ಗೋಚರ ನೀನಾಗಿ ದುರ್ಮಿಥ್ಯಾಚಾರವನ್ನು ಬಿಡಿಸೊ ೪
ಜತೆ
ಜ್ಞಾನ ಭಕುತಿ ದೇಹಿ, ಜ್ಞಾನ ಭಕುತಿ ದೇಹಿ
ಅನಾದಿ ನಾಮನೆ ವಿಜಯವಿಠ್ಠಲನೆ ೫

ಶ್ರೀರಂಗವನ್ನು ಕುರಿತು ರು

೯೪. ಶ್ರೀರಂಗ
ಧ್ರುವತಾಳ
ರಂಗರಂಗ ವಿಹಂಗತುರಂಗ ತು |
ರಂಗವದನ ತುರಂಗಖಳರ ಮರ್ದನ |
ರಂಗ ಭಕ್ತರಂಗದೊಡಿಯಾ ಶಾ |
ರಂಗ ಚಾಪಾಪಾಣಿ ಸಂಗೀತಲೋಲ |
ಮಂಗಳಂಗ ಪ್ಲವಂಗ ನಾಯಕ ತಾ |
ರಂಗಮಹಿಮ ಪಾತಂಗ (ಕುಲೋದ್ಧಾರ) ಕುಲೋದ್ಭವ |
ರಂಗ ನಿಸ್ಸಂಗ ದೋಷಾಸಂಗಾ ಸತತ ದೂರಾ |
ತುಂಗ ವಿಕ್ರಮ ಭುಜಂಗಶಯನಾ, ಮಾ |
ತಂಗ ವರದ ದೈತ್ಯಭಂಗ ಹೃತ್ಸರಸಿಜ |
ಭೃಂಗ ಭಾನುತೇಜ ಗಂಗಾಜನಕ |
ಜಂಗಮ ಸ್ಥಾವರ ಜಂಗುಳೀ ಪರಿಪಾಲ |
ರಂಗ ಮಂದಿರವಾಸರ ರಂಗರಂಗೇಶಾ |
ರಂಗ ಮೂರುತಿ ನೀಲಾಂಗ ವಿಜಯವಿಠಲ |
ಡಿಂಗರಿಗೊಲಿದ ತಿರುವೆಂಗಳೇಶಾ ೧
ಮಟ್ಟತಾಳ
ಸರಸಿಜಭವನಿಂದ ನಿರುತ ಪೂಜಿಗೊಂಬ |
ವರಶ್ರೀರಂಗದೇವಾ ಧರಣಿಯೊಳಗೆ ಸವಿತರವಂಶಕೆ ಬಂದು |
ಪರಿಪರಿವಿಧದಲಿ ಮೆರೆದು ಪಾರಂಪರೆಯ |
ಅರಸರಸರ ಕೂಡ ಪರಮತೋಷದಲಿದ್ದ |
ಕರುಣಾಂಬುಧಿರಂಗ ವರಮಂದಿರವಾಸ |
ವಿಜಯವಿಠಲರೇಯಾ |
ಶರಣರ ಮನಕೆ ಗೋಚರವಾಗುವ ದೈವಾ ೨
ರೂಪಕತಾಳ
ಅಜರಾಯನುದರದಲಿ ಸೃಜಿಸಿ ದಶರಥರಾಯಾ |
ಭಜಿಸಿ ಪಡದಾನಂದು ತ್ರಿಜಗದ ಒಡಿಯನ್ನ |
ಅಜನ ತಾತನು ಪುಟ್ಟ ರಜನಿ [ಚ]ರನು ಕುಟ್ಟಿ |
ನಿಜಸತಿಯಾ ಕೂಡ ಪರಂಜನೇತ್ರ ಮೆರದಾನು |
ರಜದೂರ ವಿಜಯವಿಠಲ ರಂಗರಾಮಾ |
ಭಜಿಸುವರ ಮನೋವ್ರಜಾವಂಧದೂರ ೩
ಝಂಪೆತಾಳ
ಭಕ್ತ ವಿಭೀಷಣನ ಭಯವನ್ನೆ ಪರಿಹರಿಸಿ |
ಉತ್ತರೋತ್ತರಿರುವಂತೆ ಅಭಯವಿತ್ತು |
ಭಕ್ತಿಗೆ ಒಲಿದು ತಿರುಗಿ ಪೋಗು ಎಂದೆನಲು |
ಉತ್ತರಕೆ ತಲೆವಾಗಿ ಬಿನ್ನೈಸಿದಾ |
ಚಿತ್ತದೊಡಿಯಾ ರಾಮಾ ನಿನ್ನಗಲಿ ಕಾಲಕಳ |
ವುತ್ತ ಇರಬಹುದೆ ನಂಬಿದ ದಾಸರೂ |
ಭೃತ್ಯ ನುಡಿವುದನು ಲಾಲಿಸಿದಾ ಸವೋತ್ತುಮಾ |
ಇತ್ತಾನು ವರಮೂರ್ತಿಯನು ಪಾಲಿಸೀ |
ಸತ್ಯಸಂಕಲ್ಪರಾಮ ರಂಗ ವಿಜಯವಿಠಲ |
ಹತ್ತಾವತಾರದ ಪುರುಷ ಸಿರಿ ಅರಸಾ ೪
ತ್ರಿವಿಡಿತಾಳ
ಪೊದವಿಗಿ[ಳು]ಹದಲೆ ನಿನ್ನ ಪುರಕೆ ವೈದು |
ಕಡುಪೂಜೆ ಮಾಡೆಂದು ಹೇಳಲಾಗಿ |
ಪೊಡವಟ್ಟು ವಿಭೀಷಣ ಶಿರಸಾವಹಿಸಿಕೊಂಡು |
ನಡೆದು ಬರುತಿರಲು ಹರಿ ಮಾಯದಿಂದ |
ತಡಧಾದಿಯಲ್ಲಿ ಬಂದು ಸಾಗದಂತಾಗಲು |
ಒಡನೆ ಸಾಹಸಮೀರಿ ಕೀಳಾಲೇಳಾದಿರೆ |
ದೃಢಾಗುಂದಿ ವಿಭೀಷಣನಿಂದಿರಲೂ |
ಒಡಿಯಾ ಪುಷ್ಕರಣಿಯವಾಸಾ ರಂಗರಾಯಾ |
ಬಡವರದಾಸ ಶ್ರೀ ವಿಜಯವಿಠಲರೇಯಾ |
ಸಡಗರದ ಮಹಿಮಾ ಮೆರದಾನಂದು ಮೊದಲು ೫
ಅಟ್ಟತಾಳ
ಭಕುತಿಗೆ ವರವಿತ್ತು ಸುಖ ಸಾಂದ್ರರದೇವ |
ವಿಕಳಾನಾಗಾದೆ ನೀ ಸಕಲ ಕಾಲಾದಾಲಿ [ಅರ್ಚಕ]ನಾಗಿರು ಎಂದು |
ಕಕುಲಾತಿ ಬಿಡಿಸಿ ಸಾರೆ ಕರೆದು ಪೇಳಿದ |
ರಕ್ಕಸರ ಪುರವಾಸಕ್ಕೆ ಸಲ್ಲಾ ಎನಗಿರತಕ್ಕದಲ್ಲಾವೆಂದೂ |
ಲಕ್ಕುಮಿ ರಮಣ ಪೇಳೆ |
ಅಕಳಂಕ ರಂಗೇಶಾ ವಿಜಯವಿಠಲ ತಾ |
ರಕವಾ ವಿಮಾನದಲಿ ಮುಕುತಾ[ರ್ಥ]ನಲಿವಾ ೬
ಆದಿತಾಳ
ತೇಜೋಮಯನು ಇಲ್ಲಿ ರಾಜಿಸುತ ಪವ[ಡಿ]ಸಿದ |
ರಾಜಾ ಸರೋವರದಲ್ಲಿ ರಾಜಾ ರಾಜಾರಂಗರಾಜಾ |
ರಾಜಶೇಖರ ಬೊಮ್ಮಾಸುರರಾಜ ಗಂಧರ್ವಾದಿಯಿಂದ |
ಪೂಜೆಗೊಳುತ ಪೂರ್ಣವಾಗಿ ನಿ |
ಕೂಜಿದವರ ಪೊರವುತ್ತಾ |
ಮೂಜ್ಜಗದೊಡಿಯಾ ರಂಗರಾಜಾರಾಮಾ ವಿಜಯವಿಠಲ |
ಯೋಜನಪಾರಕ್ಕೆ ನೆನಿಯಮಾಜಾದೆ ಸತ್ಪುಣ್ಯ[ವ]ನೀವಾ ೭
ಜತೆ
ಉಭಯಾ ಕಾವೇರಿಯಾ ವಾಸಾ ಅನಿಮಿಷಾಧೀಶಾ |
ವಿಭುವೆ ರಂಗರಾಮಾ ವಿಜಯವಿಠಲರೇಯಾ ೮

ಬ್ರಹ್ಮಾಂಡದ ಒಟ್ಟು ವಿಸ್ತಾರ ಐವತ್ತು

೭೯
ಧ್ರುವತಾಳ
ರಕ್ಷಿಸುವ ಭಕ್ತರ ನಾನಾ ರೂಪದಿಂದ
ಅಕ್ಷರ ಪುರುಷ ರಮಣ ಕರುಣಾಂಬುಧಿ
ಅಕ್ಷಿ ಮೊದಲಾದ ಕಾರ್ಯದಲ್ಲಿದ್ದು ಭಕ್ತರ
ಶಿಕ್ಷೆ ಮಾಡುವ ಉಕ್ಕು ತಗ್ಗಿಸುವ
ಈಕ್ಷಿಸುತಿಪ್ಪನು ಒಳಗೆ ಹೊರಗಿದ್ದು ಬಿಡದೆ
ದೀಕ್ಷ ಬದ್ಧನಾಗಿ ದೀನ ಬಂಧು
ಅಕ್ಷಯ ಕೊಡುತಲಿ ಆವಾವಕಾಲಕ್ಕೆ
ಮೋಕ್ಷಕ್ಕೆ ಸಾಧನ ಮಾಡಿಸುತ್ತ
ಲಕ್ಷಣ ಮೂರುತಿ ಕೇವಲ ನಂಬಿದವರು
ಲಕ್ಷ ಕೋಟಿ ಜನರ ನಡುವೆ ಇರಲು
ಲಕ್ಷ್ಮೀ ಸಹಿತ ಬಂದು ಕಾವನು ಆಪದ್ಧರ್ಮ
ರಕ್ಷಕನೆಂಬೊ ಬಿರದು ಕೂಗುತಿದಕೋ
ಭಿಕ್ಷುಕ ಭಾಗ್ಯವಂತನೆಂಬೊ ವೈಷಮ್ಯವಿಲ್ಲಾ
ಲಕ್ಷ ಇಟ್ಟು ಮೇಲೆ ಒಪ್ಪಿಸಿ ಕೊಡನೋ
ವಕ್ಷಸ್ಥಳದ ಮೇಲೆ ಒದ್ದ ಬ್ರಾಹ್ಮಣವ
ಉಪೇಕ್ಷ ಮಾಡದಲೆ ಮನ್ನಿಸಿದ ನೋಡು
ಈ ಕ್ಷಿತಿ ಮಧ್ಯದಲಿ ಇನ್ನೊಂದು ದೈವವುಂಟೆ
ತ್ರಕ್ಷ್ಯ ಜನಕ ಮೊದಲಾದವರು
ರಕ್ಷಿಸಬೇಕೆಂದು ಕರವ ಜೋಡಿಸಿ
ಅಪೇಕ್ಷದಿಂದಲೆ ಸ್ತುತಿಸಿ ಬೆಂಡಾಹರೋ
ತೀಕ್ಷಣವಾಗಿ ಹರಿಯ ಕಾಣಬೇಕೆನೆ ಪ್ರ
ತ್ಯಕ್ಷ ಸೋಮನ ಶ್ರುತಿಯಲಿ ಕಾಣಿರೊ
ವೃಕ್ಷ ಸ್ಥಾವರ ಜಂಗಮ ನಾಲ್ಕು ಎಂಭತ್ತು ಜೀವಿಗಳನ್ನು ಚಕ್ರದಂತೆ
ಚಕ್ಷು ಲವ ನೋಟದಿಂದ ಬೊಮ್ಮಾಂಡ ವರ್ಣ ಮಹಾ
ಲಕ್ಷೀ ಸಮೇತ ಸದ ಸರಸರಗಿದ್ಧಾನೆ
ಆಕ್ಷಣದಿಂದಲಿ ತೃಣಮಾಯರಂದದಿ ಲಪ
ರೋಕ್ಷ ತಾನಾಗಿ ಇನಿತು ತಿರುಗಿಸುವ
ಕುಕ್ಷಿಗೋಸುಗವಲ್ಲ ಸರ್ವ ಸ್ವಾತಂತ್ರ ನಿತ್ಯ
ದಕ್ಷಕ ಸುಖ ಸಂಪೂರ್ಣ ಇಂಥವರನ್ನ
ಲಕ್ಷಿಗೆ ತಾರನೇನೊ ಸ್ವರತಾ ನಿರ್ದೋಷಮಣಿ
ಅಕ್ಷೀಣ ಬಲವಂತ ಸ್ವಪ್ರಕಾಶಾ
ಸಾಕ್ಷಾತ್ಕಾರ ಸ್ವಭಾವ ಕಾಲದಿಯಲ್ಲೀ ಸಮ
ಕಕ್ಷಿಗಳಿಲ್ಲ ಕಾಣೊ ಚಿಂತಿಸಿದರು
ನಕ್ಷತ್ರ ಗಣ ಪುಲಿನರಾಶೀ ಪರಾಗ ಸಂಖ್ಯ
ನೀಕ್ಷಿಸಿ ಎಣಿಸಬಹುದೋ ಇದು ತೀರದು
ಸಾಕ್ಷಿ ಪ್ರೇರಕ ಕರ್ತಕಾರಯಿತ ಅನಾದಿಯಿಂದ
ಸೂಕ್ಷ್ಮ ಶರೀರದೊಳು ಮಹಾತಮ ತರದೀ
ಪಕ್ಷಿನಾಮಕದೇವ ವಾಸವಾಗಿಪ್ಪ ವಿಶ್ವ
ಚಕ್ಷು ನಾರಾಯಣಾ ಬಿಂಬ ವ್ಯಾಪ್ತಿ
ದಕ್ಷಣಾದೇವಿ ರಮಣ ವಿಜಯ ವಿಠ್ಠಲ ಬಲು
ಪಕ್ಷಪಾತಿ ಕಾಣೊ ಒಮ್ಮೆ ನೆನಿಸಿದರೂ ೧
ಮಟ್ಟತಾಳ
ಸ್ಥಳದಲ್ಲಿ ವಾಮನ ಅಟವ್ಯ ನರಸಿಂಹ
ಜಲದಲ್ಲಿ ಮತ್ಯ್ಸ ಗಗನದಿ ತ್ರಿವಿಕ್ರಮಾ
ಕುಲಗಿರಿಯಲ್ಲಿ ಪರಶುರಾಮನು ಮಾರ್ಗ
ದಲಿ ಭೂ ವರಾಹಾತ್ಮಾ ಬಲು ಪ್ರವಾಸದಲಿ
ಸಲಕ್ಷ್ಮಣ ಭರತಾಗ್ರಜ ಜಾನಕಿಪತಿ ರಾಮಾ
ತಿಳಿವದು ಈ ವಿಧದಿ ರಕ್ಷಕ ಮೂರ್ತಿಗಳ
ಬಲಿಮರ್ದನಿ ಪಾದ ವಿಜಯ ವಿಠ್ಠಲರೇಯ
ಒಲಿದು ಸಂಗಡಿಲಿದ್ದು ಸುಖವೇ ಕೊಡುತಿಪ್ಪಾ ೨
ತ್ರಿವಿಡಿ ತಾಳ
ಮತ್ತೆ ನಿಖಿಳಾ ಪ್ರಮಾದ ರಕ್ಷಕ ಶಭ
ಮೂರ್ತಿ ನಾರಯಣಾತ್ಮಕನೊ ಉ
ನ್ಮತ್ತವೊಮಾದಾ ಹಾಸಕನೆ (?) ನರ ನಾಮಕಸ್ವಾಮಿ
ದತ್ತನೂ ಅ ಯೋಗ ದ್ರಕ್ಷಕ ನಾಗಿಪ್ಪಾ
ಮೊತ್ತ ಕರ್ಮಾ ಕರ್ಮ ಬಂಧ ಮೋಚಕ ಕಪಿಲಾತ್ಮಕ ಸ
ನತ್ಕುಮಾರನು ಯೋಗ್ಯತಾವ ಕಾಮಕೆ ಇನ್ನೂ (ತಾಪಸಕಮ ಎನ್ನ)
ಭೃತ್ಯಧರ್ಮವೇ ಮರದು ಪತಿದೇವ
ಹೇಳನ ಕೃತ್ತೀಗೆ ಹಯಗ್ರೀವ ಪಾಲಿಸುತಿಪ್ಪನು
ತತ್ವೇಶರ ಕೂಡ ಅರ್ಚನೆ ಮಾಡ ಹರಿಗೆ
ತುತ್ತು ಈಯದೆ ಲಕ್ಷಣ ಕರ್ಮ ಸ್ಮರಣ ರ
ಹಿತ್ತವಾಗಿದ್ದ ಪೂಜಿಯ ದೋಷಹ ಮಹಿದಾ
ಸಾತ್ಮಕ ಹರಿಯೆನ್ನು ಅಶೇಷ ನಿರಯವಾ
ಉತ್ತರಿಸುವಾ ಕೂರ್ಮ ಧನ್ವಂತರಿದೇವಾ
ಪತ್ಯ ರಕ್ಷಕಾ ದ್ವಂದ್ವಾ ಭಯ ಪರಿಹಾರಕ
ಕೀರ್ತಿ ಪುರುಷ ಋಷಭ ಯಜ್ಞ ಕೃತಫಲದಲ್ಲಿ
ನಿತ್ಯ ಯಜ್ಞಾತ್ಮಕ ಸುರನಾಯಕಾ
ವೃತ್ತಿ ಕ್ರೋಧಾವೇಶ ಕಳೆದ ಬಲ ಭದ್ರಾತ್ಮಕಾ
ಸತ್ಯಸಂಕಲ್ಪನೋ ಪರಮಾತ್ಮನೋ
ಸತ್ಯವತೀಸೂನು ಸಂಪ್ರಮೋಹ ಬಿಡಿಪಾ
ಮಿಥಾಜ್ಞಾನಿಗಳ ಸಂಗವ ಹರಿಸುವ ಬುದ್ಧಿ
ಚಿತ್ತಾದಿಯಲಿ ಕಲಿಯ ಕಲ್ಮಷವಿರೆ ನು
ಗೊತ್ತುವಾ ಕಲಿ್ಕರೂಪವೆನಿಸಿ
ಸತ್ಯಾ ಪರಮಣ್ಯ (ಯಣ) ಸ್ವಾಮಿ ಮಿಜಯ ವಿಠ್ಠಲ ಸ
ರ್ವತ್ರದಲ್ಲಿ ಇದ್ದು ಅಘನಾಶ ಮಾಡುವಾ ೩
ಅಟ್ಟತಾಳ
ಪದಜಾನು ಉರು ರಕ್ಷಕ ಅಜಾ ಅಣಿಮಾಯಜ್ಞ
ಮೃದು ಕಟಿ ಅಚ್ಯುತಾ ಜಠರ ಹಯಗ್ರೀವಾ
ಪದುಮನಾಭ ನಾಭಿ ಗುಹ್ಯೇಂದ್ರಿಯನಿರುದ್ಧಾ
ಹೃದಯ ವಕ್ಷಸ್ಥಳ ಕೇಶವಾ ಈಶಾನಾ
ಇದೇ ಸಿದ್ಧಾಕರ ಸ್ವ ಆತ್ಮ (ಕಂಠಸ್ವಾತ್ಮಕ) ಭುಜೆವಿಷ್ಣು
ವದನ ಉರುಕ್ರಮಾ ಶಿರೋ ಈಶ್ವರನೆನ್ನು
ಎದುರಿಗೆ ಚಕ್ರಿಯಾತ್ಮಕ ಪೃಷ್ಠಭಾಗಕ್ಕೆ
ಗದಾಧರ ಪಾಶ್ರ್ವಕ್ಕೆ ಧನುರ್ಧಾ ಕಾಣೊ
ತದುಪರಿ ಉಪೇಂದ್ರ ಕ್ಷಿತಿಗೆ ತಾರಕ್ಷನೋ
ಮುದದಿಂದಲಿ ಸಮಾ ಅಂತಿಗೆ ಹಲಧರಾ
ಒದಗಿ ಇಂದ್ರಿಯಗಳಿಗೆ ಹೃಷಿಕೇಶ
ಸದಮಲ ಪ್ರಾಣಚಿತ್ತಾ ಮನೋಬುದ್ಧಿಗೆ
ಪದುಮೇಶ ನಾರಾಯಣ ದೇವ ಶ್ವೇ
ತದ್ವೀಪದವಾಸಿ ಯೋಗೇಶ್ವರ ಪ್ರಶ್ನಿಗರ್ಭ (ಪ್ರಶನಿಗರ್ಭ)
ಇದೇ ಸತ್ಯವೆನ್ನಿ ಆತ್ಮನಿಗೆ ಪರಶುರಾಮಾ
ಪದೋಪದಿಗೆ ಕ್ರೀಡಾ ಶಯನಾ ವ್ರಜಾಸಿನಾ
ವಿಧಕ್ಕೆ ಗೋವಿಂದ ಮಾಧವ ವೈಕುಂಠ ಶ್ರೀಪತಿ
ಪದ ಪ್ರದಾತಾ ನಮ್ಮ ವಿಜಯ ವಿಠ್ಠಲ ಸ
ನ್ನಿಧಿಯಾಗಿ ಇರುತಿಪ್ಪಾ ಆನಂದ ಕೊಡುತಲಿ ೪
ಆದಿತಾಳ
ಮುನ್ನೆ ಕೇಳುವುದು ಭೋಕ್ತಾರಕ್ಷಕ ಯಜ್ಞಭೋಕ್ತ
ಉನ್ಮಾದಾ ಅಪಸ್ಮಾರ ಅರ್ಭಕ ಗೃಹಾ ಯಾತೂ
ಧನ್ಯ ಕೂಷ್ಮಾಂಡ ಭೂತಪ್ರೇತ ಪೈಶಾಚಿ ಡಾ
ಕಿನ್ಯ ಶಾಕಿನಿ ದೇಹ ಪ್ರಾಣೇಂದ್ರಿಯಗಳಲ್ಲಿ
ಭಿನ್ನಾ ದುಸ್ವಪ್ನ ದುಷ್ಟ ಮೋಹೋತ್ಪಾತಾ ಬಾಲ ಯಾ
ವನ ವೃದ್ಧಾಪ್ಯ ವಿಡಿದು ನಾನಾ ಭಯ ವಿಚಿತ್ರಾ
ಘನ್ನವಾಗಿ ಬಂದಿರೆ ವಿಶ್ವನಾಮಕನ
ಚೆನ್ನಾಗಿ ನೆನಿಸುವುದು ಯಮ ನೇಮನದಿಂದ
ಇನ್ನು ಈ ವಿಚಾರಕ್ಕೆ ಸುಲಭ ಮಾರ್ಗವೆ ಉಂಟು
ಅನಂತರೂಪಗಳು ಸರ್ವದಲ್ಲಿ ಇಪ್ಪವು
ಇನಿತು ಜ್ಞಾನದಲ್ಲಿ ಇದರೊಳಗಾವ ಒದಗೆ
ನಿನ್ನ ಚಿತ್ತಕ್ಕೆ ಬಂದದ್ದು ಸ್ಮರಿಸೆ ನಿರ್ಭಯವೋ
ಧನ್ಯನಾಗೆಲೊ ಜೀವಿ ಈ ಬಗೆ ಕೊಂಡಾಡಿ
ಪುಣ್ಯ ಸಂಪಾದಿಸು ಅರಿಷ್ಟ ಪೋಗಾಡು
ಸಣ್ಣೋಪಾಯವೆ ಉಂಟು ಒಂದೆರಡು ಮೂರು ನಾಲ್ಕು
ಭಿನ್ನ ಅರೇಳು ಎಂಟು ಒಂಭತ್ತು ಈರೈದು
ಹನ್ನೊಂದು ಹನ್ನೆರಡು ಈ ಪ್ರಕಾರವೆ ಹರಿಯಾ
ಉನ್ನತ ಪ್ರೇರಣೆ ಸ್ವಾಮಿತ್ವ ತಿಳಿಯ ಬೇಕು
ತಿನ್ನಲಾಗಿ ಮೇಲಿದ್ದ ರಸ ಪೋದ ಮಾವಿನ
ಹಣ್ಣಿನಂದದಿ ಎಲ್ಲ ಅನುಭವ ನೋಡಿಕೊಳಿರಿ
ಮನ್ನಿಸಿ ಓದಿ ಕೇಳಿ ಲಾಲಿಸಿದವರಿಗೆ
ಇನ್ನಿತು ಆಗುವದು ದೀಪದಿಂದಲಿ ದೀಪವ
ಬಿನ್ನಾಣದಲಿ ಪಚ್ಚಿಕೊಂಡು ಪೋದಂತೆ ಇದು
ಪುಣ್ಯತಂದು ಕೊಡುವುದು ಹರಿಕಥಾಮೃತ ನಿತ್ಯ
ಪೂರ್ಣ ಗುಣಾರ್ಣವ ಹರಿ ವಿಜಯ ವಿಠ್ಠಲ
ತನ್ನ ತೋರಿಸಿ ತನ್ನ ಪದವಿಯ (ನೀವಾ) ಕೊಡುವಾ ೫
ಜತೆ
ಭಗವನ್ಮೂರ್ತಿಗಳನ್ನು ಚಿಂತಿಸು ಅಲ್ಲಲ್ಲಿ
ಅಘ ನಿರ್ಲೇಪನಾಗು ವಿಜಯ ವಿಠ್ಠಲ ಪೊಳಿವಾ ೬

ಈ ಸುಳಾದಿಯೂ ಕುರಂಗ ಕ್ಷೇತ್ರವನ್ನು ಕುರಿತದ್ದಾಗಿದೆ.

೨೫. ಕುರಂಗ (ಪಂಚತಿರುಪತಿ)
ರಾಗ:ಕೇದಾರಗೌಳ
ಧ್ರುವತಾಳ
ರತಿಪತಿ ಪಿತ ಪಾರ್ವತಿ ಪತಿ ಪಿತನಯ್ಯಾ |
ಶ್ರುತಿ ತತಿನುತ ಭಾರತಿ ಪಿತಗತಿ ಪ್ರೀತ |
ಸತತ ಮಹಿಮ ಉನ್ನತ ಲೀಲಾ ಅತಿಶಯ |
ಮತಿವಂತರಿಗೆ ಸದ್ಗತಿಯಾ ಕೊಡುವ ದೇವ |
ಕ್ಷಿತಿಯೊಳ ಪ್ರತಿಕೀರುತಿಯಾ ಮೆರೆವ ಸರ್ವ |
ವೃತವ್ರಾತಗಳಿಗೆ ದೂರತನಾಗಿ ಇಪ್ಪನೆ |
[ಚ್ಯು]ತದೂತ ಮಿತನಾಮಿತರಾಗತ ಹೃದಯಾ |
ಹಿತವಂತ ಪಂಚ ತಿರುಪತಿ ವಾಸಾ ಎನ್ನ ಸಾ |
ರಥಿ ವಿಜಯವಿಠಲಾ ಪತಿತಪಾವನ ದೇವ |
ದಿತಿನಂದನರ ತಾಯಿಯುವದಿತಿಸುತನವನ ದಾವಾ ೧
ಮಟ್ಟತಾಳ
ಕುಂಭಿಣಿಯನು ತಿರುಗಿ ಕುಂಭಸಂಭವ ಬಂದು |
ಸಂಭ್ರಮದಿಂದಲ್ಲೀ ತುಂಬಿದ ಮನದಿಂದೀ |
ಇಂಬುನೋಡಲು ಮರಿದುಂಬಿ ಮೃಗದ ಕಾ |
ದಂಬ ವಸಂತದಲಿ ಸಂಭವಿಸಿದಂತೆ |
ಬೆಂಬಿಡದಲಾಡಾಲು ಹಂಬಲಿಸಿ ನೋಡಿ |
ಅಂಬುನಿಧಿ ಶಯನ ವಿಜಯವಿಠಲನ ಪಾ |
ದಾಂಬುಜವನು ನೆರೆ ನಂಬಿದ ದೃಢವಾಗಿ ೨
ತ್ರಿವಿಡಿತಾಳ
ವೈದಿಕತನದಲ್ಲಿ ಐದಾಕಪಕೆ ಮನವೀ |
ರೈದರ ಒಡಗೂಡಿ ಮೈದೆಗಿಯಾದಲೆ |
ಐದು ಬಳಿಯಾ ಕುಳಿತು ಕೈಮಗುಚಿ ಜ |
ಗದೈಯಾನ್ನ ನೆನದೂ ದೈನ್ಯಾವೃತ್ತಿಯಲ್ಲಿ |
ಹೈದರೊಳಿದ್ದಪರ ದೈವ ವಿಜಯವಿಠಲ |
ಮೈದೋರಿದನು ಮುನಿಗೆ ಸೈವಾಗಿ ಸಂತತಾ ೩
ಅಟ್ಟತಾಳ
ಋಷಿಯ ಮನಕೆ ಹರುಷಾವನ್ನು ತೋರಲು |
ನಿಶವನ್ನು ಕಳೆದು ದಿವಸ ನೋಡಿದಂತೆ |
ಪಸರಿಸೀತು ಜ್ಞಾನ ಕುಶಲಾದಿಂದಲಿ ಕ |
ಲುಷಹರದ ರೂಪವೆಸದದ್ದು ಅರ್ಥಿಲಿ |
ಬಿಸಿಜನಯ್ಯನ ದೇವ ವಿಜಯವಿಠಲ ಪಂಚ |
ವಸತಿಯಾದನು ಪಾಲಿಸುತ ಎಲ್ಲರನೂ ೪
ಆದಿತಾಳ
ಪಂಚಾಮೃತದ ನದಿಯ ಸ್ನಾನ |
ಪಂಚಮೂರುತಿ ದರುಶನ |
ಪಂಚರಳಿದು ಮಾಡಿದರೆ |
ಹಿಂಚಿನಘ ಪೋಗುವದು |
ಪಂಚಭೇದವನ್ನು ತಿಳಿದು |
ಮುಂಚ ಸಾಧನಪೂರವಾಗಿ |
ಕಾಂಚನ ಮಯದಿಂದ |
ಮಿಂಚುವನು ತೇಜಾದಲ್ಲಿ |
ಪಂಚರಹಿತ ವಿಜಯವಿಠಲ |
ವಂಚನೆ ಇಲ್ಲಾದಂತೆ |
ಪಂಚರಾತ್ರಿ ಇಟ್ಟು ವಿ |
ರಂಚಿ ಕೂಡ ಕರಸುವಾ ೫
ಜತೆ
ಪಂಚತಿರುಪತಿಯಾತ್ರೆ ಯಥಾರ್ಥದಲಿ ಮಾಡಿ |ಪಾಂಚಜನ್ಯಪಾಣಿ ವಿಜಯವಿಠಲ ಪೊರೆವಾ೬

ಶ್ರೀರಾಮಾವತಾರದ ಕಥೆಯನ್ನು ಸಂಗ್ರಹಿಸಿರುವ ಸುಳಾದಿ ಇದು.

ಶ್ರೀ ರಾಮ ಸ್ತೋತ್ರ
೧೨೬
ಧ್ರುವತಾಳ
ರಾಜ ರಾಜ ರಮಣಿ ರಾಜಶೇಖರ ವಿನುತಾ
ರಾಜ ತೇಜೋನಿಧಿ ರಾಜಾಧೀಶಾ
ರಾಜ ಹಂಸ ನಯನ ರಾಜಶೇಖರ ವಿ
ರಾಜಿತ ಕೀರ್ತಿ ಗಜ ರಾಜವರದಾ
ರಾಜ ವದನಾ ರಿಪು ರಾಜಮಸ್ತಕ ಶೂಲಾ
ರಾಜ ರಾಜೋತ್ತಮ ರಾಜವಿನುತಾ
ರಜೀವದೊಳಗಿದ್ದ ರಾಜೀವನ ಪಾಲಿಸಿದ
ರಾಜ ಮಾರ್ತಾಂಡ ದ್ವಿಜರಾಜ ಗಮನಾ
ರಾಜ ರಾಜರು ನಿನ್ನ ರಾಜಿಸುವ ಚರಣ
ರಾಜೀವದಲ್ಲಿ ವಾಲಗ ಮಾಳ್ಪರೂ
ರಾಜ ರಾಜಾಗ್ರಗಣ್ಯ ರಾಜಾಭಿಷೇಕಕ್ಕೆ
ರಾಜ ನೀನಲ್ಲದೆ ರಾಜರುಂಟೇ
ರಾಜಗಂಭೀರ ಅಪರಾಜಿತನಾಮ ನಮ್ಮ
ವಿಜಯ ವಿಠ್ಠಲ ರಂಗರಾಜ
ರಾಜ ಸಮುದ್ರರಾಜ ಶಯನನೇ ೧
ಮಟ್ಟತಾಳ
ದಶಶಿರನೆಂಬುವನು ಅಸಮ ವೀರನಾಗಿ
ಬಿಸಿನಿಧಿ ಮಧ್ಯದಲ್ಲಿ ತ್ರಿದಶರ ಶೆರೆ ಇಡಲು
ದಶದಿಕ್ಕಿನ ಒಳಗೆ ಪೆಸರಾಗಿ ಪಸರಿಸುತ
ಪಶುಪನ ವರದಿಂದ ಕುಸಿಯದಲಿರುತಿರೇ
ಅಸುರನ ಉಪಹತಿಗೆ ವಸುಧಿಭಾರವಾಗೆ
ಬಿಸಿಜಭವ ಸುಮನಸರೆಲ್ಲರು ಪೋಗಿ
ಬಿಸಿಜದಳನಯನ ವಸುಧಿ ಸಂರಕ್ಷಕನೇ
ಅಸುರರ ಶಿಕ್ಷಕನೆ ಅಸಮಯ ಬಂದಿದೆ
ದೆಶೆಗೆಟ್ಟವರ ಪಾಲಿಸಬೇಕೆಂದೆನುತ
ಶಿಶುಗಳೊದರಿದಂತೆ ಎಸದು ಮೊರೆಯಿಡಲು
ವೃಷಭನಾಮಕದೇವ ವಿಜಯ ವಿಠ್ಠಲರೇಯನ
ಬಿಸಿಜ ಚರಣದಲ್ಲಿ ಹಸನಾಗಿ ಬಿನ್ನೈಸೇ ೨
ರೂಪಕ ತಾಳ
ಮೂರು ಗುಣರಹಿತ ಮೂರುತಿ ಈತನು
ಕಾರುಣ್ಯವನ್ನು ಇನ್ನಾರು ಬಲ್ಲವರಿಲ್ಲ
ವಾರಿಜಾದ್ಯರ ಸಾರೆಗರದು ಶ
ರೀರವ ತಡವರಿಸಿ ತಾರತಮ್ಯದಿಂದ
ಭಾರ ಎನ್ನದು ಎಂದು ಭರವಸವ ಇತ್ತು
ಕ್ರೂರನಿಂದಲಿ ಬಂದ ಭಾರ ಇಳಿಸುವೆನೆಂದು
ಧಾರುಣಿಯೊಳಗಿತ್ತ ಈರೈದುರಥದವನು
ನಾರಾಯಣನು ಕುಮಾರನಾಗಲೆಂದೂ
ಆರಾಧನೆಯ ಮಾಡೆ ಶ್ರೀರಾಮನೆಂದೆಂಬವ
ತಾರವನ್ನು ಧರಿಸಿದ ರಮಾರಮಣನು
ಚಾರುಗುಣ ನಿಲಯ ವಿಜಯ ವಿಠ್ಠಲರೇಯಾ
ಸಾರಿದವರ ಮನೋಹಾರವ ತೋರುತ್ತಾ ೩
ಝಂಪಿತಾಳ
ಮುನಿಪ ಕೌಶಿಕನ ಯಾಗವಕಾಯಿದು ತಾಟಿಕಿ
ದನುಜಿಯ ಮುರಿದು ನಿಜಾನುಜನ ಕೂಡ
ಜನಕನಾ ಪುರಕೆ ಗಮನವಾಗಿ ಪೋಗುತ್ತ
ಮುನಿಯಾಂಗನೆಯ ಶಾಪವನ್ನೆ ತೊಡದು
ಅನಲಾಕ್ಷನ ಧನುಸು ಮುರಿದು ಇಕ್ಕಡಿಮಾಡಿ
ಜನಕರಾಯನ ನಂದಿನಿಯ ನೆರದೂ
ಅನುವರದೊಳಗೆ ಭೃಗುತನುಜನ್ನ ಪೊಕ್ಕಳಲಿ
ದನುಜ ಸೇರಿರಲು ಬಾಣದಲಿ ಸದದೂ
ತನಗೆ ತಾನೇ ಲೀಲಿ ತೋರಿದ ಮಹದೈವವಾ
ತನೆ ಕಾಣೋ ಗೋಹಿತ ವಿಜಯ ವಿಠ್ಠಲರಾಮ ೪
ತ್ರಿವಿಡಿತಾಳ
ಪಿತನ ಮಾತನು ಮನ್ನಿಸಿ ಸತಿಸಹಿತ ಭಾಗೀ
ರಥಿಯ ದಾಟುತಲಿ ಭಕುತಗೊಲಿದೂ
ಅತಿಶಯವಾದ ಪರ್ವತ ಚಿತ್ರಕೂಟದಲಿ
ಯತಿಗಳಿಂದಲಿ ಪೂಜಿತನಾಗುತ
ಮತಿಹೀನನಾಗಿ ಬಾಳುತಲಿದ್ದ ಕಾಕನ್ನ
ಗತಲೋಚನನ ಮಾಡಿ ಕ್ಷಿತಿಗಟ್ಟಿದೇ
ಹಿತವಾಗಿ ಬಂದ ಭರತಗೆ ಹಾವುಗೆ ಕೊಟ್ಟು
ವ್ರತವಧರಿಸಿದ ಉನ್ನತ ಮಹಿಮಾ
ಪಥಚಾರನಾಗಿ ಶೋಭಿಸುತ ದಂಡಕಾರಣ್ಯ
ಯತಿಪುಂಗವ ಕುಂಬಸುತನ ಕಂಡೂ
ಪ್ರತಿರಥ ನಾಮಾ ವಿಜಯ ವಿಠ್ಠಲ ರಘು
ಪತಿ ನೀನೆ ಉತ್ಪತ್ತಿ ಸ್ಥಿತಿ ಲಯಕರ್ತನೇ೫
ಅಟ್ಟತಾಳ
ಮೋಸದ ಅಸುರಿಯ ಮೂಗುಕೊಯ್ದು ಖರ
ದೂಷಣಾದ್ಯರನ್ನು ಕೊಂದು ಗೌತುಮೆಯಲ್ಲಿ
ವಾಸವಾಗಿದ್ದ ಮಾರೀಚ ಮಾಯಾ ಮೃಗ
ವೇಷವಾಗಿ ಬರೆ ಕೊಂದು ಮಾರ್ಗದಲ್ಲಿ
ಘಾಸಿಯಾಗಿದ್ದ ವಿಹಂಗನ ಮನ್ನಿಸಿ
ದ್ವೇಷಿ ಕಬಂಧನ ಕಡಿದು ಶಬರಿಯ
ಮೀಸಲ ಭಕುತಿಗೆ ಹಣ್ಣುಸವಿದು ಸಂ
ತೋಷದಿಂದಲಿ ತುಂಗಾ ತೀರದಲ್ಲಿ ಪವ
ನಾ ಸೂನು ಎರೆಗಲು ಎತ್ತಿ ಮಾತಾಡಿ ದಿ
ನೇಶ ತನುಜಗೆ ಅಭಯವನ್ನು ಇತ್ತು
ಬೀಸಿಡಗದೆ ಕಾಲಲಿ ದುಂಧುಮಾರನ್ನ
ನೀ ಸವರಿದೆ ಏಳುತಾಳುವ ಒಮ್ಮೆಲೆ
ಸಾಸಿರನಾಮವೇ ವಿಜಯ ವಿಠ್ಠಲ ನರ
ವೇಷವ ಧರಿಸಿದ ವೈಕುಂಠವಾಸ ೬
ಆದಿತಾಳ
ಭೀತಿ ಶೂನ್ಯನಾದ ಪುರಹೂತ ಮಗನ ಕೊಂದು ರವಿ
ಜಾತಗೆ ಪಟ್ಟವಗಟ್ಟಿ ಪ್ರೀತಿದೂತ ವಾಯುಜನ್ನ
ಸೀತೆ ಬಳಿಗೆ ಕಳುಹೇ ಪೋಗಿ
ಮಾತು ತಂದು ಪೇಳಿದಾತಗೆ ವರವನಿತ್ತು
ಕೋತಿ ಕರಡಿ ಸಹಿತವಾಗಿ ಸೇತುವೆ ಬಿಗಿಸಿ ಬಂದ
ನೀತ ವಿಭೀಷಣನ ಕೂಡ ಕಾತುರದಿಂದಲಿ ದಾಟಿ
ಧೂತ ರಾವಣಾದಿಗಳ ಯಾತನೆಗೆ ಬೀಳ್ಕೋಡಿಸಿ
ಪ್ರೀತಿಯಾಸ್ಪದನಾದತಿದಾತ ವಿಭೀಷಣಗೆ ಪ್ರ
ದ್ಯೋತ ಶಶಿ ಉಳ್ಳನಕ ಭೂತಳದೊಳಗೆ ಲಂಕೆ
ಯ ತಪ್ಪದಂತೆ ಆಳೆಂದಾತಗೆ ಪಟ್ಟವಗಟ್ಟಿ
ಸೀತೆ ಸಹಿತ ಬಂದು ಸಾಕೇತಪುರದಲ್ಲಿ ನಿಂದು
ಧಾತಾದಿಗಳ ಮನಕೆ ಪ್ರೀತಿ ಬಡಿಸಿ ಸೆರೆಯ ಬಿಡಿಸಿ
ಸೀತೆಯರಸ ವಿಜಯ ವಿಠ್ಠಲಭೂತ
ನಾಥನಿಂದ ಬಂದ ಮಾತು ಮನ್ನಿಸಿದ ಮಹಾತ್ಮಾ ೭
ಜತೆ
ಸಾರ್ವಭೌಮನೆ ರಾಮ ದುರುಳ ದೈತ್ಯವಿರಾಮಾ
ಸರ್ವಯೋಗಿ ವಿನಿಶ್ರುತಾ ವಿಜಯ ವಿಠ್ಠಲ ೮

ಈ ಸುಳಾದಿಯೂ ನರಸಿಂಹನನ್ನು

೧೨೨
ಧ್ರುವತಾಳ
ರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿ
ಭದ್ರ ಫಲದಾಯಕ ದೋಷದೂರ
ಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥ
ಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದ
ನಿದ್ರಾರಹಿತ ನಿಗಮವಂದ್ಯ ಭಕ್ತಾನಂದ
ಉದ್ರೇಕಾ ತಂದು ಕೊಡುವ ಕಾಮಿತಾರ್ಥ
ಭದ್ರಪ್ರದಾಯಕ ದೋಷದೂರ
ಮುದ್ರೆಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ-
ಮುದ್ರದೊಳಗೆ ಲೋಲಾಡುತಿಪ್ಪ
ಶೂದ್ರಗಾದರು ಆಶಾ ಭಯವಿಲ್ಲವೆಂದು ಮಹ
ರುದ್ರಾದಿಗಳು ಪೇಳುತಿಪ್ಪರಿದೆ ಕೋ
ಕದ್ರುವೆ ಮಗ ವಾಸುಕಿಯಾ ಗರುಡನ್ನ ಉ-
ಪದವ್ರ ಬಿಡಿಸಿ ನೀನೆ ಪಾಲಿಸಿದಂದು
ಕ್ಷುದ್ರದೇವತೆಗಳಿಗೆ ಈ ಪರಿ ಶಕ್ತಿಯುಂಟೆ
ಛಿದ್ರತನ ಎಣಿಸದಿರು ಪರಮ ಕರುಣೀ
ರೌದ್ರಾ ಮೂರುತಿ ಶಾಂತ ವಿಜಯ ವಿಠ್ಠಲ ನಿನ್ನ
ಸದೃಶ ದೇವನ ಕಾಣೆನೊ ಜಗತ್ತಿನೊಳು ೧
ಮಟ್ಟತಾಳ
ಹರಿ ನಿನ್ನ ಸಂಕಲ್ಪ ಇದ್ದಂತೆ ಎನ್ನ
ಶರೀರದೊಳಗೆ ನಿಂದು ಸ್ತೋತ್ರ ಮಾಡಿಸಿಕೊಂಡೆ
ಅರೆಮರೆ ಇದಕಿಲ್ಲ ಶಾಶ್ವತ ವಾಕ್ಯವೆಂದು
ನೆರೆ ನಂಬಿದೆ ನಾನು ನಾನಾ ವಿಧದಲ್ಲಿ
ನರಗೆ ಬಂದಟ್ಟಿದ ವ್ಯಾಧಿಯು ನಿಲಲುಂಟೆ
ಪರಿಹರವಾಗುವುದು ಸಿದ್ಧವಾಯಿತು ಎನಗೆ
ಪುರಹರನುತಪಾದ ವಿಜಯ ವಿಠ್ಠಲರೇಯ
ನರಹರಿ ಎಂದೆನೆ ಭಯಹರವೊ ೨
ತ್ರಿವಿಡಿತಾಳ
ಅನ್ಯಥಾ ಗತಿಕಾಣೆ ನಿನ್ನ ಪಾದವಲ್ಲದೆ
ಇನ್ನು ತ್ರಿಲೋಕದಲಿ ತಿರುವೆಂಗಳ
ಎನ್ನ ನುಡಿ ಪುಶಿಮಾಡಿ ಅಪಹಾಸ ಗೈಸಿದರೆ
ನಿನ್ನದಲ್ಲದೆ ಕೀರ್ತಿ ಅಪಕೀರ್ತಿಯು
ಪೆಣ್ಣಿನಾ ಮೊರೆ ಕೇಳಿ ಕಾಯಲಿಲ್ಲವೆ ನೀನು
ಮುನ್ನ ಪೇಳುವುದೇನು ವಿಸ್ತರಿಸಿ
ಬಣ್ಣಿಸಿದೆ ಬಹು ಬಗೆಯಿಂದ ಈ ಅಬಲೆಯು
ನಿನ್ನ ನಂಬಿಹಳಯ್ಯ ನೀನೆ ಬಲ್ಲೈ
ಧನ್ಯ ಜೀವನದಾಯ ಸುವಾಸತನವಿತ್ತು
ಮನ್ನಿಸುವುದು ಇವಳ ತುತಿಗೆ ಮೆಚ್ಚಿ
ಬೆನ್ನ ಬಿದ್ದವರನ್ನ ಒಪ್ಪಿಸಿ ಕೊಡಲುಂಟೆ
ಬಿನ್ನಹ ಮಾಡಿದೆ ಇಷ್ಟೆ ಮಾತ್ರ
ತನ್ನ ಪತಿಯ ಕೊಡ ತಾಂಬೂಲ ಮೆಲುವ ಸಂ
ಪನ್ನ ಭಾಗ್ಯವಕೊಡು ಕಮಲನಾಭ
ಕನ್ಯ ಲಕುಮಿರಮಣ ವಿಜಯ ವಿಠ್ಠಲರೇಯ
ಘನ್ನ ಮಹಿಮ ನಿನ್ನ ವಾಕ್ಯ ಅಮೃತ ಸಿದ್ಧ ೩
ಅಟ್ಟತಾಳ
ಆಳು ಗೆದ್ದರೆ ನೋಡು ಅರಸಗೆ ಜಯಪ್ರದ
ಆಳು ನುಡಿದದ್ದು ಅರಸು ನುಡಿದದ್ದು
ಏಳಾಲ ಮಾಡದೆ ಯಾದವ ಕುಲಮಣಿ
ಪಾಲಿಸಬೇಕಯ್ಯಾ ಪರಮ ಅನಿಮಿತ್ತ
ಮೂಲ ಬಾಂಧವ ಭಾಷೆ ಕೊಟ್ಟರೆ ತಪ್ಪದು
ಪಾಲಸಾಗರ ಶಾಯಿ ವಿಜಯ ವಿಠ್ಠಲರೇಯ
ಕಾಲ ಕರ್ಮ ಗುಣ ನಿನಗಿದಿರೆ ಸ್ವಾಮೀ ೪
ಆದಿತಾಳ
ಅರ್ಥವಾದವಲ್ಲ ಮನಸು ಪೂರ್ವಕದಿಂದ
ಪ್ರಾರ್ಥನೆ ಮಾಡುವೆ ಅನಾದಿ ಬ್ರಹ್ಮಚಾರಿ
ಸ್ವಾರ್ಥಗೋಸುಗವಾಗಿ ಬೇಡಿಕೊಂಬುವನಲ್ಲ
ವ್ಯರ್ಥವಾಗಗೊಡದಿರು ವೇದದಲ್ಲಿ ಪೇಳಿದ
ಅರ್ಥಜ್ಞಾನಕ್ಕೆ ನಿತ್ಯ ಎಲ್ಲಿದ್ದರು ದೇವ
ಅರ್ಥಾತುರ ನೀನಲ್ಲ ಸಕಲ ಕಾಲದಲ್ಲಿ, ಸ
ಮರ್ಥ ನೀನಹುದೋ ಸರ್ವೋತ್ತಮ, ಪರಹಿ
ತಾರ್ಥವಾಗಲಿ ಇದೆ ಪುಶಿಯಾಗದಂತೆ ಕಾಯೊ
ಆರ್ತವಿದೂರ ನಮ್ಮ ವಿಜಯ ವಿಠ್ಠಲ ಕೃ
ತಾರ್ಥನ್ನ ಮಾಡುವುದು ಮುದದಿಂದ ಒಲಿದು ಬಂದು೫
ಜತೆ
ಭಕುತರ ಭಾಗ್ಯವೇ ಅಪೇಕ್ಷಾ ಪೂರೈಸಿ
ಸುಖಕೊಡುವುದು ಬಿಡದೆ ವಿಜಯ ವಿಠ್ಠಲ ವೆಂಕಟ೬

ಕನಕಗಿರಿ ಎಂಬುದೂ ಮತ್ತೊಂದು ನಾರಸಿಂಹ ಕ್ಷೇತ್ರವಾಗಿದೆ.

೧೯. ಕನಕಗಿರಿ
ರಾಗ:ಶಂಕರಾಭರಣ
ಧ್ರುವತಾಳ
ರುದ್ರಾಂತರ್ಯಾಮಿ ನಾರಸಿಂಹ ಮಹಾಸಿಂಹ |
ರೌದ್ರಾವತಾರ ತರಣಿಕೋಟಿ ಭಾಸ |
ಭದ್ರದಾಯಕ ಭಕ್ತರಾಧೀನ ಅನುದಿನ |
ಉದ್ರೇಕಮತಿ ಕೊಡುವ ಉದಧಿಶಯನ |
ಕ್ಷುದ್ರ ದಾನವ ತತಿಯ ಧರಣಿಗೆ ಕೆಡಹಿಸು |
ನಿದ್ರರಮಾಡುವ ಧೀರಶಾಲಿ |
ಹೃದರೋಗ ಮೂಲಕಿತ್ತಿ ಕೀರ್ತಿಯ ಪೊತ್ತಗುಣ ಸ |
ಮುದ್ರ ವಜ್ರನಖ ನಿಟಿಲನೇತ್ರ |
ಸದೃಶರಹಿತ ರೂಪ ಬಲು ಬಹುಪ್ರತಾಪ |
ವಿದ್ರುಮ ನಯನ ವಿಚಿತ್ರರದನ |
ರುದ್ರಾಂತರ್ಯಾಮಿ ಸ್ವಾಮಿ ಭಳಿರೆ |
ವಿದ್ರಾನೇಕ(?) ಇಪ್ಪದೇಹ ಬರುವ ಉ |
ಪದ್ರವ ಪರಿಹರಿಸೊ ಎನಗೆ ಬಲಿದು |
ಮುದ್ರಾಧರರ ಒಡನೆ ಭಕ್ತಿಯ ಕೊಟ್ಟು ಜ |
ಗದ್ರಮಣ ಕಾಯಬೇಕು ನಾರಸಿಂಹ |
ನಿದ್ರಾರಹಿತ ನಮ್ಮ ವಿಜಯವಿಠಲ ಕನ |
ಕಾದ್ರೀಶ ಕರುಣಾಳೆ ನಮೊ ನಮೊ ನಿನಗೆ ೧
ಮಟ್ಟತಾಳ
ಪ್ರಲ್ಹಾದ ದೇವನ್ನ ಅಹಲ್ಲಾದ ನೋಡಯ್ಯಾ |
ಮಹದಾದಿ ಜನಕೆ ಅಹೋ ಆಶ್ಚರ್ಯಕರ |
ಸೋಹಂ ಎಂದ ಮನುಜನನ್ನು ಇಹಪರಲೋಕದಲ್ಲಿ |
ಗ್ರಹಭಾಧೆಯಲ್ಲಿ ದಹಿಸುತಿಪ್ಪನು ಗಡ |
ಪ್ರಹಲ್ಲಾದ ದೇವನ್ನ ಅಹಲ್ಲಾದ ನೋಡಯ್ಯಾ |
ಮೋಹನ ಕನಕಾದ್ರಿ ವಿಜಯವಿಠಲ ನಿನ್ನ |
ದ್ರೋಹಿಗೆ ತಮಸು ಸಂದೇಹ ಎಂದಿಗೆ ಇಲ್ಲಾ ೨
ತ್ರಿವಿಡಿತಾಳ
ಧರೆಯೊಳು ಮೂರು ಲಿಂಗಾಕಾರವಾಗಿ ಶ್ರೀ |
ಹರಿಯೆ ಮೆರವುತಿಪ್ಪ ತಿಳಿಯಬೇಕು |
ಪರುಶ ರೂಪಾತ್ಮಕ ರೂಪಗಳೀಪರಿ |
ಕರಿಸಿಕೊಂಡವು ಕೇಳಿ ನಾಮ ನಿತ್ಯ |
ಪರಮ ಶೋಭಿತವಾದ ವಾರಣಾವತಿ ಎಂಬ |
ಪುರದಲ್ಲಿ ಜಯಂತ ನಾರಸಿಂಹ |
ಮರಳೆಲಾಲಿಸಿ ಇದನೆ ಕನಕನಾಮಕನೆನ್ನಿ |
ನರಸಿಂಹನೆಂಬೋದೆ ನಿಜಕಾಣಿರೊ |
ಶರಧಿತೀರದಲೊಂದು ಕಡೆ ಸಿಂಹಾಲಯವೆಂಬ |
ಪುರದಲ್ಲಿನಿಂದಿಹ ನಾರಸಿಂಹನೊ |
ಎರಡೊಂದು ಸ್ಥಳದಲ್ಲಿ ಪೂಜೆಗೊಳುತ ಇನಿತು |
ಮೆರೆವುತಿಪ್ಪನು ನೋಡು ನಾರಾಯಣಾ |
ಹರರೂಪ ತಾಳೀದ ಮೋಹಕ ಜನರಿಗೆ |
ನಿರಯನಾಗಲಿ ಎಂಬ ಕಪಟದಲ್ಲೀ |
ಪರಮಪಾವನವಾದ ಪಂಪಾಕ್ಷೇತ್ರಸುತ್ತ |
ಹರಹಿಕೊಂಡಿದೆ ಪಂಚಕ್ರೋಶ ಧರಿಣೀ |
ಮಿರುಗುತಿದೆ ಇದೆ ಆದರೊಳಗೆಣಿಸಿ |
ಕರಣಶುದ್ಧದಿ ಪುಣ್ಯಪಡಕೊಳ್ಳಿರೊ |
ಸುರನುತ ವಿಜಯವಿಠಲ ಕಾಂಚನರಾಯಾ |
ವರವಕೊಡತಲಿಪ್ಪ ಬೇಡಿದ ದಾಸರಿಗೆ ೩
ಅಟ್ಟತಾಳ
ಕನಕರಾಯನ ದರುಶನ ಮಾಡಿದವನಿಗೆ |
ಮನದೊಳಗಿದ್ದ ಮಹಾಭಿಷ್ಟೆ ಸಲ್ಲುವುದು |
ಅನುಮಾನವಿದಕ್ಕಿಲ್ಲ ಪೂರ್ವದ ಕಥೆಕೇಳಿ |
ಕನಕಮುನೇಶ್ವರ ತಪವಮಾಡಿದನಂದು |
ಕನಕಾವರುಷ ಒಂದು ಕ್ಷಣಕರವುದು ನಿತ್ಯ |
ಇನಿತು ಮಹಿಮೆ ಉಂಟ ಅದರಿಂದ ಲಕುಮೇಶ |
ಕನಕರಾಯನೆಂದು ಕರಿಸಿಕೊಂಡಾನು ಇಲ್ಲೆ |
ವನಜಸಂಭವ ಮೊದಲಾದ ದೇವತಿಗಳು |
ಘನವಾಗಿ ಪೂಜಿಸಿ ಕೊಂಡಾಡಿವರು ಕೇಳಿ |
ಮನುಜ ಕೇಸರಿರೂಪ ರೂಪ ಲಿಂಗಾಕಾರದಲ್ಲಿ |
ಜನರಿಗೆ ತೋರುವ ನಾನಾರೂಪಾತ್ಮಕ |
ಕನಕ ಕೊಡುವ ನಮ್ಮ ವಿಜಯವಿಠಲರೇಯಾ |
ಅನುತಾಪ ಬಿಡಿಸಿ ಆನಂದ ಸುಖವ ಕೊಡುವ ೪
ಆದಿತಾಳ
ನರಸಿಂಹತೀರ್ಥದಲ್ಲಿ ಮಿಂದು ಶುಚಿಯಾಗಿ |
ಹರಿವಾಯುಗಳ ಭಕ್ತಿ ಸಂಪಾದಿಸೀ |
ನಿರುತ ಸೇವೆಯು ಮಾಡಿ ಕನಕನರಸಿಂಹನ |
ಚರಣಾಂಬುಜಯುಗಳ ಬಿಡದೆ ನೀವು |
ನರ ಓರ್ವನು ಇಲ್ಲಿಗೆ ಯಾತ್ರೆ ಮಾಡಿದರೆ |
ಸುರರು ಮೆಚ್ಚುವರು ಅನಂತಕಲ್ಪಾ |
ಅರೆಮರೆ ಇಲ್ಲವಿದಕೆ ತುಂಗಾಮಹಾತ್ಮಿಯೊಳಗೆ |
ವಿರಚಿಸಿದೆ ನೋಡಿ ಶತ ಅಧ್ಯಾಯ |
ಹರನಸುತನ ಪುರಾಣದಲಿ ಸಿದ್ಧ |
ವರದೊರದು ಪೇಳುತಿಪ್ಪರು ಜ್ಞಾನಿಗಳು |
ನಿರಯದೂರ ನಮ್ಮ ವಿಜಯವಿಠಲರೇಯನ |
ಶರಣ ಶುದ್ಧದಲ್ಲಿ ಕೊಂಡಾಡಿ ನಲಿದಾಡಿ ೫
ಜತೆ
ಜಯಂತಿ ನದಿಸ್ನಾನಾತನಕ ನರಸಿಂಹನ |ಪ್ರೀಯರಾಗಿ ನೋಡುವುದು ವಿಜಯವಿಠಲ ಒಲಿವಾ ೬

ಮಂಗಳೂರಿನ ಉಡುಪಿಯ ಬಳಿ ಇರುವ ಕೋಟೇಶ್ವ

೨೬. ಕೋಟೀಶ್ವರ
ರಾಗ:ಸಾವೇರಿ
ಧ್ರುವತಾಳ
ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ |
ಮುದ್ರದೊಳಗೆ ಹತ್ತು ಮಹಾಕಲ್ಪಾ |
ಇದ್ದು ಕ್ಷಾರೋದಕ ಪಾನಮಾಡಿ ಪದವಿ |
ಸಿದ್ಧ ಮಾಡಿಕೊಂಡು ನರಸಿಂಹನ |
[ಹೃದ]ಯದಲ್ಲಿ ಇಟ್ಟು ಕೈಲಾಸಪತಿ ತಾನು |
ತ್ರಿದ್ದಶರಲ್ಲಿ ಮಹಾದೇವನೆನಿಸಿ |
ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ |
ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ |
ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ |
ನಿರ್ದೋಷರಾಗುವರು ಸಜ್ಜನರೂ |
ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ |
ರುದ್ರನ ಪಾಲಿಪ ಪ್ರಭುವೆ ಎನ್ನಿ ೧
ಮಟ್ಟತಾಳ
ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ |
ಇರುತಿಪ್ಪನು ತನ್ನ ಪರಿವಾರದ ಒಡನೆ |
ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ |
ಸುರರಿಗೆ ಗುರುವೆನಿಸಿ ಪರಮ |
ಪುರುಷ ನಮ್ಮ ವಿಜಯವಿಠಲನಿಂದಾ |
ಶರಣರ ಭಯ ಉತ್ತಾರ ಮಾಡುವಾ ಕರುಣಿ ೨
ತ್ರಿವಿಡಿತಾಳ
ಭಸ್ಮಾಸುರನು ಮಹತಪಮಾಡಿ ಉಗ್ರದಲಿ |
ಪಶುಪತಿಯಾ ಒ[ಲಿ]ಸಿದ ಭಕುತಿಯಿಂದ |
ಅಸಮನೇತ್ರನು ಬಂದು ನುಡಿದ ನಿನಗೇನು |
ಕುಶಲ ಬೇಕೆನಲು ವಂದಿಸಿ ತಲೆವಾಗಿ |
ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು |
ಬೆಸಸೀದನು ಉರಿಹಸ್ತಾ ಕರುಣಿಸೆಂದೂ |
ಎಸವ ಮಾತಿಗೆ ಸತಿಯಿಂದಾಗಲೆ ಅವನು |
ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ |
ದಶೆಗೆಟ್ಟು ಮುಂದಾಣ ಯೋಚನೆ ತೋರದೆ |
ದಶದಿಶಿಗೆ ಓಡಿದಾ ಭೀತಿಯಿಂದ |
ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ |
ವಸತಿ ಇದೆ ಎಂದು ಅಡಗಿದಾನಲ್ಲಿ |
ಅಸುರ ಸಂಹರ ಶಿರಿ ವಿಜಯವಿಠಲರೇಯಾ |
ನಸುನಗುತಾ ಐದಿದ ನಾರಿವೇಷವ ತಾಳಿ ೩
ಅಟ್ಟತಾಳ
ಶಿವನು ಕೇಶವಗೆ ದಾನವನ ಅಟ್ಟುಳಿಗೆ ಗಾ |
ತ್ರವನು ಬಳಲಿ ಮೊರೆಯಿಟ್ಟೂ ಮಾತಿಗೆ ತ್ರಿ |
ಭುವನ ಬೆರಗಾಗೆ ಯುವತಿ ರೂಪವ ತಾಳಿ |
ನವನವ ಮೋಹಕ ಕೌತುಕವನೆ ತೋರಿ |
ಅವನ ವಂಚಿಸಿ ಆಟವನು ಆಡಿದ ದಾ |
ನವನ ಸಂಹರಿಸಿದ ಪವನಗಿರಿಯಲ್ಲಿ |
ಪವಿತುರ ಮೂರುತಿ |
ಕವಿ ಮನೋಹರ ನಮ್ಮ ವಿಜಯವಿಠಲರೇಯಾ |
ಅವನಿಯೊಳಗೆ ವೇಲಾಪುರದ ಚನ್ನಿಗ ಕಾಣೊ ೪
ಆದಿತಾಳ
ಯಾಗ ಮಾಡಿದ ಬ್ರಹ್ಮಾ ಮುನಿಗಳ ಕೂಡ ಇಲ್ಲಿ |
ಭಾಗಕೊಡುವದಕ್ಕೆ ತಪೋಧನಾ ಉಳ್ಳಕೋಟೆ |
ಯೋಗೀಶ್ವರರಕೈಯ್ಯ ಪಾರ್ಥಿವ ಪೂಜಿಸಿ |
ಆಗ ಕರಿಸಿದ ಶಿವನ ಕೂಪದಿಂದೂಧ್ರ್ವಕ್ಕೆ |
ಭೂಗೋಳದೊಳಗಿದೆ ಕೋಟೀಶ್ವರ ಪಶ್ಚಿಮ |
ಸಾಗರ ತೀರದಲ್ಲಿ ಒಪ್ಪುತಿದೆ ಕೇಳಿ |
ನಾಗಭೂಷಣ ಇಲ್ಲಿ ವಸುರಾಯನಿಂದ ಚ |
ನ್ನಾಗಿ ಪೂಜಿಯಗೊಂಡ ಭಕುತಿಭರಕೆ ಮೆಚ್ಚಿ |
ಆಗಮ ವಂದ್ಯನಾದಿ ವಿಜಯವಿಠಲರರೇಯ |
ಬಾಗಿದ ಜನಕೆ ಸದ್ಗತಿಯಾಕೊಡುವಾ ಒಲಿದೂ ೫
ಜತೆ
ಧ್ವಜಪುರಿನಿಲಯಾ ಪಾರ್ವತಿಪತಿ ಪುರವೈರಿ |
ವಿಜಯವಿಠಲನ ಪ್ರೀಯಪಾವನ ಕಾಯಾ ೬

ಭಗವಂತನ ಭಜನೆಯಿಂದ ಎಂತಹ

೧೦೫
ಧ್ರುವತಾಳ
ರೋಗ ನಿವಾರಣವಾಗುವುದಿದು ಮಹಾ
ರೋಗಿಗಳು ನೆರೆದು ನಿಗಮ ಸುಪುರಾಣ
ಭಾಗವತ ಪಂಚರಾತ್ರಾಗಮವ ಶೋಧಿಸಿ
ವೇಗದಿಂದಲಿ ದುಗ್ಧ ಸಾಗರ ಮಧ್ಯದೊಳಗೆ
ನಾಗರಾಜನ ಮೇಲೆ ಯೋಗನಿದ್ರೆಯೊಳಿಪ್ಪ
ವಾಗೀಶ ಪಿತನ ಇಂಬಾಗಿ ನೆನೆಸಲು
ಪೋಗುವದಘವೆಂದು ಯೋಗೀಶ್ವರರು ಶಿರ
ದೂಗಿ ಸಾಕುವರು ಚನ್ನಾಗಿ ಶ್ರೀಹರಿಯ ನಾಮ
ಈಗ ಸಂಸಾರವೆಂಬೊ ಬ್ಯಾಗಿ ಮಧ್ಯದ ನರರು
ಜಾಗುಮಾಡದೆ ಬಲು ಜಾಗರರಾಗಿ ತಂಬಲಾಗುವಂತೆ ಉಂಡು
ತೇಗಿ ತೃಪ್ತಿ ಪಡುವುದು ಭೋಗಾನಂದಾ ನಿಮಗೆ
ಯೋಗಾನಂದ ಹಾಗಾರಾ ಹಾಗಾವಿತ್ತು ಲೋಗರಕೈಯಿಂದ
ತೂಗಿ ಬೆಲೆಗೆ ವಸ್ತಾವೇಗತರುವದಲ್ಲ
ಶ್ರೀಗುರು ಧನ್ವಂತ್ರಿ ವಿಜಯ ವಿಠ್ಠಲನಾಮ ದ್ವೇóಷ
ಭಾಗಿಗಳಿಗೆ ಸಲ್ಲಾ ಶ್ರೀ ಗೌರಿಪತಿ ಬಲ್ಲಾ ೧
ಮಟ್ಟತಾಳ
ಅಡವಿ ಗಿಡವ ತುಕ್ಕಿ ಆಗಳಿ ತರುವದಲ್ಲ
ಕೊಡಲಿಯಲಿ ಕಡಿದು ಪೊತ್ತು ತರುವದಲ್ಲ
ಪುಡಿಮಾಡಿ ಅರೆದು ಮುದ್ದೆ ಮಾಡುವುದಲ್ಲ
ಅಡಿಗೆಯನೆ ಮಾಡಿ ಪಾಕಕ್ಕಿಳಿಪದಲ್ಲ
ಅಡಿಗಡಿಗೆ ಬಾಯ್ದೆರೆದು ಬೇಡುವುದು ಅಲ್ಲ
ಕೊಡರು ಪರರು ಎಂದು ದುಃಖಬಡುವದಲ್ಲ
ಬಡವ ಭಾಗ್ಯವಂತರೆಂಬ ವಚನ ಸಲ್ಲ
ಪೊಡವಿಯೊಳಗೆ ಬಲು ಸವಿಯದೌಷಧವೊ
ಕುಡಿಯ ಬಲ್ಲವರಿಗೆ ರುಚಿ ಬಲುರುಚಿ ಕಾಣೊ
ಕಡಲಶಯನ ನಮ್ಮ ವಿಜಯ ವಿಠ್ಠಲರೇಯನ
ಕಡು ನಾಮಾಮೃತವು ಸರ್ವರೋಗಹರವು ೨
ತ್ರಿವಿಡಿತಾಳ
ಪಥ್ಯ ಮಾಡುವುದಲ್ಲ ಅನುಪಾನ ಮೊದಲಿಲ್ಲ
ಪೈತ್ಯಹೆಚ್ಚಿತು ಎಂದು ಬಳಲಿ ಬೀಳುವದಲ್ಲ
ಶೈತ್ಯವಾತ ಭ್ರಮಣ ಮೇಹ ಹೆಚ್ಚುವುದಲ್ಲ ಅ
ಪಥ್ಯವಾಯಿತು ಎಂದು ಶೋಕಿಸುವುದು ಸಲ್ಲ
ನಿತ್ಯಕೊಳ್ಳಲು ಲೇಶ ರುಚಿ ಕೆಡುವುದಲ್ಲಾ
ಸತ್ಯವಲ್ಲದೆ ಇದು ಎಂದಿಗೂ ಪುಶಿಯಲ್ಲಾ
ಮೃತ್ಯು ಮೃತ್ಯುವಿನ ದೂತರಿಗೆ ಕಕ್ಕಸವಾಗಿಪ್ಪದು
ಭೃತ್ಯರಾದವರಿದು ಪಾಲಿಸುತಿಪ್ಪುದು
ಸತ್ಯ ವಲ್ಲಭ ಸಿರಿ ವಿಜಯ ವಿಠ್ಠಲ ರಂಗನ್ನ
ಸ್ತುತ್ಯಮಾಳ್ಪರ ಮನಕೆ ಶೋಭಿಸುವುದು ೩
ಅಟ್ಟತಾಳ
ಸರಿ ಬಂದಡುಣಲುಂಟು ಸರಿ ಬಂದ ಕಾಲಕ್ಕೆ
ಸರಿ ಸರಿ ಬಂದಂತೆ ಸುರಿದು ಸುಖಿಸೆತನ್ನ
ಜರೆ ಮರಣ ಜಡ ಜ್ವರ ರೋಗಗಳು
ಉರುಳಿ ಪೋಗುವವಯ್ಯಾ
ಸುರಕ್ಷಿತವಾಗಿಹ ಪುರದಲ್ಲಿ ಪೊರೆವುದು
ಸುರಮುನಿನುತ ಸಿರಿ ವಿಜಯ ವಿಠ್ಠಲರೇಯನ
ನೆರೆನಂಬಿದವರಿಗೆ ಹಿರಿದಾಗಿ ಒಲಿವುದೊ ೪
ಆದಿತಾಳ
ಬುದ್ಧಿವಂತರೆಲ್ಲರಿದು ಮೆದ್ದು ಸವಿನೋಡಿ ಜಗಕೆ
ಶುದ್ಧ ಜೀವಿಗಳಿಗಿದು ಸಿದ್ದವೆಂದು ಧರೆಗೆ ಬೀರೇ
ಎದ್ದು ಮಲಗಿ ಕುಳಿತು ಇದ್ದು ತಿರುಗಾಡುತ
ಇದ್ದಕಾಲಕೆ ಸಮೀಪ ಹೊದ್ದುಕೊಂಡು ಇಪ್ಪುದು
ಉದ್ದಿನಷ್ಟು ಪಾಪಾವ ಹೊದ್ದುಗೊಡದೆ ಓಡಿಸಿ ಜ್ಞಾ
ನಾಬ್ಧಿಯೊಳಗಿಡುವುದು ಶ್ರದ್ಧಾ ವೈರಾಗ್ಯವಿತ್ತು
ಮುದ್ದುರಂಗ ವಿಜಯ ವಿಠ್ಠಲಾ
ವೈದ್ಯನೆ ತಾನಾಗಿ ನಿಂದು ಬದ್ಧವಾಗಿದ್ದ ಭವಕೆ
ಮದ್ದು ಇತ್ತು ಮಾಡಿಸುವಾ ೫
ಜತೆ
ಬಹಿರಂತರ ರೋಗ ನಿವಾರಣವಾಗುವುದು
ಅಹಿಶಾಯಿವಿಜಯ ವಿಠ್ಠಲನಾಮ ಔಷಧಕೆ ೬

ಇಟ್ಟಾಂಗೆ ಇರುವೆನೋ ಹರಿಯೆ ಎಂದು

೧೦೭
ಧ್ರುವತಾಳ
ಲಂಪಟದೊಳು ಬಿದ್ದು ಓಡ್ಯಾಡುವಿ ಎಂದು
ಸಂಪಿನಲ್ಲಿ ನಗುವುದು ಜಾಣತನವೊ
ತಂಪಾದ ನೆರಳಿನಲ್ಲಿ ಸುಖಿಸುವ ಮನಜ
ಕುಂಪಟಿ ಮೈಗೆ ಹಚ್ಚಿ ಕೊಂಬೊನೇನೋ
ಇಂಪಾಗಿ ಇದ್ದ ಏಕಾಂತದಲಿ ಹಣ್ಣು
ಹಂಪಲಿ ವಾತಾಂಬು ಪರ್ನಾಶನಾ
ಸಂಪತ್ತಿನಲ್ಲಿ ಸವಿದು ಕಾಲ ಕಾಲ ನಿನ್ನ ಭಜನೆ
ಗುಂಪಿನೊಳಗೆ ಇದ್ದು ಗುಪ್ತದಲ್ಲೀ
ಸಂಪದವಿಗೆ ಮಾರ್ಗ ಮಾಡಿಕೊಂಡು ಜ್ಞಾನ
ಸಂಪಾದಿಸಿಕೊಳುತ ಇದ್ದೆನಕಟ
ಸಂಫುಲ್ಲಾಕ್ಷನೆ ಕೇಳೊ ವೈಷಿಕವಾದ ಹೀನ
ಕಂಪ ಕುಡಿವೆನೇನೊ ಲೇಸು ತೊರದೂ
ಕೆಂಪಾಗಿದ್ದ ಮೋರಿಗೆ ಅವನಾದರೂ ಕಪ್ಪು
ಇಂಪಿನಲ್ಲಿ ಹಚ್ಚಿಕೊಂಡವನುಂಟೆ
ಕೊಂಪಿ ಮಿಕ್ಕಾದ ವಿಷಯ ಈ ದೇಹವನ್ನೆ ಬೇಡಿ
ಸಂಪರ್ಕದೊಳಗಿಡೆಂದು ಹೊರಳಿದೆನೇ
ಸಂಪಾತಿ ತಮ್ಮನೊಡೆಯ ನಮ್ಮ ವಿಜಯ ವಿಠ್ಠಲರೇಯ
ಸಂಪ್ರಜ್ಞ ಅಸಂಪ್ರಜ್ಞ ಸಮಾಧಿಗಳ ಪ್ರೀಯಾ ೧
ಮಟ್ಟತಾಳ
ಕಸ್ತೂರಿಗೆ ಪೋಗಿ ಕಂಡ ಕಡಿಗೆ ತಿರುಗಿ
ದುಸ್ತರವಾಗಿದ್ದಾರಣ್ಯವೆ ಪೊಕ್ಕಂತೆ
ಹಸ್ತದೊಳಗೆ ತೋರುವ ವಿದ್ಯವ ಓದದಲೆ
ಪುಸ್ತಕವನೆ ನೋಡಿ ಪಠಿಸಿಕೊಂಬುವನಂತೆ
ವಸ್ತ ಮುಂದಿಟ್ಟಿರಲು ವಶ ಮಾಡಿಕೊಳದೆ
ಅಸ್ತಮಾನವಿಡಿದು ಬಳಲಿ ಸೊರಗಿದ್ದಂತೆ
ಮಸ್ತಕದ ಮೇಲೆ ಮಣಿ ಮಕುಟವೆ ಇರಲು
ಹಸ್ತಿ ತೂಕದ ಕಲ್ಲು ಪೊತ್ತು ತಿರುಗಿದಂತೆ
ಸ್ವಸ್ತ ಮನಸಿನಲ್ಲಿ ಇದ್ದಲ್ಲಿ ಇರದೇ
ವಿಸ್ತೀರ್ಣವಾದ ಲಂಪಟದೊಳು ಹೊರಳಿ
ವಸ್ತೀಕಾರನಂತೆ ವಸ್ತಿ ಬಡುವೆನೆಂದು ನುಡಿವುದದು ಘನವೆ
ಹಸ್ತಿವರದ ನಮ್ಮ ವಿಜಯ ವಿಠ್ಠಲ ಪರ
ವಸ್ತುವೆ ಇಂದೆನ್ನ ಹಂಗಿಪದೇನಯ್ಯಾ ೨
ತ್ರಿವಿಡಿತಾಳ
ಗುಣ ಹೀನನೆಂದು ನಗುವರೆ ಹೀಗೆ
ಇನಿತು ನಿತ್ಯನಯ್ಯಾ ಸಮರ್ಥರ ಪ್ರೀಯಾ
ಜನವೆಲ್ಲ ನೋಡಿದರು ಡೊಂಕೆ ಇಲ್ಲಾ
ಗುಣಪೂರ್ಣ ಪರದೈವ ವಿಜಯ ವಿಠಲ ನಿನ್ನ
ಮನಸಿಗೆ ತಿಳಿದುಳ್ಳರೆ ಸಾಕು ಎನಲ್ಯಾಕೆ ೩
ಅಟ್ಟತಾಳ
ಭಳಿರೆ ನಿನ್ನಾಟವು ನಿನಗೊಳಿತಾಗಿದೆ
ನೆಲೆಯ ಬಲ್ಲವನಾಗಿ ಇರಬೇಕು ಇರಬೇಕು
ಜಲಜಲೋಚನೆ ನಿನ್ನ ಸಂಗಡ ಅನುಗಾಲ
ಸುಲಭ ನಂದನ ನಾವಾ ಅವಗೆ ವಂದಿಸಬೇಕು
ಕಲಿಯುಗದೊಳಗಿದು ವಿಹಿತವಲ್ಲೆಂಬಿಯಾ
ಚಲಿಸುವನಾರು ಪೋಪನಾರು ಮಿಕ್ಕಾದಾ
ಫಲಪ್ರಾಪ್ತಿಮಾಡಿ ಕೊಡುವನಾರು ಎಂದಿಗೆ
ಒಲಿದು ಕೇಳುವುದಯ್ಯ ಮತ್ತೆ ನಾನೊಬ್ಬನೆ
ಬಳಿವಿಡಿದು ಸರ್ವದ ಬಪ್ಪರು ನಿನ್ನ
ಬಳಗವಲ್ಲವೇನೊ ಭಾಗ್ಯವಂತ ಹರಿ
ಬಲುಜ್ಞಾನಿಗಳ ಪ್ರೀಯಾ ವಿಜಯ ವಿಠ್ಠಲ ಎನ್ನ
ಒಳಗಿದ್ದು ಈ ಪರಿ ನುಡಿಸಿ ನಡೆಸುವ ದೀಪ್ತಾ ೪
ಆದಿತಾಳ
ಒಬ್ಬರಿಬ್ಬರೇನೊ ಭುಂಜಿಸುವರು ನಿತ್ಯಾ
ಹಬ್ಬಿಗಿಕ್ಕದೆ ನೋಡು ಸಾಲುಸಾಲಾಗಿ ಇದ್ದು
ಉಬ್ಬಿ ಮತ್ಸರದಿಂದ ಎಲ್ಲ್ಯಾದರು ನಾ
ನೊಬ್ಬನೆ ಉಂಬೆನೆಂದು ಹೇಳಿಕೊಂಡರೆ ಎನ್ನ
ನಿಬ್ಬರ ಕರ್ಮದಲ್ಲಿ ಬಿಡದೆ ಹಾಕಲಿಬೇಕು
ಗುಬ್ಬಿಯ ಮರಿ ಬಂದುತೃಟಿಯಾಗಿ ಪೋಗಿ ಏಳು
ಅಬ್ಧಿಯ ಜಲವನ್ನು ಪಾನಮಾಡಿತು ಎಂದು
ಬೊಬ್ಬಿಟ್ಟು ಪೇಳಿದರು ಆರಾದರೊಪ್ಪೋರೆ
ಊರ್ಬಿಯೊಳಗೆ ನಾನೊಬ್ಬನೆ ಎನಗಿಷ್ಟು
ಲಬ್ದವಾದದೆ ಫಲ ತಂದುಕೊಡುವೆ ನೀನೂ
ಶಬ್ದಾತೀತ ನಮ್ಮ ವಿಜಯ ವಿಠ್ಠಲ ಕೇಳೊ
ಸದ್ಬ್ರಾಹ್ಮರೆ ಸಾಕ್ಷಿ ಎನಗೆ ನಿನಗೆ ದೇವ ೫
ಜತೆ
ಬೇಕೆಂಬೋದೆ ಇಲ್ಲ ಲೇಶ ಮಾತುರಪೇಕ್ಷಾ
ನೀ ಕೊಟ್ಟರೆ ಇರಲಿ ವಿಜಯ ವಿಠ್ಠಲರೇಯಾ ೬

ತಾಮ್ರಪರ್ಣಿಯ ಮಹಾತ್ಮ್ಯೆಯನ್ನು ವರ್ಣಿಸುವ

೩೩. ತಾಮ್ರಪರ್ಣಿ
ಧ್ರುವತಾಳ
ಲೋಕಾದೊಳಗೆ ಸಾಧನಬೇಕೆಂಬೊ ಮಹಾತ್ಮರು |
ಲೌಕಿಕವನ್ನೆ ಬಿಟ್ಟು ಏಕಮನದಲ್ಲಿ |
ಸಾಕಾರಾ ಭಕುತಿಯಲ್ಲಿ ಶ್ಲೋಕಾರ್ಥವನ್ನೆ ತಿಳಿದು |
ಶೋಕಂಗಳೀಡಾಡಿ ಜೋಕೆಯಿಂದ |
ಭೀಕರಗೊಳಿಸುವ ವಾಕು ಮರೆದು ವಿ |
ವೇಕತನದಲ್ಲಿ ಈ ಕಲಿಯೊಳಗೆ |
ವೈಕುಂಠಪುರದ ಬಯಕೆ ಉಳ್ಳವರು ಶ್ರೀ |
ವೈಕುಂಠ ಯಾತ್ರಿಯ ಮಾಡಿರೆಂದೂ |
ವೈಕುಂಠ ನಾಮಾ ನಮ್ಮ ವಿಜಯವಿಠಲ ನಿಜ |
ವೈಕುಂಠಪುರದಿಂದ ಇಲ್ಲಿ ಮೆರೆದ ೧
ಮಟ್ಟತಾಳ
ತ್ರಿಜಗದೊಳಗೆ ತನ್ನ ಭಜಿಸುವ ಭಕ್ತರಿಗೆ |
ಭಜನೆಗೆಡದಂತೆ ನಿಜವರ ಕೊಡುವಲ್ಲಿ |
ಅಜಹರ ಗೀರ್ವಾಣ ವ್ರಜದೊಳಗಾನೆಂದು |
ಭುಜಗಾಧಿಪಶಯನ ವಿಜಯವಿಠಲರೇಯಾ |
ವಿಜಯಾಸನವಿಟ್ಟ ಮನಭಾಪುರೆ ಈತ ೨
ರೂಪಕತಾಳ
ಇಲ್ಲಿಗೆ ಬಂದವರಾ ನಿಲ್ಲದಲೆ ಸಾಕುವೆ |
ನಲ್ಲಾದಲ್ಲಿದಲೆ ಬಿಡೆನೆಂಬಾ ಹರುಷದಲ್ಲಿ |
ಎಲ್ಲಾ ಲೋಕಗಳೆಲ್ಲಾ ಅಲ್ಲಿಗಲ್ಲಿಗೆ ಸುತ್ತಿ |
ಎಲ್ಲಕಧಿಕವೆಂದು ಮೆಲ್ಲಮೆಲ್ಲನೆ ಬಂದು |
ಬಲ್ಲಿದಾ ಭೂಮಿಪಾಲಕ ವಿಜಯವಿಠಲಾ |
ಬಲ್ಲವರಾಡಿದ ಸೊಲ್ಲುಪಾಲಿಸುವನೂ ೩
ಝಂಪೆತಾಳ
ಗೀರ್ವಾಣ ಮೊದಲಾದ ತೃಣಜೀವರಿಗಳಿಗೆ |
ನಿರ್ವಾಣವನು ಕೊಡುವೆ ನಾನೆ ಎಂದೂ |
ಊರ್ವಿಯೊಳಗೆ ಒಂದನ್ಯಥಾವಿಲ್ಲೆಂದು |
ಪರ್ವತದರೂವಂತೆ ಬಿರಿದು ಹೊಯ್ದೂ |
ಸರ್ವರೊಳು ಕರ ನೆಗಹಿ ಸಾರಿಸಾರಿರೆಂದು |
ಸಾರ್ವಭೌಮ ವಿಜಯವಿಠಲ ದೇವೇಶ |
ಸರ್ವೋತ್ತಮಾನೆನಲು ಸರ್ವಸಂಪದವೀ ೪
ತ್ರಿವಿಡಿತಾಳ
ಇಂದು ನುಡಿದವರ ಶಾಂತದಿಂದಲಿ ನೋಡಿ |
ಕಾಂತರವೆಂಬೊ ಪಾಪವನೆ ಸವರಿ |
ಪಿತನ ದುಃಖಾ ಪರಿಹರಿಸಿ ಅನುದಿನ |
ಸಂತೋಷವನೆ ಕೊಡುವೆ ಮರೆಯಾದಂತೆ |
ಕಂತುಜನಕ ಅಬ್ಜಲೋಚನ ವಿಜಯವಿಠಲಾ |
ಸಂತರಿಸುವನು ಇಹಪರದಲ್ಲಿ ಒಲಿದೂ ೫
ಮಟ್ಟತಾಳ
ಸಪುತ ದ್ವೀಪದೊಳು ನಂಬಿದ ಜನರಿಗೆ |
ಅಪರಿಮಿತವಾಗಿ ಪಾಪವು ಬಂದಿರೆ |
ಕೃಪಣನು ನಾನೆಂದು ಒಮ್ಮೆ ನೆನಿಸಿದಡೆ |
ಕೃಪೆಮಾಡಿ ಅವರ ಪಾಪವೆಂಬವಿತ್ತ |
ಅಪಹರಿಸಿ ಶುದ್ಧಾತ್ಮರನುಮಾಡುವ |
ಚಪಳ ಚೋ[ರ]ಳಾನಾಟ್ಯ ವಿಜಯವಿಠಲರೇಯಾ |
ವಿಪುಳದೊಳಗೆ ಬಲ್ಲಿದನಾಗಿ ಮೆರೆದ ೬
ಝಂಪೆತಾಳ
ಅನಂತ ಮಹಿಮನು ಅನಂತ ಅವತಾರ |
ದಾನಿಗಳರಸ ನಿಧಾನ ಪುಣ್ಯ ಪುರುಷ |
ಈ ನದಿಯಲಿ ಬಂದು ಸ್ನಾನಾದಿಗಳ ಮಾಡಿ |
ಜ್ಞಾನಿ ಆದವ ಬಂದು ಏನೇನು ಅರ್ಪಿಸಲು |
ತಾನೊಲಿದು ಪುಣ್ಯನಿಕ್ಷೇಪ ಮಾಡಿಕೊಟ್ಟು |
ಅನಂತ ಜನುಮಕ್ಕೆ ಉಣಿಸಿ ಉಡಿಸುವನೂ |
ಶ್ರೀನಾಥ ವಿಜಯವಿಠಲ ನಿಕ್ಷೇಪಸ್ವಾಮಿ |
ತಾನಾಗಿ ತಾರತಮ್ಯದಿಂದ ಕಾಯ್ವಾ ೭
ಅಟ್ಟತಾಳ
ಭಕುತ ನಿಕರ ಬಲು ಸುಖಬಡುವಂತೆ ಸಿ |
ದ್ಧಾತ್ಮರನ್ನಾ ಮಾಡಿ ಪರಕ್ಕೆ ಕರದೊಯ್ದಲ್ಲಿ |
ಮಕರಕುಂಡಲ ಮಹಾ ಮಹಾ ಮಕುಟ ವಿಹಾರ ಪ |
ದಕ ನಾನಾಭರಣ ಕರಕೆ ಶಂಖ ಚಕ್ರ ರೂ |
ಪಕನಾಗಿ ತನ್ನಂತೆ ಅಕಳಂಕನಾಗಿ ಉರಕೆ ಸಿರಿ ಇಲ್ಲದೆ |
ಮುಕುತನ್ನ ಮಾಡುವೆ ಮುಕುತಾರ್ಥಾವೆಂದು |
ಮಕರಾಯುತ ಕರ್ನಪಾಶ ವಿಜಯ ವಿಠ |
ಲ ಕುಟಿಲಾ ಹೃದಯಾ ಕರ್ನಿಕೆ ಕಂಜಾವಾಸ ೮
ಆದಿತಾಳ
ಚತುರದಿಕ್ಕಿನೊಳಗೆ ಚತುರಸಾಗರ ಮಧ್ಯ |
ನುತಿಸಿದವಗೆ ಮೆಚ್ಚಿ ಗತಿ ಈವೆ ಗಮಕದಿಂದ |
ಚತುರರೊಳಗೆ ಬಲು ಚತುರನೆ ನಾನೆ ಎಂದು |
ಸತಿ ಮೂವರೊಡನೆ ಸಂತತ[ನು]ತ ಸಾರ್ವಭೌಮಾ |
ಚತುರಾದಿನಾಥ ಸ್ವಾಮಿ ಪತಿತ ಪಾವನ ಸಿರಿ |
ಪತಿ ವಿಜಯವಿಠಲಾ ತೀರತಜನಕಾ ನಮ್ಮನೆಲ್ಲ |
ಹಿತವಾಗಿ ಪಾಲಿಸುವ ೯
ಜತೆ
ತಾಮ್ರಪರ್ಣೆಯ ಸ್ನಾನವ ತಿರುಪತಿಯಾತ್ರಿ |
ಸಂಭ್ರಮದಲಿ ಮಾಡಿ ವಿಜಯವಿಠಲ ಒಲಿವಾ ೧೦

ಶ್ರೀರಾಘವೇಂದ್ರ ಸ್ವಾಮಿಗಳ ಮಠದ

೧೨೯
ಧ್ರುವತಾಳ
ವಂದೆ ಮುಕುಂದ ಮುಚಕುಂದ ಪರಿಪಾಲಕಕುಂದೇಂದು ವದನ ಆನಂದಮೂರ್ತಿಗಂಧದೋಷ ದೂರವಾಗಿದ್ದ ಚಿತ್ ಪ್ರಕೃತಿಯಿಂದ ನೋಡೆ ಚತುರ್ವಿಧ ದೋಷದೂರಾವಂದೆ ಮುಕುಂದ ನಮೋ ವೃಂದಾರಕ ಮುನಿವೃಂದ ಪಂದ್ಯ ಸುಖಸಾಂದ್ರ ಸರ್ವೋತ್ತಮಾಮಂದಹಾಸ ಮಂದಾಕಿನಿ ಜನಕಸುಂದರಿನಾಥ ಗೋವಿಂದ ಇಂದೀವರದಳ ಶಾಮಲಾಕಂದರ್ಪ ಕೋಟಿಲಾವಣ್ಯ ತಾರುಣ್ಯ ಸದಾಮಂದಿರಾ ವೈಕುಂಠ ವೈನತೇಯಾಶ್ಯಾಂದನ ಸ್ಕಂದ ಸನಂದನ ಪ್ರಿಯ ಪುರಂದರ ನಂದನ್ನ ಮಾನಭಂಗ ಇಂದನ ಭೋಕ್ತನೇತ್ರಾಒಂದೊಂದು ಒಂದಾರು ಮ್ಯಾಲೊಂದುಕಂಧರನಗೊಸುಗ ಅಹಮತಿಯಲ್ಲಿಬಂದು ನಿಂದೆದಿರಾಗೆ ಜಡಮಾಡಿ ನಿಲಿಸಿದ ಅರಿಂದವು? ದಮಶಾಂತ ಪೂರ್ಣ ಪೂರ್ಣಾವಂದೆ ಮುಕುಂದ ನಮೋನಂದ ಗೋಕುಲ ಪಾವನ ವಿಜಯ ವಿಠಲ ರಾಮಚಂದ್ರ ಪಾಪ ರ್ವತಕೆ ಇಂದ್ರಾಯುಧವೆಂದೆನಿಪ ೧

ಮಟ್ಟತಾಳ
ಮಂಗಳಾಂಗಿ ರಮಣ ರಂಗ ರಂಗೋರಂಗಪುಂಗವ ಪರಿಯಂಕ ಸಂಗ ಸಂಗೀತಲೋಲಅಂಗ ವಿಚಿತ್ರಾಂಗ ತುಂಗ ಮಾತುಂಗ ರಿಪುಭಂಗ ರಾಜಸಿಂಗ ಭಂಗರಹಿತ ಸರ್ವಾಂಗ ರೋಮ ಪ್ಲವಂಗ ಕಟಕನಾಯಕ ಇಂಗಿತ ಜನರಂತರಂಗ ಕರುಣಾಪಾಂಗ ರಂಗು ಮಾಣಿಕ ಭೂಷಾಶೃಂಗಾರಾಂಗ ಮಾರ್ಗಣ ಶಿಂಗಾಡಿ ಹಸ್ತಅಂಗುಳಿ ಚಾತುರ್ಯ ಗಂಗಾಧರ ಚಾಪಭಂಗ ಭಕ್ತವತ್ಸಲ ರಂಗ ರಂಗರಾಮಮಂಗಳಾಂಗ ದೇವೋತ್ತುಂಗ ವಿಜಯ ವಿಠ್ಠಲಜಂಗಮ ಸ್ಥಾವರ ಜಂಗುಳಿ ಜಡ ಭಿನ್ನಾ ೨

ತ್ರಿವಿಡಿತಾಳ
ಇಂದ್ರಗೋಪದಂತೆ ವರ್ಣದಿಂದೊಪ್ಪುವಅಂದವಾದ ದಿಗ್ವಿಜಯರಾಮಚಂದ್ರ ಭಕ್ತ ಚಕೋರ ಮಾನವ ಮನುಜಲೀಲಾಸಂದರುಶನ ಮಾತ್ರದಿಂದ ಲಾಭಾಸಂದೋಹ ಕೊಡುವನೆ ಕ್ಷತ್ರಕುಲೋತ್ತಮಶ್ಯಂದನಹತ್ತು ನಾಮಕಲ ನಂದನಾಇಂದೆನ್ನ ಹೃದಯಾಬ್ಜ ಮಂದಿರದಲಿ ಬಂದುನಿಂದಾಡುವ ದಾಶರಥಿಯೆ ತಂದೆತಂದೆ ತಂದೆ ತಂದೆ ಈ ಪರಿ ಎನ್ನಾನಂದವಾದ ಮನಕೆ ನಿನ್ನ ಮೂರ್ತಿಪೊಂದಿಸು ಭುವನ ಪಾವನವಾದ ಚರಣಾರವಿಂದ ಪಾಂಸ ಲೇಶ ಧರಿಪಾರಲ್ಲಿಬಂದು ಕಾರುಣ್ಯಸಿಂಧು ನಿನ್ನಂಘ್ರಿನಖಚಂದ್ರಚಂದ್ರಿಕೆಯಲಿ ಎನ್ನ ಹೃತ್ತಾಪವನಂದಿಸು ನಾನಾವತಾರ ನಾರೆಯಣಾಮಂದರೋದ್ಧರನೇ ಮಹಾಮಹಿಮಾಸಂದೇಹ ಎನಗಿಲ್ಲ ನಿನ್ನ ಕಂಡ ಮೇಲೆಬಿಂದು ಮಾತುರ ಕ್ಲೇಶ ಎನಗಿಪ್ಪುದೇ ಕೊಂದು ಬಿಸುಟುವೆನು ಖಳರ ಉಪದ್ರವಕಂದ ನಾನೆಲೋ ನಿನಗೆ ಜನುಮ ಜನುಮಎಂದೆಂದಿಂಗೆ ಎನ್ನ ಸಾಧನದಿಂದಲಿ ಆನಂದ ಕೊಡುವೆನೆಂಬೊ ಕೀರ್ತಿಯುಂಟೇಬಂದು ಸೇರಿದ ಭೂತ ಪ್ರೇತಾದಿಗಳು ಮಂತ್ರದಿಂದಲಿ ಅನ್ನಪಾನಾದಿಗಳು ತಂದು ಇತ್ತದರಿಂದ ವಶವಾಗಿ ಒಡನೊಡನೆಹಿಂದೆ ತಿರುಗುತಿಪ್ಪವು ತ್ರಾಣಗೆಟ್ಟುವಂದಿಪೆ ಅದರಂತೆ ನಿನಗಲ್ಲವೊ ಎಳೆಗಂದಿಯೋ ಸಂತಸ ಅನುಕಂಪನೆಅಂದ ಜನಕೆ ಪ್ರಾಣ ನಿಜಸ್ವಭಾವ ಉಪೇಂದ್ರ ವಿಜಯ ವಿಠ್ಠಲ ರಾಮ ರಘುಕುಲ ತಿಲಕಾ ೩

ಅಟ್ಟತಾಳ
ಜಡ ಚೇತನದೊಳು ವ್ಯಾಪ್ತವಾಗಿಪ್ಪನೆಧೃಢ ಭಕ್ತರಿಗೆ ತತ್ತದಾಕಾರ ರೂಪನಾಗಿ ಬಿಡದೆ ಕಾಣಿಸಿಕೊಂಬುದೇನು ಸೋಜಿಗವೆಬಡವ ಭಾಗ್ಯವಂತ ಎಂಬೊ ವಾರ್ತೆಯಲ್ಲಿಅಡಿಗಡಿಗೆ ಕೇಳು ಇದರ ವಿಚಿತ್ರದನುಡಿಬೇರೆ ನಡೆ ಬೇರೆ ಪಾರಾವಾರ ಮೂರ್ತಿಯೆಸಡಗರ ಏನೆಂಬೆ ಯೋಗ್ಯತಾನುಸಾರಕೊಡುವನು ಜ್ಞಾನಭಕುತಿ ವೈರಾಗ್ಯವಅಡಿಗಡಿಡಿಗೆ ತನ್ನ ಧ್ಯಾನವ ಪಾಲಿಸಿಪೊಡವಿ ವಿಬುಧರೆಲ್ಲ ಮತ್ಸರ ದುರ್ಗವಕಡಿದು ಮನೋರಥ ಪಡಕೊಂಡು ಸುಖಿಪರುಕಡಲಶಯನ ನಮ್ಮ ವಿಜಯ ವಿಠ್ಠಲರೇಯಾಅಡಿಗಳರ್ಚಿಪರ ಚಿತ್ತದಲ್ಲಿ ನೆಲಸಿಪ್ಪ ೪

ಆದಿತಾಳ
ಆನಂದ ಜ್ಞಾನಪ್ರದ ಶ್ರೀ ನಾಥನ ದಕ್ಷಿಣ ವಾಮಾಂಘ್ರಿಆನಂದಪಾದ ಆನಂದಪ್ರದ ವಾನರಕಾಂತ ಲಕ್ಷಣ ಸುಗ್ರೀವದಾನವನಿಂದಲಿ ಪೂಜೆಗೊಂಬ ಪಾದ ರಾಜಿಸುವ ಪಾದದೀನ ಮಾನವರಿಗೆ ಒಲಿದೊಲಿದು ನಿತ್ಯಧ್ಯಾನದಪಾದ ಮಾನಪ್ರದ ಪಾದಶ್ರೀನಾರಿ ಕರಕಮಲ ಪೂಜಿತ ಸರ್ವಾಂಕಿತಪಾದ ಭವತಾರಕಪಾದಏನೇನು ಬೇಡಿದಭೀಷ್ಟೆಯ ಕೊಡುವುದುಒಳಗೆ ಪೊಳೆವ ಪಾದ ಹೊರೆಗೆ ತೋರುವಪಾದಆನಂದತೀರ್ಥರ ಮನದಲ್ಲಿ ನಿಂದ ಅತಿನಿರ್ಮಳಪಾದಅಪಾಕೃತ ಪಾದದಾನಿಗಳರಸ ವಿಜಯ ವಿಠ್ಠಲ ಕಾಮಧೇನು ರಾಮ ರಾಮಕೌಸಲ್ಯ ತನಯನ ಪಾದ ೫

ಜತೆ
ವಸುಧೇಂದ್ರ ಮುನಿಯಿಂದ ನಾನಾ ಪೂಜೆಯ ಗೊಂಡುವಸುಧಿಯೊಳಗೆ ಮೆರೆವ ವಿಜಯ ವಿಠ್ಠಲ ರಾಮ೬

ಹರಿದಾಸರು ಭಗವಂತನ

೮೦
ಧ್ರುವತಾಳ
ವಂದ್ಯಾನೆಂದರೆ ನೀನಿಂದು ಮುನಿವರೇನೊ
ಮಂದ ಹಾಸನೆ ಗೋವಿಂದ ಸದಾನಂದ ನಂದನ
ಕಂದರ್ಪ ಜನಕನೆ, ಅಂದುಳ್ಳ ದೈವವೆ, ಇಂದಿರೆನಿಲಯ
ಮಂದಮತಿತನದಿಂದ, ಗರ್ವದಲ್ಲಿ
ನಿಂದಿಸಿದೆ ನಾನು ಮುಂದಿಳಿಯದೆ
ಕಂದನ್ನ ಅಪರಾಧ ಒಂದು ಎಣಿಸದಿರು
ತಂದೆಯಾ ತಂದೆ, ತಂದೆ, ಬಂದೆ ದೈವಾವೆ
ನೊಂದಗಲಿ ನಿನ್ನ ಅಂದಾದೆ ಶತಸಿದ್ಧ
ಸಂದೇಹವಿಲ್ಲವಿದಕಿಂದುವದನಾ
ಸುಂದರ ಶ್ರೀ ಗರ್ಭ ವಿಜಯವಿಠ್ಠಲರೇಯ
ವಂದಿಸಿ ನಾನು ನಮೋ ಎಂದೆರಗುವೆನೊ ೧
ಮಟ್ಟತಾಳ
ಕೊಟ್ಟವರಾ ಬಳಿಯಾ ಕಷ್ಟವಾದರು ತನ್ನ
ಪುಟ್ಟಿದ ಮನೆಗೆ ಬೈದಟ್ಟುವುದೆ ನಿಜವು
ಶಿಷ್ಟಪಾಲಕ ಎನ್ನ ದುಷ್ಟಹಂಕಾರಗೆ
ಕಟ್ಟಿಕೊಟ್ಟದರಿಂದ, ಕಷ್ಟವಾದರು ನಿನ್ನ
ಧಿಟ್ಟತನದಿ, ದೂರಿ ರಟ್ಟು ಮಾಡದೆ ಬಿಡೆನೊ
ಬಿಟ್ಟಿಯವ ನೆಂದು ಬಿಟ್ಟರೆ ಒಳ್ಳೇದೆ
ಶಿಷ್ಟನಾಮ ವಿಜಯವಿಠ್ಠಲನಂಘ್ರಿ
ಯಿಟ್ಟಲ್ಲೆ ಕಾಯಾ ಕೊಟ್ಟಲ್ಲದೆ ತೊಲಗೆ೨
ತ್ರಿವಿಡಿತಾಳ
ಗಗನದಿಂದಲಿ ವರುಷಾ ಸೊಗಸಾಗಿ ಸುರಿಯೇ ಜೀ
ವಿಗಳೆಲ್ಲಾ ಸುಖಿಸೋರು ಯುಗಯುಗಾಂತರ ಬಿಡದೆ
ಜಗದಿಂದ ಜಲಉಬ್ಬಿ ಜಿಗಿದು ನಭವ ತೊಯ್ದು
ಮಿಗಿಲಾಗಿ ಬೆಳಿಯೆ ಪ್ರಾಣಿಗಳು ಸಂತೃಪ್ತಿಯೆ
ವಿಗಡ ದೇವರ ದೇವ ಅಗಣಿತ ಪರಾಕ್ರಮ
ಖಗ-ಗಮನ ನಿನ್ನ, ಪಾದಯುಗಳ, ಕರುಣವಾಗೆ-
ಬಗೆಬಗೆಯಿಂದ ತೊಲಗದ, ಮಾಡಿದ ಮಹ
ಅಘಗಳು ಪೋಗಿ ಬೈಲಿಗೆ ಬೀಳೋವು
ಭಗವಾನ್ ನಮೊ ನಮ್ಮ ವಿಜಯವಿಠ್ಠಲ
ನ್ನಿಗೆ, ಎನ್ನಿಂದಾವದು ಉಗುರಿನಿತುಪಕಾರವಿಲ್ಲ೩
ಅಟ್ಟತಾಳ
ಕ್ಷೀರ ವಾರಿಧಿಗೆ ಹಾರುತ ಪೋಗಿ, ಮೀರಿದ ಹರುಷವೆ
ವಾರಿಧಿ ತುಂಬಿ ಉಕ್ಕೇರಿ ಹರಿವುದೇನೊ
ಕ್ರೂರವಾಗಿ ಪೋಗಿ ಸಾರೆ ಕುಡತಿ ತುಂಬಿ
ಕ್ಷೀರ ತೆಗೆಯಲವೆ ವಾರಿಧಿ ಕಡಿಮೇನೊ
ನಾರಾಯಣ ವೇದ ಪಾರಾಯಣನೆ ನಿನ್ನ
ನೂರು ಬಗೆಯಿಂದ ಜಾರಿ ಸ್ತುತಿಸಿದರೆ
ಕಾರಣವೇನಯ್ಯ ದಾರಿಂದಲಿ ನಿನಗೆ
ಧಾರುಣೀಶಾ ಮಹಕೇಶವ ವಿಜಯ ವಿಠ್ಠ
ಲಾರು ನಿನ್ನ ಮನದಂತರ್ಚಿಸುವರು ೪
ಆದಿತಾಳ
ನುತಿಸಿ ಸ್ತುತಿಸಿ ಭಾಗ್ಯ ಅತಿಶಯವಾಗದು ದು-
ರ್ಮತಿಯಾಗಿ ನಿಂದಿಸಲು, ಮಿತಿ ಜ್ಞಾನದಲಿ ನಿನ್ನ
ದ್ಭುತ ಲೀಲೆ ತಿಳಿಯದೆ ಗತಿ ತಪ್ಪಿ ನುಡಿವೆನೊ
ಪಿತನು ವ್ಯಾಮೋಹದಲ್ಲಿ ಸುತದಿಂದ ನುಡಿಸಿಕೊಂಡು
ಖತಿಯಾಗದೆ ಸಂತೋಷ ಪ್ರತಿಯಿಲ್ಲದೆ ಬಡುವನು
ಕೃತಜ್ಞಾನಾಮ ನಮ್ಮ ವಿಜಯವಿಠ್ಠಲ ನೀನೆ
ಪಿತನಾದ ಬಳಿಕ ದೂರತನ ಮಾಡುವೆಯಾ ೫
ಜತೆ
ಅರ್ಭಕನ ಬಿನ್ನಹ ಗರ್ಭೀಕರಿಸಿಕೊಳ್ಳೊ
ಭೂರ್ಭುವ ವಿಜಯವಿಠ್ಠಲನೆ, ಜಾರ ಚೋರ ೬

ತಿರುಪತಿಯ ಶ್ರೀನಿವಾಸನ ನಾಮ

೬೦. ತಿರುಪತಿ
ರಾಗ:ನಾಟಿ
ಧ್ರುವತಾಳ
ವಲಯಾಕಾರಾದ್ರಿ ಸುತ್ತ ಒಪ್ಪುತಿರಲು ಎತ್ತ |
ತಿಳಿದರೆ ಸ್ವರ್ಣ ವರ್ಣಮಯವಾಗಿದೆ |
ಪೊಳೆವ ಚತುರ ಬೀದಿ ಜ್ಞಾನ ಭಕುತಿ ವೈರಾಗ್ಯ |
ಸಲೆ ಧರ್ಮ ಪೆಸರಿನಲ್ಲಿ ಕರೆಸುತಿವಕೊ |
ಥಳ ಥಳಿಸುವ ಉನ್ನತ ಪ್ರಾಕಾರ ಗೋಪುರ |
ಸುಲಭವಲ್ಲಯ್ಯಾ ಕೊಂಡಾಡುವ ಜನಕೆ |
ಶಿಲೆ ಎನ್ನದಿರಿ ಎಲ್ಲ ಮಣಿಮಯದಿಂದವೆ |
ಗ್ಗಳವಾಗಿ ಬಿಗಿದ ಸೊಬಗು ನೋಡಿರೊ |
ತಳಿ[ರು] ತೋರಣ ಕಟ್ಟಿ ಪರಮ ಮಂಗಳವಾಗಿ |
ಸುಳಿದಿದೆ ಬಲುಕಾಂತಿ ಗಗನ ಮುಟ್ಟಿ |
ಚಲುವ ಮಹದ್ವಾರ ಪರಿ ಪರಿ ಮಾಟದಾ ಬಾ |
ಗಿಲು ಅಲ್ಲಿ ಕುಳಿತಿದ್ದ ದ್ವಾರದವರು |
ಒಳಗೆ ಗರುಡಗಂಭ ಮತ್ತೆ ಪ್ರಾಕಾರ ಮಧ್ಯ |
ಪೊಳಲು ಭೋಗ ಮಂಟಪ ಸುತ್ತ ಪವಳೀ |
ಕಳಸದಿಂದೊಪ್ಪುವ ವೈಚಿತ್ರವಾದಾನಂದಾ |
ನಿಲಯ ವಿಮಾನ ಮ್ಯಾಲೆ ಗೋಚರಿಪ |
ಬಲು ಮೂರ್ತಿಗಳು ಉಂಟು ವೇದ ಪ್ರಮಾಣವೆನ್ನಿ |
ಸುಳಿವವು ಒಂದೊಂದನಂತವಾಗಿ |
ಬಲಭಾಗದಲ್ಲಿ ಉತ್ತಮತೀರ್ಥವೊಂದು ವಿ |
ಮಲವಾಗಿದ್ದ ವಾರಿಯಿಂದ ಶೋಭಿಸುತಿದೆ |
ಇಳಿಗಿದೆ ವೈಕುಂಠನಿಜವೆಂದು ಸತ್ಯವಾಗಿ |
ತಲೆಬಾಗಿ ಮುನಿಜನ ತುತಿಪದದಕೊ |
ಜಲಜ ಸಂಭವ ಶಿವಸುರಪತಿ ಮುಂತಾಗಿ |
ಜಲಚರಾದಿಯ ಜನ್ಮ ಬಯಸಿಪ್ಪರು |
ಒಲಿಸುವರಿತ್ತವೊಂದು ರೂಪದಿಂದಲಿ [ಕೊಂ] |
ಬಲು ಅಪೇಕ್ಷಿಸುತ್ತ ಸಮ್ಮೊಗವಾಗೆಲ್ಲ |
ಬೆಲೆ ಇಲ್ಲದಿಪ್ಪ ವಾದ್ಯಂಗಳ ಘೋಷ ಪರಿಜನದ |
ಗಲಭೆ ನೋಡಿದರಷ್ಟದಿಕ್ಕು ತುಂಬೆ |
ಮಲ ವಿರಹಿತರಾಗಿ ಮುಕ್ತಾಮುಕ್ತರು ತಮ್ಮ |
ಬಳಗದೊಡನೆ ಕ್ರೀಡೆಯಾಡುವರೂ |
ಚಲುವ ತಿರುವೆಂಗಳ ವಿಜಯವಿಠಲ ವೆಂಕಟ |
ನೆಲೆಯಾಗಿ ಇಪ್ಪ ಶುದ್ಧ ಭಕ್ತರ ವಶನಾಗಿ ೧
ಮಟ್ಟತಾಳ
[ವ]ರಸುದರುಶನ ಕಟಿ ಅಭಯಾಹಸ್ತ |
ವರ ಮಣಿ ಮಕುಟ ಕುಂಡಲಕರ್ನನಾಸಾ |
ಸರಸಿಜನಯನ ನೊಸಲ ಕಸ್ತೂರಿ ತಿಲಕ |
ಸಿರಿ ಉರ ಸಿರಿಗಂಧಾ ಕೌಸ್ತುಭ ಮಣಿಪೊನ್ನಾ |
ಸರಿಗೆ ಮುತ್ತಿನ ಹಾರಾವಳಿ ಪದಕ |
ಮಿರುಗುವ ಪೊಂಬಟ್ಟಿ ಕಿಂಕಿಣಿ ಉಡುದಾರ |
ಬಿರಿದಾವಳಿ ತೊಡಕು ಚರಣದಂದಿಗೆ ಗೆಜ್ಜೆ |
ಸರಪಳಿ ಘನ್ನ ಮೆರೆವದೇವಾದಿ ಮೂರುತಿ ಚಲುವ |
ಶರಣರ ಪರಿಪಾಲ ವಿಜಯವಿಠಲರೇಯ |
ನಿರುತ ಸ್ವಾಮಿ ಸರೋವರವಾಸ ತಿರ್ಮಲಾ ೨
ತ್ರಿವಿಡಿತಾಳ
ನೀನೆ ಜಗತ್ತಿನಲ್ಲಿ ಸಾಂಗೋಪಾಂಗನಾಗಿ |
ನಾನಾ ರೂಪನಾಗಿ ತುಂಬಿರಲೂ |
ನಾನೆ ಬಂದವನೆಂದು ಮನಸಿನಲ್ಲಿ ತಿಳಕೊಂಡು |
ಕಾಣಲಿಲ್ಲಾವೆಂದು ಚಿಂತಿಸುವೆ |
ಏನೆಂಬೆನಯ್ಯಾ ನಿನ್ನಾ ಮಾಯತನವನ್ನು |
ಮಾನವನಿಗೆ ಸುತ್ತೆ ಅಡಿಗಡಿಗೆ |
ಜ್ಞಾನಶೂನ್ಯನಾಗಿ ಯೋಚಿಸುವೆನು ನಿನ್ನ |
ಕಾಣಿಸೊ ಎಂದು ಪೇಳಿಕೊಂಡೆನೊ |
ಜ್ಞಾನವಂತನಾದಡೆ ಇನಿತು ಸೊಲ್ಲುಗಳುಂಟೆ |
ನಾನಾ ಪ್ರಕಾರದಲ್ಲಿ ಎನ್ನನು ಪೊರೆವವನೆ |
ಅನಾಥ ಮಿತ್ರ ವಿಜಯವಿಠಲ ವೆಂಕಟ |
ನೀನೆಂದು ನುಡಿದವವಗೆ ನಿಜ ಭಕ್ತರ ಕೂಡಿಪ್ಪೆ ೩
ಅಟ್ಟತಾಳ
ಈತನ ನಾಮವು ಪಾಪವಿಮೋಚನ |
ಈತನ ನಾಮವು ನರಕ ಭಂಜನ |
ಈತನ ನಾಮವು ಗತಿಗೆ ಸಾಧನವು |
ಈತನ ನಾಮವು ಸುಖಕೆ ಪೊಂದಿಸುವದು |
ಭೂತಳದೊಳಗೆಲ್ಲಿ ಈತನ ನಾಮಕ್ಕೆ ಸರಿವೊಂದಾದರೆ ಇಲ್ಲ |
ಯಾತಕ್ಕೆ ಸಂಶಯ ಪದತಿಳಿದವರಿಗೆ |
ಪಾತಕಿ ನಾನಾಗಿ ನೋಡಲಿಲ್ಲವೆಂದು |
ಈ ತೆರದಲಿ ನಿತ್ಯ ಮರಗುವೆನೋ |
ಈತನು ನಿನ್ನಾಧೀನನಾದ ಮೇಲೆ |
ಗಾತುರ ನೋಯಿಪೆ ವಂದಲ್ಲದೆ |
ಧಾತ ಜನಕ ನಮ್ಮ ವಿಜಯವಿಠಲ ಪ್ರ |
ಖ್ಯಾತ ಮೂರುತಿ ತಿರುವೆಂಗಳೇಶರಂಗ ೪
ಆದಿತಾಳ
ಅಮೃತ ಬೇಕಾದರೆ ನಿನ್ನಂಘ್ರಿ |
[ನೆ]ಮ್ಮದೆ ದೊರಿಯದು ಎಂದಿಗೂ |
ಒಮ್ಮನದಲಿ ನಿನ್ನ ಪೂಜಿಪೆನೆಂದಡೆ |
ಅಮ್ಮಹ ಭಕುತಿ ಪುಟ್ಟದು |
ಹೆಮ್ಮೆಯಿಂದಲಿ ದಿವಸ ಪೋಗಾಡಿದೆ |
ಈ ಮಹಿಯೊಳು ಚರಿಸುತ್ತಾ |
ನಮ್ಮಯ್ಯಾ ನೀನು ಸಲಹಬೇಕು |
ದುಮ್ಮಾನಂಗಳು ಕಳವುತ್ತ |
ತಿಮ್ಮಯ್ಯ ಸಿರಿ ವಿಜಯವಿಠಲ |
ಬೊಮ್ಮಾದಿಗಳು ನಿನ್ನ ಅರಿಯರು ೫
ಜತೆ
ಧರೆಗಿದೆ ವೈಕುಂಠವಾಗಿ ಮೆರೆವ ಚನ್ನ |
ತಿರುಮಲೇಶ ಸಿರಿವಿಜಯವಿಠಲನಿಪ್ಪಾ ೬

ತಿರುಪತಿಯ ಶ್ರೀನಿವಾಸನು ಮೂವತ್ತುಮೂರು

೬೧. ತಿರುಪತಿ
ರಾಗ:ಭೈರವಿ
ಧ್ರುವತಾಳ
ವಸುದೇವ ಅತ್ರಿಸುತಪ ಜಮದಗ್ನಿ ವಿಶಾಲಾ |
ದಶರಥ ಪರಾಶರ ಕರ್ದಮ ಶುಭಾ |
ವಿಶಜ ಕರ್ದಮನಾರಿ ಯಮಧರ್ಮರುಚಿ ವಿಷ್ಣು |
ಯಶ ಪ್ರಿಯವೃತ ಬ್ರಹ್ಮದೇವ ಗುಂಹ್ಯಾ |
ವಶು ನಂಭೋ ದೋಷ(?) ವೇದಶಿರ ಆಯುಷ್ಮ ಆರ್ಯುಕ |
ಬೆಸಸುವೆ ಇವರ ತುವಾಯದಲ್ಲಿ ಮತ್ತೆ |
ಪ್ರಸನಿ ದೇವಕಿ ಸತ್ಯವತಿ ರೇಣುಕ ಕೌಸಲ್ಯಾ |
ವಿಶಿಚು ವಿಕುಂಠ ಅವಿತಿ ಆಕುತಿ ಅನಸೂಯಾ |
ತುಷಿತ ಶಾರ್ವಾದಿ ಮೇರು ಸಂಭೂತಿ ಸರಸ್ವತಿ |
ಮಿಸುಣಿಪ ದೇವಹುತಿ ಅಂಬುಧರ ವೈದೃತ |
ಕುಶಲ ಸುಕೃತ ಬ್ರಹತಿ ವೀತಾದ್ಯರು |
ವಸುಧಿಯೊಳಗೆ ಏಸು ಪುಣ್ಯಮಾಡಿದರೊ |
ಎಣಿಸಲಾರರು ಮಹಾಜ್ಞಾನಿಗಳೂ |
ಅಸಮಾ ದೈವಾವೆ ನಿನ್ನ ಒಲಿಸಿಕೊಂಡು ಬಿಡದೆ |
ಶಿಶುವು ಮಾಡಿಕೊಂಡರು ಆಡಿಸುತ್ತಾ |
ಹಸಿವೆ ನೀರಡಿಕೆ ತೊರೆದು ತಲೆಕೆಳಗಾಗಿ ಬೇವೊ |
ಬಿಸಿಲೊಳು ಕುಳಿತು ತಪಿಸಿದ ಕಾಲಕ್ಕೂ |
ಬಿಸಿಜನಾಭನೆ ನಿನ್ನಾಸುಳುವು ಕಾಣಾರು ಎಲ್ಲಿ |
ಹಸುಳೆಯಾದದೆಂತೂ ಇವರಿವರಿಗೆ |
ಬಿಸಿಜಾಕ್ಷ ಲಕುಮಿ ನಿನ್ನ ಮಾತಿಗೆ ಮರುಳಾಗಿ ಮಾ |
ನಿಸದಲ್ಲಿ ಕಾಣಳು ಅರಸಿ ಅರಸೀ |
ಶಶಿಕೋಟಿಲಾವಣ್ಯ ವಿಜಯವಿಠಲ ಶೇಷ |
ವಸುಮತಿಧರ ತಿರುವೆಂಗಳೇಶ ೧
ಮಟ್ಟತಾಳ
ಬಲರಾಮನು ನಿನಗೆ ಅಣ್ಣನಾದನು ನೋಡಾ |
ಫಲ್ಗುಣ ನಿನ್ನ ಸೂತನ ಮಾಡಿಕೊಂಡ |
ಕುಲದವರಾಗಿ ಯಾದವ ಜನರೆಲ್ಲ |
ನಲಿನಲಿದು ನಿನ್ನಾ ಕೂಡ ಉಂಡರಲ್ಲಾ |
ಗೆಳೆಯರೆಂದಿನಿಸಿದ ಗೋಪಾಲಕರಂದು |
ಗೆಲವು ಸೋಲಾಟಗಳು ನಿನ್ನನೊಡನಾಡಿದರು |
ಇಳಿಯೊಳಗೆ ಇವರ ಸುಕೃತವೇನೆಂಬೆ |
ಕೆಲಕಾಲ ಗುಣಿಸಿ ಎಣಿಕೆ ಮಾಡಿದರಾಗಿ |
ನೆಲಯಗಾಣುವರಾರು ನಿನ್ನ ಕಾಂಬುವದಕ್ಕೆ |
ಸುಳಿವ ಮಿಂಚಿಗೆ ನರನ ಪ್ರಯತ್ನಗಳುಂಟೆ |
ಜಲಜನಾಭನೆ ನೀನೆ ಸ್ವಾಭಾವಿಕತನದಿ |
ಒಲಿದಾದಲ್ಲದೆ ಮತ್ತೆ ಒಂದು ಕಾರಣವಲ್ಲ |
ಸುಲಭ ಗಿರಿ ವೆಂಕಟ ವಿಜಯವಿಠಲರೇಯ |
ಗಳಿಸಿದ ತಪೋಧನವೆ ಭಕ್ತರ ಕುಲಕೋಟಿಗೆ ೨
ತ್ರಿವಿಡಿತಾಳ
ಗೋಪಿಕಾ ಸ್ತ್ರೀಯರು ಹದಿನಾರು ಸಾವಿರ |
ಭೂಪಾಲಕರ ಮಕ್ಕಳು ಹಗಲಿರಳು |
ಶ್ರೀಪತಿ ನಿನ್ನೊಡನೆ ನೆರದರಂದೂ ಬಿಡದೆ |
ವ್ಯಾಪಾರದಲಿ ಮನಸು ತೆಗೆಯದಲೆ |
ಭೂಪ ಉಗ್ರೇಸನ ಸಮುಖನ್ನ ಮಾಡಿದ |
ಅಪಾರ ಮಹಿಮ ಅನುರೂಹವಂದ್ಯನೆ |
ದ್ರೌಪದಿ ಸೊಲ್ಲಿಗೆ ನೀಪೋದದೆಂತೊ |
ನಾಪೇಳಲಾಪೆನೊ ನಿನ್ನ ಕರುಣ |
ರೂಪ ಹೀನಾಳದ ಕುಬುಜಿ ನಿನ್ನ ರಮಿಸಿ |
ತಾ ಪ್ರೀತಿಯಾದ ನುಡಿ ಪೊಂದುವದೆತ್ತ |
ಪಾಪರಹಿತ ಪರಿಪೂರ್ಣ ಸುಖಾತ್ಮಕ |
ಈ ಪರಿ ಇದ್ದವರ ಭಾಗ್ಯವೇನು |
ಭಾಪುರೆ ಇವರಿವರ ತಪಸಿಗೆ ಈ ಫಲವೆ |
ವ್ಯಾಪುತಾ ದೈವವೆ ನೀನೆ ಬಲ್ಲೀ |
ದೀಪಕ್ಕೆ ಸರ್ವ ಬ್ರಹ್ಮಂಡ ಕಾಣಿಸಿದಂತೆ |
ನೀ ಪ್ರೇಮದಿಂದ ಮೆಚ್ಚಿದಿಯಲ್ಲಾದೆ |
ಸುಪರ್ನಗಿರಿರಾಯಾ ವಿಜಯವಿಠಲ ವೆಂಕಟ |
ತಾಪಸಿಗಳಿಗೆ ಮೈದೋರದ ಧೊರಿಯೆ ೩
ಅಟ್ಟತಾಳ
ಪಶುವಿಂಡು ಗೋಪಾಲಕರು ನಂದ ವೃಜ |
ವಸುಧಿ ಎಲ್ಲಾವೆ (ಎಲ್ಲ್ಯೆವರು) ಸುಸಾಧನ ಗೈದಿದರೊ |
ಹಸುಗೂಸುಗಳೆಲ್ಲಾ ನಿನ್ನಂತೆ ಮಾತಾಡಿ |
ದಿಶಿದಿಶಿಗೆ ಬಾಲಾಟ ಕಲಿತರಲ್ಲೊ |
ಮೊಸರು ಪಾಲು ತುಪ್ಪಾ ಬೆಣ್ಣೆ ತುಂಬಿದ ಭಾಂಡಾ |
ಹೃಷಿಕೇಶಾ ನಿನ್ನ ಹಸ್ತಗಳ ಸ್ಪರ್ಶಾ |
ಮಿಸಕದಲೆ ಆಯಿತು ಈ ಜಡಗಳ ಪುಣ್ಯಾ |
ಶಶಿಧರಗಾದರು ಸೋಜಿಗವಯ್ಯಾ |
ಉಸರಲೇನು ಮುನ್ನೆ ಗೋಪ ಪಳ್ಳಿಯೊಳಿದ್ದ |
ಕಸಕುಪ್ಪಿಸಹವಾಗಿ ಧನ್ಯ ಮಹಾಧನ್ಯ |
ಬಿಸಿಜ ಸಂಭವನ ಲೋಕಕಿಂತಧಿಕ ರಂ |
ಜಿಸುವದು ನೀನವತಾರನಾಗೆ |
ಬೆಸಸೀದ ಮಾತುಗಳಂತಿರಲಿ ಸರ್ವಕ್ಕು |
ಯಶೋದಾ ದೇವಿ ನೋಪೀಯಂತೂ ಯಂತೊ |
ದಶರಥ ಮೊದಲಾದ ಋಷಿಗಳಲ್ಲಿ ಜ |
ನಿಸಿದ ಕಾಲಕೆ ದೇವಾ ನಿನ್ನ ಕೂಡಾಡಿದಾ |
[ರ]ಸುಗಳು ಏನು ಪುಣ್ಯ ಮಾಡಿದರೊ |
ವೃಷಭಗಿರಿಯ ವಾಸ ವಿಜಯವಿಠಲ ವೆಂಕಟ |
ಅಸಮ ದೈವವೆ ನಿನ್ನ ಕರುಣತನ ಎಂತೊ ೪
ಆದಿತಾಳ
ಇದು ಎಂತಿರಲಿ ಇಂದಿನ ದಿನದಲ್ಲಿ |
ಪದುಮನಾಭನೆ ಸಮ್ಮೊಗವಾಗಿ |
ಹೃದಯಾಕಾಶಾದಿ ನಿನ್ನ ಮೂರುತಿ ಇಟ್ಟು |
ಒದಗಿ ಗಾಯನ ನೃತ್ಯ ನಾನ ಪರಿಸೇವೆ |
ಮುದದಿಂದ ಮಾಡುವ ನಿಜಶರಣರ ಪುಣ್ಯ |
ಉದಯಾಸ್ತಮಾನವು ಎಣಿಸೆವುಂಟೇ |
ಇದೆ ಇದೆ ಸಿದ್ಧವೊ ಕೃತಾದಿಯುಗದಲ್ಲಿ |
ಪದೊಪದಿಗೆ ತುಂಬಿಹರೊ ಇಲ್ಲಿ |
ವಿಧು ಮೊಗಾ ಇವರೆಲ್ಲ ನಾನಾ ತಪಸುಮಾಡಿ |
ಚದುರತನದಿಂದ ಒಲಿಸಲಿಲ್ಲ |
ಮದನ ಜನಕ ನೀನೆ ಅನುಕಂಪನಾಗಿ ಒ |
ಲಿದೆ ಎಲ್ಲದೆ ಮತ್ತೊಂದು ಇಲ್ಲಾ |
ಉದಯಗಿರಿಯವಾಸ ವಿಜಯವಿಠಲ ವೆಂಕಟ |
ಅದು ಭೂತ ದೈವಾವೆ ಬಹುವಿಧ ಚರಿತಾ ೫
ಜತೆ
ಮನಸು ಬಂದಂತೆ ವಹಾಮಹಿಮೆ ತೋರುವ ದೇವ |
ಅನಿಮಿಷಾ ಗಿರಿವಾಸ ವಿಜಯವಿಠಲ ವೆಂಕಟ ೬

ಇದು ವಾಮನ ಮತ್ತು ತ್ರಿವಿಕ್ರಮರ ಸ್ತೋತ್ರವಾಗಿದೆ.

ವಾಮನ- ತ್ರಿವಿಕ್ರಮ ಸ್ತೋತ್ರ
೧೨೪
ಧ್ರುವತಾಳ
ವಾಮನ ವಟು ಇಂದ್ರಾನುಜ ಉಪೇಂದ್ರನೆ
ಭೂಮಿ ಸುರಾಗ್ರಣಿ ಬಾಲ ಬ್ರಹ್ಮಚಾರಿ
ಹೇಮ ಯಜ್ಞೋಪವೀತ ಹೇಮ ಮೇಖಳ ಪೋಳವ
ಹೇಮ ಕೌಪೀನಧರ ಕ್ಷೇತ್ರರಮಣಾ
ವ್ಯೋಮಗಂಗಾ ಜನಕ ಹಸ್ತ ಛತ್ರಕಮಂಡುಲ
ಸೋಮ ಸನ್ನಿಭ ಪೂರ್ಣ ಗುಣ ಗಣ ನಿಲಯಾ
ಕಾಮಿತಫಲವೀವ ಕರುಣಾನಿಧಿ
ಸಾಮಗಾಯನ ಪ್ರೀತ ಸುಜನರ ಮನೋರಥ
ಸಮಸ್ತಲೋಕನಾಥ ಗರುಡುವರೂಥ
ಭೀಮದೈತ್ಯಹರಣ ವಿಜಯ ವಿಠ್ಠಲ ನಿ
ಸ್ಸೀಮ ಮಹಿಮ ಸುರಸ್ತೋಮ ವಿನುತಪಾದ ೧
ಮಟ್ಟತಾಳ
ಬಲಿರಾಯನು ಬಹಳ ಬಲವಂತನಾಗಿ
ಖಳಾರಾತಿ ಮಿಕ್ಕ ಬಿಲಿಷ್ಠರಾದವರ
ಕಲಹದೊಳೋಡಿಸಿ ಛಲದಲ್ಲಿ ಅವರ
ಬಲು ಪದವಿಗಳನು ಕಳೆದು ತೆಗೆದುಕೊಂಡು
ಇಳಿಯೊಳಗಾರಿಗೆ ಅಳುಕದಲಿರುತಿರಲು
ಬಿಲ್ಲುಗಾರರಿಗೆ ವೆಗ್ಗಳನಾಗಿ ಚರಿಸಿ
ಜಲಜ ಮಗನ ಜನಕ ವಿಜಯ ವಿಠ್ಠಲ ತ
ನ್ನೊಳಗೆ ನಿರಂತರ ನಲಿದೊಲಿದು ನೆನೆವಾ೨
ರೂಪಕ ತಾಳ
ಮನದೊಳು ಬಲಿರಾಯಾ ಮನಸಿಜನಯ್ಯನ
ನೆನೆಸುತ್ತ ಸಕಲ ಲೋಕವನೆ ಗೆದ್ದು
ಎನಗಾರು ಸರಿಯೆಂದು ಬಲುಗರ್ವದಲಿ ಇರೆ
ಅನಿಮಿಷಪತಿ ಪಲಾಯನವಾಗಿ ಪೋಗಲು
ದನುಜ ಬಲ್ಲಿದನೆಂದು ದಕ್ಷನ ತನುಜೆ
ಮನೋವ್ಯಥೆಯಿಂ ಕ್ಲೇಶಬಡುತತ್ತ
ಕಣಿಸಿ ದೈತ್ಯನ ಕೂಡ ಗೆಲುವ ಮನನ ಪಡಿವೆಂ
ದೆನುತ್ತ ರೋಷದಲಿ ಪತಿ ಅಜ್ಞಾನದಲ್ಲಿ
ವನಜನಾಭನೆ ಧ್ಯಾನವನೆ ಮಾಡಿದಳು ತನ್ನ
ಮನದ ಬಯಕೆ ಸಲ್ಲಿಸು ಎನುತಲಿ
ಘಣಿಶಾಯಿ ವಿಜಯವಿಠಲ ವಾಮನ ದೇವ
ಮುನಿ ಕಶ್ಯಪ ಅದಿತಿದೇವಿಗೆ ಒಲಿದಾ ೩
ಝಂಪಿತಾಳ
ಶಕ್ರನ ಸೌಭಾಗ್ಯ ಇಂದ್ರಸೇನನು ಬಿಡದೆ
ಆಕ್ರಮಿಸಿ ತ್ರಿಲೋಕ ಮಧ್ಯದಲಿ ಬಲು ಪ
ರಾಕ್ರಮನಾಗಿ ತಾನಲ್ಲದಲೆ ಮತ್ತೋರ್ವ
ಚಕ್ರವರ್ತಿಯೇ ಇಲ್ಲವೆಂದು ಹಿಗ್ಗೀ
ಶುಕ್ರನ್ನ ಶಿಷ್ಯನಿರೆ ಯಾಗದಲ್ಲಿಗೆ ಉ
ರುಕ್ರಮನೇ ಉಪೇಂದ್ರನಾಗಿ ಬಂದು
ತಾ ಕ್ರೀಡೆಯಾಡಿದಂತೆ ಬಾಲಕನಾಗಿ
ಆಕ್ರಮಮಾಡಿ ಒಲಿಯೆ ಮೆಚ್ಚಿಸೀ
ಸಕ್ರಿಯ ಸಕಲೇಶ ವಿಜಯ ವಿಠ್ಠಲನು ತ್ರಿ
ವಿಕ್ರಮಾವತಾರ ಧರಿಸಿದನು ಸುರರೊಲಿಯೊ ೪
ತ್ರಿವಿಡಿತಾಳ
ದಾನವನಲ್ಲಿಗೆ ಮುದ್ದು ಮೋಹನ ಪೋಗಿ
ದಾನವ ಬೇಡಿದ ಮೂರುಪಾದಾ
ಕ್ಷೋಣಿಯಕೊಡು ಎಂದು ಕಪಟವೇಷದಲ್ಲಿ
ಏನೆಂಬೆ ವಟುವಿನ ಮಹಾಮಹಿಮೆ
ಮಾನವನಂತೆ ಲೀಲೆ ತೋರಿ ಕರಒಡ್ಡಿ
ದಾನೊ ಪಿತಾಮಹನಯ್ಯಾ ನಮ್ಮಯ್ಯ
ಕಾಣುವರಾರು ಈತನ ಮಹತ್ತಣು ರೂಪಾ
ಎಣಿಸಲಳವೇ ಲಕುಮಿಗಾದರೂ
ಬಾಣಸುರನ ಜನಕ ಮಾತುಕೇಳುತ ವಿಪ್ರ
ಏನು ಬೇಡಿದನೆಂದು ನಸುನಗುತ್ತ
ತಾ ನೀರಿನಲಿ ತನ್ನ ಸತಿಯಸಹಿತನಾಗಿ
ಕ್ಷೋಣಿಯ ತ್ರಿಪಾದಾ ಧಾರಿ ಎರಿಯೇ
ಧೇನು ಭಕ್ತರಿಗೆಲ್ಲ ವಿಜಯ ವಿಠ್ಠಲ ತಾನೆ
ಆನಂದದಲಿ ಕೈಕೊಂಡಾಭಕ್ತಿಗೆ ಮೆಚ್ಚಿ ೫
ಅಟ್ಟತಾಳ
ಒಂದು ಚರಣ ಬೊಮ್ಮಾಂಡ ಖರ್ಪರದಲ್ಲಿ
ಒಂದು ಚರಣ ಪಾತಾಳಲೋಕದಲ್ಲಿ
ಸಂದೇಹವಿಲ್ಲದೆ ವ್ಯಾಪಿಸಿದವು ಮ
ತ್ತೊಂದು ಪಾದಕೆ ಭೂಮಿ ಸಾಲದಾಯಿತೆಂದು
ಇಂದ್ರಸೇನಗೆ ವಾಮನದೇವ ನುಡಿಯಿಂದ
ಬಂಧಿಸಿ ಸಮಯಬದ್ಧಮಾಡಲು ಬಲಿ
ಇಂದಿರಾಪತಿ ಈತನೆಂದು ತಿಳಿದು ವೇಗ
ವಂದಿಸಿ ತನ್ನಯ ಶಿರವನು ನೀಡಲು
ಅಂದು ಗೋವಿಂದನು ಅರಸನು ತಲೆಮೆಟ್ಟಿ
ಒಂದು ಚರಣದಲ್ಲಿ ಪಾತಾಳಕಟ್ಟಿದ
ಮುಂದೆ ನಖದಿಂದ ಬೊಮ್ಮಾಂಡ ಭೇದಿಸಿ
ಮಂದಾಕಿನಿ ಪೆತ್ತಾ ನಿರುತ ನಿರ್ಭೀತಾ
ಇಂದ್ರವಂದಿತ ಸಿರಿ ವಿಜಯ ವಿಠ್ಠಲ ಕೃಪಾ
ಸಿಂಧು ಸಿಂಧುರ ಪಾಲಾ ಸಿಂಧುತನುಜೆ ಪತಿ ೬
ಆದಿತಾಳ
ಕಾಯವನಿತ್ತವಗೆ ನಾರಾಯಣನು ಒಲಿದು ಕಲ್ಪ
ಆಯುವನಿತ್ತು ಸರ್ವದ ಐಶ್ವರ್ಯದಲ್ಲಿ ಇಟ್ಟು
ಕಾಯಿದಾ ತಾನವನ ಮನಿಯ
ಸ್ಥಾಯವಾಗಿ ಬಾಗಿಲೊಳು ಈಯಬಲ್ಲಿ ದೇವ ತನ್ನ
ಮಾಯಾದಿಂದ ಜನರ ಮೋಹಿಸಿ ಶ್ರೀಯರಸ ವಿ
ಜಯ ವಿಠ್ಠಲ ನಾಯಕ ಶಿರೋಮಣಿ
ಶ್ರೇಯಸ್ಸನೀವ ತನ್ನ ಗಾಯನ ಮಾಡುವರಿಗೆ ೭
ಜತೆ
ಇಂದ್ರಂಗೆ ಸುರ ಪದವಿ ಕೊಡಿಸಿ ಬಲಿಗೆ ಒಲಿದಾ
ಕಂದರ್ಪಪಿತ ನಮ್ಮ ವಿಜಯ ವಿಠ್ಠಲವಟು ೮

ಭಗವಂತನ ಪಾದದ ಧೂಳಿಯನ್ನು ಭಕ್ತಿಯಿಂದ

೧೦೮
ಧ್ರುವತಾಳ
ವಾಸುದೇವನ ಚರಣ ಸರಸಿಜ ಧೂಳಿ
ಯಾ ಶಿರಸಿನಲಿ ಸೂಸುವುದು
ಆ ಸುಮನಸರ ಸಮಾನನು ಕಾಣೊ
ವಾಸವಾಗುವ ಮೀಸಲು ಪದವಿಲಿ
ದೋಷ ವರ್ಜಿತರಾದ ದಾಸರನನುಸರಿಸಿ
ರಾಶಿಗುಣದಲ್ಲಿ ಲೇಸನಾಗಿ
ವಾಸೆ ಪಂಥವಬಿಟ್ಟು ಬ್ಯಾಸರಕಿಯ ಮನ
ಬೀಸಿ ಬಿಸಾಟು ಸಂತೋಷದಲ್ಲಿ
ಸಾಸಿರಾರ್ಚಿಸೆ ನಾಮ ವಿಜಯ ವಿಠ್ಠಲನ್ನಾ
ಕಾಶ ಹೃದಯದಿ ನಿಲಿಸಿ ನೀ ನಮಿಸು ೧
ಮಟ್ಟತಾಳ
ಪಂಚ ಭೂತದ ಪ್ರಪಂಚವನಳಿದು
ಪಂಚೇಂದ್ರಿಯಗಳೆಂಬ ವಂಚನಿಯ ತೊರೆದು
ಪಂಚಭೇದ ತಿಳಿದು ಸಂಚಿತ ಪ್ರಾರಬ್ದ
ಮುಂಚಿನ ಕರ್ಮಕ್ಕೆ ಸಂಚಗಾರವ ಪಿಡಿದು
ಕೊಂಚಮನಾಗದಲೆ
ಲಂಚೆಗುಳಿ ಗುಪ್ತ ವಿಜಯ ವಿಠ್ಠಲ ಹರಿಯ
ಪಂಚದಶನೆಂದು ಅಂಚಿಗುಂಚಿಗೆಭಜಿಸೊ ೨
ರೂಪಕ ತಾಳ
ಮಡದಿ ಮಕ್ಕಳು ನಿನ್ನ ಒಡಿವೆ ವಸ್ತದ ಮ್ಯಾಲೆ
ಕಡುನೇಹ ಮಾಡಿ ಬೆಂಬಿಡದೆ ಮನವಿಟ್ಟಂತೆ
ಪಡಿದರಘಳಿಗೆ ಇಕ್ಕಡಿ ಚಿತ್ತನಾಗದೆ
ಪೊಡವೀಶ ರಂಗನ ಅಡಿಗಳಲಿ ಆವಾಗ
ತಡಿಯದೆ ಭಕುತಿಯ ನಡಿಸಿ ಆತನ ಕರುಣ
ಪಡೆದು ವಶೀಕರಿಸೋದು
ದೃಢ ದೈವ ವಿಹಾಯಸಗತ ವಿಜಯ ವಿಠ್ಟಲ
ಕಡು ಮೆಚ್ಚಿ ಬೆನ್ನನು ಬಿಡದೆ ಪಾಲಿಸುವನು ೩
ಝಂಪಿತಾಳ
ಇಂಧನ ಮಥನಿಸಿ ಪಾವಕನ ಪಡೆದಂತೆ
ಇಂದು ನಿನ್ನಯ ಹೃದಯ ಮಧ್ಯದಲಿ
ಇಂದಿರೇಶನ ಪಾದ ನಖದ ಸಂದರುಶನಕೆ
ಛಂದವಾಗಿ ಮನಸು ಮಥನಮಾಡಿ
ಕಂದೆರಡು ಜ್ಞಾನಾಂಕುರದಿಂದ ನೋಡಿ ಗೋ
ವಿಂದನ್ನ ಪೂಜಿಪುದು ಹರುಷದಲ್ಲಿ
ಸಂದೇಹ ಸಲ್ಲ ಲಕ್ಷ್ಮೀ ವಿಜಯ ವಿಠ್ಟಲನ್ನ
ವಂದಿಸಿ ನೀಬಪ್ಪ ದ್ವಂದ್ವವನು ನೀಗು ೪
ತ್ರಿವಿಡಿತಾಳ
ತಂತುನಾಳಿಲಿಂದ ಮದವೇರಿ ತಿರುಗುವ
ದಂತಿಯ ಎಳತಂದು ಕಟ್ಟಿದಂತೆ
ನಿಂತ ಭಕುತಿ ಎಂಬ ತಂತು ನಾಳಿಲಿಂದ
ಕಂತು ಪಿತನೆಂದೆಂಬ ಮದಕರಿಯಾ
ಸಂತತ ಹೃದಯವೆಂಬಾಖ್ಯಾನ ಪುರದೊಳು
ಅಂತರಾತ್ಮಕನ ನಿಲಿಸಿ ನಿಲಿಸಿರೊ
ದಂತಿವರದ ಊಧ್ರ್ವ ವಿಜಯ ವಿಠ್ಠಲರೇಯ
ಸಂತರಿಸುವನು ಆದ್ಯಂತ ಕಾಲದಲ್ಲಿ ೫
ಅಟ್ಟತಾಳ
ಆವಾವ ದುಶ್ಶಾಸ್ತ್ರ ಆವಾವ ದುಸ್ಸಂಗ
ಆವಾವ ದುರ್ವಿದ್ಯ ಆವಾವ ಮೋಹಕ
ಆವಾವದಾದರು ಜೀವಾಧಮರಿಂದ
ದೇವ ದೇವರ ವಾಸುದೇವಗೆ ಪೇಳುವ
ಕುವಾದ ಬರಲದ ನೀ ಒದೆದು ಕಳ
ದಾವಾವ ಪರಿಯಲ್ಲಿ ಪಾವಮಾನಿಯ ಮತ
ಭಾವದಲ್ಲಿ ಮೆಚ್ಚಿ ಕೋವಿದನಾಗೋದು
ಶ್ರೀ ವರನಾಮಕ ವಿಜಯ ವಿಠ್ಠಲನ್ನ
ತಾವರೆ ಪದಗಳ ಪಾವನ ನೋಡೋ ೬
ಆದಿತಾಳ
ಅಮೇತ ಸಹಿತ ದೃಷ್ಟಾ ಪ್ರೀಯತಾ ಸರ್ವತೊ
ಪ್ರಮೇಯಗಳನರಿದು ಶುದ್ದ
ಸಮಚಿತ್ತದಲ್ಲಿ ಇದ್ದು ಮಮತೆಯನ್ನು ಬಿಟ್ಟು ನಿಜ
ಸಮಾಧಿಯಲ್ಲಿ ಕುಳಿತು ಆತುಮ ಮೂರ್ತಿರೂಪವರಿತು
ಶಮದಮೆ ಮನದಲ್ಲಿ ಸಮಾಧಾನವಾಗಿ ನೋಡಿ
ಅಮೇಯಾತ್ಮನಾಮ ನಮ್ಮ ವಿಜಯ ವಿಠ್ಠಲನಂಘ್ರಿ
ಕಮಲವನ್ನು ಕಮಲದೊಳು ನಮಿಸಿ ನವಭಕುತಿಯಲ್ಲಿ ೭
ಜತೆ
ದ್ವಾದಶ ಮೂಲ ಮಂತ್ರದಲ್ಲಿ ಸಾಧಿಸಿ ಮನ
ಸಾಧುವೆ ವಿಜಯ ವಿಠ್ಠಲ ಪಾದವ ಕಾಣೊ ೮

ಭಗವಂತನ ವೇಷ ಭೂಷಣಗಳನ್ನು

೮೨
ಧ್ರುವತಾಳ
ವಿಜಯವಿಠ್ಠಲನೆ ಗಜರಾಜ ವರದನೆ
ಅಜನ ಪಿತನೆ ಪಂಕಜ ನಯನನೆ
ಅಜಮಿಳಪಾಲನೆ ಭುಜಗಶಯನನೆ ಭೂ
ಭುಜರ ಹರಣನೆ ವೀರಜ ಭೂಷಣನೆ
ರಜನೀಶವದನನೆ ವಿಜಯನ್ನ ಪಾಲನೆ
ತ್ರಿಜಗ ವ್ಯಾಪ್ತನೆ ದಿವಿಜ ಸದನನೆ
ಭಜಿಸುವ ಸುಜನರ ವ್ರಜದೋಷ ದೂರನೆ
ವಿಜಯವಿಠ್ಠಲ ವಾರಿಜರಮಣದೇವ ೧
ಮಟ್ಟತಾಳ
ಕಟಿಕರ ಶಂಖ ಕಟಿಕರ ಅಭಯ
ಕಟಕ ಮುತ್ತಿನ ಹಾರ ವಟಪತ್ರ ಶಯನ
ತಟಿತಕೋಟಿಸನ್ನಿಭ ಜಠರದೊಳಜಾಂಡ
ಕಟಹ ಹರಹಿಕೊಂಡ ಧಿಟಿ ಅದ್ಭುತ ದೈವ
ಪಟುತರ ಮೂರ್ತಿ ವಿಜಯವಿಠ್ಠಲ ವೆಂ
ಕಟರಮಣ ಸಂಕಟಹರಣ ೨
ತ್ರಿವಿಡಿ ತಾಳ
ಗುಣಹೀನದವನೆಂದು ಗಣನೆ ಮಾಡದೆ ನಿನ್ನ
ನೆನಹ ಪಾಲಿಸದೆ ಸುಮ್ಮನೆ ಇಪ್ಪ ಬಗೆ ಏನೋ
ಗುಣ ಒಂದಾದರು ಕಾಣೆ ಎಣಿಸಾಲಜಾಮಿಳನಲ್ಲಿ
ಗುಣವಂತ ಲಾಲಿಸೊ ಗುಣದಾಯಕ
ಅನುದಿನ ನಾ ಮರೆದು ಮರಣ ಕಾಲದಲಿ ನಂ
ದನ ನಾರಗನೆಂದು ನೆನದನಂತೆ
ಮನಮುಟ್ಟಿ ನಿನ್ನ ಸ್ಮರಣೆ ಮಾಡಿದನೆಂದು
ಗುಣವ ನೋಡದಲೆ ಪಟ್ಟಣಕ್ಕೆ ಕರಿಸಿದಿ ಅವನ
ಎಣೆಯಾರೊ ನಿನಗೆ ನಮ್ಮ ವಿಜಯವಿಠ್ಠಲರೇಯ
ಮನದಿಚ್ಛೆ ಕಾಮಧೇನುವೆ ಎನಗೆ ನೀನೆ ೩
ಅಟ್ಟತಾಳ
ನಂದನನು ಬಲು ಮಂದಮತಿಯಾಗೆ
ತಂದೆಗೆ ಬಲು ಚಿಂತೆ ಬಂದು ಘಟಿಸುವುದು
ತಂದ ಸತಿಯಲ್ಲಿ ಕುಂದಮತಿಯಾಗೆ
ತಂದ ಪುರುಷನಿಗೆ ಎಂದಿಗೆ-ಬಲು ಚಿಂತೆ
ಇಂದೀವರಾಂಬಕ ವಿಜಯವಿಠ್ಠಲ ನಿನ್ನ
ಪೊಂದಿದವರ ಕೆಡಲಿದಾದದು ಚಿಂತೆ ೪
ಆದಿತಾಳ
ತಡಮಾಡದಂತೆ ಎನ್ನ ಬಿಡದಲೆ ಕರೆದೊಯ್ದು
ಒಡೆಯ ನಿನ್ನಯ ದಿವ್ಯ ಅಡಿಗಳ ತೋರಿ ಭಕುತಿ
ಪಡೆವಂತೆ ಮಾಡಿ ಕೀರ್ತಿ ಪಡೆಯೊ ಮೆರೆಯೊ ಜಗ
ದೊಡೆಯ ದೇವರ ದೇವ ಬಡವನು ನಾನು ಪರ
ಒಡವೆ ವಿಜಯವಿಠ್ಠಲ
ತಡೆಯದಂತೆ ಮಾಡು ಪಾಪದ ಘಡೆಗಳು ಬಂದು ಎನ್ನ೫
ಜತೆ
ಅಂತಃಕರುಣಿ ನೀನೆ ಅಂತರಾತ್ಮಕ ನೀನೆ
ಸಂತೋಷ ಪಾಲಿಸು ವಿಜಯವಿಠ್ಠಲ ಒಲಿದು೬


ಇಹ ಲೋಕದಲ್ಲಿ ಶಾಂತ ಜೀವನಕ್ಕೂ

೮೦
ಧ್ರುವತಾಳ
ವಿರಾಟ ಮೂರ್ತಿ ಧ್ಯಾನ ಮಾಡು ಇದೆ ಸ್ಥೂಲ
ತೋರಾಟವಲ್ಲ ಕಾಣೊ ಕೇವಲ ಯೋಗ |
ಮಾರಾಟ ಮಿಗಿಲಾದ ವಿಷಯಕ್ಕೆ ಶಿಲ್ಕಿ ಮಹ |
ಘೋರಾಟದಲ್ಲಿ ಬಿದ್ದು ಹಗಲಿರಳು |
ಆರಾಟದೊಳು ಹೊರಳಿ ಬಳಲಿದರಾಗೆಯಿದು |
ಹೇರಾಟದಂತೆ ಕಾಣೊ ಇಹದ ಸೌಖ್ಯ |
ನೂರಾಟಾ ಕತ್ತೆ ಕೂಡ ಓಡಾಡಿದರೆ ಮೂರ್ಖ |
ಪೋರಾಟವೆನ್ನರೆ ನೋಡಿದವರು |
ಮಾರಾಟ ನಿಲ್ಲಿಸೆಂದು ಹರಿಯ ಸ್ತುತಿಸಿ ನುತಿಸಿ |
ಧೀರಾಟವನ್ನೆ ಬಯಸು ಮರಳೆ ಮರಳೆ |
ಸ್ವಾರಾಟಗಾದರು ಹರಿ ಭಕುತಿರಹಿತ ಕರ್ಮ|
ತೀರಾಟವಾಗದು ಲಿಂಗದೆಡಿಗೆ |
ಹಾರಾಟದಿಂದಲಿ ದುಃಖನಾಶನ ಕಾಣೊ |
ಜೋರಾಟ ಬಿಡು ಬಿಡು ನಾನೆಂಬೊದು |
ಬೀರಾಟ ಸಿದ್ಧವೆನ್ನು ಜ್ಞಾನಿ ನಿರ್ಭಯನೆಂದು |
ಭೀರಾಟ ಭೂಮಿಯೊಳಗೆ ಪಾಡುತಲಿ |
ಕೋರಾಟ ಮುಕ್ತರೊಡನೆ ವಿಲಿಂಗನಾಗಿ ಯಿದೆ |
ಸಾರಾಟ ಸಂತತ ಸುಜನಾ ಮೆಚ್ಚು |
ಭೂರಾಟ ಮೊದಲಾದ ವೈಭವ ಪ್ರಾಪ್ತಿಯಿಂದ |
ಆರಾಟದೊಳು ಮುಳುಗಿ ತೇಲಬೇಕು |
ದೂರಾಟ ವಿಚಾರಿಸು ಅನಂತ ಕಾಲಕ್ಕೆ ಬ |
ಹೀರಾಟ ವೆಗ್ಗಳಿಸೆ ಬಲು ಜನ್ಮವು |
ಆರಾಟ ಬಲ್ಲವರೆಂಬಿಯಾ ಮುನ್ನಿನ ಪಿರಿಯರು |
ಸ್ತ್ರೀರಾಟ ಉದಾಸಿಸಿ ಗತಿಯೈದಿದರು |
ವೀರಾಟ ಗಮನ ನಮ್ಮ ವಿಜಯ ವಿಠ್ಠಲರೇಯ |
ನೀರಾಟ ಆಡಿದ ಸತಿಯರಿಗೆ ಮುಕುತಿಯಿತ್ತ ೧
ಮಟ್ಟತಾಳ
ಶ್ರೀಕಾಂತನ ರೂಪ ಪಾತಾಳ ಸತ್ಯ |
ಲೋಕವಿಡಿದುವುಂಟು ಒಂದೊಂದು ಅವಯವದಿ |
ಲೋಕೇಶನೊಳಗೆ ಚತುರ್ದಶ ಭುವನಗಳು |
ನಾಕ ಜನರು ಮಿಕ್ಕ ಜೀವರು ತುಂಬಿಹ್ಯರು |
ಏಕ್ಯೆಕ ಧ್ಯಾನ ಮಾಡು ಮುಖ್ಯವಾಗಿ |
ಲೋಕಂಗಳು ಅಲ್ಲಿ ಯಿದ್ದ ವ್ಯಾಪಾರಂಗಳು |
ವಾಕು ಗಾತುರ ಮನಸು ಪೂರ್ವಕದಿಂದ ವಿ |
ವೇಕ ಭಕುತಿಯಲ್ಲಿ ಭವದೂರನಾಗಿ |
ಏಕಾಂತದಿ ಕುಳಿತು ಹರಿಪಾದಾ ನೆರೆನಂಬಿ |
ವಾಕು ಸಾರಥಿ ನಮ್ಮ ವಿಜಯ ವಿಠಲರೇಯ |
ಶೋಕ ಪೋಗಾಡುವನು ಈ ಪರಿ ಧ್ಯಾನಿಸಲು ೨
ರೂಪಕ ತಾಳ
ಪಾತಾಳೋತ್ಪಾದಕ ತದಾಶ್ರಯ ತದ್ಭಿನ್ನ |
ನೀತಿಯಿಂದಲಿ ತಿಳಿ ಪಾದ ಮೂಲವೆನ್ನು |
ಖ್ಯಾತಿಯಾದ ವಾಸುಕಿ ಶಂಖ ಕಾಳಿಕೆ ಪ್ರಬಲ |
ಶ್ವೇತ ಧೃತರಾಷ್ಟ್ರ ಮಹಶಂಖ ಧನಂಜಯ |
ಧಾತ ಶಂಖ ಚೂಡ ಮಿಗಿಲಾದ ಸರ್ಪಗಳು |
ಜಾತಿ ಸಮೇತದಲಿ ತುಂಬಿಕೊಂಡಿಪ್ಪರು |
ಭೂತಿಗಳಿಂದೊಪ್ಪುತಲಿ ಮಹ ಮಣಿ ವಜ್ರ |
ಭಾತಿಯ ತೋರುತ್ತ ಬಲುಕೋಪವುಳ್ಳವರಾಗೆ |
ಜೋತಿರ್ಮಯ ಕಾಯ ವಿಜಯ ವಿಠ್ಠಲರೇಯ |
ಪಾತಾಳ ಲೋಕ ಧರಿಸಿಹ್ಯನು ಧ್ಯಾನ ಮಾಡಿ |
ಝಂಪಿತಾಳ
ಪೃಥ್ವಿ ಉತ್ಪಾದಕ ತದಾಶ್ರಯವಾಗಿದೆ |
ಚತುರಮೊಗ ಭವ ಮುಖ್ಯ ಸುರವಂದಿತ |
ಸತತ ಧ್ವಜ ವಜ್ರಾಂಕುಶ ಶಂಖ ಚಕ್ರ ಶೋ |
ಭಿತ ಗದಾ ಪದುಮ ಲಾಂಛನ ಸ್ವರ್ನದಿಯ ಜನಕ |
ಚತುರ್ಜಾತಿ ಉದ್ಭವ ತರುಣಾದಿತ್ಯ ವರ್ಣ |
ಅತಿಶಯ ಅಶ್ವತರ್ಯುಷ್ಠ್ರ ಗಜ ಜನಕ ರ |
ತುನ ಕಾಂತಿಗೆ ಮಿಗೆ ಸಖ ಭಕ್ತ ಜನಕ ಆ |
ಶ್ರಿತವಾಗಿ ಇಪ್ಪ ಪದ ರಸಾತಳೋತ್ಪಾದಕ |
ದಿತಿ ಸುತರು ಇಲ್ಲುಂಟು ನಾಮ ಭೇದದಲ್ಲಿ ಉ |
ತ್ಪತ್ತಿ ಮೊದಲಾದ ಮಹ ಸಾಹಸದಲ್ಲಿ |
ತತಿ ಸಹಿತವೊಂದು ಬಿಲದಲ್ಲಿ ಉಳಗೆ ಅಡಗಿಹರು ಅ |
ಚ್ಯುತನ ವಾಗ್ರೂಪ ಮಂತ್ರದ ಭೀತಿಗೆ |
ಕಥೆಯುಂಟು ಇಲ್ಲೊಂದು ಶ್ವಾನ ರೂಪವುಳ್ಳ |
ಶತ ಮೇಧದಲ್ಲಿ ಇದ್ದ ತನ್ನಾಮಕ ಹರಿ |
ತತುವೇಶರೊಡನೆ ಪೂಜೆಯಗೊಳುತಿಪ್ಪ |
ಪತಿತ ಪಾವನ ನಮ್ಮ ವಿಜಯ ವಿಠ್ಠಲರೇಯನ |
ಸತತ ಧ್ಯಾನವ ಮಾಡಿರೊ ಪಾದ ಪೃಷ್ಟವನು | ೪
ತ್ರಿವಿಡಿ ತಾಳ
ಪರಡು ಎರಡರಲ್ಲಿ ತಜ್ಜನ್ಯ ತದಾಶ್ರಯ |
ಮೆರೆವ ಮಹಾತಳ ಲೋಕವಿಪ್ಪದು ಅಲ್ಲಿ |
ಉರಗ ನಾಯಕರು ಬಹು ಶಿರಸಾವುಳ್ಳವರು ವಿ |
ಸ್ತರವಾಗಿ ತಮ್ಮ ಬಳಗೆ ಸಹಿತದಲ್ಲಿ |
ಮರಳೆ ಕುಲಹಕಿ ತಕ್ಷಕ ಕಾಲಿಯ ಸುಶೇಣ |
ವರ ಕ್ರೋಧವಶವಾದ ಸರ್ಪಗಳು ವಾಸ |
ಗರುಡನ ಭಯದಿಂದ ಸತಿಸುತರೊಡನೆ ಸಂ |
ಚರಿಸುತ್ತಲಿಪ್ಪರು ಸ್ವಲ್ಪ ಪ್ರಮತ್ತರಾಗಿ |
ಶರಧಿ ಶಯನ ನಮ್ಮ ವಿಜಯ ವಿಠಲ ಮೂರುತಿಯ |
ಸ್ಮರಿಸಿ ಧ್ಯಾನವ ಮಾಡೊ ಗುಲ್ಭದ ದ್ವಯದಲ್ಲಿ ೫
ಧ್ರುವತಾಳ
ಗುಣಿಸು ತಳಾ ತಳೋದ್ಭವ ಕ್ರಮೂಲ ವೃತ್ತ ಪಾ |
ವನ ವರಜಂಘೆ ದ್ವಯದ ತದಾಶ್ರಯವೆನ್ನು |
ದನುಜ ಕುಲದ ಬಡಿಗ ಮಯನೆಂಬುವನು ನಿ |
ಪುಣದಿಂದ ತಾನೆ ಮಾಡಿದ ತ್ರಿಪುರವ |
ಅನಲಾಕ್ಷನಿಂದ ಚಕ್ರದಿಂದಲಿ ಅಂದು ನಾ |
ಶನವಾಗಿ ಪೋದಮೇಲೆ ಹರಿ ಪ್ರಸಾದ |
ಘನವಾಗಿ ಸಂಪಾದಿಸಿ ಮಹದೇವನಿಂದ ರ |
ಕ್ಷಣಿಯಾಗಿ ಸುಖಸುತಿಪ್ಪ ಪ್ರಬಲನಾಗಿ |
ಗುಣವಂತ ಮಹ ದೈವ ವಿಜಯ ವಿಠ್ಠಲರೇಯನ |
ನೆನಿಸು ತಳಾತಳ ಜಂಘೆ ದ್ವಯದಲ್ಲಿ ೬
ರೂಪಕ ತಾಳ
ಚನ್ನಾಗಿ ನೋಳ್ಪದು ಸುತಳ ಲೋಕದ ಸ್ಥಿತಿ |
ಕನ್ನಡಿಯಂತಿಪ್ಪುದು ಜಾನುಮಂಡಲ ದ್ವಯದಿ |
ಬಿನ್ನಣದಿಂದಲಿ ಪುಟ್ಟಿತು ನೋಡಾ ಸಂ |
ಪನ್ನ ಸತ್ಕೀರ್ತಿ ಪ್ರತಾಪ ಸಜ್ಜನ ಮಣಿ |
ಪುಣ್ಯ ಶ್ಲೋಕ ಬಲಿ ಚಕ್ರವರ್ತಿ ಮಹ |
ಧನ್ಯನು ಕಣೊ ವಾಮನ ರೂಪ ಕೃಷ್ಣಗೆ |
ತನ್ನ ಮಸ್ತಕವಿತ್ತು ದಾನವಾಂತಕನ ಕಾ |
ರುಣ್ಯ ಸಂಪಾದಿಸಿ ಇಂದ್ರಪದವಿ ಪಡೆದ |
ಇನ್ನಿತು ಧ್ಯಾನಿಸಿರೊ ವಿಜಯ ವಿಠ್ಠಲನು ಪ್ರ |
ಸನ್ನ ನಾಗುವ ಬಿಡದೆ ಭಕುತಿಗೆ ಒಲಿದು ೭
ಝಂಪಿತಾಳ
ಇಂದ್ರಿರಾಶ್ರಯ ವೈಶ್ಯಕುಲಜನ್ಯ ತದಾಶ್ರಯಾ |
ನಂದ ಪ್ರಭಾಶೋಭನ ಪರಮೋರು ದ್ವಯವು |
ಅಂದು ಪುಟ್ಟಿದ ಲೋಕ ವಿತಳವೆನಿಸುವದು ಮಯ |
ನಿಂದ ಜನಿಸಿದ ಬಲನೆಂಬೊ ದನುಜಾ |
ನಿಂದ ಪುಟ್ಟಿದ ತೊಂಭತ್ತಾರು ಮಾಯಗಳು ಬಲು |
ಸಾಂದ್ರವಾಗಿವೆ ಇವೆ ಓದುವ ಜನರ |
ಸಂದೋಹರುಂಟು ಬಲ ಅಕಳಿಸಿದರೆ ಮುಖ |
ದಿಂದ ಪೂಂಶ್ಯಲಿ ನಾರಿಯರು ದ್ಭವ |
ಮಂದಹಾಸದಲ್ಲಿ ಪುರುಷರೊಡನೆ ಮನ |
ಬಂದಂತೆ ಕ್ರೀಡಿಪರು ಅನುರಾಗದಿ |
ಇಂದು ಮೌಳಿ ಅಲ್ಲಿ ಹಾಟಕಾಖ್ಯನದಿ |
ಪೊಂದಿ ಪರಿವಾರದಿಂದಲ್ಲಿ ವೊಪ್ಪುತ |
ಒಂದೊಂದು ವಾಲಗವ ಕೈಕೊಳುತ ಪರ್ವತ |
ನಂದಿನಿಯ ಕೂಡ ಕ್ರೀಡೆಯನಾಡುತ |
ಚಂದವಾಗಿದೆ ನೋಡಿ ಈ ಜನರು ಆಯುತ |
ಶಿಂಧೂರ ಬಲ ಸಮರು ಸಕಲ ಕಾಲ |
ವೃಂದಾರಕ ವಂದ್ಯ ಹಾಟಕ ನದಿಯಲ್ಲಿ |
ಬಂದು ಪಾವನ ಮಾಡಿ ಹಾಟಕ ಸ್ವರ್ನ |
ಒಂದೊಂದು ವಿಚಿತ್ರ ಭೂಷಣವು ಧರಿಸಿ ಗುಣ |
ದಿಂದ ಚರಿಸುವರು ಹರಿ ಸೇವೆಯಲ್ಲಿ |
ಒಂದೊಂದನಂತ ರೂಪ ವಿಜಯ ವಿಠ್ಠಲರೇಯಗೆ |
ವಂದಿಸಿ ವಿತಳ ಲೋಕದ ಮಹಿಮೆ ತಿಳಿಯೊ ೮
ತ್ರಿವಿಡಿ ತಾಳ
ಅತಳ ಲೋಕ ಸರ್ವ ಮೃಗ ಪಶು ಜಾತಿವು |
ತ್ಪತಿ ಕಾಣೊ ಶ್ರೋಣಿದೇಶದಿಂದ ಅಲ್ಲೀಗ |
ಅತಿ ಮೋದದಿಂದ ನಾನಾಪರಿ ವನವು |
ನ್ನತ ಕ್ರೀಡೆಯೊಡೆ ಆಡುವ ದೈತ್ಯ ದಾನವ ಕದ್ರುವೆ |
ಸುತರು ಮಿಗಿಲಾದವರು ತಮ ತಮ್ಮ ನಿಜನಾರಿ |
ಸುತ ಬಂಧುಗಳು ಬಳಗ ಕೂಡ ಇಹರಯ್ಯ ಲೇಸಾಗಿ |
ಪ್ರತಿಯಿಲ್ಲದೆ ಮಯನ ಮಾಯದಿಂದಲಿ ಮಹ |
ರತುನ ತೆತ್ತಿಸಿದ ಮನಿಗೋಪುರ ಉಪ್ಪರಿಗಿ ಬೀದಿ |
ಚತುರಂಗ ಮೊದಲಾದ ಶ್ರೀಂಗಾರ ಸ್ಥಳಗಳು |
ಮಿಥುನ ಭಾವವುಳ್ಳ ಮೃಗ ಪಕ್ಷಿ ಜಾತಿಗಳು |
ಶತಪತ್ರ ಮೊದಲಾದ ಪುಷ್ಪ ಫಲ ತರುಜಾತಿ |
ಕೃತ ಕೃತ್ಯರಾಗಿ ಎಲ್ಲರಿಗೆ ವಾಸವಕ್ಕು |
ಚ್ಯುತ ದೂರ ವಿಜಯ ವಿಠ್ಠಲ ಆತ್ಮನಹುದೆಂದು |
ಅತಳ ಲೋಕವನು ಧ್ಯಾನವ ಮಾಡು ಮನುಜಾ ೯
ರೂಪಕ ತಾಳ
ಅವನಿ ಉತ್ಪಾದಕ ತದಾಶ್ರಯವಾಗಿ ಮಿಂ |
ಚುವ ಜಾಂಬೂನದ ವಸನ ಸ್ವರ್ಣಮಂಜೀರ ಜಘನ |
ರವಿಯಂತೊಪ್ಪುವ ನಾನಾ ಪ್ರಕಾರದಲ್ಲಿ |
ನವ ಖಂಡವುಳ್ಳ ಜಂಬುದ್ವೀಪ ವುಳಿದಾದ |
ಭುವನ ರಾಶಿಯೊಳು ಅಲ್ಲಿಗಲ್ಲಿಗೆ ದ್ವೀಪ |
ವಿವರ ಪರ್ವತ ನದಿಗಳು ಕರ್ಮಸಾಧನ ಮಾ |
ಡುವ ಮೃಗ ಪಶು ಪಕ್ಷಿ ಮಾನವರುಂಟು |
ದಿವಿಜ ದಾನವರ ಅವತಾರಗಳಾಗೋವು |
ತವಕದಿಂದಲಿ ಹರಿಯ ಅವತಾರಗಳುಂಟು |
ದಿವಾ ರಾತ್ರಿ ಎಂಬೋದು ಈ ಲೋಕದಲಿಸಿದ್ಧ |
ಕವಿಗಳು ಪೇಳ್ವರು ಮಹ ಪುಣ್ಯಮಾಳ್ಪರು |
ಅವಿಕಾರಮೂರ್ತಿ ನಮ್ಮ ವಿಜಯ ವಿಠ್ಠಲರೇಯನ |
ಪವನನ ಮಧ್ಯದಲ್ಲಿ ಯಿನಿತು ಚಿಂತಿಸಬೇಕು ೧೦
ಮಟ್ಟತಾಳ
ಪೊಕ್ಕಳ ಬಗದಿಂದಂತರಕ್ಷದ ಲೋಕ |
ವ್ಯಕ್ತವಾಯಿತು ನೋಡಿ ಯಿದರ ವರ್ನ |
ಉತ್ತೆಯಿಂದಲಿ ಕೇಳಿ ಮೇಘಾದಿ ಮಂಡಲವು |
ಉಕ್ತಕ್ರಮದಿಂದ ಯೋಜನದ ಭೇದ |
ದಿಕ್ಕು ಪಾಲಕರುಂಟು ಅಲ್ಲಿಗಲ್ಲಿಗೆ ದೇವ |
ಲಕ್ಕುಮಿ ರಮಣನು ವಾಲಗವ ಕೊಂಬುವನು |
ಇಕ್ಕೆಲದಲ್ಲಿ ವುಳಿದ ದೇವತೆಗಳುಂಟು |
ರುಕ್ಕುಮಾ ಪರ್ವತಕ್ಕಾಧಾರನಾಗಿ |
ಭಕ್ತವತ್ಸಲ ಹರಿ ಶಿಂಶುಮಾರ |
ಶಕ್ತಿ ಅನಂತವುಳ್ಳ ಪರಮಾತ್ಮ ದೇಹದಲಿ |
ನಕ್ತಾದಿಗಳನುದ್ಧರಿಸಿ ಕಾವುತಲಿಪ್ಪ |
ಅಕ್ಕಟ ಬಾಲಾಗ್ರದಲಿ ಧ್ರುವರಾಯ ಬಾಲದಲಿ |
ಶಕ್ತಿಧರ ಪ್ರಜಾಪತಿ ಇಂದ್ರ ಧರ್ಮ |
ತಕ್ಕವರೆನ್ನು ಪುಚ್ಛಮೂಲಧಾತಾ ವಿಧಾತ |
ತಕ್ರ್ಯೆಸಿದಂತೆ ಕುಕ್ಷಿಯಲಿ ಸಪ್ತ ಋಷಿಗಳು |
ಶುಕ್ರನಾಭಿಯಲ್ಲಿ ಮನಸಿನಲಿ ಚಂದ್ರಮ |
ಅರ್ಕವಕ್ಷ ಸ್ಥಳದಲ್ಲಿ ಕಕುಭ ಬ್ರಹಸ್ಪತಿ |
ರಕ್ತಾಂಗ ಮುಖದಲ್ಲಿ ಶಶಿ ಉಪಸ್ಥದಲ್ಲಿ |
ಮಿಕ್ಕಾದವರುಂಟು ಬುಧರಾಹು ಕೇತು ತಾ |
ರಕ್ಕಿಗಳು ವೊಂದೊಂದು ಸ್ಥಾನ ವಿಶೇಷದಲಿ |
ಸಿಕ್ಕಿಕೊಂಡಿಪ್ಪರು ಯೆಲ್ಲಕಾಲದಿ ಬಿಡದೆ |
ಚಕ್ರದಂತೆ ತಿರುಗಿ ಹೊತ್ತುಗಳ ನಡಿಸುತ್ತ |
ಚಕ್ರಧರ ವೃಶ್ಚಿಕಾ ಕಾರನಾಗಿ |
ಮುಕ್ತರಿಗೆ ದರುಶನವ ಕೊಡುವ ವಿಜಯ ವಿಠಲ |
ಲೆಖ್ಖವಿಲ್ಲದೆ ವೈಮಾನಿಕರ ಪಾಲಿಪನು ೧೧
ತ್ರಿವಿಡಿ ತಾಳ
ಸುರಲೋಕೋತ್ಪಾದಕ ತದಾಶ್ರಯ ತದ್ಭಿನ್ನ |
ಪರಮ ಸುಂದರ ವಿಗ್ರಹ ನಿತ್ಯ ಇಂ |
ದಿರೆ ಭುಜಾಂತರ್ಗತ ಅನಘರನ್ನಮಯ ವನಮಾಲಾ |
ಪರಿ ಪರಿಹಾರ ವಿಸ್ತರ ಭೂಷಣ |
ಪುರುಹೂತನಿಲ್ಲಿ ವಾಮದೇವನ ಪೂಜಿಸುವ |

ಯಾವ ಮನುಷ್ಯ ಕೇವಲ ಹಣಸಂಪಾದನೆಗೇ

೧೦೯
ಧ್ರುವತಾಳ
ವಿಷವಾಕ್ಯ ಮತ್ತಾವುದೊ ಎಲೆ ಮಾನವನೆ ಕೇಳೊ
ವಸುಧಿಯೊಳಗೆ ಪುಟ್ಟಿ ಮೂಢನಾಗಿ
ಪಶುವಿನಂತೆ ತಿಂದು ಅಶನಾದಿಗಳಲ್ಲಿ ದಿ
ವಸ ಕಳೆದು ಶರೀರವು ವ್ಯರ್ಥ ಮಾಡಿ
ಹಸಿವಿ ನೀರಡಿಕೆಯಿಂದ ಲೋಲುಪನಾಗಿ ಚ
ರಿಸುವನು ಆವಾಗ ಉದರಗೋಸುಗ ಪೋಗಿ
ಪುಶಿಯ ಪೊಗಳಿ ಜನರ ಉಪಕರಿಸಿ ನಾನಾಪರಿ
ಬೆಸನೆ ಮಾಡಿ ಸಕಲಾವರಣದಿಂದ
ಕುಶಲವೆ ಚಿಂತಿಸಿ ಸ್ವತಂತ್ರ ಪಚ್ಚಿಕೊಂಡು
ನಸುಗುನ್ನಿಯಂತೆ ನಾನಾ ಸೋಗು ಮಾಡಿ
ಹಸನಾದ ಪೆಣ್ಣುಗಳ ಕಚಕುಚವನ್ನು ವ
ರ್ನಿಸಿ ನರರ ಸ್ತೋತ್ರವನು ವಿಸ್ತರಿಸಿ
ಅಸಮಲೋಕಕೆ ಪೋಪ ಮಾರ್ಗಸಾಧನ ಕೆ
ಡಿಸಿಕೊಂಡು ಬಗೆ ಬಗೆ ಒಯ್ಯಾರದಿ
ವಿಷಯಲಂಪಟನಾಗಿ ವಿಚಂಡ ಕರ್ಮವ
ನುಸರಿಸಿ ಇದವಗಾ ಗೋವು ವಿಷವಾಕ್ಯವೊ
ಉಸಿರು ವ್ಯರ್ಥಬಂಧಿಸಿ ಯೋಗಾಭ್ಯಾಸವರಿಯದೆ
ಅಸುವು ಪೋಗಾಡಿದಂತೆ ನಿರರ್ಥಕ
ಕಸಕುಪ್ಪೆ ಜೋಕೆ ಮಾಡಿ ಕಣಜಕ್ಕೆ ಹಾಕಿದಂತೆ
ರಸರಸಾಯದೊಳು ಮದ್ಯಕಲಸಿದಂತೆ
ಎಸೆದ ಬಾಣಕ್ಕೆ ತಾನೆ ಗುರಿಯಾಗಿ ನಿಂದ ಮಾ
ನಿಸನಂತೆಯಾಗುವುದು ಪೇಳಿದ ಕವನ
ಬಿಸರುಹನಾಭನ ಗುಣರೂಪಕ್ರಿಯ ಮಾ
ನಸದಲ್ಲಿ ತಿಳಿದು ಆತನ ಚರಿತೆಯ
ಮಿಸಣಿ ಅಂದದಿ ಕೊಂಡಾಡಿ ಹಿಗ್ಗಿತು
ತಿಸುವ ಪ್ರವಾಹದಂತೆ ಹಗಲಿರುಳು
ವಸವಿನ ಮೇಲೆ ಪ್ರಾಣ ಇದ್ದಂತೆ ಇದ್ದಮಾನಸಗೆ
ವಿಷವಾಕ್ಯ ಉಂಟೆ ಕೇಳೂ ಪ್ರಾಣಿ
ಪಶುವಿನ ಬುದ್ಧಿಯಲ್ಲಿ ಬಲಾತ್ಕಾರ ಮಾಡಿದರೆ
ಹಸಗೆಟ್ಟು ಪೋಗುವುದೊ ನಾನಾ ಬಣ್ಣಾ
ಅಸುರರ ಉಪಹತಿ ಪೆಚ್ಚುವುದೊ ಆವಾಗ
ಋಷಿ ಗೀರ್ವಾಣಾದಿ ಜನ ಒಲಿಯರದಕೊ
ದಶದಿಕ್ಕಿನೊಳಗೆ ಆವಾವ ಕವನ ಪೇಳಿದರು
ವಿಷವಾಗಿ ತೋರುವುದು ಒಲಿಯಾ ಕೃಷ್ಣಾ
ಶಶಿಹಾಸ ಪಾಲಾ ನಮ್ಮ ವಿಜಯ ವಿಠ್ಠಲನ್ನ ಬಂ
ಧಿಸಿದ ಜ್ಞಾನಿಗೆ ಎಲ್ಲ ವಿಷ ಸುಧೆಯಾಗುವುದೊ ೧
ಮಟ್ಟತಾಳ
ಹರಿಪ್ರೇರಣೆ ಎಂದು ಅಂತರಂಗದಿ ತಿಳಿದು
ಪರಮ ಮುದನಾಗಿ ಪೇಳಿದ ಕವಿತಾ
ನೆರೆ ಪೂರ್ಣವಾಗಿ ಕೋಡಿ ಹರಿದಂತೆ
ಭರಿತವಾಗಿ ಅವಗೆ ಅಲ್ಲಿಂದುತ್ತಮ
ನರರಿಗೆ ಪ್ರಾಪುತವಾಗುವುದು ಸಿದ್ಧ
ಧರೆಯೊಳಗಿದು ಸತ್ಯ, ಧರೆಯೊಳಗಿದು ಸತ್ಯ
ವರುಷ ಸುರಿದರೆ ಫಲ ಪಲ್ಲೈಸಿದ
ತೆರದಂತೆ ಸರ್ವಾಭೀಷ್ಟಯಾಗುವುದಯ್ಯಾ
ಗುರುದೇವತೆ ಕರುಣ ಪಡೆದ ಮಾನವನಿಗೆ ಅ
ಕ್ಷರಗಳೊಂದೊಂದು ಸುರಭಿ ತುಂಬಿದ ಕುಸುಮಾ
ಕರಗಳಾಗಿ ಹರಿಗೆ ಸಮರ್ಪಣೆಯಾಗುವುದೋ
ನರನೆನದಿರು ಅವನ ನಿಜವ ಕಂಡವನಾರು
ಸ್ಮರನಯ್ಯಾ ನಮ್ಮ ವಿಜಯ ವಿಠ್ಟಲನ್ನ
ಸ್ಮರಿಸುವ ಧೀರನಿಗೆ ಸರ್ವದಾ ಶುಭಯೋಗಾ ೨
ತ್ರಿವಿಡಿತಾಳ
ರಾಜರಾಜರೂಪ ರಮಣಿಯಂತರ ರೂಪ
ತೇಜೋಮಯದ ರೂಪ ತೃಪ್ತಿ ರೂಪ
ರಾಜವರ್ನದ ರೂಪ ರಾಗದೂರ ರೂಪ
ಮಾಜದಿಪ್ಪ ರೂಪ ಮಾಜದ ರೂಪ
ವಾಜಿ ಶ್ಯಂದನವೇರಿ ಬರುವ ಪೋಗುವ ರೂಪ
ಜೂಜನಾಡುವ ರೂಪ ಜೂಟ ರೂಪ
ಸೋಜಿಗದ ರೂಪ ಸೊಬಗು ತೋರುವ ರೂಪ
ಯೋಜನವತಿಶಯವ ಮೆರೆವ ರೂಪ
ಕುಜನರಲ್ಲಿ ದ್ವೇಷಮಾಳ್ಪ ರೂಪ
ರಾಜನ್ಯರೂಪ ರಾಜಿಸುವ ಅಣುಮಹರೂಪ
ಭೂಜದಿಂದಲಿ ಫಲಕೊಡುವ ರೂಪ
ನೈಜ ಭಾವದಿಂದ ಕವನ ಪೇಳುವ ರೂಪ
ಬೀಜವಾದ ರೂಪ ಚಿತ್ರರೂಪಾ
ಮೂಜಗದೊಳಗುಳ್ಳ ರೂಪಾತ್ಮಕನಾದ
ಆ ಜನಾರ್ದನನ್ನು ಎನ್ನೊಳಗೆ ನಿಂದು
ಪೂಜೆಗೊಂಬುವನು ಈ ಪರಿ ಎಂದು ತಿಳಿದು ನಿ
ವ್ರ್ಯಾಜ್ಯ ಭಕುತಿಯಿಂದ ಬಾಳಿದರೆ
ರಾಜಧಾನಿಯಂತೆ ಮನೆ ಇದ್ದು ವೈಷಿಕ
ಭೋಜನ ಮಾಡಿದರು ಲೇಪವಿಲ್ಲ
ಸುಜನ್ಮಧರಿಸಿ ವೈಷ್ಣವನಾಗಿ ನಿರುತ ಸ
ರೋಜನೇತ್ರವ ಪೊಗಳಿ ಸುಖಿಸುವಂತೆ
ಈ ಜನರಿಗೆ ವಿಷವಾಕ್ಯ ಎತ್ತಣದೊ ವಾ
ರಿಜಭವನು ಬಲ್ಲಾ ಬಲ್ಲಾನಯ್ಯಾ
ವೈಜಯಂತಿಗ್ರೀವ ವಿಜಯ ವಿಠ್ಠಲನಂಘ್ರಿ
ಆಜನ್ಮಾರಭ್ಯನೆನೆಸುವ ನಿರ್ದೋಷ೩
ಅಟ್ಟತಾಳ
ಅನಿಳನ್ನ ಮಧ್ಯದಲ್ಲಿ ಅಗ್ನಿಯು ಹುದಗಲು
ಇನಿತಾದರು ಬಾಧೆ ಇತ್ತಂಡಕೆ ಉಂಟೆ
ವನಜನಾಭನ ಪ್ರೇರಣೆ ಎಂದು ತಿಳಿದು ಆ
ತನಿಗೆ ಸಮರ್ಪಣೆ ಮಾಡಿದ ಕವನವು
ಜನರಿಗೆ ಲೇಶವಾದರು ವಿಮುಖವಾಗಿ
ಹನನ ಮಾಡುವುದೇನು ಎಲೊ ಮನವೆ ಕೇಳೊ
ಘನವಾಗಿ ಪದವ ಮಾಡುವ ವಿದ್ಯವೆಲ್ಲ ರ
ತುನ ಮಾಲೆಯಂತೆ ಕಂಧರದೊಳಗಿಪ್ಪುದು
ತೃಣವಾದರು ಕಷ್ಟವನು ಬರಲೀಸದು
ಅನುಮಾನ ಬಿಡಿಸೋದು ಆದ್ಯಂತ ಕಾಲದ
ಚಿನುಮಯ ಮೂರುತಿ ವಿಜಯ ವಿಠ್ಠಲಸ್ವಾಮಿ
ತನುವಿನೊಳಗೆ ಇದ್ದು ತವಕದಲಿನ್ನು
ಮಾಡಿಸುವ ಮಾಡಿಸುವ ೪
ಆದಿತಾಳ
ಗಿಡುಗನ್ನ ಮುಂದೆ ಉಳಿದ ಹಕ್ಕಿಯ ಪ್ರತಾಪವೆ
ಪೊಡವಿಯೊಳಗಿದ್ದ ಪ್ರತಿಕೂಲಗಳು ಎಲ್ಲ
ಕಡಲಶಯನ ಹರಿಯ ಗುಣಕರ್ಮನಾಮಂಗಳ
ನುಡಿ ನುಡಿ ನುಡಿದವಗೆ ಅಡಗಾಣಿಪವೇನೊ
ಬಡ ಕವನವಾದರು ಆವದಾದರು ಒಂದು

ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿರುವ ಸ್ಥಳ

೧೦೦. ಹರಿಹರ
ಧ್ರುವತಾಳ
ವಿಹಂಗಗಮನ ದೇವ ವಿಶ್ವಸರ್ವದ ಕಾವ |
ಅಹಿಶಯ್ಯಾ ಕಾಮನಯ್ಯಾ ಭಕು[ತ]ಪ್ರಿಯ |
ಬಹು ಕ್ರೂರ ರೂಪ ಭವದೂರ ಫಾಲಲೋಚನ ಚನ್ನ |
ಅ[ಹಿ]ಭೂಷಣಗೆ ಈಶ ಸತತ ದಯಾಸಾಗರ |
ಗಹನಮಹಿಮ ಸದ್ಗುಣಗಣ ಸಾಂದ್ರ ಸ |
ನ್ನಿ ಹಿತನಾಗಿಪ್ಪ ದೇವೋತ್ತುಂಗಾ ಸಂಗ |
ಮಹದೇವ ಜ್ಞಾನಕಾಯಾ ಶಿವಮೂರ್ತಿ ಶುದ್ಧಮೂರ್ತಿ |
ಬಹಿರಂತರ ನಿತ್ಯವ್ಯಾಪ್ತ ನಿತ್ಯ ತೃಪ್ತ |
ಮಹಿಯೊಳು ಈ ಕ್ರೇತ್ರ ಸುತ್ತು ಮೂರುಯೋಜನ |
ಸಹ ಜವೋ ಹರಿಹರವೆಂಬೋ ಪೆಸರೂ |
ಗುಹಶಯನನಾದ ನಮ್ಮ ವಿಜಯವಿಠಲ ರೇಯಾ |
ಮಹಿಧರನಂದನೆ ವಾಸವಿಲಾ ಸ ೧
ಮಟ್ಟತಾಳ
ಅಸುರ ಗುಹನಂದು ಪಸರಿಸಿ ತಪವನೊ |
ಅಸುವ ದಂದಿಸಿ ಮಹ ಪೆಸರಾಗೆ ನಿರುತದಲಿ |
ಬಿಸಿಜ ಭವನು ಮೆಚ್ಚಿ ನಸುನಗುತ ಖಳಗೆ |
ಅಸುರಾರಿ ಹರನಿಂದ ಅಸುವಳಿಯಾದಂತೆ |
ಕುಶಲ ವರವನೀಯೆ ವಸುಧಿಯೊಳಗೆ ಇತ್ತಾ |
ಮಸದು ಮತ್ಸರಿಸಿ ಅಂಜಿಸಿದಾ ಲೋಕೇಶ್ವರರ |
ಅಸಮ ವೀರನಾಗಿ ವಶವಲ್ಲದ ಸು[ಮಾ]ನ |
ಸಿರು ಮೊರೆ ಇಡಲು |
ಪಶುಪತಿ ಪ್ರೀಯಾ ಶ್ರೀ ವಿಜಯವಿಠಲರೇಯಾ |
ಬೆಸಸಿದ ಮಾತಿಗೆ ವಸುಧಿಯೊಳಗೆ ಮೆರೆದ ೨
ತ್ರಿವಿಡಿತಾಳ
ಮೂರು ಯೋಜನ ಉದ್ದ ಹರಿಹರ ರೂಪದಲಿ ತೋರಿ |
ಕ್ರೂರನ ಕೂಡ ಕಾಳಗವನು ಮಾಡಿ |
ಸಾರಿಸಾರಿಗೆ ನಾನಾ ಶಸ್ತ್ರದಲಿ ಕಾದಿ |
ಧಾರುಣಿಗೆ ಖಳನ ಬೀಳಗೆಡಹೀ |
ಕಾರುಣ್ಯದಲ್ಲಿ ಅವಗೆ ವರವಿತ್ತು ಕ್ಷೇತ್ರ ಗು |
ಹಾರಣ್ಯ ವೆನಿಸಿ ಕರಿಸಿತಿದೆಕೋ |
ವಾರಾಣಾಸಿ ಕ್ಷೇತ್ರಗಧಿಕ ವೆಂದೆನಿಸಿತು |
ನಾರಾಯಣಾ ಸರ್ವಗುಣ ಪೂರ್ಣನೂ |
ಚಾರುವಾದಾ ಗಿರಿ ಪೋಲ್ವಾತೈರಾವತ |
ಈಶಾ ಶೋಭಿಸುತಿರೆ ತೀರ್ಥ ಸಹಿತಾ |
ವಾರಾಣವಾದ ಭೃಕುಟಿ ಮುಚುಕುಂದ ಕ್ಷೇ |
ತುರದಲ್ಲಿ ಈಶಾ ಬಪ್ಪುತಿಹನೂ |
ಈ ರೀತಿಯಲಿ ಉಂಟು ಪೂರ್ವಾದಿ ದಿಕ್ಕಿಲಿ |
ಆ ರೈದು ಕೇಳ್ವುದು ಪುಣ್ಯಶ್ರವಣ |
ಭೋರುಗರೆವ ಸರಿತೆ ಹರಿದ್ರ ಕುಮದ್ವತಿ |
ವಾರಾಹಿಯೊಳಗೆ ಸಂಗಮವೆನ್ನಿರೋ |
ಕೋರಿದವರಿಗೆ ಆನಂದ ವರವ ನಿತ್ತು |
ತಾರಕಾ ಮಾಳ್ವರು ಭವಸಾಗರ |
ಕಾರುಣ್ಯನಿಧಿ ಹರಿಹರ ವಿಜಯವಿಠಲಾ |
ಆರಾಧಿಲು ಮುತ್ತಿದಾರಿಯಾ ತೋರುವಾ ೩
ಅಟ್ಟತಾಳ
ಪರಮೇಷ್ಠಿ ಬಂದು ಹರಿಹರರೂಪವ |
ಧರಿಸಿದ ದೇವನ ವಿಶ್ವಕರ್ಮನಿಂದ |
ನಿರರ್ಮಾಣಗೈಸಿಪ ಶೂಲ ಅಭಯ ಹಸ್ತ |
ಅರಿಶಂಖದಿಂದ ಚತುರ ಹಸ್ತಾದಲ್ಲಿ |
ಹರುಷವ ತಾಳಿ ಕೊಂಡಾಡಿ ಧನ್ಯನಾಗಿ |
ಸುರರಿಗರುಹಿದ ಇದರ ಮಹಿಮೆಯನ್ನು |
ಮಿರುಗುವ ತೀರ್ಥಗಳಿಲ್ಲುಂಟು ಬಹು ಪೆ |
ಸರನು ಪೇಳುವೆ ಕೇಳುವುದು ಸಜ್ಜನರು |
ಪರಮೇಷ್ಠಿ, ಭಾರ್ಗವ, ಛಾಯಾ, ಪಿತರ, ವೈಶ್ವಾ |
ನರ, ರುದ್ರಪಾಷಂಡ, ಶಿಲಿ, ಶಿಂಶುಮಾರ |
ಅರಿಪಿಶಾಚಿ, ವಿಶ್ವಾಮಿತ್ರ, ಗಾಲವ, ವಿ |
ಸ್ತರವಾದ ಸಂಗಮ, ಸರಸ್ವತಿ, ಭೈರವ |
ನರ ಋಣಮೋಚನ ಈ ಪರಿ ತೀರ್ಥವು |
ಪರಿಪರಿ ಉಂಟು ಪೆಸರು ಬಲ್ಲವರಾರು |
ನರನೊಮ್ಮೆ ಬಂದು ಸ್ನಾನ ಮಾಡೆ ಮತ್ತೆ ಕು |
ಳ್ಳಿ[ರ]ದೆ ವಟಾಶ್ವತ್ಥ ತರುವಿನ ನೆಳಲಲಿ |
ಕರವ ಮುಗಿದು ಮಾಡಿದಾ ನಿತ್ಯ ನೈಮಿತ್ಯ |
ಹರಿಹರಗರ್ಪಿತವೆಂದು ನುಡಿದರೆ |
ದುರಿತಗಳುವಕಿ ಪುಣ್ಯ ಶರಧಿಯೊಳು |
ತೆರಹಿಲ್ಲದೆ ಲೋಲಾಡುವರು |
ಧರಿಯೊಳಗಿದಕ್ಕೆಲ್ಲಿ ಎದುರುಗಾಣೆನು ಹರಿ |
ಹರರೂಪಾ ವಿಜಯವಿಠಲ ಪರಬೊಮ್ಮನು |
ಹರ ರೂಪಾ ತಾನೆ ಮತ್ತಾವನು ತಾಳಿದ? ೪
ಆದಿತಾಳ
ಭೇದ ಜ್ಞಾನದಿಂದ ಆವರಿಸಿ ತಿಳಿದು |
ಸಾಧು ಗಳೊಡನೆ ಪ್ರಸಾದ ಮನಸಿನಲ್ಲಿ |
ಕ್ರೋಧವ ತೊರೆದು ಸಂಪಾದಿಸಿ ಭಕ್ತಿಪೂರ್ಣ |
ಬೋಧರ ಮತವಿಡಿದು ವೇದ ಶಾಸ್ತ್ರ ಸಮ್ಮತ |
ವಾದದ್ದೆ ಪತಿಕರಿಸಿ ಮೋದಾದಿಂದಲಿ ನಲಿದು |
ಗೋದಾವರಿ ಗಂಗೆ ಆದಿತ್ಯಸುತೆ ಮೊದ |
ಲಾದ ಕ್ಷೇತ್ರಕೆ ನಿಲ್ಲಾದೆ ನೂರುಸಾರಿ |
ಪೋದರೇನಯ್ಯಾ ಇಲ್ಲಿ ತಾ ಧರ್ಮಧರಿಸಿ, ಬಿಂ |
ದೋದಕ ದಿಂದ ಮಹತ್ತಾದ ಫಲವೀ[ವು]ದು |
ಮಾಧವ ಶಿರಿಧ[ರ] ವಿಜಯವಿಠಲ ವಿ |
ನೋದ ಮೂರುತಿ ಕ್ರೀಡೆ ಆದಿತ್ಯರು ಬಲ್ಲಾರೆ ೫
ಜತೆ
ಎಂತು ಗ್ರಹಿಸಾಲಾರದಂತೆ ತೋರುವ ಹರಿ |
ದಂತಿ ಚರ್ಮಾಂಬರ ವಿಜಯವಿಠಲರೇಯಾ ೬

ಪ್ರಹ್ಲಾದನ ಭಕ್ತಿಗೆ ಮೆಚ್ಚಿ

ನರಸಿಂಹ ಸ್ತೋತ್ರ
೧೨೧
ಧ್ರುವತಾಳ
ವೀರಸಿಂಹನೆ ನಾರಸಿಂಹನೆ ದಯ ಪಾರಾ
ವಾರನೆ ಭಯ ನಿವಾರಣ ನಿರ್ಗುಣ
ಸಾರಿದವರ ಸಂಸಾರ ವೃಕ್ಷದ ಮೂಲ
ಬೇರರಸಿ ಕೀಳುವ ಬಿರಿದು ಭಯಂಕರ
ಘೋರಾವತಾರ ಕರಾಳವದನ ಅ
ಘೋರ ದುರಿತ ಸಂಹಾರ ಮಾಯಾಕಾರ
ಕ್ರೂರ ದೈತ್ಯರ ಶೋಕ ಕಾರಣ ಉದುಭವ
ಈರೇಳು ಭುವನ ಸಾಗರದೊಡಿಯಾ
ಆ ರೌದ್ರನಾಮಾ ವಿಜಯ ವಿಠ್ಠಲ ನರಸಿಂಗ
ವೀರರಸಾತುಂಗ ಕಾರುಣ್ಯಪಾಂಗ ೧
ಮಟ್ಟತಾಳ
ಮಗುವಿನ ರಕ್ಕಸನು ಹಗಲಿರುಳು ಬಿಡದೆ
ಹಗೆಯಿಂದಲಿ ಹೊಯ್ದು ನಗಪನ್ನಗ ವನಧಿ
ಗಗನ ಮಿಗಿಲಾದ ಅಗಣಿತ ಬಾಧೆಯಲಿ
ನೆಗೆದು ಒಗದು ಸಾವು ಬಗೆದು ಕೊಲ್ಲುತಿರಲು
ಜಗದವಲ್ಲಭನೆ ಸಗುಣಾನಾದಿಗನೆ
ನಿಗಮಾವಂದಿತನೆ ಪೊಗಳಿದ ಭಕತರ
ತಗಲಿ ತೊಲಗನೆಂದೂ ಮಿಗೆ ಕೂಗುತಲಿರಲು
ಯುಗ ಯುಗ ದೊಳು ದಯಾಳುಗಳ ದೇವರ ದೇವ
ಯುಗಾದಿಕೃತೆ ನಾಮಾ ವಿಜಯ ವಿಠ್ಠಲ ಹೋ, ಹೋ
ಯುಗಳಕರವ ಮುಗಿದು ಮಗುವು ಮೊರೆಯಿಡಲು ೨
ರೂಪಕ ತಾಳ
ಕೇಳಿದಾಕ್ಷಣದಲ್ಲಿ ಲಾಲಿಸಿ ಭಕ್ತನ್ನ
ಮೌಳಿವೇಗದಲಿ ಪಾಲಿಸುವೆನೆಂದು
ತಾಳಿ ಸಂತೋಷವ ತೂಳಿ ತುಂಬಿದಂತೆ
ಮೂಲೋಕದ ಪತಿಯಾಲಯದಿಂದ ಸು
ಶೀಲ ದುರ್ಲಭನಾಮ ವಿಜಯ ವಿಠ್ಠಲ ಪಂಚ
ಮೌಳಿ ಮಾನವ ಕಂಭ ಸೀಳಿ ಮೂಡಿದ ದೇವ ೩
ಝಂಪಿತಾಳ
ಲಟ ಲಟಾ ಲಟಲಟಾ ಲಟಕಿಸಿ ವನಜಾಂಡ
ಕಟಹ ಪಟ ಪಟ ಪಟುತ್ಕಟದಿ ಬಿಚ್ಚುತಿರಲು
ಪುಟ ಪುಟಾ ಪುಟನೆಗೆದು ಚೀರಿ ಹಾರುತ್ತ ಪ
ಲ್ಕಟ ಕಟಾ ಕಟ ಕಡಿದು ರೋಷದಿಂದ
ಮಿಟಿ ಮಿಟಿ ಮಿಟನೆ ರಕ್ತಾಕ್ಷಿಯಲ್ಲಿ ನೋಡಿ
ತಟಿತ್ಕೋಟಿ ಉರ್ಭಟಗೆ ಆರ್ಭಟವಾಗಿರಲು
ಕುಟಿಲ ರಹಿತ ವ್ಯಕ್ತ ವಿಜಯ ವಿಠ್ಠಲ ಶಕ್ತ
ಧಿಟ ನಿಟಿಲ ನೇತ್ರ ಸುರಕಟಕ ಪರಿಪಾಲಾ ೪
ತ್ರಿವಿಡಿತಾಳ
ಬೊಬ್ಬಿರಿಯೇ ವೀರಧ್ವನಿಯಿಂದ ತನಿಗಿಡಿ
ಹಬ್ಬಿ ಮುಂಜೋಣಿ ಉರಿ ಹೋರೆದ್ದು ಸುತ್ತೆ
ಉಬ್ಬಸ ರವಿಗಾಗೆ, ಅಬ್ಜಾಂಡ ನಡುಗುತಿರೆ
ಅಬ್ದಿಸಪುತ ಉಕ್ಕಿ ಹೊರಚಲ್ಲಿ ಬರುತಿರೆ
ಅಬ್ಜ ಭವಾದಿಗಳು ತಬ್ಬಿಬ್ಬುಗೊಂಡರು
ಅಬ್ಬರವೇನೆನುತ ನಭದ ಗೂಳೆಯು ತಗಿಯೆ
ಶಬ್ದತುಂಬಿತು ಅವ್ಯಾಕೃತಾಕಾಶ ಪರಿಯಂತ
ನಿಬ್ಬರ ತರುಗಿರಿ ಜರ್ಝರಿಸಲು
ಒಬ್ಬರಿಗೊಶವಲ್ಲದ ನಮ್ಮಾ ವಿಜಯ ವಿಠ್ಠಲ
ಇಬ್ಬಗೆಯಾಗಿ ಕಂಭದಿಂದ ಪೊರಮಟ್ಟ ೫
ಅಟ್ಟತಾಳ
ಘುಡಿ ಘುಡಿಸುತ ಕೋಟಿ ಸಿಡಿಲು ಗಿರಿಗೆ ಬಂದು
ಹೊಡೆದಂತೆ ಚೀರಿ ಬೊಬ್ಬಿಡುತಲಿ ಲಂಘಿಸಿ
ಹಿಡಿದು ರಕ್ಕಸನ್ನ ಕೆಡಹಿ ಮಂಡಿಯ ತುಡುಕಿ
ತೊಡಿಯ ಮೇಲೇರಿಸಿ ಹೇರೊಡಲ ಕೂರುಗುರಿಂದ
ಪಡುವಲಗಡಲ ತಡಿಯ ತರಣಿಯ ನೋಡಿ
ಕಡುಕೋಪದಲಿ ಸದೆಬಡಿದು ರಕ್ಕಸನ ಕೆಡಹಿ
ನಿಡಿಗರುಳನು ಕೊರಳಡಿಯಲ್ಲಿ ಧರಿಸಿದ
ಸಡಗರದ ದೈವ ಕಡುಗಲಿ ಭೂರ್ಭೂವ
ವಿಜಯ ವಿಠ್ಠಲ ಪಾ
ಲ್ಗಡಲೊಡಿಯಾ ಶರಣರೊಡೆಯ ಒಡನೊಡನೆ ೬
ಏಕತಾಳ
ಉರಿ ಮಸಗೆ ಚರ್ತುದಶ ಧರಣಿ ತಲ್ಲಣಿಸಲು
ಪರಮೇಷ್ಠಿ ಹರಸುರರು ಸಿರಿದೇವಿಗೆ ಮೊರೆ ಇಡಲು
ಕರುಣದಿಂದಲಿ ತನ್ನ ಶರಣನ್ನಸಹಿತ ನಿನ್ನ
ಚರಣಕ್ಕೆ ಎರಗಲು ಪರಮ ಶಾಂತನಾಗಿ
ಹರಹಿದೆ ದಯವನ್ನು ಸುರರು ಕುಸುಮವರುಷ
ಕರೆಯಲು ಭೇರಿ ವಾದ್ಯ ಮೆರೆವುತ್ತರರೆ ಎನುತ
ಪರಿಪರಿವಾಲಗ ವಿಸ್ತಾರದಿಂದ ಕೈಕೊಳ್ಳುತ್ತ
ಮೆರೆದು ಸುರರುಪದ್ರಹರಿಸಿ ಬಾಲಕನ ನಿಮ್ಮ
ಚರಿತೆ ದುಷ್ಟರಿಗೆ ಭೀಕರವೋ ಸಜ್ಜನ ಪಾಲಾ ೭
ಜತೆ
ಪ್ರಹ್ಲಾದವರ ಪ್ರಪನ್ನ ಕ್ಲೇಶಭಂಜನ್ನ
ಮಹಹವಿಷೆ ವಿಜಯ ವಿಠ್ಠಲ ನರಮೃಗವೇಷಾ೮

ಮಧುರೆಯ ಬಳಿ ಇರುವ ಅಳಗಿರೀಶನನ್ನು

೮೪. ಮಧುರೆ (ಅಳಗಿರಿ)
ಧ್ರುವತಾಳ
ವೃಷಭಾಚಲ ನಿವಾಸಾ ಋಷಿ ಜನ ಮನೋಲ್ಲಾಸಾ (ಹಂಸಾ) |
ಪಶುಪತಿ ಪಾಲಕ ರಕ್ಕಸ ಮಸ್ತಕ ಶೂಲಾ |
ನಿಳಕರವದನ ರಂಜಿಸುವ ಸಿರಿ ಸದನ |
ಅಸಮ ಪ್ರತಾಪ ಸಂತಾಪ [ಸು]ಜ್ಞಾನದಿನಪಾ |
ನಿಶಿಚರ ದಾಹಕ ನಾಗ ಶಯನಾ ವಾಹನ ಗಹನ |
ವೃಷಭಾಸುರ ಮರ್ದನಾ ಶೋಭಿಸುವ ಗಿರಿವರ್ಧನ |
ಬಿಸಿಜ ದಳನಯನ ಕುಸು ಮೇಶಾನಯ್ಯನೆ |
ವಸುಧಿಗಧಿಕ ಅಳಿಗಿರಿವಾಸ ತಿರ್ಮಲೇಶ |
ಪೆಸರಾದ ವಿಜಯವಿಠಲ ಸೌಂದರ್ಯನೆ ನ |
ಮಿಸುವೆ ನಿತ್ಯಾ ಪಾಲಿಸು ಎನ್ನಾ ಒಡಿಯಾ ೧
ಮಟ್ಟತಾಳ
ಮುನಿ ಮಂಡೂಕ ನೆಂಬುವನು ಬಲು ಹರುಷದಲಿ |
ವನಜಾಕ್ಷನ ಪಾದಾವನು ಕಾಂಬುವನೆಂದೂ |
ಅನುನಯದಲಿ ಸಾಧನ ಕೇವಲವಾಗಿ |
ಮನ ಮಾಡಿದನು [ಪ್ರಾಣವ] ಗತಿ ಯಿಂದಲಿ |
ಘನ ವೃಷಭಾದ್ರಿ ಸಾಧನ ಅಳಗಿರಿ ತಿಮ್ಮಾ |
ಎನ್ನ ಮನದೊಡಿಯಾ ಶ್ರೀ ವಿಜಯವಿಠಲರೇಯಾ |
ನೆನವರ ಮಾತನು ಸಲ್ಲಸುವನೂ ೨
ರೂಪಕತಾಳ
ಮುನಿ ಇಲ್ಲಿ ಬಹುಕಾಲಾ ಕುಳಿತು ತಪವನೆಸಗೆ |
ವನಜ ನಾಭನು ಬಂದನು ಮೆಚ್ಚಿ ಕರುಣದಲ್ಲಿ |
ಮಣಿಮಯವಾದ ಭೂಷಣವಾಸದಿಂದ ದರು |
ಶನವಿತ್ತ ತ್ರಿರೂಪವನು ತೋರಿಸುತ್ತಲಿ |
ದನುಜಾರಿ ಅಳಗಿರಿ ತಿಮ್ಮ ವಿಜಯವಿಠಲ |
ಮಿನುಗುವ ಮಧುರಿ ಪಟ್ಟಣ ನಿಲಯ ದೇವ ೩
ಝಂಪೆತಾಳ
ಇತ್ತಲೀಪರಿ ಇರಲಿತ್ತ ಬೊಮ್ಮನು ತನ್ನ |
ತೆತ್ತಿಗರ ಕೂಡಾಲಿತ್ತೆ ವಾಲಗ ಒಂದು |
ಸುತ್ತಿ ಬರುತಾ ಮುನಿಪೋತ್ತುಮಾ ನಾರದನೂ |
ವಿಸ್ತರಿಸಿದನು ಈ ಪೃಥ್ವಿ ಮಹಿಮೇ |
ಉತ್ತುಮಾಂಗಾ ತೂಗಿ ತೆತ್ತೀಸ ಕೋಟೆ ದೇ |
ವತಿಗಳ ಕೂಡ ನಲಿಯುತ್ತಾ ಬಂದೂ |
ಹತ್ತುಮಡಿಯಂದದಲಿ ಕ್ರತು ಮಾಡಿದನು ನ |
ಗುತ್ತಲಿ ವೃಷಭಪರ್ವತದೆಡಿಯಾ |
ತೊತ್ತಿನಾ ಮಗನೊಲಿದ ವಿಜಯವಿಠಲ ದೇ |
ವೋತ್ತಮ ಅಳಗಿರಿಯಾ ಅತ್ಯಂತಮಹಿಮಾ ೪
ತ್ರಿವಿಡಿತಾಳ
ಮೊದಲು ಶ್ರೀಹರಿ ದಾನಾವದಗೀ ಬೇಡಿದಂದೂ |
ತುದಿನಖಾ ಪೋಗಿ ಸೋಕಿದಾ ಸಮಯದಲ್ಲಿ |
ಮುದದಿಂದ ಬಹಿರಾವರುಣ[ದಿಂದು]ದಕಾ ಬರಲು ಅಜನೂ |
ಪದವತೊಳಿಯೆ ನೂಪುರದಾ ಒಳಗೆ ಜಲಾನಿಲ್ಲೇ |
ಸದರವಿಲ್ಲಾದಲೆ ಉಳಿದ ಜಲವಿತ್ತ ಪ |
ರಿದುದ ಶಿವ ನಿರ್ಮಲ್ಯಾನದಿ ಜಾನ್ಹವಿ ಎನಿಸೀತೀ |
ಉದುಕಾವೆನಿಸಾಲಿಲ್ಲಾ ಸದಮಲವೆನ್ನಿರೋ |
ಪದುಮಾ ಸಂಭವನಾ ಯಾಗದಾ ಉಪಚಾರಕ್ಕೆ |
ವದಗೀದಾಳಿಂದಿ ಶೈಲದ ತಪ್ಪಾಲಲ್ಲಿಗೇ |
ಪದುಮನಾಭನು ಕರುಣಾದಲಿ ಇಲ್ಲಿಗೆ ಬರಲೂ |
ಚದುರಾ ಅಳಿಗಿರಿ ರಾಯಾ ವಿಜಯವಿಠಲರೇಯಾ |
ಮಧುರಾಪುರದ ಸೌಂದರ್ಯ ಪುರುಷಪುಣ್ಯಾತ್ಮಾ ೫
ಅಟ್ಟತಾಳ
ಕೃತು ಮಾಲಾವಾದಾಳು ಪಿತಾಮಹಾ ನೋಡಲು |
ಅತಿಶಯದಲಿ ವೇಗವತಿ ಎನಿಸಿಕೊಂಡು |
ಕ್ಷಿತಿಯೊಳೊಬ್ಬಾ ಮಂದಮತಿ ಬಂದು ಸೇವಿಸೆ |
ಚತುರಾರ್ಥ ಸುಲಭ ಭಕುತಿಯಿಂದ ಮಾಡಲು |
ಪ್ರತಿಗಾಣೆಯಲ್ಲಿ ಭರತಖಂಡದೊಳದಿಕ್ಕೆ |
ಶ್ರುತಿ ರಾಮಾಯಣಾ ಭಾರತ ಪಂಚರಾತ್ರಾಗಮಾ |
ತತಿಯೊಳರಿದಾರು ಮತಿವಂತಾರಿಗರಿದೂ |
ಗತಿ ಪ್ರದಾಯಕ ಸುರತತಿಪಾಲಕ ದಿತಿ |
ಸುತ ವೃಷಭಾಸುರಹತ ಅಳಗಿರಿವಾಸ |
ಪತಿತಪಾವನ ಸಿರಿ ವಿಜಯವಿಠಲರೇಯಾ |
ಸತತ ಸೌಂದರ್ಯ ಮೂರುತಿ ಎನಿಸುವ ನಾಮಾ ೬
ಆದಿತಾಳ
ವಟಬೀಜಾದಂತೆ ಪುಣ್ಯಾಘಟಿಸೋದು ಇಲ್ಲಿ ಒಂದು |
ಘಟಿಕಾವಿದ್ದರೆ ಇಂದು ಸಟೆಯಲ್ಲಾ ಶುದ್ಧಾವೆನ್ನಿ |
ನಿಟಿಲನೇತ್ರನು ಸುರಕಟಕ ಹರುಷಾದಲ್ಲಿ |
ನಟನೆ ಮಾಡುತ್ತ ಸ್ತವ ಪಠಿಸುತ್ತ ಪಾಡುವರೂ |
ಪಟುತರವಾಗಿ ಜ್ಞಾನಕುಟಿಲರಹಿತದಿಂದ |
ಧಿಟ್ಟ ಅಳಗಿರಿ ಮಧುರಾ ಪುಟಾಭೇದನಿ ನಿವಾಸ |
ವಟಪತ್ರಶಾಯಿ ವಿಜಯವಿಠಲನ್ನಾ ನಾಮರಸಾ |
ತ್ರಟಿಯಾದರೂ ಬಿಡದೆ ಗುಟುಗುಟು ಸವಿದುಂಡು |
ಕಠಿಣ ಪದವೀಯ ಸಂಕಟ ಒದಯ ಸುಖಿಯಾಗೀ ೭
ಜತೆ
ಮೂರುಯೋಜನಾ ಕ್ಷೇತ್ರಯಾತ್ರಿ ಮುದದಿಂದ ಮಾಡುವುದು |
ಚೋರಾರ ಗುರು ವಿಜಯವಿಠಲಾ ತಿರ್ಮಲ ಒಲಿವಾ ೮

ತಿರುಪತಿಯ ಶ್ರೀನಿವಾಸನ್ನು ಕುರಿತ ದೀರ್ಘ ರಚನೆ ಇದು.

೬೩. ತಿರುಪತಿ
ರಾಗ:ಭೈರವಿ
ಧ್ರುವತಾಳ
ವೆಂಕಟೇಶನ ಯಾತ್ರಿ ಎಂಥಾದೊ ವರ್ಣಿಸಲೊ |
ಮಂಕು ಜನರಿಗೆ ದೊರಿಯಾದಿದು |
ಪಂಕಜೋದ್ಭವ ಮೃಗಾಂಕಧರಾದಿಗಳು |
ಕಿಂಕರರಾಗಿ ಕೊಂಡಾಡುವರು |
ಡೊಂಕ ಮಾನವಗದೆ ಭುಜದಲ್ಲಿ ತಪುತ ಮು |
ದ್ರಾಂಕಿತ ಧರಿಸಿದ ಮನುಜ ಬಂದು |
ಓಂಕಾರ ಪೂರ್ವಕದಿಂದ ಸ್ಮರಿಸೆ ಭವದ |
ಸಂಕೋಲೆ ಕಡಿವದು ಒಮ್ಮೆ ಸಾರೀ |
ಸಂಕಟ ಇಲ್ಲದ ಲೋಕದಲ್ಲಿ ಸರ್ವಾ |
ಲಂಕಾಧರರಾಗಿ ಸುಖಸುವರೋ |
ಶಂಕಿಸೆ ಇದರಲ್ಲಿ ಅಪವಾದ ನುಡಿದರೆ |
ಶಂಕು ತಲೆಯ ಮ್ಯಾಲೆ ಹೊಡೆವ ಯಮನು |
ಅಂಕುಶವೊ ಮಹಾ ದುರಿತವೆಂಬೊ ಕರಿಗೆ |
ಪಂಕಜನಾಭನ ದಾಸರಿಗೆ ನಿತ್ಯಾ |
ಶಂಕ[ರಾ]ಭರಣಾ ಶಾಯಿ ವಿಜಯವಿಠಲ ಬಿರಿ |
ದಂಕನ ಧ್ಯಾನ ನಿಲ್ಲಿಸಿದವಗೆ ೧
ಮಟ್ಟತಾಳ
ಕನಕಗಿರಿ ದರುಶನ ಕಂಡ ಕಂಡ ಮನುಜರಿಗಾಗದು ಕಾಣೊ |
ಅನಿಮಿಷ ಗಂಗಾ ಯಮುನೆ ಗೋದಾವರಿ |
ಮಣಿಕರ್ಣಿಕೆ ಕೃಷ್ಣ ತನುಜ ಸಂಭವೆ ವರಹ |
ತನುಜ ಕಾವೇರನ್ನ ತನಯ ಗೌತುಮ ರೇವಾ |
ಮಿನಗುವ ಸರಸ್ವತೀ ಮಣಿ ಮುಕ್ತಿ ನಂದಿನಿ ತಪತಿ ಕಪಿಲಾ |
ಗಣಪತೀ ಭೀಮರಥೀ ಕನಕವತೀ ಸಿಂಧು |
ಕನಿಕಿ ವೇದಾವತಿ ಘನಗೌಮತಿ ಕಾ |
ಗಿಣಿ ವಂಝರಿ ವರದ ಪುನಹ ಪುನಹ ಕುಂ |
ತಿನಯು ನಾಮಾವತಿ ನರಸಿಂಹ ತನುಜ ಶ್ರೋಣೀ ಭದ್ರ |
ಇನಿತು ನಾನಾ ತರಂಗಿಣಿ ಮೊದಲಾಗಿ ಮ |
ಜ್ಜನಗೈದು ಮತ್ತೆ ವನಧಿ ಬಂಧನ ಕಾಶಿ |
ಹನುಮನೊಡಿಯ ನಗರಿ ಪ್ರಣವ ವಿಮಾನ ಭೂಮಿ |
ಯನು ತಂದ ಕ್ಷೇತ್ರ ವನಜನಾಭನು ನೀ |
ರಿನಗಿರಿ ಜಗಕೆ ಭೂಷಣ ಪಾಂಡುರಂಗ |
ಕನಕ ಮುನಿವರದ ಚಿನುಮಯ ಜಗನ್ನಾಥ |
ಮನ ಮೆಚ್ಚಿಪ ಮದ್ಯಾರ್ಜುನಾ ದ್ವಾರಕಿ |
ಜನಾರ್ಧನ ಹರಿಹರ ನಾರಾಯಣ ನಿಧಿ |
ಮನ್ನಾರಿ ವನಜಾಕ್ಷನು ಹಸ್ತಿನಪುರ ಗಜಶೈಲ |
ತೃಣ ಶೈನಾನು ವಾಮನ ನವ ತಿರುಪತಿ |
ಗುಣನಿಧಿ ಸರಸಿಜ (ಮನೆವಂದುಕಾಗಿ) ಮುನಿವಂದ್ಯಕಾಗಿ |
ಕನಕವಾದ ಕ್ಷೇತ್ರ ಮುನಿಗಳು ಇದ್ದ ಭೂಮಿ |
ರಣಮಂಡಲ ಧರಣಿ ಧನುಪಣಿ ಕುಲದರಣ |
ಋಣವ ತಿದ್ದುವಕ್ಷೇತ್ರ (ವಿಭೂತಿ ಕ್ಷೇತ್ರ) |
ಮಣಿಕುಲ ವೃಂದಾವನ ಮಥುರಾಪ |
ಟ್ಟಣ ಗಂಡಿಕೆ ಮಾಯಾವತಿ ಪುಷ್ಕರಕ್ಷೇತ್ರ |
ಫಣಿಶಾಯಿ ಶ್ರೀರಂಗಪಟ್ಟಣ ಗೌತುಮ |
ಮುನಿವರದ ವನಿತೇರಿಗೆ ಮೋಹನವಾದ ಉಡುಪಿ |
ಉಣಬಡಿಸಿದ ನಾರಾಯಣಿ ಕ್ಷೇತ್ರ |
(ಅಣು ಬದರಿನಾರಾಯಣ ಕ್ಷೇತ್ರ) ಪಾ |
ವನ ಪ್ರಯಾಗ ಕೂರ್ಮನಹೋಬಲ ಧ |
ರಣಿ ಧರ ವಿಷ್ಣುವರ್ಧನಗೊಲಿದ ಚನ |
ಮಣಿ ಮಯ ಮಕುಟಾನು ವಂದಿನ ಧರಿಸುವ ಚಲ್ವ |
ಮನ್ಮಥಕೋಟಿ ಕಿರಣ ಪೊಳೆವ ಗೋಪಾ |
ಲನು ಸುಮಂಗಳ ಗಿರಿ ಷಣುಮೊಗ ಪಂಚಮೂರ್ತಿ |
ಗಣನೆ ಇಲ್ಲದ ಕ್ಷೇತ್ರವನು ನಾನಾವರ್ತಿ |
ಎಣಿಕೆ ಇಲ್ಲದಲೆ ಆವ ಮನುಜನು |
ಅನಂತಾನಂತ ಜನ್ಮವೊಂದು ಕ್ಷಣ ಬಿಡದಲೆ ಮಾಡಿ |
ಫಣಿಶೈಲದ ಯಾತ್ರೆ ಆನುಮಾತರವನಿಗೆ ದೊರಕುವದು |
ಭಣಗು ಮಾನವಗೆ (ಮನುಜಗೆ) ಸಾಧನಬಾರದು ಕಾಣೊ |
ಗುಣಗಣ ನಿರ್ದೋಷ ವಿಜಯವಿಠಲ |
ತನ್ನನೆ ಸ್ಮರಿಸಲು ಕಾವನು ಶ್ರೀನಿವಾಸ ೨
ರೂಪಕತಾಳ
ಗಿರಿಯ ತಪ್ಪಲಲ್ಲಿ ಮೆರೆವ ಕಪಿಲ ತೀರ್ಥ |
ಎರಡೊಂಬತ್ತು ತೀರ್ಥನಿರುತ ವಾಸವುಂಟು |
ನರರು ಮಿಂದು ಗೋತುರಗಳ ಉದ್ಧರಿಸಿ |
ಹಿರಿದಾಗಿ ಧಾರುಣಿ ಸುರರ ತೃಪ್ತಿಯ ಬಡಿಸಿ |
ಪರಮ ಹರುಷದಲ್ಲಿ ಗಿರಿಯ ಸೋಪಾನವ |
ಭರದಿಂದಲೇರುತ್ತ ಎರಡೈವತ್ತು ಮೆಟ್ಟು |
ಪರಿಮೀರದೆ ಕುಳಿತು ಹರಿಕಥಾಶ್ರವಣವ |
ತಿರುವೆಂಗಳೇಶನ ಚರಿತೆ ಕೊಂಡಾಡುತ್ತ |
ಬರುತ ನರಸಿಂಹನ ದರುಶನ ಕೈಕೊಂಡು |
ತೆರಳಿ ಗುಡಿಗೋಪುರ ಶಿರವನ್ನೆ ಕಂಡು ನಿಂ |
ದಿರದೆ ಪ್ರದಕ್ಷಿಣೆ ತಿರುಗಿ ಗುಡಿ ಪೌಳಿಯಲ್ಲಿ |
ವರವರಹ ದೇವಗೆ ಎರಗಿ ಪುಷ್ಕರಣಿಗೆ |
ಸರಸದಲ್ಲಿ ನಮಿಸಿ ಪರಿಶುದ್ಧನಾಗಿ ದೇವ |
ದ್ವಾರವನ್ನೆ ಪೊಕ್ಕು ಗರುಡಗಂಬದ ಬಳಿಯಲ್ಲಿ |
ಪರಿಠವಿಸಿ ಪೂರ್ವೋತ್ತರ ಪೂಜಿಯನ್ನು ತಿಳಿದು ಶ್ರೀ |
ಹರಿಯ ಚಿಂತಿಸಿ ಅಲ್ಲಿ ಮರುತಾಂತರ್ಗತನೆಂದು |
ಪರಮಾತ್ಮನಾದ ಸುಂದರ ಶ್ರೀನಿವಾಸನ್ನ |
ನಿರೀಕ್ಷಿಸಿ ತನ್ನೊಳಗಿರತಕ್ಕ ಮೂರ್ತಿಯ |
ಅರಿದು ಆತನ ಗುಣೋತ್ಕರಷಣಿಯನು ಮಾಡಿ |
ಸ್ಮರಿಸಲು ಬೇಗ ದುಸ್ತರವನ್ನು ದಾಟಿಸುವ |
ಪರಮ ಮಂಗಳರೂಪ ವಿಜಯವಿಠಲ ತಿಮ್ಮ |
ಕರೆದರೆ ಕರವಿಡಿದು ಕರದೊಯ್ವ ಮುಕುತಿಗೆ ೩
ಝಂಪೆತಾಳ
ಸ್ವಾಮಿ ಪುಷ್ಕರಿಣಿಯ ಸ್ನಾನವನ್ನು ಮಾಡಿಸು |
[ತ್ರಾ]ಮಾದಿ ತೀರ್ಥಗಳ ಇರುಹು ತಿಳಿದೂ |
ನಾಮದ ವಿಚಾರ ಧರಿಸಿ ಕೇಳು ಉತ್ತಮೋ |
ತ್ತಮರೊಡನೆ ಹಾರಿ ಹರಿದಾಡುತ್ತ |
ಕಾಮಕ್ರೋಧಂಗಳ ಬೇರರಿಸಿ ಕೀಳಿ |
ಹೇಮ ರಂಜಿತವಸನ ನಾನಾವರ್ಣ ಸಾಲಿ |
ಗ್ರಾಮ ಮೊದಲಾದುವ ದಾನವನಿತ್ತು |
ನೇಮ ನೈಮಿತ್ಯಂಗಳ ಚೆನ್ನಾಗಿ ಮಾಡಿ ಹರಿ |
ನಾಮಂಗಳಡಿಗಡಿಗೆ ಉಚ್ಚರಿಸುತ್ತ |
ಕೋಮಲಾಂಗ ತಿಮ್ಮ ವಿಜಯವಿಠಲ ನಿತ್ಯ |
ಸಾಮಗಾಯನಲೋಲ ಭಕ್ತ ಪರಿಪಾಲ (ಪ್ರಿಯಾ) ೪
ತ್ರಿವಿಡಿತಾಳ
ಅಪರಾಧಿ ನಾನೆಂದು ತನ್ನವಗುಣಂಗಳ |
ಸ್ವಪನದಲಿ ಬಿಡದೆ ಮಾಡಿದವು |
ಕಪಟದಲಿ ನಡದು ಪರರ ವಂಚಿಸಿ ದ್ರವ್ಯ |
ಅಪಹರಿಸಿ ನಾನ ಮಾಯಗಳ ತೋರಿ |
ಕೃಪಣನಾಗಿದ್ದು ಇರಳು ಹಗಲು ಕಾಮ |
ಕುಪಿತ ಪುಂಜದಲ್ಲಿ ಕಾಲವನ್ನೇ ಕಳದು |
ಜಪಗಳ ಜರಿದು ಜಗದೊಳು ನಿತ್ಯದಲ್ಲಿ |
ತಪಸಿಗಳ ನಿಂದಿಸಿದ ತರುವಾಯವು |
ಉಪಕಾರ ಅರಿಯದೆ ಉಚಿತಾರ್ಥ ತಿಳಿಯದೆ |
ಅಪಹಾಸದಲಿ ನಿರಂತರ ತಿರುಗೀ |
ಅಪರಮಿತವಾಗಿ(ದ) ದೋಷಕಾರಿ ನಾನು |
ಕೃಪಣವತ್ಸಲ ತಿರುವೆಂಗಳೇಶಾ |
ಕೃಪೆ ಮಾಡುವವೆಂದು ಈ ಪರಿನಮಿಸಲು |
ಗುಪಿತ ಮಹಿಮನೀತ ಪರಿಪಾಲಿಪ |
ಚಪಲ ನಯನ ತಿಮ್ಮ ವಿಜಯವಿಠಲ ಸದಾ |
ರಿಪುತನಾಗಿ ತನ್ನ ಭಕ್ತರ್ಗೆ (ಭಜಕರಿಗೆ) ಪೊಳೆವನು ೫
ಅಟ್ಟತಾಳ
ಶಿವನ ಬ್ರಹ್ಮಹತ್ಯ ಚಂದ್ರನ ಗುರುತಲ್ಪ |
ಕವಿಯ ಸುರಾಪಾನ ಬಲಿಯ ಸ್ವರ್ಣಸ್ತೇಯಾ |
ದಿವಿಜಪತಿಯ ಪರಯುವತಿ (ಸತಿಯ) ಗಮನದೋಷ |
ಅವರಿವರ್ಯಾಕಿನ್ನು ಬಲಬಧ್ರನ ಪಾ |
ಪವನು ಪರಿಹಾರ ಜವನು ಮೊದಲಾದ |
ದೇವತೆಗಳ ಪಾಪನಿವಹ ಬಿಟ್ಟು ಪೋಯಿತೀ ಗಿರಿಯಲ್ಲಿ |
ಭವಗಿರಿಗೆ ವಜ್ರಾ ವಿಜಯವಿಠಲ(ರೇಯಾ) ಬಾರಾ |
ದವಗೆ ದಯಮಾಡಾನೆಂದಿಗೂ (ಎಂದಿಗಾದರೂ ನೋಡೆ) ೬
ಆದಿತಾಳ
ಮುಕುತಿ ಬೇಕಾದವಗೆ ಮುಕುತಾರ್ಥ ಕೇಳುವದು |
ಭಕುತಿ ಪೂರ್ವಕದಿಂದ ಸಕಲ ಸಂಪದವಿಗ |
ಧಿಕವೆಂದು ತಿಳಿದು [ಐ]ಹಿಕವನ್ನು ಬಯಸದೆ |
ತ್ವಕು ಇಂದ್ರಿಯಾದಿ ಹರಿಪಾದಕೆ ಸಮರ್ಪಿಸುತಲಿ |
ಸುಖವಸುರಿದು ಬಾಷ್ಪೋದಕದಲ್ಲಿ ನೆನೆನೆನದು |
ಅಖಿಲದಾಸರ ಕೂಡ ಅಕಟಾ ನಲಿದಾಡಿ ಕುಣಿದು |
ಸಕಲ ಸುರರೊಡೆಯ ವಿಜಯವಿಠಲ ಸ್ವರ್ಣ |
ಮುಖರಿ ನಿವಾಸನ ಯಾತ್ರೆ ಗೈಯ್ಯುವದು ೭
ಜತೆ
ಮತ್ಸರವನು ಅಳಿದ ಶ್ರೀ ವೆಂಕಟೇಶನ ಯಾತ್ರೆ |
ಉತ್ಸಹದಲಿ ಮಾಡೆ ವಿಜಯವಿಠಲ ಒಲಿವಾ (ಕಾಯ್ವಾ) ೮

ಇದೊಂದು ಸ್ತೋತ್ರ ಪ್ರಧಾನ ಸುಳಾದಿಯಾಗಿದೆ.

೬೨. ತಿರುಪತಿ
ರಾಗ:ನಾಟಿ
ಧ್ರುವತಾಳ
ವೆಂಕಟೇಶನೆ ಚಕ್ರ ಶಂಖ ಕೌಮೋದಕಿ |
ಪಂಕಜಾಂಕಿತನೆ ಮೀನಾಂಕನ ಪಿತನೆ ಭ |
ಯಂಕರ ದೈತ್ಯರ ಬಿಂಕವತರಿದಕ |
ಳಂಕ ಮಹಿಮ ನಿಶ್ಯಂಕ ಪುಣ್ಯನಾಮ |
ಪಂಕಜಭವನಾಗಾ ಕಂಕಣನುತ ಪಾದಾ |
ಪಂಕಜ ಶಿರಿವತ್ಸಾಂಕಿತ ಫಣಿ ಪರಿ |
ಯಂಕನೇ ಲಂಕೇಶ ಪೋಷಾ ವೆಂಕಟದೀಶಾ |
ಸಂಕಟಹರ ಸುರಲಂಕೃತ ಮನೋಹರ |
ಟಂಕಿನೆ ನಾಮದೇವಾ ವಿಜಯವಿಠಲಯನ್ನ |
ಸೋಂಕಿ ಸಂಸಾರದ ಶೃಂಖಳ ಪರಿಹರಿಸೊ ೧
ಮಟ್ಟತಾಳ
ನಿರಾಧಾರ ನಿಸ್ಸಂಗ ನಿರಮಲಾಂಗ |
ನಿರಾಮಯ ನಿರ್ದೋಷ ನೀರದ ಭಾಸೆ |
ನಿರಂಜನ ನಿರ್ಗುಣ ನಿರಾವರಣ |
ನೀರಜರಮಣಾ ನಿರಾಶ್ರಯನೆ ನಿರ್ವಿಕಲ್ಪ |
ನಿರ್ವಿಕಾರಾ ವಿಜಯವಿಠಲ |
ತಿರುವೆಂಗಳೇಶ ತಿರುಪತಿವಾಸ ೨
ತ್ರಿವಿಡಿತಾಳ
ಮಂಗಳ ಮಹಿಮ ತಿರುವೆಂಗಳನಾಥ |
ಸುರಂಗಳ ಪಾಲಾ ಜನಂಗಳ ಒಡಿಯಾ |
ಹೆಂಗಳೆಯರ ವಸನಂಗಳಾ ಕದ್ದು ಸು |
ಖಂಗಳಾ ತೋರಿಸಿದ ದಿಕ್ಕಂಗಳೊಳಗೆ |
ತಿಂಗಳಾನಂದದಲಿ ಕಂಗಳಿಗೆ ನಿನ್ನ ಪಾ |
ದಂಗಳ ತೋರು ನಾಮಂಗಳ ಉಣಿಸುತ |
ಮಂಗಳಕಾಯ ಸಿರಿ ವಿಜಯವಿಠಲ ಹೃದ |
ಯಂಗಳ ಮಧ್ಯ ರೂಪಂಗಳ ನೆಸಗುತಾ ೩
ಅಟ್ಟತಾಳ
ನಾರಾಯಣ ಕೃಷ್ಣ ಅಚ್ಯುತಾನಂತ |
ಘೋರದುರಿತ ಸಂಹಾರ ನಾನಾಕವ |
ತಾರಲಕುಮಿ ರಮಣಾಪತ್ತು ನಾಶನಾ |
ಚಾರು ಚರಿತ್ರ ಮುನಿಸ್ತ್ರೋತ್ರ ಪಾತ್ರಾ |
ಕಾರುಣ್ಯ ನಿಧಿ ತಿಮ್ಮ ವಿಜಯವಿಠಲ ಭವ |
ತಾರಕ ವರಗಿರಿ ವಾಸ ತಿರುಪತೀಶಾ ೪
ಆದಿತಾಳ
ತಿರುಗುವಂತೆ ಮಾಡು ಮನಸು |
ಕರಗುವಂತೆ ಮಾಡು ಮನಸು |
ಮಿರುಗುವಂತೆ ಮಾಡು ಮನಸು |
ಸೊರಗುವಂತೆ ಮಾಡು ಮನಸು |
ಸುರಳಿತವಾಗಿ ಈ ಪರಿಯಲ್ಲಿ ಧರ್ಮಗತಿಗೆ |
ತಿರುವೆಂಗಳೇಶ ನಮ್ಮ ವಿಜಯವಿಠಲ ಮೇಲೆ |
ಗಿರಿಯವಾಸ ಸಿರಿ ವೆಂಕಟೇಶ ಮಹಾ ಮಹಿಮಾ ೫
ಜತೆ
ಧರೆಯೊಳು ಮೆರೆವ ಸಿರಿ ತಿರುವೆಂಗಳಪ್ಪ |
ತಿರುಮಲ ವಿಜಯವಿಠಲ ಜಗನ್ಮೋಹನ ೬

ಭಗವಂತನ ಆರಾಧಕರಿಗೆ

೧೧೩
ಧ್ರುವತಾಳ
ವೆಗ್ಗಳವಲ್ಲವಯ್ಯಾ ನಿನ್ನಂಘ್ರಿ ಧೇನಿಪ ಭ
ಕ್ತರ್ಗೆ ಇಹಸುಖ ಬಲುಪರಿ ನಿತ್ಯ
ಸ್ವರ್ಗಾಪವರ್ಗ ನಾನಾ ಲೋಕವಾವನು
ನೀರ್ಗುಡಿದಂತೆ ಅಲ್ಲವೇನೊ ಸುಲಭಾ
ಕೂರ್ಗಣಿಯಾದರು ಪೂವು ಶುಭವಂದಾದ
ಮೊಗ್ಗಿಯ ಮನಿಯಂತೆ ದಿನ ಪ್ರತಿದಿನ
ಮಗ್ಗುಲೊಳಗಿನ ಸುರತರುವೇ
ಬಗೆ ಬಲ್ಲರೇನೊ ನಿನ್ನವರನ್ಯರಿಗೆ
ವೆಗ್ಗಳವೇನೋ ದುರ್ಗಮವಾಗಿದ್ದ ದುರಿತಕೋಟಿಗೆ
ಲಗ್ಗಿಗೆ ಬಿಟ್ಟು ಕುಡಿನೋಟದಲ್ಲಿ ನೋಡಿ
ಮುಗ್ಗು ಮಾಡುವ ವಿಷಯಂಗಳಿಗೀಮನ
ಒಗ್ಗಟ್ಟಿಕೊಂಡು ಪೋಗದಂತೆ ಒಂದಕೈ
ಜಗ್ಗುವೆ ಜಗಜ್ಜನಕಾ ಜಲಧಿಶಯ್ಯಾ
ದುರ್ಗಮ ಅಗ್ಗಳಿಕೇನೆಂಬೆ ನಿನ್ನ ನಂಬಿದವರು
ದಿಗ್ಗಜದಂತೆ ಮದವೇರಿ ಸಂಚರಿಪರು
ಯೋಗ್ಯತಾವಾರದೊ ತೊಲಗಿತು ಉಬ್ಬಿದ ಜ್ಞಾನ
ಸುಗ್ಗಿಯೊಳಗೆ ನಿಂದಾಡೋದು ನೀನೆ ಬಲ್ಲೆ
ಅಗ್ಗಳಿಕೆ ಹಾಹಾ ಹಾಹಾ ಸೋಜಿಗಾ
ಜಿಜ್ಞಾಸೆವ್ಯಾತಕ್ಕೆ ನಿನ್ನ ಪಾದವ ಕಂಡ
ಸುಜ್ಞಾನಿಗೆ ಎಲ್ಲಿ ಆವಲ್ಲಿ ಇದ್ದರೂ
ತಗ್ಗಿ ಪೋಗದೆ ಪುಣ್ಯ ಪೂರತಿಯಾಗುವುದು
ನೆಗ್ಗು ಬೀಳದು ಬಹುಕಾಲಕ್ಕೆ
ಋಗ್ಗುವೇದಾದಿಗಳು ವಿಚಿತ್ರ ಬಗೆಯಿಂದ
ಒಗ್ಗೂಡಿಸಿ ಕೊಂಡಾಡಿ ನಿಲ್ಲುತಲಿವೇ
ಜಿಜ್ಞಾನಾಪ ರುಕ್ಮಿಣಿ ಮನೋಹರ ನೀನು ಮಾಡಿದ ಪ್ರ
ತಿಜ್ಞವ ಬಿಟ್ಟು ನಿಜಭಕ್ತರ ಗೆಲಿಸುವೆ
ಉಗ್ಗಡ ವಿವರಿಪೆ ದೇವಾ ನಿನ್ನ ಕೃಪೆಗೆ
ದಿಗ್ಗದೇಶದೊಳಗೆ ಅಧಿಕವು ಕಾಣೆ
ಕಗ್ಗತ್ತಲಿನೊಳು ಕಾರ್ಗಗನ ಮಿಂಚೆ
ಕುಗ್ಗುಗೊಡದಂತೆ ಹೃದ್ಗತ ನಿವಾಸಾ
ವಿಜ್ಞಾನಮಯ ಮೂರುತಿ ವಿಜಯ ವಿಠ್ಠಲಾ
ದುರ್ಗಾರಮಣ ದುರ್ಜನ ವಿದಾರಣಾ
ವೆಗ್ಗಳವಲ್ಲವಯ್ಯಾ ೧
ಮಟ್ಟತಾಳ
ಆರಿಗೆ ದುರ್ಭಿಕ್ಷಾ ಆರಿಗೆ ಸುಭಿಕ್ಷಾ
ಆರಿಗೆ ಅರಿಷ್ಟಾ ಆರಿಗೆ ಮಹಾಕಷ್ಟಾ
ಆರಿಗೆ ಸಂತಾಪಾ ಆರಿಗೆ ದುರ್ಲೇಪಾ
ಆರಿಗೆ ವ್ಯಾಕುಲಾ ಆರಿಗನುಕೂಲಾ
ಆರಿಗೆ ದಾರಿದ್ರಾ ಆರಿಗೆ ಗುಣಛಿದ್ರಾ
ಆರಿಗೆ ಆವಸತ್ಯಾ ಆರಿಗೆ ವೈಪರೀತ್ಯಾ
ಆರಿಗಾರಯ್ಯಾ ಈ ರೀತಿ ದುಶ್ಚಿತ್ತಾ
ನಾರಾಯಣ ನಿನ್ನ ಸೇರದ ಪಾಪಿಗೆ
ಪೋರತನವೆಲ್ಲ ಬಂದುಟ್ಟುವದು
ಸಾರಿಸಾರಿಗೆ ನಿನ್ನ ಸಾರಿದ ಮನುಜಂಗೆ
ಸರುವಪಾಪಗಳು ದೂರದಲ್ಲಿಪ್ಪವು
ಕಾರುಣ್ಯಸಿಂಧು ವಿಜಯ ವಿಠ್ಠಲರೇಯಾ
ಆರಾಧಿಸುವರಿಗೆ ಸೂರೆ ನಿನ್ನ ನಾಮಾ ೨
ತ್ರಿವಿಡಿ ತಾಳ
ಕಠಿಣವಾಗಿಪ್ಪದು ಯಮಪುರಾದಾ ಬಟ್ಟೆ
ಕಠಿಣವಾಗಿಪ್ಪದು ಯಮ ಯಾತನೆ
ಕಠಿಣವಾಗಿಪ್ಪದು ಯಮದೂತರ ನೋಟಾ
ಕಠಿಣವಾಗಿಪ್ಪದು ಯಮದರುಶನಾ
ಸಟಿಯಲ್ಲಾ ಈ ಮಾತು ಸಿದ್ಧಾಂತವೆ ಸರಿ
ಶಠನಿಗಲ್ಲದೆ ನಿನ್ನವರಿಗುಂಟೇ
ಘಟದೊಳಗೆ ಉದಕ ಇದ್ದ ತೆರದಿ ನಿನ್ನ
ಜಠರದೊಳಗೆ ಲೋಕಾದಿರಲದರಲ್ಲಿ
ತೃಟಿಯಾದರು ಬಿಡದೆ ನಾನಾ ಸುಖದಿಂದ
ನಟನೆ ಮಾಡುತಲಿಪ್ಪ ತೋಂಡನಿಗೆ
ತುಟಿ ಮಿಸಕಲು ಸರ್ವ ತಾತ್ವಿಕರು ಬಂದು
ಘಟಕರಾಗುವರು ನಿನ್ನ ಭೀತಿಯಲ್ಲಿ
ಕಠಿಣವಾವದು ಕಾಣೊ ಯಾವ ವ್ಯಾಪಾರದಲ್ಲಿ
ಕಟಿಕಟಾ ಧರ್ಮರಾಯಾ ಹೊಲ್ಲೆನೆಲ್ಲಾ
ಪಟುಮೂರುತಿ ನಮ್ಮ ವಿಜಯ ವಿಠ್ಠಲ ನಿ
ಚ್ಚಟಲ ಭಜಕರ ಕೂಡ ಸರಸವಾಡುವ ರಂಗಾ ೩
ಅಟ್ಟತಾಳ
ಎಂಥಾದೊ ನಿನ್ನ ರಕ್ಷಣೆಗೆ ಪಡಿಗಾಣೆ
ಅಂತುಗಾಣದು ಕಾಣೆ ನಿನ್ನಂಘ್ರಿಗಳಾಣೆ
ಸಂತರ ಸಂತರಿಸಿ ನಿರಂತರ
ಸಂತಾಪ ಕಳೆದು ಆದ್ಯಂತಕಾಲದಲ್ಲಿ
ಅಂತರಂಗದಲ್ಲಿ ಸಂತತವಾಸನೆ
ಸಂತೋಷವಾಗಿಪ ಚಿಂತೆಯೊಳಗಿಟ್ಟು
ಅಂತಕನ ಭೀತಿ ಪಿಂತಿ ಮಾಡಿಸುವ ಶ್ರೀ
ಕಾಂತ ವಿಜಯ ವಿಠ್ಠಲರೇಯ ನಿರ್ಮಳಕಾಯ
ಚಿಂತಾಮಣಿಯ ಸಚ್ಚಿದಾನಂದಾತ್ಮಕಾ ೪
ಆದಿತಾಳ
ಭಕ್ತರ ನೋಡಿ ನಗುವ ಪರಮ ನಿನ್ನ ವ್ಯಾಪಾರ
ವ್ಯಕ್ತಾವ್ಯಕ್ತ ವೆಂದು ತಿಳಿದರೆ ಅವನೆ ಅಪಾರಾ
ಉಕ್ತಿವಂತನಹುದೋ ಸಿದ್ಧಾಂತ ಅವನೆ ಪ್ರಸಿದ್ದಾ
ಶಕ್ತಸುಕಾಣೊ ಅವನಿಯೊಳಗೆ ತಾರೊ ಮನಸಿಗೆ
ಮುಕ್ತಿಯಪೇಕ್ಷಾ ಒಮ್ಮಿಗೆಮಾಡ ಹರಿಯನ್ನೆ ಬಿಡಾ
ಭೋಕ್ತಿಗೆ ಆವಾನು ಆವಪರಿಯ ನೋಡಿವನ ಪರಿಯಾ
ಭಕ್ತಿ ಜ್ಞಾನ ವಿರಕ್ತಿಯಲ್ಲಿ ಲೋಲಾಡುವುನಲ್ಲಿ
ತ್ಯಕ್ತ ದೇಹಸಂಬಂಧದ ಮೋಹ ಸುಜನರಲ್ಲಿ ಸ್ನೇಹಾ
ಮುಕ್ತಿದಾತಾ ವಿಜಯ ವಿಠ್ಠಲನಾ ದೇವ ಸಂಜೀವಾ
ಸಕ್ತನಾಗಿದ್ದವಗೆ ಬರುವ ಎದುರಿಗೆ ೫
ಜತೆ
ಪಕ್ಕೆಯೊಳಗೆ ಪಕ್ಕಿ ಮಕ್ಕಳ ಸಾಕಿದಂತೆ
ಅಕ್ಕರದಲಿ ವಿಜಯ ವಿಠ್ಠಲ ಭಕ್ತರ ಕಾವಾ ೬

ಚತುರ್ವೇದಗಳನ್ನು ಅಧ್ಯಯನ ಮಾಡಿ

೧೧೦
ಧ್ರುವತಾಳ
ವೇದ ಚತುರಶಾಸ್ತ್ರ ಪುರಾಣ ಸ್ರ‍ಮತಿ ರಹಸ್ಯ
ಓದಿಕೊಂಡು ವಾದಮಾಡಿ ಜೈಸಿದರೇನು
ಓದನಾದಿ ಮುಂತಾದ ದಾನ ಧರ್ಮಂಗಳು ಅ
ಗಾಧವಾಗಿ ನಿತ್ಯ ಮಾಡಿದರೇನೋ ಏನೊ
ಈ ಧಾರುಣಿಯೊಳಗಿದ್ದ ತೀರ್ಥ ತಿರುಗಿ
ಸಾಧು ಎನಿಸಿಕೊಂಡು ಖ್ಯಾತನಾದರೇನು
ಸಾಧಿಸಿ ನಾನಾ ವ್ರತ ದೇಹದಂಡಿಸಿ ವಿ
ರೋಧವಾಗದ ಕರ್ಮ ಮಾಡಲೇನು ಏನೇನೊ
ಆದಿ ಮೊದಲು ವಿಡಿದು ಒಂದೊಂದು ಬಿಡದೆ ಮಹಾ
ಸಾಧನ ಮಾಡಿ ಕೇವಲ ಸಿದ್ಧನಾದರೇನು
ಹಾದಿಯಾಗದು ಕಾಣೋ ವೈಕುಂಠಕ್ಕೆ
ಕ್ರೋಧವನ್ನು ತೊರಿಯದೆ ಆಚರಣೆ ಮಾಡಿದರು
ಮಾದಿಗ ತೀರ್ಥವನ್ನು ಮಾಡಿದಂತೆ
ಈ ದೇಹಿ ದೇಹಕ್ಕೆ ಅನಾದಿ ಕಾಲದಿಂದ
ಭೇದವನ್ನು ತಿಳಿದು ಮಮತೆ ತೊರೆದು
ಮೋದ ಚೇತನದಿಂದ ಚರಿಸುವನೆ ಧನ್ಯ
ಪ್ರಾಧಾನ್ಯ ಗ್ರಹಿಸಬೇಕು ಜಡಜೀವ ಸಂಯೋಗ
ಬೋಧ ಸಹನಶಕ್ತಿ ಅನುಭವವ
ಬಾಧೆ ಬಡಿಸಿದರು ತಾಳುವುದಂತಿರಲಿ
ಬೈದರೆ ಸುಮ್ಮನಿಪ್ಪ ಬಗೆಕೇಳೆಲೋ
ಈ ದೇಹದಿಂದ ಬಿದ್ದ ಛಾಯಕ್ಕೆ ಉಪದ್ರವ
ಆದರೆ ಗಾತ್ರಕ್ಕೆ ಕ್ಲೇಶವಹುದೆ
ಶೋಧಿಸಿ ಗುಣಿಸಿ ನೋಡು ಬಿಂಬ ಪ್ರತಿಬಿಂಬ ಭಾವ
ಭೇದಾಭೇದದಿಂದ ಒಪ್ಪುತಿದೆಕೋ
ಓದಿ ಮರುಳಾದರೇನು ಎಲೊಮನವೆ ಇನಿತು ಮಾತ್ರ
ವಾದರು ಸೈರಿಸದಿರಲು ನಿನಗೆ
ವೈದಿಕ ಮಾರ್ಗವೆಂತು ದೊರಕುವುದೋ
ಮಾಧವ ಮೆಚ್ಚನು ಮನೋರಥ ಸಿದ್ಧಿಸದು
ಕ್ರೋಧ ತೊರೆದು ಹರುಷವಾಗುವ ತನಕ
ಮೇದಿನಿಯೊಳಗೊರ್ವ ನಾನಾರತ್ನಗಳಿಂದ
ವೇದಿ ಕಟ್ಟಿಸಿ ಗಂಗಾಮೃತ್ತಿಕೆ ಹರಹಿ
ಮಾಧುರ್ಯ ನಿಗಮ ಮಂತ್ರ ಘೋಷಣೆ
ವಾದ್ಯಾ ಭವ್ಯನಾದದಿಂದಲಿ ದೈತ್ಯ ಖರ್ಜುರವ
ಪದಾರ್ಥ ಕಾಲದಿವಸ ಮಾನ್ಯ ಇಲ್ಲದಂತೆ
ಸಾಧಿಸಿ ಹಾಕಿದರು ಫಲಪಲ್ಲೈಸಿ
ಭೂದೇವತತಿಗಳು ನಿತ್ಯ ಕೊಂಡಾಡಿ ಆ
ರಾಧನೆ ಮಾಡುವರೆ ಬಿಡು ಕೋಪವ
ಬೀದಿ ಬೀದಿ ತಿರುಗಿ ತತ್ವ ಕಂಡಲ್ಲಿ ಅನು
ವಾದ ಮಾಡಿದರೇನು ಬಿರಿದೆ ನಿನಗೆ
ಪಾದ ಮಸ್ತಕ ಪೂರ್ಣ ವಿಜಯ ವಿಠ್ಠಲ
ಮೈದೋರುವನೂ ನಾನುಡಿದದು ಬಿಡಲಾಗಿ ೧
ಮಟ್ಟತಾಳ
ಎಲ್ಲ ರೋಗವನ್ನು ಕಳಕೊಂಡು ನಾಲಿಗೆ
ಮುಳ್ಳೂರಿ ಕೊಂಡ ತೆರನಂತಾಯಿತಲ್ಲೊ
ಹೊಲ್ಲೆ ಮನಸು ಕೇಳು ಹಿತವಾದ ಮಾತು
ಅಲ್ಲಿಗಲ್ಲಿಗೆ ಸರ್ವವು ತೊರೆದು ಈ ಕೋಪವನೆ
ಚೆಲ್ಲಿ ಬಿಡದಲಿಪ್ಪ ಭಾಗ್ಯವಾವದು ಕೇಳು
ಬಲ್ಲಿದತನವಲ್ಲ ಇದು ಬಂದಾಶ್ರಯಿಸೆ
ಎಲ್ಲ ತಿರುಗಿ ಬಂದು ಸೇರಿಕೊಳ್ಳುತಲಿಹವು
ಬಲ್ಲವರನ ಬಲ್ಲ ವಿಜಯ ವಿಠ್ಠಲರೇಯ
ಸೊಲ್ಲುಲಾಲಿಸನೊ ಕೋಪವುಳ್ಳವೆ ತುತಿಸೆ ೨
ತ್ರಿವಿಡಿ ತಾಳ
ಪಿತೃಕಾನನದೊಳಗೆ ಪ್ರಖ್ಯಾತವಾಗಿದ್ದ
ಉತ್ತಮ ಭೂರುಹ ಜನಿಸಲಾಗಲದಕೆ
ಪತ್ರ ಕುಸುಮ ಫಲ ನೋಡಲು ಒಂದೊಂದು
ಚಿತ್ರ ವಿಚಿತ್ರ ರಮ್ಯವಾಗಿದೆ
ತತ್ವ ಜ್ಞಾನಿಬಂದು ಈಕ್ಷಿಸಿದ ಮೇಲೆ
ಸ್ತೋತ್ರವ ಮಾಡಿ ಫಲ ತೆಗೆದುಕೊಂಡು
ತುತ್ತುಮಾಡಿ ಸವಿದುಂಡು ಜಗದೊಳು
ಕೀರ್ತನೆ ಮಾಡುವನೆ ಎಲೇ ಮನಸೇ
ಹತ್ತಿಲಿ ಸೇರದಲೆ ಅಸೂಯನಾಗಿ, ದೂ
ರತ್ತ ಪೋಗುವನೊ ಪ್ರೀತಿಯ ಬಿಡನೊ
ಇತ್ತ ಲಾಲಿಸು ಕೋಪಹಳಿ ನೂಕು ಸುಡು ನು
ಗ್ಗೊತ್ತು ಕಾಲಲಿಮೆಟ್ಟು ಕುಟ್ಟು ಕಳಿಯೋ
ಕತ್ತರಿಸು ಕಡಿಗೆ ಹಾಕು ಹಿಟ್ಟುಗಳಿಯೋ
ಮುತ್ತೊ ಕೆಡಹೊ ಕಟ್ಟೋ ಕೊರಿಯೊ ಕೊಲ್ಲೋ ಅರಿಯೋ
ಕಿತ್ತು ಮುರಿಯೊ ಹೊಡಿಯೊ ಹರದಿಕ್ಕು ಅದರ ಅ
ನರ್ಥ ಮಾಡೆಲೊ ಗುದ್ದು ಎಳೆಯೊ ಶಳಿಯೊ
ಹೊತ್ತುಬೀಸು ಹೊಯ್ಯೊ ಚಿವಿಟು ತಿವಿಯೊ
ಕಿತ್ತು ಬೇರು ಅಟ್ಟು ಹಾರಿಸು ಮುಣಗಿಸು
ಅರ್ತಿಯ ಕೊಡು ಶೋಷಿಸು ಹೂಳು ಬಳಲಿಸು
ಹತ್ತಿಲಿ ಇರದಂತೆ ಎಬ್ಬಟ್ಟಿ ಬಲು ಆ
ವರ್ತಿ ಘೋರಿಸು ನಾನಾ ಉಪದ್ರವ
ಇತ್ತದಲ್ಲದೆ ಇದು ತೊಲಗುವುದಲ್ಲವೋ
ಎತ್ತ ಪೋದರೆ ಏನು ನಿಶ್ಚಯ ಕಾಣೊ
ಚಿತ್ತವೆ ಇದು ಮಾತ್ರ ಜೈಸಿದರರರೆ ನಿನಗೆ
ಉತ್ತಮ ಲೋಕ ಇದ್ದಲ್ಲೆ ಉಂಟು
ಸುತ್ತದಿರು ಕಂಡಲ್ಲಿ ಕ್ರೋಧವಶವಾಗಲು
ಕತ್ತೆ ಮರಿಗೆ ಮುದ್ದು ಕೊಟ್ಟಂತೆವೋ
ಚಿತ್ತಜಪಿತ ನಮ್ಮ ವಿಜಯ ವಿಠ್ಠಲರೇಯನ
ಭೃತ್ಯಜನ ಮೆಚ್ಚದು ಪುಣ್ಯ ಹಚ್ಚದು ಸಿದ್ಧ ೩
ಅಟ್ಟತಾಳ
ಅಲಂಕಾರ ವಸನ ಭೂಷಣ ಗಂಧ ಪರಿಮಳ
ಬಲು ಪುಷ್ಪ ಧರಿಸಿದ್ದ ಮುತ್ತೈದಿ ಪತಿವ್ರತೆ
ಮಲ ಮಲಿನವಾಗಿದ್ದರ ಅವಳನ್ನ
ಒಳಿತೆಂದು ಸ್ಪರಶ ಮಾಡಲಿ ಬಹುದೆ ಕೇಳು
ಕಾಲ ಕಾಲ ನಿರ್ನಯ ಇದರಂತೆ ತಿಳಿನೀನು
ಒಳಗೆ ಕೋಜವತಾಳಿ ಇದ್ದರಾದಡೆ ನಿ
ರ್ಮಳ ಇಲ್ಲ ಎಂದಿಗೆ ಅವಳಂತೆ ಕಾಣೆಲವೊ
ಸುಲಭ ಜ್ಞಾನಕೆ ಪ್ರತಿಕೂಲ ಅಜ್ಞಾನಕ್ಕೆ
ನಿಲವರ ಅನುಕೂಲ ಪಾಪಮಾಡಿಸುವುದು
ಕುಲಕೋಟಿಗೆ ಮುಂದೆ ಹಿತವಾಗದು ಮಂದ
ಘಳಿಗೆ ಒಂದೊಂದಕ್ಕೆ ಬಹುಜನ್ಮ ಮಾಡಿದ
ಸಲೆ ಪುಣ್ಯ ಕೆಡಿಸೋದು ಎಚ್ಚರ ಕೆಡದಿರೂ
ಛಲಹಿಡಿ ಕೋಪದ ಮೇಲೆ ನಿರಂತರ
ತುಳಿದು ತಲೆ ಎತ್ತದಂತೆ ಮಾಡಲಿಬೇಕು
ಇಳಿಯ ವಲ್ಲಭ ಹರಿಯ ವಿಜಯ ವಿಠ್ಠಲನ್ನ
ಪೊಳೆವು ಬೇಕಾದರೆ ಇದನೆ ನಿರಾಕರಿಸು ೪
ಆದಿತಾಳ

ಮಾನವನು ಜೀವನದಲ್ಲಿ ವೈಕುಂಠಪತಿಯ

೧೧೧
ಧ್ರುವತಾಳ
ವೈಕುಂಠವಾಗುವುದಕೆ ಲೌಕಿಕದಿಂದ ಪುಸಿ
ಸಾಕು ಮಾಡು ಧಾವತಿ ಕಾಕುಲಾತಿ ಯಾತಕ್ಕೆ
ನಾಕ ಧಾರುಣೆ ಸುಖಯಾಕೆ ನಿನಗೆ ವೈದಿಕವೆ ಲಾಭವೆನ್ನು
ಏಕಾಗ್ರ ಚಿತ್ತದಲ್ಲಿ ಲೋಕಾಂತ ಪಾರ್ತಿ ನೀ ನೀ
ಮಾಕಾಂತ ದೈವವೆನ್ನು ಲೋಕ ಸಂಸಾರನಾಗಿ
ಏಕಾಗ್ರ ಚಿತ್ತದಲ್ಲಿ ಲೋಕ ಸಂಸಾರನಾಗಿ
ರಾಕರಿಸಿ ಹೃದಯಾಕಾಶದಲ್ಲಿ ದಿ
ವಾಕರ ವರ್ನನ ಆಕಾರ ಕಾಂಬುವುದಕ್ಕೆ
ನೀ ಕಾಣು ಉಪಾಯವ ಲೋಕದೊಳಗೆ ಮಾ
ಣೀಕವೆಂಬೊದೆ ಸ್ವಲ್ಪು ತೂಕವಾದರ ಕ
ನೇಕ ಬೆಲೆ ಇಪ್ಪುದು ಕಾತಪ್ಪಿಯಾಗಿ ರ
ತ್ನಾಕರನಂತೆ ಕರ್ಮನೇಕ ಬಗೆಯಿಂದ
ತಾ ಕುಳಿತು ಮಾಡಿದರು ವೈಕುಂಠವಾಗದು
ವಾಕು ನಿಜವೆನ್ನಿ ಬೇಕಾದ ಪದವಿ ವಿ
ವೇಕದಿಂದಲ್ಲದೆ ಈ ಕರ್ಮ ಬಹು ಚರಿಸೆ
ಸಾಕಾರವಾಗದು ಲೋಕನಾಯಕ ನಮ್ಮ ವಿಜಯ
ವಿಠ್ಠಲ ಹರಿಯು
ಸಾಕುವನೊಮ್ಮೆ ಪರಾಕು ಜ್ಞಾನದಲ್ಲಿ ಪೇಳೆ ೧
ಮಟ್ಟತಾಳ
ಎಲೊ ಮನವೆ ನಿತ್ಯ ಮಲವ ತೊಳಿಯದಲೆ
ಹಲವು ಕರ್ಮಗಳ ಕಾಲಕಾಲಕ್ಕೆ ನೀನು
ಒಲಿದು ಮಾಡಿದರನ್ನ ಸುಲಭ ಸದ್ಗತಿಗೆ
ನೆಲೆಯಾಗುವುದೇನೊ ತಿಳಿದೀ ಪರಿಯಲ್ಲಿ
ಇಳಿಯೊಳಗೆ ಕರ್ಮಾವಳಿಗಳ ಆಚರಿಸೆ
ತೊಳಲಬೇಕಲ್ಲದೆ ಮಲಿನ ಪೋಗದು ಮನವೆ
ಎಳೆ ಭಕುತಿಯಿಂದ ವಿಜಯ ವಿಠಲ ಹರಿಯ
ಜಲಜ ಪಾದವ ನಂಬಲು ಬಲು ಕರ್ಮವು ಯಾಕೆ ೨
ತ್ರಿವಿಡಿತಾಳ
ಮಾರ್ಗ ಪೇಳುವೆ ಕೇಳು ಸ್ವರ್ಗಧಾರಣಿಯಿಂದ
ನಿರ್ಗತನಾಗಿ ಅಪವರ್ಗ ಸೇರುವುದಕ್ಕೆ
ಭಾರ್ಗವಿರಮಣನ್ನ ಮಾರ್ಗವರಿದು ನಾಕು
ಮಾರ್ಗಣದಲ್ಲಿ ಪಾಪದುರ್ಗಡೆ ಸವರುತ್ತ
ದುರ್ಗುಣ ಉಳ್ಳ ಸಂಸರ್ಗಿಯರಲ್ಲಿರದೇ
ದೀರ್ಘವಾದ ಕರ್ಮ ದುರ್ಘಟ ಬಿಡು ಕರ್ಮ
ಭಾರ್ಗವಿಗಾದರು ನಿರ್ಗಮನ ಎಣಿಸಲು
ನಿರ್ಗುಣೆ ಅವಿಕಾರ ವಿಜಯ ವಿಠಲ ಭೃತ್ಯ
ವರ್ಗದೊಳಿಟ್ಟು ಬಂದ ದುರ್ಗತಿ ಪರಿಹರಿಪಾ ೩
ಅಟ್ಟತಾಳ
ಕೃತು ಯಾತ್ರೆತೀರಥ ಮಿತಿ ಓದನ ದಾನ
ವ್ರತ ಜಪತಪ ನಾನಾ ರತುನ ತುಲಾಭಾರ
ಅತಿಶಯವಾದ ಭಾರತ ರಾಮಯಣ
ಸ್ರ‍ಮತಿ ಪುರಾಣ ಬಹು ಕಥೆಕಲ್ಪ ಮಂಗಳಾ
ರತಿ ಮೊದಲಾದ ವಿಹಿತ ಧರ್ಮಗಳೆಲ್ಲ
ಪ್ರತಿದಿನದಲ್ಲಿ ಉನ್ನತವಾಗಿ ಚರಿಸಲು
ಗತಿಗೆ ಸಾಧನವಲ್ಲ ಕ್ಷಿತಿಯೊಳು ಜ್ಞಾನ ಭ
ಕುತಿ ವೈರಾಗ್ಯ ಮುಕುತಿಗೆ ಎರಡೊಂದು
ಸತತವಾಗಿ ಮಾರುತಿ ಮತದ ಸ
ಮ್ಮತದಲಿ ತಿಳಿದು ಶಾಶ್ವತವೆನ್ನು ಮನವೆ
ಯತಿವಂದ್ಯ ವಿಜಯ ವಿಠ್ಠಲರೇಯ ಶಾಂತ ಮೂ
ರುತಿಯ ಪಾದಕೆ ನಮಿತನಾಗು ಬಿಡದೇ ೪
ಆದಿತಾಳ
ನೀರಡಿಸಿ ಬಂದು ಭಾವಿ ನೀರು ಮೇಲಕ್ಕೆ ಉಕ್ಕಿ
ತಾರಿಬಂದ ಮಾನವನು ನೀರು ಕುಡಿವೆನೆಂದು
ಕೋರಿ ಉದಯ ದಿನಾಂತ ಪರಿಯಂತ
ಪಾರುಗಾಣದೆ ಸೊರಗಿ ಗಾರುಗೆಟ್ಟವನಂತೆ
ಆರಾದರೇನು ನಿತ್ಯ ಪೂರೈಸಿ ಕರ್ಮದಿಂದ
ಸಾರವಾದ ಮುಕುತಿ ದಾರಿ ಪಿಡಿದವನಿಲ್ಲ
ಸಾರುವೆನು ಕೇಳು ದ್ರವ ಆರಿ ದಣಿದುಬಂದು
ವಾರಿಯನ್ನು ಕುಡಿದವನ್ನ ನೀರಡಿಕಿ ಪೋಗುವಂತೆ
ಹಾರೈಸಿದರು ಉಳ್ಳಪಾರ ಕರ್ಮವ ಮುಗಿಸಿ
ಪಾರುಗಂಡವರಿಲ್ಲ ಈರೇಳು ಭುವನವದೊಳು
ಮಾರಾರಿಗಳಿಗರಿದು ವಾರವಾರಕೆ ಮನವೆ
ಹಾರವಾಗಿ ಕರ್ಮ ತೀರಿದಷ್ಟು ಮಾಡಿ
ವಾರಣದಲಿ ಇದ್ದು ವೈರಾಗ್ಯ ಜ್ಞಾನ ಭಕುತಿ
ಮೂರು ಸಂಪಾದಿಸಿ ನಾರಾಯಣನ್ನ ಮಂ
ದೀರವಸೇರು ಮನವೆ
ಚಾರುಚರಿತ ನಮ್ಮ ವಿಜಯ ವಿಠಲರೇಯ
ಸಾರಿ ಸಾರಿಗೆ ರೂಪತೋರುವ ಬಗೆ ತಿಳಿ ೫
ಜತೆ
ಕರ್ಮದಾರಿಯ ಬಿಡು ಕಡೆ ಬಿದ್ದವರ ಕಾಣೆ
ನಿರ್ಮಳಾತ್ಮ ವಿಜಯ ವಿಠ್ಠಲನ್ನ ತಿಳಿ ತಿಳಿ ೬

ಕಾಲದ ವಿವರಗಳನ್ನು ದಾಸರು ಈ ಸುಳಾದಿಯಲ್ಲಿ ಕೊಟ್ಟಿದ್ದಾರೆ.

೮೧
ಧ್ರುವ ತಾಳ
ವೈರಾಗ್ಯವೆಂಬೊದಿದೆ ಆವಾವ ಕಾಲಕ್ಕೆ
ಸಾರಾಂಶವನ್ನೆ ತಿಳಿ ಹರಿ ತಿಳುಪಿದ್ದು
ಭಾರವೆ ವಹಿಸದಿರು ನಾನೆ ಸ್ವತಂತ್ರನೆಂದು
ಸಾರಿ ಸಾರಿಗೆ ನುಡಿದು ಹಿಗ್ಗುವಂಥಾ
ಮೇರೆದಪ್ಪಿದ ಮಾತು ಬಿಡು ಬಿಡು ಸಿರಿ ಅರಸಾ
ಪ್ರೇರಿಸಿದಂತೆ ಸಂಚರಿಪೆನೆನ್ನು
ಹಾರಾವಾಗಿರು ಬಾಲಹಾಲುಂಡ ಸದನದೊಳು
ಚಾರು ವಿಲಾಸದಲ್ಲಿ ಆಡಿದಂತೆ
ಕ್ರೂರ ಅಕ್ರೂರರಲ್ಲಿ ಸಮ ಬುದ್ಧಿಯನ್ನು ಮಾಡು
ತಾರತಮ್ಯ ಪಂಚಭೇದಜ್ಞಾನ
ತಾರಕವೆಂದು ಘೋರ ಸಂಸಾರಾಬ್ಧಿಗೆ ಸದಾ
ಚರಾಚರದಲ್ಲಿ ವಿಹಿತಾವಿಹಿತ ಗ್ರಹಿಸೀ
ಮೂರುಗುಣಗಳ ಮೀರಿದ ಮಾತಿನಲ್ಲಿ
ಸಾರಾ ಹೃದಯನಾಗು ಸತ್ಕಾಲದಲ್ಲಿ
ಶರೀರದಲ್ಲಿ ತಿಳಿ ಏನೇನು ಬಗೆವುಂಟು
ಭಾರಿ ಭಾರಿಗೆ ಬರುವ ಸೌಭಾಗ್ಯವ
ದಾರಿದ್ರವನ್ನೆ ನೋಡಿ ಸುಖದುಃಖ ಹಚ್ಚಿಕೊಂಡು
ಥೋರ ಸಣನಾಗುವ ಮನಸೆ ತೊರೆಯೊ
ಆರಾರು ಕೊಡುವರು ಕೊಂಬುವರಾರು ಮ
ತ್ತಾರರೊ ಆರೊ ನಾನಾ ಚೇಷ್ಟಿಗಳು
ಆರಾರು ಕೂಡಿ ಮತ್ತಾರು ಮಾಡಿಸುವರು
ಆರಿಂದಲೇನಹುದು ಕಡೆ ಭಾಗಕ್ಕೆ
ಕಾರಣ ಕರ್ತನಾಗಿ ಇಪ್ಪ ಸಮರ್ಥನು
ನಾರಾಯಣನ ಮಾಯವನ್ನೆ ತುತಿಸಿ
ಮೂರೇಳು ಗೋತ್ರವೆ ಸಂಬಂಧದಲಿ ವಿ
ಸ್ತಾರ ಗೈಸುವ ಭವದ ಭ್ರಮಣವೆಂದೂ
ಹಾರೈಸಿ ದಿನ ದಿನ ಮುಕ್ತಿಗೆ ಪೋಗುವ
ದಾರಿಯ ನಿರೀಕ್ಷಿಸು ನಿತ್ಯದಲ್ಲಿ
ಭಾರತಿಪತಿ ಪ್ರೀಯ ವಿಜಯ ವಿಠ್ಠಲನ್ನ
ಸಾರಿ ಕೊಳ್ಳುತ ಸಿದ್ಧನಾಗಿ ತಿರುಗಬೇಕು ೧
ಮಟ್ಟತಾಳ
ಜಾಡಾ ಉಂಕಿಯನ್ನು ಜೋಡಿಸಿ ಮಗ್ಗವನು
ಹೂಡಿ ನಡಿವೆ ನಡಿವೆ ನೋಡಿ ಕಾಷ್ಟೆಗಳನ್ನು
ನೀಡಿ ನಾನಾ ವಸ್ತ್ರವ ಮಾಡುವ ಬಗೆಯಿಂದ
ಆಡುತ ನೇವುತಲೀ
ನಾಡಿ ನಾಡಿಗೆ ಹಿಂದು ಮಾಡುವ ಕಾಷ್ಟಗಳ
ಆಡಲೇನು ತಿರುಗಿ ಪಾಡಿಲ್ಲದೆ ಉಂಕಿ
ಹೂಡಿಕೊಂಬುವನೇನೊ
ಪ್ರೌಢ ಮೂರುತಿ ನಮ್ಮ ವಿಜಯ ವಿಠ್ಠಲರೇಯನ
ಹಾಡುತ ದಿನಗಳನು ಪೋಗಾಡಲಿಬೇಕು ೨
ತ್ರಿವಿಡಿ ತಾಳ
ಪರಿ ಪರಿ ದೇಹದಂಡಣಿ ಮಾಡಿದರೇನು
ಚರುವ ಚಾಂದ್ರಾಯಣ ಚರಿಸಲೇನು
ಇರದೆ ಸತಿಸುತರ ತೊರೆದು ದೇಶವೆಲ್ಲ
ತಿರಿಗಿ ದಿಗಂಬರನಾದರೇನು
ಶಿರಮುಂಡವಾಗಿ ಶೀಲನಾದರೇನು
ಗಿರಿ ಗಂಹರದಲ್ಲಿ ಸೇರಲೇನು
ಮರಳೆ ನಾನಾಭೋಗ ಕೈಕೊಂಡರೆ ಏನು
ತೆರವಿಲ್ಲದೆ ಬಹು ವಿಷಯದಲ್ಲೀ
ಸರಿ ಸರಿ ಬಂದಂತೆ ಸರಸವಾಡಿದರೇನು
ವಿರಕುತಿ ಮಾಡಿವ ಬಗೆ ಬೇರಕ್ಕು
ಬರಿದೆ ಸರ್ವದ್ರವ್ಯ ತೆರೆದರೇನು ಫಲ
ಸರ್ವ ಪದಾರ್ಥಗಳ ಕೊಂಡರೇನೈ
ನರನು ವೈರಾಗ್ಯದ ಚರಿಸುವ ಉಪಾಯ
ಅರಿತಲೆ ಕೈವಲ್ಯ ಪುರವೆಂಬೋದು
ಕರತಳದಲಿ ಉಂಟು ಕಠಿಣವೊಂದಿಷ್ಟಿಲ್ಲ
ವರಬೀಜ ನುಡಿ ಉತ್ತಮರು ಕೇಳಿ
ಸರ್ವದಾತ್ಮಕ ನಮ್ಮ ವಿಜಯ ವಿಠ್ಠಲರೇಯನ
ಸ್ಮರಣಿ ಬಲ್ಲವ ಬಲ್ಲ ಇದರ ಪ್ರಕೃತಿಯನ್ನು
ಅಟ್ಟತಾಳ
ರಸ ರಸಾಯನ ರುಚಿ ಭುಂಜಿಸಬೇಕು ಮಾ
ನಸರೊಳಗಿದ್ದರು ತನ್ನ ಮನಸು ಬೇರೆ
ಹಸನಾಗಿ ಇರಬೇಕು ಹಸುಳೆಯಂದದಲಿ
ಚರಿಸಬೇಕು ಸ್ವಾತಂತ್ರ ಅಸ್ವಾತಂತ್ರವು
ವಶವಾಗಿ ಎನಗಿಲ್ಲವೆಂದು ತಿಳಿದು ರಂ
ಜಿಸ ಬೇಕು ನಿಚೋಚ್ಚವಸ್ತವೆ ಸಮನಾಗಿ
ಉಸರಲೇನೈ ಸರ್ವೇಂದ್ರಿಯಗಳ ವ್ಯಾ
ಪಿಸಿದ ವ್ಯಾಪಾರ ಸ್ಥಿತಗತಿ ಧರ್ಮವ
ಬಿಸಿಜ ಜಾಂಡದ ಮಧ್ಯ ಚಕ್ಷುಕೆ ಯೋಗ್ಯ ಸು
ರಸದ್ರವ್ಯಗಳೆಲ್ಲ ಮೆಲುವ ಬಗೆ ತಿಳಿ
ಅಸಮ ದೈವವಾದ ಹರಿ ಮುಖ್ಯ ಆತನ
ಪೆಸರು ಒಂದನೆ ಕೇಳಿ ಅನಂತ ಅಲ್ಲ್ಯೆನ್ನು
ಪುಸಿಯದೆ ಅಲ್ಲಿದ್ದ ಅಭಿಮಾನಿ ದೇವತಿಯ
ಪೆಸರನೆ ತಿಳಿವುದು ಮತ್ತೆ ಸಮಸ್ತರು
ವಸತಿಯಾಗಿಪ್ಪರು ನಿಬಿಡಿ ಕೃತಿಯಾಗಿ
ಎಸದು ಚತುರವಿಂಶತಿ ತತ್ವಾತ್ಮಕ
ರಸವುಂಟಲ್ಲದೆ ಬರಿದೆ ಇಲ್ಲವೆನ್ನು
ಅಸುರರು ತಮ್ಮ ತಮ್ಮ ವ್ಯಾಪಾರದಲ್ಲಿ
ವಿ ಸಕದೆ ಇಪ್ಪರು ಒಂದೊಂದರಲಿ
ಪಶುಪಾಲ ವಿಜಯ ವಿಠ್ಠಲರೇಯ ಸರ್ವದಾ
ವಸತಿಯಾಗಿಪ್ಪ ಚೇತನ ಅಚೇತನದಿ ೪
ಆದಿತಾಳ
ಹರಿ ಹರಿಗೆ ಐಕ್ಯ ಸಿರಿಗೆ ಸಿರಿಗೆ ಐಕ್ಯ
ಸರ್ವ ತಾತ್ವಿಕರಗೆ ಅವರವರಿಗೆ ಐಕ್ಯ
ಮಿರಗುವ ಚತುರ ವಿಂಶತಿ ಜಡತತ್ವ ತತ್ವಕೆ ಐಕ್ಯ
ಸರಿ ಬಂದಂತೆ ತಿಳಿ ಸರಸಿಜಾಂಡವೆ ಐಕ್ಯ
ತರತಮ್ಯಗುಣದಿಂದ ಚಿಂತಿಸಬೇಕು ಇಂತು
ನಿರುತ ಶ್ರೀಹರಿ ಇಚ್ಛಾ ಸರ್ವರಿಗೆ ಪ್ರೇರಕ
ಪರಸ್ಪರ ವ್ಯವಹಾರವಾಡುವ ಆಡಿಸುವ
ಚಿರಕಾಲ ಶಕ್ತನು ಚಿನ್ಮಯ ವೈಚಿತ್ರ
ನಿರವೈರ ವೆಂಬೊದೇನು ಇದ್ದಂತೆ ತಿಳಿ ಒಂದು
ಧರೆಯೊಳಗೆ ಅವ ಪರಮ ವೈರಾಗ್ಯ ಕಾಣೊ
ಸರ್ವ ಸಮರ್ಪಣೆ ವಿಜಯ ವಿಠ್ಠಲಗೆಂದು
ಕುರುಹ ಕಂಡವ ಸರ್ವ ಉಂಡವಾ ಬಿಟ್ಟವಾ ೪
ಜತೆ
ಬಿಂಬ ಐಕ್ಯವೆ ಸಿದ್ಧಾ ವೈರಾಗ್ಯ ಮೂರೊಂದು (ಮೂರೆಂದು)
ಎಂಬೋದೆ ಇಪ್ಪದು ವಿಜಯ ವಿಠ್ಠಲ ಬಲ್ಲಾ ೫

ಈ ಸುಳಾದಿಯೂ ಪ್ರಾರ್ಥನಾ ರೂಪದ ಸುಳಾದಿಯಾಗಿದೆ.

೭೯. ಪಂಢರಪುರ
ರಾಗ:ಭೈರವಿ
ಧ್ರುವತಾಳ
ವ್ಯಕ್ತನಾಗಿ ಶಕ್ತನಾಗಿ ವ್ಯಾಪಕ ಪಾಂಡುರಂಗ |
ಭಕ್ತರಿಗಾಗಿ ಭಾಗ್ಯನಾಗಿ ಬಂದಾ ಬಂದಾ ಪಂಢರಿರಾಯಾ |
ಉಕ್ತಿಗಳೊಂದಂದು ಲಾಲಿಸಿದಾರೆ |
ಮುಕ್ತಾರು ಬೆರಗಾಗುತಿಪ್ಪಾರು |
ಮುಕ್ತಿ ಕ್ರೀಡೆ ಇಲ್ಲೆ ತೋರಿದಾ ತವಕಾದಿಂದಲಿ ಕುಣಿವುತ್ತ |
ಮೌಕ್ತಿಕಹಾರಾ ನಾನಾಭರಣಾ ಧರಸೀಗೋವಳರೊಡಗೂಡಿ |
ತ್ಯಕ್ತಾ ವೈದಿಕ ಮಿಕ್ಕಾದವರು ನೆರೆದು ಜಯಜಯಾವೆನುತಿರೆ |
ಯುಕ್ತಿವಂತರು ಯುಗಯುಗದಲಿ ಇದೆ ಪರಿನೋಳ್ಪರು |
ಭಕ್ತಿಗೊಲಿಪಾದು ಈ ಪರಿ ಭಕ್ತಿ ಮಾಡಿದಾ ಜನಕೆ
ಮನಸಿನಲ್ಲಿ ಕನಸಿನಲ್ಲಿ |
ಭುಕ್ತಿ ಮೊದಲಾದಾ ಸಂಪತ್ತುವೀವ [ಸು]ರಧೇನು ಇದ್ದಂತೇವೆ |
ಭಕ್ತಿಗೊಲಿವುದು ಈ ಪರಿ ೧
ಮಟ್ಟತಾಳ
ಎಣೆಗಾಣೆನು ರಂಗನ ಕರುಣಾಕಟಾಕ್ಷಕ್ಕೆ |
ಮನದಲ್ಲಿ ನೆನಿಸಿದ್ದು ಸಲಿಸುವ ಸಂಭ್ರಮದಿ |
ಕುಣಿಕುಣಿದಾಡುವನು ಪದಗತಿಯನು ಬಿಡದೆ |
ಮಣಿಭೂಷಣದಿಂದ ಗೋಪಿರೆಡ ಬಲದಿ |
ಮಿನುಗುತಿರೆ ಗೋಗಳು ಸುತ್ತಲು ಒಪ್ಪೆ |
ಮುನಿ ಪುಂಡರೀಕನಿಗೆ ಅಂದೊಲಿದು ಬಂದಾ |
ತನೆ ಈತನೆ ಕಾಣೊ |
ಅನುಮಾನಗೊಳದೀರಿ ಆರ್ತಿಯ ಪೋಗಾದಿ |
ಘನಮಹಿಮಾ ನಮ್ಮ ವಿಜಯವಿಠಲಾ |
ಮನುಜರೊಳಗೆ ಮನುಜರೂಪ ಧರಿಸಿ ಮೆರೆವ ೨
ತ್ರಿವಿಡಿತಾಳ
ಎಲ್ಲಿದ್ದರೇನಯ್ಯಾ ಭಕ್ತರಿಗೆ ಒಲಿವ ಶ್ರೀ |
ವಲ್ಲಭನ ಪ್ರೀತಿ ಅತಿ ಮಿಗಿಲೂ |
ಕಲ್ಲು ಎನಿಸಲ್ಲಾ ಇದರಲ್ಲಿ ಪ್ರಲ್ಹಾದನ್ನಾ |
ಸೊಲ್ಲಿಗೆ ಬಂದಂತೆ ಬಂದ ಕಾಣೋ |
ಎಲ್ಲಾವ ಜಾತಿಗಳು ಸುತ್ತಾ ಚಪ್ಪಳೆನಿಕ್ಕಿ |
ನಿಲ್ಲಾದೆ ಕುಣಿವಾರು ದೇವನೊಡನೆ |
ಬಲ್ಲಿದಾ ಹರಿಕಾಣೊ ಎಲ್ಲಿ ನೋಡಿದರೀತಗೆ |
ಇಲ್ಲಪೋ ಸಾಮ್ಯವಾಧಿಕ್ಯ ಇಹಪರದಲ್ಲಿ |
ಎಲ್ಲಾ ಕ್ಷೇತ್ರದಕ್ಕಿಂತ ಇದೆ ಉತ್ತಮಾವೆನ್ನಿ |
ಬಲ್ಲಾರು ಬೊಮ್ಮಾದಿ ಭಕ್ತರೆಲ್ಲ |
ಗಲ್ಲಾ ಎರಡರ ಬೆಳಕು ಸೂರ್ಯ ಚಂದ್ರರಂತೆ |
ಅಲ್ಲೆಲ್ಲ ತುಂಬಿದ ವೈಚಿತ್ರಿಕ |
ಮಲ್ಲಾ ಮರ್ದನ ನಮ್ಮ ವಿಜಯವಿಠಲ ವಿಠಲಾ |
ಎಲ್ಲೆ ಮಾಯಾದಾ ಬೊಂಬಿಯೊ ವರ್ಣಿಸಲಾರಿನೊ ೩
ಅಟ್ಟತಾಳ
ನಿತ್ಯಸತ್ಯ ಕಾಮಾ ಪರಿಪರಿರೂಪದಲಿ |
ಭೃತ್ಯರ ಸತ್ಯಕಾಮರಮಾಡಿ ಮನ್ನಿಸಿ |
ಅತ್ಯಂತವಾಗಿ ಆಶಿಯ ಬಿಡಿಸಿ ಕೂಡ |
ಹತ್ತೊಂದು ಇಂದ್ರಿಯಾ ಸುಖ ಬಿಡಿಸುವ ಜಾಣಾ |
ತೊತ್ತಿನ ತೊತ್ತಿನ ಮಗನ ಮೊಮ್ಮಗ ನಾನು |
ಎತ್ತಿ ಭವದಿಂದ ಕಡೆಗೆ ಹಾಕುವದಯ್ಯಾ |
ಮೃತ್ಯು ನಿವಾರಣಾ ವಿಜಯವಿಠಲಾ ವಿಠಲಾ |
ಸತ್ಯಸಂಕಲ್ಪಾ ನೀನಹುದೊ ಮತ್ತಹುದೊ ೪
ಆದಿತಾಳ
ಪಾವನ್ನ ನಾನಾದೆ ಪೂವನ್ನ ನಾನಾದೆ |
ಪಾವನ್ನ ಮೂರುತಿಯಾ ಪಾದದರುಶನದಿಂದ |
ಭಾವದಲಿ ಇಂದು ನೆನಸಿದ ಯಾತ್ರಿಫಲ |
ಪೂವಿನೊಳಗೆ ಇಟ್ಟು ಕೊಟ್ಟಂತಾಯಿತೊ ಎನಗೆ |
ದೇವನ್ನ ನಿಜರೂ ಹಾ ಸ್ವಪ್ನದಲ್ಲಿ ಕಂಡೆ |
ಆವಜನ್ಮದ ಪುಣ್ಯ ಬಂದೊದಗಿತೊ ಸಿದ್ಧ |
ಜೀವನ್ನಾ ಮುಕ್ತರೆಲ್ಲ ನಲಿದಾಡುವರು ಬಂದು |
ಕೈವಲ್ಲ್ಯಾಗುವಕ್ಕೆ ಸಂಶಯ ಇನ್ನುಂಟೆ |
ಗೋವೆಗೋವಳರಾಯಾ ವಿಜಯವಿಠಲಾ ವಿಠಲಾ |
ಕಾವ ಕಲ್ಮಷ ಕಳೆದು ಕಳೇವರದೊಳಗಿದ್ದೂ ೫
ಜತೆ
ಕಂಡು ಧನ್ಯ ನಾನಾದೆ ಕುಲಕೋಟಿಗಳ ಸಹಿತ |
ಪುಂಡರೀಕವರದಾ ವಿಜಯವಿಠಲಾ ವಿಠಲನಾ ೬

ಮಾನವನಾಗಿ ಹುಟ್ಟಿದ ಮೇಲೆ

೮೧
ಧ್ರುವತಾಳ
ವ್ಯರ್ಥವಾಯಿತು ಜನನಾನರ್ಥ ಸಾಧನದಲಿ
ಕರ್ತೃತನವೆನ್ನದೆಂಬಾವರ್ತದಲ್ಲಿ
ಸಾರ್ಥಕ ಇಲ್ಲ ನಿರರ್ಥಕವಾಗಿ ದುಃ-
ಖಾರ್ಥವ ಬಲಗೊಂಡೆ ಅರ್ಥಿಯಿಂದ
ವ್ಯರ್ಥಾಯ ನೊಂದು ಇತ್ಯರ್ಥವ ಕಾಣದೆ
ಅರ್ಥಾತುರನಾಗಿ ಧರ್ಮದ ದಾರಿ ಯ
ತಾರ್ಥವೆನ್ನದಲೆ ಕೃತಾರ್ಥನಾಗದೆ ನರಕ
ಗರ್ತದೊಳಿಳಿವೆನು ಕೀರ್ತಿಮರೆದು
ತೀರ್ಥಮೌಳಿಯ ಪಾಲಾ ವಿಜಯವಿಠ್ಠಲ ಮು-
ಕ್ತಾರ್ಥ ಧ್ಯಾನದೊಳಿರದೆ ಘರ್ತನಾಗುಳಿವೆ ೧
ಮಟ್ಟತಾಳ
ಇಬ್ಬರಿಂದಲಿ ಬಂದ ಮೊಬ್ಬು ಕವಿದು ಮನಸು
ಉಬ್ಬಿ ಮಂದನಾಗಿ ಹಬ್ಬಿತು ತಾಮಸವು
ನಿಬ್ಬರದಲಿ ನಿನ್ನ ಎಬ್ಬಟ್ಟು ಪಾಪ
ದುಬ್ಬಸ ಕಳೆಯುವರನ ಒಬ್ಬರ ಕಾಣೆನೊ
ಅಬ್ಜದಳನಯನ ವಿಜಯವಿಠ್ಠಲ ನೀನೆ
ಒಬ್ಬನಲ್ಲದೆ ಆಧಾರೊಬ್ಬರು ಎಲ್ಲಿಲ್ಲ೨
ತ್ರಿವಿಡಿ ತಾಳ
ಮನವೆಂಬ ತರಗೆಲೆ ದುರ್ವಾಸನೆ ಎಂಬ
ಅನಿಲಾ ಬೀಸಲು ಹಾರಿ ಪೋಗುತಿದಕೊ
ಎನಗೆ ಪಿಡಿವ ಶಕ್ತಿಯನು ಕಾಣೆ ಕಾಣೆನೊ
ಕ್ಷಣವೊಂದರೊಳಗೆ ಕೋಟಿ ಕೋಟಿ ಯೋ-
ಜನ ಹಾರಿ ಈ ಮನಸು ಸುತ್ತ ಸುತ್ತತಲಿದೆ
ಘನ ಮಹಿಮ ನಿನ್ನಂಘ್ರಿ ವನಜಯುಗಳ ಊರಿ
ಮನವೆಂಬ ತರಗೆಲೆಯನು ಹಾರದಂತೆ ದಯ-
ವನು ಮಾಡು ನಿನಗೆ ವಂದನೆ ಗೈವೆ ಹರುಷದಲಿ
ಹನುಮ ವಂದಿತ ಪಾದ ವಿಜಯವಿಠ್ಠಲರೇಯ
ದಣಿಸದೆ ಕರವಿಡಿದು ಗುಣವಂತರೊಳಗಿಡು ೩
ಅಟ್ಟತಾಳ
ನಿನ್ನಂಥ ಪ್ರಿಯನು ಎನಗೊಲಿದಿರಲಾಗಿ
ಅನ್ಯರಿಗೆ ಸೆರಗನ್ನೊಡ್ಡಿ ಬೇಡುವೆನೆ
ಎನ್ನಂಥ ದುರಾತ್ಮಕನ್ನಂತದೊಳಗಿಲ್ಲ
ಇನ್ನೇನುಪಾಯವ ಇನ್ನೇನು ಗತಿಯೊ
ಅನ್ಯಥನ್ಯರಿಗೆ ದೈನ್ಯ ಬಡುವ ವೃತ್ತಿ
ಬೆನ್ನು ಬಿಡದು ಕಾಣೊ ಚನ್ನ ಪ್ರಸನ್ನ
ಅನ್ನಾಥರೊಡೆಯನೆ ವಿಜಯವಿಠ್ಠಲ ಸಂ-
ಪನ್ನ ಮನ್ನಿಸಿ ಮಾನವನು ಕಾಪಾಡೊ ೪
ಆದಿತಾಳ
ಈರಾರು ದ್ವಿಗುಣ ಪರಿವಾರದವರ ಸಹಿತ ನೀನು
ಸೇರಿಕೊಂಡು ಎನ್ನೊಳಗೆ ತೋರಿ ತೋರಿಕೊಳುತಲಿದ್ದು
ಕ್ರೂರ ಇಂದ್ರಿಯಗಳ ಗುಡಿ ಹಾರಿಹಾರಿ ಈ ಮನಸು
ಗಾರು ಮಾಡುವುದು ನೋಡಿ ಆರಿಗಾರಂತಿರಬಹುದೆ
ಕಾರುಣ್ಯನಿಧಿ ನಮ್ಮ ವಿಜಯವಿಠ್ಠಲ ನೀನೆ
ದೂರು ನೋಡಿದರೆ ಎನಗಾರು ಗತಿ ಇಳೆಯೊಳು ೫
ಜತೆ
ಅಂದ ಮಾತನು ಕೇಳೊ ಬಂಧು ಎನ್ನ ಮನಸು
ಪೊಂದಿ ನಿನ್ನರ್ಚಿಸಲಿ ವಿಜಯವಿಠ್ಠಲ ಶೌರಿ೬

ಸಾಧ್ಯವಾದ ಸಂದರ್ಭಗಳಲ್ಲೆಲ್ಲಾ ಮನುಷ್ಯ

೧೧೨
ಧ್ರುವತಾಳ
ವ್ಯಾಕುಲವೇನೊ ಮನವೇ ಯಾಕೆ ನಿನಗೆ ನಿತ್ಯ
ಸಾಕುವ ದಾತಾರ ಶ್ರೀಕಾಂತನನುದಿನ
ಲೋಕ ಲೋಕವನೆಲ್ಲ ಸಾಕುವ ಭಾರಕರ್ತ
ಬೇಕೆಂದು ಪ್ರತಿದಿನ ಜೋಕೆ ಮಾಡುವನೋ
ಕಕ್ಕುಲಾತೆ ವಿಡಿದು ಲೌಕೀಕದೊಳಬಿದ್ದು
ಕುಕರ್ಮವನುಸರಿಸಿ ಶೋಕಕ್ಕೊಳಗಾಗದಿರು
ನೂಕು ಸಂತಾಪವನೇಕೆ ಬಗೆಯಿಂದ ವಾಕುಸಾರಿದೆನಿದು
ನೀ ಕೇಳು ದೃಢವಾಗಿ ಈ ಕುಂಬಿನಿಯ ಮಧ್ಯ
ಪ್ರಾಕೃತವಿಡಿದು ಬದುಕುವ ಜೀವಿಗಳ ಸಾಕುವನಾರು
ಗೋಕುಲಾಂಬುಧಿ ಚಂದ್ರ ವಿಜಯ ವಿಠ್ಠಲ ಗ್ರಾಸ
ಹಾಕುವನಿರಲಾಗಿ ನೀ ಕಳವಳಿಸುವರೇ ೧
ಮಟ್ಟತಾಳ
ಬರ ಬಂದರೇನು ಬಾರದಿದ್ದರೆ ಯೇನು
ಧರೆ ಎಲ್ಲ ಇಂದು ಕರಗಿಪೋದರೆ ಯೇನು
ಅರಸಾಗಿದ್ದವರ ಕರುಣ ತಪ್ಪಿದರೇನು
ವರುಷಂಗಳ ತಡೆದು ಇರಲು ಇದ್ದರೆ ಏನು
ಗಿರಿ ಸಮುದಾಯಗಳು ಹರಿದು ಬಂದರೆ ಏನು
ಹರಿದು ಮುಗಿಲು ಮೇಲೆ ಒರಗಿದರೇನು
ಧರಣಿ ಪಾಲಕ ರಂಗ ವಿಜಯ ವಿಠ್ಠಲರೇಯ
ಪರಮಪುರುಷ ಹರಿಯಶರಣರಿಗೆ ಭಯವೇನು ೨
ತ್ರಿವಿಡಿತಾಳ
ಶಾರೆ ಹೊನ್ನಿಗೆ ಭತ್ತ ಶಾರೆಯಾದರೆ ಏನು
ನೂರಾರು ಖಂಡುಗ ಕಾಸಿಗಾದರೆ ಏನು
ಊರು ಊರಲಿ ಧನ ಸೂರೆಬಿಟ್ಟರೆ ಏನು
ಮಾರುವ ಧಾರಣಿ ಏರಿ ಇಳಿದರೇನು
ಘೋರಾರಣ್ಯದೊಳು ಪೋಗಿ ಇದ್ದರೆ ಏನು
ನೀರು ಇಲ್ಲದ ಠಾವು ದೊರಿತಾರೇನು
ಅರಾಜಕವಾಗಿ ಭೀತಿ ಬಂದರೇನು
ಆರಾದರು ಮೋರೆ ತಿರುಹಲೇನು
ಮೇರೆದಪ್ಪಿ ಏನು ವನಧಿ ಹೆಚ್ಚಿದರೇನು
ದಾರಣದಲ್ಲಿ ದೇಹ ಬಳಲಾಲೇನು
ಶರೀರವೆ ಶ್ರೀನಿವಾಸನ ಚರಣಕ್ಕೆ
ಆರೋಪಿಸಿದ ತರುವಾಯದಲ್ಲೀ
ವಾರವಾರಕೆ ಮನವೆ ಯೋಚನೆಗೊಳಸಲ್ಲ
ಪೂರೈಸಿ ತಿಳಿಯೊ ಹರಿಯ ಮಹಿಮೆಯನ್ನು
ನಾರಾಯಣ ರಂಗ ವಿಜಯ ವಿಠ್ಠಲ ನಿತ್ಯ
ಭಾರಕರ್ತನಾಗಿ ಪೊರೆವನು ಪ್ರತಿದಿವಸ ೩
ಅಟ್ಟತಾಳ
ಉದರದೊಳಗೆ ಬಂದು ಉದುಭವಿಸಿದಾಗ
ವದನಕ್ಕೆ ತಂದು ಕೊಡದವನಾರೋ ಬೆಣ್ಣಿಯ
ಬದಿಗನು ತಾನಾಗಿ ಪದೆಪದೆಗೆ ಹರಿ
ಬದಿಯಲ್ಲಿ ನಿಂದು ಹದುಳ ನೋಡುತಲಿದ್ದು
ಪೊದೆ ವನಗಿರಿ ಗುಹೆ ಹೊದರಿನೊಳಿದ್ದರು
ಕ್ಷುಧೆಯಾಗಗೊಡದಂತೆ ಮಧುರನ್ನವ ತಂದು
ಉದಯಾಸ್ತಮಾನ ಬಿಡದೆ ಉಣಿಸುವ ಸತ್ಯ
ಮದಡು ಮಾನವ ನಿನ್ನ ಉದರ ಚಿಂತಿಯ ಬಿಡು
ಹೃದಯದೊಳಗೇ ಸಿರಿ ಪದುಮನಾಭವ ಇಡು
ಒದಗಿ ಸಾಕುವ ತಂದೆ ವಿಜಯ ವಿಠ್ಠಲನಿರೆ
ಇದೆ ದೈರ್ಯವಿಡಿದು ಮುದದಿಂದ ನಲಿದಾಡು ೪
ಆದಿತಾಳ
ಹಿಂದೆ ಬಹುಜನ್ಮಗಳು ಬಂದು ಬಂದು ಪೋದುದಕೆ
ಒಂದು ತೃಣವಾದರೂ ನಿನ್ನಿಂದ ನೀನೆ ಗಳಿಸಲಿಲ್ಲಾ
ಇಂದಿರಾರಮಣನು ತಾ ಒಂದು ಒಂದು ಪರಿಯಲ್ಲಿ
ಬಾಂಧವನಾಗಿ ನಿತ್ಯ ನಿಂದು ಭಾರಕರ್ತನಾಗಿ
ಒಂದು ನಿಮಿಷ ಮೀರಗೊಡದೆ ಸಂದೇಹ ಬಿಡದಂತೆ
ಚಂದವಾಗಿ ಒಲಿದು ಆನಂದ ಸುಖ ಬಡಿಸುವಾ
ಮುಂದುಗೆಡದಲೆ ಹೇಗೆಂದು ಚಿಂತೆ ಮಾಡದಲೆ
ಎಂದೆಂದಿಗೂ ಕಳೆಗುಂದದಲಿರು ಮನವೆ
ಹಿಂದೆ ಇಂದು ಮಂದು ಬಿಡದೆ ತಂದೆಯಾಗಿ ಸಾಕುವ ಗೋ
ವಿಂದ ವಿಜಯ ವಿಠ್ಠಲಂಗೆ ವಂದಿಸುವುದ ಬಿಡದಿರು ೫
ಜತೆ
ಅಣುರೇಣು ಪೊಟ್ಟಿಗೆ ನಡೆಸುವ ದೇವನು
ನನಗೀಯದಿಪ್ಪನೆ ವಿಜಯ ವಿಠ್ಠಲ ಸ್ವಾಮಿ ೬

ಈ ಸುಳಾದಿಯು ಅನಂತಶಯನ

೬. ಅನಂತಶಯನ
ಧ್ರುವತಾಳ
ವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲು |
ಮತಿವಂತರಿಗೆ ಮುಕ್ತಿ ಪಥಕೆ ಮೊದಲೂ |
ಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿ |
ಪ್ರತಿದಿನ ವೆಚ್ಚುವದು ಅತಿಶಯದಲ್ಲಿ |
ಖತಿಗೊಳದಿರಿ ಶಾಶ್ವತವೆನ್ನಿರೋ ಜನರೂ |
ಪತಿತರಾಗದೆ ಸಮ್ಮತ ಬಡುವದೂ |
ಶತಕೋಟಿ ಅನ್ಯದೇವತಿಗಳ ವ್ರತಮಾಡೆ |
ಹತವಾಗುವದು ಸುಕೃತವಿದ್ದದ್ದೂ |
ಚತುರ ಮೂರುತಿ ನಮ್ಮ ವಿಜಯವಿಠಲನಂತಾ |
ವ್ರತ ಕಾವುದು ಎಲ್ಲಿ ಪ್ರತಿಗಾಣೆ ಶ್ರುತಿಯೊಳು ೧
ಮಟ್ಟತಾಳ
ಸುಮಂತ ಭೂಸುರನಾ ಕುಮಾರಿ ಸುಶೀಲೆ |
ವಿಮಲಾ ಗುಣವಂತೆ ಶಮೆದಮೆಯಲ್ಲಿರಲು |
ಸುಮಂತ ವಿಪ್ರಾ ಉತ್ತುಮ ಕೌಂಡಣ್ಯಗೆ |
ಸುಮತಿಯಳಾನಿತ್ತಾ ಸುಮನಸರು ಮೆಚ್ಚೆ |
ರಮೆಯರಸ ನಮ್ಮ ವಿಜಯವಿಠಲನ್ನಾ |
ತುಮದೊಳಗೆ ನೆನೆದು ಯಮುನಾ ತೀರಕೆ ಬರಲೂ ೨
ರೂಪಕತಾಳ
ಮೌನಿ ಕೌಂಡಿಣ್ಯನು ಮಧ್ಯಾನದಾ ಆನ್ಹಿಕೆಯನು |
ಪ್ರಣವ ಪೂರ್ವದಿಂದಾರ್ಚನೆ ಮಾಡ ಪೋದಾ ಯ |
ಮುನ ನದಿ ಸಲಿಲಿಗೆ ಘನತೀವರದಿಂದ |
ವ[ನಿ]ತೆ ಸುಶೀಲಿತಾ ವನಜಾಕ್ಷಿಯರು ವೃತಾ |
ವನು ಮಾಡುತಿರೆ ಆ ಕ್ಷಣದಿಂದ ಗಮನಿಸೀ |
ಎನಗೆ ಪೇಳೆಂದವರನನುಸರಿಸಿ ಕೇಳಲೂ |
ಸನುಮತ ಅನಂತನ ವ್ರತವೆಂದೆನಲೂ |
ವಿನಯದಿಂದ ನಮಿಸಿ ಮನದಿಚ್ಛೆಲಿ ನೋಂಪಿ |
ಏನುನೋ ತಾಳದಾನಂತನ ಸೂತ್ರ ತೋಳಿಲಿ |
ದಿನ ಭದ್ರಪದ ಶೋಭನ ಶುಕ್ಲ ಚತರ್ದಶಿ |
ದಿನದಲ್ಲಿ ವಾಮಲೋಚನೆ ಕಟ್ಟಿದಳೊಲಿದೂ |
ಪ್ರಣುತಾರ್ಥಹರ ನಮ್ಮ ವಿಜಯವಿಠಲನ್ನ |
ನೆನದು ಪತಿಯಾ ಕೂಡಿ ಮನೆಗೆ ಬರುತೀರೆ ೩
ಝಂಪೆತಾಳ
ವಾರಿಯೊಳಗೆ ಮದವಾರುಣಾ [ಶ್ವದ್ಧನಾ] ಶ್ಯಂದನಾ |
ವಾರುಗಂಗಳು ಪರಿವಾರಾವೊಪ್ಪುತಲಿರೇ |
ಸಾರರತುನಾ ಬಂಗಾರಮಯದಾ ಶೃಂ |
ಗಾರದಾ ಮಂದಿರಾ ತೋರುತಿರಲು ಮನಕೆ
ಕಾರುಣಿಕವು ಮುಂದೆ ನಾರಿಯೊಡನೆ ಮುನಿ |
ವರೇಣ್ಯ ತನ್ನಯಾ ಕುಟೀರಕ್ಕೆ ಬರಲಾಗಿ |
ಕಾರಣಾ ಪುರುಷಶಿರಿ ವಿಜಯವಿಠಲನ್ನಾ |
ದೋರದಾ ಮಹಿಮೇಲಿ ಪೂರೈಸಿತು ಭಾಗ್ಯಾ ೪
ತ್ರಿವಿಡಿತಾಳ
ಎತ್ತ ನೋಡಿದರತ್ತ ತತ್ತುಳಕಲು ಭಾಗ್ಯ |
ನಿತ್ಯಸಂದಣಿಯಿಂದ ಇತ್ತಮುನಿ ಇರುತಿರೆ |
ಚಿತ್ತದೊಲ್ಲಭ ಕರದಿ ಸೂತ್ರವಿರಲೂ ಮುನಿ |
ಪೋತ್ತಮಾ ನುಡಿಸಿ ಅದರುತ್ತರವ ತಿಳಿದು |
ಎತ್ತಣ ವೃತವೆಂದು ಮಿತ್ರಿಯಜರದು ಮೋರಾ |
ಕಿತ್ತು ಬಿಸುಟನಾಗಾ ಪಿತ್ತದೊಳಗೆ ತೆಗೆದು |
ಉತ್ತಮಗುಣವಂತೆ ಎತ್ತಿ ಮನದಿ ಹಾ, ಯೆ |
ನುತ್ತ ಪಾಲಿನೊಳದ್ದಿ ತುತಿಸಿ ಗತಿ ಹರಿಯೆ |
ನುತ್ತ ಜತನ ಮಾಡಿ ಚಿತ್ತಜಾಪಿತ |
ನಂತ, ವಿಜಯವಿಠಲರೇಯಗೆ |
ಹತ್ತದವನಾಗಿ ಮುನಿ ಪೊತ್ತಾ ಕ್ಲೇಶದೊಳಾದ ೫
ಅಟ್ಟತಾಳ
ಬಡತನ ಬಂದು ಬೆಂಬಿಡದಲೆ ಕಾಡಲು |
ಒಡನೆ ಬಿದ್ದವರೆಲ್ಲಾ ಬ[ಡಿ]ದರು ಪಗೆಯಾಗಿ |
ಪಿಡದಾ ಪರಿಚಾರಾ ಕಿಡಿಗೆಡಿಗೆ ಮುನಿ |
ದಡಿಗಡಿಗೆ ಬೈದೊಡಂಬಡದಿಪ್ಪಾರು |
ಕಡುನೊಂದು ಯತಿ ತನ್ನ ಮಡದಿ ವಿನಯದಿಂದಾ |
ನುಡಿವ ಮಾತನು ತನ್ನೊಡಲೊಳು ಚಿಂತಿಸಿ |
ಸುಡು ಎನ್ನ ಶರೀರ ಬಿಡುವೆ ರಂಗನ ದಿವ್ಯಾ |
ಅಡಿಗಳ ಬಳಿಯಲ್ಲಿ ತಡಿಯದಲೆ ಪೋಗಿ |
ಕೊಡವೆನೆನುತ ನೀರು ಕುಡಿಯದೆ ಪೊರಮಟ್ಟಾ |
ಅಡವಿ ಗಿಡಗಳು ಪಿಡಿದು ಕ್ಲೇಶದಿಂದ |
ಮಿಡಕುತಾಳಲ್ಲಿ ಕಾಲೊಡದು ನೆತ್ತರಧಾರಿ |
ಇಡುತಲಿ ಬಲುದೂರಾ ಹುಡುಕುತಾ ಮಹೇಂದ್ರ |
ದಡಿಗೆ ಬಂದನು ಋಷಿ |
ಕಡು ಕೃಪಾಸಾಗರಾ ನಮ್ಮ ವಿಜಯವಿಠಲನಂತಾ |
ತಡಿಯ ಕೌಂಡಣ್ಯನು ನಡುಗಿ ಬಾಯಾರಿ ೬
ಆದಿತಾಳ
ಬರುತಾ ಚೂತಾ ತರುವು ಸರೋ |
ವರಾವೆರಡು ಗೋ ವೃಷಭಾ |
ಖರ ಮದಕುಂಜರಗಳನು |
ನಿರೀಕ್ಷಿಸಿ ಅನಂತನಾ | ಕುರುಹನಾ[ನೀ]ವುತೋ |
ರಿರಿ ಎಂದು ಬೆಸಗೊಳಲು | ಅರಿಯಲಿಲ್ಲಂದು ಉ |
ತ್ತರ ನೆರದಾವು ಕೊಡಲು | ಪರಮ ಮೂರ್ಛಿತನಾಗಿ |
ಒರಗಿದ ಧರಿಗೆ ಮುನಿ | ಹರಿ ಅರಿದು ವೃದ್ಧ ಭೂ |
ಸುರನಾಗಿ ಬಂದು ವಿ | ವರಿಸಿ ತಿಳಿದು ತಡ |
ವರಿಸಿ ಕಿಂಕರ ನೋಡಿರದೆ ಬೆಂಬಲವಾಗಿ |
ಕರತಂದು ತನ್ನ ನಿಜ | ಸ್ವರೂಪವಾ ತೋರಿ ಮುನಿಯಾ |
ಪರಿಶ್ರಮ ಪರಿಹರಿಸಿ ಕರುಣವ ಮಾಡಿದನು |
ಸುರರಿಗಸಾಧ್ಯವು | ಮರಿಯದೆ ಪದಿನಾಲ್ಕೋ |
ತ್ಸರಾನಂತನಾ ವೃತ | ಚರಿಸಿ ಸುಖದಿ ಬಂದು |
ವರ ಪುನರ್ವಸು ಸ್ಥಾನಾ | ಇರ ಹೇಳಿ ಹಿಂದೆ ಕಂಡಾ |
ದರ ಶಂಕೆಯನು ಪೇಳಿ | ಹರಿ ಅಂತರ್ಧಾನನಾದಾ |
ತಿರುಗಿ ಕೌಂಡಣ್ಯ ಮುನೀಶ್ವರಾ ಅಕ್ಲೇಶದಲ್ಲಿ |
[ಕ]ರುಣಿ ಜ್ಞಾನವಾ ನೆನದು ಹರಿಯಾ ಕೊಂಡಾಡುತ್ತಾ |
ಭರದಿಂದ ತನ್ನ ಮಂದಿರಕೈತಂದು ವೃತವ |
ಚರಿಸಿದ ಮನಃ ಪೂರ್ವದರ ಭಕುತಿ ತಪ್ಪದಲೇ |
ಸರಿ ಇಲ್ಲಾದೈಶ್ವರ್ಯ ಪರಿಪೂರ್ಣವಾಗಿ ಬಾಳಿ |
ಮರಳೆ ಸೇರಿದ ತನ್ನವರ ಸ್ಥಾನದಲಿ ಪೋಗಿ |
ಶಿರಿ ಶ್ರೀಮದನಂತ ವಿಜಯವಿಠಲರೇಯಾ |
ಸ್ಥಿರವಾದಾನಂದು ಮೊದಲು | ಶರಧಿ ದಕ್ಷಿಣಾದಲ್ಲಿ ೭
ಜತೆ
ಯಮ ಸುತನ ನೋತು ಬಲು ಶ್ರಮದಿಂದ ದೂರಾದ
ತಮರಿಗೆ ಸಲ್ಲಾದಿದು ವಿಜಯವಿಠಲ ಬಲ್ಲಾ ೮

ಭಕ್ತಿ ಸಾಧನೆಯಲ್ಲಿ ಕರ್ಮ,

೮೩
ಧ್ರುವತಾಳ
ಶರಣನಾಗುವೆ ಶರಣರ ಪರಿಪಾಲ
ಶರಣು ನಿನಗೆ ಅನಂತ ಶರಣು
ಶರಣಾಗತ ವತ್ಸಲ ಶರಣರ ಅಭಿಮಾನ
ಶರಣರಿಗೆ ವಜ್ಜರ ಪಂಜರ
ಶರಣೆಂದವರ ಭಾರಾ ಪರಿಪೂರ್ಣವಹಿಸುವ
ಶರಣು ಪೊಕ್ಕವರಘ ದಹಿಸುವನು
ಶರಣು ನಿನ್ನ ಪಾದಕ್ಕೆ ಶರಣು ನಿನ್ನ ಪಾದಕ್ಕೆ
ಶರಣೆಂಬದಕ್ಕೆ ಸುಮನವನೀಯೋ ಚರಣ
ಸ್ಮರಣೆಗೆಲ್ಲಿ ಸರಿಸಾಟಿಯಲ್ಲೆಂದು
ಪರಮಾ ಉತ್ತಮರು ವಿಸ್ತರಿಸುವರು
ಇರಳು ಹಗಲು ಒಂದರ ಘಳಿಗೆ ವಾಸರ
ದಂತೆ ಕರುಣವನು ಮಾಡಿ ಬರಿದಾಗದಂತೆ
ಹರಿ ನಿನ್ನ ನೆನವಂತೆ ಶರಣ ಒಡಗೂಡಿ
ಅರಿವುಮಾಡುವುದು ಪಾಮರಶಾಲಿಗೆ
ಅರಿದರ ಮಹಸ್ವಗತಿ ವಿಜಯವಿಠ್ಠಲರೇಯ
ಶರಣರ ಭಕ್ತರ ಭಕ್ತಗೆ ಕರಗುವಾ ದೈವ ೧
ಮಟ್ಟತಾಳ
ಸ್ನಾನ ಸಂಧ್ಯಾ ಜಪವೇ ಮೌನ ಧ್ಯಾನಂಗಳು
ದಾನ ಧರ್ಮಾವಳಿ ಏನೇನು ಮಾಡಿದರು
ಶ್ರೀನಿವಾಸನೆ ನಿನ್ನ ಜ್ಞಾನದಿಂದಲೆ ನೆನವನಿಗೆ ಸರಿಯುಂಟೆ
ಅನಂತ ಜನುಮದಲಿ ಹೀನ ಸಂಗತಿಯಿಂದ
ಏನೇನು ಬಂದಿರಲು ಜೇನು ಮುಗ್ಗಿದಂತೆ
ಕ್ಷೀಣವಾಗೋವಯ್ಯ ಏನೇನು ಕರ್ಮಗಳು
ಕ್ಷೋಣಿಯೊಳಗೇನೆಸಗೆ ಶ್ರೀನಾಥನ ನಾಮಾ
ಗಾನಕೆ ಸರಿಯುಂಟೆ ಗಾನಕೆ ಸರಿಯುಂಟೆ
ದೀನ ಪಾಲಕ ಸೂಕ್ಷ್ಮ ವಿಜಯವಿಠ್ಠಲ
ನೀನೆ ಪರದೈವ-ನೀನೆ ಜಗದ್ಭರಿತಾ ೨
ತ್ರಿವಿಡಿತಾಳ
ಒಂದೆ ನಾಮವೆ ನೆನೆಯೆ ಎಂದೆಂದು ಪೋಗದು
ಸಂದೋಹ ಪಾಪಗಳು ಬೆಂದು ಪೋಗುವುವು
ಅಂದೆ ಇಂದೇವೆ ಇನ್ನೊಂದು ಸಿದ್ದಿಸುವುದ
ಕೆಂದು ಯೋಚನೆಮಾಡಿ ನೋಡ ಸಲ್ಲ
ಬಂದು ದಿವಸ ಮನ ಬಂದಾಗಲು ಹರಿಗೋ-
ವಿಂದನೆಂದೆನಲಾಗಿ ಭಕುತಿಯಿಂದ
ಹಿಂದಾಗನುವೇಗದಿಂದ ಸಾಕುವನು
ನಂದ ಮತಿಯನಿತ್ತಾನಂದ ದೈವ
ಎಂದು ಕೇಳಿ ನಾನು ಬಿಂದು ನಿನ್ನನು ಕಾಯ್ದೆ
ತಂದೆ ಶ್ರೀ ವಿಜಯವಿಠ್ಠಲನೆ ಮನ್ನಿಪುದು ೩
ಅಟ್ಟತಾಳ
ಮನೆ ಮುಂದೆ ಪೀಯೂಷ ವನಧಿಯಿರಲು ಉದಾ
ಸೀನ ಮಾಡಿ ನೂರು ಯೋಜನ ಪೋಗಿ ಕೊಳ-
ಚಿನೀರನು ನೋಡಿ ಕೊಂಡಾಡಿ ತನು ರೋಮಾಂಚನ ಉಬ್ಬಿ
ಮನಕೆ ಬಂದ ಹಾಗೆ ಕುಡಿದು ದೇವರ ನೆನೆದು
ದಣಿದು ಬಾಯಾರಿದೆ ಗುಣಹಿನ ನಾನಾಗಿ
ಜನುಮಾದಿರಹಿತ ಶಿರಿ ವಿಜಯವಿಠ್ಠಲ
ಎನಗೊಂದು ಸಾಧನ ತೋರಿ ನಿನ್ನ ದಾಸನ್ನ ಮಾಡೋ ೪
ಆದಿತಾಳ
ಹಾರಿ ಹಾರಿ ಪಾರಲಾರೆ ಚೀರಿ ಕೂಗಿ ಕರೆಯಲಾರೆ
ಮೋರೆ ಮೇಲೆ ಎತ್ತಿಕೊಂಡು ಸಾರಿಸಾರಿಗೆನಲಾರೆ
ಆರು ಮಾಡಿದಂತೆ ಆರಾಧನೆ ಮಾಡಲಾರೆ
ಭಾರಕರ್ತ ಬ್ರಹ್ಮಣ್ಯ ವಿಜಯವಿಠ್ಠಲ ಕೇಳು
ಸೂರ ಮನವೆ ನಿನಗಲ್ಲದೆ ಬ್ಯಾರೆ ಎನಗೆ ಕರ್ಮವಿಲ್ಲ ೫
ಜತೆ
ನಾಮದ ಶರಣನ ಮಾಡು ಮನಮಥ ಜನಕ
ಕ್ಷೇಮಕೃತೆ, ವಿಜಯವಿಠ್ಠಲ ದಯದಿಂದ ೬

ಶರಣಾಗತರಿಗೆ ವಜ್ರ ಪಂಜರನೆನಿಸಿಕೊಂಡಿರುವ

೧೧೩
ಧ್ರುವತಾಳ
ಶರಣಾಗತ ವಜ್ರ ಪಂಜರ ಜರಾಮರಣ
ವಿರಹಿತ ವಿಶ್ವಕಾಯಾ ಕುಂಜರ ಪತಿ ಪ್ರೀಯ
ಸರಸ ಸದ್ಗುಣ ಸಾಂದ್ರ ಶರಣು ಯದುಕುಲೇಂದ್ರ
ನಿರಯವಿದೂರ ನಿರ್ಜರಗಣ ಮನೋಹರ
ಪರಮಾತ್ಮ ಮೂಲ ಪುರುಷ ಅಪರಿಚ್ಛಿನ್ನ ಮೂರುತಿ
ಮುರ ವೈರಿ ಮುಕುಂದ ಸರಸಿಜನಯನ
ನಿರ್ವಿಕಾರ ನಿರ್ಭಯ ನಿರುಪಮ ನಿರಂಜನ
ಕರುಣ ಶರಧಿಯೆ ಶ್ರೀಧರ ಶ್ರೀನಿವಾಸ
ಸುರರ ಮಸ್ತಕ ಮಣಿ ಪರತತ್ವ ಅಣೋರಣಿ
ತುರಗ ವದನ ದೇವ ವಿಜಯ ವಿಠ್ಠಲರೇಯ
ಸರಿಗಾಣೆ ನಿನಗೆ ಎನಗೆ ಕರುಣ ಮಾಡು ೧
ಮಟ್ಟತಾಳ
ಸಾಧನವೆಂಬೋದು ಆವುದು ಆವುದು
ಹಾದಿ ಒಂದಾದರು ಕಾಣೆನೊ ಕಾಣೆನೊ
ಕ್ರೋಧ ಮದಗಳಿಂದ ಕಾಲವ ಪೋಗಾಡಿ
ಈ ದೇಹವೆ ವ್ಯರ್ಥವಾಗಿ ದಿನವ ಕಳೆದೆ
ಸಾಧುಗಳ ಸಂಗ ಕ್ಷಣವಾದರು ಮಾಡಿ
ಪಾಥೆ ಬಿಗಿಯಲಿಲ್ಲ ಹರಿ ನಿನ್ನ ನಗರಿಗೆ
ಬೋಧ ಮೂರುತಿ ನಮ್ಮ ವಿಜಯ ವಿಠ್ಠಲ ನಿನ್ನ
ಪಾದವ ನಂಬದಲೆ ಪತಿತನು ನಾನಾದೆ ೨
ತ್ರಿವಿಡಿತಾಳ
ತಿಳಿದು ತಿಳಿದು ಎನ್ನ ಮನಸು ಚಂಚಲವಾಗಿ
ಸುಳಿಯೆಂಬೊ ಭವದೊಳು ಶಿಲ್ಕಿ ಸುತ್ತುತಲಿದೆ
ಹೊಳೆಯುತುಂಬಿದ ವಾರ್ತಿ ದೂರದಿಂದಲಿ ಕೇಳಿ
ಶಿಲಿಯ ಮೇಲೆ ದಾಟಿ ಪೋಗುವೆನೆಂದು ಯೋಚಿಸಿ
ತಲೆಯಲ್ಲಿ ಧರಿಸಿ ಆ ಹೊಳಿಯ ತೀರಕ್ಕೆ ಬಂದು
ಜಲದೊಳು ಶಿಲೆ ಇಟ್ಟು ಬೆರಗಾಗಿ ನಿಂತಂತೆ
ಹೊಲೆ ಸಂಸಾರದೊಳು ಶಿಲ್ಕಿ ಇದ್ದು ಈ ಪರಿಯಲ್ಲಿ
ಹಲುಬಿ ಯೋಚನೆ ಮಾಡಿ ಹಕ್ಕ ಮನನಾದೆ
ಕಲಿ ವಿನಾಶನ ರಂಗ ವಿಜಯ ವಿಠ್ಠಲ ನೀನೆ
ಸಲಹಬೇಕಯ್ಯಾ ಸಂತತ ಎನ್ನ ಬಿಡದಲೆ ೩
ಅಟ್ಟತಾಳ
ಹಾರುವುದು ಮನ ಕಂಡ ಕಡೆಯಲ್ಲಿ
ಮೀರುವುದು ಎನ್ನ ವಶಕೆ ನಿಲ್ಲಲೇವೆ
ಸೇರುವುದು ಅನ್ಯ ವಚನವೆ ಸವಿಯೆಂದು
ಕೋರುವುದು ದುರ್ಗತಿ ಪಂಥ ಆವಾಗ
ಜಾರುವುದು ಸಜ್ಜನರ ಕಾಣುತ ಹಿಂದೆ
ನಾರುವುದು ಅಹೋರಾತ್ರಿ ದುರ್ಗಂಧದಲಿ
ತಾರುವುದು ಕಿಂಚಿತ ಪುಣ್ಯವಿದ್ದರು
ಸಾರಿದವರ ದಾತಾ ವಿಜಯ ವಿಠ್ಠಲ ಕೃಪಾ
ವಾರಿಧಿಯೆ ನಿನ್ನ ಆರಾಧಿಸುವೆನೆಂತೊ ೪
ಆದಿತಾಳ
ಅಪರಾಧಾನಂತವಿರಲು ಕೃಪೆಯಿಂದಲಿ ನೋಡುತ
ಅಪಾರ ಮಹಿಮನೆ ನೀ ಪತನ ಗೈಸೋದು
ಉಪಚರಣೆ ಎನ್ನದೇನೋ ಉಪಕಾರ ನಿನ್ನದಯ್ಯಾ
ಜಪತಪದಿಂದಲಿ ಇದು ಉಪಶಮನವಾಗುವುದೆ
ಗುಪಿತವಾಗಿದ್ದ ನಾಮಾ ಉಪಗೀತ ಮಾಡಿದರೆ
ತಪಿಸುವ ಕರ್ಮಗಳು ಅಪಹಾಸವಾಗುವುವು
ಕಪಟ ನಾಟಕ ನಮ್ಮ ವಿಜಯ ವಿಠ್ಠಲರೇಯ
ಅಪವರ್ಗಕ್ಕೆ ನಿನ್ನ ತಪವ ಒಂದಲ್ಲದೆ ಇಲ್ಲ೫
ಜತೆ
ಸರ್ವ ಸಾಧನದೊಳಗೆ ನಿನ್ನ ನಾಮಕೆ ಸರಿ
ಊರ್ವಿಯೊಳಗಿಲ್ಲ ವಿಜಯ ವಿಠ್ಠಲ ಧೊರಿಯೆ ೬

ಸಾತ್ವಿಕ ಚೇತನದ ಸ್ವಭಾವ ಶುದ್ಧವೇ ಆದರೂ

೧೧೪
ಧ್ರುವತಾಳ
ಶುದ್ಧ ಸ್ವಭಾವ ಜೀವ ಜ್ಞಾನಾನಂದ ಶರೀರ
ನಿರ್ದೋಷ ನಿರ್ವಿಕಾರ ಅನಾದಿ ಲಿಂಗ
ಬದ್ದವಾಗಿಪ್ಪ ಸಂರ‍ಸತಿಯಲ್ಲಿ ನೆಲೆಯಾಗಿ
ಬಿದ್ದು ಸಂಚರಿಸುವ ನಾನಾ ಯೋನಿ
ಬುದ್ಧಿಯ ತೋರದೆ ವಿಷಯ ಭುಕ್ತಿಯಲ್ಲಿ
ಸನ್ನಿದ್ದನಾಗಿಪ್ಪ ಪುನರಾವರ್ತಿಯ ಎಡೆಗೆ
ಇದ್ದದ್ದೆ ಅನುಭವಿಪ ಇದರಿದರ ಕಾರಣ
ಪೊದ್ದಿಕೊಂಡಿಪ್ಪವು ತ್ರಿಬಣ್ಣದಲ್ಲಿ
ಪದ್ಧತಿ ವುಂಟು ಕೇಳಿ ಮೇಲೆ ಮೇಲೆ ಸ
ಮುದ್ರದ ತೆರೆಯಂತೆ ಕರ್ಮಂಗಳು
ಭದ್ರಾಭದ್ರಗತಿಗೆ ಸಾಧನ ವಾಹದಿದಕೊ
ಸಿದ್ಧವಾದ ಪ್ರಮೇಯ ತಿಳಿಯಬೇಕು
ಮಧ್ವ ಮತವ ಪೊಂದಿ ನಡೆದ ಮಾನವ ಪ್ರ
ಸಿದ್ಧವಂತನು ಕಾಣೊ ಗುಣವಂತನು
ಗೆದ್ದು ಪೋಗುವ ಭವ ರಾಷ್ಟ್ರವ ದಾಟಿ ಭ್ರಾಂತಿ
ಒದ್ದು ತೀವ್ರದಿಂದ ಹರಿಪುರಕ್ಕೆ
ಸುದ್ದಿಯ ಕೇಳಿ ಜನರು ಯೋಗದಿಂದಲಿ ನಿತ್ಯ
ಇದ್ದು ಮುಕ್ತರೊಳಗೆ ಮೂರು ಬಗೆ ಉಂಟು
ಪದ್ಮಜ ವಿಡಿದು ಪುಷ್ಕರ ಪರಿಯಂತ ಮಹಾ
ವಿದ್ಯಾವಂತರು ಅಪ್ರತೀಕಾಲಂಬರ
ಸದ್ಮುನಿಗಳು ಯೆಂಭತ್ತು ರಾಯರು ನೂರು
ತ್ರಿದ್ದಶಗಂಧರ್ವ ಅಪ್ಸರರು ಯಿಷ್ಟೇ
ಅರ್ಧಯಿಂದ್ರರು ಹನ್ನೊಂದು ಮಂದಿ ಮನುಗಳು
ನಿರ್ಧಾರವಾಗಿ ಯಕ್ಷದೈತ್ಯ ವಿದ್ಯಾಧರ
ಸಿದ್ದ ಸಾಧ್ಯರು ವಿಜಯ ಜಯಾದಿ ದ್ವಾರಪಾಲರು
ಖದ್ಯೋತ ಸಾರಥಿ ದಿನ ತಾರಾಯೋಗ ಕರಣಾ
ಅಬ್ದ ದ್ವಯಪಕ್ಷ ದಕ್ಷಿಣೋತ್ತರಾಯಣ
ಅದ್ರಿ ಅವಾಂತರ ಗಗನ ದ್ವೀಪ ಪ್ರತಾಪ
ಅಧ್ವರ ಮೊದಲಾದ ದ್ರವ್ಯಂಗಳಾಭಿಮಾನಿ
ಕದ್ರುವೆ ಮಕ್ಕಳು ಧೇನು ಸ್ವಾನದಿ ಸರ್ವ
ಕ್ಷುದ್ರವಾಗಿದ್ದ ಪದಾರ್ಥಾಭಿಮಾನಿಗಳು
ಈ ಧರೆ ಯೊಳಗೆ ಅಲ್ಪಾಧಿಕಾರಿಗಳಿವರು
ನಿದ್ರ್ವಂದ್ವರಿವರೊಳು ಪ್ರತೀಕಾಪ್ರತೀಕಾ ಲಂಬನರು
ಸಿದ್ಧವಾಗಿಪ್ಪರು ವಿವರ ತಿಳಿಯಬೇಕು
ಬದ್ಧವಾಗಿ ಪೇಳುವೆ ಮನುಜ ಗಂಧರ್ವ ಹರಿ
ಗದ್ದುಗೆವುಳ್ಳ ಜನರು ಮುನಿ ಪಿತೃ ಮನುಜೋತ್ತಮರು
ಇದ್ದ ಜಂಗಮ ಸ್ಥಾವರ ತೃಣಾದಿಗಳು ಅ
ನಾದ್ಯ ಕಾಲದಿಂದಲಾನಧಿಕಾರಿಗಳು
ಅದ್ಯರ್ಧ ಪತಿ ನಮ್ಮ ವಿಜಯ ವಿಠ್ಠಲ ನಂಘ್ರಿ
ಪದ್ಮವ ಭಜಿಸುವರು ಭಾವದಲ್ಲಿ ತಿಳಿದು ೧
ಮಟ್ಟತಾಳ
ಷೋಡಶ ಕಲೆವುಳ್ಳ ಲಿಂಗ ದೇಹವು ನಿತ್ಯಾ
ಗೂಡಿನಂತಿಪ್ಪದು ಜೀವಿಗಳಿಗೆ ಬಿಡದು
ನೋಡಿದರಲ್ಲಿ ಕಾರಣ ರೂಪಗಳು
ಜೋಡಿಸಿದಂತೆ ಪೊಂದಿಪ್ಪವು ಕಾರ್ಯಗಳು
ಮಾಡವು ಅಲ್ಲಿಂದ ತೆರಳಿ ಬಾರದ ತನಕಾ
ಕೂಡಿಕೊಂಡು ತಮ್ಮ ಸ್ವಭಾವಗಳವೆರೆಸಿ
ನಾಡಿಯೊಳಗಿದೆ ತಾರತಮ್ಯದಿಂದಾ
ರೂಢಿಸಿ ಮರೆಯದೆ ಮಾತಾಡು ಭಕುತಿಯಿಂದ
ಪಾಡಿದವರ ಪ್ರಾಣ ವಿಜಯ ವಿಠ್ಠಲರೇಯ
ಬೇಡಿದ ವರಗಳ ಕೊಡುವ ಈ ಪರಿ ಕೊಂಡಾಡೆ ೨
ತ್ರಿವಿಡಿತಾಳ
ಮನದಲ್ಲಿ ಅಸೂಯಾ ಈರ್ಷಾ ಚಂಚಲ ಯೋ
ಚನೆ ಸತ್ವದಲಿಉಂಟು ರಜೋ ಭಾಗದಲಿ
ಮಿನುಗುವ ಕರ್ನದಲ್ಲಿ ಬಧಿರತ್ವವುಂಟು ಕ
ಣ್ಣಿನಲಿ ಕಾಚು ಮಲ ಮೊದಲಾದವು
ತನುವಿಗೆ ಬರುವ ಕುಷ್ಟರೋಗ ತ್ವಕ್ಕಿನಲ್ಲಿ
ಅನುದಿನ ರಸನದಲ್ಲಿ ಪ್ರೋಷಾದಿಯಾ
ಪಿನಸಯೆಂಬುವುದು ನಾಸಿಕದಲ್ಲಿ ಉಂಟು
ಇನಿತೇ ತಿಳಿವುದು ಐದು ಜ್ಞಾನೇಂದ್ರಿಯ
ಇನಿತಾದ ಮೇಲೆ ಮೂಕತ್ವ ವಾಕ್ಯದಲ್ಲಿ
ಎಣಿಸು ಹಸ್ತದಲಿ ಚೊಂಚತನವೂ
ಘನ ಹೆಳವತ್ವವೆ ವುಂಟು ಪಾದದಲ್ಲಿ ಪಾಯು
ವಿನಲ್ಲಿ ಭಗಂದರ ಗುಹ್ಯದಲ್ಲಿ ಮೇಹ
ಗುಣಿಸು ಈ ಪರಿಯಲ್ಲಿ ಕರ್ಮೇಂದ್ರಿಯಂಗಳೈದು
ಗಣಿತ ಮಾಡಲು ಹತ್ತು ಕರಣದೋಷ
ವನೆ ನೋಡು ಪಂಚ ತನ್ಮಾತ್ರಗಳು ತಮೋಭಾಗ
ವನುಸರಿಸಿ ಕೊಂಡಿವೆ ಇದರ ವಿವರ
ಜನರು ಕೇಳುವುದು ಶಬ್ದದಲ್ಲೀಗ ಮೆ
ಲ್ಲನೆ ನುಡಿವೋ ನುಡಿ ಸ್ಪರ್ಶದಲ್ಲಿ
ಎಣೆಗಾಣೆ ದುರ್ವಾಸನೆ ಈ ಬಗೆ ವುಂಟು ರೂ
ಪಿನಲಿ ದೂರಸ್ಥದ ನೋಟ ರಸದಿ
ತಿನಲಿಕ್ಕೆ ಬಾರದ ತಿಕ್ತಾದಿಗಳು ದುರ್ವಾ
ಸನೆ ಗಂಧದಲ್ಲಿ ಉಂಟು ಕಾರಣ ರೂಪ
ದಿನ ಪ್ರತಿ ದಿನ ಇದಕೆ ಸಹಾಯವಾದ ಐ
ದನೆ ಪೇಳ್ವೆ ತಮ ಮೋಹ ಮಹ ಮೋಹ ತಾಮಿಸ್ರ
ಅನುಮಾನವಿಲ್ಲದೆ ಅಂಧ ತಾಮಿಸ್ರ ಸಜ್ಜ
ನರಿಗೆ ವಿಪರೀತ ಕೊಡುವವಯ್ಯಾ
ಅಣುವಾಗಿ ಅಣುವಾಗಿ ಲಿಂಗದೊಡನೆ ಸು
ಮ್ಮನೆ ಇಪ್ಪವು ಇಂದ್ರಿಯಂಗಳು ಸಹಿತ
ಗುಣ ವೈಷಮ್ಯವಾಗೆ ಅನಿರುದ್ಧದಲ್ಲಿ ಪ್ರಯೋ
ಜನ ಕಾಂರ್ಯೋನ್ಮುಖವಾಗಿ ಮಾಡಿಪ್ಪವು
ದನುಜರಮರರಿಲ್ಲಿ ಸ್ಥಾನಿಕರಾಗಿ ಸಾ
ಧನ ಮಾಡಿಸುವರು ಹರಿ ಆಙ್ಞಯಿಂದ
ಮನ ಮಿಕ್ಕಾದದರಲ್ಲಿ ದೋಷಗಳಿರೆ ಲಿಂಗ
ತನುವಿನಲ್ಲಿ ಬಾಧೆ ಮಾಳ್ಪವಲ್ಲಾ
ಅನಿರುದ್ಧ ಕಾರ್ಯದಲಿ ಆದ ಕ್ಲೇಶಂಗಳು ಜೀ
ವನಕೆ ಅನುಭವವಕ್ಕು ಹರಿಯ ಶಕ್ತಿ
ಬಿನಗುಪ್ರದವ ಬರಲು ದೇಹಕ್ಕೆ ಇದೇ ಸ್ಥೂಲಾ
ತನುವಿಗೆ ಬರಲಾಗಿ ಅನಿರುದ್ಧಕ್ಕೆ
ಇನಿತು ನೋಡಿದರೆ ವಿಸ್ತಾರವೊ
ಅನಿಮಿಷ ತತಿಗಳಿಗೆ ತಾರತಮ್ಯವೆ ಉಂಟು
ನೆನೆಸು ಅಂಶಾವೇಶ ಅವತಾರದಿ
ಮುನಿ ಮನುಜಾದ್ಯರಿಗೆ ಇದೆ ಇದೆ ಪ್ರಕಾರ
ಅಣು ಘನವಾಗಿದೆ ಕಾಲ ಭೇದ
ವನಜ ಗರ್ಭಗೆ ಮಾತ್ರ ದೋಷ ಕಾರ್ಯಗಳಿಲ್ಲಾ
ತನೆ ಸಮರ್ಥನು ಕಾಣೊ ಮುಖ್ಯ ಪಾತ್ರ
ಮನೆಯೊಳು ದೀಪಸ್ತಂಭದ ಸುತ್ತ ದೀವಿಗೆ

ಕಾಶಿಯ ಬಿಂದು ಮಾಧವ ಹಾಗೂ

೨೨. ಕಾಶಿ
ಧ್ರುವತಾಳ
ಶ್ರೀ ಕೇ[ಶ]ವಾದಿ ಯಾವದೊಂದಂಗಾ ಪೊತ್ತಾ |
ಲೋಕೈಕಾ ವೈಲಕ್ಷಣ್ಯ ಪೂರ್ಣಾಪೂರ್ಣಾ |
ಸಾಕಾರಾ ಮೂರುತಿ ಪ್ರಾಣೆಂದಿರಾಪತಿ ಅ |
ನೇಕರೂಪ [ಕ್ರೀ]ಯಾ ಗುಣಗಣನಂತಾನಂತ |
ಶೋಕವಿನಾಶ ನಾರಸಿಂಹಾದಿ ಕ್ಷೇತ್ರಜ್ಞ |
ಲೋಕೇಶ ಮೊದಲಾದ ತತುಶಬ್ದದಿಂದ |
ಓಂಕಾರಾದಿ ವರ್ಣಾಭಿದೇಯಾ |
ಶ್ರೀ ಕಾಂತಾ ಸಮಸ್ತ ಶಕ್ತಿ ಜ್ಞಾನಾತ್ಮಕ |
ವೈಕುಂಠನಾಯಕ ವೈತರಣಿ ತಾರಕಾ |
ಏಕಾರ್ಣವಾಸ ವಟಪತ್ರ ಶಾಯೀ |
ಏಕಾಂತಿಗಳ ಮನೋರಥವೆ ರಾಕ್ಷಸಾರಾತಿ |
ಗೋಕುಲಾ ಭೂಮಿ ಪಾವನ ಜೀವನಾ |
ವೈಕಾರಿಕ ತೈಜಸ ತಾಮಸ ಕರ್ಮ, ಪುಣ್ಯ |
ಶ್ಲೋಕಾನೆ ನಿನಗೆ ಅರ್ಪಿತವಾಗಲಿ |
ನಾಕ ನದಿಯ ಜನಕ ವಿಜಯವಿಠಲ ವಿ |
ವೇಕಬುದ್ಧಿಯ ಕೊಡು ಬಿಂದು ಮಾಧವ ಕಾಶಿ ೧
ಮಟ್ಟತಾಳ
ಕಾಶಿಗೆ ಬಂದೆನಯ್ಯಾ ಕಾಶಿಗೆ ಬಂದೆ ಶತ |
ಕಾಶಿಗೆ ಬಂದೆನಯ್ಯಾ ಕಾಶಿಗೆ ಬಂದರಾಗಾ ಕಾಸಾವಿಸಿಪೋಗರು |
ಕಾಶಿನಿಂದಲಿ ದೇಹ ಕಾಸಿದಂತಾಯಿತು |
ಕಾಶಿಜಪತಿ ವಂದ್ಯಾ ವಿಜಯವಿಠಲ ಯೇ |
ಕಾಶಿಯ ಬಿಡಿಸೂ ಕಾಶಿಯ ಪುರ ಧೊರಿಯೆ ೨
ತ್ರಿವಿಡಿತಾಳ
ಆವಾವಾಬಗೆಯಿಂದ ಇದ್ದಾರಾದಾನು |
ದೇವಾ ನೀನೆ ಕರುಣಮಾಡಿ ಎನ್ನಾ |
ಕಾವ ಮಾತಲ್ಲಾದೆ ಮತ್ತೊಂದು ಯೋಚನೆ |
ಆವಾವಾ ಜನುಮಕ್ಕೆ ಮಾಡೆನಯ್ಯಾ |
ಪಾವನ ಪಾವನ ನಿನ್ನಾಧ್ಯಾನವೆ ಜಗ |
ತ್ಪಾವನ ನಿನ್ನ ಪಾದೋದಕಕೆ ಉಂಟು |
ಈ ವಿಧವಲ್ಲದೆ ಸಾಧ್ಯಾಸಾಧನವಿಲ್ಲ |
ಕೋವಿದರರಸನೆ ಕೇಶವ ಮೂರ್ತಿ |
ನೋವು ಇಲ್ಲದಂತೆ ಕರತಂದು ನಿನ್ನಂಘ್ರಿ |
ದಾವರೆ ಜಲದಲ್ಲಿ ಮೀಯೀಸಿದೇ |
ಭಾವದಲಿ ಭಕ್ತರು ನೆನೆದದ್ದು ಪೂರೈಸಿ |
ಸಾವಧಾನವಾಗಿ ಕೊಡುವವನೆ |
ಪೂವಿಲ್ಲನಯ್ಯಾ ಶ್ರೀ ವಿಜಯವಿಠಲ ಮಾಧವ |
ಶ್ರೀ ವಾರಣಾಸಿಯ ವಾಸಾ ನಾನಾವೇಷಾ ೩
ಅಟ್ಟತಾಳ
ಅನಂತ ಅಪರಾಧ ಮಾಡಿದ ಕಾಲಕ್ಕೂ |
ನೀನೆಣಿಸುನಲ್ಲಾ ಸತ್ಯಕಾಮನೆಂದು |
ಶ್ರೀ ನಾರಿಬೊಮ್ಮಾ ಮಹೇಂದ್ರಾದ್ಯರು ನಿತ್ಯ |
ಎಣಿಕೆಮಾಳ್ಪರು ಎಲ್ಲೆಲ್ಲಿ ನಿರೀಕ್ಷಿಸಿ |
ಮಾಣಾದೆ ಮತಿಯಿಂದ ತಲೆದೂಗಿ ಅನುಭವ |
ಏನೆಂಬೆ ನಿಮ್ಮಯ ಬಲು ಪ್ರತಾಪಕ್ಕೆ |
ಮಾನವಾಗುಣಿಸಿ ನೆಲೆಗಾಣ ಬಲ್ಲನೆ |
ಮೇಣೀ[ಗಿರೀ]ಶಗೆ ಕಾಶಿ ಪಟ್ಟಣದಲ್ಲಿ |
ನೀನಿಲಿಸಿದೆ ಬ್ರಹ್ಮಹತ್ಯವ ಪೋಗಾಡಿ |
ಆನಂದ ವನವಾಸಾ ವಿಜಯವಿಠಲರೇಯಾ |
ಜಾನ್ಹವಿ ಪಡೆದ ಜಗದ ಮೋಹನ ಸ್ವಾಮೀ ೪
ಆದಿತಾಳ
ನರಕತಾರಕ ನಾರಾಯಣ ನರಕಮಾರಕ ನಾರಾಯಣ |
ನರ ನಾರಾಯಣ ನಾರದವರದ |
ಹರಿ ವಾಸುದೇವ ಪರಮ ಮಂಗಳ ಪರದೈವ |
ನೆರೆನಂಬಿದೆ ನಿನ್ನ ಚರಣ ಶರಣವರಣ |
ಶರಣ ನರಕತಾರಕ ನಾರಾಯಣಾ ಕರುಣಾ |
ಶರಧಿ ತ್ರಿಪುರವೈರಿ ಕರಶರಸರಸಿಜಾಂಡಾಕರಾ |
ವರಣ ಅಸಿ ಸಂಗಮನಿಲಯ |
ನರಕೋದ್ಧಾರಕ ವಿಜಯವಿಠಲ |
ನರಹರಿ ಬಿಂದು ಮಾಧವ ಕಾಶಿ ೫
ಜತೆ
ಅಗ್ನಿಬಿಂದು ವರದಾ ಅನಾದಿಮೂರುತಿ |
ಅಜ್ಞಾನಾ ಪರಿಹಾರಾ ವಿಜಯವಿಠಲ ಕಾಶಿ ೬

ಈ ಸುಳಾದಿಯೂ ಗಯೆಯನ್ನೇ ಕುರಿತದ್ದಾಗಿದೆ.

೨೮. ಗಯಾ
ಧ್ರುವತಾಳ
ಶ್ರೀ ಗಯಾದ ಯಾತ್ರಿಮಾಡಿ ಸಿದ್ಧ ಸಾಧ್ಯ ಮಾನವರು |
ಆಗಮೋಕ್ತಿಯಿಂದ ತಿಳಿದುನೋಡಿ |
ಭೋಗದಾಸೆಯ ಬಿಟ್ಟು ಭಕುತಿಮಾರ್ಗದಿಂದ |
ಯೋಗಿ ಜನರ ಸಂಗಡದಿಂದಲಿ |
ಯಾಗ ಮೊದಲಾದ ಕರ್ಮಕಲಾಪಂಗಳು |
ತ್ಯಾಗಮಾಡಿದರು ದೋಷವಿಲ್ಲಾ |
ಸಾಗಿ ಬಂದ ಇಲ್ಲಿ ನೂರೊಂದು ಕುಲವ ಲೇ |
ಸಾಗಿ ಉದ್ಧರಿಸಬೇಕು ತ್ರಿಕರ್ಣದೀ |
ಭಾಗಾದೆಯಾದವ ದ್ವೇಷದಿಂದಲಿ ಬರ |
ಲಾಗಿ ಮುಕ್ತಿಯುಂಟು ಪಿತ್ರಾದಿಗೇ |
ಈಗಲಾಗೆನ್ನದಿರಿ ಕಂಡ ಮಾತುರಬಲು |
ವೇಗಾದಿಂದಲಿ ನರಕಾ ದೂರಾಗೋವೂ |
ಸಾಗರಶಾಯಿ ನಮ್ಮ ವಿಜಯವಿಠಲನಂಘ್ರಿ |
ಜಾಗುಮಾಡದೆ ನೆನಸೆ ಸಮಸ್ತ ಕಾರ್ಯಸಿದ್ಧಿ ೧
ಮಟ್ಟತಾಳ
ಪರಮ ಪ್ರಿತಿಯಿಂದ ಫಲ್ಗುಣಿ ಶ್ರಾದ್ಧವನು |
ವಿರಚಿಸಿ ವಿನಯದಲಿ ಪ್ರಥಮ ದಿವಸದಲ್ಲಿ |
ತರುವಾಯ ಕಮಲಾಸನ ತೀರ್ಥಪ್ರೇತ ಶಿಲೆಯು |
ಚರಿಸಿ ಚತುರನಾಗಿ ಎರಡನೆ ಸ್ಥಾನದ |
ಲಿರಾಮ ಪರ್ವತರಾಮಾ |
ಸರೋವರ ಕಾಕಬಲಿ |
ಎರಡೆರಡೂ ಒಂದೂ ಸ್ಥಳ ಒಂದೇ ದಿವಸ |
ಕರಣಶುದ್ಧಿಯಿಂದ ಪಿಂಡ ಪ್ರದಾನಗೈದು |
ಸುರಸಾರ್ವಭೌಮ ವಿಜಯವಿಠಲ ಗದಾ |
ಧರನ ಪ್ರೀತಿಬಿಡಿಸಿ ಕುಲವನು ಉದ್ಧರಿಸಿ ೨
ರೂಪಕತಾಳ
ಉತ್ತರ ಮಾನಸ ಕನಕ ತೀರ್ಥಸೂರ್ಯ |
ಹತ್ತಿಲಿ ದಕ್ಷಿಣ ಮಾನಸ ಮಧುಕುಲ್ಯಾ |
ಸತ್ಯವಾಗಿ ಐದು ಸ್ಥಾನದಲ್ಲಿ ತಮ್ಮ |
ಪಿತೃಗಳನುದ್ಧರಿಸೆ ಅಲ್ಲಿಂದಾ ಮರುದಿವಸಾ |
ಮಾತೆಮಾತಂಗ ಧರ್ಮರೂಪ ಅಶ್ವತ್ಥ |
ತತ್ತಳಿಸುವ ಬ್ರಹ್ಮಕುಂಡಕ ಕಾಶ್ವಾನ |
ಪ್ರತ್ಯೇಕವಾಗಿ ಪಿಂಡ ಪ್ರದಾನವ ಗೈದು |
ಪಿತೃಮಾತೃವಂಶಗತಿಗೆ ಪೊಂದಿಸುವುದು |
ಸತ್ಯಸಂಕಲ್ಪ ವಿಜಯವಿಠಲರೇಯ |
ಆತ್ಮಸಮ್ಮತ ಪಾಲಿಸುತಿಪ್ಪ ಪ್ರತಿದಿನಾ ೩
ತ್ರಿವಿಡಿತಾಳ
ಇನಿತು ಮಾಡಿದ ಮೇಲೆ ಪಿಷ್ಠಯುಳ್ಳು ಪರಮಾನ್ನ |
ಘನಕ್ಷೀರ ತರ್ಪಣದೀಪವ ವಿರಚಿಸಿ |
ಅಣೋರಣಿಯಾದ ಶ್ರೀ ವಿಷ್ಣುಮೂರ್ತಿಯ ಮತ್ತೆ |
ವನಜಾಸನಾ ರುದ್ರ ಇಂದ್ರ ಸ್ಕಂದಾರ್ಕಾಬ್ಜಾ |
ಅನಲೈದು ಗಣೇಶ್ವರ ಕ್ರೋಂಚಕಲಶೋದ್ಭವ |
ಮುನಿ ಕಾಣ್ವದಧಿಚಿ ಮಾತಂಗಾ ಕಶ್ಯಪಮುನಿ |
ಎಣಿಸಿ ಹತ್ತೊಂಭತ್ತು ಪಾದದ ಮೇಲೆ ಸ |
ದ್ಗುಣದಿಂದ ಪೂರ್ವೋಕ್ತ ಪ್ರಕಾರಮಾಳ್ಪದೂ |
ಗುಣಪೂರ್ಣ ವಿಜಯವಿಠಲ ಗದಾಧರಗೆ ವಂ |
ದನೆಮಾಡು ಗಜರೂಪದಲ್ಲಿ ಬಂದು ನಿಂದೂ ೪
ಝಂಪೆತಾಳ
ಭಕುತಿಯಿಂದಲಿ ಮೂಲವಟದಲ್ಲಿ ಶ್ರಾದ್ಧವನು |
ಸಕಲ ಗೋತ್ರಗಳು ಉದ್ಧಾರಾರ್ಥವಾ |
ಲಕುಮಿ ಕುಂಡ ಗದಾ, ಲೋಲಕರ್ನಿಕೆಯಲ್ಲಿ |
ಮಖ ಸಮನಾದ ಪಿಂಡಗಳನಿಟ್ಟೂ |
ಭಕುತಿಯಿಂದಲಿ ಕ್ಷೇತ್ರವಾಸಿಗಳ ಪೂಜಿಸಿ |
ಸುಖಬಡಿಸಿ ವಟದಲ್ಲಿ ಪಂದ ಪ್ರದಾನವಗೈದು |
ಕಕುಲಾತಿ ಸಲ್ಲಾ ನಿಮಗೆಲ್ಲಿ ಈ ನಿಧಿಯಲ್ಲಿ |
ದುಃಖದಿಂದ ಕಡೆಬಿದ್ದು ಪೋಪನರನು |
ಅಖಿಳ ಲೋಕೇಶ ಸಿರಿ ವಿಜಯವಿಠಲರೇಯಾ |
ಅಕಳಂಕ ಜನರೊಡನೆ ಇಡುವ ಕರುಣದಲಿ ೫
ಅಟ್ಟತಾಳ
ಸೀತರಾಮ ಗಯ ಗಯ ಶೀರ್ಷಯರೂಪ |
ನೀತಾ ಮುಂಡ ಪೃಷ್ಠಗಿರಿ ಆದಿಗಯ ಮುಂದೆ |
ಧೌತ ಪಾಪ ಭೀಮ ಗಯ ಗೋಪಾದವು |
ವೈತರಣಿ ತೀರ್ಥ ಇನಿತು ಸ್ಥಾನದಲ್ಲಿ |
ಕಾತುರದಿಂದಲಿ ಪಿಂಡ ಪ್ರದಾನವ |
ಮಾತಾ ಪಿತೃಗಳಿಗೋಸುಗ ಸ್ವಾಮಿ
ಕೈಯಲ್ಲಿಕೊಟ್ಟುಕೊಂಡಾಡಿ ಆ |
ತುಮಾರ್ಥವಾಗಿ ದಧ್ಯಾನ್ನದ ಪಿಂಡ |
ದಾತ ಜನಾರ್ಧನಸ್ವಾಮಿಯ ಕೈಯಲ್ಲಿ |
ತಾ ತೃಪ್ತಿಯಿಂದಲಿ ತಿಲರಹಿತವಾಗಿ |
ಪ್ರೀತಿಯಿಂದಲಿ ಕೊಟ್ಟು ಸ್ತೋತ್ರವ ಮಾಡೀ |
ಗಾತುರ ತೊಲಗಿದಾಗಲಿ ಮುದದಿಂದ ಪ್ರ |
ಖ್ಯಾತ ವಿಷ್ಣು ಪಾದದಲ್ಲಿ ಹಾಕೆಂದು ಭಕುತಿಯಿಂದಲಿ ಪೇಳಿ |
ಸಂತೋಷವಹುದು ಹೇಯದಾನವ ಹರ
ವಿಜಯವಿಠಲರೇಯಾ |
ಭೂತಳದೊಳಗೆ ಈ ತೆರದಲ್ಲಿ ಮೆರೆವ ೬
ಆದಿತಾಳ
ಶ್ರೀ ಗಯಾ ಯಾತ್ರಿ ಸಾವಿತ್ರಿ ಸರಸ್ವತಿ ತೀರ್ಥಮಿಂ[ದು ನಿ] ತ್ಯ |
ಈ ಗಿರಿಗಳಲ್ಲಿ ಇಷ್ಟಾರ್ಥಬೇಡುವುದು |
ಯೋಗಿ ಜನರು ಇಲ್ಲಿ ಧ್ಯಾನ ಮಾಡುವದು, ಲೇ |
ಸಾಗಿ ನಾನಾ ತೀರ್ಥದಲ್ಲಿ ವಾಸವಾಗಿ |
ಭೋಗಭೂಷಣ ಬಹುರೂಪದಲ್ಲಿ ನಿಂದು |
ಸಾಗರತಲ್ಪನ ಧ್ಯಾನಮಾಡುವನು |
ಆಗಮೋಕ್ತಿಯಿಂದ ಸಿದ್ಧವಾಗಿದೆ ಕೇಳಿ |
ನಾಗವಾಹನ ಮಿಕ್ಕಾ ದೇವಾದಿಗಳು, ಅನು |
ರಾಗ ಮತಿಯಲ್ಲಿ ಹರಿಯ ಪೂಜಿಸುವರು |
ಈ ಗಯಾದ ಯಾತ್ರೆ ಮಾಡೆ ನೂರೊಂದು ಕುಲದವರು |
ಸಾಗುವರು ಸರ್ವಬಾಧೆಗೆದ್ದು ಹರಿಪುರಕೆ |
ಭಾಗೀರಥಿ ಜನಕಾ ವಿಜಯವಿಠಲನಂಘ್ರಿಗೆ |
ಬಾಗಿ ಸಮಸ್ತ ಸೌಖ್ಯ ಪಡೆದು ಧನ್ಯನಾಗಿ೭
ಜತೆ
ಪಿತ್ರಾದಿಕುಲ ಇಲ್ಲಿ ಉದ್ಧಾರವಾಗುವುದು |
[ಗಾ]ತ್ರದೊಳಗೆ ಇಪ್ಪಾ ವಿಜಯವಿಠಲ ಬಂಧೂ ೮

ಪ್ರಾಣ, ಅಪಾನ, ಧ್ಯಾನ, ಉದಾನ ಮತ್ತು ಸಮಾನರೆಂಬ

೧೧೫
ಧ್ರುವತಾಳ
ಶ್ರೀ ಗುರುವಿನ ನೆನೆದು ನಿರ್ಮಳನಾಗಿ ಸರ್ವ
ಯಾಗ ಭೋಕ್ತನಾದ ನಾರಾಯಣಗೆ
ಬಾಗಿ ಭಕುತಿಯಿಂದ ಚಿಂತಿಸಿ ಹೃದಯದಲ್ಲಿ
ಆಗಮ ಸ್ತುತಿಯಿಂದ ವಿಹಿತ ತಿಳಿದೂ
ಭೋಗಗಳೆಲ್ಲ ಸರ್ವಯಾಗಗಳೆಂದು ಲೇ
ಸಾಗಿ ಸಂಚರಿಪುದು ಸತತವಾಗಿ
ಈ ಗಾತ್ರದಲ್ಲಿ ಪಂಚ ಪ್ರಾಣ ಯಜ್ಞ ಸ್ಥಳಗಳು
ಭಾಗಂಗಳುಂಟು ಒಂದೊಂದು ಕಡೆ
ಮೊಗದಲ್ಲಿ ಪ್ರಾಣನೆಂಬೊ ಹೋತ್ರನು ವಾಸ
ವಾಗಿಪ್ಪಪಾನದೆಶೆಯಿಂದ ಉದ್ಗಾತ್ರ
ನಾಗಿಪ್ಪ ವ್ಯಾನನೆಂಬುವನು ನಾಭಿಯಲ್ಲಿ
ವೇಗ ಕಂಠದಲ್ಲಿ ಉದಾನನೆಂಬೋಧ್ವರಿಯ
ಪೂಗರ್ಭ ನಾಮಕ ಸಮಾನ ಸರ್ವಾಂಗದಲ್ಲಿ
ಈ ಗಣಿತದೈವರು ಪ್ರಾಣ ರೂಪಗಳಿಂದ
ಯಾಗದಧಿಕಾರಿಗಳ ದೇಹದೊಳಗೆ
ಯೋಗಿ ಜನನುತ ವಿಜಯ ವಿಠ್ಠಲರೇಯ
ಭಾಗಮಾಡಿ ಕೊಡುವ ಉಂಡ ಪದಾರ್ಥವ ೧
ಮಟ್ಟತಾಳ
ವದನದಲ್ಲಿ ಆಹವನೀಯ ಎಂಬಾಗ್ನಿ
ಹೃದಯದಲ್ಲಿ ಅಗ್ನಿ ಗಾರ್ಹಸ್ಪತ್ಯನು
ಇದೇ ದಕ್ಷಿಣಾಗ್ನಿ ನಾಭಿ ಸ್ಥಾನದಲ್ಲಿ
ಮುದದಿ ಶರಭಿ ಅಗ್ನಿನಾಭಿ ದಕ್ಷಿಣ ಭಾಗ
ಅದರ ತರುವಾಯ ಅವ ಶರಭಿ ಎಂ
ಬುದು ಕಾಣೊ ನಾಭಿ ಉತ್ತರ ದಿಕ್ಕಿನಲಿ
ಇದೆ ಇದೆ ಪಂಚಾಗ್ನಿ ಎನಿಸುವುದು ಸಿದ್ಧಾ
ಪದುಮಲೋಚನ ನಮ್ಮ ವಿಜಯ ವಿಠ್ಠಲ ಹರಿಯ
ಪದಗಳ ಭಜನೆಯಲೀ ಬಗೆಯನು ಮಾಡುವುದು ೨
ತ್ರಿವಿಡಿತಾಳ
ಶರೀರ ಎಂಬೊದೆ ಅರಣಿ ಎನಿಪ ತಾ ಹಂ
ಕಾರವೆಂಬೋ ಪಶು ಯೂಪಸ್ತಂಭ ಪ್ರಣವ
ಈ ರೀತಿಯೆ ಉಂಟು ಯಙ್ಞ ಪತ್ನಿಯೆ ಬುದ್ಧಿ
ತೋರುವುದು ಬೆನ್ನು ವೇದಿಕವು
ಈ ರೋಮ ರೋಮಗಳು ದರ್ಭೆ ಎಂದದಿ ಕಾಣೊ
ಸಾರಿ ಸಾರಿಗೆ ಮೆಲುವ ಜಿಹ್ವೆ ಸ್ರುಕ್‍ಶ್ರುವಗಳು
ಚಾರುಮನಸು ಯಙ್ಞ ಮಧ್ಯದಲಿ ಸಂಚಾರ
ಸಾರಿರೈ ಸುಜನರು ಇನಿತು ನೋಡಿ
ಕಾರಣಕರ್ತನು ವಿಜಯ ವಿಠ್ಠಲರೇಯ
ಸಾರ ಭೋಕ್ತನು ಪ್ರಾಣಯಜ್ಞದೊಳಗೆ ಇಪ್ಪಾ ೩
ಅಟ್ಟತಾಳ
ಭೋಕ್ತ ಪುರುಷನ ಲಕ್ಷಣವನ್ನು ಕೇಳೋದು
ರಕ್ತ ಹರಿದ್ರಾವರ್ಣ ಕೂಡಿದ ಕಣ್ಣು
ಶಕ್ತ ಸರ್ವಕಾಲ ಜನನಾದಿ ವಿದೂರ
ಮುಕ್ತಿ ಪ್ರದಾತ ಪಾದಕ ಸದೃಶರೂಪ
ಭಕ್ತರು ಭಕ್ತಿಲಿ ಕೊಟ್ಟ ಪದಾರ್ಥವ
ವ್ಯಕ್ತದಲಿ ಕೈ ಕೊಂಡು ಮನ್ನಿಸುವನು
ಉಕ್ತಕ್ರಮದಿಂದ ಗುಣ ತೋರಿಸಿಕೊಂಬ
ಭಕ್ತವತ್ಸಲ ಸಿರಿ ವಿಜಯ ವಿಠ್ಠಲರೇಯ
ಭುಕ್ತಿಯವನಲ್ಲ ಬಲು ಲೀಲೆಗಾರನು ೪
ಆದಿತಾಳ
ಉತ್ತಮಜ್ಞಾನಿ ತಾನು ಹೋತ್ರಾದಿಗಳ ತಿಳಿದು
ಮತ್ತೆ ಪಂಚಾಗ್ನಿಉಳ್ಳ ಸ್ಥಾನವೆ ಪತಿಕರಿಸಿ
ತುತ್ತು ತುತ್ತಿಗೆ ಆತ್ಮ ಅಂತರಾತ್ಮ ರೂಪಗಳು
ತುತ್ತಿಸಿ ಭೋಜನಮಾಡಲು ಬಲುಪುಣ್ಯ
ಚಿತ್ತ ನಿರ್ಮಲ ಸರ್ವದೇವತಿಗಳು ಸ
ಮ್ಮತ ಮಾಡಿಕೊಂಬರು ಇವರ ಕುಲಕೋಟಿ ಉದ್ಧಾರ
ಚಿತ್ತದೊಡಿಯರಂಗ ವಿಜಯ ವಿಠ್ಠಲರೇಯ
ಅತ್ಯಂತ ಕೃಪೆಯಲ್ಲಿ ತೃಪ್ತಿಯ ಬಡಿಸುವ ೫
ಜತೆ
ಪ್ರಾಣಯಾಗವ ತಿಳಿದು ನಡೆದ ಜನರಿಗೆಲ್ಲಪ್ರಾಣವಾಗಿಪ್ಪ

ಹರಿದಾಸತ್ವ ದೀಕ್ಷೆಯುಳ್ಳವ್ಯಕ್ತಿತ್ವವನ್ನು ದಾಸರು

೧೧೬
ಝಂಪಿತಾಳ
ಶ್ರೀ ಚರಣವರ್ಚಿಸುವೆ ವಾಚಾಮಗೋಚರ ನಿ
ಶಾಚಯ ದಹನ ಖೇಚರೇಶ
ಲೋಚನಾಯುಗಳಕೆ ಗೋಚರನಾಗದೆ
ಸೂಚಿಸು ಮನಸಿಗಾಲೋಚನೆಯಾ
ಯಾಚನವಿದೆಬೇಕು ಉಚ್ಚಪದವಿಯನೊಲ್ಲೆ
ಯಾಚನಾಗೊಳಿಸದಿರು ನೀಚ ನರನ
ಭೂಚೋರಹರ ವಿಜಯ ವಿಠ್ಠಲ ಸರಸಿಜ
ಲೋಚನ ಪಾಪ ವಿಮೋಚನನೆ ೧
ಮಟ್ಟತಾಳ
ಕಾವಳ ಉಳ್ಳಗಲ ದೀವಿಗೆ ಪೆಚ್ಚಿಸಿದ
ಈ ವಸುಧೆಯೊಳಗೆ ಆವನಾದರು ಉಂಟೆ
ಆವಾವ ಜನನದ ಆವಾವ ಕರ್ಮದ
ಅವಳಿಗಳು ಇರಲು ಸಾವಿರ ಬಗೆಯಿಂದ
ದೇವ ನಿನ್ನಯ ಚರಣ ಸೇವಿಯನು ಒಮ್ಮೆ
ಸೇವಿಸಲು ಪಾಪ ಉಳಿಯವೊ ಕಾಣೊ
ದೀವಸ್ಪ್ರಶ ನಾಮಾ ವಿಜಯ ವಿಠ್ಠಲರೇಯ
ದೀವಿಗೆ ಸ್ವಲ್ಪಕ್ಕೆ ಕಾವಳ ನಿಲುವುದೇ ೨
ರೂಪಕತಾಳ
ಒಂದೊಂದು ಜನನದಲಿ ಒಂದೊಂದು ಪಾಪಗಳು
ಬಂದು ಪೊಂದಿದವೆಲ್ಲ ಗಣನೆ ಮಾಡೆ
ಎಂದಿಗೆ ಸವಿಯದ ಅಂಧಕ ಮರೆವುದೇ
ನೆಂದು ಪೇಳಲಿ ಎನ್ನ ಕುಂದುಗಳ
ಮಂದಿರದೊಳಗೆಲ್ಲ ಅಂಧಕಾರವೆ ತುಂಬಿ
ಒಂದೊಂದು ಮೂಲಿಗೆ ಒಂದೊಂದು ದೀಪವ
ತಂದಿಡುವರೆ ಮುಕ್ಕುಂದ ವಿಜಯ ವಿಠ್ಠಲಾ
ದಂದ್ವ ಪಾಪಕೆ ನಾಮ ಒಂದೆ ಸಾಲದೆ ದೇವ ೩
ಧ್ರುವತಾಳ
ಜನಿಸಬೇಕಾದರೆ ಜನಿಸಬೇಕಯ್ಯಾ ಪಂ
ಚಾನನ ಗರ್ಭದಲ್ಲಿ ಬಂದು ಜನಿತವಾಗಿ
ವನದೊಳ ತಿರುಗುವ ಘನಗಜ ಕುಂಭಸ್ಥಳ
ವನು ಸೀಳಿ ಎರುರಿಲ್ಲೆನುತ ಚರಿಸಿದಂತೆ
ಮನೊವಾಚಾದಲ್ಲಿ ದಾಸತನ ಪಡೆವೆನೆಂಬುವ
ವನಜನಾಭನೆ ನಿನ್ನ ಒಲಿಸಿಕೊಂಡು
ಘನ ಮಾಯವನು ಹಿಂದನು ಮಾಡಿ ಕಾಮಕ್ರೋಧ
ವನು ಸೀಳಿ ಮೃಗನಂತೆ ತನುವಿನೊಳಿರಬೇಕು
ನೆನೆವವರ ಪರಿಪಾಲ ವಿಜಯ ವಿಠ್ಠಲ ನಿನ್ನ
ಅನುಸರಿಸಿ ಜ್ಞಾನತನು ಜ್ಯೋತಿ ಪಡಿಯಬೇಕು ೪
ತ್ರಿವಿಡಿತಾಳ
ದಾಸನಾದರೆ ನಿನ್ನ ದಾಸನಾಗಲಿಬೇಕು
ಏಸೇಸು ಜನನ ಸಂಪಾದಿಸಿ ಕೊಂಡಾದರು
ಮೋಸ ಪೋಗದೆ ದುರವಾಸನಿಗೆರಗದೆ
ಸಾಸಿರ ದೈವಗಳ ಸೇರದೆ ಬಯಲಾಸಿಗೆ ಮನುವುಬ್ಬಿ
ಹ್ರಾಸನಾಗದೆ ಪುಣ್ಯರಾಶಿಗಳಳಿಯದೆ
ಲೇಸು ಭಕುತಿಯಲ್ಲಿ ಈಶಗಿರೀಶನೆ ವಿಜಯ ವಿಠ್ಠಲ ನಿನ್ನ
ದಾಸನಾದರೆ ದು:ಖ ಲೇಶವಾದರು ಇಲ್ಲ ೫
ಅಟ್ಟತಾಳ
ನಿನ್ನಯ ಮೂರ್ತಿಯ ನೋಡುವುದು ಒಂದಾನಂದ
ನಿನ್ನ ಕೀರುತಿ ಕೇಳುವುದು ಒಂದಾನಂದ
ನನ್ನ ವಾರುತಿ ಕೇಳುವುದು ಒಂದಾನಂದ
ನಿನ್ನ ವಾರುತಿಯ ಪೇಳುವುದು ಒಂದಾನಂದ
ನಿನ್ನ ಆರುತಿಯ ಕೊಂಬುವುದು ಒಂದಾನಂದ
ನಿನ್ನ ಚರಿತೆಯ ಆಡುವುದು ಒಂದಾನಂದ
ನಿನ್ನವನಾಗಿ ಮೆರೆವುದು ಒಂದಾನಂತ
ಅನಂತವತಾರ ವಿಜಯ ವಿಠ್ಠಲರೇಯ
ನಿನ್ನ ಪಾದದಲ್ಲಿ ಸೇರುವುದು ಒಂದಾನಂದ ೬
ಆದಿತಾಳ
ಒಳಗೆ ಬಲುತುಂಬಿದ ಕತ್ತಲೆಯೆಂಬ ಅಜ್ಞಾನ
ಕಳಿಯದಿರು ಕಳಿಯದಿರು ನಿಲವಾಗಿದ್ದರೆ ಇರಲಿ
ಕೆಲಕಾಲ ನಾನದಕೆ ಆಳಕಿ ಅಂಜುವನಲ್ಲ
ಚೆಲುವ ದೇವನೆ ನಿನ್ನ ಪೊಳೆವ ಪಾದದ ನಖ
ಬೆಳಗು ಎನ್ನೊಳಗೊಮ್ಮೆ ಪೊಳೆದ ತರುವಾಯ
ಬಲವಂತವಾದ ಕತ್ತಲಿ ಎಂಬೊ ಅಜ್ಞಾನ
ಉಳಿವುದೇನಯ್ಯಾ ಲೇಶ ಒಳಗೆ ಇದ್ದು ತೊಲಗದೆ
ಬಲುದೈವಾ ವೃಷಭಾಕ್ಷ ವಿಜಯ ವಿಠ್ಠಲ ನಿನ್ನ
ಬೆಳಗು ತೋರಿಕೊಡಲು ಕತ್ತಲೆ ತಾನೆ ಓಡುವುದೋ ೭
ಜತೆ
ಕ್ಷಣ ಒಂದು ಬದುಕಿದರು ನಿನ್ನ ದಾಸನೆನಿಸಿ
ತನುವ ಧರಿಸುವೆನು ಭರ್ಗ ವಿಜಯ ವಿಠ್ಠಲಾ ೮

ನರಹರಿತೀರ್ಥರಿಂದ ಕನ್ನಡದಲ್ಲಿ ಆರಂಭಗೊಂಡ

ಶ್ರೀಪಾದರಾಯರ ಸ್ತೋತ್ರ
೧೫೭
ಧ್ರುವತಾಳ
ಶ್ರೀ ಪಾದರಾಯ ಗರುವೆ ಧೃಢಭಕುತಿಯಿಂದ ನಿಮ್ಮ
ಶ್ರೀಪಾದ ದ್ರುಮವನ್ನು ನೆರೆನಂಬಿದವನ ಭಾಗ್ಯ
ಅಪಾರವಲ್ಲದೆ ಲೇಶ ಕೊರತೆ ಇಲ್ಲ
ಗೋಪಾದ ಉದಕದೊಳು ರತುನ ದೊರಕಿದಂತೆ
ಪ್ರಾಪುತವಾಗುವುದು ಬಾಹೀರಂತರ ಸೌಖ್ಯ
ಲೋಪವಾಗದು ಒಂದು ಇಷ್ಟಾರ್ಥ ಪ್ರತಿದಿನ
ಆಪಾರ್ಥ ಎನಿಸದು ಪೇಳಿದ ವಚನಂಗಳು
ಆಪವರ್ಗಕೆ ಮಾರ್ಗ ಕೇವಲ ಖ್ಯಾತಿಯಾಗಿ
ತಾಪಸಿಯಾಗುವನು ಜನುಮಜನುಮದವು ಬಿಡದೆ
ಗೋಪಾಲಕೃಷ್ಣನ ಗುಣವೆ ಕೊಂಡಾಡುತ
ಆಪಾದಮೌಳಿ ಪರಿಯಂತ ನೋಡುವ ಮಹ
ಪಾಪರಹಿತರಾಗಿ ಸಂಚರಿಸುವರು ನಿತ್ಯ
ಪ್ರಾಪುತವಲ್ಲದೆ ಒಂದಾದರವರಿಗೆ
ಭೂಪಾರ ಬೇಡಿದ ಮನೋರಥಂಗಳು
ಶ್ರೀಪಾದರಾಯ ಶಿರಿ ನಾರಾಯಣಯೋಗಿ
ಈಪರಿ ಸ್ಮರಿಸಿದ ಜನರ ಸಂಗದಲ್ಲಿದ್ದ
ಆ ಪುಣ್ಯಪುರುಷನಿಗೆ ಕೈವಲ್ಯ ಇದ್ದಲ್ಲಿಗೆ
ಪೋಪಾದಲ್ಲದೆ ಅವನ ಆಯುಷ್ಯ ವ್ಯರ್ಥವಾಗಿ
ಭಾಪು ಇವರ ಬಿರುದು ಪೊತ್ತು ತಿರುಗಿದರೆ
ಶಾಪಾದಪಿಶರಾದಪಿ ಎನಿಸಿಕೊಂಬ
ದೀಪದ ಬೆಳಕಿನಲ್ಲಿ ಸರ್ವವು ಕಂಡಂತೆ
ವ್ಯಾಪುತದರ್ಶಿಯಾಗಿ ಯೋಗ್ಯತದಂತೆ ಕಾಂಬ
ದ್ವಿಪಾದ ಪಶುಗಾಣೊ ಈ ಮುನಿಯ ನಂಬದವ
ಕೂಪಾರವೆಂಬ ಮಹ ಘೋರದೊಳಗೆ ಇಪ್ಪ
ಆಪತ್ಕಾಲ ಬತ್ತಿ ವಿಜಯ ವಿಠ್ಠಲರೇಯನ
ವ್ಯಾಪಾರವನ್ನೆ ನೆನೆದು ನಲಿನಲಿದಾಡುವ ೧
ಮಟ್ಟತಾಳ
ಭಕುತಿ ಬೇಕಾದವರು ಇವರ ಪಾದದಲ್ಲಿ
ಸಕಲಕಾಗಿ ಇದೇ ಸಾಧ್ಯವೆ ನಮಗೆಂದು
ಸಕುತನಾಗಲಿ ಬೇಕು ರಾಗಂಗಳ ತೊರೆದು
ಮುಕುತಿ ಮಾರ್ಗಕೆ ಇನ್ನು ಯಾತಕೆ ಅನುಮಾನ
ಕಕುಲಾತಿಯಿಂದ ಕಂಡಲ್ಲಿ ತಿರುಗಿ
ಹಕ್ಕಲ ಮನಸಿನಲ್ಲಿ ಕೆಟ್ಟುಪೋಗದಿರಿ
ಲಕುಮಿರಮಣ ನಮ್ಮ ವಿಜಯವಿಠಲರೇಯನ
ಭಕುತರೊಳಗೆ ಮಹಮಹಿಮ ಎನಿಸಿಕೊಂಬ೨
ತ್ರಿವಿಡಿತಾಳ
ನಂಬಿರೋ ಶ್ರೀಪಾದರಾಯರ ಚರಣವ
ಹಂಬಲಿಸದಿರಿ ಅನ್ಯಮಾರ್ಗ
ತುಂಬಿ ತುಳುಕುತಿಪ್ಪುದು ಇಹಪರದ ಭಾಗ್ಯ
ಉಂಬುವುದುಡುವದು ಅಡಿಗಡಿಗೆ
ಡಿಂಬದೊಳಗೆ ಹರಿಯ ಧ್ಯಾನಂಗತವಾಗಿ
ಕಾಂಬುವ ಲೇಶ ಪಾಪಂಗಳಿಲ್ಲದೆ
ಗಂಭೀರ ಸಂಸಾರವಾದುದು ಅದೆ ಅವಗೆ
ಇಂಬುಗೊಡುವುದು ವೈದೀಕವೆನಿಸಿ
ಅಂಬುಜಸಖ ತೇಜ ವಿಜಯವಿಠ್ಠಲರೇಯ
ಬೆಂಬಿಡದೆ ಭಜಿಸಬೇಕು ಈ ಪರಿಯಲ್ಲಿ೩
ಅಟ್ಟತಾಳ
ಇವರ ಪ್ರಸಾದವಾದರೆ ವ್ಯಾಸ ಮುನಿರಾಯ
ಕವಿರಾಯ ಪುರಂದರದಾಸರು ಮೊದಲಾ
ದವರ ಕರುಣವದು ಸಿದ್ಧಿಸುವುದು ಕೇಳಿ
ನವಭಕುತಿ ಪುಟ್ಟುವುದು ವ್ಯಕ್ತವಾಗಿ
ತವಕದಿಂದಲಿ ಚರಮ ದೇಹ ಬರುವುದು
ದಿವಿಜರು ಒಲಿದು ಸತ್ಕರ್ಮ ಮಾಡಿಸುವರು
ಸುವಿರುದ್ಧವಾದ ಜನರೆಲ್ಲ ನೆರೆದು ಭಾ
ಗ್ಯವನು ಬರಲಿ ಎಂದು ಕೊಂಡಾಡುವರು ನಿತ್ಯ
ಶ್ರವಣಕ್ಕೆ ತೋರುವ ವಿಜಯವಿಠ್ಠಲರೇಯನ
ದಿವಾರಾತ್ರಿಯಲಿ ನೊಡಿ ಸುಜನರ ಕೊಡುವಾ೪
ಆದಿತಾಳ
ನರಕ ನರಕದಲ್ಲಿ ಹೊರಳುವ ಆ ಮನುಜ
ಧರೆಯೊಳು ಇವರ ಚರಿತೆ ಒಂದೊಂದದ್ಭುತವಾಗಿ
ನಿರುತದಲ್ಲಿ ನೋಡೆ ತುಂಬಿ ಸೂಸುತಲಿದೆ
ಅರುಣೋದಯದಲೆದ್ದು ಶ್ರೀ ಪಾದರಾಯರೆಂದು
ಸ್ಮರಿಸಿದ ಮಾನವಂಗೆ ಸರ್ವಸಾಧನದಿಂದ
ಮರಮಗತಿಯಾದಂತೆ ಆಗುವದು ಸಿದ್ಧ
ಪರಿಹಾಸವಲ್ಲ ಕೇಳಿ ಪ್ರೀಯ ವಿಜಯ ವಿಠಲನೆ
ಕರುಣದಿಂದಲಿ ಮಹ ಉನ್ನತದಲ್ಲಿಪ್ಪರೊ೫
ಜತೆ
ಧ್ರುವ ಮರಿಯದಲೆ ಇದನೆ ಓದಿದವಗೆ ಬಂದ
ಭವರೋಗ ಪರಿಹಾರ ವಿಜಯವಿಠಲ ಒಲಿವಾ೬

ತಿರುಪತಿಯ ಶ್ರೀನಿವಾಸನ ಮುಖವನ್ನು

೬೫. ತಿರುಪತಿ
ಧ್ರುವತಾಳ
ಶ್ರೀ ರಮಣಿ ಕೂಡ ಏಕಾಂತವಾಡುವ ವದನ |
ಸಾರ ಸುಂದರವಾದ ವೇದವದನ |
ಚಾರು ಶೋಭಿಪ ದಂತ ಪಙ್ಞಎಸೆವ ವದನ |
ಕಾರುಣ್ಯದಲಿ ಸೋನೆಗರೆವ ವದನ |
ವಾರಿಜೋದ್ಭವಗೆ ಉಪದೇಶ ಪೇಳಿದ ವದನ |
ಚೋರತನದಲ್ಲಿ ಬೆಣ್ಣೆ ಸವಿದ ವದನ |
ಸಾರಿಸಾರಿಗೆ ನಗಲು ರತ್ನ ಉದುರುವ ವದನ |
ನಾರಿಯರಧರವ ಚುಂಬಿಸುವ ವದನ |
ಕಾರುಣ್ಯನಿಧಿ ಕಾಮಿಕಾಂತ ವಿಜಯವಿಠಲ |
ಶೌರಿಯ ಚಿತ್ರ ವಿಚಿತ್ರ ವದನ ೧
ಮಟ್ಟತಾಳ
ಯಶೋದೆ ದೇವಿಯ ಅ[ನ್ನ] ಉಂಡ ವದನ |
ಅಸುರ ಪೂತನಿಯ ವಿಷವಹೀರಿದ ವದನ |
ಶಿಶುವ ಲೀಲೆಯಲಿ ಮಣ್ಣು ಮೆದ್ದ ವದನ |
ಬಸುರೊಳಗೆ ವನಜಜಾಂಡ ತೋರಿದ ವದನ |
ಪಶುಗಳ ತೊರದಾ ಮೊಲೆ ಚಪ್ಪರಿಸಿದ ವದನ |
ಹಸುಮಕ್ಕಳ ಮೇಲೆ ಉಗುಳುಗಳಿದ ವದನ |
ಮೃಷಪರ್ವನಾಮ ವಿಜಯವಿಠಲನ್ನ |
ಶಶಿ ಬಿಂಬದ ವದನ ಆನಂದದ ವದನ ೨
ತ್ರಿವಿಡಿತಾಳ
ಕರಾಳ ವದನ ಕರ್ಪುರವನ್ನೆ ತುಂಬಿದ |
ಕರಡಿಗೆ ಯಂದದಿ ಪೋಲುವ ವದನ |
ಪರಮಭಕ್ತಿಗೆ ಒಲಿದು ಪಣ್ಣುಸವಿದ ವದನ |
ವರವೇಣು ಚನ್ನಾಗಿ ಊದಿದ ವದನ |
ತರುಣೇರಿಂದ ಅನ್ನ ತರಿಸಿ ಉಂಡ ವದನ |
ಧರೆ ಚತುರ್ದಶವನ್ನು ನುಂಗಿದ ವದನ |
ಸುರದ್ಯಕ್ಷನಾಮ ನಮ್ಮ ವಿಜಯವಿಠಲದೇವ |
ಪರಮದಾಸರ ಕೂಡಲಾಡು ವದನ ೩
ಮಟ್ಟತಾಳ
ಜನನಿಗೆ ತತ್ವವ ಪೇಳಿದ ವದನ |
ದನುಜನುರಿಯಾಗೆ ನುಂಗಿದ ವದನ |
ವನಧಿಗಳೆಲ್ಲ ಘೋಷಣೆಗೊಂಬ ವದನ |
ಘನಸೂಕರ ತುರಂಗವದನ ವದನ |
ಕನಕಾಚಲವನ್ನು ಕಚ್ಚಿದ ವದನ |
ತನಿ ಮಧುರಾಮೃತ ಸೋರುವ ವದನ |
ಅನಿರ್ವಿರ್ತಿ ವಿಜಯವಿಠಲ ರಂಗರಾಯಾ |
ತನಯನಾಗಿ ಜೊಲ್ಲು ಸುರಿಸುವ ವದನ ೪
ಆದಿತಾಳ
ತಾಂಬೂಲರಸದಿಂದ ಥಳಥಳಿಸುವ ವದನ |
ಅಂಬುಜಜಾಂಡವನೇಕ ಕ್ಷಣಕುಗುಳುವ ವದನ |
ಕಾಂಬೆನೆಂದು ಬಂದ [ಮಿ]ತ್ರನ್ನವಲಕ್ಕಿ ತಿಂದ ವದನ |
ಅಂಬೆ ಅಂಬೆ ಎಂದು ಗೋಸಂಕುಲವ ಕರವ ವದನ |
ಬೆಂಬಿಡದೆ ಸರ್ವವಸ್ತು ಮೆಲ್ಲುವನ ಪೆತ್ತ ವದನ |
ಅಂಬರೀಷ ಪಾಲ ಮಹ ಹೃದಯ ವಿಜಯವಿಠಲ |
ಅಂಬು[ಜ]ಭವಾದಿಗಳ ಪಾಲಿಸುವ ದಿವ್ಯ ವದನ ೫
ಜತೆ
ವಿಶ್ವತೋವದನ ವಂದನಾನಂತವದನ |
ವಿಶ್ವಬಾಹು ವಿಜಯವಿಠಲರೇಯನ ವದನ ೬

ಭಗವಂತನ ರಕ್ಷಕ ಗುಣ

೧೦೬
ಧ್ರುವತಾಳ
ಶ್ರೀ ವಲ್ಲಭ ನಿನ್ನ ಕಾವೊ ಘನವೋ
ಭೂವಲ್ಲಭ ನಿನ್ನ ಕಾವೊ ಘನವೋ
ಆವಾವ ನಾಮನೋ ಈ ವಸುಧಿಯೊಳ
ಗಾವಲ್ಲಿ ನೋಡಲು ದೇವರೊಳಗೆ ಕಾಣೇ
ಸೇವಕರಲ್ಲಿದ್ದ ಆವಾವಾ ದ್ರವ್ಯವ
ಕಾವ ಕಟ್ಟಲಿಯಿಂದ ಜೀವ ಜತನಮಾಡಿ
ಅವರಿಗೆ ಪ್ರಾಪುತವ ಮಾಡಿ ಕೊಡುವೆ
ದೇವಾ ನಿನ್ನ ಲೀಲೆಗೆ ಆವುದು ನೆಲೆಗಾಣೆ
ಭಾವಜ್ಞರೊಡೆಯಾ ವಿಜಯ ವಿಠ್ಠಲರೇಯ
ಕಾವ ಕರುಣಿ ಸಂಜೀವ ಸತತ ಎನಗೆ ೧
ಮಟ್ಟತಾಳ
ಪದುಮನಾಭ ಪರಮಪುರುಷಾ
ಸದಮಲಾನಂದಾ ಸಾತ್ಯಕಿಪ್ರೀಯಾ
ಸುದರುಶನ ಪಾಣಿ ಸುಲಭಾ ದೇವಾ
ಅದುಭೂತ ಮಹಿಮಾ ಅನಾದಿಸಿದ್ಧ
ಪದೋಪದಿಗೆ ನಿನ್ನ ಪಾದವ ನಂಬಲು
ಇದು ಅದು ಎಂಬೋದು ಅನಿಸಲಿಲ್ಲಾ
ಚದುರಂಗ ವಿಜಯ ವಿಠ್ಠಲ್ಲಾ
ಮುದದಿಂದ ಒಲಿಯೋ ಒದಗುವುದು ಪುಣ್ಯ೨
ತ್ರಿವಿಡಿತಾಳ
ಉಪ್ಪಿಲ್ಲದಂಬಲಿ ಕುಡಿವಾ ನರಗೆ ಕೋಟಿ
ಕೊಪ್ಪರಿಗೆ ಧನ ಇದ್ದಲ್ಲಿ ದೊರೆತಂತೆ
ತಿಪ್ಪೆ ಮೇಲೆ ಹೊರಳಿಮಲಗುವ ಮನುಜಗೆ
ಉಪ್ಪರಗಿ ಮೇಲೆ ಸುಖಿಸುವಂತೆ
ಚಿಪ್ಪಗೀರಿ ತಿಂಬ ದಟ್ಟದಾರಿದ್ರಗೆ
ತುಪ್ಪಾ ಸಕ್ಕರಿ ಪಾಲು ಹಣ್ಣು ಮೆಲಿಸಿದಂತೆ
ಸರ್ಪಶಯನ ನೀನು ತಪ್ಪದೆ ದಯಮಾಡು
ತಿಪ್ಪದು ಅರಿಯರೊ ಸರ್ಪಭೂಷಾದಿಗಳು
ಸರ್ಪಕೇತನ ಗರ್ವಹರ ವಿಜಯವಿಠ್ಠಲ
ಅಪ್ಪನೇ ಜಗದೇಕವಂದ್ಯ ಸರ್ವೇಶಾ ೩
ಅಟ್ಟತಾಳ
ಹಿಂದಿನ ದಿನದಲ್ಲಿ ವೈಶ್ಯ ಮಾದಮ್ಮನ
ನಂದನ ನಂಜುಂಡ ಯಮಲೋಕಕ್ಕೆ ಪೋಗಿ
ಬಂದು ಪುರಂದರದಾಸರು ನಿಲ್ಲಲು
ಸಂದೇಹಗೊಳಿಸದೆ ಅವನ ಎಬ್ಬಿಸಿ ಕೊಟ್ಟಾ
ನಂದಮೂರುತಿಯೇ ನಿನ್ನಂಘ್ರಿಗೆ ನಮೋ ನಮೋ
ಇಂದು ಪೋಗಿದ್ದ ಜಡಪದಾರ್ಥವ
ತಂದು ಇತ್ತದು ಬಲು ಸೋಜಿಗವಲ್ಲವೋ
ಮುಂದಾಗಿ ಸಾಕುವ ವಿಜಯವಿಠ್ಠಲ ದೇವಾ
ಎಂದೆಂದಿಗೆ ನಂಬಿದವರಂಗ ಸಂಗಾ ೪
ಆದಿತಾಳ
ಭೋವ್ಯೋಮ ಪಾತಾಳ ಪಯೋಜಜಾಂಡದೊಳು
ಶ್ರೀಯರಸ ನಿನ್ನ ಪ್ರೀಯರ ಒಡಿವೆ ವಸ್ತಾ
ವಾಯು ಮಳೆ ಪಾವಕ ಮಿಕ್ಕಾಯದಲ್ಲಿ ಹಾಕಿದರು
ಬೇಯದೆ ತಿರುಗಿ ಬಂದು ನ್ಯಾಯದಲ್ಲಿ ಸೇರುವುದು
ನೋಯದಂತೆ ಸಾಕುವುದುಪಾಯಗಾರ ನೀನಹುದೊ
ನಾಯಿಗೆ ವರವಿತ್ತ? ವಿಜಯವಿಠ್ಠಲರೇಯಾ
ನೀ ಎಡೆಬಿಡದಿರಲು ಆಯಾಸ ಒಂದೂ ಕಾಣೆ ೫
ಜತೆ
ಬೊಮ್ಮಾಂಡ ನುಂಗಿ ಉಗುಳುವ ಮಹಾದೈವವೆ
ಈ ಮಹಿಮೆ ಅರಿದೆ ವಿಜಯವಿಠ್ಠಲ ನಿನಗೆ ೬

ತಿರುಪತಿಯ ಶ್ರೀನಿವಾಸನನ್ನು ಕುರಿತ

೬೪. ತಿರುಪತಿ
(ಈ ಸುಳಾದಿಗೆ ವಿವಿಧ ತಾಳ ನಿರ್ದೇಶನವಿಲ್ಲ)
ಧ್ರುವತಾಳ
ಶ್ರೀನಿವಾಸನ ನಿಧಿಯಾನು ಬಣ್ಣಿಸಲಿನ್ನು |
ನಾನೆಲ್ಲಿ ಇದರ ಸಮಾನಧಿಕ ವಾದ |
ಭೂ ನಿತಂಬಿಯೊಳು ಕಾಣೆನೊ ಅರಸಲು |
ಆ ನಿರ್ಜರನುದಿನ ಎಣಿಸೆಣಿಸೆ |
ವಾಣಿ ಬರಿದೆ ಗುಣವಾನು ತೋರದೆ ನಿತ್ಯ |
ಈ ನಿಧಿಯಾ ಪುಣ್ಯಶ್ರೇಣಿಯನೊ |
ಧೇನಿಸಲಾರದೆ ಮೌನವಾಗುವನಯ್ಯಾ |
ಹೀನ ಮಾನವ ಮಿತಿಯಾನು ನುಡಿದ ಫಲ |
ವೇ[ನೆ]ಣಿಕೆ ಗೈವನೆ ಚೂಣಿ ಅಂತವಿಡಿದು |
ಚಾಣುರಾರಿ ರಂಗ ವಿಜಯವಿಠಲರೇಯಾ |
ನೀನೆ ಬಲ್ಲವ ನಿದರ ಆನಂದ ವೈಭವ ೧
ರತುನ ಸಮವಿನ ಸುತಗೆ ವೆಂಕಟ ಪ |
ರ್ವತನೆಂಬಭಿದಾನ ಹಿತವಾಗಿ ಇರಲೂ |
ಗತ ಶ್ರವಣ ಮಾರುತ ದೇವಗೆ ಬಿಡದೆ |
ಪ್ರತಿವಾದಗಳಾಗೆ ಖತಿಯವನಂತೆ ಮಾ |
ರುತಿ ಪತಿ ಬೀಸಾಲು ಗತಿ ತಪ್ಪಿ ಉರಗ |
ಪತಿ ಪರ್ವತ ಸಹಿತ ಕ್ಷಿತಿಯೊಳಗೀ ಭ |
ರತ ಖಂಡದೊಳಗೆ ದ್ಯುತಿಯಾಗಿ ಪೊಳವುತ್ತ |
ರತಿಪತಿ ಪಿತ ಸಿರಿ ವಿಜಯವಿಠಲನ್ನ |
ನುತಿಸಿ ನಿರಂತರ ಸ್ತುತಿಸಿ ಕರವ ಮುಗಿಯೆ ೨
ಕುಂಡಲಿ ಈ ಪರಿ ಕೊಂಡಾಡಿ ದೈನ್ಯದಲಿ |
ದಂಡ ಪ್ರಣಾಮದಿಂದ ಅಂಡಜಗಮನನ್ನ |
ತಂಡ ತಂಡದ ಭಕುತಿ ಖಂಡವಾಗದಂತೆ |
ಪುಂಡರೀಕಾಕ್ಷನು ಕಂಡು ವೇಗದಲ್ಲಿ |
ಅಂಡಲಿಯದಂತೆ ವಿಜಯವಿಠಲ ತನ್ನಾ |
ತೊಂಡಗೆ ವರವ ಮುಂಕೊಂಡು ಪಾಲಿಸಿದಾ ೩
ವರವಿತ್ತು ಭಕುತಗೆ ಪರಿಹರಿಸಿ ಭಯವನ್ನು |
ಸ್ಥಿರವಾಗಿ ನಿಂದ ನೀ ಗಿರಿಯ ಮದ್ಧನ್ಯ |
ಸುರರಿಂದ ವಾಲಗವ ಭರದಿಂದ ಕೈಕೊಳುತ |
ಮೆರೆದು ಪೆಸರಾಗಿ ತ್ರ್ಯೆಧರಿಯಾವೊಳಗೆ |
ಶರಣೆಂದವರ ಮನಾದರ ಮರೆಯನು ಬಿಡಿಸಿ |
ಪೊರೆವ ಪರಿಪರಿಯಲ್ಲಿ ಪರಮ ಪುರುಷ |
ತಿರುವೆಂಗಳೇಶ ತಿರುಪತಿ ವಿಜಯವಿಠಲ |
ಜರಾಮರಣ ರಹಿತ ಭೂಸರ ವರದಾತ ೪
ಈ ಗಿರಿಯಲ್ಲಿ ತಪಸು ವೇಗದಿಂದಲಿ [ಎ]ಸಗಿ |
ಆ ಗಂಧಾ ವಾಹನ್ನಲಾಗ ಸ್ತುತಿಸಲಾಗೆ |
ತಾ ಗುಣದಲಿ ಪ್ರಥಮಾಂಗದ ನೆನಿಸಿದ ಸಾಗರ ಶಯನಗೆ |
ಅಗಸ್ತ್ಯ ಮುನಿಯಿದರ ಆಗಮ ಬಲ್ಲಾನು |
ಭೂಗೋಳದೊಳಗನು ರಾಗದಿಂದಲಿ ಮಿಕ್ಕ |
ಯೋಗಿಗಳೆಲ್ಲಾ ಭಾವಿಸು ತಿಪ್ಪದು |
ಭೊಗಿಶಯನಾ ವಿಜಯವಿಠಲನ್ನ |
ಭೋಗವೇನು ಪೇಳಲಿ ಭೋಗಾಗಿರಿಯಲ್ಲಿ ೫
ಐದು ಯೋಜನಾ ವಿಸ್ತಾರದ ಗಿರಿಯನು |
ವೈದಿಕದಿಂದಲಿ ಸುತ್ತ ಪ್ರದಕ್ಷಿಣೆ |
ಐದೊಂದು ಸಾರಿಗೆ ತಿರಿಗಿ ಭಕುತಿಯಲ್ಲಿ |
ಐದು ಹತ್ತು ಹದಿನಾರು ಕೋಟಿ ತೀರ್ಥ* ಹಾ |
(* ಅರುವತ್ತಾರು ಕೋಟಿ ತೀರ್ಥ)
ಯಿದು ನೆನೆಸುವಂಥ ಮೈದೆಗಿಯದವರಾ |
ಕೋಯಿದು ಹಾಕುವನಯ್ಯಾ ಮೈದುಗುಡದ ಪಾಶಾ |
ಐದು ವಿರಹಿತ ವಿಜಯವಿಠಲನ್ನ |
ಕೈದಣಿಸಿ ಪೂಜಿಸಿ ಪೂಜಿಸಿ ಐದಿದವರುಮತಿ ೬
ಸ್ವಾಮಿ ಪುಷ್ಕರಣಿ ಸ್ನಾನ ಈ ಮಹಾತ್ಮನ ದರ್ಶನ |
ಈ ಮಹಿಯೊಳಗೊಮ್ಮೆ ನೇಮದಲ್ಲಿ ಮಾಡಿದವನು |
ವ್ಯೋಮಾ ಭೂ ಪಾತಾಳದೊಳಗೆ ನಿ |
ಸ್ಸೀಮವಾಗಿ ಚರಿಸಿ ನಿಜ ಕಾಮಿತಾರ್ಥವ ಬೇಡದೆ |
ಕಾಮಿಸಿ ಹರಿಯ ಪಾದಾ |
ಪಾಮರಾ ನಾಗದೆ ನಮ್ಮ ವಿಜಯವಿಠಲನ್ನ |
ನಾಮವನೆ ಉಂಡು ನಿಜಧಾಮಾದಲ್ಲಿ ಸೇರುವನು ೭
ವೆಂಕಟೇಶನೆ ನಮೊ ವೆಂಕಟೇಶನೆ ನಮೊ |
ಸಂಕಟ ಪರಿಹರಿಸೊ ವಿಜಯವಿಠಲರೇಯಾ ೮
ಧನ್ಯನಾದೆನು ಇಂದೀ ಪುಣ್ಯಗಿರಿಯ ತಾ |
ರುಣ್ಯ ಭಕುತಿಯಲ್ಲಿಂದ ದೈನ್ಯಾಮನದಲ್ಲಿ ಕಂಡೆ |
ಅನ್ಯಾಯಗೊಳಿಸುವ ಮನ್ಯು ಪಾಪವೆಂಬಾ |
ರಣ್ಯಕ್ಕೆ ಹವ್ಯ ವಾಹನ್ನ ತೋರುತಿದೆ |
ಗಣ್ಯವೆ ಇದರ ಲಾವಣ್ಯವರೆಣ್ಯವ |
ಬಣ್ಣಿಸಲರಿದು ಹಿರಣ್ಯ ಗರ್ಭಗಾದರು |
ಕನ್ಯಾಧಾರುಣಿ ಹಿರಣ್ಯ ತುಲಾಭಾರಾ |
ಅನ್ಯಾದಾನಾದಿಗಳು ಅನ್ಯೋನ್ಯ ಮಾಡಲು |
ಅನ್ಯಥ ಈ ಯಾತ್ರಿ ಪುಣ್ಯಕ್ಕೆ ಫಲ ಸಾ |
ಮಾನ್ಯವೆನಿಸುವುದು ಸೌಜನ್ಯರು ಲಾಲಿಪದು |
ಕನ್ಯಪತಿ[ಯು] ಕಾರುಣ್ಯ ಮೂರುತಿ ಪಾಂಚ |
ಜನ್ಯ ಪಾಣಿ ನಮ್ಮ ವಿಜಯವಿಠಲನು ಶಾ |
ರಣ್ಯರಿಗೆ ಅನು ಗುಣ್ಯಾ ನಡಿಸುವಾ ೯

ಸಪ್ತ ಪೆಡೆಗಳು ತಪ್ತ ಕಾಂಚನದಂತೆ |
ಸಪ್ತವನನಿಧಿ ಸಪ್ತದ್ವೀಪದ ಮದ್ಧ್ಯ |
ಸಪ್ತೆರಡು ಲೋಕ ವ್ಯಾಪ್ತವಾಗಿ ಕಿರಣ |
ಸಪ್ತಾಶ್ವನ ತೆರದಿ ದೀಪ್ತವಾಗಿದೆ ಸರ್ವ |
ತೈಪ್ತ ಮೇಲುಗಿರಿ ವಿಜಯವಿಠಲನಿಗೆ |
ಆಪ್ತನಾಗಲು ಫಲ ಪ್ರಾಪ್ತಿಯಾಯಿತು ಬಿಡದೆ ೧೦
ಶೃಂಗವೆ ವಜ್ರಾನು ರಂಗು ಮಾಣಿಕದಂತೆ |
ಕಂಗಳಿಗೆ ಬಿಡದೆ ಕಂಗೊಳಿಸುತಿದೆ |
ಸಿಂಗ ಶಾರ್ದೂಲ ಸಾರಂಗ ಮನ ಭೋತು ತೂ |
ರಂಗ ವರಹ ವೃಕ ಮಾತಂಗ ಭಲ್ಲುಕ ಪ್ಲಾ |
ವಂಗ ಮಾರ್ಜಾಲ ವಿಹಂಗಾನು ಶುಕ ಪಿಕ ಭೂ |
ಜಂಗಮ ನಾನಾ ಭೃಂಗ ಪತಂಗಾದಿ ಸಂಘವು ಚೀರುತ್ತಾ |
ಸಂಗ ಲ್ಯಾಡುತಾ ಶೃಂಗಾರದಲಿ ಪೊಳೆಯೆ |
ಮಂಗಳಾಂಗ ತುರಂಗ ವದನ ಭಕ್ತ |
ರಂಗದೊಡಿಯಾ ವಿಜಯವಿಠಲರೇಯಾ |
ವಂಗಳ ನಾಡುವ ಭಂಗಾರ ತಿರುಗಿರಿಯಾ ೧೧
ಸುರರು ಗಂಧರ್ವರು ಉರಗ ಯಕ್ಷಸಿದ್ಧ |
ಗರುಡ ಕಿಂಪುರುಷ ಕಿನ್ನರರು ಗುಹ್ಯಕರು ಸಾ |
ಧ್ಯರು ತುಂಬರಾದಿ ನಿಕರವಲ್ಲಿಗಲ್ಲಿಗೆ |
ವರ ತಪಸಿಗಳಾಗಿ ಗಿರಿಯ ತಪ್ಪಲಲೀ |
ಗರುಡಾಸನ ನಮ್ಮ ವಿಜಯವಿಠಲನ್ನ |
ಸ್ಮರಣೆ ಮಾಡುತ ಸಂಚರಿಪುದು ಕಂಡೆ ೧೨
ಶಿಲೆಯೆ ಸಾಲಿಗ್ರಾಮ ಹೊಳಲೆ ಸುದರುಶನ |
ಥಳಥಳಿಸುವ ವರ್ನಾ ಮಳಲೆ ಚಕ್ರಾಂಕಿತ |
ಇಳೆಯೊಳಗಿದೆ ನಿಶ್ಚಲ ವೈಕುಂಠ ನಗರ |
ಸಲೆ ಶ್ವೇತದ್ವೀಪ ಇದೆ ಪೊಳೆವಾನಂತಾಸನ |
ಸ್ಥಳವೆಂದು ಉತ್ತಮರು ತಿಳಿದು ಮನ್ನಿಸುವರು |
ಭಲಿನೆ ನಾವ್ಯ(?) ನಮ್ಮ ವಿಜಯವಿಠಲನ್ನ |
ಒಲಿಸಿ ಭಜಿಸುವಾರು ಜಲಜ ಗರ್ಭಾದಿಗಳು ೧೩
ಜತೆ
ವರಗಿರಿಯ ಯಾತ್ರಿ ಮನಮುಟ್ಟಿ ಮಾಡಲು |
ವರವೀವ ಪರನಾಮಾ ವಿಜಯವಿಠಲ ತಿಮ್ಮ ೧೪

ಈ ಸುಳಾದಿಯೂ ಅನಂತಶಯನ ಮೂರ್ತಿಯನ್ನು

೫. ಅನಂತಶಯನ
ಧ್ರುವತಾಳ
ಶ್ರೀಮದನಂತಾ ಶ್ರೀ ಲಕುಮಿಕಾಂತಾ ಆ |
ದಿ ಮ[ಧ್ಯಾಂ]ತರಹಿತ ಪರಮಕಾಂತ |
ತಾಮಸ ಖಳಹಂತ ಸರ್ವರಿಗೆ ಬಲವಂತ |
ರೋಮ ರೋಮ ಗುಣವಂತ ಬಲು ನಿಶ್ಚಿಂತ |
ನಾಮ ಪೊಗಳುವಂಥ ಜನರಿಗೆ ದಯವಂತ |
ಕಾಮಜನಕ ಅನಂತ ತಲ್ಪಾನಂತ ನಾಮಾ |
ಆದಿ ಅನಂತ ವಿಜಯವಿಠಲ ಸಂತ |
ತಮನ್ನಿಸುವಂತ ರಂಗ ನಿ[ಶ್ಯಾಂ]ತ ೧
ಮಟ್ಟತಾಳ
ಜಯ ಜಯ ಜಯದೇವಾ ಜಯ ಜಯ ಸಂಜೀವಾ |
ಜಯ ಜಯ ಶ್ರೀಧವ ಜಯ ಭಕ್ತರಕಾವ |
ಜಯ ಅಘವನದಾವ ಜಯ ವರಗಳ ನೀವ |
ಜಯ ಭುವನ ಜೀವ ಜಯಗೋಕುಲ ಗೋವ |
ಜಯ ಜಯ ಜಯ ವಿಜಯವಿಠಲದೇವ |
ಜಯ ಜಯ ಅನಂತ ಜಯ ಜಯ ಧನಂ |
ಜಯ ನಾಗ್ರಜ ಪ್ರೀಯಾ ಜಯ ಜಯ ಮುನಿಗೇಯಾ ೨
ತ್ರಿವಿಡಿತಾಳ
ಕ್ಷೀರವಾರಿಧಿಶಯನಾ ನೀರಜದಳನಯನಾ |
ಕಾರುಣ್ಯ ಮೂರುತಿ ಮೆರವ ಸತ್ಕೀರೂತಿ |
ವಾರುಣಭಯಹಾರ ವಾರುಣಸಂಹಾರ |
ಕಾರಣ ಪುರುಷಾ ಭವತಾರಣ ಬಲುದೈವಾ |
ಚಾರು ನವನೀತ ಚೋರ, ನಾರಿಯರ ಜಾರಾ |
ವಾರವಾರಕ್ಕೆ ಕೃಪಾಪಾರಾವಾರವೆನಿಪ |
[ಪಾ]ರಾಮಹಿಮ ಗುಣವಾರಿಧಿ ನಿರ್ಗುಣ |
ಕಾರಾ ಶ್ರೀಮದಾನಂತಾ ತೋರುವಾನಿಜಾನಂತಾ |
ಸಾರಾ ವಿಜಯವಿಠಲಾ ದೂರಿದವರ ಕುಟಲಾ |
ಹಾರಿಸುವಾ ಕರುಣಿಸುರರ ಮಸ್ತಕ ಮಣಿ ೩
ಅಟ್ಟತಾಳ
ವೃದ್ಧ ಭೂಸುರನಾಗಿ ಕೌಂಡಿಣ್ಯ ಮುನಿಪನ್ನ
ಶ್ರದ್ಧರ ಸಕೆ ಒಲಿದ ಸಿದ್ಧ ಪ್ರಸಿದ್ಧ |
ಶುದ್ಧಾತ್ಮರು ಬಂದು ಯಾತ್ರಿಯಾ ಮಾಡಾಲು |
ಬಿದ್ದು ಹೋಹದ ಫಲಗಳನ್ನು ಇತ್ತು |
ಉದ್ಧಾರಗೈಸುವ ಉದಧಿ ಮಥನಸಿರಿ |
ಮುದ್ದುರಮಣ ಶ್ರೀಮದನಂತರೂಪ |
ಇದ್ದಲ್ಲಿ ಫಲವೀವ ವಿಜಯವಿಠಲ ಬಂದು |
ಸದ್ಭಾವದಲ್ಲಿರೆ ಭದ್ರವಾಗುವುದೂ ೪
ಆದಿತಾಳ
ಜ್ಞಾನಾವಂತಾ ಗುಣನಂತಾ |
ಧ್ಯಾನಾನಂತಾ ದಾನಾನಂತಾ |
ಮಾನಾನಂತ ಮೌನಾನಂತಾ |
ಅನಂತಾನಂತಾನಂತಾ |
ಅನಂತವರ್ನ ವಿಜಯವಿಠಲಾ |
ಅನಂತ ಎನ್ನ ಪ್ರಾಣಾನಂತಾ ೫
ಜತೆ
ನಮೊ ನಮೊ ಅನಂತಾ ಆದಿ ಅನಂತಾ ನಿ |
ಗಮಪಾಲಾ ವಿಜಯವಿಠಲನಂತ ಸ್ವಾಮಿ೬

ವಾಯುದೇವರ ಅವತಾರರೆಂದೇ ಪ್ರಸಿದ್ದರಾದ

ಶ್ರೀಮಧ್ವಾಚಾರ್ಯರ ಸ್ತೋತ್ರ
೧೫೫
ಧ್ರುವತಾಳ
ಶ್ರೀಮಧ್ವಿಠಲ ಪಾದಾಂಬುಜ ಮಧುಪ ರಾಜಾ
ಶ್ರೀಮದಾಚಾರ್ಯ ಧೈರ್ಯ ಯೋಗ ಧುರ್ಯಾ
ಕಾಮವರ್ಜಿತ ಕೃಪಾಸಾಗರ ಯತಿರೂಪಾ
ರೋಮ ರೋಮ ಗುಣಪೂರ್ಣ ಪರಣಾ
ಸಾಮ ವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧ
ಸೀಮರಹಿತ ಮಹಿಮ ಭುವನ ಪ್ರೇಮ
ತಾಮಸಜನದೂರ ದಂಡಕಮಂಡಲಧರ
ಶ್ರೀ ಮಧ್ವ ಮುನಿರಾಯ ಶೋಭನ ಕಾಯ
ಆ ಮಹಾ ಜ್ಞಾನದಾತ ಅನುಮಾನ ತೀರಥ
ಕೋಮಲಮತಿಧಾರ್ಯ ವೈಷ್ಣವಾರ್ಯ
ಕಾಮ ಸುತ್ರಾಮ ಶರ್ವ ಸುರನುತ ಗುರುಸಾರ್ವ
ಭೌಮಾತಿ ಭಯನಾಶ ಭಾರತೀಶಾ
ರಾಮಕೃಷ್ಣ ವ್ಯಾಸ ವಿಜಯ ವಿಠ್ಠಲನ ಹೃದಯ
ಧಾಮದೊಳಗಿಟ್ಟ ಸತತ ಧಿಟ್ಟಾ ೧
ಮಟ್ಟತಾಳ
ಹರಿಯೆ ಗುಣಶೂನ್ಯ ಹರಿಯ ನಿರಾಕಾರ
ಹರಿಯು ದೊರೆಯು ಅಲ್ಲ ಹರಿ ಪರತಂತ್ರ
ಹರಿಯು ದುರ್ಬಲನು ಹರಿಗೆ ಎಂಟುಗುಣ
ಹರಿಯು ತಾನೆಂದು ತಾರತಮ್ಯವೆನದೆ
ಧರೆಗೆಲ್ಲ ಮಿಥ್ಯಾ ಪರಿ ಪರಿ ಕರ್ಮಗಳು
ಹರಿತಾನೇ ಪುಟ್ಟಿ ಚರಿಸುವ ಲೀಲೆಯಲಿ
ನರ ನಾನಾ ಜನ್ಮ ಧರಿಸಿ ತೋರುವನೆಂದು
ದುರುಳ ದುರ್ಮತದವರು ಸರಿ ಸರಿ ಬಂದಂತೆ
ಒರಲಿ ಸಜ್ಜನರನ್ನು ತಿರಸ್ಕಾರವನೆ ಮಾಡಿ
ತಿರುಗುತಿರೆ ಇತ್ತ ಸುರರು ಕಳವಳಿಸಿ
ಪರಮೇಷ್ಠಿಗೆ ಪೇಳೆ ಹರಿಗೆ ಬಿನ್ನೈಸಲು
ಮರುತ ದೇವನೆ ಅವತರಿಸಿದ ಹರುಷದಲ್ಲಿ
ಕರುಣಾಕರ ಮೂರ್ತಿ ವಿಜಯ ವಿಠ್ಠಲರೇಯ
ಪರನೆಂದು ಸಾರಿ ಧರೆಯೊಳಗೆ ಮೆರೆದಾ ೨
ತ್ರಿವಿಡಿತಾಳ
ಶೂನ್ಯವಾದ ಮಿಕ್ಕ ದುರ್ಮತದವರೆಲ್ಲ
ಸನ್ಯಾಯವಿಲ್ಲದ ವಚನದಿಂದ
ಸನ್ಯಾಸಿಗಳೆಂಬೊ ಗರ್ವವಲ್ಲದೆ ವೇದ
ಸನ್ಮತವಾಗದ ದುರ್ಲಕ್ಷಣ
ವನ್ನು ಕಲ್ಪಿಸಿ ಶುಧ್ಧ ಆಚಾರವನೆ ಕೆಡಿಸಿ
ಭಿನ್ನವಿಲ್ಲವೆಂದು ತಿರುಗುತಿರೆ
ಪುಣ್ಯಶ್ಲೋಕ ನಮ್ಮ ವಿಜಯವಿಠ್ಠಲನ
ಸನ್ನುತಿಸದೆ ದ್ವೇಷವ ತಾಳಿರೆ ೩
ಅಟ್ಟತಾಳ
ಇಪ್ಪತ್ತು ಒಂದು ಕುಭಾಷ್ಯವ ರಚಿಸಿರೆ
ಒಪ್ಪದಿಂದಲಿ ಗೆದ್ದು ಅವರವರ ಮಹಾ
ದರ್ಪವ ತಗ್ಗಿಸಿ ದಶದಿಕ್ಕು ಪೊಗಿಸಿ ಕಂ
ದರ್ಪ ಜನಕನು ಸ್ವತಂತ್ರ ಗುಣಪೂರ್ಣ
ಅಪ್ಪಾರ ಮಹಿಮನು ಸಾಕಾರ ಸತ್ಪುರುಷ
ತಪ್ಪದೆ ತ್ರಿಲೋಕಕ್ಕೊಡೆಯ ಜಗಜೀವ
ನಪ್ಪನು ಸರ್ವಾಂತರಂಗದೊಳಗೆ ಬಿಡ
ದಿಪ್ಪ ವಿಶ್ವಮೂರುತಿ ವಿಲಕ್ಷಣ ರೂಪ
ಸರ್ಪಶಯನ ನಮ್ಮ ವಿಜಯವಿಠ್ಠಲರೇಯ
ಮುಪ್ಪಿಲ್ಲದ ದೈವ ಅಜಭವ ಸುರವಂದ್ಯಾ ೪
ಆದಿತಾಳ
ದರುಶನ ಗ್ರಂಥವ ರಚಿಸಿ ಸುಜನರಪಾಲಿಸಿ
ಮರುತಮತದ ಬಿರಿದೆತ್ತಿದೆ ಮಹಾಯತಿ
ಸರಿಗಾಣೆ ನಿಮಗೆಲ್ಲ ಪರ್ಣಿಸಲೆನ್ನಳವೆ
ದುರುಳರ ಗಂಟಲಗಾಣ ವಿದ್ಯಾಪ್ರವೀಣಾ
ನೆರೆನಂಬಿದವರಿಗೆಲ್ಲ ಮನೋವ್ಯಥೆಗಳ ಬಿಡಿಸಿ
ಹರಸು ಜ್ಞಾನ ಭಕುತಿ ವಿರಕ್ತಿ ಮಾರ್ಗವ ತೋರಿಸಿ
ಪೊರೆವ ತತ್ವದ ವನಧಿ ಪೊಡವಿಯೊಳಗೆ
ಸುರನರೋರಗಾದಿಗೆ ಗುರುವೆ ಪರಮಗುರುವೆ
ಸರಸ ಸದ್ಗುಣ ಸಾಂದ್ರ ವಿಜಯ ವಿಠ್ಠಲರೇಯನ
ಚರಣವ ನಂಬಿದ ಪ್ರಧಾನ ವಾಯುದೇವಾ ೫
ಜತೆ
ಅದ್ವೈತ ಮತಾರಣ್ಯ ದಾವಾ ವ್ಯಾಸಶಿಷ್ಯ
ಮಧ್ವಮುನಿ ವಿಜಯ ವಿಠ್ಠಲನ ನಿಜದಾಸಾ ೬

ಗುಣ ತಾರತಮ್ಯವನ್ನು ವಿವರಣಾತ್ಮಕವಾಗಿ ತಿಳಿಸುವ

೧೧೭
ಧ್ರುವತಾಳ
ಶ್ರೀವನಿತೆಯರಸಾ ಶೃಂಗಾರ ಗುಣನಿಧಿ
ಪಾವನ್ನ ಮೂರುತಿ ಪರಮ ಪುರುಷಾ
ಭಾವುಕ ಚರಿತಾ ಭವ ಭಯ ವಿದೂರ
ಕೋವಿದಾ ಜಗದಂತರ್ಯಾಮೀ ಸ್ವಾಮಿ
ದೇವ ದೇವೇಶಾ ಆತುಮಾ ಅಂತರಾತುಮಾ
ತ್ರಿವಿಧ ಜೀವಿಗಳ ನಿರ್ಮಾಣನೇ
ಕೈವಲ್ಯನಾಥಾ ಅತ್ಯಣು ಮಹಾ ಮಹತ್ತು
ಠಾವಿನಲ್ಲಿ ಪೂರ್ಣಗುಪ್ತ ವ್ಯಾಪ್ತಾ
ಕಾವ ಮುಕ್ತಾ ಮುಕ್ತರ ಇಚ್ಛಾಮಾತುರದಿಂದ
ಆವಾವ ಕಲ್ಪದಲ್ಲಿ ಶಶ್ವದೇಕಪ್ರಕಾರ ಸ್ವಾ
ಭಾವಿತ ಪ್ರವರ್ತ ಲೀಲಾ ವಿನೋದ
ಕಾವಳವಾದಾ ದುರ್ಘಟ ಭವಾಟವ್ಯಕೆ
ಪಾವಕನೆನಿಸುವ ಪರದೇವತಿ
ಸೇವಿಸುವ ಭಕ್ತರ ಕುಲಕೆ ವಜ್ರ ಪಂಜರ
ಜೀವಾದಿಗಳ ಭಿನ್ನ ಜನಾರ್ದನಾ
ಸ್ಥಾವರ ಜಂಗಮ ಸಿರಿ ಪರಿಯಂತ ಗು
ಣಾವಳಿ ಆಧಿಕರನ್ನೆ ಮಾಡಿ
ಪೂವಿಲ್ಲನಯ್ಯ ವಿಜಯ ವಿಠ್ಠಲ ತಾರತಮ್ಯ
ಭಾವದಲ್ಲಿ ನಡಿಪಾ ಭಾಸ್ಕರಾನಂತ ತೇಜಾ ೧
ಮಟ್ಟತಾಳ
ಹರಿಗೆ ಸಿರಿದೇವಿ ಅನಂತ ಗುಣಕೆ ನೀಚಳು
ಸಿರಿಗೆ ಪರಮೇಷ್ಟಿ ಕೋಟಿ ಗುಣಕೆ ಅ
ವರ ಕಾಣೋ ವಾಯು ಸರಸಿಜಭವ ಸಮಾ
ಸರಸ್ವತೀ ಭಾರತೀ ತಮ್ಮ ತಮ್ಮ ಪತಿಗಳಿಂದ
ನಿರುತದಲಿ ತಾವು ನೂರು ಗುಣಾಧಮರು
ಗರುಡ ಶೇಷ ರುದ್ರ ಮೂವರೊಂದೆ ಸಮಾ
ಸರಸ್ವತಿಯರಿಗಿಂತ ಹತ್ತು ಹತ್ತು ಗುಣ ನೀಚಾ
ಗಿರಿಜ ವಾರುಣಿಯರು ತಮ್ಮ ಪತಿಗಳಿಂದ
ಎರಡೈವತ್ತು ಗುಣದಿಂದಧಮರು
ವರಜಾಂಬುವತಿ ನೀಲಾ ಕಾಳಿಂದಿ ಸುಂ
ದರ ಮಿತ್ರವಿಂದಾ ಲಕ್ಷಣ ಭದ್ರಾ ಇ
ವರು ಆರು ಜನರು ಹರಿಯ ರಾಣಿಯರು
ಗರುಡಶೇಷ ರುದ್ರ ಇವರಿವರ ಸತಿ
ಯರ ಮಧ್ಯದಲಿ ಇರುತಿಪ್ಪರು ಇವರು
ಸಿರಿಯಾವೇಶವನು ಇಲ್ಲದ ಸಮಯದಲ್ಲಿ ಅ
ವರು ಪ್ರದ್ಯುಮ್ನಗೆ ವಿಂಶತಿಗುಣ ಅಧಿಕರು ಎನಿಸುವರು
ಗರುಡಾದ್ಯರ ನೋಡೆ ಪಂಚಗುಣಕ್ಕೆ ಹೀನಾ
ಸಿರಿಯಾವೇಶವದು ಬಂದು ಪ್ರಾಪುತವಾಗೆ
ಸರಿಯೆಂದೆನಿಸುವರು ಬಲರಾಮನ ಗುಣಕೆ
ಕರಡಿಸುತೆಯಲ್ಲಿ ಸದಾ ಸಿರಿಯಾವೇಶಾ
ಇರಲಾಗಿ ಐವರಿಗೆ ಕಿಂಚಿತು ಅಧಿಕಳು
ಅರಿವುದು ಈ ಪರಿ ವಿಜಯ ವಿಠ್ಠಲಗೆಲ್ಲ
ಪರಮ ಪ್ರೀಯರು ತಮ್ಮ ಯೋಗ್ಯತಾನುಸಾರ ೨
ರೂಪಕ ತಾಳ
ಇಂದ್ರನ್ನ ನೋಡಲು ಕಾಮ ಕಿಂಚಿತು ನೀಚಾ
ಇಂದ್ರರಾಣಿಯರಿಗಿಂತ ಒಂಭತ್ತು
ಒಂದು ಗುಣಕೆ ನೀಚರಾಗಿ ಒಪ್ಪುತಲಿಹರು
ಮುಂದೆ ಅಹಂಕಾರ ಪ್ರಾಣನು ಸುರ ವತಿ ಕಾಮ
ರಿಂದ ಹತ್ತುಗುಣ ಅನಧಿಕನು
ಇಂದ್ರಾಣಿ ಅನಿರುದ್ಧ ಸ್ವಾಯಂಭುವ ಮನು ದಕ್ಷ
ವೃಂದಾರಕ ಗುರು ರತಿ ಇವರಾರು ಜನ ಸಮ
ರೆಂದು ತಿಳಿವುದು ಅಹಂಕಾರ ಪ್ರಾಣನ ದೆಶೆ
ಯಿಂದ ಈರೈದು ಗುಣದಿಂದ ಶೂನ್ಯ(ಊನ)ರು ಕಾಣೋ
ಛಂದದಿಂ ಪ್ರವಹ ಮರುತಾನಿರುದ್ಧಾದಿಗ
ಳಿಂದ ವಿಚಾರಿಸೆ ಐದು ಗುಣಾಧಮನು
ಸಂದೇಹವಿನ್ನಿಲ್ಲಾ ಸನಕಾದಿಗಳು ಅಜನ
ನಂದನೆಯರು ಚಂದ್ರಸೂರ್ಯರಿವರು ಕ್ರಮ
ದಿಂದ ಅಲ್ಪರ್ಧದ ಗುಣದಲಿ ನೀಚರು
ಹಿಂದೆ ಪೇಳಿದಾ ಮರುತ ಪ್ರವಹನಿಗಿಂತಲಿ
ಒಂದೊಂದು ಗುಣಗಳಿಗೆ ಕಡಿಮೆ ಇವರು ಎನ್ನಿ
ಮಂದಾಕಿನೀ ರಮಣಾ ಒಬ್ಬನೇ ಧರ್ಮಾದ್ಯಾ
ರಿಂದ ಪಾದ ಪಾದಾರ್ಧ ಗುಣಕೆ ನೀಚಾ
ಒಂದೇ ಪರದೈವ ವಿಜಯ ವಿಠ್ಠಲ ರೇಯಾ
ಪೊಂದಿಸಿದಂತೆ ಪ್ರವರ್ತಿಸುವರು ೩
ಝಂಪಿತಾಳ
ತ್ರಿದಶಮುನಿ ನಾರದನು ವರುಣ ದೇವರಕಿಂತ
ಪಾದಕೆ ಗುಣ ನೀಚನು ಕಲಹಪ್ರೀಯಾ
ತದನಂತರದಲ್ಲಿ ಭೃಗು ಅನಿಲ ಪ್ರಸೂತಿ ನಾ
ರದ ಕಿಂತ ನೀಚತನವೆಂಬೋರಯ್ಯಾ
ವಿಧಿಸುತರು ಏಳುಜನ ಕೌಶಿಕ ವೈವಸ್ವತಾ
ಅಧಮರು ಎಳ್ಳನಿತು ಭೃಗ್ವಾದಿಗೆ
ಇದೆ ಸತ್ಯ ಮಿತ್ರ ತಾರಾ ಮನುಜವಾಹನ
ಸುದತಿ ಪ್ರಾವಹಿ ವೊಂದೇ ಸಮರು
ವಿಧಿಜಾದ್ಯರ ನೋಡೆ ಗುಣ ಎರಡಕ್ಕಧಮರು
ಮುದದಿ ವಿಷ್ವಕ್ಸೇನ ಗಣಪತಿ ವಿತ್ತಪಾ
ತ್ರಿದಶ ವೈದ್ಯರು ಕಾಣೋ ಮಿತ್ರಾದ್ಯರಿಗೆ ಸ್ವಲ್ಪ
ಇದೆ ತಾರತಮ್ಯವೆಂದರಿವುದೆಲ್ಲಾ
ಮದನನ್ನ ಪೆತ್ತ ಸಿರಿ ವಿಜಯ ವಿಠ್ಠಲ ಹರಿಯಾ
ಪದಗಳನು ಧ್ಯಾನಿಸುವ ಸದಮಲರಿವರು ನಿತ್ಯಾ ೪
ತ್ರಿವಿಡಿತಾಳ
ವಸುಗಳೇಳು ಮಂದಿ ದಶ ರುದ್ರರು ಮತ್ತೆ
ಬಿಸಿಜಾಪ್ತರಾರು ಜನ ದಶ ವಿಶ್ವದೇವರು
ಶ್ವಸನ ಗಣದಲಿ ಎಣಿಸು ನಾಲ್ವತ್ತೆರೆಡರನ್ನಾ
ಎಸೆವ ಋಭು ಗಣದೊಳಗೊಬ್ಬಾ ದ್ಯಾವಾ
ರಸ ಪಿತೃಗಳು ಮೂವರು ಹಸನಾಗಿ ತಿಳಿವುದು
ಮಿಸುಕಾದೆಣಿಸುವುದು ಇವರನೆಲ್ಲಾ ಕೂಡಿಸಿ
ಉಸುರುವೆ ಇವರ ಕೂಟದವರ ಕೆಲಬರನ್ನಾ
ಶ್ವಸನರೊಳೈವರು ಸ್ವಲ್ಪರಿವರಧಿಕ
ಕುಶಲದಲೆಣಿಸಿ ಎಂಭತ್ತು ಆರುಜನಾ
ವಸುಗಳಿಂದಲ್ಲಿಗೆ ಪ್ರಾಂತ ತಿಳಿವುದು
ಬೆಸಸುವೆ ಇಂದ್ರ ವಿವಸ್ವಾನ್ ಮಿತ್ರಾ ವರುಣಾ
ವಸುಗಳೊಳು ಅಗ್ನಿ ರುದ್ರರೊಳು ಸದಾಶಿವಾ
ಶ್ರಸನರೊಳಿವರು ಯಿಲ್ಲಿ ಲೆಖ್ಖಗು
ಣಿಸು ತೊಂಭತ್ತು ನಾಲ್ಕು ಜನಗಳು
ಪುಸಿಯಲ್ಲ ಮೊದಲೆ ಪೇಳಿದವರನ್ನಾ
ವಿಸ್ತರಿಸುವೆ ಗಣಪಾದ್ಯರು ಐವರು
ಬಿಸಿಜ ಸಖರ ಕೂಟ ಪರ್ಜನ್ಯನೊಬ್ಬಾ
ಎಣಿಸಲಾಗಾ ಶತಸ್ಥರಿವರು ಎನ್ನಿ

ಆಂಧ್ರಪ್ರದೇಶದ ಶ್ರೀಶೈಲ ಶಿವಭಕ್ತರಿಗೆ

೯೫. ಶ್ರೀಶೈಲ
ಧ್ರುವತಾಳ
ಶ್ರೀಶೈಲಾ ಪಂಚಪಂಚಕ್ರೋಶಾ ಯಾತ್ರೆಯುಂಟು |
ಶೇಷಾದ್ರಿ ಪುಚ್ಛಭಾಗಾವೆಂದು ತಿಳಿದೂ |
ಶೇಷಭೂಷಣನಿಲ್ಲಿ ವಾಸವಾಗಿಪ್ಪನು |
ಶ್ರೀಶನ ದಯದಿಂದ ತೀರ್ಥಾಸವನೀವುತ್ತ |
ದೇಶದೊಳಗೆ ಭೂಕೈಲಾಸದಿಕವಿದು |
ಕಾಶಿ ರಾಮೇಶ್ವರ ಮಧ್ಯದಲ್ಲೀ |
ದೋಷವಿಬಂಧನಾ ಪಾಶಾನೆ ಹರಿಸೋದು |
ವಿಸಜನ್ಮದ ಕ್ಲೇಶನಾಶನವಾಗುವದೂ |
ಕೇಶವನ ಧೀರ್ಘದ್ವೇಷಿಗಳು ಇಲ್ಲಿ |
ವಾಸವಾದರು ಫಲಾ ಲೇಶವಿಲ್ಲ |
ವಾಸುದೇವನಾಮಾ ವಿಜಯವಿಠಲರೇಯನ |
ದಾಸನಲ್ಲಾದವಗೆ ಈ ಸುಲಭ ದೊರಕೋದೆ ೧
ಮಟ್ಟತಾಳ
ಸುತನ ಸ್ನೇಹದಿಂದ ಪಿತಾಮಹನು ಬಂದು |
ಅತಿಶಯದೀಶನಾ | ಹಿತವಾಗಿ ಪೂಜಿಸಿದ |
ಸತತ ವಲ್ಮೀಕದೊಳು ಮಿತಿಯಿಲ್ಲದ ವರುಷಾ |
ಹುತನೇತ್ರನಿರಲು |
ಜಿತಮನ್ಯುನಾಮಾ ವಿಜಯವಿಠಲನ್ನ ಅ |
ಮೃತ ನಾಮವನ್ನು ಪ್ರತಿದಿನ ನೆನೆಸುತ್ತ ೨
ರೂಪಕತಾಳ
ಚಂದ್ರಗುಪ್ತನೃಪನಾ ಮಂದಿರದಿಂದಲ್ಲಿ |
ಬಂದು ಉತ್ತಮವಾದ ಅಂದಾವುಳ್ಳಕಳೂ |
ಬಂದು ನಿರಂತರ ಚಂದವಾಗಿ ಕ್ಷೀರ |
ಬಿಂದು ಮಾತುರ ಇಡದೆ ಅಂದು ಕರವುತಿರೆ |
ಒಂದುದಿನ ನೃಪತಿ ಅಂದು ಗೋವನು ಕರ |
ತಂದು ದಂಡಿಸಲಾಗ ಬಂದಾಗ ಪರೀಕ್ಷಿಸಿದ |
ಸಂಧಿಮಾತೆ ನಾಮಾ ವಿಜಯವಿಠಲನಾ ಕೃಪೆ |
ಯಿಂದ ಪೆಸರಾದಾನೆಂದು ತಿಳಿವುದೂ ೩
ಝಂಪೆತಾಳ
ಈ ತೆರದಲಿರುತಿರಲು ಭೂತನಾಥನು ಮುಂದೆ |
ಸೀತಾಂಶಳಾಗುಪ್ತಜಳು ಮಲ್ಲಿಕಾ ಎಂಬುವಳು |
ಚಾತುರ್ಯವಂತೆ ಯವ್ವನಾತುರದಿ ಒಪ್ಪುತಿರೆ |
ಸೋತನಾಗವಳ ಪಿತ ಕೈದುಡುಕಲು |
ಕಾತುರದಲಿ ಪಿತನ ಶಾಪಿಸಿ ವೇಗದಲಿ |
ಭೂತೇಶನೊಳಗೆ ಗೋಪಾಲ ಸಮ್ಮೇತಾ |
ತಾ ತವಕದಲ್ಲಿ ಪ್ರವೇಶವಾದಳಂದು |
ಮಾತು ಪುಶಿಯಲ್ಲನಿಶ್ಚಯವೆನ್ನಿರೊ |
ಜ್ಯೋತಿರಾದಿತ್ಯ ಶಿರಿ ವಿಜಯವಿಠಲನ್ನ |
ಪ್ರೀತಿ ಸಂಪಾದಿಸಿ ಲಾಲಿಸುವದಿದನೂ ೪
ತ್ರಿವಿಡಿತಾಳ
ಇಲ್ಲಿ ಈರ್ವರು ಬಂದು ಪೊಕ್ಕಾ ಕಾರಣದಿಂದ |
ಮಲ್ಲಿಕಾರ್ಜುನನೆಂಬ ನಾಮಾದಲ್ಲೀ |
ಎಲ್ಲ ಲೋಕದಲೀಶ ಕರಿಸಿಕೊಂಡನು ಸುರ |
ರೆಲ್ಲಾರು ಕೊಂಡಾಡೆ ವಿಜಯದಿಂದಾ |
ಬಲ್ಲಿದ ಶಶಿಗುಪ್ತಾ ಕೂಪಿತಾದಲ್ಲಿ ಗಿರಿಜಾ |
ವಲ್ಲಭಗೆ ಶಪಿಸೀದಾ ನಿನ್ನಾ ನೋಡಲು ಗತಿ |
ಇಲ್ಲಾದೆ ಪೋಗಲಿ ಎನುತಾ ಪೇಳಲು ಗಿರಿಜಾ |
ವಲ್ಲಭ ಕರುಣದಲಿ ಶಿಖರಕ್ಕೆ ವರವಿತ್ತಾ |
ಖುಲ್ಲಾದಲ್ಲಣ ಶ್ರೇಷ್ಠಾ ವಿಜಯವಿಠಲರೇಯಾ |
ಸಲ್ಲಿಸುವನು ಭಕುತಿಯಲ್ಲಿ ನಡೆದರೆ ಪುಣ್ಯ ೫
ಅಟ್ಟತಾಳ
ನವಭಕುತಿಯಲಿಂದ ನವನದಿಯಲಿ ಸ್ನಾ |
ನವನು ಮಾಡಿದ ಮಾನವನ ಪುಣ್ಯಕಿ ಇ |
ನ್ನವನಿಯೊಳಗಾವನಾವನು ವಿಧಿತ ಸಾಧ |
ನವನು ತೀರಿಸಿದ ಮಾನವಗೆ ಪಡಿಯುಂಟೆ |
ನವನೀತ ಚೋರ ವಿಜಯವಿಠಲನ ಧ್ಯಾ |
ನವನು ಕೈಕೊಂಡಾಗಾನವ ನೀತರಾಗಿ ೬
ಆದಿತಾಳ
ಶ್ರೀಗಿರಿಯಲ್ಲಿ ವಾಸವಾಗಿ ಒಂದು ನಿಮಿಷಾ ನಿಜಾ |
ಭಾಗವತರೊಡಗೂಡಿ ಜಾಗರತನದಿಂದಲಿ |
ಆಗಮ ಸಿದ್ಧಾಂತವುಳ್ಳ ಸಾಗರದೊಳಗೆ ವಿ |
ಯೋಗವಾಗದಂತಿದ್ದು ಸಾಗರಶಯನನ ಸೇವೆ |
ಜಾಗುಮಾಡದತಿಮಾಡಿ ನೀಗಿ ಭವರೋಗಗಳು |
ಯೋಗಿಗಳು ಬಲ್ಲರಿದು ಈಗಿನ ಮಾತಲ್ಲವಲ್ಲ |
ಭೂಗರ್ಭನಾಮ ಸಿರಿ ವಿಜಯವಿಠಲ ಬಲ್ಲಾ |
ಕಾಗಿಯಂತೆ ಮುಣಗಿದರು |
ಆಗದಾಗದು ಕೈವಲ್ಯಾ ೭
ಜತೆ
ಎಂದಿಗಾದರು ಒಮ್ಮೆ ಜ್ಞಾನದಿಂದಲಿ ನೋಡೆ |
ಬಂದು ಮಹವೀರ್ಯಾ ವಿಜಯವಿಠಲನೊಲಿವಾ ೮

ಭಗವಂತನ ಸನ್ನಿಧಾನವನ್ನು

೮೨
ಧ್ರುವತಾಳ
ಸಂಧಿಕಾಲವೆ ತಿಳಿಯುಗ ಮನ್ವಂತರ ಭೇದ |
ಒಂದೊಂದು ಪ್ರಕಾರ ಗುಣಿತದಿಂದ |
ಎಂದೆಂದಿಗೆ ಇದು ಪ್ರವಾಹ ರೂಪವಾಗಿ |
ಒಂದರ ತರುವಾಯ ಒಂದು ಬರುತಿಪ್ಪವು |
ಮುಂದೊಲಿದು ಕೇಳಿ ಯುಗನಾಲ್ಕು ಮತ್ತೆ ಹ |
ನ್ನೊಂದು ಮೂರು ಮನುಗಳಸಂಧಿಯ |
ಚಂದವಾಗಿದೆ ನಾಲ್ಕು ಯುಗದ ಲೆಖ್ಖ ಮನುಜಮಾನ |
ದಿಂದ ನಾಲ್ವತ್ತು ಮೂರು ಲಕ್ಷ ಮೂವತ್ತೆರಡು ಸಾವಿರ |
ಯಂದೆಂಬ ವರುಷಂಗಳು ಇದರೊಳು ವಿವರವುಂಟು |
ಸಂಧಿಕಾಲ ಯಾವತ್ತು ಇಪ್ಪತ್ತು ಸಹಸ್ರ ಆ
ರೊಂದು ಲಕ್ಷದ ವರುಷವಾಗುತಿದಕೂ |
ಒಂದೊಂದು ಯುಗದ ಸಂಖ್ಯ ಇತ್ತಂಡದಲ್ಲಿ ಗ್ರಹಿಸು |
ಕುಂದದಲೆ ಕಲಿ ಅಂತ ಕೃತಾದಿ ಭಾಗ |
ಸಂಧಿಕಾಲವೆ ಸರಿ ಎಂಭತ್ತು ಸಾವಿರ |
ಒಂದು ಲಕ್ಷವೆ ಸಿದ್ಧವು ಕೃತಾಂತ ಆದಿತ್ರೈತ |
ಸಂಧಿ ಎರಡು ಲಕ್ಷ ಐವತ್ತೆರಡು ಸಹಸ್ರ |
ಪೊಂದಿ ತ್ರೇತಾ ಅಂತ ದ್ವಾಪರಾದಿ ಭಾಗ |
ಒಂದು ಲಕ್ಷ ಎಂಭತ್ತು ಸಹಸ್ರ ವತ್ಸರ ಕಾಣೊ |
ಸಂಧಿ ಪೋಯಿತು ದ್ವಾಪರಾಂತ ಕಲಿಯುಗದಿ |
ಒಂದು ಲಕ್ಷ ಎಂಟು ಸಾವಿರ ವರುಷವೆನ್ನಿ |
ಸಂಧಿ ಕಾಲ ಉಭಯ ವಿವರ್ಣವು ಪ್ರಥಮದಲ್ಲಿ |
ನಂದನ್ನ ನಂದ ವಿಜಯ ವಿಠ್ಠಲರೇಯ ಆ
ನಂದದಲಿ ಸರ್ವಕಾಲದಲ್ಲಿ ಇಪ್ಪ ೧
ಮಟ್ಟತಾಳ
ಉಳಿದ ವರ್ಷಂಗಳು ಅರವತ್ತು ಸಾವಿರ |
ತ್ರಿಲಕ್ಷ ನಿಜಕಾಲ ನಾಲ್ಕು ಯುಗಕೆ ಲೆಖ್ಖ | (೩,೬೦,೦೦೦)
ತಿಳಿದು ಈ ಪರಿಯಿಂದ ಕೊಂಡಾಡಲಿಬೇಕು |
ಒಲಿಸಿ ಚತುರ್ದಶ ಮನುಗಳ ವೃತ್ತಾಂತ |
ಸುಲಭ ಮನಸಿನಲ್ಲಿ ಭುಕ್ತಿ ಸಂಧಿಕಾಲ |
ಇಳಿಯೊಳು ಚನ್ನಾಗಿ ಅವರವರ ಕ್ಲಪ್ತ |
ಜಲಜನಯನ ನಮ್ಮ ವಿಜಯ ವಿಠ್ಠಲರೇಯನ |
ಒಲಿಮೆಯಿಂದಲೆ ಇದೆ ಧ್ಯಾನ ಮಾಡಲಿ ಬೇಕು ೨
ತ್ರಿವಿಡಿ ತಾಳ
ಮನುವೋರ್ವನಿಗೆ ನೋಡು ಭೋಗಿಸುವ ಕಾಲ ಯೋ |
ಚನೆ ಮಾಡು ಮಾನವ ತ್ರಿಂಶತಿ ಕೋಟಿ ಮೇ |
ಲೆಣಿಸು ಎಂಭತ್ತೈದು ಲಕ್ಷ ಎಪ್ಪತ್ತೊಂದು |
ಗಣನೆ ಮಾಡು ಸಾವಿರ ನಾನೂರಿಪ್ಪತ್ತೆಂಟು ಹಾ |
ಯನ ತಿಂಗಳಾಗು ಆ ತರುವಾಯ ಎಪ್ಪತ್ತೈದು |
ದಿನ ತಾಸು ಹದಿನೇಳು ಯಿಪ್ಪತ್ತೊಂದು ಪಳ (ವಿಫಳಿಗಿ)
ಇನಿತು ಸಿದ್ಧವೆನ್ನು ಯಿದರಂತೆ ಚತುರ್ದಶ |
ಮನುಗಳಿಗೆ ಲೆಖ್ಖ ಮಾಡಬೇಕಯ್ಯ |
ಅನುಮಾನಯಿದಕ್ಕಿಲ್ಲ ಮರಳೆ ಸಂಧಿ ಕಾಲ |
ಗುಣಿಸು ಯಿಂಗಡವಾಗಿ ಪ್ರತ್ತ್ಯೇಕದಿ |
ಘನ ಮೂರುತಿ ನಮ್ಮ ವಿಜಯ ವಿಠ್ಠಲರೇಯ |
ಮನಗಳೊಳಗೆ ತಾನೆ ತಾಪಸನಾಗಿಪ್ಪ ೩
ಅಟ್ಟತಾಳ
ಮೊದಲು ಮನುವಿಗೆ ಯೆರಡು ಸಾವಿರ ವರುಷ | ೨೦೦೦
ಇದೆಸಿದ್ಧ ಸ್ವಾರೋಬೆಷ ಚಾಕ್ಷುಷ ತನಕ |
ಹದಿನಾಲ್ಕು ನೂರು ವತ್ಸರ ಐದು ಮಂದಿಗೆ | ೭೦೦೦
ಇದರ ತರುವಾಯ ವೈವಸ್ವತಮನು |
ಮುದದಿಂದ ದೇವ ಸಾವರ್ಣಿ ಪರಿಯಂತ |
ಹದಿನೈದು ನೂರು ಪ್ರಕಾರ ಯೆಂಟು ಜನಕೆ | ೧೨೦೦೦
ಹದಿನೆಂಟು ಮೂರು (೧೮+೩=೨೧) ಸಾವಿರ
ವತ್ಸರಾದವು ೨೧೦೦೦
ಇದೆ ಲೆಖ್ಖದಿಂದಲಿ ಆದಿ ಅಂತ್ಯಭಾ |
ಗದ ಸಂಧಿಕಾಲವೆ ತಿಳಿವುದು ವಿಸ್ತಾರವ |
ಮದನ ಲಾವಣ್ಯ ನಮ್ಮ ವಿಜಯ ವಿಠ್ಠಲರೇಯ |
ಪದುಮಗರ್ಭನ ದಿನದಲಿ ನೇಮಿಸಿಯಿಪ್ಪ | ೪
ಆದಿತಾಳ
ಇಂತು ಕೊಂಡಾಡುವದು ಭಕ್ತಿಮಾರ್ಗದಲಿ ಮ |
ನ್ವಾಂತರ ಹದಿನಾಲ್ಕು ಪುನರಾವರ್ತಿ ಯೆಣಿಸು |
ಇಂತಿವರೊಳಗೆ ಹದಿಮೂರು (ನಾಲ್ಕು)ಇಂದ್ರರುವುಂಟು |
ಕಂತುಪಿತನ ಅವತಾರಂಗಳು ವುಂಟು ಪ್ರತಿದಿನ |
ಚಿಂತಿಸು ಯಿವರಿವರ ಕಾಲದಲ್ಲಿ ಯಿದ್ದ |
ಸಂತರಾ (ನಾ)ಮನುಗಳ ಮುನಿಗಳ
ತ್ರಿದಶ ಜನರ ಪೆಸರುಗಳ |
ಮುಂತೆ ಲಕುಮಿರಮಣನ್ನ ತಂದೆ ತಾಯಿ ಮಿಕ್ಕಾದ |
ಸಂತತಿಗಳ ನೆನಸೆ ಇಹ ಪರದಲಿ ಸೌಖ್ಯ |
ಎಂತೆಂತು ಹರಿ ಲೀಲೆ ಜಗದೊಳು ತುಂಬಿವೆ |
ಸಂತುಜನ ಸ್ತೋತ್ರಮಾಡಿ ಧನ್ಯರಾಗಲಿ ಬೇಕು |
ಅಂತರಂಗದ ಸ್ವಾಮಿ ವಿಜಯ ವಿಠ್ಠಲರೇಯ |
ಸಂತತ ಜ್ಞಾನವಂತರ ಕಾವುತಲಿಪ್ಪನಯ್ಯ ೫
ಜತೆ
ಸಂಧಿ ಕಾಲವೆ ತಿಳಿದು ಸತತ ಸಾಧನ ಮಾಡು |
ಮಂದರಾದ್ರಿಧರ ವಿಜಯ ವಿಠ್ಠಲ ಒಲಿವ ೬

ಭಗವಂತನನ್ನು ಸತ್ಯ ಎಂದು ಕರೆಯುವ ವಾಡಿಕೆ ಇದೆ.

೮೩
ಧ್ರುವತಾಳ
ಸಂಪೂಜೆಮಾಡು ಮನವೆ ಸಂತತ ನಿನಗೆ ಜ್ಞಾನ
ಸಂಪತ್ತು ಸಿದ್ಧ ಸುಲಭಮಾರ್ಗ
ಸಂಪದವಿಗೆಯನ್ನು ಸಮಸ್ತಕಾಲದಲ್ಲಿ
ಸಂಪುಲ್ಲಾಕ್ಷನ ನೋಳ್ಪ ಸೌಭಾಗ್ಯವೆ
ಇಂಪಾಗಿದೆ ನೋಡು ಈಶಾವಾಸ್ಯಾ ಜಗತ್ತು
ಸಂಪ್ರೀತಿಯಾಗಿದ್ದ ಪ್ರಮಾಣದಾ
ಗುಂಪು ತಿಳಿದು ನಿತ್ಯ ಸುಖದಲ್ಲಿ ಇಪ್ಪುದೊಂದೆ
ಸಂಪೂಜೆ ಕಾಣೊ ಕೇವಲ ಸಾಧನ
ಪುಂ ಪೆಂಗಳಿಂದ ಪ್ರಪಂಚ ನಿರ್ಮಾಣ ಮಾಳ್ಪಾ
ಕೆಂಪು ಮಿಕ್ಕಾದ ಗುಣದ ಕಾರ್ಯ ಬಲಿಸಿ
ಕೆಂಪು ಹೇಯ ಹೊಲಸು ಹಗರಣ ದುರ್ವಿಷಯ
ಲಂಪಟಾ ನಾನಾ ಬಗೆಯು ಚಿಂತಾತುರ
ಸಂಪೂಜೆ ಇದೆ ಎಂದು ಬಿಗಿವಿಲಿ ನುಡಿಯದಿರು
ಸಂಪಿಗೆ ಪ್ರತಿಕೂಲ ವಿಚಾರಿಸು
ಸಂಪ್ರಮೋಹದಿಂದ ಕೆಡದಿರು ಕೆಡದಿರು
ಸಂಪ್ರದಾಯಕ ತಿಳಿದು ಸಂಚರಿಸು
ಪುಂ ಪುಂಗವ ರಾಜ ವಿಜಯ ವಿಠ್ಠಲನಂಘ್ರಿ
ತಂಪಿನಲ್ಲಿ ವಾಸವಾಗು ವ್ಯಾಕುಲ ನೀಗು ೧
ಮಟ್ಟತಾಳ
ಹರಿ ಹರಿದಾಸರ ವೇದ ಪ್ರಮಾಣವ
ನಿರುತ ನಿಂದ್ಯಮಾಳ್ಪ ಅಧಮರನ ನೋಡಿ
ಪರಿ ಪರಿಯಿಂದಲಿ ನಿಂದ್ಯಮಾಡೊದೊಂದೆ
ಪರಮ ಭಕುತರಿಗೆ ಇದು ಸಂಪೂಜೆ
ಕರಣಶುದ್ಧದಲ್ಲಿ ಉತ್ತಮರ ದಿವ್ಯ
ಚರಣವನು ನೋಡಿ ಕೊಂಡಾಡುವುದೊಂದೆ
ಧಾರಣಿಯೊಳಗೆ ಇದೆ ಪರಿಶುದ್ಧ ಸಂಪೂಜೆ
ಎರಡರ ವಿರಹಿತ ನಾನಾ ಬಗೆಯಿಂದ
ಸರುವ ಉಪಸ್ಕರವು ಸಂಭ್ರಮದಿ ತಂದು
ಹರಿಯ ಪೂಜಿಸಿದರು ಅದು ಸಂಪೂಜೆ ಅಲ್ಲ
ಕರುಣಾಕರ ಮೂರ್ತಿ ವಿಜಯ ವಿಠಲನ್ನ
ಚರಣವಾರಿಜ ದಳವೆ ನಂಬಿದವಗೆ ಸಾಧ್ಯ ೨
ತ್ರಿವಿಡಿ ತಾಳ
ಹರಿಗೆ ಪ್ರತಿಮೆ ಎರಡು ಬೊಮ್ಮಾಂಡ ದೊಳಗೆ ವಿ
ವರಿಸುವೆ ಜಡ ಜೀವವೆಂಬೊವೆ ಅನಂತ
ಪರಿಯಲ್ಲಿ ಇಪ್ಪವು ಕೇಳಿ ಭಗವನ್ಮೂರ್ತಿಗಳೆಂದು
ಎರಡರಲ್ಲಿ ಉಂಟು ಅಂತದಲ್ಲಿ
ವರ ಪ್ರತಿಮೆಯಲ್ಲಿ ಮೂರು ಅವರಾದಲ್ಲಿ ಎರಡು
ತರತಮ್ಯ ಇದರೊಳಗೆ ಬಲು ಇಪ್ಪದೋ
ಸ್ಮರರಿ ನೋಡು ಕೇಳಿ ಮಾತಾಡು ಧ್ಯಾನಿಸು
ಹರಿಯ ಮೆಚ್ಚಿಸು ಇದಕೆ ವಿವರ ಕಾಣೊ
ಅರಹುವೆ ಇದರ ವೃತ್ತಾಂತ ತೋರಿದಿನಿತು
ಕುರುಹು ತಿಳುಕೊಂಬುವುದು ಕಠಿಣವಲ್ಲಾ
ಸರುವ ಪ್ರಕಾರದಲಿ ವ್ಯಾಪ್ತ ಮೂರ್ತಿಯ ಪೂಜಾ
ವರ ಅವರಾದಲಿ ನಿರ್ಲಿಪ್ತನೆಂದು
ಇರಳು ಹಗಲು ಇದೆ ಚಿಂತಿಸುತಿಪ್ಪದೆ ಪೂಜೆ
ಮರಳೆ ತತ್ತದಾಕಾರ ಮೂರ್ತಿಯಲ್ಲಿ
ವಿರಚಿಸುವ ಬಗೆ ಕೇಳು ಎರಡು ಪರಿ
ಇರತಕ್ಕ ಜಡದೊಳು ಸ್ತಂಬಾದಿ ಪಾಷಾಣ
ಧರಣಿ ಮೊದಲು ಮಾಡಿ ತದ್ವ್ಯಾಪಾರ
ಹರಿಯಿಂದಾಗುವುದೆಂದು ತಿಳಿವುದು ತದಾಕಾರ
ವರ ಸಂಪೂಜೆ ಎಂದು ಗ್ರಹಿಸಬೇಕು
ತರುವಾಯ ಮತ್ತೊಂದು ತದಾಕಾರದ ಪೂಜೆಯ
ಚಿರಕಾಲದಲ್ಲಿ ಮಾಳ್ಪ ಸಂತೋಷವೋ ಕರ
ಚರಣಗಳಿಂದ ಒಪ್ಪು ಮೂರುತಿ ಸುಂ
ದರ ಲಕ್ಷಣೋಪೇತ ವಾಗಿದ್ದದಕೆ
ವರ ಮಂತ್ರಗಳಿಂದ ಅಭಿಷೇಚನೆ ಗಂಧ
ಪರಿಮಳಾಭರಣಾ ತುಲಸಿ ಕುಸುಮ
ಮಿರಗುವ ಧೂಪಾರ್ತಿ ಯೇಕಾರ್ತಿ ನೈವೇದ್ಯ
ಮರಿಯದೆ ಮಂಗಳಾರತಿ ಕರ್ಪುರ
ಭರದಿಂದ ಸ್ತವನ ಮಂತ್ರ ಪ್ರದಕ್ಷಿಣಿ ನಮ
ಸ್ಕರಿಸುವ ಸೊಬಗು ನಾನಾ ಸೇವೆಯು
ನಿರುತ ಮಾಡುವುದಿದೆ ಒಂದು ಪೂಜೆ
ಎರಡು ವಿಧ ಪೂಜೆ ಜಡದಲ್ಲಿ ನಿಣರ್ೈಸಿ
ಹರಿಯ ಪ್ರೀತಿ ಬಡಿಸಿ ಸುಖಿಸುವರು
ಕರ ಚರಣಾದಿಗಳು ಇಲ್ಲದ ಪ್ರತಿಮೆ ಒಂದೆ
ವರ ಸಾಲಿಗ್ರಾಮದಲಿ ಇದೇ ಪ್ರಕಾರ ಆ
ಚರಣೆ ಮಾಡುವರಯ್ಯಾ ಇತ್ತ ಲಾಲಿಸು ಸಂ
ಚರಿಸುವ ಪ್ರಾಣಿಗಳ ವಿಚಾರವ
ಎರಡೆರಡು ಎಂಭತ್ತು ಲಕ್ಷ ಯೋನಿಗಳುಂಟು
ಇರುವು ಮೊದಲಾಗಿ ಗಜ ಪರಿಯಂತ
ವರ ಅವರಾ ಉಂಟು ಕೇಳಿ ಇದರೊಳು ತಿಳಿದು ಅನು
ಸರಿಸು ಗೋ ಪೂಜೆ ಉಳಿದ ಭೂತ ದಯವೊ
ತರುವಾಯ ಮಾನವರೊಳು ಗ್ರಹಿಸಲಿಬೇಕು
ಎರವು ನೋಡದೆ ಅನ್ನೊದಕವ ಕೊಟ್ಟು
ಸುರ ಮುನಿ ನುತ ನಮ್ಮ ವಿಜಯ ವಿಠಲರೇಯನ
ಸ್ಮರಣೆ ಮಾಡುತಲಿರಬೇಕು ತತು ತತುರೂಪಗಳಾ ೩
ಅಟ್ಟತಾಳ
ಇದರೊಳು ಕೇವಲ ಭಗವಂತ ಪೊಂದಿಹ
ಅಧಿಷ್ಠಾನ ಪೇಳುವೆ ಭೂಸುರ ಜಾತಿಲಿ
ವಿಧಿನಿಷೇಧ ಕರ್ಮ ತಿಳಿದು ವೈಷ್ಣವ ಜ್ಞಾನ
ಮುದ ಭಕ್ತಿಯಿಂದ ಸಂತತ ಇಪ್ಪ ಮನುಜನ್ನ
ಸದಮಲನಾಗಿ ವಂದಿಸಿ ನಾನಾ ಬಗೆಯಿಂದ
ಮಧುರನ್ನ ಮಿಗಿಲಾದ ಉಪಚಾರದಿಂದ
ಪದೋಪದಿಗೆ ಪ್ರೀತಿ ಬಡಿಸಿದರಾಗಿದು
ತದಾಕಾರದ ಪೂಜೆ ಇದೆ ಮಾನಸ ಪೂಜೆ
ಅಧಿಕಾರತನ ಭೇದದಲಿ ತಿಳಿಯಬೇಕು
ಚದುರನಾದವ ಆಲಸ್ಯ ಮಾಡದೆ ನಿತ್ಯ
ಪದುಮನಾಭ ನಮ್ಮ ವಿಜಯ ವಿಠ್ಠಲರೇಯ
ಒದಗಿ ಕೈಕೊಂಬ ತದಾಕಾರ ವ್ಯಾಪ್ತಿಲಿ ೪
ಆದಿತಾಳ
ಇಂತು ಜಡ ಜಂಗಮದಲಿ ಭಗವಂತನ
ಸಂತೋಷ ಐದಿಸುವದು ವಿವಿಧ ಮೂರ್ತಿಗಳನ್ನು
ಸಂತರು ತಮ ತಮ್ಮ ಬಿಂಬನ ಧ್ಯಾನದಿಂದ
ಮಂತ್ರೋಕ್ತಿಯಲ್ಲಿ ಮೆಚ್ಚಿಸಿ ಒಲಿಸುವರು
ಅಂತು ಗಂಡವರಾರೊ ಅವರವರ ಯೋಗಮಾರ್ಗ
ಗ್ರಂಥದಲ್ಲಿ ಉಂಟು ಮುಕ್ತಿಗೆ ಸೋಪಾನ
ಮುಂತೆ ನೀನು ನಿನ್ನ ಅಧೀನವಾಗಿದ್ದ ಸಿರಿ
ಕಾಂತನ ಪೂಜೆ ಮಾಡು ಮುೂರು ಮೂರ್ತಿಗಳನ್ನು
ಪಿಂತೆ ಪೇಳಿದಂತೆ ವ್ಯಾಪ್ತತ್ವ ತಿಳಿದು
ಚಿಂತಿಸು ಪರಿಪರಿ ಭೋಜ್ಯಾದಿ ಭೋಗದಲ್ಲಿ
ಸಂತಾಪ ಹರಿಸುವ ದೇಹಾಕಾರ ಮೂರ್ತಿಯ
ಸಂತೃಪ್ತಿ ಮಾಡುವುದು ಈತನೆ ನಿತ್ಯ ಪೂರ್ಣ
ಅಂತರಂಗದ ಪೂಜೆ ಕೇವಲ ಪ್ರೀತಿಏ
ಕಾಂತದಲ್ಲಿ ಮಾಳ್ಪುನ್ನತೋನ್ನತ ಆತ್ಮಾ
ಅಂತರಾತುಮ ಮೂರುತಿ ಎರಡು ಅಭೇದವೆಂದು
ಅಂತರಾತುಮದಲ್ಲಿ ನಿಲಿಸಿ ಒಲಿಸಿ
ಎಂತು ಪೇಳಲಿ ಈ ಮನದಲ್ಲಿ ಸರಸ್ವತಿ
ಕಾಂತಂಡ ತುಂಬಿದೆ ಧ್ಯಾನಮಾಡೆ
ಕಂತು ಪಿತನ ಪೂಜೆ ಮಾಳ್ಪ ಲಕ್ಷಣ ಆ
ದ್ಯಂತ ಕಾಲದಲ್ಲಿ ತಕ್ಕವೆಂದು
ಚಿಂತಾಮಣಿ ಕಾಮಧೇನು ಕಲ್ಪ ವೃಕ್ಷ
ಇಂತಿವೆ ಮನದಲ್ಲಿ ಅಂಶಿ ಅಂಶಾ
ಚಿಂತಿಸು ಪ್ರಾರ್ಥಿಸು ಕಲ್ಪಿಸು ಮೂರರಿಂದ
ಎಂಥಾ ಪವಿತ್ರ ಷಡುರಸ ಪದಾರ್ಥ
ಅಂತು ಇಲ್ಲದೆ ಸೂಕ್ಷ್ಮತರವಾಗಿ ಕೊಡುವುವೋ
ಶಾಂತ ದಾಂತ ಸೂಚಿತ್ತ ತರತಮ್ಮ ಭಕ್ತಿಜ್ಞಾನ
ವಂತೆಗೆ ವೇಗದಿಂದಾ ವಾಸನಮಯದಿ
ಇಂತು ಸಂಪೂಜೆಮಾಡು ಆವಾವ ಬಗೆಯಿಂದ
ನಂತ ಕಾಲಕ್ಕೆ ಬಿಡದೆ ಯೋಚನೆಯಿಂದ
ನಿಂತಲ್ಲಿ ಕುಳಿತಲ್ಲಿ ಮಲಗಿ ತಿರುಗಾಡುತಲಿ
ಇಂಥದ್ದೇ ಕೈಕೊಂಡು ಕರ್ಮ ತೊರಿಯೊ
ಸಂತೆ ಕೂಟದ ಪೂಜೆ ಯಾತಕ್ಕೆ ಪ್ರಯೋಜನ
ಭ್ರಾಂತಿಯಲ್ಲದೆ ಅಲ್ಪ ಸುಖವಾಹೊದೇ
ಅಂತಿ ಕಂತಿಕ ಪೂಜೆ ಮಹಿಮೆ ನಿರ್ಜರ
ಸಂತರು ಮೆಚ್ಚಿಕೊಡರು ಕೊಡುವರು ಕೆಲರು
ಅಂತಕನಗರಿಯ ಭಯ ಶೋಕ ಆದಿ ಮ
ದ್ಯಾಂತದಲ್ಲಿ ಇಲ್ಲ ಕಾಯದಲ್ಲಿ
ಎಂತು ಕೊಂಡಾಡಲಿ ಧ್ಯಾನ ಸಾಧನ ಪೂಜೆ
ವಂತನ ಭಾಗ್ಯಕ್ಕೆ ಎಣಿಸಲಾಗಿ
ಅಂತ್ಯಕಾಲ ಕೇಳು ಕಠಿಣವಾಗಿದ್ದ ಹೃದಯ
ಗ್ರಂಥಿ ಛೇದಿಪದಕ್ಕೆ ಇದೇ ಉಪಾಯ
ಜಂತು ಅಲ್ಪ ಯೋಗ್ಯತನೆ ನಿನಗೆ ತಿಳಿದಷ್ಟು ಸ
ತ್ಪಂಥವ ಬಿಡು ಬಿಡು ಬಾಹ್ಯ ಅರ್ಚನಿಗೆ ಈ
ಅಂತರಂಗದ ಪೂಜೆ ಕೂಡದಲೆ
ಅಂತರಿಕ್ಷವಲ್ಲದೆ ಫಲವಿಲ್ಲ ನಿರ್ಜಲ
ಕಾಂತಾರದಲ್ಲಿ ಪೊಕ್ಕು ಅಳಲಿದಂತೆ
ದಂತಿಯ ದಾಡಿಗೆ ತೂಗಿ ಬಿದ್ದಂತೆ ವಿ
ಶ್ರಾಂತನಾಗುವ ಜನ್ಮ ಧರಿಸುವನು
ದಂತಕ್ಕೆ ರುಚಿ ತಂದು ಸ್ಪರುಶ ಮಾಡಿಸಲಾಗಿ
ಸಂತಸವಾಗುವುದೆ ರಸವ ತಿಳಿದು
ಮಂತ್ರ ತಂತ್ರೋಪಕರಣ ನಾನಾ ಚಿತ್ರ ವಿಚಿತ್ರ
ಚಿಂತನೆ ಮಾಡು ಒಳಗೆ ಪ್ರಾಣಂತಸ್ಥ
ದಂತಿ ವರದ ನಮ್ಮ ವಿಜಯ ವಿಠ್ಠಲರೇಯ
ಕುಂತಿ ಮಕ್ಕಳಿಗೆ ಒಲಿದಂತೆ ಒಡನೆ ತಿರುಗುವ ೫
ಜತೆ
ಸಂಚಿತಾಗಾಮಿ ನಾಶ ಪ್ರಾರಬ್ಧ ಉಪಮರ್ದಾ
ಪಂಚ ಪ್ರಾಣೇಶ ಸಿರಿ ವಿಜಯವಿಠ್ಠಲಾ ಸಮ್ಮುಗಾ ೬

ಸತ್ಕರ್ಮಾಚರಣೆ ಮತ್ತು ದುಷ್ಕರ್ಮಾಚರಣೆಗಳು

೧೧೮
ಧ್ರುವತಾಳ
ಸಜ್ಜನರ ಪಾದಧೂಳಿ ನಾನಯ್ಯ ಎನಗಯ್ಯ
ವಜ್ರಕವಚವಾಗಿ ಇರುತಲಿದೆ
ಜಜ್ಜರಿಸುವೆನೆ ಯಮನಭಟರ ಕಠಿಣೋಕ್ತಿಗೆ
ಪ್ರಜ್ವಲಿಸುವುವು ಉರಿಗಂಭ ತೀವ್ರ
ಮಜ್ಜಾ ಮಿಕ್ಕಾದ ನರಕೆಭಾರ ಯಮದಂಡನ
ಊರ್ಜನೆ ಅತಿ ಕಠೋರವಾಗಲು
ದುರ್ಜೀವಿಗಳಿಗೆ ಗಂಟಲಗಿಳಿಯ ಎಂದಿಗೆ
ಮೂಜಗದೊಳಗೆ ಹರಿ ಭಕ್ತಗೆದುರೇ
ಕುಜನರ ರೂಪನೆ ಧರಿಸಿ ಬಂದು
ಅಬ್ಜನಾಭನ ಹಗೆಯ ತಾಳಿ ನಿತ್ಯದಲಿ ಅ
ಪಜಯ ಪೊಂದುವರು ದು:ಖದಲ್ಲಿ
ಪೂಜ್ಯನಾಗದೆ ಪೋಗುವ ತಮಯೋಗ್ಯನವನೆನ್ನು
ಮಜ್ಜನಾದಿಯ ಮಾಡಿ ಲಾಭವೇನು
ವ್ಯಾಜ್ಯಾವಲ್ಲದೆ ವ್ಯರ್ಥ ಸಾಧನವಾಗದು ಒಂದು
ಹೆಜ್ಜೆ ಇಡುವವನಿತು ಹೊತ್ತು ಪುಣ್ಯವಿಲ್ಲ
ಲಜ್ಜೆಯನ್ನು ತೊರೆದು ವಿವಶವಯವ್ವನನಾರಿ
ಸಜ್ಜೆಯಲಿ ಕಲಿಯುಗದಿ ರಮಿಸಿದರು
ತ್ಯಜಿಸಿ ಸರ್ವಜನ ದೂರ ಮಾಡುವರು ಅವ
ಳಾರ್ಜನಿಯಲಿಪ್ಪರೆ ತಿಳಿದುನೋಡಿ
ದುರ್ಜನರು ಪಂಥದಲಿ ಐಕ್ಯಶಾಸ್ತ್ರದ ಕರ್ಮ
ಸೋಜಿಗವ ತೋರಿ ಬಹುಮಾಡಿ ಅವಳ
ಅರ್ಜಿತದಂತೆ ಫಲವಾಗದು ಇದು ಸಿದ್ದ
ಧೂರ್ಜಟಿ ಬಲ್ಲನಯ್ಯಾ ಸಂಶಯ ವಿಲ್ಲಾ
ಗುಜ್ಜಿಗೊಲಿದ ನಮ್ಮ ವಿಜಯ ವಿಠ್ಠಲನಂಘ್ರಿ
ಅಬ್ಜವನು ಭಜಿಸುವರು ಕರುಣವೆ ಗತಿ ಪಥಾ ೧
ಮಟ್ಟತಾಳ
ಮನೆ ಗಳಿಸಲಿಬಹುದು ಧನ ಗಳಿಸಲಿಬಹುದು
ವನಿತೇರ ತರಬಹುದು ತನುಜರಾಗಲಿಬಹುದು
ಮನೆ ಮನೆ ತಿರುಗಿ ಮಾತನೆ ಪೇಳಲಿಬಹುದು
ಜನರ ವಂಚಿಸಿ ಭೋಜನ ಮಾಡಲಿಬಹುದು
ಗಣನೆ ಇಲ್ಲದೆ ಹೊನ್ನು ಹಣ ಕೊಡಲಿಬಹುದು
ವನ ತೀರ್ಥಯಾತ್ರೆಯನು ಚರಿಸಲುಬಹುದು
ದಿನ ದಿನಕೆ ಹಿಂದಣ ಮುಂದಿನ ವಾರ್ತಿ
ಜನರಿಗೆ ಪೇಳಿ ಲೋಚನ ಮುಚ್ಚಲಿಬಹುದು
ಮುನಿಯಾಗಿ ಕುಳಿತು ಒಣಗಿದ ಎಲೆ ಬಹು
ತೃಣಮೆದ್ದು ತಪವನೆ ಮಾಡಲಿಬಹುದು
ಕುಣಿಕುಣಿದು ಗಾಯನವನ್ನೆ ಮಾಡಿ
ಮನಬಂದಂತೆ ಆನನ ತಿರುಗಲಿಬಹುದು
ಇನಿತು ದೊರಿಯಬಹುದು ಅನುಮಾನವಿದಕ್ಕಿಲ್ಲ
ಮನ ನಿರ್ಮಳರಾದ ಜನರ ಚರಣಪಾಂಸ
ಜನುಮಜನುಮ ಸಾಧನ ಕೈಗೂಡದಲೆ
ಮನುಜಗೆ ದೊರೆಯದು ಕ್ಷಣ ಒಂದಾದರು
ಹನುಮಂತನ ಒಡಿಯ ವಿಜಯ ವಿಠ್ಠಲರೇಯನ
ನೆನೆಸುವವನ ಚರಿತ ಕೊನೆಗಂಡವನಾರು ೨
ರೂಪಕ ತಾಳ
ಸುಜನರ ಪದದಿಂದ ರಜ ಏಳೆ ಮ
ನುಜ ಶಿರದಲಿ ಧರಿಸಿ ಭಜನೆಯ ಮಾಡೆ ವಿ
ರಜನಾಗಿ ಪೋಗಿ ದಿವಿಜಲೋಕದಲಿ ತನ್ನ
ಸ್ವಜನ ಸಹಿತ ವಿಬುಧಕುಜದ ತಂಪಿನಲಿ
ನಿಜ ಅನುಭವ ಸುಖ ವಜ್ರದಲ್ಲಿ ಇದ್ದು ಸ
ಹಜ ಮಾರ್ಗದಲಿ ಪೋಗಿ ಅಜನ ಪಟ್ಟಣ ಸೇರಿ
ಕುಜದಲ್ಲಿ ಹರಿಪಾದಾಂಬುಜವ ಪೂಜಿಸುತಲಿ
ಅಜನಂತೆ ಪೊಳೆದು ವಿರಜೆಯಲ್ಲಿ ಮುಣಗುವ
ರಜತಮೋಗುಣ ಗೆದ್ದು ರುಜುಗಣ ವಂದಿತ
ವಿಜಯ ವಿಠಲರೇಯ ತ್ರಿಜಗದೊಳಗೆ ಸು
ದ್ವಿಜರ ಪಾಲಿಸುತ ಇಪ್ಪಾ ೩
ಧ್ರುವತಾಳ
ಚಕ್ರವರ್ತಿಯಾದವನ ಭಾಗ್ಯವೆ ಭಾಗ್ಯವಲ್ಲ
ಶಕ್ರಲೋಕದಲ್ಲಿದ್ದರೂ ಭಾಗ್ಯ ಭಾಗ್ಯವಲ್ಲ
ವಕ್ರವಲ್ಲದವಂಗೆ ಅಜ್ಞಾನ ನಾಶವಿಲ್ಲ
ಶುಕ್ರಶಿಷ್ಯರ ಬುದ್ದಿಯಿಂದಲಿ ನಡೆದು ಹೀ
ನ ಕ್ರಮದಲಿ ಬಾಳಿ ಬದುಕುವನು
ಅಕ್ರೂರರಾದ ಹರಿದಾಸರ ಪಾದಧೂಳಿ
ಸುಕೃತವಾದರು ಮಸ್ತಕದಲ್ಲಿ ಧರಿಸಿ
ಸುಕೃತ ಪಡೆಯದಿದ್ದವಗೆ ಇದೆ ನಿಜ
ಈ ಕೃತಿ ಪೊಸದಲ್ಲ ಮುನ್ನಿನ ಪಿರಿಯರು
ಸುಕೃಪೆಯಿಂದಲಿ ಸರ್ವದಾ ಪೇಳಿಪ್ಪರು
ಚಕ್ರಧರನು ತಾನೆ ವಿಪ್ರರ ಮನ್ನಿಸಿಪ್ಪಾ
ವಿಕ್ರಮದಿಂದಲಿ ನಡದವಗೆ ಸುಖವಿಲ್ಲ
ನಕ್ರಭಂಜನ ಸಿರಿ ವಿಜಯ ವಿಠ್ಠಲನ್ನ ಪಾ
ದಕ್ರಾಂತನಾದವನ ಪೊಂದು ನಿರುತ ಪೊಂದು ೪
ತ್ರಿವಿಡಿತಾಳ
ವಾಸುದೇವನ ನಿಜದಾಸನ್ನ ಮನ್ನಿಸದೆ
ದ್ವೇಷಮಾಡಿದವನ ಕ್ಲೇಶಕ್ಕೆ ಕಡೆ ಇಲ್ಲ
ದೇಶದೊಳಗೆ ಇವನೆ ಎಚ್ಚತ್ತು ನಡೆದರೆ
ಏಸೇಸು ಜನ್ಮಕ್ಕೆ ಎಳ್ಳಿನಿತು ಕೇಡಿಲ್ಲ
ಲೇಸಾಗಿ ತಿಳಿವುದು ಸಿದ್ಧಾಂತ ಬಲ್ಲವರು
ಸೂಸುವ ಭವಾಂಬುಧಿ ನಿಮಿಷ ಮಾತ್ರದಲಿ ಜ
ಯಿಸಬೇಕಾದರೆ ಬಹು ಪ್ರಯಾಸವಿಲ್ಲ
ಸಾಸಿರ ಬಗಯಿಂದ ಸುಲಭ ಮಾರ್ಗವ ಕೇಳಿ
ಭೂಸುರ ಪಾದದಲಿ ನಿಷ್ಠೆಯಲ್ಲಿ ಮಂದ
ಹಾಸನಾಗಿದ್ದು ಭಕುತಿಯನು ತೊರಿಯದೆ
ತೋಷವ ತಾಳಿದವಗೆ ಘನ ಕಠಿಣ ತಾರಕ
ಭೂಷಣ ಅವಗದೆ ಅನ್ಯೋಪಾಯವಿಲ್ಲ
ಪಾಶವೆ ಪರಿಹಾರ ನಾನಾ ಜನುಮದ ರೋಗ
ರಾಸಿಗಳೋಡೋವು ನಿಶ್ಚಿತಾರ್ಥವ ತಿಳಿ
ವಾಸವನ್ನ ವಜ್ರದೇವ ಮೊಗನ ಶಕ್ತಿ
ರೋಷ ಯಮದಂಡ ಮನುಜ ರೂಢನ ಕುಂತಾ
ಪಾಶಿಯ ಆಯುಧ ಭೂತವಾಹನ ಗದಾ
ಈಶ ಸಖನ ಖಡ್ಗ ಭೂತೇಶನ ಶೂಲಾ
ಆ ಸಮಸ್ತ ದೇವತೆಗಳ ಆಯುಧ
ಏಸೇಸು ಬಗೆಯಿಂದ ನಿರೋಧವಾದಡೆ
ಭೂಸುರನಂಘ್ರಿಯ ರೇಣು ಧರಿಸಿದ ಮಾ
ನಿಸನು ಶಂಕೀಸ ಶಂಕೀಸ ಎಂದಿಗೂ
ದೋಷ ಅವಗಿಲ್ಲ ಅವರ ಪೊಂದಿ ಇದ್ದ
ದಾಸನಾಗಲಿಬೇಕು ಪವನ ಮತದೊಳಿದ್ದು
ಈ ಸೌಭಾಗ್ಯವನ್ನು ದೊರಕಿದವನ ಪುಣ್ಯ
ಕಾಶಿಮಿಕ್ಕಾದ ಯಾತ್ರೆ ತೀರ್ಥಗಿಂದಧಿಕ
ಶೇಷಶಯನ ನಮ್ಮ ವಿಜಯ ವಿಠಲರೇಯನ

ಕೃಷ್ಣನು ಹದಿನಾರು ಸಾವಿರ ಸ್ತ್ರೀಯರನ್ನು

೧೪೧
ಧ್ರುವತಾಳ
ಸತತ ಬ್ರಹ್ಮಚಾರಿ ಎನಿಸಿಕೊಂಡು ಪರೀ
ಕ್ಷಿತನ ಪ್ರಾಣವನ್ನು ಉಳುಹಿದ ದೈವವೆ
ರತಿಪತಿ ವ್ಯಾಪಾರದಲ್ಲಿ ಶ್ರೇಷ್ಠನೆನಿಸಿ ಅನ್ಯ
ಸತಿಯರ ಭೋಗಿಸಿ ಸುತರ ಪಡೆದದೇನೋ
ಚತುರ ಮೊಗಾದಿಗಳ ಪೆತ್ತ ಪರಮಪುರುಷ
ಗತಿ ಪ್ರದಾಯಕನಾಗಿ ಮೆರೆದೆ ಕಮಲನಾಭಾ
ಗತಿಯಾಗಬೇಕೆಂದು ಸುತನಗೋಸುಗ ಪೋಗಿ
ಕೃತ ವಿರೋಧಿಯ ಒಲಿಸಿ ವರವ ಕೈಕೊಂಡದ್ದೇನೊ
ನುತಿಸಿದ ಜನರಿಗೆ ಅನದಿನ ತಪ್ಪದಲೇ
ಹಿತವಾಗಿರುತಿಪ್ಪ ಭಕ್ತವತ್ಸಲದೇವ
ಶಿತವಾಹನಗೊಲಿದು ರಣದೊಳು ಸುಧನ್ವನ್ನ
ಹತಮಾಡಿಸಿದ್ದು ಆವುದೋ ಕರುಣತನವೋ
ತುತಿಸುತಿಪ್ಪರು ನಿನ್ನ ನಿತ್ಯ ತೃಪ್ತನೆಂದು
ಕೃತಭೂಜರೊಂದಾಗಿ ಗಣನೆ ಕಾಣದೆ ಎಣಿಸಿ
ಕ್ಷಿತಿಯೊಳು ಭಕ್ತರಿತ್ತ ಸ್ವಲ್ಪಕ್ಕೆ ತೇಗುವೆ
ಅಮಿತಭೋಜನನೆಂದು ಕರೆಸಿಕೊಂಬುವುದೇನೋ
ಪತಿತ ಪಾವನ ರಂಗಾ ವಿಜಯ ವಿಠ್ಠಲ ನಿನ್ನ
ಕೃತಕಾರ್ಯಂಗಳಿಗೆ ನಾನೇನೆಂಬೆ ತಲೆದೂಗಿ ೧
ಮಟ್ಟತಾಳ
ಬಲುರವಿ ಪ್ರಕಾಶನೆಂದು ನಿನ್ನನ್ನು
ಕೆಲಕಾಲಾ ಬಿಡದೆ ಪೊಗಳುವ ಬಗೆ ನೋಡು
ಇಳೆಯೊಳಗೆಯಿದ್ದ ಮನುಜರ ಕಣ್ಣಿಗೆ
ಬೆಳಗುತೋರಿ ಪ್ರೀತಿ ಮಾಡಿದ ಪರಿಯೇನೋ
ಹಲವು ಬಗೆಯಿಂದ ಶುದ್ದಾತ್ಮನೆಂದು
ಒಲಿಸಿ ವೇದಂಗಳು ಬೆರಗಾಗುತಲಿರೇ
ಗಲಭೆ ಮಾಡದೆ ಪೋಗಿ ಗೊಲ್ಲತಿಯರ ಮನೆ
ಒಳಪೊಕ್ಕು ಪಾಲು ಮೊಸರು ಬೆಣ್ಣೆಯ ಕದ್ದೆ
ಜಲಜಜಾಂಡಕಿಂತ ಭಾರವುಳ್ಳವನೆಂದು
ನೆಲೆಗಾಣೆನು ನಿನ್ನ ಕೀರ್ತಿಗೆ ಎಣೆಯುಂಟೇ
ಕುಲಸತಿ ನಾರದಗೆ ಮಾರಿದ ಸಮಯದಲಿ
ತುಲಸಿದಳಕ್ಕಿಂತ ಕುಡಿಮೆಯಾದುದು ಏನೊ
ಕಲಿಭಂಜನ ನಮ್ಮ ವಿಜಯ ವಿಠ್ಠಲ ನಿನ್ನ
ಸುಲಭತನಕೆ ಎಲ್ಲಿ ಸರಿಗಾಣೆ ನೋಡಿದರು ೨
ತ್ರಿವಿಡಿತಾಳ
ನೀನೆ ಅಪ್ರಾಕೃತ ಶರೀರನೆನಿಸಿಕೊಂಡು
ಅನಂತಕಲ್ಪಕ್ಕೆ ಬಾಳುವ ಭವದೂರಾ
ಮಾನವರೂಪವು ಬಂದಾಗ ಕಾಯವ
ಕ್ಷೋಣಿಯೊಳಗೆ ಬಿಟ್ಟು ಪೋದನೆನಿಸುವುದೇನೊ
ಆನಂದಮಯನಾಗಿ ಸುಖಿಸುವ ಸರ್ವೇಶ
ಮಾಣದರ್ಭಕನಂತೆ ಅಳುವ ಲೀಲಗಳ್ಯಾಕೆ
ಜ್ಞಾನಪೂರ್ಣನಾಗಿ ಜಗದೊಳಗಿಪ್ಪನೆ
ಏನೆಂಬೆ ನಿನ್ನ ವಿಚಿತ್ರ ಮಹಿಮೆಗಾನು
ಕ್ಷೋಣಿ ವಿಬುಧನಾದ ಸಾಂದೀಪನ ಬಳಿಯೆ
ದೀನವಂತನಾಗಿ ವಿದ್ಯೆ ಓದಿದುದೇನೊ
ಶ್ರೀನಾಥ ನೀನಹುದೋ ನಿನ್ನ ಸೌಭಾಗ್ಯಕ್ಕೆ
ಪ್ರಾಣಾದಿಗಳು ಎಣಿಸಿ ಕಡೆಗಾಣರು
ಭೂನಾಥರೊಳಗೆ ಕೇವಲ ನೀಚನಾದುಗ್ರ
ಸೇನಗೆ ಪರಾಕು ಪೇಳುವರಾ
ಮೌನಿಗಳರಸ ಶ್ರೀ ವಿಜಯ ವಿಠ್ಠಲರೇಯಾ
ನೀನಾಡುವ ಲೀಲೆ ಜ್ಞಾನಿಗಳಿಗೆ ಬಲುಹರುಷ ೩
ಅಟ್ಟತಾಳ
ನಿಜ ಸಂಕಲ್ಪ ನೀನೆಂದು ಪೇಳುವರು ಗಂ
ಗಜಗೆ ಮಾತನು ಕೊಟ್ಟು ಚಕ್ರ ಪಿಡಿದುದೇನೊ
ಕುಜನ ಮರ್ದನನೆಂದು ನಿನ್ನ ಬಿರಿದು ಅಂ
ಗಜನ ದೈತ್ಯನು ಒಯ್ಯೇ ಸುಮ್ಮನಿದ್ದದ್ದೇನೋ
ತ್ರಿಜಗದೊಳಗೆ ನೀನೆ ನಿಬಿಡಿಯಾಗಿರಲಾಗಿ
ರುಜುವಾಗಿ ಸಕಲರು ಚರಿಸುವ ಬಗೆಯೆಂತು
ಸುಜನರ ಮನೋಹರ ವಿಜಯ ವಿಠ್ಠಲರೇಯಾ
ಭಜನಿ ಮಾಡಿದವರ ಭಾಗ್ಯವು ಬಹುವರ್ನಾ೪

ಆದಿತಾಳ
ವಿದ್ಯಾತೀತನೆಂದು ನಿನ್ನ ಚರಿತೆಯೇನೋ
ಅಧ್ವರ ಮೊದಲಾದ ಕರ್ಮಮಾಡಿದುದೇನೋ
ವೈದ್ಯ ನೀನಹುದೋ ಮಹಾಭವರೋಗಕ್ಕೆ
ಈ ಧರೆಯಲ್ಲಿ ಸಾಂಬನನು ಸ್ತುತಿಸಿದೆನು
ಇದ್ದಲ್ಲಿ ಸರ್ವವೂ ಉಂಟಾಗಿರಲಿಕ್ಕೆ
ಉದ್ಯುಕ್ತನಾದೆ ಮಕ್ಕಳ ತರಬೇಕೆಂದು
ಮುದ್ದು ಮೊಗದರಾಯ ವಿಜಯ ವಿಠ್ಠಲ ಸರ್ವ
ಸುದ್ದಿ ಬಲ್ಲ ಪ್ರತಾಪ ಅನ್ಯರನ ಕೇಳುವರೆ ೫
ಜತೆ
ಸುವಿರುದ್ಧ ಕರ್ಮಗಳು ತೋರುವ ಪರಬೊಮ್ಮಅವಿಕಾರ ಮೂರುತಿ ವಿಜಯ ವಿಠ್ಠಲರೇಯಾ೬

ಜೀವದ ಗಾತ್ರ ಸ್ವರೂಪ, ದೇಹದ

೮೪
ಧ್ರುವತಾಳ
ಸತ್ಯ ಸಂಕಲ್ಪ ಸಿದ್ಧ ಅನಾದಿದೈವ |
ಸತ್ಯ ಸತ್ಯವು ನಿನ್ನ ಮಹಿಮೆ ಪ್ರತಾಪ |
ಸತ್ಯವೆ ನಿನ್ನ ಗುಣಜ್ಞಾನ ಪರಿಪೂರ್ಣ |
ಸತ್ಯವೆ ನಿನ್ನ ಚರಿತೆ ಸೂತ್ರಧಾರಕನೆ |
ಸತ್ಯವೆ ನಿನ್ನ ಲೀಲೆ ಜಗವನಡಿಸುವುದು |
ಸತ್ಯವೆ ನಿತ್ಯಾನಂದ ಸಕಲೈಶ್ವರ್ಯ |
ಸತ್ಯವೆ ನಿನ್ನ ಕಪಟ ನಾಟಕ ತನವು |
ಸತ್ಯವೆ ನಿನ್ನ ವ್ಯಾಪ್ತಿ ಅಣೋರಣಿಯಲ್ಲಿ |
ಸತ್ಯ ಪರಾಕ್ರಮ ವಿಜಯ ವಿಠ್ಠಲ ನೀನೆ |
ಸತ್ಯ ವಂತನಲ್ಲದೆ ಮತ್ತಾರುವುಂಟೆ ೧
ಮಟ್ಟತಾಳ
ವರಣ ಭರಿತದಲಿ ವರುಣ ನಾಮಕನಾಗಿ |
ವ ರಣಾಂತರ್ಯಾಮಿ ವರನಾಮಕದಲ್ಲಿ |
ಕರಸಿಕೊಂಡೆ ಓಂ ಕಾರವೆಂಬೊ ಶಬ್ದಾ |
ಕ್ಷರ ಮೂರರಿಂದ ಪರಿಮಿತವಾಗಿ |
ಪರತರ ಪರದೂರ ವಿಜಯ ವಿಠ್ಠಲ |
ಹಿರಣ್ಯ ನಾಭನೆ ಸಿರಿ ದೇವಿಯರಸ |
ಸರುವೋತ್ತಮ ಸಗುಣ ಸರ್ವೋತ್ತಮ ಸಗುಣ ೨
ತ್ರಿವಿಡಿ ತಾಳ
ಆರು ಅಕ್ಷರದಿಂದ ವ್ಯಾಹೃತಿ ಮಂತ್ರ ವಿ |
ಸ್ತಾರವನು ಮಾಡಿ ಪ್ರಕಾಶಿಸಿದೆ |
ಸಾರವನು ಹರಹಿ ಚತುರವಿಂವಶತಿ ಅ |
ಕ್ಷಾರದಿಂದಲಿ ಸಾ ಗಾಯತ್ರಿ ಬೆಳಸಿ |
ಬೇರಿಳಿದಂತೆ ಪುರುಷಸೂಕ್ತ ರಚಿಸಿ ಆ |
ಧಾರವೆನಿಸಿದೆ ಅನಂತಶ್ರುತಿಗೆ |
ತಾರಕ ಬ್ರಹ್ಮಕೃತು ವಿಜಯ ವಿಠ್ಠಲವೇದ ಸಂಚರಿಸುತಿಪ್ಪೆ ೩
ಅಟ್ಟತಾಳ
ನಾಶರಹಿತನಾಗಿ ಅಚ್ಯುತನೆನಿಸಿದೆ |
ಸಾಸಿರ ಸಂಖ್ಯ ನಿಗಮ ಪ್ರತಿಪಾದ್ಯ |
ಲೇಸಾಗಿ ಗೋವಿಂದನೆಂದು ಕರೆಸಿಕೊಂಡು |
ಭಾವಿಸಿ ತಾವಾನಂ ತನಂತನೆನಿಸಿದೆ |
ಈಶಾದ್ಯರಿಗೆ ಈಶ ವಿಜಯ ವಿಠ್ಠಲನೇ ಸ |
ರ್ವೇಶ ಶುದ್ಧ ದೈವವೆ ಅಪ್ಪನು ೪
ಆದಿತಾಳ
ರಜೋಗುಣಾತ್ಮಕವಾದ | ತ್ರಿಜಗವನ್ನು ಪುಟ್ಟಿಸಿ ವ |
ನಜ ನಾಭಿಯೆಲ್ಲಿ ಪೊತ್ತು | ಅಜನ ಪಡೆದ ತತ್ವ |
ವ್ಯಜದಲ್ಲಿ ಅಭಿಮಾನ್ಯರ | ಸೃಜಿಸಿ ಸಂಘಟನೆಯಿಂದ |
ಪ್ರಜಾಪತಿಗೆ ನೇಮಿಸಿ | ನಿಜ ತ್ರಿಧಾಮದಲಿ ಪಂ |
ಕಜ ಪಾಣಿ ಸೇವೆಯಿಂದಾಂ | ಗಜಕೋಟಿ ಲಾವಣ್ಯ |
ಪ್ರಜಾಪತಿಯೆಂಬ ನಾಮ ವಿಜಯ ವಿಠ್ಠಲರೇಯ |
ಅಜರಾಮರಣ ರಹಿತ | ಅಜಭುಜಗಾದಿದಾತ |
ಸುಜನರ ಮನೋವಾಸ | ಕುಜನ ಶೈಲ ಕುಲಿಶ ೫
ಜತೆ
ಅಂತರ ಬಹಿರದೊಳು ವ್ಯಾಪಿಸಿ ವ್ಯಕ್ತದಲ್ಲಿ |
ತಂತುವರ್ಧನಾ ವಿಜಯ ವಿಠ್ಠಲ ನೀನದ್ಭುತ ೬

ಹರಿದಾಸರ ಲಕ್ಷಣ ಅವರ ಬದುಕಿನ ಧೋರಣೆ,

೧೧೯
ಧ್ರುವತಾಳ
ಸತ್ಯಲೋಕದ ಪದವಿ ಸಾರೆ ಸಾರೆವಾದರು ಮೊಗ
ವೆತ್ತಿ ಲೇಶ ಮಾತ್ರ ನೋಡರಯ್ಯಾ
ಮತ್ತೆ ತಪ ಜನ ಮಹರ್ಲೋಕಾದಿ ಆಳಿಕೆ
ಚಿತ್ತಕೆ ತಾರರು ಒಮ್ಮ್ಯಾದಡೇ
ತತ್ತಳಿಸುವ ಸ್ವರ್ಗ ನಾನಾ ಭೋಗ ಬಂದು
ಹತ್ತಿಲಿ ನಿಂದರೂ ಕೇಳರಯ್ಯಾ
ಅತ್ಯಂತ ಉಪಸರ್ಗ ಅಂಗೈಯಲಿ ಸೇರೆ
ಹತ್ತದೆಂದು ಬೀಸಿ ಬಿಸಾಟುವರು
ಮತ್ರ್ಸಲೋಕದಲ್ಲಿದ್ದ ಪರಿ ಪರಿ ಸೌಖ್ಯ
ಸುತ್ತ ಕುಣಿದಾಡಿದರು ಸುಮ್ಮನಿಹರೊ
ಚಿತ್ತಜನಯ್ಯನ ಚಿತ್ತದಲ್ಲಿಟ್ಟು
ನಿತ್ಯಪೂರ್ಣರು ನಿಜಭಾಗವ
ತೋತ್ತುಮರಿದನೆಲ್ಲ ಲೆಕ್ಕಿಸರೈ
ಎತ್ತಲಾದರತ್ತ ಹರಿಪಾದ ಸರ್ವದ
ಹೊತ್ತುಕೊಂಡು ಕೊಂಡಾಡುವರಯ್ಯಾ ಅಯ್ಯಾ
ಮೃತ್ಯುಮಾರಿ ಮಾಯೀ ಮಿಗಿಲಾದವರು
ಭೃತ್ಯರಾಗಿ ಜಯ ಜಯವೆಂಬರು
ವೃತ್ತಿ ವಿತ್ತದ ಪರವೆ ಪರಲೋಕವಲ್ಲದೆ
ಸತ್ಯವಂತರಾಗಿ ಸರ್ವಕಾಲಾ
ವತ್ತಿದಗ್ನಿಯಂತೆ ಧರೆ ಮೇಲೆ ತೋರಿ ತಮ್ಮ
ಆತ್ಮದೊಳಗೆ ತಮ್ಮ ಹರಿಯ ಕೊಂಡಾಡುತ
ತತ್ವಮಾರ್ಗದಲಿ ಗುಣಿಸಿ ಎಣಿ
ಸಿ ತಾರತಮ್ಯ ಬಗೆಯಿಂದ ಸುಖಿಸುವರೊ ಕರ್ತೃತ್ವ
ಉಂಟು ಆವದಾದರೂ ಪ್ರಾ
ಪುತ್ತವಾದರು ನಗುತಲಿಪ್ಪರಿದೆಕೊ
ಕೀರ್ತಿ ಸಂಪಾದಿಸಿ ಹರಿಯ ಗುಣಂಗಳ
ಕೀರ್ತನೆ ಮಾಡುವರು ಮನಬಂದಂತೆ
ಪೆತ್ತ ತಾಯಿ ತಂದೆ ಹರಿಯೆ ನಮಗೆ ನಿತ್ಯ
ಇತ್ತದು ಭುಂಜಿಸಬೇಕೆಂಬರೊ
ಇತ್ತಂಡ ಪ್ರವಾಹದ ಚಿಂತೆ ಇಲ್ಲದೆ ಪ್ರತಿ
ಉತ್ತರವಿಲ್ಲ ಕೇಳಿ ದೂರದೃಷ್ಟಿ
ಬುತ್ತಿಯೊಳಗೆ ರಸವಾಸನೆ ರುಚಿ ವ್ಯಾ
ಪುತವಾಗಿದಂತೆ ಹರಿ ಇವರಲ್ಲಿ
ಚಿತ್ರವ್ಯಾಪ್ತನಾಗಿ ಇಪ್ಪ ಆರ್ಪಿತ ಕೈ
ಕೊಳ್ತಡಿಗಡಿಗೆ ಲಾಲಿಸಿ ಪಾಲಿಸಿ
ಪ್ರತ್ಯಕ್ಷ ತೋರರು ಬಹಿರದಲಿ ತಮ್ಮ
ಸತ್ವಗುಣದ ಕಾರ್ಯ ಲೇಶ ಮಾತ್ರ
ರತ್ನ ಕಾಂಚನ ಧಾನ್ಯ ಪಶು ತುರಗ ಗಜಾಂದಣ
ಸತ್ತಿಗೆ ಸೂರ್ಯಪಾನ ಚಾಮರ ವಸ್ತ್ರ
ವಸ್ತ್ರಾಲಂಕಾರ ರಾಜಕೋಶ ರಾಜಧಾನಿ
ಮುತ್ತುಮಯವಾದ ಪ್ರಸಾದ ದುರ್ಗ ಭೃತ್ಯವರ್ಗ
ಭೃತ್ಯವರ್ಗ ಮಂತ್ರಿ ಸಂದಣಿ ಸಾಧನ
ನೃತ್ಯಗಾಯನ ನೀತಿ ನಿರ್ಣಯ ನ್ಯಾಯಾ
ತುತ್ತಿಸುವ ಜನ ಸಂಭ್ರಮವೊ
ಪಿತೃ ಮಾತೃ ಭ್ರಾತಾ ಭಾರ್ಯಾ
ಪುತ್ರಾ ಪುತ್ರಿ ಪೌತ್ರ ಪ್ರಪೌತ್ರ ಬಂಧು ಬಳಗಾ
ಈ ತೆರದಿ ನೋಡಿ ತೃಣ ಬ್ರಹ್ಮಾದಿ ತನಕ
ಹತ್ತಾವರಣ ಸಹಿತಾ ಮೀರಿ ತಿಳಿದು ಉತ್ತು
ವೋತ್ತಮ ವಸ್ತ ನಿಶ್ಸ್ಯಯಿಸಿ ಅದರ ಮೇಲೆ
ಹತ್ತು ನುರು ಲಕ್ಷ ಕೋಟ್ಯಾನಂತಾ
ಮೊತ್ತ ಮೇಲಾಗಿ ನೋಡೆ ಪರಮ ಮುಖ್ಯತರ
ವಸ್ತುವೆ ಇದೆ ಎಂದು ಹರಿ ಪಾದವ
ಅತ್ಯಧಿಕ ಪ್ರೀತಿಯಾಗಿ ಹಗಲಿರುಳು ಬುದ್ಧಿ
ಚಿತ್ತಾರದಲ್ಲಿ ಇಟ್ಟು ಉಚಿತದಲ್ಲಿ
ಹೊತ್ತು ಪೋಗಾಡುವರು ಇದರಿಂದಲ್ಲದೆ ಅನ್ಯ
ವಾರ್ತಿವೆಂಬೊದಿಲ್ಲ ಕಾಣುವಲ್ಲಿ
ಮೂರ್ತಿಯ ನೋಡುವರು ವೈದಿಕ ಲೌಕೀಕ
ಸ್ಪೂರ್ತಿಯಿಂದಲಿ ಅನುಭವಕೆ ತಂದು
ಪ್ರತ್ಯೇಕ ಜಡಜೀವ ರಾಶಿಯಲ್ಲಿ
ಉತ್ತಮ ಶ್ಲೋಕನೊಬ್ಬ ಕ್ರಿಯಾಭಿನ್ನ
ತತ್ತತ್ಪದಾರ್ಥದಲ್ಲಿ ತದಾಕಾರನಾಗಿ ನಿಂದು
ಸುತ್ತಿ ಸುತ್ತಿಪ ಜಗವ ನಿರ್ಲೇಪದೀ
ಸತ್ಯ ಜಗತ್ತು ಅಸ್ವತಂತ್ರ ಅಪೂರ್ಣ ಅ
ನಿತ್ಯ ಅಸಾರವೆಂದು ತಿಳಿದಿಪ್ಪರು
ಆತ್ಮದಾಪೇಕ್ಷವಿಲ್ಲ ಮತ್ತೊಂದು ಗಣನೆ ಉಂಟೆ
ಆತ್ಮನೆ ಗತಿ ಎಂದು ಆನಂದದಿ
ಪೂರ್ತಿ ಸಂಪದರಾಗಿ ನಾನಾ ಭೋಗ ದಿವ್ಯ ಸಂ
ಪತ್ತು ಸಾಧನದಿಂದ ಕುಣಿದಾಳ್ವರೂ
ನೆತ್ತಿಯಮೇಲೆ ಭಾಂಡಗಳು ಪೊತ್ತುಗೊಂಡು
ನರ್ತನೆ ಮಾಡುವ ಪುರುಷನ ಧ್ಯಾನ
ಎತ್ತಲಿಪ್ಪದೊ ಅವರಂದದಿ ಇವನ ಮನಸು
ಹತ್ತಿ ಬಿಡದಿಪ್ಪದು ಹಾರ್ಯಾಡಲು
ತುತ್ತು ಮೊದಲಾದ ಯತ್ನ ಹರಿಯಿಂದಾ
ಗುತ್ತಲಿವೇ ಎಂದು ನಲಿದಾಡೋರು
ದತ್ತ ಸ್ವಾತಂತ್ರ ಶ್ರುತಿಗೆ ವಿರೋಧವಾಗದಂತೆ
ಸತ್ಕರ್ಮಾಚರಿಸುವರು ಜನಹಿತಾರ್ಥ
ಹತ್ತಿದ ಪ್ರಾರಬ್ಧ ಭೋಕ್ತನಿಗೆ ಕೇಳು
ಎತ್ತಣದೊ ಪಾಪಪುಣ್ಯ ವಿಚಾರಿಸೆ
ಕೀರ್ತಿ ತಂದುಕೊಡುವ ಇವರಿಗೆ ಕರ್ಮಲೇಶ
ಮಾತ್ರ ಬರಗೊಡನು ಸ್ಮರಣೆಯಿಂದ
ಶತೃಸಂಹಾರ ನಮ್ಮ ವಿಜಯ ವಿಠ್ಠಲನ್ನ ಪಾ
ಡುತ್ತ ತಿರುಗವ ಭಕ್ತನೆ ಮಹಾಧನ್ಯ ೧
ಮಟ್ಟತಾಳ
ಹದಿನಾಲ್ಕು ಲೋಕಾ ಉದರದೊಳಗೆ ಇಟ್ಟು
ಪದುಮನಾಭನ ಅಂಥ ಪದುನಾಭನ ತಮ್ಮ
ಹೃದಯದೊಳಗೆ ಇಟ್ಟು ಪದೊಪದಿಗೆ ಧ್ಯಾನ
ಮುದದಿಂದಲಿ ಮಾಡಿ ಸದಮಲರಾಗುವರು
ಇದೆ ದೃಢ ವೈಕುಂಠ ಸದನ ಹಂಬಲಿಸರಯ್ಯಾ
ಪದುಮ ಕರ್ನಿಕೆಯಲಿ ವಿಧಿ ರುದ್ರಾದಿಗಳ
ಅದುಭೂತ ರೂಪಗಳ ಬದಿಯಲ್ಲಿ ನಿಲ್ಲಿಸಿ
ಮಧುವೈರಿಗೆ ನಾನಾವಿಧು ಭೂಷಣ ವಸನ
ಮಧುರನ್ನ ಸರ್ಪಿ ದಧಿಪಾಲು ದಿವ್ಯ
ಉದಕ ಸರ್ವಭೋಗ ಮೃದುತರವಾಗಿ ತ
ಪ್ಪದಲೆ ಕಲ್ಪಿಸಿ ಮಹಾ
ಸುಧಿಯಿಂದಲಿ ಚಿತ್ತದಲಿ ಅರ್ಪಿಸುವರು
ಇದರಿಂದಲೆ ಸರ್ವದ ತೃಪ್ತಿಯಾಗಿ
ಬುಧಜನರ ಕೂಡ ಹುದುಗಿಕೊಂಡಿಪ್ಪರೈ
ಮದನ ವೈರಿನುತ ವಿಜಯ ವಿಠ್ಠಲರೇಯನ
ಪಾದ ದುರ್ಗಾಶ್ರಯದ ಅಧಟರು ಅನುದಿನಾ &ಟಿಬ್

ಈ ಸುಳಾದಿಯು ಪರಶುರಾಮನನ್ನು ಕುರಿತ ಸ್ತೋತ್ರವಾಗಿದೆ.

ಪರಶುರಾಮ ಸ್ತೋತ್ರ
೧೨೫
ಧ್ರುವತಾಳ
ಸತ್ಯವತಿ ಪುತ್ರ ದುರ್ಗಾಕಳತ್ರ ನಿಜ
ಸತ್ಯ ಸಂಕಲ್ಪ ಸಿದ್ಧಸೂರಿ ಪ್ರಸಿದ್ಧ
ನಿತ್ಯ ನಿಸ್ಸಂಗಾ ನಿರ್ವಿಕಾರಗುಣ ತರಂಗ
ಭೃತ್ಯವತ್ಸಲ ಲೀಲಾ ಭೃಗುಕುಲ ಪಾಲಾ
ದೈತ್ಯಜಾತಿಮರ್ದನ ಸದ್ದರ್ಮವರ್ಧನ
ಅತ್ಯಂತ ಪರಾಕ್ರಮ ರಾಮರಾಮಾ
ಸತ್ಯಲೋಕೇಶನಯ್ಯಾ ಸತತ ವಿಜ್ಞಾನ ಕಾಯಾ
ಮೃತ್ಯುಂಜಯ ನಿಂದು ಜಯವೆನೆ ಸುರವೃಂದಾ
ತೌತ್ಯನೆ ರಾಜರಿಪು ಬಲುಧನ್ಯಾ
ಹತ್ಯಾದಿ ದೋಷದೂರ ಭೂಭಾರವನಕುಠಾರಾ
ನೃತ್ಯಗೀತಕೆ ಒಲಿದಾ ದೇವರದೇವಾ
ಇತ್ಯರ್ಥಕಂಡವರಾರು ಎಂದಿಗೆ ನಿನ್ನಾ
ಗತ್ಯಾದಿ ಮಿಗಿಲಾದ ಪ್ರವರ್ತಕಾ
ದ್ವಿತ್ಯಕ್ತ ಮಾಡಿಸು ಪರಿಣಾಮಕೆ ಚಿತ್ತ
ಸತ್ಯವಾಗಲಿ ನಿನ್ನಂಘ್ರಿಯಲಿ
ಸತ್ಯರ್ಥ ಮುಕುತಿಗೆ ಸಾಧನಾ ಧನವೈಪ
ರಿತ್ಯ ಇಲ್ಲವು ಕಾಣೊ ಕಮಲಾಕಾಂತಾ
ಅತ್ಯಧಿಕ ದೈವಾ ವಿಜಯ ವಿಠ್ಠಲರೇಯಾ
ಕೃತಜ್ಞತೆಯನ್ನು ಮಾಡು ನಿನ್ನ ದಾಸರೊಳು ಪೊಂದಿಸಿ ೧
ಮಟ್ಟತಾಳ
ರಾಮಾ ರಾಮಾ ಪೂರ್ಣಕಾಮಾ ಕಾಮಿತ ಫಲದಾ
ಜಾಮದಗ್ನಿ ಅಗ್ನಿನೇಮಕ ಕುಲಿಶುಧರಾ
ರಾಮ ವಲ್ಕವವಾಸ ರಾಮಣೀಯ ಸರ್ವಸಾರ್ವ
ಭೌಮಾ ಪೂರ್ಣ ಪೂರ್ಣಾ
ಭೂಮಿನಾಥಾ ತಾಮಸಗುಣಹಾರಿ
ಧೂಮಕೇತುವರ್ನಸ್ವಾಮಿ ಅಂತರ್ಯಾಮಿ
ಸಮಸ್ತ ಘನಶೌರಿ ರಾಮ ರಾಜಿವಾಕ್ಷಾ
ಸೋಮಕುಲವೈರಿ ವಿಜಯ ವಿಠ್ಠಲರಾಮಾ
ಕಾಮಧೇನು ಸತತ ಮನದಲಿ ನೆನೆದವಗೆ ೨
ತ್ರಿವಿಡಿತಾಳ
ಮುನಿ ಕುಲೋದ್ಬವ ರಾಮ ರೇಣುಕಾನಂದನಾ
ಧನುರ್ಧಾರಿ ಖಡ್ಗ ಚರ್ಮಧಾರಿಯೇ
ರಣಭಯಂಕರ ಚಂಡಪ್ರಚಂಡ ಉದ್ದಂಡಾ
ಸೆಣಿಸಿದವರ ಗಂಡಾ ರಿಪು ಭೇರುಂಡಾ
ಗಣನೆಗಾಣಿಸೊ ನಿನ್ನ ಪ್ರತಾಪತನಕೆ ತ
ಲ್ಲಣಿಸುತದೆ ರಾಯಾಕುಲ ಸಾಗರಾ
ಜನಕನ ಮಾತುನು ಲಾಲಿಸಿ ಭ್ರಾತಾರಾ
ಜನನಿಯ ತರಿದು ಮಗುಳೆ ಉಳುಹಿದೆ
ಜನನ ಮರಣ ಶೂನ್ಯ ರಾಮ ಭಾರ್ಗವರಾಮ
ಬಿನಗು ದೈವಂಗಳು ನಿನಗೆ ಸಮನೆ
ಅನಿಮಿಷತತಿ ಅಭ್ರದಲಿ ನಿಂದು ಬಾಗಿ
ನೆನೆ ನೆನದುಘೇಯನೆ ನಿನ್ನ ಚರಿತೆ
ಪಣವ ಮಾಡುವನಾರು ನಿನ್ನ ಸಂಗಡ ಹೋಹೋ
ತೃಣ ಸಮವಾಗಿದೆ ತ್ರಿಭುವನಾ
ಸನಕಾದಿ ವಂದಿತಾ ವಿಜಯ ವಿಠ್ಠಲರೇಯಾ
ಮಣಿದು ನಮೋ ಎಂಬೆ ಉದ್ದರಿಸು ಉರ್ಚಿತಾ೩
ಅಟ್ಟತಾಳ
ಕೃತವೀರ್ಯಸೂನು ಅರ್ಜುನನ ಸಾವಿರಹಸ್ತಾ
ಕ್ಷಿತಿಗುರುಳಿಸಿ ಅವನನ್ನ ಕೊಂದು ಅವನ
ಸುತರನ ಸದದು ಕಾಳಗದೊಳು ಏಕ ವಿಂ
ಶತಿಸಾರಿಗೆಲಿ ನಿಕ್ಷತ್ರಿಯರ ಮಾಡಿ
ಕೃತುಮಾಡಿ ಅವನಿಸುರರಿಗೆ ಸಕಲದಾನಾ
ಚತುರ್ದಿಗ್ಬಾಗವ ಕೊಟ್ಟು ಸಿಂಹ ಪ
ರ್ವತದಲ್ಲಿ ಇದ್ದ ಬ್ರಾಹ್ಮರನ ಮನ್ನಿಸಿ ವಾರಿ
ಪತಿಯಿಂದ ಭೂಮಿಯ ಪಡೆದು ರಾಮಭೋಜ
ಕ್ಷಿತಿಪನ್ನ ಪೊಂದಿಸಿ ಯಾಗವ ಮಾಡಿಸಿ
ಕೃತಕಾರ್ಯ ನೀನಾದೆ ಪಡುವಲ ವನಧಿಲಿ
ನುತಿಸಿದವರ ಪ್ರಾಣಾ ವಿಜಯ ವಿಠ್ಠಲರೇಯಾ
ಪ್ರತಿಕೂಲ ಕಳೆವ ವಾಗಿಂದ್ರಿಯ ನಿವಾಸ ೪
ಆದಿತಾಳ
ಪರುಶುರಾಮನೆಂದು ಸ್ಮರಿಸಿದ ಜನರಿಗೆ
ಸ್ಪರಿಸಮಾಡದು ಕಾಣೊ ನಿರಸವಾಗೊದು ನಿತ್ಯ
ಹರುಷದಿಂದಲಿ ಸಂಚರಿಸುವ ಪುಣ್ಯ ಭೂಮಿ
ಪುರುಷಾರ್ಥವಾಗುವುದು ವರುಷ ವರುಷ ಜ್ಞಾನ
ವರುಷಸುರಿವುದು ಪರುಷವಾಗಿಪ್ಪನೂ
ಅರಸಿನ ಸಹಿತಬಂದು ಅರಸಿದರೆ ದೊರಕನು
ಸುರ ಶಿರೋಮಣಿ ಪತಿಕರಿಸುವ ತಾನೆ ಉ
ದ್ಧರಿಸುವ ಕರುಣದಿಂದ ಪುರುಷ
ಪ್ರಧಾನ ಜನಕ ವಿಜಯ ವಿಠ್ಠಲರೇಯಾ
ಸರಿಸಿಜ ಭವಾದ್ಯರಿಗೆ ಅರಸಾಗಿ ಒಪ್ಪುತಿಹಾ ೫
ಜತೆ
ಭಾವಿ ಸಪ್ತ ಋಷಿಯ ಭಕ್ತವತ್ಸಲ ಕರು
ಣಾವಲೋಕವ ರಾಮಾ ವಿಜಯ ವಿಠ್ಠಲ ಮುಖ್ಯ ೬

ಪಾಂಡಿತ್ಯವನ್ನು ಕೇವಲ ಹಣದ ಲಾಭಕ್ಕಾಗಿ

೧೨೦
ಧ್ರುವತಾಳ
ಸತ್ಸಭೆಗೆ ನಮಿಸುವೆನು ಶುದ್ಧ ಮನಸಿಲಿ
ಉತ್ಸಹದಲ್ಲಿ ಕೇಳಿ ಲಾಲಿಪುದು
ಮತ್ಸರ ತಾಳಿದರೆ ಇದರಿಂದ ನಿಮಗೇನು
ಉತ್ಸಾಹವಾಗದು ಊರ್ವಿಯೊಳಗೆ
ಸತ್ಸಂಗತಿ ಉಳ್ಳ ಕಾಲಕ್ಕೆ ಅಸೂಯವಾಗದು
ತತ್ಸಂಬಂಧಿಗಳಿಗೆ ಶಿರಕಂಪನ
ಕುತ್ಸಿತ ಮಾರ್ಗಕ್ಕೆ ಬೀಳದಲೆ ನಿತ್ಯ ಶ್ರೀ
ವತ್ಸಲಾಂಛನ ಪಾದ ಪ್ರೀತಿಯಲ್ಲಿ
ವತ್ಸರ ನಿಜದಲ್ಲಿ ಇಟ್ಟು ಪೂಜಿಸಿದವ
ವತ್ಸನಾಗಿರಬೇಕು ಉತ್ತಮರಲ್ಲಿ
ಸತ್ಸಿದ್ಧಾಂತ ಮನುಜಂಗೆ ಮತಿ ಭ್ರಮಣ ಪುಟ್ಟದು
ಮತ್ ಸ್ವಭಾವವಿದೆ ಸಾರುವೆನು
ತತ್ಸಹವಾಸ ತೊರೆದು ಹರಿ ಪ್ರೇರಣೆಯೆನೆ ಮೋ
ಹತ್ಸವೆ ಕೆಲಕಾಲ ಹರುಷ ಮಿಗೆ
ಮತ್ಸ್ಯಾವತಾರ ನಮ್ಮ ವಿಜಯ ವಿಠ್ಠಲರೇಯ
ಮತ್ಸಾರಥಿüಯಾಗಿ ನಿಂದಿಹ ಬಳಿಯಲ್ಲಿ ೧
ಮಟ್ಟತಾಳ
ಧರಣಿಯೊಳಗೆ ಶಿರಿ ಹರಿ ಚರಣದಲ್ಲಿ
ಪರಮ ಭಕುತಿ ಉಳ್ಳ ನರರು ಮನ್ನಿಸಿ ಕೇಳಿ
ಹಿರಿಯತನವೆಂಬೊ ಗರುವಿಕೆಯನು ಬಿಟ್ಟು
ಪರೀಕ್ಷಿಸಿ ನೋಡುವುದು ಅರಮರೆ ಇದಕಿಲ್ಲ
ತರುವುಗಳಿಗೆ ಒಂದೇ ಕರವು ಬೆಂಬಿಡದೆ
ತಿರುಗಿದರೆ ಬೇಸರಿಕೆ ಉಂಟಾಗುವುದೆ
ಇರುಳು ಹಗಲು ಈ ತೆರದಲ್ಲಿ ಇದ್ದರು
ಮರಳೆ ಕೋಳಿಗೆ ಹತ್ತು ಮರಿಗಳು ಇರಲಾಗಿ
ಪೊರೆಯಲಾರದೆ ಬಿಟ್ಟು ಬರುವುದೆ ವನದಲ್ಲಿ
ತುರುಗಳು ತನ್ನಯ ಕರುಗಳಲ್ಲಿ ಮೋಹ
ಮರಿಯದೆ ಕೋಳಿಗೆ ಮರಿಗಳಲ್ಲಿ ಮೋಹ
ನರರು ನೋಡಿ ತಾಳಲರಿಯದೆ ತಮ್ಮೊಳು
ವಿರಸ ಹಚ್ಚಿಕೊಂಡರೆ ಲಾಭವೇನು
ಹರಿಯ ಸ್ವಾತಂತ್ರ ಬಲ್ಲರೆ ಇನಿತೆ ಬುದ್ಧಿ
ದುರುಳಮರ್ದನ ನಮ್ಮ ವಿಜಯ ವಿಠ್ಠಲನ್ನ
ಕುರುಹ ಕಾಣದನಕ ಹರಿಯದು ಅಜ್ಞಾನ ೨
ತ್ರಿವಿಡಿತಾಳ
ಧರಣಿ ಪಾಲನು ಬಂದು ಪರಮ ಪ್ರೀತಿಯಿಂದ
ಒರಲೂವ ನಾಯಿಯ ಸಾಕುತಿರಲು
ನರನೊಬ್ಬ ನೋಡಿ ಸೈರಿಸದಲೆ ನಾಯಿಯ
ಹರಳಿಲೆ ಹಾಕಲು ನೋಡಿ ರಾಯಾ
ತರಹರಿಸನು ಕಾಣೊ ಅವನ ಶಿಕ್ಷಿಸಿ ವೇಗ
ಹೊರಗೆ ಹಾಕುವ ತನ್ನ ಸೇವಿ ಬಿಡಿಸಿ
ನರನು ಉತ್ತಮನಾಗಿ ನಾಯಿ ಮೇಲಿನ ಸ್ನೇಹ
ಬರಿದಾಗದು ಕಾಣೊ ಭೂಪತಿಗೆ
ಹರಿ ತನ್ನ ಭಕ್ತರ ಮೇಲೆ ಇದ್ದ ಕರುಣ
ಪರದಲ್ಲಿ ಮಾಡುವನು ಸಿದ್ಧವಿದು
ಸ್ಥಿರಪುರ ಉಳ್ಳ ವಿಜಯ ವಿಠ್ಠಲರೇಯ
ಹರರೂಪನ್ನ ಭಂಗಿಸಿ ಅಂಬರೀಷನ ಕಾಯ್ದ ೩
ಅಟ್ಟತಾಳ
ಊಚ ಜ್ಞಾನಿಗಳು ತಾವಾದರು ಜಗದೊಳು
ಆ ಚಂದ್ರತಾರರ್ಕ ಉಳ್ಳ ಪರಿಯಂತ
ಯೋಚಿಸಿ ನೋಳ್ಪದು ಮನದಲ್ಲಿ ನಿಮಗೆ ಆ
ಲೋಚನೆಯ ದೊರಿಯದಿದ್ದರೆ ಹಿರಿಯರ ಕೇಳಿ
ಈ ಚತುರ್ದಶ ಭುವನೇಶನ್ನ ಮನಿಯಲ್ಲಿ
ನೀಚಭಾವವುಳ್ಳ ನಾಯಿ ಒಂದಿರಲಾಗಿ
ಛೀ ಛೀ ಎನ್ನದೆ ಸುಮ್ಮನಿದ್ದರೆ ದಾರಿದ್ರ
ಮೋಚನವಾಗುವದಯ್ಯಾ ಕೃಪೆ ಮಾಳ್ಪನು ರಾಯಾ
ಯಾಚಕದವರಿಗೆ ನಾಯಿಯ ಗೊಡವೇಕೆ
ಸೂಚನೆ ತಿಳಿವುದು ಸರ್ವದ ಬಲ್ಲವರು
ನಾಚಿಕೆಪತಿ ನಮ್ಮ ವಿಜಯ ವಿಠಲರೇಯ
ಗೋಚರಿಸುವ ತನ್ನ ನೆನೆದವರ ಬಳಿಯಾ ೪
ಆದಿತಾಳ
ಕ್ಷೋಣಿಯೊಳಗೆ ಸರ್ವಜ್ಞ ನಾನೆಂಬವನ್ನ ಕಾಣೆ
ಎಣಿಸಿ ನೋಡಿದರು ಬೊಮ್ಮಾದಿಗಳ ವಿಡಿದು
ಮಾನವರಿಗೆತ್ತಣದೊ ಏನೇನು ಬಲ್ಲರೆಂಬೊ
ಜ್ಞಾನ ಉಂಟೇನೋ ಬರಿದೆ ಗೋಣು ತಿರುಹುವನಲ್ಲದೆ
ತಾನೆ ಸರ್ವಜ್ಞನಾಗೆ ಗೇಣುದರಕೆ ಪೋಗಿ
ಕಾಣೆನೆಂದು ಒರಲಿ ದೀನರ ಬೇಡುವನೆ
ಜ್ಞಾನಿಯಾದವರಿಗೆ ನಾನೆಂಬೊದೆಲ್ಲೆದು
ನಾನಾ ಪ್ರಕಾರದಿಂದ ಆನಂದವಾಗುವುದು
ಮಾನ ಕಡಿಮೆ ಎಂಬೊ ಜ್ಞಾನವಲ್ಲದೆ ಪುಣ್ಯ
ಕ್ಷೀಣವಾಗುವುದು ನಿದಾನ ತಿಳಿಯರಯ್ಯಾ
ನಾ ನೀಚ ಸರ್ವರಂಘ್ರಿರೇಣಾಗಿ ಇಪ್ಪೆನು
ಜ್ಞಾನಿಗಳು ಪಾದತ್ರಾಣ ಪ್ರಯೋಗ ಮಾಡೆ
ಮಾಣದೆ ಅನುದಿನ ಮೇಣು ಸೌಭಾಗ್ಯವೆಂಬೆ
ವಾಣಿ ಒಬ್ಬರ ಮನಿಯಾಧೀನವಾಗಿಪ್ಪಳೇ
ಪ್ರಾಣೇಶನ ಕರುಣವಾಗದ ತನಕ
ಧ್ಯಾನಕೆ ನಿಲುಕುವ ವಿಜಯ ವಿಠಲರೇಯ
ಗಾನವ ಮಾಡಿದವಗೆ ನಿತ್ಯ ಪದವಿಯ ಕೊಡುವ ೫
ಜತೆ
ಲಾಭ ಪೋಗುವುದೆಂದು ಪಂಡಿತರೆನಿಸುವರು
ಲೋಭವೆ ಗಳಿಸುವರು ವಿಜಯ ವಿಠಲ ಒಲಿಯಾ ೬

ಉಡುಪಿಯ ಕೃಷ್ಣನನ್ನು ಕುರಿತ ಸುಳಾದಿ ಇದಾಗಿದೆ.

೧೪೨
ಗೌಳ ಧ್ರುವತಾಳ
ಸದಾ ನಿನ್ನ ಭಕುತರ ಚರಣಕ್ಕೆ ಎರಗು-
ವುದು ಎನ್ನ ಉತ್ತಮಾಂಗಕ್ಕೆ ನೇಮಿಸು
ಸದಾ ನಿನ್ನ ಭಕುತರ ಕ್ರೀಡೆ ನೋಡು-
ವುದು ಎನ್ನ ಕಂಗಳಿಗೆ ವೇಗದಿ ನೇಮಿಸು
ಸದಾ ನಿನ್ನ ಭಕುತರ ಮಹಿಮೆ ಕೇಳು
ವುದು ಎನ್ನ ಕರ್ನಕೆ ಬಿಡದೆ ನೇಮಿಸು
ಸದಾ ನಿನ್ನ ಭಕುತರು ಉಂಡ ಮಿಕ್ಕ ಪ್ರ-
ಸಾದಾ ಎನ್ನ ಜಿಹ್ವೆಗೆ ವೇಗದಿ ನೇಮಿಸು
ಸದಾ ನಿನ್ನ ಭಕುತರ ಪದಸೇವೆ ಮಾಡು
ವುದು ಎನ್ನ ಕರಯುಗಳಕ್ಕೆ ನೇಮಿಸು
ಸದಾ ನಿನ್ನ ಭಕುತರ ಪದಸೇವೆ ಮಾಡು
ವುದು ಎನ್ನ ಕಗ್ಯುಗಳಕ್ಕೆ ನೇಮಿಸು
ವಿಧುಕ್ಷೇತ್ರ ನಿವಾಸ ವಿಜಯ ವಿಠ್ಠಲರೇಯ
ಯದು ಕುಲೋತ್ತಮ ಕೃಷ್ಣಮಧ್ವಮುನಿ ಮನದೈವ
ಇದನೆ ಬೇಡುವೆ ನಿನ್ನ ಭಕುತರ ಸಂಗತಿ ೧
ಮಟ್ಟತಾಳ
ಸದಾ ನಿನ್ನ ಭಕುತರು ಮುಡಿದ ನಿರ್ಮಾಲ್ಯವಾಸನೆ
ನೇಮಿಸು ಎನ್ನನಾಸಕ್ಕೆ
ಸದಾ ನಿನ್ನ ಭಕುತರ ಬರವ ಕಾಣುತಲಿ ಅಡ್ಡಬೀಳುವಂತೆ
ನೇಮಿಸು ಎನ್ನಂಗಂಕ್ಕೆ
ಸದಾ ನಿನ್ನ ಭಕುತರು ಇದ್ದಲ್ಲಿಗೆ ಪೋಗಿ-
ಸುಳಿದಾಡುವುದೆ ಎನ್ನ ಚರಣಕೆ ನೇಮಿಸು
ಸದಾ ನಿನ್ನ ಭಕುತರು ಇದ್ದಲ್ಲಿಗೆ ನಮೊ
ಸದಮಲ ಮೂರುತಿ ಉಡುಪಿಯ ಕೃಷ್ಣ ಶ್ರೀ
ಸದನ ವಿಜಯ ವಿಠ್ಠಲ ಮಧ್ವಮುನೀಶಾ
ಸದಾ ನಿನ್ನ ಭಕುತನು ನಾನು೨
ತ್ರಿವಿಡಿತಾಳ
ನಿನ್ನ ಭಕುತರ ಮಹಿಮ ಅನ್ನಂತ ಬಗೆಯುಂಟೆ
ಎನ್ನಿಂದ ಕೊಂಡಾಡಲೊಶವೆ ಸ್ವಾಮಿ
ಎನ್ನ ಮನಸು ಬಹು ಚಂಚಲವುಳ್ಳದ್ದು
ಇನ್ನು ತಿಳಿಯುವುದೆಂತೋ ನಿನ್ನವರ
ಕಣ್ಣಿಗೆ ಕಾಣಿಸರು ಆವಾವ ಪರಿಯಲ್ಲಿ
ನಿನ್ನ ಮೂರುತಿ ಎನ್ನ ಹೃದಯ ಮಧ್ಯ
ಚೆನ್ನಾಗಿ ನೋಡುತ್ತ ನಿಲಿಸಿ ಧ್ಯಾನವ ಮಾಡಿ
ಧನ್ಯರೆಂದೆನಿಸುವರನುಗಾಲವೊ
ಎನ್ನಂಥ ಮತಿ ಹೀನಗೆ ಶುಚಿಯಾಗಿ ಅವ
ರನ್ನ ವಂದಿಪುದೆಂತೊ ತ್ರಿಜಗವ್ಯಾಪ್ತ
ಅನ್ನಂತೇಶ್ವರ ಕೃಷ್ಣ ಉಡುಪಿ ನಿವಾಸ ಸಂ-
ಪನ್ನ ವಿಜಯ ವಿಠ್ಠಲ ಆನಂದ ಮುನಿಗೇಯ ೩
ಅಟ್ಟತಾಳ
ನಿನ್ನ ಭಕುತರು ಬರಲು ಏಳದಿರೆ
ಘನ್ನ ನರಕಕ್ಕೆ ಕಾರಣವಾಗೋದು
ಮುನ್ನಾವ ಗತಿಯೊ ಮುಕ್ಕುಂದ ಮುರಾರೆ
ಇನ್ನುಪಾಯ ಒಂದಾದರು ಕಾಣೆ
ಬಿನ್ನಪ ಮಾಡುವ ಭಕುತ ವತ್ಸಲನೆ
ಮನ್ನಿಸು ಈ ಮಾತ ಮುದದಿಂದ ಲಾಲಿಸಿ
ಕಣ್ಣು ಮೊದಲಾದ ಸ್ಥಾನದಲ್ಲಿ
ಅನ್ನು ದಿನ ವಾಸವಾಗಿದ್ದ ತಾತ್ವಿಕರಿಗೆ
ಚೆನ್ನಾಗಿ ನಿರ್ಮಳ ಚೇತನ ಪಾಲಿಸೆ
ಎನ್ನ ಕೂಡಲಿ ಸಜ್ಜನರ ಚರಣ ಸೇವೆ-
ಯನ್ನು ಮಾಡಿಸುವಂತೆ ನಿನ್ನದೆ ದಯವಯ್ಯ
ಅನ್ಯಾಯದಲಿ ಸಂಚರಿಸುವ ಜನರನ್ನು
ಇನ್ನು ಕಂಡರೆ ಆಕ್ಷಣ ಹಗೆ ಪುಟ್ಟಲಿ
ಪನ್ನಂಗ ಶಯನ ಉಡುಪಿಯ ಸಿರಿಕೃಷ್ಣ
ಎನ್ನ ಮನೋಭೀಷ್ಟ ವಿಜಯ ವಿಠ್ಠಲ ಮಧ್ವ
ಮುನ್ನಿಗೊಲಿದ ದ್ವಾರಕ ಪುರನಿವಾಸ ೪
ಆದಿತಾಳ
ಹರಿ ನಿನ್ನ ಭಕುತರು ದುರಿತ ರಾಸಿಗೆ ಪಾವಕ
ಹರಿ ನಿನ್ನ ಭಕುತರು ಪುಣ್ಯ ಸಸಿಗೆ ಚಂದ್ರ
ಹರಿ ನಿನ್ನ ಭಕುತರೆ ಕರುಣ ಮಾಡಿದರವ
ಸುರಲೋಕ ಮೊದಲಾದ ಸುಖವೆ ಧಿಕ್ಕರಿಸುವರು
ಹರಿ ನಿನ್ನ ಭಕುತರ ನಂಬಿದವನೆ ಧನ್ಯ
ಹರಿ ನಿನ್ನ ಭಕುತರಿಗೆ ನಿನ್ನ ಒಲಿಮೆ ಎಂತೊ
ಹರಿ ಹರಿ ನರಹರಿ ಶರಣು ಶರಣ ಗತಿ
ಕರದಲ್ಲಿ ಕಡಗೋಲು ನೇಣ ಪಿಡಿದ ಕೃಷ್ಣ
ಪರಮ ಪುರುಷ ನಮ್ಮ ವಿಜಯ ವಿಠ್ಠಲ ನಿನ್ನ
ಶರಣರ ಚರಣ ಸ್ಮರಣೆ ಪರಮಾನಂದ ಕಾಣೊ
ಗುರು ಮಧ್ವ ಮುನಿಯಿಂದ ಪೂಜೆಗೊಂಬುವ ದೇವ ೫
ಜತೆ
ನಿನ್ನ ಭಕ್ತರು ದಯ ಮಾಡಿದವನ ಚಿಂತೆ
ಘನ್ನವಾಗಿದೆ ನಿನಗೆ ವಿಜಯವಿಠ್ಠಲ ಕೃಷ್ಣ ೬

ಭಗವಂತನಿಗೆ ನಾವು ಭುಂಜಿಸುವ

೮೫
ಧ್ರುವತಾಳ
ಸಪ್ತಾವರಣ ದೇಹ ಸತತ ಸಾಧನಗೇಹ
ಆಪ್ತನು ಅನಂತ ಗುಣ ರೂಪಾತ್ಮಕ ಹರಿ
ತಪ್ತ ಕಾಂಚನದಂತೆ ಒಳಗೆ ಸುಳಿವ ನಿ
ರ್ಲಿಪ್ತನು ಸಮಸ್ತ ದೋಷರಾಶಿಗಳಿಂದ
ತೃಪ್ತನು ಅನಾದ್ಯಂತ ಕಾಲದಲಿಂದ
ಪ್ರಾಪ್ತ ನಾಗುವ ಕೇವಲ ನಂಬಿದವರಿಗೆ
ಗುಪ್ತ ಮಹಿಮ ಗುಣಾಸಾಂದ್ರ ಸುಜನಾಬ್ದಿ ಚಂದ್ರ
ವ್ಯಾಪ್ತ ಪ್ರಧಾನ ಪುರುಷ ಅಣುರೇಣು ಸ್ಥಾನದಲ್ಲಿ
ಶಪ್ತಮಾಡಿದಮೇಲೆ ಭಕ್ತರ ಪೊರೆಯದಿರಾ
ಸುಪ್ತಿಕಾಲದಲ್ಲಿ ಏಕಮೇವನೆನಿಸುವ
ಕ್ಲಪ್ತಿಗೆ ಲೇಶಾಂಶ ಕೊರತೆ ಎನಿಸಾ ಶ್ರೀಶ
ಜಾಪ್ತರ ಮನದಲ್ಲಿ ಮುಂದೊಲಿದು ಪೊಳೆವ
ದೀಪ್ತ ಮೂರುತಿ ನಮ್ಮ ವಿಜಯ ವಿಠಲ ಕಮ
ಲಾಪ್ತನಂತೆ ಪೊಳೆದು ಅಜ್ಞಾನಾಂಧ ಓಡಿಸುವ ೧
ಮಟ್ಟತಾಳ
ತ್ವಕ್ಚರ್ಮ ಮಾಂಸ ಮಜ್ಜ ಮೇದಸ್ಸು ಅಸ್ಥಿ
ರಕುತ ಸಮೇತ ಸಪುತಧಾತುಗಳು
ಯುಕ್ತಿವಂತರು ಮನಃ ಪೂರ್ವಕದಿಂದ
ಉಕ್ತಿ ತಿಳಿದು ಹರಿಯ ಕೊಂಡಾಡುವರು
ಭಕುತಿಯಿಂದಲಿ ಒಮ್ಮೆ ಸ್ಮರಣೆ ಮಾಡೇ
ಮುಕುತಿಗೆ ಇದೆ ಮಾರ್ಗ ಅನ್ಯಯೋಚನೆ ಸಲ್ಲ
ಕಕುಲಾತಿಯಿಂದ ಅನ್ಯ ಗ್ರಂಥವನೋದಿ
ಕಕ್ಕಸ ಯಾತನೆಯ ಒಳಗಾಗುವದಲ್ಲ
ನಖ ಶಿಖ ಪರ್ಯಂತ ಗುಣಿಸಿ ಎಣಿಸುವುದು
ಸುಖ ತೀರ್ಥರ ಮತದ ಮನುಜರ ನೆರೆನಂಬಿ
ಸುಖ ಪೂರ್ಣ ನಿತ್ಯ ವಿಜಯ ವಿಠಲರೇಯನ
ಭಕುತರೊಳಗೆ ನಲಿದು ಭವ ಉತ್ತರಿಸುವದು ೨
ರೂಪಕತಾಳ
ತನುರೂಹದಲ್ಲಿ ಹಿಂಕಾರ ಪ್ರದ್ಯುಮ್ನ
ನನು ಕಾಣೋ ತ್ವಕ್ಕಿನಲ್ಲಿ ಪ್ರಸ್ಥಾವ ನಾಮಕ
ಅನಿರುದ್ಧ[ನಾ]ಮನು ಚರ್ಮದಿ ಸಂಕರು
ಷಣನೆಂಬ ಪ್ರತಿಹಾರ ನಾಮಕ ಶ್ರೀಪತಿ
ಗುಣನಿಧಿ ಉದ್ಗೀಥ ನಾಮಕ ವಾಸುದೇ
ವನು ವರಾಹಾಮೂರ್ತಿಗಳು ಮಾಂಸದಲ್ಲಿ ಉಂಟು
ಎನಿಸು ಶಾಂತಿ ಸಂವಿದ ನಿಧನ ನಾಮಕ ನಾರಾ
ಯಣ ದ್ವಯ ರೂಪಗಳು ಶೋಣಿತದಲಿ ವಾಸ
ಪ್ರಣವ ಪ್ರತಿಪಾದ್ಯ ವಷಟ್ಕಾರ ನಾಮಕನು ಷ
ಡ್ಗುಣನೆಂಬೊ ಎರಡನ್ನು ಮೇದಸ್ಸಿನಲ್ಲಿ ತಿಳಿ
ಘನಶೋಕ ಹರ ಸಾರನೆಂಬೊದಾದಿ ನಾರಾ
ಯಣ ಮೂರ್ತಿ ಇಪ್ಪರು ಮಜ್ಜದಲ್ಲಿ ಬಿಡದೆ
ಜನನರಹಿತ ಹಂಸನಾಮಕ ಉಪೇಂ
ದ್ರನು ಪೊಳೆವ ಅಸ್ಥಿಗಳೊಳಗಿದ್ದು ತಪ್ಪದೆ
ಮನೋ ನಿಯಾಮಕ ನೊಡೆಯ ವಿಜಯ ವಿಠಲರೇಯ
ಅಣುರೇಣು ತೃಣಕಾಷ್ಟ ಬಹಿರಂತರ ಭರಿತ ೩
ಝಂಪೆತಾಳ
ಪೇಳಲೇನು ಮುಂದೆ ಅಸ್ಥಿ ಮಜ್ಜದಲಿ ಅಂ
ಗುಲಿ ಪರ್ವಗಳಲ್ಲಿ ಸಾವಿರದ ಎಂಭತ್ತು
ಮೇಲು ಭಗವದ್ರೂಪ ಮೂರುಕಡೆ ಇಪ್ಪದು
ಹೋಲಿಕೆಯ ಬಲ್ಲವರಾರು ಬುಧರು
ಏಳು ಧಾತುಗಳೊಳಗನ್ನ ಮಯಾದಿ ಕೋಶ
ಮೇಲು ಕೆಳಗೆ ಕವಚದಂದದಿ
ವಾಲಯವಕ್ಕು ಅದರೊಳಗೆ ತನ್ನಾಮಕ
ಶ್ರೀ ಲೋಲನಿಪ್ಪನು ಅಯಿದು ರೂಪಾ
ಏಳಲವ ಮಾಡದೆ ಸೂಕ್ಷ್ಮ ಸೃಷ್ಟಿಯಲ್ಲಿ
ನಾಲ್ಕು ಮೂರ್ತಿಗಳು ಅನಿರುದ್ಧಾದಿ
ಆ ಲಿಂಗ ದೇಹಕ್ಕೆ ಆವರಕವಾಹವು
ಆಲಿಸಿದರೆ ಅಂಗಿತೊಟ್ಟ ತೆರದಿ
ಪಾಲಿಸುವ ಪ್ರತಿದಿನ ವಿಜಯ ವಿಠಲರೇಯನ
ಊಳಿಗವನು ಮಾಡೆ ಉದ್ಧಾರನಾಗುವಾ ೪
ತ್ರಿವಿಡಿತಾಳ
ಹದಿನಾರುಕೂಡಿದ ಅನಾದಿ ಲಿಂಗದೇಹ
ಇದು ಉಂಟು ಕವಳೆಯಂದದಿ ಜೀವಕ್ಕೆ ಮುಚ್ಚಿ
ಅದರೊಳು ಪುರುಷನಾಮಕ ಭಗವಂತನು
ಕದಲಿಪೋಗದೆ ಸರ್ವ ಸ್ವರೂಪದಿ
ಮುದದಿಂದ ಇಪ್ಪನು ಅಗಲನು ಕ್ಷಣ ಮಾತ್ರ
ಪದುಮಜ ಜೀವಿಗಳೊಳಗೆ
ಕುದುರೆಯ ಕೂದಲು ಸಹಸ್ರ ಭಾಗ ಮಾಡೆ
ಅದರ ಪ್ರಮಾಣ ನಿಶ್ಚಯ ಜೀವವೊ
ಇದೇ ಬ್ರಹ್ಮಾದಿಗಳಿಗೆ ಒಂದೇ ಪ್ರಕಾರವು
ಅಧಿಕಾರತನ ಭೇದ ಗುಣವನೋಡು
ತ್ರಿ ದಶಗಣಕೆ ಅಂಶತೋವ್ಯಾಪ್ತಿ ಶರೀರ
ವದೆ ಮಿಕ್ಕಾದವರಿಗೆ ಪ್ರಕಾಶಿತಾ
ಇದೆ ಇದೆ ಸಿದ್ಧ ಶ್ರುತಿ ಸ್ರ‍ಮತಿ ಸಮ್ಮತ
ಪದೋಪದಿಗೆ ಹರಿಯ ಮರಿಯದಿರು
ವಿಧಯಿಂತು ಇರಲಿಕ್ಕೆ ಜೀವೇಶವೊಂದೆಂಬ
ಅಧಮಾಧಮರ ಕರ್ಮವೇನೆಂಬೆನೋ
ಕ್ಷುಧೆಯಗೋಸುಗ ಪೋಗಿ ಕಂಡ ಕಂಡ ಜನರ
ಪದಕೆ ಬೀಳುವ ಮನುಜ ಬೊಮ್ಮನೆಂತೊ
ಸುದತಿ ವಂಚಿಸಿ ಸುತರ ಪಡದ ಕಾರ್ಯವ ತಿಳಿಯಾ
ಮದ ಗರ್ವ ಮತಿತಾನು ದೈವ ಸಮನೇ
ಮದುವೆಯ ಮಾಡುವ ತನ್ನ ನಷ್ಟವ ತಿಳಿಯದೆ
ತದುಪರಿ ಶೋಕಿಸುವ ನೆಲೆಗಾಣದೆ
ಒದಗಿ ಪೋಗುವ ಪಯಣಗತಿಯಲ್ಲಿ ಗ್ರಾಮಕ್ಕೆ
ಹದುಳ ಕಾಣದಲಿಪ್ಪ ಸೇರುವುದೊ
ಮದ ಸೊಕ್ಕಿದವರನ್ನು ಕೊಲ್ಲುವ ವಿಜಯ ವಿಠಲ
ಇದೇ ದೇಹ ನಿರ್ಮಾಣ ಮಾಡಿದ ಮಹಾಮಹಿಮ ೫
ಧ್ರುವತಾಳ
ಆರಂಗುಲ ಪ್ರಮಾಣ ಪೊಕ್ಕಳಧೋ ಭಾಗ
ಶಿರಸು ಪರಿಯಂತ ಬಹ್ಮನಾಡಿ
ದೋರ ನೋಡಿದರು ಕೇವಲ ಸೂಕ್ಷ್ಮ ನಿರ್ಮಳ
ಧಾರಾಳವಾಗಿಪ್ಪದು ಮಧ್ಯದಲ್ಲಿ
ಈ ರೀತಿ ಇದೆ ಸುಷುಮ್ನವೆಂದೆನಿಪದು
ಮೂರೊಂದು ಇದಕೆ ಪ್ರಭೇದನಾಡಿ
ಚಾರು ವಜ್ರಿಕಾರ್ಯಕ ಪ್ರಕಾಶಿನಿ ವೈದ್ಯುತಿ
ಸೇರಿಸಿಕೊಂಡಿಪ್ಪವು ಚತುರ ಭಾಗ
ಸಾರಿರೈ ಹರಿತಾ ನೀಲ ಶ್ವೇತ ಪಿಂಗಳ ರಕ್ತ
ನಾರಾಯಣಾಂತ ಕೃತಿಪತಿತನಕ
ಮೂರೊಂದು ಒಂದು ನಾಡಿಯೊಳಗೆ ಈ ಕ್ರಮವವರ್ಣ
ಮೂರುತಿಗಳಿಪ್ಪವು ವಾಸವಾಗಿ
ಬೇರೆ ಬೇರೆ ನಾಡಿ ಸ್ಥಾನದಲ್ಲಿ ಲಕುಮಿ
ವಾರಿಜಾದ್ಯರಿಂದ ತುತಿಸಿ ಕೊಳುತ
ಪಾರತಂತ್ರವಿಲ್ಲದ ವಿಜಯ ವಿಠಲರೇಯ
ಆರಾಧಿಸುವ ಜನಕೆ ಬೆಂಬಿಡದೆ ಬೆಂಬಲನು ೬
ಮಟ್ಟತಾಳ
ಸತತ ಈ ನಾಡಿ ಮೂಲ ಸ್ಥಾನದಲ್ಲಿ
ಚತುರದಳ ಪದುಮರಕುತ ವರ್ಣ
ಹುತಾಶನ ಮಂಡಲ ತ್ರಿಕೋಣಾಕಾರ
ಅತಿಶಯವಾದ ನಾಭಿ ಸ್ಥಾನದಲ್ಲಿ
ಚತುರ ದ್ವಿದಳ ವನಜ ರಕ್ತ ವರ್ಣ
ಪತಿತನ ಶೋಷಿಸುವ ಆರುಕೋಣಿಯು ಮಾ .
ರುತ ಮಂಡಲವೆನ್ನಿ
ಕತಿಪತಿ ಮೊದಲಾದ ಐದು ಮೂರುತಿಯು ಉ
ಕೃತ ಕ್ರಮದಿಂದ ಇಪ್ಪವು ಅನುಗಾಲ
ಚ್ಯುತ ದೂರ ನಮ್ಮ ವಿಜಯ ವಿಠಲ ಕಾಣಿರೊ
ನುತಿಸಿದವರಿಗೆ ಸದ್ಗತಿಯನು ಪಾಲಿಸುವಾ ೭
ತ್ರಿವಿಡಿ ತಾಳ
ಹೃದಯಸ್ಥಾನದಲಷ್ಟದಳದಿಂದಲೊಪ್ಪುವ
ಪದುಮ ಇದರ ಮೇಲೆ ರವಿ ಮಂಡಲ
ಅದನು ನೋಡಲಾಗಿ ಮೂರು ಕೋಣೆಯುಳ್ಳ
ತ್ರಿದಶ ಮೊಗ ಮಂಡಲ ಪೊಳೆವುತಿದೆಕೊ
ಅದನು ಕಳೆದು ತಿಳಿ ಹನ್ನೆರಡು ದಳವುಳ್ಳ
ಪದುಮವೆ ಉಂಟು ಉರಸ್ಥಾನದಲ್ಲಿ
ದ್ವಿದಳ ಶುಕ್ಲ ಪದುಮತಾಲುದಲ್ಲಿ ನೋಡು
ವಿಧುಮಂಡಲವದರ ಮೇಲೆ ಸಿದ್ಧಾ
ಪದುಮ ಶುಭ್ರ ಎಸಳ ಎರಡರಿಂದೊಪ್ಪುತ
ಇದೆ ಭ್ರೂ ಮಧ್ಯಾಗ್ನಿ ಮಂಡಲ ತ್ರಿಕೋಣ
ಪದುಮ ದ್ವಾದಶ ಎಸುಳ ಶುಕ್ಲವರ್ಣದಲ್ಲಿ
ಪ್ಪದು ಶಿರಸ್ಸಿನಲ್ಲಿ ವರ್ತುಳ ಮಂಡಲ
ನದಿ ಪತಿ ನಾಮದಲಿ ಕರಿಸಿಕೊಂಬದು
ಇದಕೆ ಮೊದಲು ಪೇಳಿದಂತೆ ಮೂರುತಿಗಳು
ಯದುಕುಲೋತ್ತಮರಂಗ ವಿಜಯ ವಿಠಲರೇಯ
ಪದವಿಯ ಕೊಡುವನು ಈ ಪರಿಧ್ಯಾನಿಸೆ ೮
ಝಂಪೆ ತಾಳ
ಹಿರಿಯ ನಾಡಿಯಸುತ್ತ ಪೂರ್ವಾದಿವಿಡಿದು ಚ
ತುರ ನಾಡಿಗಳುಂಟು ಉತ್ಸಹದಲಿ
ಕರಿಸಿದವು ವಜ್ರಿಕಾ ಈಡಾಪಿಂಗಳಾಧಾರಣಿ
ತರುವಾಯದಲಿ ಗುಣಿಸು ಎಪ್ಪತ್ತೆರಡು ಸಾ
ವಿರ ನಾಡಿಗಳು ಸತ್ಯ ಸವ್ಯಾಪಸವ್ಯದಲಿ
ಬೆರದಿಪ್ಪುದು ಅರ್ಧಾರ್ಧ ಉಭಯಪಕ್ಷ
ಹರಿ ತಾನೆ ಸ್ತ್ರೀ ಪುರುಷರು ರೂಪವನ್ನೆ ಧರಿಸಿ
ಇರುಳು ಹಗಲು ಕ್ರೀಡೆಯಾಡುತಿಪ್ಪ
ನರನುತ್ತಮನೊಬ್ಬ ವೈಷ್ಣವನ ಮನ್ನಿಸಿ
ಕರೆದು ಮೃಷ್ಟಾನ್ನ ಭೋಜನವ ಮಾಡಿಸೆ
ಪುರುಷಾಯು ಉಳ್ಳನಕ ನಿತ್ಯ ಕುಟುಂಬಕ್ಕೆ
ಪರಿತೋಷ ಬಡಿಸಿದಂತೆ ಕಾಣಿರೈ
ತುರಿಯನಾಮಕದೇವ ವಿಜಯ ವಿಠಲ
ಹರಿಯ ಕರುಣವನು ಪಡೆದವನು ಬಲು ಧನ್ಯನು ೯
ರೂಪಕ ತಾಳ
ಆ ಶಿಖೆಯಲ್ಲಿ ಬ್ರಹ್ಮನಾಮಕ ನಾರಾಯಣ
ಕೇಶದಲಿ ಪ್ರದ್ಯುಮ್ನ ತದಭಿಮಾನಿ ರುದ್ರ
ಕೇಶವ ಫಣಿಯಲ್ಲಿ ಬಲಗಣ್ಣಿನಲಿ ಸ್ತಂಭ
ವೇಷ ನಾರಾಯಣ ದಾಮರೂಪ ಲಕುಮಿ
ಆ ಸಮೀರನು ವತ್ಸರೂಪದಲಿಪ್ಪ ಉ
ಪಾಸನೆ ಸರ್ವ ದೇವತೆಗಳು ಮಾಳ್ಪರು
ಸುಶುಕ್ಲ ರಕ್ತ ನೀಲ ರೇಖೆಗಳಲ್ಲಿ
ವಸಿಷ್ಟ ಗೌತುಮ ವಿಶ್ವಾಮಿತ್ರರೆಂದು
ಈಶ ಇಂದ್ರ ಸೂರ್ಯ ನಾಮಕರಾಗಿ ಕ
ರಸಿ ಕೊಂಬರು ಕಾಣೊ ಉದಕಾಗಮದಲ್ಲಿ
ಲೇಸು ಭಾರದ್ವಾಜ ನಾಮಕ ಪರ್ಜನ್ಯ
ವಾಸ ವೊಧ್ರ್ವಯವೆ ಅಧೋಯವೆ ಪ್ರತಿಮೆ ಜೋ
ತಿಷಕ್ಕೆ ಅತ್ರಿ ಫ್ಶ್ಯಪ ಕಪಿಲನಾಮಕಾ
ಕಾಶ ದೇವಾದ್ಯರು ಶೋಭಿಸುತಿಪ್ಪರು
ಈ ಸಮಸ್ತದ್ರವ್ಯ ಕಾಣಿಸಿಕೊಡುವ ಮಾ
ನಿಸ ಮೊಗ ಹದಿನೆಂಟು ಒಂದು ಆನಿಯಮೋರೆ
ಏಸುಬಗೆಯಿಂದ ಮೆರೆವ ಸಪ್ತಾಂಗ
ವಿಭೂಷಿತ ವಿಶ್ವನು ದಕ್ಷಿಣಾಕ್ಷಿಯಲ್ಲಿ
ಮೀಸಲ ಪದಾರ್ಥ ಶುಭ ರಸವನುಭವಿಪ
ಆಶೆಯಿಲ್ಲ ನಿತ್ಯ ತೃಪ್ತ ನಿರ್ದೋಷನು
ಈ ಸವ್ಯಗಣ್ಣಿನಲ್ಲಿ ದಾಮನ ದ್ವಯಗಣ್ಣಿ
ಗಾ ಸೂರ್ಯಗಭಿ ಮಾನಿಯಶ್ವಿನಿದೇವತೆಗಳು
ನಾಸಕ್ಕೆ ಸ್ಥಾನಿಗಳು ಅಲ್ಲಿ ಶ್ರೀ ಧನ್ವಂತ್ರಿ
ಶ್ವಾಸೋಚ್ಛ್ವಾಸದಲ್ಲಿ ಮುಖ್ಯಪ್ರಾಣ ಭಾರತಿ
ದ್ಯು ಸರಿತು ಮೊದಲಾದ ತೀರ್ಥಗಳು ಕಿವಿಯಲ್ಲಿ
ಲೇಶ ಬಿಡದಿಪ್ಪರಲ್ಲಿ ತ್ರಿವಿಕ್ರಮ
ಧೀಶಾ ದೇವತೆಗಳು ತದಭಿಮಾನಿಗಳು
ವೈಶ್ರವಣ ಚಂದ್ರಮ ಧರ್ಮಾದ್ಯರು ಕಾಣೋ
ದಾಸೋಹಮ್ಮೆಂದೆನಲು ತನ್ನನೆ ಕೊಡುವ ಜಗ
ದೀಶ ವಿಜಯ ವಿಠಲ ಸರ್ವರನಾಳುವಾ ೧೦
ಧ್ರುವತಾಳ
ಗಲ್ಲ ಓಷ್ಠೆಗಳಲ್ಲಿ ಮಧುಸೂದನಾದಿ ಮೂರ್ತಿ
ಪಲ್ಲಿನಲ್ಲಿ ಓಜೋಭೃತ ಔರಸ
ಇಲ್ಲಿ ಪೇಳಿದವೆರಡು ಬಿಟ್ಟು ಉಳಿದ ಹದಿ
ನಾಲ್ಕು ಅಜಾದಿಗಳ ತಿಳಕೊಂಬೋದು
ಸೊಲ್ಲು ನುಡಿವ ಜಿಹ್ವೆಯಲ್ಲಿ ವರುಣದೇವ
ಅಲ್ಲಿ ಮತ್ಸ್ಯಾದಿ ಮೂರ್ತಿ ನಲಿದಾಡುವ
ಮೆಲ್ಲುವ ವದನದಲಿ ವನ್ಹಿ ಮತ್ತೆ ಭಾರ್ಗವ

ಭಗವಂತನ ಧ್ಯಾನ ಮಾಡುವ

೮೬
ಧ್ರುವತಾಳ
ಸಮರ್ಪಣೆ ಪ್ರಕಾರ ತಿಳಿವುದು ಚೆನ್ನಾಗಿ
ಸಮ ಬುದ್ಧಿವುಳ್ಳ ಜನರು ಸತತದಲ್ಲಿ
ಹಿಮಶೇತು ಮಧ್ಯದಲ್ಲಿ ಪುಟ್ಟಿದ ದೇಶದೊಳಗೆ
ಕ್ರಮಉಂಟು ಸ್ವಲ್ಪ ಪ್ರದೇಶ ಧರಣಿ
ಶಮೆದಮೆ ಉಳ್ಳ ಮಧ್ವಮತದಲ್ಲಿ ಪೊಂದಿದ್ದ
ಸುಮನೋಹರ ಜೀವಿಗಳಿಗೆ ಪೇಳತಕ್ಕ
ಪ್ರಮೇಯ ಇದು ಕೇವಲ ಹರುಷ ರಹಸ್ಯ ಆ
ಗಮದಲ್ಲಿ ಸರಿ ಪೇಳುತಿದೆ ಉತ್ತಮ
ರಮೆಯರಸನ್ನ ದಿವ್ಯ ವಿಗ್ರಹ ಮನಸಿಗೆ
ರಮಣೀಯವಾದದ್ದು ಲಕ್ಷಣೋಪೇತ
ದ್ಯುಮಣಿ ಪ್ರಕಾಶದಂತೆ ಒಪ್ಪುತಿಪ್ಪದು ಆ
ತುಮ ಅನಾತುಮದೊಳು ಚಿಂತನೆಗೈದು
ಸಮ ವಿಷಯದಲ್ಲಿ ಗೋಳಕವ ನೆನೆದು ಮ
ಹಿಮೆಯನ್ನು ಮರಳೆ ಮರಳೆ ಧೇನಿಸುತ್ತ
ತಮೋಗುಣದ ಕಾರ್ಯವನ್ನು ಹಿಂಗಳದು ಶುದ್ದ ಸತ್ವ
ಮಮತೆಯಿಂದಲಿ ಹರಿಯ ಮೆಚ್ಚಿಸಬೇಕು
ಅಮರದಿ ಸಮುದಾಯ ಜೀವಿಗಳಿಗೆ ಲ
ಕುಮಿ ವಲ್ಲಭನೆ ಮುಖ್ಯ ಮೂಲನೆಂದೂ
ಕಮಲ ಕರ್ನಿಕೆಯಲ್ಲಿ ಇದ್ದ ಬಿಂಬನ ಪ್ರ
ತಿಮೆಯಲ್ಲಿ ಇಡುವದು ವಿವಿಧ ತಿಳಿದು
ಸಮನ್ವಯ ಇಲ್ಲೆ ಮಾಡಿ ಮುಕ್ತಿ ಮಾರ್ಗವ ಪೊಂದು
ಗಮನವಾಗಲಾರದು ಕಂಡಕಡಿಗೆ
ಅಮಲವಾದ ಪೂಜೆ ಹದಿನಾರು ದಿಕ್ಕಿನಿಂದ
ಕ್ರಮತಿಳಿದು ಅವಾಹನ ಧ್ಯಾನಮಾಡಿ
ಅಮಿತ ಪ್ರತಾಪ ಹರಿ ನಿಸ್ಪ್ರಹ ನಿತ್ಯ ತೃಪ್ತ
ಕಮಲ ಭವಾದಿ ಮನಕೆ ದೂರಕ್ಕೆ ದೂರ
ಅಮಿಶ್ರ ಮಿಕ್ಕಾದ ರಸಭೋಕ್ತಾ ನಾನಾ ರೂಪದಲಿ
ಭ್ರಮೆ ಇಲ್ಲವಗೆ ನಿಜಪೂರ್ಣ ಸುಖನೊ
ಕ್ಷಮ ಮಧ್ಯದಲಿ ಸ್ಥೂಲ ಮಧ್ಯಮ ಸೂಕ್ಷವೆಂದೀ
ಕ್ರಮದಿಂದ ಪ್ರಸಿದ್ಧ ವಾಸನ ಚಿತ್ತು
ಚಮತ್ಕಾರ ಒಂದೊಂದಕೆ ತ್ರಿವಿಧಬಗೆ ಉಂಟು
ಸುಮತಿಲೋಕಕೆ ಸುಲಭವಾಗಿಪ್ಪದೂ
ಸಮನಸಿ ತಿಳಿಯಬೇಕು ಚತುರ ವಿಧ ಅನ್ನ
ರಮೆ ಬೊಮ್ಮ ತಾತ್ವಿಕರು ಸಾಕ್ಷಾತ್ಪರಮಾ
ನಿಮಿಷ ಬಿಡದೆ ಇನಿತು ಕಷ್ಣಾದಿ ಇಷ್ಟವಾಸ
ನಾಮಯದಿ ಪ್ರಾಜ್ಞಬಿಂಬ ಕೈಕೊಂಬೋರು
ಕಮರ ಕಪಿಲ ಭೃಗು ನರಸಿಂಹ ನಾಮದಲಿ
ರಮಿಪ ಜಿಹ್ವೇಂದ್ರಿಯದಲಿ ಸ್ವೀಕರಿಸಿ
ಕುಮತಿ ಜನಕೆ ತಿಳಿಯಗೊಡನೊ ಅನಾದ್ಯ ವಿದ್ಯ
ತಿಮರ ಭಾನು ಭವಾರ್ಣವ ತಾರಕ ಉ
ತ್ತಮವಾದ ಯೋಗ್ಯ ರಸ ತತ್‍ತ್ಪದಾರ್ಥದಲಿ
ಸಮ ತಿಳಿಸಿಕೊಂಡರೆ ಯೋಗ ಮಾಯಾ
ಅಮರರಿಗೆ ಉಣಿಸುವ ತಾನು ಕೈ ಕೊಂಬದು ದು
ರ್ಗಮ ಕಾಣೊ ದುಃಖ ದೂರ ಮಾಹಾ ಪ್ರಭುವೊ
ಉಮೆಯರಸ ಪರಿಯಂತ ಈ ರಸ ಸಲ್ಲುವದು
ಕಮಲಭವಗೆ ಲಕುಮಿಗೆ ಇಲ್ಲವೋ
ಸುಮನಸ ಗಣಕೆ ಲೇಪನವಿಲ್ಲಾ ಅವರ ಆ
ತುಮದೊಳಗಿದ್ದ ಖಳರಲ್ಲಿ ಐಕ್ಯ
ಕ್ರಮ ಗೆಡುವರು ಒಮ್ಮೆ ಇದರ ಪ್ರಾಚುರ್ಯದಿಂದ
ತಮ ತಮ್ಮ ಸ್ವಾಭಾವಿಕ ನಡತೆಯಲ್ಲಿ
ಅಮಮ ಹರಿ ಪರಮ ಶಕ್ತಿ ಸೃಷ್ಟಾ ಉಪ
ರಮದಲ್ಲಿ ಸರ್ವರನ್ನು ಉದರದೊಳಗು
ತ್ತಮ ತರದಿಂದ ಪೊಂದಿಟ್ಟುಕೊಂಡಿಪ್ಪ ಉ
ತ್ತಮ ಶ್ಲೋಕ ಪೂರ್ಣನ್ನ ಚರಿತೆ ಎಂತೊ
ಮಮತಾ ರಹಿತ ಪರಾಯು ಆರಂಭಿಸಿ
ನವಿಪ ಜನರು ಇತ್ತ ಭೋಗ್ಯಾವಸ್ಥಾ
ಕ್ರಮದಲಿ ಆವಾವ ತತ್ವಾತ್ಮಕ ರಸಂಗಳು
ಸಮಸ್ತ ಜೀವಿಗಳಿಗೆ ಏಕ ಮಾಳ್ಪ
ಕಮಲೇಶ ಶುಭರಸ ಸವಿದುಂಬೋದು ನಿಶ್ಚಯವು
ಅಮಿತ ವಿಜ್ಞಾನಪೂರ್ಣ ಸ್ವರಮಣನು
ಕ್ರಿಮಿ ಮೊದಲಾದ ಚೇತನಕೆ ಉಪಜೀವ್ಯ ಅ
ಕ್ರಮಕೆ ಭಗವಂತನಿಗೆ ಆಗುವದೇನೊ
ಭ್ರಮಣನಲ್ಲವೊ ಸ್ವಾಮಿ ಭಿನ್ನಾಂಶಿ ಅಂಶಕೆ ಸಂ
ಗಮ ಮಾಡಿಸುವ ಒಂದೇ ಜೀವರನ್ನು
ನಮೊ ನಮೊ ನಮೊ ಎಂದು ಆದ್ಯಂತ ತಿಳಿದ ನರಗೆ
ಸಮವೃತ್ತಿ ಭೀತಿ ಇಲ್ಲ ಎಲ್ಲಿದ್ದರೂ
ಹಿಮಕರಾವರ್ಣ ವಿಜಯ ವಿಠಲನನು
ಪಮನೆಂದದರ್ಪಿಸೆ ಕೈವಲ್ಯಾ ಸರ್ವದಾ ಕೈಕೊಂಬಾ ೧
ಮಟ್ಟತಾಳ
ಅರ್ಚಿಸಲಿಬೇಕು ಅಧಿಕಾರ ಭೇದದಲಿ
ಸರ್ಪಿಮೊದಲಾದ ನಾನಾ ವಸ್ತುಗಳಿಂದ
ದರ್ಪತನ ಬಿಟ್ಟು ಧರ್ಮಮಾರ್ಗದಲಿ ಕಂ
ದರ್ಪ ಪಿತನೆ ಸರ್ವ ವ್ಯಾಪ್ಯ ವ್ಯಾಪಕನೆಂದು
ದರ್ಪಣದೊಳು ಬಿಂಬನೋಳ್ಪ ತೆರದಂತೆ
ಸರ್ಪಭೂಷಣ ತತ್ವದಲ್ಲಿ ಇದ್ದದ್ದೆ ಗ್ರಹಿಸು
ದರ್ಪಜನರವೈರಿ ವಿಜಯ ವಿಠ್ಠಲರೇಯಾ
ಅರ್ಪಿತ ಕೈಕೊಂಬ ಭಕುತಿ ಮಾತ್ರಕೆ ಒಲಿದು ೨
ತ್ರಿವಿಡಿತಾಳ
ಒಂದೊಂದು ಪದಾರ್ಥಕ್ಕೆ ಒಬ್ಬೊಬ್ಬ ಅಭಿಮಾನಿಗಳು
ವೃಂದಾರಕ ಜನ ಉಂಟು ಅದಕೆ
ಒಂದೊಂದು ಭಗವದ್ರೂಪಗಳಲ್ಲಿ ಇಪ್ಪವು
ಕುಂದದಲೆ ತಿಳಿದು ಕೊಂಡಾಡುವದು
ನಂದವಾಹದು ಜನಕೆ ಅನ್ನ ಪಾಯಸದಲ್ಲಿ
ಚಂದ್ರ ಭಾರತಿ ಕೇಶವ ನಾರಯಣ
ಸಂದೋರು ಭಕ್ಷ ಘೃತ ಕ್ಷೀರದಲ್ಲಿ ಅರ
ವಿಂದ ಭಾಂಧವ ಲಕುಮಿ ವಾಣಿಯಲ್ಲಿ
ನಿಂದಿಹ ಮಾಧವ ಗೋವಿಂದ ವಿಷ್ಣು ಬಲು
ಅಂದಾ ಮಂಡಿಗೆ ಬೆಣ್ಣೆದಧಿ ಸೂಪಕ್ಕೆ
ಒಂದೊಂದಿರಾ ಮೌಳಿ ವಾಯು ಚಂದ್ರ ವರುಣಾ
ವೀಂದ್ರ ಮಧುರಿಪು ಕ್ರಮಾತು ಶ್ರೀಧರ
ಮಮುದೆ ಪತ್ರ ಫಲ ಶಾಖಾ ಆಮ್ಲ ಅನಾಮ್ಲಕ್ಕೆ
ಪೊಂದಿ ಮಿತ್ರ ಶೇಷ ಗೌರೀ ಗೌರೀಶರು
ಇಂದ್ರೀಶ (ಪದ್ಮ)ನಾಭ ದಾಮೋದರ ಗುಣ
ಸಾಂದ್ರ ಸಂಕರುಷಣ ಮೂರ್ತಿ ಎನ್ನೂ
ಇಂದ್ರಯಮ ವಾಸುದೇವ ಪ್ರದ್ಯುಮ್ನ ಆ
ನಂದ ಅನಿರುದ್ಧನು ಸಕ್ಕರೆ ಬೆಲ್ಲ
ಚಂದ ಉಪಸ್ಕಾರ ಕಟುಗಳಿಗೆ ಇವರೆನ್ನು
ವಂದಿಸುವುದು ಈ ಪರಿ ತಿಳಿದೂ
ಗಂದುಗ್ರ ಯಾಲಕ್ಕಿ ಸಾಸವಿ ಮತ್ತೆ ಶ್ರೀ
ಗಂಧ ಕರ್ಪುರ ಇವಕ್ಕೆಲ್ಲ ಕೇಳಿ
ಕಂದರ್ಪ ಪುರುಷೋತ್ತಮ ತೈಲ ಪಕ್ವಕ್ಕೆ
ಇಂದ್ರಜ ಅಧೋಕ್ಷಜ ದೇವತಿಯೂ
ಸಂದೀದ ಕೂಷ್ಮಾಂಡ ಪರಿಶುದ್ಧ ತಿಲಮಾಷ
ದಿಂದ ನಿರ್ಮಿತಕ್ಕೆ ದಕ್ಷ ನರಸಿಂಹನೆ
ರಂಧ್ರವುಳ್ಳ ಭಕ್ಷಮಾಷ ಮಿಕ್ಕಾದದಕೆ ಸ
ಬಂಧವಾಗಿಹ ಮನು ಅಚ್ಯುತ ದೇವಾ
ಸೈಂಧವ ಸಂದಿಜಕೆ ನಿರುಋತಿ ಪ್ರಾಣ ಉ
ಪೇಂದ್ರನು ಜನಾರ್ಧನ ಯುಕ್ತ ಕ್ರಮದಲ್ಲಿ
ತಂದಿಡುವ ತಾಂಬೂಲ ಸ್ವಾದೋದಕದಲ್ಲಿ
ಮಂದಾಕಿನಿ ಸೌಮ್ಯಹರಿ ಕೃಷ್ಣನೋ
ಒಂದೊಂದು ಅಭಿಮಾನಿ ಒಂದೊಂದು ಮೂರ್ತಿ ಮು
ಕುಂದನ ಪ್ರೇರಣೆಯಿಂದ ಪೇಳಿದೆ
ಮಂದರಾದ್ರಿಧರ ವಿಜಯ ವಿಠ್ಠಲ ಕರುಣಾ
ದಿಂದ ಸುಳಿದಾಡುವ ಸವಿದು ತೃಪ್ತನಾಗಿ ೨
ಅಟ್ಟತಾಳ
ಪುಷ್ಠರ ರತಿ ಹಂಸನಾಮಕ ಪರಮಾತ್ಮ
ವಿಶ್ವನು ಪಾವಕ ಶುದ್ಧಿಗೆ ಸ್ವಾದು ರಸಕೆನ್ನಿ
ವಸುಜೇಷ್ಟ ವಸಂತ ಒಲಿಗೆ ಗೋಮಯ ಪಿಂಡ
ಕೂಸತಿಯಾಗಿಪ್ಪರು ಭಾರ್ಗವ ಋಷಭನು
ಅಸಮಾ ಗುಣದೇವಿ ಪಾಕಕರ್ತೃಗಳಿಗೆ
ವಿಶ್ವಂಭರದೇವ ಅಲ್ಲಿ ವಾಸಾ
ವಸುಧಿ ವರಾಹ ನೈವೇದ್ಯ ಮಂಡಲದಲ್ಲಿ
ಉಸವ ಮೇಲು ಭಗಕೆ ವಿಘ್ನೇಶ್ವರ ಕುಮಾರ
ಮಿಸುಣಿಪ ವರ್ಣಕೆ ವಿಷ್ವಕ್ಸೇನ ಪು
ರುಷನಾಮಕ ಭಗವಂತನ ಚಿಂತಿಸು
ಎಸಳು ತುಳಿಸಿಗೆ ಶ್ರೀದೇವಿ ಕವಿಲ ರಂ
ಜಿಸುವ ಪಾತ್ರಿಯಲ್ಲಿ ವಾರುಣಿ ಆನಂದ
ಬೆಸಸೂವೆ ಭೋಜನ ಪಾತ್ರಿ ವ್ಯಂಜನಕೆ ಶೋ
ಭಿಸುವರು ದುರ್ಗಾ ಸೌಪರ್ಣಿ ಸತ್ಯಾದತ್ತ
ಮಶಕಾದಿ ಸ್ಪರ್ಶದೋಷ ಪರಿಹಾರಕ್ಕೆ
ಶ್ವಶನ ಮುದ್ರೆ ಎನಬೇಕು ತಾಕ್ಷ್ರ್ಯ ಮುದ್ರೆಯು
ವಿಷ ನಿವಾರಣಾರ್ಥ ತೋರಿಸಬೇಕು ಶುಭ
ರಸ ಸಿದ್ಧಿಗೆ ಧೇನು ಮುದ್ರೆ ತೋರಿಸ ಬೇಕು
ಬಿಸಿಜ ಮುದ್ರೆಯು ಶೋಧನಾಥವು ಸು
ದರ್ಶನ ಮುದ್ರೆಯು ರಕ್ಷಣಾರ್ಥ ಶಂಖಗದಾಕ
ಲಶ ಮುದ್ರೆಗಳು ತೋರಿಸಬೇಕು ಚೆನ್ನಾಗಿ
ದಶ ದಿಗ್ಬಂಧನ ಅಮೃತ ಬಿಂದು ಪವಿತ್ರಕೆ
ಬೆಸಸೆ ತಿಳಿದು ಮತ್ತೆ ಹಂಸ ಮುದ್ರೆಯು
ಪೆಸರುಗೊಳಲಿಬೇಕು ಎಲ್ಲಿ ಬೇಕಾದಲ್ಲಿ
ಕುಶಲಮಂತ್ರ ಜ್ಞಾನಪೂರ್ವಕದಿಂದ ಚಿಂ
ತಿಸಬೇಕು ನಾನಾ ಪದಾರ್ಥದ ವೈಭವ
ಅಸು ಕರಣ ಕಾಯ ಭೇದವನರಿತು ತು
ತಿಸಬೇಕು ಹರಿಯ ಈ ಪರಿಯಲ್ಲಿ ಸ್ವತಂತ್ರ ನಿ
ರ್ದೋಷಾ ಗುಣ ಪೂರ್ಣ ನಿಸ್ಪ್ರಹ ಸಾರಭೋಕ್ತ ಅಪ್ರಮೇ
ಯ ಸತ್ಯ ಸಂಕಲ್ಪ ಕರುಣಾ ನಿಧಿ ಭಕ್ತ
ವತ್ಸಲ ನಾರಾಯಣಾತ್ಮಕ ಅಂಶಿ
ಅಂಶಾವತಾರಾವೇಶ ದ್ರವ್ಯಪ್ರಾ ಪೂರ್ತಿ
ಉಸರಿಕ್ಕದೆ ನಿನ್ನ ದಾಸನೆಂದು
ಪುಶಿಯಲ್ಲ ಪುಶಿಯಲ್ಲ ಪುಶಿಯಲ್ಲ ಎನುತಲಿ
ವಶವಾಗಿ ಇಪ್ಪ ದೇವನ ನೀಕ್ಷಿಸಿ
ಹಸುಳೆ ಯಂದದಲಿ ಪರಮೋತ್ಸಹ ವಿಡಿದು ಸಾ
ಧಿಸು ಗುಣರೂಪ ಕ್ರೀಯಾದ ಸಮರ್ಪಣೆ
ಅಸುರ ಸಂಹಾರ ನಮ್ಮ ವಿಜಯ ವಿಠ್ಠಲರೇಯಾ
ವಿಷಯಂಗಳಿಗೆ ದೂರ ಅನಾದಿ ಸ್ವಭಾವಾ ೪
ಆದಿತಾಳ
ರತ್ನಮಂತ್ರ ವಿಷ್ಣು ಸಹಸ್ರನಾಮ ತಂತ್ರಿಕ
ಚಿತ್ತ ಶುದ್ಧನಾಗಿ ಮೂರು ಪ್ರಕಾರದಲ್ಲಿ
ತತ್ವಜ್ಞಾನದಿಂದ ಅಲ್ಪಜ್ಞ ನಾನು ಎಂದು
ತುತಿಸಿ ಮಂಗಳಮೂರ್ತಿಗೆ ನೈವೇದ್ಯ
ಉತ್ತಮ ಗುಣವುಳ್ಳ ಹವಿಸ್ಸು ಪರಮ ಪಾ
ವಿತ್ರ ಸ್ವಾದು ಸುಗಂಧ ಹವ್ಯ ಭಾವಕ್ರಿಯಾದಿ
ಅತ್ಯಂತ ವಿಶುದ್ಧಮನೋಹರ ಅ
ಮೃತವಾಗಿಹ ಸತ್ಯ ಭೋಗದ್ರವ್ಯ ಹರಿಯ ಮುಂಭಾಗದಲ್ಲಿ
ನಿತ್ಯ ಹೀಗೆ ಚಿಂತಿಸಿ ಪರಮಾನ್ನ ಹರಿದ್ರಾನ್ನ
ಚಿತ್ರಾನ್ನ ಮುದ್ಗಾನ್ನಅ ಪೂಪ ವಿಧಗಳು
ಮತ್ತೆ ಕದಳಿ ಫಲ ಸಂಭ್ರಾಣ ಸುಫಲ ಪಕ್ವ
ತರ್ದಳಿಸುವ ಕಂದಮೂಲ ವ್ಯಂಜನ ನಾನಾ
ವಸ್ತು ಗೋಘ್ನತ ಮಿಶ್ರ ಫಲ ಮೊದಲಾದವು
ತತ್ತಸ್ಥಾನದಲಿ ಇಡಿಸಿಕೊಂಡು ಸರ್ವ
ಕರ್ತು ನೀನೆ ಎಂದು ಮೇರು ಮುದ್ರೆ ತೋರಿಸಿ
ಭೃತ್ಯ ಇತ್ತದ್ದು ಕೈ ಕೊಳ್ಳಬೇಕೆಂದು ಚಿಂತಿಸು
ಪ್ರತ್ಯೇಕ ಪ್ರತ್ಯೇಕ ಧ್ಯಾನದಿಂದಲಿ ತಿಳಿದು
ತತ್ತದ್ರಸ ಸಂಯೋಗ ವಿಭಾಗ ಯೋಚಿಸು
ಸತ್ವ ರಾಜಸ ತಮೋಗುಣದಿಂದ ಷಡುರಸ ಇ
ಪ್ಪತ್ತು ನಾಲ್ಕು ರಸ ಅದರೊಳಗಿಪ್ಪವು
ಉತ್ತಮ ರಸ ಎರಡು ಎಂದಿಗೆ ನಾಶವಿಲ್ಲ
ವ್ಯಾಪ್ತವಾಗಿಪ್ಪವು ಆದಿಮಧ್ಯಾಂತದಲ್ಲಿ
ಸುತ್ತುವ ಮನಸು ನಿಲ್ಲಿಸಿ ಸಾಧನದಲಿ ಮಾನು
ಷ್ರೂೀತ್ತಮ ಮಾಡಬೇಕು ಅನಪರೋಕ್ಷ ಕಾಲಕೆ
ಸತ್ಯ ಸಂಕಲ್ಪನೆಂದು ಮೌನವಿಡಿದು ಪೂರ್ವ
ಉತ್ತರಾಪೋಶನ ವಿಧಿ ಅಚಮನಾನೀಯೊ
ಪ್ರತ್ಯಕ್ಷವಾಗಿದ್ದ ಗ್ರಹಮೇಧಿ ಯಾದವ
ನಿತ್ಯ ಈ ಪರಿಯಿಂದ ಚರಿಸಬೇಕು ಚನ್ನಾಗಿ
ತುತ್ತು ತೊರದು ಗುಹಾಶೇರಿದವನಾದರು
ಹೊತ್ತು ಹೊತ್ತಿಗೆ ಕೊಂಬ ಆಹಾರ ಅರ್ಪಿಸಬೇಕು
ಉತ್ತಮ ಮಧ್ಯಮ ಅಧಮರ ಬಗೆ ಬೇರೆ

ಈ ಸುಳಾದಿಯನ್ನು ನೈವೇದ್ಯ ಸುಳಾದಿ

೧೨೧
ಧ್ರುವತಾಳ
ಸಮರ್ಪಣೆ ಪ್ರಕಾರ ತಿಳಿವುದು ಚೆನ್ನಾಗಿ
ಸಮಬುದ್ಧಿ ಉಳ್ಳಾ ಜನರು ಸತತಾದಲ್ಲಿ
ಹಿಮಸೇತು ಮಧ್ಯಾದಲ್ಲಿ ಪುಟ್ಟಿದದೇಶದೊಳಗೆ
ಕ್ರಮಉಂಟು ಸ್ವಲ್ಪ ಪ್ರದೇಶ ಧರಣಿ
ಶಮೆದಮೆ ಉಳ್ಳಾ ಮಧ್ವಮತದಲ್ಲಿ ಪೊಂದಿದ್ದ
ಸುಮನೋಹರ ಜೀವಿಗಳಿಗೆ ಪೇಳತಕ್ಕ
ಪ್ರಮೇಯ ಇದು ಕೇವಲ ಹರುಷ ರಹಸ್ಯ ಆ
ಗಮದಲ್ಲಿ ಸಾರಿ ಪೇಳುತಿದೆ ಉತ್ತುಮಾ
ರಮೆಯರಸನ್ನ ದಿವ್ಯ ವಿಗ್ರಹ ಮನಸಿಗೆ
ರಮಣೀಯವಾದದ್ದು ಲಕ್ಷಣೋಪೇತಾ
ದ್ಯುಮಣಿ ಪ್ರಕಾಶದಂತೆ ಒಪ್ಪುತಿಪ್ಪದು ಆ
ತುಮ ಅನಾತುಮದೊಳು ಚಿಂತನೆ ಗೈದು
ಸಮ ವಿಷಮದಲಿ ಗೋಳಕವ ನೆನೆನೆದು ಮ
ಹಿಮೆಯನ್ನು ಮರಳೆ ಮರಳೆ ಧೇನಿಸುತ್ತಾ
ತಮೊ ಗುಣದ ಕಾರ್ಯವನ್ನು ಹಿಂಗಳದು ಶುದ್ಧ ಸತ್ವ
ಮಮತೆಯಿಂದಲಿ ಹರಿಯಾ ಮೆಚ್ಚಿಸಬೇಕು
ಅಮರಾದಿ ಸಮುದಾಯ ಜೀವಿಗಳೀಗೆ ಲ
ಕುಮಿವಲ್ಲಭನೆ ಮುಖ್ಯ ಮೂಲನೆಂದೂ
ಕಮಲ ಕರ್ಣಿಕೆಯಲ್ಲಿ ಇದ್ದ ಬಿಂಬನ ಪ್ರ
ತಿಮೆಯಲ್ಲಿ ಇಡುವುದು ವಿವಿಧಾ ತಿಳಿದು
ಸಮನ್ವಯ ಇಲ್ಲೆ ಮಾಡಿ ಮುಕ್ತಿ ಮಾರ್ಗವನೆ ಪೊಂದು
ಗಮನವಾಗಲಾಗದು ಕಂಡಕಡಿಗೆ
ಅಮಲವಾದ ಪೂಜೆ ಹದಿನಾರು ದಿಕ್ಕಿನಿಂದ
ಕ್ರಮ ತಿಳಿದು ಆವಾಹನ ಧ್ಯಾನ ಮಾಡಿ
ಅಮಿತ ಪ್ರತಾಪ ಹರಿ ನಿಸ್ಪ್ರಹ ನಿತ್ಯತೃಪ್ತ
ಕಮಲ ಭವಾದಿ ಮನಕೆ ದೂರ ದೂರಾ
ಅಮಿಶ್ರ ಮಿಕ್ಕಾದ ರಸ ಭೋಕ್ತ ನಾನಾ ರೂಪದಲಿ
ಭ್ರಮೆಯಿಲ್ಲವಗೆ ನಿಜಪೂರ್ಣ ಸುಖನೊ
ಕ್ಷಮೆ ಮಧ್ಯದಲಿ ಸ್ಥೂಲ ಮಧ್ಯಮ ಸೂಕ್ಷ್ಮವೆಂದೀ
ಕ್ರಮದಿಂದ ಪ್ರಸಿದ್ದವಾಸನ ಚಿತ್ತು
ಚಮತ್ಕಾರ ಒಂದೊಂದಕೆ ತ್ರಿವಿಧ ಬಗೆಉಂಟು
ಸುಮತಿ ಲೋಕಕೆ ಸುಲಭವಾಗಿಪ್ಪದೂ
ಸಮನಿಸಿ ತಿಳಿಯಬೇಕು ಚತುರ ವಿಧ ಅನ್ನ
ರಮೆ ಬೊಮ್ಮ ತಾತ್ವಿಕರು ಸಾಕ್ಷಾತ್ಪರಮ
ನಿಮಿಷಾಬಿಡದೆ ಇನಿತು ಕೃಷ್ಣಾದಿ ಇಷ್ಟ ವಾಸ
ನಾ ಮಯಾದಿ ಪ್ರಾಙ್ಞ ಬಿಂಬ ಕೈ ಕೊಂಬೋರು
ಕಮಠ ಕಪಿಲ ಭೃಗುನರಸಿಂಹ ನಾಮದಲಿ
ರಮಿಪಾ ಜಿಂಹೇಂದ್ರಿಯದಲಿ ಸ್ವೀಕರಿಸಿ
ಕುಮತಿ ಜನಕೆ ತಿಳಿಯಾಗೊಡನೊ ಅನಾದ್ಯವಿದ್ಯಾ
ತಿಮಿರಾ ಭಾನು ಭವಾರ್ಣನತಾರಕ ಉ
ತ್ತುಮವಾದ ಯೋಗ್ಯರಸ ತತ್ತತ್‍ತ್ಪದಾರ್ಥದಲಿ
ಸಮ ತಿಳಿಸಿಕೊಂಡರೆ ಯೋಗಮಾಯಾ
ಅಮರರಿಗೆ ಉಣಿಸುವ ತಾನು ಕೈ ಕೊಂಬುದು
ರ್ಗಮ ಕಾಣೊ ದು:ಖ ದೂರಾ ಮಹಾಪ್ರಭುವೊ
ಉಮೆಯರಸ ಪರಿಯಂತ ಈ ರಸ ಸಲ್ಲುವದು
ಕಮಲಭವ ಲಕುಮಿಗೆ ಇಲ್ಲವೋ
ಸುಮನಸ ಗಣಕೆ ಲೇಪನವಿಲ್ಲ ಅವರ ಆ
ತುಮದೊಳಗಿದ್ದಖಿಳರಲ್ಲಿ ಐಕ್ಯ
ಕ್ರಮಗೆಡುವರು ಒಮ್ಮೆ ಇದರ ಪ್ರಾಚುರ್ಯದಿಂದ
ತಮತಮ್ಮ ಸ್ವಾಭಾವಿಕ ನಡತೆಯಲ್ಲಿ
ಅಮಮ ಹರಿ ಪರಮ ಶಕ್ತಿ ಸೃಷ್ಟಾ ಉಪ
ತಮದಲ್ಲಿ ಸರ್ವರನ್ನು ಉದರೊಳಗೆ ತರ
ತಮದಿಂದ ಪೊಂದಿಟ್ಟು ಕೊಂಡಿಪ್ಪ ಉ
ತ್ತಮ ಶ್ಲೋಕ ಪೂರ್ಣನ್ನ ಚರಿತೆ ಎಂತೊ
ಮಮತಾ ರಹಿತಾ ಪರಾಯು ಆರಂಭಿಸಿ
ನಮಿಪಾ ಜನರು ಇತ್ತ ಭೋಗ್ಯ ವಸ್ತು
ಕ್ರಮದಲಿ ಆವಾವ ತತ್ವಾತ್ಮಕ ರಸಂಗಳು
ಸಮಸ್ತ ಜೀವಿಗಳಿಗೆ ಪಿಕ ಮಾಳ್ಪ
ಕಮಲೇಶ ಶುಭರಸ ಸವಿದುಂಬೋದು ನಿಶ್ಚಯವು
ಅಮಿತ ವಿಜ್ಞಾನ ಪೂರ್ಣ ಸ್ವರಮಣನು
ಕ್ರಿಮಿ ಮೊದಲಾದ ಚೇತನಕೆ ಉಪಜೀವ್ಯ ಆ
ಕ್ರಮಕೆ ಭಗವಂತನಿಗೆ ಆಗುವುದೇನೊ
ಭ್ರಮಣನಲ್ಲವೊ ಸ್ವಾಮಿ ಭಿನ್ನಾಂಶಿ ಅಂಶಕೆ ಸಂ
ಗಮ ಮಾಡಿಸುವ ಒಂದೇ ಜೀವರನ್ನು
ನಮೊ ನಮೊ ನಮೊ ಎಂದು ಆದ್ಯಂತ ತಿಳಿದ ನರಗೆ
ಸಮವೃತ್ತಿ ಭೀತಿ ಇಲ್ಲ ಎಲ್ಲಿದ್ದರೂ
ಹಿಮಕರ ವರ್ಣ ವಿಜಯ ವಿಠ್ಠಲನನು
ಪಮನೆಂದರ್ಪಿಸ ಕೈವಲ್ಯಾ ಸರ್ವದಾ ಕೈಕೊಂಬಾ ೧
ಮಟ್ಟತಾಳ
ಅರ್ಪಿಸಲಿಬೇಕು ಅಧಿಕಾರ ಭೇದದಲಿ
ಸರ್ಪಿ ಮೊದಲಾದ ನಾನಾ ವಸ್ತುಗಳಿಂದ
ದರ್ಪತನವೆ ಬಿಟ್ಟು ಧರ್ಮ ಮಾರ್ಗದಲಿ ಕಂ
ದರ್ಪ ಪಿತನೆ ಸರ್ವ ವ್ಯಾಪ್ಯ ವ್ಯಾಪಕನೆಂದು
ದರ್ಪಣದೊಳು ಬಿಂಬನೋಳ್ಪ ತೆರದಂತೆ
ಸರ್ಪ ಭೂಷಣ ತತ್ವದಲ್ಲಿ ಇದ್ದದ್ದೆ ಗ್ರಹಿಸು
ದರ್ಪ ಜನರ ವೈರಿ ವಿಜಯ ವಿಠ್ಠಲರೇಯಾ
ಅರ್ಪಿತ ಕೈಕೊಂಬಾ ಭಕುತಿ ಮಾತ್ರಕ ಒಲಿದು ೨
ತ್ರಿವಿಡಿತಾಳ
ಒಂದೊಂದು ಪದಾರ್ಥಕ್ಕೆ ಒಬ್ಬೊಬ್ಬ ಅಭಿಮಾನಿಗಳು
ವೃಂದಾರಕ ಜನ ಉಂಟು ಅದಕೆ
ಒಂದೊಂದು ಭಗವದ್ರೂಪಗಳಲ್ಲಿ ಇಪ್ಪವು
ಕುಂದದಲೆ ತಿಳಿದು ಕೊಂಡಾಡುವುದು
ನಂದವಾಹದು ಜನಕೆ ಅನ್ನಪಾಯಸದಲ್ಲಿ
ಚಂದ್ರ ಭಾರತಿ ಕೇಶವ ನಾರಾಯಣ
ಸಂದೋರು ಭಕ್ಷ ಘೃತ ಕ್ಷೀರದಲ್ಲಿ ಅರ
ವಿಂದ ಬಾಂಧವ ಲಕುಮಿ ವಾಣಿಯಲ್ಲಿ
ನಿಂದಿಹ ಮಾಧವ ಗೋವಿಂದ ವಿಷ್ಣು ಬಲು
ಅಂದ ಮಂಡಿಗೆ ಬೆಣ್ಣೆ ದಧಿ ಸೂಪಕೆ
ಒಂದೊಂದಿರಾ ಮೌಳಿ ವಾಯು ಚಂದ್ರವರುಣಾ
ವಿಂದ್ರ ಮುಧುರಿಪು ಕ್ರಮಾತು ಶ್ರೀಧರಾ
ಮುಂದ ಪತ್ರ ಫಲ ಶಾಖಾ ಆಮ್ಲ ಅನಾಮ್ಲಕ್ಕೆ
ಪೊಂದಿ ಮಿತ್ರ ಶೇಷ ಗೌರಿ ಗೌರೀಶರು
ಇಂದ್ರೀಶ ಅಬ್ಬನಾಭದಾಮೋದರ ಗುಣ
ಸಾಂದ್ರ ಸಂಕರುಷಣ ಮೂರ್ತಿ ಎನ್ನು
ಇಂದ್ರ ಯಮ ವಾಸುದೇವ ಪ್ರದ್ಯುಮ್ನ ಆ
ನಂದ ಅನಿರುದ್ಧನು ಸಕ್ಕರೆ ಬೆಲ್ಲಾ
ಛಂದ ಉಪಸ್ಕರ ಕಟುಗಳಿಗೆ ಇವರೆನ್ನು
ವಂದಿಸುವುದು ಈ ಪರಿ ತಿಳಿದೂ
ಗಂದುಗ್ರ ಯಾಲಕ್ಕಿ ಸಾಸಿವಿ ಮತ್ತೆ ಶ್ರೀ

ತಿರುಪತಿಯ ವೆಂಕಟೇಶನ ಬಿಂಬರೂಪ

೬೬. ತಿರುಪತಿ
ಧ್ರುವತಾಳ
ಸಮ್ಮುಖನಾಗು ಗಿರಿಯ ತಿಮ್ಮ ನಾತುಮ್ಮ ಪುರುಷೋ |
ತುಮ್ಮ ಆ ಮಹಾಮಹಿಮಾ ರಮ್ಮೆಯರಸ ಸರ್ವೋ |
ತುಮ್ಮ ಅಂತರಾತುಮ್ಮ ಬೊಮ್ಮಾಜನಕ ಪರಮಾ |
ತುಮ್ಮ ರೇವತಿ ರಮಣ ತಮ್ಮ ದೇವೋ |
ತುಮ್ಮ ಜ್ಞಾನಾತುಮ್ಮ ವೈಷಮ್ಯ ಇಲ್ಲದ ಪರ |
ಬೊಮ್ಮ ರಮ್ಮೆನುತಾ ಅನುಪಮ್ಮಚರಿತಾನಮಿತ |
ಸಮ್ಮಂಧ ಸರ್ವದಾಗಮ್ಯ ಹಮ್ಮಿನ ದೈವ |
ಖಮ್ಮಹಿಯೊಳಗೆ ಆಹಂಮತಿಯವ ನಾನೆ |
ದಮ್ಮಯ್ಯಾ ಇಮ್ಮಯ್ಯಾ ಲಾಲಿಸು ನಮ್ಮಯ್ಯಾ |
ನಿಮ್ಮವನಾಗಿ ನಿನಗೆ ನಮ್ಮೊನಮೊ ಎಂಬೆ |
ಹಮ್ಮು ಭಕ್ತರ ಕೂಡಾ ಸಮ್ಮಂಧಾವಲ್ಲವೊ |
ಹೆಮ್ಮೆ ಇಂದಲಿ ನಿನ್ನ ನೆಮ್ಮಿದೆ ನೇಮದಲಿ |
ಅಮ್ಮಾಲಾ ವನಮಾಲಾ ವಿಜಯವಿಠಲ ಎನ್ನ |
ಮಮ್ಮುಳಿಕೆ ಹರಿಸು ಅಮೃತಾ ದಾರಿ ತೋರೂ ೧
ಮಟ್ಟತಾಳ
ಪಂಚನಾಡಿಯೊಳಿಪ್ಪ ಪಂಚಮೂರುತಿ ದೇವಾ |
ಪಂಚಭೂತದ ಪ್ರಪಂಚವುಳ್ಳವನಯ್ಯಾ |
ಪಂಚಪರ್ವದಲ್ಲಿ ಪಂಚೈವರ ಕೂಡ |
ವಂಚನೆ ಇಂದಲ್ಲಿ ಚಂಚಲಮನದಿಂದ |
ಹಿಂಚಮುಂಚ ತಿಳಿಯೆ |
ಪಾಂಚಜನ್ಯಪಾಣಿ ವಿಜಯವಿಠಲನೆ ವಿ |
ರಿಂಚಿ ದೇವತೆಗಳ ವಂಚಿಸಿದ ದೈವ ೨
ರೂಪಕತಾಳ
ಷೋಡಶೋಪಚಾರ ಮಾಡಲಿ ಬಲ್ಲೆನೆ |
ಮೂಢಾನು ನಾನು ಈ ನಾಡಿನೊಳಗೆಲ್ಲಾ |
ಕಾಡಿ ಬೇಡುವೆನೆಂಬ ಹೇಡಿತನವಲ್ಲದೆ |
ನಾಡಿವಂದಾದರು ಬಾಡಿಬತ್ತದೆ ಮನ |
ಹಾಡಿಪಾಡಿ ನಿನ್ನ ನೋಡಿ ಅರ್ಥಿಯಿಂದ |
ಲಾಡಿ ಕೊಂಡಾಡಿ ಕೂಡಾಡಲಿಲ್ಲ |
ಗೋಡೆ ಸಂಗಡ ಸರಸವಾಡಿದಾರಾ ಗೋಡೆ |
ನೋಡಿ ಹರುಷದಿಂದಲಾಡುವದೇ ಮಾತು |
ಆಡಲೇನೂ ನಿನಗೆ ಈಡಿಲ್ಲಾದ ಮಹಿಮ |
ಬೀಡಿನೊಳಗೆ ಈಗ ರೂಢಾತನವೆನೊ |
ಗೂಢ ಕರುಣಿರಂಗ ವಿಜಯವಿಠಲ ಇತ್ತಾ |
ಮಾಡು ಮೊಗವನು ಗಾಡಿಕಾರ ದೈವಾ ೩
ಝಂಪೆತಾಳ
ದೀಪಕ್ಕೆ ನೆಳಲುಂಟೆ ನಿನ್ನ ಪರಿಚಾರಕರಿಗೆ |
ಪಾಪಗಳುಂಟೆನೊ ಪರಮಪುರುಷ |
ಕೋಪತಾಪಗಳಿಂದ ನಾನಿದ್ದರೆ ನಿನ್ನ |
ಶ್ರೀಪಾದನೆನಸೀದ ಜನರಿಗೆಲ್ಲಾ |
ಆಪಾರ ಜನುಮದ ದುಷ್ಕರ್ಮಗಳು ಇರಲು |
ಪೋಪದೆ ಇರಬಲ್ಲವೇನೊ ಪೇಳೊ |
ಶ್ರೀಪತಿ ನಾನೊಬ್ಬ ಮಾಡಿದ ದೋಷಕ್ಕೆ |
ನೀ ಪರಿಹರ ಕಾಣಲಾಪದೆ ಸರಿಯೈಯ್ಯಾ |
ಆಪತ್ತಿಗಾಗುವ ಶಕ್ತನಿಂತಾದಡೆ |
ತಾಪಕಳವರಾರು ಪತಿತಾರೊಡಿಯಾ |
ಗೋಪಾಲರೊಡನಿಪ್ಪ ವಿಜಯವಿಠಲರೇಯಾ |
ಕಾಪಾಡುವ ದೈವ ಎನ್ನ ಅನುದಿನ ಬಿಡದೆ ೪
ತ್ರಿವಿಡಿತಾಳ
ಕರಗಿಸಿದ ಬೆಣ್ಣೆ ಘೃತವಾದ ಮ್ಯಾಲೆ |
ತಿರಿಗಿ ನವನೀತನೆನಿಸುವಾದೆ |
ಹರಿ ನಿನ್ನ ದಾಸರ ಚರಣಯುಗಳವನ್ನು |
ನೆರೆನಂಬಿದ ಮ್ಯಾಲೆ ನರರೊಳು ಗಣನೆ |
ಅರಮರೆಮಾಡದೆ ಎನ್ನಕಡಿಗೆ ಮೊಗ |
ತಿರುಹು ಸುಂದ[ರ]ಮೂರ್ತಿ ತಿರ್ಮಲೇಶ |
ಅರಿಗಳದಲ್ಲಣ ವಿಜಯವಿಠಲ ನೀನೆ |
ಕರುಣ ಮಾಡದಿರೆ ಮುಂದೆ ಸಾಕುವನ್ಯಾರೊ ೫
ಅಟ್ಟತಾಳ
ಭಕುತ ಪ್ರಲ್ಹಾದ ನಿನಗೇನು ತಂದಿತ್ತ |
ಶುಕಮುನಿ ನಿನಗೇನು ಉಪಕಾರ ಮಾಡಿದ |
ಸುಖಬಡಿಸಿದನೆ ನಾರದ ಬಂದು ಅನುದಿನ |
ರುಕುಮಾಂಗದ ತೃಪ್ತಿ ಬಡಿಸೀದ ನಿನಗೇನೂ |
ಶಿಖರವೆತ್ತಿದನೆನೊ ಲಂಕಾಧೀಶನು ಬಂದು |
ಮಖ ಮಾಡೋದಕ್ಕೆ ಧನವಿತ್ತಾನೆ ನರಪುಂಡ |
ರೀಕನು ನಿನಗೆ ಏರುವ ರಥ ವಿತ್ತನೆ |
ಭಕುತಿಗೆ ಘಳಿಸಿ ಹಾಕಿದನೇನೊ ಧ್ರುವ ಶೌ |
ನಕ ಮಿಗಿಲಾದವರೇನು ಮಾಡಿದರು |
ಭಕುತಿ ಇದ್ದನಿತು ಭಜಿಸಿದಲ್ಲದೆ |
ಅಕಟ ನಾನೊಬ್ಬನೆ ನಿನಗಾಗದವನೆ |
ಲಕುಮಿರಮಣ ನಮ್ಮ ವಿಜಯವಿಠಲರೇಯ |
ಮುಖವಾ ತೋರು ಎನ್ನ ಭಕುತಿ ಇದ್ದನಿತೂ ೬
ಆದಿತಾಳ
ಒಳ್ಳಿತಾದರೆ ಏನು ಇದಕೆ ಕಡೆಯಾಗುವುದೆ |
ಬಲುಕಾಲಾದಲ್ಲಿ ಎನಗೆ ನಿನಿಗೆ ಸಂಬಂಧವೊ |
ಮಿಳಿತವಾಗಿರಲಾಗಿ ನೀ ಪೋಗುವದು ಎತ್ತ |
ತಿಳಿಯ ಪೇಳುವುದು ಕೈಯಾ ಮುಗಿದು ಬಿನ್ನೈಸುವೆ |
ಪೊಳೆವ ವಸ್ತಕೆಯಲ್ಲಿ ಎಲ್ಲಿಗಾದರೆ ಒಂದು |
ಹುಳುಕು ಇದ್ದರೆ ನೋಡಿ ತೆಗೆದು ಬಿಸಾಟು ಅದ |
ಮೆಲುವನಲ್ಲದೆ ಬಿಡದೆ ವಿವೇಕನಾದವನು |
ಕೆಳಕೆ ಈಡ್ಯಾಡನೊ ಕೇಳೊ ದೇವ |
ಹುಳುಕು ಕರ್ಮಗಳು ಎನ್ನಲ್ಲಿ ಅಪಾರವುಂಟು |
ನೆಲೆಯ ಬಲ್ಲ ಮಹಿಮಾ ತೆಗಿದು ಕಳಿಯೊ |
ಸುಳಿವ ಸುಲಭವಾಗಿ ವಿಜಯವಿಠಲ ಭಕ್ತಾ |
ವಳಿಗೆ ಸೂರೆ ಕಾಣೊ ತಪ್ಪದೆ ಕೆಲಕಾಲ ೭
ಜತೆ
ಇತ್ತಮುನ್ನಾ ಎನ್ನೊಳಿರಸಲ್ಲದಾದಾಡೆ |
ಚಿತ್ತಕ್ಕೆ ಬಂದಂತೆ ಮಾಡೊ ವಿಜಯವಿಠಲ ೮

ಸರ್ವಕರ್ಮ ಸಮರ್ಪಣೆಯನ್ನು ಶ್ರೀಹರಿಗೆ

೧೨೨
ಧ್ರುವತಾಳ
ಸರ್ವಸಮರ್ಪಣೆ ಮಾಡು ಮುಕ್ತಿಯಾ ಬೇಡು
ಸರ್ವಾದಿಷ್ಠಾನ ತ್ರಿವಿಧಾ ತಿಳಿದು
ಸರ್ವಜ್ಞ ಹರಿ ಎಂದು ತ್ರಿಕರ್ಣಾವಾಗಿ ನುಡಿದು
ಗೀರ್ವಣರೊಡತಿ ಶ್ರೀ ಲಕುಮಿವಿಡಿದೂ
ಈರ್ವಾಗೆ ಜನರನ್ನು ತಾರತಮ್ಯಾದಿ ಗುಣಿಸಿ
ಊರ್ವಿಯೊಳಗೆ ನಿ:ಸಂಗನಾಗೊ
ಸರ್ವದಾ ಮುಖ್ಯ ಭಕ್ತಿಯಲ್ಲಿ ದೃಢನಾಗು
ಸರ್ವಜ್ಞರಾಯರ ಮತದಲ್ಲಿದ್ದೂ
ದರ್ವಿಯಂದದಿ ಸರ್ವ ವಿಷಯಂಗಳೊಳಗಿರು
ನಿರ್ವಾಹಕರ್ತನಿಗೆ ಮನ ಒಪ್ಪಿಸಿ
ಗರ್ವಾರಹಿತವಾದ ಸಾಧನದಲ್ಲಿ ನಡೆದು
ಪೂರ್ವೋತ್ತರ ಜ್ಞಾನ ವಿಚಾರಿಸಿ
ಓರ್ವನಿಂದಲೆ ಎಲ್ಲಾ ಸುಖದು:ಖ ಒಪ್ಪೊದೆಂದು
ನಿವ್ರ್ಯಾಜ ಗುಣದಲಿ ತಿರುಗುವುದೂ
ನಿರ್ವಾಣ ಬೇಡಸಲ್ಲ ಈ ಪರಿ ಇಪ್ಪವಂಗೆ
ದೂರ್ವಿ ಏರಿಸೇ ಹರಿ ಒಡನಾಡುವಾ
ಪರ್ವತ ಮೊದಲಾದ ತತ್ಪದಾರ್ಥದಲ್ಲೀ
ಸರ್ವೇಶ ಅದರಂತೆ ಇಪ್ಪನೆಂದೂ
ಸರ್ವೋತ್ರ‍ಕಷ್ಟ ಮೂರುತಿ ವಿಜಯ ವಿಠ್ಠಲರೇಯಾ
ದುರ್ವಾದಿಗಳ ಗಂಡಾ ಸತತೋದ್ದಂಡಾ ೧
ಮಟ್ಟತಾಳ
ನಾನೆ ಸರ್ವಕರ್ತಾನೆಂದೆಂಬುವ ತಮಸಿ
ನಾನೆ ಹರಿ ಒಡನೇ ಮಾಳ್ಪನೆಂಬವ ಬದ್ದಾ
ನಾನು ಪಾಪಕರ್ತಾ ಪುಣ್ಯಕ್ಕೆ ಹರಿಯೆಂದು
ಈ ನುಡಿನುಡಿವವನು ಸತ್ವಗುಣದವನು
ನಾನ್ಯಾತಕೆ ಸಲ್ಲಾ ಹರಿ ಎನ್ನಿಂದಲ್ಲೀ
ನಾನಾತ್ಮಗಳಿಂದ ಬಗೆ ಬಗೆ ವೈಷಮ್ಯ
ಏನೇನು ಮಾಡಿಸುವ ಮಾಡುವನದರಂತೆ
ಹೀನ ಲೇಸುಗಳಲ್ಲಿ ಹಿತಾಹಿತದಲ್ಲಿ
ಮಾಣದೆ ಮರಿಯದಲೆ ಎಂದವ ನಿರ್ಗುಣನು
ಜ್ಞಾನವಂತನಾಗಿ ಸರ್ವ ಸಮರ್ಪಣೆ
ಸ್ವಾನುಭವಕೆ ನಿತ್ಯಾ ತಂದುಕೊಂಬುವ ಮನಕೆ
ಅನಂತ ರವಿತೇಜಾ ವಿಜಯ ವಿಠ್ಠಲನ್ನಾ
ಕಾಣುತ ತಿರಗೂವಾ ನಿರ್ದೋಷ ಎನುತಾ ೨
ತ್ರಿವಿಡಿತಾಳ
ಹಿಟ್ಟುಗಾಳಿಗೆ ತೂರಿ ಮರಳೆ ಕೂಡಿಸಿಕೊಂಡು
ರೊಟ್ಟಿಯ ಸುಟ್ಟುಕೊಂಡು ಉಂಬೇನೆಂದು
ಅಟ್ಟಹಾಸವ ಮಾಡಿ ದಿನಪ್ರತಿ ದಿನದಲ್ಲಿ
ಕಷ್ಟವ ಬಟ್ಟದರಿಂದ ಫಲವಾಹುದೇ
ಸೃಷ್ಟಿಯೊಳಗೆ ಮನುಜಾ ಸರ್ವ ಬಗೆಯಿಂದ
ಶಿಷ್ಟನಾಗಿ ಇದ್ದು ಆಚರವಾ
ಎಷ್ಟು ಮಾಡಿದರೇನು ನಿರ್ಗುಣನಾಗಿ ಮನ
ಮುಟ್ಟಿ ಸರ್ವಾರ್ಪಿತವೆನ್ನದನಕಾ
ಕೃಷ್ಣಾ ಮೆಚ್ಚನು ಕಾಣೊ ಗತಿಗೆ ಸಾಧನವಲ್ಲಾ
ಇಷ್ಟರೊಳಗೆ ಆವ ಸುತ್ತುತಿಪ್ಪಾ
ಕಟ್ಟಕಡಿಗೆ ಇದೆ ಮುಕ್ತಿಯೋಗ್ಯಕೆ ಜ್ಞಾನಾ
ಪುಟ್ಟಾದಲೇ ಬಿಂಬದರ್ಶನವಾಗದೂ
ಎಟ್ಟಿಮಾನವರಿಗೆ ಒರದೊರದು ಕೇವಲಾ
ಗುಟ್ಟು ಪೇಳಿದರಿಂದ ಏನಾಹುದೂ
ಧಿಟ್ಟಾ ದೈವಗಳರಸಾ ವಿಜಯ ವಿಠ್ಠಲ ಜಗ
ಜಟ್ಟಿಗೆ ಪಾಪಪುಣ್ಯವ ಲೇಪನವೇನೊ ೩
ಅಟ್ಟತಾಳ
ಮೂಜ್ಜಗದೊಳು ಹರಿ ನಿಬಿಡಕೃತನಾಗಿ
ತಜ್ಜೀವಿಗಳಂತೆ ವ್ಯಾಪಾರ ಮಾಡುವಾ
ನಿರ್ಜರರ್ವಿಡಿದು ತೃಣಾಂತ ನೋಡಲಾಗಿ
ಪೂಜ್ಯ ಭಾವವೆ ಪ್ರತ್ಯೇಕಾವಾಗಿಪ್ಪೋದು
ದುರ್ಜನಹರ ಹರಿಯಾ ಇನಿತು ಭಜನೆ ಕೆಲವು
ಸಜ್ಜನರಿಂದಲಿ ಕೈ ಕೊಳುತಲಿಪ್ಪಾ
ವಜ್ರಕ್ಕೆ ಹರಳಿನಾ ವ್ಯಥಿ ಆದೂದೆಂದು ಮ
ನುಜ್ಜರು ಪೇಳಿದಂತಾಗೋದು ಪುಸಿ ಎಲ್ಲ
ಎಜ್ಜಾ ಮಾಡಿದರಾಗೆ ವೇದನೆಯುಂಟೆ
ಅಬ್ಜಾ ಪೋಣಿಪದಕ್ಕೆ ಗಾಢರ ತರಸಲ್ಲಾ
ಅಬ್ಜಾ ಭವನಯ್ಯಾ ವಿಜಯ ವಿಠ್ಠಲರೇಯಾ
ಲಜ್ಜೆ ಬಿಡದವಗೆ ಲಂಪಟಾ ಕಟ್ಟುವಾ ೪
ಆದಿತಾಳ
ಬಂದರೆ ಬರುವೆನೆಂದು ಇದೇ ಆರಂಭಿಸಿ
ಒಂದೊಂದು ಮಾತುಗಳು ಯಾವಜ್ಜೀವ ಪರಿಯಂತ
ತಂದುಕೊಳ್ಳಲಿ ಬೇಕು ತನ್ನ ಮನಸಿಗೆ ಬಿಡದಾನು
ಸಂಧಾನ ಆವಲ್ಲಿ ಪೋದಲ್ಲಿ ಇದ್ದಲ್ಲಿ
ನಂದವಾಗಲಿ ಅತಿ ಕ್ಲೇಶವಾಗಲಿ ಆ
ನಂದವಾಗಲಿ ಲಾಭ ನಷ್ಟವಾಗಲಿ ಗೋ
ವಿಂದನೆ ನಿನ್ನ ಪ್ರೀತಿ ಎನಬೇಕು ನಗಬೇಕು
ಹಿಂದೆ ಮುಂದೆ ಸಂಸಾರವೆಂದೆಂಬ
ಸಂದಣಿಯೊಳಗಿರೆ ನಿರ್ಭಯಾದವನಿವಾ
ಸಂದೇಹ ಪೋಗಾಡುವ ವಿಜಯ ವಿಠ್ಠಲರೇಯಾ
ಎಂದೆಂದಿಗೆ ತನ್ನ ಭಕ್ತಾರ ಪೊರೆವಾ ೫
ಜತೆ
ಸಾಧಾರಣ ಸಾಧಾರಣ ಹರಿಗೆ ಒಪ್ಪಿಸಿ ಕೊಟ್ಟು
ಮೋದಾದಲ್ಲಿರು ವಿಜಯ ವಿಠ್ಠಲನ್ನ ನೆರೆನಂಬೀ ೬

ಪುಣ್ಯನದಿಗಳ ಸ್ನಾನ ದಾನ, ಅರ್ಚನೆಗಳಿಗಿಂತಲೂ

೧೨೩
ಧ್ರುವತಾಳ
ಸಾಧನವೆಂಬೊದಿದೆ ಜನ್ಮದಲ್ಲಿಯಲ್ಲವೆ
ನಿದಾನದಿಂದಲಿ ತಿಳಿಯಲೊ ಮನವೆ
ಆದಾನಾದ ಕರ್ತ ನಾರಾಯಣನ ದಿವ್ಯ
ಪಾದದಲ್ಲಿದ್ದ ಗುಣವೆ ಕೇಳಿ ಆ
ರಾಧನೆ ಮಾಳ್ಪ ಉಪಾಯವೆಲ್ಲ
ನೀದಾನ ಮೊದಲಾದ ಕಾಯಬಂದಾಗ ಸಂ
ಪಾದನೆ ಪುಣ್ಯಉಂಟೆ ಇನಿತಾದರು
ಓದನಗೋಸುಗ ವಿಚಿತ್ರ ತತ್ವಂಗಳು
ಕ್ರೋಧ ನರರ ಬಳಿಗೆ ಪೋಗಿ ಕೊಂಡಾಡಿ ದುರ
ರಾ ಧನ ತಂದು ಕಾಲವನ್ನು ಕಳೆವೆ ಇದ
ನಾದರು ಕೇಳು ಸಿದ್ದ ವಿಚಾರ ಪೂರ್ಣ
ಬೋಧರ ಮತವ ಸಾರಿ ಭಕುತಿಯಿಂದ
ಭೂಧನ ಹೇಮರಜತ ಉಂಟಾಗಿದ್ದರೆ ಭೂಮಿ
ಬುಧರ ನೋಡಿ ಸಂತೋಷಬಡಿಸು
ನೀಧನ ವಿರಹಿತನಾದರೆ ಇಲ್ಲವೆಂದು
ರೋಧ ಹಚ್ಚಿಕೊಂಡು ಕೆಡಲಿಬೇಡ
ಬಾ ಧನವೆಂದರೆ ಮುಂದೆ ಬೀಳೋದೆ ಅಪ
ರಾಧ ನಡತಿಯಿಂದ ಭಾಗ್ಯನಾಗಿದ್ದ ಸು
ಯೋಧನ ಸರ್ವರಾಜ್ಯವಾಳಿದನ್ನ ನೋಡು
ಆದ ನರಕಕ್ಕೆ ತೆರವಿಲ್ಲದೆಂದಿಗವ
ವೇದ ನಾನಾ ಪುರಾಣ ಇತಿಹಾಸ ವಚನ ಪ್ರ
ಸಾದನಾಗೆಂದು ಪೇಳುತಿವೆಕೋ ಕೇಳೊ
ಭೂದಾನ ಬೇಡಿದ ವಿಜಯ ವಿಠ್ಠಲಮಧು
ಸೂದನನಿರುತಿರೆ ಅನ್ಯಹಂಬಲವೇ ೧
ಮಟ್ಟತಾಳ
ಕಲಿಯುಗದೊಳು ಕರ್ಮಂಗಳು ಬಲುಪರಿಯುಂಟು
ತಿಳಿದು ಮಾಡುವನ್ಯಾರು ನೆಲೆಯ ಬಲ್ಲೆನೆಂದು
ಹಲವು ಬಗೆಯಿಂದ ಘಳಿಗೆ ಬಿಡದೆ ಕರ್ಮಾ
ವಳಿಗಳು ಮಾಡಲದರೊಳಗೆ ದುರಿತವಕ್ಕು
ಕಲಿಕಾಲಾ ವೆಗ್ಗಳೆಯರಿಗೆ ದೂರ ಜಲನಿಧಿಯೊಳು ಪೊಕ್ಕು
ನೆಲೆಯ ತಂದವರುಂಟೆ ಬಿಳಲದಿರು ವ್ಯರ್ಥ
ಕಲಿತಾಪ ಪರಿಹರ ವಿಜಯ ವಿಠ್ಠಲರೇಯನ
ಒಲಿಸಿ ಭಜಿಪುದಕ್ಕೆ ಸುಲಭ ಮಾರ್ಗವೆ ಉಂಟು ೨
ತ್ರಿವಿಡಿತಾಳ
ಬಲು ಸುಲಭವಾಗಿದೆ ನೋಳ್ಪರಿಗೆ
ಛಳಿ ಗಾಳಿ ಮಳೆ ಸಿಡಿಲು ಬಂದರೆ ಬಿಡದಲ್ಲ
ಹಳೆಯದಾಯಿತೆಂದು ಉದಾಸೀನ ಮಾಡಿ
ಕಳೆವುದಲ್ಲ ತಿರುಗಿ ನೋಡುವುದಲ್ಲ
ಬೆಲೆಗೆ ತರುವುದಲ್ಲ ಭಯಕೆ ಹುಳುವುದಲ್ಲ
ಬಲವಂತರಿಗೆ ಕೊಟ್ಟು ಮಾರಿ ಬರುವುದಲ್ಲ
ಕೆಲವು ದಿವಸಯಿದ್ದು ಓಡಿ ಪೋಗುವುದಲ್ಲ
ಬಳಲಿಕೆಯಾಗಿ ಸಾಕೆಂಬೊದಲ್ಲ
ಫಲವಾದರೂ ವೆಗ್ಗಳವಾಗಿ ಬರುತಿದೆ
ಹಲವು ಜನ್ಮದ ಪಾಪ ಪರ್ವತಕೆ
ಕುಲಿಶವಾಗಿಪ್ಪದು ನಂಬಿದ ಭಜಕಕ
ಕುಲಕೋಟಿ ಉದ್ಧಾರ ಎಲೊ ಮನವೆ
ಸಲೆನಂಬು ವಿಜಯ ವಿಠ್ಠಲನ ನಾಮ
ಘಳಿಗೆ ನೆನೆಯೆ ತನ್ನ ಬಳಿಯಲ್ಲೆ ವೈಕುಂಠ ೩
ಅಟ್ಟತಾಳ
ಶತಕೋಟಿ ಜನ್ಮವು ಸತತ ಮಜ್ಜನಾದಿ
ವ್ರತಗಳ ಮಾಡಲು ಗತಿಗೆ ಸಾಧನವಲ್ಲ
ಹಿತವಾಗಿ ಇಪ್ಪದು ಅಮೃತ ಕುಡಿದಂತೆ ಶ್ರೀ
ಪತಿಯ ಮಂಗಳ ನಾಮ ಮತಿಯಲ್ಲಿ ಸ್ಮರಿಸಿ ಶಾ
ಶ್ವತ ವೆಸಗಿದ ಪಾಪ ಪತನವಾಗುವುದು ಸಂ
ತತಿ ಸಹಿತಕೆ ವೇಗ ಶತ ಪತ್ರ
ನೇತ್ರ ಶ್ರೀ ವಿಜಯ ವಿಠ್ಠಲ ಸಾ
ರಥಿಯಾಗುವನು ತ್ವರಿತದಲ್ಲಿ ಬಂದು ೪
ಆದಿತಾಳ
ಹರಿ ನಾಮದ ಮಹಿಮೆಯ ಅರಿದವನಾರು ಮನವೆ
ಮರಳಿ ಸಂಸಾರವೆಂಬೊ ತರುವಿನ ಬೇರು ಸರ್ವ
ಧರೆ ಗಗನ ಪಾತಾಳ ಸುತ್ತಲು ಭೇದಿಸಿದರೆ
ಮರದೊಮ್ಮೆ ನೆನದರೆ ಎಲ್ಲಿದ್ದರೂ ಬಂದು
ಭರದಿಂದ ಕಿತ್ತಿ ಭವದ ತರುವಿನ ಪೆಸರನ್ನು
ಇರಗೊಡದಂತೆ ಮಾಡಿ ಮುಂದೆ ಸಾಕುತಿಪ್ಪದು
ಹರಿನಾಮ ಹರಿನಾಮ ದುರಿತರಾಸಿಗೆ ಭೀಮ
ಹರಿನಾಮ ಒಂದಕ್ಕೆ ಅನಂತ ಬಗೆ ಕರ್ಮ
ಸರಿಬಾರದವು ಕಾಣೊ ಇದಕೆ ಸಂಶಯವ್ಯಾಕೆ
ಹರಿನಾಮವೆ ತೊರೆದು ಕರ್ಮಮಾಡಲು ದೋಷ
ಕರಗದು ಹೆಮ್ಮೆಟ್ಟಿ ಪೋಗದು
ಹರಿನಾಮದಲ್ಲಿ ಪ್ರೀತಿ ಇಟ್ಟು ಕರ್ಮವ
ತೊರೆದರೆ ಪಾಪಲೇಶವಿಲ್ಲ ಫಲವಕ್ಕು
ಸುರಗುರು ವಿಜಯ ವಿಠ್ಠಲರೇಯನ
ಸ್ಮರಿಸಿದ ಮನಜಂಗೆ ಸ್ಥಿರವೆನ್ನು ಜ್ಞಾನಭಕ್ತಿ ೫
ಜತೆ
ಮನವೆ ಈ ಜನುಮ ತಪ್ಪಿದ ಮೇಲೆ ಆವಸಾ
ಧನವು ನಿಶ್ಚಯವಿಲ್ಲ ವಿಜಯ ವಿಠ್ಠಲನ ಕಾಣೋ ೬

ಬಿಂಬಾಪರೋಕ್ಷಕ್ಕೆ ಅಗತ್ಯವಾದ ಸಾಧನೆಯ

೧೨೪
ಧ್ರುವತಾಳ
ಸಾಧನವೆಂಬೊದಿದೆ ಸಕಲ ಕಾಲದಲ್ಲಿ
ಆದರದಿಂದಲೆ ಕೇಳೋ ಎಲೋ ಜೀವವೆ
ಭೂದೇವ ದೇಹವಿನ್ನು ಬಾಹೋದೆ ದುರ್ಲಭ
ಮೇದಿನಿಯಲ್ಲಿ ಪುಟ್ಟಿ ಬಂದು ಪೂರ್ಣ
ಬೋಧರ ಮತದಲ್ಲಿ ಪೊಂದುವದೆ ನಿರ್ಜ
ರಾದಿಗಳಿಗೆ ಬಲು ದೂರ ಕಾಣೋ
ವೇದ ಭಾಗವತ ರಾಮಾಯಣ ಭಾರತ
ಓದುವ ಪುರಾಣ ಮಿಕ್ಕಾದದಲ್ಲಿ ಪಂಚ
ಭೇದ ಮಾರ್ಗವೆ ತಿಳಿದು ಕಂಡಮತಿಗೊಡದೆ
ಸಾಧಿಸುವ ಹರಿಹ ಪಾದ ದೃಡತರದಲ್ಲಿ
ಸಾಧನ ಮಾಡಿದರು ಸುಲಭದೊಳುಂಟು ಅ
ಗಾಧವಿಲ್ಲವೋ ಕಾಣೋ ತಿಳಿದ ಮೇಲೆ
ಪೋದ ದಿನಗಳಲ್ಲಿ ಮಾಡಿದ ಕರ್ಮ ಪುಣ್ಯ
ವಾದದ್ದು ಎನ್ನು ನಿಶ್ಚಲ ಗುಣದಲ್ಲಿ
ಖೇದಬಡದಿರು ವೈಕುಂಠ ನಗರಿಗೆ
ಹಾದಿಯಾಗುವುದೊ ಇಲ್ಲೆಂದು ನೀನು
ಆದಿಯಲ್ಲಿ ಹರಿ ಮಾಡಿದ ಕ್ಲಪ್ತಿಗೆ
ಬಾಧೆ ಬಾರದೆಂದು ಕಾಣೊ ಏನಾದರು
ನೀ ಧೈರ್ಯದಲ್ಲಿರು ಮಧ್ವದಾಸರು ನಿತ್ಯ
ವಾದ ತಮಸ್ಸಿನಲ್ಲಿಗೆ ದೂರರೆಂದು
ಕ್ರೋಧರಹಿತ ನಮ್ಮ ವಿಜಯ ವಿಠ್ಠಲರೇಯನ
ಪಾದವೇ ಕೇವಲ ನಂಬುನಂಬು ಬಿಡದೆ ೧
ಮಟ್ಟತಾಳ
ಭಗವನ್ನಿಷ್ಠೆಯಲ್ಲಿ ಭಾಗ್ಯವಂತನಾಗು
ಸಿಗದಲೆ ಸಂಚರಿಸು ಕಾಮಾದಿ ಬಲೆಯಲ್ಲಿ
ಅಗಲದಿರು ನೀನು ಉತ್ತಮ ಗುಣದಿಂದ
ಹಗಲಿರುಳು ಹರಿಯ ವ್ಯಾಪ್ತಿ ಬಗೆಯ ನೆನೆಸು
ಮಿಗಿಲಾಗಿ ವರ್ಣೋಚಿತ ಕರ್ಮವ ಚಿಂತಿಸು
ಚಿಗದಾಡಿದರೇನು ಕುಣಿದಾಡಿದರೇನು
ತ್ರಿಗುಣವ ಮನೆಮಾಡಿ ಅಂತರ್ಯಾಮಿಯಲ್ಲಿ
ನಗೆಮೊಗ ಉಳ್ಳ ಶ್ರೀ ಹರಿ ಮೂರ್ತಿ ಜೀ
ವಿಗಳ ಚೇಷ್ಟಿಗಳೆಲ್ಲ ನಡಿಸುವದಹುದೆಂದು
ಜಗದೊಳಗಾದ್ಯಂತ ಬಗೆಗಳ ಕೃಪೆ ತಿಳಿದು
ದುಗುಡ ಸಂತೋಷವನು ಹಚ್ಚಿಕೊಳ್ಳದಿರು
ಖಗವಾಹನ ನಮ್ಮ ವಿಜಯ ವಿಠ್ಠಲನ್ನ
ಅಗಣಿತ ಸೇವೆಯನು ತಿಳಿದುಕೊಂಡಾಡುವುದು ೨
ತ್ರಿವಿಡಿತಾಳ
ಒಂದು ಪ್ರಾಕೃತವಾದ ವಸ್ತುವಿನಲಿ ಸಂ
ಬಂಧವಾಗಿಪ್ಪದು ಚತುರವಿಂಶತಿ ತತ್ವ
ಮಂದಿಗಳು ತಮ್ಮ ಸತಿಯರೊಡನೆ ಬಿಡದೆ
ಮುಂದೆ ಈರಾರು ದ್ವಾದಶ ಜಡಗಳು
ಕುಂದದಲಿಪ್ಪವು ಇದೆ ಸಿದ್ದವೆಂಬೊಂದು
ನಂದ ಮೂರುತಿ ಲಕುಮಿ ನಾರಾಯಣ
ಒಂದಾಗಿ ಇಪ್ಪರು ಏನೆಂಬೆ ಇದೆ ಗುಣಿಸು
ಎಂದಿಗೆ ನಿನಗೆ ಪಾತಕವಾಗದು
ಕುಂದಣಕ್ಕೆ ಪುಟವೆ ವಿಜಯ ವಿಠ್ಠಲರೇಯನ
ಹೊಂದಿದ ನರರಿಗೆ ಪ್ರಥಕು ಪೂಜೆಗಳುಂಟೆ ೩
ಅಟ್ಟತಾಳ
ಅಡಿಗಳಿಡುವುದು ಕರವ ಬೀಸುವದು
ನುಡಿವುದು ನಾಲಿಗೆಯಿಂದಾಡೋದು ಓಡೋದು
ಎಡೆಯಲ್ಲಿ ಕುಳಿತು ತುತ್ತು ಎತ್ತಿ ಮೆಲುವೋದು
ಒಡಲ ತೃಪ್ತಿಯಾಗಿ ತೇಗೋದು ನಲಿವುದು
ಒಡನೆ ಕರ್ಣಗಳಿಂದ ಕೇಳುವ ಸಂಭ್ರಮ
ಕುಡುವ ಉದಕ ಮಿಕ್ಕಾದ ಚೇಷ್ಟೆಗಳೆಲ್ಲ
ಪೊಡವೀಶ ರಂಗನ ಆರಾಧನೆಯನ್ನು
ಅಡಿಗಡಿಗೆ ಇದೆ ಮರಿಯಾದೆ ಯೋಚಿಸು
ಬಡವರಾಧಾರಕೆ ವಿಜಯ ವಿಠ್ಠಲರೇಯ
ಕೆಡಗೊಡ ಸುಕೃತ ತೋರುವಧಿಕ ಮಾಡಿ ೪
ಆದಿತಾಳ
ಕೊಡಿಸುವ ಬೇಡಿಸುವ ಕೊಡಿಸಬೇಡಿಸನು
ಕೊಡಿಸುವ ಬೇಡಿಸನು ಕೊಡಿಸ ಬೇಡಿಸುವ
ಬಡಿವಾರ ದೀನತನ ದೃಢ ಚಂಚಲ ವೃತ್ತಿ
ನಡುಗುವುದು ನಿರ್ಭಯ ತಡೆಯದೆ ಈ ಬಗೆ
ಕಡೆ ಮೊದಲಿಲ್ಲದೆ ಬಿಡದೆ ಧ್ಯಾನಿಸಿದರೆ
ಜಡಮತಿಗಾದರು ಕಡುಜ್ಞಾನ ಪುಟ್ಟುವುದು
ಒಡಿಯರಂಗನ ಮಾಯ ಅಡಿಗಡಿಪ್ಪದು
ನುಡಿಗೆ ಒಲಿವ ನಮ್ಮ ವಿಜಯ ವಿಠ್ಠಲರೇಯ
ಕೊಡನು ತಾಮಸ ಬುದ್ಧಿ ಪಡಕೊಂಡ ಜ್ಞಾನಿಗಳಿಗೆ ೫
ಜತೆ
ವಿಧಿ ನಿಷೇಧಗಳೆರಡು ಕರ್ಮಕ್ಕೆ ಪ್ರೇರಕ
ವಿಧಿಪಿತ ವಿಜಯ ವಿಠ್ಠಲ ನೀನೆ ಸಾಧನಾ ೬

ನವವಿಧ ಭಕ್ತಿಗಳಲ್ಲಿ ಶ್ರವಣ ಭಕ್ತಿಯೂ ಒಂದು.

೧೨೫
ಧ್ರುವತಾಳ
ಸಾಧುಜನರ ಸಂಗಮಾಡು ಮನವೆ ಸಕಲ
ವೇದದಲ್ಲಿ ಸಾರಿಸಾರುತಿದೆಕೋ
ಆದಿಯಿಂದಲಿ ವಿಡಿದು ಇದ್ದ ದೇಹದ ಮೂಲ
ಛೇದಿಪ್ಪುದಕ್ಕೆ ಇದೆ ಬೀಜಕಾಣೊ
ಪಾದಾರ್ಧಕಾಲವಾಗೆ ಬಿಡತಕ್ಕದ್ದಲ್ಲ ಸಂ
ಪಾದಿಸು ಸಾಧಿಸು ಹೃದಯದಲ್ಲಿ
ಬೋಧಭರಿತನಾಗಿ ನಲಿದಾಡು ಕುಣಿದಾಡು
ಮೋದಾಂಬುಧಿ ಮಧ್ಯ ತೂಗ್ಯಾಡೆಲೋ
ಸಾಧನ ಒಂದು ಕಾಣೆ ಇದರ ವಿರಹಿತವಾಗಿ
ವೈದೀಕ ಮಾರ್ಗಕ್ಕಿಂತ ಸುಖವೇ ಇಲ್ಲ
ಆದಿತ್ಯಗಣದವರು ಭವಒಲ್ಲೆವೆಂದು ಬಲು
ರೋದನದಿಂದ ಹರಿಯ ತುತಿಪಾರಿದಕೊ
ಸಾಧಿಸಿ ತಿಳಿದು ನೋಡು ನಿನ್ನ ಪಾಡೇನು ಮೃತ್ಯು
ಹಾದಿ ನೋಡುತಲಿದೆ ದಿವಸ ಎಣಿಸಿ
ಈ ದೇಹ ದೃಢವಾಗಿ ಉಳ್ಳ ಪರಿಯಂತ ನಿನಗೆ
ಈ ದೇಹಿಗಳೆಲ್ಲ ಅನುಬಂಧಿಯೋ
ಮೇಧಾದಿ ಕರ್ಮಗಳು ಮಾಡಿದರೇನು ಬ್ರಹ್ಮ
ವಾದಿಗಳ ಸಂಗವಿಲ್ಲದನಕಾ
ಓದಿದಾ ಮಾನವನು ಮಾತಂಗಿ ಸಂಗ ಮಾಡಿ
ಮೇದಿನಿಯೊಳಗೆ ಇದ್ದಂತೆ ಕಾಣೊ
ತೇದ ಕರ್ಪುರಗಂಧ ಹಂದಿಗೆ ಪೂಸಿ ವಿ
ನೋದ ಮಾಡಿದಂತೆ ತಿಳಿಯದ ಕರ್ಮ
ಗೋದಿಯ ಬೀಸಿ ತಂದು ಅದಕೆ ಮದ್ಯವ ಹಾಕಿ
ನಾದಿದಂತೆ ಕಾಣೊ ನಾನಾಕುಶಲ
ಐದಕಾಲಕ್ಕೆ ಶ್ರೀ ಹರಿವಾಯು ವಿರಹಿತ
ವಾದ ಕರ್ಮಗಳೆಲ್ಲ ವ್ಯರ್ಥಕಾಣೊ
ಆದಿ ಮೂರುತಿ ನಮ್ಮ ವಿಜಯ ವಿಠ್ಠಲರೇಯನ
ಪಾದ ಪೊಂದುವುದಕ್ಕೆ ಸುಲಭಸಾಧನ ಕೇಳಿ ೧
ಮಟ್ಟತಾಳ
ಶ್ರವಣವೆ ಮಹಾಮುಖ್ಯಕರ್ಮ ಜ್ಞಾನಿಗಳಿಗೆ
ಶ್ರವಣವಿಲ್ಲದ ತನಕ ಆವದು ದೊರಕದು
ಶ್ರವಣದಿಂದಲಿ ಸತತ ಜ್ಞಾನ ಭಕುತಿ ವಿರಕುತಿ
ಶ್ರವಣವೆ ಸಕಲಕ್ಕೂ ಕಾರಣ ಕಾರಣವೋ
ಶ್ರವಣವೆ ಶ್ರೀ ಹರಿಯ ತಾತ್ವಿಕ ಪ್ರಸಾ
ದವನು ಕೊಟ್ಟು ಮುಕ್ತಿಗೆ ಐದಿಪುದೊ
ಶ್ರವಣವೆ ಮಂಗಳವೋ ಮೂರುಲೋಕಕ್ಕೆ ನಿತ್ಯ
ಶ್ರವಣ ಮಾಡಿದ ಮನುಜ ಸರ್ವದ ಪವಿತ್ರ
ಶ್ರವಣಾಸಕ್ತನಿಗೆ ಭಯ ಶೋಕಗಳಿಲ್ಲ
ಶ್ರವಣಾನಂದಕ್ಕಗಾಧ ಕರ್ಮಂಗಳು
ಇವು ಸರಿಯಾಗವು ಮರಳೆ ಮರಳೆ ಮರಳೆ ಎಣಿಸೆ
ಶ್ರವಣಕ್ಕೆ ಒಲಿವ ವಿಜಯ ವಿಠ್ಠಲನಂಘ್ರಿ
ನವನವ ನಾಮಗಳ ಶ್ರವಣ ಮಾಡೊ ಮನುಜ ೨
ತ್ರಿವಿಡಿತಾಳ
ಅನಿಷಿದ್ಧ ಕರ್ಮಗಳು ಕೈ ಕೊಂಡು ಚೆನ್ನಾಗಿ
ಅನುಭವದಿಂದಲಿ ಇರುಳು ಹಗಲೂ
ಮನದಲಿ ಶ್ರೀ ಹರಿಯ ಧ್ಯಾನವ ಮಾಡಿಯೋ
ಚನೆ ಮಾಡುವುದು ಸರ್ವವ್ಯಾಪ್ತ ತಿಳಿದು
ಘನವಾಗಿ ನಾನಾ ಕರ್ಮಕೆ ಮುಖ್ಯ ಸಾಧನ
ಗುಣಿಸು ಈ ಯುಗದಲ್ಲಿ ಶ್ರೀ ಕೃಷ್ಣ ಸ್ಮರಣೀ
ಕ್ಷಣ ಒಂದು ಮಾಡಿದರೆ ಅನಂತಾನಂತ ಬಹು
ಜನುಮದಲಿ ಮಾಡಿದ ಸತ್ಕರ್ಮವೋ
ಎಣಿಕೆ ಮಾಡಿದರಾಗೆ ಇದಕೆ ಸರಿಬಪ್ಪುದೇ
ಮನುಜ ಕೇಳೆಲೊ ಮಾತು ಅತಿ ರಹಸ್ಯ
ಪ್ರಣವ ವಿಡಿದು ವಾಯು ಜಠರವನೇ ತುಂಬಿ
ಗಣನೆ ಇಲ್ಲದ ತಪಸು ಮಾಡಲ್ಯಾಕೆ
ಕೊನಿಗೆ ಪೂರೈಸದು ಕರ್ಮಠನಾದರೆ
ದಣಿದು ಕರ್ದಮವಾರಿ ಕೂಡಿದಂತೆವೊ
ದಿನ ಪ್ರತಿದಿನದಲ್ಲಿ ಕರ್ಮ ಸಂಕೋಚದಲ್ಲಿ
ವನಧಿಶಯನನ ನಾವು ಮಂಗಳ ಶ್ರವಣ
ಅನಿಲನ್ನ ಪಾದವ ಸ್ಮರಿಸುತ ಮಾಡಿದ
ಮನುಜಂಗೆ ವಿಷಯ ಜನನವಾಗದೂ
ವಿನುಗುವ ಇಂದ್ರಿಯಂಗಳು ಮನ ಪ್ರಾಣಾತ್ಮ
ಘನ ಧೈರ್ಯ ಸ್ಥೈರ್ಯ ಹ್ರೀ ಶ್ರೀ ಸತ್ಯವೊ
ವಿನಯ ವಿದ್ಯದ ಧರ್ಮ ಜ್ಞಾನ ಆಚಾರದಿ
ಇನಿತು ಸಿದ್ಧಿಸಿ ಅವಗೆ ಕೆಡದಿಪ್ಪವೋ
ಜನನ ಹಾನಿ ನಾಶ ವಿಜಯ ವಿಠ್ಠಲರೇಯನ
ಗುಣ ಕರ್ಮಾವಳಿ ಮಹಿಮೆ ಶ್ರವಣ ಮಾಳ್ಪನೆ ಧನ್ಯ ೩
ಅಟ್ಟತಾಳ
ತನಗೆ ಮಂಗಳ ತನ್ನ ಕುಲಕೆ ಮಂಗಳ ಸುತ್ತೆ
ಜನಕೆ ಮಂಗಳ ನಿತ್ಯ ಸರ್ವ ಜಗಕೆ ಮಂಗಳ
ಮನಸ್ಸಿನಲ್ಲಿ ನೆನೆನೆನೆದು ಪುಳಕೋತ್ಸಾಹ
ವನಧಿಯೊಳಗಿದ್ದು ಹರಿಕಥಾಮೃತದಲ್ಲಿ
ನೆನೆನೆನೆದು ತೋದು ತೋದು ತೋದಾ
ಮನುಜನೋರ್ವನು ಸ್ವಾಭಾವಿಕನಾಗಿ ಪೋಗುತ್ತ
ವನಿಮಧ್ಯ ಮಾನವ ಚಾಂಡಾಲ ಕುಲದಲ್ಲಿ
ಜನನವಾಗಿದ್ದು ನಿಶ್ಶೇಷ ಪಾಪಗಳೆಲ್ಲ
ಮನ:ಪೂರ್ವಕವಾಗಿ ಮಾಡಿದವನ ನೋಡೆ
ಅನಿತರೊಳಗೆ ಶುದ್ಧಾತ್ಮನಾಗುವ ಕೇಳಿ
ಕನಸು ಎನ್ನ ಸಲ್ಲ ಯಮಪುರವೆ ಸಾಕ್ಷಿ
ತೃಣ ಮಾಡಿ ನರಕವ ಒದ್ದು ಪೋದರು ನೋಡು
ಮುನಿ ಪುಂಗವನುತ ವಿಜಯ ವಿಠ್ಠಲರೇ
ಯನ ಹೃತ್ಕಮಲದಲ್ಲಿ ಕಾಂಬ ಶ್ರವಣದಿಂದ ೪
ಆದಿತಾಳ
ಭವತಾರಕ ಹರಿಕಥಾಮೃತ ಶ್ರವಣ
ಶ್ರವಣಕ್ಕೆ ಬೀಳಲು ಮಾಡುವ ಮುಕುತಿಗೆ
ಹವಣ ಭವತಾರಕ ಜಿತು ಉದ್ಧರಣ ಶ್ರವಣ ಭಾವನಾ
ಭುವನದೊಳಗಿರೆ ಢವಳಂತ:ಕರುಣ
ನವನವ ಪ್ರಮೇಯ ಭಾಗ ಸ್ಮರಣವು
ಕವನ ಪೇಳುವರಿಗಾಭರಣಾ
ಭವ ತಾನೆ ಬಲ್ಲ ಇದರೋಚ್ಚರಣ ಆಚರಣ
ಶ್ರವಣ ಬಲು ಮಾಡಿದ ನರಗೆ ಜವನ ಭೀತಿ ಹರಣ
ಭವತಾರಕ ಹರಿಕಥಾಮೃತ ಶ್ರವಣ
ಭವ ಮೂರುತಿ ನಮ್ಮ ವಿಜಯ ವಿಠಲ ತನ್ನ
ಭವನವೆ ಕೊಡುವನು ಶ್ರವಣವೇಗತಿ ಎನ್ನು ೫
ಜತೆ
ಶ್ರವಣ ಕೇಳದವನು ಜೀವಚ್ಛವನೆನ್ನಿ
ಪವನ ಸ್ವಾಮಿ ನಮ್ಮ ವಿಜಯ ವಿಠಲ ಮೆಚ್ಚ ೬

ಈ ಸುಳಾದಿಯು ಭಗವದುಪಾಸನೆಯ

೮೭
ಧ್ರುವ ತಾಳ
ಸಾಮಾನ್ಯ ಧ್ಯಾನವಿದು ಮಾನ್ಯವಂತರು ಕೇಳಿ
ತಾಮಸ ಭಕ್ತಜನಕೆ ಪೇಳಸಲ್ಲ
ಸ್ವಾಮಿ ಭೃತ್ಯನ್ಯಾಯಬಲ್ಲ ತಾತ್ವಿಕರಿಗೆ
ಈ ಮಹಾ ಮಹಿಮೆಯ ತಿಳಿವುದೊ
ಕಾಮ ಕ್ರೋಧಗಳಳಿದು ತನ್ನ ಚಿತ್ತಕ್ಕೆ ಸುಖ
ಸ್ತೋಮವಾಗುವ ಸೂಚನೆ ಗ್ರಹಿಸಿ
ನೇಮವಾದ ಭೋಜನ ನಿದ್ರಾ ನಾನಾ ವ್ಯಾಪಾರ
ಭುವಿ ವೊಳಗೆ ನಿರ್ಭಯವೆ ಸರಿ
ಕೋಮಲನಾಗಿ ಮಾಡಿ ಸ್ವಧರ್ಮ ಬಿಡದಲೆ
ಯಾಮ ಯಾಮಕೆ ಹರಿ ನಾರಾಯಣ
ರಾಮಾನಂತ ಗೋವಿಂದ ಅಚ್ಯುತ ಕೃಷ್ಣನೆಂಬೊ
ನಾಮಾಮೃತದಲ್ಲಿ ವೋಲಾಡುತ
ಹೇಮ ರಜತ ರತುನ ಧನಧಾನ್ಯ ಪಶುವ್ರಾತ
ಧಾಮ ಸತಿಸುತರ ಕೇವಲವಾಗಿ
ತಾ ಮುನಿದು ಪೋಗದೆ ನಶ್ವರ ದೇಹದಲ್ಲಿ
ಪ್ರೇಮ ಅನವರತ ಇದ್ದದರೊಳು
ಕಾಮ ಅನುದಿನ ಹೊರ್ತು ಶ್ರೀರಮಣನ್ನ ಪಾದ
ತಾಮರಸದಲ್ಲಿ ಏಕಾಗ್ರದಿ
ಪ್ರೇಮ ಉಳ್ಳವನಾಗಿ ಹರಿ ಪರ ಪರ ಬೊಮ್ಮ
ಕಾಮಾದಿಗಳ ಒಡೆಯ ಸುಲಭನೆಂದು
ಸಮಸ್ತ ವೇದಾತೀತ ನಿರವರಧಿಕ ನಿಗಮ
ತಮ ಸರ್ವ ಭವ ತಾರಕನೀತಾ ನಿತ್ಯ
ನಿಷ್ಕಾಮದಲ್ಲಿಗೆ ಮನಸು ಮಾಡಿ ಪ್ರಮೋದದಿಂದ
ರೋಮಾಂಚನ ಮಹ ಸ್ನೇಹದಿಂದ ಬಿಡದೆ
ಯಾಮಿನಿನಾಥ ವರ್ಣ ವಿಜಯ ವಿಠಲರೇಯ
ಕಾಮಿಸಿದ ಫಲಕೊಡುವನು ಭಕ್ತರಿಗೆ ೧
ಮಟ್ಟತಾಳ
ತನಗಿಷ್ಟವಾದ ಪ್ರತಿಮೆಯನು ಸುಲ
ಕ್ಷಣ ಉಳ್ಳದೊಂದು ಕ್ಷಿಪ್ರಮತಿಯಲ್ಲಿ
ದಣಿ ದಣಿ ನೋಡುತ್ತ ಮುಂಭಾಗದಲ್ಲಿ ಇಟ್ಟು
ಮಣಿಮಯ ಮಕುಟ ಕಾಂಚನ ತೊಡಗಿಯ ತೊಡಿಸಿ
ಗುಣ ಗಣ ಪೂರ್ಣ ಸಾಕಾರನೆಂದು
ಇನಿತು ಚಿಂತಿಸಿ ಪ್ರತೀಕದೊಳಗೆ ಇದೆ
ನೆನೆದು ತದ್ಗತವಾದ ಮೂರ್ತಿಯ ಮಧ್ಯದಲ್ಲಿ
ಅನಿಲದೇವನ ಸ್ಮರಿಸಿ ಇದರಂತೆ ಯೋ
ಚನೆ ಮಾಡು ವೊಳಗೆ ಚಿನುಮಯ ಕಾಯನ
ನಿನಗೆ ನೀನೆ ತಿಳಿ ದ್ವಯ ಬಿಂಬವ ತರುವಾಯ
ಸನುಮಾರ್ಗವನ್ನೆ ಸು (ಸ) ಜ್ಜನ ದಿಂದಲಿ
ಇನಿತು ಗೋಳಕವೆಂದು ನುಡಿಯದಿರೊ ಮಂದ
ಜನರಿಗೆ ಮಾತುರ ಪೇಳಿದೆ ನೋಡಿರೊ
ಘನ ಜ್ಞಾನಿಗಳೊಡೆಯ ವಿಜಯ ವಿಠಲರೇಯ
ಅನುದಿನ ಯೋಗ್ಯರಿಗೆ ಗೋಚರಿಸುವ ಕಾಣೊ ೨
ತ್ರಿವಿಡಿತಾಳ
ಎದುರಿಲಿ ಮೂರ್ತಿಯ ಇಟ್ಟು ಪೂಜಿಸಿ ತನ್ನ
ಸದಮಲ ದೃಷ್ಟಿಯಲಿ ನೋಡಿ ನೋಡಿ
ಪದ ಮೂಲ ಪಿಡಿದು ಕಿರೀಟ ಪರಿಯಂತ
ಇದೆ ಇದೆ ಪರಿಯಲ್ಲಿ ನಿರೀಕ್ಷಿಸುತ್ತ
ಸುಧೆಯನ್ನು ಕುಡಿದಂತೆ ಇದ್ದ ಮೂರ್ತಿಯ ಬಾಹಿ
ರದ ಧ್ಯಾನ ಚನ್ನಾಗಿ ನಿಲ್ಲಲಾಗಿ
ಒದಗಿ ವಾಸನಮಯ ಜಡದಿಂದ ನಿರ್ಮಾಣ
ಹೃದಯದೊಳಗೆ ಬೇಗ ಮಾಡಿಕೊಂಡು
ಅದನೆ ಪೂಜಿಸಬೇಕು ಮರಳಿ ಮರಳಿ ಮರಳಿ ಚಿತ್ತದಲ್ಲಿ
ನಿಂದಲ್ಲಿ ಕುಳಿತರೆ ಮಲಗಿದರೆ
ಇದೆ ಇದೆ ಅಭ್ಯಾಸ ಮಾಡಲು ಬಲು ಜ
ನ್ಮದಲ್ಲಿದ್ದ ವಾಸನಮಯ ಮೂರುತಿ
ಪದೊ ಪದಿಗೆ ಸಾಂಗೋಪಾಂಗದಿಂದಲೆ ಪೊಳೆವ
ಎದುರಲಿ ಇಟ್ಟಿದ್ದ ದ್ರವ್ಯದಂತೆ
ಮದನ ಜನಕ ನಮ್ಮ ವಿಜಯ ವಿಠಲರೇಯ
ಇದನೆ ಹಿಂದು ಮಾಡಿ ಹೊಸ ಪರಿ ತೋರಿಸುವಾ ೩
ಅಟ್ಟತಾಳ
ನಿರುತ ವಾಸನ ಮೂರ್ತಿ ಪೂಜಿಸಲು ಕಾಲ
ಪರಿಪಕ್ವ ಬರಲಾಗಿ ಹರಿಕರುಣದಿಂದ ಗುರುಕೃಪೆ ಮಾಡುವ
ಸರನೆ ಈ ಮೂರ್ತಿ ಇವನ ಕಣ್ಣಿಗೆ ಗೋ
ಚರಿಸೋದು ಈತನೆ ತೋರುವ ಪ್ರಾಜ್ಞಾ ಪೆ
ಸರು ಉಳ್ಳ ಆತ್ಮ ಬಿಂಬ ನಾಮಕನೆಂದು
ಕರಿಸಿಕೊಳ್ಳುತಲಿಪ್ಪ ಕಡೆಮನೆ ಧೊರೆಯೆಂದು
ಶರಣರಿಗೆ ಮಿರಗುವ ಅಂತರಂಗದಲ್ಲಿ
ಅರಿದೆ ಅವನ ಯೋಗ್ಯತವನ್ನೆ ಪಸರಿಸಿ
ಪರಮ ಪುರುಷ ನಮ್ಮ ವಿಜಯ ವಿಠ್ಠಲ ಮುಂದೆ
ಕುರುಹ ತೋರುವ ನಿಜ ಸ್ವರೂಪದೇವನ್ನಾ ೪
ಆದಿತಾಳ
ಜೀವಾಂತರ್ಗತವಾದ ಮೂರ್ತಿಯೆ ತಾನಾಗಿ
ಆವಾಗ ಪೊಳೆಯಲು ಸಂಚಿತಾಗಾಮಿ ಕರ್ಮ
ಬೇವೋದು ಅನುಭವಿಸಿ ಪ್ರಾರಬ್ಧ ಕರ್ಮಂಗಳೆಲ್ಲ
ನೋವು ಸುಖವಾದರು ಉಂಡು ತೀರಿಸಬೇಕು
ಆ ವಿರಜಾನದಿಯಲ್ಲಿ ಮುಳುಗುವ ಪರಿಯಂತ
ತ್ರಿ ವಿಧ ಯೆನಿಸುವ ದೇಹ ನಾಶವಿಲ್ಲ
ದೇವನ ಲೀಲೆಯಂತೊ ಅಧಿಕಾರ ಭೇದದಿಂದ
ತಾ ಒಳಗಿದ್ದು ಸರ್ವಬಗಿಯನ್ನು ಮಾಡಿಸುವ
ಪಾವನ ಜೀವಕ್ಕೆ ತಮಸ್ಸು ಎಂದಿಗೂ ಇಲ್ಲ
ಕೋವಿದರು ಕೇಳಿ ಕೌತಕವೆನ್ನದಿರಿ
ಶ್ರೀ ವಲ್ಲಭ ನಮ್ಮ ವಿಜಯ ವಿಠಲರೇಯ
ಜೀವರ ಸ್ವರೂಪದಂತೆ ಧ್ಯಾನವ ಕೊಡುವಾ ೫
ಜತೆ
ಆಚಾರವಂತನಾಗಿ ಧ್ಯಾನಮಾಡಲಿಬೇಕು
ರೋಚನ ಪ್ರೀಯ ವಿಜಯ ವಿಠಲನ್ನ ಮೂರ್ತಿಗಳ ೬

ಶ್ವೇತದ್ವೀಪ, ವೈಕುಂಠ, ಅನಂತಾಸನಗಳೆಂಬುದು

೮೮
ಧ್ರುವತಾಳ
ಸಾಮೋಪಾಸನೆ ಮಾಡು ಶುದ್ಧಾಂತಃಕರಣದಲ್ಲಿ
ಸಮಸ್ತ ಬೊಮ್ಮಾಂಡವನ್ನೆ ತಿಳಿದೂ
ಶ್ಯಾಮ ಶಬಲವರ್ಣ ಇದ್ದ ಬಿಂಬ ಮೂರ್ತಿಯ
ಭೂಮಾದಿ ಗುಣಗಳಿಂದ ಹರಿಯ ಒಲಿಸೊ
ನೇಮ ನಿತ್ಯದಲ್ಲಿ ನಿಸ್ಸಂಗನಾಗಿ ಇದೆ
ಕಾಮಿಸು ಕಾಲ ಕಾಲಕ್ಕೆ ಯೋಗಮಾರ್ಗ
ಕಾಮಿನಿ ಮೊದಲಾದ ಭೋಗ ಭಾಗಗಳೆಲ್ಲ
ಶ್ರೀ ಮನೋಹರ ವಿಷ್ಣು ಸರ್ವೋತ್ತಮ
ರೋಮ ರೋಮಾಂತರದಿ ಮುಕ್ತಾ ಮುಕ್ತರವಿಟ್ಟು
ಸ್ವಾಮಿ ಮಮ ಸ್ವಾಮಿ ಸರ್ವಸ್ವಾಮಿ
ತಾಮಸ ತಾಮಸ ನಿರ್ಲೇಪ ತಾತ್ವಿಕ ಸಾತ್ವಿಕ
ಸಾಮಗಾಯನ ಪ್ರಿಯ ಭೂತಸ್ಥನೆ
ಪ್ರೇಮ ಪರಮನೆಂದು ಹಿಂಕಾರಾದಿ ಪಂಚ
ಸಾಮಾದಿ ಉಪದ್ರವ ಇಂತು ಗ್ರಹಿಸೊ
ಈ ಮಾತಿಗೆ ಪ್ರದ್ಯುಮ್ನ ವಾಸುದೇವ ನಾರಾಯಣ
ನಾಮಾ ಅನಿರುದ್ಧ ಸಂಕರುಷಣ ವರಹಾ
ನೃಮೃಗ ಸಪ್ತ ಭಗವದ್ರೂಪಗಳು ಅಲ್ಲಿಗಲ್ಲಿ
ನೀ ಮುದದಲ್ಲಿ ಧ್ಯಾನವ ಮಾಡೋ
ಧೂಮರಹಿತ ಅಗ್ನಿಯಂತಾಹನೊ
ಕಾಮಕ್ರೊಧಗಳೆಲ್ಲ ದಹಿಸಿ ಭಸ್ಮ ಮಾಡುವ
ಆ ಮೃತ್ಯು ಮಾರಿಗಳು ಭೃತ್ಯರಾಹರೊ
ಹೇಮ ವರ್ಣದಂತೆ ಪೊಳೆವ ಸಜ್ಜನರೊಡನೆ
ಭೂಮಿಯೊಳಗೆ ಅಪ್ರತಿಮಾ ನವಾ
ಭೀಮ ಭವ ವಾರಧಿ ಆವಾಗ ಗೋವತ್ಸ ಪಾದೋದಕ
ಸಾಮಿಪ್ಯದಲ್ಲಿ ಕಾಣಿಸುತಿಪ್ಪದೊ
ಶ್ಯಾಮ ಶಬಲವರ್ಣ ದೇವನೆ ಅತ್ಯಣುನಿ
ಸ್ಸೀಮ ಇಂದ್ರಿಯಗಳಿಗಾಗೋಚರ ಪುರುಷ
ವ್ಯಾಮೋಹ ಪುಟ್ಟಿಸುವ ಈತನೆ ಇಷ್ಟ ದೈವ
ಕೋಮಲ ಗಾತುರು ಬಲು ಸುಲಭ
ಸಾಮಸ್ತ ವ್ಯಾಪ್ತ ವಿಶಿಷ್ಟಾವರಣ ಲಕುಮಿ ಮೀರಿ
ಸ್ವಾಮಿಯ ದಯದಿಂದಲಿ (ಸಾಮದಿಂದಲಿ)ಸ್ವಮಹಿಮ ಕಾಣೊ
ವ್ಯೋಮ ಕಾಲ ವೇದ ಗುಣ ಜೀವರಾಶಿ ತ್ರಿವಿಧ
ಈ ಮಾತಿನಂತೆ ಸರ್ವದ ಎಣಿಸೊ
ಸಾಮೋಪಾಸನೆ ಇದೆ ಮಾಡೊ ಮನುಜಾ
ಸಾಮವಂದಿತ ನಮ್ಮ ವಿಜಯ ವಿಠಲರೇಯಾ
ಕಾಮಿಸಿದಂತೆ ಫಲವ ಕೊಡುತಿಪ್ಪನೊ
ಮಟ್ಟತಾಳ
ಹಿಂಕಾರ ಪ್ರದ್ಯುಮ್ನ ಪ್ರಸ್ಥಾವ ವಾಸುದೇವ
ಉದ್ಗೀಥ ನಾರಾಯಣ ಪ್ರತಿಹಾರ ಅನಿರುದ್ಧ
ಸಂಕರುಷಣ ನಿಧನ ಈ ಪರಿ ಪಂಚ ಸಮ
ಶಂಕೆ ಇಲ್ಲದೆ ಜನರು ಕೊಂಡಾಡಿ ಭಕುತಿಯಲಿ
ಮಂಕು ಬುದ್ಧಿ ಬಲು ದೂರಾಗಿ ಪೋಗುವದು
ಸಂಕಟ ತೊಲಗುವುದು ದೇಹದೊಳಗಿದ್ದ
ಓಂಕಾರ ಮೂರ್ತಿ ವಿಜಯ ವಿಠಲನಲ್ಲಿ ಅ
ಲಂಕಾರನಾಗಿ ಪೂಜಿಪ ಜೀವ ಹೃದ್ಗತನಾ ೨
ತ್ರಿವಿಡಿ ತಾಳ
ಬಿಂಬೋಪಾಸನೆ ಮಾಡು ಭಕುತಿ ಪೂರ್ವಕದಿಂದ
ಡಂಭಕವನೆ ತೊರೆದು ತ್ರೀವ್ರದಲ್ಲಿ
ಡಿಂಬಾದೊಳಗೆ ಇದ್ದ ಹೃದಯಸ್ತ ಮೂರ್ತಿಯ
ಬೆಂಬಿಡದೆ ನೋಡುವುದು ಬಹು ಪ್ರಕಾರ
ನಂಬು ಸಂತತ ಸಂಯೋಗ ಮೊದಲಾವರ್ತಿಲಿ
ಹೊಂಬಂಣ ವರ್ಣನು ಆ ತರುವಾಯ
ಕಂಬ ಮೂರ್ತಿಗಳ ಪೆಸರು ಕೇಳು ಶ್ರೀ ವಿಷ್ಣು
ಅಂಬುಜ ಸಂಭವ ರುದ್ರನಾಮಾ
ಇಂಬಾಗಿ ಇಪ್ಪದು ಪರಿಚ್ಛೇದ ತ್ರಯದಲ್ಲಿ
ಅಂಬುಧಿ ನಂದನೆ ಲಕುಮಿವಾಣಿ
ಅಂಬಿಕ ನಾಮಾದಲ್ಲಿ ತತ್ತ ಸ್ಥಾನದೆಡಿಯಾ
ಬೆಂಬಲವಾಗಿ ಪಾಲಿಸು ತಿಪ್ಪಳು
ತುಂಬದ ಪ್ರಕೃತಿ ಗುಣ ಸಾಮ್ಯ ಪರಮಾಣುಗಳು
ಎಂಬೊವು ಒಂದೊಂದಾನಂತ ಮಿಳಿತ
ಇಂಬುಗೊಂಡಿಹುದು ಅವ್ಯಕ್ತದಿ ಮನ
ಅಂಬಕ ಮಿಕ್ಕಾದ ದಶ ಕರಣ
ಅಂಬರಾದಿ ಭೂತ ಪಂಚ ತನ್ಮಾತ್ರಿಗಳು
ಎಂಬ ತತ್ವಗಳು ಇಪ್ಪತ್ತುನಾಲ್ಕು
ತುಂಬಿದ ಚಿತ್ತದಲ್ಲಿ ವಿಚರಿಸಿಹರು
ಷಾಂಬುಧಿಯೊಳಗಿರು ಹಗಲಿರಳು
ಶಂಬರಾರಿ ಜನಕ ವಿಜಯ ವಿಠಲರೇಯ
ನಂಬಿದ ಭಕ್ತರಿಗೆ ನಾನಾ ಪರಿ ೩
ಆಟ್ಟತಾಳ
ಗುಣ ಕಾಲ ದೇಶವು ಕರ್ಮ ನಾನಾ ಜೀವಾ
ನೆನೆಸೋದು ಅನಾದಿಯಿಂದ ಸಿದ್ಧವೆಂದು
ಎಣಿಸಿ ಕಾರ್ಯಗಳೆಲ್ಲ ಸೂಕ್ಷ್ಮ ಸ್ಥೂಲ ಬಹು
ಗಣನೆ ಇಲ್ಲದೆ ಬೊಮ್ಮಾಂಡ ಬಾಹ್ಯಾಂತರ
ಕ್ಷಣ ಬಿಡದಲೆ ಸಾಮ ವಿದ್ಯವನು ಗ್ರಹಿಸಿ
ಇನ ಮಂಡಲದಲ್ಲಿ ಉಪಾಸನೆ ಹೃ
ಧ್ವನಜದಲ್ಲಿ ಇದೆ ವಿಧದಲ್ಲಿ ತಿಳಿದು
ಗುಣವಂತನಾಗು ಭವ ಭೀಜವ ನೀಗು
ತೃಣ ಮೊದಲಾದ ದ್ರವ್ಯದಲ್ಲಿ ಯೋಚಿಸು
ಗುಣಗಣ ಪೂರ್ಣ ಶ್ರೀ ವಿಜಯ ವಿಠಲನ್ನ
ಮನ ಮೆಚ್ಚಾ ಭಜಿಸಿ ಮಹಾತ್ಮರ ಸೇರೊ ೪
ಆದಿತಾಳ
ಒಂದೆರಡು ಮೂರು ನಾಲ್ಕು
ಮುಂದೈದು ಅರೇಳೆಂಟು
ನಂದಾನ ಹತ್ತು ಹನ್ನೊಂದು ಹನ್ನೆರಡು ಇಂ
ತೆಂದು ಈ ಪರಿ ಇಪ್ಪತ್ತೆರಡರ ಪರಿ ಯಂತಸು
ನಂದದಿಂದಲಿ ಎಣಿಸಿ ಸಾಮೋಪಾಸನೆ ಮಾಡು
ಕುಂದದಲೆ ಕೇಶವಾದಿ ಮತ್ಸ್ಯಾದಿ ವಾಸುದೇವ
ವಂದಿಸಿ ಇನಿತು ನಿತ್ಯ ಕೊಂಡಾಡಿ ಕಂಡಲ್ಲಿ
ನಿಂದಲ್ಲಿ ಧ್ಯಾನಮಾಡು ಸ್ಮರಿಸು ವಿವೇಕನಾಗಿ
ಎಂದೆಂದಿಗೆ ಕೇಳು ಪಾಪಲೇಪವೆ ಇಲ್ಲಾ
ಬಂಧನ ಪರಿಹಾರ ಭಕುತಿ ಮಾತುರ ಮಾಡು
ನಂದ ಮೂರುತಿ ನಮ್ಮ ವಿಜಯ ವಿಠಲರೇಯ
ಬಂದು ಹೃತ್ಕಮಲದಲ್ಲಿ ಸುಳಿದಾಡುವ ನಲಿದು ೫
ಜತೆ
ಸಕಲಬಗೆಯಿಂದ ಸಾಮವಂತನಾಗು
ರುಕುಮಣಿಪತಿ ವಿಜಯ ವಿಠಲನ್ನ ಸ್ಮರಿಸು ೬

ಭಗವಂತನ ನಾಮಸ್ಮರಣೆಯನ್ನು ಸತತವಾಗಿ

೮೪
ಧ್ರುವತಾಳ
ಸಾರಥಿಯಾಗಿ ಪಾಶ್ರ್ವದನಾಗಿ ಸಖನಾಗಿ
ವೀರಾಸನನಾಗಿ ಅನುಗಮನನಾಗಿ
ಸಾರ ದೂತನಾಗಿ ಸೇವಕನಾಗಿ ಬಿಡದೆ
ಬಾರಿ ಬಾರಿಗೆ ಸ್ತವನನಾಗಿ ನಿತ್ಯ
ಸಾರೆದಲಿದ್ದು ಸಂವರಕ್ಷಿಸು ದಾ
ತಾರನಾಗಿ ದೊರೆಯಾಗಿ ನೀನೆ
ಮಾರುಕೊಂಡವನಾಗಿ ಜನನಿ ಜನಕನಾಗಿ
ಹಾರೈಸಿ ಹರಿಕೆ ಕೊಡುವ ಹಿರಿಯ ನಾಗಿ
ದಾರಿ ತೋರುವನಾಗಿ ಧರ್ಮ ಮಾಳ್ಪವನಾಗಿ
ತಾರಕನಾಗಿ ತಾಮಸ ಕಳೆವನಾಗಿ
ಆರಿಗಾದರು ಅಸಾಧ್ಯ ಬೋಧನಾಗಿ
ಚಾರು ಮನೋಹರನಾಗಿ ಅಚಲನಾಗಿ
ಚಾರು ಮನೋಹರನಾಗಿ ಅಚಲನಾಗಿ
ಧೀರಾಧಿಧೀರ ಅವಧಾರು ಆಶ್ರಿತ ಜನರ
ಕೋರಿದಭೀಷ್ಟ ಕೊಡುವ ಕರ್ತನಾಗಿ
ಈ ರೀತಿ ನಿಂದು ನಿಂದು ಅನೂಹ್ಯನಾಗಿ
ವಾರ ವಾರಕೆ ಎನ್ನ ಪೊರೆವನಾಗಿ
ಧಾರುಣಿಯೊಳು ನೀನು ಭಕುತರ ಮನ್ನಿಪುದು ಸ
ತ್ಕೀರುತಿಯಿರಲಿಕ್ಕೆ ಮುಂಗಾಣದೇ
ಆರಾದರು ಒಂದು ಆರಂಭಿಸಿಕೊಂಡು
ನೂರಾರು ಭಾರ ಕೊಡುವೆನೆಂದವಗೆ
ನೀರ ಬೊಬ್ಬುಳಿಯಂತೆ ಇಪ್ಪ ಶರೀರವ
ಮಾರಿಕೊಂಡೆನೆಂಬ ಮನವಾಹುದೊ
ಪಾರತಂತ್ರ ರಹಿತ ನಿನ್ನ ಕರೆವ ನೆವದಿಂದ
ಮ್ಯಾರೆಯಿಲ್ಲದೆ ಸದಾ ಹೇಮವರುಷ
ಧಾರೆ ಎಡಬಿಡದೆ ಸುರಿವುತಿರೆ ಈಕ್ಷಿಸಿ
ಪೊರವಾಗಿ ಸವಿದು ಸುಖಿಸದಲೇ
ಕ್ಷೀರವಾರುಧಿಯೊಳಗಿಪ್ಪ ಮಾನವ ನಿತ್ಯ
ಕ್ಷಾರೋದಕೆ ಎನ್ನ ಮನಸು ಇಂತೊ
ಪೊರೆವೆನ್ನ ನೋಡಲು ಈ ಸೌಖ್ಯಅನುಭವಿಸಿ
ಸೂರೆಗೊಳಬಾರದೆ ನಿನ್ನ ಪುರವ
ಹಾರಿ ಪೋಗುತಲಿದೆ ಕಂಡದ್ದು ಹಂಬಲಿಸಿ
ಆರಾದರು ನುಡಿದರೆ ಆಶೆಗೊಂಡು
ಸೇರಿ ಕಾಲವ ಕಳೆವೆನೆಂಬ ವಿಚಾರದಲ್ಲಿ
ಧಾರುಣಿಯೊಳು ಬಾಳುವೆ ಗತಿ ನೀ ಎಂದು
ನೀರಜದಳನೇತ್ರ ವಿಜಯವಿಠ್ಠಲ ನಿನ್ನ
ಆರಾಧನಿಯ ಮಾಡುವ ಮಹಿಮೆ ತಿಳಿಯದಾದೆ ೧
ಮಟ್ಟತಾಳ
ಅಧಿಕಾಧಿಕಪೇಕ್ಷೆ ಮಾಡಿ ಮಾಡಿ ನಾನು
ಪದವಿಗೆ ಬಲು ದೂರವಾಗಿ ಪೋಗುವೆನಯ್ಯ
ಪದೋಪದಿಗೆ ಯಿಂಥ ಬದ್ಧಿಯಲ್ಲದೆ ಲೇಶ
ಸದಮಲ ಮತಿ ಮಾರ್ಗ ಕಾಣೆನೊ ಕಮಲೇಶ
ಹೃದಯದೊಳಗೆ ಇನಿತು ಯೋಚನೆಯಲ್ಲದೆ
ಒದಗುವುದು ಹಿಂದಣ ಕರ್ಮದ ಫಲವು
ವಿಧಿ ಜನಕ ನಮ್ಮ ವಿಜಯವಿಠ್ಠಲರೇಯ
ನಿಧಿ ದೊರಕಿದವನು ಕಾಸು ಹುಡುಕಿದಂತೆ ೨
ತ್ರಿವಿಡಿತಾಳ
ಇಂತು ನೀನೆ ಒಲಿದು ರಕ್ಷಿಸುತಿರಲಾಗಿ
ಭ್ರಾಂತಿಗೊಂಡ ಜೀವ ಮನೆಯೊಳಗೆ ನಾನಾ
ನಂತ ಬಗೆಯಿಂದ ಬೇಡಿದ ಪದಾರ್ಥ
ಅಂತು ಇಲ್ಲದೆ ಮುಂದೆ ಇರಲು ನಂಬಿಕೆ ಸಾಲದೆ
ಹಂತರ ಒಡಗೂಡಿ ನೂರಾರು ಯೋಜನ
ಸಂತೆಯಿರಲು ಪೋಗಿ ತಾ ಹೆನೆಂಬಂತೆ
ಕಂತು ಜನಕ ನಿನ್ನ ಕರುಣತ್ವ ತಿಳಿಯದೆ
ಮುಂದೆ ಯೋಚಿಸುವೆನೊ ಮಂದನಾಗಿ
ಅಂತರಂಗದಲಿಪ್ಪ ವಿಜಯವಿಠ್ಠಲ ನಿನ್ನ
ಚಿಂತೆಗೆ ಬಲು ವಿಘ್ನ ನಿಲ್ಲದೆ ಬರುತಿವೆ ೩
ಮಟ್ಟತಾಳ
ಅವುದಾವುದೊ ಸಾಧನ ಮ
ತ್ತಾವುದು ಸಾಧನ ಕಾಣೆನೊ
ಸರ್ವವೇದಗಳಲ್ಲಿ ಆವಾಗ ಆಜಭವಸುರರೆಲ್ಲ ಶೋಧಿಸೆ
ದೇವೇಶ ನಿನ್ನ ನಾಮ ಒಂದೆ ನಮಗುಪ
ಜೀವನವಾಗಿದೆ ಎಂದು ಜಪಿಸುವರು
ಪಾವನ ಮತಿಯ ಕೊಡುವ ಪರರ ಸೇವೆಯ ಮಾಡೆ
ಧಾವಂತಗೊಂಬ ಪ್ರಯಾಸವ ಬಿಡಿಸುವ
ಮಾವಿನ ಫಲದಂತೆ ಕಲಿಯುಗದಲ್ಲಿ ಪುಟ್ಟಿ
ಜೀವಿಸುವುದು ಕೇಳು ಕಮಲಲೋಚನನೆ
ಲಾವಕವಾಗಿದ್ದ ಮನೋದೋಷ ಓಡಿಸೆ
ಈವದೊ ಎನಗೆ ಭಕುತಿ ಲಾಭ ಅನುದಿನ
ಕಾವ ಕರುಣಿ ನಮ್ಮ ವಿಜಯವಿಠ್ಠಲರೇಯ
ಆವಾವ ಕಲ್ಪಕ್ಕೆ ಪರಮಾನುಗ್ರಹ ಮಾಡು ೪
ಆದಿತಾಳ
ರಮಾ ಬ್ರಹಾದಿಗಳಿಗೆ ಉತ್ತಮೋತ್ತಮ ನೀನೆ
ಅಮಮ ನಿನ್ನಾಧೀನ ತ್ರಿಜಗವೆಂದಿಗೆ ಸತ್ಯ
ಸಮವಿಲ್ಲ ನಿನಗೆಲ್ಲಿ ಸರ್ವಸ್ವತಂತ್ರನೆ
ಅಮಿತಾನಂತ ಕಲ್ಯಾಣ ಗುಣಪರಿಪೂರ್ಣ ಸಂಪೂರ್ಣ
ಅಮಲ ಮೂರುತಿ ಅಖಿಳ ದೋಷ ಗಂಧವಿದೂರ
ಕ್ರಮದಿಂದ ಮಕ್ತರನು ಪೊರೆವ ಅಪ್ರತಿಹತನೆ
ನಮಿಸುವೆ ನಾನಾ ಪರಿ ಕಾಲಕಾಲಕೆ ಇದನೆ
ಶಮೆದಮೆಯಿಂದ ತಿಳಿದು ಗತಿಗೆ ಪೋಪ ಮಾರ್ಗ
ನಿಮಿಷ ಮೊದಲು ಮಾಡಿ ಅಲ್ಲಿ ಪರಿಯಂತವಾಗಲಿ
ಸಮಜ್ಞಾನಾನಂದರೂಪ ವಿಜಯವಿಠ್ಠಲರೇಯ
ಶ್ರಮವೆ ಹರಿಸಿ ನಿನ್ನ ದಾಸರೊಳಗಿಡು ೫
ಜತೆ
ಬೇಡುವೆ ನಿನ್ನನು ಕರದಲ್ಲಿ ಇದನೆ ದಯ-
ಮಾಡು ಮಾನಸದಲ್ಲಿ ವಿಜಯವಿಠ್ಠಲರೇಯ೬

ಸಾಧನೆ ಗೈಯುವವರು ತಾವು ಸಾಧನೆಯ

೧೨೬
ಝಂಪಿತಾಳ
ಸಾರವನು ಮರೆದು ಬೇಸರದಲೆ ನಾನು ಸಂ
ಸಾರವೆಂದೆಂಬ ಅಸಾರದಲ್ಲಿ
ಸಾರಮೇಯಾನಂತೆ ಸಾರಿಸಾರಿಗೆ ಕೆಲ
ಸಾರುತ ತಿರುಗಿದೆನು ಸರಿ ಸರಿದು ಹೇ
ಸರಗತ್ತೆಯಂತೆ ಸಾರಡಿಯಪೊತ್ತು ನಿ
ಸ್ಸಾರರವನಾದೆನೊ ಸರಿಯರೊಳಗೆ
ಸಾರಣಿ ಅರವೆಗಿಂತ ಸ್ವಾರಸ್ಯವಿಲ್ಲದಲೆ
ಸಾರದುರಿತ ಪ್ರಸಾರವನು ಉಂಡೆ
ಸರಸಿಜನಯನ ನಾಮ ನಾರದ ನಿನ್ನ ದಾ
ಸರ ಸಂಗತಿಯನನುಸಾರದಲೆ
ಸಾರಲಿಲ್ಲವೊ ನಿನ್ನ ಸಾರಸುಧೇನಾಮ ಲೋಕ
ಸಾರಂಗನಾಮ ಶಿರಿ ವಿಜಯ ವಿಠ್ಠಲನೆ ೧
ಮಟ್ಟತಾಳ
ತತ್ವಗುಣದಲ್ಲಿ ಇತ್ತಂಡದಿಂದ
ಉತ್ತಮ ವರ್ಗಕ್ಕೆ ಹತ್ತುವ ಸೋಪಾನ
ಮತ್ತೆ ರಜೋತಮ ಚಿತ್ತವ ಬಿಡದಲೆ
ಚಿತ್ತದೊಳಗೆ ನಿತ್ಯ ಸುತ್ತಿಕೊಂಡಿರಲು
ಹತ್ತಿ ಮೊಸರುಹಾಕಿ ಬುತ್ತಿಕಲಿಸಿದಂತೆ
ಎತ್ತಲು ಪೊಂದದಲೆ ಬತ್ತುವುದು ಬುದ್ಧಿ
ಜತ್ತ ವಿಜಯ ವಿಠ್ಠಲಾತ್ತುಮ ಮೂರುತಿ
ಸತ್ತಮ ಬಿನ್ನಹ ಚಿತ್ತವಧರಿಸು ೨
ತ್ರಿವಿಡಿತಾಳ
ಸುಚಿತ್ತದಲಿ ನಿನ್ನ ಸುಚರಿತ್ರವನು
ಅಚಲ ಭಕ್ತಿಯಲ್ಲಿ ಪೂಜಿಸಲಿಲ್ಲವೋ
ರಚಿಸಿ ಮೇಳುವನೆನಿಸಿ ವಚನ ಹಾರದಲಿ
ರುಚಿ ಪದಾರ್ಥವ ಬಯಸಿ ಬರಿದಾದೆನೋ
ಹುಚ್ಚು ಬಿಟ್ಟ ಶ್ವಾನೊಂದು ಉಚಿತಾರ್ಥ ತಿಳಿಯದೆ
ಅಚಲಕ್ಕೆ ಬೊಗಳಿ ಬಾಯಾರಿದಂತೆ
ಕುಚಿತವ ನಾನಾದೆ ಶುಚಿ ವಿಜಯ ವಿಠ್ಠಲ
ನಿಚಯಘಾರಣ್ಯಕ್ಕೆ ಶುಚಿಯಾಗಿ ನಿಲ್ಲೊ ೩
ಅಟ್ಟತಾಳ
ಪೂರ್ತಿಯಾಗಲಿ ಎಂದು ಒಡಲಿಗೆ ನಾನಾಕು
ವಾರ್ತಿಯ ಕಲಿತು ನೆರೆಹೊರೆಯವರಿಗೆ
ಅರ್ತಿಯ ಬೆಳಗಿ ಅವರವರಂಶದ
ಕೀರ್ತಿಯ ಕೊಂಡಾಡಿ ಕಿರಿದಾಗಿ ಕರನೀಡಿ
ಸ್ವಾರ್ಥವಲ್ಲದೆ ಪರರುಪಕಾರ ಒಂದಿಲ್ಲ
ನರ್ತನದವರಂತೆ ಕೈಯ್ಯ ಮೈಯನುತೋರಿ
ಆರ್ಥವ ಘಳಿಸಿ ಭಾಗವತನೆನಿಸಿದೆ
ತೀರ್ಥಕರ ನಾಮ ವಿಜಯ ವಿಠ್ಠಲ ಪ್ರೇಮ
ಕರ್ತೃ ನಿನ್ನ ಯಥಾರ್ಥ ನೆನೆಯದೆ ೪
ಆದಿತಾಳ
ಬೇಡುವ ಮನವೀಯೊ ನಿನ್ನನು
ಕಾಡುವ ಮನವೀಯೊ
ಗಾಢವಾದ ರಜೋತಮ ಗುಣಗಳ
ಓಡಿಸಿ ಶುದ್ಧಾತ್ಮನ ಮಾಡಿ ಪ್ರತಿದಿನ
ಬೇಡುವ ಮನವೀಯೋ ನಿನ್ನನು
ಕಾಡುವ ಮನವೀಯೋ
ಪಾಡುವೆ ನಿನ್ನಯ ಸಾಸಿರನಾಮವ ವಾಮನ ನಾಮ
ವಿಜಯ ವಿಠಲ| ೫
ಜತೆ
ಸಂಸಾರಾಂಬುಧಿಗೆ ನಿನ್ನ ನಾಮವೆ ನಾವಿ
ಹಂಸ ವಿಜಯ ವಿಠ್ಠಲ ನಿನ್ನ ಚರಣವೆ ಧಡಿ ೬

ಸಿಂಧು ಶಬ್ದವನ್ನು ಈ ಸುಳಾದಿಯ

೮೫
ಧ್ರುವತಾಳ
ಸಿಂಧುತನಯಳರಮಣ ಸಿಂಧು ಬಂಧನ ಪಾಲ
ಸಿಂಧುಶಯನ ಸಿಂಧು ಮೂರ್ತಿ
ಸಿಂಧು ರಾಜಾಹರಣ ಸಿಂಧುರಾಪಾಲಾ ಪಾಲಿ-
ಸಿಂಧು ಎನ್ನನು ದೀನ ಸಿಂಧುಶಯನ
ಸಿಂಧು ಮಥನ ಭವ ಸಿಂಧುನಯನ
ಸಿಂಧು ವಿರೋಧಿ ನೀತ ಸಿಂಧುಸಂಚರಣ
ಸಿಂಧು ಮಧ್ಯ ಮಂದಿರ ವಿಜಯವಿಠ್ಠಲ ಸಪುತ
ಸಿಂಧು ಮೀರಿದ ಭವಸಿಂಧು ದಾಟಿಸು ದೇವ ೧
ಮಟ್ಟುತಾಳ
ಆವುದಾವುದು ಎನಗೆ ಜೀವಕೆ ಸಾಧನವು
ಕಾವನಯ್ಯನೆ ಕರುಣಿ ಕಾವ ದಾತಾರ
ಕಾವುರಿ ಮದದಿಂದ ನೋವು ನೋವಾದೆನೊ
ಆವುದು ನೆಲೆಗಾಣೆ ಆವುದು ನೆಲೆಗಾಣೆ
ಈ ವಿಷಯಂಗಳ ಕಾವಲಿ ಒಳಬಿದ್ದು
ಬೇವು ಮೆದದಾ ಮಾನವನಾದೆ
ಶ್ರೀವನಿತೆಯರಸ ವಿಜಯವಿಠ್ಠಲರೇಯ
ಭಾವುಕ ಮೂರುತಿ ಲಾವಕನ ಕಾಯೊ ೨
ತ್ರಿವಿಡಿತಾಳ
ಎಂತು ಮಾಡಲಿ ಹರಿಯೆ ಅಂತರ ಶುಚಿಯಾಗಿ
ಶಾಂತವಾಗಿಪ್ಪ ಪಂಥ ತೋರದು ಕಾಣೊ
ಚಿಂತೆಯಲಿ ಈ ಮನಸು ನಿಂತಲ್ಲಿ ನಿಲ್ಲದೆ
ಸಂತತ ಕುದಿದು ಲೋಕಾಂತಕೆಳವುತಿದೆ
ಕಾಂತಾರದೊಳು ನಿಂದು ಅಂತರಿಕ್ಷಕೆ ಬೆದರಿ
ದಂತವ ಕೀರಿದವನಂತೆ ಜೀವಿಸಿದೆನೊ
ಸಂತೋಷ ಗುಣನಿಧಿ ವಿಜಯವಿಠ್ಠಲ ನಿನ್ನ
ಚಿಂತಿಗೆ ಮನಸು ಏಕಾಂತದಲ್ಲೆರಗದು ೩
ಅಟ್ಟತಾಳ
ದಶ ಇಂದ್ರಿಯಗಳು ಇದ್ದೇನು ಫಲವಯ್ಯ
ವಶಮಾಡಿ ಮನಸು ನಿಲ್ಲಿಸದನ್ನಕ
ಪುಶಿಯಲ್ಲ ಪರಗತಿ ಸಾಧನವಾಗದು
ಹಸಿಯ ಮರಕೆ ಬೇಯಿಸ ತೊಡಕಿದರೆ
ಮುಸುಕಿ ಕುದಿದು ಕೊನೆ ಒಸರುವ ತೆರದಂತೆ
ವಶವಲ್ಲ ಸಂಸಾರ ಮುಸುಡಿಯೊಳಗೆ ಬಿದ್ದು
ಅಸುವ ಶೋಷಣವಾಗಿ ಕುಸಿದು ಅಳಲುವೆ
ಹಸನಾವುದು ಕಾಣೆ ವಿಜಯವಿಠ್ಠಲರೇಯ
ಘಸಣೆಗೊಳಿಸುವ ತಾಮಸವನೆ ಕೆಡಿಸೊ ೪
ಆದಿತಾಳ
ಅದ್ಭುತ ಕರ್ಮದೊಳು ಬಿದ್ದು ಬಯಲಾಸಿಯೆ
ಸಿದ್ಧವೆಂದು ತಿಳಿದು ಬದ್ಧಿಪಲ್ಲಟನಾದೆ
ನಿದ್ರಾಲಸ್ಯಾಹಾರ ಮೆದ್ದು ಮಂದನಾಗಿ
ಕ್ಷುದ್ರನಡತೆಯಲ್ಲಿ ಪೊದ್ದಿದೆ ಇಹದೊಳು
ಅಬ್ಧಿಗೊಡೆಯ ವಿಜಯವಿಠ್ಠಲ ಎನ್ನ ಪೊರೆವ ದಾ
ರಿದ್ರ ಮನಸು ದೂರಮಾಡೊ
ಶಬ್ದಗಳಿಗಾಗೋಚರನೆ ೫
ಜತೆ
ಬಿಡಿಸು ಬಿಡಿಸು ಜೀಯಾ ಭವದ ವ್ಯಾಕುಲವನ್ನು
ಪೊಡಮಡುವೆ ನಿನ್ನ ಪಾದಕೆ ವಿಜಯವಿಠ್ಠಲ ೬

ಸಾಂಸಾರಿಕ ಕ್ಲೇಶಗಳಿಂದ ತತ್ತರಿಸಿದ

೮೬
ಧ್ರುವತಾಳ
ಸಿಕ್ಕಿದೆ ಸಂಸಾರ ಸಿಕ್ಕಿನೊಳಗೆ ನಾನು
ಸಿಕ್ಕು ಬಿಡಿಪರಿಲ್ಲ ರಕ್ಕಸಾರಿ
ತ್ವಕ್ಕುವ ಮಿಕ್ಕಾದ ಕಕ್ಕಸ ಇಂದ್ರಿಯಗಳು
ತಿಕ್ಕಿ ಮುಕ್ಕುತಲಿವೆ ಮುಕ್ಕುಂದನೆ
ತೆಕ್ಕೊ ಕರುಣವನ್ನು ಇಕ್ಕೊ ವಂದನೆ ನಿನಗೆ
ತುಕ್ಕುವುದೋ ಕಳಿಯೋ ಚಕ್ಕನೀಗ
ಚೊಕ್ಕಟ ಮನವೀಯೊ ಸೊಕ್ಕಿದ ಮದವಳಿಯೊ
ದಕ್ಕಿದೆ ಕೆಲಕಾಲಕ್ಕೆ ನಿನಗೆ ಘಕ್ಕನೆ ಕರವಿಡಿದು
ಇಕ್ಕಟ್ಟಿನೊಳಗಿಂದು ದಿಕ್ಕುಗೆಟ್ಟವನ ಸಾರಕ್ಕೆ ಕರಿಯೊ
ಬಕ್ಕದಾಸನು ನಾನು ಇಕ್ಕೆಲ್ಲ ಭಕ್ತರೊಳಗೆ
ತಕ್ಕದನಿತ್ತು ಎನಗೆ ಪುಕ್ಕಟೆ ಶ್ರಮ ಬಿಡಿಸೊ
ಹಕ್ಕಿವಾಹನದೇವ ವಿಜಯವಿಠ್ಠಲ ರೇಯಾ
ತಕ್ಕ ಹಲವು ಬಗೆ ಹಕ್ಕಲ ಗೈಸೋದು ೧
ಮಟ್ಟತಾಳ
ಸುಖವುಳ್ಳವನಿಗೆ ದುಃಖಲೇಪನ ಹಚ್ಚಿ
ಅಖಂಡ ಕಾಲದಲ್ಲಿ ಅಖಿಳ ಬಗೆಯಿಂದ
ನಖಶಿಖ ಪರಿಯಂತ ಮುಖಂಡ ಪಾಪಗಳ
ಮುಖಕೆ ಎನ್ನನು ಹಾಕಿ
ಸಖನಾಗಿದ್ದು ಅಣಕವಾಡುವುದೇನೋ
ಮುಖಕೆ ಪಾಲನ ನಮ್ಮ ವಿಜಯವಿಠ್ಠಲರೇಯ
ಶಿಖಿನುತ ರವಿ ಮಯೂಖ ಸಮಶುಭ ಚರಣ೨
ತ್ರಿವಿಡಿತಾಳ
ದುರಿತ ಜೀಮೂತವಾತ
ನಿರುತ ಶುಭಸನ್ನುತ
ಚರಿತಾ ಗುಣವಂತ
ಭರಿತ ಭಾಗ್ಯವಂತ
ಮರುತಾದಿಗಳ ತಾತಾ
ಅರಿತ ಭಕುತಿ ವ್ರಾತ
ಬೆರೆತ ಪಂಚಭೂತ ಉರಿ ತಾಪಕ ರಹಿತ
ತ್ವರಿತ ನೆನವೆ ಪ್ರೀತ
ಕರೆತಾರೊ ಎಲೊ ದಾತ
ಮರೆತಾರೊ ಎನಗೆತ್ತ
ಹರಿತೋರದು ಸುತ್ತ
ಸುರತರುವೆ ತುಂಗ ಸಂತರಲ್ಲಿ ನಿಂತ ವಿಜಯವಿಠ್ಠಲಜಾತ
ಭರತಗ್ಗಿಸು ಮಲತ ೩
ಅಟ್ಟತಾಳ
ಮಲಿನ ಹೇಸಿಕೆಗೂಡು ಹೊಲಸು ರಕುತ ಮಾಂಸ
ಎಲವು ಸುತ್ತಿದ ನರ ಬಲಿದ ಬಳ್ಳಿಗಳು ವೆ
ಗ್ಗಳ ಹುಳುವಿನಕೊಂಡ ಬಿಲಗಳು ಒಂದೆಂಟೆ
ರಲಿ ಸೋರುವ ಹೀನ ಜಲ ಪೂರಿತವಾಗಿ
ಅಳಲಿಕೆ ಬಳಲಿಕೆ ತೊಳಲುವ ತೊಳಸುವ
ಒಳಗೆ ಹೊರಗೆ ಬೆಂದು ನಲುಗಿ ಹಲವು ಹಂ
ಬಲ ಬಿಡದಲೆ ಬೆಂಬಲವಾಗಿ ಕೆಲಕಾಲ
ತಿಳಿದು ಬಲಿದು ಆಶೆ ಬಲಗೊಂಡು ಚಂಚಲ
ಉಳಿದಾದ ಕ್ಲೇಶದ ಬಲೆಯೊಳಗೆ ಇಪ್ಪೆ
ನಳಿನಾಕ್ಷ ವಿಜಯವಿಠ್ಠಲರೇಯ ಬಿನ್ನಹ
ಒಲಿದು ಕೇಳುವುದು ಒಡಲ ಉಮ್ಮಳಿಕೆಯ ೪
ಆದಿತಾಳ
ಇನ್ನಾದರೆ ಬಿಡಿಸೊ ಬನ್ನ ಬಡಿಪ ಜನುಮ ಈ
ನಿನ್ನಾಳಿನ ಮನೆಯ ಕುನ್ನಿಯಾದವನೊ
ಕಣ್ಣಿನಿಂದಾದರು ಎನ್ನ ಮಾತರನೋಡು
ಮನ್ನಿಸು ಮುದದಿಂದ ನಿನ್ನವನಾದ ಮೇಲೆ
ಎನ್ನ ಪಾಲಿಸಿದರೆ ನಿನ್ನಾರು ಮೆಚ್ಚುವರೊ
ಬಣ್ಣಿಸುವೆನು ನಿತ್ಯ ವಿಜಯವಿಠ್ಠಲರೇಯ
ಎನ್ನಾಧೀನದದೈವ ಚಿನ್ನುಮಯ ಮೂರುತಿ೫
ಜತೆ
ಸಾಕು ಮಾಡು ತಂದೆ ಸಂಸಾರದೊಳಗಿಂದ
ಶ್ರೀಕರ ಮೂರುತಿ ವಿಜಯವಿಠ್ಠಲರೇಯ೬

ಕಪಿಲನಾಮಕ ಪರಮಾತ್ಮನ ಸ್ತೋತ್ರವೇ

೧೧೬
ಧ್ರುವತಾಳ
ಸಿದ್ದಿದಾಯಕ ಶಿಷ್ಯಜನ ಪರಿಪಾಲ ಪರಮ
ಶುದ್ಧಾತ್ಮ ಸುಗುಣ ಸಾಂದ್ರ ಸುಖವಾರಿಧಿ
ನಿದ್ರಾರಹಿತ ನಿದ್ರಾರಮಣ ನಿರ್ವಿಕಾರ
ಚಿದ್ದೇಹಿ ಸರ್ವಕಾಲ ಸುಂದರಸಾರ
ಪದ್ಮಸಂಭವ ಬಲಿ ಪ್ರಕ್ಷಾಲಿತ ಪಾದ ಮಹಾ
ಹೃದ್ರೋಗನಾಶ ವೈಕುಂಠವಾಸ
ವಿದ್ಯಾತೀತ ವಿಶ್ವನಾಟಕ ನಾರಾಯಣ
ವಿದ್ಯ ಉದ್ದಾರಕ ಉದಧಿಸದನಾ
ಸಿದ್ಧಾದಿ ವಿನುತ ಸಂತತ ಪಾತಾಳವಾಸಿ
ಬುದ್ಧಿ ವಿಶಾಲ ಮಹಿಮ ಪಾಪಹಾರಿ
ಖದ್ಯೋತ ವರ್ಣ ಸಕಲ ವ್ಯಾಪ್ತ ಆಕಾಶ ಅಮಿತ
ಅದ್ವೈತಕಾಯಾ ಮಾಯಾರಮಣ ರಾಜೀವನೇತ್ರಾ
ಅದ್ವಯ ಅನಾದಿ ಪುರುಷ ಚಿತ್ರ
ಕರ್ದಮ ಮುನಿಸೂನು ವಿಜಯ ವಿಠ್ಠಲ ಕಪಿಲ
ನಿರ್ದೋಷ ಕರುಣಾಬ್ದಿ ಸರ್ವರಾಧಾರಿ ೧
ಮಟ್ಟತಾಳ
ಆದಿ ಮನ್ವಂತರದಿ ಜನಿಸಿದ ಮಹದೈವ
ಆದಿ ಪರಬೊಮ್ಮ ಬೊಮ್ಮನಯ್ಯಾ ಜೀಯಾ
ಸಾಧುಜನ ಪ್ರೀಯಾ ಸುತಪ ಮುನಿತಿಲಕಾ
ಬೋಧಶರೀರ ಭಕುತರ ಮನೋಹರ ಹರಿ
ಮಾಧವ ಸಿರಿ ವಿಜಯ ವಿಠ್ಠಲ ವಿಮಲೇಶ
ಮೋದಪತಿ ಕೊಡುವ ಕಪಿಲ ಭಗವನ್ಮೂರ್ತಿ ೨
ತ್ರಿವಿಡಿತಾಳ
ಘನ ಮಹಿಮಾ ಗೌಣಾಂಡದೊಳಗೆ ಲೀಲೆಯಿಂದ
ಜನಸಿ ಮೆರೆದೆ ಬಿಂದುಸರೋವರದಲ್ಲಿ
ಮಿನುಗುವ ದ್ವಯ ಹಸ್ತ ಅಪ್ರಾಕೃತಕಾಯ
ಇನನಂತೆ ಒಪ್ಪುವ ಶಿರೋರುಹವೊ
ಕನಕ ಪುತ್ಥಳಿಯಂತೆ ಕಾಂತಿ ತ್ರಿಭುವನಕ್ಕೆ
ಅನವರತ ತುಂಬಿ ಸೂಸುತಲಿದಕೊ
ಜನನಿ ದೇವಹೂತಿಗೆ ಉಪದೇಶವನು ಮಾಡಿ
ಗುಣಮೊದಲಾದ ತತ್ವವ ತಿಳಿಸಿದೆ
ತನುವಿನೊಳಗೆ ನೀನೆ ತಿಳಿದು ತಿಳಿದೆ ನಿತ್ಯ
ಜನರನ್ನು ಪಾಲಿಸುವ ಕಪಿಲಾಖ್ಯನೆ
ಅನುದಿನ ನಿನ್ನ ಧ್ಯಾನವ ಮಾಡಿ ಮಣಿಯಿಂದ
ಎಣಿಸುವ ಸುಜನಕ್ಕೆ ಜ್ಞಾನ ಕೊಡುವೆ
ಎಣೆಗಾಣೆ ನಿನ್ನಾಲೋಚನದ ಶಕ್ತಿಗೆ ಸಗರ
ಜನಪನಂದನರನ್ನು ಭಂಗಿಸಿದೆ
ಅನುಮಾನವಿದಕಿಲ್ಲ ನಿನ್ನ ನಂಬಿದ ಮೂಢ
ಮನುಜನಿಗೆ ಮಹಪದವಿ ಬರುವುದಯ್ಯಾ
ಮುನಿಕುಲೋತ್ತಮ ಕಪಿಲ ವಿಜಯ ವಿಠ್ಠಲರೇಯ
ಎನಗೆ ಯೋಗ ಮಾರ್ಗವ ತೋರು ತವಕದಿಂದ ೩
ಅಟ್ಟತಾಳ
ಕಪಿಲ ಕಪಿಲ ಎಂದು ಪ್ರಾತಃ ಕಾಲದಲೆದ್ದು
ಸಪುತ ಸಾರಿ ನುಡಿದ ಮಾನವನಿಗೆ
ಅಪಜಯ ಮೊದಲಾದ ಕ್ಲೇಶಗಳೊಂದಿಲ್ಲಾ
ಅಪರಿಮಿತ ಸೌಖ್ಯ ಅವನ ಕುಲಕೋಟಿಗೆ
ಗುಪುತ ನಾಮವಿದು ಮನದೊಳಗಿಡುವುದು
ಕಪಟ ಜೀವರು ಈತನ ಒಬ್ಬ ಋಷಿ ಎಂದು
ತಪಿಸುವರು ಕಾಣೊ ನಿತ್ಯ ನರಕದಲ್ಲಿ
ಕೃಪಣವತ್ಸಲ ನಮ್ಮ ವಿಜಯ ವಿಠ್ಠಲರೇಯಾ
ಕಪಿಲಾವತಾರನು ಬಲ್ಲವಗೆ ಬಲು ಸುಲಭ ೪
ಆದಿತಾಳ
ಬಲಹಸ್ತದಲ್ಲಿ ಯಜ್ಞಶಾಲೆಯಲ್ಲಿ ಕಂ
ಗಳ ಕಪ್ಪಿನಲ್ಲಿ ಹೃಞ್ಯಸ್ಥಾನ ನಾಭಿಯಲ್ಲಿ
ಜಲಧಿ ಗಂಗಾ ಸಂಗಮದಲ್ಲಿ ಗಮನದಲ್ಲಿ
ತುಲಸಿ ಪತ್ರದಲ್ಲಿ ತುರಗ ತುರುವಿನಲ್ಲಿ
ಮಲಗುವ ಮನೆಯಲ್ಲಿ ನೈವೇದ್ಯ ಸಮಯದಲ್ಲಿ
ಬಲುಕರ್ಮಬಂಧಗಳು ಮೋಚಕವಾಗುವಲ್ಲಿ
ಚಲುವನಾದವನಲ್ಲಿ ವಿದ್ಯೆಪೇಳುವನಲ್ಲಿ
ಫಲದಲ್ಲಿ ಪ್ರತಿಕೂಲ ಇಲ್ಲದ ಸ್ಥಳದಲ್ಲಿ
ಬೆಳೆದ ದರ್ಭಗಳಲ್ಲಿ ಅಗ್ನಿಯಲ್ಲಿ ಹರಿವ
ಜಲದಲ್ಲಿ ಜಾಂಬುದ ನದಿಯಲ್ಲಿ ಶ್ಲೋಕದಲ್ಲಿ
ವಲಿಮುಖ ಬಳಗದಲ್ಲಿ ಆಚಾರ ಶೀಲನಲ್ಲಿ
ಘಳಿಗೆ ಆರಂಭದಲ್ಲಿ ಪಶ್ಚಿಮ ಭಾಗದಲ್ಲಿ
ಪೊಳೆವ ಮಿಂಚಿನಲ್ಲಿ ಬಂಗಾರದಲ್ಲಿ ಇನಿತು
ಕಾಲ ಅಕಾಲಕ್ಕೆ ಬಿಡದೆ ಸ್ಮರಿಸು ಕಪಿಲ ಪರಮಾತ್ಮನ್ನ
ಗೆಲುವುಂಟು ನಿನಗೆಲವೋ ಸಂಸಾರದಿಂದ ವೇಗ
ಕಲಿಯುಗದೊಳಗಿದೆ ಕೊಂಡಾಡಿದವರಿಗೆ
ಖಳರ ಅಂಜಿಕೆಯಿಲ್ಲ ನಿಂದಲ್ಲಿ ಶುಭಯೋಗ
ಬಲವೈರಿನುತ ನಮ್ಮ ವಿಜಯ ವಿಠ್ಠಲರೇಯಾ
ಇಳಿಯೊಳಗೆ ಕಪಿಲಾವತಾರನಾಗಿ ನಮ್ಮ ಭಾರವೊಹಿಸಿದಾ
ಜತೆ
ತಮಪರಿಚ್ಛೇದ ಈತನ ಸ್ಮರಣೆ, ನೋಡು ಹೃ
ತ್ಕಮಲದೊಳಗೆ ವಿಜಯ ವಿಠ್ಠಲನ್ನ ಚರಣಾಬ್ಜ ೬

ವಿಷ್ಣುವೇ ಸಕಲ ಚೇತನರಲ್ಲಿಯೂ ಇದ್ದು

೧೨೭
ಧ್ರುವತಾಳ
ಸಿರಿದೇವಿಗೆ ಪೇಳಿ ಭಾಗ್ಯವ ಕೊಡಿಸೆಂದು
ಮರಳೆ ಮರಳೆ ಬೇಡ ಬಂದುದಿಲ್ಲಾ
ಪರಮೇಷ್ಟಿಯ ಕರೆದು ನೊಸಲಲಿ ನಿರ್ಮಿಸಿದ
ಬರಹ ವೆಗ್ಗಳ ಮಾಡೆಂದುಸುರಲಿಲ್ಲಾ
ಪುರ ವೈರಿಗೆ ಆಜ್ಞಾಪಿಸಿ ವೈರಾಗ್ಯವ
ಬರಲೆಂದು ದೀನನಾಗಿ ತುತಿಸಲಿಲ್ಲಾ
ಸುರಪತಿಗೆ ಭಟರನಟ್ಟಿ ಕಾಲಕಾಲಕ್ಕೆ
ತಿರುಗುವ ಮನಸು ನಿಲ್ಲಿಸೆನಲಿಲ್ಲಾ
ಮರುತ ಮಿಕ್ಕಾದ ತತ್ವೇಶ್ವರ ಹಿಡತರಸಿ
ಸರುವ ಕಾರ್ಯವ ಮಾಡಿ ಕೊಡು ಎನಲಿಲ್ಲಾ
ಹರಿಯೆ ನಿನ್ನ ಇಚ್ಛೆ ಎನ್ನ ಸ್ವಭಾವ ಈ
ಪರಿಯಲಿ ಅನಾದಿ ಕಾಲದಿಂದ ಬಿಡ
ದಿರಲಿಕ್ಕೆ ತಿಳಿಯದೆ ಬಲು ಚಿಂತಿಪುದೇನು
ನರಕವಾಗಲಿ ಸ್ವರ್ಗ ಮೇಣು ಲೋಕವಾಗಲಿ
ಪರಿಪರಿ ಭಂಗ ಸುಖತರವಾಗಲಿ ಇಹ
ಪರದೊಳಗೆ ನೀನೆ ಇತ್ತದ್ದಲ್ಲದೆ ಬೇರೆ
ಕರೆದು ಉಪಾಯ ತೋರ ಬಲ್ಲವರಾರು
ಬರಿದೆ ಭ್ರಮೆಯಲ್ಲದೆ ಸಿದ್ಧ ಸಾಧನವಲ್ಲ
ಸಿರಿದೇವಿಗೆ ಆದರು ನಿನ್ನ ಅಪೇಕ್ಷಿಸುವಳಯ್ಯಾ
ನರರ ಪಾಡೇನಿನ್ನು ಯಾತಕ್ಕೆ ಭೀತಿ ಲೇಶ
ಥರವಲ್ಲ ಥರವಲ್ಲ ತೃಣ ಒಂದಲ್ಲಾಡಿಸಲು
ಸರ್ವ ಸ್ವಾತಂತ್ರ ಹರಿ ವಿಜಯ ವಿಠ್ಠಲರೇಯಾ
ಧೊರೆ ನೀನೆ ಇರಲಿಕ್ಕೆ ಆರಾರು ಹಿರಿಯರೋ ೧
ಮಟ್ಟತಾಳ
ಸೂರಿಯಾ ಚಂದ್ರಮ ನಿರುತ ಉದುಭವಿಸಿ
ಆ ರಥಿಗೆ ಬಿಡದೆ ತಿರುಗುವರು ಇಂದು
ಶ್ರೀ ರಮಣ ನಿನ್ನ ಭಯವಿದ್ದುದರಿಂದ
ತಾರಾ ಪಥದಲ್ಲಿ ಸಂಚರಿಸುವರೂ
ಧಾರುಣಿ ಜನರೆಲ್ಲ ಒಂದಾಗಿ ಶಕ್ತಿ
ಮೀರಿ ಸಾಹಸ ಮಾಡೆ ನಿಲಲಾಪತಿ ಇವರು
ಓರಂತೆ ಸರ್ವ ಅಭಿಮಾನ್ಯರ ವ್ಯಾ
ಪಾರ ನಿಶ್ಚಯವಾಗಿ ಸಂತತ ಒಪ್ಪುತಿದೆ
ಕಾರಣ ಮೂರುತಿ ವಿಜಯ ವಿಠ್ಠಲರೇಯ
ಆರಾಧಿಸುವರ ಒಡನೆ ತಿರುಗುವನೆ ೨
ತ್ರಿವಿಡಿತಾಳ
ಬೊಮ್ಮನೊಳಗೆ ಬೊಮ್ಮ ಶಿವನೊಳಗೆ ಶಿವರೂಪ
ರಮ್ಮೆಯರಸ ನೀನೆ ವಾಸವಾಗಿ
ಒಮ್ಮನದಲಿ ಅವರ ವಶವಾಗಿ ಸರ್ವದಾ
ಅಮ್ಮಮ್ಮಾ ವ್ಯಾಪಾರಗಳ ಮಾಡುವೆ
ಸುಮ್ಮನಸರಲ್ಲಿ ಶುಭಕರ್ಮ ಎಸಗೂವೆ
ಹಮ್ಮಿನವರಲ್ಲಿ ಅಶುಭ ಕರ್ಮ
ನೆಮ್ಮನೆವವಾಗಿ ನಡಿಸುವ ನಾನಾ ಲೀಲಾ
ಸಂಬಂಧ ಒಂದಿಲ್ಲ ನಿನ್ನವಿನಾ
ಬೊಮ್ಮಾಂಡ ಪುಟ್ಟಿಸಿ ಒಳಗೆ ಪ್ರೇರಕನಾಗಿ
ಪೆರ್ಮೆ ಇಂದಲಿ ಅರಘಳಿಗೆ ಬಿಡದೆ
ನಮ್ಮನ್ನ ಸಲಹುವ ವಿಜಯ ವಿಠ್ಠಲರೇಯ
ನಿಮಿತ್ಯ ನೀನೆಂದರ್ಜುನಗೆ ಪೇಳಿದೆ ೩
ಅಟ್ಟತಾಳ
ಸುರ ಮುನಿ ಪಾಡಿದಾ
ಕರಿರಾಜ ಕೂಗಿದಾ
ಸ್ಮರಸಿದಜಾ ಮಿಳಾ
ಸುರನದಿಸೂನು ಭ
ಳಿರೆ ಶಪ್ತ ಮಾಡಿದಾ
ಧರಣೀಶ ಬಲಿದಾನ
ವೆರದಾ ಪ್ರಲ್ಹಾದನು
ಮೊರೆ ಇಟ್ಟ ಭೃಗು ಬಂದು
ಭರದಿಂದ ವದದನೆ
ಹರನು ರೂಪವ ನೋಡಿ
ಮರಳು ಸುತ್ತಿದನೇನೊ
ತರುಳ ಧ್ರುವನು ತಪ ಧರಿಸಿದನೆ ತಾನೆ
ಭರತನು ಮಹಾ ಜಡ
ತೆರನಾಗಿ ಇದ್ದನೆ
ವರ ಅಂಬರೀಷ ರಾ
ಯರು ಮೊದಲಾದಂಥ ಪರಮ ಭಕ್ತರು ಸಂ
ಚರಿಸಿದ ವ್ರತ ಧರ್ಮ
ಪರಿ ಪರಿ ಚತುರ್ದಶ
ಧರೆಯೊಳಗೆ ತುಂಬಿ
ಇರಲಾಗಿ ಸಕಲವಿ
ಸ್ತರಮೆಲ್ಲ ನೋಡೆ ಇ
ವರಿಂದಾದದ್ದಲ್ಲಾ
ಹರಿ ನೀನೆ ಒಳಗಿದ್ದು
ಸುರರಾದಿಗಳಿಗೆ ಗೋ
ಚರವಾಗದೆ ತೀವರ
ಪ್ರೇರಿಸಲು ಅ
ವರು ನಿನ್ನ ಪೂಜಿಸಿ
ದರು ಎಂಬೊದಲ್ಲದೆ
ಎರಡನೆ ಮಾತಿಲ್ಲಾ
ಪರಮೂರ್ತಿ ವಿಜಯ ವಿಠ್ಠ
ಲರೇಯ ಸ್ವಾತಂತ್ರ ಚರಾ
ಚರದಲಿ ನೀನೆ ಪರಾಪರದಲ್ಲಿ ಸತ್ಯ ೪
ಆದಿತಾಳ
ಕಷ್ಟ ಹಾರೈಸದಲೆ ತಾನಾಗಿ ಬರುವುದು
ಇಷ್ಟೇ ಮಾತುರ ಕಷ್ಟ ಬರಲೆಂದ ನರನುಂಟೆ
ಶ್ರೀಷ್ಟೇಶ ಸಂತೋಷವಾಗಲೆಂದರೆ ಬಾರದು
ಭ್ರಷ್ಟ ಸಂಕಲ್ಪಗಳು ನಮ್ಮಿಂದ ಮಾಡಿಸುವೆ
ಕಷ್ಟಕ್ಕೆ ದೈತ್ಯರಿಗೆ ಪ್ರೇರಣೆಯಾಗಿ ಒಂ
ದಿಷ್ಟು ಕೊರತೆಯಾಗದಂತೆ ನೀನುಣಿಸುವೆ
ಶಿಷ್ಟ ಜನರಿಗೆ ನೀನೆ ಪ್ರೇರಿಸಿ ಬಿಡದೆ
ಇಷ್ಟು ಪುಣ್ಯಗಳು ಅನುಭವಿಸುವಂತೆ ಮಾಡುವೆ
ಕಷ್ಟ ಸುಖಗಳೆರೆಡು ತಾನಾಗಿ ಬರಲಿಕ್ಕೆ
ಶಿಷ್ಟ ದುಷ್ಟರಿಗೆಲ್ಲ ಪೇಳೆನಲ್ಯಾತಕೆ
ಪುಟ್ಟು ಸಾವುಗಳಿಗೆ ನಿರ್ಮಾಣಗೈಸಿದಾಗ
ಅಷ್ಟು ಸಂಕಲ್ಪಗಳು ನಿನ್ನಿಂದ ಸಿದ್ಧವಯ್ಯಾ
ಶಿಷ್ಯ ಜನರ ಪ್ರೀಯ ವಿಜಯ ವಿಠ್ಠಲರೇಯಾ
ಮುಟ್ಟಿ ನೆನಿಸಿದವರ ಮನಸಿನಂತೆ ಮಾಳ್ಪೆ ೫
ಜತೆ
ಪೊಸದಾಗಿ ಕರ್ಮಗಳು ಬರುಲುಳ್ಳವೆ ಇಲ್ಲಾ
ಅಸುರ ನಿರ್ಜರ ಗುರು ವಿಜಯ ವಿಠಲರೇಯಾ ೬

ರಾಮೇಶ್ವರದ ಮಹಾತ್ಮ್ಯೆಯನ್ನು ತಿಳಿಸುವ

೮೯. ರಾಮೇಶ್ವರ
ಧ್ರುವತಾಳ
ಸೀತಾರಾಮನು ಬಂದು ಸೇತು ಬಂಧಿಸಿ ಖಳರಾ |
ಕೋತಿಗಳಿಂದಲಿ ಘಾತಮಾಡಿಸಿ |
ಪಾತಕ ರಾವಣನ್ನ ಯಾತನಿಗೆ ಕಳುಹಿ |
ಚಾತುರ್ಯದಲ್ಲಿ ಸುರವ್ರಾತವನು ಪಾಲಿಸಿ |
ಭೂತನಾಥನ ಇಲ್ಲಿ ಪ್ರೀತಿಯಿಂದ ಪ್ರತಿಷ್ಟಿ |
ಸಿ ತಾನು ಪೆಸರಾದ ಭೂತಳದೊಳಗೆಲ್ಲ ಭೂತ ಪ್ರಮಥ |
ಮಥ ಪೇತಾವೃತಗಳಿಂದ ಜಾತವೇದಸನ ಮನ |
ಭೂತಳಾಧಿಪ ರಘುನಾಥನ ಚರಣಾಂಬುಜ |
ತಾ ತುತಿಸುತಿರೆ ಪೀತಾಂಬರ ಧರ ಶ್ರೀ ವಿಜಯವಿಠಲರೇಯಾ ೧
ಮಟ್ಟತಾಳ
ಸೇತು ಮಧ್ಯದಲಿ ಒಪ್ಪುತಾ ಪೊಳೆದನಾಗ |
ಮಾಧವನು ಗಂಧ ಮಾಧನಗಿರಿಯಲ್ಲಿ |
ವೇದಗಳು ತುತಿಸೆ ವೇಧನು ಕೊಂಡಾಡೆ |
ವೇದ ಪುರುಷಾ ಲವಣೋದಧಿ ಮಧ್ಯದಲ್ಲಿ |
ಸಾಧುಸಜ್ಜನರೊಡನೆ ಮೋದವಾಲಗವಾದನು ಹರುಷದಲಿ |
ಶ್ರೀದೇವಿಯರಸಾ ವಿಜಯವಿಠಲ ರಾಮಾ |
ಕ್ರೋಧರಸದೆ ಒಡೆದು ತ್ರಿಧರೆಯೊಳು ಮೆರೆದಾ ೨
ರೂಪಕತಾಳ
ಈ ಪರಿಯಲಿ ವಾಲಗ ಪರಮಪುರುಷ |
ಆ ಪಾರ ಬಗೆಯಲಿ ತಾ ಪ್ರೀತನಾಗಿರೆ |
ಆ ಪತ್ತಿಗೆ ಬಂದು ಶರಣೆಂದು ಮೊರೆಹೊಕ್ಕ |
ಆ ಪನ್ನ ವಿಭೀಷಣಾ ಕರವನ್ನು ಮಗುಚಿ |
ಭೂಪಾರಾ ಶಿರೋರತುನ ಬಿನ್ನಹಾ ಕೇಳೆಂದು |
ಪಾಪರಹಿತ ಭಕ್ತ ಪೊಗಳಿದನೂ |
ಶ್ರೀಪತಿ ರಘುರಾಮಾ ನೀ ಸೇತು ಉಳುಹಿದರೆ |
ಆ ಪತ್ತ ಅಡರುವದು ಧರಿಗೆನಲೂ |
ಚಾಪಧರಾಗ್ರಣಿ ವಿಜಯವಿಠಲ ಲಂಕಾ |
ದ್ವೀಪ ಪತಿಯಾ ಮಾತನ್ನು ಪಾಲಿಸಿದನು ೩
ಝಂಪೆತಾಳ
ಸೇತುವಿನ ಛೇದಿಸಿ ಮೂರು ಭಾಗವ ಮಾಡಿ |
ಸೇತು ಮಾಡಿದನು ಸುರನರದಾನವ |
ವ್ರಾತಗಳು ಮಿಂದು ಕೃತಾರ್ಥನಾಗುವದಕ್ಕೆ |
ಸೀತಾರಾಮನು ಬಲು ಪ್ರೀತಿಯಲ್ಲಿ |
ಪ್ರಾತರಾ ಮಧ್ಯಾನ್ನಾ ಸಾಯಂಕಾಲದ ಕಾಲಾ |
ತೀತಾಗಗೊಡದೆ ಬಲು ಭಕುತಿಯಲ್ಲೀ |
ಜಾತ ಉತ್ತಮರೆಲ್ಲಿ ನಿತ್ಯನೈಮಿತ್ಯಗಳು |
ಶಾತದಲ್ಲಿ ಮಾಡಲು ಸರ್ವೋತ್ತುಮಾ |
ವಾತ ನಿಜಗುರು ರಘುನಾಥ ವಿಜಯವಿಠಲಾ |
ಸೇತುಯಾತ್ರಿಗೆ ಬರಲು ಪ್ರೀತಿಮಾಡುವನು ೪
ತ್ರಿವಿಡಿತಾಳ
ರತುನಾಕಾರ ಮಹೋದಧಿ ಸಂಗಮದಲಿ (ಅಪರಿ) ಅಪಾರ |
ವಿತವಲ್ಲಿ ಮುಖ್ಯರು ವಾಯುಜನ ಸ |
ಹಿತಾ ಕೃತೆನುತೆ ಲಕುಮಿ ಎಂದೆನಿಸುವ ವೈದೇಹಿ |
ರತಿ ಪತಿ ಪಿತ ನಾರಾಯಣನೆ ರಾಮಾ |
ಅತಿಶಯದಿಂದ ತೀರಥದೊಳು ಸನ್ನಿಧ |
ಪ್ರತಿದಿನದಲಿ ಬಿಡದೆ ಇರುತಿಪ್ಪರು |
ಹಿತದಿಂದ ನಿಂದು ವಂದನೆ ಗೈದವರಿಗೆ |
ಮತಿಯಾಗುವದು ಸೌಭಾಗ್ಯ ಮ್ಯಾಲೆ |
ಗತಿಯಾಗುವದಿದಕೆ ಸಂಶಯ ಲೇಶವಿಲ್ಲ |
ಚತುರಾತರು ಕೇಳಿ ಸಂತೋಷರಾಗಿ |
ಸತುದೈವ ರಾಘವ ವಿಜಯವಿಠಲರೇಯಾ |
ಪತಿಯಾಗಿಪ್ಪನು ಇಲ್ಲಿ ಪಿತಮಹಾದ್ಯರಿಗೆಲ್ಲಾ ೫
ಅಟ್ಟತಾಳ
ಹತ್ತು ಸಾವಿರ ವಿಪ್ರವಧೆ ಕನಕಸ್ತೇ[ಯ] |
ಮತ್ತೆ ಇದರಷ್ಟು ಸುರಾಪಾನಾ ಗುರುತಲ್ಪಾ |
ಇತ್ತಂಡಾದಲಿ ಸಂಸರ್ಗಿಕೋಟಿ ಇರೆ |
ಎತ್ತಲಾದರು ಏನು ನರರು ಒಮ್ಮೆ ಬಂದು |
ಚಿತ್ತಶುದ್ಧನಾಗಿ ನಿಂದು ತುತಿಸಿದಾರು |
ಸೋತ್ತುಮನಾಗುವ ಸರ್ವಕಾಲದಲ್ಲಿ |
ಕತ್ತತಿ ಹರ ನಮ್ಮ ವಿಜಯವಿಠಲ ದೇ |
ವೋತ್ತುಮಾನೊಲಿದು ಮುಕ್ತಿಯನೀವನು ೬
ಆದಿತಾಳ
ಪುಸಿ ಎನ್ನದಿರಿ ಧನುಸುಕೋಟೆ ಮಹಿಮೆ ಪ |
ಠಿಸಿ ಕೇಳಿದವಗೆ ಲಾಲಿಸಿ ಪೇಳಿದವಗೆ |
ವಿಷಯಾದಿಗಳ ಮಹಾಪ್ರಸರವಳಿದು ಯಮನ |
ಘಸಣಿಗೆ ತಪ್ಪಿಸಿ ಗತಿಗೇರಿಸುವುದು ಶುಭದಿಂದ |
ವಸುಧಿಯೊಳಾವ ಮಾನಿಸನಾದರು ಸೇ |
ವಿಸಿದರು ಪುಣ್ಯ ಸಿದ್ಧಿಸುವುದು ವೇಗದಲ್ಲಿ |
ಅಸುರ ವಿರೋಧಿ ರಾಮಾ ವಿಜಯವಿಠಲರೇಯ |
ಪೆಸರಾದ ಸೇತು ಬಂಧಿಸಿ ಶ್ರುತಿ ಸ್ರ‍ಮತಿಯೊಳು ೭
ಜತೆ
ಮೊದಲು ನರರು, ಮಧ್ಯಾದೇವಾಂತ್ಯದನು ಜರುತ್ರಿ |
ವಿ[ಧ]ಮಾಡಿದ ರಾಮಾ ವಿಜಯವಿಠಲನೊಲಿದು ೮

ಪಂಢರಾಪುರದ ವಿಠಲನು ಕೇವಲ

೮೦. ಪಂಢರಪುರ
ರಾಗ:ಭೈರವಿ
ಧ್ರುವತಾಳ
ಸುಂದರಮಯವಾದ ದ್ವಂದ್ವ ಚರಣವನ್ನು |
ಇಂದು ಕಂಡೆನು ಬಂದು |
ಅಂದು ಕಾಳಿಂದಿಯಾ ಧಮುಕಿ ನಾ |
ಗೇಂದ್ರನಾ ಫಣಿಯಲ್ಲಿ ಕುಣಿಕುಣಿದಾಡಲು |
ದುಂದುಭಿರಭಸಾ ಮೊರಿಯೆ ಗಗನ |
ದಿಂದಲೆ ಪೂಮಳೆ ಬಿಡದೆ ಸುರಿಯೆ |
ವೃಂದಾರಕವೃಂದ ಚಂದಾಗಿ ಸರಸಿಜ |
ನಂದನ ಸಹಿತ ವಂದನೆ ಗೈವುತಿರೆ |
ನಂದನಂದನ ಗೋಪಿಯ ಕಂದ |
ಅಂದಂದಾಡಿದ ಗೋವಿಂದ ವಿಜಯವಿಠಲಾ |
ನಿಂದು ನಲಿವಿಂದಾ ಮೆರೆವ [ನೀ]ನು ಇಲ್ಲಿ |
ಇಂದಿರೆಯರಸನ ನಂದ ಮೂರುತಿಯಾ[ದೆ] ೧
ಮಟ್ಟತಾಳ
ಇದೆ ವೈಕುಂಠಾ ಇದೆ ಶ್ವೇತ ದ್ವೀಪ |
ಇ[ದೆ ಅ]ನಂತಾಸನ ಇದೆ ಗೋಕುಲವೋ |
ಇದೆ ವೃಂದಾವನ ಇದೆ ದ್ವಾರವತಿ |
ಇದೆ ನಮ್ಮಾ ಯದುಪತಿ ಇಪ್ಪಾನಗರಾ |
ಇದೆ ನಮ್ಮ ತಿರುಮಲಾ ವಿಜಯವಿಠಲನಿಪ್ಪ ಸಂಭ್ರಮವೋ ೨
ತ್ರಿವಿಡಿತಾಳ
ಧನ್ಯನಾನಾದೆನೋ ದಾನ್ನವಾರಿಯಾ ಕಂಡು |
ಎನ್ನ ಸಂಸ್ಕಾರಕ್ಕೆ ಪಡೆಗಾಣೆ ಪಡೆಗಾಣೆ |
ಅನ್ಯಾಯಗೊಳಿಸುವ ದುರುಳ ವೃತ್ತಿಗಳೆಲ್ಲಾ |
ಬೆನ್ನು ತೋರಿದವಯ್ಯಾ ಬೀಳುವಾದರಿಯಾದೆ |
ಅನ್ನ್ಯಾ ದೇವರಿಗೆ ಶಿರವಾಗಿ ಶಿರವಾಗಿ ಶ |
ರಣು ಶರಣೆನ್ನಿನೋ ಆವಾವ ಕಾಲದಲ್ಲಿ |
ರನ್ನ ಕೈ ಸೇರಾಲು ಗಾಜಮಣಿ ಬಯಸುವೆನೆ |
ತನ್ನಿಂದ ತಾವೊಲಿದ ವಿಜಯವಿಠಲ ಕರ |
ವನ್ನು ಪಿಡಿಯೆ ಎನಗೆ ಇನ್ನು ಯಾತರ ಭೀತಿ ೩
ಅಟ್ಟತಾಳ
ಮೈಲಿಗಿಯವ ನಾನಾದಡೆ ಜಗದಯ್ಯಾ |
ಅಯ್ಯಾನೆ ನಿನ್ನ ಮಂಗಳವಾದ ನಾಮಕ್ಕೆ |
ಮೈಲಿಗಿ ಉಂಟೇನೋ ಮದನಾರಿಯ ಒಡೆಯಾ |
ಮೈಲಾರಿ ಜೊಕ್ಕನು ಆವಕುಲದವ |
ಅಯ್ಯಾ ವಿಜಯವಿಠಲಾನುದಿನ ನೀನೊಲಿಯೆ |
ವೈವಾದು ಸದ್ಗತಿಗೆ ಒಂದೆ ನಾಮವನೆನಿಯ ೪
ಆದಿತಾಳ
ಹರಿದು ಎಂತನ್ನಯಿಯಾದ ನರರಿಗೆ |
ಶರಣಜನರಿಗೆ ಬಲು ಮರಳು ಕಾಣೋ ಪಾಂಡುರಂಗಾ |
ವರ ಇಟ್ಟಂಗಿ ಮೇಲೆ ಸ್ಥಿರವಾಗಿ ನಿಂದಾ |
ಸಿರಿಧರಪತಿ ವಿಜಯವಿಠಲಾ |
ಗುರುಪುರಂದರನ ಪ್ರೀಯಾ ೫
ಜತೆ
ಪಂಢರಿರಾಯಾ ಪ್ರಾಕೃತವಿರಹಿತಕಾಯಾ |
ಪುಂಡರೀಕ ವರದ ವಿಜಯವಿಠಲರೇಯಾ ೬

ಸುಖದುಃಖಗಳೆರಡೂ ಹಗಲು ರಾತ್ರಿಗಳಂತೆ

೧೨೮
ಧ್ರುವತಾಳ
ಸುಖ ದು:ಖಗಳು ಎರಡು ಅನುಭವಿಸದೆ ಬಿಡದು
ಅಖಿಳ ಕಾಯುವ ತೊತ್ತು ಬಂದರಾಗೆ
ಅಖಂಡಿತವಾಗಿ ಸ್ವರ್ಗ ಮೃತ್ಯು ಪಾತಾಳ ಗಿರಿ
ಶಿಖರ ಕಾನನ ದೇಶ ಸುತ್ತೆ ಪಂಚ
ಮುಖ ಮೊದಲಾದ ನಿರ್ಜರರಿಗೆ ತಪ್ಪುವುದೇ
ನಖಿಳ ಬಗೆಯಿಂದ ಯೋಚಿಸುತ್ತ
ನಖಶಿಖ ಪರಿಯಂತ ನೋಡಿದ ಕಾಲಕ್ಕು
ಅಖಿತ ಪುಶಿಯಾಗದು ನಿರ್ಮಿಸಿದದ್ದು
ದು:ಖವಾದೀತೆಂಬಿಯಾ ನೋಡಿದರೆನಗಿದು
ಸುಖವಾಗಿ ತೋರುತಿದೆ ವಿಚಾರಿಸೆ
ಸುಖನಾಗಿ ಇಪ್ಪೆ ದೇವ ಬಹು ಜನ್ಮದಲಿ ನಾನಾ
ದು:ಖವಿರೆ ಒಂದರಿಂದ ಪೋಗಾಡಿದೆ
ಮಖ ಮೌನ ಕರ್ಮಗಳು ಇಲ್ಲದ ಮನುಜಗೀ
ಸುಖ ಬಪ್ಪದೆಯೊ ಹರಿ ನೀನಿತ್ತದೋ
ಮುಖಭೋಕ್ತ ನಮ್ಮ ಸಿರಿ ವಿಜಯ ವಿಠ್ಠ ನಿತ್ಯ
ಮುಖ ದಯಾಪರ ಎನಗಿಂದು ಮಾಡಿಸುವುದು ೧
ಮಟ್ಟತಾಳ
ರಾಶಿಯೊಳಗೆ ಬಂದು ಕಾಳು ಪೋಗಲು ತಿರುಗಿ
ಲೇಶ ಬಿಡದೆ ಬಂದ ಆವಟಿಗನು ಅಳಿಯೇ
ರಾಶಿ ಕಡಿಮೆ ಉಂಟೆ ನೋಡಲು ಕೇಳಲು
ಕ್ಲೇಶವೆ ಎನಗಿಲ್ಲ ಎಂದೆಂದಿಗೆ ದೇವಾ
ತೋಷವಾಗುವದಯ್ಯಾ ಶುದ್ಧ ಮನಸು ಇದೇ
ವಾಸುದೇವ ರಂಗ ವಿಜಯ ವಿಠ್ಠಲ ನಿನ್ನ
ದಾಸತನವೆ ಒಂದೇ ಸಂತತಕರಿಸುವುದು ೨
ತ್ರಿವಿಡಿತಾಳ
ಎನ್ನ ಯೋಗ್ಯತದಿನಿತು ಜ್ಞಾನ ಭಕುತಿ ವೈರಾಗ್ಯ
ಮುನ್ನೆ ದ್ರವ್ಯ ಪೂಜೆ ಮೃಷ್ಟಾನ್ನ ಭೋಜನ
ಮನ್ನಣೆ ಕೀರ್ತನೆ ಕೀರ್ತಿ ಸತ್ಪುಣ್ಯ ಉ
ತ್ಪನ್ನ ವಿಶೇಷ ಸ್ವಧರ್ಮ ಉತ್ತಮ ಸೇವೆ
ಘನ್ನ ವ್ರತಗಳು ತೀರ್ಥಯಾತ್ರೆ ವಾಕ್ಸರಣಿ
ಚನ್ನಾಗಿ ಶಿಷ್ಯ ಸಂಪತ್ತು ಸರ್ವಾಭೀಷ್ಟ
ಮನ್ನಿಸಿ ದಯದಿಂದ ನೀನಿತ್ತು ಇರಲಾಗಿ
ಇನ್ನು ಕ್ಲೇಶಗಳುಂಟೆ ಗುಣಿಸಿದರೂ
ಕಣ್ಣು ಸುಳುವಿನೊಳು ಕಡ್ಡಿ ಕಾಣಿಸಿದರೆ
ಮನುಜ ಕುರುಡನೆ ಧರಣಿ ಮೇಲೆ
ನಿನ್ನ ಕರುಣದಿಂದ ಸಕಲ ಸೌಖ್ಯಗಳಿರೆ
ಗಣ್ಯವೆ ಬರುತಿಪ್ಪ ಮೋಹಕ ಲೀಲೆ
ಚನ್ನ ವಿಜಯ ವಿಠ್ಠಲ ನಿನ್ನ ನಾಮ ಸ್ಮರಣೆ
ಚನ್ನಾಗಿ ಇರಲಿ ಎನಗಾನಂದ ಆವಾಗ ೩
ಅಟ್ಟತಾಳ
ತರಣಿ ಕಾಂತಿಯ ನೋಡೆ ನರನ ಎರಡು ಕಣ್ಣು
ತೆರಿಯಗೊಡದೆ ಕುಕ್ಕಲಿರದು ನೋಡಗೊಡದು
ತರಣಿ ಸ್ವಭಾವವಿದೆ ನಿರುತ ದೋಷವಿಲ್ಲಾ
ನರನ ನೋಟದ ದೋಷ ಸರಿ ಎಂದು ತೋರುತದೆ
ಹರಿ ನಿನ್ನ ಸ್ವಭಾವ ಅರಿದರೆ ಇದೆ ಸಿದ್ದ
ಮರಳೆ ದೋಷಂಗಳು ನರನಿಂದಾಗುವುದಯ್ಯಾ
ಪರಮಾತ್ಮ ಗುಣನಿಧಿ ವಿಜಯ ವಿಠ್ಠಲ ನಿನ್ನ
ಚರಿತೆ ಒಂದಾದರೂ ಪರಿಮಿತ ಕಾಣಬಹುದು ೪
ಆದಿತಾಳ
ಆನಂದ ಮತ್ತೊಂದುಂಟೆ ನೀನೊಲಿದ ಮೇಲೆ
ನಾನೆಂಬೊ ಮಾತುಗಳೂ ಮಾಣಿಸೋ ಎಲೊ ದೇವ
ನಾನಾ ಭೋಜನ ನನಗೆ ದೊರಕಿದ ಮೇಲೆ ಕಾಟಿ
ಕಾಣೆನೆಂದು ಹಲುಬಿ ಪೇಳುವನೇನೊ ತಿರುಗಿ
ಮಾನಸದಲಿ ಪೊಳೆವ ವಿಜಯ ವಿಠ್ಠಲ ನಿನ್ನ
ಧ್ಯಾನವನೊಂದು ಕೊಡೊ ದುರ್ಗತಿಯಾಗದಂತೆ ೫
ಜತೆ
ನಿನ್ನ ಭಕ್ತರ ಯೋಗ್ಯತೆ ನೀನೆ ಬಲ್ಲೆ ಕಾಣೋ
ಅನ್ಯರು ತಿಳಿಯರು ವಿಜಯ ವಿಠ್ಠಲರೇಯಾ ೬

ದಾಸರು ಭಗವಂತನನ್ನು ಮತ್ತೆ

೮೭
ಧ್ರುವತಾಳ
ಸುಖದ ದೈವವೆಂದು ಸತತದಲಿ ಸ್ತುತಿಸಲು
ಮುಖವ ತಿರುಹುವರೆ ಮುರವಿರೋಧಿ
ಅಖಿಳ ಲೋಕದಲ್ಲಿ ಭಜಿಸುವ ಭಕ್ತರಿಗೆ
ಸಖನಾಗಿ ರಕ್ಷಿಸುವ ಸರ್ವೋತ್ತಮ
ಪಖದಲ್ಲಿಯಿಟ್ಟು ಪರಿಪಾಲನೆಯ ಮಾಡಿ
ದುಃಖದಿಂದ ದೂರನೆನಿಸೊ ದುರ್ಲಭನೆ
ಮುಖಜನು ನಾನಯ್ಯ ಮುಕುತಾರ್ಥ ಬಾಹೊದೇನೊ
ನಿಖಿಳ ತಾಮಸಂಗಳು ನಿನಗೆಲ್ಲೊ
ಅಖಂಡ ಪ್ರತಾಪ ನಮ್ಮ ವಿಜಯವಿಠ್ಠಲ ನಿನ್ನ
ನಖವೆಂಬೊ ಸುರತರು ನೆಳಲಿಂಬುಗೊಡೊ ೧
ಮಟ್ಟತಾಳ
ಜನನಿ ತನುಜಗೆ ಪಾಲು ಕುಡಿಸುವಾಗ
ನೊಣ ಬಿದ್ದಿರಲು ಉದಾಸೀನ ಮಾಡುವಳೇನೊ
ಜನಮ ಜನುಮಕೆ ಜನನಿಯಾಗಿ ನೀನೆ
ಎನಗೊಲಿದಿರಲು ಸಾಧನ ಪುಣ್ಯವೆಂಬೊ ಪಾ
ಲಿನ ಮಧ್ಯದಲಿ ಕಪ್ಪನೆ ಬಿದ್ದಿರಲುದಾ
ಸೀನ ಮಾಡುವರೇನೊ ಸನಕ ಸನಂದನ ಸರ್ವೋತ್ತಮ
ಸನತ್ಕುಮಾರ ವಂದ್ಯ ವಿಜಯವಿಠ್ಠಲರೇಯ
ಕ್ಷಣ ಪ್ರತಿಕ್ಷಣಕೆ ಎನ್ನನು ಪಾಲಿಪ ದೈವ ೨
ತ್ರಿವಿಡಿ ತಾಳ
ಉಪವಾಸದವನಿಗೆ ಊರು ತುಂಬಿದರೇನು
ಅಪಹಾಸಗೊಳಿಸುವ ಗೆಳೆಯನಾದರೇನು
ಕಪಟ ಬಿಡದವನ ಕೂಡ ಉಂಡರೆ ಏನು
ಕುಪಿತ ಬಿಡದವನು ಕುಲಜನಾದರೆ ಏನು
ಉಪಕಾರರಿಯದವನು ಊಟಕೆ ಬಂದರೇನು
ಹಪ ಹಪ ಉಣಿಸುವ ಆಪುತನಾದರೆ ಏನು
ಚಪಲಾತನದಲಿಯಿದ್ದ ಸತಿಯ ಸಂಗತಿ ಏನು
ಕೃಪೆಯ ಮಾಡದವನ ಚರಣ ತೊಳೆದರೇನು
ತಪಸಿಗಳೊಡೆಯ ನಮ್ಮ ವಿಜಯವಿಠ್ಠಲ ನಿನ್ನ ಆ-
ಲಾಪ ಕಾಣದಿರಲಾ ಅಪವರ್ಗದಗೊಡಿವೇನೊ ೩
ಅಟ್ಟತಾಳ
ಇಷ್ಟು ದಿನ ನಿನ್ನ ಹಾರೈಸಿಕೊಂಡವನ
ಭ್ರಷ್ಟನ ಮಾಡಿ ನೋಡುವರೇನೊ ಹರಿಯೆ
ಮೊಟ್ಟ ಮೊದಲೆ ಸುಮ್ಮನಿದ್ದರೆ ನಿನಗೆ ನಾ
ನಿಷ್ಟು ಪರಿಯಲ್ಲಿ ಚಾಲ್ವರಿವೇನೆ
ನಿಷ್ಠನೆಂದೆನಿಸಿ ಬಲು ಪರಿಯಿಂದಲಿ
ಸೃಷ್ಟಿಯೊಳಾಭಾಸನೆನಿಸುವರೆ
ಕೊಟ್ಟ ಮಾತಿಗೆ ತಪ್ಪದ ದೈವಾವೆ
ವೃಷ್ಣಿ ಕಲೋದ್ಭವ ವಿಜಯವಿಠ್ಠಲರೇಯ
ಅಟ್ಟಹಮ್ಮವ ಬಿಡಿಸಿ ಶಿಷ್ಟರೊಳಗಿಡೊ ಒಮ್ಮೆ ೪
ಆದಿತಾಳ
ಹೊನ್ನು ಹಣವ ಕೊಡಿಸಲಿ ಬ್ಯಾಡ
ಮನ್ನಣೆಯ ಮಾಡಿಸಲಿ ಬ್ಯಾಡ
ಎನ್ನದೆಂಬೊ ಮಾತು ಎಂದಿಗನ್ನ ಅನಸ ಬ್ಯಾಡ
ನಿನ್ನವನೊ ನಿನ್ನವನೊ ನಿನ್ನವನೆಂಬೋದು
ಅನ್ನಂತ ಕಾಲದಲ್ಲಿ ಅನ್ನಿಸಿ ಪ್ರೀತಿ ಬಡಿಸೊ
ಕಣ್ಣಿಗೆ ಸುಳಿದು ನಿತ್ಯ ಮೂರ್ತಿಯ ತೋರೊ
ಚನ್ನ ವಿಜಯವಿಠ್ಠಲರೇಯ ಸಂ
ಪನ್ನ ಎನ್ನ ಸುಖದಲ್ಲಿಡೊ ೫
ಜತೆ
ಮುದ್ದು ಮುಖವ ತೋರೊ ಮುಚಕುಂದ ವರದಾನೆ
ಎದ್ದು ಕರವ ಮುಗಿವೆ ವಿಜಯವಿಠ್ಠಲರೇಯ ೬

ಶ್ರೀರಾಮಾವತಾರದ ಸ್ತೋತ್ರವಾದ ಈ ಸುಳಾದಿಯಲ್ಲಿ

೧೨೭
ಧ್ರುವತಾಳ
ಸುತ್ತ ವಿರಜಾನದಿ ರತ್ನಮಯದ ಏಳು
ಸುತ್ತಿನ ಕೋಟಿ ಪಚ್ಚೆ ಮುತ್ತು ವೈಢೂರ್ಯದಿಂದ
ಕೆತ್ತಿದ ಪಲಗೆ ಕಾಳಗತ್ತಲೆ ಹರಿಸುವ
ಎತ್ತಿದ ಸೂರ್ಯಪಾನ ಪತಾಕೆಗಳ ಗಲಭೆ
ಎತ್ತ ನೋಡಿದರತ್ತ ನೃತ್ಯಗೀತವಾದ್ಯ
ಇತ್ತಂಡದಲಿ ನಿಂದಾ ಬೆತ್ತದವರ ಸೊಲ್ಲು
ಹತ್ತು ದಿಕ್ಕುಗಳಂಜಿಸುತಲಿಪ್ಪ ತೆರದಿ
ಚತ್ತುರ ದಿಕ್ಕಿನಲ್ಲಿ ಉತ್ತರದಿ ನಾಲ್ಕು
ತತ್ಥಳಿಸುವ ದ್ವಾರ ಉತ್ತಮ ಸರೋವರ
ಮತ್ತೆ ಆನಂದವನ ಅತ್ತಲತ್ತಲಾಡುವ
ಸತ್ವ ಶರೀರಗಳ ಉತ್ತಮಾಂಗಗಳೆ ತೂ
ಗುತ್ತ ಸ್ವೇಚ್ಛೆಯಿಂದಾ
ನಿತ್ಯ ಕ್ರೀಡೆಯಲ್ಲಿ ಭರಿತವಾಗಿಪ್ಪರು
ಸತ್ಯವಲ್ಲದೆ ಪುಸು ಉತ್ತರವೆಂಬೊದಿಲ್ಲ
ಹೊತ್ತು ಹೊತ್ತಿಗೆ ಎಲ್ಲ ಚಿತ್ತಚಂಚಲರಿಲ್ಲ
ತೆತ್ತಿಸಕೋಟಿ ದೇವತೆಗಳು ತಲೆಬಾಗಿ
ತೆತ್ತಿಗರಾಗಿ ನಿಂದು ತುತಿಪರನುಗಾಲಾ
ಸತ್ಯಲೋಕದ ಮ್ಯಾಲತ್ತ ಉಳ್ಳ ವೈಕುಂಠ
ಹತ್ತಿಲಿ ಓಲೈಸುತ್ತ ಇಂದಿರೆ ಇರೆ
ಎತ್ತಣದದ ತಾ ದೊರೆತನವೋ ನಿನ್ನದು
ಶ್ರುತ್ಯರ್ಥಗಳಿಗೆ ದೂರತ್ತನೆನಿಸುವನೇ
ಚಿತ್ತಜಪಿತ ರಾಮ ವಿಜಯ ವಿಠ್ಠಲ ನೀ
ಮತ್ರ್ಯಲೋಕಕ್ಕೆ ನರಕೃತ್ಯ ತೋರಿದದೇನೋ ೧
ಮಟ್ಟತಾಳ
ವನಜಭವಾದ್ಯರು ತನುಜರಾಗಿರೆ ನಿನಗೆ
ಜನಪ ದಶರಥಗೆ ತನುಭವವೆನಿಸುವರೇ
ಎಣೆಗಾಣೆನೊ ನಿನ್ನ ಗುಣಕರ್ಮಾವಳಿಗೆ
ಮನೋವಾಕ್ಕಾಯಾ ನೆನೆನೆನೆದು ನಿತ್ಯ
ದಣಿ ದಣಿ ಪಾಡಿದರು ದಣಿಯಬಲ್ಲದೆ ಜಿಹ್ವೆ
ಯನು ಸಾಲದು ಎನಗೆ ಅನಿಮಿಷ ಮಿಕ್ಕಾದ
ಜನರ ಸಮಾಧಿಗೆ ಗಣನೆ ಮಾಡುತಲಿಪ್ಪಾ
ಚಿನುಮಯ ಮೂರುತಿ
ಮನುಜೋತ್ತಮ ರಾಮ ವಿಜಯ ವಿಠ್ಠಲ ನಿನಗೆ
ಮಣಿದು ನಮೋ ಎಂದವನೇ ಬಲು ಧನ್ಯ ಧನ್ಯ೨
ರೂಪಕತಾಳ
ಅನಂತಯಾಗದ ಕರ್ತಾಭೋಕ್ತನೆ ನಿನಗೆ
ಮೌನಿಯ ಮುಖವಂದು ಕಾಯ್ದದ್ದು ಸೋಜಿಗವೆ
ಏನೆಂಬೆ ಜಡದಿಂದ ಚೇತನ ಈಯಪನೇನೋ
ಮಾನಿನಿ ಜಡಚೇತನವನ್ನು ಕಳದದ್ದು ಸೋಜಿಗವೆ
ದಾನವ ಬಲವಾಗೆ ನಿತ್ರಾಣ ಗೈಸಿದವನೆ
ದೀನ ಉಮೇಶನ ಧನುವ ಮುರಿದದ್ದೇನೊ
ರಾಣಿವಾಸವು ನಿತ್ಯ ಶ್ರೀನಾರಿ ಅವಿಯೋಗಿ
ಜಾನಕಿಯ ಮದುವೆಯಾದನು ಎನಿಸುವದೇನೋ
ನೀನೆ ನಿನ್ನೊಳು ಕಾದಿ, ಮಾನವಾಧಮರಿಗೆ
ಹೀನಗತಿಗೆ ಮಾರ್ಗವನು ತೋರಿದ ದೈವಾ
ಭಾನುಕುಲೋತ್ತಮಾ ವಿಜಯ ವಿಠ್ಠಲ ರಾಮಾ
ನೀನಾಡಿದ ಲೀಲೆ ತಿರೆಗೆ ವಶವಲ್ಲ೩
ಝಂಪಿತಾಳ
ಬಲು ಜೀವಿಗಳ ಭವದ ವಲಯದೊಳಗಿಟ್ಟು
ತೊಳಲುವಂತೆ ಮಾಡಿ ಅಳಲಿಸುವ ಮಹದೈವ
ಇಳಿಯೊಳಗೆ ವನವಾಸದಲಿ ತೊಳಲಿದನೆಂದು
ತಿಳಿಸಿ ನರರಿಗೆ ಮಾಯ ಕಲ್ಪಸಿ ಬಿಡುವುದೇನೋ
ಸುಲಭದಿಂದಲಿ ಸಕಲರಿಗೆ ಉಣಿಸುವನೆ
ಫಲಗಳಿಂ ದಿನವ ಕಳೆದನೆನಿಸುವದೇನೋ
ನಳಿನಜಾದ್ಯರು ನಿನ್ನೆಂಜಲ ಬಯಸುತಿಪ್ಪರು
ಒಲಿದು ಶಬರಿ ಸವಿದ ಫಲ ಮೆಲುವುದೇನಯ್ಯ
ಜಲಜ ಭವಾಂಡಕ್ಕೆ ಸಲೆ ನೀನು ಆಶ್ರಯವೋ
ಮಲೆವಿಂಧ್ಯದೊಳಗೊಂದು ಸ್ಥಳವ ಮಾಡಿದದೆನೋ
ನೆಲೆ ಯಾವುದೊ ನಿನ್ನ ಬಲವ ಪೊಗಳುವದಕ್ಕೆ
ಸುಳಿದ ಮೃಗವಟ್ಟಿ ಬೆಂಬಲ ಪೋದನೆನಿಸಿದೆ
ಚೆಲುವ ಸೀತೆಯ ನಿನ್ನ ಬಳೆಲಿಟ್ಟುಕೊಂಡು
ಹಲುಬಿದೆ ಹೆಂಡತಿಯ ಕಳಕೊಂಡವನಂತೆ
ಭಳಿರೆ ನಿನ್ನವತಾರ ಹಲಬರಿಗೆ ಸಾಧ್ಯವೇ
ಹಲವು ಬಗೆಯಲಿಂದ ಪೊಗಳಲಿ ಕೂಡದು
ಮಲತವರ ಮಸ್ತಕಾಂಕುಶ ರಾಮ ವಿಜಯ ವಿ
ಠಲ ನಿನ್ನ ಚರಣದಾ
ಸುಳುವು ಕಂಡವನಾರೋ ಸುರರು ಬೆರಗಾಗುವರು೪
ತ್ರಿವಿಡಿತಾಳ
ಗುಣನಿಧಿಯೆ ನಿನ್ನ ನೆನವೆಲ್ಲರಗೆ ಬಲ
ನಿನಗೆ ಸಹಾಯವೇನೊ ಇನನಂದನಾ
ಕ್ಷಣ ಮೀರದಲೆ ಬೊಮ್ಮನ ಪದವಿಗೆ ಋಜುಗಣವೇ
ಹನುಮಗೆ ನೂತನಪಟ್ಟ ಇನ್ನುಂಟೆ
ಅನುದಿನ ಸರ್ವರಂತರವನು ಬಲ್ಲ ವ್ಯಾಪ್ತನೆ
ವನಚರಾದಿಯ ಸುಧ್ದಿಯ ತರಲಟ್ಟಿದೆ
ಮುನಿದಾಕ್ಷಣ ಏಳು ವನಧಿ ನುಂಗುವನೆ
ಮಣಿಯ ಸಾಗರನೆಂದು ಧನುವ ಎಸದದೇನೊ
ತೃಣವೊಂದಿಡದೆ ಕಟ್ಟೆಯನು ಕಟ್ಟಿದ ಧೀರಾ
ಘನ ಪರ್ವತಗಳಿಂದ ವನಧಿ ಬಿಗಿಪುದೇನೋ
ಮಿನುಗುವ ರತ್ನಭೂಷಣಕೆ ಕೊರತೆಯಿಲ್ಲ
ತನುವಿಗೆ ನಾರುವಸನಉಟ್ಟ ಜಡಿಯೇನೋ
ಸೆಣಿಸಿದವರ ಗಂಡ ವಿಜಯ ವಿಠ್ಠಲ ನಿನಗೆ
ಅನುವಾರಾವೇನೊ ಜನನ ಮರಣ ರಹಿತಾ ೫
ಅಟ್ಟತಾಳ
ಇಂದ್ರಂಗೆ ಪುರುಷಾರ್ಥ ತಂದುಕೊಡುವನಿಗೆ
ಇಂದ್ರನು ನಿನಗೊಂದು ಸ್ಯಂದನಟ್ಟಿದನೇನೊ
ನೊಂದವರು ನೋಟದಿಂದಲೇಳುವರು
ಗಂಧವಹನ ಕರದಿಂದದ್ರಿ ತರಿಸಿದೆ
ಕುಂದದೆ ಲೋಕವ ಕೊಂದು ಹಾಕುವ ದೇವ
ಅಂದು ದುರುಳ ದಶಕಂಧರನನಳಿದದಾ
ನಂದಾ ಪಟ್ಟವಗಟ್ಟಿ ವೃಂದಾರಕರ ಪೊರೆದೆ
ಬಂದಾ ವಿಭೀಷಣಗೊಂದು ಪಟ್ಟ ಕಟ್ಟಿದ ಬಗೇ
ನೆಂದು ಪೇಳಲಿ ನಿನ್ನಾನಂದವಾದಾಟಕ್ಕೆ
ವಂದಿಸಿ ನಮೊ ನಮೋ ಎಂದು ಕೊಂಡಾಡುವೆ
ಇಂದಿರಾಪತಿ ರಾಮ ವಿಜಯ ವಿಠ್ಠಲ ಶಾಮ
ಸುಂದರ ಸುಧಾಕಾಯ ಕಂದರ್ಪನಯ್ಯ ೬
ಆದಿತಾಳ
ಏಸೇಸು ಬೊಮ್ಮಾಂಡ ನಾಶನ ಗೈಸುವಂಗೆ
ದೋಷಕಾರಿಗಳನ್ನು ಘಾಸಿಮಾಡಿದ ಹತ್ಯ
ವೊ ಸೇರಿದರಿಂದ ಈಶನಭಜನಿ ಲೇಸಾಗಿಮಾಡಿ ನಿ
ರ್ದೋಷನಾದನೆಂದು ಹೇಸಿ ನರಕ ನಿತ್ಯ
ವಾಸಿಗಳು ನುಡಿದು ಕ್ಲೇಶವ ಬಡುವರು
ಏಸೇಸು ಜನ್ಮದಲ್ಲಿ ದೋಷವೆತ್ತಣದೊ ಅ
ಶೇಷದೋಷ ದೂರನೆ ದೇಶಾದೊಳಗೆ ನಿನ್ನ
ದಾಸನಾದವನಿಗೆ ಲೇಶ ದೋಷಗಳಿಲ್ಲಾ
ದೋಷ ನಿನಗೆ ಉಂಟೆ ದಾಶರಥೆ ನಮ್ಮ ವಿಜಯ ವಿಠ್ಠಲ ಸ್ವಪ್ರ
ಕಾಶನೆ ನಿನಗೆಣಿಸಲು ಕಾಣೆ ೭
ಜತೆ
ನಿನ್ನ ಮಾಯಾ ಮೋಹ ಖಳರಿಗೆ ತಮಸ್ಸು ಆ
ಪನ್ನರಿಗೆ ಮೋಕ್ಷ ವಿಜಯ ವಿಠ್ಠಲ ಧೋರಿಯೇ೮

ಒಂದು ಜೀವ ಈ ಲೋಕದಲ್ಲಿ ಎಷ್ಟು

೮೮
ಧ್ರುವತಾಳ
ಸುತ್ತಿದೆ ಬಿಡದೆ ಈ ಮತ್ರ್ಯ ಲೋಕದಲ್ಲಿ
ಸುತ್ತು ತಿರುಗಿದಂತೆ ನಿಲವಿಲ್ಲದೆ
ಇತ್ತಂಡದಿಂದ ಉತ್ಪತ್ಯವಾದಸಂಖ್ಯಾತ
ಪತ್ತರ ಬರೆದು ಸುರುಳಿ ಹರಹೆ
ಪೃಥ್ವಿಗೆ ಹತ್ತು ನೂರುಮಡಿಯಾಗೋದು
ಸತ್ತು ಪುಟ್ಟುವ ಮಿತಿ ತಿಳಿಯದಯ್ಯ
ಎತ್ತಲು ಪೊಂದದಲೆ ವ್ಯರ್ಥವಾಯಿತು ಜನುಮ
ಸುತ್ತ ಕವಿದ ಪಾಪ ಮೊತ್ತದಿಂದಲ್ಲಿ ಉ
ನ್ಮತ್ತನಾಗಿ ಮಹವರ್ಗದಲ್ಲಿ ಉತ್ತಮನಾಗದೆ
ಮತ್ತಾರಿಗಂಜದೆ ಎತ್ತುವ ಜನನದ ಭೀತಿ ಮರೆದೆ
ಚಿತ್ರ ಮಿತ್ರ ನ್ನಾಮಾ ವಿಜಯವಿಠ್ಠಲರೇಯ
ಚಿತ್ತದಲೊಮ್ಮೆ ನಿನ್ನತ್ತ ಬಾರದೆ ಪೋದೆ ೧
ಮಟ್ಟತಾಳ
ಊಳಿಗತನವ್ಯಾಕೊ ನಿನ್ನನೆ ನೆನೆಸದ
ಆಳಿಗೆ ಹಲವಂಗ ವೈಯ್ಯಾರವು ಯಾಕೊ
ವ್ಯಾಳಿವ್ಯಾಳಿಗೆ ಎನ್ನ ಅನ್ನದ ಚಿಂತೆಯಲ್ಲಿ
ಮಾಳಿಗೆ ಮನೆಗಳು ಹಾರೈಸಿ ಕೊಳುತ
ಕಾಲವನು ಕಳೆದೆ ನಿನ್ನ ದಾಸನು ಎಂದು
ಆಳಿಗೆ ಗೆಲಿದಂಥ ಬಿರಿದು ಹಾಕಿದಓಲು
ತಾಳ ದಂಡಿಗೆ ಪಿಡಿದೆ ವಿಜಯವಿಠ್ಠಲ ಸಾಕ್ಷಿ
ಊಳಿಗತನವೆಂಬ ಆಳಿಂಗವು ಬರದೆ ೨
ರೂಪಕ ತಾಳ
ಕೋಳಿಗೆ ಯಾತಕ್ಕೆ ಹೊನ್ನದ ಪಂಜರವ
ಸೂಳಿಗೆ ಯಾತಕ್ಕೆ ಗರತಿಯ ಸಂಗ
ಬೋಳಿಗೆ ಯಾತಕ್ಕೆ ಜಾಳಿಗೆ ದಂಡೆ
ಮೊಳಿಗೆ ಯಾತಕ್ಕೆ ದಾನವಿಲ್ಲದಿರೆ
ನೀಲಿಗೆ ಯಾತಕ್ಕೆ ಪನ್ನೀರು ತೊಳೆವುದು
ಜಾಲಿಗೆ ಯಾತಕ್ಕೆ ಯಾತ ಎತ್ತುವುದು
ನಾಳೆಗೆಂಬುದು ಚಿಂತೆ ಬಿಡದು ಎನಗೆ ನಿನ್ನ
ಊಳಿಗ ತನವ್ಯಾಕೊ ಉರಗತಲ್ಪ
ಕೇಳಯ್ಯ ಬಿನ್ನಹ ವರುಣ ನಾಮಕ ಸಿರಿ
ಲೋಲ ವಿಜಯವಿಠ್ಠಲ ವಿಶ್ವತೋಮುಖನೆ
ಕಾಲಿಗೆ ಎರಗುವೆ ಲಾಲಿಸು ಮಾತ ೩
ಝಂಪಿ ತಾಳ
ಹೂಜಿ ಹೊರಗೆ ಬೆಳಗಿ ಮೈಲಿಗೆ ಕಳದಂತೆ
ತೇಜಸ್ಸು ಮಾಳ್ಪೆನೊ ಎನ್ನಂಗಕ್ಕೆ
ನ್ಯಾಜಿಯಂತೆ ನಾಮ ಮುದ್ರೆ ಧರಿಸಿಕೊಂಡು
ಭೋಜನಕೆ ಬರ ಹೇಳಿ ತೀವ್ರದಲ್ಲಿ
ಭಾಜನದಲ್ಲಿಗೆ ಪೋಗಿ ಕುಳಿತುಕೊಂಡು ಊರ
ರಾಜಕಾರಣ ವಾರ್ತಿಯನು ಪೇಳುವೆ
ಭೂಜಡವಾಗಿ ಸಂಚರಿಸುವೆ ನಾನಾ
ವ್ಯಾಜದಲ್ಲಿಗೆ ಮನ ಎರಗುತಲಿ
ಭೋಜನನಾಮಸಿರಿ ವಿಜಯವಿಠ್ಠಲ ನಿನ್ನ ಸ-
ರೋಜ ಚರಣವನ್ನು ನೆನೆಯದಲೆ ೪
ತ್ರಿವಿಡಿತಾಳ
ಹಂದಿಗೆ ಗೊಜ್ಜಲು ಸವಿಯಾಗಿಯಿದ್ದಂತೆ
ಇಂದಿಗೆ ಎನಗಿದು ರುಚಿಯಾಗಿದೆ
ಎಂದಿಗೆ ಅಹಮ್ಮತ್ತು ಸುಡುವುದೊ ಬೇವುದೋ
ಎಂದಿಗೆ ಸಾಧುಗಳ ಕೂಡುವೆನೊ
ಅಂದಿಗೆ ನಿನ್ನವನೆನಿಪ ಉತ್ತಮವಾದ
ಮಂದಿಯೊಳಗಾಡುವೆನಲ್ಲವೇನಯ್ಯಾ
ಅಂದಿನ ತನಕ ಗೋವಿಂದ ವಿಜಯವಿಠ್ಠಲ
ಹಿಂದುಗಳೆವುದು ಒಂದೊಂದು ದುರಾಚಾರ೫
ಅಟ್ಟತಾಳ
ನಾನು ನಾನು ನಾನು ಎಂದು
ಈ ನಿರಂತರದಲ್ಲಿ ಬಾಳಿ
ಏನು ಕಾಣದಲೆ ಪೋಗಿ ತ್ರಾಣಗೆಟ್ಟು ತಿರುಗಿದೆನೊ
ನಾನು ನಾನೆಂದದರಿಂದ ಹೀನ ನರಕವೆ ಪ್ರಾಪ್ತಿ
ದೀನ ಬಂಧುಯಿತ್ತ ಮುನ್ನ
ಮಾನದಭಿಮಾನವಿತ್ತು
ನೀನು ನೀನು ನಿನ್ನದೆಂದು ನಿನ್ನ ದಾಸನೆಂದು ವಾಚಾ
ಮಾನಸ ಜೀವನಾಮ ವಿಜಯವಿಠ್ಠಲ ವಿಶೇಷ ಮಹಿಮ
ಮಾಣಿಸುವುದು ಬಂದ ಭವರೋಗ ಬಂಧನಗಳ೫
ಆದಿತಾಳ
ಕರ್ಮ ಜ್ಞಾನಿಗರಸೆಂದು ಮರ್ಮವನ್ನು ಉಸುರಿದೆನು
ಪೆರ್ಮೆಯಿಂದ ನೋಡು ಪರಮ
ಧಾರ್ಮಿಕನೆ ದಯಾವಂತನೆ
ದುರ್ಮತಿಯಿಂದರ್ಚಿಸುವ
ಕರ್ಮ ಕಠೋರವ ಬಿಡಿಸಿ
ನಿರ್ಮಳದಿಂದಲ್ಲಿ ನಿನ್ನ
ವರ್ಮವನ್ನು ತೊಡಿಸುವುದು
ಶರ್ಮನಾಮ ವಿಜಯವಿಠ್ಠಲ
ಚರ್ಮದೇಹ ಪೋಗುವಂತೆ
ನಿರ್ಮಾಣವ ಮಾಡಿ ನೋಡೊ ನೋಡೊ
ನೋಡೊ, ನೋಡೊ ನೋಡೊ ೬
ಜತೆ
ಪಾತಕಿ ಅಜಾಮಿಳನ ಸದ್ಗತಿಗೆ ಕರೆಸಿದ
ಪೂತಾತ್ಮನಾಮ ಎನ್ನ ಕಾಯೊ ವಿಜಯವಿಠ್ಠಲ ೭

ದೇಹಗತ ನಾಡಿಗಳ ವಿವರಗಳನ್ನು

೮೯
ಧ್ರುವತಾಳ
ಸುಧಾಂಬುಧಿ ಮಧ್ಯ ಈರೈದು ದಶ ಲಕ್ಷ ಗಾ
ವುದ ಮಿತಿ ವಿಸ್ತಾರ ಶ್ವೇತ ದ್ವೀಪ |
ಅದರೊಳು ತ್ರಿ ಭಾಗ ಈರಾರು ವೊಂದೆಂಟು |
ಭೂ ದುರ್ಗ ಶ್ರೀ ಭಾಗ ವೆಂಟು ಲಕ್ಷ |
ಉದಧಿ ಎರಡು ಉಂಟು ಅರಣ್ಯ ವೆಂ |
ಬುದರಗಲಾ ಲಕ್ಷ ವೊಂದೊಂದು ಗಾವುದ |
ವಿದಿತದಿಂದಲಿ ಶ್ರೀ ಭಾಗದೊಳಗೆ ಲಕ್ಷ |
ತದನಂತರದಲ್ಲಿ ಹೊ ಕದ ಲಕ್ಷ ದ್ವಯದೊಳು |
ಪದುಮ ನಿಭೇಕ್ಷಣ ವಿಜಯ ವಿಠ್ಠಲನು |
ಮದುವಣಿಗನಾಗಿ ಶ್ರೀ ಭಾಗದೊಳಿಪ್ಪ ೧
ಮಟ್ಟತಾಳ
ಲಕ್ಷತ್ರಯ ಗಾವುದ ರನ್ನ ಮಂಚ |
ಚಕ್ಷು ಶ್ರವನು ಅದರ ಪರಿಮಿತಿ |
ಲಕ್ಷ ದ್ವಯ ಸಾರ್ಧ ಗಾವುದ ಉನ್ನತ |
ಅಕ್ಷರ ಪುರುಷ [ಸಿತ] ವಾಸುದೇವ |
ಅಕ್ಷ (ಯ) ಮೂರುತಿ ಪವಡಿಸಿ ನಲಿವ |
ದಕ್ಷಣನಾಮಾ ವಿಜಯ ವಿಠ್ಠಲ |
ಕುಕ್ಷಿಯೊಳು ತ್ರಿಭುವನ ತಾಳುವ |
ಮೋಕ್ಷಾದ್ಯರಿಗೆ ಈತನ ಸಿದ್ಧ ೨
ತ್ರಿವಿಡಿ ತಾಳ
ವರ ಮೂರ್ತಿ ಎರಡುವರೆ ಲಕ್ಷಯೋಜನದುದ್ಧ |
ಪರಿಯಂಕದಲಿ ವಿಗ್ರಹದ ವಿವರ |
ಚರಣದುನ್ನತ ಗಾವುದ ಮೂವತ್ತಾರು ಸಾ |
ಸಿರ ಮೇಲೆ ಕಟಿ ಪರಿಯಂತರ ಲಕ್ಷ |
ಪರಿಮಿತನಾಭಿ ಅಲ್ಲಿಗೆ ಹದಿನೆಂಟು ಸಾ |
ಸಿರಗಾವುದ ಮತ್ತೆ ವಕ್ಷ ಉದರ (ಉರ) ಸಹ |
ಅರಿವದು ಐವತ್ತೆರೆಡು ಸಾವಿರ ಎಪ್ಪ |
ತ್ತೆರಡು ಸಾವಿರ ಮುಖ ನಯನ ಸಾಹಸ್ರ ಈ ವಿ |
ವರದಿರುವ ಬಗೆ ತಿಳಿದು ಬೃಹತಿ ವಿಜಯ ವಿಠ್ಠಲ್ಲ |
ಪರದೈವವೆಂದು ಸ್ಮರಿಸಿರಿ ನಿರುತ ಸಾರಿ
ಅಟ್ಟತಾಳ
ಮುನ್ನೂರ ಯೋಜನ ಲಲಾಟದಲಿ ಸಂಖೆ |
ಕರ್ನಗಳು ಎರಡು ಒಂದೊಂದು ಸಾವಿರ |
ಕಣ್ಣು ದ್ವಯಂಗಳು ಕರ್ನದ ಪರಿಮಿತಿ |
ಚನ್ನ ಭ್ರೊಗಳ ದ್ವಯ ಸಾವಿರ ಒಂದೊಂದು |
ಇನ್ನೇನು ಉಸುರುವೆ ನಾಶಿಕ ಕೂಡಿಸಿ |
ಮುನ್ನೂರು ಗಾವುದವೆಂಬೋದು |
ಪುಣ್ಯ ಶ್ರವಣ ಕೀರ್ತಿ ವಿಜಯ ವಿಠ್ಠಲನ್ನ |
ಅನಂತ ಶಯನನ್ನ ಆದಿ ಮೂರುತಿಯು ೪
ಆದಿತಾಳ
ಬಾಹುಗಳು ಯೆರಡುಲಕ್ಷ ಒಂದೊಂದು ಪರಿಮಿತಿ |
ಸಾಹಸ್ರಗಾವುದ ಏನ್ನತ ಒಂದೊಂದು ಬೆರಳ್ಗಳು |
ಮೋಹನ ದಿವ್ಯ ಮಂಟಪ ಯೇಳುಲಕ್ಷ ಗಾವುದು |
ಮಾಹ ವಿಮಾನ ವುನ್ನತ ಲಕ್ಷ ಐವತ್ತೊಂದ್ಯೋ ಜನ |
ಮಹ ವೀರ್ಯಾ ವಿಜಯ ವಿಠಲ ವಾಸವಾಗಿ ತಾನೆ ವ್ಯಾಪಿಸಿ |
ಮಹಿಯೊಳು ಬಂದು ಮೆರೆವ ಕ್ಷೀರವಾರಿಧಿ ಶಯನ ೫
ಜತೆ
ಜಂಭಾರಿ ಶಂಭು ಸ್ವಾಯಂಭು ನಿರ್ಜರ ಹೃದಯ |
ಅಂಬುಜವಾಸ ಲಕ್ಷೀಶ ವಿಜಯ ವಿಠಲ ೬

ಹರಿದಾಸರೆಂಬ ಪಟ್ಟವನ್ನು ಸ್ವೀಕರಿಸಿದವರು

೧೦೭
ಧ್ರುವತಾಳ
ಸುಳಿಕುಮಾಯದ ನಡುಸುಳಿಯಿಂದ ಕಡೆಮಾಡಿ
ಸುಳಿಸುವದಾಲಿದು ಸುಲಭರೊಡಿಯಾ
ಸುಳಿಸದಿರಿಲ್ಲಿಯೆ ಸುಳಿಸಾದಿರೆಯೆ ಸುಳಿದಿನಾವಿದ್ದರು
ಸುಳವಾಗಿ ಮಾಡಿ ಶುದ್ಧಮುಗ್ಧಗೊಲಿದು
ಸುಳಿಯೊ ಸುಹೃತ್ತಮ ನಾಮಾ ವಿಜಯವಿಠ್ಠಲರೇಯಾ
ಸುಳವಿನೊಳಿಗೆ ಇಂದು ದೀನ ಜನಬಂಧು ೧
ಮಟ್ಟತಾಳ
ಒಂದಾನು ಒಂದು ದಿನವಾದರು ನಿನ್ನ
ಬಿಂದು ಮಾತುರ ನಾಲಿಗಿಂದು ನೆನೆದು ನಾಮ
ಪೊಂದೀಗಾ ಪೊಗಳದೆ ಇಂದು ಕಿಂಕರನೆಂದು
ಮಂದಿಯೊಳಗೆ ನೋಡಿದಿಂದು ತುದಿ ಫಲವ
ಬಂದು ಹೆಳುವ ನೋಡಿ ತಿಂದೇನೆಂತೆಂಬೊ
ಮಂದಮತಿಯಾದೆ ಮುಂದೆ ಸೂಚಿಸದಂತೆ
ತಂದೆ ಸುಹೃತನಾಮ ವಿಜಯವಿಠ್ಠಲ ಆವಾ
ನಂದದಲೆ ಬಯಸಿ ವಂದಿಸಿದೆ ನಿನ್ನಾ ೨
ರೂಪಕ ತಾಳ
ಈ ಶರೀರವು ಕ್ರಿಮಿ ರಾಶಿ ಎನಗೆ ನಿನ್ನ
ಸಾಸಿರನಾಮಾ ಕಾಣಾಸಿಯಾಗಿರಲಿ
ಲೇಸುವುಳ್ಳನಕಾ ನಾ ವಾಸಾವಾಗಿಪ್ಪೆನೊ
ದೇಶದೊಳು ಡಂಭಕದ ದಾಸನಾಗಿ
ರಾಶಿ ಹಾಕಿದ ಹಣ ಏಸು ಇದ್ದರೇನು
ಕಾಸಿಗೆ ಪೋಗಾದಾದೊಂದಾರಿರದೆ
ಕೇಶವ ನಿನಗಿನ್ನು ಮೀಸಲಾ ದಾಸರು
ವಶಯಾಗಿದ್ದರು ಆ ಸರ್ವರೊಳಗೊಬ್ಬ
ದೋಷಕಾರಿ ನಾನು ಪಾಶಬದ್ಧಕ ನಾನು
ಹೇಸಿ ಮಾನವ ನಾನು ಆಸೆಬಡಕನಾನು
ಈಸುಗುಣವುಳ್ಳ ಕ್ಲೇಶಾಧಿಕಾರನ್ನ
ಪೋಷಣೆ ನಿನ್ನದು ಬೀಸಿ ಬಿಸಾಟದಿರು
ನೀ ಸೇರಿವೊಳಗೆ ಪ್ರಕಾಶ ಮಾನನಾಗಿ
ಭೂಷಾ ವಿಜಯ ವಿಠ್ಠಲೇಶ ಕರುಣದಿಂದ
ವಾಸವಾಗಿದ್ದೆನ್ನ ದೋಷವ ಹಿಂಗಿಸಿ
ಸೂಸುವ ಭಕ್ತಿಗೆ ಭೂಷಣನಾಗೋ ೩
ಝಂಪಿತಾಳ
ಭಕುತ ಪ್ರಲ್ಹಾದನು ನಿನಗೇನು ಇತ್ತನು
ಶುಕ-ಮಹಾಮುನಿಪ ನಿನಗೇನು ತಂದುಕೊಟ್ಟ
ರುಕುಮಾಂಗನುಪಕಾರ ನಿನಗೇನು ಮಾಡಿದ
ಮಖಶತನು ನಿನಗೇನು ಊಟವನುಣಿಸಿದಾ
ಸುಖಬಡಿಸಿದನು ನಾರದಮುನಿ ನಿನಗೇನು
ಮಕರ ತೋರಣವ ಕಟ್ಟದನೇನೋ ನದಿಸುತಾ
ಶಿಖರವೆತ್ತಿದನೇನೋ ಲಂಕಾಧಿಶನು ಬಂದು
ಸಕಲ ಸುರರು ನಿನ್ನ ಒಕ್ಕಲಾ ಗೈಸಿದರೆ
ಭಕುತ ಪ್ರಲ್ಹಾದ ಅಕಟ ನಾ ನಿನಗೇನು
ಭಕುತಿ ಮಾಡದೆ ಪೋದೆ ಲಕುಮಿ ವಲ್ಲಭ ಎನ್ನ
ವಿಕಳಮತಿಯೊಳಗದ್ದಿ ಕಕ್ಕಸಬಡಿಸೋದು
ಚಕಿತತನವೇ ದೇವ
ತ್ರಿಕಕುಬ್ಧ ನಾಮ ಸಿರಿ ವಿಜಯ ವಿಠ್ಠಲ ತಂದೆ
ವಿಕಸಿತ ಜ್ಞಾನಕ್ಕೆ ಅಂತರಂಗದಲ್ಲೇ
ಮಕರಂದನಾಗೋ ಪಾದಕ್ಕೆ ನಮಿಸುವೆನು ೪
ತ್ರಿವಿಡಿತಾಳ
ಅವರೀಗ ಕರಿಯಲು ಅಂತರ ಬಾಹಿರ
ಅವತಾರಗಳಿಂದಲ್ಲಿ ಪೊಳದು ನಿಂದು
ಅವರವರ ವಾಸನಾ ತೀರಿಸಿ ಮನೋಭೀಷ್ಟೆ
ಅವರಿಗೆ ಈವೆಯೋ ಅವರಂತೆ ನಾನಲ್ಲಾ
ಅವರಿಂದಲಾನಂತ ಸೇವೆ ನಿಮಗಾಯಿತು
ಅವತ್ತ ಗುಣದವನಿಂದ ಎಂದು ಪೂರ್ತಿ
ಅವರ ಸೇವಿಯಾದಿತು ಅವರಿಗೆ ಪ್ರೇರಿಸಿದ್ದಾ
ಅವರ ದಾಸಾನುದಾಸ ಎನ್ನ ಸೇವೆಯಾ ರೀತ್ಯಾ
ತವಬಿಂಬ ಮೂರ್ತಿಯ ತೋರೋ ಭೂತ ಭವ್ಯ
ಭವನ್ನಾಥನಾಮ ಶ್ರೀ ವಿಜಯ ವಿಠ್ಠಲ ಎನ್ನ
ಭವಪಾಶವ ಹರಿದು ಸಂಭವಿಸಲಿ ಜ್ಞಾನ ೫
ಅಟ್ಟತಾಳ
ಆತುಮ ಮೂರುತಿ ಪ್ರಮಾಣವಂಗುಟಿ
ಮಾತುರ ಮೂರುತಿ ದೇಹ ದೇಹಿಯಲ್ಲಿ
ತತುಪ್ರಮಾಣ ಶೋಭಿಸುತಿರೇ
ಆತುಮನಾಮಕ ಪ್ರಾಜ್ಞ ಮೂರುತಿಯೇ
ಆತ ನಾನಾ ಬಿಂಬ ಮೂರುತಿಯಾಗಿ ಪೂಜಿಯ
ಪ್ರೀತಿಯಲ್ಲಿಗೊಂಬ ಆತುಮದೊಳಗೆ
ಪಾತಕ ಹರಿಸುತ್ತ ಪತಿತರ ಪೊರೆವುತ್ತ
ಆತುಮಯೋನಿ ವಿಜಯ ವಿಠ್ಠಲರೇಯಾ
ಯಾತರ ಭಯವಿಲ್ಲಾ ಪ್ರಾಯಶ್ಚಿತ್ತವೆ ಇಲ್ಲಾ ೬
ಆದಿತಾಳ
ಹೆಳವನು ಬಯಸಿದಾ ಫಲವು ಚಲಿಸದೆ ಇರುತಿದ್ದು
ಕೆಳಗೆ ಬೀಳೆ ಪಾವನದಿಂದ ಸಲೆಪಣ್ಣು ದೊರಕಿದಂತೆ
ಮಲಿನಗಳೆದು ಗುರುಗಳೆನಗೆ
ಒಲಿದು ತೋರಿಸಿದರಾದಳವಾಗೆ
ಸುಳಿದು ಸುಖದ ವಿಜಯ ವಿ
ಠ್ಠಲ ಬಲುದೈವಾ ಕಾಯ್ವಾ ೭
ಜತೆ
ಸಾಸಿರ ಮೂರುತಿ ಶತಾನಂತ ಮೂರುತಿ
ಸಾಸಿರನಯನ ಶ್ರೀ ವಿಜಯ ವಿಠ್ಠಲ ಸುಳಿದಾ ೮

ತಿರುಪತಿಯ ಶ್ರೀನಿವಾಸನನ್ನು ಮೇಲುಗಿರಿ

ಶ್ರೀನಿವಾಸ ಸ್ತೋತ್ರ
೧೪೫
ಧ್ರುವತಾಳ
ಸುಳಿದವನಾರೆನ್ನ ಕಣ್ಣಮುಂದೆ
ಪೊಳೆದವನಾರೆನ್ನ ಕಂಗಳಿಗೇ
ಥಳಥಳಿಸುವ ಪುತ್ಥಳಿ ಬೊಂಬಿಯಂದದಿ
ಎಳೆ ಮಿಂಚಿನಂತೆ ಕಂಗಳು ಥಳಥಳಿಸುವಂತೆ
ಸುಳಿಗುರುಳು ಭ್ರಮರಾವಳಿಯಂತೆ ಒಪ್ಪಲು
ಗುಲಗುಂಜಿ ಸರ ಶಿರಕೆ ಪೊಳೆವ ಮುಕುಟ ಬಳ್ಳಿ
ಗಳುಸುತ್ತಿ ಕಂಡಕಂಡೆಲಿಯ ತುರಾಯವು
ಹಲವಾಭರಣ ತಳಲಗಾವಿ ಪೊಂಬಟ್ಟೆ
ಶಳೆಗೋಲು ಕೈಯ ಕೊಳಲಧ್ವನಿಗೈಸುತ್ತಾ
ಕಳಕಾಯದನೀತ ಗೆಳೆಯ ಗೋವಳಗೆ
ಗೆಲ ಸೋಲಾಡಿದನೀತ ಬಲುಮಾಯಾದಾತಾ
ಹಲವಂಗ ಯಜ್ಞಾಂಗಕೃತನಾಮ ವಿಜಯ ವಿ
ಠ್ಠಲನೀತ ಮೇಲ್ಗಿರಿ ತಿರುವೆಂಗಳಾನೀತ ೧
ಮಟ್ಟತಾಳ
ಮುಗುಳು ಮಲ್ಲಿಗೆ ಸಂಪಿಗೆ ಸುರಹೊನ್ನೆ ಮ
ರುಗ ಪಾರಿಜಾತ ಮಿಗೆ ಕೇತಕಿ ಶಾವಂ
ತಿಗೆ ಇರುವಂತಿ ಸುರಗಿ ಪಾರಿಭದ್ರಾ
ದಿಗಳು ಕುಸುಮ ತುರುಗಿ ತುರುಬಿನಲ್ಲಿ
ಮೃಗನಾಭಿ ಘಣಿಗೆ ನಾಮವನಿಟ್ಟು
ಮುಗುಳುನಗೆಯಿಂದ ಬಗೆ ಬಗೆ ಒಯ್ಯಾರ
ಸೊಗಸು ತೋರುವ ಜಾಣ ನಗಧರ ಸರ್ವ
ದ್ರುಗ ವಿಜಯವಿಠ್ಠಲಯುಗಳ ಚರಣ ದಂ
ದಿಗೆ ರಭಸಗೈಯೋ ೨
ತ್ರಿವಿಡಿತಾಳ
ಪೂಸಿದಗರು ಚಂದನ ಶೋಭಿಸುವ ಗಂಧ
ಲೇಸಾದ ಕಸ್ತೂರಿ ಪುನಗು ಜವ್ವಾದಿ ಸು
ವಾಸನೆಯಿಂದ ಪ್ರಕಾಶದಲ್ಲಿ ಒಪ್ಪೆ
ಸೂಸುವ ಕರ್ಪುರದ ಹಳಕು ತಾಂಬೂಲ
ಭೂಷಣ ಸಿರಿದೇವಿ ಉರದಲ್ಲಿ ನಲಿದಾಡೆ
ನಾಶರಹಿತ ಕಮಲಾಸನ ಜನಕ
ಮೋಸ ಪೋಗನು ತನ್ನ ದಾಸರ ವಿರಹಿತ
ಅಶತೃಘ್ನನಾಮ ವಿಜಯವಿಠ್ಠಲ ಎನ್ನ
ಮೀಸಲ ದೈವವು ಈ ಸುಲಭದಿಂದ ೩
ಅಟ್ಟತಾಳ
ಚಂದ್ರನುದ್ಭವನಾಗೆ ಚತುರಂಗಲದಷ್ಟು
ಸಿಂಧುರಾಜನು ಉಬ್ಬಿ ಮೇಲಕ್ಕೆ ಸೂಸುವ
ಇಂದಿರೇಶನು ಎನ್ನ ಹೃದಯಾಂಬುಧಿಯೊಳು
ಇಂದು ಸುಳಿದಂತೆ ಪರಿಪೂರ್ಣವಾಗೆ
ಇಂದೆನ್ನ ಸಂತೋಷ ಪಿಡಿಯಲಾರವಶ
ಅಂಧಕಗೆ ಕಣ್ಣು ಬಂದಂತೆಯಾಯಿತು
ಸುಂದರ ಸುವೇಧ ವಿಜಯವಿಠ್ಠಲರೇಯ
ಒಂದೊಂದು ಪರಿಯಲ್ಲಿ ನಿಂದು ನಿಂದೊಲಿದಾ೪
ಆದಿತಾಳ
ಇಂದು ಮಂದಾಕಿನಿಯಲ್ಲಿ ಮಿಂದ ಫಲ ಉಪರಾಗ
ಬಂದ ಕಾಲದಲ್ಲಿ ಕೋಶ ತಂದು ದಾನವಿತ್ತು ಸಕಲ
ಸಿಂಧುವಿನಲ್ಲಿ ಸ್ನಾನ ಮಾಡಿ ಒಂದುಬಿಡದೆ ಯಾತ್ರೆ ಚರಿಸಿ
ಮಂದರಧರನಾ ನಖ ಒಂದು ಕಾಣಲದಕೆ ನೂ
ರೊಂದು ಮಡಿ ಫಲವಹುದೆಂದು ವೇದ ಸಾರುತಿದೆ
ಇಂದು ಎನ್ನ ಭಾಗ್ಯವೇನೆಂದು ಪೇಳಿಕೊಂಬೆನಯ್ಯ
ವಂದಿಸಿ ವರ ಮನಕೆ ನಿಜಬಂಧು ವಿಜಯ ವಿಠ್ಠಲ ಸ
ನಂದನಾದಿ ವಂದ್ಯನೀತ ಇಂದು ಕೃತ ಕೃತ್ಯನಾನು೫
ಜತೆ
ಕಂಡು ಧನ್ಯನಾದೆ ಕಮನೀಯ ಮೂರುತಿಯ
ಮಂಡಲೇಶನಯ್ಯಾ ವಿಜಯ ವಿಠ್ಠಲದೇವನ೬

ಹಲವು ದೈವಗಳುಪಾಸನೆಯಿಂದ ಯಾವ

೮೯
ಧ್ರುವತಾಳ
ಸುಳಿದು ಸುಳಿಯೊ ಎನ್ನ ಕಣ್ಣ ಮುಂದೆ ನೀನು
ಗೆಳೆಯಾನಹುದೆಂದು ಕೇಳಿ ಬಂದೆ
ಗೆಲಲಾರೆನೊ ಕಾಮ ಕ್ರೋಧ ಇಂದೆ
ನಿಲವರ ಪೇಳಿದೆ ಜಗದ ತಂದೆ
ಸಲಿಸುವುದಯ್ಯ ಈ ಮಾತು ಒಂದೇ
ತಲೆಬಾಗಿ ಕರಗಳ ಮುಗಿದು ನಿಂದೆ
ಹಲವು ಜನನದಲ್ಲಿ ಪುಟ್ಟಿ ನೊಂದೆ
ಸುಲಭ ಜನನದಲ್ಲಿ ಪುಟ್ಟಿ ನೊಂದೆ
ಸುಲಭ ಕಾಣದೆ ಪೊಕೈ, ನಿನ್ನ ಹಿಂದೆ
ಹಲುಬಿ ಪೋಗುವಂತೆ ಮಾಡದಿರು ಎಂದೆ
ಜಲಜಾಕ್ಷ ಮಹಾಂಬುಧಿ ವಿಜಯವಿಠ್ಠಲ ಎನ್ನ
ಬಲು ದೂರಮಾಡೆಂದೆ ಸಲಹೊ ತಂದೆ ೧
ಮಟ್ಟತಾಳ
ಜಲದೊಳು ಜಲ ಹಾಕಿ ಪ್ರಳಯ ಕಾಲದ ತನಕ
ಕಲಸಿ ನಾದಿದರದು ಫಲಿತವಾಗುವುದೇನು
ಇಳಿಯೊಳಗೆ ಉಳ್ಳ ಹಲವು ದೈವರಿಗೆ ಕೇ-
ವಲ ಚಾಲ್ವರಿದರೆ ಹಲಬುವುದಲ್ಲದೆ
ಬಳಲಿಕೆ ಪೋಗೋದೇನಯ್ಯ
ಕುಲಗುರು ಅಪ್ರಯೇಯಾತ್ಮ ವಿಜಯವಿಠ್ಠಲ ನಿನ್ನ
ಸುಳುವಾದರೆ ನಾನು ಬಲು ಸುದೈವನು ೨
ತ್ರಿವಿಡಿತಾಳ
ಮುಖ್ಯ ದೈವವೆ ನೀನೆ ಮೂರು ಲೋಕಕೆ ಎಂಬೊ
ಆಖ್ಯಾನ ಕೇಳಿ ಅತಿ ಆತುರದಲ್ಲಿ
ಸೌಖ್ಯದಿಂದಲಿ ನಂಬಿ ಎಲ್ಲ ಕರ್ಮವ ತೊರೆದು
ಐಕ್ಯತನವೆ ಬಿಟ್ಟು ದಾಸ್ಯಭಾವದಲ್ಲಿ
ಇಕ್ಕೆಲದವರನು ದೂರವಾಗಿ ಜರೆದು
ಮುಖ್ಯ ಪ್ರಾಣನ ಸಹಿತವಾಗಿದ್ದು ಎನಗೆ
ಸಖ್ಯವಾಗಿ ಇದ್ದು ನಿತ್ಯ ಪಾಲಿಸುವುದು
ಪ್ರಖ್ಯಾತಮೂರುತಿ ಶ್ರೀ ವಿಜಯವಿಠ್ಠಲ ೩
ಅಟ್ಟತಾಳ
ಯೋನಿಜನಾಗಿ ತೊಳಲಿ ಬಂದುದಕಿನ್ನು
ಏನು ಕಾಣೆನೊ ಎಳ್ಳಿನಿತು ಸಾಧನ ಸಂಪ-
ತ್ತಾನು ಒಂದಾರು ಅನಂತ ಜನುಮಕ್ಕೆ
ಆತನಿಗೆ ಪನ್ನೀರು ಸ್ನಾನ ಮಾಡಿಸಿದ, ತೆ-
ರನಾಯಿತಯ್ಯ ಅರಿಗೆ ದೂರಲಿ
ನೀನಲ್ಲದೆ ಮತ್ತಾರನು ಕಾಣೆನೊ
ಸಾನಂದ ಸಾತ್ವಿಕ ವಿಜಯವಿಠ್ಠಲ ಕರು
ಣಾನಂದ ವಿನೋದ ಎನ್ನ ಮನದೈವ ೪
ಆದಿತಾಳ
ಅಂತರಂಗದಲ್ಲಿ ನಿರಂತರಂತರ ನಿನ್ನ ರೂಪ
ಸಂತೋಷದಲ್ಲಿ ತೋರಿ ಸಂತಾಪವನು ಬಿಡಿಸೊ
ಭ್ರಾಂತಿಗೊಳಿಸದೆ ವಿಶಿಷ್ಟ ವಿಜಯವಿಠ್ಠಲ
ಅಂತಿಕಾಲಕ್ಕೆ ನಿನ್ನ ಚಿಂತೆ ಒಂದನೀಯೊ ೫
ಜತೆ
ವಿಷಯಾದಿಗಳಿಗೆರಗದಂತೆ ಒಳಗೆ ನಿಂದು ಕಾಯೊ
ವಷಟ್ಕಾರ ವಿಜಯವಿಠ್ಠಲ ಧ್ಯಾನಕ್ಕೆ ಬಾರೋ ೬

ಉಡುಪಿಯ ಕೃಷ್ಣನನ್ನು ಅಪಾರ ಭಕ್ತಿಯಿಂದ

೧೫. ಉಡುಪಿ
ಧ್ರುವತಾಳ
ಸುಳಿನಾಭಿ ಸುಮನೋಹರವಾದ ಉದರ ತ್ರಿ |
ವಳಿಯಲ್ಲಿ ತ್ರಿಲೋಕಾಶ್ರಯ ಮಾಡಿಕೊಂಡಿರೆ |
ಎಳೆ ತುಳಸಿ ಕೌಸ್ತುಭಮಣಿ ಶಿರಿ ವತ್ಸ ಪರಿ |
ಮಳ ದ್ರವ್ಯ ಸೂಸುತಿರೆ ಸರ್ವಾಂಗದಲ್ಲಿ ನಿತ್ಯ |
ಬೆಳಗುವ ಎಳೆನಗೆ ಕುಂದ ಕುಸುಮದಂತೆ |
ನಳನಳಿಸುವ ನಳಿತೋಳು ಉನ್ನತಬಾಹು |
ಗಳ ಕರ್ಪೂರಾದ ಕರಡಿಗೆ ಯಂದಾದಿ ವನಾ |
ಗಿಳಿ ಎಂದು ಸೋಲುವಧರ ಕಪೋಲ ಕ[ರ್ಣ] |
[ಪಾ]ಲಿಪಾ ಕುಂಡಲ ಮುಂಬಣೆಯಲ್ಲಿ ತೂಗುವ |
ಅಳಿಯಗೂದಲು ವಿಸ್ತಾರ [ನೊ]ಸಲು ತಿಲಕ |
ಚಲುವ ಕಂಕಣ ಕಡನ ಬೆರಳಾ ನಾನಾ ಉಂಗುರ |
ಪೊಳೆವ ನವರತ್ನ ವೈಜಯಂತಿ ಮಾಲೆ ಸೊಬಗು |
ದಳವಾದ ಪಾದಕನಕಸೂತ್ರಾ ನವ ಉ |
ತ್ಪಲದಳಲೋಚನಾ ಮಂಡಲಾ ಮಂಡಿತದೇವ |
ಝಳಝಳಿಸುವ ಜಗನ್ಮೋಹ ಪಾವಿ ಚಿತ್ರಕಾಂತಿ |
ಬಲು ಸೂರ್ಯರ ಬೆಳಗವಂದೆಸವಾಸವೆನೆ |
ಅಲವಬೋಧ ಮುನಿಯಿಂದ ಪೂಜಿಯಗೊಂಡ |
ಸುಲಭ ದೇವರ ದೇವ ವಿಜಯವಿಠಲ ಕೃಷ್ಣ |
ಜಲಧರ ವರ್ನ ಸುಗುಣ ಉಡಪಿನಿವಾಸ ೧
ಮಟ್ಟತಾಳ
ತಿಳಲಾಗಾವಿಯ ಪೊಂಬಟ್ಟಿವಸನ |
ಘಿಳಿ ಘಿಳೆಲುನಾದ ಕಿಂಕಿಣಿ ಕಟಿಸೂತ್ರ |
ಮ[ಲೆವ]ರ ಗಂಡಾನೆಂಬೊ ಬಿರಿದೂ ಬಾವುಲಿಕಡಿ |
ಇಳಿಯೊಳಗೆ ಮೆರೆವ ವಿಶ್ವತೋಮಯ ಮಹಿಮಾ |
ನೆಲನ ಪಾವನವಾದ ಚರಣ ಭೂಷಣ ಒಪ್ಪೆ |
ಪ್ರಳಯಾರಹಿತ ನಮ್ಮ ವಿಜಯವಿಠಲ ಉಡುಪಿ |
ನಿಲಯಾ ಯಾದವ ಕೃಷ್ಣ ಮಧ್ವಮುನಿವರದ ೨
ತ್ರಿವಿಡಿತಾಳ
ಮೊಲ್ಲೆ ಮಲ್ಲಿಗೆ ಜಾಜಿ ಮರುಗ ಮಂದಾರ |
ಎಲ್ಲ ಪೂಗಳು ತುರುಬಿಲಿ ತುರುಬಿದ ಜಾಣ |
ಸೊಲ್ಲುಕೊಳಲಾ ಧ್ವನಿಗೆ ಗೋಪಾಂಗನೆಯರ ಮನ |
ಬಿಲ್ಲು ಬಾಗಿಸಿದಂತೆ ನಿನ್ನ ತತ್ತರಿಸಿದೆ |
[ಝ]ಲ್ಲಡಿಯೊಳು ತುರುಗಳ ಕೂಡ ನಲಿದನೆ |
ಇಲ್ಲಿಗೆ ಬಂದಾ ಬಗೆ ಪೇಳು ಪರಮಾತ್ಮ |
ಎಲ್ಲೆ ಗೋಕುಲ ವೃಂದಾವನ ಎಲ್ಲೆ ದ್ವಾರಕ |
ದಲ್ಲಿ ಮೆರದು ವೈಭೋಗದಿಂದೊಪ್ಪದೆ |
ಕಲ್ಲಿವಾಗರಾ ಮೆದ್ದ ವಿಜಯವಿಠಲ ಸರ್ವಾ |
ದಲ್ಲಿ ಇಪ್ಪಾ ಉಡುಪಿಕೃಷ್ಣ ಮಧ್ವ ಮುನೇಶ೩
ಅಟ್ಟತಾಳ
ನಿನ್ನ ಪಾದವೆ ಎನ್ನಾ ಶಿರಕೆ ಜೀವನ್ನಾ |
ನಿನ್ನ ನೊಡವದೆನ್ನ ಕಣ್ಣಿಗೆ ಜೀವನ್ನ |
ನಿನ್ನ ಶ್ರವಣ ಎನ್ನ ಕರ್ನಕ್ಕೆ ಜೀವನ್ನ |
ನಿನ್ನ ಪಾಡುವದೆನ್ನ ಜಿಂಹಕ್ಕೆ ಜೀವನ್ನ |
ನಿನ್ನ ಎಂಜಲು ಎನ್ನ ವದನಕ್ಕೆ ಜೀವನ್ನ |
ನಿನ್ನ ಸೇವೆ ಎನ್ನ ಹಸ್ತಕ್ಕೆ ಜೀವನ್ನ |
ನಿನ್ನ ಯಾತ್ರೆಗಳೆನ್ನ ಚರಣಕ್ಕೆ ಜೀವನ್ನ |
ನಿನ್ನ ಧ್ಯಾನವೆ ಎನ್ನ ಮನಸಿಗೆ ಜೀವನ್ನ |
ನಿನ್ನ ಪಾದೋದಕ ಪೀಯೂಷ ಪ್ರ |
ಪನ್ನ ಜೀವನವಯ್ಯಾ ಜೀವೇಶ |
ನಿನ್ನ ವರದಾಸ ಒಮ್ಮೆ ಎನಿಸಿದ್ದು |
ಎನ್ನ ಸಾಸಿರ ಕುಲಕೋಟಿಗೆ ಜೀವನ್ನ |
ಉನ್ನತ ಗುಣನಿಧಿ ವಿಜಯವಿಠಲರೇಯಾ |
ಮನ್ನಜ ವಿಗ್ರಹ ಉಡುಪಿನ ಕೃಷ್ಣ |
ಬಣ್ಣಿಪ ಗುರು ಮಧ್ವಮುನಿಗೆ ಒಲಿದು ಬಂದ ೪
ಆದಿತಾಳ
ಶರಧಿ ಆಪೋಷಣ ಮಾಡಿದನೊಬ್ಬಾ |
ತರಣಿ ಸಂಗಡ ಕಕ್ಷೆಮಾಡಿದನೊಬ್ಬಾ |
ಪುರವನು ಎಬ್ಬಿಸಿ ಉಳಹಿದನೊಬ್ಬಾ |
ಶರದಲ್ಲಿ ಹೊಳಿಯನು ಬಂಧಿಸಿದನೊಬ್ಬಾ |
ಮುರಿವ ಮಾರಿಗೆ ಹಣಿಯದಿದ್ದವನೊಬ್ಬಾ |
ಉರಗವ ಬಿಡಿಸಿ ಸಭೆಗೆ ತಂದವನೊಬ್ಬಾ |
ಸುರರಿಗೆ ಉಪಕಾರ ಮಾಡಿದವನೊಬ್ಬಾ |
ಉರಿವ ಗರಳಿವನುನುಂಗಿ ನಗುವಾನೊಬ್ಬಾ |
ಹರಿ ನಿನ್ನ ಭಕ್ತರ ಶಕ್ತಿಗೆ ನಮೊ ನಮೊ |
ಹರಿ ನಿನ್ನ ಶಕ್ತಿಗೆ ಅನಂತ ನಮೊ ನಮೊ |
ಪರಮ ಗುರು ಮಧ್ವಮುನಿಗೊಲಿದ ಕೃಷ್ಣ |
ಸುರವರ ಗರಲೀಲಾ ವಿಜಯವಿಠಲರೇಯಾ |
ಧರಣಿಗಧಿಕ ಉಡುಪಿನವಾಸಾ ದಯಾಬುಧಿ ೫
ಜತೆ
ಅಡಿ ತೊಲಗದ[ಲೆ] ಹೃದಯ ಸದನ ಮಧ್ಯ |
ಕಡಗೋಲು ಪಿಡಿದ ವಿಜಯವಿಠಲ ಕೃಷ್ಣಾ ೬

ತಿರುಪತಿಯ ಶ್ರೀನಿವಾಸನನ್ನು ಕುರಿತ ಭಕ್ತಿ

೬೭. ತಿರುಪತಿ
ಧ್ರುವತಾಳ
ಸೂರಿಯಾ ಪುಟದಂತೆ ಝಗಝಗಿಸುವ ದಿವ್ಯ |
ಕಿರೀಟ ಕೀಲಿಸಿದ ಮಣಿ ಪ್ರಕಾಶ |
ಸಾರ ಕಸ್ತೂರಿ ತಿಲ[ಕ] ಫಾಲ ಕಪೋಲ ಶ್ರೀ |
ನಾರಿಯೊಡೆದ ಕುಸುಮ ನಯನ ಚಲುವ |
ಕಾರುಣ್ಯಾಮೃತ ಸುರಿವ ನೋಟವೊಪ್ಪುವ ಮಾಟ |
ಮಾರ ಕಾರ್ಮುಕ ಪುಬ್ಬು ಪರಿಮಳನಾಸ |
ಸ್ಮೇರಾನನ ಮುದ್ದು ಮಂದರೋದ್ಧಾರ ವಿ |
ಸ್ತಾರ ಚಂದ್ರಿಕೆ ಕಾಂತಿ ದಿಗ್ಗೊಳಿಪಾಭ ಸ |
ಚಾರು ಕುಂಡಲಕರ್ನ ಸಮದಂತ ಪಙ್ತಯು |
ಭಾರಿ ಭಾರಿಗೆ ನುಡಿವಾಶ್ಚರ್ಯ ಸೊಲ್ಲು |
ಹೀರ ತೋರ ಹಾರ ಸರಿಗೆ ಬಂಗಾರಮಣಿ ವನಮಾಲೆ ವೈಜಯಂತಿ |
ಊರುವರಿತ (ಉರ್ವರಿತ) ವರ್ನ ಕೌಸ್ತುಭ ವೇದೋ |
ಚ್ಚಾರ ಕಂಧರ ನವವಾರಿಜ ಪೋಲುವ |
ಪೇರುರದಿಲಿ ಲಕುಮಿ ನಾನಾ ಶ್ರೀಗಂಧ ಶೃಂ |
ಗಾರ ಪದಕ ಪರಮಪುರುಷ ಸರ್ವಾ |
ಧಾರ ನಿಗೂಢ ಜಠರನಾಭಿ ತ್ರಿವಳಿ |
ಸಾರಿ ಸಾರಿಗೆ ಪೊಳೆವಾ ತ್ರಿಗಂಗಿಯೋ |
ವೈರಿದಲ್ಲಣ ಚಕ್ರವೇದಮಯದ ಶಂಖ |
ತೋರುವ ವರ ಅಭಯ ಚತುರ ಹಸ್ತ |
ಈರೈದು ಹಸ್ತಾಂಗುಲಿ ಮುದ್ರೆ ಕಂಕಣ ಕೇಯೂರ |
ಕೀರುತಿ ಚಿತ್ರಕರ ತಳಕೆಂಪು ಮೀರಿದನ |
ಖರ ಪ್ರತಿಬಿಂಬ ಕಾಣಿಸುತಿರೆ |
ಹಾರೈಸುವ ಮನಕಾಗೋಚರನೊ |
ವೀರಾಜಿಸು ಪೀತಾಂಬರ ಕಟಿಸ್ವರ್ಣಾ ಮುಂ |
ಜೀರ ಜಘನ ಊರು ಜಾನು ಜಂಘೆ |
ವೀರ ಪಿಂಡಿಯೂ ಕಡಗ ಪೊಂಗೆಜ್ಜೆ ಸರಪಳೆ |
ಧಾರುಣಿ ಪಾವನ ಹೆಜ್ಜೆ ಸೊಬಗೂ |
ವಾರಿಜ ಧ್ವಜಾಂಕುಶ ವಜ್ರರೇಖ ಅ |
ಪಾರ ಮಹಿಮ ದೇವಾ ದೇವಾ ವಂದ್ಯಾ |
ಜಾರ ನಾರಿಯರೊಡನೆ ನಲಿದಾಡಿದಾ ನಿರುತ |
ಜಾರ ಭಕ್ತರ ಮಾತಿಗೆ ಎಂದೆಂದಿಗೇ |
ಘೋರಾದುರಿತಹಾರಿ ವೆಂಕಟಾಚಲ ವಿಹಾರ ವಿಜಯವಿಠಲ |
ಸಾರಿದವರ ಮನೋಹರ ಮಾಡಿದ ಕರುಣ ೧
ಮಟ್ಟತಾಳ
ಈಶ ನಿನ್ನ ಪಾದ ನೋಡದವನು ಪಾಪಿ |
ಈಶರೆಂಬುವರೆಲ್ಲ ನಿನ್ನ ತರುವಾಯ |
ಈಶ ಈಷಣತ್ರಯವೆಂಬೊ ಮಹಾ ಮಮತೆಯನ್ನು |
ಈ ಶರೀರದಲಿ ಬಿಡಿಸು ಮುಂತೆ ಇಂತು |
ಈಶವಂದಿತ ಪಾದ ವಿಜಯವಿಠಲ ವೆಂಕಟ |
ಲೇಶವಾದರು ನಿನ್ನ ಬಿಡದಿಪ್ಪನೆ ಧನ್ಯಾ ೨
ತ್ರಿವಿಡಿತಾಳ
ಕಣ್ಣೀಗೆ ಕಾಣಿಸದ ಪರುಸ ಕಂಡಲಿದ್ದ |
ಅನಂತ ವಾಗಿಪ್ಪ ಲೋಹ ಖಣಿಗೇ |
ಮುನ್ನೆ ಸಂಬಂಧವಾದದೆಂತೂ ತಿಳಿಯದು |
ಘನತೆ ಏನೆಂಬೆ ವಿಚಾರಿಸೆ ನಿನ್ನ ಸರಿ ಕೃಪಾಂಬುಧಿ |
ಇನ್ನಿಲ್ಲ ಇನ್ನಿಲ್ಲ ಎನ್ನಂಥ ಪಾಪಾತ್ಮ ಮುನ್ನಿಲ್ಲ ಅವಲ್ಲಿ |
ಇನ್ನೀತೀರ್ವರಿಗೆ ಘಟನೆ ಮಾಡಿದ ಬುದ್ಧಿ ಸಂ |
ಪನ್ನ ಗುರುಗಳ ಕರುಣಕ್ಕೆ ಎಣೆಗಾಣಿನೋ |
ಘನ್ನ ಮಹಿಮ ನಮ್ಮ ವಿಜಯ ವಿಠಲ ರೇಯ |
ಧನ್ಯನಾದೆ ನಿನ್ನ ಪಾದದ್ವಯವ ಕಂಡೂ ೩
ಅಟ್ಟತಾಳ
ನರೆ ಮೇರು ಗಿರಿ ಶಿಖರಾಗ್ರದಿ ಕುಳಿತು |
ಕರದಲ್ಲಿ ಪೀಯೂಷ ಪಾತ್ರಿಯ ಪಿಡಿದು |
ಸುರಿದು ಸುಖಿಸುವ ತೆರದಂತೆ ಎನಗಿಂದು |
ದೊರಕಿತು ಹರಿಯ ಚರಣ ನಾಮಾಮೃತ |
ಸುರಿದು ಸುಖಿ ಸೀದೆ ಗುರುಗಳನುಗ್ರಹ |
ಪಿರಿದಾಗಿ ಸಿದ್ಧಿಸಿತು ವೆಂಕಟ ಸಂಕಟ |
ಹರಣಾ ಹರಿ ಹರಿಣಾಂಕ ಗಿರಿರಾಯ |
ನರಿಗೆ ವಂಚಕನಾಮ ಉಂಟಾಗಿದ್ದದ್ದು |
ಪರಿಹಾರ ವಾಯಿತು ನೋಡಿ ನೋಡಿರೋ |
ಧರೆಯೊಳು ನಾನೊಬ್ಬ ವಂಚಕ ನಾಗಿದ್ದೆ |
ಕರುಣ ಮಾಡಿದ ಹರಿ ತನ್ನವನಿವನೆಂದು |
ಸುರಪಾಲಕ ನಮ್ಮ ವಿಜಯವಿಠಲರೇಯನ |
ನಿರೀಕ್ಷಿಸಿ ಕೊಂಡಾಡಿ ಭವತಾರಕನಾದೆ ೪
ಆದಿತಾಳ
ಪರಮ ಪುರುಷ ಪರಂಜ್ಯೋತಿ ಪರಮ ಬ್ರಹ್ಮನಾಯಕ |
ಪರಮಾತ್ಮ ಪರಮ ಪೂಜ್ಯಾ ಪರತರ ತಮ ಗುಣ ಪರಿಪೂರ್ಣ |
ಪರಮ ಮುಖ್ಯ ಪರಮೋದ ಪರಮೇಶ ಪರಮಾಶ್ಚರ್ಯ |
ಪರಮತತ್ವ ಪರಮ ಶರೀರ ಪರಮ ಪಾವನ |
ಪರಮ ಸುಹೃತ ಪರಮ ಮಂಗಳ ಮೂರ್ತಿ |
ಪರಮ ವೈಚಿತ್ರ ವಿಜಯ ವಿಠಲ |
ವರದ ವೆಂಕಟಗಿರಿರಾಯ ಶರಣರ ಮನೋರಥ ಸಂತತ ೫
ಜತೆ
ಗಿರಿರಾಯ ಸುರರಾಯ ಸುಖಪೂರ್ಣ ಮಹಾರಾಯ |
ಉರಗಾದ್ರಿ ವೆಂಕಟ ವಿಜಯ ವಿಠಲವೊಲಿದ ೬

ಲೋಕಜೀವನದ ಸುಖಪ್ರದ ವಸ್ತುಗಳು

೯೦
ಧ್ರುವತಾಳ
ಸೇರಿದೆನೊ ಬಂದು ಸಂಕಟದಲ್ಲಿ ನೊಂದು
ತಾರಿ ತುಟಿಯಾರಿ ದಾನವಾರಿ
ಘೋರವಾದ ಕ್ರೂರರು ಒಳಗೆ ಐ
ವಾರು ಒಂದಾಗಿ, ಮೆದ್ದಾರು ಚೆನ್ನಾಗಿ
ನೂರು ನೂರು ಬೇರು ಬಲ್ಲನೆಂದರೆ ಮೂರು
ಬಾರಿ ಕುಡಿಸಿದರು ಬಂದೊಂದು ಸೇರು
ಪುರಾತನ ನಾನು ವಿಜಯವಿಠ್ಠಲ ಪ್ರೇಮ
ಆರೈದು ಸಲಹುವವರ ಕಾಣೆ ಬಲ್ಲವರ ೧
ಮಟ್ಟತಾಳ
ವಿಷಪಾನಗಳಲ್ಲಿ ನಸುಗುಂದಿದೆ ನವೆದು
ಮುಸುಕಿತು ರೋಗ ಕಾಣಿಸಲಾರದೆ ಉ-
ಬ್ಬಸ ಬಡುತಲಿಪ್ಪೆ
ಅಶ್ವತ್ಥನಾಮಕನೆ ವಿಜಯವಿಠ್ಠಲನೆ ಎನ್ನ
ಅಸುವನು ನಿರ್ವಹಿಸಲಾರೆನೊ ಇನ್ನು ೨
ರೂಪಕ ತಾಳ
ಎಂದಿಗಾದರು ಒಮ್ಮೆ ಪುಣ್ಯವಂತರಿಂದ
ಒಂದು-ದಿನ ನಾಮಾಮೃತವ ಪಾನವನು ಮಾಡೆ
ಬಿಂದು ಮಾತುರ ಕಾಯಕೆ ಆಗಗೊಡದೆ
ಮುಂದುಗೆಡಿಸುತಿದೆ ಮುನಿದು ಮುನಿದು ನಿತ್ಯ
ಬೆಂದು ಹಸಿಮರ ತುದಿಯಲ್ಲಿ ಕುದಿದಂತೆ
ಕಂದಿ ಕುಂದಿಸಿ ಎನ್ನ ತಿಕ್ಕಿಮುಕ್ಕುತಲಿವೆ
ತಂದುಕೊಂಬೆನೆ, ಜೀರಣಕೆನಲು, ಸುವರ್ಣ
ಬಿಂದು ವಿಜಯವಿಠ್ಠಲನೆಂದೆಂದಿಗೆ ಎನ್ನಿಂದಾಗದು ದೇವ ೩
ಝಂಪಿತಾಳ
ವಿದ್ಯೆ ಎಂಬುದು ಇಲ್ಲ ಮುದ್ದೆ ಘಳಿಸಿದ್ದಿಲ್ಲ
ಉದ್ದಿನಷ್ಟು, ಸೇವೆ ಮಾಡುವನು ಅಲ್ಲ
ಉದ್ದಕ್ಕೆ ನಿನಗಡ್ಡ ಬಿದ್ದು ದೈನ್ಯದಲಿ, ಪಾ-
ದದ್ವಯಕೆ ಎರಗುವೆನು ಉದಧಿಶಯನ
ಉದ್ಧಾರವನು ಮಾಡು ಕ್ಷುದ್ರರಿಕ್ಕಿದ ವಿಷದ
ಮದ್ದು ಪರಿಹರಿಸುವುದು ಮಧುಸೂದನ
ಸದ್ಗತಾನಾಮ ಶ್ರೀ ವಿಜಯವಿಠ್ಠಲರೇಯ
ಹೊದ್ದಿದೆನು ಎನ್ನ ಅವಿದ್ಯ ಮಾಡದಿರು ೪
ತ್ರಿವಿಡಿತಾಳ
ಘನ ವೈದ್ಯ ನೀನು ಒಬ್ಬನೆ ಎಂದು ಸ್ರ‍ಮತಿಯಿಂದ
ಅನಿಮಿಷಾವಳಿ ಮುನಿಸನಕಾದ್ಯರು
ವಿನಯದಲಿ ಪೇಳಲರ್ಜುನ ಮಿಕ್ಕರವರು ಆ-
ರ್ಜನೆ ಮಾಡಿ ವಿಷಪಾನವನು ಪರಿಹಾರದಿಂದ
ತನು ಶುದ್ಧವಾದರೆಂಬೋದು ಮನಕೆ
ಧನವಂತ್ರಿ ವೈದ್ಯನೆ ನಿನಗೆ ತೋರಿತು ಕಾಣೊ
ಪುನರ್ವಸುನಾಮ ಸಿರಿ ವಿಜಯವಿಠ್ಠಲ ಎನ್ನ
ಗಣನೆ ಮಾಡುವುದು ಸುಜನರ ತರುವಾಯ ೫
ಅಟ್ಟತಾಳ
ನಾರಾಯಣನೆಂಬ ವೀರವೈದ್ಯನ ಕಂಡ
ಕಾರುಣ್ಯದಲಿ ತನ್ನ ಚರಣಾಂಬಿಲಿ ಚಿಂ
ತಾರುತುನ ಮಾತ್ರೆ ಅಂದು ಪೂರ್ಣವಾಗಿ
ಕಾರಕೊಟ್ಟನು ನೋಡು ಕರದು ಸಮೀಪಕ್ಕೆ
ಶಾರಿರವೆ ಉಂಡು, ಎದಿಗೆ ಹತ್ತಿದ ಮದ್ದು
ಕಾರಿಸಿತು ಬಹು ವ್ಯಾಪ್ತವಾಗಿದ್ದದ್ದು
ಪೂರಾಯಿತ ನಾಮಾ ವಿಜಯವಿಠ್ಠಲ ಮುಂದೆ
ಪೊರೆವ, ದುರುಳರು ಸೇರದಂತೆ ಒಲಿದು ೬
ಆದಿತಾಳ
ಮುಂದಾದರು ದುರುಳ ಇಂದ್ರಿಯಗಳಿಂದ ಬಪ್ಪ
ವೃಂದ ರೋಗಗಳಿಗೆ ಇಂದು ತನ್ನಯ ದಯವೆಂಬೊ
ಸಿಂಧೂರ ಮಾತ್ರೆಯನ್ನು ತಂದು ಲೇಪಿಸಿದ, ಗೋ
ವಿಂದ ವಿಜಯವಿಠ್ಠಲ ಬಂದು ಎನ್ನ ನಾಲಿಗ್ಗೆ ೭
ಜತೆ
ಬಹು ದಿನದಲಿ ಇದ್ದ ಭವರೋಗ ಹಿಂಗಿತು
ಸಹಿ ವಿಷ್ಣು ವಿಜಯವಿಠ್ಠಲ ವೈದ್ಯನಿಂದಲಿ ೮
೨. ನಿವೇದನಾತ್ಮಕ ಸುಳಾದಿಗಳು
ವಿಜಯವಿಠಲನ ಸ್ತೋತ್ರಗಳು

ಋಷಭನಾಮಕ ಪರಮಾತ್ಮನ

ಋಷಭದೇವ ಸ್ತೋತ್ರ
೧೧೯
ಧ್ರುವತಾಳ
ಸೌಭಾಗ್ಯವಂತ ಜಯತು ಸೌಂದರ್ಯಸಾರ ಜಯತು
ಭೂಭಾರಹರಣ ಜಯತು ಭೂಮಾ ಜಯತು
ಶ್ರೀ ಭೂರಮಣ ಜಯತು ಶೃಂಗಾರ ಪುರುಷ ಜಯತು
ಶೋಭನಮೂರ್ತಿ ಜಯತು ಲೋಕೇಶ ಜನಕ ಜಯತು
ಲಾಭ ಪ್ರದಾತ ಜಯತು ಲಘುವ ಜಯತು
ವೈಭೋಗಾನಂದ ಜಯತು ವೈಕುಂಠ ವಾಸ ಜಯತು
ಭೂ ಭೂಜ ರತ್ನ ಜಯತು ಭೂಷಾಜಯತು
ನಾಭಿ ಕಮಲಾ ಜಯತು ನಾಗಾರಿಗಮನಾ ಜಯತು
ಗೋ ಭೀತಿನಾಶ ಜಯತು ಗೋತ್ರಜ ಜಯತು
ಶ್ರೀ ಭಾಗ ಚರಣ ಜಯತು ತ್ರಿದಶವಂದಿತ ಜಯತು
ವೈಭವಕೀರ್ತೀ ಜಯತು ವೈದ್ಯ ಜಯತು
ನಾಭಿನಂದನ ಜಯತು ನಾನಾವತಾರ ಜಯತು
ಸ್ವಭಾವ ಲೀಲಾ ಜಯತು ಸ್ವಾಮೀ ಜಯತು
ಸಾಭೀಮಾನನೆ ಜಯತು ಸಮಸ್ತಫಲದಾ ಜಯತು
ಸಾಭೀಮ ದೈವ ಜಯತು ಸಮಸ್ತ ಸಾಧೂ ಜಯತು
ಸುಭಾಷ್ಯಪಾಲ ಜಯತು ಸುಖಸಾಂದ್ರ ಜಯತು
ಕುಭಾವ ವೈರಿ ಜಯತು ಕುಶಲಾ ಜಯತು
ಸೌಭರಿ ಮುನಿ ವಂದ್ಯ ವಿಜಯ ವಿಠ್ಠಲ ಋಷಭ
ಈ ಭೋಗದಲ್ಲಿ ನಿಂದು ವಿಜ್ಞಾನವನ್ನೆ ಕೊಡು ೧
ಮಟ್ಟತಾಳ
ಋಷಭ ಋಷಭ ಮಹಾ
ಋಷಿಜನ ಮನೋಹರ
ಪೃಷವಾಹನ ಪ್ರೀಯ
ಹೃಷಿಕೇಶ ಪರಮೇಶ ಋಷಿ ಋಷಭ
ವಿಷಭಂಜನ ನಿತ್ಯ ವಿಷಯವಿದೂರ
ವಿಷಯದ ಮಡುವಿನೊಳಗೆ
ವಿಷದಂತನ ತುಳಿದ ವಿಜಯ ವಿಠ್ಠಲರೇಯಾ
ಋಷಿವೇಷವಧರಿಸಿ ವಸುಧೆಯೊಳಗೆ ಮೆರೆದೆ ೨
ತ್ರಿವಿಡಿತಾಳ
ಪಾರ ತಂತ್ರ ರಹಿತ ಪರಿಪೂರ್ಣ ವಿಜ್ಞಾನ
ಶಾರೀರ ಸತ್ವ ಜಾಗರ ಮೂರುತೀ
ಮೇರು ಗರ್ಭೋದಯ ಮೇಧಾದಿ ನಾಮಕ
ಚಾರು ಪರಮಹಂಸರೂಪ ಭರತಜನಕ
ಧಾರುಣಿಯೊಳಗವಧೂತವೇಷವ ಧರಿಸಿ
ತೋರಿದೆ ಅಜಗರ ವೃತ್ತಿಯನ್ನು
ಸಾರಿಸಾರಿಗೆ ಮನುಜ ಲೀಲೆಯಿಂದಲಿ ಮೆರೆದೆ
ಆರಾರು ನುಡಿದದ್ದ ಸೈರಿಸಿಕೊಂಡೆ
ಮೂರು ಭುವನದೊಳು ಆಶ್ಚರ್ಯ ತೋರಿ ಸಂ
ಸಾರ ಉತ್ತರಿಸುವ ಮಾರ್ಗವ ತಿಳುಪಿ
ಊರ ಪೋರಂಗಳಿಂದ ನೀಚತ್ವ ನುಡಿಸಿಕೊಂ
ಡೀರಿತಿಯಲ್ಲಿ ಒಪ್ಪಿದ ನಿರ್ದೋಷನೆ
ಆರುಬಲ್ಲರು ನಿನ್ನ ಆನಂದಾನಂದವ
ವಾರಿಜೋದ್ಬವಾದಿಗಳು ಪೊಗಳಲೊಶವೆ
ಭಾರಕರ್ತ ನಮ್ಮ ವಿಜಯ ವಿಠ್ಠಲರೇಯಾ
ವಾರವಾರಕೆ ಎನ್ನ ಮನದಲ್ಲಿ ಸುಳಿದಾಡು ೩
ಅಟ್ಟತಾಳ
ತತುವ ಮೋದಾಂಬುಧಿ ತಪನೀಯವರ್ನನೆ
ತತುತಕ್ಕದ್ದು ವ್ಯಾಪಾರವ ಮಾಡುವಿ
ಹುತವಾಹನನೊಳು ಅಂತರ್ಧಾನನಾಗಿ
ಕ್ಷಿತಿಯೊಳು ಷೋಡಶಗಿರಿಯಲ್ಲಿ ಅಡಗಿದೆ
ಮತಿಹೀನ ಮನುಜರು ವಿಪರೀತ ತಿಳಿದು ದು
ರ್ಗತಿಯಲ್ಲಿ ಪೋಗಿಬೀಳುವರು ಶ್ರುತಿಸಿದ್ದಾ
ಸತತ ನಿಜವೆಂದು ಒಲಿಸಿದ ಮನುಜ ಉ
ನ್ನತ ಪದವಿಯಲ್ಲಿ ಸೇರಿ ಸುಖಿಸುವರು
ಅತಿ ಚಿತ್ರವಿಚಿತ್ರ ವಿಜಯ ವಿಠ್ಠಲ ಋಷಭ
ಯತಿ ಶಿರೋಮಣಿ ಮಧ್ವಮುನಿ ವಂದ್ಯ ಆನಂದಾ ೪
ಆದಿತಾಳ
ಸುಜನರ ಸಂತಾಪಹರಣ ಅನಾದಿಕಾಯ
ದ್ವಿಜಕುಲ ಸಂರಕ್ಷಣಯೋಗಿ ಯೋಗೇಶ್ವರ
ಭಜಿಸುವೆ ನಿನ್ನ ಪಾದ ಕಾಲಕಾಲಕೆ ಎನ್ನ
ವೃಜನಗಳು ಪೋಗಾಡಿ ಶುದ್ಧಾತ್ಮನ ಮಾಡು
ಅಜದೇವಾದಿಗಳಿಗೆ ಸಮಸ್ತ ಸಾಧನ
ಸೃಜಸಿ ಕೊಡುವೆ ವೇಗ ತಾರತಮ್ಯದಿಂದಲಿ
ಪ್ರಜಾಪಾಲ ಪಾವನ ವಿಜಯ ವಿಠ್ಠಲರೇಯಾ
ನಿಜಭಕ್ತರ ಕೈಯ್ಯ ಪೂಜೆಗೊಂಬ ಪರಮಾತ್ಮಾ೫
ಜತೆ
ಕಂಜನಾಭ ಅಮೃತವಪುವೆ ಋಷಭ ನಿ
ರಂಜನ ಮೂರುತಿ ವಿಜಯ ವಿಠ್ಠಲ ಸ್ವಾಮಿ ೬

ತತ್ವಶಾಸ್ತ್ರಗಳ ಪ್ರಕಾರ ಸ್ವಪ್ನವೆಂಬುದು

೧೨೯
ಧ್ರುವತಾಳ
ಸ್ವಪ್ನ ಪ್ರಕರಣ ನಿತ್ಯ ಯೋಚಿಸಿ ತಿಳಿಯಬೇಕು
ಗುಪುತವಾಗಿದೆ ಇದು ನೋಡಿದರು
ಸಪುತ ಸಪುತ ಭುವನಾಂತರ್ಗತವಾಗಿದ್ದ
ಕ್ಲಿಪುತ ದು:ಖ ಸಂತೋಷ ಕಾರಣವೆನಿಸಿ
ಅಪರಿಮಿತ ಜನ್ಮಂಗಳು ಬಂದರಾದಡೆ ಇದು
ಉಪಕ್ರಮ ಉಪಸಂಹಾರವಾಗುತಿದಕೊ
ದಿಪುತವಾದ ಮನಸು ಆಶ್ರಯವೆನ್ನಿ ಜಡ
ತ್ರಿಪರಿ ಗುಣ ಸಂಯುಕ್ತ ಪ್ರಕಾಶವೋ
ಚಪಲ ಸದೃಶವಾಗಿ ಹೃದಯ ಕಂಠ ನಯನ
ಜಪಿಸು ಪೂರ್ವೋಕ್ತ ಕ್ರಮಣ ಕರಣಭೇದ
ತಪನ ಕಾಲ ಪ್ರಾರಂಭ ಬಾಹಿರ ವ್ಯಾಪಾರವೆ
ನಿಪುದು ಜಾಗ್ರದಾವಸ್ಥೆ ಎಂಬೊ ನಾಮಾ
ಕೃಪಣ ವತ್ಸಲ ವಿಶ್ವನಂತ ಪ್ರಾಜ್ಞಾಚಕ್ಷುಸ
ನೃಪ ತ್ರಿಣಿಮೊಗ ಮನುಜ ಹಸ್ತಿವದನ
ಕೃಪಾಪಯೋನಿಧಿ ಪೂರ್ಣ ಸ್ಥೂಲ ಭಕುತಸತ್ವ ಪ್ರವರ್ತಕ
ತಪನೀಯ ಕಾಯ ಈತನೆ ವಿಷ್ಣುವೋ
ತಪವ ಮಾಡೆಲೊ ನಿತ್ಯ ವಿಶ್ವನ್ನ ಸೃಷ್ಟಿಕಾಲ
ಸುಪವರ್ನ ದೈತ್ಯ ತಲೆಯ ಪುಟ್ಟಿಸುವ
ಸುಪಥ ದುಷ್ಪಂಥ ಚರಿಯದಿಂದ ತಿಳಿಯಬೇಕು
ವಿಪುಳದೊಳಗೆ ನೋಡುವ ಕರ್ಮದಿ
ನಿಪುಣ ಮನೋರಥ ಸೃಷ್ಟಿ ಸೂಕ್ಷ್ಮ ಸ್ಥೂಲ
ತಪನೀಯ ಗರ್ಭವಾಯು ಗರುಡಾದಿ ಇಂದ್ರಾದ್ಯರು
ಅಪಭ್ರಷ್ಟ ದೇವ ಮೊದಲಾದ ಸುರರು
ರಿಪುವಂಶಾವಳಿ ಸರ್ವಗಣವೆಲ್ಲ ತುಂಬಿ ಲೋ
ಲುಪರಾಗಿ ಮಹಾ ಪ್ರವಹದಂತೆವೊ
ಪ್ರಪಂಚವ ನಡಿಸುವರು ಒಂದು ದಶ ಭಾಗದಲ್ಲಿ
ಕಪಟನಾಟಕ ಹರಿಯ ನೇಮನದಿಂದ
ಶ್ವಪಚ್ಯಾದಿ ಜನ್ಮಗಳು ಬರುತಿಪ್ಪದೊ ಪಂಚೇಕದ್ವಿ
ಶಫಲ ಶಬರ ನಾನಾ ದೇಹ ಒದಗಿ
ವಿಪರೀತ ಕಾರ್ಯ ಮೇಲು ಸಂತೋಷ ಲಾಭವೆಲ್ಲ
ಸ್ವಪನಾವಸ್ಥಿಯಲ್ಲಿ ಆಗುವುದು
ಕಪಿಲಾದಿ ಭಗವದ್ರೂಪ ವಾಸನಮಯದಲ್ಲಿ
ಅಪರೋಕ್ಷವಾದರಾಗೆ ಇದರ ಸ್ಥಿತಿ
ಕಪಿವರಗೆ ತದಾಕಾರ ಮಹತತ್ವಕಾಯ ಸೂಕ್ಷ್ಮ
ಉಪಕ್ರಮವಾಗುವುದೊ ತತ್ಕಾಲಕ್ಕೆ
ಸುಪರ್ನವಾಹನ ಆ ಪ್ರಾಣನ್ನ ಮಧ್ಯದಲ್ಲಿ
ವಪು ಧರಿಸಿ ಅಂಶದಿಂದ ಕಾಣಿಸುವೆನೊ
ತ್ರಿಪುರಾದಿ ಮಿಕ್ಕಾದ ಸಾಂಶ ಜೀವರು ವ
ರ್ಣಿಪುದೇನು ಗಾತ್ರ ಧರಿಸಿ ತೋರುವುದು
ಅಪವರ್ಗದಾತ ನಮ್ಮ ವಿಜಯ ವಿಠಲರೇಯ
ತಪ ತಪ ಮಾಡದಲೆ ಮನಕೆ ಪ್ರೇರಕನಾಗಿ ೧
ಮಟ್ಟತಾಳ
ಕನಸಿನಲಿ ಗಜ ತುರಗ ಮನೆ ಸತಿ ಸುತ ವಾಜಿ
ಧನ ಭೂಗೋಳ ಕ್ಷೇತ್ರ ವನ ಕಾಂಚನ ವಸ್ತ್ರ
ಮಣಿ ಅಂದಣ ದೇಶ ಜನ ನದಿ ಸಮುದ್ರ
ಜನನಿ ಜನಕ ಬಂಧು ತೃಣ ಪಶು ಮೊದಲಾಗಿ
ಅಣು ಘನ ಗುರು ಲಘುವು ಇನಿತಿನಿತು ಎಲ್ಲ
ಎಣಿಕೆ ಇಲ್ಲದೆ ಯೋಚನೆ ಮಾಡದೆ ಕಾಂಬ
ಜನನ ಸ್ಥಿತಿ ನಾಶ ಗುಣ ದುರ್ಗುಣ ವೃತ್ತಿ
ಕ್ಷಣ ಕ್ಷಣಕೆ ಬಿಡದೆ ತನುವಿನೊಳಗೆ ಸ್ವ
ಪನ ಕಾಲದಲ್ಲಿ ಜೀವನ ಭಿನ್ನವಾದ
ಜನ ಜಡ ಚೇತನವ ದಿನರಾತ್ರಿ ಎಂದು
ಗಣನೆ ಮಾಡುವ ಇದಕ್ಕೆ ನೆನಿಸಿ ಪ್ರತ್ಯಕ್ಷದಲ್ಲಿ
ಅನುಮಾನವಿಲ್ಲದಲೆ ಮನೋವಾಕ್ಕಯದಲ್ಲಿ
ಪ್ರಣವ ಮೂರುತಿ ನಮ್ಮ ವಿಜಯ ವಿಠಲರೇಯ
ಅನಿಮಿಷರೊಡನೆ ಜನ್ಮ ಜನ್ಮದಲ್ಲಿದ್ದ ಅನುಭವ ಮಾಡಿಸುವ ೨
ತ್ರಿವಿಡಿತಾಳ
ದಿವಸದಲ್ಲಿ ಮನುಜ ಮನಸು ನಯನ ಮತ್ತೆ
ಶ್ರವಣದಿಂದ ವಸ್ತು ತಿಳಿದೆವಲ್ಲಾ
ವಿವರಾ ವಿವರವಾಗಿ ಪಾಪ ಪುಣ್ಯ ವೃತ್ತಿ
ನವನವವೆಸಗಲು ಇವಕೆ ಮಾನಿ
ಕವಿಶಿಷ್ಯ ನಿರ್ಜರರು ನಿಜವಾಗಿ ಇಪ್ಪರು
ತವಕದಿಂದಲಿ ಕೇಳು ಮನುಜಾದಿಲೆ
ವಿವರಿಪೆ ಮನದಲ್ಲಿ ಈ ಬಗೆ ಆಭಿಮಾನಿಗಳು
ಇವರಿಂದ ಮಾಡಿಸುವ ಕರ್ಮದೊಳಗೆ ಪೋ
ಗುವ ಬರುವ ಕಾರ್ಯದಲಿ ವಿಶ್ವನೊಳಗೆ
ಲವ ತೃಟಿ ಕಾಲ ಪರಿಮಿತದಲ್ಲಿ ಬಂದು
ಪ್ರವಿಷ್ಠರಾಗುವುದು ಭೂತ್ಯದರೊಡನೆ
ರವಿ ಮೇರು ಮರೆಯಾಗಿ ದಿವಸಾಂತ ವೆನಿಸುವುದು
ಅವಸರದಲ್ಲಿ ಮಲಗಲಾಗ ವಿಶ್ವ
ದ್ವಿ ವಿಧಾವಸ್ಥಾ ಸ್ಥಳಕೆ ತೆರಳಿ ಪೋಗುವ ಸರ್ವ
ದಿವಿಜದಾನವ ತತಿಯ ಗರ್ಭದಿ ಧರಿಸಿ
ಶಿವನ ಮನೆಗೆ ಇಳಿದು ತೈಜದಿ ಸದಲ್ಲಿ ಕೂ
ಡುವ ಏಕೀಭೂತ ಸಪ್ತಾಂಗ ಪ್ರಾಜ್ಞ
ಇವರಿಗೆ ಸ್ವಪನಾವಸ್ಥಿ ತಂದುಕೊಡುವ ಶ್ರೀ
ಧವನು ವಾಸನಾಮಯ ಸೃಷ್ಟಿಯಿಂದ
ದಿವದ ವ್ಯಾಪಾರದ ಗತಿಯಂತೆ ಜೀವಕ್ಕೆ
ಭವದಲ್ಲಿ ಇದ್ದದು ತತ್ತ ಸದೃಶ
ಪ್ರವರ್ತಕೆ ಇದಕೆಲ್ಲ ದೇವ ದೈತ್ಯರ ಗಾ
ತ್ರವನು ನಿರ್ಮಾಣವ ಮಾಡಿನೋಳ್ಪ
ಪವಿತುರ ಲೀಲೆಗೆ ತ್ರಿದಶತತಿ ಹೇಯಕ್ಕೆ
ಅವಗುಣದವರೆನ್ನಿ ನಿತ್ಯದಲ್ಲಿ
ಇವರೆ ಸಪ್ತ ಗೋತ್ರ ಪಿತೃ ಮಾತೃ ಸಹ
ಭವ ನಾನಾ ಪರಿಯಾಗಿ ಕಾಣಿಪರಯ್ಯ
ಭವನಾಮಕ ರುದ್ರ ಸತಿದ್ವಾರದಿಂದ ಉ
ದ್ಭವರಾಗುವರು ತೈಜಸ ಮುಖ್ಯ ಕರ್ತ
ಗ್ರೀವದಲ್ಲಿ ಇಂಥ ಪ್ರಯೋಜನವಾಹುದೊ
ಪವನಾಂತರ್ಯಾಮಿ ವಿಜಯ ವಿಠಲ ತ್ರಿ
ಭುವನದೊಳಗೆ ಸರ್ವಸ್ವಪನ ವ್ಯಾಪಾರವೊ ೩
ಅಟ್ಟತಾಳ
ತತ್ಕರ್ಮತತ್‍ಕ್ರಿಯ ತದ್ರೂಪ ತದ್ಗುಣ ತತ್ಕರಣ
ತತ್ಕಾಲ ತತ್ ಪ್ರಕಾರ ಚರ್ಯ ತತ್ತಳ ದೇವತೆ ದಾನವ ಮಿಕ್ಕಾಯ
ತತ್ಕಟಕವ ಮಾಡಿ ತೆತ್ತುವ ದೇಹವ
ಸತ್ಕರ್ಮ ದುಷ್ಕರ್ಮ ಹಗಲು ನೋಡಿದಚ
ಮತ್ರ‍ಕತಿ ದೇಹವ ಭೂತಗಳು ಬಂದು ಸ್ಥೂಲ ಭಕು
ಚಿತ್ಪ್ರಕೃತಿ ಪತಿ ವಿಶ್ವನ್ನ ಜಠರದೊ
ಳುತ್ರ‍ಕಷ್ಟವಾಗಿ ಪ್ರವೇಶವಾಹವು
ತತ್ಕಳೇವರದಿಂದ ದಿವಸ ದಿವಸದಲ್ಲಿ
ವ್

ಜೀವರ ತಾರತಮ್ಯಾನುಸಾರ ಬಿಂಬಾಪರೋಕ್ಷವನ್ನು

೧೩೦
ಧ್ರುವತಾಳ
ಸ್ವರಮಣ ಸ್ವಾತಂತ್ರ ಸುಗುಣ ಸಾಕಾರ ಸುಂದರ
ಪರಬೊಮ್ಮ ಸರ್ವಜ್ಞ ವ್ಯಾಪ್ತ ವ್ಯಕ್ತಾವ್ಯಕ್ತ
ನಿರುಪಾಧಿಕ ಭಕ್ತಪಾಲ ನಿಸ್ಸಂಗ ಅಪ್ರಾತೃತ
ಶರೀರ ನಿರವಕಾಶ ಪ್ರಮೇಯಭರಿತ
ಹರಿ ಸರ್ವೋತ್ತಮ ನಿತ್ಯ ನಿಖಿಳೈಶ್ವರ್ಯ ಭೂಮ
ಸರ್ವದ ಲಿಂಗ ಸೂಕ್ಷ್ಮ ಸ್ಥೂಲ ದೇಹದ ತತ್ವದಲ್ಲಿ
ಪೊರೆವಗೋಸುಗ ವಸತಿಯಿಪ್ಪ ಈಶಾ
ಪರಿಪೂರ್ಣ ಪ್ರಭು ಪ್ರಣವ ಪ್ರತಿಪಾದ್ಯ ಇಂದಿರೆ
ಯರಸ ಪರತತ್ವ ನಾನಾರೂಪ ಸುಪ್ರತಾಪ
ಎರಡೊಂದು ಯೋಗ್ಯರನ್ನು ನೋಡಿ ಮುಕ್ತಿ ಜೀವರ
ತರತಮ್ಯ ಚತುರ್ದಶ ಬಗೆ ನೇಮಿಸಿ
ಹಿರಿದಾಗಿ ಅಂಶಾನಂದ ಬಲಜ್ಞಾನ ದೇಶ ಕಾಲ
ಮರಳೆ ಅಪರೋಕ್ಷಲಯ ಸೃಷ್ಟಿ ಪದ
ತರುವಾಯ ಅವೇಶ ಗುಣ ಲಕ್ಷಣ ಕಾಂತಿ
ಪರಿಯಿಂತು ಮಾಡಿದ (ಸಾಂಶಕ್ಕ) ಸಾಂಶ ಜನಕೆ
ನರಗಾಯಕ ವಿಡಿದು ತೃಣಾಂತ ಗುಣಿಸುವುದೀ
ಪರಿಯಾಗಿಪ್ಪುದು ಗ್ರಹಿಸಬೇಕು
ಸರುವ ಜೀವರನ್ನು ಸೃಜಿಸಿತತ್ತತ್ಸಾಧನವ
ಪರಿಮಿತ ಮಾಡಿ ಇಪ್ಪಾ ಸ್ವಾಭಾವಿಕಾ
ಹರಿ ಸತ್ಯ ಸಂಕಲ್ಪ ಅನಾದಿ ಸಿದ್ಧಾ
ಕರ್ಮ ಮಾರ್ಯದೆಯಿಂದಲಿ ಸಾಧನೆ (ಸದ್ಧರ್ಮ) ಮಾಡಿಸಿ
ಕರಣು ಶುದ್ಧಿಯಾಗಲು ಭಕ್ತಿ ಪ್ರಸಾದ ಬಲು
ಗುರು ವುಪದೇಶ ಜ್ಞಾನ ಪ್ರಬಲವಿತ್ತು
ಹರಿ ತನ್ನ ಖಂಡಾಖಂಡ ಧ್ಯಾನ ಕ್ರಮದಿಂದ
ದರ್ಶನ ಕೊಡುವ ಅನುಭವಪ್ರಕಾರ
ಚರಿಸುವ ಕರ್ಮಜ್ಞಾನ ಭಕುತಿಯೋಗ್ಯರಿಗೆ ಶ್ರೀ
ಯರಸನು ಪ್ರತ್ಯೇಕ ಪ್ರತ್ಯೇಕ ಜೀವರಲ್ಲಿ
ವರ ಮೂರ್ತಿದರ್ಶನ ಸ್ವಯೋಗ್ಯರಿಗೆ ತಾ ಸ
ದ್ಗುರು ದೊರಕದಲೆ ಪ್ರಾಪ್ತಿಯಿಲ್ಲಾ
ಸ್ಥಿರವಾಗಿ ತಿಳಿವುದು ದೇಶಕಾಲ ವೇದಾಕ್ಷರ ಜೀ
ವ ರಮಾ ಈಶ ಈ ಜಡೇಂದ್ರಿಯಂಗಳಿಗೆ
ಸ್ಮರಣೆ ಪುಟ್ಟದು ಕಾಣೊ ಹರಿ ಗೋಚರಿಸುವುದೆತ್ತ
ಸ್ವರೂಪೇಂದ್ರಿಯಂಗಳಿಗೆ ಕೇವಲ ಸ್ಪಷ್ಟ
ಹರಿಯಿಚ್ಛೆಯಿಂದ ಇಂತಾಗುವುದೋ ತಾ
ತ್ರರ್ಯಾರ್ಥ ತಿಳಿವುದು ಗ್ರಂಥದಲ್ಲಿ
ವರ ಮೂರುತಿ ನಮ್ಮ ವಿಜಯ ವಿಠ್ಠಲರೇಯ
ಶರಣ ಜನಕ್ಕೆ ತನ್ನ ಪುರದಲ್ಲಿಡುವನು ೧
ಮಟ್ಟತಾಳ
ತೃಣ ಮೊದಲು ಮಾಡಿ ಮನುಜ ಗಂಧರ್ವರಿಗೆ
ಎಣಿಸು ನಿರಂಶರು ಪ್ರತೀಕಾಲಂಬರು ಎನ್ನಿ
ಜನುಮ ಜನುಮ ಧರಿಸಿ ಪಾಪ ಪುಣ್ಯಗಳಿಂದ
ಗಣನೆಯಿಲ್ಲದೆ ಯಿಲ್ಲಿ ಸುಖ ದು:ಖವನುಂಡು
ಕೊನೆಗೆ ಬರುತ ಬರುತ ಅನಿಷ್ಟದಿಂದಲಿ ಕರ್ಮವನೆ ಎಸಗಿ
ಅನುದಿನದಲ್ಲಿ ಮನಕೆ ಹೇಯವನು ಪುಟ್ಟಿ
ಜನುವ ಸಾಸಿರ ತೆತ್ತಿ ತತ್ಸಾಧನೆ ಮಾಡಿ
ಇನಿತರೊಳಗೆ ಹತ್ತು ಜನ ಮದಲೀ ಜ್ಞಾನ
ಮನಸಿಲಿ ಸಂಪಾದಿಸಿ ತನು ಶುದ್ದನಾಗಿ ಸದ್ಭಕ್ತಿಮೂರು
ಜನುಮಕೆ ಕೈಕೊಂಡು ಹೃದಯ ಸ್ಥಾನದರು
ಶನವಾಗುವದಯ್ಯಾ ವಾಸನ ಮಯವೆನ್ನಿ
ಅನಿಲನ ದಯದಿಂದ ಸಹಸ್ರಧದಿ ಮೂರು
ಜನುಮಕ್ಕೆ ವೈರಾಗ್ಯ ಜ್ಞಾನ ಭಕುತಿ ಪಡೆದು
ಮನಸಿಜನಯ್ಯನ ಕಾಣುವರು ಬಿಡದೆ
ಪ್ರಣತನಾಗುವ ಕೇವಲ ನಿಷ್ಠಾಮದಲ್ಲಿ
ಜನುಮ ಜನುಮಕ್ಕೆ ಕ್ರಮಾತು
ನೆನಿಸುವರು ಇವರೆ ಕರ್ಮಯೋಗಿಗಳೆನ್ನು
ಅನಿಮಿತ್ತ ಬಂಧು ವಿಜಯ ವಿಠ್ಠಲ ರೇಯ
ಮನುಜ ಗಾಯಕ ತನಕ ಈ ಪರಿ ನಡಿಸುವ ೨
ರೂಪಕತಾಳ
ಭಗವದ್ದರ್ಶನ ಲಾಭ ತೃಣ ಕ್ರಿಮಿ ಕೀಟ ಕಾ
ದಿಗಳ ಕಾಲ ಪರಿಮಿತ ಪಾದೋನ ಘಟಿಕಾ
ಯುಗಳ ದೃಷ್ಟಿಗಳಿಂದ ನೋಳ್ಪರು ಪ್ರದೀಪದಿ
ಬಗೆಯಾಗಿ ಬದರಿ ಪ್ರಮಾಣದಂತೆ ನಿತ್ಯಾ
ಮಗುಳೆ ವೃಕ್ಷ ಜೀವ ಘಟಿಕಾ ಪರಿಮಿತ ಪ
ನ್ನಗ ತಲ್ಪನ್ನ ದಶ ದೀಪಾದುನ್ನತ ಮನ
ತೆಗೆಯದಲೆ ಕಾಂಬೋರು ಅಂಗುಟ ಮಾತ್ರ ಮಿತಿ
ಖಗ ಮೃಗ ಪಶು ಮಿಕ್ಕ ಜೀವರಾಶಿಗಳು ಘ
ಳಗೆ ಸಾರ್ಧಕಾಲ ನೂರು ದೀಪದ ಕಾಂತಿ
ಮಿಗೆ ಮನುಜೋತ್ತಮರು ಚತುರ್ಗುಣೋಪಾಸಕರು
ಅಗಣಿತ ಮಹಿಮನ್ನ ಮಿಂಚಿನೋಪಾದಿಯಲಿ ಹೃದ್
ಗಗನದಲಿ ನೋಳ್ಪರು ತಮ್ಮ ಎರಡು ಘಳಿಗೆ
ಪೋಗಳಲೇನು ನೃಪರು ದಶಮಿಂಚಿನಂತೆ ಘ
ಳಿಗೆ ಮೂರು ಪರಯಂತ ಬಿಂಬನನೀಕ್ಷಿಪರು
ತಗಲಿ ಮನುಜ ಗಂಧರ್ವ ಜನ ನೋಡುವ
ಬಗೆ ಕೇಳು ಇಪ್ಪತ್ತು ಮಿಂಚಿನಂದದಿ ಘ
ಳಿಗೆ ನಾಲ್ಕು ಸಿದ್ಧವೋ ತಮ ತಮ್ಮ ಸ್ಥೂಲ ಹೃ
ದ್ಗಗನದಲ್ಲಿದರೊಳು ತಾರತಮ್ಯ ಪ್ರಕಾಶ
ಯುಗ ಪೇಳುವುದೇನು ಇವರ ಪರಿಯಂತ ಕ
ಣ್ಣಿಗೆ ತೋರ್ಪ ಹರಿ ಮಂಟಪ ಸಹಿತ ಇಲ್ಲದಲೆ
ಪಗೆದಲ್ಲಣ ನಮ್ಮ ವಿಜಯ ವಿಠ್ಠಲ ರೇಯ
ಯುಗ ಯುಗದಲ್ಲಿ ಜ್ಞಾನ ವ್ಯಕ್ತಿ ಮಾಡಿ ಕೊಡುವಾ ೩
ಝಂಪಿತಾಳ
ಏನೆಂಬೆ ಇಲ್ಲಿ ಪರಿಯಂತ ನಿರಂಶರು
ನಾನಾ ಯೋನಿ ಜನ್ಮ ಇವರಿಗುಂಟು
ಜ್ಞಾನ ಶೂನ್ಯರಯ್ಯಾ ಅಪರೋಕ್ಷದ ಪರಿಯಂತ
ಕಾಣರು ಸತ್ಸಂಗ ಲೇಶಮಾತ್ರ
ಮಾಣು ಈ ಪರಿಯಂತೆ ಮುಂದೆ ಕೇಳುವುದು ಸುಪಾ
ರ್ವಾಣ ಗಂಧರ್ವ ಕರ್ಮದೇವತನಕಾ
ಜ್ಞಾನ ಯೋಗಿಗಳೆಂದು ಕರೆಸುವರು
ಭಾನು ಮಂಡಲದಂತೆ ಕಾಂಬಸಾಂಶರು
ಪ್ರಾಣಾಧಿಷ್ಠಾನದಲ್ಲಿ ಪ್ರತೀಕಾಲಂಬಾ
ನಾನಾ ಜನುಮ ಧರಿಸಿ ಅಂಶದಿಂದಲಿ ಬಳಲಿ
ಜ್ಞಾನವಿರಹಿತರಾಗಿ ಭವದಲಿದ್ದು
ಸ್ನಾನಾದಿ ಪುಣ್ಯದಿಂದ ಸದ್ಗತಿಗೆ ಬರಲು ನಿ
ಧಾನಿಸಿ ಸತ್ಕರ್ಮ ನೂರುಜನ್ಮ
ತಾನು ಕೈಕೊಂಡು ಆಮೇಲೆ ಸಾವಿರ ಜನ್ಮ
ಮೇಣು ಧರಿಸಿ ಜ್ಞಾನವಂತನಾಹಾ
ಜ್ಞಾನ ಕರ್ಮದಿಂದ ಮುನ್ನೂರು ಜನ್ಮಕ್ಕೆ
ತ್ರಾಣನಾಗುವ ಸದ್ಭಕ್ತಿ ಪ್ರಾಪ್ತಿ

ಕೃಷ್ಣ ಸ್ತೋತ್ರರೂಪವಾದ ಈ ಸುಳಾದಿಯಲ್ಲಿ

೧೪೩
ಧ್ರುವತಾಳ
ಸ್ವರ್ಗತಿ ನಿರ್ಗತಿ ಸಕಲ ನಿಗಮ ಮಸ್ತಕ ರನ್ನನೇ
ಅಗಣಿತ ಬಲನೇ ಜಗದಾ ಮೋಹನನೇ
ಸಗುಣ ನಿರ್ಗುಣದವನೇ ಸ್ವಗುರು ಸ್ವವಶನೇ
ಸ್ವಗಮನಾನೇ ಸ್ವಾಂಗ ಝಗಿಪ ಮುಕುಟನೇ
ಮಗುವಾಗಿ ನಗುತ ಮಲಗಿದ ಮಹಿಮನೇ
ಯುಗ ಯುಗದವತಾರ ಅನಾದಿಗನೇ ಜಗಕೆ ಸೋ
ಜಿಗ ತೋರಿದ ಮಗುವಾದವನೇ
ಹಗಲಿರುಳು ಗೋಪಿಗೆ ಬಗೆ ತೋರಿದವನೇ
ಭೊಗರಿ ಚಂಡು ಚಿಣಿಕೋಲಾಡಿದವನೇ
ಜಿಗಿದು ಅಡವಿ ತಿರುಗಿ ಒಗರು ಮೆದ್ದವನೇ
ಹಗಲಿರುಳು ಪರರ ಒಗೆತನವನಳಿದವನೇ
ಬಗೆಬಗೆಯಿಂದಲಿ ಹಗರಣದವನೇ
ಜಗಕೆ ಚನ್ನಿಗ ಗುಪ್ತ ವಿಜಯ ವಿಠ್ಠಲನೇ
ವಿಗಡತನದ ವಿನೋದಿಗನೆ ಪಳ್ಳಿಗನೇ ೧
ಮಟ್ಟತಾಳ
ಸಾಗರವೆಲ್ಲಾ ಪೋಷಣೆಗೊಂಬಾ
ದಾಗಿದೆ ನಿನ್ನ ಕರತಳವಯ್ಯಾ
ವಾಗರ ಗಂಜಿ ಅಂಬಲಿ ಜೋರು
ನೀಗುಡುವೆ ಭೊಗಸಿಯನು ಒಡ್ಡಿ
ದಾಗಡಿ ಬಳ್ಳಿ ತಲೆಗೆಸುತ್ತಿ ಆಗರದೊಳಗೆ ಆಡುವುದೇನೋ
ಸೋಗು ತೋರಿದ ವಿಚಿತ್ರಚರಿತಾ ಪ್ರ
ಜಾಗರ ಮೂರುತಿ ವಿಜಯ ವಿಠ್ಠಲ
ಹೀಗಲ್ಲದೆ ಮತ್ತಾರರ್ಚಿಸಾರೇ ೨
ತ್ರಿವಿಡಿತಾಳ
ಸುತನ ಕನ್ನಿಕೆ ಮಾಡಿ ನೆರವ ಸ್ವರಮಣವೇ
ಕ್ಷಿತಿಯೊಳು ಗೊಲ್ಲರಂಗನಿಯರ ರಮಿಸುವರೆ
ಸತಿಯಾಗಿ ಸುರರಿಗೆ ಅಮೃತವನೆರೆದವನೇ
ಸತಿಯರು ಬೇಕೇನೊ ಮಾಯಾ ಲೀಲಗಾರನೇ
ಹಿತವಾಗಿ ಸುರರಿಗುಪದೇಶವಿತ್ತವನೇ
ಕ್ಷಿತಿಸುರ ಸಾಂದೀಪನಲ್ಲಿ ಓದಿದವನೇ
ಯತಿಗಳ ಮನಸಿಗೆ ದೂರತರವಾಗುವನೇ
ರಥವನ್ನು ನಡಿಸಿದ ಬಂಡಿ ಓವಿಗನೇ
ಚತುರ ಶ್ರೀ ವಿಜಯ ವಿಠ್ಠಲ ವಿಶ್ವ ನಾಟಕ
ಅತಿ ಆಶ್ಚರ್ಯವ ತೋರಿದ ಸತತ ಚತುರಿಗನೆ೩
ಅಟ್ಟತಾಳ
ಸ್ತಂಭ ಸಂಭವನಾಗಿ ಉದುಭವಿಸಿದ ಪರಿ
ಎಂಬೆನೆ ಶುಕ್ಲ ಶೋಣಿತ ವಿರಹಿತ ದೇವಾ
ಕುಂಭಿಣಿಯೊಳು ದೇವಕಿದೇವಿ ಗರ್ಭದ
ಲಿಂಬಿಟ್ಟು ಜನನವಾದ ಪರಿ ಆವುದು
ತುಂಬರ ನಾರದ ಜಂಭಾರಿ ಶಂಭು ಸ್ವ
ಯಂಭು ಸುರಾದ್ಯರ ಕುಣಿಸುವ ದೇವ
ಕಂಬು ಕೊಳಲು ತುತ್ತೂರಿ ಮವುರಿ
ಭೊಂ ಭೊಂ ಭೊಂ ಎಂದು ಊದುವ ಜಾಣಾ
ಕುಂಭದೊಳಗೆ ಜಲತುಂಬಿ ಅನೇಕರು
ಸಂಭ್ರಮದಿಂದಲಿ ಸಾಲಾಗಿ ನೋಡೆ
ಅಂಬರಗಳಿ ಗಿಳಿಯಂಬಕ ಪೊಳೆವಂತೆ
ತುಂಬಿದ್ದ ಪರಿಪೂರ್ಣ ವಿಜಯ ವಿಠ್ಠಲರೇಯಾ೪
ಆದಿತಾಳ
ಘನವಂಗುಟದಲಿನ್ನು ವನಜಜಾಂಗಳವನ್ನು
ತೃಣದಂತೆ ವ್ಯಾಪಿಸಿ ದಿನವಾ ನಡಿಸುವ ದೈವಾ
ಮನುಜ ವೇಷವ ತಾಳಿ ಜನನಿಯ ಭೀತಿಗೆ ಬಾ
ಯನು ಮುಚ್ಚಿ ಬಾಲನಾಗಿ ಮನಿಯೊಳಗಿಪ್ಪ ದೇವ
ಅಣು ಘನವೆರಡು ನಿನ್ನನಬಾರದು ನಿನ್ನ
ಗುಣಗಳ ಸರ್ವಲಕ್ಷಣಗಳು ನೂತನವೂ
ಅನಿಶ ನಾಮಕ ನಮ್ಮ ವಿಜಯ ವಿಠ್ಠಲರೇಯಾ
ಅನುಪಮ ಚರಿತ ಚೇತನಾಚೇತನ ಪ್ರಾಣಾ೫
ಜತೆ
ಅಮರಾಸುರರಿಗೆ ಸೌಖ್ಯದುಃಖಕ್ಕೆ ಕಾರಣ
ನಮೋ ನಮೋ ಸೋಮ ವಿಜಯ ವಿಠ್ಠಲ ಗೋಪ೬

ಶ್ರೀಹರಿಯೇ ಕರ್ಮ ಪ್ರವರ್ತಕನೂ, ಕರ್ಮನಿವೃತ್ತಕನೂ

೧೩೧
ಧ್ರುವತಾಳ
ಹಂಗಿಪುದೇನೋ ಇಂದು ಮೊಗ ತೋರಿ ಎನ್ನ ಅಂತ
ರಂಗದೊಳಗೆ ಇಪ್ಪ ಮುನಿವರೇಣ್ಯಾ
ಬಂಗಾರದ ಪಾತ್ರೆ ಬೆಲೆಯುಳ್ಳದಾದಡೆ
ಸಂಗತಿ ಬೇಕು ಒಂದು ಆಧಾರವು
ಮಂಗಳ ಪುರುಷ ನೀನಾದಡೆ ನಿನಗೊಬ್ಬ
ಡಿಂಗರಿಗನು ಬೇಕು ಪ್ರೇರಣಿಗೇ
ರಂಗಾ ನೀನೆಂದೆಂದಿಗೆ ಎಲ್ಲೆಲ್ಲಿ ಇರಲೂ ನಿ
ಸ್ಸಂಗನಾದೆನೆಂದರೆ ಕೂಡೋದಿಲ್ಲಾ
ಹಂಗಿಸದಿರು ಎನ್ನ ಕಾವ ಧೊರಿಯೆ
ಡಂಗುರ ಹೊಯ್ದು ಸಕಲ ಭೂಮಿಯೊಳಗೆ ಜ
ನಂಗಳು ಕೇಳುವಂತೆ ಕೂಗುವೆನೊ
ಕಂಗಳಿಗೆ ವಿಷಯ ಇಲ್ಲದಿದ್ದಡೆ ನೋಳ್ಪ
ಶೃಂಗಾರ ಮತ್ತಾವುದೋ ದೇಶದಲ್ಲಿ
ಭಂಗ ಬಡುವ ಜೀವಾ ಇಲ್ಲಾದಿರಲು ಉಪ
ದ್ರಂಗಳು ನಿನಗೆ ಬಂದು ತಾಕವೇನೊ
ಪೊಂಗು ಮೊದಲಾದ ದೋಷಕೆ ಮಾರ್ಗವೇನೊ
ಸಂಗೀತ ಪಾಡುವ ನರನಾವನೋ
ಇಂಗಿತದಲಿ ಕೇಳು ನಿನಗೆ ನೀ ನೆಂಬಿಯಾ
ಭಂಗವಾಯಿತು ನಿನ್ನ ಈಶ್ವರತನಕೆ
ಹಂಗಿಸದಿರು ನಾನೆ ಪ್ರೇರಕನೆಂದು
ಜಂಗಮ ಸ್ಥಾವರ ಜಡ ಪ್ರಪಂಚಯಾತಕೆ
ಲಿಂಗ ಶರೀರವೆಂಬೊ ಮಾತೆಯಿಲ್ಲಾ
ಗಂಗಾ ಜನಕ ನಮ್ಮ ವಿಜಯ ವಿಠ್ಠಲ ರೇಯಾ
ಅಂಗಾ ಅಂಗಿ ಭಾವದಲ್ಲಿ ಪೋಷಿಸುವನೆ ೧
ಮಟ್ಟತಾಳ
ಹರಿ ಹರಿ ಶಿರಿ ಕೃಷ್ಣ ಪರಮ ಪಾವನ ರಂಗಾ
ನರ ಹರಿ ಗೋವಿಂದ ಉರಗ ಶಯನ ಸ್ವಾಮಿ
ಧರಣಿ ಪಾಲಕ ದೇವಾ ಗರುಡ ವಾಹನ ಹರಿ
ವರ ಮೂರುತಿ ವರದಾ ಶರಣಾಗತ ವತ್ಸಲ
ಕರುಣಾಕರ ಕರುಣಿ ಉರುಮಹಿಮಾರಾಮಾ
ಅರವಿಂದನಾಭಾ ಪರಿ ಪರಿ ಪರಿಪೂರ್ಣ
ಪರತತ್ವ ಪರಂಜ್ಯೋತಿ ಸುರಪಾಲಕನೆಂದು
ನಿರುತ ಕೊಂಡಾಡುವ ಶರಣರು ಬೇಕಯ್ಯಾ
ಇರಿದಿಲ್ಲದಿರಲು ಧೊರೆ ಸೇವಕನೆಂಬೊ ಬರಿದೆ ಮಾತಾಗುವದು
ಅರಿತಕೊ ನಿನ್ನೊಳಗೆ ಶರಣ ನುಡಿದ ಮಾತು
ಕರಿವರದಾ ನಮ್ಮ ವಿಜಯ ವಿಠ್ಠಲರೇಯಾ
ಚರಿತ ಪೇಳುವದಕ್ಕೆ ಆವನಾದರು ಬೇಕು ೨
ತ್ರಿವಿಡಿತಾಳ
ಸಮಸ್ತ ಶ್ರುತಿ ಶಾಸ್ತ್ರ ಪುರಾಣ ಪಂಚರಾತ್ರಾ
ಗಾಮ ಭಾರತ ಭಾಗವತ ವೇದ ಸಿರಸಾ
ರಾಮಾಯಣ ಮಿಕ್ಕ ವಾಕ್ಯದಲ್ಲಿ ನಿತ್ಯ
ಸ್ವಾಮಿ ಭೃತ್ಯ ನ್ಯಾಯ ಪೇಳು ತಿದಕೋ
ಈ ಮಾತು ಇರಲಿಕ್ಕೆ ಎನ್ನ ಅಂಜಿಸಿಕೊಂಡು
ನೀ ಮಾಡುವೆನೆಂಬೊ ಬಿಂಕವ್ಯಾಕೆ
ಬೊಮ್ಮನಾದರೆ ನಿನಗೆ ನಿನಗೆ ಸುಖಬಟ್ಟೂ
ಆ ಮಹಾಖ್ಯಾತಿಯಲಿ ಸಂಚರಿಸುವೆ
ಕಾಮಿತಾರ್ಥವೆ ಕೊಡುವೆನೆಂಬೊ ಉತ್ತರವೇನೊ
ಈ ಮಹಿಯೊಳು ನಿನ್ನ ಪೊಗಳಲಳವೋ
ಕ್ರಮದಿಂದಲಿ ನಾನಿನ್ನ ಬಳಿಗೆ ಬಂದೂ
ಸ್ವಾಮಿ ಪಾಲಿಸು ಎಂದು ಆಲ್ಪರಿದೆನೊ
ಪಾಮರನ ಬಿಡು ಬಿಡು ಒಳಗಿದ್ದು ಇಂಥ ನಿ
ಯಾಮಕತನ ಮಾಳ್ಪದು ಮುದದಿಂದ
ಭೀಮಾ ವಾರಿಧಿನಾವಾ ಭಕ್ತವತ್ಸಲನೆಂಬ
ನಾಮಾ ಎಲ್ಲಿಪ್ಪದಾನಿಲ್ಲದಿರವಾ
ಕ್ಷೇಮಾ ಕೊಡುವೆನೆಂಬ ಉಪಕಾಯ ಎನಗೇನು
ನಾ ಮೂಢನಾದರೆ ನಿನಗೆ ತಿಳಿಯದೆ ಸಾರ್ವ
ಭೌಮ ಜ್ಞಾನಾನಂದ ಸಂಪೂರ್ಣನೇ
ಯಾಮ ಯಾಮಕೆ ಎನ್ನ ಹಂಗಿಪುದೇನೊ
ಶ್ರೀ ಮನೋಹರ ನಿನ್ನ ಬೇಡಿಕೊಂಬುವನಾರೊ
ಸಂಬಂಧನಾಗಿ ಸರ್ವದರಂದೊಂದೂ
ರೋಮ ವಿಡಿದು ಸರ್ವ ದೇಹ ದೇಹದಲ್ಲಿ
ಕ್ರಮದಿಂದಲಿ ನೀನು ಇರ ಸಲ್ಲದು
ಆ ಮೇಲೆ ಎನ್ನ ಪ್ರಾಪ್ತಿ ಆವದಿದ್ದರು
ನೀ ಮಾಣಿಸದಿರೂ ನಿನಗೆ ಎನ್ನಾ
ಭೂಮಿ ಗ್ರಾಮದ ಮೇಲೆ ವ್ಯಾಮೋಹವ
ತಾ ಮುನಿದು ಪೋಗುವ ಬಗೆ ಎಂತಲೊ
ಧೀಮಂತ ನಿನಗೊಂದು ವ್ಯಾಪಾರನ್ಯ ಫಲವಿಲ್ಲ
ಧಾಮದೊಳಗೆ ಸುಮ್ಮನೆ ಇರಬಹುದೊ
ನೇಮವಾಗಿಯಿದ್ದ ಸಂಕಲ್ಪಕೆ ಹಾಗಿ ಸು
ತ್ರಾಮ ಭವ ಅಜ ಶಿರಿ ನಗರೇನಯ್ಯಾ
ಹೋಮ ಜಪ ತಪ ಮಿಕ್ಕಾದ ಕರ್ಮಂಗಳು
ನೀ ಮಾಡಿಪೆನೆಂದು ಹಂಗೀಸ ಸಲ್ಲಾ
ನೀ ಮೊದಲು ನಾ ಮಧ್ಯ ಬಂದವರಾದರೆ
ಈ ಮಾತು ಆಡತಕ್ಕದ್ದು ಕಾಣೆಲೋ
ಸೀಮರಹಿತ ನಿನಗೆ ಎನಗೆ ಇಷ್ಟೇ ಮಾತ್ರ
ಕೋಮಲಾಂಗನೆ ಕೇಳೋ ಅಘಟಿತಾಘಟಿತಾ
ಸಮರ್ಥನು ಕಾಣೋ ಮತ್ತಾವಾವಾ
ತಾಮರಸಜಾಂಡ ನಮ್ಮಿಂದಲೆ ಒಂದು
ರೋಮಕ್ಕೆ ಇಕ್ಕಿ ಲೆಕ್ಕಿಸದಿಪ್ಪದೊ
ಹೇಮಾಂಗ ವಿಜಯ ವಿಠ್ಠಲ ಅದ್ಭುತ ಶಕ್ತಾ
ಕಾಮಧೇನು ಸುಮ್ಮನಿರಲು ಕೀರ್ತಿ ಉಂಟೆ ೩
ಅಟ್ಟತಾಳ
ಜ್ಞಾನ ಪ್ರಯತ್ನ ಇಚ್ಛಾ ನಾನಾವಿಧಿ ನಿ
ದಾನಿ ಸ್ವಾಭಾವಿಕ ಎನಗೆ ಸ್ವರೂಪದಿ
ಅನಾದಿ ಕಾಲದಿಂದ ಒದಗಿರಲಾಗೇವೆ
ನೀನದರೊಳಗಿದ್ದು ಪ್ರೇರಿಸಲ್ಲದೆ
ತ್ರಾಣನಾಗಿ ಪೋಗೋ ಬಗೆ ಮಾಡಿದರೇನೂ
ಪ್ರಾಣಿಗಳ ಜಡ ಮಾಡುವೆನೆಂಬಿಯಾ
ಹಾನಿ ಬಾರದೇ ನಿನ್ನ ನಿಜ ಸಂಕಲ್ಪಕ್ಕೆ
ಸ್ಥಾಣುವಿನ ಸ್ಥಾಣುವಿನಂದದಲಿ ನಿಲಿಸಿದ್ದ
ಈ ನುಡಿ ಇದ್ದರು ಜಡವಾಗಿದ್ದರೆ ನಿತ್ಯಾ
ಆನೆ ಇರವು ಸರ್ವ ಜೀವರ ಸ್ವರೂಪಾ
ಏನಿದ್ದದೆ ಸಿದ್ಧಾ ಮತ್ತೊಂದಾಗದು ಕಾಣೊ
ಅನಂತ ಕಲ್ಪಕೆ ಮಾಡುವ ನೀನಲ್ಲಾ
ಆನು ನಿನ್ನ ಬಿಟ್ಟು ಅಗಲುವುದಿಲ್ಲಾನು
ಮಾನವ್ಯಾತಕೆ ಎನ್ನಹಂಗಿಸಿ ಕೊಲ್ಲುವಾ
ಜಾಣತನವೇನೊ ಜಗದಂತರ್ಯಾಮಿ
ಹೀನಾಯ ಉಣಲಿಕ್ಕೆ ಎಂದಿಗೆಂದಿಗೆ ಕೇಳು
ನಾನಲ್ಲದೆ ಮತ್ತೊಬ್ಬನ ತೋರಿಸು

ರಿಗಿದ್ದುದು ಏಕೈಕ ಪುತ್ರ

೧೦೮
ಧ್ರುವತಾಳ
ಹಗರಣ ಮಾಡದಿರು ಹರಿಯೆ ನಿನಗೆ ಕರವ
ಮುಗಿದು ಬೇಡಿಕೊಂಬೆ ಭಕ್ತ ಜನರ
ಬಗೆಬಗೆಯಿಂದ ಬಂದ ಕ್ಲೇಶವ ಕಳದು ನಂ
ಬಿಗೆಯೆತ್ತು ಪಾಲಿಸುವ ಗುಣವಾರಿಧಿ
ಜಗದೊಳು ನಿನಗಿದೆ ವ್ಯಾಪಾರವಲ್ಲದೆ
ಮಿಗಿಲೇನೊ ಕಾಣೆ ಸರ್ವದ ನೋಡಲು
ಪಗೆವುಳ್ಳವನಾದರು ಬಂದು ನಿನ್ನ ಚರಣ
ಯುಗಳ ನಂಬಲು ಕಾಯುವೆನೆಂಬೊ ಬಿರಿದು
ಅಗಣಿತವಾಗಿ ದಶದಿಕ್ಕಿಲಿ ಒಪ್ಪುತಿದೆ
ನಿಗಮವಿನುತ ನಿಷ್ಕಳಂಕ ಮಹಿಮ
ಸೊಗಸೋದೆ ಸರಿ ಸಜ್ಜನರ ಪ್ರತಿಪಾಲಿಪುದು
ಮಗುಳೆ ಉತ್ತರವುಂಟೆ ಎಲೊ ದೇವನೆ
ಖಗರಾಜಮಣಿಯಿರೆ ಪನ್ನಗ ಗರಳದ ಭಯವೇನು
ಹಗಲು ಇರಳು ಒಡನಿದ್ದರಾಗೆ
ಭಗವಂತ ಹಲವು ಮಾತಿನ ಫಲವೇನು ಭ
ಕ್ತಗೆ ಬಂದಾಪತ್ತು ಪರಿಹರಿಸಿ ನೋಡು ಕರುಣಾದಲ್ಲಿ
ನಗೆಗೆಡೆಗಾಗಗೊಡದೆ ರಾಹುವಿನಿಂದಲಿ ಹೊರ
ದೆಗದ ಇಂದುವಿನಂತೆ ಮಾಡು ಜೀಯಾ
ನೆಗಳಿಯ ಕತ್ತರಿಸಿ ಗಜವ ಕಾಯ್ದದದು ಮನ
ಸಿಗೆ ಯಾಗುತಿದೆ ಸಿದ್ದವೆಂಬೋದಿಂದಲಾ
ತ್ರಿಗುಣಾತೀತ ಕೃಷ್ಣ ವಿಜಯ ವಿಠ್ಠಲ ನಿನ್ನ
ಪೊಗಳುವ ದಾಸನ್ನ ತಡಮಾಡದೆ ಕಾಯೊ ೧
ಮಟ್ಟತಾಳ
ಹರಿಯೆ ನರಹರಿಯೆ ಕರುಣಾಸಾಗರ ಸಿರಿಯೆ
ಪರರ ಕುರುಹನರಿಯೆ ನಿರುತ ನಿನ್ನ ಮರಿಯೆ
ದುರಿತ ಕದಳಿ ಕರಿಯೆ ಸುರಗಣದಾ ಧೊರಿಯೆ
ಬರಿದೆ ಸೌಖ್ಯಕೆ ಕರಿಯೆ ದುರವಾರ್ತಿಯ ಬರಿಯೆ
ದುರುಳರಲ್ಲಿ ಬೆರೆಯೆ ಪರಮದಿಂದಲಿ ಬರಿಯೆ
ಸರಿಗಾಣೆನೀ ಪರಿಯೆ ಸ್ಮರಣೆಯಲ್ಲಿ ಸರಿಯೆ
ಪೊರೆವ ನೀನೆ ಮಂದರ ಗುಣವೆಣಿಸದೆ
ಧರೆಯೊಳು ಮತ್ತೊಬ್ಬರುಳ್ಳವರಾರು
ತುರುಗಳ ಕಾಯಿದಾ ಶ್ರೀ ವಿಜಯ ವಿಠ್ಠಲ ಕೃಷ್ಣ
ಎರವು ಮಾಡದೆ ಈ ಉತ್ತರವನು ಮನ್ನಿಸಬೇಕು ೨
ತ್ರಿವಿಡಿತಾಳ
ನೀನೆ ಉಳಿಪೆನೆಂದು ನಿಂದರಾದಡೆ ಸು –
ಪ್ರಾಣರು ಆರೈಸಿ ನಿಲಲಾಪರೆ
ಏನೆಂಬೆನೊ ನಿನ್ನ ನಾಮದಾಚರಣಿಗೆ
ನಾನಾ ವಿಪತ್ತುಗಳು ನಿಲಬಲ್ಲವೆ
ಕಾಣೆನಿದಕೆ ಒಂದುಪಾಯವ ಆವಲ್ಲಿ
ಮೇಣು ಪೇಳುವುದೇನು ಪರಮಪುರುಷ
ನೀನಾಳಿದ ಬಂಟಂಗೆ ಮಹಾತಾಪಗಳು ಬಂದು
ಬ್ಯಾನೆ ಬಡಿಸಲಾಪವೆ ಕ್ಷಣಮಾತುರ
ಜ್ಞಾನ ಸಂಪನ್ನರು ದಾಸರಂದೇ ನಮ್ಮ
ಪಾಣಿಗ್ರಹವ ಮಾಡಿಪ್ಪರಯ್ಯಾ
ಮಾಣಾದೆ ಈ ಸೊಲ್ಲು ಮನ್ನಿಸಿದರೆ ಕೀರ್ತಿ
ಕ್ಷೋಣಿಯೊಳಗೆ ನಿನಗೆ ಬರುತಲಿದೇ
ನೀನೆ ಪರದೈವ ಲೋಕಕ್ಕೆ ಗುರುಮುಖ್ಯ
ಪ್ರಾಣನೆ ನಿಜವೆಂಬೊದಾದರಿಂದು
ನಾನು ಬರೆದ ಬರಹ ಸತ್ಯವಾದರೆ ಖರಿಯಾ
ಮಾನಾಭಿಮಾನದೊಡಿಯಾ ಧನ್ವಂತ್ರಿ
ನೀನೊಲಿದದಕ್ಕೆ ಮಾಣಿಸು ಅಪವಾದಾ ನಿ-
ರ್ವಾಣಗಿಂತಧಿಕ ಎನಗಿತ್ತದಯ್ಯಾ
ಧ್ಯಾನಾದಿಗಳು ತಿಳಿಯೆ ಬಾಯಿಗೆ ಬಂದಂತೆ
ಗಾನ ರೂಪದಲಿ ಕೊಂಡಾಡಿದೆನೊ
ಹೀನವಾಗಗೊಡದೆ ಹಿತವ ಚಿಂತಿಸು ಕ-
ಲ್ಯಾಣವ ಕೊಡುತಲಿ ಸಹಾಯವಾಗಿ
ಪ್ರಾಣಧಾರನೆ ವಿಜಯ ವಿಠ್ಠಲರೇಯ
ದೀನ ಬಾಂಧವ ಸತತ ಸಾಧು ನರನ ಕಾಯೊ೩
ಅಟ್ಟತಾಳ
ಉದ್ಧವನ್ನ ಶಾಪದಿಂದ ಮುಕ್ತನಮಾಡಿ
ಉದ್ಧರಿಸಿದೆ ತತ್ವವ ಉಪದೇಶಿಸಿ
ಶುದ್ಧ ವೈಷ್ಣವನಿವ ನಿರ್ಮತ್ಸರದವ
ಮಧ್ವರಾಯರ ಪಾದ ಪದ್ಮವ ಪೊಂದಿದ
ತದ್ದಾಸರ ದಾಸರ ಭೃತ್ಯನೆನಿಸು
ಶ್ರದ್ಧೆಯುಳ್ಳವನಿವ ಸೌಮ್ಯ ಗುಣದವ
ಸಿದ್ಧಾಂತ ಪ್ರಮೇಯಗಳ ಪದ್ಧತಿ ಬಲ್ಲವ
ಉದ್ದಂಡನಲ್ಲವೊ ಕರ್ಮನಿಷ್ಠನಿವ
ಕ್ಷುದ್ರನಾದರೆ ನಾ ನಿನಗೆ ಪ್ರಾರ್ಥಿಸುವೆನೆ
ಹಾರ್ದವ ತಿಳಿದು ಪೇಳಿದೆ ಭವರೋಗದ
ವೈದ್ಯ ವೈಕುಂಠ ರಮಣ ರಾಮಚಂದ್ರಾ
ವಿದ್ಯಾ ಕರ್ಮಾಲಂಬನದವ ನಾನಲ್ಲ
ಶುದ್ಧ ವೈಷ್ಣವರ ಚರಣರೇಣು ತಾನಾಗಿ
ಬದ್ಧ ಪ್ರಯಕ್ತದಿ ಇನಿತು ತುತಿಸಿದೆನು
ಛಿದ್ರವಾಗಿದ್ದರು ಪೂರ್ಣವಾಗುವುದು ನೀ-
ನಿದ್ದ ಕಡೆಗೆ ಒಮ್ಮೆ ಶಿರಬಾಗಿ ನಮಿಸಲು
ಅದ್ರಿಧರ ನಿನ್ನ ನಂಬಿದ ದಾಸಗೆ
ಭದ್ರವಲ್ಲದೆ ಸರ್ವದಾ ಎನ್ನಸ್ವಾಮಿ
ಮುದ್ದು ಮೋಹನರಾಯ ವಿಜಯ ವಿಠ್ಠಲರೇಯ
ಒದ್ದು ಕಳೆಯೊ ಬದ್ಧ ತಾಪಂಗಳ ತಡಿಯದೆ೪
ಆದಿತಾಳ
ಅಪಕೀರ್ತಿ ತಾರದಿರು ಎನ್ನ ಪಾಲಿಗೆ
ಅಪರಿಮಿತ ಮಹಿಮ ಅಂಬರೀಷ ವರದ
ಅಪಾರಗುಣನಿಲಯ ಅಭಯವನೀಯೊ ಇವಗೆ
ಸ್ವಪನಾವಸ್ಥಿಯಂತೆ ಕಡೆಗಾಗಲಿ ಕ್ಲೇಶ
ಉಪಚಾರ ನಿನಗೆ ನಾನು ಏನು ಪೇಳಲಸಾಧ್ಯ
ಅಪವಾದ ಬಂದಿದೆ ಅದನು ಪರಿಹರಿಸು
ಕೃಪೆಮಾಡು ಅರ್ಥಿಯಲ್ಲಿ ಅನನ್ಯ ಶರಣನೆಂದು
ಕೃಪಣನಾದರು ನಿನ್ನ ದಾಸನೆನಿಸಿ ಇಪ್ಪೆ
ಅಪಹಾಸಕಿಕ್ಕದಿರು ಅನಂತ ಜನುಮದ
ಉಪಕಾರ ಎನಗಿದೆ ಮತ್ತೊಂದಾವುದು ಒಲ್ಲೆ
ಜಪತಪ ಸ್ವಾಧ್ಯಾಯ ಮತ್ತೆ ದಾನ ಧರ್ಮ
ಸಫಲವಿದ್ದರು ಅವಗೆ ಅಡಸಿ ಬಂದಟ್ಟಿದ
ಅಪಮೃತ್ಯು ತೊಲಗಿಸು ತವಕದಿಂದಲಿ ಒಲಿದು
ಗುಪುತಮಹಿಮೆ ನಮ್ಮ ವಿಜಯ ವಿಠ್ಠಲರೇಯ
ವಿಪರೀತವಾಗಗೊಡದೆ ಬಲವಾಗಿ ರಕ್ಷಿಪುದು ೫
ಜತೆ
ಆರೋಗ್ಯವನೆ ಮಾಡು ಆಲಸ್ಯಗೈಸದೆ
ವೈರಾಗ್ಯನಿಧಿ ವಿಜಯ ವಿಠ್ಠಲ ಮಹವೈದ್ಯ ೬

ಭಗವಂತನನ್ನು ನಾನಾ ಬಗೆಯಾಗಿ

೯೦
ಧ್ರುವತಾಳ
ಹತ್ತೈದು ವಿಂಶತಿ ಮ್ಯಾಲೆರಡು ಸಾವಿರ |
ಮತ್ತೆ ನೂರೊಂದು ನಾಡಿ ದೇಹದೊಳಗೆ |
ತಥ್ಥಳಿಸುತಿಪ್ಪದು ಬಲಸವ್ಯ ವಿಡಿದು ಯಿ |
ನ್ನಿತ್ತು ಕೇಳುವುದು ನಾಡಿಗಳ ಶಾಖಾ |
ಹತ್ತು ಹತ್ತೊಂದು ಮುಖ್ಯ ನಾಡಿಯ ನೂರರಿಂದ |
ಬಿತ್ತರಿಸಿ ಗುಣಿಸೆ ಅಯುತ ನೂರು |
ಸತ್ಯವಾಯಿತು ನೋಡಿ ಇದಕೆ ವಿವರವುಂಟು |
ಉತ್ತಮ ಗುಣದವರು ತಿಳಿಯಬೇಕು |
ಹತ್ತು ಹತ್ತು ಗುಣಿಸಿ ಅದನ್ನು ಅಷ್ಟರಿಂದ |
ಜತ್ತಾಗಿ ಹೆಚ್ಚಿಸಲು ಸಾವಿರವಹುದು |
ಇತ್ತ ಮುಂದಕೆ ನೂರು ಇಟ್ಟುಕೊಂಡು ಒಂ
ಭತ್ತರಿಂದಲಿ ಗುಣಿಸೆ ಒಂಭತ್ತು ನೂರು |
ಸುತ್ತದಿರಿ ಇನ್ನು ತ್ರಯನೂರು ಎಂಟರಿಂದ |
ಚಿತ್ತದಲ್ಲಿ ಗುಣಿಸೆ ಆದಾದಿ ದಕೊ ಇ |
ಪ್ಪತ್ತು ನಾಲ್ಕು ನೂರು ಆ ತರುವಾಯ ಒಂ |
ಭತ್ತು ಸಾವಿರದ ಆರುನೂರು |
ಆರ್ಥಿಯಿಂದಲೆ ಇದೆ ಆರಾರಿಂದ ಗುಣಿಸೆ |
ಹತ್ತೈದು ಯೇಳು ಸಾವಿರಾರು ನೂರು |
ಇತ್ತಂಡದಿಂದ ಪೂರ್ವೋತ್ತರ ನೋಡೆ ಅರ |
ವತ್ತೊಂದು ಸಾವಿರೆಂಟೊಂದು ನೂರು |
ಮತ್ತೆ ಇದರ ಕೆಳಗೆ ಮ್ಯಾಲಿನ ಅಯುತ ನೂರು (೧೦೧೦೦)
ಇತ್ತರೆ ಸಪ್ತೆರಡು ಆ ಅಯುತನಾಡಿಯು
ನಿತ್ಯವೆಸರಿಯೆದಕೆ ನೂರೆಂದು ಮುಖ್ಯನಾಡಿ |
ತತ್ತಳಗೊಳ್ಳದಲೆ ಕೂಡಿಸಲು |
ಮತ್ತೆ ವುಳ್ಳದಕೆ ಹೆಚ್ಚುವಾದಿಷ್ಟೆ ನಾಡಿಗಳು |
ಮರ್ತ ಲೋಕದ ಜನರು ಗುಣಿಸಿದರು |
ಅತ್ಯಂತ ಮಹಿಮಾ ನಮ್ಮ ವಿಜಯ ವಿಠ್ಠಲರೇಯ |
ಸ್ತೋತ್ರ ಮಾಡಿದವರ ಮನಕೆ ಇಂತು ತಿಳಿಪುವಾ
ಮಟ್ಟತಾಳ
ಇನಿತು ನಾಡಿಯ ಶಾಖ ಭೇದವನ್ನೆ ತಿಳಿದು |
ಗುಣಿಸುವರು ನಿತ್ಯ ಸಕಲರು ಮನದಲ್ಲಿ |
ಇನಿತರೊಳಗೆ ಮುಖ್ಯ ನೂರೊಂದು ನಾಡಿ |
ಅನಿತರ ಮಧ್ಯದಲಿ ಕೇವಲ ಪೆಸರಾಗಿ |
ಮಿನಗುತಿಪ್ಪವು ದ್ವಾದಶ ನಾಡಿಗಳಲ್ಲಿ |
ಕೊನೆ ಮೊದಲೊಂದಾಗಿ ನವ ದ್ವಾರವೆ ವಿಡಿದು |
ಘನನಾಡಿವೊಂದೆ ಅಡಿ ಅಂಬರವ್ಯಾಪ್ತಿ |
ತನುವು ವ್ಯಾಪಿಸಿ ಕೊಂಡದು ಒಂದು ನಾಡಿ |
ಯನು ತಿಳಿವದು ಒಂದೆನಾಡಿಯು ಒಂದೇ ಠಾ |
ವಿನಲಿ ಪೊಂದಿಪ್ಪದು ತಿಳಿದರೆ ಬಲು ಸುಲಭ |
ಕ್ಷಣ ಬಿಡದಲೆ ಕಾವ ವಿಜಯ ವಿಠ್ಠಲರೇಯ |
ಚಿನುಮಯನಾಗಿ ಕಾಣಿಸುವನು ಒಂದರಲ್ಲಿ ೨
ತ್ರಿವಿಡಿ ತಾಳ
ಒಂದೊಂದು ನಾಡಿಯಲಿ ಒಂದೊಂದು ನದಿಗಳು |
ಕುಂದದೆ ಉಂಟು ಹನ್ನೆರಡರಲ್ಲಿ |
ಮಂದಾಕಿನಿ ೧ ಇಡಾ ನಾಡಿಯಲ್ಲಿ ಭಾನು |
ನಂದನೆ ೨ ಪಿಂಗಳಾನಾಡಿಯಲ್ಲಿ |
೩ ಗಾಂಧಾರಿಯಲಿ ವುಂಟು ಕಾವೇರಿ ೪ ಹಸ್ತಿನಿಗೆ |
ಸಿಂಧು ನದಿಯೆನ್ನಿ ತಾಮ್ರಪರ್ಣಿ |
ಸಂದಿದೆ ಬಹು ಬಗೆ ೫ [ನಂ] ಬು ಶಿನಾಡಿಯಲ್ಲಿ |
ಛಂದುಳ್ಳ ಗೋಮತಿ ೬ ಮಧ್ಯನಾಡಿ |
ಯಿಂದ ಗಂಡಿಕೆನೋಡಿ ೭ ಸರಸ್ವತಿ ನಾಡಿಯಲ್ಲಿ |
೮ ನಂದ ಕೃಷ್ಣವೇಣಿ ೯ ಕುಹದಿ ಸೋಮ |
ನಂದನೆ ತಪತಿ ೧೦ ಶಂಖಿನಿ ನಾಡಿಯಲ್ಲಿ ವಾಸ |
ವೆಂದು ತಿಳಿಯೊ ಗೋದೆ ೧೧ ವಾರುಣಿ ನಾಡಿಯಲ್ಲಿ |
ಅಂದವಾದ ೧೨ ಪೂರ್ಣ ಪೂರ್ಣ ಪಯಶ್ವಿನಿ |
ಯಿಂದ ಪುಟ್ಟಿಪದು ಅಲ್ಲಿಗಲ್ಲಿ |
ಪೊಂದಿ ಕೊಂಡಿಪ್ಪವು ಜ್ಞಾನಿಗಳು ಸ್ತುತಿಸಿ |
ಎಂದು ಪರಮ ಪದವಿಯ ಪಡಕೊಂಬುವರೊ |
ವೃಂದಾರಕ ವಂದ್ಯ ವಿಜಯ ವಿಠ್ಠಲರೇಯನ |
ಸಂದುರಶನ ಮಾಳ್ಪ ಮಾಹತ್ಮ ಬಲ್ಲನು
ಅಟ್ಟತಾಳ
ಮಹತತ್ವಾತ್ಮಕ ಬಲಭಾಗದ ನಾಡಿ |
ಮಹದೇವತತ್ವಾತ್ಮಕ ಎಡಗಡೆ ನಾಡಿ |
ಇಹದನು ನೋಡಿ ಇವಕಿಟಕೆ ಮಾನಿಗಳುಂಟು |
ಆ ಹಿರಣ್ಯೋಧರ ವಾಯು ಇವರ ಪತ್ನಿ |
ಮಹಕೇಶ ಸರ್ಪ ಖಗೇಶ್ವರ ತರುವಾಯ |
ರೋಹಿಣಿ ನೀಲ ಮೊದಲಾದ ಸತಿಯರು |
ಶ್ರೀಹರಿಗೆ ಹೆಂಡರು ಕಾಣೊ ತಿಳಿವದು |
ಗುಹನ ಜನನಿ ವಾರುಣಿ ಸೌಪರಣಿಯು |
ಮೋಹದಿಂದಲಿ ನಾಡಿ ನಾಡಿಯಲಿಪ್ಪರು |
ರಹಸ್ಯವಿದು ಬಿಚ್ಚಿ ಬಿಸಾಟದಿರು |
ಕುಹಕರಿಗೆ ಪೇಳಿದರೆ ಫಲಿಸದು |
ಮೋಹನ ಮೂರುತಿ ನಮ್ಮ ವಿಜಯ ವಿಠ್ಠಲರೇಯ |
ಇಹನೊ ಜ್ಞಾನಾನಂದ ಮಯನಾಗಿ ೪
ಆದಿತಾಳ
ಪೊಕ್ಕಳ ಭಾಗದಿಂದ ನಾಡಿಗಳೊಂದೊಂದು |
ದಿಕ್ಕಿಗೆ ಪೋಗಿಪ್ಪವು ಶೋಧಿಸಿ ನೋಡುವದು |
ಮುಕ್ಕಣ್ಣನುತ ವಾಯು ನಿತ್ಯ ಜೀವಿಗಳ |
ತಕ್ಕು ವ್ಯಾಪಾರವ ಮಾಡುವ ಬಿಡದೆ ದೇ |
ವಕ್ಕಳ ಕೂಡತಾನೆ ಹರಿ ಪ್ರೇರಣೆಯಿಂದ |
ಭಕ್ತಿ ಭುಕ್ತಿಯ ಕೊಡುವ ವಂದನೇಕ ರೂಪನಾಗಿ |
ಸಿಕ್ಕು ಗೊಡನು ತನ್ನ ಭಕ್ತರ ನರಕದಲ್ಲಿ |
ರಕ್ಕಸಗಣಕೆ ಕುವೃತ್ತಿಯ ಪ್ರೇರಿಸಿ |
ಕಕ್ಕಸಗತಿಯಲ್ಲಿ ಸೇರಿಸುವ ಹರುಷದಲ್ಲಿ |
ಸೊಕ್ಕಿದವರ ಗಂಡ ವಿಜಯ ವಿಠ್ಠಲರೇಯ |
ದಕ್ಕುವ ಯಿದರಂತೆ ಧೇನಿಪಸುಜನರಿಗೆ ೫
ಜತೆ
ನಾಡಿ ಪ್ರಕರಣವನು ತಿಳಿದು ಕೊಂಡಾಡಲು
ಗೂಡಿನೊಳಗಿದ್ದಂಥ ವಿಜಯ ವಿಠ್ಠಲ ಒಲಿವ ೬

ತಿರುಪತಿಯ ವೆಂಕಟೇಶನ ಚರಣವನ್ನು

೬೮. ತಿರುಪತಿ
ಝಂಪೆತಾಳ
ಹದಿನಾಲ್ಕು ಲೋಕದಲಿ ಪೂಜೆಗೊಂಬ ಚರಣ |
ಸುಧಾಕರ ನಂದದಲಿ ಪೊಳೆವ ಸುಂದರ ಚರಣ |
ಪದೊ ಪದಿಗೆ ನಾರದನ ಪದನದಿ ನೆನೆವ ಚರಣ |
ಮೃದುವಾದ ದಿವ್ಯ ಚರಣ |
ಕದನದಲಿ ನರನ ರಥ ಮುಚಿನಲ್ಲಿದ್ದ ಚರಣ |
ಅಧೋ ಭುವನಕಾಶ್ರಯ ವಾಗಿದ್ದ ಚರಣ |
ನಿರಶನವಾಗಿ ನಿತ್ಯ ತೋರುವ ಚರಣ |
ಸದಮಲವಾದ ಚರಣ |
ಚದುರ ಅಳಗಿರಿ ತಿಮ್ಮಾ ವಿಜಯ ವಿಠಲ ಸಾರ |
ಹೃದಯರಿಗೆ ಒಲಿದು ಸಂಪದವಿ ಕೊಡುವ ಚರಣ | ೧
ಮಟ್ಟತಾಳ
ಸನಕಸನಂದರ ಮನಕೆ ಪೊಳೆವ ಚರಣ |
ದನುಜಕುಲ ಸಂಹರಣ ಮಾಡುವ ಚರಣ |
ಕನಕಮಯ ವಾಗಿ ಪೋಲುವ ಸಿರಿ ಚರಣ |
ಘನ ವೃಷಭಾದ್ರಿಯಲಿನಿಂದ ವಿಜಯ ವಿಠಲ |
ಲನುಗಾಲ ಎನ್ನ ಸಾಕುವ ಶುಭ ಚರಣ ೨
ತ್ರಿವಿಡಿತಾಳ
ಗಗನ ಪಾತಾಳ ಭೂ ವ್ಯಾಪಿಸಿದ ಚರಣ |
ಅಗಣಿತ ಗುಣದಿಂದವೊಪ್ಪುವ ನಿಜ ಚರಣ |
ಮೃಗಮದಾದಿ ಯಲ್ಲಿ ಪೂಜೆಗೊಂಬುವ ಚರಣ |
ಅಘ ಪರ್ವತಕ್ಕೆ ಅಶನಿಯೆನಿಸುವ ಚರಣ |
ಜಗದೇವ ಅಳಗಿರಿ ತಿಮ್ಮ ವೃಷಭಾದ್ರಿ |
ನಗರಾವಾಸ ವಿಜಯ ವಿಠಲ ದೇವನ ಚರಣ ೩
ಅಟ್ಟತಾಳ
ಎಂಥವರನ್ನು ಚಂಚಲಗೊಳಿಸುವ ಚರಣ |
ಸಂತರಿಗೊಲಿದು ಮೇಲೆ ಬಿಡದ ಚರಣ |
ಅಂತಕನಾಳಿಗೆ ಶೂಲವಾದ ಚರಣ |
ಚಿಂತನೆ ಮಾಡಲು ನಿಲುಕುವ ಚರಣ |
ಸಂತತ ವೃಷಭಾದ್ರಿ ಅಳಗಿರಿ ತಿರ್ಮಲ |
ಶಾಂತ ವಿಜಯವಿಠಲನ್ನ ಶ್ರೀ ಚರಣ ೪
ಆದಿತಾಳ
ಮುನಿಪ ಮಂಡೂಕಗೆ ವರವಿತ್ತುದೀ ಚರಣ |
ಜನಪ ಪುಣ್ಯನಿಧಿಗೆ ಒಲಿದ ಚರಣ |
ಪ್ರಣಿತಾರ್ತರಹ ಸಾದಟಲು ಪಾವನ ಚರಣ |
ಪ್ರಣವ ಪೂರ್ವಕದಿಂದ ಪರಿಪೂರ್ಣವಾದ ಚರಣ |
ಹನುಮವಂದಿತವಾದ ವಜ್ರರೇಖಿಯ ಚರಣ |
ಘನವರ್ನದಂತೆ ನಿತ್ಯರಂಜಿಸುವ ಚರಣ |
ಮಣಿಭೂಷಣವಾದ ವೃಷಭಾದ್ರಿ ಶೈಲವಾಸ |
ಎನಗೊಲಿದ ವಿಜಯವಿಠಲ ತಿಮ್ಮನ ಚರಣ ೫
ಜತೆ
ಪಾಂಡ್ಯರಾಯಗೆ ಒಲಿದ ಪರಮಪಾವನ ಚರಣ |
ಚಂಡಕೋಟಿತೇಜ ವಿಜಯವಿಠಲನ ಚರಣ ೬

ಸಾಮಾನ್ಯ ಮನುಷ್ಯನಿಗೆ ಹಬ್ಬವೆಂದರೆ ತುಂಬ

೧೩೨
ಧ್ರುವತಾಳ
ಹಬ್ಬಂಗಳಿವೆ ಕೇಳಿ ಊರ್ಬಿಯೊಳಗೆ ವೈ
ದರ್ಭರಮಣ ಕರುಣಾಬ್ಧಿ ಒಲಿದ ಬಳಿಕ
ಒಬ್ಬರ ಕಾಡಿಬೇಡಿ ಒಬ್ಬರ ಹಬ್ಬ ಮಾಡಿದರಿಂದ
ಉಬ್ಬುತೀರದು ಕಾಣೋ ಅರ್ಬುದ ಜನಕ್ಕೆ
ಅಬ್ಬಿದಾವರ್ತಿ ಧಾನ್ಯರುಬ್ಬಿ ಗಂಜಿಯ ಕಾಸಿ
ಹಬ್ಬಿದ ಸುಖಮಾನ ವಬ್ಬಿಗೆ ಸತಿಪತಿ
ಇಬ್ಬರಾನಂದಲ್ಲಿ ಹೆಬ್ಬಟ್ಟಿನಲ್ಲಿ ಸವಿದು
ಸಭ್ಯವಾಗಿಪ್ಪುದು ಹಬ್ಬವೆ ಬಲಹಬ್ಬ
ನಿರ್ಭಯವಾದ ರತ್ನಗರ್ಭದಲ್ಲಿ ಕುಟೀರ
ಗುಬ್ಬಿಗೂಡಿನಷ್ಟು ಗರ್ಭವಾಸವೆ ರಚಿಸಿ
ಹಬ್ಬಿಗಿಕ್ಕದೆ ಏನು ನಿರ್ಬಂಧನವಿಲ್ಲದೆ
ಲಭ್ಯವಾಗಿಪ್ಪ ಗರ್ಭದ ಸುಖಿಗಳವರು
ಕರ್ಬುರನಂತೆ ತಿಂದು ಕೊಬ್ಬಿ ತಿರುಗುವಂಗೆ
ದುರ್ಭಾಗ್ಯವಲ್ಲದೆ ಹಬ್ಬವೆನಿಸುವುದೆ
ಕಬ್ಬು ಬಿಲ್ಲಿನಯ್ಯ ವಿಜಯ ವಿಠ್ಠಲರೇಯ
ದರ್ಭೆ ಏರಿಸಲು ಹಿಬ್ಬರ ಕರವಪಿಡಿವಾ ೧
ಮಟ್ಟತಾಳ
ಕಾಮಕ್ರೋಧಂಗಳು ಬಿಡುವುದೆ ಬಲು ಹಬ್ಬ
ನೇಮ ನಿತ್ಯವನ್ನೇ ಮಾಡುವುದೇ ಹಬ್ಬ
ತಾಮಸ ಜನರುಗಳು ಬಿಡುವುದೆ ಮಹ ಹಬ್ಬ
ಕಾಮನ ಉಪಹತಿಗೆ ಅಂಜುವನೇ ಹಬ್ಬ
ಭೂಮಿಯೊಳಗೆ ಜ್ಞಾನಿಯಾಗುವದೇ ಹಬ್ಬ
ಸ್ವಾಮಿ ಭೃತ್ಯನ್ಯಾಯ ತಿಳಿಯುವದೆ ಮಹ ಹಬ್ಬ
ಶ್ರೀ ಮಾರುತಿ ಮತವ ಹಾರೈಪುದೇ ಹಬ್ಬ
ಯಾಮಯಾಮಕ್ಕೆ ಹರಿನಾಮ ನೆನೆವುದೆ ಹಬ್ಬ
ವ್ಯೋಮಗಂಗೆಯ ಜನಕ ವಿಜಯ ವಿಠ್ಠಲ ಹರಿಯ
ಧಾಮವ ಜಯಸುವದೆ ಧರೆಯೊಳ ಮಹಾ ಹಬ್ಬ ೨
ತ್ರಿವಿಡಿತಾಳ
ಬಂದ ದುರಿತಗಳ ಪೋಗಾಡುವುದೇ ಹಬ್ಬ
ಮಂದಾಕಿನಿಯಲ್ಲಿ ಮಜ್ಜನವೆ ಹಬ್ಬ
ನಿಂದ್ಯಕಾರರ ನಿತ್ಯ ನಿಂದೆ ಮಾಳ್ಪುದೆ ಹಬ್ಬ
ವಂದಿಸಿ ಗುರುಗಳಿಗೆ ಎರಗುವುದೆ ಹಬ್ಬ
ಮುಂದೆ ಪುಟ್ಟುವ ಜನನವ ನೀಗಿಕೊಂಬುದೆ ಹಬ್ಬ
ಬಂಧನವಾಗದ ಯೋಚನೆ ಬಲು ಹಬ್ಬ
ತಂದೆತಾಯಿಗಳಿಗೆ ಅನುಕೂಲವೇ ಹಬ್ಬ
ಅಂದನಗುತ ಸಂತೋಷವಾಹುದೆ ಹಬ್ಬ
ಕುಂದು ಸಜ್ಜನರಿಗೆ ನುಡಿಯದಿಪ್ಪದೆ ಹಬ್ಬ
ಬಿಂದು ಮಾತುರ ಭೋಗ ಬಯಸದಿಪ್ಪದೆ ಹಬ್ಬ
ಬಂದ ಅತಿಥಿಗಳ ಪೂಜಿಸುವುದೇ ಹಬ್ಬ
ಮಂದಿರದಲ್ಲಿ ಕಲಹವಿಲ್ಲದ್ದೆ ಮಹ ಹಬ್ಬ
ಇಂದುನಾಳಿಗೆ ಇಂಬೊ ಚಿಂತೆ ಬಿಡುವುದೆ ಹಬ್ಬ
ಸಂದಣೆ ತೊರೆದು ಏಕಾಂತ ವಾಹದೆ ಹಬ್ಬ
ನಿಂದಿದ್ದ ಖಿಳರೊಳು ನರೆಯದಿಪ್ಪುದೆ ಹಬ್ಬ
ನಿಂದೆ ಬಾರದಂತೆ ಬಾಳುವುದೆ ಹಬ್ಬ
ಇಂದ್ವರ್ಕವುಳ್ಳ ನಕ ವಿಜಯ ವಿಠ್ಠಲರೇಯನ
ಒಂದೆ ಭಕುತಿಯಲಿ ಭಜಿಪದೆ ಮಹಾಹಬ್ಬ ೩
ಅಟ್ಟತಾಳ
ಋಣರೂಪವಾಗದ ಸಂಸಾರವೆ ಹಬ್ಬ
ಗುಣವಂತನಾಗಿ ಸಂಚರಿಸುವುದೆ ಹಬ್ಬ
ಕನಸೀಲಿ ಹಣವನ್ನು ಬಯಸದಿಪ್ಪದೆ ಹಬ್ಬ
ಮನವಾಚ ಕಾಯಕ ಬಡತನವೆ ಹಬ್ಬ
ವನಜನಾಭವ ನೋಡಿ ಪಾಡುವುದೆ ಹಬ್ಬ
ದಿನಪ್ರತಿದಿನ ಸತ್ಕರ್ಮಾಚರಣೆ ಹಬ್ಬ
ಮಣಿ ಕರ್ಣಿಕೆಯಲ್ಲಿ ದೇಹತ್ಯಾಗವೆ ಹಬ್ಬ
ಮನೆ ನೆರೆ ಹೊರೆ ನೋಡಿ ಬಳಲದಿಪ್ಪದೆ ಹಬ್ಬ
ಅನಿಮಿಷ ಜಾಗರ ಹರಿವಾಸರವೆ ಹಬ್ಬ
ತನುವಿಗೆ ವ್ಯಾಧೆ ಬಾರೆದ್ದೊಂದೆ ಮಹಾ ಹಬ್ಬ
ಚಿನುಮಯ ಮೂರುತಿ ವಿಜಯ ವಿಠ್ಠಲರೇಯನ
ಮನಸಿನೊಳನುದಿನ ಈಕ್ಷಿಸುವುದೇ ಹಬ್ಬ ೪
ಆದಿತಾಳ
ಕಾಲನ ಭಾದಿಗೆ ಸಿಲುಕದಿಪ್ಪದೆ ಹಬ್ಬ
ಕಾಲಕಾಲಕೆ ತೀರ್ಥಯಾತ್ರೆ ಮಾಳ್ಪದೆ ಹಬ್ಬ
ಕೇಳುವ ಹರಿ ಕಥಾ ಶ್ರವಣವೆ ದೊಡ್ಡ ಹಬ್ಬ
ನಾಲಿಗಿಂದಲಿ ಹರಿಯ ಸ್ತೋತ್ರ ಮಾಳ್ಪದೆ ಹಬ್ಬ
ಆಳಾಗಿ ಒಬ್ಬನಲ್ಲಿ ವಶವಾಗದ್ದೊಂದು ಹಬ್ಬ
ಹಾಳು ಹರಟೆ ಬಿಟ್ಟು ಬಿಟ್ಟು ಹೊತ್ತು ಗಳಿಯುವದೆ ಹಬ್ಬ
ಶ್ರೀ ಲೋಲ ಪರನೆಂದು ಕೂಗ್ಯಾಡುವದೆ ಹಬ್ಬ
ವಾಲಯಗಯದಲ್ಲಿ ಕುಲಪವಿತ್ರವೆ ಹಬ್ಬ
ಭಾಳಲಿಪಿಗೆ ನೋಯ ಆಡದಿಪ್ಪದೆ ಹಬ್ಬ
ವೇಳೆಗೆ ದೊರೆತದು ಭುಂಜಿಸುವುದೆ ಹಬ್ಬ
ಪಾಲಾಬ್ಧಿಶಾಯಿ ನಮ್ಮ ವಿಜಯ ವಿಠ್ಠಲರೇಯನ
ಊಳಿಗದವನಾಗಿ ವಾಲ್ಗೈಸುವುದೆ ಹಬ್ಬ ೫
ಜತೆ
ದಂಪತಿಗಳು ಏಕವಾಗಿಪ್ಪುದೆ ಹಬ್ಬ
ಶಂಪದಂತೆ ವಿಜಯ ವಿಠ್ಠಲ ಪೊಳೆವುದೆ ಹಬ್ಬ ೬

ಶ್ರೀ ಹರಿಯ ಗುಣ ವಿಶೇಷಗಳನ್ನು ಹರಿದಾಸರ

೧೩೬
ಧ್ರುವತಾಳ
ಹರಿ ಪರಮ ಪರುಷ ಇಂದಿರಾದೇವಿಯರಸ
ಪರಿ ಪೂರ್ಣವತಾರ ಪಾಪವಿದೂರ
ನಿರುತ ಸಾಕಾರ ಸದ್ಗುಣ ಪಾರಾವಾರಾ
ಚರಿತದ ಪ್ರಾಕೃತ ಶರೀರಲಂಕೃತ
ಜರ ಜಡ ದುರಿತ ಜನನ ಮರಣ ರಹಿತ
ಸುರರಿಗೆ ದಾತಾದರ ಆಗಮಗೋಚರ
ಪರಶಕ್ತಿರಾನಂತ ಗುಣ ಪರಮಶಾಂತ
ಸರುವೋತ್ತಮ ಹರಿ ಎಂದು ಸಾರಿಗೆ ಸಾರಿ
ಕರದು ಪಾವನನಾಗು ಕರ್ಮವನ್ನು ನೀಗು
ಅರೆಮರೆ ಬಿಡು ಕಿಂಕರನಾಗಿ ನೋಡು ದಾ
ಸರ ದಾಸನಾಗು ನಿನ್ನ ಶಿರವನ್ನು ಬಾಗು
ಪರಮೇಷ್ಠಿನಾಮ ಶಿರಿ ವಿಜಯ ವಿಠ್ಠಲ ಕರುಣಿ
ಮರಿಯದೆ ಸ್ಮರಿಸಲು ನೆರವಾಗಿ ಬರುವ ೧
ಅಟ್ಟತಾಳ
ಮಂದರಧರ ಗೋವಿಂದ ಮುಕುಂದ
ಚಂದಿರ ವದನ ವೈಕುಂಠ ವಾಸ
ನಂದ ನಂದನ ಉಪೇಂಧ್ರ ವಾಮನ್ನ
ಸಿಂಧು ಶಯನ ಎನ್ನ ವಿಜಯ ವಿಠ್ಠಲ
ಬಂಧು ಎಂದೆನಲು ಬಂದೀಗ ನಿಲುವ
ಎಂದೆಂದಿಗೆ ನೀ ವಂದಿಸಿ ಬೇಡೊ ೨
ತ್ರಿವಿಡಿತಾಳ
ಕೇಶವ ಎನ್ನು ನಾರಾಯಣ ಎನ್ನು
ಕೇಶಿಮರ್ದನ ನರಕೇಸರಿ ಎನ್ನು
ವಾಸುದೇವ ಎನ್ನು ವಾಸದೇವ ಎನ್ನು
ದೋಷರಾಶಿ ಗಿರಿಗೆ ಕುಲಿಶಎನ್ನಿರೊ
ಮೀಸಲ ಪದವೀಯನೀವನೆನ್ನು
ಶಾಶ್ವಿತ ವಿಜಯ ವಿಠ್ಠಲನೆ ದೈವವೆನ್ನು
ನೀ ಸುಖಿಯಾಗಿ ನಿಷ್ಠಾಮವ ಬಯಸೂ ೩
ಅಟ್ಟತಾಳ
ಭಾಗವತನಾಗು ಭಾಗೀರಥಿಗೆ ಪೋಗು
ಸಾಗರವನು ಮಿಂದು ಕೃತಾರ್ಥನೆಂದು
ಯೋಗಿಗಳರ್ಚಿಸು ಯಥಾರ್ಥ ಭಾವಿಸು
ಭೋಗಾನುಸಾರದಿ ಭೋಗದೊಳು ಪೊಂದಿ
ಲೋಗರಿಗೆ ಶಿರವಾಗಿ ಬೇಡದಿರೂ
ವಾಗ್ಮಿನೆ ವಿಜಯ ವಿಠಲನ್ನ ನಂಬಲು
ಯೋಗಕ್ಷೇಮಂವಹಾಮ್ಯಹಂ ಎಂಬ ಮಾತಿಲಿ
ವೇಗದಿಂದಲಿ ಬಂದು ಭಾರವಹಿಸುವ ೪
ಆದಿತಾಳ
ತತ್ವಸಾರದ ಬುತ್ತಿಯ ಕಟ್ಟು
ಉತ್ತಮ ಮಾರ್ಗದ ಸೋಪಾನ ಮೆಟ್ಟು
ಮಿಥ್ಯಾಚಾರದ ವಚನವ ಬಿಟ್ಟು
ಹತ್ತಿದ ದುರಿತದ ಭಯಗಳ ಕುಟ್ಟು
ಸತ್ಯ ವಿಜಯ ವಿಠ್ಠಲನ್ನ ಪಾದ
ಚಿತ್ತ ಮಧ್ಯದಲಿ ಚನ್ನಾಗಿ ಇಟ್ಟು ೫
ಜತೆ
ಬಿಡು ಬಿಡು ಹಲವಂಗ ಆವಾವ ಕಾಲಕ್ಕೆ
ತೊಡು ತೊಡು ತೊಡು ವಿಜಯ ವಿಠ್ಠಲನ ಕರುಣಕವಚ ೬

ದೇವತಾ ತಾರತಮ್ಯವನ್ನು ಸರಿಯಾಗಿ

೯೨
ಧ್ರುವತಾಳ
ಹರಿ ವಿಷ್ಣು ರೂಪಾತ್ಮಕ ಚತುರವಿಂಶತಿ ತತ್ವ |
ಬೆರಸಿ ಸ್ಪಷ್ಟದಿಂದ ಬೊಮ್ಮಾಂಡವ |
ವಿರಚಿಸಿದನು ಉದಯ ಕಾಲದೊಳೈವತ್ತು ಕೋಟಿ |
ಪರಿಮಿತ ಯೋಜನ ವಲಯಾಕಾರ |
ನಿರಿಕ್ಷಿಸು ಈ ಪ್ರಕಾರ ದಳವನ್ನು ತಿಳಿದು ಮುಂ |
ದರಿದು ನೋಳ್ಪದು ಇದಕೆ ನೂರು ಕೋಟಿ |
ಧರಣಿ ಆವರಣವು ಅಲ್ಲಿಂದ ಮೇಲು ಭಾಗ |
ಇರುತಿಪ್ಪವು ಕೇಳಿ ಉದಕಾಗ್ನಿ ಮರುತಾಕಾಶ |
ತರುವಾಯ ಮಹನ ಹಂಕಾರವಿದರೊಳು ಕಾರಣವುಂಟು |
ಮರಳೆ ಮಹತತ್ವ ಅವ್ಯಕ್ತದ ಸಮೇತ |
ಸ್ಥಿರವಾಗಿಯಿಪ್ಪದು ಬೊಮ್ಮಾಂಡಕೆ ಸುತ್ತಲು |
ಎರಡೈದಾವರಣಾ ಒಂಭತ್ತು ಹತ್ತು ಎನಿಸುವದು |
ಸಿರಿ ಬೊಮ್ಮಾದಿಗಳು ತಾತ್ವಿಕರಾಗಿ ಎರುವರು |
ಹಿರಿದಾಗಿ ವೊಂದಂದಕ್ಕೆ ದಶಮಡಿ ಗುಣಿತದಿಂದ |
ಧರಣಿಯ ಬಿಟ್ಟು ಮೇಲಿಂದತ್ತ ಯೆಣಿಸುವದು |
ಪರಮ ಭಕುತಿಯಿಂದ ಹರಿ ವ್ಯಾಪಾರವ |
ಇರಳು ಹಗಲು ತುತಿಸಿ ಧನ್ಯನಾಗೊ |
ಸುರರು ಅಂಶಗಳಿಂದ ತುಂಬಿಹ್ಯರು ಕಾರ್ಯ ಧಾ |
ರರಾಗಿ ತಮ ತಮ್ಮ ಉದ್ಯೋಗದಿ |
ಹರಿಯೆ ಬಾಹಿರ ಸರ್ಗಮಾಡಿ ಆಮ್ಯಾಲೆ ವಿ |
ಸ್ತರಿಸಿದ ಒಳಗಿನ ಬೊಮ್ಮಾಂಡವ |
ವಿರಂಚಿಯ ಗರ್ಭದಲಿ ಇಟ್ಟು ವಿನೋದದಿಂದ |
ಸಿರಿ ಕೂಡ ಬೊಮ್ಮಾಂಡವ ಪ್ರವೇಶಿಸೆ |
ಸುರರ ಸಾವಿರವರುಷ ಮಲಗಿದ್ದ ಪರಮಾತ್ಮ |
ಹರಿಪ್ರೀತನಾಗಿ ನಾಭಿ ಕಮಲದಿಂದ |
ಸರಸಿಜ ಸಂಭವನ ಪೆತ್ತ ಪ್ರೇಮದಿಂದ |
ಹಿರಣ್ಯಗರ್ಭಾಖ್ಯ ನಾಮದಲ್ಲಿ |
ಎರಡೇಳು ಭುವನಾತ್ಮಕ ವಾರಿಜ ಸತ್ಯಲೋಕದ |
ಪರಿಯಂತ ಬೆಳಿಯಿತು ಪಾತಾಳವಿಡಿದು |
ಮೆರೆವ ವೈಭವ ಮೂರ್ತಿ ವಿಜಯ ವಿಠ್ಠಲರೇಯ |
ವರ ಪದ್ಮನಾಭ ರೂಪಾತ್ಮಕನಾದ ಉರಗಶಾಯಿ ೧
ಮಟ್ಟತಾಳ
ಜನನವಾದಾ ಕ್ಷಣಕೆ ನಾಲ್ಕು ದಿಕ್ಕನು ನೋಡಾ |
ಆನನ ನಾಲ್ಕಾದವು ಬ್ರಹ್ಮ ದೇವರಿಗೆನ್ನಿ |
ಮಣಿ ಭೂಷಣ ಅಕ್ಷ ಮಾಲೆ ಜ್ಞಾನ ಮುದ್ರೆ |
ಘನ ದಂಡ ಕಮಂಡುಲ ಚತುರ ಹಸ್ತ |
ಮಿನಗುವ ಉಪವೀತ ಶುಭ್ರ ವಸನ ದ್ವಯವು |
ವನಜಾ ಮಧ್ಯದಲ್ಲಿ ತನುಜಾನಾಗಿ ಕುಳಿತು |
ವನಜಾಗರ್ಭನು ತನ್ನ ನೋಡಿಕೊಂಡು ಮೇ |
ಲನಿತು ನೋಡಲಾಗಿ ಐದನೆ ಮೊಗವಾಯಿತು |
ಚಿನುಮಯ ಮೂರುತಿ ವಿಜಯ ವಿಠ್ಠಲರೇಯನ |
ಮನದಿಚ್ಛೆ ಲೀಲೆ ಆವಾವ ನೆಣಿಸುವನೊ ೨
ತ್ರಿವಿಡಿ ತಾಳ
ಅದೆ ಸಮಯದಲ್ಲಿ ಪದುಮಾತ್ಮ ದು |
ರ್ಗದೇವಿಯು ಮಹಚಂಡ ಮಾರುತ ಪುಟ್ಟಿಸಿ |
ಉದಕ ಬಿಂದುಗಳಿಂದ ಬ್ರಹ್ಮರಾಯನ ಗಾ |
ತ್ರದ ಮೇಲೆ ಸೂಸಿ ತೋಯಿಸಿದಳಂದು |
ವಿಧಿ ತಾನೆ ಬೆರಗಾಗಿ ಮಹ ಅಂಧಕಾರದೊಳು |
ಗಡ ಗಡನೆ ನಡುಗತ ಮಹ ಘಾಳಿಯಿಂದ |
ಉದಕದ ಧೆರೆಯಿಂದ ಪೀಡಿತನಾಗಿ ಅಂ |
ಜಿದ ಕ್ಷಣ ಮಾತುರ ತನ್ನ ಪಿತನ |
ಪದ ಪದುಮ ಸ್ಮರಿಸಿದನು ಏನಂಬೆ ಬೊಮ್ಮನಿಗೆ |
ಮುದದಿ ಅಜ್ಞಾನ ಭಯ ನಾಲ್ಕು ಎರಡು ಸಾರಿ |
ಒದಗಿದವು ನೋಡಾ ನಾನಾ ಪರಿಯಿಂದಲಿ |
ಪದುಮ ಸಂಭವಗೆ ಈ ಕಾಲದಲ್ಲಿ |
ಇದೆ ಸತ್ಯವೆನ್ನದಿರಿ ಅನಾದಿ ನಿರ್ದೋಷ |
ನಿಧಿಗೆ ಎತ್ತಣ ದೋಷ ಈ ವಾರತಿ |
ಪದುಮ ಬಾಂಧವ ಮದ್ಧ್ಯಾನ್ಹದಲ್ಲಿಗೆ ಬಂದ |
ಅದರಂತೆ ಕಾಣೊ ಚಂಚಲ ತೋರುವ |
ಮದಡ ಮಾನ್ನವರಿಗೆ ಅಜ್ಞಾನಿಯಂತೆ ತೋ |
ರಿದ ತನ್ನ ವಿಚಿತ್ರ ಮಹಿಮೆಯನ್ನು |
ಉದಿಸಿದ ಜನರಿಗೆ ಈ ಪರಿಯಾಗಲೆಂದು |
ಪದುಮನಾಭನ ಮಗನು ನಡುಗಿದನು |
ಇದನೆ ಎಣಿಸದಿರಿ ಇನ್ನೊಂದು ರಹಸ್ಯ |
ಸದಮಲವಾಗಿದೆ ಬಲು ಸೋಜಿಗ |
ತ್ರಿದಶ ಗಣಕೆ ದುಃಖ ಲೇಶ ಮಾತುರವಿಲ್ಲ |
ಮುದ ಪುಟ್ಟುವದು ದಿವಸ ದಿವಸದೆಡಿಗೆ |
ಚದುರರಿವರು ಕಾಣೊ ಕಿಂಚಿದಸುರಾವೇಶ |
ಒದಗಿದಾಗಲು ದುಃಖ ಪ್ರಾಪ್ತವಹದೊ |
ಇದರಂತೆ ತಿಳಿ ದೈತ್ಯ ಜಾಲಕೆ ಸುಖವಿಲ್ಲ |
ತ್ರಿದಶರಾವೇಶದಿಂದಲಿ ಬಪ್ಪದೊ |
ಮಧು ವೈರಿ ವಿಜಯ ವಿಠ್ಠಲರೇಯ ವೈಕುಂಠ |
ಸದನನ ಕ್ರೀಡಿಗೆ ನಮೊ ನಮೊ ಕರ ಮುಗಿದು ೩
ಅಟ್ಟತಾಳ
ಬೆರಗಾಗಿ ಪರಮೇಷ್ಠಿ ಮಹ ಜಲಧಿಯಲ್ಲಿ |
ಇರುತಿದ್ದು ನೋಡಿದ ನೀ ಕಮಲಕೆ ಒಂದೊಂದು |
ಗುರುತು ಕಾಣಲಿಬೇಕೆಂದಾಲೋಚಿಸಿ |
ಸರನೆ ನಾಳ ಮದ್ಧ್ಯ ವಿಳಿ ವಿಳಿದು ಪೋಗಲು ಮಹ |
ಬಿರಸು ಉನ್ನ ತವಾಗಿ ಇರಲಾಗಿ ಕಂಡು ಅ |
ಚ್ಚರಿಯ ದೇವರ ಮೋಹ ವರ್ಜನೆ ಬ್ರಹ್ಮ |
ಧೆರೆ ಚಂಡವಾತ ಮಹಾಧ್ವನಿ ಸುಳಿ ದೆಶೆ |
ಹಿರಿದಾಗಿ ಹೊಡಸಿಕೊಂಡು ಉದಕದೊಳಗೆ ತಾ |
ನರಿಯಲಾರದೆ ಭಯದವನಂತೆ ತೋರಿದ |
ತಿರಿಗಿ ಐದ್ರ್ವ ದೇಶವ ಊದಿದ ತಾನಾಗಿ ಕು |
ಳ್ಳಿರಲಾಶ್ರಯವಾದ ಕಮಲ ಪೀಠದಲ್ಲಿ |
ಹರಿಯಾ ಭಜನೆಯಲ್ಲಿ ಅತ್ಯಂತ ಉದ್ಯೋಗ |
ತರನಾಗಿ ರೇಚಕ ಕುಂಭಕ ಪೂರ್ವಕ |
ಎರಡೊಂದರಲಿ ವಾಯು ಧಾರಣಿ ಮಾಡಿ ವಿ |
ಸ್ತರ ಸಮಾಧಿಯೋಗ ಧ್ಯಾನಂಗತನಾಗಿ |
ಹರಿತಾನೆ ತಪ ತಪವೆಂದಾ ಮಾತಿಗೆ ಇಂಥ |
ಸುರರ ಸಾವಿರ ವರುಷ ತಪವ ಮಾಡಿದನು |
ಕರುಣದಿಂದಲಿ ಸ್ವಾಮಿ ಪ್ರಸನ್ನನಾದ ಮು |
ಕ್ತರ ಸಹಿತ ನಾನಾ ದಿವ್ಯ ಭೂಷಣದಿಂದ |
ಮೆರವ ತನ್ನ ಸ್ವಮೂರ್ತಿಯು ಹದಿನಾರು |
ಕರೆಸಿಕೊಂಡವು ವಾಸುದೇವಾದಿ ವಿಮಲೋ
ತ್ಕರಷಣಿ ಮೊದಲಾದ ಅಣಿಮಾದ್ಯ ಪೆಸರಿಲಿ |
ಪರಿವಾರದಿಂದಲಿ ಸೇವೆ ಕೊಳುತಲಿದ್ದು |
ಪರಮೇಷ್ವಿಯಿಂದಲಿ ದಿವ್ಯ ಸಾವಿರ ವರುಷ |
ಪರಮ ಮುಖ್ಯ ಸ್ತೊತ್ತರ ಮಾಡಿಸಿಕೊಂಡು |
ಕರುಣದಿಂದಲಿ ಸರ್ವ ವೇದ ಬ್ರಹ್ಮ ತರ್ಕ |
ಇರದೆ ಪಂಚರಾತ್ರಗಮ ವುಪದೇಶಿಸಿ |
ಹರಿ ಅದೃಶ್ಯನಾದ ತರುವಾಯ ಅಜದೇವ |
ವರುಷ ಸಾಸಿರವನ್ನು ವೋದಿದ ವೇದ ವು |
ಚ್ಚರಿಸಿ ಕೊಳುತಲಿದ್ದು ಸರ್ವ ಜಗವನು |
ತ್ವರದಿ ಪುಟ್ಟಿಸುವ ಮನಸು ಮಾಡಿ |
ನಿರುಪಮ ನಿರ್ಗುಣ ನಿಧಿ ವಿಜಯ ವಿಠ್ಠಲನ್ನ |
ಪರಿ ಪರಿ ರೂಪಗಳ ಧ್ಯಾನವ ಮಾಡುತ ೪
ಆದಿತಾಳ
ನಳಿನ ಚತುರದಶ ಭುವನಾತ್ಮಕವಾಗಿ |
ಬೆಳೆಯಿತು ಇದಕೆ ಆಧಾರ ಭೂತವಾಗಿ |
ನಳಿನ ಸಂಭವ ತನ್ನ ವೈರಾಜ ರೂಪ ಧರಿಸಿ |
ಸಲೆ ಮೆರದಾ ಮಹದಹಂಕಾರ ತತ್ವದಿ ನಿರ್ಮಾಣ |
ಜಲಜನಾಭ ತಾನೆ ಸರ್ವ ಜೀವರಾಶಿ |
ಗಳ ಸಹಿತ ಪುರುಷ ರೂಪದಿಂ ಪ್ರವೇಶಿಸಿದ |
ತಲೆ ಮೊದಲು ಮಾಡಿ ಪಾದ ಮೂಲ ಪರಿಯಂತ |
ಬೆಳಗಿದವು ಹದಿನಾಲ್ಕು ಲೋಕಂಗಳು |
ಬಲುಜನ ಪುಟ್ಟಿದರು ತತ್ವಾಭಿಮಾನಿಗಳು |
ಬಲವಂತ ರುದ್ರನಿಂದ ಪೂರ್ವದಂತೆ ಉತ್ಪತ್ತಿ |
ತಿಳಿವದು ಆಮ್ಯಾಲೆ ವಿರಾಟ ಕಲ್ಪದಲಿ |
ನೆಲೆಗೊಳಿಸಿತು ಅಹಂ ತ್ವಾಹಂ ಯೆಂದು ಪ್ರಾಣಾ |
ಕಲಹ ಪುಟ್ಟಿತು ತತ್ವರೊಂದಾಗಿ ನಿ |
ಶ್ಚ್ಲಲ ಮಾಡಬೇಕೆಂದು ಒಂದು ಶರೀರದಲಿ |
ಬಲು ಪರೀಕ್ಷೆಯ ಮಾಡಿ ಪ್ರಾಣ ದೇವರಿಗೆ ಪ್ರ |
ಬಲತನದಿಂದಲಿ ಜೀವ ದೇವಾಧಿಪತಿ |
ನಿಲಕರವಾಯಿತು ಸೂತ್ರ ನಾಮಕ ಪ್ರಾಣಗೆ |
ಬಲಿಯ ತಂದಿತ್ತ ನಮಗೆ ಸ್ವಾಮಿ ನೀನೆಂದು |
ತಲೆ ಬಾಗಿ ಸ್ತುತಿಸಿ ಕಾವುಥಾನೆಂದು ಕರೆದರು |
ಜಲಜ ಸಂಭವಗೆ ಐದನೆ ಶೀರ್ಷವುಂಟಾದ್ದು |
ಒಲಿಮೆಯಿಂದಲಿ ಕೇಳಿ ರುದ್ರನಿಗೆ ಮೋಚಕವು |
ಪೊಳೆವ ಸಮಸ್ತ ಜಗತನ್ನು ಪುಟ್ಟಿಸಿ ಅವರ |
ಬಳಗದೊಡನೆ ಮೊದಲು ಯಾಗಗೋಸುಗ ಸಂಭರಾದಿ |
ಗಳನು ಸೃಜಿಸಿ ಹರಿಯ ಪ್ರೀತಿ ಬಡಿಸಲಾಗಿ |
ಒಲಿದು ಪ್ರಸನ್ನನಾದ ಪರಮಾತ್ಮ ಲಕ್ಷೀಪತಿ |
ಅಲೌಕಿಕ ಸ್ತೋತ್ರದಿಂದ ಸುರರಿಂದ ತೃಪ್ತನಾಗಿ |
ಸುಲಭ ಮೂರುತಿ ಅಂತರ್ಧಾನ ಐದಿದನು |
ಇಳಿಯೊಳಗಿವರು ಪೂರ್ವ ಸಾಧ್ಯರು ಎಂದು |
ಕಲಕಾಲ ಪ್ರಸಿದ್ಧರಾದರು ದೇವತೆಗಳು |
ಸಲಹಿದ ಬೊಮ್ಮನಿವರ ಅನುಲೋಮ ಪ್ರತಿಲೋಮ |
ಕುಲದಿಂದ ಸಮಸ್ತರಿಗೆ ಬುದ್ಧಿಯನಿತ್ತು |
ಜಲಜ ಕಲ್ಪಾಂತದಲಿ ಈ ಪ್ರಕಾರವಾಗಿ |
ಪ್ರಳಯ ಮಾಡುವದಕ್ಕೆ ಅಂತ್ಯ ದಿನದಲ್ಲಿ |
ಜಲಜ ಪೀಠನು ಇಚ್ಛೆವುಳ್ಳವನಾದ ಭೂಮಿಯ |
ಮಳೆ ಮಿಕ್ಕಾದದರಿಂದ ಮುಳಗಿಸಿದ ನೀರೊಳಗೆ |
ಲಲನೆ ಗಾಯಿತ್ರಿ ಸಹಿತ ಸತ್ಯ ಲೋಕದಲ್ಲಿ |
ಮಲಗಿದ್ದ ಸರ್ವ ಜೀವರನ ಪಾವನ ಮಾಡಿ |
ನಲುವಿನಿಂದ ಯಿದ್ದನು ಪ್ರಕೃತಿ ಸಂಗಡ ಪುರುಷ |
ಕಳೆಗುಂದದಲೆ ಇಲ್ಲಿಗೆ ಪದ್ಮ ಕಲ್ಪಕಡೆಭಾಗ |
ತಿಳಿಯಬೇಕು ಜ್ಞಾನಿಗಳು ಮುಂದಿನ ವರಹ ಕಲ್ಪ |
ಭಳಿರೆ ಭಳಿರೆಯಿದೆ ತತ್ವಕ್ಕೆ ಸಾನು ಕೂಲ |
ಜಲಧಿ ಶಯನ ನಮ್ಮ ವಿಜಯ ವಿಠ್ಠಲರೇಯ |
ಸುಳಿದಾಡುವ ಮುಂದೆ ಈ ಪರಿ ಧೇನಿಸಲು ೫
ಜತೆ
ಪದ್ಮ ಕಲ್ಪದ ಕಥೆ ಕೇಳಿದ ಮನುಜಂಗೆ |
ಪದ್ಮೆ (ಪದ್ಮಿ) ವಲ್ಲಭ ನಮ್ಮ ವಿಜಯ ವಿಠ್ಠಲ ಕಾವ ೬

ರು ತತ್ವಶಾಸ್ತ್ರಾಭ್ಯಾಸ ಮಾಡಿದವರ ಜ್ಞಾನ

೧೩೩
ಧ್ರುವತಾಳ
ಹರಿದಾಸನಾಗು ಸಂಚರಿಸು ಸಂತೋಷದಲ್ಲಿ
ಗುರುಹಿರಿಯರ ಪಾದಕ್ಕೆರಗು ಬಿಡದೆ
ಎರಡೊಂದು ತಿಳಿದು ಮತ್ತೆರಡೊಂದು ಅಳಿದು
ಎರಡೊಂದು ಸಂಪಾದಿಸಿ ಎರಡೊಂದು ಶುದ್ಧಿಯಲ್ಲಿ
ಎರಡೊಂದು ಸೈರಿಸುತ್ತ ಎರಡೊಂದು ಕಾಲದಲ್ಲಿ
ಎರಡೊಂದು ಗುಣಗಳಿಗೆ ಎರಡೊಂದು ರೂಪನೆಂದು
ಎರಡೊಂದು ಲೋಕವನ್ನು ಎರಡೊಂದು ಮಾಳ್ಪನ್ನ
ಎರಡೊಂದಾರಿಂದಾವಸ್ಥಿ ಎರಡೊಂದು ಉಳ್ಳಾಮೇಲು
ಎರಡೊಂದು ಕಾಯಾನೋಡು ಎರಡೊಂದು ಕರ್ಮಾಕಳಿಯೊ
ಎರಡೊಂದಕ್ಷರಗಳ ಎರಡೊಂದುಸಾರೆ ನೆನದು
ಎರಡೊಂದು ಸ್ಥಾನ ಸೇರು
ಎರಡೊಂದು ಗುಣಶೂನ್ಯ ವಿಜಯ ವಿಠ್ಠಲ ಹರಿಯ
ಎರಡೊಂದು ರೂಪಾಭಜಿಸೆ ಎರಡೊಂದಾವರ್ತಿ ಪೊಳಿವಾ ೧
ಮಟ್ಟತಾಳ
ಮೂರೊಂದು ಯುಗದಲ್ಲಿ ಮೂರೊಂದು ವರ್ಣದ
ಮೂರೊಂದು ಕಡೆ ಬಿಂಬ ಮೂರೊಂದಾದಿ ಭಜಿಸಿ
ಮೂರೊಂದು ಪುರುಷಾರ್ಥ ಮೂರೊಂದಾದಿ ಬೇಡೆ
ಮೂರೊಂದು ಮೊಗನಯ್ಯಾ ವಿಜಯ ವಿಠ್ಠಲರೇಯ
ಮೂರೊಂದುಪಾಯದಲ್ಲಿ ಮೂರೊಂದು ಪ್ರಳಯನಾದೆ ೨
ತ್ರಿವಿಡಿತಾಳ
ನಾಲ್ಕೊಂದು ಭೇದವ ಆವಲ್ಲಿ ನಿಜವೆಂದು
ನಾಲ್ಕೊಂದಾತ್ಮಕವಾದ ಬೊಮ್ಮಾಂಡದಿ
ನಾಲ್ಕೊಂದು ಬಗೆಯವರು ಯೋಗ್ಯವಂತರೆಂದು
ನಾಲ್ಕೊಂದು ಸಂಪದವಿ ಇಪ್ಪವೆಂದು
ನಾಲ್ಕೊಂದು ಕೋಶದಲ್ಲಿ ವಾಸವಾಗಿ ಇದ್ದು
ನಾಲ್ಕೊಂದು ಪರ್ವದಲ್ಲಿ ತಿರುಗದಲೆ
ನಾಲ್ಕೊಂದು ಊಧ್ರ್ವಪುಂಢ್ರವ ಮುದ್ರಿಯೆ ಧರಿಸು
ನಾಲ್ಕೊಂದು ಯಜ್ಞವ ತಿಳಿದು ಮಾಡಿ ನಿತ್ಯ
ನಾಲ್ಕೊಂದು ಇಂದ್ರಿಯಂಗಳ ಬಂಧನವ ಮಾಡು
ನಾಲ್ಕೊಂಧಾದಿಗೆ ಎರಗದೀರು
ನಾಲ್ಕೊಂದು ಭೇದವ ತಿಳಿಯೋ ನೀನು
ನಾಲ್ಕೊಂದವರ ಪಾಲ ವಿಜಯ ವಿಠ್ಠಲ ಪ್ರ
ನಾಲ್ಕೊಂದು ಬಿಡಿಸುವ ನಾಲ್ಕೊಂದು ಕೊಡುವನೊ ೩
ಅಟ್ಟತಾಳ
ಐದೊಂದು ರಿಪುಗಳುಪದ್ರವ ಮುಗ್ಗಿಸು
ಐದೊಂದು ಕರ್ಮವ ಮಾಡುತಲಿರು
ಐದೊಂದು ಮತಕೆ ನಮ್ಮ ಮತಧಿಕವೆನ್ನು
ಐದೊಂದು ರುಚಿಬಿಡು ಹರಿನಾಮ ರುಚಿಯೆನ್ನು
ಐದೊಂದು ರಧಿಕರ ಜರಿದ ವಿಜಯ ವಿಠ್ಠಲನ್ನ
ಐದೊಂದು ಸ್ಥಳದಲ್ಲಿ ತಿಳಿಯೋ ನಿರ್ಮಲನಾಗಿ ೪
ಆದಿತಾಳ
ಆರೊಂದು ಜಡವುಳ್ಳ ಗ್ರಾಮ ನಿನ್ನದಲ್ಲ
ಆರೊಂದಂಬುಧಿಯಷ್ಟು ಕರ್ಮವೆ ನಿನ್ನದು
ಆರೊಂದವರ ಕೇಳಿ ಯಮನು ಶಿಕ್ಷಿಸುವನು
ಆರೊಂದು ದ್ವೀಪವನಾಳಿದವರೆಲ್ಲ
ಆರೊಂದು ಹಯನ ಕಾಲಕೆ ಎದ್ದು ಸ್ನಾನಾದಿ
ಆರೊಂದು ಜಿಹ್ವಕೆ ಉಣಿಸಿ ಕರ್ಮ ಜ್ಞಾನ
ಆರೊಂದು ಗೋತ್ರ ಉದ್ಧಾರ ಮಾಡುತ
ಆರೊಂದು ಅಂಗವುಳ್ಳ ವಿಜಯ ವಿಠ್ಠಲ ಹರಿಯ
ಆರೊಂದು ವಾರದೊಳು ನಿಮಿಷ ದಾಸನಾಗೊ ೫
ಜತೆ
ಕೊಡಬ್ಯಾಡ ಕೊಳಬ್ಯಾಡ ಸಿರಿ ವಿಜಯ ವಿಠಲನ್ನ
ಅಡಿಗಳರ್ಧಾನಿಮಿಷಾ ನಂಬಲು ಕೈವಲ್ಯ ೬

ಹರಿದಾಸನಾಗುವ ಇಚ್ಛೆ ಒಬ್ಬ ವ್ಯಕ್ತಿಗೆ

೧೩೪
ಧ್ರುವತಾಳ
ಹರಿದಾಸರ ಲಕ್ಷಣ ಇರಬೇಕು ಈ ಪರಿ
ಗರುವ ಕೋಪ ಮದ ಮತ್ಸರಾದಿ ಬಿಡಬೇಕು
ಮರುತ ಮತಕೆ ಎಲ್ಲಿ ಸರಿಗಾಣೆನೆನುತಲಿ
ಧರಿಯೋಳು ಕೂಗಿ ಡಂಗುರವ ಹೊಯಲಿ ಬೇಕು
ಎರಡಾರು ಪುಂಢ್ರವ ವಿರಚಿಸಿ ಪಂಚ ಮುದ್ರಾ
ಧರರಾಗಿ ತಪ್ತಾಂಕಿತ ಧರಿಸಬೇಕು ಭುಜದಲ್ಲಿ
ಶಿರಿಬೊಮ್ಮ ಹರಾದ್ಯರಿಗೆ ತರತಮ್ಮ ಭಾವದಿಂದ
ಎರಗಿ ಎನ್ನೊಳಗಿದ್ದು ಪೊರೆಯೆಂದಾಡಲಿಬೇಕು
ಕರಣ ನಯನ ಶ್ರವಣನಾಸಾವದನ
ಪರಿ ಪರಿ ಅಂಗಗಳು ಹರಿವಿತ್ತವೆನ್ನಬೇಕು
ಗುರು ಹಿರಿಯರಿಗೆ ಆದರ ಪೂರ್ವಕದಿಂದ
ಕರ ಮುಗಿದು ನಮಸ್ಕರಿಸಿ ನುತಿಸಬೇಕು
ನೆರೆ ಹೊರೆಯವರಿಗೆ ನಿರುತ ಇದ್ದರು ಬೇ
ಸರಗೊಳಿಸದೆ ಸಂಚರಿಸುತ್ತಲಿರಬೇಕು
ಹಣ ಹರಿಯಾಧೀನ, ನೆರದ ಸತಿಸುತರು
ನಿರುತ ಹರಿಗೆ ದಾಸರು ಎಂದು ಗುಣಿಸಬೇಕು
ಪರಮ ಭಕುತಿ ಜ್ಞಾನ ವಿರಕುತಿ ಮಾರ್ಗವು
ದೊರಕುವುದಕ್ಕೆ ಸಜ್ಜನರ ಸಂಗವಾಗಬೇಕು
ಹರಿದಾಸರ ಹರಿಚರಿತೆ ಹರಿ ಶ್ರವಣ ಹರಿಪೂಜೆ
ಹರಿ ಸ್ಮರಣೆ ಅಂತರ ಶುಚಿ ಇರಲಿಬೇಕು
ಹರಿ ಪರದೇವತಿ ವಿಜಯ ವಿಠ್ಠಲ ಗತೀ
ಸುರರಾಧ್ಯರಿಗೆಂದು ಉರವಣಿಸಿ ನುಡಿಬೇಕು ೧
ಮಟ್ಟತಾಳ
ಪರಧನ ಪರಸತಿ ಪರನಿಂದ್ಯದವರ
ಸರಸದಲ್ಲಿರದೆ ಚರಿಸಬೇಕು ದೂರ
ನರರು ಬೈದರೆ ಆದರವೆಂದು ತಿಳಿದು
ಹರುಷ ಬಡಲಿಬೇಕು ಸುರತರು ದೊರೆತಂತೆ
ಕರೆದು ಮನ್ನಿಸಿದರು ಇರಳು ಹಗಲು ಪಾಲುಗರೆವ
ಸುರಧೇನು ಬರಡಾಗಿನಿಂದ ಪರಿಯೆಂದೆನಬೇಕು
ನೆರೆದು ಸಂದಣಿಯೊಳು ಚರಿಸಬಾರದು ಪೋಗಿ
ಬರಿದೆ ಕುಳಿತು ಹಾಳಹರಟಿಯ ಪೇಳದಲೆ
ಮರಿಯದೆ ಸೊಲ್ಲು ಇರಬೇಕು ತನ್ನೊಳಗೆ
ಪರಮ ತತ್ವವತಿಳಿದು ದುರುಳರಿ
ಗರುಹದಲೆ ಸುರಿಯಬೇಕು ಸುಖವ
ಮರಳೆ ಮರಳೆ ನೆನೆದು ಪರಮ ಗುಪ್ತನಾದ ವಿಜಯ ವಿಠ್ಠ
ಲರೇಯನ ನೆರೆನಂಬಲಿಬೇಕು ಕುರುಹ ಕಾಣುವಂತೆ ೨
ತ್ರಿವಿಡಿತಾಳ
ಲೇಸಾದರು ಹರಿಯ ಕಾರುಣ್ಯವೆನಬೇಕು
ಲೇಸಾಗದೆ ಬಲು ಮೋಸವಾದಲ್ಲಿ
ಕ್ಲೇಶ ಬಂದಡರಲು ಏಸು ಜನ್ಮದ ಪಾಪ
ರಾಸಿಯ ಫಲಸಿತೊ ಎನ್ನ ಕರ್ಮ
ಈ ಶರೀರಕೆ ಬಂದು ಪ್ರಾಪ್ತವಾದುದು ಆನುಭ
ವಿಸದಲೇ ಬಿಡದು ಸಿದ್ಧವೆಂದು
ಲೇಶವಾದರು ದು:ಖ ಹಚ್ಚಿಕೊಳ್ಳದೆ ಮಹಾ
ತೋಷದಲ್ಲಿರಬೇಕು ನೋಯದಲೆ
ಶ್ರೀಶನೆಗತಿ ಎಂದು ಬೇಸರದಲೆ ಬಂದ
ಕ್ಲೇಶಗಳುಣಬೇಕು ಬಂದಾಗಲು
ದೇಶ ಕಾಲ ಗುಣ ಪರಿಪೂರ್ಣ ಹರಿ ಇರೆ
ಘಾಸಿ ಎಲ್ಲಿದೊ ಎಂದು ನಲಿಯಬೇಕು
ಶ್ರೀ ಸತಿ ಕಾಲ ವೇದ ಜೀವ ಪ್ರಳಯದಲ್ಲಿ
ನಾಶವಾಗವು ಭೇದ ಅನಲಿಬೇಕು
ವ್ಯಾಸ ವಚನ ಮಧ್ವರಾಯರು ಮಾಡಿದ
ಭಾಷ್ಯ ಸಮ್ಮತದಿಂದ ನೋಡಬೇಕು
ವಾಸುದೇವ ನಮ್ಮ ವಿಜಯ ವಿಠ್ಠಲನ್ನ
ದಾಸಾನುದಾಸರ ದಾಸನಾಗಲಿ ಬೇಕು ೩
ಅಟ್ಟತಾಳ
ಬಡತನ ಬಂದರು ಹಿಗ್ಗುತಲಿರಬೇಕು
ಜಡನಾಗಿ ಬಾಹ್ಯದಲ್ಲಿ ತೋರಲಿಬೇಕು
ಅಡಿಗಡಿಗೆ ಲಜ್ಜೆಗೆಡಬೇಕು ಸರ್ವದ
ಒಡಲಿಗೆ ಚಿಂತಿಮಾಡದೆ ಧೃಢ ಇರಬೇಕು
ಒಡವೆ ವಸ್ತ ತಂದೆ ತಾಯಿ ತ್ರಿಲೋಕದ
ಒಡಿಯ ಶ್ರೀ ಕೃಷ್ಣನೆಂದು ಬಿಡದೆ ನಂಬಲಿಬೇಕು
ಯಡಿಗೆ ಪರಿಮಿತ ಧಾನ್ಯ ತರಲಿಬೇಕು
ಕೊಡಬೇಕು ಕೊಡಬೇಕು ಒಬ್ಬರಿಗದರೊಳು
ಕಡುಗಲಿ ವಿಜಯವಿಠಲ ರಂಗನಪಾದ
ಪಿಡಿದು ಭಜಿಸಬೇಕು ನಲಿನಲಿದಾಡುತ್ತ ೪
ಆದಿತಾಳ
ಉಟ್ಟದಕ್ಕಿಂತ ಮೇಲು ತೊಟ್ಟದಕ್ಕಿಂತ ಮೇಲು
ಇಟ್ಟದಕ್ಕಿಂತ ಮೇಲು ವಿಠ್ಠಲನ್ನ ಸ್ಮರಣೆ ಮನ
ಮುಟ್ಟಿ ನಮಿಸಲಿಬೇಕು ಬಲುಹಿತದಲ್ಲಿ
ಅಟ್ಟಹಾಸದಲ್ಲಿ ಚೀರಿ ಬಿಟ್ಟಿಕ್ಕಿ ಕೂಗಿ ತೂಗುತ
ಇಷ್ಟ ಸುಖಕ್ಕಿಂತ ಮೇಲು
ದಟ್ಟಡಿಯಿಂದ ತಿಳಿದು ನಿಷ್ಠೆಯಿಂದಲಿ ಇರಲು
ಇಷ್ಟ ಪ್ರಾಪುತ ಅವರಿಗರಿಷ್ಟವು ಪರಿಹಾರ
ಹುಟ್ಟು ಸಾವಿಲ್ಲದ ವಿಜಯ ವಿಠಲ ತಾನು
ಕೊಟ್ಟು ಸಾಕುವ ದಯವಿಟ್ಟು ದಾಸನ ಮಾಡಿ ೫
ಜತೆ
ಈ ಪರಿ ಇದ್ದವಂಗೆ ಅನಂತ ಜನುಮಕ್ಕೆ
ತಾಪತ್ರಯಗಳಿಲ್ಲ ವಿಜಯ ವಿಠ್ಠಲ ಬಲ್ಲ ೬

ಈ ಸುಳಾದಿಯೂ ಹರಿದಾಸರ ಬದುಕಿನ ನಿಲುವು,

೧೩೫
ಧ್ರುವತಾಳ
ಹರಿದಾಸರೊಡನಾಡು ಹರಿಯಂಘ್ರಿಯುಗ್ಮ ನೋಡು
ಹರಿಯೆಂದು ಕೊಂಡಾಡು ಹರಿನಾಮ ಹಾಡಿಪಾಡು
ಹರಿ ಪ್ರಸಾದವೆ ಬೇಡು ಹರಿಸೇವಿಯನ್ನು ಮಾಡು
ಹರಿಗೆ ಕರವನೀಡು ಹರಿಯ ಬಿಡದೆ ಕಾಡು
ಹರಿಯ ಪೊಗಳಿಪಾಡು ಹರಿಗೆ ಮನಸುಕೊಡು
ಹರಿಗೊಪ್ಪಿಸು ಈ ಬೀಡು ಹರಿದ್ವೇಷಿಗಳ ಬಿಡು
ಹರಿಧ್ಯಾನದಲ್ಲಿ ಕೊಡು ಹರಿಕರುಣದ ಜೋಡು
ಹರಿಯದಂತೆ ನೋಡು ಹರಿನಗರಿಗೆ ಓಡು
ಹರಿಯಲ್ಲಿ ರತಿ ಇಡು ಹರಿ ವಿಜಯ ವಿಠ್ಠಲನ್ನ
ಹರಿ ಎಂದರೆ ಈ ನಾಡು ಹರುಷಬಡುವುದು ನೋಡು
ಹರಿದು ಪೋಗದೆ ಕೇಡು ೧
ಮಟ್ಟತಾಳ
ಹರಿಯ ಭಕುತಿ ಹರಿ ಬಲ್ಲವನೆಲ್ಲಿ
ಹರಿತಾ ಹತ್ತರೊಳಗೆ ಹರಿಹರಿದಾಡುವ
ಹರಿವಂತನು ಕಾಣೊ ಹರಿದಿಕ್ಕುವ ಭವದ
ಹರಿಯೊಳಗಿಂದಲಿ ಹರಿದೆದ್ದು ಬಪ್ಪ
ಹರಿಗಂಡವನೆನ್ನು ಹರಿವದನ ನಮ್ಮ ವಿಜಯ ವಿಠಲ ನರ
ಹರಿನಾಮವೆ ಪರಿಹರಿಸುವದು ನರಕಾ ೨
ತ್ರಿವಿಡಿತಾಳ
ಹರಿಯ ನಂಬಿರೊ ಜನರು ವೈರಾಗ್ಯ ಪರರಾಗಿ
ಹರಿದು ಪೋಗದೆ ನಿತ್ಯ ಪರರ ಒಡವಿಗೆ
ಹರಿ ಹನುಮಂತ ಒಂದೇ ಎಂದು ತಿಳಿದೂ
ಹರಿ ಇದ್ದಲ್ಲಿ ಪವಮಾನ ಇಪ್ಪನೆಂದೂ
ಹರಿಯ ಭಜಿಸಿ ಪವಮಾನನ್ನೆ ತೊರೆದರೆ
ಹರಿಪುರವಾಗದು ಶತಕಲ್ಪಕ್ಕೂ
ಹರಿಶರಣರ ಬಳಿವಿಡಿದು ಭಕುತಿಯಲ್ಲಿ
ಹರಿಶ್ರವಣವ ಕೇಳು ಶ್ರವಣದಲ್ಲಿ
ಹರಿತಾವಂದಿತ ನಮ್ಮ ವಿಜಯ ವಿಠಲರೇಯ
ಹರಿ ಎಂದು ನುಡಿದರೆ ಹರಿದು ಬಪ್ಪನು ಕಾಣೊ ೩
ಅಟ್ಟತಾಳ
ಹರಿಯಭಕುತಿ ಕಂಡವರಿಗೆ ದೊರಕುವುದೆ
ಹರಿದೇರಿ ಪರ್ವತಾಗ್ರದಿಂದ ಭೂಮಿಗೆ
ಹರಿಯ ಬಿದ್ದರೆ ಇಲ್ಲ ಸುತ್ತುವ ಸುಳಿಯೊಳು
ಹರಿದು ಮುಣುಗಿ ಪೋಗಿ ಎದ್ದು ಬಂದರೆ ಇಲ್ಲ
ಹರಿಯರೊಳಗೆ ನಿತ್ಯ ಹಗಲಿರುಳು ತಲೆ
ಹರಿ ಮಾಡಿಕೊಂಡು ನಭಕೆ ಪಾರಿದರಿಲ್ಲಾ
ಹರಿಭಕುತಿ ಸಂಪಾದನೆ ಗಂಟಿ
ಹರಿಣಾಂಕಕುಲಪಾಲ ವಿಜಯ ವಿಠಲನಂಘ್ರಿ
ಹರಿಯಬಲ್ಲವನಿಗೆ ಸುಲಭ ಸಾಧ್ಯವೆನ್ನಿ ೪
ಆದಿತಾಳ
ಹರಿಯೆ ಪರಮಪುರುಷ ಹರಿಪರಾತ್ಪರ ದೇವ
ಹರಿ ಚತುರನಾಶರಹಿತ ಹರಿ ಆಚಿಂತ್ಯಾಧ್ಬುತ
ಹರಿ ಅಪ್ರಾಕೃತ ಕಾಯಾ ಹರಿ ಪ್ರಳಯ ವಿರಹಿತ
ಹರಿ ಮುಕ್ತಾಶ್ರಯ ಹರಿ ಸರ್ವಾಂತರ್ಯಾಮಿ
ಹರಿ ಜೀವಜಡಕೆ ಭೇದ ಹರಿ ಅಣುಮಹಾರೂಪ
ಹರಿಕರ್ತಾ ಜಗತ್ಕಾರಣ ಹರಿ ರಮಾದಯಪ್ರೀಯ
ಹರಿ ವೈಕುಂಠರಮಣ ವಿಜಯ ವಿಠಲರೇಯ
ಹರಿತೋರುವನು ಭಕುತಿಕೈಕೊಂಡ ಮನುಜರಿಗೆ ೫
ಜತೆ
ಭಕುತಿಗೆ ಕೇಡಿಲ್ಲಾ ಅನಂತ ಕಲ್ಪಕ್ಕೆ
ಭಕುತಿಯ ಪಡೆಯಿರೋ ವಿಜಯ ವಿಠಲನಲ್ಲಿ ೬

ರು ಈ ಸುಳಾದಿಯಲ್ಲಿ

೧೦೯
ಧ್ರುವತಾಳ
ಹರಿನಾಮ ಪ್ರಹ್ಲಾದನ್ನ ಮೊರೆ ಕೇಳಿ ಒದಗಿತು
ಹರಿನಾಮ ಗಜೇಂದ್ರನ್ನ ಆಪತ್ತು ಹರಿಸಿತು
ಹರಿನಾಮ ಅಜಾಮಿಳನ ಪಾತಕ ಕೆಡಿಸಿತು
ಹರಿನಾಮ ನಾರದನ ನೀಚಯೋನಿ ಬಿಡಿಸಿತು
ಹರಿನಾಮ ಭೀಷ್ಮನ್ನ ಪಂಥವ ಗೆಲೆಸಿತು
ಹರಿನಾಮ ಅಂಬರೀಷನ ವ್ರತವ ಸಂರಕ್ಷಿಸಿತು
ಹರಿನಾಮ ವಿಭೀಷಣನ ಪಟ್ಟದಲ್ಲಿಟ್ಟಿತು
ಹರಿನಾಮ ದ್ರೌಪದಿಯ ಮಾನವೆ ಪಾಲಿಸಿತು
ಹರಿನಾಮ ಧ್ರುವನ್ನ ತಪಸಿಗೆ ಒಲಿಯಿತು
ಹರಿನಾಮ ಅಹಲ್ಯಾ ಶಾಪವ ಹಿಂಗಿಸಿತು
ಹರಿನಾಮ ಬಲಿನೃಪನ ಇಂದ್ರನ್ನ ಮಾಡಿತು
ಹರಿನಾಮ ಕುಚೇಲನ ದಾರಿದ್ರ ಕಳೆಯಿತು
ಹರಿನಾಮ ವಿದುರನ್ನ ಕ್ಷೀರಕ್ಕೆ ಹಿಗ್ಗಿತು
ಹರಿನಾಮ ಪಾರ್ಥನ್ನ ಜೀವವೇ ಉಳಿಸಿತು
ಹರಿನಾಮ ಜನಕನ್ನ ದೃಢಮಾಡಿ ನೋಡಿತು
ಹರಿನಾಮ ಪುಂಡರೀಕನ ಭಕ್ತಿಗೆ ಮೆಚ್ಚಿತು
ಹರಿನಾಮ ಗುರುಪುತ್ರನ್ನ ತಿರುಗಿ ಬದುಕಿಸಿತು.
ಹರಿನಾಮ ವಾಲ್ಮೀಕನ್ನ ಮುನಿಪನೆಂದೆನಿಸಿತು
ಹರಿನಾಮ ಭೂಮಿಯ ಉದ್ಧಾರ ಗೈಸಿತು
ಹರಿನಾಮ ಪರಿಪರಿ ಭಕ್ತರೊಡನಾಡಿತು
ಹರಿನಾಮ ಒಂದಿರಲು ಅನ್ಯುಪಾಯವೇ
ಹರಿನಾಮ ಸಮಸ್ತ ಭಯನಿವಾರಣವಯ್ಯ
ಹರಿನಾಮ ಮನಸಿಗೆ ನಿರ್ಮಲ ಕಾರಣ
ಹರಿನಾಮ ಸರ್ವ ದೇವತೆಗಳಿಂದಧಿಕವೊ
ಹರಿನಾಮ ಜಗದೊಳು ಅಖಂಡವಾಗಿಪ್ಪುದೊ
ಹರಿನಾಮ ಅಜಭವಾದಿಗಳಿಗೆ ಗತಿಪ್ರದಾ
ಹರಿನಾಮ ಮಹಿಮೆ ಆರು ಬಣ್ಣಿಪರಯ್ಯಾ
ಹರಿ ಹರಿ ಹರಿ ಎಂದು ನೆನೆದಡೆ ರೋಗಂಗಳು
ಉರುಳಿ ಪೋಗುವುದು ನೀನು ಕೇಳೊ ಎಲೋಕೇಳೋ
ಹರಿನಾಮ ಸಕಳ ಪ್ರಾಯಶ್ಚಿತ್ತಕ್ಕೆ ಮೊದಲು
ಹರಿನಾಮವಿರಲಾಗಿ ಮತ್ತೊಂದಪೇಕ್ಷೆಯೇ
ಹರಿನಾಮ ನಿಜಸ್ವಾಮಿ ವಿಜಯ ವಿಠ್ಠಲನಂಘ್ರಿ
ಪರಿಶುದ್ಧನಾಗಿ ಎಳ್ಳನಿತು ಮನದಲ್ಲಿಡೊ ೧
ಮಟ್ಟತಾಳ
ಹರಿನಾಮವೇ ನಮ್ಮ ಮನವಶವಾಗಿರಲು
ಮರೆದು ಪಾಮರನಾಗಿ ಕೆಟ್ಟುಪೋಗುವದ್ಯಾಕೆ
ಹರಿನಾಮವೇ ನಿತ್ಯ ಎದುರಿಲಿ ನಿಡಿದಾ
ಗುರುತಿನಂತಿರಲಾಗಿ ಬೆಸನೆ ಮಾಡುವುದ್ಯಾಕೆ
ಮರುಳೆ ಮಾತನು ಕೇಳೊ ಅನಂತರ ಕ್ಲೇಶವನ್ನು
ಇರಗೊಡದಿರು ನಿನಗೆ ತಿಳಿಪುವೆನು ಇನ್ನು
ಮುರಮರ್ದನ ನಮ್ಮ ವಿಜಯವಿಠ್ಠಲನ್ನ
ಸ್ಮರಣೆ ಮಾಡಲು ಬಂದ ರೋಗವೆ ವಿನಾಶ ೨
ತ್ರಿವಿಡಿತಾಳ
ಹರಿನಾಮವೆಂಬೋದು ದುರಿತ ಕಾನನ ಸಂ
ಹರಿಸುವ ಪ್ರಳಯಾಗ್ನಿ ಸೋಲಿಸುತಿಪ್ಪುದು
ಹರಿನಾಮ ನೆನೆದವ ಕುಲಕೋಟಿ ಉದ್ದಾರ
ಹರಿನಾಮ ನಂಬಿದರೆ ಕೇಡಿಲ್ಲಾ ಕೇಡಿಲ್ಲಾ
ಹರಿನಾಮ ಜಗದೊಳು ಅಖಂಡವಾಗಿ ನಿಂ
ದಿರದೆ ವ್ಯಾಪಿಸಿಕೊಂಡು ಇಪ್ಪುದಿದಕೋ
ಹರಿನಾಮವೇ ಮಹಾ ಪ್ರತಿಬಂಧಗಳ ಕಳೆದು
ಪೊರೆಯುತ್ತಲಿರೆ ನಮಗೆ ಚಿಂತೆಯಾಕೆ
ನರದೇಹಕ್ಕೆ ಬಂದ ಭಣಗು ಉಪದ್ರವ
ಪರಿಹರಿಸಿ ಬಿಡುವುದು ಸೋಜಿಗವೇ
ಬರೆದೊರದು ಜ್ಞಾನಿಗಳು ಪೇಳುವ ಕಥೆ ಕೇಳಿ
ಸ್ಥಿರಮಾಡುವುದು ಚಿತ್ತ ಸುಖವೇ ಉಂಟೋ
ತಿರುಗಿ ಬಾರದು ವ್ಯಾಧಿ ಪೋಯಿತೆಂದು ತಿಳಿ
ಹರಿನಾಮದ ಶೌರ್ಯ ಸತತದಲ್ಲಿ
ಜ್ವರತಾಪ ನಿವಾರಿಸಿ ವಿಜಯ ವಿಠ್ಠಲ ಸಜ್ಜ
ನರ ಮಾತನು ಪುಸಿಯಾಗಗೊಡ ನಿಜವೋ ೩
ಅಟ್ಟತಾಳ
ಹರಿನಾಮ ಇದ್ದಲ್ಲಿ ಹರುಷವೇ ಎಂದಿಗೂ
ಸುರರಾದಿಗಳು ಬಲ್ಲರು ಬಹುಕಾಲದಿ
ನಿರಯಾದೊಳಿದ್ದರೂ ಕಡೆಹಾಕುವುದು ಅ
ದರಿಂದ ಪಾಲಿಸಿ ಪರಮ ಪ್ರೀತಿಯಿಂದ
ನಿರುತ ಜ್ಞಾನ ಭಕ್ತಿ ವೈರಾಗ್ಯ ಕೊಡುವುದು
ಬರಿದಾಗದು ಕಾಣೊ ತುಂಬಿದ ಭಂಡಾರ
ಪಿರಿದಾಗಿ ಎಂತೆಂಥ ರಾಯರಾಯರನೆಲ್ಲ
ಅರೆಕ್ಷಣದಲ್ಲೀಗ ಕಾಯಿತು ಕಾಯಿತು
ಧರಣಿಪಾಲಕ ರಂಗ ವಿಜಯವಿಠ್ಠಲರೇಯಾ
ಹೊರಗೆ ಒಳಗೆ ಇದ್ದು ಆನಂದಿಬಡಿಸುವ ನಿಜವೋ ೪
ಆದಿತಾಳ
ಒಂದೊಂದು ಹರಿನಾಮ ನೆನಿಸಿದರೆ ನಮಗೆ
ಸಂಧಿ ಸಂಧಿಯಲ್ಲಿದ್ದ ರೋಗಗಳೆ ಸಂಹಾರ
ಕುಂದು ಎಣಿಸದಿರು ಕುಚ್ಛಿತಯೋಚನೆ ಬಿಡು
ಪೊಂದು ತಿರುಗಿ ಪೊಂದು ಹರಿನಾಮ ಸ್ಮರಣೆಯನ್ನು
ನಿಂದಲ್ಲಿ ಕುಳಿತಲ್ಲಿ ನಡೆದಾಡುವಲ್ಲಿ
ಮಂದಮತಿಯಲ್ಲಿ ಮದಡನಾಗಿದ್ದಲ್ಲಿ
ಸಂದೇಹ ಬಡದಲೆ ಸರ್ವೋತ್ತಮನ ಮನ
ದಿಂದ ತೊಲಗಲೀಯದೆ ಮುಂದುಗೆಡೆದೆ ನೆನೆಸೊ
ಮಂದರಧರ ನಮ್ಮ ವಿಜಯ ವಿಠ್ಠಲರೇಯಾ
ಬಂದು ಭಕ್ತಿಗೆ ಒಲಿದು ಮನೋಭೀಷ್ಟವ ಕೊಡುವನು ೫
ಜತೆ
ಇತ್ತಾ ಮುಂದಾಗಿ ನಮಗೆ ಮುನ್ನಾವಭಯ ನಮಗಿಲ್ಲ
ಚಿತ್ತಜಪಿತ ವಿಜಯವಿಠ್ಠಲನೇ ಗತಿ ಎನ್ನೋ ೬

ಹರಿನಾಮ ಮಹಾತ್ಯ್ಮೆಯನ್ನು ದಾಸರು

೧೧೧
ಧ್ರುವತಾಳ
ಹರಿನಾಮ ಲಕ್ಷ್ಮೀ ಕಾಣೋ ದಾರಿದ್ರ ಜನರಿಗೆ
ಹರಿನಾಮ ಬ್ರಹ್ಮಕಾಣೊ ಅಲ್ಪಾಯುಳ್ಳ ಜನಕೆ
ಹರಿನಾಮ ಪವನ ಕಾಣೊ ದುರಿತ ಘನಾವಳಿಗೆ
ಹರಿನಾಮ ಗರುಡ ಕಾಣೊ ಕಾಲಾಖ್ಯ ಸರ್ಪಗಳಿಗೆ
ಹರಿನಾಮ ಶೇಷ ಕಾಣೊ ಜ್ಞಾನಸಾಧನ ಪಾಲಿಪುದಕೆ
ಹರಿನಾಮ ರುದ್ರಕಾಣೊ ದುಷ್ಕರ್ಮ ಪರ್ವತಕ್ಕೆ
ಹರಿನಾಮ ಇಂದ್ರ ಕಾಣೊ ದುಷ್ಕರ್ಮ ಪರ್ವತಕ್ಕೆ
ಹರಿನಾಮ ಸೂರ್ಯ ಕಾಣೋ ಅಜ್ಞಾನಾಖ್ಯ ಕತ್ತಲಿಗೆ
ಹರಿನಾಮ ಚಂದ್ರ ಕಾಣೊ ಹೃತ್ತಾಪ ಮೂಲಸ್ಥಾನಕ್ಕೆ
ಹರಿನಾಮ ವರುಣಕಾಣೊ ವೃಷ್ಟಿ ಕೊಡುವುದಕ್ಕೆ
ಹರಿನಾಮ ಅಗ್ನಿಕಾಣೊ ದುರಿತಕಾನನಕೆ ಮುಖ್ಯ
ಹರಿನಾಮ ವಡಬಾನಳನೊ ಮಹಾ ದುಃಖಸಾಗರಕ್ಕೆ
ಹರಿನಾಮ ಸಂಜೀವನವೊ ಮೃತ್ಯು ಪ್ರಾಯ ಜೀವಿಗಳಿಗೆ
ಹರಿನಾಮ ವೈದ್ಯಕಾಣೊ ಭವರೋಗ ಕಳೆವುದಕ್ಕೆ
ಹರಿನಾಮ ಗಂಗೆ ಕಾಣೊ ಮನಮಲಿನ ತೊಳೆವುದಕ್ಕೆ
ಹರಿನಾಮ ಕವಿಯೆ ಕಾಣೊ ಅನಾಚಾರ ಬಿಡಿಸುವುದಕ್ಕೆ
ಹರಿನಾಮ ಪ್ರಾಣ ಕಾಣೊ ಇಂದ್ರಿಯಗಳ ಬಲಕೆ
ಹರಿನಾಮ ವ್ಯಾಘ್ರಕಾಣೊ ಆಪತ್ತು ಮೃಗಂಗಳಿಗೆ
ಹರಿನಾಮ ಸಿಂಹ ಕಾಣೊ ಕ್ರೋಧವೆಂಬ ಗಜಕೆ
ಹರಿನಾಮ ಗಜ ಕಾಣೊ ಆಶವೆಂಬೋ ಕದಳಿಗೆ
ಹರಿನಾಮ ಶಸ್ತ್ರಕಾಣೊ ಕಾಮಬಲ ಖಂಡ್ರಿಪುದಕ್ಕೆ
ಹರಿನಾಮ ವಿತ್ತಕಾಣೊ ಸತ್ಕರ್ಮಕೊಂಬೋದಕ್ಕೆ
ಹರಿನಾಮಭರಣ ಕಾಣೊ ಶರೀರಾಲಂಕಾರಕ್ಕೆ
ಹರಿನಾಮಾಂಬರ ಕಾಣೊ ಭವವೆಂಬ ಸೀತಕ್ಕೆ
ಹರಿನಾಮ ವಜ್ರಪಂಜರ ಶರಣರ ಕುಲಕೋಟಿಗೆ
ಹರಿನಾಮ ನೆನೆದವರ ಅಶುಭವೆ ಓಡಿಸುವುದು
ಹರಿನಾಮ ನಂಬಿದರೆ ಸರ್ವವು ದೃಷ್ಟಿಗೋಚರ
ಹರಿನಾಮ ಆವಾವಾ ವಿಶೇಷಾ ಕೊಡುವುದು
ಹರಿ ಮೂರುತಿ ನಮ್ಮ ವಿಜಯ ವಿಠ್ಠಲರೇಯಾ
ಹರಿಯೆಂದ ಮನುಜಂಗೆ ಹರುಷ ಪ್ರವಾಹ ಎನ್ನು ೧
ಮಟ್ಟತಾಳ
ತೊಟ್ಟಿಲೊಳಗೆ ಇದ್ದ ಶಿಶುವಿನ ಮೊಗನೋಡಿ
ತುಷ್ಟಳಾಗಿ ಜನನಿ ತೆಗೆದೆತ್ತಿ ಮೊಲೆ
ಗೊಟ್ಟು ಸಂತೈಸುವಳಾ ತೆರದಿ ಎನಗೆ
ವಿಠ್ಠಲ ವಿಠ್ಠಲನೆಂಬೊ ಜನನಿ ಇರಲು
ಕಷ್ಟಬಡುವದ್ಯಾಕೆ ಕಂಡದ್ದು ಹಂಬಲಿಸಿ
ಇಷ್ಟಮೂರುತಿ ರಂಗ ವಿಜಯವಿಠ್ಠಲರೇಯನ
ಪಟ್ಟಣ ಸೇರುವುದು ಒಂದೇ ನಾಮದಿಂದ ೨
ತ್ರಿವಿಡಿತಾಳ
ಹರಿನಾಮವಾ ನೆನಸೆ ಆವಾವ ವಿಪತ್ತು
ಪರಿಹಾರವಾಗೋವು ಪ್ರತಿ ಪ್ರತಿ ಕ್ಷಣದಲ್ಲಿ
ಹರಿನಾಮದಿಂದಲಿ ತತ್ವೇಶ ಮೊದಲಾದ
ಸುರರೆಲ್ಲ ವಶವಾಗಿ ಇರುತಿಪ್ಪರೋ
ಪರಲೋಕದ ಮಾರ್ಗ ಪುರದ ಬೀದಿಯಂತೆ
ಅರೆಮರೆ ಇಲ್ಲದಲೆ ಕಾಣಿಸುವುದು ಸತ್ಯಾ
ಪರಬುದ್ಧಿ ಪ್ರತ್ಯಕ್ಷವಾಗುವುದು ಸತ್ಯಾ
ಪರಮ ಜ್ಞಾನಿಯಾಗಿ ಸುಖಿಸುವನೋ
ಎರಡೆಂಟುದಿಕ್ಕಿನಲ್ಲಿ ಆಗುವ ವಿವರ ವಿ
ಸ್ತಾರವಾಗಿ ತಿಳಿವುದು ಗುಣಿಸಿದರೂ
ಹರಿನಾಮದಿಂದ ಬಂದ ಜ್ಞಾನಕೆ ಇನಿತು
ಚರಿಯಲಿಪ್ಪುದೆಂದು ಶಂಕಿಸದಿರು
ಅರುಹುವೆ ಮನಕೆ ಅನುಭವವಾಗುವಂತೆ ನಿಂ
ದಿರದೆ ಲಾಲಿಸುವುದು ಭಕುತಿಯಿಂದ
ನರನೊಬ್ಬ ಅಂಜನವ ಮಾಡಿದರಿಂದದು
ಕರತಳದಲ್ಲಿ ಪಚ್ಚಿಸಿಕೊಂಡರೆ
ಸರಿಸಾ ದೂರದಲ್ಲಿದ್ದ ವಸ್ತು ಕಾಣಿಸುವುದು
ಧರೆಯೊಳಗಿಂಥ ಈ ಜಡಕೆ ಈ ಸಾಮರ್ಥಿಕೆ
ಸ್ಥಿರವಾಗಿ ಇರಲಿಕ್ಕೆ ಜ್ಞಾನದೃಷ್ಟಿಗೆ ಕಾಂಬೋ
ದರಿಂದೇನೊ ಎಲೋ ಮನವೆ ಜಡ ಇಂದ್ರಿಯಂಗಳು
ನಿರುತಲಿದ್ದರೇನು ಜ್ಞಾನ ಅಧಿಕವಾಗೆ
ಹೊರಗೆ ಒಳಗೆ ಮಾಳ್ಪುದೆಲ್ಲ ಜ್ಞಾತ
ಪರಮಪುರುಷ ರಂಗ ವಿಜಯ ವಿಠ್ಠಲರೇಯನ
ಚರಣ ಧ್ಯಾನವ ಮಾಳ್ಪ ಜ್ಞಾನೋಪಾಸನೆ ಬಲವೊ ೩
ಅಟ್ಟತಾಳ
ಅನುಭವವಿಲ್ಲದ ಜ್ಞಾನದ ಫಲವೇನು
ಅನುದಿನ ಜ್ಞಾನಕ್ಕೆ ಪ್ರತಿಷ್ಠೆ ಯಾತಕೆ
ಅನಿಮಿಷ ಮುನಿಜನ ಕೊಂಡಾಡಲ್ಯಾತಕೆ
ಘನತನವ್ಯಾತಕ್ಕೆ ಜ್ಞಾನಿ ಮನುಜನೆಂದು
ತೃಣಮಿಕ್ಕಾದದಕೆ ಸಾಧನೆ ಜನುಮವ್ಯಾತಕ್ಕೆ
ನಿನಗೆ ನೀನೆ ನೋಡು ಜ್ಞಾನಕ್ಕೆ ಶ್ರೇಷ್ಠತ್ವ
ವನಜನಾಭನೆ ತಾನೆ ಜ್ಞಾನಕ್ಕೆ ಸಿಲುಕುವ
ಚಿನುಮಯರೂಪಗಳು ತೋರಿಕೊಳುತ ಲಿಂಗ
ತನುವೆ ಪೋಗುವಂತೆ ಗುಣಾನಂತನ ಮಾಳ್ಪ
ಪ್ರಣತನಾಗಿರುವ ರಾಮಕೃಷ್ಣ ಗೋವಿಂದ ವಾ
ಮನ ಮಧುಸೂದನ ಮುಕ್ಕುಂದ ಜನಾ
ರ್ದನ ಅಚ್ಯುತಾನಂತ ನಾಮ ಉಚ್ಚರಿಸಲು
ಉಣಲುಂಟು ಉಡಲುಂಟು ಏನೇನು ಬೇಡಿದ
ಮನೋಭಿಷ್ಟೆಯು ಉಂಟು ಮಾತು ಸತ್ಯವೆ ಉಂಟು
ಕನಸಿನೊಳಾದರು ಕಾಣಿಸವು ಪಾಪ
ಗಣಗಳೆಲ್ಲ ಕೇಳಿ ಜ್ಞಾನದ ಮಹಿಮಾ
ಜನನವಿದೂರ ನಮ್ಮ ವಿಜಯ ವಿಠ್ಠಲ ನಂಘ್ರಿ
ಮನದಲ್ಲಿ ನಿಲ್ಲಿಸಲು ಉತ್ಸಾಹ ಎಂದಿಗೂ೪
ಆದಿತಾಳ
ವಿದ್ಯದ ಬಲ ಕೇಳೋ ಸುಯಜ್ಞ ಮುನಿ ಬಾಲಕ
ಶುದ್ದಾತ್ಮ ಕಾನನದಲ್ಲಿ ಪೋಗುತಿರೆ ಮಹ
ಕ್ರುದ್ಧವ ತಾಳಿ ಇಪ್ಪತ್ತೆಂಟು ಪಿಶಾಚಿಗಳು
ಮೆದ್ದೆವೆಂದು ವೇಗಾ ಹರಿದೆದ್ದು ಓಡಿಬರಲು
ಖದ್ಯೋತವರ್ನದಂತೆ ಜ್ಞಾನಿಯ ಕಾಂತಿಯಿಂದ
ಪೊದ್ದಿ ಭೀತಿಯಿಂದ ವಂದನೆ ಮಾಡಿ ನಮ್ಮ
ನುದ್ಧರಿಸು ಎಂದು ವಶವಾದರು ಕೇಳಿ
ಭದ್ರಗತಿಯ ಪಥವ ಸೇರಿದರು ಬಿಡದೆ
ಈ ಧರಿಯೊಳು ಭಕ್ಷಿಸಲು ಬಂದ ಕ್ರೂರರು
ಪದ್ಮ ನಾಭನ ಪೊಂದಿ ಜ್ಞಾನ ಸಂಪಾದಿಸಿದ
ಸದ್ಮುನಿಗೆ ಸಮಸ್ತ ಜಗತ್ತು ವಶಕರವೊ
ಸಿದ್ದಾಂತ ಪ್ರಮೇಯ ಇದೆ ಇದರಂತೆ ಚರಿಸಿದರೆ
ಇದ್ದಲ್ಲಿ ಸೌಕರ್ಯವೊ ಆವ ಮನುಜಗಾಗೆ
ಬುದ್ಧಿ ಪಾಲಿಸುವ ಪಾವನ್ನ ವಿಜಯವಿಠ್ಠಲನ್ನ
ಹೃದ್ಯದಲ್ಲಿ ಇಡಲು ನೆನೆದಂತೆ ಸೌಕರ್ಯ ೫
ಜತೆ
ಮಾತು ಮಾತಿಗೆ ಹರಿನಾಮವೆ ಗತಿ ಎನ್ನು
ಗಾತುರ ನಿರ್ಮಲಿನಾ ವಿಜಯ ವಿಠ್ಠಲ ಒಲಿವಾ೬

ಭಗವಂತನು ಸರ್ವ ಕಾಲಗಳಲ್ಲಿ

೧೧೦
ಧ್ರುವತಾಳ
ಹರಿಯ ಬಿಡದಿರು ಸತ್ಯ ºರುಷದಲಿ ನಿತ್ಯ
ಹರಿಯೆಂಬ ಕೊಂಡಾಡಿ ನಿರುತ ಪಾಡಿ
ಹರಿ ಸರ್ವೋತ್ತಮ ಎಂದು ಶರಣು ಎಂದು
ಹರಿದಾಡಿ ಕುಣಿವರು ಗುಣವೆಣಿಸುವುದು
ಹರಿಯನ್ನೇ ಪೊಂದುವುದು ಗತಿಗೆ ಸಂದುವುದು
ಹರಿಯ ಬಿಟ್ಟರೆ ಕೇಡು ನಿಮಿಷದಲ್ಲಿ ನೋಡು
ಹರಿಯ ಕೂಡಣ ದ್ವೇಷಿ ನಿತ್ಯ ನರಕವಾಸಿ
ಹರಿಗಂಡವನು ಶ್ರೀ ಹರಿಯ ಕಾಂಬುವನು
ಹರಿಯಗಾಣದವನು ಅತಿಶುದ್ಧ ಶವನೂ
ಹರಿ ಪರಮಪುರುಷ ಪುರುಷೋತ್ತಮ
ನರಸಿಂಹನಾಮ ಸಿರಿ ವಿಜಯವಿಠ್ಠಲ
ಹರಿದಿಂಬ ದುರಿತ ಕರಿಗೆ ಹರಿ ಹರಿ ಕಾಣೊ
ಹರಿಪಾದ ನೆನವನ್ನು ಮರೆಯದಿರು ಮನುಜಾ ೧
ಮಟ್ಟತಾಳ
ಮಾತಾಪಿತಾ ಗುರು ಭ್ರಾತೃ ಬಾಂಧವನು
ಪ್ರೀತನ ಪ್ರಿಯನು ದಾತನು ನಾಥನು
ಈತನು ಕಾಣೆಲವೋ ಭೂತ ಭೂತಳಕ್ಕೆ
ಭೂತಭಾವನ ನಾಮ ವಿಜಯವಿಠ್ಠಲಾ
ಜ್ಯೋತಿರ್ಮಯ ವಿಖ್ಯಾತ ಮೂರುತಿಯಿದು
ಯಾತಕೆ ಸಂಶಯವೋ ಪಾತಕ ಪೋಗಾಡು ೨
ರೂಪಕತಾಳ
ಒಂದೊಂದು ರೋಮ ರೋಮ ಕೂಪದೊಳು
ಪೊಂದಿಸಿಕೊಂಡಿಪ್ಪನಾನಂತಾನಂತರ
ವಿಂದ ಜಾಂಡಗಳೆಲ್ಲ ಬಿಂದುಗಜದ ಮ್ಯಾಲೆ
ಬಂದು ಬಿದ್ದ ತೆರದಿ ಇಂದಿರೇ ರಮಣ
ನಂದಾದಿಂದಾವ್ಯಾಕೃತಾಗಸಕ್ಕೆ ಸು
ಗಂಧವ ಪೂಸಿದಂತೆ ಲೇಪಿಸಿಕೊಂಡು
ಒಂದೆ ಮೂರುತಿಯಾಗಿ ವಿಶ್ವನೆಂದೆನಿಸಿ ಮ
ತ್ತೊಂದು ಮೂರುತಿಯಾಗಿ ಲಕುಮಿಗೆ ಪೊಳೆವ
ಅಂದವರಂತೆ ವರವನೀವನು ಶತಾ
ನಂದ ವಿಜಯವಿಠ್ಠಲ ಕಂದರ್ಪನಯ್ಯಾ ೩
ಝಂಪೆತಾಳ
ಬೊಮ್ಮನಕುಲದಲ್ಲಿ ಉತ್ಪತ್ಯವಾದನು
ತಮ್ಮಂದಿರು ಕುಂಭಶ್ರವಣವ
ಉಮ್ಮೆಯರಸನು ಅವರ ಮನೆದೈವ
ಸುಮ್ಮನಸರ ಶೆರೆಹಾಕಿ ಇಪ್ಪಾ
ಇಮ್ಮಡಿಯಾಗಿ ಸಾಗರದ ನಡುವೆ ನಗರ
ಹಮ್ಮಿಲಿ ತಿರುಗುವ ರಾವಣನ್ನ
ರಮ್ಮೆ ಅರಸನು ಅಣುವಾಗಿ ದನುಜನ
ಹಮ್ಮು ಮುರಿದು ಸುರರ ಸುಖಬಡಿಸಿದಾ
ಉಮ್ಮೆಯರಸನು ಪರಬೊಮ್ಮನಹುದೆಂದು
ಸುಮ್ಮನಿದ್ದನು ನಮಿಸಿ ವಿಜಯ ವಿಠ್ಠಲಗೆ ೪
ತ್ರಿವಿಡಿತಾಳ
ಅಣುವೆಂದನಸಲ್ಲಾ ಬಲಿಯ ದಾನವ ಬೇಡಿ
ಕ್ಷಣದೊಳು ಗಗನಾಂಗಣಕ್ಕೆ ಬೆಳೆದು
ಅಣಿಚಿ ಬಲಿಯ ತುಳಿದು ಘನ ಉಂಗುಟದಿಂದ
ತನುಜಯ ಪಡೆವಾತನು ಕಾಣಿರೋ
ಅಣುವೆ ಮಹತ್ತು ಘನವೆ ಅಣುವಾಗುವ
ಮನದಿಚ್ಛೆಲೀಲೆ ಉಪೇಂದ್ರ ವಿಜಯ ವಿಠ್ಠಲಾ ೫
ಅಟ್ಟತಾಳ
ಅಂದು ಗೋಕುಲದಲ್ಲಿ ಇಂದಿರೆ ರಮಣನು
ಒಂದೇ ಅಸಿತ ರೋಮ ನಂದನಂದನನಾಗಿ
ಬಂದು ಪುರಂದರನ ಬಿಂಕವ ಮುರಿದು ದಿಕ್ಪಾಲರ
ಮುಂದುಗೆಡಿಸಿತು ಮುದದಿಂದಲಿ ಬಲಿ
ನಂದನೆಗೊಲಿದ ಇಂದುಶೇಖರನಾ
ಮಂದಮತಿಯ ಮಾಡಿ ಖಳನ ಕರವ ತರಿದ
ಅಂದು ದೇವರೆಂಬೊ ಹರಿಯರು ಆವಾವ
ಸಂದಿಬಿದ್ದರು ಕಾಣೊ ವಿಜಯ ವಿಠ್ಠಲ ಸುರ
ನಂದ ಮೂರುತಿ ತನ್ನ ಪೊಂದಿದ ಜನರಿಗೆ
ಎಂದಿಗೆ ಕೆಡದಿಪ್ಪ ನಂದವನೀವ೬
ಆದಿತಾಳ
ರೋಮ ರೋಮ ಪರಿಪೂರ್ಣ ರೋಮಾಂಗ ಪರಿಪೂರ್ಣ
ರೋಮ ಜ್ಞಾನ ಪರಿ ಪೂರ್ಣ ಶ್ರೀಮೂರುತಿ ಪರಿಪೂರ್ಣ
ಕಾಮಾಗುಣ ಪರಿಪೂರ್ಣ ಸೀಮೆಯಲ್ಲಿ ಪರಿಪೂರ್ಣ
ಆ ಮಹಿಮ ಪರಿಪೂರ್ಣ ಸಾಮ ಸ್ತೋಮ ಪರಿಪೂರ್ಣ
ಕಾಮ ನಾಮ ವಿಜಯ ವಿಠ್ಠಲ
ಈ ಮಹಿಯೊಳಗೆ ನಿಯಾಮಕನು ತಾನಾಗಿ
ನಾಮವನ್ನು ಪೊಗಳುವಂಥ ಮನುಜರನ್ನ ಪೊರೆವ ೭
ಜತೆ
ಅಹಂಕಾರವನು ಬಿಟ್ಟುದೇಹ ದೇಹಿ ಎಲ್ಲಾ
ಮಹಬಲ ವಿಜಯ ವಿಠ್ಠಲ ಎಂದು ಗತಿ ಗಾಣೂ ೮

ಬ್ರಹ್ಮ ದೇವರ ಐವತ್ತೊಂದನೆಯ ವರ್ಷದಲ್ಲಿ

೯೧
ಧ್ರುವತಾಳ
ಹರಿಯಾರ್ಚನೆಯ ಮಾಡು ಹರುಷದಿಂದಲಿ ಮನವೆ
ನಿರುತ ಯೋಚಿಸು ನಿನ್ನೊಳಗೆ ನೀನು
ಧರಣಿ ಮೇಲಿದ್ದ ಪುಷ್ಪಫಲ ಉದಕಾದಿಯಿಂದ
ಪರಿಪರಿ ಪೂಜೆಯನ್ನು ಮಾಡಿದರೂ
ಹಿರಿದಾಗಿ ಜ್ಞಾನ ನಿನಗೆ ಪುಟ್ಟದು ಕಾಣೊ ನಿಂ
ದಿರದು ಈ ಪುಣ್ಯ ಮೇಲುಗತಿ ಮಾರ್ಗಕೆ
ಬರಿದಾಗಿ ಪೋಗುವುದು ಸಂತತ ತಿಳಿವುದು
ಹರಣಾ ಬಳಲಿಪಲಾಗದು ಸುತ್ತಿ ಸುತ್ತಿ
ಕುರುಡನ್ನ ಕೈಯ ಪಿಡಿದು ಕುರುಡ ಪೋದಂತೆಯೊ
ಪರಮ ಭಕುತಿ ಜ್ಞಾನ ವೈರಾಗ್ಯವ
ದೊರಿಯದೆ ಬಗೆ ಬಗೆ ಪೂಜಿಸಿ ಹಾರಿದರು
ಸ್ಪರುಶ ವಾಗದು ಕಾಣೊ ಪುಣ್ಯ ಜನರ
ಸಿರಿ ಸತ್ವ ವಿಡಿದು ಗುಣಿಸು ಶನೈಶ್ವರ ತತ್ವ
ಪರಿಯಂತ ಹರಿವ್ಯಾಪ್ತಿಗಲ್ಲಿಗಲ್ಲಿ
ಪರಮರೂಪಗಳುಂಟು ಒಂದಾನಂತವಾಗಿ
ಮಿರುಗುತಿವೆ ನೋಡು ಭೇದವಿಲ್ಲಾ
ಸುರಗಣನುತ ವಿಜಯ ವಿಠ್ಠಲರೇಯನ
ಚರಣಾರ್ಚನೆ ಮಾಡಲು ಸರ್ವ ಲೋಕವೆ ತೃಪ್ತಿ ೧
ಮಟ್ಟತಾಳ
ಒಂದು ಬಿಂದೋದಕ ಒಂದು ತುಲಸಿ ಪತ್ರ
ಒಂದು ಫಲವು ಮತ್ತೊಂದು ಮಂಗಳಾರ್ತಿ
ಒಂದು ಧೂಪಾರತಿ ಒಂದು ಚರವು ಅನ್ನ
ಒಂದು ಸ್ತೋತ್ರದ ಪಠಣೆ
ಒಂದು ವಂದನೆ ಒಂದೇ ನಮಸ್ಕಾರವನ್ನು
ನಂದದಿಂದಲಿ ಮಾಡೆ ಕುಂದದೆ ಶ್ರೀ ಹರಿ
ಮಂದಹಾಸದಲಿಂದ
ಚಂದವಾಗಿ ಒಲಿದು ನಿಂದಿರದೆ ಕೊಂಬ
ಸಿಂಧುಶಯನ ನಮ್ಮ ವಿಜಯ ವಿಠ್ಠಲರೇಯನ
ಒಂದು ಮೂರುತಿಗೀಯೆ ಬಲು ರೂಪಕೆ ಉಂಟು ೨
ತ್ರಿವಿಡಿ ತಾಳ
ಒಬ್ಬ ಮನುಜ ತಾನು ಸಭೆಯೊಳಗೆ ಕುಳಿತು
ಶಬ್ದ ನುಡಿದರೆ ಸರ್ವರು ಕೇಳಿದಂತೇವೆ
ಅಬ್ಜನಾಭನ್ನ ಒಂದು ಮೂರುತಿಗೆ
ತಬ್ಬಿಬ್ಬ್ಗು ಕೊಳದಲೆ ಉದಕಗಳಿಂದ
ಉಬ್ಬಿ ಉತ್ಸಹದಲ್ಲಿ ಪೂಜೆಯ ಮಾಡಿದರೆ
ದಭ್ರ ಬಿಡದಲೆ ಹರಿ ಸರ್ವರೂಪಗಳಿಂದ
ನಿಬ್ಬಡೆಯಾಗಿ ಮೊಪ್ಪುಗೊಂಡು ಕೃಪೆಯಿಂದ
ಹಬ್ಬಿದ ಕರ್ಮಗಳಿಂದ ಕಡೆಗೆ ಮಾಡಿ
ಒಬ್ಬಗೆ ಗತಿಯನ್ನು ಕೊಡುವ ವೇಗದಲ್ಲಿ
ಶಬ್ಧಗೂೀಚರ ನಮ್ಮ ವಿಜಯ ವಿಠ್ಠಲನಂಘ್ರಿ
ಅಬ್ಜವ ನೆನದವಂಗೆ ಆವಾಗ ಫಲವಕ್ಕು ೩
ಅಟ್ಟತಾಳ
ಪದೋಪದಿಗೆ ನಿನ್ನ ಹೃದಯದೊಳಗೆ ಧ್ಯಾನ
ಮುದದಿಂದ ಮಾಡೋದು
ಪದುಮನಾಭನ ವ್ಯಾಪ್ತಿ ಅಖಂಡದಲ್ಲಿ ಉಂಟು
ಅದರ ತರುವಾಯ ಸಿರಿ ಅಜಭವ ಇಂದ್ರ
ಮದನ ವಿಡಿದು ಶನೇಶ್ವರ ವ್ಯಾಪ್ತಿ ತಿಳಿದು ನಿ
ಲ್ಲದೆ ಇವರ ಪೂಜೆ ಆವಾವ ಬಗೆಯಿಂದ
ಉದಯಾಸ್ತಮಾನ ಪರಿಯಂತ ರಚಿಸಲು
ಇದೆ ಇದೆ ತತ್ವೇಶರ ವ್ಯಾಪ್ತಿ ಪರಿಯಂತಾ
ಸದಮಲವಾಗಿ ಮುಟ್ಟುವದೆಂದು ಧ್ಯಾನಿಸಿ
ಪದವಿಗೆ ಸೋಪಾನ ವೇಗದಿಂದಾಗೋದು
ಚದುರ ಮೂರ್ತಿ ನಮ್ಮ ವಿಜಯ ವಿಠ್ಠಲರೇಯ
ನೆನೆದರೆ ಕೈಕೊಂಡು ಸರ್ವರಿಗೀವಾ ೪
ಆದಿತಾಳ
ಉಣಲಿ ಉಡಲಿ ಭೂಷಣಗಳು ಧರಿಸಲಿ
ಕುಣಿಯಲಿ ನಡಿಯಲಿ ಗುಣಗಳು ಎಣಿಸಲಿ
ತೃಣ ಮೊದಲಾದಲ್ಲಿ ಯೋಚನೆ ಮಾಡಲಿ
ಇನಿತು ಪೇಳಿದವರ ಸ್ಮರಣೆ ಮರಿಯದಿರು
ಜನರೊಳಗಿಪ್ಪ ನಮ್ಮ ವಿಜಯವಿಠ್ಠಲ ರೇಯನ ೬
ಶನಿಶನಿಯಲ್ಲಿ ತಿಳಿದು ಮುಕುತಿ ಸುಖಬಡು
ಜತೆ
ಹಗಲಿರಳು ಚಿತ್ತ ವ್ಯಾಪ್ತ ಮಾರ್ಗದಲ್ಲಿಡೂ
ತ್ರಿಗುಣಾತೀತ ನಮ್ಮ ವಿಜಯ ವಿಠಲ ಒಲಿವಾ

ವೇದಾಂತವನ್ನರಿತು, ಕಠಿಣಕರ್ಮಗಳನ್ನಾಚರಿಸುತ್ತಿದ್ದರೂ

೧೩೭
ಧ್ರುವತಾಳ
ಹರಿಯೆ ಜಗದದೊರಿಯೆ ನಿರುತ ಭಾಗ್ಯದ ಶಿರಿಯೆ
ದುರಿತಗಜಕೆ ಸರಿಯೆ ದನುಜಾರಿಯಾ
ಸ್ಮರಣೆಯ ಮಾಡಲರಿಯಾ ಅರಿಯದನರಗುರಿಯ
ಕರೆಸಿ ಯಮ ಪರಿಪರಿಯಾದಿವರುರಿಯಾ
ನರಕಾದಿಗೆ ಗುರಿಯಾನಿರಿಸುವನು ಘನಸಿರಿಯಾ
ವರಕಲ್ಪಕ್ಕೆ ದೋಷಕಾರಿಯಾ
ದುರತಿಕ್ರಮನಾಮ ವಿಜಯ ವಿಠ್ಠಲನ್ನ
ಮರಿಯಾದಿರೆ ವಿರಿಂಚಿ ದುರ್ಲೇಖ ಬರಿಯಾ ೧
ಮಟ್ಟತಾಳ
ಸ್ನಾನ ಜಪತಪವು ಮೌನವನುಷ್ಠಾನ
ದಾನ ಪರ್ವಣೆ ಪುಣ್ಯ ಜ್ಞಾನಸುಯಾಗಗಳು
ನಾನಾ ಯಾತ್ರಿಗಳು ಏನೇನು ಕರ್ಮನಿ
ಧಾನದಿಂದಲಿ ಮಾಡೆ ಶ್ರೀ ನಾರೆಯಣನ
ಧ್ಯಾನ ನಾಮಂಗಳು ತಾನುಡಿಯದಿರೆ ಕಾಣರು ನಿರ್ವಾಣ
ಅನಾದಿ ನಿಧನ ವಿಜಯ ವಿಠ್ಠಲನ್ನ
ನೀನೆ ಎನ್ನದವನು ಜ್ಞಾನಿಯಾದರೇನು ೨
ತ್ರಿವಿಡಿತಾಳ
ಹಲವು ವೇದಗಳೋದಿ ಹಲವು ಕೇಳಿದರೇನು
ಇಳೆಯೊಳು ಯತಿಯಾಗಿ ಚರಿಸಲೇನೂ
ಬಲು ವಿವೇಕ ಮತಿ ಸತತವಾದರು ತನ್ನ
ಒಳಗಿದ್ದ ನರಹರಿಯ ಗೆಳಿಯನೆಂದರಿಯಾದೆ
ಕಲಿ ಮಾನವನು ಧರ್ಮಾವಳಿ ಎಸಗಿದರೇನೂ
ಫಲವಿಲ್ಲವೊ ಬಹುಕಾಲ ಬಳಲಿದರೂ
ಬೆಳೆದ ಗಿಡದ ತುದಿಗೆ ಫಲ ಪುಟ್ಟಿದಂತೆಯೊ
ಕುಲಟೆ ಮಕ್ಕಳ ಪಡೆದು ನೆಲೆಯಾಗದಂತೆ
ಜಲಜನಾಭನ ಭಕ್ತಿ ಮಿಳಿತವಿಲ್ಲದ ಧರ್ಮ
ಮಳಲೋಳು ಗೋಕ್ಷೀರ ಎರದಂತೆ ಯಾಗುವುದೂ
ಚಲುವ ಗದಾಗ್ರಜ ವಿಜಯ ವಿಠ್ಠಲನ್ನ
ಸಲೆ ನಾಮ ಸ್ಮರಿಸದಲೆ ಸಂಸಾರ ಹರವಿಲ್ಲ ೩
ಅಟ್ಟತಾಳ
ಹರಿನಾಮದಲಿಂದ ಪರಗತಿಯಾದಂತೆ
ಧರೆಯೊಳಗುಳ್ಳ ವಿಸ್ತಾರ ಕರ್ಮವ
ಮರೆಯದೆ ವಿರಚಿಸಿ ಇರಳು ಹಗಲುಯಿರೆ
ಕಿರಿಯದೋಷಂಗಳು ತೆರಳಿದಂತೆ ಪೋಗಿ
ತಿರುಗಿ ಸೇರಿಕೊಂಡು ಭರಿತವಾಗಿಪ್ಪವೊ
ನರನು ತಿರುಗುತ ಕೆಸರನು ತುಳಿದು ಬಂದು
ಮರಳೆ ಕೆಸರಿನಲ್ಲಿ ಚರಣವು ತೊಳೆದಂತೆ
ಹಿರಿದಾಗಿ ಕರ್ಮವ ಹರುಷದಿಂದಲಿ ಮಾಡೆ
ಪರಿ ಪೂರ್ಣವಾಗದೆ ದುರಿತ ಸಂಘಟಿಸೋದು
ಸುರಧೀಶ ವಿಕ್ರಮ ವಿಜಯ ವಿಠ್ಠಲನ್ನ
ಸ್ಮರಣೆ ಸರ್ವಕ್ಕೆ ಪ್ರಾಯಶ್ಚಿತ್ತ ಭೂತಾ ೪
ಆದಿತಾಳ
ದ್ವೇಷದಲಿಯಾಗಲಿ ಪರಿಹಾಸ್ಯದಲಿಯಾಗಲೀ
ಭಾಸದಲಿ ಆಗಲಿ ಆಭಾಸದಲ್ಲಿ ಆಗಲೀ
ಕ್ಲೇಶದಲಿ ಆಗಲಿ ಅಕ್ಲೇಶದಲ್ಲಿ ಆಗಲೀ
ಮೀಸಲಾದ ಅಜ್ಞಾನದಲ್ಲಿ ಆಗಲೀ
ಆಶೆಯನ್ನು ಬಿಟ್ಟು ವಿಶೇಷ ಭಕುತಿಯಿಂದಲಿ
ದಾಸನೆಂದು ಕೈ ಮುಗಿದು ನೀ ಸಲಹು ಹರಿ ಎನಲು
ಏಸೇಸು ಜನ್ಮದ ಅಘನಾಶವಾಗುವುದು
ಈಶ ನಹುಷ ವಿಜಯ ವಿಠ್ಠಲ ಅಶೇಷ
ದೋಷದೂರ ವಾಸವಾಗಿ ಹೃದಯದೊಳು
ವಾಸನಾಮಯನೆನಿಸುವ ೫
ಜತೆ
ಹರಿ ನಾಮದಿಂದಲಿ ಸಂಸಾರ ನಿವೃತ್ತಿ
ಸ್ಥಿರವೆಂದವರ ಬಿಡನು ಸುತಪ ವಿಜಯ ವಿಠ್ಠಲ ೬

ಸನ್ಯಾಸಿ-ಗುರುಗಳಿಂದ ಪ್ರತಿ ಏಕಾದಶಿಯ ದಿನ

೧೩೮
ಧ್ರುವತಾಳ
ಹರಿಯೆ ನಿನ್ನಾಧೀನ ಸಕಲ ಜ್ಞಾನೇಂದ್ರಿಯಂಗಳು
ಹರಿಯೆ ನಿನ್ನಾಧೀನ ಸಕಲ ಕರ್ಮೇಂದ್ರಿಯಂಗಳೂ
ಹರಿಯೆ ನಿನ್ನಾಧೀನ ಪಂಚ ಭೂತಾತ್ಮಗಳು
ಹರಿಯೆ ನಿನ್ನಾಧೀನ ಮನ ಚಿತ್ತಾದಿಗಳು
ಹರಿಯೆ ನಿನ್ನಾಧೀನ ಸಕಲ ಚೇತನವು
ಹರಿಯೆ ನಿನ್ನಾಧೀನ ಸರ್ವಚೇಷ್ಟೆಗಳು
ಹರಿಯೆ ನೀನೇಮಿಂದ ಕಾರಣ ಎನ್ನ
ಶರೀರದೊಳಗೆ ಎಲ್ಲ ಭರಿತವಾಗಿದೆ
ಪೊರಗಿದ್ದ ಸರಕು ಬೆಲೆ ಮಾಡಿದಂತೆ ಇದ್ದ
ಸರಕು ಧನವನಿತ್ತು ತುಂಬಲಿಲ್ಲ
ಶರಣರ ಮೊರೆಕೇಳೂ ವಿಜಯ ವಿಠ್ಠಲರೇಯ
ಮರೆದು ಬಿಡುವನಲ್ಲ ಬಿರಿದುಳ್ಳ ದೇವನೆ ೧
ಮಟ್ಟತಾಳ
ಕುಣಿಸಿದರೆ ಕುಣಿವೆ ನಗಿಸಿದರೆ ನಗುವೆ
ಮಣಿಸಿದರೆ ಮಣಿವೆ ಅಳಿಸಿದರೆ ಅಳುವೆ
ಉಣಿಸಿದರೆ ಉಣುವೆ ಉಡಿಸಿದರೆ ಉಡುವೆ
ನೆನಿಸಿದರೆ ನೆನಿವೆ ಮನುಜ ವೇಷ ಪ್ರಿಯ ವಿಜಯ ವಿಠ್ಠಲ ಹರಿ
ನೆನವಿತ್ತರೆ ನೆನೆವೆ ದಣುವಿತ್ತರೆ ದಣುವೆ ೨
ತ್ರಿವಿಡಿತಾಳ
ತಪುತ ಮುದ್ರಿಗಳಿಲ್ಲ ದಂಥಮಾನವ ನಿನ್ನ
ಅಪರೋಕ್ಷಕರಿಸಿ ಪ್ರತ್ಯಕ್ಷ ಕಾಣುತ್ತಿರಲು
ಉಪಚಾರವನು ಮಾಡೆ ಜನುಮಾಂತರಕೆ ನಾನು
ತಪಸಿ ಆದರು ಅವಗೆ ನಮಿಸೆನೊ ನಮಿಸೆನೋ
ಆಪವರ್ಗವಾಗಲಿ ಸರ್ಗವಾಗಲಿ ಯಮನು
ಕುಪಿತದಲಿ ಒಯಿದು ತಪಿಸಿದರಾದರು
ಕಪಿಯ ಕೈಯಲ್ಲಿ ಮಣಿಯ ಜಪಮಾಲೆ ಸಿಕ್ಕಂತೆ
ತಪುತ ಮುದ್ರಹೀನ ನಿನ್ನ ನೋಡಿದರೇನು
ಗುಪಿತ ಮಹಿಮ ನಮ್ಮ ಒಡೆಯ ವಿಜಯ ವಿಠ್ಠಲರೇಯ
ಕೃಪೆ ಮಾಡಿದರೆ ಲೇಸೆ ಮಾಡದಿದ್ದರೆ ಲೇಸೆ ೩
ಅಟ್ಟತಾಳ
ಶಿವನ ತ್ರಿಶೂಲ ವೈಶ್ರವಣನ್ನ ಖಡ್ಗವು
ಜವನ ದಂಡವು ವೃದ್ದ ಶ್ರವಣನ ವಜ್ರಾಯುಧ
ಪವನಸಖನ ಶಕ್ತಿ ನವವರುಣನೆ ಪಾ
ಶವನು ಕೋಪದಲಿ ದಾನವನು ಪಿಡಿದರುಂ ತಾ
ದಿವಿಜರು ಮಿಕ್ಕಾದ ನಿವಹ ಕೈದುಗಳಿಂದ
ತವಕದಿಂದಲಿ ಬಂದು ಅವಘಡಿಸಿದರೆ ನಾ
ನವಕೆ ಭೀತಿಯ ಬಡೆ ಪವನ ಮತವನು ಮಾನವನ ತೋರಿದರೆ
ಅವನ ವಹಿಸಿಕೊಂಡು ಇವರೆಲ್ಲ ಬರಲ್ಯಾಕೆ
ಪವಮಾನಗತಿ ಪ್ರಿಯ ವಿಜಯ ವಿಠ್ಠಲ ಕೃಷ್ಣ
ಅವರ ಪ್ರೇರಕ ನಿನ್ನವರ ಪಾಲಕ ನೀನೆ ೪
ಆದಿತಾಳ
ಹರಿ ಮುನಿದರೆ ಗುರು ಪರಿಹರಿಸುವನಯ್ಯಾ
ಗುರು ಮುನಿದಡೆ ಹರಿಕಾಯಲರಿಯನೆಂದು ಈ
ಚರಾಚರದಲಿ ಇದೆ ಸ್ಥಿರವಾಗಿ ಇರಲಿಕ್ಕೆ
ಹರಿ ನಿನ್ನ ನೆನೆನೆನೆದು ವೃಕೋದರನ ನೆನೆಯದವ
ಹಿರಿಯನಾದರೆ ಏನು ಕಿರಿಯನಾದರೆ ಏನು
ಥರವಲ್ಲ ಮನ್ನಣೆಗೆ ವರಕೆ ದೂರದು ಕಾಣೊ
ಸರಿವೆ ಆವನಲ್ಲಿ ಕುಳ್ಳಿರೆ ಮನವಾಗದು
ಕರುಣವಾರಿಧಿ ನಮ್ಮ ವಿಜಯ ವಿಠ್ಠಲರೇಯ
ಗುರುವೆ ಪರನೆಂದು ಬಿರಿದು ಡಂಗುರ ಹೊಯಿವೆ ೫
ಜತೆ
ಪವನನ್ನ ಮತ ಪಿಡಿದು ನಿನ್ನ ಶ್ರವಣ ಮಾ
ಡುವರ ಸಂಗ ಪಾಲಿಸು ನಿತ್ಯ ವಿಜಯವಿಠ್ಠಲರೇಯಾ ೬

ಹರಿ ಸರ್ವೋತ್ತಮನೆಂಬ ವಿಚಾರವನ್ನು

೧೩೯
ಧ್ರುವತಾಳ
ಹರಿಯೇ ಸರ್ವೋತ್ತಮ ಹರಿಪರ ದೇವತಿ
ಹರಿಗುಣಪರಿಪೂರ್ಣಂತರ ಬಾಹಿರ ವ್ಯಾಪ್ತಾ
ಹರಿಪರ ತತ್ವ ಸಿರಿಯರಸಾ ಪರಮೇಷ್ಟಿ ಜನಕಾ
ಹರ ಸುರ ಮುಖ್ಯ ಭೂಸುರರ ಪರಿಪಾಲಾ
ಹರಿ ಇಲ್ಲವೆಂದವ ದುರುಳ ಮೂರ್ಖನು ಪೇಳೆ
ಸರಿ ಎಂದು ಸುಮ್ಮನೆ ಇರಲಾಗದು ವೀರಾ
ಪರಮ ಡಿಂಗರಿಗರು ಹಿರಿದಾಗಿ ಕೂಗಿ ಡಂ
ಗುರುವ ಹೊಯ್ದು ಅಬ್ಬರ ವಚನದಿಂದಾ
ಸರಿ ಮಿಗಿಲಿಲ್ಲೆಂದು ಹರಿ ಹರಿದಾಡುತ್ತ
ವರ ಅಟ್ಟಹಾಸದಲ್ಲಿ ಕರಗಳ ಹೊಯ್ದು ಚ
ಪ್ಪರಿಸಿ ಎರಡು ಭುಜಾ
ಭರದಾ ಸಿಡಿಲು ಧರೆಗೆರಗಿದ್ದಂತೆ ಬೊ
ಬ್ಬಿರಿದು ನಾದವ ಮಾಡಿ ಅರೆಮನರಾಗದೆ
ಹರಣ ಬಿಚ್ಚಿಡದಲೆ
ಹರಿ ಸರ್ವೇಶ್ವರ ವಿಜಯ ವಿಠ್ಠಲ ನಿತ್ಯಾ
ಶರಣರಿಗೊಜ್ರ ಪಂಜರವಾಗಿ ಪೊರೆವಾ ೧
ಮಟ್ಟತಾಳ
ವರಣಾಶ್ರಮದಲ್ಲಿ ಹಿರಿದು ಭೂಸುರ ಜನ್ಮಾ
ಬರಲದರ ಒಳಗೆ ಮರುತ ಮತಕೆ ಬಂದು
ಚರಿಸುವ ಸುಕೃತವು ಸುರರೆಣಿಸಲಳವೆ
ಹರಿ ವಿಷಯಕೆ ನಿಮ್ಮ ಹರಣವಿಪ್ಪನಕ
ಹರಿ ಭಕ್ತರ ಪದಕೆ ಶರಣಾಗತರಾಗಿ
ನಿರುತ ಧರ್ಮಾಧ್ಯಕ್ಷಾ ವಿಜಯ ವಿಠ್ಠಲನ್ನ
ಚರಣಾಂಗುಟವೆ ಸುರರ ಮುಕುಟವೆನ್ನಿ ೨
ತ್ರಿವಿಡಿತಾಳ
ಹರಿ ಮೂರ್ತಿ ವಿರಹಿತ ಅನ್ಯಮೂರ್ತಿಯ ನೋಡೆ
ಹರುಷವಾಗದು ಕಾಣೊ ಕಣ್ಮನಕೆ
ಹರಿಪಾದೋದಕವಲ್ಲದೆ ಇತರೋದಕದಿಂದ
ಪರಿಶುದ್ಧವಾಗದು ಮನುಜರಿಗೇ
ದುರುಳ ದೋಷಂಗಳು ಪರಿಹಾರವಿಲ್ಲೆಂದು
ಕರತಳದೊಳು ಒಂದು ಉರಿಯ ಗುಂಡನು ತಾಳಿ
ಉರಗನ ಪೆಡೆ ನಿರ್ಭಯವಾಗಿ ಧರಿಸಿರೊ
ಪುರುಷನಾಮ ಸಿರಿ ವಿಜಯ ವಿಠ್ಠಲನ್ನ
ಸ್ಮರಿಸಲ್ಲದೆ ಮಿಕ್ಕ ಸುರರು ಬಂದೊಲಿಯರು ೩
ಅಟ್ಟತಾಳ
ಸೋಮಕನಾ ಕೊಂದು ಕಮಲಾಸನನ ಕಾಯಿದೆ
ಸೋಮಪಾನವೆರೆದಮರರ ಸಾರಿದಾ
ಹೇಮಾಗಣ್ಣನ ಕೊಂದು ಭೂಮಿಯನುಳುಹಿದಾ
ನೃಮೃಗರೂಪವಾಗಿ ಆ ಮಗುವಿಗೊಲಿದಾ
ಭೂಮಿಯನಳೆದು ಸುತ್ರಾಮಗೆ ಪುರವಿತ್ತಾ
ಜಾಮದಗ್ನಿಯಾಗಿ ಭೀಮನೃಪರ ಗೆದ್ದಾ
ರಾಮಮೂರುತಿಯಾಗಿ ತಾಮಸರ ಮುರಿದಾ
ಕಾಮ ಜನಕನಾಗಿ ಭೂಮಿ ಭಾರವನಿಳುಹಿದಾ
ವ್ಯೋಮಕೇಶನ ಸಂಗ್ರಾಮವ ಗೆಲಿಸಿದಾ
ಈ ಮಹಿಯೊಳು ಲಲಾಮರಾವುತನಾದಾ
ರೋಮ ರೋಮ ಕೋಟಿ ತಾಮರಸ ಜಾಂಡಾ
ಸೋಮಪನಾಮ ಸಿರಿ ವಿಜಯ ವಿಠ್ಠಲ ಸಾರ್ವ
ಭೌಮನು ಸಕಲ ಉದ್ದಾಮನು ಈಶನೊ ೪
ಆದಿತಾಳ
ಏಕೋಮೇವ ಹರಿಯೆಂದು
ಲೋಕದೊಳು ವೇದಂಗಳು
ವಾಕು ಪೇಳುತಿವೆ ನೋಡು
ನಾಕಾದಿ ಮನುಜರಲ್ಲಿ
ನೂಕು ನೂಕು ದುರವರ್ತಿ
ಸಾಕು ಸಾಕು ಕುಹಕ ಬುದ್ಧಿ
ಕಾಕನಾಗದಿರವಿ
ವೇಕ ಮಾರ್ಗವನ್ನು ತೊರೆದು
ಏಕ ಪಾದಾನಾಮ ಪ್ರೀತ ವಿಜಯ ವಿಠ್ಠಲ ಸುಪ್ರ
ಭಕ್ತ ಹೃದಯ ಕಮಲನೆಂದು ಪೊಗಳೂ ೫
ಜತೆ
ಹರಿಯೆ ಜಗಕೆ ಕರ್ತಾ ಹರಿಯೆ ಜಗಕೆ ಭರ್ತಾ
ಹರಿ ಸರ್ವಸಾಹಾ ವಿಜಯ ವಿಠ್ಠಲನೆ ಶಕ್ತಾನೆನ್ನಿ ೬

ಹರಿದಾಸರಾದವರು ನಿಯತವಾಗಿ ತಪ್ತ

೧೪೦
ಧ್ರುವತಾಳ
ಹರಿಯೇ ಸಿರಿಯರುಣ ಸರಸಿಜದಳದವೊಲು
ಚರಣಯುಗಳವನ್ನು ಶಿರದಲ್ಲಿಟ್ಟು
ಮರುತ ಮತಾಂಬುಧಿಯೊಳಗಿದ್ದು ತತ್ವ ತಾ
ತ್ಪರಿಯ ತಾರತಮ್ಯಂಗಳನು ಗ್ರಹಿಸಿ
ಹರಿ ಪರಾತ್ಪರನೆಂದು ಪರಿ ಪರಿಯಲ್ಲಿ ತಿಳಿದು
ಪರಿಶುದ್ಧನಾದ ವೈಷ್ಣವನೆನಿಸೀ
ಪರುಷೇಶ್ವರನಾಮ ವಿಜಯ ವಿಠ್ಠಲನಂಘ್ರಿಗೆ
ಎರಗು ಬೆರದಾಡು ವಿವರಗಳ ಬೇಡು ೧
ಮಟ್ಟತಾಳ
ಸಿರಿ ಒಲಿವಳು ಪರಮೇಷ್ಟಿ ಒಲಿವನು
ಹರ ಸುರಪಾದ್ಯರು ಹರುಷದಿ ಒಲಿವರು
ನರನುತ್ತಮನೆಂದು ಚರಿಪರಿವನಲ್ಲಿ
ನರ ವಿಜಯ ವಿಠ್ಠಲರಘಳಿಗೆ ಒಲಿಯೆ
ದುರಿತ ದುರ್ಗುತಿ ಪರಿಹಾರವಾಗೋವು ೨
ತ್ರಿವಿಡಿತಾಳ
ಹರಿದಾಸರೊಂದು ಚರಣವಿಟ್ಟ ಭೂಮಿ
ಕುರುಕ್ಷೇತ್ರಕಧಿಕವೆಂದಿನಿಸುವದು
ಹರಿದಾಸರ ಪಾದಧೂಳಿ ಸೋಂಕಲು ಮಹ
ದುರಿತ ಶೈಲಂಗಳು ಉರುಳುವುವೋ
ಹರಿದಾಸರ ಸಂಗ ನಿರುತ ನಿರ್ಮಳಾಂಗ
ಸುರರಿಗಧಿಕ ಮುಪ್ಪುರದೊಳಗೆ
ಪುರುಷನಾಮಕ ರಂಗ ವಿಜಯ ವಿಠ್ಠಲನ್ನ
ಶರಣರ ನಂಬಲು ಸಂಸಾರಹರವೊ ೩
ಝಂಪೆತಾಳ
ಮುದ್ರೆ ಇಲ್ಲದ ಬದುಕು ಎಲ್ಲೆ ಜೋಕೆ ಇಲ್ಲ
ಮುದ್ರೆ ಇಲ್ಲದ ಹೊನ್ನು ಹಣಕಾಸು ಸಲ್ಲವು
ಮುದ್ರೆ ಇಲ್ಲದ ರಾಜ ಪಟ್ಟಕ್ಕೆ ಸಲ್ಲನು
ಮುದ್ರಾಂಕಿತರಹಿತ ಮಾನವನು ದಾನವನು
ಮುದ್ರೆ ಇಲ್ಲದೆ ಸಮುದ್ರನಾದರೇನು
ಭದ್ರಗತಿಗೆ ಸಲ್ಲ ಎಂದಿಗೆ ಕಾಣಿರೋ
ಸದೃತ ನಾಮ ಶ್ರೀ ವಿಜಯ ವಿಠ್ಠಲರೇಯನ
ಮುದ್ರೆ ಧರಿಸದವನು ಕ್ಷುದ್ರ ಅಭದ್ರ ೪
ರೂಪಕತಾಳ
ಯತಿಯಾದರೇನು ತಪುತ ಮುದ್ರೆ ಇಲ್ಲದಿರೆ
ಮತಿವಂತರು ನಮಿಸುವುದು ಸಲ್ಲ
ಸತತದಿ ಜಪಿಸಿದರು ಮತಿ ಇಲ್ಲದ
ನಿತ್ಯ ಚತುರವಾಗಿದ್ದ ನರಕವನುಂಡು
ಪತಿತಜೀವಿಯಾಗಿ ಗತಿತಪ್ಪೆ ಭಾರತಿ
ಪತಿ ಗದೆಯಿಂದ ಪ್ರಚೂರ್ನವಾಗಿ
ಶತಕಲ್ಪವಾದರು ನಿತ್ಯ ನರಕದಲ್ಲಿ
ಅತಿಶಯ ತಾಡನೆಯಿಂದ ತನ್ನ
ತತಿಸಹಿತ ಇಪ್ಪರು ಶ್ರುತಿ ಆರ್ಥ ಪ್ರಮಾಣ
ಇತರ ಸಂಶಯ ಬಿಟ್ಟು ಮುದ್ರೆ ಧರಿಸೆ
ಶತನಾಮ ವಿಜಯ ವಿಠ್ಠಲನ ಮುದ್ರಾಂ
ಕಿತರಲಿ ಮುಕುತಿ ಕುಮತಿಯನ್ನು ಬಿಡು ಬಿಡು ೫
ಅಟ್ಟತಾಳ
ವೀರ ವೈಷ್ಣವನಾಗೆ ದುರಿತವೆ ಪರಿಹಾರ
ಮಾರಿಗಳು ನಿಂದಿರದೆ ಪೋಗುವುವು
ಸಾರಿಸಾರಿಗೆ ನಿಜದಾಸರನು ಸಾರೆ
ಸಾರೆ ಪರಮಗತಿ ಸಂಸಾರ ವಾರಿಧಿ
ಪಾರು ಗೈಸುವುದು ಆಲಸಮಾಡದೆ
ಧಾರುಣಿಯೊಳು ಹರಿಶರಣರಿಗೆ ಪಡಿಯೆ
ಭಾರ ಭೃತ್ಯನಾಮ ವಿಜಯ ವಿಠ್ಠಲನ್ನ
ಸೇರಿದವರ ಪಾದಸೇರಲು ನಿರ್ವಾಣ೬
ಆದಿತಾಳ
ಅರಸು ಒಲಿದರೆ ಪರಿವಾರ ಕರಸಾದೆ
ಅರಸಿ ಕೊಳುತ ಬಂದು ಅವನೊಡನೆ ಇದ್ದು
ಚರಿಸುತಲಿ ನರಹರಿಯಾರಾಧನಿಗೆ
ಪರಿಪೂರ್ಣವಾಗಿ ಸಾರಥಿಯಂತೆ ನಡಿಸುವರು
ವರಾಹನಾಮಾ ಶ್ರೀ ವಿಜಯವಿಠ್ಠಲನ್ನ
ದೊರೆತನದಾಳುಗಳ ಭಾಗ್ಯವಿನ್ನೆಂತೋ ೭
ಜತೆ
ಹರಿಸರ್ವೋತ್ತಮನೆಂದು ಅರಿದ ದಾಸರಿಗೆ ನಮಿಸು
ವರಮೋಹ ವಿಜಯವಿಠ್ಠಲನು ಒಡನೆ ಇಪ್ಪ ೮

ಶ್ರೀಹರಿಯ ಸರ್ವತಂತ್ರ ಸ್ವಾತಂತ್ರ್ಯ, ವ್ಯಾಪ್ತಿ,

೧೪೧
ಧ್ರುವತಾಳ
ಹರಿಯೇ ಸ್ವತಂತ್ರ ನಿರ್ದೋಷ ಶಿಖಾಮಣಿ
ಪರದೈವ ಸರ್ವವ್ಯಾಪ್ತ ಬಲು ಸುಂದರಾ
ವರ ಸತ್ಯ ಸಂಕಲ್ಪ ಅಪ್ರಾಕೃತ ಶರೀರಾ
ಪರಮ ಸ್ವರೂಪಾಲಂಕಾರ ಕರುಣಾಜಲಧಿ
ನಿರ ವಿಶೇಷ ನಿರ್ಭಿನ್ನ ಮೂಲಾವತಾರದಲ್ಲಿ
ಸರಸಿಜಜಾಂಡ ಪ್ರೇರಕ ಸರ್ವರಾಧಾರಾ
ಸಿರಿ ಸಮೇತ ಪ್ರಳಯರಹಿತ ಸಂಪೂರ್ಣ ವಿಚಿ
ತ್ತರ ವಿಜ್ಞಾನರಾಶಿ ವಿಶ್ವಮೂರ್ತಿ
ಸುರ ನರೋರಗ ದಾನವ ತೃಣಾದಿ ಜೀವಕ್ಕೆ
ನಿರುತ ಪ್ರೇರಣೆ ಮಾಡಿ ಅವರವರಾ
ಪರಿಯಂತೆ ಅನಾದಿಯಿಂದ ಎಲ್ಲಕರ್ಮವಿ
ಸ್ತರಮಾಡಿ ಜೀವರಿಂದ ಮಾಳ್ಪ ಶಕ್ತಾ
ಅರರೆ ಈತನ ಯುಕ್ತಿಗ್ಯಾರು ಪ್ರತಿಕೂಲವು
ಸರಿಬಂದ ತೆರದಲ್ಲಿ ಶೋಭಿಸುವಾ
ಮೆರೆವ ನಿಜಾನಂದಾ ನಿತ್ಯ ತೃಪ್ತ ತ್ರಿಗುಣ
ವಿರಹಿತ ಭಕ್ತಾರಾಧೀನ ದೇವಾ
ಹರಿ ಪರಸ್ಪರ ಹೆಚ್ಚಿ ಒಬ್ಬರಿಂದೊಬ್ಬರಿಗೆ
ಕರುಣತ್ವ ವೈರತನ ಮಾಡಿಸುವಾ
ಹೊರವೊಳಗೆ ತಾನಲ್ಲದೆ ಅನ್ಯಾನಿಲ್ಲ
ಸ್ಥಿರವಹುದು ಚರಿಸುವ ಅಣ ಜಾಣನೂ
ಚಿರಕಾಲ ಎಲ್ಲಿದ್ದರು ನಿರ್ಲೇಪ ಚಿದ್ರೂಪ
ಶಿರದೂಗಿದರೆ ಮಾಳ್ಪದು ಬಿಡುವನೆ
ಹರಿ ಇಚ್ಛೆ ಅಂಥಾದೆ ಲಕುಮಿದೇವಿಗಾದರು
ಮರಳು ಕವಿಸಾದಲೆ ಸುಮ್ಮನಿರನೋ
ಪರಮೇಷ್ಟಿ ಯಾರಿಗೆ ನೆಲೆಯಾಗುವುದು ಕಾಣೆ
ನರಗುರಿ ಮರುಗಿದರೆ ಏನಾಹುದೂ
ಉರವಣಿಸಿ ಮಾತಾನಾಡಿದ ಮಾತ್ರವಲ್ಲದೆ
ಬರಿದಾಗಿ ಪೋಗುವಾದು ದಿವಸವೆಲ್ಲಾ
ಧರಣಿಯೊಳಗೆ ಪುಣ್ಯ ಪಾಪಗಳೆರಡಕ್ಕೆ
ಗುರಿಯಾಗಿ ನಮ್ಮಿಂದ ಮಾಡಿಸುವಾ
ಅರಿಯಾಗೊಡದಂತಿಪ್ಪ ಮಾಯವ ಕಲ್ಪಿಸಿ
ಮರಳೆ ಯೋಚಿಸದಿರು ಹರಿಯಲ್ಲಾದೆ
ಪರರಿಂದಾಗುವುದೇನು ಆರಾರಾ ಪ್ರೇರಣೆಗೆ
ಸಿರಿ ಅರಸನೆ ಮುಖ್ಯಾ ಅಲ್ಲಿದ್ದಂತೆ
ಮರಿಯಾದೆ ಯಾಗಿಪ್ಪದು ಸರ್ವ ಬಗೆಯಿಂದ
ಅರಸಿದರೆ ಆತನೆ ಆತನೋ
ತರುವಾಯ ಜ್ಞಾನಿಗಳ ಉತ್ತರ ಮತ್ತಾವದೂ
ಇರದೆ ಯೋಚಿಸಿ ನೋಡಿ ಮೂಲಾಮುಟ್ಟಿ
ಕರಣಾ ಶುದ್ಧಿಯಲ್ಲಿ ಕೇವಲ ರಹಸ್ಯ ವಿ
ವರಗಳ ತಿಳಿವುದು ದುರ್ಲಭವೋ
ಪುರದಲ್ಲಿ ಅಂಗಡಿಟ್ಟು ತನ್ನಲಿಯಿಲ್ಲ ನಾನಾ
ಸರಕು ತಿಳಿಯದಂತೆ ಯಾಗದಿರಿ
ದರುಶನ ಗ್ರಂಥವನ್ನು ಓದಿದ ಮೇಲೆ ಅವಾಂ
ತರದಿಂದ ನುಡಿಯ ಬೇಕೆಂದು ತಮ್ಮ
ಗುರುತು ತೋರಿದಂತೆ ಸ್ವಾತಂತ್ರ ಪಚ್ಚಿಕೊಂಡು
ಹಿರಿದಾಗಿ ಜನ್ಮಂಗಳು ಧರಿಸುವರೂ
ಧರವಲ್ಲ ಈ ಮಾತು ಪೇಳಿಕೊಂಡದರಿಂದ
ಧುರದೊಳು ಪಾರ್ಥಂಗೆ ಹರಿ ಏನು ಪೇಳಿದಾ
ಸುರರಾದಿಗಳಿಗಿ ಜ್ಞಾನ ಅಜ್ಞಾನವೆರಡು
ಹರಿ ಪ್ರೇರಿಸದಲೆ ವ್ಯಕ್ತವಾಗೋವೇ
ಗುರು ದ್ರೋಣಾಚಾರ್ಯನು ಮಾಡಿದ ಪ್ರತಿಜ್ಞ ನಿಂ
ದಿರದೆ ಪೋಯಿತು ನೋಡೆ ಸ್ವಾತಂತ್ರನೆ
ತರತಮ್ಯ ಭಾವದಿಂದ ಅವರವರ ಯೋಗ್ಯತಾ
ಹರಿನಡಿಸಿದರುಂಟು ಸರ್ವರಿಗೆ
ಗರುವಿಕೆ ಸಲ್ಲಾ ನಾವು ನೀವೆಂಬೊ ಮಾತನು
ಧರಿಸದಿರು ಕಡೆ ಬೀಳುವುದೇ
ವರ ಶ್ರುತಿ ಸ್ರ‍ಮತಿಯಲ್ಲಿ ಜೀವಕ್ಕೆ ಕರ್ತವ್ಯ
ಒರದೊರದು ಪೇಳಿವೆ ಎಂಬ
ಪರಮ ಸತ್ಯವೆ ಸರಿ ಪಾಪ ಪುಣ್ಯಗಳೆರೆಡು
ಹರಿ ಮಾಡಿಸಿ ಎಣಿಸಲು ಉಣ್ಣಿರೊ
ಅರೆ ಮರೆ ನಿಮಗ್ಯಾಕೆ ತಾಯಿ ತನ್ನ ಮಕ್ಕಳಿಗೆ
ಗರಳವಾಗಲಿ ಪೀಯುಷವಾಗೆ
ಎರಧರೆ ಎಂಬಂದಿ ಕರ್ತೃತ್ವ ಇದ್ದ ತೆರದಿ
ಸರುವ ಜೀವಿಗಳಿಗೆ ಇಪ್ಪದದಕೋ
ಹರಿ ಜೀವನ ಕೂಡಾ ಒಳಗೆ ಹೊರಗೆ ಇದ್ದು
ಪರಿಪರಿ ಚೇಷ್ಟಿಯ ಮಾಡಿಪನೂ
ಸರುವಂತರ್ಯಾಮಿ ನಮ್ಮ ವಿಜಯ ವಿಠ್ಠಲರೇಯಾ
ನರಕದಲ್ಲಿದ್ದರು ನಿರ್ಲೇಪಾನೆಂಬೊದೇನೊ ೧
ಮಟ್ಟತಾಳ
ಹರಿನಾನಾ ಅವತಾರಾ
ಧರಿಸಿ ಧರಣೆಯೊಳಗೆ
ಪರಿಪರಿ ವಿಧತಸ್ಕರ
ಜಾರತ್ವ ಸೋ
ದರಮಾವನ ಕೊಂದಾ
ಸುರರ ವಂಚಿಸಿ ಕಲ್ಪ
ತರುವೆನ್ನ ತಂದಾ
ಪರಶು ವಿಡಿದು ಸೋ
ದರರ ಮಾತೆಯನ್ನು
ಶಿರವ ಕಡಿದನಂದು
ಎರಡೊಂದು ಪಾದವನು
ಧರಿಯ ಬೇಡಿ ಬಲಿಯಾ
ಹರಣವ ತುಳಿದಾ ಸಂ
ಗರವಿಲ್ಲದೆ ಕಪಿಯಾ
ಶರದಲಿ ಕೊಂದಾ ಅಂ
ಬರ ತೊರೆದು ನಾರಿಯರ ವ್ರತಗೆಡಿಸಿದನು
ಕುರುಬಲ ಸಂಹರಿಸಿದಾ ಕಪಟದಲಿ
ಪರಿಮಿತಿಯಿಲ್ಲದೆ ವರ ಪ್ರಳಯದಲ್ಲಿ
ಸರಸಿಜ ಭವ ಗಂಗಾಧರ ಮಿಕ್ಕಾದವರ
ಹರಣವಳಿದು ನಿರ್ಭರದಲಿ ಕುಣಿದಾಡಿದಾ
ನಿರಯಾ ಕರ್ಮಗಳೆಲ್ಲ ಹರಿ ಎಸಗಿದರಾತಾ
ಪರದೈವಾ ನೀತಾ
ಪರಶಕ್ತಿರನಂತಾ
ದುರಿತವಿದೂರ ವಿಸ್ತರ ಅದ್ಭುತ ಚರಿತಾ
ಸರಿ ಬಂದಂತೆ ಸಂಚರಿಸುವಾ ದಿಟನೆಂದು
ಸಿರಿ ಪೊಗಳಿ ಮೈಮರೆದು ನಿಲ್ಲುತಿರೆ
ಸುರರು ಮಿಕ್ಕಾದ ಜೀವರ ಒಳಗೆ ನಿತ್ಯಾ
ಹರಿ ಪ್ರೇರಿಸಿ ಕರ್ಮಾಚರಣೆ ಮಾಡಿಸಲು
ಪರಮಾತ್ಮಗೆ ದೋಷವದು ಕೊಂಬೋದೆನೊ
ಹರಿಹರಿ ರೂಪಕ್ಕೆ ತರತಮ್ಯವೇ ಇಲ್ಲ
ಅರುಹುವೆನು ಬಾಹಿರದ ರೂಪಗಳಂಥ
ಚರಿತೆ ಮಾಡಿದರೇನು ಮರುಳೆ ಜೀವರ ಒಳಗೆ

ಹರಿದಾಸರ ಸ್ನೇಹ, ಸಹವಾಸಗಳಿಂದ ಉಂಟಾಗುವ

೧೪೨
ಧ್ರುವತಾಳ
ಹರಿಶರಣರ ಬಾಲಾರುಣ ಚರಣಕಿರಣ ಸಂತತ
ಧರುಣಿಯೊಳಗೆ ಮೆರುವುತಿದೆ
ಹರಿಶರಣರ ಪಾದರಜವು ತರತರ ಜನ್ಮದ
ಪರಿಪರಿ ಭವದ ಶರನಿಧಿಯ ಉತ್ತರಿಸುವುದು
ಹರಿಶರಣರ ಸಂಚರಣೆ ಲೋಕ ಉದ್ಧರಣ
ಹರಿಶರಣರ ಸಲ್ಲಾಪ ಪಾಪನಿರ್ಲೇಪ
ಹರಿಶರಣರ ಬರವನು ಆವ
ನರನು ಹಾರೈಸುತಿರಲು ಅವನೆ
ಸುರನು ಹರಿಶರಣರ ಬಾಲಾರುಣ
ಅರಿತವರಿಲ್ಲ ಧರೆಯೊಳಗೆ
ಹರಿಶರಣರಿಗೆ ಮನಿಯ ಮಗನೊ
ಹರಿಶಿರಿ ವಿಜಯ ವಿಠಲ
ಶರಣರ ಬಳಿವಿಡಿಯಿರೊ ೧
ಮಟ್ಟತಾಳ
ಹರಿಶರಣರ ಸಂಗ ದುರಿತ ಸಂಘ ಭಂಗ
ಹರಿಶರಣರ ಪತಿಕರಿಸಿಕೊಳಲು ಗತಿ
ಹರಿಶರಣರ ನೋಟ ಹರಹಲು ಶುದ್ಧ ದೂಟ
ಹರಿಶರಣರ ಸುದರುಶನವೇ ಲೇಸೂ
ಹರಿಶರಣರು ಇದ್ದಾಗರವೆ ಪ್ರಸಿದ್ಧ
ಹರಿಶರಣರ ಕೀರ್ತಿ ಅರಿದವ ಗುಣಪೂರ್ತಿ
ಹರಿಶರಣರ ಲೀಲೆ ವಿರಚಿಸಲೂ ಮೇಲೆ
ಹರಿಶರಣರ ಸೇವೆ ಪರಿವದು ಪಾಶವೆ
ಹರಿವರ್ನಾ ವಿಜಯ ವಿಠ್ಠಲ ನಿತ್ಯ
ಧೊರೆ ಎಂದವನು ಶರಣನು ಕಾಣಿರೊ ೨
ತ್ರಿವಿಡಿತಾಳ
ಹರಿಶರಣರು ಇಲ್ಲದ ಭವನ ಮಹಾವನ
ಹರಿಶರಣರಿಲ್ಲದ ಕೇರಿ ಹೊಲಿಗೇರಿ
ಹರಿಶರಣರಿಲ್ಲದಲ್ಲಿ ಹರಿತಾನೆ ನಿಲ್ಲನು
ಹರಿಶರಣನೆ ವರಬೊಮ್ಮನೆನ್ನಿ
ಹರಿಶರಣ ಇದ್ದಲ್ಲೆ ದುರಿತಗಾಳಿರವಯ್ಯಾ
ಹರಿಶರಣನೆ ಜಗಕೆ ಧೊರೆ ಕಾಣಿರೊ
ಹರಿಶರಣಗೆ ಉಳ್ಳ ಪರಮ ಸೌಖ್ಯಂಗಳು
ಸುರನರೋಶಗಾದ್ಯರಿಗೆ ಇಪ್ಪದೇನು
ಹರಿಶರಣರ ನಿಂದಿರದೆ ಪೊರೆವ ಸರ್ವ
ಪರಿಪೂರ್ಣ ವಿಜಯ ವಿಠ್ಠಲ ಭಕ್ತ ವತ್ಸಲ
ಸರಿಯದೆ ಬಳಿಯಲ್ಲಿ ಇರುತಿಪ್ಪ ನಲಿವುತ ೩
ಅಟ್ಟತಾಳ
ಹರಿಶರಣರ ಸಂಗಮಾಡದ ಮಾನವ
ನರಕಕ್ಕೆ ಮೊದಲವನಹುದೆಂದು ತಿಳಿವುದು
ಮರಳೆ ಮರಳೆ ದುರಯೋನಿಯಲ್ಲಿ ಪೊಕ್ಕು
ಪರಮ ದು:ಖಂಗಳ ಪಡುವನು ನೆಲೆಗಾಣಾ
ಚಿರಕಾಲದಲಿ ಆವ ಕಾರ್ಯಾಚರಣೆ ಮಾಡೆ
ಬರಿದಾಗಿ ಪೋಗೋವು ಲೇಸು ಸುಕೃತವಿಲ್ಲ
ಹರಿಶರಣರ ಪಾಲಾ ವಿಜಯ ವಿಠಲ ತನ್ನ
ಸ್ಮರಣೆ ಮಾಡುವಗೆ ಅಂದರೆ ತಾಳಲರಿಯನೂ ೪
ಆದಿತಾಳ
ಹರಿ ಶರಣನಾಗುವುದಕ್ಕೆ ಪರಮ ಸುಲಭ ಉಂಟು
ಸರುವದಲ್ಲಿ ಸ್ರ‍ಪಹನಾಗಬೇಕು ಆಗಬೇಕು
ಹರಿಯ ಮಹಿಮೆ ತಿಳಿದು ಹಿಗ್ಗಿ ಹಾರೈಸಬೇಕು
ಮರಣ ಜನನಕೆ ಭಯಬಡದಲೆ ಇರಬೇಕು
ಇರುಳು ಹಗಲು ಮಾಡಿಹಗಲು ಇರುಳು ಎಂದು
ಅರಿದು ದಿನವ ಕಳೆದು ದೀನನಾಗಿ ಇರಬೇಕು
ಹರಿ ಭಕುತಿಯಲ್ಲಿ ಬಲು ಲೋಲ್ಯಾಡುತಿರಬೇಕು
ಹರಿ ನಾಮ ವಿಜಯ ವಿಠ್ಠಲ ಪರದೈವ ನಿಜವೆಂದು
ಕರೆದು ಕೂಗಲಿಬೇಕು ವಿರಕ್ತನಾಗಬೇಕು೫
ಜತೆ
ಏಕಾಂತ ಉಳ್ಳವರ ಪದಪದ್ಮಗಳ ಪಿಡಿದು
ಶ್ರೀಕಾಂತ ವಿಜಯ ವಿಠ್ಠಲನ ಒಲಿಸುವುದೂ ೬

ಭಗವದ್ಭಕ್ತರು ಯಾವಾಗಲೂ ಭಗವಂತನ

೧೪೩
ಧ್ರುವತಾಳ
ಹಾರೈಸಿದೆನೆ ನಿನ್ನ ಹಾರಾ ಮಾಡಿದ ಮನೋ
ಹಾರಿಗಳಸಂಗ ವ್ಯವಹಾರ ತೊರೆದು
ಹಾರಿಹಾರುವ ಮನಾಹಾರವಾಗಿ ಎನ್ನ
ಹಾರದೊಳಗಿರಲಿ ಅಘಹಾರಿ ಎಂದು
ಹಾರಿ ಹಾರಿ ಮಾಡಿ ಹರುಷದಿಂದಲಿ ನಿತ್ಯ
ಹಾರವಾಗಲಿ ಎನಗೆ ಎಂಜಲನ್ನಾ
ಹಾರೈಸುವೆ ನಾಮ ಬ್ಯಾಹಾರಿಗನು ಎನಿಸಿ ಮೋ
ಹಾರ ಪಾಪಗಳು ಪರಿಹಾರ ಮಾಡಿ
ವೀರ ಬಾಹ್ವರ್ವಿದಾರಣ ವಿಜಯ ವಿಠ್ಠಲ
ಹಾರುವರ ಪ್ರೀಯಾ ಮಹರಮಣ ಜೀಯಾ ೧
ಮಟ್ಟತಾಳ
ತೈಲಧಾರಿ ಬಿಂದು ಜಲದೊಳು ಬಿದ್ದಂತೆ
ನೆಲೆಯಾಗಲಿ ಚಿತ್ತದೊಳಗೆ ನಿನ್ನಯ ಭಕುತಿ
ಗಳ ದಾಸ್ಯಕೆಗಳುಬ್ಬಿ ದಳ ದಳ ಬಾಷೋದ
ಕಂಗಳಲಿ ಪದಯುಗಳ ನೆನೆದು
ಪುಳಕೋತ್ಸದಲ್ಲಿ ನಲಿನಲಿದೊಲಿದು
ತಲೆದೂಗುತಲಿ ತೊದಲ ನುಡಿಗಳಿಂದ
ಜಲಜಾಕ್ಷಗ್ರಣಿ ವಿಜಯ ವಿಠಲರೇಯ
ನಿಲುವಾಗಲಿ ನಿನ್ನಲಿ ಎನ್ನ ಮನಸು ೨
ತ್ರಿವಿಡಿತಾಳ
ಬಹುಕಾಲದಲಿ ನಿನ್ನರ್ಚಿಸುವ ಕಿಂಕರರಿಗೆ
ಬಹುವೇಗ ಸದ್ಗತಿ ಈವೆನೆಂಬ
ಅಹುದೊ ದಾತಾರನೆ ಅವರು ಎನ್ನನುನೋಡೆ
ಸಾಹಸಿಗರು ನೂರಾರು ಮಡಿ ವೆಗ್ಗಳ
ಮಹಪದವೀಗಾವರರು ತರುಕಾಣೊ
ಪಾಹಿನಾ ನಧಿಕಾದ ಯೋಗ್ಯನಲ್ಲಾ
ರೋಹಿತಾ ವಿಜಯ ವಿಠಲ ಕೇಳು ಸೂಚಿಕ
ಟಾಹ ನ್ಯಾಯವಲ್ಲವೇನೋ ಭಕ್ತರಲ್ಲಿ ೩
ಅಟ್ಟತಾಳ
ಪಕ್ಕ ಪುಟ್ಟದ ಮರಿ ಸಿಕ್ಕಿ ಒರಲಿದಂತೆ
ಸೊಕ್ಕಿದಾನೆ ಕಮಲಕ್ಕೆ ಲಂಘಿಸಿದಂತೆ
ಲಕ್ಕವ(?) ತಂದಗ್ನಿ ಮುಖದಲ್ಲಿ ಇಟ್ಟಂತೆ
ಉಕ್ಕುವ ಹೊಳೆಯೊಳು ಪೊಕ್ಕು ಮುಣಗಿದಂತೆ
ಕಕ್ಕುಲಾತಿಯಿಂದ ಕಕ್ಕಸಪಥದೊಳು
ಕಿಕ್ಕಿರದಲಿ ನಾನಕ್ಕಟ ಭ್ರಮೆಯಾದೆ
ಚಕ್ರಗದಾಧರ ವಿಜಯ ವಿಠ್ಠಲ ಗುಟು
ಕಿಕ್ಕಿಸಲು ಕಾವ ನಿನ್ನ ಪಕ್ಕದೊಳಿರಿಸಿ ೪
ಆದಿತಾಳ
ನಿನ್ನಧೀನದಲ್ಲಿ ಸರ್ವವನ್ನು ತ್ಯಾಗಮಾಡಿ
ಅನಿಮಿಷದ ಜಾಗರವನ್ನು ಮಾಳ್ಪ ಸಿದ್ಧರೊಡನೆ
ಎನ್ನ ನೀನಪಾಂಗದಿದ ಮನ್ನಿಪುದು ಮಾರನಯ್ಯ
ಕಣ್ಣಿಗೆವೆ ಕಾಯುವ ತೆರದಿ ಸನ್ನು ಮಾನದಲ್ಲಿ ಕಾಯೊ
ಎನ್ನೊಡಿಯ ಸಾಮವರ್ತ ವಿಜಯ ವಿಠ್ಠಲರೇಯಾ
ಅನ್ಯಥಾವನ್ಯರ
ನಂಬೆ ಎನ್ನಪೇಕ್ಷೆ ತೀರಿಸಯ್ಯ ೫
ಜತೆ
ಕೂಡಲೆ ಭಕುತಿ ಮಾಡಿ ಸಂಸಾರ ವೆಂಬೂ ವೃಕ್ಷ
ಕಡಿದು ಕೆಡಿಸುವುದು ಶತ ವಿಜಯ ವಿಠಲಾ ೬

೯೩
ಝಂಪೆತಾಳ
ಹೃತ್ಕಮಲ ಮಧ್ಯದಲಿ ಪೊಳೆವ ವೈಚಿತ್ರಾ
ಸತ್ಕಾಲ ಕ್ರಮಣಿಯ ಮಾಡಿಸುವದನುದಿನಾ
ಸತ್ಕರುಣದಲಿ ಎನಗೆ ನಿನಗೆ ನಾನೊಂದು ಚ
ಮತ್ಕಾರದಲಿ ಪೇಳ್ವೆ ನಮಿತರಿಗತಿ ಪ್ರೇಮ
ಸತ್ಕಾರ ಪೂಜೆ ಪುರಸ್ಕಾರದಿಂದಲ್ಲಿ
ಮತ್ಕಾಯದಲಿ ನಿಲಿಸಿ ಒಲಿಸಿ ಅರ್ಚಿಸಲಾರೆ
ಸತ್ಕುಲದಲಿ ಜನಿಸಿ ಹಗಲಿರಳು ಬಿಡದೆ ಬ
ಲತ್ಕಾರ ಭಜಿಸಿದರೆ ಸುರರಿಗಸಾಧ್ಯವೆ
ಮತ್ಕುಲದ ಸತ್ರ‍ಕತವ ನಾನರಿಯೆ ವರ್ನಿಸಲು
ಶತ್ಕೋಟಿ ಧರನು ಬಲ್ಲನು ಕಾಣಿರೋ
ಸತ್ಕಥೆಗೆ ಒಳಪೊಕ್ಕು ಭೇದಿಸುವ ಪ್ರಬಲ ಜ
ಗತ್ಕಾರಣನೆ ವಿಜಯ ವಿಠ್ಠಲ ರಮೇಶಾ ೧
ಮಟ್ಟತಾಳ
ಹರಿ ಪರದೇವತಿ ಪರಿಪೂರ್ಣ ಮೂರುತಿ
ಧರೆಯೊಳು ಕೀರುತಿ ಮೆರೆವ ಜಗತ್ಪತಿ
ಸುರರೊಳಗ ಪ್ರತಿ ದುರುಳದಾನವರಾತಿ
ಶರಣೆಂದರೆ ಸುಮತಿ ಪರಿಪಾಲಿಪ ಪ್ರೀತಿ
ವಿಜಯ ವಿಠ್ಠಲಶ್ರುತಿ ವರಗಳಿಗೆ ಗತಿ೨
ರೂಪಕ ತಾಳ
ಅಪ್ರಾಕೃತ ಮಹಿಮಾ
ಅಪ್ರಾಕೃತ ಲೀಲಾ
ಅಪ್ರಾಕೃತ ಕಾಯಾ
ಅಪ್ರಾಕೃತ ರೂಪ
ಅಪ್ರಾಕೃತ ತೇಜ
ಅಪ್ರಾಕೃತ ಪೂಜೆ
ಕ್ಷಿಪ್ರದಲಿ ಲಕುಮಿ
ಸುಪ್ರೇಮ ದಿಂದ ನಾ
ನಾ ಪ್ರಕಾರ ಮಾಡು ಪ್ರತಿಗಾಣಳೂ
ಅಪ್ರಮೇಯನೆ ರಂಗ
ವಿಜಯ ವಿಠ್ಠಲ ನಿನ್ನ
ಅಪ್ರಬುದ್ಧನು ನಾನು
ಸುಪ್ರೀತಿ ಬಡಿಸುವೆನೆ
ಧ್ರುವತಾಳ
ಆವಾದು ನಿನ್ನ ಪೂಜೆ ಆವಾದು ನಿನ್ನ ಸ್ತೋತ್ರ
ಆವಾದು ನಿನ್ನ ಪ್ರೀತಿ ಆವಾದು ನಿನ್ನ ಸೇವೆ
ಆವುದಾವುದರಿಂದ ವಿವರಿಸುವೆನೆ ನಾನು ಒಂದು ಕಾಣಿನೊ
ಪಾವನರೂಪ ಕೋವಿದರರಸ ಶ್ರೀ ವಿಜಯ ವಿಠಲ ಎನ್ನ
ಭಾವದಲ್ಲಿನಿತು ಭಾವಿಸುವೆನು ಕೇಳೊ ೪
ತ್ರಿವಿಡಿ ತಾಳ
ತನುವೆ ನಿಕೇತನ ಶಿರವೆ ಉತ್ತಮ ಕಳಸ
ಅನಿಲಾ ಬರುವ ರಂಧ್ರಯುಗಳ ಶ್ರವಣಗಳು
ಮಿನುಗುತಿಪ್ಪ ಪೂರ್ವದ್ವಾರ ವದನವೇ ದ
ಕ್ಷಿಣ ಉತ್ತರದ್ವಾರ ದ್ವಯ ನಾಸರಂಧ್ರ ಲೋ
ಚನ ವೆಡೆ ಸುರದೀಪ ನಾಲಿಗೆಂಬೋದೆ ಘಂಟಿ
ವನಜ ಕರಗಳೆ ಬೀಸುವ ಚಾಮರ ಚೌರ
ಅನುವಾದ ಹೃದಯವೆ ಮಂಟಪವನೆ ರಚಿಸಿ
ಘನ ಕಳೆಯು ಕಾಂತಿ ಮಕರತೋರಣ ತಳಿಗೆ
ಅನುಪಮಾ ಬುದ್ಧಿ ಎಂಬೊದೇ ಗದ್ದಿಗೆ ಮಾಡಿ
ಎನ್ನ ಬಿಂಬ ಮೂರುತಿ ವಿಜಯ ವಿಠ್ಠಲರೇಯನ
ಮನವೆಂಬೊ ಭಟನಟ್ಟಿ ಕರೆಸಿ ನಿಲಿಸಿ ನೋಳ್ಪೆ೫
ಅಟ್ಟತಾಳ
ಕುಡಿವ ಜಲಭಿಷೇಕ ಇಡುವ ಗಂಧವೆ ನಿ
ನ್ನಡಿಗೇರಿಸುವ ಗಂಧ ಕಡು ಮುದ್ರೆ ಭೂಷಣ
ಉಡುವ ಪೀತಾಂಬರ ಉಡುಗರಿ ಇತ್ತವು
ಪಡೆದ ಜ್ಞಾನದಿ ನಿನ್ನಡಿಗೇರಿಸುವ ಪೂವೊ
ತಡಿಯದೆ ಜಠರಾಗ್ನಿ ಬಿಡದೆತ್ತುವ ಧೂಪಾ
ರ್ತೊಡನೊಡನೀಪರಿ ವಿಜಯ ವಿಠ್ಠಲರೇಯ
ನ್ನೊಡಿಯನೆ ಒಡಂಬಡು ಬಡವನ ಪೂಜೆ ೬
ತ್ರಿವಿಡಿ ತಾಳ
ಭಕುತಿ ಎಂದೆಂಬೋದೇಕಾರುತಿ ಪ್ರತಿದಿನ
ಭುಕುತಿ ಹಾಕುವ ಕವಳ ನೈವೇದ್ಯ ಕಾ
ಣಿಕೆ ಚತುರ ವಿಂಶತಿ ನಾಮಗಳಯ್ಯಾ
ಸುಖವೆಂಬೋದೆ ಕರ್ಪುರ ತಾಂಬುಲ ಕಾ
ಳಿಕ ನಾಶವೆಂಬೋದೆ ಕರ್ಪುರದಾರುತಿ
ಮುಕುತಾರ್ಥ ತತ್ವರೂ ವಾಲಗದವರು ಗ
ಮಕದಲ್ಲಿ ತಿರುಗುವದು ನಿತ್ಯ ಪ್ರದಕ್ಷಿಣೆ
ಸುಖಸಾಂದ್ರ ವಿಜಯ ವಿಠ್ಠಲ ಶ್ರೀನಿ ಕೇತನ
ಸಕಲ ಗುಣ ಪೂರ್ಣ ಗುರುವಿನ ಗುರುವೆ ೭
ಅಟ್ಟತಾಳ
ಪವಡಿಸುವುದು ನಿನ್ನಯ ನಮಸ್ಕಾರವು
ಅವಸರಕೆ ಪೋಗುವ ನಡೆ ನರ್ತನೆ
ನವ ನೂತನವಾದ ಉತ್ತಮಗುಣ ರಭಸವೆಲ್ಲ
ನಿನಗೆ ವಾಲ್ಗೈಸುವ ವಾದ್ಯವೋ
ಅವನೀಶ ವಿಜಯ ವಿಠಲ ನಿಮಗವಂದ್ಯ
ಭವದೂರ ಭವಸುರರರ್ಚಿತ ವಿಗ್ರಹರಂಗಾ ೮
ಆದಿತಾಳ
ಕುರುಕ್ಷೇತ್ರ ಕಾಶಿ ಗಯಾ
ವರ ಪ್ರಯಾಗ ಗಂಗಾ
ನರ ನಾರಾಯಣ ನಿಧಿ
ಪುರುಷೋತ್ತಮ ದ್ವಾರಕಾ
ವರ ಗಿರಿ ಕಂಚಿ ನಿಲ
ವರಹ ಶ್ರಿ ಮದಾನಂತ
ಅರಿನಾಶ ಜನಾರ್ದನ
ಸಿರಿರಂಗ ರಜತಪೀಠ ಪುರಿವಾಸ ಸುರಧೀಶ
ಗುರು ಸುಖ ತೀರ್ಥರಿಂದ
ನಿರುತ ಪೂಜೆಯಗೊಂಬ
ಪರಮ ಕರುಣಾಸಿಂಧು ಎನ್ನನು
ಧರಿಸ ಬೇಕೀ ಪರಿಯಲ್ಲಿ
ಭರದಿಂದ ಒಲಿದು ನೋಡು
ವಿಜಯ ವಿಠ್ಠಲರೇಯ
ಅರಿಯದ ಮನಜ ಸಂ
ದರುಶನ ಬರಲಾಗಿ ೯
ಜತೆ
ಆವಾವ ಕ್ಷೇತ್ರಕ್ಕೆ ಕರದೊಯ್ದು ಎನ್ನಿಂದ
ಈ ವಿಧಾರ್ಚನೆಗೊಳೆ್ಳೂ ವಿಜಯ ವಿಠ್ಠಲ ಮೂರ್ತಿ ೧೦

೯೪
ಧ್ರುವತಾಳ
ಹೃದಯ ವ್ಯಾಪ್ತಿ ಪ್ರಾದೇಶವೆಂದೆಂಬೊ ಮೂರುತಿ
ಪದುಮ ಕರ್ಣಿಕೆ ಮೂಲದಲ್ಲಿ ಮೂಲೇಶ
ಇದೆ ಅಂಗುಟಾಗ್ರ ಪರಿಮಿತವೆನ್ನಿರೋ
ಪದುಮ ಕರ್ಣಿಕಾಗ್ರದಲಿ ಅಂಗುಟಾದನಿತು
ಇದೆ ಪ್ರಾಜ್ಞ ಮೂರುತಿ ಎಂದು ಕೊಂಡಾಡಿರೋ
ಸದ ಮಲ ವಾಗಿ ಸಂತತ ಒಪ್ಪುತಿಹವೊ ಸ
ನ್ನಿಧಿಯಾಗಿ ಜ್ಞಾನಿಗಳ ಪೊರೆವುತಿದೆ ಕೋ
ಪದುಮ ಸಂಭವವಿಡಿದು ತೃಣಜೀವ ಪರಿಯಂತ
ತದು ತದು ಶಾರೀರ ಪರಿಮಿತ ಗಣಿತ
ಅಧಿಕಾರ ತನದಿಂದ ನೋಳ್ಪದು ಭಿನ್ನ ಕಾಣೋ
ಇದೆ ಮೂರುವರ್ಣಾ ಶುಕ್ಲ ರಕ್ತ ನೀಲ
ಇದೆ ಶ್ರವಣ ಮನನ ಧ್ಯಾನ ಜಾಗ್ರತ ಸ್ವಪ್ನ ಸುಪ್ತ
ಇದರಂತೆ ಗುಣಿಸುವುದು ಒಂದೊಂದು ಭಾಗ
ವಿಧಿಮಾತುರ ಕೇವಲ ಅಸಂಪ್ರಜ್ಞವು
ಳಿದ ಋಜುಗಳಿಗೆ ಸ್ಪಷ್ಟತ್ವದಲಿ ಭೇದ
ತ್ರಿದಶ ಗಣಕೆ ನೋಡು ತಾರತಮ್ಯದಿಂದ
ಒದಗಿ ಸಾಧನ ಪ್ರಾರಬ್ಧ ದೇಹ
ಮುದದಿಂದ ಮತ್ರ್ಯರಿಗೆ ಕಾಲಾನುಸಾರ ಪ್ರಾಪ್ತಿ
ಇದೆ ಸರ್ವಜೀವರಿಗೆ ಅನುಕೂಲವು
ಇದರ ತರುವಾಯ ಅನಂತ ರೂಪಗಳು
ಹೃದಯೇಂದ್ರಿಯಗಳು ಸರ್ವ ದೇಹದಲ್ಲಿ
ನಿಧಿಯಾಗಿಪ್ಪವು ಎಣಿಕೆ ಮಾಡಲುಂಟೆ
ಅಧಿಕಾರದಂತೆ ಹರಿ ಕಾಣಿಸಿಕೊಂಬ
ಉದಯಾರ್ಕ ಸನ್ನಿಭ ವಿಜಯ ವಿಠಲರೇಯ
ಪದೋ ಪದಿಗೆ ತನ್ನನು ಕೊಂಡಾಡೆ ಒಲಿವ ೧
ಮಟ್ಟತಾಳ
ಅಂತ್ಯ ಬಾಹ್ಯ ಉಭಯ ತ್ರಿವಿಧ ದರ್ಶಿಗಳೆನ್ನು
ಸಂತರು ಇದರೊಳಗೆ ಅಲ್ಲ ಮಹತ್ತಾಗಿ
ಸಂತತ ಕಾಂಬುವರು ತಮ್ಮ ಸ್ವಯೋಗ್ಯತದಿ
ಚಿಂತಿಸಿ ಮೂರ್ತಿಯ ಒಂದೊಂದು ಪ್ರಕಾರ
ಎಂತೆಂತು ನೋಡುತ್ತ ಪೂರ್ಣ ಭಕುತಿತನಕ
ಸಂತು ಜನರ ಸ್ಪರ್ಧಿ ದುಃಖ ಪ್ರಾರಬ್ಧಾ
ಹಂತ ಜನಾವೇಶ ಮಿಕ್ಕಾದ ದೋಷ
ನಿಂತ ಕಾಲಕೆ ತಮ ತಮ್ಮಂತರಂಗದಲ್ಲಿ
ಕಾಂತಿ ವಿಶೇಷದಲಿ ಹರಿಯ ಕಾಂಬುವರಯ್ಯಾ
ಅಂತರಾತುಮ ಹರಿ ವಿಜಯ ವಿಠಲರೇಯ
ಇಂತಿಂತು ನಡಿಸಿ ಮುಕ್ತಿ ಕೊಡುವ ಬಿಡದೆ ೨
ತ್ರಿವಿಡಿ ತಾಳ
ಪುರುಷಸೂತ್ರ ಪ್ರಕೃತಿ ಶ್ರದ್ಧ ಜೀವಕಾಲ
ಹರ ಷಣ್ಮಹಿಷೇರು ವಾರುಣ್ಯಾದಿ
ಸುರಪಸ್ಮರ ಅಹಂಕಾರ ಅನಿರುದ್ಧಾದಿ ನಾಲ್ಕು
ಎರಡು ಜನ ಪ್ರವಹ ಸೂರ್ಯಾದ್ಯರು
ವರುಣ ನಾರದ ಭೃಗು ಪಾವಕ ಪ್ರಸೂತಿ
ಮರೀಚ್ಯಾದಿ ಸಪ್ತ ಗಾಧೇಯವನು
ಮಿತ್ರ ನೈರುತ್ಯ ಗುರುಪತ್ನಿ ಪ್ರಾವಹಿ ವಿ
ಸ್ತರಿಸುವೆ ವೈದ್ಯ ವಿಷ್ವಕ್ಸೇನ
ಮರುತಾದಿತ್ಯರು ರುದ್ರ ವಿಶ್ವದೇವರು ಸಪ್ತ
ಪರಿವಸುಗಳು ದ್ಯಾವಾ ಪೃಥುವಿ ಋಭರು
ಸರಿ ಇಲ್ಲೆಗೆ ಕೇಳಿ ಮುನ್ನೂರು ಮೂರು ಸಾ
ವಿರ ದೇವತಿಗಳನ್ನು ಗುಣಿಸಿರಯ್ಯಾ
ಮರಳೆ ಪಾವಕಾದ್ಯರು ಬಲ್ಯಾದಿಗಳು ಸಪ್ತ
ಅರಿವದು ಮುಂದೆ ಮನುಗಳು ಹನ್ನೊಂದು
ಅರಸು ಜನರು ನೂರು ಗಂಧರ್ವರೆಂಟು ಮಂದಿ
ಸರಸ್ವತಿ ಪ್ರಾಕೃತ ವಾಕ್ಯಾದೊಡತಿ
ತರುವಾಯ ದಶರುದ್ರ ರಾಕಾ ಶ್ರೀ ಪ್ರಾಚಿನಿ (?)
ತರುಣೀರುಷೆ ಭಾರ್ಯರ ಸಹಿತ
ಸುರನದಿ ಪರ್ಜನ್ಯ ಸೂರ್ಯ ಚಂದ್ರಮ ಭಾ
ಸ್ಕರ ಅನಿರುದ್ಧನ್ನ ಸತಿಯ ಪೇಳಿ
ಇರದೆ ಪಾವಕರೈವತ ಪರ್ಜನ್ಯಾದ್ಯರ
ನಾರಿಯರು ಕಾಲಾಭಿಮಾನಿ ಜಯಾದ್ಯರೆನ್ನಿ
ಸುರಧೇನು ಗುಹ್ಯಕ ಯಮಭಟರ ಯಕ್ಷಾದಿ
ಸುರದೂತನರಾಣಿ ಬಧ ಉಷಶ ನಿ ಇಲ್ಲಿಗೆ
ವಿರಚಿಸು ಪಾವಕ ವಿಡಿದು ಎಣಿಕೆ ಮಾಡೆ
ಎರಡೊಂಭತ್ತು ಸಾವಿರ ಏಳುನೂರು
ಸರಿಯೆನ್ನಿ ಇತ್ತ ಕೆಲವು ದೇವತಿಗಳ ಹೆಂ
ಡರು ಬುಧ ಶನಿ ಪತ್ನಿಯರು ತೀರ್ಥರು
ವರ ಪುಷ್ಕರ ಮತ್ತೆ ಕಿಂಚಿತು ದೇವತಿಗಳು
ನಿರುತ ಈ ಬಗೆ ತಿಳಿ ಇಲ್ಲಿಗೆ ತ್ರಿಂಶತಿ
ಎರಡೊಂದು ಸಾವಿರ ಕಡಿಮೆ ನವಕೋಟಿಯು
ಅರಿವದು ಮುಂದೆ ಅನಾಮಸುರರು
ಎರಡು ಹನ್ನೆರಡುಕೋಟಿ ಜನರೆನ್ನಿರೋ
ಸ್ಮರಿಸು ಇಲ್ಲಿಗೆ ತ್ರಿ ಂಶತಿ ತ್ರಿಕೋಟಿಯು
ಪರಮ ಪುರುಷ ರಂಗ ವಿಜಯ ವಿಠಲರೇಯ
ತರತಮ್ಯ ಸಮದಿಂದ ಸರ್ವರನ್ನ ಪಾಲಿಸುವಾ ೩
ಅಟ್ಟತಾಳ
ಅನಲನ ಮಕ್ಕಳು ಅಜಾನಜದೇವರು
ಮುನಿಗಳು ಚಿರ ಪಿತೃ ಗಂಧರ್ವ ಅಪ್ಸರ
ಗಣ ಸಿದ್ಧ ಸಾಧ್ಯರು ಯಕ್ಷ ರಕ್ಷರು ವಿದ್ಯಾ
ಮನುಜ ಗಂಧರ್ವರು ಋಷಿ ಕ್ಷಿತಿ ಪಾಲರು
ಮನುಜೋತ್ತಮರು ತೃಣಾಂತ ಪರಿಯಂತ
ತನುವು ತನುವಿನಲ್ಲಿ ಮೂರು ಮೂರ್ತಿಗಳನ್ನು
ಮನದಲ್ಲಿ ತಿಳಿದು ಪೂಜಿಸುವರು ಯೋಗ್ಯತ
ಪ್ರಣತರ ಪರಿಪಾಲಾ ವಿಜಯ ವಿಠಲರೇಯ
ಘನವಾಗಿ ನಮ್ಮನು ಪೊರೆವನು ಬಿಡದೆ ೪
ಆದಿತಾಳ
ಲೇಶಾಕಾಶದಲ್ಲಿ ವಾಸವಾಗಿಪ ಸ
ರ್ವೇಶ ವಾಸುದೇವ ವಿಶಿಷ್ಟ ಗಣದೊಡನೆ
ದಾಸರಿಗೆ ಸರ್ವ ಭಷಣ ಯುಕ್ತನಾಗಿ
ಕೋಶದೊಳಗೆ ಸ್ವ ಪ್ರಕಾಶವಂತನಾಗಿ
ಕೀ ಸಲದಲ್ಲಿ ಪೊಳೆವ
ಕೇಶವ ದಯಾ ನಿಧಿ ವಿಜಯ ವಿಠಲರೇಯ
ಲೇಸು ಕೊಡುವ ಒಲಿದು ಈ ಪರಿ ತಿಳಿದವನೆ ೫
ಜತೆ
ಕಮಲಕರ್ಣಿಕೆ ಮಧ್ಯ ಕಮನೀಯ ಭಕುತಿಯಲಿ
ಕಮಲಕರ ವಿಜಯ ವಿಠಲನ್ನ ನೋಡಿರೊ ೬

೯೪
ಧ್ರುವತಾಳ
ಹೃದಯ ವ್ಯಾಪ್ತಿ ಪ್ರಾದೇಶವೆಂದೆಂಬೊ ಮೂರುತಿ
ಪದುಮ ಕರ್ಣಿಕೆ ಮೂಲದಲ್ಲಿ ಮೂಲೇಶ
ಇದೆ ಅಂಗುಟಾಗ್ರ ಪರಿಮಿತವೆನ್ನಿರೋ
ಪದುಮ ಕರ್ಣಿಕಾಗ್ರದಲಿ ಅಂಗುಟಾದನಿತು
ಇದೆ ಪ್ರಾಜ್ಞ ಮೂರುತಿ ಎಂದು ಕೊಂಡಾಡಿರೋ
ಸದ ಮಲ ವಾಗಿ ಸಂತತ ಒಪ್ಪುತಿಹವೊ ಸ
ನ್ನಿಧಿಯಾಗಿ ಜ್ಞಾನಿಗಳ ಪೊರೆವುತಿದೆ ಕೋ
ಪದುಮ ಸಂಭವವಿಡಿದು ತೃಣಜೀವ ಪರಿಯಂತ
ತದು ತದು ಶಾರೀರ ಪರಿಮಿತ ಗಣಿತ
ಅಧಿಕಾರ ತನದಿಂದ ನೋಳ್ಪದು ಭಿನ್ನ ಕಾಣೋ
ಇದೆ ಮೂರುವರ್ಣಾ ಶುಕ್ಲ ರಕ್ತ ನೀಲ
ಇದೆ ಶ್ರವಣ ಮನನ ಧ್ಯಾನ ಜಾಗ್ರತ ಸ್ವಪ್ನ ಸುಪ್ತ
ಇದರಂತೆ ಗುಣಿಸುವುದು ಒಂದೊಂದು ಭಾಗ
ವಿಧಿಮಾತುರ ಕೇವಲ ಅಸಂಪ್ರಜ್ಞವು
ಳಿದ ಋಜುಗಳಿಗೆ ಸ್ಪಷ್ಟತ್ವದಲಿ ಭೇದ
ತ್ರಿದಶ ಗಣಕೆ ನೋಡು ತಾರತಮ್ಯದಿಂದ
ಒದಗಿ ಸಾಧನ ಪ್ರಾರಬ್ಧ ದೇಹ
ಮುದದಿಂದ ಮತ್ರ್ಯರಿಗೆ ಕಾಲಾನುಸಾರ ಪ್ರಾಪ್ತಿ
ಇದೆ ಸರ್ವಜೀವರಿಗೆ ಅನುಕೂಲವು
ಇದರ ತರುವಾಯ ಅನಂತ ರೂಪಗಳು
ಹೃದಯೇಂದ್ರಿಯಗಳು ಸರ್ವ ದೇಹದಲ್ಲಿ
ನಿಧಿಯಾಗಿಪ್ಪವು ಎಣಿಕೆ ಮಾಡಲುಂಟೆ
ಅಧಿಕಾರದಂತೆ ಹರಿ ಕಾಣಿಸಿಕೊಂಬ
ಉದಯಾರ್ಕ ಸನ್ನಿಭ ವಿಜಯ ವಿಠಲರೇಯ
ಪದೋ ಪದಿಗೆ ತನ್ನನು ಕೊಂಡಾಡೆ ಒಲಿವ ೧
ಮಟ್ಟತಾಳ
ಅಂತ್ಯ ಬಾಹ್ಯ ಉಭಯ ತ್ರಿವಿಧ ದರ್ಶಿಗಳೆನ್ನು
ಸಂತರು ಇದರೊಳಗೆ ಅಲ್ಲ ಮಹತ್ತಾಗಿ
ಸಂತತ ಕಾಂಬುವರು ತಮ್ಮ ಸ್ವಯೋಗ್ಯತದಿ
ಚಿಂತಿಸಿ ಮೂರ್ತಿಯ ಒಂದೊಂದು ಪ್ರಕಾರ
ಎಂತೆಂತು ನೋಡುತ್ತ ಪೂರ್ಣ ಭಕುತಿತನಕ
ಸಂತು ಜನರ ಸ್ಪರ್ಧಿ ದುಃಖ ಪ್ರಾರಬ್ಧಾ
ಹಂತ ಜನಾವೇಶ ಮಿಕ್ಕಾದ ದೋಷ
ನಿಂತ ಕಾಲಕೆ ತಮ ತಮ್ಮಂತರಂಗದಲ್ಲಿ
ಕಾಂತಿ ವಿಶೇಷದಲಿ ಹರಿಯ ಕಾಂಬುವರಯ್ಯಾ
ಅಂತರಾತುಮ ಹರಿ ವಿಜಯ ವಿಠಲರೇಯ
ಇಂತಿಂತು ನಡಿಸಿ ಮುಕ್ತಿ ಕೊಡುವ ಬಿಡದೆ ೨
ತ್ರಿವಿಡಿ ತಾಳ
ಪುರುಷಸೂತ್ರ ಪ್ರಕೃತಿ ಶ್ರದ್ಧ ಜೀವಕಾಲ
ಹರ ಷಣ್ಮಹಿಷೇರು ವಾರುಣ್ಯಾದಿ
ಸುರಪಸ್ಮರ ಅಹಂಕಾರ ಅನಿರುದ್ಧಾದಿ ನಾಲ್ಕು
ಎರಡು ಜನ ಪ್ರವಹ ಸೂರ್ಯಾದ್ಯರು
ವರುಣ ನಾರದ ಭೃಗು ಪಾವಕ ಪ್ರಸೂತಿ
ಮರೀಚ್ಯಾದಿ ಸಪ್ತ ಗಾಧೇಯವನು
ಮಿತ್ರ ನೈರುತ್ಯ ಗುರುಪತ್ನಿ ಪ್ರಾವಹಿ ವಿ
ಸ್ತರಿಸುವೆ ವೈದ್ಯ ವಿಷ್ವಕ್ಸೇನ
ಮರುತಾದಿತ್ಯರು ರುದ್ರ ವಿಶ್ವದೇವರು ಸಪ್ತ
ಪರಿವಸುಗಳು ದ್ಯಾವಾ ಪೃಥುವಿ ಋಭರು
ಸರಿ ಇಲ್ಲೆಗೆ ಕೇಳಿ ಮುನ್ನೂರು ಮೂರು ಸಾ
ವಿರ ದೇವತಿಗಳನ್ನು ಗುಣಿಸಿರಯ್ಯಾ
ಮರಳೆ ಪಾವಕಾದ್ಯರು ಬಲ್ಯಾದಿಗಳು ಸಪ್ತ
ಅರಿವದು ಮುಂದೆ ಮನುಗಳು ಹನ್ನೊಂದು
ಅರಸು ಜನರು ನೂರು ಗಂಧರ್ವರೆಂಟು ಮಂದಿ
ಸರಸ್ವತಿ ಪ್ರಾಕೃತ ವಾಕ್ಯಾದೊಡತಿ
ತರುವಾಯ ದಶರುದ್ರ ರಾಕಾ ಶ್ರೀ ಪ್ರಾಚಿನಿ (?)
ತರುಣೀರುಷೆ ಭಾರ್ಯರ ಸಹಿತ
ಸುರನದಿ ಪರ್ಜನ್ಯ ಸೂರ್ಯ ಚಂದ್ರಮ ಭಾ
ಸ್ಕರ ಅನಿರುದ್ಧನ್ನ ಸತಿಯ ಪೇಳಿ
ಇರದೆ ಪಾವಕರೈವತ ಪರ್ಜನ್ಯಾದ್ಯರ
ನಾರಿಯರು ಕಾಲಾಭಿಮಾನಿ ಜಯಾದ್ಯರೆನ್ನಿ
ಸುರಧೇನು ಗುಹ್ಯಕ ಯಮಭಟರ ಯಕ್ಷಾದಿ
ಸುರದೂತನರಾಣಿ ಬಧ ಉಷಶ ನಿ ಇಲ್ಲಿಗೆ
ವಿರಚಿಸು ಪಾವಕ ವಿಡಿದು ಎಣಿಕೆ ಮಾಡೆ
ಎರಡೊಂಭತ್ತು ಸಾವಿರ ಏಳುನೂರು
ಸರಿಯೆನ್ನಿ ಇತ್ತ ಕೆಲವು ದೇವತಿಗಳ ಹೆಂ
ಡರು ಬುಧ ಶನಿ ಪತ್ನಿಯರು ತೀರ್ಥರು
ವರ ಪುಷ್ಕರ ಮತ್ತೆ ಕಿಂಚಿತು ದೇವತಿಗಳು
ನಿರುತ ಈ ಬಗೆ ತಿಳಿ ಇಲ್ಲಿಗೆ ತ್ರಿಂಶತಿ
ಎರಡೊಂದು ಸಾವಿರ ಕಡಿಮೆ ನವಕೋಟಿಯು
ಅರಿವದು ಮುಂದೆ ಅನಾಮಸುರರು
ಎರಡು ಹನ್ನೆರಡುಕೋಟಿ ಜನರೆನ್ನಿರೋ
ಸ್ಮರಿಸು ಇಲ್ಲಿಗೆ ತ್ರಿ ಂಶತಿ ತ್ರಿಕೋಟಿಯು
ಪರಮ ಪುರುಷ ರಂಗ ವಿಜಯ ವಿಠಲರೇಯ
ತರತಮ್ಯ ಸಮದಿಂದ ಸರ್ವರನ್ನ ಪಾಲಿಸುವಾ ೩
ಅಟ್ಟತಾಳ
ಅನಲನ ಮಕ್ಕಳು ಅಜಾನಜದೇವರು
ಮುನಿಗಳು ಚಿರ ಪಿತೃ ಗಂಧರ್ವ ಅಪ್ಸರ
ಗಣ ಸಿದ್ಧ ಸಾಧ್ಯರು ಯಕ್ಷ ರಕ್ಷರು ವಿದ್ಯಾ
ಮನುಜ ಗಂಧರ್ವರು ಋಷಿ ಕ್ಷಿತಿ ಪಾಲರು
ಮನುಜೋತ್ತಮರು ತೃಣಾಂತ ಪರಿಯಂತ
ತನುವು ತನುವಿನಲ್ಲಿ ಮೂರು ಮೂರ್ತಿಗಳನ್ನು
ಮನದಲ್ಲಿ ತಿಳಿದು ಪೂಜಿಸುವರು ಯೋಗ್ಯತ
ಪ್ರಣತರ ಪರಿಪಾಲಾ ವಿಜಯ ವಿಠಲರೇಯ
ಘನವಾಗಿ ನಮ್ಮನು ಪೊರೆವನು ಬಿಡದೆ ೪
ಆದಿತಾಳ
ಲೇಶಾಕಾಶದಲ್ಲಿ ವಾಸವಾಗಿಪ ಸ
ರ್ವೇಶ ವಾಸುದೇವ ವಿಶಿಷ್ಟ ಗಣದೊಡನೆ
ದಾಸರಿಗೆ ಸರ್ವ ಭಷಣ ಯುಕ್ತನಾಗಿ
ಕೋಶದೊಳಗೆ ಸ್ವ ಪ್ರಕಾಶವಂತನಾಗಿ
ಕೀ ಸಲದಲ್ಲಿ ಪೊಳೆವ
ಕೇಶವ ದಯಾ ನಿಧಿ ವಿಜಯ ವಿಠಲರೇಯ
ಲೇಸು ಕೊಡುವ ಒಲಿದು ಈ ಪರಿ ತಿಳಿದವನೆ ೫
ಜತೆ
ಕಮಲಕರ್ಣಿಕೆ ಮಧ್ಯ ಕಮನೀಯ ಭಕುತಿಯಲಿ
ಕಮಲಕರ ವಿಜಯ ವಿಠಲನ್ನ ನೋಡಿರೊ ೬

ಹರಿನಾಮ ಸ್ಮರಣೆಯ ಫಲಗಳ

೧೧೨
ಧ್ರುವತಾಳ
ಹೆಜ್ಜೆ ಹೆಜ್ಜೆಗೆ ಒಮ್ಮೆ ಅರ್ಜುನಸಾರಥಿ ಕೃಷ್ಣ
ಮೂರ್ಜಗದೊಡಿಯಾ ಧೂರ್ಜಟಿಯ ಪ್ರಿಯಾ
ನಿರ್ಜರರ ಪಾಲಾ ವಿವರ್ಜಿತಲಯ ಕಾಯೊ
ಸಜ್ಜನರ ಮನೋಹರ ದುರ್ಜನರ ಸಂಹಾರಾ
ವಜ್ಜರ ಪಂಜರ ಭಕುತಜನಕೆ ಎಂದು
ಲಜ್ಜೆಯನು ತೊರೆದು ನಿರ್ಲಜ್ಜರಾಗಿ
ಪರ್ಜನ್ಯಗರೆವ ಘನಗರ್ಜನೋಪಾದಿಯಲಿ
ಗರ್ಜನೆಯ ಮಾಡುತ್ತ ಈ ಜಗದೊಳಗೆ
ಪರ್ಜನ್ಯನಾಮ ಸಿರಿ ವಿಜಯವಿಠ್ಠಲ ಪಾ
ದಾಬ್ಜವನು ಸ್ಮರಿಸದ ದುರ್ಜೀವಿಗೆ ತಮಸು ೧
ಮಟ್ಟತಾಳ
ನಡೆನಡೆದು ದಾರಿ ವಿಡಿವಿಡಿದು ಪೋಗು-
ತಡಿಗಡಿಗೆ ನಲಿದು ಅಡಿಗಡಿಗೆ ಬಿಡದೇ
ಒಡಲೊಳಗಾಡುವನ ಒಡ ಒಡನೆ ಶಬ್ಧ
ನುಡಿನುಡಿದು ಹರುಷ ಪಡೆಪಡೆದ ಜನ
ದೊಡಿಯ ಅಮೃತನಾಮ ವಿಜಯ ವಿಠ್ಠಲನ್ನ
ಕಡುನಾಮಾಮೃತದೆಡೆಯುಣ್ಣದವನು
ಅಡಿಅಡಿಯಾಗಿ ಮಿಡಕೋಡು ಕಡೆಗಾಣೆ ೨
ತ್ರಿವಿಡಿತಾಳ
ಹರಿನಾಮವೇ ಸ್ನಾನ, ಹರಿನಾಮವೇ ಮೌನ
ಹರಿನಾಮವೇ ಧ್ಯಾನ, ಹರಿನಾಮವೇ ದಾನ
ಹರಿನಾಮವೇ ಗಾನ, ಹರಿನಾಮವೇ ಜ್ಞಾನ
ಹರಿನಾಮವೇ ಸರ್ವ ತೀರ್ಥಯಾತ್ರೆಗಳು
ಹರಿನಾಮವೇ ಕೃತು ಹರಿನಾಮವೇ ವ್ರತ
ಹರಿನಾಮವೇ ಸಕಲ ಸಾಧನ ಸಂಪತ್ತು
ಹರಿನಾಮವೇ ಗತಿ ಹರಿನಾಮವೇ ಮತಿ
ಹರಿನಾಮವೇ ಹಿತ, ಹರಿನಾಮಾಮೃತಾ
ಹರಿನಾಮ ನೆನೆಯದಿರೆ ಶರಧಿ ಬತ್ತಿದ ಮೀನು
ಒರಲಿದಂತೆ ಒರಲಿ ಹೀನರಾಗುವರು
ಹರಿನಾಮ ಒಂದೆ ಉಳ್ಳರೆ ಬಂದ ದುರಿತ ಪರಿ
ಹರ ಮಾಡುವನು ಗಂಭೀರ ವಿಜಯವಿಠ್ಠಲಾ೩
ಅಟ್ಟತಾಳ
ಹರಿಯೆಂದು ದಿನದಲ್ಲಿ ಸ್ಮರಿಸದ ನರಗುರಿಯಾ
ಕರೆಯನೋ ಸಂಗಡ ನೆರೆಯನೊ ಬೆರೆಯೆನೋ
ಮರಳೆ ಸರಸದಲ್ಲಿ ಕುಳ್ಳಿರೆ ನಿಂದಿರೆ
ಸರಿದು ಪೋಗುವನತಿ ದೂರದಲ್ಲಿ ನೋಡಿ
ದುರುಳಗೆ ಶರಣೆಂದು ಎರಗಿದರೆ ಯಮ
ಕರವ ಕತ್ತರಿಸುವ ಕರುಣವಿಲ್ಲದಲೆ
ಹರಿನಾಮ ಮರೆದವ ಮರವೆನ್ನಿ ಮರವೆನ್ನಿ
ಮರಪುಟ್ಟಿ ಕುಲಕೆ ವಿರೋದಿಯಾದನೆನ್ನಿ
ಸುರಪಾಲ ಮಹಿಧರ ವಿಜಯವಿಠಲನ್ನ
ಮರೆದು ತನ್ನಯ ಕುಲವ ನಿರಯದೊಳಿಡುವನು೪
ಆದಿತಾಳ
ಕೇಳಿ ಕೇಳಿ ಇಹ ಜನರು ಪೇಳುವೆನು ಕ್ಷಿತಿಯಲ್ಲಿ
ಕಾಲಾಕಾಲಾವೆನ್ನದೆ ಶ್ರೀ ಲೋಲನ್ನ ಕೊಂಡಾಡಿದರೆ
ಫಾಲದಲ್ಲಿ ಬರೆದ ಹೀನಲಿಖಿತಾ ತೊಡದೂ
ಪಾಲಿಸುವ ಪರಮ ಸಂಪದವನಿತ್ತು ಇವನ
ಪೀಳಿಗಿಯ ಲಾಲಿಸುವ ತಿಳಿವಿಂದಲಿ ಕರಿಸಿ
ಆಳುವ ಸಂಸ್ಥಾನ ನಾಮ ವಿಜಯ ವಿಠ್ಠಲ ಕರು
ಣಾಳಿಯ ನೆನೆಯದವನು ನಾಮಾನಾಮಾ ಇಟ್ಟರೇನು ೫
ಜತೆ
ನರಕದವರ ಉದ್ದಾರವ ಮಾಡಿದ ನಾಮಾ
ಪರಿಪೂರ್ಣರಕ್ಷಣ ವಿಜಯ ವಿಠ್ಠಲನ ನಾಮಾ ೬


ಅಂಜಿಪ ಕ್ರೋಧವ ಬಿಡಿಸೊ ಗುಲಗಂಜಿ ಮಾಧವಾ
ಕಂಜದಳ ಲೋಚನ ಕುಂಜರ ಪರಿಪಾಲಾ ಪ
ಧರ ಸುದರುಶನ ಕೌಮೋದರೆ ಧರ ಸಂಕರುಷಣ
ಪರಮ ಮಂಗಳ ಚತುರ ಹಸ್ತ ಪಂಪಾ
ಪುರಧೀಶ ಶಿವನುತ ಕರುಣಸಾಗರ ದೇವಾ
ಗರುಡಗಮನ ಸುಂದರಧರ ಧರಶಾಯಿ
ಧರಧರವರ್ಣ ಭೂಧರಧರ ಮಹಿಮಾ೧
ಕೇಶವಾಚ್ಯುತ ಕೃಷ್ಣ ಹೃಷಿಕೇಶ ಮಹಾಪ್ರೀತ
ಲೇಸು ದಕ್ಷಿಣ ವಾರಣಾಸಿಯೆ ಇದು ಸರ್ವ
ದೇಶದೊಳಹುದೆಂದು ದಾಸರಿಗೆ ಉಪದೇಶ ಪೇಳುವ
ದೋಷವ ಕಳೆಯುತ ವಾಸುದೇವ ತುಂಗಾವಾಸ ವಿಲಾಸ ೨
ವಂದನೆ ಮಾಡುವೆ ಹಸ್ತ ಮುಗಿದು
ವಂದನೆ ಬೇಡುವೆ ಎಂದಿಗೆಂದಿಗೆ ಪರರ ಪೊಂದಿಸಿ ಬೇಡುವ
ಮಂದವೆ ಕೊಡದಿರು ಇಂದೆನ್ನ ಬಿಡದಿರು
ಇಂದು ವದನ ಸಿರಿ ವಿಜಯವಿಠ್ಠಲ ಮು
ಕುಂದ ಲಕುಮಿಪತಿ ನಂದನ್ನ ಕಂದಾ ೩

ಅನಂತಗಿರಿವಾಸ ಕೊಡು ಎನಗೆ ವೀಸಾ :


ಅನಂತಗಿರಿ ವಾಸ ಕೊಡು ಎನಗೆ ಲೇಸಾ
ಎನ್ನಂತರಂಗದಲ್ಲಿಪ್ಪ ಜಗದಪ್ಪಾ ಪ
ಬಂದೆ ನಿಂದೆ ನಿಂದೆ ತಲೆವಾಗಿ ವಂದೆ
ವಂದನೆ ಮಾಡಿದೆ ಕೃಪೆಮಾಡು ಎಂದೆ
ಕುಂದ್ಯರನು ನೋಡು ಜಗತ್ರಯದ ತಂದೆ
ಹಿಂದೆ ನೊಂದದರಿಂದ ಗತಿಕಾಣೆ ಮುಂದೆ ೧
ಕತ್ತಲೆಯೊಳು ಬಿದ್ದೆ ಸಂಸಾರದಿಂದ
ಸುತ್ತಿದೆ ಪರಿಪರಿ ಒದಗುವ ಬಂಧಾ
ಮೊತ್ತದಲ್ಲಿಗೆ ಸೇರಿಯಿದ್ದದ್ದರಿಂದ
ಚಿತ್ತದಲ್ಲಿ ನಿನ್ನ ಮರೆದೆ ಗೋವಿಂದಾ ೨
ರಕ್ಷಿಸುವುದು ತಾರಕ್ಷ್ಯ ತುರಂಗ
ಅಕ್ಷಯ ಮರೆಕೊಡು ಭವಭಯಭಂಗಾ
ಲಕ್ಷ್ಮೀನಾಯಕ ನೀ ಭಕ್ತಜನ ಸಂಗ
ಮೋಕ್ಷದಾಯಕ ವಿಜಯವಿಠ್ಠಲ ನರಸಿಂಗಾ೩

ಅಂತರಂಗದ ಕದವು ತೆರೆಯಿತಿಂದು
ತತ್ವವಿವೇಚನೆ
೪೯೮
ಅಂತರಂಗದ ಕದವು ತೆರೆಯಿತಿಂದು ಪ
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಅ.ಪ
ಏಸುದಿನವಾಯಿತೊ ಬೀಗಮುದ್ರೆಯ ಮಾಡಿ |
ವಾಸವಾಗಿದ್ದರೋ ದುರುಳರಿಲ್ಲಿ ||
ಮೋಸವಾಯಿತು ಇಂದಿನ ತನಕ ತಮಸಿನ |
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ೧
ಹರಿಕರುಣವೆಂಬಂಥ ಕೀಲಿ ಕೈ ದೊರಕಿತು |
ಗುರುಕರುಣವೆಂಬಂಥ ಶಕ್ತಿಯಿಂದ ||
ಪರಮ ಭಾಗವತರ ಸಹವಾಸದಲಿ ಪೋಗಿ |
ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ ೨
ಸುತ್ತಲಿದ್ದವರೆಲ್ಲ ಪಲಾಯನವಾದರು |
ಭಕ್ತಿಕಕ್ಕಡವೆಂಬ ಜ್ಞಾನದೀಪ ||
ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ |
ಎತ್ತನೋಡಿದರತ್ತ ಶೃಂಗಾರಸದನ ೩
ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು |
ಪರ ದಾರಿಗೆ ಪ್ರಾಣ ಜಯವಿಜಯರು ||
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ |
ಸರಸಿಜನಾಭನ ಅರಮನೆಯ ಸೊಬಗು ೪
ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ |
ರಮೆಧರೆಯರಿಂದಲಾಲಿಂಗಿತ್ವದಿ ||
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- |
ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ ೫

ಹಾಡಿನ ಹೆಸರು :ಅಂತರಂಗದ ಕದವು ತೆರೆಯಿತಿಂದು
ಹಾಡಿದವರ ಹೆಸರು :ಶ್ರೀನಾಥ್ ಚಕ್ರವರ್ತಿ
ರಾಗ :ರಾಗಮಾಲಿಕೆ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ನಾಗಮಣಿ ಶ್ರೀನಾಥ್ ಎಂ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಆನಂದಾ ಆನಂದಾ ಮತ್ತೆ

ಆನಂದಾ ಆನಂದಾ ಮತ್ತೆ ಪರಮಾನಂದಾ
ಆನಂದನನಂದನೊಲಿಯೆ ಏನಂದದ್ದೆ ವೇದ ವೃಂದಾ ಪ
‘ಅ’ಮೊದಲು ‘ಕ’್ಷ ಕಾರಾಂತ ಈ ಮಹಾವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ೧
ಪೋಪದು ಬರುತಿಪ್ಪುದು ಕೋಪಶಾಣಿ ಮಾಡುವುದು
ರೂಪ ಲಾವಣ್ಯವು ಹರಿವ್ಯಾಪಾರವೆಂದವರಿಗೆ ೨
ಜಲ ಕಾಷ್ಠ ಶೈಲ ಗಗನ ನೆಲ ಪಾವಕ ವಾಯು ತರು
ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ ೩
ತಾರೊ ಬಾರೊ ಬೀರೊ ಸಾರೊ ಮಾರೊ ಕೋರೊ ಹಾರೊ
ಹೋರೊ ಸೇರೊ ಕೋರೊದೆಂಬ ದಿಶಾಪ್ರೇರಣೆ ಎಂದವರಿಗೆ ೪
ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಸಿದ್ಧ ವಿಜಯವಿಠ್ಠಲನ ಪೊಂದಿ ಕೊಂಡಾಡುವವರಿಗೆ ೫

ಹಾಡಿನ ಹೆಸರು :ಆನಂದಾ ಆನಂದಾ ಮತ್ತೆ
ಹಾಡಿದವರ ಹೆಸರು :ಸುರೇಖಾ ಕೆ. ಎಸ್.
ಸಂಗೀತ ನಿರ್ದೇಶಕರು:ನಾರಾಯಣ ಹೆಚ್. ಕೆ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಎಲೆ ಮನ ಮುರಾರಿಯನೆ ಕೊಂಡಾಡು
೧೯೧
ಮುರಾರಿಯನೆ ಕೊಂಡಾಡು ಎಲೆ ಮನ ಮುರಾರಿ ಪ
ಮಂದಿಯ ಮತಿಗೆ ಯೆಂದೆಂದು ಮರುಗದೆ |
ಮುಂದಿನ ಗತಿಯನು ನೋಡು ೧
ಕಾಲನ ದೂತ ಕಾಲಿಗೆ ಬಿದ್ದರೆ |
ನಾಳೆಗೆ ನಿಲ್ಲೋರೆ ನೋಡು ೨
ರಾಜೀವ ಮುಖಿಯರ ಸೋಜಿಗ ಮೆಚ್ಚಿದೆ |ವಿಜಯವಿಠ್ಠಲನ ಬೇಡು ೩

ಹಾಡಿನ ಹೆಸರು :ಎಲೆ ಮನ ಮುರಾರಿಯನೆ ಕೊಂಡಾಡು
ಹಾಡಿದವರ ಹೆಸರು :ವೆಂಕಟೇಶ ಗೋಡ್ಖಿಂಡಿ
ಸಂಗೀತ ನಿರ್ದೇಶಕರು :ಪ್ರವೀಣ್ ಗೋಡ್ಖಿಂಡಿ
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಏನಾದರೇನು ಮೋಕ್ಷವಿಲ್ಲ
೫೦೯
ಏನಾದರೇನು ಮೋಕ್ಷವಿಲ್ಲ ಜ್ಞಾನವಿಲ್ಲದೆ ಪ
ವೇದ ಓದಿದರೇನು ಶಾಸ್ತ್ರ ನೋಡಿದರೇನು |
ಕಾದಿ ಕಾದಾಡಿ ಗೆದ್ದರೇನು | ಜ್ಞಾನವಿಲ್ಲದೆ ೧
ಕಾಶಿಗೆ ಹೋದರೇನು ಕಾನನ ಸೇರಿದರೇನು |
ಕಾಶಿ ಪೀತಾಂಬರ ಉಟ್ಟರೇನು, ಜ್ಞಾನವಿಲ್ಲದೆ ೨
ಜಪತಪ ಮಾಡಲೇನು, ಜಾಣತನ ಮೆರೆದರೇನು |
ವಿಜಯವಿಠಲನ ಸಾರಿದರೇನು, ಜ್ಞಾನವಿಲ್ಲದೆ ೩

ಹಾಡಿನ ಹೆಸರು :ಏನಾದರೇನು ಮೋಕ್ಷವಿಲ್ಲ
ಸಂಗೀತ ನಿರ್ದೇಶಕರು :ಶ್ರೀಲತಾ ಆರ್. ಎನ್.
ಸ್ಟುಡಿಯೋ : ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

ಕಾಯೆ ಕರುಣಾಂಬುಧಿಯೇ
೨೦೬
ಕಾಯೆ ಕರುಣಾಂಬುಧಿಯೇ |
ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ಪ
ಮಾಯೆ ನಾರಾಯಣನ್ನ ಜಾಯೆ ಸತತ ಜ್ಞಾನ |
ವೀಯೆ ಭಕ್ತರ ಪ್ರೀಯೇಅಪ
ಕನ್ನಾಮಣಿಯೆ ಕಾಮಿನಿ ಮಂಗಳವಾಣಿ |
ಸನ್ನುತೆ ಲೋಕ ಜನನಿ |
ನಿನ್ನ ಚರಣಯುಗ್ಮ |
ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ |
ಭಿನ್ನೆ ಭಾಗ್ಯಸಂಪನ್ನೆ ||
ಮನ್ನಿಸಿ ಮುದದಿಂದ |
ಬಿನ್ನಪ ಲಾಲಿಸು |
ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ ೧
ಅತಿದಯವಂತೆ ನೀನೆಂದು ಬೇಗದಿ ಬಂದು |
ನುತಿಸಿದೆ ದೀನನಾಗಿಂದೂ |
ಪತಿತರೊಳಿಡದಲೆ |
ಗತಿಗೆ ಸಮ್ಮೊಗಮಾಡು |
ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ |
ಪತಿಯಲಿ ಜನಿಸಿದೆ|
ಪತಿಗೆ ಸತಿಯಾದೆ |
ಪತಿಯ ಸಂಗಡ ಜ | ನಿತಳಾದ ಚರಿತೆ೨
ಕುಂಕುವರತ ರಾಜಿತೆ ಧವಳಗೀತೆ |
ಪಂಕಜಸದನೆ ಖ್ಯಾತೆ |
ಲೆಂಕಾ ವತ್ಸಲೆ ಸರ್ವಾಲಂಕಾರ ಮಾಯೆ ರವಿ |
ಸಂಕಾಸೆ ಬಹುಕಾಲ |
ಸಂಕಟವ ವಿನಾಶೆ |
ಮಂಕು ಮತಿಹರ ವಿಜಯವಿಠ್ಠಲನ |ಸಂಕಲ್ಪಕೆ | ಕ | ಳಂಕವಾಗದಂತೆ೩

ಹಾಡಿನ ಹೆಸರು :ಕಾಯೆ ಕರುಣಾಂಬುಧಿಯೇ
ಹಾಡಿದವರ ಹೆಸರು :ಪ್ರತಿಮಾ ಬೆಳ್ಳಾವೆ
ರಾಗ :ಅಹಿರ್ ಭೈರವ್
ತಾಳ :ದಾದ್‍ರಾ
ಶೈಲಿ :ಹಿಂದೂಸ್ಧಾನಿ
ಸಂಗೀತ ನಿರ್ದೇಶಕರು :ಶಕುಂತಲಾ ನರಸಿಂಹನ್
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಕೊಡುವವನು ನೀನು
೩೮೨
ಕೊಡುವವನು ನೀನು ಕೊಂಬುವನು ನಾನು ಪ
ಬಡಮನದ ಮನುಜನ ಬೇಡಿ ಫಲವೇನುಅ.ಪ
ಹದಿನಾರು ಹಲ್ಲುಗಳ ಬಾಯ್ದೆರದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು
ಮದನ ಕೇಳಿಗೆ ನೂರನೊಂದಾಗಿ ನೋಡುವನು
ಮದಡ ಮಾನವನೇನು ಕೊಡಬಲ್ಲ ಹರಿಯೆ ೧
ಗತಿಯಲ್ಲವೆಂತೆಂದು ನಾನಾ ಪ್ರಕಾರದಲಿ
ಮತಿಗೆಟ್ಟು ಪೊಗಳಿದರೆ ಅವನು ತನ್ನ
ಸತಿಸುತರ ಕೇಳಬೇಕೆಂದು ಮೊಗ ತಿರುಹುವ
ಅತಿ ದುರುಳ ಮತ್ತೇನು ಕೊಡಬಲ್ಲ ಹರಿಯೆ ೨
ಹೀನ ವೃತ್ತಿಯ ಜನರಿಗಾಸೆಯನು ಬಡುವದು
ಗಾಣದೆತ್ತು ತಿರುಗಿ ಬಳಲಿದಂತೆ
ಭಾನು ಕೋಟಿ ತೇಜ ವಿಜಯವಿಠ್ಠಲರೇಯ
ನೀನಲ್ಲದನ್ಯತ್ರ ಕೊಡುಕೊಂಬುರಂಟೆ ೩

ಹಾಡಿನ ಹೆಸರು :ಕೊಡುವವನು ನೀನು
ಹಾಡಿದವರ ಹೆಸರು :ಶ್ರೀಶುಕ
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ್, ಬೆಂಗಳೂರು

ನಿರ್ಗಮನ

ಜರಿಯಬೇಡ
ಜರಿಯಬೇಡ ಹರಿಯ ಮರೆಯಬೇಡೆಂದೆಂದು |ತಿರಿಯಬೇಡ ಖಳರ ಮನೆಗೆ ಪೋಗಿ ||ಪ||ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು |ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||ಅ|| ||ಪ||
ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ |ಶ್ರೀಕಾಂತ ಚರಿತೆಯನು ಕೇಳದಿರಬೇಡ |ಪಾಕವನು ಮಾಡಿ ಏಕಾಂಗಿಯಾಗುಣಬೇಡ|ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||
ಪಂಡಿತರು ಪಾಮರರು ಆರಿಗಾದರೂ ನಿನ್ನ |ಕಂಡವರಿಗೆಲ್ಲ ಕೌತುಕವು ತೋರಿದರೂ |ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು |ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ||
ಮಂದಮತಿಗಳ ಕೂಡೆ ಮಾತಾಡಲಿ ಬೇಡ |ನಿಂದಕರ ಕಣ್ಣೆತ್ತಿ ನೋಡಬೇಡ |ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ|ದ್ವಂದ್ವದಲಿ ಮಸ್ತಕವನಿಡದಿರಬೇಡ ||

ಹಾಡಿನ ಹೆಸರು :ಜರಿಯಬೇಡ
ಹಾಡಿದವರ ಹೆಸರು :ಶಮಿತಾ ಮಲ್ನಾಡ್
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ, ಬೆಂಗಳೂರು

ನಿರ್ಗಮನ

ಭಕುತ ಜನ ಮುಂದೆ ನೀನವರ
೬೦
ಭಕುತ ಜನ ಮುಂದೆ ನೀನವರ ಹಿಂದೆ ಪ
ಯುಕುತಿ ಕೈಗೊಳ್ಳದೊ ಗಯ ಗದಾಧರನೆ ಅ ಪ
ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ |
ಕಟ್ಟಲೆಯಲಿ ಹರಿಗೋಲು ಹಾಕಿ ||
ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ |
ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? ೧
ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- |
ಸ್ಸಾಳ ನಾನಾವಾದ್ಯ ಘೋಷಣಗಳು ||
ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ |
ಆಳು ಮುಂದಲ್ಲದೆ ಅರಸು ತಾ ಮುಂದೆ?೨
ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ |
ಸತ್ಸಂಗತಿಗೆ ಹರಿದಾಸರೆಲ್ಲ ||
ವತ್ಸಲ ಸಿರಿ ವಿಜಯವಿಠ್ಠಲ ವೆಂಕಟಾಧೀಶ
ವತ್ಸ ಮುಂದಲ್ಲದೆ ಧೇನು ತಾ ಮುಂದೆ ? ೩

ಹಾಡಿನ ಹೆಸರು :ಭಕುತ ಜನ ಮುಂದೆ ನೀನವರ
ಹಾಡಿದವರ ಹೆಸರು :ಮಡಿಕೇರಿ ನಾಗೇಂದ್ರ ಎಂ. ಎ.
ರಾಗ :ಶುದ್ಧಸಾರಂಗ
ಸಂಗೀತ ನಿರ್ದೇಶಕರು :ಶ್ರೀನಿವಾಸ್ ಟಿ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು
ನಿರ್ಗಮನ

ಭಕುತಿ ಸುಖವೊ ರಂಗ
೬೧
ಭಕುತಿ ಸುಖವೊ ರಂಗ ಮುಕುತಿ ಸುಖವೊ ಪ
ಭಕುತಿ ಸುಖವೊ ಮುಕುತಿ ಸುಖವೊ |
ಯುಕುತಿವಂತರೆಲ್ಲ ಹೇಳಿ ಅ.ಪ.
ಭಕುತಿ ಮಾಡಿದ ಪ್ರಹ್ಲಾದ |
ಮುಕುತಿಯನ್ನು ಪಡೆದುಕೊಂಡ |
ಮುಕುತಿ ಬೇಡಿದ ಧ್ರುವರಾಯ |
ಯುಕುತಿಯಿಂದ ಹರಿಯ ಕಂಡ ೧
ಭಕುತಿ ಮಾಡಿದ ಅಜಮಿಳನು |
ಅಂತ್ಯದಲಿ ಹರಿಯ ಕಂಡ |
ಮುಕುತಿ ಬೇಡಿದ ಕರಿರಾಜ |
ದುರಿತಗಳನು ಕಳೆದುಕೊಂಡ ೨
ಭಕುತಿ ಮುಕುತಿದಾತ ನಮ್ಮ |
ಲಕುಮಿಯರಸ ವಿಜಯವಿಠ್ಠಲ ||
ಶಕುತನೆನುತ ತಿಳಿದು ನಿತ್ಯ |
ಭಕುತಿಯಿಂದ ಭಜನೆ ಮಾಡಿರೊ ೩

ಹಾಡಿನ ಹೆಸರು :ಭಕುತಿ ಸುಖವೊ ರಂಗ
ಹಾಡಿದವರ ಹೆಸರು : ನಾರಾಯಣ ಹೆಚ್. ಕೆ.
ಸಂಗೀತ ನಿರ್ದೇಶಕರು :ನಾರಾಯಣ ಹೆಚ್. ಕೆ.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಸದಾ ಎನ್ನ ಹೃದಯದಲ್ಲಿ ವಾಸ
೪೪೦
ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿನಾದಮೂರ್ತಿ ಮೋದದಿಂದ ನಿನ್ನ ಪಾದ ಭಜಿಸುವೆ ಅ.ಪಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿಗಾನಲೋಲನ ಕುಳ್ಳಿರಿಸಿಧ್ಯಾನದಿಂದ ಭಜಿಸುವೆ೧ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಮುಕ್ತನಾಗಬೇಕು ಯೆಂದು ಮುತ್ತಿನಾರತಿ ಎತ್ತುವೆ ೨ನಿನ್ನ ನಾನು ಬಿಡುವನಲ್ಲಎನ್ನ ನೀನು ಬಿಡಲು ಸಲ್ಲಘನ್ನ ಮಹಿಮ ವಿಜಯವಿಠ್ಠಲ ನಿನ್ನ ಭಕ್ತರ ಕೇಳೊ ಸೊಲ್ಲ ೩

ಹಾಡಿನ ಹೆಸರು :ಸದಾ ಎನ್ನ ಹೃದಯದಲ್ಲಿ ವಾಸ
ಹಾಡಿದವರ ಹೆಸರು :ಕೇದಾರ್ ಸಿ. ಎಸ್.
ಸಂಗೀತ ನಿರ್ದೇಶಕರು :ಶ್ಯಾಮಲಾ ಜಿ. ಭಾವೆ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು
ನಿರ್ಗಮನ

Leave a Reply

Your email address will not be published. Required fields are marked *