Categories
ರಚನೆಗಳು

ವಿಜಯದಾಸ

(ಉ) ಶ್ರೀ ಕೃಷ್ಣ
೧೫೮
ಅಂಗಿ ಕೊತ್ತೇನೆ | ಗೋಪಿ | ತಿಂಗಲವಾದೇನೆ |
ತಿಂಗಾದಿ ಪಿದಿದೆನು ಸಲಸಲ ಪೋಗಿ |
ಗಂಗಿಯ ತಿದೆಯಲ್ಲಿ ಆದಿ ಬಂದೇನು ಪ
ಕುಕುಕೊಲ್ಲೆ | ತಾಯಿಹಾಲು ಕುದಿದೇನು |
ಗೋಕುಲ ಮಕ್ಕಳ ಕೂದಾ ಕಲಿತು |
ಕಾಕಾಕೋಲು ಹೊದಾದೆನೆ ೧
ತಂದು ಕೊದು ಬ್ಯಾಗಾ ಕೈಗೆ ಚಿನ್ನಿಕೋಲು ಬೇಕಲ್ಲೆ |
ಉಂದೇನು ಕಲ್ಲಿಯ ಬುತ್ತಿಯ ಮತ್ತೆ |
ಹಿಂದಾಕಲುಗಳ ಕಾದು ತಂದೆನೊ ೨
ಅಪ್ಪತ್ತಿಕೊದು ಒಂದು ಮ್ಯಾಲೆ ತುಪ್ಪವು ತೊದಿಯದಕೆ |
ತಪ್ಪಿಗೆಯಿದಸೆ ಅಪ್ಪಗೆ ಪೇಳಿ
ವಪ್ಪುಗದಲಿ ವುದಿಕಲಿ ಕತ್ತೆ ೩
ಅಮ್ಮ ನೀ ತಿಂದೆನೆ ಯಿತ್ತು ಯೆಂಣೆ ಮೆದ್ದೆನೆ |
ವಮ್ಮೆ ತತಕು ಮೊಸಲು ಸುರಿದೇನು |
ತಮ್ಮನ ತೊತ್ತಿಯಿಂದಾ ಯಿಲೆಸೆ ೪
ಈ ಲೀಲೆಯ ನೋಡಿ ಮಗನ ತೋಳಲಿ ಬಿಗಿದಪ್ಪಿ |
ಮೂಲೋಕದರಸ ವಿಜಯವಿಠ್ಠಲ
ಆಲಯ ಪಾವನವೆಂದಳೆ ಗೋಪಿ ೫

ಅಂತರಂಗದ ಕದವು ತೆರೆಯಿತು … :
ತತ್ವವಿವೇಚನೆ
೪೯೮
ಅಂತರಂಗದ ಕದವು ತೆರೆಯಿತಿಂದು ಪ
ಎಂತು ಪುಣ್ಯದ ಫಲವು ಪ್ರಾಪ್ತಿ ದೊರಕಿತೊ ಎನಗೆ ಅ.ಪ
ಏಸುದಿನವಾಯಿತೊ ಬೀಗಮುದ್ರೆಯ ಮಾಡಿ |
ವಾಸವಾಗಿದ್ದರೋ ದುರುಳರಿಲ್ಲಿ ||
ಮೋಸವಾಯಿತು ಇಂದಿನ ತನಕ ತಮಸಿನ |
ರಾಶಿಯೊಳಗೆ ಹೂಳಿ ಕಾಣಿಸುತ್ತಿರಲಿಲ್ಲ ೧
ಹರಿಕರುಣವೆಂಬಂಥ ಕೀಲಿ ಕೈ ದೊರಕಿತು |
ಗುರುಕರುಣವೆಂಬಂಥ ಶಕ್ತಿಯಿಂದ ||
ಪರಮ ಭಾಗವತರ ಸಹವಾಸದಲಿ ಪೋಗಿ |
ಹರಿ ಸ್ಮರಣೆಯಿಂದಲ್ಲಿ ಬೀಗಮುದ್ರೆಯ ತೆಗೆದೆ ೨
ಸುತ್ತಲಿದ್ದವರೆಲ್ಲ ಪಲಾಯನವಾದರು |
ಭಕ್ತಿಕಕ್ಕಡವೆಂಬ ಜ್ಞಾನದೀಪ ||
ಜತ್ತಾಗಿ ಹಿಡಿಕೊಂಡು ದ್ವಾರದೊಳಗೆ ಪೊಕ್ಕೆ |
ಎತ್ತನೋಡಿದರತ್ತ ಶೃಂಗಾರಸದನ ೩
ಹೊರಗೆ ದ್ವಾರವು ನಾಲ್ಕು ಒಳಗೈದು ದ್ವಾರಗಳು |
ಪರ ದಾರಿಗೆ ಪ್ರಾಣ ಜಯವಿಜಯರು ||
ಮಿರುಗುವ ಮಧ್ಯಮಂಟಪ ಕೋಟಿರವಿಯಂತೆ |
ಸರಸಿಜನಾಭನ ಅರಮನೆಯ ಸೊಬಗು ೪
ಸ್ವಮೂರ್ತಿಗಣ ಮಧ್ಯ ಸಚ್ಚಿದಾನಂದೈಕ |
ರಮೆಧರೆಯರಿಂದಲಾಲಿಂಗಿತ್ವದಿ ||
ಕಮಲಜಾದಿಗಳಿಂದ ತುತಿಸಿಕೊಳ್ಳುತ ಹೃದಯ- |
ಕಮಲದೊಳಗಿರುವ ಶ್ರೀ ವಿಜಯವಿಠ್ಠಲನ ಕಂಡೆ ೫

ಅಡಿಗಳಿಗೊಂದಿಪೆ ಪುರಂದರ ಗುರುವೆ :
೩೩೮
ಅಡಿಗಳಿಗೊಂದಿಪೆ ಪುರಂದರ ಗುರುವೆ ಪ
ಕಡು ಜ್ಞಾನ-ಭಕ್ತಿ-ವೈರಾಗ್ಯದ ನಿಧಿಯೆ ಅ.ಪ
ವರ ಮಧ್ವಮತ ಕ್ಷೀರಾಂಬುಧಿಗೆ ಚಂದ್ರನಾದೆ |
ಗುರು ವ್ಯಾಸರಾಯರಿಂದುಪದೇಶಗೊಂಡೆ ||
ಎರಡೆರಡು ಲಕ್ಷದಿಪ್ಪತೈದು ಸಾವಿರ |
ವರ ನಾಮಾವಳಿ ಮಾಡಿ ಹರಿಗೆ ಅರ್ಪಿಸಿದೆ ೧
ಗಂಗಾದಿ ಸಕಲ ತೀರ್ಥಂಗಳ ಚರಿಸಿತು |
ರಂಗವದನ ವೇದವಾಸ್ಯನ ||
ಹಿಂಗದೆ ಮನದಲ್ಲಿ ನೆನೆದು ನೆನೆದು ಮರೆವ |
ಮಂಗಳ ಮಹಿಮೆಯ ನುತಿಸಿ ನುತಿಸಿ ನಾ ೨
ನಿನ್ನತಿಶಯಗುಣ ವರ್ಣಿಸಲಳವಲ್ಲ |
ನಿನ್ನ ಸೇವಕನ ಸೇವಕನೆಂತೆಂದು ||
ಪನ್ನಗಶಯನ ಮುಕುಂದ ಕರುಣ ಪ್ರ |
ಸನ್ನ ವಿಜಯವಿಠ್ಠಲ ಸಂಪನ್ನ ೩

೧೫೯
ಅಣ್ಣನ ತೋರಿಸೆ ಎನಗೆ |
ತನ್ನ ಮನೆಯಲ್ಲಿ ಬಣ್ಣದ ಭೊಗರಿ ಚಂಡು ಯಿಲ್ಲಾ |
ಸುಣ್ಣದ ಗಡಿಗೆ ಯಾಕೆ ವಡಿಯಿತು ಪ
ಹಾಸಿಕೆ ಹಾಸಿಕೆ ಎತ್ತ | ಕಾಸೆ ಬಿಸಿ ನೀರು | ದಾಸನ ಕರಿಯೆ |
ಮೋರಿ ತೊಳಿಯೆ | ಈಸು ಸೊಲ್ಲು ಕೇಳೆ ಗೋಪಿ ೧
ಕುಪ್ಪಸ ಕೊಡಬೇಡ ನೀ | ಅಪ್ಪನ ನೋಡ ಬೇಡ |
ಚಪ್ಪರದೊಳಗೆ ಕುಳಿತು ಕಾಳು | ಕುಪ್ಪೆ ನಾಡುವ ಈಗ ಪೋಗಿ ೨
ಹೊತ್ತು ಹೋಯಿತು ಮಸರುಕಟಿಯಲಿಲ್ಲ್ಯಾಕೆ |
ಹತ್ತಿವೆ ಯಾಯಿತು ವೊತಯನೆ ಯಿಂದ |
ಬಿತಿ ಬಿತಿ ಬೂವಾ ಉಂದೇನು ತುತ್ತು ೩
ಅನ್ನಯ್ಯಾ ಬಂದ ತಾರೆ ತನ್ನ ತಲಗೀಯ |
ನಿನ್ನೆ ಮಾಡಿದ ವಬ್ಬತು ಕೊದು ಎನ್ನ ಬಟ್ಟಲೊಳಗೆ ಹಾಕ ೪
ಹೊಲಗೆ ಅನ್ನಯ್ಯ ಬಿದ್ದಾನೆ ತಲಿಯಲ್ಲೆ ಮನ್ನು |
ಶಲಗಿಲಿ ವಲಿಗಿಸುವೇಗ ಬಂದು ತೊಲಿಯೆ ಬಿಸಿ ನೀರಿಂದ ಕೆತರು ೫
ಕೆಲಿಗೆ ಹೋದೆನು ಕುಂತಿ ತಾಲೆ ಗೋಪಮ್ಮ |
ಕಾಲಿಗೆ ಪಾಪೋತು ಆ ಮೆತ್ತನೆ ವಾಲೆಕಂತ ಕೈಯಲಿ ಹಿದಿಸೊ ೬
ತೊದಲ ಮಾತಾ ಕೇಳಿ ಮಗನ ವದನ ಮುದ್ದಾ |
ಸದಮಲ ಭಾಗ್ಯ ವಿಜಯವಿಠ್ಠಲ |
ಯದುಕುಲ ಪಾವನ ವೆಂದಳು ಗೋಪಿ ೭

೫೦೦
ಅಧಮನಲ್ಲವೆ ಅವನು ಅಧಮನಲ್ಲವೆ |
ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ
ಹೊರಳಿ ಎದ್ದು ಕುಳಿತು ಎರಡು ಕರವ ಮುಗಿದು ಜಿಹ್ವೆಯಲ್ಲಿ |
ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು ೧
ಮಡುವಿನೊಳಗೆ ಮಿಂದು ಬಂದು |
ಕುಡತಿ ಜಲವ ಕೊಂಡು ರವಿಗೆ |
ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು ೨
ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು |
ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು ೩
ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ |
ಸಾಲಿಗ್ರಾಮ ತೊಳೆದು ತೀರ್ಥವೆಂದು ಮಾಡಿ |
ಕೊಳದ ಯಿದ್ದ ಹೀನ ನರನು ೪
ಗಿಡದ ತೊಪ್ಪಲು ತೊಡಿಮೆ ತಂದು |
ಪೊಡವಿಯರಸ ಕೇಶವನ್ನ |
ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು |೫
ಅಟ್ಟ ಅಡಿಗೆ ಎಲ್ಲ ಸಿರಿ | ವಿಠ್ಠಲನ ಮುಂದೆ ತಂದು |
ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು೬
ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ |
ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು ೭
ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ |
ಸಾರಿಸಾರಿಗೆ ತಿಳಿದು ಕಂಸಾರಿ ಎನದ ಹೀನ ನರನು ೮
ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು |
ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು ೯
ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ |
ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು ೧೦
ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ |
ಅಲ್ಲದಿಲ್ಲ್ಲವೆಂದು ಬಂದು ಸೊಲ್ಲು ಪೇಳಿ ಬಾಳದವನು ೧೧

ಆ. ಶ್ರೀಹರಿ ಸಂಕೀರ್ತನೆ
(ದೇವತಾಕಕ್ಷೆ)
(ಅ) ಶ್ರೀಹರಿ

ಅನಂತಗಿರಿ ಯಾತ್ರೆ ಮಾಡಿ ಜನರು
ಅನಂತ ಜನುಮದ ಪಾಪ ಸಂಹರವು ಪ
ಇಲ್ಲಿ ಕುರುರಾಯ ಜನ್ಮಾಂತರದು ಪಾಪ
ನಿಲ್ಲದೆ ಮಾಡಿದಾ ನಡತಿಯಿಂದಾ
ಎಲ್ಲ ಕಾಲದಲಿ ದರಿದ್ರನಾಗಿದ್ದು ಶ್ರೀ
ವಲ್ಲಭನ ಒಲಿಸಿ ಮುದಂಬರೀಷ ನೃಪನಾದಾ ೧
ಚಂಡಶಾಸನನೆಂಬ ನೃಪತಿ ದುರ್ಮತಿಯಲಿ
ಮಂಡಲದೊಳಗಿರಲು ಸರ್ಪ ಕಚ್ಚಿ
ಕಂಡು ಗೃಧ್ರವು ಅವನ ಉಂಗುಷ್ಟ ಭವನಾಶಿ
ಕುಂಡದಲಿ ಬಿಸುಡೆ ದಶರಥ ಭೂಪತಿಯಾದಾ೨
ಹೇಳಲಳವೆ ಇನ್ನು ಈ ಕ್ಷೇತ್ರದ ಮಹಿಮೆ
ಕೇಳಿದಾಕ್ಷಣ ಮುಕ್ತಿ ಸಿದ್ಧವಕ್ಕೂ
ಶ್ರೀಲೋಲ ನರಸಿಂಹ ವಿಜಯವಿಠ್ಠಲರೇಯೇನ
ವಾಲಗವ ಕೈಕೊಂಡ ಮನುಜಂಗೆ ಬಲು ಸಾಧ್ಯ ೩

೫೦೧
ಅನ್ಯಾಯದಲಿ ಬಾಳಿ ಬದಕೋರೆ | ನಾಳೆ |
ಕಿನ್ನೇಶದೂತರು ಎಳಿಯಾರೆ ಪ
ಹಿಂದಿನ ದುಃಖವ ನೆನಸಿಕೊ | ನೀನು |
ಬಂದದೆ ಒಂದೊಂದು ಗುಣಿಸಿಕೊ |
ಮುಂದೀಗ ಎಚ್ಚತ್ತು ನೋಡಿಕೊ |
ಇದು ಸಂದೇಹವೆನದೆ ನಿಜವಾಗಿ ತಿಳಿದಕೊ ೧
ಗರ್ಭಯಾತನೆ ಬಲು ಹೇಸಿಕೆ | ವಳಗೆ |
ನಿರ್ಬಂಧವಾಗಿ ಬೆಳೆದು ಮೇಲಕೆ |
ದೊಬ್ಬುವರು ನಿನ್ನ ಕೆಳಿಯಿಕೆ |
ಬಿದ್ದು ಅಬ್ಬಬ್ಬ ಐಯ್ಯಯ್ಯವೆಂದು ಅಳಲೇಕೆ೨
ಬಾಯಿಗೆ ಬಜೆ ಬೆಣ್ಣೆ ಕೊಡುವರು | ತಾಯಿ |
ಬಳಗವೆಲ್ಲ ಸಂತೋಷಬಡುವರು |
ಆಯಿತು ಮಗುವೆಂದು ನುಡಿವರು |
ಇವನ ಆಯುಷ್ಯ ಕಡಿಮೆಯೆಂದದು | ಅರಿಯದೆ ಕೆಡುವರು ೩
ಚಿಕ್ಕಂದು ಎತ್ತಿ ಮುದ್ದಾಡಿ ಬೆಳಸಿ |
ಅಕ್ಕರದಿಂದಲಿ ನೋಡಿ ಕೊಂಡಾಡಿ |
ಫಕ್ಕನೆ ಕುಲಗೋತ್ರರ ಕೂಡಿ | ಒಬ್ಬ |
ರಕ್ಕಸಿಯ ತಂದು ನಿನಗೆ ಜತಿ ಮಾಡಿ ೪
ನೆಲೆ ಇಲ್ಲದ ಮಮತೆಯೊಳು | ಮುಳುಗಿ |
ತಲೆಕೆಳಗಾಗಿ ನಡೆದು ಹಗಳಿರುಳು |
ಕುಲನಾಶಕನೆಂಬೊದು ಬಾಳು | ಬಿಡು |
ತಿಳಿಯ ಪೇಳುವೆನು ಎತಾರ್ಥವ ಕೇಳು೫
ದುರ್ವಾಸನೆ ನಾರುವ ಬೀಡು | ಇದು |
ಸ್ಥಿರವಲ್ಲ ಎಂದಿಗು ಹಂಬಲ ಬಿಡು |
ಹರಿದಾಸರ ಸಂಗ ಮಾಡು | ಇನ್ನು |
ಹರಿನಾಮಗಳ ಕೊಂಡಾಡು ೬
ಆವಾವ ಜನ್ಮದಲಿ ನೀನು | ಒಮ್ಮೆ |
ದೇವ ಎಂದೆನಲಿಕ್ಕೆ ನಾಲಿಗಿತ್ತೇನು |
ಈ ಉತ್ತಮವಾದ ಈ ತನು | ಬಂತು |
ಕೋವಿದನಾಗಿ ಶ್ರೀ ಹರಿಯನ್ನು ಕಾಣು೭
ಆ ಮರ ಈ ಮರ ಎನಲಾಗಿ | ಅವನ |
ತಾಮಸದ ಜ್ಞಾನ ಪರಿಹಾರವಾಗಿ |
ಸ್ವಾಮಿಯ ದಯದಿಂದ ಮಹಯೋಗಿ | ಎನಿಸಿ |
ಭೂಮಿಯೊಳಗೆ ಬಾಳಿದನು ಚನ್ನಾಗಿ ೮
ಭಂಗಮಾಡುವಾಗ ದ್ರೌಪದಿ | ಸಿರಿ |
ರಂಗ ಯೆನಲಾಗಿ ಕಾಯ್ದ ಶ್ರೀಪತಿ |
ಕಂಗಡದಲೆ ಪುರಂದರನ ಅಂತರಂಗ
ವಿಜಯವಿಠ್ಠಲ ನಂಬು ೯


ಅಪ್ಪನ ನೋಡಿರೊ ವರಗಳ
ತಪ್ಪದೆ ಬೇಡಿರೋ
ಸರ್ಪನಮೇಲೆ ಉಪ್ಪವಡಿಸಿ
ಮುಪ್ಪು ಇಲ್ಲದೆ ಭಕ್ತರನ ಪೊರೆವಾ ಪ
ಇಂದ್ರ ನೀಲಿದ ರತನೋ ಕಾಂತಿ ಚಂದ್ರಬಿಂಬ ವದನೋ
ಚಂದ್ರಿಕೆಯ ಪೋಲಿಪ ಮುಖವೊ
ಬಲುವಾ ನಂದಗಡಲ ಸುಖವೊ
ಮುಂದಿನ ಬೆಳಸುವ ಮಿಂಚೋ
ತೂಗುವ ಸುಳಿಗುರುಳ ಚುಂಚೊ
ಒಂದೊಂದೊ ದಕ್ಕನಂತಾದ
ಸುಂದರದವತಾರ ಮಂದರಧರನೋ ೧
ಅರಳಿದ ಸಂಪಿಗೆ ತೆನೆಯು ನಾಸಾ ಕೊನೆಯಲ್ಲಿ ಮಣಿಯು
ತರುಳ ಹಾರವೋ ಮುಂದಲೆಯಲ್ಲಿ ಅರಳೆಲೆ ವೈಯಾರವೋ
ಎರಳಿಯ ಗಂಗಳೋ ನೊಸುಲಲಿ
ತಿಲಕಾಂಬರದ ಬಿದಿಗೆ ತಿಂಗಳೊ
ಪರಿಪರಿ ನಗೆ ಸಾವಿರ ಮಿಹಿರನಂತೆ
ಕಿರಣವ ಮಿಗೆ ಮಕರ ಕುಂಡಲವೊ ೨
ಬಿಲ್ಲು ಬಾಗಿದ ಪುಬ್ಬೊ ಮುಡಿಯಲಿ ಕುಸುಮ ವನದ ಹಬ್ಬೊ
ಗಲ್ಲದ ಚಿಬವೊ ಕಮಠದ ಬೆನ್ನೊ ಹೋಲಿಕೆ
ಬಲು ಚನ್ನೊ ಪಲ್ಲು ಪಂಙ್ತಗೆ ಹಾಕಿದ ಕರಿಯು
ಅಧರಾಮೃತದ ಸುರಿಯು ಅಲ್ಲಲ್ಲಿಗೆ ಕಿರಿಬೆವರಿಡೆ
ನಿಲ್ಲದೆ ವೀಳ್ಯದ ಜೊಲ್ಲಿನ ಧಾರೆಯು ೩
ಬಾಳಿದಿಂಡಿನ ತೋಳು ಕಟ್ಟಿದ ತಾಯಿತಗಳೇಳು
ಕೀಲು ಕಡಗ ಝಣವೊ ದ್ವಾರೆ ಘಟ್ಟಿ ಕಂಕಣವೋ
ನೀಲದುಂಗುರ ಹರಳೊ ಮುಂಗೈ ಸರಪಳಿಯ ಬೆರಳೊ
ಏಳು ಗೂಳಿಯ ನಯತೋಳಿಲಿ ಬಿಗಿದ
ಬಾಲಲೋಲ ಗೋಪಾಲನೊ ೪
ಪನ್ನಲಗ ಮುರಿಗ್ಯೂರಕ್ಷಿಯ ಮಣಿಯು ಥೋರ ದಾಸರಿಗೆ
ಚಿನ್ನದ ಸರವೊ ರೇಶಮಿಗೊಂಡೆ ಕೌಸ್ತುಭ ಶೃಂಗಾರವೊ
ರನ್ನದ ಮಾಲೆ ತುಲಸಿ ಪದಕ ಹಾಕಿದ ಎಣ್ಣಿನುಲೊ
ಅಣ್ಣಣ್ಣ ಹೊನ್ನಿನ ಗುಬ್ಬಿ ಎನುತ ಗೋಪಿ ಮನ್ನಿಸುತಲಿ ೫
ಹುಲಿಯುಗುರೂಮುತ್ತಿನಮಾಲಿಕಿಯುಪೂಸಿದಗಂಧಗರೊ
ವೀಳೆಯರುಣನೊ ಅಂಗೈಯ ಗೆರೆಯು ವಿಸವ ಲಕ್ಷಣನೊ
ಪೊಳೆವ ಪವಳವೊ ಪೋಣಿಸಿಯಿದ್ದ ವೈಜಯಂತಿ ಸುಳ್ಳುವೊ
ನಲಿನಲಿನಲಿದು ವಲಿದಾದೆನುತ
ಒಲಿಸಿದಳೊ ಮಗನ ಯಶೋದೆ ೬
ಕಂಬು ಕೊರಳೊ ಮೂರೇಖಿಯು ಅಂಗೈಯಿವರಿಗೆ ಮರುಳೊ
ತುಂಬಿ ಸೂಸುವ ಹೊಳೆಯು ಜಠರದ ನಾಭಿ ತ್ರಿವಳಿಯು
ಅಂಬಿನ ತೆರೆಯು ಯೆನಲು ಮಿನುಗುವ
ಬಿಸಲಿನ ಘನ ಹರಿಯು
ಭೊಂ ಭೊಂ ಭೊಮೆಂದು ಕೊಂಬಿನ ಊದು
ಎಂಬೊ ನುಡಿಯಲಿ ರಂಬಿಸಿ ಕೃಷ್ಣನ ೭
ಕಮಲದ ಮಗ್ಗ್ಯೊ ಉಂಗುರ ನಡುವಿದು ಅಲಂಕಾರದ ಸುಗ್ಗ್ಯೊ
ಅಮಮ ಧೊರೆಯು ನಾದದ ಘಂಟ್ಯೊ
ಮಣಿಶಿಂಗನ ಮರಿಯು
ಸಮಸಮವಾತೊಡೆ ಬಾಳಿಯ ಸ್ತಂಭೊ
ಜಾನು ಕನ್ನಡಿ ಕ್ರಮವೊ
ಧಿಮಿ ಧಿಮಿ ಎಂದು ರಂಗನ ಕುಣಿಯೆಂದು ನಿಮನಿಮಗೆಲ್ಲ ೮
ಕಾಲಲಿಯಿಟ್ಯ ಗೆಜ್ಜ್ಯೋ ಅಂದಿಗೆ ತಪ್ಪು ತಪ್ಪು ಹೆಜ್ಜ್ಯೊ
ನೀಳದ ದಂತೊ ಜಂಘ ಸರಪಳಿಯ ಗಗ್ಗರಿಯ ಯಿಂತೊ
ಸಾಲಾಂಗುಲಿಯು ವೀರ ಮುದ್ರಿಕೆ ನಖ ಕೇದಿಗೆ ಮುಳೆಯು
ಲಾಲಿ ಲಾಲಿ ಕಂದ ಎನುತಲಿ ಶ್ರೀ ಲಕುಮಿ ಲೋಲನ ಎಬ್ಬಿಸಿ ೯
ನೆರೆದವರಿಗೆ ತರುಳರನೆಲ್ಲಾ ಕರೆದು ಸುತ್ತಲು ನಿಲಿಸಿ
ಹರಿಹರಿ ಎಂದು ಹರದಾಡುತಲಿ
ಪರಿಪರಿಯಿಂದ ಮಾತನು ಅಪ್ಪನೆ ಸರಿಯಾಗಿ ಕುಣಿಯೆಂದು
ಪರಮ ಸಂಭ್ರಮದಿಂದ ಕರೆಕರೆದು ವಿಜಯವಿಠ್ಠಲನ
ತರಕಿಸಿ ಸಂತತ ಉಡಿಯಲಿ ಎತ್ತಿ ೧೦

೮೮
(ಆ) ಶ್ರೀ ವೆಂಕಟೇಶ್ವರ
ಅಭಯ ಗಿರಿಯವಾಸ ಶ್ರೀನಿವಾಸನು ನಮಗೆ |
ಶುಭವೀವ ನಿರುತ ಮಂದಹಾಸನೊ ಪ
ಧೇನಿಪರ ಮನಕೆ ಚಿಂತಾಮಣಿಯೋ ಸ್ವಾಮಿ |
ನೀನೆ ಗತಿಯೆಂಬರಿಗೆ ಹೊಣೆಯೋ
ಜ್ಞಾನಮಯ ಸಂದಣಿಯೊ ಪುಣ್ಯ
ಕಾನನ ನಿವಾಸ ಸುರಖಣಿಯೊ ೧
ಶರಣರಿಗೆ ವಜ್ರ ಪಂಜರನೋ ದುಷ್ಟ
ದುರುಳ ದೈತ್ಯರಿಗೆ ಝರ್ಝರನೊ
ದುರಿತ ಕದಳಿಗೆ ಕುಂಜರನೊ ಸ್ವಾಮಿ
ಉರಗತಲ್ಪನಾದ ಸಿರಿವರನೊ ೨
ಪರಮೇಷ್ಟಿ ಶಿವರೊಳಗಿಪ್ಪನೋ ಇಂದು
ಮರುತನ ಪೆಗಲೇರಿ ಬಪ್ಪನೊ
ಶರಣರಿಗೊರವೀಯೆ ತಪ್ಪನೋ ನಮ್ಮ
ಸಿರಿ ವಿಜಯವಿಠ್ಠಲ ತಿಮ್ಮಪ್ಪನೊ ೩

೫೦೨
ಅರಿವರಿಗಿಲ್ಲೆ ಹರಿಪುರವೊ | ಹರದಾರಿ
ಕೂಗಳತಿ ಎಂಬೊ ಸಂಶಯಸಲ್ಲಾಪ
ಸಮಚಿತ್ತದಲ್ಲಿ ಇದ್ದು | ಸಮ ವಿಷಮ ತಿಳಿದೆದ್ದು |
ಕುಮತ ಮತವನು ವದ್ದು | ಬಲು ಉಬ್ಬೆದ್ದು |
ಕಮಲ ಪೀಠನ ಹೊದ್ದು | ಕ್ರಮಣಿ ಯೋಪಾದಿಯಲಿದ್ದು |
ತಮಕ್ಕೆ ಹರಿನಾಮ ಮದ್ದು | ಶ್ರಮ ಕಳುಕದವಗೆ೧
ಭಾಗವತರ ನೋಡಿ | ವೇಗ ಮನಸನು ಮಾಡಿ |
ಬಾಗಿ ಸಿರವನೆ ನೀಡಿ | ನಲಿದು ಪಾಡಿ | ಯೋಗವಾಗದೆ ಕೂಡಿ |
ಭೋಗವನು ಈಡಾಡಿ | ತೂಗಿ ಮೈಯಲಾಡಿ ಪುಣ್ಯದನವನಿಗೆ ೨
ಹರಿ ಭಕುತಿಯ ಬೇಕು | ನರಹರಿಯ ಸ್ಮರಣೆ ಬೇಕು |
ಹರಿಕಥಾ ಬೇಕು | ಹರಿ ಎನಲಿ ಬೇಕು |
ಹರಿಯ ಭಜಿಸಲಿ ಬೇಕು | ಹರಿವೊಲಿಮೆ ಇರಬೇಕು |
ಹರಿಯಲ್ಲದಿಲ್ಲೆಂದು ಹರಿದು ನುಡಿದವನಿಗೆ ೩
ಆಸಿಯನು ಕಳೆದು | ದುರ್ವಾಸನೆ ಹಮ್ಮು ಕಳೆದು |
ಕ್ಲೇಶವನು ಅಳಿದು | ತೋಷದಲಿ ಬೆಳೆದು |
ದೋಷರಾಶಿಗೆ ಮುಳಿದು | ದೂಷಕರನೆ ಅಳಿದು |
ಭೇಷಜವನೆ ಅಳಿದು | ದಾಸರ ಬಳಿಗೆ ಸುಳಿದವಗೆ ೪
ಆಚಾರವನು ಪಿಡಿದು | ಸೂಚನೆ ಅರಿತು ನಡೆದು |
ವಾಚಗಳ ಮಿತಿ ನುಡಿದು | ನಾಮಗುಡಿದು |
ನಾಚಿಕೆಯ ತೊರೆದು | ಸಿರಿ ವಿಜಯವಿಠ್ಠಲರೇಯನ |
ಯೋಚನಿಂದಲಿ ಬಿಡದೆ | ದಿನವ ಹಾಕುವನಿಗೆ ೫

೪೯೯
ಅರ್ಚನೆ ಬಗೆ ಕೇಳಿ ಲೋಕ ಪ
ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ ಅ.ಪ
ಜಡವ ಪೂಜಿಸಿದರಲ್ಲೇನೊ ತಾನು |
ಜಡ ತುಲ್ಯ | ನಾಗಿದ್ದಕೆ ಸಮವೇನು ||
ಕೆಡದಿರು ಇದರೊಳಗೆ ನೀನು ತಿಳಿ |
ಒಡನೆ ಕರ್ಮಗಳೆಲ್ಲೇನುಂಟು ಕಾಣೋ ೧
ಏಕಾಂತದಲಿ ನಿನ್ನ ಮನಸು ಅ |
ನೇಕವಾಗುವುದು ನಿರಂತರ ಗುಣಿಸು ||
ನೀ ಕೇಳು ಯೋಚಿಸಿ ಗಣಿಸು |
ಸರ್ವ ಆಕಾರದಲ್ಲಿ ಶ್ರೀ ಹರಿಯನ್ನೆ ನೆನಸು ೨
ತ್ರಿವಿಧ ಜೀವರು ಮಾಡುವಂಥ ನಡತಿ |
ಹವಣವ ನೋಡಿದು ಬಿಡು ನಿನ್ನ ಪಂಥ ||
ಕವಿಗಳೊಡನೆ ಸುಪಂಥದಿಂದ |
ಪವಮಾನಮತ ಪೊಂದಿ ಭಜಿಪುದು ಇಂಥ ೩
ದ್ಯುಣುಕ ಪಿಡಿದು ಬಹುಕಾಲತನಕ |
ಎಣಿಕೆ ಮಾಡುತಲಿರು ನಿತ್ಯ ಸುಶೀಲ ||
ಗುಣವಂತನಾಗೊ ನೀ ಬಹುಳ ಸುಖ- |
ವನಧಿ ರಂಗನ ವ್ಯಾಪಾರವೆನ್ನೊ ಬಾಲ ೪
ಆವಾಗ ಮರೆಯದಿರು ಹರಿಯ ಕಂಡ |
ಠಾವಿನಲಿ ಯೋಚಿಸು ಅರಗಳಿಗೆ ಬಯಸದಿರು ಸಿರಿಯ ||
ದೇವ ವಿಜಯವಿಠ್ಠಲ ದೊರೆಯ ನಿನ್ನ
ಭಾವದಲಿ ತಿಳಿಯೊ ಆತನ ಚರಿಯಾ ೫

(ಋು) ಬ್ರಹ್ಮ
೨೧೮
ಆಂಜನೇಯಾ ಕುಂತಿತನಯಾ |
ಕಂಜಲೋಚನ ಪ್ರಿಯಾ | ಮಧ್ವಾಖ್ಯರಾಯಾ |
ಸಂಜೀವಧರಣ ಧನಂಜಯ ಪೂರ್ವಜ |
ಅಂಜದ ದುರ್ವಾದಿ ಭಂಜ ಪೂಭಂಜನ ಪ
ಯಾಗಾಭಿಮಾನಿಗಳನು | ಯೋಗದಿಂದಲಿ ಪಡೆದಾ |
ಆಗಮತತಿ ವಂದ್ಯ ಅನಿಂದ್ಯಾ | ಭಾಗತ್ರಯದಲ್ಲಿ ವಿ |
ಭಾಊ ಮಾಡಲು ಅಂದು | ನಾಗಭೂಷಣನ
ಪೆತ್ತಾಸೆ ಚಿತ್ತ | ಭಾಗವೆ ನಿನ್ನ ವೈ |
ಭೋಗದ ಚರಣಕೆ | ಸಾಗರ ಹಾರಿದ ಹೇ ಗುಣಪೂರ್ಣನೆ |
ರಾಗ ಭಕುತಿಯಿಂದ ಭೋಗದೊಳಗೆ ಮೇಲು |
ಬಾಗಿಲ ಸಾರುವ ವೇಗವನೀಯೋ ೧
ನಿತ್ಯ ಪ್ರವಾಸ ರೂಪಾ | ವ್ಯಕ್ತಿ ಜ್ಞಾನ ಪ್ರತಾಪಾ |
ಸತ್ಯಮೂರ್ತಿ ಈ ವಾರ್ತಿ |
ಸುತ್ತು ತುಂಬಿದೆ ಕೀರ್ತಿ ಇತ್ತು ಸಂತತಾ |
ಸ್ಛೂರ್ತಿ ಕಿತ್ತಿ ಬಿಸಾಟು ಪಂಕಾ | ನಿಷ್ಕಲಂಕಾ |
ಹೊತ್ತು ಹೊತ್ತಿಗೆ ನಿನ್ನ ತುತ್ತಿಸುವೆನೊ
ರಿಪುಬಲ | ಕತ್ತರಿಸಿದಿ ಭೀಮಾ |
ಚಿತ್ತದೊಳಗೆ ಹರಿ | ಉತ್ತಮತರ ತಮ
ಉತ್ತಮನೆಂಬೋದೀ ಉತ್ತರ ಬರಲಿ೨
ಪರಿಪರಿ ಸಾಮಥ್ರ್ಯ ದುರುಳ ಸಮೂಹವೆಂಬೋ |
ಸ್ಮರನಾ ನಿನ್ನಯ ಮೈಗೆ ಈ ಕೈಗೆ | ಭರದಿಂದ ಸೋಂಕಲು |
ವರಗಲ್ಲಿನ ಮೇಲೆ ವರಸಿದಂತಾಗುವದೊ ಇದಹುದೋ |
ಧರೆಯೊಳು ಸುಜನರ | ಕರದು ಸುಜ್ಞಾನವ |
ಅರುಹಿದ ಆನಂದ | ವರ ಮುನಿಯೇ ವಿ |
ಸ್ತರ ಕರುಣಾಂಬುಧಿ ವಿಜಯವಿಠ್ಠಲನ್ನ ಚರಣವ ತೋರಿಸಿ ತೊರೆಯಯ್ಯಾ ಪ್ರಾಣಾ ೩


ಆನಂದಾ ಆನಂದಾ ಮತ್ತೆ ಪರಮಾನಂದಾ
ಆನಂದನನಂದನೊಲಿಯೆ ಏನಂದದ್ದೆ ವೇದ ವೃಂದಾ ಪ
‘ಅ’ಮೊದಲು ‘ಕ’ಷ ಕಾರಾಂತ ಈ ಮಹಾವರ್ಣಗಳೆಲ್ಲ
ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ೧
ಪೋಪದು ಬರುತಿಪ್ಪುದು ಕೋಪಶಾಣಿ ಮಾಡುವುದು
ರೂಪ ಲಾವಣ್ಯವು ಹರಿವ್ಯಾಪಾರವೆಂದವರಿಗೆ ೨
ಜಲ ಕಾಷ್ಠ ಶೈಲ ಗಗನ ನೆಲ ಪಾವಕ ವಾಯು ತರು
ಫಲಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ ೩
ತಾರೊ ಬಾರೊ ಬೀರೊ ಸಾರೊ ಮಾರೊ ಕೋರೊ ಹಾರೊ
ಹೋರೊ ಸೇರೊ ಕೋರೊದೆಂಬ ದಿಶಾಪ್ರೇರಣೆ ಎಂದವರಿಗೆ ೪
ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ
ಸಿದ್ಧ ವಿಜಯವಿಠ್ಠಲನ ಪೊಂದಿ ಕೊಂಡಾಡುವವರಿಗೆ ೫

೧೬೦
ಆರಯ್ಯಾ ಕಣ್ಣ ಮುಂದೆ ಬಂದು ನಿಂತಿಯೋ |
ಸಾರು ನೀನು ಎನಗೆ ಸುಮ್ಮನ್ಯಾತಕೆ ಯಿದ್ದೀ ಪ
ನೀರೊಳು ಮುಣಗೆ ವೇದವ ತಂದಾತನೊ |
ಭಾರವನು ಪೊತ್ತು ಸುರರ ಕಾಯಿದಾತನೊ |
ಧಾರುಣಿ ನೆಗಹಿ ಉದ್ಧಾರ ಮಾಡಿದಾತನೊ |
ಕೂರ್ರ ದೈತ್ಯನ ಕೊಂದ ಕುಜನ ಗಿರಿಗೆ ವಜ್ರನೊ೧
ಗಗನಕೆ ಬೆಳದು ಸುರ ನದಿಯ ಪಡೆದಾತನೊ |
ಹಗೆಗಳ ಕೊಂದು ಹರುಷಿತನಾದನೊ |
ಜಗವರಿಯೆ ಶಿಲಿಯ ನಾರಿಯ ಮಾಡಿದಾತನೊ |
ಮಗನಮಗನ ತಂದ ಮಹಿಮನೊ ೨
ಹರಗೆ ಸಾಯಕವಾಗಿ ಪುರ ಉರಹಿದಾತನೊ |
ದುರುಳರನ ಕೊಂದ ದುರ್ಲಭದೇವನೊ |
ಕರಿರಾಜ ವರದ ಶ್ರೀ ವಿಜಯವಿಠ್ಠಲರೇಯ –
ಶರಣರಿಗೊಲಿದು ಬಂದ ಸರ್ವೋತ್ತಮನೊ ೩

ಕಥನಾತ್ಮಕ
೫೨೯
ಆರಸಿಕೊಡು ಒಬ್ಬಳ ಅರಸಿಕೊಂಬೆ |
ಅರಸಿಕೊಂಬೆ ಮನಸ್ಸಿಗೆ ಬಂದವಳ ಪ
ಶ್ರೀ ರುಕ್ಮಿಣಿ ಸಂಗಡ ಕೇಳಿಯಲಿ ಶ್ರೀ ರಮಣ ಇರಲು |
ನಾರದಮುನಿ ಬಂದು ಕುಳಿತು ಷೋಡಶೋಪಚಾರವ
ಕೊಂಡು ಮಾತಾಡಿ ಬೇಡಿದ ೧
ನಾರಿಯರು ನಿನಗೆ ಉಂಟಾಗ ಈರೈದು ಸಾವಿರ
ನೂರಾಎಂಟು ಮಂದಿಯೊಳಗತಿ ಚಲುವಿಯ
ಕಾರುಣ್ಯವನು ಮಾಡುಬೇಕು ಪರಾಕು ೨
ಕೇಳೈ ಮಹ ತಪಸಿಯನ್ನೀಗ ವೇಳ್ಯ ಮೀರಗೊಡದೆ |
ಲಾಲಿಸು ಮಾತನು ನಾ ನಿಲ್ಲದೆ | ಸತಿ ಆಲಯಕೆ
ವೇಗ ಪೋಗು ನೀ ಸಾಗು ೩
ನಿಂದಿರದೆ ನಾರದಾ ಗೋಪಿಯವರ ಮಂದಿರವ ಸುತ್ತಿದಾ |
ಒಂದೊಂದು ಮನೆಯಲಿ ಸೋಜಿಗ ಅತಿಶಯ |
ಅಂದು ನಾರದಗೆ ತಾ ತೋರಿದ ಬಿರುದಾ ೪
ಒಂದೆ ಮನೆಲಚ್ಯುತಾ ಅನಂತ ಒಂದು ಕಡೆ ಗೋವಿಂದ |
ಒಂದೆರಡು ನಾಲ್ಕು ಆರಭ್ಯವಾಗಿ
ನೂರೊಂದು ಪರಿಯಂತ ಏಕಾಂತ ೫
ಪಗಡಿಯೊಳೊಂದು ಮನೆ |
ಚದುರಂಗ ನಗೆಕೂಟ ಒಂದು ಮನೆ |
ಮಗುವು ಮುದ್ದಾಡಿ ಮಂಚದ ಮೇಲೆ ಮಡದಿಯಾ |
ಬಿಗಿದಪ್ಪಿ ಸವಿನಾಡುವ ನೋಡಾ೬
ಉಯ್ಯಾಲೆ ಒಂದು ಕಡೆ ಕೈಗಳು
ಹೋಯಿದಾಟ ಒಂದು ಮನೆ |
ಮನ್ಯರಾದ ಶುದ್ಧಿ ಮಕ್ಕಳ ಶೋಭನಾ |
ಪಯಣಗತಿಯಲಿದ್ದ ವಾರ್ತಿ ಒಂದರ್ಥಿ೭
ಕರುಗಳು ಒಂದು ಕಡೆ ಬಿಡುತ ತುರುಗಳ ಒಂದು ಮನೆ |
ಕರಕೊಂಡು ಕುಡಿಯುತಾ |
ತರುಣಿಯ ತುರುಬಿಗೆ ಅರಳಿದ
ಕುಸುಮವ ಮುಡಿಸುತ ನುಡಿಸುತಾ೮
ಸ್ನಾನವು ಒಂದು ಕಡೆ ಸಂಧ್ಯಾನ ಮೌನವು ಒಂದು ಕಡೆ |
ಧ್ಯಾನ ಜಪ ತಪ ವ್ಯಾಖ್ಯಾನ ಪುರಾಣ |
ದಾನ ಧರ್ಮಗಳ ಕೊಡುವನು ನಡೆವನು ೯
ನಿಂದಿದ್ದ ಒಂದು ಮನೆ ಎಣ್ಣೆ ಪೂಸಿ
ಮಿಂದುಂಡು ಒಂದು ಮನೆ |
ಕಂದಗಳಾಡಿಸಿ ಪರಿಪರಿಯಿಂದಲೆ ಒಂದು
ಅನಂತ ಇದ್ದಾ ಅನಿರುದ್ಧಾ೧೦
ಬೆರಗಾಗಿ ಬೆಡಗು ನೋಡಿ ತಿರುಗಿ
ಬಂದು ಹರಿಯ | ಚರಣಕ್ಕೆ ಬಿದ್ದು |
ಅರಿಯದೆ ಮರುಳಾದೆ ವಿಜಯವಿಠ್ಠಲರಾಯ |
ಪರಬ್ರಹ್ಮ ನೀನಲ್ಲದಿಲ್ಲಾ ಇನ್ನಿಲ್ಲಾ ೧೧

೧೬೧
ಆರೀಗ ನೀ ಎನ್ನ ಕಣ್ಣು ಮುಚ್ಚಿದೆಯೊ ಕು- |
ಮಾರ ಮೌನದಲಿದ್ದಿ ಮಾತನಾಡಯ್ಯಾ ಪ
ಇಂದಿರಾ ಭೂದೇವಿ ಆಳಿದವನೊ |
ನಂದ ಗೋಕುಲದಲ್ಲಿ ಪುಟ್ಟಿದವನೊ ||
ಮಂದಿರ ವೈಕುಂಠ ಶ್ರೀನಿವಾಸನೊ | ಕರಿ – |
ಬಂಧನ ವಿನಾಶದ ವಿಠ್ಠಲನೊ ೧
ಅಂಬರೀಷನ ಶಾಪ ಪರಿಹರನೊ |
ಶಂಭು ಮೊರೆಯಿಡಲು ಕಾಯಿದವನೊ ||
ಕಂಭದಿಂದೊಡೆದು ಬಂದವನೊ | ತ್ರಿ –
ಯಂಬಕನ ಭಕ್ತನ ಸಂಹರನೊ ೨
ಬೆರಳಲ್ಲಿ ಬೆಟ್ಟವನೆತ್ತಿದವನೊ |
ದುರುಳ ಕಾಳಿಂಗನ ತುಳಿದವನೊ ||
ಒರಳನು ಕಾಲಲ್ಲಿ ಎಳೆದವನೊ |
ಚೆಲ್ವ ಸಿರಿ ವಿಜಯವಿಠ್ಠಲರಾಯನೊ ೩

೫೦೩
ಆರೇನು ಮಾಡುವರು ಅವನಿಯೊಳಗೆ |
ಪೂರ್ವಜನ್ಮದ ಕರ್ಮ ಫಣಿಯಲ್ಲಿ ಬರೆದುದಕೆ ಪ
ಮಾಡಿದಡಿಗಿಯು ಕೆಡಲು ಮನಿಯ ಗಂಡನು ಬಿಡಲು |
ಕೂಡಿದ ಸತಿ ತನ್ನ ಕುಣಿಸ್ಯಾಡಲು ನಿಜದಿ ||
ಗೋಡೆಗೆ ಬರೆದ ಹುಲಿ ಘಡಘಡನೆ ತಿನಬರಲು |
ಆಡಿದ ಮತುಗಳು ಅಖಿಳಿರು ನಿಜವೆನಲು ೧
ಹೊಲ ಬೇಲಿ ಮೆಯ್ದರೆ ಮೊಲ ಇರಿಯ ಬಂದರೆ |
ತಲೆಗೆ ತನ್ನ ಕೈ ಪೆಟ್ಟು ತಾಕಿದರೆ ||
ಹೆರಳು ಹಾವಾದರೆ ಗೆಳೆಯ ರಿಪುವಾದರೆ |
ಕಲಿಸಿದ ಅವಲಕ್ಕಿ ಕಲಪರಟಿ ನುಂಗಿದರೆ ೨
ಹೆತ್ತ ತಾಯಿ ಹಿಡಿದು ಮಕ್ಕಳಿಗೆ ವಿಷ ಹಾಕಿದರೆ |
ಪೆತ್ತ ತಂದೆಯು ಹೊರಗೆ ಮಾಡಿದರೆ ||
ತೊತ್ತು ಅರಸಿಗೆ ಪ್ರತ್ಯುತ್ತರವನಾಡಿದರೆ |
ಕತ್ತಲೆ ಬೆನ್ನಟ್ಟಿ ಕರಡ್ಯಾಗಿ ಬಂದರೆ ೩
ಕಣ್ಣವೊಳಗಿನ ಗೊಂಬಿ ಕಾದ ಬಂದರೆ |
ಹೆಣ್ಣಿನ ಹರಟೆ ಹೆಚ್ಚಾದರೆ |
ಅನ್ನವನು ಉಣ್ಣಲು ಅಜೀರ್ಣವಾದರೆ |
ಪುಣ್ಯಕ್ಷೇತ್ರಗಳಲ್ಲಿ ಪಾಪ ಅಟ್ಟಿಸಿದರೆ ೪
ಏರಿ ಕುಳಿತ ಕುಂಬಿ ಎರಡಾಗಿ ಮುರಿದರೆ |
ವಾರಿಧಿಗಳು ಮೇರೆ ಮೀರಿದರೆ ||
ಆರಿದ ಇದ್ದಲಿಗಳು ಅಗ್ನಿಯಾದರೆ |
ನಮ್ಮ ವಿಜಯವಿಠ್ಠಲನಿರುವ ತನಕ ೫

೫೦೪
ಆವ ಜನುಮದ ಪಾಪ ವೊದಗಿತೋ ಎನಗಿಂದು |
ದೇವ ಗಂಗೆಯ ನೋಡಿದೆ ಪ
ದೇವಕೀಸುತ ಒಲಿದು ಕರೆತಂದು ಎನ್ನನು |
ಪಾವನ್ನ ಮಾಡಿದನು ಇನ್ನೂ-ಮುನ್ನೂ ಅ.ಪ
ಗುರುಗಳನು ವಹಿಸಿ ಭೂಸುರರಿಗೆ ಕಠಿಣ | ಉ-
ತ್ತರ ಪೇಳಿಸಾಗಿದ್ದನೊ |
ವರ ಬ್ರಾಹ್ಮಣರ ತಪ್ಪು ಬಲು ಇರಲು ಇಲ್ಲದೇ |
ಸರಿಯೆಂದು ಸ್ಥಾಪಿಸಿದೆನೊ |
ಮುರಿವ ಲಗ್ನಕೆ ಪೋಗಿ ಪುಸಿ ದ್ರವ್ಯವನೆ ಪೇಳಿ |
ಮರಳಿ ಪೂರ್ತಿಸಿ ಇದ್ದೆನೊ |
ವರ ವಿಪ್ರರಿಗೆ ವಧೆಯು ಬರಲು ಸಾಕ್ಷಿಯಾಗಿ |
ಪರಿಹರಿಸಿ ಬಂದಿದ್ದನೋ ಏನೋ ೧
ಘನ ತೀರ್ಥಯಾತ್ರೆಗೆ ಪೋಗುವಾಗ-ಲು | ವಂ
ಚನೆ ಕರ್ಮ ಮಾಡಿದ್ದೆನೊ |
ಜನಪತಿಗಳ ಮಾತು ಕೇಳದೆ ಧರ್ಮಕ್ಕೆ |
ಅನುಕೂಲನಾಗಿದ್ದೆನೊ |
ಮನೆಗೆ ಬಂದತಿಥಿಗಳು ಜರಿದು ಪಿತ್ರಾದ್ಯರಿಗೆ |
ಉಣಿಸಿ ಸುಖಪಡಿಸಿದ್ದೆನೊ |
ವನಗಳನು ಕಡಿದು ದೇವಾಲಯವ ಕಟ್ಟಿಸಿ |
ಕ್ಷಣ ಕ್ಷಣಕೆ ಅರ್ಚಿಸೆದೆನೋ ಏನೊ ೨
ಉತ್ತಮನು ಮನೆಗೆ ಬಂದಾಗ ಮಾಡುವಂಥ |
ಸತ್ಕರ್ಮ ತೊರೆದಿದ್ದೆನೋ |
ಹೆತ್ತವರ ಬಾಂದವರ ಧನದಿಂದ ಕೆರೆ ಭಾವಿ |
ಹತ್ತೆಂಟು ಕಟ್ಟಿಸಿದೆನೊ |
ದತ್ತಾಪಹಾರವನು ಮಾಡಿ ಅದರಿಂದನಗ್ನಿ-
ಹೋತ್ರವನು ಸಾಧಿಸೆದೆನೊ |
ಇತ್ತ್ಯಧಿಕ ನಿರ್ಬೀಜ ಪಾಪಗಳನೆಸಗಿ | ಕೃ-
ತಾರ್ಥನಾದೆನೊ ವಿಜಯವಿಠ್ಠಲನ್ನ ಕರುಣದಲಿ೩

ಆವಜನ್ಮದ ಪುಣ್ಯ ಫಲಿಸಿತೆನಗೆ……… :
೧೬೨
ಆವ ಜನ್ಮದ ಪುಣ್ಯ ಫಲಿಸಿತೆನಗೆ |
ಈ ಉಡುಪಿ ಕೃಷ್ಣನ ಪ್ರಸಾದ ಭುಂಜಿಸಿದೆ ಪ
ಲವಣವನು ಸವಿದುಣಲು | ಬಲುಜನ್ಮದಲಿ ಯಿದ್ದ
ಭವರಾಸಿಗಳು ಹಾರಿ ಬಯಲಾದವು|
ನವವಿಧ ಭಕುತಿಯಾ ಮಾರ್ಗವನೆ ತಿಳಿದು ಮಾ |
ನವರೊಳಗೆ ಪರಿ ಶುದ್ಧನಾದೆ ಗುರು ಕರುಣದಲೀ೧
ಶಾಖಫಲ ಕೈಕೊಳಲು ಅರಿಷಡ್ವರ್ಗಗಳಿಂದ |
ಶೋಕವನೆ ಬಂದಿರಲು ಬೆನ್ನು ಬಟ್ಟು |
ಕಾಕೆಟ್ಟು ಪೋಗುವವು ಏನೆಂಬೆ ಸೋಜಿಗವು |
ಲೋಕದೊಳಗೆ ನಮ್ಮ ಕುಲಗೋತ್ರಜರೆ ಧನ್ಯ ೨
ಸೂಪವನು ಉಂಡರೆ ಮುಂದಟ್ಟಿ ಬರುತ್ತಿಪ್ಪ |
ಆಪತ್ತು ಕಳವಳಿಸಿ ಹಿಂದಾದವು |
ಭಾಪುರೆ ಮೋಕ್ಷಮಾರ್ಗಕ್ಕೆ
ಸೋಪಾನ ದೊರಕಿದವು ಏನೆಂಬೆ
ಸೋಜಿಗವು ಬಲು ತೀವ್ರದಲಿ ೩
ಭಕ್ಷ್ಯಗಳು ಮೆಲಲಾಗಿ ಭಕ್ತಿ ಪುಟ್ಟುವದಯ್ಯಾ |
ಅಕ್ಷಯವಾಗುವದು ಇದ್ದ ಪುಣ್ಯ |
ಅಕ್ಷರ ವಂಚನಾಗಿ ಸರ್ವದಾ ಮೋಕ್ಷಸಾಧನ
ಮಾಳ್ಪ ಮನಸು ಪುಟ್ಟಿತು ನೋಡಾ೪
ಓದನವು ಉದರದಲಿ ತುಂಬಲಾಕ್ಷಣದಲ್ಲಿ |
ಸಾಧುಗಳ ಸಂಗತಿ ಘಟಿಸುವದು | ಭೇದಾರ್ಥ
ಜ್ಞಾನ ಬಂದೊದಗುವದು ಗುರು ಪೂರ್ಣ |
ಬೋಧರಾ ಮತದಲ್ಲಿ ಲೋಲಾಡುವಾನಂದಾ ೫
ಘೃತ ದಧಿ ತಕ್ರ ಮೊದಲಾದ ವ್ಯಂಜನ ಉಣಲು |
ಹಿತವಾಗಿ ಸಕಲ ಇಂದ್ರಿಯಂಗಳು |
ಸತತ ದುರ್ವಿಷಯಕ್ಕೆ ಪೋಗದಲೆ ಆವಾಗ |
ರತಿಪತಿಪಿತನ ಪದಸೇವೆಯೊಳಗಿಪ್ಪವೊ ೬
ಕೃಷ್ಣ ಸಂದರುಶನ ಮೃಷ್ಟಾನ ಭೋಜನ |
ಕಷ್ಟನಾಶನ ಸರ್ವ ಕರ್ಮಕಧಿಕಾ |
ಇಷ್ಟ ಸುಖ ಸೌಖ್ಯಕರ ಮತ್ತಾವಲ್ಲಿ ಕಾಣೆ |
ಸೃಷ್ಟಿಗೊಡೆಯ ವಿಜಯವಿಠ್ಠಲನು ದಯವಾಗೆ ೭

೧೬೩
ಆವ ತಾ ಸುಖವೊ ಮತ್ತಾವನಂದವೊ |
ಈ ಉಡುಪಿ ಯಾತ್ರಿ ಮಾಡಿದ ಮನುಜಗೆ ಪ
ಮನದೊಳಪೇಕ್ಷಿಸೆ ಅವನೀಗ ಹದಿನಾಲ್ಕು |
ಮನುಗಳು ಭೂಮಿ ಆಳುವ ತನಕಾ |
ಕನಕ ರಜತಪೀಠ ಗೋಕುಲದಿಂದ | ಸ |
ಜ್ಬನ ಮಾರ್ಗದಲ್ಲಿ ಗುಣವಂತ ನೆನೆಸುವ ೧
ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ |
ಅಂದೆ ಸುರರೊಳು ಗಣನೆ ಎನ್ನಿ |
ಒಂದಕ್ಕೆ ನೂರಾರು ಯಾಗ ಮಾಡಿದ ಫಲ |
ತಂದು ಕೊಡುವ ಅಜನಾದಿ ಕಲ್ಪ ಪರಿಯಂತ೨
ಅರ್ಧ ಮಾರ್ಗವು ಬರಲು ಬಂದೆ ದಿವಸದಲ್ಲಿ |
ಸಾಧರ್ ತ್ರಿಕೋಟಿ ದೇವತೆಗಳಲಿ |
ಊಧ್ರ್ವರೇತಸನಾಗಿ ಮಿಂದ ಫಲವಕ್ಕು |
ಮೂರ್ಧಾಭಿಷಕ್ತನು ಬ್ರಹ್ಮಾಯ ಪರಿಯಂತ ೩
ಕ್ಷೇತ್ರದ ಬಳಿಗಾಗಿ ಬರಲು ಅವನ ಏಳು |
ಗೋತ್ರ ನೂರೊಂದು ಕುಲದವರು |
ಗಾತ್ರವ ಮರೆದು ರೋಮಾಂಚನದಿಂದಲಿ |
ಪಾತ್ರವನಾಡೋರು ಮೋಕ್ಷಮಾರ್ಗವ ಸಾರಿ೪
ಸನ್ನಿಧಿಗೆ ಬಂದು ಕರವ ಜೋಡಿಸಿ ನಿಂದು |
ಸನ್ನುತಿಸಿ ದರ್ಶನ ಮಾಡಲು |
ತನ್ನ ಕರವ ತಿಳಿದು ಜ್ಞಾನ ಭಕುತಿ ಸಂ |
ಪನ್ನ ವಿರುಕುತಿಲಿ ಗತಿಗಭಿಮುಖನಾಹ ೫
ಮಧ್ವ ಸರೋವರದಲ್ಲಿ ಸ್ನಾನವಗೈದು |
ಸಿದ್ಧಾಂತ ಕರ್ಮಗಳನನುಸರಿಸೀ |
ಶುದ್ಧಾತ್ಮ ಕೃಷ್ಣನ ದೇವಾಲಯವ ಸಾರೆ |
ಪೊದ್ದಿದಾ ಸತ್ಯಲೋಕದ ಸಭೆಯೊಳಗೆ ೬
ಕೃಷ್ಣ ಕೃಷ್ಣ ಯೆಂದು | ನವ ವಿಧ ಪೂಜೆಯನ್ನು |
ದೃಷ್ಟಿಯಿಂದಲಿ ನೋಡೆ ಅವನೆ ಮುಕ್ತಾ |
ಮುಟ್ಟಿ ಪೂಜಿಸುವರ ಸತ್ಪುಣ್ಯ ವಿಜಯ |
ವಿಠ್ಠಲ ತಾ ಬಲ್ಲ ನರರೆಣಿಸಲಳವಲ್ಲಾ ೭

೫೦೫
ಆವ ಪರಿಯಲಿ ಹರಿಯ ವೊಲಿಸು
ಈ ಉಪಾಯವು ತೋರಿ ಕೊಡುವೆನು ಪ
ಉದಯದಲಿ ಎದ್ದೀಗ ಊರ ವಾರ್ತಿಯ ಬಿಟ್ಟು
ಮುದದಿಂದ ವೃಂದಾವನ ಸೇವಿಸಿ
ವದನದಲಿ ಶ್ರೀ ಹರಿಯನಾಮ ಗುಣಕಥೆಗಳನು
ಪದೋಪದಿಗೆ ಪಾಡಿ ಕೊಂಡಾಡು ನಲಿದಾಡು ೧
ಆಮೇಲೆ ದೇವರೆಡೆ ರಂಗವಾಲಿಯನಿಕ್ಕಿ
ಕಾಮುಕನಾಗದಲೆ ಸ್ನಾನ ಸಂಧ್ಯಾ
ನೇಮ ನಿತ್ಯವ ಮುಗಿಸಿ ದೇವತಾ ಪೂಜೆಗೈದು
ಪ್ರೇಮದಿಂದಲಿ ದಾನ ಕರದಲ್ಲಿ ಮಾಡೊ ೨
ಮಂಗಳ ಮೂರುತಿಯ ಅಂತರಂಗದಿ ನಿಲಿಸಿ
ಶೃಂಗಾರದುಡಿಗೆ ಇಡಿಗಿಯನು ತೊಡಿಸಿ
ಮಂಗಳಾರುತಿ ಬೆಳಗಿ ಮನದಲ್ಲಿ ನಲಿನಲಿದು
ಕಂಗಳಿಂದಲಿ ನೋಡು ಹರಿಯ ಕೂಡಾಡು ೩
ಮೂಲ ಗುಣ ಅವತಾರ ಮಹಿಮೆ ಮಹ ಉನ್ನತ
ಲೀಲೆ ವಿನೋದ ಅತಿ ಆಶ್ಚರ್ಯವ
ವ್ಯಾಳವ್ಯಾಳೆಗೆ ಪೋಗಿ ಉತ್ತಮ ಜ್ಞಾನಿಗಳಿಂದ
ಕೇಳು ಕರ್ಣದಲಿ ಪರಮ ಹರುಷದಲೆ೪
ಹರಿಚರಣಕ್ಕೇರಿಸಿದ ಶಿರಿ ತುಲಸಿ ಚಂಪಕ
ವರ ಜಾಜಿ ಮಲ್ಲೆ ಮಲ್ಲಿಗೆ ಕ್ಯಾದಿಗೆ
ಪರಿಪರಿ ಗಂಧ ಚಂದನ ದಿವ್ಯ ಪರಿಮಳ
ಸರಕು ನಾಶಿಕದಲ್ಲಿ ಕೊಳ್ಳು ಸುಖ ಬಾಳು ೫
ಅಶಿವರುಣ ಮಧ್ಯ ತ್ರಿವೇಣಿ ವಿಷ್ಣುಪಾದ
ಎಸೆವ ಕುರುಕ್ಷೇತ್ರ ಅಯೋಧ್ಯ ಮಾಯಾ
ವೃಷಭ ಗಿರಿ ಶ್ರೀರಂಗ ಕಂಚಿ ಮೊದಲಾಗ್ಯುಳ್ಳ
ಹೆಸರಾದ ಪುಣ್ಯನಿಧಿ ಮಟ್ಟು ದುರಿತವ ಕುಟ್ಟು ೬
ಬೇಸರದಲೀಪರಿಚರಿಸಿದರೆ ಜನನಾದಿ
ನಾಶನವ ಮಾಡಿ ನಾರದವರದನು
ದಾಸ ಪುರಂದರಗೆ ವೊಲಿದಂತೆ ವಿಜಯವಿಠ್ಠ
ಲೇಶ ವೆಂಕಟ ನಿನಗೆ ಪರಮ ಪದವೀಯನೀವ ೭


ಆವ ಬಗೆಯಿಂದ ಸಲಿಗೆಯನಿತ್ತಿಯೊ
ಮಾವಮರ್ದನ ರಂಗ ನಿನ್ನ ದಯಾ ತಿಳಿಯದು ಪ
ಅಂದರೆ ಆನಂದ ಅನಂದದೇ ಅನಾನಂದ
ನಿಂದದೆ ಗೋಕುಲ ನಿಲದದೆ ವ್ಯಾಕುಲ
ಬಂದದೆ ಪುರುಷಾರ್ಥ ಬಾರದಿದ್ದರೆ ವ್ಯರ್ಥ
ಮಂಧರಧರ ನಿನ್ನ ಮನಸು ಬಂದದ್ದೆ ಸರಿ ೧
ಕೊಟ್ಟದ್ದೆ ಪುರುಷಾರ್ಥ ಕೊಡದಿಪ್ಪದೆ ಅನರ್ಥ
ಅಟ್ಟಿ ಬರುವ ಪಾಪ ಸುಟ್ಟು ಬಿಡು ನಿರ್ಲೇಪ
ತಟ್ಟಿದುದೆ ವೇದಾರ್ಥ (ತಟ್ಟದದೆ) ಮಿಥ್ಯ
ವಿಠ್ಠಲ ನಿನ್ನ ಭಕ್ತರಿಗೆ ನೀ ಬಲು ಸುಲಭಾ ೨
ಹರಿ ನಿನ್ನ ಶರಣರ ಮನಸ್ಸು ಆವರಕಾದ
ದೆರಗಲು ಆಕ್ಷಣವೆ ಸಿದ್ಧ ಮಾಳ್ಪೆ
ಕರುಣ ನಿಧಿಯೆ ನಮ್ಮ ವಿಜಯವಿಠ್ಠಲ ನಿನ್ನ
ಸರಿಯಾದ ದೇವರನು ಕಾಣೆ ತ್ರಿಭುವನದಲ್ಲಿ೩

ಆತ್ಮನಿವೇದನೆ
೩೪೯
ಆವಗತಿ ಎನಗೆ ವೈಕುಂಠಪತಿಯೆ |
ಕಾವ ಕರುಣಿಯೆ ಸರ್ವದೇವರ ದೇವ ಪ
ಉದಯದಲಿ ಎದ್ದು ನಿನ್ನ ನಾಮವೆನ್ನದೆ |
ಉದರಕಿನ್ನೇನು ಮಾಡಲಿ ಎನ್ನುತಾ |
ಕದಗಳಾ ಸರಸುತ್ತ ಕಂಡಲ್ಲಿ ತಿರುಗಿದೆ |
ಮದ ಗರ್ವದಲಿ ಬಾಳ್ವ ಮನುಜ ಶಿರೋಮಣಿಗೆ ೧
ಧನವ ಘಳಿಸವ ವಾತ್ಸಲ್ಯವಲ್ಲದೆ ಸಾ |
ಧನಕೆ ಒಮ್ಮೆ ಮನಸ್ಸು ಎರಗಲಿಲ್ಲಾ |
ಮನುಜರೊಳಗೆ ಖ್ಯಾತಿಯಾಗುವೆನೆಂಬೊ | ವೇ |
ದನೆ ಮಿಗಿಲಲ್ಲದೆ ಭಕುತಿ ಮತ್ತಿಲ್ಲ ೨
ಒಬ್ಬರಕಿಂತಲಧಿಕನಾಗುವೆನೆಂದು |
ಉಬ್ಬಿ ಪರರಾ ಸೇವೆಯನು ಮಾಡುವೆ |
ಹಬ್ಬಿದ ಪಾಪದ ಸರವಿಗೆ ಉರುಲು ಬಿದ್ದು |
ಸುಬ್ಬ್ಬಿದ ಸುಕೃತವ ಕಳಕೊಂಡೆನಯ್ಯಾ ೩
ಪೂರ್ವದಲಿ ಉಂಡ ದು:ಖಗಳೆಲ್ಲ ಮರೆದು |
ಸರ್ವದಾ ಗರ್ವದಲಿ ಸಜ್ಜನರ ಕೆಡನುಡಿದು |
ಉರ್ವಿಯೊಳು ಬಲು ಬಲವಂತನೆನಸೀ |
ಸರ್ವದಾ ಸರ್ವ ನರಕಂಗಳಲಿ ಬಿದ್ದು ಹೊರಳಿದೆನು೪
ಇನ್ನಾದರೂ ದುರ್ಬುದ್ಧಿಯನ್ನು ಬಿಡಿಸಿ |
ಪ್ರಾಸನ್ನ ಕರಿಸಿಕೊಳ್ಳೊ ಕರವ ಬಿಡದೆ |
ಕನ್ಯಾಮಣಿ ಪತಿ ವಿಜಯವಿಠ್ಠಲರೇಯಾ |
ಎನ್ನ ಭಾವವು ನಿನ್ನದಲ್ಲವೇನಯ್ಯಾ೫

೩೫೦
ಆವದೆನೆಗೆ ಪ್ರೀತಿ ಎಂದೆಂಬಿಯಾ |
ದೇವ ದೇವಕಿ ತನುಜ ಬಿನ್ನಪವ ಮಾಡುವೆನೊ ಪ
ದೊರೆತನವಲ್ಲೆ ಧನವಲ್ಲೆ ಒಬ್ಬರ ಬಳಿಯ |
ಹಿರಿಯತನವಲ್ಲೆ ಹಿಗ್ಗುವುದು ವಲ್ಲೆ |
ಹರಿ ನಿನ್ನ ಚರಣಗಳ ಸ್ಮರಿಸುವ ಭಾಗವತರ |
ಅರಮನೆಯ ಬೀದಿಯಲಿ ಹೊರಳುವ ಭಾಗ್ಯವ ಕೊಡು ೧
ಪಂಡಿತನಾಗಲಿವಲ್ಲೆ ಫಲವಲ್ಲೆ ನಾವು ಪ್ರ |
ಚಂಡ ಯೋಗಗಳೊಲ್ಲೆ ಯಾಗವಲ್ಲೆ |
ಥಂಡ ಥಂಡದಿ ನಿನ್ನ ಕೊಂಡಾಡುವರ ಬಳಿಯ |
ಕೊಂಡರಾಗಿಪ್ಪವರ ಸೇರುವ ಭಾಗ್ಯವ ಕೊಡು ೨
ಅಂದಣವೇರಲಿವಲ್ಲೆ ಆತ್ಮಸುಖವಲ್ಲೆ ನಾ |
ನೆಂದು ಪೇಳುವರ ಸಂಗತಿಯವಲ್ಲೆ |
ಇಂದಿರಾಪತಿ ನಿನ್ನ ವಂದಿಸುವ ಜನ ನಿತ್ಯ |
ನಿಂದಂಗಳದೊಳಗೆ ಯಿಪ್ಪ ಭಾಗ್ಯವ ಕೊಡು ೩
ರಸ ರಸಾಯನ ವಲ್ಲೆ ಹಸನಾದ ಪಟ್ಟಿ ರಂ |
ಜಿಸುವದುವಲ್ಲೆ ರಾಗಗಳುವಲ್ಲೆ |
ವಸುದೇವ ಸುತ ನಿನ್ನ ಪೆಸರು ಎಣಿಸುವವರ |
ಶಿಶುವಾಗಿ ಬದಕುವ ಕುಶಲ ಭಾಗ್ಯವ ಕೊಡು ೪
ಪುಣ್ಯ ತೀರ್ಥಗಳು ನಿನ್ನ ಮನಸಿಗೆ ಬಂದ |
ವನ್ನು ಮಾಡಿಸು ಬಿಡದೆ ಮನ್ನಿಸೆನ್ನ |
ಚನ್ನ ಮೂರುತಿ ಚೆನ್ನ ವಿಜಯವಿಠ್ಠಲರೇಯ |
ಎನ್ನ ವಂದನೆಯನ್ನು ಮುನ್ನು ನೀ ಕೈಕೊಂಡು೫

೩೫೧
ಆವಪರಿಯಲಿ ನಿನ್ನನು ವೊಲಿಸುವೆ
ದೇವ ಎನ್ನೊಳಗೆ ಒಂದಾದರೂ ಗುಣವಿಲ್ಲಾ ಪ
ಅರಿಯೆ ಧರ್ಮವ ಪಾಪ | ಮರಿಯೆ ಉತ್ತಮರನ್ನ
ಕರಿಯೆ ನಾಮಕೆ ಬಾಯಿ | ತೆರಿಯೆ ಸುರಿಯೆ
ಜರಿಯೆ ಮೋºಕೆ ಮನ | ಮುರಿಯೆ ವ್ಯಾಕುಲ ಜ್ಞಾನಾಂ |
ಕುರಿಯ ನಿನ್ನವರೊಳು | ಬೆರಿಯೆನರಿಯೆ
ಸರಿಯೆ ದುಸ್ಸಂಗ ಕಥಾ | ಬರಿಯೆ ಕರದಿ ಯಾತ್ರಿಗೆ
ಹರಿಯೆ ಪುಣ್ಯ ತೀರ್ಥ | ವರಿಯೆ ಮೊರಿಯೆ
ಹರಿಯೆ ಜಗದೊರೆಯೆ | ಸಿರಿದೊರೆಯೆ ಅಘ
ಕರಿಗೆ ಕೇಸರಿಯೆ ಮತ್ತಾ | ರರಿಯೆ ನಿನ್ನವರ ಮರಿಯೆ೧
ನಡಿಯೆ ಸುಮಾರ್ಗ ವ್ರತವಿಡಿಯೆ ಮುಡಿದ ಪೂವು
ಮುಡಿಯೆ ಕಾಮದ ಮರ್ಮ | ತಡಿಯೆ ಕಡಿಯೇ
ಕುಡಿಯೆ ಪಾಪೋದಕವ ನುಡಿಯೆ ಮಂಗಳ ವಾರ್ತಿ
ಪಿಡಿಯೆ ಭಕುತಿ ನೀತಿ ಪಿಡಿಯೆ ಗುಡಿಯೇ
ಹುಡಿಯೆ ಸುಕೃತಿ ಕಾಳ | ಗೆಡಿಯೆ ಪರರೊಸ್ತಕ್ಕೆ
ತೊಡಿಯೆ ಚಿಂತಾತುರವ | ವುಧಿಯೆ ಹೊಡಿಯೆ
ಕೊಡಿಯೆ ಎನ್ನಗೊಡಿಯೆ ನೆಂ | ದೆಡೆಯಲ್ಲಿ ಸೂಸಿದಾ
ಪುಡಿಯಲ್ಲಿ ವೊಡಬೆರಸೆ | ಅಡಿಗಡಿಗೆ ಎನ್ನ ಕಡಿಗೆ ೨
ಸುಳಿಯೆ ಕೀರ್ತನಿಗೆ ಮದ | ವಳಿಯೆ ಗುರುನಿಂದಕರ
ಹಳಿಯೆ ಕಾಮದ ಕುಪ್ಪೆ | ಕಳಿಯೆ ಬಳಿಯೆ
ತೊಳಿಯೆ ಮನನ ನರಕಕ್ಕೆ | ಮುಳಿಯೆ ಸುಮತಿಮಾರ್ಗ
ತಿಳಿಯೆ ಪದವಿಗೆ ಪೋಗಿ | ಇಳಿಯೆ ಬೆಳಿಯೆ
ಛಳಿಯೆ ಮುಂದಿನ ಜನನ | ಹೊಳೆಯೆಂಬೋದು ಅರಿದು
ಶಳಿಯೆ ಸಂಚಿತ ಕರ್ಮ | ವಳಿಯೆ ತುಳಿಯೆ
ವುಳಿಯೆ ಬೊಬ್ಬುಳಿಯೆ ಈ | ಕಳೆಯೇನುವಲ್ಲನಭ
ಸುಳಿ ಹೃದಯಾವಳಿಯಲ್ಲಿ | ವಿಜಯವಿಠ್ಠಲವೊಳಿಯೆ೩

೧೦
ಆವರೋಗವೆ ಯೆನಗೆ ದೇವ ಧನ್ವಂತ್ರೀ ಪ
ಸಾವಧಾನದಿಯೆನ್ನ ಕೈಪಿಡಿದು ನೋಡೋ ಅ ಪ
ಹರಿಮೂರ್ತಿ ಕಾಣಿಸದು ಎನ್ನ ಕಂಗಳಿಗೆ
ಹರಿಕೀರ್ತನೆ ಕೇಳದೆನ್ನ ಕಿವಿಗಳಿಗೆ
ಹರಿಯ ಶ್ರೀಗಂಧವಾಘ್ರಾಣಿಸದೆನ್ನ ನಾಸಿಕವು
ಹರಿಯಪ್ರಸಾದ ಜಿಹ್ವೆಗೆ ಸವಿಯಾಗದು ೧
ಹರಿಪಾದ ಪೂಜಿಸೆ ಹಸ್ತಗಳು ಚರಿಸದು
ಹರಿಗುರುಗಳಂಘ್ರಿಗೆ ಶಿರ ಬಾಗದು
ಹರಿಯ ಸೇವೆಗೆ ಯೆನ್ನ ಅಂಗಗಳು ಚಲಿಸದು
ಹರಿಯಾತ್ರೆಗೆನ್ನ ಕಾಲುಗಳೇಳದೋ ೨
ಅನಾಥಬಂಧು ಶ್ರೀವಿಜಯವಿಠ್ಠಲರೇಯ
ಯೆನ್ನ ಭಾಗ್ಯದ ಸ್ವಾಮಿಯಾಗಿ ನೀನೊ
ಅನಾದಿಕಾಲದ ಘನರೋಗವನೆ ಬಿಡಿಸು
ನಿನ್ನ ಉಪಕಾರವ ನಾನೆಂದಿಗೂ ಮರೆಯೇ ೩

೧೧
ಆವಾವ ಬಗೆಯಿಂದ ಹರಿಗರ್ಪಿಸೊ
ಭಾವ ಶುದ್ಧನಾಗಿ ಮುಖ್ಯತ್ವ ವಹಿಸದೆ ಪ
ನೋಡುವ ನೋಟಗಳು ಹರಿಯೆ ನೋಡಿದನೆನ್ನಿ
ವೋಡುವ ಆಟಗಳು ಹರಿಯೆ ವೋಡಿದನೆನ್ನಿ
ಆಡುವ ಮಾತುಗಳು ಹರಿಯೆ ಆಡಿದನೆನ್ನಿ ೧
ನಡಿವ ನಡಿಗೆ ಎಲ್ಲ ಹರಿಯೆ ನಡೆದನೆನ್ನಿ
ಕೊಡುವ ದಾನಗಳು ಹರಿಯೆ ಕೊಟ್ಟನೆನ್ನಿ
ಒಡನಾಡುವ ಲೀಲೆ ಹರಿಯೆ ಆಡಿದನೆನ್ನಿ
ಪಿಡಿವ ಚೇಷ್ಟೆಗಳೆಲ್ಲ ಹರಿಯೆ ಪಿಡಿದನೆನ್ನಿ ೨
ಕೇಳುವ ಶಬ್ದಗಳು ಹರಿಯೆ ಕೇಳಿದನೆನ್ನಿ
ಹೇಳುವ ವಿಧವನಿತು ಹರಿಯೆ ಎನ್ನಿ
ಮಾಲೆ ಧರಿಸುವುದು ಹರಿಯೆ ಧರಿಸಿದನೆನ್ನಿ
ಮೇಲು ಸುಖ ಬಡುವುದು ಹರಿಯೆ ಎನ್ನಿ೩
ವಾಸನೆ ಕೊಂಬುವದು ಹರಿಯೆ ಕೊಂಡ ಎನ್ನಿ
ಭೂಷಣವಿಡುವುದು ಹರಿಯೆ ಎನ್ನಿ
ಲೇಸು ಬಯಸುವುದು ಹರಿಯೆ ಬಯಿಪನೆನ್ನಿ
ಗ್ರಾಸ ಮೆಲುವದೆಲ್ಲ ಹರಿಯೆ ಎನ್ನಿ ೪
ಸತಿಯ ಕೂಡುವದೆಲ್ಲ ಹರಿಯೆ ಕೂಡಿದನೆನ್ನಿ
ಹಿತವಾಗಿಪ್ಪದು ಹರಿಯೆ ಎನ್ನಿ
ಸುತರ ಪಡೆದಾದಲ್ಲಿ ಹರಿಯೆ ಪಡೆದನೆನ್ನಿ
ಪ್ರತಿಕೂಲವಾಗುವುದೆ ಹರಿಯೆ ಎನ್ನಿ ೫
ಬಳಗ ಸಾಕುವುದೆಲ್ಲ ಹರಿಯೆ ಸಾಕಿದನೆನ್ನಿ
ಸುಲಭನಾದರೆ ಹರಿಯಾದನೆನ್ನಿ
ಗಲಭೆ ಮಾಡುವುದೆಲ್ಲ ಹರಿಯೆ ಮಾಡಿದನೆನ್ನಿ
ಸುಳಿದಾಡುವುದೆಲ್ಲ ಹರಿಯೆ ಎನ್ನಿ ೬
ಏನೆಂಬೆ ಹರಿ ಲೀಲೆ ನಿರ್ದೋಷ ನಿಸ್ಸಂಗ
ಅನಂತಕಾಲಕ್ಕೂ ಎಲ್ಲಿದ್ದರು
ಜ್ಞಾನಮಯ ಕಾಯ ವಿಜಯವಿಠ್ಠಲರೇಯ
ನಾನಾ ವ್ಯಾಪಾರಗಳ ಮಾಳ್ಪನೆನ್ನಿ ೭

೮೯
ಇಂಥಾ ಪ್ರಭುವ ಕಾಣೆನೋ ಈಜಗದೊಳ-
ಗಿಂಥಾ ಪ್ರಭುವ ಕಾಣೆನೋ ಪ
ಇಂಥಾ ಪ್ರಭುವ ಕಾಣೆ ಶಾಂತ ಮೂರುತಿ ಜಗ-
ದಂತರಂಗನು ಲಕ್ಷ್ಮೀಕಾಂತ ಸರ್ವಾಂತರ್ಯಾಮಿ ಅ.ಪ.
ಬೇಡಿದಿಷ್ಟವ ಕೊಡುವ-ಭಕ್ತರ ತಪ್ಪು
ನೋಡದೆ ಬಂದು ಪೊರೆವ
ಗಾಡಿಕಾರನು ಗರುಡಾ –
ರೂಢ್ಯ ಗುಣವಂತ ಮಹಾ
ಪ್ರೌಢ ಪ್ರತಾಪಿ ಜಗದಿ
ಗೂಢದಿಂ ಸಂಚರಿಪ
ಪಾಡಿ ಪೊಗಳಿ ಕೊಂಡಾಡುವವರ ಮುಂ-
ದಾಡುತಲಿಪ್ಪನು ನಾಡೊಳಗಿದ್ದರು
ಕೇಡಿಗನೇ ನಾಡಾಡಿಗಳಂದದಿ
ಈಡುಂಟೇನೋ ಈ ವೆಂಕಟಗೆ-ಇಂಥಾ ೧
ನಿಗಮ ತತಿಗಳರಿಯದ- ನೀರಜಭವಾ-
ದ್ಯಗಣಿತ ಸುರರು ಕಾಣದ
ಜಗದೊಡೆಯನು ಭಕ್ತ-
ರುಗಳಿಗೊಲಿದು ತ್ರಿಸ್ಥಾ-
ನಗಳತ್ಯಜಿಸಿ ಕಲಿ
ಯುಗದಿ ಭೂಮಿಗೆ ಬಂದು
ಅಗಣಿತ ಸುಗುಣಾರ್ಣವ- ಶ್ರೀ ಹರಿಯೇ
ಜಗದೊಳು ಸೇವಾದಿಗಳನು ಕೊಳುತಿಹ
ಅಘಹರ ಮೋಕ್ಷಾದಿಗಳನೆ ನೀಡುತ
ನಗೆಮೊಗದಲಿ ಚನ್ನಿಗನಿಂತಹನೊ – ಇಂಥಾ ೨
ಭಾರ್ಗವಿ ಭೂಮಿವಲ್ಲಭ – ಭವದೂರ ಭಕ್ತ
ವರ್ಗಕೆ ಇವಸುಲಭ
ನಿರ್ಗುಣ ನಿರ್ವಿಕಾರ-
ಸ್ವರ್ಗದೈಶ್ವರ್ಯದಿಂದಾ-
ನಘ್ರ್ಯದ ಪದವನೀವ
ದೀರ್ಘಾಯುವಂತನೀತ
ಭಾರ್ಗವರಾಮ ನೃಪರ್ಗಳನೆಲ್ಲರ –
ಣಾಗ್ರದಿ ಜಯಿಸಿದ ಉಗ್ರಪ್ರತಾಪಿ
ಅಗ್ರಗಣ್ಯ ಸದ್ವಿಗ್ರಹ ಶ್ರೀಮದ –
ನುಗ್ರಹ ಮಾಡುತ ದುರ್ಗುಣ ಕಳೆವ ೩
ನಿರ್ದುಃಖಾನಂದ ಭರಿತಾ – ನಿರ್ವಾಣ ಸುಖಕೆ
ಆದ್ರ್ರಹೃದಯ ತೋರುತ
ನಿದ್ರೆಯೊಳಿದ್ದವಗು –
ಪದ್ರಬಡಿಸಿ ದೈತ್ಯ
ಕ್ಷುದ್ರನಂಕೊಲಿಸಿ ಸು
ಭದ್ರ ಜಗಕೆ ಇತ್ತ
ನಿರ್ದಯನಲ್ಲ ಸಮುದ್ರಶಯನ ಗೋ-
ವರ್ಧನ ಗಿರಿಯನು ಉದ್ಧರಿಸಿದ ಯದು
ವರ್ಧನ ದನುಜ ವಿಮರ್ದನ ಲಕ್ಷ್ಮೀ ಜ –
ನಾರ್ದನ ವರ ಶೇಷಾದ್ರಿ ನಿವಾಸ – ಇಂಥಾ ೪
ವಾರಿಜಾಸನ ಮನೋಜಾ ಈರ್ವರು ಸುತರು
ಸುರತರಂಗಿಣಿ ತನುಜಾ
ಪುರವೇ ವೈಕುಂಠ ಇಂದ್ರಾದ್ಯ
ಮರರು ಕಿಂಕರರು
ಗರುಡವಾಹನ ಉರಗ
ಪರಿಯಂಕ ನಿಷ್ಕಳಂಕ
ಸರಿದೊರೆಗಳ ನಾನರಿಯೆನು ವೆಂಕಟ
ಗಿರಿಯಲಿ ಇರುತಿಹ ಕರುಣೆಗಳರಸನೆ
ಮರೆಯದೆ ಸಲಹೋ ಶರಣಾಗತರನು
ಮರುತಾಂತರ್ಗತ ಸಿರಿ ವಿಜಯವಿಠ್ಠಲಾ – ಇಂಥಾ ೫

೧೨
ಇಂದಿರಾದೇವಿಯ ರಮಣ ಬಾ
ವೃಂದಾರಕ ಮುನಿವಂದ್ಯ ಬಾ
ಸಿಂಧುಶಯನ ಗೋವಿಂದ ಸದಮಲಾ
ನಂದ ಬಾ ಮಾವನ ಕೊಂದ ಬಾ ಗೋಪಿಯ
ಕಂದ ಬಾ ಹಸೆಯ ಜಗುಲಿಗೆ ಶೋಭಾನೆ ೧
ಕೃಷ್ಣವೇಣಿಯ ಪಡೆದವನೆ ಬಾ
ಕೃಷ್ಣನ ರಥ ಹೊಡೆದವನೆ ಬಾ
ಕೃಷ್ಣೆಯ ಕಷ್ಟವ ನಷ್ಟವ ಮಾಡಿದ
ಕೃಷ್ಣ ಬಾ ಯದುಕುಲ ಶ್ರೇಷ್ಠ ಬಾ ಸತತ ಸಂ
ತುಷ್ಟ ಬಾ ಉಡುಪಿಯ ಕೃಷ್ಣ ಬಾ
ಹಸೆಯ ಜಗುಲಿಗೆ ಶೋಭಾನೆ ೨
ಎಲ್ಲರೊಳು ವ್ಯಾಪಕನಾಗಿಪ್ಪನೆ
ಬಲ್ಲಿದ ಧೊರೆಯೇ ಜ್ಞಾನಿಗಳರಸನೆ
ಎಲ್ಲಿ ನೋಡಲು ಸರಿಗಾಣೆ ವಿಜಯವಿ-
ಠ್ಠಲ ಬಾ, ಅಪ್ರತಿಮಲ್ಲ ಬಾ ನೀ-
ನಲ್ಲದಿಲ್ಲ ಬಾ, ಭಕುತವತ್ಸಲ ಬಾ,
ಹಸೆಯ ಜಗುಲಿಗೆ ಶೋಭಾನೆ ೩

೨೦೪
(ಊ) ಶ್ರೀ ಮಹಾಲಕ್ಷ್ಮೀ
ಇಂದಿರೆ ಇಂದೀವರಾಕ್ಷಿ- ಸುಂದರಿ ಅರ-
ವಿಂದ ಮಂದಿರೆ ಪೂರ್ಣೆ | ಪ
ಇಂದುವದನೆ ಅಮರೇಂದ್ರ ವಂದಿತೆ |
ಸಿಂಧುಸುತೆ ಆನಂದ ಫಲದೆ ಅಪ
ರಾರರಮಣನ ಸೋಲಿಪ ನಖದಕಾಂತಿ |
ಚಾರು ಚರಣತಳ ವಾರಿಜಾಂಕುಶ ಧ್ವಜ |
ವಾರಣ ಕನಕ ಮಂಗಳರೇಖೆವೊಪ್ಪೆ | ನೂ-
ಪುರ ಕಡಗ ಪೆಂಡ್ಯೆ ಪರಡೆ ಜಾನು ಜಂಘೆ |
ಊರು ಕಟಿ ನಾಭಿ ಉದರ ತ್ರಿವಳಿ |
ಧಾರ ಶೋಭನವಾದ ಹೊನ್ನುಡಿ |
ಧಾರ ಕಿಂಕಿಣಿ ತೋರಮುತ್ತಿನ-
ಹಾರ ಉರವಿಸ್ತಾರ ಗುಣವಂತೆ ೧
ನ್ಯಾವಳಸರ ಕಂಠಮಾಲೆ ಪದಕ ಕಂಬು –
ಗ್ರೀವ ಸರಿಗೆ ದಿವ್ಯಚಂದನ ಲೇಪಿಸಿ |
ಪ್ರಾವಡ ಕಂಚುಕ ಹಸ್ತಕಡಗ ಮುದ್ರೆ
ಪ್ರವಳಮಣಿಯು ಕೇಯೂರ ದಂಡೆಯ ಸರ |
ಬೇವಿನೆಸಳಂತೆ ಪುಬ್ಬು ಢಾಳಿಪ |
ತಾವರೆಯ ಫಣೆಯೂ ಸಂಪಿಗೆ |
ಪುವ್ವ ಪೋಲುವ ನಾಸಿಕ ವೇಣಿ |
ಹಾವಿನಂದದಿ ಒಪ್ಪುತಿರೆ ದೇವಿ ೨
ವಾಲೆಮೂಗುತಿ ಹೊನ್ನಹೂವು ತೂಗುವ ತುಂಬು |
ಫಾಲ ಕಸ್ತೂರಿನಾಮ ಕದಪು ಮುಂಗೂದಲು |
ಮೇಲೆ ರ್ಯಾಕಟೆ ಚೌರಿ ಮುಡಿದ ಕುಸುಮವು |
ಸಾಲು ಮುತ್ತಿನ ಜಾಳಿಗೆ ಗೊಂಡ್ಯ ಶಿರದಲ್ಲಿ |
ಪಾಲ ಸಾಗರ ಶಾಯಿ ವಿಜಯವಿ-
ಠ್ಠಲರೇಯನ ಉತ್ಸಾಹದಲಿ |
ತೋಳಿನಲ್ಲಿ ಬಿಗಿದಪ್ಪಿ ಪವಳಿಪ |
ಶ್ರೀ ಲಕುಮಿ ತ್ರೈಲೋಕ್ಯ ಮಾತೆ ೩

೧೩
ಇಂದು ನೋಡಿದೆ ಇಂದಿರೇಶ
ಮುಕುಂದನ ಮುದ್ದು ರೂಪವ ಕಳೆದೆ ಸಂತಾಪವ ಪ
ಪಂಚ ವರ್ಣದ ಪಕ್ಕಿ ಪೆಗಲಲ್ಲಿ
ಮಿಂಚಿನಂದದಿ ತೋರುತಾ ವರಗಳ
ಬೀರುತಾ ವೊಡನಿಪ್ಪ ಮಾರುತಾ ೧
ಝಗಝಗಿಪ ಪದಯುಗಳ ಬಿಗಿದಪ್ಪಿ
ತೆಗೆಯದಲೆ ಮನಪಾಡಿದೆ ಕುಣಿ ಕುಣಿ
ದಾಡಿದೆ ಸಂತರ ಸಂಗ ಬೇಡಿದೆ ೨
ಧನ್ಯನಾದೆನೊ ದಾನವಾರಿಯ ಘನ್ನ ವೈಭೋಗ ಕಂಡೆ ನಾ
ಪುಣ್ಯವನು ಕೈಕೊಂಡೆ ನಾ ನಾಮಾಮೃತ ಉಂಡೆ ನಾ ೩
ಏನು ಪೇಳಲಿ ಗುರುಗಳ ಕೃಪೆ
ಸ್ವಾನೆ ನಿರುತ ಕರಗರವದು ಅಹಂಮತಿ
ಮರೆವದು ಸುರಗಣ ಪೊರೆವುದು ೪
ಕಮಲಹರ ಶಿರ ವಿಜಯವಿಠ್ಠಲ
ಕಮಲಲೋಚನಾಭಾಸನ ಪನ್ನಗನಗ
ವಾಸನಾಗುಣ ಮಂದಹಾಸನಾ೫

೧೪
ಇಂದು ನೋಡಿದೆ ಗೋವಿಂದನಾ ಸರ್ವ
ಸುಂದರಸಾರ ವೆಂಕಟ ರಮಣನಾ ಪ
ಭಾಗೀರಥಿಯ ಪೆತ್ತವನಾ ಭವ
ರೋಗವ ಕಳೆವ ರಾಜೀವನೇತ್ರನಾ
ಸಾಗರದೊಳಗೆ ಒಪ್ಪುವನಾ ಭಕ್ತ
ಕೂಗಲು ನಿಲ್ಲದೆ ಒದಗಿ ಬರುವನಾ೧
ನಿಲ್ಲದೆಳಿಪಿಗೆ ಪೊಳೆದನಾ ಗೋ
ಪಾಲಕರಿಗೆ ವೈಕುಂಠ ತೋರಿದನಾ
ನೀಲಾದೇವಿಗೆ ಬಲಿದವನಾ ಭೂ
ಪಾಲಗೆ ಮೆಚ್ಚಿ ಸತ್ವರವನಿತ್ತವನಾ೨
ವಿಶ್ವ ಮಂಗಳದಾಯಕನಾ ಅಹಿ
ವಿಷ್ಟಕಸೇನರಿಂದ ಪೂಜೆಗೊಂಬುವನಾ
ವಿಶ್ವರೂಪ ವಿಲಕ್ಷಣನಾ ಸರ್ವ
ವಿಶ್ವ ಪರಿಪಾಲ ಪ್ರಣತಾರ್ತಿ ಹರನ೩
ಸುರ ಶಿರೋಮಣಿ ಸದ್ಗುಣನಾ ಸು
ದರಶನ ಶಂಖ ಭಜಕರಿಗೆ ಕೊಟ್ಟವನಾ
ನಿರುತ ಆನಂದ ಭರಿತನಾ ದಿವ್ಯ
ಮಿರುಗುವಾಭರಣದಿಂದಲಿ ನಿಂದಿಹನಾ ೪
ಶಾಮವರ್ಣ ಚತುರ್ಭುಜನಾ ನಿಜ
ಕಾಮಿನಿ ಸಂಗಡ ನಲಿದಾಡುವನಾ
ಹೇಮ ಗಿರಿಯಲಿದ್ದವನಾ ದೇವ
ಸ್ವಾಮಿ ತೀರ್ಥವಾಸ ವಿಜಯವಿಠ್ಠಲನಾ೫

ಆತ್ಮ ನಿವೇದನೆ
೪೪೬
ಇಂದು ಪಾವನವಾಗಿರೊ |
ಇಂದಿರಾ ರಮಣನ್ನ ದಿನ ವ್ರತವ ಮಾಡಿ ಪ
ಜನನಿ ಜನಕ ಭ್ರಾತಾ ಅನುಜ ನಿಜಾಂಗನೆ |
ತನಯರು ನೆರೆಹೊರೆ ಮನ ಜನಕೆ |
ಬಿನಗು ವ್ರತವ ಬಿಟ್ಟು ವನಜನಾಭಾನ ಸಿರಿ |
ದಿನ ತ್ರಯವನು ಅನುಸರಿಸಿರೆಂದು ೧
ಏಕಾದಶಿದನ ವಿಕೇತನದಲಿ ಪಾಕ ಮಾಡಿದರದು |
ಕಾಕಮಾಂಸ ಲೋಕದೊಳಗೆ ಸರಿ | ಲೋಕದೊಳಗೆ ಎಂದು |
ತಾ ಕೂಗಿ ಸುಖದಲ್ಲೀ |
ವಾದ ಪೇಳುತಲಿದ್ದು ಏಕ ಭಕುತಿಯಲ್ಲೀ೨
ಹರಿದಿನದಲ್ಲಿ ನೀರು ಬೆರಳಲಿ ಸುರಿದಾ |
ಭೂಸುರನು ಚಾಂಡಾಲನು ನಿರುತದಲೀ |
ವರಗೋಮಾಂಸ ನರಕಾ | ನರಿ ನಾಯಿರಾಸ |
ಸೂಕರ ಭಕ್ಷಣಿಗಿಂತ | ಪರಮ ಉತ್ತಮನೆಂದು ೩
ಪ್ರಾಣತ್ಯಾಗವಾಗಿ ಹಾನಿ ಪ್ರಾಪುತದಿಂದ |
ಏನೇನು ಸಂಕಟ ತಾನೊದಗೆ |
ಆನಂದ ಮತಿ ಈವಾ ಶ್ರೀನಾಥನ ದಿವಸ |
ಧಾನ್ಯದಲಿಟ್ಟು ನಿದಾನಕೆ ಗತಿ ಎಂದು ೪
ಇತರ ದಿವಸದಲ್ಲಿ ಅತಿಶಯದಿಂದಲೀ |
ಕೃತ ಕರ್ಮಗಳು ವಿಹಿತವಹುದೂ |
ರತಿಪತಿಪಿತನ ಅಪ್ರತಿವಾಸರದಲ್ಲೀ |
ಅತಿ ಅವಶ್ಯಕವಾ ವರ್ಜಿತ ಮಾಡಿ ಸಜ್ಜನರು ೫
ಎಲೆ ಹಾಕದೆ ಜಾಗರವ ಬೇಸರದಲೆ |
ಲವಲವಿಕೆಯಿಂದ ಕವಿಗಳೊಡನೆ |
ತವಕದಿಂದಲಿ ಪಾಡುತ ಗಾಯನ ಶುದ್ಧಾ |
ಶ್ರವಣ ಮಾಡುತ್ತ ಸದಾ | ಪವನ ಮತದೊಳಿದ್ದು೬
ದಶಮಿ ವಂದು ಏಕಾದಶಿ ಎಂಟು ತಿಳಿದು |
ದ್ವಾದಶಿ ಐದು ಹ | ದಿನಾಲ್ಕು ಎಸವ ಝವಾ |
ಪುಶಿಯಲ್ಲ ಇದು ಸಿದ್ಧಾ ಅಸುಯವ ಬಡದಲೇ |
ಕುಶಲದಿಂದಲಿ ವ್ರತ ಚರಿಸುತ್ತಲಿ ಚನ್ನಾಗಿ ೭
ಏಳೊಂದು ವತ್ಸರದ ಮೇಲೆ |
ಎಂಟು ಹತ್ತು ಮೇಲು ವತ್ಸರ ಬಿಟ್ಟು ವಾಲಾಯ ಉಳಿದವರು |
ನೀಲವರ್ಣನ ವ್ರತವಾ ಲೀಲೆಯಿಂದಲಿ ಚರಿಸಿ ೮
ಆವಾದಾದರ ಬಿಡದಿರೀ |
ಕೇವಲ ಸಾಧನವೂ |
ಈ ವಾರವು ದೇವೇಶ ವಿಜಯವಿಠ್ಠಲಗೆ ಸಮರ್ಪಿಸೆ |
ಸೇವಿಯ ಪಾಲಿಸಿ ಕೈವಲ್ಲ್ಯದಲಿ ಇಡುವಾ ೯

೧೬೪
ಇಂದು ಬನ್ನಿ ಇಂದಿರೇಶಾ ಇಂದುವಾರದಲಿ ಬಲು |
ಅಂದದಿಂದ ಮೆರೆವನಂದವ ನೋಡಾ ಪ
ಮುತ್ತಿನ ಕಿರೀಟ ಮೇಲೆ ಸುತ್ತಿದ ಲತೆ ತಳಲು |
ರತ್ನಗಂಬಳಿ ಕಲ್ಲಿಯ ಬುತ್ತಿ ಪೆಗಲೂ ||
ತೂತ್ತುತೂರಿ ಎಂದು ಸ್ವರ | ವೆತ್ತಿ ಊದುವ ಕೊಳಲು |
ಉತ್ತಮ ಶೋಕ್ಲವನು ಮೆರೆಯುತ್ತಲಿಪ್ಪುದು ೧
ಉಂಗುರಗೂದಲು ಪುಬ್ಬು ಸಿಂಗಾಡಿ ಅಂದದಿ ಒಪ್ಪೆ |
ಅಂಗಾರ ಕಂಕಣ ಮಂಗಳಾಂಗ ನಿಸ್ಸಂಗ |
ರಂಗ ತುಂಗ ಮಹಿಮ ತಾರಂಗ ಅಂಗುಲಿಲಿ ರತ್ನ |
ದುಂಗುರವ ಯಿಟ್ಟ ಸುಖಂಗಳ ನೋಡಾ ೨
ಉಂಗುರವ ನಡು ಮೇಲು ಕಂಗಳ ಕುಡಿನೋಟ |
ಗೋಪಾಂಗನೇರ ಮನಕೆ ಮೋಹಂಗಳ ತೋರೆ |
ಅಂಗಜನ್ನೆನೆಸಿ ತಾಪಂಗಳು ವೆಗ್ಗಳದಿಂದ |
ಹಂಗೀಗರಾಗೆ ನಗುವ ಗಂಗಾಜನಕ ೩
ಲೋಕ ಬೆಲೆಗೊಂಬ ಅಲೌಕೀಕ ಮಣಿನಾಸದಲ್ಲಿ |
ರಾಕಾಬ್ಜಾನಂದದಿ ಮೊಗಾನೇಕ ಲೋಕೇಳಾ |
ನಾಕಾಜನಾದಿಗೆ ನಿತ್ಯ ಬೇಕೆಂದು ಜಪಿಸಲು
ದೊರಕದ ದೊಂಬಲು ಬಾ ಯದುಕುಲಾಂಬರಾ೪
ತೂಗುವ ಕುಂಡಲ ಕರ್ಣ ಶ್ರೀಗಂಧ ಪೂಸಿದ ವಕ್ಷ |
ಪೂಗೊಂಚಲು ಸಣ್ಣನಾಮ ಆ ಗೆಜ್ಜೆಧ್ವನಿ |
ಆಗಮನ ಸೋಲಿಸೆ ನಾನಾ ಭೋಗಾದಲ್ಲಿಯಿಪ್ಪ | ಮಧ್ವ |
ಯೋಗಿಪ್ರಿಯಾ ವಿಜಯವಿಠ್ಠಲಾ ಗುಣನಿಧಿ ೫

೧೫
ಇಂದು ಸಾರ್ಥಕವಾಯಿತು ಎನ್ನ ಜನನಾ
ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು ಪ
ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ
ರತ್ನದ ಕವಾಟ ತೋರಣಗಳು
ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ
ತುತ್ತಿಸಲಳವೆ ಅನಂತ ಜನುಮಕೆ ೧
ಸಾಲು ಬೀದಿಗಳು ಒಂದೊಂದರ ಮಧ್ಯದಲಿ
ಸಾಲು ಮಂಟಪ ಮುತ್ತಿನ ಚಪ್ಪರಾ
ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ
ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲು ೨
ಮುಂದೆ ಗರುಡಗಂಭ ಪವಳದ ಗವಾಕ್ಷಿ
ಹಿಂದೆ ನೆರೆದ ಬಲು ಪರಿಯಂಗಡಿ
ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ
ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು ೩
ಚಂದನ್ನನಿಂದೆ ಪೋಗಾಡಿದ ಸರೋವರ
ಒಂದು ಸುರವನ್ನೆ ವೃಕ್ಷದಲ್ಲಿ
ಮಿಂದು ಸಜ್ಜನರು ಕೈಗಳ ಮುಗಿದು ನಮೊ
ಎಂದು ಕೊಂಡಾಡುವರು ವೇಗದಲ್ಲಿ ೪
ಪ್ರಣವಾಕಾರವಾದ ವಿಮಾನ ಅದರ ಮೇಲೆ
ಮಿನುಗುವ ವಾಸುದೇವಾದಿಗಳ
ಮನದಣಿಯ ಕೊಂಡಾಡಿ ಮುದದಿಂದ ಪಾಡುತ್ತಾ
ಫಣಿ ತಲ್ಪನಾಥ ಶ್ರೀ ಪರಮಪುರುಷನ ಕಂಡು ೫
ಕಮನೆಯ ಮುಕುಟ ಕಸ್ತೂರಿ ತಿಲಕ ನಾಶಿಕ
ಕಮಲಾಕ್ಷ ಕುಳಿರತೆರದಿ ಕದಪು
ಅಮಲಗೂದಲು ಕರ್ಣ ಕುಂಡಲ ಉರದಲ್ಲಿ
ರಮಣಿ ಕೌಸ್ತುಭ ಹಾರ ಪದಕ ಪಾವನ ಪಾದಾ೬
ನಸುನಗೆ ಚತುರ್ದಶ ಲೋಕವ
ಬಿಸಜ ಕರಗಳು ಭೂಷಣದಿಂದಲಿ
ಬಿಸಜ ಭವನ ಪಡೆದು ನಾಭಿ ವಸನಕಟಿ
ಮಿಸುಣಿಪ ವಡ್ಯಾಣ ಸರ್ವ ಲಕ್ಷಣನಾ ೭
ಕಾಲ ಕಡಗ ಪೆಂಡೆ ಪೊಂಗೆಜ್ಜೆ ಅಂದಿಗೆ
ವಾಲಾಯ ಪದತಳದಲಿ ರೇಖೆ
ವಾಲಗ ಸಿರಿದೇವಿ ಪ್ರೀತಿಯಿಂದಲೆ ಮಾಡೆ
ಕಾಲಕಾಲಕೆ ಸುರರು ಸಮ್ಮುಖದಲಿ ನುತಿಸೆ ೮
ಉಭಯ ಕಾವೇರಿ ನಡುವೆಯಿದ್ದು ದಕ್ಷಿಣ
ಅಭಿಮುಖವಾಗಿ ಪವಡಿಸಿದ ವಿ
ಭೀಷಣದ ವರದ ರಂಗ ಮಂದಿರ ನಿಲಯಾ
ವಿಬುಧೇಶ ವಿಜಯ ವಿಠ್ಠಲ ರಂಗನ ಕಂಡು೯

೯೦
ಇಕೋ ಈತ ವೆಂಕಟೇಶನೊ | ಭವದ |
ಸಿಕ್ಕು ಬಿಡಿಸಿ ನೆನದವರಿಗೆ ಸಿಕ್ಕಿ ಮನದಿಂದಗಲದಿಪ್ಪಾ ಪ
ಕರುಣ ಅರುಣ ಕಿರಣ ಪೋಲುವ |
ಚರಣ ಧರಣಿ ತರುಣಿ ಸ್ಮರಿಸಿ |
ಕರುಣಗಡಲಾ |
ಧರಣಿಯಿಂದ ಉದ್ಧರಣೆ ಮಾಡಿದೆ ಪರಣನೀತ ೧
ಮಂಡಿಯ ಮಂಡನ |
ಕುಂಡಲ ಕಾಂತಿ |
ಗಂಡ ಸ್ಥಳದಲಿ ಮಿರುಗೆ ತುಲಸಿ |
ದಂಡೆ ಕೌಸ್ತುಭ ಭೂಷಣ ಕಾಲ | ಪೆಂಡೆಯಿಟ್ಟು ನಂದನೀತ ೨
ತಂ (ತು) ವಾಹನ ಆ ಖಂಡಲ ಇಕ್ಷುಕೋ |
ದಂಡ ಪರಮೇಷ್ಠಿ |
ತೊಂಡರ ನಲಿದು ಕೊಂಡಾಡೆ ಚಂದಿರ ಮಂಡಲದೊಳು ಉ|
ದ್ದಂಡನಾಗಿಯಿಪ್ಪಾ | ಪುಂಡ ದೈವನೀತ ೩
ಪಂಜಿನಸಾಲು ಪರಂಜಳಿ ವಾದ್ಯ ವಿ |
ರಂಜಿಸಲು ಜ್ಞಾನ |
ಪುಂಜ ನಾರದ ಜಯ ಜಯ ಪೇಳಲು |
ಕಂಜಲೋಚನ ನಿರಂಜನ ದಾನವ ಭಂಜನ ಈಶಾ ೪
ಕರದ ಜನಕೆ ಸುರಧೇನು ಇದು |
ನಿರುತದಲ್ಲಿ ಪೊರೆವ ಭಕ್ತರ |
ಕರಿಯ ಕಾಯ್ದ ವಿಜಯವಿಠ್ಠಲ |
ಪರಮ ಪುರುಷ ತಿರುಮಲನೀತ ೫

(ಏ) ಮಧ್ವಾಚಾರ್ಯ
೨೪೬
ಇದು ನಿನಗೆ ಬಲು ಚಂದವಾಗಿದೇನೋ |
ಬಾದರಾಯಣನ ಮೆಚ್ಚಿಸಿ ಸೇವೆ ಮಾಡಬೇ |
ಕಾದರೂ ಮತ್ತಾವ ಪರಿಯಿಲ್ಲವೇ |
ಈ ಧರೆ ಮನುಜರಿಗೆ ಆವಾವ ಕಾಲಕ್ಕೆ
ಭೋದವಾಗದಂತೆ ಇದ್ದದ್ದೇನು ಬಗೆ ೧
ಸಂಪುಟಾಕಾರವನು ಧರಿಸಿ ಅಲಂಕಾರ |
ಸಂಪತ್ತಿನಿಂದ ಯತಿಗಳ ಕೈಯ್ಯಲಿ |
ಸೊಂಪಾಗಿ ಮಿಗೆ ಪೂಜೆ ಕೊಳುತ ಪೊಗಳಿದ ಜನಕೆ |
ತಂಪಾಗಿ ಗುರು ಶ್ರೀ ಮದಾಚಾಯರ್ಸ ೨
ಪೆಟ್ಟಿಗೆಯಂದದಲಿ ಒಪ್ಪುವನೆಂದದಕೆ |
ದಿಟ್ಟವಾಯಿತು ದಾಸರು ನುಡಿದುದು |
ವಿಷ್ಣುತೀರ್ಥರಿಂದ ಆರಿಸಿ ಬಂದ | ವಿಜಯವಿಠ್ಠಲ ವೇದ |
ವ್ಯಾಸನಂಘ್ರಿವಾರಿಜ ಮಧುಪಾ೩

೧೬೫
ಇದೇ ಭಕುತಿ ಮತಿಗೆ ಮುಕುತಿ |
ಇದಕ್ಕಧಿಕವಾಗಿಪ್ಪ ವಿಧಿಗಳೆಲ್ಲಿಯಿಲ್ಲಾ ಪ
ರತುನ ಗರ್ಭದೊಳಗೆ ತಿಳಿ |
ರತುನ ಸಮಕ್ಷೇತ್ರಗಳಿಗೆ |
ರತುನವೆನ್ನಿ ಯತಿವಂಶ |
ರತುನ ಮಧ್ವಮುನಿಮಾಡಿದಾ ೧
ಪದ ಜೀವಸ್ತರಿಗದೆ ಪಾ |
ಪ ಜನರು ಕೃಷ್ಣರಾಯನ ಪಾದವ ನೋಡಿ ನಿತ್ಯಾ |
ಸಾಧನಿ ಮನ ಮಾಡಿರಯ್ಯಾ ೨
ಏಳು ಒಂದು ಮಠದ ಲೋಕರಂಸೆ ಸದನವೆನ್ನಿ |
ಪೇಳಲೇನು ಅವರೇ ಯಿಲ್ಲಿ
ಊಳಿಗವ ಮಾಡುತ್ತಿಪ್ಪರು ೩
ಮೇರೊ ಪರ್ವತ ತುಲ್ಯವಿದೆ |
ವಾರಿಜನೆ ಮಧ್ವರಾಯ |
ಈ ರಜತ ಪೀಠವೆ ಮಂದಿರ ಶತಕೋಟಿ ಎನ್ನೀ೪
ಮೆರೆವ ಮಧ್ವತೀರ್ಥ ಬಾಹಿರ |
ವರಣ ಉದಕವೆನ್ನಿ ಇಲ್ಲಿ |
ಚರಿಸುವಂಥ ಸುಗುಣ ತೃಣಾ
ದ್ಯರು ಮುಕುತಿ ಯೋಗ್ಯರಹುದು೫
ಉಡಪಿ ಯಾತ್ರೆ ಮಾಡಿದವನು |
ಪೊಡವಿ ತುಂಬ ಯಾತ್ರೆ |
ಬಿಡದೆ ಚರಿಸಿದವನೆ ಎಂದು |
ಮೃಡನು ಇಲ್ಲಿ ಸಾರುತಿಪ್ಪಾ ೬
ಉಬ್ಬಿ ಸರ್ವ ಇಂದ್ರಿಯಂಗಳಾ |
ಹಬ್ಬವಾಗಿ ಸುಖಿಪದಕೆ |
ಊರ್ಬಿಯೊಳಗೆ ಉಡುಪಿ ಯಾತ್ರೆ |
ಅಬ್ಬದಲೆ ದೊರಕದಯ್ಯಾ ೭
ಲಿಂಗ ದೇಹ ಭಂಗವಾಗಿ
ಹಿಂಗಿ ಪೋಗದಕೆ ಇದೇ |
ಅಂಗವಲ್ಲದೆ ಬೇರೆ ಇಲ್ಲ |
ರಂಗ ಸುಲಭಸಾಧ್ಯಾವಾಹಾ ೮
ನೂರು ಕಲ್ಪಧರ್ಮ
ಮಾರನಯ್ಯ ವಿಜಯವಿಠ್ಠಲನ |
ಪ್ರೇರಣೆಯಾಗಿ ಉಡುಪಿಗೊಂದು
ಸಾರಿ ತಂದು ಕೊಡುವಾ೯

೯೧
ಇದೇ ರಾಮನಿಧಿ ನೋಡು ಎದುರಿಗಿರುತಿರೆ
ಹೃದಯವೆಂಬೊ ಸದನದಲ್ಲಿ ಕದವು ತೆಗೆದಿದೆ ಪ
ದಾರಿಯಲ್ಲಿ ಆರು ಛತ್ರ ಭೂರಿ ಭೋಜನ
ಊರೊಳಲ್ಲಿ ಪ್ರಣವ ಶಬ್ದ ಭೋರೆಗುಟ್ಟುತ
ನೂರು ಕೋಟಿ ಸೂರ್ಯ ಕಿರಣ ತೋರುವಾ ಪ್ರಭೆ
ಸೂರೆ ಮಾಡಿಕೊಳ್ಳಿರೋ ಪಾರವಿಲ್ಲದಾ ೧
ಅಷ್ಟದಳದ ಮಂಟಪದ ಪೆಟ್ಟಿಗೆಯಲೀ
ಸೃಷ್ಟಿಗೊಡೆಯ ಹರಿಯ ನಾಮ ಅಂಕಿತವಾದ
ಕಟ್ಟಳೆಯಿಲ್ಲದ ನಾಣ್ಯಗಳನು ಕಟ್ಟರೀಸಿದೆ
ಹುಟ್ಟ ತಿರುಕರೆಲ್ಲ ಬಂದು ಕಟ್ಟಕೊಳ್ಳಿರೋ ೨
ಅಂಕೆ ಮಾಡುವರಿಲ್ಲವಿದಕೆ ಶಂಕೆ ಬ್ಯಾಡಿರೋ ಅ-
ಹಂಕೃತಿಯ ತೊರೆದು ಕಾಲ್ಗೆ ಗೆಜ್ಜೆ ಕಟ್ಟಿರೋ
ಶಂಖ ತಾಳ ಮದ್ದಳೆಯು ಝೇಂಕೃತಿಯಿಂದಾ
ವೆಂಕಟಾಚಲ ನಿಲಯಕಾಯೊ ವಿಜಯವಿಠ್ಠಲ ೩

೩೫೨
ಇದೇ ಸಮಯ ಹರಿಯೇ ಇದೇ ಸಮಯ ಪ
ನಿನ್ನ ಪದ ಕಮಲ ತೋರಿ ಸದಾ |
ಬಿಡದೆ ಎನ್ನ ಮುದದಿ ಪೊರೆವುದಕೆ ಅ.ಪ
ನಾನಾ ಯೋನಿಯಲಿ ಬಂದು ಜ್ಞಾನ ದುರ್ಲಭನಾಗಿ |
ಹೀನನಾದವಗೆ ಸುಜ್ಞಾನ ಪಾಲಿಸುವುದಕೆ ೧
ಆಶಾಪಾಶಕೆ ಸಿಲುಕಿ ಶ್ರೀಶನ ಮರೆತೆನೋ |
ಲೇಸು ದಾರಿಯ ತೋರಿ ದಾಸನ ಕಾಯುವುದಕೆ ೨
ಸಂತರ ಸಂಗವ ಸಂತತ ಪಾಲಿಸಿ
ಅಂತರಂಗದಿ ನಿನ್ನ ಚಿಂತನೆ ಕೊಡುವುದಕೆ ೩
ಹಿಂದಿನ ಸುಕೃತದಿ ಬಂದೆ ಭೂಸುರನಾಗಿ |
ಮುಂದಿನ ಪದಕ್ಕಾಗಿ ಕುಂದದೆ ಸಲಹುವುದಕೆ ೪
ಶ್ರೀ ಪತಿ ವಿಜಯವಿಠ್ಠಲ ವೆಂಕಟ |
ತಾಪವ ಕಳೆದೆನ್ನ ಕಾಪಾಡುವುದಕೆ ೫

೩೫೩
ಇರಬಾರದೊ ಬಡವ ಜಗತ್ತಿನೊಳಗೆ |
ಪರದೇಶಿ ಮಾನವಗೆ ದಿಕ್ಕು ಮತ್ತಾವನು ಪ
ಪೊಡವಿಪತಿ ದೃಷ್ಟಿಗಳು ಒಳ್ಳೆವಲ್ಲಾವೆಂದು |
ಬಿಡದೆ ಜನ ಪೇಳುವುದು ಸಿದ್ಧವಯ್ಯಾ |
ಬಡವ ನಾನಯ್ಯ ನಾನಾ ಕಷ್ಟಬಟ್ಟೆರಡು |
ಒಡವೆ ಸಂಪಾದಿಸಲು ಅಪಹರಿಸಿದ ನೋಡು ೧
ದಿನ ಪ್ರತಿ ದಿನದಲ್ಲಿ ಕರಳು ಕಟ್ಟಿಕೊಂಡು |
ಹಣದಾಸಿಯಿಂದ ನಾ ಘಳಿಸಿದ್ದೆನೊ |
ಮನೆವುಗೆ ಬಂದು ಮಾಡಿಕೊಂಡೊಯ್ದಿಯಾ ಧರ್ಮವೇ |
ವನಜನಾಭನೆ ನಿನ್ನ ದೊರೆತನಕೆ ಶರಣೆಂಬೆ೨
ದೊರೆಗಳಾ ಲಕ್ಷಣವಿದೆ ಎಂದೆಂದಿಗೆ ತಮಗೆ |
ಸರಿಬಂದ ಕಾರ್ಯಮಾಡುವರಲ್ಲದೇ |
ನೆರೆಯವರದೇ ತಪ್ಪೇ ವಿಜಯ ವಿಠ್ಠಲರೇಯ |
ಮರಳೆ ಮಾತಾಡಿದರೆ ಅಪರಾಧ ಹೊರಿಸುವರು ೩

೩೫೪
ಇವನ ಪಾಲಿಸಿದರೆ ನಿನಗೆ ಪುಣ್ಯ ಪ
ಅವನಿಯೊಳೆಂದೆಂದಿಗೂ ನಾನೆ ಧನ್ಯ ಅ.ಪ
ನೆಟ್ಟ ಮುಳ್ಳು ಕಿತ್ತು ಬಿಸುಟಂತೆ ಮಾಡು |
ಘಟ್ಟಿಯಾಗಿ ಭಕುತನ್ನ ಕಾಪಾಡು೧
ಸಾಧನ ಪ್ರಾಣಿಗಳಿರಲಿ ಬೇಕು |
ಆದರದಿಂದಲಿ ಕೇಳೆನ್ನ ವಾಕು ೨
ತ್ರಿಜಗದೊಳಗೆ ನಿ£ಗ್ಯಾರೆಣೆಯೆ |
ವಿಜಯವಿಠ್ಠಲ ಕೇಳೆನ್ನ ದೊರೆಯೆ ೩

೫೦೬
ಈ ಕಾಯ ಬಲು ಹೇಯವೊ |
ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ
ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ |
ಅರ್ಧರ್ಧ ಪ್ರವೇಸಿಯಾಗಿ |
ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು |
ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ ೧
ಸನ್ನಿರೋಧವಾದ ಪ್ರಾದೇಶದಲಿ ನೀನು |
ಬನ್ನ ಬಡುವದು ಜನಕೆ ಅರಿಯನಲ್ಲಾ |
ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು |
ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ ೨
ಕಫ ಶ್ಲೇಷ್ಮ ಪಿತ್ತ ವಾತ ಶೈತ್ಯಜ್ವರ ಕೆಮ್ಮು |
ಸಪುತ ಧಾತುಗಳಿಂದ ಬರುವ ರೋಗ |
ಅಪರಿಮಿತವಾದ ತನು ಕ್ಲೇಶ ಮೋಹಗಳೊಡನೆ |
ತಪಿಸುವುದು ನೋಡು ಅನುಗಾಲ ಬಿಡದು ಮಾಯಾ ೩
ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ |
ಜ ಮಗಳ ಕೂಡ ಬೆರದಾಡಿ ಬೆರೆದು |
ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ |
ಪಾಮರನಾಗಿ ಬಳಲದಿರು ಬಹು ಜೋಕೆ ೪
ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು |
ಪ್ರತಿದಿವಸದಲಿ ಅಟ್ಟುವುದು ನೋಡು|
ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ |
ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ ೫
ಎಂತು ನೋಡಲು ವಿಷಯ ಅನುಭವಿಸಿದರು ಅದರ |
ಅಂತು ಕಂಡವರಾರು ವಲ್ಲೆನೆಂದು |
ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ |
ಚಿಂತೆ ಇಷ್ಟಷ್ಟು ಏನೆಂದು ಪೇಳಲಿ ೬
ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ |
ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ |
ಸುಲಭ ದೇವರ ದೇವ ವಿಜಯವಿಠ್ಠಲರೇಯ |
ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು ೭

೪೪೭
ಈ ದೇಹ ಬಲು ಸಾಧನ
ಭೂದೇವ ಜನ್ಮದಲಿ ಬಂದ ಕಾರಣ ನಮಗೆ ಪ
ಶ್ವಸನ ಮತವೆ ಪೊಂದಿ |
ನಸು ಚಿತ್ತದಲಿ ಯಿದ್ದು |
ವಿಷಯಂಗಳೆಲ್ಲ ನಿರಾಕರಿಸಿ |
ಋಷಿಮಾರ್ಗದಲಿ ನಡೆದು ವಿಹಿತಾರ್ಥದ ಸತ್ಯ |
ಬೆಸಸೆ ಪೇಳುತ ನಿತ್ಯ ಸಜ್ಜನರ ಒಡಗೂಡು೧
ಬಾಹುದ್ವಯದಲಿ ಶಂಖ ಚಕ್ರ ಧರಿಸಿ ಉ |
ತ್ಸಾಹದಲಿ ದ್ವಾದಶ ಪುಂಡ್ರಗಳನಿಟ್ಟು |
ಸ್ನೇಹಭಾವದಲಿ ಸತತ ಭಕುತಿಯ ಮಾಡು |
ಇಹಲೋಕದಲಿ ಇಷ್ಟಾರ್ಥ ಬೇಡುತಲಿರು ೨
ಅನಿಷಿದ್ದ ಕರ್ಮಗಳು ಆಚರಿಸಿ ಭೂತದಯ |
ಅನುಗಾಲ ಇರಲಿ | ಬಂಧುಗಳ ಕೂಡಾ |
ಮನಮೆಚ್ಚು ನಡೆದು ನೀ ಮಂದಮತಿಯನು ಕಳೆದು |
ಘನಜ್ಞಾನದಲಿ ನಡೆದು ಗುಣವಂತನಾಗು ೩
ಧರ್ಮೋಪದೇಶವನೆ ಮಾಡುತಲಿರು ನೀನು |
ಪೇರ್ಮೆಯುಳ್ಳವನಾಗು ಪೃಥವಿಯೊಳಗೆ |
ನಿರ್ಮತ್ಸರನಾಗು ವೈಷ್ಣವ ಜನರ ಕೂಡ |
ದುರ್ಮತವ ಪೊಂದದಿರು ಅನಂತ ಜನ್ಮಕ್ಕೆ ೪
ಕೊರಳು ತುಳಸೀ ಮಣೀ ಕರ್ಣ ತುಲಸೀ ದಳ |
ಬೆರಳಲ್ಲಿ ಪವಿತ್ರದುಂಗರವನಿಟ್ಟು |
ಪರಮ ವಿರಕುತಿಯಲಿ ದೇಹವನು ದಂಡಿಸುವ |
ಹಿರಿದಾಗಿ ಭಾಗವತನಾಗು ವ್ಯಾಕುಲವ ಬಿಡೋ ೫
ವದನದಲಿ ಹರಿಸ್ಮರಣೆ ಮರೆಯದಿರು ಕಂಡಕಡೆ |
ಉದರಕ್ಕೆ ಪೋಗಿ ಚಾಲ್ವಯದಿರು
ಅಧಿಕರ ಆಪೇಕ್ಷಗಳ ಮಾಡದಿರು ಹರಿಯಿತ್ತ
ದದು ಭುಂಜಿಸಿ | ಬಂದ ಕಾಲವನು ಹಿಂಗಳಿಯೊ ೬
ತೀರ್ಥಯಾತ್ರೆಯ ಚರಿಸು ಕಥಾಶ್ರವಣವನು ಕೇಳು |
ಅರ್ಥವನೆ ಬಯಸದಿರು ಬಾಕಿ ಬಸಿದು
ವ್ಯರ್ಥ ನಿನ್ನಾಯುಷ್ಯ ಪೋಯಿತೆಂದೆನಿಸದೆ |
ಪ್ರಾರ್ಥನೆಯ ಮಾಡು ಪ್ರತಿಕ್ಷಣಕೆ ಶ್ರೀ ಹರಿಚರಣ ೭
ವ್ರತಗಳನೆ ಬಿಡದಲಿರು ವಾರ್ಧಿಕ ಪರಿಯಂತ |
ಮಿತ ಆಹಾರ ಮಿತ ನಿದ್ರಿ ಮಿತ ಮಾತನು |
ಸತತ ಮೀರದಲಿರು ಶೋಕಕ್ಕೊಳಗಾಗದಿರು |
ಸತಿ ಸುತರು ಎಲ್ಲ ಶ್ರೀ ಹರಿಗೆ ಸೇವಕರೆನ್ನು ೮
ಹರಿದಿನದ ಉಪವಾಸ ಜಾಗರ ಗಾಯನ |
ಮರಳೆ ಮರಳೆ ಮಂತ್ರ ಪಠನೆಯಿಂದ |
ಧರೆಯೊಳಗೆ ಪುಣ್ಯವಂತನಾಗಿ ಸರ್ವದ |
ಇರಬೇಕು ಇಹಪರಕೆ ಲೇಸು ಎನಿಸಿಕೊಂಡು೯
ಸುಖ ದು:ಖ ಸೈರಿಸುತ ಅರಿಗಳಿಗೆ ಭಯಪಡದೆ |
ನಖಶಿಖವಾಗಿ ಆನಂದ ವಿಡಿದೂ |
ಮುಖದಲ್ಲಿ ಹರಿನಾಮ ಅಮೃತವೆ ಸುರಿಸುತ್ತ |
ಸಖರೊಳಗೆ ಲೋಲಾಡು ಹರಿಗುಣವ ಕೊಂಡಾಡು೧೦
ಸಕಲಾಧಿಷ್ಠಾನದಲಿ ಹರಿಯೆ ಲಕುಮಿ ತತ್ವ |
ನಿಕರವನು ನೆನೆದು ಕರ ಮುಗಿದು ತಿಳಿದು |
ಮುಕುತಿ ಕರದೊಳಗಿಡು ವಿಜಯವಿಠ್ಠಲರೇಯನ |
ವಿಕಸಿತ ಮನದಲ್ಲಿ ಭಜಿಸು ಬಲು ವಿಧದಿಂದ೧೧

೩೫೫
ಈ ಪರಿಯಲಿ ಸಲೆ ಸೇವೆಯನು
ಕೊಡು ಕಂಡ್ಯಾ ಹರಿಯೇ |
ಶ್ರೀಪತಿ ಉತ್ತಮರ ಸಂಗತಿಯಲೆನ್ನಯಿಟ್ಟು ಪ
ಬಂದು ಕುಳ್ಳಿರುವಲ್ಲಿ ಸಿಂಹಾಸನನಾಗುವೆನು |
ನಿಂದಲ್ಲಿ ಮೆಟ್ಟುವ ಹಾವಿಗೆಯಾಗುವೆ |
ಮಿಂದ ಬಚ್ಚಲಿಗೆ ಹಚ್ಚಿದ ಶಿಲೆಯಾಗುವೆ |
ಗಂಧವಾಗುವೆ ನಿನ್ನ ಅಂಗಾಲಿಗೆ ೧
ಉಂಬಲ್ಲಿ ಬಿದ್ದ ಎಂಜಲ ತಿಂದು ಬದುಕುವೆ |
ಅಂಬು ಶೀತಳವಾಗಿ ಕರವ ತೊಳಿವೆ |
ಅಂಬುಜ ಕುಸುಮವಾಗಿ ಹಾಸಿಕೆಯಾಗುವೆ ಬಾಯ |
ದೊಂಬಲಿಗೆ ಕರವಡ್ಡಿ ಛಲ ಹೊರುವೆ೨
ಪವಡಿಸುವ ಮನೆಯೊಳಗೆ ಸೂಜ್ಯೋತಿಯಾಗುವೆ |
ಪವಳ ಮಂಚದ ನಾಲ್ಕು ಕಾಲಾಗುವೆ |
ಪವನ ರಿಪುಗಮನ ಸಿರಿ ವಿಜಯವಿಠ್ಠಲ |
ಜವನ ದೂತರನೊದದು ಸುಶುಚಿಯಾಗುವೆ೩

೩೫೬
ಈ ಮಾತುರ ನೀಯದಿದ್ದರೆ ನಿನ್ನ |
ಧಾಮದಲ್ಲಿಗೆ ಪೋಗಿ ಸೇರಿ ಸುಖಿಪದೆಂತೋ ಪ
ಹುಟ್ಟಿದಾರಭ್ಯದಿ ಹೊಟ್ಟಿ ಬಟ್ಟಿಯಲಿಂದ |
ಕಷ್ಟ ಬಟ್ಟೆನೆಂದು ಹೇಳಲಿಲ್ಲಾ |
ಸೃಷ್ಟೇಶ ಕಾಡುವ ಅಷ್ಟ್ಟ ಮಹಾಮದಗಳ ನಷ್ಟಗೊಳಿಸಿ ನಿನ್ನ |
ನಿಷ್ಟಿಲಿಡೆಂದೆಲ್ಲದೆ ೧
ಸತಿ ಸುತರಿಗೆ ಯೇನೋ |
ಗತಿ ಗೋತ್ರವಿಲ್ಲೆಂದು |
ಸತತ ನಿನ್ನ ಕೇಳಿ ದಣಿಸಿಲಿಲ್ಲಾ |
ಪತಿತ ಪಾವನ ಎನಗೆ ಗತಿಯಾಗುವುದಕೆ |
ಸುಪಥವನೆ ತೋರುವ |
ಮತಿಕೊಡೆಂದೆನಲ್ಲದೆ೨
ಕರುಣಿ ಬೇಡಿಕೊಂಬೆ |
ಉರು ಕಾಲದಲಿ ನಿನ್ನ |
ಶರಣರ ಸಂಗತಿಲೆನ್ನ ಇಟ್ಟು |
ಪರಮ ಶುದ್ಧನ ಮಾಡಿ
ವಿಜಯವಿಠ್ಠಲ ನಿನ್ನ |
ಚರಣಸೇವೆ ನಿರಂತರ ಕೊಡೆಂದೆನಲ್ಲದೆ೩

೧೬೬
ಈ ವೈಷ್ಣವ ಜನುಮ ಸಫಲವಿಂದು |
ಈ ಉಡುಪಿ ಯಾತ್ರಿಗಭಿಮುಖವಾದುದು ಪ
ಮನೋವಾಕ್ಕಾಯ ಕರ್ಮಗಳು ಬಲುಪರಿ ಇರಲು |
ಮನುಜ ಪೋಗುವೆನೆಂದು ಒಮ್ಮೆ |
ನೆನೆಸಿದ ಕ್ಷಣದಲ್ಲಿ ನಾಕವಾಗೋವು ಸು
ತ್ತನು ಸುತ್ತಿಸುವ ಭವ ವನಧಿಗೆ ಇದೇ ಮೂಲ ೧
ದೇಶದೊಳಗುಳ್ಳ ನಾನಾ ಯಾತ್ರೆ ತೀರಥಾ |
ಏಸುಬಾರಿ ಪೋಗಿ ಬರಲಿ ಉಂಟೆ |
ಈ ಸುಲಭ ಯಾತ್ರೆ ಕಂಡವರಿಗೆ ದೊರಿಯದು |
ಲೇಸಾಗಿ ಕೇಳುವದು ಕುತ್ಸಿತ ಭಾವನೆ ಬಿಟ್ಟು ೨
ಕೃಷ್ಣರಾಯನ ದರುಶನಕೆ ಮನಮಾಡಿದ |
ಶಿಷ್ಟಾಚಾರಗೆ ಲಿಂಗಕಾಯ ಭಂಗಾ |
ದಿಟ್ಟ ಮೂರುತಿ ವಿಜಯವಿಠ್ಠಲ ಕರುಣಿ ಜ್ಞಾನ |
ಕೊಟ್ಟುಪಾಲಿಸುವ ಬಲು ಮೂರ್ಖರಾದರೂ ಸಿದ್ಧ೩

೧೬೭
ಈ ಸೊಬಗು ಇನ್ನಾವ ಕ್ಷೇತ್ರದಲಿ ಕಾಣೆನಾ ಇಲ್ಲಿ |
ವಾಸುದೇವ ಮುನಿಯಿದ್ದ ಕಾರಣ ಪ
ರಾಜಧಾನಿಯ ನೋಡೆ ಇಂದ್ರಭವನಕೆ ಮೇಲು |
ತೇಜದಲಿ ನೋಡೆ ಸೂರ್ಯನದೆ ಸೋಲು ||
ಪೂಜೆದಲಿ ನೋಡೆ ಸರ್ವ ಧರಣಿಗೆ ಮೇಲು |
ಭೋಜನದಲಿ ನೋಡೆ ಅಮೃತಕೆ ಮೇಲು ೧
ಉತ್ಸಾಹದಲಿ ನೋಡೆ ನಹಿ ಪ್ರತಿ ನಹಿ ಪ್ರತಿ |
ಸತ್ಸಂಗತಿಯ ನೋಡೆ ಬುಧ ಸಂಗತಿ ||
ಸುಚರಿತೆಯ ನೋಡೆ ಶುದ್ಧ ಸತ್ವದ ನೀತಿ |
ಮತ್ಸರ ಮೆರೆದು ನೋಡೆ ಇಲ್ಲೆ ಮುಕುತಿ ೨
ಓಲಗದಲಿ ನೋಡೆ ಸತ್ಯಲೋಕಕೆ ಸಮ |
ಪೇಳುವ ಕೀರ್ತನೆ ನೋಡು ವೇದಸ್ತೋಮ ||
ಬಾಲ ಉಡುಪಿಯ ಕೃಷ್ಣ ವಿಜಯವಿಠ್ಠಲರೇಯನ |
ತಿಳಿದ ಮಾನವಗೆ ಫಲವು ನಿಷ್ಕಾಮಾ೩

(ಓ) ಶ್ರೀರುದ್ರದೇವರು
೨೬೭
ಈತನೀಗ ಪ್ರಣವ ಪಾದ್ಯನೊ |
ಭೂತ ಪ್ರೇತ ಪ್ರಮಥ ತತಿಗೆ |
ನಾಥನೆನಿಪ ನಮಗೆ ನಿರುತ |
ವಾಕನೊಳಗೆ ಹರಿಯ ತೋರುವ ಪ
ಗಜದನುಜ ವಿನಾಶನೀತ |
ಗಜವದನನ ಪೆತ್ತನೀತ |
ಗಜನ ಸದದನೀತ ಪೆತ್ತಂ |
ಗಜನ ಗೆದ್ದ ಗಂಭೀರನೀತ |
ಗಜರಿಪುರಥ ರಮಣನೀತಾ ನಂ |
ಗಜಮಾರಗೊಲಿದನೀತ |
ಗಜ ವರದನ ಭಕ್ತರಘವೆಂಬೊ |
ಗಜಕೆ ಕೇಸರಿಯಾಗಿಪ್ಪನೀತಾ ೧
ದ್ವಿಜರಾಜ ಜುಟನೀತಸೋತ್ತಮ |
ದ್ವಿಜಗೆ ಪಾಲಿಪನೀತ ಸತತಾ |
ದ್ವಿಜ ಪನ್ನಗನ್ನ ಸಮಗುಣನೀತಾ |
ದ್ವಿಜ ಕುಲದಲ್ಲಿ ಉದ್ಭವನೀತ |
ದ್ವಿಜನ ಶಾಪವ ಕೈಕೊಂಡನೀತ |
ದ್ವಿಜ ಭೂಷಣ ಯಾಗದಲಿ ಸೂರ್ಯನ |
ಧ್ವಜವ ಕಿತ್ತಿದನೀತ ಕೈಲಾಸ |
ದ್ವಿಜವಾಗಿವುಳ್ಳ ಉಗ್ರೇಶನೀತ೨
ತ್ರಿಗುಣಾಕಾರ ನೀತ ಮೂರು |
ಜಗವದಲ್ಲಣನೀತ ಮೇರು |
ನಗಚಾಪನೀತ ನಾರಾಯಣಾಸ್ತ್ರದಿ |
ನಗರನುರುಪಿ ಬಿಟ್ಟನೀತ |
ಬಗೆಬಗೆಯ ಜೀವಿಗಳಿಗೆ ಬಿಡದೆ |
ಅಗಣಿತ ಭೋಗ ಪ್ರದಾತನೀತ |
ಮೃಗಲಾಂಛನದ ಮೊಗನಗೆ ಈತ |
ನಿಗಮಾಶ್ರವದಗಧಿಕನೀತಾ ೩
ಭಸುವ ರಾವಣ ಮಾಗಧ ಕಶ್ಯಪ |
ಅಸುರಗಣಕೆ ವರವಿತ್ತನೀತ |
ಪಶುವದನ ಪರಮೇಶ್ವರನೀತ |
ವಿಷವ ಭಂಜನಭವ ಶಿವನೀತ |
ಬಿಸಿಜ ಸಂಭವ ನಂದನನೀತ |
ಅಸಮವೀರ ವೈಷ್ಣವನೀತ |
ವಸುಧಿಯೊಳಗೆ ಶರಣ ಜನಕೆ |
ವಶವಾಗಿಯಿಪ್ಪ ಉಗ್ರೇಶನೀತಾ ೪
ಹೇಮಕೂಟಾದ್ರಿ ನಿಲಯನೀತ |
ರಾಮದೇವ ವಾಸವಂದ್ಯ |
ಸೋಮವರ್ಣನೀತ ಸಕಲ |
ಕಾಮಿತಾರ್ಥವ ಕೊಡುವನೀತ |
ಯಾಮ ಯಾಮಕೆ ಮನದೊಳು ನಿಂದು |
ಕ್ಷೇಮ ಮಾರ್ಗಕ್ಕೆ ಪ್ರೇರಕನೀತ |
ರಾಮ ವಿಜಯವಿಠ್ಠಲನಂಘ್ರಿ |
ನಾಮನೆನಿಸಿ ಕೊಂಡಾಡುವನೀತಾ೫

೨೧೯
ಈತನೀಗ ಭಾರತೀಶನು ತನ್ನ ಪ್ರೀತಿಸುವರ |
ಮನದ ಮಾತು ಸಲಿಸಿ ಮುಕುತಿ ಈವ ಪ
ಶರಧಿ ಜಿಗಿದು ಹಾರಿ ಲಂಕಾಪುರವ ಶೋಧಿಸಿ |
ಹರಿಯ ರಾಣಿಗೆ ಕುರುಹನಿತ್ತು ಮರಗಳುರುಹಿ ||
ಮುರಿದು ಧರೆಗೆ ವರಿಸಿದಾತಾ ಅಪ
ಧುರದೊಳಕ್ಷನ ಹರಣವಳಿದು |
ಗುರುವರ್ಹತ್ತುಶಿರನ ಜರಿದು ||
ಸರ್ರನೆ ನಗರ ಉರುಪಿ ಮರಳಿ |
ಹರಿಯ ಚರಣಕ್ಕೆರಗಿದಾತಾ ೧
ಕುರುನಿಕರ ಕರುಬಿ ಬೊ-|
ಬ್ಬಿರಿದು ನಿಂದುರವಣಿಸಿ ಎದುರಾ-||
ದರಿಗಳ ಶಿರ ತರಿದು ತಳೋ-|
ದರಿಯ ಹರುಷಬಡಿಸಿದಾತಾ೨
ಕರಿಯ ತೆರದಿ ದುಷ್ಟ ಸಂಕರನು |
ತಿರುಗಲವನ ಮುರಿದು ಮತ್ತೆ ||
ಮರುತಮತದ ಬಿರುದನೆತ್ತಿ – |ಪರನೆ ವಿಜಯವಿಠ್ಠಲನೆಂದಾ ೩

ಈತನೀಗ ವಿಜಯವಿಠ್ಠಲಾ :
೧೬
ಈತನೀಗ ವಿಜಯ ವಿಠ್ಠಲಾ
ಈತನೀಗ ವಿಜಯ ವಿಠ್ಠಲಾ
ಮಾತು ಮಾತಿಗೆ ನೆನಸಿದವರ
ಪಾತಕಗಳ ಪರಿದು ಯಮನ
ಯಾತನೆಯನು ಕಳೆದು ಪೊರೆವಾ ಪ
ಕರೆದರೊಂದೆ ನುಡಿಗೆ ಬಂದು
ಕರುಣದಿಂದ ಮುಂದೆ ನಿಂದು
ಕರವ ಪಿಡಿದು ಅಂದು ಅಭಯ
ಕರವ ಪಾಲಿಸಿದ ದಯಾಸಿಂಧು
ಪರಿಪರಿಯಿಂದಲಿ ಹಿಂದು ಮುಂದು
ದುರಿತದಿಂದ ನೊಂದು ಬಂದು
ಇರಲು ದಾಸರ ದಾಸರನೆಂದು
ಮೊರೆ ವಿಚಾರಿಸಿ ಸಾಕಿದನಿಂದು ೧
ಅಚ್ಯುತಾನಂತನೆಂಬ ನಾಮಾ
ಅಚ್ಚು ಸುಧೆಯೆನಗೆ ನೇಮಾ
ನಿಚ್ಚ ಉಣಲಿಕಿತ್ತ ಪ್ರೇಮಾ
ಚಚ್ಚಲದಲಿ ಪೂರ್ಣಕಾಮಾ
ಹೆಚ್ಚಿ ಬಪ್ಪ ಮದದಾ ಸ್ತೋಮಾ
ನುಚ್ಚು ಮಾಡಿ ಬಿಡುವ ಭೀಮಾ
ನಿಚ್ಚ ಮನದ ಕುಮುದ ಸೋಮಾ
ಸುಚ್ಚರಿತ ಸಾರ್ವಭೌಮಾ೨
ಮೊದಲೆ ಗುರು ಪುರಂದರದಾಸರಾ
ಹೃದಯದೊಳಗೆ ನಿಂದಾ ಶೃಂಗಾರಾ
ಉದಧಿಯೋ ಇದು ಬಣ್ಣಿಸಿಬಲ್ಲ್ಲಿರಾ
ತ್ರಿದಶರೊಳಗೆ ಕಾಣೆ ಜ್ಞಾನರ
ಸದಮಲಾನಂದ ಪೂರ್ಣ ಇಂದಿರಾ
ಸದನಾ ಪ್ರತಾಪಗುಣ ಪಾರಾವಾರಾ
ಚದುರ ವಿಜಯವಿಠ್ಠಲ ಗಂಭೀರಾ
ಪದೋಪದಿಗೆ ಎನ್ನಯ ಮನೋಹರಾ೩

೨೬೮
ಈಶಾ ಕೈಲಾಸವಾಸಾ | ಕಾಶೀನಗರಾಧೀಶಾ |
ಶೇಷಭೂಷಣ | ಗಿರೀಶಾ | ವಿಶ್ವೇಶ ಚಿತ್ತವಾಸಾ ಪ
ಶಿವಸಿದ್ಧ ಸಾಧ್ಯ ಸೇವ್ಯಾ | ಭವವನಾಶವ ದಿವ್ಯ |
ಭವಮೂರ್ತಿ ಕೀರ್ತಿಭವ್ಯಾ | ಕವಿ ಪ್ರಿಯ ಜ್ಞಾನ ದ್ರವ್ಯಾ ಹಾ ||
ಶಿವ ಓಂ ನಮಃ ಶಿವ | ಸವಚರಣ ನೋಡುವ |
ಪವಿತ್ರ ಚಿತ್ತವ ಕೊಡು | ಧವಳ ಗಂಗಾಧರನೇ ೧
ಸತಿನಾಥ ಭೂತ ಪ್ರೀತ | ಸತತ ಸದ್ಗುಣ ವ್ರಾತ |
ಪತಿತ ಪಾವನ ತಾತ | ಕೃತುವೈ ಪದ್ಮಜಾತ ಹಾ ||
ಕ್ಷಿತಿಯೊಳು ನೀಲಲೋಹಿತ | ನೀನೇ ಗುರುವೆಂದು |
ತುತಿಪ ಗತಿಗೆ ರಘು | ಪತಿನಾಮ ಎನಗೀಯೋ ೨
ತ್ರಯನೇತ್ರ ಚಿತ್ರಗಾತ್ರ | ನಯ ನಮಿಪರ ಮಿತ್ರ ಜಯ |
ಜಯಾಮರ ಸ್ತೋತ್ರ | ದಯಮಾಡೋ ಪುಣ್ಯ ಪಾತ್ರಾ ಹಾ ||
ಭಯ ನಿವಾರಣ ಸಿರಿ | ವಿಜಯವಿಠ್ಠಲನ |
ಭಕುತಿಯ ಕೊಡು ಅತಿ | ಶಯದಿ ಪಿನಾಕೀಶಾ ೩

೩೫೭
ಉದರ ಪೂರ್ತಿಯ ಕೊಡದಿರು ಉದಧಿಶಯನ ಪ
ಮುದದಿ ನಿನ್ನನು ನೆನೆದು ಮಲಗುವೆನೊ ಸುಖದಿ ಅ.ಪ
ಮುದದಿ ನಿನ್ನ ಚರಣವನು ಸ್ಮರಿಸುವುದು |
ಪರಿಹಾರವು ಬಹು ಗರ್ವ ಹೆಚ್ಚುವುದು ಎನಗೆ |
ಅರವಿಂದನಾಭ ಹರಿ ವರವಿದೆ ನಿನ್ನ ಕೇಳ್ವೆ |
ಪರಿಹಾಸ್ಯ ನುಡಿಯಲ್ಲ ಪರಮ ಪಾವನಗೆ ೧
ತನುಮನವು ನಿನ್ನ ವಿಷಯಕ್ಕೆರಗಲಿ |
ಅನುಮಾನವಿದ್ದ ಪರಿಯೆಲ್ಲ ತೊಲಗಿ ||
ವನಜಸಂಭವನೈಯ್ಯ ವೈಕುಂಠಪತಿ ನಿನಗೆ |
ಅನವರತ ದೊರೆ ಎಂಬೊ | ಘನತೆ ತಪ್ಪದೆ ಇರಲಿ೨
ಗಜಮದದಿ ಕಂಗೆಟ್ಟ ಪರಿಯನ್ನ ಮಾಡದೇ |
ಅಜಮಿಳಗೆ ಒಲಿದಂತೆ ಎನಗೆ ವೊಲಿದೂ ||
ಸುಜನ ರಕ್ಷಕನೆಂಬೊ ಬಿರುದು ಬೇಕಾದರೆ |
ನಿಜವಾಗಿ ದಯಮಾಡೊ ವಿಜಯವಿಠ್ಠಲನೇ೩

೩೫೮
ಉದ್ದರುಸುವದೆನ್ನ ಉದಧಿಶಯನ |
ಬಿದ್ದೆ ನಿನ್ನಯ ಪಾದ |
ಪದ್ಮದ್ವಯಕೆಯಿಂದು ಪ
ಅಂದು ನೀ ಪೇಳಿದಂದಲಿ ತೀರ್ಥಯಾತ್ರೆ |
ನಿಂದರದೆ ಸಂಚರಿಸಿ ಪುಣ್ಯವೆಲ್ಲಾ |
ತಂದು ನಿನಗರ್ಪಿಸಿದೆ ಕೈ ಕೊಂಡು |
ಮುಂದೆ ಎನ್ನಗೊಂದು ದಾರಿಯ
ತೋರು ತಡಮಾಡದಲೆ ದೇವಾ ೧
ಯಾತರವ ನಾನು ನರಮನೆ ಗಾಯಕರ
ದೂತರೆಂಜಲನುಂಡು ಬೆಳದ ನರನೋ ||
ನೋತ ಫಲವಾವದೊ ನೀನೆ ಬಲ್ಲೆಯಾ ಜೀಯಾ |
ಮಾತು ಮಾತಿಗೆ ಹಿಗ್ಗಿ ನಗುವ ಚನ್ನಿಗರಾಯಾ೨
ಇಷ್ಟೆನ್ನ ಮನದ ಭೀಷ್ಟೆ ಒಂದೆ ವುಂಟು |
ಕೃಷ್ಣಾ ಸ್ನಾನ ಕೃಷ್ಣ ಸಂದರುಶನಾ |
ಕೊಟ್ಟು ಕೇವಲವಾಗಿ ನಿನ್ನಂಘ್ರಿಯಲಿ ರತಿ |
ಇಟ್ಟು ಭಜಿಸುವಂತೆ ಭಾಗ್ಯವನು ಕೊಡೊವೇಗಾ೩
ಏನು ಕಡಿಮೆ ನೀನು ಒಲಿದರಾದಡೆ ರಾಮ |
ಧೇನು ತರುಮಣಿ ಬಾರದೆ ನಿಲ್ಲವೇ ||
ಶ್ರೀನಿವಾಸನೆ ನಿನ್ನ |
ನಂಬಿದ ಪಾಪಿಗೆ ಹಾನಿಯಲ್ಲದೆ
ಲೇಶ ಸುಖವು ತೋರದು ದೇವಾ ೪
ವೆಂಕಟಗಿರವಾಸಾ ವೇದ ವಂದಿತ ಚರಣಾ |
ಶಂಖ ಚಕ್ರಪಾಣಿ ಕರುಣಾಕರಾ |
ಶಂಖಾಣ ನೃಪವರದ ವಿಜಯವಿಠ್ಠಲ ತಿಮ್ಮ
ಅಂಕದ ಮೇಲಾಡುವ ಬಾಲನೆಂದು ಬಿಡದೆ ೫

ಉಮಾ ಕಾತ್ಯಾಯಿನಿ ಗೌರಿ ದಾಕ್ಷಾಯಿಣಿ
(ಅಂ) ಪಾರ್ವತೀದೇವಿ
೨೮೫
ಉಮಾ ಕಾತ್ಯಾಯನೀ ಗೌರಿ ದಾಕ್ಷಾಯಣಿ |
ಹಿಮವಂತ ಗಿರಿಯ ಕುಮಾರಿ ಪ
ರಮೆಯರಸನ ಪದಕಮಲ ಮಧುಪೆ ನಿತ್ಯ |
ಅಮರವಂದಿತೆ ಗಜಗಮನೆ ಭವಾನಿ ಅ. ಪ.
ಪನ್ನಗಧರನ ರಾಣಿ ಪರಮಪಾವನಿ |
ಪುಣ್ಯಫಲ ಪ್ರದಾಯಿನಿ ||
ಪನ್ನಗವೇಣಿ ಶರ್ವಾಣಿ ಕೋಕಿಲವಾಣಿ |
ಉನ್ನತ ಗುಣಗಣ ಶ್ರೇಣಿ |
ಎನ್ನ ಮನದ ಅಭಿಮಾನ ದೇವತೆಯೆ |
ಸ್ವರ್ಣಗಿರಿ ಸಂಪನ್ನೆ ಭಾಗ್ಯ ನಿಧಿ ||
ನಿನ್ನ ಮಹಿಮೆಯನು ಬಿನ್ನಾಣದಲಿ ನಾ |
ಬಣ್ಣಿಸಲಳವೆ ಪ್ರಸನ್ನ ವದನಳೆ ೧
ಮುತ್ತಿನ ಪದಕ ಹಾರ ಮೋಹನ ಸರ |
ಉತ್ತಮಾಂಗದಲಂಕಾರ ||
ಜೊತ್ಯಾಗಿ ಇಟ್ಟ ಪಂಜರದೋಲೆ ವಯ್ಯಾರ |
ರತ್ನಕಂಕಣದುಂಗುರ ||
ತೆತ್ತೀಸ ಕೋಟಿ ದೇವತೆಗಳ್ ಪೊಗಳುತ |
ಸತ್ತಿಗೆ ಚಾಮರವೆತ್ತಿ ಪಿಡಿಯುತಿರೆ ||
ಸುತ್ತಲು ಆಡುವ ನರ್ತನ ಸಂದಣಿ |
ಎತ್ತ ನೋಡಿದರತ್ತ ಕಥ್ಥೈ ವಾದ್ಯ೨
ಪೊಳವ ವಸನ ಕಂಚುಕ ತಿಲಕ |
ಥಳಪಿ ಮೂಗುತಿ ನಾಸಿಕ ||
ಕಳಿತ ಮಲ್ಲಿಗೆ ಗಂಧಿಕ ಮುಡಿದ ಸೂಸುಕ |
ಸಲೆ ಭುಜ ಕೀರ್ತಿಪಾಠಿಕ ||
ಇಳೆಯೊಳು ಮಧುರಾ ಪೊಳಲೊಳು ವಾಸಳೆ |
ಅಳಿಗಿರಿ ವಿಜಯವಿಠ್ಠಲ ಕೊಂಡಾಡುವ ||
ಸುಲಭ ಜನರಿಗೆಲ್ಲ ಒಲಿದು ಮತಿಯನೀವ |
ಗಳಿಕರ ಶೋಭಿತೆ ಪರಮಮಂಗಳ ಹೇ ೩

೧೬೮
ಊಟವನು ಮಾಡು ಬಾ ಉದಧಿಶಯನಾ |
ಆಟವನು ಸಾಕುಮಾಡಿ ಅತಿ ವೇಗದಿಂದಲಿ ಪ
ಕಾಯಿಪಲ್ಲೆ ಒಂದೊಂದು ನೂರು ಪರಿ |
ತೋಯ ಸಂಡಿಗೆ ಪಳದೆ ಹುಳಿ ಸಾರು ||
ಪಾಯಸ ನೊರೆಹಾಲು ಸಕ್ಕರೆಗೂಡಿಸಿ |
ತಾಯಿ ದೇವಕಿಯು ಎಡೆಯ ಮಾಡಿದಳು ತಂದು ೧
ಯಾಲಕ್ಕಿ ಹಾಕಿದ ಹೋಳಿಗೆಯು ಪರಿಮಳ |
ಸಲೆ ಶಾಲ್ಯೋದನ ಕರಿದ ಭಕ್ಷ್ಯಾ ||
ಮೇಲಾದ ಇಂಗು ಜೀರಿಗೆ ಮೆಣಸಿನ ಹುಗ್ಗಿ |
ಶ್ರೀ ಲಕುಮಿದೇವಿ ಎಡೆ ಮಾಡಿದಳು ತಂದು ೨
ಕಸಕಸಿ ಎಳ್ಳು ಲಡ್ಡಿಗೆಯು ಅಪ್ಪಾಲು ಅರೆ-|
ರಸ ದೋಸೆ ಬೆಣ್ಣೆ ಸೂಸಲುಕಡಬು ||
ಹಸನಾಗಿ ಕರಿದ ಹಪ್ಪಳ ಸಂಡಿಗೆ ನಿನ್ನ
ಸೊಸೆ ಸರಸ್ವತಿ ಎಡೆ ಮಾಡಿದಳು ತಂದು ೩
ಕಾದಾಕಳ ತುಪ್ಪ ಅಳಗಳಗ ತಿಳಿತುಪ್ಪ |
ಮಾಧುರ್ಯವಾಗಿದ್ದ ಜೇನು ಘೃತವು ||
ಕಾದಾರಿದ ಪಾಲು ಕಟ್ಟುಸುರು ಕೆನೆಮೊಸರು |
ಭೂದೇವಿ ನಲಿನಲಿದು ಎಡೆ ಮಾಡಿದಳೊ ತಂದು೪
ಸರಳಿಗೆ ಗೌಲಿ ಬಟಿವೆ ಪರಡಿ ಸಜ್ಜಿಗೆ |
ಸರಸವಾಗಿದ್ದ ಚಿತ್ರಾನ್ನಂಗಳು ||
ಪರಿ ಪರಿ ಫಲ ಪಕ್ವಾನ್ನ ಸೋಪಚಾರದಿ |
ಗಿರಿಜಾದಿಗಳು ತಾವು ಎಡೆ ಮಾಡಿದರೊ ತಂದು೫
ಖಾರುಳ್ಳ ಪಚ್ಚಡಿ ಹಚ್ಚಗೆ ಹಸಿರು ವರ್ಣದ |
ವಾರುಣದಿ ಉಪ್ಪಿನಕಾಯಿ ಕೂಟಾ ||
ನೀರು ಮಜ್ಜಿಗೆ ನಿಂಬೆಹಣ್ಣನೆ ಹಿಂಡಿ |
ಭಾರತೀದೇವಿ ಎಡೆಮಾಡಿದಳೊ ತಂದು ೬
ಉಂಡ ತರುವಾಯದಲಿ ಹರಿಯೇ ಪೀಠದಿ ಕುಳಿತು |
ಕೊಂಡು ಬಂದ ಗಂಧ ತಾಂಬೂಲವ ||
ಕೊಂಡು ರಕ್ಷಿಸಿ ಎನ್ನೆ ಸಿರಿ ವಿಜಯವಿಠ್ಠಲ |
ಕೊಂಡನಾದ ಪುರಂದರಗೆ ಒಲಿದು ಒಲಿದು ೭

೩೫೯
ಎಂತಹದೋ ನಿನ್ನ ಸಂದುರಶನಾ |
ಕಂತುವಿನ ಜನಕ ಉಡಪಿ ಕೃಷ್ಣರಾಯಾ ಪ
ಪರರ ಓದನ ತಿಂದೆ |
ಪರರ ದ್ರವ್ಯದ ತಂದೆ |
ಪರ ಸತಿಯರಿಗೆ ನೊಂದೆ |
ಗುರು ಹಿರಿಯರ ನಿಂದೆ |
ಹಿರದಾಗಾಡಿದೆ ಮುಂದೆ |
ಬರುತಿಪ್ಪ ಪಾಪದಿಂದೆ |
ಒಂದೆ ಪೋಯಿತು ವಂದೆ
ಪರಿಯಾಗಿ ಈ ಬಂದೆ |
ಅರುಹು ತೊರದೆ ಬಂದೆ |
ಕರುಣಿಸು ಜಗದ ತಂದೆ ೧
ಸುಜನರ ಗುಣವ ಹಳಿದೆ |
ಕುಜನರ ಸಂಗದಲಿ ಬೆಳಿದೆ |
ಭಜನೆಗೆಟ್ಟು ಸುಳಿದೆ |
ಪ್ರಜರನು ಪೊಗಳಿದೆ |
ವೃಜ ಪುಣ್ಯಕೋಶ ಕಳಿದೆ |
ಋಜುಮಾರ್ಗವ ತೊರದುಳಿದೆ |
ರಜನಿಚರ ಮತಿಗಳಿದೆ |
ವಿಜಯ ವಾರ್ತೆಗೆ ಮುಳಿದೆ |
ತ್ರಿಜಗಪತಿ ಕೇಳಿದೆ ೨
ಹರಿವಾಸರವ ಬಿಟ್ಟೆ |
ದುರುಳರಿಗೆ ಧನ ಕೊಟ್ಟೆ |
ಹರಿಭಕ್ತರ ತೊರೆದು ಕೆಟ್ಟೆ |
ಹರಿಶ್ರವಣ ಬಚ್ಚಿಟ್ಟೆ |
ಪರಮ ವ್ರತವ ಮೆಟ್ಟೆ |
ಹರುಷದಲ್ಲಿಗೆ ಮನಮುಟ್ಟಿ |
ದುರ ರಸಕೆ ಸುಖ ಬಟ್ಟೆ |
ವಿರಕುತಿಯನು ಬಿಟ್ಟೆ |
ದುರಿತಕ್ಕೆ ಗುರುತಿಟ್ಟೆ |
ಪರಕೆ ಕಾಣೆನೊ ಬಟ್ಟೆ ೩
ಜ್ಞಾನವೆಂಬೋದೇ ಇಲ್ಲಾ |
ಏನು ಪೇಳಲಿ ಸೊಲ್ಲಾ |
ನೀನೆಂಬೋದಿಲ್ಲವಲ್ಲಾ |
ಹಾನಿ ವೃದ್ದಿಗಳೆಲ್ಲಾ |
ನಾನುಂಟೆ ಎಲ್ಲ ಸಲ್ಲಾ |
ದಾನಾದೆ ಸತತ ಖುಲ್ಲಾ |
ತಾ ನುಡಿಗೆ ಸೋತು ಚಿಲ್ಲಿ |
ರಾನಡತಿ ಸಿರಿನಲ್ಲಾ |
ನಾ ನಡದೆ ನೀ ಬಲ್ಲಾ |
ದೇ ನೋಡು ಪ್ರತಿ ಮಲ್ಲಾ ೪
ಅಪರಾಧಿ ನಾನಯ್ಯ |
ಅಪವಾದದವನಯ್ಯ |
ಕೃಪಣದಿಂದೆನ್ನ ಕಾಯಾ |
ಉಪಜಯವಾಯಿತು ಪ್ರೀಯಾ |
ಸ್ವಪನದಿ ಪುಣ್ಯ ಸಹಾಯಾ |
ಲಪಮಾಡಲಿಲ್ಲ ಜೀಯಾ |
ಕೃಪೆಯಲ್ಲಿ ಪಿಡಿ ಕೈಯಾ |
ವಿಜಯವಿಠ್ಠಲರೇಯಾ |
ಗುಪುತವಾದುದುಪಾಯಾ |
ತಪಸಿಗಳ ಮನೋಜಯಾ ೫

೩೬೦
ಎಂತು ಗತಿ ಎನಗಾಗುವದೊ ಶ್ರೀ |
ಕಾಂತ ನಿನ್ನ ಭಕುತಿಯ ಕಾಣೆ ಪ
ಸಂಸಾರ ಎಂಬುದು ಸುಖವೆಂದು ನಾನು |
ಹಂಸನಂತೆ ನಲಿಯುತ್ತಲಿದ್ದೆ |
ಕಂಸಾರಿ ನಿನ್ನ ನಾಮಸ್ಮರಣೆ ಒಳ್ಳೆ |
ವಂಶರ ಕೂಡ ನಲಿಯಲಿಲ್ಲಾ ೧
ಪಾತ್ರರ ಕಂಡರ ಪರಿಹಾಸ್ಯ ಕು |
ಪಾತ್ರರ ನೋಡಲವರ ಶಿಷ್ಯಾ |
ಯಾತ್ರೆ ಪೋಗುವದಕ್ಕೆ ಅತಿ ಕ್ಲೇಶ ಎನ್ನ |
ಗಾತ್ರಗೋಸುಗ ಪೋಗೆ ಬಲು ತೋಷಾ ೨
ವಿರಕ್ತಿ ಕೇಳಲು ತಲೆಶೂಲೆ ವಿ |
ಹಾರ ಮಾಡುವಲ್ಲಿ ಅನುಕೂಲೆ |
ವಾರಿಜಾಕ್ಷ ನಿನ್ನ ಕಥೆ ಬಿಡುವೆ ಬಹು |
ಚಾರುವಾಕರ ಕೂಡ ಸುಖಬಡುವೆ ೩
ಕಾಸು ಪ್ರಾಪುತವಾಗಿ ಬಚ್ಚಿಡುವೆ ಅದೆ |
ಕಾಸು ಬೇಡಿದರೆ ಪ್ರಾಣವ ಕೊಡುವೆ |
ಮೋಸ ಬುರುವದು ಕಾಣೆನಲ್ಲಾ ದು |
ರಾಶೆಯಿಂದಲಿ ಬಾಳಿದೆನಲ್ಲಾ ೪
ನೆಂಟರು ಬಂದರೆ ಹಿಗ್ಗುವೆನೊ
ವೈಕುಂಠದಾಸರು ಬರೆ ಕುಗ್ಗುವೆನೊ |
ಕುಂಟತನಕೆ ಬಹು ನಲಿದಾಟಾ ಗತಿ |
ಉಂಟಾದದಕೆ ಉಚ್ಚಾಟ೫
ತಂದೆ ತಾಯಿಗಳಲ್ಲಿ ವಂಚನೆ ಹೀನ |
ಮಂದಿಕೂಡಾಪ್ತಾಲೋಚನೆ |
ಕುಂದು ನುಡಿದೆ ಸಜ್ಜನರಿಗೆ ಆ |
ನಂದ ಬಡಿಸುವೆ ದುರ್ಜನರಿಗೆ ೬
ಹೆಂಡತಿ ಮುನಿದರೆ ಬೇಡಿಕೊಂಬೆ ಹರಿ |
ಕೊಂಡರು ಮುನಿದರೆ ಪೋಗಲೆಂಬೆ |
ಕೊಂಡು ಬಾಹ್ಯನೆ ಪರರವಡಿವೆ |
ಪರರ ಕಂಡರೆ ಬೇಡವೆಂದು ನುಡಿವೆ ೭
ಮಕ್ಕಳು ಹಸ್ತರೆ ಬಳಲುವೆನೊ ಭೂದೇ |
ವಕ್ಕಳು ಹಸ್ತರೆ ನಗುವೆನೊ |
ಮುಕ್ತಿಗಾಗುವ ನಾನಾ ಶ್ರವಣ ನೀಚ |
ಉಕ್ತಿಗೆ ಮಾಡಿದೆ ಅನುದಿನಾ ೮
ದೇವರ ಮನೆ ದೀಪವೆ ಕಾಣದು ಎನ್ನ
ಜೀವನಕ್ಕೆ ಬೇಕಾದದೆ ಮಾಣಿದು |
ಕೋವಿದರೊಡನೆ ಆಡುವೆ ಸುಳ್ಳು
ಅಭಾವಾ ಮಾಡೆನು ನೀಚರ ಸೊಲ್ಲು೯
ಹರಿ ನಿನ್ನ ಶುಚಿಮಾಡೆ ಹೀನ
ನರರ ದೊಂಬಲು ತೆಗಿಯದೆ ಬಿಡೆ |
ಭರದಿಂದ ಅಗ್ರೋದಕ ತಾರೆ ನೀರು |
ಹೊರುವೆನೊ ಹಣವೆಂದರೆ ಮಾರೆ ೧೦
ಗಂಡಿಕಿಸಿಲಿ ತೊಳೆಯಲಿ ಮಿಡಿಕಿ ನಾನು |
ಅಂಡವಲಿವೆ ಅಶನ ಹುಡುಕಿ |
ಅಂಡಜವಾಹನ ನಿನ್ನ ಸೇವೆ ಕೈ |
ಕೊಂಡು ಮಾಡದೆ ಪೋದೆ ಹೀಗೆವೆ೧೧
ಗಂಧವ ತೆಗೆ ಎಂದರೆ ಅಳುವೆ | ಬಿದ್ದ |
ಮಂದಿರಕೆ ಕದಡುತಳುವೆ |
ಒಂದು ತುಲಸಿದಳ ತರಲಾರೆನೆಂದು |
ಸಂದಿಗೊಂದಿ ಸುತ್ತಿದೆನೊ ದೊರೆ ೧೨
ಧೂಪಾರತಿ ಏಕಾರುತಿ |
ಶ್ರೀಪತಿ ನಿನ್ನ ದಿವ್ಯ ಮೂರ್ತಿ |
ಪಾಪಾತಿಶಯದಿಂದಾ ನೋಡಲಿಲ್ಲ ಬಹು |
ತಾಪತ್ರಯದಿಂದ ನೊಂದೆನಲ್ಲಾ ೧೩
ನೈವೇದ್ಯ ತಂದು ಮುಂದಿಟ್ಟು ಸಿರಿ |
ದೇವನಿಗೆ ಯಿತ್ತು ಸುಖಬಟ್ಟು |
ಆವಾವ ರುಚಿಗಳ ಭುಂಜಿಸದೆ ನಾನು |
ಪಾವನಮತಿಯಾಗದೆ ಪೋದೆ ೧೪
ಎಳೆದುಲಸಿ ನಿರ್ಮಾಲ್ಯವಾಸವಾ ||
ಬಳಿಯಲ್ಲಿಯಿಟ್ಟು ಕೈವಲ್ಯವಾ |
ಘಳಿಸಿಕೊಳ್ಳದೆ ಬಲು ದುರ್ಗಂಧ ಬಂದು |
ತಿಳಿಯದೆ ಪೋದಿನೊ ಭವ ಬಂಧಾ ೧೫
ಹರಿಕಥೆಗೆ ಮೊಗ ತಿರುಹುವೆನೊ |
……………………………………………
ಸ್ಮರಣೆ ಮಾಡುವಲ್ಲಿ ಅತಿ ಹೇಯಾ ದುರಾ |
ಚರಿತೆಯ ಮಾಡುವಲ್ಲಿ ಬಲು ನ್ಯಾಯಾ ೧೬
ಹರಿದಾಸರನಪ್ಪಿಕೊಳ್ಳದೆ ಪಾ |
ಮರ ಸತಿಯೊಳನಪ್ಪ ತಾ ಪೊಳದೆ |
ಧರೆಯೊಳು ನಾನು ನಡಿವಂಥ ಇಂಥಾ |
ದುರುಳಾಟಕೇನೆಂಬೆ ಗುಣವಂತಾ ೧೭
ನಿನ್ನಂಘ್ರಿಗೆ ಅಡ್ಡಬೀಳದೆ ತುತ್ತು |
ಅನ್ನಕೆ ಎರಗುವೆ ಸೋಲದೆ |
ಅನ್ಯಾಯ ಮಾಡುವಲ್ಲಿ ಆನಂದಾ
ಸತಿಸ | ತ್ಪುಣ್ಯ ಮಾಡುವಲಿ ನಿಭಂಧಾ ೧೮
ಸಾಧುಗಳೊಡನೆ ತಾಳುವೆ ದ್ವೇಷಾನಿತ್ಯ |
ಕ್ರೋಧರ ಕಂಡರೆ ಬಲು ಹರುಷಾ |
ಓದನಕೆ ವೇದವನೋದಿ ತಂದು |
ವಾದಿಸುವೆನು ಸಭೆಯಲಿ ಕಾದಿ ೧೯
ಸತಿಯಳ ಸಂಬಂಧಿಗಳ ಸಾಕುವೆನೊ ಮಾತಾ |
ಪಿತರ ಕಡೆಯವರ ನೂಕುವೆನೊ |
ಖತಿಗೊಂಬೆ ಕರ್ಮ ಮಾಡೋರ ನೋಡಿ ಹೀನ |
ವಕ್ರದವರು ಕಂಡು ಬಲು ಪಾಡಿ ೨೦
ಔತನವಾದರೆ ಪರಿ ಪರಿ ಹೊಸ |
ಕೌತುಕ ಪೇಳೂವೆ ನೋಡಿರಿ |
ಶ್ರಾತಾದಿಗಳು ಎಲ್ಲಿ ಧಿಕ್ಕರಿಸಿ ಯಿಂಥ |
ಭೌತಿಕ ನೆಚ್ಚಿದೆ ಅನುಕರಿಸಿ ೨೧
ಒಡಿವಿ ಮಾಡಿಸಿ ಮಡದಿಗೆ ಇಡದೆ ಅನ್ಯ |
ಮಡದಿಯರಿಗೆ ಧನ ಸೂರೆವಿಡಿದೆ |
ಬಡವರ ಕಂಡರೆ ಅಣಕಿಸುವ ಭಾಗ್ಯ |
ಪಡದವರಿಗೆ ಬಾಗಿ ನಮಿಸುವೆ ೨೨
ಧರ್ಮಕ್ಕೆ ಅಸೂಯಾ ಬಡುವೆ ಅ |
ಧರ್ಮಕೆ ಹಿಗ್ಗಿ ಸುಖವ ಬಡುವೆ |
ನಿರ್ಮತ್ಸರರೊಳು ವೈರತನಾ ದು |
ಷ್ಕರ್ಮಿಗಳ ಕೂಡಾಮಾನತನಾ ೨೩
ವಿಧಿ ನಿಷೇದವನೆಣಿಸದಲೆ ನಾನು |
ಉದರ ತುಂಬಿದೆ ಭೀತಿ ಗಣಸದಲೆ |
ವದಗಿ ಬೀಳುವ ನರಕದ ಬಾಧೆ ಕೇಳಿ |
ಹದುಳಕ್ಕೆ ಮನಮಾಡದೆ ಪೋದೆ ೨೪
ಯಜಮಾನ ನಾನೆಂದು ಪೇಳಿಕೊಂಡು ದೋಷ |
ವ್ರಜದಲಿ ಚರಿಸದೆ ದು:ಖವುಂಡು |
ಸುಜನರಾ ಸಂಗತಿ ಕೊಟ್ಟು ಇಂದು |
ಕಾಯೊ ವಿಜಯವಿಠ್ಠಲ ಕಾರುಣ್ಯ ಸಿಂಧು ೨೫

೯೨
ಎಂತು ನಿನ್ನ ಮೆಚ್ಚಿಸುವೆನೊ ಎಲೊ ವೆಂಕಟಾ
ಸಂತತ ಬಿಡದೆ ಎನ್ನ ಅಂತರಂಗದಲ್ಲಿ ಇರೊ ಪ
ಕುಣಿದು ನಿನ್ನ ಮೆಚ್ಚಿಸುವೆನೆ |
ಫಣಿಹಾರನೈಯನನ ಜನಕಾ |
ಮಣಿದು ನಿನ್ನ ಮೆಚ್ಚಿಸುವೆನೆ |
ಸನಕಾದಿಗಳ ಸುಪ್ರೇಮಾ ೧
ಅನ್ನವಿತ್ತು ಮೆಚ್ಚಿಸುವೆನೆ |
ಘನ್ನ ನಿತ್ಯ ತೃಪ್ತ ನೀನು |
ಹೆಣ್ಣನಿತ್ತು ಮೆಚ್ಚಿಸುವೆನೆ |
ಹೆಣ್ಣುರೂಪ ನೀನೆ ಸ್ವಾಮಿ ೨
ಅಪ್ಪ ನಿನ್ನ ಮೆಚ್ಚಿಸುವೆನೆ |
ದರ್ಪಾಕ ಬೊಮ್ಮನ ತಂದೆ |
ಅಪ್ಪ ನಿನ್ನ ಮೆಚ್ಚಿಸುವೆನೆ |
ಸುಪ್ಪಾಣಿ ರಮೆಯರಸಾ ೩
ಪಾಲು ಕುಡಿಸಿ ಮೆಚ್ಚಿಸುವೆನೆ |
ಪಾಲಸಾಗರ ಸದನ ನೀನು |
ಮಾಲೆ ಹಾಕಿ ಮೆಚ್ಚಿಸುವೆನೆ |
ಮಾಲೆ ಕೌಸ್ತಭ ಭೂಷಣಾ೪
ಸೇವೆ ಮಾಡಿ ಮೆಚ್ಚಿಸುವೆನೆ |
ಪಾವಮಾನಿ ತಾತ ನೀನು |
ಆವದೊ ಕಾಣೆನೋ ಎನ್ನ
ಕಾವುದು ವಿಜಯವಿಠ್ಠಲಾ ೫

೩೬೧
ಎಂತು ನಿಲ್ಲುವೆನು ನಿನ್ನಯ ಬಳಿಯಲ್ಲಿ |
ಅಂತರಾತ್ಮಕ ಪೇಳು ಎನಗೊಂದು ಹದನಾ ಪ
ವೇದಶಾಸ್ತ್ರವನು ಅರಿಯೆ |
ಪುರಾಣ ಪುಣ್ಯಕಥೆ |
ಓದಲಿನ್ನರಿಯೆನೊ ಎಂದೆಂದಿಗೂ |
ಭೇದ ಭೇದವನರಿಯೆ |
ಬಾಗಿ ನಮಿಸುವದನರಿಯೇ |
ಆದರಣಿ ಅರಿಯೆ ಆರಾಧಿನಿಯನರಿಯೆ೧
ಜ್ಞಾನ ಭಕುತಿಯನರಿಯೆ |
ಗಮನ ತೀರ್ಥವನರಿಯೆ |
ಧ್ಯಾನವನು ಅರಿಯೆ ದಾಕ್ಷಿಣ್ಯವನು ಅರಿಯೆ |
ಮೌನವನು ಅರಿಯೆ ಮಹತಪಸ್ಸು ಮೊದಲೆ ಅರಿಯೆ |
ಗಾನವನು ಅರಿಯೆ ಗತಿಮತಿಗಳನು ನಾನರಿಯೆ ೨
ಭೂತದಯವನು ಅರಿಯೆ |
ಬುದ್ಧಿ ಪೂರ್ವಕವರಿಯೆ |
ಯಾತರ ಸೇವಿ ಅರಿಯೆ ಏನು ಅರಿಯೆ |
ದಾತಾರ ಜಗದೇಕ |
ನಾಥ ವಿಜಯವಿಠ್ಠಲ ಪ್ರೀತಿಯಲಿ
ನಿನ್ನ ನಾಮವನುಣಿಸಿಕಾಯೊ ೩

೩೬೨
ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ |
ಸಂತ ಜನರ ಆಧಾರಿ ಪ
ಶ್ಲೋಕ – ಘನ ಅನವರತ ಕಾಯಾ |
ಸ್ವಾಮಿ ಲಕ್ಷ್ಮೀ ಸಹಾಯ |
ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ |
ಅನಘ ನಗರ ನಿಲಯಾ |
ಅಮಿತ ಆನಂದ ಕಾಯಾ |
ನೆನಹಿ ಪಾಲಿಸೋ ಜೀಯಾ |
ನಾಗ ತಲ್ಪೋರು ಗಾಯಾ ೧
ಪದ – ಶರಣು ಶರಣು ಶಾರಣ್ಯನೆ |
ಗುಣ ಗುಣ್ಯನೆ |
ನಮಗಾನನ್ಯನೆ |
ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ |
ಅಪ್ರತಿ ಧನ್ಯನೆ |
ಪರಮ ಪುರುಷ ಅಸಮಾನ್ಯನೆ |
ಮಹ ಪುಣ್ಯನೆ |
ಪ್ರಳಯ ಕನ್ಯೆನೆ |
ಕರುಣ ಸಾಕ್ಷಿಗನೆ ಲಾವಣ್ಯನೆ |
ಅನುಗಣ್ಯನೆ ಪ್ರಾಕೃತ ಶೂನ್ಯನೆ ೧
ಶ್ಲೋಕ – ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ |
ಚರಿಸಿದೆ ವಿಷಯ ಯಾತ್ರಾ |
ಪಾರಗಾಣೆನೋ ಮಿತ್ರಾ |
ಕೊರಳಿಗೆ ಮಮತೆ ಸೂತ್ರಾ |
ಉರುಲು ಬಿದ್ದಿದೆ ಚಿತ್ರಾ |
ಸುರಕು ಬಡಿಪ ತನುತ್ತಾ |
ಆವನೋ ಕಮಲ ನಿನೇತ್ರಾ | ೨
ಪದ – ನರಕ ನರಕ ಉಂಡು ಬೆಂದೆನೊ |
ಇಲ್ಲಿ ನಿಂದೆನೊ |
ಗತಿಗೆ ಮುಂದೇನೊ |
ಕುರುಡ ಕಿವುಡನಾಗಿ ನೊಂದೆನೊ |
ಇನ್ನೊಂದೇನೊ |
ಉಪಾಯವಂದೆನೊ |
ಮರಹು ಸಾಗರದೊಳು ಸಂದೆನೊ |
ಅಂದು ಹಿಂದೆನೊ |
ಸುಜನರಿಗಂದೇನೊ ೨
ಶ್ಲೋಕ – ಸುಲಲಿತ ರುಚಿರಪಾಂಗಾ |
ಶುದ್ದ ಸ್ವಭಾವ ರಂಗಾ |
ಪಲಿಪರಮಾಣು ಸಂಗಾ |
ಪಾವನ ಕೋಮಲಾಂಗಾ |
ವೊಲಿಸಿದವರ ಭಂಗಾ |
ಪರಿಸುವ ಶಿಂಗ ಶಿಂಗಾ |
ವರಬಲಗುಣ ತರಂಗಾ |
ಸರಸಿಜ ಹೃತ್ಪುಂಗಾ೩
ಪದ – ಚಿಂತಿಸುವೆನೊ ನಿನ್ನ ವಿಗ್ರಹಾ |
ಮನೋನಿಗ್ರಹಾ |
ವಾಗಲಿ ಅನುಗ್ರಹಾ |
ಸಂತತ ಎನಗಿದೆ ಸಂಗ್ರಹಾ |
ದೇಹವೈಗ್ರಹಾ |
ದುರುಳರ ಪ್ರತಿ ಗ್ರಹಾ |
ಮುಂತೆ ಕೈಕೊಂಬ ದುರಾಗ್ರಹಾ |
ಯೈವ ವಿಗ್ರಹಾ |
ಮಾಣಿಸು ಶಿರಿಗ್ರಹಾ |
ಸಂತೈಸು ಕರುಣವಾರುಣಗ ಅನಿಗ್ರಹಾ ೩
ಶ್ಲೋಕ – ನವನೀತ ಚೋರಾ ಗೋಪಿ ವಸ್ತ್ರಾಪಹಾರಾ |
ಲವ ಲವ ಕಾಲ ಧಾರಾ |
ಕಂಸದಾನವ ಸಂಹಾರಾ |
ಧ್ರುವ ಬಲಿಕರಿ ಉದ್ಧಾರಾ |
ನಾನವತಾರ ಧೀರಾ |
ಪವನ ಮನಮಂದಿರಾ ಪಾಲಿಸೊ ವಾರಂ ವಾರ೪
ಪದ – ವಿಜಯನಗರಾಧೀಶ ಸರ್ವೇಶಾ |
ಮಣಿಮಯ ಭೂಷಾ |
ಸೂರ್ಯ ಕೋಟಿ ಪ್ರಕಾಶಾ |
ತ್ರಿಜಗದೊಳಗೆ ನೀನೆ ನಿರ್ದೋಷಾ |
ಶಕ್ತಿ ವಿಶೇಷಾ |
ಐಶ್ವರ್ಯ ವಿಲಾಸಾ |
ಋಜುಜ್ಞಾನ ಕೊಡುವದೊ ಮನೋತ್ತರಿಸಾ |
ಮಂಜುಳ ಭಾಷಾ |
ಭೂದಾ ರಜವಾಸಾ |
ವಿಜಯವಿಠ್ಠಲ ನಿರ್ಜರ ಕೋಶಾ |
ಹೃದಯ ಕಾಶಾ |
ನಾಮಕ ಮಹಿದಾಸಾ ೪

೩೬೩
ಎಂತು ಮರುಳಾದೆ ನೀ ಯದಿಯ ಬಿಗುವಿನಲಿ ತಿರುಗಿ |
ಪಂಥದಲ್ಲಿ ಕೆಡಲಿಬೇಡ ಎರಡು ದಿನ |
ಸಂತೆ ನೆರೆದಂತೆ ಮೂಢ ಇಪ್ಪದಿದು |
ಸಂತತ ತೊರೆದು ಬಾಡೊ ಪ್ರಾಣಿ ಪ್ರಾಣಿ ಪ
ವಿಂಚುಗೂಳನು ತಿಂದು ಮನೆ ಮನೆಗಳು ತಿರುಗಿ |
ಸಂಚಿತಾರ್ಥವ ತಿಳಿಯದೆ ಮರುಳಾದ |
ಪಂಚೇಂದ್ರಿಯಂಗಳನು ಅಳಿಯದೆ | ಬಂದ ಪರ |
ಪಂಚವನು ನೀ ಕಳಿಯದೆ ವ್ಯರ್ಥಾಯ |
ವಂಚನಿಂದಲಿ ನಡೆದು ಬಾಯಿ ತೆರೆದು | ಹಲ್ಲನು |
ಹಂಚಿಕೆ ತೋರಿದಂತೆ ಮೃತ್ಯುವಿನ |
ಪಂಚದಲಿ ಸೇರಿದಂತೆ | ಆಗುವುದು |
ಕಂಚು ಕೆಳಗೆ ಬಿದ್ದಂತೆ ಪ್ರಾಣಿ ೧
ನುಗ್ಗು ನುಸಿಯಾಗದಿರು | ನೂಕು ನಿನ್ನಹಂಕಾರ |
ಹಿಗ್ಗದಿರು ಈ ಬದುಕಿಗೆ ಎಂದಿಗೂ |
ಕುಗ್ಗದಿರು ಈ ಮಲಕಿಗೆ ವೊಳಗಾಗಿ |
ಮುಗ್ಗದಿರು ಈ ಬಲಕಿಗೆ ಸ್ಥಿರವಾಗಿ |
ಬಗ್ಗು ನಡೆವಳಿ ನಡೆದು |
ವೆಗ್ಗಳದ ನಡೆವಳಿ ನಡೆದು |
ವೆಗ್ಗಳದ ಧರ್ಮದಾ ಸುಗ್ಗಿಯಲಿ ದಿನವ ಹಾಕೊ |
ಬಿಡು ಬಿಡು ಅಗ್ಗಳಿಕೆತನವೆ |
ಸಾಕು ಆವಾಗ ತೆಗ್ಗಿಕೊಂಡಿರಲಿ ಬೇಕು | ಪ್ರಾಣಿ ೨
ಇನ್ನಾದರೂ ಕೇಳು | ಪುಣ್ಯವಂತರ ಕೂಡು |
ನಿನ್ನವರು ನಿನಗೆ ದಾರೊ |
ಕಣ್ಣಾಗೆ ಎಣ್ಣೆ ಬಿದ್ದಂತೆ ಸಾರೊ ಬಾಯಿಂದ |
ಬೆನ್ನಿಗೆ ಬಂದ ವಿಚಾರೊ ತುದಿಯಲಿ |
ಮಣ್ಣು ಮಣ್ಣನೆ ಕಲಿತು ಹೋಗುವುದು ನಿಶ್ಚಯವು |
ಚೆನ್ನಾಗಿ ಎಚ್ಚೆತ್ತುಕೋ ಈ ಮಾತಿಗೆ |
ಖಿನ್ನನಾಗುವದೇತಕೊ ಸಾವಿರಕು |
ಮುನ್ನಿಲ್ಲವೊ ಮನಸಿತೊ ಪ್ರಾಣಿ ೩
ವೇದಶಾಸ್ತ್ರವನರಿಯೆ ಆದಿಪುರಾಣಗಳು |
ಓದುಬರವೆಂದನ್ನದಿರೂ ಅದ್ವೈತ |
ವಾದವರ ಕೂಡದಿರು ಇದೆ ಮಿಗಿ
ಲಾದರು ಮರಿಯದಿರು ಉತ್ತಮ |
ಸಾಧನಗತಿಗೆ ಸಿರಿ ವಿಜಯವಿಠ್ಠಲನ ಶ್ರೀ |
ಪಾದವನು ಒಂದೇ ಭಕ್ತಿಯಿಂದಲಾ |
ರಾಧಿಸು ಇದಕೆ ಯುಕ್ತಿ ಕಡಿಯದಲೆ |
ಮಾಧವನು ಕೊಡುವ ಮುಕ್ತಿ ಪ್ರಾಣಿ೪

ಹಂಪೆಯಲ್ಲಿ ಶ್ರೀ ವ್ಯಾಸರಾಯರು ಬಂಡೆಯ
೨೨೦
ಎಂತು ವರ್ಣಿಪೆ ನಮ್ಮಮ್ಮಾ |
ಯಂತ್ರೋದ್ಧಾರಕನಾಗಿ ಮೆರೆವನಾ ಪ
ಕೋತಿ ರೂಪದಲಿ ಬಂದು |
ಭೂತಳಕೆ ಬೆಡಗು ತೋರಿ ||
ಈ ತುಂಗಭದ್ರೆಯಲ್ಲಿ |
ಖ್ಯಾತಿಯಾಗಿಪ್ಪ ಯತಿಯಾ೧
ಸುತ್ತಲು ವಾನರ ಬದ್ಧ |
ಮತ್ತೆ ವಲಯಾಕಾರ ಮಧ್ಯ ||
ಚಿತ್ರಕೋಣ ಅದರೊಳು |
ನಿತ್ಯದಲಿಯಿಪ್ಪ ಯತಿಯಾ ೨
ವ್ಯಾಸ ಮುನಿರಾಯರಿಂದ |
ಈ ಶಿಲೆಯೊಳಗೆ ನಿಂದು ||
ಶ್ರೀಶ ವಿಜಯವಿಠ್ಠಲನ್ನ |
ಏಸು ಬಗೆ ತುತಿಪನ್ನ ೩

೩೬೪
ಎಂದಿಗಾಹುದೋ ನಿನ್ನ ದರುಶನ |
ಇಂದಿರೇಶ ಮುಕುಂದ ಕೇಶವ ಪ
ಗಾನಲೋಲನೆ ದೀನವತ್ಸಲ |
ಮಾನದಿಂದಲಿ ನೀನೆ ಪಾಲಿಸೋ ೧
ಯಾರಿಗೆ ಮೊರೆ ಇಡುವೆ ಶ್ರೀ ಹರಿ |
ಸಾರಿ ಬಂದು ನೀ ಈಗಲೆ ಪೊರಿ ೨
ಗಜವ ಪಾಲಿಸೊ ಗರುವದಿಂದಲಿ |
ಭುಜಗಶಯನ ಶ್ರೀ ವಿಜಯವಿಠಲಾ ೩

೩೬೫
ಎಂದಿಗ್ಯಾಹೋದೋ ನಿನ್ನ ದರುಶನ ಪ
ವೇಳೆ ತಪ್ಪದೆ ಊಳಿಗವನು ಧ್ಯಾನ
ಮಾಳ್ಪ ನಿನಾಳುಗಳ ಸಂಗ ೧
ನಿನ್ನ ಮೂರ್ತಿಗಳ್ಧ್ಯಾನ ಮಾಡುವ
ಉನ್ನಂಥಾ ಗುಣಯೆನ್ನ ಸೇರ್ವದೋ ೨
ತ್ರಿಜಗವಂದಿತ ಕುಜನನಿಂದಿತ
ಭುಜಗಶಯನ ಶ್ರೀ ವಿಜಯವಿಠ್ಠಲನೇ ೩

೨೬೯
ಎಂದು ನೋಡುವೆ ಎನ್ನ ಗುರುವಿನಾ |
ನಿಂದು ನಂದಿಗಮನನಾ ಎಂದೆಂದಿಗೆ ಪೊಂದಿದವರಿಗಾ |
ನಂದ ಕೊಡುವ ಇಂದು ಮೌಳಿಯ ಪ
ತ್ರಿಗುಣ ರೂಪನ ತ್ರಿಭುವನೇಶನ |
ಜಗತಿಧರ ವಿಭೂಷನ ||
ನಿಗಮವಂದ್ಯ ನೀಲಕಂಠನ
ನಗವತಿ ಸುತಿಪತಿಯ ರುದ್ರನ ೧
ತಪೋಧನೇಶನ ತಪ ಪ್ರತಾಪನ |
ತಪನ ಶಶಿ ಅಗ್ನಿನೇತ್ರನ |
ಕುಪಿತ ರಹಿತ ಕುಜನ ಮಥನನ |
ಅಪರಮಿತ ಗುಣ ವನದಿ ಶಿವನ ೨
ವಿಮಲಗಾತ್ರನ ವಿಶ್ವಪಾಲನ |
ರಮೆಯರಸ ಪದಿಧಾರನ ||
ಶಮಜಿತನನ ಸುಜನ ರನ್ನನ |
ನಮಿಸುವರ ಮನೋವಾಸ ಈಶನ ೩
ಅಂಧಹರಣನ ಅರ್ಧವೇಷನ |
ಮಂದಮತಿ ವಿದುರನ |
ಬಂಧು ಬಳಗನ ಬಹು ಉದ್ದಂಡನ |
ಅಂಧ ಏಕೇಶವರ್ನ ವದನನ ೪
ತತುವನಾಥನ ತುಂಗ ವರದನ |
ಸತತ ವೈರಾಗ್ಯ ಭಾಗ್ಯನ ||
ಪತಿತ ಪಾವನ ವಿಜಯ ವಿಠ್ಠಲನ್ನ |
ತುತಿಪ ಅವಿಮುಕ್ತಿ | ಪತಿ ವಿಶ್ವೇಶನ ೫

೫೦೭
ಎಂದೆಂದಿಗೂ ಎರಡು ಒಂದಾಗವು |
ಒಂದೆ ಕುಲದಲಿ ಜನಿಸಿದ ಪಕ್ಷಿಗಳು ಪ
ಒಂದೇ ರೂಪಪಕ್ಷಿ ಒಂದರಲಿ ತಿರಗೋವು |
ಒಂದೀಗ ಪಂಚವರ್ಣದ ಕೋವಿದಾ ||
ಒಂದೆಲ್ಲ ಸಮನೆಂದು ಪೇಳುತ ಬದುಕುವುದು |
ಒಂದಕ್ಕೆ ಗುರುತು ಮತ್ತೊಂದಕ್ಕೆ ಯಿಲ್ಲ ೧
ಒಂದೇ ಕೊಂಬಿನಲಿ ಎರಡು ಸೇರಿಕೊಂಡು |
ಒಂದು ಸಾರವನುಂಬದೊಂದರಿಯದು ||
ಒಂದು ಬುದ್ಧಿಯಲ್ಲಿಪ್ಪದೊಂದು ಇರಲೊಲ್ಲದು |
ಒಂದು ನಾನೆಂಬೋದು ಮತ್ತೊಂದು ಪೇಳದು ೨
ಒಂದೀಗ ತನ್ನ ಫಲ ಪರರಿಗೆ ಕೊಡುವದು |
ಒಂದು ತನ್ನ ಫಲ ತಾ ತಿಂಬೋದು ||
ಒಂದು ಏರು ಇಳಿವ ಮೆಟ್ಟಗಳು ಬಲ್ಲದು |
ಒಂದೀಗ ಕಾಣದೆ ಕಮರಿ ಬೀಳುವದು ೩
ಒಂದು ಸುಡಗಾಡು ಸಿದ್ಧ ಎಂದು ಕೂಗುವದು |
ಒಂದು ಕೂಗುವದು ಪ್ರಸಿದ್ಧನೆಂದು ||
ಒಂದು ಬೆಳೆದಿಂಗಳೊಳು ಹರುಷದಲಿ ಆಡುವದು |
ಒಂದು ಕತ್ತಲೆಯೊಳು ಆಡುವುದು ನಿತ್ಯಾ ೪
ಒಂದಕೆ ಒಂದು ಸಂವಾದವನು ಮಾಡುವವು | ಹಾರುವುದು |
ಒಂದು ಅರಿಯದು ಬಾಂಧವ ಪುರಂದರ ವಿಜಯವಿಠ್ಠಲನ್ನ |
ಒಂದು ಪೊಂದಿತು |
ಒಂದು ಪೊಂದದಲೆ ಹೋಯಿತು ೫

೧೭
ಎಂದೊಡನಾಡುವೆ ಎಂದರ್ಥಿಬಡುವೆ
ಎಂದಿಗೆ ತಕ್ರ್ಕೈಸಿ ಸಂತೋಷಬಡುವೆ ಪ
ಉತ್ಸವ ಮಂಟಪದೊಳಗೆ ಕುಳಿತು ಭಕ್ತ
ವತ್ಸಲನೆಂದು ನುತಿಸಿಕೊಂಬನ ಕೂಡ ೧
ಸಕಲ ಭೂಷಿತನಾಗಿ ಅಜಹರ ಸುರಮುನಿ
ನಿಕರ ಕೈಯಿಂದ ಸ್ತುತಿಸಿಕೊಂಬನ ಕೂಡ ೨
ಆಪೋಹಿಷ್ಠಾ ಮಯೋಭುವನೆಂಬೋ ಮಂತ್ರ
ಆ ಪುರೋಹಿತರಿಂದ ಕಲಿತುಕೊಂಬನ ಕೂಡ ೩
ನಾಲ್ವತ್ತುಮೂರು ಪದಂಗಳು ಮಾಡೆಂದು
ಹೇಳಿದ ಹೇಮಾದ್ರಿ ಶಿಖರಾಕಾರನಕೂಡೆ ೪
ದಂಡಿಗೆ ಕರೆದಲ್ಲಿ ಕೊಟ್ಟು ಅಮೃತದ ಕರ
ಮಂಡೆಯಲ್ಲಿಟ್ಟ ಮಹಮಹಿಮನ ಕೂಡ ೫
ಪಲ್ಲಕ್ಕಿ ಏರಿ ಪವಳಿಯ ಸುತ್ತಿ
ಸರ್ರಗೆ ನಿಲ್ಲದೆ ಗುಡಿಪೊಕ್ಕ ನಿರ್ಮಳನ ಕೂಡ೬
ವಾರಶನಿ ಚತುರ್ದಶಿ ಕೃಷ್ಣಪುಷ್ಯದಿ
ಈ ರೀತಿಯಲಿ ಕೂಡ ಇಂದಿರೇಶನ ಕೂಡ ೭
ರೌದ್ರಿ ಸಂವತ್ಸರ ಅರ್ಧರಾತ್ರಿಯಲಿ
ಭದ್ರ ಮೂರುತಿಯಾದ ಭವಹರ ಕೂಡ ೮
ಗುರುಪುರಂದರ ಉಪದೇಶನ ಬಲದಿಂದ
ಸಿರಿ ವಿಜಯವಿಠ್ಠಲನ ಚರಣ ತಕ್ರ್ಕೈಸಿ ೯

೪೪೮
ಎಚ್ಚತ್ತು ಇರು ಕಂಡ್ಯ ಮನವೇ | ನಮ್ಮ |
ಅಚ್ಯುತನಂಘ್ರಿಗಳನು ನೆನೆ ಕಂಡ್ಯ ಮನವೆ ಪ
ಆಡದಿರಪವಾದಗಳನು ಕೊಂ |
ಡಾಡದಿರಿನ್ನು ಚಿಲ್ಲರೆ ದೈವತಗಳನು ||
ಬೇಡದಿರು ಭಯ ಸೌಖ್ಯವನು ನೀ |
ಮಾಡದಿರಿನ್ನು ದುರ್ಜನ ಸೇವೆಯನು || ಸಜ್ಜನ ದ್ವೇಷವನು೧
ನರಜನ್ಮ ಬರುವದೆ ಕಷ್ಟ ಇದ- |
ನರಿದು ನೋಡು ವಿಪ್ರಾದಿ ಶ್ರೇಷ್ಠ ||
ಮರಳಿಬಾಹುದು ಉತೃಷ್ಟ |
ಮರುತ ಮತವ ಪೊಂದುವದು ದುರ್ಘಟ ||
ಕೇಳೆಲವೊ ಮರ್ಕಟ ೨
ಹಾಳು ಹರಟೆಗೆ ಹೋಗಬೇಡ ನೀ ಕಂಡ |
ಕೂಳನು ತಿಂದು ಒಡಲ್ಹೊರಿಯಬೇಡ ||
ಕಾಲ ವ್ಯರ್ಥ ಕಳಿಯ ಬೇಡ ನಮ್ಮ |
ಪ್ರಾರಬ್ಧ ಭೋಗಕ್ಕೆ ಮನ ಸೋಲಬೇಡ ||
ಶ್ರೀ ಹರಿಯ ದಯಮಾಡ ೩
ಅನ್ಯ ಸ್ತ್ರೀಯರ ನೋಡ ಬೇಡಾ ಹಿಂದೆ |
ಮಣ್ಣುಕೂಡಿದವರ ನೀ ನೋಡಾ ||
ಅನ್ಯ ಶಾಸ್ತ್ರವನೋದಬೇಡಾ ನಮ್ಮ |
ಪೂರ್ಣಪ್ರಜ್ಞರ ಬೋಧ ತಿಳಿದಕೊ ಗಾಢಾ ||
ಮೈ ಮರೆತಿರಬೇಡಾ ೪
ಗೋ ವಿಪ್ರರ ಸೇವೆ ಮಾಡು ಸೋಹಂ |
ಭಾವಗಳನು ಬಿಟ್ಟು ದಾಸತ್ವ ಕೊಡು ||
ಕೇವಲ ವೈರಾಗ್ಯ ಮಾಡು ವಿಜಯ ||
ಝಾವಗಳಲ್ಲಿ ಶ್ರೀ ಹರಿಯ ಕೂಡ್ಯಾಡೊ ||
ಲಜ್ಜೆಯ ಈಡ್ಯಾಡೊ೫
ನಾನು ಎಂಬುದು ಬಿಡು ಕಂಡ್ಯ ಎನ್ನ |
ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ ||
ಜ್ಞಾನಿಗಳ ಒಳಗಾಡು ಕಂಡ್ಯ ವಿಷಯ |
ಜೇನೆಂದು ಮೆದ್ದರೆ ಅದು ವಿಷ ಕಂಡ್ಯಾ ||
ಬೀಳುವಿ ಯಮಗೊಂಡಾ ೬
ಕಷ್ಟ ಪಡದೆ ಸುಖಬರದು ಕಂ- |
ಗೆಟ್ಟ ಮೇಲಿನ್ನು ಕಷ್ಟ ತಿಳಿಯೋದು ||
ದುಷ್ಟ ವಿಷಯ ಆಶೆ ಜರಿದು ವಿಜಯ- |
ವಿಠ್ಠಲರಾಯನ ಹೊರತು ಮುಕ್ತಿ ಬಾರದು ||
ಕೂಗೆಲವೊ ಬಾಯಿ ತೆರೆದು ೭

೯೩
ಎಚ್ಚರಿಕೆ ಎಚ್ಚರಿಕೆ ಎಲೋ ದೇವ |
ಎಚ್ಚರಿಕೆ ಎಚ್ಚರಿಕೆ |
ಅಚ್ಚ ಕಲ್ಯಾಣ ಮೂರುತಿ ತಿರುವೆಂಗಳಾ ಪ
ಅಜ ದ್ವಿಜಗಜ ಅಜಾಮಿಳ ಪರಿಪಾಲನೆಯಾ |
ದ್ವಿಜ ರಾಜಾಂಗಾ ಗಂಗಜ ಭಕ್ತವರದನೆಯಾ |
ಗಜ ಕುಜ ದನುಜ ಭೂ ಭುಜರ ಸಂಹಾರನೆಯಾ |
ನಿಜ ಭಜಕರ ಪಂಕಜ ಹೃದಯಾರ್ಕನೆಯಾ೧
ಪರತರ ಪರಮಾತ್ಮ ಪರಮೇಷ್ಠಿ ವಂದನೆಯಾ |
ಕರುಣ ಶರಧಿ ತಾರಾ ಕರುಗಳ ಕಾಯಿದನೇಯಾ |
ಎರಡೇಳು ಲೋಕ ಪೊರೆವಾ ಭಾರಣ ಹರಿಯಾ |
ಶರಣು ಹೊಕ್ಕೆನು ಎನ್ನ ಮೊರೆ ವಿಚಾರಿಸೊಯಾ ೨
ಜಯ ಜಯಾ ಚಿತ್ತಾವಾಧಾರು ಪರಾಕ್ರಮಯಾ |
ಭಯ ನಿವಾರಣ ನಿಜ ಭಂಟರಿಗೆ ಬಂಟಯಾ |
ನಯ ಮೂರುತಿ ನಮ್ಮ ವಿಜಯವಿಠ್ಠಲರೇಯಾ ಯಾ |
ತ್ರಿಯಗುಣ ವಿರಹಿತ ಶೇಷಗಿರಿವಾಸಯಾ ೩

೪೪೯
ಎಚ್ಚರಿಕೆಚ್ಚರಿಕೆ ಮನವೆ ಇನ್ನು |
ಎಚ್ಚರಿಕೆಚ್ಚರಿಕೆ ಯಮನ ಪುರದ ಬಾಧೆ ಪ
ಕಿಚ್ಚನಾದರು ಕೇಳಿ ದುಶ್ಚಿಂತನ ಬಿಡು ಅ.ಪ
ಗಂಡ ಅತ್ತೆ ಮಾವ ಮೈದುನರ ಬೈವರ |
ಖಂಡ ತುಂಡನೆ ಮಾಡಿ ಖಂಡವ ಕೊಯಿದು |
ಕಂಡದೊಳಗೆ ಬೇಯ್ಸಿ ದಿಂಡುಗೆಡಹಿ ಕಟ್ಟಿ |
ಮಂಡೆಯ ಒಡೆದು ಡಂಡದಿ ಶಿಕ್ಷಿಸಿ |
ಹಿಂಡಿ ಹಿಪ್ಪೆಯ ಮಾಡಿ ಕೊಂಡೊಯ್ದು ಅಗ್ನಿಯ
ಕುಂಡವ ಹೋಗಿಸುವರೊ-ಎದೆಯ ಮೇಲೆ |
ಗುಂಡನೆ ಹೊರಿಸುವರೊ-ಬಾಯೊಳಗೆ |
ಕೆಂಡವ ಸುರಿಸುವರೊ-ಕೋಟಿ ಜನ್ಮ
ಚಂಡಾಲ ಯೋನಿಯಳಿಟ್ಟು ಬಾಧಿಸುವರೊ ೧
ಉತ್ತಮ ಗುರು ಹಿರಿಯರುಗಳ ಬೈವರ |
ತಿತ್ತಿಯ ಸುಲಿದು ಕತ್ತರಿಪ ಬಾಚೆಯ ತಂದು |
ಕೆತ್ತಿ ಶರೀರಕ್ಕೆ ಹತ್ತೊ ನೀರನೆ ಚೆಲ್ಲಿ |
ನೆತ್ತಿಯ ಕೊರೆದು ಖಾರವನೊತ್ತಿ ಹಾವಿನ
ಹುತ್ತವ ಹೊಗಿಸಿ ವಿಷವನಿತ್ತು ಕೈ ಕಾಲು |
ಕಿತ್ತು ಹೊಟ್ಟೆಯ ಕೊಯ್ವರೊ ಬೊಬ್ಬಿರಿ |
ಯುತ್ತುರುಳು ಹಾಕುವರೊ ಬೆನ್ನೊಳಗೇ |
ಎತ್ತಿ ಕರುಳ ತೆಗೆವರೊ ದೊಡ್ಡ ಬೆಟ್ಟ |
ಹತ್ತಿಸಿ ತಲೆಕೆಳಗಾಗಿ ನೂಕಿಸುವರೊ ೨
ಪರಧನ ಪರಸತಿ ಪರನಿಂದೆಗೆಳೆವರ |
ಮರುಳುವ ಮರಳಿನೋಳ್ ಹೊರಳಿಸಿ ಅಸ್ಥಿಯ |
ಮುರಿದು ಮುಟ್ಟಿಗೆ ಮಾಡಿ ಉರೆದ ಗುಂಡಿಗೆ ಸೀಳಿ |
ಗರಗಸದಲಿ ಜಿಹ್ವೆ ಕೊರೆದು ತೈಲದೊಳಗೆ |
ಅರಿವೆಯೆದ್ದಿ ಮೈಗೆ ಉರಿಯ ಸುತ್ತಲಿಕ್ಕೆ |
ಉರವಣಿಸು ಕುಣಿಸುವರೊ-ಹೆರೆದಂಬಿಗೆ |
ಗುರಿಮಾಡಿ ನಿಲಿಸುವರೊ ಉಕ್ಕಿನ ಕಂಭ |
ಕ್ಕೊರಗಿಸಿ ನಿಲಿಸುವರೊ ಶೂಲಕೆ ಹಾಕಿ |
ಎರಡು ಕಾಲೆಳೆದು ಕಾವಲಿ ಮೇಲೆ ನಿಲಿಸೀರೊ ೩
ಹೆಣ್ಣುಮಾರಿ ಹೊನ್ನು ಕಟ್ಟಿದ ಮನುಜರ |
ಕಣ್ಣನೆ ಕಳಚಿ ಹಿಂಗಿನ ಪುಡಿಯನೆ ತುಂಬಿ |
ಸುಣ್ಣದೊಳಗೆ ಹೂಳಿ ಜನ್ಮ ಕಳೆದು ಶಿರ |
ವಣ್ಣಿಕಲ್ಲನೆ ಆಡಿ ಇನ್ನು ಉಕ್ಕಿನ ಕಾದ- |
ಎಣ್ಣೆಯ ಸುರಿದು ನೀರನ್ನೆರದು ನರಮಾಂಸ- |
ಉಣ್ಣೆಂದು ತಿನಿಸುವರೊ-ತಿತ್ತಿಯನಿಕ್ಕಿ |
ಹಣ್ಣಣ್ಣು ಮಾಡುವರೊ-ಅಸೀಪತ್ರಾ- |
ರಣ್ಯವ ಹೊಗಿಸುವರೊ-ಕ್ಷುಧೆಯೆನ್ನೆ |
ಮಣ್ಣು ಬಾಯಲಿ ತುಂಬಿ ಕುಟ್ಟಿ ಮೆಲ್ಲಿಸುವರೊ೪
ವಾಸುದೇವನ ವಾಸರದಲ್ಲಿ ಉಂಬರ |
ಹಾಸುಗಲ್ಲಿನ ಮೇಲೆ ಬೀಸಿ ಅಪ್ಪಳಿಸಿ ಆ- |
ಕಾಶಕ್ಕೊಗೆದು ಖಡ್ಗ ರಾಸಿಯೋಳ್ ಬೀಳಲು |
ಕೇಶ ಪಿಡಿದು ಕೆಡಹಿ ಘಾಸಿಸಿ ಬಾಯೊಳು |
ಸೀಸವ ರಾಸಿ ಎರೆದು-ಸಾಸುವೆ ತುಂಬಿ |
ನಾಸಿಕ ಕೊಯ್ಸುವರೋ-ಕೀಸಿಸಿ ಗೂಟ |
ಹೇಸದೆ ಬಡಿಸುವರೊ ಹಂದಿಯಂತೆ |
ಈ ಶರೀರ ಸುಡಿಸವರೊ-ತಮಸಿನೊಳು |
ಏಸು ಜನ್ಮಕೆ ಗತಿಯಲ್ಲವೆನಿಸುವರೊ ೫
ಎಲ್ಲ ಒಂದೇ ಎಂಬ ಪಂಚ ಮಹಾಪಾತಕಿಯ |
ಹಲ್ಲನ್ನು ಮುರಿದು ಗಂಟಲ ಶೀಳಿ ಅಂಗುಳಿಗೆ |
ಮುಳ್ಳನ್ನು ತಂದೂರಿ ತಪ್ತ ಲೋಹದ ಮೇಲೆ |
ಕುಳ್ಳಿರಿಸಿ ಕೊಡಲಿಯೊಳ್ ಎಲ್ಲವನು ಕಡಿದು |
ಕೊಲ್ಲ ಬಡಿದು ಅಂಬಿನಲಿ ಚುಚ್ಚಿ ರಕ್ತ- |
ಚೆಲ್ಯಾಡಿ ಬಗೆಯುವರೊ-ಉರಿಯ ಕೊಂಡ- |
ದಲ್ಲಿ ಮುಳುಗಿಸಿಬಿಡವರೊ-ಹೊತ್ತು ಒಯ್ದು |
ಕಲ್ಲುಗಾಣಕೆ ಹಾಕುವರೋ-ಕುಂಭೀಪಾಕ |
ದಲ್ಲಿ ಕುದಿಸಿ ಬೇಯ್ಸಿ ಬೆಂಡು ಮಾಡುವರೊ೬
ಒಂದು ನೋಡಿದರೊಂದು ಅಧಿಕ ಪಾಪಗಳಿವೇ-
ನೆಂದು ಪೇಳಲಿ ಎನಗೊಂದಾದರಳವಲ್ಲ |
ಹಿಂದಿನ ದುರ್ವಾರ್ತೆ ಮರೆದು ಮುಂದಾದರು |
ನಂದತೀರ್ಥರ ಪಾದಾನಂದದಿ ಭಜಿಸಿ ಪು |
ರಂದರನನು ಸರಿಸಿ-ವಿಜಯವಿಠ್ಠಲ |
ನ್ಹೊಂದಿ ಪತಿಕರಿಸಿ-ಮುಕ್ತಿ ಮಾರ್ಗ- |
ವಿಂದು ಆಶ್ರಿಯಿಸೊ ಗೋವಿಂದನ ಸ್ತುತಿಸಿ | ೭

೩೬೬
ಎನಗ್ಯಾರು ಗತಿಯಿಲ್ಲ ನಿನಗ್ಯಾರು ಸರಿಯಿಲ್ಲ |
ಎನಗೆ ನಿನಗೆ ನ್ಯಾಯ ಪೇಳುವರಿಲ್ಲ ಪ
ಒಂದುಗೂಡಿಲಿ ಬಂದು ಒಂದು ಕ್ಷಣ ವಗಲದೆ |
ಯೆಂದೆಂದು ನಿನ್ನ ಪಾದ ಪೊಂದಿರಲೂ ||
ಬಂದ ವಿಷಯಂಗಳಿಗೆ ಯೆನ್ನನೊಪ್ಪಿಸಿ ಕೊಟ್ಟು |
ನೀನಂಧಕನಂತೆ ನೋಡುವದುಚಿತವೆ ರಂಗಾ ೧
ಪರಸತಿಯರ ಕೂಡಿದರೆ ಪರಮ ಪಾತಕವೆಂದು |
ಪರಿ ಪರಿಯ ನರಕಗಳ ನಿರ್ಮಿಸಿರುವಿ ||
ಪರಸತಿಯರೊಲುಮೆ ನಿನಗೊಪ್ಪಿತೆಲೋ ದೇವಾ | ನಿನ್ನ |
ದೊರೆತನಕಂಜಿ ನಾ ಶರಣೆಂಬೆನಲ್ಲದೇ ೨
ನಿನ್ನಾಜ್ಞ್ಞಧಾರನಾಗಿ ನಿನ್ನ ಪ್ರೇರಣೆಯಿಂದ |
ಅನೇಕ ವಿಧಕರ್ಮಗಳ ಮಾಡುತಿರುವೇ ||
ಯೆನ್ನಪರಾಧಗಳ ವರ್ಣಿಸಲಾಗದೊ | ದೇವ |
ಪನ್ನಂಗಶಯನ ಶ್ರೀ ವಿಜಯವಿಠಲನೇ ೩

೩೬೭
ಎನ್ನ ಪಾಲಿಸುವುದಾನಂತ ಶಯನ |
ಚನ್ನ ಗರುಡವಾಹನಾ |
ಇನ್ನು ನಿನ್ನಯ ಪಾದವನ್ನೆ ಸೇರಿ ಕೌಂಡಣ್ಯ|
ಮುನಿಗೊಲಿದನಂತ ಗುಣಾರ್ಣವಾ ಪ
ದೇವಾ ನಂಬಿದವರ ನೋವ ಕಳೆದು ಬಿಡದೆ |
ಕಾವ ಬೇಡಿದ ವರವ ನೀವ ಮೂರು |
ಭುವನ ಜೀವ ವಿಮಲರಾ |
ಜೀವ ನಯನ ವಸುದೇವ ದೇವಕಿತನು |
ಭವನೆ ಭವದೂರ ದುರ್ಜನ ಸಂಹಾರ |
ದೇವತಾ ವರ ಸಂಜೀವಾ ಪ್ರಭಾವಾ೧
ಸೂರ್ಯಕೋಟಿ ಪ್ರಕಾಶಾ | ಚಾರ್ಯನಾ ನಾಯಕಾಧೀಶಾ |
ಧೈರ್ಯವುಳ್ಳ ಸರ್ವೇಶಾ | ಕಾರ್ಯರೊಳು ವಿಶೇಷಾ |
ಕಾರ್ಯವಂತನೆ ಈಶಾ | ತುರ್ಯಮಹಿಮಾ ಸುರ
ವರ್ಯ ಮನ್ಮಥನಯ್ಯಾ |
ಮರ್ಯಾದಿಯಲಿ ಬಲು | ವೀರ್ಯದಲಿ ಮತಿ |
ಧಾರ್ಯನ ಮಾಡೋದು | ನಿರ್ಯಾಣ ಸಮಯಕ್ಕೆ ೨
ಬಂದು ಮತ್ಸ್ಯಾದಿ ತೀರ್ಥ | ಬಂದು ಬಲು ಸಮರ್ಥ |
ನೆಂದು ಬೇಡಿದೆ ಪುರುಷಾರ್ಥ | ಇಂದು ಕರುಣಿಸು ಕರ್ತಾ |
ಬೆಂದು ಪೋಗಲಾರ್ಥ | ಮುಂದುಣಿಸು ಸುಧಾರ್ಥ |
ತಂದು ನೀನೆ ಮುಕ್ತ್ತಾರ್ಥ | ಬಂದು ವೈತಿರುವಾ
ನಂದು ರೂಪವನೆ | ಸಿಂಧುಶಯನ ಆ
ನಂದ ವಿಜಯವಿಠ್ಠಲೆನ್ನ ಪಾಲಿಸೋ೩

೩೬೮
ಎನ್ನಲ್ಲಿ ಅವಗುಣ ಶತಸಾವಿರವಿರೆ |
ಅನ್ಯರ ಕರೆದಾನು ನಡತೆ ಇದೇನೆಂಬೆ ಪ
ವೇದವನೋದಿದೆ ಪರರಿ | ಗಾದರಿಸಿ ಮುಕುತಿಗೆ |
ಸಾಧನೆ ಇದೆ ಎಂದು | ಹಾದಿಯವರಿಗೆ
ಭೋದಿಪೆನಲ್ಲ್ಲದೆ ನಾನು | ಕ್ರೋಧ ಬಿಟ್ಟೆವನಲ್ಲ್ಲ
ಹಾದರಹಳು ನಾರಿ | ಮಾದಿಗನ ಪೋದಂತೆ ೧
ಧನದಾಸೆಯಿಂದ ಸಾಧನವಾಗದೆಂದು |
ಜನರಿಗೆ ಉಪದೇಶವನು ಮಾಡುವೆ |
ಮನೆ ಮನೆಯ ತಿರು ಮಾತಿನ ಬಣ್ಣವಲ್ಲ್ಲದೆ |
ತೃಣ ಹತ್ತದಿದ್ದ | ವಧನರಾಶಿ ಕದ್ದಂತೆ೨
ರಸನೇಂದ್ರಿಯಗಳ ಬಂ | ಧಿಸಬೇಕೆಂದು ನಾನು |
ಉಸುರುವೆ ಅಲ್ಲಲ್ಲಿ ಕುಶಲನಾಗಿ |
ಹಸನಾಗಿ ಹೇಯ ಬ | ಯಸುವೆನು ಅಮೃತ |
ರಸವಲ್ಲೆನೆಂದಾವ ಮುಸುರಿಯ ಮೆದ್ದಂತೆ ೩
ಒಡಿವೆ ವಸ್ತುಗಳು ಸಂಗಡ ಬಾರವು ಮಮತೆ |
ಬಿಡು ಸಂಸಾರವಿದು ಕಡಿಗೆ ಭವದ |
ಮಡವು ಸಿದ್ಧವೆಂದು ನುಡಿವೆನೊ ಪರರಿಗೆ |
ಯಡಹಿಯೊ ಎಂದಾವ ಗಿಡನೇರಿ ಬಿದ್ದಂತೆ ೪
ಭಕುತಿ ಕೂಡಿದ ವಿರಕುತಿ ಲೇಶವಿಲ್ಲಾ |
ಯುಕುತಿ ಬಾಯಲಿ ನಾರಕಕೆ ಸಾಧನಾ |
ಲಕುಮಿವಲ್ಲಭ ನಮ್ಮ ವಿಜಯವಿಠ್ಠಲ ನಿನ್ನ ಅ |
ರ್ಚಕನಾಗಿ ಬದುಕತಕ್ಕದ್ದು ಮಾರ್ಗವ ತೋರೊ ೫

೩೬೯
ಎಲೆ ಮನ ಮುರಾರಿಯನು ಕೊಂಡಾಡು ಪ
ಸಾಧನಕಿದು ಉಪಾಯ ನೋಡು ಅ.ಪ
ಕಾಲನ ದೂತರ ಕಾಲಿಗೆ ಬಿದ್ದರೆ |
ನಾಳೆಗೆ ನಿಲುವರೆ ನೋಡು ೧
ಮಂದಿಯ ಮಾತಿಗೆ ಎಂದೆಂದು ಮರುಗದೆ |
ಮುಂದಿನ ಗತಿ ನೀ ನೋಡು ೨
ರಾಜೀವ ಮುಖಿಯರ ಸೋಜಿಗ ಮೆಚ್ಚದೆ |
ವಿಜಯವಿಠಲನ ಪಾಡೋ೩

೧೯೧
ಮುರಾರಿಯನೆ ಕೊಂಡಾಡು ಎಲೆ ಮನ ಮುರಾರಿ ಪ
ಮಂದಿಯ ಮತಿಗೆ ಯೆಂದೆಂದು ಮರುಗದೆ |
ಮುಂದಿನ ಗತಿಯನು ನೋಡು ೧
ಕಾಲನ ದೂತ ಕಾಲಿಗೆ ಬಿದ್ದರೆ |
ನಾಳೆಗೆ ನಿಲ್ಲೋರೆ ನೋಡು ೨
ರಾಜೀವ ಮುಖಿಯರ ಸೋಜಿಗ ಮೆಚ್ಚಿದೆ |ವಿಜಯವಿಠ್ಠಲನ ಬೇಡು ೩

೧೮
ಎಲ್ಲಡಗಿದನೊ ಹರಿ ಎನ್ನಯ ಧೊರಿ ಪ
ಎಲ್ಲೆಲ್ಲಿ ಪರಿಪೂರ್ಣನೆಂಬೊ ಸೊಲ್ಲನು ಮುನ್ನಾ
ಅಲ್ಲಲ್ಲಿ ಪುಸಿಮಾಡಿ ಮಲ್ಲಮರ್ದನ ಪುಲ್ಲಲೋಚನ ಹರಿಅ ಪ
ಶರಣೆಂದವರ ಕಾಯ್ವ ಕರುಣಾ ಸಮುದ್ರನು
ಕರುಣನ ಅರಿಯದೆ ಹರಿಣಾಂಕ ನಿಭವಕ್ತ್ರ ೧
ಕರಿರಾಜನ ಮೊರೆ ಕೇಳಿ ತ್ವರಿತದಿಂದ
ಗರುಡನೇರಿ ಬಂದ ಗರ್ವರಹಿತ ದೇವ ೨
ವರ ಭುಜದಲಿ ಶಂಖ ಚಕ್ರವ ಧರಿಸಿದ
ಪರಮ ಸುಂದರಮೂರ್ತಿ ಪರಮೇಷ್ಠಿ ಜನಕನು ೩
ವನಜ ಮಲ್ಲಿಗೆ ಜಾಜಿ ವನದಲ್ಲಿ ಚಲಿಸುವ
ವನಿತೆಯರಾಟಕ್ಕೆ ಮನಮೆಚ್ಚಿ ನಡೆದಾನೊ ೪
ಗೋವುಗಳ ಹಿಂಡು ಗೋಪಾಲರನು ಕಂಡು
ಕಾವ ವಿಷಯಕ್ಕಾಗಿ ಕಮಲಲೋಚನ ಹರಿ೫
ಇನ ಚಂದ್ರ ನಿಭವಕ್ತ್ರ ಕನಕಾಂಬರಧರ
ವಿನಯದಿಂದಾಡುತ್ತ ಮುನಿಗಳಲ್ಲಿಗೆ ದೇವ ೬
ಗಜ ಧ್ರುವ ಬಲಿ ಪಾಂಚಾಲಿ ವರದನೆಂಬ
ನಿಜವಾದ ಬಿರುದುಳ್ಳ ವಿಜಯವಿಠ್ಠಲರೇಯ೭

೪೫೧
ಎಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲ ಪ
ಇಲ್ಲವೋ ಕಾಣೋ ಎಂದಿಗಾದರು ಮರುಳೆ ಅ.ಪ
ಹುಲಿ ಇಲಿಯಾಗುವುದು ತೋಳ ಕೋಳ್ಯಾಗುವುದು |
ಕಲಿ ಬಂದು ಹಿತ್ತಲನ್ನೀಗ ಬಳಿವ
ಖಳ ಮಹಾಚೋರ ಚೊಚ್ಚಿಲಗೌಡಿ ಮಗನಾಹ
ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ೧
ಕರಡಿ ಕರುವಾಗುವುದು ಉರಿ ಮಂಜು ಆಗುವುದು |
ಕರಿ ನಾಯಿಯಾಗುವುದು ಕಂಡವರಿಗೆ |
ಭರದಿಂದ ಸುರಿವ ಮಳೆ ನಿಲ್ಲೆನಲು ನಿಲ್ಲುವುದು |
ನರಹರಿಯ ನಾಮಗಳ ನಂಬಿ ಭಜಿಪರಿಗೆ ೨
ಫಣಿ ಸರಿವೆಯಾಗುವುದು ದಣುವಾಗುತಿಹ ಮಾರ್ಗ |
ಕ್ಷಣದೊಳಗೆ ಪೋದಂತೆ ಕಾಣಿಸುವುದು |
ಘನ ಪಾಷಾಣಗಳು ತೃಣಸಮವು ಎನಿಸುವುವು |
ವನಜಾಕ್ಷನ ಕೃಪೆಯ ಪಡೆದ ದಾಸರಿಗೆ ೩
ಕ್ಷುಧೆ ತೃಷೆಯಾಗುದು ಕ್ಷುದ್ರ ಸಂಗವಾಗದು |
ಪದೆಪದೆಗೆ ರೋಗಗಳು ಬೆನ್ನಟ್ಟವು |
ಉದಯಾಸ್ತಮಾನಗಳೆಂಬ ಭಯ ಸುಳಿಯದು |
ಪದಮನಾಭನ ಕೃಪೆಯ ಪಡೆದ ದಾಸರಿಗೆ ೪
ಬಾರವು ಭಯಗಳು ಬಂದರೂ ನಿಲ್ಲವು |
ಹಾರಿ ಹೋಗುವುವು ದಶ ದಿಕ್ಕುಗಳಿಗೆ |
ಘೋರ ದುರಿತಾರಿ ಶ್ರೀ ವಿಜಯವಿಠ್ಠಲನಂಘ್ರಿ |
ಸೇರಿದ ಜನರಿಗೆ ಇನಿತು ಭಯವುಂಟೆ೫

೫೦೮
ಎಲ್ಲಿ ಸುವರಗಳು ಇಲ್ಲದಿದ್ದರೆ ಇವ |
ನಲ್ಲದೆ ಮತ್ತಾರಾ |
ವಲ್ಲಿ ಕಾಣದೆ ಪೋದೆ ಪ
ಸಾರುವ ಶರೀರ ಧರಿಸಿ ಬಾಳಿದ ಮಹಾ |
ಭಾರವಾಗಿದ್ದ ಪಾಷಾಣವ ಪೊತ್ತವ |
ಗೊರುವ ನೆಲನಂದು ಕಾಷ್ಟದಿಂದಲಿ ಬಂದ |
ಹಾರುವನಾಗಿ ತಿರದುಂಡು ಕುಲಧರ್ಮ |
ಮೀರಿ ನಡೆದವ ಉಪವಾಸದವನಿಂದ |
ಊರ ಎಂಜಲಿಗೆ ಹೇಸದೆ ಓಡಾಡಿದವ |
ನಾರಿಯರ ವ್ರತ ಕೆಡಿಸಿ ರಾವುತನಾಗಿ |
ಹಾರಾಡಿವನು ಇವ ಹಲವು ಕಾಯ |
ಆರಿಂದ ಜನಿತನಿವ ನೋಡಲಾಗಿ |
ಧಾರುಣಿಯೊಳಗಿದ್ದವ ಸರ್ವರನ್ನ |
ಮೀರಿ ನಡೆತಲಿದ್ದವ ಇವಗೆ ಮೆಚ್ಚಿ |
ಧಾರಿ ಎಂದ ನಿನ್ನ ಮಗಳೆ ಬೇಕೆಂದವ ೧
ಬಿರಿಗಣ್ಣೆನವನಿವ ಆವಾವ ಕಾಲಕ್ಕೆ |
ಶಿರವಾಗಿ ಕೊಂಡಿಪ್ಪ ಶೀಲ ಸ್ವಭಾವದಿ |
ಕೊರಳ ತಿರುಹಲಾರ ಕರುಳ ಮಾಲೆಯುವ |
ಪರರ ಬಾಗಿಲ ಕಾವರಾಜ್ಯವಿಲ್ಲದವ |
ಸುರರ ಕೋತಿಯ ಮಾಡಿ ಕುಣೆಸಾಡಿದವನಿವ |
ಕರಡಿಯ ಮಗಳನ್ನು ಕೂಡಿದವನಿವ
ದಿಗಂಬರನಾಗಿ ಚರಿಸಿದೆನೆಂದು ಕೋಪದಿಂದ |
ಕರವಾಳ ಹಸ್ತದವ ||
ಪರಾಕ್ರಮ ಉರಗನ್ನ ಮೇಲಿದ್ದವ ಇವನ ಖೂನ |
ಅರಿಯನು ದಾವದಾವ | ಭೇದವನಿಕ್ಕಿ |
ತಿರುಗಿಸುವನು ಲೋಕವ ವಂಚಕನಿಗೆ |
ಪರಮ ಪ್ರೀತಿಯಿಂದ ಕೊಟ್ಟದನೆಣಿಸುವ ೨
ತನ್ನ ಜಾತಿಗಳನ್ನು ನುಂಗುವನವನಿವ |
ಬೆನ್ನ ಮೇಲಿನ ಒಂದೆ ಬುಗುಟಿ ಪಲ್ಲಿನ ತುದಿ |
ಮಣ್ಣು ತೋರುವನಿವ ವಿಕಾರ ಮೊಗದವ |
ಕಣ್ಣು ಚುಚ್ಚಿದ ಒಬ್ಬ ಹಾರವನ್ನು ನೋಡಿ |
ಹೆಣ್ಣಿಗಭಯವಿತ್ತು ಕಾದಿ ಸೋತವನಿವ |
ರಣ್ಯ ವಾಗನಿವ ರಣದೊಳೋಡಿದನಿವ |
ಅನ್ಯಾಯ ಪೇಳಿದ ನಂಬಿದವರಿಗೆ |
ಮುನ್ನೆ ಕುದುರಿಯೇರಿದಾ ಇವನು ತಾನೆ |
ಅನಂತ ಮಾಯಮೋದಾ ಎಂಥವರಲ್ಲಿ |
ಚನ್ನಾಗಿ ತನ್ನ ಪಾದ ಇಟ್ಟು ಇದ್ದು |
ಕಣ್ಣಿಗೆ ಪೊಳಿಯೆ ಖೇಡ ಬಡಿಸವಂಥ |
ಬಣ್ಣಾಣಿಗಾರನು ಬಂದೆಲ್ಲಿ ದೊರಕಿದಾ ೩
ಮೀಸಿ ಕಟ್ಟಿಸಿಕೊಂಡಿವನೀವ ಪ್ರಳಯಾದಿ |
ದ್ವೇಷವನಿಕ್ಕಿದ ದೇವದಾನವರಿಗೆ |
ಏಸು ದಿವಸವಾಗೆ ಅದೋ ದೃಷ್ಠಾಯವನಿವ |
ಭೀಷನಣದನಿವ ಭಿಕ್ಷೆ ಪಾತ್ರಿಯವ |
ಮೋಸ ಮಾಡಿದ ತನ್ನ ಸೇರಿದವನ ಶರಾಸವ
ಬಿಗಿಯನೆ ಮುರದು ಬಿಟ್ಟವನಿವ |
ಕೂಸಾಗಿ ಕ್ರೂರದ ಕೊಂಡ ಲಜ್ಜೆಗೇಡಿ |
ಘಾಸೆತನಕೆ ಶೂರನು ಒಮ್ಮ್ಯಾದರು ||
ಲೇಸು ಒಬ್ಬರ ಬೇಡನು ದೊಡ್ಡವರುಪಹಾಸ
ಮಾಡುತಲಿಪ್ಪನು ಇವನು ಹೆಣ್ಣು |
ವೇಷ ಧರಿಸಿಕೊಂಬನು ಕೇವಲ ಅವ |
ಕಾಶ ಯಿಲ್ಲದ ಸ್ಥಾನದಲ್ಲಿ ವೊಂದಿಪ್ಪನು ೪
ದೃಷ್ಟಿ ಮುಚ್ಚದಿಪ್ಪನವನಿವ ಆವಾಗ |
ಬೆಟ್ಟವೆ ಗತಿ ಎಂದು ಸೇರಿಕೊಂಡವನಿವ |
ದಿಟ್ಟ ಕಠೀಣ ಕಾಯದವನಿವ ಎದುರಿಗೆ |
ಎಷ್ಟಗಲ ಬಾಯದೆರೆದಿಪ್ಪ ಪಾದದ |
ಬಟ್ಟಿನಿಂದಲಿ ನೀರು ಸುರಿಸುವ ಬಗೆ ಉಂಟು |
ಕುಟ್ಟಿ ಮಾತೆಯ ಶಿರ ಕೆಡಹಿದನಿವ ಜಡೆ |
ಗಟ್ಟಿಪ್ಪ ಚೋರನಾಯಕ ಮೌನಪ್ರಾಂತಕ್ಕೆ |
ದುಷ್ಟನೆನಸಿ ಮೆರೆವ ಹತ್ತದೆಂದು ||
ಅಟ್ಟಿಬಿಟ್ಟರೆ ಬರುವ ತನ್ನೆಲ್ಲಿಗೆ |
ಕೆಟ್ಟವರನ ಕರೆವ ಉತ್ತಮರನ್ನು |
ಬಿಟ್ಟು ನೀಚರ ಪೊರೆವ ಅವಸರ ಬರಲು
ಪಟ್ಟದ ರಾಣಿಗೆ ಪೇಳದೆ ಜವಾ | ೫
ಜಲದೊಳಗಾಡುವನಿವ ಹೊರೆ ಹೊತ್ತು |
ಕಲೆಪರಟಿಯಾಗಿ ತಿರುಗುವನಿವ ಮೂಗಿಲ್ಲಿ |
ಳಿದು ಬಂದವನಿವ ಗೊಗ್ಗರ ಧ್ವನಿಯವ |
ತಲುವರಿ ಇವ ತಾನೆ ಶಿಷ್ಯಗೆ ವಿದ್ಯವ |
ಕಲಿಸಿ ಶ್ಯಾಪವ ಕೊಟ್ಟನವನಿವ ವೈರತ್ವ |
ಬಳಸದವನ ಮೇಲೆ ಕಲ್ಲು ಹಾಕಿಸಿದವ |
ಬಲು ಭಂಡುಗೋವಳ ಅನ ಬರದದು ಬಿಟ್ಟು |
ಕಲಿಯಾಗಿ ಓಡಾಡಿದ |
ಹೆರರಿಗಾಗಿ ಸ್ತಳ ದ್ರವ್ಯವ ಮಾಡಿದಾ ದಾನವರಿಂದ |
ಬಲವಾವನು ಬೇಡಿದಾ ಬೊಮ್ಮಾಂಡದ |
ಒಳಗೆ ಹೊರಗೆ ಕಾಡಿದಾ |
ಬಹು ಠಕ್ಕನು |
ತಿಳಿದು ತಿಳಿದು ಈರ್ವರಿಗೆಯಲ್ಲಿ ನೋಡಿದಾ ೬
ಸವಿ ನೋಡದದರ ರೂಪನಾದವನಿವ |
ಅವಯವಂಗಳೆಲ್ಲ ಮುದುರಿಕೊಂಡಿಪ್ಪಾನಿವ |
ಅವನಿಗೋಡಿ ಪೋದನಿವ ಮೃಗವಲ್ಲ ಮಾ |
ನವನಲ್ಲ ವದ್ಭೂತನಾಗಿ ತೋರುವನಿವ |
ಬವರಿಗಾದವನಿವ ತನ್ನ ಕಾಲಕೆ ತಪ್ಪ |
ಭವನವಿಲ್ಲದೆ ದಿನ ಕಳೆದವ ಯಾಗದ |
ನ್ನವನುಂಡು ನಾನಾ ಶಸ್ತ್ರವನ್ನು ನುಂಗಿದವನಿವ ||
ಹವಗಾಡಿಗ ನಿಸ್ಸಂಗ ಉದರದಲ್ಲಿ
ಯುವತಿ ಧರಿಸಿದ ಸಂಗಾ ಹಾ |
ರುವ ಪಕ್ಕಿ ದಿವಸ ದಿವಸ ತುರುಗಾನಾಗಿಪ್ಪದು |
ಅವಧೂತ ಮಾರ್ಗ ತುಂಗಾ |
ಪರ್ವತವನು |
ಲವಕಾಲಬಿಡದೆ ಬಾಯಲಿ ಕಚ್ಚಿದ ರಂಗಾ ೭
ಮಾರಧ್ವಜನನವತಾರ ತಾಳಿದನಿವ |
ನೀರೋಳಗಡಿಗಿಪ್ಪ ಎರಡು ಭಾಗಗಲ್ಲಿ |
ಕೋರೆಗಳದ್ದಿ ಮಸದು ಮತ್ಸರಿಸುತಿಪ್ಪ |
ಚೀರಿ ಕೂಗುವ ಮಹಾ ಬೊಮ್ಮಾಂಡವಡದಂತೆ |
ಮೂರಡಿಯೊಳಗೆ ತ್ರಿಲೋಕವನಿಟ್ಟವ |
ಬೇರು ಕಡುವನಂತೆ ಕೊಡಲಿಕಾರನಿವ |
ಆರೋಗಣಿಗೆ ಶಬರಿಯ ಹಣ್ಣು ಮೆದ್ದವ |
ಜಾರ ಬುದ್ಧ ಉದ್ದಂಡಾ ಏಕನು ಇವ ||
ಪಾರ ಪ್ರಾಣವನು ಕೊಂಡ ಬಹು ಕಡೆ |
ಬೀರಿದನ್ನವ ಕೈಕೊಂಡಾ ಒಂದು ತುತ್ತು |
ಆರಗೀಯದಲೆ ಉಂಡಾ ಇವನನ್ನು |
ಹಾರೈಸಿದವರಿಗೆ ಏನು ಲಕ್ಷ ಹೆಚ್ಚಳ ಕಂಡಾ ೮
ಉದಕ ಬಿಟ್ಟರೆ ಬದುಕಲಾರದವನಿವ |
ಎದೆಗಟ್ಟಿಯವನಲ್ಲಿ ಮುಟ್ಟಿ ನೋಡಿದರೆ |
ಪೊದೆ ಪೊದರಿನೊಳು ಸೇರಿ ಕೊಂಡವನಿವ |
ಎದುರಿಗೆ ಒಬ್ಬರ ಬರಗೊಡದವ ತನ್ನ |
ಪದದ ಕೆಳಗೆ ಕೊಟ್ಟವನ ಇಟ್ಟವನಿವ |
ಮದಕಾವ ಮಾಡಿ ತನ್ನೊಳು ತಾನೆ ಸೋತವ |
ಸುದತಿಯುಳಟ್ಟಿದ ಪಾರ್ಥಗಾಳಾದ |
ಚದುರ ಕ್ರೂರರಿಗೆ ಕ್ರೂರಾ ನಿರಂತರ |
ಉದಧಿ ಎಂಬೊದೆ ಮಂದಿರಾ ಇವಗೆ ನೋಡು |
ಬದರಿ ಗಿಡವೆ ಆಸರಾ ಏನೆಂಬೆನೊ |
ಕದರು ಮೋರಿಯೆ ಶೃಂಗಾರ ತನ್ನಯ ಗುಣ |
ಮೊದಲಿದೆ ಕಡೆ ಎಂದು ಆರಾರಿಗೆ ತೋರಾ ೯
ಚಪಲಾಕ್ಷದವನಿವ ಚಲುವನೆಂತೆಂಬೆನೆ |
ವಿಪರೀತ ನಿದ್ರೆ ಮಾಡುವನಿವ ಕರೆದರೆ |
ಕುಪಿತವಾಗುವ ಕಿಡಿ ಉಗುಳುವನಿವ |
ಕಪಟದಲ್ಲಿ ಗಟ್ಟಿ ತಲೆ ಹೊಡಕ ರಾಮ |
ಕಪಿಯ ಮೋಸದಿಂದ ಕೆಡಹಿದ ಮಾವನ್ನ |
ನಿಪತನ ಗೈಸಿದ |
ದೋಷಕ್ಕೆ ಶಂಕಿಸಾ |
ತ್ರಿಪುರವ ಕೆಡಸಿದ ಹರಗೆ ಸಾಯುಕವಾಗಿ |
ಅಪಕಾರಿ ಝಗಳಗಂಟ ಒದಿಸಿಕೊಂಡ ||
ವಿಪುಳದೋಳೇನು ಒಂಟಾ ಉಚ್ಚರಿಸುವೆ |
ಕೃಪಣ ಜನರಿಗೆ ನೆಂಟಾಸನಕ್ಯಾದರ |
ಶಪತದಲ್ಲಿಗೆ ಪೊರವಂಟಾ ಉತ್ತಮರಿಂದ |
ಉಪದೇಶವಿಲ್ಲದ ಬಾಳುವ ಮಹಾತುಂಟಾ ೧೦
ಇವರೀರ್ವರಿಗೆ ಈಡೆ ತಪ್ಪಿಸಲು ಪದ್ಮ |
ಭವಗಳವಲ್ಲವು ನಿನ್ನ ಕುವರಿಗೆ |
ಸವಿಗಾರ ಇವನಲ್ಲದೆ ಮತ್ತಾವಾವಾ |
ವಿವರಿಪೆ ಎಂಥವರಕೆ ಅಂಥ ಕನ್ನಿಕೆ |
ಹವಣವಾಗಿದೆ ಸತ್ಯ ಸಂಕಲ್ಪವೆ ಸಿದ್ಧಾ |
ಶ್ರವಣಾದಿ ಇಂದ್ರಿಂಗಳಿಗಗೋಚರಾ |
ಸ್ಥವಿರ ಯೌವನ ಬಾಲ ಒಂದಾದರಿವನೆಲ್ಲಾ |
ನವನವ ಬಗೆ ಸುಕಾಯಾ || ಮೋಹನ್ನ ಯಾ |
ದವರಾಯಾ ಶಿರಿ ವಿಜಯವಿಠ್ಠಲ ಕೃಷ್ಣ |
ಶಿವಕುಲ್ಲ್ಯ ಪುರಿ ನಿಲಯಾ ಭಕ್ತರ ಪ್ರೀಯಾ |
ಭವದೂರ ಬಹುಳ ಮಾಯಾ ಜಗದ್ಗುರು |
ಪವನವತಾರ ಶ್ರೀ ಆನಂದ ಮುನಿಗೇಯಾ೧೧

೪೫೦
ಎಲ್ಲಿದ್ದರೇನು ಶ್ರೀ ಹರಿಗಲ್ಲದವನು ಪ
ನಿಲ್ಲದೆ ಜಪಿಸಿದರೆ ಸಲ್ಲುವನೆ ಸದ್ಗತಿಗೆ ಅ.ಪ
ಕಪ್ಪೆ ಕಮಲದ ಬಳಿಯೆ ತಪ್ಪದೆ ಅನುಗಾಲ |
ಇಪ್ಪುದೈ ಒಂದು ಅರೆ ಘಳಿಗೆ ಬಿಡದೆ ||
ಬಪ್ಪದಿಂದಲಿ ಅದರ ಪರಿಮಳದ ಸೊಬಗ ನೀ- |
ಕಪ್ಪೆ ವಾಸನೆಗೊಂಡು ಹರುಷಪಡಬಲ್ಲುದೆ ೧
ಹಾಲುಕೆಚ್ಚಲು ಬಳಿಯೆ ತೊಣಸಿ ಹತ್ತಿಕೊಂಡು |
ಕಾಲವನು ಕಳೆವ ಬಗೆ ಬಲ್ಲಿರೆಲ್ಲ ||
ವೇಳೆವೇಳೆಗೆ ಹಸುವ ಕರೆದುಂಬ ನರನಂತೆ |
ಕೀಳು ತೊಣಸಿಯು ಉಂಡು ಹರುಷಪಡಬಲ್ಲ್ಲುದೆ೨
ತುಳಸಿ ಸಾನ್ನಿಧ್ಯದಲಿ ನೀರುಳ್ಳಿಯನು ಹಾಕಿ |
ಹೊಲಸು ಹೋಗ್ವುದೆ ಹಲವು ಕಾಲಿದ್ದರೆ ||
ತಿಳಿವಳಿಕೆ ಇಲ್ಲದವ ಸಿರಿ ವಿಜಯವಿಠ್ಠಲನ
ಬಳಿಯಲಿದ್ದರೇನು ದೂರಿದ್ದರೇನು ೩

೩೭೦
ಎಲ್ಲೊ ಎಲ್ಲೊ ಎನ್ನ ಸಾಲವೆತ್ತದೊ |
ನಿಲ್ಲೊ ನಿಲ್ಲೊ ನಿನ್ನ ಕಂಡ ಮ್ಯಾಲಕೆ ಬಿಡೆ ಪ
ಮೀನ ನಡೆದ ಹೆಜ್ಜೆಗಳು ಕಾಣದಂತೆ ಪೋಗಿ ನಡಗಿದೆ |
ಬೆಟ್ಟದಡಿಯ ಅಂದು ಒಡನೆ ಮಣ್ಣುಕಚ್ಚಿ ಬಾಯಿದೆರದು ಆ |
ರ್ಭಟಿಸಿದರೆ ನಿನ್ನ ಪೋಗಗೊಡುವೆವೇನೊ ೧
ಬಲು ಉದ್ದ ಬೆಳೆದರೆ ನ್ಯಾಯದಿ ಸೋಲಿಸಿ |
ಹೆಗ್ಗಲಿದಾ ಗಿಡದ ಬೇರು ಕಡಿಸುವೆನೊ |
ಕಲಕಾಲಾ ಉಪವಾಸ ಮಾಡಲು ನಮಗೇನು |
ಕಳವು ಹಾದರದಲ್ಲಿ ನಿಸ್ಸೀಮ ಪುರುಷನೇ ೨
ಮಾಣಿಯ ತೋರಿಸಿದರೆ ನಿನಗಾರುರಂಜೋರೋ |
ಪಾಣಿಯೊಳಗೆ ಖಡ್ಗ ಇದ್ದರಂಜೆ |
ಕಾಣಿ ಪಾದಿದ್ದರೆ ಹಿಂದೆ ಸುಮ್ಮನಿದ್ದೆ |
ಜಾಣತನವೇನೊ ವಿಜಯವಿಠಲ ಇಂದು ೩

೩೭೧
ಏಕಾಂತದಲಿ ಬಂದು ಮಾತು ನುಡಿದೆ ಶ್ರೀ |
ಕಾಂತ ನಿನಗಿದು ಸುಲಭವಾಗಿದೆ ನೋಡು ಪ
ಪರಧನವನಪಹರಿಸಿಕೊಂಡು ಬೆಳೆದು ಇದ್ದ |
ವರ ಮನೆಯೊಳಗಡಲೇತಕೆ |
ನಿರುತ ಎನ್ನ | ಹೃದಯವೆಂಬೊ ಗಾಡಾಂಧಕಾರ |
ಭರಿತವಾಗಿದೆ ಇಲ್ಲಿ ಅಡಗಬಾರದೆ ಬಂದು ೧
ಕೇವಲ ಹಕ್ಕಲದ ವನದೊಳು ಪೊಕ್ಕು ಬೇಟೆ |
ದೇವ ಆಡುವರೆ ನೀ ಹುಡಿಕಿ ಹುಡಿಕಿ|
ಕಾವಲಾರಣ್ಯ ಇಲ್ಲಿ ವಿಂಡೂ ತುಂಬಿದೆ |
ಸಾವಧಾನದಿ ಬೇಟೆ ಆಡಬಾರದೆ ಬಂದು ೨
ವೈಕುಂಠ ಮೂರು ಸ್ಥಾನದಲಿ ಮುಕ್ತರಿಗೆ |
ಬೇಕಾದದೀಯಾಬೇಕು ಕಡಿಮೆ ಇಲ್ಲಾ |
ನೀ ಕೇಳು ಎನ್ನಲ್ಲಿ ಸರಿ ಬಂದಂತೆಯಲ್ಲದೆ |
ವಾಕು ಪೇಳುವೆ ನಿಲ್ಲು ವಿಜಯವಿಠ್ಠಲ ಬಂದು೩

ಏಕಾದಶಿ ವ್ರತ ಶೋಧಿಸಿ ಸಾಧಿಸಿ :
೪೫೨
ಏಕಾದಶಿ ವ್ರತ ಶೋಧಿಸಿ ಸಾಧಿಸಿ ಏಕಭಕುತಿಯಿಂದ
ಮಾಡಿರೊ ಪಾಡಿರೊ |
ಲೋಕದೊಳಗೆ ಇದೆ ಬೀರುತಾ ಸಾರುತಾ ಶ್ರೀಕಾಂತನ ವೊಲಿಸಿ ಪ
ದಶಮಿ ಏಕಾದಶಿ ದ್ವಾದಶಿ ದಿನತ್ರಯ |
ವಸುಧಿಯೊಳಗೆ ಮಹಾವ್ರತವೆಂದು ತಿಳಿದು ತ್ರಿ |
ದಶರೆಲ್ಲ ಕೈ ಕೊಂಡು ಮಾಡಿದರಂದು ರಂ |
ಜಿಸುವ ಸತ್ಕರ್ಮದಲ್ಲಿ |
ಬಿಸಜನಾಭನು ಲಕುಮಿಗೆ ಪೇಳಿದ ವ್ರತ |
ಹಸನಾಗಿ ಬೊಮ್ಮಗೆ ಅರಹು ಮಾಡಲು ದೇವ |
ಋಷಿಗೆ ಅಜನು ಪೇಳಲಾ ಮುನಿ ಬೀರಿದಾ
ದಶ ದಿಕ್ಕಿನೊಳಗೊಂದು ೧
ಉದಯಕಾಲದೆಲೆದ್ದು ಸಂಸಾರಯಾತ್ರೆ ಎಂದು |
ಬದಿಯಲ್ಲಿದ್ದವರೆಲ್ಲ ಹರಿದಾಸ ದಾಸಿಯರು
ಹೃದಯದೊಳೀಪರಿ ಯೋಚಿಸಿ ಅಜ್ಞಾನ ಒಂದು ಕಡೆಗೆ ನೂಕಿ |
ಸದಮಲನಾಗಿ ಸ್ನಾನಾದಿಯ ಮಾಡಿ ಮ
ತ್ತದರ ತರುವಾಯ ದೇವತಾರ್ಚನೆ ಬಲು ವಿಧಿ ತಂತ್ರ ಸಾರದಿ
ಮುಗಿಸಿ ಶ್ರವಣ ಸಾರಾ ಹೃದಯರಿಂದಲಿ ಕೇಳಿ೨
ಸಂಧ್ಯಾವಂದನೆ ದಿವ್ಯ ಮಂಗಳಾರುತಿ
ಗೋವಿಂದನ ಚರಣಕೆ ಎತ್ತಿ ನಿರ್ಮಲ ಚಿತ್ತ |
ದಿಂದಲಿ ನಲಿವುತ ಹಿಗ್ಗಿ ಹಾರೈಸಿ ಆನಂದ ವಾರಿಧಿಯಲ್ಲಿ |
ಕುಂದದೆ ಸೂಸುತ ಗೆಳೆಯರ ಒಡಗೂಡಿ |
ತಂದು ಪುಷ್ಪಗಳಿಂದ ಮಂಟಪವ ವಿರಚಿಸಿ |
ನಂದನ ಕಂದ ಮುಕುಂದನ ಮಧ್ಯದಿ ಇಂದು ಸ್ಥಾಪಿಸಿ ತುತಿಸಿ ೩
ಜ್ಞಾನಿಗಳೊಡನೆ ಕುಳ್ಳಿದ್ದು ಸುಜ್ಞಾನಿಗಳು ಶುದ್ಧ ಗಾ|
ಯನ ಮಾಡುತ ಹರಿಯ ಮಹಿಮಯನ್ನು
ಆನನ ಕೂಗುತ ಹಾಡುತ ಪಾಡುತ |
ಧ್ಯಾನವ ಗೈವುತಲಿ |
ಮಾನಸ ಪೂಜೆಯೊಳಗೆ ರಚಿಸಿ ಮೇಲೆ
ಕಾಣಬಾರದಂತೆ ಪ್ರಜೆದೊಳಗೆ ತೋರಿ |
ನಾನೆಂಬೊ ಅಹಂಕಾರ ತೊರೆದು
ಮಗುವಿನಂತೆ ಶ್ರೀನಿವಾಸನ ನೆನಸಿ ೪
ತಾಳ ಝಾಗಟೆ ಮದ್ದಳೆ ತಂಬೂರಿ ಸಮ್ಮೇಳದಿಂದಲಿ
ಕೂಡಿ ಸೋಗು ವೈಯಾರದಿ |
ಕಾಲಲಿ ಗೆಜ್ಜೆಯ ಕಟ್ಟಿ |
ವಲಯಾಕಾರ |
ಮೇಲು ಚಪ್ಪಳೆಯಿಂದ |
ಬಾಲವೃದ್ಧರು ನಿಂದು ಕುಣಿಕುಣಿದಾಡಿ ಹಿ |
ಯಾಲಲಿ ಹರಿಯ ಸಂಕೀರ್ತನೆ ಕೀರ್ತಿಸಿ |
ಸೋಲದೆ ಘನಸ್ವರ ಸ್ವರದಿಂದಲಿ ಕೂಗಿ ವಿ |
ಶಾಲ ಭಕುತಿ ಒಲಿಸಿ ೫
ಕಿರಿಬೆವರೊದಕ ಮೊಗದಿಂದಿಳಿಯಲು |
ಉರದಲಿ ಇದ್ದ ದೇವಗೆ ಅಭಿಷೇಚನೆ |
ಪರವಶವಾಗಿ ಮೈಮರೆದು ತಮ್ಮೊಳು ತಾವು |
ಕರದು ತರ್ಕೈಸುತಲಿ |
ಕಿರಿನಗೆಯಿಂದ ತೋಳುಗಳು ಅಲ್ಲಾಡಿಸಿ |
ಎರಡು ಭುಜವ ಚಪ್ಪರಿಸಿ ಏಕಾದಶಿ |
ದುರಿತ ರಾಸಿಗೆ ಪಾವಕನೆಂದು ಕೂಗಿ ಬೊಬ್ಬಿರಿದು ಬಿರಿದು ಸಾರಿ೬
ಮಧ್ಯ ಮಧ್ಯದಲಿ ಮಂಗಳಾರುತಿ ಎತ್ತಿ |
ಸದ್ವೈಷ್ಣವರುಗಳು ಹರಿ ಪರದೇವ
ಮಧ್ವರಾಯರೆ ಮೂರು ಲೋಕಕೆ ಗುರುಗಳು |
ಸಿದ್ಧಾಂತ ಮುನಿ ಸಮ್ಮತಾ |
ಈ ಧರೆಯೊಳಗಿದನೆ ಮಾಡದ ನರ ಮದ್ಯ ಮಾಂಸ
ಮಲ ಮೂತ್ರವನು ಕ್ರಿಮಿವ ಮನವು |
ಮೆದ್ದಾ ಸದ್ದೋಷಿ ಚಂಡಾಲ ವೀರ್ಯಕ್ಕೆ ಬಿದ್ದವ ನಿಜವೆನ್ನಿ ೭
ಸಾಗರ ಮೊದಲಾದ ತೀರ್ಥಯಾತ್ರೆಯ ಫಲ |
ಭೂಗೋಳದೊಳಗುಳ್ಳ ದಾನ ಧರ್ಮದ ಫಲ |
ಆಗಮ ವೇದಾರ್ಥ ಓದಿ ಒಲಿಸಿದ ಫಲ |
ಯೋಗ ಮಾರ್ಗದ ಫಲವೊ |
ಭಾಗವತರ ಸಂಗಡ ಚತುರ್ದಶ ಝಾವ ಜಾಗರ
ಮಾಡಿದ ಮನುಜನ ಚರಣಕ್ಕೆ
ಬಾಗಿದವಗೆ ಇಂಥ ಫಲಪ್ರಾಪ್ತಿ ನಿರ್ದೋಷನಾಗುವ ವೈರಾಗ್ಯದಿ ೮
ನಿತ್ಯಾ ನೈಮಿತ್ಯಕ ಮಾಡು ಮಾಡದಲಿರು |
ತತ್ವ ವಿಚಾರದಿ ಸುಖಿಸಿ ದ್ವಾದಶಿ ದಿನ ಹೊತ್ತು
ಪೋಗಾಡದೆ ಸದಾಚಾರ
ಸ್ರ‍ಮತಿಯಂತೆ ಅತ್ಯಂತ ಪಂಡಿತ ಪಾವನ್ನ |
ಉತ್ತಮರೊಡಗೂಡಿ ಮೃಷ್ಟಾನ್ನ ಭುಂಜಿಸಿ |
ಮೃತ್ಯು ಜೈಸಿ ಸದ್ಗತಿಗೆ ಸತ್ಪಥಮಾಡು |
ಸತ್ಯ ಮೂರುತಿ ನಮ್ಮ ವಿಜಯವಿಠ್ಠಲರೇಯ |
ನಿತ್ಯ ಬಿಡದೆ ಕಾವಾ ೯

೫೦೯
ಏನಾದರೇನು ಮೋಕ್ಷವಿಲ್ಲ ಜ್ಞಾನವಿಲ್ಲದೆ ಪ
ವೇದ ಓದಿದರೇನು ಶಾಸ್ತ್ರ ನೋಡಿದರೇನು |
ಕಾದಿ ಕಾದಾಡಿ ಗೆದ್ದರೇನು | ಜ್ಞಾನವಿಲ್ಲದೆ ೧
ಕಾಶಿಗೆ ಹೋದರೇನು ಕಾನನ ಸೇರಿದರೇನು |
ಕಾಶಿ ಪೀತಾಂಬರ ಉಟ್ಟರೇನು, ಜ್ಞಾನವಿಲ್ಲದೆ ೨
ಜಪತಪ ಮಾಡಲೇನು, ಜಾಣತನ ಮೆರೆದರೇನು |
ವಿಜಯವಿಠಲನ ಸಾರಿದರೇನು, ಜ್ಞಾನವಿಲ್ಲದೆ ೩

೨೯೧
ಏನು ಕಾರಣ ಬಂದೆ ಗಂಗೆ |
ನಾನೇನು ಪುಣ್ಯವನು ಮಾಡಿದವನಲ್ಲ ಪ
ಕಾಸೀಪುರದಿಂದಲಿ ದೇಶ ನೋಡಲು ಬಂದ್ಯೋ |
ಬೀಸಿ ಬಿಸುಟುವಂಥ ಅಸ್ಥಿಗಾರದೆ ಒಂದ್ಯೋ |
ದಾಸರ ಮಹಿಮೆಯನು ನೋಡುವೆನೆಂದು ಬಂದ್ಯೋ |
ದೋಷವರ್ಜಿತ ವಾರಣಾಸಿ ಕಡಿಯದಲೆ |
ಲೇಸಾಗಿ ತಿಳಿಪುವದು ಭೀಷ್ಮನ ಜನನೀ ೧
ತಿಲನೀರು ಕುಡಿದು ಧರಿಸಲಾರದೆ ಬಂದ್ಯೋ |
ಮಲಜನರ ದೋಷವನು ಕಳೆವೆನೆಂದು ಬಂದ್ಯೋ |
ಕಲಿಯುಗಕೆ ಈ ಕೃಷ್ಣಾ ಅಧೀನಳೆಂದು ಬಂದ್ಯೋ |
ಸುಲಭ ತ್ರಿದದೇಶ್ವರಿ ಗಂಗೆ ತಡೆಯದಲೆ |
ನಿಲಜಾಲೆ ತಿಳಿಪುವದು ನೀರಜ ನಯನೇ ೨
ಸುರರ ನಿತ್ಯ ಕರ್ಮಗಳು ನೋಡಲಿ ಬಂದ್ಯೋ |
ಮಜ್ಜನವ ಮಾಡಿಸಿ ಎನ್ನ ಪೊರಿಯಲು ಬಂದ್ಯೋ |
ಮೂಜಗದೊಳು ಪೆಸೆರಾಗಿಪ್ಪೆನೆಂದು ಬಂದ್ಯೋ |
ನಿರ್ಜನ ತಟನಿ ನಿರ್ಗುಣಸಾಂದ್ರೆ ತಡಿಯದಲೆ |
ನಿಜವ ತಿಳುಪುವದು ವಿಜಯವಿಠ್ಠಲಸುತೆ ೩

೩೭೨
ಏನು ಕಾರಣ ಮತಿಯಿಲ್ಲ ಮನವೆ ಪ
ಹೀನಾಯವಾಡದಿರು ಪರರ ಗುಣಗಳ ಎಣಿಸಿ ಅ.ಪ
ಅವನ ಗೊಡವೆಯೇಕೆ ಅವನಾರು ನೀನಾರು |
ಅವನ ಪಾಪಕ್ಕೆ ನೀ ಭಾಗಾದಿಯೆ |
ಅವನುತ್ತಮನಾದಡವನೆ ಬದುಕಿದ ಕಾಣೊ
ಅವ ಪುಣ್ಯಮಾಡಿದರೆ ಅವನ ಕುಲ ಉದ್ಧಾರ ೧
ನಿನಗೆ ಕೊಡುವುದರೊಳಗೆ ಬೇಡ ಬಂದವನಲ್ಲ |
ನಿನಗೆ ಅವನಿಗೆ ಏನು ಸಂಬಂಧವೊ |
ಮನೆ ಒಡವೆ ವಸ್ತುಗಳ ಹಂಚಿಕೊಂಬುವುದಲ್ಲ |
ಕ್ಷಣ ಕ್ಷಣಕೆ ಕ್ಲೇಶವನು ಮಾಡಿಕೊಂಬುದು ಸಲ್ಲ ೨
ನಿನ್ನ ಗತಿ ಮಾರ್ಗಕ್ಕೆ ಅವನಡ್ಡ ಬಾಹನೆ |
ನಿನ್ನಿಂದ ಪರಲೋಕ ಅವನಿಗುಂಟೆ |
ನಿನ್ನೊಳಗೆ ನೀ ತಿಳಿದು ವಿಜಯವಿಠ್ಠಲನ್ನ |
ಸನ್ನುತಿಸಿ ಭವರೋಗ ಬನ್ನವನು ಕಳೆಯೊ ೩

(ಈ) ಶ್ರೀರಾಮ
೧೫೦
ಏನು ಕಾರಣ ಮಲಗಿದಿಯೊ
ಶ್ರೀನಾಥ ರಘುಕುಲೋದ್ಭವ ದರ್ಭಶಯನಾ ಪ
ಸೀತೆ ಪೋದಳು ಎಂದು ಚಿಂತೆಯಲಿ ಮಲಗಿದೆಯೊ
ಸೇತುಗಟ್ಟುವದು ಅಸಾಧ್ಯವೆಂದು ಮಲಗಿದೆಯಾ
ಕೋತಿಗಳ ಕೈಯಲೆ ರಣವಾಗದೆಂದು ಮಲಗಿದೆಯಾ
ಪಾತಕ ಹರದೈತ್ಯ ಭಂಜಾ ತಿಳುಪುವದು
ಜ್ಯೋತಿರ್ಮಯರೂಪ ದರ್ಭಶಯನಾ೧
ವನವಾಸ ತಿರಗಲಾರೆನೆಂದು ಮಲಗಿದೆಯೊ
ವನಧೀಶ ಮಾರ್ಗವನು ಕೊಡನೆಂದು ಮಲಗಿದೆಯೊ
ದನುಜ ಬಲ್ಲಿದನೆಂಬೊ ವ್ಯಾಕುಲದಿ ಮಲಗಿದೆಯೊ
ಜನನ ಮರಣರಹಿತ ರಾಮ ತಿಳುಹುವದು
ಹನುಮ ವಂದಿತ ಪಾದ ಶ್ರೀದರ್ಭಶಯನಾ ೨
ಅನಿಲಾರಿ ಅಹರಗೆ ಕರುಣಿಸಿ ಮಲಗಿದೆಯೊ
ವನಜ ಸಂಭವಗೆ ನೀ ಒಲಿಯ ಬಂದು ಮಲಗಿದಿಯೊ
ಮುನಿಗಳು ಸ್ತೋತ್ರವ ಮಾಡಲು ಹಿಗ್ಗಿ ಮಲಗಿದೆಯೊ
ಜನನಾಥ ಜಾನಕಿಕಾಂತ ತಿಳುಪುವದು
ಎನಗೊಲಿದ ವಿಜಯವಿಠ್ಠಲ ದರ್ಭಶಯನಾ ೩

೨೨೧
ಏನು ಪವಮಾನಿ | ಏನು ಪವಮಾನಿ |
ಈ ನಿಧಿಯಲಿ ಬಂದು ನಿಂದ ಕಾರಣ |
ಮಾಣದೆ ಪೇಳು ನಿ | ದಾನದಿಂದಲಿ |
ಮಾನಸದಲಿ | ದಾನವಾರಿಯ |
ಧ್ಯಾನ ಮಾಡುವ ಜಾಣ ಜಗದ ಪ್ರಾಣ ಸುಂದರಾ |
ನಾನಾ ಮಹಿಮಾ ಗುರುವೆ ಪ

ಕೇಸರಿನಂದನ ಪಾಶವಿನಾಶ ನಿರ್ದೋಷ |
ದಾಸರನ ಪಾಲಿಸುವ ವಾನರೇಶನೆ ಭಾರತೀಶ ಈಶಾ |
ಶೇಷಾದ್ಯರಿಗುಪದೇಶದ ಕರ್ತಾ |
ಲೇಸು ಸದ್ಗುಣಗಣ ಕೋಶ
ಸರಸಿಜಾಸನ ಪದವಿಗೆ ಸೇರುವಾತಾ ||
ದೇಶದೊಳು ಬಲುಭೂಷಣ ಪಾಕಶಾಸನ ಶರದ ಶರೀರ |
ದಾಶರಥಿ ಪಾದಾಸರವಿಡಿ |
ದೇಸು ಬಗೆಯಲಿ |
ಮೋಸ ಪೋಗದಾಯಾಸಬಡದಲೆ |
ಮೀಸಲ ಮನ ಸೂಸು ವನರಾಸಿ ಲಂಘಿಸಿ ೧
ವಾಸವವಿನುತಾ ನೀನಾ | ಕಾಶಕ್ಕೆ ಅಡರಿ
ಪರಿಸರ ಪೋಗಲಾಸಮಯದಲ್ಲಿ |
ದ್ವೇಷವನು ತಾಳಿ ರಕ್ಕಸಿ ಬರಲವಳ ಸೀಳಿ |
ಮೈನಾಕೆಂಬ ಶೈಲ ಮನ್ನಿಸಿ
ಭಾಸುರ ಲಂಕೆ | ಯ ಶೋಧಿಸಿದನಾ ಗೋ |
ಸಾಸಿರವಿತ್ತು ಕೂಸಿನಂದದಲಿ ||
ಭಾಷಿಯನಾಡಿ ಪದ್ಮಾಸನಿಗೆ ಸಂ |
ತೋಷವ ಪೇಳದ
ಪ್ರಕಾಶಿತ ದುಂಗುರ ಭೂಸುತೆಗೆ ಯಿತ್ತು
ರೋಷದಲ್ಲಿ ವನಸಮುದಾಯವ
ಸವರಿ ಫಲ ಸವಿದು ಖಳನ ನಗುತ |
ನಾಶಗೊಳಿಸಿದ ಸಮರ್ಥನೆ ೨
ಹಿಂದೆ ಪ್ರಳಯದಲ್ಲಿಂದಿರೇಶನು ಸುರ್ವೃಂದ ಉದರದೊಳು |
ಪೊಂದಿಟ್ಟುಕೊಂಡು ಆಗ |
ಅಂದು ನೀನೊಬ್ಬನೇ ಮಂದನಾಗದೆ ನಯದಿಂದಲಿ ಎಚ್ಚತ್ತು |
ಪೊಂದಿಕೊಂಡು ಇದ್ದೆ |
ಇಂದು ಕದನದೊಳು ಇಂದ್ರಜಿತನು ಕರದಿಂದ ಸೆಳೆದ ಶರ |
ದಿಂದಲಿ ಸಿಗಿಬಿದ್ದು |
ಬಂಧಿಸಿಕೊಂಡಂಜಿನಿಂದಂತೆ ಮೈದೆಂದಿಗಿಲ್ಲದಂತೆ ನಂದವ ತೋರಿದೆ
ಇಂದು ಮೌಳಿಯ ಪೊಂದಿದದಶ |
ಕಂಧರನ ಮೊಗ ಮುಂದೆ ಭಂಗಿಸಿ |
ಬಂದು ಗುದ್ದಿಲಿನೊದ್ದನು ಅವನಿರೆ |
ಮಂದಹಾಸದಲಿಂದ ನಗುತ ೩

ಪುರವನುರುಹಿ ಅಸುರರ ಸದೆದು ತೀ |
ವರದಿಂದ ಶರಧಿಯ ಮರುಳೆ ಹಾರಿ ಬಂ |
ದುರವಣಿಯಿಂದ ಶ್ರೀ |
ಹರಿ ಚರಣಕ್ಕೆರಗಿ ಪೊಡಮಟ್ಟು |
ಕರವನೆ ಮುಗಿದು |
ಗುರುತು ಚೂಡಾಮಣಿ ಇಡೆ ಮುಂದೆ ವಿವರಿಸಿದೆ | ರಿಪುಗಳಾ |
ಗರದ ವಿಸ್ತಾರ |
ಸುರರು ಭಾಪುರೆ ಎಂದಂಬರದಲಿವಾದ್ಯ |
ಬೆರೆದಲ್ಲಿ ಮೊರೆಯಾಗಿ ಅರಮರೆಯಿಲ್ಲದೆ |
ಕರಡಿ ವಾನರ ನೆರೆಸಿ ಗಿರಿಗಳ
ತರಿಸಿ ಮಾರ್ಗವಸರದಲಿ ವಿಸ್ತರಿಸಿ |
ಧುರದೊಳಗರಿಗಳಿಂದಲಿ ಮರಣವಾದವರನ ಎಬ್ಬಿಸಿ ೪
ಪಾತಾಳದೊಳು ಹತ್ತು ತಲೆಯವನಿರಲು ಕಾತುರದಿಂದ ಹೋ
ಮಾತುರಕಾರ್ಚಿಸೆ |
ಮಾತು ಮುಂಚದ ಮುನ್ನ ಭೀತಿ ಇಲ್ಲದೆ ಪೋಗಿ |
ಪಾತಕನವಧಾನ |
ಧಾತುಗೆಡಿಸಿದೆ |
ದಾತಗೆ ದಿವ್ಯವರೂಥವೆಂದೆನಿಸಿ ವಿ|
ಧೂತ ರಾವಣನ ವಿ |
ಪಾತನ ಗೈಸಿದೆ |
ಪ್ರೀತಿ ಬಡಿಸಿ ನಿಜಾರಾತಿ ವಿಭೀಷಣಗೆ ತಪ್ಪದೆ ಲಂಕಾ |
ನಾಥನ ಮಾಡಿ ನೀ |
ನೀತೆರದಲಿ ಸೇತುಪತಿ ಸಾಕೇತಪುರಿ
ರಘುನಾಥನ ಯಡೆ ನೀ ತೆಗೆದುಂಡೆ |
ಶ್ರೀ ತರುಣೇಶ ವಿಜಯವಿಠ್ಠಲನ ದೂತಾ ಹನುಮಾ ೫

೧೯
ಏನು ಪೇಳಲಿ ತೀರ್ಥಪತಿಯ ಮಹಿಮೆ
ಮಾನವರಿಗೆ ಯಿಲ್ಲಿ ಮುಕ್ತಿ ಏಳಲವಯ್ಯಾ ಪ
ಕಾಸಿಯೊಳು ಮರಣ ಮುಕ್ತಿಯೆಂದು ಪೇಳುವದು
ದೇಶದೊಳು ಪುಸಿಯಲ್ಲ ಸಿದ್ಧವೆನ್ನಿ
ಈಶನುಪದೇಶದಿಂದಲಿ ವಿಗತ ಜನನಾಗಿ
ಶ್ರೀ ಶಕ್ತಿ ವೇಣಿಮಾಧವನ ಸನ್ನಿಧಿ ಗೈಯ್ವಾ ೧
ನಿರುತ ವ್ಯಭಿಚಾರಿ ವಿಪ್ರನ ಕೆಡಿಸಿ ಕಾಸಿಯಲಿ
ಇರಲು ಕಾಲಾಖ್ಯ ಉರಗನು ಕಚ್ಚಲು
ಪರಮಭೀತಿಯಿಂದ ಅವಳ ವಸನವ ತಂದು
ವರ ತ್ರಿವೇಣಿಯೊಳಗೆ ತೊಯಿಸಲು ಗತಿಸಾರ್ದರು ೨
ಇಲ್ಲಿಗೆ ನಡೆತಂದು ಸ್ನಾನವಂದೆ ಮಾಡಲು
ನಿಲ್ಲದೆ ಸನ್ಮುಕ್ತಿ ಧರನಾಗುವಾ
ಬಲ್ಲಿದಾ ವಿಜಯವಿಠ್ಠಲವೇಣಿ ಮಾಧವನ
ಸಲ್ಲಲಿತ ಪಾದವನು ಕಾಂಬ ಪ್ರಾಣೇಂದ್ರಿಯದಲಿ ೩

ಏನು ಮರುಳಾದೆಮ್ಮ ಎಲೆ ಭಾರತೀ :

(ಒ) ಭಾರತೀ ದೇವಿ
೨೬೧
ಏನು ಮರುಳಾದೆಮ್ಮ ಯೆಲ ಭಾರತೀ |
ವಾನರ ಕುಲ ನಿಕರ ಶ್ರೇಷ್ಠನಾದವಗೆ ಪ
ಕಣ್ಣಿಲ್ಲದಂಜನೆಯ ಉದರದೊಳು ಜನಿಸಿ |
ನಿನ್ನ ತೊರೆದು ಬ್ರಹ್ಮಚಾರಿಯಾಗಿ ||
ಹಣ್ಣಿಗಾಗಿ ಹೋಗಿ ವನವ ಕಿತ್ತೀಡ್ಯಾಡಿ |
ಉಣ್ಣ ಕರದರೆ ಎಂಜಲೆಡೆವೈದ ಕಪಿಗೆ ೧
ಪುಟ್ಟಿದನು ಗುರುತಲ್ಪಕನ ವಂಶದಲಿ |
ನಟ್ಟಿರುಳೆ ಒಬ್ಬ ಅಸುರಿಯ ಕೂಡಿದಾ ||
ಹೊಟ್ಟೆಗಾಗಿ ಪೋಗಿ ಭಿಕ್ಷದನ್ನವನುಂಡ |
ಅಟ್ಟು ಹಾಕುವನಾದ ಕುಲವ ಕೊಂದವಗೆ ೨
ಮಂಡೆ ಬೋಳನಾಗಿ ಭೂಮಂಡಲ ಚರಿಸುವ |
ಕಂಡವರಾರು ಈತನ ಗುಣಗಳಾ ||
ಪುಂಡರೀಕಾಕ್ಷ ವಿಜಯವಿಠ್ಠಲನ್ನ |
ಕೊಂಡಾಡುತ ತಾ ಬೋರೆ ಗಿಡದ ಕೆಳಗಿಪ್ಪ ೩

೨೨೨
ಏನು ಸೇವಿಸಿದೆ ಗುರು ಯೆಲೊ ಮಾರುತಿ |
ಭಾನು ವಂಶೋತ್ತಮನೆ ನಿರುತ ಧಾರ್ಮಿಕನೆಂದು ಪ
ಪೋತತನದಲಿ ಸೇರಿ ಅರ್ಕಜನ ಕರೆತಂದು
ಮಾತಾಡಿಸಿ ಕೊಟ್ಟು ಮುದದಿ ಉದಧಿ |
ಭೀತಿ ಇಲ್ಲದೆ ಹಾರಿ ಲಂಕಾಪುರವ ದಹಿಸಿ |
ಸೀತೆ ವಾರ್ತೆಯ ತಂದು ಪೇಳಿದಕೆ ಸುಫಲಾ ೧
ಕೋತಿಗಳ ಕೂಡಿಕೊಂಡು ವನಧಿ ತೀರದಲಿಳಿದು
ಭೂತಳವ ತಿರುಗಿ ಪ್ರತಾಪದಿಂದ |
ಗೋತುರೋನ್ನತ ತಂದು ತಡಿಯದೆ ಪ್ರಖ್ಯಾತದಿ |
ಸೇತುವಿಯ ಕಟ್ಟಿ ಕುಣಿದಾಡಿದದುಕೇನು ಫಲಾ ೨
ಅಂದು ವಿಂಶತಿ ಹಸ್ತ ರಣದೊಳಗೆ ರಥವೇರಿ |
ಬಂದಿರಲು ನೋಡಿ ಈ ಧನುರ್ಧಾರಿಯಾ
ಸ್ಕಂದದ ಮೇಲೇರಿಸಿಕೊಂಡು ಗಗನಕೆ ಬೆಳೆದು
ನಿಂದು ಚಾಲ್ವರಿದು ಬೊಬ್ಬಿರಿದದುಕ್ಕೇನು ಫಲಾ ೩
ಒಂದೇ ಹಾರಿಕಿಯಲಿ ಜಿಗಿದು ಕುಪ್ಪಳಿಸಿ ನೀ |
ಗಂಧಮಾದನಗಿರಿಯ ಕಿತ್ತು ತಂದು |
ಅಂದದಲಿ ದೇವತತಿ ಕೊಂಡಾಡುತಿರೆ ಕಪಿ |
ವೃಂದವೆಬ್ಬಿಸಿ ಖಳರ ಮಡುಹಿದದುಕ್ಕೇನು ಫಲಾ ೪
ಅಪರಿಮಿತ ಉಪಕಾರ ಮಾಡಿದಲ್ಲದೆ ನಿನ್ನ |
ಉಪವೀತ ಕೌಪೀನ ಬಿಡಿಸಲಿಲ್ಲಾ |
ತಪಸಿವೇಷಿ ರಾಮ ವಿಜಯವಿಠ್ಠಲನೆ ಬಲು |ಕೃಪ ವನಧಿ ನಿಜವೆಂದು ತುತಿಸಿದದುಕ್ಕೇನು ಫಲಾ ೫

೨೦
ಏನೆಲವೊ ದೇವ ವೈಕುಂಠನಾಥಾ
ನೀ ನಾರಿ ವೇಷವನು ಧರಿಸಿದ ಬಗೆ ಪೇಳೋಪ
ದೈತ್ಯರುರುಬಿಗೆ ದೇವ ತತಿಗಳು ತಲ್ಲಣಿಸಿ
ಮಿತ್ರ ಭಾವದ ಅವರ ಕೂಡಲಿಟ್ಟು
ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು
ಮಿತ್ರವೇಷ ಧರಿಸಿ ಸುರರ ಸಲಹಿದಾ ಬಗೆಯೊ ೧
ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ ಕ
ರವನಿಡುವೆನೆಂದು ಬರಲಾಗಲೂ
ಅವನೀಶ ಭವಹರ ಕೇಶವ ನೀನೆ ಗತಿ ಎನಲೂ
ಯುವತಿ ವೇಷವಧರಿಸಿ ಶಿವನ ಸಲುಹಿದ ಬಗೆಯೊ೨
ಅಂದು ಮಾಡಿದ ಚರಿತೆ ಭಕ್ತಜನರು ಬಂದು
ಒಂದು ದಿನ ನೋಡಿದವರಲ್ಲವೆಂದೂ
ಇಂದು ಸತಿ ವೇಷವನು ಧರಿಸಿ ತೋರಿಸಿದೆಯೊ
ಪುರಂದರದಾಸರಿಗೆ ಒಲಿದ ವಿಜಯವಿಠ್ಠಲ ಚೆಲುವಾ ೩

೧೬೯
ಏಳು ಏಳು ಏಳು ಲೋಕದ ಒಡಿಯನೆ |
ಏಳು ಗೋವಳರಾಯ ಗೋಪೇರಿಗತಿ ಪ್ರಿಯಾ |
ಏಳು ಅಪ್ರಾಕೃತ ಕಾಯಾ ಸುರಮುನಿ ಗೇಯಾ |
ಏಳು ಗೋಪಾಲಕೃಷ್ಣ ಪ
ಪುರಂದರನ ದಿಶೆಯಲ್ಲಿ ಗರುಡಾಗ್ರಜನು ಬರಲು |
ಅರುಣವಾಯಿತು ಗಗನ | ಶರಧಿ ತೆರೆ ತಗ್ಗಿದವು
ಉರಗ ಪೆಡೆ ಪಸರಿಸಿದಾ | ಹರಿದು ಪೋಯಿತು | ಕಾಳ |
ಸುರ ವೈರಿಗಳು ಅಡಗಲು | ಅರಳಿದವು ಅರವಿಂದ |
ಪರಮ ಶೋಭನದಿ ಮಧುಕರಗಳು
ಝಂಕರಿಸಿ ಶುಕಪಿಕ ಮೃಗಾದಿ ಯೆ-|
ಚ್ಚರವಾಗೆ ಕಣ್ಣೆರಿಯೆ ಚರಣಾಯುಧನು ಕೂಗೆ |
ಕರುಣಾಳುಗಳ ದೇವನೆ ೧
ಸುರರು ದುಂದುಭಿ ಭೇರಿ ಮೊಳಗಿದವು | ಮೇರು ಪರ್ವತ
ಮೇರೆ ತಪ್ಪಿ ಬಂದಾ ರಥಸಹಿತ ಭಾಸ್ಕರನು ದಿಶದಿಶೆಗೆ ಕಿರಣಗಳ |
ಹರಹಿಕೊಳುತಾ | ಹರಿ ಗುರುವೆ ಪೇಳಲಳವೆ |
ತರುಣಿಯರು ಎದ್ದು ಕಸ್ತ್ತೂರಿಯನು
ಕಲಿಸಿ ಮಂದಿರದೊಳಗೆ ಎಳೆಬಾಳೆ |
ಕರವುಗಳು ಪದ್ದಿ ಕರ್ಪುರದ ಚಳವಳಿದು |
ಶೃಂಗರಿಸಿದರು ಅರವಿಂದನಾಭ ಚೆಲುವ ೨
ಪರಮ ಮಂಗಳವಾದ ದ್ವಾರ ದ್ವಾರಗಳಿಗೆ |
ವಿರಚಿಸಿತು ಕಳಿತೆ ತೋರಣ ಕನ್ನಡಿ ಮಲಕು |
ಭರದಿಂದಲಿ ಬಿಗಿದು ಮೇಲ್ಕಟ್ಟು ಚಿತ್ತರದ ಗೊಂಬೆ |
ಪರಿಚಾರವು ವಪ್ಪಲು | ಹಿರಿದು ಹೂವಿನ ಮಾಲೆ ಕಟ್ಟಿದವು |
ಪರಿಮಳದ ದ್ರವ್ಯ ನಿಲುವಾದ ದರ್ಪಣ ಯಣ್ಣಿ |
ಮಕರವು ತುರ ತೊ
ಗರು ಪೊಗಳು ಕಾದೋದಕವು ತಂದಿರೆ | ಅರಸಾದ ಆದಿದೈವ೩
ಪರಮ ಭಾಗವತರು ಬತ್ತೀಸರಾಗದಲಿ |
ಸ್ವರವೆತ್ತಿ ಪಾಡುತಿದೆ | ಸರಿಗಮಪದನಿಸಾ |
ಸ್ವರಮಂಡಲಾ ತಾಳ ತಂಬೂರಿ ಕಿನ್ನುರಿಗ ಸರವೇಣಿ ನಾನಾ ಗೀತ |
ಸರಸ ವಿಲಾಸದಲಿ ಸೂತ ಮಾಘದ
ಬಂದಿ ಪರಿ ಪರಿ ಕೊಂಡಾಡುತಿರಲು |
ವಾರನಾರಿಯರು ಮದ್ದಳೆ ತಾಳ ಗತಿಯಲ್ಲಿ
ಕುಣಿಯುತಿದೆ ಸುರನಿಕರ ಪರಿಪಾಲಿಕ ೪
ಸುರ ನರೋರಗ ಯಕ್ಷಗರುಡ ಸಿದ್ಧ ವಿದ್ಯಾ |
ಧರ ಸಾಧ್ಯ ಗಂಧರ್ವ ಚಾರಣ ಕಿನ್ನರ ಸಾಮ |
ಸ್ತರ ಸಹಿತ ಪರಮೇಷ್ಟಿ ವಾಲಗಕೆ ಬಂದು ಎ-
ದುರು ನಿಂದು ತುತಿಪನಾಹಕೊ ಭರಿತಾಭರಣವಿಟ್ಟು |
ಸರಸ್ವತಿ ಭಾರತಿ ಗಿರಿಜೆ ಸುರನಾರಿಯರು ತಮ್ಮ |
ಕರದಿಂದಲಿ ಹೊನ್ನ ಹರಿವಾಣ |
ದಾರುತಿಯ ಪಿಡಿದು ನಿಂದೈಧಾರೆ ಶರಣಾಗತ ವತ್ಸಲಾ ೫
ಕರಿ ತುರಗ ರಥಪಾಯದಳವು ದಟ್ಟಡಿಯಾಗಿ |
ನೆರದಿದೆ ಸಭೆಯಲಿ ಸಪ್ತಾಂಗದವರುಂಟು |
ಅರಿ ಶಂಖಗದಾ ಪದುಮಖೇಟ ನಂದನ ಮುಸಲಾ |
ಪರಶು ನೇಗಲ ಸುಶಕ್ತಿ ಪರಿಪರಿಯ ದಿವ್ಯಾಯುಧವ ತಮತಮಗೆ |
ಧರಿಸಿ ಸಂತೋಷದಲಿ ದಾತಾರ ನಿನ್ನಯ ಬರುವ ಹಾರೈಸಿ |
ವೈರಿಗಳು ನೋಡುತಲಿ ಹಾರೆ ಕುರುವಂಶ ವಿನಾಶಕಾ ೬
ಸುರಿಗೆ ಪಾರಿಜಾತದ ಮಲ್ಲಿಗೆ |
ಸುರವನ್ನೆ ಬಕುಳ ಪಾರಿ ಭದ್ರ ಸಂಪಿಗೆ |
ಮರುಗ ಮಲ್ಲಿ ಜಾಜಿ ಕಾಂಜಿ ಶಾವಂತಿಗೆ ಕರವೀರ ನಂದಾವರ್ತ |
ಅರಗುಂದ ಕುಂತಾತಸಿದವನ ಮುಡಿವಾಳ |
ಈರವಂತಿಕೆ ಕೇತಿಕಾ ಸರ್ವ ಕುಸುಮಗಳಿಗೆ |
ಶಿರೋರತನವಾದ ಎಳದುಳಸಿ ಹಾರಗಳಿಗೆ |
ಅರಿಗಳ ಮಸ್ತಕಾಂಕುಶಾ೭

ಚರಣದಂದಿಗೆ ಪೆಂಡೆ ಪೊಂಗೆಜ್ಜಿ ಮಣಿಮಯದ |
ಸರಪಳಿಯು ತೊಡೆದು ಬಿರುದಾವಳಿಗಳು ಪೀತಾಂ |
ಬರದ ನೀಲಿ ಸೆರಗು ಮುಂಗಾಲಿಗಿಳಿಯ ವಿಚಿತ್ರವಾದ
ಕಾಂಚಿ ದಾಮಾ |
ಸರಿಗೆ ನ್ಯಾವಳಹಾರ ತುಳಸಿ ಕೌಸ್ತಭ ಪದಕ |
ಸಿರಿವತ್ಸ ಕನಕಕುಂಡಲ ನೊಸಲ ಮೃಗನಾಭಿ |
ಕರದಾಭೂಷ ಫಣಿಮಕುಟ ಧರಿಪಾ ದೇವಿ ನಿನ್ನ |
ದರುಶನ ಭಕ್ತರಿಗೆ ಲಾಭಾ ೮
ಸಿರಿ ಏಳಲೀಸಳೊ ಹತ್ತವತಾರವನು ಧರಿಸಿದ ದಣವಿಕಿಯ |
ಕರಿ ಕಾಯಲಿ ಬಂದ ಭರದ ಉನ್ನತವು |
ರಣದೊಳಗೆ ಪಾರ್ಥನ್ನ ರಥದ ತುರುಗವ ನಡಿಸಿದ ಲಜ್ಜೆಯ |
ಸುರತ ಕ್ರೀಡೆಯಲಿ ಸ್ತ್ರೀಯರೋಳಾದಂಜಿಕಿಯೊ |
ವರವ ಕೊಡು ಎಂದು ಬಂದು ಮಮ ಭಕ್ತರ ಭಯವೊ |
ಸಿರಿ ವಿಜಯವಿಠ್ಠಲ ಉಡುಪಿಯ ಕೃಷ್ಣ ನಿನಗೆ |
ದರಿಲ್ಲವೆಂಬೊ ಘನವೊ೯

೧೭೦
ಏಳು ಬೆಳಗಾಯಿತು ಯದುಕುಲೋತ್ತಮ |
ವಾಲಗಕೆ ಪರಮೇಷ್ಠಿ ಹರ ಸುರಪಾಲಕರು ಪ
ಹರ ಸುರಪಾಲಕರು ಬಂದರು ತಮ್ಮಯ
ಆಳುಸಹಿತದಲಿ ರಂಗಾಅ.ಪ.
ವೇದವನು ತಮ ಕದ್ದು ಒಯ್ದನು |
ಆಧಾರಾಗದೆ ಅದ್ರಿ ಮುಣಗಿತು ||
ಮೇದಿನಿಯ ಬಳಕೊಂಡು ಹೋದನು |
ಅದಿತಿಯ ಸುತನು ಭಾದಿಗಾಗದಲೆ ಬಂದು ಸಕಲರು ||
ಆದರಣೆಯಿಂದ ಕೈಯ ಮುಗಿದು ನೀ |
ದಯಾನಿಧಿ ಎಂದು ಹೊರಗೆ ಕಾದು ಐದಾರೆ ರಂಗ ೧
ಬಲಿಯ ಅಟ್ಟುಳಿ ಹೆಚ್ಚಿತು ವೆ
ಗ್ಗಳಿಸಿದರು ಛತ್ರಿಯರು ಈರೈದು ತಲೆಯವನು ||
ಬಲವಂತನಾದನು ಆರಿಗೊಶವಿಲ್ಲ |
ಇಳೆಗೆ ಭಾರವು ತೂಕವಾಯಿತು ಕಳ-|
ವಳಗೊಳಲಾರೆವೆನುತಲಿ ಅಳುಕಿ ಭಯದಲಿ |
ನಿಮ್ಮ ಬಾಗಿಲ ಬಳಿಯ ಸಾರಿದರೊ ರಂಗಾ೨
ಮೂರು ಪುರದವರೀಗ ನಮ್ಮನ್ನ ಮೀರಿದರು |
ಕಲಿಪುರುಷ ಸುಜನರ ಮೇರೆದಪ್ಪಿಸಿ ನಡೆಸಿ ||
ಬಲು ವಿಕಾರ ಮಾಡಿದನು ಈ ರೀತಿ ಶ್ರಮವೆಂದು |
ಪೇಳಲು ಮಾರಪಿತ ಸಿರಿ ವಿಜಯ- ||
ವಿಠ್ಠಲ ಕಾರಣಾರ್ಧವ ಕಳೆದು |
ಮುಂದೆ ಉದ್ಧಾರ ಮಾಡಿದನು ೩

೩೩೯
ಒಂದಾನೊಂದು ದಿವಸದಲ್ಲಿ ಗುರುವ್ಯಾಸರಾಯರು | ಪ
ಚಂದದಿಂ ದ್ವಾದಶಿ ಸಾಧನೆ ಬರಲು
ಅಂದದಿಂದ ಪುರಂದರದಾಸರಿ |
ಗಿಂದು ಭೋಜನಕ್ಕೆ ಬನ್ನಿರೆಂದು ಕರೆದರೂ ಅ.ಪ
ಪೇಳಿತೆಂದು ದಾಸರು ಪೋಗಿ ತಾವು ನಿರ್ಮಲ ಸ್ನಾನ
ಜಪಮಂತ್ರ ಹರಿಪೂಜೆಯನೆ ಮಾಡಿ ||
ಧಳಥಳಿಸುವ ವಿಠಲನ ದಿವ್ಯ ಪಾದ
ಗಳ ಧ್ಯಾನಿಸಿ ಕುಳಿತರು ಜನಗಳೆಲ್ಲ ಕೇಳಿ ೧
ವಿಠಲನ ದಿವ್ಯ ಮೂರ್ತಿಯ ಪಾಡಿ ದೃಷ್ಟಿಯಿಂದಲಿ ನೋಡಿ |
ಮುಟ್ಟಿ ಮುಂದೊಲಿದು ಕುಣಿಕುಣಿದಾಡಿ ||
ಥಟ್ಟನೆ ವೇದಕ್ಕೆ ಸಮನಾದ ಪದಗಳು |
ನಿಷ್ಠೆಯಿಂದ್ಹೇಳಿ ಅಭೀಷ್ಟವ ಪಡೆದರು೨
ಎಡೆಯೊಳು ಷಡ್ರಸದನ್ನವ ನೀಡೆ | ಕಡು ಮಮತೆಗಳಿಂದ |
ಬಿಡದೆ ದಾಸರ ದಾರಿಯ ನೋಡಿ ||
ಯೆಡ ಬಲದಷ್ಟ ದಿವ್ಯದಿಂಡೆಯರೆಲ್ಲಾ |
ಕಡೆಯದೆಶೆ ಧರಿಸಿದರು ದಾಸರಾ ೩
ಹಗಲು ಒಂಭತ್ತು ತಾಸಾಗಿರಲು |
ಆಗೆದ್ದು ಬೇಗ ಗುರುಗಳ ಸಮೀಪಕ್ಕೆ ಬರಲು ||
ಮುಗಿದು ಕರಯುಗ್ಮವ ಬಗೆ ಬಗೆ ಸ್ತುತಿಸುತಾ |
ಜಗದೊಳು ನಾನಪರಾಧಿಯೆಂದರೂ ೪
ಭೋಜನವ ಮಾಡಿ ಗುರುಗಳಂದು ಸಿಂಹಾಸನದಲ್ಲಿ |
ರಾಜಿಸುತ್ತ ಬಂದು ಕುಳಿತಿರಲಂದೂ ||
ಆ ಜನದೊಡಗೀ ದಾಸರು ಕರೆಯಲು |
ನೈಜಭಾವದಿಂದು ಬಂದು ಕುಳಿತರೂ ೫
ಪದಗಳು ಬರದ ವಹಿಯಕೊಂಡು ಪೋಗಿ |
ಮಧ್ವಶಾಸ್ತ್ರದ ಮೇಲೆ ಕುಳ್ಳಿರಲಾಗ ||
ಅದನರಿಯದೆ ದಿಂಡೆಯನೊಬ್ಬನು ಆ |
ಪದವಹಿಯ ತೆಗೆದು ಬಿಸುಟನಾಗಾ ೬
ಯೆರಡಾವರ್ತಿ ತೆಗೆಯಲು ಆಗ |
ತಿರುತಿರುಗಿ ಬಂದು ವರಪುಸ್ತಕದ ಮ್ಯಾಲೆ ಕುಳ್ಳಿರಲಂದೂ ||
ಗುರು ವ್ಯಾಸರಾಯರು ನೋಡಿ ಹರುಷದಿಂದ |
ಕರೆದು ಬೈದರವಗೆ ಕಡು ಮೂರ್ಖನೆಂದೂ ೭
ಪದದೊಹಿ ತೆಗೆದು ಬಿಸಾಡಿದರೆ ತಿರುತಿರು
ಗ್ಯದರಮ್ಯಾಲೆ ವರನಾಲ್ಕು ವೇದಾರ್ಥದರೊಳಗುಂಟು ||
ನರರುತ್ತಮರೆಲ್ಲ ನೋಡಿ ಹರುಷದಿಂದ |
ಧರೆಯೊಳು ಪುರಂದರ ಉಪನಿಷತ್ತೆಂದರೂ ೮
ಗುರುರಾಯರು ದಾಸರ ನೋಡಲಾಗ ಭರದಿಂದ ಯೆದ್ದು |
ಅರಿವೆಯ ಕೈಯಿಂದೊರಸಲು ಆಗ ||
ತ್ವರಿತದಿ ಕೇಳಲು ವಿಠಲನ ಗುಡಿಯೊಳು |
ಪಡದಗುರಿ ಹತ್ತವು ವರಿಸಿದೆವೆಂದರು ೯
ಹಾಗೆಂದು ನುಡಿದಾಕ್ಷಣದಲಿ ಬೇಗ ಶಿಷ್ಯರಿಗೆ |
ಹೋಗಿ ನೋಡಿ ಬಾರೆಂದೆನಲಾಗಿ ||
ಬೇಗದಿಂದಲಿ ಬಂದು ಕೇಳಲು ಅವರು |
ಈಗ ದಾಸರು ಬಂದು ಪರಿಹರಿಸಿದರೆಂದು ೧೦
ಆ ಮಾತು ಕೇಳಿದಾಕ್ಷಣದಿ ಬೇಗ |
ಪ್ರೇಮದಿ ಬಂದು ಸ್ವಾಮಿರಾಯರಿಗೆ ಪೇಳಲು ಆಗ ||
ನಾಮವ ಸ್ಮರಿಸುತ ಪ್ರೇಮಾಲಿಂಗನವಿತ್ತು |
ಕಾಮಿತಾರ್ಥ ಫಲವೀವ ಕಲ್ಪತರುವೆಂದರೂ ೧೧
ಇಂತು ಅನುಭವ ಮಾತುಗಳನಾಡಿ ಲಕ್ಷ್ಮೀಕಾಂತನ |
ಅಂತರಂಗದಲಿ ಅತಿಮಾನವ ಮಾಡಿ ||
ಕಾಂತಿ ಹೆಚ್ಚಿದ ಕಂತುಪಿತನ ಮೂರ್ತಿ |
ಶಾಂತತ್ವದಿ ನೋಡುತ ಶರಣು ಮಾಡಿದರೂ ೧೨
ಗಜಪುರದಲ್ಲಿ ಇರುವರು ಕೂಡಿ ವಿಜಯವಿಠ್ಠಲನ್ನ |
ಭಜನೆಯಿಂದ ದಿನ ದಿನ ಪೊಗಳಿ ||
ತ್ರಿಜಗದೊಡೆಯ ಗುರು ಪುರಂದರವಿಠಲನ |
ನಿಜ ವೈಕುಂಠದ ಮುಕ್ತಿಯೈದಿದರೂ ೧೩

೨೧
ಒಂದೇ ನಾಮದಲಡಗಿದವೊ ಅಡಗಿದವೋ ಆಪ
ನಂದದಿಂದುಸುರುವ ಅಖಿಳ ವೇದಗಳು ಅ ಪ
ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು
ಒಂದೇ ನಾಮವೆ ಅಜಾಮಿಳಗೆ ವೊಲಿದಿತು
ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ
ನಂದ ಪದವಿಯಿತ್ತ ಅದ್ಭುತ ಮಹಿಮೆಯು ೧
ಮಚ್ಛಾದ್ಯನಂತಾವತಾರಾ
ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ
ಕಚ್ಛಪ ತ್ರಿಜಗಕೆ ಆಧಾರ ತನ್ನ
ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ ೨
ಒಬ್ಬರಿಂದಲಿ ತನಗಿಲ್ಲ ತಾ
ನೊಬ್ಬನೆ ಜೀವರ ರಕ್ಷಿಪನೆಲ್ಲಾ
ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ
ದರ್ಭೆಯ ರಮಣನ ಸುಗುಣಗಳೆಲ್ಲಾ ೩

೨೨
ಒಡಿಯಾ ನಿನ್ನಡಿಗಳಿಗೆ ಬಿಡದೆ ನಾ ನಮೋ ಎಂಬೆ
ಕೊಡು ಎನಗೆ ದೃಢ ಪದವಿ ಕಡಲಶಯನಾ ಪ
ಪಿತನ ತೊಡಿಯ ಮೇಲೆ ಕುಳಿತಿರಲು ಮಲತಾಯಿ
ಅತಿ ರೋಷದಿಂದವನ ಹೊಯಿದೆಬ್ಬಿಸೆ
ಖತಿಯಿಂದ ವನಕೆ ಪೋಗಿ ನಿನ್ನ ಪೂಜಿಸಲು
ಮತಿವಂತನ ಮಾಡಿ ಧ್ರುವಪದವಿ ಕೊಡಲಿಲ್ಲವೆ ೧
ತಂದೆ ಬಾಧಿಸೆ ಧೃತಿಗೆಡದೆ ನರಹರಿ ಗೋ
ವಿಂದ ನಾರಾಯಣ ಕೃಷ್ಣ ವಿಷ್ಣು
ಇಂದಿರಾರಮಣ ಇನಕುಲತಿಲಕ
ಎಂದೆನಲು ಕಂದನಿಗೆ ಕೈವಲ್ಯಪದವಿ ಕೊಡಲಿಲ್ಲವೇ೨
ಜಾತಿಧರ್ಮವ ಬಿಟ್ಟು ಅಜಮಿಳನು ಚಂಡಾಲ
ಜಾತಿ ವಧುವಿಗೆ ಸೋತು ಕೆಟ್ಟು ಯಮನ
ದೂತರನ ನೋಡಿ ಕಂಗೆಟ್ಟು ಮಗನನು ಕರಿಯೆ
ಪ್ರೀತಿಯಲಿ ವೈಕುಂಠ ಪದವಿ ಕೊಡಲಿಲ್ಲವೇ ೩
ವನಿತೆ ಪತಿವ್ರತವಾನಂತನನುಚರಿಸಿ ಬಂದಿರಲು
ಮನದ ಖೇದವ ತಾಳಿ ಹರಿದು ಬಿಸುಟೆ
ಮುನಿಪುಂಗ ಅಡವಿಯನು ತೊಳಲಿ ನೆಂದು ಬಿದ್ದಿರಲು
ಪುನರ್ವಸು ಸ್ಥಾನವು ಕೊಡಲಿಲ್ಲವೆ೪
ಶೌರ್ಯದಲಿ ಅಬ್ಧಿಯನು ಹಾರಿ ಲಂಕೆಯ ಸುಟ್ಟು
ಧೂರ್ಯದಲಿ ರಕ್ಕಸರನೊರಿಸಿ ಬಿಸುಟೂ
ಕಾರ್ಯದಲಿ ಹನುಮಂತ ನಿನ್ನ ಮೆಟ್ಟಿಸೆ ಒಲಿದು
ಸೂರ್ಯಭಾಂದವಗೆ ಜನಪದವಿ ಕೊಡಲಿಲ್ಲವೆ ೫

ಸೋದರಗೆ ಬುದ್ದಿಯನು ಪೇಳೆ
ಕೇಳದೆಯಿರಲು ಪಾಧಾರಿ ದಾಟಿ ನಿಮ್ಮ ಸೇವಿಸಿ
ಕಾದಿ ರಾವಣನ ಛೇದಿಸಿ ಲಂಕಾಪುರ ಪದವಿ
ಆ ದಿನಪ ಶಶಿವುಳ್ಳ ಪರಿಯಂತ ಕೊಡಲಿಲ್ಲವೆ ೬
ಚಿತ್ತದೊಳು ಆವಾಗ ನಿನ್ನ ಧ್ಯಾನವ ಮಾಡಿ
ವಿತ್ತಾದಿ ದಾನಗಳು ಮಿತಿಯಿಲ್ಲದೇ
ಅತ್ಯಂತ ಕೊಡುವವನ ಮೂರು ಪಾದವ ಬೇಡಿ
ಭಕ್ತಗೆ ನಲಿದು ಸುರಪದವಿ ಕೊಡಲಿಲ್ಲವೆ ೭
ಮಾನಿನಿಯ ಸೀರಿಯನು ಸಭೆಯೊಳಗೆ ದುರುಳರು ಅಭಿ
ಮಾನ ಭಂಗವ ಮಾಡಿ ಸುಲಿವುತಿರಲು
ಶ್ರೀನಾಥ ಕೇಶವ ಮುಕುಂದನೆಂದು ಮೊರೆ ಇಡೆ
ನೀನರಿತು ಅಕ್ಷಯಾಂಬರ ಕೊಡಲಿಲ್ಲವೆ೮
ಬಡತನ ಉಳ್ಳವನಾಗಿ ಕ್ಲೇಶದಲಿ ಸುಧಾಮ
ನಡುಗುತಲಿ ನಿನ್ನ ಪಟ್ಟಣಕೆ ಬರಲು
ಹಿಡಿತುಂಬಿ ಅವಲಕ್ಕಿಗೆ ಸಂತೃಪ್ತನಾಗಿ
ಕಡೆಯಿಲ್ಲದೈಶ್ವರ್ಯ ಪದವಿ ಕೊಡಲಿಲ್ಲವೆ ೯
ಸರಸಿಯೊಳು ಬಾಲಕನ ನೆಗಳಿ ಪಿಡಿದು ನುಂಗೆ
ಗುರುದಕ್ಷಿಣವ ಬೇಡೆ ಸಾಂದೀಪನು
ಭರದಿಂದ ಪೋಗಿ ಕೃತಾಂತನೊಳು ಭೂ
ಸುರಗೆ ಸುಪುತ್ರ ಪದವಿ ಕೊಡಲಿಲ್ಲವೆ ೧೦
ಭುಜಕರೆಲ್ಲರು ನಿನಗೆ ಭಾಗ್ಯವನು ಕೊಡಲಿಲ್ಲ
ಭಜಿಸಿದರವರು ತಮ್ಮ ತಕ್ಕ ತೆರದಿ
ಭಜಿಸುವೆನು ನಿನ್ನ ತಕ್ಕಂತೆ ದೃಢ ಪದವಿಕೊಡು
ಸುಜನವಂದಿತ ಸಿರಿ ವಿಜಯವಿಠ್ಠಲನೆ೧೧

೩೭೩
ಒಲಿದವಳ ಬಿಡುವುದು ಧರ್ಮವಲ್ಲ |
ಚಲುವ ನಿನಗಾಗಿ ನಾ ಯೇಸು ಕಾಲಕೆ ತಪವಿದ್ದೆ ಪ
ತಂದೆತಾಯಿಗಳಲ್ಲಿ ಪುಟ್ಟಿದಾಕ್ಷಣದಲ್ಲಿ |
ಅಂದೆ ನೇಮಿಸಿದರು ಪೆಸರನಿಟ್ಟು |
ಸಂದೇಹಗೊಳದಿರು ಮೈಲಿಗೆಯವಳೆಂದು |
ಬಂದ ಪ್ರಾಣವ ನೋಡು ಬರಿದೆ ಪೇಳುವಳಲ್ಲ ೧
ಕನ್ಯಾವಸ್ಥಿಯಲಿಂದ ನಿನ ನಿನ್ನ ಧ್ಯಾನವಲ್ಲವೇ |
ಅನ್ಯಪುರುಷರಾಪೇಕ್ಷೆ ಮಾಡಲಿಲ್ಲ |
ಅನ್ಯಾಯವೇನು ಆಗಲಿ ಪೋಗುವರೇನೊ |
ಅನ್ಯಥಾ ಈ ನುಡಿಗೆ ನಿಜಕೆ ನಿಲ್ಲುವೆ ನಾನು ೨
ಮಲದಲ್ಲಿ ಮೂರುದಿನ ಪೋಗಾಗಿ ಹೋಗಿದ್ದೆ |
ಬಲು ಶುಚಿಯಾದೆನೊ ಶುದ್ಧ ಜಲದಿ |
ಘಳಿಗೆ ಕಡೆದರೆ ಎನ್ನ ಪ್ರಾಣನಿಲ್ಲವೊ |
ಎನ್ನನಗಲಿ ಮೈ ತಪ್ಪಿಸಿ | ದೂರ ಕರೆದೊಯ್ಯೊ ಕರುಣದಲಿ ೩
ನಗೆಗೇಡಿ ಮಾಡದಿರು ಜಗದೊಳಗೆ ಇಪ್ಪವಳ |
ಸೊಗಸಿಗನೆ ಸರಸವಾಡುವನೆ ಬಾರೊ |
ಮಗುಳೆ ಮತ್ತೊಬ್ಬರು ಮೆಚ್ಚಿದರೆ ಇದೆ ಪಾಟು |
ಮಗುಳೇನು ಹೊಸ ಪರಿಯು ತೋರುವುದು ನೋಡಿದರೆ ೪
ಕಂಡ ಕಾಣದ ಹಾಗೆ ಮಾತನಾಡಿದಿರೆನ್ನ |
ಅಂಡೊಲಿವ ಖ್ಯಾತಿ ಎಂದಿಗೆ ತೀರದೂ |
ಕುಂಡಲಿಗಿರಿವಾಸ ವಿಜಯವಿಠ್ಠಲ ವೆಂಕಟ |
ಹಿಂಡು ಬಂಧುಗಳಿದ್ದರೇನು ಮಾನವನು ತೊರೆದೆ ೫

೩೭೪
ಒಳ್ಳೇದೋ ಒಳ್ಳೇದೋ ಎಲ್ಲ ಸ್ಥಳವ ಬಿಟ್ಟು |
ಇಲ್ಲಿ ಅಡಗಿದ ಬಲ್ಲಿದ ತನವೇ ಪ
ಬಿಡೆ ಬಿಡೆನೊ ಎನ್ನ ಒಡಿಯ ತಿರುಮಲ ನಿನ್ನ |
ಉಡಿಯ ಪೀತಾಂಬರ ಪಿಡಿದು ನಿಲಿಸಿಕೊಂಬೆ ೧
ಎರವು ಎರವು ಮಾಡಿ ತಿರುಗಿಸಿದಿ ನೀ ಎನ್ನ
ಕೊರಳಿಗೆ ನಿನ್ನ ಚರಣ ಕಟ್ಟಿಕೊಂಬೆ ೨
ಅತ್ತ ಇತ್ತಲಿ ನೋಡಿನೆತ್ತ ಪೋಗಲಿ ಎನ್ನ |
ಚಿತ್ತದಲಿ ನಿನ್ನ ಹತ್ತೆಗಟ್ಟಿಕೊಂಬೆ ೩
ಅತ್ತಿಯ ಮಕ್ಕಳಿಗೆ ತೆತ್ತಿಗ ನೀನಾಗಿ |
ವಿತ್ತವಿತ್ತದರಾದ ರಾಸಿ ಸಿರಿಯಲ್ಲಿ ೪
ಇರಳು ಹಗಲು ಬಿಡದೆ ಗುರು ಪುರಂದರಗೊಲಿದೆ |
ಬಿರಿದು ಏನೊ ಇಷ್ಟು ವಿಜಯವಿಠಲಾ೫

೩೭೫
ಕಂಗೆಡದಿರು ಮನವೆ
ಕಂಗೆಡದಿರು ಒಡನೊಡನೆ ನೆರೆದು ಬಂದು ಪ
ಜನಕೆ ಗ್ರಾಸವೆಂತಹುದೆಂದು
ಅನುಮಾನ ಹಚ್ಚಿಕೊಂಡು
ಬಡವಾಗದಿರೆಲೆ ಆಲೋಚನೆ ಮಾಡು
ನಿನ್ನೊಳಗೆ ತಿಳಿದು ಮರಳಿ ಮರಳಿ
ಘನಮಹಿಮ ನಾರಾಯಣ ಅನಾದಿ ಸ್ವಾಭಾವಿಕ
ಚಿನುಮಯ ಸತ್ಯಸಂಕಲ್ಪ ದೇವ| ೧
ಇನಿತು ಜೀವಿಗಳಿಗೆ ಕಾಲಕಾಲಕೆ
ತೃಣ ಮೊದಲಾದ ಗ್ರಾಸ ಮಾಡಿಯಿಪ್ಪಾ
ಕ್ಷಣಮಿರಗೊಡದೆ ಆವಲ್ಲಿಯಿದ್ದರೂ
ವುಣಿಸುವ ಉಚಿತವನ್ನೆ ತಿಳಿದು ನೋಡಿ
ದಿನ ದಿನಕೆ ಅಧಿಕವಿಲ್ಲಾ ತತ್ಪೂರ್ವ ಚೇತನಕೆ
ನಿರ್ಮಾಣ ಮಾಡಿದಂತೆ ಬೊಮ್ಮಾ೨
ಫಣಿತಿಯಲ್ಲಿ ಬರೆದಿರುವ ಆಯು:ಕರ್ಮವಿದ್ಯಾ
ಧನ ನಿಧಾನನೆನೆಸಿ ಶ್ರೀಹರಿಯ ಆಜ್ಞಾದಿ
ಜನಿಸುವಾಗಲೆ ಅವರವರವಾಡಿಪನಾ
ಕೊನೆಯ ಸೆರಗಿನಲಿ ಕಟ್ಟಿಹನೋ
ನಿನಗೆ ಕಾಣಬಾರದೋ ಪದಶಾಸ್ತ್ರಗಳಿಂದೆ
ಗುಣಿಸಿ ನೋಡಿದರೆ ಕಾರುಣಿಕವಹುದೊ ೩

ಅಣುಮಾತ್ರನಿಂ ನಿಂದಾ ಆಗುವಾ ಶೌರ್ಯವೇನೋ
ಅನುಭವಕೆ ತಂದುಕೊಂಡು ಗ್ಲಾನಿಯಾಗೋ
ಮಿನುಗು ಚಿಂತೆಗಳಿಂದಾ ಬರುವ ಲಾಭವೇ ಕಾಣೆ
ತನುವ ಶೋಷಿಸಿ ವಿರೋಧಾವಾಗಿ ಕೊಂಬೆ
ಧನವಂತಾ ಸಿರಿ ನಮ್ಮ ವಿಜಯವಿಠಲರೇಯಾ
ಮನುಜಾದಿ ದೇಹಿಗಳಿಗೆ ಸ್ವಾಮಿಯಾಗಿಪ್ಪನೋ

ಕಂಡೆ ಕಂಡೆನೋ ಭೂಮಂಡಲದೊಳು ಮೆರೆವ :

೩೩೭
ಕಂಡೆ ಕಂಡೆನೊ ಕಂಗಳಲಿ ಭೂ |
ಮಂಡಲದೊಳು ಮೆರೆವ ಯತಿಗಳ
ಮಂಡಲಾಬ್ಧಿಗೆ ಸೋಮನೆನಿಪ ಅ |
ಖಂಡ ಮಹಿಮಾ ವಾದೇಂದ್ರ ಗುರುಗಳ ಪ
ನಸುನಗಿಯ ಮೊಗ |
ಪಸರಿಸಿದಾ ದ್ವಾದಶನಾಮಗಳು ಶ್ರೀ ಮುದ್ರೆ ಮುದದಿಂದ |
ನೊಸಿಲಿಲೊಪ್ಪುವ ಗಂಧ ಅಕ್ಷತಿ ಎಸೆವ ಸಣ್ಣಂಗಾರ ಕಿವಿಯಲಿ
ಹಸನಾದ ಎಳೆ ತುಲಸಿ ಶೋಭಿಸಿ |
ಬೆಸಸುವ ಒಂದೊಂದು ಮಾತಾ |
ಲಿಸಿದರದು ವೇದಾರ್ಥತುಲ್ಯಾ |
ಲಸವ ಗೈಯಿಸದೆ ಬರುವ ಗುರುಗಳ೧
ಮೊಸಳಿವಾಯಪಲಕ್ಕಿ ಸುತ್ತಾ ಭಾ |
ರಿಸುವ ನಾನ ವಾದ್ಯಾದಾ ಘೋಷಾ |
ಪುಸಿಕರೆದೆದಲ್ಲಣರು ಎಂಬಾ |
ದಶ ದಿಕ್ಕಿನೊಳು ಕೀರ್ತಿ ತುಂಬಿರೆ |
ಶಿಶುವು ಮೊದಲಾದವರು ತಮ ತಮ |
ಬೆಸನೆ ಪೇಳಲು ಕೇಳಿ ಅವರು |
ಬ್ಬಸವ ಕಳದಿಷ್ಟಾರ್ಥ ತೋರುವ
ಋಷಿಕುಲೋತ್ತಮರಾದ ಗುರುಗಳ೨
ಶ್ವಶನ ಮತ ವಾರಿಧಿಗೆ ಪೂರ್ಣ |
ಶಶಿ ಎನಿಸಿಕೊಂಬ ಧೀರುದಾರರೆ |
ಅಸಮ ತತ್ವ ಪ್ರಮೆಯದಲಿ ನಿರ್ಮಿಸಿದನೆ |
ಲೋಕೇಶ ಇವರನ್ನ ವಸುಧಿ ಅಮರರು |
ಪ್ರಸರ ಎಡಬಲ ಎಸದು ತುತಿಸಲು ಹಿಗ್ಗಿ ಕರುಣಾ |
ರಸಭರಿತರಾಗಿ ನೋಡುತ್ತ ಮಾ |
ಸನದಿ ಹರಿಪದ ಭಜಿಪ ಗುರುಗಳ೩
ಕುಸುವಶರನ ಬಾಣವನು ಖಂಡ್ರಿಸಿ
ಬಿಸುಟ ಸಂಪನ್ನ ವಿದ್ಯಾ |
ವಸುವಿನಲಿ ಆವಾಗ ತಲೆ ತೂ |
ಗಿಸುವರು ಪಂಡಿತರ ಮೆಚ್ಚಿಸಿ |
ವಶವೆ ಪೊಗಳಲು ಎನಗೆ ಇವರ ದ |
ರುಶನದಿಂದಲಿ ಗತಿಗೆ ಪಥನಿ |
ವಿಷದೊಳಗೆ ಇದು ಸಿದ್ಧವೆಂದು ವಂ |
ದಿಸಿದಿರೊ ಮರಿಯದೆ ಈ ಗುರುಗಳಾ ೪
ಮಿಸುಣಿ ಮಂಟಪದೊಳಗೆ ರಂ |
ಜಿಸುವ ರಾಮನ ಕುಳ್ಳಿರಿಸಿ ಅ |
ರ್ಚಿಸುವ ಚಿತ್ತೇಕಾಗ್ರದಲಿ ವೊ |
ಲಿಸುವ ತಂತ್ರ ಸಾರೋಕ್ತ ಬಗೆಯನು |
ಕುಶಲರಾದ ಉಪೇಂದ್ರ ಮುನಿಕರ |
ಬಿಸಜದಿಂದಲಿ ಜನಿಪ ಭಕುತಿಲಿ |
ಅಸುರರಿಪು ಸಿರಿ ವಿಜಯವಿಠ್ಠಲನ್ನ |
ಪೆಸರುಗಳು ಎಣಿಸುವ ಗುರುಗಳ ೫

೨೩
ಕಂಡೆ ಕಮಲನಾಭನ ಕಣ್ಣಾರೆ
ಪುಂಡರೀಕನ ಪಾಲಿನ
ಪಂಡರಿವಾಸನ ಸಕಲ – ಬೊ
ಮ್ಮಾಂಡವ ಧರಿಸಿದನಾ ಪ
ಸುಲಭ ದೇವರ ದೇವ ನಾನಾ – ಪರಿ
ಮಳ ತುಲಸಿಗೆ ವಲಿವನ
ಕಲಿಕಾಲ ಸಲಹುವನ ಭವದ – ಸಂ
ಕಲೆ ಪರಿಹರಿಸುವನ ೧
ಲಿಂಗ ಸಂಗವನೀವನ
ಜಗದಂತರಂಗ ಮೋಹನರಾಯನ
ಮಂಗಳ ದೇವೇಶನ ಸಿರಿಪಾಂಡು
ರಂಗ ನೆನಸಿಕೊಂಬನ೨
ಜಗದ ಸದ್ಭರಿತ ನಾನಾ
ವನದಿ ಬಿಗಿದ ಪರಾಕ್ರಮನಾ
ನಗವನೆತ್ತಿದ ಧೀರನಾ ತನ್ನನು
ಪೊಗಳಲು ಹಿಗ್ಗುವನಾ ೩
ಯಾದವ ಶಿರೋರನ್ನನ
ಕೊಳಲು ಊದುವ ಚೆನ್ನಿಗನಾ
ಆದಿ ಪರಮ ಪುಂಸನ ಸರ್ವ
ವೇದ ನಿಕರಮಯನಾ ೪
ಇಟ್ಟಿಗೆಯಲಿ ನಿಂದನ ವರಂಗಳ
ಕೊಟ್ಟರೆ ತಪ್ಪದವನ
ಅಟ್ಟಿ ಖಳನ ಕೊಂದನಾ ವಿಜಯ
ವಿಠ್ಠಲ ಜಗದೀಶನಾ ೫

೫೧೦
ಕಟ್ಟೆಯ ಕಟ್ಟಿದರು ಭವ ಸಾಗರಕೆ ಸ್ವಲ್ಪ ಪ
ಬಿಟ್ಟು ವೇಗದಿಂದ ಸಾಧ್ಯ ಮಾಡಿಕೊಂಡು
ಮೆಟ್ಟಿಕೆಯಿಂದಲಿ ದಾಟಿ ಪೋದರು ಜಗ
ಜಟ್ಟಿ ದಾಸರು ತಮಗೆ ಸುಲಭವಾದದು ಯನಗೆ
ಇಟ್ಟುಪೋದರೆಯಿಂದು ಗುಟ್ಟು ತೋರುತಲಿದೆ ಸಾಧಾರಣವಲ್ಲ ೧
ದಿಟ್ಟವಾದಕ ವನಯನ್ನಿಂದಾದದಲ್ಲ
ಬಿಟ್ಟಿಯವರಿಗೆ ತಿಳಿಯಲಿಹದೆ
ಕೊಟ್ಟಿಗೆ ಮೇಲುಪ್ಪರಿಗೆಯಾಗುವದೆ
ಹುಟ್ಟಾರಭ್ಯವಾಗಿ ಮಂದನಾಗಿದ್ದವಗೆ
ಮಟ್ಟಯಿಲ್ಲದೆ ಬುದ್ಧಿ ಬರುವದೆಂತೊ
ಧಿಟ್ಟಳಿ ಮಹಿಮ ಶಿರಿ ವಿಜಯವಿಠಲ ಮನ
ಮುಟ್ಟಿ ಭಜಿಸಿದವ ದಾಸರ ಕರುಣವೆನ್ನಿ೨

೪೫೩
ಕಥಾಶ್ರವಣ ಮಾಡೋ ಪಾಡೋ ಹರಿ ಪ
ಪಥ ವೈಕುಂಠಕ್ಕಿದು ನೋಡೋಅ.ಪ
ಪತಿತಪಾವನ ಪಾದಾಬ್ಜದಲಿ
ಹಿತದಿಂ ಭಕುತಿಯ ಮಾಡೋ ೧
ಜ್ಞಾನ ಭಕುತಿ ವೈರಾಗ್ಯವೀವ
ಆನಂದತೀರ್ಥರ ಪಾಡೋ ೨
ಅಜಭವಾದಿಗಳಿಗರಸನಾದ ಶಿರಿ
ವಿಜಯವಿಠಲನ ನೋಡೋ೩

೩೭೬
ಕಮಲಸಂಭವ ನಾಸಿಕ | ಸಂಭವ ಕಾಯೊ
ನಮಿಸುವೆ ನಿನಗೆ ನಾನು ಪ
ಅಂದು ಧರಣಿ ಜಲ ವಂದಾಗಿ ಕರಗಿರೇ |
ನಂದನ ಚಿಂತಿಸಿ ಬಂದ ವರಹಮೂರ್ತಿ ೧
ಮಧು ಪಾನಾವವ ಸಾ | ದದು ಅವನ ಚರ್ಮ |
ಹೊದಿಸಿ ಹೆಪ್ಪುಗೊಟ್ಟು ಮೇದಿನೆಂದಿಸಿದೆ ೨
ಕನಕಲೋಚನ ಭೂಮಿಯನು ಕದ್ದು ಮೈಯಲು |
ಅನಿಮಿಷರೊಲಿಸೆ ಅವನ ಕೊಂದುದ್ಧರಿಸಿದೆ೩
ಕರುಣಾಕಟಾಕ್ಷದಿ ಹೊರವಲ್ಲಿ ನಾನೆಲ್ಲಿ |
ಸರಿಗಾಣೆ ನಿನಗೆ ಅಂತರ ಬಹಿರದೊಳು ೪
ರಜೋಭಿಮಾನಿಯ ವಡಿಯಾ ಸುಜನಪಾಲಾ |
ಭುಜಗ ಗಿರಿಯ ವಾಸಾ ವಿಜಯವಿಠ್ಠಲಾಧೀಶಾ ೫

೨೦೫
ಕಮಲೆ ನಿನ್ನಯ ಪಾದ ಕಮಲದಲ್ಲೆನಗೆ
ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ ಪ
ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದು
ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ ೧
ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟು
ಕಷ್ಟವ ತಿಳಿದು ಸಂತುಷ್ಟನ ಮಾಡಮ್ಮ ೨
ಶ್ರೇಷ್ಠನ್ನ ಮಾಡು ಉತ್ರ‍ಕಷ್ಟ ಜ್ಞಾನವನಿತ್ತು
ಶಿಷ್ಟನೆಂದೆನಿಸಿ ಶ್ರೀಕೃಷ್ಣನ್ನ ರಾಣಿ೩
ಅಜಭವ ಮೊದಲಾದ ದ್ವಿಜರಿಂದ ವಂದಿತಳೆ
ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೆ ೪
ದ್ವಿಜರಾಜಗಮನಳೆ ಭುಜಗಶಯನನಾದವಿಜಯವಿಠ್ಠಲನಂಘ್ರಿರಜವ ಧರಿಸುವೆ ೫

೩೪೦
ಕರುಣಿಸಯ್ಯಾ ಗುರುವರ್ಯ ಪರಮ ಸುಹೃದಯಾ |
ನಿರುತ ನಿನ್ನವನೊ ನಾನು ಪುರಂದರರಾಯ ಯಿಂದು ಪ
ಲೋಕದ ಜನರು ತಮ್ಮ ಸುಕುಮಾರರಿಗೆ ಪೆಸರು |
ಯಾಕೆ ಯಿಡವರೊ ಜೀಯ್ಯಾ | ನೇಕ ಮಮತೆಯಲಿ ||
ಬೇಕೆ ಎನಗೆ ಯಿಂಥಸ್ ಖ್ಯಾತಿ ನೀ ಕೊಟ್ಟ ಭಾಗ್ಯವೆಯಿರಲಿ |
ವಾಕು ವ್ಯರ್ಥವಾಗದಂತೆ ಸಾಕುವದು ಬಿಡದೆ ಒಲಿದು ೧
ಅಡವಿ ಹತ್ತಿ ಪೋಪ ನರನ ಒಡನೆ ಕೂಡಿಕೊಂಡು ಬಂದು |
ಕಡು ಮಹೋತ್ಸವವ ಮಾಡಿ ವೇಗ ಪೊಡವಿಪತಿತನವು ||
ಧೃಢವಾಗಿ ವಾದಿಸಿ ಅವನ
ತೊಡರು ಕಳೆದು ಸರ್ವರೊಳಗೆ |
ನಡತಿವಂತ ಮಾಡಿದಂತೆ ಬಡವನ್ನಾ ಉದ್ಧರಿಸು ಜ್ಞಾನಿ೨
ಕೀರ್ತಿಯಪಕೀರ್ತಿ ಎರಡು ಪೆತ್ತ ತಂದೆ
ಯಿರಲಾಗಿ ಪುತ್ರನೀಗೆ ಬರುವಾವೆ
ಉತ್ತಮರು ಮೆಚ್ಚುವಂತೆ ನಿತ್ಯವೊಲಿದು
ಪಾಲಿಪದು ಎತ್ತಲಿದ್ದರೂ |
ಸತ್ಯ ವಿಜಯವಿಠ್ಠಲನ್ನ |
ತುತ್ತಿಸುವ ಮಹಾಮಹಿಮಾ ೩

೩೭೭
ಕರುಣಿಸೋ ಕೃಷ್ಣ ಕರುಣಿಸೊ |
ಕರುಣಿಸಿದರೆ ನಾ ನಿನ್ನನೆಂದಿಗು ಮರೆಯ ಪ
ಭೂತಳದೊಳು ನಾನು ಈ ತನುವುತೆತ್ತು |
ಪಾತಕದಲಿ ಯಮಯಾತನೆ ಪಟ್ಟೆ ೧
ಇಂದೆನ್ನ ಹೃದಯವೆಂಬೊ ಮಂದಿರದೊಳು |
ಬಂದು ವಾಸವಾಗೊ ಇಂದಿರೆ ರಮಣ ೨
ಹಿಂದಿನ ಅವಗುಣ ಒಂದೂ ಎಣಿಸದೆ |
ಮುಂದೆ ದೋಷಕ್ಕೆ ಮನವೆರಗಿಸದೆ ೩
ಪಾಪ ಪುರುಷನೆಂಬೊ ಪಾಪಿಯ ಕೈಗೆ |
ಪೋಪಗೊಡದೆ ಎನ್ನ ಕಾಪಾಡೊ ರನ್ನ ೪
ಅಂತ್ಯಕಾಲದಲಿ ಅಂತಕರು ಬಂದು |
ನಿಂತಾಗಲಿ ನಿನ್ನ ಚಿಂತೆ ಒದಗಲಿ ೫
ಕನಸಿನೊಳಗೆ ನಿನ್ನ ನೆನಸಿಕೊಂಬಂತೆ |
ಮನಸು ಸುಸ್ಥಿರವಾಗಲಿ ಅನುಗಾಲವಿರಲಿ ೬
ಇದ್ದಾಗ ದಾಸರದಾಸನೆನಿಸೊ ಬೇಗ |
ಅಬ್ಧಿಶಯನ ಸಿರಿ ವಿಜಯವಿಠ್ಠಲ ಕರುಣಿಸೊ ೭

ಕಲ್ಲು ಕಡಲ ಕಡೆಯೆ ಅಮೃತವೆ ಪುಟ್ಟಿತು :

೫೧೧
ಕಲ್ಲಿನಿಂದ ಸರ್ವ ಫಲ ಬಾಹುದೊ | ಪ
ಕಲ್ಲು ಭಜಿಸಿದರೆ ಕೈವಲ್ಯ ತೋರುವುದೊ ಅ.ಪ
ಕಲ್ಲು ಕಡೆಯುತ್ತಿರಲು ಅಮೃತವೆ ಪುಟ್ಟಿತು |
ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು |
ಕಲ್ಲು ಹರಿಪಾದವನು ಸೋಕೆ ಹೆಣ್ಣಾಯಿತು |
ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು೧
ಕಲ್ಲಿನೊಳಗೆ ದೇವನೊಡಮೂಡಿ ಕಾಣಿಸುವ |
ಕಲ್ಲು ಕೊರೆಯಲು ಮೂರ್ತಿ ಮಂತಾಹುದು |
ಕಲ್ಲು ದೇವರ ಗುಡಿಗೆ ಗರುಡ ಗಂಬವು ಆಯ್ತು |
ಕಲ್ಲು ಕೋಟ್ಯಾನು ಕೋಟಿಗೆಲ್ಲ ಬೆಲೆಯಾಯ್ತು೨
ಕಲ್ಲೆಂದುಪೇಕ್ಷಿಸದೆ ಕಾಲಕಾಲದಿ ನಿಮ್ಮ |
ಕಲ್ಲು ಮನಸನು ಬಿಟ್ಟು ಪೂಜೆಮಾಡಿ |
ಕಲ್ಲಿನೊಳಗಿದ್ದು ಸಿರಿ ವಿಜಯವಿಠ್ಠಲ ಒಳ್ಳೆ |
ಕಲ್ಲು ಪದವಿಯ ಕೊಟ್ಟು ಸತತ ಪಾಲಿಪನೊ ೩

೧೭೧
ಕಾದನಾ ವತ್ಸವ ಹರಿ ಕಾದನಾ |
ಮೋದದಿಂದ ಮಾಧವ ಪ
ವೇದವೇದ್ಯ ಸಾಧುವಿನುತರಾದಿಕಾ ರಮಣ ಕೃಷ್ಣ ಅ.ಪ.
ಎಳೆಯ ಗರಿಕೆ ಇರುವ ಸ್ಥಳದಿ ನೆರೆದು ವತ್ಸಗಳನೆ ನಿಲಿಸಿ ||
ಕೊಳಲು ಕೈಲಿ ಪಿಡಿದು ಮುರಲಿಗಾನ ಮಾಡುತ್ತಾ ೧
ತನ್ನ ಶೆರಗು ತೆಗೆದು ಕೃಷ್ಣ ಕರುಗಳನ್ನೆ ಬೆನ್ನೊರಿಸಿ |
ತಿನ್ನು ತಿನ್ನು ಪುಲ್ಲು ಯೆನುತ ಘನ್ನ ಕರುಗಳೊತ್ತುತ್ತ ೨
ಉಡುಗಳಂತೆ ಕರಗಳು ನಡುವೆ ಚಂದ್ರ ಧರೆಯೊಳು ||
ಪೊಡವಿಯೊಳಗೆ ಬೆಳಗಲು ಆ ಮೃಡನು ಕೊಂಡಾಡಲು೩
ಒಂದು ತಿಂಗಳ ಕರುಗಳು ಇಂದಿರೇಶನು ಮೇಯಿಸಲು |
ಬಂದು ವರುಷ ಕರುಗಳಂತೆ ಆನಂದದಿಂದ ಬೆಳೆದವು ೪
ಕನಕ ರಜತ ಸರಪಳಿ ದನಕರುಗಳ ಕೊರಳಲ್ಲಿ |
ಇಣಕುವಂತರಳೆಲೆ ಅನೇಕ ನಾದ ಬೆರಳಲಿ ಮಾಡುತ೫
ಮರದ ನೆರಳು ವೊಳಗೆ ಕೃಷ್ಣ | ಮೆರೆದು ವತ್ಸಗಳನೇ ನಿಲಿಸಿ |
ಕರೆದ ಪಾಲು ಕರದಿ ಪಿಡಿದು ನೆರೆದು ಬಾಯಲುಣಿಸುತ೬
ಅಜಗಳ್ಹಾಂಗ ಇದ್ದ ಕರುಗಳು ಗಜಗಳ್ಹಾಂಗ ಆದವು |
ತ್ರಿಜಗದೊಡೆಯ ವಿಜಯವಿಠ್ಠಲ ವ್ರಜಕೆ ದೊರೆಯಾಳುವ | ೭

೧೫೧
ಕಾಮಹರ ಒಬ್ಬ ತಾನೆ ಬಲ್ಲಾ |
ರಾಮ ರಾಮ ಸೀತಾರಾಮ ರಾಮನಲ್ಲದಿಲ್ಲವೆಂದು ಪ
ಕೈಯಲಿ ಕಿನ್ನರಿ ಧರಿಸಿ ಸಿರಿಮೊಗದಿಂದ |
ಮೈಯಲಿ ದ್ವಾದಶ ಪುಂಡ್ರ ಧರಿಸಿ |
ಕೈಲಾಸಗಿರಿಯಲ್ಲಿ ಪಾರ್ವತಿ ಕೂಡ ಜಗ
ದಯ್ಯನಯ್ಯ ಜಗದೊಡಿಯ ರಾಮನಲ್ಲದಿಲ್ಲೆಂದು ೧
ಫಣಿಯಾಭರಣವು ಪೆಡೆಯೆತ್ತಿ ಇರಲು |
ಮಣಿ ಮಣಿ ರುಂಡಮಾಲೆ ತೂಗಾಡಲು |
ಕುಣಿದು ಕಣಕಾಲಿಂದ ಥಕ್ ಥಕ್ ಥೈ ರು
ಕ್ಮಿಣಿ ಪತಿ ಸರ್ವೋತ್ತಮ ರಾಮನಲ್ಲದಿಲ್ಲವೆಂದು ೨
ಕಾಳಕೂಟದ ವಿಷಬಿಂದು ಮಾತುರನುಂಗೆ |
ತಾಳಲಾರದೆ ತಳಮಳವಗೊಂಡು |
ಕಾಳಿಮರ್ದನ ಕಮಲಾಯತಾಕ್ಷ ಎನ್ನ |
ಪಾಲಿಸಿದ ಪರಮಾತ್ಮ ರಾಮನಲ್ಲದಿಲ್ಲವೆಂದು೩
ಗಜಮುಖ ತಾಳವ ಪಿಡಿದು ತಥೈ ಎನ್ನಿ |
ಅಜಸುತ ರಿಪು ಮದ್ದಳಿಯೆ ಮುಟ್ಟಿ |
ಗಜ ಚರ್ಮಾಂಬರ ಗಾಯನವ ಮಾಡುತ-ತ್ರಿ |
ಜಗಾಧಿಪತಿ | ವಿಷ್ಣು ರಾಮನಲ್ಲದಿಲ್ಲವೆಂದು ೪
ಆರು ಮುಖದವ ಶಂಖವನ್ನು ಊದೆ |
ಭೈರವ ನಾಗಸ್ವರವ ನುಡಿಸೆ |
ಚಾರು ಪ್ರಥಮ ಭೂತ ತಲೆ ಚಪ್ಪಳಿಡೇ|
ಧಾರಣಿಧರ ಸೀತಾರಾಮನಲ್ಲದಿಲ್ಲವೆಂದು ೫
ಗೋರಾಜ ಸರಿಗಮಪದನಿಸ ಎಂದು ನಲಿಯೇ |
ಉರಗಾದಿ ಮೂಷಕಾದಿ ಚಿಗಿದಾಡಲು |
ವಾರಣದ ಗಂಗೆ ಸಿರದಲಿ ತುಳುಕಲು |
ನಾರಾಯಣ ಪರದೈವ ರಾಮನಲ್ಲದಿಲ್ಲವೆಂದು ೬
ತುಂಬುರನಾರಂದ ತಂದನ್ನಾತಾ ಎನ್ನೆ |
ಅಂಬರದಿಂದ ಪೂಮಳೆಗೆರೆಯೆ |
ಅಂಬುಜಪತಿ ಶಿರಿ ವಿಜಯವಿಠ್ಠಲ ವಿ
ಶ್ವಂಭರಜಾಂಡಕರ್ತು ರಾಮನಲ್ಲದಿಲ್ಲವೆಂದು ೭

೨೦೬
ಕಾಯೆ ಕರುಣಾಂಬುಧಿಯೇ |
ಇಂದಿರಾದೇವಿ ಕಾಯೆ ಕರುಣಾಂಬುಧಿಯೆ ಪ
ಮಾಯೆ ನಾರಾಯಣನ್ನ ಜಾಯೆ ಸತತ ಜ್ಞಾನ |
ವೀಯೆ ಭಕ್ತರ ಪ್ರೀಯೇಅಪ
ಕನ್ನಾಮಣಿಯೆ ಕಾಮಿನಿ ಮಂಗಳವಾಣಿ |
ಸನ್ನುತೆ ಲೋಕ ಜನನಿ |
ನಿನ್ನ ಚರಣಯುಗ್ಮ |
ವನ್ನೆ ನಂಬಿದೆ ಸುಪ್ರಸನ್ನೆ ಸರ್ವಜೀವರ |
ಭಿನ್ನೆ ಭಾಗ್ಯಸಂಪನ್ನೆ ||
ಮನ್ನಿಸಿ ಮುದದಿಂದ |
ಬಿನ್ನಪ ಲಾಲಿಸು |
ಚನ್ನೆ ಚಕ್ರ ಪಾಂಚಜನ್ಯ ಧರಾದೇವಿ ೧
ಅತಿದಯವಂತೆ ನೀನೆಂದು ಬೇಗದಿ ಬಂದು |
ನುತಿಸಿದೆ ದೀನನಾಗಿಂದೂ |
ಪತಿತರೊಳಿಡದಲೆ |
ಗತಿಗೆ ಸಮ್ಮೊಗಮಾಡು |
ತ್ಪತ್ತಿ ಸ್ಥಿತಿ ಲಯಕರ್ತೆ ಅತುಳ ಶೋಭನಮೂರ್ತೆ |
ಪತಿಯಲಿ ಜನಿಸಿದೆ|
ಪತಿಗೆ ಸತಿಯಾದೆ |
ಪತಿಯ ಸಂಗಡ ಜ | ನಿತಳಾದ ಚರಿತೆ೨
ಕುಂಕುವರತ ರಾಜಿತೆ ಧವಳಗೀತೆ |
ಪಂಕಜಸದನೆ ಖ್ಯಾತೆ |
ಲೆಂಕಾ ವತ್ಸಲೆ ಸರ್ವಾಲಂಕಾರ ಮಾಯೆ ರವಿ |
ಸಂಕಾಸೆ ಬಹುಕಾಲ |
ಸಂಕಟವ ವಿನಾಶೆ |
ಮಂಕು ಮತಿಹರ ವಿಜಯವಿಠ್ಠಲನ |ಸಂಕಲ್ಪಕೆ | ಕ | ಳಂಕವಾಗದಂತೆ೩

೯೪
ಕಾವನಯ್ಯಾ ಜಗವನನುದಿನ |
ದೇವ ತಿರುಪತಿಯ ದಾಸಾ ಶ್ರೀ ವಲ್ಲಭವೆಂಕಟೇಶಾ ಪ
ತರಳ ಉತ್ತಾನಪಾದಿಯ ನೋಡು |
ಕರಿಯ ನೋಡು ಮಂದ ಕಾಯನ್ನ |
ಕುರೂಪಿಯಾದ ಕುಬಜೆ ವ್ಯಭಿ |
ಚರಿಯ ಅಜಮಿಳನ ಕಾಯದ ೧
ಬಡವನಾಗಿದ್ದ ಸುಧಾಮ ಕೊಲೆ
ಗಡಿಕನಾದ ಕಿರಾತನ್ನ ನೋಡು |
ನಡತೆ ತಪ್ಪಿದ ಸುಗ್ರೀವ ಕುಲವ |
ಕಡಿದ ಪಾರ್ಥನ್ನ ಕಾಯದಾ ೨
ಇಟ್ಟಿಗೆ ವಗೆದ ಪುಂಡಲೀಕನ |
ಬೆಟ್ಟಲೆ ಬೆಟ್ಟವ ನೆತ್ತಿಸಿದವನಾ |
ಪೆಟ್ಟನು ಫಣಿಗೆಯಿಟ್ಟ ಭೀಷ್ಮನ |
ಕಟ್ಟಿಬಿಗಿದ ಗೋಪಿಯ ಕಾಯದಾ೩
ಜನನ ನೋಡು ವಿದುರನ್ನ ಕ
ರುಣಿ ಎಂಬೆನೆ ರುಕುಮಾಂಗದ |
ಮನೆ ಉಳ್ಳವರೆ ಸನಕಾದಿಗಳು |
ಮಣಿಹಾಕಿಸಿದ ಭೂಪತಿಯ ಕಾಯದಾ೪
ಶಕುತಿ ಮಿಕ್ಕಾದ ಕರ್ಮಗಳು ನೋಡಾ |
ಭಕುತಿಗೆ ಮಾತ್ರ ಸಿಲುಕುವವನು |
ಭಕುತವತ್ಸಲ ಶ್ರೀನಿವಾಸಾ |
ಅಕಳಂಕ ರೂಪ ವಿಜಯವಿಠ್ಠಲ ೫

೩೦೫
ಕಾವೇರಿ ತ್ರಿಭುವನಕಾಯೆ | ಸುರಮುನಿಗೇಯೆ |
ಕಾವೇರಿ | ಆವಾವ ಜನುಮಕೆ ಬಿಡದೆ ಎನ್ನನು ಕಾಯೆ ಪ
ಅಜನನಂದನೆ ಚಂದ್ರವದಗೆ | ಚತುರಮಯೆ |
ಸುಜನರಿಗಾನಂದ ಸದಗೆ | ಧವಳಕಾಯೆ |
ಭಜಿಸಿ ಬೇಡುವೆ ನಿನಗಿದನೆ |
ಸೃಜಿಸಿ ಕೊಡುವುದು |
ತ್ರಿಜಗದೊಳಗೆ ಹರಿ |
ನಿಜ ಭಕ್ತರಪಾದ | ರಜವಾಗಿ ಯಿಪ್ಪ ಸ |
ಹಜ ಮತಿಯನುದಿನ | ಕುಜನ ನಿವಾರೆ ೧
ಕಲಿನಾಶ ಕಾರುಣ್ಯ ನಿಧಿಯೆ | ನಿರ್ಮಳಶೀಲೆ |
ಕಲಕಾಲಾ ಸುಜ್ಞಾನಾಂಬುಧಿಯೆ |
ತಲೆವಾಗಿ ನಮಿಸುವೆ |
ಹಲವು ಜನ್ಮಂಗಳ | ಒಳಗೊಳಗೆ ಬಿದ್ದು |
ಹಲಬುತಿಪ್ಪ ವ್ಯಾ |
ಕುಲವನು ಕಳೆದು ನಿ |
ಶ್ಚಲ ಮತದೊಳಗಿಡು ೨
ನಿತ್ಯ ಉತ್ತಮ ಗುಣಸಮುದ್ರೇ |
ಸಿಂಹಜೆ ಮಾರುದೃತೆ ಎನಿಪ ಲೋಪಾಮುದ್ರೆ |
ಕವೇರಕನ್ಯೆ ……ಗಿತ್ತ ಪೊಳೆವ ಸೂಭದ್ರೆ |
ಸತ್ಯ ಸಂಕಲ್ಪ ಶ್ರೀ ವಿಜಯವಿಠ್ಠಲನ್ನ ಭೃತ್ಯನೆನೆಸಿಕೊಂಡು
ಸ್ರೌತ್ಯದಿಂದಲಿ ಬಲು |
ನೃತ್ಯಮಾಡುವ ಸಂ |ಪತ್ತನೆ ಕರುಣಿಸು ೩

೨೪
ಕಾಶಿಯ ಹಾದಿಯಲಿ ಕೇಶವನಿದ್ದಾನೆ ರಾಮರಾಮ
ಕೇಶವನ ದಯದಿ ಕಾಶಿಯಾತ್ರೆಯ ಕಂಡೆ ರಾಮರಾಮ ೧
ಬದರಿಕಾಶ್ರಮದಲ್ಲಿ ನಾರಾಯಣನಿದ್ದಾನೆ ರಾಮರಾಮ
ಬದರಿಕಾಶ್ರಮ ಕಂಡೆ ನಾರಾಯಣನ ದಯದಿ ರಾಮರಾಮ ೨
ಪ್ರಯಾಗ ನದಿಯಲ್ಲಿ ಮಾಧವನಿದ್ದಾನೆ ರಾಮರಾಮ
ಪ್ರಯಾಗ ನದಿ ಮಿಂದೆ ಮಾಧವನ ದಯದಿ ರಾಮರಾಮ ೩
ಗೋಕುಲದಲ್ಲಿ ಶ್ರೀ ಗೋವಿಂದನಿದ್ದಾನೆ ರಾಮರಾಮ
ಗೋಕುಲವನು ಕಂಡೆ ಗೋವಿಂದನ ದಯದಿ ರಾಮರಾಮ ೪
ವಿಷ್ಣು ತೀರ್ಥದಲಿ ಶ್ರೀವಿಷ್ಣುವಿದ್ದಾನೆ ರಾಮರಾಮ
ವಿಷ್ಣು ತೀರ್ಥದಿ ಮಿಂದೆ ವಿಷ್ಣುವಿನ ದಯದಿಂದ ರಾಮರಾಮ ೫
ಮತ್ಸ್ಯತೀರ್ಥದಲ್ಲಿ ಮಧುಸೂದನನಿದ್ದಾನೆ ರಾಮರಾಮ
ಮತ್ಸ್ಯತೀರ್ಥದಿ ಮಿಂದೆ ಮಧುಸೂದನನ
ದಯದಿ ರಾಮರಾಮ೬
ತ್ರಿವೇಣಿಯಲ್ಲಿ ತ್ರಿವಿಕ್ರಮನಿದ್ದಾನೆ ರಾಮರಾಮ
ತ್ರಿವಿಕ್ರಮನ ದಯದಿ ತ್ರಿವೇಣಿಯಲ್ಲಿ ಮಿಂದೆ ರಾಮರಾಮ೭
ವಾಮನ ನಮ್ಮನು ಒಲಿದು ಕಾಯುವನಂತೆ ರಾಮರಾಮ
ವಾಮನನ ದಯದಿ ಭೂವೈಕುಂಠವ ಕಂಡೆ ರಾಮರಾಮ೮
ಶ್ರೀಧರ ನಮ್ಮ ಹೃದಯದಲ್ಲಿದ್ದಾನೆ ರಾಮರಾಮ
ಶ್ರೀಧರನ ದಯದಿಂದ ಹೃದಯವಾಸನ ಕಂಡೆ ರಾಮರಾಮ೯
ಋಷಿಗಳಾಶ್ರಮದಲ್ಲಿ ಹೃಷಿಕೇಶನಿದ್ದಾನೆ ರಾಮರಾಮ
ಹೃಷಿಕೇಶನ ದಯದಿ ಋಷಿಗಳಾಶ್ರಮ ಕಂಡೆ ರಾಮರಾಮ೧೦
ಪದ್ಮನಾಭದಲ್ಲಿ ಪದ್ಮನಾಭನಿದ್ದಾನೆ ರಾಮರಾಮ
ಪದ್ಮನಾಭನ ದಯದಿ ಪದ್ಮನಾಭನ ಕಂಡೆ ರಾಮರಾಮ೧೧
ಸಾಧು ಬೃಂದದಲ್ಲಿ ದಾಮೋದರನಿದ್ದಾನೆ ರಾಮರಾಮ
ಸಾಧು ಬೃಂದವ ಕಂಡೆ ದಾಮೋದರನ ದಯದಿ ರಾಮರಾಮ ೧೨
ಸಕಲ ತೀರ್ಥದಲ್ಲಿ ಸಂಕರ್ಷಣನಿದ್ದಾನೆ ರಾಮರಾಮ
ಸಂಕರ್ಷಣನ ದಯದಿ ಸಕಲ ತೀರ್ಥವೆ ಮಿಂದೆ ರಾಮರಾಮ ೧೩
ವಸುಧೇಯ ಮೇಲೆಲ್ಲ ವಾಸುದೇವನಿದ್ದಾನೆ ರಾಮರಾಮ
ವಾಸುದೇವನ ದಯದಿ ವಸುಧೆಯೆಲ್ಲವ ಕಂಡೆ ರಾಮರಾಮ ೧೪
ವೃದ್ಧಗಂಗೆಯಲ್ಲಿ ಪ್ರದ್ಯುಮ್ನನಿದ್ದಾನೆ ರಾಮರಾಮ
ಪ್ರದ್ಯುಮ್ನನ ದಯದಿ ವೃದ್ಧಗಂಗೆಯ ಮಿಂದೆ ರಾಮರಾಮ ೧೫
ಅಲಕನಂದೆಯಲ್ಲಿ ಅನಿರುದ್ಧನಿದ್ದಾನೆ ರಾಮರಾಮ
ಅಲಕನಂದನೆ ಮಿಂದೆ ಅನಿರುದ್ಧನ ದಯದಿ ರಾಮರಾಮ ೧೬
ಪುಣ್ಯಕ್ಷೇತ್ರದಲ್ಲಿ ಪುರುಷೋತ್ತಮನಿದ್ದಾನೆ ರಾಮರಾಮ
ಪುಣ್ಯಕ್ಷೇತ್ರವ ಕಂಡೆ ಪುರುಷೋತ್ತಮನ ದಯದಿ ರಾಮರಾಮ ೧೭
ವೈತರಣಿಯಲ್ಲಿ ಅಧೋಕ್ಷಜನಿದ್ದಾನೆ ರಾಮರಾಮ
ವೈತರಣಿದಾಟಿದೆ ಅಧೋಕ್ಷಜನ ದಯದಿ ರಾಮರಾಮ ೧೮
ನಿರ್ಮಲ ಗಂಗೆಲಿ ನರಸಿಂಹನಿದ್ದಾನೆ ರಾಮರಾಮ
ನಿರ್ಮಲ ಗಂಗೆಯ ಮಿಂದೆ ನರಸಿಂಹನ ದಯದಿ ರಾಮರಾಮ ೧೯
ವೈಕುಂಠಗಿರಿಯಲ್ಲಿ ಅಚ್ಯುತನಿದ್ದಾನೆ ರಾಮರಾಮ
ವೈಕುಂಠಗಿರಿ ಕಂಡೆ ಅಚ್ಯುತನ ದಯದಿ ರಾಮರಾಮ೨೦
ಜಾಹ್ನವಿಯಲ್ಲಿ ಜನಾದರ್ನಿದ್ದಾನೆ ರಾಮರಾಮ
ಜನಾರ್ದನನ ದಯದಿ ಜಾಹ್ನವಿಯಲಿ ಮಿಂದೆ ರಾಮರಾಮ೨೧
ಉಡುಪಿ ಕ್ಷೇತ್ರದಲ್ಲಿ ಉಪೇಂದ್ರನಿದ್ದಾನೆ ರಾಮರಾಮ
ಉಡುಪಿ ಕ್ಷೇತ್ರವ ಕಂಡೆ ಉಪೇಂದ್ರನ ದಯದಿ ರಾಮರಾಮ ೨೨
ಹರಿಯುವ ನದಿಯಲ್ಲಿ ಶ್ರೀ ಹರಿಯಿದ್ದಾನೆ ರಾಮರಾಮ
ಹರಿಯ ದಯದಿಂದ ಹರಿವ ನದಿಯ ಮಿಂದೆ ರಾಮರಾಮ ೨೩
ಕೃಷ್ಣಯೆಂದರೆ ಕಷ್ಟವು ಪರಿಹಾರ ರಾಮರಾಮ
ಕೃಷ್ಣನ ದಯದಿ ಸಕಲ ಕಷ್ಟ ಬಿಟ್ಟಿತು ರಾಮರಾಮ ೨೪
ಭಕ್ತಿಲಿಪ್ಪತ್ನಾಲ್ಕು ನಾಮ ಪೇಳುವರಿಗೆ ರಾಮರಾಮ
ಭುಕ್ತಿ ಮುಕ್ತಿಯ ನೀವ ವಿಜಯವಿಠ್ಠಲರೇಯ ರಾಮರಾಮ ೨೫

ಕಿಂಕರನ ಧ್ವನಿಗೆ ನೀ ಕೊಡು ಮತಿಯನು :

(ಐ) ಸರಸ್ವತೀ
೨೫೬
ಕಿಂಕರನ ಧ್ವನಿಗೆ ಕೊಡು ಮತಿಯನು ಪ
ಪಂಕಜಾನಾಭನ ಸೊಸೆ ಸರಸ್ವತಿಯೆ ಅ.ಪ.
ಸಕಲ ವಿದ್ಯಾರಂಭೆ ಕನಕ ಪುತ್ಥಳಿ ಬೊಂಬೆ
ವಿಕಸಿತ ಸುಲಲಿತಾಂಬೆ ಸುನಿತಂಬೆ
ನಿಕುರುಂಬೆ ಸುರರಂಭೆ ದಂತ ದಾಳಿಂಬೆ
ಭಕುತಿಯಲಿ ಕಾಂಬೆ ನಿನ್ನ ನಾಮವನುಂಬೆ೧
ಗಂಗೆ ಯಮುನೆ ಉಭಯ ಸಂಗಮೆ ಭಕ್ತ ಭಯ
ಹಿಂಗಿಸಿ ಕೊಡು ಅಭಯ ಅಖಿಳ ಧ್ಯೇಯೆ
ಮಂಗಳ ಶೋಭನ ಮಣಿಯೆ ಅಭ್ಯುದಯೆ ಅತಿ ಸದಯೆ
ರಂಗು ಮಾಣಿಕ ಪ್ರಭೆಯೆ ಸುಜನಾಬ್ಧಿಗೇಯೆ ೨
ಪ್ರಯಾಗ ವರಕ್ಷೇತ್ರವಾಸೆ ಪುಣ್ಯಕ್ಷೇತ್ರೆ
ಕ್ಷಯ ರಹಿತ ಮುನಿಸ್ತೋತ್ರೆ ಶುಭಚರಿತ್ರೆ
ನಯವಿನಯ ನೇತ್ರೆ ಪವಿತ್ರ ಅಜನ ಕಳತ್ರೆ
ಜಯಜಯೆ ವಿಜಯ ಸಿರಿ ವಿಠ್ಠಲನ ಪೌತ್ರೆ ೩

ಕೂಗಿತು ತಾಮ್ರದ ಚೂಡ
ಕ್ಷೀರಸಾಗರಶಯನನಲ್ಲದಿಲ್ಲಹ ಪರ ಇಲ್ಲ್ಲೆಂದು ಪ
ಪಕ್ಕಗಳೆರಡು ಚಪ್ಪರಿಸಿ ಡಂಗುರುವ ಹೊಯ್ಯೆ
ಸೂಕ್ಕಿದವರ ಎದೆ ಜರ್ಝರಿಸೆ
ರೆಕ್ಕಿಯ ಮುಖವೆತ್ತಿ ಹರಿಸರ್ವೋತ್ತಮನೆಂದು
ಕೊಕ್ಕಟೆ ಕೊಕ್ಕಟೆ ಕೊಕ್ಕಟ್ಟೆ ಕೋ ಎಂದು೧
ಒಂದು ಝಾವದಿ ಓಂಕಾರನೆಂದು ಕೂಗೆ
ಇಂದಿರಾಪತಿ ವಿಧಿಜನಕನೆಂದೂ
ಸಂದೇಹಪಡಬೇಡಿ ಸಕಲಾಂತರ್ಯಾಮಿ ಶ್ರೀ
ಬಿಂದುಮಾಧವನಲ್ಲದಿಹಪರವಿಲ್ಲವೆಂದು ೨
ಎರಡು ಝಾವದಿ ಪುರುಷೋತ್ತಮನೆಂದು
ಗರುಡಾಚಲ ನರಸಿಂಹನೆಂದು
ಮೂರನೆ ಝಾವಕ್ಕೆ ವೀರನಾರಾಯಣ
ಹರಿಗಯಾಗದಾಧರನಲ್ಲದಿಲ್ಲವೆಂದು೩
ನಾಲ್ಕನೆ ಝಾವದಲಿ ಬದರಿವರನಿಲಯ
ಏಕೋ ನಾರಾಯಣ ದೇವನೆಂದು
ಶ್ರೀ ಕಂಚಿವರದನೆ ಐದನೆ ಝಾವಕ್ಕೆ
ಗೋಕುಲಪತಿಯಲ್ಲದಿಹಪರ ಇಲ್ಲವೆಂದು ೪
ಯಾಮ ಆರರೊಳು ವ್ಯಾಸಮೂರ್ತಿ ಎಂದು
ರೋಮಕೋಟಿ ಬ್ರಹ್ಮರುದ್ರರೆಂದು
ಸಾಮಗಾಯನ ಕಾವೇರಿ ರಂಗೇಶ
ಸ್ವಾಮಿ ಅಳಗಿರಿ ತಿಮ್ಮನಲ್ಲದಿಲ್ಲವೆಂದು ೫
ಏಳು ಝಾವದಿ ವೇಣಿಮಾಧವನೆಂದು
ಮೇಲಗೋಟೆ ಚಳ್ಳಾಬಳ್ಳನೆಂದು
ಶ್ರೀಲೋಲ (ಆಯೋಧ್ಯಾ) ರಘುರಾಮ ಗಂಡಕಿ
ಸಾಲಿಗ್ರಾಮನಲ್ಲದಿಲ್ಲಹ ಪರ ಇಲ್ಲೆಂದು೬
ಝಾವ ಎಂಟರೊಳು ಶ್ವೇತ ವರಾಹನೆಂದು
ಮಾವ ಮರ್ದನ ಜನಾದರ್ನನೆಂದು
ಶ್ರೀ ಉಡುಪಿಯ ಕೃಷ್ಣ ವಿಜಯವಿಠ್ಠಲ ತಿಮ್ಮ
ದೇವನಲ್ಲದೆ ಬೇರೆ ಇಹಪರ ಇಲ್ಲವೆಂದು ೭

೩೭೮
ಕೂಗಿದರು ಧ್ವನಿ ಕೇಳದೆ ಶಿರ |
ಬಾಗಿದರು ದಯ ಬಾರದೆ ಪ
ಭೋಗಿಶಯನ ಭುವನಾಧಿಪತೇ ನಿನ್ನ |
ಆಗಮನವೆಂದಿಗೆ ಆಗುವುದು ಪ್ರಭೊಅ.ಪ
ಭಕ್ತರಿಗೊಲಿದವ ನೀನು ಖರೆ ಎ|
ನ್ನತ್ತ ನೋಡುವುದು ದೊರೆ ||
ಚಿತ್ತವಧಾನ ಪರಾಕು ಮಹಾಪ್ರಭು |
ಎತ್ತಣ ರಥವನು ಎತ್ತಿ ಬಾ ನೀಡು ದೊರೆ೧
ಸಿಂಧುಶಯನ ಶೇಷಾದ್ರಿ ವರ ಸಿರಿ |
ಮಂದಿರ ಭಕ್ತ ಕುಟುಂಬಧರ ||
ಸುಂದರ ಮೂರುತಿ ಒಂದಿನ ಸ್ವಪ್ನದಿ |
ಬಂದು ಪದದ್ವಯ ಚಂದದಿ ತೋರಿಸೊ೨
ಕರುಣಾ ಶರಧಿಯು ನೀನಲ್ಲವೇ ಕೃಷ್ಣ |
ಶರಣಾಗತರಿಗೆ ದೊರೆಯಲ್ಲವೆ ||
ಮೊರೆಹೊಕ್ಕವರಿಗೆ ಮರೆಯಾಗುವರೆ |
ಸರಿಯೆ ಜಗದೊಳು ವಿಜಯವಿಠ್ಠಲರೇಯಾ ೩

೨೭
ಕೂಗೆಲೋ ಮನುಜ ಕೂಗೆಲೋ ಪ
ಸಾಗರಶಯನನೆ ಜಗಕೆ ದೈವವೆಂದು ಅ
ಅಚ್ಯುತಾನಂತ ಗೋವಿಂದ ಮಾಧವ ಕೃಷ್ಣ
ಸಚ್ಚಿದಾನಂದೈಕ ಸರ್ವೋತ್ತಮ
ಸಚ್ಚರಿತ ರಂಗ ನಾರಾಯಣ ವೇದ
ಬಚ್ಚಿಟ್ಟವನ ಕೊಂದ ಮತ್ಸ್ಯ ಮೂರುತಿಯೆಂದು೧
ನರಹರಿ ಮುಕುಂದ ನಾರಾಯಣ ದೇವ
ಪರಮ ಪುರುಷ ಹರಿ ಹಯವದನ
ಸಿರಿಧರ ವಾಮನ ದಾಮೋದರ ಗಿರಿ
ಧರಿಸಿದ ಸುರಪಾಲ ಕೂರ್ಮ ಮೂರುತಿಯೆಂದು೨
ಪುರುಷೋತ್ತಮ ಪುಣ್ಯಶ್ಲೋಕ ಪುಂಡರೀಕ
ವರದ ಅಪಾರ ಸದ್ಗುಣನಿಲಯ
ಮುರುಮರ್ದನ ಮಂಜು ಭಾಷಣ ಕೇಶವ
ನಿರ್ಮಲ ದೇವ ಭೂವರಾಹಮೂರುತಿ ಯೆಂದು ೩
ನಿಗಮವಂದಿತ ವಾರಿಜನಾಭ ಅನಿರುದ್ಧ
ಅಘನಾಶ ಅಪ್ರಾಕೃತ ಶರೀರ
ಸುಗುಣ ಸಾಕಾರ ಜಗದತ್ಯಂತ ಭಿನ್ನ
ತ್ರಿಗುಣರಹಿತ ನರಮೃಗ ರೂಪಾನೆಂದು ೪
ವಟಪತ್ರಶಯನ ಜಗದಂತರ್ಯಾಮಿ
ಕಟಕ ಮುತ್ತಿನಹಾರ ಕೌಸ್ತುಭ ವಿಹಾರ
ತಟಿತ್ಕೋಟಿ ನಿಭಕಾಯ ಪೀತಾಂಬರಧರ
ನಿಟಿಲಲೋಚನ ಬಾಲವಟು ಮೂರುತಿಯೆಂದು೫
ವಿಷ್ಣು ಸಂಕರುಷಣ ಮಧುಸೂದನ ಶ್ರೀ
ಕೃಷ್ಣ ಪ್ರದ್ಯುಮ್ನ ಪ್ರಥಮ ದೈವವೆ
ಜಿಷ್ಣು ಸಾರಥಿ ರಾಮ ಅಚ್ಯುತಾಧೋಕ್ಷಜ
ಸೃಷ್ಟಿಗೊಡೆಯ ಭಾರ್ಗವ ಮೂರುತಿಯೆಂದು ೬
ಇಭರಾಜ ಪರಿಪಾಲ ಇಂದಿರೆಯರಸ
ನಭ ಗಂಗಾಜನಕ ಜನಾದರ್ನನೆ
ವಿಭುವೇ ವಿಶ್ವರೂಪ ವಿಶ್ವನಾಟಕ ಋ
ಷಭ ದತ್ತಾತ್ರೇಯ ಶ್ರೀ ರಾಮಮೂರುತಿಯೆಂದು ೭
ವೈಕುಂಠ ವಾಮನ ವಾಸುದೇವ ರಂಗ
ಲೋಕೇಶ ನವನೀತ ಚೋರ ಜಾರ
ಗೋಕುಲವಾಸಿ ಗೋವಳರಾಯ ಶ್ರೀಧರ
ಏಕಮೇವ ಶ್ರೀ ಕೃಷ್ಣ ಮೂರುತಿಯೆಂದು ೮
ಹೃಷಿಕೇಶ ಪರಮಾತ್ಮ ಮುಕ್ತಾಮುಕ್ತಾಶ್ರಯ
ಅಸುರ ಭಂಜನ ತ್ರಿವಿಕ್ರಮ ಕಪಿಲ
ಕುಸುಮ ಶರನಯ್ಯ ಶಾರ್ಙಧರಾಚಕ್ರಿ
ವಿಷಹರ ಧನ್ವಂತ್ರಿ ಬೌದ್ಧ ಮೂರುತಿಯೆಂದು ೯
ಸರ್ವನಾಮಕ ಸರ್ವಚೇಷ್ಟಕ ಸರ್ವೇಶ
ಸರ್ವಮಂಗಳ ಸರ್ವಸಾರ ಭೋಕ್ತ
ಸರ್ವಾಧಾರಕ ಸರ್ವ ಗುಣಗಣ ಪರಿಪೂರ್ಣ
ಸರ್ವ ಮೂಲಾಧಾರ ಕಲ್ಕಿ ಮೂರುತಿಯೆಂದು ೧೦
ಈ ಪರಿ ಕೂಗಲು ಆಪತ್ತು ಪರಿಹಾರ
ಅಪಾರ ಜನ್ಮ ಬೆಂಬಿಡದಲೆ ಸಪ್ತ
ದ್ವೀಪಾಧಿಪ ನಮ್ಮ ವಿಜಯವಿಠ್ಠಲರೇಯ
ಅಪವರ್ಗದಲ್ಲಿಟ್ಟು ಆನಂದಪಡಿಸುವ ೧೧

೩೭೯
ಕೃಷ್ಣ ಎನಗೆ ಬಂದರಿಷ್ಟವ ಕಳೆದು ನಿನ್ನ
ನಿಷ್ಠೆಯಲಿ ಇರುವಂತೆ ಇಷ್ಟೆ ಮಾತುರವೀಯೋ ಪ
ನಿರ್ದೋಷ ಗುಣವಾರುಧಿ
ನಿರ್ಧಾರವಾಗಿ ನುಡಿವೆ
ಸಿದ್ಧಾಂತ ಮತದಲಿ ಪೊದ್ದಿಪದೆ ಸಾಕು ೧
ಅಜ ಭವಾದ್ಯರು ನಿನ್ನ
ಭಜಿಪರಾರು ದೋಷ
ವ್ರಜದ ಮಾನವ ತಿಳಿದು ಭಜಿಸಬಲ್ಲೆನೆ ದೇವಾ ೨
ಮಧ್ವ ಸರೋವರದಲ್ಲಿ
ಇದ್ದು ಪೂಜೆಯಗೊಂಬ
ಮುದ್ದು ವಿಜಯವಿಠಲ ಬಿದ್ದೆ ನಿನ್ನಯ ಪದಕೆ ೩

೩೮೦
ಕೃಷ್ಣ ಕೃಷ್ಣ ಬಾಂಧವ ಸೃಷ್ಟ್ಯಾದಷ್ಟ ಕರ್ತ
ದೃಷ್ಟನಾಮಕ ಭವ ನಷ್ಟವಗೈಸೋದು
ಅಷ್ಟರೊಳಗೆ ಹರಿ ವಿಷ್ಣು ಸರ್ವೋತ್ತಮ
ಇಷ್ಟೆ ಪೇಳುವದಕೆ ನಿಷ್ಟಿಯನೀಯೊ ಪ
ಈ ಸುದಿನವಾರಭ್ಯ ಕ್ಲೇಶದೊಳಗೆ ಬಿದ್ದಾ
ಯಾಸ ಬಡುತಲಿದ್ದೆ ಲೇಶವಾದರು ಸುಖ
ಲೇಶಗಾಣದಿರಲು ಏಸು ಜನ್ಮದ ಪುಣ್ಯ
ಸೂಸಿತೋ ನಿನ್ನಯ ದರುಶನ ಲಾಭವಾಗೆ
ದೇಶದೊಳಗೆ ನಿನ್ನ ದಾಸರ ದಾಸನೆನಿಸಿಕೊಂಬ
ಈ ಸುಲಭ ವೊಂದಿಸನುದಿನ ದು
ರಾಶೆಯ ಬಿಡಿಸೆಂದು
ನಾಶರಹಿತ ಗುಣರಾಶಿ ರಮೇಶ ೧
ವೇದಪರಾಯಣ ಸಾಧುಗಳರಸಾ ವಿ
ನೋದಿಗಾ ಪಳ್ಳಿಗನೆ ಆದಿದೈವವೆ ತೀರ್ಥ
ಪಾದ ಜಗತ್ಯೆಂತ ಭೇದಾ ಶೃಂಗಾರ ವೇಣು
ನಾದ ಸನಕಾದಿ ಮುನಿವಂದಿತಾ
ಮಾಧವ ಮಹಿಧರ ಯಾದವ ಕರುಣ ಪ
ಯೋಧದಿ ಎನ್ನಪರಾಧವನೆಣಿಸದೆ
ಸಾಧನ ಕೆಡಿಸುವ ಕ್ರೋಧವ ಬಿಡಿಸಾರಾಧನೆ ತಿಳಿಯದು
ಭೂದೇವರೊಡಿಯಾ ೨
ಕರವಾ ಬಿಡದಿರೆನ್ನ ಕರಣ ಶುದ್ಧವ ಮಾಡು
ಕರದ ಮಾತಿಗೆ ಭಯಂಕರವ ಓಡಿಸಿ ಮಂದ
ಕರಿಯ ಕಾಯಿದ ಶುಭಕರ ಕಾಳಿ ಮಥನ ಸಂ
ಕರ ಪಾಲಾ ನಿತ್ಯ ಚಾಮಿ ಕರ ರತುನ ಭೂಷಿತ
ಕರಡಿಸುತಿಯ ಪತಿ ಕರಸಿದ ಹರಿನಿಶಕರ
ಕುಲ ರತುನಾ ಕರಕೆ ಉಡುಪ ಮಕರಧ್ವಜಪಿತ
ಶಿರಿ ವಿಜಯವಿಠ್ಠಲ ಪದ ಕರದು
ತೋರಿಸೊ ಭಜಕರರೊಳಗಿಡುವುದು ೩

೧೭೨
ಕೃಷ್ಣನ್ನ ಬಲೂತ್ರ‍ಕಷ್ಟನ್ನ ವಿಶಿಷ್ಟನ್ನ ಸ್ತುತಿಸಿ ತುಷ್ಟನ್ನ ಪ
ಗೋಪಳ್ಳಿಯೊಳಗಂದು ನಿಂದನ್ನಬಲುಗೋಪಿಯರ ಕೂಡ ನಂದನಾಗೋಪಿ ಚಂದನದಿಂದ ಬಂದನ್ನಾನಮ್ಮಗೋಪಾಲ ವಿಷ್ಣು ಗೋವಿಂದನ್ನ ೧
ಅಪಾರ ಮಹಿಮ ನೆನೆಸುವನ್ನಾಭüಕುತ ಗಾಪತ್ತಬರಲು ಮಾಣಿಸುವನ್ನಾತಾಪಸಿಗಳಿಗೆ ಕಾಣಿಸುವನ್ನಾದಶರೂಪವ ಧರಿಸಿ ಜನಿಸುವನಾ ೨
ರಜತಪೀಠ ಪುರವಾಸನ್ನಮಹರಜನೀಚರರ ವಿನಾಶನ್ನತ್ರಿಜಗದೊಳಗೆ ಪ್ರಕಾಶನ್ನನಮ್ಮವಿಜಯವಿಠ್ಠಲ ಮಾನಿಸನ್ನ ೩

೩೦೧
ಕೃಷ್ಣವೇಣಿ ಕಲ್ಯಾಣಿ
ಕಷ್ಟ ಪರಿಹರಿಪೆ ನಿತ್ಯ ಸಾಗರನ ರಾಣಿ ಪ
ಅಜನ ನಿರೂಪದಲಿ ಜಾಬಾಲಿಮುನಿ ಬಂದು
ಭಜಿಸಿದನು ನಿನ್ನ ಬಲುದಿವಸಂಗಳು
ನಿಜವಾಗಿ ಹರನ ಜಡೆಯಲ್ಲಿ ಉದ್ಭವಿಸಿದೆ
ತ್ರಿಜಗದೊಳಗೆ ಮೆರೆದೆ ತ್ರಿದಶಾಮರವಂದಿತೆ ೧
ಕನ್ಯಾರಾಶಿಗೆ ಜೀವ ಬಂದು ಪ್ರಾಪುತನಾಗೆ
ಹನ್ನೆರಡು ವರುಷಕೆ ಒಮ್ಮೆ ಬಿಡದೇ
ಮನ್ನಿಸಿ ಭಕುತಿಯಿಂದ ಒಂದು ಮಜ್ಜನಮಾಡೆ
ಧನ್ಯನ ಮಾಳ್ಪೆ ಬಲು ಘನ್ನ ತರಂಗಿಣಿ ೨
ಎತ್ತ ನೋಡಿದರತ್ತ ನಾಲ್ಕುವರೆ ಯೋಜನವು
ಕ್ಷೇತ್ರ ಪುಣ್ಯದೇವಿಯೆನಿಸಿಕೊಂಬೆ
ಸ್ತುತಿಸಲಳವೇ ನಿನ್ನ ಮಹಿಮೆಯ ಅನುಗಾಲ
ಮತ್ತಗಜಗಮನೆ ಮಲದೂರೆ ಮುಕ್ತಿಧಾರೆ ೩
ಪೋಗದ ಪಾಪಗಳಿರಲು ನಿನ್ನ ದರುಶನವು
ಆಗುತ್ತ ಓಡಿದವು ನೆಲೆಗಾಣದೆ
ಬಾಗಿ ನಮೋ ನಮೋಯೆಂಬ ಭಾಗವತರ ಮನೆಯ
ಬಾಗಿಲ ಕಾಯ್ವ ಭಾಗ್ಯವ ಕೊಡು ಕರುಣದಲಿ ೪
ಕಲಿಯುಗಕೆ ನೀನೇ ವೆಗ್ಗಳವೆಂದು ಬುಧಜನರು
ಒಲಿದು ಕೊಂಡಾಡುವರು ಸತತದಲ್ಲಿ
ಜಲನಿಧಿಯ ಎರಡು ಮೊಗದಲಿ ಮೆರೆದೆ ಮಹತಟಿನಿನೆಲೆಗೊಳಿಸು ವಿಜಯವಿಠ್ಠಲ ಚರಣದಲ್ಲಿ ೫

೩೮೧
ಕೃಷ್ಣಾ ನಿನ್ನ ಕನಿಷ್ಟ ಪೊಳವ ವುಂ
ಗುಷ್ಟ ಭಜಿಸುವ
ನಿಷ್ಠ ಜನರ ಉಚ್ಚಿಷ್ಟ ಎನಗದು
ಮೃಷ್ಠಾನ್ನವಾಗಲಿಷ್ಟೇ ಬೇಡಿದೆನೊ ಪ
ನರಲೋಕದ ಸುಖ ಪರಿಪರಿಯಲ್ಲಿ
ಅರಿದೆನದರೊಳು
ಪರಮ ಸೌಖ್ಯ ಎಳ್ಳರೆ ಅನಿತಿಲ್ಲ
ಬರಿದೆ ಜನನ ಮರಣ ಪರಿಯಂತಾ
ಅರಸಿ ನೋಡಲು ದುರಿತ ವಾರುಧಿ
ಧರೆಯೊಳಗೆ ನಿಂದಿಸಲಾರೆ ಸಾಕು
ಶರಣು ಹೊಕ್ಕೆನು
ಕರುಣಪಾಂಗನೆ ಕರವಿಡಿದು ಸಲಹೋ ೧
ಆವುದುಂಟದು ದೇವ ಮಾಣಿಸು
ಈ ವರವ ಕೊಂಡು ನಾ ಒಂದನು ವಲ್ಲೆ
ಭಾವಶುದ್ಧ ವಾಕ್ಯವೆ ನಿಶ್ಚಯವೊ
ಬೇವು ಬೆಲ್ಲವೆ
ನೋವು ಬಯಿಪ ಮಾನವ ನವ ಮುಕ್ತಾ ನೀ
ಕಾವ ನೈಯನೆ
ಕಾವ ಜೀವ ನಿನ್ನಂಘ್ರಿ ಸೇವೆ ಸಂಪದವೊ ಜಗತ್ರಯವ ೨
ಹಡಗದೊಳಗಿಂದ ತಡಿಯದೆ ಬಂದಾ
ಕಡಗೋಲ ನೇಣ ಪಿಡಿದ ಪಡುವಲಾ
ಗಡಲ ತೀರದ ಉಡುಪಿನಲಿ ನಿಂದ
ಅಡಿಗಡಿಗೆ ಪೂಜೆ
ಬಿಡದೆ ಯತಿಗಳಿಂ
ದೊಡನೆ ಕೈಕೊಂಬ ಸಡಗರುಳ್ಳ
ಉಘಡ ವಿಜಯ ವಿಜಯವಿಠ್ಠ
ಲೊಡಿಯ ಭಕ್ತರ ಬಿರುದಿನ ಕಡು ಸಾಹಸಮಲ್ಲ೩

೧೭೩
ಕೃಷ್ಣಾರ್ಪಿತವೆಂದು ಕೊಡುಲು ಎ-|
ಳ್ಳಷ್ಟಾದರೂ ಮೇರು ಪರ್ವತ ಮೀರುವದು ಪ
ಗಣ್ಯವಿಲ್ಲದೆ ಶಿಷ್ಯ ಸಹಿತ ಹರರೂಪ ಮುನಿ ಅ-
ರಣ್ಯದಲಿ ಪಾಂಡವರು ಇರಲು ಬಂದು ||
ಪುಣ್ಯಬೇಕೆಂದೆನಲು ಬಂದು ದಳ ಶಾಖಾ ಕಾ- |
ರುಣ್ಯದಲಿ ಹರಿ ಎನಲು ಅಪರಿಮಿತವಾದುದು ೧
ಹಸ್ತಿನಾಪುರದಲ್ಲಿ ಸಕಲ ದೇವಾದಿಗಳ |
ಮಸ್ತಕದ ಮಣಿ ವಿದುರನ ಮನೆಯಲ್ಲಿ ||
ಹಸ್ತು ಬಂದುದಕೆ ಉಪಾಯವೇನೆಂದೆನಲು |
ಹಸ್ತದೊಳು ಪಾಲ್ಗುಡತಿಯೆರಿಯೆ ಮಿಗಿಲಾದುದೊ೨
ಅಣು ಮಹತ್ತಾಗಲಿ ಆವಾವ ಕರ್ಮಗಳು |
ತೃಣನಾದರರಿತು ಅರಿಯದೆ ಮಾಡಲು ||
ಕ್ಷಣ ತನ್ನದೆನ್ನದೆ ಅರ್ಪಿತನೆ ನಿಕ್ಷೇಪ |
ಗುಣನಿಧಿ ವಿಜಯವಿಠ್ಠಲನ ಪುರದಲ್ಲಿ ೩

೪೫೪
ಕೇಳು ಮನವೆ ಸುಜನನಾಗಿ ಬಾಳು ಬಾಲ ಭಕುತಿಯಲ್ಲಿ
ಕೇಳು ಶ್ರವಣದಲ್ಲಿ ಪೇಳು ಹರಿಯೇ ದೈವವೆಂದು ಪ
ನಿಲ್ಲಿಸು ಹರಿಯ ವೊಲಿಸುವಳಿಗೆ ಗಳಿಸು ಜ್ಞಾನ
ವಳಿಸು ಪಾಪಕಲಿಯಾ ಬೆಳಿಸು ಘಳಿಸು
ತಾಮಸ ಸುಳಿಸು ಮಾರ್ಗ
ಬಲಿಸು ಧ್ಯಾನವ ಉಳಿಸು ಮನವ
ಬೆಳಿಸು ಚೆನ್ನಾಗಿ ಗೆಲಿಸು ವ್ರತವ
ಚಲಿಸು ಯಾತ್ರೆಯ ಇಳಿಸು ಮಮತೆ
ಕಲಿಸು ಮಿಥ್ಯವ ಥಳಿಸುವಂತೆ ಕೇಳು ಮನವೆ ೧
ನೋಡು ಕಣ್ಣಲಿ ಮಾಡು ಸೇವೆಯ ಪಾಡಿ
ಕೀರ್ತನೆ ಕಾಡು ರಂಗನ
ಬೇಡು ದೈನದಿ ನೀಡು ಹಸ್ತವ
ಬಾಡು ನಿನ್ನೊಳಗಾಡು
ತಾಡುತಾ ಕೇಡು ಒದೆದು ಬಿಡು ನೆಚ್ಚ
ದೀಡ್ಯಾಡ್ಯೋ ಕಾಯವ ಗೂಢದ ಮಾತಾಡು ಕಲಾಪ
ಬೇಡರಟ್ಟಲು ಮೋಡು ನಿಲ್ಲದೆ ಪಾಡು ಪಂಥವಾ ೨
ಕರಿಯೊ ಹರಿಯಾ ಬೆರಿಯೆ ಸಂಗಡ
ನೆರಿಯೊ ವೊಡನೆ ಸುರಿಯೊ ನಾಮವ
ಅರಿಯೊ ಮಹಿಮೆ ಮರಿಯೊ ವ್ಯಾಕುಲ
ಮೆರಿಯೊ ಗುಪ್ತದಿ ಜರಿಯೊ ಹೀನರಾ ಸರಿಯೊ ಮಿರಲು
ಗುರಿಯೊ ತಮಕ್ಕೆ ಸರಿಯೆ ಲಾಲಿಸು ಧರಿಯೊಳಗೆ ನೀ
ಮರಿಯೊ ಯೆನಿಸಿ ಹರಿಯೊಲಿದರೆ ದೊರಿಯೊ
ವಿಜಯವಿಠ್ಠಲನೆಂದು ೩

೨೭೦
ಕೈಲಾಸವಾಸ ಗೌರೀಶ ಈಶ ಪ
ತೈಲ ಧಾರೆಯಂತೆ ಮನಸುಕೊಡು ಹರಿಯಲ್ಲಿ ಶಂಭೋ ಅ
ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೆ
ಅಹಿಭೂಷಣನೆ ಎನ್ನವಗುಣಗಳೆಣಿಸದಲೆ
ವಿಹಿತ ಧರ್ಮದಿ ಕೊಡು ವಿಷ್ಣುಭಕುತಿಯ ಶಂಭೋ ೧
ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಲ್ಲದೆ
ದನುಜ ಗಜಮದ ಹರಿಯೆ ದಂಡ ಪ್ರಣಾಮವ ಮಾಳ್ಪೆ
ಮಣಿಸು ಈ ಮನವ ಸಜ್ಜನರ ಚರಣದಿ ಶಂಭೋ೨
ಭಾಗೀರಥೀಧರನೆ ಭಯವ ಪರಿಹರಿಸೈಯ ಲೇ
ಸಾಗಿ ಒಲಿದು ಸಂತತ ಶರ್ವದೇವ
ಭಾಗವತ ಜನಪ್ರೀಯ ವಿಜಯವಿಠ್ಠಲನಂಘ್ರಿ
ಜಾಗುಮಾಡದೆ ಭಜಿಪ ಭಾಗ್ಯವನು ಕೊಡೋ ಶಂಭೋ೩

೨೨೩
ಕೊಂಡಾಡಲಳವೆ ಕಪಿಕುಲೋತ್ತಮ
ನಿನ್ನ ಚಂದ್ರಕೋಟಿ ತೇಜ ಚಕ್ರಧರನ ಭೃತ್ಯಾ ಪ
ತ್ರಿದಶ ದೈತ್ಯರು ಕೂಡಿ ತೀವ್ರದಿಂದಲಿ ತಾವು
ವೊದಗಿ ಮಂದರ ಶೈಲ ತವಕದಿ ತಂದಾಗ
ಉದಧಿಯೊಳಿಟ್ಟು ಸರ್ಪವನೆ ಸುತ್ತಿದರು ಪಿಡಿದು
ಮುದದಿಂದ ಕಟಿಯಲು ಮುನಿದು ಮಹರೋಷದಿ
ಉದಧಿಯೊಳು ವಿಷ ಹೊರಡಲು
ಅದು ನೋಡಿ ಮದನಾರಿ ಕಂಗೆಡಲು ಅಂಜದೆ ನೀನು
ಉದರದೊಳು ತಾಳಿದಿ ಸುರರು ಸುಖಬಡಲು ೧
ವಾತನ ಸುತನಾಗಿ ವಾಲಿಯ ತಮ್ಮನ ಕೂಡಿ
ಭೂತಳಾಧಿಪ ರಾಮಚಂದ್ರನ ಪದವಾರಿ
ಜಾತಕ್ಕೊಂದನೆ ಮಾಡಿ ವೃತ್ತಾಂತವನು ಪೇಳಿ
ಆತುರದಲಿ ಪುರಹೂತನಂದನ ನಿ
ರ್ಭೀತನ ಕೊಲ್ಲಿಸಿ ಶರಧಿಯನು ಹಾರಿ
ಸೀತೆಗುಂಗುರ ಕೊಟ್ಟು ಬೆಳೆದ ಚಲ್ವ-
ಮಾತುಲಿಯನು ಕಿತ್ತಿಟ್ಟು ಅಕ್ಷನ ಕೊಂದು
ವಾತಹತಮಾಡಿ ಲಂಕಾಪುರವ ಸುಟ್ಟ ೨
ಪಾಂಡುಚಕ್ರವರ್ತಿ ಕುಂತಿಯಲಿ ಜನಿಸಿ
ಮಂಡಲದೊಳು ಮಹಾಶೂರನೆನಿಸಿ ವಿಷ
ಉಂಡು ದಕ್ಕಿಸಿಕೊಂಡು ಉರಗಲೋಕದಲ್ಲಿದ್ದು
ತಾಂಡ ಭಾದಿಯ ಗೆದ್ದು ಹಿಡಿದು ಹಿಡಂಬನ
ಹಿಂಡಿ ಬಕಾಸುರನ ಖಂಡರಿಸಿ ಕೀಚಕನ
ಮಂಡಲದೊಳಗೆ ನಿಂದೆ ವಿರಾಟನ್ನ
ಕೊಂಡೊಯ್ಯೆ ಬಿಡಿಸಿ ತಂದೆ ಕುರು ನೃಪನ
ದಿಂಡುಗೆಡುಹಿ ಕದನದಲಿ ವೇಗ ಕೊಂದೆ ೩
ಮಧ್ವಾವತಾರವ ಮಾಡಿ ದುರ್ಮತದಿಂದ
ಬುದ್ಧಿಹೀನರಾಗಿ ಬಾಳಿದ ಮನುಷ್ಯರ
ಶುದ್ಧಾತ್ಮರನ ಮಾಡಿ ಶುಭವೇಗದಲಿ ಶ್ರೀ
ಮುದ್ರೆಧಾರಣ ಕೊಟ್ಟು ಜ್ಞಾನಾಂಬುಧಿಯೊಳಿಟ್ಟು
ಅದ್ವೈತ ಮತ ಕಾಲಿಲೊದ್ದು ಪರವಾದಿ
ಎದ್ದೋಡಿ ಬಂದು ತಿರುಗಿ ನಿಮ್ಮ
ಪದ್ಮಪಲ್ಲವಕ್ಕೆರಗಿ ಬೇಡಿಕೊಳ್ಳಲು
ಉದ್ಧರಿಸಿ ಅವರವರ ದೋಷ ಹೋಯಿತು ಕರಗಿ೪
ಭೂವ್ಯೊಮ ಪಾತಾಳದೊಳಗೆ ಎದುರುಗಾಣೆ
ವಾಯು ಹನುಮ ಭೀಮ ಮಧ್ವನೆಂದಿನಿಸಿದೆ
ಕಾಯಜ ಜನಕನ ಪದವ ಪೂಜಿಸಿ ಅಂಬು
ಜೆಯನ ಪದವಿ ಪಡೆದು ಹರ ಇಂದ್ರಾದಿಗಳಿಗೆ
ನಾಯಕನೆನಿಸಿದೆ ನಾನಾ ದುರಿತವಾಗಿ
ಮಾಯಿಗಳೆಲ್ಲ ತರಿದೆ ಸುಭಕುತರ
ಆಯತದಿಂದ ಪೊರೆದೆ ವಿಜಯವಿಠ್ಠಲರಾಯ ವೆಂಕಟನ ಒಲಿಮೆಯಿಂದಲಿ ಮೆರೆದೆ೫

೩೮೨
ಕೊಡುವವನು ನೀನು ಕೊಂಬುವನು ನಾನು ಪ
ಬಡಮನದ ಮನುಜನ ಬೇಡಿ ಫಲವೇನುಅ.ಪ
ಹದಿನಾರು ಹಲ್ಲುಗಳ ಬಾಯ್ದೆರದು ಬೇಡಿದರೆ
ಇದು ಸಮಯವಲ್ಲೆಂದು ಪೇಳಿ ತಾನು
ಮದನ ಕೇಳಿಗೆ ನೂರನೊಂದಾಗಿ ನೋಡುವನು
ಮದಡ ಮಾನವನೇನು ಕೊಡಬಲ್ಲ ಹರಿಯೆ ೧
ಗತಿಯಲ್ಲವೆಂತೆಂದು ನಾನಾ ಪ್ರಕಾರದಲಿ
ಮತಿಗೆಟ್ಟು ಪೊಗಳಿದರೆ ಅವನು ತನ್ನ
ಸತಿಸುತರ ಕೇಳಬೇಕೆಂದು ಮೊಗ ತಿರುಹುವ
ಅತಿ ದುರುಳ ಮತ್ತೇನು ಕೊಡಬಲ್ಲ ಹರಿಯೆ ೨
ಹೀನ ವೃತ್ತಿಯ ಜನರಿಗಾಸೆಯನು ಬಡುವದು
ಗಾಣದೆತ್ತು ತಿರುಗಿ ಬಳಲಿದಂತೆ
ಭಾನು ಕೋಟಿ ತೇಜ ವಿಜಯವಿಠ್ಠಲರೇಯ
ನೀನಲ್ಲದನ್ಯತ್ರ ಕೊಡುಕೊಂಬುರಂಟೆ ೩

೨೦೮
ಕೊಲ್ಹಾಪುರ ನಿಲಯ ಸರಸಿಜಾಲಯ ಹರಿ
ವಲ್ಲಭೆ ಬಲು ಸುಲಭೆ ಪ
ಮೂಕಾಸುರನ ಕೊಂದು ಮೂಕಾಂಬಿಕೆನಿಸಿದೆ
ಲೋಕ ಜನನಿ ಕಾಮಿನಿಸಾಕಾರ ಗುಣವಂತೆ
ಶ್ರೀ ಕಮಲೆ ಎಲ್ಲಿನಾ ಕಾಣೆ ನಿನಗೆ ಸಮಾ ೧
ಕೋಲ ಮುನಿಗೊಲಿದಮಲ ಮೃಗನಾಭಿ
ಫಾಲೆ ಸಜ್ಜನರ ಪಾಲೆಬಾಲೆ ಜಾತರಹಿತೆ
ಲೀಲೆ ನಾನಾ ಪುಷ್ಪಮಾಲೆ ಕಮಲಹಸ್ತೆ೨
ಶಿವದುರ್ಗೆ ನೀನೆಂದು ಶ್ರವಣಮಾಡಲು ಮನುಜ
ರವರವ ನರಕದಲ್ಲಿ ಬವಣೆಪಟ್ಟ ಮೇಲೆ
ಸವಿಯದಂತೆ ತಮಸುನಿವಹದೊಳಗೆ ಇಪ್ಪನು ೩
ಕಾಮತೀರ್ಥ ಬಳಿಯ ಪ್ರೇಮದಿಂದಲಿ ನಿಂದೆ
ಸೀಮೆಯೊಳಗೆ ನಿನ್ನಯ ನಾಮಕೊಂಡಾಡಲು
ತಾಮಸಗಳ ಕಳೆದು ನಿಷ್ಕಾಮ ಫಲ ಪಾಲಿಪೆ ೪
ಧರೆಯೊಳು ಷೋಡಶಗಿರಿಯ ಪ್ರಾದೇಶ ಮಂ
ದಿರ ರಚಿಸಿಕೊಂಡು ಇಪ್ಪೆ ವರವ ಕೊಡುವೆ ನಿತ್ಯ
ಸಿರಿ ವಿಜಯವಿಠ್ಠಲನ್ನಪರಮ ಪ್ರೀತಿ ಅರ್ಧಾಂಗಿ ೫

೪೫೫
ಕೋಪವೆ ತಾಪ ಬ್ರಹ್ಮೇತಿ
ಶ್ರೀ ಪುರುಷ ಬಾಲ ಅಣುರೇಣುತ್ರಿಣಗಳಿಗೆಲ್ಲ ಪ
ವಿಷ್ಣಪದೆ ಯಮುನೆ ಸರಸ್ವತಿ ಸಿಂಧು ಕಾವೇರಿ
ಕೃಷ್ಣವೇಣಿ ಗೋದೆ ತುಂಗೆ ನರ್ಮದಾ
ಇಷ್ಟು ಮಹಾನದಿಯಲ್ಲಿ ಮುಣಗಿ ಮಿಂದರೇನು
ಕಾಷ್ಟಕಭ್ಯಾಂಗವನು ಮಾಡಿ ನೀರೆರದಂತೆ೧
ಭಕುತಿಯಲಿ ನಡೆದು ಭವಿಷೊತ್ತರ ಪೇಳಿದರೇನೊ
ವಿಕಳಮತಿಯಲಿಟ್ಟು ವರನಾದರೇನು
ಕಕುಲಾತಿ ತೊರೆದು ನಿಷ್ಕಳಂಕನಾದರೆ ಏನು
ಶುಕಪಕ್ಷಿ ಅನುಗಾಲ ಓದಿ ತಿಳಿದಂತೆ ೨
ಜ್ಞಾನದಲ್ಲಿ ಪರರಿಗೆ ನ್ಯಾಯ ಪೇಳಿದರೇನು
ಹಾನಿ ನೆನೆಸಿ ಕೀರ್ತಿಯ ಪಡೆದರೇನು
ಧ್ಯಾನದಲಿ ಮಾನಸ ಪೂಜೆ ಮಾಡಿದರೇನು
ಶ್ವಾನದಲಿ ಬೂದಿಯೊಳಗೆ ವರಗಿ ಇದ್ದಂತೆ ೩
ಯಾತ್ರೆ ತೀರ್ಥಂಗಳು ತೊಳಲಿ ತಿರುಗಿದರೇನು
ಪಾತ್ರಾಪಾತ್ರನರಿದು ನಡೆದರೇನು
ಗಾತ್ರವನು ಬಳಲಸಿ ನೇಮ ಮಾಡಿದರೇನು
ಮೂತ್ರದಲಿ ತೊಳೆದು ಅಮೃತನ್ನ ಉಂಡಂತೆ ೪
ವಡೆವ ಮಡಕಿಗೆ ಚಿಂತಾಮಣಿ ತಂದು ಹಚ್ಚಲು
ಗಡಿಗಿ ಅಲ್ಲದೆ ಅದು ಪರುಶಾಗೋದೆ
ಬಿಡದೆ ಕೋಪಿಷ್ಠನು ಬಲು ಶಾಂತನೆನೆಸಿದರೆ
ವೊಡಿಯ ಸಿರಿ ವಿಜಯವಿಠ್ಠಲನೊಲಿದು ಮೆಚ್ಚನಯ್ಯಾ ೫

೫೧೨
ಕ್ಲೇಶಮಾಡಲಿ ಬೇಡ ಮನವೆ ನೀನೂ
ದೇಶದೊಳಗೆ ಕೇಳು ಜ್ಞಾನಿಗಳ ಸಮ್ಮತಾ ಪ
ವಸಿಷ್ಠ ಮಹಾಋಷಿಗೆ ನೂರುಮಂದಿ ಸುತರು
ಅಸಮಸಾಹಸರು ಬಲು ಶೀಲಜ್ಞರು
ಕುಶಲದಲಿ ಇರುತಿದ್ದು ಕಾಲ ಮೃತ್ಯುವಿನ ಕೈ
ವಶವಾಗಿ ಹೋದರದು ನೋಡು ದು:ಖವ ಬಿಡು ೧
ಕೃಷ್ಣ ಸೋದರಮಾವ ಮತ್ತೆ ಭೀಮಸೇನ
ಜೇಷ್ಠಪಿತ, ಪಾರ್ಥನು ಪಡೆದ ಶೂರ
ಇಷ್ಟು ಜನ ಇರಲಾಗಿ ಅಭಿಮನ್ಯು ದೇಹವನು
ಬಿಟ್ಟು ಪೋಗಲು ಒಬ್ಬರಾದರು ಉಳುಹಿದರೆ೨
ಇಂಥವರಿಗೀತ್ಯರನು ನಿನಗಾವ ಸ್ವಾತಂತ್ರ್ಯ
ಸಂತೋಷವೆ ಬಡು ಧೈರ್ಯದಲ್ಲಿ
ಕಂತು ಜನಕ ನಮ್ಮ ವಿಜಯವಿಟ್ಠಲನಂಘ್ರಿ
ಅಂತರಂಗದಲಿಡು ಮುಂದಿನಗತಿ ಬೇಡು ೩

೨೫
ಕ್ಷಿತಿಪರನ ಸ್ಮರಿಸಿ ಜನರು
ಕ್ಷಿತಿಪರನ ಸ್ಮರಿಸಿ ನಿಮಗಪವಿಜಯವೆಂದಿಗೆ ಇಲ್ಲ-ಸು
ಪಥವಾಗಿಪ್ಪದನುದಿನ ಸಂಚರಿಪ
ಮಾರ್ಗತಪನಾಬ್ಬವಂಶದಲಿ-ದಿ
ಪುತರಾದ ವರನೆ ಕೃಪವನಧಿ ಹರಿವೊಲಿವಾ ಪ
ಬಲಿ ವಿಭೀಷಣ ರಂಧ್ರಗಣ ರಂತಿರೇವತ
ಮಲಯಧ್ವಜ ರಾಮಭೋಜಾ ಯದು
ಬಲಗಿರಿಕ ಗಾಂಧಾರ ಗಯಸೇತು ಈಶ್ವರ
ಕುಲಿಶಧ್ವಜ ಸಗರ ವೀರಾ
ನಳ ಹರಿಶ್ಚಂದ್ರ ಚಂದ್ರಕಾಂತ ಆಕಾಶ
ಸುರಭ ಶಶಿಬಿಂದು ಮಾಂಧಾತ ಧ್ರುವ ಶಿವಪ್ರಿಯ
ಛಲಭರತ ಆಷ್ಮಾಕ ವಾಲಿ ಲೋಹಿತನೃಗಸು
ಬಲ ಕುಕ್ಷಿ ಯದು ಭೂಷಣ೧
ವಸುಪ್ರದ ಸುಖವೀರ್ಯ ಯದು ಕುರು ಋತುಪರ್ನ
ವಸುಧರ್ಮ ಖಟ್ಟಾಂಗ ಧೃತರಾಷ್ಟ್ರ ಸೌವರ್ನ
ಶಿಶುಪಾಲ ಪವನದೇವಕ ಜನಕವೈದರ್ಭ
ಅಸಮಂಜ ಸಂಜನಾಭಾ
ವಸುದತ್ತ ಸೌಗಂಧಿಮಣಿ ಮುಕ್ತಕೇಸರೆ
ನಿಸಿದಮಣಿ ವಾಹನಾ ಮಹವೀರ್ಯ ಕ್ಷೇಮಕ
ಕುಶಿಕ ಕುಂಡಿನ ಹಸ್ತಿ ಸಂಪಾತಿ ಮಧುಪುರು
ವಸು ಅರಿಹಹೇಮಗರ್ಭ ೨
ಕುಕುಸ್ಥ ಇಕ್ಷ್ವಾಕು ಮರುತ ಮುನಿಚೈತ್ರರಥ
ವಿಕುಕ್ಷಿ ಸುರಥ ಆರಾವಾಚಿ ಶೃತಿ ಕೀರ್ತನ
ಹುಶದಿಪ್ತಕೇತ ಸುವುತವಿಭಾವ ಸು
ಶಕುತಿ ಶಿಖಿ ಸಾರ್ವಭೌಮಾ
ಸುಖಸೇನ ಭಗೀರಥ ಅಜಮಾನು ಸ್ವರ್ಭಾನು
ಮಖಪತೀ ಮಾಂಧಾಂತ ಧಾತ ವಿಧಾತ ಕ್ರಥ
ಕುಕುರ ಕುಂಡೋದರ ತ್ರಯಗರ್ಭ ದೀರ್ಘಾಯು
ರುಕ್ಮಾಂಗದ ವಿರಾಜ ೩
ಪುರಮೀಢ ಸುಮೀಢ ಭದ್ರಾಶ್ವ ರಮಣಕಾ
ಹರಿಧರ್ಮನೇತ್ರ ಸುನೇತ್ರಕೇತುಮಾಲ
ಪುರೋರವ ಮಿತ್ರಮನ ಜಯಸೇನ ಶುಭವರ್ಮ
ಧರಯತೀ ಪುಣ್ಯದ್ರವಿಣೌ
ಕರವೀರ ಸಾವೀರ ಪೌಷ್ಯಕೇಸರಿ ಸಿಂಗ
ಮರುರುಕ್ಷ ಪ್ರದೀಪ ದಿಲೀಪ ಅಷ್ಟಕಕಂಪ
ಅರಣಿ ಭೂಮನ್ಯು ಪ್ರಥಮಾಹವೀರ್ಯ
ಸುರದತ್ತ ಹರಿವೀರಮನ್ಯು ವಿಶ್ವಾ ೪
ಸುಮತಿ ಸುಂಹರ ರಘು ಮುಚಕುಂದ ದಶರಥ
ಸುಮನ ದುಷ್ಯಂತ ಸಂಯಾತಿ ಹಂಸಧ್ವಜ
ದಮಯಂತ ನೀಲಾಂಗ ಧರ್ಮಾಂಗದ
ಶಮಲ ವಿಮರ ರವಿಕಾಂತ ನಹುಷ
ದ್ರುಮಿಳ ಪದ್ಮಾಶತಾಯುಧ ಮಯೂರಧ್ವಜ
ಪ್ರಮಿಲ ಕೀರ್ತಿವಾನ ತೊಂಡವಾನ ವಿದಗರ್ಭ
ಅಮಿತ ಪರಾಕ್ರಮ ನಭಾಗಂಬರೀಷ
ಸೌಮಿತ್ರ ಕಾರ್ತವೀರ್ಯಾ ೫
ಜನಮೇಜಯ ಪರಮೇಷ್ಟಿ ದೀರ್ಘಾಂಗ ಪ್ರಶ್ಯಧರ
ಮಣಿಗ್ರೀವ ಭೃಗುದೇವದತ್ತ ಪ್ರಿಯನಾವರ್ತ
ಮಣಿನಾಭ ಚೋಳ ತ್ರಿಶಂಖ ಶಂಖಣ ಶಂಖ
ಮಣಿಕೇತ ಪಾಂಚಜನ್ಯ
ಧನಂಜಯ ಕಾಶಿ ಸುಕಾಂತಕುಶ ಕುಶನಾಭ
ಮಣಿಸೇನ ಪಾಂಡವ ಜಂಬುನದಿ ದಿವ್ಯರಥ
ವನ ಕಕ್ಷಸೇನ ಜಾಕ್ಷಿತ ಪರಿಕ್ಷಿತ ದೃಂಹ್ಯ
ಅನು ಅನಾಯುಪದಾತೀ ೬
ಹರಿಶ್ರವ ಉತ್ತಾನಪಾದ ಕುಂಡಲಗಜ
ಯವನಾಶ್ವರಾಜ ನೀಲಧ್ವಜ ಸುರವೃತ್ತ
ಕವೇರ ಆಯು ದೃಢಾಯು ವಿಶಾಲ ಪ್ರತಿ
ಶ್ರವ ಚಿತ್ರವೀರ್ಯ ಸುಭಗಾ
ಕವಿವಂಗ ಅಂಗ ಕೋಶಲ ಹೇಮಗರ್ಭ ಶುಚಿ
ಶ್ರವ ಇಳಾವರ್ತ ವಿದುರ ತ್ರಯಗರ್ಭಧೃತ
ಸವಿರಜಾಮೀಢ ವಿಕುಂಠ ಸುರಭೀ ಸೂ
ಹವಿ ಅಭಿರಾಜ ಸುಹಿಜಾ ೭
ಶಿಂಧು ಶುಭವರ್ನ ಸಿರ್ಯಾತಿ ಯಯಾತಿ ಸತ್ಯ
ಸಂಧ ರೋಹಣ ಸಾಹದೇವ ವಾಪೀ
ನಂದನ ಸುಮನ್ಯು ಸ್ವರ್ಭಾನು ಪಿಪ್ಪಲರವಿ
ಬಿಂದು ದ್ಯುಮನಿ ಹಂಪಾತಿ
ಚಂದ್ರಹಾಸ ಅಶ್ವವಂತ ಶಬಲಾಶ್ವ ಅಣು
ಚಂದ್ರವರ್ಣ ಚಪನ ಸತ್ಯ ಸಯಾತಿ ಬಲ
ವೃಂದ ತಾಮ್ರಧ್ವಜ ವೃಷ್ಣಿ ಸುಹೋತ್ರ ದೇವ
ವೃಂದ ವಿಷ್ಣುವರ್ಧನ ೮
ಎಂತು ಹೇಳಲಿ ಕ್ಷಿತಿಪರಾಯರ ಪೆಸರುಗಳ
ಸಂತತದಲಲ್ಲೆಣಿಸಿದರೆ ಪಾರಗಂಡವರಾರು
ಚಿಂತನೆಗೆ ತೋರಿದುದು ಸಾರಿದೆನು ಚನ್ನಾಗಿ
ಸಂತರು ಕೇಳಿ ಲಾಲಿಸೀ
ಪಿಂತೆ ಬಲು ಜನನದಾ ದುರಿತೌಘ ಪೋಗುವದು
ಸಂತೋಷವಾಗುವುದು ಪರಿಸಿದ ಜನಕೆ ನಿತ್ಯ
ಕಂತುಪಿತ ವಿಜಯವಿಠ್ಠಲನ ಚರಣಾಂಬುಜವ
ಸಂತತಿ ಸಹಿತ ಕಾಂಬರೂ ೯

೨೦೭
ಕ್ಷೀರ ವಾರಿಧಿ ಕನ್ನಿಕೆ ಮಾರಜನಕೆ
ಈರೇಳು ಲೋಕನಾಯಿಕೆ ಪ
ವಾರವಾರಕೆ ಆರಾಧಿಪುದಕೆ ಚಾರುಮತಿಯ ಕೊಡು
ದೂರ ನೋಡದಲೆ ಅಪ
ಶ್ರೀಧರಾ ದುರ್ಗಿ ಆಂಭ್ರಣಿ ನಿತ್ಯ ಕಲ್ಯಾಣಿ
ವೇದವತಿಯೆ ರುಕ್ಮಿಣಿ
ವೇದ ವೇದಾಂತದಭಿಮಾನಿ ವಾರಿಜ ಪಾಣಿ
ಆದಿ ಮಧ್ಯಾಂತ ಗುಣಮಣಿ
ಸಾಧು ಜನರ ಹೃನ್ಮಂದಿರ ವಾಸಿನಿ
ಭೇದಗೊಳಿಪ ಕಾಮಕ್ರೋಧಗಳೋಡಿಸಿ
ನೀ ದಯದಿಂದಲೆ ಮುಂದೆ ಗತಿಗೆ ಪಂಚ
ಭೇದಮತಿಯ ಕೊಡು ಮಾಧವ ಪ್ರಿಯಳೆ ೧
ಶ್ರೀ ಮಾಯಾ ಜಯಾ ಕೃತಿ ಶಾಂತಿದೇವಿ ಜಯಂತೆ
ನಾಮದೊಳಪ್ಪ ಗುಣವಂತೆ
ಕೋಮಲವಾದ ವೈಜಯಂತೆ ಧರಿಸಿದ ಶಾಂತೆ
ಸೋಮಾರ್ಕ ಕೋಟಿ ಮಿಗೆ ಕಾಂತೆ
ತಾಮರಸಾಂಬಕೆ ರಮೆ ಲಕುಮಿ ಸತ್ಯ
ಭಾಮೆ ಭವಾರಣ್ಯ ಧೂಮಕೇತಳೆ
ಯಾಮ ಯಾಮಕೆ ಹರಿ
ನಾಮವ ನುಡಿಸಿ ಉತ್ತಮರೊಡನೆ ಪರಿ
ಣಾಮವನೀಯುತ ೨
ಅನೇಕಾಭರಣ ಭೂಷಿತೆ ಧರಣಿಜಾತೆ
ಜ್ಞಾನಿಗಳ ಮನೋಪ್ರೀತೆ
ಆನಂದಲೀಲೆ ವಿಖ್ಯಾತೆ ಆದಿದೇವತೆ
ಗಾನವಿಲೋಲೆ ಸುರನುತೆ ನೀನೇ ಗತಿ ಎನಗಾರನ
ಕಾಣೆನೆ ದಾನಿ ಇಂದಿರಾದೇವಿ
ನಾನಾ ಪರಿಯಲಿ ಶ್ರೀನಿಧಿ ವಿಜಯವಿಠ್ಠಲನ ಮೂರುತಿಯಧ್ಯಾನದೊಳಿಡುವಂಥ ಜ್ಞಾನ ಭಕುತಿ ಕೊಡು೩

೨೯೨
ಗಂಗೆ ಶೋಭನ ತರಂಗೆ
ರಂಗನಂಘ್ರಿಯಂಗುಷ್ಠೆ ಸಂಗೆ ಭವಭಂಗೆ ಪ
ಇಂದ್ರಸೇನನು ಸ್ವರ್ಗವ ಪರಿಹರಿಸಿ ಯಿರಲು
ಉಪೇಂದ್ರ ಭಗವಂತ ಪಟುರೂಪ ಧರಿಸಿ
ಚಂದ್ರಮಂಡಲ ಮೀರಿ ಬೆಳದಜಾಂಡವನೊಡಿಯೆ
ಸಾಂದ್ರಗುಣದಿಂದ ಉದ್ಭವಿಸಿದೆ ಜನನಿ ೧
ಕಮಲಜನು ಪಾತ್ರಿಯೊಳು ಧರಿಸಿ ಸಿರಿಹರಿಪಾದ
ಕಮಲವನು ತೊಳಿಯಲಾವೇಗದಿಂದ
ವಿಮಲಗತಿಯಲಿ ಬಂದು ಮಂದಾಕಿನಿ ಎನಿಸಿ
ಸುಮನ ಸಾವನಿಯಲ್ಲಿ ಪರಿದೆ ಸ್ವರ್ಣನದಿಯೇ೨
ಧ್ರುವಲೋಕಕಿಳಿದು ಅಮರಾಲಯವ ಸಾರಿದೆ
ರವಿಯಂತೆ ಪೊಳೆವುತ ಅಜನಮಧ್ಯ
ತವಕದಿಂದಲಿ ಧುಮುಕಿ ಚತುರಭಾಗವಾದೆ
ಭವ ಪರಿಹರಿಸಿ ಭಾಗೀರಥಿ ಎನಿಸಿದೆ ೩
ಶಿವನ ಮಸ್ತಕದಲ್ಲಿ ಶೋಭಿಸುವ ಮಹಾಮಹಿಮೆ
ಭವದೊರೆ ಭಗೀರಥಗೆ ಒಲಿದು ಬರುತ
ಕವಿಜನ್ಹು ಮುನಿಯಿಂದ ಪುಟ್ಟಿ ಹಿಮಗಿರಿದಾಟಿ
ಜವನ ಮನಿಯ ಕೊಡ ಮಣಿಕರ್ಣಿಕೆ ನೆರದೆ೪
ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ
ಕುಲಕೋಟಿ ಉದ್ಧಾರ ನಿಃಸಂದೇಹಾ
ಸಲಿಲವನು ಸ್ಪರ್ಶ ಮಜ್ಜನ ಪಾನ ಪಾಡಿದರೆ
ಪೊಳೆವ ವೈಕುಂಠಪುರ ಅವನ ಹೃದಯದಲಿ೫
ಕುಲಪ್ರವಹವಾಗಿದ್ದ ಜೀವರ ಪುಣ್ಯವನು
ಹೇಳಿ ಕೇಳುವವನಾರು ಮೂಲೋಕದಿ
ಸೀಲಗುಣ ಸಂಪನ್ನೆ ವರುಣನರ್ಧಾಂಗಿನಿ
ಕಾಲ ಕಾಲಕೆ ನಿನ್ನ ಧ್ಯಾನದಿಂದಲ್ಲಿರಿಸು ೬
ದೇಶದೇಶದಲಿಂದ ಬಂದ ಸುಜನರ ಪಾಪ
ನಾಶ ಮಾಳ್ಪ ಕಾಮಿತ ಫಲಪ್ರದೆ
ಕಾಸಿ ನಿರ್ಮಿತ ಬಿಂದು ಮಾಧವ ಚಲುವ ಶ್ರೀನಿವಾಸ ಯದುಪತಿ ವಿಜಯವಿಠ್ಠಲನ ಸುತೆ ಖ್ಯಾತೇ ೭

೨೯೩
ಗಂಗೆ ಸನ್ಮಂಗಳಾಂಗೆ
ರಂಗನಂಘ್ರಿಯ ಸಂಗೆ
ತುಂಗೆ ಕಾರುಣ್ಯ ಪಾಂಗೆ
ಅಸಿತಾಂಗೆ ತಿಂಗಳಾನನೆ ಪ
ಪರಮೇಷ್ಟಿ ಪಾತ್ರಜಾತೆ
ವರುಣನ್ನ ನಿಜದೈಯಿತೆ
ಸುರ ಮುನಿಗಣವಿನುತೆ
ವರದಾತೆ ಸರ್ವಖ್ಯಾತೆ
ತರಣಿಸುತನ ಉದ್ಧರಿಸಿದೆ
ಕರುಣದಿ ಧರೆಯೊಳು ನಿನಗೆ ಎ
ದುರುಗಾಣೆ ಶರಣಾ ೧
ಭಯ ಪಾಪ ತಾಪದೊರೆ
ಜಯ ಜಯ ಗುಣಸಾರೇ
ತ್ರಯಭುವನ ಉದ್ಧಾರೆ
ಆಯುತಾರ್ಕವರ್ನ ನೀರೆ
ನಯವ ಭಕುತಿ ಹೃ
ದಯದೊಳಗಿತ್ತು ಸಹಾಯ ದಿನ ದಿನ ನಯನ ಶ್ರವಣವೇಣಿ ೨
ಘನ್ನ ವಾರಣಾಸಿ ಕಾಸಿವನ
ಆನಂದ ನಿವಾಸಿ ಪ್ರಣತ ಜನರಘನಾಶ
ಮಣಿಭೂಷೆ ಸೌಖ್ಯರಾಸಿ
ಅನನುತ ವಿಜಯವಿಠ್ಠಲನ ಮನಸಿನಲಿ
ನೆನೆಸುವ ಸಾಧನ ಕೊಡು ವಿರಜೇ ೩

ಅ. ಶ್ರೀ ಗಣೇಶಸ್ತುತಿ

ಗಜವದನ ಪಾಲಿಸೊಗಜವದನ ಪಾಲಿಸೊ ಪತ್ರಿಜಗದೊಡೆಯ ಶ್ರೀ ಭುಜಗಭೂಷಣಗಜವದನ ಪಾಲಿಸೊ ಅ ಪಭಕ್ತಿಯೊಳು ಭಜಿಪೆನು ರಕ್ತಾಂಬರಧರಮುಕ್ತಿಪಥವ ತೋರೊ ಶಕ್ತಿ ಸ್ವರೂಪನೇ ೧
ಏಸು ದಿನಕೆ ನಿನ್ನ ವಾಸವ ಪೊಗಳುವೆಲೇಸಪಾಲಿಸೊ ನಿತ್ಯವಾಸವನುತ೨
ಪೊಡವಿಯೊಳಗೆ ನಿನ್ನ ಬಿಡುವರ್ಯಾರೊ ಎನ್ನಕಡುಹರುಷದಿ ಕಾಯೋ ವಿಜಯ ವಿಠ್ಠಲದಾಸ ೩

೯೫
ಗಿರಿಯ ತಿಮ್ಮಪ್ಪ ವಾಹನಗಳೇರಿ ನಿತ್ಯಾ
ಮೆರೆದು ಚತುರ ಬೀದಿ ತಿರುಗಿ ಬಪ್ಪುದು ನೋಡೆ ಪ
ಸರಸಿಜಭವಾಗ್ರಜರುಳಿದವಾರು
ವರ ಸಕಲ ಮನೋಭೀಷ್ಟ ಕೈಕೊಳುತಾ
ನೆರೆದು ಸುತ್ತಲು ತಮ್ಮ ಭಕುತಿಯಲಿ ಸೂಸುತ್ತ
ಹರುಷ ವಾರಿಧಿಯಾಳು ಮುಳಗಿದಟ್ಟಿಡಿಯಿಂದಾ ೧
ಎತ್ತಿದ ಸತ್ತಿಗೆಯಿಂದ ಪೀಯೂಷ
ಸುತ್ತಲುದರೆ ಬಿಂದುಗಳೊಂದು
ಮುತ್ತಿನ ಸೂರ್ಯಪಾನಾ ಪತಾಕೆಗಳು ಬೀ
ಸುತ್ತಲಿಪ್ಪದು ಚಾಮರ ಪಂಜುಗಳೆಸೆಯೆ ೨
ದಂಡಿಗೆ ತಾಳ ಬೆತ್ತವ ಪಿಡಿದು ನಿಂದು
ತಂಡ ತಂಡದಲಿಂದ ಮಹಿಮೆಯನ್ನು
ಕೊಂಡಾಡುತ ಮನ ಉಬ್ಬಿ ಮಹೋತ್ಸವದಲ್ಲಿ
ತೊಂಡರು ಹರಿದಾಡಿ ಹಾಡಿ ಪಾಡುತಲಿರೆ೩
ಪವನ ಗರುಡ ಶೇಷ ಸಿಂಹ ಮಂಟಪ ಮತ್ತೆ
ರವಿ ಶಶಿ ತುರಗ ಅಂದಣ ಮಿಕ್ಕಾದ
ನವರಾತ್ರಿಯೊಳಗೆಲ್ಲ ವಾಹನನಾದ ಅಂ
ದವನಾರು ಬಣ್ಣಿಪರು ಸಕಲ ಭೂಷಿತವಾಗೆ ೪
ಚಿನುಮಯ ರೂಪ ವಿಚಿತ್ರ ಮಹಿಮ ದೇವ
ನೆನೆದವರ ಹಂಗಿಗೆ ಸಿಲುಕುವಾ
ಘನಗಿರಿ ತಿರ್ಮಲ ವಿಜಯವಿಠ್ಠಲರೇಯಾ
ದನುಜದಲ್ಲಣನೆಂಬೊ ಬಿರಿದು ಪೊಗಳಿಸುತ್ತ ೫

೯೬
ಗಿರಿರಾಜ ಚಿತ್ತ ಉದಾರ ಜೀಯಾ ನಾ ನಿನ್ನ ಪಾದ
ಕ್ಕೆರಗಿ ಯಾಚಿಸುತಲೆ ಮುಗಿವೆನು ಕೈಯ್ಯಾನೆರೆ ನಂಬಿದವರನು
ಎರವು ಮಾಡಲು ನಿನಗೊಳತೇನಯ್ಯಾ ಪಿಡಿ ಬೇಗನೆ ಕೈಯ್ಯ
ಕರದಶಿಗಳರಸನೆ ಕಾಮಿತ ಫಲದನೆ ಕರಿರಾಜನ
ಭೀಕರ ಹರ ವೆಂಕಟ ಪ
ಆಪಾರ ಮಹಿಮಾ ಆಪದ್ಬಂಧೋ ಆಪನ್ನರ ಪಾಲಿಪ
ವ್ಯಾಪಾ ನಿನಗಲ್ಲದೆ ಮತ್ತೊಂದು ಕಾಣೆನೊ ಜಗದೀ
ಭೂಪಾನೆ ಭೂಮ್ನ ಗುಣಗಣಸಿಂಧೋ ಸ್ವಾಮಿಯೆ ಎನಗಿಂದು
ಪಾಪದ ಪರ್ವತ ಲೇಪವಾಗದಂತೀ
ಪರಿಪಾಲಿಸು ಶ್ರೀಪತಿ ಅಂಜನ ಗಿರಿರಾಜ ೧
ಕಲಿಯುಗದೊಳಗೀ ಪರ್ವತಕೆಲ್ಲಿ ಸರಿಗಾಣೆನು ಯೆಂದು
ನೆಲಸಿದೀ ನೀನೆ ಈ ಸ್ಥಳದಲ್ಲಿ ವೈಕುಂಠಕಿಂತ
ನೆಲೆಯು ವೆಗ್ಗಳವೆಂದು ನೀ ಬಲ್ಲೀ ಅದಕಾರಣ ಇಲ್ಲೀ
ಜಲಜ ಭವಾದ್ಯರು ಪೊಲಿದೊಲಿಯುತ
ತಲೆಯಾಗುವರಯ್ಯಾ ಭಳಿರೆ ಕಾಂಚನ ೨
ತರುಜಾತಿ ಮೃಗಪಕ್ಷಿಗಳಾಕಾರ ಮೊದಲಾದ ರೂಪದಿ |
ನೂರಾರು ಕಿನ್ನರು ತಮ್ಮ ಪರಿವಾರ ಒಡಗೂಡಿ ನಿನ್ನ
ಚರಣಾರಾಧನೆ ಮಾಡಿದ ವಿಸ್ತಾರ ಈ ಬಗೆ ಶೃಂಗಾರ
ದೊರೆತನ ಠೀವಿಗೆ ಧರಣೀ ಮಂಡಲದಿ
ಸರಿಗಾಣೆನೊ ಹೇ ತಿರುಪತಿ ವೆಂಕಟ ಗಿರಿರಾಜ೩
ಹದಿನಾಲ್ಕು ಲೋಕದ ಭಾಗ್ಯಗಳಲ್ಲಿ ಅಮರತತಿಗೆ ಕೊಟ್ಟ
ವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲ ನಾನವರ ನೋಡೆ
ಅಧಮಾಧಮನು ನೀನೆ ಬಲ್ಲೆಲ್ಲಾ ಎನ್ನ ಯೋಗ್ಯತಯ
ಹದುಳವೇನಿಹುದು ಒಡಗೂಡಿಸದಲೆ
ಒದಗಿ ಪಾಲಿಸೋ ವಸುಮತಿ ಧರ ಫಣಿ ೪
ಸುವರ್ಣ ಮುಖರಿತೀರ ನಿವಾಸ ನವರಾತ್ರಿಯಲ್ಲೀ
ಆವ ಬ್ರಹ್ಮೋತ್ಸವ ನೋಡಲು ಶ್ರೀಶ ಸಂಪದವನಿತ್ತು ಪೊ
ರವಾನು ಕಲುಷದ ಭಯ ಬರಲೀಸ ಶ್ರೀನಿವಾಸ
ಶ್ರೀವರ ಭೂಧರ ವಿಜಯವಿಠ್ಠಲ ಪಾರಾವರೇಶ
ಭೂದೇವರ ವರದ೫

ನಾರದರೆ ಈ ರೂಪದಲಿ ಚಾರುದರುಶನ ತೋರಿದ :

೩೪೧
ಗುರು ಪುರಂದರ ದಾಸರೇ ನಿಮ್ಮ ಚರಣ ಸರಸಿಜ ನಂಬಿದೆ ಪ
ಗುರುವ ರಹಿತರ ಮಾಡಿ ನಮ್ಮನು ಪೊರೆವ ಭಾರವು ನಿಮ್ಮದೆ ಅ
ಒಂದು ಅರಿಯದ ಮಂದಮತಿ ನಾನಿಂದು ನಿಮ್ಮನು ವಂದಿಪೆ
ಇಂದಿರೇಶನ ತಂದು ತೋರಿಸಿ ತಂದೆ ಮಾಡೆಲೊ ಸತ್ರ‍ಕಪೆ ೧
ಪುರಂದರ ಗಡದೊಳಗೆ ನಿಂದು ನಿರುತ ದ್ರವ್ಯವ ಗಳಿಸಿದೆ
ಪರಮ ಪುರುಷನು ವಿಪ್ರನಂದದಿ ಕರವ ನೀಡಿ ಯಾಚಿಸೆ ೨
ಪರಮ ನಿರ್ಗುಣ ಮನವರಿತು ಹರಿಗೆ ಸೂರೆಯ ನೀಡುತ
ಅರಿತು ಮನದೊಳು ಹರಿದು ಭವಗಳ
ತರುಣಿ ಸಹಿತಾ ಹೊರಟನೆ ೩
ಮಾರಜನಕನ ಸನ್ನಿಧಾನದಿ ಸಾರಗಾನವ ಮಾಡುವ
ನಾರದರೆ ಈ ರೂಪದಿಂದಲಿ ಚಾರುದರುಶನ ತೋರಿದ ೪
ಅಜಭವಾದಿಗಳರಸನಾದ ವಿಜಯವಿಠ್ಠಲನ ಧ್ಯಾನಿಪ
ನಿಜ ಸುಜ್ಞಾನವ ಕೊಡಿಸಬೇಕೆಂದು
ಭಜಿಪೆನೋ ಕೇಳ್ ಗುರುವರ ೫

ಗುರು ವಾದಿರಾಜ ಯತಿಯಾ ನೆನೆಸುವುದು :

೩೧೯
ಗುರು ವಾದಿರಾಜ ಯತಿಯಾ ನೆನಸುವದು
ನಿರುತ ಕರುಣಿಪ ಮತಿಯಾ ಪ
ಆರ್ತನಾ ಸರಿದಾರು ನವನ
ವರ್ತಮಾನವನೆ ಕೇಳಿ
ಕರ್ತೃತ್ವ ಪರಿಹರಿಸಿ ಸಂಸೃತಿಯ ಗರ್ತದಿಂದೆತ್ತಿ ನೋಳ್ಪ ೧
ದುರಿತ ರಾಶಿಗಳ ಶೀಳಿ ಹೊರದೆಗೆದು
ಮರುತ ಶಾಸ್ತ್ರವನೆ ಪೇಳಿ
ಪರಮಾರ್ಥ ಮಾರ್ಗವಾ ತೋರಿ ಸುಖಬಡಿಸಿ
ಧರಿಯೊಳಗೆ ಮೆರೆದೆ ಧೀರ ೨
ವಂದಿಸಿ ಸೌಂದರ್ಯಪುರಿಯ ವಾಸ ವರಪ್ರದ
ನಂದ ಸತ್ಕೀರ್ತಿ ಭೂಪ
ವಂದಿಸಿದವರಿಗೆ ಲೇಸಾಗಿ ಕೊಡುವ ಮು
ಕುಂದನಂಘ್ರಿಯ ದಾಸ ೩
ತೀರ್ಥಯಾತ್ರೆಯನೆ ಮಾಡಿ
ಹರಿ ಭೇದಾರ್ಥದಿಂದಲೆ ಕೊಂಡಾಡಿ
ಅರ್ಥಾಸೆಗಳ ಈಡಾಡಿ
ಹಯಮೊಗನ ಅರ್ಥಿಯಿಂದಲಿ ಪೂಜಿಪ೪
ತ್ರಿಜಗದೊಳಗಿನವರಿಗೆ ಎಣೆಗಾಣೆ
ಕುಜನ ಮತ ಸೋಲಿಸುವಲ್ಲಿ
ವಿಜಯವಿಠ್ಠಲನೆ ದೈವವೆಂದು
ಧ್ವಜವೆತ್ತಿ ತಿರುಗಿದ ಮುನಿಪ ೫

೩೨೦
ಗುರು ವಾದಿರಾಜ ರವಿಕೋಟಿ ತೇಜಾ
ಶರಣೆಂಬೆನಯ್ಯಾ ಸತತಗೇಯಾ ಪ
ನಂಬಿದೆನು ನಿನ್ನ ದಯ ಸಂಪನ್ನ
ಸಂಭ್ರಮದಲ್ಲೆನ್ನ ಪೊರೆಯೊ ಪ್ರಸನ್ನ ೧
ವೇದಶಾಸ್ತ್ರ ಬಲ್ಲ ಭಳಿರೆ ಮಲ್ಲ
ಭೇದ ಜ್ಞಾನವೆ ಎಂಬೊ ನಿಜವೆಂಬ ಫಲ ೨
ಮಾಯಿಗಳ ವದ್ದ ಮಮತಾ ಗೆದ್ದ
ಗಾಯನ ಪ್ರಸಿದ್ಧ ಗುಣದಲಿ ಇದ್ದ ೩
ನಾನಾ ಚಾರಿತ್ರ ತೋರಿದ ಮಿತ್ರ
ಧೇನಿಸಿ ಸಿರಿ ಹರಿಯ ಗಾತ್ರದೊಳಿಟ್ಟ ಪಾತ್ರ೪
ಸಂತತ ವಿರಕ್ತ ಜೀವನ ಮುಕ್ತಾ
ಸಂತಾರಿ ಸುಶಕ್ತಾ ಹರಿನಾಮ ಭೋಕ್ತಾ ೫
ಸ್ವಾದಿಪುರವಾಸ ಸಾಧುಗುಣ ಭಾಸಾ
ಸದ್ಭಕುತ ಪೋಪ ಮಧ್ವಮುನಿಯ ದಾಸಾ ೬
ವಿಜಯವಿಠ್ಠಲನ್ನ ನೆನೆಸುವ ಘನ್ನ ಹರಿ
ತ್ರಿಜಗ ಹಯವದನನ್ನ ಪರನೆಂಬೊ ಪೂರ್ಣಿ೭

೩೧೧
ಗುರುವಶಕೆ ನಮೋ ಎಂಬೆ ನಮ್ಮ
ಮರುತ ಮತಾಬ್ದಿಗೆ ನಮೋ ಎಂಬೆ ಪ
ಶ್ರೀ ಮದಾನಂದತೀರ್ಥ ಪದ್ಮನಾಭರಿಗೆ |
ರಾಮದೇವರ ಕಂದ ನರಹರಿಗೆ ||
ಕಾಮಿತ ಫಲವೀವ ಮಾಧವಕ್ಷೋಭ್ಯರಿಗೆ |
ಆ ಮಹಾಮಹಿಮ ಜಯತೀರ್ಥ ರಾಯರಿಗೆ ೧
ವಿದ್ಯಾಧಿರಾಜರಿಗೆ ವಿಜಯ ಕವೀಂದ್ರ ಸು |
ಸದ್ಗುಣ ವಾಗೀಶ ರಾಮಚಂದ್ರರಿಗೆ ||
ವಿದ್ಯಾನಿಧಿ ರಘುನಾಥ ರಘುವರ್ಯತೀರ್ಥರಿಗೆ |
ಅದ್ವೈತಮತ ಖಂಡ ರಘೋತ್ತರಾಯರಿಗೆ ೨
ವೇದವ್ಯಾಸ ವಿದ್ಯಾಧೀಶ ವೇದನಿಧಿ ಮುನಿಗೆ |
ಸಾಧುಜನ ಪ್ರಿಯ ನಿತ್ಯ ವತ್ರರಿಗೆ ||
ಮೇದಿನಿಯಲಿ ಮೆರೆದ ಸತ್ಯನಿಧಿತೀರ್ಥರಿಗೆ |
ವಾದಿಗಜಕೆ ಸಿಂಹ ಸತ್ಯನಾಥರಿಗೆ ೩
ಯತಿಶ್ರೇಷ್ಠ ಸತ್ಯಾಭಿನವತೀರ್ಥರಿಗೆ |
ಸತತ ಸಜ್ಜನಪಾಲ ಸತ್ಯಪೂರ್ಣರಿಗೆ ||
ಅತಿಶಯವಾನಂದ ಸತ್ಯ ವಿಜರಿಗೆ |
ಮತ ಉದ್ಧಾರಕ ಶ್ರೀ ಸತ್ಯಪ್ರಿಯರಿಗೆ೪
ಇಂತು ಗುರುಗಳ ಸಂತರೆ ಕೊಂಡಾಡಿ
ಇಂತು ಸುತಾಪವನುರುಹಿ ಬಿಟ್ಟು ||
ಸಂತೋಷಿ ನಾನಾದೆ ವಿಜಯವಿಠ್ಠಲನ್ನ
ಚಿಂತಿಯ ಮಾಡುವೆ ದಾಸರ ದಯದಿಂದ ೫

೨೨೪
ಗುರುವೇ ನಿಮ್ಮ ಮಹಿಮೆ ಅರಿವೇ ವಿಚಿತ್ರವೆಂದು
ಕರವೇ ವಂದಿಸಿ-ನಮಸ್ಕರಿಸಿ ಮಾತನುಸುರುವೆ ಪ
ಪರಮಾದರದಲಿ ಕರುಣ ಎನ್ನ ಮೇಲೆ
ಹರಹಿ ದುರುಮತಿಯ ಪರಿಹರಿಸುವುದು ಅ.ಪ.
ವಾತತನಯ ವಾರಿಜಾತ ಬಾಂಧವ ಸಂ
ಭೂತ ಸಹಾಯ ರಘುನಾಥನ್ನ ಪ್ರಿಯದೂತ
ಶಾತಕುಂಭ ಮಕುಟ ಶೀತಕರ ಕುಂಡಲ-
ತೀತ ಸುಂದರ ಕಾಯ-ಜಾತ ಶರವರ್ಜಿತ
ದಾತನಿಂದಲಿ ಬಹಳಾತುರದಲಿ ಗು-
ರುತು ಪಡೆದು ನಿರ್ಭೀತನಾಗಿ ಪೋಗಿ
ಮಾತೆಗೆರಗಿ ಖಳವ್ರಾತವ ಘಾತಿಸಿ
ಪ್ರೀತಿಯಿಂದಲಿ ನಿಜರಾತಿಯ ತಣಿಸಿದ ೧
ಪಾಂಡುತನಯ ಗಿರಿ ಖಂಡಿತ ಶತಶೃಂಗ
ಮಂಡಲದೊಳಗೆ ಉದ್ದಂಡ ವಿಷವನುಂಡು
ಕುಂಡಲಿಯಿಂದ ಕೈಗೊಂಡು ಮನ್ನಣೆಯ
ಚಂಡಗದೆಯ ದಿಟ್ಟ ಗಂಡುಗಲಿ ಪ್ರಚಂಡ
ಹಿಂಡು ಖಳರ ಶಿರ ಚೆಂಡಾಡಿ ಗುರು ಕೋ
ದಂಡ ರುದ್ರನ ಮುಂಕೊಂಡು ಭಜಿಸಿ ರಣ
ಮಂಡಲದೊಳು ಜಗಭಂಡನ ಕರುಳನು
ದಂಡೆಯ ಮುಡಿಸಿದ ಖಂಡ ಪ್ರತಾಪ ೨
ದ್ವಿಜನ ಉದರದಲ್ಲಿ ಸೃಜಿಸಿ ಮೆರೆದೆಯೊ
ತ್ರಿಜಗದೊಳಗೆ ಶುದ್ಧ ಸುಜನಾಂಬುಧಿಗೆ ಚಂದ್ರ
ಕುಜನ ಮತ ಭುಜಂಗ ದ್ವಿಜರಾಜನೆನಿಸಿದೆ
ಅಜನ ಪಿತನ ಪಾದಾಂಬುಜವ ಬಿಡದೆ ನಿತ್ಯ-
ಭಜಿಸುವೆ ಯತಿ ದಿಗ್ವಿಜಯ ಮೂರುತಿ ಸುರ-
ವ್ರಜವ ಪಾಲಿಪ ಪಂಕಜ ಭವ ಪದವಿಯ
ನಿಜವಾಗಿ ಕೈಗೊಂಡು ಋಜುಗಣದಧಿಪ ತಿವಿಜಯವಿಠ್ಠಲನಂಘ್ರಿರಜವನು ಧರಿಸಿದ ೩

೪೫೬
ಗೋತ್ರ ಪ್ರವರ ಉಚ್ಚಾರಣೆ ವಂದೇ ಕಾಣೊ
ಧಾತ್ರಿಯೊಳಗೆ ತಂದೆ ಮಕ್ಕಳು ಮಾಡುವ ಕಾ |
ಲತ್ರಯದ ಸಂಧ್ಯಾವೆಲ್ಲ ಎಂದಿಗೂ ಭೇದವಿಲ್ಲಾ ಪ
ಪುತ್ರನಿಗೆ ಪಿತನು ಆನಾರಂಭದಿ ನಾಮ
ಮಾತ್ರ ನುಡಿಸುವ ಬುದ್ಧಿ ಪೇಳಿ |
ಚಿತ್ರವ ಗೋಡೆಯ ಮೇಲೆ ರಚಿಸಿರಲು ನೋಡಿ
ಸ್ತೋತ್ರ ಮಾಡಿದರೆ ಯೇನಾಹದೋ೧
ಚಿತ್ರಿಕ ಬಲು ವಿವೇಕ ಉಳ್ಳವನೆಂದು
ಪಾತ್ರರ ಮುಂದೆ ಕೊಂಡಾಡಿದಂತೆ |
ಧಾತ್ರಿಯೊಳಗೆ ನಮ್ಮ ಪುರಂದರದಾಸರ
ಸ್ತೋತ್ರ ಮಾಡಿರಯ್ಯ ಸಚಲರಾಗೀ ೨
ಗಾತ್ರ ನಿರ್ಮಲವಕ್ಕು ಯೆಂದೆಂದಿಗೆ ದಿವ್ಯ |
ನೇತ್ರದಿಂದಲಿ ಹರಿಯ ಸರಿದರುಶನಾ |
ರಾತ್ರಿಂಚರೆಯೆಂದು ಪೆಸರುಳ್ಳವು ಕುಮುದ
ಮಿತ್ರಗೆ ಸರಿಯೇನು ಉಳದಾದವು ೩
ಸ್ತೋತ್ರಾಭರಣವಾದ ದಾಸರ ಶವನಕ್ಕೆ ಅ
ನ್ಯತ್ರ ನುಡಿವದು ಧಿಕ್ಕರಿಪದು |
ನಿತ್ರಾಣವಾದ ಮನುಜ ಹಿರಿಯರ
ವಿತ್ತದಿಂದ ಯಾತ್ರಿ ಮಾಡಿ ಪುಣ್ಯ ಘಳಿಸಿದಂತೆ ೪
ಸ್ತೋತ್ರ ಮಿಟಮ್ಯಾಲೆ ಪಂಗ್ತಿ ಹಾಕಿ ಕೊಡಲು
ಮಾತ್ರೆಗಳ ನೋಡಿ ಬರದಂತೆ ವೋ |
ಶತ್ರು ಸಂಹಾರ ನಮ್ಮ ವಿಜಯವಿಠ್ಠಲನಂಘ್ರಿ ಶತ
ಪತ್ರ ಬಲ್ಲವರಿಗೆ ಯಿದೆ ವಿಸ್ತಾರ ನಿರ್ಮಾಣ ೫

೨೯೮
ಗೋದೆ ಅತಿ ಪುಣ್ಯ ಸಾಧೆ
ಮಾಧವನ ಚರಣಾರವಿಂದೆ ಪಾದೆ ಪ
ಇದ್ದಲ್ಲಿ ನಿನ್ನ ಸ್ಮರಣೆಯನು ಮಾಡಲು ಪಾಪ
ಎದ್ದೋಡಿ ತಿರುಗಿ ನೋಡದೆ ಹೋಹವು
ಸದ್ಬಕ್ತಿಯಿಂದ ನಿನ್ನನು ನೋಡಬೇಕೆನುತ
ಉದ್ಯುಕ್ತವಾಗೆ ಬ್ರಹ್ಮಹತ್ಯ ಪರಿಹಾರವೊ ೧
ಬಂದು ಹರುಷದಲಿ ಕಣ್ಣಲಿ ಕಂಡು ಶಿರವಾಗಿ
ವಂದನೆಯ ಮಾಡಿ ಸಾಷ್ಟಾಂಗೆರಗಲೂ
ಹಿಂದಣ ಶತಕೋಟಿ ದುರಿತ ರಾಸಿಗಳೆಲ್ಲ
ಒಂದು ಉಳಿಯದಂತೆ ಬೆಂದು ಹೋಹವು ೨
ಅತಿವೇಗದಿಂದ ಬಂದು ಸ್ನಾನವನು ಮಾಡಲು
ಮತಿವಂತರನ ಮಾಡಿ ದುರ್ಮಾರ್ಗ ಬಿಡಿಸಿ
ರತಿಪತಿ ಜನಕ ಸಿರಿ ವಿಜಯವಿಠ್ಠಲನ್ನ
ಸ್ತುತಿಸಿ ಗತಿ ಪಡೆವಂತೆ ಧನ್ಯರನು ಮಾಡುವ ತಾಯಿ೩

ಗೋಪಾಲವಿಠ್ಠಲ ನಿನ್ನ ಪೂಜೆಯ ಮಾಡುವೆನು :

೩೮೩
ಗೋಪಾಲವಿಠ್ಠಲ ನಿನ್ನ ಪೂಜೆ ಮಾಡುವೆನು
ಕಾಪಾಡೊ ಈ ಮಾತನು ಪ
ಅಪರಾ ಜನುಮದಲಿಡುವನೆ ಮ್ಯಾಲೆ
ನೀ ಪ್ರೀತಿಯನು ಮಾಡಿ ನಿಜದಾಸರೊಳಿದು ಅ.ಪ
ಶ್ರುತಿಶಾಸ್ತ್ರ ಪುರಾಣ ಮಿಕ್ಕಾದ ಗ್ರಂಥಗಳ ಸತತ ಅಭ್ಯಾಸ ಮಾಡಿ
ಮಿತಿಯಿಲ್ಲದಲೆ ತೀರ್ಥಯಾತ್ರೆ ನಾನಾ
ದಾನ ವ್ರತಗಳನೆ ಬಿಡದೆ ಮಾಡಿ
ಮತಿಯಲ್ಲಿ ನಿಮ್ಮಯ ಸ್ತೋತ್ರಗಳ ಗೈದುನ್ನ
ತೋಪಾಸನಗಳನು ಮಾಡಿ
ಹಿತ ಪುಣ್ಯದಿಂದವಗುಪದೇಶವನು
ಮಾಡಿದೆನು ಚ್ಯುತಿದೂರ ನಿನ್ನ ಕೊಂಡಾಡಿದೆ ೧
ಜ್ಞಾನವೆ ಭಕುತರಿಗೆಯಿತ್ತು ಯಥಾರ್ಥದಲಿ
ಕ್ಷೋಣಿಯೊಳಗೆ ನಡಿಸುತ
ಮಾನವರೊಳಗಿದ್ದು ವಿಚಿತ್ರವನು ತೋರಿ
ಮೇಣು ಧನ್ಯನ್ನ ಮಾಡು
ಮಾಣದಲೆ ಈ ಪರಿ ಕೀರ್ತಿ ತುಂಬಿರಲಾಗಿ
ಧ್ಯಾನದಲಿ ಅಮರರಿಗೆ ಬೆಡಗುಗೊಳಿಸುವ ದೇವಾ೨
ಅಂಕಿತವ ನಾನಿತ್ತೆ ನಿನ್ನ ಪ್ರೇರಣೆಯಿಂದ
ಕಿಂಕರಗೆ ಲೌಕಿಕದ ಡೊಂಕು ನಡತೆಯ ಬಿಡಿಸಿ
ಮಂಕು ಜನುಮ ಜನುಮದಲ್ಲಿದ್ದ ಪಂಕವಾರವ ತೊಲಗಿಸಿ
ಶಂಕೆ ಪುಟ್ಟದಂತೆ ಕಾವ್ಯಗಳ ಪೇಳಿದದು
ಸಂಕಟಗಳಟ್ಟಿಥಾರಿಗೆ ವೆಂಕಟ ಕೃಷ್ಣನು
ನೀನೆ ವಿಜಯವಿಠ್ಠಲಯೆಂದು
ಅಂಕುರವ ಪಲೈಸಿ ಫಲಪಾಪ್ತಿಯಾಗದೊ೩

೧೭೪
ಗೋಪಿದೇವಿ ಎಂತು ಪೇಳಲೆ ನಾನೆಂತು ತಾಳಲೆ ಪ
ಶ್ರೀಪತಿ ಬಂದು ನಿಂದು ಏಕಾಂತವನ್ನ ಆಡುತಾನೆ |
ಪಾಪ ಇಂಥಾದುಂಟೇನೆ ಕೇಳೆ ಲಕ್ಷ್ಮೀಕಾಂತನೀತನೆ ||
ಮಂಥನ ಮಾಡುವಲ್ಲಿ ಮಂಥಣಿಯ ಒಡೆದನು |
ಕುಂತಳವ ಪಿಡಿದು ಎನ್ನ ಕುಳ್ಳಿರಿಸಿದಾ ಕಿರಿಬೆವರನೊರಸಿದಾ ೧
ಚಿಕ್ಕಮಕ್ಕಳ ಕೂಡಿ ಚಕ್ಕನೆ ತಾ ಬಂದು ಬೇಗ |
ಬೆಕ್ಕು ಕುನ್ನಿ ಮರ್ಕಟವ ತಂದನಮ್ಮಾ ಇದು ಚಂದವೇನಮ್ಮ ||
ಉಕ್ಕುತಿಹ ಪಾಲ್ಗೊಡಗಳ ಉರುಳಿಸಿದಾ ಸುಮ್ಮನೆ |
ಚೊಕ್ಕವೇನೆ ಸುಮ್ಮನೆ ಮೊಸರ ಸುರಿದಾ ಮೀಸಲು ಮುರಿದಾ ೨
ರಕ್ಕಸರ ಗಂಡ ನಮ್ಮ ರಾಜ್ಯದೊಳಗಿವಗಿನ್ನು |
ತಕ್ಕ ಬುದ್ದಿಯ ಪೇಳುವರದಾರು ಮೀರಿದ ಗೋಪಗೆ ||
ಸಿಕ್ಕ ಪಿಡಿದೇವೆಂದರೆ ಸಿಕ್ಕನಮ್ಮ ಇವ ಗುಡಿವಡ್ಡಿ ಬೇಡವೇ |
ಕಕ್ಕಸದಲಿ ಬಲು ಕಕ್ಕಲಾತಿಯಲಿ ೩
ಬಿರಬಿರನೆ ತಾ ಬಂದು ಬೆದರಿ ಎನಗಂದು |
ಹರವಿಯ ಹಾಲು ಕುಡಿದಾ ತಾ ಎತ್ತ ಓಡಿದನೆ ||
ವಾರಿಗಣ್ಣಿನಿಂದಲಿ ನೋಡಿ ಒದಗಿ ಬಳಿಗೆ ಬಂದು |
ತೋರವಾದ ಕುಚಗಳ ಪಿಡಿದಾನೆ ಬಲಿದನೇನೆ ೪
ಹಾರ ಪದಕವು ಹಿಡಿ ಹಿಡಿ ಎಂದು ಎನ್ನ ಕೂಡ |
ಸರಸವನಾಡಲಿಕ್ಕೆ ಅರಸನೇನೆ ನಮಗೆ ಪುರುಷನೇನೆ ||
ಪುರುಷರು ಕಂಡರೆನ್ನ ಪರಿಪರಿ ಬಾಧಿಸ್ಯಾರು |
ತರಳನ ಕರೆದ್ಹೇಳು ತಿದ್ದಿ ನೀನು ಇವಗೆ ಬುದ್ಧಿ೫
ಚಂಡನಾಡುತಲಿ ಚಿಕ್ಕ ಮಿಂಡಿಯರ ಕಂಡು ತಾನು |
ಚಂಡು ಅಂತ ಕುಚಗಳ ಪಿಡಿದಾನೆ ಇಂಥದುಂಟೇನೆ ||
ಭಂಡು ಮಾಡತಾನೆ ಭಂಡಿಯ ಗೋವಳಗಿಂದು |
ದಂಡಿಸವ್ವಾ ದಂಡವನು ಕೊಡು ನೀನು ೬
ಚಂಡ ಪ್ರಚಂಡನಿವನು ಗೋಪಿಕೆಯರಿಗೆಲ್ಲ |
ಉದ್ದಂಡನಿವನು ತಂಡ ತಂಡದಲಿ ತುರು- ||
ಹಿಂಡುಗಳ ಕಾಯುವ ಗೊಲ್ಲಬಾಲಕನಮ್ಮಾ |ಪಾಂಡುರಂಗ ವಿಜಯವಿಠ್ಠಲರಾಯ ಬಲು ದಿಟ್ಟನಿವನು೭

ಗೌರೀವರನೆ ಎನ್ನ ಮೊರೆ ಕೇಳೋ

೨೭೧
ಗೌರೀವರನೆ ಎನ್ನ ಮೊರೆ ಕೇಳೊ ಚೆನ್ನ
ಹೌರನೆ ಮತಿಯಿತ್ತು ಸಲಬೇಕೆನ್ನ ಪ
ಗೌರವ ಗಾತುರ ತೌರ ಮನೆಯ ಹರ
ಕೌರವಾಂತಕನೊಳು ಶೌರಿಯ ತೋರಿಸೋ ಅ.ಪ.
ಮೃಗಲಾಂಛನ ಸನ್ಮೌಳಿ ಶಿವ ಮಹಾದೇವ
ತ್ರಿಗುಣಾತುವ ಗಾತುರ ಭಕ್ತ ಸಂಜೀವ
ನಿಗಮತುರಗ ಪಾವ ವನಮಾಲ ಪಾವಾ
ಮೃಗಪಾಣಿ ಮೃತ್ಯುಂಜಯ ಸುಪ್ರಭಾವ
ನಗೆಪಗೆ ಮಗನನು ಮೃಗನೆವನದಿ ಕಾ
ಳಗಮಾಡಿ ಮೆಚ್ಚಿದೆ ಅಗಣಿತ ಗುಣಮಣಿ
ಯುಗಯುಗದಲಿ ವಾಲಗ ನಿನ್ನವರೊಳು
ಮಗಳೆ ಮಗುಳೆ ಕೊಡು ಗಗನೇಶ ಜನಕ ೧
ಭವಹರ ತ್ರಿಯಂಬಕ ತ್ರಿಪುರಾರಾತಿ
ಪವನ ಸಪುತ ಸಪ್ತ ವಂದಿತ ಖ್ಯಾತಿ
ಅವನಿಯೋಳ್ ಕೈಲಾಸ ವಾಸ ಅಪ್ರತಿ
ನವ ವಿಧ ಭಕುತಿ ಕೊಡು ಶಂಭು ಪಶುಪತಿ
ದಿವಸ ದಿವಸ ವೈಶ್ರವಣ ಬಾಂಧವ ದೇ
ಹವೆ ನಿನಗೊಪ್ಪಿತು ಅವನಿಯೊಳುತ್ತಮ
ಶ್ರವಣದೊಳಗೆ ರಾಘವನ ಕಥಾಮೃತ
ಸವಿದೋರುವುದೋ ಭುವನ ಪವಿತ್ರ ೨
ಅಜಭೃಕುಟ ಸಂಭೂತ ಭೂತಗಣೇಶ
ಭುಜಗ ಕುಂಡಲ ಮಾಲಾ ವಿಭೂತಿ ಭೂಪ
ನಿಜ ಮಹಾ ಸ್ಮಶಾನವಾಸ ಉಗ್ರೇಶ
ತ್ರಿಜಗಪಾವನ ಗಂಗಾಧರ ವಿಶ್ವೇಶ
ಸುಜನರ ಹೃದಯ ಪಂಕಜದೊಳ್ ಮಿನುಗುವ
ಗಜ ಪಾಲಕ ರಂಗ ವಿಜಯವಿಠ್ಠಲನಂಘ್ರಿ
ಭಜನೆಯ ಕೊಡು ಭೂಭುಜ ದೇವೋತ್ತಮ
ರಜತಾದ್ರಿ ನಿಲಯನೆ ಗಜ ಅಜಿನಾಂಬರ ೩

೩೮೪
ಚರಣವ ತೋರೈ ಚಲುವರಸನೇ
ಚರಣವ ತೋರೈ ಪ
ಸ್ಮರಣೆಮಾತ್ರದಲಿ ಮುಕುತಿಯ ಕೊಡುವ ಚರಣವ ತೋರೈ ಅ.ಪ
ರಮ್ಮೆಯ ಮನಕೆ ಬೆಡಗು ತೋರುವ ಚರಣ
ಬೊಮ್ಮಾದಿಗಳ ಮನಕೆ ನಿಲುಕದ ಚರಣವ ತೋರೈ
ಚಿಮ್ಮಿ ರಾವಣನ ಬಲು ದೂರಗೈದ ಚರಣವ ತೋರೈ
ಘಮ್ಮನೆ ಮೊಸರು ಮೆದ್ದು ಓಡುವ ಚರಣ ತೋರೈ ೧
ಗೋಕುಲ ಭೂಮಿಯ ಪಾವನ ಮಾಡಿದ ಚರಣವ ತೋರೈ
ಲೋಕವನೆಲ್ಲಾ ಅಡಗಿಸಿಕೊಂಡಾ ಚರಣವ ತೋರೈ
ಬೇಕೆಂದು ಕುಬುಜಿಯ ಮನೆಗೆ ಪೋದ ಚರಣವ ತೋರೈ
ನೂಕಿ ಭವಾಬ್ಧಿ ಬತ್ತಿಸಿ ಬಿಡುವಾ ಚರಣವ ತೋರೈ ೨
ಬಿಡದಲೆ ಸರ್ವಜ್ಞತೀರ್ಥರಿಗೊಲಿದಾ ಚರಣವ ತೋರೈ
ಬಡವರಾಧಾರ ದಿವ್ಯಭೂಷಣವಿಟ್ಟು ಚರಣವ ತೋರೈ
ಕಡು ಮುದ್ದು ಸಿರಿಕೃಷ್ಣ ವಿಜಯವಿಠ್ಠಲ ನಿನ್ನ ಚರಣವ ತೋರೈ
ಉಡುಪಿಯ ಸ್ಥಳದಲಿ ನಿಂದು
ಪೂಜೆಯಗೊಂಬ ಚರಣವ ತೋರೈ೩

೩೮೫
ಚಿಂತೆ ಮಾಡುವುದ್ಯಾಕೆ ಮನವೆ ನೀನು
ಪಿಂತೆನ್ಯೆಸಗಿದ ಕರ್ಮ ಎಂದಿಗಾದರೂ ಬಿಡದು ಪ
ಮಗನಾರು ನೀನಾರು ಪೇಳೊ ಸಿದ್ಧ
ನಿಗಮಾರ್ಥಗಳಿಂದ ಸಜ್ಜನರ ಕೇಳೊ
ತಗಿದು ಕಳಿ ಶೋಕದ ಗೋಳು ನಿತ್ಯ
ನಗಧರನ ಭಕ್ತಿಯಲಿ ಸುಖದಲ್ಲಿ ಬಾಳೋ ೧
ಸಾಹನಶಕ್ತಿಯನ್ನು ಮಾಡೊ ಬರಿದೆ
ಸ್ನೇಹ ಮಾಡಿದರಿಂದ ಜ್ಞಾನಕ್ಕೆ ಕೇಡು
ತಾಹಾದು ಸ್ಥಿರವೆಂದು ನೋಡೊ ನೀನೂ
ಮಾಹಪದವಿಗೆ ಬಂದೆ ಸುದೃಢವೆ ಬೇಡು೨
ವಿರಕ್ತಿ ತೊಡು ತೊಡು ಬಿಡದೆ ಎಂದು
ಸಾರಿದೆ ಪೇಳಿ ಧರ್ಮದಲಿನ್ನು ನುಡಿದೆ
ವಾರವಾರಕೆ ಹೀಗೆ ಕೆಡದೇ ಶ್ರಿಂ
ಗಾರ ಶ್ರೀ ವಿಜಯವಿಠ್ಠಲಲೆನ್ನು ದು:ಖಬಡದೆ ೩

೫೧೩
ಚಿಂತೆಯಾತಕೆ ನಿನಗೆ ಎಲೆ ಪ್ರಿಯಳೆ |
ಸಂತತ ತಿಳುಪುವೆನು ಭಕುತಿಯಿಂದಲಿ ಕೇಳು ಪ
ಈ ಭೋಗ ನಮಗೆ ಯಾಕೆಂದು ನೀ ಕೇಳುವಿಯಾ |
ಲಾಭವಲ್ಲದ ಇದು ನೋಡುವದಕೆ
ಶ್ರೀ ಭೂರಮಣ ತಾನೆ ತಂದಿತ್ತ ವಿಚಿತ್ರ
ವೈಭೋಗವಲ್ಲೆನೆಂದರೆ ಬಿಡದು ರಮಣೀ ೧
ಹಿರಿಯರು ಈರ್ವಗೆ ಮಾಡಿದ ನಿಷ್ಠೆ ವಿ
ಸ್ತರ ಪುಣ್ಯ ಬಂದು ಈ ಪರಿ ಸೌಖ್ಯವ
ಹಿರಿದಾಗಿ ಕೊಟ್ಟು ನಮ್ಮನು ಪಾಲಿಸುವುದು ಬಲು
ಮೊರೆಯಿಟ್ಟರೆ ಕೇಳು ಹರಿಯ ಮಹಿಮೆಗೆ ನಮೋ ೨
ಕ್ಷೀರಸಾಗರದೊಳಗೆ ಓಲ್ಯಾಡುವವನ ವಿ
ಚಾರಮಾಡದೆ ತಂದು ಹೃದಯಮಧ್ಯ
ಸೇರಿಸುವಂದದಿ ಎನಗೆ ಇಲ್ಲಿಹ್ಯುದು ಸಂ
ಸಾರದೊಳಗಿದ್ದ ಸುಖವಿನಿತುಂಟು ರಮಣೀ ೩
ಸಂತಾನವಿಲ್ಲೆಂದು ಈರ್ವರೂ ಚಿಂತಿಪದ್ಯಾಕೆ
ಪಿಂತೆ ಕಾಂತಾರದಲಿ ಬಾಲಮೃಗನ
ಅಂತಕನ ಪುರಿಗೆ ಅಟ್ಟಿದ ದೋಷದಿಂದ ನಮ-
ಗಿಂತು ತೋರಿತು ಗುಟ್ಟು ಪೇಳಬಾರದು ರಮಣೀ ೪
ಈ ಜನ್ಮ ಬಂದದಕೆ ಇನ್ನಾದರೆಚ್ಚೆತ್ತು
ಮಾಜಿಕೊಂಡಿದ್ದು ಜನರಂತೆ ನಡದು
ಮೂಜಗತ್ಪತಿ ಸಿರಿ ವಿಜಯವಿಠ್ಠಲನ ಸ
ರೋಜ ಚರಣವನು ಪೂಜಿಸುವೆನು ರಮಣೀ ೫

೫೧೪
ಚಿಂತೆಯಾತಕೆ ಮನವೆ ನಿನಗಿದು ಸತತ ಸಲ್ಲದು ಕಾಣೊ
ನಿಂತು ಪುರಂದರ ದಾಸರನುದಿನ ಇಂತು ಬಗೆಯಲಿ ಪಾಲಿಸೊ ಪ
ಅಗ್ರ ಬುದ್ಧಿಯ ತಾಳು ನಿನಗೆ ಸಾ
ಮಗ್ರಿ ಆಲೋಚನಿ ಯಾತಕೆ ಸ
ಮಗ್ರ ಸೋಪಸ್ಕರವನು ಅನುಗ್ರಹವನು ಮಾಡುತಾ
ಉಗ್ರ ಮನುಜರ ಕೂಡಿಸದೆ ಪಾ
ಣಿಗ್ರಹ ಮಾಡಿಪ (ರಾವ) ಗವುಗಾದರೂ
ಅಂದು ಪೊಗಳಲು ಶೀಘ್ರದಲಿ ನಿಂದಿಹರೊ ೧
ಹರಿಗುರುಗಳ ಸಂಕಲ್ಪ ತಪ್ಪದು
ಗಿರಿಗಹ್ವರದೊಳಗಿದ್ದರು ಅದು
ಬರಿದೆಯಾಗದು ಕೇಳು ಸ್ಮರಿಸಿ ಬಳಲಿ ನಲಿದಾಡಿ
ಸುರ ನರೋರುಗ ಏಕತ್ರಗಳ ಮಾಡಿ ಶರಣರಿಂದಾಳಿಸುವ ನಿಶ್ಚಯ
ಪರಿದ ಕಾಲಕೆ ಬಿಡದೆ ಅಹಿಕದ ಚರಿತೆ ಅವರಿಗೆ ಗಣಣೇನೊ೨
ತೆತ್ತಗಿನ ಸ್ವಭಾವ ಆವದೊ ಎತ್ತಲಟ್ಟಿದರತ್ತ ತೊಲಗದೆ
ಹೊತ್ತುಹೊತ್ತಿಗೆ ಪೋಗಿ ಬಾಗಿ ತೊತ್ತಿನಂದದಿ ಪ್ರಯೋಜನ
ಹೊತ್ತು ಮೀರದೆ ಮಾಳ್ಪುದು ಧರ್ಮ
ಮೊತ್ತವಲ್ಲದೆ ಇನ್ನೊಂದಿಲ್ಲವೊ
ಇತ್ತ ಭಾಗ್ಯವಿತ್ತ ನಿರ್ಮಳ ಚಿತ್ತದಲಿ ಅರ್ಪಿಸುತಿರು೩
ನೀನು ಮಾಡಿದ ಪುಣ್ಯಗಳಿಗೆ ತಾ ನಡದು ಬರುವುದೇ ಮರುಳೆ
ನಾನಾ ಪರಿಯಲಿ ತಿಳಿದು ನೋಡು
ಧ್ಯಾನದಿಂದಲಿ ದಿನಪ್ರತಿ ಜ್ಞಾನನಿಧಿ ನಿಜಗುರು
ಶಿರೋಮಣಿ ಅನಂತಾನಂತ ಜನುಮದಲೀಗ
ಗಾನಮಾಡಿದ ನಿಷ್ಟ ಪುಣ್ಯವು ತಾನೊಲಿದು ಫಲವಿತ್ತದೋ೪
ಕಲ್ಲು ಕರಗಿಸಿ ಬೆಣ್ಣಿ ತೆಗುವಂಥ ಬಲ್ಲಿದರು ನಿನ
ಗೊಲಿದಿರಲು ಎಲ ಎಲ್ಲಿ ಇಲ್ಲವೆಂಬೊ
ಸೊಲ್ಲುಗಳಲ್ಲದೆ ಇದು ಸಲ್ಲದೊ
ಎಲ್ಲಿ ಇದ್ದರು ನಿನ್ನ ಬಳಿಯಲ್ಲಿ ಸಲ್ಲುತಿಪ್ಪದೊ
ಸಕಲ ಮನೋಭೀಷ್ಟಾ
ತುಲ್ಯ ವಲ್ಲಭ ಮಲ್ಲದಲ್ಲಣ ನಿಲ್ಲದಲೆ ವೊಲಿದಿಹನೊ ೫
ನೂನ್ಯಪೂರ್ಣವು ಅವರನ ಕೂಡಿ
ತನ್ನ್ಯೋಪಾಯವು ಯಾಕೆ ನಿನಗೆ
ಅನನ್ಯನಾಗಿರು ಆತ ನಿನಗೆ ರಾಜೆಂದು
ಕಣ್ಣೆವೆ ಇಡುವನಿತರೊಳು ಕಾರುಣ್ಯವರುಷಗರೆದು ಬಿಡುವ
ದೈನ್ಯವೃತ್ತಿಯ ಬಿಡಿಸಿ ನಿಷ್ಕಾಮ ಪುಣ್ಯವನಧಿಯೊಳಿಡುವರೊ ೬
ಊರ್ವಿಗೀರ್ವಾಣರಿಗೆ ಉಣಿಪುದು
ಗರ್ವವನು ತಾಳದಲೆ ಚೆನ್ನಾಗಿ
ಸರ್ವಬಗೆಯಲಿ ನಾನು ಎಂಬೊ ದುರ್ವಚನಗಳ ನುಡಿಯದೆ
ಪೂರ್ವೂತ್ತರವನು ತಿಳಿದು ಸರ್ವದ
ಪೂರ್ವತನೆ ಬಯಸುತಾರಾಧಿಸು
ಶರ್ವಸನ್ನುತ ವಿಜಯವಿಠ್ಠಲ ಪೂರ್ವನೆಂತ ಪ್ರಬಲನೆ೭

೨೮
ಚಿನ್ಮಯ ಚಿದಾನಂದ ನೀನೆ
ಸನ್ನುತಾಂಗಿಯ ರಮಣ ಸಕಲ ಲೋಕಕೆ ಕರುಣ ಪ
ಭೃಗು ಮುನಿಪ ಹರಿಹರಾ ಹಿರಣ್ಯಗರ್ಭಾ
ದಿಗಳ ವೆಗ್ಗಳವ ನೋಡಲಿ ಬಂದ್ಯೋ
ಮಿಗಿಲಾದ ಪರದೈವ ಹರಿಯೆಂದು ಕೊಂಡಾಡೆ
ಗಗನ ವಾಸಿಗಳು ಪೂಮಳೆಗರಿಯೆ ಹರುಷದಲಿ ೧
ಮಡುವಿನೊಳ್ ಕರಿರಾಜ ಸಿಕ್ಕಿ ಸಾವಿರದ ವರುಷ
ಬಿಡದೆ ನಕ್ರನ ಕೂಡ ಕಾದಿ ಸೋತು
ಒಡಿಯರಾರುಂಟೆ ತ್ರಿಮೂರ್ತಿಗಳೊಳಗೆನಲು
ಮೃಡನಜರು ಬೆರಗಾಗಿ ಸಾಮಜನ ಪಾಲಿಸಿದೆ ೨
ಸೃಷ್ಟಿಜಲ ಮುಸುಕಿ ಬ್ರಹ್ಮಾಂಡ ಪ್ರಳಯಕಾಲದಲಿ
ನಿಟಿಲಾಕ್ಷ ಮೊದಲಾದ ದೇವತೆಗಳು
ಜಠರದೊಳು ಜಗಕರ್ತುನೆಂದೆನಿಸಿದೆ
ವಟಪತ್ರಶಯನ ಸಿರಿವಿಜಯವಿಠ್ಠಲರೇಯಾ೩

೪೫೭
ಚಿರಂಜೀವಿಯಾಗಿರೆಲೊ ಚಿಣ್ಣ ನೀನು ಪ
ಪರಮ ಭಾಗವತರ ಪದಧೂಳಿ ಧರಿಸುತಲಿಅ.ಪ
ಜರಿಯಬೇಡ ಹರಿಯ ಮರೆಯಬೇಡೆಂದೆಂದು
ತಿರಿಯಬೇಡ ಖಳರ ಮನೆಗೆ ಪೋಗಿ
ಜರೆಯಬೇಡನ್ಯರಿಗೆ ರಹಸ್ಯ ತತ್ತ್ವಗಳನ್ನು
ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ೧
ಲೋಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ
ಶ್ರೀ ಕಾಂತ ಚರಿತೆಯನು ಕೇಳದಿರಬೇಡ
ಪಾಕವನು ಮಾಡಿ ಏಕಾಂಗಿಯಾಗುಣಬೇಡ
ಭೂಕಾಂತರನುಸರಿಸಿ ಬೆಸಗೊಳ್ಳಬೇಡ ೨
ಸಾಲ ಮಾಡಲಿ ಬೇಡ ಸಾಲದೆಂದೆನಬೇಡ
ನಾಳೆಗೆ ಹ್ಯಾಗೆಂಬ ಚಿಂತೆ ಬೇಡ
ಖೂಳ ಜನರೊಡಗೂಡಿ ಕಂಗೆಡಲಿ ಬೇಡ ನೀ
ಬಾಳುವರ ಸಂಗದಲಿ ಬಾಳೆಲವೊ ಬಾಲ ೩
ಪಂಡಿತರು ಪಾಮರರು ಆರಿಗಾದರೂ ನಿನ್ನ
ಕಂಡವರಿಗೆಲ್ಲ ಕೌತುಕ ತೋರಲಿ
ಹೆಂಡಿರು ಮಕ್ಕಳು ಅಳಿಯ ಸೊಸೆ ಮೊಮ್ಮಕ್ಕಳು
ಉಂಡುಟ್ಟು ದ್ವಿಜರ ಸಹ ಗಂಡುಗಲಿಯಾಗೋ ೪
ಮಂದಮತಿಗಳ ಕೂಡೆ ಮಾತಾಡಲಿ ಬೇಡ
ನಿಂದಕರ ಕಣ್ಣೆತ್ತಿ ನೋಡಬೇಡ
ಇಂದಿರೆಯರಸ ಶ್ರೀ ವಿಜಯವಿಠ್ಠಲನ ಚರಣ
ದ್ವಂದ್ವದಲಿ ಮಸ್ತಕವ ನೀಡದಿರಬೇಡ೫

೩೮೬
ಛೀ ಹಳಿ ಥೂ ಖೋಡಿ ಪಾಪಿ ಮನವೆ, ನಿನ್ನ ಪ
ಕುಹಕ ಬುದ್ಧಿಗಳೆಲ್ಲ ಬಿಡು ಕಂಡ್ಯ ಮನವೆಅ.ಪ
ಬಣ್ಣದ ಬೀಸಣೆಗ್ಯಂತೆ ಹೆಣ್ಣು ತಿರುಗೋದ ಕಂಡು
ಕಣ್ಣು ಸನ್ನೆಯಮಾಡಿ ಕೈ ಹೊನ್ನು ತೋರಿ
ತಣ್ಣೀರು ಹೊಯಿದ ಹೊಸ ಸುಣ್ಣದಂತೆ ಕುದಿದು ನಿನ್ನ
ಕಣ್ಣಿಗೆ ಮಣ್ಣು ಚೆಲ್ಲಿಕೊಂಬರೆ ಮನವೆ ೧
ನೆರೆಹೊರೆ ಮನೆಗಳಲಿ ಪ್ರಸ್ಥವನ್ನು ಮಾಡಿದರೆ
ಕರೆಯದೆಲೆ ಮೊದಲ್ಹೋಗಿ ಹಾಳು ಹರಟೆ
ಬಡಿಗಂಟು ಸುದ್ದಿ ನೂರಾರು ಹೇಳಿ ಅವರ
ಹಿರಿಯ ಮಗನಂತೆ ಉದರವ ಪೊರೆವೆ ಮನವೆ ೨
ಉತ್ತಮಾನ್ನವ ನೀಡೆ ಮುಸುರೆ ಬಯಸುವಂತೆ
ಚಿತ್ತದೊಲ್ಲಭನ ಸಂಗಡದಿ ನಲಿದು
ಮತ್ತೆ ಉಪರತಿಗೆ ಪರಪುರುಷನ ಬಯಸುವ
ತೊತ್ತು ಬುದ್ಧಿಯನೆಲ್ಲ ಬಿಡು ಕಂಡ್ಯ ಮನವೆ ೩
ಪಗಡೆ ಚದುರಂಗ ಕವಡೆಯನಾಡ ಕರೆದರೆ
ನಿಗುರುವುವು ಕರ್ಣಗಳು ಮೊಚ್ಚೆಯಂತೆ
ಜಗದೀಶನ ದಿನದಿ ಜಾಗರಕೆ ಕರೆದರೆ
ಮುಗಿಲ್ಹರಿದು ಬಿದ್ದಂತೆ ಧರೆಗಿಳಿವೆ ಮನವೆ ೪
ವಾಸುದೇವನ ಪೂಜೆಯೊಮ್ಮೆ ಮಾಡೆಂದರೆ
ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ
ಆ ಸಮಯದೊಳಗೊಬ್ಬ ಕಾಸು ಕೊಟ್ಟೇನೆನಲು
ದಾಸಿ ಮಗನಂತೆ ಬೆನ್ನಟ್ಟಿ ಪೋದೆ ಮನವೆ ೫
ಕುಳ್ಳಿರುವ ಸ್ಥಳವೆಷ್ಟು ಕೂಳು ತಿಂಬುವುದೆಷ್ಟು
ಉಳ್ಳನಕ ಕೀರ್ತಿಯಪಕೀರ್ತಿಯೆಷ್ಟು
ಗುಳ್ಳೆಯಂದದ ದೇಹನೆಚ್ಚಿ ನೀ ಕೆಡಬೇಡ
ಉಳ್ಳಿಪರೆ ಸುಲಿದರೆ ಹುರುಳಿಲ್ಲ ಮನವೆ ೬
ಬಿಂದು ಮಾತ್ರವೊ ಸುಖವು ದು:ಖ ಪರ್ವತದಷ್ಟು
ಸಂದೇಹವಿಲ್ಲವಿದು ಶಾಸ್ತ್ರಸಿದ್ಧ
ಎಂದೆಂದು ಸಿರಿಯರಸ ವಿಜಯವಿಠ್ಠಲನಂಘ್ರಿ
ಕುಂದದೆ ಹೃದಯದೊಳು ನೆನೆಕಂಡ್ಯ ಮನವೆ ೭

೨೦೯
ಜಗಪತಿಯ ತೋರಮ್ಮ ಎನಗೆ ಕರುಣವ ಮಾಡಮ್ಮ ಪ
ಅಘಗಳ ಕಳೆವ ಅಮೋಘದೇವನ
ಭಕುತರ ಕಾವನ ಎನ್ನಯ ಜೀವನ ಅ
ಮೃಗಲಾಂಛನ ವದನೆ ಮೃದು ಸರಸಿಜ ಸದನೆ
ಹಗಲು ಇರುಳು ನಿನ್ನ ಸಂಯೋಗನ್ನ ಅನಂತ ಭೋಗನ್ನ
ಕಿರೀಟಿಯ ಬೀಗನ್ನ೧
ಭ್ರಮರ ಕುಂತಳೆ ಜಾಣೆ ಸುಮನ ಕೋಕಿಲಗಾನೆ
ಕಮಲ ತುಳಸಿ ಮಣಿಹಾರನ್ನ ಜಗದಾಧಾರನ್ನ
ದಶಾವತಾರನ್ನ ೨
ಅಜರಾಮರಣ ಸಿಧ್ದಿ ತ್ರಿಜಗದೋಳ್ ಪ್ರಸಿದ್ಧಿ
ವಿಜಯವಿಠ್ಠಲ ಶ್ರೀನಿವಾಸನ ತಿರುವೆಂಗಳೇಶನ
ಜಗವ ಪೋಷನ ೩

೩೮೭
ಉದಯರಾಗ
ಜನಿಸಲಾರೆನು ಜಗದೊಳಗೆ ಹರಿಯೆ ಪ
ಕನಸಿನೊಳು ನೆನೆಯೆ ಕಂಪನವಾಗುತಿದೆ ಮನಕೆ ಅ.ಪ
ವಾರಿಮಂಡಲ ವೃಷ್ಟಿಧಾರೆ ಧಾರುಣಿ ಜನಕ
ದ್ವಾರದಿಂ ಸರಿದುಪೋಗಿ-ಸಾಗಿ
ಜಾರಿ ಜನನೀ ಜಠರ ನಾರುವ ದುರ್ಗಂಧ
ಸೇರಿ ಬೊಬ್ಬುಳಿಯ ತೆರದಿ-ಭರದಿ
ವಾರಿವಾರಕೆ ಬೆಳೆದು ತಾರಿತಗಲಿ ಬಳಲಿ
ಶರೀರವನ್ನೆ ಪೊತ್ತು-ತೆತ್ತು
ಖಾರ ಕಟು ಲವಣಾದಿ ಘೋರತರ ಮಹಕ್ಲೇಶ
ವಾರಿಧಿಯೊಳಗೆ ಮುಳುಗಿ ಮರುಗಿ ಸೊರಗಿ ೧
ಲೇಶಾವಕಾಶವಿಲ್ಲದ ದೇಶದೊಳು ಸನ್ನಿ
ವಾಸ ಉಲ್ಬಣದೊಳಿದ್ದು-ಕುದ್ದು
ಘಾಸಿಯಲ್ಲಿ ಪರಿತಾಪ ಸೂಸಲು ಹಾಹಾಯೆಂಬ
ಘೋಷಧ್ವನಿಯಿಂದ ಬೆದರಿ-ಅದರಿ
ರೋಷವಾಗಿದ್ದ ಕ್ರಿಮಿರಾಶಿ ಮುಖ ಕಾಟದಿಂ
ಏಸು ಬಗೆಯಿಂದ ನೊಂದು ಬೆಂದು
ಶ್ವಾಸ ಬಿಡುವುದಕೆ ವ್ಯತ್ಯಾಸವಾಹುದು ಮುಂದೆ
ಮೋಸಗೊಂಡು ಮತಿಗೆಟ್ಟು ಬೇಸರಿಕೆ ಅಕಟಕಟ ೨
ಜಾನು ಮಧ್ಯದಲಿ ಶಿರಗೋಣು ತೂರಿಸಿಕೊಂಡು
ಮಾಣದಲೆ ಬಿಕ್ಕಿ ಬಿಕ್ಕಿ-ಸಿಕ್ಕಿ
ಏನೆಂಬೆ ಮಸೆದುಕ್ಕಿನ ಬಾಣ ಪೆಟ್ಟಿನ ಸಮ-
ಬೇನೆಯಿಂದಧಿಕವಾಗೆ ಮೈಗೆ
ಮೇಣು ಕೈಕಾಲುಗಳು ಕಾಣಿಕಾ ಕಾಲವಗ-
ಲಾನು ಚರಿಸದಾದೆನೊ ಇನ್ನೇನೊ
ಗಾಣ ತಿರುಗಿದಂತೆ ಗೇಣು ಬೈಲೊಳಗೆ ಈ
ಆ-ನನ ಮೇಲಡಿಯಾಗಿ ಬಂದೆ-ನೊಂದೆ ೩
ಸೂತಿಕಾಮರುತ ಬೀಸಿದಾತುರಕೆ ಬೆಸಸುವ
ಯಾತನೆಗೆ ಕಾಣೆ ಲೆಖ್ಖ-ದು:ಖ
ಗಾತುರವು ಕಿರಿದಾಗಿ ಪೋತಭಾವವ ವಹಿಸೆ
ಭೂತಳಕೆ ಉಗ್ಗಿಬಿದ್ದು-ಎದ್ದು
ಶೀತೋಷ್ಣ ಮಲರೋಗ ಭೀತಿ ಲಾಲನೆಯಿಂದ
ಮಾತೆಯ ಮೊಲಿಯನುಂಡು-ಉಂಡು
ಆ ತರುವಾಯ ಉಪನೀತ ವಿವಹಗಳಲ್ಲಿ
ಖ್ಯಾತನಾಗೀ ವಿಷಯ ವ್ರಾತ ಕೈಕೊಂಡೆನಯ್ಯ ಜೀಯ ೪
ಯೌವನದಿ ಚತುರ್ವಿಂಶತಿ ತತ್ವಜ್ಞಾನವ ಜರಿದು
ಯುವತಿಯರ ರೂಪಲಾವಣ್ಯ ನೋಡಿ-ಬಾಡಿ
ನೆವನೆವದಿ ಭೋಗಗಳ ಸವಿ ಸವಿದಿಪೇಕ್ಷಿಸಿ
ಭವನ ಭವನವನು ಪೊಕ್ಕು -ಸೊಕ್ಕು
ಅವರಿವರ ಜಾತಿಯೆನ್ನದೆ ಮಾತುಗಳನಾಡಿ
ದಿವರಾತ್ರಿಯಲ್ಲಿ ಹೊರಳಿ-ಉರುಳಿ
ಕವಿಜನರ ಧಿಕ್ಕರಿಸಿ ಕೋಣನಂತೆ ಸದಾ
ಆವಧಿಯಿಲ್ಲದೆ ಕಾಲ ಕಳೆದೆ ಉಳಿದೆ ೫
ಹೆಂಡ್ರು ಮಕ್ಕಳಿಗಾಗಿ ಎನ್ನ ಹಿತಮನೆ ಮರೆದು
ಕಂಡಕಂಡವರ ಕಾಡಿ-ಬೇಡಿ
ಉಂಡುಟ್ಟು ಸುಖಪಟ್ಟು ಪಾರತ್ರಯವ ಜರೆದು
ಕೊಂಡೆಯಲಿ ನಿಪುಣನಾಗಿ ತೂಗಿ
ಮಂಡೆಯನು ಬಲಿತ ಪಶುವಿನಂತೆ ಮದವೇರಿ
ಚಂಡ ವೃತ್ತಿಯಲಿ ನಡೆದು-ನುಡಿದು
ಹಿಂಡು ಮಾತೇನು ಈ ಜರೆನರೇ ಬಂದೆನ್ನ
ಲಂಡತನ ಪೋಗದಕಟ್ಟ-ಉಂಬೆ ವಿಕಟ ೬
ನಾನಾ ಯೋನಿಗಳಲ್ಲಿ ಬರಲಾರೆ ಬರಲಾರೆ
ನಾನು ಪೇಳುವುದು ಏನೋ-ಇನ್ನೇನೊ
ನೀ ನೋಡಿದರೆ ಅನ್ಯ ಕಾವ ದೈವರ ಕಾಣೆ
ಮಾನಸದೊಳಗೆ ಒಮ್ಮೆ-ಇಮ್ಮೆ
ದೀನರಕ್ಷಕ ಬಿರುದು ಅನವರತ ನಿನ್ನದು
ಎಣಿಸದಿರು ಎನ್ನ ದೋಷ ಲೇಶ
ಶ್ರೀನಾಥ ವಿಜಯವಿಠ್ಠಲರೇಯ ನೀನೊಲಿದು
ಧ್ಯಾನದಲ್ಲಿ ಬಾರೊ ನಿಜ ಮೂರುತಿಯ ತೋರೊ ೭

೩೦೨
ಜಯ ಕೃಷ್ಣವೇಣಿ ದುರ್ಜನರ ಗಂಟಲಗಾಣಿ
ನೀ ತಮತಗುಣ ಶ್ರೇಣಿ ನಿತ್ಯ ಕಲ್ಯಾಣಿ ಪ
ಹರಜಡಿಯಲಿ ಜನಿಸಿ ಹರಿಪಾದ ಜಲವೆನಿಸಿ
ಮುರಹರನ ವರ್ಣ ಪೆಸರವನೇ ಪೊತ್ತು
ಧರೆಯೊಳಗೆ ಮಹಾಬಳೇಶ್ವರದಲ್ಲಿ ನೆಲೆಯಾಗಿ
ಪೊರಿದೆ ಶರಣಾಗತರ ದುರಿತಗಳ ತರಿದೆ ೧
ದೋಷರಹಿತಾಥೆರೆಯೊಳು ಸಾಸಿರ ಭಾಗದಲಿ
ಆ ಸಲಿಲ ಬಿಂದು ಪವಮಾನ ಬಂದೂ
ಬೀಸಿದಾ ಸಮಯದಲಿ ಜೀವರಾಸಿಯ ಮೇಲೆ
ಸೂಸಿ ಬೀಳಲು ಕ್ಲೇಶ ಶೋಕ ವಿನಾಶ ೨
ಅಷ್ಟಾರ್ಥಮಾಸ ಕೃಷ್ಣಪಕ್ಷ ಚತುರ್ದಶಿ
ಕೃಷ್ಣವಾರ ವಿಷ್ಣು ತಾರೆಯಲ್ಲೀ
ಕೃಷ್ಣಕೃಷ್ಣಾ ಎಂದು ನಿಷ್ಠೆಯಿಂದಲಿ ಮನ
ಮುಟ್ಟಿ ಸ್ನಾನವ ಮಾಡೆ ಕಷ್ಟ ಪರಿಹರಿಪ ೩
ಸೂರಪಾಲಿ ಕಪಟ ಸಂಗಮಛಾಯಾ
ಶ್ರೀ ಶೈಲ ವರ ಚತುಸ್ಥಾನಗಳಲಿ ವಾಸಮಾಡಿ ಇರಲು
ವಾರಣಾಶಿಯ ಫಲಗರೆದು ಜೀವನ್ಮು
ಕ್ತರನು ಮಾಡಿ ಪೊರದೇ ೪
ಕಲಿಯುಗದಿ ಕೃಷ್ಣಾ ಸ್ನಾನ ಕೃಷ್ಣ ಸ್ಮರಣಿ ವೆ
ಗ್ಗಳವೆಂದು ಅಜನ ಸತಿ ಪೊಗಳಲು
ಜಲನಿಧಿಯ ಉಭಯಮುಖದಲಿ ಕೂಡಿ ಭಕ್ತರಿಗೆಒಲಿದು ಸಿರಿ ವಿಜಯವಿಠ್ಠಲ ಕಾಣಿಸಿದಿಯಾ೫

ಜಯ ಜಯ ಮೂಷಕಗಮನಾಜಯ ಜಯ ಗಜಾನನಾಜಯ ಜಯ ನಾಗಾಭರಣಾ ಜಯ ಏಕದಂತ ಜಯ ಜಯ ಪ
ಮತಿಯ ಕೊಡು ಪಾರ್ವತಿಯ ನಿಜ ತನುಜನೆಬಿಡದೆ ನಿನ್ನನು ನಾನು ನುತಿಸುವೆ ಕ್ಷಿತಿಯೊಳಗೆಶ್ರೀ ಲಕುಮಿ ಪತಿಯ ಕೊಂಡಾಡಿ ಸದ್ಗತಿಯಪಡೆಯುವದಕ್ಕೆ ಸಾರಥಿಯಾಗು ದೇವಾ ೧
ಆಕಾಶದಭಿಮಾನಿ ಅಂಗಜನ ಚಾಪನಿರಾಕರಿಸಿ ಬಿಸುಟ ಲಂಬೋದರನೆಏಕ ಪಿಂಗಾದಿಗಳ ಪ್ರಿಯ ಹಸ್ತಚತುಷ್ಟಲೋಕದೊಳು ಭಜಿಸುವರ ವಿದ್ಯಾದಾ ನಿಧಿಯೆ ೨
ಸೀತಾರಮಣನಿಂದ ಪೂಜಿತನಾಗಿವನಧಿ ತೀರದಲ್ಲಿ ಮೆರೆವ ಗಣೇಶಾಸೇತುಮಾಧವ ವಿಜಯವಿಠ್ಠಲರೇಯನದೂತನು ನೀನೆ ಪಾಶಾಂಕುಶಧರನೆ ೩

೨೯೫
ಜಯ ಜಾಹ್ನವಿ ದೇವಿ ಜಯ ಭಕುತ ಸಂಜೀವಿ
ಜಯ ಪ್ರದಾಯಕ ವೀವೆ
ಜಯ ಎಮ್ಮ ಕಾವೆ ಪ
ಅಜನ ಸಭೆಯಲಿ ವರುಣಗೆ ಶಾಪವು ಬರಲು
ಪ್ರಜಪಾಲನಾದ ಶಂತುನ ನಾಮದೀ
ನಿಜರೂಪದಲಿ ಬಂದು ಅಷ್ಟವಸುಗಳ ಪಡೆದೆ
ಭಜಿಸಬಲ್ಲೆನೆ ನಿನ್ನ ಬಹು ಭಾಗ್ಯವಂತೇ೧
ಭಗೀರಥಗೆ ವೊಲಿದು ಭವದೂರ ಪಾವನಕಾರೆ
ಸಗರರಾಯನ ವಂಶವನ್ನೆ ಉದ್ಧಾರೆ
ಅಗಣಿತೋದಯ ಪಾರಂವಾರೆ ಶುಭಶರೀರೆ
ಮುಗುವೆನು ಕರವೆತ್ತಿ ಸಂತತ ವಾರಂವಾರೆ ೨
ಏನು ಧನ್ಯರೊ ಎನ್ನ ಕುಲಕ ಪಾವನೆಯೆನಲು
ನೀನುಬ್ದಿ ಪೊರದೆ ಉತ್ಸಾಹದಿ ಮೆರೆದೆ
ಮಾನನಿಧಿ ವಿಜಯವಿಠ್ಠಲನ ಸನ್ನಿಧಿಯಲ್ಲಿಜ್ಞಾನಪೂರ್ವಕ ವೊಲಿದು ಭಕುತಿ ಕೊಡು ಎನಗೆ ೩

೨೯೪
ಜಯಜಯತು ಜಾಹ್ನವಿಯೆ ಭಕ್ತ ಸಂಜೀವಿ
ಜಯ ಮಂಗಳವನೀಯೆ ಜಯ ನಮ್ಮ ಕಾಯೆ ಪ
ಕಮಲಜನು ಪಾತ್ರೆಯೊಳು ಧರಿಸಲಾ ಹರಿಪಾದ-
ಕಮಲವನು ತೊಳೆಯಲಾವೇಗದಿಂದ
ವಿಮಲ ಸಂಗತಿಯಿಂದ ಮಂದಾದಿನಿಯೆನಿಸಿ
ಸುಮನ ಸಾವನಿಯಲ್ಲಿ ಮೆರೆದೆ ಸುರನದಿಯೆ೧
ಧ್ರುವಲೋಕಕಿಳಿದು ಅಮರಾವತಿಯ ಸಾರಿದೆ
ರವಿಯಂತೆ ಪೊಳೆಯುತ ಆ ಜನ ಮಧ್ಯದಿಂ
ಭುವನದೊಳಗೀರೈದು ನೂರು ಯೋಜನದಗಲ
ತವಕದಿಂದಲಿ ಧುಮುಕಿ ಚತುರ ಭಾಗವಾದೆ ೨
ಶಿವನ ಮಸ್ತಕದಲ್ಲಿ ಶೋಭಿಸುವ ಮಹಮಹಿಮೆ
ಭವದೊರೆ ಭಗೀರಥಗೆ ವಲಿದು ಬರುತ
ಕವಿ ಜನ್ಹುಮುನಿಯಿಂದ ಪುಟ್ಟಿ ಹಿಮಗಿರಿ ದಾಟಿ
ಜವನ ಭಗಿನಿಯ ಕೂಡಿ ಮಣಿಕರ್ಣಿಕೆಯ ನೆರದೆ ೩
ಅಳಕನಂದನೆ ನಿನ್ನ ಸ್ಮರಣೆ ಮಾಡಿದ ಜನಕೆ
ಕುಲಕೋಟಿ ಪಾವನವು ಸಂದೇಹವಿಲ್ಲ
ಸಲಿಲವನು ಸ್ಮರಿಸಿ ಮಜ್ಜನ ಪಾನ ಮಾಡಿದಗೆ
ಪೊಳೆಗೆ ವೈಕುಂಠಪುರ ಅವನ ಹೃದಯದಲಿ ೪
ದೇಶದೇಶಗಳಿಂದ ಬಂದ ಸುಜನರ ಪಾಪ
ನಾಶನವ ಮಾಳ್ಪ ನೀ ನಿಷ್ಕಾಮದಿ
ಕಾಶಿಸ್ಥ ಬಿಂದು ಮಾಧವ ವಿಜಯವಿಠ್ಠಲನ
ಸೋಸಿನಿಂದಲಿ ಪೊಗಳುತಿಹೆ ಸುವಿಖ್ಯಾತೆ ೫

ಜಯರಾಯರ ನೋಡಿರೋ ಸಜ್ಜನರೆಲ್ಲ :

೩೧೩
ಜಯರಾಯರ ನೋಡಿರೋ ಸಜ್ಜನರೆಲ್ಲ
ಜಯರಾಯರ ನೋಡಿರೋ ಪ
ಜಯರಾಯರ ನೋಡಿ ಜಪಿಸಿ ಮನದಿ ಪಾಡಿ
ಜಯವಾಗುವುದು ನಿಮಗೆ
ಭಯನಾಶ ಸಂತತ ಅ.ಪ
ದುರುಳಮತವೆಂಬೊ ಕರಿಗೆ ಅಂಕುಶವಿತ್ತು
ಸುರಸಾದ ಗ್ರಂಥ ಆನಂದಮುನಿ
ವಿರಚಿಸಿ ಇರಲಾಗಿ ಪರಮಭಕ್ತಿಯಿಂದ ವಿ
ಸ್ತರ ಮಾಡಿದಾ ಕರದ ಕನ್ನಡಿಯಂತೆ ೧
ವಾದಿಗಳನ್ನೆಲ್ಲಾ ಜೈಸಿ ಡಂಗುರ ಹೊಯ್ಸಿ
ಭೇದಾರ್ಥಜ್ಞಾನ ಸತ್ಯವೆನಿಸಿ
ಈ ಧರಿಯೊಳಗೆ ಹರಿಪರ ದೈವವೆಂದು
ಸಾಧಿಸಿ ಉದ್ದಂಡವಾದ ಗುರುತಿಲಕ ೨
ಅಕ್ಷೋಭ್ಯತೀರ್ಥರ ಕರದಿಂದ ಜನಿಸಿ
ಮೋಕ್ಷಕೆ ಜಯ ಪತ್ರಿಕೆ ಕೊಡಿಸಿ
ಪಕ್ಷಿವಾಹನ ಸಿರಿ ವಿಜಯವಿಠ್ಠಲನನ್ನ
ನೀಕ್ಷಿಸುವದಕೆ ಉಪದೇಶ ಕೊಡುವ ಋಷಿ
ಶ್ರೀ ಮಧ್ವೇಶಾರ್ಪಿತವು೩

ಜರಿಯಬೇಡ ಹರಿಯ ಮರೆಯಬೇಡೆಂದೆಂದು |ತಿರಿಯಬೇಡ ಖಳರ ಮನೆಗೆ ಪೋಗಿ ||ಪ||ಒರೆಯಬೇಡನ್ಯರಿಗೆ ರಹಸ್ಯ ತತ್ವಗಳನು |ಬೆರೆಯಬೇಡ ಪರರ ಸತಿಯ ಸ್ವಪ್ನದಲೂ ||ಅ|| ||ಪ||
ಮೂಕವಾರ್ತೆಯ ನಿನ್ನ ಕಿವಿಗೆ ಕೇಳಿಸಬೇಡ |ಶ್ರೀಕಾಂತ ಚರಿತೆಯನು ಕೇಳದಿರಬೇಡ |ಪಾಕವನು ಮಾಡಿ ಏಕಾಂಗಿಯಾಗುಣಬೇಡ|ಭೂಕಾಂತರನುಸರಿಸಿ ಬೆಸಗೊಳ್ಳಬೇಡ ||
ಪಂಡಿತರು ಪಾಮರರು ಆರಿಗಾದರೂ ನಿನ್ನ |ಕಂಡವರಿಗೆಲ್ಲ ಕೌತುಕವು ತೋರಿದರೂ |ಹೆಂಡಿರು ಮಕ್ಕಳು ಅಳಿಯ ಸೋಸೆ ಮೊಮ್ಮಕ್ಕಳು |ಉಂಡುಟ್ಟು, ದ್ವಿಜರು ಸಹ ಗಂಡುಗಲಿಯಾದರೂ||
ಮಂದಮತಿಗಳ ಕೂಡೆ ಮಾತಾಡಲಿ ಬೇಡ |ನಿಂದಕರ ಕಣ್ಣೆತ್ತಿ ನೋಡಬೇಡ |ಇಂದಿರೆಯರಸ ಶ್ರೀ ವಿಜಯ ವಿಠಲರ ಚರಣ|ದ್ವಂದ್ವದಲಿ ಮಸ್ತಕವನಿಡದಿರಬೇಡ ||

೨೯
ಜಾಣ ನಿನಗೆ ಸರಿಗಾಣೆ
ಪ್ರಮಾಣ ಕೊಟ್ಟ ತರುವಾಯ ತಪ್ಪುವ ನೀನಲ್ಲ ಪ
ಅಸುರ ತಾರಕನು ಸುಮನಸರ ಬಳಲಿಸುತಿರಲು
ಬಿಸಿಗಣ್ಣವನ ತಪಸು ಹಾನಿಮಾಡಿ
ಶಶಿವದನೆ ಪಾರ್ವತಿಯಲ್ಲಿ ಗರ್ಭವನಿಡಿಸಿ
ಹಸುಳೆ ಕೈಯಿಂದ ರಾಕ್ಷಸನ ಕೊಲ್ಲಿಸಿದೆ ೧
ಶಂಬರ ದೈತ್ಯಜನ ವರದಿಂದ ಅನಿಮಿಷ-ಕ
ದಂಬವನು ಸೋಲಿಸಿ ಮೆರೆವುತಿರಲು
ಅಂಬುತನಯುದರದಲ್ಲಿ ಹೊಕ್ಕು ಬೆಳೆದದು ಬಂಡು
ಅಂಬರರು ನಲಿಯೆ ವನಶಿರವ ಚಂಡಾಡಿದಾ ೨
ಮನಮುಟ್ಟಿ ನಿನ್ನನು ವಂದನೆಮಾಡಿ ನರಗೆ
ಮನದ ತಾಪವ ಬಿಡಿಸಿ ಮುಕ್ತಿ ಕೊಡುವಾ
ಘನ ಕೃಪಾನಿಧಿ ಸಿರಿ ವಿಜಯವಿಠ್ಠಲರೇಯನ
ಅನುಸರಿಸಿ ಬಾಳುವಂತೆ ಏಕಚಿತ್ತವನೀವಾ ೩

೧೫೨
ಜಾನಕಿರಾಮ ಜಾನಕಿರಾಮ
ಜಾನಕಿರಾಮ ಜಾನಕಿರಾಮ ಪ
ಭಕ್ತರ ನೋಡು ಗೀತವ ಪಾಡು
ನೃತ್ಯವನಾಡೊ ವರಗಳ ನೀಡೋ ೧
ವಾರಿಧಿ ಬಂಧ ವಸುದೇವ ಕಂದ
ಸ್ವಾರಸ್ಯ ತಂದ ಸತ್ಕರುಣದಿಂದ ೨
ಶಿರಿವಾಸ ಸಿರಿದೇವಿ ತೋಷ
ಶಿರಿ ವಿಜಯವಿಠ್ಠಲ ಉದ್ಧವ ಘೋಷ೩

೧೭೬
ಜೋ ಜೋ ಹರಿ ಜಾಹ್ನವಿ ಜನಕ
ಮೂಜಗತ್ಪತಿ ಸುರಕುಲ ಸನಕಾ
ದೀಜನ ಮನೋಹರ ಮಾಣಿಕ್ಯ ಕನಕಾ
ವೈಜಯಂತಿ ಹಾರ ಪಾವನ್ನ ಪದಕ ಪ
ಕೇಶಿಭಂಜನ ವ್ಯೋಮಕೇಶ ವಂದಿತ ಪಾದ
ಕ್ಲೇಶನಾಶನ ವಾತೇಶನ ಜನಕ
ಕೇಶರಿರುಹ ಮುಂಜಿಕೇಶನೆ ಕುಂಕುಮ
ಕೇಸರಿಭೂಷಣ ಕೇಶವ ಶೌರಿ ೧
ವಾರುಣಿ ಪತಿನುತ ವಾರುಣನ ಭಯ ನಿ
ವಾರಣಾ ವಾರಣಾಶಿ ಪುರದರಸೆ
ವಾರಣ ನಗರಿಯ ವಾರನಹತಪಲ್ಲ
ವಾರುಣಿ ಪಾಣಿಯೆ ನಾರಾಯಣನೆ ಜೋ ಜೋ ೨
ಮಾದೇವಿ ರಮಣ ಭೂಮಿದೇವಿ ಉದ್ಧಾರ
ಮಾಧುರ್ಯ ವಚನ ಉಮಾದೇವಿ ವಿನುತಾ
ಮಾಧಾರ ಮಹಶೂರ ಮತ್ಕುಲನೆ ಪ್ರೇ
ಮಾದವನನೆ ಹರಿ ಮಾಧವ ರಾಯಾ ೩
ಗೋವಳಿ ಪರಿಪಾಲ ಗೋವಳೇರಾ ಪ್ರಿಯಾ
ಗೋವುಗಳ ಕಾಯಿದ ಗೋವಳರಾಯಾ
ಗೋವರ್ಧನುದ್ಧಾರ ಗೋ ವಿಪ್ರ ಸಂರಕ್ಷ
ಗೋವಿದಾಂಪತಿ ರಂಗ ಗೋವಿಂದ ನಂದ ೪
ಮಧುಕೈಟಭಾಸುರ ಮದಗರ್ವ ಮರ್ದನ
ಮದನ ಜನಕ ನಿತ್ಯ ಮಧುರನ್ನ ಪಾನಾ
ಮಧುರಾಪುರ ಪಾಲ ಮದಗಜ ಹರಣಾ ಶಾ
ಮದವರ್ಣ ಶರೀರ ಮಧುಸೂದನನೆ ೫
ಇಷ್ಟಭಕ್ತರ ಕುಲ ಇಷ್ಟದೈವವೆ ಸರ್ವ
ಇಷ್ಟಾರ್ಥ ಕೊಡುವ ಬಲಿಷ್ಟನು ನಿನ್ನ
ಇಷ್ಟ ಅಷ್ಟಯೆಂದು ತಿಳಿಯಲಿ ವಶವಲ್ಲ
ವಿಷ್ಣು ಸರ್ವೋತ್ತಮ ವಿಶ್ವನಾಟಕನೆ೬
ಅಕ್ರಮದಲಿ ಸ್ವರ್ಗ ಆಕ್ರಮಿಸಿ ಬಲಿ
ವಿಕ್ರಮನಾಗಿ ಕಾಲಕ್ರಮಣಿ ಮಾಡೆ
ಶಕ್ರಮರ್ಚಿಸೆ ಅನುಕ್ರಮನಾಗಿ ಪ
ರಾಕ್ರಮದಲಿ ಬೆಳದೆ ತ್ರಿವಿಕ್ರಮನೆ ೭
ವಾಮಲೋಚನೆಯರ ವಾಮನ ಕೆಡಿಸಿದೆ
ವಾಮನವಾಶಿಷ್ಟವಾ ಮುನಿವಂದ್ಯ
ವಾಮನದಲಿ ದಾನವಾಮನ್ಯಗಳರನ್ನು ಅ
ವಮಾನ ಮಾಡಿದೆ ಸಿರಿವಾಮನನೆ ೮
ಶ್ರೀಧರ ರಮಣನೆ ಶೃಂಗಾರ ವಾರಿಧಿ
ಶ್ರೀಧನ ಸಂಪತ್ತಾಶ್ರಿತ ಜನರಿಗೆ
ಶ್ರೀಧೇನು ನೀನಯ್ಯಾ ಶ್ರೀ ಕರುಣಾಕರ
ಶ್ರೀದೇವಿ ಉರಭೂಷಾ ಶ್ರೀಧರನಂತಾ ೯
ಋಷಿಕೇಶನ ತಾತ ಋಷಿಜನ ಸಂಪ್ರೀತ
ಋಷಿಕುಲೋದ್ಭವ ಪುರುಷ ರಾಮ ಮಹಾ
ಋಷಿನಾಮಧೇಯನೆ ಋಷಿಪತ್ನಿ ಪಾಲನೆ
ಋಷಿಗಳ ಒಡೆಯನೆ ಹೃಷಿಕೇಶ ದೇವ ೧೦
ಪದುಮಜಾಂಡದಲ್ಲಿ ಪದುಮೆ ಮಾತನು ಕೇಳಿ
ಪದುಮನಾಭಿಯಲ್ಲಿ ಪದುಮಜನ ಪೆತ್ತ
ಪದುಮಾಸ್ಯ ಪದುಮಾಕ್ಷ ಪದುಮಕರನೆ ಪಾದ
ಪದುಮ ಮಿಗಲು ಕಾಂತಿ ಪದುಮನಾಭನೆ೧೧
ಧಾಮನಿಧಿಕುಲನು ಧಾಮನೆ ನಿರುತ ತ್ರಿ
ಧಾಮನಿವಾಸ ಸುಧಾಮನ ಮಿತ್ರ
ಧಾಮ ಪುಣ್ಯಧಾಮ ಭಕ್ತ ಹೃದ್ವನಜ
ಧಾಮ ಮಧುಕರನೆ ದಾಮೋದರ ಧರ್ಮಾ ೧೨
ಶಂಖ ಸುರಾಹರಾ ನಿಃಶಂಕ ಚರಿತ
ಶಂಖಪಾಣಿ ಶಶಾಂಕ ಸುವದನ
ಸಂಖ್ಯೆಯಿಲ್ಲದೆ ತಾಯಿ ಸಂಕಲೆ ಹರಿಗಡಿದೆ
ಸಂಕರುಷಣನುವುಜ ಸಂಕರುಷಣನೆ ೧೩
ಪ್ರದ್ಯೋತ ಶತತೇಜ ಪ್ರಧಾನ ಮೂರುತಿ
ಪ್ರದ್ವೀಪ ವರ್ಣ ಸುಪ್ರದಾಯಕನೆ
ಪ್ರದೇಶ ಪರಿಮಾಣ ವರಪ್ರದ ಸಿದ್ಧನೆ
ಪ್ರದ್ಯುಕ್ತ ಅವ್ಯಕ್ತ ಪ್ರದ್ಯುಮ್ನ ವಿಶ್ವ೧೪
ವಾಸುವಾನುಜ ಶ್ರೀನಿವಾಸ ಪುಂಡ್ರೀಕ
ವಾಸುದೇವನ ಶಮನಪುರದಲ್ಲಿ
ವಾಸಮಾಡಿಸಿದಯ್ಯಾ ವಾಸವಾರ್ಚಿತ ಶ್ರೀ
ವಾಸುದೇವ ವಾಸುದೇವ ೧೫
ಅನುಗಾಲವು ನಿನ್ನ ಅನುಸರಿಸಿದೆ ನಾನು
ಅನುಕೂಲವಾಗಿ ಎನ್ನನು ಸಾಕುವುದು
ಅನುಮಾನವ್ಯಾತಕೆ ಅನಿಮಿತ್ತ ಬಂಧು
ಅನುಪಮ ಚರಿತನೆ ಅನಿರುದ್ಧ ಶ್ರೀಶಾ ೧೬
ಪುರುಷ ಪುರುಷ ಶ್ರೇಷ್ಠ ಪುರುಷಾರ್ಥ ಕಾರಣ
ಪುರುಷೇಶ್ವರ ತತ್ಪುರುಷಾದಿ ಪುರುಷ
ಪುರುಷ ಬೀಜ ವೇದ ಪುರುಷ ಪರಮ
ಪುರುಷ ಪುರುಷರು ಮೋಹಿಸುವ ಪುರುಷೋತ್ತಮನೆ ೧೭
ಅಕ್ಷಯ ಬಲ ಸಹಸ್ರಾಕ್ಷ ರಕ್ಷಕ
ಅಕ್ಷರಪರ ಬ್ರಹ್ಮ ಗೀರ್ವಾಣಧ್ಯಕ್ಷ
ಅಕ್ಷಯ ಪಾತ್ರಿಯ ಶಾಖಾದಳವನ್ನು
ಅಕ್ಷಯ ಮಾಡಿದಧೋಕ್ಷಜ ಚಕ್ರಿ ೧೮
ನರಸಖ ನರಹರಿ ನಾರಾಯಣ ವಾ
ನರ ದಳನಾಯಕ ನಾರದ ವಿನುತ
ನರಕ ಉದ್ಧಾರಕ ನರಕಾಂತಕ ಕಿ
ನ್ನರ ಸುರನರೋರಗ ವೃಂದ ನರಸಿಂಹ ೧೯
ಸಚ್ಚಿದಾನಂದಾತ್ಮ ಸಚಲ ವಿಗ್ರಹನೆ
ಸಚ್ಚರಾಚರದೊಳೂ ಗುಣಪರಿಪೂರ್ಣ
ಸಚ್ಛಾಸ್ತ್ರದಲಿ ನಿನ್ನ ಸಾಮರ್ಥಿ ಪರಿಪೂರ್ತಿ
ಸಚ್ಚೂತ ಚುತಿ ದೂರ ಚಿನ್ಮಯ ರೂಪಾ ೨೦
ಜನನ ಮರಣ ನಾಶ ಜನನಾದಿಕರ್ತಾಂ
ಜನಸುತಗತಿ ಪ್ರೇಮಾಂಜನ ಗಿರಿಧಾಮ
ಜನಕವರದ ಸಜ್ಜನರಘದಹನ ದು
ರ್ಜನರ ಕುಲರಾತಿ ಜನಾರ್ದನನೆ ೨೧
ವೀಂದ್ರವಾಹನ ಮಹೇಂದ್ರಧಾರನೆ ಗ
ಜೇಂದ್ರನ್ನ ಬಿಡಿಸಿ ನಕ್ಷೇಂದ್ರನ ಸೀಳಿ ನಾ
ಗೇಂದ್ರ ಶಯನ ಗುಣಸಾಂದ್ರ ಗೋಕುಲ ಚಂದ್ರ
ಇಂದ್ರಮಣಿ ನಿಭ ರಾಮಚಂದ್ರ ಉಪೇಂದ್ರಾ ೨೨
ಹರಿ ಎನುತಾ ಹರಿ ಹರಿದು ಓಡಿ ಬರೆ
ಹರಿದು ಪೋಗಿ ಪರಿಹರಿಸಿದ ಖಳನ
ಹರಿ ಹರಿಯು ನಲಿವನೆ ಹರಿರೂಪ ಪರಿ
ಹರಿನಾಮವೆ ಗತಿ ಹರಿ ಸರ್ವೋತ್ತಮಾ೨೩
ಕೃಷ್ಣದ್ವಯಪಾಯನ ಉತ್ರ‍ಕಷ್ಟ ಮುನೇಶ
ಕೃಷ್ಟಿಗೆ ಬಂದ ಕಷ್ಟ ಓಡಿಸಿದೆ
ಕೃಷ್ಣವತ್ರ್ಮನೆ ಸಂತುಷ್ಟೀಲಿ ಸುಖಬಡುವ
ಕೃಷ್ಣಾವತಾರ ಕೃಷ್ಣ ಕಮಲೇಶ ೨೪
ನಿನ್ನ ಮಹಿಮೆಯನ್ನು ಬಣ್ಣಿಸಲಳವಿಲ್ಲ
ನಿನ್ನೊಳಗೆ ನೀನು ಬೀಯ ಬೀಜವನು
ಎನ್ನ ಪಾಲಿಸುವುದು ವಿಜಯವಿಠ್ಠಲ ಪ್ರಸನ್ನ ಭಕ್ತರ ವರದ ಬಾಲ ಗೋಪಾಲ ಜೋ ಜೋ ೨೫

೧೭೫
ಜೋಕುಮಾರನೆಂದು ಪಾಡಿದಳೊ
ಲೋಕಮೋಹಿಸುವಂಥ ಹೋಲಿಕೆಯವನ ಗೋಪಿ ಪ
ಬಾಯಲ್ಲಿ ಬೆಣ್ಣೆ ಬಗೆಬಗೆ ವಯ್ಯಾರ
ಕಾಯ ನೋಡಿದರದು ಬಲು ಕಪ್ಪು
ಮಾಯದ ವೇಷದವ ಮನೆ ಮನೆ ತಿರುಗುವ
ಸ್ತ್ರೀಯರ ಕಾಣುತ ಭಂಡಾಟನಾಡುವ ೧
ವಾವಿಗಳಿಲ್ಲದವಳ ತಾ ಮಾರಿ ಗಂಡು
ಆವಾಗ ಬಂದರಿವ ಇದೆ ತೆರನು
ದೇವದಾನವರೊಳಗಿವನೆ ಬಲು ಚಲುವ
ಕೇವಲ ನಾಚಿಕೆ ತೊರೆದ ಲಂಡನ್ನ ೨
ಅಷ್ಟಮಿ ದಿನದಲ್ಲಿ ಒಬ್ಬರ ವಶನಾಗಿ
ಬುಟ್ಟಿಯೊಳಗೆಯಿದ್ದು ಹೊರಗೆ ಪೋಪಾ
ಪಟ್ಟ ಗುಡುಪಾ ನಮ್ಮ ವಿಜಯವಿಠ್ಠಲರೇಯಾಸೊಟ್ಟವಳನ ಬಿಡದಿಪ್ಪಕುವಲ್ಲಭಾ೩

೩೧೪
ಟೀಕಾಚಾರ್ಯರ ಪಾದ | ಸೋಕಿದ ಕೊನೆಧೂಳಿ ಪ
ತಾಕಿದ ಮನುಜರಿಗೆ ಕಾಕುಬುದ್ಧಿಗಳೆಲ್ಲ ಪರಿಹಾರವಾಗುವವೊ |
ಬೇಕಾದ ಪದವಿಯ ಕೊಡುವನು ಶ್ರೀ ಹರಿ ಅ.ಪ
ಮಧ್ವಮತವೆಂಬ ಅಬ್ಧಿಯೊಳಗೆ ಪೂರ್ಣ |
ಉದ್ಭವಿಸಿದ ಚಂದ್ರನಾ ಗುಣಪೂರ್ಣನಾ ||
ಅದ್ವೈತಮತ ತಮನಿಧಿ ನಿಶಿಕುಠಾರ |
ವಿದ್ಯಾರಣ್ಯವ ಗರುವಕೆ ಪರಿಹಾರ ೧
ತತ್ವ ವಾರಿಧಿಗಳ ತತ್ವಸುಧೆಯ ಭಾಷ್ಯ |
ವಿಸ್ತರಿಸಿ ಇರಲು ಬೇಗದಲಿ ||
ಚಿತ್ರವಲ್ಲಭನ ಸೇವೆಯ ಮಾಡಿ ಟೀಕಂಗಳ ||
ಸುತ್ತೇಳು ಲೋಕಕ್ಕೆ ಪ್ರಕಟಿಸಿ ಮೆರೆವರ ೨
ಎಂದಿಗಾದರು ಒಮ್ಮೆ ಕೊನೆ ನಾಲಿಗೆಯಿಂದ |
ಬಿಂದು ಮಾತ್ರದಿ ನೆನೆಯೆ ||
ಮಂದ ಮತಿಯಾದರೂ ಅಜ್ಞಾನನಾಶವು |
ಸುಂದೇಹವಿಲ್ಲವು ಅವಾವ ಕಾಲಕ್ಕೆ ೩
ಜ ಎಂದು ಪೊಗಳಲು ಜಯಶೀಲನಾಗುವ |
ಯ ಎನ್ನೆ ಯುಮರಾಯನಂಜುವನು ||
ತೀ ಎಂದು ಪೊಗಳಲು ತೀವ್ರ ಪದವಿ ಉಂಟು |
ರ್ಥ ಎಂದು ಪೊಗಳಲು ತಾಪತ್ರಯುಪಶಮನ ೪
ಯೋಗಿ ಅಕ್ಷೋಭ್ಯತೀರ್ಥರ ಕರಕಮಲಸಂಜಾತ |
ಭಾಗವತರ ಸುಪ್ರೇಮ ||
ಕಾಗಿಣಿ ತೀರದ ಮಳಖೇಡ ನಿವಾಸಾ |
ಶ್ರೀ ಗುರು ವಿಜಯವಿಠ್ಠಲ ಸೇವಕ ಭಕ್ತಾ ೫

೪೫೮
ಡಂಗುರ ಹೊಡಿಸಿದ ಯಮನು |
ಪಾಪಿ ಹೆಂಗೆಳೆಯವರ ತಂದು ಭಂಗಪಡೆಸಿದರೆಂದು ಪ
ಮೃತಿಕೆ ಶೌಚದ ಗಂಧ ಪೋಗುವಂತೆ |
ನಿತ್ಯದಲ್ಲಿ ಸ್ನಾನ ಮಾಡದೆ ಸುಮ್ಮನೆ ||
ತೊತ್ತು ಒಡತಿಯಾಗಿ ಮುಖವ ತೊಳಿಯದಿಪ್ಪ |
ಕತ್ತೆ ಹೆಂಗಸರನು ಕಡಿದು ಕೊಲ್ಲಿರೊ ಎಂದು ೧
ಪತಿಗೆರಗದೆ ಗೃಹಕೃತ್ಯ ಮಾಡುವಳ |
ಮತಿವಿರದೆ ಚಂಚಲದಿಪ್ಪಳ ||
ವ್ರತಗೇಡಿ ಅನ್ಯರ ಮಾತಿಗೆ ಸೋಲುವ |
ಪತಿತಳ ಎಳೆತಂದು ಹತವ ಮಾಡಿರೆಂದು ೨
ಒಬ್ಬರಿಬ್ಬರ ಕೂಡ ಸಖತನ ಮಾಡುವಳ |
ಒಬ್ಬೊಬ್ಬರಿಗೆ ಮೈಯಿತ್ತು ಪಾಡುವಳೆ ||
ಅಬ್ಬರದ ಸೊಲ್ಲನು ವಿಸ್ತರಿಸುವಳ |
ದಬ್ಬಿರೊ ವೃಶ್ಚಿಕದ ಕುಂಡದೊಳಗೆ ಎಂದು ೩
ವಸನವಿಲ್ಲದೆ ಮೈಯ ತೊಳಕೊಂಬೊ ಪಾಪಿಯ |
ಹಸಿವೆಯಾದರೆ ಮಲಗಿಕೊಂಡಿಪ್ಪಳ
ಅಶನ ಭಕ್ಷಿಸುವಾಗ ಅಳಲುವ ದುಃಖಿಯ
ಪೆಸರಿಯ ತರೆ ಕೆಳಗಾಗಿ ಬಾಧಿಸರೆಂದು ೪
ಬಿಗಿದು ಪುಟವ ಹಾಕಿ ಬದಿ ಬಗಲ ಮುಚ್ಚದೆ |
ನಗುವಳು ಅವರಿವರೆಂದರಿಯದೆ ||
ಬಗೆ ಬಗೆ ವಯ್ಯಾರ ನಿಜವಾಗಿ ತೋರುವ |
ಅಧಮ ನಾರಿಯೆ ತಂದು ಅರಿದು ಕೊಲ್ಲಿರೊ ಎಂದು ೫
ಪಾಕದ ಪದಾರ್ಥ ನೋಡಿ ಇಡದವಳ |
ಲೋಕವಾರ್ತೆಗೆ ಮನೆಯ ಜರಿದು ಪತಿಗೆ ||
ಬೇಕಾದವರ ಜರಿದು ಬಹುಪುಷ್ಪ ಮುಡಿದಿಪ್ಪ
ಕಾಕಿಯ ಎಳೆತಂದು ಕಣ್ಣು ಕಳಿಚಿರೆಂದು ೬
ಪಂಕ್ತಿ ಭೇದವ ಮಾಡಿ ಬಡಿಸುವ ಪಾಪಿಯ |
ಕಾಂತ ಕರೆದಾಗ ಪೋಗದವಳ ||
ಸಂತರ ನೋಡಿ ಸೈರಿಸದಿಪ್ಪ ನಾರಿಯ |
ದಂತಿಯ ಕೆಳಗೆ ಹಾಕಿ ತುಳಿಸಿ ಕೊಲ್ಲಿರೊ ಎಂದು ೭
ವಿಧವೆಯ ಸಂಗಡ ಇರಳು ಹಗಲು ಇದ್ದು |
ಕದನ ತೆರೆದು ನೆರಳು ನೋಡುವಳ ||
ಕದದ ಮುಂದೆ ಕುಳಿತು ತಲೆ ಬಾಚಿ ಕೊಂಬುವಳ |
ಕುದಿಸಿ ಕಟಾಹದೊಳು ಮೆಟ್ಟಿ ಸೀಳಿರೊ ಎಂದು ೮
ಆವದಾದರು ತೊರೆದು ಪತಿದೈವವೆಂದರಿದು |
ಸೇವೆಯ ಮಾಡಿ ಸುಜನರಿಗೆ ಬೇಗ ||
ದೇವೇಶ ವಿಜಯವಿಠ್ಠಲ ತಿರುವೆಂಗಳ |
ಕಾಯುವನು ದಯದಿಂದ ಕೈವಲ್ಯ ಕಲ್ಪಿಸಿ ೯

೧೭೭
ಡೀ ಡೀ ಅಡೋನೆ ರಂಗ ಡೀ ಡೀ ಆಡೋನೆ |
ಓಡಿ ಓಡಿ ಬಂದು ತಲಿಗೆ ನೀ ಡೀ ಡೀ ಡೀ ಎಂದು ಪ
ಮರಕತ ನವರತ್ನ ವಜ್ರ |
ಹರಳು ತೆತ್ತಿಸಿದ ದ್ಯುಮಣಿ ||
ಕಿರಣ ಮುಕುಟ ಧರಿಸಿದ ಶಿರದಲಿ |
ಸರಿ ಸರಿ ಸರಿ ಸರಿ ಹಾಯಿದು ೧
ಚಂದ್ರಶೇಖರ ಹಂಸವಾಹನ|
ಇಂದ್ರಾದ್ಯರಾಕಾಶದಲಿ ಧುಂ ಧುಂ ||
ಧುಂ ಧುಂ ದುಂದುಭಿ ನುಡಿಸೆ |
ಬಂದೆ ಇಕ್ಕೋ ಬಂದೆ ಬಂದೆನುತ ೨
ಪಿಂತಿರುಗಿ ಪೋಗಿ ನೀನು |
ಅಂತರಿಸಿ ದೂರದಿಂದ ||
ನಿಂತು ವಿಜಯವಿಠ್ಠಲರೇಯಾ |ಇತ್ತಿಂ ತ್ತಿಂ ತ್ತಿಂ ತ್ತಿಂ ತ್ತಿಂ ತ್ತೆನುತಲಿ ೩

೧೭೮
ತಕ್ಕೋ ಗಂಟ ನಿನ್ನಾಟವ ತಿಳಿಸುವೆ
ಸಖಿಯರ ಕೂಡಿದಂತೆಲ್ಲೊ ಪ
ಠಕ್ಕುಬಿಕ್ಕಿನ ಮಾತುಗಳಾಡಲು
ಯುಕುತಿಯ ನಾ ಕೇಳೆನೆಲವೊ ಅ.ಪ.
ಮದಗಜಮನೇರ ಹೆದರಿಸಿ ಬೆದರಿಸಿ
ಅಧರವ ಸವಿದಂತಲ್ಲೊ
ಸುದತಿಯರೆಲ್ಲರ ಅಂಜಿಸಿ ವಂಚಿಸಿ
ದಧಿ ಘೃತ ಸವಿದಂತಲ್ಲೋ ೧
ಕ್ಷೋಣಿಯೊಳೆಲ್ಲಿಗೆ ಹೋದರು ಎನ್ನಯ
ವೀಣೆಯ ಹೊರಬೇಕಲ್ಲೊ
ಗಾಣದೆತ್ತಿನ ಪರಿಯಲಿ ತಿರುಗುತ
ತ್ರಾಣ ತಪ್ಪಲು ಬಿಡೆನಲ್ಲೊ ೨
ಸಣ್ಣಾಮಾತುಗಳಾಡಲು ಕೇಳುತ
ಚಿಣ್ಣನಂತಿರಬೇಕಲ್ಲೊ
ಘನ್ನ ಮಹಿಮ ಶ್ರೀ ವಿಜಯವಿಠ್ಠಲ
ಇನ್ನೆಂದಿಗೂ ಬಿಡೆನಲ್ಲೊ ೩

೩೦
ತರತಮದಿ ಶರಣು ಮಾಡುವೆ ನಿಮಗೆ
ಕರಣಶುದ್ಧಿಯಲ್ಲಿ ಕರುಣ ಮಾಡಿ ಎನ್ನ ಪರಿಪಾಲಿಸಬೇಕು
ನಿರುತ ಬಿಡದೆ ಮನ ಸಿರಿಹರಿ
ಚರಣಕ್ಕೆ ಎರಗುವಂತೆ ವರಭಕುತಿಯಲ್ಲಿ ಪ
ಸಿರಿ ಪರಮೇಷ್ಠಿ ವಾಯು ಸರಸ್ವತಿ ಭಾರತೀ
ಗರುಡ ಉರಗ ಈಶ ಹರಿ ಸತಿಯರು ಮೂ
ರೆರಡು ಜನರು ಆ ತರುವಾಯ ಸೌಪರ್ಣಿ
ವರವಾರುಣಿ ಗಿರಿಜೆ ಸಿರಿ ಮತ್ತೆ ಇಂದ್ರ ಕಾಮ
ಮರುತಾಹಂತಾರನ ಸ್ಮರಿಸುತಲೆ ಮನು
ಗುರು ದಕ್ಷನೆ ಶಚಿ ಮರುತ ಪ್ರವಾಹ ಮೂ
ವರು ಸನಕಾದ್ಯರು ದುರಿತಶಾಸನ ಶಶಿ
ತರಣಿ ಶತರೂಪ ವರುಣ ನಾರದರ ೧
ಮುನಿಗಳ ಶ್ರೇಷ್ಠ ಭೃಗು ಅನಲ ಪ್ರಸೂತಗಾಧಿ
ತನುಜ ವಾರಿಜಾಜನ್ನತನಯರು ವೈವಸ್ವತ
ಎಣಿಸಿ ಹತ್ತನೆಯ ಸೂರ್ಯ ಅನಿಮಿಷ ಗುರು ಸ್ತ್ರೀ
ದನು ಪ್ರವಾಹವೆಂಬ ಅನಿಲನ್ನ ತಳೋದರಿ
ಅನಿಲದೇವಜ ಅಶ್ವಿನಿ ದೇವತೆಗಳು ಅನಳಾಕ್ಷಸುತ
ಧನಪತಿ ಪ್ರಹ್ಲಾದ ಗುಣಿಸುವೆ ವಸು ಏ
ಳನು ದಶರುದ್ರರು ಇನಿತರೊಳಗೆ ಒಬ್ಬನ ಬಿಟ್ಟನು ದಿನ ೨
ದಶ ವಿಶ್ವದೇವತರು ಸ್ವಶನರೊಳಗೆಗೀರ್ವರ
ಪ್ಸರರು ತೆಗೆದು ಮತ್ತೆಣಿಸಿ ನಾಲ್ವತ್ತೇಳರನ್ನ
ರಸದ್ಯುನವಕೋಟಿ ತ್ರಿದಶರೂಪ ಪಿತ್ರರೂ
ಎಸವ ಸೋಮ ಪುನರ್ವಾಪಸರಿಪಶತಸ್ಥರು
ನಸುನಗೆ ಕರ್ಮಜ ಋಷಿ ಈರ್ವರು ಮನು
ಹಸನಾದತಿ ಚತುರ್ದಶ ಇಂದ್ರರ ಮಧ್ಯ
ಕುಶಲ ಸಪ್ತ್ತರಿಗೆ ತುತಿಸೆ ಕಾಲಕಾಲದಿ ೩
ಗಂಧರ್ವರೆಂಟು ಏಳುಮಂದಿ ಪಿತರುಗಳು
ಮಾಂಧಾತ ಬಲಿ ಶಶಿಬಿಂದುವೆ ಪ್ರಿಯವ್ರತ
ರಿಂದಲಿ ಪರೀಕ್ಷಿತ ನಂದ ಕಕುಸ್ಥ ಗಯ
ಕುಂದದೆ ಯದುಕುಲದಿಂದ ಬಂದ ಹೈಹಯನು
ಚಂದ್ರನ ಮಡದಿ ಏಳೊಂದನೆ ಸೂರ್ಯನು
ಮಂದಹಾಸಾಂಬುಜ ಬಾಂಧವನಸತಿ
ಮಂದಾಕಿನಿ ರವಿನಂದನ ರಾಣಿ
ಕಲದರ್ಪನಸೂಸೆ ವೃಂದಾರಕರಿಗೆ ೪
ಸದಮಲ ಸ್ವಾಹಾದೇವಿ ಬುಧಾ ಉಷಾದೇವಿ ಶನಿ
ಮುದದಿಂದ ಪುಷ್ಕರ ಸಹೃದಯ ತುಂಬರರಿಂದ
ಮೊದಲಾಗಿ ನೂರುಮಂದಿ ತ್ರಿದಶ
ಗಂಧರ್ವರು ಚದುರೆ ಊರ್ವಸಿ ರಂಭೆ
ಮನದನ್ನ ಸೋಲಿಪ ಬಿಂಕದ ಅಪ್ಸರರು
ಅದಿತಿ ಕಶ್ಯಪದಿತಿ ಹದಿನಾರು ಸಾವಿರ
ಬುಧನ ಮಕ್ಕಳು ತಪೋನಿಧಿಗಳು ಎಂಭತ್ತು
ತದುಪರಿ ಅಜಾನಜ ತ್ರಿದಶರು ಓಜಸ್ತರೆದರಾಗಿ ನಾನಿಂದು ೫
ಹರಿಭಕ್ತರಾದ ಅಪ್ಸರ ಸ್ತ್ರೀಯರು ಕೆಲಕೆಲವು
ಮರಳೆ ಚಿರಾಖ್ಯನಾಮದಿರುತಿಪ್ಪ ಪಿತೃಗಳು
ಪರಿಪರಿ ನೂರುಕೋಟಿ ಪರಮಋಷಿಗಳಿಗೆ
ಸುರ ಗಂಧರ್ವರ ವಿಸ್ತರ ಮನುಜ ಗಂಧರ್ವ
ಧರಿಣಿಜಾಕವಿ ಮೇಲರಿದು ಜಯಂತಗೆ
ಕರ ಮುಗಿವೆ ಕ್ಷಿತಿಪರನು ಕೊಂಡಾಡುತ
ಇರುಳು ಹಗಲು ಉತ್ತಮರ ಮನುಜರ ಪಾಡಿ
ನಿರುತ ಜಂಗಮ ಸ್ಥಾವರಗಳ ನೋಡುತ ೬
ಭುಜಗಶಯನನಿಂದ ಸೃಜಿಸಿದ್ದ ಸರ್ವರಿಗೆ
ನಿಜವಾಗಿ ಶಿರವಾಗಿ ಭಜಿಸುವೆ ಚನ್ನಾಗಿ
ತ್ರಿಜಗದೊಳಗೆ ಎನ್ನ ರಜ ತಾಮಸ ಗುಣದ
ವೃಜವೆ ಓಡಿಸಿ ನಿತ್ಯಸುಜನ ಮಾರ್ಗವ ತೋರಿ
ರಜನಿ ಚರಾಂತಕ ವಿಜಯವಿಠ್ಠಲನ್ನ
ಭಜಿಪೆನದಕೆ ನಿಮ್ಮ ನಿಜವ್ಯಾಪಾರದಿ
ಸೃಜಿಸಿ ಕೊಡುತ ಧರ್ಮ ವೃಜಗಳೊದಗಿಸುತ್ತ
ಕುಜನ ಮತದ ಮೇಲೆ ಧ್ವಜವೆತ್ತಿಸುವುದು ೭

೧೭೯
ತಾರೋ ವಸನ-ಎಷ್ಟೋ ವಿನೋದ ಪ
ಕಡಹದ ಮರನೇರಿ ಕಾಡುವುದುಚಿತವೆ
ತಡವಾಗುವುದೈ ಒಡೆಯರುಳ್ಳವರಿಗೆ ೧
ಚಿತ್ತಜನೈಯನೆ ಮತ್ತಗಮನೆಯರ
ಬತ್ತಲೆ ನಿಲಿಸುವುದುತ್ತಮವಲ್ಲವೊ೨
ಪರಮಪುರುಷ ನಿನ್ನವರು ಎಂದಿಗು ನಾವುಕರುಣಿಸು ಎಮ್ಮ ಸಿರಿ ವಿಜಯವಿಠ್ಠಲ ೩

೯೭
ತಿಮ್ಮ ನಿನ್ನಯ ಪಾದ ಒಮ್ಮಿಗಾದರು ನೆನೆದು
ಕರ್ಮ ಪೋಪುವುದು ಎಂತೊ
ಇಮ್ಮನಾವಾಗುವುದು ವ್ಯಾಮೋಹ ಸಂಗತಿಗೆ
ಕಮ್ಮಗೋಲನ ಬದುಕೀಲಿ ರಂಗಾ ಪ
ಹಾಳ ಹರಟಿಗೆ ಮನಾ ಹೇಳಿಸಿಕೊಳದೆವು
ಬ್ಬಾಳುತನದಿಂದ ಕುಳಿತು
ಕೇಳುವುದು ಕಿವಿಗೊಟ್ಟು ಅವರ ಕಿಂಕರನಾಗಿ
ಹೇಳು ಇನ್ನೊಮ್ಮೆ ಎನುತಾ
ಲಾಲಿಸಿ ಗತಿ ತಪ್ಪದಂತೆ ಜೋಡಿಸಿ ಮಾತು
ಪೇಳುವೆನು ಕೈತಿರುವುತಾ
ಶ್ರೀಲೋಲ ನಿನ್ನ ಕೀರ್ತನೆಗೆಯಿಲ್ಲದೊಂದು
ಕೀಳು ವಾರ್ತೆಯ ತಾಹದೊ ಮನಸು೧
ಧರೆಯನಾಳುವವನ ಸಮ್ಮುಖದಲ್ಲಿ ನಿಂದು
ಕರವೆರಡು ನೊಸಲಿಗೆ ಚಾಚಿ
ಕರುಣಿಸುವದೆಂದು ಮೊಗವೆತ್ತಿ ಪೊಗಳುವೆ ನಿನಗೆ
ಸರಿ ಮಿಗಿಲು ಯಿಲ್ಲವೆಂದೂ
ಮರಿಯದಲೆ ಸಲಹುವದು ಮಹಾತ್ಮನಹುದೆಂದು
ನರನಾಲಿಗೆ ತುತಿಸಿತು
ಹರಿ ನಿಮ್ಮಯ ನಾಮವೆ ನೆನೆವೆ ನಾನೆನ್ನಲು
ಮರಪು ಬಂದೊದಗಿಹದೊ ರಂಗಾ೨
ಹಸಿವೆ ತೃಷೆಯಿಂದ ಉಳ್ಳವರ ಮನೆಗಳ ಕಾಯಿದು
ಬಿಸಿಲು ಬೆಳದಿಂಗಳೆನ್ನದೆ
ದೆಸೆಗೆಟ್ಟು ಚಾಲ್ವರಿದು ವಿಷವನುಂಡವನಂತೆ
ಕುಸಿದು ಕನಿಷ್ಠನಾಗಿ
ರೆಸೆದು ಹದಿನಾರು ಪಲ್ಲುಗಳು ಅವರ ಕೊರಳ
ಹಿಸುಕಿ ಹಿಂಸೆಗಳ ಬಿಡಿಸಿ
ಹಸನಾಗಿ ನಿನ್ನ ನಾಮಾಮೃತವನುಣದೆ ನಾ
ಮುಸುರೆ ಎಂಜಲು ಸವಿದೆನೊ ರಂಗಾ ೩
ಹೊನ್ನು ಹಣದ ಆಸೆಗೆ ಹಲಬರನ ಅನುಸರಿಸಿ
ಅನ್ನಿಗರ ಕೊಂಡಾಡುತ
ಎನ್ನಯ್ಯ ಎನ್ನೊಡಿಯ ಎನ್ನ ಸಾಕುವ ತಾತ
ಎನ್ನ ಕುಲ ಉದ್ಧಾರಕಾ
ಸನ್ನುತಿಸಿ ನಾ ನಾಕ ಬಗೆಯಿಂದ ಮರಿಯದಲೆ
ಕುನ್ನಿಯಂತೆ ಕಾಯಿದೆನೊ
ಪನ್ನಂಗ ಶಯನನೆ ನಿನ್ನ ಮಹಿಮೆಗಳನ್ನು
ಅನ್ನದಲೆ ನರಕಿಕ್ಕಿಳಿದೇ ಸ್ವಾಮಿ ೪
ಒಂದು ದಿನವಾದರೂ ಸಂತೋಷದಿಂದಲಿ ಜಿಹ್ವೆ
ಯಿಂದ ಹರಿ ರಾಮಕೃಷ್ಣ
ಇಂದಿರಾರಮಣ ಶರಣಾಗತವತ್ಸಲ
ಕಂದರ್ಪನಯ್ಯ ಕಮಲಬಾಂಧವ ಕುಲಾಗ್ರಣಿ
ಎಂದು ಸ್ಮರಿಸದೆ ಘೋರ
ಅಂಧ ಕೂಪದಿ ಹೊರಳಿದೆ
ಮಂದಮತಿಗೊಂದು ಗತಿಯಿಲ್ಲ ವಿಜಯವಿಠ್ಠಲ
ತಂದೆ ನೀನೆ ಕಾವುದೋ ಹರಿಯೆ ೫

೯೮
ತಿರುದುಂಬುವ ನೀನು ತಿರುಮಲೇಶಾ
ಮರುಗಲ್ಯಾತಕೆ ಇನ್ನು ಮನಸಿನೊಳಗೆ ಪ್ರತಿದಿನವು ಪ
ಬಲಿರಾಯ ಬಲು ದಾನವನು ಮಾಡುತಿರಲಾಗಿ
ಇಳಿಯ ಸುರವೇಷವನು ಧರಿಸಿ ಪೋಗಿ
ಹಲುಬಿ ಬಾಯಿದೆರದು ತ್ರಿಪಾದ ತಿರಕೆ ಕೊಂಡು
ನಿಳಿಯ ಬಾಗಿಲ ಕಾಯ್ದೊ ನಿಗಮ ಕುಲದಾತಾರಾ ೧
ಗೋಪಳ್ಳಿಯಲಿ ಜನಿಸಿ ಗೋವುಗಳ ಕಾವುತ್ತ
ಗೋಪಾಲತತಿ ವಡನೆ ವಡನಾಡುತ
ತಾಪಸರು ಯಜ್ಞ ಕರ್ಮಾದಿಗಳು ಮಾಡುತಿರೆ
ಶ್ರೀಪತಿ ಅನ್ನ ತಿರಿದುಂಡು ಕ್ಷುದಿಯನ್ನ ಕಳೆದೆ ೨
ಅಂದು ಈ ಪರಿಯ ಯಾಚಕ ವೃತ್ತಿಯನು ಮಾಡಿ
ಇಂದೆನ್ನ ಹೃತ್ಕಮಲದೊಳಗೆ ಬಂದೂ
ನಿಂದು ಮನೆಮನೆ ತಿರದುಂಬುವ ನೀನಲ್ಲವೆ
ಸಂದೇಹವೇಕೆ ಎನಗೆ ವಿಜಯವಿಠ್ಠಲರೇಯಾ ೩

೫೧೫
ತಿಳಿದು ವಿಚಾರಿಸು ವಿಶ್ವದಲ್ಲಿ
ಹಲವು ಜೀವಿಗಳೊಂದೆ ಪ್ರಕಾರ ಚರಿಸುವದು ಪ
ಇರವು ನೊಣ ಪೋದರೆ ಏನಾದರೂ ಕ್ಲೇಶ
ಬರುವುದೇ ಪ್ರತ್ಯಕ್ಷ ನೋಡಿದರು
ಭರದಿಂದ ಆಲಿಸು ದೇಹ ಮಾತುರ ಬ್ಯಾರೆ
ಇರುವದಲ್ಲದೆ ಒಳಗೆ ಚೇತನಾಡುವದೊಂದೆ ೧
ಕೂಡಿಕೊಂಡವು ತಮ್ಮತಮ್ಮೊಳಗೆ ಭೂತಗಳು
ಆಡಲೇನದು ಪೂರ್ವದ ನಿರ್ಮಾಣ
ನಾಡೊಳಾಗಿದ್ದನಿತೆ ಸಮ್ಮಂಧವಲ್ಲದೆ
ಬೀಡು ತೊರದಾಮ್ಯಲೆ ಬಿಂಕವೆತ್ತಣದೊ ೨
ಹರಿಮಾಯದಿಂದಲಿ ನಾನು ನನ್ನದು ಎಂಬ
ಗರುವಿಕೆ ಪುಟ್ಟುವದು ಮೋಹ ಪೆಚ್ಚಿ
ನಿರಯದೊಳಿಳಿಯದೆ ವಿಜಯವಿಠ್ಠಲನ
ಸ್ಮರಣೆಯಲಿ ಕುಣಿದಾಡು ಎಲ್ಲ ಸಮನ ನೋಡು೩

ತಿಳಿವರು ಮನುಜರು ತಿಳಿದೊಮ್ಮೆ ತಿಳಿಯರು
ನಳಿನಾಕ್ಷ ನಾಶರಹಿತನಲ್ಲದಿಲ್ಲವೆಂದು ಪ
ಅರ್ಕಜಂಬುಜ ಬಲ್ಲ ………………
ಮಾರ್ಕಂಡೆಯ ಮುನಿ ಬಲ್ಲ ಮಹಿ ಬಲ್ಲಳು
ಅರ್ಕ ತನುಜ ಬಲ್ಲ ಅಂಬರೀಷ ಬಲ್ಲ ದೇ
ವರ್ಕಳವೊಡಿಯ ಮಾಧವನಲ್ಲದಿಲ್ಲವೆಂದು ೧
ವಾಯುನಂದನ ಬಲ್ಲವಾ…………. ಯತಿ ಬಲ್ಲ
ಕಾಯಜ ಹರ ಬಲ್ಲ ಕರಿ ಬಲ್ಲನೊ
ರಾಯ ಧರ್ಮಜ ಬಲ್ಲ ರಾಜ ರಾಜನು ಬಲ್ಲ
ಮಾಯಾರೂಪತಾಳಿ ಹರಿಯಲ್ಲದಿಲ್ಲವೆಂದು೨
ಗರುಡದೇವನು ಬಲ್ಲ ಗಂಗಾತನಯ ಬಲ್ಲ
ಉರಗಾಧಿಪತಿ ಬಲ್ಲ ಉಮೆ ಬಲ್ಲಳು
…………….ಶರಣರಣ್ಣಪ್ಪ ಪರಮಾತ್ಮ -ಇಂ
ದಿರಾಪತಿಯಲ್ಲದಿಲ್ಲವೆಂದು೩
ಪಾರಾಶರನು ಬಲ್ಲ ಪ್ರಹ್ಲಾದ ಭಕ್ತ ಬಲ್ಲ
ನಾರದಮುನಿ ಬಲ್ಲ ನರಬಲ್ಲನು
ವಾರಿಜಸಖ ಬಲ್ಲ ವಶಿಷ್ಠ ತಪಸಿ ಬಲ್ಲ
ಧಾರುಣಿಕರ್ತೃ ಶ್ರೀಧರನಲ್ಲದಿಲ್ಲವೆಂದು ೪
ಬಲಿಚಕ್ರವರ್ತಿ ಬಲ್ಲ ಭೃಗುಋಷೇಶ್ವರ ಬಲ್ಲ
ಕಳಸಸಂಭವ ಬಲ್ಲ……………… ಬಲ್ಲನು
ಗಿಳಿಮುಖದವ ಬಲ್ಲ ಗೌತಮ ಮುನಿ ಬಲ್ಲ
ಇಳಿಗೆ ಆಧಾರ ಶ್ರೀಕೃಷ್ಣನಲ್ಲದಿಲ್ಲರೆಂದು ೫
ಉದಧಿರಾಯನು ಬಲ್ಲ ಉಧ್ಧವ ಯದು ಬಲ್ಲ
ವಿಧುಶೇಖರ ಬಲ್ಲ ವಿದುರ ಬಲ್ಲ
ಸುದತಿದ್ರೌಪದಿ ಬಲ್ಲಳು ಸುಧನ್ವ ತಾ ಬಲ್ಲ
ಪದುಮನಾಭನೆ ಪರಗತಿಯಲ್ಲದಿಲ್ಲವೆಂದು ೬
ಜನಕರಾಜನು ಬಲ್ಲ ಜಾಹ್ನವಿನದಿ ಬಲ್ಲಳು
ದನುಜೋತ್ತಮ ಬಲ್ಲ ವಾಲ್ಖ್ಯ ಬಲ್ಲ
ಅನುಸಾಲ್ವಪತಿ ಬಲ್ಲ ಅಜಮಿಳನು ಬಲ್ಲ
ಜನಸ್ಥಿತಿಲಯ ಜನಾದರ್ನ ಅಲ್ಲದಿಲ್ಲವೆಂದು೭
ಜಮದಗ್ನಿ ಬಲ್ಲ ಜಾತವೇದಸ ಬಲ್ಲ
ಸಾಮಾವರ್ತಿ ಬಲ್ಲ ಶಶಿ ಬಲ್ಲನು
ಆ ಮಹಾಕಪಿ ಬಲ್ಲ ಅಕ್ರೂರನು ಬಲ್ಲ
ರೋಮ ರೋಮ ಬ್ರಹ್ಮಾಂಡ ರಾಮನಲ್ಲದಿಲ್ಲವೆಂದು ೮
ದಾಸ ಪುಂಡ ಪುಂಡರೀಕ ಬಲ್ಲ
ದಾ………………. ವಂದಾರವ ಬಲ್ಲ
ಶೇಷ ವಿರೋಧಿ ಸಿರಿ ಬಲ್ಲಳು
………….. ಆಶಾ ಶ್ರೀಶ ವಿಜಯವಿಠ್ಠಲೇಶನಲ್ಲದಿಲ್ಲವೆಂದು

೩೦೭
ತುಂಗೆ ಬಂದಳು ದೇವೋತ್ತುಂಗ ವರಹನಾ
ಮುಂಗೋರಿಯಲ್ಲಿ ಪುಟ್ಟಿ ಭಕ್ತ ನಿಕರನಾ
ಹಿಂಗದೆ ಪೊರೆದು ಸುಖಂಗಳನೀವು ತಾ
ಮಂಗಳಾಂಗೆ ಮಾತಂಗೆ ಸುಗಮನೆ ಪ
ಕಾಳ ಪನ್ನಗವೇಣಿ ಕೋಕಿಲವಾಣಿ
ಫಾಲ ಕಸ್ತುರಿ ಜಾಣೆ ಪಲ್ಲವಪಾಣಿ
ವಾಲೆ ಮೂಗುತಿ ಅಣಿ ಮುತ್ತು ಕಠಾಣಿ
ತೋಳು ಮಂದಾರಮಣಿ ಅರಿಗುಣಶ್ರೇಣಿ
ಮೌಳಿಯಾ ಮೇಲಿನ ಜಾಳಿಗೆ ಸೂಸುಕಾ
ವಾಲಲು ಕದಿಪಿನ ನೀಲಗೂದಲು ಭ್ರಮ
ರಾಳಿಗಳಂತಿರೆ ಬಾಲ ಸುಧಾಕರ ಪೋಲುವ ವದನೇ೧
ಕುಡುತೆಗಂಗಳ ನೀರೆ ಕಂಬುಕಂಧರೆ
ಕಡಗ ಕಂಕಣದ್ವಾರೆ ಕೈಯ ಶೃಂಗಾರೇ
ಜಡಿವ ಪದಕಹಾರೆ ಕಂಚಕಸೀರೆ
ಮುಡಿದ ಪುಷ್ಪಂಗಳು ಮರೆ ಕುಚಗಳು ಅದರೆ
ಬಡನಡುವಿನ ಕಡು ಉಡುವಿನ ಕಿಂಕಣಿ
ಒಡನುಡಿಸುವ ಗೆಜ್ಜೆ ಕಾಲಂದಿಗೆ ಪೆಂಡೇ ಅ
ಡಿಗಡಿಗೊಪ್ಪಲು ಕಡಲನ ಮಡದಿ ೨
ತೀಡಿದ ಪರಿಮಳ ಗಂಧದ ಭೋಗಿ
ಕೂಡಲಿಪುರದಲಿ ಭದ್ರಿವಂದಾಗಿ
ಕೂಡಿ ಸೂಸಿದಳಂದು ಮುಂದಕ್ಕೆ ಸಾಗಿ
ಆಡುತ ಪಾಡುತ ಬಲು ಲೇಸಾಗಿ
ಬೇಡಿದ ಜನರಿಗೆ ಈಡಿಲ್ಲದ ವರವ
ನೀಡುತ ನಿರುತರ ಮಾಡುತ ದಯವನು
ನೋಡುತ ತಡವಿಲ್ಲದಲೆ ೩
ಶೃಂಗಾರ ಮಾರ್ತಾಂಡೆ ಹರಿಹರ ಮಾತಾ
ಅಂಗಾಧಿ ಪರ್ವತ ಪಂಚ ಪ್ರಖ್ಯಾತ
ಹಿಂಗದೆ ಬಲಗೊಂಡು ಕೊಡ್ಲೀಗೆ ಬರುತ
ಸಂಗೀತ ಗಾಯನದಿಂದ ವಾಲಗಗೊಳುತ
ಸಂಗಮೆಯಾಗಿ ತಂಗಿಯ ಬೆರತೀಗ
ಮಂಗಳ ಕ್ರೀಡೆಯಲ್ಲಿ ಪ್ರವೇಶಿಸಿ
ಗಂಗೆ ಎನಿಸಿಳ್ಯಮನನಾದೇಳಗೆ ೪
ಲೋಕದೊಳಗೆ ಪ್ರತಿರಹಿತ ಪೆಸರಾದ
ಚೀಕನ ಬರವಿಯ ಅಶ್ವಥಮರದ
ನೃಕಂಠೀರವನ ಪಾದದಿ ವ್ಯಾಧಿಷ್ಟರಾದ
ಸೋಕಿ ಮೈಮರೆದಂಥ ನಮಿತರು ಕರದಾ
ಪಾಕ ಪದಾರ್ಥಕೆ ಒಲಿದೊಲಿದಾಡುತ
ಶ್ರೀಕರ ವಿಜಯವಿಠ್ಠಲಗೆರಗುತ
ನಾಕಕನ್ನಿಕೆಯಂತೆ ಹೊಳೆದಳುಯಿಂದು೫

೩೮೮
ತುತ್ತನ್ನವ ನಮಗಿಂದು ನೀಡಿರಮ್ಮಾ ನಾನು
ಹತ್ತು ಸಾರೆ ಬಾರದಲೆ ತೊಲಗೆನಮ್ಮಪ
ನಿರಾಧಾರಾದಿ ನಿದ್ರೆ ಬಾರದಮ್ಮ ವಿ
ಚಾರಿಸು ತಾಯಿ ಪಾಲುವಲ್ಲೆನಮ್ಮ
ಧಾರುಣಿ ಸಂಬಂಧ ಎನಗಾಗದಮ್ಮ ಇದಕ್ಕೆ
ಸಾರಿ ಸಾರಿಗೆ ಬಾಯಿ ತೆರೆವೆನಮ್ಮ ೧
ದೇಹಿ ಎಂಬೊದೆನ್ನ ಜಾತಿಧರ್ಮವಮ್ಮ ನಾನು
ದ್ರೋಹಿಗಳಿಗೆ ಕರ ಚಾಚೆನಮ್ಮ
ಆಹಾರಕ್ಕೆ ಬಲುದಿನ ಮೀರಿತಮ್ಮ ಸಂ
ದೇಹವಿಲ್ಲದೆ ನಾರೇರು ಬಡಿಸಲಮ್ಮ ೨
ಇದೇ ಕೇಳಿದೆನು ಇನ್ನು ಮೌನವಮ್ಮ ಬಲು
ಸದಮಲ ಜ್ಞಾನಿಗಳಿಗೆ ಪ್ರೀತಿಯಮ್ಮ
ಮಧುಹರಿ ವಿಜಯವಿಠ್ಠಲ ಪೂರ್ಣನಮ್ಮ ಸರ್ವರ
ಹೃದಯದೊಳಗಾನಂದವಾಸನಮ್ಮ ೩

೪೫೯
ತುರುಕರಿಲ್ಲದ ಮನೆ ದಿರದಿಮ್ಮನೆ ಪ
ತುರಕರ ನೋಡದ ಕಣ್ಣು ಶಿಖಿಗರಿಗಣ್ಣು
ತುರಕರಿಗೆರಗದ ತಲೆ ಕಗ್ಗತ್ತಲೆ
ತುರಕರ ಕಥಾಶ್ರವಣ ಕೇಳದ ಕರ್ಣ ಈಚಲಪರ್ಣ
ತುರಕರುವಿನುಚ್ಛಿಷ್ಟ ಉಣ್ಣ ಬಾಯಿ ವಿಷಗಾಯಿ ೧
ತುರಕರನಾಘ್ರಾಣಿಸದ ಮೂಗು ಅಡವಿಯ ಕೂಗು
ತುರಕರಸೇವೆಸದಕರ ವಿಕಾರ ಪಾಮರ
ತುರಕರ ಕೊಂಡಾಡದ ಜಿಹ್ವೆ ಅಧಮನ ಗುಂಹೆ
ತುರಕರನೊದೆವ ಕಾಲು ಯಮನ ಪಾಲು ೨
ತುರಕರ ಪ್ರಸಾದ ಉಣ್ಣದ ಹೊಟ್ಟೆ ಗೂಗಿನ ಮೊಟ್ಟೆ
ತುರಕರನ ಚಿಂತಿಸದ ಮನ ಗಾರ್ಧಭ ಗಮನ
ತುರಕರ ಕಾಯ್ದ ವಿಜಯವಿಠ್ಠಲರೇಯ
ತುರಕರ ಕರುಣ ಪಡೆಯದವನು ಶುದ್ಧ ಶವನು೩

೨೮೪
ತುಳಸಿಯ ಸೇವಿಸಿ ಪ
ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ
ಗಾತರದ ಮಲವಳಿದು ಮಾತೆ ಯೆಂಬನಿತರೊಳು
ಪಾತಕ ಪರಿಹರಿಸಿ ಪುನೀತರನು
ಮಾಡುವಳು ಯಾತಕನುಮಾನವಯ್ಯ ಅ.ಪ.
ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ |
ಪದುವನಾಭನು ತಾನು ಉದುಭವಿಸಿ ಬರಲಂದು |
ಉದುರಿದುವು ಕಣ್ಣಿಂದ
ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ ||
ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು |
ಒದಗಿ ಸುಜನರು ತಮ್ಮ ಸದನದಲಿ ನಿತ್ಯ
ತ್ಪದವಿಗೆ ಸಿದ್ಧವೆಂದು ಮುದದಿಂದ
ತಿಳಿದು ವೃಂದಾವನ ರಚಿಸಿದರೈಯ೧
ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ |
ಕಾಲ ಮೀರದೆ ಸರ್ವ ನದನದಿಗಳಮರಗಣ |
ಮೇಲೆ ದಳ ಒಂದರಲಿ ಒಂದೊಂದು
ಮೂರತಿಯು ವಾಲಯವಾಗಿಪ್ಪುದು ||
ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು |
ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ |
ರ್ಮಾಲ್ಯವನು ಸತತ ಕರ್ಣದಲಿ
ಧರಿಸಿದ ಮನುಜ ಕಾಲನಾಳಿಗೆ ಶೂಲನೊ೨
ಉದಯದೊಳಗೆದ್ದು ನೀರೆರೆದು ಮಜ್ಜನಗೈದು |
ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು |
ಮುದದಿಂದಲೊಂದು ಪ್ರದಕ್ಷಿಣಿ ನಮಸ್ಕಾರ
ತದನಂತರದಲಿ ಭಜನೆ ||
ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ |
ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ |
ಒದಗುವುದು ಹಿಂದಣಾನಂತ
ಜನ್ಮಗಳಘವ ತುದಿ ಮೊದಲು ದಹಿಪುದಯ್ಯ೩
ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ |
ಆವವನ ಮನೆಯಲ್ಲಿ ಹರಿದಾಸರಾ ಕೂಟ |
ಆವವನ ಭುಜದಲ್ಲಿ ತಪ್ತಮುದ್ರಾಂಕಿತವು
ಪಾವಮಾನಿಯ ಮತದೊಳು ||
ಆವವನು ಕಾಂತ್ರಯವ ಕಳೆವ ನಾವಲ್ಲಿ |
ಶ್ರೀ ವಾಸುದೇವ ಮುನಿ ದೇವಾದಿಗಣ ಸಹಿತ |
ಕಾವುತ್ತಲಿಪ್ಪ ಒಲಿಗೊಲಿದಂತೆ ತೊಲಗದಲೆ
ಭಾವಿಸಿರಿ ಭಾವಙ್ಞರು ೪
ಕಂಡರೆ ದುರಿತಕ್ಕೆ ಕೆಂಡವನು ಬೀರುವುದು |
ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-|
ದಿಂಡುಗೆಡಹಿದರೆ ಪುನರಪಿ
ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ ||
ಚಂಡಾಲ ಕೇರಿಯೊಳು ಇರಲು ಹೀನಯವಲ್ಲ |
ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು |
ಕಂಡ ತಂಡದ ಕುಲಕೆ ಅವರವರ
ಯೋಗ್ಯ ಫಲ ಕಂಡವರಿಗುಂಟೆ ಅಯ್ಯ೫
ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ |
ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ |
ಪ್ರತ್ಯೇಕ ಪಾತ್ರೆಯಲಿ ತೆಗೆದು
ಶೋಧಿಸಿ ತುಂಬಿ ವಿತ್ತಾದಿಯಲಿ ತಾರದೆ ||
ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ |
ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ – |
ರ್ವೋತ್ತರಭಿಮುಖನಾಗಿ ಭಕ್ತಿಯಿಂ
ತರಬೇಕು ಹೊತ್ತು ಮೀರಿಸಲಾಗದೊ೬
ಕವಿ ಮಂಗಳವಾರ ವೈಥೃತಿ ವ್ಯತೀಪಾತ
ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ
ದಿವಸ ದ್ವಾದಶಿ ಶ್ರೇಷ್ಠ ಉಪರಾಗ ಪಿತೃಶ್ರಾದ್ಧ
ಇವುಗಳಲಿ ತೆಗೆಯಾದಿರಿ
ನವವಸನ ಪೊದ್ದು ಊಟವ ಮಾಡಿ ತಾಂಬೂಲ-
ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ
ಸುವುದುಚಿತವಲ್ಲೆಂದು ತಿಳಿದು
ಕೊಂಡಾಡುತಿರಿ ದಿವಸಗಳೊಳಯ್ಯ ೭
ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ
ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು
ತುಳಿಸಿ ನಿರ್ಮಾಲ್ಯವಾದರು ತ್ರಿವಾರದಲಿ
ತೊಳೆ ತೊಳೆದು ಏರಿಸಲಿಬಹುದು
ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ
ತುಳಸಿ ವಿರಹಿತವಾದ ಪೂಜೆಯದು ಸಲ್ಲದು
ತುಳಸಿ ತುಳಸೀ ಎಂದು ಸ್ಮರಣಿಯಾದರು
ಮಾಡಿ ಜಲಜಾಕ್ಷನರ್ಚಿಸಿರೈಯ್ಯ ೮
ತುಳಸಿ ಇಲ್ಲದ ಸದನ ಹೊಲೆಮಾದಿಗರ ಸದನ
ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ
ತುಳಸಿ ಇಲ್ಲದ ತೀರ್ಥವೆಂದಗಿದ್ದರು
ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ
ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ
ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ
ತುಳಸಿದಳ ಹರಿಗೆ ಅರ್ಪಿಸಿದವನ ಪುಣ್ಯಕ್ಕೆ
ನೆಲೆಯ ನಾ ಕಾಣೆನಯ್ಯ೯
ಶಿವನ ಸತಿ ಪ್ರಹ್ಲಾದ ನಾರದ ವಿಭೀಷಣನು
ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು
ಇವರೆ ಮೊದಲಾದವರು ಭಕ್ತಿಪೂರ್ವದಲೀ
ವಿವರವನು ತಿಳಿದರ್ಚಿಸಿ
ತವಕದಿಂ ತಂತಮ್ಮ ಘನ ಪದವನೈದಿದರು
ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು
ಜವಭಟರನೋಡಿಸೀ ಜಡದೇಹವನು
ನೀಗಿ ಭವದೊರರಾದರೈಯ ೧೦
ಉದಯಕಾಲದೊಳೆದ್ದು ಆವನಾದರು ತನ್ನ
ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ
ಸದಮಲಾ ತುಳಸಿಯನು
ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ
ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ
ನದಿಯ ತೀರದಲೊಬ್ಬ ಭೂಸುರ ಪದಕೆ ವ್ಯೋವ
ಪದಪದೆಗೆ ಸಿರಿ ವಿಜಯವಿಠ್ಠಲಗೆ
ಪ್ರಿಯಳಾದ ಮದನತೇಜಳ ಭಜಿಸಿರೈದು ೧೧

೩೮೯
ತೋರೊ ನಿನ್ನಯ ಮೂರ್ತಿಯ
ತೋರೊ ನಿನ್ನ ಮೂರ್ತಿ ಬೀರೊ ಹೃದಯವೆಂಬೊ
ನೀರಜಹಾದೊಳಗೆ ಸಾರೋ ಸಾರಿ ಸಾರಿಗೆ ಸೇರೊ
ಬಾರೊ ಬಾರೊ ಪರಿವಾರದೊಡನೆ ಮನಸೂರೆಗೊಡುವೆ ಕಂ
ಸಾರಿ ಮುರಾರಿ ಪ
ತುಂಬೆ ವಿಶ್ವಮಾಯಾದ ಬೊಂಬೆ ನಾಮ ಪೀಯೂಷ
ಉಂಬೆ ಸೇವೆಯ ಕೈಕೊಂಬೆ ಅನ್ಯರ ನಂಬೆ
ಕಾಂಬೆ ನಮಿಸಿ ಪಾಲಿಸೆಂಬೆ ಕಾಲಿಗೆ ಮನ
ದುಂಬೆ ದಂತೆ ಎರಗಿ ಅಂಬೆ ಪಿಡಿವಾಕೊಂಬೆ
ನಂಬಿದೆ ನಂಬಿದೆ ಅಂಬುಜಾಕ್ಷ ನೀ
ನೆಂಬದು ಸುರನಿಕರಂಬ ಹಂಬಲಿಸಲು
ದಿಂಬಾಗಿ ಕರ್ಣಾವಲಂಬನವಾಯಿತು
ಇಂಬಿಡು ಪ್ರಾಙ್ಞನೆಂದೆಂಬ ಮೂರುತಿಯಾ೧
ಸ್ನಾನ ಪ್ರಣಮ ವಾಚಾ ಮಾನದಿಂದಲಿ ಬಲು
ಮೌನವಾಗಿದ್ದು ಮಾಳ್ಪ ಧ್ಯಾನವು ಇತ್ತು ಮಾಜ್ಞಾನಾ
ನಾನಾ ಪ್ರಕಾರದಿಂದ ದಾನಧರ್ಮಂಗಳ ನಿ
ದಾನ ಕೊಂಡಡಲಾಮೇಲೆ ನೆನೆವೆನನುದಿನ
ಮಾನವನ ಹೀನವ ನಾಡದೆ ನೀನೆನಿಸದೆ
ಸುಮ್ಮನದಿಂದಲಿ ನೋಡೊ
ದಾನವನ ವಡಲನು ಬಗದು ಕರುಳನು
ವನಮಾಲೆ ಹಾಕಿದ ಶ್ರೀನಿಕೇತನ ೨
ಒಂದನಾಂದರೆಯಿಂತು ಇಂದು ಮಾಡುವದೇನು
ಚಂದ ಭಕ್ತರಿಗತಿ ಬಂಧವನೆ ಯಾಕೆಂದಾ
ಅಂದ ರಕ್ಕಸನಾಗಿ ಕೊಂದಾವರದ ಮುಕ್ಕುಂದಾ
ವಂದಿತ ಮರ ವೃಂದಾ ಕರುಣದಿಂದಾ
ಎಂದಿಗೆಂದಿಗೆ ಎನ್ನಿಂದಗಲದೆ ಗೋ
ವಿಂದ ಇಂದಿರಾಪತಿ ಸುಂದರ ವಿಗ್ರಹ
ಮಂದಿರದೊಳು ಸುಮದಾಸನದಲ್ಲಿ
ಬಂದು ವಿಜಯವಿಠ್ಠಲೆಂದು ನೀನಿಂದು೩

೩೯೦
ದಯ ಬಾರದ್ಯಾಕೊ ರಾಘವಾ ಪ
ಕಾಯಬೇಕು ಯೆಂದು ಕೊರಗಿ ಮೊರೆಯಿಡೆ
ನ್ಯಾಯವೇನು ಯೆನ್ನ ಮರತುಬಿಡುವದು ಅ.ಪ
ಅಂದು ಅಜಮಿಳನು ಅಂತ್ಯಕಾಲದಲ್ಲಿ
ಕಂದ ನಾರ ಬಾಯೆಂದು ಕರಿಯಲು
ಅಂದ ಮಾತುಗಳಿಗೆ ಅತಿ ಹರುಷಿಸಿ
ಬಂದ ಯಮನ ಬಾಧೆ ಬಿಡಿಸಲಿಲ್ಲವೇನೊ ೧
ಹರಿಯೆ ಗತಿಯೆಂದು ಹೊಗಳು ಕಂದನ
ಹರುಷವಿಲ್ಲದೆ ಪಿತ ಕಷ್ಟಪಡಿಸಲು
ಊರು ತೋರದಂತಾ ಸ್ತಂಭದಿಂದ ಬಂದು
ಮೂರು ಜಗವು ಅರಿಯೆ ಮನ್ನಿಸಲಿಲ್ಲವೇನೊ ೨
ಸರ್ಪಶಯನನೆ ಸಾರ್ವಭೌಮನೆ
ಶೂರ್ಪನಖಿ ನಾಸಿಕ ಶ್ರೋತ್ರವಳಿದನೇ
ಅಪ್ಪ ಗುರುವರ ವಿಜಯವಿಠ್ಠಲನೇ
ಒಪ್ಪದಿಂದ ವಲಿವ ವರದರಾಜನೇ ೩

೩೯೧
ದಯಮಾಡು ದಯಮಾಡು ಎನ್ನ ಮೇಲೆ |
ಅಂತರಂಗದೊಳಿಪ್ಪ ಅಚ್ಚುತಮೂರ್ತಿ ಪ
ಗಂಧ ಪರಿಮಳ ಕುಸುಮ ಜಾಜಿ ಮಲ್ಲಿಗೆ ಮಾಲೆ |
ಮಂದಾರ ಹಾರ ಕೊರಳೊಳಿಡಲೂ ||
ಚಂದವಿಲ್ಲವೆಂದು ತೆಗೆದು ಬಿಸಾಟಿ ಊರ |
ಹಂದಿಯಂದದಿ ಇಲ್ಲಿ ಇಪ್ಪ ನರಗೆ || ೧
ಹೆತ್ತ ತುಪ್ಪ ಸಣ್ಣಶಾವಿಗೆ ಪರಮಾನ್ನ |
ಹೆತ್ತತಾಯಿ ತಂದು ಉಣ್ಣ ಬಡಿಸಲು ||
ಅತ್ತ ಮೊಗವಗಬೆ ತೊತ್ತು ಉಣಬಡಿಸಿದ |
ಹೊತ್ತು ಓಗರ ತಿಂದು ಇಪ್ಪೆನೆಂಬ ನರಗೆ ೨
ತುಂಬಿದ ಹೊಳೆಯಲ್ಲಿ ಹರಿಗೋಲಿಟ್ಟುಕೊಂಡು |
ಅಂಬಿಗ ತಡೆಯದೆ ದಾಟಿಸಲು ||
ಅಂಬುವಾಸನೆ ನೋಡಿ ದಾಟಿ ಪೋಗುವೆನೆಂ |
ದೆಂಬ ಮಾನವನಾದೆ ವಿಜಯವಿಠ್ಠಲ ಕರುಣೀ೩

೩೯೨
ದಯವಿರಲಿ ಎನ್ನಲ್ಲಿ ಧರಣಿಧರನೆ
ಭಯಗಳನು ಪೋಗಾಡು ಭಕ್ತಜನ ಪ್ರೀಯಾ ಪ
ಎರಗಿಸುವದು ಚರಣದಲಿ ಶಿರಸು
ಎರಗಲಿ ನಿನ್ನ ಧ್ಯಾನದಲಿ ಮನಸು
ಎರವೆರವು ಮಾಡದಲೆ ನಿನ್ನ ನಾಮಾಮೃತವ
ಎರದು ಸಾಕುವದು ಸಂತತ ಎನ್ನ ಬಿಡದೆ ೧
ಮತಿಗೆಟ್ಟ ಮಾನವಗೆ ಗತಿ ನೀನೆ ಆವಾವಾ
ಶ್ರುತಿಗಳೊಳು ಪೇಳುತಿದೆ ವರದೊರದೂ
ಕ್ಷಿತಿಯೊಳಗೆ ರವಿ ಶಶಿಯ ಗತಿ ತಪ್ಪಿದರೇನು
ಪತಿತ ಪಾವನ ನಿನ್ನ ಕೃಪೆಗೆ ಎಣೆಗಾಣೆ ೨
ಕೊಡುವಲ್ಲಿ ಕೊಳುವಲ್ಲಿ ಯಡಿಯಡಿಗೆ ಭಕುತಿರಸ
ಕುಡಿಸುವಲಿ ಕಲಕಾಲ ಸಂತೋಷವ
ಬಡಿಸಿ ಪೊರೆವಲ್ಲಿ ನಿನಗಾವಲ್ಲಿ ಸರಿಗಾಣೆ
ಮೃಡನೊಡಿಯಾ ಸಿರಿ ವಿಜಯವಿಠ್ಠಲ ತಿರುಮಲೇಶಾ ೩

೨೨೫
ದಾಶರಥ ಪಾದಸರಸಿಜ ಮಧುಕರ
ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ
ಶಿರಸನಾ ಮಗಗೊಲಿದು ರಾಮಚಂದ್ರನ
ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ
ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ
ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ
ಧರಿಸುವೆನು ರಿಪುನಿಕರ ಮಾರೀ೧
ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ
ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ
ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ
ಸಂಗರಕೆ ಬಂದ ವಿಕಾರಿಗಳ ನೋಡಿ
ಭಂಗಬಡಿಸಿದೆ ಅವರ ಬಲವೆಲ್ಲ ತೂರಿ ೨
ಸಭೆಯೊಳಗೆ ರಾವಣನ ರಕ್ತವನೆ ಕಾರಿಸಿದೆ
ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ
ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ
ಅಬುಧಿಯನು ವೇಗ ಬಂಧಿಸಿದೆ
ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ ೩
ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ
ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ
ನೀ ತಡೆಯದೆ ಪೋಗಿ ಮೈರಾವಣನ ಮುರಿದೆ
ಕೋತಿಗಳೊಳಗೆ ನೀ ಮೆರೆದೆ ವೇದ
ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ ೪
ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ
ಆಲಸಗೈಸದಲೆ ದಾಟಿಸಿದೆ ಬಲು ಛಲವಾ
ವಾಲಯದಲಿ ಮಾಡಿ ವೈರಿದಳವನು ಗೆಲುವಾ
ಕಾಳಗದೊಳು ನಿನ್ನ ಬಲವ ಕೊಂಡಾಡಿದವರು
ಮೂಲೋಕದೊಳಗೆ ಸವಿಯದು ಬಲು ಚೆಲುವಾ ೫
ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ
ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ
ಸತತದಲಿ ಕಾಪಾಡು ಎನುತ ಪಾದವ ಪಿಡಿದೆ
ಮತಿಯಲಿಡು ಎಂದು ಬೇಡಿದೆ ಅಭಯವ
ಚತುರ ಫಲದಾಯಕನೆ ದಯಮಾಡು ಬಿಡದೆ ೬
ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ
ಇಂಪಾಗಿ ಮಾಡುವ ಅಂಜನೆಯನಂದನಾ
ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ
ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ೭

೩೯೩
ದಾಸ ದಾಸ ದಾಸರ ದಾಸ್ಯವ ಕೊಡೊ-
ದೋಷ ರಾಸಿಯಳಿದು ಪ
ಶ್ರೀಶ ಧೀಶ ಸರ್ವೇಶ ಸುರೇಶ್ವರ –
ಭಾಸುರ ಗುಣಗಣ ಭವ್ಯ ಶರೀರ ಅ.ಪ
ಚಿತ್ತ ನಿನ್ನ ಪದ ಸೇವೆಯೊಳಿರಲಿ-ಚಿಂತೆ ಇತರ ಬಿಡಲಿ
ಅಂತರಂಗದಲ್ಲಾನಂದಿಸಲಿ-ಅಹಂಕೃತಿಯನ್ನೆ ಬಿಡಲಿ
ಸಂತತ ನಿನ್ನ ಪದ ಪಂಕಜ ಭಕ್ತರ –
ಪಂಥವ ಪಾಲಿಸೊ ಪರಮ ಪುರುಷ ಹರಿ ೧
ಅರಿಷಡ್ವರ್ಗಗಳಟವಿಯ ಖಂಡಿಸು-ಆನಂದದಲಿರಿಸು
ದುರುಳರ ಸಂಗವ ದೂರ ಮಾಡಿಸು-
ದುರ್ಮತಿಯನೆ ಬಿಡಿಸು
ಸರಸ ಸಂಭ್ರಮ ಸನ್ನುತ ಭಕುತರೋಳ್-
ನಿರುತವು ನಿಲ್ಲಿಸೋ ನೀರಜಾಕ್ಷ ಹರಿ೨
ತ್ರಿಜಗನ್ಮೋಹನಾಕಾರ ತ್ರಿ-ಗುಣಾತೀತ ತೀರ್ಥಪಾದ
ಭಜಕರ ಪಾವನ ಭವನುತ ಚರಣ-ಋಜಗಣನುತಾಭರಣ
ವಿಜಯವಿಠ್ಠಲಾಧೀಶ ವಿಶ್ವೇಶ್ವರ ಕುಜನ
ವಿದಾರಣ ಕೋವಿದನುತ ಹರಿ ೩

ನೈಚ್ಯಾಮಸಂಧಾನ ಭಕ್ತಿಯ

೪೪
ಧ್ರುವ ತಾಳ
ದಾಸ ನಿನಗೆ ನಾನು ಲೇಸಿನವನೆಂದು
ಆಶೆಯಿಂದಲಿ ಗತಿ ಬೇಡಲಿಲ್ಲ
ದಾಸತನ ಎನಗೆಲ್ಲಿಹುದು ಶ್ರೀನಿ-
ವಾಸನೆ ಅನಂತ ಕಲ್ಪದಲ್ಲಿ
ದಾಸನು ನಾನಲ್ಲ ನಾನಾ ಸುಬುದ್ಧಿಯ
ನಾಶನ ಮಾಡಿಕೊಂಬ ದಾಸ ನಾನು
ದಾಸನೆನಿಸಿಕೊಂಡು ತಿರುಗುವ ಜನಕ್ಕೆ
ಲೇಸಾಗಿ ದಂಡಿಸಿ ಮೆದಿಯ ಬೇಕು
ಕೇಶವ ವಿಜಯವಿಠ್ಠಲನೆ ನಿನ್ನ ಮರೆದು
ಗ್ರಾಸಕ್ಕೆ ತಿರುಗುವ ಭಾಸಮಾನ ದಾಸ ೧
ಮಟ್ಟತಾಳ
ತಿರಕದಾಸ ನಾನು ಹರಕ ದಾಸ ನಾನು
ಕರಕರಿಯನು ಮಾಡಿ ಪರರ ಪೀಡಿಸಿ, ಉ-
ದರ ಪೊರೆವ ದಾಸನು ನಾನು, ಬರಿಯ ದಾಸ ನಾನು
ಅರಿಮರ್ದನ ಹರಿ ವಿಜಯವಿಠ್ಠಲ ನಿನ್ನ
ಪರಮ ಭಕ್ತನೆಂದು ತಿರಿದುಣ್ಣ ಮೆಚ್ಚಿದೆನು ೨
ತ್ರಿವಿಡಿ ತಾಳ
ಕೊಟ್ಟರೆ ಹರಸುವೆನು, ಕೊಡದಿದ್ದರೆ, ಬೆರ
ಳಿಟ್ಟು ಬಗಳುವಂಥ ಭ್ರಷ್ಟ ದಾಸನು ನಾನು
ಸೃಷ್ಟಿಯೊಳಗೆ ಬಹು ಧನವಂತರ ಮನೆಯ
ಮೆಟ್ಟು ಕಂಡರೆ ಬಿಡದಿಪ್ಪ ದಾಸ ನಾನು
ನಷ್ಟ ವಾಗಿದ್ದ ಉಚ್ಛಿಷ್ಟ ದಾಸನು ನಾನು
ದೃಷ್ಟಿಯಿಂದಲಿ ನೋಡೊ, ವಿಜಯವಿಠ್ಠಲ ಕೇಳೊ
ಎಷ್ಟೊ ಕಾಲದ ಪಾಪಿಷ್ಠ ದಾಸನು ನಾನು ೩
ಅಟ್ಟತಾಳ
ಕುರುಡ ದಾಸನು ನಾನು ಕುಂಟ ದಾಸನು ನಾನು
ಹುರಡಿಗೆ ಮಾಡುವ ಹುರಳಿಲ್ಲದ ದಾಸ
ಸರಿಯವರನು ಕಂಡು ಮರಗುವ ದಾಸನು
ಎರಡು ಕಡೆ ಕೆಟ್ಟ ಭರಡಿ ದಾಸನು ನಾನು
ನರಕಾರಿ ವಿಜಯವಿಠ್ಠಲರೇಯ ಪರರ ವಾ
ಗರಕೆ ಕರದಾರೆ ಹಿಗ್ಗುವ ದಾಸನು ನಾನು ೪
ಆದಿತಾಳ
ಹೀನ ದಾಸನು ನಾನು, ನೀಚ ದಾಸನು ನಾನು
ಹಾನಿವೃದ್ಧಿಗಳೆಲ್ಲ ತಿಳಿಯದ ದಾಸನು
ನಾನಾ ದುಷ್ಕರ್ಮ ಮಾಳ್ಪ ದಾಸನೊ ನಾನು
ಮಾನವಿಲ್ಲದೆ ಅಪಮಾನ ದಾಸ ನಾನು
ದಾನ ಧರ್ಮವಿಲ್ಲದ ಹೀನ ದಾಸನು ನಾನು
ಅನಂತ ಜನನಕ್ಕೆ ಹೊಲೆದಾಸನು ನಾನು
ಶ್ರೀನಿವಾಸ ತಿರುಮಲೇಶ ವಿಜಯವಿಠ್ಠಲ
ಬ್ಯಾನೆ ಇದ್ದಲ್ಲಿ ಬಿಡುವ ಬಕ್ಕದಾಸನು ನಾನು ೫
ಜತೆ
ಹೊಟ್ಟೆಕಿಚ್ಚಿನ ದಾಸ-ಹಲುಬಿ ಪೋಗುವ ದಾಸ
ದಟ್ಟದಾರಿದ್ರ ದಾಸನು ವಿಜಯವಿಠ್ಠಲರೇಯ ೬

೪೬೦
ದಾಸರ ಭಾಗ್ಯವಿದು-ಪುರಂದರ-ದಾಸರ ಭಾಗ್ಯವಿದು ಪ
ಸರ್ವ-ದೇಶದೊಳು ತುಂಬಿ ಸೂಸುತಲಿದೆ ಅ.ಪ
ಭೂಸುರ ಜನುಮದಿ ಬಂದು ಬೆಳೆದು ಉಪ-
ದೇಶಗೊಂಡು ಮಧ್ವಮತ ಪೊಂದಿ
ಲೇಸಾಗಿ ಭಕ್ತಿ ವಿರಕ್ತಿ ಜ್ಞಾನದ ವಿ-
ಶೇಷವಾಗಿ ನಾ ಬಾಳುವದೆಲ್ಲ ೧
ಸಜ್ಜನ ಸಂಗತಿ ಮಾಡಿ ದುರುಳಜನ
ವರ್ಜನಗೈದು ಸತ್ಕರ್ಮಗಳ
ಆರ್ಜಿಸಿ ನಾಮ ಮುದ್ರೆ ಹಗಲು ಇರಳು ನಿ
ರ್ಲಜ್ಜನಾಗಿ ನಾ ಬಾಳುವುದೆಲ್ಲ ೨
ಶ್ರವಣ ಕೀರ್ತನೆ ವಂದನೆ ಸ್ತೋತ್ರ ಹರಿನಾಮ
ತವಕದಿಂದ ನುಡಿಯುವ ಕವನ
ನವನವ ವಚನವು ಮಂತ್ರ ಸಂಕಲ್ಪವು
ಸವಿದು ಸ್ಮರಿಸಿ ನಾ ಬಾಳುವುದೆಲ್ಲ ೩
ಯಾತ್ರೆ ತೀರ್ಥ ದಿವ್ಯ ದಾನಧರ್ಮಂಗಳು
ಕ್ಷೇತ್ರ ಮೆಟ್ಟಿ ಬಹ ಸಂಭ್ರಮವು
ಮಿತ್ರರ ಕೂಡಾಡಿ ಹರಿಪರನೆಂದು ಸ-
ತ್ಪಾತ್ರನಾಗಿ ನಾ ಬಾಳುವುದೆಲ್ಲ ೪
ಹರಿದಿನದುಪವಾಸ ಜಾಗರಣೆ ಪಾರಣಿ
ಗುರು ಹಿರಿಯರಲಿ ವಿಹಿತಸೇವೆ
ಹಿರಿದಾಗಿ ಮಾಡೋಡು ಪರಿಪರಿಯಿಂದಲಿ
ಹರುಷದಿಂದಲಿ ನಲಿದಾಡುವುದೆಲ್ಲ ೫
ಷಡುರಸಭೋಜನ ದಿವ್ಯವಸನ ನಿತ್ಯ
ಉಡುವುದು ಹೊದೆವುದು ಹಸನಾಗಿ
ತಡೆಯದೆ ಜನರಿಂದ ಪೂಜೆಗೊಂಡು ಸುಖ-
ಬಡಿಸುತಿರುವ ವಿಚಿತ್ರಗಳೆಲ್ಲ ೬
ಮನವೆ ಹಿಗ್ಗದಿರು ಹಿಯ್ಯಾಳಿಕೆಯಿಂದ
ಗುಣಿಸಿಕೊ ಸುಖವಾವುದು ಲೇಶ
ನಿನಗೆ ಸ್ವತಂತ್ರ ಎಂಬುದು ಕಾಣೆನೆಂದಿಗು
ಗುಣನಿಧಿ ವಿಜಯವಿಠ್ಠಲನ ಪ್ರೇರಣೆಯೆಲ್ಲ ೭

೩೪೨
ದಾಸರೆ ಪುರಂದರದಾಸರು
ಲೇಸಾಗಿ ಎನಗೆ ಸುಮಾರ್ಗವನು ತೋರಿದರು ಪ
ಅತಿ ಮುಗ್ಧನಾಗಿ ದುರುಳರಾ ದುರಾಚಾರದಲ್ಲಿ
ಮತಿಗೆಟ್ಟು ಮಹಿಯೊಳಗೆ ತಿರುಗುತಿರಲೂ
ಅತಿ ದಯಾಪರರಾಗಿ ತನ್ನವನಿವನೆಂದು
ಹಿತದಲ್ಲಿ ಪೊರೆದು ಕುಮತಿಯ ಬಿಡಿಸಿದರು೧
ಶಬ್ದಾದಿ ಮೊದಲಾದ ವಿಷಯಂಗಳಾ ಕರ್ಮ
ದಬ್ಧ್ದಿಯೊಳಗೆ ಬಿದ್ದು ಪೊರುಳುತಿದ್ದಾ
ಲುಬ್ಧಕನ ಕರೆದು ದೃಢವಾಗಿ ಸುಜ್ಞಾನದ
ಅಬ್ಧಿಯೊಳಗಿಟ್ಟು ಕರುಣದಲಿ ನೋಡಿದರು ೨
ಹಿಂದೆ ಏಸೇಸು ಜನ್ಮ ಜನಿಸಿ ಅನ್ಯ
ರಿಂದಲಿ ಬಲು ಕಾಲ ನೊಂದ ನರನಾ
ತಂದು ವೈರಾಗ್ಯದೊಳು ಪೊಗಸಿ ಸೌಖ್ಯವ ಪರಶಿ
ತಂದೆ ಮಕ್ಕಳನು ಸಾಕಿದಂತೆ ಸಾಕಿದರು೩
ಉಪದೇಶವಿತ್ತರು ಸುಪ್ರೀತಾರ್ಥದಲಿ ಬಂದು
ಜಪ ನಿಜಾಸನ ಧ್ಯಾನ ಜ್ಞಾನದಿಂದ
ಸಪುತೆರಡು ಲೋಕದ ಒಡೆಯನ್ನ ಪಾದವ
ಸಫಲವಾಗುವಂತೆ ಸಾಧನವ ಪೇಳಿದರು ೪
ದಾರಿದ್ರ ದೋಷವ ಸೇರಿದ ಮಾನವನಿಗೆ
ಆರು ಕೊಡದಲೆ ಧೇನು ದೊರಕಿದಂತೆ
ಕಾರುಣ್ಯದಲಿ ಗುರು ಪುರಂದರದಾಸರು
ಮೂರುತಿ ವಿಜಯವಿಠ್ಠಲನ್ನ ತೋರಿಸಿದರು ೫

ದುರಿತ ಜೀಮೂತರ್ವತ ಪೊರೆಯಯ್ಯ :

೩೨೩
ದುರಿತ ಜೀಮೂತವಾತ
ಪೊರಿಯಯ್ಯ ನಿನಗೆ ನಿರುತ
ಧರಣಿಯೊಳಗೆ ವಿಸ್ತರಿಸಿ ಬಲ್ಲವರಾರು
ಗುರುವೆ ನಿಜ ನಮಿತರ ಸುರತರುವೆ ಪ
ನಂಬಿದೆ ನಿನ್ನ ಪಾದವಂಬುಜವನು ಗಾಲ
ಬೆಂಬಿಡದಲೆ ನಾನೆಂಬೋದು ಬಿಡಿಸಿಂದು
ಬೆಂಬಲವಾಗು ಆರೆಂಬ ಖಳರ ನೀಗು
ಇಂಬಾಗಿ ನೋಡು ದಿವ್ಯಾಂಬಕದಿಂದ ವೇಗ
ಡಿಂಬಾರೋಪಿರೆ ಡಂಬಕತನವೆಂಬುದು ಕೊಡದಲೆ
ಸಂಭ್ರಮದಲಿ ಹರಿದೊಂಬಲ ಬಯಸುವ
ಹಂಬಲಿಗರ ಕೂಡ ಇಂತು ತೋರು ಬಲು
ಗಂಭೀರ ಕರುಣಿ ೧
ಎಣೆಗಾಣೆ ನಿಮಗೆ ಕುಂಭಿಣಿಯೊಳಗೆಲ್ಲ ಯತಿ
ಮಣಿಯೆ ರಾಮವ್ಯಾಸರ
ಮಣಿಭೂಷಣ ಚರಣಾರ್ಚನೆ ಮಾಳ್ಪ ಮಹಿಮ
ಮನಸಿಜ ಶರಭೀಮ ಮನದಣೆ ಗುಣಿಸಿ ಈ
ದಿನ ಮೊದಲು ಪಿಡಿದು ಜನುಮ ಜನುಮದ ಸಾ
ಧನ ಫಲಿಸುತು ಯೋಚನೆಗೊಳಲ್ಯಾಕೆ
ಅನುಮಾನ ಸಲ್ಲದು ಘನತರ ಕೀರ್ತಿ ನೂರಾರಕೆ
ಎಣಿಕೆ ಇಲ್ಲದೆ ಮೆರೆವ ದಿನಕರ ಪ್ರಭ ಕಾಯ ೨
ವರಹಜೆ ಸರಿತೆಯಲ್ಲಿ ಸ್ಥಿರನಾಗಿ ನಿಂದು ಕ್ಷಣ
ಸುರರಿಂದಾರಾಧನೆ ಸರಸರನೆ ಹಗಲು
ಇರಳು ಕೈಗೊಳುತ ವಕ್ಕಾರಗಳು ಹರಸಿ ಸುಂ
ದರ ವರಗಳನಿತ್ತು ಚಿರಕಾಲ ಬಿಡದಲೆ
ಪರವಾದಿಯ ಬಲ ಉರುದಲ್ಲಣ ಪೂ
ತುರೆ ಸುಧೇಂದ್ರರ ಕರಾರವಿಂದಜ
ಅರಸರಸರ ಪ್ರಿಯ ವಿಜಯವಿಠ್ಠಲನ
ಬಿರಿಯ ಹೊಯಿಸುವ ಧೀರಾ ಗುರು ರಾಘವೇಂದ್ರ೩

೫೧೬
ದುರಿತ ದುರ್ಗತಿಗೆ ಆವಾನಂಜನೊ
ಹರಿಯ ಕರುಣವೆಂಬ ಕವಚ ತೊಟ್ಟಿರಲಿಕ್ಕೆ ಪ
ಮಲಗಿ ಹೊರಳನೇಕೆ ಕುಳಿತುಕೊಂಡಿರನೇಕೆ
ಬಲುದೂರ ತಿರುಗಾಡಿ ಬಪ್ಪನೇಕೆ
ಮಲಿನ ವಸನವ ಪೊದ್ದು ಮೋರೆ ತೊಳಿಯನೇಕೆ
ಜಲಜನಾಭನ ಪಾದ ನೆಳಲು ಸೇರಿದವ ೧
ಸ್ನಾನ ಸಂಧ್ಯಾ ಮೌನ ಮಾಡದೆ ಇರನೇಕೆ
ಕಾನನದಲಿ ಬಂದು ಸೇರನೇಕೆ
ದಾನ ಧರ್ಮಂಗಳ ಮಾಡದೆ ಇರನೇಕೆ
ದಾನವಾರಿಯ ಕಾಣುತಲಿಪ್ಪವ ೨
ಮಡಿ ಉಡದೆ ಉಣನೇಕೆ ಅಡಿಗೆ ನೇಮನವೇಕೆ
ಅಡಿಗಡಿಗೆ ಜಪಮಣಿ ಎಣಿಸನೇಕೆ
ನಡೆಯುತ ಪಥದೊಳು ತಿನ್ನಲ್ಲಾ ಮೆಲ್ಲನೇಕೆ
ಪೊಡವೀಶ ಶ್ರೀ ಹರಿಯ ಅಡಿಗಳ ಬಲ್ಲವಾ ೩

ಓದದೆ ಇರನೇಕೆ ವೇದ ಪಠಿಸನೇಕೆ
ವೇದಮಂತ್ರ ರಚಿಸದರನೇತಕೆ
ಓದನವೀಯದೆ ಬಾಳುತಲಿ ಇರನೇಕೆ
ಮಾಧವನ ಚರಣಾರಾಧನೆ ಮಾಳ್ಪ ೪
ತೀರ್ಥ ತಿರುಗನೇಕೆ ಯಾತ್ರಿ ಚರಿಸನೇಕೆ
ವ್ಯರ್ಥ ದಿವಸವೆಂದು ಅನಿಸಲೇಕೆ
ಆರ್ಥಿಯನ್ನು ನೋಡಿ ಆಟ ಆಡುವನೇಕೆ
ತೀರ್ಥಪದನ ದಿವ್ಯತೀರ್ಥ ಬಯಸುವವ ೫
ವ್ರತವು ಮಾಡನೇಕೆ ಕಥಿಯ ಕೇಳನೇಕೆ
ಸತಿಯ ಸಂಗಡ ನಿತ್ಯರಮಿಸನೇಕೆ
ಚತುರ ಸಾರೆ ಉಂಡು ಹಾಗೇ ಇರನೇಕೆ
ಪತಿತಪಾವನನಂಘ್ರಿ ಮತಿಯಲ್ಲಿ ನೋಳ್ಪನಾ೬
ದುರಿತವೆಂಬೋದೆಂತು ಬಿಳಿದೊ ಹಸರೊ ಕೆಂಪೊ
ಕರದೊ ಮತ್ತಾವದೋ ಅದರ ವರ್ಣಾ
ದುರಿತಾರಿ ವಿಜಯವಿಠ್ಠಲನ್ನದಾಸಗೆ ತನ್ನ-
ತೊರೆದು ಕಾಣೊ ಹಣೆ ನೋಡದೆ ಮಹಾ ೭

೩೯೪
ದುರ್ಗಾ¥ತಿಯೆ ಕಾಯೊ ಸತತ
ದುರ್ಗಣ ಪರಿಹರಿಸಿ
ನಿರ್ಗುಣದಲಿ ದೇವಾ ನಿನ್ನಯ
ದುರ್ಗದೊಳಿಡು ಎನ್ನಾ ಪ
ಕೋಪವಧಿಕವಾಗಿ ಕುಶ್ಚಿತ
ಪಾಪಕ್ಕೆ ಎರಗುತಾ
ತಾಪಸರನ್ನ ಜರಿದು ಬಲು ಸಂ
ತಾಪದಿ ಬಳಲಿದೆನೊ ಕುಕ್ಕಿ ೧
ಹಿಂಸೆಯ ಮಾಡುವಲ್ಲಿ ಹೇಸದೆ
ವಂಶರಾ ನಿಂದಿಸುವೆ
ಅಂಶುಮಾಲಿಯಂತೆ ತಮೋಗುಣ
ಧ್ವಂಸಗೈಸು ವೇಗಾ ೨
ಕಠಿಣ ಉತ್ತರ ನುಡಿದು ಮತ್ಸರ
ಕುಟಿಲತನವಾ ಮರಿಯೆ
ಸಟೆ ಮಾತುಗಳನಾಡಿ ನಿನ್ನಾ ನಿ
ಚ್ಚಟದ ಮರಿದೆನೊ ಹರಿಯೆ ೩
ಕಲಹವೆಂದರೆ ಕಾಲು ಕೆದರುವೆ
ಕೆಲಸಾರದಲೇವೇ ಮಲಿತು ಎದುರು
ನಿಲುವೆ ಮುಂದಿನ
ನೆಲೆಗಾಣದೇ ಪೋದೆ೪
ವ್ಯಾಧೆ ವೇದನೆಯಿಂದ ಬಲು ಕಷ್ಟ
ವಾದದು ಈ ದೇಹಕ್ಕೆ
ಮೋದ ವಿಜಯವಿಠ್ಠಲ ನಿನ್ನಿಂ
ದಾದದ್ದು ತೊಲಗಿಸಿ ೫

೪೬೧
ದುರ್ಲಭ ಇದು ಕಲಿಯುಗದೊಳಗೆ ಕಾಣಾ
ಎಲ್ಲರಿಗೆ ದೊರಕಬಲ್ಲದೆ ಶ್ರೀ
ವಲ್ಲಭನ ಪಾದಸೇವೆ ಮಾಡೋ ನೀ
ನಲಿದಾಡೋ ಎಲೆ ಮನುಜಾ ಪ
ಸುರನರ ಉರಗರು ಕಿಂನರಕಿಂಪುರುಷರು
ಗಂಧರ್ವರು ಸಿದ್ಧರು ವಿದ್ಯಾ
ದರಸಾಧ್ಯ ಗುಹ್ಯಕ ಸುರಮುನಿಗಣ ಗರುಡಾದ್ಯರೆ ನೆರೆದು
ಹರಿ ಸರಸಿಜ ಸಂಭವ ಪುರಹರ ಮೂವನ ಬಲ್ಲಿದರೀ
ದರಿಯೊಳು ಇದರಲಿ ಹರಿ ಭಕುತಿಗೆ ಸರಿ
ಇಲ್ಲವೆನುತಲಿ ಬರಿದು ರೇಖೆಯ
ಬರಿಸಿದರೊ ಡಂಗುರ ಹೊಯಿಸಿದರೊ ಎಲೆ ಮನುಜಾ ೧
ಹರಿಯೆಂತೆಂದವ ಧರ್ಮಕೆ ಸಂದವ
ಕರದಲಿ ದಂಡಿಗೆ ಪಿಡಿದವ ಪುಣ್ಯವ ಪಡೆದವ
ಚರಣದ್ವಯದಲಿ ಗೆಜ್ಜೆಯ ಕಟ್ಟಿದವ ಅಟ್ಟಿದವ ಯಮ ಭಟರ
ಹರಿಹರಿದಾಡುತ ಕುಣಿದವ ಉತ್ತಮ ಗುಣದವ
ಹಿರಿದಾಗಿ ಗಾಯನ ಪಾಡಿದವ ಸುರರನ ಗೂಡಿದವ
ತಿರುಹುತ ಅಭಿನವ ನೋಡೊ
ಮಾಯವ ಬಿಡೋ ಎಲೆ ಮನುಜಾ೨
ತಂಬೂರಿ ತಂತಿಯಾ ಮೀಟಿದವ ಭವಾಬ್ಧಿ ದಾಟಿದವ
ಇಂಬಾಗಿ ಕಡ್ಡಿ ವಾದ್ಯವ ಹಾಕಿದವ ದುರುತವ ನೂಕಿದವ
ಸಂಭ್ರಮ ತಾಳ ಕಟದವ ಊಟದವ ಸುರರೊಡನೆ
ತುಂಬಿದ ದಾಸರ ಸಭೆಯೊಳಗಿದ್ದವ ನರಕವನೊದ್ದವ
ಕಂಬನಿ ಪುಳಕೋತ್ಸವ ಸುರಿದವ ತತ್ವವನರಿದವ
ಅಂಬುಜಾಕ್ಷನ ಮಹಿಮೆಯ ಕೇಳೋ
ನೀ ಸುಖದಲಿ ಬಾಳೊ ಎಲೆ ಮನುಜಾ ೩
ದಾಸರ ಕೀರ್ತನೆ ಒಂದು ಸುಳಾದಿಯ
ಬೇಸರದಲೆ ಹೇಳಿ ಏಕಾದಶಿಯ
ವಾಸರದಲಿ ಜಾಗರವನು ಗೈದ ಮಾನೀಸನು ಅಘನಾಶನು
ಸಾಸಿರ ಜನ್ಮದ ಕುಲಕೋಟಿಯ ಶ್ರೀನಿವಾಸನ
ಚರಣಕೆ ಏರಿಸಿದನಿವ
ಏಸು ವ್ರತಗಳು ಬಿಡಬಿಡು ಜರಿದು ಹರಿದಾಸರ ಸಂಗತಿ
ಬೆರೆದು ಎಲೆ ಮನುಜಾ೪
ಈ ಪರಿಯಿಂದಲಿ ಸೇವಿಸಿ ಉಪಾದಾನ
ಗೋಪಾಳವನು ಬೇಡಿ ನಿತ್ಯಸುಖಿಯಾಗಿ
ತಾಪತ್ರೆಯ ಮೊದಲಾದ ದುಷ್ಕರ್ಮ ಪಾಪರಹಿತನಾಗಿ
ಶ್ರೀಪತಿ ಸಿರಿ ವಿಜಯವಿಠ್ಠಲನ ಪದ
ಪದ್ಮವ ಪೊಂದಿದ ಭಜಕರು
ಕಾಪುರುಷರಿಗೆ ವಿಶೇಷರು ಕಾಣೊ ಮುಕ್ತಿ
ಒಂದೇ ಗೇಣೊ ಎಲೆ ಮನುಜಾ ೫

೩೯೫
ದೂರ ನೋಡುವರೆ ರಂಗಯ್ಯ ಎನ್ನ ಪ
ದೂರ ನೋಡುವರೇನೋ ಸಂಸಾರ ಶರಧಿಯೊಳಗೆ ಮುಳುಗಿ
ದಾರಿಗಾಣದೆ ನೀನೆ ಗತಿ ಮು-ರಾರಿಯೆಂದು ಸಾರಿದ ಮೇಲೆ ಅ.ಪ
ಆಸೆ ಬಿಡದೆಲೊ ಕಾಸುವೀಸಕೆ-ಕ್ಲೇಶ ಘನ್ನವೆಲೊ
ಈಶ ಯಾರಿಗೆ ಪೇಳಲೊಶವೆಲೊ-ಶ್ರೀಶ ಎನ್ನ ಮನಸಿನಲ್ಲಿ
ಲೇಶಮಾತ್ರ ಭಕುತಿಯಿಲ್ಲ, ಆಸೆ ಬದ್ಧನಾಗಿ
ಬಹಳ ಘಾಸಿಪಟ್ಟೆನೊ-ದಾಶರಥಿ ೧
ಭಕುತಿಯಿಲ್ಲವೊ ಅದರ ಹೊರತು-ಮುಕುತಿಯಿಲ್ಲವೊ
ಯುಕುತಿಯಿಂದಲಿ ವಲಿವನಲ್ಲವೊ-
ಮುಕುತಿದಾಯಕ ನಿನ್ನ ಕಾಣದೆ
ಭಕುತಿಗೋಸುಗ ಪರರ ತುತಿಸಿ, ಕಕುಲಾತಿಯಿಂದಲೆನ್ನ-
ಶಕುತಿಯೆಲ್ಲ ನಷ್ಟವಾಯಿತು ೨
ಪೊರೆಯದಿರುವರೆ ಕರುಣಾಳುಯೆಂಬ-ಬಿರುದ ಬಿಡುವರೆ
ಹರಿಯೆ ಯೆನ್ನ ಮರೆತು ಬಿಡುವರೆ-
ಕರಿಯು ಹರಿಯೇ ಎಂದು ಕರೆಯೆ
ಸಿರಿಗೆ ಪೇಳದೆ ಭರದಿ ಬಂದು, ಪೊರೆದೆಯೆಂಬ ವಾರ್ತೆಕೇಳಿ
-ಮರೆಯ ಹೊಕ್ಕೆನೊ ವಿಜಯವಿಠ್ಠಲ ೩

೩೯೬
ದೇವರ ದೇವ ನಿನ್ನ ಬಲವಲ್ಲದೆ ಮತ್ತೆ
ಆವ ಗ್ರಹಗಳಿಂದಲಿ ಉಂಟು ಎನಗೆ ಪ
ಇಂದು ನಿನ್ನ ನೆನಹು ಇಂದು ಬಲವೊ ಅರ
ವಿಂದ ಪದ ನೋಡುವದು ಅರ್ಕ ಬಲವು
ವಂದನ ಗೈದು ಮಂತ್ರಿ ಬಲವೋ ಎನಗೆ
ನಿಂದು ಕೊಂಡಾಡುವದು ಕಾವ್ಯ ಬಲವೊ ೧
ಆರಾಧನೆ ಮಾಡುವುದು ಅಂಗಾರಕನ ಬಲವೊ
ಸಾರಿ ಪೇಳುವದೆನಗೆ ಸೌಮ್ಯ ಬಲವೊ
ಕಾರುಣ್ಯ ಕಡುಸೋನೆ ಎನಗೆ ಶೌರಿಬಲವೊ
ಹಾರೈಸಿ ಹಿಗ್ಗುವದು ರಾಹು ಬಲವೊ ೨
ಕೇಳುವ ಕಥಾಶ್ರವಣ ಕೇತು ಬಲವೊ ಎನಗೆ
ವಾಲಗ ಮಾಡುವದು ತಾರಾಬಲವೊ
ಮೂಲೋದರಸು ಸಿರಿ ವಿಜಯವಿಠ್ಠಲ ನಿನ್ನ
ಆಳಾಗಿ ಬಾಳುವದು ಸರ್ವಬಲವು ೩

೨೧೦
ದೇವಿ ಕಾರುಣ್ಯದಿಂದ ಬಂದು ಎಂದೆಂದು
ಬಿಡದೆಂದು ದಯದಿಂದ ಪಾಲಿಸಿ ನಿಂದು ಪ
ಕಮಲಲೋಚನೆ ಸಾಮಜಯಾನೆ ಶಶಾಂಕ ವದನೆ
ವಿಮಲಾಬ್ಜ ಸದನೆ ಕೋಕಿಲ ಗಾನೆ ಆನಂದಪೂರ್ಣೆ
ನಮೋ ನಮೋ ರಮೆ ಉತ್ತಮೆ ಅನುಪಮೆ
ಶಮೆಕ್ಷಮೆ ಹರಿಗಸಮೆ ಸತತಾಗಮೆ ಗಗನಿಜಿತ
ಯಮೆ ಪರಮೇಶ್ವರಿ ಅ ಉಮೆ ಈ ಪರಾಕ್ರಮೆ೧
ಲೋಕ ತರುವಾತ ತನಯವಾಕು ಇವು ಮೂರು ಬೇಕು
ಬೇಕೆಂದು ತುತಿಸಿದೆ ಪರಾಕು ಸಂತಾಪ ನೂಕು
ಲೋಕ ಜನನಿಯೆ ವೈದೀಕ ಪ್ರಾರ್ಥನೆ ಇದು
ನೀ ಕೇಳು ಕರುಣದಿ ಸಾಕು ಸಕಲ ತನುಪ್ರಾಕು ಕುರ್ಮದಿ ಬಂದ
ಶೋಕ ಓಡಿಸಿ ಎನ್ನ ಸಾಕು ನೀ ಮನಸು ಹಾಕು೨
ರಂಗನ ಅರ್ಧಾಂಗಿ ನೀ ರನ್ನೆ ಕ್ಷೀರಾಬ್ದಿ ಕನ್ಯೆ
ಮಂಗಳಾದೇವಿ ಭಾಗ್ಯ ಸಂಪನ್ನೆ ಭಕ್ತ ಸಂಪನ್ನೆ
ತುಂಗ ಗುಣಾಬ್ಧೆ ತರಂಗಳೆ ತರುಣ ಪ್ರಕಾಶಿಸು
ಮಂಗಳಪ್ರದೆ ಭುಜಂಗ ಶಯನ ಸಿರಿ ವಿಜಯವಿಠ್ಠಲನ್ನ ವಕ್ಷಸಾರಿದ ಸಾಕ್ಷಾದ್ದೇವಿ ೩

೩೨
ದೇಶದೊಳಗೀ ಕ್ಷೇತ್ರ ಬಲು ಉತ್ತಮಾ
ದಾಸೋಹಂ ಎಂದೆನಲು ಗತಿಗೆ ಪಥವ ಕೊಡುವ ಪ
ಹರಿಸರ್ವೋತ್ತಮನೆಂದು ನೆರಪಿದಂಥ ಮುನಿ
ವರನ ಶಾಪದಲಿ ಪಾವಕನು ಬಂದು
ಪರಮತಪ ಮಾಡಿದನು ವರವಿತ್ತ
ಹರನೊಲಿದು ಧರೆಯೊಳಗೆ ಈ ದೇವನಿ
ಪುಷ್ಕರಣಿ ಎನಿಸುವುದು೧
ದಿವಿಜರಿಗೆ ಸೋತು ದಾನವರು ಶುಕ್ರಗೆ ಹೇಳಿ
ಶಿವನೊಲಿಸೆ ಅಮೃತವ ಮಾಳ್ಪೆನೆಂದು
ಕವಿ ಇಲ್ಲೆ ತಪಮಾಡೆ ಅಂದು ಸುರಧೇನು ವಾ
ಸವನ ಕೈಕೊಳಲು ಶ್ರೀರಾಮನಿಂದಲಿಗತಿ ೨
ರಾಯ ಋಷಿಗಾಧೇಯು ಬ್ರಹ್ಮತ್ವಗೋಸುಗ
ಗಾಯತ್ರಿ ಒಲಿಸಿದನು ಈ ಸಿಲೆಯಲೀ
ಆಯು ಉಳ್ಳದರೊಳಗೆ ಇಲ್ಲಿ ಕುಳಿತು ಬಂದು
ಗಾಯತ್ರಿ ಮಂತ್ರವನು ಜಪಿಸೆ ನರನು ಮುಕ್ತಾ ೩
ಅಗಸ್ತೀಶ್ವರವಿಡಿದು ರಾಮಲಿಂಗ ಪರಿಯಂತ
ಬಗೆಬಗೆ ತೀರ್ಥ ಎರಡೊಂದು ಪದ್ಮ
ಮಿಗೆ ಷೋಡಶಕೋಟಿ ಅರವತ್ತು ಸಾವಿರ
ಸೊಗಸಾಗಿವಿಪ್ಪವಿಲ್ಲಿ ಕಾವೇರಿ ಮಧ್ಯದಲ್ಲಿ ೪
ರಾಮನಾಥನ ಪುರವೆಂಬೊ ಪೆಸರೆ ಉಂಟು
ವ್ಯೋಮಕೇಶನು ನಾಲ್ಕು ಹೆಸರಿನಿಂದಾ
ತಾ ಮಹೋತ್ಸವದಿಪ್ಪ ವಿಜಯವಿಠ್ಠಲನಂಘ್ರಿತಾಮರಸ ಧ್ಯಾನವನು ಮಾಡುತ ಭಕ್ತರ ಪೊರೆವಾ

೩೩
ದೋಷ ದೂರ ಜನಾರ್ದನ ದೋಷ ದೂರಾ ಪ
ದೋಷ ದೂರ ಎನ್ನ ಸಾಕುವುದು ಪರಾಶರವರದಾ ಅ
ಬಲು ಕಾಲಗಳಿಂದ ನೆಲೆಯ ಕಾಣದೆ ನಿನ್ನ
ಚೆಲುವ ಚರಣ ದ್ವಂದ್ವ ನೆಳಲನಾಶ್ರೈಸಿದೆ ೧
ಕಂಡೆ ನಾ ನಿನ್ನಯ ಪುಂಡರೀಕ ಪಾದ
ಚಂಡಾಘ ತಿಮಿರ ಮಾರ್ತಾಂಡ ಮುರವೈರಿ ೨
ಅಜಗೆ ಪ್ರಸನ್ನ ವಿರಜಭಾಗ್ಯ ಸಂಪನ್ನ
ವಿಜಯಮೂರುತಿ ನಮ್ಮ ವಿಜಯವಿಠ್ಠಲರೇಯ ೩

೯೯
ದೋಷವರ್ಜಿತ ಬಾರೈ ವೆಂಕಟೇಶಾ
ಶ್ರೀನಿವಾಸ ವಾಸವಿಸೂನು ಪ
ಚರಣರಹಿತ ಪತಿ ತ್ಯಜನೆ ತಥ
ಚರಣಪಾಣಿ ಪರಮಾನಂದಾ
ಚರಣಾಯುಧನಾದವಗೆ ಸೋಕಿದಳ
ಚರಣದಿ ಪಾವನಗೈಸಿದೆ ದೇವಾ೧
ಪತಿ ಗುರು ಪಿತೃ ಪಿತಾಮಹಾ ದೈ
ವತ ಗುರೋರ್ಗುರು ಸ್ವಶುರ ಜಾರಾ
ಅತಿಶಯ ಭೂತಿರಭೂತಿ ಎಂದು ಸಂ
ತತ ಉಪಾಸ್ಯತನಾಗಿ ಮೆರೆವನೆ ೨
ಪಂಚಾದಿಗ್ಬರಸ್ಮಿಗಳಲ್ಲಿ ಪೂಜೆ
ಪಂಚ ರೂಪದಿ ಕೊಂಬನಾಡಿಸ್ಥ
ಪಂಚಜನ ಪಂಚಮೊಗವೇಶ ತಾಳಿದ
ಪಂಚ ಕುಸುಮಸಾರ ಮಧು ವಿದ್ಯಮೂರ್ತಿ ೩
ಹೃದಯಾಖ್ಯಪುರ ಪಂಚದ್ವಾರದಲಿ ನೀ
ವಿಧಿ ಭವರಿಂದಾರ್ಚನೆ ಗೊಂಬೆ
ಪದುಮಾಷ್ಟ ದಳದಲಿ ಪ್ರಹರೇಯ ತಿರುಗುವ
ಸುದರುಶನಾಬ್ಜಾದಿ ಅಷ್ಟಬಾಹು ಚನ್ನಾ ೪
ಆನಂದೋತ್ರ‍ಕಷ್ಟ ಜ್ಞಾನ ಪೂರ್ಣ
ಗುಣಪೂರ್ಣ ಐಶ್ವರ್ಯಾನಂತ ಮೋದಾ
ಗಾನೆ ತ್ರಾಣ ಕರ್ತೃ ಪ್ರಣವ ತ್ರಿಚರಣಸ್ತಾ
ಎಣಿಸುವೆ ಷಟುಚತು ತ್ರಿಭಿರೂಪಾತ್ಮಾ೫
ಪದ್ದುಮ ಶಾಂತಸಿಂಹ ಅನಿರುದ್ಧ
ಪ್ರದ್ಯುಮ್ನ ಸಂಕರುಷಣ ವಾ
ಸುದೇವ ನಾರಾಯಣ ರೂಪಗಳಿಂದ
ಹೃದ್ಗತನಾಗಿ ಒಪ್ಪುವ ಮಹಾಮಹಿಮಾ ೬
ಗೋಕುಲನಾಥ ಗೋವಿಂದ ತಿರುಮಲ
ಕಾಕೋದರಾದ್ರಿನಿಲಯ ಸ್ವಾಮಿ
ಲೋಕಪಾಲಕ ಸಿರಿ ವಿಜಯವಿಠ್ಠಲ ಪ
ರಾಕು ಈ ರಥದೊಳು ಕುಳ್ಳಿ ವೇಗಸಾಗಿ೭

೩೯೭
ಧನ್ಯನೋ ಶೇಷಗಿರಿದಾಸ ನೀನೂ
ಪುಣ್ಯವಂತನು ಅಹುದೊ ಮನೊ ವಾಚದಲಿ ನಿತ್ಯ ಪ
ಮುಂಗೈಯ ಮ್ಯಾಲಿನ ಗಿಳಿ ಹಾರಿಹೋದಂತೆ
ರಂಗ ಮಧ್ವನ ಸ್ಮರಣೆ ಮಾಡಿಕೊಳುತ
ಮಂಗಳಾಂಗನಾಗಿ ಸ್ವರ್ಗಸ್ಥನಾದಿ ಕ್ಷಣ
ಭಂಗುರವೆಂಬ ಪ್ರಮಾಣ ಸಿದ್ಧಿಸಿತು ಗಡ ೧
ಸತ್‍ಶಿಷ್ಯನೆಂದೆನಿಸಿಕೊಂಡದಕೆ ಎನ್ನ ಮ
ನೋತ್ಸಾಹ ಮಾತ್ರ ಬಂದಾಗಲಿಲ್ಲಾ
ವತ್ಸ ಕೇಳು ಉಪಸರ್ಗ ಕೂಡಿದ ನಾಭಿ
ತತ್ಸಮಾನಾಯಿತೊ ಇಂದಿನಾರಭ್ಯವೂ೨
ಒಂದೆ ಪ್ರವಾಹದೊಳು ಈಸು ಬೀಳಲು ಸುಳಿ
ಯಿಂದ ಹಿಂದಕೆ ಒಬ್ಬನಿಂದಂತೇವೆ
ಇಂದು ಎನಗಾಯಿತೊ ಭೂಮಿಯೊಳಗೆ ಋಣಾನು-
ಬಂಧ ಇಂತಿರಲಿಕ್ಕೆ ಯತ್ನ ಒಬ್ಬರದಿಲ್ಲ೩
ಪರಿಣಾಮಕೆ ನಿನಗೆ ಸಾನುಕೂಲಾವಾಗಿ
ಅನಿಲದೇವನು ಒಲಿದು ಹರಿಯ ಕೂಡಾ
ಪ್ರಣಮಪೂರ್ವಕದಿಂದ ಪಂಚತ್ವ ಐದಿದೆ ಸಾ-
ಧನ ಪೂರ್ತಿಕಾಲ ಎಳ್ಳನಿತು ಉಳದಿಪ್ಪದೊ ೪
ವಿಧಿ ಸಂವತ್ಸರ ಭಾದ್ರಪದ ಶುಕ್ಲದ ಭಾನು
ಬಿದಿಗೆಯಲಿ ಪ್ರವರ ಗೌತಮ ಸಂಗಮಾ
ನಿಧಿಯಲಿ ವಿಜಯವಿಠ್ಠಲನಂಘ್ರಿಯುಗಳವನು
ಹೃದಯದಲಿ ಇಟ್ಟು ದೇಹವ ತ್ಯಾಗಮಾಡ್ದೆ ೫

೨೯೯
ಧ್ಯಾನವನು ಮಾಡಿ ತ್ರಿವೇಣಿ ಕ್ಷೇತ್ರವ ಬಿಡದೆ |
ಜ್ಞಾನಭಕ್ತಿ ವೈರಾಗ್ಯ ನಾನಾ ಸತ್ಕರ್ಮ ನಿ |
ದಾನದಿಂ ಸಿದ್ಧಿಪುದು ಮಾನಸದಲಿ ಸಿರಿ |
ಪ್ರಾಣೇಶ ಕುಣಿಯುವನಯ್ಯಾ ಅಯ್ಯಯ್ಯಾ ಪ
ಹರಿವೀರ ದ್ರುಪದನುದ್ಧರಿಸಿವಾಗಲು ತನ್ನ |
ಶರೀರದಿಂದಲಿ ಅಷ್ಟಕೇತ್ರಗಳ ಪುಟ್ಟಿಸಿ |
ವರದೇಶ ವೈಕುಂಠದಲ್ಲಿಟ್ಟನು ಸಪ್ತ |
ಪಿರಿಸಹಿತ ತೀರ್ಥರಾಜಾ ||
ಮೆರೆವದಿದೆ ಪುಂ ಕ್ಷೇತ್ರ ಉಳಿದವೇಳು ಸ್ತ್ರೀ |
ಇರುತಿಪ್ಪವಲ್ಲಿ ಮಿಗಿಲಿದಾದಕೆ ಅತಿಶಯವೊ |
ಧರಣಿಯೊಳಗಿದಿ ಕಾಲಾಂತರಕೆ ಹರಿತಂದ ವಟ |
ತರು ಸಹವಾಗಿ ಅಯ್ಯಾ ಅಯ್ಯಾ ಅಯ್ಯಾ ೧
ತರಣಿಸುತೆ ಮಾನಸೋತ್ತರ ಶೈಲದಲಿ ಕುಳಿತು |
ವರರಾಜ ತೀರ್ಥ ಮಾಧವನ ಸಾರುವೆನೆಂದು |
ಭರದಿಂದ ತಪವು ಮಾಡೆ ಸರಸಿಜೋದ್ಭವನೊಲಿದು |
ವರವಿತ್ತ ಮುಂದೆ ನೀನು ಧರೆಯೊಳು ಕಾಳಿಂ ||
ದ ರಾಯಗೆ ಕುವರಿ ಎನಿಸಿ ಮಹಾಸರತಿಯಾಗಿ ಪೋಗಿ |
ಸಿರಿ ಮಾಧವನ ಚರಣ |
ಶರಣು ಪೋಗೆನೆ ಸಪ್ತಶರಧಿ ಭೇದಿಸಿಯಲ್ಲಿ
ನೆರೆ ಮೆರೆದಳೈಯ್ಯಾ ಅಯ್ಯಾ ಅಯ್ಯಾ ಅಯ್ಯಾ ೨
ತುರುಗಮ ನೆವದಿಂದ ಅರವತ್ತು ಸಾವಿರ ಸ |
ಗರನ ಕುಲದವರು ಕಪಿಲಾಖ್ಯಾ ಹರಿ ಮುನಿಯಿಂದ |
ಉರಿದು ಪೋಗೆನಲಾಗಿ ಭಗೀರಥ ಭೂಪತಿ ಉಗ್ರ |
ಧುರಧಿ ತಪವನ್ನೆ ಮಾಡೇ |
ಹರಿ ನಿರೂಪವ ತಾಳಿ ಗಿರಿಗಹ್ವರವನೊಡದು |
ಸುರಗಂಗೆ ಬಂದು ತ್ರಿವೇಣಿ ಮಾಧವನ ಸಿರಿ |
ಚರಣದೆಡೆಯಲ್ಲಿ ನಿಂದು ಯಮುನೆ ವಡಗೊಡಿ ಬಾ |
ಮರವಾದವಳಂದು ಅಯ್ಯ ಅಯ್ಯಾ ಅಯ್ಯಾ೩
ಸರಸ್ವತಿಯ ಬೆರೆದು ತ್ರಿವೇಣಿ ಸಂಗಮವೆಂದು |
ಕರಿಸಿಕೊಂಡಿತು ವಿಕರ ಸೋಮೇಶ್ವರನ ತನಕ |
ಪರಮೇಷ್ಠಿಯಿಲ್ಲಿಗೈತಂದು ಬೊಮ್ಮಾಂಡವನು |
ಸರಿ ಮಾಡಿ ತೊಲಗಲಾಗೀ ||
ಅವರೇ ಪೇಳುವದೇನು ಸುರರು ಶಿರದೂಗುತಿರೆ |
ವರರಾಜತೀರ್ಥ ಮಹಾಭಾರವಾಗಲು ಇದಕೆ |
ಸರಿ ಮಿಗಿಲು ಇಲ್ಲೆನುತ ಪೊಗಳಿ ಕರದರು ಮಹ |
ವರದ ಪ್ರಯಾಗವೆಂದಯ್ಯಾ ಅಯ್ಯಾ ಅಯ್ಯಾ ೪
ಪುರವೈರಿ ನಟಣೆ ಪೂ ತುಲಸಿ ಸುರಪತಿ ವೈಶ್ವಾ |
ನರನು ತಿಲ ಹೋಮ ಯಮರಾಯಕಿಂಚಿತು ದಾನ |
ನಿಋರುತಿತ ಪೈತೃಕಕರ್ಮ ವರುಣ ಜಲದಾನಸ್ತುತಿ |
ಮರುತ ಭೂತನು ಕುಬೇರ ||
ಅರಗಳಿಗೆ ವಸತಿ ಈ ವಟನಿಕಟ್ಟಿಯಲಿಯಿದ್ದು |
ಪರಿಪರಿಯಿಂದಲಿ ಒಲಿಸಿ ಮಾಧವನಿಂದ |
ಪುರಷಾರ್ಥ ಪಡೆದು ಸುಖಿಸಿದರು ಸಮಸ್ತ ಬಗೆ |
ಅರಿತು ಕೊಂಡಾಡಿ ಜನರೈಯ್ಯ ಅಯ್ಯಾ ಅಯ್ಯಾ೫
ಎರಡೊಂದು ಮೂರು ಕುಲದ ಮಧ್ಯ ನಿಂದು |
ಕರ್ತಾರಿಯೊಳಗೆ ಮಿಂದು ಸತ್ಕರ್ಮವನೆಸಗಿ ಭೂ |
ಸುರರ ಮೆಚ್ಚಿಸಿ ಮನದಿ ಪಾಪಗಳ ಉಚ್ಚರಿಸಿ |
ಕರಣ ನಿರ್ಮಲಿನರಾಗಿ |
ನರನಾರಿ ಈರ್ವ ಜನ ವಿಪ್ರ ಚಂಡಾಲ ||
ಕುಲ ಪರಿಯಂತ ವಪನವೆ ಮುಖ್ಯವೆಂದು ತಿಳಿದು |
ಚರಿಸಿದರೆ ಅನಂತ ಜನ್ಮಕ್ಕೆ ಮಹಾಸೌಖ್ಯ |
ಬರಿದೆ ಆಗದು ಕಾಣಿರೈಯ್ಯ ಅಯ್ಯ ಅಯ್ಯಾ೬
ಧರೆಯ ಮೇಲೆ ಬಿದ್ದ ಶಿಶುಗಳ ತಂದು ಮುಂಡಣವ |
ಉರುತರ ಬುದ್ದಿಯಿಂದ ಮಾಡಿಸಲಿ ಬೇಕು ವಿ |
ಸ್ತರಿಸುವೆನಯ್ಯಾ ಯೌವನ ವಾರ್ಧಿಕರಿಗೆ ನಿಜ |
ವರನಾರಿಯರಿಗೆ ವೇಣಿ ಸರಿ ಎನ್ನಿ ಸಾತ್ವೀಕ ||
ಪುರಾಣದಲಿ ಪೇಳಿದ ಎರಡು ಭುಜದಲಿ ತಪ್ತ ಚಕ್ರ |
ವಿರಹಿತರಾಗಿ ಬರಲು ಷಣ್ಮುತ ಜನಕ ಗತಿಯಿಲ್ಲ ಮತಿಯಿಲ್ಲ |
ಸ್ಥಿರವಾಕ್ಯ ಲಾಲಿಪುದು ಅಯ್ಯಾ ಅಯ್ಯಾ ಅಯ್ಯಾ ೭
ಎರಡೈದು ತುರಗ ಕೃತು ಮೊದಲಾದ ತೀರ್ಥಗಳು |
ಪರಿಪರಿ ದೇವ ಮುನಿಗಳು ನಾಮದಲಿ ಉಂಟು |
ಪರಮಭಕುತಿಯಿಂದ ಮಜ್ಜನಾದಿಯ ಮಾಡೆ |
ಪರಲೋಕ ಕರತಳದೊಳು ||
ಇರುತಿಪ್ಪದು ನಿತ್ಯಾ ಪ್ರಯಾಗರಾಜನ |
ಸ್ಮರಣೆ ಮಾಡಿದ ಮನುಜನು ಆವಾವಲ್ಲ್ಯಾದರು ಇರಲು |
ಮರಣ ಕಾಲಕೆ ಮೂಲ ಮಾಧವ ವೊಳಗೆ ಮೊಳೆವ |
ದರುಶನವ ಕೊಡುತಲಯ್ಯ ಅಯ್ಯಾ ಅಯ್ಯಾ ೮
ಅರುಣೋದಯಲೆದ್ದು ಶುದ್ಧಾತ್ಮರಾಗಿ |
ಪರಿಪರನೆಂಬೊ ಜ್ಞಾನದಲಿ ಹಾಡಿಪಾಡಿದವರ |
ತೆರಳಿ ಪೋಗದೆ ದುರಿತ ರಾಸಿಗಳ ದಹಿಸಿ ನಿಂ |
ದಿರದೆ ಸಂತರ ಕೊಡಿಸಿ ||
ಮೊರೆವುತಿಪ್ಪುದು ಗಡಾ ಸಿದ್ದಾರ್ಥ ಕ್ಷೇತ್ರವಿದು |
ನೆರೆನಂಬಿ ಮಾನವನು ಮಾನಸದಲಿ ಭಜಿಸಿ |
ಸಿರಿ ವಿಜಯವಿಠ್ಠಲ ಕರುಣವುಳ್ಳವನಿಗೆ |
ದೊರಕುವದು ದೊರಕುವದಯ್ಯಾ ಅಯ್ಯಾ ಅಯ್ಯಾ ೯

ಧ್ಯಾನವನೆ ಮಾಡೊ ಬಿಂಬ ಮೂರುತಿಯ :

೫೧೭
ಧ್ಯಾನವನು ಮಾಡು ಬಿಂಬ ಮೂರುತಿಯಪ
ಆನಂದದಲಿ ಕುಳಿತು ಅಂತರಂಗದಲಿ ಅ.ಪ
ಸದಾಚಾರನಾಗಿ ದ್ವಾದಶಗುರುಗಳಿಗೆರಗಿ
ಮುದದಿಂದ ಮೂಲಮಂತ್ರವನು ಜಪಿಸಿ
ಸದಮಲ ಭಕುತಿಯಲಿ ದೇಹಸ್ಥಿತಿಯನೆ ತಿಳಿದು
ಪದಮಾಸನವ ಹಾಕಿ ಪರಮ ವಿಶ್ವಾಸದಲಿ೧
ಅಂಗವನು ಚಲಿಸದೆ ಚೆನ್ನಾಗಿ ದೃಢವಾಗಿ
ಕಂಗಳನೆ ಮುಚ್ಚಿ ಇಂದ್ರಿಯಗಳನೆ ತೆರೆದು
ಮಂಗಳ ಶೋಭಿತ ಅಖಂಡ ಧ್ಯಾನದಂತ
ರಂಗದೊಳಗೆ ನಿಲಿಸಿ ಎಲ್ಲವನು ಕಾಣೊ ೨
ಭಗವದ್ರೂಪಗಳೆಲ್ಲ ಒಂದು ಬಾರಿ ಸ್ಮರಿಸಿ
ಮಗುಳೆ ಪರಮ ಗುರುವಿನ ಮೂರ್ತಿಗೆ
ತೆಗೆದು ಆಹ್ವಾನಮಾಡಿ ಅಲ್ಲಿಂದ ಹರುಷದಿ
ಸ್ವಗುರು ಬಿಂಬಮೂರ್ತಿಯಲಿ ಐಕ್ಯವನೆ ಮಾಡು೩
ತಿರುಗಿ ಮೆಟ್ಟಿಕೆ ಮೂರು ವೇಗದಿಂದಲಿ ನಿನ್ನ
ಲ್ಲಿರುವ ಮೂರ್ತಿಯಲ್ಲಿ ಚಿಂತನೆಯ ಮಾಡೊ
ಭರದಿಂದ ಎಲ್ಲವನು ತಂದು ಹೃದಯದಲ್ಲಿ
ಸ್ಥಿರವಾಗಿ ಇಪ್ಪ ಮೂರುತಿಯೊಡನೆ ಕಲೆಸು ೪
ಆತನೆ ಬಿಂಬ ಮೂರುತಿಯೆಂದು ತಿಳಿದುಕೊ
ಆ ತರುವಾಯ ನಾಡಿಗಳ ಗ್ರಹಿಸಿ
ಆ ತೈಜಸನ ತಂದು ವಿಶ್ವಮೂರ್ತಿಯಲ್ಲಿ
ಪ್ರೀತಿಯುಳ್ಳವನಾಗಿ ಪತಿಕರಿಸು ಮರುಳೆ ೫
ಜ್ಞಾನ ಪ್ರಕಾಶದಲಿ ಇದ್ದು ನಿನ್ನ ಹೃದಯ
ಸ್ಥಾನದಲ್ಲಿ ಅಷ್ಟದಳ ಕಮಲ ಮಧ್ಯ
ಶ್ರೀನಿವಾಸನ ಮೂರ್ತಿ ನಿಲ್ಲಿಸಿ ಬಾಹ್ಯದಲಿ
ಏನೇನು ಪೂಜೆಯನು ಉಳ್ಳದನು ಮಾಡೊ೬
ಗುಣ ನಾಲ್ಕರಿಂದಲಿ ಉಪಾಸನವನೆ ಮಾಡು
ಕ್ಷಣ ಕ್ಷಣಕೆ ಹರಿಪಾದವನು ನೋಡುತ
ಅಣುರೇಣು ಚೇತನಾಚೇತನಕೆ ನೇಮಕ
ಫಣಿಶಯನನಲ್ಲದೆ ಮತ್ತೊಬ್ಬರಿಲ್ಲವೆಂದು ೭

ಮಮತೆಯನು ತೊರೆದು ಮೇಲೊಂದಪೇಕ್ಷಿಸದೆ
ಸಮ ವಿಷಮ ತಿಳಿದೊಂದೆ ಭಕುತಿಯಲ್ಲಿ
ಸ-ಮಾಧಿಗೊಳಗಾಗಿ ದಿವ್ಯ ದೃಷ್ಟಿಲಿ ಸರ್ವ
ಕ್ರಮ ಅನುಕ್ರಮದಿಂದ ಭರಿತಭಾವುಕನಾಗೊ ೮
ಈ ಪರಿ ಧೇನಿಸಲು ದೇವ ಕರುಣನ ಮಾಡೆ
ಪಾಪ ಸಂಚಿತವು ಪ್ರಾರಬ್ಧ ನಾಶ
ಅಪರೋಕ್ಷಿತನಾಗಿ ತನ್ನ ಯೋಗ್ಯತದಷ್ಟು
ಗೋಪಾಲ ವಿಜಯವಿಠ್ಠಲನೊಲಿವನಾಗ೯

೫೧೮
ಧ್ಯಾನಿಸು ಶ್ರೀಹರಿಯ ಧ್ಯಾನಿಸು ಪ
ಧ್ಯಾನಿಸು ಮನವೆ ಶ್ರೀ ಹರಿಯ ಪಾದ
ಧ್ಯಾನವಂತರ್ಯಾಮಿ ಹರಿಯ, ಆಹ
ಪ್ರಾಣಾಪಾನ ವ್ಯಾನೋದಾನ ಸಮಾನರ್ಗೆ
ಪ್ರಾಣನಾಗಿಹ ಮುಖ್ಯ ಪ್ರಾಣಾಂತರ್ಗತನ ಅ.ಪ
ಪರಮಾಣು ಪ್ರದೇಶದಲ್ಲಿ, ಪ್ರಾಣಿ
ರಾಸಿ ಅನಂತವುಂಟಲ್ಲಿ ಹೀಗೆ
ವರಲುತಿದೆ ವೇದದಲ್ಲಿ ದೃಷ್ಟಾಂ
ತರವ ಪೇಳುವೆ ದೃಢದಲ್ಲಿ-ಆಹ
ಪರಮ ಸೂಕ್ಷ್ಮ ವಟತರು ಫಲದಲ್ಲಿಹ
ಪರಿಮಿತಲ್ಲದ ಬೀಜದಿರವನರಿತು ನಿತ್ಯ ೧
ನಿರುತ ಸುವರಣ ಬ್ರಹ್ಮಾಂಡದಲ್ಲಿ
ಪರಿಪೂರ್ಣವಾಗಿ ಅಖಂಡವಾಗಿ
ಮೆರೆವುತಲಿಪ್ಪ ಮಾರ್ತಾಂಡ ದಿವ್ಯ
ಕಿರಣದಂತಿರುವ ಪ್ರಚಂಡ-ಆಹ
ಹೊರಗೆ ಒಳಗೆ ಹರಿ ಚರಿಸುವ ಪರಿಯ ನೀ
ನರಿತು ಆವಾಗಲು ದೊರಕಿದ ಸ್ಥಳದಲ್ಲಿ ೨
ಸಲಿಲ ಭೂಗಿರಿ ಲತೆ ನಾನಾ-ವೃಕ್ಷ
ಫಲ ಮೃಗ ಪಕ್ಷಿ ಕಾನನ-ಮುಕ್ತ
ಸ್ಥಳಗಳವ್ಯಾಕೃತ ಗಗನ, ತೃಣ-
ಜಲ ಪಾವಕ ತರು ಪವನ-ಆಹ
ಒಳಗೆ ಹೊರಗೆ ಎಲ್ಲ ಸ್ಥಳದಲ್ಲಿ ಹರಿಮಯ
ನೆಲೆಯ ನೀ ನಲವಿಂದ ತಿಳಿದು ಆವಾಗಲು೩
ಕೇಶವ ವಿಶ್ವ ಮತ್ಸ್ಯಾದಿ, ತೇಜೊ
ರಾಶಿ ಹಯಗ್ರೀವಾದಿ, ಜೀವ
ರಾಶಿಯೊಳಿದ್ದು ಅನಾದಿ ಸರ್ವ
ದೇಶ ಭೇದಿಸುವಂಥ ವೇದಿ-ಆಹ
ಈ ಸಮಸ್ತ ಮೂರ್ತಿ ಶ್ರೀಶ ರಂಗನೆಂದು
ವಾಸನಾ ಮಯದಿಂದ ನೀ ಸೇವಿಸುತ ನಿತ್ಯ ೪
ಸಪ್ತಾವರಣ ದೇಹದಲ್ಲಿ, ದಶ
ಸಪ್ತ ದ್ವಿಸಹಸ್ರ ನಾಡಿಯಲಿ, ದಶ
ಸಪ್ತ ದ್ವಿಸಹಸ್ರ ರೂಪದಲಿ ಹರಿ
ವ್ಯಾಪ್ತ ನಿರ್ಲಿಪ್ತ ಸ್ಥಾನದಲಿ-ಆಹ
ಆಪ್ತನಂತಿಪ್ಪ ಸುಷುಪ್ತಿ ಜಾಗರದೊಳು
ತಪ್ತ ಕಾಂಚನದಂತೆ ದೀಪ್ತಿಸುತಿಪ್ಪನ್ನ೫
ಜೀವರಿಂದತ್ಯಂತ ಭೇದ, ಪ್ರತಿ
ಜೀವಾಂತರದಲ್ಲಿ ಮೋದನಾಗಿ
ಯಾವಾಗಲಿರುತಿಹ ವೇದ-ದಲ್ಲಿ
ಪೇಳುವುದು ಸತ್ಯಂಭಿದಾ-ಆಹ
ಈ ವಿಧ ವೇದಾರ್ಥ ಸಾವಧಾನದಿ ತಿಳಿದು
ಶ್ರೀ ವಾಯುಮತದ ಸುಕೋವಿದರೊಡಗೂಡಿ ೬

ಶ್ರೀಕೇಶವನೆ ಮೂಲರಾಶಿ, ಶ್ರುತಿ-
ಏಕೋ ನಾರಾಯಣ ಆಸೀತ್ ನಾನಾ
ಲೋಕ ಸೃಷ್ಟಿಪ ಧಾತನಾಸೀತ್, ಜಗ
ದೇಕತಾರಕ ಉಪದೇಶೀ-ಆಹ
ನೀ ಕೇಳಿ ನಿಗಮಾರ್ಥ ನೀಕರಿಸು ಸಂಶಯ
ಏಕಮೇವ ದ್ವಿತಿಯ ಶ್ರೀಕೃಷ್ಣನಂಘ್ರಿಯ ೭
ಗಂಗಾಜನಕ ಸಿರಿರಂಗ ಉ-
ತ್ತುಂಗ ಗುಣಾಂತರಂಗ, ಕಾ
ಳಿಂಗ ಸರ್ಪನ ಮದಭಂಗ, ಭು
ಜಂಗಶಯನ ಅಮಲಾಂಗ-ಆಹ
ಮಂಗಳ ಇಡಾ ಪಿಂಗಳ ಸುಷುಮ್ನ
ಸಂಗಡ ಮಧ್ಯದಿ ತಿಂಗಳಂತಿಪ್ಪನ್ನ ೮
ಹೃದಯಸ್ಥಾನದಲಿದ್ದ ಮೂರ್ತಿ, ಬಲು
ಅದುಭುತಾತನ ದಿವ್ಯಕೀರ್ತಿ, ಅದು
ಪದುಮುಜಾಂಡದಿ ಪರಿಪೂರ್ತಿ ತರು
ವುದಕೆ ಬೇಕು ವಾಯು ಸಾರಥಿ-ಅಹಾ
ಅದು ಬಿಂಬಮೂರ್ತಿ ಜೀವದಾಕಾರಾವಾಗಿದ್ದ
ಪದುಮಕೋಶದಲ್ಲಿ ಸದಮಲಾತ್ಮಕನನ್ನು ೯
ಧರೆಯನಳೆದ ದಿವ್ಯ ಚರಣ, ಅದು
ಮೆರೆವುತಿಹುದು ಕೋಟಿ ಅರುಣನಂತೆ
ಪರಿಪೂರ್ಣ ಭರಿತವು ಕಿರಣ, ಸ್ಮರಿ-
ಪರಿಗೆ ಮಾಡುವುದು ಕರುಣ-ಆಹ
ತರಣಿಯಂಥ ನಖದಿ ಸುರನದಿಯನು ಹೆತ್ತ
ಎರಡೈದು ಬೆರಳಲ್ಲಿ ಕಿರುಗೆಜ್ಜೆ ಪೆಂಡೆಯು ೧೦
ಪೆರಡು ಜಾನು ಜಂಘೆ ಘನ್ನ ಸುರು-
ಚಿರ ವಜ್ರಾಂಕುಶ ಧ್ವಜ ನಾನಾ, ದಿವ್ಯ
ವರ ರೇಖೆಯಿಂದಲೊಪ್ಪುವನ, ಜಘನ
ಪರಮ ಶೋಭಿತ ಸುಂದರನ-ಆಹ
ಉರುಟು ಕದಳಿ ಕಂಬ ಇರುವೂರು ಶೋಭಿಸೆ
ಸರಿಗಾಣೆ ಹರಿವುಟ್ಟ ವರ ಪೀತಾಂಬರವನ್ನು ೧೧
ಗಜವೈರಿಯಂತಿಪ್ಪ ಮಧು ಬಲು
ವಿಜಯ ವಡ್ಯಾಣ ಅಚ್ಛೇದ್ಯ, ಭೇದ್ಯ
ನಿಜಘಂಟೆ ಘಣರೆಂಬೊ ವಾದ್ಯ, ಕು
ಬುಜೆ ಡೊಂಕ ತಿದ್ದದನಾದ್ಯ-ಆಹ
ಅಜ ಜನಿಸಿದ ನಾಭ್ಯಂಬುಜದಳ ಚತುರ್ದಶ
ತ್ರಿಜಗ ಭರಿತ ಕುಕ್ಷಿ ನಿಜಪೂರ್ಣ ಸಖನನ್ನು ೧೨
ಉದರ ತ್ರಿವಳಿ ನಾನಾ ಹಾರ ದಿವ್ಯ
ಪದಕ ಪವಳದ ವಿಸ್ತಾರ ರತ್ನ
ಮುದದಿಂದ ಧರಿಸಿದ ಧೀರ ಸುಂದರ
ವಾದ ಕಂಬುಕಂಧರ-ಆಹಾ
ಪದುಮಜ ಭವರಿಂದ ತ್ರಿದಶರು ತಿಳಿಯುತ್ತ
ಸದಾಕಾಲ ಧ್ಯಾನಿಪ ಹೃದಯಾಂಬರವನ್ನು ೧೩
ಸಿರಿವತ್ಸ ಕೌಸ್ತುಭಹಾರ, ಮೇಲೆ
ಸರಿಗೆ ನ್ಯಾವಳದ ವಿಸ್ತಾರ ಅಲ್ಲಿ
ಉರ ವೈಜಯಂತಿ ಮಂದಾರ, ಗುರು
ತರವಾದ ಭುಜ ಚತುರ-ಆಹ
ಮರಿಯಾನೆ ಸೊಂಡಿಲಂತಿರೆ ಬಾಹು ಕೇತಕಿ
ಬೆರಳು ನಕ್ಷತ್ರದ ಅರಸಿನಂತೆ ನಖ೧೪
ಕರಚತುಷ್ಟಯದಲ್ಲಿ ಶಂಖ, ಚಕ್ರ
ವರಗದೆ ಪದುಮು ನಿಶ್ಶಂಕನಾಗಿ
ಧರಿಸಿ ಮೆರೆವೊ ಅಕಳಂಕ, ದುರು
ಳರ ದಂಡಿಸುವ ಛಲದಂಕ ಆಹ
ಬೆರಳು ಮಾಣಿಕದುಂಗುರ ಕಡಗ ಕಂಕಣ
ಬಿರುದಿನ ತೋಳ್ಬಂದಿ ವರ ಭುಜಕೀರ್ತಿಯ೧೫
ಅಗರು ಚಂದನ ಗಂಧಲೇಪ, ಕಂಬು
ಸೊಗಸಾದ ಕಂಠಪ್ರತಾಪ, ಮಾವು
ಚಿಗುರಲೆ ಕೆಂದುಟಿ ಭೂಪ, ನಸು
ನಗುವ ವದನ ಸಲ್ಲಾಪ-ಆಹ
ಮಗನಾಗಿ ತಾನು ಗೋಪಿಗೆ ವದನದೊಳು
ಜಗವೆಲ್ಲ ತೋರಿದ ಅಗಣಿತ ಮಹಿಮನ್ನ ೧೬
ಮುಗುಳು ಮಲ್ಲಿಗೆ ಮೊಗ್ಗೆ ದಂತ ಪಙÂ,
ಜಗವ ಮೋಹಿಸುವ ಸುಶಾಂತ ಜಿಹ್ವೆ
ನಿಗಮಕೆ ವೇದ್ಯವಾದಂಥ ಬಲು
ಬಗೆಯಿಂದ ನಡೆಸುವ ಪಂಥ-ಆಹ
ಪೊಗಳಲಾರದು ವೇದ ಖಗವಾಹನನ ಮಹಾ
ಅಗಣಿತ ಮಹಿಮೆ ಸಂಪಿಗೆಯ ನಾಸಿಕನನ್ನು ೧೭
ಪೊಳೆವೊ ವಿದ್ಯುತ ಕಪೋಲ, ನೀಲೋ-
ತ್ಪಲದಳ ನೇತ್ರ ವಿಶಾಲ, ದಿವ್ಯ-
ತಿಲಕವನಿಟ್ಟ ಸುಫಾಲ, ನೀಲಾ-
ಚಲಕಾಂತಿ ತನುರುಹ ಜಾಲ-ಆಹ
ಹೊಳೆವ ಕುಂಡಲ ಕರ್ಣದೊಲುಮೆಯ ಚೆಲುವಿಕೆ
ಇಳೆಯೊಳಗೆಣೆಗಾಣೆ ಇಂದಿರಾಲೋಲನ್ನ ೧೮
ಕರುಣ ಶಾಂತ ಶುಭ ನೋಟ, ಕಂಗ-
ಳೆರಡ ಚೆಲುವಿಕೆ ಮಾಟಕಿನ್ನು
ಅರವಿಂದ ಸರಿಯಿಲ್ಲ ದಿಟ ಅಲ್ಲಿ
ತರಣಿ ಚಂದ್ರಮರ ಕೂಟ-ಆಹ
ಶರಣ ಜನರ ಮನೋಹರುಷ ವಾರ್ಧಿಗೆ ಸುಧಾ
ಕರ ದುಷ್ಟಜನರ ತಿಮಿರಕ್ಕೆ ಭಾಸ್ಕರನ್ನ ೧೯
ಹೊಳೆವ ಹುಬ್ಬುದ್ವಯ ಸ್ಮರನ ಚಾಪ-
ತಲೆ ತಗ್ಗಿಸುವಂಥ ರಚನ ಫಾಲ-
ದಲ್ಲಿಟ್ಟು ತಿಲಕ ಸುಂದರನ ಲೋಕ-
ಕಳವಳಗೊಳಿಸುವ ಸುಗುಣ-ಆಹ
ನಲಿವ ವದನದಲ್ಲಿ ಅಳಿಗಳಂತೊಪ್ಪುವ
ಸುಳಿಗುರುಳಿನ ಮೇಲೆ ವಲಿವಾರಳೆಲೆಯನ್ನು ೨೦
ರೂಪ ಶೃಂಗಾರ ವಿಲಾಸ ಉಡು-
ಭೂಪ ನಾಚುವ ಮುಖಹಾಸ ವಿಶ್ವ
ರೂಪ ಧೃತ ಸ್ವಪ್ರಕಾಶ ಸರ್ವ
ವ್ಯಾಪಕಾಖಿಳ ಜಗದೀಶ-ಆಹ
ತಾಪಸರಿಗೆ ಕರುಣಾಪಯೋನಿಧಿ-ಅಣು
ರೂಪಿನೋಳ್ ಪರಮಾಣು ರೂಪನಾಗಿಪ್ಪನ್ನ೨೧
ಕೋಟಿಮಾರ್ತಾಂಡ ಸಂಕಾಶ ಕಿ
ರೀಟಕ್ಕೆ ಅಸಮ ಪ್ರಕಾಶ ಎಲ್ಲು
ಸಾಟಿಗಾಣೆನು ಲವಲೇಶ ಕಪಟ-
ನಾಟಕ ಶ್ರೀ ಲಕುಮೀಶ-ಆಹ
ನೇಟಾಗಿ ನಖ ಲಲಾಟ ಪರಿಯಂತ
ನೋಟದಿಂದಲೆ ಈಶ ಕೋಟಿ ಸಹಿತನಾಗಿ ೨೨
ಕಾಮಾದಿಗಳನೆಲ್ಲ ತರಿದು ಮುಕು-
ತೀ ಮಾರ್ಗವನ್ನೆ ನೀನರಿದು ಅತಿ-
ಪ್ರೇಮದಿ ಗುರುಗಳ ನೆನೆದು ಹೇಮ
ಭೂಮಿ ಕಾಮಿನಿಯರ ಜರಿದು-ಆಹ
ಸಾಮಜ ವರದ ಶ್ರೀ ವಿಜಯವಿಠ್ಠಲನಂಘ್ರಿ
ತಾಮರಸ ಯುಗ್ಮ ನೇಮದಿಂದಲಿ ನಿತ್ಯ ೨೩

೫೧೯
ನಂಬದಿರು ಈ ದೇಹ ನರಲೋಕವೆಂಬುದು ಸುಖವೆಂದು
ನಂಬದಿರು ಮಾಯಾ ಪ್ರಪಂಚವನು ಅನುಗಾಲಾ
ನಂಬು ನಮ್ಮಂಬುಜಾಂಬಕನ ಪಾದಾಂಬುಜವ
ನಂಬಿದರೆ ಮುಕ್ತಿಯಲಿ ಇಂಬುಂಟು ಮರುಳೆ ಪ
ತಂದೆ ತಾಯಿ ತಮ್ಮ ಸುಖಕೆ ಏಕಾಂತದಲಿ
ಒಂದು ದಿನಲಿರಲಾಗಲವರರೇತಸು
ಬಿಂದುವಿನಲಿ ಉತ್ಪತ್ಯವಾಗಿ ಬೆರೆದಾಗ ದು
ರ್ಗಂಧದೊಳು ಬಂದು ನಿಂದೂ
ಬಂಧನದೊಳಗೆ ಸಿಲುಕಿ ಒಂದೆಂಟು ತಿಂಗಳು
ಪೊಂದಿ ಯಾತನೆಬಟ್ಟು ಮಲಮೂತ್ರ ಹೇಸಿಕೆಯಿಂದ ಕುದಿದು
ಬೆಂದೂ ಗರ್ಭದ ಮಧ್ಯದಲಿ ನೊಂದು
ಬಿಂದು ಕೆಳಗೆ ಹೊರಳಿದಿರು ಮರುಳೆ ೧
ತಾಮಸವ ಕವಿದು ಕಾವಳಗೊಂಡ ಕತ್ತಲೆಯ
ಸೀಮೆಯೊಳಗೆ ಸಿಲ್ಕಿ ಬಾಲತ್ವತನದಲ್ಲಿ
ನೀ ಮಂದನಾಗಿ ಮರುಳಾಟಕ್ಕೆ ಮನವು ಉಬ್ಬಿ
ಧಾಮಕ್ಕೆ ಪೋಪುತಿರಲೂ ಆಮೇಲೆ
ಮುಂಜಿಯನು ಕಟ್ಟಿ ಬಂಧುಬಳಗ
ಪ್ರೇಮದಿಂದಲಿ ನೆರೆದು ಮೋಹದಲಿ ಒಬ್ಬ
ಕೋಮಲೆಯ ಜತೆಮಾಡಲು ನೋಡಿ ಹಿಗ್ಗುತ್ತಾ
ಛೀಮಾರಿಯಾಗಿ ತಿರುಗಲಿ ಬೇಡ ಮರುಳೆ ೨
ಮದ ಮತ್ಸರ ಲೋಭ ಮೋಹ ಕಾಮಾದಿಯಲಿ
ಮದನ ಬಲಿಗೆ ಬಿದ್ದು ಅಹಂಮತಿ ಪಂಕದಾ
ಹುದಲಿನೊಳಗೆ ಮುಣುಗಿ ಮುಂಗಾಣದಲೆ ತನು ರೂಹ
ಮೊದಲಾಗಿ ವಿಷವ ತುಂಬಿ ಇದರಲಿ
ಕಾಲವನು ಕಳೆದು ಮಕ್ಕಳ ಪಡೆದು
ತುದಿಮೊದಲು ಧರ್ಮವನು ಮರೆದು ಮಮತೆಯಲ್ಲಿ
ಸದರೆಂದಿಲ್ಲದಾ ದುಷ್ಕರ್ಮಗಳು ಮಾಡಿ
ಮುದದಿಂದ ನರಕದೊಳು ಬೀಳುವಾ ಹುರುಳೆ ೩
ಇದ್ದಾಗ ನೆಂಟರಿಷ್ಟರು ಬಂದು ಚೆನ್ನಾಗಿ
ಹೊದ್ದಿಕೊಂಡು ನಿನ್ನ ಕೊಂಡಾಡಿ ನೂರಾರು
ಸುದ್ದಿಯನು ಪೇಳಿ ನಡುಮನೆಯೊಳಗೆ ಇದ್ದು ನಿನ್ನಯ ಬದುಕು
ಉದ್ದಿನ ಕಾಳಿನಷ್ಟು ಉಳಿಯಲೀಸದೆ ನಿತ್ಯಾ
ಬದ್ಧವಿಲ್ಲದಲೆ ಕರಗಾತಿಂದು ಬಡತನಾ
ಸಿದ್ಧನಾಗಲು ತಿಂದವರು ಹರದೋಡಿ
ಎದ್ದು ಪೋಗಲು ಕೆಟ್ಟಬಾಯಿದೆರವಾ ಮರುಳೆ ೪
ಬಿಡು ಬಿಡು ಅಕಟ ಸಂಸಾರ ಸಾಗರದ
ಮಡುವಿನೊಳಗೆ ಬಿದ್ದು ಕಾಲ್ಗೆಡೆದು ಪೋಗದೆ
ಹಿಡಿ ಹಿಡಿ ಪರಮ ಭಾಗವತರ ಸಂಗತಿಯ
ಬಿಡದೆ ಪರಿಶುದ್ಧನಾಗಿ ಪಡೆದು
ಸರ್ವಜ್ಞತೀರ್ಥರ ಮತದ ಕರುಣವನು
ಪಡೆಯಲು ಅಧಿಕಾರನಾಗಿ ಸಿರಿದೇವಿಯ
ವೊಡಿಯ ವಿಜಯವಿಠ್ಠಲನಂಘ್ರಿ ನೆರೆ ನಂಬಿ
ತಡಿಯದಲೆ ಸದ್ಗತಿಗೆ ಸೇರುವದು ಮರುಳೆ೫

೪೬೨
ನಂಬಿ ನೆಚ್ಚದಿರು ನರಲೋಕ ಸುಖವೆಂಬ, ಅಂಬಲಿ ಪರಮಾನ್ನ ಪ
ಹಂಬಲಿಸುವುದು ಹರಿಲೋಕಾನಂದವೆಂಬ ಪೀಯೂಷಪಾನ ಅ.ಪ
ದುರುಳಜನರ ಸಂಗವೆಂಬುದು ಎಂದಿಗೂ
ನೊಣ ಬೆರಸಿದ ಊಟ
ಪರಮಭಾಗವತರ ಪದಸಂಗವೆಂಬುದು ಮಸ್ತಕದ ಮಕುಟ
ಮರೆ ಮೋಸಗೊಳಿಸುವ ಸತಿಸುತರೆಂಬೋದೆ
ಕೇವಲ ಯಮಕಾಟ
ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ ೧
ಬಿದ್ದ ಕಾಳಿಗೆ ಕಾಳು ಕೂಡಿ ಹಾಕುವುದೆಲ್ಲ,
ಹಾರಿ ಹೋಗುವ ಹೊಟ್ಟು
ಇದ್ದಾಗ ದಾನ ಧರ್ಮಂಗಳ ಮಾಡೋಡು ಕೈವಲ್ಯಕೆ ಮೆಟ್ಟು
ಹೊದ್ದಿರುವರ ಕಂಡಾಸೆಯಪಟ್ಟರೆ ಹೋಗುವಿ ನೀ ಕೆಟ್ಟು
ಬುದ್ಧಿಹೀನರಿಗೆ ಪೇಳದಿರೆಲೊ ತತ್ವಸಾರ ಸುಂದರ ಗುಟ್ಟು ೨
ಅಲ್ಪಾವಕಾಶವು ಈ ಶರೀರವು ಗಾಳಿಗೊಡ್ಡಿದ ದೀಪ
ಅಲ್ಪ ಸಂತೋಷನಾಗು ಅದು ನಿನಗೆ
ನೋಡು ಹಾಲುಸಕ್ಕರೆ ತುಪ್ಪ
ಬಲ್ಪಂಥ ಮಾಡದಿರು ಜನ್ಮಜನ್ಮದಲಿ ಬಿಡದೆಲೊ ಸಂತಾಪ
ಸ್ವಲ್ಪಕಾಲಾದರೂ ಮಧ್ವಮತವೊಂದು ಭವವೇ ನಿರ್ಲೇಪ೩
ಹರಿಗರ್ಪಿಸದ ಕರ್ಮ ಆವುದಾದರು ಸೂಳೆಗಿಕ್ಕ್ಕಿದ ವಿತ್ತ
ಹರಿಗೆ ವಿಶ್ವಾಸದಿ ಅಣುಮಾತ್ರ ಅರ್ಪಿಸೆ ಅವನೆ ನಿರ್ಮಲ ಚಿತ್ತ
ನಿರುತಗ್ರಾಸಕೆ ಚಿಂತೆಮಾಡಲು ಒದಗದು ಪುಣ್ಯವು ನಿನಗೆತ್ತ
ಅರೆಮನವಿಲ್ಲದೆ ದೃಢಮನದಿಪ್ಪುದೆ ಸಂಪಾದನೆ ಭತ್ಯ೪
ಭಾವವಿರಕ್ತಿಯ ವಹಿಸದಿದ್ದರೆ ನಿನಗಾಗುವುದು ಖೇದ
ಸಾವಿರಕೊಂದೆ ಮಾತು ಹರಿದಾಸನೆನಿಸೋದು
ಪರಿಪರಿಯಾಸ್ವಾದ
ದೇವಕಿಸುತ ನಮ್ಮ ವಿಜಯವಿಠ್ಠಲನಂಘ್ರಿ ತೀರುಥ ಪ್ರಾಸಾದ
ಸೇವಿಸದವನೆ ನಿತ್ಯ ನರಕವಾಸ ಎನ್ನತಲಿದೆ ವೇದ ೫

೩೯೮
ನಂಬಿದೆ ನಿನ್ನ ನೀರಜಪಾದ |
ಇಂಬಿನಲ್ಲಿಟ್ಟು ಸಲಹೊ ಪ್ರಸಾದ ಪ
ಅಂಬರೀಷನ ಶಾಪ ಹಿಂಗಿಸಿ ಕಳೆದ ದ- |
ಯಾಂಬುಧಿ ನೀನೆಂದು ಹಂಬಲಿಸಿದೆ ಹರಿಯೆ ಅ.ಪ
ಉಗ್ರನ್ನ ಖಳವಂಚಿಸಿ ತನ್ನ ಕ- |
ರಾಗ್ರವಾ ಶಿರದಲ್ಲಿ ಇಡಬರಲು ||
ಅಗ್ರೇಶ ಕಾಯೆಂದು ಅವನೀಗ ಮೊರೆಯಿಡೆ |
ಶೀಘ್ರದಿಂದಲಿ ಬಂದು ಕಾಯ್ದು ಕರುಣಿಯೆಂದು೧
ಕಾಲದೂತರು ಅಜಾಮಿಳನೆಳೆಯಲು |
ನಾಲಿಗೆಯಿಂದ ನಾರಗನೆನ್ನಲು ||
ಆಲಸ್ಯ ಮಾಡದೆ ನಿನ್ನ ದೂತರನಟ್ಟಿ |
ಓಲಗ ವೈಕುಂಠವಿತ್ತ ಭಾಂದವನೆಂದು ೨
ಭೂತಳದೊಳು ನಿನ್ನನು ಪೋಲುವ |
ದಾತರ ನಾನೆಲ್ಲಿ ಕಾಣೆ ಶ್ವೇತವಾಹನ ||
ಮಸ್ತಕವನು ಉಳುಹಿದ ದಾತ |
ವಿಜಯವಿಠ್ಠಲನಹುದೆಂದು ದೃಢವಾಗಿ ೩

೪೦೧
ನಂಬಿದೆ ನಿನ್ನ ಪಾದವ ಕಾಣಬೇಕೆಂದು
ಹಂಬಲಿಸಿದೆ ಮಾಧವ
ಬೆಂಬಲವಾಗು ಪೀತಾಂಬರಧರ ಕುಟುಂಬಿ ಪಾಲಾ
ಕಮಲಾಂಬಕ ರಂಗಾ ಪ
ಚಂದಿರಹಾಸ ಸರ್ವೇಶ ಚಂಡ ಪ್ರಕಾಶಾ
ಇಂದಿರಾ ಮನೋವಿಲಾಸ
ಮಂದಿರ ವೈಕುಂಠವಾಸಾ ಮನಜವೇಷ
ವೃಂದಾರಕರ ನಿಜಕೋಶಾ
ಮಂದರಧರ ವಸುಂಧರಪತಿ ಪುರಂದರ
ವಂದಿತ ಸುಂದರಾಂಗ ಕಂಬು
ಕಂಧರ ಎನ್ನಯ ಒಂದರಗಳಿಗೆ ಕಂದನ
ಇಂದೀಗ ತೊಂದರೆಕಿಡದಿರು ೧
ತಂದಿತಾಯಿಗಳವರಾರೊ ತಾವಳಿದು
ತಂದ ಸತಿ ನಂದನರೊ ಬಂಧುಬಳಗ ಮತ್ತಾರೊ ಬರಿದೆ ಊರು
ಪೊಂದದೆನಲೊ ಇಳಿಜಾರು ಎಂದೆಂದಿಗಿದರ
ಗಂಧದೊಳಗೆ ನಾ ಬಂದು ಬಳಲಿ ಸಂ
ಬಂಧದೊಳುರಳಿದೆ ಮುಂದಾದರು ದಾರಿ ಒಂದಾದರು ಕಾಣೆ
ತಂದೆ ತಾಯಿ ಸರ್ವಂದವು ನೀನೆ ೨
ನೊಂದೆನೊ ನಾನಾ ಜೀವಿಲಿ ನೋಡು ನೋವಿನಲಿ
ಕುಂದಿದೆ ಎಲ್ಲ ಕಾವಿಲಿ
ಹಿಂದಿನ ಹುಟ್ಟು ಸಾವಿಲಿ ಗಹನ ಠಾವಿಲಿ
ಬೆಂದೆನೋ ಬಲು ಕೋವಿಲಿ
ಅಂದದರ್ಚನೆಯಿಂದ ಮಾಡಿದ ಪಾಪಗೊಂದಿಗೆಳೆದು ಎನ್ನ
ಕೊಂದು ಕೊಲ್ಲುತಲಿವೆ ಇಂದು ಚರಣರವಿಂದವ ತೋರಿಸುವ
ಬಂಧು ವಿಜಯವಿಠ್ಠಲೆಂದಹುದೆಂದು ೩

೩೯೯
ನಂಬಿದೆನೊ ನಂಬಿದೆನೊ ಅಂಬುಜಾಕ್ಷ
ತೊಂಬಲಿಗೆ ಹಂಬಲಿಸಿ ಹಾರೈಸಿದೆ ನಿನ್ನ ಪ
ಮೊದಲುಂಡ ಪಾಪದಲಿ ಕಳೆಗುಂದಿ ಕಳೆಗುಂದಿ
ಮುದದಿಂದ ನಿತ್ರಾಣನಾದೆನಯ್ಯಾ
ಪದುಮನಾಭನೆ ನಿನ್ನಭಯದೊಂಬಲನಿತ್ತು
ವದನ ಚೇತನನಾಗುವಂತೆ ದಯಮಾಡೊ ೧
ವಿಷವ ಸೇವಿಸಿದ ತರುಣನಂತೆ
ಮೆಲವು ಭಾವಿಸದೆ ಬೀಳುತೀ ನೀ ನೆಲೆಗಾಣದೆ
ಬಿಸಿಜಾಕ್ಷ ನೀನೆ ಕೃಪಾಳು ಎಂದೆಂದಿಗೆ
ರಸ ಸುರಿವ ಸುರಿವ ಬಾಯದೊಂಬಲಾನಿತ್ತು ಸಲಹೊ೨
ಆವದಾದರುವಲ್ಲೆ ಅನಿಮಿತ್ತ ಬಂಧು ಕೇಳು
ಜೀವವೇ ನಿನ್ನ ಪಾದದಾಧೀನವೋ
ಶ್ರೀವಧುರಮಣ ನಮ್ಮ ವಿಜಯವಿಠ್ಠಲ ನೀನೆ ದೇವ ಯನಗ
ಹುದು ತೊಂಬಲನಿತ್ತು ಪೊರಿಯೊ ೩

೪೦೦
ನಂಬಿದೆನೊ ನಿನ್ನ ಪಾದಾರವಿಂದಾ
ಇಂಬು ಈವದು ಎನಗೆ ವೈಕುಂಠಪುರದೊಳಗೆ ಪ
ಮಲಭಾಂಡದಲ್ಲಿ ಪೊಕ್ಕು ನೆಲೆಗಾಣದಲೆ ಸಿಕ್ಕು
ಸಲೆ ಸೊರಗಿ ತಿರುಗಿದೆನೊ ಬಳಲಿ ಮರುಗಿ
ಉಳಿವದಕುಪಾಯವನು ಒಂದರೆ ಕಾಣೆನೊ
ಎಲೊ ಬಲುದೈವ ನೀನೆ ದಯಾಳು ಎಂದೂ ೧
ಕಂಡಮಾರುತದಲ್ಲಿ ಕೈವಲ್ಯ ಕೊಡುವಲ್ಲಿ
ಮಂಡಲದೊಳು ಎಣಿಯಾರು ನಿನಗೆ
ಭಂಡಕಾಯವ ತೆತ್ತು ಬರಲಾರೆ ನಿನ್ನ ತೊತ್ತು
ತೋಂಡರೊಳು ಇಡು ನಿತ್ಯ ಎಳೆನೋಟದಲಿ ನೋಡು ೨
ಯದುಕುಲಲಲಾಮ ಸುರಸಾರ್ವಭೌಮ ಮಹಿಮ
ಮದನಪಿತ ಕಾಳಿಂಗಭಂಗ ರಂಗಾ
ಮಧುಸೂದನ ವಿಜಯವಿಠ್ಠಲ ಲಕುಮಿನಲ್ಲಾ
ಹೃದಯದೊಳು ಪೊಳೆವ ಬಲು ವಿಚಿತ್ರ ಚಲುವಾ ೩

ನಂಬಿದೆ ನಿನ್ನಯಪಾದ ಮುಖ್ಯ ಪ್ರಾಣ :

೨೨೬
ನಂಬಿದೇ ನಿನ್ನಯ ಪಾದ ಮುಖ್ಯ ಪ್ರಾಣಾ
ನಂಬಿದೇ ನಿನ್ನಯ ಪಾದಾ
ಡಂಬರ ತೊಲಗಿಸಿ
ಡಿಂಬದೊಳಗೆ ಹರಿಯ ಬಿಂಬ ಪೊಳೆವಂತೆ ಮಾಡೊ ಪ
ಇಪ್ಪತ್ತು ಒಂದು ಸಾವಿರ ಐದೊಂದು ನೂರು
ಅಪ್ರತಿಹಂಸಮಂತ್ರ ತಪ್ಪದೆ ದಿನದಿನ
ಒಪ್ಪದಿಂದಲಿ ಭಜಿಸಿ ತಪ್ಪಿಸೋ ಭವವಾ ಸ
ಮೀಪದ ಜೀವ ಕೊ ಅಪ್ಪನಂದದಿ ಪುಣ್ಯ
ವಪ್ಪಂತೆ ಕರುಣಿಸೊ
ಕಪ್ಪುವರ್ಣನ ಕೂಡಪ್ಪಿಸಿ ಪಾಲಿಸೋ ೧
ಹತ್ತೇಳು ಎರಡಾಯುತ ನಾಡಿಯೊಳು
ಸುತ್ತಿ ಸೂತ್ರವ ಮಾರುತಾ
ಉತ್ತರ ಪಾಲಿಸೋ ಉತ್ಕ್ರಮಣದಲ್ಲಿ ನೆತ್ತಿಯದ್ವಾರದಿಂದ
ಎತ್ತಮರಿಯಲೀ ಸದದೆ ತತ್ತುವರೊಳು ಜೀವೋ
ತ್ತಮನೆ ಸತ್ ಚಿತ್ ಎನಗೆ ಕೊಡು
ಉತ್ತರ ಧರಿಸೋ ೨
ಅಂತರಂಗದಿ ಉಸುರಾ ಹೊರಗೆ ಬಿಟ್ಟು
ಅಂತರಂಗಕ್ಕೆ ಸೇರುವ ಪಂಥದೊಳು ನೀನೆ
ಕಂತುಜನಕನಲ್ಲಿ ಮಂತ್ರಿ ಎನಿಸಿ ಸರ್ವ
ರಂತರ್ಯಾಮಿ ಆಗಿ
ನಿಂತು ನಾನಾಬಗೆ ತಂತು ನಡಿಸುವ
ಹೊಂತಕಾರಿ ಗುಣವಂತ ಬಲಾಢ್ಯ ೩
ಪಂಚಪರಣ ರೂಪನೆ ಸತ್ವ ಕಾಯಾ
ಪಂಚೇಂದ್ರಿಯಗಳ ಲೋಪನೆ
ಮುಂಚಿನ ಪರಮೇಷ್ಟಿ ಸಂಚಿತಾಗಾಮಿ ಬಿಡಿಸಿ
ಕೊಂಚ ಮಾಡೋ ಪ್ರಾರಬ್ಧ ವಂಚನೆ ನೆನೆದೊ
ಅಂಚಗಂಚಿಗೆ ಪರಪಂಚವೆ ಓಡಿಸಿ
ಪಂಚವಕ್ತ್ರ ಹರಿ ಮಂಚದ ಗುರುವೇ ೪
ಯೋಗಾಸನದೊಳಿಪ್ಪ ಯಂತ್ರೋದ್ಧಾರಾ
ಭಾಗವತರಪ್ಪಾ ಯೋಗಿಗಳೀಶಾ ವ್ಯಾಸಾ
ಯೋಗಿಗೊಲಿದ ವ್ಯಾಸಾ ಶ್ರೀ
ತುಂಗಭದ್ರಾ ವಾಸಾ ಬಾಗುವೆ ಕೊಡು ಲೇಸಾ
ಶ್ರೀಗುರು ವಿಜಯವಿಠ್ಠಲನ ಪಾದಕೆಬಾಗುವ ಭವದೂರ ಜಾಗರ ಮೂರುತಿ೫

೪೦೨
ನಂಬಿದ್ದೆನೆಲೊ ದಾತ ಅಂಬುಜಾಸನ ತಾತ
ಕುಂಭಿಣಿಯೊಳು ಪುಟ್ಟಿ ಜನನಿಯ ಮೊಲೆ ಪಾಲು
ಉಂಬೋದು ಬಿಡಿಸೊ ಜನನವ ಕೆಡಿಸೊ ಪ
ರಸಿಕೆ ಮುಹಕದಲಿ ನಿಶಿದಿನದಲಿ ಹೊರಳಿ
ಅಸುರುಸುರೆನುತಲಿ ಹಸಗೇಡಿಯಾದೆನೊ
ಅಸವು ನನ್ನದು ಎಂದು ಈ ಪರಿ ನೊಂದು ೧
ಹಲವು ಲಂಪಟದೊಳು ಹಲುಬಿ ಹಕ್ಕಲನಾದೆ
ಬಲೆಯೊಳಗಿದ್ದ ಎರಳೆಯಂತೆ ಮಿಡುಕುತ
ಮಲಮೂತ್ರದೊಳು ಬಳಲಿದೆ ಕೇಳೊ ೨
ಎಳ್ಳನಿತು ಸತ್ಕರ್ಮವುಳ್ಳದ್ದು ಚರಿಸಿದೆ
ಬಲಿಷ್ಠ ನಾನೆಂದು ಬಲು ದುರ್ಮತಿಯಿಂದ
ಎಲ್ಲರ ಜರಿದೆ ಧರ್ಮವ ಮರೆದೆ ೩
ಚಾರುವಾಕರಗೂಡಿ ಮೂರೆ ವಿಕಾರದಲ್ಲಿ
ನೀರೇರ ಒಡಗೂಡಿ ನೀತಿ ನಿರ್ಣಯ ತೊರೆದು
ತಾರಿ ಬರಿದೆ ಕೆಟ್ಟೆ ಮುಂದೇನು ಬಟ್ಟೆ ೪
ಎಲ್ಲಿರಲು ನಿನ್ನವನೋ
ಅಲ್ಲವೆಂದೆನಿಸದೆ ಬಲ್ಲಿದರೊಡಿಯ ವಿಜಯವಿಠ್ಠಲ ನಿ
ನ್ನಲ್ಲಿ ಸೇರಿಸಿ ಎನ್ನ ಪೊರೆಯೋ ಪ್ರಸನ್ನಾ ೫

(ಗ) ನದಿಸರೋವರಗಳು
೨೯೦
ನದನದಿಗಳನು ಸ್ಮರಿಸಿರೋ
ನದನದಿಗಳನು ಸ್ಮರಿಸಿ ಹೃದಯ ನಿರ್ಮಳರಾಗಿ
ಮುದದಿಂದ ನಿಮ್ಮ ಮನದಧಮತನ ಬಿಟ್ಟ ಸಂ
ಪದವಿಗೆ ಸೋಪಾನದಂತಾಗುವದು ಶ್ರೀ
ಪದುಮನಾಭನು ವೊಲಿವನು ಪ
ಸುರ ತರಂಗಿಣಿ ಸಿಂಧು ಕುಶವರ್ತಳೆ ಸೀತ
ಮರುಧೃತಿ ಹೇಮವತಿ ನೇಮಿ ನೇತ್ರವತಿ
ತರಣಿಸುತೆ ನರ್ಮದಾ ಗಾಯತ್ರಿ ಗೋಮತಿ
ಗರುಡ ಸಾಧರ್ಮಾ
ಸರಸ್ವತಿ ಮಣಿಮುಕ್ತ ಮುಕ್ತನದಿಯು ಪ್ರಣತ
ವರದಕಾಗಿಣಿ ಕೃಷ್ಣವೇಣಿ ವೇದವತಿ
ಹರಿಧೃತಿ ಇಂದ್ರಾಣಿ ಪುನಃ ಪುನಃ ವಾಣಿವಂ
ಜರಫಣಿ ಭೀಮರಥಿನೀ ೧
ವಾರುಣಿ ವರುಣ ಅಸಿಭುವನಾಶಿ ಕುಮಾರ
ಧಾರಿ ತುಂಗಾ ಭದ್ರಿಗಣಪತಿ ಶತಭಾಗ
ನಾರದಿ ಉಭಯಪಿನಾಕಿ ಚಿತ್ರವತೀ
ಮೂರು ಲೋಕೋದ್ಭವ ಭವಾನೀ
ಚಾರು ಗಂಡಿಕೆ ಸರಯು ಶ್ರೋಣಿ ಭದ್ರನೀಲ
ಕ್ಷೀರನದಿ ಪಾಪಘ್ನ ಮಹಾನದಿ ಅಘನಾಶಿ
ವಾರಿಜಾಪ್ತಾವತಿ ಸುರ್ವಣ ಮುಖರೀ
ವಿಸ್ತಾರ ಹಾಟಕ ಅತ್ರಿಣೀ ೨
ಮಲಾಪಹಾರಿ ತ್ರಿಪತಿ ಪೂರ್ಣ ಕುಮದ್ವತಿ
ಸುಲಭ ಮಂದಾಕಿನಿ ಕೌಮೋದಕಿ ಶಾಂತಿ
ಫಲ್ಗುಣೀ ವೇಗವತಿ ಅರ್ಜುನ ಮಹೇಶ್ವರಿ
ಕಪಿಲ ಚಂದ್ರಭಾಗ ಅರುಣೀ
ಪೊಳೆವ ಕಾಳಾವತಿ ತ್ರಿಪಥಿ ಗೌರಿ ಕುಂತಿ
ಅಳಕನಂದನ ಅಮಲವತಿ ಭೀಮಸಂಭೆ
ಸಿ ತಾಂಬ್ರ ಪರ್ಣಿಯು ಜಯ ಮಂ
ಗಳೇ ಸತಿ ಸತ್ಯವತಿ ವೈಷ್ಣವೀ ೩
ಕನಿಕ ಶುಕ್ಲಾವತೀ ಬಾಹುನದಿಗೋವಿಂದ
………… ಸುತಿ ಕಲ್ಯಾಣ ಕೌಸಿಕಾ
ಮಿನಗುವ ಭೋಗವತಿ ಕಾಶ್ಯಪಿಂಕಾಳಿಂದಿ
ಅನುಸಿಂಧು ಐರಾವತಿ
ಋಣ ವಿಮೋಚನ ಮಯೂರ ಸಂಭವೆ
ಘನಸ್ವಾಮಿ ಚಂದಿರಾ ನಿತ್ಯ ಪುಷ್ಕರಣಿ ಪಯೋ
ಶ್ವಿನಿ ಮಹಾಪಗ ಭದ್ರ ಭೈರವಿ ವಿಚಿತ್ರ ನದಿಗಳನು ೪
ಅರುಣೋದಯಲೆದ್ದು ಧರೆಯೊಳುಗಳ್ಳ ಬಲು
ಸರಿತಗಳ ನೆನೆದು ಪುಳಕೋತ್ಸವದಲಿ
ಪರಮ ಧನ್ಯರಾಗಿ ಪಾಪಗಳ ಪೋಗಾಡಿ
ನಿರುತ ಮಾರುತ ಮತದಲೀ
ಚರಿಸಿ ನಿಜಭಕುತಿಯಲಿ ಹಗಲು ಇರಳು ಇನಿತು
ಸಿರಿಯರಸ ವಿಜಯವಿಠ್ಠಲನ ಚರಣಾಂಬುಜವ
ಸರಸದಿಂದಲಿ ಧ್ಯಾನಗೈದು ಈ ನದಿಗಳಲಿ
ಕರಣದಲಿ ತಿಳಿದು ನಿತ್ಯಾ೫

೩೦೮
ನಮೋ ನಮೋ ಜಯ ತುಂಗಭದ್ರೆ
ನಮಿತರನು ಪಾಲಿಸುವ ಸದ್ಗುಣ ಸಮುದ್ರೆ ಪ
ವೈರಾಚ ನಗರಿಯಲಿ ವಿಧಾರುಣಿಯ ರೋಚಕನು
ಮೀರಿ ದೇವಾದಿಗಳಿಗಂಜದಿರಲು
ಘೋರ ರೂಪವ ತಾಳಿ ಅವನ ಕೊಲ್ಲಲು ಹರಿಯ
ಮೋರೆ ಕರಿಬೆವರಿಡಲು ಅತಿ ಹರುಷದಿಂದ ೧
ರೂಢಿಯೊಳಗೆಲ್ಲ ಸಮಸ್ತ ನದಿ ಉದಕಗಳು
ನೋಡಿದರು ರುಚಿಕರವಿಲ್ಲವೆಂದೂ
ದಾಡಿಯಲಿ ಧರಿಸಿದನು ಸುರರು ಕೊಂಡಾಡುತಿರೆ
ಈಡ್ಯಾರು ನಿನ್ನ ಮಹಿಮೆಗೆ ವರಹತನಯೇ ೨
ಸಲಿಲವೇ ಹರಿಯಾದ ಶಿವ ನಿನಗೆ ಶಿಲೆಯಾದ
ಬಲು ಮುನಿಗಳು ಮಳಲವಳಗಾದರೂ
ಜಲಜ ಸಂಭವನು ತೃಣನಾದ ಬಳಿಕ ವಿಷ್ಣು
ಕೆಲವುಕಾಲ ನಿನ್ನೊಳಗೆ ನಿಲಿಸಿದನು ತುಂಗೆ ಗಂಗೆ೩
ವೇದಾದ್ರಿಯಲಿ ಜನಿಸಿ ನರಸಿಂಹ ಕ್ಷೇತ್ರದಲಿ
ಭೇದವಿಲ್ಲದಲೆ ಸಂಗಮವು ಎನಿಸೀ
ಆದರದಿಂದ ಹರಹರ ಪೊಂಪ ಬಲಗೊಂಡು
ಮೊದಲು ಶ್ರೀ ಕೃಷ್ಣ ಬೆರದೆ ಕೂಡಲಿಯೊಳು ೪
ತುಂಗೆ ತುಂಗೆ ಎಂದು ಸ್ಮರಿಸುವಾ ಜನರಿಗು
ತ್ತಂಗ ಗತಿಯಾಗುವುದು ಪಾಪವಳಿದು
ಮಂಗಳ ಮೂರುತಿ ವಿಜಯವಿಠ್ಠಲನ ಚರಣಂಗಳಲಿ ಇದ್ದವರ ಸತತ ಪೊರೆವುದು ದೇವಿ ೫

೩೪
ನಮೋ ನಮೋ ನಾರಾಯಣ ನಮೋ ಶ್ರುತಿ ನಾರಾಯಣ
ನಮೋ ಬಾದರಾಯಣ ನರನ ಪ್ರಾಣ ಪ
ಶಿವನ ಮೋದದಲಿ ಪಡೆದೆ ಶಿವರೂಪದಲಿ ನಿಂದೆ
ಶಿವನೊಳಗೆ ಏರಿದೆ ಶಿವನಿಗೊಲಿದೆ
ಶಿವಗೆ ನೀ ಮಗನಾದೆ ಶಿವ ತಾತನೆನೆಸಿದೆ
ಶಿವನ ಮಗನಾ ಪಡೆದೆ ಶಿವನ ಕಾಯ್ದೆ೧
ಶಿವಗೆ ಸಹಾಯಕನಾದೆ ಶಿವನ ಕಂಗಡಿಸಿದೆ
ಶಿವನ ಧನುವನು ಮುರಿದೆ ಶಿವನೊಲಿಸಿದೆ
ಶಿವನ ಜಡ ಮಾಡಿದೆ
ಶಿವನ ಒಡನೆ ಬಂದೆ ಶಿವಮುನಿಗೆ ಉಣಿಸಿದೇ ಕೇಶವನೆನಿಸಿದೇ ೨
ಶಿವನ ಜಡೆಯೊಳಗಿದ್ದ ಶಿವಗಂಗೆಯ ಪೆತ್ತೆ
ಶಿವನ ಕೂಡಲಿ ಕಾದಿದವನ ಭಾವ
ಶಿವ ಭಕ್ತನ್ನ ನಿನ್ನವನಿಂದ ಕೊಲ್ಲಿಸಿದೆ
ಶಿವನ ಶೈಲವನೆತ್ತಿದವನ ವೈರಿ೩
ಶಿವ ನುಂಗಿದದ ನುಂಗಿದವನ ಒಡನಾಡುವ
ಶಿವ ಪರಾಶಿವ ನಿನ್ನ ಶಿವ ಬಲ್ಲನೇ
ಶಿವ ಕೊಳದವರ ಉದ್ಭವ ಮಾಡುವೆನೆಂದು
ಯವೆ ಇಡುವನಿತರೊಳಗೆ ಧವಳ ಹಾಸಾ೪
ಶಿವನ ಮೇಲಿದ್ದ ಸಹಭವೆ ರಮಣ ಸರ್ವದಾ
ಶಿವನೊಳಗಿಳಿದ ಶಿಷ್ಯನಿವ ಹರಾತೀ
ಶಿವ ಭೂಷಣ ತಲ್ಪ ಶಿವ ಸಮಾನಿಕ ರೂಢ
ಶಿವನ ಮನೆ ತೊಲಗಿಸುವ ಶಿವ ಬಾಂಧವಾ ೫
ಶಿವನ ಧೊರಿಯೆ ಜ್ಞಾನ ಶಿವ ಹಚ್ಚುವದೆ ಕೊಡು
ಶಿವಮಣಿ ಎನಿಸುವ ಸ್ತವ ಪ್ರಿಯನೇ
ಶಿವನು ವಾಹನ ವೈರ ಶಿರವ ತರಿಸಿದೆ ದೇವ
ಶಿವ ಪ್ರತಿಷ್ಠಿಸಿದೆ ಶಿವಗೆ ಕಾಣಿಸದಿಪ್ಪೆ೬
ಶಿವನ ಸೋಲಿಸಿದವನ ಜವಗೆಡಿಸಿದೆ
ಶಿವನು ಕುದರಿಯ ಹೆರವ
ಅವನು ಕಾಯಿದ ಗೋವ
ಶಿವನವತಾರ ಶಸ್ತ್ರವನು ಹಳಿದೆ ೭
ಶಿವನಧರ್ನಾಗಿ ದಾನವನು ಕೊಂದ ಮಹಿಮಾ
ಶಿವಋಷಿ ಪೇಳಿದ ಯುವತಿ ರಮಣಾ
ಶಿವನ ವೀರ್ಯವ ಧರಿಸಿದವನ ಮುಖದಲಿ ಉಂಬ
ಅವರ ಬೆಂಬಲವೇ ಯಾದವಕುಲೇಶಾ ೮
ಶಿವಗೆ ತ್ವಂಚ ಬಾಹುಯೆಂದು ಪೇಳಿ ಮೋಹ
ದಿವಿಚಾರಿಗಳ ತಮಸಿಗೆ ಹಾಕುವೆ
ಶಿವಮೂರುತಿ ನಮ್ಮ ವಿಜಯವಿಠ್ಠಲರೇಯ
ಶಿವನಾಳು ಮಾಡಿ ಆಳುವ ದೈವವೇ೯

೨೪೭
ನಮೋ ನಮೋ ಶ್ರೀ ಮಧ್ವರಾಯ ಸುರಮುನಿಗೇಯ
ನಮೋ ನಮೋ ಶ್ರೀ ಮಧ್ವಾಚಾರ್ಯ ಆರ್ಯಾ ಪ
ಭೃಗು ಕುಲೋತ್ತಮ ರಾಮ ಭೂಸುರರಿಗೆ ಸರ್ವ
ಜಗವೆಲ್ಲ ಧಾರಿಯನು ಯೆರದು ಸಂಹ್ಯಾ
ನಗದಲ್ಲಿ ನಿಂದು ಸಮುದ್ರನ್ನ ಹಿಂದಕ್ಕೆ ತೆಗಿಸಿ
ಈ ಭೂಮಿಯನು ಸಾಧಿಸಿದನು೧
ಅತಿ ದಯಾಪರ ಮೂರ್ತಿ ಅಲ್ಲಿಗಲ್ಲಿಗೆ ಕ್ಷೇತ್ರ
ಗತಿ ತಪ್ಪಿದಂತೆ ನಿರ್ಮಾಣ ಮಾಡಿ
ಸತಿಪತಿಯ ಉದ್ಧರಿಸಿ ಬರುತ ಕಂಡನು ಉ
ನ್ನತವಾದ ಪರ್ವತವು ಯೋಜನವಿರೆ ೨
ಬೆರಗಾಗಿ ಪರಶುರಾಮನು ಬಂದು ಈ
ಗಿರಿಯಲ್ಲಿ ನಿಂದು ಅಗ್ರಭಾಗವೈದೆ
ತರಹರಿಸಲಾರದೇ ಭೂಮಿಗಿಳಿಯಿತು ಅದ್ರಿ
ನಿರೀಕ್ಷಿಸಿ ಸುಜನರು ಇದ್ದನಿತು೩
ಸಿರಿರೂಪ ದುರ್ಗಾನಾಮಕಳಾದ ದೇವಿಯನು
ಕರದು ಈ ಸ್ಥಾನದಲಿ ಇರ ಹೇಳಿದಾ
ಅರವು ಮಾಡದೆ ಮುಂದೆ ಕಲಿಯುಗದಲಿ ನೆರದು
ದುರುಳರಾತಿಯರ ಸಂಹರಿಸುಯೆಂದು ೪
ಅನಿತರೊಳಾಕಾಶದಲಿ ಜಯ ಜಯವೆಂದು
ಅನಿಮಿಷರು ಕೊಂಡಾಡಿ ನಗುತ ದಿವ್ಯ
ಮಣಿಮಯ ವಿಮಾನದಿಂದಾ ಗಿರಿಗೆ ವೇಗದಿ ಸು
ಮ್ಮನರಾಗಿ ಬಂದು ತುತಿಸಿದರು ಹರಿಯಾ ೫
ಅಂದಿನಾರಭ್ಯವಾಗಿ ಇದೇ ವಿಮಾನಗಿರಿ
ಯೆಂದು ಕರೆಸಿತು ಶ್ರುತಿ ಯುಕ್ತಿಯಲ್ಲಿ
ಎಂದೆಂದಿಗೆ ಇದನೆ ನೋಡಿದವರಿಗೆ ದೋಷ
ಗಂಧವಾದರು ಇಲ್ಲಾ ಇಲ್ಲ ಇಲ್ಲಾ೬
ಈ ಮಹಿಮೆಯನು ಕೇಳಿ ಧರ್ಮ ತಪವನು ಮಾಡಿ
ಭೂಮಿಯೊಳಗೆ ಎನ್ನ ವಂಶಸ್ಥನು
ಸೋಮಾರ್ಕ ಪ್ರಭಯಂತೆ ಕೀರ್ತಿಯನು ಪಸರಿಸಿ
ಪಾಮರರ ಉದ್ಧರಿಸಬೇಕು ಯೆಂದು೭
ಈ ಪರಿ ಶ್ರೀಹರಿಯ ಧ್ಯಾನವನು ಮಾಡಲು
ಶ್ರೀಪತಿ ವರವಿತ್ತ ಮುಂದೆ ಮಹ
ಪಾಪಿ ಪುಟ್ಟುವನು ಅವನಗೋಸುಗ ವಾಯು
ತಾ ಪರಮ ಪ್ರೀತಿಯಲಿ ಜನಿಸುವನು ೮
ಅಂದ ಮಾತಿಗೆ ಯಮನು ಬಹುಕಾಲದಲಿದ್ದ
ಛಂದದಿಂದದಿ ಪೋದ ತನ್ನ ಪುರಕೆ
ಇಂದಿರಾಪತಿ ನೇಮಿಸಿದ ಪರಿಯಂತೆ ಆ
ನಂದತೀರ್ಥರಾಗಿ ಜನಿಸಿದರು ೯
ಏನು ಪೇಳಲಿ ಪುಣ್ಯ ಚರಿತಯನು ಚನ್ನಾಗಿ
ಇಂತು ಹೇಳಿದ ಪ್ರಕಾರದಲಿ ಹೇಳಿ ಕೇಳೆ
ಜ್ಞಾನದಲಿ ಅಧಿಕಾರಾಗಿ ಇಷ್ಟಾನಿಷ್ಟ ಪುಣ್ಯ
ಮಾನದಲಿ ಕೊಂಡಾಡಿ ಸುಖಿಪರಲ್ಲಿ೧೦
ಹುರಳಿ ಗುಗ್ಗರಿ ಮೆದ್ದ ಅದ್ಧುತವ ಕೇಳಿದರೆ
ಉರಳಿ ಹೋಗುವದು ಜನ್ಮಾಂತರದ ದುಷ್ಕರ್ಮ
ಮರಳಿ ಬಲಿ ಬಾಲವನು ಪಿಡಿದದು ನೆನಸಿದರೆ
ನೆರಳಾಗುವರು ಸುರರು ಮುಕ್ತಿಯಿನಿತ್ತು ೧೧
ಧರಣಿಧರದಿಂದ ಧುಮುಕಿದ ಪಾದಯುಗ ನೋಡೆ
ಎರಡೊಂದು ಏಳು ಕುಲತೃಪ್ತರಹರೊ
ಅರೆ ಮ್ಯಾಲೆ ಸಾಲವನು ತಿದ್ದಿದಾ ವಾರ್ತಿ ಕೇಳಿ
ಎರಡೊಂದು ಋಣದಿಂದ ಕಡೆಗಾಗುವ ೧೨
ತಲೆಕೆಳಕಾಗಿ ಬೆಳೆದಾ ವೃಕ್ಷವನು ನೋಡಿ
ಬಲಿವನು ಸುರದ್ರುಮದಂತೆ ರಂಗ
ಛಲದಿಂದ ಸರ್ಪನ ವರಸಿದ ಸ್ಥಳ ಕಾಣೆ
ಬಲು ವಿಷಗಳು ಪೋಗಿ ನಿರ್ಮಲಹರೋ ೧೩
ಧೂಳಿ ಅಕ್ಷರ ಬರೆದ ಪ್ರದೇಶ ನೋಡಲು
ವಾಲಯಾ ಶುಭವಿದ್ಯ ಫಲಿಸುವದು
ಲೀಲೆಯಿಂದ ಗ್ರಂಥ ಅಭ್ಯಾಸಕೆ ಪೋಗಿ ಬರುವ
ಶೀಲತೆಯು ಕೇಳೆ ಮನೋ ವಾಯುವೇಗ ೧೪
ಬುತ್ತಿಯ ಉಂಡ ಸ್ಥಳವನ್ನು ಕೊಂಡಾಡಲು
ತೃಪ್ತನಾಗುವ ಮನುಜ ಮೃಷ್ಟಾನ್ನದಿ
ನಿತ್ಯ ಬಾಲಕ್ರೀಡೆ ಆಡಿದ್ದು ಪಾಡಲು
ಪುತ್ರೋತ್ಸವಗಳಿಂದ ಬಾಳುತಿಪ್ಪ೧೫
ಶರ ಚಾಪ ಗದ ಪದುಮ ಎರಡೊಂದು ತೀರ್ಥಗಳು
ಇರುತಿಪ್ಪ ವಾಸುದೇವನೆಂಬೊ ನಾಮಾ
ಸರೋವರದಲಿ ಮಿಂದು ಸ್ತೋತ್ರ ಮಾಡಿದ ನರಗೆ
ವಿರಜೆಯಲಿ ಸ್ನಾನ ಸಂದೇಹವಿಲ್ಲ ೧೬
ಜನಿಸಿ ಮೊದಲು ಮಹಾ ಬದರಿಗೆ ಪೋದಾರಭ್ಯ
ಎಣಿಕೆ ಇಲ್ಲದೆ ಚರಿತೆ ಅನುದಿನದಲಿ
ಗುಣಿಸಿ ಗುಣದಲಿ ತಿಳಿದು ಕೀರ್ತನೆಯನೆಸಗಿದಾ
ಮನುಜರಿಗೆ ಸತ್ಕೀರ್ತಿ ಬರುವುದಯ್ಯಾ ೧೭
ಮಧ್ವ ಮಧ್ವ ಎಂಬೋ ನಾಮವನು ನುಡಿದರೆ
ಬದ್ಧವಾಗಿದ್ದ ಭವಾಬ್ಧಿಯಿಂದ
ಎದ್ದು ಕಡಿಗೆ ಬಿದ್ದು ಸಂಚಿತಾಗಾಮಿಯಿಂದ
ಗೆದ್ದು ಚರ್ಮ ದೇಹದಿಂದ ನಲಿವ ೧೮
ಶ್ರೀ ಪೂರ್ಣಬೋಧ ಗುರುಶೇಖರ ಸುಗುಣಧಾಮ
ಆಪನ್ನ ಪರಿಪಾಲ ಅಮೃತಫಲದ
ವ್ಯಾಪುತ ನಾನಾ ಸ್ಥಾನ ಹನುಮ ಭೀಮ ಸರ್ವ
ರೂಪಾತ್ಮಕ ಪ್ರಾಣ ಭಾರತೀಶ೧೯
ಕೇಳಿ ಹರುಷಿತನಾಗಿ ಬಂದ ವೈಭವದಂತೆ
ಕಾಲ ಹಿಂಗಳಿಯದೇ ನಿತ್ಯದಲ್ಲಿ
ಲೀಲೆಯಲಿ ವಾಸವಾಗಿರಲೆಂದು ಅಂದು
ಪೇಳಲಾ ಮೌಳಿಯನು ತೂಗಿ ಸರ್ವರು ನಿಂತರು೨೦
ಪುಂಜಕಾಸ್ಥಳ ಬಂದು ತಪವು ಮಾಡಲು ಕ್ಷೇತ್ರ
ರಂಜನವಾಯಿತು ಇದೇ ನಾಮದಲ್ಲಿ
ಕುಂಜರ ವರದ ನಮ್ಮ ವಿಜಯವಿಠ್ಠಲನಂಘ್ರಿ
ಕಂಜವನು ಭಜಿತ ಗುರುರಾಜ ಜಯತು ೨೧


೪೬೩
ನರಕ ಎತ್ತಣದೋ ನರಕ ಎತ್ತಣದೋ
ನರ ಕಂಠೀರವನೆಂದು ಸ್ಮರಿಸುವ ಜನರಿಗೆ ಪ
ಸ್ನಾನ ಮಾಡುವುದೇಕೆ ಧ್ಯಾನಗೈಯುವುದೇಕೆ
ದಾನ ಧರ್ಮಂಗಳು ಮಾಡಲೇಕೆ
ಶ್ರೀ ನಾರಾಯಣನೆಂದು ಆವಾಗಲೂ ಜಿಹ್ವೆ
ತ್ರಾಣದಲಿ ಬಿಡದೆ ಎಣಿಸುವ ಜನರಿಗೆ೧
ತೀರ್ಥ ಮೀಯುವದೇಕೆ ಯಾತ್ರೆ ಚರಿಪದೇಕೆ
ಸ್ತೋತ್ರ ಮಂತ್ರಾದಿಗಳು ಪಠಿಸಲೇಕೆ
ಚಿತ್ರಮಹಿಮ ನೀಲಗಾತ್ರನ್ನ ಚರಿತೆ ಕಾ
ಲತ್ರಯ ಬಿಡದೆ ಉಚ್ಚರಿಸುವ ಜನರಿಗೆ ೨
ದೀಪ ಧೂಪಗಳೇಕೆ ನಾನಾ ಪರಿಯಲ್ಲಿ
ಸೋಪಸ್ಕರದ ಎಡೆ ಇಡಲೇತಕೆ
ಅಪಾರ ಮಹಿಮ ಅನಾಥರೊಡೆಯ ರಂಗ
ಶ್ರೀಪತಿ ಎಂದೀಗ ಸ್ಮರಿಸುವ ಜನರಿಗೆ ೩
ಭೂತದಯಗಳೇಕೆ ನೀತಿ ಎಂಬುದು ಏಕೆ
ಜಾತವೇದಸನಲ್ಲಿ ಕಳವಳವೇಕೆ
ಪೀತಾಂಬರಧರ ಪಿನಾಕಿ ಸಖನೆಂದು
ಮಾತು ಮಾತಿಗೆ ನೆನೆದು ಸುಖಿಸುವ ಜನರಿಗೆ ೪
ಏನೇನು ಕರ್ಮದಾಚರಣೆ ಮಾಡುವದೇಕೆ
ಭಾನು ಉದಯವಿಡಿದು ತೊಳಲಲೇಕೆ
ದೀನನಾಗಿ ದಾತಾ ವಿಜಯವಿಠ್ಠಲ ಹರಿಯ
ಮಾನಸದಲಿ ಧ್ಯಾನ ಮಾಡುವ ಜನರಿಗೆ ೫

(ಇ) ಶ್ರೀ ನರಸಿಂಹ
೧೪೪
ನರಸಿಂಹ ವಜ್ರಸಿಂಹ
ಸರಸಿಜನಾಭಾ ದಕ್ಷಿಣ ಶರಧಿನಿವಾಸಾ ಪ
ಹಿರಣ್ಯಕಶ್ಯಪು ತಾ ಪ್ರಹ್ಲಾದನಾ ಬಾಧಿಸಲು
ಪರಿಯ ದೈವವೆ ಮೊರೆಯೋಗಲೂ
ಹಿರಿದಾಗಿ ಕೇಳಿ ಹಿತದಲಿ ಬಂದು ಬೊಬ್ಬಿಡಲು
ಹಿರಣ್ಯಗರ್ಭಾದಿಗಳು ಹಿರಿದು ಚಿಂತಿಸಲೂ ೧
ಭುಗಿಲೆನೆ ಧಿಗಿಲೆನೆ ದಿಕ್ಕಿನೆಲಿ ಪ್ರತಿ ಶಬ್ದ ಪುಟ್ಟಿತಿರೆ
ಪಗಲಿರಳು ಒಂದೆಂದರು ಸಕಲರೂ
ಝಗಝಗಿಪ ಬೆಳಗು ಕವಿದದು ಮೂರು ಲೋಕಕ್ಕೆ
ಉಗುರು ಕೊನೆ ಪೊಗಳಿ ವೇದಗಳು ಬೆರಗಾಗಿ ೨
ರಕ್ಕಸ ನೋಡಲು ಬಗೆದು ಕರುಳು ಕೊರಳಿಗೆ ಮಾಲೆ
ಇಕ್ಕಿ ಭಕ್ತಗೆ ಮೆಚ್ಚಿ ವರವನಿತ್ತಾ
ಕಕ್ಕಸದ ದೈವ ಅನಂತ ಪದುಮನಾಭ
ಮುಕ್ತಿದಾಯಕ ವಿಜಯವಿಠ್ಠಲ ಮಹದಾ೩

೫೩೭
ನವನೀತ ತಸ್ಕರಾಯ ಜಯಮಂಗಳಂ
ಪವಮಾನ ವಂದಿತಾಯ ಶುಭಮಂಗಳಂ ಪ
ಪರಿಪೂರ್ಣಾಯ ವಿಶ್ವ ಪರಬ್ರಹ್ಮ ಅಚ್ಯುತಾಯ
ಶರನಿಧಿ ಮಂದಿರಾಯ ಜಯಮಂಗಳಂ
ಪರವಸ್ತ ಪರಪರಂಜ್ಯೋತಿ ಪ್ರಕಾಶಾಯ
ಸಿರಿದೇವಿ ಅರಸಾಯ ಶುಭಮಂಗಳಂ ೧
ಈಶಾ ಇಂದ್ರಾ ವಂದಿತಾಯ ವಿಶ್ವನಯನಾಯ ವಾರಾ
ಣಾಸಿ ಕ್ಷೇಮ ಸ್ಥಾಪಿತತಾಯ ಜಯಮಂಗಳಂ
ಆಶಾ ದೋಷಾ ಕ್ಲೇಷಾ ಪಾಶಾ ನಾಶಾ ನಾರಾ ಪೋಷಕಾಯ
ಶೇಷರಾಜ ಶಯನಾಯ ಶುಭಮಂಗಳಂ ೨
ವಾಣೀಪತಿ ಜನಕಾಯ ವೇಣು ನಾದಾ ವಿನೋದಾಯ
ಮಾಣಿಕ್ಯ ಹೀರಾ ಹಾರಾಯ ಜಯಮಂಗಳಂ
ಬಾಣ ಬಾಹು ಖಂಡನಾಯ ಬಲಿ ಸದನವಾಸಾಯ
ಚಾಣೂರ ಮರ್ಧನಾಯ ಶುಭಮಂಗಳಂ ೩

ವಿಷ್ಣು ಕರ್ಮಾಣಿ ಪಶ್ಯಾಮಿ ವಿಶ್ವ ಕುಟುಂಬಿ ಪಾಲಾಯ
ವಿಷ್ಣು ಸರ್ವೋತ್ತಮಾಯ ಜಯ ಮಂಗಳಂ
ಶಿಷ್ಯ ಜನ ವರದಾಯ ಸಿದ್ಧ ಪ್ರಸಿದ್ಧ ರೂಪಾಯ
ಮುಷ್ಟಿಕಾ ಸುರವಧಾಯ ಶುಭಮಂಗಳಂ ೪
ಬಂಧು ಬಂಧನಾಯಾ ಮಹಸಿಂಧು ನರ ರಕ್ಷಕಾಯ
ಸಿಂಧುರಾಜಾ ಹರಣಾಯ ಜಯಮಂಗಳಂ
ವೃಂದಾವನ ಸಂಚಾರಾಯ ವಿಜಯವಿಠ್ಠಲರೇಯಾಯ
ಬಿಂದು ಮಾಧವ ದೇವಾಯ ಶುಭಮಂಗಳಂ೫

೪೬೪
ನಾಡ ದೈವಗಳ ಪೂಜೆಯನು ಮಾಡಿದರೆ |
ಕೇಡಲ್ಲದೆ ಮತ್ತೆ ಕೈವಲ್ಯವುಂಟೇ ಪ
ಕೊಳಚಿ ನೀರನು ದಾಟಲರಿಯದ ಮನುಜಗೆ
ನಿಲವುದ್ದ ದ್ರವ್ಯ ಕೊಡುವೆ ಎನ್ನ ನಾ- |
ಜಲನಿಧಿಯ ಉತ್ತರಿಸಿಕೊಂಡು ಎಂದರೆ ಅವನು |
ಅಳಿಯದಂತೆ ದಡಕೆ ತರಬಲ್ಲನೇ ೧
ಕತ್ತಲೆಗಂಜುವನ ಕರೆತಂದು ಶೃಂಗರಿಸಿ |
ಉತ್ತಮದ ವಾಜಿವಾಹನವ ಮಾಡಿ ||
ಕತ್ತಿಯನು ಕರದಲ್ಲಿ ಕೊಟ್ಟು ರಿಪುಪರಿವಾರ- |
ದತ್ತ ಒಂದಡಿಯಿಟ್ಟು ಬರಬಲ್ಲ್ಲನೇ ೨
ತನಗೆ ಬಂದಾವಸ್ತು ಪರಿಹರಿಸಿಕೊಳ್ಳದೆ ಪರ- |
ಮನ ವಿಡಿದು ಭಜಿಸಿದರೆ ಏನಾಗದೊ ||
ಬಿನಗು ದೈವರಗಂಡ ಶ್ರೀ ವಿಜಯವಿಠ್ಠಲನ |
ವನಜಪದ ನೆನೆದರೆ ಮುಕುತಿಯುಂಟು ೫

೪೦೩
ನಾನು ನಿನ್ನ ಸೇವಕ ಏನಾದರೂ ಬರಲಿ ನಿನ್ನ ಬಿಡುವನೆ ರಂಗಾ ಪ
ಅಪತ್ತೆ ಬರಲಿ ಅತಿಶಯದ ಕ್ಲೇಶವೇ ಬರಲಿ
ಕೋಪ ಕಾಮಾದಿಗಳು ವೆಗ್ಗಳಿಸಲಿ
ಪಾಪದ ರಾಶಿಗಳು ಬಂದು ಬೆನ್ನಟ್ಟಲಿ
ಶ್ರೀಪತಿ ನಿನ ಪಾದವನು ಬಿಡಬಲ್ಲನೆ ೧
ಯಮನಪುರದ ಬಟ್ಟೆ ಅತಿ ಕಠಿಣವಾಗಲಿ
ಯಮನಾಳು ಬಲು ಭಯಂಕರರಾಗಲಿ
ಯಮನು ದಂಡಿಸಿ ತೀವ್ರ ನಿರಯದೊಳಗೆ ಇಡಲಿ
ಕಮಲನಾಭನೆ ನಿನ್ನ ಪಾದವನು ಬಿಡಬಲ್ಲನೆ೨
ಲೋಕದೊಳಗಿದ್ದ ಜನರಿಗೆ ಬಪ್ಪ ದೋಷಗಳು
ಏಕವಾಗಿ ಎನಗೆ ಬರಲಿ ಇಂದೆ
ನಾ ಕಳವಳಿಸಿದರು ನಿನ್ನಂಘ್ರಿಯಗಳಾಣೆ
ಶ್ರೀಕಾಂತ ವಿಜಯವಿಠ್ಠಲರಂಗ ಕೇಳೊ೩

೩೫
ನಾಮತ್ರಯ ನೆನೆಯಿರೊ
ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ಪ
ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ
ದುಶ್ಚರಿತವೆಂಬ ಮಹ ಕಾನನಕ್ಕೆ
ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ
ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು೧
ಅನಂತ ಅನಂತ ಎಂದು ಮನದಲ್ಲಿ ನೆನೆಯೆ
ನಾನಾ ಭವಬಂಧ ದುಷ್ಕರ್ಮದಿ
ಹೀನಾಯವನು ಕಳೆದು ಹಿತದಿಂದಲಿ ವೊಲಿದು
ಆನಂದ ಆನಂದವಾದ ಫಲ ಕೊಡುವುದು. ೨
ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ
ಗೋವಿಂದ ಕಡೆಹಾಕಿ ಸಾಕುವದು
ದೇವೇಶ ಶಿರಪತಿ ವಿಜಯವಿಠ್ಠಲೇಶನ
ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ೩

೫೩೦
ನಾರಾಯಣನು ನಾರಿಯಾದನು
ನಾರಾಯಣನು ನಾರಿಯಾಗಲು ಉಗರು ಕಾಂತಿ ಪೋಗಿ
ವಾರಿಜಭವ ಮಾರರಿಪು ಮುಖ್ಯರ
ಸಾರಸುಂದರವ ತಿರಸ್ಕರಿಸೆ ಶೃಂಗಾರಸ ನಿಧೆ ಪ
ಸುರರಸುರ ಕರೆಸಿ ವೈರೆವ
ಮರೆಸಿ ಸ್ನೇಹದಿಂದಿರಿಸಿ ಈ ಕುಲ
ವರಿಸಿ ನಿಮ್ಮೊಳು ಬೆರಸಿ ಸುಖವಂಕುರಿಸುವಂತೆ ಸಂಚರಿಸೆಂದು
ಸರಸದಿಂದಲಾದರಿಸೆ ಸುರರ
ಧರಿಸಿ ಬಿಡದುದ್ಧರಿಸುವೆ ನಿದ್ರಿ
ತರಿಸಿ ದೈತ್ಯರ ವರಿಸೆಂದು
ಸರಸಿಜಾಂಬಕ ಹರಿ ಸಿರಿ ೧
ದಿತಿಜಾದಿತಿ ಜ್ಯಾತ ತತಿಗಳನು ಸ
ಮ್ಮತ ಬಡಿಸಿ ಅಮೃತ ಬಪ್ಪದಕ್ಕೆ
ಹಿತವ ಪೇಳುವೆನೆಂದತಿಶಯದಿಂದ
ಚತುರಾತುಮ ಮಾರುತ ಪಿತಾ
ಕ್ಷಿತಿಯೊಳು ನೂರು ಶತ ಯೋಜನ ಪರ್ವತ ಮಂದಾರುಂಟು
ಜತೆಯಲಿ ಏಕಮತರಾಗಿ ಪೊಲ್
ಜಾತವ ಕಿತ್ತೆತ್ತಿಸಿತಾಬ್ಧಿಯೊಳು ಮಥಿüಸೆಂದು ೨
ಹರಿ ನಿರೂಪವ ಧರಿಸಿ ಎಲ್ಲರು
ಗಿರಿಯ ಬಳಿಗೆ ಹರಿದರಾಗಲೆ
ಕಿರಿ ಬೆರಳ ಅಬ್ಬರದಾಟವು ಬೊಬ್ಬಿರುವ ಧ್ವನಿ ಭೀಕರ
ಸಾರೀಗಧರ ಅಂಬರೆಂಟು ಕರಿ ಎರಡೈದು
ಶರಧಿ ಮಿಕ್ಕ ಗೋತುರ ಸಪ್ತದ್ವೀಪ
ತರು ಮೃಗಾದಿ ಜೀವರು ತಲ್ಲಣಿಸೆ
ಗಿರಿ ವೆಗ್ಗಳಿಪ ಭರಕಂದು೩
ಸುತ್ತ ಈ ಪರಿಯಾಗುತ್ತಿರೆ ಇತ್ತ ಪ
ರ್ವತವಲ್ಲಾಡಿಸಿ ಕಿತ್ತಿ ತೆಗೆದೆತ್ತಿ
ಹೊತ್ತರಿತ್ತಂಡದಿ ಚಿತ್ತ ಮಾರ್ಗವನು ಹತ್ತಿ ಬರಲು ದೇವತೆಗಳು
ಹೊತ್ತರದ್ರಿಮೂಲ ಎತ್ತಲಾರದಲೆ
ತತ್ತಳಗೊಂಡು ಮಾರುತ್ತ ಅಡಿಗಡಿ
ಎತ್ತಿಡಲರಿದು ದೈತ್ಯರ ವಂಚಿಸಿ ಆ
ದಿತ್ಯರಿಗಿರಿಸಿದುತ್ತಮನೊ೪
ವನಧಿಸ್ಯೊಳದ್ರಿ ದನುಜ ಮರರ ಗುಣವಿಳಹಿ ಸ
ರ್ಪನ ತಂದೀಗ ನೇಣನೆ ಮಾಡಿದರು
ಘಣ ಸುರರು ಬಾಲನು ದೈತ್ಯಯರು ಹೂಣಿಕೆಲಿ
ವಿನಯದಿಂದ ಮಥಿüಸುವಾಗ
ವದನದನಿಲಕೆ ಅನಿಮಿಷರು ತಲ್ಲಣಿಸೆ
ಹರಿ ತನ್ನನು ನಂಬಿದವರ ಕಾಯಿದ ವಂಚನೆಯಿಂದ೫
ಉಭಯ ಜನರು ಗಂಭೀರವಾದ ಕ್ಷೀರಾಂಬುಧಿ ಕಟವ
ರಭಸಗೈದು ಕಕುಭದಲಿ ಪ್ರತಿ ಶಬ್ದಪುಟ್ಟಿ ಉ
ದುಭವಿಸಿದವು ಶುಭಾ ಶುಭ
ಪ್ರಭು ಧನ್ವಂತ್ರಿ ಸುಲುಭ ರಸ ತಾರೆ
ವಿಭುದರೊಳಗೆ ಗಲಭೆಯ ಬೀಸಿ ಅ
ನಿಬರು ಒಯ್ಯಲು ಋಭುಜಾದ್ಯರು
ಅಬುಜಾಪ್ತ ಪೋದನಭವಾಗೆ೬
ಹರಿ ತಿಳಿದ ಭಕ್ತರ ಮನೋಕ್ಲೇಶ
ಸಿರಿ ಸ್ತುತಿಗಗೋಚರನೆನ್ನಲು
ಧರಿಸಿ ಬಂದನು ಮಿರುಗುತಿಪ್ಪ ಸುಂ
ದರ ನಾರೀ ರೂಪ ಪರದೈವ
ಅರುಣ ಚರಣ ಬೆರಳುಂಗುರ ನೂಪುರ
ಕಡಗ ಕುಸುಮ ಪೊಂಗೆಜ್ಜೆಯ
ಸರಪಳಿಯ ಮೇಲೊಲಿವ ಕಾಂಚಿದಾಮ
ಶರತ್ಕಾಲದ ಚಂದಿರನಂತೆ೭
ಸಣ್ಣವನಾರಾ ಮೋಹನ್ನಕರವು ಪಾ
ವನ್ನ ಕೌಸ್ತುಭ ರನ್ನ ವನಮಾಲೆ
ಚಿನ್ನದ ಸರ ಶೋಭನ ಕರಡಿಗೆ
ಚನ್ನಗೋಡಿ ಸರ ಬಣ್ಣ ಸರ
ರನ್ನದಪದಕ ಕನ್ನಡಿ ಮಲಕು
ಚನ್ನಪ ನ್ಯಾವಳ ಮುನ್ನೆ ಸರ್ವಹಾರ
ಭಿನ್ನಭಿನ್ನವಾಗಿನ್ನು ತೋರಲು ಸಂಪನನ್ನು ಅಪರಿಚ್ಛಿನ್ನ ಮೂರ್ತಿ ೮
ಮುತ್ತಿನ ಚಿಂತಾಕ ಮುತ್ತಿನೋಲೆ ಜಾತ
ಮುತ್ತಿನ ಮೂಗುತಿ ಮುತ್ತಿನಕ್ಷತಿಯು
ಮುತ್ತಿನ ಸೂಸುಕಾ ಮುತ್ತಿನ ಜಡೆಯು
ಮುತ್ತಿನ ಗೊಂಚಲು ಮತ್ತೆ ತೋಳು
ಮುತ್ತು ಮೇಲಗೊಪ್ಪು ಕತ್ತಲೆ ಸೋಲಿಪ ಕಸ್ತೂರಿ ತಿಲಕಾ
ನೆತ್ತಿಯ ಬೈತಲು ಸುತ್ತ ತಳಪು ಸುರೋತ್ತಮ ಚಂದ್ರಮಾ
ನಿತ್ಯಾನಂದ ಪರುಷೋತ್ತಮನು ೯
ನೀಲಗೂದಲು ಸುಫಲಾದಿ ಶ್ರವಣ ಭ್ರೂಲಾದಿಕವು ಚಂ
ಚಲ ನಯನ ಕಪೋಲ ನಾಸಿಕ ತಾಂಬುಲದ ವದನ
ನಾಲಿಗೆತಳ ವಿಶಾಲ ಭುಜ
ಮೇಲು ಕಂದರ ಸುಂಡಾಲಾಕಾರವಾದ
ತೋಳು ಕರತಳ ಪಾಲು ಬಪ್ಪ ಸ್ತನ
ಸ್ಥೂಲೋದರ ನಾಭಿ ಲೀಲಾ ನಡವು ಪಂ
ಚಳ ಊರು ಜಾನು ಲೋಲಾಡುತಾ ೧೦
ಹರಡಿ ಕೈಕಟ್ಟು ಬೆರಳುಂಗುರವ
ವರ ಕಂಕಣಾದಿ ಸರಿಗೆ ತಾಯಿತ
ಸರ ಹುಲೆಯುಗರು ಎಣ್ಣೆ ನೂಲು
ತರುಳಹಾರ ಚೌರಿಯಿಂದ ಪರಿಪರಿ ಚಿತ್ರ ಬರೆದ ಕಂಚುಕಾ
ಸರಿಸರಿ ಬಂದಾಭರಣ ಧರಿಸಿ
ಅರೆ ಶರಗು ಗಹ್ವರದಿ ಮಾಡುತ್ತ
ಮರಿಯಾನೆ ಬಪ್ಪ ತೆರದಂತೆ ೧೧
ಗಂಧ ಪಚ್ಚಿಕೊಂಡು ಒಂದು ಕರದೊಳು
ಗಂಧ ವಿಳ್ಯವು ಮತ್ತೊಂದು ಕರದೊಳು
ಕಂದುಕ ಪುಟಿಸುತ್ತೊಂದೊಂದು ಹೆಜ್ಚೆಯನು
ನಿಂದಲ್ಲಿ ನಿಲ್ಲದೆ ಚಂದದಿಂದ
ಬಂದಬಂದಂತೆ ಪೂ ಮಂದರಾದಿ ಮುಡಿಯಿಂದ ಉದರಲು
ಮಂದಹಾಸದಿಂದ ವೇಗ ನಡೆ ತಂದು ಸಮೀಪದಿ
ನಿಂದನು ಖಳರಿಗೊಂಡಿ ಮಾರಿ೧೨
ದುರುಳ ಸಮೂಹ ಪರವಶನಾಗಿ ಬೆರಗಾಗಿ ನಿಲ್ಲೆ
ಕರೆದು ನಿಮ್ಮಯ ಪರಿ ಏನೆನಲು
ಇರದೆ ಪೇಳಲು ಶಿರವದೂಗುತ್ತಾತಾರವೆಂದ
ಭರ ಯೌವ್ವನ ಸ್ತ್ರೀ ಪರಪುರಷರ
ಸರಿತದಲ್ಲಿಗೆ ಚರಿಸಬಾರದು
ಎರಡು ಬಲದವರು
ಕರದಿ ಲೋಚನವ ಮುಚ್ಚಿ ಸಾಗಿರೆ ಪಂಙÂ್ತ ೧೩

ಬಡಿಸೂವೆನೆ ಒಡನೆ ತಮ್ಮಯ
ಪಡೆ ಸಮ್ಮತ ಸಾಲ್ಹಿಡಿದು ಕುಳ್ಳಿರೆ
ನಡುವೆ ಪಿಯೂಷ ಪಿಡಿದು ದುಷ್ಟರ
ಕಡಿಗೊಂದು ಬಿಂದು ಬಡಿಸದೆ
ದೃಢ ಭಕ್ತರಿಗೆ ಕುಡಿಸುತ್ತಿರಲು
ಬಡ ರಾಹು ತಾನು ದುಡುಗಿ ಸುರರಾ
ಎಡೆಯೊಳಿರಲು ಕುಡಿತಿಯೊಳು ತಾ ಬಡಿಸಿ ಚಕ್ರವಾ ತುಡುಕಿದ೧೪
ಓರ್ವನ ತರಿದು ಈರ್ವಗೆ ಮಾಡಿದ
ಊರ್ವಿಗೆ ಕೆಡಹಿ ಗರ್ವ ಮುರಿದು
ಸರ್ವಬಗೆಯಿಂದ ನಿರ್ವಾಹ ಕರ್ತನು
ಓರ್ವನಲ್ಲದೆ ಮತ್ತೋರ್ವನಾರೊ
ನಿರ್ವಿಣ್ಣರಾಗಿದ್ದ ಗೀರ್ವಾಣ ಜನರ
ನಿರ್ವಾಧಿಕವೊಹಿಸಿ ಪರ್ವತೆಡೆಯಿದ್ದ ದು
ರ್ವಿಷಯಾಬ್ಧಿಗೆ ಚೀರ್ವನಾಗಿದ್ದ ವಿಜಯವಿಠ್ಠಲ ನಿರ್ವಾಣೇಶ೧೫

ನಾರಿ ಗೌರಿ ಕುಮಾರಿ :

೫೩೪
ನಾರಿ ಗೌರಿ ಕೌಮಾರಿ ವಾರಿಜಾಕ್ಷನ ಚರಣ
ವಾರಿಯನು ಧರಿಸುವ ನಾರಿ ಗೌರಿ ಕೌಮಾರಿಪ
ಬಾಣ ಕುಂಭನೆಂಬೊ ದಾನವರೀರ್ವರು
ಕ್ಷೋಣಿಯೊಳು ಬಂದಲ್ಲಿ ತಪವ ಮಾಡಿ
ಮಾಣದಲೆ ಕಮಲ ಗರ್ಭನವೊಲಿಸಿ ವೇಗದಲಿ
ಏನು ವರ ಬೇಡೆನಲು ನಗುತಲವನು ಸುರಿದನು ೧
ಜಗಕ್ಕೊಡಿಯನಾವಾತ ಆತನ ತನು
ಸಂಬಂಧಿಗಳೆಮ್ಮ ಕೊಲ್ಲಲ್ಲಿ ಉಳಿದವರ
ಬಗಿಯದಂತೆ ವರವನು ಪಾಲಿಸೆನಲು
ನಗುತ ಲೋಕೇಶ ದುರುಳರಿಗೆ ಸಲೆ ಇತ್ತಾ ೨
ಚತುರ್ದಶ ಲೋಕವನು ಗೆದ್ದು ತ್ರಿದಶರಾ
ಮಿತಿಯಿಲ್ಲದೆ ಮಾನಭಂಗ ಮಾಡಿ
ಪತಿತರು ಈ ತೆರದಲಿರುತಿರಲು ವಿಬುಧರು
ಚತುರ ಮುಖಗೆ ಮೊರೆಯಿಡಲು ಹರಿಗೆ ಬಿನ್ನೈಸಿ೩
ತಿಳಿದು ಕುಂಡಲನೊಲಿದು ದ್ವಾಪಾರಾಂತ್ಯದಲಿ
ಖಳ ಕಂಸನೆಂಬುವನು ಪುಟ್ಟಿ ತನ್ನ
ಬಲದಲಿ ತನ್ನ ಅನುಜೆಯರ ಶರೆಯುಯಿಟ್ಟು
ಬಳಲಿಸುವವಳಿಗೊಲಿದು ಅವತಾರ ಮಾಳ್ಪ ಯುದಕುಲದಲಿ ೪
ಎನ್ನ ಕೂಡಲೀ ದುರ್ಗಿ ಜನಿಸಿ ಬರಲು ಅವ
ಳನ್ನ ಕೊಲ್ಲುವೆನೆಂದು ಕಂಸ ಮುನಿಯೆ
ತನ್ನ ಶಕ್ತಿಯಿಂದಾ ಗಗನಕ್ಕೆ ಪಾರಿ ಬರಲು
ಘನ್ನ ಘಾತುಕರನ್ನ ಮಡುಹಿ ಬಿಡುವಳೆನಲು ೫
ಇಂತು ಪೇಳಲಿ ಅಜನು ಸಂತೋಷದಿರಲಿತ್ತ
ದಂತಿ ಗಮನಳು ಉದುಭವಿಸಿ ಬಂದು
ಪಿಂತೆ ಮಾಡಿದ ತಪಸು ಸಿದ್ಧಿಸಿತು ಎನಗೆನುತ
ಅಂತಕರಾಗಿದ್ದ ಖೂಳರ ಸದೆ ಬಡಿದು ೬
ಹರಿಕೃಪೆಯಿಂದ ದಕ್ಷಿಣ ಶರಧಿಯಲಿ ನಿಲ್ಲಲು
ಪರಮ ಮುನಿ ಅಗಸ್ತ್ಯ ಪೂಜಿಸಿದನು
ಶರರಾಜ ಬಂದು ಮದುವೆನೈದಲು
ಪರಮೇಷ್ಠಿ ಹರನ ಸಹಿತಲಿ ನಡೆತಂದಾ ೭
ಬರಲಾಕ್ಷಣದಲ್ಲಿ ಕಲಿಯುಗ ಪ್ರಾಪುತವಾಗೆ
ಮರಳೆನಿಂದರು ವರ ಸುಧೇಂದ್ರವೆಂಬೊ
ಪುರದಲ್ಲಿ ಪೂಜೆಗೊಳ್ಳುತಲ್ಲಿರಲು ಇತ್ತ ಸುಂ
ದರ ಕನ್ಯಾಮಣಿಯಾಗಿ ದಶದಿಶಿಗೆ ಪೊಳೆಯುತಿರೆ೮
ಅಂದಾರಭ್ಯನಾಗಿ ಕನ್ಯಾಕುಮಾರಿ ಎನಿಸಿ
ಬಂದು ನವತೀರ್ಥದಲಿ ಯಾತ್ರೆ ಜನರು
ಮಿಂದಾಗಲೆ ಮನದಂತೆ ಭಕುತಿಯನಿತ್ತು
ಪೊಂದಿಸುವೆ ವಿಜಯವಿಠ್ಠಲನ ಪಾದದಲ್ಲಿ೯

೪೬೫
ನಿಚ್ಚಳಾಗಲಿ ಬೇಕು ತಿಳಿದು ನಿಚ್ಚಳಾಗಲಿ ಬೇಕು ಪ
ನಿಚ್ಚಮಾಡುವ ದೋಷರಾಶಿಗಳಳಿದು ನಿಚ್ಚಳಾಗಲಿ ಬೇಕು ಅ.ಪ
ಪಾಪವೆಂಬುದು ಹೊರಗಿಹುದೆ ತನ್ನ
ಕೋಪವಲ್ಲದೆ ಬೇರೆ ಹೊಸದಾಗಿ ಬಹುದೆ
ಅಪವರ್ಗಕೆ ಮಾರ್ಗವಹುದೆ ಬಲು
ತಾಪಸಿಗಾದರು ಅದು ಸಾಧನವಹುದೆ ೧
ಪುಣ್ಯವೆಂಬದು ಬೇರೆಯಿಲ್ಲಾ ನಾನಾ
ರಣ್ಯ ಚರಿಸಿದರು ದೊರಕುವದಲ್ಲಾ
ಮನ್ಯು ಬಿಡದೆ ಮತ್ತೊಂದಲ್ಲಾ ನಿರುತ
ಅನ್ಯರಾಶಿ ಬದಲು ಗತಿಗವಸಲ್ಲಾ ೨
ವೈಕುಂಠವೆಂಬೋದು ಅಲ್ಲೆ ಬರಿದೆ
ಲೌಕೀಕ ತೊರದರೆ ಇಪ್ಪದು ಇಲ್ಲೆ
ಈ ಕಲಿಯೊಳಗೆ ಈ ಸೊಲ್ಲೆವೊಲಿಸ
ಬೇಕೆನೆ ಮಾರಿ ಓಡುವುದು ನಾ ಬಲ್ಲೆ ೩
ಹರಿಸ್ಮರಣೆಗೆ ಪೋಪ ದೋಷ ಬಲು
ಪರಿ ಪರಿ ಧರ್ಮವ ಮಾಡಲು ಲೇಶ
ಸರಿಯಾವು ತರುವಾಯ ಮೋಸದಿಂದ
ತಿರುಗಿ ತಿರುಗಿ ಪುಟ್ಟಿ ಬಡವನು ಕ್ಲೇಶಾ೪
ಒಬ್ಬರ ಸರಿಗಟ್ಟದಿರೊ ನಿನ
ಗ್ಹಬ್ಬಿದಷ್ಟೆ ಕರ್ಮ ಸುಖವೆಂದು ಸಾರೊ
ಉಬ್ಬಲ ದಾಡಿಪರಾರೊ ಎಲೆ
ಲ್ಹಬ್ಬಿದ ವಿಜಯವಿಠ್ಠಲನೆಂದು ಸಾರೋ ೫

೩೬
ನಿನಗಿಂತ ಅಧಿಕರು ನಿನ್ನಯ ಭಕುತರು
ಇದಕೆ ಅನುಮಾನಗೊಳಬೇಡ ಅಂಬುಧಿಶಯನ ಪ
ಪದಿನಾಲ್ಕು ಲೋಕಗಳು ಪೊತ್ತೆನೆಂದೆನಬೇಡ
ಅದುಸಹಿತ ನಿನ್ನನು ಹೃದಯದೊಳಗೆ
ಹುದುಗಿಕೊಂಡಿಪ್ಪರೋ ಪದುಮನಾಭನೆ ಕೇಳೊ
ಇದರಿಂದ ಸರಿಮಿಗಿಲು ಆರೊ ಜನದೊಳಗೆ ೧
ವನಜಾಂಡಗಳೆಲ್ಲ ಪೊತ್ತೆನೆಂದೆನಬೇಡ
ಕೊನೆಯ ನಾಲಿಗೆಯಲ್ಲಿ ನಿನ್ನ ನಿಲಿಸಿ
ಅಣುಮಾತ್ರ ಭಾರ ಇಲ್ಲದಂತಿಪ್ಪರೊ
ಘಣಿಶಯನ ಅಧಿಕಸಮರಾರೊ ಜಗದೊಳಗೆ ೨
ಅಣುಮಹತ್ತು ಆದೆನೆಂದೆನೆಬೇಡವೊ
ಗಣನೆ ಇಲ್ಲದೆ ನಿನ್ನ ಕರದಿ ಮುಚ್ಚಿ
ಘಣಿ ಆಹಾರಗಾಮಿ ನಾ ವಿಜಯವಿಠ್ಠಲ ನಿನಗೆ
ಮಣಿದು ಲೆಕ್ಕಿಸರೋ ನಿನ್ನನು ಮೆಚ್ಚಿದಾಳುಗಳು೩

೩೭
ನಿನಗೆ ಅಂಜುವನಲ್ಲ ನೀರಜಾಕ್ಷ ಪ
ಮನವಚನ ಕಾಯದಿಂ ನಿನ್ನವರಿಗಂಜುವೆನುಅ
ರಾಗದಿಂದಲಿ ಇಂದ್ರದ್ಯುಮ್ನ ಭೂಪಾಲಕನು
ಯೋಗ ಮಾರ್ಗದಿ ನಿನ್ನ ಭಜಿಸುತಿರಲು
ಯೋಗ ಕುಂಭೋದ್ಭವನು ಬಂದು ಶಾಪವೆ ಕೊಡಲು
ಆಗ ಮೌನದಲವನನೊಪ್ಪಿಸಿದ ಬಗೆ ಬಲ್ಲೆ ೧
ಗುಣವಂತರೀರ್ವರು ಜಯವಿಜಯರು ನಿನ್ನ
ಅನುಗಾಲ ಬಾಗಿಲನು ಕಾಯುತಿರಲು
ಸನಕಾದಿಗಳು ಬಂದು ಶಪಿಸಲಾಕ್ಷಣದಲ್ಲಿ
ಸನುಮತದಲವರ ನೀನೊಪ್ಪಿಸಿದ ಬಗೆಬಲ್ಲೆ ೨
ನೃಗರಾಯ ಪುಣ್ಯ ಬರಬೇಕೆನುತ ವಿಪ್ರರಿಗೆ
ನಿಗಮೋಕ್ತಿಯಿಂದ ಗೋದಾನ ಕೊಡಲು
ಜಗಳ ಪುಟ್ಟಿತು ನೋಡು ಅನ್ಯೋನ್ಯರೊಡಗೂಡಿ
ಮಿಗೆ ಶಾಪ ಕೊಡಲವನನೊಪ್ಪಿಸಿದ ಬಗೆ ಬಲ್ಲೆ ೩
ಉಣಲಿತ್ತರೆ ಉಂಡು ಪೋಗಲೊಲ್ಲದೆ ಒಂದು
ತೃಣದಲ್ಲಿ ಗೋವನ್ನೆ ರಚಿಸಿ ನಿಲಿಸಿ
ಮುನಿಪ ಗೌತಮನಿಗೆ ಗೋಹತ್ಯವನು ಹೊರಿಸಿ
ಕ್ಷಣದೊಳಗೆ ಅವನ ನೀನೊಪ್ಪಿಸಿದ ಬಗೆ ಬಲ್ಲೆ ೪
ಅನಪರಾಧಿಗಳಿಗೆ ಇನಿತಾಯಿತೋ ದೇವ
ಎನಗೆ ತನಗೆಂಬುವರಿಗಾವ ಗತಿಯೊ
ಮಣಿದು ಬೇಡಿಕೊಂಬೆ ವಿಜಯವಿಠ್ಠಲರೇಯ
ನಿನಗಿಂತ ಭಕುತಿ ನಿನ್ನವರಲ್ಲಿ ಕೊಡು ಎನಗೆ ೫

೧೦೦
ನಿನ್ನ ಅರುಸುತನಕ್ಕೇನೆಂಬೆನೊ ವೆಂಕಟೇಶಾ
ಘನ್ನಗಿರಿಯ ವಾಸ ಕಮಲಾಸನ ಜನಕ ತಿರುಮಲೇಶಾ ಪ
ಹರುವ ಸರ್ಪಯಿರುವ ಚೋರ
ಮುರುವ ಮೀರಿ ಬರುವ ಶರಧಿ ಉರೆವ ಕಿಚ್ಚು
ಕರೆವ ಮೃತ್ಯು ಸುರಿವ ಮಳೆ ಬಿರುವನೆಲ್ಲ
ಹೊಡೆವ ದೈತ್ಯಾ ತೊರೆವ ಸನ್ನ್ಯಾವ
ಮೇರೆ ತಪ್ಪಿ ಭರದಿ ತನಗೆ ಇದಿರು
ಬಂದವ ಕಾಣುತತಿ ಹರಿಯ
ನಾಮ ಮುಟ್ಟುವ ದೇವ ಶ್ರೀನಿವಾಸಾ೧

ಸೃಷ್ಟಿ ಜನರಿಗೊಂದು ಆಳು
ಕೊಟ್ಟು ವೇಗದಿಂದ ಕರಿಯ
ಲಟ್ಟಿದವರ ಕಾಣೆನಯ್ಯಾ
ಎಷ್ಟೆಷ್ಟು ದೂರದಿಂದಲಿ
ಕಟ್ಟಿಕೊಂಡು ಹೊನ್ನು ಹಣಗಳ ತಮಗೆ ತಾನೆ
ಅಟ್ಟಹಾಸದಿಂದ ಮಂಗಳವ ಪಾಡಿ ಪೊರ
ಮಟ್ಟ ಒಪ್ಪ ತಿರುವೆಂಗಳಾ೨
ಹದಿನೆಂಟು ಜಾತಿಯವರು
ಒದಗಿ ಮುದದಿಂದ ಕುಣಿದು
ಪದೋಪದಿಗೆ ಹಾಡಿ ಪಾಡುತ
ಹದುಳವಾದ ಪಂಚವಾದ್ಯ
ಎದುರುನಿಂದು ಧ್ವನಿಯ ಮಾಡುತಾ
ದಾಸರೆಂಬೊ ಅಟ್ಟಹಾಸದ ಮಾತು ನುಡಿಯುತ್ತ
ನಿತ್ಯ ನಿನ್ನ ಮದುವೆಯೆಂದು ಸುಖವು ಸುರಿಯುತ್ತಾ ೩
ಎಲ್ಲರಿಲ್ಲಿಗೆ ಬಂದರೇನು ಯಿಲ್ಲ ಪು
ಣ್ಯಲೇಶ ಮಾತ್ರ ಸಲ್ಲದಯ್ಯಾ ಮುಕ್ತಿಗವರು
ಇಲ್ಲೆ ಸುಖವು ಬಟ್ಟು ಕಡಿಗೆ
ಎಲ್ಲೆಲ್ಲಿ ಜನಿಸಿ ಬಹು ಭವದ
ಪಲ್ಲಡಿಯೊಳಗೆ ಜನಿಸಿ ಜ್ಞಾನ
ವಿಲ್ಲದೆ ಸಲ್ಲುವರು ದುರಿತವ ವಹಿಸಿ ೪
ಮನುಜರೆಣಿಕೆ ಏನು ಮತ್ತೆ
ವನಜ ಸಂಭವ ಈಶ ಮುಖ್ಯ
ಅನಿಮಿಷರೆಲ್ಲ ಬಂದು ಭಯದಿ
ಮನಸಿನಲಿ ನಿನ್ನ ಅರಸುತನದ ಶೌರ್ಯ
ವನ್ನು ಎಣಿಸುತ ನೆಲೆಗಾಣದೆ
ಮಣಿದು ನಮಸ್ಕರಿಸುತಾ ವಾಲ್ಗೈಸುತಾ
ಹೊಣಿಯೊ ವಿಜಯವಿಠ್ಠಲ ಎನುತಾ ೫

ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು :

೪೦೪
ನಿನ್ನ ಒಲುಮೆಯಿಂದ ನಿಖಿಳ ಜನರು ಬಂದು
ಮನ್ನಿಸುವರೊ ಮಹರಾಯ ಪ
ಎನ್ನ ಪುಣ್ಯಗಳಿಂದ ಈ ಪರಿಯುಂಟೇನೊ
ನಿನ್ನದೆ ಸಕಲ ಸಂಪತ್ತು ಅ.ಪ
ಒಬ್ಬ ಹೆಂಗಸಿನ ಹೊಟ್ಟೆಗೆ ಹಾಕುವುದಕಿನ್ನು
ತಬ್ಬಿಬ್ಬುಗೊಂಡನೊ ಹಿಂದೆ
ನಿಬ್ಬರದಿಂದಲಿ ಸರ್ವರ ಕೂಡುಂಬೊ
ಹಬ್ಬವನುಣಿಸುವಿ ಹರಿಯೆ ೧
ಸಂಜೆತನಕವಿದ್ದು ಸಣ್ಣ ಸೌಟಿನ ತುಂಬ
ಗಂಜಿ ಕಾಣದೆ ಬಳಲಿದೆನೋ
ವ್ಯಂಜನ ಮೊದಲಾದ ನಾನಾ ರಸಂಗಳು
ಭುಂಜಿಸುವುದು ಮತ್ತೇನೊ೨
ಜೀರ್ಣ ಮಲಿನ ವಸ್ತ್ರ ಕಾಣದ ನರನಿಗೆ
ಊರ್ಣ ವಿಚಿತ್ರ ಸುವಸನ
ವರ್ಣವರ್ಣದಿಂದ ಬಾಹೋದದೇನೊ ಸಂ
ಪೂರ್ಣಗುಣಾರ್ಣವ ದೇವ ೩

ನೀಚೋಚ್ಚ ತಿಳಿಯದೆ ಸರ್ವರ ಚರಣಕ್ಕೆ
ಚಾಚಿದೆ ನೊಸಲ ಹಸ್ತಗಳ
ಯೋಚಿಸಿ ನೋಡಲು ಸೋಜಿಗವಾಗಿದೆ
ವಾಚಕ್ಕೆ ನಿಲುಕದು ಹರಿಯೆ ೪
ಮಧ್ಯಾಹ್ನ ಕಾಲಕ್ಕೆ ಅತಿಥಿಗಳಿಗೆ ಅನ್ನ
ಮೆದ್ದೆನೆಂದರೆ ಈಯಗಾಣೆ
ಈ ಧರೆಯೊಳಗೆ ಸತ್ಪಾತ್ರ ಕೂಡುಂಬೊ
ಪದ್ಧತಿ ನೋಡೊ ಪುಣ್ಯಾತ್ಮ ೫
ಮನೆ ಮನೆ ತಿರಿದರು ಕಾಸು ಪುಟ್ಟದೆ ಸು
ಮ್ಮನೆ ಚಾಲ್ವರಿದು ಬಳಲಿದೆನೊ
ಹಣ ಹೊನ್ನು ದ್ರವ್ಯಂಗಳಿದ್ದಲ್ಲಿಗೆ ತನಗೆ
ತಾನೆ ಪ್ರಾಪ್ತಿ ನೋಡೊ ಜೀಯಾ ೬
ವೈದಿಕ ಪದವಿಯನೀವಗೆ ಲೌಕಿಕ
ಐದಿಸುವುದು ಬಹು ಖ್ಯಾತೆ
ಮೈದುನಗೊಲಿದ ಶ್ರೀ ವಿಜಯವಿಠ್ಠಲನ ನಿನ್ನ
ಪಾದಸಾಕ್ಷಿಯನುಭವವೊ ೭

೪೦೫
ನಿನ್ನ ಚಿತ್ತಕೆ ಬಂದುದನು ಮಾಡು ಸರ್ವೇಶ
ಎನ್ನ ಸ್ವಾತಂತ್ರ್ಯ ಲವಮಾತ್ರ ಉಂಟೇ ಸ್ವಾಮಿ ಪ
ಅನಂತಾನಂತ ಜನ್ಮ ಕಾದರು ಒಮ್ಮೆ
ಚೆನ್ನ ಗೋಪಾಲ ಕೃಷ್ಣದೇವ ಅ.ಪ.
ಛೀ ಎನಿಸು ಜನರಿಂದ ನಿಂದ್ಯವನು ಮಾಡಿಸು
ಬಾಯದೆರೆಸೊ ಹೊಟ್ಟೆಗಾಗಿ
ಗಾಯನವ ಮಾಡಿಸು ಗುಪ್ತದಲ್ಲೇ ಇರಿಸು
ದಾಯಾದಿಗಳಿಗೊಪ್ಪಿಸು
ರಾಯಪದವಿಯ ಕೊಡಿಸು ರಾಜ್ಯವೆಲ್ಲವ ಮೆರೆಸು
ಕಾಯಕ್ಲೇಶವನು ಪಡಿಸು
ಮಾಯಾಧವನೆ ನಿನ್ನ ಮಹಿಮೆ ತಿಳಿದವರಾರು
ನ್ಯಾಯ ಅನ್ಯಾಯವಾಗಿ ಶ್ರೀಶ ೧
ಧನವನ್ನೆ ಕೊಡಿಸು ದಾನವನೆ ಮಾಡಿಸು
ಗುಣವುಳ್ಳ ಮನುಜನೆನಿಸು
ಮನಸು ಚಂಚಲನೆನಿಸು ಮಾತುಗಳ ಪುಸಿಯೆನಿಸು
ಕ್ಷಣದೊಳಗೆ ಶುದ್ಧನೆನಿಸು
ಋಣದ ಭಯವನೆ ಹೊರಿಸು ರಿಕ್ತ ನಾನೆಂದೆನಿಸು
ತೃಣದಂತೆ ಮಾಡಿ ನಿಲಿಸು
ಪ್ರಣತ ಜನರಿಗೆ ನಿತ್ಯ ಮನದಿಚ್ಛೆಗಾರನೆ
ದಿನ ಪ್ರತಿದಿವಸವಾಗೆ, ದೇವ ೨
ಯಾತ್ರೆಯನೆ ಮಾಡಿಸು ಯೋಚನೆಯಲೇ ಇರಿಸು
ಪಾತ್ರ ಜನರೊಳು ಪೊಂದಿಸು
ಗೋತ್ರ ಉತ್ತಮನೆನಿಸು ಗೋವುಗಳ ಕಾಯಿಸು
ಧಾತ್ರಿಯೊಳು ನೀಚನೆನಿಸು
ಮೈತ್ರರೊಳು ಕೂಡಿಸು ಮೈಗೆಟ್ಟವನೆನಿಸು
ಸ್ತೋತ್ರಕ್ಕೆ ಯೋಗ್ಯನೆನಿಸು
ನೇತ್ರ ಮೂರುಳ್ಳವನು ಸ್ತುತಿಸಿದ ಮಹಾಮಹಿಮ
ರಾತ್ರಿ ಹಗಲು ಎನ್ನದೆ ದೇವ ೩
ಉಪವಾಸದಲ್ಲಿರಿಸು ಉಚಿತ ಭೋಜನ ಉಣಿಸು
ಜಪತಪವನೆ ಮಾಡಿಸು
ಅಪಹಾಸ್ಯ ಮಾಡಿಸು ಅದ್ಭುತವನೈದಿಸು
ಗುಪಿತರೊಳಗಧಿಕನೆನಿಸು
ಉಪಕಾರಿ ನರನೆನಿಸು ಉದ್ದಂಡನಿವನೆನಿಸು
ವಿಪುಳ ಮತಿಯಲಿ ನಿಲಿಸು
ಅಪರಿಮಿತ ಗುಣನಿಧಿಯೆ ಆನಂದ ಮೂರುತಿಯ
ಸಫಲಮತಿಯೀವ ದೇವ ೪
ವೇದವನು ಓದಿಸು ವೇದಾರ್ಥಗಳ ನುಡಿಸು
ಓದಿದರು ದಡ್ಡನೆನಿಸು
ಹಾದಿಯನು ತಪ್ಪಿಸು ಹಿತದವರನಗಲಿಸು
ಸಾಧು ಮಾರ್ಗವನೆ ಕೊಡಿಸು
ಬಾಧೆಗಳನಟ್ಟಿಸು ಭಕುತಿವೆಗ್ಗಳನೆನಿಸು
ಉದರಕೋಸುಗ ತಿರುಗಿಸು
ಪಾದದಲಿ ಗಂಗೆಯನು ಪೆತ್ತ ಪರಮಾನಂದ
ಮೋದ ವಿನೋದವಾಗೆ ದೇವ ೫
ಕುಣಿಕುಣಿದಾಡಿಸು ಕಾಶಿಯಲಿ ಪೊಂದಿಸು
ಮಣಿ ಭೂಷಣವ ತೊಡಿಸು
ಘನ ಕವನ ಪೇಳಿಸು ಕೌತುಕವನೈದಿಸು
ವನ ಭುವನದೊಳು ನಿಲಿಸು
ಪ್ರಣವ ಮಂತ್ರವ ಜಪಿಸು ಪ್ರಕಟಭಯವನೆ ಬಿಡಿಸು
ಬಿನುಗು ವೈರಾಗ್ಯನೆನಿಸು
ಜನನಿ ತನುಜರ ಕೂಡೆ ಅನುಸರಿಸಿ ನಡೆವಂತೆ
ಎನಗೆ ನೀನೆ ಸದ್ಗತಿ ಸ್ವಾಮಿ ೬
ಯಾವುದಾದರು ನೀನು ಇತ್ತುದಕೆ ಎನಗಿಷ್ಟು
ನೋವು ಒಂದಾದರಿಲ್ಲ
ಜೀವೇಶರೊಂದೆಂಬ ದುರ್ಮತವ ಕೊಡದಿರು
ಭಾವದಲಿ ನಾ ಬೇಡುವೆ
ಆವಾವ ನರಕದಲಿ ಬಹುಕಾಲವಿಟ್ಟರು ಇಪ್ಪೆ
ನಾನೊಲ್ಲೆ ಮಿಥ್ಯಮತವ
ಕಾವ ಕರುಣೆ ನಮ್ಮ ವಿಜಯವಿಠ್ಠಲರೇಯ
ಪಾವನ್ನ ಮಾಳ್ಪ ಶಕ್ತ ವ್ಯಕ್ತ ೭

ನಿನ್ನ ದರುಶನಕೆ ಬಂದವನಲ್ಲವೋ :

೧೦೧
ನಿನ್ನ ದರುಶನಕೆ ಬಂದವನಲ್ಲವೊ
ಪುಣ್ಯವಂತರ ದಿವ್ಯ ಚರಣ ನೋಡಲಿ ಬಂದೆ ಪ
ಎಲ್ಲೆಲ್ಲಿ ನಿನ್ನ ವ್ಯಾಪ್ತತನವಿರಲಿಕ್ಕೆ
ಇಲ್ಲಿಗೆ ಬರುವ ಕಾರಣವಾವುದೊ
ಸೊಲ್ಲಿಗೆ ಕಂಭದಲಿ ತೋರಿದ ಮಹಾಮಹಿಮ
ಅಲ್ಲಿ ಇಲ್ಲೇನಯ್ಯ ಬಲ್ಲ ಭಜಕರಿಗೆ೧
ಕರೆದಾಗಲೆ ಓಡಿ ಬಂದೊದಗುವ ಸ್ವಾಮಿ
ಮರಳಿ ಗಾವುದ ಎಣಿಸಿ ಬರಲ್ಯಾತಕೊ
ನೆರೆ ನಂಬಿದವರಿಗೆ ಆವಲ್ಲಾದರೇನು
ಅರಿದವರ ಮನದೊಳಗೆ ನಿಂದಾಡುವ ಚಂದವಾ ೨
ಕಠಿನವೊ ನಿನ್ನ ಭಕುತರನ ನೋಡುವ ಲಾಭ
ಸಟೆಯಲ್ಲಾ ವೇದಗಳು ಸಾರುತಿವಕೊ
ವಟು ಮೊದಲಾದ ವೈಷ್ಣವಾಗ್ರೇಸರಂಘ್ರಿ
ತ್ರಿಟಿಯಾದರೂ ಎನಗೆ ಸೋಕಲು ಗತಿಗೆ ದಾರಿ೩
ಧ್ಯಾನಕ್ಕೆ ಸಿಲುಕುವನೆ ನಿನ್ನ ಕಾಣಲಿಬಹುದು
ಜ್ಞಾನಿಗಳು ಎಂತು ಬರುವರೊ ಅಲ್ಲಿಗೆ
ಅನಂತ ಜನುಮದಲ್ಲಿ ಜಪ ತಪ ಹೋಮ ವ್ರತ
ಏನೇನು ಮಾಡಿದರು ಇಷ್ಟು ಜನ ಕೂಡುವದೇ೪
ನೀನಿದ್ದ ಸ್ಥಾನದಲಿ ಸಕಲ ಪುಣ್ಯಕ್ಷೇತ್ರ
ನೀನಿದ್ದ ಸ್ಥಾನದಲಿ ಸರ್ವತೀರ್ಥ
ನೀನಿದ್ದ ಸ್ಥಾನದಲಿ ಸಮಸ್ತ ತಾತ್ವಿಕರು
ನಾನಿತ್ತ ಬರುವುದು ನಿನಗೆ ತಿಳಿಯದೆ ಸ್ವಾಮಿ೫
ಇದನೆ ಲಾಲಿಸು ಜೀಯಾ ನಿನ್ನದೊಂದೇ ಮೂರ್ತಿ
ನಿದರುಶನವಲ್ಲದೆ ಮಿಗಿಲಾವುದೊ
ಪದೋಪದಿಗೆ ಮಧ್ವಮತ ಹೊಂದಿದ ಸುಜನರ
ಹೃದಯದೊಳಗಾನಂತಪರಿ ನಿನ್ನ ರೂಪಗಳು ೬
ಭಳಿರೆ ತಿರುಮಲರಾಯ ನಿನ್ನ ಕರುಣಾ ರಸಕೆ
ನೆಲೆಗಾಣೆನೆಲೆ ಸೆರೆಹೊರೆಯೊಳು
ವೊಲಿದು ಭಕುತರಿಗಾಗಿ ಮದುವೆ ಹಮ್ಮಿಕೊಂಡೆ
ಸುಲಭ ದೇವರದೇವ ವಿಜಯವಿಠ್ಠಲ ವೆಂಕಟಾ೭

೧೦೨
ನಿನ್ನ ನೋಡಲಿ ಬಂದೆ ನಿತ್ಯ ತೃಪ್ತಾ
ಅನ್ಯರಿಂದಲಿ ಎನಗೆ ಏನು ಪ್ರಯೋಜನವೊ ಪ
ದರುಶನಕೆ ಬಂದವ ನಾನಲ್ಲವೆಂದು ನಾನಂದು
ಹರಿ ನಿನಗೆ ನುಡಿದದ್ದು ಮನಸ್ಸಿನೊಳಗೆ
ಇರುತಿಪ್ಪದೇನಯ್ಯಾ ಬಿನ್ನಪವೆ ಲಾಲಿಸು
ಶರಣ ಜನರ ಅಭಿಪ್ರಾಯವೊಂದು ಬಗೆ ಇಪ್ಪದೊ೧
ನಿರುತ ವ್ಯಾಪ್ತತ್ವ ಕರುಣತ್ವ ಅಣುಮಹತ್ತು
ಸರುವ ಚೇತನ ಜಡ ಮತ್ತೆ ಮತ್ತೆ
ಪರಿ ಪರಿಯಿಂದಲಿ ನಿನ್ನಲಿ ಉಂಟು ನಿನ್ನ
ವರ ಮೂರ್ತಿಗಳ ಪೇಳದೆ ಇದಷ್ಟು ವಿನಯದಲಿ ೨
ಧ್ಯಾನಕ್ಕೆ ನೀನು ಪ್ರಧಾನನೆಂದು ನುಡಿದೆ
ಆನಂದಮತಿ ಕೊಡುವ ಅಪ್ರಮೇಯ
ಕ್ಷೋಣಿಜನಕಿಂತ ದ್ವಾರದವರು ವೆಗ್ಗಳವಾಗೆ
ಏನೆಂಬೆ ತಿರುವೇಂಗಳೇಶ ನಿನ್ನಾಟಕ್ಕೆ ೩
ಮಿಕ್ಕ ಮಂದಜನಕೆ ನಿನ್ನ ಭಕುತರ ಮೇಲೆ
ಭಕುತಿ ಪುಟ್ಟುವುದಕ್ಕೆ ನಾ ಪೇಳಿದದ್ದು
ಅಕಟಕಟ ನಿನ್ನ ದೊರೆತನಕೆ ಏನೆಂಬೆ
ತಕ್ಕ ಮಾತುಗಳೇನೊ ಆಲೋಚಿಸಿ ನೋಡೆ ೪
ಹೊನ್ನು ಹಣ ತೂಗಬೇಕಾದರೆ ಮೊದಲಿಗೆ
ಚಿನ್ನ ಹಾಕುವರೇನೊ ಚಿನ್ಮಯರೂಪ
ಮುನ್ನೆ ನಿನ್ನವರ ದರುಶನವಾದ ಮೇಲೆ ಪಾ
ವನ್ನ ಶಾರೀರನೆ ನಿನ್ನ ಕಾಂಬುವದುಚಿತ ೫
ಜರೆಮರಣರಹಿತ ಸುಜನರ ಪರಿಪಾಲಾ ನಿ
ರ್ಜರಗಣಕೆ ನಿತ್ಯ ವಜ್ರಪಂಜರಾ
ಜರಗೆ ವರವಿತ್ತ ದನುಜರ ವಂಶನಾಶಾ ನಿ
ರ್ಜರ ನದಿ ಜನಕಾಂಬುಜ ರವಿ ನಯನ ದೇವಾ ೬
ಸ್ಥೂಲಮತಿಯಿಂದ ಪೇಳಿದೆನೆಂದು ಚನ್ನಾಗಿ
ಲಾಲಿಸು ಲಲಿತಾಂಗಿ ಲಕುಮಿ ರಮಣಾ
ನೀಲಗಿರಿ ನಿವಾಸ ವಿಜಯವಿಠ್ಠಲ ವೆಂಕಟವಾಲಗವ ಕೈಗೊಳ್ಳು ಎನ್ನ ಯೋಗ್ಗಿತವರಿತು೭

೪೦೭
ನಿನ್ನ ಮನಸಿಗೆ ಬಂತೆ ಪ್ರಾಣನಾಥಾ
ಚಿಣ್ಣನೆಂದು ನೋಡದಲೆ ಕರಿಯಲಟ್ಟಿದೆ ವೇಗ ಪ
ಸಾಕಿದೆನು ನಿನ್ನ ದಾಸನೆಂದು ತಿಳಿದು ವಿ- |
ವೇಕದಿಂದಲಿ ಉಪನಯನ ಮಾಡೀ |
ಲೋಕದೊಳಗೆ ಬೆಳಸಿ ಮುದುವೆಯ ಮಾಡಿ ಅ-
ನೇಕ ತೀರ್ಥಯಾತ್ರೆ ತಿರುಗಿದವನಾ ಇಂದೆ ೧
ಉದ್ಧಾರವಾಗುವೆನು ಕುಲಕೋಟಿ ಸಹಿತೆಂದು
ಪದ್ದಿಟ್ಟುಕೊಂಡಿವೈ ಈ ತರಳನ
ಸುದ್ದಿ ತಿಳಿಯಗೊಡದೆ ವಿಯೋಗ ಮಾಡಿಸಿದೆ
ಸಿದ್ಧ ಮಾಡಿದೆ ನಿನ್ನ ಸಂಕಲ್ಪವೆ ಇಂದು ೨
ನೆಚ್ಚಿ ನಿನ್ನ ಪಾದ ಭಜಿಸುವರಿಗೆ ಭಾಗ್ಯ
ಹೆಚ್ಚುಗೊಡದಿಪ್ಪನೆಂದು ಬಿರುದು ಧರಿಸಿ
ನಿಚ್ಚ ಮೆರೆವಾ ಮಹಿಮ ವಿಜಯವಿಠ್ಠಲರೇಯ
ಅಚ್ಚ ಭಕುತರ ಪ್ರಿಯ ವೈಕುಂಠಕೆ ಇಂದೆ ೩

೪೦೮
ನಿನ್ನ ಮರೆದೆನೊ ರಂಗ ನಿನ್ನ ಮರೆದೆ
ಅನ್ಯರನ್ನಕೆ ಸಿಲುಕಿ ಅನುಗಾಲ ಮರುಳಾಗಿ ಪ
ಊಟಕ್ಕೆ ಬರುವಲ್ಲಿ ತನುವುಬ್ಬಿ ಎನ್ನ ಮನ
ನಾಟುವುದು ಅವರ ಕಡೆ ಅನುರಾಗದಿ
ನೀಟಾದ ಭೋಜನವ ಬಯಸುವೆನು ಯಮರಾಯ
ಪಾಟು ಬಡಿಸುವ ಭಂಗ ಕೇಳಿ ಎಚ್ಚರಿಯದಲೆ೧
ಮತ್ತೆ ಕರೆಯಲು ಬರಲು ಉತ್ಸವ ಪಿಡಿಯಲೊಶವೆ
ಹೊತ್ತು ಹೊತ್ತಿಗೆ ಅವರ ಕೊಂಡಾಡುತ
ಹೆತ್ತವರಿಗಿಂತಲೂ ಅಧಿಕ ನಮಸ್ಕರಿಸುವೆನು
ಚಿತ್ತಜನಪಿತ ನಿನ್ನ ಸ್ತೋತ್ರ ಪಠಿಸದಲೆ೨
ಎಡೆಯ ಮುಂದೆ ಕುಳಿತು ಎಲ್ಲ ಕಾಲಗಳಿಂದ
ಬಿಡದೆ ಮಾಡಿದ ಪುಣ್ಯಪಾಪಗಳೆದು
ಎಡಬಲದವರ ಪಙ್ತ ನೋಡಿಕೊಳ್ಳುತ ದುಃಖ
ಪಡುವೆನೋ ಎನಗಿಷ್ಟು ಕಡಿಮೆ ಹಾಕಿದರೆಂದು೩
ಅನ್ನವಿತ್ತವನ ಪಾಪಗಳು ನಿರಂತರದಿ
ಅನ್ನದಾಶ್ರಯ ಮಾಡಿಕೊಂಡಿಪ್ಪವು
ಚೆನ್ನಾಗಿ ತಿಳಿಯದಲೆ ಚಾತುರ್ಯದಿಂದಲಿ
ಧನ್ಯನಾದೆನು ನಾನು ಪರರ ಪಾಪವ ಭುಜಿಸಿ ೪
ಒಬ್ಬರೆಡೆ ನೋಡಿಕೊಳಲಧಿಕವಾಗಿದ್ದರೆ
ಉಬ್ಬುವೆನು ಊರು ಕೇರಿ ಹಿಡಿಸದಂತೆ
ಸುಬ್ಬನ ಸೂರೆಯಂತೆ ಪರರ ಅನ್ನವನುಂಡು
ಮೊಬ್ಬಿನಲಿ ದಿನಗಳೆದೆ ದೀನ ಮನಸಿನಲಿ ೫
ಒಡಲಿಗೆ ಬಿದ್ದರಸ ಮೂರು ಭಾಗಗಳಾಗಿ
ಕಡೆಗೆ ಪೋಗುವುದೊಂದು ನಿಲುವುದೊಂದು
ತಡೆಯದಲೆ ಸಂತಾನ ಪಡೆವುದೊಂದೀತೆರ
ಕಡೆಗಾಣಲಿಲ್ಲ ಪರರಲಿ ಉಂಡ ಋಣಕೆ೬
ಆವಾವ ಬಗೆರುಚಿ ಜಿಹ್ವಗೆ ತೋರುತಿದೆ
ಆವಾವ ಬಗೆ ನರಕ ಬೇರೆಯುಂಟು
ದೇವ ಮಣಿ ಸರ್ವೇಶ ವಿಜಯವಿಠ್ಠಲ ಸ್ವಾಮಿ
ಈ ಜೀವ ಹಿತವಾಗುವಂತೆ ಮಾರ್ಗವ ತೋರು ೭

೧೦೩
ನಿನ್ನ ಮಹಿಮೆ ಇದೇನೊ
ಕನ್ನಗಾರರ ಗುರುವೆ ಅಳಗಿರಿ ತಿಮ್ಮರಾಯಾ ಪ
ಕ್ಷೋಣಿಯೊಳಗುಳ್ಳವರು ಕ್ಷಿಪ್ರದಲ್ಲಿ
ನಿನ್ನ ಕಾಣಿವೇನೆಂಬ ತವಕದಲಿ ಬರಲು
ಮಾಣದಲೆ ಅವರ ವಸನ ಸುಲಿಸಿ ತಡೆಯದೆ
ಮಾನವನು ಕೊಂಬ ಅಭಿಮಾನಗೇಡಿ ೧
ಬ್ರಹ್ಮಾದಿಗಳು ಇಲ್ಲಿ ಸುಲಿಸಿಕೊಳಬೇಕೆಂದು
ಹೆಮ್ಮೆಯಿಂದಲಿ ನೋಡಿ ಹಿಗ್ಗುವರೋ
ಹಮ್ಮಿನದೇವ ನಿನ್ನ ಸೋಜಿಗವೆ ತಿಳಿಯದು
ಈ ಮ್ಮಹಿಯೊಳಗೆ ಇಂಥ ಸುಮ್ಮಾನವೇನೊ೨
ಹಲವು ಕೇಳಿದರೇನು ನೀಚೋಚ್ಚ ಎಣಿಸಲೆ
ಒಲಿಸಿದವರಿಗೆ ನೀನು ಒಲಿದು ಎಲ್ಲಾ
ಸುಲಿಗೆಯನು ಯಿತ್ತು ಸಂತತಲವರ ಪಾಲಿಪ
ಬಲು ದೈವ ವಿಜಯವಿಠ್ಠಲ ಅಳಗಿರಿ ತಿಮ್ಮಾ೩

೧೦೪
ನಿನ್ನ ಮಾತಿಗೆ ಮೆಚ್ಚುವನಾವಾವಾ
ಪನ್ನಗಾದ್ರಿ ನಿವಾಸಾ ಪರಾಕು ಎಲೊ ಎಚ್ಚರಿಕೆ ಪ
ಅಂತರ ಬಾಹೀರ ವ್ಯಾಪ್ತಾ ಆಪ್ತನೆಂಬುವ
ಎಂತಾಗುವದೆಂದು ನುಡಿಯದಿರಿ
ಕಂತುವಿನ ಪಿತ ನಿನಗೆ ನಮೊ ನಮೊ ಬಿನ್ನೈಪೆ
ಸಂತು ಧ್ರುವರಾಯನು ಸಂತತ ಇದಕೆ ಸಾಕ್ಷಿ ೧
ಒಂದೆ ರೂಪದಲಿ ಪೂಜೆಯಗೊಂಬೆ ಎನಗೆ ಮ
ತ್ತೊಂದು ರೂಪಕೆ ಶಕ್ತಿ ಇಲ್ಲೆನ್ನದಿರು
ಸಂದೇಹ ಎನಗಿಲ್ಲ ಎಲ್ಲಿದ್ದರು ದೇವ
ನಂದನಂದನ ಇದಕೆ ರಾಯ ಬ್ರಾಹ್ಮಣ ಸಾಕ್ಷಿ ೨
ಬದಿಯಲಿದ್ದರೆ ಇಷ್ಟೆ ಮುಂದೆ ಬರುವ ಆಪತ್ತು
ಒದಗಿ ಕಳೆವೋಪಾಯ ಕಡಿಮೆನ್ನದಿರೊ
ಮುದದಿಂದ ನಿನ್ನಂಘ್ರಿಗೆರಗುವೆನು ಗತಿಪ್ರದಾ
ಕದನದೊಳು ಬದುಕಿ ನರಧ್ವಜನೆ ಸಾಕ್ಷಿ೩
ಆಪತ್ತು ಕಳೆವೆ ಬೇಡಿದ ಭೋಜನ ಕೊಡುವೆ
ಈ ಪರಾಕ್ರಮ ನಿನಗಲ್ಲೆನ್ನದಿರು
ಶ್ರೀಪತಿ ನಿನ್ನ ಲೀಲೆಗೆ ಬೆರಗಾಗುವೆನೊ
ತಾಪಸರ ಮಧ್ಯದಲಿ ದುರ್ವಾಸಮುನಿ ಸಾಕ್ಷಿ ೪
ನಾನಾ ಭಕ್ತರು ಇನಿತು ಸಾಕ್ಷಿಯಾಗಿರಲಿಕ್ಕೆ
ಏನು ಸೋಜಿಗವೆಂಬೊ ಸೋಗು ಯಾಕೆ
ಜ್ಞಾನ ಪರಿಪೂರ್ಣ ಸಿರಿ ವಿಜಯವಿಠ್ಠಲರೇಯಾ
ನಾನು ಬೇಡುವದೇನು ಸರ್ವಪ್ರೇರಕೆ ಪ್ರೀಯಾ೫

೧೦೫
ನಿನ್ನ ಮೂರುತಿ ನಿಲ್ಲಿಸೊ ವೆಂಕಟಸ್ವಾಮಿ ಪ್ರ
ಸನ್ನ ವದನ ಭುಜಗನ ಗಿರಿಯ ತಿಮ್ಮಾ ಪ
ಪೊಳೆವ ಕಿರೀಟಕುಂಡಲ ಕರ್ಣ
ಪಣೆಯಲ್ಲಿ ತಿಲಕ ಬಿಲ್ಲಿನ ಪುಬ್ಬು
ಸುಳಿಗೂದಲಿಂದೊಲಿವ ೧
ಕದಪು ಕೂರ್ಮನಂತೆ ಸುಧೆಯ ಸುರಿವ ವದನ
ಅಧರ ನಾಸಿಕ ಕಪೋಲ
ಮುದ್ದುನಗೆಯಿಂದೊಲಿವ೨
ಕೊರಳ ತ್ರಿರೇಖೆ ಉಂಗುರ
ಬೆರಳ ಶಂಖ ಸುದರಶನ ಕಟಿ ಅಭಯ
ಕರ ಚತುಷ್ಟಯಿಂದೊಲಿವ೩
ಶ್ರೀವತ್ಸ ಕೌಸ್ತುಭ ನ್ಯಾವಳ ವೈಜಯಂತ
ಆವಾವಾಸರ ಉದರ
ತ್ರಿವಳಿಯಿಂದೊಲಿವಾ೪
ಬಡ ನಡು ನಾಭಿಯು ಉಡುದಾರ ಪೊಂಬಟ್ಟೆ
ಉಡಿಗೆ ಕಿಂಕಿಣಿಗಂಟಿ
ನುಡಿ ತೊಡರಿಂದೊಲಿವಾ ೫
ಊರು ಜಾನು ಜಂಘೆ ಚಾರುಪೆಂಡೆ ನೂಪುರ
ಭೋರಗರೆವ ಗೆಜ್ಜೆ
ತೋರುತ್ತ ನಲಿದೊಲಿವಾ ೬
ಧ್ವಜ ವಜ್ರಾಂಕುಶ ಸರ
ಸಿಜ ರೇಖಿಯ ಚರಣ
ವ್ರಜನಂದ ಬಾಲಕ ವಿಜಯವಿಠ್ಠಲ ತಿಮ್ಮಾ ೭

೪೧೦
ನಿನ್ನ ವಶದಲಿ ಇದ್ದು ಇದ್ದು
ಮುನ್ನೆ ದುರ್ವೃತ್ತಿಗೆ ಪೋಗುವುದೆನ್ನ ಮನಾ ಪ
ಚಿತ್ರವಾದ ಕರಿಯ ಶೃಂಗರಿಸಿ ಮೇಲೆ
ಛತ್ರಿಗೆ ನೆರಳಲ್ಲಿ ಕುಳ್ಳಿರೆನೆ
ಆನೆ ಕೆಳಗೆ ಇಳಿದು ಬೂದಿಯೊಳಗಿಪ್ಪ
ಕತ್ತೆ ಏರುವನೆಂದು ಇಚ್ಛೆ ಮಾಡುತಲಿದೆ ೧
ಕಾಲಕಾಲಕೆ ಸುಧಿಯ ಸವಿದು
ಮಾಣಿಕದ ಉಯ್ಯಾಲೆ ಮೇಲಾಡುತ್ತ ಬಾಳು ಎನೆ
ತಾಳವೃಕ್ಷವನೇರಿ ತಲೆಕೆಳಗಾಗಿ ತಾ
ಬೀಳುವೆನೆಂದು ಅಪೇಕ್ಷೆ ಮಾಡುತಲಿದೆ ೨

ವೇಣಿ ಮಾಧವರಾಯಾ ನಿನ್ನ ಚರಣಾಂಬುಜ
ಕಾಣುವ ಪ್ರಕಾಶ ಉದಾಸಸಿ
ಕ್ಷೋಣಿಯೊಳಗೆ ಮಹಾ ಕತ್ತಲೆ ಬಯಸುವೆ
ಹೀನನಂತೆಯಾದೆ ವಿಜಯವಿಠ್ಠಲರೇಯಾ ೩

೪೦೬
ನಿನ್ನನಗಲಿ ಪೋಗಲಾರೆವೋ ನೀರಜಾಕ್ಷ
ನಿನ್ನ ಸೇರಿ ಸುಖಿಸ ಬಂದೆವೊ ಪ
ಮನ್ನಿಸದೆ ಮಮತೆಯಿಂದ ಭಿನ್ನ ನುಡಿಗಳಾಡಿ ನಮಗೆ
ಹಣ್ಣು ತೋರಿ ಕಾಳಕೂಟವನ್ನು ಕೊಡುವರೇನೊ ಕೃಷ್ಣ ಅ
ಐದುವದಕೆ ಶಕ್ಯವಲ್ಲದ ಅಪ್ರಮೇಯ
ಆದಿಪುರುಷ ಅಮರಸನ್ನುತ
ಶ್ರೀದ ನಮ್ಮ ಕೈಯ ಬಿಡದೆ ಆದರಿಸಬೇಕು ಪರವ-
ರಾದರೇನು ನಿನ್ನ ಶರಣರಾದ ಮೇಲೆ ಬಿಡುವುದುಂಟೆ೧
ಬಂಧುವರ್ಗವನ್ನು ಬಿಡುವುದು ಸ್ತ್ರೀಯರಿಗೆ
ನಿಂದ್ಯವೆಂದು ಶಾಸ್ತ್ರ ಪೇಳ್ವುದು
ಎಂದೆಗೆಂದಿಗೆಮಗೆ ನೀನೆ ಬಂಧುವೆಂದು ಬಂದಿಹೆವೊ
ಸಿಂಧುಶಯನ ಎಮ್ಮನ್ಯಾಕೆ ಇಂದು ಹೋಗಿರೆಂಬೆ ನೀನು೨
ಶಮದಮಾದಿ ಗುಣಗಳಿಂದಲಿ ಸಜ್ಜನರು
ಕ್ರಮದಿ ನಿನ್ನ ಮೂರ್ತಿ ಮನದಲಿ
ಮಮತೆಯಿಂದ ಪೂಜಿಸುತ್ತ ಗಮಿಸುವರೊ ನಿನ್ನ ಪುರಕೆ
ನಮಗೆ ಮಾತ್ರ ಪತಿಸುತಾದ್ಯರಮಿತ ಸುಖವ ಕೊಡುವರೇನೊ ೩
ಮೋಕ್ಷ ಇಚ್ಛೆಯಿಂದ ನಿನ್ನನು ಭಜಿಪ ಜನರಾ
ಪಕ್ಷ ವಹಿಸಿದಂತೆ ನಮ್ಮನು
ರಕ್ಷಿಸದೆ ಬಿಡುವರೇ ಕಟಾಕ್ಷದಿಂದ ಈಕ್ಷಿಸದೆ
ಲಕ್ಷ್ಮೀದೇವಿ ನಿಮಗೆ ಬಹಳಾಪೇಕ್ಷೆಯಿಂದ ಮೋಹಿಸಿದಳೆ ೪
ಅನಘ ನಿನ್ನ ನೋಡಿ ಮೋಹಿಸಿ ಅಂತರಾತ್ಮ
ತನುವು ಮನವು ನಿನಗೆ ಅರ್ಪಿಸಿ
ಜನನ ಮರಣದಿಂದ ಜನರು ದಣಿವರೇನೂ ಕಾಂತ ನಮ್ಮ
ಮನಸಿನಂತೆ ಒಲಿದು ಸಲಹೊ ವನಜನಾಭ ವಿಜಯವಿಠ್ಠಲ ೫

೨೪೮
ನಿನ್ನನೆ ನಂಬಿದೆ ಅನ್ಯರೊಬ್ಬರ ಕಾಣೆ | ಮಧ್ವರಾಯಾ ಪ
ನಿಮ್ಮ ಸಿದ್ಧಾಂತದಿ ಮನವ ನಿಲ್ಲಿಸಯ್ಯ | ಮಧ್ವರಾಯಾ ಅಪ
ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲು || ಮಧ್ವರಾಯಾ ||
ಗತಿಯ ಕಲ್ಪಿಸಿ ಸಜ್ಜನರ ತತಿಗಳ ಕಾಯಿ || ಮಧ್ವರಾಯಾ ೧
ತಂದೆ ತಾಯಿ ಬಂಧು ಬಳಗವೆಲ್ಲವು ನೀನೆ | ಮಧ್ವರಾಯಾ |
ಎಂದೆಂದಿಗು ನಿಮ್ಮ ಪೋದಿರುವಂತೆ ಮಾಡೈ | ಮಧ್ವರಾಯಾ ೨
ಬಾಲಕೃಷ್ಣನ ಸೇವೆ ಮೇಲಾಗಿ ಮಾಡುವ | ಮಧ್ವರಾಯಾ |
ಮೂಲ ಮೂವತ್ತೇಳು ಮೇಲು ಗ್ರಂಥಗಳಿತ್ತೆ | ಮಧ್ವರಾಯಾ ೩
ಶ್ರೀನಿಧಿ ಕೃಷ್ಣನೆ ಜಗಕೆಲ್ಲ ದೊರೆಯೆಂಬ | ಮಧ್ವರಾಯಾ |
ಆನಂದ ಮುನಿಯೆಂದು ನೀನು
ಹೆಸರು ಪೊತ್ತೆ | ಮಧ್ವರಾಯಾ ೪
ಅಜಪದಕೆ ಬಂದು ಅಖಿಲರ ಪಾಲಿಪ | ಮಧ್ವರಾಯಾ |ವಿಜಯಸಾರಥಿ ಕೃಷ್ಣ ವಿಜಯವಿಠ್ಠಲಪ್ರಿಯ | ಮಧ್ವರಾಯಾ ೫

೪೦೯
ನಿನ್ನವರ ಸಂಗ ಎಂತಹದಯ್ಯಾ
ಅನಂತ ಜನ್ಮದ ಪಾಪ ಪುಂಜರ ನಾನು ಪ

ಬಾರೆ ಸುಜನರ ಮನಕೆ ತಾರೆ ಗಂಗೋದಕವ
ಸೇರೆ ನಿನ್ನಡಿಗಳಲಿ ಸಾರೆ ಉತ್ತಮರ ಕೀರ್ತಿ
ಬೀರೆ ನಿನ್ನಯ ಮಹಿಮೆ ಕೋರೆ ನಿರ್ಮಳ
ದಾರಿಯಾ ನೀರೆಯರ ಶಶಿಬಿಂಬ ಮೋರೆ ಬಣ್ಣಕೆ ಮೆಚ್ಚಿ
ಕಾರ್ಯ ಕಾರಣ ಜರಿದು ಭಾರಿ ತಿರುಗವನಿಗೆ೧

ಏಕಾದಶಿ ದಿನ ಬೇಕೆಂದು ಮನವಿಟ್ಟು
ಪಾಕನ್ನ ಮಾಡಿಸುವನೊ
ಸಾಕಿದವರನ ಬಡಿದು ನೂಕಿ ಸತಿಯಳಿಂದಾ
ನೇಕಪರಿ ಮಾಡಿಸುವನೊ
ಪೋಕತನದಲ್ಲಿ ವಿವೇಕ ರಹಿತನಾಗಿ
ಗೋಕುಲವ ಹಳಿದು ಕೋ ವಾರೆವಿದ್ದವನಿಗೆ೨

ಪರರ ವಡವೆಯ ನೋಡಿ ಧರಿಸಲಾರದೆ ಮನ
ಮರಗಿ ನಿಷ್ಠುರನಾಡಿ ಇರಳು ಹಗಲೂತ್ತ-
ಮರ ಬೈದು ಪಾಪಕ್ಕೆ ಗುರಿಯಾಗಿ ನಸುನಗುತ
ಪಿರಿದು ದುರ್ವಿಷಯದೊಳು ಹೊರಳಿ ಹಕ್ಕಲನಾಗಿ
ಮರಳಿ ಜನಗಳಲ್ಲಿ ಜನಮವಾಗುವನಿಗೆ ೩

ಅತಿಥಿ ಅಭ್ಯಾಗತರ ಕಂಡು ಸ್ಮರಿಸದೆ
ಮತಿಹೀನವಾಗಿ ಭ-
ಕುತಿ ಲೇಸ ತಾ ತಾ ಕೊಂಬೆನಯ್ಯಾ ಆರನಾರನಾದರು ಕರಿಯೆ
ಹಿತದವರ ಜರಿದೆನೋ ಮಿತಿಯಿಲ್ಲನಾಚಾರ
ಚತುರೋಕ್ತಿಯಲಿ ನೆನೆಸಿ
ಪ್ರತಿ ಯಾರು ನಿನಗೆಂದು ಗರ್ವದಲ್ಲಿದ್ದವನಿಗೆ ೪

ಆದಿಯಲಿ ಬಂದದ್ದು ಅಂತ್ಯದಲಿ ಪೋಗುವ
ಹಾದಿಯನು ತಿಳಿತಿಳಿದು
ಕ್ರೋಧವನು ಬಿಡದೆ ಕಾದುವೆನು ಹಲ್ಲು ಕಡಿದು
ಸಾಧುಗಳ ನೋಡದಲೆ ವೇದಾರ್ಥಗಳ ಓದಿ ಶೋಧಿಸಿ ಕೇಳಿ
ವಾದವನು ಮಾಡಿ ಸಂಪಾದಿಸುವ ದುರ್ಧರನಿಗೆ೫
ದಿನವೆಂದು ತಿಳಿಯದಲೆ ತೃಣ ಮೊದಲಾಗಿ
ದುರ್ಧನಕೆ ಕೈಕೊಡುವೆ | ಮೊದಲೆ
ಕನಸಿನೊಳಗಾದರೂ ಗುಣಿಸುವೆ ಪರರ ಹಿಂಸೆಯನು ಬಿಡೆ
ಕ್ಷಣವಾದರು ತನುವಿನ ಕ್ಲೇಶದಲಿ
ದಿನವ ಹಾಕಿದೆ ವ್ಯರ್ಥ
ದಣಿದಣಿದು ಈ ಪರಿಯನು ಮಾಡಿದವನಿಗೆ ೬
ಹುಟ್ಟಿದಾರಭ್ಯವಾಗಿ ಶಿಷ್ಟಾಚಾರವ ತೊರೆದು
ಕೆಟ್ಟ ಬಾಳಿದೆ ಧರಣೀಲೀ
ಸುಟ್ಟ ಸಂಸಾರದೊಳು ಸಟಿಯಾಡಿ
ಗುಟ್ಟಗುಂದಿದೆ ವಿಜಯವಿಠ್ಠಲ ನಿನ್ನ ನೆರೆ ಮರೆದು
ಕೆಟ್ಟು ನರಕಕ್ಕೆ ಮನಮುಟ್ಟಿ ಬೀಳುವವನಿಗೆ ೭

೪೧೨
ನೀ ಪಾಲಿಸದಿರಲು ನಾ ಪೋಗುವುದು ಎತ್ತ
ನೀ ಪೇಳೊ ಪರಮ ಪುರುಷಾ
ಅಪಾರ ಮಹಿಮ ಅಗಣಿತ ನಾಮ ಸುರ ಪ್ರೇಮ
ಸ್ವರ್ಣ ಗಿರಿವಾಸ ನರಕೇಶ ಭೂಷಾ ಪ
ಉದರ ಚಿಂತಿಯಲಿ ಉದಯದಲಿ
ಯೆದ್ದು ಅವರಿವರ ಸದನದಲ್ಲಿಗೆ ಹೋಗದೆ
ಮೃದು ವಾಕ್ಯವಾಡದಲೆ
ಮದ ಗರ್ವ ಬಲದಿಂದ ಎದುರಾದವರ ಜರಿದೆ
ಮನಸಿನ ಕ್ಲೇಶದ ಪರಸುದತಿಯರನೀಕ್ಷಿಸಿ
ವಿದಿತ ಕರ್ಮಗಳ ತೊರೆದೆ
ಒದಗಿ ಬಂದ ಪುಣ್ಯ ಬರಿಗೈದು ಪಾಪದ ಹುದಲೊಳಗೆ
ಬಿದ್ದು ಸಂಪದವಿಗೆ ದೂರದವನಾ೧
ಉತ್ತಮರ ನಿಂದಿಸಿದೆ ಉಚಿತಾರ್ಥ ತಿಳಿಯದಲೆ
ಹೆತ್ತವರನ್ನ ಜರಿದೆ
ಹತ್ತೆಗರೆದು ಪರಿಪಾಲಿಸಿದ ದಾತರನು
ಹೊತ್ತಾಕೆ ಪ್ರೀತಿ ಪೇಳುವೆ
ಮತ್ತೆ ಧರ್ಮವೆಯಿಲ್ಲಾ ಮಹಾಕೃಪಣನಾಗಿ ಪರ
ವಿತ್ತಾಶೆ ಪೋಗಿ ಮುಳವೆ
ಚಿತ್ತಪಲ್ಲಟವಾಗಿ ವಿಷವೆಂಬ ಹಾವಿನ
ಹುತ್ತಿನೊಳು ಬಿದ್ದು ಪುನಿತನಾಗದವನಾ ೨
ಗುರು ನಿಂದಕರ ನೋಡಿ
ಸರವಾಗಿ ಪೋಗಳುವೆನೊ ವೇದ ಸಮ್ಮತವೆ ಬಿಟ್ಟು
ಮರೆವೆ ನಿನ್ನಯ ಸ್ಮರಣೆ ಗತಿಗೆ ಸಾಧನವೆಂದು
ಅರಿದರಿದು ಬುದ್ಧಿಗೆಟ್ಟು
ಹರಿವಾಸರದುಪವಾಸ ಮಾಡುವ ಜನರಿಗೆ
ಮುರಳಾಡಿ ಮುಟ್ಟಿಯಲಿಟ್ಟು
ಪರಮ ಜಾಗರ ತೊರೆದು ಹಿರಿ ಪಾಮರನಾಗಿ
ಹರಣ ಸ್ಥಿರವೆಂದು ಮದುಕರಿಯಂತೆ ತಿರುಗುವೆ ನಾ೩
ಕಾಸಿಗೆ ಕಾಸು ಘರ್ತಿಸಿ ಗಳಿಸಿ ಬಿಡದೆ
ಮೀಸಲಾ ಪದಾರ್ಥವೆಂಬೆ
ದೋಷಕ್ಕೆ ಗುರಿಯಾಗಿ ದುರ್ಜನರ ಒಡಗೂಡಿ
ರಾಸಿ ದುರನ್ನ ಉಂಬೆ
ಆಶೆಯನು ತೊರಿಯದಲೆ ಉಪರಾಗ ಪರ್ವದಲಿ
ಕಾಸು ದಾನವನು ಕೊಂಬೆ
ಲೇಸಾದರೆ ಹಿಗ್ಗಿ ಹಾರೈಸುವೆನು ಇಷ್ಟು
ಕ್ಲೇಶ ಬಂದರೆ ದೈವವೆಂದು ದೂಷಿಸುವೆನಾ೪
ಒಂದೇ ಎರಡೇ ಎನ್ನ ಅಪರಾಧ ಪೇಳಿದರೆ
ಎಂದೆಗೆಂದಿಗೆ ಸವಿಯದು
ನೊಂದು ದುಶ್ಚಿತ್ತದಲಿ ನೀನೆ ಗತಿ
ಎಂದು ಬಾಗಿಲ ಕಾಯಿದುದು
ಬಂದು ಮಾತುರದಲ್ಲಿ ಬಲು ದಯಾಳು ಎನ್ನ
ಸಂದೇಹವನು ತೊಡೆದು
ಮುಂದಾದರೂ ಭವದ ಅಂಧ ಕೂಪದೊಳಿಡದೆ
ಪೊಂದಿಸುವ ನಿನ್ನವರೊಳಗೆ ವಿಜಯವಿಠ್ಠಲ ಎನಗೆ ೫

೩೮
ನೀನೆ ದೀನಜನ ಬಂಧೂ ದಯಾರಸ ಸಿಂಧೂ ಪ
ದಿವಿಜರ ಸಮುದಾಯವಿದ್ದರೇನು
ಅವನ ವ್ಯಾಳೆಗೆ ಒದಗಲಿಲ್ಲಾ
ಅವನಿವಲ್ಲಭ ಅವ್ಯಯವೆಂದರೆ
ಅವಸರಕ್ಕೊದಗಿ ಕಾಯದೇ ಕೃಷ್ಣಾ ೧
ಭೂತ ಪರಿವಾರವಿದ್ದರೇನು
ಆತನ ಅಭಂಗಕ್ಕೆ ಒದಗಲಿಲ್ಲಾ
ಪೂತಾತ್ಮ ಪುರುಷೋತ್ತಮನೆಂದರೆ
ಚಾತುರ್ಯದಿಂದ ಸಲಹಿದೆ ಕೃಷ್ಣಾ ೨
ಚತುರಾಸ್ಯಾದಿಗಳು ಇದ್ದರೇನು
ಶ್ರುತಿಯಹಾನಿರೆ ಒದಗಲಿಲ್ಲಾ
ಚತುರಾತ್ಮ ಸಿರಿಪತಿ ಉರಗಾದ್ರಿ
ಪತಿ ವಿಜಯವಿಠ್ಠಲನೇ ಕಾಯ್ದ ಕೃಷ್ಣಾ೩

೫೨೦
ನೀನೆ ಮಾಡಿದ ಲೀಲೆ ಬಲು ಸುಖವೊ |
ಆನೇನು ದು:ಖವನು ಬಡುವುದಿಲ್ಲವೋ ಜೀಯ |ಪ
ತೋಟವನು ಮಾಡಿಸಿ ಅದರೊಳಗೆ ಒಂದು ಫಲ |
ನಾಟಿಸಲು ಬೆಳೆದ ಫಲ ಪಕ್ವವಾಗೆ |
ನೀಟಾದ ಫಲವೆಂದು ಅರಸು ಕೊಯ್ ತರಿಸಲು
ತೋಟಿಗಾಗೇನು ದು:ಖ ಅರಸಿನಿಂಗೇನೈಯ೧
ನಿನ್ನ ಸಂಕಲ್ಪನೆ ಸ್ಥಿರವಾಗಿ ಇದೆ ಇದೆ
ಅನಂತ ವೇದಗಳು ಪೊಗಳೂತಿವಕೊ
ಪನ್ನಗಶಯನನೆ ನೀನು ಮಾಡಿದ ಕ್ಲುಪ್ತ
ಅನ್ಯಥಾವಾಗುವದೆ ಅನುಭವಾದಿಗಳಿಗೆ ೨
ಸುಖ ದು:ಖವೆ ಎರಡು ನಿನ್ನ ವಶವಾಗಿದೆ
ಸಖನಾಗಿ ಸುಖ ಉಣಿಸಲು ಹಿಗ್ಗುವೆ
ದು:ಖ ತಂದಿತ್ತರೆ ಅಳಲಿ ಬಳಲುವದ್ಯಾಕೆ
ಅಖಿಳ ನೀನಾವದಿತ್ತದೇ ಬಲು ಲೇಸು ೩
ನೀನೆ ಕಲ್ಪಿಸಿದರೆ ಸೈರಿಸಲಾರದೆ ವೇಗ |
ನಾನು ವ್ಯಧಿಕರಣ ಪೇಳಿದರಾಯಿತೆ |
ಆನಂದಕೆ ಹ್ರಾಸ ಬರುವುದೆ ಶಾಶ್ವತ |
ಏನಾದರೇನು ನೀನಾಡಿದಾಟವೆ ಸಮ್ಮತ | ೪
ಸತ್ಪಾತ್ರರಾ ನೋಡಿ ದಾನವಿತ್ತರೆ ಅವಗೆ |
ಉತ್ತಮಾ ಪದ ಉಂಟು ಪುಶಿಯಲ್ಲವೋ |
ಸತ್ಪಾತ್ರ ನೀನೆಂದು ಪುತ್ರಾಖ್ಯ ಧನವಿತ್ತೆ |
ಉತ್ತುಮಾ ಗತಿ ನೀಯೋ ವಿಜಯವಿಠ್ಠಲ ಕರುಣಿ ೫

೫೨೧
ನೀನೇನ ಮಾಡಲಾಪಿಯೋ ಲಕುಮೀಶಾ |
ನಾನೀಗ ಪಡೆದದ್ದು ಉಣದಲೆ ಪೋಗುವದೆ | ಪ
ಲೋಕದೊಳಗೆ ನಿನ್ನ ಕೊಂಡಾಡಿ ಪ್ರತಿದಿನ
ಏಕ ಭಕುತಿಲಿ ಸರ್ವೋತ್ತಮನೆಂದು
ಏಕಾಂತ ಭಜಿಪ ಮನುಜಗಾದರು ಬರೆದ
ವಾಕು ತಪ್ಪುವದೇನೋ ಅಜನು ನಿರ್ನೈಸಿದ೧
ಮುಂದೆ ಕೊಡುವ ಫಲಕೆ ಕರ್ತ ನೀನಲ್ಲದೆ
ಹಿಂದಣಿಂದಲಿ ಬರುವ ಕಾಲಾಖ್ಯಕೆ ಒಂದು
ಬಿಂದು ಮಾತ್ರ ತೊಲಗಿಪ ನಡತಿ ಕಾಣೆ
ಅಂದಲ್ಲಿ ಏನು ಫಲ ಎನ್ನ ಕರ್ಮವಷ್ಟೇ ೨
ಇದ್ದದೊಂದು ಮರಿ ಅಡಗಾಣಿಸಿ ಬಂದು
ಹದ್ದು ತಾ ವೈಯಲು ಆ ಕುರುಬ ಯೆಲ್ಲಿ
ಇದ್ದರೇನು ಭಯ ವಿಜಯವಿಠ್ಠಲ ನಿನ್ನ
ಪೊದ್ದಿದವಗಾದರು ಅನುಭವಿಸದೆ ಬಿಡದು೩

೪೧೧
ನೀನೋಲಿದುದ್ದಕ್ಕೀ ಇಹ ಸೌಖ್ಯವೇಯಿನ್ನು
ನಾನೊಲ್ಲೆ ನಾನೊಲ್ಲೆ ಸರ್ವೇಶಾ ಪ
ನಿನ್ನನುರಾಗದಿ ಗತಿಯೆಂದು ನಂಬಿದ
ಮಾನವನೊಡನೆ ನೀನಾಡುವದೆಲ್ಲಾ ಅ.ಪ
ಷಡುರಸ ನಾನಾ ಸುಭೋಜನವ ಬಿಡಿಸಯ್ಯ ದಾನವ ಭಂಜನ
ಒಡಲಿಗೋಸುಗ ನಿನ್ನನು ಸೇವಿಸುವೆ
ಒಡೆಯ ದಾಂಟಿಸೊ ಭವಕಡಲವೇಗ ಜ್ಞಾನ
ತೋರಿಸದಿರೆ | ದಿವ್ಯಾಂಬರಗಳ
ಉಡಿಸಿ ಸ್ವರ್ಣಾಭರಣಗಳ ತೊಡಿಸಿ | ಬರಿ ಮಾತಿನಲಿ ಮೊರೆ
ಯಿಡುವೆನೊ ವಾಕ್ಕಾಯದಿಂದಲೀ ೧
ಜನರು ಜನಪರಿಂದ ಮನ್ನಣೆ ಸ್ವಲ್ಪ |
ಎನಗೆ ಹತ್ತದು ಕಾಣೊ ನಿನ್ನಾಣೆ ||
ಮನುಜನ ಸೈಸಿದವನ ಬಾಯೆನೆ ಬರೆವಾ |
ಹನತೇರು ಮೊದಲಾದ | ಘನ ವಿಭವ ದೊರೆಯದೆ |
ಜನುಮದಲಿ ಬಂದದಕೆ ಮಹಾ ಸಾಧನವಿಧಾರಿ ತೋರಿಸಿ |
ನಿನ್ನ ದಾಸನೆನಿಸದೆ | ನಿಸ್ಸಾರವೆಣಿಸಿ ತೋರ್ಪ ದೇವ ಸೈಸೈ ೨
ಕಂಡಕಂಡಲಿಯೆನ್ನ ತಿರಿಗಿಸಿ ಬಹು
ಥಂಡ ಥಸ್ಂಡದಲೆನ್ನ ಮರುಗಿಸಿ |
ಮಂಡಲದೊಳು ಪ್ರಚಂಡನೆನಿಸದಿರು |
ಉಂಡ ಪರಾನ್ನಕೆ ದಂಡನೆ ಬಹಳಲ್ಲಿ |
ತೊಂಡ ನಾನಯ್ಯ ಕರುಣಸಾಗರ |
ಖಂಡ ಮತಿಯನು ಕೊಡದೆ ಮುಕ್ತರ |
ಹಿಂಡಿನೊಳು ಕೂಡಿಸುವದೆಮ್ಮನು |
ಅಂಡ ಜಾಂಸಗ ವಿಜಯವಿಠ್ಠಲಾ ೩

೧೪೫
ನೀಲವರ್ಣ ನಿರುಪಮ
ಶ್ರೀಲೋಲನಲ್ಲೆ ಭಾಮೆ ಅವಲೋಲನಲ್ಲೆ ಭಾಮೆ ಪ
ಲೋಲನೊ ಬಾಲನೊ ಗೋಪಾಲನೊ ನಾನರಿಯೆ ಅ.ಪ.
ಇಂದು ತಮನ ಕೊಂದು ವೇದವ ತಂದವನಲ್ಲೆ ಭಾಮೆ
ಅವತಂದವನಲ್ಲೆ ಭಾಮೆ
ತಂದವನೊ ಬಂದವನೊ ಅದರಂದವನು ನಾನರಿಯೆ ೧
ಅರ್ಥಿಯಿಂದಲಿ ಗಿರಿಯ ಬೆನ್ನಿಲಿ ಪೊತ್ತವನಲ್ಲೆ ಭಾಮೆ
ಅವ ಪೊತ್ತನಲ್ಲೆ ಭಾಮೆ
ಪೊತ್ತವನೊ ತೆತ್ತವನೊ ಅದರರ್ಥವನು ನಾನರಿಯೆ ೨
ಭೂಮಿ ಚೋರನ ಕೊಂದ ವರಾಹ ಸ್ವಾಮಿಯಲ್ಲೆ ಭಾಮೆ
ಅವ ಸ್ವಾಮಿಯಲ್ಲೆ ಭಾಮೆ
ಸ್ವಾಮಿಯೊ ಪ್ರೇಮಿಯೊ ಬಹು ಕಾಮಿಯೊ ನಾನರಿಯೆ೩
ತರಳ ಪ್ರಹ್ಲಾದನಿಗೊಲಿದ ನರಹರಿಯಲ್ಲೆ ಭಾಮೆ
ಅವ ನರಹರಿಯಲ್ಲೆ ಭಾಮೆ
ನರಹರಿಯೊ ಸಿರಿದೊರೆಯೊ ಆ ಉರವಣಿಗೆಯ ನಾನರಿಯೆ೪
ನೆಲನ ಈರಡಿ ಮಾಡಿ ಅಳೆದ ಚೆಲುವನಲ್ಲೆ ಭಾಮೆ
ಅವ ಚೆಲುವನಲ್ಲೆ ಭಾಮೆ
ಚೆಲುವನೊ ಮಲೆವನೊ ಅಂಡಲೆವನೊ ನಾನರಿಯೆ ೫
ಕೊಡಲಿ ಮಸೆದು ರಾಯರನೆಲ್ಲ ಕೆಡಹಿದನಲ್ಲೆ ಭಾಮೆ
ಅವ ಕೆಡಹಿದನಲ್ಲೆ ಭಾಮೆ
ಕೆಡಹಿದನೊ ಮಡುಹಿದನೊ ಆ ತೊಡರವನು ನಾನರಿಯೆ ೬
ಸೀತಾ ಚೋರನ ಕೊಂದ ರಘುನಾಥನಲ್ಲೆ ಭಾಮೆ
ಅವ ನಾಥನಲ್ಲೆ ಭಾಮೆ
ನಾಥನೊ ಖ್ಯಾತನೊ ಆ ಮಾತನು ನಾನರಿಯೇ ೭
ಮಾವನ ಕೊಲಲು ಮಧುರೆಗೆ ಪೋದ ದೇವನಲ್ಲೆ ಭಾಮೆ
ಅವ ದೇವನಲ್ಲೆ ಭಾಮೆ
ದೇವನೊ ಭಾವನೋ ಗೋ ಕಾವನೊ ನಾನರಿಯೆ೮
ತ್ರಿಪುರಾಂಗನೆಯರ ವ್ರತವನಳಿದ ಚಪಳನಲ್ಲೆ ಭಾಮೆ
ಅವ ಚಪಳನಲ್ಲೆ ಭಾಮೆ
ಚಪಳನೊ ವಿಪುಳನೊ ಆ ವಿಪರೀತವ ನಾನರಿಯೆ ೯
ಓಜೆಯಿಂದ ತೇಜಿಯನೇರಿದ ರಾಜನಲ್ಲೆ ಭಾಮೆ
ಅವ ರಾಜನಲ್ಲೆ ಭಾಮೆ
ರಾಜನೊ ಭೋಜನೊ ಆ ಸೋಜಿಗವ ನಾನರಿಯೆ ೧೦
ಸೃಷ್ಟಿಗೆ ಕರ್ತನು ವಿಜಯವಿಠ್ಠಲನಲ್ಲೆ ಭಾಮೆ
ಅವ ವಿಠ್ಠಲನಲ್ಲೆ ಭಾಮೆ
ವಿಠ್ಠಲನಾದರೆ ಇಷ್ಟೊಂದ್ಯಾತಕೆ ದಟ್ಟಡಿಗಳಿಗೊಂದಿಸುವೆ ೧೧

ನುತಿಸಿ ಬೇಡುವೆ ಕರವ ಮುಗಿದು :

೩೩೬
ನುತಿಸಿ ಬೇಡುವೆ ವರವ ಕರವ ಮುಗಿದು
ಸತತ ಲಕುಮಿಪತಿಯ ಭಕುತಿ ಒಂದೇ ಇರಲಿ ಪ
ಮದನಶರ ತಿಮಿರಾರ್ಕ ಸುಜನವಾರ್ಧಿಗೆ ಪೂರ್ಣ
ಬದರಮಂಗಳಗಾತ್ರ ಬಲು ಸುಲಭ
ಬುದ್ಧನಾಗಿ ಶಿಷ್ಯರ್ಗೆ ಸುಧಿಯ ಪೇಳುವ ಮೌನಿ
ಎದಿರಿಲ್ಲ ನಿಮಗೆಲ್ಲಿ ಗುರುವೆ ಸುರತರುವೆ ೧
ಅಂದವಾದ ಕಾವ್ಯ ಸಾಮಥ್ರ್ಯಧೀರುವೆ
ಮಂದಹಾಸದಿ ನೋಳ್ಪ ಭಕುತ ಜನರ
ಒಂದೊಂದು ಪದಾರ್ಥ ಪಿಡಿವ ಗಂಟಲೆ ರಾಹು
ನಂದತೀರ್ಥರ ಮತಕೆ ಕೇತುಸ್ಥಾನಿಯ ನಿತ್ಯ ೨
ವಾದಿಗಳೆದೆಯ ಶೂಲ ಸತ್ಯಪ್ರಿಯ ಕರಜಾತ
ಸಾಧು ಸಜ್ಜನಗೇಯ ಸತ್ಯಬೋಧ
ಮೋದಿ ಹಯವದನ ರಾಮ ವಿಜಯವಿಠ್ಠಲ
ನಾದಿದೈವವೆಂದು ಎಣಿಸುವ ಜಪಶೀಲ ೩

೫೨೨
ನೆಚ್ಚದಿರು ಸಂಸಾರ ಕಡೆಗೆ ಹಾಕುವುದಲ್ಲ
ಮಚ್ಚುಗೊಳಿಸುವುದು ವಿಷಯದಲಿ
ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ-
ಅಚ್ಯುತನ ಪಾದವನು ನಂಬೊ ಪ್ರಾಣಿ ಪ
ಪುಂಪೆಣ್ಗಳಿಂದ ಪುಟ್ಟಿದ ದೇಹವನು ತಿಳಿ
ಕೆಂಪು ಬಿಳಿದಿನ ವರ್ಣ ಮಿಳಿತ
ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ-
ಗಂಪು ನಾರುವುದು ಅದ ತೊಳೆಯದೆ ಇರಲು ೧
ಜನಿಸಿದಾಕ್ಷಣ ಕಾಯು ಕಡಮೆಂದು ತಿಳಿಯದಲೆ
ಜನನಿ ಜನಕರು ಸುಖಿಸುತಿಹರು
ತನುಭ್ರಮಣವಲ್ಲದೆ ಚಿದ್ರೂಪ ಬಲ್ಲರೆ
ಕೊನೆಗೆ ಏನಾಗುವುದೊ ಪ್ರಾಣಿ ೨
ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ
ಭಳಿರೆ ಇವ ಮಹಾತ್ಮನೆಂದು
ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ
ಹಳಿದು ಹಲ್ತೆರೆದು ಅಣಕಿಪರೋ-ಪ್ರಾಣಿ ೩

ಹುಬ್ಬಿನಿಂದಲೆ ಹೊಡೆದು ಹೃದಯದ ಕಗ್ಗಂಟು
ಕಬ್ಬು ಕಾರ್ಮುಕನಿಂದ ಬಿಡಿಸಿ
ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ
ಉಬ್ಬಸವ ಬಡಿಸುವಳೊ ನಾರಿ ಪ್ರಾಣಿ ೪
ಯೌವನವೊದಗಿದಾಗ ಏನೆಂದರೂ ಅಪ್ಪ
ಅವ್ವಣ್ಣನೆಂದು ನಸುನಗುತ
ಗವ್ವಳಿಕೆ ವೃದ್ಧಾಪ್ಯ ಬಂದೊದಗಲು ಇವನ
ಬವ್ವನ ತೆರೆದಲಾಡಿಪರೋ-ಪ್ರಾಣಿ ೫
ನಿಷ್ಠಕ್ಕೆ ದೇಹವನು ಮಾಡಿಕೊಂಡಂತೆ ನೀ
ದುಷ್ಕರ್ಮಕೊಳಗಾಗದಿರೆಲೋ
ನಿಷ್ಕಂಟಕವಾದ ಮಾರ್ಗದಲಿ ನರಹರಿಯ
ನಿಷ್ಕಾಮದಲಿ ಭಜಿಸೊ ಮನವೆ ಪ್ರಾಣಿ ೬
ಅಂ¨ಲಿಗೆ ಗೃಹಪಾಲ ಮನೆ ಮುಂದೆ ಹಗಲಿರುಳು
ಹಂಬಲಿಸಿ ಬಿದ್ದಂತೆ ನೀನು
ಉಂಬ ವಿಷಯಂಗಳಿಗೆ ಕವಿ ಜೋತು ಬಿದ್ದು ಈ
ಡಿಂಬವನು ಪೋಷಿಸದಿರೆಲವೊ-ಪ್ರಾಣಿ ೭
ದೇಹಕ್ಕೆ ಬಲವಾಗಬೇಕೆಂದು ಎಲ್ಲರೊಳು ಕಂಡಲ್ಲಿ
ಸ್ನೇಹಭಾವವನ್ನು ಬಯಸಿ
ಆಹಾರಗಳ ತಿಂದು ಕಾಯ ಪುಷ್ಟಿಯಿಂದ
ಮೋಹಕ್ಕೆ ಒಳಗಾದೆಯಲ್ಲೋ-ಪ್ರಾಣಿ೮
ಸ್ವಲ್ಪ ದಿನವುಳಿಯಿತು ಒಂದು ಸಾಧನ ಕಾಣೆ
ಕಲ್ಪಾಯು ನಿನಗಿಲ್ಲವಲ್ಲೊ
ಬಲ್ಪಂಥಗಳ ಮಾಡಿ ಭೋಗಪಡದಿರು ನಾಗ-
ತಲ್ಪನ್ನ ಮೊರೆಹೋಗಲೋ-ಪ್ರಾಣಿ೯
ದೇಶ ದೇಶವ ತಿರುಗಿ ಬಳಲಿ ಬಾಯಾರಿ ನೀ
ಕ್ಲೇಶಕೊಳಗಾಗಿ ಹೊನ್ನುಗಳ
ಏಸೇಸು ತಂದದ್ದು ಏನಾಯಿತೋ ಒಂದು-
ಕಾಸು ನಾಳೆಗೆ ಕಾಣೆಯೋ-ಪ್ರಾಣಿ೧೦
ಎಂದಿಗಾದರೋ ಇದೇ ಸಂಸಾರ ವಿಸ್ತಾರ
ಒಂದಕ್ಕೆ ಒಂದೊಂದು ಅಧಿಕ
ಬಂಧನವಲ್ಲದಲೆ ಲೇಶ ನಿರ್ಮಲ ಕಾಣೆ
ಪೊಂದು ಸಜ್ಜನರಲ್ಲಿ ಮಂದ-ಪ್ರಾಣಿ೧೧
ನಿತ್ಯ ಗಂಡಾಂತರದಿ ಬಿದ್ದು ಸಕಲಕ್ಕೆ
ಕರ್ತೃ ನಾನೆಂದು ಕೂಗುವಿಯಲೊ
ಮೃತ್ಯು ನಗುವುದು ನಿನ್ನ ಹೆಡತಲೆಯಲಿ ನಿಂದು
ಚಿತ್ತದಲ್ಲಿ ತಿಳಿದು ತಲೆ ಬಾಗೊ-ಪ್ರಾಣಿ ೧೨
ದೊಡ್ಡವನು ನಾನು ಎನಗೆಲ್ಲ ಜನರು ಬಂದು
ಅಡ್ಡಬೀಳುವರೆಂಬ ಮಾತು
ಹೆಡ್ಡತನ ತಾಳದಿರು ಕೊನೆಗೆ ಅನುಭವಕ್ಕು
ಕಡ್ಡಿಯಂದದಿ ಮಾಳ್ಪರೋ-ಪ್ರಾಣಿ ೧೩
ಕೋಟಿಯಾದರು ಕೇಳು ಅವರೋಕ್ಷಿಗಾದರೂ
ಕೋಟಲೆಯೊಳಿರದೆ ಗತಿಯಿಲ್ಲ
ತಾಟತೂಟಕ ಮಾಡಿ ಅವರಂತೆ ನುಡಿದು ಭವ
ದಾಟಬೇಕೋ ಬೇಗ ಜಾಣ-ಪ್ರಾಣಿ೧೪
ಆದರಿಸಿ ಸತಿಸುತರು ಬಂಧು ಬಳಗಕ್ಕೆ ಸಂ
ಪಾದಿಸಿ ಧನ ಧಾನ್ಯ ತಂದು
ಮೋದಪಡಿಸುವೆನೆಂದು ವಾದಿಸುವ ಮನುಜನ್ನ
ಪಾದಕ್ಕೆ ಶರಣು ಸಾರೆಲವೋ-ಪ್ರಾಣಿ ೧೫
ವನಧಿಯೊಳು ಸಪ್ತದ್ವೀಪದ ಮೃತ್ತಿಕೆ ಹಾಕೆ
ದಣುವಿಕ್ಯಲ್ಲದೆ ಪೂರ್ಣವಹುದೆ
ಇನಿತು ತಿಳಿಯೆಲ್ಲೆಲ್ಲಿ ತಂದ ಧನದಿಂದ ಭವ-
ವನಧಿ ತುಂಬದು ಕಾಣೊ ಮರುಳೆ-ಪ್ರಾಣಿ ೧೬

ಚಿತ್ರಗುಪ್ತರು ನಿತ್ಯ ಬರೆದ ಲೆಖ್ಖವು ದಿವಾ
ರಾತ್ರಿ ನೋಡುತಲಿದ್ದು ನಿನ್ನ
ಪತ್ರ ಕರದಲಿ ಪಿಡಿದು ಈ ಮೂರ್ಖ ನರಮಹಿಷ-
ಪುತ್ರನೆಂದು ನಸುನಗುವರಲ್ಲೋ-ಪ್ರಾಣಿ ೧೭

ಎನಗೆ ತನಗೆಂದು ಯಮಭಟರು ಕರಗಳ ಹೊಯಿದು
ಕಣಿದು ಭುಜ ಚಪ್ಪರುಸುತಿಹರೊ
ಅನಿತರೊಳಗೆಚ್ಚರಿಕೆ ಎಚ್ಚತ್ತು ಹರಿಚರಣ
ವನಜ ಧಾನ್ಯವ ಒಲವು ಮಾಡೊ-ಪ್ರಾಣಿ ೧೮

ಶ್ರುತಿಗೆ ಅಪ್ರಾಮಾಣ್ಯ ಬಾರದಂತೆ ಮಧ್ವ
ಮತಕೆ ವಿರೋಧವಾಗದಂತೆ
ಕ್ಷಿತಿಯೊಳಗೆ ಸುಜನರಿಗೆ ಹಿತವಾಗುವಂತೆ ಶ್ರೀ-
ಪತಿಯ ಸೇವಿಸಿ ಸುಗತಿ ಪಡೆಯೋ-ಪ್ರಾಣಿ ೧೯

ಅರ್ಥಬಾರದು ನಿನ್ನ ಸಂಗಾತ ಕೇಳ್ ಕೊನೆಗೆ
ವ್ಯರ್ಥಧಾವತಿ ಪ್ರಾಪ್ತಕರ್ಮ
ತೀರ್ಥಯಾತ್ರೆಯ ಮಾಡಿ ನಿಸ್ಸಂಗನಾಗು ಯ_
ಥಾರ್ಥಾ ಜ್ಞಾನದಿಂದ ಬಾಳೊ ಪ್ರಾಣಿ೨೦

ಶಿಥಿಲವಾಗಿ ಪೋಪ ದೇಹಕೆ ಮಮತಿಂದ
ಮಿಥುನ ಭಾವಗಳನ್ನೆ ಬಯಸಿ
ವ್ಯಥೆಪಟ್ಟು ಪಥತಪ್ಪಿ ನಡೆದು ನರಹರಿ ಸುಗಣ
ಕಥೆಗೆ ವಿಮುಖನಾಗದಿರೆಲೊ-ಪ್ರಾಣಿ ೨೧

ವನಗಿರೀ ನದಿ ಮೆದೆ ಹೊದರು ಗಹ್ವರ ಹುತ್ತ
ವನರಾಶಿ ದ್ವೀಪ ಪಾತಾಳ
ತನು ಮತ್ರ್ಯ ಸುರಲೋಕ ಜನನಿ ಜಠರದೊಳಿರಲು
ಅಣು ಮಾತ್ರ ತಪ್ಪುವುದೆ ಬರಹ ಪ್ರಾಣಿ ೨೨

ಹಲವು ಹಂಬಲ ಸಲ್ಲ ಆದ್ಯಂತಕಾಲದಲಿ
ಗಳಿಸಿಕೋ ಪೂರ್ಣಾಯು ವಾಯು
ಒಲಿಯದಲೆ ನಿನ್ನೊಳಗೆ ವಿಜಯವಿಠ್ಠಲರೇಯ
ಸುಳಿಯ ಜಾಗ್ರತನಾ ಗೆಲೋ ಪ್ರಾಣಿ ೨೩

೪೬೬
ನೆಚ್ಚಬೇಡಿ ಪತಿತನಾರಿಯ |
ಕಚ್ಚುವ ಹಾವಿನ ಸಂಗವೆನ್ನಿ || ಪ
ಮೆಚ್ಚುಗೊಳಿಪಳು ಗುಣಿಸಿ ನೋಡಿ
ನಿಚ್ಚದಲಿ ಚಿತ್ತ ಚಂಚಲಳಾಗಿ ಅ.ಪ
ಯುವ ತನಗೆ ಬರುವ ಪರಿಯಂತ |
ಯಾವದನಿತು ಮೊಗವನೆತ್ತದಲೆ ||
ಎವೆ ತೆಗೆದು ದಿಕ್ಕುಗಳು ನೋಡದೆ |
ಅವನಿಗೆ ಬಾಗಿ ನಡೆಯುತ ||
ತವರು ಮನೆಯವರನು ಹಳಿದು |
ನವನವ ಪ್ರಾವರ್ತನವನು ತೋರುತ ||
ಅವಗುಣಂಗಳಿಲ್ಲ ದೋಷಾದಲಿ |
ಲವಕಾಲವನು ಕಳೆವ ನಾರಿಯ ೧
ಪ್ರಾಯಾವಸ್ಥೆ ಬಂದು ಪ್ರಾಪ್ತವಾಗಲು |
ಆಯುತಾಕ್ಷಿಗಳ ತಿರುಹಿ ಮೆಲ್ಲನೆ ||
ಬಾಯಲ್ಲಿ ಒಂದೊಂದು ಕ್ರಮಾಸಾರದಿ |
ನೋಯ ನೋಯದಂತೆ ವಚನವ ||
ದಾಯಿಗಳಂತೆ ಮತ್ಸರಿಸಿ ಬಯ್ಯದೆ |
ಮಾಯಾವಿ ಕಲ್ಪಿಸಿ ಮುಸಿಮುಸಿ ನಗೆ ||
ಆಯಕೆ ತಗಲಿ ಕಂಡ ಜನರಿಗೆ |
ಘಾಯ ಕಾಣಿಸದಂತೆ ಮಾಳ್ಪಳ ೨
ಅತ್ತೆ ಮಾವಗೆ ಅತ್ಯಂತವಾಗಿ ತಾನು |
ಪ್ರತಿ ಉತ್ತರ ಪೇಳಲು ಅಂಜಿ ಅಂಜಿದಂತೆ ||
ಉತ್ತಮರ ಮನೋರಥವ ಕೆಡಿಸಿ |
ಅತ್ತಿಗಿ ನಾದುನಿ ಮಿಗಿಲಾದವರೆಲ್ಲ ||
ಕತ್ತೆ ನಾಯಿ ನರಿಯೆಂಬೊ ಸೊಲ್ಲಲ್ಲಾದೆ |
ಎತ್ತಲಾದರು ವಂಚಿಸಿ ಗಂಡನ್ನ ||
ತನ್ನಂತೆ ಮಾಡಿಕೊಂಡು ಹಗಲಿರುಳು ಥೈ- |
ತಥ್ಥಾ ಎಂದಾಡಿಸಿ ಕುಣಿಸುವ ಸತಿಯಳ ೩
ಮಿಥುನಭಾವಕೆ ಕೊಂಡ ತೆರದಿ |
ಪತಿಯ ಸಮಯ ನೋಡದೆ ತಾನು ||
ಸಥೆಯಿಂದಲಿ ಸಂಸಾರದೊಳಗಿದ್ದು |
ಸುತರ ಪಡೆದು ಹಮ್ಮಿಲಿ ||
ಕಥನವೆಬ್ಬಿಸಿ ಗಂಡನ್ನ ಅಡವಿ |
ಪಥವ ಹಿಡಿಸಿ ಹಣದಗೋಸುಗ ||
ಸತತ ಮನೆಯೊಳಗಿದ್ದ ಬದುಕು |
ಮಿತಿಯಿಲ್ಲದೆ ಭಕ್ಷಿಸುವ ನಾರಿಯ ೪
ಒಲಿಪಗೆ ನೀವು ಮೋಸಗೊಂಡು |
ಒಲಿಯದಿರಿ ಸ್ತ್ರೀಯರಿಗೆ ಸೋತು ||
ಕಲಿಗೆ ಪ್ರಥಮ ಪಟ್ಟದ ಗದ್ದಿಗೆ |
ಸುಲಭವಲ್ಲವೋ ಸುಖವಿಲ್ಲಾ ||
ಕೆಲಕಾಲ ಮಹಾ ಕಾತರದಿಂದಲಿ |
ವಳಗಾಗದಿರು ಒಳಿತು ಪೇಳುವೆ ||
ಜಲಜಾಕ್ಷ ವಿಜಯವಿಠ್ಠಲನ್ನ ನಂಬಿರೋ |
ನಂಬಿರೋ ನಂಬಿರೋ ಚತುರರು ೫

೪೮೮
ನೆನೆದು ನಿಷ್ಕಳಂಕರಾಗಿರೋ
ಪಂಕಜಾಕ್ಷನ ಕೂಡ ದ್ವೇಷ ಬಳಿಸುವ ಮಾಯಿ ಪ
ಮಲವಿಸರ್ಜನೆಯಾಗುವಾಗ ಮೂತ್ರವನು ಬಿಡುವಾಗ
ಹೊಲಗೇರಿಯೊಳಗೆ ಸುಳಿದಾಡುವಾಗ
ಹೊಲಿಯಾದವನು ತನ್ನ ಎದುರಿಗೆ ಬರುವಾಗ
ಕಲಿಶಿಷ್ಯನಾದ ಮಣಿವಂತನ ನೆನೆಸಿರೊ೧
ಶ್ರದ್ಧವನು ಬಿಡುವಾಗ ಸ್ವಪ್ನದೊಳಗೆ
ಇಂದ್ರಿಯ ಬಿದ್ದು ಹೋಗುವಾಗ ಉಗುಳುವಾಗ
ಬದ್ಧವಾಗಿ ಗುಹ್ಯ ತೊಳೆಯುವಾಗ ಅಪ್ರ
ಬದ್ಧನಾದ ಏಕಲವ್ಯನ ನೆನೆಯಿರೋ ೨
ಶುದ್ಧ ಅಶುದ್ಧವನು ತುಳಿದು ನೆಲಕ್ಕೆ ವರಸುವಾಗ
ವಮನವಾಗುವಾಗ ಮರಿಯದಲೆ
ಅಮಲ ಸುಖ ಮುನಿ ಗುರು ವಿಜಯವಿಠ್ಠಲ ವೈದು
ತಮಕೆ ಹಾಕುವ ಶುದ್ಧ ಕುಮತಿಯನು ನೆನೆಯಿರೋ ೩

೩೯
ನೆನೆದು ನೆನೆಸಿ ನಿಮ್ಮ
ತನುಮನದಲ್ಲಿ ಯೋಚನೆ ಮಾಡೀ
ಎಣಿಸಿ ಗುಣಿಸಿ ಮನಸಿಜನ್ನ ಜನಕನ ಲೀಲೆ ಪ
ನರನಾರಾಯಣನೀತ ಕೃಷ್ಣ
ಹರಿ ಹೃದ್ಭಾನು ಕಪಿಲನೀತ
ಹರಿನಾರಾಯಣೇನೀತ ಯೋಗೀ
ಶ್ವರ ತಾಪಸ ವೈಕುಂಠನೀತ
ಹರನಸಖ ಸ್ವಧಾಮನೀತ
ತುರಗವದನನೀತ ದಯಾ
ಕರುಣಿ ಸಾರ್ವಭೌಮನನೀತಾ ೧
ಅಜಿತಯಜ್ಞನಾಮನೀತ
ಅಜಗೆ ಪೇಳಿದ ಹಂಸನೀತ
ಸುಜನಪಾಲ ವ್ಯಾಸ ವೀ
ರಜ ಮಹಿದಾಸ ದತ್ತನೀತ
ನಿಜ ಮಹಿಮ ಧನ್ವಂತ್ರಿ ಈತ
ತ್ರಿಜಗವಳೆದುಪೇಂದ್ರನೀತ
ಭಜಕರೊಡಿಯ ವಿಷಕ್ಸೇನ ಭುಜಗಶಾಯಿವಿಭುವೆ ಈತ ೨
ಚಲುವ ಧರ್ಮಶೇತು ಈತ
ಬಲುವುಳ್ಳ ಶಿಂಶುಮಾರನೀತ
ಪೊಳೆವ ಮತ್ಸ್ಯ ಕೂರ್ಮವರಹ
ಲಲಿತನರಸಿಂಹನೀತ
ಬಲಿಗೊಲಿದ ವಾಮನ್ನನೀತ
ಕುಲವೈರಿ ರಘರಾಮನೀತ
ಕಳುವು ಮಾಡಿದನೀತ ಬತ್ತಲೆ
ಕಲಕಿ ರೂಪನಾದನೀತಾ ೩
ಪುರುಷನಾಮಕನೀತ-ವಿ
ಸ್ತರ ವಾಸುದೇವ ಜಯಪತಿ ಸುಂ
ದರ ಪ್ರದ್ಯುಮ್ನ ಈತ ನಿರಂತರ ಅನಿರುದ್ಧನೀತ ಚ
ತುರ ವಿಂಶತಿ ಮೂರುತಿಯೇ ಈತ
ಮೆರೆವ ಅಜಾದಿ ನಾಮಕನೀತ
ವರ ಪಂಚಮೂರುತಿಯೇ ಈತಾ
ಎರಡೈದು ಮೇಲೊಂದನೀತ ೪
ಪರಿಪರಿ ರೂಪ ಉಳ್ಳನೀತ
ಹೊರಗೆ ಒಳಗೆ ವ್ಯಾಪ್ತನಾಗಿ
ಸರಿಸರಿ ಬಂದ ತೆರದಿ ಜಗವ
ಸರಸದಲಿ ಆಡಿಪನೀತ
ಸ್ಮರಣೆ ಮಾಡಲು ಸಕಲ ಇಷ್ಟವ
ಕರೆದು ಕೊಡವನೀತ
ಶಿರಿಯರಸ ವಿಜಯವಿಠ್ಠಲನೀತ
ಮರಣ ಜನನರಹಿತ ನೀತ ೫

೪೦
ನೆನೆಬೇಕು ನೆನೆಬೇಕು ಶ್ರೀಹರಿಯ ಪ
ನೆನೆಬೇಕು ಹರುಷದಿಂದಲಿ ಶ್ರೀ ಹರಿಪಾದಂಗಳ
ನಿರುತದಿಂದ ಭಜಿಸಲು ದುರಿತ ನಿವಾರಣ೧
ಅಖಿಳಾಂಡಗಳನ್ನು ಉದರದಿ ಧರಿಸಿದ
ನಿಖಿಳ ಲೋಕದಿ ವ್ಯಾಪ್ತ ಶ್ರೀಹರಿಯೆನುತಾ ೨
ಸಂತತ ಚಿಂತೆಯ ಸಂತಾನ ಬಿಡಿಸುವ
ಚಿಂತನೆ ಶ್ರೀ ವಿಜಯವಿಠ್ಠಲನಡಿಗಳ ೩

೪೧
ನೆನೆಸು ಮನವೆ ನಲಿವಿನಿಂದಲಿ
ನೆನೆಸು ಮನವೆ ನಲಿವಿನಿಂದಲಿ
ಮನಸಿಜನ್ನ ಪೆತ್ತ ಹರಿಯ
ವನಜ ಚರಣವನ್ನು ಹೃ
ದ್ವನಜದೊಳಗೆ ನಿಲಿಸಿ ನಗುತ ಪ
ಪ್ರಳಯದಲ್ಲಿ ವರ ರಮಾ ಕ
ಳವ ತಾಳಿ ಲೀಲೆಯಲ್ಲಿ
ಪೊಳವ ಕಂಗಳಿಂದ ಕಿಡಿ
ಗಳನು ತೋರಿ ಕುಣಿವುತ
ಜಲಜ ಪೀಠ ಸುರಪ ಪುಲಿದೊ
ಗಲ ವಸನ ಉಳಿದ ಸುರರ
ಅಳಿದು ಏಕಮೇವನಾಗಿ
ನಲಿವ ನಾರಸಿಂಹನೆಂದು ೧
ಜರಾಮರಣರಹಿತ ಸುಜ
ನರನ ಕಾಯ್ದು ಕರುಣದಲ್ಲಿ
ಜರಿದು ಅದ್ರಿಯಲ್ಲಿ ದನುಜರನ್ನು ಶೀಳಿ ವೇಗ ನಿ
ರ್ಜರರ ಪೊರೆದು ನಿಗಮತತಿಗೆ
ಪರಮನೆಂದೆನಿಸಿ ಚರಿಸುತಿಪ್ಪ
ಅರುಣಪ್ರಭೆಗೆ ಕೋಟಿ ಮಿಗಿಲು
ಪರಮಪುರುಷ ಸಿರಿಧರನ್ನ ೨
ಕೆಡದೆ ಪರಮ ಭಕುತಿ ಮಾರ್ಗ
ವಿಡಿದು ಗರ್ವವೆಂಬ ಕವಚ
ತೊಡದೆ ದುರುಳ ಚೇತನಕ್ಕೆ
ಕೊಡದೆ ಮನಸು ವಿನಯದಿಂದ
ಕಡಲಶಯನನಾದ ಒಡಿಯ ವಿಜಯವಿಠ್ಠಲನ್ನ
ಬಿಡದೆ ನುಡಿಯೆ ಬಂದ ಅವ
ಘಡವ ದಾಟಿಸು ವೊಲಿದು ಕಾಯುವಾ೩

೪೧೩
ನೊಂದು ಸಂಸಾರದೊಳಗೊಂದಿಸುವೆನೋ ಇಂದು
ಬಿಂದು ಮಾಧವ ಯಾದವ ಪ
ಕರುಣಬಾರದೆ ನಿನಗೆ ಅಕಟಕಟ ಅಕಟಕಟ
ಶರಣ ನಾ ನಿನಗಲ್ಲವೇ ಸ್ವಾಮಿ ನಿನ್ನ
ಮೊರೆಹೊಕ್ಕೆ ಸರ್ವಾಂತರ್ಯಾಮಿ-ಎನ್ನ
ಎರವು ಮಾಡುವರೇನೋ ಪ್ರೇಮಿ-ಇನ್ನು
ಪರಿಹರಿಸು ಸಂಚಿತಾಗಾಮಿ-ಇದೇ
ಸರಿಯೇನೊ ಜಗದೊಳಗೆ ಭಕುತವತ್ಸಲನೆಂಬ
ಬಿರುದು ಪೊಳ್ಳಾಗದೇನೊ ನಿರುತ ಖ್ಯಾತ೧
ಸತತ ಸುಖವುಳ್ಳರೆ ಬಾಯ್ದೆರೆದು ಪಲ್ಗಿರಿದು
ನುತಿಸಿ ಬೇಡಿಕೊಂಬೆನೇ ನಿನ್ನ- ಮುಂದೆ
ಗತಿಯ ಕಾಣದಲೆ ಚಾಲ್ವರಿದೆ ಭೇದ-
ಮತಿ ಕೊಡದೆ ನೋಡುವುದು ಬರಿದೆ-ಸರ್ವ
ಕ್ಷಿತಿಯೊಳಗೆ ನೀನೆಂದು ಅರಿದೆ-ವರ-
ತತುವ ನಿಯ್ಯಾಮಕರ ಬಳಿ ಪಿಡಿದು ನಿನ್ನಂಘ್ರಿ
ಶತಪತ್ರ ತೋರಿಸೈಯ್ಯಾ ಜೀಯಾ ೨
ಶೃತಿಶಾಸ್ತ್ರ ಪೌರಾಣ ಭಾರತ ರಾಮಾಯಣ
ಇತಿಹಾಸ ಪಾಂಚರಾತ್ರ ನಿಗಮ-ನಿನ್ನ
ತುತಿಪ ಭಕುತರಿಗೆ ತಲೆಬಾಗಿ-ಕೊಂಡು
ಪ್ರತಿದಿವಸದಲಿ ಚೆನ್ನಾಗಿ-ವಲಿದು
ಅತಿಶಯವ ಕೊಡುತ ಲೇಸಾಗಿ-ವಿಘ್ನ
ತತಿಕಳೆದು ನೀ ಬಂದು ಸಾರೆ ಬೆರಗಾಗುತಿದೆ
ಪತಿತಿ ಪಾವನ ಮೋಹನ-ಚೆನ್ನ೩

ತಡವ್ಯಾಕೆ ಗುಣಕಾಲ ಕರ್ಮದೇಶಗಳೆಲ್ಲ
ವಡೆಯ ಎನ್ನಾಧೀನವೇ ಪೇಳೊ-ದು:ಖ
ಬಿಡಿಸುವುದು ನಿನಗುಚಿತವಲ್ಲ-ಪಾಟು
ಬಡಿಸದಿರು ಸಿರಿ ಲಕುಮಿನಲ್ಲ-ಒಂದು
ನುಡಿವೆ ನಾನಾಂತರ್ಯ ಸೊಲ್ಲ-ಇಂತು
ಕಡೆಮಾಡಿ ನೋಡದಿರು ದಿವಸ ಹಿಂದಾಗುತಿದೆ
ಬಡವರಾಧಾರಿ ಕರುಣೀ-ದಾನಿ೪
ಧ್ರುವನು ನಭದೊಳು ಇಲ್ಲಿ ರಾವಣಾನುಜ ಅಧೋ
ಭುವನದಲಿ ಬಲಿರಾಯನ ನೋಡಿ, ನಾನು
ತವಪಾದ ಗತಿಯೆಂದು ಬಂದೆ-ಮಹಾ
ಭವಣೆ ಬಟ್ಟೆನೊ ಕೇಳು ಹಿಂದೆ-ಜಗದಿ
ತ್ರಿವಿಧ ತಾಪಗಳಿಂದ ನೊಂದೆ-ಈ
ಅವಸರಕೆ ಬಂದೊದಗಿ ನಿನ್ನ ನಾಮಾಮೃತದ
ಸವಿದೋರೊ ದ್ವಾರಾವತಿಯ-ಜೀಯ ೫
ಅಂಧಕೂಪದಲಿ ಬಿದ್ದವನ ನೋಡಿ ನಿನಗೆ ಚ
ಕ್ಕಂದವಾಗಿದೆಯೊ ಕಾಣೆ-ನಾನು
ಸಂದೇಹ ದ್ವೇಷದವನಲ್ಲ-ಇದು
ಎಂದೆಂದಿಗೂ ಪುಸಿಯು ಅಲ್ಲ-ಹೃದಯ-
ಮಂದಿರದೊಳು ಬಲ್ಲೆಯೆಲ್ಲ-ಸ್ವಾಮಿ
ನೊಂದು ಕೂಗಿದರೆ ಎಳೆಗಂದಿಯೆಂಬಾ ಮಾತು
ಇಂದು ಎತ್ತಲಿ ಪೋಯಿತೋ ತಾತ-ನೀತ ೬
ಗುಣವಂತ ಬಲವಂತ ಜಯವಂತ ಸಿರಿವಂತ
ಘನವಂತ ಧೈರ್ಯವಂತ ಶ್ರೀಕಾಂತ-ಎನ್ನ
ಮನದ ದುಮ್ಮಾನವನೆ ಬಿಡಿಸೊ-ನಿನ್ನ
ಅನವರತ ನಾಮವನು ನುಡಿಸೊ-ಮಧ್ವ
ಮುನಿ ಕರುಣ ಕವಚವನು ತೊಡಿಸೊ-ಇದೇ
ಜನುಮ ಜನುಮಕೆ ಬೇಡಿಕೊಂಬೆ-ಶರಣೆಂಬೆ
ಪ್ರಣತ ಹೃದಯಾಬ್ಜ ತುಂಬೆ-ಕಾಂಬೆ ೭
ಮಾನಸ್ನಾನವನುಂಡು ಮತಿಗೆಟ್ಟ ಪೂರ್ಣ ವಿ
ಜ್ಞಾನಮಯನೆ ನಿನ್ನ ಮರೆದೆ-ಕರ್ಮ
ಪ್ರಾಣೇಂದ್ರಿಯಂಗಳು ನಿನ್ನ ವಶವೊ-ಇಂಥ
ಜಾಣತನ ಬಹಳ ಸಂತಸವೊ-ಹೀಗೆ
ಮಾಣದಲೆ ಇಪ್ಪ ಸಾಹಸವೋ ಚನ್ನ
ಜ್ಞಾನ ಭಕುತಿ ವಿರಕುತಿ ಕೊಟ್ಟು
ನಿನ್ನವರೊಳಾನಂದದಲಿ ನಿಲ್ಲಿಸೈಯ್ಯ ಜೀಯ ೮
ಶಂಖ ಚಕ್ರ ವರಾಭಯ ಹಸ್ತದಲಿ ನಿಂದ
ವೆಂಕಟಾಚಲ ನಿವಾಸ ಶ್ರೀಶ-ನಿನ್ನ
ಕಿಂಕರನ ಕಿಂಕರನೊ ನಾನು-ಅಕ-
ಳಂಕ ಮನುಜನ ಮಾಡೊ ನೀನು-ಭವ
ಸಂಕಟವ ಕಳೆಯಾ ಸುರಧೇನು-ಬೊಮ್ಮ
ಶಂಕರ ವಿನುತ ವಿಜಯವಿಠ್ಠಲ ಹರಿ-
ಣಾಂಕ ಸೌವರ್ಣ ಪೂರ್ಣ ಸಂಪೂರ್ಣ ೯

೧೦೬
ನೋಡ ಬಂದೆನೋ ನಿತ್ಯ ಪಾಡಿದವರ ಪ್ರಾಣ
ಮಾಡು ಕಾರುಣ್ಯವ ಮಾತಾಡು ಮನ್ನಿಸಿ
ರೂಢಿಯೊಳಗೆ ನಿನಗೀಡುಗಾಣೆನೊ ಕರ
ಪಿಡಿವ ತಾರಾಕ್ಷರೂಢ ವೆಂಕಟರಾಯ ಪ
ನಾನಾ ಪೂರ್ವ ಉತ್ತರ ಯೋನಿ ಮೊಗದಿಂದ ವೃದ್ಧ
ಹಾನಿ ದೇಹವ ತೆತ್ತು. ನಾನು ನಿನ್ನದು ಎಂದು
ಹೀನ ಮತಿಯಿಂದಪಮಾನಕೊಳಗಾಗಿ
ಏನು ಕಾಣದೆ ಪಾಪ ಕಾನನದೊಳು ಬಿದ್ದು
ಜ್ಞಾನರಹಿತನಾದೆ ಕಾಣೆ ಲಾಭಕೆ ಮದ್ದು-
ನೀಯಳ ಕಳಕೊಂಡ ಮಾನವನಂತೆ ನಿತ್ರಾಣಗೆಟ್ಟೆನೊ ಈ
ಕ್ಷೋಣಿಯೊಳಗೆ ಪುಟ್ಟಿದಾಗ ವಿನೋದಿಯೆ ನೀನೆ ಗತಿ ಎಂದು ೧
ನಿಚ್ಚಳ ಮನ ದೊರಿಯೆ ನಿತ್ಯ ನಿನ್ನ ನಂಬಿದೆ
ಬೆಚ್ಚಿಸಲಾರೆ ಬಲು ಅರ್ಚನೆ ಬಗೆಯಿಂದ
ಮುಚ್ಚಿದಾವರ್ಕ ದೇಹ ಬಿಚ್ಚಿಯಿಟ್ಟು ದೇವಾ
ಅಚ್ಚನಾಗ್ರಹದಿಂದ ಅಚ್ಯುತಾ ಶರಣೆಂದು
ಬೆಚ್ಚಿದವರ ಪ್ರಾಣ ಹೆಚ್ಚಿನ ದೈವವೆ ಎಚ್ಚರವುಳ್ಳಾಗ
ಅಚ್ಯುತಾ ಅಚ್ಯುತಾ ಚಚ್ಚರಾ ನಾಮಗಳುಚ್ಚರಿಸುವ ಧ್ಯಾನ
ಬಿಚ್ಚದೆ ಒದಗಲಿ ಇಚ್ಛಾಕ ಮೂರುತಿ ೨
ಧನ್ಯ ಸ್ವಾಮಿ ಕಾಸಾರಾಪುಣ್ಯ ಕಾನನವಾಸಾರಣ್ಯಗಳೆಲ್ಲಾದಿ ಅಲ್ಲ
ನಿನ್ನ ಭಕ್ತರ ಕುಲಕೆ ಮಾನ್ಯರಹಿತನೆ ತಾ-
ರುಣ್ಯಗಾತುರ ಸತ್ಕಾರುಣ್ಯ ನಿಧಿ ಮದನ ಲಾ-
ವಣ್ಯ ಕ್ಷೀರವಾರಿಧಿ ಕನ್ಯ ಭೂ ಸತಿಪತಿ
ಅನ್ಯಥಾ ಸತ್ಪಂಥ ಶೂನ್ಯ ನೀನೆಲೊ ದುರಿತಾ-
ಗಣ್ಯರ ಹೋತ್ರನೆ ಪುಣ್ಯ ಶ್ಲೋಕ ಸಿರಿ ವಿಜಯವಿಠ್ಠಲ ಹಿ-
ರಣ್ಯೋದರ ಪಿತ ಸನ್ಯಾಯದಿಂದಲಿ ೩

೪೪
ನೋಡಿ ನಾ ಧನ್ಯನಾದೆನೊ ತೋತಾದ್ರೀಶನ
ನೋಡಿ ಧನ್ಯನಾದೆ ನಾಡೊಳು ತನಗೆಲ್ಲಿ
ಈಡಿಲ್ಲೆನಿಸುವನ ನೋಡಿ ಧನ್ಯನಾದೆನೊ ಪ
ಆರೊ ಮಹಾರೂಪ ಬಂದು ಏಕಾಂತದಲ್ಲಿ
ಆರಾಧಿಸಿದಾತನಂದು ಭಕುತಿ ಬಿಡದೆ
ವಾರವಾರಕ್ಕೆ ಗತಿಯೆಂದು
ಈ ರೀತಿಯಲ್ಲಿ ಇರೆ ತೋರಿದ ಕರುಣ ನಿನ್ನಾ ೧
ಭಕುತನ್ನ ತಪಸಿಗೊಲಿದು ವೇಗದಿಂದಲಿ
ಲಕುಮಿ ರಮಣ ಸುಳಿದು ಬೇಡಿದಂಥಾ
ಧಿಕವಿತ್ತು ರೋಷವಳಿದು ಸುಖದ ಭಾರತ ಪೇಳೊ
ದಕ್ಕೆ ಮುನಿ ಮಾಡಿದ ದಾನಾ ೨
ಧರಿಗೆ ದಕ್ಷಿಣ ದಿಕ್ಕಿಲಿ ಮಾಹೇಂದ್ರಿ ಮಹಿ
ಧರನ ಸಮೀಪದಲ್ಲಿ ಪ್ರತಿದಿನ
ಮೆರೆವ ವೈಭೋಗದಿಂದಲಿ
ಕರುಣಿ ವಿಜಯವಿಠ್ಠಲ ವರಧೇನು ಎನಿಸುವನಾ೩

ನೋಡಿ ನೋಡಿ ಸತ್ಯಪ್ರಿಯರ ನೀವಿಂದು :

೩೩೩
ನೋಡಿ ನೋಡಿ ಸತ್ಯಪ್ರಿಯರ ನಾ ನಿಂದು ನಿಂದು
ಪಾಡಿ ಪಾಡಿ ಯೋಗಿವರ್ಯರ ನಾ
ಪಾಡಪಂಥದಲಿ ಬಂದ ಮೂಢ ಮಿಥ್ಯಾವಾದಿಗಳ
ಓಡಿಸಿ ತನ್ನನು ಕೊಂ
ಡಾಡಿದವರ ಪೊರೆವ ಯತಿಯ ಪ
ನಾಗಸರ ನಾಗಬಂಧ ಕೊಂಬು ಕೊಳಲು
ರಾಗದಿಂದ ಪಾಡುವ ಸನಾಯಿಸುತಿಗಳು
ಬೇಗಿ ಕೂಗುವ ಹೆಗ್ಗಾಳೆ ದುಂದುಭಿ ಎಸಿಯೆ ಚತು
ಸ್ಯಾಗರ ಪರಿಯಂತ ಮೆರೆದ ಯೋಗಿಗಳಾಗ್ರಣ್ಯನ೧
ವಾದಿಗಳೆದೆಯು ಬಿರಿಯೆ ಧವಳ ಶಂಖದಾ
ನಾದ ಒಪ್ಪ್ಪಿಸುತ್ತಿ ಮೆರೆವ ಬಿರಿದು ಸಮುದಾಯ
ವೇದ ಓದುವ ಶಿಷ್ಯರು ಮೇದಿನಿ ಸುರರು
ಬಲದಾರಿಯಲಿ ಬರೆ ಆಶೀ
ರ್ವಾದವನ್ನು ಕೊಡುವ ಧೀರನು ೨
ವಾಜಿ ಗಜ ಪಾಯಿದಳನೇಕಸಂದಣಿ
ಯೋಜನದಗಲಕೆ ಘೋಷಣವಾಗಲು
ರಾಜಾಧಿರಾಜರು ಪೂಜೆಯನ್ನು ಮಾಡುತಿರೆ
ಈ ಜಗದೊಳಗೆ ಸಿದ್ಧ ತೇಜಪುಂಜರನ್ನ ೩
ಬುದ್ಧಿಹೀನನಾದ ಜನರ ಉದ್ಧರಿಸುತ
ಅದ್ವೈತಮತಶಾಸ್ತ್ರ ವದ್ದು ಕಳವುತ
ಮಧ್ವಮತವ ಎಂಬೊ ಸುಧಾಬ್ಧಿಗೆ ರಾಕೇಂದುನಂತೆ
ಇದ್ದು ಭವರೋಗಳಿಗೆ ಮದ್ದು ಅಹುದೋ ಸುಗುಣದವರ೪
ಚಂಡಮಾಯವಾದಿಗಳ ಹಿಂಡು ಬರಲಾಗಿ
ಕಂಡು ಹರುಷದಿಂದ ಸಭಾಮಂಡಿತರಾಗಿ
ಖಂಡ ತುಂಡು ಮಾಡಿ ಅವರ ದಿಂಡುಗೆಡಹಿ ಮಂಡಲಕೆ
ಪುಂಡರಿಕಾಕ್ಷನೆ ಉದ್ದಂಡನೆಂದು ಸಾರಿದರನ೫
ಬಿಜವಾಡದಲಿ ಕೃಷ್ಣ ತಜ್ಜಲದೊಳು
ದುರ್ಜಂತುಗಳು ನರರಾ ಬೆಚ್ಚರಿಸಲು
ಪ್ರಜ್ವಲಿಸುತ ಪೋಗಿ ಮಾರ್ಜನೆ ಯನ್ನು ಗೈದು ಭೀತ
ರಾಜಝರವ ಬಿಡಿಸಿ ಕಾಯಿದ ಸಜ್ಜನರ ಮನೋಹರ ೬
ದೇಶದೊಳೀ ಶೇಷವಾದ ದಾಸರ ಪ್ರಿಯ
ವಾಸ ಸಿರಿ ವಿಜಯವಿಠ್ಠಲೇಶನಂಘ್ರಿಯ ಸಾಸಿರ ದಳದ ಧ್ಯಾನ
ಮೀಸಲಾಗಿ ಮಾಡುತಿಪ್ಪ ದೋಷರಹಿತರಾದ ಸಂ
ನ್ಯಾಸ ಕುಲಭೂಷಣನಾ ೭

೪೧೪
ನೋಡಿ ನೋಡಿನೊ ರಂಗಾ ನಿನ್ನ ನೋಡಿನೊ
ಆಡಲೇನಯ್ಯಾ ಪರಸತಿಯರ ಮೋಹಕ್ಕೆ ಸಿಲುಕಿ ಪ
ಹೆಣ್ಣ ನಾ ಕಾಣುತ ಮನಸು ದ್ರವಿಸುವದು ದೃಢವಾಗಿ
ಮುನ್ನೆ ದಾರಿದ್ರತನ ಯೆಣಿಸಿಕೊಳದೆ
ಕಣ್ಣು ಹೋಗುವ ಸುದ್ದಿ ತಿಳಿಯದಲೆ ನೀಕ್ಷಿಸಿ
ಬನ್ನ ಬಡುವೆನೊ ರಂಗ ನಿನ್ನ ಮೂರ್ತಿಯ ನಿತ್ಯ ೧
ಜಲ್ಪಸಿಲ್ಪಿಗಳಿಂದ ಮಂತ್ರ ಮಾಡುವೆ ಅವಳಾ
ಬಲ್ಪು ವಯ್ಯಾರ ಗುಣಗುಣಿಸಿಕೊಳುತಾ
ತಲ್ಪಮಿಕ್ಕಾದ ಭೋಗದ್ರವ್ಯ ಬಯಸಿ ವಿ
ಕಲ್ಪ ಸಂಕಲ್ಪದಲ್ಲಿ ಬಳುಲುವೆನುಬ್ಬಸವಳಿದು ೨

ವ್ಯಾಖ್ಯಾತ ಪಂಡಿತದ್ವ್ಯಾಪಕ ಪಾಠಕ ಮಹಾ
ಪ್ರಖ್ಯಾತ ವೇದವೇದಾಂತ ಪ್ರೌಢ
ಸೌಖ್ಯ ಪುಸ್ತಕ ಪಾಣಿ ಜ್ಞಾನಿ ಎನಿಸಲು ಅವಳ
ಆಖ್ಯಾನ ಕೇಳುತಲೆ ಕಿವಿಗೊಟ್ಟು ಲಾಲಿಸುವೆ ೩
ಬೀದಿಯೊಳು ಪೋಗುವವಾಳೊಂದು ಪ್ರಯೋಜನಕೆ
ಹಾದಿಯನು ಹಿಡಿದು ಸಮೀಪ ಬರಲು
ಪಾದಕಾದರು ಬಿದ್ದು ಮಾತಾಡುವೆನೆಂಬೊ
ಮೋದವನು ತಾಳಿ ಏಕಾಂತ ಹುಡುಕುವೆ ೪
ವಿಧವಾ ವ್ಯಾದಿಷ್ಟಾ ವ್ಯಭಿಚಾರಿ ಅಂಧಕ ಮೂಕಿ
ಬಧಿರೆ ಹೀನಾಂಗ ಅವರೋತ್ತಮ ಜಾತಿ
ವಿಧಿ ನಿಷೇಧವನು ಚಿಂತಿಸದೆ ತೀವರದಿಂದ
ಅಧೋಗತಿಗೆ ಇಳುವೆನು ಸತ್ಕರ್ಮವನು ತೊರೆದು ೫
ನೀರು ಸೀರೆವೊಗಿವಾಗ ಮೈ ತೊಳೆದು ಉಡುವಾಗ
ಉರು ಕುಚ ಕಚ ನೋಳ್ಪ ಆಶೆಯಲ್ಲಿ
ಮೂರು ಹತ್ತನೆ ತತ್ವ ನೆನೆನೆನೆದು ಯೋಚಿಸಿ
ವಾರಿತಿಯ ಕೇಳಿ ತಲೆದೂಗುವೆನೊ ಲೇಸಾಗಿ ೬
ಕಣ್ಣುಯಿದ್ದದಕೆ ಸಾರ್ಥಕವಾಗಲಿಲ್ಲ ಪ್ರ
ಸನ್ನ ಮೂರುತಿ ಯೆನ್ನ ಸಾಧನವೇನೊ
ಘನ್ನ ಏಲ್ಲೆಲ್ಲಿ ನಾ ನೋಡಿದರೆ ಅಲ್ಲಲ್ಲಿ
ನಿನ್ನ ರೂಪವ ತೋರೊ ವಿಜಯವಿಠ್ಠಲ ಒಲಿದು ೭

ರು ತೀರ್ಥಯಾತ್ರೆ ಹೊರಟಾಗ

೧೦೭
ನೋಡಿದೆ ಗಿರಿಯ ತಿರ್ಮಲನ ನಿತ್ಯ
ಮೂಡಲ ದಿಕ್ಕಿನಲಿಪ್ಪ ನಿರ್ಮಲನಾ ಪ
ನೀರೇರ ಕೂಡಾಡಿದವನಾ ದೇವ
ನೀರೊಳಗೆ ಸದನವ ಬಿಗಿದವನಾ
ನೀರದ ಶ್ಯಾಮ ವರ್ಣನನಾ ಭವ
ನೀರಜ ಭವವಂದ್ಯಾ ದಯಾಸಾಗರನಾ ೧
ನೀರು ಪಾದದಲಿ ಪೆತ್ತವನಾ ಮಹಾ
ನೀರು ದಾಟಿ ಮಕ್ಕಳ ತೋರಿದವನಾ
ನೀರಧಿ ಬಿಗಿದ ಪ್ರಬಲನಾ ಅಂದು
ನೀರುಪತಿಯ ಭಂಗವ ಮಾಡಿದವನಾ ೨
ನೀರು ಕಟದ ನಿಃಸಂಗನಾ ಸರ್ವ
ನೀರು ಸೇದುವನಾಗಿ ಜಗವ ಸುತ್ತುವನ
ನೀರೊಳಗಾಡುವ ನಿಜನಾ
ಓರ್ವ ನೀರೇಳ ನಾರಿಯ ಮಾಡಿದ ಗುಣನಾ ೩
ನೀರಜೋದರ ನಿರ್ಮೋಹನನಾ ಏಳು
ನೀರಜ ದಳದಲ್ಲಿ ಪೊಳೆವ ಚನ್ನಿಗನಾ
ನೀರು ಬಯಲು ಮಾಡಿದವನಾ ಅನ್ನ
ನೀರೊಳಗಿದ್ದು ಜಗವ ಪೊತ್ತವನಾ ೪
ನೀರಜಪಾಣಿ ವಲ್ಲಭನಾ ತೇಜ
ನೀರನ್ನ ತತ್ವ ವ್ಯಾಪಿಸಿಕೊಂಡವನಾ
ನೀರೆ ಗತಿಯ ಮಾಡಿದವನಾ ನಮ್ಮ
ನೀರಜಾದ್ರಿ ತಿಮ್ಮ ವಿಜಯವಿಠ್ಠಲನಾ ೫

ನೋಡಿದೆ ಗುರುಗಳ ನೋಡಿದೆ

೩೨೪
ನೋಡಿದೆ ಗುರುಗಳ ನೋಡಿದೆ ಪ
ನೋಡಿದೆನು ಗುರುರಾಘವೇಂದ್ರರ
ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ಈಡು ಇಲ್ಲದೆ ಕೊಡುವ ಗುರುಗಳಅ.ಪ
ಮೊದಲು ಗಾಂಗೇಯ ಶಯ್ಯಜನು ಈ
ನದಿಯ ತೀರದಲ್ಲಿ ಯಾಗವ
ಮುದದಿ ರಚಿಸಿ ಪೂರೈಸಿ ಪೋಗಿರ
ಲದನು ತಮ್ಮೊಳು ತಿಳಿದು ತವಕದಿ
ಹೃದಯ ನಿರ್ಮಲರಾಗಿ ರಾಗದಿ
ಬುಧಜನರ ಸಮ್ಮೆಳದಲಿ ಸಿರಿ
ವದನನಂಘ್ರಿಯ ತಿಳಿದು ನೆನೆವರ
ಉದಿತ ಭಾಸ್ಕರನಂತೆ ಪೊಳೆವರ ೧
ಆಲವಬೋಧ ಮಿಕ್ಕಾದ ಮಹಮುನಿ
ಗಳು ಸಅಂಶರು ಒಂದು ರೂಪದಿ
ನೆಲೆಯಾಗಿ ನಿತ್ಯದಲಿ ಇಪ್ಪರು
ಒಲಿಸಿಕೊಳುತಲಿ ಹರಿಯ ಗುಣಗಳ
ತಿಳಿದು ತಿಳಿಸುತ ತಮ್ಮ ತಮಗಿಂ
ರಧಿಕರಿಂದುಪದೇಶ ಮಾರ್ಗದಿ
ಕಲಿಯುಗದೊಳು ಕೇವಲ ಕ
ತ್ತಲೆಯ ಹರಿಸುವ ಸೊಬಗ ಸಂತತ ೨
ರಾಮ ನರಹರಿ ಕೃಷ್ಣ ಕೃಷ್ಣರ
ನೇಮದಿಂದೀ ಮೂರ್ತಿಗಳ ಪದ-
ತಾಮರಸ ಭಜನೆಯನು ಮಾಳ್ಪರು
ಕೋಮಲಾಂಗರು ಕಠಿನಪರವಾದಿ
ಸ್ತೋಮಗಳ ಮಹಮಸ್ತಕಾದ್ರಿಗೆ
ಭೂಮಿಯೊಳು ಪವಿಯೆನಿಸಿದ ಯತಿ
ಯಾಮ ಯಾಮಕೆ ಎಲ್ಲರಿಗೆ ಶುಭ
ಕಮಿತಾರ್ಥವ ಕರೆವ ಗುರುಗಳ ೩
ನೂರು ಪರ್ವತ ವರುಷ ಬಿಡದಲೆ
ಚಾರು ವೃಂದಾವನದಲಿ ವಿ
ಸ್ತಾರ ಆರಾಧನೆಯು ತೊಲಗದೆ
ವಾರವಾರಕೆ ಆಗುತ್ತಿಪ್ಪುದು
ಸಾರೆ ಕಾರುಣ್ಯದಲಿ ಲಕುಮೀ
ನಾರಾಯಣ ತಾ ಚಕ್ರರೂಪದಿ
ಸಾರಿದವರಘವ ಕಳೆದು ಇವರಿಗೆ
ಕೀರುತಿಯ ತಂದಿಪ್ಪುದನುದಿನ೪
ಮಿತವು ಎನದಿರಿ ಇಲ್ಲಿ ದಿನ ದಿನ-
ಕತಿಶಯದೆ ಆಗುವುದು ಭೂಸುರ
ತತಿಗೆ ಭೋಜನ ಕಥಾಶ್ರವಣ ಭಾ-
ರತ ಪುರಾಣಗಳಿಂದಲೊಪ್ಪುತ
ಕ್ಷಿತಿಯೊಳಗೆ ಮಂಚಾಲೆ ಗ್ರಾಮಕೆ
ವ್ರತಿಯ ಇಲ್ಲವೆಂದೆನಿಸಿಕೊಂಬುದು
ಪತಿತಪಾವನ ವಿಜಯವಿಠಲನ
ತುತಿಸಿಕೊಳ್ಳುತ ಮೆರೆವ ಗುರುಗಳ ೫

ಹಿಮಋತು ಪ್ರಥಮ ಮಾಸದ ದಶಮಿ ಹಿಮಕರವಾರ ದಿನದಲಿ :

೧೦೮
ನೋಡಿದೆ ನಾ ನೋಡಿದೆ
ಮೂಡಲಗಿರಿಯ ವಾಸನ ಯಾತ್ರಿಯ
ಮಾಡಿದೆ ನಾ ಮಾಡಿದೆ ಪ
ಬೆಟ್ಟವ ಕಂಡೆನು ಸೋಪಾನಂಗಳು
ನಿಟ್ಟುಸುರಿಕ್ಕದೆ ಏರಿದೆ ಕಟ್ಟ
ಕಡಿಯಣ ಗೋಪುರ ಶಿಖರ
ದಿಟ್ಟಿಸಿ ಕಣ್ಣಿಲಿ ನೋಡಿದೆ ೧
ಈ ಸಮಸ್ತರ ಗುರುವಾದ ಭಾರತಿ
ಈಶನ ಪಾದಕ್ಕೆ ಎರಗಿದೆ
ಕ್ಲೇಶನ ಕಳೆದು ಎದುರಾಗಿ ಪೊಳೆವ
ಶ್ರೀಶನ ಮಹದ್ವಾರ ನೋಡಿದೆ ೨
ಬಲವಾಗಿ ಬಂದು ಸ್ವಾಮಿ ಪುಷ್ಕರಣಿ
ಒಳಗೆ ವರಹನ ನೋಡಿದೆ
ಜಲದಲಿ ಮಿಂದು ವೇಗದಲಿ ತಿರುವೆಂ
ಗಳ ದೇವನ ನೋಡ ಸಾಗಿದೆ ೩
ಗುಡಿಯ ಪೊಕ್ಕೆನು ಗರುಡಗಂಬದ
ಸಡಗರವನು ನಾ ನೋಡಿದೆ
ಒಡನೆ ಪ್ರಾಣಾಚಾರದವರು
ಪಡೆದ ವರಗಳ ಕೇಳಿದೆ ೪
ಮುನ್ನ ಅವಸರ ಮನಿಯೊಳಗೆ
ಅನ್ನಪೂರ್ಣಿಯ ನೋಡಿದೆ
ಚನ್ನಾಗಿ ಮಂಟಪದೊಳು ಶ್ರೀನಿವಾ
ಸನ್ನ ಮೂರುತಿಯ ನೋಡಿದೆ ೫
ತೊಟ್ಟಲ ತೀರ್ಥವ ಕೊಂಡು ಪ್ರಸಾದ
ಇಟ್ಟು ಮಾರುವದು ನೋಡಿದೆ
ಇಷ್ಟ ಭಕ್ತರು ಸಮ್ಮುಖದಲಿ
ಮುಟ್ಟಿ ಪಾಡುವದು ನೋಡಿದೆ೬
ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ
ಸ್ಕಾರವನು ಮಾಡಿದೆ
ಭೋರನೆ ಕಟಾಂಜನದ ಫಲ್ಗುಣಿ ಬಂ
ಗಾರ ಬಾಗಿಲವ ನೋಡಿದೆ ೭
ಇಂದು ರವಿ ಶತಕೋಟಿ ತೇಜದ
ಇಂದಿರೇಶನ ಪಾದಾರ
ವಿಂದ ಯುಗ್ಮವ ಪುಳಕೋತ್ಸಹದಿಂದ
ಸಂದರುಶನ ನಾ ಮಾಡಿದೆ ೮
ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ
ಕಟ್ಟಿದ್ದ ಧಟ್ಟಿ ವಢ್ಯಾಣ
ಝಟಿ ಕಂಕಣಾಕಾರದಾಲಾಯುಧ
ಇಟ್ಟ ಕಸ್ತೂರಿಯ ನೋಡಿದೆ ೯
ಮಾಸದಾ ಪೂವು ಪೂಸಿದ ಗಂಧ
ಭೂಷಣಾ ನಾನಾ ಪರಿವಿಧ
ಏಸು ಬಗೆಯಲ್ಲಿಟ್ಟು ಶ್ರೀನಿ
ವಾಸನ ಶೃಂಗಾರ ನೋಡಿದೆ ೧೦
ಜಯಜಯ ಜಗದೀಶ ಜಗನ್ನಿವಾಸ
ಜಯ ಜಯ ಲಕುಮಿ ಪರಿತೋಷ
ಜಯ ಜಯ ವಿನಾಶ ಜಯ ಜಯ ಸರ್ವೇಶ
ಜಯವೆಂದು ಸ್ತೋತ್ರವ ಮಾಡಿದೆ೧೧
ಕೇಸಕ್ಕಿ ದಧ್ಯೋದನ ಪರಮಾನ್ನ
ದೋಶಿ ಬಿಸಿಬಿಸಿ ಮನೋಹರ
ಲೇಸಾಗಿ ಚತುರ್ವಿಧ ಪ್ರಸಾದವನ್ನು
ಈಸು ಅವಸರ ನೋಡಿದೆ ೧೨
ಕರ್ಪೂರದಾರತಿ ವಪ್ಪಿನಿಂದಲಿ ತಂದು
ತಪ್ಪದಲಿ ಬೆಳಗೋದು ನೋಡಿದೆ
ರೆಪ್ಪೆಯವಿ ಹಾಕದೆ ಮನದಣಿಯ ತಿ
ಮ್ಮಪ್ಪನ ವಿಗ್ರಹ ನೋಡಿದೆ ೧೩
ಹಿಮಋತು ಪ್ರಥಮ ಮಾಸ ದಶಮಿ
ಹಿಮಕರ ವಾರದದಿನದಲ್ಲಿ
ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ
ವಿಮಲ ಚಾರಿತ್ರವ ನೋಡಿದೆ ೧೪
ಶತ ಅಪರಾಧವ ಮಾಡಲು ಕಳೆದು
ಗತಿಯನೀವ ಇಂದಿರಾ
ಪತಿ ವಿಜಯವಿಠ್ಠಲ ಪುರಂದರನ ಸಂ
ಗತಿಯಲ್ಲಿ ಸತತ ಸಾಕಿದಾ೧೫

೧೮೦
ನೋಡಿದೆನು ಉಡುಪೀ ನಿವಾಸನ
ನೋಡಿದೆನು ಯಾದವೇಶನ
ನೋಡಿದೆನು ಮಾನಿಸ ವೇಷನ
ನೋಡಿದೆನೊ ಲಕುಮೇಶನ ಪ
ಪರಶುರಾಮನು ಭೂಮಿ ಸುರರಿಗೆ
ಸರವು ಧಾರುಣಿ ಧಾರಿಯಾ ಎರದು
ಕೇಸರಗಿರಿಯ ಪಡುಮೂಲ
ಶರನಿಧಿಯನು ಶರದಲೀ
ಭರದಿ ಬಿಡಿಸಿದ ಶೂರ್ಪಕಾರದ
ತೆರದಿ ನೆಲ ನೀ ಧರುಣಿಗೆ
ಪರಮ ಸಾಹಸ ರಾಮಭೋಜನು
ಅರಸನಾದುದು ನೋಡಿದೆ ೧
ಯಾಗಗೋಸುಗ ರಾಮ ಭೋಜನು
ನೇಗಿಲಿಯ ಕೊನೆಯಿಂದಲಿ
ಆಗ ಭೂಮಿಯ ಶೋಧಿಸಲು ಬಂದು
ನಾಗ ಬಂದಿತು ಮೃತವಾಗಿ
ತೂಗಿ ಶಿರವನು ಭೃಗು ಕುಲೇಶಗೆ
ಬಾಗಿ ನೆನೆಯಲು ಸಂಕೇತಾ
ಸಾಗಿ ಭೂಮಿಪಾಲ ರಿಪು
ಚನ್ನಾಗಿ ಒಲಿದದು ನೋಡಿದೆ ೨
ತಿಳುಹಿದನು ಪೂರ್ವದಲಿ ಈ ಫಣಿ
ಖಳನು ಕಾಣೊ ಇವನಿಂದು
ಅಳಿದು ಪೋದದು ಲೇಸು ಭೂಸುರ
ಕುಲಕೆ ಸಂತೋಷವಾಯಿತು
ಒಲುಮೆಯಲಿ ಸತ್ಕಾರ ವಿಧ ವೆ
ಗ್ಗಳವಾಗಿ ಸುಯಾಗವ
ಸುಲಭ ಮನದಲಿ ಮಾಡೆನಲು ನಿ
ಶ್ಚಲ ಭಕುತಿಲಿ ಸ್ತುತಿಸಲು ೩
ಇಂದಿರಾಪತಿ ಕರುಣಿಸೆಂದು
ಅಂದಿಗಾ ರಾಮ ಭೋಜನು
ಒಂದು ಕ್ರೋಶದ ಅಗಲ ರಜತಾ
ಚಂದದಾಸನ ಮಾಡಿಸಿ
ತಂದು ದೇವನ ಕುಳ್ಳಿರಿಸಿ ಆ
ನಂದದಲಿ ಓಲಾಡುತಾ
ಕುಂದದಲೆ ಮೇಧವನು ಮುಗಿಸಿ ಗೋ
ವಿಂದನ ಪ್ರೀತಿಪಡಿಸಿದಾ ೪
ಭೂತಳದೊಳು ರಜತಪೀಠಾಖ್ಯ
ಖ್ಯಾತಿ ಆಯಿತು ಸರ್ವದಾ
ಆ ತರುವಾಯದಲ್ಲಿ ಭಾರ್ಗವ
ಭೂತನಾಥನ ನಂದದಿ
ವಾತ ಭಕ್ಷನ ನಡುವೆ ನಿಂದನು
ಮಾತುಯಿದು ಪುಶಿಯಲ್ಲವೊ
ಪೂತುರೆ ಮೋಹಕವೆ ತೋರಿದ
ಜಾತ ರಹಿತಗೆ ನಮೋ ನಮೋ ೫
ಇಂತು ಈ ಪರಿ ಇರಲು ಗಂಗೆಯ
ಕಾಂತ ಮಹಾ ತಪವನೆ ಮಾಡಿ
ಸಂತತ ಗೋಪಾಲಕೃಷ್ಣನ
ಸಂತೋಷವನು ಬಡಿಸಿದಾ
ಚಿಂತೆಯಲಿ ವಿದೂರನಾದನು
ಮುಂತೆ ನಡೆದ ಕಥೆ ಕೇಳಿ
ಕಂತುಹರನನ ಒಲಿಸಿ ಉಡುಪಾ
ಕಾಂತ ವರವನೆ ಐದಿದಾ ೬
ಮೂರು ಯುಗದಲಿ ಈ ಪರಿಯಾಗೆ
ಮಾರುತ ಮಧ್ಯಗೇಹನ
ಚಾರು ಮನೆಯಲಿ ಜನಿಸಿ ವೈಷ್ಣವಾ
ಚಾರ್ಯ ಈ ದುಶ್ಯಾಸ್ತ್ರವ
ಹಾರಿಸಿದ ಹರುಷದಲಿ ರುಕ್ಮಿಣಿ
ದ್ವಾರಕೆಲಿ ಪೂಜೆ ಮಾಡಿದ
ಮೂರುತಿಯ ಸ್ಥಾಪಿಸಿದ ಲೀಲೆಯು
ಆರು ಬಣ್ಣಿಸಲಾಪರು ೭
ಇದೇ ರಜತಪೀಠ ಅಜಕಾನನವಿದೆ
ಇದೇ ಉಡುಪಿ ಇದೇ ಶಿವಕುಲ್ಲ್ಯ
ಅದರ ಬಳಿಯಲಿಯಿಪ್ಪ ತೀರ್ಥವ
ಅದುಭುತವ ವರ್ಣಿಸುವೆನು
ಇದೇ ಅನಂತ ಸರೋವರವು ಮ
ತ್ತಿದೇ ವಾರುಣ್ಯಚಂದ್ರಮತೀರ್ಥ
ಇದಕೆ ಮಧ್ವಸರೋವರ ವೆಂ
ಬದು ಕಾಣೊ ಶ್ರುತಿ ಉಕ್ತಿಲಿ ೮
ಸಕಲ ದೇಶದ ಜನರು ತ್ರಿವಿಧ
ಸುಖವಾರಿಧಿಯೊಳು ಸೂಸುತಾ
ಅಖಿಳ ವೈಭವದಿಂದ ಬಪ್ಪ
ಅಕಟ ಸಂದಣಿಗೇನೆಂಬೆ
ಮಕರ ರಾಶಿಗೆ ಸೂರ್ಯ ಬಂದ ಕಾ
ಲಕೆ ಕೃಷ್ಣನ ನೋಡುವೆನೆಂದು
ಚಕ್ಕನೆ ನಿಲ್ಲದೆ ಬಂದು ನೆರದಂದು
ಮುಕ್ತಾರ್ಥ ಹರಿಪ್ರೇರಕಾ ೯
ಸಜ್ಜನರ ಸಿರಿಚರಣ ರಜದಲಿ
ಮಜ್ಜನವ ಗೈವುತ
ಹೆಜ್ಜಿಹೆಜ್ಜಿಗೆ ಕೃಷ್ಣ ಕೃಷ್ಣ
ಅಬ್ಜನಾಭ ನಾರಾಯಣ
ಮೂಜಗತ್ಪತೆ ಎಂದು ಸ್ತೋತ್ರ ನಿ
ರ್ಲಜ್ಜನಾಗಿ ಪಠಿಸುತಾ
ರಜ್ಜುಪಾಣಿಯ ಬಹಿರದಿಂದ ನಿ
ವ್ರ್ಯಾಜ್ಯ ಭಕುತಿಲಿ ನೋಡಿದೆ ೧೦
ಮೊದಲು ನಮಿಸಿದೆ ಚಂದ್ರಶೇಖರ
ಪದುಮಗರ್ಭನ ಮಗನೆಂದು
ಅದರ ತರುವಾಯದಲ್ಲಿ ಮಾಯಿಯ
ಸದಬಡೆದ ಪೂರ್ಣಬೋಧರು
ಸದಮಲಾ ಕುಳುತಿಪ್ಪ ಸ್ಥಾನವ
ಒದಗಿ ನೋಡಿ ಕೊಂಡಾಡುತಾ
ಮದನ ಜನಕಾನಂತ ಸ್ವಾಮಿಯ
ಪದಯುಗಳವನು ನೋಡಿದೆ೧೧
ರತುನ ಗರ್ಭದೊಳಧಿಕವಾದ ತೀ
ರಥವಿದು ಮಧ್ವಾಖ್ಯದಿ
ಸತತ ಬಿಡದಲೆ ಇಲ್ಲಿ ಭಾಗೀ
ರಥಿವಾಸ ನದಿಗಳ ಕೂಡಿ
ನುತಿಸಿ ಮೆಲ್ಲನೆ ಮುಟ್ಟಿ ಮಿಂದು
ಮತ್ತೆ ಕರ್ಮದ ಚರಿಯವ
ಹಿತ ಮನಸಿನಲ್ಲಿ ಮಾಡುವಂಥ
ಕೃತ ಕಾರ್ಯವನು ನೋಡಿದೆ ೧೨
ಅಲ್ಲಿಂದ ನವರಂಧ್ರಗಳು ಕಂಡು
ಪುಲ್ಲಲೋಚನ ಕೃಷ್ಣನ
ಸೊಲ್ಲಿನಿಂದಲಿ ಪಾಡಿ ಭಾರತಿ
ವಲ್ಲಭನ ಕೊಂಡಾಡುತಾ
ಮೆಲ್ಲ ಮೆಲ್ಲನೆ ದ್ವಾರವನೆ ಪೊಕ್ಕು
ನಿಲ್ಲದಲೆ ಸಮೀಪಕೆ
ಬಲ್ಲವನು ಗುಣಿಸುತ್ತ ಭಕುತ ವ
ತ್ಸಲನಂಘ್ರಿ ನೋಡಿದೆ೧೩
ಮೂರು ಬಗೆ ಭೂಷಣವ ಧರಿಸಿದ
ಮೂರುತಿ ಇದೇ ಕಾಣಿರೊ
ಪಾರುಗಾಣರು ಈತನ ಅವ
ತಾರ ಗುಣಕ್ರಿಯೆ ಮಹಿಮೆಯಾ
ವಾರಿಜೋದ್ಭವ ಶಿವ ಮುಖಾದ್ಯರು
ಸಾರಿ ಹಾಹಾ ಎಂಬರೊ
ಧಾರುಣಿಗೆ ಇದೇ ದೈವ ನವನೀತ
ಚೋರನ ಕೊಂಡಾಡಿದೆ ೧೪
ತ್ರಾಹಿ ತ್ರಯಾವಸ್ಥೆ ಪ್ರೇರಕ
ತ್ರಾಹಿ ತ್ರಯಗುಣ ವಿರಹಿತಾ
ತ್ರಾಹಿ ತ್ರಯಧಾಮ ವಾಸ ಸರ್ವೇಶ
ತ್ರಾಹಿ ತ್ರಯ ರೂಪಾತ್ಮಕಾ
ತ್ರಾಹಿ ತ್ರಯವನು ಗೆದ್ದ ಪ್ರಸಿದ್ಧ
ತ್ರಾಹಿ ತ್ರಯವನು ಕೊಡುವನೆ
ತ್ರಾಹಿ ತ್ರಯಗಣ್ಣ ವನಪಾಲಕ
ತ್ರಾಹಿ ತ್ರಯಲೋಕಾಧಿಪಾ ೧೫
ಪಾಹಿಪರಮಾನಂದ ಗೋವಿಂದ
ಪಾಹಿ ಪರತರ ಪರಂಜ್ಯೋತಿ
ಪಾಹಿ ಪತಿತ ಪಾವನ್ನ ಮೋಹನ್ನಾ
ಪಾಹಿ ಪಾಲಾಂಬುಧಿಶಾಯಿ
ಪಾಹಿ ಜಗದತ್ಯಂತ ಭಿನ್ನಾ
ಪಾಹಿ ನಿರ್ಭಿನ್ನ ಸ್ವರೂಪ
ಪಾಹಿ ನಖಶಿಖ ಜ್ಞಾನ ಪೂರ್ಣನ
ಪಾಹಿ ಎನ್ನಯ ಪ್ರೇಮನೆ ೧೬
ನಮೋ ನಮೋ ಚತುರಾತ್ಮ ಗುಣನಿಧಿ
ನಮೋ ನಮೋ ಪುನ್ನಾಮಕ
ನಮೋ ನಮೋ ವಟಪತ್ರಶಾಯಿ
ನಮೋ ನಮೋ ಪುಣ್ಯಶ್ಲೋಕನೆ
ನಮೋ ನಮೋ ಸಮಸ್ತ ಸರ್ವಗ
ನಮೋ ನಮೋ ಸರ್ವ ಶಬ್ದನೆ
ನಮೋ ನಮೋ ಅವ್ಯಕ್ತ ವ್ಯಕ್ತಾ
ನಮೋ ನಮೋ ನಾರಾಯಣ ೧೭
ಜಯ ಜಯತು ಕರಿವರದ ವಾಮನ
ಜಯತು ನಾರದ ವಂದ್ಯನೆ
ಜಯ ಜಯತು ಪ್ರಹ್ಲಾದ ರಕ್ಷಕ
ಜಯ ಜಯತು ಪಾರ್ಥನ ಸಾರಥೆ
ಜಯ ಜಯತು ಅಂಬರೀಷ ಪರಿಪಾಲಾ
ಜಯತು ಪರಾಶರನುತಾ
ಜಯ ಜಯತು ಪಾಂಚಾಲಿ ಮಾನ ಕಾಯ್ದನೆ
ಜಯ ಜಯತು ಗೋಪಿಕಾ ವಲ್ಲಭಾ೧೮
ಇನಿತು ಬಗೆಯಲಿ ತುತಿಸಿ ದೇವನ
ಮನದಣಿಯ ಕೊಂಡಾಡುತಾ
ಕ್ಷಣಬಿಡದೆ ತನ್ನ ನೆನೆಸಿದವರಿಗೆ
ಹೊಣೆಯಾಗಿ ಪಾಲಿಸುವನು
ಜನುಮ ಜನ್ಮದಲಿಂದ ಮಾಡಿದ
ಘನದುರಿತ ಪರ್ವತಗಳು
ಚಿನಿಗಡೆದು ಸಾಧನವೆಲ್ಲ ವೇಗ
ತನಗೆ ತಾ ಮಾಡಿಸುವನು ೧೯
ಆದಿನಾರಾಯಣನು ಗೋವಿಂದ
ವ್ಯಾಧ ಭೂಸುರ ವೇಷವು
ಭೇದ ಮಾಡಿದ ನಾರಾಯಣಿ
ಸುಪ್ರಸಾದ ನಿರ್ಮಲರೂಪವು
ಆದಿವಾರವು ವಿಡಿದು ಎರಡು
ಐದು ದಿನ ಪರಿಯಂತವು
ಶ್ರೀಧರೇಶನು ವೇಷ ಧರಿಸಿದ್ದು
ಸಾಧು ಸಂಗಡ ನೋಡಿದೆ೨೦
ಉದಯಕಾಲದ ಪೂಜೆಯಾಗಲು
ಮುದ ನಿರ್ಮಾಲ್ಯ ವಿಸರ್ಜನೆ
ಇದೆ ಪೂರೈಸಲು ಮತ್ತೆ ಪಂಚ
ಸುಧ ಪೂಜೆ ಉದ್ವಾರ್ಥನೆ
ಒದಗಿಯಾಗಲು ಮೇಲೆ
ಸುಧ ವಿಧುದಂತೆ ಬೆಣ್ಣೆ ಶರ್ಕರ
ಸದತೀರ್ಥ ಅಲಂಕಾರ ಅವಸರ
ಇದೆ ಮಹ ಪೂಜೆ ನೋಡಿದೆ ೨೧
ಗಂಧ ಪರಿಮಳ ತುಲಸಿ ಪುಷ್ಪಾ
ನಂದ ಭೂಷಣ ಧರಿಸಿಪ್ಪ
ಒಂದು ಕೈಯಲಿ ದಾಮ ಕಡಗೋ
ಲಂದದಲಿ ತಾಳಿದಾ
ಮಂದರಿಗೆ ಇದು ಸಾಧ್ಯವಲ್ಲವು
ಮುಂದೆ ಯತಿಗಳು ಮಂತ್ರವ
ಮಂದ ನಗಿಯಲಿ ಪೇಳುತಿಪ್ಪ
ಚಂದವನು ನಾ ನೋಡಿದೆ ೨೨
ಎತ್ತುವ ಧೂಪಾರತಿಗಳು
ಹತ್ತೆಂಟು ಬಗೆ ಮಂಗಳಾ
ರುತ್ತಿ ನಾನಾ ನೈವೇದ್ಯ ಷಡುರಸ
ಮೊತ್ತಂಗಳು ಪರಿವಿಧಾ
ಉತ್ತಮ ಶಾಖಾದಿ ಘೃತದಧಿ
ತತ್ತಕ್ರಫಲ ಪಕ್ವವು
ಸುತ್ತಲು ತಂದಿಟ್ಟು ಅರ್ಪಿ
ಸುತ್ತಲ್ಲಿಪ್ಪುದು ನೋಡಿದೆ ೧೩
ಮಂತ್ರ ಘೋಷಣೆ ಭಾಗವತಜನ
ನಿಂತು ಗಾಯನ ಮಾಡಲು
ಅಂತವಿಲ್ಲದೆ ವಾದ್ಯಸಂದಣಿ
ಚಿಂತಿಸುವ ನಿಜದಾಸರು
ವಂತು ವಾಳೆಯಿಲ್ಲದಾ ಜನ
ಸಂತೋಷದಲಿ ನಲಿವುತಾ
ತಂತ್ರ ಸಾರೋಕ್ತದ ಪೂಜೆ
ಅತ್ಯಂತವನು ನಾ ನೋಡಿದೆ ೨೪
ತೀರ್ಥ ಪ್ರಸಾದ ಗಂಧ ಅಕ್ಷತೆ
ಅರ್ಥಿಯಲ್ಲಿ ಕೊಡುವರು
ವ್ಯರ್ಥವಲ್ಲಿವು ಇಲ್ಲಿ ಒಂದು ಮು
ಹೂರ್ತವಾದರು ಎಂದಿಗೂ
ಪಾರ್ಥಸಾರಥಿ ಉಂಡ ಶುಭ ಪ
ದಾರ್ಥ ಬಡಿಸಲು ಉಂಡು ಕೃ
ತಾರ್ಥನಾದೆನು ಜ್ಞಾನವಧಿಕ
ಸಾರ್ಥಕರನ ನೋಡಿದೆ೨೫
ತರಣಿ ಮಕರಕೆ ಬರಲು ಗೋಪಾಲ
ಮೆರೆವ ವೈಭವವೆಂಬೆನೇ
ಉರಗ ಮಂಟಪ ಗಜ ತುರಗ ಹರಿ
ಗರುಡ ಶ್ರೀ ಹನುಮಂತನಾ
ವರ ರೂಢನಾಗಿ ಮೆರೆದು ಆಮೇಲೆ
ಮಿರುಗುವ ರಥವನೇ ಏರಿ
ಪರಮ ವೇಗದಿ ಚತುರ್ವೀಧಿಯ
ತಿರುಗಿ ಬಪ್ಪದು ನೋಡಿದೆ ೨೬
ಓಕಳಿಯ ಸಂಭ್ರಮವೆ ಪೇಳಲು
ಗೋಕುಲಕೆ ಸಮನೆನಿಸಿತು
ವಾಕು ಕೇಳ್ ಸುರ ಮುನಿಗಳೊಡನೆ
ಲೋಕಕ್ಕಾಶ್ಚರ್ಯ ತೋರುತಾ
ಸೋಕಿ ಸೋಕದ ಹಾಸೆ ಓಕುಳೀ
ಹಾಕಿ ಆಡುವ ಲೀಲೆಯ
ಈ ಕಲಿಯುಗದಲ್ಲಿ ಸೋಜಿಗ
ಈ ಕಥೆಯಾದುದು ನೋಡಿದೆ ೨೭
ಸಂಜೆ ವಾಲಗ ಎಡಬಲದಲಿ
ಪಂಜು ಕಟ್ಟಿಕೆಕಾರರು
ರಂಜಿಸುವ ಪಲ್ಲಕ್ಕಿ ಸೇವಿಪ
ರಂಜಳವಾಗಿ ಒಪ್ಪಲು
ಕುಂಜರಾರಿಯ ಪೀಠದಮೇಲೆ
ಕಂಜಲೋಚನ ಕುಳ್ಳಿರೆ ನಿ
ರಂಜನದಲಿ ಪೂಜಿಸುವ ಮತಿ
ಪುಂಜ ಯತಿಗಳ ನೋಡಿದೆ ೨೮
ಶ್ರುತಿ ಪುರಾಣಗಳುಪನಿಕ್ಷತ್ ವೊ
ಸತು ಶಾಸ್ತ್ರ ಪ್ರಬಂಧವು
ಸತತ ಪೇಳುವ ಭಾಗವತ ಸುಸಂ
ಗೀತಿಯಲಿ ರಾಗ ಭೇದವು
ಶ್ರುತಿ ಕಥಾಭಾಗ ಪದ್ಯ ಅಷ್ಟಕ
ಮಿತಿಯಿಲ್ಲದಲಿಪ್ಪ ಪ್ರಸಂಗ
ತತುವ ಮಾರ್ಗದಿ ನುಡಿವ ಬಲು ಉ
ನ್ನತ ಮಹಿಮರ ನೋಡಿದೆ ೨೯

೧೦೯
ನೋಡಿದೆನು ತಿರುವೆಂಗಳೇಶನಾ
ಮಾಡಿದೆನು ಭಕುತಿಯಲಿ ವಂದನೆ
ಬೇಡಿದೆನು ಕೊಂಡಾಡಿ ವರಗಳ
ನಾಡೊಳಗೆ ಈಡಿಲ್ಲದಪ್ಪನಾ ಪ
ಘನಸುಂದರ ಜ್ಞಾನ ತೀರ್ಥ ಆನಂದ
ಕನಕ ಮುಕ್ತ ವೈಕುಂಠ
ಧನ ವರಹಾ ವೈರಾಗ್ಯನಿಲಿ ರ
ತುನ ಚಂದ್ರಮ ವರಧರ್ಮ ನಾರಾ
ಯಣ ಭಕುತಿ ಶ್ರೀಕಾಂತಿ ಬ್ರಹ್ಮಾ
ರುಣ ವೃಷಭ ಶ್ರುತಿ ಗರುಡ ಸರ್ಪ
ಜನತ ಪೂಜಿಪ ಸುರ ಸುಧಾನಂತ
ಇನಿತು ಪೆಸರುಳ್ಳ ಪುಷ್ಕರಾದ್ರಿಯಾ೧
ಖಗನ ಪೆಗಲಲಿ ನಗವ ತಂದ
ಜಗದೊಳು ಸುವರ್ಣಮುಖರಿ ನಿ
ಮ್ನಗ ತೀರದಲಿ ಸ್ಥಾಪಿಸಿದ ಸುತ್ತಲು
ಝಗಝಗಿಸುದೆ ನೋಳ್ಪ ಜನರಿಗೆ
ಅಗಣಿತ ಅಗಾಧಗಳು ತೆಗೆದು
ಹಿಮ್ಮೊಗವಾಗಿ ಪೋದವು
ಯುಗ ಯುಗ ಕಥಾಭೇದ ಬಗೆಬಗೆ
ಪೊಗಳಿದರೆ ನೆಲೆಗಾಣೆ ಅನುದಿನಾ ೨
ಸರಸ್ವತಿಗೆ ಮುನಿಯಿಂದ ಶಾಪವು
ಬರಲು ಭರದಲಿ ಬಂದು ವಿರಜಾ
ಸರತಿಯೊಳು ಬೆರಸಿದಳ್ ತಪದಲಿ
ಹರಿಯ ಕರುಣವ ಪಡೆದು ಪ್ರತಿದಿನ
ಸ್ಮರಸಿದವರಿಗೆ ಪುಣ್ಯವೀವುತ
ಸರುವ ಸರೋವರಧಿಕವೆನಿಪ ಸುಂ
ದರ ಸ್ವಾಮಿ ಪುಷ್ಕರಣಿಯನು ತ್ರಿ
ಕರಣ ಬಲು ಒಂದಾಗಿಬಿಡದಲೆ ೩
ಎರಡೈದು ಪ್ರಾಕಾರ ಗೋಪುರಾ
ಎರಡೈದು ದ್ವಾರಗಳು ಕಟ್ಟಿದಾ
ಮಿರುಗುವತಿ ಮಹಾ ಮಕರ ತೋರಣ
ಧರೆಗೆ ಮಟ್ಟಿದ ಎಡಬಲದ ಪೂ
ಸರಗಳೊಪ್ಪಲು ದ್ವಾರಪಾಲಕರಿ
ರುತಿಪ್ಪರಲ್ಲೆಲ್ಲಿ ಕಾವುತಾ
ತರುಚರಾದಿಯ ನಿಕರ ತುಂಬಿರೆ
ಪರಿಪರಿಯ ಮಂಟಪಗಳಿಂದಾ ೪
ಭಂಗರಹಿತ ಬಂಗಾರಮಯವಾದಾ
ತುಂಗ ಆನಂದ ನಿಲಯ ವಿಮಾನಾ
ಕಂಗಗಳಿಗೆ ಬಲು ತೇಜಿಃಪುಂಜದಿ
ಹಿಂಗದಲೆ ಗೋಚರಿಸುತದೆ ನರ
ಸಿಂಗ ಮೂತ್ರ್ಯಾದಿಗಳು ಪ್ರಾಣ ಭು
ಜಂಗಧರಾದಿ ದಿಕ್ಪಾಲರೆಲ್ಲರು
ಸಂಗ ಮತಿಯಲಿ ವಾಸವಾಗಿರೆ
ಮಂಗಳಾಂಗ ಪ್ರಿಯಾಂಗ ಪ್ರಿಯನಾ ೫
ಮುಕ್ತಿ ಬೀದಿಗಳೆರಡು ವಿ
ರಕ್ತಿ ಜ್ಞಾನ ಸತ್ಕರ್ಮ ಬಲು ದೃಢ
ಭಕ್ತಿಯೋಗವು ಯಾವ ತ್ಯಾಗ ಸಂ
ವ್ಯಕ್ತ ರಾಗವು ಈಪರಿ ಸು
ಉಕ್ತಿ ದ್ವಾದಶ ಸಾಲ ಬೀದಿಗ
ಳುಕ್ತ ಜನ ಸಂಚರಿಸುತ್ತಿಪ್ಪರು
ಶಕ್ತನೊಬ್ಬನೆ ಜಗದೊಳೀತನೆ
ವ್ಯಕ್ತ ಅವ್ಯಕ್ತದಲಿ ಚಿತ್ರವಾ ೬
ಲೋಕೇಶ ಲೋಕಪಾಲಕರು ಖಗ
ಕಾಕೋದರ ಗಂಧರ್ವ ಸನಕಾದಿ
ಲೋಕ ಚಕ್ಷು ಸೀತಾಂಶು ಉದಿಸಿದರು
ಏಕಾಂತನು ವಾಯುನಂದನ
ಪಾಕಶಾಸನ ಸೌಮ್ಯ ಗುರು ಕವಿ
ನಾಕಜನ ಮಿಗಿಲಾದ ಭಕ್ತರು
ಏಕಗುಣವಾರಂಭಿಸಿ ಅ
ನೇಕ ಗುಣದಲಿ ಭಜಿಸುತಿಪ್ಪುದಾ೭
ಮೂರು ಪ್ರಸಾದ ಮಹಿಮೆಯ
ಸಾರಿದರೆ ನೆಲೆದೋರದು ಕಂ
ಸಾರಿ ಚಿನ್ಮಯ ಲೀಲೆಗೆ ಮತ್ತಾರಾದರು ಗಣ್ಯಮಾಳ್ಪರೆ
ಧಾರುಣಿಲಿ ಮಧ್ಯದಲಿದಕೆ ಎ
ದಿರುಗಾಣೆನು ಎಲ್ಲಿ ಚರಿಸಲು
ಮಾರುತನು ತಾನೊಬ್ಬ ಬಲ್ಲ ವಿ
ಸ್ತಾರವಿದರ ವಿಚಾರ ಮತಿಯಲಿ೮
ಧೀರ ಜಗದೋದ್ಧಾರ ರಿಪು ಸಂ
ಹಾರ ನಾನಾವತಾರ ನವನೀತ
ಚೋರ ಜಾರ ಶಿರೋಮಣಿ ಶ್ರೀ
ನಾರಿಯರರಸನೆ ತಾ ಭಕ್ತ ಚ
ಕೋರ ಚಂದ್ರಮ ಪೂರ್ಣ ಸುಂದರ
ಸಾರ ಭವಾರ್ಣವತಾರ ಕಾರಣ
ವೀರ ವಿತರಣ ಶೂರನೆನಿಪನ್ನ
ದ್ವಾರದಲಿ ಬಂದು ಸ್ತುತಿಸಿದೆನು ನಿಂದೂ ೯
ಈ ವೈಲಕ್ಷಣವುಳ್ಳ ದೊರೆತನ
ಈ ವೈಭವ ಸರ್ವೋತ್ತಮನೆಂಬದು
ಈ ವೈಭೋಗ ಸಾಕಲ್ಯವಾಗಿದೆ
ಈ ವೈಯಾರವು ಈತಗಲ್ಲದೆ
ಈ ವೈಕುಂಠನ ನೋಡುವುದು ಮಹಾ
ಈ ವೈದಿಕದ ಭಾಗ್ಯಕ್ಕೆಣೆಯೆ
ಈ ವೈಧಾತ್ರಿಗೆಯಿವನು ಪೇಳಿದ
ಈ ವೈಚಿತ್ರವ ಕೇಳಿ ಮನದಲಿ ೧೦
ರನ್ನಮಯ ಕಿರೀಟ ಕುಂಡಲ
ಕರ್ಣ ಕಸ್ತೂರಿನಾಮ ಪಣೆಯಲಿ
ಕೆನ್ನೆ ಚಂಪಕ ನಾಸದಂತ ಪ್ರ
ಸನ್ನ ವದನಾಂಭೋಜಲೋಚನಾ
ಚಿನ್ನಸರ ಉಡುದಾರ ಸರಿಗೆ ಮೋ
ಹನ್ನ ಪೀತಾಂಬರ ನೂಪುರಗೆಜ್ಜೆ
ಸನ್ನಿಧಿಗೆ ನಡೆತಂದು ದೇವವರೇ
ಣ್ಯನಂಘ್ರಿಯ ನೆನೆದೆ ಚೆನ್ನಾಗಿ ೧೧
ಮೆರೆವ ಉತ್ಸವ ವಾಹನಂಗಳು
ನೆರೆದ ಪ್ರಜೆದಟ್ಟಡಿಯಾಗಿದೆ ನೋಡಿ
ಎರಡೊಂದು ವಿಧದವರುಯಿಲ್ಲಿಗೆ
ಬರುವರೈ ಅವರವರ ತಕ್ಕದು
ಹರಿಯ ಫಲವನು ಕೊಡುವನಿಲ್ಲದೆ
ಅರಮರೆ ಇಲ್ಲಿದಕೆ ಎಂದಿಗು
ಮೊರೆವ ನಾನಾ ವಾದ್ಯ ರಭಸ ವಿ
ಸ್ತರಿಸ ಬಲ್ಲೆನೆ ನೂತನೂತನಾ ೧೨
ರಥದ ಸಂಭ್ರಮವಾರು ಬಲ್ಲರು
ಪ್ರತಿಗಾಣೆ ಈ ಪೃಥ್ವಿಯೊಳಗೆ ಅ
ಪ್ರತಿ ಸಾಹಸಮಲ್ಲ ತನ್ನಯ
ಸತಿಯೊಡನೆ ಪರುಠವಿಸಿ ಪೊಳೆವುತ್ತ
ಚತುರ ಬೀದಿಯ ಸುತ್ತಿ ಸುಮನಸ
ತತಿಯ ಸಂಗಡ ಬರುವ ಭರ ಉ
ನ್ನತವ ಗುಣಿಸುತ್ತ ನಲಿನಲಿದು ಅ
ಚ್ಯುತನ ಕ್ರೀಡೆಯ ಸ್ಮರಿಸಿ ನಮೋ ಎಂಬೆ೧೩
ರಾಜರಾಜೇಶ್ವರ ನಿರಂತರ
ರಾಜಿಸುತಿಪ್ಪ ಬಗೆಬಗೆ ಸಂಪೂಜೆಯಲಿ ರಾಜೋಪಚಾರದಿ
ಮೂಜಗದೊಳು ಈ ನಿಧಿಯಲಿದ್ದ
ಸೋಜಿಗವೆ ಮತ್ತೆಲ್ಲಿಯಿಲ್ಲವು
ರಾಜಶೇಖರ ಬಲ್ಲವನೊಬ್ಬನೆ
ಮಾಜದಲೆ ಸಜ್ಜನರು ಸತ್ಕರ್ಮ
ಬೀಜಮಂದಿ ಮಾಡಿಬಿಡಲೆ ೧೪
ದರ ಸುದರಶನ ಪಾಣಿ ತನ್ನ ಸಂ
ದರುಶನವೆಮಗಿತ್ತು ಘನ ಆ
ದರ ಪಾಲಿಸಿ ಸಂಚಿತಗಾಮಿ
ಪಠಿಸಿ ಪ್ರಾರಬ್ಧವೇ ತೀರಿಸಿ
ಕರುಣದಿಂದಲಿ ದಿವ್ಯರೂಪದ
ಗುರುತು ತೋರುವ ಅಂತರಂಗದಿ
ಪರಮಪಾವನ ವಿಜಯವಿಠ್ಠಲ
ಪೊರೆವ ಪ್ರೀತಿಲಿ ಬಂದು ಮರಿಯದೆ೧೫

೧೮೨
ನೋಡಿದೆನು ಯಾದವ ಕೃಷ್ಣನ |
ಪಾಡಿದೆನೊ ಮನದಣಿಯ ವರಗಳ |
ಬೇಡಿದಾಕ್ಷಣ ಕೊಡುವ ಜಗತ್ರಯ |
ವಾಡಿಸುವ ವಾಗೀಶ ಜನಕನ ಪ
ವೇದ ಭೂಧರ ಮೇದಿನಿ ಪ್ರ |
ಹ್ಲಾದ ಸುರಪನ ಕಾದ ವಂಶವ |
ಛೇದ ಸಾಗರ | ಹಾದಿ ಬಿಗಿದ ಗೋಯಿದ ಬತ್ತಲೆ |
ಯಾದ ತುರಗವ | ಬೀದಿ ವದಿಸಿದನೀತ ಹಯಮೊಗ |
ಬಾದರಾಯಣ ದತ್ತ ವೈಕುಂಠ |
ಬೋಧ ಮೂರುತಿ ಕಪಿಲ ನಾನಾ ವಿ |
ನೋದ ರೂಪದ ಆದಿ ದೈವವ ೧
ಜನನಿಗಾಟವ ತೋರಿ ಕಡಗೋ |
ಲನು ನೇಣರು ಕರದಲಿ ಪಿಡಿದು | ರು
ಕ್ಮಿಣಿಯ ಕೈಯಿಂದ ಪೂಜೆಗೊಂಡರ್ಜು |
ನನಿಂದಲಿ ಗೋಪಿ ಚಂ |
ದನದೊಳಡಗಿ ಅಲ್ಲಿಂದ ಆನಂದ |
ಮುನಿಗೊಲಿದು ಬಲು ವೇಗ ಪಡುವಣ |
ವನಧಿ ತೀರದಲಿಪ್ಪನಂತಾಸನ ಬಳಿಯ ನಿಂದಿದ್ದ ಚಲುವ ೨
ಸುತ್ತ ಯೋಜನ ಕ್ಷೇತ್ರವಿದರೊಳು |
ಉತ್ತಮ ವಿಮಾನ ವೇದ ಪ |
ರ್ವತಗಳು ಅಲ್ಲೆಲ್ಲಿ ಸರೋವರ |
ಕತ್ತಲಿಗಭಿಮಾನಿನಿ ದುರ್ಗಾ |
ಚಿತ್ತಕೊಪ್ಪುವ ಸ್ವರ್ಣ ನದಿಯ ಮಾರುತ
ಸೋಕಲು ದುರಿತ ಪರಿಹರ |
ಸೋತ್ತಮರಿಗಿದು ಸಿದ್ಧ ಸರ್ವದ |
ತತ್ತಳಿಪ ಪರತತ್ವ ಹರಿಯ೩
ತಂತ್ರ ಸಾರೋಕ್ತದಲಿ ಪೂಜೆ ನಿ |
ರಂತರದಿ ಕೈಗೊಂಬ ಬಲು ಗುಣ |
ವಂತ ನೀತನ ಹೊಳವು ಪೊಗಳಿದ |
ರಂತ ಗಾಣವು ಶ್ರುತಿ ಪುರಾಣಗ |
ಳೆಂತು ಪೇಳಲಿ ಮೆರೆವ ವೈಭವ |
ಸಂತರಿಗೆ ಅತಿ ಪ್ರಿಯನಾಗಿಪ್ಪ |
ನಂತ ಕಾಲಕೆ ದೋಷ ದೂರ ನಿಶ್ಚಿಂತ
ನಿತ್ಯ ಸ್ವಾತಂತ್ರ ಪುರುಷನ ೪
ಮಕರ ತಿಂಗಳು ಮೊದಲು ಪಕ್ಷದ |
ಲಕುಮಿರಮಣನ ದಿವಸದಲ್ಲೀಗ |
ಭಕುತಿಯಿಂದಲಿ ಬಂದು ವಂದಿಸಿ |
ಅಕುಟಿಲರ ವೊಡಗೊಡಿ | ನಿಂದು ಗೋ |
ಳಕವ ಚಿಂತಿಸಿ ಸ್ನಾನ ಒಂದೆ |
ಸುಖ ತೀರ್ಥ ಸರೋವರದಲಿ ಮಾಡೆ |
ಸಕಲ ಮನೋಭೀಷ್ಟ ತಾನು ಪಾಲಿಸಿ |
ಮುಕುತರೊಳು ಪೊಂದಿಸುವ ದಾತನ ೫
ಶುಕ್ರವಾರದ ಪೂಜೆ ನೋಡಲು |
ವಕ್ರಗತಿಗಳು ಮುಟ್ಟಲಂಜೊವು |
ಚಕ್ರವರ್ತಿ ತಾನಾಗಿ | ಸಕಲ ಪರಾಕ್ರಮದಲಿ ಚರಿಸಿ ಜಗದೊಳು |
ಶುಕ್ರ ದೇವಸ್ಥಾನದೊಳು ಕಾ |
ಲಕ್ರಮಣ ಮಾಡೆ | ಗೋತ್ರದೊಡನೆ ಪೂ
ರ್ಣ ಕ್ರೀಡೆಯಾಡಿಸುತ ಸಲಹುವ |
ಚಕ್ರಧರ ಅಕ್ರೂರ ವರದನ ೬
ಕಣಿಸಿ ಉಡಿಸುವ ಕುಣಿಸಿ ನೋಡುವ |
ಕನಸಿನೊಳಗಾವಾಗ ತನ್ನನು |
ಮನಸಿನಲಿ ಕ್ಷಣ ಬಿಡದೆ ಗುಣಗಳ |
ಎಣಿಸಿ ಮೈ ಮರೆದಡಿಗಡಿಗೆ ಈ |
ತನುವೆ ನಿನ್ನಾಧೀನವೆಂದಾ |
ಜನರಿಗಪವಾದ ಬರಲೀಸನು |
ಫಣಿಫಣಾದಲಿ ನಾಟ್ಯಮಾಡಿದ |
ದನುಜದಲ್ಲಣ ವಿಜಯವಿಠ್ಠಲನ್ನ ೭

೧೮೧
ನೋಡಿದೆನೊ ಮನದಣಿಯ ನಳಿನಭವಾದ್ಯರ
ಕ್ರೀಡಾಮೃಗವನೆ ಮಾಡಿ
ಆಡಿಸುವ ವಿಚಿತ್ರ ಮಹಿಮ ಗೋಪಾಲಗ
ಈಡುಗಾಣೆನೊ ಎಲ್ಲೆಲ್ಲಿ ಆವಲ್ಲಿ ಪ
ಕಾಲಲಂದಿಗೆ ಗೆಜ್ಜೆ ಸರಪಳಿ ಉಡುದಾರ
ಮೇಲು ಕಿರಿಗೆಜ್ಜೆ ಘಂಟೆ
ತೋಳು ರಕ್ಷಾಮಣಿ ನಾಗ ಮುರಿಗೆ ಬಂದಿ
ಸಾಲು ತಾಯಿತ ಕಟ್ಟಿರೆ
ನೀಲ ಮಾಣಿಕ ವಜ್ರ ಉಂಗುರದ ಬೆರಳು ಸು
ಫಾಲದಲಿಯಿಟ್ಟ ತಿಲಕಾ
ಲಾಲಿಸುವ ಬಾಲಕರೂಪದಿಂದಲಿ ಪ್ರಾತಃ
ಕಾಲದಿ ಮೆರೆವ ಕೃಷ್ಣನ ಇಂದು ೧
ಮುಂಗೈ ಮುರಾರಿ ಪವಳದ ಬುಲಿಗೆಜ್ಜೆ
ಬಂಗಾರ ಕೊರಳಲ್ಲಿ ಹಾ
ರಂಗಳನು ಶೋಭಿಸುವ ಮಾಗಾಯಿ ಕರ್ಣದಲಿ
ಮಂಗಳ ಉರ ಕೌಸ್ತಭ
ಕಂಗೊಳಿಪ ಎಣೆನೂಲು ಹುಲಿಯುಗುರು ತಾಳಿಸರ
ಹಿಂಗದಲೆ ಪಚ್ಚೆ ಪದಕಾ
ಶೃಂಗಾರದರಳೆಲೆ ಶಿರದಿ ಜಾವಳ ಜಡೆ
ತುಂಗಭೂಷಣ ಶಾಂತನ ಇಂದು ೨
ಕಣ್ಣಿಗ್ಹಚ್ಚಿದ ಕಪ್ಪು ಮಕರ ಕಡಗೋಲ
ನೇಣನ್ನೆ ಕರದಲಿ ಪಿಡಿದು
ಕೆನ್ನೆ ವದನ ಕಂಠ ಉದರ ಉರ ಪಾಣಿಗಳು
ಬೆಣ್ಣೆ ಮೊಸರಿಲಿ ತೋದಿರೆ
ಚನ್ನನಾಸಾ ಮಣಿತೂಗೆ ಅದರ ಭಾಗ್ಯ
ಬಣ್ಣಿಪಲರಿದು ತಿಳಿದು
ಚಿನ್ಮಯ ವಿಜಯವಿಠ್ಠಲ ವಿಶ್ವರೂಪ ಪಾ
ವನ್ನ ಉಡುಪಿಯ ಕೃಷ್ಣನ ಇಂದು ೩

೪೩
ನೋಡಿದೆನೊ ಸಿರಿ ಪಾಂಡುರಂಗನಾ
ಪಾಡಿದೆನೊ ಜಗದಂತರಂಗನ
ಕೂಡಿದೆನೊ ಮನ ಖಗ ತುರಂಗನ
ಬೇಡಿದೆನೊ ಗುಣಾಂತರಂಗನಾ ಪ
ಕಪಿಲ ವಿಭುಹರಿ ಸಾರ್ವಭೌಮ ಸು
ತಪನಂದನ ಕೃಷ್ಣ ಕೃಷ್ಣ ಗೀರ್ವಾಣ
ತಪಯಜ್ಞ ಜಿತದತ್ತ ಧನ್ವಂತ್ರಿ
ತಪನಿವಾಸ ವಿನುತ ವೃಷಭ ಹಯ
ಲಪನ ವೈಕುಂಠ ಹಂಸ ತಪನಾ
ಕುಪಿತ ಜಿತ ಮುನಿ ನರನಾರಯಣ
ಅಪರಿಮಿತ ರೂಪ ಧರಿಸಿದಾನಂದ
ವಿಪುಳದೊಳಗೀ ಗುಪಿತ ಮಹಿಮನ ೧
ಮುನಿವನ ಜಿತ ಚಿತ್ತ ಶುದ್ಧದಿ
ಜನನಿ ಜನಕನ ಚರಣ ಸೇವೆಯ
ಅನುದಿನದಿ ಘನವಾಗಿ ಮಾಡುತ
ಗುಣಗಳಿಂದಲಿಯಿರಲು ಇತ್ತಲು
ಮುನಿ ನಾರದನು ಗಾಯನವ ಗೈಯುತ
ಇನಿತು ಸೋಜಿಗ ನೋಡಿ ತನ್ನಯ
ಜನಕಗರುಹಲು ನಗುತಲಾ
ಮನದಿ ಕೈಕೊಂಡ ಮೂಲ ಮೂರ್ತಿಯ ೨
ನುಡಿದ ಮಾತಿಗೆ ತೂಗಿ ಮಸ್ತಕ
ಪೊಡವಿಯೊಳು ನೀನವತರಿಸಿ ಆ
ದೃಢü ಬಕುತನಿಗೆ ದರುಶನವೆ ಇ
ತ್ತಡಿಗಡಿಗೆ ಸುಖಬಡಿಸಿ ಅಲ್ಲಲ್ಲಿ
ಬಿಡದೆ ನಿಲ್ಲುವೆ ನಿಮ್ಮ ಸಹಿತಲಿ
ಕೊಡುವೆ ವರಗಳ ವಿನುತ ಕಳುಹಿದ
ಒಡನೆ ಸಲ್ಲಿಪೆನೆಂದ ಯಮುನಾ
ತಡಿಯ ಜನಿಸಿದ ಜಗನ್ಮೋಹನಾ ೩
ಉದಭವಿಸಿ ಕಿಶೋರತನದಲಿ
ನಿಧಿಯ ನೋಡುವೆನೆನುತ ಗೋವುಗಳ
ಮುದದಿ ಮೇಯಿಸಿಕೊಳುತ ಕಾವುತ
ಒದಗಿ ಗೋವಳರೊಡನೆ ಬಂದನು
ಮೃಡ ವಿಧಿ ಸಂಭವಾದ್ಯ ಭಕ್ತನ
ಎದುರಲಿ ನೋಡಿದನು ಹೋ ಹೋ
ಇದೇ ಸಮಯವೆಂದು ನಿಂದಾ ಹಿಂಭಾ
ಗದಲಿ ಭಕ್ತಿಗೆ ಮೆಚ್ಚಿ ಬಲು ವೇಗಾ೪
ತಿರುಗಿ ನೋಡದಲಿರಲು ಭಕುತನ
ಮರಳೆ ಮಾತಾಡಿಸಲು ಇಟ್ಟಿಗೆ
ಭರದಿ ಹಿಂದಕೆ ಒಗಿಯೆ ವಿಠ್ಠಲ
ಹರುಷದಲಿ ವಶವಾಗಿ ನಿಲ್ಲಲು
ಕರುಣರಸ ಸಂಪೂರ್ಣ ದೇವನ
ನಿರೀಕ್ಷಿಸಿದ ಜಯವೆಂದು ಪೊಗಳಿ
ವರವ ಬೇಡಿದ ಪುಂಡರೀಕನು ಗಿರಿಯನೆತ್ತಿದ ಗೋಕುಲೇಶನ ೫
ಭಕುತ ಮನೋರಥ ಎನ್ನ ಪೆಸರಿಲಿ
ಪ್ರಕಟವಾಗಲಿ ಕ್ಷೇತ್ರ ಸರ್ವದ
ಸಕಲ ಲೋಕದೊಳಗೆ ನೀನೆ
ಮುಕುತಿ ಕೊಡುತಲಿ ಇಲ್ಲೆ ನಿಲುವದು
ಅಖಿಳ ಬಗೆಯಿಂದ ಭಜನೆಗೊಳುತ ನೀ
ರುಕ್ಮಿಣಿಪತಿ ಒಲಿದು ಪಾಲಿಸಿ
ವ್ಯಕುತವಾದನು ಪೂರ್ವಮುಖನಾಗಿ
ಸುಖವಯೋನಿಧಿ ಮೆರೆಯುತಲಿ ಇಂದೂ ೬
ಕ್ರೋಶ ಯೋಜನ ಯೋಜನತ್ರಯ
ದೇಶ ಪರಿಮಿತ ಕ್ಷೇತ್ರವಿಪ್ಪುದು
ವಾಸ ಒಂದಿನಮಲ ಮನುಜರನ
ಲೇಸು ಪುಣ್ಯಗಳೆಣಿಸಿ ಸರಸಿ
ಜಾಸನನು ಬೆರಗಾಗಿ ನಿಲ್ಲುವ
ದೋಷ ವರ್ಜಿತ ಹರಿಯ ನೆನೆಸುತ
ಆ ಸೇತು ಮಧ್ಯದಲಿ
ವಿಶೇಷವಾಗಿದ್ದ ಈ ಕ್ಷೇತ್ರ ಮೂರ್ತಿಯಾ ೭
ನಂದಾ ಮಂದಾಕಿನಿ ಮಧ್ಯಾಹ್ನಕೆ
ನಿಂದಿರದೆ ಬರುತಿಪ್ಪ ಪ್ರತಿದಿನ
ಚಂದ್ರಭಾಗಾ ಪ್ರಸೂನುವತಿ ಅರ
ವಿಂದ ಕುಂಡಲ ಚತುರ ದಿಕ್ಕಿನಲಿ
ಪೊಂದಿಪ್ಪವು ಓರ್ವನಾದರು
ಮಿಂದು ತೀರ್ಥದಲಿ ಆ
ನಂದ ಸತ್ಕರ್ಮ ಚರಿಸಲಾಕ್ಷಣ
ಇಂದಿರೇಶನು ಒಲಿವ ನಿಶ್ಚಯಾ ೮
ದ್ವಾರಸ್ಥ ಜಯ ವಿಜಯ ನಾರದ
ಭಾರತಿ ಪಂಚ ಕೋಟಿ ದೇವರು
ಶ್ರೀರಮಣಿ ಮಿಕ್ಕಾದ ಜನರೆಲ್ಲ
ಈರೆರಡು ದಿಕ್ಕಿನಲಿಯಿಹರು
ಸುತ್ತಲಿ ಪಾಡುತ್ತ ಕುಣಿಯುತ್ತ
ಹಾರುತಲಿ ಹಾರೈಸಿ ನಾನಾ ವಿ
ಹಾರದಲಿ ಪುರಿ ಪ್ರದಕ್ಷಣಿ ವಿ
ಸ್ತಾರ ಮಾಡುತಲಿಪ್ಪ ಸೊಬಗನಾ ೯
ಎರಡು ವಿಂಶತಿ ಗುದ್ದು ಮೊಳವೆ
ಕರಿಸಿ ಕೊಂಬೊದೊಂದೆ ನಿಷ್ಕವು
ಇರದೆ ಇವು ನಾನೂರುಯಾದಡೆ
ವರಧನಸ್ಸು ಪ್ರಮಾಣವೆನಿಸೊದು
ಗುರುತು ತಿಳಿವದು ಇಂಥ ಧನಸ್ಸು
ಅರವತ್ತು ಪರಿಮಿತಾ ಈ ಭೀಮಾ
ಸರಿತೆಗಳು ಪರಿಪರಿ ತೀರ್ಥಗಳಕ್ಕು
ನಿರೀಕ್ಷಿಸಿ ವಂದನೆಯ ಮಾಡುತಾ ೧೦
ಜ್ಞಾತಿ ಗೋತುರ ಹತ್ತದೊಂದೆ
ಮಾತು ಮನ್ನಿಸಿ ಕೇಳಿ ಸುಜನರು
ವಾತದೇವನ ಕರುಣತನವನು
ನೀತಿಯಲಿ ಪಡಕೊಂಡು ಸತ್ವದಿ
ಜ್ಞಾತ ಅನುಷ್ಠಾನದಲಿ ನಡೆದು ಪು
ನೀತ ಮಾನವ ಬಂದರಾದಡೆ
ಆತುಮದೊಳು ಹರಿ ಪೊಳೆದು ಬಲು
ಕೌತುಕವ ತೋರಿಸುವ ರಂಗನಾ ೧೧
ಶಯ್ಯಾ ಹರಿ ದಿನದಲಿ ಮಾನವ
ಕಾಯ ನಿರ್ಮಳನಾಗಿ ಫಂಡರಿ
ರಾಯ ರಾಜೀವನೇತ್ರ ತ್ರಿಭುವನ
ನಾಯಕನ ಕ್ಷೇತ್ರಕ್ಕೆ ಮನಮುಟ್ಟಿ
ಗಾಯನವ ಮಾಡುತಲಿ ಬಂದ ನಿ
ರ್ಮಾಯದಲಿ ಕೊಂಡಾಡಿ ದಮ್ಮಯ್ಯ
ಕೈಯ ಪಿಡಿಯನೆ ಕರುಣದಿಂದ ಸಾ
ಹಾಯವಾಗುವ ವಾಣಿ ಜನಕನಾ ೧೨
ಮಕುಟ ಕುಂಚಿ ಕುಲಾಯ ಕುಂತಳ
ಮಕರ ಕುಂಡಲ ಮಣಿ ಕಿರಣ ಸ
ನ್ನುಖ ಮುಕರ ಸೋಲಿಸುವ ಕಾಂತಿ ಚಂ
ಪಕ ನಾಸಿಕ ಮುಖ ಮೃಗನಾಭಿ ಸಣ್ಣ ತಿ
ಲಕ ಕೌಸ್ತುಭಗಳ ತುಲಸಿ ಮಾಲಿಕಾ
ನಖ ಪದಕ ಕಟೆಕಂಬು ಕರದ್ವಯ
ಅಕಳಂಕ ನಖ ಪಾದ ಭೂಷಣ ಮಾ
ಣಿಕ ಇಟ್ಟಿಗೆ ಮೇಲೆ ನಿಂದ ವಿಠ್ಠಲನ ೧೨
ಸಂಗಮ ಸುರ ಮಥನ ಕಾಳಿಂಗ
ಭಂಗ ಭಾವುಕ ಭಕ್ತಜನಲೋಲ
ಶೃಂಗಾರಾಂಬುಧಿ ರೋಮ ಕೋಟಿ ಕೋಟಿ
ಲಿಂಗಧರ ಗೌರೀಶ ಸುರಪ
ನಂಗ ಮಿಗಿಲಾದ ಮುನಿವಂದಿತಾ ಮಾ
ತುಂಗ ವರದ ಗೋವಿಂದ ವರದೇಶ
ಸಂಗ ನಿಃಸಂಗ ಸುಪ್ರಸನ್ನ ನೀ
ಲಾಂಗ ಗತಿ ಎಂದು ತುತಿಗೆ ಅನುದಿನ ೧೪
ಪೇಳಲೊಶವೇ ಲೋಹದಂಡಿ ಹಿ
ಯ್ಯಾಳಿ ಕ್ಷೇತ್ರದ ಮಹಿಮೆ ಸಾವಿರ
ನಾಲಿಗಿಂದಲಿ ಪೊಗಳಿ ಸುಮ್ಮನೆ
ವ್ಯಾಳಪತಿ ಬೆರೆಗಾಗಿ ನಿಲ್ಲುವ
ಸಲಿಗೆ ನಾ ಮಾಳ್ಪರು ವಿಲಿಂಗರು
ಮೇಲು ಮೇಲೀ ಭುವನದೊಳಗಿದ್ದು
ಹೇಳಿ ಕೇಳಿದ ಜನರಿಗಾನಂದಾ
ಬಾಲಾ ವಿಜಯವಿಠ್ಠಲರೇಯನಾ ೧೫

೪೨
ನೋಡಿದ್ಯ ರಂಗೈಯನ ನೋಡಿದ್ಯ ಪ
ನೋಡಿದ್ಯ ಮನವೆ ನೀನಿಂದು ಕೊಂ-
ಡಾಡಿದ್ಯ ಎದುರಲ್ಲಿ ನಿಂದು ಆಹ ಮಾ-
ತಾಡಿದ್ಯ ವರಗಳ ಬೇಡಿದ್ಯ ನಿನ್ನೊಳು
ಕೂಡಿ ನಲಿನಲಿದಾಡುವ ಶ್ರೀ ರೂಪ ಅ.ಪ.
ಚರಣತಳದಲ್ಲಿ ಕೆಂಪು- ಶುದ್ದ
ಅರವಿಂದ ಧ್ವಜ ವಜ್ರಸೊಂಪು- ಸ್ತುತಿ
ಪರಿಗೆ ಸುರಂಘ್ರಿಪ ತಂಪು- ನೋಡ-
ಲರಸಿ ಕಾಣದೊ ವೇದಗುಂಪು, ಆಹ
ಹರಡಿ ಹಿಂಬಳೆ ಸಾಲ್ಬೆರಳೈದರ ಮೇಲೆ
ಸುರುಚಿರ ರೇಖೆ ಚಂದ್ರಮನ ಸೋಲಿಪ ನಖ೧
ಸರಸ ನೂಪುರ ಗೆಜ್ಜೆ ಪೆಂಡ್ಯ – ಹೊನ್ನ
ಸರಪಳಿ ಪಾಡಗ ಕಂಡ್ಯ – ಹಿಂದೆ
ಧರೆಗೆ ಮುಟ್ಟಿದ ಜಡೆಗೊಂಡ್ಯ – ಇದು
ತರುಣಿ ಎನ್ನದಿರು ಕಂಡ್ಯ – ಆಹ
ಬೆರಳಲ್ಲಿ ಇಟ್ಟ ಸುಂದರ ಪಿಲ್ಲಿಮೆಂಟಿಕೆ
ಕಿರಿಪಿಲ್ಲಿ ಅಡಿಮೆಟ್ಟು ಮೆರೆವ ಕಾಲುಂಗರ೨
ಝಣ ಝಣ ಗೆಜ್ಜೆನಾದ – ವನ್ನು
ಎಣಿಸಲಾರದು ನೋಡಿ ವೇದಾ – ನಂತ –
ಗುಣಗಳುಭೈರಿಸುವ ಮೋದ – ಇದು
ಅಣುರೇಣು ತೃಣಕಾಷ್ಠ ಭೇದ, ಆಹ
ಪ್ರಣತಾರ್ತಿ ಹರವಾದ ಮಿನುಗುವ ಜಾನುದ –
ರ್ಪಣ ನಾಚಿಪ ಜಂಘೆ ಎಣೆಗಾಣೆ ಸ್ತ್ರೀರೂಪ ೩
ಊರುದ್ವಯಂಗಳು ರಂಭಾ – ಸ್ತಂಭ
ಚಾರು ಪೊಕ್ಕುಳ ಸುಳಿಗುಂಭ – ತಂತ್ರಾ –
ಸಾರೋಕ್ತದಿ ಪೂಜೆಗೊಂಬ – ವಿ
ಸ್ತಾರ ಮಹಿಮೆ ಗುಣತುಂಬ, ಆಹ
ನಾರಿ ಲಾವಣ್ಯದ ಪಾರ ಮೀರಿದ ಕಾಂತಿ
ಆರಾರ ಮನಸಿಗೆ ತೋರದ ಪೆಣ್ಣಿನ೪
ಉದಯರಾಗದ ದಿವ್ಯವಸನ – ಮೇಲೆ
ಉದರ ತ್ರಿವಳಿ ಬಂದಿ ಹಸನ – ಕೇಳು
ಮುದದಿಂದ ವಡ್ಯಾಣ ಬೆಸನ – ನೋಡು
ಯದುಕುಲ ಜಾತ ಮಾನಿಸನ, ಆಹ
ಮದಕರಿಯಂದದಿ ವಲಿದೊಲಿದಾಡಲು
ಮದನಾರಿ ಮರುಳಾದ ಅದುಭುತ ಚರಿಯನ್ನ ೫
ದೋರ್ಯ ಹರಡಿ ಕೈಕಟ್ಟು – ಚೂಡ್ಯ
ಈರೈದುಂಗುರವುಳ್ಳ ಬೆಟ್ಟು – ಬಂ –
ಗಾರ ಕಂಕಣ ಬಳೆಯಿಟ್ಟು – ಶೃಂ
ಗಾರ ಹಣೆಗೆ ಹಚ್ಚಿ ಬೊಟ್ಟು, ಆಹ
ಗೀರು ಗಂಧವು ಗಂಬೂರ ಕರ್ಪೂರ ಕ-
ಸ್ತೂರಿ ಲೇಪನ ಶೃಂಗಾರ ತ್ರಿವಳಿಯ ೬
ತಾಯಿತು ಮುತ್ತ ಕಟ್ಟಾಣಿ – ತೋಳ
ತಾಯಿತ ಬಂಧುರ ಮಣಿ – ವಂಕಿ
ಕೇಯೂರ ಪಲ್ಲವ ಪಾಣಿ – ಉ
ಪಾಯದಲ್ಲಿ ಘಟ್ಟಿ ಕಾಣಿ, ಆಹ
ನೋಯದೆ ಸುರರಿಗೆ ಪೀಯೂಷ ವುಣಿಸಿ ದೈ-
ತೇಯರ ಮಡುಹಿದ ಮಾಯದ ಕನ್ನಿಕೆ ೭
ಸರಿಗೆ ಮುತ್ತಿನ ಚಿಂತಾಕ – ಕುಚ-
ವೆರಡರ ಮೇಲೆ ಕಂಚುಕ – ತೊಟ್ಟ
ಭರದಿ ತೂಗುವ ಪಚ್ಚೆಪದಕ – ಕೆಳಗೆ
ಹರಿ ನಡುಕಿಂಕಿಣಿ ಕನಕ, ಆಹ
ಹರಳು ಕೆತ್ತಿದ ಚಿತ್ತರ ಮಾಟ ಕಟಿಸೂತ್ರ
ಧರೆಗೆ ಶೋಭಿಪ ಸೀರೆ ನೆರೆಯ ವೈಭವವನು ೮
ರನ್ನ ಪವಳ ಸರ ಥಳಕು – ಜೋಡು
ಕನ್ನಡಿ ಹಾಕಿದ ಮಲಕು – ನೋಡು
ಅನ್ನಂತ ಸೂರ್ಯರ ಝಳಕು – ಲೋಕ
ಚನ್ನಾಗಿ ತುಂಬಿದ ಬೆಳಕು
ರನ್ನ ತ್ರಿವಳಿ ಹೇಮ ಸಣ್ಣ ಮುತ್ತಿನ ಮೋ
ಹನ್ನ ಏಕಾವಳಿ ಚಿನ್ನದ ಸರಗಳು ೯
ಸಿರಿವತ್ಸ ಕೌಸ್ತಭ ಹಾರ-ವೊಪ್ಪೆ
ಉರ ವೈಜಯಂತಿ ಮಂದಾರ – ಮೇಲೆ
ತರುಣ ತುಲಸಿ ಜನಿವಾರ – ಇಟ್ಟು
ವರಭುಜಕೀರ್ತಿ ಕುಂಜರ, ಆಹ
ಕರದಂತೆರಡು ತೋಳು ಎರಡೊಂದಾರು ಸಾ-
ವಿರ ರೂಪನಾಗಿ ಶರೀರದೊಳಿಪ್ಪನ ೧೦
ಸಕ್ಕರೆ ತುಟಿ ಕೂರ್ಮ ಕದಪು – ಕಣ್ಣಿ-
ಗಿಕ್ಕಿದ ಸೊಬಗಿನ ಕಪ್ಪು – ತಲೆ –
ಹಿಕ್ಕಿ ಬಾಚಿದ ಕೇಶ ಥಳಪು – ಸರ್ವ
ದಿಕ್ಕು ಮೋಹಿಸುವಂಥ ವಲಪು, ಆಹ
ಲಕ್ಕುಮಿ ದೇವಿಯ ಲೆಕ್ಕಿಸದೇ ಮಗನ
ಪೊಕ್ಕುಳಿಂದಲಿ ವೆತ್ತ ಅಕ್ಕಜದಬಲೆಯ೧೧
ಸೂಸುವ ದಾಡಿಯ ದಂತ – ಪಙÂ್ತ-
ನಾಸ ಮೂಗುತಿಯಿಟ್ಟ ಶಾಂತ – ಸುಖ
ಲೇಸು ಹಾಸ ಜಗದಂತ – ರಂಗ
ಭಾಸ ಮಿಗಿಲು ಚಂದ್ರಕಾಂತ, ಆಹ
ಸುಷುಪ್ತಿಯಲ್ಲಿ ಭೂಶ್ವಾಸ ಬಿಡುವರನ್ನು
ಲೇಸಾಗಿ ಸಲಹುವ ದೋಷನಾಶನ ರೂಪ೧೨
ಎಸೆವ ಪಂಜರದೋಲೆ ಕಿವಿಯ-ಹೊನ್ನ
ಕುಸುಮ ಕೂಡಿದ ಬಾವಲಿಯ – ತಿದ್ದಿ
ಕುಸುರಿಯಿಕ್ಕಿದ ಸರಪಣಿಯ – ಚಿನ್ನ
ಸೋಸಲು ಕುಂಕುಮ ರ್ಯಾಕಟೆಯ, ಆಹ
ಎಸಳು ಕೇದಿಗೆ ಬಹು ಕುಸುಮವ ಮುಡಿದದ್ದು
ವಶವಲ್ಲ ಚೌರಿ ಅರಸಿನ ಪೂಸಿದ ಹೆಣ್ಣ೧೩
ಭ್ರೂಲತೆ ವಲಯ ಕಪೋಲ – ಪೊಸ-
ಮೌಳಿ ಕೈಯಲ್ಲಿ ಕಡೆಗೋಲ – ನೇಣು
ಪಾಲಯ ಪಿಡಿದ ಸುಶೀಲ – ಧರೆಯ –
ನಾಳಿದ ಭಕ್ತವತ್ಸಲ, ಆಹ
ಶೂಲಿಯ ನೆಲೆಸಿದ ಖೂಳನ ಸದೆದು ಹಿ-
ಯ್ಯಾಳಿಸಿ ಮೆರೆದ ಗೋಪಾಲನೆಂಬ ಹೆಣ್ಣ೧೪
ರಜತ ಪೀಠ ಪುರಾಧೀಶ – ನಂದ
ವ್ರಜದೊಳಾಡಿದ ಸರ್ವೇಶ – ನಮ್ಮ
ವಿಜಯವಿಠ್ಠಲ ನಾರಿವೇಷ – ತನ್ನ
ನಿಜಭಕ್ತ ಮಧ್ವಮುನೀಶ, ಆಹ
ಭಜನೆ ಮಾಡಲು ಮೆಚ್ಚಿ ತ್ರಿಜಗ ಮಧ್ಯದಲಿ
ನಿಜ ಪದವಿಯನಿತ್ತು ಸುಜನರಿಗೊಲಿದನ್ನ೧೫

೪೫
ನೋಡು ನೋಡು ಗರುಡಗಮನನೆ
ಮಾಡು ದಯವನು ವೇಗದಿ ಪ
ಪಾಡುವೆ ಆನಂದದಲಿ ನಿನ್ನನು
ಕೊಂಡಾಡುವೆನು ನಿನ್ನ ಮೂರ್ತಿಯಾ ಅಪ
ಮಂಗಳಾಂಗನೆ ಮನ್ಮಥನ ಪಿತ
ಸಂಗೀತ ಸುರಲೋಲನೆ
ಕಂಗಳಬ್ಬರ ತೀರುವಂತೆ
ಚರಣಂಗಳನೆ ತೋರೋ ವಿನಯದಿ೧
ಪರಮ ಪುರುಷನೆ ಪುಣ್ಯ ಶ್ಲೋಕನೆ
ದುರುಳ ದೈತ್ಯರ ದಲ್ಲಣ
ಮರಿಯಲೀಸದೆ ನಿನ್ನ ಚರಣ
ಸ್ಮರಣೆ ಒದಗಿಸೊ ವದನಕೆ ೨
ವಂದನೆಯು ಗೋವಿಂದ ಗೋಪಾಲಾ
ಮಂದರಧರ ಮಾಧವಾ
ಇಂದು ವಿಜಯವಿಠ್ಠಲ ನಿನ್ನ
ಸಂದರ್ಶನವ ಕೋರುತಾ ೩

ಪಂಪಾಪುರಾಧಿಪ ಶ್ರೀವಿರೂಪಾಕ್ಷ

೨೭೩
ಪಂಪಾಪುರಾಧಿಪ ಶ್ರೀ ವಿರೂಪಾಕ್ಷ ನೀ ಪಾಲಿಪುದೆಮ್ಮನು ಪ
ಕಾಪಾಡುವುದು ಶ್ವೇತ ದ್ವೀಪಾವಾಸನ ತೋರಿ
ಸರ್ಪಭೂಷಣ ದೇವ ತ್ರಿಪುರಸಂಹಾರ
ಭಾಪುರೆ ಸುರಕುಲ ದೀಪ ಸದಾಶಿವ
ಶ್ರೀಪತಿ ಪಾದ ಸಮೀಪದ ಸೇವಕ ಅ.ಪ.
ಹರಿಪಾದೋದಕ ಶಿರದಲಿ ಧರಿಸಿದ
ಹರಿಕಥಾಮೃತ ಮಳೆಗರೆವೆ ನೀ
ಕರುಣಿ ಸಂಕರುಷಣನ ಚರಣಾಬ್ಜ ಧೂಳಿ ಶ-
ರೀರ ಲೇಪನದಿಂದ ವರ ತೇಜಯುತನೆ
ಮುರಹರಗೆರಗದ ನರನಿಗೆ ನರಕವು
ಸ್ಥಿರವೆಂದು ಸುರವರ ಭೇರಿ ಭೋರಿಡುತಿರೆ
ನಿರುತ ಅವನ ಪದ ಮೆರೆಯದೆ ಮನಗೊಂಡೆ
ಶರಣು ಅಮರನುತ ಗುರು ಶಿರೋಮಣಿಯೆ೧
ದೇಶಕ್ಕೆ ದಕ್ಷಿಣ ಕಾಳಿಯೆನಿಸುವ ವಿ-
ಶೇಷ ಸ್ಥಳದೊಳು ವಾಸವಾಗಿ ಅ-
ಶೇಷ ಜನರನ್ನು ಲೇಸಾಗಿ ಸಲಹುವಿ
ವಾಸವಾದಿ ಅನಿಮೇಷ ವಂದಿತನೆ
ದೋಷನಾಶನ ಸಂತೋಷದಿ ಗಿರಿಜೆಗೆ
ಶ್ರೀಶನ ಮಂತ್ರೋಪದೇಶವ ಮಾಡಿದೆ
ದಾಶರಥಿಯ ನಿಜದಾಸರೆನಿಸುವರ
ಪೋಷಿಪೆ ಶಿವ ಪರಮೇಶ ಕೃಪಾಳೊ ೨
ಕಂದುಗೊರಳ ಜೀಯ ಸಿಂಧೂರ ಮೊಗನಯ್ಯ
ಕಂದರ್ಪಹರ ಭಕ್ತಬಾಂಧವ ಕಾಯೊ
ಇಂದಿರೆರಮಣ ಗೋವಿಂದನ ಪಾದಾರ-
ವಿಂದ ಭೃಂಗನೆ ಭವದಿಂದ ಕಡೆಗೆ ಮಾಡೊ
ನಂದಿವಾಹನ ಎನ್ನ ಹಿಂದಣ ಕಲುಷಿತ
ವೃಂದಗಳೋಡಿಸುವ ಇಂದುಧರ ಅರ-
ವಿಂದನಯನ ಸಿರಿ ವಿಜಯವಿಠ್ಠಲನಕುಂದದೆ ಭಜಿಪ ಆನಂದವ ಕರುಣಿಸು ೩

೪೧೫
ಪತಿತನ್ನ ಪಾವನ ಮಾಡುವ ರಂಗಾ |
ಗತಿಯಿಲ್ಲದವರಿಗೆ ಗತಿಯೇ ನೀನೇ ಗತಿ ಪ
ನಿಂದಿರಲು ನೆರಳಿಲ್ಲ ನಿಲ್ಲಲು ನೆಲೆಯಿಲ್ಲ |
ತಂದಿ-ತಾಯಿಯೆಂಬೋರು ಮೊದಲೆ ಇಲ್ಲ||
ಒಂದು ಸಂಗತಿ ಇಲ್ಲ ಪಡದಾನಂದನರಿಲ್ಲ |
ಬಂದು-ಬಳಗದವರು ಆರಿಲ್ಲ ಹರಿಯೇ ೧
ಕುಡಿಯಲು ನೀರಿಲ್ಲ ಕಾಲಿಡಲು ಇಂಬಿಲ್ಲಾ |
ಪಿಡಿವೆನೆಂದರೆ ಮೇಲೆ ಕೊಡೆಯಿಲ್ಲ ||
ಒಡನೆ ಬರುವರಾರಿಲ್ಲ ಸಂಗಡದಿ |
ಆಡಿವೆನೆಂದರೆ ವಳ್ಳಿಗಾಯಿತೊ ಹರಿಯೆ ೨
ಧೈರ್ಯ ಕೊಡುವವರು ಇಲ್ಲ ದಾತರೊಬ್ಬರಿಲ್ಲ |
ಕಾರ್ಯವೆಂದರೆ ಕೇಳಿ ಅರಿವರಿಲ್ಲಾ ||
ವೀರ್ಯವು ಎನಗಿಲ್ಲ ವಸಿಷ್ಠನು ನಾನಲ್ಲ |
ಧೈರ್ಯವು ದು:ಖವು ವೆಗ್ಗಳಿಸಿತೋ ಹರಿಯೆ ೩
ತನ್ನವರು ತನಗಿಲ್ಲ ತಾಳು ಎಂಬುವರಿಲ್ಲ |
ಸಣ್ಣ ಮನಸ್ಸು ಅಲ್ಲದೇ ಘನವು ಯಿಲ್ಲ ||
ಮುನ್ನ ಮಾಡಿದ ಕರ್ಮ ಬೆನ್ನ ತೊಲಗಲಿಲ್ಲ |
ಇನ್ನು ಜನ್ಮ ವ್ಯರ್ಥವಾಯಿತೊ ಹರಿಯೇ ೪
ಸಾಕು ಈ ದುಷ್ರ‍ಕತ ಬೇಕು ನಿನ್ನಯ ಪಾದ |
ಸಾಕಾರ ಮಾಡಿಕೊಂಬುವರ ಸಂಗಡ ||
ಶ್ರೀಕಾಂತ ವೆಂಕಟ ವಿಜಯವಿಠ್ಠಲರೇಯ |
ನೀ ಕರುಣಸಿದರೆ ಸಕಲಾರ್ಥವಹುದು ೫

೪೧೬
ಪತಿತಪಾವನ ನಾಮ ಪೂರ್ಣಕಾಮಾ |
ಗತಿಯ ಪಾಲಿಸೊ ಎನಗೆ ಗುರುಸಾರ್ವಭೌಮಾ ಪ
ಹದಿನಾರು ಸಾವಿರ ಸುದತಿಯರೆಲ್ಲರು |
ತ್ರಿದಶವಿರೋಧಿಯ ಸದನದಲ್ಲಿ ||
ಮದದಿಂದ ಸೆರೆಬಿದ್ದು ಹದುಳ ಕಾಣದೆ |
ಸುತ್ತಿಸಿದರು ಮನದೆ ನಾರದನಿಂದ ನಲಿದಾಡಿ೧
ಕಾರ್ತಿಕ ಮಾಸದಲಿ ಕಾಂತೆಯ ಒಡಗೂಡಿ |
ಕಾರ್ತರಥವನೇರಿ ಕೀರ್ತಿಪುರುಷಾ ||
ಧೂರ್ತನ ಕೊಂದು ಬಾಲೆಯರಾರ್ತವ ಪರಿಹರಿಸೆ |
ತೀರ್ಥಧರಾದಿಗಳು ನರ್ತನದಲಿ ಪೊಗಳೆ ೨
ಇಂದುಮುಖಿಯರ ಬಂಧನ ತರಿದವರು |
ಅಂದು ಉತ್ಸಾಹದಿಂದ ದ್ವಾರಾವತಿಗೆ ||
ಬಂದು ಅಭ್ಯಂಗದಲಿಂದ ಮಜ್ಜನ ಮಾಡೆ |
ಮಂದಾರ ಮಳೆ ನಭದಿಂದ ಸುರಿಯೆ ೩
ದೇವ ಶೃಂಗಾರವಾಗೆ ವೇದಾದಿಗಳು ನಿಂದು |
ತಾವೆಲ್ಲ ಮಣಿಭೂಷಣಾವಳಿಯಿಟ್ಟು ||
ನೋವ ಪೋಗಾಡಿಸಿ ಪಾವನರಾಗಿ ಸುಖ- |
ವನಧಿಯೊಳು ಮೀಯುತ್ತ ಕೊಂಡಾಡೆ ೪
ನರಕಾಸುರನ ಕೊಂದು ಇರಳು ಈ ಪರಿಯಲ್ಲಿ |
ಹರಿಮಾಡಿದ ಚರಿತೆ ತಿಳಿದುದನು- ||
ಚ್ಚರಿಸಿದವನ ಕುಲ ನರಕದಿಂದುದ್ಧಾರ |
ಮೊರೆಹೊಕ್ಕೆ ಇದಕೇಳಿ ವಿಜಯವಿಠ್ಠಲರೇಯಾ ೫

೪೬
ಪರದೇಶಿ ನೀನು ಸ್ವದೇಶಿ ನಾನು ಪ
ಪರಮ ಭಾಗವತರ ಬಾ ಹೋಗಿ ಕೇಳೋಣಅ
ಎನಗೆ ಜನಕನು ನೀನು ನಿನಗಾವ ಜನಕನೊ
ಜನನಿ ಇಂದಿರೆದೇವಿ ನಿನಗಾವಳೊ
ವನಜಪೀಠನು ಭ್ರಾತ ನಿನಗಾವ ಭ್ರಾತನೊ
ಇನ ಸೋಮ ಮಾತುಳರು ನಿನಗಾವ ಮಾತುಳನೊ ೧
ಸುರನದೀ ಅಗ್ರಜಳು ನಿನಗೆ ಅಗ್ರಜಳಾರು
ಶರನಿಧಿ ಭಾವ ನಿನಗಾರು ಭಾವ
ಸ್ಮರನು ಕಿರಿ ಸಹಭವನು ನಿನಗೆ ಸಹಭವನಾರೊ
ಸುರರು ಬಂಧುಗಳೆನಗೆ ನಿನಗಾರು ಬಾಂಧವರೊ ೨
ವರ ಇಳಾ ಸಾಮಾತೆ ನಿನಗೆ ಸಾಮಾತೆ ಯಾರೊ
ಮರುತ ದೇವರು ಗುರು ನಿನಗಾರು ಗುರುವೊ
ಸಿರಿಯರಸ ವಿಜಯವಿಠ್ಠಲರೇಯನೆ ನಿನ್ನ
ಚರಣ ಸೇವಕ ನಾನು ನೀನಾರ ಸೇವಕನೊ ೩

೩೨೫
ಪರಮ ಮಂಗಳ ಮೂರುತಿ ದಿವ್ಯಕೀರುತಿ |
ಧರೆಯೊಳಗಿದೆ ವಾರುಕಿ ಪ
ಕರುಣಾಪಯೋನಿಧಿಯೆ ಕರವ ಪಿಡಿದು ಎನ್ನ |
ಕರಣಶುದ್ಧನ ಮಾಡೊ ಕರವ ಮಸ್ತಕ ಬಾಗಿಪೆ ೧
ರಾಘವೇಂದ್ರರ ಪಾದ ಲಾಘವ ಮರೆಯಲ್ಲಿ |
ಶ್ಲಾಘನ ಮಾಡಿದ ಮಾಘಧರನ ಪ್ರಿಯ ೨
ನಿರುತ ಮಂತ್ರಾಲಯ ಪುರವಾಸಾ ಅಘನಾಶಾ|
ಸಿರಿ ವಿಜಯವಿಠ್ಠಲನ ಚರಣ ಭಜಿಪ ಗುರುವೆ ೩

೨೪೯
ಪರಮಯೋಗಿಯ ನೋಡಿರೊ ನೀವೆಲ್ಲರು |
ಪರಮಯೋಗಿಯ ನೋಡಿರೊ ||
ಪರಮಯೋಗಿಯ ನೋಡಿ ಪ್ರೀತಿವಂತರಾಗಿ |
ನಿರಯವ ಕಳೆದು ಆನಂದ ಬೇಡುವರೆಲ್ಲ ಪ
ವಾನರ ವೇಷವಾಗಿ ಪರ್ವತ ಸೇರಿದಾ |
ಭಾನುನಂದನ ಮನೋಬಯಕಿಯ ಸಲ್ಲಿಸಿ ||
ಏನೆಂಬೆ ಬಲು ಒಂದು ರೂಪವಾಗಿ ತೋರಿ |
ತಾನೆ ತನ್ನೊಳಗೆದ್ದು ದುರುಳರ ಮೋಹಿಸಿದಾ ೧
ವಿಷವನುಂಡು ಮೂರು ಲೋಕದೊಳಗೆ ಮೆರೆದು |
ಅಸುರ ಬಕನ ಸೀಳಿ ಧರಿಗೆ ಬಿಸುಟು |
ಶಶಿಮುಖಿಯಳ ಪ್ರೀತಿಬಡಿಸಿ ಅರ್ಜುನಗೊಲಿದು |
ಶಶಿಕುಲದಲಿ ಪುಟ್ಟಿ ದುರ್ಜನ ಸಂತಾಪಬಡಿಸಿ೨
ಯತಿಯಾಗಿ ಜನಿಸಿ ಸುವಾಕ್ಯವ ಬಯಸಿ |
ಮತಿಹೀನ ಜನರ ಶಾಸ್ತ್ರವ ಖಂಡಿಸಿ ||
ತುತಿಸಿದ ಭಕ್ತರ್ಗೆ ಗತಿಯ ಕೊಡುವ ಪ್ರಾಣ-
ಪತಿ ವಿಜಯವಿಠ್ಠಲ ಬದರಿನಿಲಯ ನಿತ್ಯ ಪರಮ ೩

೪೬೭
ಪರಮಾತ್ಮನೆ ನೀ ಸರಿ ಎಂದು
ಕರಗದ ತಮದಲ್ಲಿ ಸೇರುವದೆ ಪ
ಜೀವ ಪರಮಾತ್ಮಗೆ ಭೇದವ
ಆವಾವ ಕಾಲಕ್ಕೆಯಿಲ್ಲವೆಂದು
ದೇವನ ಬಳಿಗೆ ನೀ ದೂರಾಗಿ
ಈ ವಸುಧೆಯೊಳು ಬದುಕುವರೆ ೧
ಭೇದ ಜೀವಕೆ ಜೀವ ಎಂದಿ
ಗಾದರು ಇಲ್ಲವೆಂದು ನುಡಿದು
ಈ ದುರಾಚಾರದಲ್ಲಿ ನಡೆದು
ಮಾದಿಗನಂತೀಗ ಮಾರ್ಮಲಿದು೨
ಜಡ ಪರಮಾತ್ಮ ಜಡ ಜಡಕೆ
ಜಡ ಜೀವಕೆ ಅಭೇದವೆಂದು
ಕಡುಗರ್ವದಿಂದಲಿ ಉಚ್ಚರಿಸಿ
ಮಡಿದು ನರಕಕ್ಕೆ ಉರುಳುವರೆ ೩
ಅರಸಿನ ಬಳಿಗೆ ತೋಟಿಗ ಬಂದು
ಅರಸೆ ನೀನೆ ನಾನೆಂದಡೆ
ಉರವಣಿಸಿ ಕೊಲ್ಲಿಸಿ ಅವನ
ಶೆರಿಯ ಹಾಕದೆ ಮನ್ನಿಸುವನೆ ೪
ದಾಸನ ದಾಸನು ಎಂದು
ಏಸು ಜನ್ಮಕೆ ಅಹುದೆಂದು
ದ್ವೇಷವು ತೊರೆದು ನೆನಿಸಿದರೆ
ಮೀಸಲಾಗಿಡುವ ವಿಜಯವಿಠ್ಠಲಾ ೫

ಪವಮಾನ ಜಗದ ಪ್ರಾಣ ಸಂಕರುಷಣ

೨೨೭
ಪವಮಾನ ಜಗದ ಪ್ರಾಣ ಸಂಕರುಷಣ
ಭವನೇ ಭಯಾರಣ್ಯದಹನ ಪ
ಶ್ರವಣವೆ ಮೊದಲಾದ ನವವಿಧ ಭಕುತಿಯ
ತವಕದಿಂದಲಿ ಕೊಡು ಕವಿಗಳ ಪ್ರೀಯ ಅ.ಪ.
ಹೇಮ ಕಚ್ಚುಟ ಉಪವೀತ-ಧರಿಪ ಮಾರುತ
ಕಾಮಾದಿ ವರ್ಗರಹಿತ
ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ
ರಾಮಚಂದ್ರನ ನಿಜದೂತ
ಯಾಮ ಯಾಮಕೆ ನಿನ್ನರಾಧಿಪುದಕೆ
ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು ೧
ವಜ್ರ ಶರೀರ ಗಂಭೀರ-ಮಕುಟಧರ
ದುರ್ಜನವನ ಕುಠಾರ
ನಿರ್ಜರಮಣಿ ದಯಾ ಪಾರಾ-ವಾರ ಉದಾರ
ಸಜ್ಜನರಘ ಪರಿಹಾರ
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು
ಮೂರ್ಜಗವರಿವಂತೆ ಗರ್ಜನೆಮಾಡಿದೆ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ-
ಮೂರ್ಜನದಲಿ ಭವವರ್ಜಿತನೆನಿಸೊ ೨
ಪ್ರಾಣ ಅಪಾನ ಉದಾನ-ವ್ಯಾನ ಸಮಾನ
ಆನಂದ ಭಾರತೀರಮಣ
ನೀನೆ ಯಾಮ ಯಾಮಕೆ ಜ್ಞಾನ
ಧನಪಾಲಿಪ ವರೇಣ್ಯ
ನಾನು ನಿರುತದಲಿ ಏನೇನನೆಸಗಿದೆ
ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ
ಪ್ರಾಣನಾಥ ಸತ್ಯ ವಿಜಯವಿಠ್ಠಲನಕಾಣಿಸಿ ಕೊಡುವುದು ಭಾನು ಪ್ರಕಾಶ ೩

ಪವಮಾನ ಶ್ರೀಗುರುವೆ ಪವಮಾನ

೨೨೮
ಪವಮಾನಾ ಮದ್ಗುರವೆ ಪವಮಾನಾ ಪ
ಪವಮಾನಾ ಗುರುವೆ ಪರಾಕು | ನಾನು |
ವಿವರಿಸುವೆನು ಕೇಳು ವಾಕು || ಆಹಾ |
ತವಕದಿಂದಲಿ ಸಂಭವಿಸುವ ಮತಿಯಿತ್ತು |
ಭವದಿಂದ ಕಡೆಗಿತ್ತು ಅ.ಪ.
ಆಶ್ರಿತಜನ ಕಲ್ಪವೃಕ್ಷಾ | ನಿನ್ನ |
ಆಶೆಮಾಡಿದೆ ಬಲು ದೀಕ್ಷಾ |
ಗುಣರಾಶಿವಿರಾಗ ಪ್ರತ್ಯಕ್ಷ | ವಾಗಿ |
ದಾಸತ್ವ ಕೊಡು ಬಲುದೀಕ್ಷಾ || ಆಹಾ ||
ಏಸು ಜನ್ಮಗಳಿಂದ |
ದೋಷವ ಕಳೆದು ಸಂ |
ತೋಷವಾಗುವ ಕರ್ಣ |
ಭೂಷಣ ಕೃಪೆ ಮಾಡೊ ೧
ಜ್ಞಾನ ಪ್ರಾಣೋತ್ತಮ ರೂಪ | ನಿನ್ನ |
ನಾನು ನಂಬಿದೆನೊ ಪ್ರತಾಪ | ಸುರ |
ಧೇನು ಭಕ್ತರಿಗೆ ಸಮೀಪ | ಜಗ |
ತ್ರಾಣ ಕಪಿಕುಲ ದೀಪ || ಆಹಾ ||
ಆನಾದಿಯಲಿ ಬಂದು |
ಜ್ಞಾನವ ನೋಡಿಸಿ |
ಮಾನಸದಲಿ ಭೇದ |
ವನ್ನು ಕರುಣಿಸು ನಿತ್ಯಾ ೨
ಹರಿದಾಸರೊಳು ಅಗ್ರಣಿಯೆ | ನೋಡು |
ಸುರರೊಳು ನಿನಗಾರು ಯೆಣೆಯಾ | ಚಿಂತಿ |
ಪರಿಗೆ ಆವಾವಾ ಹೊಣೆಯೇ | ಆಹಾ |
ಕರವ ಮುಗಿವೆ ಸಂ |
ತೈಸು ಸ್ವಧರ್ಮವ |
ಮೊರೆ ಹೊಕ್ಕವರ ವಿ |
ಸ್ತರವಾಗಿ ಪ್ರತಿದಿನ ೩
ತತ್ವೇಶ ಜನರೆಲ್ಲ ನೆರೆದು | ಅಹಂ |
ಮತಿಯಲ್ಲಿ ಸತ್ಕರ್ಮ ಮರೆದು | ನಿನ್ನ |
ನುತಿಸದೆ ಅತಿಶಯ ಜರೆದು | ತಮ್ಮ |
ಗತಿಯೆಲ್ಲ ಅಲ್ಲಲ್ಲೆ ಮರೆದು || ಆಹಾ ||
ಚತುರಾನನ ಶ್ರೀ |
ಪತಿನೋಡುತಲಿರೆ |
ಪ್ರತಿಕಕ್ಷಿಯಲ್ಲಿ ಸಂ |
ತತಿಯೆನಿಸಿಕೊಂಡೇ ೪
ಇಂದ್ರಿಯಂಗಳ ನಿಯಾಮಕನೇ | ಗುಣ |
ವೃಂದ ನಿರ್ಜರ ನಾಯಕನೆ | ಪಾಪ |
ಸಿಂಧು ಬತ್ತಿಪ ಪಾವಕನೆ | ನಿಜ |
ಬಂಧು ಸಂಶ್ರಿತ ತಾರಕನೇ ||ಆಹಾ ||
ಇಂದು ಮಹಾದಯ |
ದಿಂದ ಗಂಗೆಯ ಕರ |
ತಂದು ಉದ್ದರಿಸಿದ |
ಇಂದ್ರಪ್ರಸ್ತನೇ ೫
ಇನ್ನಾದರು ಕೇಳು ವಾಕು | ದೇವ |
ಯೆನ್ನ ಕುತ್ಸಿತ ಮನ ನೂಕು | ಮುನ್ನೆ |
ಘನ್ನ ಭಕುತಿಯ ನೀಡಬೇಕು | ಇಂತು |
ಪುಣ್ಯಮಾಡಿಸಿ ಬಿಡದೆ ಸಾಕು ||ಆಹಾ ||
ಕಣ್ಣುಕಾಣದೆ ಘೋರಾ |
ರಣ್ಯದಿ ಬಿದ್ದಿಹೆ |
ಬನ್ನ ಬಡಿಸುವದು |
ನಿನ್ನ ಧರ್ಮವಲ್ಲಾ ೬
ಎಣೆಗಾಣೆನೊ ನಿನ್ನ ಪ್ರೇಮ | ಅನು |
ಗುಣ್ಯವಾಗಲಿ ನಿಸ್ಸೀಮ | ಸುಪ್ರ |
ಸನ್ನ ಶುದ್ದಾತ್ಮ ಧಾಮ | ಗುಣ |
ಪೂರ್ಣ ಮಧ್ವ ಹನುಮ ಭೀಮ ||ಆಹಾ||
ಪನ್ನಂಗಾರಿ ವಾ |
ಹನ್ನ ವಿಜಯವಿಠ್ಠ |
ಲನ್ನ ಮೂರುತಿಯನ್ನು |ನಿನ್ನೊಳು ತೋರಿಸೋ೭

೨೮೬
ಪಶುಪತಿಯ ತೋರಮ್ಮಾ
ವಶವಾಗಿ ಉದ್ಧರಿಸಮ್ಮಾ
ವಿಷವ ಸವಿದ ರುಂಡಮಾಲನ ತ್ರಿಭುವನ ಪಾಲನ ಪ
ಸತಿ ಮೈನಾಕ ನಂದನೆ ಮಾಡುವೆ ನಾನೀಗ ವಂದನೆ
ಮತಿಯ ಕೊಡುತಿಪ್ಪ ಎನ್ನ
ಅಂತರಂಗನ ತ್ರಿಪುರವ ಭಂಗನಾ ಕರುಣಾ ಪಾಂಗನ೧
ಬುದ್ದ್ಯಾಭಿಮಾನಿ ದೇವಿ
ಇಂದ್ರಾದ್ಯ ಸುರರನ್ನ ಕಾಯ್ವಿ
ಖದ್ಯೋತ ಶಶಿ ಅನಳನೇತ್ರ ಸಾ ಮಂಗಳ
ಗಾತ್ರನ ಧನಪತಿ ಮಿತ್ರನಾ ೨
ತ್ರಿಜಗ ಪೂಜಿತೆ ಉಮೆ ಪೊಗಳುವೆನು ಒಮ್ಮೆ
ವಿಜಯವಿಠ್ಠಲರೇಯನ ದಾಸದಾಸನ
ಕೈಲಾಸವಾಸನ ಜಗಕೆ ವಿಶೇಷನಾ ೩

೪೮
ಪಾಂಡುರಂಗನ ಈಕ್ಷಿಸುವ ಸುಖವೇ ಸಾಕೂ
ಅಪಾರ ಮಹಿಮ ಅನಂತಾನಂತ ರೂಪನಾ ಪ
ಶಶಿ ನಖ ನಾಲ್ಬೆರಳು ಎರಡು ಜಾನು ಜಂಘೀ
ಎಸೆವ ಊರು ಕಟಿ ನಾಭಿ ಉದರ ಉರುತರ ಕಂಠಾ
ಮಿಸಣಿಪ ವದನ ನಾಸ ಕದಪು ಕರ್ಣ ನಯನಾ
ನೊಸಲು ಶಿರ ಜಗವ ವ್ಯಾಪಿಸಿದ ರಕ್ಕಸ ಹರನಾ೧
ಮಕುಟ ಮಣಿ ಕುಂಡಲ ತಿಲಕ ಸರಿಗೆ ಕೌಸ್ತಭ
ವಿಕಸಿತ ಕಮಲ ತುಲಸಿಹಾರ ಮುತ್ತಿನಸರ ಪ
ದಕ ಅಂಗದ ಕಂಕಣ ಮುದ್ರೆ ಕಟಿಸೂತ್ರ
ಸುಖದಂದಿಗೆ ಪೆಂಡೆಗೆಜ್ಜೆ ಸುಕುಮಾರನಾ ೨
ಶ್ರುತಿ ತತಿಗೆ ದೂರ ಉನ್ನತ ಲೀಲ ಸಾಕಾರ
ಸತತ ಭಕ್ತರಾಧಾರ ಅಪ್ರಾಕೃತ ಶರೀರ
ಯತಿಗಳ ಮನೋಹರ ಮತಿಗೆ ಅಗೋಚರ
ಪತಿತಪಾವನ ಸಿರಿ ಪತಿ ವಿಜಯವಿಠ್ಠಲನಾ ೩

೪೯
ಪಾದಾ ಭಕ್ತರನ ಪೊರೆವ ಪಾದಾ
ಪಾದಾ ಸಿರಿದೇವಿ ಉರದಲ್ಲಿ ಒಪ್ಪುವ ಪಾದಾ ಪ
ಧರಣಿಪತಿ ಬಲಿಯನ್ನು ನೆಲಕೆ ಒತ್ತಿದ ಪಾದಾ
ಸುರನದಿಯ ಹರುಷದಲಿ ಪಡೆದ ಪಾದಾ
ಧುರದೊಳಗೆ ಪಾರ್ಥನ ಶಿರವ ಕಾಯ್ದ ಪಾದಾ
ಸುರರು ಸನಕಾದಿಗಳು ವಂದಿಸುವ ಪಾದಾ ೧
ಕೋಪದಲಿ ಉರಗನ ಪೆಡೆಯ ತುಳಿದ ಪಾದಾ
ತಾಪಸರ ಮನಕೆ ನಿಲಕದ ಪಾದಾ
ಭೂಪ ಕೌರವನ ತಲೆಕೆಳಗೆ ಮಾಡಿದ ಪಾದಾ
ಕಾಪಾಲಿ ಪೂಜಿಸುವ ಕಡು ದಿವ್ಯ ಪಾದಾ೨
ಹಸುಳೆತನದಲಿ ಶಕಟಾಸುರನನೊದೆದ ಪಾದಾ
ಋಷಿಪತ್ನಿ ಶಾಪ ವಿಶ್ಶಾಪ ಪಾದಾ
ವಿಷ ಕರ್ತು ರಿಪು ವಿನಾಶ ಕರದಿ ಮೆರೆವ ಪಾದಾ
ವಸುಧಿಯೊಳು ವಿಜಯವಿಠ್ಠಲನ ಪಾದಾ೩

೪೧೭
ಪಾಪೇಂದ್ರಿಯಗಳಿಗೆರಗಿ ಪರಹಿತಾರ್ಥವ ಮರೆದು
ವ್ಯಾಪಾರ ವಿಷಯಂಗಳಲ್ಲಿರೆ ಯಮನೊಯ್ದು
ಕೋಪಾಟೋಪದಲಿಂದ ದಂಡಿಸಿ ತಮಸಿನ
ಕೂಪದಲ್ಲಿ ಹಾಕದಲೆ ಬಿಡುವನೆ ಮರುಳೆ ಪ
ಉಡಿಗೆ ತೊಡಿಗೆ ಇಡಲು ಮಡದಿಯಳ ಮುಖ ನೋಡಿ
ಕಡು ಹಿಗ್ಗಿ ಹುಗ್ಗಿ ಪಡಗದಂತೆ ಹಿರ್ರನೆ
ಪಿಡಿದು ಗಲ್ಲವ ಮುಟ್ಟಿ ಮುಡಿಗೆ ಮುಡಿವಾಳವನು
ತಡಿಯದಲೆ ಮುಡಿಸುತ್ತಲಿ
ಕುಡಿತೆಗಂಗಳಾ ಸವಿನುಡಿಗಳ ಕಕ್ಕಸ ಕುಚ
ವಡನೊಡನೆ ನೋಡಿ ಸುಖಬಡುತಾ
ಬಡನಡುವಿಗೆ ತೊಡಿಗೆ ಕಿರ್ದೊಡೆಗೊಲಿದು
ಬಿಡದೆ ಕಾಳ್ಯಾಡುವುದು
ಸುಡುಸುಡು ಮಾಡಿದರಿನ್ನಾವ ಗತಿ ಮರುಳೇ ೧
ನೆಂಟರು ಮನೆಗೆ ಬರಲು ವಂಟಿಯಂತೆ ಮೊಗವ
ಸೊಂಟ ಮಾಡಿಕೊಂಡು ಕಂಠವನು ತರ್ಕೈಸಿ
ಕುಂಟವಾರ್ತೆಯ ಕೇಳಿ ಬಂಟನು ನಾನೆಂದು
ತೊಂಟತನ ಬಗೆ ತೋರುತಾ
ಉಂಟಾದ ಗೋಧಿಯ ಸೊಂಟೆ ಬೆಲ್ಲನು ತಂದು
ಹೆಂಟಿಯಂತೆ ಹದಿನೆಂಟು ಕಡುಬನೆ ಕೊರಿಸಿ
ವಂಟಿಲಿ ಕುಳಿತು ಸುಂಡಿಗೆಯನ್ನು ಚಾಚುತ್ತಾ
ಎಂಟು ಮಡಿಸದೆ ವಾರ್ತಿ ಪೇಳುತಲಿ ಮರುಳೇ ೨
ಇಂದು ನಮ್ಮನೆ ಪ್ರಸ್ತವೆಂದು ಆರಾದರೂ
ಬಂದು ಪೇಳಲು ಊರ ಹಂದಿಯಂತೆ ಕಾಯಿದು
ಒಂದು ಕಾಳು ತಿನದೆ ಸಂದಿಗೊಂದಿ ಸುತ್ತಿ
ಸಂಧ್ಯಾಕಾಲ ವಾನರಾಗುತ್ತ
ಚಂದದಿಂದ್ಯುಕ್ತಿಯೊಳು ದ್ವಂದ್ವದಲಿ ಕುಳಿತಿವರು
ತಂದೆ ತಾಯಿ ಕಡೆ ಬಂಧುಬಳಗವೆಂದೂ
ಒಂದಿಷ್ಟು ಕಡಿಮೆ ತಿನ್ನದೆ ಪರರ ಒಡವೆಯನು
ತಿಂದು ಡರ್ರನೆ ತೇಗಿ ನಸುವ ನಗುವ ಮರುಳೇ೩
ನಾಡಾಡಿ ಚಾಡಿ ಮಾತಾಡಬೇಕಾದರೆ
ಖೋಡಿ ನಾಲಿಗೆ ದೊಡತಾಗಿ ಬಾಹಿನೀ
ನಿಡಿ ಲಟಲಟವೆನುತಾ ಕೋಡಗದಂತೆ ಕುಳಿತು
ಹೇಡಿ ಪರನಿಂದೆಗಳಿಗೆ ಬಾಡದಲೆ ಬತ್ತದಲೆ
ಮಾಡಿದ ಮಹಾಪುಣ್ಯ ಕಾಡಿಗೊಪ್ಪಿಸಿ ಕೊಟ್ಟ
ಮೂಢ ಗಾರ್ಧಬನಂತೆ ಓಡಾಡಿ ಬಳಲಿ
ನಾಡಾಡಿ ಸುದ್ದಿಗಳಿಗೆ ಬಿಡಿ
ಬಿಡಿಂದಾ ತಿರುಗುವಾ ಹೀನ ಮರುಳೇ ೪
ಸಂಸಾರವೆಂಬಾ ಸಾರಾ ಸಾಗರ ಮಧ್ಯ
ಹಿಂಸನಾಗದೆ ಬಿಟ್ಟು ಇದರಂತೆ ಭಕುತಿ ಮರು
ದಂಶ ಗುರು ಮಧ್ವಮುನಿರನ್ನನಾ ಶ್ರೀ ಚರಣ
ಸಂಶಯವಿಲ್ಲದಲೆ ನಂಬಿ
ಸಂಸಾರ ಉತ್ತರಿಸು ಸಂದೇಹ ಇದಕಿಲ್ಲ
ಕಂಸಾಸುರನ ಪ್ರಾಣಹರ ಎನ್ನ ಮನಸ್ಸಾ
ಹಂಸ ಶ್ರೀ ವಿಜಯವಿಠ್ಠಲನ್ನ ಪಾದದಾ
ಪಾಂಶವೊ ಮಾಡಿ ಗತಿಯಲಿ ಬಾಳು ಮರುಳೇ೫

೨೨೯
ಪಾಲಿಸು ಅವಾಂತರೇಶಾ ಪಾವನ ಕೋಶಾ
ಪಾಲಾಬ್ದಿ ಶಯನನ ದಾಸಾ
ಕಾಲ ಜನಕ ವಿಶಾಲಮಹಿಮಾರೈಯಿ
ಲೋಲಾ ಜೀವೋತ್ತಮ ಕಾಲಕಾಲಕೆ ಎನ್ನ ಪ
ಪುಣ್ಯಗಾತುರ ಮಾರುತಾ ಪುಂಜಿತ ಜೀವಾ
ಗಣ್ಯರಹಿತ ಗುಣಜಾತಾ
ಮನ್ಯುದಾನವ ಕುಲಘಾತಾ ಮಹಾತತ್ವ ದಾತಾ
ಸನ್ನ್ಯಾಯಮಣಿ ಶ್ರುತಿಗೀತಾ
ಧನ್ಯನ ಮಾಡೊ ಅನ್ಯನೇನೊ ನಾನು ಕಾ
ರುಣ್ಯದಿ ದುರಿತಾರಣ್ಯ ಮನ್ಮಥ ಲಾ
ವಣ್ಯ ಸರ್ವದಾತಾ
ಗುಣ್ಯ ಮನದಾ ಕಾರ್ಪಣ್ಯವ ಓಡಿಸಿ ೧
ದ್ವಿತೀಯ ನಿರ್ಜರವರೇಣ್ಯ ದೀನನುಗಣ್ಯ
ದಿತಿಜಾವಳಿಗೆ ಕಾಠಿಣ್ಯ
ಸತತ ಅಪ್ರತಿರಾಜ್ಯನ್ಯಾಸ ಚರಾಚರಮಾನ್ಯಾ
ತುತಿಸುವೆ ಕೇಳು ದೈನ್ಯ
ಗತಿ ನೀನೆ ಕ್ಷಿತಿಯೊಳಗಿತರರ ಕಾಣೆನೊ
ಸತಿಪತಿ ಮಿಗಿಲಾದ ತುತುವೇಶ ತತಿಗಳ
ಜಿತ ಸದ್ಗುರು ಭಾರಿತ ಪ್ರತಿಪಾದ್ಯ ಮಾರುತಿ
ಮತಿಯಲಿ ನಿನ್ನ ಮತದಲಿ ಪೊಂದಿಸಿ ೨
ವಿಕಸಿತ ಸದನಾ ಜ್ಞಾನ ವಿಶೇಷ ಧ್ಯಾನಾ
ಅಖಿಳ ವಿಚಾರ ನಿದಾನಾ
ಅಕಳಂಕವಾದ ಬಹುಮಾನಾ ಅಮೃತಪ್ರಾಣಾ
ಸಕಲಕ್ಕು ನೀನೇ ಪವಮಾನಾ
ಸುಖಸಾಗರ ಸುರನಿಕರವಿನುತ ಮಹಾ
ಭಕುತ ಭವಾಬ್ಧಿತಾರಕ ವಿಷಭಂಜನ
ಲಕುಮಿವಲ್ಲಭ ನಮ್ಮ ವಿಜಯವಿಠ್ಠಲನ್ನ
ನಖ ಕೊನೆ ಪೊಗಳುವ ಉಕುತಿ ನೀಡಿಂದು ೩

೨೧೧
ಪಾಲಿಸೆ ಪದುಮಾಲಯೆ, ನೀನೇ ಗತಿ ಪ
ಬಾಲಕನು ತಾನಾಗಿ ಗೋಪಿಗೆ
ಲೀಲೆಯಿಂದಲಿ ನಂದ ಗೋಕುಲ-
ಬಾಲೆಯರ ಮೋಹಿಸುತ ಅಸುರರ
ಕಾಲನೆನಿಸಿದ ಬಾಲಕನ ಪ್ರಿಯೆ ಅಪ
ಅನ್ಯರ ನೆನೆಯಲೊಲ್ಲೆ ನಿನ್ನಯ ಪಾದ-
ವನ್ನು ನಂಬಿದೆ ನೀ ಬಲ್ಲೆ ತಡಮಾಡದೆ
ಚಿಣ್ಣ ಕರೆಯಲು ಘನ್ನ ಮಹಿಮನು
ಉನ್ನತದ ರೂಪಿನಲಿ ಗುಣಸಂ
ಪನ್ನ ರಕ್ಕಸನನ್ನು ಸೀಳಿದ
ಪನ್ನಗಾದ್ರಿ ನಿವಾಸೆ ಹರಿಪ್ರಿಯೆ ೧
ಅರಿಯದ ತರಳನೆಂದು ಶ್ರೀಪತಿ ಸತಿ
ಕರುಣದಿ ಸಲಹೆ ಬಂದು ಕರುಣಾಸಿಂಧು
ಸರಸಿಜಾಸನ ರುದ್ರರೀರ್ವರ
ವರದಿ ಮೂರ್ಖನು ಸುರರ ಬಾಧಿಸೆ
ಹರಿವರರ ದಂಡೆತ್ತಿ ಬಹುಮುಖ
ದುರುಳನ ಶಿರ ತರಿದವನ ಪ್ರಿಯೆ ೨
ಅಜ ಮನಸಿಜ ಜನನಿ ಅಂಬುಜಪಾಣಿ
ಭುಜಗ ಸನ್ನಿಭವೇಣೀ ನಿತ್ಯ ಕಲ್ಯಾಣಿ
ಕುಜನಮದರ್ನ ವಿಜಯವಿಠ್ಠಲ
ಭಜಿಸಿ ಪಾಡುವ ಭಕ್ತಕೂಟವ
ನಿಜದಿ ಸಲಹುವೆನೆಂಬ ಬಿರುದುಳ್ಳವಿಜಯಸಾರಥಿ ವಿಶ್ವಂಭರ ಪ್ರಿಯೆ ೩

೨೧೨
ಪಾಲಿಸೆ ಯೆನ್ನ ಇಂದಿರಾದೇವಿ, ಪಾಲಿಸೆ ಯೆನ್ನಾ ಪ
ಪಾಲಿಸೆ ನಾ ನಿನ್ನ ಪಾಲಿಗೆ ಬಂದಿರ್ಪೆ
ಶ್ರೀಲೋಲನ ಪದಕೀಲಾಲಜ ತೋರಿ ಅ.ಪ
ಚಿತ್ಪ್ರಕೃತಿ ನಿತ್ಯ ಜಡಪ್ರಕೃತ್ಯಭಿಮಾನಿ
ಸತ್ಪ್ರಮಾಣವಾದ ಕೀರ್ತನೆ ನುಡಿಸುತ್ತ೧
ಮಂತ್ರಗಳರಿಯೆನು ಮಂದಮತಿಯು ಸ್ವ
ತಂತ್ರದವನಲ್ಲ ಸೃಷ್ಟ್ಯಾದ್ಯಷ್ಟ ಕರ್ತೆ೨
ಗುಣಪ್ರಕ್ರಿಯೆಗಳ ಅರಿತವುಳ್ಳ ಲಕ್ಷಣವಂತೆ ವಿಜಯವಿಠ್ಠಲನ ನಿಜಾಂಗನೆ ೩

೫೦
ಪಾಲಿಸೆನ್ನನು ದೇವಾ ಪರಮ ಪುರುಷಾ
ಭೂಲೋಲ ಶ್ರೀ ಮುಷ್ಣನಿಲಯ ಶ್ವೇತ ವರಹಾ ಪ
ಸ್ವಾಯಿಚ್ಛೆಯಲಿ ಬಂದು ಮೆರೆದು ಮಹಾಕೀರ್ತಿಯನು
ಪಯೋನಿಧಿಸುತೆಯಿಂದ ತುತಿಸಿಕೊಳ್ಳುತಾ
ಜಯಜಯದೇವನಾಶ್ರಯ ಕಾಮಧೇನು ನೀ
ದಯಮಾಡಿ ನೋಡುವದು ದಾಸ ನೆನೆಸುವದು ೧
ಚಿತ್ತಾವಧಾರು ಪರಾಕು ಬೊಮ್ಮಾಂಡವನು
ಹೊತ್ತು ನಸುನಗು ನಾಗಾರಿಗಮನಾ
ಮುತ್ತು ಮಣಿ ಮಯದಾಭರಣದಿಂದೆಸೆವ ದೇ
ವೋತ್ತಮನೆ ದಾನವರ ಬಲವಳಿದಾ ಧೈರ್ಯ ೨
ನಿತ್ಯ ಪುಷ್ಕರಣಿಯಲಿ ನಿರುತ ಪೂಜೆಯಗೊಂಡು
ಪ್ರತ್ಯಕ್ಷವಾಗಿ ವರಗಳನೀವುತ
ಸತ್ಯ ಸಂಕಲ್ಪ ಸಿರಿ ವಿಜಯವಿಠ್ಠಲ ವರಹ
ಭೃತ್ಯನೆನೆಸಿ ನಿನ್ನ ಸ್ತೋತ್ಯದೊಳಗಿಡು ದೇವಾ೩

೫೧
ಪಾಲಿಸೊ ಪತಿತಪಾವನ್ನಾ ನಿನ್ನ
ಪಾಲಿಗೆ ಬಂದೆ ಮೋಹನ್ನಾ -ಆಹಾ
ಪಾಲಾಬ್ಧಿಶಾಯಿ ಗೋಪಾಲರೊಡೆಯಾ ಲೋಕ
ಪಾಲಕ ವಿನುತಾ ಗೋಪಾಲ ಫಾಲಾಕ್ಷನೆ ಪ
ಬಂದೆನೊ ನಿನ್ನ ಹಂಬಲಿಸಿ ನಾನು
ನೊಂದು ಸಂಸ್ರ‍ಕತಿಯಲ್ಲಿ ಸೂಸಿ ಈಸಿ
ಮುಂದಣ ನೆಲೆಗಾಣೆ ಗುಣಿಸಿ ಏನೇ
ನೆಂದು ಪೇಳಲೊ ವಿಸ್ತರಿಸಿ -ಆಹಾ
ಮಂದರಧರ ನಿನ್ನ ಮಂದಿರದ ದಾಸಿ
ಕಂದನು ನಾನೆಲೊ ಕಣ್ತೆರೆದು ನೋಡೊ ೧
ಪೊಂದಿದೆ ಭಾರವವೊಹಿಸು ಪ್ರತಿ
ಬಂಧಕವ ಪರಿಹರಿಸು ನಿನ
ಗೊಂದಿಸುವೆ ಕೊಡು ಲೇಸು ಅತ್ಯಾ
ನಂದದಲ್ಲಿ ಚಿತ್ತವಿಡಿಸು -ಆಹಾ
ಇಂದಿರಾ ಮಂದಿರಾ ಸುಂದರ ಯೋಜನ
ಗಂಧಿಯ ಬಸುರಿಲಿ ಬಂದ ಭವದೂರಾ ೨
ನಿಂದ್ಯ ಕರ್ಮವು ಮಾಡಿದವನ ದೂತ
ರಿಂದ ತರಿಸಿದೆ ತ್ರಿಭುವನಾ ಜಯ
ವೆಂದು ಕೊಂಡಾಡಲು ಜವನಾ ಭೀತಿ
ಯಿಂದ ಮಾಡಿದ ನಿನ್ನ ಸ್ತವನಾ -ಆಹ
ಒಂದಾನಂತವಾಗಿ ದ್ವಂದ್ವಪಾಪಗಳಿಗೆ
ನಿಂದಿರಬಲ್ಲವೆ ಸಂದರುಶನವಾಗೆ ೩
ಕಂದುಕ ಪುಟಿ ಸೂತ ಬಳುಕಿ ದೈತ್ಯ
ವೃಂದ ಮೋಹಕವಾಗಿ ಸಿಲುಕಿ ಸುರ
ಸಂದೋಹಕೆ ನೀನೆ ಘಳಿಕಿ ನಿಜ
ವೆಂದು ಮಾನವರಿಗೆ ಬಳಿಕಿ -ಆಹಾ
ಎಂದೆಂದಿಗೆ ಸಿದ್ಧ್ದಾಗಂಧಮಾತುರ ಕಳೆ
ಗುಂದದೆ ಮತಿ ಕೊಡು ನಂದಕಾನಂದ ಹಸ್ತನೆ ೪
ಹಂದಿ ನಾಯಿ ನರಿ ರಾಸಾ ಜನ್ಮ
ಬಂದರೆ ಎನಗದು ಹರುಷಾ ಬಹು
ಮುಂದುಂಟು ರಹಸ್ಯಾ ಮನಸಾಪೇಕ್ಷಾ
ಸಂದೇಹ ಮಾಡಿಸೊ ಶ್ರೀಶಾ -ಆಹಾ
ಚಂದ ಚಂದದಿ ಯೋನಿ ಸಂದೀದ ಕಾಲಕ್ಕು
ಒಂದು ವಿಂಶತಿ ಮತ ಹೊಂದಿಸದಿರು ಹರಿ೫
ಅಂಧಃಕಾರದೊಳೆನ್ನ ತಂದೆ ಇದ
ರಿಂದ ನಿನಗೇನೊ ಮುಂದೆ ಲಾಭ
ಬಂದಾದರೂ ಇಲ್ಲಾ ಇಂದೆ ಸುಖ
ಸಾಂದ್ರ ಕಡಿಮೆನೊ ಮುಂದೆ -ಆಹಾ ೬
ಇಂದಿರಾವರ ರಾಮ ಶಾಮಾ ರಾಮ
ಚಂದ್ರ ಚತುರ ಸಾರ್ವಭೌಮಾ ದಿವ್ಯ
ಚಂದನ ಸಿರಿ ಉರಪ್ರೇಮಾ ಮುಚ
ಕುಂದ ಪಾಲಕ ನಿಸ್ಸೀಮಾ -ಆಹಾ
ಇಂದ್ರಿಯಂಗಳು ತನು ಸಂಬಂಧದೆಡೆಗೆ ಪೋಪಾ
ತೊಂದರೆ ಬಿಡಿಸೊ ಗೋವಿಂದ ಗೋವಳರಾಯಾ ೭
ದುಂದುಭಿ ಭೇರಿಯ ರಭಸಾ ಮಹಾ
ಸಿಂಧೂರ ವಿಚಿತ್ರ ಕೋಶಾ ದುರ್ಗಾ
ಬಂಧುರಾ ನೆರೆದ ವಿಶೇಷಾ
ಮಂತ್ರಿ ಮಂದಿ ಪರಿವಾರ ಭೂಷಾ -ಆಹಾ
ಬಿಂದು ಮಾತುರ ಇವು ಮುಂದಿನೈಶ್ವರ್ಯ ಸಿದ್ಧಾ
ಕುಂದಗೊಡದೆ ಬೊಮ್ಮನಂದದಿ ಪಥತೋರಿ೮
ಹಿಂದಣ ಬಲವನ್ನು ಕಾಣೆ ನಾನು
ಅಂದು ನುಡಿದದ್ದು ಮಾಣೆ ಅನು
ಬಂಧಗಳಿಗೆ ಕಾಮಧೇನೆ ಸತ್ಯ
ವೃಂದಾವನ ಪತಿ ನೀನೆ -ಆಹಾ
ನಂದತೀರ್ಥರಿಗೆ ಆನಂದ ಕೊಡುವ ಪೂರ್ಣ ಸನಕಸ
ನಂದನ ಮನೋಹಂಸಾ ೯
ಸಂದಣೆ ತೊಲಗದೆಂಬಿಯಾ ಆಹಾ
ಬಂದರೆ ಬರಲಿ ಎಂಬಿಯಾ ಇದೇ
ಸಂದಲಿ ಅನುಗಾಲ ನ್ಯಾಯಾ ಅನು
ಸಂಧಾನ ನಿನ್ನಲಿ ಪ್ರೀಯಾ -ಆಹಾ
ಇಂಧನದೊಳು ವಾಯು ವ್ಯಾಪಿಸಿದದ
ರಂದದಿ ಸರ್ವಾಂಗಾ ನಿಂದಿಹ ನಿರ್ದೋಷಾ ೧೦
ಕಂದರ್ಪ ಕೋಟಿ ಲಾವಣ್ಯ ಅರ
ವಿಂದ ನಯನ ಗುಣ ಗಣ್ಯ ದೀನ
ಮಂದಾರ ಸತತ ತಾರುಣ್ಯ ಸರಿ
ಬಂದಂತೆ ಮಾಡೊ ಕಾರುಣ್ಯ -ಆಹಾ
ವಂದೆದೈವವು ನಾನೆಂದ ಮುರಾರಿಯ
ಕೊಂದು ಬಿಸುಟಾಧೀರ ನಂದಕುಮಾರಕ೧೧
ಇಂದ್ರಿಯಂಗಳ ಗಾತ್ರಾ ಪ್ರಾಣಾ ಸರ್ವ
ರಂಧ್ರವು ಸುಜನಂಘ್ರಿ ತ್ರಾಣಾವಾಗಿ
ಕುಂದಣ ಪುಟದಂತೆ ವರಣಾ ಕಂಬು
ಕಂಧರ ಪೊಳಿಯಲಿ ವಚನಾ -ಆಹಾ
ಸಂದರ್ಭವಾಗಿ ಏನೆಂದದೆ ಸಚ್ಛಾಸ್ತ್ರ
ವೊಂದಿಬರಲಿ ಮುಕುಂದಾ ಮುದ್ದುರಂಗಾ೧೨
ಅಂದಿಗೆ ಪೊಂಗೆಜ್ಜೆ ಮೆರೆಯೆ ತಂದೆ
ಯೆಂದು ಕುಣಿಯೊ ಎನ್ನ ಧೊರಿಯೆ
ವಾದ್ಯಾ ಧಿಂ ಧಿಂ ಧಿಮಿಕೆಂದು ಮೊರೆಯೆ ಮೇಲೆ
ವೃಂದಾರಕ ಪುಷ್ಪಗರಿಯೆ -ಆಹಾ
ಇಂದಿನ ಉತ್ಸಾಹ ಇಂದ್ರಾದ್ಯರು ಪೂತು
ರೆಂದು ಪೊಗಳೆ ನಗೆಯಿಂದ ನೋಡುವದೆ ೧೩
ಮಧ್ವರಮಣ ಪಾಪಿ ಭಕ್ತಿ ಜ್ಞಾನ
ಸದ್ಧರ್ಮ ವೈರಾಗ್ಯಯುಕ್ತಿ ಕೊಡು
ನಿದ್ರಾಹಾರಾ ಮತ ಭುಕ್ತಿ ಇತ್ತು
ಮುದ್ರಧಾರನಾ ಮಾಡಿ ಮುಕ್ತಿ -ಆಹಾ
ನಿರ್ಧಾರಮಾರ್ಗವ ಬದ್ಧದಿ ತೋರಯ್ಯಾ
ರುದ್ರವಂದಿತ ಸಮುದ್ರಸುತೆಯ ಪತಿ ೧೪
ಬಂಧೂರ ಕೀರ್ತಿ ಸಂಪನ್ನಾ ಕರಿ
ಬಂಧ ವಿಮೋಚನ್ನ ನಾ
ರಂದ ವರದ ಸುಪ್ರಸನ್ನಾ ಶತಾ
ನಂದ ಕಾನನವಾಸಾ ಘನ್ನಾ -ಆಹಾ
ಸಿಂಧುಜನಕನೆ ಪರಂಧಾಮತ್ರಯ ಸತ್ಯ
ಸಂಧ ವಿಜಯವಿಠ್ಠಲೆಂದು ವದನ ಎನ್ನಾ೧೫

೧೧೦
ಪಾಲಿಸೊ ಶ್ರೀನಿವಾಸ ಪಾಲಿಸೊ ಶ್ರೀನಿವಾಸ
ಪಾಲಾಬ್ಧಿಶಯನ ಕಾಪಾಲಿಯ ಕಾಯ್ದ ಗೋ
ಪಾಲ ಹರಿ ವಿಶ್ವರೂಪ ಲೋಕಾಧೀಶ
ಪಾಲಯವಾಗೆನ್ನ ಪಾಲಿಲಿದ್ದ ಶಿಶುಪಾಲಕ ಎನ್ನ ಕಾಯನ್ನಾ ಪ
ಮನೆ ನಿನಗಾಗಿ ದೇಹಾ ಸುಮ್ಮನೆ ಪೇಳುವುದಿಲ್ಲ ಹ
ಮ್ಮನೆ ಬಿಡಿಸುವುದು ಘಮ್ಮನೆ ಬಂದು ಒಲಿದು ನಿ
ಮ್ಮನೆ ಭಕ್ತರ ಕೂಡ ನೆಮ್ಮನೆ ಕೊಟ್ಟ ಬಲನ ತ
ಮ್ಮನೆ ನಡಿಸುವುದು ತಿಮ್ಮನೆ ಅಜಿತಾನಂತ ನಾ
ಮನೆ ನಾನೆಂಬದರ ಮನೆಯಲ್ಲಿ
ಸಾರ್ವಭೌಮನೆಯಾಗಿ ಪುಟ್ಟಿ ಭೀ
ಮನೆ ಗುರು ನಿತ್ಯಾ ಸಮನೆ ಎಂದು ಪೇಳಿದಾ
ಮನೆಯಲ್ಲಿ ಇಡು ಮಾಮನೆಯುಳ್ಳಾ ಮಹಿಮನೆ ವೆಂಕಟೇಶಾ೧
ಮನ ದುರ್ವಿಷಯಕೆ ಗಮನವಾಗಿ ಪೋಗುತಿದೆ
ಮನಸಿಜ ಜನಕ ಕರುಣಿಸಿ ಅಧಮನ ಕಾಯಬೇಕು
ಕಾಮನ ಸಂಬಂಧವುಪಶಮನ ಮಾಡು ಬೇಗ ಸುಧಾ
ಮನ ಮಿತ್ರ ಪವಿತ್ರ ಸುಮ್ಮನಸಕೊಡಿಯಾ ವಾ
ಮನ ಮೂರುತಿಯೆ ಮನಸಂಹಾರ ಬಮ್ಮನ ಬಿಡಿಸಿದಾ ಹಿ
ಮನ ಭಾವನೆ ನಿನ್ನ ಮನನಾದಿ ದಿನಯಸ್ತ
ಮಾನ ಪರಿಯಂತ ನೇಮನ ಚಿಂತಿಸುವಂತೆ೨
ಜನನ ಮರಣ ಶೂನ್ಯಾ ಜನಕಾದ್ಯನಂತಗಂಗ
ಜನಕಾಯಿದಾನಾದಿ ದೈವ ಅ
ಜನನಯ್ಯ ಸ್ವರ್ಣ ಕಾಯಂ ಜಿನೆ ಪುತ್ರಪ್ರಿಯ್ಯಾ ದುಷ್ಟ
ಜನಮರ್ದನಾ ಬಲು ಯೋಜನ ಮೆರೆವ ದೇವ ಸು
ಜನಪಾಲ ಗುಣಶೀಲಾ ಜನುಮ ಜನುಮಕ್ಕು –
ಜನಮತಿ ಕಳೆದು ರಂ
ಜನವಾದಾ ಜ್ಞಾನ ಪುಂಜಿನ ಮಾಡು ದನುಜ ಭಂ
ಜನ ಅತಿ ಭೋಜನ ವಿಜಯವಿಠ್ಠಲ
ನಿರಂಜನ ನಿರ್ಮಳ ಅಂಜನ ಗಿರಿವಾಸಾ ೩

೩೨೬
ಪಾವನಕಾಯ ರಾಘವೇಂದ್ರ ಪ
ರಾಘವೇಂದ್ರ ದುರಿತ ಘೋರ ಪರಿಹಾರ |
ರಾಘವೇಶನ ಪಾದ |
ಮೇಘನುಣಿಪ ಗುರು ೧
ಶರಣು ಹೊಕ್ಕ್ಕೆನು ಹೊಕ್ಕೆನು ಯಿಂದು |
ಕರುಣ ಕರುಣ ಪೋಲುವ ಚರಣ |
ಸ್ಮರಣೆ ಪಾಲಿಸುವುದು | ಕರುಣದಿಂದ ಮಹಿಮ ಗುರು೨
ಸಿರಿ ವಿಜಯವಿಠಲ ಪರದೈವವುಯೆಂದು |
ಸ್ಥಿರವಾಗಿ ಸ್ಥಾಪಿಸಿ ಪೊರೆದ ನಿರ್ಮಲ ಗುರು ೩

೪೧೮
ಪಾಹಿ ಪಾಂಡವ ಪರಿಪಾಲ ನೀನೇ ನಿತ್ಯ
ಮಹದಾದಿವಂದ್ಯಾ ಸುಶೀಲಾ ಪ
ದೈಹಿಕ ಮೊದಲಾದ ಕರ್ಮವ ಮಾಡಿಸಿ
ಮೋಹಕ ಪಾಶವ ಓಡಿಸು ಕೇಶವಾಅ.ಪ
ಇಂದ್ರತನಯಾ ಮಾನಭಂಗ ಮಾಡಿದೆ ನೀನು
ಇಂದು ಉಂಡೆನೋ ಸಿರಿರಂಗಾ
ಮಂದರೋದ್ಧರ ಕೋಮಲಾಂಗಾ ಕೇಳೊ
ಪೊಂದಿಸು ಸುಜನರ ಸಂಗಾ
ಕಂದರ್ಪಜನಕ ಆನಂದ ವಿಗ್ರಹ ಪೂರ್ಣ ಮಾತನು
ಸುಂದರ ನಿಜ ಭಕ್ತ ವೃಂದ ಮಹೋದಧೇ ೧
ಕಾಲಕರ್ಮ ಗುಣದಿಂದಾ ವೃಥಾಯು
ವೇಳೆಯ ಕಳದೆ ಮುಕುಂದಾ
ಪೇಳಾ ಲೇಸೊ ಪ್ರತಿ ಬಂಧಾ ಇನ್ನು ನಾನು
ತಾಳಲಾರೆ ದು:ಖದಿಂದಾ
ಆಲಸ ತಾಳದೆ ಆಲಿಸು ಮಾತನು
ಆಳುಗಳೊಳಗಿಹ ಆಳಾನೆಂದು ೨
ಅನಾದಿಯಿಂದಲಿ ನಿನ್ನ ಪದಗಳ
ಧ್ಯಾನವ ಮಾಡುವೆ ಚನ್ನಾ
ನಾನಾ ಬಗೆಯಿಂದ ಯೆನ್ನಾ ಸಾಕುತಲಿಪ್ಪ
ನೀನೆ ಮುಖ್ಯನೊ ಪ್ರಸನ್ನ
ಅನಂತಶಯನ ಭೋ ವಿಜಯವಿಠ್ಠಲರೇಯ
ಮಾನದಲಿ ನಿಂದು ಪ್ರಾಣಪ್ರೇರಕನಾಗೊ ೩

೪೧೯
ಪಾಹಿ ಮೋಹನ ವಿಠಲ ಪರಮಕರುಣಾಜಲಧಿ
ಮಹದಾದಿ ದೇವ ವಂದ್ಯ |
ಮೋಹಪಾಶವ ಬಿಡಿಸಿ ನಂಬಿದವನಿಗೆ ಒಲಿದು
ರಹಸ್ಯಮತಿ ಕೊಡುವುದು ಸ್ವಾಮಿ ಪ

ನೀನಿತ್ತ ಮಾತುಗಳು ಪೊಳ್ಳಾಗಬಲ್ಲವೆ
ಅನಂತ ಜನುಮವಾಗೆ
ಆನೊಬ್ಬನೆನ್ನದಿರು ಕೀರ್ತಿಸುವ ನರನೆಂದು
ಜ್ಞಾನಿಗಳಿಗರಿವಾಗಿದೆ
ಏನಯ್ಯ ನಿನ್ನಂಘ್ರಿ ಭಜಿಸದಲೆ ಇರುತಿಪ್ಪ
ಮಾನವನ ಕ್ಲೇಶಕೆಣಿಯೆ
ಆನಂದ ನಂದನನೆ ತೃಣವ ಪಿಡಿದು ರುತುನ
ವನು ಮಾಡಿ ತೋರುವ ಸ್ವಾಮಿ ೧
ನಿನ್ನಧೀನ ಕರ್ಮಸ್ವಭಾವ ಮೊದಲಾಗಿ
ಅನ್ಯಥಾ ಯಲ್ಲಿ ಕಾಣೆ
ಮನ್ನಿಪುದು ಮುದದಿಂದ ಮುಂದನೆನ್ನದೆ ಎನ್ನ
ಬಿನ್ನಪವ ಬರಿದೆನಿಸದೆ
ಅನ್ಯನಿವನಲ್ಲವೊ ಎನ್ನನ್ನೆ ಪೊಂದಿದ
ನಿನ್ನ ದಾಸನ ದಾಸನು
ಉನ್ನಂತ ಗುಣವಿತ್ತು ಉರುಕಾಲ ಒಲಿದು ಪ್ರ
ಸನ್ನನಾಗೋ ಪಾವನ್ನರನ್ನ ೨
ನರರಿಗೆ ಸಾಧನ ಸತ್ಕೀರ್ತನೆ ಎಂದು
ಪರಮೇಷ್ಠಿ ಒರೆದನಿದಕೊ
ಪರಿಪರಿ ಬಗೆಯಿಂದ ಕರ್ಮಗಳ ಮಾಡಿದರೆ
ದುರಿತ ಬೆಮ್ಮೊಗವಾಗವು
ಪಿರಿದಾಗಿ ಬೇಡಿದೆನೊ ವಿಜಯವಿಠ್ಠಲ ನಿನ್ನ
ಶರಣರೊಳಗಿಟ್ಟು ಕಾಪಾಡು
ಸ್ಥಿರವಾಗಿ ಅಂಕಿತವ ಪ್ರೇರಿಸಿ ಕೊಡಿಸಿದ್ದು ಧರೆಯೊಳಗೆ
ಪರಿಪೂರ್ಣವಾಗಿ ಇರಲಿ ಸ್ವಾಮಿ೩

೨೩೦
ಪಿಡಿ ಎನ್ನ ಕೈಯ್ಯ ಮುಖ್ಯ ಪ್ರಾಣ
ಭುವನ ತ್ರಾಣ ಸದ್ಭವ ಪ್ರವೀಣ ಪ
ಶ್ಲೋಕ :
ಹೀನಾಹೀನ ವಿವೇಕವಿಲ್ಲದೆಸೆವಾ | ನಾನಾ ವಿಧ ಪ್ರಾಣಿ ಭ |
ಜ್ಞಾನಾ ಜ್ಞಾನ ತ್ರಿಕಾಖಿಳ ಕ್ರಿಯೆಗಳು | ಹೇ ನಾಥ ನಿನ್ನಿಂದಲಿ ||
ಏನಾಶ್ಚರ್ಯ ನಿವೇದಕೀಯ ನಿನಗೆ ಶ್ರೀನಾಥನ ಪ್ರೀತಿಗೆ
ನಾನಾ ರೂಪ ವಿಶಿಷ್ಟನಾದಿ ರಿಪುಸ್ಸೇನೇಯ ಸಂಹರಿಸಿದೆ೧
ಪದ:
ಏನ ಹೇಳಲಿ ನಿಜ ಸಂಶಯ ಜನರಾಸೆಯ | ಉದ್ಧರಿಸುವ ಬಗೆಯಾ
ಜ್ಞಾನ ಭಕುತಿ ವಿರಕ್ತಿಯಾ | ಕೋಟಿ ಮುಕ್ತಿಯಾ |
ನೀ ಕೊಡುವಿ ಕಾಣಯ್ಯಾ | ಶ್ರೀ ನಾರಸಿಂಹನ ಪದಾಶ್ರಯಾ
ಗುಣ ಸಂಚಯ | ಮಾಡೊ ಎನ್ನಲ್ಲಿ ದಯಾ |
ಹೀನನಾಗಿ ಪಾಪರಾಶಿಯ |
ಮಾಡಿದೆನಯ್ಯಾ | ಮುಂದೇನೋ ಉಪಾಯ ೨
ಶ್ಲೋಕ:
ನೀನೊಬ್ಬಾನಲ್ಲದಾವ ದೇವತೆಗಳು | ದಾವಂಗೆ ಬಿಟ್ಟೀರ್ವರು |
ಕಾವಾ ಮಾಯಾದಿ ವೊನ್ಹವೆಂದು ಜನರು |
ಜೀವಾತ್ಮಗೆ ಪೇಳ್ವಿರೊ ||
ಶ್ರೀ ವತ್ಯಾಂಕನ ಆಜ್ಞೆಯಿಂದ ತನು ಬಿಟ್ಟಾವ್ಯಾಳಿಗೆ ಪೋಪಿಯೋ |
ಆವಾಗೆಲ್ಲರು ಕೂಡಿ ಊರ ಹೊರಗೆ ದೇವೇಶ ಕೊಂಡೊಯ್ವರೋ
ಪದ:
ಕಂಸಾರಿ ಚರಣವ ಭಜಿಸದೆ | ನಿನ್ನ ನೆನೆಯದೇ |
ದುರ್ವಿಷಯದಿ ಬರಿದೆ | ಸಂಸಕ್ತನಾಗಿ
ನಾ ಭ್ರಮಿಸಿದೆ ಬುದ್ಧಿಸಾಲದೇ ||
ಬಹು ಪಾಮರನಾದೆ | ಸಂಶಯ ಬಿಟ್ಟಿನ್ನು ತಪ್ಪದೇ |
ನಿನ್ನ ನಂಬಿದೆ | ಇನ್ನು ಬಿಡುವುದು ಚಂದೇ |
ಸಂಸಾರದಲ್ಲಿ ಪದೇ ಪದೇ ದುಃಖಪಡಿಸದೆ | ಉದ್ಧರಿಸೆನ್ನ ತಂದೆ ೨
ಶ್ಲೋಕ :
ಶ್ರೀಶ ಪ್ರೀತಿಗೆ ಕೀಶನಾದೆ ರವಿಯ | ಗ್ರಾಸಕ್ಕೆ ಬೆನ್ನಟ್ಟಿದೆ |
ಈಶಾಧೀಶರು ಆತಗಾಗಿ ನಿನಗೆ | ಕಾಶರಭವನ್ಹಾಕಲು ||
ಲೇಶಾಯಾಸವು ಆಗಲಿಲ್ಲ ನಿನಗೆ ಶ್ವಾಸಾ ಬಿಡದಾಯಿತೋ |
ಆಶಾಪಾಶ ಸಮಸ್ತ ಮೂರುಜಗಕೇ | ಆ ಶಕ್ತಿ ಅತ್ಯದ್ಭುತ ೩
ಪದ:
ಅಂಜನೆಯುದರದಿ ಜನಿಸಿದಿ | ಹನುಮನೆನಿಸಿದಿ |
ರಾಮದೂತ ನೀನಾದಿ
ಕಂಜನಾಭನ ಮಾತು ಕೇಳಿದಿ | ವನಧಿ ದಾಂಟಿದಿ |
ಲಂಕಾಪುರವ ನೈದಿದೀ||
ಅಂಜದೆ ಸೀತೆಯಾ ನೋಡಿದಿ | ಮಾತನಾಡಿದಿ |
ಚೂಡಾರತ್ನವ ಪಿಡಿದಿ | ಬಂಧಿಸಿ ಮನವ ಸಂಚರಿಸಿದಿ |
ಆರ್ಭಟಿಸಿ | ರಕ್ಕಸರ ಸೀಳಿದಿ ೩
ಶ್ಲೋಕ :
ಕನ್ಯಾ ದೇಶನ ಕಂಡು ಅವನ ಪುರವ | ಹವ್ಯಾದಗೆ ಅರ್ಪಿಸೀ |
ಅವ್ಯಾಷ್ಟಾಯೆಂದ ವಿಭೀಷಣಾಲಯವನು | ಅವ್ಯಸ್ತ ನಿರೀಕ್ಷಿಸಿ ||
ದೇವ್ಯಾದೇಶವ ಕೇಳಿ ಬಂದು
ರಘುರಾಮರ ದಿವ್ಯಾಂಘ್ರಿಗೇ ವೊಂದಿಸೀ
ಸೇವ್ಯ ನಿಜ ಕೃತ್ಯ ಅರ್ಪಿಸಿದೆಯೊ | ಅವ್ಯಾಜ ಭಕ್ತಾಗ್ರಣೇ ೪
ಪದ:
ಸಹ ಭೋಗ ಕೊಟ್ಟನು ರಾಘವ | ನಿನಗೆ
ಯೋಗ್ಯವ | ಬದಲು ಕಾಣದೆ ದೇವಾ
ಅಹಿ ಪಾಶಾ ಮೋಹಿತ ಬಂಧವಾ | ಜನ
ಸದ್ಭಾವ | ನೋಡಿ | ಗಂಧಮಾದನವ |
ಮೋಹಿಸಿ ಕ್ಷಣಕೆ ಬಂದು ವೊದಗುವ | ನಿನ್ನ
ವೇಗವ | ಪೊಗಳಲಾರೆನು ಭವ |
ಮಹಿತ ಚರಣ ಸರಸಿರುಹವ | ನಿನ್ನ ಚರಣವ |
ಮೊರೆ ಐದಿವರವ ೪
ಶ್ಲೋಕ :
ಕುಂತಿದೇವಿಯು ಮಂತ್ರದಿಂದ ಕರೆಯೇ |
ಸಂತುಷ್ಟನಾಗಿ ಸ್ವಯಂ |
ಕಾಂತಸ್ಪರ್ಶನ ಮಾತ್ರದಿಂದ ಧರೆಯೊಳ್ |
ನಿಂತ್ಹಾಂಗೆ ನೀ ಹುಟ್ಟಿದಿ |
ಸಂತಾಪಪ್ರದನಾಗಿ ದುಷ್ಟ ಮಣಿನ್ಮುಂತಾದ ದೈತ್ಯಾಘಕೇ |
ಎಂಥಾ ದೇಹವೊ ನಿಂದು ಅದ್ರಿ ಪುಡಿಯಾ |
ಎಂಥ ಬಲವೆ ನಿನ್ನದು
ಪದ:
ನಾಮದಿಂದಲಿ ನಿನಗೆಲ್ಲರು | ತ್ರಿಜಗದ್ಗುರು |
ಭೀಮಾಸೇನನೆಂಬುವರು |
ಭೂಮಿಯೊಳಗೆ ನಿನಗೊಬ್ಬರು | ಸಮರಿಲ್ಲರು |
ಧೃತರಾಷ್ಟ್ರನ್ನ ಸುತರು |
ಭೀಮನ್ನ ಕೊಲ್ಲಬೇಕೆಂಬೋರು | ವಿಷವನಿತ್ತರು ||
ಸರ್ಪಗಳ ಕಚ್ಚಿಸಿದರು | ಕ್ಷೇಮವಾಯಿತು ಏನಾದರು |
ಭಕ್ತ ಸುರತರು | ಮೋಕ್ಷ ಮಾರ್ಗವ ತೋರು ೫
ಶ್ಲೋಕ :
ಕಕ್ಷಾ ವಾಸಕ ಋಕ್ಷ ಕೇಸರಿ ಮಹಾ | ವೃಕ್ಷಾದಿ ಸಂಹಾರಕಾ |
ಲಾಕ್ಷಾಗಾರವು ಬಿಟ್ಟು ನಿನ್ನವರ ನಾ | ಸುಕ್ಷೇಮದಿಂದೈದಿಸಿ |
ಭಿಕ್ಷಾರ್ಥಾವಿನಿಯುಕ್ತನಾಗಿ ಬಕನಾ | ಲಕ್ಷಿಲ್ಲದೇ ಕುಟ್ಟಿದೀ |
ಸಾಕ್ಷೀ ಮೂರುತಿ ಚಿತ್ರವೇ ನಿನಗದಧ್ಯಕ್ಷಗ್ರ ಸರ್ವೇಶಗಾ ೬
ಪದ :
ಭಾರತಿ ನಿನಗಾಗಿ ಬಂದಳು ವೇದವತಿಯಾಳು |
ದ್ರುಪದಜೆ ಎನಿಸಿದಳು |
ಘೋರ ದುಃಶಾಸನು ಮುಟ್ಟಲು | ಮೊರೆಯಿಟ್ಟಳು ದ್ವಾರರಾದಳು |
ವರ ಸುಜನಾಭೀಷ್ಟ ಕೊಡುವಳು |
ಧೀರನೆನವೆ ಹೃದಯದೊಳು ಹಗ
ಲಿರುಳು | ಭಜನೆಗಳಿಪ್ಪನಂಘ್ರಿಗಳು || ೬
ಶ್ಲೋಕ :
ಎಲ್ಲಾ ದೈತ್ಯರು ಹುಟ್ಟಿ ಭೂತಳದಿ ನಿನ್ನಲ್ಲೆ ಪ್ರದ್ವೇಷದಿಂ |
ದಿಲ್ಲೇ ಇಲ್ಲ ಮುಕುಂದನಾ ಗುಣಗಳು | ಸುಳ್ಳಷ್ಟು ಈ ವಿಶ್ವವೊ ||
ಇಲ್ಲೆಂಧೇಳಲು ಸದ್ಗುಣಕ್ಕೆ ಗೊತ್ತಿಲ್ಲಾ ತಾನಾಗ ಈ ತತ್ವವೊ |
ಅಲ್ಲಿಂದಚ್ಯುತನಾಜ್ಞೆಯಿಂದವನಿಯೋಳ್ | ಪುಲ್ಲಾಕ್ಷ ಮತ್ತೈದಿದಿ
ಪದ :
ಪಾಜಕ ಕ್ಷೇತ್ರದಿ ಜನನವನು ಮತ್ತೈದಿ ನೀನು |
ಮಧ್ಯಗೇಹಾರ್ಯನ ಸೂನು |
ರಾಜತಾಸನದಲ್ಲಿ ಇದ್ದನು | ಒಬ್ಬ ಯತಿಪನು |
ಅಚ್ಯುತಪ್ರೇಕ್ಷ ಎಂಬುವನು | ಸ್ರಜನಿಯನು ಸೇವಿಸಿ ತಾನು |
ವರ ಪಡೆದನು | ಭಾವೀ ಶಿಷ್ಯ ನಿನ್ನನು |
ದ್ವಿಜನಾಗಿ ಬಂದು ಆ ಯತಿಯನು ಪೊಂದಿದಿ ನೀನು |
ತುರ್ಯಾಶ್ರಮವನು ಯಿನ್ನು ೭
ಶ್ಲೋಕ :
ದುರ್ವಾದ್ಯುಕ್ತ ಭಾಷ್ಯ ಸಂಘಗಳನು | ಸರ್ವೇದ್ಯನೀ ಖಂಡಿಸೀ |
ಸರ್ವಾನಂದದಿ ದಿವ್ಯ ಶಾಸ್ತ್ರಗಳನು | ವಾಗಾಜಯಂ ನಿರ್ಮಿಸಿ ||
ಪೋರ್ವಾನಂದ ಸುತೀರ್ಥ ಮಧ್ವ ಎನಿಸಿ |
ಗರ್ವೋಚಿಸಲ್ಲೋಕಕೆ |
ನಿರ್ವಾಣಕ್ಕೆ ಸುಮಾರ್ಗ ತೋರಿದಿ ಮಹಾ |
ಸರ್ವಜ್ಞ ಚೂಡಾಮಣಿ
ಪದ:
ಕೃಷ್ಣನು ಗೋಪಿಚಂದನದಲ್ಲಿ ಬಂದು ಧರೆಯಲ್ಲಿ |
ರಜತಪೀಠ ಪುರದಲ್ಲಿ |
ವಿಷ್ಣು ತಾ ನಿಂದನು ನಿನ್ನಲ್ಲಿ | ದಯದಿಂದಲ್ಲಿ |
ನೀ ಕಲಿಯುಗದಲ್ಲಿ |
ವೃಷ್ಣೀಶನ ಮಾಡಿಸುತಲ್ಲಿ ಅನುದಿನದಲ್ಲಿ |
ಇರುವಿ ಮತ್ತೊಂದರಲ್ಲಿ |
ವಿಷ್ಣು ಕೃಪೆಯು ಎಷ್ಟು ಹೇಳಲಿ ದಿನದಿನದಲ್ಲಿ |
ಪಟ್ಟವಾಳಿದಿ ಅಲ್ಲಿ |ವಿಠ್ಠಲನ ವಿಜಯಪಾದದಲ್ಲಿ ಅನುದಿನದಲ್ಲಿ೮

೪೬೯
ಪುಣ್ಯ ಕ್ಷೇತ್ರವ ಸ್ಮರಿಸಿ ಧನ್ಯರಾಗಿರೋ ಪ
ನಿಮ್ಮ | ಮುನ್ನೆ ಮಿಕ್ಕಾದಘ ಮಹ ಅನ್ಯಾಯ ಅಳಿದು ಅನು
ಗುಣ್ಯದಲ್ಲಿರೆ ಭವದಾರಣ್ಯ ದಹಿಸುವದು
ಕಾರುಣ್ಯನಿಧಿ ಹರಿ ಒಲಿವಾ ಅ.ಪ.
ಶೇಷಪರ್ವತ ಗರುಡಾದ್ರಿ ಶ್ರೀ ಶೈಲ ಪ್ರಭಾಸ
ಕ್ಷೇತ್ರ ಮಧುರೆ ಗೋಕುಲ ವೃಂದಾವನ
ನಾಸಿಕ ತ್ರಿಯಂಬಕ ಮುದ್ಗಲಕ್ಷೇತ್ರ ಪರಾಶರ ಮಗನಾಶ್ರಮ
ತೋಷದಲಿ ತೋತಾದ್ರಿ ಕುಂಭಘೋಣ
ವಾರಣಾಸಿ ಭಾರದ್ವಾಜ ಕ್ಷೇತ್ರ ಅರುಣಾಚಲ
ದೋಷವರ್ಜಿತ ಝಲ್ಲಿಕಾರಣ್ಯ ಸೇತು
ದರ್ಭಶಯನ ಮಧ್ಯಾರ್ಜುನ ೧
ಸುಂದರ ಸಿಲಾಚಯ ಜಂಬುಕೇಶ್ವರ ಮಹಾನಂದಿ
ಚಿದಂಬರ ವೀರ ರಾಘವ ದೇವ
ಸ್ಕಂದ ನಿಬ್ಬಣಸ್ವಾಮಿ ಕಾರ್ತಿಕ ಖಗಶೇಷ ನಂದ ಯೇಕಾಂಬರೇಶ
ಅಂದವಾದ ಛಾಯ ಅಳಕಾಪುರಿ ಕ್ಷೇತ್ರ
ಮಂದಾಕಿನಿ ಇಪ್ಪ ಸಾಗರ ಯಯಾತಿಗಿರಿ
ಮಂದಮತಿ ಕಳೆವ ಘನಗಿರಿ ಕ್ಷೇತ್ರ ಧರ್ಮಪುರಿ
ಒಂದೊಂದು ಕೋಟೀಶ್ವರಾ ೨
ಶ್ರೀರಂಗ ಹಸ್ತ ಸಿರಿ ಪಾಂಡುರಂಗ ಕ್ಷೇತ್ರ
ದ್ವಾರಕಾ ಸಿಂಹಾದ್ರಿ ನೀಲಕಂಠನಿಧಿ
ಚಾರು ಗಯ ಚಂಪಕಾರುಣ್ಯ ಪಂಪಾಕ್ಷೇತ್ರ
ವೀರ ನಾರಾಯಣವೋ
ಕಾರುಣ್ಯ ಮಾಳ್ಪ ರಾಮನ ನಗರಿಯು ಮಾಯ
ಕೇದಾರ ಕುರುಕ್ಷೇತ್ರ
ಕೂರ್ಮನಿಧಿ ಸಾರಿದ ಬರುವ ಪುರುಷೋತ್ರಮ
ಪುಷ್ಕರ ಕ್ಷೇತ್ರ ಮಾರಕಾಪುರಿ ಚನ್ನಾ ೩
ಉದಯಗಿರಿ ರಾಮನಾಥಪುರ ಕಾವೇರಿ
ಉದ್ಭವ ಆದಿ ಅನಂತ ಬಲಕ್ಷೇತ್ರ
ಪದುಮನಾಭ ಪುಂಡರೀಕಾಕ್ಷ ವಿಂಧ್ಯಾದ್ರಿ
ಸುಧಿಯೆಂದು ಕನ್ಯಾಕುಮಾರಿ
ಮಧುರಿ ಅಳಗಿರಿ ತಿಮ್ಮ ಬೇಲೂರಿ ಚೆನ್ನಿಗ
ಮುದದಿ ಮಹಂಕಾಳಿ ಹಸ್ತಿಪಳಿನಾಥ
ಕದಿರಿ ಮಂಗಳ ಗಿರಿತೋರವೀಯ ನರಸಿಂಗ
ಪದ ಮುರಳಿ ತ್ರಿವಿಕ್ರಮ ೪
ಹರಿಹರ ಗಂಗಾಸಾಗರ ಕಪಿಲಕ್ಷೇತ್ರ ನಿರುಪಮಾದಿ
ಕೂರ್ಮ ನೆಲ್ಲನಪ
ತಿರುಪತಿ ಶೂರ್ಪಾಲಿ ಮಾಬಲೇಶ್ವರ ಭದ್ರಾಚಲ
ಧರಣೀಧರ ಚಾಪವಾಣಿ
ಪರಿಶುದ್ಧ ಭಕ್ತವತ್ಸಲ ಗೌರಿ ವಯ್ಯಾರ ವರಸಾರ
ಕ್ಷೇತ್ರ ಶ್ರೀನಿವಾಸನೆದ ನಿಧಿ
ಪರಮ ಸುಂದರ ಮನ್ನಾರಸ್ವಾಮಿ ಘನಶಾಮವರ
ಗೌರೀ ಮನೋಹರ ೫
ಶಂಕರನಾರಾಯಣ ಉತ್ತಮರು ಗೋಕರ್ಣ
ಶಂಕರನ ಕ್ಷೇತ್ರ ಗೋಗರ್ಭ ಶೇತುವನ
ಶಂಖಮುಖಿ ಗಜೇಂದ್ರಮೋಕ್ಷ
ಗಜಾರಣ್ಯ ಓಂಕಾರನಾಥ ದೇವಾ
ಪಂಕಜಾಸದನ ಶಿಯ್ಯಾಳಿ ವೈದ್ಯನಾಥ ಠಂಕಾಳಾಂತರ
ವೇದಿ ಗೋಪಾಲನಿಧಿ
ಬಿಂಕದಲಿ ಯಿಪ್ಪ ಚಿಂತಾಮಣಿ ನರಸಿಂಹ
ಅಲಂಕಾರ ಮುಕ್ತಿ ಕ್ಷೇತ್ರ ೬
ಸಂತಾನಗೋಪಾಲ ತಿಶಿಖ್ರಿನಾರಾಯಣ ಅನಂತಗಿರಿ
ಮಳೂರಪ್ರಮೇಯ ಶಿವಾ
ಅಂತಕನಗೆ ದ್ವಾಪುರತೀರ್ಥ ನಿವರ್ತಿ ಅಂತು ಆದಿಶ್ರೀರಂಗ
ಇಂತು ಪಾನಕ್ಷೇತ್ರ ವಾತಗಿರಿ ನೀಲಾದ್ರಿ ಸಂತು
ನೀಲಾರಣ್ಯ ರಾಜವನ ನೈಮಿಷ
ಕಾಂತರದಕ್ಷ ವನಶಿದ್ಧ ವಟಪುಷ್ಪಗಿರಿ ಕಂತುಹರ ನಂಜು ಭೋಕ್ತ ೭
ಕೂಲ ಪರ್ವತ ಕಣ್ವಮುನಿಕ್ಷೇತ್ರ ಪಿನಾಕಿಮಾಲಿ
ಅಂದದಲಿಯಿಪ್ಪ ನಿಧಿ ಮಾಧವಸ್ವಾಮಿ
ಮೇಲು ಘಟಿಕಾಚಲ ಬದರಿ ನರಸಿಂಹ ರವಿಸೇತು ಗಣ ಮುಕ್ತೇಶ್ವರ
ಕಾಲದೂತ ಗೆದ್ದ ಕ್ಷೇತ್ರ ಭವಾನಿಗುಡಿ ವ್ಯಾಳನಿಧಿ
ಮಹಾಲಕುಮಿ ರಘುನಾಥ ಶಿವಗಂಗೆ
ಬಾಲಕೃಷ್ಣ ಕ್ಷೇತ್ರ ಕರವೀರ ಪುರ ವಿಶಾಲ ವಿಹಂಗಕ್ಷೇತ್ರ ೮
ದೇಶದೊಳಗುಳ್ಳ ಪುಣ್ಯ ಕ್ಷೇತ್ರಗಳು ಯೆಣಿಸಿ
ಪೇಳಿದುದಕ್ಕೆ ಆರಿಗೆ ಅಳವಲ್ಲ
ಪ್ರದೋಷ ಕಾಲದಲಿ ಪ್ರಭಾತ ಕಾಲದಲಿ
ನೆನಸೋದು ಮಾನವರು
ಮೀಸಲಾಮನದಲ್ಲಿ ಅನಂತ ಜನುಮದ ದೋಷ ವಿ-
ನಾಶ ವಿಜಯವಿಠ್ಠಲ ಬಂದು ಲೇಸಾಗಿ
ಪಾಲಿಸುವ ಕುಲಕೋಟಿಗಳ೯

೪೬೮
ಪುಣ್ಯ ದೊರಕುವುದು ಅನು
ಗಣ್ಯವಾಗಿದ್ದ ಸತಿಯಿದ್ದ ಜನರಿಗೆ ಪ
ಬಡತನವಿದ್ದರು ನೆರೆಹೊರೆ ಮನೆಯಲ್ಲಿ
ನುಡಿ ಬಿಚ್ಚಿ ಪೇಳದೆ ಸೌಮ್ಯಳಾಗಿ
ಬಿಡದೆ ಮಾಡುವ ಗೃಹಕೃತ್ಯಂಗಳು ಜಗ
ದೊಡಿಯಗರ್ಪಿತವೆಂದು ಹಿಗ್ಗುತ ಅನುದಿನ ೧
ವಿಪರೀತ ಕಾಲಗಳಟ್ಟಿದ ಕಾಲಕ್ಕು
ಸ್ವಪನಾದಿಯಪ ಕಳವಳಿಸದಲೇ
ದ್ವ್ವಿಪುತ ಪ್ರಾಕಾಶವಂತಳಾಗಿ ಪತಿ ಸೇವೆ
ಅಫಲದಲ್ಲಿ ಮಾಡಿ ಒಲಿದೊಲಿದಾಡುವ೨
ಲಾವಣ್ಯ ಪುರುಷರ ಕಂಡರು ಮನದಲ್ಲಿ
ಭಾವಿಸಬೇಕು ಸಹೋದರರು ಎಂದು
ದೇವದೇವೆಶನ್ನ ವಿಭೂತಿ ರೂಪವ
ಆವಾವ ಬಗೆಯಲ್ಲಿ ನೆನೆಸಿ ನೋಡುತ ನಿತ್ಯ ೩
ಬಂದು ತಂದರೆ ಸಾವಿರ ಮಾಡಿ ಚಿಂತಿಸಿ
ಇಂದಿರೇಶನೆ ಪತಿರೂಪವೆಂದು
ಅಂದದದಲಿದ್ದ ವಿಭವಾನುಸಾರ ಆ
ನಂದವಾಗಿ ಸಂಸಾರದೊಳಗಿರೆ ೪
ಪತಿಯ ಜನಕ ಮಾತೃ ಮಿಗಿಲಾದ ಜನರಿಗೆ
ಹಿತವಂತಳಾಗಿ ನುಡಿಸಿಕೊಳುತಾ
ಅತಿಶಯವಾಗಿ ತನ್ನಯ ಗಾತ್ರ ಸರ್ವದಾ
ಪ್ರತಿದಿನ ಸುವಿನುವಳಾ ನಾರಿ ಅಧಿಕಾರಿ ೫
ಚಕೋರ ಚಂದ್ರಮನಲ್ಲಿ ಮನಸು ಇಟ್ಟು
ಸುಖಬಡುವಂತೆ ನಾನಾ ಪ್ರಕಾರ
ಕಕುಲಾತಿಯಿಂದ ಕಾಮುಕಳಾಗದೆ ಮಹಾ
ಭಕುತಿಯಿಂದಲಿ ಗುರು ಹಿರಿಯರ ಸಮ್ಮತ ೬
ಸಂತಜನರೆಂಬ ಕ್ಷೀರಾಂಬುಧಿ ಮಧ್ಯ
ಸಂತತ ಮೀನಿನಂದದಿ ಬೀಳುತಾ
ಸಂತೋಷಮತಿಯಲ್ಲಿ ಪತಿ ಧರ್ಮವಹಿಸಿ ಶ್ರೀ
ಕಾಂತನ ಗುಣಕಥೆ ಕೇಳಿ ಪೊಗಳಲಾಗಿ ೭
ನಾಮ ಮೊದಲು ಮಾಡಿ ಪ್ರಕೃತಿಯ ಪರಿಯಂತ
ಪ್ರೇಮದಿಂದಲಿ ಗುಣಗಳ ಗುಣಿಸೀ
ಕಾಮಾದಿ ಚತುರ್ವಿಧ ಪುರುಷಾರ್ಥ ತನ್ನಯ
ಸ್ವಾಮಿಯಲಿಂದಲಿ ಸಂಪಾದಿಸುತಿಪ್ಪಾ ೮
ಆವಾವ ಪ್ರಯೋಜನ ಮಾಡಲು ಸರ್ವದ
ದೇವದೇವೇಶನಾಧೀನವೆಂದೂ
ಭಾವದಲಿ ತಿಳಿದನ್ಯ ಕರ್ಮವ ಬಿಟ್ಟು
ಪಾವನ ವಿಜಯವಿಠ್ಠಲನ ಭಕುತಿಯಿಂದಾ ೯

೩೪೩
ಪುರಂದರ ಗುರುರಾಯ ಪುರಂದರ
ಗುರುರಾಯ ಪೂರ್ಣ ಗುಣಾಂಬುಧೆ
ಶರಣಜನ ಪರಿಪಾಲಾ ಸುಸ್ಸೀಲಾ ಪ
ಕಲಿ ವಿಪ್ರಜಿತು ದ್ವಾಪರ ಮಧು ಕೈಠಭ
ಖಳರು ಬಂದಾಗೆ ಅಪಾರ ಸುಲಭ ಮಾರ್ಗಕೆ ಎನ್ನ
ಸುಳಿಯಲೀಸದೆ ತಮ್ಮ ಬಳಗಾ ಹರಿಯಬಿಟ್ಟು
ಕಳವಳಿಸುವ ಚಂಚಲತನವಿತ್ತು ಕ
ತ್ತಲೆಯೊಳು ಪೊಗಿಸುವ ಮಾಯಾ ಕತ್ತರಿಸುವ ಪ್ರೀಯಾ೧
ಜ್ಞಾನ ಭಕುತಿ ವಿರಕುತಿ ಸರ್ವದಯಿತ್ತು
ಮಾಣಿಸುವುದು ದುರ್ಮತೀ
ನೀನೋಲಿದು ಯಿಂದು ಅನಂತ ಜನುಮಕ್ಕೆ
ದಾನವಾರಿಯ ಪಾದ ಧ್ಯಾನವೆ ಮಾಡುವ
ಆನಂದವನೆ ಕೊಡು ನಾನಾ
ಬಗೆಯಿಂದ ಗುರುವೆ ನಿತ್ಯಸರು ತರುವೆ ೨
ಈ ದೇಹ ಬಂದದೆ ಪಂಚ ಭೇದವೆ ತಿಳಿಸಿ
ಮೋದವೆ ಕೊಡು ಪ್ರಾಪಂಚ
ಖೇದವೆ ಖಂಡಿಸಿ ಆದರಿಸುವದಪರಾಧವಗಳೆಣಿಸದೆ
ಸಾಧುಗಳಡಿಯಲಿ ಕಾದುಕೊಂಡಿಹ್ಯ ವಿ
ನೋದವೆ ಕರುಣಿಸು ವಿಜಯವಿಠ್ಠಲನ ಪ್ರೀಯಾ೩

೩೪೪
ಪುರಂದರ ಗುರುರಾಯಾ ಸತ್ಪ್ಪುಣ್ಯ ಕಾಯಾ ಪ
ನಿರುತ ನಿನ್ನ ಚರಣ ಸೇವೆ ಕರುಣ ಮಾಳ್ಪದೋ ಜೀಯಾಅ.ಪ.
ಬಹು ಜನ್ಮಗಳಲ್ಲಿ ನಾನು ಮಹ ಪುಣ್ಯ ಮಾಡಿದವರ
ಸಹವಾಸದಲಿದ್ದು ಗ್ರಹದ ಮುಂದೆ
ದೇಹಿಗ ನಾನಾದದರಿಂದ ದ್ರುಹಿಣ ಸುತನೆ ನಿನ್ನನು
ಗ್ರಹದಿಂದೆನಗೆ ಮಹಿಸುರ ಜನ್ನವಿತ್ತೆ ೧
ಮಾನವನೋ ಖಗನೋ ಮೃಗನೋ ಶ್ವಾನ ಸೂಕರನೊ
ನಾನದನು ಕಾಣೆನೊ ಮತ್ತಾವನೊ ನಾನಾ ಜೀವನೊ
ಆನು ಒಂದು ತಿಳಿಯೆ ಗುರುವೆ ನೀನೆ ಬಲ್ಲಿ ಎನಗೆ ಬಂದ
ಅನಾದಿ ಶರೀರವ ಅಜ್ಞಾನವನ್ನೇ ತೆಜಿಸುವುದು೨
ಯಾಚನೆ ದೇಹದಲ್ಲಿ ಊಚು ಭಾಗ್ಯವ ಜಯಸದಿಪ್ಪ
ಯೋಚನೆಯಿಂದಲಿ ಕಮಲಲೋಚನ ನಿನ್ನಂಘ್ರಿಯಾ
ಯಾಚನೆಯಿಂದಲಿ ಕರವ ಬಾಚೆನೊ ಹೀನರಿಗೆ ನಿನ್ನ
ಪಾಚಕರ ಮನೆಯ ಪರಿಚಾರ ಸಿದ್ಧ್ದವಾಗಲಿ ೩
ಹಿಂದೆ ಏನು ಪ್ರೇರಿಸಿದಿಯೊ ನಂದವ ನಾನರಿಯೆನೊ
ತಂದೆ ತಾಯಿ ನೀನೆ ಎಂದು ಪೊರದಿ ಸಂದೇಹವಿಲ್ಲ
ಯೆಂದು ಪೊರೆದದ್ದು ನಿನ ಕರುಣವಲ್ಲವೆ ಮತ್ತೆ
ಮುಂದೆಯಿದರಂತೆ ಪೊರೆವ
ಭಾರವು ನಿನದೆಂದು ನಾ ಪ್ರಾರ್ಥಿಸುವೆ ೪
ತಿರುಗುವುದು ಕುಳ್ಳಿರುವುದು ಬರುವುದು ಮತ್ತೇಳುವದು
ಮರಳೆ ಮಾತನಾಡುವುದು ವಾಸರದಲ್ಲಿ ಬಿಡದೆ
ಚರಿಸುವ ಕರ್ಮಗಳಲಿ ಸಿರಿ ವಿಜಯವಿಠ್ಠಲನ್ನ
ಚರಣಸ್ಮರಣೆಯ ಸುಖಾಂತರ
ಕರದೊಳಿಪ್ಪಂತೆ ಮಾಳ್ಪದೊ ಜೀಯಾ ೫

೨೫೦
ಪೂರ್ಣಪ್ರಜ್ಞನೆಂಬ ಪರಿಪೂರ್ಣ
ಸುಜ್ಞಾನ ಸಮುದ್ರ ಮಧ್ವಮುನಿರಾಯ ||
ವಾರಣದಿಂದಲಿ ಬಂದೆ ವಾದಿಯ
ನಿವಾರಿಸಿದ | ಮಧ್ವ ಮುನಿರಾಯಾ ಪ
ಮಣಿವಂತನೆಂಬೊ ದೈತ್ಯ ಧಾರುಣಿಯೊಳಗೆ
ಸಂಕರನಾದಾ | ಮಧ್ವರಾಯಾ ||
ಅವ | ಜನಿಸಿ ಬಂದು ಉತ್ತಮರ
ಗುಣಗಳಲ್ಲ ಕೆಡಿಸಿದಾ | ಮಧ್ವರಾಯಾ ೧
ಹರಿಯಿಲ್ಲ ಗುರುವಿಲ್ಲ ಹರನು ಪುಸಿ ಎಂದು || ಮಧ್ವ | ಅವ |
ಪರದೈವ ತಾನೆ ಎಂದು ಧರೆಯೊಳು ತಿರುಗಿದ | ಮಧ್ವ ೨
ವೇದಶಾಸ್ತ್ರವೆಲ್ಲ ಮಿಥ್ಯ ಅಹಂ ಬ್ರಹ್ಮ ಜಗಕೆಂದ | ಮಧ್ವ || ಅವ |
ಭೇದಾಭೇಧ ಇಲ್ಲ ಹೆತ್ತ ತಾಯಿ ಸತಿ ಒಂದೆ ಎಂದು ಮಧ್ವ ೩
ಜಾತಿಧರ್ಮವೆಲ್ಲ ತೊರೆದು | ಜಾತಿ ಸಂಕರವಾಗೆ ಮಧ್ವ ||
ಭೂತಳದೊಳಗೆ ಮಿಥ್ಯ ಪಾತಕವೆ ತುಂಬಿತು | ಮಧ್ವರಾಯ ೪
ಸುರರು ಚಿಂತಿಸಿ ಪೋಗಿ | ಪರಮೇಷ್ಠೆಗೆ
ಪೇಳಲು | ಮಧ್ವ ||ಬೊಮ್ಮ |
ಪರಿಹರ ಕಾಣದೆ ಹರಿಗೆ ಬಿನ್ನೈಸಿದ | ಮಧ್ವ೫
ಜಯ ತನಯನ್ನ ಕರೆದು | ದಯದಿಂದ
ಪೇಳಲು | ಮಧ್ವ || ವೇಗ |
ಪ್ರಿಯದಲ್ಲಿ ಬಂದು ಮಧ್ಯಗೇಹನಲ್ಲಿ ಅವತರಿಸಿದ | ಮಧ್ವ ೬
ಮುಖ್ಯ ಶಿಷ್ಯ ತಿಪ್ಪಣ್ಣ ಅವಧಾನಿ ಸೋತು ವೈಷ್ಣವನಾಗೆ | ಮಧ್ವ ||
ಮಾಯಾ ಶಕ್ಯವಲ್ಲವೆಂದು ಸೋತು |
ಸಂಕರ ಮೂಲಿಯ ಪೊಕ್ಕ | ಮಧ್ವ ೭
ಶುಂಠ ಮಿಕ್ಕ ರಕ್ಕಸರ ಗಂಟಲ ಮುರಿದುವಟ್ಟಿ | ಮಧ್ವ ||
ಉಂಟು ಮಾಡಿದನು ವೈಕುಂಠ ಪತಿದೇವವೆಂದು | ಮಧ್ವ೮
ಮರುತ ಮತ ಉಧ್ಧರಿಸಿ | ಗುರುಕುಲ ತಿಲಕನಾದ | ಮಧ್ವ ||ಶಿರಿ ವಿಜಯವಿಠ್ಠಲನ್ನ ಚರಣಾಬ್ಜ ಭೃಂಗನಾದ ಮಧ್ವ ೯

೨೫೧
ಪೂರ್ಣಪ್ರಜ್ಞರ ನೆನೆದು ಜ್ಞಾನಪೂರ್ಣರಾಗಿರೊ |
ಆನಂದ ಜನನದಲಿ ಜನನಗಳ ನೀಗಿರೊಪ
ಮಲಗಿ ಏಳುವಾಗ ಮಾತುಗಳನಾಡುವಾಗ |
ಇಳಿಯ ಮೇಲಡಿಯಿಟ್ಟು ತಿರುಗುವಾಗ ||
ಜಲದಲಿ ಮಿಂದಘ್ರ್ಯೆ ಪ್ರಣವ ಜಪಿಸುವಾಗ |
ಮಲಿನ ಸಂಕರನಳಿದಮಲಬೋಧನ ನೆನೆಯಿರೊ ೧
ದೇವತಾ ಪೂಜೆಮಾಡಿ ಸ್ತೋತ್ರ ಪಠಿಸುವಾಗ |
ಪಾವಕಾವನಿ ಸುರರ ಉಣಿಸುವಾಗ ||
ಕೋವಿದರ ಸಂಗಡ ಸಂತೋಷಬಡುವಾಗ |
ಶ್ರೀ ವೀರ ವೈಷ್ಣವಾಚಾರ್ಯನ ನೆನೆಯಿರೊ೨
ಸತಿಸುತರ ಕೂಡ ಹರಿ ಚರಿತೆಗಳ ಪೇಳುವಾಗ |
ಪ್ರತಿ ದಿವಸ ಷಟ್ಕರ್ಮ ಮಾಡುವಾಗ ||
ಪತಿತ ಪಾವನ ವಿಜಯವಿಠ್ಠಲನ ಭಜಿಪ ಸದಾ |ಗತಿಯಾದ ಸುಜನರಿಗೆ ಯತೀಶ್ವರನ ನೆನೆಯಿರೊ೩

೪೭೦
ಪೇಳುವೆ ಮನವೆ ನಿನಗೊಂದು ಕುಳಿತು
ಲಾಲಿಪುದು ಮುಕ್ತಿಗೆ ಹಾದಿ ಎಂದು ಪ
ಹರಿಯ ಚರಣಾಬ್ಜ್ಬಕೆ ಎರಗು ಬಡ
ವರನ ಕಂಡರೆ ಅಕಟಾ ಎಂದು ಮರಗು
ಹರಿ ಭಕುತಿಗೆ ನೀನೆ ಕರಗು
ಇಹ ಪರದಲ್ಲಿ ಉತ್ತಮ ಯೆಂದೆನಿಸಿ ತಿರುಗು ೧
ಅಹಂಕಾರ ಮಮಕಾರ ಬಿಟ್ಟು ಅಂಬು
ರುಹಲೋಚನನ ಸುಮತವನ್ನೆ ತೊಟ್ಟು
ಕುಹಕ ಮತಿಗಳನ್ನು ಬಿಟ್ಟು ಗುರು
ದ್ರೋಹಿಗಳಾದವರ ಹೃದಯವ ಮೆಟ್ಟು ೨
ಅಲ್ಪ ಬುದ್ಧಿಗಳನ್ನು ಮಾಣು ಒಂದು
ಸ್ವಲ್ಪವಾದರು ಜ್ಞಾನದ ಮಾರ್ಗ ಕಾಣು
ಬಲ್ಪಂಥದಲಿ ಬಾಹದೇನು ಬಿಡು
ಅಲ್ಪಗಳ ಸಂಗ ಎಂದು ಸಾರಿದೆನು ೩
ಸ್ವಾಮಿಯ ಪಾದವ ನೋಡು ನಿನ್ನ
ಕಾಮ ಕ್ರೋಧಗಳೆಲ್ಲ ಕಳೆದು ಈಡಾಡು
ನಾಮ ಕೀರ್ತನೆಗಳನ್ನು ಪಾಡು ತ್ರಿ
ಧಾಮದೊಳಗೆ ಒಂದು ಇಂಬನೆ ಬೇಡು ೪
ಎಚ್ಚತ್ತು ತಿಳಿದುಕೋ ಸೊಲ್ಲಾ ನಾನು
ಮುಚ್ಚುಮೊರಿಲ್ಲದೆ ಪೇಳಿದೆನಲ್ಲಾ
ಹುಚ್ಚಾದರೆ ಫಲವಿಲ್ಲ ಮುಂದೆ
ಅಚ್ಚುತ ವಿಜಯವಿಠ್ಠಲನಲ್ಲದಿಲ್ಲ ೫

೫೨
ಪೊಗಳಬಲ್ಲನೆ ನಾ ನಿನ್ನ ಪೊಗಳಬಲ್ಲನೆ
ನಿನ್ನ ಬಗೆ ಬಗೆ ರೂಪಗಳ
ಸುಗುಣ ಸಂಪೂರ್ಣ ಉರಗ ಶಯ್ಯ ರಂಗಯ್ಯಾ ಪ
ದಿತಿಸುತ ಸೋಮಕ ಶ್ರುತಿತತಿ ಕದ್ದೊಯ್ಯೆ
ಶತಧೃತಿ ತಲೆವಾಗಿ ಚತುರತೆಯಿಂದಲಿ
ಮತಿಪತಿ ಮತ್ಪಿತಾ ಪ್ರತಿಪತಿ ಕಲ್ಪಕ್ಕೆ
ಗತಿಸ್ಥಿತಿ ನೀನೆಂದು ಅತಿ ತುತಿಸಲು ಸಂ
ತತ ಹಿತ ಹಿರಿದಾಗಿ ಪ್ರತಿಯಿಲ್ಲವೆನಿಸಿದ್ದು
ರಿತ ಪುಂಜದಾನವನ ತರಿದೊಟ್ಟಿ
ಮತ್ಸ್ಯಾಕೃತಿಯಾ ಜಯ ಜಯವೆನುತಿರೆ ತ್ರಿಭುವನಾ ೧
ಕೃತು ಭುಕು ದೇವಾರಿತತಿ ಸಂಗತಿಯಿಂದ
ಮತಿ ಏಕರಾಗಿ ಸಂಮತದಿಂದ ನಡೆದು ಪ
ರ್ವತವ ಕಿತ್ತಿ ತಂದು ಉ
ನ್ನತವಾದ ಕ್ಷೀರೋದ ಪತಿಯೊಳಗಿಟ್ಟು
ಅತಿಬಲದಿಂದ ನಗುತ ಮಥಿಸಲು ಮಹಾ
ಕ್ಷಿತಿಧರ ಮುಣಗಿ ಪೋಗೆ ಹಾಹೋ ಎಂದು
ಗತಿಗೆಟ್ಟ ಯೆಲ್ಲ ಕೂಗೆ ಕೇಳುತ ಬಂದು
ಅತುಳ ಕಮಠನಾಗಿ ಪೊತ್ತೆ ಭಳಿರೆ ಮಿಗೆ೨
ಗತಮಂದ ಮಾರೀಚ ಸುತ ಹೇಮನೇತುರಾ
ಕ್ಷಿತಿಯ ಕದ್ದೌಯಿದು ದುರ್ಮತಿಯಿಂದ ವಿಬುಧರ
ಖತಿಗೊಳಾಗೈಸಿ ಹಿಗ್ಗುತಲವ ತಿರುಗುತ್ತ
ಪ್ರತಿಕೂಲನಾಗಿ ಸುವ್ರತಗಳ ಕೆಡಿಸುತ್ತ ಮಿತಿ ಮೀರಿ
ಪಾತಾಳ ವಾಸವಾಗಿರಲು ಅದ್ಭುತ ಕಿಟಿ ರೂಪವಾಗಿ
ದೈತ್ಯನ ಕೊಂದು ಸತಿಯಾದಂತದಲಿ ತೂಗಿ ತ
ರುತಲಿರೆ ಸತತಮರರು ಪಾಡೆ ಏನೆಂಬೆ ಶಿರವಾಗಿ ೩
ಚತುರ ಮೊಗನವರನುತಿಸಿ ಪಡೆದು ಪ್ರಾಗ
ರ್ವಿತನಾಗಿ ನೀಲಲೋಹಿತನ ಭಕುತಿಯಿಂದ
ತತುವೇಶಜನರ ಶಕುತಿ ಕುಂದಿಸಿ ತಾನೆ
ರತುನ ಗರ್ಭದೊಳು ದೇವತಿಯೆಂದು ಸಾರಿ ಬಾ
ಳುತ್ತ ತನ್ನಾತ್ಮಜ ಭಾಗವತನ ಭಾಧಿಸಿ ಶಿರಿ
ಪತಿಯ ತೋರೆಂದು ಕೊಲ್ಲೆ ಪ್ರಹ್ಲಾದ
ಗತಿಯೆಂದು ವಂದಿಸಲೆ ಕಂಭದಿ ಬಂದು
ಹತಗೈದೆ ಖಳನ ಸುರರು ಪೂಮಳೆ ಚೆಲ್ಲೆ ೪
ಸುತಳ ಲೋಕಕ್ಕೀಶ್ವರ ಶತಕೃತ ಕವಿಯ ರಚಿಸಿ
ಸಿತನಾಗಿ ರಥ ನನ್ನ ಚ್ಯುತ ಪದಸ್ಥನ ಮಾಡಿ
ಸತುವ ಮಾರ್ಗದಲಿ ಪೂರಿತ ಭಾಗ್ಯತನದಲ್ಲಿ
ಕೃತಕಾರ್ಯನಾಗಿರೆ ರಿತಮದದಲಿ ತಾ
ನುತಿಸಲಾದಿತಿಯ ಗರ್ಭದಲ್ಲಿ ಜ
ನಿತಳಾಗಿ ಕಿತವ ರೂಪದಲಿ ಬಂದು ಆ ದ್ವಾರದಲಿ
ವಿತರಣೆ ನೆವದಿ ನಿಂದು ಭೂಮಿಯ ಕೊಂಡಜ
ತತಿ ವಿಕ್ರಮತೀರಿತವಾದ ದಯಾಸಿಂಧು ೫
ಕೃತವೀರ್ಯ ಸೂನು ಪೂಜಿತನಾಗಿ ಮುನಿಯಿಂದ
ಕತಕತ ಕುದಿದು ಅಮೃತದಾಯಿ ಯಾವೈಯ್ಯ
ಪಿತನಗೋಸುಗ ಉಗ
ಳುತ ರೋಷ ಕಿಡಿಗಳಾದ ಈರೈದು ಬಾಹೋ
ನ್ನತ ಕಡಿದು ವಿಂಶತಿ ಏಕಸಾರಿಗೆ
ದ್ವಿತೀಯ ಜಾತಿಯವನ ಹುತವ ಮಾಡಿದ ಗಂಭೀರಾ ನಿ
ರುತ ಸತ್ಯವತಿ ನಂದನಕುವರ ಪರುಶ ಪಾಣಿ
ಮೃತ ಜೀವಿಗಳ ಬದುಕಿಸಿದ ಮಹಾಧೀರಾ ೬
ಚತುರಾತ್ಮ ಹರಿದೈವ ವೈವಸ್ವತ ಮನುಕುಲೋಧ್ಭವನಾ
ಶತಿವಾರು ಧನದಲಿ ಉತ್ಪತ್ತಿಯಾಗಿ ಅನುಜ
ಸಹಿತ ಪೋಗಿ ಮುನಿಯ ವಾ
ರುತಿಯ ಮನ್ನಿಸಿ ಶಿಲಿ ಸತಿಯಳ ಮಾಡಿ ಭೂ
ಪುರವಸಾರಿ ಪಿತನಾಜ್ಞ ತಿಳಿದು ಮಾ
ರುತಿಯಿಂದ ಕಪಿಯ ವಿಗತಸಂತಾಪನ ಮಾಡಿ
ಸೇತುವೆ ಕಟ್ಟಿ ಪತಿತರ ಶಿರ ಚೆಂಡಾಡಿ ಲಂಕಾನಗರ
ಹಿತದಿಂದ ಭಕ್ತಗೆ ಪಟ್ಟಗಟ್ಟಿದ ನೋಡಿ ೭
ಶತ್ರಪತ್ರಾರುಣ ದಳಾಯುತ ನಯನಾದೇವ|
ತತಿ ವಂದ್ಯ ಗೋಕುಲ ಸ್ಥಿತಿ ಉದ್ಧಾರಕ |
ಶತಕೃತ ಭಂಗ ಬಲಾ | ಚರಿತಪೂರ್ಣ ಕಂಸಾರಿ
ಯುತ ಷೋಡಶಾಖ್ಯ ಯುವತಿಯರ ತಂದ ಅ|
ಪ್ರತಿಮಲ್ಲ | ರತಿಪತಿ ಪಿತ ಫಲ್ಗುಣಗೆ ಭಾ |
ರತದಿ ಸಾರಥಿ ಎನಿಸಿ ಕಾಳಗದೊಳು |
ಧೃತರಾಷ್ಟ್ರಜರ ಕೊಲ್ಲಿಸೆ ಸಭಯಲ್ಲಿ ಪರೀ |
ಕ್ಷಿತಿನ ಉಳಿಹಿ ಕೀರುತಿ ಪೊತ್ತ ಗುಣರಾಶಿ ೮
ವ್ರತದಿಂದ ಖಳರು ಧರಿತ ಸತ್ಕರ್ಮವ ಮಾಡೆ |
ಗತಿಗೆಟ್ಟು ಸುರರ ಉಕುತಿಯಿಂದ ಕೈಮುಗಿದು |
ತುತಿಸಲಾಕ್ಷಣ ಅಪ್ರಾಕೃತ ಕಾಯ ಶಿಶುವಾಗಿ ||
ಶ್ರುತಿ ಸರ್ವದಲಿ ಅನೃತವೆಂದು ತಿಳುಪಿ ಉ |
ಚಿತ ಮಾರ್ಗದ ಬಿಡಿಸಿ ನಿ |
ರ್ಜೀತ ಕಾರು ಪಾರ್ವತಿ ಪತಿಗೆ ಮಾರ್ಗಣವೆನಿಸಿ
ತ್ರಿಪುರಾರಿಗೆ ಹುತಗೈಸಿ ಶಿವನ ಗೆಲಿಸಿ
ವಿವಶಳನೆ ಪತಿವ್ರತೆಯರ ಲಜ್ಜೆಗೊಳಿಸಿದೆ ವಂಚಿಸೀ ೯
ಚತುರ ವರ್ಣಾಶ್ರಮ ಮತಿಶೂನ್ಯರಾಗಿ
ವಿಹಿತ ಧರ್ಮ ಮರೆದು |
ಮಮತೆ ಜಾತಿ ಸಂಕರ |
ವ್ರತದಲ್ಲಿ ನಾನಾ ದುಷ್ರ‍ಕತ ತುಂಬಿರಲು ದೇವತೆಗಳು ಮರುಗಿ ಅ |
ರತರಾಗಿ ತುತಿಸಿ ತ್ವರಿತ ಸ್ವಭಾವದಲ್ಲಿ ನಿ |
ಸಿತ ಖಡ್ಗಧರಿಸಿ ರಾ
ವುತನಾಗಿ ತುರಗವೇರಿ ಉದ್ಭಟ ದುರುಳತೆಯರ ಕಡಿದ ಶೌರಿ |
ಕಲಿಕೆಯೆ ಸುಕೃತ ನೆನೆವವರಿಗೆ ಭವಸಾಗರ ತಾರಿ೧೦
ಶ್ರುತಿ ಶೀರ್ಷ ಶ್ರುತಿ ಉಪ |
ಕೃತಿನಯ ಪಂಚಮ ಶ್ರುತಿ ಪಂಚರಾತ್ರಾ ಸಂ |
ಹಿತ ರಾಮಾಯಣ ಭಾಗ
ವತ ಮೂಲ ರಹಸ್ಯ | ತತುವಾದಿನಾಮನು |
ಶ್ರುತಿಕಲ್ಪ ಕಥೆ ಸರ್ವ ಪ್ರತಿಪ್ರತಿ ವರ್ಣ ಸಂತತಿಯಲ್ಲಿ ನೀನೆ ವ್ಯಾ |
ಪುತಮೂರ್ತಿ ಸಪ್ತ ಸಪುತ ಭುವನೇಶನೆಂದು ಅಚೌಧ್ಯರೊ
ಪ್ಪುತ ಕೊಂಡಾಡುವರು ನಿಂದು | ಭಕುತಪೂ
ಜಿತ ಕಾಯಾ ವಿಜಯವಿಠ್ಠಲನೆ ಪಾಲಿಸೊ ಇಂದು೧೧

೧೮೩
ಪೋತರಾಜನಲ್ಲವೋ ನಮ್ಮ ರಂಗ ಪೋತರಾಜನಲ್ಲವೋ
ಭೂತಳದೊಳಜಾತನಾಗಿ ಮೆರೆವ ಪ
ಏಕಾರಾರ್ಣವದೊಳು ಎಲ್ಲರ ವೊಡಲೊಳು
ಸಾಕಿಕೊಳ್ಳುತ ಪೊಂದಲಿಟ್ಟುಕೊಂಡು
ಲೋಕನಾಯಕ ಹರಿವಟದೆಲಿಯ ಮೇಲೆ
ಮಾಕಾಂತಿಯ ಕೂಡ ಮಲಗಿದ ಗುಣನಿಧಿ ೧
ಜಿನಮತದಲಿ ಪುಟ್ಟಿ ದಾನವರು ಸ
ಜ್ಜನಕರ್ಮ ಮಾಡುತಲಿರೆ ವೇಗಾ
ಅನಿಮಿಷರಾಡಿದ ಮಾತಿಗೆ ದೈತ್ಯನ
ಮನವಂಚಿಸಿ ಉಪದೇಶ ಮಾಡಿದ ಹರಿ೨
ನಂದ ವ್ರಜದಲ್ಲಿ ಪೂತಿನಿ ಶಕಟನ್ನ
ಕೊಂದು ಗಜ ಮಲ್ಲರ ಸವೆದು
ಅಂದವಾಗಿ ಮೆರೆದ ವಿಜಯವಿಠ್ಠಲರೇಯಅಂದು ದೇವಕಿ ಬಾಲಕನಾಗಿ ತೋರಿದಾ ೩

೪೭
ಪ್ರಥಮ ದೈವವೇ ಪಂಢರಿರೇಯಾ
ಪೃಥ್ವಿಯೊಳಗೆ ಭಾಗೀರಥಿಗೆ ಪಥವ ಕೋರೊ ಪ
ಸಕಲಭಯನಾಶ ಸಾತ್ವಿಕ ಮೂರುತಿ
ಭಕ್ತಜನಷೋಷಕ ನೀನಲ್ಲವೆ
ತ್ವಕ್ಕು ಇಂದ್ರಿಯಗಳು ನಿನ್ನಾಧೀನವೋ
ಅಖಿಳ ಬಗೆಯಿಂದ ಮಾತು ಮನ್ನಿಸಿ ಕಾಯೊ ೧
ಸರ್ವರಂತರಿಯ ಸಿದ್ಧ ಫಲದಾಯಕ
ಸರ್ವರಲಿ ಸ್ವಾಮಿಯೆಂದೆನಿಪ
ಸರ್ವ ವಿಘ್ನೋಪ ಶಾಂತಾ ವೇದಾಂತನೆ
ಗೀರ್ವಾಣ ಮುನಿಸುತ ಗಿರಿಧರ ದೇವಾ ೨
ಸಾಧು ಮೂರುತಿ ಸಿದ್ಧ ಫಲದಾ
ಬೋಧ ಕೀರುತಿ ಆದಿಪರಬೊಮ್ಮ
ವಿಜಯವಿಠ್ಠಲರೇಯಾ ನೀನು
ಈ ಜಗದೊಳು ಭೀಮಾ ಕೀರನಿವಾಸಾ ೩

೨೩೧
ಪ್ರಾಣ ನಿನ್ನಂಘ್ರಿ ಸಿರಿರೇಣು ಕಾಣು
ತ್ರಾಣ ತ್ರಾಹಿ ತಾತಾ ದಾತಾ | ನಾನಾ
ಯೋನಿಯಲಿ ಬಂದೆ ನೊಂದೆ ಗುರುವೆ
ನೀನೆ ಗತಿಯೊ ಪ
ಭರತ ಭಾರತಿರಮಣ ಭಾರತ ಪ್ರತಿಪಾದ್ಯ
ಭರತ ಕುಲೋತ್ತಮ ಭವ್ಯ
ಭರದಿಂದಲಿ ಎನ್ನಭಾರ ವಹಿಸುವ
ಭರಣ ಭಾರದ್ವಾಜಾತ್ಮಜ ಭಾರಭಂಗಾ ೧
ಗತಿ ಅಗತಿ ಗಮನಗರ್ಭ ಸ್ವರ್ಗ ನರಕ ಈ
ಕ್ಷಿತಿ ಲೋಕಾಂತದಲ್ಲಿ ಬಳಲಿ
ಮತಿಯ ಕಾಣದೇ
ಮಂತ್ರಿ ರಾಜ ಮಹಾತತುವೇಶ ಬಲವತ್ವ್ಸರೂಪ೨
ಪಂಚಾಹುತಿಯಲಿ ಹಾಕದಿರೋ ಜೀವೇಶ
ಸಂಚಿತಾವಳಿ ಸರ್ವನಾಶಾ
ಪಂಚದ್ವಾರದಲಿ ಶ್ರೀ ಹರಿಯ ಪೂಜಿಪ ಪುಣ್ಯ
ಸಂಚಕನೆ ಪುರುಷಾಕಾರನೀಯೋ ೩
ಅಪೂಪ ಬಹುರೂಪ ಹರಿಚಾಪ ಪ್ರತಾಪ
ಕಪಿಕುಲಾಂಬುಜ ದಿನಪ ಸುರಪ
ರಿಪು ವಿಪಿನಕಾಲ ಮಹಾ
ಗುಪುತ ವ್ಯಾಪ್ತ ಸುಪ್ತಿ ಸ್ವಪನ ಜಾಗೃತಕಾರ್ಯಫಲದಾ೪
ತೇಜೋದಕ ಅನ್ನ ಚತುರ್ವಿಂಶತಿ ತತ್ವದಲಿ
ರಾಜಿಸುವ ರಾಗವಿದೂರಾ
ವಾಜಿರೂಪ ವಾಶಿಷ್ಟ ವಂದ್ಯಾ ವರದಾ
ಮಜ್ಜಗದ್ಗುರು ಮುಖ್ಯ ಪ್ರಾಣಾ ೫
ಪೂರ್ವೋತ್ತರಂಗ ಸಂಧಿ ಸಂಧಾನ ವಿಶಿಷ್ಟಾ
ಈರ್ವ ಸ್ಥಾನದಲಿ ನೀನೇ
ಸರ್ವದಲಿ ಧ್ಯಾನವನು ಇತ್ತು ಪಾಲಿಸು ನಿತ್ಯ
ಗೀರ್ವಾಣ ಜ್ಯೇಷ್ಠ ಶ್ರೇಷ್ಠ ಮೂರ್ತಿ ೬
ಮಾನವ ಪವನ ಪವಮಾನ್ ಮಾನವ ರೂಪಾ
ಮಾನಾಭಿಮಾನಿಗಳೊಡಿಯಾ
ಆನಂದತೀರ್ಥಪದ ಭಕ್ತ ಅನಾಥಬಂಧು ವೈರಾಗ್ಯ ೭
ನಾಮಾದಿ ವಿಡಿದು ಪ್ರಾಣಕಳೆಗಳತನಕ
ಸಮಸ್ತ ಪರಮಾಣು ತಿಳಿಸೋ
ಕಾಮಿಸುವನೆ ಇದನೆ ಹೃತ್ಕಮಲದೊಳಗಿದ್ದ
ಸಾಮ ಸೂರ್ಯಸ್ಥಿತನೆ ಸೂತ್ರಾ೮
ಇಪ್ಪತ್ತೆರಡು ಸ್ಥಾನದಲಿ ಪ್ರಭುವೆ ಜಗ
ದಪ್ಪ ಚತುರದ್ವಾರವಾಸ
ಅಪ್ರತಿಮಲ್ಲ ಶ್ರೀ ವಿಜಯವಿಠ್ಠಲನ್ನ
ಅಪ್ಪಿಕೊಂಡು ಮೆರೆದ ಧೀರಾ ೯

೪೨೦
ಪ್ರಾಯಶ್ಚಿತ್ತವು ಎನಗೆ ಇಲ್ಲವಯ್ಯಾ ಪ
ನಾಯಿಯಂತೆ ಕಂಡ ಕಂಡಲ್ಲಿ ತಿಂಬುವಗೆ ಅ.ಪ
ಮಾನಸದಿ ತ-ದೇಕ ಧ್ಯಾನದಲ್ಲೇ ಕುಳಿತು
ಜ್ಞಾನಿಗಳ ಸಹವಾಸ ಮಾಡದಲೆ
ಹೀನರಾಶ್ರೈಸೆ ನಾಲಿಗ್ಯೆ ಹಿತವನೆ ಬಯಸಿ
ಮೀನು ಗಾಣಕೆ ಬಿದ್ದು ಮಿಡುಕುವಂದದಲಿ ೧
ಸರಸರನೆ ಕಂಠವನು ಗರಗಸದಿ ಕೊಯ್ದರೂ
ತರಹರಿಸದೇ ಪರರ ಮನೆಯನ್ನವನ್ನು
ಕರದಲಿ ಸ್ಪರ್ಶ ಸಲ್ಲದು ಎಂದು ಪೇಳುತಿರೆ
ಹಿರಿದಾಗಿ ಕುಳಿತು ಭುಂಜಿಸುವ ಪಾತಕಿಗೆ೨
ಪರರಿತ್ತ ಕೂಳಿನಲಿ ಅವರ ಕುಲಕೋಟಿ ಸಾ-
ವಿರ ಜನುಮದಲಿ ಅರ್ಜಿಸಿದ ಪಾಪ
ಬೆರೆತಿಹುದು ಎಂದ್ಹೇಳಿ ಕೇಳಿ ಕೇಳಿ ನಗುತ
ಹರುಷದಿಂ ಕುಳಿತು ವಿಷವುಂಬ ಪಾತಕಿಗೆ ೩
ಯಾತ್ರೆಯ ಪೋಪಲ್ಲಿ ತಿಥಿ ಮತಿ ಹವ್ಯದಲಿ
ಮತ್ತೆ ಕುಲಹೀನದಲಿ ಅನ್ನ ತಿಂದು
ನಿತ್ಯ ಹಿಂಗದಲೆ ಈ ನೀಚ ಒಡಲನು ಹೊರೆವ
ತೊತ್ತು ಬಡುಕಗೆ ಪುಣ್ಯವೆತ್ತ ದೊರಕುವುದೊ ೪
ಕ್ಷಿಪ್ರ ಪ್ರಾಯಶ್ಚಿತ್ತ ಪೊಂದಿಹುದು ಕೇಳಯ್ಯಾ
ಈ ಪೃಥ್ವಿಯೊಳಗೆಲ್ಲ ನಿನ್ನ ನಾಮ
ಅಪ್ರಾಕೃತ ಕಾಯ ವಿಜಯವಿಠ್ಠಲರೇಯ
ಸುಪ್ರಸಾದವನಿತ್ತು ಶುದ್ಧಾತ್ಮನನು ಮಾಡು ೫

೩೪೫
ಬಂದ ದುರಿತ ವಿನಾಶನಾ
ಬಂದ ದುರಿತ ವಿನಾಶನ ಇಂದು ಪುರಂದರನ
ಪೊಂದುತಲಿ ಅತಿ ಭಕುತಿಯಿಂದ ಸ್ಮರಿಸುವ ಜನರ
ಹಿಂದೆ ಮುಂದು ಕುಲಕೋಟಿಗಳು
ಉದ್ಧಾರ ಸಂದೇಹ ಸಲ್ಲದಿದಕೆ ಪ
ದ್ವಾರಕಾಪುರದಲ್ಲಿ ಶ್ರೀರಮಣ ಸಭೆಯೊಳಗೆ
ಚಾರು ಮಂಡಿತನಾಗಿ ಇರುತಿರಲು ಯದು ಪರಿ
ವಾರ ವಾಲಗ ಮಾಡೆ ಸುತ್ತಲಿಹ
ಗೋಪಿಕಾ ನಾರಿಯರ ಖ್ಯಾಲದಲ್ಲಿ
ವಾರ ಕಾಂತೆಯರು ಮದವೇರಿ ನೃತ್ಯವ ಮಾಡೆ
ಭೋರೆಂಬ ವಾದ್ಯವಿಳೆಯೊಳು ಮೊಳಗೆ ದೇವತತಿ
ಧೀರರಾರಾರೆಂದು ಪೊಗಳಲಾ ನಭದಿಂದ
ನಾರದನು ಧರೆಗಿಳಿದನು ೧
ಬರುತಲೇ ವೈಕುಂಠಪುರದರಸಗೆರಗಿದನು
ಕರಗಳನು ಮುಗಿದು ಕಿನ್ನರಿಯನ್ನು ತಾ ಧರಿಸಿ
ಹರುಷದಿಂದಲಿ ಸ್ವರವನೆತ್ತಿ
ಮೂವತ್ತೆರಡು ರಾಗಗಳಲಿದಿರುನಿಂದು
ಎರಡು ಕಂಗಳಧಾರೆ ಸುರಿಯೆ ಪುಳುಕೋತ್ಸಹದಿ
ಕೊರುಳುಟ್ಟಿ ತೊದಲುನುಡಿ ಮೈಸ್ಮರಣೆ ಹಾರೆ ಶ್ರೀ
ಹರಿ ಹರೀ ಹರಿಯೆಂದು ಹರಿದಾಡುತಿರಲಾಗ
ಸುರರು ಶಿರವನೆ ತೂಗಲು೨
ಅಚ್ಚುತನು ಪರಮ ಭಾಗವತನ್ನ ಭಕುತಿಗೆ
ಮೆಚ್ಚಿದನು ಬೇಡುವುದು ವರವಧಿಕವೆಂದೆನಲು
ಮುಚ್ಚಿದಂಬಕಗಳನು ತೆರೆದು
ಗೀರ್ವಾಣಮುನಿ ಎಚ್ಚರಿಕೆಯನು ಪೇಳುತ
ಅಚ್ಚಗನ್ನಿಕೆ ರಮಣ ದೀನನನು ಮನ್ನಿಪುದು
ನಿಚ್ಚಟೆನ್ನಯ ಕೂಡೆ ಬಿಡದೆ ಆಡೆನಲು ಕಲಿ-
ಹೆಚ್ಚಿದಾ ಯುಗದಲ್ಲಿ ಸಲಿಸುವೆನು
ಕೀರ್ತಿಗಳು ಬಿಚ್ಚಿ ತೋರಿಸುವೆನೆಂದ ೩
ವರ ಪಡೆದು ನಾರದನು ಇರುತಿರಲು ತಾವಿತ್ತ
ಬರಲು ಕಲಿ ದೊರೆತನವು ಕೆಲವು ಕಾಲಾಂತರಕೆ
ಸಿರಿವರನ ದಯದಿಂದ ಜನಿತರಾದರು
ಪುರಂದರವೆಂಬ ನಗರಿಯಲ್ಲಿ
ಚರಿಸಿದರು ಕೆಲವು ದಿನ ಸಂಸಾರ ವೃತ್ತಿಯಲಿ
ಜರಿದು ವೈರಾಗ್ಯವನು ತೊಟ್ಟು ದೃಢಮನಸಿನಲಿ
ತರುಣಿ ಮಕ್ಕಳು ಸಹಿತ ಸೇರಿದರು
ಕಿಷ್ಕಿಂಧಗಿರಿ-ತುಂಗ ಪಂಪದಲ್ಲಿ ೪
ಅಂದು ಭಕುತಗೆ ಇತ್ತ ಭಾಷೆ ತಪ್ಪಲಿಬಾರ-
ದೆಂದು ಇಂದಿರೆಪತಿಯು ದಯದಿಂದ ವಲಿದವರ
ಮುಂದೆ ಒಂದರಘಳಿಗೆ ತೊಲಗದಲೆ
ಕುಣಿಕುಣಿದು ನಂದವನೆ ತೋರಿಕೊಳು
ಮಂದಭಾಗ್ಯರಿಗೆ ಈ ಪರಿಯ ಸೊಬಗುಂಟೆ ನಾ
ರಂದರಿವರಾದ ಕಾರಣದಿಂದ ಪರ ಬೊಮ್ಮ
ಬಂದು ಸಿಲುಕಿದನೆಂಬುವುದೆ ಇದಕೆ
ಪ್ರಾಮಾಣ್ಯವೆಂದು ತಿಳಿದು ಸುಜನರು ೫
ವಾಸವನೆ ಮಾಡಿದರು ಪ್ರಹ್ಲಾದನವತಾರ
ವ್ಯಾಸರಾಯರ ಬಳಿಯ ಮುದ್ರೆ ಗುರುಮಂತ್ರ ಉಪ
ದೇಶ ಕೈಗೊಂಡು ವೈಷ್ಣವರಾಗಿ
ಪುರಂದರ ದಾಸರೆಂಬುವ ಪೆಸರಲಿ
ದೇಶಗಳ ತಿರುಗಿ ಪುಣ್ಯಕ್ಷೇತ್ರಗಳ ಮೆಟ್ಟಿ
ಲೇಸಾಗಿ ಅಲ್ಲಲ್ಲಿ ಮಹಿಮೆಗಳ ಪೇಳುತ ದು
ರಾಸೆಯನು ತೊರೆದು ವಿಠ್ಠಲನ ಸನ್ನಿಧಿಯಲಿ
ವಸಿಸಿದರು ಧರ್ಮಬಿಡದೆ ೬
ಉಪಾದಾನವ ಬೇಡಿ ವಿಪ್ರರಿಗೆ ಮೃಷ್ಟಾನ್ನ
ಅಪರಿಮಿತವಾಗಿ ಉಣಿಸುತ್ತಿರಲು ಅವರಲ್ಲಿ
ಗುಪಿತ ಚರಿತೆಯ ಕಂಡು ದೇವಮುನಿ
ತಟಿನಿಗಳು ತಪಸು ಫಲವಾಯಿತೆಂದು
ತಪನ ಕಾಲದಲೆದ್ದು ದಾಸರಾ ಸದನದಲಿ
ಜಪಿಸಿ ತಮ ತಮ ತಕ್ಕ ತಾರತಮ್ಯಗಳಿಂದ
ಉಪಚಾರ ಕೈಗೊಂಡು ಧನ್ಯರಾದೆವು ಎಂದು
ಸುಪಥವನು ಇಚ್ಛಿಸುವರು ೭
ಅವರೆಂದ ವಚನಗಳೆಲ್ಲ ವೇದಾರ್ಥವಾಗಿ
ಅವನಿಯೊಳು ತುಂಬಿದುವು ಬಂದರೇ ಗ್ರಹಿಸಿದರ
ಭವರೋಗ ಭಸಿತಾಗಿ ಸುಜ್ಞಾನವೆಂಬಂಥ
ಭುವನ ನಿಧಿಯೊಳಗೆ ಮುಳುಗಿ
ಪವನ ಮತವಿಡಿದು ಪರಿಪೂರ್ಣಮಾಚಾರದಲಿ
ತವಕದಿಂದಲಿ ಹರಿಯ ಪಾದವನೆ ಪಡಕೊಂಡು
ಜವನಪುರ ದಾಟಿ ಜನ ತಪ ಸತ್ಯ ಲೋಕದಲಿ
ನವರೂಪಿನಲಿ ಇಪ್ಪರು ೮
ಏನು ಇದು ಎಂತೆಂದು ದೂಷಿಸದಿರಿ ದಾಸರ
ಸೂನು ಪೇಳಿದನು ಗುರು ವ್ಯಾಸಮುನಿ ರಾಯರಿಗೆ
ಆ ನಾರದರೆ ಪುರಂದರ ದಾಸರೆಂಬಂಥ ಸೂನೃತದ ಸಿದ್ಧಾಂತದ
ಧ್ಯಾನದಲಿ ತಿಳಿದು ಸುಜ್ಞಾನಿಗಳ ವದನಖದ
ರೇಣಿನವನಾಗಿ ಬಿನ್ನೈಸಿದನು ಜ್ಞಾನಮಯ
ಆನಂದಮಯ ವಿಜಯವಿಠ್ಠಲನ್ನ ಪಾದಾಂಬುಜ
ಕಾಣುವಾ ಜನ ಲಾಲಿಸೆ ೯

೧೮೪
ಬಂದದೆ ಎನಗೆ ಬರಿದೆ ದೂರು
ಬಂದೊಂದು ಅವಗುಣದವನೆಂಬೊ ಮಾತು ಪ
ಕಾಮಕ್ರೋಧಂಗಳು ಹೆಚ್ಚಿಸಿ ಮನದೊಳು
ತಾಮಸ ಬುದ್ಧಿ ವಿಶೇಷವಾಗಿ
ಕಾಮುಕವಾಗಿ ನಡವಳಿ ನಡಸಿದ ಈ
ಮನದ ಅಧಿಕಾರಿ ಶ್ರೀಕೃಷ್ಣನೊ ನಾನೊ ೧
ಅನ್ಯಾಯ ಅನ್ಯಾಯ ಅಸಡ್ಡಾಳ ಅಪದ್ಧ
ನನ್ನ ನಿನ್ನದು ಎಂಬೊ ಬಡದಾಟವು
ತನ್ನ ಸ್ಮರಣಿ ತಪ್ಪಿ ವಿಷಯಕ್ಕೆ ಎರಗಿಸಿ
ಮುನ್ನ ಮನದ ದಾತಾ ಶ್ರೀಕೃಷ್ಣನೊ ನಾನೊ ೨
ಮನೆ ಮನೆಗಳ ಪೊಕ್ಕು ಮಕ್ಕಳಾಟಿಕೆಯಿಂದ
ವನುರುತರ ರೂಪಿಗೆ ಸೋತು ಆತು
ಕನಿಕರಿಸಿ ಕ್ರಮಗೆಟ್ಟು ತಿರುಗಿಸುವ
ತನವು ಮಾಡಿದಾತಾ ಕೃಷ್ಣನೊ ನಾನೊ ೩
ನೀತಿ ನಿರ್ಣಯ ಮರೆದು ಪಾತಕದೊಳು ಬಿದ್ದು
ಪ್ರೀತಿಯಲಿ ಅತಿಥಿಗಳ ವಂದಿಸದೆ
ಯಾತಕ್ಕೆ ಬಾರದಾ ಚರಿತೆ ನಡೆವಂಥ
ಚೇತನ ಕಲ್ಪಿಸಿದ ಕೃಷ್ಣನೊ ನಾನೊ ೪
ಆವಾವ ದುಷ್ಕರ್ಮಗಳ ಮಾಡಿ ಉತ್ತಮ
ದೇವ ಬ್ರಾಹ್ಮಣರ ಪೂಜಿಸಲಿಲ್ಲವು
ಶ್ರೀ ವಿಜಯವಿಠ್ಠಲ ವೆಂಕಟಗಲ್ಲದ
ಜೀವ ಪುಟ್ಟಿಸಿದಾತ ಕೃಷ್ಣನೋ ನಾನೊ ೫

೫೩
ಬಂದರು ಹರಿಯ ವಾಲಗಕೆ ಭಕ್ತ |
ವೃಂದ ಸಹಿತ ಸುರ ಶ್ರೇಷ್ಠ ಮೊದಲಾದವರು ಪ
ನಾಗಜ ನಾಗಾರಿ ಸುತ ಬಂದ |
ನಾಗ ಚರ್ಮಾಂಬರ ನಾಗಾರಿ ಬಂದಾ |
ನಾಗಾನ ಧನು ಬಂದ ನಾಗಪುಂಗವ ಬಂದ |
ನಾಗಾರಿ ಗಮನ ಬಂದ | ನಾಗ ಬಂದಾ || ೧
ನಾಗಶಯ ಮುಖವಾದ ನಾಗವಾಹನ ಮಿತ್ರ |
ನಾಗ ಚರ್ಮಾಂಬರ ಸಖನು ಬಂದಾ |
ನಾಗಾರಿ ಸುತೆಯಳನಾಳಿದವನು ಬಂದಾ |
ನಾಗ ಭಕ್ಷಕನು ನಾಗಾರಿ ಬಾಂಧವ ಬಂದಾ || ೨
ನಾಗದ್ವೇಷಿಕನು ನಾಗಾನಾದನನುಜ |
ನಾಗಕೇತನನ ಕೊಂದಗ್ರಜನು ಬಂದಾ |
ನಾಗಶಯನ ಸಿರಿ ವಿಜಯವಿಠ್ಠಲರೇಯ |
ನಾಗವಾಹನನಾಗಿ ಬರುವ ಸಂಭ್ರಮದೊಳು ||೩

೨೭೫
ಬಂದು ಕಂಡೆನೊ ಇಂದು |
ಇಂದುಧರನ ಪಾದದ್ವಂದ್ವಗಳನು ದಿನವು |
ಎಂದೆಂದಿಗೆ ಬಿಡದೆ | ಪೊಂದಿದ್ದ ಪಾಪಗಳು |
ನಿಂದಿರದಲೆ ಓಡಿ ಬೆಂದು ಪೋದವು ನೋಡಾ ಪ
ಸತಿಗೆ ಅಧರ್ಕಾಯ ಹಿತದಿಂದಲಿ ಇತ್ತು |
ಚತುರತನದಲಿಳೆಯೊಳು ಪತಿತ ಮಾನವರಿಗೆ |
ಮತಿಬಾಹದೊ ಮಾನಸ ಸತತ ದೃಢವನೀವ |
ಪ್ರತಿದಿನದಲಿ ಕಾಯ್ವಾ ೧
ವಿಷವ ಧರಿಸಿ ಸುಮನಸರ ನಡುವೆ ಮೆರೆದೆ |
ಪಶುವಾಹನ ಪರಮೇಶ ಅಸುರಾರಿಗಲ್ಲದ |
ಅಸುರರ ಕೊಲ್ಲುವ ರಂಜಿಸುವಾ |
ಶಶಿ ಜಟಾ ಕಮನೀಯ ಮಣಿಮಕುಟಾ ೨
ಕಡಲ ತಡಿಯವಾಸ | ವೊಡಿಯ ರಾಮನ ದಾಸ |
ಮೃಡರುಂಡ ಮಾಲಾಭೂಷಾ ||
ಬಿಡದೆ ಸೇತುಬಂದ ವಿಜಯವಿಠ್ಠಲನ |
ಅಡಿಗಡಿಗೆ ನೆನೆಸುವ ಶಿವರಾಮಲಿಂಗಾ ೩

೫೪
ಬಂದು ನಿಂದಾ | ಕಣ್ಣ ಮುಂದೆ | ಬಂದು ನಿಂದಾ ಪ
ಬಂದು ನಿಂದಾ ಭಾಗವತರ ಪ್ರಿಯಾ |
ಕಂದರ್ಪಜನಕ ಶ್ರೀ ಕರುಣಾಸಾಗರ ಮೂರ್ತಿ ಅಪ
ಕುಟಿಲ ಕುಂತಲ ದೇವ | ವಟು ವೇಷದಿಂದಲಿ ||
ನಟನೆ ಮಾಡುತ ದಿವ್ಯ | ಪಟುತರದಲಿ ತಾನು ೧
ಮುರಳಿನೂದುತ್ತ | ಮರುಳುಗೊಳಿಸಿ ಜನರ ||
ಕೊರಳ ಪದಕಹಾರ | ಧರಿಸಿ ತಾ ನಲಿಯುತ ೨
ಸುಜನರ ಪೊರೆಯುವ | ಕುಜನರ ತರಿಯುವ |
ವಿಜಯ ಸಾರಥಿ ದಿವ್ಯ | ವಿಜಯವಿಠಲರೇಯಾ ೩

೫೫
ಬಂದು ನಿಲ್ಲೋ | ಕಣ್ಣ ಮುಂದೆ ಪ
ಬಂದು ನಿಲ್ಲೋ ನಿನ್ನ ಪಾದಕ್ಕೆ ವಂದಿಪೆ
ಇಂದಿರೆಯರಸಾ ಗೋವಿಂದ ಮುಕುಂದಾ ನೀ ಅ.ಪ.
ಅರಳಿದ ಕೆಂದಾ | ವರೆಯ ಧಿಕ್ಕರಿಸುವ
ಚರಣಾರವಿಂದವ | ನಿರುತ ತೋರು ನೀನು ೧
ನೀಲಾಲಕ ಭ್ರಮರ | ಕುಂಡಲ ಮಂಡಿತ ||
ಮೇಲಾದ ರಾಕೇಂದು | ಮುಖವ ತೋರಿಸುತಲೀ೨
ಪದುಮನೇತ್ರನೆ ನಿನ್ನ | ಸದನವೆನುತಯೆನ್ನ ||
ಹೃದಯದೊಳಗೆ ನಿಂತು ನಾ | ಮುದದಿ ಭಜಿಸುವಂತೇ ೩
ಕರಿಯ ಮೊರೆಯ ಕೇಳಿ | ಕರುಣದಿಂ ಬಂದಂತೆ ||
ಕರೆದಾಗ ನಿನ್ನ ದಿವ್ಯ | ಚರಣಾವ ತೋರಿಸುತಾ೪
ಅಜಭವಾದಿಗಳಿಗೆ | ನಿಜಪದವನಿತ್ತಂತೆ ||
ಭಜಿಪ ಭಕ್ತರಿಗೊಲಿವ | ವಿಜಯವಿಠ್ಠಲರೇಯಾ೫

೫೬
ಬಂದು ನಿಲ್ಲೋ ದಯಾನಿಧೇ ಬಂದು ನಿಲ್ಲೋ ಪ
ಬಂದು ನಿಲ್ಲೋ ನಿನಗೊಂದಿಸುವೆನು ಗೋ
ವಿಂದ ಗೋವಳರಾಯ ಸಂದೇಹಗೊಳಿಸದೆ ಅ.ಪ
ಸದೋಷಕ ನಾನು ಸದಾ ನಿರ್ಮಲ ನೀನು
ಪದೆಪದೆಗೆ ಪೇಳುವುದುಚಿತವಲ್ಲ ೧
ಮನದೊಳು ಪೊಳದು ಚಿಂತನೆಗೆ ನೆಲೆಯಾಗಿ
ಘನಮಹಿಮನೆ ಮಧ್ವಮುನಿ ಮನ ಮಂದಿರ ೨
ಕಡೆಗೋಲು ನೇಣಪಿಡಿದ ಪರಮಾನಂದ
ಉಡುಪಿಯ ಶ್ರೀ ಕೃಷ್ಣ ವಿಜಯವಿಠ್ಠಲರೇಯ೩

೧೮೫
ಬಂದು ನಿಲ್ಲೋ ರಮಾಪತೆ ಬಂದು ನಿಲ್ಲೋ ||
ಬಂದು ನಿಲ್ಲೊ ನಿನಗೊಂದಿಸುವೆ ಗೋ |
ವಿಂದ ಗೋವಳ ರಾಯ ಸಂದೇಹ ಮಾಡದೆ ಪ
ಸದೋಷಿಗ ನಾನು ಸದಾ ನಿರ್ಮಲ ನೀನು ||
ಪಾದೋಪಾದಿಗೆ ಬೇಡಿಸುವದುಚಿತವಲ್ಲ ೧
ಮನದೊಳು ಪೊಳದು ಚಿಂತನೆ ನೆಲೆಯಾಗಿ ||
ಘನಮಹಿಮನೆ ಮಧ್ವಮುನಿ ಮನಮಂದಿರ ೨
ಕಡಗೋಲ ನೇಣ ಪಿಡಿದ ಪರಮಾನಂತ ||ಉಡುಪಿನ ಶ್ರೀಕೃಷ್ಣ ವಿಜಯವಿಠ್ಠಲರೇಯಾ ೩

೫೭
ಬಂದೆ ನಾ ನಿಂದೆ ಇಂದೇ | ವಂದಿಸಿದೆನೊ ವಂದೆ |
ಬಿಂದು ಮಾಧವ ತಂದೆ | ಆನಂದ ಇಂದಿರೇಶ ಬಂದೆ ಪ
ಪುರುಹೂತ ಜಾತ ಸೂತ | ಸರಸಿಜ ತಾತಾ |
ಪರಮ ಪುರುಷ ಖ್ಯಾತ | ಸರವಂದ್ಯ ದೈತ್ಯ ಘಾತಾ | ಹಾಹಾ
ಚರಣವ ನಿರುತರ ನೆರೆನಂಬಿದೆ | ದು
ಸ್ತರ ಭವಶರಧಿ ಉತ್ತರಿಸೊ ಉರಗಶಾಯಿ ೧
ಕರಿ ಪಾಶ ನಾಶ ಈಶಾ | ವರ ಮೂರ್ತಿ ವರದೇಶಾ
ಶರಣರ ಪರಿತೋಷಾ | ತರತಮ್ಯ ಜ್ಞಾನ ಕೋಶ | ಹಹ |
ಪುರಹರಗೀಕಾಶಿಪುರ ಕರುಣಿಸಿದ ಸುಂ |
ದರಗಾತುರ ಗೋತುರ ಧರ ಧರಣೀಶಾ ೨
ಅವಿಮುಕ್ತಿ ಕ್ಷೇತ್ರವಾಸಾ | ನವನವ ಗುಣಭೂಷಾ |
ಅವಿಕಾರ ನಾನಾ ವೇಷಾ |
ರವಿಜವನ ಪೊರೆವ ಮಿರುವ ಮಹಸತ್ಕಥಾ
ಶ್ರವಣವೆ ಕೊಡು ಕೇಶವ ವಿಜಯವಿಠ್ಠಲಾ ೩

೧೮೬
ಬಡನಡುವು ಬಾಲೆಯರ ಕೂಡಿ | ಪಾ |
ಲ್ಗಡಲೋಡಿಯನೊಡನೊಡನೆ |
ಬಿಡದೆ ಆಡಿದರೊ ವಸಂತ ಪ
ಪಾಲ್ಗೆನೆಗಧಿಕ ಮೃದುವಸನಮಂ ಉಟ್ಟ್ಟು ನು |
ಣ್ಗೂದಲು ತಿದ್ದಿ ಪಲಪು ಬೈತಲೆ ಸೊಗಸು |
ಪಾಲ್ಗೊನಿಗೆ ಬಂದಿರಲು | ತುಂಬಿ ಕುಂಕುಮ ಮಿಗೆ |
ಬಲ್ಕಸ್ತುರಿಯ ತಿಲಕ | ಅರೆರೆ |
ಕಾಳ್ಗತ್ತಲೆ ಮೀರಿ ತೋರುತಿರೆ ತಿರ್ತಿತಿರಗಿ |
ವಾಲ್ಗಣ್ನು ನೋಟ ವೈಯಾರ ಸೋಲ್ದುರುಬು ವಿ |
ಶಾಲ್ಗೊಂಚಲು ಮುತ್ತುಸುತ್ತು ಸೂಸುತಲಿರೆ
ಪೇಳ್ಗಾಣೆ ಪೆಂಗಳು ಶೃಂಗರಿಸುವ ಮದವೊ ೧
ಸಣ್ಮೊಗ್ಗೆ ಜಗದ ವಿಚಿತ್ರ ಕಂಚುಕವು ಮೋ |
ಹನ್ಮಾಲೆ ಪದಕ ನ್ಯಾವಳ ಸರಿಗೆಸರ ಮುತ್ತು |
ಪೊನ್ಮಾಣಿಕದ ವಾಲೆ ಪೊಂಪುಷ್ಟ ಬುಗುಡಿ ಥೋ |
ರನ್ಮುತ್ತು ನಾಸಾಮಣಿ | ಅರರೆ |
ಮನ್ಮನೋಹರವಾದ ಕಡಕ ಕಂಕಣ ಮುದ್ರೆ |
ಸನ್ಮೋಹನಾಂಗಿಯರು ಸರ್ವಾಭರಣವಿಟ್ಟು |
ಮನ್ಮಥನ ಹಿಡಿದೇಜಿ ಕುಣಿವಂತೆ ಮುಂದೊರಿದು |
ಕಣ್ಣಂಚಿನಿಂದ ಜಗವೆಲ್ಲ ಬೆಳಗುತಲಿ ೨
ಕರ್ಪುರದ ವೀಳ್ಯೆಯವ ಮೆಲುತ ನಾನಾ ಬಗೆ |
ವರ್ಪುಣವು ಮೃಗನಾಭಿ ಅಗರು ಶಿರಿಗಂಧ |
ಸಾರ್ಪರಿಮಳ ಸಕಲ ದ್ರವ್ಯದಿಂದೋಕುಳಿಯ |
ಮಾರ್ಪೆಸರು ಬಾರದಂತೆ | ಅರೆರೆ |
ಕರ್ಪಾಣಿಯೊಳಗೆ ದ್ವೀಪಾಂತರದ ತರ ನಿಲುವ |
ದರ್ಪಣವ ಪಿಡಿದು ಸರ್ವಾಂಗ ನೋಡಿಕೊಳುತ |
ದರ್ಪ ತಗ್ಗಿಸದಲೆ | ಪೊನ್ನುಡೆಗಳ ತುಡುಕಿ ಕಂ |
ದರ್ಪನಪ್ಪನ ಮೇಲೆ ಗುಪ್ಪಿರರು ಮುದದೀ ೩
ಮೇಲ್ಮೇಲು ಸೊಗಸು ಚನ್ನಿಗರಾಯನಿಲ್ಲ ನಿಲೂ
ನೀಲ್ಮೇಘ ವರ್ಣಾನೆ | ಕಾಲ್ದೆಗೆದು ನಮ್ಮಮ್ಮ |
ತೋಳ್ಮದವ ತೀರಿಸದೆ ಪೋಗದಿರು ಭಡಭಡಾ |
ಕಾಲ್ಮೇಲೆ ಕರವ ತೆಕ್ಕೊ | ಅರೆರೆ |
ತಾಳ್ಮದತಿಗತಿಯಂತೆ ಹೆಜ್ಜೆಯ ನಿಡುತ |
ಪಾಲ್ಮೊಸರು ಕದ್ದ ಬಗೆ ಎಲ್ಲ ಪೊಸತೆನುತ ಸತಿ |
ಜಾಲ್ಮೊಗದು ವಾರಿಧಿಯ ಥೆರೆಯಂತೆ ಮೂದಲಿಸಿ |
ಆಳ್ಮಾತಿಲಿಂದ ಹೈ ಎನುತ ಚಲ್ಲಿದರೂ೪
ಪೆಣ್ಗಳಿರಾ ನಿಮಗೇಕೆ ಪ್ರಬಲತನವೆಂದೆನುತ |
ಅಣ್ಗದಾ ಗೋವಳರ ನಡುವೆ ವಪ್ರ್ಪಿರ್ದಸು |
ವಣ್ಮಾತ್ರ ಪರಮಾತ್ಮನೀಕ್ಷಿಸಿದ ಅವರವರ |
ಕಣ್ಗೊರಳ ಕುಚ ತೊಡೆಗಳ | ಅರೆರೆ |
ಬನ್ಗಾಡಿವ ಭಗವಂತ ಹೃತ್ತಾಪ ಹರಿಸುವ |
ಚಿನ್ಗೋಲಿಯಲಿ ಸಿರಿ | ಸರ್ರನೆ ಓಕಳಿ ಚಲ್ಲೆ |
ಸಣ್ಗೊಲ್ಲತಿಯರು ಬೆರಗಾಗಿ ಮರಳೆ ಹರಿಯ |
ಬೆಣ್ಗಳ್ಳನೆಂದು ಮುತ್ತಿದರು ಹಾಸ್ಯದಲಿ ೬
ತೋರ್ಕೈಯ ಬಚ್ಚಿಡದೆ ಪಳ್ಳಿಗನೆ ಠಕ್ಕಿಸದೆ |
ಮಾರ್ಕರೆದುಕೋ ನಿನ್ನ ಗೆಳೆಯರನ ಒಂದಾಗಿ |
ಸೂರ್ಕುದೇಗಂತೆ ಸರ್ವೋದ್ಧಾರಗರದ ವೈ |
ಜೀರ್ಕೋಳಲಿ ತೆರವಿಲ್ಲದೆ | ಅರೆರೆ |
ಅರ್ಕನರ್ಕಕೆ ವಾರಿ ಇಂಗಿ ಪೋಗುವಂತೆ |
ನರ್ಕಾಂತಕನ ಕಾಯದೊಳಗೆ ಓಕುಳಿಯಡಗೆ |
ಅರ್ಕಾದ್ರಿಯಂತೆ ಶಿರಿ ಕೃಷ್ಣರಾಜಿಸುತಿರೆ |
ತರ್ಕೈಪ ಭರದಿಂದ ನಾರಿಯರು ಇರಲು ೭
ಹಸ್ತ ಲಾಘವ ನೋಡಿ ತಲೆದೂಗಿ ನಕ್ಕು ಸ |
ಮಸ್ತ ನಾರಿಯರಿಟ್ಟು ಉಟ್ಟ ಮಂಗಳವಸನ |
ವಸ್ತುಗಳು ಜಿಗಳುವಂತೆ ಓಕುಳಿಯಿಂದ |
ವಿಸ್ತಾರವಾಗಿ ಉಗ್ಗೆ | ಅರೆರೆ |
ಕಸ್ತೂರಿಮೃಗದಂತೆ ಸುಳಿಸುಳಿಯ ನಿಂದಿರ್ದ|
ಹಸ್ತಿಗಮನಿಯರೊಡನೆ ಕ್ರೀಡೆಯನು ಪರಾತ್ಪರ |
ವಸ್ತು ಲಕುಮಿಯ ರಮಣ ಆಡುತಿರೆ ನಾಲ್ಕೈದು |
ಮಸ್ತಕಾದ್ಯರು ವಿಸ್ತರಿಸಲರಿದೆನಲು ೮
ಸುಕ್ಕದೆ ಕುಚಗುಳುಬ್ಬಿ ಕಕ್ಕಸವಾಗೆ ಹೆಜ್ಜೆ |
ಇಕ್ಕಲಾರದೆ ವಿರಹತಾಪದಿಂದೀಕ್ಷಿಸುತ |
ವಖ್ಖಣಿಸುವ ಮಾತು ಹಿಂದಾಗುತಿರೆ ಕಲೆಗ |
ಳುಕ್ಕೇರಿ ಬೆವರುತಿರಲು | ಅರೆರೆ |
ಅಕ್ಕಕ್ಕೊ ಎಂದು ಅಕ್ಕೋಜಗೆಗೊಳ್ಳುತ್ತ ತಾ |
ರಕ್ಕಿಯಂತೆ ಕೃಷ್ಣ ಸುತ್ತ ವಲ್ದರು |
ಸಕ್ಕರೆದುಟಿ ಚಲುವ ಉಡುಪನಂತೆ ವಪ್ಪೆ |
ದಕ್ಕಿವನಂತೆ ಸಂತರಿಸುತಲಿ ಇಂದೂ ೯
ಬೆರ್ದೋಕಳಿಯನಾಡಿ ಸರಿ ಮಿಗಿಲು ಎನಿಸಿ ಕೆಲ |
ಸಾರ್ದಿರ್ದ ನಾರಿಯರ ಶಿರವ ತಡವರಿಸಿ ಶತ |
ಸಾರ್ದವೆಲೆ ಉಳ್ಳ ಉಡುಗೊರೆನಿತ್ತು ಮನ್ನಿಸಿ |
ಮೀರ್ದಾಭರಣವ ತೊಡಿಸಿ | ಅರೆರೆ |
ಸಾರ್ದೆಗೆದು ತರ್ಕೈಸಿ ಪ್ರೀತಿಯಿಂ ಬಡಿಸಿ ಮುರ
ಮರ್ದನ ವಿಜಯವಿಠ್ಠಲ ಮೆರೆದ ಗೋಕುಲ ದೊರೆ |
ಕಾರ್ದೊರಿಯ ತೀರದಲಿ | ಮನುಜಾಕೃತಿ ಲೀಲ |ನಿರ್ದೋಷ ಸುಖಪೂರ್ಣ ಸುಜನ ಜನಸಂಗಾ ೧೦

೧೮೭
ಬಣ್ಣಿಸಲಾರೆ ನಿಂದು ಈ ಮೂರುತಿಯ ಬಣ್ಣಿಸಲಾರೆ ನಿಂದು
ಕನ್ಯಾರೂಪವ ತಾಳಿದ ಚನ್ನಿಗ ಕೃಷ್ಣರಾಯನಾ ಪ
ದಾನವರ ಮರಳು ಮಾಡಿ ಮಾಣದೆ ಸುಧೆಯನೆರೆದು
ಆ ನಿರ್ಜರರ ಪಾಲಿಸಿದ ಶ್ರೀ ನಾರಾಯಣಿ ವೇಷವಾ ೧
ಆರಾರು ಸಾವಿರ ಸಕಲ ಶರೀರದ ಎಡಕೆ ಇಪ್ಪ
ಸಾರಸುಂದರವಾಗಿದ್ದ ನಾರಿ ರೂಪಗಳು ಇದೊ ೨
ಭೂತಳದೊಳಗೆ ಜನಕೆ ಮಾತೆಯಾಗಿ ಕಾವುತಿಪ್ಪ
ಜಾತರಹಿತ ವಿಜಯವಿಠ್ಠಲ ಶ್ರೀ ತರಣಿಯಾಳಿದ ಪೆಣ್ಣಿನ ೩

೧೧೧
ಬಲ್ಲವಾಗಿಲ್ಲೆ ಪರಮಾತ್ಮಾ
ಎಲ್ಲೆಲ್ಲಿ ನೋಡಿದರು ಅಲ್ಲಲ್ಲಿ ಇರುತಿಪ್ಪ ಪ
ನೋಡಿದವೆಲ್ಲ ಶ್ರೀಹರಿಯ ಪ್ರತಿಮೆಗಳೆಂದು
ಆಡಿದವೆಲ್ಲ ಹರಿಯ ರೂಪವೆಂದು
ಮಾಡಿದದ್ದೆಲ್ಲ ಶ್ರೀಹರಿಯ ಸೇವೆ ಎಂದು
ಕೂಡಿದದ್ದೆಲ್ಲ ಹರಿ ಭಕ್ತರೆಂದು ೧
ತಾಪತ್ರಯಗಳೆಲ್ಲ ಮಹಾ ತಪಸು ಎಂದು
ರೂಪಗಳೆಲ್ಲ ಹರಿಕಾಂತಿ ಎಂದು
ಪೋಪದು ಬರುವುದೆಲ್ಲ
ವ್ಯಾಪಾರ ಹರಿ ಅಧೀನವೆಂದು ೨
ತಾರತಮ್ಯಕಿದು ಪರಲೋಕದಿ ಸರಿಯಿಲ್ಲ
ಸಿರಿ ಹರಿಯದೊರೆ ತನಗೆ ಎಂದೆನುತಾ
ಇರುಳು ಹಗಲು ಏಕ ಭಕ್ತಿಯಿಂದಲಿ ನಿತ್ಯ ಕಾಲಕಾಲಕೆ
ಹರಿಯ ವ್ಯಾಪಾರ ಸ್ಮರಿಸುತ್ತ ಓಡ್ಯಾಡುತ ೩
ಒಲಿಸಿ ಒಲಿಸಿ ಒಲಿದು ಒಲಿದು
ಖಳರೊಳಗಾಡದಲೆ ವಿಜಯವಿಠ್ಠಲ ವೆಂಕಟ
ಶೈಲ ನಿವಾಸಾ ಸರ್ವೋತ್ತಮನೆ ಗತಿ ಎಂದು ೫

ಬಾಬಾ ಭಕುತರ ಹೃದಯಮಂದಿರ :

೧೧೨
ಬಾ ಬಾ ಭಕುತರ ಹೃದಯ ಮಂದಿರ
ಬಾ ಬಾ ಜಗದೋದ್ಧಾರ ಪ
ಬಾ ಬಾ ವೇಂಕಟಾಚಲ ವಿಹಾರ
ಬಾ ಬಾನೇಕಾವತಾರ ಧೀರ-ಶೂರ ಅ.ಪ.
ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ
ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ
ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವ ಪಕ್ಷ
ಅಕ್ಷಯವಂತ ಸೂಕ್ಷ್ಮಾಂಬರ ಧರಾ-
ಧ್ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೇರ ತಕ್ಷಣದಲಿ ತಂದ
ಅಕ್ಷರ ಪುರುಷ ಗೋವಿಂದ ೧
ಜಾಂಬೂನಾದಾಂಬರ ಸಾಂಬಜನಕ-ನೀ
ಲಾಂಬುದ ವರ್ಣಸುಪೂರ್ಣ
ಸಾಂಬವಿನುತ ಸುಗುಣಾಂಬುಧಿ ನಾನಾ ವಿ
ಡಂಬನ ತೋರಿದ ಮಹಿಮ
ಕಾಂಬುವೆ ನಿನ್ನ ಚರಣಾಂಬುಜ ಮನದೊಳು
ಜಾಂಬುವಂತನ ಪರಿಪಾಲಾ ವಿ-
ಶ್ವಂಭರಂಬರಗ್ಗಣಿಯ ಪಡೆದ ವೃ-
ತ್ತುಂಬರೇಶಾಂಬುಧಿ ಶಾಯಿ ೨
ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ
ಕಾಳೆ ಹೆಗ್ಗಾಳೆ ತಮ್ಮಟಿ ನಿ-
ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ
ಕಂಬುಡಿಕ್ಕಿ ವಾದ್ಯ
ಸೂಳೈಸುತಲಿರೆ ಭಾಗವತರು ಸಂ
ಮೇಳದಿ ಕುಣಿದೊಲಿದಾಡೆ
ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ
ಢಾಲುಗಳು ಒಪ್ಪಿರಲು೩
ಹಂಸವಾಹನ ಕ್ರತುಧ್ವಂಸಿ ಸುಮನಸೋ
ತ್ತಂಸ ಕೃಶಾನು ಪಾಪಿಗಳ
ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ
ಕೌಂಶಿಕಾಪತಿಯು ಧನವ
ಅಂಶಮಾಲಿ ಸೋಮಕಂಶಿಕಮುನಿ ಪರಮ
ಹಂಸರು ಅಲ್ಲಲ್ಲಿ ನಿಂದು
ಸಂಶಯ ಮಾಡದೆ ಸಮ್ಮೊಗರಾಗಿಹರು
ಕಂಸಾರಿ ತ್ರಿಗುಣಾತೀಶ ೪
ಮೂರು ನಾಮಂಗಳ ಧರಿಸಿದ ದಾಸರು
ವೀರ ಮಾರುತಿ ಮತದವರು
ಸಾರುತ್ತ ಬೊಮ್ಮಾದಿ ಸುರರುಗಳನ್ನು
ತಾರತಮ್ಯದಿಂದ ತಿಳಿದು
ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದ
ವಾರಿಧಿಯಲಿ ಮಗ್ನರಾಗಿ
ತಾರರು ಮನಸಿಗೆ ಮುರಡು ದೇವತೆಗಳ
ಸಾರ ಹೃದಯರು ನಿಂದಿಹರು ೫
ಅಂದು ಬಲೀಂದ್ರನ್ನ ದ್ವಾರದಿ ನೀನಿರೆ
ಮಂದಮತಿಯು ರಾವಣನು
ಬಂದು ಕೆಣಕೆ ನಗುತ ಮಹಾಲೀಲೆ
ಯಿಂದಲಿ ನೀನಾ ಖಳನ
ಒಂದು ಶತಯೋಜನ ತಡಮಾಡದಲೆ ನೀ
ಹಿಂದಕ್ಕೆ ಬೆರಳಲ್ಲಿ ಒಗೆದೆ
ಇಂದು ನಿನಗೆ ಈ ರಥವ ನಡೆಸುವುದು
ಅಂದವಾಗಿಹುದೇನೊ ದೇವ೬
ಬಂಗಾರ ರಥದೊಳು ಶೃಂಗಾರವಾದ ಶ್ರೀ
ಮಂಗಳಾಂಗ ಕಳಿಂಗ
ಭಂಗ ನರಸಿಂಗ ಅಂಗಜ ಜನಕ ಸಾ-
ರಂಗ ರಥಾಂಗ ಪಾಣಿ
ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲ-
ವಂಗ ನಾಯಕ ಪರಿಪಾಲ
ಸಂಗೀತ ಲೋಲ ಗೋಪಾಂಗನೆಯರ ಅಂತ-
ರಂಗ ಸಂತಾಪ ವಿದೂರ ೭
ತಡಮಾಡಲಾಗದೊ ಪೊಡವೀಶ ನೀನಿಂದು
ತಡೆಯದಲೆ ಪೊರಟರೆ
ತಡೆವರಿನ್ನಾರೈಯ ವಡೆಯ ವೇದವೇದ್ಯ
ಕಡೆಗಣ್ಣಿನಿಂದ ನೋಡಿದಲೆ
ನಡೆವುದು ನುಡಿವುದು ಅಡಿಗಡಿಗೆ ನೀನು
ಬಿಡದೆ ಒಳಗೆ ಹೊರಗಿದ್ದು
ಸಡಗರ ದೈವವೆ ನುಡಿಯ ಲಾಲಿಸುವುದು
ವಡನೊಡನೆ ಪಾಲಿಸುತ್ತ ೮
ಹತ್ತವತಾರದ ಹರಿಯೆ ಘನಸಿರಿಯೆ
ಮತ್ತೊಬ್ಬರನು ಹೀಗೆ ಕರೆಯೆ
ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎ-
ನ್ಹತ್ತಿಲಿ ಆಡುವ ಮರಿಯೆ
ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ
ಎತ್ತನೋಡಲು ನಿನಗೆ ಸರಿಯೆ
ಅತ್ತಿತ್ತ ಪೋಗದೆ ಇತ್ತ ಬಾರೈಯ ಎ-
ನ್ಹತ್ತಿಲಿ ವೆಂಕಟದೊರೆಯ ೯

೧೧೩
ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು |
ತಾರಯ್ಯಾ ಒಂದು ಚುಂಬನ ಕರುಣ |
ಬೀರಯ್ಯಾ ನಮ್ಮ ವಶಕೆ ಪ
ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ |
ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ
ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ ೨
ನೀರೊಳು ಈಸುವ ನಾರಿಯೆರ ಶೀರೇ
ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ |
ಪೋರ ಬುಧ್ಧಿಗಳ ಬಿಡವಲ್ಲಿ ೩
ತುರುಕರಗಳ ಕಾಯ್ದು | ಚರಿಸಿದೆ ಅಡವಿಯ |
ಪರಸತಿಯರ ವ್ರತಗಳ | ಪರಸತಿಯರ ವ್ರತಗಳ ಕೆಡಿಸಿದ |
ಪರಮಾತ್ಮನಿಗೆ ಎಣೆಯುಂಟೆ ೪
ಕೇಸಕ್ಕಿ ತಿರುಮಲ ಲೇಸಯ್ಯಾ ನಿನ್ನ ಗುಣ |
ಕಾಸುಕಾಸಿಗೆ ಬಿಡದಲೆ | ಕಾಸುಕಾಸಿಗೆ ಬಿಡದೆ |
ಬಡ್ಡಿಕೊಂಬ ಆಶೆಗಾರನು ಬಹು ಸೂರಾಳೊ ೫
ಅಣಕವಾಡಲಿ ಬೇಡ ಕೆಣಕಿದರೆ ನಿನ್ನ |
ಹೊಣಿಕೆ ಹಾಕುವೆ ಹಿಡತಂದು |
ಹೊಣಿಕೆಹಾಕುವೆ ಹಿಡತಂದು ಎನ್ನಯ |
ಮನವೆ ನಿನ್ನಯ ಚರಣಕ್ಕೆ ಶೋಭಾನೆ ೬
ಬೆಟ್ಟದ ಕೊನೆ ಏರಿ ಎಷ್ಟು ದೂರ ಓಡೀ |
ಗಟ್ಯಾಗಿ ನಿನ್ನ ಚರಣದ | ಗಟ್ಯಾಗಿ ನಿನ್ನ ಚರಣದ ಕೊನಿಯ ಉಂ
ಗುಷ್ಟ ಕಚ್ಚದಲೆ ಬಿಡೆ ನಾನು ೭
ಹಿಂದೆ ಯಾರು ಏನು ತಂದು ಕೊಟ್ಟರೋ ನಿನಗೆ |
ಇಂದು ನಾನೇನು ಕೊಡಲಿಲ್ಲ |
ಇಂದು ನಾನೇನು ಕೊಡಲಿಲ್ಲವೆಲೋ ತಂದೆ |
ಕಣ್ಣಿರದು ನೋಡೊ ಕಮಲಾಕ್ಷ | ಶೋಭಾನೆ ೮
ಭಕ್ತನ ನುಡಿಕೇಳಿ ಚಕ್ಕನೆ ಬಿಗಿದಪ್ಪಿ |
ತೆಕ್ಕಿಸಿದಾ ವಿಜಯವಿಠ್ಠಲ ಎನ್ನ
ಅಕ್ಕರವೆಲ್ಲ ತೀರಿಸಿದಾ | ಶೋಭಾನೆ ೯

೧೧೪
ಬಾರಯ್ಯ ಶ್ರೀನಿವಾಸ ಭಕ್ತರ ಬಳಿಗೆ ಪ
ತೋರಯ್ಯ ನಿನ್ನ ದಯ ತೋಯಜಾಂಬಕನೆ ಅ.ಪ.
ದುರುಳರ ತರಿವಂಥ ವರಚಕ್ರಧಾರಿ
ಪರಮಾತ್ಮ ಪರಬೊಮ್ಮ ಪರರಿಗುಪಕಾರಿ೧
ಅರಣ್ಯದಿ ಮೊರೆಯಿಟ್ಟು ಕರಿರಾಜಗೊಲಿದಿ
ತರಳ ಪ್ರಹ್ಲಾದನ್ನ ವೈರಿಯ ಮುರದಿ ೨
ವರ ಷೋಡಶ ಗಿರಿಯಲ್ಲಿ ನಿರುತ ನೀನಿರುವಿ
ಹರಿದಾಸರು ಕರೆದರೆ ಎಲ್ಲಿದ್ದರೆ ಬರುವಿ೩
ಅನಂತನಾಮನೆ ನಿನ್ನ ಅನಂತ ಸದ್ಗುಣವ
ನೆನೆವರಿಗೊಲಿವಂಥ ಪವಮಾನನೀಶಾ ೪
ಅಜಭವಾಧಿಪ ನೀನು ವಿಜಯಸಾರಥಿಯೇ
ತ್ರಿಜಗವಂದಿತ ಈಶ ವಿಜಯವಿಠ್ಠಲನೇ ೫

೫೮
ಬಾರೊ ಭಕ್ತರ ಮನಮಂದಿರಕೆ |
ಶ್ರೀ ರಮಣ ಪ್ರಯಾಗವೇಣಿ ಮಾಧವರಾಯಾ ಪ
ಅಂಬುಧಿ ಚರನೆ ಬಾರೊ |
ಅಂಬುಧಿ ಮಥನ ಬಾರೊ |
ಅಂಬುಜಾಕ್ಷಿಯ ತಂದ ರ |
ಕ್ತಾಂಬು ಪಾನನೆ ಬಾರೊ | ೧
ಅಂಬುಪೆತ್ತವನೆ ಬಾರೊ |
ಅಂಬುಧಿ ತೊಲೆಗಿನ |
ಅಂಬುಧಿ ಬಂಧನ ಬಾರೊ |
ಅಂಬೆ ಕಾಯ್ದವನೆ ಬಾರೊ | ೨
ಅಂಬಾರ ಪುರಾಲಯ ನ |
ರಾಂಬು ಹಯಗಮನ ಪೀ
ತಾಂಬರ ವಿಜಯವಿಠ್ಠಲ |
ಎಂಬ ವೆಂಕಟರಾಯ ಬಾರೊ |೩

೧೧೫
ಬಾರೋ ಮನೆಗೆ ಬಾರೋ ವೆಂಕಟರಮಣಾ ಪ
ಕಂಸಾಸುರಮರ್ದನನೆ ಬಾರೊ |
ಕೌಶಿಕಯಜ್ಞಪ ಬಾರೊ |
ಹಂಸಡಿಬಿಕನಂತಕ ಬಾರೊ |
ಹಂಸವಾಹನನ ಪಿತನೆ ಬಾರೊ ೧
ಸಾಸಿರ ಮುಖನ ಪೆತ್ತವನೆ ಬಾರೊ |
ಸಾಸಿರ ಗಣ್ಣಿನ ಅನುಜ ಬಾರೊ |
ಸಾಸಿರ ವದನ ಶಯನ ಬಾರೊ |
ಭೂಸುರರಿಗೆ ಪ್ರಿಯನೆ ಬಾರೊ ೨
ವಾರಿಧಿಯೊಳು ಪೊಕ್ಕವನೆ ಬಾರೊ |
ವಾರಿಧಿಯ ಮಾನಭಂಗನೆ ಬಾರೊ |
ವಾರಿಧಿಸುತೆಯ ಪಡೆದ ಕರುಣಾ – |
ವಾರಿಧಿ ಸಿರಿ ವಿಜಯವಿಠ್ಠಲ ಬಾರೊ ೩

೧೮೮
ಬಿಡು ಬಿಡು ಇನ್ನು ಸೋಗಾಚಾರ |
ಒಡಿಯ ಬಲ್ಲನು ನಾನು ನಿನ್ನ ವಿಚಾರ ಪ
ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ |
ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು |
ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ |
ಪಡಚುತನವಲ್ಲದೆ ಭಾರಕನು ನೀನಲ್ಲ ೧
ಸೀರಯನು ಕದ್ದಂದು ಕಡವಿನ ಮರವನೇರಿ |
ಊರ ನಾರಿಯರ ಮಾನಕ್ಕೆ ಸೋತು ||
ಜಾರತನದವನಾಗಿ ತಿರಗಿ ಜಗದಾ ಭಂಡ |
ಪೋರರಿಗೆ ಪೋರನಲ್ಲದೆ ಹಿರಿಯನಲ್ಲ೨
ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ |
ತನುಜರ ಸಂಗಡಲಿದ್ದು ಎಂಜಲುಂಡು |
ಮನುಜದೇಹವ ತೆತ್ತು ಬಿನಗು ಲೀಲಾಕೃತಿ |
ದನಗಾವಿ ಎಲ್ಲದೆ ದೊರೆ ಮಗನು ನೀನಲ್ಲ ೩
ಯಾತಕ್ಕೆ ಬಾರದ ಕುನಪೆಣ್ಣಿಗೆ ಮೆಚ್ಚಿ |
ಮಾತುಳನ ಕೊಂದು ಮುತ್ತೈಯಗೊಲಿದು |
ಭೀತಿಯಲಿ ಪರರಾಯನ ಮಗಳ ಕೊಂಡು ಬಂದ |
ಯಾತರ ಪೌರುಷದವನು ಲೋಕದೊಳಗೆಲ್ಲ ೪
ತೊತ್ತಿನ ಮಗನಲ್ಲಿ ವುಂಡು ಬಿಗಿಸಿಕೊಂಡು |
ಮಿತ್ರಭೇದವನಿಕ್ಕಿ ಬಂಧುಗಳಿಗೆ |
ತೆತ್ತಿಗನು ನೀನಾಗಿ ವಾಜಿಗಳ ಪಿಡಿದು |
ಹತ್ಯವ ಮಾಡಿಸಿದೆ ಉತ್ತಮನು ನೀನಲ್ಲ ೫
ಅಣ್ಣ ತಮ್ಮಂದಿರನು ಅಗಲಿಸಿ ವೈರದಲಿ |
ನುಣ್ಣಗೆ ಒಬ್ಬರೊಬ್ಬರ ಕೊಲ್ಲಿಸಿ |
ಇನ್ನೇನು ಉಸರುವೆನು ಕಟ್ಟಕಡಿಗೆ ಎಲ್ಲ |
ನಿನ್ನ ಕುಲವನು ಕೊಂದೆ ಇದು ಪುಶಿಯಲ್ಲ ೬
ತಿಳಿಯಲಾರರು ನಿನ್ನ ಠಕ್ಕು ಠವಳಿಯ ಮಾಯ |
ಜಲಜ ಸಂಭವ ಶಿವ ಇಂದ್ರಾದ್ಯರು |
ಸುಲಭ ದೇವರದೇವ ವಿಜಯವಿಠ್ಠಲರೇಯ |ವೊಲಿದ ದಾಸರಿಗೆ ಸಂತಾನ ಕುಲದೀಪ೭

೪೭೧
ಬಿಡು ಬಿಡು ಮಾಯವನು ಕೆಡದಿರು ಕಪಟದಲಿ |
ನಡಿ ನಡಿ ಸುಪಥವ ಜಗದೊಡಿಯೆನ ನೆನೆ ಮನವೆ ಪ
ನಾನು ನನ್ನದು ಎಂಬೊ ಹೀನ ವಚನ ಸಲ್ಲ
ಗೇಣುದರವಲ್ಲದೆ ಪೊರೆವದು ಮತ್ತೇನಾದರು ಉಂಟೆ ೧
ಮಡದಿ ಮಕ್ಕಳ ನೋಡಿ ಕಡು ಹಿಗ್ಗಿ ಕೆಡಬೇಡ |
ಕಡು ಮುನಿದೆಮನಾಳುಗಳು ಪಿಡಿದೆಳೆದೊಯ್ವಾಗ ೨
ಇರುಳು-ಹಗಲು ನೀನು ಹರಿಸ್ಮರಣೆ ಚಿತ್ತದಲಿ |
ಸ್ಥಿರವಾಗಿ ಇರಿಸೋದು ಅನಂತ
ಜನ್ಮಾಂತರ ಪಾಪ ಪೋಗುವುದು ೩
ಜ್ಞಾನ ಮಾರ್ಗವಿಡಿದು ಆನಂದ ಮೂರುತಿಯ ಧ್ಯಾನದಿಂದಲಿ
ಕಾಣ್ಯ ದೈನ್ಯವೃತ್ತಿಯ ಬಿಟ್ಟು ಹಾನಿ ವೃದ್ಧಿಯ ಜರಿದು೪
ಅತಿ ಕಾಮಾತುರನಾಗಿ ರತಿಯಲ್ಲಿ ಸಿಗದಿರು |
ಸತತ ಮಾಡಿದ ಕರ್ಮ ವ್ಯಾಳೆವ್ಯಾಳೆಗೆ ಶ್ರೀಪತಿಗರ್ಪಿತವೆನ್ನು೫
ಸಂತೋಷಗಳು ಬರಲಿ ಸಂತಾಪಗಳು ಇರಲಿ |
ಇಂತು ಇವರಿಗೆಲ್ಲ ಪ್ರೇರಕ ಹರಿ ಜಗದಂತರ್ಯಾಮಿ ೬
ಧನ-ಕನಕ ವಸ್ತು ಮಾನಿನಿ ನಂದನರು ಆರು ? |
ತನುವೆ ನಿನ್ನದಲ್ಲ ತಿಳಿದುಕೊ ಗತಿ ಸಾಧನಕೆ ವಿಜಯವಿಠ್ಠಲ೭

೪೨೧
ಬಿನ್ನಪವ ಕೇಳು ಜೀಯಾ
ಬನ್ನಬಡಿಸುವ ಮಾಯಾ
ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಪ
ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು
ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ
ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ
ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ ೧
ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ
ಮಂದಿರದಲ್ಲಿ ಜನಿಸಿ ಎಂದು ನುಡಿದಡೆ
ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ
ಬಂಧನದಲ್ಲಿಡು ಅಲ್ಲಿ ಪೊಂದುವರಾರೊ ೨
ಶ್ವಾನ ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ
ಯೋನಿಯೊಳು ಕಟ್ಟಿಹಾಕಿ ಹೀನಾಯ ಉಣಸೀ
ಅನಂತ ಕಲ್ಪಕ್ಕೆ ಪವಮಾನ ಮತ ಪೊಂದಿಸಿ
ನಿರ್ವಾಣವೀವೆನೆಂದರಾಗೆ ನಾನಾದಿ ಬಯಿಪೆ ೩
ಗುರುಪ್ರಸಾದದಿಂದಲಿ ಪರಮ ಸದ್ಗತಿ ಎನ
ಗರಿದಲ್ಲ್ಯಾವಾಗಾದರು ಸ್ಥಿರವೆ ಸಿದ್ಧ
ಮರುತಮತ ಸಾರಲು ನಿರಯ ದುರಾತ್ಮಗಿಲ್ಲ
ಕರವ ಮುಗಿದು ಒಂದು ವರ ಬೇಡುವೆ ೪
ಭಾಗವತರ ಸಹವಾಸ ಭಾಗವತರ ಕಥಾಗುಣ
ಭಾಗ ಗುಣಿಸುವ ಮತಿ ಭಾಗೀರಥಿ ಯಾತ್ರೆ
ಭಾಗ್ಯವೆ ಪಾಲಿಸು ದುಷ್ಟ ಭಾಗಾದಿಯರೋಡಿಸಿ ಕಡೆ
ಭಾಗಕ್ಕೆ ಎನ್ನೆಡಬಲ ಭಾಗದಲಿ ಸುಳಿಯೊ ೫
ಕಾಣಿಕಾಣೆ ಜ್ಞಾನವಿಲ್ಲ ತುತಿಪುದಕ್ಕೆ
ಧ್ಯಾನವರಿಯೆ ನಿನ್ನನೆ ನಿದಾನಿಸಲಿಕ್ಕೆ
ನಾನಾಪರಾಧವ ಮಾಡಿದ ಮಾನವನೋ ದೀನಬಂಧೊ
ನೀನೊಲಿದು ಎನ್ನ ಮನಕೆ ಆನಂದ ತೋರೋ ೬
ರಜತಪೀಠ ಪುರನಿವಾಸಾ ರಜನಿಪತಿ ಸಂಕಾಶಾ
ರಜನಿಚರ ವಿನಾಶಾ ಸುಜನಮಾನಸಹಂಸ
ರಜದೂರ ಮಂದಹಾಸಾ
ವಿಜಯವಿಠ್ಠಲ ಶ್ರೀಶಾ ಭಜಿಪೆ ಲೇಶಾ ೭

೪೭೨
ಬೂದಿ ಮುಚ್ಚಿದ ಕೆಂಡದಂತಿಪ್ಪರು ಪ
ಈ ಧರೆಯ ಮೇಲೆ ಶ್ರೀ ಹರಿಭಕ್ತ ಜನರು ಅ.ಪ
ಅಂಗ ನೋಡಲು ಅಷ್ಟಾವಕ್ರವಾಗಿಪ್ಪರು
ಕಂಗಳಿಂದಲಿ ನೋಡೆ ಘೋರತರರು
ಮಂಗಳಾಂಗನ ಅಂತರಂಗದಲಿ ಭಜಿಸುತ್ತ
ಹಿಂಗದೆ ಸಂತಜನ ಸಂಗದೊಳಗಿಹರು ೧
ನಾಡ ಜನರುಗಳಂತೆ ನಡೆಯರು ನುಡಿಯರು
ಕೂಡರು ಕುಟಿಲಜನ ಸಂಘದಲ್ಲಿ
ಚಾಡಿ ಕ್ಷುದ್ರವ ಹೇಳಿ ಒಡಲು ತುಂಬಿಸಿಕೊಳರು
ರೂಢಿಯೊಳಗೆಂದೆಂದು ಗೂಢವಾಗಿಹರು೨
ಡಂಭಕತನದಿಂದ ಗೊಂಬೆನೆರಹಿಕೊಂಡು
ಡೊಂಬ ಕುಣಿದಂತೆ ಕುಣಿದಾಡರು
ಹಂಬಲಂಗಳ ಬಿಟ್ಟು ಹರುಷವುಳ್ಳವರಾಗಿ
ಬಿಂಬ ಮೂರುತಿಯನ್ನು ಕೊಂಡಾಡುತಿಹರು ೩
ಶತ್ರು ಮಿತ್ರರುಗಳ ಸಮನಾಗಿ ಎಣಿಸುವರು
ಪುತ್ರ ಮಿತ್ರ ಭ್ರಾತೃಗಳ ನೆಚ್ಚರು
ಯಾತ್ರೆ ತೀರ್ಥಂಗಳಿಗೆ ಹೋಗುತ್ತ ಶ್ರೀ ಹರಿಯ
ಸ್ತೋತ್ರಗಳ ಮಾಡಿ ಸಾಧನೆ ಮಾಡಿಕೊಂಬುವರು ೪
ಕಷ್ಟ ಸೌಖ್ಯಂಗಳನು ಕಲಿವರದಗರ್ಪಿಪರು
ಇಟ್ಟುಕೊಟ್ಟಿದ್ದನ್ನ ಹರಿಕೊಟ್ಟನೆಂಬುವರು
ಸೃಷ್ಟೀಶ ಸಿರಿ ವಿಜಯವಿಠ್ಠಲನ ಪದಪದ್ಮಾ
ಮುಟ್ಟಿ ಭಜಿಸಿ ಮುಕ್ತ ಸಾಮಾಜ್ರ್ಯ ಪಡೆಯುವರು೫

೫೯
ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ ಪ
ಚರಣ ತೊಳೆದು ಜಲಪಾನ ಮಾಡುವೆನೊಅ.ಪ.
ನೀರೊಳು ನಿನ್ನನು ಕಾಂಬೆ ಗಿರಿ
ಭಾರಪೊತ್ತರೆ ನಗುವಳೊ ನಿನ್ನ ರಂಭೆ
ಮೋರೆ ತಗ್ಗಿಸಿದರೇನೆಂಬೆ ಅಲ್ಲಿ
ನಾರಸಿಂಹನಾಗಿ ಪೂಜೆಯ ಗೊಂಬೆ ೧
ಬಲಿಯದಾನವ ಬೇಡಿದ್ದೆಲ್ಲ ನೀ
ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ
ಛಲವಂತ ನಿನಗೆದುರಿಲ್ಲ ನೀ
ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ ೨
ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ
ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ
ಬ್ರಹ್ಮಾದಿಗಳು ಸಮರಲ್ಲ ಬಲು
ಹಮ್ಮಿಲಿ ಹಯವೇರಿ ವಿಜಯವಿಠ್ಠಲ ೩

೪೭೩
ಬೇಡುವರೊ ಸುಖ ಬೇಡರೊ ದುಃಖವ |
ಮಾಡಾರೋ ಅವರ ಉಪಾಯವ | ಜನ | ಬೇಡುವರೋ ಪ
ಇಟ್ಟಿಕಲ್ಲನು ತಂದು ಕಿಟ್ಟಿ ಬೀಸುವರೊ |
ಕುಟ್ಯಾರೋ ರಂಗವಲ್ಲಿಯಾ | ಜನ ೧
ಸಾಲು ಸಾಲೆಮ್ಮೆಯ | ಸೋಲದೆ ತೊಳೆವರು |
ಸಾಲಿಗ್ರಾಮಕ್ಕ ಹಾಲೆರೆಯರೊ | ಜನ | ೨
ತ್ರಿಜಗವಂದಿತ ನಮ್ಮ ವಿಜಯವಿಠ್ಠಲನ |
ಭಜನೆಯಾ ಮಾಡದೆ ಸೋಲ್ವರೋ | ಜನ | ೩

೧೧೬
ಬೇಡುವೆ ಇದನಾ ಜೀಯ್ಯಾ ವೆಂಕಟಾರಾಯ
ಮಾಡು ಕರುಣವ ಫಲದಾಯ ಪ
ಯತಿರತುನತಿ ದಶಮತಿ ಮತದಲಿ ಸ
ನ್ನತಿ ಹಿತ ಭಕುತಿಲಿ ಪ್ರತಿದಿನ ಸ
ದ್ಗತಿ ಪಥ ಚತುರತೆ ತತುವೇಷ ತತಿಸಮ್ಮತ
ಹಿತವಾಗಿಪ್ಪ ಸುಖಮತಿಯನೀಯೋ ೧
ಬಲಬಲ ಬಲರಿಪು ವೊಲಿದೊಲಿದು ಗಿರಿಯಲಿ
ಬಲುವೊಲಿಮೆಲಿ ವೊಲಿಸಬಾರದೇ
ಕಳವಳಿಸಲು ಬಲಗುಂದಿ ನಲವು ನಿ
ಶ್ಚಲವಾಗಿ ಬಲವಾಗಿ ಗಿರಿಯೆಳದೆಲೊ ಸಲಹಿದಿ ೨
ತ್ರಿಜಗವೀರ ಧ್ವಜ ಸುಜನರ ನಿಜಪದ
ರಜರಜವಾದರು ಭಜಿಸುವ ಸರ್ವದ
ವ್ರಜಗಳ ಸಂಗ ದ್ವಿಜನರವಿ ಈ ಮತದಿ
ಸೃಜಿಸುವದು ಸಿರಿ ವಿಜಯವಿಠ್ಠಲರೇಯಾ ೩

ಬೇಸರದೆ ಭಜಿಸಿರೊ ಪುರಂದರ ದಾಸರಾಯರ

೩೪೬
ಬೇಸರದೆ ಭಜಿಸಿರೋ ಪುರಂದರ ದಾಸರಾಯರ
ಶ್ರೀಶ ನಿಮ್ಮನು ಉದಾಶೀನ ಮಾಡದೆ
ಪೋಷಿಸುವ ಸಂತೋಷದಿಂದಲಿ ಪ

ಪುರಂದರಗಡಾದ ಒಳಗೆ ಹಿರಿಯ ಸಾವುಕಾರನೆನಸಿ
ಪರಿಪರಿಯ ಸೌಖ್ಯಗಳ ಸುರಿಸುತ್ತ
ಇರುತಿರಲು ನರಹರಿ ತ್ವರಿತದಿಂ ಬ್ರಾಹ್ಮಣನಾಗುತ್ತ
ಕರುಣದಲಿ ಅವರುದ್ಧ್ದರಿಸಲೋಸುಗ ಮನೆಗೆ
ಪೋಗುತ್ತ ಯಜಮಾನ ಕಂಡು
ಜರಿದು ಬ್ರಾಹ್ಮಣನ್ಹೊರಗೆ ಹಾಕಲು
ಮರುದಿವಸ ಮತ್ಹೋಗಿ ನಿಂತ ೧
ಭಾರಿಭಾರಿಗೆ ಸಾವುಕಾರನ
ಮೋರೆಗ್ಹೊತ್ತಿ ಮೇರೆಯಿಲ್ಲದೆ
ಆರು ತಿಂಗಳು ಬೆನ್ನು ಬೀಳುತ್ತ ನಾಯಕರು ಈತನ
ಆರು ಅಟ್ಯಾರೆಂದು ಬೈಯುತ್ತ ಬೇಸತ್ತು ಎರಡು
ಹೇರು ರೊಕ್ಕಾ ಮುಂದೆ ಸುರಿಯುತ್ತ ಅದರೊಳಗೊಂದು
ಡ್ಡಾರಿಸಿಕೋ ಎಂದು ಹೇಳಲು ನಾರಾಯಣ ಬಿಟ್ಹೋದ ನಗುತ೨
ಹಿತ್ತಲಾ ಬಾಗಿಲಿಗೆ ಹೋಗಿ ಮತ್ತೆ ಆತನ ಮಡದಿಗಾಗಿ
ಹತ್ತಿ ಬಿದ್ದನು ವಿತ್ತ ತಾ ಯೆನುತ ತನ ಮಗನ ಮುಂಜ್ಯೆಂ
ದೆತ್ತಿ ಕರದಿಂ ಬಾಯಿ ತೆರೆಯುತ್ತ ಆ ಪ್ರಾಣಿ ನುಡಿದಳು
ಎತ್ತಣ ದ್ರವ್ಯವು ತನಗೆನುತ ನಿನ್ನ ಮೂಗಿನ
ಮುತ್ತಿನ ಮೂಗುತಿಯ ಕೊಡು ಎನೆ
ಉತ್ತುಮಳು ತೆಗೆದಿತ್ತಳಾಕ್ಷಣ ೩
ಜೋಕೆಯಿಂ ಮೂಗುತಿಯನೊಯ್ದು
ಆಕಿ ಗಂಡನ ಕಣ್ಣೆದುರಿಗೆ ಹಾಕಿದನು ತಾ
ಪಾಕಿ ಕೊಡೆಯೆನುತ ಅದು ಕಂಡು ಇದು ನ
ಮ್ಮಾಕಿದೆಂದು ಈತ ನುಡಿಯುತ್ತ ಅನ್ಯರದು ಯಿಂಥಾ
ದ್ಯಾಕೆ ಯಿರಬಾರದೆನ್ನುತ್ತಾ ಬೆಲೆ ಹೇಳು ಎನಲು
ನಾಕು ನೂರು (ಪಾಕಿ) ಶುಭ್ರ ಕೊಡು
ಎಂದಾಕೆ ಹೋದನು ತಿರೂಗಿ ಬಾರದೆ ೪
ತಿರುಗಿ ಬ್ರಾಹ್ಮಣ ಬಾರದಿರಲು ಕರೆದು ತನ್ನ ಹೆಂಡತಿಯ
ಬರಿಯ ನಾಶಿಕವನ್ನೆ ಕಂಡುನು ಮೂಗುತಿಯ ಎಲ್ಲೆನೆ
ಮುರಿದಿಹುದು ಯೆಂದಾಕೆ ಹೇಳಲು ಒಳಗ್ಹೋಗಿ ನೀ ತಾರದಿರೆ
ಅರೆವೆ ನಿನ್ನಯ ಜೀವವೆಂದನು ವಿಷಕೊಂಬೆನೆಂದು
ಕರದಿ ಬಟ್ಟಲು ಧರಿಸಲಾಕ್ಷಣ
ತ್ವರಿತದಲಿ ಹರಿ ಅದರೊಳಾಕಿದ ೫
ಹರುದಿಂ ಮೂಗುತಿಯನ್ನು
ಪುರುಷನಾ ಕೈಕೊಳಗೆಯಿಡಲು
ತರಿಸಿ ತನ್ನಲ್ಲಿದ್ದ ಪೆಟ್ಟಿಗೆಯಾ ಅದು ಕಾಣದಿರಲು
ಬೆರಗಾಗಿ ನೋಡಿದನು ಮಡದಿಯ ನಿಜ ಪೇಳುಯೆನಲು
ಅರಸಿ ಪೇಳ್ದಳು ಕೊಟ್ಟ ಸುದ್ದಿಯಾ ಅಭಿಮಾನಕಂಜಿ
ಅರದು ವಿಷವನು ಕುಡಿವೆನಲು ಸಿರಿರಮಣಾ ಕೊಟ್ಟ ಖರಿಯಾ ೬
ದೇವ ದೇವನು ಎನ್ನ ಮನದ
ಭಾವವನ್ನು ತಿಳಿವುದಕೆ ತಾ ವೃದ್ಧ ಬ್ರಾಹ್ಮಣನಾಗಿ
ಬಂದಿದ್ದ ಪರಿಪಕ್ವವೆನಗೆ
ನ್ನಾವ ಕಾಲಕೆ ಆಗಬೇಕೆಂದ ವೈರಾಗ್ಯಭಾವದಿ
ಜೀವಿಸಿಕೊಂಡಿರುವುದೇ ಛಂದ ಹೀಗೆನುತ ಮನೆ ಧನ
ಕೋವಿದರ ಕರೆದಿತ್ತ ಹರುಷದಿ
ಕಾವನಯ್ಯನ ದಾಸನಾದ ೭

ಲಕ್ಷ್ಮಿಪತಿಯ ಪಾದದಲ್ಲಿ ಲಕ್ಷ್ಯವಿಟ್ಟು ವ್ಯಾಸರಾಯರ
ಶಿಕ್ಷೆಯಿಂದಲಿ ಅಂಕಿತವ ಕೊಳುತ ತಿರಿಪಾದ ಐದು
ಲಕ್ಷಪದ ಸುಳಾದಿ ಪೇಳುತ್ತ ಪ್ರತಿದಿವಸದಲ್ಲು
ಪಕ್ಷಿವಾಹನ ನಾಟ್ಯವಾಡುತ ಅಪರೋಕ್ಷ ಪುಟ್ಟಲು
ಮೋಕ್ಷಸ್ಥಾನಕ್ಕೆ ಕರೆದೊಯ್ದು ಅ
ಧೋಕ್ಷಜನು ಸಂರಕ್ಷಿಸಿದ ೮
ಘೊರ ನರಕದೊಳಗೆ ಬಿದ್ದಾ
ಪಾರ ಜನರು ಚೀರುತಿರಲು
ದ್ಧಾರ ಮಾಡಿದ ನಾರದಾರಿವರು ಅವ
ತಾರ ಮಾಡಿ ಧಾರುಣಿಯಲಿ ಮತ್ತೆ ಬಂದರು ಸರುವೋತ್ತಮ
ಹರಿ ನಾರಾಯಣನೆ ಎಂದು ಸಾರಿದರು ಹೀಗೆಂದು ತಿಳಿಯಲು
ಮಾರ ಜನಕ ವಿಜಯವಿಠ್ಠಲ ಆರಿಗಾದರು ಒಲಿವ ಕಾಣಿರೊ ೯

೫೨೩
ಬ್ಯಾಡವೊ ಕುವಾದಿ ಬ್ಯಾಡವೊ ಪ

ಬ್ಯಾಡವೊ ಕೇಳು ಕುವಾದಿ ನೀ
ನಾಡುವದುಚಿತವಲ್ಲ ಧಾದಿ | ಆಹಾ |
ಮೂಢ ನಿನಿಗದಾವ ಖೋಡಿ ಬೋಧಿಸಿದನೊ
ನಾಡಿಗೊಡಿಯ ರಂಗಗೀಡು ನೇನೆಂಬದುಅ.ಪ

ಎಲ್ಲ ಜೀವರು ದೇವವೊಂದೆ ಭೇದ
ವಿಲ್ಲೆಂದಾಡುವುದು ಧಂದೆ ಯಮ
ಕೊಲ್ಲದೆ ಬಿಡ ನಿನ್ನ ಮುಂದೆ ನಿನ್ನ
ಹಲ್ಲು ಮುರಿವನೊಂದೊಂದೆ || ಆಹಾ ||
ಉಳ್ಳಿಗಡ್ಡಿಯ ಉದ್ದಿ ಬೆಳ್ಳಗೆ ತೊಳೆದರೆ
ಅಲ್ಲಕ್ಕೆ ಸರಿಯೇನೊ ಬಲ್ಲವರೊಪ್ಪಾರು ೧

ಇದ್ದು ನೀ ಇಲ್ಲೆಂತೆಂಬಿ ಕಾಲಿ
ಲೊದ್ದರೆ ಬಲು ನೊಂದು ಕೊಂಬಿ ಇ
ಲ್ಲಿದ್ದವರೆಲ್ಲ ಬ್ರಹ್ಮ ನಾನೆಂಬಿ ಆ ಪರ
ಬುದ್ಧಿಯಿಂದ ಶುದ್ಧ ಎಂತೆಂಬಿ || ಆಹಾ ||
ಬಿದ್ದುಹೋಯಿತು ನಿನ್ನ ಸಿದ್ದಾಂತವೆಲ್ಲವು
ಸದ್ದು ಎನ್ನ ಕೂಡ ಗೆದ್ದು ಹೋಗಲಾರಿ ಬ್ಯಾಡವೊ ೨
ಒಬ್ಬ ಬ್ರಹ್ಮ ಎಲ್ಲಾ ಮಾಯವೊ ಇ
ನ್ನೊಬ್ಬನೆ ಎಲ್ಲಿಹ ಸುಖವೊ
ನಿನ್ನ ಕುಹಕ ಶಾಸ್ತ್ರವೆಲ್ಲ ಮೃಷವೋ
ಉಬ್ಬಿ ಆಡುವುದು ನಿರಯವು || ಆಹಾ ||
ಒಬ್ಬ ಬ್ರಹ್ಮಗೆ ಮುಕ್ತಿ ಒಬ್ಬ ಬ್ರಹ್ಮಗೆ ನರಕಾ
ಈ ಬಗೆಯಾಯಿತು ನಿನಗೊಬ್ಬಗೆ ಈ ಮಾತು ಬ್ಯಾಡವೊ ೩
ಒಂದೆ ಆದರೆ ನಿನಗೆಲ್ಲ ನಿನ
ತಂದೆಯಿಂದ ನೀ ಪುಟ್ಟಿದ್ದೆಲ್ಲ ನಿನ್ನ
ತಂದೆ ನೀನು ಒಂದೆ ಎಲ್ಲಿ ಇನ್ನು
ಛಂದಾಗಿ ನೀ ತಿಳಿಯೊ ಸೊಲ್ಲ || ಆಹಾ ||
ತಂದೆಯ ಸತಿ ನಿನಗೇನಾದಳೊ ಮನುಜ
ಮಂದ ಮತಿಯೆ ತಾಯಿಗಂಡ ನೀನಾದೆಲ್ಲೋ ೪
ಅನ್ನಕ್ಕೆ ಪರಬ್ರಹ್ಮನೆಂಬಿ ಈಗ
ಅನ್ನ ಚಲ್ಲಲು ದೋಷವೆಂಬಿ ನಿತ್ಯ
ಚನ್ನಾಗಿ ಪರಿಪೂರ್ತಿಗೊಂಬಿ ಈ
ಅನ್ನ ನಾನು ವೊಂದೆ ಎಂಬೀ || ಆಹಾ ||
ನಿನ್ನ ದೇಹಕ್ಕೆ ರೋಗವು ಬಂದರೆ ನೀನು
ಅನ್ನವ ಬಿಟ್ಟಿನ್ನು ಚನ್ನಾಗಿ ಮಲುಗುವಿ ೫
ಭೇದವಿಲ್ಲೆಂತೆಂದರೆ ನೀನು
ಮಾದಿಗರೆಲ್ಲ ಒಂದೇನೊ ಸರಿ
ಹೋದವರೆಂಜಲ ತಿನ್ನೋ ಕಹಿ
ಸ್ವಾದವು ನಿನಗಿಲ್ಲವಿನ್ನು ||ಆಹಾ||
ಓದನಾದರು ವೊಂದೆ ಮೇದ್ಯವಾದರು ವಂದೇ
ಭೇದವಿಲ್ಲದೆ ತಿಂದು ಹೋದಿಯೋ ನರಕಕ್ಕೆ ೬
ಎಲ್ಲವೂ ಬ್ರಹ್ಮಸ್ವರೂಪಾ ಬ್ಯಾರೆ
ಇಲ್ಲೆಂದು ನಿನಗೆ ರೂಪಾ
ಭೇದವಿಲ್ಲೆಂತೆಂಬುವದು ನಿಶ್ಚಯವು ವಾಕು
ಸಲ್ಲದೆ ಇನ್ನು ಪೋದಾವು ||ಆಹಾ ||
ಬಲ್ಲಿದ ಪುರುಷನು ಮೆಲ್ಲನೆ ನಿನ್ನ ಸತಿ
ಯಲ್ಲಿ ಮಲಗಿದರೆ ನೆಲ್ಲಿ ನೀ ಸೈರಿಸಿ೭
ನಾಶವಿಲ್ಲೆಂಬುದೆ ಸತ್ಯ ದೋಷ
ಕ್ಲೇಶವಿಲ್ಲೆಂಬುದೆ ಮಿಥ್ಯ ಜಗ
ದೀಶಗೆ ಜೀವನು ಭೃತ್ಯ ಬಿಡದೆ
ವಾಸವಾಗಿಹ ಹೃದಯ ನಿತ್ಯ ||ಆಹಾ||
ದ್ವಾಸುಪರ್ಣವೆಂಬೊ ಈ ಶ್ರುತಿಗರ್ಥವು
ಲೇಸಾಗಿ ತಿಳಿಯದೆ ಘಾಶಿಪಡುವಿ ವ್ಯರ್ಥ ೮
ಈಶನು ನೀನಾದರೇನು ಸರ್ವ
ದೇಶ ಪೋಷಿಸದೆ ಇಪ್ಪೋರೆ ನಿನ್ನ ಸಾ
ಹಸ ವ್ಯರ್ಥ ಮಾಡೋರೆ ಹರಿ
ದಾಸರು ಕಂಡು ಸಹಿಸೋರೆ ||ಆಹಾ ||
ಗ್ರಾಸ ಇಲ್ಲದೆ ಉಪವಾಸ ಸತಿ ಸುತರು
ಕ್ಲೇಶ ಪಡುವುದು ಬಿಡಿಸಲಾರಿಯೊ ಲೇಶ ೯
ಗುರುದೈವವಿಲ್ಲವೊ ನಿನಗೆ ಒಬ್ಬ
ಸರಿಯಿಲ್ಲ ಈ ಧರೆಯೊಳಗೆ
ಯಾರು ಹಿರಿಯ ಕಿರಿಯರಿಲ್ಲ ನಿನಗೆ ನೀನು
ಖರ ಶಬ್ದಕಿಂತ ಹೊರಗೆ ||ಆಹಾ ||
ಎರಡಿಲ್ಲಾಯೆಂಬೊದೆ ಇರುಳಿಲ್ಲ ಹಗಲಿಲ್ಲಾ
ನರಕ ಸ್ವರ್ಗ ವಂದೇ ಅರಿಯಾದೆ ಮುಳುಗುವಿ ೧೦

ವಂದನೆ ನಿಂದ್ಯಗಳೊಂದೇ ನಿನಗೆ
ಗಂಧ ದುರ್ಗಂಧವು ವಂದೇ ಕೆಟ್ಟ
ಹಂದಿಯೆಲ್ಲ ನೀನು ವಂದೇ ನಿನ್ನ
ಕೊಂದರೆ ದೋಷವಿಲ್ಲವೆಂಬೆ ||ಆಹಾ||
ಎಂದಿಗೂ ಈ ಮಾತು ನಿಂದಾವೆ ನಿನಗಿನ್ನು
ಮುಂದಕ್ಕೆ ಬರಲಾರಿ ಮಂದಮತಿಯೆ ಖೋಡಿ೧೧
ಜಗದೊಳಗೆ ನೀ ನಿಂತು ಇದು
ಜಗವಲ್ಲವೆಂಬೋದಕ್ಕಿಂತು ನೋಡಿ
ನಗುವರೋ ಅಶುದ್ಧ ಜಂತು ಜಿಂಹ್ವೆ
ಬಿಗಿದು ಕೋಯಿಸುವ ಯಮನಿಂತು ||ಆಹಾ ||
ಹಗಲು ಇರುಳು ವಂದೆ ನಗುತ ನಗುತಾ ಕಂಡು
ತೊಗಲು ದೇಹವು ನಿನ್ನದಗೆ ಮಾಡುವುದು ವ್ಯರ್ಥ ೧೨
ಸ್ವಾಮಿ ನಿನಗೆ ಬ್ಯಾರಿಲ್ಲಾ ನಿತ್ಯ
ನೇಮ ಕರ್ಮವು ಬ್ಯಾರೆ ಸಲ್ಲ ಒಂದು
ಕಾಮಿನಿ ನಿನಗೆ ಬೇಕಲ್ಲ ಪೂರ್ಣ
ಕಾಮನು ನೀನೆಂಬೆಯಲ್ಲಾ ||ಆಹಾ||
ಗ್ರಾಮ ಭೂಮಿಗಳ್ಯಾಕೊ ತಾಮಸ ನಿನಗಿನ್ನು
ತಾಮಸರಿಗೆಲ್ಲ ಸ್ವಾಮಿಯಾಗಿರು ಹೋಗೋ ೧೩
ಕಾಣದೆ ಬಗಳುವೆ ಮಾಯಿ ನಾಯಿ
ನಿನಗೆ ತಂದೆ ತಾಯಿ ಇನ್ನು
ಕಾಣುತ ಬೊಗಳೋದು ನಾಯಿ ಈ
ನಾಯಿ ಕಚ್ಚಿ ನೀ ಸಾಯಿ ||ಆಹಾ ||
ಬಾಯ ಮುರಿವಾ ನಿನ್ನ ನ್ಯಾಯದಿಂದಲಿ ವಾಯು
ಬಾಯ ಶೀಳಿ ನಿನ್ನ ಕಾಯ ಖಂಡ್ರಿಸುವನೊ ೧೪
ಇಷ್ಟು ಹೇಳಿದರೆ ನೀ ಕೇಳಿ ನೀ ವ್ಯರ್ಥ
ನಿಷ್ಠುರಾಡಿ ನೀ ಬಾಳೀ ನಿನ್ನ
ಕಟ್ಟಿಗೆ ಮುರಿದಂತೆ ಶೀಳಿ ಬಾಯ
ಕುಟ್ಟಿ ತುಂಬುವ ಯಮಧೂಳಿ ||ಆಹಾ||
ಸೃಷ್ಟಿಗೊಡಿಯ ನಮ್ಮ ವಿಜಯವಿಠ್ಠಲನ ಮುಟ್ಟಿ ಭಜಿಸದಲೆ
ಭ್ರಷ್ಟ ಮನುಜ ನೀ ಅಷ್ಟವೆಂದೆಂಬೋದು ಬ್ಯಾಡವೊ ೧೫

ಭಕುತಜನ ಮುಂದೆ ನೀನವರ ಹಿಂದೆ :

೬೦
ಭಕುತ ಜನ ಮುಂದೆ ನೀನವರ ಹಿಂದೆ ಪ
ಯುಕುತಿ ಕೈಗೊಳ್ಳದೊ ಗಯ ಗದಾಧರನೆ ಅ ಪ
ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ |
ಕಟ್ಟಲೆಯಲಿ ಹರಿಗೋಲು ಹಾಕಿ ||
ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ |
ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? ೧
ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- |
ಸ್ಸಾಳ ನಾನಾವಾದ್ಯ ಘೋಷಣಗಳು ||
ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ |
ಆಳು ಮುಂದಲ್ಲದೆ ಅರಸು ತಾ ಮುಂದೆ?೨
ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ |
ಸತ್ಸಂಗತಿಗೆ ಹರಿದಾಸರೆಲ್ಲ ||
ವತ್ಸಲ ಸಿರಿ ವಿಜಯವಿಠ್ಠಲ ವೆಂಕಟಾಧೀಶ
ವತ್ಸ ಮುಂದಲ್ಲದೆ ಧೇನು ತಾ ಮುಂದೆ ? ೩

೬೧
ಭಕುತಿ ಸುಖವೊ ರಂಗ ಮುಕುತಿ ಸುಖವೊ ಪ
ಭಕುತಿ ಸುಖವೊ ಮುಕುತಿ ಸುಖವೊ |
ಯುಕುತಿವಂತರೆಲ್ಲ ಹೇಳಿ ಅ.ಪ.
ಭಕುತಿ ಮಾಡಿದ ಪ್ರಹ್ಲಾದ |
ಮುಕುತಿಯನ್ನು ಪಡೆದುಕೊಂಡ |
ಮುಕುತಿ ಬೇಡಿದ ಧ್ರುವರಾಯ |
ಯುಕುತಿಯಿಂದ ಹರಿಯ ಕಂಡ ೧
ಭಕುತಿ ಮಾಡಿದ ಅಜಮಿಳನು |
ಅಂತ್ಯದಲಿ ಹರಿಯ ಕಂಡ |
ಮುಕುತಿ ಬೇಡಿದ ಕರಿರಾಜ |
ದುರಿತಗಳನು ಕಳೆದುಕೊಂಡ ೨
ಭಕುತಿ ಮುಕುತಿದಾತ ನಮ್ಮ |
ಲಕುಮಿಯರಸ ವಿಜಯವಿಠ್ಠಲ ||
ಶಕುತನೆನುತ ತಿಳಿದು ನಿತ್ಯ |
ಭಕುತಿಯಿಂದ ಭಜನೆ ಮಾಡಿರೊ ೩

ಭಕುತಿಯ ಪಾಲಿಸು ಜೀಯ್ಯಾ ಮುಂದೆ :

೪೨೨
ಭಕುತಿಯ ಪಾಲಿಸು ಜೀಯಾ ಮುಂದೆ
ಮುಕುತಿಗೊಡವೆ ಯಾಕೆ ನೀನೊಲಿದ ಮೇಲೆ ಪ
ತನುವೆ ನಿನ್ನಾಧೀನವೆನಿಸು ಇದು
ಅನುದಿನ ಕೊಡು ಏಕಪ್ರಕಾರ ಮನಸು
ಧನ ವಡವೆಯ ಕಂಡ ಕನಸು ಎಂದು
ಎನಗೆ ತೋರಲಿ ನಿತ್ಯ ನಿನ್ನಂಘ್ರಿ ನೆನಸು ೧
ತತ್ವದ ಮತದೊಳಗಿರುಸು ಪುಶಿ
ಉತ್ತರ ಮತವೆಂಬ ಮಾರ್ಗವ ಮೆರೆಸು
ಉತ್ತಮರೊಳಗೆನ್ನನಿರಿಸು ಭವ
ವತ್ತುವ ನಿನ್ನ ನಾಮಮೃತ ಸುರಿಸು ೨
ಶ್ರವಣ ಮನನ ಧ್ಯಾನವೀಯೋ ಎನ್ನ
ಅವಗುಣವೆಣಿಸದೆ ಕರುಣಾಳು ಕಾಯೊ
ಅವಸಾನದಲಿ ನೀನೆ ಗತಿಯೊ ತ್ರೈ
ಭುವನೇಶ ವಿಜಯವಿಠ್ಠಲ ನೀ ದೊರೆಯೋ ೩

೧೮೯
ಭಕ್ತಜನ ಪಾಲಕ – ಭಕ್ತಿಸುಖದಾಯಕ
ಮುಕ್ತೀಶ ದೀನಬಂಧು ಕೃಷ್ಣ ಪ
ಯುಕ್ತಿಯಲಿ ನಿನ್ನಂಥ ದೇವರನು ನಾಕಾಣೆ
ಸತ್ಯವತಿ ಸುತನೆ ಕಾಯೋ ಕೃಷ್ಣ ಅ.ಪ.
ಆನಂದತೀರ್ಥ ಮುನಿಯ ಧ್ಯಾನಿಪರ ಸಂಗ |
ಆನಂದದಲಿ ನಿಲಿಸೊ ಕೃಷ್ಣ ||
ದೀನಜನ ಮಂದಾರ ನೀನೆಂದು ನಂಬಿದೆನೊ |
ಸಾನುರಾಗದಲಿ ಕಾಯೋ ಕೃಷ್ಣ ೧
ಕೆಟ್ಟ ಜನರ ಸಂಗ ಇಷ್ಟು ದಿನವೂ ಮಾಡಿ |
ಭ್ರಷ್ಟನಾಗಿ ಪೋದೆನೋ ಕೃಷ್ಣ ||
ಬೆಟ್ಟದೊಡೆಯನೆ ನಿನ್ನ ಮುಟ್ಟಿ ಭಜಿಸುವ ಭಾಗ್ಯ |
ಇಷ್ಟಗಳ ಎನಗೆ ಕೊಡಿಸೋ ಕೃಷ್ಣ ೨
ಅಜಜನಕ ಗಜವರದ ಭುಜಗಶಯನನೆ ನಿನ್ನ |
ಭಜಿಪ ಭಾಗ್ಯವನೆ ಕೊಡಿಸೊ ಕೃಷ್ಣ ||
ನಿಜವಾಗಿ ನಿನ್ಹೊರುತು ಸಲಹುವರ ನಾ ಕಾಣೆ |ವಿಜಯವಿಠ್ಠಲರೇಯ ಕೃಷ್ಣ ೩

ಭಕ್ತಜನ ಸಂರಕ್ಷಣ ಭಕ್ತಜನ ಸುರಕ್ಷ

೧೧೭
ಭಕ್ತಜನ ಸಂರಕ್ಷಣ ಪ
ಭಕ್ತಜನ ಸಂರಕ್ಷ ಭವದುರಿತ ಸಂಹಾರಿ
ಭಕ್ತರಾ ಸುರಧೇನು – ತರುವೆ ಚಿಂತಾಮಣಿಯೆ
ಭಕ್ತರಾಧೀನನೆಂಬುವ ಬಿರುದು ಅನುಗಾಲ
ಪೊತ್ತ ತಿಮ್ಮಪ್ಪ ಏಳೊಅ.ಪ.
ಅಂಬರವು ತಾಂಬ್ರಮಯವಾಗೆ ಗರುಡಾಗ್ರಜನು
ಇಂಬಿನಲಿ ತಲೆದೋರೆ ಕಿರಣಗಳು ಹರಹಿದುವು
ಅಂಬುಜ ವಿರೋಧಿ ಕಳೆಗುಂದಿ
ತಾರಾ ನಿಕರವಂಬರದಿ ರೂಹುಮಾಸೆ
ಕುಂಭಿಣಿಯ ಮುಸುಕಿರ್ದ ಕತ್ತಲೆ ಪರಿದು ಪೋಗೆ
ಅಂಬುಜದಳಕ್ಕೆ ಮರಿದುಂಬಿಗಳು ಎರಗಿದವು
ತಾಂಬ್ರ ಚೂಡವು ಧ್ವನಿಮಾಡಿ ಕೂಗಿತು
ಸರಸಿಜಾಂಬುಕ ಮಂಚದಿಂದೇಳೊ ೧
ಉದಯ ಪರ್ವತಕೆ ರಥನೂಕಿದನು ಮಾರ್ತಾಂಡ
ಉದಧಿತೆರೆ ತಗ್ಗಿದುವು ಉರಗ ಪೆಡೆಯೆತ್ತಿದನು
ಗದಗದನೆ ನಡುಗಿ ದಾನವರು
ಭಯದಿಂದ ಅಡಗಿದರು ದಶದಿಕ್ಕಿನೊಳಗೆ
ತ್ರಿದಶರಬ್ಬರಿಸಿ ಆನಕ ದುಂದುಭೀ ಶಂಖ
ಧಂ ಧಂ ಧಣಾ ಸರಿಗಮಪದನೀ ಯೆಂದೆನುತ
ವದರುತ್ತ ಸುಮವರ್ಷವನು ಸುರಿಸಿ
ತುರೆಸಿದರು ಸದಮಲಾನಂದ ತಿಮ್ಮಾ ೨
ನಾರಿಯರು ಬಂದು ಅಂಗಳ ಬಳಿದು ಗಂಧದಾ
ಸಾರಣಿಯದೆಳೆದು ಮುತ್ತಿನ ರಂಗವಾಲೆ ವಿ-
ಸ್ತಾರದಿಂದಲಿ ಪಂಚವಣ್ಣಿಗೆಯ
ನಿಟ್ಟು ಹೊಸತೋರಣ ಮಕರ ಕನ್ನಡಿ
ದ್ವಾರದಲಿ ಬಿಗಿದರ್ಥಿಯಲಿ ಗೊಲ್ಲ ಕಟ್ಟಿಗೇ-
ಕಾರ ಪರಿವಾರದವರೆಲ್ಲ ವೊಪ್ಪುತಿದಾರೆ
ದ್ವಾರಕರು ಸಾರಿದರು ಭಟರು
ಹೊಗಳಿದರು ಕಂಸಾರಿ ಕೋನೇರಿವಾಸ ೩
ನೃತ್ಯಗಾರರು ಬಂದು ತತ್ಥಿಗಿಣಿ ತಕ್ಥೈಯ
ತಿತ್ತಿರಿ ಮೃದಂಗ ಜೊತೆ ತಪ್ಪದಂದದಿ ತಾಳ
ಬತ್ತೀಸರಾಗದಲಿ ಎತ್ತಿ ಧ್ವನಿತೋರುತ್ತ ನೃತ್ಯ ಪಾಡುತ್ತ ಕುಣಿಯೆ
ಮುತ್ತೈದೆಯರು ಬಂದು ಮುತ್ತಿನಾರತಿ ಪಿಡಿದು
ಮಿತ್ರಭಾವದಿ ನಿಮ್ಮ ಅಡಿಗಳಿಗೆ ಹರಿವಾಣ
ಎತ್ತುವೆವು ಎಂದೆನುತ ಕಾದು ನಿಂದೈದಿ
ನೋಡುತ್ತಿದಾರೆ ಸರ್ವೇಶ೪
ಕಾದೋದಂ ವಿಮಲ ಕಮ್ಮೆಣ್ಣಿ ಕಸ್ತೂರಿ
ಸ್ವಾದು ಜವ್ವಾಜಿ ಚಂದನ ಗಂಧ ದ್ರವ್ಯಗಳ
ಆದರಿಸಿ ಪಿಡಿದ ದರ್ಪಣ ಹೇಮ ಗದ್ದುಗೆಯ
ಪಾದುಕಾ ಪಟ್ಟುವಸನ
ಈ ಧರೆಯ ಮೇಲಿರ್ದ ಉಡಿಗೆ ತೊಡಿಗೆಯು ಕರ್ಪು
ರಾದಿ ತಾಂಬೂಲ ನಿರ್ಮಲ ದಾದಿಯರು ಪಿಡಿದು
ಕಾದು ನಿಂದೈದಾರೆ ಹೊನ್ನ ಬಾಗಿಲ
ಮುಂದೆ ಆದಿಹರಿ ಪರಮಪುರುಷ ೫
ದಂಡಿಗೆ ಶಂಖತಾಳ ತಂಬೂರಿ ಜಾಂಗಟೆಯ
ಗೊಂಡು ನಿನ್ನಯ ಪರಮ ಪ್ರೀತ್ಯರ್ಥ ದಾಸರು
ಹಿಂಡು ಹಿಂಡಾಗಿ ಸಮ್ಮೊಗವಾಗಿ ನಿಂದು
ಬೊಮ್ಮಾಂಡ ಕಟಹ ಬಿಚ್ಚುವಂತೆ
ತಂಡ ತಂಡದಿ ಗೆಜ್ಜೆಕಟ್ಟಿ ಅಭಿನಯ ತಿರುಹಿ
ಕೊಂಡಾಡೆ ಶಬ್ದ ಪ್ರತಿ ಶಬ್ದವಾಗುತಿದೆ ಭೂ-
ಮಂಡಲಾದೊಳಗೆ ಈ ಸೊಬಗು
ಬಲ್ಲವರಾರು ಕುಂಡಲಗಿರಿವಾಸ ತಿಮ್ಮಾ ೬
ಗೋತ್ರಾರಿ ಹರಿಧರ್ಮ ಪುಣ್ಯಜನಪನು ವರುಣ
ವೀತಿಹೋತ್ರನ ಸಖನು ಯಕ್ಷೇಶ ಕೈಲಾಸ-
ಪತಿ ಸೂರ್ಯ ಅತ್ರಿ ನಂದನರು ವಾಹನವೇರಿ
ಚಿತ್ತದಲಿ ಮುಖ್ಯರಾದ
ಮೈತ್ರಾವರುಣಿ ಜಾಮದಗ್ನಿ ಕಶ್ಯಪ ವಿಶ್ವ –
ಮಿತ್ರ ಸನಕಾದಿಗಳು ನಾರದರೆ ಮೊದಲಾಗಿ
ಸ್ತೋತ್ರವನು ಮಾಡುತಲಿದ್ದಾರೆ ಲಕ್ಷ್ಮೀಕಳತ್ರ ಜಗದ್ಭರ್ತ ತಿಮ್ಮಾ ೭
ನಿಚ್ಚ ಏಳುವ ಸಮಯ ಮೀರಿತೋ ಇಂದೀಗ
ಎಚ್ಚರಿಕೆ ಪುಟ್ಟದೇ ಎಲೋ ದೇವ ಶ್ರೀದೇವಿ
ಮೆಚ್ಚುಗೊಳಿಸುತ್ತ ಬಿಗಿದಪ್ಪಿ ರತಿಕ್ರೀಡೆಯಲಿ
ಮೆಚ್ಚಿಸಿದ ಮಹಸರಸವೆ
ಮುಚ್ಚಟೆಯಿದೇಂ ತಿಳಿಯಲಾಗದೆ ಸ್ವಾಮಿ
ಕಚ್ಚಿತನ ಸೊಲ್ಲು ಕರ್ಣಕೆ ಬೀಳದಾಯಿತೆ
ಹೆಚ್ಚಿನಾ ಪದವಿ ಮತ್ತೇನು ಬಂದಿತೊ
ಕಾಣೆ ಸಚ್ಚಿದಾನಂದಾತ್ಮಕ ೮
ನಿದ್ರೆಗೆವೆ ಹಾಕದಿರೊ ನೀರೊಳಗೆ ನೀನಿರೊ ಉ-
ಪದ್ರ ಭೂಮಿಗೆ ಕಳೆಯೊ ಕಶ್ಯಪನ ಸುತನಳಿಯೊ ಸ-
ಮುದ್ರ ರಾಣಿಯ ಪಡೆಯೊ ರಾಯರಾಯರ
ತಡೆಯೊ ಮುದ್ರೆ ಭೂಮಿಜೆಗೆ ಕಳುಹೊ
ಅದ್ರಿಯುದ್ಧರಿಸೊ ಮುಪ್ಪುರವ ಸಂಹರಿಸೊ ಕಲಿ-
ಕ್ಷುದ್ರ ಕಳೆ ನಿದ್ರೆ ಸಾಕೆಂದು ಶುಕ್ತಿ ಸಾರುತಿದೆ
ಭದ್ರಮೂರತಿ ವಿಜಯವಿಠ್ಠಲ
ವೆಂಕಟಕಾದ್ರವೇಯ ಹಾಸಿಗೆಯಿಂದೇಳು ೯

೪೭೪
ಭಕ್ತರನ ನಂಬದಿರು ಭವದೂರನೆ
ಮುಕ್ತಿಯನು ಬೇಡದಲೆ ನಿನ್ನೆ ಪೂಜಿಸುವರು ಪ
ಪ್ರಸ್ತ ಮಾಡುವ ಸಾಧನಕ್ಕೆ ಪೋಗಿ ನಿಂದು ಬಲು
ಹಸ್ತು ಬಂದವನು ತುತ್ತನ್ನ ಕೇಳೆ
ಸ್ವಸ್ತವಾಗಿ ಕುಳಿತು ಭೋಜನ ಮಾಳ್ಪ ಆ
ಗ್ರಹಸ್ತ ಪೊಟ್ಟಿ ತುಂಬದೆ ಬರಿದೆ ಏಳುವನೆ೧
ಹಾದಿಕಾರನು ಬಂದು ವಸ್ತಿ ಮಾಡುವದಕ್ಕೆ
ಆದರದಲಿ ಸ್ವಲ್ಪ ಸ್ಥಳವ ಕೇಳಿ
ಪಾದ ಇಡುವನಿತರೊಳು ಕುಳಿತು ಆಮೇಲೆ ಸಂ
ಪಾದಿಸುವ ತನ್ನ ತಕ್ಕಷ್ಟು ಧರಣಿಯನ್ನು೨
ಆವದೊಲ್ಲೆವೆಂದು ಆಡುವರು ನಿತ್ಯದಲಿ
ಕಾವ ಕರುಣಿ ನೀನೆಂದು ತಿಳಿದು
ಶ್ರೀ ವನಿತೆಯರಸ ಸಿರಿ ವಿಜಯವಿಠ್ಠಲ ನಿನ್ನ
ಪಾವನನಾಗಿದ್ದ ನಾಮ ಬದಲಿ ಇಂದು ೩

೪೭೫
ಭಕ್ತಿಯಲಿ ನಡೆವರಿವರೇ ಸುಗುಣರೊ
ಮುಕ್ತಿಯನು ಬಯಸಿ ಮುರಾರಾತಿಯ ಚರಣದಲ್ಲಿ ಪ
ಉದಯದಲೆದ್ದು ಉನ್ನತ ಸ್ವರದಿಂದ ಹರಿ
ಪದವೇ ಗತಿ ಎನುತಾ ಎಲ್ಲ ಕಾಲಕೆ
ಉದರ ಚಿಂತಿಯ ಮರೆದು ಮನ ಉಬ್ಬಿ ಉತ್ಸವದಿ
ಪದೋಪದಿಗೆ ಮಂಗಳಾವಾರ್ತಿ ಪೇಳುತ ನಿತ್ಯಾ ೧
ಅಡಿಬಿಡದೆ ಭಾಗವತ ಮಿಕ್ಕ ಪುರಾಣಾದಿ
ನುಡಿಗೆ ಕಿವಿಗೊಟ್ಟು ಹಾಹಾ ಎನತಲಿ
ಒಡನೊಡನೆ ಹರಿ ಮಹಿಮೆಯಲಿ ಇದ್ದು ಮಾರಿಗಳ
ಅಡಿಮಾಡಿ ಆದ್ಯಂತಕಾಲ ಸುಖಿಸುವ ನಿತ್ಯಾ ೨
ಈ ದೇಹ ತ್ಯಾಗ ಮಾಡದೆ ಆಗಲಿ ಪಂಚ
ಭೇದ ಪೇಳುವದು ಬಿಡೆನೆಂಬೊ ಸೊಲ್ಲು
ಆದಿತ್ಯ ಲೋಕಕ್ಕೆ ಮುಟ್ಟುವಂತೆ ಕೂಗಿ
ಸಾಧನ ಮಾಡುತಲಿಪ್ಪ ಶುಭಮಾರ್ಗದಲಿ ನಿತ್ಯಾ ೩
ಅವಾವ ಮೋಹಕವು ಶಾಸ್ತ್ರದಲ್ಲಿದ್ದರೂ
ಭಾವದಲಿ ಗುಣಿಸದೆ ನಿಕ್ಕರಿಸೀ
ದೇವದೇವೇಶನೆ ಬ್ರಹ್ಮಾದಿಗಳು ವಂಚಿಪ
ಕಾವ ಕೊಲ್ಲುವನೀತನೆಂದು ತಿಳಿದು ನಿತ್ಯಾ ೪

ಅನ್ಯಶಬ್ದವು ಅನ್ಯಸ್ಪರಿಶ ರೂಪಕ ರಸಾ
ಅನ್ಯಗಂಧಗಳಿಗೆ ಇಂಬುಗೊಡದೇ
ಧನ್ಯರಾಗಿದ್ದವರ ಕರುಣ ಸಂಪಾದಿಸಿ
ಪುಣ್ಯಭೂಮಿಯನು ಹಾರೈಸುವ ನಿತ್ಯಾ ೫
ಅವೈಷ್ಣವನು ಹರಿ ಎಂದು ನುಡಿವಡೆ ತಾನು
ಅವನಂತೆ ಸ್ಮರಿಸದೇ ಸುಮ್ಮನಿದ್ದೂ
ಭವವದ್ದು ಭಾಗ್ಯವನು ಅಪೇಕ್ಷಿಸದೇ ಮುಂದೆ
ಜವನ ದೂತರಿಗೆ ಮಹ ಭೀತಿ ತೋರುತ ನಿತ್ಯ ೬
ಭೂಸುರರ ಪಾದದಲಿ ವಿಶ್ವಾಸ ಇಟ್ಟು ದು
ರಾಶೆಯನು ಮಾಡಿ ನರರಾಶ್ರೈಸದೆ
ಏಸೇಸು ವಿಪತ್ತು ಗುಣ ಮೇಲಟ್ಟಿದರು
ಲೇಶವಾದರು ಧೈರ್ಯಗೆಡದೆ ಮತಿಯಲಿ ನಿತ್ಯ ೭
ಕಾಲ ಮೃತ್ಯು ಬಂದು ಹುಂಕರಿಸಿ ನಿಂದು ಮಹ
ಜ್ವಾಲೆಯನು ತೋರಿ ಕಠಿಣೋಕ್ತಿಯಲ್ಲೀ
ಏಳೇಳು ಎನುತ ಎಬ್ಬಿಸಿದ ಕಾಲಕೆ ತನ್ನ
ನಾಲಿಗೆಲಿ ಹರಿ ಕೃಷ್ಣ ಕೇಶವನೆನುತ ನಿತ್ಯಾ ೮
ಸಕಲ ಚೇಷ್ಟಾದಿಗಳು ಹರಿಮಾಡಿಸಲು ಉಂಟು
ಮುಕುತಿ ನರಕವೆಂಬ ಯೋಚನ್ಯಾಕೆ
ಭಕುತವತ್ಸಲ ಸಿರಿ ವಿಠ್ಠಲನಲ್ಲಿ
ಸುಖ ದು:ಖವಿತ್ತದು ಸಮ್ಮತವೆನುತ ನಿತ್ಯಾ ೯

೬೨
ಭಜಿಸಿದ್ಯಾ ಈ ಭಾಗ್ಯನಿಧಿಯಾ
ಭಜಿಸಿದ್ಯಾ ಈ ಭಾಗ್ಯನಿಧಿಯಾ ನೋಡು
ತ್ರಿಜಗವಂದಿತ ಗುಣಾಂಬುಧಿಯಾ ಹಾಹಾ
ಸುಜನರ ಹೃದಯ ಪಂ
ಕಜ ಕರ್ಣಿಕೆವಾಸಾ ಅಜಸುರಾರ್ಚಿತ ಪಾದಾ
ರಜತಮೋ ದೂರನ್ನ ಪ
ಮಣಿಮಯ ಖಚಿತ ಕಿರೀಟ ಚಂದ್ರ
ಮನ ಸೋಲಿಸುವ ಲಲಾಟ
ಸಣ್ಣ ಫಣಿ ಕಸ್ತೂರಿ ನಾಮಾ ಮಾಟಾ
ನಮ್ಮನು ನೋಡುವ ವಾರೆ ನೋಟಾ ಹಾಹಾ
ಕನಕ ಮಕರ ಮೋಹನ ಕುಂಡಲ ಕರ್ಣ
ಮಿನುಗುವ ಕದಪು ಆವಿನ ಸೋಲಿಸೆ ನಿತ್ಯಾ ೧
ಭೃಂಗ ಕುಂತಳ ಕೇಶಾ ಪುಬ್ಬು ಅಂಗಜ ಚಾಪಾ ವಿಲಾಸ ಉ
ತ್ತುಂಗ ಚಂಪಕ ಕೋಶಾ ನಾಸಾರಸಾ
ರಂಗುದುಟಿಯ ಮಂದಹಾಸಾ ಹಾಹಾ ತಿಂಗಳ ಎಳೆ ಬೆಳ
ದಿಂಗಳಾ ಮೀರೆ ಭೂ ಮಂಗಳಾಕೃತಿ ತಿರುವೆಂಗಳ ಸ್ವಾಮಿಯ ೨
ಪರಿಮಳ ವೀಳ್ಯೆ ಕರ್ಪುರಾ ವಿಟ್ಟಾ
ಕರಿಡಿಗೆ ಬಾಯ ಮಧುರಾ ವಾಣಿ
ಸ್ವರನಾದಾ ಜಲಧಿ ಗಂಭೀರಾ ದಂತ
ಪರಿಪಙË್ತ ಸಮ ವಿಸ್ತಾರ ಹಾಹಾ ಮಿರುಗುವಾನಂತ ಚಂ
ದಿರ ತೇಜಾಧಿಕ ಮುಖಾ ಪರಿಪರಿ ವೇದಾವು
ಚರಿಸುವ ಚತುರನ್ನ ೩
ಬಕುಳಾರವಿಂದ ಮಲ್ಲಿಗೆ ಕುರುವಂಕ
ಪನ್ನೇರು ಸಂಪಿಗೆ ಪೊಂಗೇ
ತಕಿ ಮರುಗ ಶಾವಂತಿಗೆ ಭೂ ಚಂಪಕೆ
ಜಾಜಿ ಇರುವಂತಿಗೆ | ಹಾಹಾ |
ಸಕಲವು ತುರುಬಿರೆ ಮುಕುಳಿತಾ ವಿಕಸಿತಾ
ಮಕರಂದಾ ಮಾರಂದೋದಕ ಸುರಿಯಲಿಂದು೪
ಕಡಗ ಕಂಕಣ ಮುದ್ರೆ ಬೆರಳಾ ಪಾಣಿ
ನಿಡಿದೋಳು ಕಕುಭುಜಾ ಕೊರಳಾ ಸ್ಕಂಧಾ
ಪಡಿಸಪ್ತ ಪರ್ಣಾದಿ ಸರಳಾ ಬೆನ್ನು
ಮುಡಿಯಲಿಟ್ಟಾ ಮಣಿ ಹರಳಾ | ಹಾಹಾ|
ಜಡಿತದ ಪವಿ ಅಳವಡಿಸಿದ ಕೇಯೂರ
ಒಡನೆ ತಾಯಿತ ಕೀರ್ತಿ ವಡಿವೇಲಿ ಮೆರೆವನ್ನ ೫
ಕರತಳ ರೇಖೋಪರೇಖಾ ಕಾಂತಿ ಅರುಣ
ಸುರವಿ ಮಯೂಖಾ
ಬೇರೆ ಪರಿಶೋಭಿಸುವ ಹಸ್ತಶಾಖಾ
ಮೇಲು ಧರಿಸಿದ ಚಕ್ರಾದಿ ಶಂಖಾ | ಹಾಹಾ |
ಸರಿಗೆ ಕೌಸ್ತುಭ ಮಣಿ ಸಿರಿವತ್ಸ ವನಮಾಲಾ
ಉರವೈಜಯಂತಿ ಮಂದಾರ ಹೀರ ಹಾರನ್ನ೬
ಮುತ್ತು ವೈಢೂರ್ಯ ಪ್ರವಳಾ ಪಚ್ಚ್ಚೆ ಕೆತ್ತಿದ ಪದಕ ನ್ಯಾವಳಾ
ಸುತ್ತಸುತ್ತಿದ ಸನ್ನುಡಿವಾಳಾ ಈತಾ
ಸ್ತುತಿಪ ಜನಕೆ ಜೀವಾಳಾ | ಹಾಹಾ |
ಪ್ರತ್ಯೇಕವಾಗಿ ತೂಗುತಿಹ ಸರಗಳು
ತತ್ತುಲಸಿಧಾಮ ಚಿತ್ರವಾಗಿರೆ ಬಲು ೭
ಪುಣುಗು ಕೇಶರಗಂಬೂರ ಗೋರೋ
ಚನ ನಖ ಚಂದನಾ ಅಗರಾ ಪಚ್ಚೆ
ತೆನೆ ಮೃಗನಾಭಿ ಪನ್ನೀರಾ ವ್ಯಾಳಾ
ಘನ ಪರಿಮಳ ಗಂಧ ಸಾರಾ | ಹಾಹಾ |
ತನುವಿಗೆ ತನುವು ಲೇಪನವಾದಾ ಸೊಗಸು ವಾ
ಸನೆ ಸುತ್ತ ಘಮಘಮ ತನರು ಹಾವಳಿ ತಿಳಿ ೮
ತ್ರಿವಳಿ ಉಪಗೂಢ ಜಠರಾ ಅಖಿಳಾವನಿ ಧರಿಸಿದ ಧೀರಾ ನಾಭಿ
ಸುವರ್ಣ ಕುಸುಮ ಮಂಜೀರಾ
ಮೃಗ ದೇವ ಉಡಿ ಉಡದಾರಾ | ಹಾಹಾ |
ಭವಕಿಂಕಿಣಿ ತಳಲಾವಿ ವಸನ ಬಿರು
ದಾವಳಿ ತೊಡರು ದೈತ್ಯಾವಳಿ ಹರನನ್ನಾ ೯
ಊರು ಜಾನು ಜಂಘೆ ಗುಲ್ಫಾ ವಿಚಾರಿಸೆ ಕ್ರಮಾತು ಅಲ್ಪಾ ತನ್ನ
ತೋರುವ ಜನರಿಗೆ ಅಲ್ಪಾ ಗುಣ ಸಾರಮಾಡಿಪ್ಪ
ಸಂಕಲ್ಪಾ | ಹಾಹಾ|
ವಾರಣಾ ಕರದಂತೆ ಹಾರೈಸುಯಿಂತು ನೂ
ಪುರ ಕಡಗ ಗೆಜ್ಜೆ ಚಾರು ಚರಣ ಪೆಂಡೆ೧೦
ಮೃದುದಳಾಂಗಲ ನಖ ಭಾಸಾ ರಕ್ತ ಪದತಳಧ್ವಜ
ವಜ್ರಾಂಕುಶ ಚಕ್ರ
ಪದುಮಾದಿ ಚಿಹ್ನ ನಿರ್ದೋಷ
ಸುಧಿಯಾ ಸುರಿವ ಪೀಠ ಸರಸಾ | ಹಾಹಾ |
ತ್ರಿದಶನಾಯಕ ಶಿವ ವಿಧಿಗಳ ಮುಕುಟ
ಪಾದದಲಿ ಸಮ್ಮರ್ದವಾದುದು ನೋಡಿ ತರುವಾಯಾ ೧೧
ಭಾನು ಶಶಿವರ್ಣ ಪಾದಾ ಪಾಪಕಾನನ
ದಹಿಸುವ ಪಾದಾ ಕಾಮ
ಧೇನು ಚಿಂತಾಮಣಿ ಪಾದಾ ಬಲು
ಕಾನನ ದಹಿಸುವ ಪಾದಾ | ಹಾಹಾ |
ಅನಂತ ದಿನಕ್ಕೊಮ್ಮೆ ನೀನೇ ಗತಿಯೆಂದಾ
ಮಾನವಗೆ ಬಂದು ಕಾಣಿಸಿಕೊಂಬನ್ನ೧೨
ಅಪದಕ್ಷ ಸಾರಾಧ್ಯಕ್ಷ ಸರ್ವವ್ಯಾಪಕ ಕರುಣಿಕಟಾಕ್ಷ ಜಾಗ್ರತ್
ಸ್ವಪ್ನದಲ್ಲಿ ಪ್ರಾಜ್ಞಾದಕ್ಷ ನಿಜ ಆಪನ್ನರಿಗೆ ದಾವಾ ವೃಕ್ಷ | ಹಾಹಾ |
ರೂಪ ರೂಪಾಂತರ ವ್ಯಾಪಾರ ಮಾಳ್ಪನ್ನ
ಆಪಾದ ರತುನ ಮೌಳಿಪರಿಯಂತರಾ೧೩
ಹಿಂದಣ ಅನುಭವ ಧ್ಯಾನಾ ವೇಗ ತಂದು
ಸಂಪಾದಿಸು ಜ್ಞಾನಾ ಭಕ್ತಿ
ಯಿಂದ ಮುಂದಕೆ ನಿದಾನಾ ಚಿತ್ತಯಿಂದಾ
ಕೊಂಡಾಡು ಮುನ್ನಿನಾ | ಹಾಹಾ |
ಬಂಧನ ಹರಿಸಿ ಆನಂದವ ಕೊಡುವ ಮು
ಕುಂದ ಅನಿಮಿತ್ತ ಬಂಧು ವೆಂಕಟನ್ನ ೧೪
ಭುಜಗಾದ್ರಿನಿಲಯಾ ಗೋಪಾಲಾ ನಿತ್ಯ
ಭಜಿಸುವ ಜನರಿಗೆ ಶೀಲಾ ಪುಣ್ಯ
ವ್ರಜ ಪಾಲಿಸುವ ವಿಶಾಲಾ ಇತ್ತು
ನಿಜರೊಳಗಿಡುವ ಈ ಕೂಲಾ | ಹಾಹಾ |
ವ್ರಜದಲಿ ಪುಟ್ಟಿದಾ ಸುಜನಾಂಬುಧಿ ಸೋಮ
ವಿಜಯವಿಠ್ಠಲರೇಯಾ ಗಜರಾಜವರದನ್ನಾ ೧೫

೧೧೮
ಭಜಿಸಿದ್ಯಾ | ವೆಂಕಟನಾ ನೀ | ಭಜಿಸಿದ್ಯಾ ಪ
ಭಜಿಸಿದ್ಯ ಈ ಭಾಗ್ಯನಿಧಿಯ | ನೋಡು |
ತ್ರಿಜಗವಂದಿತ ಗುಣಾಂಬುಧಿಯಾ ||ಆಹ||
ಸುಜನರ ಹೃದಯ ಪಂಕಜ ಕರ್ಣಿಕೆ ವಾಸ |
ಅಜ ಸುರಾರ್ಚಿತ ಪಾದರಜ ತಮದೂರನ್ನ ಅ.ಪ.
ಮಣಿಮಯ ಖಚಿತ ಕಿರೀಟ ಚಂದ್ರ
ಮನ ಸೋಲಿಸುವ ಸುಲಲಾಟ | ಚನ್ನ |
ಫಣಿಗೆ ಕಸ್ತೂರಿನಾಮ ಮಾಟ | ನ
ಮ್ಮನು ಪಾಲಿಸುವ ವಾರೆನೋಟ |ಆಹ|
ಕನಕ ಮೋಹನ ಕುಂಡಲಾ ಕರ್ಣ
ಮಿನುಗುವ ಕದವು ಆವಿನ ಸೋಲಿಪ ನಿತ್ಯಾ೧
ಭೃಂಗಕುಂತಳ ನೀಲಕೇಶ | ಹುಬ್ಬು |
ಅಂಗಜ ಚಾಪ ವಿಲಾಸ | ಉ |
ತ್ತುಂಗ ಚಂಪಕ ಕೋಶನಾಸ | ರಸ
ರಂಗು ತುಟಿ ಮಂದಹಾಸ || ಆಹ ||
ತಿಂಗಳು ಯೆಳೆ ಬೆಳೆದಿಂಗಳು ಮೀರಿ ಭೂ
ಮಂಗಳ ಕೃತಿ ತಿರುವೆಂಗಳ ಸ್ವಾಮಿಯ ೨
ಪರಿಮಳವೀಳ್ಯ ಕರ್ಪೂರ | ಇಟ್ಟು |
ಕರಡಿಕೆ ಬಾಯ ಮಧುರ | ವಾಣಿ
ಸ್ವರನಾದ ಜಲಧಿ ಗಂಭೀರ | ದಂತ
ಪರಿಪಜ್ಞೆ ಸಮ ವಿಸ್ತಾರ ||ಆಹ ||
ಮಿನುಗುವನಂತ ಚಂದೀರ ತೇಜಾಧಿಕ ಮುಖ
ಪರಿಪರಿ ವೇದ ಉಚ್ಚರಿಸುವ ಚತುರಾರ ೩
ಬಕುಳಾರವಿಂದ ಮಲ್ಲೀಗೆ | ಅದು |
ಕುರುವಕ ಪನ್ನೀರು ಸಂಪಿಗೆ |
ಭೂಚಂಪಕ ಜಾಜಿ ಯಿರುವಂತಿಗೆ |
ಪೂಕೇತಕಿ ಮರುಗ ಶಾವಂತಿಗೆ ||ಆಹ||
ಸಕಲ ಪೂತರುವಿರೆ ವಿಕಸಿತ ಮುಕುಳಿತ
ಮಕರಂದ ಮೊರದ್ವಂದ್ವ ಕಸ್ತೂರಿಯ ನಿಂದು೪
ಕರತಾಳರೇಖೋಪರೇಖ | ಕಾಂತಿ |
ಅರುಣಸಾರಥಿ ಮಯೂಖ | ಬೇರೆ |
ಪರಿ ಶೊಭಿತ ಹಸ್ತ ಶಂಖ | ಗದೆ |
ಧರಿಸಿದ ಚಕ್ರ ನಿಶ್ಶಂಕ || ಆಹ |
ಸರಿಗೆ ಕೌಸ್ತಭಮಣಿ ಸಿರಿವತ್ಸವನ ಮಾಲೆ
ಉರ ವೈಜಯಂತಿ ಮಂಜರಹೀರ ಹಾರನ್ನ೫
ಕಡಗ ಕಂಕಣ ಮುದ್ರೆ ಬೆರಳ | ಪಾಣಿ |
ನಿಡಿತೋಳ ಕಕುಭುಜಿ ಕೊರಳ ಸ್ಕಂಧ
ವಿಡಿ ಸಪ್ತವರಣ ವಿಸರಳ | ಬೆನ್ನು |
ಮುಡಿಯವಿಟ್ಟ ಮಣಿಹವಳ ||ಆಹ |
ಝಡಿತದ ಪವಳ ವಡಸೀದ ಕೇಯೂರ
ವಡನೆ ಕಾಯಿಕ ಕೀರ್ತಿ ವಡಲೀಲಿ ಮೆರೆವನ್ನ೬
ಮುತ್ತು ವೈಢೂರ್ಯ ಪ್ರವಾಳ | ಪಚ್ಚೆ |
ಕೆತ್ತಿದ ಪದಕನ್ಯಾವಳ ಸುತ್ತ
ಸುತ್ತಿದ ಸನ್ಮುಡಿವಾಳ | ಇತ್ತ
ತುತಿಪ ಜನಕೆ ಜೀವಾಳ ||ಆಹ ||
ಪ್ರತ್ಯೇಕವಾಗಿ ತೂಗುತ್ತಿಹ ಸರಗಳ
ಸುತ್ತುಲಸಿಯ ಮಾಲೆ ಚಿತ್ರವಾಗಿರೆ ಬಹಳ ೭
ಪುಣುಗು ಕೇಸರಿ ಅಂಬರ | ಗೋರೋ
ಚನ ನಖಚಂದ ನಗಾರು | ಪೆಚ್ಚಿ |
ತೆನೆ ಮೃಗನಾಭಿ ಪನ್ನೀರ | ವೆಳ |
ಘನಪರಿಮಳ ಗಂಧಸಾರ ||ಆಹ ||
ತನುವಿಗೆ ತನುವು ಲೇಪನವಾದ
ಸೊಗಸು ಸಲಿಸುತ್ತ ಒಪ್ಪುವ ಘನರುಹ ತ್ರಿವಳಿಯಾ ೮
ತ್ರಿವಳಿ ಉಪಗೂಢ ಜಠರ | ಅಖಿ |
ಳಾವನೀ ಧರಿಸಿದಾ ಧೀರಾ | ಮೇಲೆ |
ಸುವರ್ಣ ಕುಸುಮ ಮಂದಿರಾ |
ಮೃಗದೇವ ಉಡಿನಡು ಧಾರಾ ||ಆಹ ||
ಭಾವ ಕಿಂಕಿಣಿ ತೋಳಲಿವಾಸನಾ ಬಿರು
ದಾವಳಿಕೊಂಡರು ದೈತ್ಯಾವಳಿ ಹಾರನ್ನಾ ೯
ಊರು ಜಾನು ಜಂಘ ಗುಲ್ಫ | ವಿ
ಚಾರ ಶಕ್ರ ಮಾತು ಅಲ್ಪ | ಎನ್ನ
ತೋರುನೆಯ ಅಗ್ರ ಸ್ವಲ್ಪ | ಗುಣ |
ಸಾರಮಾಡಿಪ್ಪ ಸಂಕಲ್ಪ ||ಆಹ ||
ವಾರಣಕರದಂತೆ ಹಾರೈಸು ಈ ತನೂ
ಪುರ ಕಡಗಾ ಗೆಜ್ಜೆ ಚಾರುಚರಣ ಪೆಂಡ್ಯಾ೧೦
ಮನು ಶಶೀವರ್ಣ ಪಾದ | ಪಾಪ
ಕಾನನ ದಹಿಸುವ ಪಾದ | ಕಾಮ
ಧೇನು ಚಿಂತಾಮಣಿ ಪಾದ | ಬಹು
ಜ್ಞಾನಾನಂದಪ್ರದ ಪಾದ ||ಆಹಾ||
ಅನಂತ ಚಿನ್ಮಯ ಒಮ್ಮೆ ನೀನೇ ಗತಿಯೆಂಬ
ಮಾನವಗೆ ಬಂದು ಕಾಣಿಸಿಕೊಂಬನ೧೧
ಮೃದುತಾಳಾಂಗುಲಿನಿಸಿ ಭಾಸ | ರಕ್ತ
ಪದತಳ ಧ್ವಜ ವಜ್ರಾಂಕುಶ | ಚಕ್ರ
ಪದುಮ ಚಿಹ್ನೆ | ನಿರ್ದೋಷ |
ಸುಧಿ ಸುಧ ಕಥಾಪಾಠ ಸರಸ ||ಆಹ||
ತ್ರಿದಶನಾಯಕ ಶಿವ ವಿಧಿಗಮುಗುಟ
ಪಾದದಲಿ ಸಮರ್ಥವಾದರು ನೋಡು ತರುವಾಯ ೧೨
ಆಪದ್ರಕ್ಷಕ ಸುರಾಧ್ಯಕ್ಷ | ಜಗ |
ದ್ವ್ಯಾಪಕ ಕರುಣಾಕಟಾಕ್ಷ | ಜಾಗ್ರತ್ |
ಸ್ವಪ್ನದಲಿ ನೀನೆ ದಕ್ಷಾ | ನಗೆ |
ಆಪನ್ನರಿಗೆ ನೀನೆ ವೃಕ್ಷಾ ||ಆಹ ||
ರೂಪರೂಪಾಂತರ ವ್ಯಾಪಾರ ಮಾಳ್ಪನ್ನ
ಆಪಾದ ಮೌಳಿ ಪರಿಯಂತರ ನೀನು ೧೩
ಹಿಂದಾಣ ಅನುಭವ ಧಾನ್ಯ | ಲೋಹ |
ತಂದು ಸಂಪಾದಿಸೋ ಜ್ಞಾನ | ಭಕ್ತಿ |
ಯಿಂದ ಮುಂದಕೆ ನಿಧಾನ | ಚಿತ್ತ |
ಯಿಂದು ಕೊಂಡಾಡೋ ಮುನ್ನೀನ ||ಆಹ||
ಬಂಧನ ಹರಿಸಿ ಆನಂದಾವ ಕೊಡುವ ಮು-
ಕುಂದ ಅನಿಮಿತ್ತ ಬಂಧು ವೆಂಕಟನಾ ನೀ೧೪
ಭುಜಗಾದ್ರಿ ನಿಲಯ ಗೋಪಾಲ | ನಿತ್ಯ |
ಭಜಿಸುವ ಜನರಿಗೆ ನೀಲ | ಪುಣ್ಯ |
ವ್ರಜವ ಪಾಲಿಸುವ ವಿಶಾಲ | ವಿತ್ತು |
ನಿಜದೊಳಗಿಡುವ ಈ ಕೋಲ ||ಆಹ||
ವ್ರಜದಲ್ಲಿ ಪುಟ್ಟಿದ ಸುಜನಾರಾಂಬುಧಿ ಸೋಮ |
ವಿಜಯವಿಠ್ಠಲರೇಯ ಗಜರಾಜವರದನ್ನ ೧೫

ಭಜಿಸಿರೋ ಬಿಡದೆ ವಿರಾಜಮಾನಸರಾಗಿ :

೩೩೨
ಭಜಿಸಿರೊ ಬಿಡದೆ ವಿರಾಜಮಾನರಾಗಿ ನಿತ್ಯ
ಕುಜನರೊಳಾಡದಲೆ ನಿಜ ಭಕುತಿಯಿಂದ
ಭುಜಬಲವುಳ್ಳ ಪರಜರಟ್ಟುವ ದಿ
ಗ್ವಿಜಯ ಸತ್ಯಪೂರ್ಣರ ಸುಜನರೊಂದಾಗಿಪ

ಭರದಿಂದ ಬಂದು ನಿಂದು ನಿರೀಕ್ಷಿಸಿ ನಿರ್ಮಳ
ಕರಯುಗಳ ಮುಗಿದು ಶಿರವಾನಿಲ್ಲದೆ
ಧರಣಿಯಾ ಮ್ಯಾಲೊಂದು ತೀವರ ಸಾಷ್ಟಾಂಗ ನಮ
ಸ್ಕರಿಸಿ ಕೊಂಡಾಡಿ ನಿಂದಿರಲಾನರರಿಗೆಲ್ಲ
ಪರಿಹರವೊ ಬಂದರಘಳಿಗೆಯಲಿ
ಪರಿಪರಿ ಜನ್ಮದ ತರತರದಘಗಳು
ಸರಿಯೆನ್ನಬಹುದಿವರ ದರ್ಶನ ಲಾಭ
ದುರುಳರಿಗಾಯ್ತು ಮರಿಯದೆ ಚೆನ್ನಾಗಿ೧
ನೆರೆನಂಬಿ ನಿಮ್ಮಯ ಗೋತುರ ಸಹಿತಕ್ಕೆ ಜ್ಞಾನಾಂ
ಕುರವಾಗುವುದು ಇದು ಉರುಕಾಲ ಸಿದ್ಧವೆನ್ನಿ
ತರತಮ್ಯ ತತ್ವ ತಾತ್ಪರಿಯ ವಿಧ ತಿಳಿದು
ತಿರಗುವರನುದಿನ ಸುರರು ಮೆಚ್ಚುತಲಿರೆ
ಮುರರಿಪು ಚತುರ್ದಶ ಧರಣಿಗೆ ಪರನೆಂದು
ಬಿರಿದನು ಎತ್ತಿ ಡಂಗುರವ ಹೊಯಿಸಿ ಡಿಂಗರರಿಗೆ ಸಚ್ಛಾಸ್ತ್ರ
ಅರುಹಿ ಸುಖಾರ್ಥವ ಕರೆದು
ಕೊಡುವ ಯತಿಶಿರೋಮಣಿ ಕರ್ನಾ ೨
ಅವನಿಯೊಳು ಸತ್ಯಾಭಿನವತೀರ್ಥರ
ಪಾದಾಂಬುಜಾತ ಕೃಷ್ಣಾ ತನು
ಭವಸರಿತ ನಿವಾಸಾ ದಿವಿಜೇಶನಾಯುಧ
ಕವಚದಿಂದಲಿ ತನ್ನವರನ ಪೊರೆದೆತ್ತಿ
ನವವಿಧ ಬಗೆ ತೋರಿ ತವಕದಿ ಕೋಲುಪುರ
ಪವಿತುರ ಸ್ಥಳದಲ್ಲಿ ರವಿಯಂತೆ ಪೊಳವರು
ಭವದೋಷ ಕಳೆವುತಾ ಕವಿಗಳ ಮನೋಹರ ವಿಜಯವಿಠ್ಠಲನ
ಶ್ರವಣ ಮನನ ಧ್ಯಾನವನು ಬಲ್ಲವರಾ೩

೧೧೯
ಭಳಿರೆ ತಿರುಪತಿ ತಿಮ್ಮಾ |
ಛಲ ಮಾಡುವ ಲೀಲೆಗಳರಿನ್ನಾರನು ಕಾಣಿನೊ |
ಇಳಿಯೊಳಗೆ ಬಿರಿದು ಸಲ್ಲುವದು ನಿಜ ಭಕ್ತವ |
ತ್ಸಲನೆಂಬೊ ನಾಮವನು ಧ್ವಜವೆತ್ತಿ ಮೆರವುವದೊ ಪ
ಅತಿಶ್ರೇಷ್ಠನಾಗಿ ಕೀರ್ತಿ ಪಡೆದು ಪಸರಿಸಿ |
ಪ್ರತಿಯಿಲ್ಲ ಎನಿಸಿಕೊಂಬೆ ನಾ |
ಸತತವನು ಪರರಾಶೆ ಮಾಡದಲೆ |
ಚತುರತನ ಚತುರೋಪಾಯದಿ ಬಾಳುವೆ |
ಕ್ಷಿತಿಯೊಳಗೆ ಅಭಿಮಾನ ಕ್ಷಿತಿಯಾಗದಂತೆ ಸು |
ಮತಿಗಳಿಂದಲಿ ಬದುಕುವೆ | ಸುತ ಸಹೋದರ ನಡುವೆ |
ಲತೆವೊಲು ಬೆಳದು ಬಲು |
ಅತುಳ ಬಲವಂತನೆನೆಸುವೆನೆಂದು ಇದ್ದೆನಲ್ಲನೆ ೧
ಜಡದೇಹವನು ಮೆಚ್ಚಿ ಮುಪ್ಪು ದೂರೆಂತೆಂದು |
ಕಡು ಸಾಹಸವ ತಾಳಿದೇ ಒಡಿಯರಾರೆನಗಿಲ್ಲ ಒಬ್ಬರಿಗೆ |
ಒಡಿಯನೆಂದು ಎಡೆಎಡೆಗೆ ಪೇಳಿಕೊಂಬೆ |
ಮಡಗಿ ಧನವನು ಧರ್ಮ ಕೊಡದತೀ ಕೃಪಣನಾಗಿ |
ಅಡಿಗಡಿಗೆ ಉಚ್ಛೈಸುವೆ |
ಪಡವೆ ಸಂಸಾರವೆಂಬೊ ಅಹಂಕಾರವನು ತಾಳಿ |
ಎಡಹಿ ಮುಂಗಾಣದ ಅಧಮನಂತೆ ಇದ್ದೆನಲ್ಲದೆ ೨
ಪುರುಷ ಪಟಾಂತ್ರದವನಾಗಿ ಎಲ್ಲ | ಧಿಕ್ಕರಿಸಿ ನಿರಾಕರಿಸುವೆ |
ಜರೆದು ನಿಷ್ಕರುಣದಲಿ | ವರ ಅಭ್ಯಾಗತಿಗಳನು |
ಹುರುಳಗೆಡಿಸಿ ನೋಡುವೆ |
ಗುರು ಹಿರಿಯರನು ಮರುಗುವಂತೆ ಕೇಡು ನುಡಿದು ಉ |
ತ್ತರ ಅನುತ್ತರನಾಡುವೆ |
ಪರಿಪರಿಯ ಮಾಯದ ಶರಧಿಯೊಳು ಬಿದ್ದು ಲಜ್ಜಿ
ಉರಿಯೊಳಗೆ ಪೊಕ್ಕಂತೆ ಮರುಗುತ್ತಿದ್ದನಲ್ಲವೆ ೩
ಅಪರಾಧವೇನಯ್ಯಾ ವಿಪರೀತ ತೋರದೆ | ಅ |
ಪರಿಮಿತ ಪರಮಹಿಮನೆ |
ಕಪಟ ನಾಟಕನೆಂಬ ಪೆಸರುಂಟು ಮಡದಿ |
ಉಪಕಾರಕ್ಕಪಕಾರವೊ |
ಚಪಳನಜಮಿಳಗಂದು ಮತಿಸುಳೂದಿಂದಲಿ |
ನಿಪುಣತನವಿರಲಿಲ್ಲವೊ | ಸಪುತೆರಡು
ಲೋಕದೊಳಗಾನೆಂದು ಇದ್ದೆನಿಲ್ಲವೊ |
ವಿಪುಳ ವೈಕುಂಠ ತೊಲಗಿಸದೆ ಸುಮ್ಮನಿರಬಲ್ಲನೆ೪
ಪರದೈವ ನಾನೆಂದು ಪೇಳುವರ ಗಂಡನೆ |
ಸರಿಗಾಣೆ ಈ ಮಹಿಯೊಳು |
ಕರುಣದಳತಿಯಲಿ ಕಿಂಕರರ ಪತಿ |
ಕರಿಸಿ ನಿಜಕರವ ಪಿಡಿಯಾಡದೆ |
ಹರಸುರಪ ಪರಮೇಷ್ಠಿ ನರ
ಹರಿದು ತಲ್ಲಣಿಸಿ ನೆರದು ಭೀಕರಗೊಂಬರು |
ಪರಮಾಣು ರೂಪ ಭಕ್ತರ ಪರುಶ |
ಸಿರಿ ವಿಜಯವಿಠ್ಠಲ ವರ ವೆಂಕಟನೆ | ಶರಣಜನ ಪರಿವಾರ೫

೧೪೬
ಭಳಿರೆ ಭಳಿರೆ ನರಸಿಂಹ ಮಹಾಸಿಂಹ |
ಮಲಮಲಾ ಮಲತವರ ವೈರಿ ಉರಿಮಾರಿ ಪ
ನಗನಗಾ ನಗನಗಗಳಲ್ಲಾಡೆ ಚತುರ್ದಶ |
ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ ||
ಹಗೆ ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ |
ಉಗು ಉಗು ಉಗುಳುತ್ತ ಬಂದ ನರಸಿಂಹ ೧
ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ |
ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ ||
ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ |
ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ ೨
ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ |
ಬಗ ಬಗ ಬಗ ಬಗದು ರಕುತವನ್ನು |
ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ |
ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ ೩
ಯುಗ ಯುಗ ಯುಗ ಯುಗದೊಳಗೆ ಪ್ರಣತಾರ್ತಿ ಹರನೆಂದು |
ಝಗ ಝಗಾ ಝಗಝಗಿಪ ಮಕುಟ ತೂಗೆ |
ನಗು ನಗು ನಗು ನಗುತ ಸುರರು ಗಗನದಿ ನೆರೆದು |
ಮಿಗಿ ಮಿಗಿ ಮಿಗಿ ಮಿಗಿಲೆನೆ ನರಸಿಂಹಾ ೪
ಒಂದೊಂದೊಂದೊಂದು ಮುನಿಗಳಿಗೊಲಿದು |
ಅಂದಂದಂದಂದದೀಗಾಯತ ವೊಲಿದು |
ಅಂದಂದಂದವ ಕಾವ ಚೊಳಂಗಿರಿ |
ಮಂದಿರನೆ ವಿಜಯವಿಠ್ಠಲ ನರಸಿಂಹಾ ೫

೨೬೨
ಭಾರತೀ ಜನನಿ ಪಾಲಿಸು ನಿತ್ಯ ಮಾರುತನ ರಾಣಿ |
ಭಾರಿ ಭಾರಿಗೆ ಎನ್ನ ಭಾರ ನಿನ್ನದೇ ವಾಣೀ ಪ
ಭಕುತಿ ಇಲ್ಲದೇ ಅನುದಿನ |
ಅಕಟನಿಲ್ಲದೆ |
ಸಕಲ ಠಾವಿನಲ್ಲಿ ಅರ್ಭಕನಾಗಿ ತಿರುಗಿ ಪಾ |
ಪಕೆ ಎರಗಿದೆ ಯಾತಕೆ ಬಾರದವನಾದೆ ೧
ಆರನ್ನ ಕಾಣದೆ ನಿನ್ನನು ನಾ |
ಸಾರಿದೆ ಮಾಣದೆ |
ವಾರ ವಾರಕೆನ್ನ ಉದ್ಧಾರವ ಮಾಳ್ಪುದು |
ಕಾರುಣ್ಯದಿಂದಲಿ ಶೃಂಗಾರವಾರಿಧಿ ವೇಗ ೨
ನುತಿಸಿ ವಂದನೆ ಮಾಡುವೆ ನಿತ್ಯ |
ಕೃತಿಯನಂದನೆ |
ಸತತ ವಿಜಯವಿಠ್ಠಲನ ಪದಾಬ್ಜದಿ |
ರತಿ ಆಗುವಂತೆ ಸುಮತಿಯನು ಕರುಣಿಸೇ ೩

೨೬೩
ಭಾರತೀ ಭವಹಾರಿಯೆ | ಭಕ್ತರಪ್ರಿಯೆ |
ಭಾರತೀ ಭವಹಾರಿಯೇ ಪ
ಈರೈದು ಇಂದ್ರಿಯಗಳುಗಾರು |
ಮಾಡದಂತೆ ಸಾಕಾರವಾಗಿ ಪಾಲಿಸು ಅ.ಪ.
ಮತಿವಂತನ ಮಾಳ್ಪುದು | ಇದಕೆ ನಿನ್ನ |
ಪತಿಯ ಈಗಲೆ ಕೇಳ್ವುದು |
ಕ್ಷಿತಿಯೊಳು ಹೀನರ ಸ್ತುತಿಸಲರಿಯೆ | ಮು-
ಕುತಿ ಮಾರ್ಗವ ತೋರಿ ಭಕುತಿ ಬೇಗ ಒದಗಿಸು ೧
ಮಹತ್ತತ್ವದಭಿಮಾನಿ ನೀ | ಕಲಿರಹಿತೆ |
ಅಹಿಪತಿ ಅಪ್ಪ ಖಗಪ ಜನನೀ ||
ಮಹಾಪ್ರಮಾಣು ವ್ಯಾಪುತೆ ಸರ್ವಜೀವರ |
ದೇಹದಲಿ ನಿಂದು ಶ್ರೀಹರಿ ಆರಾಧನೆಯ ರಹಸ್ಯವ ೨
ಶರಣು ಶರಣು ಗುಣಮಣಿ | ಚಂದ್ರಪ್ರಕಾಶೆ |
ಪರಮ ಪಾವನಿ ಕಲ್ಯಾಣಿ ತರತಮ್ಯ ಭಾವದಿ ||
ಅರಿದು ಕೊಂಡಾಡುವ ಚಿಂತೆ ಇರಲಿ | ವಿ- |
ಸ್ಮರಣೆಯಾಗದಂತೆ ವಿಜಯವಿಠ್ಠಲನ್ನ ನಿರುತ ಪೊಂದಿಸು ೩

೨೩೨
ಭಾರತೀಶ ಮದ್ಭಾರ ನಿನ್ನದಯ್ಯ | ಕರುಣದಿ ಪಿಡಿ ಕೈಯ್ಯಾ ||
ಪೂರೈಸೆನ್ನ ಮನೋಭಿಲಾಷೆ ಗುರುವೆ | ಭಜಕರ ಸುರತರುವೆದ್ಭ ಪ
ಹರಿಭಕ್ತಾಗ್ರೇಸರನೆ ಹನುಮಂತಾ | ಹರನುತ ಬಲವಂತಾ |
ತರಣಿಕುಲಜ ಶ್ರೀರಾಮನ ಕೈಯಿಂದ | ಬಲುಸಂಭ್ರಮದಿಂದಾ |
ಶರಧಿಯನು ದಾಂಟಿ ಸೀತಾಕೃತಿಯನ್ನ ನೋಡಿ |
ರಣದೊಳಗೋಲ್ಯಾಡಿ |
ದುರುಳ ರಕ್ಕಸರ ದುಷ್ಟ ದನುಜರ | ತರಿದೆ ಲೋಕೈಕ ಸಮರ್ಥಾ ೧
ಕುಂತಿ ಜಠರಾಂಭೋನಿಧಿ ಚಂದ್ರಮನೆ ರಾಜಾಗ್ರೇಸರನೆ |
ಕಂತು ಜನತನಿಚ್ಛಾನುಸಾರವಾಗಿ | ರಣದೊಳಗೆ ಚೆನ್ನಾಗಿ |
ನಿಂತು ದುಷ್ಟ ದುರ್ಯೋಧನಾದಿಗಳನು ಸಂಹರಿಸಿದಿ ನೀನು |
ಭ್ರಾಂತಿ ಮನ ಜರಿವರೇನು |
ಬಲ್ಲರಯ್ಯ ಕರುಣದಿ ಪಿಡಿಯೊ ಕೈಯಾ ೨
ನಡುಮನೆಯೆಂಬೊ ವಿಪ್ರನ ಮನೆಯಲ್ಲಿ | ಅವತರಿಸಿ ಚೆನ್ನಾಗಿ |
ಮೃಡ ಸರ್ವೋತ್ತಮ ಹರಿಯೆ ತಾನೆಂದು | ಮಿಥ್ಯಾಜಗವೆಂದು |
ನುಡಿವ ಜನರ ಮತಗಳನೆ ನಿರಾಕರಿಸಿ ಶಾಸ್ತ್ರವ ರಚಿಸಿ |ಒಡೆಯ ತಂದೆ ಶ್ರೀ ವಿಜಯವಿಠಲನ್ನ ಪೂಜಾಸಕ್ತನೇ ೩

(ಎ) ಭೀಮ
೨೪೫
ಭೀಮ ಪರಿಪೂರ್ಣ ಕಾಮ ಸೋಮಕುಲಾಬ್ಧಿ
ಸೋಮ ರಣರಂಗ ಭೀಮಾ ಆ ಮಹಾದುರಿತ
ರಾಮರಾಸಿಗೆ ದೇವಾ ಮೊಗನೆನಿಸುವ ಭೂಮಿ ಭಾರ ಹರ ಪ
ಧರ್ಮನಂದನನೊಡನೆ ಜನಿಸಿ ಬಂದು
ದುರ್ಮತಿಗಳಾ ಕೂಡ ನಿರ್ಮತ್ಸರಾದಲ್ಲಿರದೆ ನಿರುತ ಛಾತ್ರಾ
ಕರ್ಮದಲ್ಲಿ ಮರೆದೆ ಧರ್ಮಕ ಹಿತರೊಂದು ನಿರ್ಮಿತದರಗಿನ
ಅರ್ಮನೆ ಮಾಡಿರೆ ಮರ್ಮ ತಿಳಿದು ದಾಟಿ
ಮಾರ್ಮಲೆತ ಅಸುರನ ನಿರ್ನಾಮಗೈಸಿದ
ನಿರ್ಮಳಾ ಮನೋಹರಾ ಪೇರ್ಮಿವುಳ್ಳವನೆ೧
ಬಕನ ಸರ್ರನೆ ಸೀಳಿ ಬಿಸಾಟಿ ಪಾಂಚಾಲಕನ ಸಭಾದ ಮೌಳಿ
ಅಕಟ ತೊಲಗಿಸಿ ಗೆಲಿದು ನೆರೆದ ಕಾ
ಮುಕರ ಬಿಂಕವ ಹಳಿದು
ಬಕ ವಿರೋಧಿಯ ಭಕುತಿಯಿಂದಲಿ ಬಲು ಸುಖ ಬಡಿಸುತ ಕು
ಹಕ ಮಾಗಧನ ರಣಮುಖಕಾಹುತಿಯಿತ್ತು
ವಿಕಳತನದ ಕೀಚರ ಕಿಮ್ಮೀರ ಲಿಕಿಲಿಕಿ ಮಾಡಿದ೨
ಗುರುವಿನ ರಥವೆ ತೆಗೆದು ಗಗನಕ್ಕೆ ಭರದಿಂದಲಿ ಬಗೆದು
ಹರಿದಾಡಿ ಕುಣಿಕುಣಿದು ನೆರದ ಸುತ್ತುವದ ರಥಿಕರ ಹಣಿದು
ಅರಿಗಳ ಶಿರಗಳ ತರಿ ತರಿದವನಿಗೆ
ಹರಪಿದೆ ಗುರುಸುತ ಧುರ ಧರದೊಳು
ಹರಿಶರ ಬಿಡಲಂಜದೆ ಎರಗದಲಿಪ್ಪ ಭ
ಳಿರೆ ಪರಾಕ್ರಮ ವರ ವೃಕೋದರ೩
ಕೊಬ್ಬಿದ ದುಃಶಾಸನ್ನ ಉರವಣಿಸಿ ಮಬ್ಬಾದ ಕರಿ ತೀಕ್ಷಣ
ಕಬ್ಬು ತುಡಕಿದಂದದಿ ಪಿಡಿದವನ
ಇಬ್ಬಗದು ಉದರದ ಕೊಬ್ಬು ಹರಿಸಿ ಕರು
ಳಬ್ಬರದಲಿ ಸತಿಗೆ ಉಬ್ಬಿಗೆ ತೀರಿಸಿ
ಇಬ್ಬಲದವರನ ಯೆಬ್ಬಟಲು ಸುರರಭ್ಬೆಭ್ಬೆನುತಿರೆ
ಬೊಬ್ಬಾಟಕೆ ಜಗ ಸುಬ್ಬನ ಸೂರೆ ೪
ಕುರುಪ ಜಲದೊಳಗೆ ಅಡಗಿರಲು
ಬಿರಖು ನುಡಿಯ ಕೆಳಗೆ ಪೊರಡಿಸಿ ಗದೆಯಿಂದಲಿ
ವೈರಿಯ ತೊಡೆ ಮುರಿದು ನಿರ್ಭಯದಿಂದಲಿ
ತುರಗಧ್ವರದಲಿ ಮೆರೆದೆ ದೋಷರಾಶಿ
ವಿರಹಿತ ಕಾಮನೆ ಸುರಮಣಿ ಜಗದಂ
ತರಿಯಾಮಿ ಪರಮಗುರುವೆ ವಿಜಯ
ವಿಠ್ಠಲರಿವ ಭಾರತ ಮಲ್ಲ ಮರುತಾವತಾರ ೫

೫೩೩
ಭೀಮ ಶಾಮ ಕಾಮಿನಿಯಾದನು ಪ
ಭೀಮ ಶಾಮ ಕಾಮಿನಿಯಾಗಲು
ಕಾಮನ ಪತಿ ಪುಲೋಮ ಜಿತುವಿನ
ಕಾಮಿನಿ ಸಕಲ ವಾಮ ಲೋಚನೆಯ-
ರಾಮೌಳಿ ಕೂಗುತಲೊಮ್ಮನದಿ ಪಾಡೆಅ.ಪ
ದಾಯವಾಡಿ ಸೋತು ರಾಯ ಪಾಂಡವರು
ನ್ಯಾಯದಿಂದ ಸ್ವಾಮಿಯ ಸೇವೆಯೆಂದು
ಕಾಯದೊಳಗೆ ಅಸೂಯೆಪಡದಲೆ
ಮಾಯದಲ್ಲಿ ವನವಾಯಿತೆಂದು
ರಾಯ ಮತ್ಸ್ಯನಾಲಯದೊಳು ತಮ್ಮ
ಕಾಜು ವಡಗಿಸಿ ಅಯೋನಿಜೆ ದ್ರೌಪ-
ದೀಯ ವಡಗೂಡಿ ಆಯಾಸವಿಲ್ಲದೆ
ಅಯ್ವರು ಬಿಡದೆ ತಾವಿರಲು ೧
ಬಾಚಿ ಹಿಕ್ಕುವ ಪರಿಚಾರತನದಲಾ
ಪಾಂಚಾಲಿಗೆ ಮತ್ಸ್ಯನಾ ಚದುರೆಯಲ್ಲಿ
ಆಚರಣೆಯಿಂದ ಯಾಚಕರಂದದಿ
ವಾಚವಾಡಿ ಕಾಲೋಚಿತಕೆ
ನೀಚರಲ್ಲಿಗೆ ಕೀಚಕನಲ್ಲಿಗೆ
ಸೂಚಿಸಲು ಆಲೋಚನೆಯಿಂದಲಿ
ನಾಚಿಕೆ ತೋರುತಲಾ ಚೆನ್ನೆ ಪೋಗಲು
ನೀಚ ಖೂಳ ಕರ ಚಾಚಿದನು ೨
ಎಲೆಗೆ ಹೆಣ್ಣೆ ನಿನ್ನೊಲುಮೆಗೆ ಕಾಮನು
ಕಳವಳಿಸಿದ ನಾ ಗೆಲಲಾರೆನಿಂದು
ವಲಿಸಿಕೊ ಎನ್ನ ಲಲನೆಯ ಕರುಣಾ-
ಜಲಧಿಯೆ ನಾರೀ ಕುಲಮಣಿಯೆ
ಬಳಲಿಸದಲೆ ನೀ ಸಲಹಿದಡೇ ವೆ-
ಗ್ಗಳೆಯಳ ಮಾಡಿಪೆನಿಳೆಯೊಳೆನ್ನೆ-ಆ-
ಖಳನಾ ಮಾತಿಗೆ ತಲೆದೂಗುತಲಿ ಅ-
ನಿಳಜನೆನ್ನ ನೀ ಸಲಹೆಂದ ೩
ಮೌನಿ ದ್ರೌಪದಿ ಮೌನದಲ್ಲಿ
ಹೀನನಾಡಿದಾ ಊನ ಪೂರ್ಣಗಳು
ಮನೋಭಾವವ ಧೇನಿಸಿ ನೋಡುತ್ತ
ಹೀನಕೆ ತಿಳಿದಳು ಮನದಲಿ
ದೀನವತ್ಸಲ ಕರುಣವು ಮೀರಿತು
ಕಾನನದೊಳ್ಕಣ್ಣು ಕಾಣದಂತಾಯಿತು
ಏನು ಮಾಡಲೆಂದು ಜಾಣೆಯು ಚಿಂತಿಸಿ
ಅನಿಲಗೆ ಬಂದು ಮ-ಣಿದಳು೪
ಚೆಲ್ವೆ ಕಂಗಳೇ ನಿಲ್ಲೆ ನೀ ಘಳಿಗೆ
ಸಲ್ಲದೆ ಆತನ ಹಲ್ಲನು ಮುರಿದು
ಹಲ್ಲಣವ ಹಾಕಿ ಕೊಲ್ಲುವೆ ನಾನೀಗ
ತಲ್ಲಣಿಸದಿರೇ ಗೆಲ್ಲುವೆನೆ
ಪುಲ್ಲನಾಭ ಸಿರಿನಲ್ಲನ ದಯವಿ-
ದ್ದಲ್ಲಿಗೆ ಬಂದಿತು ಎಲ್ಲ ಕಾರ್ಯಗಳ
ಸಲ್ಲಿಸಿ ಕೊಡುವನು ಬಲ್ಲಿದ ನಮಗೆ
ಮಲ್ಲಿಗೆ ಮುಡಿಯಾ ವಲ್ಲಭಳೆ ೫
ಎಂದ ಮಾತಿಗಾನಂದ ಮಯಳಾಗಿ
ಬಂದಳಾ ಖಳನ ಮಂದಿರದೊಳು ನೀ-
ನೆಂದ ಮಾತಿಗೆ ನಾನೊಂದನು ಮೀರೆನು
ಎಂದು ಕಪಟ ಸೈರಂಧಿರಿಯೂ
ಕುಂದಧಾಭರಣವ ತಂದು ಕೊಡಲು ಆ-
ನಂದದಿಂ ಪತಿಯ ಮುಂದೆ ತಂದಿಟ್ಟಳು
ಮಂದರೋದ್ಧರನ ಚಂದದಿ ಪೊಗಳುತ
ಇಂದು ಸುದಿನವೆಂದ ಭೀಮ೬
ಉಟ್ಟ ಪೀತಾಂಬರ ತೊಟ್ಟ ಕುಪ್ಪಸವು
ಇಟ್ಟತಿ ಸಾದಿನ ಬಟ್ಟು ಫಣಿಯಲ್ಲಿ
ಕಟ್ಟಿದ ಮುತ್ತಿನ ಪಟ್ಟಿಸ ಕಿವಿಯಲ್ಲಿ
ಇಟ್ಟೋಲೆ ತೂಗಲು ಬಟ್ಟ ಕುಚ
ಘಟ್ಟಿ ಕಂಕಣ ರ್ಯಾಗಟೆ ಚೌರಿ ಅ-
ದಿಟ್ಟಂಥ ಈರೈದು ಬೆಟ್ಟುಗಳುಂಗರ
ಮುಟ್ಟೆ ಮಾನೆರಿ ದಟ್ಟಡಿವೊಪ್ಪತಿ
ಕಟ್ಟುಗ್ರದ ಜಗ ಜಟ್ಟಿಗನು ೭
ತೋರ ಮೌಕ್ತಿಕದ ಹಾರ ಸರಿಗೆ ಕೇ
ಯೂರ ಪದಕ ಭಂಗಾರ ಕಾಳಿಸರ
ವೀರ ವಿದ್ರುಮದ ಭಾಪುರಿ ಉ-
ತ್ತಾರಿಗೆ ವರ ಭುಜಕೀರುತಿಯು
ಮೂರೇಖೆಯುಳ್ಳ ಉದಾರ ನಾಭಿವರ
ನಾರಿ ನಡು ಉಡುಧಾರ ಕಿಂಕಿಣಿ ಕ-
ಸ್ತೂರಿ ಬೆರಸಿದ ಗೀರುಗಂಧವು ಗಂ-
ಬೂರ ಲೇಪ ಶೃಂಗಾರದಲಿ೮
ವಂಕಿ ದೋರ್ಯವು ಕಂಕಣ ಒಮ್ಮೆಯೀ-
ನಾಂಕ ಚಾಪ ಭ್ರೂ ಅಲಂಕಾರ ಭಾವ
ಪಂಕಜಮಾಲೆ ಕಳಂಕವಿಲ್ಲದಲೆ
ಸಂಕಟ ಕಳೆವ ಪಂಕಜಾಂಘ್ರಿ
ಝಂಕಾರಕೆ ಲೋಕ ಶಂಕಿಸೆ ನಾನಾ-
ಲಂಕಾರದ ಹೊಸ ಅಂಕುರ ವೀರ-
ಕಂಕಣ ಕಟ್ಟಿದ ಬಿಂಕದಿಂದಲಾ-
ತಂಕವಿಲ್ಲದೆಲೆ ಕಂಕಾನುಜ ೯
ಕಂಬು ಕೊರಳು ದಾಳಿಂಬ ಬೀಜ ದಂತ
ದುಂಬಿಗುರುಳು ನೀಲಾಂಬುದ ಮಿಂಚೆಂ-
ದೆಂಬ ತೆರದಲಾ ಅಂಬಕದ ನೋಟ
ತುಂಬಿರೆ ಪವಳ ಬಿಂಬಾಧರ
ಜಂಬೀರ ವರ್ಣದ ಬೊಂಬೆಯಂತೆಸೆವ
ತಾಂಬೂಲ ಗಿಳಿಯೆಂಬ ಗಂಭೀರ ಪುರುಷನು
ಹಂಬಲಿಸಿದ ತಾ ಸಂಭ್ರಮದಿ ೧೦
ಸಂಧ್ಯಾದೇವಿಯೊ ಇಂದ್ರನ ರಾಣಿಯೊ
ಚಂದ್ರನ ಸತಿಯೋ ಕಂದರ್ಪನಾಕರ-
ದಿಂದ ಬಂದ ಅರವಿಂದದ ಮೊಗ್ಗೆಯೊ
ಅಂದ ವರ್ಣಿಪರಾರಿಂದಿನಲಿ
ಇಂದು ರಾತ್ರಿ ಇದೆ ಎಂದಮರಮುನಿ
ಸಂದೋಹ ಕೊಂಡಾಡೆ ಇಂದುಮುಖಿಯೊಡ
ನಂದು ತಾ ನಾಟ್ಯದ ಮಂದಿರಕೆ ನಗೆ-
ಯಿಂದ ಬಂದ ಕುಂತಿನಂದನನು೧೧
ಭಂಡ ಉಡಿಯಲಿ ಕೆಂಡವೊ ಪರರ
ಹೆಂಡರ ಸಂಗ ಭೂಮಂಡಲದೊಳೆನ್ನ
ಗಂಡರು ಬಲು ಉದ್ದಂಡರು ನಿನ್ನನು
ಕಂಡರೆ ಬಿಡರೋ ಹಂಡಿಪರೋ
ಲಂಡ ಬಾಯೆಂದು ಮುಕೊಂಡು ಕೈದುಡುಕಿ
ಅಂಡಿಗೆಳೆದು ಅಖಂಡಲನ ಭಾಗ್ಯ
ಉಂಡು ತೀರಿಸೆನ್ನೆ ಮಂಡೆ ಮೊಗ ಗಲ್ಲ
ಡುಂಡು ಕುಚ ಮುಟ್ಟಿ ಬೆಂಡಾದನು ೧೨
ಸಾರಿಯಲ್ಲ ಮಕಮಾರಿಯಿದೆನುತ ಶ-
ರೀರ ವತಿ ಕಠೋರವ ಕಂಡು ಜ-
ಝಾರಿತನಾಗಿ ನೀನಾರು ಪೇಳೆಂದು ವಿ-
ಕಾರದ್ಯಬ್ಬರಿಸಿ ಕೂರ್ರನಾಗಿ
ತೋರು ಕೈಯೆಂದು ಸಮೀರನು ಎದ್ದು ವಿ
ಚಾರಿಸಿಕೋ ಎನ್ನ ನಾರಿತನವೆಂದು
ವೀರ ಮುಷ್ಟಿಯಿಂದ್ಹಾರಿ ಹೊಡೆಯಲು
ಕ್ರೂರನು ರಕ್ತವ ಕಾರಿದನು ೧೩
ಹಾರಿ ಹೊಯ್ಯತಲೆ ಮೋರೆಲಿದ್ದ ಕಳೆ-
ಸೂರೆಯಾಯಿತು ಪರನಾರೇರ ಮೋಹಿಸಿ
ಪಾರಗಂಡವರುಂಟೆ ಶರೀರದೊಳಿದ್ದ
ಮಾರುತೇಶ ಹೊರಸಾರಿ ಬರೆ
ಧೀರ ಭೀಮರಾಯ ಭೋರಿಡುತ ಹಾರಿ
ಕೋರ ಮೀಸೆಯನೇರಿಸಿ ಹುರಿಮಾಡಿ
ನಾರಿಮಣಿ ಯಿತ್ತ ಬಾರೆಂದು ಕರೆದು
ಸಾರಿದನು ನಿಜಾಗಾರವನು ೧೪
ಸರಸವು ನಿನಗೆ ವಿರಸವು ಆಯಿತು
ಕರೆಸೆಲೊ ಈ ಪುರದರಸಾ ಕಳ್ಳನ
ನರಸಿಂಹನ ನಿಜ ಅರಸಿಗೆ ಮನವನು
ವೆರೆಸಿದ್ಯೋ ಮಂದರ ಅರಸನೆ
ಅರಸಿ ನೋಡುತಿರೆ ವರೆಸಿದನಾ ಜೀವ
ದೊರಸೆಯ ಖೂಳನ ಬೆರೆಸಿ ಸವಾಂಗ
ವಿರಿಸಿ ಅಲ್ಲಿಯೆ ಸಿರಿ ವಿಜಯವಿಠ್ಠಲ
ಅರಸಿನ ಲೀಲೆಯ ಸ್ಮರಿಸುತಲಿ ೧೫

೪೨೩
ಭೂರಮಣನೆ ಕಾಯೋ ನಿತ್ಯ ಪ
ಸಂಸಾರವೆ ಸುಖವೆಂದು ಹಾರಯಿಸಿ ಬಾಳುವಾ |
ನರನ ಉದ್ಧಾರ ಮಾಡುವುದು ಅ.ಪ
ಕಂಗಳಿಂದಲಿ ಪರರ ಮನೆಯ ಅಂಗನೆಯರ ನೋಡಿ
ಅಂಗಸಂಗವ ಬಯಸಿ ಪಾಪಕ್ಕೆ ಹಿಂಗದೆ ಗುರಿಯಾದೆ ೧
ಜಿಹ್ವೆಯನು ಪಿಡಿದು ನಿಲಿಸದೆ ವಿಹ್ವಲನಾಗಿ ಬಹುರಸ
ಸಂಹ್ವತಿಯ ಮೆದ್ದು ಪುಣ್ಯದಾ ಗಹ್ವರವು ಮರಿಯದೆ ೨
ನಾಸಿಕಕೊನೆಯಿಂದ ಅನರ್ಪಿತ ವಾಸನೆ ಕೈಕೊಂಡು
ಲೇಸಾಗಿ ಮನವುಬ್ಬಿ ನಲಿವುತ ದೇಶದೊಳಗೆ ಮೆರೆದೆ ೩
ಮುಪ್ಪಾಗುವತನಕ ಸುಖದಲ್ಲಿ ಅಪ್ಪಿದೆ ನಾರಿಯರ
ಒಪ್ಪಿದ ಧರ್ಮಗಳ ಖಳರಿಗೆ ಒಪ್ಪಿಸಿದೆನೊ ಹರಿಯೇ ೪
ದುಷ್ಟರಾಡುವ ವಾಕ್ಯ ಕೇಳುತ್ತ ಅಟ್ಟಹಾಸವ ಮಾಡಿ
ಕೆಟ್ಟು ಪೋಗುವೆನೆಯ್ಯಾ ವಿಜಯವಿಠ್ಠಲ ನೀನೆ ೫

೪೭೬
ಭೇದ ಪೇಳುವೆನೆ ತಮೊ ಯೋಗ್ಯ ಪೂರ್ಣ
ಬೊಧರ ಮತ ಬಿಡುವನೆ ಮುಕ್ತಿಯೋಗ್ಯ ಪ
ಸತ್ಯ ನುಡಿವನೆ ಅಪಕಾರಿ ಪರರ
ವಿತ್ತಪಹರಿಸುವನೆ ಬಲು ಉದಾರಿ
ಹತ್ಯ ಮಾಡುವನೆ ಉಪಕಾರಿ
ನಿತ್ಯ ಚಿತ್ತ ಚಂಚಲಿಸುವನೆ ಧರ್ಮದಾದಿ ೧
ಪರನಾರಿ ಸಹೋದರ ಹೀನ ಕಂಡಾ ಉ
ತ್ತರಗಳನಾಡುವನೆ ಆವಾಗ ಮೌನ
ತರತಮ್ಮ ಪೇಳುವನೆ ಕೋಣ ತನ್ನ
ಹರಣವೊಪ್ಪಿಸಿಕೊಂಬುವನೆ ಪ್ರವೀಣಾ ೨
ಭ್ರಷ್ಟನೆನೆಸುವನೆ ಧನ್ಯ ಪರರ
ಇಷ್ಟಾರ್ಥ ಕೆಡಿಸುವನೆ ಬಲು ಮಾನ್ಯ
ಕಷ್ಟ ಬೇಡುವನೆ ರಾಜನ್ಯ ವಿಜಯ
ವಿಠ್ಠಲನ್ನ ಪೂಜೆ ಮಾಡುವನೆ ಗುಣಶೂನ್ಯ ೩

೨೩೩
ಮಂಗಳಂ ಪ್ರಧಾನ ಮಾರುತಗೆ ಪ
ಮಂಗಳಂ ಪಾವನ ಮೂರುತಿಗೆ |
ಮಂಗಳಂ ತ್ರಿವಿಧ ಸತ್ಕೀರ್ತಿಗೆ |
ಮಂಗಳಂ ಸದ್ಗುಣ ಕೀರ್ತಿಗೆ ಅ.ಪ.
ಮುಕ್ಕೋಟಿ ರೂಪನಿಗೆ ರುಗ್ಮಮಣಿ ಹಾರನಿಗೆ |
ಚಿಕ್ಕವನಾಗಿ ಪುರಪೊಕ್ಕವಗೆ ||
ಸಿಕ್ಕಿ ವೈರಿಯ ಕೈಗೆ ರಕ್ಕಸರ ಎದೆಯಲ್ಲಿ |
ನಿಕ್ಕಿಸಿದರಣದ ವಿಷ ಭೋಕ್ತನಿಗೆ ೧
ವೃಕೋದರ ಭೀಮಗೆ ವಿಶೋಕನೊಡೆಯಗೆ |
ಬಕ ಜರಾಸಂಧ ಕೀಚಕ ವಧೆ ಮಾಡಿದಗೆ ||
ಸಕಲ ದಳದೊಳಗೆ ನಾಯಕನೇ | ನೀ |
ನೇ ಕಲಿಬಂಧಕ ಶಕುತಿಗೆದ್ದ ತಾರಕ ಚರಿತಗೆ ೨
ಒಂದೆ ಅಕ್ಷರದಿಂದ ನಂದ ಕೊಡುವವನಿಗೆ
ಒಂದೆರಡು ಮೂರಾರು ಮುರಿದವಗೆ ||
ಒಂದೆ ದೈವ ನಮ್ಮ ವಿಜಯವಿಠ್ಠಲ ಕೃಷ್ಣನ್ನ |
ವಂದಿಸುವ ಶ್ರೀಮದಾನಂದತೀರ್ಥಗೆ ೩

೨೯೬
ಮಂಗಳಂ ಮಹಾಗಂಗೆ | ಭಕುತ ಮನೋಹಾರಿಗೆ |
ಮಂಗಳಂ ಬಲುದುರಿತ ಸಂಹಾರಿಗೆ |
ಮಂಗಳಂ ಪ್ರಯೋಗ ಕ್ಷೇತ್ರ ವಿಹಾರಿಗೆ
ಮಂಗಳಂ ಕುಸುಮ ಚಿತ್ರಹಾರಿಗೆ ಪ
ವೇಣಿಗೆ ನಿತ್ಯಕಲ್ಯಾಣಿಗೆ ಪಲ್ಲವ |
ಪಾಣಿಗೆ ಗಂಭೀರ ಗುಣಶ್ರೇಣಿಗೆ |
ತ್ರಾಣಿಗೆ ಕೋಕಿಲವಾಣಿಗೆ ಯಾದವನ |
ರಾಣಿಗೆ ಮಣಿಹೇಮ ಭೂಷಣೆಗೆ ೧
ಖ್ಯಾತಿಗೆ ತ್ರಿಲೋಕ ಮಾತೆಗೆ ಯ |
ಮುನೆ ಸಂಘಾತಿಗೆ ಸರ್ವದಾ ಬಲುನೀತಿಗೆ |
ಜಾತಿಗೆ ತುಹಿನಗಿರಿದಾತೆಗೆ ಲಕುಮಿಯ |
ದೂತಿಗೆ ಅಮಿತ ಗುಣ ಪ್ರತಾಪಿಗೆ || ೨
ಚನ್ನಿಗೆ ನಾರಿಕುಲರನ್ನಿಗೆ ಭಾಗ್ಯ ಸಂ |
ಪನ್ನಿಗೆ ಸಗರಕುಲ ಪಾವನ್ನಿಗೆ |
ಕಣ್ಣಿಗೆ ಪೊಳೆವ ಪ್ರಸನ್ನಿಗೆ ಸೀತಾ ಸು |
ವರ್ನಿಗೆ ವಿಜಯವಿಠ್ಠಲ ಕನ್ನಿಗೆ ೩

೩೨೭
ಮಂತ್ರಾಲಯನಿವಾಸ ಉತ್ತಮ ಹಂಸ |
ಸಂತಾಪ ಪರಿಹರಿಸ ಕೊಡು ಎನಗೆ ಲೇಸ ಪ
ಯತಿಗಳ ಶಿರೋರನ್ನ ಯೋಗಸಂಪನ್ನ |
ಕ್ಷಿತಿಯೊಳಗೆ ನಿನಗೆ ಸರಿಗಾಣೆನೊ ||
ನುತಿಸುವೆ ಭಕ್ತಿಯಲಿ ಬಿಡದೆ |
ಮುಕುತಿಯಲಿ ಸತತಾನಂದದಲಿಪ್ಪ ೧
ಕಪಿಲ ತೀರ್ಥದಲಿ ಶರಣ ಶುದ್ಧಿಯಲ್ಲಿ |
ತಪವ ಮಾಡುವ ಜ್ಞಾನಿ ಸೌಮ್ಯಜ್ಞಾನಿ ||
ಜಪಶೀಲ ಗುಣ ಗಣಾಂಬುಧಿ ಪುಣ್ಯದ ಬುದ್ಧಿ
ಕೃಪೆಮಾಡಿ ಕೊಡು ಗುರುವೆ ಶಿಷ್ಯಸುರತರುವೆ ೨
ತಮೋಗುಣ ಕಾರ್ಯ ಪೋಗಲಾಡು ವ್ಯಾಪ್ತಿಯಾ |
ಶಮೆದಮೆಯಲ್ಲಿ ಉಳ್ಳ ಮಹಿಮೆಯಾ ||
ನಮಗೆ ಪೇಳುವೆ ವೇದಬಲ್ಲ ವಿನೋದ |
ಸುಮನ ಸುಗುಣವ ಮೆಚ್ಚೆ ದುರ್ಮತಕೆ ಕಿಚ್ಚೆ ೩
ಕಾಶಿ ಸೇತುವೆ ಮಧ್ಯೆ ಮೆರೆವೇ ಜನರಲ್ಲಿ |
ಭೇದ ವಿದ್ಯಾ ಸಜ್ಜನಕೆ ತಿಳಿಸು ಮನಸು ನಿಲ್ಲಿಪೆ ||
ಪೋಷಿಸುವೆ ಅವರ ಅಟ್ಟುವ ಮಹದುರ |
ದೋಷವ ಕಳೆವಂಥ ವಿಮಲ ಶಾಂತ೪
ವರಹಜ ತೀರದಲ್ಲಿದ್ದ ಸುಪ್ರಸಿದ್ದ |
ಮರುತ ಮತಾಂಬುಧಿ ಸೋಮ ನಿಸ್ಸೀಮ ||
ನರಸಿಜಾಪತಿ ನಮ್ಮ ವಿಜಯವಿಠ್ಠಲನಂಘ್ರಿ |
ಸ್ಮರಿಸುವ ಸುಧೀಂದ್ರ ಸುತ ರಾಘವೇಂದ್ರ ೫

೪೨೪
ಮಂದಮತಿ ನಾನಯ್ಯ ಮಂಗಳಾಂಗಾ
ಒಂದಾದರೂ ಗತಿ ಧರ್ಮ ಚಿಂತಿಸಲಿಲ್ಲಾ ಪ
ಜಪತಪಗಳರಿಯೆ ಉಪವಾಸಗಳರಿಯೆ
ಕೃಪೆ ಮಾಡಲರಿಯೇ ಪರಿಜನಗಳಲ್ಲಿ
ಕುಪಿತವನು ಬಿಡಲರಿಯೆ ಅಪರಿಮಿತವಾಗಿದ್ದ
ಅಪರಾಧಗಳ ಮಾಡಿ ತಪಿಸುವೆನು ಭವದೊಳಗೆ ೧
ಯಾತ್ರೆ ಮಾಡಲರಿಯೆ ತೀರ್ಥ ಮೀಯಲರಿಯೆ
ಗಾತ್ರದಂಡಣಿಯ ಮಾಡಲರಿಯೆ
ಸ್ತೋತ್ರ ಪಠಿಸಲರಿಯೆ ಗಾತ್ರ ಲಘು ನೋಡಿ ಸ
ತ್ಪಾತ್ರರನು ಭಜಿಸದೆ ವ್ಯರ್ಥ ಕಾಲವ ಕಳೆವ೨
ಅನ್ನದಾನವರಿಯೆ ಮನ್ನಣೆ ಮಾಡಲರಿಯೆ
ಚನ್ನಾಗಿ ಬಂಧುಗಳು ಪೊರಿಯಲರಿಯೆ
ಎನ್ನ ಮನದೊಡಿಯ ಶ್ರೀ ವಿಜಯವಿಠ್ಠಲರೇಯಾ
ನಿನ್ನ ಭಕುತಿ ಒಮ್ಮೆ ಪಡಿಯಲರಿಯೆ ೩

೪೨೫
ಮಗನೆಂದೆಂಬುವ ಇನ್ನು ಮತ್ತಾವನೊ
ಜಗದೊಳಗೆ ನಿನ್ನ ವಿನಾ ಕಾಣೆಯೆಲ್ಲಿ ಪ
ರಕ್ತ ಶುಕ್ಲ ಮಿಶ್ರವಾದ ಸಮ್ಮಂಧ ವಿಷ_
ಭುಕ್ತನಾಗಿದ್ದ ಸಂಸಾರದೊಳಗಾ
ಸಕ್ತತನದಲಿ ಇಪ್ಪ ಎಂದಿಗೆಂದಿಗೆ ಇವನು
ಮುಕ್ತಿ ಕೊಡುವನೇನೊ ಮುಂದೊಲಿದು ಕೊಂಡಾಡೆ೧
ಪ್ರಕೃತಿ ಬದ್ಧನಾಗಿ ನಾನಾ ಜನುಮಗಳಲ್ಲಿ
ವಿಕೃತಿಯ ಮಾಡುವ ಮದದಿಂದಲೀ
ಸುಕೃತವನು ಮರೆದು ದೂರಾಗಿ ಸಂಚರಿಸುವ-
ನುಕ್ರ ಮವಂದುಮಾಸ ಜನತೆ ಕ್ಯೆಡೆಯಿರದವ ೨
ಪುತ್ರ ಉಳ್ಳರೆ ಅವಗೆ ಕಂಡಕಡೆ ತಿರುಗಿ ಉ-
ನ್ಮತ್ತನಾಗಿ ಕೆಟ್ಟ ಗ್ರಾಸವನ್ನು
ಹೊತ್ತಹೊತ್ತಿಗೆ ತಂದು ಹಾಕಬೇಕು ಸಾಕಿ
ನಿತ್ಯದಲ್ಲಿ ಅವಗಾಗಿ ಕ್ಲೇಶಬಡಲಿ ಬೇಕು ೩
ನಾಡೊಳಗೆ ನೀನೆ ಮಗನೆಂದವನ ಭಾಗ್ಯಕ್ಕೆ
ಈಡುಗಾಣೆನು ಎಲ್ಲಿ ವಿಚಾರಿಸೆ
ಕಾಡಿ ಬೇಡುವೆ ಮುನ್ನೆ ಪರಿಪರಿಬಾಧೆಬಡಿಸಿ
ಕೂಡಿರುವೆ ಮುಕ್ತರೊಳು ಮುಕ್ತಿಗಳವಲ್ಲಿದೊ ೪
ನಿನ್ನಂಥ ಮಗನ ಪಡದಮ್ಯಾಲೆ ಎನಗೆ
ಅನ್ಯಚಿಂತೆಗಳಿಲ್ಲ ಚಿಂತಾಮಣೀ
ಘನ್ನಮೂರುತಿ ನಮ್ಮ ವಿಜಯವಿಠ್ಠಲರೇಯ
ಅನಂತಕಾಲಕ್ಕೆ ವಹಿಸುವ ದೇವ ೫

೩೦೯
ಮಧ್ವ ಸರೋವರದ ಸ್ನಾನವ ಮಾಡಿರೊ
ಬುದ್ಧಿವಂತರು ಕೇಳಿ ಇದರ ಮಹಾತ್ಮೆಯನು ಪ
ಕೃತಯುಗದಲಿ ಇದೇ ಅನಂತ ಸರೋವರ
ತ್ರೇತಾಯುಗದಲ್ಲಿ ವರುಣತೀರ್ಥ
ಕ್ಷಿತಿಯೊಳಗೆ ದ್ವಾಪರದಿ ಚಂದ್ರ ಪುಷ್ಕರಣಿ ಉ-
ನ್ನತ ಕಲಿಯುಗದಲ್ಲಿ ಮಹಾ ತೀರಿಥ ೧
ಸುರನದೀ ಮಿಕ್ಕಾದ ಸ್ಥಾನದಲಿ ಸೇವೆ ವಿ-
ಸ್ತರವಾಗಿ ಕೊಳುತಿಪ್ಪಳು ಉಪೇಕ್ಷದಿ
ಧರೆಯೊಳಗೆ ಇಲ್ಲಿ ಗುರು ಮಧ್ವಮುನಿ ಸರ್ವಾರ್ಥ
ನಿರುತದಲ್ಲಿ ತೀವ್ರಗತಿ ಕೊಡುವಳೂ೨
ಸಕಲ ವೇದಶಾಸ್ತ್ರ ಓದಿದವನಾದರೂ
ಶಕುತಿವಂತನಾಗಿ ಇದ್ದನಾಗೆ
ಸುಖ ತೀರ್ಥ ಸರೋವರದ ಸ್ನಾನ ಮಾಡದಿರಲು
ಶಕಲ ಮತಿಯಲಿ ಮಹಾನರಕ ಭುಂಜಿಸುವಾ ೩
ಒಂದೆ ಮಜ್ಜನ ಮಾಡೆ ಅನಂತ ಜನುಮಕೆ
ತಂದು ಕೊಡುವದು ನರಗೆ ಮಿಂದ ಫಲವೊ
ಎಂದೆಂದಿಗೆ ಇಲ್ಲಿ ಬಿಡದೆ ವಾಸವಾದ
ಮಂದಿಗಳ ಪುಣ್ಯ ಪ್ರತಾಪ ಎಣಿಸುವರಾರು ೪
ಆದಿಯಲ್ಲಿ ಇದ್ದ ಲಿಂಗ ಶರೀರವು
ಛೇದಿಸುವದಕೆ ಇದೇ ಸ್ನಾನವೆನ್ನಿ
ಮೋದ ಮೂರುತಿ ನಮ್ಮ ವಿಜಯವಿಠ್ಠಲ ಕೃಷ್ಣ
ಭೇದಾರ್ಥ ಮತಿಕೊಟ್ಟ ಭೇದವನು ತೊಲಗಿಸುವಾ೫

೪೭೯
ಮಧ್ವಮತ ಪೊಂದದೆ ಬದುಕಿದವನೂ
ಹದ್ದು ಕಾಗಿ ಬದುಕಿ ಕಾಲವನು ಕಳೆದಂತೆ ಪ
ಸಕಲೇಂದ್ರಿಯಗಳು ಇದ್ದು ನಯನೇಂದ್ರಿಯ ಇಲ್ಲದಂಅ.ಪ.
ಫಲಪುಷ್ಪಯಿಲ್ಲದಾ ಗಿಡಬಳ್ಳಿ ಇದ್ದಂತೆ
ಮಳೆಯಿಲ್ಲದಾ ಬೆಳಸು ನೋಡಿದಂತೆ
ಚಲುವನಾದಡೆ ಏನು ಗುಣಹೀನನಾದಂತೆ
ಖಳರು ನಿತ್ಯಾಕರ್ಮ ಚರಿಸಿದಂತೆ ೧
ಉತ್ತಮರ ಕೂಡದಾ ಯಾತ್ರೆ ಮಾಡಿದಂತೆ
ಕತ್ತೆ ಪರಿಮಳ ಪೊತ್ತು ತಿರುಗಿದಂತೆ
ಮೃತ್ತಿಕೆ ಶೌಚ ಇಲ್ಲದೆ ಆಚಾರ ಮಾಡಿದಂತೆ
ಸತ್ತ ಹೆಣಕ್ಕೆ ವಸ್ತ್ರ ಶೃಂಗರಿಸಿದಂತೆ೨
ನಿಶಿಕರ ಇಲ್ಲದಾ ತಾರೆಗಳು ಇದ್ದಂತೆ
ವಸುಧಿಪತಿಯಿಲ್ಲದಾ ರಾಜ್ಯದಂತೆ
ಹಸಿವೆ ಇಲ್ಲದವನು ಮಧುರನ್ನ ಉಂಡಂತೆ
ಹಸುಗಳಿಲ್ಲದ ಮನೆ ವೊಪ್ಪಿದಂತೆ ೩
ತಾರತಮ್ಯಗಳಿಲ್ಲದ ವೇದ ಓದಿದಂತೆ
ಪುರಂದರದಾಸರು ಪೇಳಿದಂತೆ
ಮಾರುತಿಯ ಮತವಿಡಿದು ಸಿರಿ ವಿಜಯವಿಠ್ಠಲನ
ಕಾರುಣ್ಯ ಪಡಿಯದವ ಅಧಮನಂತೆ ೪

೪೭೮
ಮಧ್ವಮತವ ಪೊಂದದವನ ಭಕುತಿಯಾತಕೆ ಪ
ಊಧ್ರ್ವಪುಂಡ್ರ ತಿದ್ದದವನ ಕರ್ಮವ್ಯಾತಕೆಅ.ಪ
ದಾನವನ್ನು ಮಾಡದವನ ದ್ರವ್ಯವ್ಯಾತಕೆ |
ಸ್ನಾನವನ್ನು ಮಾಡದವನ ಮೌನವ್ಯಾತಕೆ |
ಮಾನಿನಿಯು ಇಲ್ಲದವನ ಬದುಕು ಯಾತಕೆ |
ಧ್ಯಾನವನ್ನು ಅರಿಯದವನ ಪೂಜೆ ಯಾತಕೆ ೧
ವಂಶವನ್ನುದ್ಧರಿಸದಂಥ ಮಗನು ಯಾತಕೆ |
ಹಿಂಸೆಯನ್ನು ಪಡಿಸುವಂಥ ಅರಸು ಯಾತಕೆ ||
ಸಂಸಾರವನು ಒಲ್ಲದಂಥ ಸತಿಯು ಯಾತಕೆ |
ಕಂಸಾರಿಯನು ತಿಳಿಯದಂಥ ಜ್ಞಾನವ್ಯಾತಕೆ ೨
ಬಂಧು ಬಳಗ ಬಿಟ್ಟು ಉಂಬ ನೆಂಟರ್ಯಾತಕೆ |
ಕಂದರನ್ನು ಮಾರುತಿಪ್ಪ ತಂದೆಯಾತಕೆ ||
ಬಂದ ಅತಿಥಿಗನ್ನವಿಕ್ಕದ ಸದನವ್ಯಾತಕೆ |
ನಿಂದೆಗಳು ಮಾಡುತಿಹನಾಚಾರವ್ಯಾತಕೆ ೩
ಗುರೂಪದೇಶವಿಲ್ಲದಂಥ ಮಂತ್ರವ್ಯಾತಕೆ |
ಹಿರಿಯರನ್ನು ಸಾಕದವನ ಪುಣ್ಯವ್ಯಾತಕೆ ||
ಚರಿಸಿ ತೀರ್ಥಯಾತ್ರೆ ಮಾಡದ ದೇಹವ್ಯಾತಕೆ |
ವರ-ಪ್ರಸಾದವೀಯದಂಥ ದೇವರ್ಯಾತಕೆ೪
ಏಕಾದಶಿಯ ಮಾಡದವನ ವ್ರತವು ಯಾತಕೆ |
ಏಕಮನಸು ಇಲ್ಲದವನ ನಡತೆ ಯಾತಕೆ ||
ಸಾಕಿದವನ ಕೊಲ್ಲುವಂಥ ಭಂಟನ್ಯಾತಕೆ |
ಲೋಕವಾರ್ತೆ ಬಿಡದವನ ಜಪವು ಯಾತಕೆ ೫
ಭಾಷೆ ಬದ್ಧವಿಲ್ಲದವನ ಮಾತು ಯಾತಕೆ |
ಕಾಸುವೀಸಕೆ ಬಡಿದಾಡುವ ಅನುಜರ್ಯಾತಕೆ ||
ಲೇಸು ಹೊಲ್ಲೆಹ ನೋಡದಂಥ ಗೆಳೆಯನ್ಯಾತಕೆ |
ಆಸೆಯನ್ನು ಬಿಡದ ಸನ್ಯಾಸವ್ಯಾತಕೆ ೬
ತಪ್ತ ಮುದ್ರೆಯಿಲ್ಲದವನ ಜನ್ಮವ್ಯಾತಕೆ |
ಗುಪ್ತದಲ್ಲಿ ನಡೆಯದಿಪ್ಪ ದಾಸನ್ಯಾತಕೆ ||
ಆಪ್ತಬಂಧು ವಿಜಯವಿಠ್ಠಲನ ಶ್ರೀ ಚರಣದಿ |
ಕ್ಲುಪ್ತ ಮೀರದೆ ನಡೆದ ಮೇಲೆ ನರಕವ್ಯಾತಕೆ ೭

೨೫೩
ಮಧ್ವಮುನಿಯೆ ನಿನಗೆ ಎದ್ದು ಕರಗಳ ಮುಗಿವೆ |
ಬುದ್ಧಿ ಪಾಲಿಸಿ ಎನ್ನ ಉದ್ಧರಿಸೊ ಗುರುವೇ ಪ
ದುರುಳ ಪಾಮರ ಸಂಕರನೆಂಬುವನು |
ದುರಾಚಾರಗಳು ಧರಿಯೊಳಗೆ ಕುಭಾಷ್ಯಗಳ ವ್ಯಾಪಿಸೀ |
ಇರಲು ಉತ್ತಮ ಸಂಪ್ರದಾಯದಲ್ಲಿಪ್ಪ |
ವರರು ಇರದಂತಾಗೆ ಸುಜನರು ಕೂಗೆ ೧
ಮಲ್ಲ ಮಾಯಿಗಳ ಹಲ್ಲು ಮುರಿದ ಅಪ್ರತಿಮಲ್ಲ |
ಇಳಿಯೊಳಗೆ ಶುದ್ದ ಭಾಷ್ಯ ರಚಿಸಿ ಲೇಸಾ |
ಕಿಲಕಿಲನೆ ನಗುತ ಮೊಗ ಕಳೆವೇರುತಾ ವೇಗ |
ನಳಿನನಾಭನ ಚರಣ ಮನದಲಿಟ್ಟ ಪರಣಾ ೨
ಇಪ್ಪತ್ತು ಒಂದು ದುರ್ಮತದ ವರ ಕುವಾಕು |
ಸರ್ಪನನ್ ಗರುಡ ಶೀಳಿದಂತೆ ಕೇಳಿ |
ಇಪ್ಪ ಬಲು ಅಜ್ಞಾನ ಓಡಿಸಿ ಸುಜ್ಞಾನ |
ತಪ್ಪದಲೆಗರದು ಸಂತರನೆಲ್ಲ ಪೊರೆದು ೩
ಪಂಚ ಭೇದವೆ ಸತ್ಯ ಐಕ್ಯವೆಂಬದು ಮಿಥ್ಯ |
ಪಂಚವಿರಹಿತ ಹರಿ ಪರನೆಂದು ಸಾರೀ |
ಚಂಚಲವ ಪರಿಹರಿಸಿ ಮರುತ ಮತ ಉದ್ಧರಿಸಿ |
ಮಿಂಚುವ ಹೇಮದ ಕಾಯ ಸುಖ ತೀರ್ಥರಾಯಾ೪
ಸುರರಾದಿಗಳ ಮಣಿಯ ಆರಾರು ನಿನಗೆಣೆಯೇ |
ಅರಸಿದರೆ ಕಾಣೆ ಹರಿ ಪದಗಳಾ ಆಣೆ |
ಶಿರಿ ವಿಜಯವಿಠ್ಠಲನ್ನ ಭಜಿಸುವ ಯತಿರನ್ನ |
ಶರಣಪಾಲಕ ಪೂರ್ಣಪ್ರಜ್ಞ ಗುಣಪೂರ್ಣ ೫

೨೫೨
ಮಧ್ವಮುನಿಯೇ ಎನ್ನ ಹೃತ್ಕುಮುದ ಚಂದ್ರ ಪ
ಅದ್ವೈತಮತಾರಣ್ಯ ದಹನ ಗುಣಸಾಂದ್ರ ಅ.ಪ.
ನೊಂದೆ ಎಂಭತ್ನಾಲ್ಕು ಲಕ್ಷಯೋನಿಗಳಲ್ಲಿ
ಒಂದೇ ಪ್ರಕಾರ ಸಂಚಗ್ಣೆಯಿಂದ
ಒಂದೊಂದು ಕರ್ಮಗಳನರಸಿ ನೋಡಲು ಅದ-
ರಿಂದ ಭವಾಬ್ಧಿಗೆ ಬಂದುಪಾಯವ ಕಾಣೆ ೧
ನೀರು ಚಳಪಳಕಾಸಿ ಆರಲಿಟ್ಟು ಹೆಪ್ಪು
ನೀರಿನಿಂದಲಿ ಕೊಡಲು ಬಪ್ಪುದೇನೊ
ಮಾರುತೀ ನಿನ್ನ ಕೃಪೆ ಪಡೆಯದಲೆ ಉಳಿದವರ
ಕಾರುಣ್ಯವಾಗಲು ಮೋಕ್ಷಸಾಧನವಿಲ್ಲ೨
ಹರಿಸಿರಿಗೆ ಎರಗುವ ಸತ್ವ ಶರೀರನೆ
ನಿರುತ ಎನ್ನೊಳಗಿಪ್ಪ ಮೂಲಗುರುವೆ
ನೆರೆ ನಂಬಿದೆನೊ ಸ್ವಾಮಿ ವಿಜಯವಿಠ್ಠಲರೇಯನಚರಣದಲ್ಲಿರುವಂತೆ ಸಾಧ್ಯವಾಗಲಿ ಮನಸು ೩

೨೫೪
ಮಧ್ವರಾಯರ ಕರುಣ ಪಡೆಯದವ |
ಧರೆಯೊಳಗೆ ಇದ್ದರೇನು ಇಲ್ಲದಿದ್ದರೇನು ಪ
ಮಧ್ವಮತವೇ ಮತವು ಸಕಲ ಶ್ರುತಿ ಸಮ್ಮತವು |
ಮಧ್ವರಾಯರ ಧ್ಯಾನ ಅಮೃತಪಾನ ||
ಮಧ್ವರಾಯರ ಲೀಲೆ ನವರತುನದಾ ಮಾಲೆ |
ಮಧ್ವೇಶನಾ ಸ್ಮರಣೆ ಕುಲಕೋಟಿ ಉದ್ಧರಣೆ ೧
ಮಧ್ವರಾಯರ ಕಥೆಯ ಕೇಳಲದು ದುರಿತ ಹತ |
ಮಧ್ವರಾಯರ ಭಕುತಿ ಮಾಡೆ ಮುಕುತಿ ||
ಮಧ್ವರಾಯರ ಸ್ತೋತ್ರ ಮಾಡಿದವ ಸತ್ಪಾತ್ರ |
ಮಧ್ವರಾಯರ ಭಜನೆ ದುಷ್ಕರ್ಮ ತ್ಯಜನೆ ೨
ಮಧ್ವರಾಯರ ದಾಸನಾದವನೆ ನಿರ್ದೋಷ |
ಮಧ್ವರಾಯರ ಬಂಟ ಜಗಕೆ ನೆಂಟ ||
ಮಧ್ವರಮಣಾ ನಮ್ಮ ವಿಜಯವಿಠ್ಠಲನಾದ |ಮಧ್ವೇಶನಾ ಕರುಣೆ ಪಡೆದವನೆ ಶರಣ ೩

೪೨೬
ಮನವೆ ನೀ ದೃಢವಾದರೆ
ಮನಸಿಜನಯ್ಯನ ಚರಣ ಕಾಂಬೆನೊ ನಾನು ಪ
ಹಂಬಲವನು ಮಾಡದಿದ್ದರೆ ಹರಿ
ಎಂಬ ನಾಮಪೀಯೂಷ ದೊರಕುವುದು೧
ಚಂಚಲವುಳ್ಳವುನಾಗದಿದ್ದರೆ ದುಷ್ಟ
ಪಂಚೇಂದ್ರಿಯಗಳ ಸ್ಥಿರವಾಗಿ ನಿಲ್ಲಿಸುವೆ ೨
ಅತ್ತಲಿತ್ತಲಿ ಪೋಗದಿರು ಎ
ನ್ನತ್ತ ವಿಜಯವಿಠ್ಠಲ ಬರಲೀ ೩

೪೨೭
ಮನವೆ ಮಾಧವನೊಳು ಮಮತೆಯಿರಲಿ
ತನು ಮನ ಧನಗಳು
ತನವಾ ನೀಡಿದ ಮ್ಯಾಲೆ
ಮಾನಸಿಜ ಜನಕನು ಅನುದಿನ ಪೊರೆವ ಪ
ಕಾಮ ಜನಕನು ಪ್ರೇಮದಿ ನೆನದರೆ
ಮಾಮನೋಹರ ತನ್ನ ಧಾಮವ ಕೊಡುವ೧
ಸಂತತ ನಿನ್ನನು ಚಿಂತಿಸುವಂ-
ತೆನ್ನಂತ ಮಂಗಳ ಮತಿಯು ನೀಡು ನೀ ಮನವೆ ೨
ಅಜಭವನುತ ವಿಜಯ ಸಖನ ಯಜಿಸುವ ಜನರಿಗೆ
ನಿಜಪದವನೆ ಕೊಡುವಾ ವಿಜಯವಿಠ್ಠಲನಾ ೩

೪೨೮
ಮನಸು ನಿಲಿಸುವುದು ಬಹಳ ಕಷ್ಟ ಪ
ಗುಣಿಸುವುದು ನಿಮ್ಮೊಳಗೆ ನೀವೆ ನೆಲೆ ಬಲ್ಲವರು ಅ.ಪ
ಮುರಿದೋಡಿ ಬರುವ ರಣರಂಗ ನಿಲ್ಲಿಸಬಹುದು |
ಹರಿಯುತಿಹ ನದಿಗಳನು ತಿರುಗಿ ಸಲಿಸಬಹುದು ||
ಕರಿ ಸೊಕ್ಕಿ ಬರುತಿರಲು ತಡೆದು ನಿಲ್ಲಿಸಬಹುದು |
ದುರುಳಮನ ನಿಲಿಸುವುದು ಸುರರಿಗಳವಲ್ಲ ೧
ಭೈರವ ದಾಡೆಯನು ಹಿಡಿದು ನಿಲ್ಲಿಸಬಹುದು |
ಮಾರುತನ ಉರುಬೆಯನು ನಿಲ್ಲಿಸಲಿಬಹುದು ||
ಮಾರಿಗಳ ಮುಂಜೆರಗ ತುಡುಕಿ ನಿಲ್ಲಿಸಬಹುದು |
ಹಾರಿ ಹಾರುವ ಮನಸು ನಿಲಿಸಲಳವಲ್ಲಿ ೨
ಶರಧಿಗಳ ಭೋರ್ಗರೆವ ಧ್ವನಿಯ ನಿಲ್ಲಿಸಬಹುದು |
ಸುರಿವ ಬಿರಮಳೆಯನು ನಿಲ್ಲಿಸಬಹುದು ||
ಹರಿದೋಡುವ ಮನಸು ನಿಲಿಸಲಾರಳವಲ್ಲ |
ಸಿರಿಯರಸ ವಿಜಯವಿಠ್ಠಲ ತಾನೆ ಬಲ್ಲ೩

೬೩
ಮನ್ನಿ ಮನ್ನಿಗೆ ಉಣ್ಣ ಬಂದಾ |
ತನ್ನವರೊಳಗಿದ್ದ ಸರ್ವ ಸಾರಭೋಕ್ತಾ ಪ
ಭಕುತರಗೋಸುಗ ಭಕುತಿಯ ಕೈಕೊಂಡು
ಕರುಣಾಂಬುಧಿ ಇಂದು ೧
ಭೂವದರೊಳಗಿದ್ದು ದೈತ್ಯರ ಗೆದ್ದಂತೆ |
ಆವಿಷ್ಣುವಾಗಿ ಮನ್ನಣೆಯ ಕೈಕೊಳುವಲಿ ೨
ನಂಬಿದ ದಾಸರ್ಗೆ ಪ್ರಾರಬ್ಧ ಕರ್ಮವು |
ಉಂಬೋದು ಬಿಡದಂದು ತದಾಕಾರ ರೂಪದಿ೩
ಅವರವರ ಯೋಗ್ಯತೆ ಫಲ ಕೊಡುವೆನೆಂದು |
ದಿವಿಜರ ಒಡಗೂಡಿ ದಿನ ಪ್ರತಿದಿನದಲ್ಲಿ ೪
ತನ್ನ ಸಂಕಲ್ಪವು ಸಿದ್ಧಿ ಮಾಡುವೆನೆಂದು
ಘನ್ನತೆಯಲಿ ನಮ್ಮ ವಿಜಯವಿಠ್ಠಲಸ್ವಾಮಿ ೫

೨೭೫
ಮನ್ನಿಸು ಮಾರಾರಿ ಮುದದಿಂದಲಿ ಎನ್ನ |
ಬಿನ್ನಪವನೆ ಲಾಲಿಸಿ ಮುನ್ನೆ ಮಾಡಿದ
ಯಿನ್ನು ದುರಿತಗಳನ್ನ ಹಾರಿಸಿ |
ಎನ್ನನನುದಿನ ಪ
ಅಮಿಶ್ರ ತತ್ವದಲಿ ಕಲಿ ವಿರಹಿತ ರುದ್ರ |
ಹಮ್ಮಿನಿಂದಿತ್ತ ಸರ್ವವ ನೋಳ್ಪನೆ |
ಬೊಮ್ಮನಾ ತತ್ವದಲಿ ಹೋಗಿಬರುವ ಪ್ರಬಲ್ಯ |
ಉಮ್ಮೆಯರಸಾ ತಾಮಸ ಕಾರ್ಯದಧಿಪತಿ |
ಒಮ್ಮೆ ಬಿಡದಲೆ ನರಹರಿಯ ನಾ |
ಮಾಮ್ಮರತ ಮನದಲಿ ನೆನಸುವ ಸುಖದಿಂದಲಿ |
ಅಮ್ಮಹಾ ವೈರಾಗ್ಯ ಭಾಗ್ಯವ |
ಕಮ್ಮರದಿ ಕೊಡು ಕರುಣದಿಂದಲಿ ೧
ನಂದಿವಾಹನ ನಾಗತಲ್ಪ ಕಲ್ಪಾಂತರ |
ಚಂದಿರಮವ್ಯಾಳಿ ಚರ್ಚಕನಾಯಕ |
ಕುಂದುಗೊರಳ ನೀಲಕಂಠಾಗಮನೈಯ್ಯ |
ವಂದೀರೈದು ಸ್ಥಾನ ವಾಸವಾದ್ಯ ||
ಇಂದು ನಿನ್ನ ಪಾದದ್ವಂದ್ವ ನಂಬಿದೆ |
ನಿಂದಕರ ಸಂಗತಿ ಸಂಗತಿಯಲಿಡದಲೇ |
ಪೊಂದಿಸೋಮ ಜನರೊಳಗೆ ಎರ |
ಡೊಂದುಪುರ ವಿನಾಶಾ ಈಶಾ ೨
ತುಂಗ ಪೊಂಪಾಕ್ಷೇತ್ರ ನಿಲಯ ನಿಖಿಳ ಶಾಂತ |
ತುಂಗ ಮಹಿಮಾ ಶಂಭೋ ನಿಟಿಲನೇತ್ರ |
ಮಂಗಳಾಂಗ ಶ್ರೀ ವಿಜಯವಿಠ್ಠಲನ |
ಹಿಂಗದೆ ಮನದಲ್ಲಿ ನೆನೆಸುವರ |
ಸಂಗಸುಖ ಸರ್ವದಾ ಸುಜನಪಾಲಕ |
ಪೊಂಗರ್ಭಸುತ ಪತಿತ ಪಾವನ ೩

(ಖ) ಶತಸ್ಥಮರುತುಗಳು
೨೮೯
ಮರುತಗಳ ನಾಮವನು ಉದಯದಲಿಯೆದ್ದು |
ಸ್ಮರಿಸಿದವರ ದುರಿತ ಪರಿಹಾರವಾಗುವುದು ಪ
ಪ್ರಾಣ ಅಪಾನನು ವ್ಯಾನ ಉದಾನ ಸ |
ಮಾನ ಮತ್ತೆ ನಾಗ ಕೈಕಲಕೂರ್ಮ ||
ಏನೆಂಬೆ ದೇವದತ್ತನು ಧನಂಜಯ ಪ್ರವಾ |
ಹನನು ವಿವಹ ಸಂಯಾ ಸಂವಾಹನೆಂದು ೧
ಶೀಲ ಪರಾವಹ ಉದ್ವಹ ವಾಹಶಂಕು |
ಕಾಲ ಶ್ವಾಸ ಅನಳ ಅನಿಲಪ್ರತಿಯೂ ||
ಬಾಲ ಕುಮುದಾಕಾಂತ ಶುಚಿಶ್ವೇತ ಅಜಿತಗುರು |
ಮೇಲಾಗಿ ಸಂಸಾರ ಪ್ರವರ್ತಕ ಕಿಲರನ್ನ ೨
ತರುವಾಯ ಅಜಿತ ಸಂಯನು ಕಪಿ ಜಡದೇವ |
ಮರಳೆ ಮಂಡುಕ ಸತತ ಸಿದ್ಧ ರಕ್ತಾ ||
ಸರಸ ಕೃಷ್ಣ ಪಿಕಶುಕ ಯತಿ ಭೀಮಹನು |
ಮರಿಯದಲೆ ಪಿಂಗ ಅಹಂಪ್ರಾಣ ಕಂಪನ ೩
ಇವರ ಸಹಿತವಾಗಿ ಸೂತ್ರನಾಮಕ ಮೂಲ |
ಪವಮಾನನೊಡನೆ ಗಣಣೆಯನು ಮಾಡಿ ||
ತವಕದಿಂದಲಿ ತಾರತಮ್ಯವನೆ ತಿಳಿದು |
ಶ್ರವಣದಲಿ ಕೇಳಿ ಸಾಕಲ್ಯವಾಗಿ ನಿತ್ಯ ೪
ಇವನೆ ಪಠಿಸಿದರೆ ಜನ್ಮ ಜನುಮದ ಪಾಪ |
ಉದರಿ ಪೋಗುವದು ಲೇಶ ಉಳಿಯದೆ ||
ಪಮಮನಾಭ ನಮ್ಮ ವಿಜಯವಿಠ್ಠಲರೇಯನ |
ಪದವ ಭಜಿಸುವದಕ್ಕೆ ಜ್ಞಾನವೇ ಪುಟ್ಟವದು ೫

ಮಾತನ್ನಾಡೈ ಮನ್ನಾರಿ ಕೃಷ್ಣ :

೧೯೦
ಮಾತನಾಡೈ ಮನ್ನಾರಿ ಕೃಷ್ಣ ಮಾತನಾಡೈ ಪ
ದಾತನು ನೀನೆಂದು ಬಯಸಿ ಬಂದೆನು ಮಾತನಾಡೈಅ.ಪ.
ಊದುವ ಸಿರಿ ಪೊಂಗೊಳಲೊ ಜಗ-|
ದಾಧಾರದ ನಿಜ ಹೊಳೆಯೋ ||
ಪಾದದ ಪೊಂಗೆಜ್ಜೆ ಥಳಿಲೊ ಸರ್ವ |
ವೇದಗಳರಸುವ ಕಲ್ಪಕ ಸೆಳಲೊ ೧
ಕಸ್ತೂರಿ ತಿಲಕದ ಮದವೊ ಮ-
ಕುಟ ಮಸ್ತಕದಿ ಝಗಝಗವೊ ||
ವಿಸ್ತರದಿ ಪೊತ್ತ ಜಗವೊ ಪರ- |
ವಸ್ತುವು ನಂದ ಯಶೋದೆಯ ಮಗುವೊ ೨
ನವನೀತವ ಪಿಡಿದ ಕರವೊ ನವ-|
ನವ ಮೋಹನ ಶೃಂಗಾರವೊ ||
ಅವತರಿಸಿದ ಸುರತರುವೊ ಶತ-
ರವಿಯಂದದಿ ಉಂಗುರವಿಟ್ಟ ಭರವೊ ೩
ಆನಂದ ಜ್ಞಾನದ ಹೃದವೊ ಶುಭ-|
ಮಾನವರಿಗೆ ಬಲು ಮೃದುವೊ ||
ಆನನ ಛವಿಯೊಳು ಮಿದುವೊ ಪಾಪ-|
ಕಾನನ ದಹಿಸುವ ಪಾವಕ ಪದವೊ ೪
ತ್ರಿಜಗದಧಿಕ ಪಾವನನೊ ಪಂ-|
ಕಜ ನೇತ್ರೆಯ ನಾಯಕನೊ ||
ಅಜಭವಾದಿಗಳ ಜನಕನೊ ನಮ್ಮ |ವಿಜಯವಿಠ್ಠಲ ಯದುಕುಮಾರಕನೊ ೫

೪೨೯
ಮಾತು ಮನ್ನಿಸೊ ಪರಮಾತಮಾ ಮುದದಿಂದ
ಮಾತು ವೈದವನಲವ ಮಾತುರದೊಳು ಗೆದ್ದು
ಮಾತಿಯ ಸೆರೆ ಪ್ರೇಮಾತುರ ಭೇದಿಸಿದ
ಮಾತುರಪತಿ ಚಿನ್ಮಾತುರ ತೋರೋ ಪ
ಶುನಕ ಸೂಕರ ಘೂಕಾ ಮನಕಾಶಾ ಕಾಕಕಂಕಾ
ದನ ಕತ್ತೆ ಮೊದಲಾದ ಜನ ಕಲಿಯುಗದೀ
ತನಕೆ ಆದಞ್ಕಿನ್ನು ಮನಕಾನಂದವ ಕಾಣೆ
ದಿನ ದಿನ ಕಾಂಚನಾಶಿಯಿಂದ ಘನಕಾಮ ಬದ್ಧನಾದೆ
ಕನಕಾಂಬುಜ ಭವಜನಕ ಜಗತ್ಪತಿ ಜನ ಕಥೆಯಿಂದ ಭ
ವನಕತಿ ಮೋಹಿಸಿ ಧನಕವಿಯೆನಿಸಿದೆ
ವನಕವಿವರಗೆ ಮೋಹನ ಕಂಠ ಮಾಲಿಯೆ
ಎನ್ನ ಕಡೆ ಮೊಗವಾಗು ೧
ಸನಕಾದಿ ವಂದ್ಯ ತ್ರಿಭುವನಕಾದಿ ಮೂಲವೆನಿಸಿ
ವನಕಾಯಿದ ಕಾರುಣ್ಯರತುನಕಾರ ಪೂರ್ಣನೀತಾ
ಘನಕಾಯ ಒಂದಾರೆ ಸಾಧನಕಾಧಾರವಾದೊ ಪಾ
ವನ ಕಾಲಾ ತೊರೆದು ಜೀವನ ಕಾದುಕೊಂಡೆನಯ್ಯಾ
ಇನಕರ ತೇಜಾ ತುಹಿನಕರ ಚರಣನೆ
ಬೆನಕಾನ ತತ್ವಾದಿ ಅನಕಳೆವ ರಾಮ ನನ ಕಾರಣಕೆ
ದರುಶನ ಕರುಣಿಸೋ ಲೋ
ಚನ ಕತ್ತಲೆ ನಾಶನ ಕರಿವರದಾ ೨
ಜನಕಾ ವನಿಕಾ ನಾಭಾ ಕಾಣಿಸಿದೆ ಮುನಿ
ಜನಕಾಶ್ಚರ್ಯರಾಗೆ ವಾಗೆ ಅನನಕಾಮರಿ ತೂಗೆ ವಂ
ಚನೆ ಕಾಠಿಣ್ಯ ಪಾಪಕಾನನಕಾನಳನೆ ಜಾ
ವನ ಕಾಟ ಬಿಡಿಸಿ ಈಮ್ಮನ ಕಾದಂತಯ್ಯಾ
ನನಕೂಡ ಹಾಕು ದುಷ್ಟನದೊಟ್ಟಿ ಸ
ಜ್ಜನ ಕರ್ಮದಲಿ ಸೋಭನ ಕಡೆಯಲಿ ಇಡು
ದಿನಕರ ಕುಲಧ್ವಜ ವಿಜಯವಿಠ್ಠಲ ನೂತನ
ಕವನಕೆ ದಾಸನ ಕರವಿಡಿಯೊ ೩

೪೩೦
ಮಾಧವನ ನೋಡಿ ಸಂಪಾದಿಸಿದೆ ಭಕುತಿಯನು |
ಆದರಪೂರ್ವಕದಿಂದಲಿ ಮಾಧುರ್ಯವಾದ ಮನ |
ಸಾಧುಗಳ ಸಂಗತಿ ಭೇದ ಪಂಚಕ ಪೂರ್ಣಬೋಧರ
ಮತವಿಡಿದು ಪ
ಮಡುವಿನೊಳು ಕರಿ ಮೊರೆ ಇಡಲು ಕೇಳುತ ನಕ್ರನ |
ಕಡಿದು ಕರುಣದಿಂದಲಿ ತಡಿಯದಲೆ ಜಡುಮತಿಯ |
ಬಿಡದೆ ಉದ್ಧರಿಸಿದ ಒಡೆಯ ಪುಣ್ಯನಿಧಿಗೆ
ಕಡು ಮೆಚ್ಚಿ ಬಂದವನ ೧
ಮರಣಕಾಲದಿ ಭಯಂಕರವಾದ ಯಮನ ದೂ |
ತರನ ನೋಡಿ ಕರಿಯಲು |
ಪರಮ ವೇಗದಿಂದ ಪುರಕೆ ಕರಿಸಿದ
ಉಭಯ ಶರಧಿ ಮಧ್ಯದಲ್ಲಿ |
ಮೆರೆವ ಮಧುಸೂದನನ ೨
ಜ್ಞಾನ ಪಾಪಿಯ ಸ್ನಾನ ಆನಂದದಲಿ ಮಾಡಿ |
ಹೀನ ದೋಷಗಳ ಕಳೆದು |
ಜ್ಞಾನವಧಿಕವಾದ ಗುರುಗಳ ಕೃಪೆಯಿಂದ |
ಶ್ರೀ ವಿಜಯವಿಠ್ಠಲ ಸೇತುವಾಸನಾ ೩

೪೩೧
ಮಾನ ನಿನ್ನದು ಅಭಿಮಾನ ನಿನ್ನದು |
ದಾನವಾಂತಕ ರಂಗ ದಯಮಾಡಿ ಸಲಹೊಪ
ಒಡೆಯಳು ಕುಳಿತಿರಲು ತೊತ್ತಿನ ಮುಂದಲಿಯ |
ಪಿಡಿದೆಳೆದೊಯ್ದು ಘಾಸಿಯನು ಮಾಡಿ ||
ಅಡಿಗಡಿಗೆ ಅಪಮಾನಗೊಳಿಸಿ ಕೊಲೆ ಮಾಡಿದರೆ |
ಒಡತಿಗಲ್ಲದೆ ಕೊರತೆ ಅವಳಿಗೇನಯ್ಯಾ೧
ಸದನದೊಳು ಪುರುಷನು ಇರುತಿರಲು ಹೆಂಡತಿಯ |
ಎದೆಯ ಮೇಲಿನ ಸೆರಗು ಸೆಳೆದುಕೊಂಡು||
ಒದೆದು ಕೈ-ಕಾಲಿಂದ ಮಾನಹಾನಿ ಮಾಡಿದರೆ |
ಅದು ಪುರುಷಗಲ್ಲದೆ ವಧುವಿಗೇನಯ್ಯಾ ೨
ಪಿತನ ಬಳಿಯಲಿ ಮಗನು ಕುಳಿತಿರಲು ವರ ಮನುಜ |
ಖರೆಯಿಂದ ಕೆಡಹಿ ಪಾಶದಲಿ ಕಟ್ಟಿ ಬಿಗಿಯಾಗಿ ||
ಮತಿಗೆಡಿಸಿ ನಾನಾ ಪ್ರಕಾರ ಭಂಗವ ಮಾಡೆ |
ಕ್ಷತಿ ತಂದೆಗಲ್ಲದೆ ಕುವರಗೇನಯ್ಯಾ೩
ಆಳುವ ದೊರೆಯ ಸಮ್ಮುಖದಲಿ ಬಂಟನಿರೆ |
ಖೂಳರು ಬಂದು ಶಸ್ತ್ರವನು ತೆಗೆದು ||
ಕೀಳು ಮಾಡಿ ಬಂಟನ ಅಭಿಮಾನ ಕೊಂಡರೆ
ಏಳಲವು ಅರಸಗಲ್ಲದೆ ಬಂಟನಿಗೇನು ೪
ಸತ್ಯ ಸಂಕಲ್ಪ ಸರ್ಮೋತ್ತಮ ಸುರಪಾಲ |
ಅತ್ಯಂತ ಪಾಲಸಾಗರ-ಸದನನೆ ||
ಭೃತ್ಯರಪಮಾನ ಅಭಿಮಾನ ನಿನ್ನದು ಸದಾ |
ನಿತ್ಯ ತೃಪ್ತನೆ ಸಿರಿ ವಿಜಯವಿಠ್ಠಲರೇಯಾ ೫

೪೮೧
ಮಾನಸ ಪೂಜೆಯನು ಮಾಡು |
ಧ್ಯಾನ ಪೂರ್ವದಿಂದ ಕುಳಿತು ಪ
ಜ್ಞಾನ ಭಕುತಿಯ ವಿಡಿದು ಲಕುಮಿ |
ಪ್ರಾಣನಾಥನ ಪ್ರೇರಣೆಯಿಂದ ಅ.ಪ
ಕಾಮ ಕ್ರೋಧವ ಹಳಿದು ವಿಷಾದವೆಂಬೋ |
ಸ್ತೋಮಗಳನು ತೊರೆದು ರಜೋ ಮೊದಲಾದ ||
ತಾಮಸದ ಬುದ್ಧಿ ಬಿಟ್ಟು ನೇಮನಿತ್ಯ ತೀರಿಸಿಕೊಂಡು |
ಶ್ರೀಮದಾನಂದತೀರ್ಥರ ಕೋಮಲಾಂಘ್ರಿಯಲ್ಲಿ
ಈ ಮನಸ್ಸು ಇಟ್ಟು ೧
ಹೃದಯ ಪದುಮದೊಳಗೆ ಹರಿಯ ಪದುಮ ಪದಗಳಿಟ್ಟು |
ದೇಹ ಕದಲದಂತೆ ಇದ್ದು ಜ್ಞಾನ ಉದಿತವಾದ ದೃಷ್ಟಿಯ ||
ಹದುಳದಿಂದ ತಿಳಿದು ಅಂತರವೆಲ್ಲವನು ನೋಡಿ |
ಕದವ ತೆರೆದು ಕೊಟ್ಟ ಮುದದಿ ದೃಢವ ಸಂಪಾದಿಸಿ೨
ನೀಲ ರತುನದಂತೆ ಹೊಳೆವ ಪಾಲಸಾಗರತನುಜೆ |
ಮೇಲು ಮಂಗಳರಮಣನಾದ ಮೇಲುಗಿರಿಯ ತಿಮ್ಮನ ||
ಲಾಲಿಯಿಂದ ತುತಿಸಿ ತವಕ ಬೀಳದಲೆ ಪೂಜೆ ವಿಧಾ |
ಸಾಲುಗಳನು ತಿಳಿದು ವಿಶಾಲ ಬುದ್ಧಿ ಯುಕುತಿಯಿಂದ ೩
ವೇದ ಮಂತ್ರಗಳನು ಪೇಳಿ ಆದಿಯಲ್ಲಿ ಪೀಠಪೂಜೆ- |
ಯಾದ ತರುವಾಯ ವಿನೋದದಿಂದಲಾವರಣ ||
ಆದರಣೆಯಿಂದ ಬಳಿಕ ಮಾಧವರಿಗೆ ಸಕಲ ಭೂಷ- |
ಣಾದಿಗಳನು ರಚಿಸಿ ಪುಣ್ಯಹಾದಿಯನು ತಪ್ಪದೆ ೪
ದೋಷರಾಶಿಗೆ ದ್ವೇಷನಾಗಿ ಈ ಶರೀರವ ಘಾಸಿಮಾಡದೆ |
ನಾಶರಹಿತನಾದ ಹರಿಯ ಆಶಿರಸಾವಿಡಿದು ಪಾದ ||
ಲೇಸಿನಿಂದ ಭಜನೆಗೈದು ವಾಸವಾಗು ಪದದಲ್ಲಿ |
ಶ್ರೀಶ ವಿಜಯವಿಠ್ಠಲರನ್ನ ದಾಸ-ದಾಸರ ದಾಸನೆಂದು೫

೨೩೪
ಮುಂಜಾನೆ ಎದ್ದು ಸಂಜೀವನೆನ್ನಿ |
ಎಂದೆಂದಿನ ದುರಿತ ಪೋದವೆನ್ನಿ ಪ

ವಾಯುನಂದನನನೆನ್ನಿ | ವರವಜ್ರಕಾಯನೆನ್ನಿ |
ರಾಯ ರಾಘವನ ಕಿಂಕರನೆನ್ನಿರೈ |
ಛಾಯಾಗ್ರಿಯನ ಕೊಂದು ವನ ಕಿತ್ತಿದನೆನ್ನಿ |
ಮಾಯದ ಲಂಕೆಯ ದಹನನೆನ್ನಿರೈ ೧
ಪಾಂಡು ಕುಮಾರನೆನ್ನಿ ಪಾಪ ಸಂಹಾರನೆನ್ನಿ |
ಉಂಡು ವಿಷವ ತೇಗಿದಾನೆನ್ನಿರೈ |
ಲೇಂಡ ಹಿಡಂಬಕನ ಕೊಂದನೆನ್ನಿ |
ಚಂಡ ಕುರವಂಶಹತನೆನ್ನಿರೈ ೨
ಆನಂದತೀರ್ಥರೆನ್ನಿ ಅಮಿತ ಜೀವಾತ್ಮನೆನ್ನಿ |
ಜ್ಞಾನಕೆ ಮೊದಲು ದೇವತಿಯನ್ನಿರೈ |
ಆನಂದಮಯನಾದ ವಿಜಯವಿಠ್ಠಲರಾಯನ ಧೇನಿಪ ಜನರಿಗೆ ಕೈವಲ್ಯ ಮಾರ್ಗವೆನ್ನಿ೩

೫೨೪
ಮುಕುತಿ ತಮಸು ಎರಡಿಲ್ಲೆ ಕಂಡ್ಯಾ
ಮುಕುತಿ ಬೇರೆ ತಮಸು ಬೇರಿಲ್ಲ ಕಂಡ್ಯಾ ಪ
ಗುರುಪಾದ ಒಡಗೊಂಡು ಮರುತ ಶಾಸ್ತ್ರವ ನೋಡಿ
ಹರಿಯ ಗುಣಂಗಳ ಕೊಂಡಾಡುತ
ಪರಮ ಉತ್ತಮರು ಬರಲು ಬನ್ನಿ ಬನ್ನೆಂದು
ಎರಗಿ ತಕ್ಕೈಸಿ ಕೊಂಡುಂಬುವದೆ ಮುಕ್ತಿ ೧
ನಾನು ನೀನು ಎಂದು ಜ್ಞಾನವನೆ ತಿಳಿಕೊಂಡು
ತಾ ನಿಲ್ಲದಿಲ್ಲೆಂದು ಪೇಳಿಕೊಂಬಾ
ಈ ನಾಡಿನೊಳಗಿವ ಹೀನವನು ಎಂಬರ್ಥ
ಈ ನುಡಿ ಎನಿಸಿಕೊಂಬುದೆ ತಮಸು ೨
ಒಂದರೊಳಾನಂತ ಅನಂತದಲಿ ಒಂದು
ಒಂದೊಂದು ಅನಂತ ಹರಿಪ್ರೇರಕ
ಎಂದು ಗ್ರಹಿಸಿ ಹರಿಗುರು ಹರಿದ್ವೇಷಿಗಳನ್ನ
ನಿಂದಕವಾಗಿ ಬಾಳುವದೆ ಮುಕ್ತಿ ೩
ಅನ್ನದಾ ಸಮಯ ಇಲ್ಲದೆ ಕಂಡಲ್ಲಿ
ತಿನ್ನಲೋಡಿ ಸಮಯವೆನ್ನದೆ
ಅನ್ಯರ ಬದುಕ ಪಹರಿಸುವ ಖಲು
ಗನ್ನ ಫಾತಕನೆನಿಸಿಕೊಂಬುವದೆ ತಮಸು ೪
ಮೀಸಲಾ ಮನದಲ್ಲಿ ವಾಸುದೇವನ ನಿಜ
ವಾಸರದಲ್ಲಿ ಜಾಗರಾ ಮಾಡುವಾ
ಆಶೆಬಡಕನಲ್ಲ ದೇಶದೊಳಗೆ ಹರಿ
ದಾಸನೆಂದು ಪೇಳುವುದೆ ಮುಕ್ತಿ ೫
ವ್ರತವಿಲ್ಲ ವಾವಿಲ್ಲ ಮತಿ ಮೊದಲು ಇಲ್ಲಾ
ಕಥಾಶ್ರವಣ ಒಂದು ಕೇಳಲಿಲ್ಲ
ಪಿತ ಮಾತರನ್ನ ಬೊಗಳುವ ನಾಯಿ ಕು
ತ್ಸಿತನು ಎಂದೆನಿಸುವದೆ ತಮಸು ೬
ಗುಣ ಒಳ್ಳೇದು ನೀತಿ ಮನ ಒಳ್ಳೇದು ಅಜ
ತೃಣ ಜೀವಾದಿಯ ಭೇದಬಲ್ಲನಿವ
ಗಣನೆಮಾಡ ವಿಜಯವಿಠ್ಠಲನಲ್ಲದೆ
ಕ್ಷಣ ಹೀಗೆ ಎಂದೆನಿಸುವದೆ ಮುಕ್ತಿ ೭

೨೩೫
ಮುಖ್ಯಪ್ರಾಣನೀತಾ | ನಮಗೆ |
ಮುಖ್ಯ ಪ್ರಾಣನೀತ ನಮಗೆ ಮೂಲ ಗುರುವಿತ ಸತತಾ |
ಸೌಖ್ಯವನು ಕರುಣಿಸಿ ನಮ್ಮ ಸಖ್ಯನಾಗಿ ಪೊರೆವನೀತಾ ಪ

ನಿಗಮವೇದ್ಯನೀತಾ ನಂಬಿಕೆಯನೀವ ಚರಣ |
ಯುಗಳ ಪೂಜಿಪಾ ದುರಿತ ರಾಗಗಳ ಕಳೆನೀತಾ |
ವಿಗಡ ವಿಷವನುಂಡನೀತಾ |
ಹಗಲ ವಲ್ಲಭನಲ್ಲಿ ಸಂಮೊಗದವನಾಗಿ | ಓದಿದನೀತಾ |
ಅಗಣಿತಾದವಿದ್ಯನೀತಾ ೧
ಜಗವ ಪಾಲಕನೀತಾ ಚತುರ | ಯುಗದಿ ಬಲುದಿಟ್ಟನೀತಾ |
ಪೆಗಲಿಲಿ ಭೂಮಿ ಮಗಳ ಪತಿಯ | ಜಗಳದಲ್ಲಿ ಪೊತ್ತನೀತಾ |
ಹಗೆಯ ದುಶ್ಶಾಸನ್ನ ವಡಲ ಬಗೆದು ಮುಂದೆ ಚತುರ |
ಮೊಗದವನಾಗಿ ವಾನರ ಬಲವ |
ನಗವ ತಂದೆತ್ತಿದವನೀತಾ ೨
ವರ ವೃಕೋದರನೀತಾ ಸಕಲ ಸುರರೊಳು ಬಲು ಪ್ರಬಲನೀತಾ |
ಕರೆದು ಕೊಡುವ ಚತುರ ವಿಧದ |
ಪರಮ ಮಂಗಳ ಪದದಿ ಭವದ |
ಶರಧಿ ಬತ್ತಿಪನೀತಾ | ಒಮ್ಮೆ ಸ್ಮರಿಸಿದಾಕ್ಷಣ ಬರುವನೀತಾ |
ಮರುತಾವತಾರನೀತಾ ತನ್ನ |
ಶರಣ ಜನರ ಪೊರೆವನೀತಾ ೩
ಅಸಮ ಸಾಹಸನೀತಾ ಭಕ್ತರ ವಶವಾಗಿ ವೊಳಗಿಪ್ಪನೀತಾ |
ವಸುಧಿ ಜನರ ಪುಣ್ಯದಂತೆ ಸಮ ವಿಷಮ
ನೋಡಿ ಪೊರೆವನೀತಾ |
ಅಸುರ ಲಿಂಗಭಂಗವ ಮಾಡಿ |
ಬೆಸನೆ ಮತವ ಕಟ್ಟುವನೀತಾ |
ಹಸನಾದ ಮುನಿ ಈ ರಕ್ಕಸರೆದೆಯ ಶೂಲನೀತಾ ೪
ಜ್ಞಾನ ಪೂರ್ಣನೀತಾ ಶ್ರೀಮದಾನಂದತೀರಥನೀತಾ |
ದಾನ ಧರ್ಮ ಪ್ರೇರಕನೀತಾ |
ಪ್ರಾಣನೀತಾ ನಾಶವಿಲ್ಲದೆ ನಾನಾ ಮಹಿಮನೀತಾ |
ನಮಗೇನೇನು ಕೊಡುವನೀತಾ |
ಗಾನವಿಲೋಲ ವಿಜಯವಿಠ್ಠಲ ಧ್ಯಾನ ಮಾಳ್ಪನೀತಾ ೫

ಯತಿಕಕ್ಷೆ – ದಾಸಕಕ್ಷೆ
೩೧೦
ಮುನಿಜನರ ನೆನೆಸಿ ಜನರೂ | ಮುನಿ ಜನರ ನೆನೆಸಿ ಬಿಡ |
ದನುದಿನದಲಿ ನಿಮ್ಮ | ಮನ ಮಲಿನ ಪೋಗಿ ಸ |
ಜ್ಜನ ಸಂಗವಾಗುವುದು || ಅನುಮಾನವಿಲ್ಲ ಗುಣಗಣ |
ವನಧಿ ಹರಿವೊಲಿದು | ಘನವಾಗಿ ಪಾಲಿಸುವನು ಪ
ಮಿತ್ರಮಿತ್ರಾಯು ವಿ | ಚಿತ್ರ ಭಾರ್ಗವ ವಿಶ್ವ |
ಮಿತ್ರ ಮೈತ್ರಾವಾರುಣಿ ಭೃಗು | ವೀತಿ
ಹೋತ್ರ ಕಪಿ ಗಾಗ್ರ್ಯ ಗಾಲವ | ಗರ್ಗಗಾರ್ಚಮಾ ||
ಅತ್ರಿ ಅತಿ ಅಷ್ಟ ವಕ್ರ |
ಪತ್ರ ಫಾಲಾಶವಟು | ಶಾಂಡಿಲ್ಯ ಶಕಟ ಸು |
ನೇತ್ರ ಸುಮಾಂಗಲ್ಯ ಸಂ | ಕೃತಿ ಭಾರದ್ವಾಜ |
ಗೋತ್ರ ಗೌರೀವೀತಹವ್ಯ | ಕಪಿ ಶಂಖಕಟ
ಮೈತ್ರಾವರುಣವಾಧುಳಾ || ೧
ಉಪಮನ್ಯು ಶಂಕು ಉದ್ದಾಲಕ ಕೌಂಡಿಣ್ಯ |
ಅಪುನವಾನ ಅತಿಥಿ ಪಾಂತುಚಾವನ ಚವನ |
ಉಪಮಿಥ್ಯು ಕಪಿಲ ಕಾಶ್ಯಪ ಕಾಣ್ವ ಹರಿತ ಕ |
ಶ್ಯಪ ಪೂತಿಮಾಷರೈಭ ||
ವಿಪುಳ ಜಮದಗ್ನಿ ವಾಲ್ಮಿಕಿ ರೇಭ ಜಾಬಾಲಿ |
ಸ್ವಪನ ಸಾತ್ಯಕಿಯು ಸಾಮ್ಯಾಳ ದೇವರತತಿ |
ತಪ ದೈವಲ ಸಿತ ಗೌತುಮ ಭದ್ರಸ್ವಾತಂತ್ರ |
ಕಪಿಕುತ್ಸ್ನ ಪೌರಕುತ್ಸಾ ೨
ಮುನಿಮಾದ್ರಮ ಶಣಶರ್ಮ ಬಾದರಾಯಣ |
ಕನಕ ಕಾತ್ಯಾಯನ ಮಾರ್ಕಾಂಡ್ಯ ಮಾಂಡವ್ಯ |
ಶುನಕ ಶೌನಕ ರೋಮಹರ್ಷಿಣಿ ಸೌಭರಿ |
ತೃಣಬಿಂದು ಭಾಷ್ಕಾಳಾಖ್ಯ ||
ಪನಸ ಅಘಮರ್ಷಣ ಪ್ರಮಧ ಪ್ರಾಗಾಧ ಜೀ |
ವನಯಾಜ್ಞವಲ್ಕ್ಯ ಜಿವಂತಿ ಮಾತಂಗ ಶೋ |
ಭನ ಸಕೆಕೃತಿ ಭಾರ್ಗವ ಸುರವತ್ಸ ಚಂ |
ದನ ಧೌಮ್ಯ ಆರ್ಯ ರುಚಿರಾ || ೩
ವಾಸಿಷ್ಟ ಶ್ರೀವತ್ಸ ಲೋಹಿತಾಷ್ಯಕಶರ್ವ |
ವಾಸುಳೆ ಋಷಿ ಶಣಕ ಕರ್ದಮ ಮರೀಚಿ ಪಾ |
ರಾಶರಪ್ಸಲ್ಲಾದ್ರಿಧರ ಶಕ್ತಿ ವೈರೋಹಿತ್ಯ |
ಬೇಷಿ ಜಾವಾಯುಲಿಕೆಯೂ ||
ಭೂಷಣೌ ಬಾರ್ಹಸ್ಪತ್ಯದಾಲ್ಭ್ಯ ಸುಯಜ್ಞಾಜ್ಞಿ |
ವೇಶ್ಯ ಮುಖ ಸಪರಿಧಿಸಾಲಂಕಾಯನಾ ಧರ್ಮ |
ದೈಸಿಕಾ ದೇವರಾತ ವತ್ಸರಾಜಾರ್ವನಾ |
ನಾಶಯ ದೇವಶ್ರವತಾ ||೪
ಗಿವಿಷ್ಠರಾ ವಾಮವಾಮರಿತ್ಯ ಕಾಲುಗ್ರ |
ಶ್ರವ ಪೂರ್ಣವಾಹಕ ಕೃತು ಅಂಗಿರಸಾಂಗಿರಾ ||
ಪವನ ಪ್ರಚಿನಾ ಯಜ್ಞಾರಿಷ್ಟ ಶಠನಾ ಪಾ |
ಲವ ಶಮನ ಋಷಿಶೃಂಗ ||
ಕವಿ ವೇದಶಾಲ ವಿಶಾಲ ಕೌಶಿಕ ಶುಚಿ |
ಭುವನ ಉರ್ಜಯನ ಮಾಹಋಷಿಭಹುದ ಸಂ |
ಭವಸ್ತಂಭ ಕಿರಾಠಿ ಕಪಿಸೇನ ಶಾಂಡಿಲ್ಯ |
ಪವನದಮ ಬೀಜವಾಪಿ || ೫
ಉಲಿಖಲು ಧನಂಜಯ ವಾಲಿಖ್ಯಮಾಯ |
ಕಲಿಕಿ ಸೃಂಗಿ ಮಧು ಚಂದವಿತನು ಬಹು |
ಬಲ ಧ್ರೂಮ ಜಠರ ಉರ್ವಾಸ ಐಕ್ಯಾಯನ |
ತಿಲುಕ ವಿಭಾಂಡ ಶರಭ ||
ಪುಲಸ್ತ್ಯ ದಧೀಚಿ ಕಥಾಸೂನು ಸೇವಾಸ್ಯ ಮಾ |
ದ್ಗಲ ವಿಷ್ಣು ತ್ರಿಧಕುಕ್ಷಿ ಶುಕ್ಷ ಮನತಂತು |
ಪುಲಹ ಹವಿಧಾನ ಉತ್ತಂಕ ಉತ್ತಮ ಕಚರ |
ಬಲವೀರ್ಯ ಬಬ್ರಾಮೇನೂ೬
ಸುತಪ ಅಪವರ್ಗ ಹಿರಣ್ಯನಾಭ ಅ |
ದ್ಭುತ ಅಜಾಮೀಡ ಪರ್ವತ ಶ್ವೇತಕೇತಮಾಹ ||
ದೃತಿ ಶಕ್ತಿ ವೈಶಂಪಾಯನ ಪೈಹಿಲಜಯ |
ಸತ್ಯವ್ರತ ಶ್ರ್ರುತಿದೃತಿ ಆಯತಾ ||
ಶ್ರುತಿಕೀರ್ತಿ ಸುಪ್ರಭಾವತ್ಸ ಮೃತಾಂಡ ಸೂ |
ಮತಿ ಕ್ರೋಢ ಕೋಲ ಗೋಬಲ ಮಾತೃಕಾನಂದ ||
ದ್ಯುತಿ ತಪವಿದ್ವಾಹ ದರ್ಭಾ ಜಾನ್ಹವಶೀಲ |
ಕಥನ ಸರ್ವಸ್ಥಂಬವಾ ೭
ನೈಧ್ರುವಾ ದೀರ್ಘತಮ ಜಮದಗ್ನಿ ಕಾರುಣಿ |
ಸದ್ಮುನಿಕಾಂಡಮಣಿ ಮಾಂಡವ್ಯವಾಚಸಕ |
ಶುದ್ಧ ಸಂವರ್ತ ಸಂತತ ಕಾಮ ಸಂಹತಿ |
ಶಿದ್ಧಿಸನಕಸ ನಂದನಾ ||
ವಿದ್ಯಾಂಗ ಹವ್ಯರೋಹಿತಶರ್ಮ ಸೂಕರ್ಮ |
ಉದ್ಧಾಳ ಉಚಿತ್ಥ್ಯಹರಿ ಮೇಧ ಮೇಧ ಪ್ರ |
ಸಿದ್ಧ ಮಯೂರ ಶುಕ ಕಪಿಲ ಕಾಪಿಲ್ಲ್ಯ ಗುಣ |
ಬುದ್ಧಿ ಸಮೇಧ ಪೇರ್ಮಿ ೮
ಪಂಚ ಪಂಚಾಸಪ್ತ ಅಪ್ಟ ಕಾಲದಲಿ ಪ್ರಾ |
ಪಂಚದೊಳು ತೊಡಕದಲೆ ಬುದ್ಧಿ ಚಿತ್ತದೊಳಿಟ್ಟು |
ಅಂಚಿಗಂಚಿಗೆ ಬಹು ಮುನಿಗಳೊಳ |
ಗಿದ್ದವರ ಕೊಂಚ ಮುನಿಗಳ ಪೇಳಿದೆ ||
ವಂಚನೆಯಿಲ್ಲದೆ ಸ್ಮರಿಸಿ ಮಧ್ವಮತಪೊಂದಿ |
ಸಂಚಿತಾಗಮ ಕಳೆವ ಸರ್ವಸುಖವೀವ ವಿ |
ರಂಪಪಿತ ವಿಜಯವಿಠ್ಠಲರೇಯ ಇದು ರವಿ |
ಮಿಂಚಿನಂದದಿ ಪೊಳೆವನು ೯

ಮುನಿಯ ನೋಡಿರೊ ವಂದನೆಯ ಮಾಡಿರೊ :

೩೩೧
ಮುನಿಯ ನೋಡಿರೊ ವಂದನಿಯ ಮಾಡಿರೊ
ಕನಸಿನೊಳಗೆ ನೆನೆದ ವರವ ಕ್ಷಣದಲೀವ ಘನ ಸಮರ್ಥ ಪ
ತೊಲಗದಿಪ್ಪ ಭೂತಪ್ರೇತ ನೆಲೆಯಾಗಿರಲು ಇವರ ಚರಣ
ತೊಳೆದ ಜಲವು ಬೀಳಲಾಕ್ಷಣ
ಹಲುಬಿಕೊಳುತಲಳಿದು ಪೋಗೋವು ೧
ಹಿಂದೆ ವ್ಯಾಸ ಮುನಿಗಳಿಂದ
ನೊಂದು ನಮಿತರಾಗಿ ಅವರಿಂದ ಭೇದವರಿತು ಗೋ
ವಿಂದ ಒಡೆಯನೀತ ೨
ಮೊದಲು ಹೇಮಕಶ್ಯಪಜನ ಬದಿಯಲಿದ್ದು ತತ್ವ ಜ್ಞಾನ
ಮುದದಿ ತಿಳಿದು ಮಾಯಿ ಶಾಸ್ತ್ರ
ವೊದೆದು ಕಳೆದ ನಿಜ ಸದಮಲ ಸಮರ್ಥ ೩
ಮಧ್ವಮತಾಂಬುಧಿಯೊಳು ಪುಟ್ಟಿ
ಅದ್ವೈತ ಮತವನೆಲ್ಲ ಸದದು ಸದ್ವೈಷ್ಣವರನ್ನ ಪಾಲಿಸಿ
ಊಧ್ರ್ವ ಲೋಕದಲ್ಲಿ ಮೆರೆದ೪
ವರಸತ್ಯಾಭಿನವತೀರ್ಥರ ಕರಕಂಜದಿಂದ ಜನಿಸಿ
ವೇಲೂರ ಪುರಪಯೋನಿಧಿವಾಸ ಜಗದ
ದೊರೆ ವಿಜಯವಿಠ್ಠಲನ್ನದಾಸ೫

೧೯೨
ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ |
ಕಿಸರು ಹೊರಲಿ ಬೇಡ ಕೆಲಕೆ ಸಾರೋ ಪ
ಪಶುಗಾವಿ ನೀ ಎನ್ನ ಹೆಸರುಗೊಳಲಿಬೇಡ |
ಹಸನಾದ ಮುತ್ತಿನ ಸರಗಳು ಹರಿದಾವೊ ||
ನಿಶೆಯ ವೇಳೆಯು ಅಲ್ಲಾ ನಿನಗೆ ಬುದ್ಧಿಯು ಸಲ್ಲಾ |
ವಶಕರವಾಗುವಳೆ ಒಲವು ಇಲ್ಲದೆ ೧
ಎದೆಯ ಮುಟ್ಟಲಿ ಬೇಡ ಎಳೆನಗೆ ನಗಲಿಬೇಡ |
ಬದಿಬಗಲು ಪಿಡಿದು ನೋಡುವರೆ ಹೀಗೆ ||
ಕದವ ಮುಚ್ಚಿಕೊಂಡು ಕಾಕು ಎಬ್ಬಿಸುವರೆ |
ಸದನಕ್ಕೆ ಹೋಗಬೇಕು ಸರಸವೇಕೊ೨
ಹಿಂದೆ ಬಂದವರು ಏನೆಂದು ಒಲಿದರೊ ಕಾಣೆ |
ಒಂದಿಷ್ಟು ಚೆಂದವಿಲ್ಲ ಚೆಲುವಿಕೆಯಿಲ್ಲಾ ||
ಕಂದರ್ಪಕೋಟಿ ತೇಜ ವಿಜಯವಿಠ್ಠಲ ಎನ್ನ |ಮಂದಿರಕೆ ಬಾರೊ ನಿನ್ನ ಮನಸು ದಣಿಸುವೆ ೩

೧೯೩
ಮೋಹಿಯಾಲಧರಾ ನಂ |
ಮನನ ಮೋಹಿಯಲ ಮುರಲಿಧರಾ ಪ
ಗೋಕುಲ ವಾಸಿ ಗೋಪ ವಿಲಾಸಿ |
ಜನ್ಮಾನಿ ಯಾದವರೈಸಿ || ೧
ಯಮುನಾಚ ತೀರಿ ಗೋಧನಚಾರಿ |
ಖೇಲತನಾನಾ ಪರಿ ೨
ಸುಂದರಶ್ಯಾಮ ಸುಗುಣಾಭಿ ರಾಮ |
ವಿಜಯವಿಠ್ಠಲ ನಿಜ ಪ್ರೇಮ ಮನ ಮೋಹಿಯಾಲ ೩

೪೩೨
ಯಚ್ಚತ್ತು ನಡಿ ಕಂಡ್ಯ ಮನವೇ ನಮ್ಮ
ಅಚ್ಯುತನಂಘ್ರಿಗಳನು ನೆನೆ ಮನವೇ ನೀ ನೆನೆ ಕಂಡ್ಯ ಮನವೇ ಪ
ಆಡದಿರಪವಾದಗಳನು ನೀನು
ಕೊಂಡಾಡದಿರು ಚಿಲ್ಲರೆ ದೈವಗಳನು
ಬೇಡಾಡದಿರುಭಯ ಸೌಖ್ಯಗಳನು ನೀ
ಮಾಡಿ ಕಂಡ್ಯ ದುರ್ಜನರ ಸ್ನೇಹವನ್ನು ಸಜ್ಜನರ ದ್ವೇಷವನು ೧
ಹಾಳು ಹರಟಿಗ್ಹೋಗ ಬ್ಯಾಡ ಕಂಡ
ಕೂಳುಗಳನು ತಿಂದು ವಡಲ್ಹೊರಿಯ ಬೇಡ
ಕಾಲ ವೃಥಾ ಕಳಿಯ ಬ್ಯಾಡ ನಮ್ಮ |
ಪ್ರಾಲಬ್ಧ ಭೋಗಕ್ಕೆ ಮನಸೋಲ ಬ್ಯಾಡ,
ಶ್ರೀ ಹರಿ ದಯಮಾಡಾ ೨
ನಾನು ಯೆಂಬುದು ಬಿಡು ಕಂಡ್ಯಾ ಎನ್ನ
ಮಾನಾಭಿಮಾನದ ಹರಿಯನ್ನು ಕಂಡ್ಯಾ
ಜ್ಞಾನಿಗಳೊಡನಾಡು ಕಂಡ್ಯಾ ವಿಷಯ
ಜೇನೆಂದು ಮೆದ್ದರೆ ಅದು ವಿಷ ಕಂಡ್ಯಾ
ಬೀಳುವಿ ಯಮಕೊಂಡಾ ೩
ಅನ್ಯಸ್ತ್ರೀಯರ ನೋಡಬ್ಯಾಡಾ ಹಿಂದೆ
ಮಣ್ಣು ಕೂಡಿರುವರೆಗೊ ಕೇಳೊ ಮೂಢಾ
ಅನ್ಯಶಾಸ್ತ್ರವನೋದ ಬ್ಯಾಡಾ ನಮ್ಮ
ಪೂರ್ಣಪ್ರಜ್ಞರ ಬೊಧ ತಿಳಿದುಕೊ ಗಾಢ,
ಮೈಮರೆದಿರ ಬ್ಯಾಡಾ೪
ನರಜನ್ಮ ಬರುವೋದು ಕಷ್ಟ ಅಮ್ಮ
ಹಿರಿದು ನೋಡೆಲೋ ವಿಪ್ರತ್ವವು ಶ್ರೇಷ್ಠ
ಮರಳಿ ಬಾರದು ಉತ್ರ‍ಕಷ್ಟ ನಮ್ಮ
ಮಾರುತ ಮತವನೆ ಪೊಂದುವದೆ ದುರ್ಘಟ,
ಕೇಳೆಲವೋ ಮರ್ಕಟ ೫
ಗೋವಿಪ್ರರ ಸೇವೆ ಮಾಡೋ ಸೋಹಂ
ಭಾವಗಳನು ಬಿಟ್ಟು ದಾಸತ್ವ ಕೂಡೋ
ಕೇವಲ ವೈರಾಗ್ಯ ಮಾಡೋ ಎಂಟು
ಝಾವಗಳಲಿ ಶ್ರೀ ಹರಿಯ ಕೊಂಡಾಡೊ,
ಲಜ್ಜೆಯನೀಡ್ಯಾಡೋ೬
ಕಷ್ಟ ಪಡದೆ ಸುಖ ಬರದು ಕಂ
ಗೆಟ್ಟ ಮ್ಯಾಲಲ್ಲದೆ ಕಷ್ಟ ತಿಳಿಯದು
ದುಷ್ಟ ವಿಷಯದಾಶೆ ಜರಿದು ವಿಜಯ
ವಿಠಲನೆನ್ನದೆ ಮುಕ್ತಿಯು ಬರದೂ, ಕೂಗೆಲವೊ ಬ್ಯಾದೆರದು ೭

೩೦೪
ಯಮುನೆ ದುರಿತ ಉಪಶಮನೆ | ಅಮಮ ಮಂದಗಮನೆ ||
ಅಗಣಿತ ಸುಮನೆ ಪ
ಆ ಮಹಾ ಮಾರ್ತಾಂಡ ಪುತ್ರೆ ಮಂಗಳಗಾತ್ರೆ |
ಕಾಮಿತ ಸುಫಲದಾಯೆ ಕಾಲನಿಭ ಕಾಯೆ |
ಆ ಮಂಜುಗಿರಿ ಬಳಿಯ ಅಲ್ಲಿ ಪುಟ್ಟಿದ ಸಿರಿಯೆ |
ಸೋಮಕುಲಪಾವನೇ ಶರಣ ಸಂಜೀವನೆ ೧
ಗಂಗಾ ಸಂಗಮ ಘನತರಂಗಿಣೀ ಮಹಾಮಹಿಮೆ |
ಅಂಗವಟೆ ಅತಿ ಚಲುವೆ ನಲಿದಾಡಿ ನಲಿವೆ |
ಮುಂಗುರಳು ಸುಮಲತೆ ಮೂಲೋಕ ವಿಖ್ಯಾತೆ |
ಕಂಗಳಲಿ ನೋಳ್ಪಂಗೆ ಹೃತ್ಕಮಲ ಭೃಂಗೆ ೨
ವಾರಿನಿಧಿ ಪ್ರಥುಕುಗಾಮಿನಿ |
ಹಾರ ಮುಖೆ ಸುಪ್ರಮುಖೆ |
ವೀರಶಕ್ತಿ ವಿಜಯವಿಠ್ಠಲನ |ಕಾರುಣ್ಯಪಾತ್ರೆ ಸಂಗೀತಲೋಲೆ ೩

೨೧೩
ಯಲ್ಲರಮ್ಮನಲ್ಲವೆ ಸಿರಿದೇವಿ | ಎಲ್ಲರಮ್ಮನಲ್ಲವೆ ||
ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ಪ
ಆಲದೆಲೆಯ ಮೇಲೆ ತನ್ನ ಪುರುಷನಂದು |
ಕಾಲವರಿತು ಪವಡಿಸಿರಲು ||
ವಾಲಗವನು ಮಾಡಿ ಕೊಂಡಾಡಿ ಜೀವರ |
ಮೂಲ ಕರ್ಮಂಗಳು ತೀರುವಂತೆ ಮಾಡಿದ ೧
ಆಮೋಘ ವೀರ್ಯ ಗರ್ಭದಿ ಧರಿಸಿ ತಾ |
ಬೊಮ್ಮಾಂಡವನೆ ಪೆತ್ತ ಲೋಕಾಮಾತಾ ||
ಸುಮನಸರಿಗೆ ಕಡೆಗಣ್ಣ ನೋಟದಿ |
ಆ ಮಹಾ ಪದವಿಯ ಕೊಡುವ ಭಾಗ್ಯವಂತೆ ೨
ಎರಡೊಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀ
ವರ ಯೋಗ್ಯತೆಯಂತೆ ಪಾಲಿಸುತಿಪ್ಪಳು ||
ಪರಮ ಪುರುಷ ನಮ್ಮ ವಿಜಯವಿಠ್ಠಲನ್ನ |ಕರುಣದಿಂದಲಿ ಅನಂತ ಕಲ್ಪಕೆ ನಿತ್ಯ ೩

೪೩೩
ಯಾಕೆ ಜೀವನವೆ ನೀ ಶ್ರೀಕಾಂತನನು ಮರೆವಿ |
ವಿವೇಕವೇ ನಿನಗಿದು ? ಪ
ಜೋಕೆಯಿಂದಲಿ ನಿನ್ನ ಸಾಕುವ ಶ್ರೀ ಹರಿಯು |
ಬೇಕಾದ ವರವೀವ ಭಕ್ತವತ್ಸಲ ದೊರೆಯಾಅ.ಪ
ಲೇಸಾದರು ವಿಷಯದಾಸೆಯ ಬಿಡಲೊಲ್ಲಿ |
ಏಸು ಜನ್ಮಂಗಳಾದರು ಈ ಶರೀರವು ನಿನ್ನದೆಂದು ತಿಳಿದು ||
ಪೋಷಿಸುವಿಯೊ ಬರಿದೆ ದೋಷರಹಿತ ಶ್ರೀನಿ- |
ವಾಸನ್ನ ನೆನೆದು ನಿರ್ದೋಷವ ಕಳೆದೆನ್ನ ಪೋಷಿಸು ಎನ್ನದಲೆ ೧
ಸತಿ-ಸುತರನು ನೀನು ಸಲಹುವೆನೆನುತಲಿ |
ಅತಿ ಚಿಂತೆ ನಿನಗ್ಯಾತಕೊ ಗತಿ ನಿನಗಾಗುವ ||
ಹಿತಚಂತನೆ ಮಾಡೊ ಸದ್ಗತಿಯಾಗುವ ತನಕ |
ರತಿಪತಿ ಪಿತನ ನೆನೆದು ನೀ ಪ್ರತಿಕ್ಷಣ ಹರಿಕಥೆ ಕೇಳದಲೆ೨
ಪೊಟ್ಟೆಗೋಸುಗ ಭ್ರಷ್ಟರ ಸ್ತುತಿಸಿ ನೀ |
ಕೆಟ್ಟು ಪೋಗುವಿ ಯಾತಕೋ ಜೀವನವೆ ||
ಪುಟ್ಟಿಸಿದವ ನಿನ್ನ ಪೊಟ್ಟೆಗೆ ಕೊಡನೇನೋ |
ಕೆಟ್ಟುಹೋಗದೆ ವಿಜಯವಿಠ್ಠಲನ್ನ ನೆನೆದು ಸುಖಿಯಾಗು೩

೪೩೪
ಯಾಕೆ ಪುಟ್ಟಿಸಿದಿ ಇನ್ನು ಎಲೊ ಹರಿಯೆ |
ಲೋಕ ದೊಳಗನುಗಾಲ ತಿರಿದು ತಿಂಬುವಂತೆ ಮಾಡಿ ಪ
ಒಡಲಿಗಾಗಿ ಒಬ್ಬನ ಸಂಗಡ ಹೋಗಲು |
ಕೊಡುವವನು ಇಲ್ಲೆಂದು ಪರಿಹರಿಸುವ ||
ಸುಡು ಈ ಶರೀರವ ಬಳಲಲಾರೆನೊ ವಿಷದ,
ಮಡುವನಾದರು ಧುಮುಕಿ ಮರಣವಾಗುವೆ ರಂಗಾ ೧
ಪ್ರತಿದಿನವೂ ಅನ್ನ ಕೊಡುವವನ ಬಾಗಿಲಿಗ್ಹೋಗೆ |
ಹುತವಾಗುವನು ಎನ್ನ ನೋಡುತಲಿ ||
ಕ್ಷಿತಿಯೊಳಗೆ ಈ ಪರಿ ಬದುಕಿ ಇಹೋದಕಿಂತ |
ಹತವಾಗಬಹುದಂಬಿನ ಮೊನೆಗೆ ಬಿದ್ದು ರಂಗಾ ೨
ಎಲ್ಲಿ ಬೇಡಿದಲ್ಲವೆಂಬೋ ಸೊಲ್ಲಿಲ್ಲಿದೇ |
ಒಲ್ಲೆನೋ ಸಾಕು ಈ ನರ ಜನ್ಮವು
ಬಲ್ಲಿದ ಬಲ್ಲಿದರರಸ ಸಿರಿ ವಿಜಯವಿಠ್ಠಲ ನಿ- |
ನ್ನಲ್ಲಿ ದೂತರ ಸಂಗದಲ್ಲಿ ಸುಖಬಡಿಸೊ ೩

೪೩೫
ಯಾಕೆ ಬಂದಿ ಜೀವಾ ಯಾಕೆ ಬಂದಿ |
ಲೋಕದ ಸವಿಸುಖ ಅನುಭವವಾಯಿತು ಪ
ಮೇರು ಪರ್ವತದಲ್ಲಿ ವಾರಣವಂತನಾಗಿ |
ಶ್ರೀ ರಮಣನ ಧ್ಯಾನ ಆರಾಧನೆಯ ಬಿಟ್ಟು ೧
ಉಡಿಗೆ-ತೊಡಿಗೆ ಇಟ್ಟು ಅಡಿಗಡಿಗೆ ಸುಖ |
ಬಡುವೆನೆಂಬುದಕೆ ಈ ಪಾಡುಬಡಲು ನೋಡು ೨
ಉಣ್ಣು ಉಣ್ಣು ಉಣ್ಣು ಮತ್ತೆ ಉಣ್ಣು
ಹೆಣ್ಣು-ಹೊನ್ನು-ಮಣ್ಣು ನಿನ್ನಾಧೀನವೆಂಬೀ ೩
ಅಲ್ಲಿಗಲ್ಲಿಗೆ ಜ್ಞಾನ ಬಲ್ಲವರ ಕೂಡ |
ಎಲ್ಲ ಕಾಲದಲಿ ನಲಿದಾಡೋದು ಬಿಟ್ಟು ೪
ಆದದ್ದಾಯಿತು ಹೋದ ಮಾತುಗಳೇಕೆ |
ಶ್ರೀಧರ ವಿಜಯವಿಠ್ಠಲನ ಮರೆಯದಿರು ೫

೪೮೨
ಯಾಚಕರು ಪರರ ಸಂಕಟ ಬಲ್ಲರೆಣ ಪ
ಭೂ ಚಕ್ರದಲಿ ಗಾಳಿಯಂತೆ ತಿರುಗಲು ಬಿಡರುಅ.ಪ
ಕಾಪೀನವನು ಧರಿಸಿ ಮುಖವ ಡೊಂಕನೆ ಮಾಡಿ
ಕೋಪದಿಂದಲಿ ಕರವನೆತ್ತಲ್ಯಾಕೆ
ಪಾಪಿ ಕೂಪವ ಮೀರಿ ಸಮುದ್ರವನು ನೆರೆ ದಾಟಿ
ರೂಪಾಂತರದಿ ಮನೆ ಮನೆಯ ಪೊಕ್ಕರು ಬಿಡರು ೧
ವಿಷವ ಸವಿದುಂಡು ಮಹ ಮಡುವ ಪ್ರವೇಶಿಸಿ
ವಸುಧೆಯೊಳು ಬೇಡಿ ಕಿರಿತಂದುಂಡರು
ಬೆಸಬೆಸನೆ ವನವನವ ತಿರುಗಿ ಅಜ್ಞಾತದಲಿ
ವಸಿಸಿ ಮಾನಸದಿ ಗೃಹಕರ್ಮ ಮಾಡಲಿ ಬಿಡರು ೨
ಜುಟ್ಟು ಜನಿವಾರವನು ಕಿತ್ತುಕೊಂಡು ಯತಿಯಾಗಿ
ಕಟ್ಟ ಕಡೆಯಲಿ ಗೃಹಸ್ಥ ಧರ್ಮ ತೊರೆದು
ಹುಟ್ಟುಗತಿ ಯಿಲ್ಲೆನಗೆ ಕೃಷ್ಣ ಕೃಷ್ಣ ವಿಜಯ
ವಿಠ್ಠಲನ ಪಾದಕೆ ಮೊರೆಯಿಟ್ಟರು ಬಿಡರು ೩

೪೮೩
ಯಾಯಾ ವಾರವ ನೀಡಿ ಪ್ರೀಯದಿಂದಲಿ ಜನರು
ಬಾಯಲ್ಲಿ ಹರಿಯ ಕೊಂಡಾಡುತ ಪತಿವ್ರತ
ಸ್ತ್ರೀಯರು ಮುದದಿಂದ ಪ
ಸಾರುತ ಹರಿದಾಸ ಕೇರಿಯೊಳಗೆ ಬರಲು
ಚೋರತನವ ಮಾಡಿ ಚುದಗು ಬುದ್ಧಿಯಲಿಂದ
ದ್ವಾರವನಿಡದಿರಿ ೧
ಬಂದಾ ಹರಿದಾಸನ ವಂದಿಸಿ ನಿಮ್ಮಯ
ಮಂದಿರದೊಳು ಕರೆದು ತಂದಿಗಳೆಂದು ನಲು
ವಿಂದಲಿ ಉಪಚರಿಸಿ ೨
ಪರಲೋಕ ಬಂಧುಗಳೆ ಕರುಣವ ಮಾಡಿದಿರಿ
ನಿರುತ ಮಾಡಿದ ಕರ್ಮ ಪರಿಹರವೆಂದು ನಾ
ಸಿರ ಬಗೆ ಕೊಂಡಾಡುತಾ ೩
ಪತಿಮತೈಕ್ಯವಾಗಿ ಅತಿಶಯ ಭಕುತಿಯಲಿ
ಗತಿಗೆ ಸಾಧನವೆಂದು ತಿಳಿದು ಈ ಧರ್ಮಕ್ಕೆ
ಪ್ರತಿಕೂಲವಾಗದಲೆ ೪
ವಕ್ಕಡತಿ ತಂಡುಲವ ಚಕ್ಕನೆ ನೀಡಲು
ಮಕ್ಕಳು ಮರಿಗಳು ಸಹಿತ ನಿತ್ಯಾ
ಸುಖವಕ್ಕು ಸಟಿಯಲ್ಲಾ ೫
ಇಲ್ಲವೆಂದು ನುಡಿದರೆ ಪುಲ್ಲಲೋಚನವಪ್ಪಾ
ಎಲ್ಲ ಕಾಲದಲಿ ನಿಮ್ಮಂಗಣದೊಳು
ಇಲ್ಲವೆ ನಿಂತಿಪ್ಪದು ೬
ಹಸ್ತು ಹರಿದಾಸ ಬಂದು ಹೊಸ್ತಿಲಿಂದಲೆ ತಿರಿಗಿ
ವಿಸ್ತರಿಸುವೆ ಕೇಳು ಹರಿ ತೊಲಗುವಾ ದ್ವಿ
ಮಸ್ತಕ ಭುಂಜಿಸುವಾ ೭
ಒಂದೊಂದು ಕಾಳಿಗೆ ಒಂದೊಂದು ಕುಲಗೋತ್ರ
ಮುಂದೆ ಉತ್ತಮ ದೇಹದಲಿ
ಬಂದು ಸುಜ್ಞಾನದಿಂದಲೆ ಲೋಲಾಡುವರು ೮
ಹಲವು ಪೇಳುವದೇನು ಸುಲಭಾವೆನ್ನು ಧರ್ಮ
ಅಳಿದು ಹೋಗುವದಲ್ಲ್ಲ ಇದನು ವಿಜಯವಿಠ್ಠಲ
ಬಲ್ಲ ಮಹಾಫಲವ೯

೧೯೪
ಯಾವದು ಸುಖವೇ ಮತ್ಯಾನಂದವೇ ಪ
ಈ ಉಡುಪಿಯ ಯಾತ್ರೆ ಮಾಡಿದ ಮನುಜಗೆ ಅ.ಪ.
ಮನದಲಪೇಕ್ಷಿಸೆ ಅವನಿಗೆ ಹದಿನಾಲ್ಕು
ಮನುಗಳು ಭೂಮಿಯನಾಳೋತನಕ
ಕನಕನ ಚಿತ್ತನಾಗಿ ಗೋಕುಲದಿಂದ ಸ
ಜ್ಜನ ಮಾರ್ಗದಲಿ ಗುಣವಂತನೆನಿಸಿಕೊಂಬ ೧
ಒಂದು ಹೆಜ್ಜೆಯನಿಟ್ಟು ಸಾಗಿ ಬರುತಲಿರೆ
ಅಂದೆ ಸುರರೊಳು ಗಣನೆ ಎನ್ನೆ
ಒಂದಕ್ಕೆ ನೂರಾರು ಯಾಗ ಮಾಡಿದ ಫಲ
ತಂದು ಕೊಡುವ ಅಜನಾದಿಕಲ್ಪ ಪರಿಯಂತ೨
ಅರ್ಧ ಮಾರ್ಗದಿ ಬರಲು ಬಂದು ನಿಲ್ಲಲು ಅವರ
ಸಾಗರದಿ ಕೋಟಿ ಸ್ನಾನ ಮಾಡಲು
ಊಧ್ವರೇತಸ್ಥನಾಗಿರ್ದ ಫಲವಕ್ಕೆ
ಊಧ್ರ್ವಭೂಷಿತನಾದ ಬ್ರಹ್ಮಯುಗ ಪರಿಯಂತ ೩
ಸನ್ನಿಧಿಗೆ ಬಂದು ಕರವನ್ನೆ ಜೋಡಿಸಿ
ಸನ್ನುತ ಸಾಧನವನು ಮಾಡಲು
ಸನ್ನುತರ ತೆಗೆದು ಜ್ಞಾನ ಭಕುತಿ ಸಂ
ಪನ್ನವಿರಕುತಿಗೆ ಯತಿಗಾದಿ ಮುಖನಾದ೪
ಶ್ರೀಕೃಷ್ಣ ಕೃಷ್ಣೆಂದು ಕರವ ಜೋಡಿಸಿ ನಿಂದು
ದೃಷ್ಟಿಯಿಂದಲಿ ನೋಡಿದವನೆ ಮುಕ್ತಾ
ಮುಟ್ಟಿ ಭಜಿಸುವರ ಸತ್ಪುಣ್ಯ ವಿಜಯವಿಠ್ಠಲನಾತನೆ ಬಲ್ಲ ಅರುಹಲಳವಲ್ಲ ೫

೨೩೬
ಯೆಂತು ವರ್ಣಿಸಲಮ್ಮ ಈ ಗುರುಗಳ |
ಯಂತ್ರೋದ್ಧಾರ ನಾಗಿ | ಇಂತು ಮೆರೆವ ಯತಿಯಾ ಪ
ಕೋತಿ ರೂಪದಿ ಬಂದು | ಭೂತಳಕ್ಕೆ ಬೆಡಗು ತೋರಿ ||
ಈ ತುಂಗ ಭದ್ರೆಯಲಿ | ಖ್ಯಾತನಾಗಿಪ್ಪ ಯತಿಯೊ ೧
ಸುತ್ತು ವಾನರ ಬಂಧ | ಮತ್ತೆ ಮಲೆಯಾಕಾರ || ಮಧ್ಯ
ಚಿತ್ರಕೋಣ ಅದರೊಳು | ನಿತ್ಯದಲಿ ಮೆರೆವಾ ಯತಿಯಾ ೨
ವ್ಯಾಸರಾಯರಿಂದ ಬಂದು | ಈ ಶಿಲೆಯಾಳು ನಿಂತು ||ಶ್ರೀಶ ವಿಜಯವಿಠ್ಠಲನ್ನ | ಯೇಸು ಬಗೆ ವರ್ಣಿಪೆ ಯತಿಯಾ೩

೬೪
ಯೆಂದಿಗಾಹುದೋ ನಿನ್ನ ದರುಶನಾ |
ಇಂದಿರೇಶ ಮುಕುಂದ ಕೇಶವಾ ಪ
ಗಾನಲೋಲನೇ ದೀನ ವತ್ಸಲಾ ||
ಮಾನದಿಂದಲೀ ನೀನೆ ಪಾಲಿಸೋ ೧
ಯಾರಿಗೆ ಮೊರೆಯಿಡುವೆ ಶ್ರೀ ಹರೀ ||
ಸಾರಿ ಬಂದು ನೀ ಈಗಲೇ ಪೊರೀ ೨
ಗಜವ ಪಾಲಿಸೋ ಗರುವದಿಂದಲೀ ||
ಭುಜಗಶಯನ ಶ್ರೀ ವಿಜಯವಿಠಲಾ೩

೬೫
ಯೆಲ್ಲಿ ಭಯಗಳು ಹರಿಯ ಭಕುತರಿಗೆ ಇಲ್ಲಾ |
ಇಲ್ಲವೋ ಕಾಣೋ ಯೆಂದಿಗಾದರು ಮರುಳೆ ಪ
ಹುಲಿ ಇಲಿಯಾಗುವದು ತೋಳ ಕೋಳ್ಯಾಗುವುದು |
ಕಲಿ ಬಂದು ಹಿತ್ತಿಲನ್ನೀಗ ಬಳಿವಾ ||
ಮೂಲ ಮಹಾಚೋರ ಚೊಚ್ಚಿಲ ಗೌಡಿಮಗನಾವಾ |
ಜಲಜಾಕ್ಷನ ಕೃಪೆಯ ಪಡೆದ ದಾಸರಿಗೆ ೧
ಕರಡಿ ಕರು ಆಗುವದು ಉರಿ ಮಂಜು ಆಗುವದು |
ಕರಿ ನಾಯಿ ಆಗುವದು ಕಂಡವರಿಗೆ ||
ಭರದಿಂದ ಸುರಿವ ಮಳೆ ನಿಲ್ಲೆನಲು ನಿಲುವದು |
ನರಹರಿಯ ನಾಮಗಳ ನಂಬಿ ಪಠಿಪರಿಗೆ ೨
ಘಣಿ ಸರವೆ ಆಗುವದು ದಣುವಾಗುತಿಹ ಮಾರ್ಗ
ಕ್ಷಣದೊಳಗೆ ಪೋದಂತೆ ಕಾಣಿಸುವದು ||
ಘನ ಪಾಷಾಣಗಳು ತೃಣ ಸಮವು ಯೆನಿಸುವವು
ವನಜಾಕ್ಷನ ಕೃಪೆಯ ಪಡದ ದಾಸರಿಗೆ ೩
ಕ್ಷುಧೆ ತೃಷೆಯಾಗದು ಕ್ಷುದ್ರ ಸಂಗ ಬಾರದು |
ಪದೇ ಪದೆಗೆ ರೋಗಗಳು ಬೆನ್ನಟ್ಟವು ||
ಉದಯಾಸ್ತಮಾನವೆಂಬೋ ಭಯವು ಸುಳಿಯದು |
ಪದುಮನಾಭನ ಕೃಪೆಯ ಪಡೆದ ದಾಸರಿಗೆ೪
ಬಾರವು ಭಯಗಳು ಬಂದರು ನಿಲ್ಲವು |
ಹಾರಿ ಹೋಗುವವು ದಶದಿಶಗಳಿಗೆ ||
ಘೋರ ದುರಿತಾರಿ ಶ್ರೀ ವಿಜಯವಿಠಲನಂಘ್ರಿ |
ಸೇರಿದಾ ಜನರಿಗೆ ಇನಿತಾಹುದುಂಟೇ ೫

೪೮೪
ಯೇನಾದರೇನು ಜ್ಞಾನವಿಲ್ಲದೆ ಮೋಕ್ಷವಿಲ್ಲಾ ಪ
ವೇದವನೋದಿದರೇನು | ಶಾಸ್ತ್ರವ ನೋಡಿದರೇನು |
ಕಾದಿ ಕಾದಾಡಿದರೇನು || ೧
ಕಾಶಿಗೆ ತಾ ಹೋದರೇನು | ಕಾನನವ ಸೇರಿದರೇನು |
ಕಾಶಿ ಪೀತಾಂಬರ ಉಟ್ಟರೇನು ೨
ಜಪ ತಪವ ಮಾಡಲೇನು | ಜಾಣತನದೊಳ್ ಮೆರೆದರೇನು |
ವಿಜಯವಿಠ್ಠಲನ್ನ ಸಾರಿದರೇನು ೩

೬೬
ಯೇನು ಕರುಣಾಳೋ ದೇವವರೇಣ್ಯ
ಯೇನು ಭಕುತರಧೀನನೋ ಪ
ನಾನು ಎಂಬೋದು ಬಿಡಿಸಿ
ಕನ್ನಯ್ಯ ಧ್ಯಾನವಿತ್ತ ನಾರಾಯಣಾ ಅ.ಪ.
ಅನಂತಾನಂತ ಜನುಮದಲ್ಲಿ ಅನ್ನೋದಕ ಕಾಣದಿದ್ದ ದರಿ
ದ್ರನ್ನ ಕರವನೆ ಪಿಡಿದು ಮೃಷ್ಠಾನ್ನ ಭೋಜನ ಮಾಡಿಸಿ
ಸಂಪನ್ನವಾಗಿದ್ದ ಮತಿಯನಿತ್ತು ಪ್ರಸನ್ನನಾಗಿ
ಒಡನೆ ತಿರುಗೂವ
ಕನ್ನಿ ಸಂಕಲ್ಪ ಕೆದುರುಗಾಣದೆ ಘನ್ನ ಮೂರುತಿ ಕೇಶವಾ ೧
ಪಾವಮಾನಿಯ ಮಖವೆ ಪೊಂದಿಸಿ
ಪಾವನವ ಮಾಡಿದನು ಬಲು ಕೃ
ಪಾವಲೋಕನ ಪರಮ ಸೂರ್ಯರ್ ರಾವಣಾಸುರ ಮರ್ದನಾ
ಆವ ಪರಿಯಲಿ ನುಡಿದ ಕವನವ ಕವಿ ಮನ್ನಿಸಿ ತಪ್ಪನೆಣೆಸದೆ
ದೇವ ಜಗತ್ರಯ ಜಿತ ಕರಣ ವಸುದೇವ ದೇವಕೀನಂದನಾ೨
ಲೇಶವಾದರು ಪುಣ್ಯಮಾಡದೆ
ದೋಷರಾಶಿಯೊಳಿದ್ದು ಅನುದಿನ
ಮೋಸಗೊಳಿಸುವ ಭವವನಧಿ ಮಧ್ಯ ಈಶ ಕಡಕಾಣಲಾರದೆ
ಕ್ಲೇಶದಲಿ ಸಂಚರಿಸುತ್ತಿಪ್ಪ ಮಾನೀಶ ಪಶುವನು ನೋಡಿ ವೇಗದಿ
ಲೇಸು ಕೊಡುವೆನೆಂದು ಆನಂದ ದಾಸರೊಳಗಿದ್ದ ನರಹರೀ ೩
ಬಿಂಬ ಕ್ರಿಯಾದ ಮಾರ್ಗವನೆ ಕೋರಿ
ಡಂಬಕಾ ಭಕುತಿಯನೆ ಬಿಡಿಸೀ
ಉಂಬೊ ಪಾಪವ ತೊಲಗಿಸೀ ಮನ
ವೆಂಬೋದೆ ನಿರ್ಮಲ ಮಾಡೀ
ಹಂಬಲಿಸಿ ತನ್ನ ಪಾದ ಪದುಮದ
ಇಂಬು ಬಯಸುವ ಸುಖವೆ ಪಾಲಿಸಿ
ಅಂಬರದಿ ನಿಜರೂಪ ತೋರುವ
ಪೊಂಬುಡೆಧರ ಗೋವಿಂದಾ ೪
ಜಪತಪಾನುಷ್ಠಾನ ನಾನಾ ವುಪವಾಸ ವ್ರತದಾನ ಧರ್ಮಗ
ಳಪರಿಮಿತವಾದ ಯಾಗ ಕನ್ಯಾದಾನ ನಾನಾಲೋಚನ
ಅಪರಿಮಿತವಾಗಿ ಮಾಡಲೊಮ್ಮೊಮ್ಮೆ
ಸ್ವಪನದಲಿ ಕಾಣಿಸುವ ತಾನೆ
ಕೃಪಣರಿಗೆ ವಲಿದಲ್ಲದೆ ಬಿಡ ಚಪಲ ವಿಜಯವಿಠಲಾ೫

೬೭
ಯೇನೆಲವೊ ದೈವಾ ವೈಕುಂಠನಾಥ
ನೀ ನಾರಿವೇಷವನು ಧರಿಸಿದ ಬಗೆಯೇನೊ ಪ
ದೈತ್ಯರು ಎರಗಿ ದೇವತತಿಗಳು ತಲ್ಲಣಿಸೆ |
ಮಿತ್ರಭಾವದಲಿವರು ಕೂಡಲಿಟ್ಟು |
ಇತ್ತಂಡದ ನಡುವೆ ಸುಧೆಯ ಬಡಿಸುವೆನೆಂದು |
ಮಿತ್ರವೇಷವ ಧರಿಸಿ ಸುರರ ಸಲಹಿದ ಬಗೆಯ ೧
ಶಿವಗೆ ವೃಕಾಸುರನು ಬೆಂಬಿಡದೆ ತನ್ನುರಿ |
ಕರವ ನೀಡುವೆನೆಂದು ಬರಲಾಗಲು ||
ಅವನೀಶ ಭವಹರ ಕೇಶವ ನೀನೆ ಗತಿಯೆನಲು |
ಯುವತಿ ವೇಷವ ಧರಿಸಿ ಶಿವನ ಸಲಹಿದ ಬಗೆಯಾ ೨
ಅಂದು ಮಾಡಿದ ಚರಿತೆ ಭಕ್ತಜನರು ಬಂದು |
ಒಂದೊಂದನ ನುಡಿದರನ ಲೀಲೆಂದು |
ಇಂದು ಸತಿವೇಷವನು ಧರಿಸಿ ತೋರಿದಿಯೋ ಪು
ರಂದರ ದಾಸರಿಗೊಲಿದೆ ವಿಜಯವಿಠಲ ಚಲುವಾ೩

೧೪೮
ರಂಗ ಮಾನವ ಸಿಂಗನಾದನು ಪ
ರಂಗಮಾನವ ಸಿಂಗನಾಗಲು
ಭಂಗಾರ ಗಿರಿಯ ಶೃಂಗಗಳಲ್ಲಾಡೆ
ಹಿಂಗದೆ ಎಂಟು ಮಾತಂಗ ಸಪುತ ದ್ವೀ-
ಪಂಗಳು ಕಂಪಿಸೆ ವಿಗಡದಿ ಅ.ಪ.
ವನಜ ಭವನಂದನರಾನಂದದಿ
ವನಧಿಯೊಳಿದ್ದ ವನಜನಾಭನ
ವನಜಾಂಘ್ರಿ ದರುಶನಕ್ಕೋಸುಗದಿ
ಘನ ವೈಕುಂಠ ಪಟ್ಟಣ ಸಾರೆ
ವಿನಯರಲ್ಲದ ಜಯನು ವಿಜಯನವ-
ರನು ತಡೆಯಲು ಮುನಿದೀರ್ವರಿಗೆ
ದನುಜಾಂಗದಿಂದ ಜನಿಸಿರೋ ಎಂದು
ಮುನಿಗಳು ಶಾಪವನ್ನು ಈಯೆ ೧
ದಿಕ್ಕು ಎಂಟರೊಳು ಕಕ್ಕಸರೆನಿಸಿ
ದಿಕ್ಕು ಪಾಲಕರ ಲೆಕ್ಕಿಸದಲೇವೆ
ಸೊಕ್ಕಿ ತಿರುಗುವ ರಕ್ಕಸರಾಗಲು
ಮುಕ್ಕಣ್ಣ ಬಲದಿಂದಕ್ಕೆ ಜದಿ
ನಕ್ಕು ಪರಿಹಾಸ್ಯಕಿಕ್ಕಿ ಸರ್ವರನು
ಚಕ್ರವರ್ತಿಯಾಗಿ ವಕ್ರರ ಶೌರ್ಯದಿ
ಮುಕ್ಕಿ ಮುಣಿಗಿ ಧರ್ಮಕೆ ವಿರೋಧಿಸಿ
ಸಿಕ್ಕದಂತಲ್ಲಲ್ಲಿ ತುಕ್ಕುತಿರೆ ೨
ಇತ್ತ ಶಾಪದಿಂದಲಿತ್ತಲೀರ್ವರಿಗಾ
ಪೊತ್ತ ಸುರಾಂಗದಲಿತ್ತಲೋರ್ವವನಿಯು
ಕಿತ್ತು ಒಯ್ಯಲು ಬೆಂಬುತ್ತಿ ಹರಿಯು ಕೊಲ್ಲೆ
ಇತ್ತ ಹಿರಣ್ಯನುನ್ಮತ್ತದಿಂದ
ಸುತ್ತುತಿರುವಾಗ ಪುತ್ರನು ಭಾಗವ
ತ್ತೋತ್ತಮನಾಗಿ ಸರ್ವೋತ್ತಮ ಬ್ರಹ್ಮನ
ಪೆತ್ತ ಹರಿಯೆಂದು ಎತ್ತಿ ಕರವ ಲೋ-
ಕತ್ರಯವರಿವಂತೆ ಬಿತ್ತಿದನು೩
ಸೊಲ್ಲು ಕೇಳುತಲಿ ಎಲ್ಲೆಲೊ ನಿನ್ನ ದೈ-
ವೆಲ್ಲೊ ಮತ್ತಾವಲ್ಲೆಲ್ಲಿಹನೆನುತಲಿ
ನಿಲ್ಲದರ್ಭಕನ್ನ ಕಲ್ಲು ಕೊಳ್ಳಿ ಮುಳ್ಳು
ಭಲ್ಲೆ ಕರವಾಳ ಬಿಲ್ಲು ನಾನಾ
ಎಲ್ಲ ಬಾಧೆಯನ್ನು ನಿಲ್ಲದೆ ಬಡಿಸೆ
ಎಳ್ಳನಿತಂಜದೆ ಎಲ್ಲೆಲ್ಲಿಪ್ಪನೆಂದು
ಪುಲ್ಲಲೋಚನ ಶ್ರೀ ವಲ್ಲಭ ಎನ್ನಯ
ಸೊಲ್ಲನು ಬೇಗದಿ ಸಲ್ಲಿಸೆನೆ ೪
ಏನು ಕರುಣಾಳೊ ಏನು ದಯಾಬ್ಧಿಯೊ
ಏನು ಭಕ್ತರಾಧೀನನೊ ಏನೇನು
ನಾನಾ ಮಹಿಮನೊ ಏನೇನೊ ಏನೊ-ಈ-
ತನ ಲೀಲೆ ಕಡೆಗಾಣರಾರೊ
ದಾನವಾಭಾಸನ ಮಾನಹಾನಿ ಗೈಯೆ
ಸ್ಥಾಣು ಮೊದಲಾದ ಸ್ಥಾನದಲ್ಲಿ ಸರ್ವ
ನಾನೆ ವ್ಯಾಪ್ತನು ಎಂಬಾ ನುಡಿ ತೋರುತ್ತ
ದೀನರಿಗೆ ದತ್ತ ಪ್ರಾಣನಾಗ ೫
ತುಟಿಯು ನಡುಗೆ ಕಟ ಕಟ ಪಲ್ಲು
ಕಟನೆ ಕಡಿದು ನೇಟನೆ ಚಾಚುತ
ಪುಟಪುಟ ನಾಸಪುಟದ ರಭಸ
ಕಠಿನ ಹೂಂಕಾರ ಘಟುಕಾರ
ನಿಟಿಲನಯನ ಸ್ಫುಟಿತ ಕಿಗ್ಗಿಡಿ
ಮಿಟಿಯೆ ಹುಬ್ಬಿನ ನಿಟಿಲ ರೋಷದಿ
ಮಿಟಿಯೆ ಚಂಚು ಪುಟದಂತೆ ರೋಮ
ಚಟುಲ ವಿಕ್ರಮುದ್ಧಟ ದೈವ ೬
ನಡುಕಂಭದಿಂದ ಒಡೆದು ಮೂಡಿದ
ಕಡು ದೈವವು ಸಂಗಡಲೆ ಚೀರಲು
ಬಡ ಜೀವಿಗಳು ನಡುಗಿ ಭಯವ
ಪಡುತಲಿ ಬಾಯ ಬಿಡುತಿರೆ
ಕಡೆಯೆಲ್ಲೊ ಹೆಸರಿಡಬಲ್ಲವರಾರೊ
ತುಡುಗಿ ದುಷ್ಟನ ಪಡೆದ ವರವ
ಪಿಡಿದು ಅವನ ಕೆಡಿಸಿ ಹೊಸ್ತಿಲೊ-
ಳಡಗೆಡಹಿದನು ಪವಾಡದಲಿ ೭
ವೈರಿಯ ಪಿಡಿದು ಊರುಗಳಲ್ಲಿಟ್ಟು
ಘೋರ ನಖದಿಂದ ಕೊರೆದು ಉದರವ
ದಾರುಣ ಕರುಳಹಾರ ಕೊರಳಲ್ಲಿ
ಚಾರುವಾಗಿರಲು ಮಾರಮಣ
ಸಾರಿಗೆ ಭಕ್ತಗೆ ಕಾರುಣ್ಯಮಾಡಿ ಶ್ರೀ
ನಾರೀಶನಾನಂದದಿ ತೋರುತಿರೆ ಸುರ-
ವರರ್ನೆರೆದು ಅಪಾರ ತುತಿಸಿ ಪೂ-
ಧಾರೆ ವರುಷ ವಿಸ್ತಾರೆರೆಯೆ ೮
ನೃಕೇಸರಿಯಾಗೆ ಭಕುತಗೆ ಬಂದ
ದುಃಖವ ಕಳೆದು ಸುಖವನೀವುತ್ತ
ಅಕಳಂಕದೇವ ಲಕುಮಿಪತಿ ತಾ-
ರಕ ಮಂತ್ರಾಧೀಶ ಸುಕುಮಾರ
ಅಖಿಳ ಲೋಕಪಾಲಕ ಪ್ರಹ್ಲಾದಗೆ
ಸಖನಾಗಿ ಇಪ್ಪ ಸಕಲ ಕಾಲದಿ
ಶಕಟ ಭಂಜನ ವಿಜಯವಿಠ್ಠಲ
ಮುಕುತಿ ಈವ ಭಜಕರಿಗೆ೯

೧೫೩
ರಂಗನ ನೋಡಿರೈ ಕರುಣಾಪಾಂಗನ ಪಾಡಿರೈ ಪ
ಮಂಗಳ ಮೂರುತಿ ಮನುಕುಲೋತ್ತುಂಗ
ಜಗದಂತರಂಗ ಹೋ ಹೋಅಪ
ಶೀಕರೆ ಪುಟ್ಟಿದೆ ಮೇದಿನಿಪಾಲಗೆ ಮೆಚ್ಚಿ-ಬಂದನೊ ಹೆಚ್ಚಿ
ಆತುಮ ಮೂರುತಿ ದಶರಥನಿಗೆ ಮಗನಾದ-
ಲೀಲಾ ವಿನೋದ
ಜ್ಯೋತಿ ಪ್ರಕಾಶನು ಸಾಕೇತಪುರದಲಿ ನಲಿದ-
ಸುತ್ತಿ ಪರಿಗೊಲಿದ
ಭೂತಳದೊಳು ಜಾನಕಿಗೆ ನಾಥನಾಗಿ ಮೆರೆದ-
ಕಾಮಿತಗರೆದ ಹೋ ಹೋ ೧
ಜಲಜಸಂಭವಭವ ಮಿಕ್ಕಾದವರನು ಗರ್ಭ-ದೊಳಿಟ್ಟ ಸರ್ಬ
ಜಲಜಾಯತದಳ ಪೊಕ್ಕಳಿಂದಲಿ
ಅಂದು ಪಡೆದ-ಮಗನಿಗೆ ನುಡಿದ
ಪ್ರಳಯಕಾಲದಿ ವಟ ಪತ್ರದ ಮೇಲ್ ಮಲ-ಗಿದ್ದ ಸುಪ್ರಸಿದ್ಧ
ಪೊಳೆದ ಪ್ರಣವ ವಿಮಾನದೊಳಗಿಂದ
ಬಂದ ಪರಮಾ-ನಂದ ಹೋ ಹೋ ೨
ಬರುತ ವಿಭೀಷಣ ಕಾವೇರಿ ತೀರಕೆ ಬಂದ, ಉತ್ಸಾಹದಿಂದ
ಪರಮ ಪುರುಷ ಲಂಕೆಗೆ ಪೋಗದೆ ನಿಂತ-ಬಲು ಜಯವಂತ
ಧರಣಿಪತಿ ಧರ್ಮವರ್ಮನ ಮಾತಿಗೆ ನಕ್ಕ-ಕೇಳಾವಾಕ್ಯ
ನಿರುತದಿ ದಾಲ್ಬ್ಯ ಮುನೀಶನಿಂದ
ಪೂಜೆಗೊಂಬ ಸರ್ವರ-ಬಿಂಬ ಹೋ ಹೋ ೩
ಲೋಕ ಕಂಟಕ ದಶಕಂಠನ ವಂಶವ ಕೊಂದ -ಈತ ಮುಕುಂದ
ಏಕ ತನ್ನೊಳು ತಾನೆ ಪೂಜೆಯ
ಮಾಡಿಸಿಕೊಂಡ -ಬಲು ಪ್ರಚಂಡ
ನಾಕದ ಜನರೆಲ್ಲ ಜಯ
ಜಯವೆನುತಿರಲಯೋಧ್ಯಾ-ಆಳ್ದ ಅನಾದ್ಯ
ಕೈಕಸೆಸುತ ಭಜಿಸಲು ವಲಿದು ಬಂದನಂದು,
ಕರುಣಾ-ಸಿಂಧು ಹೋ ಹೋ ೪
ದಕ್ಷಿಣ ಮುಖನಾಗಿ ಉರಗನ ಮೇಲ್ ಮಲಗಿಪ್ಪ –
ಮೂಜಗದ್ದಪ್ಪ
ನಕ್ಷತ್ರೇಶ ಸರೋವರತಟ ಪುನ್ನಾಗ-ವೃಕ್ಷದಲ್ಲಿಹ ದಕ್ಷ
ಅಕ್ಷಯ ಮೂರುತಿ ಅಪ್ರಾಕೃತ ಶರೀರ-ಧೃತ ಮಂದಾರ
ಪಕ್ಷಿ ವಾಹನ ನಮ್ಮ ವಿಜಯವಿಠ್ಠಲ ರಾಜ –
ರಾಜಾಧಿರಾಜ ಹೋ ಹೋ ೫

೧೪೭
ರಂಗನ ನೋಡಿರೊ ಸಿರಿ ನರಸಿಂಗನ ಪಾಡಿರೊ |
ಮಂಗಳಮೂರುತಿ ಡಿಂಗರಿಗರ ಹೃಸ್ಸಂಗ ಕರುಣಾತರಂಗಾ ಪ
ತನುಜನ ಜನಕನು ಕೊಲ್ಲಲು
ಮೊರೆಯಿಡಾ ಬಂದ | ಕಂಭದೊಳಿಂದ |
ಮನುಜಕೇಸರಿ ರೂಪಧರಿಸಿದ ನಿಜ
ಲೋಕಸ್ವಾಮಿ | ಅಂತರ್ಯಾಮಿ ||
ದನುಜನ ಉದರ ಬಗೆದು
ಕರುಳಮಾಲೆ ಇಟ್ಟಾ | ಕೊರಳೊಳು ದಿಟ್ಟಾ |
ವನಜ ಭವಾದ್ಯರು ಜಯ
ಜಯವೆನುತಿರೆ ಮೆರೆದಾ | ಪ್ರಹ್ಲಾದವರದಾ ೧
ಮನದಲಿ ಬೇಡಿದ ಭಾಗ್ಯವ
ಕೊಡುವನು ಚಲುವಾ | ಭಕುತರಿಗೊಲಿವ |
ಅನುದಿನದಲಿ ಅನುಕಂಪನು
ಹರಿ ನಮಗೆಲ್ಲಾ | ಭಕ್ತವತ್ಸಲಾ ||
ಘನಮಹಿಮನು ಪರಿಪೂರ್ಣ
ಗುಣಾಂಬುಧಿ ತೇಜ | ರಾಜಾಧಿ ರಾಜ |
ಜನುಮ ಜನುಮದಲಿ ಜನನಾದಿಗಳಿಗೀತ ಮುಖ್ಯ |
ಕರ್ತನು ಸಖ್ಯ ೨
ಕನಕಮುನೀಶ್ವರ ತಪವನು ಮಾಡಲು ಮೆಚ್ಚಿ | ಬಂದನು ಮೆಚ್ಚಿ |
ಕನಕ ವರುಷವನು ಗರೆವದು ಅಂದಿನ ದಿನದಿ | ಆನಂದವನಧಿ |
ಕನಕ ನೃಕೇಸರಿ ಎನಿಸಿದಾ ಅಂದಿನಾರಭ್ಯಾ | ಈತನೆ ಸಭ್ಯಾ |
ಅಳನಯನ ರೂಪ ಲಿಂಗಾಕೃತಿಯಾ ಪೊಳೆವಾ |
ನುತಿಸಲು ಸುಳಿವಾ ೩
ಗುಣದಲಿ ತಿಳಿವದು ರುದ್ರಗೆ ಹರಿರೂಪವಿಲ್ಲಾ |
ಇದು ಪುಸಿಯಲ್ಲಾ |
ವನಜನಾಭಗೆ ನಾನಾ ರೂಪಗಳುಂಟೆಂದು
ವೇದಾ | ಪೇಳ್ವದು ಮೋದಾ ||
ಪ್ರಣತನಾಗದ ಇನಿತಾಗದ ಪಾಪಿಷ್ಠ ಮನುಜಾ |
ಅವನೇ ದನುಜಾ |
ಗಣನೆಮಾಡದಲಿರಿ ಇವರನು ಸುಜನರು ಇಂದೆ |
ನಮಗೀತ ತಂದೆ ೪
ಇವನಂತೆ ಒಪ್ಪುವಾ ಪೊಂಪಾ
ನಿಧಿಯೊಳು ಧನದಾ | ದಿಕ್ಕಿಲಗಾಧಾ |
ಮುನಿಜನ ಸಮ್ಮತ ಶ್ರುತಿ ಉಕ್ತಿಗಳಲ್ಲಿ ಅಕ್ಕು | ಕೇಳೀವಾಕು |
ಮಣಿದು ನಮಿಸಿ ಒಮ್ಮೆ ಧ್ಯಾನವ
ಮಾಡಲು ಭಕುತಿ | ಉಂಟು ವಿರಕುತಿ |
ಹನುಮದೀಶ್ವರ ನಮ್ಮ ವಿಜಯ
ವಿಠ್ಠಲ ನರಸಿಂಗಾ | ರಿಪುಗಜ ಸಿಂಗಾ ೫

೧೯೫
ರಂಗನಾಡಿದನೊ ಮನ್ನಾರಿ ಕೃಷ್ಣನಾಡಿದನೊ |
ರಂಗನಾಡಿದ ಪೊಂಗೊಳವಿಯಲಿ
ಶೃಂಗಾರದಿಂದ ಗೋಪಾಂಗನೆಯ ಕೂಡ |
ತುಂಗ ವಿಲಾಸ ತಾ ರಂಗ ಕೇಳಿಯಲಿ |
ಸಂಗೀತ ಪಾಡುತ ಸಾಂಗೋಪಾಂಗದಿಂದಾ ಪ
ಹೊಳಿಯ ಜನಕೋಕುಳಿಯ ಕಲಿಸಿ |
ಗೆಳೆಯರೊಂದಾಗೆ ಕಳೆಯೆವೇರುತ್ತ |
ಅಳಿಯ ಗರುಳಬಲಿಯರರಸಿ |
ಇಳಿಯಾಳಗೋಕುಳಿ ವಸಂತವಾ |
ಉಳಿಯದಂತೆ ವೆಗ್ಗಳಿಯ ತರಿಸಿ
ಹಳೆಯ ಬೊಮ್ಮನ ಬಳಿಯವಿಡಿದು |
ಸುಳಿಯಲೊವಸನೆ ರುಳಿಯ ಕೈಸರ |
ಪಳಿಯ ಚಲುವ ತಿಳಿಯಗೊಡದೆ ೧
ಸಕ್ಕರೆದುಟಿ ಹೆಮ್ಮಕ್ಕಳು ಯೆಲ್ಲರು |
ನಕ್ಕು ಕೈಯ ಹೊಯಿದ | ಕ್ಕರದಿಂದ ತಾ |
ವರ್ಕರಾಗಿ ನಿಂದೂ ತೆಕ್ರ್ಕೊರಂಗಯೆಂದು |
ಜಿರ್ಕೊಳವಿಲಿಂದಲಿಕ್ಕಿದರು |
ಸೊಕ್ಕಿದಾ ನೆಡಸಿ ಹೊಕ್ಕು ಎರಗಿದಂ |
ತೊಕ್ಕಟರಾಗಿ ದೇವಕ್ಕಿ ತನುಜನ ಸಿಕ್ಕಿಸಿಕೊಂಡರು |
ಅಕ್ಕಟಾಬ್ಜಗಬ್ಧಿ ಉಕ್ಕಿದಂತೆ ಮನ | ಉಕ್ಕುತಲಿ ೨
ನಾರಿಯರಿಂದ ಉತ್ತರವ ಲಾಲಿಸಿ |
ಮಾರನಯ್ಯನು ಕೆನ್ನೀರನು ತುಂಬಿ ಅ |
ಪಾರನಾರಿ ಪರಿವಾರದವರ ಶರೀರವ ಮೇಲೆ | ವಿ |
ಸ್ತಾರವಾಗಿ ಕಾರಿ ವಾರಿದನು ನೀರೆರದಂತಾಗೆ |
ಆರೊಂದು ಬುದ್ಧಿಗೆ ಮೀರಿತಿದೊ ಎಂದು |
ವಾರುಣಿಪತಿ ಪಂಕೇರುಹಾಭವ ಕಂ ||
ದರವ ಬಾಗಿಸಿ ಸಾರಿದರು ೩
ಖಗ ಮೃಗ ಧ್ವನಿದೆಗೆದು ಪಾಡಲು |
ನಗ ಬೆವರಿ ಪನ್ನಂಗ ನೋಡಾಗಲು |
ಅಗಣಿತ ಮುನಿ ಚಿಗಿದು ಪಾಡಲು |
ನಗ ಬೆವರಿ ಪನ್ನಂಗ ನೋಡಾಗಲು |
ಅಗಣಿತ ಮುನಿ ಚಿಗಿದು ಪಾಡಲು ಪೊಗಳ ಬಗೆಯಿಂದ |
ಗಗನ ಮಣಿ ತಾರೆಗಳು ಚಂದ್ರ ನಗುತ ತಮ್ಮ ಪಥಗಳು ನಿಲಿಸಿ |
ಮಂಗಳಕರವ ಮುಗಿದು ಸೋಜಿಗ ಜಗದೊಳಗಿದು ಮಿಗಿಲೆನುತಲಿ ೪
ದುಂದುಭಿ ಮೊರಿಯೆ ಧಂ ಧಂ ಧಳಾ ಎಂದು |
ವೃಂದಾರಕ ವೃಂದ ಚಂದದಿ ಪೂಮಳೆಯಂದುಗರಿಯಲು |
ಚಂದಣಗಂದಿಯ ಒಂದಾಗಿ ನಿಂದರು ವಂದಿಸುತ |
ಮಂದಹಾಸನಖ ದುಂದುಭಿ ಓಕಳಿಂದಲೆರಾರೈಪಾ
ಸಿಂಧು ಮೆರೆದ ನಾರಂದವರದ ವಿಜಯವಿಠ್ಠಲ |
ಪುರಂದರದಾಸರ ಮುಂದಾಡಿಞ್ ||೫

೬೮
ರಂಗಾದುರಿತ ಮದಭಂಗಾ | ನಿತ್ಯ ನಿಸ್ಸಂಗಾ ಪ
ಅಂದು ದಶಕಂಧರನ ಮಂದಿರದೊಳಗೆ ಸೇರಿ|
ಇಂದ್ರಾದಿಗಳು ಬಿದ್ದಿರೆ ಬಂದು ದಯದಿಂದ ಸಲುಹಿದಾ ೧
ಸಿಂಧುವಿನೊಳಗೆ ಸುರರು ಮಂದರಗಿರಿಯ ಕಟಿಯ |
ಕುಂದದೆ ಸುಧೆಯನೆರೆದ ನಂದ ವಿಗ್ರಹ ಗೋವಿಂದಾ ೨
ಇಂದು ಪುಷ್ಕರಣಿ ಕಾವೇರಿ | ದ್ವಂದ್ವ ತೀರವನಿರುತ ವಾಸಾ |
ಕಂದರ್ಪಜನಕ ರಂಗ ಮಂದಿರ ವಿಜಯವಿಠ್ಠಲಾ ೩

೨೩೭
ರಕ್ಷಿಸೆನ್ನ ರಮಣ ಪಂಚಪರಣಾ ಜಗತ್ಪಾವನಾ |
ಮೋಕ್ಷದಾಯಕ ಯಂತ್ರೋದ್ಧಾರಕ ಹನುಮಂತಾ ಪ
ಗತಿಯ ಕಾಣೆನೊ ಸದಾ ಗತಿಯೊ ಎನ್ನ ಮನಸು |
ಸತತ ಚಂಚಲ ದೂರ ಸ್ಥಿತಿಗೆ ಎರಗಿದೆ ಸು |
ಕೃತವೆಲ್ಲ ಪೋಗಾಡಿದೆ ಇದಕೆ ಪ್ರಾಯಶ್ಚಿತ್ತ
ನಿನ್ನ ನಾಮವ ಬೇಡಿದೆ | ಹಾಡಿ ಪಾಡಿದೇ |
ಪ್ರತಿದಿನ ದಯ ಮಾಡಿದೆ ವರವನ ಬೇಡಿದೆ |
ಅತಿಶಯದಿಂದಲಿ ವಿಪ್ರಜಿತು ವಿರೋಧಿಯ ವಿಪ್ರ೧
ನಾನಾ ಮಹಿಮ ಮಾನ ಪಾವನ ವಿದ್ಯಾ ಪ್ರ |
ವೀಣಾರೋಚನಾ ವಿಜ್ಞಾನಾಭಿಮಾನಿ ನಿ |
ದಾನ ತ್ರಿಜಗದ್ಗುರುವೆ ಸುರತರುವೇ |
ನಾನೆ ನಿನಗೆ ಕರವ ಮುಗಿದು ಕರವೇ |
ಧ್ಯಾನದಿಂದಲಿ ಬೆರವೆ ಸುತ್ಯನ್ಯರವೇ |
ಜನನವ ಬಿಡಿಸೋದು ಗಾನವ ನುಡಿಸೋದು ೨
ವ್ಯಾಸಮುನಿ ವರದಾ ವಸುಧಿಯೊಳಗೆ ಮೆರೆದಾ |
ಭಾಷಿಸುವ ಮಾತಂಗ ಪರ್ವತದಲಿ ತುಂಗಾ |
ವಾಸಾ ವಾಸವ ವಿನುತ ಸತ್ವಕಾಯಾ |
ಶಾಶ್ವತಾಗಮ ವಿಖ್ಯಾತಾ ನಿತ್ಯ ಜಪಿತಾ |
ಲೇಸು ಸುದರುಶನ ತೀರ್ಥ ತೀರದಲ್ಲಿಪ್ಪಾ |ಶ್ರೀಶ ವಿಜಯವಿಠ್ಠಲನ ದಾಸನ ಮಾಡಿ ಮುನ್ನಾ ೩

೧೯೬
ರಜತ ಪೀಠದ ಯಾತ್ರೆ ರಜೋತಮ ಗುಣವುಳ್ಳ |
ಪ್ರಜರಿಗೆ ದೊರಕುವದೆ |
ತ್ರಿಜಗದೊಳಗೆ ಮುಂದೆ | ಅಜನಾಗಿ ಬಪ್ಪಗೆ |
ಭಜನೆ ಮಾಡುವಂಥ ಸುಜನರಿಗಲ್ಲದೆ ಪ
ಮಂದಾಕಿನಿ ಮಿಕ್ಕಾದ ನದಿಗಳಲ್ಲಿಗೆ ಪೋಗೆ |
ಮಿಂದು ನಾನಾ ಕ್ಷೇತ್ರವ ಬಂದೂ ಬಿಡದೆ ತಿರುಗಿ ವೇದ ಶಾಸ್ತ್ರಗಳು |
ಚಂದದಿ ಓದಿಕೊಂಡು |
ಕುಂದದೆ ವ್ರತ ಯಾಗ ಯೋಗ ಮಾಡಲೇನು |
ಬಿಂದು ಮಾತ್ರ ಫಲವಿಲ್ಲ |
ವೃಂದಾರಕ ಸುರರು ಒಂದಾಗಿ ಒಂದಿನ |
ಅಂದು ಪೀಯೂಷವ ಕರೆಯೆ ಉಂಡವರಾರು ೧
ಕ್ರೀಡೆಯಲಿ ತ್ರಿಪುಂಡ್ರವ ಧರಿಸಿದ ಮಾನವ |
ನಾಡೊಳು ಉಡುಪಿ ಯಾತ್ರೆ ಮಾಡಿದರವಗೇನು ಲೇಶ ಸತ್ಕರ್ಮವು |
ಕೂಡದು ಕೂಡದಯ್ಯಾ |
ಬಿಡಾಲನಂದದಿ ತಿರುಗಿದಂತಾಗುವದು |
ಕೇಡಿಗೆ ಗುರಿಯಾಗುವಾ |
ಜೋಡು ಇಲ್ಲಿಗೆ ಬಂದು ತಿರುಗಿ ಪೋದರೆಯೇನು |
ಆಡಲೇನದಕೆ ತಿಲಾಂಶ ಸುಖವುಂಟೆ ೨
ತಮೋ ಯೋಗ್ಯ ಉಡುಪಿನ ಯಾತ್ರೆ ಮಾಡಲು |
ಅಮಿತ ಬಲವಂತನಾಗಿ
ಯಮಗ ಸದೃಶನಾದ ಯವನನಲ್ಲಿ
ಪುಟ್ಟಿ ಆಕ್ರಮಿಸಿ ಪುಣ್ಯವನೆ ಕೆಡಿಸಿ
ತಮಕೆ ಸಾಧನವಾದ ಸುಖಬಟ್ಟು ಬಹುಕಾಲ |
ರಮಣಿ ಮಕ್ಕಳು ಸಹಿತದಿ |
ಕ್ರಿಮಿ ಮೊದಲಾದ ನರಕವನುಂಡು ಅವ ನಿತ್ಯ |
ತಮಸಿನೊಳಗೆ ವಾಸಫಲ ವ್ಯರ್ಥವಾಗದು ೩
ರಾಜಸ ಗುಣದಲ್ಲಿ ಈ ಯಾತ್ರೆ ಮಾಡಲು |
ರಾಜ ಕುಮಾರನಾಗಿ ತೇಜೋಮಯಾಭರಣ |
ಭೂಷಣವನೆ ಯಿಟ್ಟು |
ವಾಜಿ ಗಜವಾಗಿ ಸೌಖ್ಯ
ಈ ಜಗದೊಳು ಒಟ್ಟು ಪೋಗೋದಲ್ಲದೆ ವಿ |
ರಾಜಿಸುವದು ಬಲ್ಲದೇ |
ರಾಜಮಂದಿರಕೆ ನವರತ್ನ ತೆತ್ತಿಸಿದಂತೆ |
ಈ ಜನದ ಸುಖದ ಫಲ ವ್ಯರ್ಥವಾಗುವದು೪
ಮುಕ್ತಿಯೋಗ್ಯನು ಬಂದು ಯಾತ್ರೆಯ ಮಾಡಲು |
ಮುಕ್ತಿ ಉತ್ತಮ ಕುಲದಲ್ಲಿ |
ವ್ಯಕ್ತನಾಗೀ | ದಿವ್ಯ ಮನದಲ್ಲಿ ವಿರುಕುತಿ |
ಭಕ್ತಿಜ್ಞಾನದಲಿ ಬಾಳಿ |
ಶಕ್ತನೆಂದೆನೆ ಸತತ ಶ್ರೀಮದಾರ್ಯರ | ಭಕ್ತಿಲಿ ಲೋಲಾಡುತ |
ಭಕ್ತವತ್ಸಲ ವಿಜಯವಿಠ್ಠಲ ಕೃಷ್ಣಸಾರ |
ಭೋಕ್ತನಲ್ಲಿಪ್ಪನು ಫಲ ವ್ಯರ್ಥವಾಗದು ೫

೧೨೦
ರಥವನೇರಿದ ರಥಗಾತ್ರ ಪಾಣಿ |
ರಥಪತಿ ದಶರಥ ಸುತ ದಶರಥ ನೃಪ ಭಾಗೀ |
ರಥಿ ವಿನುತಾ ಸು | ರಥನಯ್ಯ ಮನೋರಥ ದೇವ ಪ
ಸುರಪಥ ಪಿತಾ ಕರಿ ಭಯಂಕ
ಹರ ಹರಿಣಾಂಕಾ |
ಕಿರಣಶತ ಧಿಕ್ಕರಿಸುವ ದೇವಾ ||
ವರಮಣಿ ಭಕ್ತ ವರದಾಯುದಧಿ ತುರಗವು |
ಪರತರ ತಮ ತರರಸ |
ಪರಮ ಮಂಗಳ ಪುರುಷ ಪ್ರಧಾನಂ |
ತರ ಪ್ರವಿಷ್ಠ ಭಾ |
ಸುರ ಕೀರ್ತಿಹರ ನಿರುತ ಪ್ರದರು ಸುರಪತಿ ೧
ಮಣಿಪ್ರಚುರ ಮುತ್ತಿನ ಮುಕುಟ ಸು |
ಫಣಿ ಕಸ್ತೂರಿ ಕಂಕಣ ಕೇಯೂರ ಕಾಂ|
ಚನ ಸರಿಗೆಯು ಘನ ಶ್ರೀ ವತ್ಸಲಾಂಛನ
ಕೌಸ್ತುಭ ಸೂರ್ಯನಗೆಲ್ಲ್ಲೆ |
ವನಮಾಲೆ ಹರಿಮಣಿ ಪದಕ ಪಾ |
ವನ ಪೀತಾಂಬರ ಮಿನಗುವ ಕಾಂಚಿ |
ಝಣ ಝಣ ಮಹಾ |
ಧ್ವನಿ ಚರಣ ಭೂಷಣವಾಗಿಯೂ ಮಾ |
ನಿನಿ ಕೂಡಾ ೨
ಎತ್ತಿದ ಶ್ವೇತಾತಪತ್ರ ಚಾಮೀಕರ |
ಸತ್ತಿಗೆ ಪತಾಕಿ ವಿತ್ತ ನೋಡಿದರಾಗತ್ತಾ ನಭ ತುಳುಕುತ್ತಲಿರೆ ಧ್ವಜ |
ಮಾತ್ರ ಬಂದಾಗಿ ತೂಗುತ್ತಿರಲು |
ಸುತ್ತಲು ಊದುವ ತುತ್ತುರಿ ಶಂಖ |
ವತ್ತಿ ಬಾರಿಸುವ ಮತ್ತೆ ವಾದ್ಯಗಳು |
ತುತ್ತಿಸುವ ಮುನಿ |
ಉತ್ತಮ ಜನ ಬಾ |
ಗುತ್ತ ವಡನೆ ಬರುತಿರಲು ೩
ವಸು ರುದ್ರಾದಿತ್ಯ ವಸುಜನರ ಪಾ |
ಲಿಸುವೆನೆಂದು ದರಶನವು ಸರಸಿಜಗದಾಧರಿಸಿಕೊಂಡು ಅಷ್ಟ
ರಸ ನಾಮಕ ಹರುಷದಿಂದ |
ನಸುನಗುತ ನೀಕ್ಷಿಸಿಕೊಳುಂತ ಆ |
ಲಸ ಮಾಡದೆ ರಂ |
ಜಿಸುವ ಲೀಲಾಮಾನಸ ವಿಗ್ರಹ ಮೆ |
ಚ್ಚಿಸಿದ ಜನರ |
ವಶವಾಗಿಪ್ಪ ರಾಕ್ಷಸ ರಿಪು ೪
ದಯ ವನಧಿ ಚಿನ್ಮಯ ಉ |
ಭಯಾ ಭಯ ಹಾರೆ | ಪಯೋವಾರಿ ನಿಧಿ |
ಶಯನ ಚತುರ್ಬೀದಿಯಲಿ ತಿರುಗಿ |
ಪ್ರೀಯದಿಂದಲಿ ಸ |
ತ್ಕ್ರಿಯವಂತ ಜಯ ಜಯ ಪ್ರದಾ |
ಜಯಾ ರಮಣ ವಿಜಯ ಸಾರಥಿ ನಿ |
ರಯ ವಿದೂರ ವಿಜಯವಿಠ್ಠಲ ಸಾ |
ಹಾಯವಾಗುವ ಗಿರಿಯ ವೆಂಕಟರಾಯ ಬಂದಾ ೫

೩೨೮
ರಾಘವೇಂದ್ರ ಗುರುರಾಯ ರಮಣೀಯ ಕಾಯ
ರಾಘವೇಂದ್ರ ಪಾದಾಂಬುಜ ಭೃಂಗ ಭವ ಭಯ ಭಂಗ ಪ
ನೋಡಿದೆ ನಿಮ್ಮ ಮಹಿಮೆಯ ಹಾಡಿ ಪಾಡುವೆನೊ ನಿತ್ಯ
ಆಡಿ ಕೊಂಡಾಡಲು ಬಲು ಗೂಢವಾಗಿದೆ
ನಾಡಿನೊಳಗೆ ವೊಮ್ಮೆ ಸ್ಮರಣೆ ಮಾಡಿದವ ಧನ್ಯ ಎನ್ನು
ಮೂಢ ಬುದ್ಧಿಯನು ಬಿಡಿಸು ಕೂಡಿಸು ಸಜ್ಜನರೊಳಗೆ ೧
ನಾಮಾಭಿವಿಡಿದು ಉಮಾಪತಿ ಪರಿಯಂತ
ಈ ಮನ ಎರಗಲಿ ಯಾಮ ಯಾಮಕೆ
ಕಾಮಿಪೆ ಇದನೆ ಗುರುವೆ ವಾಮದಕ್ಷಣ ಮಾರ್ಗ
ನೇಮ ತಪ್ಪುದಂತೆ ತಿಳಿಸಿ ಭ್ರಾಮ ಬುದ್ಧಿಯ ಓಡಿಸುವುದು ೨
ಚಿಂತಾಮಣಿ ಕಂಡ ಮೇಲೆ ಭ್ರಾಂತಿಗೊಳಿಪ ವಿಷಯ
ಚಿಂತಿಸಿ ಬೇಡುವುದು ಲೋಕಾಂತದ ಸುಖವು
ಇಂತು ಬಾಗಿ ನಿಂತು ಕೇಳುವಂತೆ ಮಾಡದಿರು ಕರುಣಿ
ಸಂತತ ನಿನ್ನ ಪಾದಕ್ರಾಂತನಾಗಿ ತುತಿಸುವೆ ೩
ಸಾರಿಸಾರಿಗೆ ಈ ಚಿತ್ರ ತಾರತಮ್ಯವ ವಿಚಾರಗೈದು ನಲಿದಾಡಿ
ಮೇರೆ ಇಲ್ಲದೆ ಕೋಶ ಇಂದಿರೇಶನ್ನ ಹೃ
ದ್ವಾರಿಜದೊಳು ನಿಲಿಸಿ
ಆರಾಧನೆ ಮಾಡುವ ವೈಕಾರಿಕ ಭಾಗ್ಯವೆ ಬರಲಿ ೪
ನಮೋ ನಮೋ ಯತಿರಾಜ ಮಮತೆ ರಹಿತ ಅನುಪಮ ಚರಿತಾ
ಚಾರುಹಾಸನೆನಿಪ ನಿನ್ನ ಹೆಮ್ಮೆಯಿಂದಲಿಪ್ಪ
ಪರಬೊಮ್ಮ ವಿಜಯವಿಠಲ ನಾ
ತುಮ್ಮದೊಳಚಿನಪ ಜ್ಞಾನೋತ್ತುಮ ತುಂಗಭದ್ರವಾಸ ೫

೩೨೯
ರಾಘವೇಂದ್ರ ಪಾವನ ಕಾಯ ರಾಘವೇಂದ್ರ
ರಾಘವೇಂದ್ರ ದುರಿತೌಫ ಪರಿಹರಿಸಿ
ರಾಘವೇಷನ ಪಾದಮೌಘ ನುತಿಪ ಗುರು ಪ
ಶರಣು ಪೊಕ್ಕೆನು ಇಂದು ಕಿರಣಪೊಲುವ ಪಾದ
ಸ್ಮರಣೆ ಪಾಲಿಸುವುದು ಕರುಣದಿಂದಲಿ ಇಂದು ೧
ವ್ಯಾಕುಲ ಹರಿಸಿ ಕಾಮಕ್ರೋಧ ಓಡಿಸಿ
ಸಾಕುವುದು ಎನ್ನನೇಕ ಮಹಿಮ ಗುರು೨

ಸಿರಿವಿಜಯವಿಠ್ಠಲ ಪರದೈವವೆ ಯೆಂದು
ಸ್ಥಿರವಾಗಿ ಸ್ಥಾಪಿಸಿ ಮೆರೆದ ನಿರ್ಮಳಕಾಯ ೩

ರಾಘವೇಂದ್ರಂ ಭಜೇಹಂ :

೩೩೦
ರಾಘವೇಂದ್ರಂ ಭಜೇಹಂ ||ಶ್ರೀ|| ಪ
ಆಗಮಚಯ ವಿಜ್ಞಾನ ಸುಗೇಹಂ
ಶ್ರೀಗದಾಬ್ಜ ಚಕ್ರಾಂಕಿತ ದೇಹಂ ಅ.ಪ
ರಾಗ ಮೋಹನಾದಿ ರಹಿತಂ ಸುಚರಿತಂ
ಭೋಗಿರಾಟ್ ಶಯನ ಗುಣಮತಿ ಮಹಿತಂ
ಭಾಗವತೋತ್ತಮ ಮತಿ ಸುಮತಿಯುತಂ
ಯೋಗಿ ಜನಹಿತಂ ಶ್ರೀ ಗುರು ನಿರುತಂ ೧
ಅತಿಪಾವನ ಕಾಷಾಯ ಸುವಸನಂ
ನತಜನೇಷ್ಟ ವಿಶ್ರಾಣನ ನಿಪುಣಂ
ಧೃತ ದಂಡ ಕಮಂಡಲ ಶುಭಪಾಣಿಂ
ಕೃತ ಹರಿಸುತಿ ಸಂಗೀತ ಸುವಾಣೀಂ ೨
ನಿಜತಪಸಾ ಸಮುಜಾರ್ಜಿತ ತೇಜಂ
ಸುಜನಾವನ ಗುಣಹಿತ ಸುರಭೂಜಂ
ವೃಜಿನ ಹರಣ ಕೃಷ್ಣ ವಿಜಯವಿಠ್ಠಲರೇಯಂ
ಅಜಿನಾಸನ ಸುಸ್ಥಿರ ಯತಿರಾಜಂ೩

೧೯೭
ರಾಜಕುಲ ವನರಾಶಿ ರಾಜರಾಜೇಶ್ವರಾ |
ರಾಜೀವ ನಯನ ಯದುರಾಜ ಎಲೊ ಭಾಪುರೆ ಪ
ಗರಳ ಪೇರ್ಮೊಲೆಯಿತ್ತ ಅಸುರಿಯಳ ಸಂಹರಿಸಿ |
ಮರಳಿ ಅವಳಿಗೆ ಉತ್ತಮ ಗತಿಯನಿತ್ತೆ |
ದುರಳ ಶಕಟಾಸುರನ ಚರಣ ದುಂಗುಟದಲ್ಲಿ |
ತರಳಾಟದಿಂದ ಮರ್ದಿಸಿದೆ ಎಲೆ ಭಾಪುರೆ ೧
ಸುರಪ ಗರ್ವಿಸೆ ಸಪ್ತದಿನ ಮಳೆಗರಿಯೆ ವ್ರಜ |
ಪುರವ ಪಾಲಿಸಿದೆ ಕಾಳಿಂಗನೈದು |
ಸಿರದಲ್ಲಿ ತುಳಿದು ರಮಣ ದ್ವೀಪಕೆ ಕಳುಹಿ |
ಪರಿಪರಿಯ ಖಳರ ಮರ್ದಿಸಿದೆ ಎಲೊ ಭಾಪುರೆ ೨
ಕರೆಯ ಬಂದಾ ಕ್ರೂರ ಭಕ್ತನಿಗೆ ಯಮುನೆಯಲಿ |
ಕರುಣದಿಂದಲಿ ನಿಜರೂಪ ತೋರಿ |
ಭರದಿಂದ ಕರಿರಾಜ ಕರಿಯೆ ಬಿಲ್ಲು ಮಲ್ಲರ
ಮುರಿದು ಧರಿಗೆ ವರಿಸಿದೆ ಕಂಸನ ಎಲೆ ಭಾಪುರೆ ೩
ವನಧಿಯೊಳು ಪುರ ಬಿಗಿದು ಕಾಲಯವನನ ಸದೆದು |
ಅನಿಲ ಸುತನಿಂದ ಮಾಗಧನ ಕೊಲ್ಲಿಸಿ |
ವನಿತೆಯರ ಸೆರೆ ಬಿಡಿಸಿ ಸೂತತನವನೆ ವೊಹಿಸಿ |
ಫಲ್ಗುಣಗೆ ವಿಶ್ವರೂಪವ ತೋರಿದೆ ಎಲೊ ಭಾಪುರೆ ೪

ಗುರು ಭೀಷ್ಮ ಶಲ್ಯ ಶಕುನಿ ಸುಬಲ ಭಗದತ್ತ |
ತರಣಿಸುತ ದುಶ್ಶಾಸ ಕೌರವೇಶಾ |
ಎರಡು ಬಲ ವ್ಯಾಜ್ಯದಲಿ ಭೂಭಾರನಿಳುಹಿ ಸಾ |
ವಿರ ತೋಳ ಖಳನ ಭಂಗಿಸಿದೆ ಎಲೊ ಭಾಪುರೆ೫
ದ್ವಾರಕಾಪುರದಲ್ಲಿ ನಾರದಗೆ ಸೋಜಿಗವ |
ತೋರಿದೆ ಒಬ್ಬೊಬ್ಬ ನಾರಿಯಲಿ |
ನಾರಿಯರ ಕೂಡ ಬಲು ಕ್ರೀಡೆಗಳನಾಡಿ ಅ |
ವರ ಸಂತಾನವನು ಪಡದೆ ಎಲೊ ಭಾಪುರೆ ೬
ವರ ಚಂದ್ರಹಾಸ ಮಿಗಿಲಾದ ಭೂಪಾಲಕರ |
ಕರೆಸಿ ಪಾಂಡುವರ ಯಾಗವನೆ ಮುಗಿಸಿ |
ಹರುಷದಲಿ ಯದುಕುಲವಾಸ ಮಾಡಿದೆ |
ಪರಮ ಪುರುಷ ವಿಜಯವಿಠ್ಠಲನೆ ಎಲೆ ಭಾಪುರೆ ೭

೩೨೧
ರಾಜವದನೆ ನೀ ಗುರು-
ರಾಜರಿರುವ ಸಂಭ್ರಮ ನೋಡೆ ಪ
ರಾಜಿಸುವ ಮುಖನ
ಪೂಜಿಸುವ ಯತಿವರನೆ ಅ.ಪ
ದೂಷಿತ ದುರ್ಜನರ
ತಾಸು ಬಾಳದಂತೆ ವಿ-
ಶೇಷದಿಂದ ಭಜಿಸುವರ
ಪೋಷಿಸುವ ಯತಿವರನೆ ೧
ಪಾದ ನಂಬಿದವರಿಗೆ
ಮೋದವೀವ ದೇವನೆ
ಬೀದಿಬಿಡುವ ನಂಬಿದವರ
ವಾದಿರಾಜ ದೊರೆವರನೆ ೨
ಅಜಪದಕೆ ಅರ್ಹನೆಂದು
ಗಜವರದನ ದಾಸನೆಂದು
ಭಜನೆ ಮಾಡುವ ನಿಜವ ಪೇಳುವ
ವಿಜಯವಿಠಲನ ಸೇವಕರಿವರೇ ೩

೧೫೪
ರಾಮ ಜಾನಕೀರಮಣ ರಾಜೀವದಳನಯನ
ಧಾಮ ನಿಧಿವಂಶ ಸೋಮನಿಗೆ ಪ
ಪದುಮಶಾಲೆಯೊಳಗೆ ಪದುಮಗದ್ದುಗೆ ಹಾಕಿ
ಪದುಮನಾಭನು ಬಂದು ಕುಳಿತನು
ಪದುನುನಾಭನು ಬಂದು ಕುಳಿತನು ಎಡದಲ್ಲಿ ಪದುಮಾಕ್ಷಿ
ಪದುಮ ಸಾಧನೆ ಲಕುಮಿ ಒಪ್ಪಿದಳು. ೧
ವಾಣಿ ಭಾರತಿ ಖಗಪರಾಣಿ ವಾರುಣಿ ಗಿರಿಜೆ
ಮೀನಕೇತನ ರಾಣಿ ಇಂದ್ರಾಣಿ ಮಿಕ್ಕಾನಲಿದಾಡುತಲಿ
ಮೀನಕೇತನ ರಾಣಿ ಇಂದ್ರಾಣಿ ನಕ್ಕು ನಲಿದಾಡುತಲಿ
ಆನಂದದಿ ಬಂದು ಕುಳಿತರು ತಮ್ಮ ಠಾಣೆಗೆ ೨
ಚಿನ್ನದ ತಳಿಗೇಲಿ ಎಣ್ಣೆ ಅರಿಶಿಣ ಗಂಧ
ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ
ಸಣ್ಣ ಕುಂಕುಮ ಜಾತಿ ಕಸ್ತೂರಿ ಪೊಂಗಳಸ
ಹೆಣ್ಣುಗಳ ಮಧ್ಯೆ ಇಳಿಸಿದರು೩
ತಂದೆ ತಾತನ ಬಳಿಯ ಮಂದಾಕಿನಿ ವಾಗ್ವಿಯ-
ರೊಂದಾಗಿ ಒಡಗೂಡಿ ರಂಗಯ್ಯನ ಕೈಗೆ
ಒಂದಾಗಿ ಒಡಗೂಡಿ ರಂಗಯ್ಯನ ಕೈಯೊಳಗೆ
ತಂದು ಅರಿಶಿಣ ಎಣ್ಣೆ ಗಂಧವಿತ್ತು೪
ತಡಮಾಡಲಾಗದು ಕಡಲಶಯನ ನಿಮ್ಮ
ಮಡದಿಯಂಗಕ್ಕೆ ತೊಡೆವುದೆನಲು
ಮಡದಿಯಂಗಕ್ಕೆ ತೊಡೆವುದು ಎನಲಾಗಿ
ಕಡು ಹರುಷದಿ ಸತಿಯಳ ನೋಡಿದನು ೫
ಎನ್ನರಸಿ ಹೊನ್ನರಸಿ ಪ್ರಾಣದರಸಿ ಪಟ್ಟದರಸಿ |
ಕನ್ಯೆ ಶಿರೋಮಣಿ ಪಾವನ ದೇಹಿ ||
ಕನ್ಯೆ ಶಿರೋಮಣಿ ಪಾವನ ದೇಹಳೆ ನಿನ್ನ |
ಕನ್ನಡಿ ಮುಖವ ತೋರರಿಷಿಣವ ನಾ ಹಚ್ಚುವೆ ೬
ತಂದೆ ನಂದನರಿಗೆ ಬಂಧು ಬಳಗ ಸುತ್ತ |
ಹೊಂದಿದ ಜನರಿಗೆ ಹಲವರಿಗೆ ||
ಹೊಂದಿದ ಜನರಿಗೆ ಹಲವರಿಗೆ ಕದನ |
ತಂದು ಹಾಕುವಳೆಂದು ಹಚ್ಚಿದನು ೭
ತೂಗಿಸಿಕೊಂಬುವಳೆ ದೌತ್ಯಕ್ಕೆ ಸಲ್ಲುವಳೆ |
ಬಾಗಿಲ ಕಾಯಿಸುವಳೆ ಬಲ್ಲಿದರ ||
ಬಾಗಿಲಕಾಯಿಸುವಳೆ ಬಲ್ಲಿದರನು ಬಿಡದೆ |
ಸಾಗರನ ಮಗಳು ಎಂದು ತೊಡೆದನು ೮
ಇಂದಿರಾದೇವಿ ಬಾ ಮಂದಿರಾಂಬುಜ ರಾಮ |
ಸುಂದರ ಶ್ರೀವಾರಿ ಮಂಗಳಗಾತ್ರೆ ||
ಸುಂದರ ಶ್ರೀನಾರಿ ಮಂಗಳಗಾತ್ರೆ ಯೆಂದು |
ಅಂಗಜ ಜನಕನು ನಗುತಲಿದ್ದ ೯
ರಮಣಿಯ ದೇಹಕ್ಕೆ ಕಮಲನಾಭನು ಎದ್ದು |
ವಿಮಲಕಸ್ತೂರಿ ಗಂಧವರಿಷಿಣ ಎಣ್ಣೆ ||
ವಿಮಲ ಕಸ್ತೂರಿ ಗಂಧವರಿಷಿಣ ಎಣ್ಣೆಯ |
ಕ್ರಮದಿಂದ ಲೇಪಿಸಿ ಊಟಣಿಸಾರಿ ೧೦
ಸಾಕಾರಗುಣವಂತಿ ತ್ರಿಲೋಕದ ಜನನಿ |
ನಾಕಜವಂದಿತಳೆ ನಾಗಗಮನೆ ||
ನಾಕಜವಂದಿತಳೆ ನಾಗಗಮನೆ ಏಳೂ |
ಶ್ರೀಕಾಂತನ ಸೇವೆಯ ಮಾಡೆಂದರು ೧೧
ಅಂದ ಮಾತನು ಕೇಳಿ ಗಂಧ ಅರಷಿಣ ಕೊಂಡು |
ನಿಂದು ಸಮ್ಮುಖದಲ್ಲಿ ರಂಗನ ನೋಡಿ |
ನಿಂದು ಸಮ್ಮುಖದಲ್ಲಿ ರಂಗನ ನೋಡಿ ಹಿಗ್ಗಿ |
ಚಂದ್ರವದನೆ ಪತಿಗೆ ಹಚ್ಚಿದಳು ೧೨
ಗೋವಳರ ಎಂಜಲು ಆವಾಗ ತಿಂದವನೆ |
ಮಾವನ್ನ ಕೊಂದವನೆ ಮಾಯಾಕಾರ ||
ಮಾವನ್ನ ಕೊಂದವನೆ ಮಾಯಾಕಾರನೆ ನಿನ್ನ |
ಸೇವೆಗೆ ಶಕ್ತಳೆನುತ ಹಚ್ಚಿದಳು ೧೩
ಬೆಣ್ಣೆ ಮೊಸರು ಕದ್ದು ಹೆಣ್ಣುಗಳ ಕೆಡಿಸಿ |
ಮುನ್ನೆ ತೊತ್ತಿನ ಮಗನ ಮನಿಯ ಉಂಡ ||
ಮುನ್ನೆ ತೊತ್ತಿನ ಮಗನ ಮನಿಯಲುಂಡ ಹಿಂದೆ |
ಹೆಣ್ಣಾಗಿ ಇದ್ದವನೆಂದು ಹಚ್ಚಿದಳು ೧೪
ಎನ್ನರಸ ಚೆನ್ನರಸ ಪ್ರಾಣದರಸ ಪಟ್ಟಣದರಸ |
ಭಿನ್ನವಖಿಳ ಜೀವಕ್ಕೆನ್ನ ಒಡೆಯ ||
ಭಿನ್ನವಖಿಳ ಜೀವಕ್ಕೆನ್ನ ಒಡೆಯ ಸಲಹಿಂದು |
ಚೆನ್ನಾಗಿ ಅರಿಷಿಣ ಗಂಧ ಹಚ್ಚಿದಳು ೧೫
ನಿತ್ಯ ಕಲ್ಯಾಣ ಪುರುಷೋತ್ತಮ ಸರ್ವೇಶ |
ಸತ್ಯಸಂಕಲ್ಪ ಸಿದ್ಧ ಅಪ್ರಮೇಯಾ ||
ಸತ್ಯಸಂಕಲ್ಪ ಸಿದ್ಧ ಅಪ್ರಮೇಯನೆಂದು |
ಮಿತ್ರೆ ಸರ್ವಾಂಗಕ್ಕೆ ಹಚ್ಚಿದಳು ೧೬
ದೇವಿ ದೇವೇಶಗೆ ಈ ಉರುಟಣೆಯಿಲ್ಲ |
ಆವಾವ ಬಗೆ ಎಲ್ಲ ತೋರಿಸುತ್ತ ||
ಆವಾವ ಬಗೆ ಎಲ್ಲ ತೋರಿ ವಧು-ವರಗಳಿಗೆ |
ಹೂವು ಬಾಸಿಂಗವ ರಚಿಸಿದರು೧೭
ಅಸುರ ವಿರೋಧಿ ವಸುದೇವನಂದನ |
ಪಶುಪತಿ ರಕ್ಷಕ ಪರಮ ಪುರುಷ ||
ಪಶುಪತಿ ರಕ್ಷಕ ಪರಮ ಪುರುಷ ಎಂದು |
ಹಸನಾಗಿ ಲೇಪಿಸಿ ಇತ್ತ ಜನರ ೧೮
ಶೃಂಗಾರವಂತೇರು ರಂಗ ಶ್ರೀಲಕುಮಿಗೆ |
ಮಂಗಳಾರತಿ ಎತ್ತಿ ಹರಸಿದರು ||
ಮಂಗಳಾರತಿ ಎತ್ತಿ ಹರಸಿ ದೇವರಮನೆಗೆ |
ಅಂಗನೆಯಳ ಸಹಿತ ನಡೆಯೆಂದರಾಗ ೧೭
ಎತ್ತಿಕೊಂಡನು ರಂಗ ಚಿತ್ತದ ವಲ್ಲಭೆಯ |
ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ||
ಮತ್ತೆ ಸುಗಂಧಿಯರು ಹೊಸ್ತಿಲೊಳಗೆ ನಿಂದು |
ಪತ್ನಿಯ ಹೆಸರು ಪೇಳೆಂದರು ಆಗ ೨೦
ಬೇಗ ಮಾರ್ಗವ ಸಾರಿ ತೂಗಲಾರನು ಇವಳ |
ಸಾಗಿ ಪೋಗುವನೆಂದು ಪೇಳುತಿರಲು ||
ಸಾಗಿ ಪೋಗುವನೆಂದು ಪೇಳುತಿರಲು ಸ್ತ್ರೀ ಕೂಟ |
ತೂಗವದೆಂತು ನಾಳೆ ನುಡಿಯೆಂದರು ೨೧
ನಕ್ಕು ಸಂತೋಷದಲಿ ರುಕ್ಮಿಣಿ ಎಂದನು |
ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ||
ಅಕ್ಕಯ್ಯ ಪೇಳೆಂದು ಹೆಮ್ಮಕ್ಕಳೆಲ್ಲ ಎನಲು |
ಚಕ್ರಪಾಣಿ ಎಂದು ಪೇಳಿದಳು ಲಕುಮಿ ೨೨
ಗಂಡ ಹೆಂಡತಿ ಪೋಗಿ ದಂಡ ಪ್ರಣಾಮಮಾಡಿ |
ಮಂಡಲದ ಚರಿತೆ ತೋರಿದರು ಆಗ ||
ಮಂಡಲದ ಚರಿತೆ ತೋರಿ ವಧು-ವರಗಳಿಗೆ |
ಕಂಡವರಿಗೆ ಮದುವೆಯೆನಿಸಿದರು ೨೩
ದಂಪತಿಗಳು ಒಲಿದು ಇಂಪಾಗಿ ಉರುಟಣಿ |
ಸೊಂಪಾಗಿ ಮಾಡಿದರು ಅನೇಕವಾಗಿ ||
ಸೊಂಪಾಗಿ ಮಾಡಿದವರ ಕತೆಗಳ ಕೇಳಲು
ಸಂಪತ್ತು ಕೊಡುವನು ವಿಜಯವಿಠ್ಠಲರಾಯಾ ೨೪

೧೫೫
ರಾಮ ರಘುಕುಲಾಬ್ಧಿ ಸೋಮಾ ಪ
ಸಂತತ ಭಕ್ತ ಪ್ರೇಮಾ ಮಂಗಲಧಾಮಾ |
ಪರಿಪೂರ್ಣ ನಿನ್ನಯ ನಾಮವೆ ಗತಿ ಎನಗೆ ಅ.ಪ.
ಏಸಪರಾಧಗಳೆಣಿಸದೆ ದಯವಿಟ್ಟು |
ದೋಷದೂರನ ಮಾಡೊ ಕೇಶವ ಕಮಲಾಕ್ಷಾ ೧
ಪ್ರಣವಾಕಾರ ವಿಮಾನ ಮನಿಯಾಗಿಯಿಪ್ಪನೆ |
ಫಣಿಶಾಯಿ ರಂಗೇಶ ಮಣಿಗಣ ಭೂಷಣನೆ೨
ಇಕ್ವಾಕು ನೃಪವರದ ಸಾಕ್ಷಾತ್ತ ಪರಮಾತ್ಮಾ-|
ಧ್ಯಕ್ಷ ವಿಜಯವಿಠ್ಠಲಾ ರಕ್ಷಿಸು ಬಿಡದೆನ್ನ೩

೧೫೬
ರಾಮ ರಾಮ ಎಂಬೆರಡಕ್ಷರ |
ಪ್ರೇಮದಿ ಸಲುಹಿತು ಸುಜನರನು ಪ
ಹಾಲಾಹಲವನು ಪಾನವಮಾಡಿದ |
ಫಾಲಲೋಚನನೆ ಬಲ್ಲವನು ||
ಆಲಾಪಿಸುತ್ತ ಶಿಲೆಯಾಗಿದ್ದ |
ಬಾಲೆ ಅಹಲ್ಯೆಯ ಕೇಳೇನು ೧
ಅಂಜಿಕೆಯಿಲ್ಲದೆ ಗಿರಿಸಾರಿದ ಕಪಿ-|
ಕುಂಜರ ರಮಿಸುತ ಬಲ್ಲವನು ||
ಎಂಜಲ ಫಲಗಳ ಹರಿಗರ್ಪಿಸಿದ |
ಕಂಜಲೋಚನೆಯ ಕೇಳೇನು ೨
ಕಾಲವರಿತು ಸೇವೆಯ ಮಾಡಿದ
ಲೋಲ ಲಕ್ಷ್ಮಣನೆ ಬಲ್ಲವನು ||
ವ್ಯಾಳಶಯನ ಶ್ರೀ ವಿಜಯವಿಠ್ಠಲನ
ಲೀಲೆ ಶರಧಿಯ ಕೇಳೇನು೩

೨೭೬
ರುದ್ರಾ ವೀರಭದ್ರ ಅದ್ರಿನಂದನೆ ರಮಣಾ ಪ
ರೌದ್ರ ಮೂರುತಿ ದಯಾಸಮುದ್ರ ಎನ್ನನು ಕಾಣೊ ಅ. ಪ.
ಮುಪ್ಪುರವ ಗೆದ್ದ ಮುಕ್ಕಣ್ಣ ಮನ್ಮಥ ವೈರಿ
ಸರ್ಪಭೂಷಣ ಮೃತ್ಯು ನಿವಾರಣ
ಕಪ್ಪುಗೊರಳ ಕೃತ್ತಿವಾಸ ವ್ಯೋಮಕೇಶ
ಒಪ್ಪಿಕೊಳ್ಳಬೇಕು ಒಲಿದು ಈ ವಾಕು ೧
ಸದ್ಯೋಜಾತ ಭೂತನಾಥ ಭಕುತರದಾತ
ಖದ್ಯೋತ ಲಾವಣ್ಯ ಸುರಜ್ಯೇಷ್ಠನ
ಮಧ್ಯವಾಸನ ಛೇದ ಶ್ರೀ ವಿಷ್ಣುವಿನ ಪಾದ
ಹೃದ್ಯದೊಳಗಿಟ್ಟ ಜಟಾ ಜೂಟ ಬಲು ಧಿಟ್ಟ೨
ಮನೋನಿಯಾಮಕ ಗುರುವೆ ದೈನ್ಯದಿಂದಲಿ ಕರೆವೆ
ಜನಿಸಿ ಕಾಡುವ ರೋಗ ಕಳೆಯೊ ಬೇಗ
ಅನುಪಮ ವಿಜಯವಿಠ್ಠಲನ ನಾಮಾಮೃತವ
ಎನಗುಣಿಸುವುದೋ ಸಾಂಬು ಮರುತ ಪ್ರತಿಬಿಂಬ ೩

ಲಿಂಗ ಎನ್ನಂತರಂಗ ಮಂಗಳಾಂಗ :

೨೭೭
ಲಿಂಗಾ ಎನ್ನಂತರಂಗ ಪ
ಮಂಗಳಾಂಗ ಸರ್ವೋ-ತುಂಗನೆ ರಾಮ ಅ. ಪ.
ಮಂದಾಕಿನೀಧರಗೆ ಗಂಗಾಂಬು ಮಜ್ಜನವೆ
ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೆ
ಇಂದು ರವಿನೇತ್ರಗೆ ಕರ್ಪೂರದಾರತಿಯೆ
ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ರಾಮಾ ೧
ಘನವಿದ್ಯಾತುರಗೆ ಮಂತ್ರಕಲಾಪವೆ
ಧನವತಿಯ ಸಖಗೆ ಕೈಕಾಣಿಕೆಯೆ
ಮನೆರಜತ ಪರ್ವತಗೆ ಫಣಿಯ ಆಭರಣವೆ
ಮನೋ ನಿಯಾಮಕಗೆನ್ನ ಬಿನ್ನಹವೆ ರಾಮಾ೨
ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೆ
ಗೌರಿಯ ರಮಣಗೆ ಈ ಸ್ತೋತ್ರವೆ
ವೀರ ರಾಘವ ವಿಜಯವಿಠ್ಠಲ ನಿಜಹಸ್ತ
ವಾರಿಜದಳದಿಂದುದ್ಭವಿಸಿದ ಮಹಾ ೩

೨೭೮
ಲಿಂಗಾಭವ ಭಸಿತಾಂಗ ಅಂಗಜಮದ ಭಂಗ ಪ
ಶೃಂಗಾರ ಗುಣನಿಧಿ ಕೃಪಾಂಗ ಎನ್ನನು ಕಾಯೊ ಅ. ಪ.
ರಜತಪರ್ವತವಾಸ ಸುಜನ ಮನವಿಲಾಸ
ಅಜನಂದನ ರುದ್ರ ವೀರಭದ್ರಾ
ಕುಜನಮತವನು ಬಿಡಿಸೊ ನಿಜಪಥವ ತೋರಿ
ಭುಜಗಭೂಷಣ ಸಾಂಬ ಪ್ರಾಣ ಪ್ರತಿಬಿಂಬ ೧
ನೀಲಕಂಧರ ವಿಶಾಲಗುಣ ಸುಂದರ
ಫಾಲಲೋಚನ ಭಜಕ ಕಾಲಹರ ಪಾರ್ವತಿ
ಲೋಲ ಭಕ್ತರ ಪಾಲ
ಪಾಲಯ ಶ್ರೀ ಸಿರಿ ಲೊಲನಪ್ರಿಯ ೨
ದುರ್ವಾಸ ಶುಕಮುನಿಯೆ ಉರ್ವಿಯಾಳ್ ನಿನಗೆಣೆಯೆ
ಓರ್ವ ಮೂಕನ ಕೊಂದು ಮರಳೆ ಬಂದು
ದೇವ ದೇವ ನಮ್ಮ ವಿಜಯವಿಠ್ಠಲರೇಯ
ಸರ್ವೋತ್ತಮನೆಂಬ ನಾಮರಸ ಉಂಟಾ ೩

೨೩೮
ವಂದಿಪ ಬನ್ನಿ ನೀವೆಲ್ಲ ಚನ್ನಾಗಿ ಕುಂತಿ
ಕಂದ ಭೀಮಗೆ ಸರಿಯಿಲ್ಲ
ಎಂದೆಂದಿಗೆ ಬಿಡದೆ ಬಂದಾ ಪ್ರತಿಬಂಧಕಗಳ
ನಿಂದಿರಗೊಳದಲೆ ಕಳಿವ ನಿತ್ಯ ಸುಳಿವಾ
ಅರಿತುಳಿವಾ ಸತ್ಕೀರ್ತಿ ಪೊಳವ ಪ
ಪ್ರಳಯಾಂತದಲ್ಲಿ ತಾನು ತಿಳಿದು ಸತ್ವ ಜೀವರ ನೆಲೆ
ಗೊಳಿಸುವೆನೆಂದು ಬಲುಹರುಷದಲಿ
ಜಲಜನಾಭನ ಚರಣಾಬ್ಜಕರಿಗೆ ಹಸ್ತ ಮುಗಿದು
ತಲೆಬಾಗಿ ಬಿನ್ನೈಸಿದಾತಾ ಗುಣಜಾತಾ
ಶ್ರುತಿವಿನುತ ಇದೇ ಕಾಯವನಿತ್ತ ೧
ಅಂಡಾಂತದೊಳು ತನ್ನ ಮಂಡೆ ಮೇಲೆ ಭಾರವ
ಕೊಂಡಾ ಸಹಸ್ರ ಫಣ ಕುಂಡಲಿಯ ಪೊತ್ತಾ
ಗಂಡುಗಲಿ ಕೂರ್ಮನಾ ಕೊಂಡಾಡಲು ನಮಗೆ
ತಂಡತಂಡದ ಮಹಾ ಸೌಖ್ಯವನೀವ ಸಖ್ಯಾ
ಸಗುಣಾಖ್ಯಾ ಗುರುವೀತನೇ ಮುಖ್ಯಾ ೨
ಭೀಮನೆ ಭೀಮಸೇನಾ ಭೀಮರಾಯನೆಂದು ನೇಮದಿಂದಲಿ
ನಾಮವ ನೆನೆದಡೆ ಪಾಮರ ಬುಧ್ಧಿಯನ್ನು
ತಾಮಸರ ಕರ್ಮಸ್ತೋಮ ಓಡಿಸಿ ನಿತ್ಯ ಸತ್ಪುಣ್ಯ
ಅನುಗಣ್ಯ ಬಲು ಗುಣ್ಯಮಾಡಿಸುವನನ್ಯ ೩
ಹಿಂದೆ ರಘುನಾಥನ ಛಂದದ ದೂತನಾಗಿ
ಸಿಂಧು ಬಂಧಿಸಿ ಶತಕಂಧರನ ಕೊಲ್ಲಿಸಿ ಇಂದು ವಂಶದಲಿಂದು
ಮಂದಹಾಸದಲುದಿಸಿ ನಂದದಿಂದಲಿ ಕುರುಬಲವ
ಗೆದ್ದ ಚಲುವ ಭಕ್ತಗೊಲಿವ ಮೂಲೋಕವ ಗೆಲುವ ೪
ಜ್ಞಾನ ಭಕ್ತಿ ವೈರಾಗ್ಯ ನಾನಾ ಪ್ರಕಾರ ಭೀಷ್ಟೆ
ಮಾಣದೆ ಕೊಡುವನು ಅನಂತ ಕಾಲಕೂ ಆನಂದತೀರ್ಥನೀತಾ
ಪ್ರಾಣಾದಿ ಪಂಚರೂಪ ಶ್ರೀನಾಥ ವಿಜಯ ವಿಠ್ಠಲಾ ಸಿರಿನಲ್ಲಾ ಪೊರೆವೆಲ್ಲಾ ಒಂದೆಂಬದಲ್ಲಾ ೫

೬೯
ವಂದಿಸು ವಂದಿಸು ಗುಣವ ಕೊಂಡಾಡಿ ಅರ
ವಿಂದನಾಭನ ಮೂರ್ತಿ ನೋಡಿ | ಹಾಹಾ | ಆ
ನಂದ ಸಿಂಧುವಿನೊಳು ಪೊಂದು ಒಂದೆ ಭಕ್ತಿಯಿಂದ
ಇಂದುವಿನಂದದಿಪ್ಪನಾ ಪ
ಓಂಕಾರ ಪ್ರತಿಪಾದ್ಯನೀತಾ ಅಕಳಂಕ ಅಪ್ರಾಕೃತನೀತಾ ಬಿರು
ದಾಂಕ ಅಖಂಡವ್ಯಾಪುತ ತನ್ನ ಸಂಕಲ್ಪಕ್ಕೆ
ಮೀರಾಜಾತಾ | ಹಾಹಾ|
ಪಂಕಜಸಖ ಕೋಟಿ ಸಂಕಾಶ ಸುರಗಣ
ಲಂಕಾರವಾಗಿಪ್ಪ ವೆಂಕಟರಮಣನ್ನ ವಂದಿಸು ೧
ಪ್ರಳಯದಲ್ಲಿ ವಟಪತ್ರದಲ್ಲಿ ಮಲಗಿಪ್ಪ ಭುವನ ಪವಿತ್ರ ನಿತ್ಯ
ಬಲು ಲೀಲಾಚಿತ್ರ ವೈಚಿತ್ರ ಕರ್ಮ
ನೆಲೆಗೊಳಿಸುವ ಶ್ರೀ ಕಳತ್ರ || ಹಾಹಾ ||
ಪೊಳೆವ ಏಳು ಕೋಟಿ ನಿಲವು ಪರಿಮಿತಾ
ತಲುವರಿಯಾದ ವಿಮಲಜ್ಞಾನ ಪೂರ್ಣನ್ನ ವಂದಿಸು೨
ನಿರ್ವಿಕಾರ ನಿರ್ಗುಣಾ ದೇವ ಓರ್ವನಹುದೊ
ಕಲ್ಯಾಣಾ ಮೂರ್ತಿ
ಸರ್ವರೊಳಗೆ ಬಲು ಜಾಣಾನಾಗಿ
ಸರ್ವದಾ ಚರಿಪ ಪ್ರವೀಣಾ ||ಹಾಹಾ ||
ಊರ್ವಿ ಭಾರಕರಾದ ಪೂರ್ವ ದೇವರುಗಳ
ಗರ್ವಹರನ ಒಂದು ದೂರ್ವಿಗೆ ಒಲಿವನ್ನ ವಂದಿಸು ೩
ಕಾಲನಾಮಕ ಭಗವಂತಾ ವೇಗ ಪೇಳಿಸುವನು ಏಕಾಂತಾತತ್ತ್ವ
ಕೇಳು ಮನವೆ ನಿಶ್ಚಿಂತಾದಲ್ಲಿ ಹೇಳುವೆ ಮುಂದೆ
ವೃತ್ತಾಂತಾ | ಹಾಹಾ |
ಶ್ರೀಲಕುಮಿಗೆ ತಾನು ವಾಲಯ ಪ್ರೇರಿಸಿ
ಮೇಲುಪದಗಳಿಂದ ವಾಲಗಗೊಂಡನ್ನ ವಂದಿಸು ೪
ಪುರುಷ ನಾಮಕ ನಾರಾಯಣಾ ತನ್ನ
ಶರಣರಿಗೆ ಪಂಚಪ್ರಾಣಾನಾಗಿ
ಪೊರೆವನು ಬಿಡದನುದಿನಾ ಇದೆ
ಸ್ಥಿರವಾಗಿ ತಿಳಕೊಂಡು ಧ್ಯಾನಾ | ಹಾಹಾ |
ತರಳ ಯವ್ವನ ವೃದ್ಧ ಪರಿಯಂತ ಮಾಡಲು
ಎರಡೊಂದು ಪರಿಯಲ್ಲಿ ಮಿನಗುವ ದೇವನ್ನ ವಂದಿಸು ೫
ಒಂದೊಂದು ಅವಯವದಿಂದ ತತ್ವ
ಮಂದಿಯ ಪಡೆದ ಗೋವಿಂದ ಅವ
ರಿಂದ ಸ್ತುತಿಸಿ ಕೊಂಡಾನಂದ ಬಂದು
ಕುಂದದೆ ವರ್ಣಿಪ ಛಂದಾ | ಹಾಹಾ |
ಎಂದಿಂಗೆಂದೀಗೆ ಗುಣವೃಂದ ಎಣಿಪರಾರು
ತಂದೆ ಎಂದೆಂದಿಗೂ ಸುಖ ತಂದು ಕೊಡುವನ್ನ ವಂದಿಸು೬
ಅನಿರುದ್ಧ ಪ್ರದ್ಯುಮ್ನ ಸಂಕರುಷಣ ವಾಸುದೇವ ನಿಃಶಂಕ
ತನ್ನ ನೆನೆದವರಿಗೆ ನಿರಾತಂಕ | ಹಾಹಾ |
ತನಗೆ ತಾನೆ ಬಿಜ್ಜಣನಾಗಿ ಜೀವರ
ಕ್ಷಣ ಬಿಡದಲೆ ಕಾರಣನಾಗಿ ಇಪ್ಪನ್ನ ವಂದಿಸು೭
ಕಾರ್ಯಕಾರಣ ರೂಪದಿಂದ ಸರ್ವಕಾರ್ಯ
ಮಾಡಿಸುವ ಮುಕುಂದ ಸ್ವರ್ಣ
ವೀರ್ಯವಿಟ್ಟನು ವೇಗದಿಂದ ಪದ್ಮ
ಭಾರ್ಯಳಲ್ಲಿ ದಯದಿಂದ | ಹಾಹಾ |
ಮರ್ಯಾದಿಯಲಿ ಸುರ ವೀರ್ಯಾಂಡಾ ಪುಟ್ಟಿಸಿ
ಪರ್ಯಾಯದಲ್ಲಿ ತಾತ್ಪರ್ಯ ನುಡಿಸುವನ್ನ ೮
ಮೀನ ಕಮಠ ಕಿಟಿ ಮನುಜ ಸಿಂಗ ದಾನ ಪಿಡಿದ ಭೃಗು
ತನುಜ ಸೀತಾ ಪ್ರಾಣೇಶ ಬಲಭದ್ರಾನುಜ
ಅಭಿಮಾನಗೇಡಿ ದುಷ್ಟದನುಜ | ಹಾಹಾ |
ಶ್ರೇಣಿಯ ವ್ರತವ ಕ್ಷೀಣವಗೈಸಿನ್ನು
ಜಾಣರ ಕಾಯಿದ ಅನಾಥ ಮಿತ್ರನ್ನ ವಂದಿಸು ೯
ಕಪ್ಪು ಕೂಡಿದ ಐದು ಮೂರ್ತಿ ಮತ್ತೆ
ಒಪ್ಪುವ ಚತುರ ವಿಂಶತಿ ಮುಂದೆ
ಇಪ್ಪವು ಈರೈದು ಶತಿಹೆಚ್ಚೆ ತಪ್ಪದೆ ಸಾಸಿರ ಮೂರ್ತಿ | ಹಾಹಾ |
ಅಪ್ಪುತ ವಿಶ್ವಾದಿ ಅಪಾರಾ ಅಜಿತಾದಿ
ಗಪ್ಪ ನನ್ನಯಗಳು ಜಪ್ಪುತಜಾದಿಯ ವಂದಿಸು೧೦
ಎಸೆವ ಕಪಿಲ ವೇದವ್ಯಾಸಾ ತಾಪಸ ವೃಷಭ ಮಹಿದಾಸಾ ರಂ
ಜಿಸುವ ಸಾರ್ವಭೌಮ ಹಂಸಾ ದಿವ್ಯ
ಪೆಸರಾದ ವೈಕುಂಠಾಧೀಶಾ | ಹಾಹಾ |
ಕುಶಲ ಹಯಮೊಗ ಅಸುರರ ಮೋಹ ಕ
ಲಶ ತಂದ ಧನ್ವಂತ್ರಿ ಋಷಿದತ್ತ ಕೃಷ್ಣನ್ನ೧೧
ನಾರಾಯಣ ವಿಷ್ಟಕ್ಸೇನಾ ಗುಣ ಸಾರಾ ಹರಿ ರುದ್ರಪ್ರಾಣಾ ಶಿಂಶು
ಮಾರವಿದ್ಭಾನು ಗೀರ್ವಾಣ ಪಟ
ಸಾರಿದ ಯಜ್ಞನಿದಾನಾ | ಹಾಹಾ |
ಕಾರುಣ್ಯನೇಕಾವತಾರ ಜಡ ಜೀ
ವರ ಸಂಗಡ ವಿಸ್ತಾರವಾಗಿಪ್ಪನ್ನ ವಂದಿಸು ೧೨
ಇಂತು ಬಲ್ಲಿದ ಸಿರಿ ಅರಸಾ ತನ್ನ ಅಂತು
ತೋರನು ವಂದು ದಿವಸಾ ಎಲ್ಲ
ಸಂತರಿಗೆ ನಾಮ ತರಸಾ ದುಷ್ಟ ಚಿಂತೆಯಲ್ಲಿ
ಭಕ್ತರಿರಸಾ | ಹಾಹಾ |
ನಿಂತು ನಿರ್ಮಳ ಸ್ವಾತಂತ್ರತನಾದಲ್ಲಿ
ತಂತು ನಡಿಸುವ ಆದ್ಯಾಂತ ಸತ್ ಚಿತ್ತನ್ನ ವಂದಿಸು ೧೩
ಅಷ್ಟ ಕರ್ತೃತ್ವ ಷಡ್ಗುಣ್ಯ ಭೂತಿ ಇಷ್ಟದಲ್ಲಿಪ್ಪ ನಿರ್ಗುಣಾ ಸರ್ವಾ
ಭೀಷ್ಟವ ಕೊಡುವ ಸತ್ರಾಣಾ ತನ್ನ ನಿಷ್ಠೆ
ಉಳ್ಳವರಿಗೆ ಕರುಣಾ | ಹಾಹಾ |
ತುಷ್ಟಾಗಿ ಇಟ್ಟ ಅನಿಷ್ಟ ಪಾಪ ಪುಣ್ಯ
ನಿಷ್ಟವ ಮಾಡಿ ವಿಶಿಷ್ಠನ ಪೊರೆವನ್ನ ೧೪
ಎರಡೈದಾವರಣಾ ಬೊಮ್ಮಾಂಡ ಮಾಡಿ
ತರತಮ್ಯ ಗುಣ ಥಂಡ ಥಂಡಾದಿಂದ
ವಿರಚಿಸಿದನು ಉದ್ದಂಡಾ ಆವಾ
ತರುವಾಯ ಉಪಾಯ ಕಂಡಾ | ಹಾಹಾ |
ಪರಮೇಷ್ಠಿಯ ತನ್ನ ಹಿರಿಯಮಗನ ಮಾಡಿ
ಪರಿಪಾಲಿಪ ಚತುರ ಭುವನೇಶನ ವಂದಿಸು ೧೫
ವಿರಾಟರೂಪವ ಧರಿಸೀ ಅದೇ ಶರೀರದಲ್ಲಿ
ಸುರರ ಧರಿಸಿ ತಂದು
ವಾರಿಜ ಭವದೊಳು ಹೊರಿಸೀ ಪೋಗಿ
ಆರು ತಿಳಿಯದಂತೆ ಮೆರೆಸೀ | ಹಾಹಾ|
ಕೀರುತಿಯನು ಸರ್ವ ಭಾರ ಕರ್ತನಾಗಿ
ಕ್ರೂರರಿಗೆ ಸುಕುಠಾರವಾಗಿದ್ದನ್ನ ವಂದಿಸು ೧೬
ಅವರವರೋಗ್ಯತ ನೋಡಿ ಸುಕೃತ
ದುಷ್ಕರ್ಮಗಳು ನೀಡಿ ಮುಕ್ತಿ
ಭವತಮನಸಿನಲ್ಲಿ ಕೂಡಿ ಚರಿ
ಸುವ ಸಂಬಂಧವ ಮಾಡೀ | ಹಾಹಾ |
ತ್ರಿವಿಧ ಜೀವರ ಸಾಕುವ ವೈಷಮ್ಯವಿಲ್ಲ
ದವನಾಗಿ ಸಾಮರ್ಥನವ ನವ ಮಾಯನ್ನ ವಂದಿಸು೧೭
ನಿತ್ಯಾನಿತ್ಯ ಪದಾರ್ಥದಲ್ಲಿ ವ್ಯಾಪ್ತ ಸತ್ಯ ಸಂಕಲ್ಪ ವೇದದಲ್ಲಿ ಕೇಳು
ಅತ್ಯಂತ ಮಹಿಮಾ ಎಲ್ಲೆಲ್ಲಿ ತನ್ನ
ಸ್ತೌತ್ಯಮಾಳ್ಪರ ಬಳಿಯಲ್ಲಿ | ಹಾಹಾ |
ಭೃತ್ಯನಾಗಿ ನಿಂದಾಗ ನಿತ್ಯವೊಲಿದು ಅಪ
ಮೃತ್ಯು ಪರಿಹರಿಸುವ ಮುತ್ಯನ್ನ ಕಾಯಿದನ್ನ ವಂದಿಸು ೧೮
ದ್ರವ್ಯಕರ್ಮದಿ ವಸ್ತಾವಾ ಇವು ಅವ್ಯಯ ಹರಿ ವಿಸ್ತಾವಾ ತೋರಿ
ಹವ್ಯಾದಿ ಯಜ್ಞ ಪ್ರಸ್ತಾವಾ ರಚಿಸಿ ದಿವ್ಯ
ಮೂರುತಿ ತನ್ನ ಸ್ಥಾವಾ | ಹಾಹಾ |
ಭವ್ಯ ಲೋಕಕೆ ಸಂಜ್ಞೆ ಇತ್ತು
ಸೇವ್ಯಮಾನನಾದ ಅವ್ಯಕ್ತವಾಸಾ ಸವ್ಯದಲ್ಲಿಪ್ಪನ್ನ ವಂದಿಸು ೧೯
ಶಬ್ದ ಸ್ಪರ್ಶ ರೂಪ ರಸ ಗಂಧ ಅಬ್ಧಾವು ಮತ್ತೆ ಪ್ರಕಾಶಾ ವಾಯು
ನಿಬ್ಬಡಿಯಾದ ಆಕಾಶವಾಯು
ಶಬ್ದ ಹಸ್ತಂಘ್ರಿಲೇಶಾ | ಹಾಹಾ |
ಇಬ್ಬಗಿ ಗುಹ್ಯವು ಶಬ್ದಗ್ರಹ ಚಕ್ಷು
ತಬ್ಬು ಜಿಹ್ವೆ ಘ್ರಾಣಗಬದಿ ಮಾಳ್ಪನ್ನ ವಂದಿಸು ೨೦
ಪಿತಾಮಹಾ ಸುರಪಾಲಾ ದಿಗ್ದೇವತಿಗಳು
ರವಿ ವಾಯು ಶೀಲಾ ಗಂಗಾ
ಪ್ರತಿವೇದ್ಯರು ಸ್ವಾಹಾಲೋಲಾ ಅಜಾಸುತ
ಜಯಂತನು ಕಮಲಾ | ಹಾಹಾ |
ಪಿತಸ್ವಯಂಭುವಾ ಬೃಹಸ್ಪತಿ ಪಂಚಪ್ರಾಣರು
ಮತಿಪ್ರದಾ ಪ್ರವಾಹಾಹುತವಾದ್ಯಾರಿಷ್ಟನ್ನ ವಂದಿಸು ೨೧
ತತುವಕದಭಿಮಾನಿ ದೇಹಾ ಉಂಟು
ತತುವೇಶ ಜೀವರ ಸ್ನೇಹ ಸಿರಿ
ಪತಿತಾನೆ ಪ್ರವೇಶ ಮೋಹಾದಲ್ಲಿ ಪ್ರತಿದಿನ
ವಾಸ ಸಂದೇಹಾ | ಹಾಹಾ |
ಸತತ ಮಾಡಲಿ ಸಲ್ಲಾ ಚತುರ ಬಗೆ ತಿಳಿ
ದಿತರ ವ್ಯಾಕುಲ ಬಿಟ್ಟ ಮತಿಯಾಗಿ ಮೋದನ್ನ ವಂದಿಸು೨೨
ಪಂಚಭೇದಾರ್ಥವ ತಿಳಿಯೋ ದುಷ್ಟ
ಪಂಚೇಂದ್ರಿಯಗಳ ಅಳಿಯೊ ಜ್ಞಾನಿ
ಪಂಚೆಯಲ್ಲಿ ಪೋಗಿ ಸುಳಿಯೋ | ಹಾಹಾ |
ಮಿಂಚಿನಂದದಿ ಲೋಕಾಸಂಚಾರ ಮಾಡುತಾ
ಕೊಂಚೆದವನಾಗಿ ಚಂಚಲಾ ತೋರಿ ಹರಿಯಾ ವಂದಿಸು ೨೩
ಕಲಿ ನಾಲ್ವರಿಗೆ ಪ್ರವೇಶಾ ಇಲ್ಲಾ
ಉಳಿದವರಿಡಿದು ಗಿರೀಶನೊಳು
ನೆಲೆಯಾಗಿಪ್ಪ ದಾನೀಶಾ ಶಬ್ಧಾ
ಬಳಲೀಸುವದಕವ ಹೇಸಾ | ಹಾಹಾ |
ಜಲಜಜಾಂಡದ ಮಧ್ಯ ಬಲು ದುಃಖಕೆ ವೆಗ್ಗಳ ಶಿರೋಮಣಿ
ಇವನ್ನಾಳದನ್ನ ಒಡಿಯನ್ನ ವಂದಿಸು ೨೪
ಮುಕ್ತಿಲಿ ತಾರತಮ್ಯವೆನ್ನು ಆಸಕ್ತನಾಗಿ ಕೇಳು ಇನ್ನು ಇಂಥಾ
ಉಕ್ತಿಗೆ ಕೇಡಿಲ್ಲಾವೆನ್ನ ಕಾವಾ ಶಕ್ತಿವಂತನು ನಮ್ಮನ್ನ | ಹಾಹಾ |
ರಿಕ್ತವೃತ್ತಿಯಲ್ಲಿ ವಿರಕ್ತನಾಗು ದು
ರೂಕ್ತಿಯ ತೊರೆದು ವಿಮುಕ್ತನಾಗು ಹರಿಯಾ ವಂದಿಸು ೨೫
ಹರಿವುಂಡ ಎಂಜಲಾ ಉಂಡು ಮತ್ತೆ
ಹರಿವುಟ್ಟ ಉಡುಗೆ ಕೈಕೊಂಡು ಉಟ್ಟ
ಹರಿ ನಿರ್ಮಾಲ್ಯವೆ ಗಂಡು ತೆರನಾಗಿ
ಮುಡಿದಿದ್ದ ಹಿಂಡು |ಹಾಹಾ |
ದುರಿತಗಳ ಗೆದ್ದು ಹರಿ ಮಾಯಾವಿಡಿದು ವು
ಚ್ಚರಿಸು ನಾಮಂಗಳು ನಿರುತರಾ ರಂಗನಾ ವಂದಿಸು ೨೬
ಚತುರ್ವಿಧ ಅರ್ಚಕರು ಶುದ್ಧದಾರುತಿಗಳು
ಜಗದೊಳಧಿಕರು ಎನ್ನು
ಸತತ ನುಡಿವರು ಶೋಧಕರು ಜ್ಞಾನಿ –
ಗತಿಶಯನೆಂದು ಧಾರ್ಮಿಕರು | ಹಾಹಾ |
ಕ್ಷಿತಿಯೊಳು ಕೇವಲ ರತಿಪತಿಜನಕಂಗೆ
ಹಿತವಾಹಿಯಿಪ್ಪ ಸಮ್ಮತವೆಂದು ಕೃಷ್ಣನ್ನ ವಂದಿಸು ೨೭
ನಿಷ್ಠೆಯಿಂದಲಿ ಕೃಷ್ಣ ಕೃಷ್ಣನೆಂದು ಮೂರು
ಸಾರಿ ಕೂಗಿ ಸಾರಿ ಪೇಳಿ
ದಷ್ಟಮಾತುರದಲ್ಲಿ ಮಾಡಿ ಓಡಿ
ನಷ್ಟವಾಗೋವು ಹೆದರಿ | ಹಾಹಾ |
ಗಟ್ಯಾಗಿ ದೊರಕೋದು ಇಷ್ಟು ಪುಣ್ಯದಲ್ಲಿ ಸಂ
ತುಷ್ಟನಾಗುವಾ ಸಿದ್ದಾ ವೃಷ್ಟಿಕುಲಜನ್ನ ವಂದಿಸು ೨೮
ರಥಕೆ ಕುದರಿಯಂತೆ ಕಟ್ಟೀ ಭಕ್ತ
ಪಥವ ಪಿಡಿಸಿದನಾ ಅಟ್ಟೇ ಬಿಟ್ಟ
ವ್ಯಥಿಯ ಮಾಡಿದ ಮೊಳೆ ತಟ್ಟಿ
ಮನ್ಮಥ ಪಿತನಾದಡಿ ಗುಟ್ಟೀ | ಹಾಹಾ |
ಸಥೆ ಇತ್ತದು ನೋಡು ಪೃಥ್ವಿಯೊಳಗೆ ಖಗ
ರಥನ ಕಾರುಣ್ಯಕೆ ಪ್ರತಿಯಿಲ್ಲ ಪೊರೆವನ್ನ ವಂದಿಸು ೨೯
ಕೊಟ್ಟಾರೆ ತಪ್ಪಾದದೇನು ಬಲು
ದುಷ್ಟ ಜನಾ ತಿಮಿರಭಾನು ನಿತ್ಯಾ
ನುಷ್ಠಾನ ಮಾಡೋದು ನೀನು ಹರಿ
ಪಟ್ಟಣ ಇಲ್ಲಿಗೆ ಗೇಣು | ಹಾಹಾ |
ಕೊಟ್ಟಿದ್ದು ಉಂಡು ವಿಶಿಷ್ಟನಾಗಿ ಬಾಳು
ಕಟ್ಟಕಡೆಯಲಿ ನಿಷ್ಠನಾಗಿ ಹರಿಯಾ ವಂದಿಸು೩೦
ಜ್ಞಾನವಿಲ್ಲಾ ಮುಕ್ತಿ ಇಲ್ಲಾ ಇದು ಅನಂತಕಾಲಕೆ ಬಲ್ಲಾದೆನ್ನ
ಸ್ನಾನಾದಿಗಳ ಮಾಡೆ ಎಲ್ಲಾ ಪುಣ್ಯ
ತಾನುಂಟಾ ಸಂಪದವಿಲ್ಲಾ | ಹಾಹಾ |
ನಿನ್ನೊಳಗೆ ನೀನು ಧೇನಿಸು ಅನುಭವ
ಮಾನವನಾಗದೆ ಕಾಣಿಸ ಹರಿಯನ್ನ ವಂದಿಸು ೩೧
ಅಜಗೆ ನಿರ್ಮಳವಾಗಿ ಪೊಳೆವಾ
ಬೊಮ್ಮಜಗೆ ಕನ್ನಡಿಯಂತೆ ಸುಳಿವಾ ಸುರ
ವ್ರಜಕೆ ತರಣಿಯಂತೆ ನಿಲುವಾ ಮನುಜರಿಗೆ
ಮಿಂಚಿನ ತೆರೆವೀವಾ | ಹಾಹಾ |
ಸುಜನರಿಗೆ ತನ್ನ ಭಜನಿಯ ಪಾಲಿಸಿ
ನಿಜರೂಪ ಕೊಡುವಾ ವಿರಜನದಿಯ ಪೆತ್ತನ್ನಾ ವಂದಿಸು ೩೨
ಹದಿನಾಲ್ಕು ಲೋಕದ ಮಧ್ಯದಲ್ಲಿ
ಅಧಿಕವಾಗಿವೆ ಅಭೇದ್ಯಾ ಮೂರು
ಸದನಗಳುಂಟು ಅನಾದ್ಯಾ ಕಾಲ
ಹದುಳವಾಗಿಪ್ಪವು ಸಾಧ್ಯಾ | ಹಾಹಾ |
ಮೊದಲು ಮುಕ್ತಿಗೆ ಪೋದಾ ಪದುಮ ಭವಾದ್ಯರು
ಇದೆ ಪದವಿಯಲಿ ತೋಷದಲ್ಲಿ ಇಪ್ಪದು ನೋಡಿ ವಂದಿಸು ೩೩
ಜೀವರ ಪ್ರಮಾಣೆಂದೆ ಲೋಕ
ಜೀವನು ತಮಗೆ ತಾವಂದೆ ಹೀಗೆ
ಭಾವಿಸು ಮರ್ಯಾದಿಯೆಂದೆ ಸಿದ್ಧಾ
ಶ್ರೀವರ ಮಾಡಿದೆ ಅಂದೆ | ಹಾಹಾ |
ಆವಾವಾ ಸ್ಥಾನದಿ ಅವರವರಾ ಇಟ್ಟು
ಸೇವಿಯ ಕೊಂಬ ಪಾವನ ಮೂರುತಿಯ ವಂದಿಸು ೩೪
ಮೊರೆ ಇಟ್ಟು ಬೇಡಲು ಕೊಡನು
ಅವಾಕರದಾ ಮಾತಿಗೆ ವಡಂಬಡನು ಬಲು
ಪರಿತೋರಲು ದಯವಿಡನು ತನ್ನ
ಸರಿಬಂದರೆಯಲ್ಲಿ ಬಿಡನು | ಹಾಹಾ |
ತುರುಬು ಹಿಡಿದು ತುಪ್ಪಾ ಸುರಿಸುವವಲ್ಲೆನೆಂದರೆ ಕೇಳಾ
ಶರಣಗೆ ಶರಣನಾಗಿಪ್ಪನ್ನ ವಂದಿಸು ೩೫

ಭಾಸುರ ದೀನ ಮಂದಾರಾ ರತ್ನ
ರಾಶಿ ಹಗಲು ಬೇಗ ಬಾರಾ ನಿನ್ನ
ದಾಸನೆಂದರೆ ಕೆಲಸಾರಾ ಅಂದಾ
ಮೀಶೆಕೂಟ್ಟಿಸಿಕೊಂಡ ಧೀರಾ | ಹಾಹಾ |
ಏಸು ಬಗೆಯಲ್ಲಿ ವರ್ಣಿಸಬಲ್ಲೆನು ಮಾನಿಸ
ವೇಷನ ಧರಿಸಿದ ಸುಲಭನ್ನವಂದಿಸು ೩೬

ಗಲಭೆ ಇದೇನು ಎಂಬ ಸುಳಾದಿ
ವಲಿಸಿದನು ನೋಡಿಲೇಸು ನಮಗೆ
ಕೆಲಕಾಲ ಕೊಟ್ಟು ಮನ್ನಿಸು ಲಾಲಿ ಸಲಹುವ
ದಾಸರಾ ನೆನೆಸು| ಹಾಹಾ |
ಬಳಲಿದ್ದು ಕರಿಯಾ ಹುಯ್ಯಾಲಿಗೆ ಬಂದೊದಗಿದ
ನಳಿನನಾಭನ ದಯಾ ಜಲನಿಧಿ ಎಂದು ಇಂದು ವಂದಿಸು೩೭
ಎಂಭತ್ತು ನಾಲುಕು ಲಕ್ಷಾ ಯೋನಿ ಇಂದಾಗಿ
ಮಾಡಿದಾ ದಕ್ಷಾ ತಾನೆ
ಡಿಂಭಾದೊಳಗೆ ನಿಂತು ದೀಕ್ಷಾ ಬದ್ಧ
ಎಂಬೋದು ತಿಳುಪುವಧ್ಯಕ್ಷಾ | ಹಾಹಾ |
ಕುಂಭಿಣಿಯೊಳಗೆಲ್ಲಾ ಉಂಬೋದ ತಪ್ಪಿಸಿ
ಬೆಂಬಿಡದಲೆ ಸರ್ವ ತುಂಬಿಕೊಂಡಿಪ್ಪನ್ನ ವಂದಿಸು ೩೮
ಇದರೊಳು ಭೂಸುರ ಬಿಂಬಾವನ್ನ
ಅಧಿಕ ಮಾಡಿದನು ಕಂಸಾಸುರನ
ವಧೆ ಮಾಡಿದಾ ಸುರೋತ್ತಂಸಾ ತನ್ನ ಪದವ
ನಂಬಲು ಪಾಪಧ್ವಂಸಾ | ಹಾಹಾ |

೧೪೯
ವಂದೇ ಮುಕುಂದ ನಮೊ |
ವಂದೇ ಮುಕುಂದ ನಮೊ |
ವೃಂದಾರ ಕೇಶ ನಮೊ |
ನಂದ ಮೂರುತಿ ಪರಮಾನಂದ ನರಸಿಂಹಾ ಪ
ಬಿಸಿಜಪೀಠನ ವರವ ಪಡೆದು ಮಹಾರಾಜೇಂದ್ರ |
ವಸುಮತಿಗೆ ತಾನೆ ಸ್ವಾಮಿ ಎಂದು ||
ಹಸುಳೆಯನು ಬಾಧಿಸಲು ಮೊರೆಯಿಡಲಾಕ್ಷಣ |
ಮಿಸಣಿಪ ಕಂಭದಿ ಬಂದ ಭಳಿರೆ ನರಸಿಂಹಾ ೧
ರೋಷವನೆ ತಾಳಿ ನಿಟ್ಟುಸುರಗೈಸಿಕೊಳುತಾ |
ಸೂಸಿ ಕಿಡಿಗಳನುದುರೆ ಕುಪ್ಪಳಿಸುತ ಕಮ ||
ಲಾಸನಾದ್ಯರ ಪಾಲಿಸಿದ ನರಸಿಂಹಾ ೨
ಅಜವಾಣಿ ನೆಲೆಯಲ್ಲಿ ವಾಸವಾಗಿದ್ದ ನರ |
ಗಜಪಗೀಯ ಮೊಗನೆ ಆನಂದ ಮಗನೇ ||
ಭಜಿಸುವನು ಗತಿ ಕೊಡುವ ಜನಮೇಜಯ ನೃಪವರದ |
ವಿಜಯವಿಠ್ಠಲ ವರದಾತೀರ ನರಸಿಂಹ ೩

(ಅಃ) ಕಾಮದೇವ
೨೮೭
ವರಗಳನು ಕೊಡುವದು ವಾಸುಕಿಯ ಪ್ರಿಯಾ |
ಕರುಣದಿಂದಲಿ ಒಲಿದು ಕಂಡನಾತುರದಲಿ ಪ
ಇಂದ್ರಸಮಾನ ದೇವತೆಯೆ ರತಿಪತಿಯೇ |
ಇಂದಿರೇಶನ ನಿಜಕುಮಾರ ಮಾರ ||
ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ |
ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ ೧
ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ |
ಮನದಲ್ಲಿ ಪುಟ್ಟಿಸೆ ಚತುರ ಜನರ ||
ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ |
ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ ೨
ತಾರಕಾಸುರನೆಂಬ ಬಹು ದುರುಳತನದಲ್ಲಿ |
ಗಾರುಮಾಡುತಲಿರಲು ಸುರಗಣವನು ||
ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ |
ಧಾರುಣಿಯೊಳಗೆ ಸ್ಕಂದನೆನಿಸಿದೆ ೩
ರುಕ್ಮಿಣಿಯಲಿ ಜನಿಸಿ ಮತ್ಸ್ಯ ಉದರದಲಿ |
ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು ||
ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ |
ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ ೪
ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ |
ಮನೋ ವೈರಾಗ್ಯ ಚಕ್ರಾಭಿಮಾನಿ ||
ಎನಗೊಲಿದ ವಿಜಯವಿಠ್ಠಲರೇಯನಂಘ್ರಿ |
ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ ೫

೩೦೬
ವರದೆ ಸಮಸ್ತ ವರದೆ | ಪರಮ ಭಕುತಿಯಿಂದ ತುತಿ |
ಪರನ ಪೊರದೇ ಪ
ನೋಡಿದಾಕ್ಷಣದಲ್ಲಿ ಅನಂತ ಜನ್ಮದಿಂದ |
ಮಾಡಿದ ಪಾಪಗಳು ಪರಿದವಯ್ಯ |
ಆಡಲೇನು ತೋಯ ಸ್ಪರ್ಶವಾಗಲು | ನಲಿ |
ದಾಡಿದರು ಗೋತ್ರಜರು ಇವನ ಪುಣ್ಯಕ್ಕೆ ಎಣಿಯೇ ೧
ಮಿಂದು ಮನಃಪೂರ್ವಕದಿ ಕೊಂಡಾಡಲು ವಳಗೆ |
ಪೊಂದಿದ ದಾಸವರು ಸುಮ್ಮನಹರೋ |
ವೃಂದಾರಕರ ಬಳಗ ಇವನ ಸಾಧನೆ ಮಾಳ್ಪಾ
ನಂದದಲಿ ಇಪ್ಪನೆ ಅಭಿಮೊಗರಾಗಿ೨
ವರನ ಕೊಡುವೆನೆಂದು ವೈಷ್ಣವ ಮಣಿಯಿಂದ |
ಧರೆಯೊಳಗೆ ಜನಿಸದೆ ಜಗಜ್ಜನನಿ |
ಕರಸಿಕೊಂಡೆ ನೀನು ವರದೆ ವರದೆ ಎಂದು |
ವರವ ಕೊಡು ಎನಗೆ ಸುಜನರು ಮೆಚ್ಚವಂದದಲಿ ೩
ಇದನೆ ಬೇಡಿಕೊಂಬೆ ಇರಳು ಹಗಲು ನೀನೆ |
ಒದಗಿ ಬಿನ್ನಹ ಮಾಡು ನಿನ್ನ ಪತಿಗೆ |
ಮುದದಿಂದ ಹರಿಯಾಪ್ರವಿಷ್ಠಾಪ್ರವಿಷ್ಠ ಕಥೆ |
ತುದಿನಾಲಿಗೆಯಲ್ಲಿ ಬರಲಿ ಬಣ್ಣಿಸುವಂತೆ ೪
ಪಾಂಚಜನ್ಯಾದ್ರಿಯಲ್ಲಿ ಉದುಭವಿಸಿ ತುಂಗೆಯೊಳು |
ಪಂಚನದಿ ಸಂಗಮವೆಂದೆನಿಸಿದೆ |
ಪಂಚವಿಂಶತಿ ನಮ್ಮ ವಿಜಯವಿಠ್ಠಲದೇವ |
ಕಾಂಚನದಂತೆ ಪೊಳೆವ ಮೂರ್ತಿ ಮನದೊಳಗಿರಲಿ೫

೭೦
ವರ್ಣಿಸಲರಿಯೆ ನಿನ್ನ | ವರ್ಣಿಸಲರಿಯೆ ಗು |
ಣಾರ್ಣವ ಹರಿಯೆ ಸೂ | ವರ್ಣ ಗಿರೀಶ ಸು |
ಪರ್ಣ ಗಮನ ರಂಗಾ ಪ
ಮಣಿಮಯ ಮುಕುಟ ಕಾಂ | ಚನದ ಕುಂಡಲ
ಕರ್ಣ | ಫಣಿಯ ಕಸ್ತೂರಿ ನಾಮ |
ಮಿನುಗುವ ಹಸ್ತ ಕಂಕಣ ಬೆರಳುಂಗರ |
ಎಣಿಗಾಣೆ ಕೊರಳ ಮುತ್ತಿನಹಾರ ಕೌಸ್ತುಭ |
ಮಣಿರಿಪುಗಳದಲ್ಲಣ ಕಂಬು ಸೂದರು |
ಶನ ಭುಜಕೀರ್ತಿ ಭೂ | ಷಣವಾದ ಶಿರ ಉರುವ ಒಪ್ಪಲು ಕಿಂ |
ಕಿಣಿ ಕನಕಾಂಬರವ ಪೂಸಿದ ಗಂಧ |
ಪುನುಗು ಜವ್ವಾದಿಯಿಂದೆಸೆವ ಸುರತರುವೆ ೧
ಸುಳಿನಾಭಿ ಉದರ ತ್ರಿವಳಿ
ಕಾಂಚಿದಾಮ ಥಳಿ | ಥಳಿಸುವ ಪದಕ ನ್ಯಾ |
ವಳ ಸರ ಸರಿಗೆ ಪ | ವಳದುಟಿ ಬಾಯ
ತುಂಬಲು ಸೂಸುತಿರೆ ದಂತಾ |
ವಳಿ ದಾಳಿಂಬರದ ಬೀಜ | ಎಳನಗೆ
ಮಾತಾರಗಿಳಿಯಂತೆ ಶೋಭಿಸಿ |
ಹೊಳೆವ ಕಪೋಲ ಸುತ್ತಲು ಬೆಳಗುವ ಕಂಗಳ ನಾಸಕಾಂತಿ |
ಸುಳಿಗುರುಳು ತಿಂಗಳನಂದದಿ ಮೊಗ |
ಚಲುವ ದೇವರ ದೇವ ಸಿರಿ ತಿರುವೆಂಗಳಾ೨
ವರ ಚತುರ್ಭುಜ ಕಟಿ | ಕರ ಅಭಯ ಹಸ್ತ
ಎರಡೇಳು ಲೋಕ ಜಠರದೊಳಡಗಿರೆ |
ಕಿರಿದೊಡೆದರ್ಪಣ | ತೆರದಿಂಮೊಪ್ಪು ಜಾನು
ಕರಿ ಪಲ್ಲಿನಂತೆ ಸುಂದರ ಜಂಘೆ ಗುಲ್ಫ ವಿ |
ಸ್ತರ ಪಾದ ನಖ ಸಾ | ಲ್ಬೆರಳು ಪಾದತಳ ಪರಿ |
ಪರಿ ರೇಖೆಗಳ ಕಾಲಿಂದಿಗೆ |
ಬಿರಿದಿನ ಪೆಂಡೆಗಳ ತೊಡರನಿಟ್ಟು |
ಮೆರೆವ ಪರಮಪುರುಷ ನಿತ್ಯ ಮಂಗಳಾ ೩
ನಮೊ ನಿರಯ ದೂರ ಕಮಲನಾಭನೆ ಉ |
ತ್ತಮ ಜನ ಮನೋರಥ |
ಅಮರೇಶ ಪರಬೊಮ್ಮ |
ರಮೆ ಮನೋವಲ್ಲಭ ಸಮರದೊಳುಳಿಹಿದಾ |
ಗಮ ಸಿದ್ಧಾಂತನೆ ವಿ | ಕ್ರಮದಾನವ ಹರ |
ಅಮಲ ಸುಖಸಾಂದ್ರ ದ್ಯುಮಣಿ
ಕೋಟಿ ಪ್ರಕಾಶಾ | ವೆಂಕಟೇಶಾ |
ಅಮಿತ ಮಹಿಮ ಸರ್ವೇಶಾ | ಅಪ್ರಾಕೃತ |
ಪ್ರಮೆಯಭರಿತನಾದ | ಕುರುವಂಶ ವಿನಾಶಾ ೪
ಭೂಗೋಳದೊಳಗಿದರಾಗಮ ತಿಳಿ | ದುರಗ ಗಿರಿ ಯಾತ್ರಿಗೆ |
ಭೋಗದಾಶೆಯ ಬಿಟ್ಟು | ವೇಗದಿಂದಲಿ ನಿಜ |
ಭಾಗವತರ ಸರಿಯಾಗಿ ಪೂರ್ವದ ಭವ
ರೋಗವ ನೀಗುತ್ತ | ಆಗಲೀಗೆನ್ನದೆ |
ಸಾಗಿ ಬರಲು ಚನ್ನಾಗಿ ಜ್ಞಾನವ ನೀವುತ್ತ ಸಾಕುವಂಥ |
ಯೋಗಿ ನಾರದನ ಪ್ರೀತ ತಿರುಮಲೇಶಾ |
ಶ್ರೀ ಗುರು ವಿಜಯವಿಠ್ಠಲ ಭಕ್ತರ ದಾತಾ೫

(ಋ) ಬ್ರಹ್ಮ
೨೧೭
ವಾಣಿಯರಸ ಪರಮೇಷ್ಠಿ ನಿರುತನಿಷ್ಠಿ
ಮಾಣದೆ ಕೊಡು ಮನಮುಟ್ಟಿ ಪ
ನಾನಾ ನಾಡಿನೊಳು ನೀನೆ ಪಿರಿಯನೆಂದು
ಆನಂದ ಮತಿಯಿಂದ ಗಾನವ ಮಾಡುವೆ ಅ.ಪ.
ಪುರುಷನಾಮಕ ವಿಧಾತ ಹಂಸವರೂಥ
ಸರಸಿಜ ಗರ್ಭ ಶಿವತಾತ
ಪರಮ ಗುರುವೆ ವಿಖ್ಯಾತ ಪೂರ್ವ ಮಾರುತ
ತಾರತಮ್ಯದೊಳುನ್ನತ
ಹರ ಸಿರಿ ದೇವಿಯ ಚರಣ ರಜವನ್ನು
ಪರಮಾಣು ಪ್ರದೇಶ ವರ ಶಬ್ದ ಪಿಡಿದು
ತರುವಾಯ ಬಹುವಿಧ ಪರಿ ಪರಿಯಿಂದಲಿ
ಸ್ಮರಿಸಿಕೊಳ್ಳುತ ಮೈಮರೆವ ಶತಾನಂದ ೧
ಜಗವ ಪುಟ್ಟಿಸುವ ಮಹಾಧೀರ ತತ್ವಶರೀರ
ಮಗುಳೆ ಅನಿರುದ್ಧಕುಮಾರ
ಝಗಿಝಗಿಪ ಮಕುಟಧರ ಜೀವನೋದ್ಧಾರ
ನಿಗಭಿಮಾನಿ ಚತುರ-ಮೊಗನೆ ಪ್ರಬಲ ಅಹಿಗರುಡಾದ್ಯರಿಗೆಲ್ಲ
ಮಿಗಿಲಾಗಿಪ್ಪನೆ ಅಗಣಿತ ವಾಕ್ಯನೆ
ಹಗಲಿರುಳು ಮನಸಿಗೆ ಸುಖವಾಗುವ
ಬಗೆ ಕರುಣಿಸು ನಮ್ಹಗೆಗಳ ಕಳೆದು ೨
ವಾರಿಜಾಸನ ಲೋಕೇಶ ಭಕುತಿವಿಲಾಸ
ಚಾರುಸತ್ಯ ಲೋಕಾಧೀಶ
ಸಾರಹೃದಯ ವಿಶೇಷ ಮಹಿಮನೆ ದೋಷ
ದೂರ ನಿರ್ಮಲ ಪ್ರಕಾಶ
ಧಾರುಣಿಯೊಳಗವತಾರ ಮಾಡದ ದೇವ
ಸಾರಿದೆ ನಿನ್ನಂಘ್ರಿವಾರಿಜಯುಗಳವ
ಸಾರಿಸಾರಿ ವಿಜಯವಿಠ್ಠಲನ್ನ
ಆರಾಧಿಪುದಕೆ ಚಾರುಮತಿಯ ಕೊಡು ೩

ವಾಣಿ ನೀ ತೋರೇ ವಾರಿಜನಾಭನ್ನ ಮಹಾಲಾಭನ್ನ

೨೫೭
ವಾಣೀ ನೀ ತೋರೆ ವಾರಿಜನಾಭನ, ಮಹಾಲಾಭನ್ನ
ನಿತ್ಯ ಸುಲಭನ ಭಾನು ಸನ್ನಿಭನ ಪ
ಕ್ಷೋಣೀಯೊಳಗಣ ಪ್ರಾಣಶ್ರೇಷ್ಠ – ಜಗ
ತ್ರಾಣನ ತೋರಿಸೆ ಭಾನು ಸನ್ನಿಭಳೆ ಅ. ಪ.
ಚೈತನ್ಯರಾಣಿ ಪುಸ್ತಕಪಾಣಿ-ಸುನೀಲವೇಣಿ
ಅತ್ಯಂತ ಮಹಿಮೆ ಗುಣಗುಣಶ್ರೇಣಿ ತ್ರಿಲೋಕ ಜನನಿ
ಸತ್ಯವ ತೋರುತ ನಿತ್ಯೋಪಾದಿಲಿ
ದೈತ್ಯರ ಮರ್ದಿಸಿ ಮುಕ್ತಿಯ ಕೊಡುತಿಹ
ಸತ್ಯ ಸಂಕಲ್ಪಳೆ ನಿತ್ಯದಿ ಪೂಜಿಪೆ
ತ್ವತ್ಪಾದಾಂಬುಜವಿತ್ತು ನೀ ಸಲಹೆ೧
ನಾಲಿಗೆಯಲ್ಲಿ ಬಂದು ನಿಂದು ದಯದಿಂದ ಇಂದು
ಶ್ರೀಲೋಲ ಹರಿಯೆ ದೈವವೆಂದು ಕೊಂಡಾಡೆ ಮುಂದು
ಬೀಳುವ ಭವಣೆಯ ಕಾಲ ಹಿಂಗಿಸಿ ವಿ-
ಶಾಲ ಮತಿಯ ಕೊಟ್ಟು ಆಳುಗಳೊಡನೆ ಸು-
ಶೀಲ ಜ್ಞಾನವಿತ್ತು ಆಲಸ್ಯಮಾಡದೆ
ಶೀಲ ಮುಕ್ತಿಗನುಕೂಲವಾಗುವುದಕ್ಕೆ೨
ಜನ್ಮ ಬಂದಿದೆ ಕಡೆಗೆ ಮಾಡು ದಯದಿಂದ ನೋಡು
ಘನ ಕೀರ್ತಿವಂತೆ ಅಭಯವ ನೀಡು, ನಿನಗಲ್ಲ ಈಡು
ಕನಸಿಲಿ ಮನಸಿಲಿ ಮನಸಿಜನೈಯನ
ನೆನೆಸುವ ಸೌಭಾಗ್ಯವನುದಿನ ಕೊಟ್ಟು
ಘನಪ್ರೇರಣೆಯಿಂದ ವಿಜಯವಿಠ್ಠಲನಂಘ್ರಿ
ವನಜವ ತೋರಿ ಸನ್ಮೋದವನೀಯೆ೩

೨೫೮
ವಾಣೀ ಪರಮ ಕಲ್ಯಾಣಿ – ವಾರಿಜೋದ್ಭವನ
ರಾಣೀ ನಾರೀ ಶಿರೋಮಣಿ ಪ
ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು-
ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಅ. ಪ.
ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ
ಸರಸಿಜದಳ ಸುನೇತ್ರಿ
ಸುರಮುನಿ ನಿಕರ ಸ್ತೋತ್ರಿ – ಶೋಭನಗಾತ್ರಿ
ಕರುಣಾಸಾಗರೆ ಪವಿತ್ರಿ
ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ
ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ-
ಬರಧರೆ ಸುಂದರಿ ಎರಗುವೆ ಎನ್ನನು
ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ ೧
ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ
ಸರ್ವರಿಗೆ ಮಹಾ ಪ್ರೀತೆ
ನಿರ್ವಾಹವಂತೆ ಪತಿವ್ರತೆ ನಿರ್ಮಲ ಚರಿತೆ
ಪೂರ್ವದೇವತೆ ಹರಿಜಾತೆ
ಉರ್ವಿಯೊಳಗೆ ಮದಗರ್ವದ ಮತಿನಾ-
ನೋರ್ವನಲ್ಲದೆ ಮತ್ತೋರ್ವನ ಕಾಣೆನು
ಪೂರ್ವಜನ್ಮದ ಪಾಪ ಪರ್ವತದಂತಿದೆ
ನಿರ್ವಾಹವನುಮಾಡೆ ದೂರ್ವಾಂಕುರದಿ ೨
ನಗೆಮೊಗದ ಜಗದಂಬೆ-ನೀ ಗಂಧಲೇಪಿಸಿ
ನಿಗಮಾಭಿಮಾನಿ ಸುಜ್ಞಾನಿ
ಬಗೆಬಗೆ ವಿದ್ಯಾ ಭಾಸಿನಿ-ಶುಭಲಕ್ಷಣೆ
ಅಗಣಿತ ಫಲದಾಯಿನಿ
ಝಗಝಗಿಸುವ ಕರಯುಗಳ ಭೂಷಣ ಪ –
ನ್ನಗವೇಣಿ ಕುಂಕುಮ ಮೃಗಮದ ವೊಪ್ಪಲು
ಜಗತ್ಪತಿ ಪ್ರದ್ಯುಮ್ನ ವಿಜಯವಿಠ್ಠಲನಮಗಳೆ ಸುಖಾತ್ಮಕೆ ಜಗದಿ ಶುಶ್ರೋಣೆ ೩

೨೩೯
ವಾತನ್ನ ಜಯಾಜಾತನ್ನ ಲೋಕ-
ಪ್ರೀತನ್ನ ಸ್ತುತಿಸಿ ಖ್ಯಾತನ್ನ ಪ
ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ
ಅಸಮ ಸುಂದರ ಮತಿಧಾರ್ಯನ್ನ
ನಿಶಾಚರ ಕುಲದೋಷ ಸೂರ್ಯನ್ನ ಆರಾ
ಧಿಸುವ ಭಕ್ತರ ಸುಕಾರ್ಯನ್ನ ೧
ವಾನರ ಕುಲದೊಳು ಧೈರ್ಯನ್ನ ಮುದ್ದು
ಆನನ ಗೀರ್ವಾಣವರ್ಯನ್ನ
ಆನಂದ ವಿಜ್ಞಾನ ಚರ್ಯನ್ನ ದುಷ್ಟ –
ದಾನವರಳಿದತಿ ವೀರ್ಯನ್ನ ೨
ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ
ದ್ವಿಜಕೇತ ನಂಘ್ರಿಗೆ ಪ್ರೇಮನ್ನ
ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು
ವ್ರಜವ ಸದೆದ ಸಾರ್ವಭೌಮನ್ನ ೩
ಅದ್ವೈತ ಮತ ಕೋಲಾಹ ಲನ್ನ ವೇದ
ಸಿದ್ಧಾಂತ ಶುಭಗುಣ ಶೀಲನ್ನ
ಸದ್ವೈಷ್ಣವರನ್ನು ಪಾಲನ್ನ ಗುರು
ಮಧ್ವಮುನಿ ಗುಣಲೋಲನ್ನ ೪
ಚಾರುಚರಿತ ನಿರ್ದೋಷನ್ನ ಲೋಕ
ಮೂರರೊಳಗೆ ಪ್ರಕಾಶನ್ನ
ಧೀರ ವಿಜಯವಿಠ್ಠಲೇಶನ್ನ ಬಿಡದೆ
ಆರಾಧಿಪ ಭಾರತೀಶನ್ನ ೫

೩೨೨
ವಾದಿರಾಜ ಧೀರ ಯತಿವರ ವಾದದಿ ಬಹು ಶೂರ
ಮೋದತೀರ್ಥರ ಮತವ ಪೊಂದಿದ
ಸಾಧುಗಳನು ಉದ್ಧಾರ ಮಾಡುವ ಪ
ರಂಗ ಮಂಗಳಾಪಾಂಗ ತುಂಗ ವಿಕ್ರಮ ಹರಿಯಾ
ಶೃಂಗೇರಿ ಮಠದ ಧ್ವಜ ಹಾರಿಸಿದ ೧
ಒಡೆಯ ಹಯವಕ್ತ್ರನಿಗೆ ಕಡಲೆ ಹೂರಣವಿತ್ತ
ಕಡಲಶಯನ ಪದಬಿಡದೆ ಆರಾಧಿಸುವ ೨
ಅಜಪದಕರ್ಹ ಋಜುಗಣಪತಿ ಜೀವೋತ್ತಮ
ವಿಜಯವಿಠ್ಠಲದಾಸ ಸುಜನಮಂದಹಾಸ ೩

೪೩೬
ವಾಸುದೇವನ ನೆನೆದು ನೀ ಸುಖಿಯಾಗು ಮನವೆ |
ಈ ಶರೀರದ ಭ್ರಾಂತಿ ಇನ್ಯಾಕೆ ಮನವೆ ಪ
ಕಾಲುಗಳು ಕುಂದಿದವು ಕಣ್ಣದೃಷ್ಟಿ ಹಿಂಗಿದವು |
ಮೇಲೆ ಯೌವನ ಹೋಗಿ ಮುಪ್ಪಾಯಿತು ||
ಕಾಲ ಕರ್ಮಂಗಳು ಒದಗಿದಾಕ್ಷಣದಲಿ |
ಬೀಳುವ ತನುವಿನಾಶೆ ಇನ್ಯಾತಕೆಲೆ ಮರುಳೆ ೧
ಧಾತುಗಳು ಹಿಂಗಿದವು ದಂತಗಳು ಸಡಲಿದವು |
ಕಾಂತೆಯರು ನೋಡಿ ವಾಕರಿಸುವರು ||
ಭ್ರಾಂತಿ ಇನ್ಯಾಕೆ ಬಯಲಾದ ದೇಹಕ್ಕೆ ಇನ್ನು |
ಅಂತರ ಮಾಡದೆ ಹರಿಯ ನೆನೆ ಮನವೆ ೨
ನೀರ ಬೊಬ್ಬುಳಿಯಂತೆ ನಿಜವಲ್ಲ ದೇಹ |
ಧಾರಣಿಯನು ಮೆಚ್ಚಿ ಮರುಳಾಗಿ ಕೆಡದೆ ||
ಶ್ರೀರಮಣ ವಿಜಯವಿಠ್ಠಲರಾಯ |
ಸೋರಿ ಹೋಗುತಿದೆ ಸ್ವರ್ಗ ಸುಮ್ಮನಿರಬೇಡಾ ೩

೧೨೧
ವಿಗ್ರಹವನು ನಿಲಿಸೊ ವೆಂಕಟ ಗಗ- ಪ
ನಾಗ್ರಕ್ಕೆ ಬೆಳೆದು ಗಂಗೆಯ ಪಡೆವ ನಿನ್ನ ಅ.ಪ.
ರನ್ನದ ಮಕುಟ ಸುವರ್ಣ ಕುಂಡಲ ತೇಜ
ಚೆನ್ನ ಗಂಡಸ್ಥಳದಿ ತೂಗಿ ಪೊಳೆವ ನಿನ್ನ೧
ಕೊರಳ ತ್ರಿರೇಖೆಯು ಉರು ಕೌಸ್ತುಭಹಾರ
ಉರದಲ್ಲಿ ಶ್ರೀ ವತ್ಸಧರಿಸಿ ಮೆರೆವ ನಿನ್ನ ೨
ಕುಕ್ಷಿಯೊಳಗೆ ಲಕ್ಷ ಲೋಕವನಡಗಿಸಿ ಅ-
ಪೇಕ್ಷೆಯಿಂ ಸುಜನರ ರಕ್ಷಿಸುವ ನಿನ್ನ೩
ನಖದೊಳನಂತ ಬ್ರಹ್ಮಾಂಡವನಡಗಿಸಿ
ಮಕ್ಕಳಾಟಿಕೆಯಂತೆ ಮರುಳುಮಾಡುವ ನಿನ್ನ೪
ಉತ್ಪತ್ತಿ ಸ್ಥಿತಿ ಲಯ ಕಾರಣಕರ್ತ, ಜ-
ಗತ್ಪತಿ ವಿಜಯವಿಠ್ಠಲ ವೆಂಕಟ ೫

೭೨
ವಿಜಯವಿಠ್ಠಲ ನಾಮ
ಭಜಿಸಿದಾ ಮಾನವಗೆ ಸತತ ಸಂಪದವಕ್ಕು ಪ
ಕಾಯ ಶುಚಿಯಾಗುವದು ಕಠಿನತನ ಪೋಗುವದು
ಆಯು ಹೆಚ್ಚುವುದು ನಿಯೋಗಿ ಯಾಹಾ
ನಾಯಿ ಮೊದಲಾದ ಪ್ರಾರಬ್ಧ ಜನುಮಗಳಿರಲು
ಬಾಯಿಲಿಂದಾಕ್ಷಣ ತೀರಿ ಪೋಪವು ಕೇಳಿ ೧
ದ್ವೇಷಿಗಳು ಎಲ್ಲ ಬಾಂಧವರಾಗಿ ಇಪ್ಪರು
ದ್ವೇಷ ಪುಟ್ಟದು ತನಗೇತರ ಮೇಲೆ
ದೇಶ ಮಧ್ಯದಲಿ ತಾನೆ ಎಲ್ಲಿ ಇದ್ದರೂ
ಕೋಶಾಧಿಪತಿಯಾಗಿ ಸಂಚರಿಸುತಿಪ್ಪರು೨
ಹೀನ ವಿಷಯಂಗಳಿಗೆ ಅವನ ಮನವೆರಗಿದರೆ
ಕಾಣಿಸುವನು ತಾನೆ ಮುಂದೊಲಿದು
ಏನು ಹೇಳಲಿ ಹರಿಯ ಅನುಕಂಪನಾತನಕೆ
ಏಣಿಸಿ ಪೊಗಳಿದರೆ ಕಾಲ ಕಡೆಗಾಣನು ೩
ದೇವಾದಿ ಮುನಿತತಿಯ ಮೊದಲಾದವರು ನೆನೆದು
ಆವಾವ ಸೌಖ್ಯದಲಿ ಇಪ್ಪರದಕೋ
ಭಾವದಲಿ ತಿಳಿದು ಭಕುತಿಯ ಮಾಡಿರೋ ಜನರು
ಕಾವುತಲಿಪ್ಪ ಸರ್ವಾಶ್ರಯನಾಗಿ ಹರಿ೪
ಕಂಡವಗೆ ದೊರಕದು ಈ ನಾಮ ಜಪಿಸಿದರು
ಕಂಡವಗೆ ಬಲು ಸುಲಭ ಭಯವೆಯಿಲ್ಲಾ
ಮಂಡಲವ ಚರಿಸಿ ನಾನಾ ವ್ರತ ಮಾಡದಿರಿ
ಕೊಂಡಾಡು ವಿಜಯವಿಠ್ಠಲನ ಆಸರ ಸೇರಿ೫

೭೩
ವಿಜಯವಿಠ್ಠಲ ವಿಜಯವಿಠ್ಠಲ
ವಿಜಯವಿಠ್ಠಲ ಶ್ರೀ ವಿಜಯವಿಠ್ಠಲ ಪ
ವನಚರ ನಗಧರ ಅವನಿಯ ಉದ್ಧಾರ
ಹನನ ಮಾಡಿದಿಯೊ ಕಾನನ ವೇಗದಿ ಭು-
ವನ ದಾನದ ನೆವನನು ಮಾಡಿ ಗಂಗೆಯ ಹ –
ವಣದಿ ಪಡದೋ ಶ್ರೀ ವಿಜಯವಿಠ್ಠಲಾ ೧
ಛಲದಿಂದ ಕುಲ ಕೋಲಾಹಲ ಮಾಡಿಸಿ ನೀ ತರಿದೆ
ಬಾಲೆಯರ ಬಾಲರ ಬಿಡದೆ
ಸುಲಭದಿ ಕರ್ಣಗೆ ಒಲಿದು ಪೇಳಿದೆ ಆ
ಸುಲಲಿತಾ ಭಾರ್ಗವ ವಿಜಯವಿಠ್ಠಲ೨
ಶತಮಖರಿಪು ಲೋಕಪಿತನೊರವಿನಿಂದಲಿ
ಖತಿ ಸಕಲರಿಗೆ ನೀವು ತರಿದಿರಲು
ಪತಿತಪಾವನ ರಾಮ ಅತಿ ವೇಗ ದನುಜನ
ಹತವ ಮಾಡಿದೆಯೊ ಶ್ರೀ ವಿಜಯವಿಠ್ಠಲ೩
ಬಕಮುಖ ದನುಜರ ಹಕ್ಕಲಗೊಳಿಸಿ ಬಲು
ಯುಕುತಿಯಿಂದಲಿ ಭಕುತರ ಪೊರದೆ
ವಿಕಸಿತ ಕಮಲನಯನ ಕಂಜನಾಭನೆ
ಸಕಲ ಸುರರ ಪಾಲ ವಿಜಯವಿಠ್ಠಲಾ ೪
ರಕ್ಕಸ ಮರ್ದನ ದಿಕ್ಕು ಮೋಹಿಪ ಕೃಷ್ಣ
ರುಕ್ಮಿಣಿ ಪತಿಯಾದಾ ಚಕ್ರಪಾಣಿ
ಉಕ್ಕಿದ ಮಗಧನ ಸೊಕ್ಕು ಮುರಿದು ಕಪಿ
ರೆಕ್ಕ ಆಳ್ವನಿಗೆ ಒಲಿದೆ ವಿಜಯವಿಠ್ಠಲಾ ೫
ರಣದೊಳರ್ಜುನ ಬಾಣ ಧನು ಕೆಳಗಿಡಲಾಗಿ
ಘನವಾದ ವಿಶ್ವರೂಪವ ತೋರಿದೆ
ದಿನಮಣಿ ಕೋಟಿ ಅಧಿಕ ಕಾಂತಿ ನರಹರಿ
ವನಜ ಸಂಭವನಯ್ಯ ವಿಜಯವಿಠ್ಠಲಾ ೬
ವನಿತೆಯರ ವ್ರತ ಭಂಗವ ಮಾಡಿ
ದಾನವರ ಮೋಹಿಸಿದೆಯೊ ಪವನನೊಡಿಯಾ
ಉನುಮತ ಜನ ಕುಲ ಸನುಮತ ಶಾಸ್ತ್ರವ ವ-
ದನದಲಿ ಮೆದ್ದಿಯೊ ವಿಜಯವಿಠ್ಠಲಾ ೭
ರಜೋತಮ ಗುಣವನು ಭುಂಜಿಸುತ
ಕುಜನರ ವ್ರಜ ಭೂಮಿ ನಿಜವಾಗಿ ವ್ಯಾಪಿಸಿರೆ
ಸುಜನಪಾಲ ನೀನು ವದಗಿ ವಾಜಿಯನೇರಿ
ಭಜನಗೈಸಿದ ವೇಗ ವಿಜಯವಿಠ್ಠಲಾ ೮
ಗೋಕುಲದಲಿ ಅನೇಕ ಲೀಲೆಯ ತೋರಿ
ಬೇಕಾದ ವರ ಪುಂಡರೀಕಗಿತ್ತೆ
ಸಾಕಾರ ಗುಣ ಪೂರ್ಣ ವೇಣುಗೋಪಾಲ ವಿ
ವೇಕವ ಕೊಟ್ಟ ಕಾಯನ್ನ ವಿಜಯವಿಠ್ಠಲಾ೯

೪೩೭
ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ |
ಪುಟ್ಟುವದು ಬಿಡಿಸೊ ಎನ್ನವರೊಳಗಿರಿಸೊ ಪ
ಬಲುಕಾಲ ಮಲ-ಮೂತ್ರ ಡೊಳ್ಳಿನೊಳು ಬಿದ್ದು |
ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು ||
ಹಲವು ಮಾತೇನು ಎನಗೆ ಬಿಡದು |
ಸಲಹಬೇಕಯ್ಯಾ ಸಮುದ್ರ ಶಯ್ಯಾ ೧
ಕರ ಪಿಡಿದು ಎತ್ತುವ ಬಿರುದು ಪರಾಕ್ರಮ |
ಮರಳಿ ಮಿಗಿಲೊಂದು ದೇವರಿಗೆ ಉಂಟೆ ||
ಮರೆವು ಮಾಡದೆ ಮಹಾದುರಿತವ ಪರಿ_ |
ಹರಿಸು ಸ್ಮರಣೆಯನ್ನು ಇತ್ತು ಕೀರ್ತನೆ ಪೇಳಿಸೋ೨
ಬಿನ್ನಹ ಲಾಲಿಸು ಚೆನ್ನ ಲಕುಮಿಪತಿ |
ಚೆನ್ನಾಗಿಡು ನಿತ್ಯ ಪ್ರಾಣನಾಥಾ ಅಭಯ ಹಸ್ತಾ ||
ಅನ್ನದಾತಾ ಸಿರಿ ವಿಜಯವಿಠ್ಠಲರೇಯಾ |
ಸನ್ನಿಧಿಯಲ್ಲಿ ಎನ್ನ ಸಂತೋಷಪಡಿಸೊ ೩

೧೯೮
ವಿಠ್ಠಲ ವಿಮಲಶೀಲ ಬಾಲಗೋಪಾಲ
ದಿಟ್ಟ ಮೂರುತಿ ಶ್ರೀಲೋಲ ಪ
ಅಟ್ಟುವ ಖಳರೆದೆ ಕುಟ್ಟಿ ಕೆಡಹಿ ಮತಿ
ಗೊಟ್ಟು ಸಲಹೊ ಜಗಜಟ್ಟಿ ಪಂಢರಿರಾಯ ಅಪ
ಯದುವಂಶೋದ್ಭವ ಕೇಶವ ಹೇ ಏಕಮೇವ
ಮಧುವೈರಿ ಮಹಾವೈಭವ
ಸದಮರಾನಂದ ಸ್ವಭಾವ ಮತ್ಕುಲ ದೈವ
ಹೃದಯಾಬ್ಜ ಇನ ಬಾಂಧವ
ವಿಧಿನದಿಪಿತ ನಾರದ ಮುನಿ ಸನ್ನುತ
ಕದನ ಕರ್ಕಶ ವೈರಿ ಸದಮಲಗಾತುರ
ಪದೆ ಪದೆಗೆ ಸಂಪದವಿಯ ಬಯಸುವ
ಮೃದು ಮನದೊಳು ನಿಲ್ಲು ಪದುಮಿನಿ ವಲ್ಲಭ೧
ತುತಿಪರ ದೇವ ಪ್ರಾರ್ಥಿಪ ನಿತ್ಯ ಪ್ರಭಾವ
ಪತಿತಪಾವನ ಸುರ ಜೀವ
ಅತಿಶಯ ಲೀಲಾಮಾನವ ನರಕಂಠೀರವ
ಚ್ಯುತಿ ಪೂರಾನಾದಿ ಗುರುಗೋವ
ರತಿಪತಿಪಿತ ಶತಕ್ರತು ಸುತ ಸಾರಥಿ
ತುತಿಸುವೆ ಗತಿ ಪಥ ಹಿತವಾಗಿ ತೋರೊ ಮಾ-
ರುತ ಮತ ಶ್ರಿತಜನ ಚತುರರ ಸತತ ಸಂ –
ಗತಿ ಕೊಡು ಮುಕುತಿಗೆ ದಿತಿಸುತ ಮಥನ ೨
ಶರಣು ಶರಣು ಸರ್ವೇಶ ಇಟ್ಟಿಗೆವಾಸ
ದುರುಳರ ಸಂಗ ವಿನಾಶ
ಪರಮ ಪುರುಷ ವಿಲಾಸ ನಿರವಕಾಶ
ವರಪ್ರದ ಪೂರ್ಣಪ್ರಕಾಶ
ಮೊರೆಹೊಕ್ಕೆನೊ ನಿನ್ನ ಚರಣ ಸರಸಿಜವ
ಹರಿಯನ್ನೊಳಗಿಪ್ಪ ಮರಪೆ ಕಳೆದು ನಿನ್ನ
ಸ್ಮರಣೆ ಮಾಡುವಂತೆ ಕರುಣದಿಂದಲಿ ನೋಡುಧೊರೆ ವಿಜಯವಿಠ್ಠಲ ಪುರಂದರಪ್ರಿಯ ೩

೩೪೭
ವಿಠ್ಠಲನ ಪದವನಜ ತುಂಬೆ
ಸೃಷ್ಟಿಯೊಳಗೆ ಎನ್ನ ಬಿಡದೆ ಪೊರೆ ಎಂಬೆ ಪ
ಜ್ಞಾನ ಭಕುತಿ ವೈರಾಗ್ಯದಲಿ ಜಾಣ
ದಾನ ಮಾಡುವರೊಳಗೆ ಪೂತುರೆ ನೀನೆ ನಿಪುಣ
ಮಾನಸದಲಿ ಹರಿಯ ಧ್ಯಾನ ಮಾಡುವ
ಆನಂದಮತಿ ವಿಮಲ ಸರ್ವವಿಧಾನ ೧
ಮಾತುಮಾತಿಗೆ ನೆನೆಸಿದವರ ಭವದ ಮಾಯಾ
ಸೇತುವಿಯ ಕಡಿದು ಸಂತತವಾಗಿ ಸಹಾಯಾ
ಪ್ರೀತಿಯಲಿ ಬಂದು ಶ್ರೀ ಹರಿಯ ಪದ ಸೇವಿಯಾ
ತಾ ತೋರಿ ತಿಳಿಸುವಾ ಪ್ರಿಯನೆನಿಸುವಾ
ಭೂತಳದೊಳು ಗುರು ಪುರಂದರ ರಾಯಾ ೨
ಪಾವನ ಶರೀರ ಎನಗೆ ವಜ್ರ ಪಂಜರಾ
ಕೂವಾದಿ ಮತಹರ ನಂಬಿದವರಾಧಾರ
ಪಾವಮಾನಿಯ ಮತದಲಿಪ್ಪ ಮನೋಹರ
ಶ್ರೀ ವಿಜಯನಗರ ಮಂದಿರದೊಳಗುಳ್ಳ
ಶ್ರೀ ವಿಜಯವಿಠಲನ್ನ ಪೂಜಿಸುವ ಧೀರ ೩

೫೨೫
ವಿಠ್ಠಲನ ಮಂತ್ರ ಜಪಿಸೋ ಎಲೆ ಮನವೆ
ಕುಟಿಲವನು ಕಳೆದು ಬಲು ಕುಶಲತನವೀವದು ಪ
ಆಗಮ ಸಿದ್ಧಾಂತದಲ್ಲಿ ಪೊಳೆವ ಮಂತ್ರ
ಯೋಗಿಗಳ ಮನಕೆ ಬಲು ಸೌಮ್ಯ ಮಂತ್ರ
ಸಾಗರವು ಮಥಿಸಲು ಉದಿಸಿ ಪೊರೆದ ಮಂತ್ರ
ಯೋಗಿಗಳು ನೆನೆದರೆ ಸವಿಯಾದ ಮಂತ್ರ ೧
ಸುಧಾಮಗೆ ವೊಲಿದು ಸೌಭಾಗ್ಯವಿತ್ತ ಮಂತ್ರ
ಕದನದೊಳು ಫಲ್ಗುಣನ ಕಾಯಿದ ಮಂತ್ರ
ಮಧುರಾಮೃತವಾಗಿ ಜಿಹ್ವೆಗೆ ಒಪ್ಪುವ ಮಂತ್ರ
ಯದುಕುಲಾಗ್ರಣಿಯಾದ ವಿಶ್ವಮಂತ್ರ ೨
ಹಾರೈಸಿದವರಿಗೆ ವರವನೀವ ಮಂತ್ರ
ಕಾರುಣ್ಯನಿಧಿ ವಿಜಯವಿಠ್ಠಲರೇಯನ್ನ ಮಂತ್ರ
ಸೇರಿದವರನ್ನ ಬಿಡದೆ ಪೊರೆವ ಮಂತ್ರ ೩

೪೩೮
ವಿರಹ ನಿಲ್ಲದು ಕಾಣೊ ನಿನ್ನ ಕೂಡದೆ |
ಗುರುತ ಮಾಡಿದ ಸೊಗಸು ಮರಿಯದೊ ಗೋಪಾಲ ಪ
ಕಣ್ಣುನೋಟ ತಿರುಹಿ ನೀ ಕೈಯ ಮುದರಿ ವರಹ |
ಹೊನ್ನು ಕಂಭದಲಿ ನಿಂದು ತೋರಿ |
ಭ್ರಮಿಸಿ ಕುನ್ನಿಗೆ ಕಣಿಯನಿಕ್ಕಿ ಹೊಡೆಯೊನಾಗಿ |
ಹೆಣ್ಣು ಭಾವನ ಕರೆದು ಸೂಚನೆ ಮಾಡಿದನು ೧
ಪುಟ್ಟ ಹೆಜ್ಜೆಲೆ ಸಾಗಿ ಮುದ್ದು ಕೊಡಲು ಬಯಸಿ |
ದೃಷ್ಟಿಯಿಂದ ನೋಡಲು ಭ್ರಾಂತಳಾಗಿ |
ಅಟ್ಟ ಅಡಿವೆಯೊಳು ನಡಿವೆ ನಾ ಪೋಗಲು |
ದುಷ್ಟ ನಾದಿನಿ ಕಂಡು ಮಾವಗೆ ಪೇಳಿದಳು ೨
ಇಂದಿರೇಶ ತಾನಾಗಿ ಎದೆ ಮುಟ್ಟಿ ನಿನಗೆ |
ಇಂದಿನ ದಿವಸ ನಾ ಭ್ರಮಿಸಿದ್ದು |
ಒಂದೊಂದು ಬಗೆ ನೆನಿಸಿ ಕಲೆಕಲೆಗಳು ಕೆರಿದ್ಯಾಸೆ |
ಮುಂದೆಗಾಣದೆ ನಡಿಯೆ ಗಂಡಾ ತಲೆದೂಗಿದನು೩
ಬೀದಿಯೊಳಗೆ ನೀನು ಕುದರಿಯ ಕುಣಿಸುತ
ಹಾದು ಪೋಗಲು ನಮ್ಮ ಮನಿಯ ಮುಂದೆ |
ಪಾದಕ್ಕೆ ಕಪ್ಪನೆ ಇಟ್ಟು ತೊಟ್ಟ ಕುಪ್ಪಸ ಬಿಚ್ಚೆ |
ಮದನ ನೋಡಿ ಮನೆಯಲ್ಲರಿಗೆ ಬೀರಿದನು೪
ಪರಮಪುರುಷ ನೀನೆ ನಿನ್ನಂಗ ಸಂಗಕ್ಕೆ |
ಸರಿಗಾಣೆ ಸ್ಮರಿಸೆ ಮನಸು ನಿಲ್ಲದೊ |
ಸುರತ ಕೇಳಿಯ ಜಾಣ ವಿಜಯವಿಠ್ಠಲ ಎನ್ನ |
ಕರೆದು ಮಸಕು ತೆಗೆದು ತರ್ಕೈಸೊ ಚನ್ನಿಗಾ ೫

೧೨೨
ವೆಂಕಟ ಬಾರೋ ರಿಪುಸಂಕಟ ಬಾರೊ
ಕಿಂಕರಿಗೊಲಿದ ನಿಶ್ಶಂಕ ಬಾರೋ ಪ
ಪೊಂದೇರಿನೊಳಗೆ ಭೂಮಿ ಇಂದಿರೆಗೂಡಿ
ಚೆಂದದಿಂದಲೊಪ್ಪುತಿಹ ಇಂದುವದನ
ಮಂದರೋದ್ಧಾರನೆ ಮಹಾನಂದ ಮೂರುತಿ
ವೃಂದಾರಕ ವಂದ್ಯ ಪಾದ ವಂದಿಪನೆಂದು ೧
ಲೌಕೀಕ ವಿಲಕ್ಷಣ ಅನೇಕ ಏಕ
ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ
ಪ್ರಾಕೃತ ರಹಿತಗಾತ್ರ ಲೋಕಪಾವನ
ಶೋಕ ಮೂಲ ನಾಶನ ವಿಶೋಕ ಜನಕ ೨
ಅಂಗ ಅಂಗೀ ಭಾವದಿಂದ ಅಂಗದೊಳಿದ್ದು
ಸಂಗಡ ತಿರುಗುವೊ ನೀಲಾಂಗ ನಿಸ್ಸಂಗ
ಡಿಂಗರಿಗ ಹೃತ್ಕಮಲ ಭೃಂಗ ಜಗದಂತೆ-
ರಂಗ ರಂಗರಾಜ ಸುಖಸಂಗ ಅನಂಗ ೩
ಆಪ್ತಕಾಮ ಅಮೃತಾಂಗ ಗುಪ್ತಮಹಿಮ
ತಪ್ತಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ
ತೃಪ್ತ ತೃಣ ಬೊಮ್ಮಾದಿ ನಿರ್ಲಿಪ್ತವಾಸ
ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲ ೪
ಆಗಮ ನಿಗಮಖಣಿ ಅಗಣಿತ ಬಂಧು
ಅಗನಾಗ ಧಾರಕನೆ ನಾಗ ಭಂಜನ
ಆಗಸದಂಗಾಂಗುಷ್ಟದಿಂದ ಪೆತ್ತನೆ
ಆಗಲೀಗಲೆನ್ನದಲೆ ಸಾಗಿ ಬೇಗದಿ೫
ನಿರ್ದೋಷ ವಸ್ತು ನೀನೆಂದು ನಿರ್ಧಾರ ಮಾಡೆ
ಪೊದ್ದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳು
ಭದ್ರ ಫಲದಾಯಕ ಸಮುದ್ರಶಯನ
ಮಧ್ಯಜೀವಿ ವಂದ್ಯ ಸುಪ್ರಸನ್ನ ಮೋಹನ್ನ ೬
ಜೀವಾಭಿಮಾನಿ ಗಿರೀಶ ದೇವ ದೇವೇಶ
ಜೀವರಾಶಿಗಳ ಸ್ವಾಭಾವ ಪ್ರೇರಕ
ಜೀವನನಾಗಿ ನಮ್ಮ ಕಾವುತಲಿಪ್ಪ ರಾ-
ಜೀವ ನಯನ ವಿಜಯ ವಿಠ್ಠಲ ಪೂರ್ಣ ೭

೧೨೩
ವೆಂಕಟಾಚಲ ನಿಲಯ ಪಿಡಿಯೆನ್ನ ಕೈಯ
ಪಂಕಜಾಲಯ ಸುಪ್ರೀಯ ಪ
ಪಂಕಜಭವ ಅಹಿ ಕಂಕಣನುತ ಪದ-
ಪಂಕಜ ತೋರೊ ಮೀನಾಂಕನ ಜನಕ ಅ.ಪ.
ಪತಿತ ಪಾವನ ಮೋಹನ, ಪಾಲಿಸೊ ಎನ್ನ
ಸತತ ಬಿಡದೆ ನೋಡೆನ್ನ
ಹಿತರಹಿತರಾದವರನ್ನ ಪೊರೆದಳಿದೆ ಘನ್ನ
ನತಜನರಿಗೆ ಪ್ರಸನ್ನ
ಕ್ರತುಭುಜ ದಿತಿಸುತ ತತಿಸಂಗತಿಯಲಿ
ಮಥಿಸಲು ವನಧಿಯ ಅತಿ ಸಮ್ಮತಿಯಲಿ
ಚತುರ ಧರಿಸಿ ಪರ್ವತ ಸುರತತಿಗ-
ಮೃತ ವುಣಿಸಿದ ಶಾಶ್ವತಗತಿನಾಥ ೧
ಸತಿಯ ಕಾಯಿದ ವಿನೋದ ಸಾಮಜವರದ
ಚತುರದಶ ಲೋಕಾಧಿನಾಥ
ಗತಿ ನೀನೆ ಮಹಾಪ್ರಸಾದ ಪರಮಮೋದ
ಅತಿಶಯದಿ ಪೊಳೆವ ಪಾದ
ಶತಪತ್ರವು ಹೃದ್ಗತವಾಗಲಿ ಉ-
ನ್ನತ ಮಹಿಮನೆ ಕೀರುತಿವಂತನೆ ಅ-
ಪ್ರತಿಭಾರತಮಲ್ಲ ಮೂರವತಾರಗೆ
ಅತಿಪ್ರಿಯನೆನಿಪ ಮೂರತಿ ಚತುರದೇವ ೨
ಸ್ಥಿತ ಮನ ಮಾಡೋ ಭವಭಂಗ ಸಂಗ ನಿಸ್ಸಂಗ
ಚ್ಯುತಿ ದೂರ ಶೌರೀ ಕಾಳಿಂಗ-
ಮಥನ- ದುರಿತ ಮಾತಂಗ-ಮರಿಗೆ ಸಿಂಗ
ತುತಿಪೆ ಕರುಣಾಂತರಂಗ
ಕ್ಷಿತಿಯೊಳಗಹಿ ಪರ್ವತನಿವಾಸನೆ
ಖರೆಗೊಳಿಸುವ ದುರ್ಮತಿಯನು ತೊಲಗಿಸಿ
ತ್ವತು ಪಾದದಲಿಡು ಮತಿಯಲ್ಲದೆ ತಿರು –
ಪತಿ ವಿಜಯವಿಠ್ಠಲ ಇತರವನರಿಯೆ ೩

೧೨೬
ವೆಂಕಟಾಚಲ ಪಂಕಜ ಪತಿ |
ಪಂಕಜ ಸಖ ಸಂಕಾಶಾನೇಕಾ |
ಸಂಕಟಳಿದು ನಿಃಶಂಕನ ಮಾಡೊ |
ಅಂಕೆಯವನೆಂದು || ಪ
ಬಂದೆ ಎದುರಿಲಿ ನಿಂದೆ ಸಿರಬಾಗಿ |
ಒಂದೆ ವಂದನೆಯೆಂದೆ ಲೋಕದ ತಂದೆ ಮನಸಿಗೆ |
ತಂದೆ ನಿನಗ ಇಂದೆ ಅಂದದನು |
ಹಿಂದೆ ಯೆಸಗಿದ ದ್ವಂದ್ವ ಪಾಪಕೆ ಒಂದೆ ನಿನ್ನಂಘ್ರಿ |
ಸಂದೇ ನಾರದೆ ಮುಂದೆ ಬಾರದೆ
ಎಂದೆಗೆಂದಿಗೆ ಮುಂದೆ ಜನನಗಳು ೧
ನೋಡು ಎನ್ನ ಕೂಡಾಡು ದಯವನ್ನು |
ಮಾಡು ಮುದದಿಂದಲಾಡು ಮಾತನು | ನೀಡು ಕರುಣವ |
ಜೋಡು ತೊಡುವೆನು ಮೂಢನೆಂದೆನದೆ
ಹೋಡುಗಾರರು ಬೀಡಿನೊಳಗಿದ್ದು |
ಕಾಡುವದು ನಾನಾಡಲೇನು |
ಈಡು ನಿನಗೆಲ್ಲಿ ನಾಡೊಳು ಕಾಣೆ ಮೂಡಲಾದ್ರಿ ನಿಲಯಾ ೨
ಸಾರಿದೆನೊ ಮನಸಾರ ನಿನ್ನಂಘ್ರಿ ಸಾರಾ|
ಸಾರವೆಂಬದಾಸಾರವನು ನೂಕಿ |
ಸಾರ ಹೃದಯರ ಸಾಲೆಲಿರಸೆನ್ನ |
ಸಾರೆಗರೆಯೊ ಕಂಸಾರಿ ಪ್ರತಿದಿನ | ಸಾರಥಿಯಾಗೊ ಸಾರಿಸಾರಿಗೆ |
ಸಾರಬೋಕ್ತಾ ವಿಜಯವಿಠ್ಠಲ ಕೆಲಸಾರದೆ ಸಾರಲಿರೊ ೩

೧೨೪
ವೆಂಕಟಾಚಲನಿಲಯಾ ಎನ್ನ ಒಡೆಯ ಪ
ವೆಂಕಟಾಚಲನಿಲಯಾ ವಿಧಾತೃಸಂತರೊಡೆಯಾ |
ಪಂಕಜಮುಖಿ ರಮಣ ಪಾವನಚರಣಾಅ.ಪ.
ಉದಯವಾಗದ ಮುನ್ನ ಉದರ ಪೋಷಣೆ ಚಿಂತೆ |
ಅದರ ಮೇಲೆ ಧಾನ್ಯ ಧನದ ಚಿಂತೆ ||
ಮದನ ಯೌವನದ ಚಿಂತೆ ಮತ್ತೆ ಸತ್ವದ ಚಿಂತೆ |
ಹೃದಯದಲಿ ನಿಮ್ಮ ಚಿಂತೆಯನು ಮಾಡದಲೆ ಕೆಟ್ಟೆ೧
ಮಂದಗಮನೆಯರಾಶೆ ಮೇದಿನಿ ಆಳುವ ಆಶೆ |
ನಂದನರ ಆಶೆ ನಾನಾ ಆಶೆಯು ||
ಬಂಧುಬಳಗದ ಆಶೆ ಭಾಗ್ಯವುಳ್ಳವನಾಶೆ |
ಒಂದು ದಿನ ನಿಮ್ಮಾಶೆಯನು ಮಾಡದಲೆ ಕೆಟ್ಟಿ ೨
ಎದುರುಯಿಲ್ಲವೆಂಬೊ ಗರ್ವ ಎದೆಯ ಬಿಗುವಿನ ಗರ್ವ |
ವದನನಿಷ್ಠುರ ಗರ್ವ ವಿದ್ಯ ಗರ್ವವು ||
ಉದಧಿಶಯನ ನಮ್ಮ ವಿಜಯವಿಠ್ಠಲರೇಯಾ |
ಮದ ಗರ್ವದಿಂದ ನಿನ್ನ ನೆನಹು ಮಾಡದೆ ಕೆಟ್ಟೆ ೩

೧೨೫
ವೆಂಕಟಾಚಲನೆ ಬಾರೊ ಶಂಕರಾಭರಣ ಶಾಯಿ |
ಕಿಂಕರರಿಗೊಲಿದ ನಿಃಶಂಕ ಬಾರೊ ಪ

ಪೊಂದೇರಿನೊಳಗೆ ಭೂಮಿ ಇಂದಿರೆ ಕೂಡ |
ಚಂದದಿಂದಲೊಪ್ಪುತಿಹ ಇಂದುವದನಾ ||
ಮಂದರೋದ್ಧಾರನೆ ಮಹನಂದ ಮೂರುತಿ |
ವೃಂದಾರಕ ವಂದ್ಯಪಾಲ ವಂದಿಪೆ ನಿಂದು ೧
ಲೌಕಿಕ ವಿಲಕ್ಷಣ ಅನೇಕ ಏಕಾ |
ಸಾಕಾರ ವಿಗ್ರಹ ಪುಣ್ಯಶ್ಲೋಕ ವಿಭುವೆ ||
ಪ್ರಾಕೃತ ರಹಿತಗಾತ್ರ ಲೋಕಪಾವನ |
ಶೋಕ ಮೂಲನಾಶನ ಅಶೋಕ ಜನಕಾ ೨
ಆಗಮ ಮಣಿ ಕಣಿಯೆ ಅಗಣಿತ ಬಂಧು |
ಆಗನಾಗಧಾರಕನೆ ನಾಗ ಭಂಜನಾ ||
ಆಕಾಶ ಗಂಗೆಯ ಅಂಗುಷ್ಟದಿ ಪೆತ್ತನೆ |
ಆಗಲೀಗಲೆನ್ನದಲೆ ಸಾಗಿ ವೇಗದಿ ೩
ಅಂಗ ಅಂಗಿ ಭಾವದಿಂದ ಅಂಗದೊಳಿದ್ದು |
ಸಂಗಡ ತಿರುಗುವ ನೀಲಾಂಗ ನಿಃಸಂಗಾ ||
ಡಿಂಗರಿಗೆ ಹೃತ್ಕಮಲ ಭೃಂಗ ಜಗದಂತ |
ರಂಗ ರಂಗರಾಜ ಸುಖಸಂಗ ನಿಸ್ಸಂಗಾ ೪
ಆಪ್ತಕಾಮಿ ಅಮೃತಾಂಗ ಗುಪ್ತ ಮಹಿಮ |
ತಪ್ತ ಕಾಂಚನ ಸನ್ನಿಭ ವ್ಯಾಪ್ತ ನಿತ್ಯಾ ||
ತೃಪ್ತ ತೃಣ ಬೊಮ್ಮದಿ ನಿರ್ಲಿಪ್ತ ವ್ಯಾಪ್ತಾ |
ಸಪ್ತ ಸಪ್ತ ಲೋಕೇಶ ಅತೃಪ್ತ ಲೀಲಾ ೫
ನಿರ್ದೋಷ ವಸ್ತುವಿನಿಂದ ನಿರ್ಧರ ಮಾಡೆ |
ಪೊಂದಿಪ್ಪವು ನಿನ್ನಲಿ ನಾಲ್ಕು ನಿರ್ದೋಷಂಗಳೂ ||
ಭದ್ರ ಫಲದಾಯಕ ಸಮುದ್ರಶಯನಾ |
ಮಧ್ಯಜೀವಿ ವಂದ್ಯ ಸುಪ್ರಸಿದ್ಧ ಮೋಹನ ೬
ಜೀವಾಭಿಮಾನಿ ಗಿರೀಶ ದೇವ ದೇವೇಶಾ |
ಜೀವ ರಾಶಿಗಳ ಸ್ವಭಾವ ಪ್ರೇರಕಾ ||
ಜೀವನವಾಗಿ ನಮ್ಮನು ಕಾವುತಿಪ್ಪ |
ರಾಜೀವ ನಯನ ವಿಜಯವಿಠ್ಠಲ ಪೂರ್ಣಾ ೭

೧೨೭
ವೆಂಕಟೇಶ ಜಗದೀಶ | ವೆಂಕಟೇಶ ||
ವೆಂಕಟೇಶ ಜಗದೀಶ ಸದರುಶನ |
ಶಂಖಪಾಣಿ ಅಕಳಂಕ ಚರಿತಾ ಪ
ನಭಾಸ್ಥಾನನರಸಿಜನಾಭ ಭಜಕರ ಸು |
ಲಭಾ ವಸುಧಾ ಶ್ರೀ ದುರ್ಗಾವ |
ಲ್ಲಭಾ ಭಸುಮಾಸುರನ ಕೊಂದು ಭಸ್ಮ
ಭೂಷಣನ ಪಾಲಿಸಿದ ಪಾವನಕಾಯ |
ವಿಷವಕ್ಷಜದ ಅಸುರೆಯ ಮಡುಹಿ
ದಾಸರುಗಳ ಕಾಹುವ ಶೇಷಭೂಷಾ ೧
ದತ್ತ ವೈಕುಂಠ ಮಹಿದಾಸ ಹಯಗ್ರೀವ ಹಂಸಾ |
ಸತ್ಯಪತಿ ಸೂನು ತಾಪಸಾ | ಚಿತ್ತಜಪಿತ ದೇವೋತ್ತಮ ಆಗಮಾ |
ಸ್ತೋತ್ರವಿನುತ ಜಗವ ಸುತ್ತಿಪ್ಪ ಸುರಗಂಗೆ | ಪೆತ್ತೆ ಮಂದರಗಿರಿ |
ಪೊತ್ತನೆ ಅಮರರ | ವಿತ್ತ ಸಂಪತ್ತು ಇತ್ತಾ ೨
ಅಜಿತ ನಾರಾಯಣಾ ವಿಷ್ವಕ್ಸೇನ | ಗಜವರದ ಹರಿವಿದ್ಭಾನು |
ಸುಜನಪಾಲ ಪಂಕಜದಳ ಲೋಚನ |
ತ್ರಿಜಗದೈವವೆ ದನುಜಕುಲ ಮದರ್ನ |
ಅಜಕಾನನ ವಾಸ ವಿಜಯವಿಠ್ಠಲ ರವಿತೇಜ ವಿದ್ವದ್ ರಾಜಾ ೩

೧೩೦
ವೆಂಕಟೇಶ ಮಂತ್ರ ಒಂದೇ
ಸಂಕಟ ಪರಿಹರಿಸಿ ಸಂಪದವಿಯ ಕೊಡುವ ಪ
ಬಲನ ಭೂಸುರಹತ ಪೋಗಾಡಿದ ಮಂತ್ರ |
ಬಲಿಯ ಕನಕ ಸ್ತೇಯ ಕಳದ ಮಂತ್ರಾ ||
ಬಲವಂತ ವೃಷಭನ್ನ ಸಂಹರಿಸಿದ ಮಂತ್ರಾ |
ಕಲಿಯುಗದೊಳಗಿದೆ ಸಿದ್ಧ ಮಂತ್ರಾ || ೧
ವೃದ್ಧ ಬ್ರಾಹ್ಮಣಗೆ ಪ್ರಾಯವನು ಕೊಟ್ಟ ಮಂತ್ರಾ |
ಶುದ್ಧನ್ನ ಪರಿಶುದ್ದ ಮಾಳ್ಪ ಮಂತ್ರಾ |
ಉದ್ಧರಿಸಿ ಕಾವ್ಯನ್ಯೊಂಚಿ ? ಮಾಡಿದ ಮಂತ್ರಾ |
ಶ್ರದ್ಧೆಯನು ಪಾಲಿಸುವ ಸುಲಭ ಮಂತ್ರಾ೨
ಗುರು ತಲ್ಪಕನ ದೋಷ ನಾಶನ ಮಾಡಿದ ಮಂತ್ರಾ |
ಹರನ ಸುತ ಬರಲವನ ಪೊರೆದ ಮಂತ್ರಾ |
ಸ್ಮರಿಸಲಾಕ್ಷಣ ಒಮ್ಮೆ ಮುಂದೆ ನಿಲುವ ಮಂತ್ರಾ |
ಅರಸರಿಗೆ ವಲಿದಿಪ್ಪ ಆದಿ ಮಂತ್ರಾ ೩
ಅಜ ಭವಾದಿಗಳಿಗೆ ಪಟ್ಟಗಟ್ಟಿದ ಮಂತ್ರಾ |
ಗಜ ಮೊದಲಾದವರ ಕಾಯ್ದ ಮಂತ್ರಾ |
ರಜ ದೂರವಾಗಿದ್ದ ರಮ್ಯವಾದ ಮಂತ್ರಾ |
ಕುಜನ ಕುಲವನಕೆ ಕುಠಾರ ಮಂತ್ರಾ ೪
ಪ್ರಣವ ಪೂರ್ವಕದಿಂದ ಜಪಿಸಲು ವೊಲಿವ ಮಂತ್ರಾ |
ಅಣು ಮಹದಲೀ ಪರಿಪೂರ್ಣ ಮಂತ್ರಾ |
ಫಣಿಶೈಲ ನಿಲಯ ಸಿರಿ ವಿಜಯವಿಠ್ಠಲನ ಮಂತ್ರಾ |
ಕ್ಷಣ ಕ್ಷಣಕೆ ಬಲ್ಲವರಿಗೆ ಪ್ರಾಣ ಮಂತ್ರಾ ೫

೧೨೮
ವೆಂಕಟೇಶನ ನಂಬಿರೊ ನೀವೆಲ್ಲರೂ | ವೆಂಕಟೇಶನ ನಂಬಿರೋ ||
ವೆಂಕಟೇಶನ ನಂಬಿ | ಮಂಕುಜನರೆ ನಿಮ್ಮ |
ಸಂಕಟ ಪರಿಹರಿಸಿ ತ | ನ್ನಂಕಿತವ ನೀವ ಪ
ಗುಣ ಒಂದು ನೋಡಿದಿಯಾ ಅಜಮಿಳ |
ಗುಣವೇನು ಮಾಡಿದನು |
ಗುಣ ಶಿರೋಮಣಿ ಮ | ರಣ ಬಂದಾಗ ಸ್ಮ |
ರಣೆ ಇತ್ತು ಅವನ ನಿ | ರ್ವಾಣಕ್ಕೆ ಕರಿಸಿದಾ ೧
ಕುಲ ಒಂದು ನೋಡಿದಿಯಾ | ವಿದುರ ತಾನು
ಕುಲದಲ್ಯಾತರವನು |
ಕುಲಶಿಖಾಮಣಿ |
ನಿಳಗೆ ಪೋಗಿ ಕುಡತಿ ಪಾಲಿಗೆ ಅವನಿಗೊಲಿದು ನಿ |
ಶ್ಚಲ ಭಾಗ್ಯವನಿತ್ತ ೨
ಗುಣ ಒಂದು ನೋಡಿದಿಯಾ | ವಾಲ್ಮೀಕಿ |
ಗಣದ ಕೂಟದವನೆ |
ಅಣೋರಣಿ ದೇವ ಕ | ರುಣ ಮಾಡಿ ಅವಗೆ ಚ |
ರಣವನ್ನು ತೋರಿ ಆ | ಕ್ಷಣದಲ್ಲಿ ಸಾಕೀದ ೩
ಪತಿವ್ರತರ ನೋಡಿದಿಯಾ | ಗೋಪಿಯರು
ಪತಿ ಧರ್ಮದಲ್ಲಿ ಇದ್ದರೇ |
ಪತಿತಪಾವನ ಸಂಗತಿಯಲ್ಲಿ ಆ ನಾರಿಯರಿಗೆ |
ಅತಿಶಯವಾದ ಸದ್ಗತಿಯ ಕರುಣಿಸಿದ೪
ಗುಣಿ ಕುಲ ಗಣ ಮಿಕ್ಕಾದ ವ್ರತಂಗಳು |
ದಣಿದು ಮಾಡಲಿಬೇಡಿರೊ |
ಬಣಗುದೈವದ ಗಂಡ ವಿಜಯವಿಠ್ಠಲನ್ನ |
ಮನದೊಳು ನೆನೆದರೆ ನೆನೆಸಿದ ಫಲನೀವಾ ೫

೧೨೯
ವೆಂಕಟೇಶನೆ ಬಲ್ಲ ಪರಮ ಪಾತಕೀಯಾ |
ಕಿನ್ನೇಶ ಮುನಿದು ಬಂದೇನು ಮಾಡುವನು ಪ
ಚಿತ್ತದೊಲ್ಲಭನ ಸಮ್ಮತದಲ್ಲಿ ನಾರಿಯು |
ಅತ್ತವಿತ್ತ ಊರು ಸುತ್ತುತಿರಲು |
ಸುತ್ತಯಿದ್ದ ಬಂಧು ಬಳಗದವರು ಕೂಡಿ |
ಮುತ್ತಿಕೊಂಡು ಅವಳನೇನು ಮಾಡುವರು ೧
ಕದ್ದು ತಂದಾ ಒಡವೆ ರಾಜ್ಯವಾಳುವನಿಗೆ |
ತಿದ್ದುವಾ ಸರಿಪಾಲು ಲಂಚಕೊಟ್ಟು |
ಇದ್ದವನು ಹಗಲಿರಳು ಕದ್ದರೆ ಆ ಊರು |
ಎದ್ದು ಹಿಡಿದವರೆಲ್ಲ ಏನು ಮಾಡುವರು೨
ತೊತ್ತಿನ ಮೇಲೆ ಒಡೆಯನ ದಯವಿರೆ |
ತೊತ್ತು ಗರ್ತಿಗೆ ಅಂಜಿ ನಡಕೊಂಬಳೆ |
ಕರ್ತು ಶ್ರೀ ವಿಜಯವಿಠ್ಠಲ ವೆಂಕಟೇಶನ |
ಚಿತ್ತದಿ ನೀನಿರೆಯನೆವುಂಟೆ೩

೧೩೧
ವೆಂಕಟೇಶಾಯ ನಮೊ ವಿಜಯವಿಠ್ಠಲನೆ ನಮೊ |
ಪಂಕಜಾತ್ಮಕ ಪಶುಪತಿ ಗುರು ನಮಿತ ಪಾದಾ |
ಪಂಕಜವ ಪೊಗುಳವೆನು ಪರಿಪಾಲಿಸೆನ್ನ |
ಕಿಂಕರನ ಕಿಂಕರರಿಗೆ ಕಿಂಕರನೆಂದೆನಿಸೊ ಪ
ಶೌರ್ಯದಲಿ ತತ್ಸರ್ವ ಜನ್ಮದಲಿ ನಾನಾಶ (ಕ)
ಕಾರ್ಯವಾಕಾರ್ಯವನು ತಿಳಿಯಲೊಲ್ಲದ ಕಾಮಾ |
ತೂರ್ಯದಲಿ ಪಾಪಗಳೆ ರಚಿಸಿ | ಬೆಂಬಿಡದದೆ ಬಲು |
ಧೈರ್ಯವಂತನು ನೀನಾಗಿ |
ಧೈರ್ಯವಾಗಿದ್ದಾಗ ಜಡಜೀವ ಜಂತುಗಳು |
ವೀರ್ಯದಲಿ ಪೊಕ್ಕು ದುಃಖಾತಿಶಯದಲಿ |
ದುರ್ಯೋನಿ ಮುಖದಿಂದ ಜನನ ಜನಿತನಾದೆ |
ಮರ್ಯಾದೆಗಳು ಇಲ್ಲದೆ ಹರಿಯೇ ೧
ಕ್ಷಿತಿಯೊಳಗೆ ಬಂದು ಕಾಮ ಕ್ರೋಧ ಸಂಮೋಹ
ಶ್ರುತಿ ವಿಭ್ರಮ ಬುಧ್ಧಿನಾಶ ರಾಗದ್ವೇಷ |
ಪಥದಲಿ ವಿಷಯೇಂದ್ರಿಗಳು
ಆತ್ಮವಶವಾಗಿ ಹಿತದ ಪ್ರಸಾದದಿಂದ |
ಮಿತಿಯಿಲ್ಲದಲೆ ಸರ್ವ ದುಃಖ ಬರಲಿ
ಗತಿ ಅದರಿಂದ ಈ ಸಂಖ್ಯೆಯಿಂದಲಿ |
ಹತವಾಗಿ ಪೋಗಿ ಮರಳೆ ದೇಹವನು |
ತೆತ್ತು ಗತಿ ಪುಣ್ಯವಂತನೈದೆ ೨

ಇಂದಿಗಾ ಇವನ ಮನೆ ತಂದೆ ತಾಯಿಯ ದಿವಸ |
ಇಂದಿಗಾ ಇವನ ಮನೆ ಹತ್ತ ಹತ್ತನೆ ದಿವಸ |
ಇಂದು ಗ್ರಹ ಯಜ್ಞ ಹವ್ಯ ಕವ್ಯ ಜಾವಳ |
ಇಂದಿಗಾ ಮದುವೆ ಮುಂಜಿ |
ಇಂದು ನಿಮ್ಮನೆ ಪ್ರಸ್ತವೆಂದು ಕೇಳುತಾ ಪೋಗಿ |
ಬಂದವರನನ್ನುಸರಿಸೆ ಬಾಗಿಲಾ ಮುಂದೆ ಕುಳಿತು |
ನಂದನರ ಸಹಿತ ಕೆಡ | ತಿಂದು ಕಾಲವ ಕಳೆದು
ನೊಂದೆ | ಬಂದೆನೊ ಕೊನೆಯಲಿ ೩
ಆರಾದರೂ ಬಂದು ಕಾಸು ಕೊಡದಿದ್ದರೆ |
ದೂರುವೆನೊ ನೂರಾರು ಕೇರಿ ಕೇರಿಯ ತಿರಗಿ |
ಸಾರೆ ಅವರಲ್ಲಿದ್ದ ಅವಗುಣಂಗಳ ಎತ್ತೆ |
ಬೀರುವೆನು ಬೀದಿಯೊಳಗೆ |
ವಾರಣದಿಂದಲಿ ಕರೆದು ಆವನಾದರು ಬಂದು |
ಶಾರೆ ಭತ್ತವ ಕೊಡಲು ಕೊಂಡಾಡುವೆ ಕುಲ ಉ |
ದ್ಧಾರಕನು ಇವನೆಂದು ಕಂಡಲ್ಲಿ ಪೊಗಳುತಲಿ |
ಪೋರ ಬುದ್ಧಿಗಳ ಬಿಡದೆ೪
ಪರವಣಿ ಪುಣ್ಯಕಾಲಾ ದಿವಸ ಬಂದರೆ ತಿಳಿದು |
ಪರಮಾರ್ಥವೆಂದರಿದು ಉತ್ತಮರ ಬಾ ಎಂದು |
ಕರೆದು ತುತ್ತನ್ನ ಮೇಲೊಂದು ದಕ್ಷಿಣೆ ಕಾಸು |
ಹರುಷದಿಂದಲಿ ಕೊಡದಲೆ ಪರರ ಹಳಿಯುತ್ತ ಏನೇನು |
ದೊರಕಿದ ಹಣ ಶರಗಿನಲಿ ಮುಡಿ
ಇಟ್ಟುಕೊಂಡು ಮನಿಗೆ ಬಂದು |
ಪರರರಿಯದಂತೆ ಮಂಚದ ಕೆಳಗೆ ಹೂಳಿ ಈ |
ಪರಿಯಿಂದ ದಿನ ಹಾಕಿದೆ೫
ತೊತ್ತು ಓರ್ವೆಯಲ್ಲಿ ಈ ಹೊತ್ತು ಪೋಗಾಡಿಸಿದೆ |
ಉತ್ತಮರ ಬಳಿಯಲಿ ಕುಳಿತು
ಸತ್ಕಥೆಗೆ ಕಿವಿ ಇತ್ತು ಕೇಳದಲೆ ಕೆಲಸಾರೆ ಬೇಸರಿಕೆಯಲಿ |
ಅತ್ತಲಿತ್ತಲು ವ್ಯರ್ಥ ಸುತ್ತಿ ಸುಮ್ಮನೆ ಸುದ್ದಿ ಬರಿಗಂಟುಸಟೆ |
ಮಾತು ಎತ್ತುವನೊ ಅನ್ನಿಗರನ ನ |
ಡತೆ ನುಡಿತಿಯಲ್ಲ ಮತ್ತೆ ಎನ್ನವಗುಣಂಗಳ |
ಎಣಿಕೆ ಮಾಡದಲೆ |
ಉನ್ಮತ್ತದಲಿ ಕೆಟ್ಟೆನಯ್ಯಾ೬
ಆದದ್ದೆಲ್ಲಾಯಿತು ಹಿಂದೆ ಪರಿಯಂತ |
ವೇದೆನೆ ಬಟ್ಟೆನೊ ದುಷ್ಟ ಹಾದಿಯಲಿ ಸಿಗಬಿದ್ದು |
ಈ ದುರಾಚಾರಗಳ ಗಣನೆ ಮಾಡದೆ ಇನ್ನು |
ಕಾದುಕೊ ಕಮಲನಾಭಾ |
ಹೋದಪರಾಧಗಳ ನೋಡದಲೆ ದಯದಿಂದ |
ಆದರಿಸಿ ನಿನ್ನ ದಾಸರ ಸಂಗತಿಯನಿತ್ತು |
ಆದಿ ಪರಮ ಪುರುಷ ವಿಜಯವಿಠ್ಠಲ ನಿನ್ನ |
ಪಾದವನು ಕಾಣಿಸಯ್ಯಾ೭

೧೩೨
ವೆಂಕಟೇಶ್ವರಾ ನಿತ್ಯ ನಿಜಾಲಂಕಾರ ಶರೀರಾ |
ಲಂಕ ಜನರ ಕ | ಳಂಕ ಮತಿದೂರಾ ಪ
ವಿಭುವೆ ಇಭರಾಜಾ ವರದಾ ಸಾರಾ | ನಭರತುನ ತೇಜಾ |
ಅಭಯ ಮೂರುತಿ ಸು | ಲಭ ದಾಯಕ |
ವಿಬುಧವಂದಿತ ಸರ್ವಾ | ಶುಭಗುಣಶೀಲಾ ೧
ಹೂವ್ವಿನಂಗಿಯ ತೊಟ್ಟು ಮೆರೆವಾ ಶ್ರೀವರ ಗಿರಿಯಾ |
ಭಾವಕ್ಕೆ ಬಿಗಿದಪ್ಪಿ ತಾ ವೊಪ್ಪುತಿಹ |
ಲೋಕ ಪಾವನ ಸ್ವತಂತ್ರ ಗೋವುಗಳ ಕಾಯ್ದಾ೨
ವರಪರ್ವತ ವಾಸಾ ವಾಸುದೇವಾ |
ಶರಣರ ಪರಿತೋಷ ಪರಮ
ಮಂಗಳವೀವ ವಿಜಯವಿಠ್ಠಲರೇಯಾ |
ಗರುವ ದೇವರ ದೇವ ಜ್ಞಾನಾನಂದ ಪರಿಪೂರ್ಣ ೩

೩೦೦
ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ
ಕಾಣದೆ ನಿಲ್ಲಲಾರೆನೆ ಪ
ಕಾಣುತ ಭಕುತರ ಕರುಣದಿ ಸಲಹುವ
ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ಅ.ಪ.
ಬಂದೆನೆ ಬಹಳ ದೂರದಿ ಭವಸಾಗರ ತರಣಿ
ನಿಂದೆನೆ ನಿನ್ನ ತೀರದಿ
ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ
ಮಂದಗಮನೆ ಎನ್ನ ಮುಂದಕ್ಕೆ ಕರೆಯೆ ೧
ಶರಣಾಗತರನು ಪೊರೆವುದು ಇದು ನಿನ್ನ ಬಿರುದು
ಕರುಣವಿಂದೆನ್ನ ಕರೆವುದು
ಸ್ಮರಣೆ ಮಾತ್ರದಿ ಭವ ತಾಪವ ಹರಿಸುವ
ಸ್ಮರನಪಿತನ ಮುರಹರನ ಕರುಣದಿ ೨
ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ
ಕುಜನರ ಸಂಗದೂರಳೆ
ನಿಜ ಪದವಿಯನಿತ್ತು ಸಲಹುವ ನಮ್ಮ
ವಿಜಯವಿಠ್ಠಲ ನಿಜಪದ ತೋರಿಸೆ ೩

೪೩೯
ವೇಣು ಗೋಪಾಲವಿಠ್ಠಲರೇಯ ನಿನ್ನ ಪದ
ರೇಣು ನಂಬಿದ ಮಾನವ
ಏನು ಅರಿಯದಲಿಪ್ಪ ನೀನೊಲಿದು ಕರುಣದಲಿ
ಜ್ಞಾನ ಭಕುತಿಯ ಕೊಡುವುದು ಸ್ವಾಮಿ ಪ
ಪರದೈವ ನೀನೆಂದು ಮೂಢಮತಿಯಾದವನು |
ಪರಿಪೂರ್ಣವಾಗಿ ನಿರುತ |
ನೆರೆ ನಂಬಿದೆನು ನಾನಾ ಪ್ರಕಾರದಲಿ
ಸ್ಮರಣೆ ಮಾಡುತ ಮನದಲಿ |
ತರತಮ್ಯ ಭಾವದಲಿ ಮಾರ್ಗವನೆ ತೋರಿ ವಿ
ಸ್ತರ ಮಾಡು ಇವನ ಕೀರ್ತಿ
ಕರುಣಾಕರನೆ ನಿನ್ನ ಮೊರೆಹೊಕ್ಕ ಶರಣನ್ನ
ಕರಪಿಡಿದು ಪಾಲಿಸುವುದು ಸ್ವಾಮಿ೧
ಲೌಕಿಕವೆಲ್ಲಿನಗೆ ವೈದಿಕವೆಂದೆನಿಸಿ |
ಸಾಕುವುದು ಸಾಕಾರನೆ
ನೂಕು ದುರಳದಿಂದ ಬಂದ ವಿಪತ್ತುಗಳ
ತಾಕಗೊಡದಂತೆ ವೇಗ
ಬೇಕು ಬೇಕೆಂದೆನುತ ಪೊಗಳುವವನಿಗೆ ಶುಭ |
ವಾಕು ನೇಮಿಪುದು ಸತತ
ನಾಕಜನ ಬಲವಾಗಿ ರಕ್ಷಿಸಲಿ ಸುರತರುವೆ
ಶ್ರೀ ಕಾಂತ ನಿನ್ನಿಂದಲಿ ಸ್ವಾಮಿ ೨
ಓರ್ವನ ಪೆಸರುಗೊಂಡು ಪೇಳಲೇತಕೆ ಇನ್ನು |
ಸರ್ವರನು ಈ ವಿಧದಲಿ |
ಊರ್ವಿಯೊಳಗೆ ಇಟ್ಟು ಉದ್ಧರಿಸಿ ಉರುಕಾಲ
ನಿವ್ರ್ಯಾಜದವನ ಮಾಡಿ
ಸರ್ವರಗೋಸುಗ ತುತಿಸುತಲಿ ಯೋಗ್ಯರಿಗೆ
ಸರ್ವದಾ ಕೃಪೆಮಾಡು ಎಂಬೆ
ಸರ್ವರಾಧಾರ ಸಿರಿ ವಿಜಯವಿಠ್ಠಲ ನಿನ್ನ
ಶರ್ವ ತುತಿಸಿ ಕಾಣ ನಾನೊಬ್ಬ ಪೊಗಳುವನೆ ೩

೪೮೫
ವ್ಯರ್ಥ ಕೆಟ್ಟರು ಯಿಂದು ನರಮನುಜರು
ಸಾರ್ಥಕ ಮಾಡಿಕೊಳ್ಳರು ಶರೀರವುಳ್ಳವರು ಪ
ನಿದ್ರೆಯೊಳಗಿದ್ದು ಪ್ರಪಂಚ ಮರುಳಾಟ ಪರ
ಬುದ್ಧಿಯೊಳು ಮುಳುಗಿ ವಿಷಯವ ಭೋಗಿಸಿ
ಮದ್ದು ತಿಂದಂತೆ ಇದ್ದಾದರು ಉದಯದಲಿ
ಎದ್ದು ಕುಳಿತು ಒಮ್ಮೆ ಹರಿಯಂದು ನುಡಿಯದೆ ೧
ಹರಿವ ಜಲವ ಮಿಂದು ಹರಿಗೆ ಅರ್ಪಿಸುತೇವೆಂದು
ಬರಿದೆ ಬಾರದೆ ಬಿಂದು ಜಲ ತಂದು
ಅರಘಳಿಗೆ ಅಚ್ಯುತಗೆ ಭಕುತಿಯಲಿ ಅಭಿಷೇಕ
ಯರದು ಯಮಬಾಧೆ ಕಳೆಯಲರಿಯದ ಮಂಕು ೨
ಅಡವಿಯಿಂದಲಿ ಒಂದು ತುಳಸಿದಳವನೆ ತಂದು
ತಡಿಯದಲೆ ತಾವರೆದಳನಯನನ
ಅಡಿಗಡಿಗೆ ಏರಿಸಿ ಕರವ ಮುಗಿದು ಮುಕುತಿ
ಪಡಿಯಲೊಲ್ಲದ ಪರಮ ಪಾಪಿಷ್ಟ ಜನರಯ್ಯಾ೩
ಪತ್ರ ಫಲ ಪುಷ್ಪ ತೋಯ ಮುಂದಿರಿಸಿ ನೀಲ
ಗಾತ್ರಗೆ ನೈವೇದ್ಯವೆಂದು ಬಗೆದು
ಸ್ತೋತ್ರವನೆ ಮಾಡಿ ಪ್ರದಕ್ಷಿಣೆ ನಮಸ್ಕಾರ
ನಿತ್ಯ ಒಂದೊಂದು ಮಾಡದೆ ಕರ್ಮಿಗಳು೪
ಇಂದಿನ ಹಮ್ಮು ನಾಳಿಗೆಯಿಲ್ಲ ಈ ದೇಹ
ಇಂದು ಬಂದದೆ ನಾಳೆ ಬರಲರಿಯದೂ
ಸಿಂಧುಶಯನ ನಮ್ಮ ವಿಜಯವಿಠ್ಠಲನ ಮನ
ಬಂದಾಗ ನೆನೆದು ಭವವನದಿ ಉತ್ತರಿಸದೆ ೫

೭೧
ವ್ಯಾಪಾರ ಉದ್ಯೋಗವನು ಮಾಡುವೆ |
ಭೂಪಾಶದೊಳಗೆ ಎಲ್ಲರಿಗೆ ಬಲ್ಲಿದನಾಗಿ ಪ
ಮುರಾರಿ ನಾಮವೆಂಬೊ ಮುಂಡಾಸವನೆ ಸುತ್ತಿ |
ಅರವಿಂದನಾಭವೆಂಬೊ ಅಂಗಿಯ ತೊಟ್ಟು ||
ನರಹರಿನಾಮವೆಂಬೊ ನಡುಕಟ್ಟನೆ ಸುತ್ತಿ |
ಕರುಣಾಸಾಗರನೆಂಬೊ ಕಠಾರಿಯನು ಸಿಕ್ಕಿಸಿ ೧
ಕಮಲನಾಭವೆಂಬೊ ಕಮಲದಾನಿ ಪಿಡಿದು |
ತಿಮಿರದೋಷವೆಂಬೊ ಪಾಯಿಪೋಸು ಮೆಟ್ಟಿ ||
ಶಮೆದಮೆಯೆಂಬೊ ಪರಿಚಾರಕರ ಒಡಗೊಂಡು
ಗಮಿಸಿದ್ದೆನೊ ಹರಿದಾಸರಿದ್ದ ಚಾವಡಿಗೆ ೨
ಪೋಗಿ ನಮಸ್ಕಾರವೆಂದು ತಲೆಬಾಗಿ ನಿಲ್ಲಲು |
ಭಾಗವತರು ಕರೆದು ಇಂಬನಿತ್ತು ||
ಯೋಗಕ್ಷೇಮವೆಲ್ಲ ವಿಚಾರಿಸಿ ಪ್ರೀತಿಯಲಿ |
ಈಗಳೆ ಕುಳಿತ ಅಚ್ಯುತನ ತೋರಿದರು ೩

ಕಂಡು ಕರವನು ಮುಗಿಯೆ ಕರುಣಾಸಾಗರನೆಂಬೊ |
ಮಂಡಲಾಧಿಪನು ಕರೆದು ಮನ್ನಿಸಿ ||
ಗಂಡುಗಲಿಯಾಗೆಂದು ಸಂಚುಗಾರಿಕೆ ತುಲಸಿ |
ದಂಡೆ ಕೊರಳಿಗೆ ಹಾಕಿ ದಾಸರೊಳಗಿರಿಸಿದನು ೪
ಘನವಾದ ಉದ್ಯೋಗ ದೊರಕಿತು ನನಗಿನ್ನು |
ಅನುಮಾನವಿಲ್ಲವು ಎಂದೆಂದಿಗೂ ||
ದಿನದಿನಕೆ ಹರಿನಾಮವೆಂಬೊ ಲೆಖ್ಖ-|
ವನು ಬರೆದು ತ್ರಿಲೋಕದರಸನಿಗೆ ಒಪ್ಪಿಸಿದೆ || ೫
ಬರೆದು ಲೆಖ್ಖವ ನೋಡಿ ದಯಾಪಯೋವಾರಿಧಿ |
ಹರುಷದಿಂದಲಿ ಎನಗೆ ಸಂಬಳಕ್ಕೆ ||
ಬರೆಸಿ ಕೊಟ್ಟನು ಸನದು ಕೇಶವಾದಿಯಂಬೊ |
ವರಹಗಳು ಎಂದಿಗಾದರು ಅಳಿವಿಲ್ಲದೆ || ೬
ಈಸು ದಿನ ಉದ್ಯೋಗ ಹೀನನಾಗಿ ನೊಂದೆ |
ದಾಸರಾ ದಯದಿಂದ ದೊರೆಕಿತಿಂದು ||
ಏಸು ಜನ್ಮದ ಸಂಚಿತ ಕರ್ಮ ಓಡಿಸಿ |ಶ್ರೀಶ ವಿಜಯವಿಠ್ಠಲನಲ್ಲಿ ಬಾಳಿದೆನೊ || ೭

೩೧೭
ವ್ಯಾಸರಾಯರ ಸೇವೆ ಲೇಸಾಗಿ ಮಾಡಲು
ದಾಸನೆಂದೆನಿಸಿಕೊಂಬ ಪ
ಸಾಸಿರನಾಮದ ವಾಸುದೇವನ ಭಕ್ತ
ಕಾಷಾಯ ವಸ್ತ್ರಧರಅ.ಪ
ತಾ ಸಹಗಮನದಿ ಪತಿಸಹ ಪೋಗುವ
ಆ ಸ್ತ್ರೀಯು ಬ್ರಹ್ಮಣ್ಯತೀರ್ಥರಲ್ಲಿಗೆ ಪೋಗೆ
ಶ್ರೀಶ ಬದರಿಯಲ್ಲಿ ಪೇಳಿದ ಮಹಿಮೆಯ
ಆ ಸುಮಹಿಮ ಪ್ರಹ್ಲಾದನ್ನ ಸ್ಮರಿಸುತ್ತ
ಮೋಸ ಬರುವುದೆಂದಾಲೋಚನೆ ಇಲ್ಲದೆ
ಆ ಸತಿ ವಂದಿಸೆ ಸುಮಂಗಲ್ಯವನಿತ್ತು
ಆ ಸಮಯದಿ ಮಂತ್ರಾಘ್ರ್ಯಾವನೆ ಕೊಂಡು
ತಾ ಸುಮ್ಮಾನದಿ ಬನ್ನೂರಿಗೆ ಪೋಗ್ಯತಿ
ಯಾ ಸತಿಪತಿಯ ಪ್ರಾಣವನುಳಿಹಿ ರನ್ನ
ತಾ ಸಮೀಪದಿ ಮಠದಲ್ಲಿ ವಾಸಮಾಡಿಸಿ
ಕುಸುಮಾಕ್ಷತೆ ಫಲ ಮಂತ್ರಿಸಿ ಆಕೆಗೆ ಕೊಟ್ಟು
ಆ ಸುಮಂಗಲಿಯಲ್ಲಿ ಪ್ರಹ್ಲಾದ ಪುಟ್ಟಿದ
ಆ ಸಮಯದಿ ಚಿನ್ನದ ಹರಿವಾಣದಲಿ ಶಿಶು
ತಾನು ಬಿಡದೆ ಕಣ್ವ ನದಿಯಲ್ಲೀ
ಶಿಷ್ಯರಿಗೆ ತೊಳಸಿ ತಂದು ಮಠಕೆ ಆಗ
ವಾಸುದೇವನಭಿಷೇಕ ಕ್ಷೀರವನ್ನು
ಆ ಸುರಭಿಯ ಕರೆದಭಿಷೇಕವನೆ ಕೊಂಡ
ಲೇಸಿನಿಂದಲಿ ಮೊಲೆಯುಂಡು ಬೆಳೆದನು
ವಾಸವನುತ ದೇವೇಶನ ಪಾಡುತ
ವಾಸವಾದರು ಮಳೂರಿನಲಿ೧
ಆ ಶಂಕುಕರ್ಣನೇ ಶೇಷಾವೇಶದಲ್ಲಿ
ಶ್ರೀಶನ ಕಂಭದಿ ತೋರಿಸಿದಾತನೆ
ತಾ ಸುಮ್ಮಾನದಿ ನರಸಿಂಹನ ಪೂಜೆಗೆ
ತಾಸು ಬಿಡದೆ ಆಸೆ ತೀರಿಸಿದಾತನೆ
ಈಸು ಮಹಿಮೆಗೆ ವ್ಯಾಸ ನಾಮಕರಣವು
ಆ ಸುಮನೋಯತಿ ಆಶೀರ್ವಾದವಮಾಡೆ
ತಾ ಸುಮ್ಮನಿರದಲೆ ಕೃಷ್ಣನ್ನ ಸ್ಮರಿಸುತ್ತ
ಈ ಶಿಶುಬೆಳೆಯೆ ಆಭರಣದಿ ಶೋಭಿತ
ವೀ ಸುಮತಿಯ ಮಂಗುರುಳಿಗೆ ಮುತ್ತಿನ ಗೊಂಡೆ
ಆ ಸುಮನೋಹರಗಳೆಲೆ ಮಾಗಾಯಿ
ಭೂಸುರ ನಿಕರವ ಮೋಹಿಪ ಬಗೆವಂಟಿ
ಭೂಸುರ ಕರ್ಣಕೆ ಚಳತುಂಬು ಬಾವಲಿ
ನಾಸಿಕಛಂದವು ಪದ್ಮವಿಕಸಿತ ಮುಖನೇತ್ರ
ಆ ಸೂರ್ಯ ಕಾಂತಿಯ ಮುಖ ಫಣೆ ತಿಲಕನ ನೃ
ಕೇಸರಿ ಪ್ರಾಯಗೆ ಹಾರಪದಕವಿಟ್ಟು
ಆ ಸುಕರಗಳಲಿ ಉಂಗುರ ಪೊಳೆಯುತ
ಆ ಸುಕಾಂತಿಯ ಕಡಗ ಸರಪಳಿ ವಂಕಿಯೂ
ಲೇಸು ವಡ್ಯಾಣವ ನಡುವಿಗೆ ಧರಿಸಿ
ಆ ಸಣ್ಣ ಪಾದಕ್ಕೆ ಗೆಜ್ಜೆ ಕಾಲ್ಗಡಗವು
ಈ ಶಿಶುವಿನ ಹರಿ ಆಡಿಸುವಾ ೨
ವರ್ಷವೈದಕೆ ಚೌಲ ಅಕ್ಷರಾಭ್ಯಾಸ
ಆರನೆ ವತ್ಸರ ಉಪನಯನ ಮಾಡಿ
ಧೀರಗೆ ಸಪ್ತ ವರ್ಷಕೆ ತುರ್ಯಾಶ್ರಮ
ಕಾರುಣ್ಯದಿಂದ ಶ್ರೀಪಾದರಾಯರಲ್ಲಿ
ಅರುಹಿಸಲು ವೇದಶಾಸ್ತ್ರ ನಿಗಮಪಾಠ
ಸಾರವ ತರ್ಕತಾಂಡವ ಚಂದ್ರಿಕೆಯ ಮಾಡಿ
ಸೂರಿಶಿಷ್ಯ ವಾದಿರಾಜನ್ನ ಪಡೆದೆಯೋ
ಶೂರಕೇಸರಿಯಂತೆ ವಾದಿದಿಗ್ಗಜಗಳ
ಧಾರಿಣಿಯಲ್ಲಿ ತಲೆ ಎತ್ತದಂತೆ ಮಾಡಿ
ನೂರೆಂಟು ಮಂದಿ ಶೂರವಾದಿಗಳಿಂದ
ಧೀರ ಜಯಪತ್ರಿಕೆ ಕೊಂಡು ವಾರಿಧಿ ಕಟ್ಟಿ
ಮಾರುತಿಯನು ಪ್ರತಿಷ್ಠೆಯ ತಾಮಾಡಿ
ಶ್ರೀ ರುಕ್ಮಿಣಿಪತಿ ಗೋಪಾಲ ಕೃಷ್ಣನ
ಸಾರಸಾಕ್ಷನ ಸೇವೆ ಅನುದಿನವು ಮಾಡಿ
ತೋರಿ ಪುರಂದರ ದಾಸರಿಗಂಕಿತಾ
ಪಾರ ಕುಹುಯೋಗವ ನೂಕಿ ಭೂಷತಿಯನು ಕಾಯ್ದ
ಪಾರ ಮಹಿಮೆ ಫಾಲ್ಗುಣ ಬಹುಳ ಚೌತಿಯು
ಶ್ರೀ ರಮಣನ ಪುರಿಯಾತ್ರೆಗೆ ರಥವೇರಿ
ತೋರಿದ ವರದ ವಿಜಯವಿಠ್ಠಲನಾ ಪಾ
ಸೇರೀದರಿವರು ಆನಂದದಿ * ೩

* ಈ ಕೀರ್ತನೆ ವರದ ವಿಜಯವಿಠಲಾಂಕಿತದಲ್ಲಿ ದಾವಣಗೆರೆಶ್ರೀನಿವಾಸದಾಸಕೃತ ವ್ಯಾಸರಾಜ ಚರಿತೆಯಲ್ಲಿ ಉಪಲಬ್ಧವಿದೆ.

ವ್ಯಾಸರಾಯರ ಸ್ಮರಿಸಿರೊ :

೩೧೬
ವ್ಯಾಸರಾಯರ ಸ್ಮರಿಸಿರೋ
ವ್ಯಾಸರಾಯರ ಸ್ಮರಿಸಿ ಏಸು ಜನ್ಮದ ಪಾಪ
ನಾಶವಾಗುವುದು ನಿಮ್ಮಾಶೆ ಸಿದ್ಧಿಸುವುದು
ಲೇಸಾಗಿ ಸುಖಿಸಿ ಆನಂದ ವೈಕುಂಠದಲಿ
ವಾಸವಾಗುವುದು ನಿಜ ಭಕುತಿಯಲಿ ಬಿಡದೆ ಪ
ಪಿತನಿಂದ ನೊಂದು ರತಿಪಿತನ ಸ್ಮರಿಸುತ
ಪ್ರತಿಬಂಧಕಗಳ ಪ್ರತಿಯಾಗಿ ಬಂದಿರಲು
ಅತಿವೇಗದಿಂದ ಪಾರಂಗತನಾಗಿ
ಬಲು ಮತಿವಂತನಾಗಿ ಮುದದೀ
ಕ್ಷಿತಿಯ ಭಾರವ ವೊಹಿಸಿ ಕೃತಭುಜ ಮುನೀಶ್ವರನ
ಸ್ತುತಿಸುತಲ್ಲಿದ್ದು ಮಿತಿಕಾಲ ಹಿಂಗಳದು
ಸುತಗೆ ರಾಜ್ಯವನಿತ್ತು ಕೃತಕಾರ್ಯನಾಗಿ
ಅಚ್ಯುತನ ವರದಿಂದ ಬಂದು ೧
ಅಲ್ಲಿ ತ್ರಿಣಿನೇತ್ರ ಶ್ರೀ ವಲ್ಲಭನ ಶ್ರೀಪಾದ
ಪಲ್ಲವಾರುಣಿ ಚಿತ್ತದಲ್ಲಿ ಪ್ರತಿದಿವಸದಲಿ
ನಿಲ್ಲಿಸಿ ನಿಗಮಾರ್ಥದಿಂದ ಪೂಜಿಸುತ್ತಿದ್ದ ಬಲ್ಲ ಭಕುತಿಂದ ಸತತ
ಖುಲ್ಲನಲಿ ಪುಟ್ಟಿದ ಪ್ರಲ್ಹಾದ ದೇವನು
ಬಲ್ಲಿದಾನಾಗೆಲ್ಲಿ ಸಂಸಾರನುತ್ತರಿಸಿ
ಎಲ್ಲ ಕಾಲದಿ ಇರುತಿರಲು ನಾರದ
ಮುನಿ ಮೆಲ್ಲನೇ ನಡತಂದನು೨
ಬಂದ ನಾರದಗೆ ಪ್ರಲ್ಹಾದ ದೇವನು ಎರಗಿ
ನಿಂದು ಕಂಗಳ ಮುಗಿದು ತ್ರಾಹಿ ತ್ರಾಹಿ ಎಂದು
ಒಂದೊಂದು ಬಗೆಯಲ್ಲಿ ಕೊಂಡಾಡಿ
ಬೆಸಗೊಂಡು ಇಂದು ನಿಮ್ಮಯಾ ದರುಶನಾ
ಛಂದವಾಯಿತೆನಗೆತ್ತಲಿಂದ ಬಂದಿರಿ ಇತ್ತ
ಬಂದ ವಿಚಾರ ಪೇಳೆಂದು ಬಿನ್ನೈಸಲು
ವೃಂದಾರಕ ಮುನಿ ಕೃಷ್ಣನ ಮಹಿಮೆ
ನಂದದಲಿ ಹಾಹಾ ಎನುತಾ ೩
ವೃಕೋದರನಿಂದ ನೊಂದು ದೇಹವನು ಬಿಡುವಾಗ ಬಾ
ಲ್ಹಕರಾಯನಾಗಿ ಹುಟ್ಟಿದ ಪ್ರಲ್ಹಾದನು
ಉಕುತಿಯಿಂದಲಿ ಪೊಗಳಿ ವರವ ಬೇಡಿದನು
ವೈದಿಕ ಮಾರ್ಗವನ್ನೇ ಧರಿಸಿ
ಉಕುತಿಯನೇ ಸಾಧಿಸಿ ಕಲಿಯೊಳಗೆ ನಿಮ್ಮ ಪೂ
ಜಕನಾಗಿಪ್ಪೆನೆಂದು ತಲೆವಾಗಲು
ಭಕುತಿಗೆ ಮೆಚ್ಚಿಸಲೆ ಅಂದ ಮಾತಿಗೆ
ಇಂದು ಪ್ರಕಟವಾಯಿತು ಧರೆಯೊಳು ೪
ದಿಕ್ಕುಗಳಂ ಮರದು ಧಿಗಿಧಿಗಿನೆ ಚಿಗಿದಾಡುತ್ತ
ಉಕ್ಕಿದವು ಕಣ್ಣಿಂದ ಅಶ್ರು ಜಲಧಾರೆ ತಾ
ಶಕ್ತಿಯೆಂದದಿ ಪೊಳೆವುತಿರಲು
ಮೈಮರೆದು ದೇವಕಿ ನಂದನನ ನೆನೆದು
ನಕ್ಕು ಕಿಲಿಕಿಲಿ ರಾಹಸ್ಯಗಳನುಚ್ಚರಿಸುತಾ
ತಕ್ರ್ಕೈಸಿ ತಿಳುಪಿದನು ಮುಂದಣಾಗಮವೆಲ್ಲ
ಇಕ್ಕೆಲದವಲವರು ಸಾಹ ಕೇಳಲಾ
ವೃತ್ತಾಂತ ಅಕ್ಕಟ ಅದ್ಭುತವೇನೆಂಬೆ ೫
ಬನ್ನೂರು ಗ್ರಾಮದಲಿ ಜನಿಸಿದನು ಭೂಸ್ವರೂಪ
ಮುನ್ನಿಲ್ಲದೇ ಬೆಳೆದು ಮುನಿ ಸುಬ್ರಾಹ್ಮಣ
ರನ್ನು ಪಾಲಿಸುವ ಪರಮಾನಂದವುಳ್ಳ ಬ್ರಹ್ಮಣ್ಯತೀರ್ಥರ ಕರದಿ
ಚೆನ್ನಾಗಿ ಪೋಷಿಸಿಕೊಂಡು ಉಪನೀತವಾಗಿ
ಸನ್ಯಾಸಿ ಪಟ್ಟವನೆ ಧರಿಸಿ ಧರ್ಮದಲಿ ಸ
ತ್ಪುಣ್ಯ ಶ್ರೀಪಾದರಾಯರಲ್ಲಿ
ವಿದ್ಯವನೋದಿ ಧನ್ಯ ಕೀರ್ತಿಯಲಿ ಮೆರೆದಾ ೬
ರಾಯಗದ್ದುಗೆನೇರಿ ಅವನಿಗೆ ಬಂದ ಮಹಾ
ಕುಹುಯೋಗವ ನೂಕಿ ರಾಜ್ಯದೊಳಗೆ ಇದ್ದ
ಮಾಯಿಗಳ ಮರ್ದಿಸಿ ಮುದದಿಂದ
ಸುವರ್ಣ ಛಾಯದಂತೆ ಕಾಂತಿಲೀ
ನ್ಯಾಯಾಮೃತ ತರ್ಕ ತಾಂಡವ ಚಂದ್ರಿಕೆ ಎಂಬ
ಶ್ರೀಯರಸನೊಲಿಸಿ ನಾನಾ ವಿಧದಿ ಪೂಜಿಸಿ
ಸ್ಥಾಯವಾದರು ಪೊಂಪದಿ೭
ಯಂತ್ರೋದ್ಧಾರಕನ ಪ್ರತಿಷ್ಠಿಸಿ ವಿಜಯೀಂದ್ರ
ಸಂತ ವಾದಿರಾಜಗೊಲಿದು ಪುರಂದರ
ಇಂತು ಶಿಷ್ಯರನ್ನ ಪಡೆದು ಉಪದೇಶಿಸಿ
ಮಂತ್ರ ಸಿದ್ಧಿಯನೆ ಕೊಟ್ಟು
ಭ್ರಾಂತಗೊಳಿಸುವ ಮಹಾ ಅನ್ಯಾಯ ಮತವೆಂಬ
ಕಾಂತಾರ ಪಾವಕನೆ ವ್ಯಾಸಾಬ್ಧಿಯನು ಬಿಗಿದು
ಶಾಂತ ನಿಸ್ಸೀಮನೆನಿಸಿ ಯತಿಶಿರೋರನ್ನ
ಚಿಂತಿತಾ ಫಲದಾಯಕ ೮
ಮಧ್ವಮತವೆಂಬ ದುಗ್ಧಾಬ್ಧಿಗೆ ಪೂರ್ಣೇಂದು
ಹೃದ್ವನಜದೊಳಗಿರಿಸಿ ಕೃಷ್ಣನ ಪದಾಂಬುಜವ
ಚಿದ್ವಾತ್ಯದಲಿ ನಿಲಿಸಿ ಕಾವ್ಯದಲಿ ಕೊಂಡಾಡಿ ಸದ್ವೀರ ವೈಷ್ಣವರಿಗೆ
ಪದ್ಧತಿಯನು ಪೇಳಿ ತವಕದಿಂದಲಿ ತಾವು
ಸದ್ವೈಷ್ಣವ ಲೋಕ ಸಿರಿಮರಳೈದಿದರು
ಮಧ್ವವಲ್ಲಭ ನಮ್ಮ ವಿಜಯವಿಠ್ಠಲನ
ಪಾದದ್ವಯವ ಭಜಿಸುವವರೂ ಕೇಳಿ ೯

ವ್ಯಾಸಾಬದರಿನಿವಾಸ . . . . :

೩೧೮
ವ್ಯಾಸಾ ಬದರಿ ನಿವಾಸಾ | ಎನ್ನಯ |
ಕ್ಲೇಶ ನಾಶನಗೈಸು ಮೌನೀಶಾ | ಸಾಸಿರ ಮಹಿಮನೆ |
ದೋಷರಹಿತ ಸುರ ಭೂಸುರ ಪರಿಪಾಲ ಶಾಶ್ವತ ವೇದ ಪ
ಸತ್ಯವತಿ ವರಸೂನು ಭವತಿಮಿರ ಭಾನು |
ಭೃತ್ಯವರ್ಗದ ಸುರಧೇನು |
ಸತ್ಯಮೂರುತಿಯೆ ನೀನು | ಸ್ತುತಿಪೆ ನಾನು ||
ನಿತ್ಯ ನಿನ್ನಂಘ್ರಿಯರೇಣು | ಉತ್ತಮಾಂಗದಲಿ
ಹೊತ್ತು ಹೊತ್ತಿಗೆ ಸೂಸುತ್ತಿರಲೆನಗದು |
ಅತ್ಯಂತ ಸುಖತರ | ಸುತ್ತವ ಸುಳಿಯೆಂದೆತ್ತಿ ಕಡೆಗೆಯಿಡು |
ಎತ್ತ ನೋಡಲು ವ್ಯಾಪುತ ಸದಾಗಮ ೧
ಲೋಕ ವಿಲಕ್ಷಣ ಋಷಿ | ಗುಣವಾರಿ ರಾಸಿ |
ವೈಕುಂಠ ನಗರನಿವಾಸಿ | ನಾಕಾರಿಗಳ ಕುಲದ್ವೇಷಿ ಚಿತ್ರ ಸನ್ಯಾಸಿ |
ಬೇಕೆಂದು ಭಜಿಪೆ ನಿಲಸಿ |
ಜೋಕೆ ಮಾಡುವುದ | ನೇಕ ಪರಿಯಿಂದ |
ಆ ಕುರುವಂಶವ ನಿಕರ ತರಿಸದೆ | ಭೂಕಾಂತರು ನೋಡೆ |
ಸಾಕಾರ ದೇವ ಕೃಪಾಕರ ಮುನಿ ದಿವಾಕರ ಭಾಸಾ೨
ಸ್ಮರಿಸಿದವರ ಮನೋಭೀಷ್ಟ | ವಾಶಿಷ್ಟ ಕೃಷ್ಣ
ನಿರುತ ಎನ್ನಯ ಅರಿಷ್ಟ |
ಪರಿಹರಿಸುವದು ಕಷ್ಟದೊಳಗುತ್ರ‍ಕಷ್ಟ |
ಮೆರೆವ ಉನ್ನತ ವಿಶಿಷ್ಟ |
ಸುರ ನರ ಉರಗ ಕಿನ್ನರ ಗಂಧರ್ವರ |
ಕರಕಮಲಗಳಿಂದ | ವರಪೂಜೆಗೊಂಬ |
ಸಿರಿ ಅರಸನೆ ನಮ್ಮ ವಿಜಯವಿಠ್ಠಲ ಪರಾ |
ಶರಸುತ ಬಲು ವಿಸ್ತರ ಜ್ಞಾನಾಂಬುಧೆ || ೩

೨೭೯
ಶಂಕರನಾರಾಯಣ ಸಲಹೊ ಎನ್ನ |
ಪಂಕಜ ಪಾರ್ವತಿ ಪ್ರಿಯಾ | ಕಿಂಕರನ ಮೊರೆ ಕೇಳು ಪ
ಶಂಖ ಚಕ್ರಪಾಣಿ | ಮೃಗಾಂಕ ಮೌಳಿ ಅಹಿಪರಿ-|
ಯಂಕ ರುಂಡಮಾಲಾ ಶ್ರೀ | ವತ್ಸಾಂಕ ಭುಜಗಭೂಷಣ ವಿಷ್ಟು ೧
ನಂದಿಗಮನ ಗರುಡಾರೂಢಾ | ಅಂದ ಭಸ್ಮಧರ ಕಸ್ತೂರಿ |
ಗಂಧಲೇಪ ಭೂತನಾಥಾ | ಸಿಂಧು ಶಯನ ತ್ರಿಪುರ ವೈರಿ ೨
ಪೀತಾಂಬರಧರ ಕೃತ್ಯವಾಸಾ | ಜಾತರಹಿತ ಜಾಹ್ನವಿಧರ | ವಿ-
ಧಾತ ಜನಕ ತ್ರಿಶೂಲಪಾಣಿ | ವಾತನೋಡಿಯ ಶಿವ ಗೋವಿಂದ ೩
ಕೈಲಾಸವಾಸ ವೈಕುಂಠ | ಲೋಲ ಮಹಾಲಿಂಗ ರಂಗಾ |
ಜ್ವಾಲನೇತ್ರ ಕಮಲನಯನಾ | ಕಾಲಾ ನೀಲವರ್ಣ ಕಪರ್ವಿ ೪
ರಾಜನೊಬ್ಬ ಭೃತ್ಯನೊಬ್ಬ | ಪೂಜ್ಯನೊಬ್ಬ ಮಾಳ್ಪನೊಬ್ಬ |
ಮೂಜ್ಜಗೇಶ ವಿಜಯವಿಠ್ಠಲ | ರಾಜ ತಾತ ಈಶ ಮೊಮ್ಮಗ ೫

ಶಂಭೋ ಸ್ವಯಂಭು ಸರಭದ ನಂಬಿದೆ :

೨೮೦
ಶಂಭೋ ಸ್ವಯಂಭು ಸಂಭವ-ನಂಬಿದೆ ಕಾಯೊ
ಜಂಭಾರಿಸುತ ಅಭವ ಪ
ಅಂಬರ ಪುರಹರ ಸಾಂಬ ತ್ರಿಯಂಬಕ
ಶಂಬಕಾರಿ ರಿಪುಗಂಭೀರ ಕರುಣಿ ಅ. ಪ.
ಭಸಿತ ಭೂಷಿತ ಶರೀರ-ಭಕ್ತರುದ್ಧಾರ
ವಿಷಕಂಠ ದುರಿತಹರ
ಪಶುಪತಿ ಫಣಿಹಾರ-ಪಾವನಕಾರ
ತ್ರಿಶೂಲ ಡಮರುಗಧರ
ನೊಸಲನಯನ ವಿಕಸಿತಾಂಬುಜ ಮುಖ
ಶಶಿಧರ ಮತ್ತರಕ್ಕಸ ಮದ ಮರ್ದನ
ಘಸಣೆಗೊಳಿಪ ತಾಮಸವ ಕಳೆದು ಮಾ-
ನಸದಲಿ ರಂಗನ ಬಿಸಜ ಪಾದವ ತೋರೊ ೧
ರಜತ ಪರ್ವತ ನಿವಾಸ ನಿರ್ಮಲ ಭಾಸ
ಗಜವೈದ್ಯನಾಶ ಗಿರೀಶ
ಸುಜನರ ಮನೋವಿಲಾಸ ವ್ಯೋಮಕೇಶ
ತ್ರಿಜಗದಲ್ಲಣ ಗೌರೀಶ
ಅಜಸುತನಧ್ವರ ಭಜನೆಯ ಕೆಡಸಿದೆ
ಅಜಗರ ಮಂದಿ ಗಜಮುಖ ಜನಕನೆ
ಗಜಗಮನ ಮುನಿ ತನುಜನ ಕಾಯ್ದನೆ
ವಜ್ರಮುನಿ ವಂದಿತ ಭಜಿಸುವೆ ನಿನ್ನ೨
ಮಧರಾಪುರಿ ನಿಲಯ ಮೃತ್ಯುಂಜಯ
ಸದಮಲ ಸುಮನಗೇಯ
ಸದಾ ನಮಿಪರ ಹೃದಯದೊಳಗುಳ್ಳ ಭಯ-
ಸದೆಯುತ್ತ ಕೊಡು ಅಭಯ
ಸದಾಶಿವ ಜಾಹ್ನವಿ ಧರಕೃತ ಮಾರಾ
ನದೀತೀರದಿ ವಾಸವಾಗಿಪ್ಪ ಸೌಂದರ್ಯ
ಮಧುಪುರಿ ವಿಜಯವಿಠ್ಠಲನ ಪದಾಬ್ಜಕೆ
ಮಧುಪನೆನಿಪ ಪಂಚವದನ ಕೈಲಾಸ ೩


ಶರಣು ಗಜಮುಖ ಆಖುವಾಹನ ಶರಣು ಸುರಗಣ ಸೇವಿತ
ಶರಣು ಸಕಲಾಭೀಷ್ಟದಾಯಕ ಶರಣು ವಿಘ್ನ ವಿನಾಯಕ ೧
ಹೇಮಖಚಿತ ಕಿರೀಟ ಕುಂಡಲ ಕಾಮಿತಾ ಫಲದಾಯಕ
ಅಮಿತ ಸೌಲಭ್ಯ ಪ್ರಬಲ ಶಾಸ್ತ್ರೋದ್ಧಾಮ ವಿದ್ಯಾಶರನಿಧೇ ೨
ಪಾಶ ಮೋದಕ ಪರಶುಧರ ಫಣಿಭೂಷ ಪಾರ್ವತಿನಂದನ
ವಾಸವಾರ್ಚಿತ ವಿಜಯವಿಠ್ಠಲನ ದಾಸ ಭೋ ಗಣನಾಯಕ ೩

೧೩೩
ಶರಣು ಗಿರಿಯ ತಿಮ್ಮಾ | ಶರಣು ಪುರುಷೋತ್ತಮಾ |
ಶರಣು ಮಹಾ ಮಹಿಮ | ಶರಣು ಪರಬೊಮ್ಮಾ |
ಪರಿಹರಿಸುವದು ಹಮ್ಮಾ ಪ
ಸ್ಮರ ಕೋಟಿ ಲಾವಣ್ಯ | ನಿರುತ ದೇವ ವರೇಣ್ಯ |
ಕರಿರಾಜನ ಭಂಗ | ಹರಿಸಿದ ಶಿರಿ ರಂಗ |
ಸುರವಿನುತ ವಿಹಂಗ | ತುರಗ ತುರಗ ವದನ |
ಪರಮ ವಾರಿಜ ಸದನ | ಕರ ಮುಗಿವೆನೈಯಾ |
ಕರದ ಮಾತಿಗೆ ಜೀಯಾ | ಭರದಿಂದ ಕೊಡು ಮತಿಯಾ ೧
ಆದಿ ಮೂಲನೆ ನೀನು ಸಾಧುಗಳ ಸುರಧೇನು |
ಪಾದದಲಿ ಪೆಣ್ಣಾ |
ಮೋದದಲಿ ಪೆತ್ತ ಚಿಣ್ಣಾ | ನಾದ ಬಲು ಪಾವನ್ನಾ |
ಭೇದಾರ್ಥ ಜ್ಞಾನ | ಆದರಿಸೆ ಅನುದಿನಾ |
ನೀ ದಯದಲಿ ಕೊಡು | ಈ ದೇಹ ನಿನ್ನ ಬೀಡು |
ಯಾದುದೆ ಇತ್ತ ನೋಡು ೨
ಜಲದೊಳಗಾಡಿದೆ | ಚಲಕೆ ಬೆನ್ನ ನೀಡಿದೆ |
ನೆಲ ಬಂದು ನೆಗಹಿದೆ | ಖಳನನ್ನ ಕೆಡಹಿದೆ |
ಇಳಿಯ ಮೂರಡಿ ಮಾಡಿದೆ | ಕುಲವ ಕೂಡಲಲಿ ಹಾರ |
ತಲೆ ಜಡೆ ಜಾರ ಚೋರ | ಅಳಿದೆ ಮುಪ್ಪುರು ಶೂರಾ |
ವಿಜಯವಿಠ್ಠಲ ಪಾರಾ | ಫಲವೀವೆ ಧರಣೀಧರಾ ೩

೨೬೪
ಶರಣು ಮಾರುತನ ರಾಣಿಗೆ | ಶರಣು ನಿತ್ಯ ಕಲ್ಯಾಣಿಗೆ |
ಶರಣು ಶರಣು ಲೋಕ ಜನನಿಗೆ | ಶರಣು ಮುಂದಣ ವಾಣಿಗೆ ಪ
ಶ್ರದ್ಧೆ ಭಾರತಿ ಭಾಗ್ಯ ಸಂಪನ್ನೆ |
ಪದ್ಮ ಮಂದಿರ ನಂದನೆ |
ಭದ್ರ ಫಲದಾಯಕಳೆ ಕರುಣಾಬ್ಧಿಯೇ ಭಕ್ತರಪ್ರಿಯೇ ೧
ಖಗಪನ್ನಗ ನಗಮಗಳ ಪತಿಯಿಂದ ಮಿಗಿಲೆನಿಪೆ ಶತಗುಣದಲಿ |
ಮೃಗನಾಭಿ ನೊಸಲಲ್ಲಿ ಶೋಭಿಸೆ |
ಮೃಗಕುರುಹ ಸಿರಿಮೊಗದವಳೆ೨
ಇಂದ್ರಸೇನಳೆ ವಿಪ್ರ ಕನ್ನಿಕೆ | ಚಂದ್ರದಿ ಸ್ಥಾನವಾಸಳೆ |
ಇಂದ್ರನುತ ಸಿರಿ ವಿಜಯವಿಠ್ಠಲನ |ವಂದಿಸುವ ದ್ರೌಪದಿದೇವಿ ೩

೨೪೦
ಶರಣು ವಾಯು ತನುಜ ಶರಣು ಭಾಸ್ಕರ ತೇಜ |
ಶರಣು ರಾಜಾಧಿರಾಜ | ಶರಣು ಗೋಸಹಜ |
ಶರಣಾರ ಸುರಭೋಜ ಪ
ಸೂತ್ರನಾಮಕ ದೇವ | ಸ್ತೋತ್ರ ಮಾಳ್ಪರ ಕಾವ |
ಚಿತ್ರ ಮಹಿಮರ ಕಾವ ವಿ | ಚಿತ್ರ ಶರೀರ ಸ |
ತ್ಪಾತ್ರನೆ ಸುಮನಸದಲಿಗರಳ ಹೇಮ |
ಪಾತ್ರಿಯೊಳಗೆ ಸವಿದು ಶ್ರೀಪತಿಯ ಶತ |
ಪತ್ರ ಪಾದವ ಕಾ | ಲತ್ರಯ ನೆನೆಸುವನೆ ೧
ಜ್ಞಾನ ಭಕುತಿ ವೈರಾಗ್ಯ ನೀ ನೀಯೋ
ಇದೆ ಭಾಗ್ಯ ನಾನಾವದೂ ಒಲ್ಲೆ |
ಆ ನಾಮದ ಸೊಲ್ಲೆ ಮೇಣು ಪಾಲಿಪುದು ಮುಖ್ಯ |
ಪ್ರಾಣಪಾವನ ಲೀಲ | ದಾನವರ ಕುಲಕಾಲ |
ಏನೇನು ಮಾಳ್ಪಾಧಿಷ್ಠಾನದಲಿ |
ನೀನೇ ನಾನೆಲ್ಲಿ ಎಣೆಗಾಣೆ೨
ವಂದಿಸುವೆ ಜಗದ್ಗುರುವೆ | ಎಂದು ನಿನ್ನನು ಕರೆವೆ |
ಮುಂದೆ ಈ ಜನ್ಮವು | ಹಿಂದೆ ಮಾಡಿ ನೇಮವು |
ಪೊಂದಿಸು ಮೇಲುಗತಿ | ತಂದೆ ತಾಯಿ ಮಿಕ್ಕ |
ಬಂಧು ಬಳಗವನೇಕ ಅಂದವೆಲ್ಲವು ನಿತ್ಯ |
ವೆಂದೆ ಬಂದೆ ಸತ್ಯ ಕುಂದದೆ ಉದ್ಧರಿಸು ೩
ರಾಮಚಂದ್ರನ ದೂತ | ಸೌಮಿತ್ರಿ ಪ್ರಾಣ | ದಾತ |
ರೋಮ ರೋಮ ಕೋಟಿ ಕಾಮ ಸಂಹಾರನೇ |
ಭೂಮಂಡಲಧರನೆ ಭೀಮಶೈನ |
ಭೀಮ ರಿಪು ಗಂಟಲಗಾಣ | ತಾಮಸ ಜ್ಞಾನವಳಿ |
ನೀ ಮುಂದೆ ಬಂದು ಸುಳಿ | ಶ್ರೀ ಮದಾನಂದತೀರ್ಥ೪
ಶ್ರೀ ಸಪುತ ಕುಜನರ | ಭಾಷ್ಯ ಮುರಿದ ಧೀರ |
ಭಾಸುರ ಕೀರ್ತಿ ಹಾರಾ | ದೋಷರಾಶಿ ದೂರ |
ಹ್ರಾಸವಿಲ್ಲದ ಮಹಿಮ | ಶ್ರೀಶ ವಿಜಯವಿಠ್ಠಲನ್ನ |
ದಾಸರೊಳಧಿಕ ನಿನ್ನ ಲೇಶವಾದರು ಬಿಡೆ |
ನಾ ಸರ್ವಥಾ ಕರೆ | ತೋಷದಲಿಡುವುದೆನ್ನ ೫

೨೬೫
ಶರಣು ಶರಣು ಪ
ಶರಣು ಭಾರತಿದೇವಿಗೆ ಶರಣು ವಾಯುರಮಣಿಗೆ
ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ ಅ. ಪ.
ಶ್ರಧ್ಧೆ ಭಾರತಿ ಭಾಗ್ಯ ಸಂಪನ್ನೆ ಪದ್ಮ ಮಂದಿರ ನಂದನೆ
ಬುದ್ಧಿ ವರದಾಯಕಳೆ ಕರುಣಾಬ್ಧಿಯೆ ಭಕ್ತರ ಪ್ರಿಯಳೆ ೧
ಖಗ ಪನ್ನಗ ಗಿರಿಶರಿಂದಲಿ ಮಿಗಿಲೆನಿಪೆ ಶತಗುಣದಲಿ
ಮೃಗನ ನಾಭಿ ನೊಸಲಿಗೊಪ್ಪುವ ಮೃಗಕಲಾನನೆ ದೇವಿಯೆ೨
ಇಂದ್ರಸೇನಳೆ ವಿಪ್ರಕನ್ನಿಕೆ ಚಂದ್ರಾಧಿಷ್ಠನ ವಾಸಳೆ
ಇಂದ್ರನುತ ಸಿರಿ ವಿಜಯವಿಠ್ಠಲನ ವಂದಿಪ ದ್ರೌಪದಿ ದೇವಿಯೆ೩

೨೮೧
ಶರಣು ಶರಣು ಲಿಂಗಾ | ಶರಣು ಶ್ರೀ ಭಸಿತಾಂಗಾ |
ಶರಣು ಗಗನ ಗಂಗಾಧರ ಗೋರಾಜ ತುರಂಗ |
ಗುರುಕುಲೋತ್ತುಂಗಾ ಪ
ಅಂತರಿಕ್ಷ ಪುರಹರ | ಸಂತರ ಮನೋಹರ |
ಅಂತಕನ ಗೆದ್ದೆ | ದಂತಿ ಚರ್ಮವ ಪೊದ್ದೆ |
ಕಂತು ಮುನಿಯ ಗೆಲಿದೆ ಮಂತ್ರಿವಂದಿತ ಶೀಲ |
ಸಂತತಿಗಳ ಪಾಲ |
ಅಂತರಂಗದಲೆನ್ನ ಗ್ರಂಥಿಯ ಹರಿಸಿ ನಿರಂತರ ಸಂತರಿಸೋ ೧
ಮನ ವೈರಾಗ್ಯದಧಿಪತಿಯೇ |
ಮುನಿದು ದುರ್ವಾಸ ಶುಕ ಯತಿಯೆ |
ವನದೊಳು ರಾಯನ | ವನುತಿಯ ಮಾಡಿದ |
ಘನ ಶೌರ್ಯನ ಶಿವನೆ ||
ಸನಕಾದಿಗಳ ಪರಿಯ | ಅನುದಿನದಲಿ ಗಿರಿಯ |
ತುನುಜೆಯ ಹೃದಯಾಬ್ಜ | ದಿನಕರ ಶಶಿಜೂಟ |
ಫಣಿಭೂಷಣ ಶಂಭೋ ೨
ಅಹಂಕಾರಾತ್ಮನೆ ಶರ್ವ | ಮಹಾಕೇಶ ವಿಷಗ್ರೀವ |
ಬಹುದೂರ ಕೂಟ | ಮಹಿಧರ ನಿವಾಸನೆ |
ಮಹಿಧರ ತೀರದಿ ||
ಮಹಿಮೆಯ ಬೀರುತ್ತ | ರಹಸ್ಯದಲಿ ಮೆರೆವ |
ಶ್ರೀಹರಿ ವಿಜಯವಿಠ್ಠಲ ಸವೋತ್ತಮ | ನಹುದೆಂದು ಧೇನಿಪನೆ೩

೧೩೪
ಶರಣು ಶೇಷಾಚಲ ನಿವಾಸಗೆ | ಶರಣು ವರಹ ತಿಮ್ಮಪ್ಪಗೆ |
ಶರಣು ಅಲಮೇಲುಮಂಗ ರಮಣಗೆ
ಶರಣು ತಿರುವೆಂಗಳೇಶಗೆ ಪ

ಧರಣಿಧರ ಗೋವಿಂದ ಮಾಧವ |
ನರಹರಿ ಮಧುಸೂದನಾ |
ಮುರಹರ ಮುಕುಂದ ಅಚ್ಯುತ |
ಗಿರಿಜನುತ ನಾರಾಯಣಾ ೧
ಕ್ಷೀರ ವಾರಿಧಿಶಯನ ವಾಮನ |
ಮಾರ ಜನಕ ಗೋಪಿ ಜನ |
ಜಾರ ನವನೀತ |
ಚೋರ ರಿಪು ಸಂಹಾರ ಹರಿ ದಾಮೋದರ ೨
ಗರುಡಗಮನನೆ ಗರಳ ತಲ್ಪನೆ |
ಕರುಣಾಳುಗಳ ಒಡೆಯನೆ |
ಉರಗ ಗಿರಿ ಸಿರಿ ವಿಜಯವಿಠ್ಠಲನ |
ಚರಣ ಕಮಲಕೆ ನಮೋ ನಮೋ ೩

೭೪
ಶರಣು ಶ್ರೀ ವೈಕುಂಠನಾಮಕ ಶರಣು ಶ್ರೀ ಪುರುಷೋತ್ತಮ
ಶರಣೂ ಶ್ರೀಧರ ಗರುಡವಾಹನ ಶರಣು ವೇಂಕಟನಾಯಕ ಪ
ಪರಮಪದ ಗೋವಿಂದ ಮಾಧವ
ಪದುಮಯನಾಭ ಜನಾದರ್ನ
ಧರಣಿಧರ ಕರಿವರದ ವಾಮನ ವೈರಿಹರ ಬಲಿಭಂಜನ ೧
ಜಲಜನೇತ್ರ ಮುಕುಂದ ಮುರಹರ ಜ್ವಲಿತ ಚಕ್ರಗದಾಧರ
ಜಲಧಿಶಯನ ಉಪೇಂದ್ರ ಅಚ್ಯುತ ಶೈಲಧರ ನಾರಾಯಣ ೨
ಆದಿಯೋಗಿ ಮುನೀಂದ್ರ ವಂದಿತ ನಿಖಿಳ ಸುರಗಣ ಸೇವಿತ
ವೇದವೇದ್ಯ ವಿರಿಂಚಿ ಸನ್ನುತ ವಿಜಯವಿಠ್ಠಲ ನಮೋ ನಮೋ೩

ಶರಣು ಶ್ರೀ ವ್ಯಾಸಮುನಿ ಚರಣಾಬ್ಜ ಭೃಂಗ ಜಯ :

೩೪೮
ಶರಣು ಶ್ರೀ ವ್ಯಾಸಮುನಿ ಚರಣಾಬ್ಜ್ಬ ಭೃಂಗ ಜಯ
ಶರಣು ಶ್ರೀ ಸುಜ್ಞಾನ ಭಕುತಿ ವೈರಾಗ್ಯಪರನೆ ಜಯ
ಶರಣು ದಾಸೋತ್ತಮರ ಮಣಿಯ ನಿನಗ್ಯಾರೆಣಿಯೆ
ಗುರು ಪುರಂದರದಾಸರೆ ನಿಮಗೆ ಪ
ಪಾಕಶಾಸನಪುರದ ಚಿನಿವಾರ ವರದಪ್ಪ
ನಾ ಕುಮಾರನಾಗಿ ಜನಿಸಿ ಸಂಸಾರದೊಳು
ನೇಕ ಬಗೆಯಿಂದ ವಿಷಯಾನಂತೆ
ಸಂಚರಿಸಿ ಲೌಕಿಕವನ್ನೆ ತೊರೆದು
ಈ ಕಲಿಯುಗದಲ್ಲಿ ತುಂಗಾತೀರ ಪಂಪಾ
ರಾಕಾಬ್ಜನಂತೆ ಪೊಳೆವ ನಿಧಿಗೆ ಬಂದು ನಿ
ರಾಕರಿಸಿ ದುಸ್ಸಂಗ ವೈಷ್ಣವರಾಗಿ ಪತಿಕರಿಸಿ ಹರಿಭಕುತಿಯಾ ೧
ಕಾಮಕ್ರೋಧ ಲೋಭ ಮದ ಮತ್ಸರ ಡಂಭ
ಈ ಮರಿಯಾದಿಗಳ ಮರ್ಮವನೆ ಕಡಿದು ನಿ
ಷ್ಕಾಮದಲಿ ಸಿರಿ ರಂಗನಾಮವನ
ಕೈಕೊಂಡು ಆ ಮಹಾ ರಚನೆಯಲ್ಲಿ
ಸೀಮೆಯೊಳು ಪ್ರಾಕೃತದ ಗೀತೆಯಲಿ ಕೊಂಡಾಡಿ
ತಾಮರಸ ಸದೆ ಬಡಿದು ಮಧ್ವಸಿದ್ಧಾಂತ ಲ
ಲಾಮದಾ ಬಿರುದೆತ್ತಿ ಸಾರಿ ಡಂಗುರ
ಹುಯಿಸಿ ಕಾವನೈಯನ ಕುಣಿಸಿದ ೨
ಶುದ್ಧ ಭಕುತಿಯಿಂದ ಸಿರಿ ವಿಠ್ಠಲನ್ನ ಮೃದು
ಪದ್ಮಗಂಧವನು ಮಧುಪನಂತೆ ಸೇವಿಸುತ್ತ
ತದ್ಧಿಮಿ ಧಿಮಿಕೆಂದು ಕುಣಿಸಿ ಕುಣಿದಾಡುತ್ತ
ಬುದ್ಧಿ ಪೂರ್ವಕದಿಂದಲಿ
ಶುದ್ಧ ಮಂದರನೆಲ್ಲ ಎಂದೆಂದಿಗೂ ಬಿಡದೆ
ಪೊದ್ದರ್ದ ಪಾಪಗಳು ತಿರುಗಗೊಡದಲೆ ಕಾಲಿ
ಲೊದ್ದು ಕಡಿಗೆ ನೂಕಿ ಸುಜ್ಞಾನ
ಮಾರ್ಗದ ಪದ್ಧತಿಯ ಸ್ಥಿತಿ ಪೇಳಿದ ೩
ವರದಪ್ಪನೇ ಸೋಮ ಗುರುರಾಯ ದಿನಕರನು
ಗುರು ಮಧ್ವಪತಿಯೆ ಭೃಗು ಅಭಿನವನೆ ಜೀವ
ವರತನಯ ನಾಲ್ವರನು ಪಡೆದು
ಉಪದೇಶಿಸಿ ಪರಮ ಜ್ಞಾನಿಗಳ ಮಾಡಿ
ಶರಧಿ ತೆರೆಯಂತೆ ಹರಿಗುಣಗಳನ್ನು ಪೊಗಳುತಿಹ
ತರಳರನು ನೋಡಿ ಗುರು ವ್ಯಾಸಮುನಿರಾಯರಿಗೆ
ಹಿರಿದಾಗಿ ಮನ ಉಬ್ಬಿ ಎರಗಿದಂತಃ
ಕರಣ ಚರಿತೆಯಲಿ ನಲಿದಾಡಿದ ೪
ಫೃತದ ಬಿಂದಿಗೆ ತಂದ ಅತಿಥಿಯ ವೋಗರನುಂಡ
ಸತಿಯಳೆಂದಾ ನುಡಿಗೆ ಚತುರ ಭಾಗ್ಯವನಿತ್ತ
ಪಥದಲ್ಲಿ ತಾ ಕಾಯ್ದು ಪಥವ ತಪ್ಪಿದರೆ
ಹಿತನಾಗಿ ದೃಢನೋಡಿದ
ಕ್ಷಿತಪ ಶೋಧಿಸೆ ಅಪರಿಮಿತವಾಗಿ ಉಣ್ಣಿಸಿದ
ಯತಿಯ ಪಂಕ್ತಿಗೆ ಭಾಗೀರಥಿ ನದಿಯ ತರಸಿದ
ಸುತನಾಗಿ ನೀರು ನಿಶಿತದಲಿ ತಂದ ಅ
ಪ್ರತಿ ದೈವತಾ ಕಿಂಕರ ೫
ದುರ್ಜನರ ಮಸ್ತಕಾದ್ರಿಗೆ ವಜ್ರ ಪ್ರಹರವಿದು
ಸಜ್ಜನರ ದಿವ್ಯ ಚರಣಾಬ್ಜಕ್ಕೆ ಭೃಂಗವಿದು
ನಿರ್ಜರರ ಮೆಚ್ಚು ಮೂರ್ಜಗದೊಳಗೆ ಬಲು
ಹೆಚ್ಚು ಲಜ್ಜೆಯನು ತೊರೆದು ನಿತ್ಯ
ಹೆಜ್ಚ್ಚಿ ಹೆಜ್ಚಿಗೆ ಬಿಡದೆ ದಾಸರ ಕರುಣವೆಂಬ
ವಜ್ರ ಕವಚವ ತೊಟ್ಟು ನುಡಿದವನ ನುಡಿ ಸತ್ಯ
ಅರ್ಜುನಾಗ್ರಹ ಒಲಿದು ಸಾಧಿಸುವ ಕರುಣದಲಿ
ಅಬ್ಜಭವನೊಡನೆ ಗತಿಗೆ ೬
ಎಂತು ವರ್ಣಿಸಲಿ ಎನಗಳವಲ್ಲ ಧರೆಯೊಳಗೆ
ಸಂತತಿ ನೆಲಸಿದಂತೆ ಕಾವ್ಯವನೆ ಸ್ಥಾಪಿಸಿ
ಸಂತಾನದೊಳಗೆ ಗುರು ಮಧ್ವಪತಿ
ದಾಸರನ ಸಂತರಿಸಿ ಧರೆಗೆ ತೋರಿ
ಅಂತ್ಯಕಾಲದಲಿ ಸಿರಿ ವಿಠಲನ ಸ್ಮರಿಸುತ ಸು
ಪಂಥವನು ಹಿಡಿದು ಸದ್ಗತಿಯಲ್ಲಿ ಸೇರಿದರು
ಸಂತತದಾಸರ ಪ್ರಿಯ ವಿಜಯವಿಠ್ಠಲನಂಘ್ರಿ
ಚಿಂತೆಯೊಳಗಿಟ್ಟ ಗುರುವೆ ೭

೨೫೯
ಶಾರದಾಂಬಿಕೆ ನಿತ್ಯ ಶಾರದಾ ಕೊಡು ಎನಗೆ |
ಸಾರುವೆ ನಾ ನಿನ್ನ ಪ
ಪುಂಡರೀಕ ನಯನೆ ಪುಂಡರೀಕನ ರಾಣಿ
ಪುಂಡರೀಕಗಮನೆ | ಪುಂಡರೀಕ ಚರ್ಮಾಂಬರ |
ಪುಂಡರೀಕನಾಥನುತೆ ಪುಂಡರೀಕವೆ ನಮಗೆ ೧
ಶುಚಿ ಶರೀರಳೆ ಎನ್ನ ಶುಚಿಯ ಮಾಡುವ ಈ |
ಶುಚಿಯೊಳಗೆ ನಿನ್ನ ಕೀರ್ತಿ ಶುಚಿಯಾಗಿ ಮನದಲ್ಲಿ |
ಶುಚಿ ಜನ ಪೇಳುತಿದೆ | ಶುಚಿ ಮಾರ್ಗವನೆ ತೋರಿಸೆ ೨
ಕೌಂಶಿಕ ವಾಣಿಯೆ ಕೌಂಶಿಕ ಬಿಂಬಸದನೆ |
ಕೌಂಶಿಕವೇಣಿ ಕರುಣಿ | ಕೌಂಶಿಕ ವಿಜಯವಿಠ್ಠಲನಲ್ಲಿಕೌಂಶಿಕದವನ ಮಾಡು೩

ಶಾರದೆಯೇ ಕರುಣಾ ವಾರಿಧಿಯೇ

೨೬೦
ಶಾರದೆಯೇ ಕರುಣಾವಾರಿಧಿಯೇ ಪ
ಸಾರಾಂಶ ವಚನಕೊಟ್ಟು ಸಲಹು ಎನ್ನನು ತಾಯೆ ಅ. ಪ.
ಚಂದ್ರ ಕಿರಣ ಪೋಲ್ವಳೆ ಜಗದಂಬೆ ನಾನು ನಿನ್ನ
ಕಂದ ಎನ್ನಮತಿಗೆ ಸಾಕಾರವಾಗಿರು ಎಂಬೆ ೧
ಸರಸೀರುಹದಳ ನೇತ್ರೆ ಸಾಮಜಕ್ಕೆ ಸಮಯಾತ್ರೆ
ಪರಮಪಾವನ ಚರಿತ್ರೆ ನೀ ಗತಿ ಜಗಕೆ ಮಿತ್ರೆ ೨
ಅಜನ ಪಟ್ಟದ ರಾಣಿ ಅಬುಜ ಪಲ್ಲವ ಪಾಣಿ
ವಿಜಯವಿಠ್ಠಲನ ಸೊಸೆ ಮುದ್ದುವಾಣಿಯೆ ೩

೨೮೨
ಶಿವನ ನೋಡಿರೊ ಇಂದು ಸ್ತವನ ಮಾಡಿರೊ |
ತವಕದಿಂದ ತಿಳಿದು ಅವಗುಣಂಗಳ ತೊರೆದು ನಿತ್ಯ ಪ
ಅಂತಕಾಪುರ ವೈರಿ | ದಿನಾಂತ ವೃಷಭನೇರಿ |
ಶಾಂತಿ ಸಹಿತ ಜನರಂಗಣದಿ | ನಿಂತು ಮಾತು |
ಲಾಲಿಪ ಮಹಿಮ ೧
ಸುರಜನತೆ ಪ್ರೀತ ಸರ್ವದ | ಅಸುರ ವೈರಿಯು ನೇಮದಿಂದ |
ವಸುಧೆಯಾಳಗೆ ಬಲಿದಾನೇಕಾ |
ದಶರುದ್ರರೊಳು ಬಲು ಗುಣವಂತ ೨
ದಕ್ಷ ಪ್ರಜೇಶ್ವರನಧ್ವರ | ರಕ್ಷಣೆ ಮಾಡಿದ ದಕ್ಷಮೂರ್ತಿ |
ಮೋಕ್ಷಕೆ ಮನಸು ಕೊಡುವ | ನಿಟಲೇಕ್ಷವಂತ ಶಾಂತ ೩
ಕರಿಚರ್ಮಾಂಬರಧಾರಿ ವಾರಿ | ಧರ ತ್ರಿಶೂಲ
ಡಮರುಗ ಪಾಣಿ |
ಶರಗದ್ದುಗೆ ಸುಮೇರುವೇದಾ | ತುರಗವಾಗಿರಲಂದು ಅಂದದಿ೪
ನಮಿಸಿ ಬರಲಿ ಬೇಡಿ ಭವದಿ | ಮಮತೆ
ಓಡಿಸಿ ಭಕುತಿಯಿಂದಲಿ |
ರಮೆಯರಸ ವಿಜಯವಿಠ್ಠಲನ್ನ |
ಶಮೆ ದಮೆಯಿಂದ ಪೂಜಿಪ ಧೀರ ೫

೪೮೬
ಶುಂಠನಿಗೆ ಉಂಟೆ ವೈಕುಂಠಾ |
ಬಂಟನಿಗೆ ಉಂಟೆ ಒಡತನವು ಪ
ಕಳ್ಳನಿಗೆ ಉಂಟೆ ಪರರು ಒಡವೆ ಗಳಿಸಿದ ಕಷ್ಟ |
ಸುಳ್ಳನಿಗೆ ಉಂಟೆ ಮಿತಿಯಾದ ಭಾಷೆ||
ಕೊಲ್ಲುವನಿಗೆ ಉಂಟೆ ದಯಾದಾಕ್ಷಿಣ್ಯದ ಮಾತು |
ಕ್ಷುಲ್ಲಕನಿಗೆ ಉಂಟೆ ಗುಣ ಭಾರಿ ಬುದ್ಧಿಗಳು ೧
ಉಪವಾಸಿಗೆ ಉಂಟೆ ಅನ್ನ ಆಹಾರದ ಚಿಂತೆ |
ತಪಸಿಗೆ ಉಂಟೆ ಇಹದ ವ್ಯಾಕುಲ ||
ಕೃಪಣನಿಗೆ ಉಂಟೆ ದಾನ-ಧರ್ಮದ ಚಿಂತೆ |
ಚಪಳನಾರಿಗೆ ಉಂಟೆ ತನ್ನ ಮನೆವಾರ್ತೆ ೨
ಕ್ಷುಧಾತುರಗೆ ಉಂಟೆ ಪಾಕಾದಿ ಫಲ ರುಚಿ |
ಹಾದಿ ಬಿಟ್ಟವಗುಂಟೆ ಮನದ ಧೈರ್ಯ ||
ವೇದನೆಬಡುವಗುಂಟೆ ಅನ್ನಿಗರ ಸಂಧಾನ |
ಕ್ರೋಧದವಗುಂಟೆ ಬಲು ಶಾಂತ ನೀತಿ ೩
ಕಾಮಾತುರಗೆ ಉಂಟೆ ಭವಕುರಿತ ಲಜ್ಜೆಗಳು |
ನೇಮ ನಿತ್ಯಗೆ ಉಂಟೆ ಮನದರೋಗ ||
ಹೇಮಾತುರಗೆ ಉಂಟೆ ಗುರು ಬಾಂಧವ ಸ್ನೇಹ |
ತಾಮಸಿಗೆ ಉಂಟೆ ಶುಭಕರ್ಮ ಸದ್ಭಕ್ತಿ ೪
ದಾನಿಗೆ ಉಂಟೆ ಇಂದಿಗೆ ನಾಳಿಗೆಂಬೋದು |
ಜ್ಞಾನಿಗೆ ಹತ್ಯಾದಿ ದೋಷ ಉಂಟೆ |
ಆನಂದಾನಂದಿ ಸಿರಿ ವಿಜಯವಿಠ್ಠಲ ಸ್ವಾಮಿಯ
ಧೇನಿಸುವಗುಂಟೆ ದಾರಿದ್ರ್ಯ ದುಷ್ಕರ್ಮ೫

೨೫೫
ಶುಕಪಿತನ ಪದಕಂಜ ಪದುಪಾ |
ಅಖಿಳ ಲೋಕದ ಗುರುವೆ ಸುಖ ತೀರ್ಥ ಮುನಿಪಾ ಪ
ಮತಿ ತಿರಸ್ಕಾರವಾಗಿ ನಿತ್ಯ ನೈಮಿತ್ಯಗಳು |
ಗತಿ ತಪ್ಪಿ ಪೋಗಿರಲು ಸರ್ವ ದೇವತೆಗಳು ||
ಪಥವ ಕಾಣದೆ ನೆರೆದು ಯೋಚಿಸಿ ತಮ್ಮೊಳು |
ಅತಿಶಯದಿ ವೊದರಿ ಕೇಳು ಭವನದಾ |
ಪತಿಯಾದ ಬೊಮ್ಮಗುಸರಿದರಂದು ಮೇಲು೧
ತುತಿಸಲಾಕ್ಷಣ ಕೇಳಿ ಅಜನು ಶಿರದೂಗಿದನು |
ಕೃತಭುಜರ ಸಹವಾಗಿ ಹರಿಪುರಕೆ ಸಾಗಿದನು |
ನತನಾಗಿ ಶಿರಿಪತಿಯ ಪದಯುಗಕೆ ಬಾಗಿದನು |
ಗತಿ ನೀನೆ ಎಂದು ಕೂಗಿದನು ಹರಿ ಕೇಳಿ |
ಸತತ ನಿನ್ನನ್ನು ಕರೆದು ಪೇಳಿದವೇಗಿದನು ೨
ಭೂಸುರನ ಗರ್ಭದಲಿ ಬಂದೆ ನೀನವತರಿಸಿ |
ವಾಸುದೇವನೆಂಬ ನಾಮದಿಂದಲಿ ಜನಿಸೀ |
ಭಾಸುರ ಕೀರ್ತಿಯಲಿ ಮೆರೆದೆ ಬಲು ಪಸರಿಸಿ |
ದೋಷ ವರ್ಜಿತದ ಗುಣರಾಸಿ ಎನಿಸುವಾ |
ಲೇಸು ಆರೈದೆರಡು ಲಕ್ಷಣ ಸಂನ್ಯಾಸಿ ೩
ಪುಟ್ಟಿ ಇಳಿಯೊಳಗೆ ಸಂಕರನೆಂಬ ದುರವಾದಿ |
ಜಟ್ಟಿಗನಾಗಿ ಸೋಸ್ಹಂ ಯೆಂಬ ಅತಿ ಕ್ರೋಧಿ |
ಅಟ್ಟಹಾಸದಲಿ ತಿರುಗಿದನು ಬೀದಿ ಬೀದಿ |
ಘಟ್ಟವಚನದಿಂದ ಕಾದಿ ಅವನ ಮುರಿ |
ದೊಟ್ಟಿದೇ ವಪ್ಪದಲಿ ಮಾಯಿ ಮತಭೇದಿ ೪
ಶ್ರುತ್ಯರ್ಥವಾರಿಧಿಯ ಮಥಿಸಿ ಅಮೃತ |
ಗ್ರಂಥ ಉತ್ತಮರಿಗೆರೆದು ಸುಖ ಬಡಿಸಿದೆ ಅತಿಶ್ಯಾಂತ |
ನಿತ್ಯದಲಿ ಶುಕ್ಲ ಶೋಣಿತರಹಿತ ನಿಶ್ಚಿಂತ
ಅತ್ಯಂತ ಮಹಿಮ ಬಲವಂತ ನಿಮಗೆ ನಾ |
ಎತ್ತಿ ಕರಗಳ ಮುಗಿವೆ ತೋರು ನಿಜ ಪಂಥ ೫
ಹರಿಯೆ ಪರನೆಂದು ಬೊಬ್ಬರಿದು ಎಳಹರಿ |
ಮರಿಯೆ ಬಿರಿದು ಡಂಗುರವ ಹೊಯಿಸಿ |
ಚರಿಸಿದ ಗುರು ದೊರೆಯೇ |
ಸರಿಗಾಣೆ ನಿನಗೆಲ್ಲಿ ಮತ್ತೊಬ್ಬರನ ಕರಿಯೇ |
ಹರಣದೊಳಗೆ ನಿನ್ನ ಮರಿಯೆ ಆನಂದ
ವರ ಬದರಿಲಿಪ್ಪ ವೈರಾಗ್ಯದ ಸಿರಿಯೇ ೬
ಮುನಿಗಳೊಳಗೆ ರನ್ನ ಮುನಿದವರಿಗಿರಬೆನ್ನ |
ಘನ ವಿದ್ಯಸಂಪನ್ನ ಗುಣದಲ್ಲಿ ಅಚ್ಛಿನ್ನ |
ನೆನೆದವರ ಪ್ರಸನ್ನ ತನುವೆ ತಪುತ ಚಿನ್ನ |
ಮಿನಗುವಂತೆಯಿಪ್ಪ ಪಾವನ್ನ ಮಧ್ವಮುನಿ |
ಚಿನುಮಯ ವಿಜಯವಿಠ್ಠಲನ್ನ ಪ್ರಸನ್ನಾ೭

೧೩೯
ಶುಭವೀವ ನಿರುತದಲಿ ಮಂದಹಾಸಾ ಪ
ಅಭಯಗಿರಿಯ ವಾಸಾ ಶ್ರೀ ಶ್ರೀನಿವಾಸ ಅ.ಪ.
ಧೇನಿಪರ ಮನ ಚಿಂತಾಮಣಿಯೋ | ದೇವ |
ನೀನೆ ಗತಿಯೆಂಬುವರ ಧಣಿಯೋ ||
ಜ್ಞಾನಮಯ ಸುಖದ ಸಂದಣಿಯೋ | ಪುಣ್ಯ |
ಕಾನನವಾಸ ಸುರರ ಖಣಿಯೋ ೧
ಶರಣರಿಗೆ ವಜ್ರ ಪಂಜರನೋ | ದೇವ |
ದುರುಳರಿಗೆ ವೀರ ಜರ್ಝರನೋ ||
ದುರಿತಕದಳಿಗೆ ಕುಂಜರನೋ |
ವರಕಲ್ಪ ಕಲ್ಪ ವಿಚಲನೋ ೨
ಪರಮೇಷ್ಠಿ ಶಿವರೊಳಗೆ ಯಿಪ್ಪ | ದೇವ |
ಮರುತನ್ನ ಹೆಗಲೇರಿ ಬಪ್ಪಾ ||
ಶರಣರಿಗೆ ವರವೀಯುತಿಪ್ಪಾ |
ಸಿರಿ ವಿಜಯವಿಠ್ಠಲ ತಿಮ್ಮಪ್ಪಾ ೩

೨೪೧
ಶುಭಸುಂದರ ಕಾಯಾ ವಿಭುವೆ ಸುರಗುರುರಾಯಾ |
ಅಭಿವಂದಿಸುವೆನೊ ಜೀಯ್ಯಾ ಪ
ನಿರುತ ಅಂತರದೊಳು ಹರಿಗೆ ಸಮ್ಮೊಗನಾಗಿ
ಕರವ ಜೋಡಿಸಿ ಬಿನ್ನೈಪಾ ||
ಗುರುವೆ ಎನ್ನಯ ಮಾತು ಕೇಳೊ ದುರಿತ ರಾಶಿ |
ಪರಿಹಾರ ಮಾಡಿಸಯ್ಯಾ ೧
ಮಾರುತಿ ಸದಾಗತಿ ಭಾರತೀಪತಿ ಯತಿ |
ಮಾರಾರಾತಿಗೆ ನೀ ಗತಿ ||
ಮಾರುತ್ತರ ಕಾಣೆ ಮಾರುತಿ
ಮಾರಿಗಳಿಗೆ ನಿರುತ ಮಾರಕ ನೀನಹುದೋ೨
ವಾಯು ಎನಗೆ ಸಂಪೂರ್ಣಾಯು ಪಾಲಿಸೊ ಸರ್ವ |
ಸಾಯುಜ್ಯ ಸಾರೂಪ್ಯನೆ ||
ಕುಯುಕ್ತಿ ಜನರ ಗದಾಯುದ್ಧದಿಂದಟ್ಟಿ |
ಈ ಯುಗದೊಳು ಬಲವಾಗೋ ೩
ಕಾಯಯ್ಯಾ ಕರುಣದಿ ಕಾಯ ನಿನ್ನದು ಗುಣನಿ |
ಕಾಯ ನಿರ್ದೋಷ ಕಾಯಾ ||
ಕಾಯಾ ಐದಳಮಾನ | ಕಾಯ್ದ ಕಲಿವೈರಿ |
ಕಾಯಜಪಿತನ ದೂತಾ ೪
ಪಂಕಜನಾಭನ ಅಂಕದಲ್ಲಿಪ್ಪ
ಬಿಂಕವ ತಾಳದಿರೊ |
ಸಂಕರುಷಣ ನಮ್ಮ ವಿಜಯವಿಠ್ಠಲನ ಹೃ
ತ್ಪಂಕದೊಳು ತೋರಿಸೊ ೫

೧೩೮
ಶೇಷವಾಹನನಾಗಿ ಬಂದ | ಶ್ರೀನಿವಾಸ |
ವಾಸುದೇವ ವಾಸವ ಪ್ರಿಯಾ ಪ
ಅಜಭವ ಸುರ ಮುನಿ | ವ್ರಜ ನಾನಾ ಬಗೆಯಲಿ ||
ಭಜನೆ ಮಾಡುತ ಬಲು | ನಿಜಮನದಲಿ ನೋಡೇ ೧
ಛತ್ರ ಚಾಮರ ಜನರು | ಸ್ತೋತ್ರ ಸಂಗೀತನಾದ
ಧಾತ್ರಿ ತುಂಬಿರಲು ಸ | ರ್ವತ್ರ ವ್ಯಾಪಕ ದೇವಾ ೨
ಗಂಧರ್ವಗಣನಲು | ವಿಂದ ಪಡಲು ಭೇರಿ ||
ದುಂದುಭಿವಾದ್ಯ ಆ | ನಂದ ನುಡಿವುತಿರೆ ೩
ಇಕ್ಕಿದ ವರಕಲ್ಪ | ದಿಕ್ಕು ಬೆಳಗುತಿರೆ |
ಬೊಕ್ಕ ದೈವವೆ ಶುದ್ಧ | ಭಕ್ತರ ಒಡಗೂಡಿ ೪
ಇಷ್ಟ ಮೂರುತಿ ಮನೋ | ಭೀಷ್ಟ ಪಾಲಿಪ ವಿಜಯ ||
ವಿಠ್ಠಲ ವೆಂಕಟೇಶ | ಬೆಟ್ಟದೊಡೆಯೆಂದು ೫

೫೨೬
ಶೋಕವಾಗುವುದು ಯಾತಕೆ ಎಲಾ |
ಕಾಕುಲಾತೀ ಸಲ್ಲ ಕರಣಶುದ್ಧನಾಗು ಪ
ಜೀವಕ್ಕೆ ಎಂಬೆನೆ ಆನಂತಕಲ್ಪಕ್ಕೆ
ಜೀವನಿತ್ಯ ಸುಖೀ ಎಲ್ಲಿದ್ದರೂ
ಸಾವೆ ಹುಟ್ಟೀಯಲ್ಲಿ ಸತತದಲಿ ಚರಿಸಿದರು
ಜೀವ ಉಂಬುವದೆತ್ತ ಪ್ರಾಪ್ತವಾದ ಕ್ಲೇಶ ೧
ಶರೀರಕೆಂಬೆನೆ ಚೇತನ ತಪ್ಪಿದರೆ
ಇರುವುದು ಜಡವಾಗಿ ಬಿದ್ದುಕೊಂಡು
ಹಿರಿದಾಗಿ ತಿಳಿವುದು ಜಡಕೆ ಲೇಪನವುಂಟೆ
ಚರಾಚರದಲಿ ಇದೆ ಸಿದ್ಧವಾಗಿಪ್ಪಯಾ ೨
ಪಾರ ನೋಡುವದು ಈ ಪರಿ ಜ್ಞಾನದಲಿದು
ಸಾರ ಕಾಣಿಸದು ಸಂಸಾರದೊಳಗೆ
ಮಾರಜನಕ ನಮ್ಮ ವಿಜಯವಿಠ್ಠಲ ಹರಿಯ
ಸಾರದಲೆ ಅಭಿಮಾನ ಬಿಡದವಗೆ ಇದೆ ಉಂಟು ೩

೪೮೭
ಶೋಕವ್ಯಾತಕೆ ಮನವೆ ನಿನಗೆ ಇನ್ನು ಪ.
ಈ ಕುಮಾರಕ ನಿನಗೆ ಗತಿಯ ವಿಧಿಸುವನೇನೊ ಅ.ಪ
ಕೃಷ್ಣ ಸೋದರಮಾವ ಮತ್ತೆ ಭೀಮಸೇನ
ಜೇಷ್ಠ ಪಿತೃ ಪಾರ್ಥಾದಿ ಮಹಧೀರರು
ಇಷ್ಟು ಮಂದಿರಲಾಗಿ ಅಭಿಮನ್ಯು ಪ್ರಾಣವನು
ಬಿಟ್ಟು ಹೋಗಲು ಒಬ್ಬರಾದರುಳುಹಿದರೇನೊ ೧
ವಸಿಷ್ಠ ಮುನಿಪರಿಗೆ ನೂರುಮಂದಿ ಸುತರು
ಅಸಮ ಸಾಸಿಗರು ಮಹ ಶೀಲಜ್ಞರು
ಕುಶಲದಿಂದಿರುತಿರ್ದು ಅ-ಕಾಲ ಮೃತ್ಯುವಿನ
ವಶರಾಗಿ ಪೋದರು ನೋಡಿ ಅಚ್ಚರಿಯ೨
ಇಂಥವರಿಗೀ ರೀತಿ ನಿನಗಾವ ಸ್ವಾತಂತ್ರ್ಯ
ಸಂತೋಷವನು ತೊಡೋ ಮನಸಿನಲ್ಲಿ
ಕಂತು ಜನಕ ನಮ್ಮ ವಿಜಯವಿಠ್ಠಲನಂಘ್ರಿ
ಸ್ವಾಂತದಲ್ಲಿ ನೆನೆನೆನೆದು ಸುಖಿಯಾಗು ಮನವೆ೩

೫೩೯
ಶೋಭಾನ | ಶೋಭಾನವೆನ್ನಿರೆ ಸುರರಂಗನಿಯರೆಲ್ಲ
ಶೋಭಾನವೆನ್ನಿ ಶುಭವೆನ್ನಿ ಪ
ಮಂಗಳದೇವಿಯ ರಮಣ ಬಾ |
ಶೃಂಗಾರದ ಗುಣನಿಧಿಯೆ ಬಾ |
ಅಂಗಜಜನಕ ಅರವಿಂದದಾಳಾಕ್ಷನೆ ರಂಗಾ ಬಾ ||
ಭವಭವ ಭಂಗಾ ಬಾ | ದೇವೋತ್ತುಂಗಾ ಬಾ |
ಜಗದಂತರಂಗಾ ಬಾ ಹಸೆಯ ಜಗುಲಿಗೆ೧
ಸಂಕುರುಷಣ ಅನಿರುದ್ಧಾ ಬಾ | ಪಂಕಜ ಸಂಭವನಯ್ಯ ಬಾ |
ಕುಂಕುಮಾಂಕಿತನೆ ಭಕುತ ಕುಮುದ ಮೃಗಾಂಕ ಬಾ ||
ನಿಷ್ಕಳಂಕಾ ಬಾ ಶಂಖಚಕ್ರಾಂಕ ಬಾ |
ಅಹಿಪರಿಯಂಕ ಬಾ ಹಸೆಯ ಜಗುಲಿಗೆ ೨
ಹೇಮಾಂಬರಧರ ಹರಿಯೇ ಬಾ |
ಸಾಮಜರಾಜಾ ವರದಾ ಬಾ |
ಸಾಮವಿಲೋಲನೆ ಸದ್ಗುಣ ಶೀಲನೆ ರಾಮಾ ಬಾ ||
ಸುರಸಾರ್ವಭೌಮಾ ಬಾ ದೈತ್ಯವಿರಾಮಾ ಬಾ |
ರಣರಂಗಭೀಮಾ ಬಾ ಹಸೆಯಾ ಜಗುಲಿಗೆ ೩
ಅನಂತ ಅವತಾರ ಅಚ್ಯುತ ಬಾ |
ಉನ್ನತ ಮಹಿಮನೆ ಯಾದವ ಬಾ |
ಘನ್ನ ಮೂರುತಿಯೆ ಸುಪ್ರಸನ್ನಾ ಬಾ ಸಚ್ಚರಿತಾ ಬಾ |
ಭಾಗ್ಯ ಸಂಪನ್ನಾ ಬಾ ಜೀವರ ಭಿನ್ನಾ ಬಾ ಹಸೆಯಾ ಜಗುಲಿಗೆ ೪
ನಾರಾಯಣ ದಶರೂಪಾ ಬಾ | ಚಾರುಚರಿತಾ ಪ್ರತಾಪ ಬಾ |
ಶೌರಿ ಮುರಾರಿಯೆ ನಿಟಿಲ ಕಸ್ತೂರಿಯ ಲೇಪಾ ಬಾ ||
ಯದುಕುಲ ದೀಪಾ ಬಾ ನಿತ್ಯ ಸಲ್ಲಾಪಾ ಬಾ
ನಮ್ಮ ಸಮೀಪ ಬಾ ಹಸೆಯಾ ಜಗುಲಿಗೆ ೫
ವಾಸುದೇವ ಮುಕುಂದಾ ಬಾ | ಸಾಸಿರನಾಮ ಗೋವಿಂದಾ ಬಾ |
ಕೇಶವ ಪುರುಷೋತ್ತಮ ನರಸಿಂಹ ಉಪೇಂದ್ರ ಬಾ ||
ಗೋಪಿಕಂದಾ ಬಾ | ಬಹುಬಲ ವೃಂದಾ ಬಾ |
ಅತಿಜವದಿಂದಾ ಬಾ ಹಸೆಯಾ ಜಗುಲಿಗೆ ೬
ಪರತತ್ವದಿ ಅತಿ ಚಿಂತಾ ಬಾ | ಪರಬೊಮ್ಮನೆ ಅತಿ ಶಾಂತಾ ಬಾ |
ಪರಮಾತ್ಮನೆ ಪರಿಪೂರ್ಣ ವಿಭೂತಿವಂತಾ ಬಾ ||
ಅಖಿಳ ವೇದಾಂತಾ ಬಾ | ರುಕ್ಮಿಣಿಕಾಂತಾ ಬಾ |
ಸದ್ಗುಣವಂತಾ ಬಾ ಹಸೆಯಾ ಜಗುಲಿಗೆ೭
ಉದಯ ಪ್ರಭಾಕರ ಭಾಸಾ ಬಾ |
ತ್ರಿದಶಗುಣನುತ ವಿಲಾಸಾ ಬಾ |
ಪದುಮನಾಭ ಮಾಧವ ಶ್ರೀಧರನೆ ಸುನಾಸಾ ಬಾ ||
ಸಿರಿಮಂದಹಾಸಾ ಬಾ | ಭಕುತ ಉಲ್ಲಾಸಾ ಬಾ |
ಶ್ರೀ ಶ್ರೀನಿವಾಸಾ ಬಾ ಹಸೆಯಾ ಜಗುಲಿಗೆ೮
ಕೃಷ್ಣವೇಣಿಯ ಪಡೆದವನೆ ಬಾ | ರಥ ಹೊಡೆದವನೆ ಬಾ |
ಕೃಷ್ಣೆಯ ಕಷ್ಟವ ನಷ್ಟ ಮಾಡಿದ ಕೃಷ್ಣಾ ಬಾ ||
ಯದುಕುಲ ಶ್ರೇಷ್ಠ ಬಾ | ಸತತ ಸಂತುಷ್ಟ ಬಾ |
ಉಡುಪಿಯ ಕೃಷ್ಣ ಬಾ ಹಸೆಯಾ ಜಗುಲಿಗೆ ೯
ಎಲ್ಲರೊಳಗೆ ವ್ಯಾಪಕನೆ ಬಾ ಬಲ್ಲಿದ ದೊರೆಗಳ ಅರಸನೆ ಬಾ |
ನಾ ಎಲ್ಲಿ ನೋಡಲು ಪ್ರತಿಗಾಣೆ ನಿನಗೆ ಸಿರಿನಲ್ಲಾ ಬಾ ||
ಅಪ್ರತಿಮಲ್ಲ ಬಾ ಭಕ್ತವತ್ಸಲಾ ಬಾ |
ವಿಜಯವಿಠ್ಠಲ ಬಾ ಹಸೆಯ ಜಗುಲಿಗೆ೧೦

೫೪೦
ಶೋಭಾನವೆನ್ನಿರೆ ಸ್ವರ್ಗಾರೋಹಿಣಿಗೆ |
ಶೋಭಾನವೆನ್ನಿ ಶುಭವೆನ್ನಿ ಪ
ಹರಿಪಾದ ನಖದಿಂದ ಬ್ರಹ್ಮಾಂಡವ ಶೀಳಲು |
ಭರದಿಂದ ಇಳಿದು ಸತ್ಯಲೋಕ ||
ಭರದಿಂದ ಇಳಿದು ಸತ್ಯಲೋಕಕೆ ಬಂದ |
ವಿರಜೆಗಾರುತಿಯ ಬೆಳಗಿರೇ ೧
ಸರಸಿಜಾಸನ ನಮ್ಮ ಹರಿಪಾದ ತೊಳಿಯಲು |
ಸರಸ ಸದ್ಗುಣ ಸುರಲೋಕ |
ಸರಸ ಸದ್ಗುಣದಿ ಸುರಲೋಕಕೈದಿದಾ |
ಸ್ವರ್ಣೆಗಾರುತಿಯ ಬೆಳಗಿರೇ ೨
ಇಂದ್ರಲೋಕವ ಸಾರಿ ಧ್ರುವನ ಮಂಡಲಕಿಳಿದು |
ಚಂದದಿಂದಲಿ ಮೇರುಗಿರಿಗೆ |
ಚಂದದಿಂದಲಿ ಮೇರುಗಿರಿಗೆ ಬಂದಾ |
ಸಿಂಧುವಿಗಾರುತಿಯ ಬೆಳಗಿರೇ ೩
ಶತಕೋಟಿ ಎಂತೆಂಬ ಅಜನ ಮಂದಿರ ಪೊಕ್ಕು |
ಚತುರ್ಭಾಗವಾಗಿ ಕರೆಸಿದ |
ಚತುರ್ಭಾಗವಾಗಿ ಕರೆಸಿದ ಶ್ರೀ ಭೋಗ |
ವತಿಗಾರುತಿಯ ಬೆಳಗಿರೇ೪
ಇಂದ್ರ ದಿಕ್ಕಿಗೆ ಸಿತಾ ಚಕ್ಷು ಪಶ್ಚಿಮ ದಿಕ್ಕು |
ಚಂದ್ರ ಯಮ ದಿಕ್ಕಿಗೆ ಭದ್ರದೇವಿ |
ಚಂದ್ರ ಯಮ ದಿಕ್ಕಿಗೆ ಭದ್ರದೇವಿ ಅಳಕ |
ನಂದಿನಿಗಾರುತಿಯ ಬೆಳಗಿರೇ ೫
ಕುಂದ ಮಂದರೆ ಇಳಿದು ಗಂಧ ಮಾದನಗಿರಿಗೆ |
ಹಿಂಗದೆ ಪುಟಿದು ವಾರಿನಿಧಿಯ |
ಹಿಂಗದೆ ಪುಟಿದು ವಾರಿನಿಧಿಯ ನೆರದ |
ಗಂಗೆಗಾರುತಿಯ ಬೆಳಗಿರೇ ೬
ಗಿರಿಜೆ ಸೂಪಾರಶ್ವಕೆ ಧುಮುಕಿ ಮಾಲ್ಯವಂತಕೆ ಜಿಗಿದು |
ಪರಿದಂಬುಧಿಯ ಕೂಡಿ ಮೆರದು |
ಪರಿದಂಬುಧಿಯ ಕೂಡಿ ಮೆರದಾ |
ತ್ರಿದಶೇಶ್ವರಿಗಾರುತಿ ಬೆಳಗಿರೇ೭
ಕುಮುದಾದ್ರಿಗೆ ಇಳಿದು ನಲಾ ಶತ ಶೃಂಗ |
ಕ್ಷಮಧಾರಿಗಳಿಗೆ ಹಾರಿ ವನಧಿ |
ಕ್ಷಮಧಾರಿಗಳಿಗೆ ಹಾರಿ ವನಧಿ ಕೂಡಿದಾ |
ಸುಮತಿಗಾರುತಿಯ ಬೆಳಗಿರೇ ೮
ಮೇರು ಮಂದರಕಿಳಿದು ನಿಷಿಧ ಕಾಂಚನ ಕೂಟ |
ಮೀರಿ ಹಿಮಗಿರಿಗೆ ಹಾರಿ ಬದರಿಗೆ |
ಮೀರಿ ಹಿಮಗಿರಿಗೆ ಹಾರಿ ಬದರಿಗೆ ಬಂದಾ |
ನಾರಿಗಾರುತಿಯ ಬೆಳಗಿರೇ ೯
ಕ್ಷಿತಿಪ ಭಗೀರಥನಂದು ತಪವ ಒಲಿದು|
ಅತಿಶಯವಾಗಿ ಧರೆಗಿಳಿದು |
ಅತಿಶಯವಾಗಿ ಧರೆಗಳಿದು ಬಂದಾ |
ಭಾಗೀರಥಿಗಾರುತಿಯ ಬೆಳಗಿರೇ೧೦
ಮುನಿ ಜನ್ಹು ಮುದದಿಂದ ಆಪೋಶನವ ಮಾಡೆ |
ಜನನಿ ಜಾನ್ಹವಿ ಎನಿಸಿದಾ|
ಜನನಿ ಜಾನ್ಹವಿ ಎನಿಸಿದಾ ಮೂಜಗದ |
ಜನನಿಗಾರುತಿಯ ಬೆಳಗಿರೇ ೧೧
ವಿಷ್ಣು ಪ್ರಜಾಪತಿ ಕ್ಲೇತ್ರದಲ್ಲಿ ನಿಂದು |
ಇಷ್ಟಾರ್ಥ ನಮಗೆ ಕೊಡುವಳು ಸತತ |
ಇಷ್ಟಾರ್ಥ ನಮಗೆ ಕೊಡುವಳು ಸತತ ಸಂ |
ತುಷ್ಟಿಗಾರುತಿಯ ಬೆಳಗಿರೇ ೧೨
ಕ್ರಮದಿಂದ ಬಂದು ನಲಿವುತ ಸರಸ್ವತಿ |
ಯಮುನೇರ ನೆರೆದು ತ್ರಿವೇಣಿ |
ಯಮುನೇರ ನೆರೆದು ತ್ರಿವೇಣಿ ಎನಿಸಿದಾ |
ವಿಮಲೆಗಾರುತಿ ಬೆಳಗಿರೇ೧೩
ಸತ್ವ ರಜೋ ತಮ ತ್ರಿವಿಧ ಜೀವರು ಬರಲು |
ಅತ್ಯಂತವಾಗಿ ಅವರವರ |
ಅತ್ಯಂತವಾಗಿ ಅವರವರ ಗತಿ ಕೊಡುವ |
ಮಿತ್ರೆಗಾರುತಿ ಬೆಳಗಿರೇ ೧೪
ಪತಿಯ ಸಂಗತಿಯಿಂದ ನಡೆತಂದು ಭಕುತಿಲಿ |
ಸತಿಯಲ್ಲಿ ವೇಣಿಕೊಡಲಾಗಿ |
ಸತಿಯಲ್ಲಿ ವೇಣಿ ಕೊಡಲಾಗಿ ಕಾವ ಮಹಾ |
ಪ್ರತಿಗಾರುತಿ ಬೆಳಗಿರೇ ೧೫
ವೇಣಿಯ ಕೊಟ್ಟಂಥ ನಾರಿಯ ಭಾಗ್ಯವು |
ಏನೆಂಬೆನಯ್ಯ ಪಡಿಗಾಣೆ |
ಏನೆಂಬೆನಯ್ಯಾ ಪಡಿಗಾಣೆ ಸುಖವೀವ |
ಕಲ್ಯಾಣಿಗಾರುತಿಯ ಬೆಳಗಿರೇ ೧೬
ಒಂದು ಜನ್ಮದಲಿ ವೇಣಿಯಿತ್ತವಳಿಗೆ |
ಎಂದೆಂದು ಬಿಡದೆ ಐದೆತನವ |
ಎಂದೆಂದು ಬಿಡದೆ ಐದೆತನವೀವ ಸುಖ |
ಸಾಂದ್ರೆಗಾರುತಿಯ ಬೆಳಗಿರೇ ೧೭

ವಾಚಾಮಗೋಚರೆ ವರುಣನರ್ಧಾಂಗಿನಿ |
ಪ್ರಾಚೀನ ಕರ್ಮಾವಳಿ ಹಾರಿ |
ಪ್ರಾಚೀನ ಕರ್ಮಾವಳಿ ಹಾರಿ ಮಕರ |
ವಾಚಳಿಗಾರುತಿಯ ಬೆಳಗಿರೇ ೧೮
ಅಂತರ ಬಾಹಿರ ಪಾಪ ಅನೇಕವಾಗಿರೆ |
ಸಂತೋಷದಿಂದಲಿ ಭಜಿಸಲು |
ಸಂತೋಷದಿಂದಲಿ ಭಜಿಸಲು ಪೊರೆವ ಮಹಾ |
ಕಾಂತೆಗಾರುತಿಯ ಬೆಳಗಿರೇ ೧೯
ಗುರುಭಕುತಿ ತಾರತಮ್ಯ ಇಹಪರದಲ್ಲಿ ತಿಳಿದು |
ಹರಿ ಪರನೆಂದು ಪೊಗಳುವರ |
ಹರಿ ಪರನೆಂದು ಪೊಗಳುವರ ಪೊರೆವ |
ಕರುಣಿಗಾರುತಿಯ ಬೆಳಗಿರೇ೨೦
ಜಗದೊಳು ಪ್ರಯಾಗ ಕ್ಷೇತ್ರದಲ್ಲಿ ನಿಂದು |
ಬಗೆ ಬಗೆ ಶುಭವ ಕೊಡುವಳು |
ಬಗೆ ಬಗೆಯ ಶುಭವ ಕೊಡುವ ವಿಜಯವಿಠ್ಠಲನ |
ಮಗಳಿಗಾರುತಿಯ ಬೆಳಗಿರೇ ಶೋಭಾನೆ ೨೧

೧೯೯
ಶ್ರೀ ಕಮಲನೇತುರ | ಪುಣ್ಯಗಾತುರ |
ಸಾಕಾರ ಕ್ಷಣ ಮಾತುರ | ನೀ ಕರುಣದಿಂದ |
ವಾಕು ಲಾಲಿಸು | ಬೇಕು ವೇಗದಲಿ |
ಗೋಕುಲಾಂಬುಧಿ ರಾಕಾಂಬುಜ ಲಾ |
ವಕರ ತೊಲಗಿಸಿ | ಸಾಕುವುದೆನ್ನ ನಿ | ಜಕರ ವಿಡಿದೂ ಪ
ದೇವಕಿ ಗರ್ಭ ಸಂಭೂತ | ನಿತ್ಯ ಅಜಾತಾ |
ಪಾವನ ಬಲು ಚರಿತಾ | ಕೋವಿದರರಸ ಶತ |
ಕುಂಭ ಮಕುಟನೀತಾ |
ಮಾವ ಮರ್ದನ ನಿರ್ಭೀತಾ ||
ದೇವಮರರ ಕಾ | ವ ಭಕ್ತರ | ಜೀವನೆ ವರ |
ವೀವನನುದಿನ | ಆವು ಕಾವುತ ಪೋಗಿ |
ಗೋವಳರೊಡಗೂಡಿ | ಪಾವಿನ ಪೆಡೆ ತುಳಿ |
ದಾ ವಿಷ ಬಿಡಿಸದೆ ||
ಶ್ರೀ ವಲ್ಲಭ ನಿನಗಾವವನೆಣೆ ತ್ರಿ |
ಭುವನದೊಳಗತಿ |
ಸೇವಕ ಜನರಿಗೆ ಕೈವಲ್ಯವನು ಕೊಡುವಾ ೧
ಪೂತನಿ ಪ್ರಾಣಾಪಹಾರಾ | ಪರಮ ಸುಂದರಾ |
ಜ್ಯೋತಿರ್ಮಯ ಶರೀರ | ಮಾತಾ ಬಂಧ
ಪರಿಹಾರಾ | ಮರಣಜರ ವಿದೂರಾ |
ಭೂತಿ ಉಳ್ಳಿಂದ್ರ ಕುಮಾರಾ | ಸೂತ ನೀನಾಗಿ ಭೂತಳದೊಳು |
ಪಾತಕ ಕುರು | ವ್ರಾತ ಯಮುನೆಯ |
ಭ್ರಾತನ್ನ ನಗರಿಯ | ಯಾತನಿಗಟ್ಟಿದೆ |
ಪೂತುರೆ ನಿನ್ನ ಮಾ | ಯಾತನಕೇನೆಂಬೆ |
ಖ್ಯಾತಿ ಮೂರುತಿ ಬೆನ್ನಾತು ಕಾಯೊ ಪಾರಿ |
ಜಾತವ ತಂದ | ಮಿತ ಮಹಿಮ ಜಗ |
ತಾತಾ ಬೊಮ್ಮಾದಿ ವಿನುತಾ ೨
ಈ ಪಡವಲಾಬ್ದಿ ವಾಸಾ | ಇಂಪಾದ
ತೋಷ ಗೋಪಾಲ ಮಾನಿಸಾ ವೇಷ |
ಆ ಪಾರ ರತುನ ಭೂಷಾ | ನಂತಪ್ರಕಾಳಾ |
ತಾಪಸಿಗಳ ವಿಲಾಸಾ ||
ಕೋಪ ಮೊದಲಾದ ತಾಪತ್ರಯಗಳ |
ನೀ ಪೋಗಾಡು ಉ |
ಡುಪಿ ಸದನನೆ ಪಾಪರಹಿತ ಮಧ್ವಪತಿ ಕರದಿಂ |
ದ ಪೂಜೆಗೊಂಡ ಪ್ರತಾಪನೆ ಜ್ಞಾನದ | ದೀಪ ಬೆಳಗಲಿ |
ರೂಪವ ತೋರಿಸು ಯದುಪಾ ಎನ್ನ ಸಮೀಪಾ ೩

೩೦೩
ಶ್ರೀ ಕೃಷ್ಣವೇಣಿ ಕಲ್ಯಾಣಿ | ಕಷ್ಟ ನಿತ್ಯ ಸಾಗರನರಾಣಿ ಪ
ಅಜನ ನಿರೂಪದಲಿ ಜಾಬಾಲಿ ರಿಷಿ ನಿಂದು
ಭಜಿಸಿದನು ನಿನ್ನ ಬಹುದಿನಂಗಳಲಿ
ನಿಜವಾಗಿ ಹರನ ಶಿರದಲ್ಲಿ ಉದ್ಧವಿಸಿದೆ
ತ್ರಿಜಗದೊಳಗೆ ಮೆರೆದೆ ತ್ರಿದಶಸುರಶುಭವರದೆ ೧
ಎತ್ತ ನೋಡಿದರತ್ತ ನಾಲ್ಕೂವರೆ ಯೋಜನವು
ಸ್ತುತ್ಯ ಪುಣ್ಯದೇವಿ ಎನಿಸಿಕೊಂಬೆ
ಸ್ತುತಿಸಲಳವೇ ನಿಮ್ಮ ಮಹಿಮೆ ಅಮಿತವಲ
ಮತ್ತಗಜಗಮನೆ ಶುಭಕರೆ ಜ್ಞಾನಧಾರೆ ೨
ನೂಗದ ಪಾಪಗಳೆನಿತೊ ನಿನ್ನ ದುರುಶನವು
ಆಗುತ್ತ ಓಡಿದವು ತಳವಿಲ್ಲದೇ
ಚಾಗಿ ನಮೋ ನಮೋ ಎಂಬ ಭಾಗವತರ ಮನಿಯ
ಬಾಗಿಲ ಕಾಯುವ ಭಾಗ್ಯವ ನೀಡೆಲೆ ವರದೇ ೩
ಕಲಿಯುಗದಿ ನೀನೇ ವೆಗ್ಗಳಳೆಂದು ಸಾತ್ವಿಕರು
ಒಲಿದು ಕೊಂಡಾಡುವರು ನಿರುತದಲಿ
ಜಲನಿಧಿಯ ಇಮ್ಮೊಗದಿಂದಲಿ ಮೆರದೆ ಮಹತಟನಿನೆಲೆಗೊಳಿಸು ವಿಜಯವಿಠ್ಠಲನ ಸಂಪದದೊಳು೪

೨೯೭
ಶ್ರೀ ಭಾಗೀರಥಿ ತಾಯೇ ಶೃಂಗಾರ ಶುಭಕಾಯೆ |
ಶ್ರೀ ಭೂರಮಣನ ತನಯೇಪ
ನಿನ್ನ ಯಾತ್ರಿಗೋಸುಗ ಎನ್ನ ಮನಸು ಪುಟ್ಟಿತು |
ಇನ್ನು ನೀ ಮರಿಸದೇ |
ಪುಣ್ಯನರನ ಮಾಡೊ ಪೂತೋಭಾವವೆಂದು |
ಧನ್ಯ ಜನ ಮಾನ್ಯಾ ಭಕ್ತಜನ ಪ್ರಸನ್ನೇ ೧
ಶಿವ ನಿನ್ನ ಶಿರದಲ್ಲಿ ಧರಿಸಿದೆ ಕಾರಣ ಪವಿತ್ರಂಗನಾದನೆಂದು |
ಅವನಿಯೊಳಗೆ ಮಹಾ |
ಕವಿಜನ ಪೇಳಿದ ಶ್ರವಣದಿಂದಲಿ ಭಕುತಿಯಿಂದಲಿ ನಿಂದೆ ೨
ದೂರದಿಂದಲಿ ನಿನ್ನ ಸ್ಮರಿಸಿದವರ ಪಾಪ |
ಹಾರಿಹೋಗುವದು ಸಿದ್ದಾ |
ಶ್ರೀರಮಣ ವಿಜಯವಿಠ್ಠಲರೇಯನ ಪಾದ |
ವಾರಿಜ ಪೊಗಳುವಂತೆ ಬುದ್ಧಿ ಪಾಲಿಸುವದು ೩

೪೮೦
ಶ್ರೀ ಮಧ್ವಮತ ಸಾಗರದೊಳಗೆ ಲೋಲಾಡಿ
ಆ ಮಹಾತತ್ವ ತಾರತಮ್ಯಗಳ ತಿಳಿದು
ಕಾಮ ಕ್ರೋಧಗಳೆಲ್ಲ ಹಳಿದು ಗುರು ಹನುಮಂತ
ಭೀಮ ಮಧ್ವಮುನಿಯ ಸಾರಿರಯ್ಯ | ಅಯ್ಯಯ್ಯಾ ಪ
ಅಂಜನೇಯ ಗರ್ಭದಲಿ ಜನಿಸಿ ಆಕಾಶದಲ್ಲಿ
ಕಂಜನಾಪ್ತನ ತುಡುಕಿ ಕಿಷ್ಕಿಂಧದಲಿ ಕಪಿ
ರಂಜನನ ಕೂಡಿ ಪಂಪಾ ತೀರದಲಿ ದೇವಂಜನ ಪಾದವ
ಕಂಜನಮಿತನಾಗಿ ಬಂದು ಮುದ್ರೆಯ ಧರಿಸಿ
ಜನಕಾತ್ಮಜಗೆಯಿತ್ತು ಅಕ್ಷರಿ ಎನೊ
ಭಂಜನವ ಮಾಡಿ ಲಂಕೆಯನುರಿಪಿ ಬಂದ ಪ್ರ
ಭಂಜನಿಯ ಭಜಿಸಿರಯ್ಯಾ | ಅಯ್ಯಯ್ಯಾ | ೧
ಧರ್ಮನಂದನೊಡನೆ ಜನಿಸಿ ಹಾಲಹಲ ಉಂಡು
ಸೀರ್ಮುಟ್ಟಿ ಪೋಗಿ ನಾಗನ ಗೆದ್ದು ಅರಗಿನ
ಅರ್ಮನೆಯ ದಾಟಿ ವನದೊಳಗೆ ಹಿಡಂಬನ ಶಾ
ರಿರ್ಮುರಿದು ಸೀಳಿ ಬಿಸಟು
ಕಿರ್ಮೀರ ದನುಜರ ಸದೆದು ಪೂತಂದು ಸು-
ಶರ್ಮಕನ ಬಿಗಿದು ಕಣದೊಳಗೆ ದುಶ್ಯಾಸನನ
ಚರ್ಮವನೆ ಸುಲಿದು ಸುಯೋಧನಾಂಕನಾದ
ನಿರ್ಮಳಾತ್ಮಕನ ಭಜಿಸಿರಯ್ಯಾ | ಅಯ್ಯಾಯ್ಯಾ ೨
ಹರಿಯೆ ಪರನೆಂದು ಬೊಬ್ಬಿಕ್ಕಿ ವಾದಿಗಳೆದೆ
ಬಿರಿಯೆ ದು:ಶಾಸ್ತ್ರಜ ಜರಿಯೆ ದುರ್ಮತಗಳು
ಪರಿಯ ಬಿಡದು ಠಕ್ಕೆ ಮೆರೆಯೆ ಧರೆಯೊಳಗೆ ಈ
ಪರಿಯೆ ಮುನಿಗಾರು ಸರಿಯೆ ಪೊರೆಯ ಭಕ್ತರಿಗೆ ಸುಧೆ
ಗರಿಯೆ ಜ್ಞಾನ ಮಾರ್ಗಾಂಕುರಿಯೆ ವೇದದ ಸಾರ
ನೆರಿಯೆ ರಿಪುಕಾಲ ಮದಕರಿಗೆ ಕೇಸರಿಯೆ ಒಪ್ಪುವ
ಮರಿಯೆ ಜಗದೋರಿ ಗುರುವರ್ಯರಂ
ಭಜಿಸಿರಯ್ಯಾ | ಅಯ್ಯಯ್ಯಾ ೩
ಅಜನಾಗಿ ಮುಂದೆ ಪಸರಿಸಿ ಬೆಳೆದು ಹರುಷದಲಿ
ತ್ರಿಜಗವನು ನಿರ್ಮಾಣವನು ಮಾಡಿ ಒಂದೊಂದು
ಸೃಜಿಸುವನು ಚಿತ್ರವಿಚಿತ್ರ ಗುಣಗಣವುಳ್ಳ
ವೃಜ ಜೀವ ಜಂತುಗಳನು ನಿಜವಾಗಿ
ಇವನೆಂದು ವೇದಗಳು ಸಾರುತಿವೆ
ಕುಜನಮತವನೆ ಪಿಡಿದು ಪುಸಿಯಿದು ಎಂದೆನ್ನದೆ
ಭಜಿಸಿ ಗುರುಪಥವಿಡಿದು ಸಂದೇಹವನೆ ತೊರೆದು
ಸುಜನರ ಶಿರೋಮಣಿಯಯ್ಯ | ಅಯ್ಯಾಯ್ಯಾ೪
ಜಾತಿ ಸಂಕರವಾಗಿ ಜಾತಿ ಧರ್ಮವ ತೊರೆದು
ಜಾತವೇದ ಸಯಜ್ಞ ಇಲ್ಲದಿದರೆ ವನಜ ಸಂ
ಜಾತ ಲೋಚನೆಗೆ ಪೇಳೆ ಜಾತಿ
ಮೌಕ್ತಿದಮಣಿ ನುಡಿದ ಕರುಣದಲಿ ದ್ವಿ
ಜಾತರನ ಉದ್ಧರಿಸ ಪೋಗೆನಲು ಜಯ ತನೋ
ಜಾತ ಪುಟ್ಟಿದನು ಇಳಿಯೊಳಗೆ ಮಧ್ಯಗೇಹರ
ಜಾತನಂ ಭಜಿಸಿರಯ್ಯ | ಅಯ್ಯಯ್ಯಾ | ೫
ಇಳಿಯೊಳಗೆ ಬಲವಂತನಾದ ಮತ ಮಧ್ವಮತ
ಸುಲಭವಾಗಿಹುದು ಸುಲಭರಿಗೆ ಕಮಲಕೇತಪನ
ಹೊಳಪು ಹೊಳೆದಂತೆ ವಿಕಸಿತಾ ಮಾಡಿ ಸುಜ್ಞಾನ
ಜಲಧಿಯೊಳಗಾಡಿಸುವುದು ಮಲತು ನಿಂತಿರ್ದ
ಕಲಿಮನದ ಮಾನವರಿಗೆ ಪ್ರಳಯನಂತಕನಂತೆ
ಹರಿನಾಮ ದಂಡವಾ
ಸೆಳೆದು ಹೊಡೆದೆಬ್ಬಿಸಿ ಹುತ್ತು ಜಲಹೊಗಿಪ
ಗುರುಕುಲತಿಲಕನಂ ಭಜಿಸಿರಯ್ಯಾ | ಅಯ್ಯಯ್ಯಾ |೬
ದುರವಾದಿಗಳ ಗಂಡ ಗಜದಭೇರುಂಡ ಸಂ
ಕರಣ ಪ್ರಾಣವನರದು ದುರ್ಮಾಯಿ ಮಿಥ್ಯದ
ತರುಬೇರು ಕೀಳಿ ಮೂರಾರೆರಡ್ಯೊಂದು ಕುಹಕ ಭಾಷ್ಯ |
ಮುರಿದು ಉರಹಿ
ಅರಿಗಳಂಗದ ಚರ್ಮ ಸುಲಿದು ಭೇರಿಗೆ ಹಾಕಿ ಹರಿಸೆ ಓಂಕಾರ
ಹರಿ ಪರನೆಂಬೊ ಬಿರುದಾಂತ ಪರಮ ಭಾಗವತರ
ಮಣಿಯಂ ಭಜಿಸಿಯ್ಯಾ | ಅಯ್ಯಯ್ಯಾ ೭
ಗುರುಕರುಣ ಪಡೆದ ಮಾನವನೆ ಸರ್ವಕೃತಾರ್ಥ
ಗುರುಕರುಣ ಪಡೆಯದಿದ್ದವನ ಜನ್ಮವೇ ವ್ಯರ್ಥ
ಗುರುವಿನನುಸುರಿಸಿ ಉಪದೇಶಕೊಳದಾ ಮಂತ್ರ
ಉರಗ ಉಪವಾಸ ತಂತ್ರ
ಗುರು ಮುನಿದು ಅವಘಡಿಸೆ ಹರಿ ಕರಿ ಕರುಣತಿಪ್ಪುವದು
ಗುರು ದಯಾಕರನಾಗೆ ಹರಿವೊಲಿದು ಸಲಹುವನು
ಗುರುವಾರು ಇವರವರೆಂದೆನದೆ ವರ ವೃಕೋದರನ
ಪಾದವ ನಂಬಿರೈಯ್ಯ | ಅಯ್ಯಯ್ಯಾ ೮
ಪದ್ಧತಿಯ ಕೇಳಿ ಶುದ್ಧಾತ್ಮರಿದು ವರಗುರು
ಮಧ್ವ ದುಗ್ಧಾಬ್ಧಿಯನು ಕಟಿದ ನವ ನವನೀತ
ಮುದ್ದೆಯನು ತೆಗೆದು ನವವಿಧ ಭಕುತಿರಸದಿಂದ
ಮೆದ್ದು ಸದ್ಭಾವದಲಿ ಸದ್ವೇಷ್ಣವರಾಗಿ ಮೃತ್ಯುವಿನ ಗೋನಾಳಿ
ಒದ್ದು ಕಾಲನ ಮೀರಿ ವೈಕುಂಠಪುರ ಸಾರಿ
ಮಧ್ವಾಂತರ್ಯಾಮಿ ಸಿರಿ ವಿಜಯವಿಠ್ಠಲನ
ಪಾದದ್ವಯವ ಭಜಿಸಿರಯ್ಯಾ ಅಯ್ಯಯ್ಯ ೯

ಸೋಮ ಸೋದರಿಯೆ :

೨೧೪
ಶ್ರೀ ಮಹಾಲಕುಮಿ ದೇವಿಯೆ,
ಕೋಮಲಾಂಗಿಯೆ ಸಾಮಗಾಯನ ಪ್ರಿಯೆ ಪ
ಹೇಮಗರ್ಭ ಕಾಮಾರಿ ಶಕ್ರಸುರ
ಸ್ತೋಮ ವಂದಿತಳೆ ಸೋಮ ಸೋದರಿಯೆ ಅ
ಬಟ್ಟುಕುಂಕುಮ ನೊಸಲೋಳೆ ಮುತ್ತಿನ ಹೊಸ
ಕಟ್ಟಾಣಿ ತ್ರಿವಳಿ ಕೊರಳೋಳೆ
ಇಟ್ಟ ಪೊನ್ನೋಲೆ ಕಿವಿಯೋಳೆ ಪವಳದ ಕೈಯ
ಕಟ್ಟ ಕಂಕಣ ಕೈಬಳೆ
ತೊಟ್ಟ ಕುಪ್ಪಸ ಬಿಗಿದುಟ್ಟ ಪೀತಾಂಬರ
ಘಟ್ಟಿ ವಡ್ಯಾಣ ಕಾಲಂದಿಗೆ ರುಳಿಗೆಜ್ಜೆ
ಬೆಟ್ಟಿಲಿ ಪೊಳೆವುದು ವೆಂಟಿಕೆ ಕಿರುಪಿಲ್ಲಿ
ಇಟ್ಟು ಶೋಭಿಸುವ ಅಷ್ಟಸಂಪನ್ನೆ ೧
ಸಕಲ ಶುಭಗುಣಭರಿತಳೆ ಏಕೋದೇವಿಯೆ
ವಾಕುಲಾಲಿಸಿ ನೀ ಕೇಳೆ
ನೋತನೀಯನ್ನ ಮಹಲೀಲೆ ಕೊಂಡಾಡುವಂಥ
ಏಕಮನವ ಕೊಡು ಶೀಲೆ
ಬೇಕು ಬೇಕು ನಿನ್ನ ಪತಿ ಪಾದಾಬ್ಜವ
ಏಕಾಂತದಿ ಪೂಜಿಪರ ಸಂಗವ ಕೊಡು
ಲೋಕದ ಜನರಿಗೆ ನಾ ಕರವೊಡ್ಡದಂತೆ
ನೀ ಕರುಣಿಸಿ ಕಾಯೆ ರಾಕೇಂದುವದನೆ ೨
ಮಂದರೋದ್ಧನರಸಿಯೆ ಇಂದಿರೆ ಯೆನ್ನ
ಕುಂದು ದೋಷಗಳಳಿಯೆ
ಅಂದ ಸೌಭಾಗ್ಯದ ಸಿರಿಯೆ ತಾಯೆ ನಾ ನಿನ್ನ
ಕಂದನು ಮುಂದಕ್ಕೆ ಕರೆಯೆ
ಸಿಂಧುಶಯನ ಸಿರಿ ವಿಜಯವಿಠ್ಠಲರೇಯ
ಎಂದೆಂದಿಗೊ ಮನದಿಂದಗಲದೆ ಆ
ನಂದದಿಂದಲಿ ಬಂದು ಮುಂದೆ ಕುಣಿಯುವಂತೆ
ವಂದಿಸಿ ಪೇಳಮ್ಮ ಸಿಂಧುಸುತೆಯಳೆ೩

೨೬೬
ಶ್ರೀ ಮಾರುತನ ಮಾನಿನಿ ಭಾರತೀದೇವಿ
ಆ ಮಹಾಭಕುತಿಗಭಿಮಾನಿ ಪ
ಕಾಮಾಂತಕ ಸುತ್ರಾಮ ಕಾಮ ರವಿ
ಸೋಮವಿನುತೆ ಮದಸಾಮಜ ಗಮನೆ
ನೀಲಕುಂತಳೆ ಮೋಹನ್ನೇ-ಸುವಾಣಿ ಚನ್ನೆ
ಬಾಲಾರ್ಕ ತಿಲಕರನ್ನೆ
ಫಾಲೆ ವಿಶಾಲೆ ಗುಣರನ್ನೆ -ಕುಂದರದನ್ನೆ
ಮೂರ್ಲೋಕದೊಳು ಪಾವನ್ನೆ
ಕಾಳವ್ಯಾಳ ವೇಣಿ ಮ್ಯಾಲೆ ರ್ಯಾಗಟೆ ಪೊ
ನ್ನೊಲೆ ಚವುರಿಗೊಂಡ್ಯ ಹೆರಳು ಭಂಗಾರ ಕು-
ಟ್ಟಿಲ ಚಂಪಕ ನಾಸಿಕ ನೀಲೋ
ತ್ಪಲೆ ನೇತ್ರಳೆ ಪಾಂಚಾಲಿ ಕಾಳಿ ನಮೋ ೧
ಪೊಳಿವೊ ಕೆಂದುಟಿ ನಸುನಗೆ ಪತ್ತು ದಿಕ್ಕಿಗೆ
ಬೆಳಕು ತುಂಬಿರಲು ಮಿಗೆ
ಥಳಕು ವೈಯಾರದ ಬಗೆ ಮೂಗುತಿಸರಿಗೆ
ಸಲೆ ಭುಜಕೀರ್ತಿ ಪೆಟ್ಟಿಗೆ
ಥಳಥಳಿಸುವ ಕೊರಳೊಳು ತ್ರಿವಳಿ ನ್ಯಾ
ವಳಿ ತಾಯಿತು ಸರಪಳಿಯ ಪದಕ ಪ್ರ
ವಳ ಮುತ್ತಿನ ಸರಪಳಿಗಳು ತೊಗಲು
ಎಳೆ ಅರುಣನ ಪೋಲುವ ಕರತಳವ ೨
ಕಡಗ ಕಂಕಣ ಮಣಿದೋರೆ-ದೋಷ ವಿದೂರೆ
ಝಡಿತದುಂಗುರ ಶೃಂಗಾರೆ
ಮುಡಿದ ಮಲ್ಲಿಗೆ ವಿಸ್ತಾರೆ-ಕಂಚುಕಧರೆ
ಉಡಿಗೆ ಶ್ವೇತಾಂಬರ ನೀರೆ
ಬಡ ನಡು ಕಿಂಕಿಣಿ ನಿಡುತೋಳ್ಕದಳಿಯ
ತೊಡೆ ಪದದುದಿಗೆ ಉಡುಗೆಯಿಂದೊಪ್ಪುತ
ಪೊಡವಿಗೊಡೆಯ ನಮ್ಮ ವಿಜಯವಿಠ್ಠಲನ್ನ
ಅಡಿಗಳರ್ಚಿಪುದಕೆ ದೃಢಮನ ಕೊಡುವಳ ೩

೨೦೦
ಗೋಪಿಕಾ ಗೀತೆ
ಶ್ರೀ ಲತಾಂಗಿರ ರಮಾಕೃಷ್ಣನು
ಬಾಲ ಲೀಲೆಯ ಜಗಕೆ ತೋರುತ ೧
ಆಡಿಪಾಡುತ ಕೂಡಿ ರಮಿಸುತ
ಗಾಡಿಗಾರನು ಅವಳ ಹೆಗಲನೇರಿಸಿ ೨
ತಾನೆ ಸುಂದರೀ ಎಂದು ಗರ್ವಿಸೆ
ದೀನನಾಥನು ಅದೃಶ್ಯನಾದನು ೩
ಅಗರು ಕಸ್ತೂರೀ ಪೂಸಿ ಹೃದಯಕೇ
ಮೊಗರು ಕುಚಗಳ ಮುಖದ ಕಮಲವು ೪
ಎತ್ತ ಪೋದನೋ ರಂಗ ಎನುತಲಿ
ಚಿತ್ತ ಭ್ರಮೆಯಲಿ ಹುಡುಕುತ್ತಿದ್ದರು ೫
ಎಲ್ಲಿ ಪೋದನೋ ಕೃಷ್ಣ ಎನುತಲಿ
ಮತ್ತೆ ಸಖಿಯರು ಹುಡುಕುತ್ತಿದ್ದರು ೬
ಸುತ್ತ ಗೋಕುಲಾದೊಳಗೆ ಸ್ತ್ರೀಯರೂ
ಮತ್ತೆ ಕೃಷ್ಣನ ಪಾದ ಕಾಣದೇ ೭
ಗಿಳಿಯು ಕೋಗಿಲೇ ಹಂಸ ಭೃಂಗನೇ
ನಳಿನನಾಭನ ಸುಳಿವು ಕಂಡಿರಾ೮
ಕಂದ ಮೂಲವೇ ಜಾಜಿ ವೃಕ್ಷವೇ
ಇಂದಿರೇಶನ ಸುಳಿವು ಕಂಡಿರಾ ೯
ಇಂದಿರೇಶನು ನಮ್ಮನು ವಂಚಿಸೀ
ಮಂದಭಾಗ್ಯರ ಮಾಡಿ ಪೋರನು೧೦
ಶ್ರುತಿಗೆ ಸಿಲುಕದ ದೋಷದೂರನೇ
ವ್ರತವ ಕೆಡಿಸಿರೆ ಎಲ್ಲಿಗ್ಹೋಗೋಣ೧೧
ಇಷ್ಟ ಪರಿಯಲಿ ಸ್ತೋತ್ರಮಾಡಲು
ರಂಗರಾಯನು ಬಂದು ಸೇರಿದ ೧೨
ಬಹಳ ಪರಿಯಲಿ ಸ್ತೋತ್ರಮಾಡಲು
ಕೃಷ್ಣರಾಯನು ಬಂದು ಸೇರಿದ೧೩
ಮದನನಯ್ಯನಾ ಮುದದಿ ನೆನೆದರೆ
ನದಿಯ ತೀರದಿ ವಿಜಯವಿಠ್ಠಲ೧೪
ನದಿಯ ತೀರದ ತೀರ್ಥಪಾದರುಸಲಿಹ ಭಕುತರ ಪಾಲಿಸೂವನು ೧೫

೧೩೭
ಶ್ರೀ ವನಜಲೋಚನ ಭವ ಮೋಚನಾ |
ಭಾವಿಸುವೊದು ಸೂಚನಾ |
ಪಾವನರಂಗಾ | ಜೀವಾಂತರಂಗ | ಜೀವ ತುರಂಗಾ |
ಗ್ರೀವ ರಿಪು ಭಂಗಾ | ದೇವ ಎನ್ನಯ |
ಹೃದ್ದಾವರೆಯಲಿ ನಿಲ್ಲು |
ಆವಾವ ಬಗೆ ಸು | ರೂಹ | ಆವಾಗ ತೋರುತ ಪ
ನಂದನಂದನಾ ಆನಂದಾ | ನಾಗನಾ | ಬಂಧಾ |
ಹಿಂದುಗೈಸಿದ ಮುಕುಂದಾ | ಅಂದು
ಬೀಡಾದೆಕ್ಕೆಂದಾ | ದಾ ಖಳನ ಕೊಂದೆ |
ನಂದವ್ರಜದ ಗೋವಿಂದಾ | ಯಶೋದೆ ಕಂದಾ |
ಮಂದನು ನಾನು | ಇಂದೀಗ ನೀನು |
ಬಂದು ಸುರಧೇನು | ಪೊಂದು | ಇನ್ನೇನು |
ಮುಂದಣ ಇಹಸುಖ | ಒಂದು ವಲ್ಲೆನು ಸಖ |
ಕಂದ ನಂದದಿ ನೋಡು | ಕುಂದದ ವರವ ಕೊಡು |
ಎಂದೆಂದಿಗೆ ಪದದ್ವಂದಾರವಿಂದಕೆ | ವಂದಿಸುವೆನು ಬಾ |
ಲೇಂದು ವದನ ಪೊರಿಯೋದೆ ಲೋಕದ ತಂದೆ ೧
ಮಂದರಧರ ಮಾಧವಾ | ಮಹದಾದಿ ದೇವಾ |
ಅಂದವಾರಿಗೆ ಸಂಜೀವಾ | ಇಂದ್ರತನಯ
ಬೋವಾ | ಇಚ್ಛೈಸಿದರೆ ಕಾವಾ |
ತಂದೀಯ ತಂದಾ ಪ್ರಭಾವಾ | ಶ್ರೀ ವಾಸುದೇವ |
ನಿಂದು ಕರೆವೆನು ಒಂದೆ ಮನಸನು |
ತಂದು ವೇಗಾನು | ಸಂಧಿಸೆಂಬೆನು |
ಚಂದ ಚಂದದಿ ನಿನ್ನನಂದಕೆ ಹಿಗ್ಗುವೆ |
ನೊಂದು ಕೂಗಲು ಸೈರಂದ್ರಿಯ ಸಾಕೀದ ವೃಂದಾವನ ಪತಿ |
ವೃಂದಾರಕ ಮುನೇಂದ್ರ ಸನಕಸನಂದನ ಯತಿಗಳ
ಬಂಧು | ಅತಿ ದಯಾಸಿಂಧು || ೨
ಶ್ರೀಲತಾಂಗೀಯ ರಮಣಾ ಶೃಂಗಾರ ಚರಣಾ |
ಮಾಲಾ ಕೌಸ್ತುಭಾ ಭರಣಾ |
ಶೀಲಾ ಸದ್ಗುಣಗಣ ಸಿದ್ಧಸವ್ಯಾಕಾರಣ |
ಲೀಲಾವತಾರ ಧಾರಣಾ | ನಾರಾಯಣ
ನೀಲಲೋಹಿತ ಪಾಲಿಪನೆ ಪ್ರೀತ |
ಮೂಲೋಕದ ದಾತಾ | ಲಾಲೀಸಿ ಮಾತಾ |
ಪಾಲ ಸಾಗರಶಾಯಿ ಪತಿತ ನರನ ಕಾಯಿ |
ಮೇಲುಗಿರಿಯಲಿಪ್ಪಾ | ಮೇಲಾದ ತಿಮ್ಮಪ್ಪಾ
ಕಾಲಕಾಲಕೆ ನಿನ್ನಾಳಿನ ಕೂಡಣ | ವಾಲಗ ವೆಂಕಟ |
ಶೈಲಾ ವಿಜಯವಿಠ್ಠಲಾ | ನೀಯೋ ಗೋಪಾಲಾ ೩

೨೧೭
ಶ್ರೀ ವನಿತೆ ವೈನತೇಯ ವಾರುತೆ ದೇವಾದಿ ವರವಿನುತೆ
ಕಾವದು ಯೆನ್ನ ನೀ ವದಿಗಿ ಮುನ್ನೆ ಈವದು ವರ ಆವದುವಲ್ಲೆ
ದೇವಿ ನಿನ್ನಯ ರಾಜೀವ ಚರಣದ
ಸೇವೆಯ ಪಾಲಿಸು ಕೋವಿದರೊಡನೆ ಪ
ಸಮಸ್ತಲೋಕ ವಂದಿತೆ ಸಂತತ ಮತ್ತೆ
ತಾಮಸ ಜ್ಞಾನ ಹರತೆ ಸಾಮಗಾಯನ ಪ್ರೀತೆ ಸಕಲವಿದ್ಯಾತೀತೆ
ರೋಮ ರೋಮ ಗುಣ ಭರಿತೆ
ರಾಮನ್ನ ಪದ ನಾಮವನ್ನು
ನಾ ಮರೆಯದಂತೆ ನೀ ಮನಸು ಕೊಡು
ಹೇಮಾಂಬರೆ ಕಾಂಚಿದಾಮೆ ಅಮಮ ನಿ-
ಸ್ಸೀಮ ಮಹಿಮೆ ಭಕ್ತಸ್ತೋಮ ವನಧಿ ಸೋಮೆ
ಕಾಮ ಜನನಿ ತ್ರಿಧಾಮೆ ಪುಣ್ಯನಾಮೆ
ಕೋಮಲಾಂಗಿ ಸತ್ಯಭಾಮೆ ರಮೆ ಪೂರ್ಣ
ಕಾಮೆ ಸುರಸಾರ್ವಭೌಮೆ ೧
ಚಂದನ ಗಂಧಲೇಪಿನೀ ಚತುರವಾಣೀ
ಮಂದಹಾಸಗಮನೀ
ಗಂಧಕಸ್ತೂರಿ ಜಾಣಿ ಗಂಭೀರ ಗುಣಶ್ರೇಣಿ
ಸಿಂಧುತನಯೇ ಕಲ್ಯಾಣಿ
ಇಂದಿರೆ ಪದ್ಮಮಂದಿರೆ ಕಂಬು
ಕಂಧರೆ ಸರ್ವಸುಂದರೆ ಮಾಯೆ
ಬಂದೆನು ಕರುಣದಲಿಂದ ನೋಡು ಶತ –
ಕಂಧರರಿಪು ಸುಖಸಾಂದ್ರ ನಿರಾಮಯೆ
ಹಿಂದಣ ಕಲ್ಮಷ ವೃಂದಗಳೋಡಿಸಿ
ಇಂದು ದೈನ್ಯದಲಿ ಬಂದು ಮರೆಬಿದ್ದು
ನಿಂದೆ ನಮೋನಮೋ ಯೆಂದೆ ೨
ಘನ್ನ ಲಕ್ಷಣ ಪ್ರತಾಪೆ ನಿತ್ಯ ಸಲ್ಲಾಪೆ
ಅನ್ನಂತಾನಂತ ರೂಪೆ
ಸನ್ನುತಜನ ಸಾಮೀಪೆ ಸಕಲ ಪಾಪ ನಿರ್ಲೇಪೆ
ಕನ್ಯಾಮಣಿಯೆನಿಪೆ ನಿನ್ನ ಕಡೆಗಣ್ಣಿನ ನೋಟ-
ವನ್ನು ಹರಹಿ ಹಿರಣ್ಯಗರ್ಭಾದಿ-
ಯನ್ನು ಅನುದಿನ ಧನ್ಯನ ಮಾಳ್ಪಳೆ
ಅನ್ಯರಿಗೆ ಕಾರ್ಪಣ್ಯ ಬಡದಂತೆ
ಚನ್ನ ವಿಜಯವಿಠ್ಠಲನ್ನ ಪೂಜಿಪ ಗುರು
ರನ್ನೆ ಪುರಂದರರನ್ನ ಪೊಂದಿಸು ಸಂ-ಪನ್ನೆ ಯೆನ್ನ ಪ್ರಾಸನ್ನೆ ೩

೫೩೧
ಶ್ರೀನಾಥ ಶ್ರೀನಾಥ ಶ್ರೀನಾಥ
ಮೋಹಿನೀ ರೂಪ ತಾ ತಾಳಿದಾನೆ ಸುಕಲಾಪ
ತಾನೋಡಿಸುವುದು ಹೃತ್ತಾಪ
ವನಂಬೆನೆ ಹರಿಯ ಪ್ರತಾಪ ಪ
ಬಂಗಾರದ ಲತೆಯಂತೆ ಬಳುಕುವಳು
ಬಾಜು ಬಂದಿಗೆ ಗೊಂಡೆಗಳ ಕಟ್ಟಿಹಳು
ಮುಂಗಾಲಿಲೆ ನಿರಿಗಿಗಳ ಚಿಮ್ಮುವಳು
ಮೋಹನ ಮಾಲೆಗಳ ಕಟ್ಟಿಹಳು
ಕುಂಭ ಕುಚದ ಭಾರಕ್ಕೆ ತಡಿಯಳೂ
ತುದಿಬೆರಳಲಿ ಗಲ್ಲವನೊತ್ತಿಹಳು
ರಂಗು ಕೇಸರಿ ಗಂಧ ಹಚ್ಚಿಹಳು
ರಾಜೀವದ ಮಂಜರಿಯ ಪೋಲುವಳು
ಹೊಂಗ್ಯಾದಿಗೆ ಪೋಲುವ ಮೈಬಣ್ಣ
ಹೊಮ್ಮಸದಲಿ ಹೋಲುವ ಈ ಹೆಣ್ಣು
ಹಿಂಗಡೆಯಲಿ ವರ ಹೆರಳು ಭಂಗಾರ
ಹಿಮ್ಮಡಿ ಬಡಿಯೋದು ಸರ್ಪಾಕಾರ
ಭಂಗಿಸುವಳು ಬಹು ದೈತ್ಯರ ಹೃದಯ
ಬಹು ವಿಲಾಸದಿ ತೋರ್ಪಳು ಸಖಿಯ
ಅಂಗಜದರು ಗಂಧಕೆ ಅಳಿವೃಂದ
ಆಡುತಲಿಗೆ ಝೇಂಕಾರಗಳಿಂದಾ
ಸಂಗಡನೆರದ ಸುರಾಸುರರಿಂದ
ಸೊಕ್ಕ ಮೋಹಿಸಿದಳು ಸತಿ ಚಲುವಿಂದಾ
ಮಂಗಳಮುಖಿ ನಮ್ಮಂಗಳ ಮೋಹಿಸಿ
ಭಂಗನ ಪಡಿಸುವಳೈ ತ್ರಿಜಗವ
ಜಗಂಗಳ ಪಾಲಿಸುವಳು | ಮನ
ಸಂಗಡ ಅಪಹರಿಸುವಳು | ಜಡ
ಜಂಗಮಲಿಗೆ ಬಹು ಪ್ರೀತ್ಯಾಸ್ಪದಳು
ಸಾರಂಗಿ | ಸಾರಂಗಿ | ಸಾರಂಗೀ
ಸಾಂಬಮದ ಭಂಗಿ | ಬಹಳ ಸುಖಸಂಗಿ
ಸುಂದರಿ ಲಲಿತಾಂಗಿ | ಮೋಹನಾಪಾಂಗೀ
ಬಡು ಹೆಂಗಲ್ಲ ಈಕೆ ಬಹುಭಂಗ
ಬಡುವಿರಿ ಜ್ವಾಕೆ || ಶ್ರೀನಾಥ || ೧
ಕನ್ನಡಿಯಂದದಿ ಪೋಲುವ ಕಪೋಲ
ಕರ್ಪೂರ ರಂಜಿತ ವರ ತಾಂಬೂಲ
ಕಣ್ಣಿಗ್ಹಚ್ಚಿಹಳು ಕನಕದ ಕೋಲಾ
ಕಾಮಿನಿಯಂದಡಿ ತೋರ್ಪಳು ಜಾಲಾ
ಬಿನ್ನುಡಿ ಹಾಕಿದ ಚಂದ್ರದ ಕುಪ್ಪುಸ
ಚಪಲಾಕ್ಷಿಯ ನೋಟದ ಬಲು ರಭಸಾ
ಕರ್ಣಾಯತ ನೇತ್ರಗಳ ವುಲ್ಲಸಾ
ವುನ್ನಂಕಾ ನಾಶಿಕದ ಬುಲಾಕು
ವಜ್ರಮಯದ ವರಮಖರೆದ ಬೆಳಕು
ಕರ್ಣದಿ ರತ್ನಖಚಿತ ತಟಾಂಕಾ
ಕುಸುರು ಹಚ್ಚಿದ ಬಾಹುಲಿಗಳ ಬಿಂಕ
ಸಣ್ಣ ನಡುವಿನೊಯ್ಯಾರದ ನಲ್ಲೆ
ಸರಸಿಜನಾಭನ ಸೃಷ್ಟಿ ಇದಲ್ಲೆ
ಬಣ್ಣಿಸಲಳವಲ್ಲವು ಸೌಂದರ್ಯ
ಬಿಡಿಸುವುದು ಕೇಳ ಮುನಿಗಳ ಧೈರ್ಯ
ಬೆಣ್ಣೆಯಂತೆ ಮೃದುವಾದ ಶರೀರ
ಭಾಗ್ಯಹೀನರಿಗೆ ಇದು ಬಲುದೂರಾ
ಕನ್ನೆ ಶಿರೋಮಣಿ | ಕಾಮನ ಅರಗಿಣಿ
ಕೌಸ್ತುಭಮಣಿಗಳ ಹಾರೇ
ಸುವರ್ಣವರ್ಣ ಸುಕುಮಾರೇ
ಮೋಹನ್ನರಸನೆ ಗಂಭೀರೇ
ಮೋಹನ್ನೆ ಮಧುರ ಮಧುರಾಧರ ಮಂಜುಳ
ವಕುಜಲರೆ ಬಹೋಚ್ಚಧರೆ ಛÅಪ್ಪನ್ನ
ಛಪ್ಪನ್ನ ದೇಶಗಳು ಚಲುವರಿದ್ದರೂ
ಚಪಲಾಕ್ಷಿಗೆ ಸಮರಾರೇ
ಗತ ಪುಣ್ಯದಿಂದ ಕೈಸೇರುವಳಲ್ಲದೇ
ಕಾಮಾಂಧಸ್ರಿಗತಿ ದೂರೇ
ಈ ಹೆಣ್ಣು | ಈ ಹೆಣ್ಣು | ಈ ಹೆಣ್ಣು
ಸುರಾಸುರರನ್ನೆ ಮೋಹಿಸಳು
ಚನ್ನ ಮನಕೆ ತರಳಿನ್ನ ಬಿಡು
ವಿಷದ್ಹಣ್ಣು ಅಪೇಕ್ಷಿಸೆ ಮಣ್ಣು ಕೂಡಿಸುವಳು
ತನ್ನ ಜನರಿಗಮೃತಾನ್ನ ಕೊಡುವಳು
ಮಾನ್ಯಳು ಪರಮಸೋನ್ಯಳು |
ಸುಗುಣ ಅರಣ್ಯ ವಿನಾಶೇ
ಬ್ರಹ್ಮಾಂಡಜಾದ್ಯಂಗೀತೇ || ಶ್ರೀನಾಥ || ೨
ಹುಡುಗಿ ನೋಡು ಹೊಸ ಪರಿಯಾಗಿಹಳು
ಹದ ಮೀರಿದ ಯವ್ವನದಿ ಮೆರೆವಳು
ಮುಡಿಯಲಿ ಮಲ್ಲಿಗಿ ಅರಳು ತುಂಬಿಹಳು
ಮಂದಸ್ಮಿತದಲಿ ಮೋಹಿಸುತಿಹಳು
ಬೆಡಗಿನಿಂ ನುಡಿಯ ಸವಿಯ ತೋರುವಳೂ ||
ಬಹು ವಿಧದಾಭರಣಗಳನ್ನಿಟ್ಟಹಳು
ನಡಿಗಿಗಳಿಂದ ನಾಚುತ ಹಂಸ
ನವಮಣಿ ಚಂದ್ರರ ಕೆಡಿಸಿತು |
ನಂಬೆ ಜಡಿತ ಮುತ್ತಿನ ತಾಯಿತ ಕಠಾಣೀ
ಜಗವನು ಮೋಹಿಸುವಳು ಸುಶ್ರೋಣೀ
ಬಿಂಕದ ನುಡಿ ಸೊಬಗಿನ ಚಂದಾ
ಅಡಗಿದವೆ ಪಿತಭೃಂಗಗಳಿಂದಾ
ಹಿಡಗಿ ಮರಗಿ ಮಧ್ಯಶಮನ ಮರಗೀ
ಹಿರಿಮೈಸಿತು ಕೇಸರಿ ಬಹು ಸೊರಗೀ
ಉಡುಪತಿ ಕೋಟಿ ಪ್ರಭ ಧಿಕ್ಕಾರಾ
ಉಲ್ಲಾಸದಿ ಮನ ಮುಖ ಚಂದಿರಾ
ನಡಿಗಗಳಿಂದೆನೆ ರಾಜಿಸುತಿ ಹೋದೆ
ನವರತ್ನದಯದೆ ಮಯದ ಫಣಿಕಟ್ಟು
ಮೇಲ್ಪೊಡವಿವೊಳಗೆ ಪಡಿಗುಣಕ ಕಡಿಯಿಲ್ಲಾ
ಸುಳ್ಳುನುಡಿಯಿಲ್ಲಾ ಯೆನ್ನೊಡೆಯಾ
ಶ್ರೀ ವಿಜಯ ವಿಠ್ಠಲನಲ್ಲದೆ ಎಲ್ಲಿಂದ ಬಂದಳೋ ಕೆಳದೀ
|| ಶ್ರೀನಾಥ || ೩

೧೩೬
ಶ್ರೀನಿವಾಸನ ಕ್ಷೇತ್ರ ಎಂಥಾದೊ
ಮಾನಿಸರಿಗೊಶವಲ್ಲ ಪೊಗಳಿ ಪೇಳುವುದು ಪ
ಮೇಧಾದಿ ಮುನಿ ತನ್ನ ತಪೋಸಿದ್ಧಿಗೆ ಸರ್ವ |
ಮೇದಿನಿ ತಿರುಗಿ ಬರುತಲಿ ಇತ್ತಲು |
ಸಾಧನಕೆ ಸೌಮ್ಯವಾದ ಭೂಮಿಯನು ನೋಡಿ ಇವ |
ಮಾಧವನ ಒಲಿಸಿದನು ಮಣಿ ಮುಕ್ತಿ ತೀರದಲಿ೧
ನೆಸಗಿದ ತಪಕೆ ಮೆಚ್ಚಿ ಹರಿ ಒಲಿದ ತೀವ್ರದಲಿ |
ಬಿಸಿಜದಳ ಲೋಚನೆ ಲಕುಮಿಯಿಲ್ಲೀ ||
ಎಸೆವ ಮಂಜರಿ ವೃಕ್ಷದಲಿ ವಾಸವಾಗಿ |
ವಸುಧಿಯೊಳು ವಾಸವಾಗಿ ಅಗ್ರದಲಿ ಮೆರೆದನು ೨
ಪರಮೇಷ್ಠಿ ಬಂದು ಈ ಕ್ಷೇತ್ರದಲಿ ನಿಂದು ಚ
ತುರ ಮೂರ್ತಿಗಳ ಭಜಿಸಿ ವರ ಪಡೆದ
ಧರೆಯೊಳಗೆ ಆವನಾದರೆ ಬರಲು ನೀನೊಲಿದು
ಪರಮ ಗತಿ ಕೊಡು ಎಂದು ಸ್ತುತಿಸಿದನು ಹರಿಯ೩
ಇಲ್ಲಿಗೆ ಬಂದು ಸತ್ಕರ್ಮವನು ಮಾಡಿದಡೆ |
ಎಲ್ಲ ಕ್ಷೇತ್ರದಲಿ ಮಾಡಿದ ಫಲಕಿಂತ |
ಎಳ್ಳಿನಿತು ಮಿಗಿಲೆನಿಸಿ ಪುಣ್ಯ ತಂ | ದುಣಿಸುವುದು |
ಎಲ್ಲೆಲ್ಲಿ ಇದ್ದರು ಸ್ಮರಣೆ ಮಾಡಿರೊ ಜನರು ೪
ಸುಗಂಧ ಪರ್ವತವಾಸ ಪುರುಷೋತ್ತಮ |
ನಿಗಮಾದಿಗಳಿಗೆ ಅತಿದೂರತರನೋ |
ಸುಗುಣನಿಧಿ ವಿಜಯವಿಠ್ಠಲರೇಯ ಸರ್ವದ |
ಗಗನದಲಿ ಪೊಳೆವನು ಬ್ರಹ್ಮಾದಿಗಳ ಸಹಿತಾ ೫

೭೫
ಶ್ರೀಪತಿಯ ನೈವೇದ್ಯ ಕೊಡುವದು
ಧೂಪದಾಂತರ ಭೂಮಿಶೋಧನ
ಆಪದಿಂ ಮಂಡಲವ ಮಾಡುತ ರಂಗವಲಿ ಹಾಕಿ
ಸೂಪ ಅನ್ನವು ಅಗ್ನಿಕೋಣದಿ
ಆ ಪರಮ ಅನ್ನವನು ಈಶಾ
ನ್ಯಾಪೆಯಾಲೇಹಗಳ ನೈರುತದಲಿ ಇಟ್ಟು ತಥಾ ೧
ವಾಯುದಿಶದಲಿ ಉಪಸುಭೋಜ್ಯವು
ವಾಯಸಾನ್ನದ ಮಧ್ಯ ಘೃತಸಂ
ಸ್ತೂಯಮಾನ ನಿವೇದನವು ಈ ಕ್ರಮದಿ ಹೀಂಗಿಟ್ಟು
ಬಾಯಿಯಿಂದಲಿ ದ್ವಾದಶ ಸ್ತುತಿ
ಗಾಯನದಿ ನುಡಿಯುತಲಿ ಈ ಕಡೆ
ಆಯಾ ಅಭಿಮಾನಿಗಳು ದೇವತೆಗಳನು ಚಿಂತಿಸುತ ೨

ಓದನಕ ಅಭಿಮಾನಿ ಶಶಿಪರ
ಮೋದನಕ ಅಭಿಮಾನಿ ಭಾರತಿ
ಆದಿವಾಕರ ಭಕ್ಷ ಕ್ಷೀರಾಬ್ಧೀಜೆ ಸರ್ಪಿಯಲಿ
ಸ್ವಾದುಕ್ಷೀರಕ ವಾಣಿ ಮಂಡಿಗಿ
ಲೀ ದ್ರುಹಿಣನವನೀತ ಪವನಾ
ದಾದಧಿಗೆ ಶಶಿವರುಣ ಸೂಪಕೆ ಗರುಡ ಅಭಿಮಾನಿ ೩
ಶಾಕದಲಿ ಶೇಷಾಮ್ಲ ಗಿರಿಜಾ
ನೇಕನಾಮ್ಲದಿ ರುದ್ರಸಿತದಲಿ
ಪಾಕಶಾಸನ ಶೇಷುಪಸ್ಕರದಲ್ಲಿ ವಾಕ್ಪತಿಯೂ
ಈ ಕಟು ಪದಾರ್ಥದಲಿ ಯಮ ಬಾ
ಹ್ಲೀಕ ತಂತುಭದಲ್ಲಿ ಮನ್ಮಥ
ನೇಕ ವ್ಯಂಜನ ತೈಲ ಪಕ್ವದಿ ಸೌಮ್ಯನಾಮಕನೂ ೪
ಕೂಷುಮಾಂಡದ ಸಂಡಿಗಿಲಿ ಕುಲ
ಮಾಷದಲಿ ದಕ್ಷ ಪ್ರಜಾಪತಿ
ಮಾಷ ಭಕ್ಷದಿ ಬ್ರಹ್ಮಪುತ್ರನು ಲವಣದಲಿ ನಿಋತಿ
ಈ ಸುಫಲ ಷಡ್ರಸದಿ ಪ್ರಾಣ ವಿ
ಶೇಷ ತಾಂಬೂಲದಲಿ ಗಂಗಾ
ಆ ಸುಕರ್ಮಕೆ ಪುಷ್ಕರನು ಅಭಿಮಾನಿ ದೇವತೆಯೂ ೫
ಸಕಲ ಭಕ್ಷ್ಯಗಳಲ್ಲಿ ಉದಕದಿ
ಭುಕು ಪದಾರ್ಥಕೆ ವಿಶ್ವ ಮೂರುತಿ
ಮುಖದಲೀ ನುಡಿ ಅಂತಿಲೀ ಶ್ರೀ ಕೃಷ್ಣ ಮೂರುತಿಯ
ನಖ ಚತು ಪದಾರ್ಥದಲಿ ಆ ಸ
ಮ್ಯಕು ಚತುರವಿಂಶತಿ ಅಭಿಮಾ
ನಿಕರ ಚಿಂತಿಸಿ ಸರ್ಪಿ ಸಹ ಶ್ರೀ ತುಳಸಿಯನು ಹಾಕಿ೬
ಕ್ಷೀರ ದಧಿ ಕರ್ಪೂರ ಸಾಕ
ರ್ಜೀರ ಪನಸ ಕಪಿಥ್ಥ ಪಣ್ಕದ
ಳೀರಸಾಲ ದ್ರಾಕ್ಷ ತಾಂಬೂಲದಲಿ ಚಿಂತನೆಯೂ
ಪೂರ ಶಂಖದಿ ಉದಕ ಓಂ ನಮೊ
ನಾರೆಯಣಾ ಅಪ್ಟಾಕ್ಷರವು ತನ
ಮೋರೆ ಮುಚ್ಚಿ ಶತಾಷ್ಟವರ್ತಿಲಿ ಮಂತರಿಸಿ ತೆರೆದೂ೭
ಸೌರಭೀ ಮಂತ್ರದಲಿ ಪ್ರೇಕ್ಷಿಸಿ
ತೋರಿ ತೀವ್ರದಿ ಮುದ್ರಿ ನಿರ್ವಿಷ
ಮೂರೆರಡು ಮೊದಲಾಗಿ ಶಂಖವು ಅಂತಿಮಾಡಿ ತಥಾ
ಪೂರ್ವ ಆಪೋಶನವು ಹೇಳಿ ಅ
ಪೂರ್ವ ನೈವೇದ್ಯವು ಸಮರ್ಪಿಸಿ
ಸಾರ್ವಭೌಮಗ ಉತ್ತರಾಪೋಶನವು ಹೇಳಿ ತಥಾ ೮
ಪೂಗ ಅರ್ಪಿಸಿದಂತರದಿ ಅತಿ
ಬ್ಯಾಗದಲಿ ಲಕ್ಷ್ಯಾದಿ ನೈವೇ
ದ್ಯಾಗ ಅರ್ಪಿಸಿ ತಾರತಮ್ಯದಿ ಉಳಿದ ದೇವರಿಗೆ
ಸಾಗಿಸೀ ಶ್ರೀ ಹರಿಯ ಸಂಪುಟ
ದಾಗ ನಿಲ್ಲಿಸಿ ವೈಶ್ವದೇವವು
ಸಾಗಿಸೀ ಶ್ರೀ ವಿಜಯವಿಠಲನ ಧೇನಿಸುತ ಮುದದಿ೯

೭೬
ಶ್ರೀಮದನಂತನೀತಾ ಶ್ರೀಮದನಂತನೀತಾ |
ಸೀಮರಹಿತಾ ಮಹಿಮನೀತಾ |
ನಾಮ ನೆನೆಯೆ ಒಲಿದು ನಿಷ್ಕಾಮ ಫಲವ ನೀವಾನೀತ
ಶ್ರೀಮದಾನಂತನೀತನು ಪ
ಆದಿದೈವನೀತಾ ಜೀವಾದಿಗಳಿಗಭಯದಾನೀತಾ |
ಶ್ರೀಧರಣಿ ದುರ್ಗಾರಮಣನಾದಾತನೊದಾನೀತಾ |
ವೇದಪಾಲಕನೀತಾ ಸನಕಾದಿಗಳಿಗೆ ಪ್ರೀತಾನೀತಾ |
ಕ್ರೋಧ ದೈತ್ಯರ ಸದೆದು ನಿತ್ಯ ಸಾಧುಗಳ ಕಾಯಿದನೀತಾ೧
ಗಜವರದನೀತಾ ಗಂಗಜನ ಮನೋಭೀಷ್ಟನೀತಾ |
ಗಜ ರಜಕ ಬಿಲ್ಲು ಮಲ್ಲರ ವ್ರಜನನಾಳಿದ ದಿಟ್ಟಿನೀತಾ |
ತ್ರಿಜಗ ವಂದಿತಾನೀತಾ ಅಂಗಜನ ಪೆತ್ತ ಪ್ರೇಮನೀತಾ |
ವಿಜಯಸಾರಥಿ ಈತಾ | ಪಂಕಜ ಬಾಂಧವನ ಭಾಸನೀತಾ೨
ಕಪಟನಾಟಕನೀತಾ ಕರಡಿ ಕಪಿಗಳನಾಳಿದನೀತಾ |
ಕಪಿಲಮುನಿಯಾಗಿ ತಾಯಿಗೆ ಉಪದೇಶವ ಪೇಳಿದನೀತಾ |
ಅಪಾರ ಮಹಿಮನೀತಾ ಅಂದು
ದ್ರುಪದಸುತೆಯ ಕಾಯದನೀತಾ
ಸ್ವಪ್ನ ಸುಷುಪ್ತಿ ಜಾಗ್ರದಾವಸ್ಥೆಗೆ ಗುಪುತವ್ಯಾಪಕ ಗುಣನೀತಾ೩
ಪರಮ ಪುರುಷನೀತಾ ದಶಶಿರನ ಕುಲವನಳಿದನೀತಾ |
ಗಿರಿಯಲಿ ಧರಿಸಿ ಲೋಕವ ಪೊರೆವ ವಿಶ್ವಾಧಾರನೀತಾ |
ಹರನ ವೈರಿಯ ಕೊಂದನೀತಾ | ನಿರುಪಮ ಮೂರುತಿನೀತಾ |
ಸುರರಿಗೆ ಉಣಿಸಿದನೀತಾ | ತರಳ ಲೀಲೆಯ ತೋರಿದನೀತಾ೪
ಭೂಮಿಯರಸನೀತಾ ಸಾಲಿಗ್ರಾಮ ನುಂಗಿದನೀತಾ |
ದಿವಾಕರ ಮುನಿಗೆ ಒಲಿದನೀತಾ | ಶಾಮವರ್ಣ ಕಾಯನೀತಾ |
ಹೋಮ ನಿತ್ಯ ಜಪತಪಾದಿಗೆ ನೇಮಪ್ರಕಾರ ಚೇಷ್ಟಕನೀತಾ |
ಸಾಮ ಲೋಲ ವಿಜಯವಿಠ್ಠಲ ತಾಮರಸನಾಭನೀತಾ ೫

೨೦೧
ಶ್ರೀಶ ಕೊಳಲನೂದಿದನಂದು ಶ್ರೀಧರನಿಂದು
ವಾಸವ ವಂದಿತ ವಾತಜ ಸೇವಿತ
ವಾಸುಕಿಶಯನನು ವಾರೆ ಸುನೋಟದಿ ಪ
ಬೆರಳ ಸಂದಿಲಿ ಮುರಳಿ ಪಿಡಿದು, ಮುರಾರಿ ತಾನು
ಹರುಷದಿಂದಲಿ ಸ್ವರವ ನುಡಿದು, ವಾರಿಜನೇತ್ರ
ಅರಳು ಮಲ್ಲಿಗೆ ಸರಗಳ ಮುಡಿದು
ಕೊರಳ ಪದಕ ಹಾರ ಕೌಸ್ತುಭ ಶೋಭಿತ
ಮರುಳು ಮಾಡುತ ಮಡದಿಯೆಲ್ಲರ ೧
ಗೌರಿ ಗಾಂಧಾರಿ ಗೌಳಪಂತು ಗೌರೀಶ ಭೂಷಣ
ಶೌರೀ ಸಾರಂಗ ಮೋಹನವಿಂತು ಸಾವೇರಿ ಸುರುಟಿ
ಭೈರವಿ ಬ್ಯಾಗಡೆ ಊದುತ ನಿಂತು
ಮಾರಜನಕ ತಾನಾನಂದದಿಂದಲಿ
ವೀರ ಶ್ರೀ ಕೃಷ್ಣನು ವಿಧವಿಧ ರಾಗದಿ೨
ನಾರದ ತುಂಬುರ ನಾಟ್ಯವನಾಡೆ, ನಳಿನನಾಭನ
ಗಿರಿಜಾಪತಿಯು ವಂದಿಸಿ ಬೇಡೆ, ಗೋಪಾಲಕೃಷ್ಣನ
ಭಾರತಿಪತಿ ತಾ ಕೊಂಡಾಡೆ
ವರಗುರು ವಂದಿತ ವಿಜಯವಿಠ್ಠಲರೇಯಹರುಷವ ಪಡಿಸುತ ವನಿತೆಯರೆಲ್ಲರ ೩

೫೩೨
ಶ್ರೀಶ ವೇದವ್ಯಾಸನಾದನು ಪ
ಶ್ರೀಶ ವೇದವ್ಯಾಸನಾಗಲು
ಸಾಸಿರ ನಯನ ಸಾಸಿರ ವದನ
ಸಾಸಿರ ಕರ ಮಿಕ್ಕ ಸುರರೆಲ್ಲ ತು-
ತಿಸಿ ಹಿಗ್ಗುತ ಹಾರೈಸಲಂದು ಅ.ಪ.
ದರ್ಪಕ ಜನಕ ಸರ್ಪತಲ್ಪನಾಗಿ
ತಪ್ಪದನುಗಾಲ ಇಪ್ಪ ವಾರಿಧೀಲಿ
ವಪ್ಪದಲಿ ಕಂದರ್ಪ ಹರನೈಯ
ಸುಪರ್ಣರಥನಾಗಿ ಒಪ್ಪಿಕೊಂಡು
ಇಪ್ಪತ್ತು ಲಕ್ಷಗಲಿಪ್ಪ ಯೋಜನದ
ಅಪ್ಪನ ಅರಮನೆ ದರ್ಪಣದಂತೆ ತಾ
ರಪ್ಪಥ ಮೀರಿದಂತಿಪ್ಪದು ನೋಡಿ ಸಾ-
ಮೀಪಕ್ಕೆ ವಾಣೀಶ ಬಪ್ಪ ಬೇಗಾ ೧
ಬಂದು ಬೆನ್ನೈಸಿದ ಮಂದಮತಿ ಕಲಿ-
ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು
ಕುಂದ ಭಕ್ತನಿಗೆ ಒಂದೆ ಮಾತಿನಲಾ-
ನಂದ ಬಡಿಸಿ ಪೋಗೆಂದು ಪೇಳೆ
ಅಂದು ಸುಯೋಜನಗಂಧಿ ಗರ್ಭದಲ್ಲಿ
ನಿಂದವತರಿಸುತ ಪೊಂದಿದ ಅಜ್ಞಾನ
ಅಂಧಕಾರವೆಲ್ಲ ಹಿಂದು ಮಾಡಿ ಸುರ-
ಸಂದಣಿ ಪಾಲಿಸಿ ನಿಂದ ದೇವ ೨
ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ
ಕಂಜಾಪ್ತನಂದನದಿ ರಂಜಿಸುವ ಕಾಯ
ಮಂಜುಳ ಸುಜ್ಞಾನ ಪುಂಜನು ವಜ್ಜರ-
ಪಂಜರನೋ ನಿತ್ಯ ಅಂಜಿದಗೆ
ಸಂಜೆಯ ತೋರಿ ಧನಂಜಯ ಶಿಷ್ಯ ನೀ-
ಗಂಜದಂತೆ ಕರಕಂಜವ ತಿರುಹಿ
ಮಂಜುಳ ಭಾಷ ನಿರಂಜನ ಪೇಳಿದ
ಕುಂಜರ ವೈರಿಯ ಭಂಜನನು ೩
ಗಂಗಾತೀರದಲಿ ಶೃಂಗಾರ ಉಪವ-
ನಂಗಳದರೊಳು ಶಿಂಗಗೋಮಾಯು ಭು
ಜಂಗ ಮೂಷಕ ಮಾತಂಗ ಸಾರಮೇಯ
ಕೊಂಗಹಂಗ ಸರ್ವಾಂಗ ರೋಮ
ತುಂಬ ಶರಭ ವಿಹಂಗ ಶಾರ್ದೂಲ ಸಾ-
ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ
ವಂಗ ತುರಂಗ ಪತಂಗ ಭೃಂಗಾದಿ ತು-
ರಂಗವು ತುಂಬಿರೆ ಮಂಗಳಾಂಗ ೪
ಬದರಿ ಬೇಲವು ಕಾದರಿ ಕಾಮರಿ
ಮಧುಮದಾವಳಿ ಅದುಭುತ ತೆಂಗು
ಕದಳಿ ತಪಸಿ ಮದಕದಂಬ ಚೂ-
ತದಾರು ದ್ರಾಕ್ಷಿಯು
ಮೃದು ಜಂಬೀರವು ಬಿದಿರು ಖರ್ಜೂರ
ಮೋದದಿ ದಾಳಿಂಬ ತುದಿ ಮೊದಲು ಫ
ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ
ಇದೆ ಆರು ಋತು ಸದಾನಂದ ೫
ವನದ ನಡುವೆ ಮುನಿಗಳೊಡೆಯ
ಮಿನುಗುತ್ತಿರಲಾ ಕಾನನ ಸುತ್ತಲು ಆ-
ನನ ತೂಗುತ್ತ ಧ್ವನಿಯೆತ್ತಿ ಬಲು-
ಗಾನ ಪಾಡಿದವು ಗುಣದಲ್ಲಿ
ಕುಣಿದು ಖಗಾದಿ ಗಣಾನಂದದಿಂದಿರೆ
ವನನಿಕರ ಮೆಲ್ಲನೆ ಮಣಿದು ನೆ-
ಲನ ಮುಟ್ಟುತಿರೆ ಅನಿಮಿಷರು ನೋ
ಡನಿತಚ್ಚರಿಯನು ಪೇಳೆ ೬
ಮೌನಿ ನಾರದನು ವೀಣೆ ಕೆಳಗಿಟ್ಟು
ಮೌನವಾದನು ಬ್ರಹ್ಮಾಣಿ ತಲೆದೂಗಿ
ತಾ ನಿಂದಳಾಗ ಗೀರ್ವಾಣ ಗಂಧರ್ವರು
ಗಾನ ಮರೆದು ಇದೇನೆನುತ
ಮೇನಕೆ ಊರ್ವಸಿ ಜಾಣೀರು ತಮ್ಮಯ
ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ
ದೀನರಾದರು ನಿಧಾನಿಸಿ ಈಕ್ಷಿಸಿ
ಎಣಿಸುತ್ತಿದ್ದರು ಶ್ರೀನಾಥನ ೭
ನಮೋ ನಮೋಯೆಂದು ಹಸ್ತ-
ಕಮಲ ಮುಗಿದು ನಮಗೆ ನಿಮ್ಮಯ
ಅಮಲಗುಣ ನಿಗಮದಿಂದೆಣಿಸೆ
ಕ್ರಮಗಾಣೆವು ಉತ್ತಮ ದೇವ
ಕೂರ್ಮ ಖಗಮೃಗ ಸಮವೆನಿಸಿ ಅ-
ಚಮತ್ಕಾರದಲ್ಲಿ ನಾಮಸುಧೆಯಿತ್ತ
ರಮೆಯರಸ ಆಗಮನತ೮
ಇದನು ಪಠಿಸೆ ಸದಾ ಭಾಗ್ಯವಕ್ಕು
ಮದವಳಿ ದಘವುದದಿ ಬತ್ತೋದು
ಸಾಧನದಲ್ಲಿಯೆ ಮದುವೆ ಮುಂಜಿ
ಬಿಡದಲ್ಲಾಗೋದು ಶುಭದಲ್ಲಿ
ಪದೆಪದೆಗೆ ಸಂಪದವಿಗೆ ಜ್ಞಾನ-
ನಿಧಿ ಪೆಚ್ಚುವುದು ಹೃದಯ ನಿರ್ಮಲ
ಬದರಿನಿವಾಸ ವಿಜಯವಿಠ್ಠಲ
ಬದಿಯಲ್ಲೆ ಬಂದೊದಗುವ ೯

೩೧೨
ಸಂತರನ ಸ್ಮರಿಸಿ ಜನರು
ಸಂತರನ ಸ್ಮರಿಸಿ ಜನ ನಿಂತಲ್ಲಿ ಕುಳಿತಲ್ಲಿ
ಇಂತೆಂತು ಸದ್ಧರ್ಮ ಚರಿಸುವ ಕಾಲಕ್ಕೆ
ಅಂತರಂಗದಲಿದ್ದು ಚಿಂತೆಯನು ಬಿಟ್ಟು ಸಿರಿ
ಕುಂತುಪಿತನೊಲಿಮೆಯಿಂದ ಪ
ವ್ಯಾಸ ಶಿಷ್ಯರಾದ ಗುರುಮಧ್ವ ಮುನಿರಾಯ
ಲೇಸು ಪಂಕಜನಾಭ ನರಹರಿ ಮಾಧವ ಮು
ನೇಶ ಅಕ್ಷೋಭ್ಯ ಜಯರಾಯ ವಿದ್ಯಾಧಿರಾಜ
ಪೋಷಿತ ಕವೇಂದ್ರತೀರ್ಥರಾ
ನ್ಯಾಶಿ ವಾಗೀಶ ಯತಿ ರಾಮಚಂದ್ರ ನಂದ
ಭಾಸುರ ವಿದ್ಯಾನಿಧಿ ರಘುನಾಥ ರಘುವರ್ಯ
ಭೂಷಣ ಮತಕೆ ರಘೋತ್ತಮ ನಿಧಿವೇದ
ವ್ಯಾಸ ವಿದ್ಯಾಧೀಶರೂ ೧
ವೇದಮುನಿ ಸತ್ಯವ್ರತ ಸತ್ಯನಿಧಿ ರಾಯ
ಬೋಧ ಮೂರುತಿ ಸತ್ಯನಾಥ ಸತ್ಯಾಭಿನವ
ಕ್ರೋಧ ಜಯ ಸತ್ಯಪೂರ್ಣ ಸತ್ಯ ವಿಜಯ ವಿ
ನೋದ ಸತ್ಯಪ್ರಿಯರೂ
ಭೇದಾರ್ಥ ಬಲ್ಲ ವಿಭುಧೇಂದ್ರ ರಘುತನಯ ಸ
ಮ್ಮೋದ ಜಿತಾಮಿತ್ರ ತೀರ್ಥ ಮುನಿಪ ಸುರೇಂದ್ರ
ವಾದಿ ಎದೆ ಶೂಲ ವಿಜಯೀಂದ್ರ ಸುಧಿಯೀಂದ್ರ ಹ
ಲ್ಲಾದ ರಾಘವೇಂದ್ರರು ೨
ಯೋಗೆಂದ್ರ ಭೂಸುರೇಂದ್ರ ಸುಮತೀಂದ್ರ ಉಪೇಂದ್ರ
ಯೋಗಿ ಶ್ರೀಪಾದರಾಯರ ಪೀ
ಳಿಗೆಯ ಅತಿ ಸಾಧನವು ವ್ಯಾಸರಾಯರ ಪಾರಂಪರಿಯವ ಲೇ
ಸಾಗಿ ಎಣಿಸಿ ಕೊಂಡಾಡಿ
ಆಗಮನುಕೂಲ ಮಧ್ವ ಶಾಸ್ತ್ರವನುಸರಿಸಿ
ವೇಗದಿಂದಲಿ ಮಹಸಂತರಿಗೆ ಶಿರ
ವಾಗಿ ಭವದಿಂದ ಕಡೆ ಬಿದ್ದು ಮುಕ್ತಿಗೆ ಪೋದ
ಭಾಗವತ ಜನರ ನಿತ್ಯ ೩
ಕ್ಷೇತ್ರ ಸರೋವರ ನದಿ ಮಿಗಿಲಾದ ದೇಶದಲಿ
ಪಾತ್ರರಾಗಿದ್ದು ವರ್ಣೋಚಿತ ಧರ್ಮವನು
ಗಾತ್ರ್ರದಂಡಿಸಿ ಮಾಡಿ ಹರಿಯ ಮೆಚ್ಚಿಸುವ ಪಾ
ರತ್ರಯವನೇ ಬಯಸುವ
ಪುತ್ರ ಪೌತ್ರರ ಕೂಡಿ ಜ್ಞಾನದಲಿ ಇಪ್ಪ ಚ
ರಿತ್ರಾರಾ ಮಹಿಮೆ ಕೊಂಡಾಡಿದವರ ವಿ
ಚಿತ್ರವನು ಪೊಗಳುವ ದಾಸದಾಸಿಯರ ಪದ
ಸ್ತೋತ್ರ ಮಾಡಿರೋ ಆವಾಗ ೪
ಉದಯಕಾಲದಲೆದ್ದು ಸಂತನ ಮಾಲಿಕೆಯನ್ನು
ಮೃದು ಪಂಚರತ್ನದಲಿ ನಿರ್ಮಿತವಾಗಿದೆ
ಸದಮಲರು ಪೇಳಿ ಸಂತೋಷದಲಿ ಕೇಳಿ ಕೊರಲೊಳಗೆ
ಪದರೂಪದಲ್ಲಿ ಧರಿಸಿ
ಮದ ಮತ್ಸರವು ಪೋಗಿ ವೈರಾಗ್ಯದಲಿ ಸಾರ
ಹೃದಯರ ಬಳಿ ಸೇರಿ ಜ್ಞಾನ ಸಂಪಾದಿಸಿ
ಪದೋಪದಿಗೆ ವಿಜಯವಿಠ್ಠಲನ ನಾಮಾಮೃತವ
ವದನದಿಂದಲಿ ಸವಿದುಂಬ ೫

೨೦೨
ಸಂಪತ್ತು ನಿನಗಿಂದು ಪೊಸದಾಯಿತೆ |
ಸಿಂಪಿನಲಿ ಪಾಲುಗುಡಿದದು ಮರದಿಯಾ ರಂಗ ಪ
ಪಾಲು ಮೊಸರು ಕದ್ದು ಗೋವಳರೆಂಜಲನುಂಡು |
ತಾಳ ಫಲಗಳ ಮೆದ್ದದು ಮರದಿಯಾ ||
ಕಾಲ ಕಾಲಕೆ ಇಲ್ಲಿ ಷಡುರಸಾಯನ ಸವಿದು |
ಮೇಲಾಗಿ ಪೊಟ್ಟೆಯೆ ಪೊರೆವ ಅತಿಶಯವೇನು ೧
ಕಂಡವರ ಕೈಯ್ಯ ಪಳ್ಳಿಯಲಿ ಹಳ ಹಳ ಎನಿಸಿ |
ಕೊಂಡು ಭಂಡಾಗಿ ಇದ್ದದು ಮರದಿಯಾ ||
ತಂಡ ತಂಡದಲಿಪ್ಪ ವೈಭೋಗ ವಾಹನ |
ತೋಂಡರು ಕರ ಮುಗಿದು ಕೊಂಡಾಡುವ ಭರವೊ ೨
ಮತಿಹೀನ ಖಳಗಂಜಿ ವನಧಿಯೊಳಗೆ ದ್ವಾರ |
ವತಿಯಲ್ಲಿ ವಾಸವಾದದು ಮರದಿಯಾ ||
ಪ್ರತಿದಿವಸದಲ್ಲಿ ಸದ್ಭಕ್ತಿಯುಳ್ಳ ಶುದ್ಧ |
ಯತಿಗಳಿಂದಲಿ ಪೂಜೆ ಕೈಗೊಂಬ ಸಂಭ್ರಮವೊ ೩
ಈ ವೈವಸ್ವತ ಮನ್ವಂತರ ಉಳ್ಳತನಾಕಾ |
ಈ ವಿಧದ ಕರ್ಮ ತಪ್ಪಲರಿಯದು ||
ಕೋವಿದರು ಪೇಳುವದು ಪುಸಿ ಎನ್ನದಿರು ದೇವ |
ಈ ಉಡಪಿನ ಸ್ಥಾನ ನೆಚ್ಚಕೇನೊ ನಿನಗೆ ೪
ಭಕುತಗೆ ಬಂದ ಮಹಾ ಕ್ಲೇಶ ಕಳಿಯದಿರಲು |
ಭಕುತವತ್ಸಲನೆಂಬ ಬಿರಿದು ಬರಿದೇ ||
ಮುಕುತೀಶ ಶಿರಿ ಕೃಷ್ಣ ವಿಜಯವಿಠ್ಠಲ | ವಿ |ರುಕತಿಯೆ ಇತ್ತರೆ ಕೀರ್ತಿ ಬಾಹದು ನಿನಗೆ ೫

೨೦೩
ಸಕಲ ಕಾಲದಿ ಮಾಡಿದ ಕರ್ಮವು |
ಭಕುತಿಯಿಂದಲಿ ಬಂದರ್ಪಿತವೆನ್ನಿ ಉಡುಪಿಯಲಿ ಪ
ಯಾತ್ರೆಗಳ ಮಾಡಲಿ ತೀರ್ಥಗಳ ಮೀಯಲಿ |
ಸ್ತೋತ್ರಗಳ ಮಾಡಲಿ ಕೊಂಡಾಡಲಿ ||
ನೇತ್ರದಲಿ ನೋಡಿ ಕರಮುಗಿದು ನಮಸ್ಕರಿಸಲಿ |
ಹೋತ್ರವನು ಮಾಡಿ ಹಿತವಾಗಿ ನುಡಿಯಲಿ ೧
ದಾನವನು ಮಾಡಲಿ ದಾಕ್ಷಿಣ್ಯವಾಗಲಿ |
ಮೌನವನು ಮಾಡಲಿ ಮಾತಾಡಲಿ ||
ಕಾನನವ ಸೇರಲಿ ಕಂಡಲ್ಲಿ ತಿರುಗಲಿ |
ಏನೇನು ಚರಿತೆಗಳ ಮಾಡುತಿರಲಿ ೨
ಪುಣ್ಯವಾದರು ಲೇಸೆ ಪಾಪವಾದರು ಹರಿ |
ಮನ್ನಿಸಿ ತಾನೀಗ ತೆಗೆದುಕೊಂಡು ||
ತನ್ನ ಸಮೀಪದಿ ಇಟ್ಟುಕೊಂಡು ಅವನ |ಘನ್ನ ಮೂರುತಿ ವಿಜಯವಿಠ್ಠಲ ಪೊರೆವ ೩

೩೩೪
ಸತ್ಯಪ್ರಿಯ ಗುರುರಾಯ ಮಂಗಳಕಾಯ
ನಿತ್ಯದಲಿ ನಿಜ ಭೃತ್ಯ ಸಹಾಯ ಪ
ಮಧ್ವಮತಾಬ್ಧಿ ಚಂದ್ರ ಸದ್ಗುಣಸಾಂದ್ರ
ಅದ್ವೈತಮದ್ರಿ ಇಂದ್ರ ಇದ್ಧರಿಯೊಳಗನಿ
ರುದ್ಧನೆ ವರನೆಂದೆದ್ದು ನೆಗಹಿ ಕರ
ಬದ್ಧ ಕಂಕಣರಾಗಿ
ಸಿದ್ಧ ಪ್ರಮೇಯಗಳನುದ್ಧರಿಸಿದ ಪರಿಶುದ್ಧ ಸ್ಮರ ಮಾರ್ಗಣ ಗೆದ್ದ ೧
ವಿತರಣದಲಿ ಬಲು ಶೂರಾ ಕೀರ್ತಿವಿಹಾರಾ
ಸತತ ವೇದಾರ್ಥ ವಿಚಾರ
ಮಿತಿ ಇಲ್ಲದೇ ಆ ಕಥಾಮೃತ ತತುವ ಮಾರ್ಗದಲಿ ವಿ
ಹಿತ ಶಿಷ್ಯರಿಗೆ ನಗುತ ಪೇಳಿದ ಅ
ದ್ಭುತ ಮಹಿಮಾ ಸಂಚರಿಸುತ ಆನಂದ ಭರಿತ ೨
ನೆನೆಸಿದವರ ಸುರಧೇನು ನಿನಗೆಲ್ಲಿ ನಾನು
ಎಣೆಗಾಣೆ ಎಣಿಸಲು ಮೇಣೂ
ಮುನಿ ಸತ್ಯಭೋಧರ ಮನದಲ್ಲಿ ನಿಂದರ್ಚನೆಯನು ಮನದಲ್ಲಿ
ಘನವಾಗಿ ಕೈಕೊಂಬ ಗುಣದಿ ವಿಜಯವಿಠ್ಠಲನ ಚರಣಾಂಬುಜ
ಧ್ಯಾನ ಮಾಡುವ ತ್ರಾಣ೩

೭೭
ಸತ್ಯವತಿಸೂನು ವೇದವ್ಯಾಸ ಲಕುಮಿಶಾ |
ನಿತ್ಯ ನಿನ್ನ ನೆನೆಸುವ ಭೃತ್ಯರೊಡನೆ ಪೊಂದಿಸು ದೇವ ಪ
ಮೊದಲು ಸರ್ಪ ವಾಸುಕಿ ಇಲ್ಲಿ ಮದನಾರಿಯ ವಲಿಸಿ | ತನ್ನ
ಬದುಕುವಗೋಸುಗ ಉಪಾಯದಲಿ ನಿಂದರೆ |
ಅದರ ತರುವಾಯ ಸ್ಕಂದ ತ್ರಿದಶ ವೈರಿ ತಾರಕನ್ನ ಸದೆದು |
ಇಂದ್ರಾದ್ಯರ ಕೂಡ ಮುದದಿಂದ ಸ್ಥಿರವಾಗಿ ಮೆರೆದ ೧
ಷಣ್ಮೊಗನು ಸತತ ತಾನು ಅನ್ನದಾನ ಮಾಡುತ ಹಾ |
ವನ್ನನಾಗುದಕ್ಕೆ ಪ್ರಸನ್ನ ಮೋದದಲಿ |
ನಿನ್ನ ಪೊಲಿಸಿಲ್ಲಿಗೆ ಬಾಹಾ | ದೆನ್ನ ಭಕುತಿಗೆ ಮೆಚ್ಚಿ |
ಮುನ್ನಿನಾಗಮವನ್ನೆ ಹೇಳಿದ ವಾಸುದೇವ ೨
ಕಲಿಯುಗದೊಳಗೆ ವಿಪ್ರಕುಲದಲಿ ಮಾರುತಿ ಎನಿಸಿ |
ಬಲು ಮಾಯಿಗಳ ಮೋಹನ ಶಾಸ್ತ್ರವಳಿದು ಬದರಿಯ |
ಬಳಿಗೆ ಬಂದು ಶಿಲಾಪ್ರತಿಮೆಗಳನೆ ಪಡೆದು ತಂದು |
ಇಲ್ಲಿ ನೆಲೆ ಮಾಡುವ ಸುಜನರಿಗೆ
ಪೊಳೆವಂದದಲಿ ಇಳೆಯೊಳಗೆನಲು ೩
ಅಂದಿನಾರಭ್ಯ ಪಾರ್ವತಿನಂದನ ಕುಕ್ಕೆಪುರದಲ್ಲಿ |
ನಿಂದು ಸರ್ವರಿಂದ ಪೂಜೆ ಚಂದದಿ ಕೊಳುತಾ |
ಮಂದ ಕುಷ್ಟರೋಗಗಳ ಹಿಂದುಮಾಡಿ ಓಡಿಸಿ | ಗೋ
ವಿಂದ ನಿನ್ನ ಪಾದ ಧ್ಯಾನದಿಂದ ಲೋಲಾಡುತಲಿರೆ ೪
ಮರುತದೇವ ಸಂಪುಟಾಕಾರವಾದ ನೀನದರೊಳು |
ಚಾರು ಸಿಲೆ ರೂಪವಾದ ಪಾರಾಶರ ಋಷಿ |
ಧಾರುಣಿಗೆ ರಹಸ್ಯವ ತೋರಿಕೊಳುತಲಿ |
ಕುಮಾರಧಾರಿವಾಸವಾದ ಕು | ಮಾರ ಗೊಲಿದ ವಿಜಯವಿಠ್ಠಲಾ ೫

೪೪೦
ಸದಾ ಎನ್ನ ಹೃದಯದಲ್ಲಿ ವಾಸ ಮಾಡೊ ಶ್ರೀಹರಿನಾದಮೂರ್ತಿ ಮೋದದಿಂದ ನಿನ್ನ ಪಾದ ಭಜಿಸುವೆ ಅ.ಪಜ್ಞಾನವೆಂಬೊ ನವರತ್ನದ ಮಂಟಪದ ಮಧ್ಯದಲ್ಲಿಗಾನಲೋಲನ ಕುಳ್ಳಿರಿಸಿಧ್ಯಾನದಿಂದ ಭಜಿಸುವೆ೧ಭಕ್ತಿರಸವೆಂಬ ಮುತ್ತು ಮಾಣಿಕ್ಯದ ಹರಿವಾಣದಿಮುಕ್ತನಾಗಬೇಕು ಯೆಂದು ಮುತ್ತಿನಾರತಿ ಎತ್ತುವೆ ೨ನಿನ್ನ ನಾನು ಬಿಡುವನಲ್ಲಎನ್ನ ನೀನು ಬಿಡಲು ಸಲ್ಲಘನ್ನ ಮಹಿಮ ವಿಜಯವಿಠ್ಠಲ ನಿನ್ನ ಭಕ್ತರ ಕೇಳೊ ಸೊಲ್ಲ ೩

೭೮
ಪ್ರಥಮ ವಚನ
ಸರಸೀರುಹಾಕ್ಷ ಕೃಷ್ಣನ | ಚರಣ ಅರುಣಾರ್ಣವ
ಕಾಂತಿಯಿಂದಿರುವ |
ಪರಮ ಸುಂದರ ರೇಖೆ ಧ್ವಜ ವಜ್ರಾಂಕುಶ ಶಂಖ |
ಚಕ್ರ ಪದುಮ ಗದೆ |
ವರಚಿಹ್ನೆಯಿಂದಿರುವ | ಕಿರಿಗೆಜ್ಜೆಗಳ ಛಾಯ
ಅದರೊಳಗೆ ಬಿದ್ದಿರುವ
ಪರಮಪವಿತ್ರ ತ್ಯುಬುಗಳ ತೆಗೆದು |
ನೇತ್ರದೊಳಗೊತ್ತಿ | ಪರಿಮಳವಾದ ಗಂಧಗಳಿಂದ ಅಲಂಕೃತ |
ಸಿರಿದೇವಿ ವರದೊಡೆಯ ಮೇಲಿದ್ದು | ಕರಕಮಲದಲೊತ್ತುವ |
ಚರಣ ದರುಶನವೆನಗಾಯಿತು ಇಂದಿನ
ದಿನವೆ ಪರಮ ಪುಣ್ಯೋದಯ ಪ
ವಿತ್ರತರ ಗಂಗೆ ಮೊದಲಾದ ನದಿಗಳು ಜನಿಸಿಹ ಪಾದ |
ಸರಸೀರುಹ ಸರಸದಿಂ ಕೊಂಡಾಡಿ |
ವರಬೇಡಿ ಹಾಡಿ ಅದರೊಳು ಬಿದ್ದು
ನೆರಳಿ ಮರಳೀ ಸೌಖ್ಯದಾನಂದ |
ಶರಧಿಯೊಳು ಮುಣುಗಿ ಮುಣುಗಿ ಏಳುತ |
ಕರವೆರಡು ಜೋಡಿಸಿ ಪರಿಮಿತಿಯಿಲ್ಲದ
ಸೌಖ್ಯದಾನಂದ ಭಕ್ತಿಭಾವಗಳಿಂದ
ಕರುಣಾಳು ಕೃಷ್ಣ ತ್ವರಿತದಲಿ ತನ್ನ ಸೇವಕ ಜನರೊಳಗೆ |
ಸೇರಿಪ್ಪ ನಾ ಅರಿಯನು ನಾನೊಂದು ಸ್ತೋತ್ರ ಮಾಡುವದಕ್ಕೆ |
ವರವ್ರಜ ತರುಣಿಯರು ಏನು ಪುಣ್ಯವ ಮಾಡಿದರೊ |
ಸರುವದಾ ಹರಿಯನ್ನು ಕಾಣುವರು ಕಂಗಳಲಿ |
ಪರಿಹಾಸ್ಯ ನುಡಿಯಲ್ಲ | ಪರಮ ಪವಿತ್ರರಿಗೆ ದೊರೆ |
ಸಿರಿ ವಿಜಯವಿಠ್ಠಲನು | ಕರವಿಡಿದು ಎನ್ನಭೀಷ್ಟವನಿತ್ತು |
ಪರಿಪಾಲಿಸಬೇಕೆಂದು ಭಕ್ತ ಕೇಳಿದನು ೧
ದ್ವಿತೀಯ ವಚನ
ಜಲಜನಾಭನ ರಥದ ದಡದ ಮೇಲೆ ನಿಲ್ಲಿಸಿ |
ಜಲದೊಳಗೆ ತಾ ಮುಳುಗಿ ಅಕ್ರೂರ ಕಣ್ಣು ತೆರೆಯೆ |
ಕಲುಷವರ್ಜಿತನಾದ ಕೃಷ್ಣ |
ಹಲಧರನ ಸಹ ಮೇಳ ಸಂಭ್ರಮದಿ | ಜಲದೊಳಗೆ ತಾ ಕಂಡು |
ಕಲಕಲನೆ ಚಿಂತಿಸಿ ಕರುಣಸಾಗರನಾದ ಕೃಷ್ಣಗೆ |
ನಾ ಪೇಳಿದ ಮಾತು ನಡಿಸಿ |
ಬಲವಂತದಲಿ ಬಿದ್ದ ಭವರೋಗ ವೈದ್ಯನ ಮಾತೆ |
ಲಲನಾಮಣಿಗೆ ಏನು ಹೇಳುವೆನು |
ಸುಲಭವಾಗಿ ಎಮಗೆ ಅಭೀಷ್ಟಪ್ರದವಿದು |
ಬಾಲಕರು ಸುಲಲಿತಾಂಗೇರು ಸುಂದರರು
ಎಂದೆನುತ ತಂದೆ ನಂದಗೋಪನು |
ಕೇಳೆ ಮಂದಮತಿ ಏನು ಪೇಳುವೆನು ಎನುತಲಕ್ರೂರ
ಯೋಚಿಸಿ ಮನದಲಿ ಚಿಂತೆಯಗೊಂಡು |
ಹನುಮೇಶ ವನಜಾಕ್ಷ | ಘನಮಹಿಮ ಎನ್ನ ಮನದ ಚಿಂತೆಯನು
ಹನನವ ಮಾಡಿ ಎನ್ನ ಕೈಪಿಡಿಯಲಾಗದೆ ಈಗ ಎನುತ |
ಮೇಲೇಳೆ ಸನಕ ಸನಂದನ ಸನತ್ಕುಮಾರ ಸಹ |
ವನಜ ಸಂಭವ ಜನಕ ವೈಕುಂಠಪತಿ ಕೃಷ್ಣ |
ಕನಕ ರಥದ ಮೇಲೆ ನಿಂತಿದ್ದು ತಾ ಕಂಡು |
ಕರವೆರಡು ಜೋಡಿಸಿ | ಭರದಿ ಭಕ್ತಿಯಗೊಂಡು |
ನರಜನ್ಮ ಹುಳು ನಿನ್ನ ಮಹಿಮೆಗಳ ಅರಿಯದೆ |
ಜಲದೊಳಗೆ ನೀ ಬಿದ್ದಿ ಎನುತಲೀ ಯೋಚಿಸಿದೆ |
ಪರಮಗುಣ ಪರಿಪೂರ್ಣ ಪತಿತಪಾವನ ಎನ್ನ |
ಚರಣದ ಮಹಿಮೆಗಳ |
ಅರಿಯಳು ಸಿರಿದೇವಿ ನರರೊಳಗೆ ಬಲುಹೀನ
ನಾ ನಿನ್ನ ಮಹಿಮೆಗಳ
ಅರಿತು ಪೇಳುವದಕ್ಕೆ ಅರಹ | ನಲ್ಲವೊ ಕೃಷ್ಣ
ಮರಣದಲಿ ಅಜಮಿಳಗೆ
ವಲಿದಿಯಂತೆ ನೀ ಎನಗೆ ತ್ವರಿತದಲಿ ಜ್ಞಾನವನು
ದಯಮಾಡ ಬೇಕೈ |
ಗಜರಾಜ ಅರ್ಭಕ ಧ್ರುವರಾಯ ನಿಜಜ್ಞಾನಿ
ಪ್ರಹ್ಲಾದ ನಿಜಮುನಿ ಶುಕಾಚಾರ್ಯರಂತೆ |
ಭಜಿಸುವ ನಾನಲ್ಲ | ಅಜಜನಕ ಅಪ್ರಾಕೃತ
ಅಕಲಂಕ ಚರಿತ ಅಮರೇಂದ್ರ ವಂದಿತ |
ಭುಜಗಶಯನ ಭೂಸುರವಂದ್ಯ ಭುವನತ್ರಯ
ಪಾಲಾ ವಿಜಯನ ರಥವನ್ನು ಸಾರಥಿಯಾಗಿ
ವಿಜಯ ಪಾರ್ಥರಿಗಿತ್ತು ಪರಿಪಾಲಿಪಾ
ದಯಾಸಮುದ್ರ ವಿಜಯವಿಠ್ಠಲನೇ೨
ತೃತೀಯ ವಚನ
ಅರವಿಂದನಾಭ ಕೃಷ್ಣ ಅಖಿಲಜನ ಪರಿಪಾಲ | ಕೃಪಾ ಸಮುದ್ರ |
ಶರದಿಂದು ನಿಭವಕ್ತ್ರ ರಾಜೀವದಳ ನೇತ್ರ ಲಕ್ಷ್ಮೀ ಕಳತ್ರ |
ಪರಿಪಾಲಿಸಬೇಕೆನ್ನ | ಪಾವನ ಚರಿತ್ರ |
ಸುರಪತಿಗೆ ಅಸುರರ ಬಲನೀಗಿ ಆ | ವಿರಂಚಿ ಬಳಿಗೆ |
ಶರಣೆಂದು ವರವೊಂದು ಕೇಳಿದೆ ವೈಕುಂಠಪತಿ ಕೃಷ್ಣ |
ತರಳನಾಗವತರಿಸಿ | ಸರ್ವಜನ ಕಂಟಕ ಕಂಸಾದಿಗಳ ಗೆಲಿದು |
ಹರುಷದಿಂದೆನಗೆ ದರುಶನವ ಕೊಟ್ಟ | ಪರಮಾತ್ಮ ನಿನ್ನ ಪಾದ |
ಸರಸಿಜದೊಳು ಚಿತ್ತವಿರುವಂದದಲಿ |
ಪರಮ ದಯಾಕರ ನಿನ್ನ ಮಹಾ ಮಹಿಮೆಗಳ |
ಅರಿತವರಿಲ್ಲವೊ ಈ ಭುವನತ್ರಯದೊಳಗೆ
ಗರ್ವಿಷ್ಠನಾಗಿ ಮಲಗಿದವನಲ್ಲಿ |
ಕರಿರಾಜವರದ ಕಾಮಿತ ಫಲಪ್ರದ
ತರಳತನವನು ಬಿಟ್ಟು ವೈಕುಂಠದೊಳಗೆ
ಮೆರೆದ ಸಂದರುಶನ | ಭರದಿ ಭಕ್ತಿಭಾವದಲಿ
ಕೇಳ್ವ | ತ್ವರಿತದಲಿ ದಯಮಾಡಿ |
ಭರದಿ ಪಾಲಿಸಬೇಕೆನ್ನ | ಭಕ್ತಜನ ವತ್ಸಲನೆ ಎನಲಾ ಮಾತಿಗೆ |
ಮನುಮಥಜನಕ ಇನ | ಚಂದ್ರ ನೇತ್ರ ಇಂದಿರೆ ಅರಸ |
ಹನುಮೇಶ ಕನಕಮಯವಾದ ಪೀತಾಂಬರ | ಜನಿವಾರ |
ಅನೇಕ ಅತರಿಗಳ ಗೆಲಿವ ಕನಕಮಯ | ಕಿರೀಟ ಚತುರ್ಭುಜ |
ವನಮಾಲೆ ಹಾಟಕದ | ಕಟಕ ರತ್ನಮಯದುಂ | ಗುರ
ಪನ್ನಗಶಯ್ಯ ಉನ್ನತೋನ್ನತ ಮಹಿಮ
ಕನಕಾಂಗಿ ಯಶೋದೆಗೆ | ತೋರಿದ ವಿಶ್ವರೂಪಪ್ರದ
ಅನಿಮಿಷರ ಅರಸ ಅಹಿವೈರಿ ವಾಹನ
ಅಚ್ಯುತ ಆನಂದ | ಗಿರಿ ನಿಲಯ |
ಘನಘನ ಶಾರಂಙ್ಗಪಾಣಿ ವಿಜಯವಿಠ್ಠಲರೇಯ ತೋರಿದನು
ತನ್ನ ಚರಣ ಸೇವಕನಾದ ಮುಚಕುಂದ
ಚಕ್ರವರ್ತಿಗೆ ತನ್ನ ನಿಜರೂಪವ೩
ಚತುರ್ಥ ವಚನ
ಆನಂದತೀರ್ಥ ಮುನಿವಂದ್ಯ | ಜ್ಞಾನಿಗಳ ವಲ್ಲಭ |
ದೀನಜನ ಮಂದಾರ ನಾ | ನಿನ್ನ ಮೊರೆಹೊಕ್ಕು ಧೇನಿಸಲರಿಯೆ |
ಆನೆಯನು ಆದರದಿ ಕಾಯ್ದ ಶ್ರೀನಿವಾಸ |
ಸಾನುರಾಗದಿ ಪ್ರಹ್ಲಾದಗೊಲಿದ ಶ್ರೀನಿಧಿ ನರಸಿಂಹ |
ಅನಾದಿ ಕಾಲದಿ ತಂದೆ ಬಂಧು ಬಳಗವು ಎಂದೆ |
ಮಾನಿನಿ ದ್ರೌಪದಿ ಮೊರೆ ಇಟ್ಟಾಗ ಧ್ವನಿ ಕೇಳಿ |
ಮಾನಿನಿ ಮಣಿ ಲಕುಮಿಗ್ಹೇಳದೆ |
ಆನಂದಮಯನು ಅಕ್ಷಯವಿತ್ತು ಆಗ ಪರಿಪಾಲಿಸಿದಿ ಅದರಂತೆ |
ಮಾನಹೀನನೆಂದು ನಿರಾಕರಿಸದೆ | ಧ್ಯಾನಕ್ಕೆ ಒಳಗಾಗಿ |
ಮೌನಿಜನರನು ಕಾವ ಕ್ಷೋಣೀಶ ಮಾಣಿಕ್ಯ ಮಕುಟ ಕುಂಡಲಧರ |
ಅಣಿ ಮುತ್ತಿನ ಹಾರ ವನಮಾಲಿ ಸಿರಿ ತುಳಸಿ |
ಪರಿಮಳ ಸಿರಿಗಂಧ ಉದರದಲಿ ಬೆಳಗುವ |
ಉಪೇಂದ್ರ ನಾಮ ಕೃಷ್ಣ ಉರಗೇಶಶಯನಾ |
ನಿನ್ನ ದಾಸರದಾಸನೆಂದೆನುತ | ಕಾಣಸಿ ನಿನ್ನ ನಿಜರೂಪ |
ಎನ್ನ ಹೃದಯ ಪದಕದೊಳಗಿಟ್ಟು ಸಾನುರಾಗದಿ
ನಿನ್ನ ಸ್ತೋತ್ರ ಮಾಡುವ ಭಕ್ತಗಣದೊಳಗೆ ನಿಲ್ಲಿಸೊ |
ನಿನ್ನ ಮತ್ತೊಂದು ಪದಾರ್ಥ ಕೇಳುವವನಲ್ಲ |
ತೀರ್ಥ ತೀರ್ಥಗಳಲ್ಲಿ ಮುಳುಗಿ ಬಂದವನಲ್ಲ |
ಸಾರ್ಥಕವಾದಂಥ ಕೃತ್ಯ ಮಾಡುವನಲ್ಲ |
ಸಾಧುಜನಸಂಗದಲಿ ಸೇರಿ ಪಾಡಿದವನಲ್ಲ |
ಈ ನುಡಿ ಸತ್ಯವೇ ಲೇಸು ಪುಸಿಯಲ್ಲ | ಮಲ್ಲಮಲ್ಲರ ಗೆಲಿದ
ಮಾಧವನು ನೀನಲ್ಲದೆ ಇನ್ನೊಂದು ದೈವವಿಲ್ಲದ ಮಧ್ವ
ಮುನಿ ಹೃದಯಾಟ್ಟ ಪೀಠದೊಳು ವಾಸ ಮಾಡುವ ದೊರೆ
ಉದ್ಧರಿಸಬೇಕೆನ್ನ ವಿಜಯವಿಠ್ಠಲನೆ ೪
ಐದನೇ ವಚನ
ಹರಿ ನಿನ್ನ ಚರಣ ಸೇವಕರ ಸೇವಕನೆನುತ |
ಕರಿಯಬೇಕೆನ್ನ ಹಿರಿಯರೂ |
ಮರಣಕಾಲಕ್ಕೆನಗೆ ಮತ್ತೋರ್ವ ವಿಷಯದಲಿ
ಇಡಲಾಗದ ಮನಸು ಸರ್ವದಾ ನಿನ್ನ |
ಚರಣಾರವಿಂದ ದ್ವಂದ್ವದಲಿ | ಭರದಿಂದ ಮುದ್ರೆಯನಿಟ್ಟ |
ಕಾಗದದಂತೆ ಹತ್ತಿರಿರಬೇಕೆನುತ ತುತಿ ಮಾಡುವೆ ನಿನ್ನ |
ಅರವಿಂದ ಗೋವಿಂದ ಮುಕುಂದ
ಮುಚಕುಂದ ವರದ ನಿತ್ಯಾನಂದ ವಿಗ್ರಹ |
ಸರಸಿರುಹಾಕ್ಷ ಸಜ್ಜನ ಪರಿಪಾಲಾ |
ಅರವಿಂದಾಸನನಯ್ಯ ಅಮರೇಂದ್ರ
ಪೂಜ್ಯ ಅವಗುಣ ವರ್ಜ ಅಕಳಂತ |
ಚರಿತ ಆದಿಪುರುಷ ಮಧ್ಯಾಂತರಹಿತ
ಮಹಾನುಭಾವ ಮಧ್ವೇಶ |
ಕರಿರಾಜ ಪರಿಪಾಲ ಕಂಸಮರ್ದನ ಕೃಷ್ಣ
ಕರುಣಾಳು ನೀನಲ್ಲದಿನ್ನೋರ್ವ ದೊರೆಯಿಲ್ಲ |
ಈ ನುಡಿಯು ಪುಸಿಯಲ್ಲ |
ಭರದಿಂದ ನೀ ಪರಿಪಾಲಿಸಬೇಕಲ್ಲದೆ ಕರ
ಪಿಡಿದು ಕಾಯ್ವರನ ಕಾಣೆ
ನಿನ್ನಾಣೆ ಹೇ ಚಕ್ರಪಾಣಿ | ನಾ ನಿನ್ನ
ಚರಣಾವಿಂದವನು ಭಜಿಪ ವೀಣೆ | ಈ
ಕ್ಷೋಣಿಯೊಳಗೆನ್ನ ನರಜನ್ಮವು ಬಾರದೆ ಪರಿಪಾಲಿಸಬೇಕೆನ್ನ |
ಪರಮ ಪವಿತ್ರ ಪಂಕೇರುಹನೇತ್ರ ಸಂಕಟಗಳ ಕಳೆದು |
ಸೌಖ್ಯಪದ ವೈಕುಂಠದೊಳಗೆನ್ನ ನಿಲ್ಲಿಸೊ |
ಭರದಿಂದ ನಿನ್ನ ನಾಮದ ಭಂಡಾರ ಕದ್ದ ಕಳ್ಳನೆನೆಸಿ |
ಚರಣದ್ವಯಗಳಿಗೆ ಭಕ್ತಿಸಂಕುಲ ಹಾಕಿ
ಅರವಿಂದನಾಭ ನಿನ್ನ ಅಮರನೇ ವೈಕುಂಠ |
ಕಾರಾಗೃಹದೊಳಗೆ ವಾಸ ಮಾಡಿಸು ದೇವ ಕೋಟಿ |
ವರುಷಕೆ ಇದುವೆ ಎನಗೆ ಹರುಷ ಆನಂದಮಯ |
ವರವ ಕೊಡುವದಕ್ಕರಹ ಪುರುಷ ನೀನಲ್ಲದೆ
ಇನ್ನೋರ್ವನಿಲ್ಲ ವಿಜಯವಿಠ್ಠಲನೇ ೫

೭೯
ಸಲಹೊ ಸಾತ್ತ್ವಿಕ ದೈವವೆ ಕಾಗಿನೆಲೆಯಾದಿ ಕೇಶವ
ನೀಲದ ವರ್ಣ ಆದಿಕೇಶವಾ ಪ
ಕನಕ ಕಾಮಿನಿ ಕುಂಭಿಣಿಯಿಂದ ಬರುವ ಚಿಂತೆ |
ಕನಸಿನೊಳಗಾದರೂ ದೂರಾಗಲಿ |
ಕನಕೋದರಗೆ ಸಾಮ್ಯವಾದ ಜೀವನದಲ್ಲಿ |
ಕನಲದೆ ಭಕುತಿ ಇರಲಿ ಎಂದೆಂದಿಗೆ |
ಮನವು ನಿನ್ನಾಧೀನ ದೇವರದೇವ ೧
ಕನಕ ನಯನ ಮಯನ ಕಂಡವರಿಗೆ ಜ್ಞಾನ |
ಕನಕವರುಷವ ಕರೆವ ವಾಸುದೇವಾ |
ಕನಕಕೇಶಪ್ರಿಯ ಕಾಮಿತಫಲದಾಯಕ |
ಕನಕ ಪರ್ವತದಿಂದ ಬಂದ ಗೋವಿಂದ ವ |
ಚನವೇ ನಿನ್ನಾಧೀನವೋ ದೇವರ ದೇವ ೨
ಕನಕ ಮಾಲಿಗೆ ಒಲಿದ ಕಮಲದ ಲೋಚನ |
ಕನಕಾಂಬರಧರಾನಂದ ಮೂರ್ತಿ |
ಕನಕಕಾಯ ನಮ್ಮ ವಿಜಯವಿಠ್ಠಲರೇಯ |
ಕನಕರಿಸುವಾಗ ನಿನ್ನ ಧ್ಯಾನವೆ ಕೊಡು |
ತನುವೆ ನಿನ್ನಾಧೀನವೊ ದೇವರದೇವ ೩

೪೯೦
ಸಲ್ಲದೊ ಸಲ್ಲದೊ ಸರ್ವರು ಕೇಳಿ ನಮ್ಮ
ಪುಲ್ಲನಾಭನ ಬಿಟ್ಟು ಖುಲ್ಲದೇವರ ಪೂಜೆ ಪ
ಮಾರಿ ಮಸಣಿ ಜೆಟ್ಟೆ ಜೆಟ್ಟಿಂಗ ಭೇತಾಳ
ವರ ಪೋತರಾಜಾ ಬೊಮ್ಮೆಯನು
ಬೀರೆದೇವರು ಹಾದಿಬೀದಿಯ ಬಸವಣ್ಣ
ಚಾರುದೈವ ಉಚ್ಚಾರವಲ್ಲದೆ ಹೊಲ್ಲಾ ೧
ಯಲ್ಲಮ್ಮಾ ಯಕನಾತಿ ಅಡವಿಯ ಗಿಡದಮ್ಮ
ಹಳ್ಳದ ತೀರದ ಹಾಳದೇವಿ ಅಮ್ಮ
ಜಲದೇವಿ ಜಕ್ಕಮ್ಮನೆಂತೆನಲು
ಸೊಲ್ಲು ಬರಿದೆ ವ್ಯರ್ಥವಲ್ಲದೆ ಫಲವಿಲ್ಲ ೨
ಬನದಶಂಕರಿ ಕುಳ್ಳಹಟ್ಟಿಗೆ ಕರಿಮಾತೆ
ವನಶಕ್ತಿ ಚವಡಮ್ಮ ಜವನಿಕೆ
ಬಿನಗ್ಯ ಮಾಳಾದೇವಿ ಮಾಳಿಗೆ ಹಿರಿಯಕ್ಕ
ಘನ ಪಿಶಾಚಿಗಳಿಂದ ಒಂದಿಷ್ಟು ಸುಖವಿಲ್ಲ ೩
ಖಂಡೇರಾಯ ಮಲಕಚ್ಚಿನ ಗಡಿಗೆಮ್ಮ
ಮುಂಡೆ ಮೂಕಾರುತಿ ಬೆಂಚೆಮ್ಮನು
ಭಾಂಡಾರದ ದುರ್ಗಿ ಹಿರಿಯಣ್ಣ ಮೈಲಾರ
ಹಿರಚು ಗುಂಪಿನ ಬಳಗ ಕಂಡರೇನಿಲ್ಲ ೪
ಸುಣ್ಣದ ಕೆಸರು ಹಾಲು ಕೂಡಿ ಕುಡಿದಂತೆ
ಅನ್ಯದೇವತೆಗಳ ಭಜನೆ ಹೊಲ್ಲ
ಚೆನ್ನಾಗಿ ಸಿರಿ ವಿಜಯವಿಠ್ಠಲನ ಯುಗಳಪಾದ
ಸನ್ನುತಿಸಿದರೆ ಪರಮ ಪದವಿಯಮ್ಮ ೫

೪೮೯
ಸಲ್ಲದೋ ಎಲೋ ಮಾಯಿ ಸಲ್ಲದೊ
ಎಲೊ ಮಾಯಿ ಎಲ್ಲಾ ಒಂದೆಂಬೋದು
ಸೊಲ್ಲನಾಡಲು ಯಮ ಕೊಲ್ಲದಲೆ ಬಿಡಾ ಪ
ಉಕ್ಕಿನ ಮಳಿಯ ರೋಮರೋಮದಲಿ ಬಡಿದು
ಬೆಸಸಿ ಸದಾ ಗಂಡುತಗಲಿ ಗಟ್ಟಿ
ಪಕ್ಕಿಯ ತಿವಿದು ಪಾಶದಲಿ ಬಿಗಿದು ಕಾ
ಲಿಕ್ಕಿ ನೆಲಕೆ ವರಿಸಿ ಕೆಂಪಗೆ ಕಾಸಿ
ಇಕ್ಕಳದಲಿ ಉಚ್ಚಿ ಕರುಳು ಬೈಲಿಗೆ ಹಾಕಿ
ಪೊಕ್ಕಳಿಗೆ ತೇಳಾರು ಪೊಗಿಸಿ ಕಟ್ಟಿ
ಡೊಕ್ಕಿಯ ಸೀಳುವರು ಕರ ಹೊಯಿದು
ನಕ್ಕು ಯಮದೂತರು ನಿನ್ನ ಬಾಧಿಪರು ೧
ನಿನ್ನ ಕಾಲಲಿ
ಒದ್ದೊದ್ದು ಹೆಡಗುಡಿಯನು ಕಟ್ಟಿ ಗಾರ್ಧಭದ
ಲದ್ದಿಯೊಳಡಿಗಿಸಿ ಸುತ್ತ ಉರಿಯನಿಕ್ಕಿ
ಮದ್ದು ಮೈಯಿಗೆ ಮುಚ್ಚಿ ಮುದದಿಂದ ಬೇಯಿಸಿ
ಹದ್ದು ಕಾಗೆಗೆ ನಿನ್ನ ಯೆಡೆ ಮಾಡುವರು ಅ
ಮೇಧ್ಯವ ತಿನಿಸುವರು ಅರಗಲ್ಲಿಗೆ
ಉದ್ದಿ ಉರುಳ ಬಿಡುವರು ಕೆಂಡದ ಮೇಲೆ
ವೊದ್ದಿಸಿ ಪರಿಪರಿ ಭಂಗವಪಡಿಸುವರು ೨
ವೈತರಣಿಯೊಳಗದ್ದಿ ಅದ್ರಿಯ ಹರಿ
ಮಾತು ಪೊರಡದಂತೆ ಮಾಡಿ ಮುದ್ರೆ ಬಾಯಿಗೆ ಹಾಕಿ
ತೂತು ಮೈಯಿಗೆ ತಂತಿಯ ಪೋಣಿಸಿ
ಪೂತಿ ಗಂಧದೊಳು ಹೊರಳಿಸಿ ತಡಿಯದೆ
ಯಾತಣೆಯಿಂದ ಬಿಸುಟು ಮೊಟ್ಟೆಯ ಕಟ್ಟಿ
ಮೂತರ ಕುಡಿಸುವರು ಮೀಸಿಯನು
ಕಿತ್ತಿ ಘಾತಿಸಿ ನೋಡುವರು ಮಹಾ
ಪಾತಕನೆಂದು ವಿಧಿಯ ಮೇಲೆ ಗುದ್ದೋರು ೩
ಹೆಡತಲೆಯಿಂದ ನಾಲಿಗೆಯ ತೆಗೆದು ಕ
ಕ್ಕಾಡಿ ಮಾಡಿ ನವನಾರು ಸಂದುಗಳು ಸುಟ್ಟು
ಕೈಕಾಲನು ಕಟ್ಟಿಸಿ ಸಾಸವಿ ಸುಣ್ಣ
ತೊಡೆದು ಬೋರಿಗೆಯಿಂದ ಬಡಿದು ಬಸಿಗೆ ಹಾಕಿ
ಒಡಲೊಳು ಸೀಸವರೆದು ಮರದ ಬೇಲೆಯಲಿ
ಹೊಡೆದು ಸರ್ರನೆ ಸೀಳೋರು ಕುರಿಯಂತೆ
ಕಡಿದು ಈ ಬಗೆ ಮಾಡೋರು ಕೀವಿನ
ಮಡುವಿನೊಳಗೆ ಇಟ್ಟು ತಲೆಮೆಟ್ಟಿ ಕುಣಿವರೊ ೪
ಮೂಗನು ಕೊಯಿದು ಕವಡಿಯ ಪೋಣಿಸಿ ಚೆ
ನ್ನಾಗಿ ಅತ್ತರಾಟದಲ್ಲಿ ತಲೆಕೆಳಕಾಗಿ ಜೋಲುವಂತೆ
ಝೋಲಿಯ ಹೊಡೆದು ಮಾತುಗಾಲೆ ನಿನ್ನ
ತೂಗಹಾಕಿ ಬಾಗಿಸಿ ಇನ್ನೊಮ್ಮೆ
ಬೊಗಳೆಂದು ಕುಡಕಾಸಿ ವೇಗನೆ ಬರೆ
ಇಡುವರು ದು:ಖದ ಸಾಗರ ಉಣಿಸುವರು
ಬೆಕ್ಕಿನಂತೆ ಕೂಗಲು ಕೇಳಿ ಸೈರಿಸದಲೆ ಇಪ್ಪರು ೫
ಘಾಯವಡೆದಲ್ಲಿ ಇರಿದು ಉಪ್ಪನೆ ತುಂಬಿ
ಬಾಯಿವರಳು ಮಾಡಿ ಭತ್ತವ ಥಳಿಸಿ ಕ್ರೂ
ರಾಯುಧ ಕಿವಿಗೆ ಬಿರಿಯಿಟ್ಟು ಬಂಧಿಸಿ
ಖೋಯೆಂದು ಕೆಡಹಿ ಬೊಬ್ಬಿರಿಯೇ ಚಿಂದಿ ಮಾಡಿ
ನಾಯಿಗಳಿಂದ ಕಚ್ಚಿಸಿ ಸೂಜೀಯ
ಆಯಕ್ಕೆ ಊರುವರು ಮರಕ್ಕೆ ಕಟ್ಟಿ
ಊಯಾಲೆ ಆಡುವರು ಇಪ್ಪತ್ತೆಂಟು
ನಾಯಕ ನರಕದಲ್ಲಿಟ್ಟು ತೆಗೆಯುವರು೬
ಮರಳಿ ಮರಳಿ ಈ ಪರಿ ಬಾಧಿಗೆ ಇರೆ
ನರಕ ನರಕದಲ್ಲಿ ಹೂಳಿ ಉಬ್ಬಸಗೈಸಿ
ಉರ ಕಾಲದಲ್ಲಿಟ್ಟು ತರುವಾಯ ತೆಗೆದು ಪಾ
ಮರ ದುರುಳನೆಂದು ಮಿಡುಕಿಸಿ ಮಹಾನಿತ್ಯ
ನರಕದೊಳಗೆ ನೂಕಿ ಕಡೆಗಾಣದಂತೆ
ವರಲುತಿರೆ ನಗುವರು ನಿರ್ಮಲವಾದ
ಮರುತ ಮತದವರು ಪ್ರತಿದಿನ
ಸಿರಿಪತಿ ವಿಜಯವಿಠ್ಠಲನ ನಂಬದ ಮಿಥ್ಯಾ ೭

೪೪೧
ಸವಿದುಣ್ಣ ಬಾರಯ್ಯ ಸಾರಾಭೋಕ್ತಾ
ಪವನಾಂತರ್ಗತ ಕಪಿಲಾತ್ಮ ನರಸಿಂಗಾ ಪ
ಉಪ್ಪು ಉಪ್ಪಿನಕಾಯಿ ಪತ್ರ ಶಾಖ ಸೂಪ
ಒಪ್ಪುವ ಸಂಡಿಗೆ ವ್ಯಂಜನಗಳು
ಇಪ್ಪವು ನಿರುಋತಿ ಪ್ರಾಣ ಮಿತ್ರ ಶೇಷ
ಸರ್ಪವೈರಿ ದಕ್ಷ ಲೋಕೇಶನಲ್ಲಿಗೆ ೧
ಅನ್ನ ಮಂಡಿಗೆ ತೈಲ ಪಕ್ವಂಗಳು ಪರ
ಮಾನ್ನ ಭಕ್ಷ ತುಪ್ಪ ಹುಳಿ ಪದಾರ್ಥ
ಮುನ್ನೆ ಚಂದ್ರ ಬೊಮ್ಮ ಜಯಂತರೈ ಸೂರ್ಯ
ಕನ್ಯ ಲಕುಮಿದೇವಿ ಪರ್ವತ ಸುತಿ ಇರೆ೨
ಕ್ಷೀರ ನವನೀತಧಿಕಾರಣಾಮ್ಲ
ಚಾರು ಉದ್ದಿನ ಭಕ್ಷ ಕಟು ದ್ರವ್ಯ ಪಾ
ವಾರಿಜಾಸನ ರಾಣಿ ವಾಯು ಸೋಮ
ಮಾರ ವೈರಿ ಧರ್ಮ ಸ್ವಾಯಂಭುವಂಗಳು ಅಲ್ಲಿ ಹಾಕಿರೆ ೩
ಇಂಗು ಯಾಲಕ್ಕಿ ಸಾಸಿವೆಯಿಂದ ವೊಪ್ಪುತಾ
ಬಂಗಾರ ಪಾತ್ರಿಯೊಳಗೆ ತಂದಿಡೆ
ಪೊಂಗಳಸದಲ್ಲಿ ಸ್ವಾದೋದಕ ಇಡೆ
ಅಂಗಜಾ ದುರ್ಗಿಯ ಚಂದ್ರಮಸುತನಿರೆ ೪
ವೀಳ್ಯವ ಕೈಕೊಳೊ ಗಂಗಾಜನಕ ಹರಿ
ಅಲ್ಲಲ್ಲಿಗೆ ನಿನ್ನ ರೂಪವುಂಟು
ಬಲ್ಲಿದಾ ವಿಜಯವಿಠ್ಠಲರೇಯ ಎನಗಿದೆ
ಸಲ್ಲೊದೆ ಸರಿ ಲೇಶವಾಪೇಕ್ಷದವನಲ್ಲ೫

೪೪೨
ಸಾಕು ಇಹಕೆನ್ನ ನೂಕದಿರು ತಂದೆ
ವಾಕು ಕೇಳು ಪರಾಕು ಮಾಡದೆ
ಸಾಕು ದಯದಿಂದನೇಕ ಮಹಿಮನೆ
ಏಕಾಮೇವಾದ್ವಿತೀಯ ಪ
ಮಂಗಳಾಂಗ ಮಾತಂಗವರದ ವಿ-
ಹಂಗಗಮನ ಭುಜಂಗಶಯನ ತು-
ರಂಗವದನ ಶುಭಾಂಗ ರಿಪುಕುಲ-
ಭಂಗ ಅಸಿತಾಂಗ ಅ.ಪ.
ಶೃಂಗಾರಾಂಬುಧಿ ರಂಗ ನಿನ್ನಯ
ಅಂಗಸಂಗಕ್ಕೆ ಅಂಗೀಕರಿಸಿದ
ಸಂಗಿತರ ಚರಣಂಗಳಬ್ಜಕೆ
ಭೃಂಗನಪ್ಪೆನೆಂತೊ ೧
ಮಾನವಾವುದು ಸುಮ್ಮನಿರೆ ಪವ-
ಮಾನವಂದಿತ ನಿನ್ನ ಪೋಲ್ವ ಸ-
ಮಾನರಾರನು ಕಾಣೆ ಎನ್ನಭಿ-
ಮಾನದ ದೊರೆಯೆ
ಮಾನವಾಧೀಶ ಮಾನವಮಾನ-
ಮಾನದಿಂದ ಕ್ರಮಾನುಸಾರನು
ಮಾನಗೊಳಿಸದೆ ಮಾನವಿತ್ತು ದು-
ಮ್ಮಾನವನೆ ಬಿಡಿಸೊ ೨
ಬಲ್ಲೆ ನಿನ್ನಯ ಎಲ್ಲ ಪರಿಯಲಿ
ಬಲ್ಲಿದರಿಗತಿ ಬಲ್ಲಿದನು ಸಿರಿ-
ವಲ್ಲಭಾ ನೀನಲ್ಲದಿಲ್ಲೆಂದು
ಎಲ್ಲ ತುತಿಸುತಿದೆ
ಸೊಲ್ಲುವೊಂದನು ನಿಲ್ಲುತಲಿ ಕೇಳು
ಎಲ್ಲು ಬಯಸದೆ ಇಲ್ಲಿಗೇ ಬಂದೆ
ಕೊಲ್ಲು ಕಾಯ್ಸಿರಿ ವಿಜಯವಿಠ್ಠಲ
ಬಲ್ಲದನು ಮಾಡೋ೩

೧೫೭
ಸಾಕೇತಪುರ ವಾಸಿ ಕಪಟವೇಷ |
ಶ್ರೀಕಮಲನಾಭನ ನಖದಲಿ ಕಾಶೀ ಪ
ವಿಶ್ವತೋಮುಖ ಬ್ರಹ್ಮ ವಿಶ್ವತೋಚಕ್ಷು |
ವಿಶ್ವ ವಿಶ್ವಬಾಹು ವಿಶ್ವರೂಪ ರೂಪ ||
ವಿಶ್ವ ಬ್ರಹ್ಮಾಂಡ ಆಧಾರ ಕಾರಣ |
ವಿಶ್ವೇಶ್ವರ ಪ್ರಾಣ ಮಂತ್ರ ರಾಮ ರಾಮ ೧
ಮಸ್ತಕಾಂಗುಟ ಪರಿಯಂತ ರೋಮಕೂಪ |
ವಿಸ್ತಾರ ಮಹಿಮ ಅಗಣಿತ ಕಮಲಜ |
ಹಸ್ತಿ ಚರ್ಮಾಂಬರರು ಇದ್ದು ನೆಲೆಗಾಣರು |
ನಾಸ್ತಿ ವಿಷ್ಣು ಪರದೈವ ಇಹಪರದಲಿ೨
ಕಷ್ಟವಿಲ್ಲದೆ ಮಕ್ಕಳಾಟಕೆ ತ್ವರದಿಂದ |
ಸೃಷ್ಟಿಸುವ ಕಣ್ಣು ಎವೆ ಹಾಕುವ ||
ಅಷ್ಟರೊಳನೇಕ ಬ್ರಹ್ಮಾಂಡ ನಾಟಕ |
ವಿಷ್ಣು ಕರ್ಮಾಣಿ ಪಶ್ಯತೆ ಪಶ್ಯತೆ ೩
ನಿತ್ಯ ತೃಪ್ತಿ ನಿರಾಹಾರಿ ನಿತ್ಯಾನಂದ |
ಮೃತ್ಯು ಹಾ ಕಾಲಪ್ರಮಾಣ ಪರುಷಾ ||
ಸತ್ಯ ನಿಗಮಾವಳಿ | ಜ್ಞಾನ ಗಮ್ಯ ಶರಧಿ |
ಸತ್ಯ ಸಂಕಲ್ಪ ನಿಷ್ಠನಾಹಂತೆ ೪
ಅಜನಯ್ಯ ಅದ್ಭುತ ಮಹಿಮ ಪುರುಷೋತ್ತಮ |
ಭುಜಧರನಯ್ಯಯಾ | ಅಮಿತಕಾಯಾ |
ವಿಜಯಸಾರಥಿ ವಿಚಕ್ಷಣ ದೀಪ್ತ ಮೂರುತಿ |
ಭುಜಗಗಿರಿ ವಿಜಯವಿಠ್ಠಲ ವೆಂಕಟೇಶಾ ೫

ಸಾಗಿಬಾರೈಯ್ಯ ಭವರೋಗ ವೈದ್ಯಾನೆ :

೧೪೦
ಸಾಗಿ ಬಾರೈಯ ನೀನು, ಗೋವಿಂದ ವೆಂಕಟ ಪ
ಸಾಗಿಬಾರೈಯ ಭವರೋಗದ ವೈದ್ಯನೆ
ಬಾಗಿ ನಿನಗೆ ಚೆನ್ನಾಗಿ ತುತಿಪೆ ನಿಂದು
ಭಾಗೀರಥಿಪಿತ ಭಾಗವತರ ಸಂ
ಯೋಗರಂಗ ಉರಗಗಿರಿ ವೆಂಕಟ ಅ.ಪ.
ರಥದ ಮಧ್ಯದಲಿಪ್ಪನೆ ರಥಾಂಡಜ ವಾಹನನೆ
ರಥಾಂಗಪಾಣಿಯೆ ದಶರಥ ನೃಪಬಾಲ
ಪಾರ್ಥಗೆ ಒಲಿದವನ ರಥವ ನಡಿಸಿ ಅತಿ-
ರಥ ಮಹರಥರ ವಿರಥರ ಮಾಡಿ ಗೆಲಿಸಿದೆ
ಪ್ರಥಮ ದೈವವೆ ಮನ್ಮಥಪಿತ ದೈತ್ಯರ-
ಮಥನ ಭಕ್ತರ ಮನೋರಥನೆ ತಾರಾ-
ಪಥವರ್ಣನೆ ತವ ಕಥಾಶ್ರವಣದಲಿ ಸು-
ಪಥವನು ತೋರಿಸು ಪ್ರಥಮಾಂಗದೊಡೆಯ ೧
ನಿಲ್ಲದೆ ಬರುವುದು ಪುಲ್ಲಲೋಚನೆ ಸಿರಿ-
ವಲ್ಲಭ ಸರ್ವರಿಗು ಬಲ್ಲಿದನೆ ಅಪ್ರತಿ-
ಮಲ್ಲ ಮುರವಿರೋಧಿ ಮೆಲ್ಲಮೆಲ್ಲನೆ ಪಾದ
ಪಲ್ಲವ ತೋರುತ್ತ ಎಲ್ಲಾ ಕಾಲದಿ ನಮ್ಮ-
ನೆಲ್ಲರುದ್ಧರಿಪುದು ಎಲ್ಲಿ ನಿನಗೆ ಸರಿ-
ಯಿಲ್ಲವೊ ನೋಡಲು ಸಲ್ಲುವುದೋ ಬಿರು-
ದಲ್ಲಿಗಲ್ಲಿಗೆ ಗುಣಬಲ್ಲವರಾರಿನ್ನು
ನೆಲ್ಲಕಟ್ಟು ಕೊನೆಯಲ್ಲಿಪ್ಪ ವಿಶ್ವ ೨
ಬೊಮ್ಮ ಮೊದಲು ಮನುಜೋತ್ತಮರು ಕಡೆಯಾಗಿ
ನಿಮ್ಮ ದಾಸರು ಅವರ ಸಮ್ಮಂಧಿಗಳ ಪಾದ-
ನೆಮ್ಮಿಕೊಂಡಿಪ್ಪಂಥ ಧಮ್ಮನು ನಾ ಸರ್ವೋ-
ತ್ತುಮ್ಮಾನೇಕ ಗುಣಮಹಿಮ ವಿಭೂಷಿತ
ರಮ್ಮೆಧರಣಿದೇವಿ ಇಮ್ಮಹಿಷೇರ ಕೂಡಿ
ಸಮುಖನಾಗುತ ಸುಮ್ಮನೆ ಬಾ ಬಾ
ಹಿಮ್ಮೆಟ್ಟಿದೆ ಸಿರಿ ವಿಜಯವಿಠ್ಠಲ ಅನು-
ಪಮ್ಮಚರಿತ ಪರಬೊಮ್ಮ ತಿರುಮಲೇಶ ೩

೫೨೭
ಸಾಧನಕ್ಕೆ ಬಗೆಗಾಣೆನೆನ್ನಬಹುದೆ
ಸಾದರದಿ ಗುರುಕರುಣ ತಾ ಪಡೆದ ಬಳಿಕ ಪ
ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ
ಉಂಡು ಉಟ್ಟದ್ದೆಲ್ಲ ವಿಷ್ಣು ಪೂಜೆ
ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ
ಹಿಂಡು ಮಾತುಗಳೆಲ್ಲ ಹರಿಯ ನಾಮ ೧
ವಾಗತ್ಯಪಡುವದೆ ವಿಧಿನಿಷೇಧಾರಚರಣೆ
ರೋಗಾನುಭವವೆಲ್ಲ ಉಗ್ರತಪವು
ಆಗದವರಾಡಿಕೊಂಬುವುದೆ ಆರ್ಶೀವಾದ
ಬೀಗುರುಪಚಾರವೇ ಭೂತದಯವು ೨
ಮೈಮರೆತು ಮಲಗುವುದೆ ಧರಣಿ ನಮಸ್ಕಾರ
ಕೈಮೀರಿ ಹೋದದ್ದೆ ಕೃಷ್ಣಾರ್ಪಣ
ಮೈ ಮನೋವೃತ್ತಿಗಳೆ ವಿಷಯದಲಿ ವೈರಾಗ್ಯ
ಹೋಯ್ಯಾಲಿತನವೆಲ್ಲ ಹರಿಯ ವಿಹಾರ ೩
ಹಿಡಿದ ಹಟ ಪೂರೈಸಲದು ಹರಿಯ ಸಂಕಲ್ಪ
ನಡೆದಾಡುವೋದೆಲ್ಲ ತೀರ್ಥಯಾತ್ರೆ
ಬಡತನವು ಬರಲದೇ ಭಗವದ್ಭಜನೆಯೋಗ
ಸಡಗರದಲ್ಲಿಪ್ಪುದೆ ಶ್ರೀಶನಾಜ್ಞಾ ೪
ಬುದ್ಧಿಸಾಲದೆ ಸುಮ್ಮನಿರುವುದೇ ಸಮ್ಮತವು
ಯದೃಚ್ಛಾಲಾಭವೇ ಸುಖವುಯೆನಲು
ಮಧ್ವಾಂತರ್ಗತ ಶ್ರೀ ವಿಜಯವಿಠ್ಠಲರೇಯ
ಹೃದ್ಗತಾರ್ಥವ ತಿಳಿದು ಒಪ್ಪಿಸಿಕೊಳನೆ ೫

೫೩೮
ಸಾಮಜ ವರದಗೆ
ಮಾಮನೋಹರಗೆ
ಕಾಮನ ಪಿತ ಶಾಮವರ್ಣ ಶ್ರೀಹರಿಗೆ
ವಾಮದೇವನ ಸಖ ಸೋಮವದನ ಹರಿಗೆ
ಕಾಮಿನಿ ಸತ್ಯಭಾಮ ಪತಿಗೆ ಹೊಸ
ಹೇಮದಾರುತಿಯ ಬೆಳಗಿರೆ ೧
ಲಕ್ಷ್ಮೀಯ ಅರಸಗೆ ಪಕ್ಷಿವಾಹನಗೆ
ಮೋಕ್ಷದಾಯಕ ಪಾಂಡವ ಪಕ್ಷ ಶ್ರೀಹರಿಗೆ
ವಕ್ಷಸ್ಥಳದಿ ಲಕ್ಷ್ಮೀಯ ಪೊರೆವ
ಕುಕ್ಷಿವಳಗೆ ಜಗವ ರಕ್ಷಿಸುವ ಹರಿಗೆ
ಲಕ್ಷದಾರತಿಯ ಬೆಳಗಿರೆ ೨
ಆಗಮವೇದ್ಯಗೆ ಭೋಗಿ ಶಯನಗೆ
ಬೇಗದಿಂದಲಿ ಭಕ್ತರ ಪೊರೆವಗೆ
ವಾಗೀಶವಂದ್ಯ ಶ್ರೀ ಗುರು ವಿಜಯವಿಠ್ಠಲ
ಮಂಗಳ ಮಹಿಮ
ತುಂಗ ಚರಿತ ಹರಿಗೆ ಮಂಗಳಾರುತಿಯ ಬೆಳಗಿರೆ ೩

ಸಾರಿ ಭಜಿಸಿರೋ ಟೀಕಾರಾಯರಂಘ್ರಿಯಾ :

೩೧೫
ಸಾರಿ ಭಜಿಸಿರೋ ಟೀಕಾಚಾರ್ಯರಂಘ್ರಿಯಾ ಪ
ಘೋರ ಪಾತಕಾಂಬುಧಿಯ ದೂರ ಮಾಳ್ಪರ ಅ.ಪ
ಮೋದತೀರ್ಥರ ಮತವ ಸಾಧಿಸುವರ |
ಪಾದ ಸೇವ್ಯರ ದುರ್ಬೋಧ ಕಳೆವರ ೧
ಭಾಷ್ಯತತ್ವ ಸುವಿಶೇಷ ಮಾಳ್ಪರ |
ದೋಷ ದೂರರ ವಾಸವಾದಿ ರೂಪರ೨
ಶ್ಯಾಮಸುಂದರ ಹರಿಗೆ ಪ್ರೇಮಪೂರ್ಣರ |
ನೇಮನಿತ್ಯದ ನಿಷ್ಕಾಮನಾ ವರ ೩
ಮೋಕ್ಷದಾತರ ಅಕ್ಷೋಭ್ಯತೀರ್ಥರ ಅ- |
ಶಿಕ್ಷಿತಾದರ ಅಪೇಕ್ಷ ರಹಿತರ ೪
ವಿಜಯವಿಠಲನ ಅಂಘ್ರಿ ಭಜನೆ ಮಾಳ್ಪರ |
ಕುಜನ ಭಂಜರ ದಿಗ್ವಿಜಯ ರಾಯರ೫

೧೪೧
ಸಾಲವ ಕೊಡದಿದ್ದರೆ ನಿನಗೆ |
ನಾಲಿಗೆಂಬೊದು ಇಲ್ಲೊ ಉತ್ತರಾಡುವುದಕ್ಕೆ ಪ
ಏಸು ದಿವಸದಿಂದ ಎಲ್ಲರ ಸೇವಿಸಿ |
ಕಾಸು ಕಾಸಿಗೆ ನಾನು ಕೂಡಹಾಕಿ |
ಲೇಸು ಉಳ್ಳವನೆಂದು ಕೊಟ್ಟರೆ ನೀ ನಿಂತು |
ಮೋಸಗೊಳಿಸುವರೆ ಕಾಣಿಸಿಕೊಳ್ಳಿದಲೆ ೧
ಬಡ್ಡಿ ಏನಾಯಿತೊ ಕೊಟ್ಟ ಗಂಟಿಗೆ ನಿನ |
ಗಡ್ಡ ಬೀಳುವೆನೊ ಸಾಲವ ತೀರಿಸೊ |
ಖಡ್ಡಿ ಮಾನವನೆಂದು ನೋಡ ಸಲ್ಲಾ ಎನ್ನ |
ದೊಡ್ಡವರು ಕಂಡರೆ ಅಡ್ಡಗೈಸದೆ ಬಿಡರು ೨
ಗುಣಿಸಿ ನೋಡಿದರೆ ಏನಯ್ಯಾ ಮುತ್ತಯ್ಯಾ ಯಾ
ಕೆ ನಿಲ್ಲದೆ ನಿನಗೆ ಸಾಲವಿತ್ತೆ |
ಧನವ ಎಣಿಸಲಾಗಿ ನೆಲೆಗಾಣೆಯಿನ್ನು ಸು |
ಮ್ಮನೆ ಕೂಗದೆ ನಿಂದು ಋಣವ ತಿದ್ದು ಚಲುವಾ೩
ಸಾಲಾ ಬಂದರೆ ಒಳಿತೆ ಇಲ್ಲದಿದ್ದರೆ ಕೇಳು |
ಮೇಲೆ ಮೇಲೆ ಬಿದ್ದು ನಿನ್ನ |
ಕಾಲಿಗೆನ್ನ ಕೊರಳ ಸಂಕಲೆಯಿಂದ
ಕೀಲಿಸಿ ಬಿಡದಲೆ ತೊಲಗ ಬಿಡೆ ದೇವಾ ೪
ಬತ್ತಲಿದ್ದವರಿಗೆ ಭಯವಿಲ್ಲವೆಂಬೊ ಗಾದಿಗೆ |
ನೆತ್ತಿಯೆತ್ತಿ ಮೋರೆ ತೋರ ಬೇಕೊ |
ಚಿತ್ತ ನಿರ್ಮಳದಲ್ಲಿ ಇಂದ ಎನ್ನ |
ಹತ್ತರ ಇದ್ದು ತೀರಿಸಬೇಕೊ ಸರ್ವೇಶಾ |
ಸುತ್ತಿ ಭಳಿರೆ ಸಂದೇಹ ಬೇಡ ನೀ ಬರೆದ ಬರಹ ನೋಡು ೫
ಬಡತನ ಬಂದರಾಗ ನಾ ನಿನಗೆ ಬಾಯಿ |
ಬಿಡುವೆನೆ ದೈನ್ಯದಲಿ ಭಾಗ್ಯವಂತಾ |
ತಡ ಮಾಡಲಾಗದು ಕೊಡು ಎನ್ನ ಒಡಿವೆ |
ಪೊಡವಿಲಿ ಪರರಿಗೆ ಸಲ್ಲದೊ ಸರ್ವೇಶಾ ೬
ಗತಿಯಿಲ್ಲ ನಾನಪ್ರಮಾಣಿಕ ನಾನಹುದೆಂದು |
ಸಂತತ ಸಂತರ ಮುಂದೆ ನುಡಿದು ಬಿಡುವೆ |
ಪತಿತ ಪಾವನ ನಮ್ಮ ವಿಜಯವಿಠ್ಠಲ ನಿನ್ನ |
ನುತಿಸಿಕೊಳ್ಳುತ್ತ ಕಾಲಕ್ರಮಣ ಮಾಡುವೆ ೭

೧೩೫
ಸಿಂಗನಾ ಏರಿದ ನರಸಿಂಗ ತೋಮರವ ಪಿಡಿದು |
ರಂಗ ವೈಭೋಗದಿಂದ | ನಲಿದು ಚತು |
ರಂಗ ಬೀದಿಯೊಳು ಮೆರೆದಾ ಪ
ಮುತ್ತಿನ ಕಿರೀಟ ಮೇಲೆ ಎತ್ತಿದ ಸತ್ತಿಗೆ ಪೊಳೆಯ |
ಸುತ್ತ ಮುತ್ತ ಬೊಮ್ಮಾದಿಗಳು | ವಾಹನ ರಥ |
ಹತ್ತಿ ಬರುವ ಪುರದ ಜನಗಳು ೧
ಸನಕಸನಂದನ ಸನತ್ಸುಜಾತ ಸನತ್ಕುಮಾರ |
ಮುನಿವರರು ವೇದ ಘೋಷಣೆ ಉಚ್ಚರಿಸುತ್ತ |
ಅನಿಮಿಷರಾಗಿ ಇಚ್ಚೈಸುತಾ ೨
ಗಂಧರ್ವಾದಿ ಗಾಯನಾ ನಾರಂದನು ಪಾಡುತ್ತ ಬರೆ |
ಇಂದು ಮೌಳಿ ಮುಂದೆ ಕುಣಿಯುತಾ | ತಕ್ಕಥೈ
ಎಂದು ತುಂಬರನು ಹಾಡಿ ಪಾಡುತಾ ೩
ವೇಶ್ಯ ಜನರು ರಂಭೆ ಊರ್ವಶಿ ಪಾತ್ರ ಮಾಡುತಿರೆ |
ದಾಸಾನುದಾಸರು ಪಾಡುತಾ | ಸಲಹೊ ಶ್ರೀನಿ
ವಾಸನೆಂದು ಬೇಡಿಕೊಳುತಾ ೪
ಮಂಗಳಪಾಂಗ ಸಾಂಗೋಪಾಂಗದಿಂದ ಒಪ್ಪೆ ಅಲಮೇ
ಲ್ಮಂಗ ವಿಜಯವಿಠ್ಠಲ | ತಿರುಪತಿ ತಿರು
ವೆಂಗಳೇಶ ಶ್ರೀ ವೆಂಕಟೇಶಾ ೫

೨೧೬
ಸೀತೆಯ ಭೂಮಿಜಾತೆಯ ಜಗ-|
ನ್ಮಾತೆಯ ಸ್ಮರಿಸಿ ವಿಖ್ಯಾತೆಯ ಪ
ಕ್ಷೀರ ವಾರಿಧಿಯ ಕುಮಾರಿಯ ತನ್ನ |
ಸೇರಿದವರ ಭಯಹಾರಿಯ ||
ತೋರುವಳು ಮುಕ್ತಿಹಾರಿಯ ಸರ್ವ |
ಸಾರ ಸುಂದರ ಶ್ರೀನಾರಿಯ ೧
ಈಶಕೋಟಿಯೊಳ್ ಗಣನೆಯ ಸ್ವಪ್ರ-|
ಕಾಶವಾದ ಗುಣಶ್ರೇಣಿಯ ||
ಈಶಾದ್ಯರ ಪೆತ್ತ ಕರುಣಿಯ ನಿ-|
ರ್ದೋಷ ವಾರಿಧಿಕಲ್ಯಾಣಿಯ೨
ವಿಜಯವಿಠ್ಠಲನ್ನ ರಾಣಿಯ ಪಂ-|
ಕಜಮಾಲೆ ಪಿಡಿದ ಪಾಣಿಯ ||
ವಿಜಯಲಕ್ಷ್ಮಿ ಗಜಗಮನೆಯ ನಿತ್ಯ |
ಸುಜನವಂದಿತೆ ಅಹಿವೇಣಿಯ ೩

(ಕ) ಷಣ್ಮುಖ
೨೮೮
ಸುಬ್ಬರಾಯ ಶುಭ ಕಾಯಾ |
ಸುಬ್ಬರಾಯ ಶುಭ ಕಾಯಂಗಜ ನೀನೆ ||
ನಿಬ್ಬರ ಮಹಿಮಾ ದಯಾಂಬುಧಿ ಸ್ಕಂದಾ ಪ
ಮಾರಾ ಭರತನೆ ಶಂಬ | ರಾರಿ ಸನತ್ಕುಮಾರ ಕು |
ಮಾರಾ ಸಾಂಬಾ ||
ಸಾರಿದೆ ನಿನ್ನವತಾರ ಮೂಲರೂಪ ||
ಸಾರಿಸಾರಿಗೆ ಸಂಸಾರಮನ ವಿ ||
ಸ್ತಾರವಾಗದಂತೆ
ಹಾರಿಸುದುರವ್ಯಾಪಾರ ಗುಣ ಪಾರಾವಾರಾ ೧
ಮಾಡುವೆ ವಂದನೆ ಸತತ | ಸಜ್ಜನರೊಳ |
ಗಾಡಿಸು ಭಕ್ತ ಪ್ರೀತಾ ||
ಪಾಡಿದವರ ಕಾ | ಪಾಡುವ ರತಿ-ಪತಿ |
ಈಡಾರು ನಿನಗೇ ನಾಡಿನೊಳಗೆಲ್ಲ |
ಬೇಡುವೆ ದಯವನ್ನು | ಮಾಡುವಿರಕುತಿಯ |
ನೀಡು ಬಿಡದಲೆ ನೋಡು೨
ಕುಕ್ಕೆಪುರಿಯ ನಿಲಯಾ | ಶ್ರೀಧರ ಬೊಮ್ಮ |
ಮುಕ್ಕಣ್ಣಗಳ ತನಯ ||
ಸೊಕ್ಕಿದ ತಾರಕ ರಕ್ಕಸ ಹರ ದೇ |
ವಕ್ಕಳ ನಿಜ ದಳಕೆ ನಾಯಕನಾದೆ ||
ಪಕ್ಕಿವಾಹನ ಸಿರಿ ವಿಜಯವಿಠ್ಠಲನ |
ಚಕ್ರ ಐದೊಂದು ವಕ್ರಾ ೩

೮೦
ಸುರನದಿ ಪೆತ್ತವನೆ ನಿನಗೆ ಮಜ್ಜನವೆ |
ಪಾಲಾರಮನೆಪುಳುವನೇ ನಿನಗೀ ಕ್ಷೀರಾಭಿಷೇಕವೇ ?
ಸರಸಿಜಕುಸುಮ ಗಂಧಾ ಪರಿಮಳದಿಂದ
ಪೊಡೆದಾ ದೈವವೇ | ಅವರೆ
ಯೊಳಗಿನ ಕುಸುಮ ನಿನಗೆ ಮೆಚ್ಚೆ |
ಎರಡು ಕಂಗಾಳಿಂದ ಲೋಕ ಬೆಳಗಿಸುವವನ
ವಿರಚೇ ಶಿವ ದೀಪದಿಂವೆಗ್ಗಳವೇನೊ ನಿನಗೆ | ೧

ಕರದೊಳಗೆ ಮುನಿಗೆ ರಸಾಯನವುಳ್ಳ ಶ್ರೀ ತೋರಿ
ಶಿರವನೆ ತರಿಸಿ ತೊಲಗಿದ ಪದಾರ್ಥದಿಂದೇನಯ್ಯಾ | ಹಂಸ ಕು
ಬೇರ ನಿನ್ನವರಾಗಿದೆ | ಬರಿದೆಯಲಾ ಯೆನ್ನ ಸುವರ್ಣ ಪುಷ್ಪವೆ |
ಪರಿಪರಿಗಾಯನ ನಾರದಾದ್ಯರು ಪಾಡೆ
ಪೊಗಳಬಲ್ಲನೆ ನಿನ್ನನಗಣಿತ ಸ್ತೋ
ತ್ರಗಳಿಂದಯೀ ಹೇಳಿಕೆಯೇನೋ |
ಸುಗುಣ ಸುಹಸವಲ್ಲ ವಿಜಯವಿಠ್ಠಲದೊರೆಯೆ |
ನಿನಗೆರಗಿ ಕೈಮುಗಿವೆನೊ ತರಳತನದಲ್ಲಿ ನಾನು೨

೪೯೧
ಸುಳ್ಳು ಪೇಳುವೆ ನಿಮಗೆ
ಸುಳ್ಳು ನಮ್ಮನೆ ದೈವ
ಕಳ್ಳನ ಬಂಟರು ನಮಗೆ ಕಡೆ ಮೊದಲಿಲ್ಲಾ ಪ
ನಾಮವಿಲ್ಲದೆ ಬೂದಿ ನೇಮ ಮಾಡೋದು ಸುಳ್ಳು
ನಾಮವೆಂಬುದೆ ಬುದ್ಧಿ ಮಿಕ್ಕವೆಲ್ಲ ಸುಳ್ಳು ೧
ಒಂದು ಅಹುದು ಎರಡು ಎಂದೆಂದಿಗೆ ಸುಳ್ಳು
ಮುಂದರಿದು ನೋಡು ಯಿಂಥ ಅಂದವೆಲ್ಲ ಸುಳ್ಳು ೨
ಸೃಷ್ಟಿಯ ಮತ್ತೊಬ್ಬ ಪುಟ್ಟಿಸುವುದೆ ಸುಳ್ಳು
ಧಿಟ್ಟ ವಿಜಯವಿಠ್ಠಲನಲ್ಲದೆ ಶ್ರೇಷ್ಠನೆಂಬುವರು ಸುಳ್ಳು೩

೮೧
ಸೇತು ಮಾಧವರಾಯನಿಗೆ | ನೀನೆ | ಪ್ರೀತಿಯಾದವಾ |
ಭೂತಳದೊಳಗತಿ ಖ್ಯಾತಿ ಮಾರುತಿ ದೇವಾ ಪ
ಪಾತಕಹರ ಪಾವನ ನಾಮ ಶ್ವೇತ ಶರೀರ |
ಭೂತನಾಥನ ಪ್ರಿಯಾ ಭುಜಗಾಧಿಪಶಯ್ಯಾ |
ಮಾತು ಮಾತಿಗೆ ನಗುತ ನೋಡುವ ದೇವ ೧
ಭಕುತಿಕೊಡು ಬೇಗ ಎನಗೆ ಶ್ರೀ ಲಕುಮಿಪತಿ ಈಗ |
ಅಕಳಂಕ ಚರಿತ ಅತ್ಯದ್ಭುತ ಮುಖ
ವಿಕಸಿತ ಮಹಾಕೃತು ಮಹಿಮಾ ೨
ಆದಿದೈವನೆ ಸಕಲ ಜೀವಾದಿ ಭೇದವೆ |
ಯಾದವ ಕುಲಮಣಿಯಾದ ಅಣೋರಣಿ |ಮಾಧವ ವಿಜಯವಿಠ್ಠಲ ರಘುರಾಮಾ ೩

೧೪೨
ಸೇರಿದೆ ನಿನ್ನ ವೆಂಕಟರನ್ನ ಪಾಲಿಸು ಎನ್ನ ಅ- |
ಪಾರ ಜನುಮಕ್ಕೆ ನೀನೆ ದೈವವೆಂದು ಪ
ಶೂನ್ಯಜ್ಞನು ನಾನು ಅನ್ಯಾಥಾ ಗತಿ ಅರಿಯೆ |
ಅನ್ಯರಲ್ಲಿಗೆ ಕೊಡದೆ ಧನ್ಯನ ಮಾಡೊ ಬಿಡದೆ ೧
ಕಲ್ಪತರುವೆ ಎಂದು ವಪ್ಪದಿಂದಲಿ ಬಂದೆ |
ಆಲ್ಪರಿಯದಂತೆ ನಾಗತಲ್ಪನೆ ಫಲವೀಯೋ ೨
ವರುಷಾವರುಷ ಹೀಗೆ ದರುಶನಕೊಡು ಎನಗೆ |
ಹರುಷವಾಗಲಿ ಪರಮಪುರುಷ ವಿಜಯವಿಠ್ಠಲಾ ೩

೧೪೩
ಸೌಂದರ್ಯ ಪುರುಷನ ಕಣ್ದೆರದು ನೋಡಿದೆನು |
ಇಂದೆನ್ನ ಜನುಮ ಸಫಲ |
ಹಿಂದೆ ಅನಂತೇಶನೆಂದೆಂಬ ನಾಮದಲಿ |
ಚಂದದಲಿ ಮೆರೆವ ಕಂಬು | ಕಂದರದ | ತಿಮ್ಮನ ಪ
ಮುಕುಟ ಮುತ್ತಿನ ಹಾರ | ಮಕರ ಕುಂಡಲಧಾರ |
ಮಕ್ಕಳಾ ಮಣಿಸು ಕಾಮದಾ | ಅಕಳಂಕ ತುಲಸಿ ಸರ |
ಪೊಕ್ಕಳ ಕಮಲ ಸುಂದರ | ಅಕುಟಿಲ ಹೃದಯಮಂದಿರ |
ಸಕಲಕಾಲದಲಿ ನಿಜ | ಭಕುತರಿಗೆ ಒಲಿದಿಪ್ಪ |
ಅಖಿಳ ಲೋಕಾಧೀಶ ಮುಕುತಾರ್ಥ ಮುರವೈರಿ೧
ಉಂಗುರ ಕೈ ಬೆರಳ ಕರ ರ| ಥಾಂಗ ಶಂಖ ಪಾಣಿ
ಮಂಗಳಾಂಗಿಯ ರಮಣಾ |
ಮುಂಗೈಯ ಕಡಗ ಕಂಕಣ ಬಾಹು ಭುಜಕೀರ್ತಿ |
ಮುಂಗೈಯ ಫಣಿಯ ತಿಲಕಾ |
ಬಂಗಾರದಂಬರ ಭವದೂರಾ ಪದದಲ್ಲಿ |
ಪೊಂಗೆಜ್ಜೆ ಸರ್ವಾಭರಣದಿಂದ ಒಪ್ಪುವಾ ೨
ಪಾಂಡೆ ದೇಶವಾಸಾ ಪಾಂಡವರ ಸಂರಕ್ಷಕ |
ಚಂಡ ಪ್ರಚಂಡ ಮಹಿಮಾ | ಗಂಡುಗಲಿಗಳ ಗಂಡಾ |
ಕೊಂಡಾಡಿದವರಿಗೆ ತಂಡ | ತಂಡದ ವರವೀವಾ |
ಮಂಡಲದೊಳಧಿಕ ಮಂಡೂಕ ವರದ | ಉದ್ದಂಡ ವಿಜಯವಿಠ್ಠಲ|
ಅಂಡಜಗಮನ ಕೃಷ್ಣಾ ತಿಮ್ಮಾ೩

೪೪೩
ಹದಿನಾಲ್ಕು ಲೋಕವನಾಳುವ ತಂದೆಗೆ |
ಮುದದಿಂದ ನಾನೊಬ್ಬ ಭಾರವಾದೆನೆ ಪ
ಸುರಗಿರಿಯು ಶರಧಿಯೊಳು ಕಡೆವಾಗ ಮುಣಗಲಾ ||
ಭರದಿಂದ ಪೋಗಿ ಚೆನ್ನಾಂತು ಪೊತ್ತೆ ||
ಧರಣಿಯು ಮೊರೆಯಿಡಲು ತೆರಳಲ್ಲಿ ಬಂದು |
ಭೂತರುಣಿಯನು ಸೆರೆಬಡಿಸಿ ಉಳುಹಿಕೊಳ್ಳಲಿಲ್ಲವೆ ೧
ಸುರಪತಿ ಮುನಿದೇಳು ಹಗಲಿರುಳು ಮಳೆಗರೆಯೆ |
ಬೆರಳಲಿ ಧರಿಸಿ ಕಾಯ್ದು ನಿಜದೆ ||
ವರಮುನಿ ಪಸವನು ಬೇಡಲಾಗಿ ಬೆದರಿ ನರ- |
ನರಸಿ ನಿನ್ನ ಕರೆಯೆ ಕರುಣದಲಿ ಪಾಲಿಸಿದೆ ೨
ಜಲಜಾಕ್ಷ ಬೆಟ್ಟವನು ಪೊತ್ತು ಬಳಲಿದಾಗ |
ಸಲಹಬೇಕೆಂದು ಬೇಸರಿಸಲಿಲ್ಲಾ ||
ಸುಲಭದಲಿ ಶೇಷಾಚಲನಾಗಿಪ್ಪ |
ಒಲಿದೆನ್ನ ಸಂರಕ್ಷಿಸೊ ವಿಜಯವಿಠ್ಠಲನೆ ೩

೨೪೩
ಹನುಮಂತ ಬಲವಂತ ಅತಿ ಗುಣವಂತಾ |
ಇನ ಶಶಿ ಶಿಖಿನೇತ್ರ ರೂಪ ಚರಿತ್ರ |
ವನಚರ ಪುಂಗವ ಸನಕ ಸನಂದನ |
ವಿನುತ ಹರಿಚರಣನನುದಿನ ಜಪಿತಾ ಪ
ವಾಯುಕುಮಾರ ದೋಷ ಗಜ ಕಂಠೀರಾ |
ರಾಯ ಕಪಿಗೆ ಹರಿಯಾ | ತೋರಿದ ಸಿರಿಯಾ |
ಶ್ರೀಯರಸನ ನಾಮ ಸವಿದ ನಿಸ್ಸೀಮ |
ಪ್ರಿಯ್ಯಾದಿಕೊಂಡು ಗುರುತು ಸಾಗರನರಿತು |
ಮಾಯಾಛಾಯಾ ಗ್ರೀಯಾ ನೋಯ |
ಸಾಯಬಡದ ಸೀತೆಯ ಮುಂದೆ ನಿಂದು |
ತೋಯಜ ಕೈಯಿಂದಾಯತ ಮುದ್ರಿಕುಪಾಯದಿ ಕೊಂಡ ಸ |
ಮಾಯದ ಲಂಕಿಯ ನ್ಯಾಯವುರಹಿದ ಧೇಯಾಂಜನೇಯಾ ೧
ವರ ಕುಂತಿನಂದನಾ ಕಲಿಯ ಭಂಜನಾ |
ಗರಳನ್ನ ಭುಂಜನಾ | ಉರಗ ಭಂಜನಾ |
ಉರಿತಾಪ ಪರಿಹಾರ | ಕರುಣ ಸಾಗರಾ |
ದುರುಳ ಕೀಚಕರ ಹಿಡಂಬಕಾಂತಕ |
ಕೌರವಾ ಪಾರಾವಾರಾ ಉರಹಿದ ಬಲುಧೀರ ಶರ ಗದಾಧಾರಾ |
ಗುರುವರ ಸುತದಿನ |
ಕರಜನುವರದೊಳು |
ತರಬಲು ಪರಿ ಪರಿಹರಿಸಿದೆ ಸಮರಾ ೨
ಆನಂದತೀರ್ಥನಾಗಿ ಅತಿ ಹರುಷಯೋಗಿ
ಕಾನನ ಪರಮತಾ ದಹಿಸಿದ ಖ್ಯಾತಾ |
ಭಾನುಕುಲ ಸಾಂದ್ರಾ ಎನಿಸುವ ಚಂದ್ರಾ |
ಧ್ಯಾನಾಮೃತ ಪಾನಾ | ಮುಕ್ತಿ ಸೋಪಾನಾ |
ಜ್ಞಾನಾಹೀನಾ ದೀನಾ ಜನಾ |
ಮಾನಿಸಫಲದಾನಾ ನಿರತ ನಿಧಾನಾ |
ಶ್ರೀನಿಧಿ ವಿಜಯವಿಠ್ಠಲ |
ಶ್ರೀನಿವಾಸನ ಮಾನಸ ಪೂಜಿಪೆ ಗಾನನ ಮುನಿಗಳ ಆನನಮಣಿ ಪವಮಾನಸೂನು ೩

೨೪೩
ಹನುಮಂತ ಬಲವಂತ ಅತಿ ದಯವಂತಾ |
ಘನವಂತ ಕೀರ್ತಿವಂತ ಅತಿ ಜಯವಂತಾ ||
ಅನುದಿನದಲಿ ನಿನ್ನ ನೆನೆಸುವೆ ಎನ್ನ ಮನದಾಸೆ |
ಯ ನೀಯೋ ದನುಜ ಕೃತಾಂತಾ ಪ
ಪಾವಮಾನಿ ಸತತ ಪಾವನ್ನ ಚರಿತಾ |
ಪಾವಕಾಂಬಕನುತಾ ಪ್ಲವಂಗನಾಥಾ ||
ದೇವ ಕರುಣಪಾಂಗಾ ಭಾವುಕತುಂಗಾ |
ಗ್ರೀವಾ ಶತಶೃಂಗ ಗ್ರಾವವೆ ಭಂಗಾ ||
ಕಾವಾ ವರವೀವಾ ಭೋದೇವ ಸಂಭವಾ | ಸು |
ಗ್ರೀವ ಸಹಾಯ ಸರ್ವ
ದೇವನರಸಿ ಯತಿವರ ಹಾರಿದಾ |
ಕೋವಿದಾ ಕಪಿವರ ದೇವಕಿ ತನುಜನಾ ||
ಮಾವನ ಮಾವನಾ | ಜೀವಕೆ ಮುನಿದನೆ |
ಜೀವೇಶ ಮತವನ ಪಾವಕಾ ಜಯ ಜಯ ೧
ಧರಣಿಜಾತಿಗೆ ಭದ್ರಕರವಾದ ಮುದ್ರಾದರದಿಂದ ಇತ್ತ ನಿದ್ರಾ |
ಹರ ಗುಣಸಮುದ್ರಾ ಗರಳ ಅಂದು ಮೆದ್ದಾ
ದುರುಳರ ವರವದ್ದಾ |
ನೆರದಲ್ಲಿ ಶಲ್ಯ ಎದುರ ಬರಲಾಗಿ ಗೆದ್ದಾ |
ಮರುತಾ ಸುಖ ಗುರುವೆ ಸುರತರುವೆ | ಫಲ |
ಗುರುವೆ ಬಲು ಮೆರೆವೇ ನಿರ್ಜರ ಗಣದಲ್ಲಿ ಇಹ |
ಪರದಲಿ ದೇವ |
ಹರುಷವ ತೋರಿದೆ ಕುರುಪುರಾ ಕೆಡಿಸುತಾ
ಶರಧೀ ಬಾಗಿದ ಧೀರಾ |
ವರ ಪಾಂಡವ ಸೂನು ಆವಾಸ ಯೋಗಕೆ ಸಂ |
ಚರಿಸಿ ಶೌರ್ಯನೆ ಸುರನದಿ ದಾಟಿದಾ ಪರಮಹಂಸ ೨
ಕರಡಿ ವಾನರಬಲಾ ನೆರಹಿ ಮಹಾ ಪ್ರಬಲ |
ಶಿರ ಹತ್ತುವುಳ್ಳವನ ಕುಲ ವರಿಸಿದಾ ಸುಬಲಾ |
ಕುರುಪತಿ ನಿಜ ತಮ್ಮ ಬರಲವನ ಹಮ್ಮು |
ಮುರಿದೆ ಭಳಿರೆ ಬೊಮ್ಮ ಪೊರೆವನೆ ನಮ್ಮ |
ಮರುತಾ ಸುಖ ಭರಿತಾ ಸಂಹರಗೈಸುವ | ಸಂ |
ಕರ ಗರ್ವಹರ ಸರಯು ತೀರದಲ್ಲಿದ್ದಾ |
ಪುರದಲ್ಲಿ ಮೆರದನೆ |
ಗುರುವ್ಯಾಸಮುನಿಗಳ ಕರ ಕಮಲೋದ್ಭವ |
ವರ ವೃಕೋದರನೆ ವಿಜಯವಿಠ್ಠಲನ |ಶರಣರ ಪಾಲಾ ಬದರಿವಾಸಾ ಯಂತ್ರೇಶಾ ೩

೨೮೩
ಹರಹರ ಮಹಾದೇವ ಮಹಾನುಭಾವಾ |
ಪರಮೇಶ ಮೃತ್ಯುಂಜಯ ಭವ ಯ್ಯೋಮಕೇಶ |
ಸುರಹರ ಅಂಧಕ ಸುರರಿಪು ಜಾಣಾ |
ಸುರವರ ಪುರ ಮುರಹರ ಪದವಿನುತಾ ಪ
ಭಸಿತ ಭೂಷಿತ ಶಿವ ಭಕ್ತ ಸಂಜೀವ |
ವಿಷ ಕರ್ತುವಾಭರಣ ಜಗದ ಸೂತ್ರಾಣ |
ಎಸೆವ ರುಂಡಮಾಲಾ ಪಾರ್ವತಿಯ ಲೋಲ |
ಪಶುಪತಿ ಪಾವನ್ನ ವರಸುಪ್ರಸನ್ನ |
ಅಸಮಾನಸಮಾ ಕುಸುಮಾಭಿಸಮ |
ನಿಶಕರ ದಿನಕರ ಬಿಸಿ ನಯನ |
ನಿಶಾಚರ ದಶಶಿರ ಪ್ರಸನ್ನ ಭಜಿಪರ ೧
ಗುರುಕುಲೋತ್ತ,ಮ ತುಂಗ ವೃಷಭ |
ತುರಂಗ ಸುರನದಿ ಧರ ಧೀರ ಜಗದೋದ್ಧಾರ |
ನಿರುತ ನಿರಂಜನ ಸುಂದರ ವದನ |
ಕರಿ ಚರ್ಮಾಂಬರ ಶೋಭಾಂತರವಾದನಾ ಭಾ |
ಪುರ ಹರಣ ಚರಾಚರ ಸುರವರ ಡಮುರಗ ತ್ರಿಶೂಲಧರ |
ನರವರ ಶರಭೂತ ಪರಿವಾರ ಭಯಂಕರ |
ಗುರುವರ ಸುಸ್ಥಿರ ದುರಿತ ವಿದೂರಾ ೨
ಈಶಕಪರ್ದಿ ಉಗ್ರೆ ಅಂಬರ ವ್ಯಾಘ್ರಾವಾಸಾ | ಯ್ಯೋಮ |
ಕೇಶ ಸ್ಮಶಾನವಾಸ |
ಭಾಸುರೋನ್ನತ ಲೀಲಾ | ಸುರಮುನಿಪಾಲಾ |
ನಾಶರಹಿತ ಚಾಪ ಪಿನಾಕಿ ಚಮುಪಾ |
ಕಾಸೀವಾಸಿ ತೋಷಿಸೆ | ದಾಶರಥಿ ನಾಮತಾರಕ ಉಪದೇಶಿ |
ಕೋಶ ಶ್ರೀ ವಿಜಯವಿಠ್ಠಲ ವೆಂಕಟೇಶನ |
ದಾಸರೊಳು ಘನದಾಸನು ಪುರಂದರ |
ದಾಸನ ದಾಸನ ಕ್ಲೇಶವಿನಾಶಾ ೩
(ಔ) ಶ್ರೀತುಳಸೀ

೮೨
ಹರಿ ಎಂಬ ನಾಮ ಎರಡಕ್ಷರವ
ಸ್ಮರಿಸುವಾಲೋಚನಿಗೆ ದುರಿತ ಕಾನನ ಛೇದ ಪ
ವೇದರಾಶೀ ಎಂಬ ಭೂಸುರನು ಯಮಪುರದ
ಹಾದಿಯಲಿ ಪೋಗುತಿರೆ ಎಡಬಲದಲಿ
ಬಾಧೆ ಬಡುವ ಪಾಪಿ ಜೀವರಾಶಿಯ ನೋಡಿ
ಮಾಧವಾ ಹರಿ ಎನಲು ಮುಕ್ತರಾದರು ಎಲ್ಲಾ ೧
ಮತ್ತೆ ಪುಷ್ಕರನೆಂಬ ಹರಿಭಕ್ತ ಬರಲಾಗಿ
ಮೃತ್ಯು ನಡುಗೀ ನಿಂದು ಪೂಜೆ ಮಾಡೀ
ಉತ್ತಮಗೆ ಅಲ್ಲಿದ್ದ ನರಕಗಳು ತೋರಿಸೆ
ಬತ್ತಿ ಪೋದವು ಹರಿ ಎಂಬ ಶಬ್ದವ ಕೇಳಿ ೨
ಕೀರ್ತಿ ಮಾನವನೆಂಬೊ ಭೂಪಾಲ ಯಮಪುರದ
ಆರ್ತಿಯನು ಕಳೆದ ಶ್ರೀಹರಿಯ ವೊಲಿಸೀ
ವಾರ್ತಿಯನು ಕೇಳಿ ಅಂತಕ ಬಂದು ಕಾದೆ ಸ
ಮರ್ಥನಾಗದೆ ಪೋದ ಏನೆಂಬೆ ಜಗದೊಳಗೆ೩
ಹದಿನಾರು ಸಾವಿರ ತರುಣಿಯರು ಅಸುರನ್ನ
ಸದನದಲಿ ಸೆರೆಬಿದ್ದು ಹರಿಯ ತುತಿಸೇ
ಮುದದಿಂದ ಹರಿಪೋಗಿ ಖಳನ ಕೊಂದು ಆ
ಸುದತಿಯರಿಗೆ ತನ್ನ ಅಂಗಸಂಗವನಿತ್ತ೪
ಕಂಡವರ ಮನೆ ಉಂಡು ಚಾಂಡಾಲರ ಕೂಡ
ಮಂಡಲದೊಳಗೆ ಪಾತಕನಾದರೂ
ಗಂಡುಗಲಿ ವಿಜಯವಿಠ್ಠಲ ಹರೆ ಹರೇ ಎಂದುಕೊಂಡಾಡಿದರೆ ಮುಕುತಿ ಸುರರಿಗಿಂತಲೂ ವೇಗ೫

೮೩
ಹರಿ ಪರದೈವ ಚತುರ್ದಶ ಲೋಕಕೆ |
ಉರಗನ ಮುಂಡಿಕೆ ತುಳುಕಿ ಪೇಳುವೆ ನಾನು ಪ
ಮುನಿಗಳೆಲ್ಲ ನೆರೆದು ಸದ್ವರವ ಮಾಡುತಲಿ |
ಮನ ಬಂದ ಹಾಗೆ ಅರ್ಪಿಸುತಿರಲು |
ಮುನಿ ನಾರದನು ಕೇಳೆ ಭೃಗು ಮುನಿಯನು ಕಳುಹಿ |
ವನಜನಾಭನೆ ದೈವವೆಂದು ನಿರ್ಣೈಸಿದರು೧
ದುರ್ವಾಸ ಮುನಿಪಗೆ ಚಕ್ರ ಎಡೆಗೊಂಡಿರಲು |
ಉರ್ವಿಯನು ತಿರುಗಿದನು ಅಜ ಗಿರೀಶಾ ||
ಗೀರ್ವಾಣರಾದ್ಯರು ಪರಿಹರಿಲಾರದಿರೆ |
ಸರ್ವೋತ್ತಮನೆ ಒಬ್ಬ ಹರಿಯೆಂದು ಸಾರಿದರು ೨
ಜೀವನದೊಳಗೆ ಕರಿ ಬಾಧೆಯನು ಬಡುತಲಿ |
ಕಾವವಾತನೆ ದೈವ ಎಂದು ಕೂಗೆ ||
ನಾವು ತಾವು ಎಂದು ಎಲ್ಲರು ಸುಮ್ಮನಿರೆ |
ತಾವ ಕಾಕ್ಷನೆ ಕಾಯ್ದಾ ಪರದೇವತೆ ಎಂದು ೩
ಹಯಮುಖನು ವೇದಗಳು ಕದ್ದೌಯೆ ಸಕಲರು |
ಭಯಬಿದ್ದು ನಿತ್ರಾಣರಾಗಿರಲು ||
ಜಯದೇವಿ ರಮಣನು ವೇದವನು ತಂದು ಜಗ |
ತ್ರಯಕೆ ಒಡೆಯನೆನೆಸಿಕೊಂಡ ಪರನೆಂದು ೪
ಮೊದಲು ನಿರ್ಣಯವಾಗಿ ಇರಲಿಕ್ಕೆ ಮಂದಮತಿ |
ಮದಡ ಮನುಜರೆಲ್ಲ ನೆಲೆಗಾಣದೆ ||
ಮದನ ಪಿತ ವಿಜಯವಿಠ್ಠಲನ ಒಲಿಸಿಕೊಳ್ಳದೆ |
ಮದ ಗರ್ವದಲಿ ನುಡಿದು ನರಕದಲ್ಲಿ ಬೀಳುವರೂ೫

೫೨೮
ಹರಿ ಮಾಡ್ದ ಮರ್ಯಾದೆ ಅನುಭವಿಸಲೀ ಬೇಕು
ಸರಸಿಜಭವಾದ್ಯರಿಗೆ ಬಿಡದು ಪ
ವರಕಲ್ಪ ಕಲ್ಪದಲಿ ಮೀರಿದವರುಂಟೆ ನಿಂ
ದಿರದಾವ ಜನುಮವಾಗೆ ಪ್ರಾಣಿ ಅ.ಪ.
ವಾರಿಜಭವನ ನೋಡು ಮುನಿಶಾಪದಿಂ
ಧಾರುಣಿಯೊಳು ಪೂಜೆ ತೊರೆದ
ಪ್ರಾರಬ್ಧ ನಿರ್ದೋಷಿಗಾದರೂ ತಪ್ಪದವ-
ತಾರವಿಲ್ಲದವನಾದನೋ ಪ್ರಾಣಿ೧
ಜಗಕೆ ಗುರುವೆಂದೆನಿಸಿಕೊಂಡ ಪ್ರಾಣನ ನೋಡು
ಯುಗದೊಳಗೆ ಕೋತ್ಯಾದನಲ್ಲೋ
ಮಗುಳೆ ಮಾತನು ಕೇಳು ಕಚ್ಚುಟವ ಧರಿಸಿದ
ಅಗಣಿತ ಸತ್ವನಿಗೆ ಈ ಪರಿಯೆ ಪ್ರಾಣಿ ೨
ಶಿವನ ನೋಡೋ ಮರುಳೆ ದೂರ್ವಾಸ ಮುನಿಯಾಗಿ
ಅವನಿಪತಿ ಮೊರೆ ಹೊಕ್ಕನಲ್ಲೊ
ಭುವನದೊಳಗೆಂದೆಂದು ವ್ರಣದಿಂದ ದುರ್ಗಂಧ
ಸ್ರವಿಸುವುದು ಶಿರಸಿನಲ್ಲೀ ಪ್ರಾಣಿ ೩
ಇಂದ್ರ ತರ್ಕವನೋದಿ ನರಿಯಾದ ಪರಸತಿ-
ಯಿಂದ ಮೇಷ ವೃಷಣನಾಭ
ಕಂದರ್ಪ ಶರೀರದಿಂದ ನಾಶನನಾಗಿ
ಬಂದ ಮೀನಿನ ಗರ್ಭದಿಂದ ಪ್ರಾಣಿ೪
ಸೂರ್ಯ ಚಂದ್ರರ ನೋಡು ಮೂಲ ರೂಪದಿ ಪರ
ಭಾರ್ಯರಿಗೆ ಶಿಲುಕಿ ತಮ್ಮಾ
ವೀರ್ಯವನು ಕಳಕೊಂಡು ಬರಿದಾದರೋ ಕರ್ಮ-
ಕಾರ್ಯ ವಾರಿಗು ಬಿಡದೆಲೋ ಪ್ರಾಣಿ ೫
ಪಾವಕನು ಸರ್ವಭಕ್ಷಕನಾದ ಮಿಕ್ಕಾದ
ಅವಾವ ಸುರರ ಕರ್ಮಂಗಳ
ಯಾವತ್ತು ವರ್ಣಿಸಲಳವಲ್ಲ ಎಚ್ಚತ್ತು
ಪಾವನ್ನ ನೀನಾಗೆಲೋ ಪ್ರಾಣಿ ೬
ಆವಾವ ಸ್ಥಳದಲ್ಲಿ ಜನನ ಸ್ಥಿತಿಗತಿ ಮತ್ತೆ
ಸಾವು ಸಾಕಲ್ಯದಿ ಮರೆಯದಲೆ
ದೇವದೇವನು ಕ್ಲುಪ್ತ ಮಾಡಿಪ್ಪನೋ ಅದನು
ಆವನಾದರು ಮೀರಲೊಳವೇ ಪ್ರಾಣಿ ೭
ಉಣಬೇಕು ಉಣಬೇಕು ಮತ್ತೆ ಉಣಲೀಬೇಕು
ತ್ರಿ-ಗುಣ ಕಾರ್ಯರ ಭವಣೆ ಮನುಜ
ತೃಣ ಜನ್ಮ ಬಂದ ಕಾಲಕ್ಕು ತ್ರೈತಾಪಗಳು
ಅಣುಮಾತ್ರವೂ ತಪ್ಪವೋ ಪ್ರಾಣಿ ೮
ಧೀರನಾಗಲಿ ಮಹಾಶೂರನಾಗಲಿ ಮತ್ತೆ
ಧಾರುಣೀಪತಿ ಭಾಗ್ಯನಾಗೆ
ಆರಿಗಾದರು ಬಿಡದು ಪರೀಕ್ಷಿತರಾಯನು
ನೀರೊಳಗಿದ್ದ ತಿಳಿಯೋ ಪ್ರಾಣಿ ೯
ಜಲಗಿರಿವನ ಪೊದೆ ಹೊದರು ಗಹ್ವರ ಹುತ್ತ-
ಬಿಲ ಸಪ್ತದ್ವೀಪ ಪಾತಾಳದಿ
ಹಲವು ನಭ ಸ್ವರ್ಗಾದಿಲೋಕ ಜನನಿಯ ಜಠರ-
ದೊಳಗಿರೆ ತಪ್ಪುವುದೆ ಬರಹಾ ಪ್ರಾಣಿ ೧೦
ಅಣಿಮಾದಿ ಅಷ್ಟಾಂಗ ಯೋಗ ಮಾಡಲು ಮಹಾ
ಗುಣವಂತ ಜನರು ಒಂದು
ಕ್ಷಣವ ಮೀರಲುಬಹುದೆ ಮೃತ್ಯು ಬಂದೆದುರಾಗಿ
ಸೆಣಸುತಿರೆ ಬೇರುಂಟೆ ಕಾರ್ಯ ಪ್ರಾಣಿ ೧೧
ಎಲ್ಲೆಲ್ಲೆ ಅನ್ನ ಮತ್ತೆಲ್ಲೆಲ್ಲಿ ಉದಕ ಇ-
ನ್ನೆಲ್ಲೆಲ್ಲಿ ನಿದ್ರೆ ಜಾಗರಣಿಯೊ
ಎಲ್ಲೆಲ್ಲಿ ಹೆಜ್ಜೆಗಳನಿಡುವ ಪರಿಮಿತಿಯುಂಟೊ
ಅಲ್ಲಿಲ್ಲಿಗೊಯ್ಯುವುದೊ ಬಿಡದೆ ಪ್ರಾಣಿ ೧೨
ಧಿಕ್ಕಾರ ಸತ್ಕಾರ ನಿಂದೆ ವಂದನೆಗಳು
ರೊಕ್ಕಾ ಸುಖ ದುಃಖ ಕಾರಣಗಳು
ಉಕ್ಕೇರಿದಂತೆ ಬರುತಿಹುದೊ ನಮ್ಮ ದೇ-
ವಕ್ಕಿ ಕಂದನ ಆಜ್ಞಯಿಂದ ಪ್ರಾಣಿ ೧೩
ಕಾಶಿಯಲ್ಲಿರೆ ಮರಣ ಆವಲ್ಲಿ ಇಪ್ಪುದಾ-
ದೇಶಕ್ಕೆ ಒಯ್ಯುವುದು ಕಾಲ
ಕಾಶಿರಾಯನ ನೋಡು ಒಡನೆ ಅಪಮೃತ್ಯು ವೇದ-
ವ್ಯಾಸರಿದ್ದರು ತಪ್ಪಲಿಲ್ಲ ಪ್ರಾಣಿ ೧೪
ಮಾರುತ ಭಾರತಿ ಶೇಷ ಶಿವ ಪಾರ್ವತಿ-
ಸರಸಿಜ ಬಾಂಧವಾಗ್ನಿ ಧರ್ಮ
ತರುವಾಯ ಕಾಲ ಮೃತ್ಯು ಕಾಲನ ದೂತರು
ಅರಸುತಿಪ್ಪರು ಲವ ತೃಟಿಯ ಪ್ರಾಣಿ ೧೫
ಇವರಿವರಿಗುತ್ತಮರು ಇವರಿವರಗಧಮರು
ಇವರೆಲ್ಲರಿಗೆ ಶ್ರೀ ಭೂಮಿ ದುರ್ಗಾ
ಅವಳಿಗೆ ಶ್ರೀ ಹರಿಯು ತಾನೆ ನಿಯಾಮಕನು
ವಿವರದಲಿ ತಿಳಿ ತಾರತಮ್ಯ ಪ್ರಾಣಿ ೧೬
ಲಕುಮಿ ಮೊದಲು ಮಾಡಿ ಇವರೆಲ್ಲರಿಗೆ ಲೇಶ
ಶಕುತಿಯಿಲ್ಲವೊ ಕಾಣೊ ಮರುಳೆ
ಅಕಟಕಟ ಗುಣಪೂರ್ಣ ಸರ್ವ ಸ್ವಾತಂತ್ರ ವ್ಯಾ-
ಪಕ ಸರ್ವಾಂತರ್ಯಾಮಿಯೆನ್ನೋ ಪ್ರಾಣಿ ೧೭
ಗುರು ಪರಂಪರ ವಾಯು ಲಕುಮಿ ನಾರಾಯಣನ
ಕರುಣಾ ಕಟಾಕ್ಷವುಳ್ಳನಕ
ಸುರ ನರೋರಗ ಯಕ್ಷಲೋಕದಲ್ಲಿದ್ದವರು
ಬರಿದೆ ಕೂಗಿದರೇನು ಆಹುದೋ ಪ್ರಾಣಿ ೧೮
ಆವಾವ ಕಾಲ ತಪ್ಪಿಸಿ ಕಾವ ಹರಿತಾನು
ಸಾವ ಕಾಲವ ಮಾತ್ರ ತಪ್ಪಿಸನೋ
ಕಾವ ಕೊಲ್ಲುವ ಸ್ವಾಮಿ ಕಾಲನಾಮಕ ಪುರುಷ
ಜೀವಿಗಳು ಮುಖ್ಯವಲ್ಲ ಕಾಣೋ ಪ್ರಾಣಿ ೧೯
ಭಗವವಸ್ವತಂತ್ರವನು ತಿಳಿಯದೆ ಮರುಳಾಗಿ
ಜಗದೊಳಗೆ ಚರಿಸದಿರೊ ಮಾನವ
ಅಘ ದೂರನಾಗೊ ನಾನಾ ಬಗೆಯಿಂದಲ-
ನ್ಯಗರ ಚಿಂತೆಗಳಲ್ಲಿ ಬಿಟ್ಟು ಪ್ರಾಣಿ ೨೦
ಹಲವು ಮಾತೇನಿನ್ನು ದಾಸಭಾವವ ವಹಿಸಿ
ಕಲಿಯುಗದೊಳಗೆ ಸಂಚರಿಸೆಲೊ
ಬಲವಂತ ವಿಜಯವಿಠ್ಠಲನ ಪಾದಾಂಬುಜವ
ನಿಲಿಸಿ ವಲಿಸಿಕೊ ಮನಸಿನಲ್ಲಿ ಪ್ರಾಣಿ ೨೧

೪೯೨
ಹರಿಚಿತ್ತಾ ಸತ್ಯ ಹರಿಚಿತ್ತಾ ಪ
ನರಚಿತ್ತವಿದ್ದಂತೆ | ನಡೆಯದು ಲವಲೇಶ ಅ.ಪ
ಸುದತಿ ಮಕ್ಕಳು ಭಾಗ್ಯ ಬೈಸೋದು ನರಚಿತ್ತ |
ಮದಿವಾಗದಿರುವೋದು ಹರಿಚಿತ್ತವು ||
ಕುದುರೆ ಅಂದಣ ಆನೆ ಬೈಸೋದು ನರಚಿತ್ತ |
ಪದಚಾರಿ ಗೈಸೋದು ಹರಿಚಿತ್ತವಯ್ಯಾ ೧
ವಿಧ ವಿಧ ಯಾತ್ರೆಯ ಬೈಸೋದು ನರಚಿತ್ತ |
ವದಗಿ ಬರುವ ರೋಗ ಹರಿಚಿತ್ತವೊ ||
ಸದ ಅನ್ನದಾನವ ಬೈಸೋದು ನರಚಿತ್ತ |
ಉದತಕ್ಕೆ ಅಲಸೋದು ಹರಿಚಿತ್ತವಯ್ಯ ೨
ಭೂಮಿಯನಾಳಬೇಕೆಂಬೋದು ನರಚಿತ್ತ |
ಆ ಮಾತಿಗೆ ಅಡ್ಡ ಹರಿಚಿತ್ತವು ||
ವಿಜಯ ವಿಠಲನ್ನ ಬೈಸೋದು ನರಚಿತ್ತ |
ಕಾಮಿಸಿ ಜೀವ್ಯೊದು ಹರಿಚಿತ್ತವಯ್ಯಾ ೩

೪೯೩
ಹರಿದಾಸನಾದರೆ ಹ್ಯಾಂಗಿರಲಿ ಬೇಕು
ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ
ಇಂದು ನಾಳಿಗೆಯೆಂಬ ಯೋಚನೆಯ ಬಿಡಬೇಕು
ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು
ಬಂದದೆಲ್ಲ ಬರಲಿ ಈಗಲೇ ಎನಬೇಕು
ಅಂದವರು ಎನಗೆ ಬಂಧುಗಳು ಎನಬೇಕು ೧
ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು
ದಾನಕ್ಕೆ ಸಮ್ಮೊಗನಾಗಬೇಕು
ಮಾನಾಭಿಮಾನಕ್ಕೆ ಹರಿತಾನೆ ಎನಬೇಕು
ಏನಾದರಾಗಲಿ ಸುಖಬಡಲಿಬೇಕು ೨
ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು
ಪರಲೋಕದ ಗತಿ ಬಯಸಬೇಕು
ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು
ದುರುಳರನ ಕಂಡರೆ ದೂರಾಗಬೇಕು ೩
ತಾವರೆಮಣಿ ತುಲಸಿಸರವ ಧರಿಸಲಿಬೇಕು
ಭಾವಶುದ್ಧನಾಗಿ ತಿರುಗಬೇಕು
ಕೋವಿದರೆ ಸಂಗಡ ಕೂಡ್ಯಾಡುತಿರಬೇಕು
ಪಾವಕನಂತೆ ಇಂಪವ ಕಾಣಬೇಕು ೪
ಅನ್ನಪಾನಾದಿಗಳಿಗವಸರ ಬೀಳದಿರಬೇಕು
ಕಣ್ಣಿದ್ದು ಕುರುಡನೆಂದೆನಿಸಬೇಕು
ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು
ತನ್ನೊಳಗೆ ತಾ ತಿಳಿದು ನಗುತಲಿರಬೇಕು ೫
ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು
ಡಂಭಕ ಭಕುತಿಯ ಜರಿಯ ಬೇಕು
ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು
ನಂಬಿ ನರಹರಿಪಾದವೆನುತ ಸಾರಲಿ ಬೇಕು೬
ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು
ಮರುತನೆ ಜಗಕೆ ಗುರುವೆನಲಿ ಬೇಕು
ಪುರಂದರದಾಸರೇ ದಾಸರೆಂದನ ಬೇಕು
ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು ೭

೪೪೪
ಹರಿಮಣಿವರ್ಣ ವಿಠ್ಠಲಾ ನಿನ್ನವನೊ
ಪರಮ ಪ್ರೀತಿಯಿಂದ ಪಾಲಿಸ ಬಾರಯ್ಯ ಪ
ಹೃದಯ ಪಂಕಜ ದಳ ಕೂಡಿತು ನೋಡು
ಮುದರಿಕೊಂಡವು ಕುಮುದವೆಂಬೊ ಕಣ್ಣು
ಪದುಮನಾಭನೆ ನಿನ್ನ ನಖವೆಂಬೊ ರವಿ
ವದನವೆಂಬೊ ಚಂದ್ರಮಾ ಉದಿಸಲಿ ೧
ಬಿರಿದಾಗಿ ಕಿವಿ ಎಂಬೊ ಮನೆ ಇಪ್ಪವು
ಸ್ಪರಿಶ ಮಾಡುವೆನೆಂದು ಕಲಿ ಸುಳಿದಾ
ಹರಿ ನಿನ್ನ ಗೆಜ್ಜೆ ಧ್ವನಿಯಿಂದ ಕರ್ಣ ಮಂದಿರವೆ ತುಂಬಲಿ
ಕಲಿ ಅಡಗಿ ಪೋಪಾ ೨
ನಾಸಾ ದುರ್ವಾಸನೆಗೆ ಇಚ್ಛೆ ಮಾಡಿತು
ಹೇಸಿಗೆ ರಸಗಳಿಗೆ ಜಿವ್ವೆ ಪೋಗುದದು
ಪೂಸಿದಾ ಗಂಧ ದಿವ್ಯವಾಸನೆ ಬರಲಿ
ಲೇಸು ನಿನ್ನ ನಾಮರಸ ಸುರಿಸುವಂತೆ ಮಾಡು೩
ನೀನಲ್ಲದೆ ತುಲಾ ಕಾವೇರಿಯೊಳಗೆ
ಸ್ನಾನ ಜಪ ತಪಗಳು ಮಾಡುವದೇಕೆ
ಕಾಣದಿರೆ ನಿನ್ನ ಚರಣ ಸಿರಿ ಪ್ರಾಣರಿಗೆ
ಪ್ರಾಣನಾದ ಬಲು ಮೋಹನಾ ೪
ಈ ಕ್ರೋಧನಾಬ್ಧ್ದ ಆಶ್ವಿಜ ನಿನ್ನ ಪಕ್ಷದ
ಏಕಾದಶಿ ರಾತ್ರಿಯೊಳು ಬಾ ಹೃದಯದೊಳಗೆ
ಯಾಕೆ ಕೂಡದಯ್ಯ ಜೀಯಾ ಪೇಳೊ ಎನ್ನೊಡಿಯ
ಲೋಕ ಚರಿಸುವದೇನು ನಿನ್ನ ಪೋಗಾಡಿ ೫
ಧವಳಗಂಗಿಯೊಳಂದು ಬಿದ್ದು ಬಂದಾಗ
ಕವಿ ವಾದಿರಾಜಗೊಲಿದು ಬರಲಿಲ್ಲವೇ
ಅವರ ದಾಸಾನುದಾಸನು ಸತತ ನಾನು
ತವಕದಿಂದಲಿ ಬಾರೊ ಭಕ್ತವತ್ಸಲಾ೬
ಅರ್ಚಿಸಬಲ್ಲನೆ ದೇವ ನಿನ್ನನುದಿನಾ
ಗಚ್ಚರಿತವಂದಲ್ಲವೆ ಮತ್ತಾವದರಿಯೆ
ಅಚ್ಯುತದಾಸರ ಪ್ರೀಯ ವಿಜಯವಿಠ್ಠಲ
ಬೆಚ್ಚಿಸಿದೋಪಾದಿಯಲ್ಲಿ ಪೊಂದಿ ಬಾರಯ್ಯ ೭

೪೯೪
ಹರಿಯ ನೆನಸಿದ ದಿವಸ ಶುಭಮಂಗಳಾ ಪ
ಹರಿಯ ನೆನಸಿದ ದಿವಸ ಅವಮಂಗಳಾ ಅ.ಪ
ಹರಿಯ ನೆನಸಿದ ನಿಮಿಷ ಆವಾಗಲೂ ಹರುಷ |
ಹರಿಯ ನೆನಸದ ದಿವಸ ದುರ್ಮಾಸನಾ ||
ಹರಿಯ ನೆನಸಿದ ಘಳಿಗೆ ಮುಕ್ತಿಗೆ ಬೆಳವಣಿಗೆ |
ಹರಿಯ ನೆನಸದ ಘಳಿಗೆ ಯಮನ ಬಳಿಗೆ ೧
ಹರಿಯ ನೆನಸಿದ ಪ್ರಹರ ಕುಲಕೋಟಿ ಉದ್ಧಾರ |
ಹರಿಯ ನೆನಸದ ಪ್ರಹರ ಹೀನಾಚಾರ ||
ಹರಿಯ ನೆನಸಿದ ಹಗಲು ಮುಕ್ತಿಗೆ ಬಲು ಮಿಗಿಲು |
ಹರಿಯ ನೆನಸದ ಹಗಲು ನರಕಕ್ಕೆ ತಗಲು ೨
ಹರಿಯ ನೆನಸಿದ ಮಧ್ಯಾಹ್ನ ಸುಧಾಪಾನ |
ಹರಿಯ ನೆನಸದ ಮಧ್ಯಾಹ್ನವೇ ಕಾನನ ||
ಹರಿಯ ನೆನಸಿದ ಸಾಯಂಕಾಲವೇ ಸುಕಾಲ |
ಹರಿಯ ನೆನಸದ ಸಾಯಂಕಾಲವೇ ದುಷ್ಕಾಲ೩
ಹರಿಯ ನೆನಸಿದ ದಿನವು ನರನಿಗೆ ಸಮ್ಮತವು |
ಹರಿಯ ನೆನಸದ ದಿನವು ದುರ್ದಿನವು ||
ಹರಿಯ ನೆನಸಿದ ನರನು ಅವನೇ ಕೃತಕೃತ್ಯ |
ಹರಿಯ ನೆನಸದ ನರಜನ್ಮ ವ್ಯರ್ಥಾ ೪
ಹರಿಯ ನೆನಸಿದ ರಾತ್ರಿ ತೀರ್ಥಕ್ಷೇತ್ರದ ಯಾತ್ರೆ |
ಹರಿಯ ನೆನಸದ ರಾತ್ರಿ ಪಂಚಪಾತ್ರಿ ||
ಪುರಂದರನ ಪ್ರಿಯ ಸಿರಿ ವಿಜಯವಿಠ್ಠಲನಂಘ್ರಿ |
ಮುರಿಯದೇ ಸದಾ ನೆನೆವವನೆ ಮುಕ್ತ ೫

೪೯೫
ಹರಿಯ ಮರೆದುದಕಿಂತ ಪಾಪವಿಲ್ಲಾ |
ಹರಿ ಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲಾ ಪ
ಗೋಹತ್ಯ ಸುರಾಪಾನ ಕನಕತಸ್ಕರ ಸುಜನ- |
ದ್ರೋಹ ಗುರುತಲ್ಪಗಮನ ಬಲು ಕಪಟ ವ್ಯಸನ ||
ಬಾಹಿರವಾಗ್ ದ್ವೇಷ ಪರದಾರಗಮನ ವಿ- |
ವಾಹಗಳ ಮಾಣಿಸುವ ಪಾಪಕಿಂತಲಿ ಮೇಲು ೧
ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ |
ಹಿಂಗದಲೆ ಗಾಯತ್ರಿ ಮಂತ್ರ ಮೌನ ||
ಕರುಂಗ ದಾನ-ಧರ್ಮ ವೃತ್ತಿ ಕ್ಷೇತ್ರ ರತುನ |
ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು ೨
ಹಾಸ್ಯ ವಿರೋಧ ಮದ ಮತ್ಸರ ಪರಕಾರ್ಯ |
ದಾಸ್ಯದಲಿ ಕೆಡಿಸುವ ಶಠನ ಲೋಭಿ ||
ವೈಶ್ವ ದೇವಾಹಿತ ಅತಿಥಿಗಳ ನಿಂದ್ಯರ- |
ಹಸ್ಯ ದೂರುವ ಬಲು ಪಾಪಕಿಂತಲು ಮೇಲು ೩
ತೀರ್ಥಯಾತ್ರೆ ವೇದ ಭಾಗವತ ಪುರಾಣ |
ಸಾರ್ಥತ್ಯವಾದ ಪ್ರವಚನ ಶಾಸ್ತ್ರ ||
ಪ್ರಾರ್ಥನೆ ಸ್ತೋತ್ರ ಗೀತ ಸಾರ ಪ್ರಬಂಧ |
ಅರ್ಥ ಪೇಳುವ ಬಲು ಪುಣ್ಯಕಿಂತಲಿ ಮೇಲು೪
ಮಿತ್ರಘ್ನ್ಯಗರಳ ಪ್ರಯೋಗ ಗರ್ಭಿಣಿವಧ |
ಗೋತ್ರಸಂಸರ್ಗ ಬಲು ಪ್ರಾಣಹಿಂಸಾ ||
ಕ್ಷೇತ್ರ ಅಪಹಾರ ಕ್ಷುದ್ರವಾಣಿ ನಿಜಕ- |
ಳತ್ರದಿ ದ್ರೋಹ ಬಲು ಪಾಪಕಿಂತಲಿ ಮೇಲು ೫
ವೇದಾದಿ ಕರ್ಮ ಸರ್ವದಲ್ಲಿ ಗಯಾ ಶ್ರಾದ್ಧ |
ಭೂಧರ ಸಮಾಗಮ ಸತ್ ಶ್ರªಣಾ ||
ಆದಿತ್ಯ ಚಂದ್ರ ಉಪರಾಗ ಪರ್ವಣಿ ನಾನಾ |
ರಾಧನೆಯರೆ ಬಲು ಪುಣ್ಯಕಿಂತಲು ಮೇಲು ೬
ಆವಾವ ಪಾಪ-ಪುಣ್ಯಗಳದವರ ಕಿಂಕರವು |
ದೇವನ ನೆನಸಿದಂಥ ನೆನೆಯದಂಥ ||
ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ |
ಕೈವಲ್ಯಪತಿ ನಮ್ಮ ವಿಜಯವಿಠ್ಠಲ ಪ್ರೇರಕ೭

೮೪
ಹರಿಯೆ ದುರಿತ ಗಜಕೇಸರಿಯೆ ತ್ರಿಲೋಕದ
ದೊರೆಯೆ ನಿನಗಾರು ಸರಿಯೆ ಭಾಗ್ಯದ ಸಿರಿಯೆ |
ಕರುಣವ ಮಾಡಿ ಪರಿಯಲಿ ಸಾರಂಗ |
ಧರನೆ ಧರಣಿಧರ ವರ ಪರಿಯಂತಾ ಪ
ಭೂಮಿಯೊಳಗೆ ಉತ್ತಮ ನೆಲಾ ನೀಡೆಂದು |
ಹೇಮ ಮುನೀಶ್ವರ ಕಾಮಿಸಿ ಹರಿಪಾದ |
ತಾಮರಸ ಹೃದಯಧಾಮದೊಳಗೆ
ನೀ ನೇಮ ನಿತ್ಯದಲ್ಲಿ | ತಾ ಮನೋರಥನಾಗಿ ||
ಸಾಮಜವರದನ ನಾಮವ ನೆನೆಯಲು |
ಸೋಮ ಸಹೋದರೆ ಹೇಮ ತೀರಥದೊಳು |
ತಾ ಮನಗೊಂಬ ನಾಮನೆ ಪಡೆದು ೧
ಮಂಗಳಾಂಗಿಯೇ ಬರಲು ರಂಗರಾಯನು ಸಾ |
ರಂಗಶರವೇಪಿಡಿದುಶೃಂಗಾರಮಯದಿಂದ | ಬಂಗಾರ ರಥ ತು |
ರಂಗಗಳ ಸಮೇತ ಭುಜಂಗಶಯನನಾಗಿ ಕಂಗೊಳಿಸುತ್ತಲೂ |
ತಿಂಗಳ ನಂದಾದಿ ಕಂಗಳಿಗೊಪ್ಪಲು |
ತುಂಗ ಮಹಿಮ ವಿಹಂಗಾದಿಗಳಿಂದ
ಹಿಂಗದಲೆ ಸೊಗಸಂಗಳ
ಕೈಕೊಳ್ಳುತ್ತಿಂಗಿತದಲಿ ನೀಲಾಂಗ ನಿರ್ದೋಷಾ ೨
ಜಯ ಕುಂಭಘೋಣನಿಲಯಾನೆನೆಸುವ ಉ |
ಭಯ ಕಾವೇರಿ ನಿವಾಸಾ | ಭಯ ಕೃದ್ಭಯನಾಶ |
ದಯಾಪಯೋನಿಧಿ ಸಾದಯ ವಿಮಲ ನಯನ |
ತ್ರಯ ಗುಣವಿರಹಿತಾ ವಿಯದ್ಗಂಗಾನದಿ ತಾತಾ |
ಪಯೋನಿಧಿಸುತೆ ಧರುಣಿಯ ಎಡಬಲದಲ್ಲಿ
ಜಯ ಜಯವೆನುತಿರೆ ಪ್ರಿಯನಾಗಿ ಕೇಳುತಾ |
ನಯನ ಮೀತಾರ ಪಾಲಯಪಾವನದೇವಾ |
ದಯಮುಖ ಹರಾ ವಿಜಯವಿಠ್ಠಲಪರಾ ೩

೮೫
ಹರಿಯೆ ಸ್ವತಂತ್ರ ಚತುರದಶ ಭುವನಕೆ |
ಪರಮೇಷ್ಠಿ ಶಿವಾದ್ಯರಾತಗೆ ದಾಸರೆನ್ನು ಪ
ಹರಿಹರರ ಒಂದೇ ಸ್ಥಾನದಲಿ ಕಾಣುವೆನೆಂದು |
ಪರಮ ಭಕುತಿಯಿಂದ ಕ್ರೋಧಮುನಿಪ ||
ಧರಣಿಯೆಲ್ಲ ತಿರುಗಿ ಶುಕ್ಲವತೀ ತೀರಕೆ ಬರಲು |
ವಸಂತ ಕಾಲದಂತೆ ಪೊಳಿಯೇ೧
ತಪಸಿ ತಪವನೆ ಮಾಡುತಿರಲು ಖರಾಟಖಳ |
ಉಪಹತಿ ಕೊಡುತಿಪ್ಪ ವರಬಲದಿ ||
ವಿಪುಳದೊಳಗಿವಗೆಲ್ಲಿ ಎದುರಾರು ಇಲ್ಲದಿರೆ |
ಸುಪರ್ಣಾದಿ ಮೊರೆ ಇಡಲು ಬೊಮ್ಮಗೆ೨
ತಲೆದೂಗಿ ಪರಮೇಷ್ಠಿ ಹರಿಯ ಬಳಿಗೆ ಬಂದು |
ಖಳನ ಕೋಲಾಹಲವ ಬಿನ್ನೈಸಲು ||
ಪುಲಿತೊಗಲಾಂಬರನ ಸಹಿತ ಸರ್ವೋತ್ತಮನ |
ಒಲಿಮೆಯಿಂದ ಬಂದು ಸುಳಿದರಾಗಂದು ೩
ದಾನವನ ಕೊಂದು ದೇವತೆಗಳ ಸುಖಬಡಿಸಿ |
ಜ್ಞಾನಕ್ರೋಢಮುನಿ ಮನಕೆ ಪೊಳೆದು ||
ಆನಂದದಿಂದಲಿ ನಿಂದು ಮೆರೆದ ಲೀಲೆ |
ಏನೆಂಬೆನಯ್ಯ ಹರಿಹರ ವಿಚಿತ್ರಾ ೪
ಶಿವನ ಸಾಲಿಗ್ರಾಮದೊಳಗೆ ಪ್ರವಿಷ್ಠ ಕೇ|
ಶವನು ತಾನೆ ಕಾಣೊ ಸ್ವಾತಂತ್ರನು ||
ಇವರು ಶಂಕರನಾರಾಯಣನೆಂಬೊ ಪೆಸರಿನಲಿ |
ಅವನಿಯೊಳು ಪ್ರಖ್ಯಾತರಾಗಿ ನಿಂದಿಹರೋ ೫
ಹೀನ ಮಾನವರು ಇವರಿಗೆ
ಐಕ್ಯ ಪೇಳುವರು ಕಾಣುತಲಿದೆ
ಎರಡು ಮೂರುತಿಗಳು ನೋಳ್ಪರಿಗೆ |
ಶ್ರೀ ನಾರಾಯಣಗೆ ಈಶ ಸಮನೇ ೬
ಚಕ್ರ ಶಂಖ ಗದೆ ಪದುಮ ಹರಿಗೆ ನೋಡು |
ಮುಕ್ಕಣ್ಣಗೆ ಡಮರುಗ ತ್ರಿಶೂಲವು ||
ಮುಖ್ಯ ದೇವತಿ ಹರಿ ಅವಾಂತರ ಶಿವನು |
ಶಕ್ರಾದ್ಯರೊಲಿದು ಭೇದವನು ಪೇಳುವರು ೭
ಸತ್ಯಂ ವದವೆಂಬ ಶ್ರುತಿವರದು ಪೇಳುತಿದೆ |
ಭೃತ್ಯ ರುದ್ರನು ಕಾಣೊ ಲಕುಮಿವರಗೆ ||
ಸತ್ಯದಲಿ ಸಿದ್ಧವಯ್ಯ ಎಂದು ತಿಳಿದು |
ಸ್ತೌತ್ಯ ಮಾಡಿದವಗೆ ವೈಕುಂಠ ಪದವಿ ೮
ಕ್ರೋಢ ಪರ್ವತವಿದೆ ತೀರ್ಥ ಪಾವನಕರ |
ನಾಡೊಳಗೆ ಕ್ಷೇತ್ರ ಉತ್ತಮ ಮಾನವಾ ||
ಪಾಡಿದರೆ ವಿಜಯವಿಠ್ಠಲರೇಯ ಒಲಿದು |ಕೂಡಾಡುವನು ದೃಢ ಭಕುತಿಯಿತ್ತು ಅನುದಿನಾ ೯

೮೬
ಹರಿಹರ ಸಲಹಯ್ಯಾ ಪರಮ
ಕರುಣವ ಮಾಡಿ ಶರಣು ಹೋ |
ಶರಣು ಹೋಗುವೆ ನಿಮ್ಮ ಚರಣ ಕಮಲಕೆ |
ಎರವು ಮಾಡಿದೆ ನಿರುತಾ ಪ
ಮೂರು ನಗರ ದಹನಾ | ತಾರಕ್ಷ ವಾಹನಾ |
ತರುಣ ಚರ್ಮಾಂಬರ ಪೀತಾಂಬರಧರ ಶ್ರೀ ಸತಿರಮಣಾ |
ಚಾರು ಚಂದ್ರಮೌಳಿ | ಶೌರಿ ಕೌಸ್ತುಭಮಾಲಾ |
ಮಾರಜನಕ ಕು | ಮಾರನಪಿತ ಗಂಗಾಧರ ಧರ ಧರ೧
ಶೂಲ ಡಮರುಗ ಹಸ್ತ | ಮೂಲೋಕ ಮೀರಿದವಸ್ತಾ |
ಕೈಲಾಸವಾಸ ವೈಕುಂಠ ಪುರಾಧೀಶ ಕಾಲಾ ಕಾಲ ನಿಯಾಮಕ |
ತ್ರಿಲೋಚನ ಕಮಲಾಕ್ಷಾ | ನೀಲಕಂಧರ ನಿತ್ಯ |
ಪಾಲಸಾಗರಶಾಯಿ ನಂದಿಗಮನ ಕಾ | ಪಾಲಿ ಅಭಯ ಪಾಣಿ ೨
ಭಸಿತ ಭೂಷಿತ ರುದ್ರ | ಎಸವ ಗುಣ ಸಮುದ್ರ
ವಿಷಧರ ಭೂಷಣ ಕಸ್ತೂರಿ ತಿಲಕ ರಂ |
ಜಿಸುವ ಜಡೆಮುಕುಟ | ಪಶುಪತಿ ಪಿನಾಕಿ |
ಅಸುರಾರಾತಿ ವಿವೇಕಿ |
ಅಸಮ ಸುದರುಶನ ರುಂಡಮಾಲಾಧೀಶ ಪಾಲ ಗೋಪಾಲ ೩
ಭೂತ ಪ್ರಮಥರೊಡೆಯಾ | ಭೂತೇಶಾದಿಗಳೊಡೆಯಾ |
ಶ್ವೇತ ಶರೀರ ನೀಲ | ಗಾತುರ ಸದ್ಯೋಜಾತಾ ಜಾತರಹಿತಾ |
ಜ್ಯೋತಿರ್ಮಯರೂಪಾ | ಭೀತಿ ಶೂನ್ಯ ಪ್ರತಾಪಾ |
ಆತುಮ ಅಂತರಾತುಮ ಪರಮೇ |
ಶ ತಾಮಸ ಖ್ಯಾತಿ ಮಂಗಳಕೀರ್ತಿ ೪
ತಂತ್ರ ಮಂತ್ರಕ್ಕೆ ಸಿಲುಕಾ | ಅಂತರಂಗ ನಿಯಾಮಕಾ |
ಎಂತೆಂತು ತಿಳಿದರೆ | ಅಂಥಂಥ ಗತಿಯನ್ನು |
ಸಂತತ ಕೊಡುವನೆ ಚಿಂತಿಪೆ ವರಹನ್ನ | ದಂತಜ ತೀರದಲ್ಲಿ |
ನಿಂತು ವರವನೀವ | ವಿಜಯವಿಠ್ಠಲ ಗುಹಾ
ಕಾಂತಾರ ನಿವಾಸಾ ೫

ಹರಿಹರನನ್ನು ಕುರಿತ ಮತ್ತೊಂದು ಸುಳಾದಿ ಇದು.

೧೦೧. ಹರಿಹರ
ಧ್ರುವತಾಳ
ಹರಿಹರರಿಬ್ಬರು ಒಂದೇ ರೂಪವ ಧರಿಸಿ |
ದುರುಳ ಗುಹಾಸುರನ ಕೊಂದರೆಂದೂ |
ಮರಳು ಮಾನವರು ತಿಳಿಯಾದೆ ನುಡಿವರು |
ಹರಿಹರರೀರ್ವರು ಏರವಾದರೆ ಅಂದು |
ಹರನು ಮೈಮರೆದು ನಿಂದನ್ಯಾತಕೆ |
ಧಾರುಣಿಯೊಳಗೆ ಹಿರಣ್ಯಕಶಿಪು ದೈತ್ಯ |
ಸುರರ ಓಡಿಸಿ ಪ್ರಬಲನಾಗಿರೆ |
ಪರಮ ಪುರುಷ ಹರಿ ನರಹರಿರೂಪವನ್ನು |
ಧರಿಸಿ ರಕ್ಕಸನ್ನ ಕೊಲ್ಲುವಾಗಲಿ, ಕೇ |
ಸರಿಯಾ ಬಳಿಗೆ ಪೋಗಿ ಮಾರೆಯಾ ಬೇಡಿಕೊಂಡು |
ಮೆರದಾನೇನೋ ಅವತಾರ ಮಾಡಿ |
ಹರಿಯ ಅದ್ಭೂತ ಶಕ್ತಿ ನಾನಾ ಲೀಲಾ ವಿನೋದ |
ಚರಿಸೂವ ಪರಬೊಮ್ಮ ಗುಣಪೂರ್ಣ ನೂ |
ತುರಗವದನ ಮತ್ಸ್ಯಕೂರ್ಮಸೂಕರ ವೇಷ |
ಧರಿಸಿದಾತನು ಕಾಣೋ ಯುಗಯುಗದೀ |
ಕರುಣಾಸಿಂಧು ನಮ್ಮ ವಿಜಯವಿಠಲರೇಯಾ |
ಹರಿಹರ ರೂಪ ಧರಿಸಿದ ಕಾಣಿರೋ ೧
ಮಟ್ಟತಾಳ
ದೀಪದ ಉಪಕಾರ ದಿನಪಗೆ ಏನಾಹದು |
ಭೂಪತಿಗಾಳಿನ ಅನುಸುಣ್ಯಾತಕೆ |
ಕೋಪವನು ತಾಳಿ ಭೃಗುಮುನಿ ಕೈಯಿಂದ |
ಶಾಪನ ಕೈಕೊಂಡನಂದು ಭಸ್ಮಾ ಸುರನ |
ಆ ಪತ್ತಿಗಾರದೆ ಮೊರೆ ಇಡಲು ಕೇಳಿ |
ಶ್ರೀಪತಿ ಮೊಗದಲಿ ಕಾಯದದ್ದು ಕಾಣದೆ |
ಗೋಪಾಲ ವಿಜಯವಿಠಲ ಹರಿಹರ |
ರೂಪವು ತಾನಾದ ಅನೇಕ ರೂಪನೊ ೨
ತ್ರಿವಿಡಿತಾಳ
ಕಂತು ಜನಕ ಶಿವನ ಬೇಡಿಕೊಂಡದ್ದು ಪುರಾ |
ಣಾಂತರದಲ್ಲಿ ಪೇಳುತಿವೆ ನೋಡಿಕೊ |
ಎಂತಾಹದೀ ನುಡಿ ಸಿದ್ಧವಲ್ಲವೊ ಶ್ರೀ |
ಕಾಂತ ನಖ ಮೌಳಿ ಅಭೀದಾನು |
ದಂತಿ ದನುಜ ವೈರಿ ಅರ್ಧಂಗವನೆ ತಾಳಿ |
ನಿಂತಿಪ್ಪ ಶ್ರೀ ಹರಿಯಾ ಕೂಡಾ |
ನಂತಾ ಕಲ್ಪರೆ ನಿಗಮಾ ಗೋಚರ ಸರ್ವ |
ಸ್ವತಂತ್ರನು ಒಬ್ಬಾರ ಹಂಗಿಗಾನೆ |
ಚಿಂತಾಮಣಿಯಾ ಬಳಿಯಾ ನಾಡ ಹರಳನೆ ತಂದು |
ಸಂತತವಿಟ್ಟರೆ ಸರಿಯಾಗೋದೆ |
ಸಂತೋಷ ಪೂರ್ಣಗೆ ದೈತ್ಯನ ಕೊಲ್ಲುವುದಕೆ |
ಚಿಂತೆಮಾಡಿದನೆಂಬೊ ವಾರ್ತಿಯೇನೂ |
ಭ್ರಾಂತರಿಗೆ ನಿತ್ಯ ಮೇಹಕವನೆ ತೋರಿ |
ಅಂತು ಗಾಣದ ನರಕಕ್ಕೆ ಹಾಕೂವ |
ದಂತಿ ವರದ ದೇವ ವಿಜಯವಿಠಲ ಜಗ |
ದಂತರಿಯಾಮಿಗೆ ಅಸಾಧ್ಯ ಬಂದಿಲ್ಲ ೩
ಅಟ್ಟತಾಳ
ಹರಗೆ ಈ ಪ್ರತಿಪ ಉಳ್ಳರೆ ಭಸುಮಾ |
ಸುರಗಂಜಿ ಹರಿಗೆ ಮೊರೆ ಇಡುವನೇನೊ |
ಜರಸಂಧನಿಗೆ ಇತ್ತಾವರ ಮತ್ತೇನಾಯಿತು |
ಮರಳಿ ರಾಮನಕೂಡ ಶರಧನು ಪಿಡಿದು ಮೈ |
ಮರೆದು ನಿಂದದ್ದು ಸರ್ವ ಜಗ ವೆಲ್ಲ ಬಲ್ಲದು |
ಕರಿ ರಾಜಾ ಆ ಮೂಲಾವೆಂದು ಕರೆವಾಗ |
ಪರಮೇಷ್ಠಿ ಶಿವನೊ ಮತ್ತಾವನೊ ಕಾಯ್ದವ |
ಸುರರೊಳಗೀತಾ ಗಿಂದಧಿಕ ದೇವರು ಇಲ್ಲಾ |
ಹರಿಹರರೂಪಾ ಶ್ರೀ ವಿಜಯವಿಠಲರೇಯಾ |
ಚರಿತೆಯ ತೋರುವ ಅವರ ಯೋಗ್ಯತಾದಷ್ಟು ೪
ಆದಿತಾಳ
ತ್ರಿಶೂಲ ಡಮರುಗ ಭಸಿತ ರುದ್ರಾಕ್ಷಿಯು |
ಪಶುವಾಹನನಾಗಿ ಇಪ್ಪದಿದೆ |
ಅಸುರಾರಿಯಲ್ಲದೆ ಅನ್ಯರೂಪಗಳಲ್ಲ |
ಹಸನಾಗಿ ತಿಳಿದು ಈತನ ಮಹಿಮೆ ಕೊಂಡಾಡಿ |
ಕೆಸರು ಕಸ್ತೂರಿಯಾದರೆ ಕೌತುಕವಲ್ಲವೇನೊ |
ಶಶಿಧರ ಹರಿರೂಪ ದೊ[ಳು]ಕೂಡುವನೆ |
ವಶವಾಗಿ ಇಪ್ಪನು ತದ್ರೂಪಾದಂತೆ ಕಾಣೊ |
ಕುಶನ ಬಯಸುವನು ಸಮನಾಗಿ ನಿಲ್ಲುವನೆ |
ಪಶುಗಳ ಕಾಯ್ದ ನಮ್ಮ ವಿಜಯವಿಠಲ ಪ |
ರಶುರಾಮ ಕ್ಷೇತ್ರದಲಿ ಹರಿಹರ ರೂಪನಾದಾ ೫
ಜತೆ
ತುಂಗಮಹಿಮೆ ದೇವೋತ್ತುಂಗಾ ತುಂಗಾವಾಸ |
ರಂಗ ವಿಜಯವಿಠಲ ಹರಿಹರ ಮೂರುತಿ ೬

೮೭
ಹರೇ ವಿಠ್ಠಲಾ ಪಾಂಡುರಂಗ
ಪರಿಪಾಲಯ ಕಂಸಾರೆ ಪ
ಕರಕಮಲದ್ವಯ ಕಟಿಯ ಮ್ಯಾಲೆಯಿಟ್ಟ |
ಪರಮ ಪುರುಷ ಶೌರೇ ಮುರಾರೇ ಅ.ಪ.
ಜಲಜಭವಾದಿ ಸುರಸನ್ನುತ ಪಾದ ಜಲಜನಾಭನಾದ
ಕಲುಷ ದೂರ ಕರುಣಾಕರ ರಂಗ
ಸುಲಲಿತ ಮಹಿಮ ಹರೇ ಮುರಾರೆ ೧
ಪುಂಡಲೀಕ ವರದಾತ ಮುಕುಂದ ಕುಂಡಲಿಶಯನ ಹರೇ |
ಅಂಡಜವಾಹನ ಅಪ್ರಾಕೃತಕಾಯ
ಕುಂಡಲಧರ ಹರೇ ಮುರಾರೇ ೨
ದಿಟ್ಟತನದಿ ಹರಿಭಕ್ತ ಕೊಟ್ಟ ಇಟ್ಟಿಗಿ ಮೇಲೆ ನಿಂದ ದೇವ
ಸೃಷ್ಟಿಗೊಡೆಯ ಶ್ರೀ ವಿಜಯವಿಠ್ಠಲ
ದುಷ್ಟಕುಲಾಂತಕನೇ ಶ್ರೀ ಕೃಷ್ಣ ೩

೨೪೪
ಹಾರುವಗೆ | ಮರದ ಮೇಲಿರುವಗೆ |
ಮುದ್ರಿಕೆಯ ತೋರುವಗೆ | ವನ ಕೀರ್ತಿ ತೋರುವವಗೆ |
ಹೀರುವವಗಾಕ್ಷಣದಿ | ಚೀರುವಗೆ ಅರ್ಭಟಿಸಿ |
ಸಾರುವಗೆ | ರಾವಣನ ಮೀರಿದವಗೆ ಜಯಮಂಗಳಂ |
ನಿತ್ಯ ಶುಭ ಮಂಗಳಂ ೧
ವೃಕೋದರ ಭೀಮಗೆ | ಅಶೋಕದೊಡೆಯಗೆ |
ಬಕಜರಾಸಂಧ ಕೀಚಕವಧನಿಗೆ | ಸಕಲ ದಳದೊಳಗೆ |
ನಾಯಕನೆನೆಸಿ ಕಲಿಯ | ಬಂಧಕ ಶಕುತಿಗೆದ್ದ ಲೌಕಿಕ ಚರಿತಗೆ |
ಜಯಮಂಗಳಂ ನಿತ್ಯ ಶುಭಮಂಗಳಂ೨
ಒಂದೆ ಅಕ್ಷರದಿಂದ ಆನಂದ ಕೊಡುವವನಿಗೆ |
ಒಂದೆರಡು ಈರೈದು ಮುರಿದವನಿಗೆ |
ಒಂದೇ ದೇವ ನಮ್ಮ ವಿಜಯವಿಠ್ಠಲನಂಘ್ರಿ
ವಂದಿಸುವ ಶ್ರೀಮದಾನಂದ ಮುನಿಗೆ |
ಜಯವಇಂಗಳಂ ನಿತ್ಯ ಶುಭಮಂಗಳಂ೩

೩೩೫
ಹಾವಿಗೆಯ ಮಹಾಪೂಜೆ ನೋಡಿ ಪಾಪಾಖ್ಯ
ಹಾವಿಗೆ ತಡೆಯಾಗಿಪ್ಪದು ನಿತ್ಯ ಹಾಡಿ ಪ
ಮನುಜನ್ನ ಭೋಕ್ತರಿಕಾಯೈದಿ
ಧನದಾತ ಸವಸನ ಭೂಷಣ ವಿದ್ಯಾ ಕನಕ
ವಿನಯದಿಂದಲಿ ಇಲ್ಲಿ ತನಕ ಬಂದು
ಘನವಾಗಿ ಬೇಡುವರು ಮುಕ್ತಿ ಅಹಿಕಾ ೧
ದೇವ ಪಾದ ಪರಿಯಿಂತು ತಿಳಿದು ಕರ್ಮ ಭೂ
ಮಿವಾಸ ಮಾಳ್ಪೆನೆಂದಲ್ಲಿಂದ ಇಳಿದು
ಆವಾವತರು ಜಾತಿಗಳಳಿದು ನಮ್ಮ
ಪಾವಮಾನಿ ಮತ ಪೊಕ್ಕು ಸುಳಿದು ೨
ಒಂದೊಂದು ಪರಿಯಲ್ಲಿ ಸಾಗಿ ಸಾರಿ
ನಿಂದಿರದೆ ಇಪ್ಪದು ಕಾವ ಲೇಸಾಗಿ
ಅಂದದಿಂದಲಿ ಮೌಳಿ ತೂಗಿ ವೇಗ
ಕುಂದನಿಷ್ಟವಾಯಿತು ತಾನೆ ಪೋಗಿ೩
ಏಕಾಂಶದಲಿ ಇಲ್ಲಿ ಒಂದೆ ನಮಗೆ
ಬೇಕಾದರ್ಥವ ಕೊಡುವದು
ವಾಕುವರ ಸಿದ್ಧಿ ಲೋಕ ತುಂಬಿದೆ ಇದೆ ಸುಧಿಕೀರ್ತಿ
ತಾ ಕೊಂಡಾಡಿದರಾಗೆ ಬಲು ಚಿತ್ತ ಶುದ್ಧಿ ೪

ಸತ್ಯಾಗಿ ಸತ್ಯಬೋಧಯತಿ ಕೈಯ ಗುರು
ಸತ್ಯಪ್ರೀಯ
ಸ್ತೌತ್ಯರಾಮನ್ನ ಹಾವಿಗೆಯ ನಂಬೆ
ಭೃತ್ಯವತ್ಸಲ ವಿಜಯವಿಠ್ಠಲ ಸಹಾಯ೫

೪೯೬
ಹಿಗ್ಗದಿರು ಹಿಗ್ಗದಿರು ಮನುಜಪಶುವೆ |
ಮುಗ್ಗಿತಗ್ಗುವುದು ಮುಂದರಿಯದಲೆ ಮರುಳಾದೆ ಪ
ಆಯುದಲಿ ದ್ರೋಣಸುತ ಕೃಪ ವಿಭೀಷಣನೇನೊ |
ಶ್ರೇಯದಲಿ ದಶರಥ ನಹುಷನೇನೊ ||
ಈಯುದ್ದಕೆ ಮಯಾರ ಧ್ವಜ ಶಿಬಿ ಬಲಿಯೇನೊ |
ಮಾಯಾ ಬಿಡುವಲ್ಲಿ ಜಡ ಭರಿತ ನೀನೇನೊ ೧
ಶೂರತ್ವದಲಿ ಭೀಷ್ಮ ಅಭಿಮನ್ಯು ನೀನೇನೊ |
ಘೋರ ತಪಸಿನಲಿ ವಿಶ್ವಾಮಿತ್ರನೇನೊ ||
ವಿರುಕುತಿಯಲಿ ಸುರಸೈನ್ಯ ನಾಯಕನೇನೊ |
ಹಾರುವ ಬಿಂಕದಲಿ ಗರುಡ ನೀನೇನೊ ೨
ಬಲದಲ್ಲಿ ಬಲರಾಮ ಶಲ್ಯ ಕೀಚಕನೇನೊ |
ತಿಳಿವಳಿಕೆಯಲಿ ವಿದುರ ಸಂಜಯನೇನೊ ||
ಒಲಿದು ಪಾಡುವಲಿ ನಾರದ ತುಂಬುರನೇನೊ |
ಛಲ ಮಾಡುವಲ್ಲಿ ಧ್ರುವರಾಯ ನೀನೇನೊ ೩

ಭಕುತಿಯಲಿ ಪ್ರಹ್ಲಾದ ಪುಂಡರೀಕನೇನೊ |
ಭುಕುತಿಯಲಿ ಅಗಸ್ತ್ಯ ಬಕ ನೀನೇನೊ ||
ಉಕುತಿಯಲಿ ಸೂತ ಸಹದೇವ ಶೌನಕನೇನೊ |
ಶಕುತಿಯಲಿ ವಾಲಿ ಯಮರಾಯ ನೀನೇನೊ ೪
ಯೋಗದಲಿ ಶುಕ ಜನಕ ಸನಕಾದಿಗಳೇನೊ |
ತ್ಯಾಗಮಾಡುವಲ್ಲಿ ಕರ್ಣ ನೀನೇನೊ ||
ಭೋಗ ಬಡುವಲ್ಲಿ ಮಹಾಭಾಗ ಇಂದ್ರನೇನೊ |
ವೇಗದಲಿ ಪುರುಷ-ಮೃಗನು ನೀನೇನೊ ೫
ಸಖತನ ಮಾಡುವಲ್ಲಿ ಶ್ವೇತವಾಹನನೇನೊ |
ನಿಖಿಳ ಕಥೆ ಕೇಳುವಲ್ಲಿ ಪರೀಕ್ಷಿತನೇನೊ ||
ಅಖಿಳರನು ಗೆಲುವಲ್ಲಿ ಕಾರ್ತವೀರ್ಯನೇನೊ |
ಸುಖದಲ್ಲಿ ಇಪ್ಪದಕೆ ಪವನ ನೀನೇನೊ ೬
ವಿತ್ತದಲಿ ನೀನು ವೈಶ್ರವಣನೇನೊ |
ಮತ್ತೆ ಕ್ಷಮೆಯಲಿ ಹರಿಶ್ಚಂದ್ರನೇನೊ |
ಭೃತ್ಯತನ ಪಡೆವಲ್ಲಿ ಅಕ್ರೂರ ನೀನೇನೊ |
ಸುತ್ತವಲಿ ಪ್ರಿಯವ್ರತ ರಾಯನೇನೊ ೭
ವ್ರತದಲ್ಲಿ ಅಂಬರೀಷ ರುಕುಮಾಂಗದನೇನೊ |
ಸ್ತುತಿಯಲ್ಲಿ ಮುಚುಕುಂದರಾಯನೇನೊ ||
ಅತಿ ಚೆಲುವತನದಲ್ಲಿ ಮನ್ಮಥ ನಕುಲನೇನೊ |
ಕ್ರತು ಮಾಡುವಲ್ಲಿ ಧರ್ಮಪುತ್ರ ನೀನೇನೊ೮
ಶಾಪಗಳ ಕೊಡುವಲ್ಲಿ ಬ್ರಹ್ಮಪುತ್ರನೇನೊ |
ತಾಪ ತೋರುವಲ್ಲಿ ರವಿ ಅನಳನೇನೊ |
ಕೋಪ ಮಾಡುವಲ್ಲಿ ಗಿರಿಜಾರಮಣನೇನೊ |
ತಾಪಸಿರ ನಡುವೆ ವಸಿಷ್ಠ ನೀನೇನೊ೯
ಉನ್ನತದಲಿ ನೀನು ಮೇರು ಪರ್ವತನೇನೊ |
ಘನ ಮದದಲಿ ಧೃತರಾಷ್ಟ್ರನೇನೊ ||
ಇನ್ನು ಮತಿಯನ್ನು ಕೊಡುವಲಿ ಗಜಮೊಗನೇನೊ |
ಮುನ್ನೆ ಕವನದಲ್ಲಿ ಶುಕ್ರದೇವನೇನೊ ೧೦
ಹಮ್ಮಿನಲಿ ಬಾಳದಿರು ಹಿತವಾಗದೊ ನಿನಗೆ |
ಆ ಮಹಿಮರ ಸರಿ ನೀನಲ್ಲವೊ ||
ಸುಮನಸರೊಡೆಯ ಸಿರಿ ವಿಜಯವಿಠ್ಠಲರೇಯನ್ನ |
ನೆಮ್ಮಬೇಕಾದರೆ ಸೋಹಂ ನಿರಾಕರಿಸು೧೧

೪೯೭
ಹೇಳುವೆನು ಕೇಳಿ ಕರ್ಣಾಮೃತವ
ಆಲೋಚನೆ ಸಲ್ಲ ತಿಳಿದ ಜ್ಞಾನರಿಗೆ ಪ
ಲಕ್ಷಣ ಛಂದಸ್ಸು ಅಡಿಪ್ರಾಸ ಆದಿ ಅಂತಿ
ಲಕ್ಷಕ್ಕೊಂದಾದರು ಮೊದಲೇ ಇಲ್ಲಾ
ಅಕ್ಷಿ ಇಲ್ಲದವನು ಕೋಲು ಸಂಪಾದಿಸುವ
ಅಕ್ಷಿ ಉಂಟಾದವಗೆ ಅದರಿಂದ ಫಲವೇನು ೧
ಜ್ಞಾನ ಕರ್ಮರ ಲಂಬನ ಮಾಡಿ ತಿಳಿದಂಥ
ಮಾನವನು ನಾನಲ್ಲ ಎಂದೆಂದಿಗೂ
ಜ್ಞಾನಿಗಳ ಮನೆಯ ತೊಂಡರ ಪಾದರಕ್ಷೆಯಾ
ಪಾಣಿಯಲ್ಲಿ ಪಿಡಿದವನ ನಖಧೂಳಿ ದಯದಿಂದ ೨
ರಾಗತಾಳ ಭೇದ ಜತೆ ಜಾಣತನದಿಂದ
ವಾಗರ ನಿಮಿತ್ಯ ಪೇಳಲಿಲ್ಲಾ
ಹ್ಯಾಗಾದರೇನು ನಾರಾಯಣಚ್ಯುತನೆಂದು
ಕೂಗಿ ಕಾಲವ ಕಳದೆ ಜನುಮ ಸಾಧನಕೆ ೩

ಬೆಲ್ಲ ಕರದಲಿ ಪಿಡಿದು ಆವನಾದರೇನು
ಎಲ್ಲಿ ತಂದರೆ ಅದು ಸೀ ಎಲ್ಲವೇ
ಬಲ್ಲನವ ನರಿಯನಿವನೆಂದು ಆಡದಿರಿ
ಪುಲ್ಲನಾಭನ ಸ್ಮರಣೆ ಒಂದು ಮುಕ್ತಾರ್ಥ ೪
ಹರಿದೈವವೆಂದು ತಾ ಉತ್ತರೋತ್ತರ ತಿಳಿದು
ಗುರುಮಧ್ವಮತದಲ್ಲಿ ಲೋಲಾಡಲು
ಸಿರಿಯ ಅರಸ ವಿಜಯವಿಠ್ಠಲ ಬಂದು ವೊಲಿವನು
ಗುರು ಪುರಂದರನ ದಯೆ ಎನ್ನ ಮೇಲಿರಲಾಗಿ೫

೪೪೫
ಹೋದ್ಯಾ ಶೇಷಗಿರಿದಾಸ ಸುಲಭ
ಹಾದಿಯನು ಮೆಟ್ಟಿ ನಮ್ಮನು ಭವಾಬ್ದಿಯೊಳಿಟ್ಟು ಪ
ಸಲಹಿದೆನು ಸಾಕಿದೆನು ಕಾಲಕಾಲಕೆ ನೋಡಿ
ತಿಳಿಸಿದೆನು ತತ್ವಗಳು ನಿರುತ ಬಿಡದೆ
ಬಳಿವಿಡಿದು ತಿರುಗಿ ಉಣಿಸಿದೆನು ಉಡಿಸಿದೆನು ವೆ-
ಗ್ಗಳವಾಗಿ ನೋಡಿ ಸುಖಿಸಿದೆನೊ ಮಾತಾಡಿ ೧
ನಿನ್ನ ಮ್ಯಾಲಿನ ಕರುಣ ಕಮಲಾಕ್ಷ ವೇಗದಲಿ
ಎನ್ನಮ್ಯಾಲೆ ಇನ್ನು ಮಾಡಲಿಲ್ಲ
ಮುನ್ನೆ ಸಾಧನ ಪೂರ್ತಿ ನಿನಗಾಯಿತೇನೋ ಸಂ
ಪನ್ನಮತಿ ಉಳ್ಳವನೆ ಸಜ್ಜನ ಶಿರೋಮಣಿ ೨
ಧಿಕು ಎನ್ನ ಜನುಮ ನಿನ್ನಂಥ ಪ್ರಿಯನ ಬಿಟ್ಟು |
ಅಕಟಕಟ ಭೂಮಿಯೊಳು ಬದುಕುವದೂ |
ಸಕಲಲೋಕೇಶ ಸಿರಿ ವಿಜಯವಿಠ್ಠಲ ನಿನ್ನ
ಭಕುತಿಗೆ ಮೆಚ್ಚಿ ತಡಮಾಡದಲೆ ಕರದೊಯ್ದು ೩

ಪಂಪಾತೀರದ ಲಿಂಗಾಭವ ಭಸಿತಂಗಾ

೨೭೨
ಪಂಪಾತೀರದ ಲಿಂಗಾ ಭವಭಸಿತಾಂಗಾ
ಸಂಪುಲ್ಲಾಕ್ಷನ ತೋರೋ ಭಕ್ತ ಕೃಪಾಂಗ ಪ
ನೀನೆ ಗತಿಯೆಂದು ನಿದಾನದಿಂದ
ಧ್ಯಾನವ ಮಾಡಲು ದೈನ್ಯದಲಿಂದ
ಹೀನ ಪಾಪಂಗಳು ಕಳೆದು ದಯದಿಂದ
ಮಾನಾಭಿಮಾನದೊಡಿಯನೆ ಆನಂದ ೧
ಗಜಚರ್ಮಾಂಬರ ಗಂಗಾಧರ ಪುರವೈರಿ
ಭಜಿಸಿದೆನೊ ನಿನ್ನ ಭಕ್ತಿಯಲಿ ಸಾಕಿರೆ
ಕುಜನರೊಳಿಡದೆ ಉತ್ತಮವಾದ ದಾರಿ
ನಿಜವಾಗಿ ತೋರಯ್ಯ ದೀನರುಪಕಾರಿ೨
ಹೇಮಗಿರಿಯ ವಾಸಾ ಈಶನಿರೀಶಾ
ಸೋಮಶೇಖರನೆ ಪಾರ್ವತಿಯ ವಿಲಾಸಾ
ರಾಮ ಶ್ರೀ ವಿಜಯವಿಠ್ಠಲನೆ ನಿರ್ದೋಷಾ
ಸ್ವಾಮಿಯ ನೆನೆವಂತೆ ಕೊಡು ಎನಗೆ ಮನಸಾ೩


ಅಡಿಗಡಿಗೆ ನಾ ನಿನ್ನ ಅಡಿಗಳನೆ ನಂಬಿದೆ |
ತೋರಯ್ಯ ಎನಗೆ ಸುಚಿತ್ತ ಚಿತ್ತಜನಯ್ಯ
ಎಡೆ ಬಿಡದೆ ನಿನ್ನಂಘ್ರಿ ಚೆನ್ನಾಗಿ ಪೂಜಿಸಿ
ಎಡೆಗೆಡಿಪ ಲಿಂಗವನ್ನು ಬಂಧಿಸಿಕೊಂಡು
ಬಡಿವಾರ ನಿನ್ನವನೆಂಬೊ ಮಾತನೆ ಪೇಳಿ
ಸಡಗರದಿ ಮೆರೆವ ದಾಸನ್ನ ಮಾಡಯ್ಯ
ಬಿಡೌಜಪತಿ ಸಿರಿ ವಿಜಯವಿಠಲ ಸ್ವಾಮಿ
ಬರಿಸೊ ಬರಿಸೊ ನಿನ್ನ ಸ್ಮರಣೆ||

ಅನ್ನಂತ ಕಲ್ಪಕ್ಕೆ ನಿನ್ನ ಮೊರೆ ……. :


ಅನಂತ ಅಪರಾಧ ಮಾಡಿದ ಕಾಲಕ್ಕು
ನೀನೆಣಿಸುವನಲ್ಲ ಸತ್ಯ ಕಾಮಧೇನೆಂದು
ಶ್ರೀ ನಾರಿ ಬೊಮ್ಮ ಮಹೇಂದ್ರಾದ್ಯರು ನಿತ್ಯ
ಎಣಿಕೆ ಮಾಳ್ಪರು ಎಲ್ಲೆಲ್ಲಿ ನಿರೀಕ್ಷಿಸಿ
ಮಾಣದೆ ಮತಿಯಿಂದ ತಲೆದೂಗಿ
ಅನುಭವ ಏನೆಂಬೆ ನಿನ್ನಯ ಬಲು ಪ್ರತಾಪಕ್ಕೆ
ಮಾನವ ಗುಣಿಸಿ ನೆಲೆಗಾಣಬಲ್ಲನೆ
ಮೇಣು ಗಿರಿಜೇಶಗೆ ಕಾಶೀ ಪಟ್ಟಣದಲ್ಲಿ
ನೀ ನಿಲಿಸಿದೆ ಬ್ರಹ್ಮ ಹತ್ಯವ ಓಡಿಸಿ ಆನಂದ
ವನವಾಸ ವಿಜಯವಿಠಲರೇಯ ಜಾಹ್ನವಿ ಪಡದಾ||


ಅನಂತ ಕಲ್ಪಕ್ಕೆ ನಿನ್ನ ಮೊರೆ ಬಿದ್ದವಗೆ
ಖಿನ್ನವಿಲ್ಲವೆಂಬುದ ಕೇಳಿ ಬಲ್ಲೆ
ಚಿಣ್ಣ ಧ್ರುವ ಪ್ರಹ್ಲಾದ ಮೊದಲಾದ ಭಕುತರ
ಘನ್ನತೆ ಏನೆಂಬೆ ಲೋಕದಲ್ಲಿ
ಮನ್ನಿಸು ಮಹರಾಯ ವಿಜಯವಿಠಲರೇಯ
ಬಿನ್ನಹ ಕೈಕೊಂಡು ಭಕುತನ್ನ ಪಾಲಿಸು||


ಅನಲದೇವನು ದಾಹಕನಹುದೊ ಎಂದಿಗೂ
ಮನ ಬಲ್ಲದು ಕಾಣೊ ತ್ರಿಜಗದಲ್ಲಿ
ಅನುದಿನದಲ್ಲಿ ತನ್ನಿಂದನುವಾದ ವಸ್ತ
ಕ್ಷಣದೊಳಗೆ ದಹಿಸಿ ಬಿಡುವನು ಕಾಣಿರೊ
ವಿನಯದಿಂದಲಿ ತಾನು ಇಟ್ಟ ತೊಟ್ಟ ಉಟ್ಟ
ಮಣಿ ಭೂಷಣ ವಸನವ ದಹಿಸಿಕೊಂಬನೇನೊ
ವನಜನಾಭನು ಪಾವಕ ಸ್ಥಾನಿಯಾದಡೆ
ನೆನಸಿ ಮೊರೆ ಪೊಕ್ಕವರ ಪೆಸರುಗೊಳನು
ಘನ ದುರಿತವ ಸುಟ್ಟು ದಾನವರ ಪುಡಿಮಾಡಿ
ಪ್ರಣತ ಜನರ ಆರ್ತಿ ಕಳೆವ ಪೊಳೆವ
ಫಣಿಶಾಯಿ ವಿಜಯವಿಠಲರೇಯ ಕಾರುಣ್ಯ
ವನಧಿ ಕಾಣೋ ಭಕ್ತರಿಗೆ ಪ್ರಾಣ ಪದಕ ||


ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ
ರನ್ನದಂದಣವೇರಿ ಮೆರೆಸಲು
ಮುನ್ನೇನು ಸುಖವಿನಿತಿಲ್ಲ ದುಃಖವಲ್ಲದೆ ಘೋರ
ಗನ್ನ ಘಾತಕವು ಎಂದಿಗೆ ತಪ್ಪದು
ಸನ್ನೆಯನು ಕೇಳಿ ಸರ್ವೋತ್ತಮ ಹರಿ ಉದಾ
ಸಿನ್ನವನು ಮಾಡಿ ಕೆರ ಹೊಡಿಸಿದ ಸುಖ
ವೇನು ಬಾರದು ಕಾಣೊ ಪನ್ನಗಾರಿಗಾದರು
ಅನ್ಯಥಾ ಬಿಡದಿರು ವಿಜಯವಿಠಲನ್ನ||

ಅಬಲೆಯ ಮಾತಿಗೆ ಮನಸು ಕರಗಿತು …….. :


ಅಬಲೆಯ ಮಾತಿಗೆ ಮನಸು ಕರಗಿತು | ನಿನ್ನ
ಅಬುಜಪಾದಕೆ ಬಿಡದೆ ಬಿನ್ನೈಸಿದೆ
ಪ್ರಬಲ ನೀನಾದ ಕಾರಣದಿಂದ ಚನ್ನಾಗಿ
ವಿಬುಧೇಶ ನಾನಾ ರೋಗ ವಿನಾಶನನೆ
ಶುಭವೆ ಕೊಡು ಜೀಯ ನಿನಗಲ್ಲದೆ ಅನ್ಯ
ವಿಭುಗಳಿಗೆ ಶರಣೆನ್ನೆ ಸರ್ವಕಾಲ
ಶಬದ ಮಾತುರವಲ್ಲ ಅಂತರಂಗದ ಸ್ತೋತ್ರ
ಶಬರಿಗೆ ಒಲಿದವನೆ ಸತ್ಯಮೂರ್ತಿ
ಕುಬುಜಿಯ ತಿದ್ದಿದ ವಿಜಯವಿಠಲರೇಯ
ನಿಬಿಡ ಕರುಣಾಂಬುಧಿ ಮಹ ದುರಿತಾರಿ||


ಆ ವಿಜಯವಿಠಲನ್ನ ಚರಣವಿರಲು
ಕಾವರಾರೆಂದು ಇನ್ಯಾಕೆ ಮರಗುವಿ ಪ್ರಾಣಿ
ಕ್ಷೀರವಾರಿಧಿ ತಡೆಯ ಸೇರಿ ಮನಗಟ್ಟಿಕೊಂಡು
ನೀರ ಮಜ್ಜಿಗೆ ಕಾಣದಳುವದೇನೋ
ಸಾರಿದರೆ ನಿನ್ನ ಕುಲ ಸಹಿತಕ್ಕೆ ಸುಖವೀವ
ನಾರದವರದ ಸಿರಿ ವಿಜಯವಿಠಲ ಎನ್ನ ಸ್ವಾಮಿ||


ಆಕಳಿಗೆ ಕರುವುಗಳು ಏಸು ಇಪ್ಪಾವೆಂದು
ಲೋಕದೊಳು ಕೇಳಿದರೆ ಜನ ಒಪ್ಪೋದು
ಈ ಕರುವಿಗೆ ಎಷ್ಟು ಆಕಳುಗಳುಂಟೆಂದು
ವಾಕು ಬೆಸಗೊಂಡರೆ ಜನಮೆಚ್ಚುವುದೆ?
ಶ್ರೀಕಾಂತ ನಿನಗಿಂದು ಉತ್ತರ ಕೊಡಲಾಪೆನೆ
ಸಾಕುವ ದೊರೆಗಳು ಎಷ್ಟೆಂದು
ನೀ ಕೇಳಿದದಕೆ ಸೋಜಿಗವಾಗಿದೆ ಎನಗೆ
ಸಾಕುವರು ನಿನ್ನ ವಿನಾ ಉಂಟೇನಯ್ಯಾ
ಬಾಕುಳಿಗ ಮಾನವರು ಎನ್ನಂಥವರು ನಿನಗ
ನೇಕ ಜನ ತುಂಬಿಹದು ನೋಡಿದಲ್ಲಿ
ಏಕೋ ಸ್ವಾಮಿ ನೀನೆ ಎನಗೋರ್ವನಲ್ಲದೆ
ನಾ ಕಾಣೆ ಇನ್ನೊಂದು ನಿನ್ನ ಸಮನಾ
ಶ್ರೀ ಕಳತ್ರ ವಿಜಯವಿಠಲ ವೆಂಕಟರಾಯ
ಯಾಕೆ ಎನ್ನೊಡನೆ ಈ ಮಾತು ಸೊಗಸೆ||


ಆವದಾದರು ನೀನಿತ್ತದ್ದೆ ಎನಗಿಷ್ಟ
ನೋವು ಒಂದಾಥರಿಲ್ಲ ಕಾವಜನಕ
ಜೀವೇಶರೊಂದೆಂಬ ದುರ್ಮತಿ ಕೊಡದಿರೇಕೋ
ಭಾವದಲಿ ಇದನೆ ಬೇಡಿಕೊಂಬೆ
ದೇವ ನೀ ನರಕದಲ್ಲಿ ಬಹುಕಾಲ ಇಟ್ಟಿರು ಇಪ್ಪೆ
ನಾ ಒಲ್ಲೆ ಮಿಥ್ಯ ಮತವ
ಕಾವ ಕರುಣಿ ನೀನೆ ವಿಜಯವಿಠಲ ಎನ್ನ
ಪಾವನ ಮಾಳ್ಪ ಪರಮ ಪುರುಷ ಹರೇ ||

೧೦
ಇಂದೇ ಮುಕುತಿ ಬೇಡ ಬಂದಿಲ್ಲ
ಹಿಂದೆಪಟ್ಟಾ ಕ್ಲೇಶಾ ಪೋಗಾಡು ಎನ್ನಲಿಲ್ಲ
ಮುಂದಾಗುವ ವಿಹಿತ ಅನುಭವವಾಗಲಿ ಎಂದು
ಅಂದಿಗಾವದು ಎಂದಿಗೆ ಬಪ್ಪದೆ
ವಂದಿಸಿ ನಿನಗಿನ್ನು ದ್ವಂದ್ವಕರವ ಮುಗಿದು
ಒಂದೆ ಬಿನ್ನೈಸುವೆ ಒಂದೆ ದೈವ
ಎಂದೆಂದಿಗೆ ನಿನ್ನ ದಾಸರ ದಾಸನಾದೆ
ಮುಂದೆ ಕಾಯ್ದು ನಿತ್ಯ ಅವರೆಡೆಯ ಎಂಜಲು
ತಿಂದು ಬದುಕಿ ನಿನ್ನ ಕೊಂಡಾಡುವಂತೆ ಮಾಡು
ಕಂದರ್ಪಪಿತ ನಮ್ಮ ವಿಜಯವಿಠರೇಯ ||

೧೧
ಈ ಕಲ್ಪ ಸಾಧನೆ ಅಪರೋಕ್ಷ ನಂತರದಲ್ಲಿ
ಬ್ರಹ್ಮ ಮೊದಲು ಮಾಡಿ ತೃಣ ಜೀವ ಪರಿಯಂತರಾ
ಅವರ ಯೋಗ್ಯತೆ ಸಾಧನ ಹೇಳಿ
ಅದೆ ಇದು ಎಷ್ಟಾಯಿತೆಂದರೆ ಎರಡು ಮಹಪದ್ಮ
ಆರೈವತ್ತು ಪದ್ಮ ಎರಡು ಮಹ ಖರ್ವ ಏಳು ಖರ್ವ ಒಂದು
ನಿರ್ಬುದ ಆರೈವತ್ತಾರು ಕೋಟಿ ವರುಷವಾಯಿತು ಶ್ರೀ ವಿಜಯವಿಠಲ||

೧೨
ಉಪವಾಸವಿದ್ದವನಿಗೆ ಊರು ತುಂಬಿದರೇನು
ಅಪಹಾಸಗೊಳಿಸುವ ಗೆಳೆಯನಾದರೆ ಏನು
ಕುಪಿತವ ಬಿಡದವನು ಕುಲಜನಾದರೇನು
ಕಪಟವ ಬಿಡದವನ ಕೂಡ ಉಂಡರೇನು
ಕೃಪೆಮಾಡದವನ ಪಾಲಿಗೆ ಬಿದ್ದರೇನು
ತಪಸಿಗಳೊಡೆಯ ನಮ್ಮ ವಿಜಯವಿಠಲರೇಯಾ||

ಋಷಿಗಳ ಋಣ ಪೂರ್ವಾಶ್ರಮದಿಂದ ಪರಿಹಾರ ………. :

೧೯
ಋಷಿಗಳ ಋಣ ಪೂರ್ವಾಶ್ರಮದಿಂದ ಪರಿಹಾರ, ತ್ರಿ
ದಶರ ಋಣ ಮೇಧಾದಿಗಳು ಮಾಡೆ
ಅಸು ಸಂಬಂಧಿಗಳ ಋಣ ಗೃಹಸ್ಥಾಶ್ರಮದಲಿ
ಪುಸಿಯಲ್ಲ ತಿದ್ದಿ ಹೋಗುವುದು ಸಿದ್ಧ
ವಸುಧೆಯೊಳಗೆ ಒಂದು ಕಾಸು ಕೊಟ್ಟವನ ಋಣ
ವಸುಧೆಯೆಲ್ಲಾ ತಿರುಗೆ ಪೋಗದಯ್ಯಾ
ಪಶುಪಾಲ ಅವ್ಯಯಾತ್ಮ ವಿಜಯವಿಠಲರಂಗ
ಬಸುರೊಳು ಪೊಗಲಿಟ್ಟು ಬೆಸಸದೆ ಬಿಡದಯ್ಯ

೧೩
ಎತ್ತಣದೊ ಮಾಯಾ ಸಂಸಾರ
ನಿತ್ಯವಲ್ಲ ವಿಚಾರಿಸೆ
ತುತ್ತನು ಮೆಲುವಾಗ ಕಂಟಕವಿದ್ದಂತೆ
ಮೃತ್ಯು ಮಾರಿಗಳು ಕಾದಿಪ್ಪವೆಲ್ಲ
ಮತ್ರ್ಯದಲ್ಲಿ ಪುಟ್ಟಿ ಸುಖ ಬಯಸುವ ನರಗೆ
ಹತ್ತುಸಾವಿರ ಪ್ರಣಾಮ ಮಾಡುವೆನೊ
ಉತ್ತಮಗತಿ ಬಯಸುವ ನಾಯಿ ತಲೆ ಮೇಲಿನ
ಬುತ್ತಿಯಂದದಿ ಕಾಣೊ ಸತಿ ಸುತರು
ಚಿತ್ತದಲ್ಲಾಡುವ ವಿಜಯವಿಠಲರೇಯನ
ತುತ್ತಿಸಲು ಬಂದು ಕೈವಲ್ಯ ದಾರಿಗಿಡುವ||

೧೪
ಎಲೊ ಎಲೊ ದುರಿತವೆ ಓಡು ಓಡು ಎನ್ನ
ಬಳಿಯಲ್ಲಿ ಮೊದಲಂತೆ ತಲೆ ಬಲಿತು ನಿಂದೆಯಾದರೆ ನಿನ್ನ
ಕುಲಕೆ ಕ್ಷೇಮವಿಲ್ಲ ಕೈಲೆ ಕಡ್ಡಿಯನಿತ್ತೆ
ಮಲೆತವರ ಗಂಡ ಸಿರಿಕೃಷ್ಣ ಕಂಡರೆ ನಿನ್ನ
ತಲೆಯ ಚೆಂಡಾಡುವ ಭೂತ ಬಲಿಯನೀವ
ತಿಳಿದುಕೊ ನಿನ್ನೊಳು ನೀನು ಮೊದಲಂತೆ ನಾನಲ್ಲ
ಸುಲಭ ವಿಜಯವಿಠಲ ಒಲಿದರೆ ಭಯವಿಲ್ಲ||

ಒಂದು ಕೈಯಲಿ ಖಡ್ಗ ಒಂದು ಕೈಯಲಿ ಹಲಗೆ ……… :

೧೫
ಒಂದು ಕೈಯಲ್ಲಿ ಖಡ್ಗ ಒಂದು ಕೈಯಲ್ಲಿ ಹಲಗೆ
ಅಂದವಾಗಿ ಪಿಡಿದುಕೊಂಡು ದಿವಾರಾತ್ರಿಯಲ್ಲಿ
ಒಂದು ಬದಿಯಲ್ಲಿ ನಿತ್ಯ ಬಾರಾಸನಾಗಿ
ಹಿಂದು ಮುಂದುಪದ್ರವಾಗದಂತೆ
ಇಂದಿರೇರಮಣ ಕಾಯುತ್ತಲಿರೆ ಎನಗಾವ
ಬಂಧನಗಳಿಲ್ಲ ಧನ್ಯ ಧನ್ಯ
ಕಂದರ್ಪನಯ್ಯ ಸಿರಿ ವಿಜಯವಿಠಲರೇಯ
ಎಂದೆಂದಿಗಾಪತ್ತು ಬರಲೀಸನೊ||

(ಮುಂಡಿಗೆಯ ಸ್ವರೂಪದ ಉಗಾಭೋಗ ಇದು)

೧೭
ಒಂದೆಂಟು ಬಾಗಿಲುಳ್ಳ ಪಟ್ಟಣದೊಳಗೆ
ಮುಂದೆ ಇಪ್ಪತ್ತ ನಾಲ್ಕು ಮನೆಯೊಳು
ತಂದೆನ್ನ ನಿಲ್ಲಿಸಿ ಒಳಗಿಟ್ಟು ಕಾವಲು ಮಾಡಿ
ಬಂಧನದೊಳಗಿಟ್ಟು ಬಳಲಿಸುವುದನ್ಯಾಯ
ತಂದೆ ಅಂತರಾತ್ಮಕ ನೀನು ಒಳಗಿದ್ದು ಸ್ವತಂತ್ರ
ನೆಂದೆನಿಸಿ ಎನ್ನ ಬರಿದೆ ಕೊಲ್ಲಿಸುವರೇನೊ ರ್ಪಪಿ
ಕಂದರ್ಪಿತರಂಗ ನೀ ಕಾಯ ಬೇಕೆನ್ನ
ಎಂದಾದರೇನು ಅನಂತ ಮೂರುತಿ ವಿಜಯವಿಠಲ||

ಒಂದೆರಡು ಮೂರು ನಾಲ್ಕೈದಾರು ಏಳು ಒಂದೇಳು

೧೬
ಒಂದೆರಡು ಮೂರು ನಾಲ್ಕೈದಾರು ಏಳು
ಒಂದೇಳು ಒಂಬತ್ತು ಹತ್ತು ಸಾರಿ
ವಂದಿಸಿ ಸ್ತೋತ್ರ ಮಾಡಿದುದಕೆ ಅವರವರ
ಬಂಧನವ ಪರಿಹರಿಸಿ ಕಾಯ್ದೆ ನೀನು
ಒಂದೊಂದು ಚಿತ್ತಕ್ಕೆ ಅನುಭವವಾದುದು ನೋಡಿ
ಇಂದು ಪ್ರಾರ್ಥಿಸಿದೆನೊ ಪಾರ್ಥಸೂತ
ಅಂದ ಮಾತನು ಬರಿದಾಗದಂತೆ ದೇವ
ಬಂದ ವ್ಯಾಧಿಗಳೆಲ್ಲ ಕಡೆಗೆ ಮಾಡಿ
ನಂದವ ಇತ್ತು ಈ ದೇಹದಲಿ ಸುಖಬಡಿಸು
ತಂದೆ ಈ ಭಕುತನ ಮೊರೆ ಕೇಳಿ
ಕಂದರ್ಪಪಿತ ನಮ್ಮ ವಿಜಯವಿಠಲ ನಿನ್ನ
ಪೊಂದಿದ ಮೇಲೆ ಮುನ್ನಾವ ಕ್ಲೇಶಗಳಿಲ್ಲ||

ಒಬ್ಬಸತಿ, ಪತಿಗಾಗಿ ಮುನಿಯ ಶಾಪವ ಧರಿಸಿ

೧೮
ಒಬ್ಬ ಸತಿ ಪತಿಗಾಗಿ ಮುನಿಯ ಶಾಪವ ಧರಿಸಿ
ಅಬ್ಜ ಬಾಂಧವನ ನಿಲಿಸಿದಳು ನೋಡಾ
ಒಬ್ಬ ಸತಿ ಪತಿಗಾಗಿ ಧರ್ಮನ ಸಭೆಯ ಸಾರಿ
ನಿಬ್ಬರದಿ ಪ್ರಾಣವನು ಪಡೆದಳು ನೋಡಾ
ಒಬ್ಬ ಸತಿಪತಿಗಾಗಿ ಚಿತ್ರಗುಪ್ತರಾಡಿದಾ
ಶಬ್ದ ಲಾಲಿಸಿ ಐದೆತನ ಪಡೆದಳು
ಉರ್ಬಿಯೊಳಗೀಪರಿ ಸತಿಯರ ಸ್ವಧರ್ಮ
ನಿಬ್ಬಿಡಿಯಾಗಿದೆ ನಿನ್ನ ದಯದಿ
ಅಬ್ಜನಾಭನೆ ಇವನ ಮೇಲೆ ದಯಮಾಡು ಕರು
ಣಾಬ್ಧಿಯೆ ಉಪೇಕ್ಷೆ ಮಾಡದಲೆ
ಅಬ್ಬರ ದೈವ ವಿಜಯವಿಠಲರೇಯ
ಲಬ್ಧವಾಗಲಿ ನಾನು ಬೇಡಿದ ವರವು||

ದಿಟ್ಟವಾದ ಕವನ ಎನ್ನಿಂದ ಬಾಹದಲ್ಲಿ …….. :

೨೦
ಕಟ್ಟೆಯ ಕಟ್ಟಿದರು ಭವಸಾಗರಕೆ ಸ್ವಲ್ಪ
ಬಿಟ್ಟು ವೇಗದಿಂದ ಸಾಧ್ಯ ಮಾಡಿಕೊಂಡು
ಮೆಟ್ಟಿಕೆಯಿಂದಲಿ ದಾಟಿ ಪೋದರು ಜಗ
ಜಟ್ಟಿ ದಾಸರು ತಮಗೆ ಸುಲಭವಾದದ್ದು ಎನಗೆ
ಇಟ್ಟು ಪೋದರೆಂದು ಗುಟ್ಟು ತೋರುತಲಿದೆ ಸಾಧಾರಣವಲ್ಲ
ದಿಟ್ಟವಾದ ಕವನ ಎನ್ನಿಂದ ಬಾಹದಲ್ಲ
ಬಿಟ್ಟಿಯವರಿಗೆ ತಿಳಿಯಲಹುದೆ
ಕೊಟ್ಟಿಗೆ ಮೇಲುಪ್ಪರಿಗೆಯಾಗುವುದೆ?
ಪುಟ್ಟಾರಭ್ಯವಾಗಿ ಮಂದನಾಗಿದ್ದವನಿಗೆ
ಮಟ್ಟಿದಲ್ಲದೆ ಬುದ್ಧಿ ಬರುವುದೆಂತೊ
ದಿಟ್ಟ ಮಹಿಮ ಸಿರಿ ವಿಜಯವಿಠಲನ ಮನ
ಮುಟ್ಟಿ ಭಜಿಪುದು ದಾಸರ ಕರುಣವೆನ್ನಿ||

೨೧
ಕಠಿಣವಾದರು ನಿನ್ನ ನಾಮ ಅನುಗಾಲ
ಜಠರಾದೊಳಗೆ ಇಟ್ಟು ಎಂತಾದರಾಗೆ
ನಟನೆಯ ಮಾಡುತ ತಿರುಗುವ ಮಾನವಗೆ
ಅಟವಿಯಲ್ಲಾದರು ಪೂರ್ಣ ಸುಖವು
ಸಟಿಯಲ್ಲ ಈ ಮಾತು ಅಜಭವಾದಿಗಳೆ ಬಲ್ಲರು
ದಿಟನೆ ತಿಳಿದು ಪೇಳಿದರು ಪುಸಿಯಲ್ಲ
ವಟಪತ್ರಶಾಯಿ ನಮ್ಮ ವಿಜಯವಿಠಲರೇಯ
ವಿಠಲಾ ಎಂದು ನುಡಿದವಗೆ ಆವ ಭಯವುಂಟು||

೨೨
ಕಾಲಕಾಲಕೆ ನಿನ್ನ ನಾಮದ ಸ್ಮರಣೆಯನು
ನಾಲಗೆಗೆ ಕೊಡು ಕಂಡ್ಯ ನಾರಾಯಣನೆ
ಕೀಳು ಮತಿಯನೆ ಬಿಡಿಸೊ ಕೀರ್ತನೆಯ ಮಾಡಿಸೊ ನಿ
ನ್ನಾಳುಗಳೊಳಗೆ ಊಳಿಗವನಿತ್ತು ಪಾಲಿಸೊ
ಬಳಲಿದೆನೊ ಭವದೊಳಗೆ ಬಿದ್ದು ಬ
ಯಲಾಸೆಯಲಿ ನಾ ಕಾಲವ ಕಳೆದೆ
ಪಾಲಸಾಗರಶಾಯಿ ವಿಜಯವಿಠಲ ನಿನ್ನ
ಪಾಲಿಗೆ ಬಂದೆನೊ ಪರಮ ಪುರುಷ ಹರೆ ||

ನಿನ್ನಯ ಭೀತಿ ……….. ದುರ್ಗಾಳಿಗೆ :

೨೩
ಕಾಲನಾಮಕ ಭಗವಂತ ನಿನ್ನಯ ಭೀತಿ|
ಕಾಲನಾಮಕಳಾದ ದುರ್ಗಾಳಿಗೆ
ಕಾಲಾಖ್ಯ ಗರುಡ ಶೇಷ ರುದ್ರರಿಗೆ ದುರ್ಗೆ ಭಯ
ಕಾಲಯಮನಿಗೆ ಇವರ ಭಯ ಯಮನ ಭೀತಿ
ಕಾಲನೆಂಬೊ ಯಮನ ತಮ್ಮನಿಗೆ ಯಾಗುವುದೊ
ಕಾಲಮೃತ್ಯುವಿಗೆ ಈ ಕಾಲನ ಭಯ
ಕಾಲದೂತರಿಗೆ ಭಯ ಇದರಿಂದಾಗುವುದು ಕ್ಷುದ್ರ
ಕಾಲದೇವತೆಗಳಿಗೆ ದೂತರ ಭಯ
ಕಾಲಕಾಲಕೆ ಇರಲು ಸ್ವಾತಂತ್ರದಲಿ ಲೇಶ
ಕಾಲವಾದರು ನರನ ಮುಟ್ಟುವರೆ
ಕಾಲನಿಯಾಮಕ ನಿನ್ನ ನಂಬಲು ಸರ್ವ
ಕಾಲದಲಿ ಸುಖವುಂಟು ನಿರೋಗದಿ
ಕಾಲ ದೇಶ ಪೂರ್ಣ ವಿಜಯವಿಠಲ ನಿನ್ನ
ಕಾಲಿಗೆ ಎರಗುವೆನು ಕರವಿಡಿದು ಸಲಹೊ||

೨೪
ಕುಟ್ಟು ಕುಟ್ಟು ಕುಂಟಣಗಿತ್ತಿ ದುರುಳರ
ಕುಟ್ಟು ಹಿಡಿವಂತೆ ಕುಟ್ಟು ಕುಟ್ಟು ಪರರ
ಕುಟುಂಬ ಬಯಸುವ ಕುಟೀರದೊಳಿದ್ದೆ ಕುಟಿಲ ವರ್ಗಗಳ
ಕುಟ್ಟಿ ಕುಟ್ಟಿ ಕುಟ್ಟಿ ಹಿಟ್ಟು ಮಾಡಿ ಅವರ
ಗುಟ್ಟಾರಿಸಬೇಕು ಒಳಗೆ ಹಾಕಿ
ಸೃಷ್ಟೀಶ ವಿಜಯವಿಠಲರಾಯನ ಮನೆ
ಜಟ್ಟಿಗನಾಗಿ ಮುಷ್ಟಿ ಪೆಟ್ಟಿನಿಂದಲಿ||

೨೫
ಕುಲಿಶ ನಂಬಿದ ನರಗೆ ಶೈಲದ ಭಯವುಂಟೆ |
ಜಲಧಿ ನೆಲೆ ಬಲ್ಲವಗೆ ಕೊಳಚೆ ನೀರಿನ ಭೀತೆ
ಛಲದಂಕ ವಿಜಯವಿಠಲ ನಿನ್ನ ನೆನೆಯಲು
ಕೆಲಕಾಲಾರ್ಜಿಸಿದ ದುರಿತಗಳು ನಿಲ್ಲೋವೆ

೨೭
ಕೋಟಿಗಾದರು ನಿನ್ನ ನಾಮ ಒಂದೆ ಸಾಕು
ದಾಟಿಸುವುದು ಭವಸಾಗರ
ಬೂಟಕತನದಲಿ ಹರಿದಾಸನಾದರೆ
ತೋಟವಿಲ್ಲದೆ ಮೋಟಿ ಎತ್ತಿದಂತೆ
ನೀಟಾಗದು ಕಾಣೊ ಎಂದಿಗೂ ಯಮ ಭಟರ
ಕಾಟತಪ್ಪದು ಕಾಶಿಯೊಳಗಿದ್ದರು
ಹಾಟಕಾಂಬರಧರ ವಿಜಯವಿಠಲರೇಯ
ನಾಟಿಸು ನಿನ್ನ ಚರಣದಲಿ ಎನ್ನ ಮನಸು||

ಚಾಗಿ ಕೇಶವರಾಯನು

೨೬
ಕ್ಷೇಮವ ಕೊಡು ಜೀಯಾ ಇವರಿಬ್ಬರಿಗೆ ನಿತ್ಯ
ಕಾಮಿತಾರ್ಥವು ಎನಗೆ ಇದೆಯಲ್ಲದೆ
ಭೂಮಿಯೊಳಗೆ ಮತ್ತೊಂದಪೇಕ್ಷೆ ಇಲ್ಲವೊ
ಸ್ವಾಮಿ, ಕರುಣದಿಂದ ಒಲಿದು ನೋಡೊ
ಶ್ರೀ ಮನೋಹರ ವಿಜಯವಿಠಲ ನಿನ್ನ
ನಾಮದ ಬಲಕಿಂತ ಅನ್ಯಬಲಗಳುಂಟೆ||

೨೮
ಜಠರವನು ಕೈಲಮಕಿ ಜುಣು ಜುಣುಗಿ ಮೆಲ್ಲನೆ
ನಿಟಿಲವನು ನರನ ಚರಣದಲಿಟ್ಟು
ಗಿಟಿಕಿರಿದು ಹಲ್ಲನು ಗಿದ್ಧನಾ ಕೊಡು ಎಂದು
ಪಟುವಾಗಿ ಕಾಯದೊಳಗಳುಕಿಕೊಳುತ
ಕಟುಕರಂಗಡಿ ಮುಂದೆ ಕಾಯ್ದ ನಾಯಿಯಂತೆ
ಗುಟುಕುಗಳು ಉಗುಳದಲೆ ನುಂಗಿಕೊಳುತಾ ಅ
ಕಟಕಟಾ ಹೀಗೆ ಮಾಡುವರೇನೊ ಹೇ ವಿಜಯ
ವಿಠ್ಠಲ ನಿನಗಿನಿತು ಕರುಣವು ಇಲ್ಲವೊ||

೨೯
ಜನನದ ಭಯ ಮರಣದ ಭಯ ಬರುತಿಪ್ಪ
ಮನೊ ಇಂದ್ರಿಯಂಗಳು ವಿಷಯಕ್ಕೆರಗುವ ಭಯ
ಕಾನನ ಭಯ ಬಲುರೋಗ ತೊಡಕುವ ಭಯ ತೀವ್ರತಮ
ಸಿನ ಭಯ ಬಂದರಾದರು
ಗಣನೆ ಮಾಡರು ಕಾಣೊ ಹರಿಯ ನಂಬಿದ ಜನರು
ಅನುಮಾನ ಸಲ್ಲದು ಸಂತರ ತಿಳಿವುದು
ಜನುಮಾದಿ ಕರ್ತ ಶ್ರೀ ವಿಜಯವಿಠ್ಠಲನ
ರ್ಚನೆ ಮಾಡಿ ಅನುದಿನ ಭಯಗಳ ನೀಗೊ||

೩೦
ಜಾಲಿಸಬೇಕು ಜಾಲಿಸಬೇಕು ಜಾಲಿಸಬೇಕು ಜಾಲಗಾರನಾಗಿ
ಜಾಲ ಪಾಪಂಗಳು ಕಸ ಪೋಗುವಂತೆ ಜಾಲಿಸಬೇಕು
ಜಾಲಿಸಿ ಬಿಳ್ಳೆ ವಸ್ತ್ರ ಸಂಪಾದಿಸಿ
ಜಾಳಿಗ ಚೆನ್ನಾಗಿ ತುಂಬಲು ಮಾಯಾ
ಜಾಲ ವಿಜಯವಿಠಲನ ಸನ್ನಿಧಿಯಲ್ಲಿ
ಜಾಳಿಗೆಯಿಟ್ಟು ಜನನ ನೀಗಬೇಕು||

೩೧
ಜುಟ್ಟು ಜನಿವಾರ ಕಿತ್ತಿಕೊಂಡು ಯತಿಯಾಗಿ
ಕಟ್ಟ ಕಡೆಯಲಿ ಗೃಹಸ್ಥ ಧರ್ಮ ತೊರೆದು
ಹುಟ್ಟುಗ ಇಲ್ಲೆನುತ ಕೃಷ್ಣ ಕೃಷ್ಣ ವಿಜಯ
ವಿಠಲನ ಪಾದಕ್ಕೆ ಮೊರೆ ಇಟ್ಟಿರುವರು||

ತತ್ತ್ವಾಭಿಮಾನಿಗಳಿರಾ ಉತ್ತರವ ಪಾಲಿಪುದು . . . . . . :

೩೨
ತತ್ವಾಭಿಮಾನಿಗಳಿರಾ ಉತ್ತರ ಪಾಲಿಪುದು
ಎತ್ತಿ ಕರವ ಮುಗಿವೆ ವಿನಯದಲ್ಲಿ
ಆತ್ಮದೊಳಗೆ ನಿಮ್ಮ ವ್ಯಾಪಾರ ಘನವಯ್ಯ
ತತ್ತಸ್ಥಾನದಲ್ಲಿ ನಿತ್ಯವಾಗಿ
ದೈತ್ಯರಿಗೆ ಸರ್ವದ ನಿಮ್ಮ ಪ್ರೇರಣೆಯುಂಟು
ಅತ್ತ ಎಳೆಸದಿರಿ ದುಸ್ಸಂಗಕ್ಕೆ
ಚಿತ್ತದಲ್ಲಿ ನೀವೇ ನಿಜ ವ್ಯಾಪಾರ ಮಾಡುವರು
ಸತ್ಯಕ್ಕೆ ಎರಗುವ ಮಾರ್ಗವಿತ್ತು
ಉತ್ತಮ ಗುಣದಲ್ಲೆ ಮೊದಲೆ ನಿಮ್ಮ ಪೂಜಿಪ
ಅರ್ಥಿಯಾಗಲಿ ಆ ತರುವಾಯದಿ
ಉತ್ತಮ ಶ್ಲೋಕ ಸಿರಿವಿಜಯವಿಠಲನ್ನ
ತುತಿಸಿ ಆತನ್ನ ಚರಣ ನೋಳ್ಪದ ಮಾಡು||

ತನ್ನಂತರ್ಯಾಮಿ ಒಳಗಿದ್ದ ಬಿಂಬ ……….. :

೩೩
ತನ್ನಂತರ್ಯಾಮಿ ಒಳಗಿದ್ದ ಬಿಂಬನ್ನ
ಅನಂತಾನಂತ ಅಂಶವೇ ಚಿಂತಿಸಿ
ಭಿನ್ನ ಜೀವರ ತಿಳಿದು ಅವರವರ ಒಳಗಿಪ್ಪ
ಘನ್ನ ಮೂರುತಿಯ ತುತಿಸಿ ಬಹು ಬಗೆಯಿಂದ
ಪುಣ್ಯ ಪ್ರಾಣನೆಂದು ಸ್ಮರಿಸಿ ಆ ಅಂಶಗಳ
ಭಿನ್ನ ಮಾಡದೆ ತಿಳಿದು ಬಿಂಬನೊಳಗೆ
ಚೆನ್ನಾಗಿ ಕೂಡಿಸಿ ಏಕತ್ರಯ ಮಾಡಿ
ಮುನ್ನ ದ್ವಿವಿಧ ಕರ್ಮ ತೋರಿಸಲಾಗಿ
ಪುಣ್ಯವೆ ಬರುವುದು ಅದರಿಂದಲಾದರೂ
ತನ್ನ ಸಹಿತದಲ್ಲಿ ಗುಣ ಯೋಚಿಸಬೇಕು
ಪನ್ನಗಶಯನ ನಮ್ಮ ವಿಜಯವಿಠಲರೇಯನ
ಸನ್ಮತಿಯಿಂದ ಆಲೋಚಿಸಿದ ಮನುಜಗೆ||

೩೪
ದಾಸನಾಗುವನಿಗೆ ಕ್ಲೇಶಬಡಿಸದೆ ಒಲಿಯ
ರೆಕ್ಕೆ ಮುರಿದ ಪಕ್ಕಿ ಬಾಯಿ ಬಿಟ್ಟಂತೆ
ಗಗನಕ್ಕೆ ಮೊಗವೆತ್ತಿ ಕೂಗುತಿಪ್ಪೆ
ಅಕ್ಕರೆ ನಿನಗಿನ್ನು ಬಾರದೇನಲೊ
ದೇವಕ್ಕಳೊಡೆಯ ತ್ರಿಜಗದಲ್ಲಿ ನೀನು
ಠಕ್ಕಿಸಿ ಪೋಗುವೆಯಾ ಸರ್ವಜೀವಿಗಳೊಳು
ಯಾತಕ್ಕೆ ಎನ್ನೊಬ್ಬನ ಪುಟ್ಟಿಸಿದೆ
ಪಕ್ಕದಾಸನು ನಾನು ವಿಜಯವಿಠಲ ನಿನ್ನ
ಲೆಕ್ಕಕ್ಕೆ ಮೊದಲಿಗನೆನಿಪೆನಯ್ಯಾ

೩೫
ದಾಸನಾಗುವೆನೆಂದು ಆಸೆ ಮಾಡಲು ಬಲುಕ್ಲೇಶವ ಬಡಿಸುವ| ಆ
ಭಾಸವ ನುಡಿಸುವ ನಾಶಮಾಡುವ ಸಕಲೈಶ್ವರ್ಯಗಳನ್ನೆಲ್ಲ
ಗ್ರಾಸವಾಸಕೆ ತರರೀಸನು ಪರರಿಂದ ಮೋಸವಾದ ಭವ
ಕ್ಲೇಶಪಾಶದಿ ಬಿಗಿದು ದ್ವೇಷವ ಮಾಡಿಸುವ ನೀಚರ ಕೈಯಿಂದ
ಕಾಸಿನವನ ಮಾಡಿ ಬೀಸಿ ಬಿಸಾಡುವ ಲೇಸು ಕೊಡುವ ನಮ್ಮ ವಿಜಯವಿಠಲನು |

೩೬
ದೂರದಲ್ಲಿದ್ದೀಯೇನೋ ಮೊರೆಯಿಟ್ಟು ಬೇಡಿದರೆ
ಆರು ನೀವೆಂದು ಕೇಳದಿಪ್ಪುದು ಸರಿಯೆ
ದಾರಿದ್ರನ ಸೊಲ್ಲು ವ್ಯರ್ಥವಾಗಿದೆ ನೋಡು
ತಿರುಗಿ ಕೂಗಿದ್ದರಿಂದಲೇನಾಹುದೊ
ಧೀರ ನೀ ಕುರುಡನೊ ಮೂಕನೊ ಬಧಿರನೊ
ಕೀರುತಿ ಒಲ್ಲೆನೆಂಬೊ ಮೌನವೊ ಏನಿದು
ಧಾರುಣಿಯೊಳಿದ್ದವರ ನೋಡೆ, ನಾನೊಬ್ಬನೆ
ಭಾರವೇನೊ ತಂದೆ ಅಕಟಕಟ
ಸಾರಿದವರ ಪೊರೆವ ವಿಜಯವಿಠಲ ನಿನ್ನ
ಕಾರುಣ್ಯತನಕೆ ನಾನೊಬ್ಬನೆ ಎರವೆ||

ಮೂವರುಷ ಎನ್ನಾಯುಷ್ಯದೊಳಿತ್ತು ಕಾವುದು ……. :

೩೭
ದೇವ ನಿನ್ನ ಪಾದದಾಣೆ ನಿನ್ನಭಕ್ತರಾಣೆ
ಈ ವಚನ ಸತ್ಯ ಮಾಡುವುದು ಎನಗೆ
ಇವನ ಜೀವದಾನ ಕೊಡು ಇದೇ ದೇಹದಲ್ಲಿ
ಮೂವರುಷ ಎನ್ನಾಯುಷ್ಯದೊಳಿತ್ತು
ಕಾವುದಲ್ಲದೆ ಇನ್ನು ಸುಮ್ಮನಿಪ್ಪದು ಸಲ್ಲ
ಸಾವಿರ ಬ್ರಹ್ಮ ಭೋಜನವ ಮಾಡಿಸುವೆನೊ
ದೇವ ನಿನ್ನ ಪಾದದಾಣೆ ಭಕ್ತರಾಣೆ
ಈ ವ್ಯಾಳಿಗೆ ಅಪ ಬಂದ ಮೃತ್ಯು ಓಡಿಸಬೇಕು
ಭೂ ವಿಭುದರೆಲ್ಲ ಕಷ್ಟಪಡುವುದ ನೋಡು
ಕೋವಿದರಾಯ ಎನ್ನಾಣೆ ಕೇಳಿದಗತ್ಯ
ಪಾವನ ಮೂರುತಿ ವಿಜಯವಿಠಲರೇಯ
ಜೀವೇಶನಿಂದಲಿ ರಕ್ಷಣೆ ಮಾಡಿಸು||

ಭಗವಂತನ ಗುಣ ವಿಶೇಷಗಳಲ್ಲಿ

೪೬
ಧ್ರುವತಾಳ
ಧಾರಣ ಧ್ಯಾನಯೋಗ ಮಾಡು ಮನವೆ ಅಸಾ
ಧಾರಣ ಹರಿಯ ಮಹಿಮೆ ಪೂರ್ಣ ತಿಳಿದು
ತಾರತಮ್ಯನುಸಾರ ತಾತ್ವಿಕ ಜನರ ವಿ
ಸ್ತಾರವಾದ ರೂಪಾಂತರವ ಗ್ರಹಿಸಿ
ಆರೇಳೊಂದು ಭುವನ ಅಲ್ಲಲ್ಲಿ ಇದ್ದ ವಸ್ತು
ವಿರಾಟರೂಪ ವೈಕುಂಠನಗರ
ವಾರಿಜ ಜಾಂಡ ಖರ್ಪರ ಸಮಸ್ತಾವರಣ
ಸಾರಾಸಾರಾವನ್ನು ನೋಡು ಅಧಿಕವಾಗಿ
ಮೂರು ಗುಣದಿಂದ ಆಗುವ ಕಾರ್ಯ ತಿಳಿದು
ಸಾರಿ ಸಾರಿಗೆ ಹಿಗ್ಗಿ ಕೊಂಡಾಡುತ್ತ
ನಾರಾಯಣನೆ ಮುಖ್ಯ ಸಮಸ್ತರೊಡನೆ ಮಹಾ
ಧೀರನೆ ಅಪ್ರಮೇಯ ನಿತ್ಯ ಸುಲಭ
ಆರಾಧನೆ ಮಾಡೋದು ಓರ್ವೋರ್ವರಲ್ಲಿ ನಿಲಿಸಿ
ಬೇರೆ ಬೇರೆ ಬುದ್ಧಿಯಿಂದ ತಿಳಿದು
ಮೇರೆ ಇಲ್ಲದೆ ದೇವತೆಗಳ ಅಂಶ ಅವ
ತಾರ ಉಣಿಸಿ ಇವರ ಪ್ರಸಾದವ
ಮೂರು ಬಗೆಯಿಂದ ಸಂಪಾದಿಸಿ ಲಕುಮಿ
ನಾರಾಯಣನನ್ನು ಧ್ಯಾನಗೈದು ಮುಕ್ತಿ
ಸೂರೆಗೊಂಡು ನೀನು ಸುಖಿಸೋದು ಅಲ್ಲಿಗಲ್ಲಿ
ಕೀರುತಿವಂತನಾಗು ಇಹಪರದಲ್ಲಿ
[ಶ]ರೀರದೊಳಗಿದ್ದ ಮಾನಿಗಳೆ ಸರ್ವಾ
ಕಾರವಾಗಿಪ್ಪರೆಂದು ಚಿಂತಿಸಿ ನಿತ್ಯ
ವಾರ ವಾರಕ್ಕೆ ಪ್ರಾಣ ನಿರೋಧಮಾಡಿ ಶ್ವಾಸ
ಧಾರಣದಿಂದಲಿ ಮನ ನಿಲಿಸೋ
ಕಾರಣ ಕಾರ್ಯರೂಪ ಒಂದೊಂದು ನೆನಿಸಿ ಉಪಸಂ
ಹಾರಾದಿಂದಲಿ ಸರ್ವ ಮಿಳಿತಗೈಯೋ
ಚಾರು ಚರಿತ್ರ ನಮ್ಮ ವಿಜಯವಿಠಲನಂಘ್ರಿ
ವಾರಿಜದಳವನ್ನು ಭಕ್ತಿಯಿಂದಲಿ ನೋಡು ೧
ಮಟ್ಟತಾಳ
ತಾತ್ವಿಕ ಕಾರ್ಮಿಕ ಮನುಜ ತೃಣ ತನಕ
ಸಾತ್ವಿಕ ಗುಣದವರು ಮುಕ್ತಿಯೋಗ್ಯರು ಮುಖ್ಯ
ಜಾತಿ ಭೇದವುಂಟು ಜಗದೊಳಗೆ ಎನ್ನಿ
ಪೂತುರೆ ಮೂವತ್ತು ಮೂರು ಕೋಟಿ ಸ್ವರ್ಗ
ಜಾತಸ್ತರ ಕಾಣೋ ಪಾತಾಳಮಾರಭ್ಯ
ಸತ್ಯಲೋಕವೆ ವಿಡಿದು
ಗಾತುರ ಭೇದದಲಿ ತುಂಬಿ ಕೊಂಡಿಹರಯ್ಯಾ
ಈ ತೆರದಲಿಯಿದ್ದ ದೇವರೊಳಗೆ ತ್ರಿವಿಧ
ಚಾತುರ ಬಗೆ ಸಂಖ್ಯೆ ಪಂಚ ಪ್ರಕಾರಗಳು
ಧಾತ ಮೊದಲ ಮಾಡಿ ಅಜಾನುಜ ಪರಿಯಂತ
ನೀತಿಯಿಂದಲಿ ಗ್ರಹಿಸು ನಿರ್ಣಯ ಉಕ್ತಿಯಲಿ
ಭೀತ ರಹಿತ ನಮ್ಮ ವಿಜಯ ವಿಠಲರೇಯ
ಸ್ವಾತಂತ್ರನೆಂದು ಇದರನ್ನೇ ಪ್ರಾರ್ಥಿಸೊ ೨
ತ್ರಿವಿಡಿ ತಾಳ
ಮುಕುತಿ ಯೋಗ್ಯರ ಸರ್ಗ ಕ್ರಮಾಂತು ಚಿಂತಿಸು
ಭಕುತಿ ಸ್ನೇಹದಿಂದ ಅಡಿಗಡಿಗೆ
ಸಕಲಕ್ಕು ಮಹಾಶ್ರೇಷ್ಠ ಬ್ರಹ್ಮ ವಾಯುಗಳು ಕಾ
ರ್ಮುಕ ದೇವತಿ ಭಾರತಿ ನಾಗಾರಿ ಫಣಿ ಕಾಮಾ
ಹರ ಷಣ್ಮಹಿಷಿ ಜನ ಗರುಡಾದ್ಯರ ಸತಿಯರು
ಮಖಶತ ಮದನ ಅಹಂಪ್ರಾಣ ಅನಿರುದ್ಧ
ಅಕಳಂಕಾದಿ ಮನು ರತಿ ಗುರು ಶಚಿ ದ
ಕ್ಷಕ ಪ್ರವಾಹ ವಾಯು ಮನು ಪತ್ನಿ ಶಶಿ ಜಲಜ
ಸಖ ಧರ್ಮ ವರುಣ ನಾರದ ಮುನಿ ಭೃಗು ಪಾ
ವಕ ಪ್ರಸೂತಿ ವಿಶ್ವಾಮಿತ್ರಾದ್ಯರು
ಅಕಟ ಮಿತ್ರನು ತಾರಾ ಪ್ರಾವಹಿ ದನುಜ ನಾ
ಯಕ ವಿಷ್ವಕ್ಸೇನ ವೈದ್ಯರು ಧನಪ ವಿನಾ
ಯಕ ಉಕ್ತಶೇಷರು ಸಹವಾಗಿ ಮುಖ್ಯ ತಾ
ತ್ವಿಕರೆನ್ನಿ ಇವರಿಗೆ ಸಹಜ ದೇವತ್ವವೊ
ಅಖಿಳ ಬಗೆಯಿಂದಲಿ ನೋಡಲು ನಿಜ ಮಹ
ಭಕುತಿವುಳ್ಳವರಯ್ಯಾ ದ್ವಿವಿಧವೆನ್ನಿ
ಪ್ರಕಟವಾಗಿದೆ ತಾರತಮ್ಯನುಸಾರ ಹಾ
ಟಕಗರ್ಭವಿಡಿದು ಋಭುಗಣ ತನಕ ಎ
ಣಿಕೆ ಮಾಡಲಾಗಿ ತ್ರಿಶತೋತ್ತರ ತ್ರಿಸಹಸ್ರ
ಧಿಕರೆನ್ನಿ ವಿಷ್ಣುಪಾದೈಕಾಶ್ರಯ
ಸುಖಸಾಂದ್ರ ವಿಜಯ ವಿಠಲರೇಯನ ಸೇ
ವಕರಾಗಿ ಸರ್ವ ಲೋಕದಲಿ ತುಂಬಿಹರೋ ೩
ಝಂಪೆತಾಳ
ಪಾವಕ ಪವಮಾನ ವನ್ಹಿಲ ಪುತ್ರರು ಷಡ್
ದೇವ ಬಲ್ಯಾದಿಗಳು ಮನುಗಳೇಕಾದಶ
ಚಾವನೊಚೇಥ್ಯಾದಿ ಋಷಿಗಳು ನವತಿ ಸಂ
ಭಾವಿಸುತ ಸನಕಾದಿ ಚಿತ್ರಾಂಗದ ಮಿಕ್ಕ
ದೇವಗಂಧರ್ವರು ಚಕ್ರವರ್ತಿಗಳು ಶತ
ಈ ವಿಧದಿ ಮಾನುಷ್ಯವಗಾಭಿಮನಿ ವಾ
ಗ್ದೇವಿ ರಾಕಾಧಿ ಶಾಂತನು ಶತಾನುಶೇಷ ಭಾರ್ಯಾ
ದೇವಿ ದಿಕ್ಪಾಲಕರು ಪ್ರಾಣಾನಿರುದ್ಧ ಋಭು
ಅವರುಗಳ ಹೆಂಡರನು ತಿಳಿದು ದೇವ ನದಿ
ಪರ್ಜನ್ಯರವಿ ಶಶಿ ಯಮಾದ್ಯ
ರ ವಧುಗಳು ಅನಿರುದ್ಧನ ಪತ್ನಿ
ಪಾವಕಾದ್ಯರು ಮನುರೈವತಾದ್ಯಸ್ತ್ರೀಯರು
ಕೋವಿದ ಜಯಂತ ಜಯಾದ್ಯ ಕಾಲಾಖ್ಯರು
ಧಾವಂತ ಯಮ ಭಟರು ಬಲ್ಯಾದಿಗಳ ಹೆಂಡರು
ದೇವತಿಗಳು ಕೆಲವು ಯಕ್ಷಗಣ ಪ್ರಧಾನ
ಪಾವಕ ಪವಮಾನ ಆರಂಭಿಸಿ
ಆವ ಬಗೆಯಿಂದ ಗುಣಿಸೆ ವಿಂಶತಿ
ನವ ಸಾವಿರದ ಏಳನೂರಜನರೆನ್ನಿ
ಸಾವಧಾನದಿ ಕೇಳೆ ಅಮುಖ್ಯತಾತ್ವಿಕ
ದೇವತೆಗಳು ಇವರೆ ಕಾರ್ಮಿಕರೊ
ದೇವಕಿ ಸುತ ನಮ್ಮ ವಿಜಯ ವಿಠಲರೇಯ
ಕಾವ ಈ ಪರಿಯಿಂದ ನೆನೆಸಿ ಧ್ಯಾನವ ಮಾಡೆ ೪
ರೂಪಕ ತಾಳ
ಬುಧ ಶನಿ ಪತ್ನೇರು ತೀರ್ಥಾಭಿಮಾನಿಗಳು
ಇದರ ತರುವಾಯ ಪುಷ್ಕರ ಕರ್ಮಪಾಭಿದರು
ಇದನೆಲ್ಲ ಕೂಡಿಸಿ ಎರಡು ಕೋಟಿಯ ಮೇಲೆ
ಅಧಿಕ ನವಲಕ್ಷ ಅರವತ್ತೇಳು ಸಹಸ್ರ
ಹದಿನಾರು ಸಾವಿರ ಅಗ್ನಿ ಪುತ್ರರು ಈ
ವಿಧದಲಿ ಶತಕೋಟಿಗೆ ಶತನ್ಯೂನ ಋಷಿಗಳು
ತ್ರಿದಶ ಗಂಧರ್ವ ಅಪ್ಸರರು ಶತಾಶತ ಮಂದಿ
ಮುದದಿಂದ ಚಿರಪಿತೃ[ಗಳು] ಕೆಲವು ಪಿತೃ ಗಂಧರ್ವ
ಬದಿಯಲ್ಲಿ ಅಪ್ಸರರು ಸಿದ್ಧಸಾಧ್ಯ ಚಾರಣ
ಮೊದಲಾದ ವಿದ್ಯಾ ಧರರು ಕಿನ್ನರ ಕಿಂಪುರುಷ ಜನ
ಅದುಭೂತ ಭೂತ ಪ್ರೇತ ಪಿಶಾಚ ಯಕ್ಷ
ಹದುಳ ಬಯಸುವ ರಾಕ್ಷಸ ಭಿನ್ನರಾಗೆ
ಹದಿನಾರು ಜಾತಿಯೋಳ್ಗತರಾಗಿ ಇಪ್ಪರು
ತದುಪರಿ ಕೆಲವು ಅಪ್ಸರರು ನರಗಂಧರ್ವ
ಒದಗಿ ಇಲ್ಲಿ ಗುಣಿಸಿ ವಿ
ವಿಧ ಇವರೊಳಕ್ಕು ಪದಸ್ಥ ರಹಿತಕಾಣೊ
ಚದುರರು ಚತುರ್ವಿಂಶತಿ ಕೋಟಿ ಸಂಖ್ಯಾಕರು
ಇದನೆಲ್ಲ ಕೂಡಿಸಿ ಗಣಿತ ಮಾಡಲು
ಆದದ್ದು ಮೂವತ್ತು ಮೂರು ಕೋಟಿ ದೇವತಿಗಳು
ಯದುಕುಲ ಲಲಾಮ ವಿಜಯ ವಿಠಲಸಾರಾ
ಹೃದಯ ಮನಸ್ಸಿನಲಿ ಇದರಂತೆ ನುಡಿಸುವ ೫
ಅಟ್ಟತಾಳ
ಉಳಿದಾದ ರಾಯರು ಮನುಜೋತ್ತಮರು ಖಗಾ
ವಳಿ ಮೃಗ ಉರಗ ಗಜಾದಿ ತೃಣಜೀವ
ತಿಳಿದು ಈ ಪರಿಯಿಂದ ಮುಕುತಿಯಿಂದ ಸವಿಶೇಷ ಗ್ರಹಿಸು ವಿ
ಮಲ ಮನಸಿನಿಂದಲಿ ಇದರೊಳು ನಿರಂಶರ ಆ
ಕೆಲಕೆ ಸಾರಿ ಮುಂದೆ ಸಾಂಶರ ಮಧ್ಯ
ಕೆಲರು ಅಜಾನಜರು ಕಾರ್ಮಿಕರು
ಕೆಲವು ತಾತ್ವಿಕ ಜನರು ಇನಿತು ಲೆಖ್ಖವನು ಮಾಡೆ ವಿವರವುಂಟು
ತಿಳಿ ಮುಖ್ಯ ತಾತ್ವಿಕ ಶನಿ ಪರಿಯಂತ ವಿಂಶತಿನವ
ಏಳು ಸಾವಿರ ಜನರೆನ್ನಿ ತೀರ್ಥಾಭಿಮಾನಿ ಪುಷ್ಕರ ಪರಿಯಂತ
ಮಿಳಿತವಾಯಿತು ಎಂಟು ತೊಂತೊಂಭತ್ತು ಲಕ್ಷ ಅರವ
ತ್ತೇಳು ಸಾವಿರ ಎಲ್ಲ ಕೂಡಿಸಿ ಒಂಭತ್ತು ಕೋಟಿ ಆಯಿತು
ಉಳಿದಾಜಾನಜ ಅಗ್ನಿ ಪುತ್ರ ಅಪ್ಸರ ಗಂಧರ್ವ ಚಿರಪಿತೃ ಮೊ
ದಲಾಗಿ ಸಿದ್ಧ ಸಾಧ್ಯ ಇಪ್ಪತ್ತು ನಾಲ್ಕು ಕೋಟಿ ಋಷಿ
ಗಳು ನೂರುಕೋಟಿ ಅಂತು ನೂರಾ ಮೂವತ್ತು ಮೂರು ಕೋಟಿ
ಮಿಳಿತವಾಯಿತು ಕೇಳಿ ಮಹಾತ್ಮರ ಲೀಲೆ
ಒಳಗೆ ಹೊರಗೆ ಭೂಮಂಡಲದಿ ತುಂಬಿದೆ
ನೆಲೆಯ ಬಲ್ಲವರಾರು ಅಚಿಂತ್ಯಾದ್ಭುತಶಕ್ತಿ
ಕೆಲಕಾಲ ಇವರಿಗೆ ಉಂಟು ಹರಿ ಕೃಪೆ
ಕಳಾಕಾಷ್ಟ ಮೊದಲಾದ ಕಾಲದೇಶ ಕರ್ಮಾ
ವಳಿಗುಣ ಭೂತ ಪಂಚಕ ದಶೇಂದ್ರಿಯ
ಬಲು ವೈರಾಗ್ಯ ಜ್ಞಾನ ಭಕುತಿ ಸಾಧನ ನಾನಾ
ಕುಲ ಯಾಗ ಯೋಗ ಭೋಗ ಭೋಜನಾಜನ
ಸಿಲಿನದಿ ಪರ್ವತ ದ್ವಿಸಪ್ತಾಂಬುಧಿ
ಪೊಳೆವ ಪಾತಾಳಾದಿ ಚತುರ್ದಶಭುವನ ಆಶಾ
ರೂಪ ವಾಗ್ವಾದಿ ವ್ಯವಹಾರ ಶಮಲವರ್ನಾದಿ
ರೂಪವ ದಿವ್ಯವಾಕಾರಾ
ಪೊಳೆವ ಪೋತ ಯವ್ವನ ವೃದ್ಧಾಪ್ಯತನ
ಇಳಿಯೊಳು ಎಂಭತ್ತುನಾಲ್ಕು ಲಕ್ಷ ಜೀವ
ಫಲ ಮರ ಮೊದಲಾಗಿ ಮನುಷ್ಯ ಪರಿಯಂತೆ
ಮಳೆ ಬೆಳೆ ಛಳಿ ಮಿಂಚು ನಾನಾ ವಾದ್ಯ ಶಬ್ಧ
ಸುಲಭ ವೇದಶಾಸ್ತ್ರ ಪುರಾಣ ಬಲು ವರ್ಣ
ಕಲಿಯುಗದೊಳಿದ್ದವೇನೇನು ಕ್ರಿಯಾದಿ
ಜಲಜ ಭವಾಂಡ ವಿರಾಡ್ರೂಪ ಖರ್ಪರ
ವಲಯಾಕರ ಸಪ್ತ ಪ್ರಕಾರ ತತ್ವವು
ಫಲ ಪರಮಾಣು ಲಿಂಗದೆಹ ಇಲಿಯಿದ್ದ
ಕಳೆ ಸಹಿತವಾಗಿ ಸರ್ವದಾ ಸಮಸ್ತ
ಸ್ಥಳದಲ್ಲಿ ಪೊಂದಿದ ಅಭಿಮತ ದಿವಿಜರ
ಬಳಿವಿಡಿದು ಅವತಾರಗಳಾವೇಶ
ಗಳನು ಚಿಂತಿಸಿ ಓರ್ವೋರ್ವರ ಪ್ರತಾಪ
ಒಲಿಮೆಯಿಂದಲಿ ತುತಿಸುತ್ತ ಹಿಗ್ಗುತ್ತ ಚಂ
ಚಲತನವನೆ ಬಿಟ್ಟು ಸರ್ವ ಏಕೀ ಭೂತ
ತಿಳಿದು ಆಮೇಲೆ ಉತ್ತಮರಾಧೀನ ಚಿಂತೆ
ನಲಿನಲಿದು ಮಾಡು ಅವರವರ ಕೋಟಿಯು
ಸಲೆ ಮೂರು ಬಗೆಯಿಂದ ಈ ಪರಿ ಎಣಿಕಿಲೀ
ಹಲವು ಸ್ಥಾನಂತರ ಬರುತ ಸೂರ್ಯ ಮಂಡಲ
ದಲಿ ಯೋಚಿಸು ತದನಂತರದಲಿ ಈ
ಕಳೇವರ ಪಾಲಿಪ ದೇವತಿಗಳಪಾದ
ಜಲಜಕ್ಕೆ ಬಿನ್ನೆಸಿ ಜಿತ ಗದ್ದುಗೆ ನಿರಾ
ಕುಲನಾಗಿ ರೂಪ ರೂಪಾಂತರ ಕೂಡಿಸಿ
ಒಲಿಸಿಕೋ ಒಲಿಸಿಕೋ ಒಲಿಸಿಕೋ ಇವರನ್ನ
ಥಳಥಳಾಯ ಮಾನ ಭೂಷಣ ವಸನ ಸೂ [ಸುವ]
ಎಳೆನಗೆ ಸರ್ವ ಲಕ್ಷಣೋಪೇತ ಸತಿ ಬಂಧು
ಬಳಗ ಪರಿವಾರ ಪರಿಪೂರ್ಣ ಕಾಮರು
ಗೆಳೆಯರಾಗಿಪ್ಪರು ನಮಗೆ ನಿರಂತರ
ಅಳಲಿಕೆ ಬಳಲಿಕೆ ನಾನಾ ಶೋಕ ದುಃಖ
ಕಳೆದು ಕರುಣದಿಂದ ತಮಗಿಂದಧಿಕರ
ಒಳಗೆ ತೋರುವರಯ್ಯಾ ಧರ್ಮ ಮಾರ್ಗದಿಂದ
ಸುಳಿ ಸುಳಿದಾಡೋರು ಮನದಲ್ಲಿ ಮಾಣದೆ
ಬಲಗೊಳ್ಳಲಿ ಬೇಕು ಪ್ರಾಣಪರಿಯಂತ
ಫಲಗಳ ಬಯಸದೆ ಉಪಸಂಹಾರದಿಂದ
ಹೊಲಬು ತಪ್ಪದೆ ಸ್ವರ್ಗಾ ಸುಸ್ವರ್ಗಾದಂತೆವೊ
ಹೊಲೆಗೂಡು ಮೆಚ್ಚಿಸಿ ನಡೆಯದಿರು ಕೆಡದಿರು
ನಳಿ ನಳಿಸುವ ಬಿಂಬಾ ಬಿಂಬನಗುಣ
ಬಲು ರೂಪ ಕ್ರಿಯಾದಿ ಸರ್ವವು ಪರಿಪೂರ್ಣ
ಸ್ಥಳ ದೇಶ ಗುಣ ಕಾಲ ವ್ಯಾಪ್ತ ನಿಜ್ಯೆಶ್ವರ್ಯ
ಸುಲಭಾ ಸುಲಭ ಅಣು ಮಹತ್ತು ರೂಪ ಹಂ
ಬಲಿಸು ಈ ಪರಿಯಿಂದ ಅತ್ಯಂತಾ ಭೇದವೊ
ನಳಿನನಾಭನ ಮೂರುತಿಯ ಈಕ್ಷಿಸೋದು
ಇಳಿಯೊಳು ಇನಿತು ಮಾಡಿದವನೆ ಧನ್ಯ
ಬಲಿ ಮಥನ ನಮ್ಮ ವಿಜಯ ವಿಠ್ಠಲರೇಯ
ಕುಲಕೋಟಿ ಉದ್ಧಾರ ಮಾಡುವ ಪ್ರತಿದಿನ ೬
ಆದಿತಾಳ
ಎಲ್ಲೆಲ್ಲಿ ತತ್ತತನು ಧರಿಸಿದ ದೇವಾಂಶಿಗಳು
ಅಲ್ಲಿಗಲ್ಲಿ ಚಿಂತಿಸಿ ಅವರವರ ನಿರ್ದೇಶವನು
ಮೆಲ್ಲಮೆಲ್ಲನೆ ತಿಳಿದು ಲಿಂಗಗಳು ರೂಪ

ಸಾರುವೆನು ಕರನೆಗಹಿ ಉರಗಹಾರವಧರಿಸಿ ……… :

೩೮
ಧಾರುಣಿಯೊಳಗೆಲ್ಲ ಪರದೈವವಾವುದೆಂದು
ತಾರಿ ಬೆಂಡಾಗದಿರಿ ತವಕದಿಂದ
ಸಾರುವೆನು ಕರ ನೆಗಹಿ ಉರಗಹಾರವ ಧರಿಸಿ
ಮಾರುತ್ತರವು ಸಲ್ಲದು ದುರುಳರಿಗೆ
ನಾರಾಯಣನೆಂಬೊ ನಾಮಕ್ಕೆ ನಿರ್ವಚನ
ಆರು ಮಾಡಬಲ್ಲರು ಪ್ರಾಜ್ಞರೊಳು
ತೋರಿರೊ ಈ ನುಡಿದ ನುಡಿಯನು ಬಿಚ್ಚಿ
ಕ್ಷೀರವಾರಿಧಿಶಯನ ವಿಜಯವಿಠಲ ದೈವ||

೩೯
ಧ್ವಜ ವಜ್ರಾಂಕುಶ ರೇಖಾಂಕಿತದ ಹರಿಯ ಪಾದಾಂ
ಬುಜವ ಸೇವಿಸುವ ಅಜಭವರ ಭಾಗ್ಯ ನೋಡು
ತ್ರಿಜಗವಂದ್ಯನ ಪಾಡು ಭಕುತಿಯ ನೀ ಬೇಡು
ಕುಜನರ ಮಾತ ಸುಡು ದುರ್ಜನರ ಸಂಗವ ಬಿಡು
ಗಜರಾಜನ ಕಾಯ್ದ ಕೃಷ್ಣನ ಧ್ಯಾನಮಾಡು
ವಿಜಯವಿಠಲನ ಬಿಡದೆ ಕೊಂಡಾಡು||

೪೦
‘ನ ತೇ ವಿಷ್ಣೋ’ ಎಂದೆಂಬೊ ನಿಗಮಾರ್ಥ
ಹಿತದಿಂದಲಿ ತಿಳಿದು ಹಿರಿದಾಗಿ ಅರಿದು
ಕ್ಷಿತಿಸುರರ ಗರ್ಭದಲ್ಲಿ ಬಂದು ಮಾ
ರುತಿ ಮತದಲಿ ಬಲು ಜ್ಞಾನಿಯಾಗೊ
ಇತರ ಮತವ ನಂಬಿ ಓದದಿರು ವೇದ
ಗತಿಯಿಲ್ಲದೆ ಹಾಯ ಹಾಯನಾಗುವದೇನೊ
ಯತಿಗಳಿಗೆ ಸಿಕ್ಕ ವಿಜಯವಿಠಲಂಗೆ
ಪ್ರತಿ ಕಕ್ಷಿಯಿಲ್ಲ ದೇವತೆಗಳೊಳು ಕೇಳು
ಮತಿಗೆಡದಿರು ನೀನು ಮತಿಗೆಡದಿರು ನೀನು||

೪೧
ನಾನು ನನ್ನದು ಎಂದು ನಾನು ನನ್ನದು ಇಂದು
ನಾನು ನನ್ನದು ತಂದು ನಾನು ನನ್ನದು ಒಂದು
ನಾನು ನನ್ನದು ವಸ್ತು ನಾನೆಂಬುದು ಬಿಡದೆ
ನಾನಿಂದಲಿ ಕೆಟ್ಟೆ ನಾನೆಂಬುದು ಬಿಡಿಸೊ
ನೀನೇ ವಿಜಯವಿಠ್ಠಲ ||

೪೨
ನಾನು ನೀನು ಎಂದು ಒಮ್ಮೆಗಾದರು ನರ
ಅನಂತ ಜನುಮದಲ್ಲಿ ನುಡಿದನಾಗೆ
ಶ್ವಾನ ಸೂಕರ ದುರ್ಯೋನಿಯಲ್ಲಿ ಪುಟ್ಟಿ
ಮಾನಸಾಧಮನಾಗಿ ಕಟ್ಟಕಡಿಗೆ
ನಾನಾ ಸಂಕಟ ಬಿಟ್ಟು ಹೀನ ಭೋಜನ ಮಾಡಿ
ತಾನಿಳಿವನು ನಿತ್ಯ ನರಕದಲ್ಲಿ
ಅನಂತ ಜನುಮದೊಳು ಸೇವಕನೆಂದೆನೆ
ತಾನೊಲಿದು ಈವ ವಿಜಯವಿಠಲ ಗತಿ||

ದ್ವಾದಶಿ ತಿಥಿಗೆ ಸಮವುಂಟೆ? ………. :

೪೩
ನಾರಾಯಣನ ನಾಮಕೆ ಇತರ ನಾಮಗಳೆಣೆಯುಂಟೆ
ತಾರತಮ್ಯದಿ ದೇವತೆಗಳೊಳಗೆ ಹಿರಿತನಕೆ ಸಮವುಂಟೆ
ಧಾರುಣಿಯೊಳಗನ್ನದಾನಕೆ ಸಮಾನ ಉಂಟೆ
ಧೀರ ವಿಜಯವಿಠಲನ್ನ ದ್ವಾದಶಿ ತಿಥಿಗೆ ಸಮವುಂಟೆ||

೪೪
ನಿನ್ನ ಜನರ ಸಂಗ ಕೊಡು ಎನ್ನಂತರಂಗ
ಘನ್ನ ಸುಗುಣಾಂತರಂಗ ಮಂಗಳಾಂಗ
ಅನ್ಯಾಪೇಕ್ಷೆಯೊಲ್ಲೆ ಅಂದಿನ ಭವಣಿ ಬಲ್ಲೆ
ಮನ್ನಿಸು ಮಾರಮಣ ಇಲ್ಲೇ ಇಲ್ಲೇ
ಇನ್ನು ಈ ದೇಹದಲ್ಲೇ ಕಡೆಮಾಡು ಇಹದಲ್ಲಿ
ಮುನ್ನೆ ಪುಟ್ಟಿ ಬರುವ ಕರ್ಮದ ಬಲೆ
ಎನ್ನ ಮನೋರಥ ಸಿರಿ ವಿಜಯವಿಠಲ ಹರಿ
ಧನ್ಯನ ಮಾಡುವದು ಪಥವ ತೋರಿ||

೪೫
ನಿನ್ನ ದಾಸನೆಂದೆನಿಸಬೇಕಾದರೆ
ಭಂಗಪಡಲುಬೇಕು ದಿನ ಪ್ರತಿದಿನದಲ್ಲಿ
ಅನ್ನವಸ್ತ್ರಕಿಲ್ಲದೆ ತಿರುಗಬೇಕು
ಬೆನ್ನುಬಿಡದೆ ರೋಗಂಗಳು ಬರಬೇಕು
ಪನ್ನಗಶಯನ ಶ್ರೀ ವಿಜಯವಿಠಲರೇಯ
ಎನ್ನನೀ ಪರಿಯಲ್ಲಿ ಮಾಡಿದ ಬಗೆ ಏನು?

೪೬
ನಿನ್ನ ಪಾದಾಂಬುಜವ ನೋಡಿದ ಮನುಜಗೆ
ಘನ್ನ ಪಾಪಗಳುಂಟೆ ಘನ್ನವರ್ಣ
ನಿನ್ನ ಪೋಲುವ ದೈವ ಆವಾವ ಕ್ಷೇತ್ರದಲ್ಲಿ
ಬಣ್ಣಿಸಿ ನೋಡಿದರು ಕಾಣೆನಯ್ಯ
ಕಣ್ಣಿಲಿ ನೋಡಿದರು ಕರ್ಣದಲಿ ಕೇಳಿದರು
ಬಿನ್ನಹ ಮಾಡಿ ತುತಿಸಿದ ಕಾಲಕ್ಕು
ಎನ್ನ ಮೊದಲು ಮಾಡಿ ಪರಮೇಷ್ಠಿ ತನಕ ಸಂ
ಪನ್ನ ಜ್ಞಾನದಲ್ಲಿ ಗುಣಿಸಿದರು
ಪನ್ನಗಶಾಯಿ ಸಿರಿ ವಿಜಯವಿಠಲರೇಯ
ನಿನ್ನ ಮಹಿಮೆಗೆ ನಮೋ ನಮೋ ಎಂದೆಂಬೆನೊ||

ಎನ್ನೊಳಗೆ ಇನ್ನಿತು ಪ್ರೇರಿಸಿ ನೀನೇ ನುಡಿಸಿದ್ದು …….. :

೪೭
ನಿನ್ನ ಮನದೊಳಗೆ ಉಳಿಸುವೆನೆಂಬ ಹರುಷ ಮಹ
ಘನ್ನವಾಗಿರಲಿಕ್ಕೆ ಎನ್ನೊಳಗೆ
ಇನ್ನಿತು ಪ್ರೇರಿಸಿ ನೀನೇ ನುಡಿಸಿದ್ದು
ಘನ್ನವಲ್ಲವೆ ಇದಕೆ ಸಂಶಯವಿಲ್ಲ
ಇನ್ನು ಯೋಚಿಸಲ್ಯಾಕೆ ಭಕ್ತ ಪಾಲಕ ಬಿರುದು
ಅನ್ನಂತಕಾಲಕ್ಕೆ ನಿನ್ನದಯ್ಯಾ
ಉನ್ನತ ಮಹಿಮ ಸಿರಿ ವಿಜಯವಿಠಲರೇಯ
ಎನ್ನ ಮಾನಾವಮಾನ ಮತ್ತಾರದಲ್ಲಾ||

೪೮
ಪತಿಯೇ ನೀನಾಗಿ ಹಂಗಿಸಲ್ಯಾಕೋ ಎಲೊ ದೇವ
ಶ್ರುತಿ ಶಾಸ್ತ್ರವಿದಕೆ ಸಮ್ಮತ ಪೇಳುವೆ
ಕ್ಷಿತಿಯೊಳು ಜನಿಸಿ ನಾ ದೋಷ ಮಾಡದಿದ್ದರೆ
ಪತಿತ ಪಾವನನೆಂಬ ಬಿರುದು ನಿನಗೆ
ಜಿತವಾಗುವುದೇನೊ ಪರಮೈಶ್ವರ್ಯನೆ ಕೇಳು
ಪ್ರತಿ ದೈವವಿದ್ದರೆ ಅವಗಾಗದೆ
ತುತಿಸಿ ನುತಿಸಿ ನಿನ್ನ ಕೊಂಡಾಡುವಂಥ ಈ
ಅತಿಶಯ ನನಗ್ಯಾಕೆ ಹಗಲಿರುಳು
ಸತತ ಗುಣಾಂಬುಧಿ ವಿಜಯವಿಠಲ
ಪತಿತನಾಗಿ ನಿನಗೆ ಮೊರೆ ಇಡುವೆ||

ಶಿರದಶ ತೋಳೆರಡು ಪದವೆರಡು ಧರಿಸುತ್ತ ….. :

೪೯
ಪರಮ ರಹಸ್ಯವಿದು ಕೇಳಿರಿ ಸಜ್ಜನರು
ಅರುಹುವೆ ಸಿರಿಪತಿಯ ವ್ಯಾಪಾರವ
ಕರುಣಿಸಿ ವಾಕು ಮನೋ ಮಯನೆನಿಸಿ
ಶಿರದಶ ತೋಳೆರಡು ಪದವೆರಡು ಧರಿಸುತ್ತ
ಸ್ಥಿರ ದೇಹದಲ್ಲಿ ನಿಂತು ತ್ರಿವಿಧರ ಮನದಲಿಪ್ಪ
ಸುರರಿಗೆ ಬಲಭಾಗ ಪಂಚಾಸ್ಯದಿ ಇವರಿ
ವರ ಸ್ತ್ರೀಯರಿಗೆ ವಾಮ ಪಂಚಾಸ್ಯದಿಂದ
ಪ್ರೇರಣೆ ಮಾಡುತ್ತ ಸದಾಕಾಲಾ
ಶರಣವತ್ಸಲ ಸಿರಿ ವಿಜಯವಿಠ್ಠಲರೇಯ
ವರವ ಕೊಡುತಿಪ್ಪ ಇವರ ಗತಿ||

ಪಾಮರ ಮನುಜರು ದಾಸವೇಷವ ಧರಿಸಿ ………… :

೫೦
ಪಾಮರ ಮನುಜರು ದಾಸವೇಷವ ಧರಿಸಿ
ನೇಮನಿಷ್ಠೆಗಳೆಲ್ಲ ಪೋಗಾಡಿಸಿಕೊಂಡು
ಕಾಮಚಾರಿಗಳಾಗಿ ಕಂಡಲ್ಲಿ ಸಂಚರಿಸಿ
ಮಾಮನೋಹರನ ಲೀಲೆಯ ಪೇಳಿದರೇನು?

ಈ ಮಹಿಯೊಳು ಮೃಷ್ಟಾನ್ನ ಭೋಜನ ವಸನ
ಇದೇ ಮಹಾಫಲವೆಂದು ಹಿಗ್ಗಿ ಕೆಟ್ಟು ಪೋಗುವನು
ಸ್ವಾಮಿ ತನ್ನ ನಿಜದಾಸನೆಂದವನಿಗೆ
ನಾಮಸುಧೆಯನಿತ್ತು ಸಲಹುತಿಪ್ಪ ವಿಜಯವಿಠ್ಠಲರೇಯ||

ಭೂಪತಿಗೆ ಬಂದ ದುಸ್ತರವಾದ ಕುಹುಯೋಗ ಬಿಡಿಸಿದರು :

೫೨
ಪುರಂದರದಾಸರು ವೈಶ್ಯ ಮಾದಮ್ಮನ
ವರ ಕುಮಾರನ ಬದುಕಿಸಿದರು ಗಡ
ಗುರು ವ್ಯಾಸ ಮುನಿರಾಯರು ಭೂಪತಿಗೆ ಬಂದದು
ಸ್ತರವಾದ ಕುಹುಯೋಗ ಬಿಡಿಸಿದರು ಗಡ
ಸಿರಿ ನಾರಾಯಣ ಯೋಗಿ ವ್ಯಾಸಮುನಿಗೆ ಬಂದ
ಉರಗ ಬಾಧೆಯ ಕಳೆದು ಪಾಲಿಸಿದರು ಗಡ
ಹರಿಯೆ ಈ ಕಲಿಯುಗದಿ ನಿನ್ನ ಶರಣರು ಇಂಥಾ
ಚರಿತೆ ಮಾಡಿಪ್ಪರು ಆವನಾದರು ಇನಿತು
ಸ್ಮರಣೆಗೈದವಗೆ ಮನಸು ನಿರ್ಮಲ ಕಾಣೊ
ಧರೆಯೊಳು ಈ ಮನುಜರಾಡಿದ್ದೇ ವೇದ
ನೆರೆ ನಂಬಿದವರಿಗೆ ರೋಗ ಹಿಂಗಳೆವುದು
ಪರಮ ಶುದ್ಧನ ಮಾಡಿ ಪೊರೆವನು ತಡಿಯದೆ
ಕರುಣಾಕರ ನಮ್ಮ ವಿಜಯವಿಠಲ ನಿನ್ನ
ಚರಣ ಧೇನಿಸುವವರ ಪಡಿದೊತ್ತು ನಾನಯ್ಯ||

ಪ್ರಮೋದ ಸಂವತ್ಸರದಲೆನ್ನವರಿಗೆ ರೋಮಕೊಂಕದು …. :

೫೧
ಪ್ರಮೋದ ಸಂವತ್ಸರದಲೆನ್ನವರಿಗೆ
ರೋಮ ಕೊಂಕದು ಕಾಣೊ ನೀನೊಲಿದರೆ
ಪ್ರಮೋದವಲ್ಲದೆ ಕ್ಲೇಶಲೇಶವಿಲ್ಲ
ಸ್ವಾಮಿ ಲಾಲಿಸಿ ಕೇಳೊ ಇಷ್ಟ ದೈವ
ಪ್ರಮಾದದಿಂದಲಿ ಬಂದಿದ್ದ ಕಾಲಕ್ಕೆ
ಗೋಮಾಯುವಿನಂತೆ ಓಡಿ ಪೋಪುದು
ಶ್ರೀ ಮನೋಹರ ನಮ್ಮ ವಿಜಯವಿಠಲ ನಿನ್ನ
ನಾಮ ನೆನೆಸಿದ ಮಾರ್ಕಾಂಡ ಮುನಿಯ ನೋಡು||

ಒಂದೇ ಮೂರುತಿ ಎರಡೊಂದೆನಿಸಿ . . . . :

೫೩
ಬಾಂಧವನು ನೀನೆ ಭಕ್ತ ಹೃದಯ
ಮಂದಿರದಲ್ಲಿ ವಿಠಲ ಮೂರುತಿಯಾಗಿ
ನಿಂದವನು ನೀನೆ ಶೇಷ ಪರ್ವತದಲ್ಲಿ
ಧಂ ಧಂ ರಧಿಸುವ ಸುಂದರ ತಿರುವೆಂಗಳನಾಗಿ
ಒಂದೇ ಮೂರುತೆರಡೊಂದೆನಿಸಿ
ಮಂದಮತಿಗೆ ಐಶ್ವರ್ಯವ ತೋರಿದೇನೆಂಬ
ವಿಜಯವಿಠಲ ತಿರುವೆಂಗಳ
ಒಂದಕೊಂದಾನಂತ ಅನಂತ ಒಂದೋ||

ಕರ್ಮವೆಂಬುದ ತೊರೆದು ಜ್ಞಾನಾಂಬುಧಿಯೊಳಗಿರು ….. ;

೫೪
ಬಿಂಬ ಪೊಳೆಯುತಿರೆ ದಿಂಬ ದಂಡನೆ ಯಾಕೆ
ತುಂಬಿದೂಟವಿರೆ ತಿರುಪೆ ಯಾಕೆ
ಕೊಂಬೆಯಲಿಪ್ಪ ಹಣ್ಣು ತಾನೇ ಬೀಳುತ್ತಿರಲು
ಕುಂಭಿಣಿಯಲಿ ಕೆಡಹಿ ಫಲ ಮೆಲುವರೆ
ಹಂಬಲಗೊಳಿಸಲ್ಲ ಕರ್ಮವೆಂಬುದು ತೊರದು ಜ್ಞಾ
ನಾಂಬುಧಿಯೊಳಗಿರು ನಂಬಿ ಹರಿಯ ಸಾರು
ಗಂಭೀರ ಪುರುಷ ಶ್ರೀ ಹರಿ ವಿಜಯವಿಠಲರೇಯನ
ಬಿಂಬ ನೋಡಿದವರಿಗೆ ಇಂಬುಂಟು ವೈಕುಂಠದಲ್ಲಿ||

ಗುರುನಂದನನಾಗಿ ಶರವನು ಎಸೆದು ಬೆಂಡಾಗಿನಿಂದ . . . :

೫೫
ಭವಿತ ಭಾವಿತ ಲೋಕವೆಂದೆಂಬ ನಿಗಮಾರ್ಥ
ಶಿವಗೆ ಸನಕ ಮುನಿ ಪೇಳಿದನಂದು
ಶಿವನೆ ದುರ್ವಾಸನು ಒಮ್ಮೆ ಪರೀಕ್ಷಿಸಿ
ಅವನಿಪತಿಯಿಂದ ಖಿನ್ನನಾದ
ಕುವರನಾಗಿ ಒಮ್ಮೆ ಗುಣಗಳ ಎಣಿಸಿ
ಹವಣ ತೋರದೆ ಬೆರಗಾಗಿ ನಿಂದ
ಬವರದೊಳಗೆ ಗುರುನಂದನನಾಗಿ ಶ
ರವನು ಎಸೆದು ಬೆಂಡಾಗಿ ನಿಂದ
ಪವನನೊಡೆಯ ನಮ್ಮ ವಿಜಯವಿಠ್ಠಲಂಗೆ
ಶಿವನು ಸೇವಕನಾಗಿ ಅರಸುತಿಪ್ಪ||

೫೬
ಭೂತಹಿತನೆಂದು ಭ್ರಾಂತಿತತಿಗಳು ಪೇಳ್ವ
ಮಾತುಗಳೆಲ್ಲ ಕೇಳುವುದಲ್ಲವೊ
ಭೂತಹಿಂಸನೆಂಬೊ ಮಾತು ಅನುಭವ ಸಿದ್ಧ
ಭೂತದೊಳಗೆ ಪೊಗಳುವುದು ಬರದೆ
ಆತುರನಾಗಿ ಬೇಡಿದ ಇಷ್ಟ ಈಯದಿರೆ
ಯಾತಕಿದು ನಿನಗೆ ಕರುಣತನವು
ಜ್ಯೋತಿ ಹಚ್ಚಿದರೆ ಪ್ರಕಾಶವಾದರೆ ಖ
ದ್ಯೋತನ್ನ ಉಪಕಾರ ಯಾತಕ್ಕೇನೊ
ಭೀತಿ ಸಿರಿ ವಿಜಯವಿಠ್ಠಲ ನಿನ್ನ
ಕೌತುಕವೆಂಥದೊ ಎಣಿಸಿದರೆ ತಿಳಿಯದೊ||

೫೭
ಮಂಗಳಪ್ರದ ನಿನ್ನ ಭಜಿಸಿದ ಜನರ
ಸಂಗದಲ್ಲಿದ್ದ ಮಾನವಗೆ ಸತತ
ಮಂಗಳವಲ್ಲದೆ ಲೇಶ ಕ್ಲೇಶಪಾಶಗಳಿಲ್ಲ
ತುಂಗ ಮಂಗಳ ತರಂಗವಾರ್ಧಿ ಚಂದ್ರಾ
ಹಿಂಗಳೆದು ರೋಗವನು ಹಿರಿದಾಗಿ ಬ್ರಾಹ್ಮಣಗೆ
ಅಂಗ ಆರೋಗ್ಯವಾಗಲಿ ಅಂಗನೆ
ಗಂಗಾಜನಕ ನಮ್ಮ ವಿಜಯವಿಠ್ಠಲ ನಿನ್ನ
ಅಂಘ್ರಿ ಧ್ಯಾನವೆ ಸರ್ವಾರಿಷ್ಟ ನಾಶ||

೫೮
ಮಡಿಮಾಡಿಕೊಂಬ ಬಗೆ ತಿಳಿಯಬೇಕು ಮನುಜ
ಮಡುವಿನೊಳಗಿನ ಉದಕ ಜಡವಲ್ಲವೆ
ಮಡಿ ಎಂದೆನಿಸಿಕೊಂಬ ವಸ್ತ್ರ ತಾನೆ ಜಡವು
ಮಡಿ ಎಂತಾಯಿತು ಪೇಳೊ ಸದಾಚಾರನೆ
ಜಡಜಡಕೆ ಸಂಬಂಧವಾದರೆ ತಕ್ಷಣಕೆ
ಉಡುವದು ಹೊದೆವದು ಶುಚಿವಾಹುದೆ
ಜಡಕೆ ಈ ಸಾಮಥ್ರ್ಯ ಬಂದ ತರುವಾಯ
ಪೊಡವೀಶ ರಂಗಂಗೆ ಪೇಳು ಅದನೆ
ಕಡಲಶಯನ ನಮ್ಮ ವಿಜಯವಿಠ್ಠಲರೇಯನ
ಅಡಿಗಳ ನೆನೆದವನು ಸರ್ವದಾ ಮಡಿ ಎನ್ನು||

ನಿರಯಣ ಸಮಯಕ್ಕೆ ನಿನ್ನ ನಾಮಗಳು

೫೯
ಮರಣ ಮುಂದೆ ಬಂದೊದಗುವುದೆ ಸತ್ಯ ಸಂ
ಕರುಷಣನೆ ಕೇಳು ಎನ್ನ ಬಿನ್ನಪ ನಿನ್ನ
ಚರಣ ಸ್ಮರಣೆ ಎನಗಿರುವುದಿಲ್ಲವೊ ತಿಳಿಯೆ
ಹರಿಯೆ ನಿನ್ನದಾಗಲಿ ಎಂಥಾದು ಕರಣ
ಹರಣ ಮನಸು ಸ್ವಾಧೀನವಿದ್ದಾಗ
ನೆರೆ ನಂಬಿ ಸ್ತೋತ್ರಗಳ ಮಾಳ್ಪೆನಯ್ಯ
ಕರುಣಾಂಬುಧಿ ಮರವು ಕಲಿಸದಿರು ಆ ಕಾಲಕ್ಕೆ
ನಿರಯಣ ಸಮಯಕ್ಕೆ ನಿನ್ನ ನಾಮಂಗಳು ಉ
ಚ್ಚರಣೆಯಾಗುವಂತೆ ಪ್ರೇರಿಸಬೇಕು
ವರುಣಾಂತರ್ಯಾಮಿ ವಿಜಯವಿಠ್ಠಲರೇಯ
ಶರಣರ ಭಾರ ವಹಿಸುವ ದೇವ||

೬೦
ಮರಿಗುಬ್ಬಿ ಬಾಯಿ ಬಿಟ್ಟಂತೆ ಬಿಡುತಲಿ ನಿಂದು
ಸೆರಗೊಡ್ಡಿ ಬೇಡುತಿಹಳೊ ಜೀಯ
ಪರಮ ಪುರುಷನೆ ನೀನು ಎನ್ನೊಳು ವ್ಯಕ್ತವಾಗಿ
ಇರುತಿರಲು ತಿಳಿದು ಬಲು ದೈನ್ಯನಾಗಿ
ಶರಣಪೇಳುವ ಮಾತು ನಿನ್ನದೆ ಎಂದಿಗೂ
ಸರಿ ಎಂದು ಜ್ಞಾನಿಗಳು ಪೇಳುತಿಹರೊ
ಬರಿದಾಗಗೊಡದಿರು ಬ್ರಾಹ್ಮಣಗೆ ಬಂದ ಮಹ
ದುರಿತ ತರಿದಟ್ಟಿ ರೋಗಗಳ ಕಳೆಯೊ
ಮರಣ ರಹಿತ ನಮ್ಮ ವಿಜಯವಿಠಲ ನಿನ್ನ
ಸರಿದೊರೆಯ ಕಾಣೆನೊ ರಕ್ಷಿಸುವಲ್ಲಿ||

ಅನ್ಯಮತ ಖಂಡನೆ ಎಂಬುದು ದ್ವೈತಿ

೬೧
ಮಾತು ಮಿಂಚಿತು ಕಾಣೊ ಹೆಂಗಳಿಯಾ ಮನೋ
ವೃತ್ತಿಗೆ ಆತುಮದೊಳಗಿಪ್ಪ ಆತ್ಮ ಕೇಳೋ
ಭೂತದೊಳಗೆ ಭಕ್ತರಧೀನ ನೀನೆಂದು
ಖ್ಯಾತವಾಗಿದೆ ನೋಡು ಸರ್ವದಲಿ
ನೀತ ಗುಣವಂತ ನಿನ್ನವರ ದಾಸಾನುದಾಸ
ಜ್ಞಾತ ಅಜ್ಞಾತದಲಿ ನುಡಿದೆನಯ್ಯಾ
ನೀ ತವಕದಿಂದ ನುಡಿಯ ಪಾಲಿಸದಿರಲು
ದಾತರೊಬ್ಬರ ಕಾಣೆ ಬೊಮ್ಮಾಂಡದಿ
ಯಾತರವ ನಾನಲ್ಲ ನಿನ್ನ ನಾಮವೆ ಗತಿ ಬೆ
ನ್ನಾತು ಕಾಯೊ ಎನ್ನ ಮನ ದೈವವೆ
ವಾತಾಂತರ್ಗತ ನಮ್ಮ ವಿಜಯವಿಠ್ಠಲರೇಯ
ಪ್ರೀತನಾಗು ಎನ್ನ ಸ್ತುತಿಗೆ ಮೈದೋರಿ||

ಅನ್ಯಮತ ಖಂಡನೆ ಎಂಬುದು ದ್ವೈತಿ ಅದ್ವೈತಿಗಳಲ್ಲಿ

೬೩
ಮಾಯವಾದ ವಾದಿಗಳಿಗೆ ನಾಯಿ ಜನ್ಮವೆ ಸತ್ಯ
ಹರಿಭಕ್ತರೆಲ್ಲೆಲ್ಲಿ ಪೂಜ್ಯರು ಸತ್ಯ
ಸಂಕರನೆಂಬೋನು ಮಂಕುತೊತ್ತಿನ ಮಗ
ಹಿಂದಿನ ವೈರದಿ ಹೀನಮತವ ಮಾಡ್ದ
ಅಂದು ಅವನ್ನ ಹಿಡಿದು ಭುಂಜಿಸಿದ್ದ ಕಲಿಭೀಮ
ಇಂದು ಅವನ ಮತವ ಮೂರಡಿಯ ಮಾಡಿ
ವಿಜಯವಿಠ್ಠಲನೆ ಪರದೈವವೆಂದು ಮೆರೆದ ಈ ಧರೆಯೊಳಗೆ||

೬೨
ಮಾಯಾವಾದಿ ಪೋದಲ್ಲಿ ಸುಜನರೆಲ್ಲ
ದೃಢವಾಗಿ ತಿಳಿವುದು ಅಡ್ಡಗಂಧದವನ ಮುಖನೋಡದಿರಿ
ನೀಡದಿರಿ ಗ್ರಾಸ ನಿಮ್ಮ ಗುರುಗಳಾಣೆ
ಮೂಢ ಆವಾತನ ಮತವು ಸುಡಲಿ ಸುಡಲಿ
ಹೆಡ್ಡತೊತ್ತಿನ ಪೋದ ಮಡದಿಯೊಳು ಪೊಕ್ಕು
ಹೆದ್ದೊರೆಬಲದಿಂದ ಪೊಡವಿಗಧಿಕಶಿವ ವಿಜಯವಿಠ್ಠಲನ್ನ
ಪಾದಕ್ಕೆ ನೀವು ಬೀಳಿರೋ ಅಡ್ಡಬೀಳಿರೊ||

೬೪
ಮೀಸಿಕಾಸಿಯ ತೋರಿ ಬಂಟ ಬದುಕುವ ಗಡ
ವೇಶ್ಯಾಸ್ತ್ರೀ ತನ್ನ ಎದೆಯ ತೋರಿ
ಗ್ರಾಸಕೆ ಪುಟ್ಟಿಸಿ ಕೊಂಬುವಳು
ಸೂಲಗಿತ್ತಿ ಕೂಸು ಮಾಸವ ಪಿಡಿದು ಬದುಕುವಳು
ಔಷಧವಿತ್ತು ವೈದ್ಯ ಬದುಕುವ ಗಡ
ಕಾಸಿಗಾಗಿ ಉತ್ತಮರ ವಂಚಿಸಿ
ಲೇಸಾಗಿ ಕುಂಠಣಿತನ ಮಾಡಿ ಬದುಕುವವರು ಕೆಲರು
ದೇಶದೊಳಗೆ ಜೋಗಿ ಕೊರವ ಕೋತಿ
ಆ ಸರ್ಪದಿಂದ ಬದುಕುವರು ಗಳ
ಪಾಶದಿಂದಲಿ ಚೋರ ಬದುಕುವನು
ಏಸು ವಿಧ ಪೇಳಲಿ ಪೊಟ್ಟೆ ಪೊರೆವ ಜನರು
ಮೋಸಗೊಳಿಸುವರು ಒಂದೊಂದು ಬಗೆಯಾ
ಕೇಶವ ನಾನು ಇವರಂತೆ ವಂಚಕನಾಗಿ
ವೇಷವ ಧರಿಸಿ ಪೊಟ್ಟೆಯ ಪೊರೆವೆನೊ
ವೀಸ ತೂಕವಾದರು ನಿನ್ನ ಪಾದದ ವಿ
ಶ್ವಾಸ ಕಾಲು ಘಳಿಗೆ ಇಲ್ಲ ಇಲ್ಲ
ಆಸೆ ಕವಚದಿಂದ ನಿನ್ನ ಮೊರೆ ಬಿದ್ದು ಇ
ನ್ನೀ ಶರೀರವ ಜೋಕೆ ಮಾಡಿಕೊಂಡು
ದಾಸನೆಂದೆನಿಸಿದೆ ಧರಣಿಯೊಳಗೆ ತಿರುಗಿ
ಹೇಸಿ ಮಾರ್ಗಕ್ಕೆ ಒಳಗಾಗಿಹೆನೊ
ನಾಶರಹಿತ ನಮ್ಮ ವಿಜಯವಿಠ್ಠಲರೇಯ
ಈ ಸಂಸಾರ ಚಿಂತೆ ನಿನ್ನಲ್ಲಿ ಆಗದೊ||

೬೫
ಯಾಚಿಸುವನ ಜನ್ಮ ಯಾತಕ್ಕೆ ಬರುವದು
ಯೋಚನೆ ಮಾಡಲಿ ಬೇಕು ತನ್ನೊಳಗೆ
ವಾಚಾಳನಾಗಿ ಪೋಗಿ ಎಲ್ಲೆಲ್ಲಿ ತಿರುಗುತ
ಊಚ ನೀಚವೆನದೆ ಸ್ತುತಿಸಿ ಕೇಳುತಾ
ಆಚಾರವನು ಬಿಟ್ಟು ದಿನಾಂತರವೆನದೆ
ಚಾಚುವೆನೊ ಕರವ ಕೇವಲ ದೈನ್ಯದಿ
ಯೋಚನೆಗೊಳಗಾಗಿ ಕುದಿಯಬೇಕೊ
ಛೀ! ಛೀ! ಒಬ್ಬರ ಬೇಡುವ ನಡತೆಗಿಂತಲಿ
ನಾ ಚರಿಸಬಹುದು ಮಾರಿಗಳ ಕೂಡ
ಕುಚೇಲಪಾಲ ಸಿರಿ ವಿಜಯವಿಠ್ಠಲ ಎನಗೆ
ನಾಚಿಕೆಯಾಗಿದಯ್ಯಾ ಉದರಗೋಸುಗ||

೬೬
ರುದ್ರಾಂತರ್ಗತ ನಾರಸಿಂಹ ರೋಗನಿವಾರಣ
ಭದ್ರವಾಗಲಿ ಇವಗೆ ಇವನ ಪತ್ನಿ
ಆದ್ರ್ರಳಾಗಿ ಚಾಲ್ವರಿದು ವಂದಿಪಳು ಸ
ಮುದ್ರ ಶಾಯಿ ಇವಳ ಮಂಗಳ ಸೂತ್ರ
ನಿದ್ರೆಯೊಳಗಾದರು ಸ್ಥಿರವಾಗಿರಲಿ ಉ
ಪದ್ರಗಳು ಬಂದರು ಪರಿಹರಿಸು
ಅದ್ರಿ ಧರಿಸಿ ಗೋಕುಲ ಕಾಯ್ದ ಕರುಣಾಸ
ಮುದ್ರ ಆಪತ್ಕಾಲ ಬಾಂಧವನೆ
ಕ್ಷುದ್ರ ದೇವತೆಗಳಿಗೆ ಶಕ್ತಿ ಈ ಪರಿಯುಂಟೆ
ಛಿದ್ರ ಸಾಸಿರವಿರೆ ಕ್ಷಮಿಸಬೇಕು
ಮುದ್ರೆಧರರಪಾಲ ವಿಜಯವಿಠಲನೆ ದಾ
ರಿದ್ರ್ಯ ಭಂಜನ ಎನಗೆ ಇದೆ ಮಾತುರ ಕೊಡೊ||

೬೭
ರೆಕ್ಕೆ ಮುರಿದ ಹಕ್ಕಿ ಬಾಯಿಬಿಟ್ಟಂತೆ ಗಗ
ನಕ್ಕೆ ಮೊಗವೆತ್ತಿ ಕೂಗುತಿಪ್ಪೆ
ಅಕ್ಕರೆ ನಿನಗಿನ್ನು ಬಾರದೆ ಎಲೊ ದೇ
ವಕ್ಕಳ ಒಡಿಯಾನೆ ತ್ರಿಜಗದಲ್ಲಿ
ರಕ್ಕಿಸಿ ಪೋದರೇನೋ ಸರ್ವ ಜೀವಿಗಳು ಯಾ
ತಕ್ಕೆ ಎನ್ನೊಬ್ಬನ ಸುತ್ತಿಸುವಿ
ಚಕ್ಕಂದವಾಗಿದೆ ನಿನಗೆ ನಾನೋರ್ವನೆ ಗತಿಯೆ
ಮುಕುತಿಯಾಗಿಪ್ಪದೆ ಸರ್ವರಿಗೆ
ಬಕ್ಕದಾಸನು ನಾನು ವಿಜಯವಿಠಲ ನಿನ್ನ
ಲೆಖ್ಖಕ್ಕೆ ನಿಪನಾವಾವನಯ್ಯಾ||

೬೮
ಷಡುರಸಾಯನ ಹೊನ್ನ ಹರಿವಾಣದೊಳು
ಬಡಿಸಲಾದ[ರದಿ]ಂದ ಒಡನೆ ನೋಡಿ
ಎಡೆಯೊಳಗೆ ಒಂದು ನೊಣ ಕೆಡಹದಂತೆ ರುಚಿ
ಒಡಲ ತುಂಬ ಮೆದ್ದು ಸಡಗರದಲಿ
ಕಡು ತೃಪ್ತಿಯಾಗಿ ತಾ ಕಡೆಗೆದ್ದು ಪೋಗುವಾಗ
ಬಡಿದು ನೊಣನ ತಿಂದು ಹೊಡ ಮರಳಿ
ಷಡುರಸಾಯನದನ್ನ ಕುಡಿದ ನೀರನೆ ಸಹಿತ
ಪಿಡಿಯಲಾರದೆ ಕಾರಿ ಮಿಡಿಕಿದಂತೆ
ಗಡ ಮನಸೆ ಕೇಳನ್ಯರಿಗೆ ನುಡಿದುದರಿಂದ ನೀನು
ಪಡೆದಾ ಪುಣ್ಯವಮೃತ ಒಡಲೊಳಿರಲು
ತಡೆಯದೆ ಬರಿಗೈಸಿ ಕೆಡಿಸುವದು
ಪೊಡವಿಯೊಳಗೊಬ್ಬರಾ ಗೊಡವಿ ಯಾಕೆ ಬಿಡು ಬಿಡು
ಬಿಡು ಇಂಥ ನುಡಿ ನಡತೆಗಳು
ಒಡೆಯ ವಿಜಯವಿಠ್ಠಲನ ಅಡಿಗಳಲ್ಲಿಪ್ಪುದು||

೬೯
ಸಂತೆ ನೋಡ ಬಂದವೆಗೆ ಶ್ರಮ ಸಾಧ್ಯವಲ್ಲದಲೆ
ಚಿಂತಾಮಣಿ ಕೈಗೆ ದೊರಕಿದಂತೆ
ಎಂತು ಪೇಳಲಿ ಎನ್ನ ಗುರುಗಳಿತ್ತ ಭಾಗ್ಯ
ಅಂತುಗಾಣೆನೊ ಎಣಿಸಿ ಗುಣಿಸಿ ನೋಡೆ
ಶ್ರಾಂತನಾಗಿ ಹಸಿದು ಅಂಬಲಿಯ ಕೇಳಿದರೆ
ಇಂತು ಪರಮಾನ್ನ ಗೋಘೃತ ಶರ್ಕರಾ
ಮುಂತೆ ಪೊಂಬಡಿವಾಣದೊಳಗೆ ತಂದಿಟ್ಟಂತೆ
ಎಂತು ಫಲಿಸಿತೊ ನೋಡು ಮನವೆ ನೀನು
ಚಿಂತಿಸಿ ಸಂಸಾರಕ್ಕೆ ದ್ರವ್ಯಗೋಸುಗ ಬರಲು
ಅಂತರಾವೇದಿ ಮಿಕ್ಕ ಕ್ಷೇತ್ರ
ಸಂತಜನರೊಡನೆ ಸಾಧ್ಯವಾಯಿತು ಸಿರಿಯಾತ್ರಿ
ಕಾಂತನ ತುತಿಸುವರ ಕರುಣದಿಂದ
ಮಂತ್ರ ತಂತ್ರಗಳರಿಯೆ ವಿಜಯವಿಠಲರೇಯ
ಎಂತು ಮಾಡಿದ ನೋಡು ಮನವೆ ಹಾ ಹಾ ಹಾ

೭೧
ಸಮಥರ್ನಾದೊಡೆ ಕೆಣಕಿನೋಡೆಲೊ, ನಿನ್ನ
ನಿರ್ಣಯ ಮಾಡುವೆನು ಭೂಮಿಯೊಳಗೆ
ಕಾಮಿಸದಿರು ಎನ್ನ ಕೂಡ ಸ್ನೇಹವ ಇಂದು
ತಾಮಸಕ್ಕೆ ಸೂರ್ಯಗೆ ಗೆಳೆತನನೇ
ಗ್ರಾಮದ ಹೊರಗೆ ಗೋಮಯ ಬಿದ್ದಿರೆ ಅರಸಿ
ಕಾಮಿನಿಯು ಬಯಸಿದಂತಾಯಿತಲ್ಲೋ
ಈ ಮಾತು ಇನ್ನೊಮ್ಮೆ ಅನ್ನದಿರು ಆಡದಿರು
ಹೋಮದೊಳಗಿನ ಘೃತ ಮಾರ್ಕ ನೆಕ್ಕುವುದೆ ಬೆಕ್ಕು
ಶ್ರೀಮನೋಹರ ನಮ್ಮ ವಿಜಯವಿಠ್ಠಲ ದುರಿತ
ಸ್ತೋಮ ಕಾನನಕೆ ಪಾವಕನಂತೆ ಇಪ್ಪ

೭೨
ಸಲಹುವುದು ಎನ್ನ ಸಲಗಿಯ ದೈವವೆ
ಸಲಹದಿದ್ದರೆ ಬಿರುದು ಸಲ್ವುದೇನೋ
ಸಲಗೀಯ ನೀನಿತ್ತು ಸಲೀಜನ ಮನೋಬಯಕೆ
ಸಲಿಸಿ ರಣಾಗ್ರದಲಿ ಸಲಹಲಿಲ್ಲವೆ ದೇವ
ಸುಲಲಿತಾ ಮನ್ನಾರನಿಲಯ ವಿಜಯವಿಠಲ
ಸಲೆಯನ್ನು ನಿನ್ನ ನಾಮ ನೆನಸಲಾಗನಿದನೆಂದು (?)
ನಿನ್ನ ಮನ್ನಿಸಲಾಗನಿವನೆಂದು (?)

ಎರಡು ವರುಷ ಎನ್ನಾಯು ಎರೆದೆ ಧಾರೆಯ ಇವಗೆ …… :

೭೪
ಸಿರಿರಮಣ ನಿನ್ನಯ ಚರಣ ಯುಗ್ಮಗಳಿಗೆ
ಶಿರಬಾಗಿ ನಾ ನಿನಗೆ ಬಿನ್ನೈಸುವೆ
ಶರಣರಿಗೆ ಬಂದ ಆಪತ್ತು ಪರಿಹರಿಸೆಂದು
ಕರುಣವಾರಿಧೆ ನಿನ್ನ ಪ್ರಾರ್ಥಿಸುವೆನೊ
ಸ್ಥಿರ ಮಾಡು ವಚನವನು ದೂರ ನೋಡದೆ ಈಗ
ಕರಿ ಮೃಕುಂಡಜ ಮುಖರ ಪೊರೆದ ಕರುಣಿ
ಇರಲಿ ಈ ನರನೋರ್ವ ಧರಿಯೊಳಗೆ ಕೆಲವು ದಿನ
ಸರಿದಿಹುದು ಆಯುಷ್ಯವಿಲ್ಲವೆಂಬ್ಯಾ
ಎರಡು ವರುಷ ಎನ್ನಾಯು ಎರದೆ ಧಾರೆಯ ಇವಗೆ
ವರ ಸಂತತಿ ಇವರಿಗಿರುವುದೆಂದು
ಅರಿದು ಪ್ರಾರ್ಥಿಪೆ ಭಕುತರಿಗೆ ಸಂಜೀವನೆ
ಶರಣ ವತ್ಸಲನೆಂಬ ಬಿರಿದೊಳ ಹಾಕೊ
ಕರುಣಾಕರ ನಮ್ಮ ಸಿರಿ ವಿಜಯವಿಠಲ ನಿನ್ನ
ಕರ ಮುಗಿದು ಪ್ರಾರ್ಥಿಸುವೆ ಕರುಣಿಸವನ||

೭೩
ಸುಡು ಸುಡು ಯಾಚಕನ ಜನ್ಮ ವ್ಯರ್ಥ ವ್ಯರ್ಥ
ಕೊಡುವೆನೆಂದರೆ ಬಹು ದಿವಸ ಕಾಯ್ದು
ಅಡಿಗೆ ಬಿದ್ದು ಅವನ ಮನಸ್ಸು ತನ್ನ ಕಡಿಗೆ
ಮಾಡಿಕೊಂಡು ಯೋಚಿಸುತ
ಗಡಗಿಯೊಳಗಿನ ನೊಣದಂತೆ ಸುತ್ತುತ ಆಸೆ
ಬಿಡಲಾರದೆ ಹಿಡಿಯಲಾರದೆ ಮಿಡುಕುತ
ಕಡುಮೂರ್ಖನಂತೆ ನಾನಾದೆನು ಪ್ರಾಣೇಶ
ಕಡು ಸಂಪೂರ್ಣ ವಿಜಯವಿಠ್ಠಲರೇಯ
ಕೊಡುಗೈ ದಾತನಿಗೆ ಇನಿತು ಪರರಾಶೆ||

೭೦
ಸ್ನಾನ ಮಾಡಿದರಿನ್ನೇನು ಫಲವೊ
ಮೌನ ಮಾಡಿದರಿನ್ನೇನು ಫಲವೊ
ದಾನ ಮಾಡಿದರಿನ್ನೇನು ಫಲವೊ
ಸ್ನಾನ ಮೌನ ದಾನ ನಾನಾ ಕರ್ಮವೆಲ್ಲ
ಭಾನು ಉದಯದಲಿ ನೀನೆದ್ದು ಭಕುತಿಲಿ
ಶ್ರೀ ನಾರಾಯಣನೆಂಬೊ ನಾಮ
ಆನಂದವಾಗಿ ಒಮ್ಮೆ ಕೊನೆ ನಾಲಿಗೆಯಿಂದ
ನೀ ನೆನೆಯೊ ನೆನೆಯೊ ಮನವೆ
ಜ್ಞಾನ ಗೋಚರ ವಿಜಯವಿಠ್ಠಲನ್ನ
ಧ್ಯಾನದಲ್ಲಿ ಒಮ್ಮೆ ನೆನೆದರೆ ಸಾಕು
ಸ್ನಾನ ಮಾಡಿದರಿನ್ನೇನುಂಟು||

೭೫
ಹರಿ ಭಕುತಿಯಿಲ್ಲದವನೊಬ್ಬ ಕೋಣ
ಪರಿ ಪರಿ ಎಸಗಿದ್ದ ಸುಕೃತ ಕ್ಷೀಣ
ಧರೆಯೊಳಗವನೆ ಜೀರ್ಣಪದ ಕಾಣ
ಕೊರಳಲಿ ಹಾಕಿದ ಹಾರವ ಕಾಣ
ಸುರ ನರೋರಗ ಮಧ್ಯ ಇಲ್ಲ ಅವಗೆ ಠಾಣ
ಸಿರಿ ವಿಜಯವಿಠಲ ಪೊರೆಯನು ಪ್ರಾಣ||

೭೭
ಹರಿದಾಸನಾಗಿ ಸಂಚರಿಸು ಸಂತೋಷದಲಿ
ಗುರುಹಿರಿಯರ ಪಾದಕೆರಗು ಬಿಡದೆ
ಮೂರೊಂದು ಯುಗದಲ್ಲಿ, ಮೂರೊಂದು ವರ್ಣದ
ಮೂರೊಂದು ಕಡೆ ಬಿಂಬ, ಮೂರೊಂದು ಆಗಿ ಭಜಿಸು
ಮೂರೊಂದು ಪುರುಷಾರ್ಥ, ಮೂರೊಂದ್ಹಾದಿ ಬೇಡು
ಮೂರೊಂದು ಮೊಗನಯ್ಯ, ವಿಜಯವಿಠಲರೇಯ
ಮೂರೊಂದುಪಾಯದಲಿ ಮೂರೊಂದು ಪ್ರಳಯ ಮಾಳ್ಪ ಎನ್ನ||

೭೬
ಹಾಗ ಕಾಸ ವೀಸ ಹಂಚಿಕೊಡು ಎಂದು
ಭಾಗಾದಿಯಾಗಿ ನಾ ಬೇಡಲಿಲ್ಲ
ಕೂಗಿ ಬೆಟ್ಟಕ್ಕೆ ಪಿರಿದಾಗಿ ಸೌಭಾಗ್ಯವಿತ್ತು
ಪೋಗಗೊಡದೆ ನಿನ್ನ ತಡೆಯಲಿಲ್ಲ
ಬಾಗುವೆ ನಿನ್ನ ಭಕ್ತರ ಮನೆ ಬಾಗಿಲು ಕಾಯ್ದಂತೆ
ಯೋಗಿ ಹೃದಯ ಶ್ರೀ ವಿಜಯವಿಠಲರೇಯ
ನೀ ಗರ್ವಿಸಿದರೆ ರೇಗದೆ ಒಡಲೊಳು||

ರು ಈ ಸುಳಾದಿಯ ಮೂಲಕ

೧೩೦
ಧ್ರುವತಾಳ
ಅಂಜಿಸುವುದೇನೋ ಪರಂಜಳವಾಗಿರದೇ
ಕೆಂಜಡಿಯನೊಡಿಯ ಯಾದವರೊಡಿಯಾ
ಎಂಜಲ ಉಂಡು ಗುಲಗಂಜಿಯ ದಂಡಿಯ ಗುಧರಿಸಿ
ಗೂಂಜಿಗೊಳನ್ನು ಕುಡಿದದ್ದು ಮರದಿಯಾ
ಭುಂಜಿಸಿ ಪರವು ಮಾಡಿ ತಂದ ವಾಗರಕೆ ನೀ
ಅಂಜದೆ ಏಳುದಿವಸ ಗಿರಿಯಪೊತ್ತೇ
ಕಿಂ ನನ ನಿನ್ನದು? ನಿನಗಂಜಲ್ಯಾಕೇ ಧ
ನಂಜಯ ನಾಮಾ ಹರಿ ವಿಜಯ ವಿಠ್ಠಲ ಗೊಲ್ಲ ೧
ಮಟ್ಟತಾಳ
ಬಾಲಕತನದಲ್ಲಿ ಪಾಲು ಮೊಸರು ಕದ್ದು
ಕೋಲು ಬಡಿಗೆಯಿಂದ ಕೊಲಿಯ ಕೊಲ್ಲಿಸಿಕೊಂಡೆ
ಕಾಲನ ಒರಳಿಗೆ? ಬೀಳು ಕಟ್ಟಿಸಿಕೊಂಡು
ಏಳಲವಾದಿಯೊ ಗೊಲ್ಲ ಬಾಲೇರಿಗೆ ಎಲ್ಲ
ಮೂಲೋಕವು ಬಿಡದೆ ಆಳುವ ದೊರೆತನವು
ಏಳಲವಾಯಿತೊ ವಿಜಯ ವಿಠ್ಠಲ ಶ್ರೇಷ್ಠಾ ೨
ರೂಪಕ ತಾಳ
ರಕ್ಕಸಗಂಜಿ ಮುಚುಕುಂದನ ಮೊರೆ ಬಿದ್ದೆ
ರಕ್ಕಸಗಂಜಿ ಸಾಗರದೊಳು ಪುರಬಿಗಿದೆ
ರಕ್ಕಸಗಾಗಿ ವಿಕಾರ ಮೊಗನಾದಿ
ರಕ್ಕಸಗಾಗಿ ಕೋಡಗ ಬಲ ನೆರಹಿದೆ
ರಕ್ಕಸಾಂತಕ ನಿನ್ನ ಮಕ್ಕಳಾಟಕೆ ದೇ
ವಕ್ಕಳ ಮನಸ್ಸಿಗೆ ಸಿಕ್ಕಿದೆಂತೆಂಬೋರು
ಮಕ್ಕಳ ಬೇಡಿ ನೀ ಮುಕ್ಕಣ್ಣನೊಲಿಸಿದೆ
ಠಕ್ಕು ಮಾಯಾತನ ಕಕ್ಕುಜ ಗೊಂಬೆನೊ
ಚಿಕ್ಕವನ ಹಿರಿಯನ ಮಾಡಿ ಪುಣ್ಯವ
ದಕ್ಕಿಸಿಕೊಂಡೆ ಶ್ರೀ ವಿಜಯ ವಿಠ್ಠಲ ಪುಂಡ ೩
ಝಂಪಿತಾಳ
ಅಳಕುವವಗೆ ಕಾವಳದೊಳು ಹುಲ್ಲ ಸರವೇ
ತುಳಿದರೆ ಪೊಳೆವೊದು ಘಣಿವೊಲು
ಅಳುಕದವಗೆ ಜಲಧಿ ಮೊಳಕಾಲು ಉದಕವೋ
ಅಳುಕುವುದೇನು ನಿನ್ನಯ ಭೀತಿಗೆ
ಇಳಿಯ ಮುಣಗಿದವಗೆ ಛಳಿಯ ಪರವೇನು ಸಿ
ಡಲಿಗಂಜದವನು ಹೆಗ್ಗೋಳಿಗಂಜುವನೆ
ಬಲವಾಗಿ ಎನ್ನೆಡ ಬಲದಲಿ ನಿನ್ನ ನಾಮಗಳು
ಪಾಲಿಸುತಿರೆ ಚಲಿಸಲ್ಯಾತಕೋ ದೇವಾ
ಕುಲಿಶ ಪಾಪದಗಿರಿಗೆ ವಿಜಯ ವಿಠ್ಠಲಕೃಷ್ಣ
ಕೆಲಕಾಲದಂತೆ ನೋಡದ ಹೊಸ ಪರಿ ಏನೋ ೪
ತ್ರಿವಿಡಿತಾಳ
ಬಾಗಿಲ ಕಾಯಿಸಿದ ಹಾಗಾಕೊಡದೆ ಬಲಿ
ಯೋಗಿ ನಾರದನು ಸ್ತ್ರೀಯರು ಬೇಡಿದ
ಭಾಗೀರಥಿ ಸುತನು ನಿನ್ನ ಪಂಥವ ಕಳೆದ
ಜೋಗಿಯಾಗಿ ಪಾರ್ಥ ಅನುಜೆಯ ಒಯ
ಭೋಗೀಶನು ಬಿಡದೆ ಹೆಣಗಾಡಿದನಯ್ಯ
ನಾಗರಾಜನು ಬೆರಳ ಬಾಗಿಸಿದಿ ಏನೋ ನೀ
ನೇ ಗತಿ ಎಂದೆನಲಾಗಿ ಎನ್ನ ನೀನಂಜಿಸಿ ಕೊಂಬೆ
ಯೋಗಿಯಾಗಿ ಎನ್ನ ನೀನಂಜಿಸುವುದೇ ನೋ
ಪೂಗಾರಗೊಲಿದ ಭಂಡುಗಾರ ಗೋವಾ ಶೃತಿ
ಸಾಗರ ನಾಮ ವಿಜಯ ವಿಠ್ಠಲರೇಯಾ ೫
ಅಟ್ಟತಾಳ
ಸೂತಸತಿಯ ಉದರದಲ್ಲಿ ಬಂದವನಿಗೆ
ಖ್ಯಾತಿಯಾತಕೊ ಇಷ್ಟು ಭೂತಳದೊಳಗೆ
ದೂತನಾಗಿ ಪೋಗಿ ಹಸ್ತಿನಾಪುರದಲ್ಲಿ
ಭೂತಿಗಳಿಂದ ಬಿಗಿಸಿಕೊಂಡು ನಿಂದು
ಯಾತಕೆ ನಿನಗಿಷ್ಟು ಬಿಂಕದ ಮಾತು
ಭೀತಿಗೊಂಬವರಿಗೆ ತೃಣ ಮೇರುವಾದಂತೆ
ಕೋತಿ ಕೊರವಂಗೆ ಸಿಕ್ಕಿದಂತೆ ಎನ್ನ
ಈ ತೆರದಲಿ ಇನ್ನು ಕಾತುರೆಬ್ಬಿಸವರೇ
ಜಾತಿಯಿಲ್ಲದ ನಿತ್ಯ ಜಾತರಹಿತ ಮಹ
ಭೂತ ವಿಜಯ ವಿಠ್ಠಲನೀತವೇ ನಿನಗೆ ೬
ಆದಿತಾಳ
ಒದ್ದವನು ಒದ್ದೇ ಪೋದಾ ಮೆದ್ದವನು ಮೆದ್ದೇ ಪೋದಾ
ಕದ್ದವನು ಕದ್ದೇ ಪೋದಾ, ಗೆದ್ದವನು ಗೆದ್ದೇ ಪೋದಾ
ಇದ್ದವನು ಇದ್ದೇ ಪೋದಾ, ಎದ್ದವನು ಎದ್ದೇ ಪೋದಾ
ಗದ್ದುಗೆ ನೀಡಿಸಿದವನು ಹೊದ್ದಿದ ನಿನ್ನವರೊಳು
ಸಿದ್ದಿದ ವಿಜಯ ವಿಠ್ಠಲ ಬಿದ್ದೆನೋ ನಿನ್ನ ಪಾದಕ್ಕೆ
ಪದ್ದು ಎನ್ನ ಕೊಡ ನಿಷಿದ್ದ ಎಂದೆಂದಿಗೂ ಬೇಡ ೭
ಜತೆ
ಕಂಡವರಿಗೆ ಮುನ್ನ ಪ್ರಾಯಶ್ಚಿತ್ತವೇ ಇಲ್ಲ
ಕುಂಡಲಿ ಶಯನ ಶ್ರೀ ವಿಜಯ ವಿಠ್ಠಲ ನಿನಗಂಜೆನೋ೮

ಈ ಸಂಪುಟಕ್ಕೆ ತತ್ವನವನೀತ ಎಂಬ ಹೆಸರನ್ನಿಡಲಾಗಿದೆ.


ಝಂಪೆ ತಾಳ
ಅಂಜುವುದು ಸಲ್ಲ ಶ್ರೀಕಂಜನಾಭನ ಪಾದ
ಕಂಜವು ನಿನಗೊಜ್ರ ಪಂಜರವಾಗಿರಲು
ಪುಂಜರ ಪಾಪಗಳು ನಿನ್ನಂಜಿಸಬಲ್ಲವೆ
ಕಂಜಬಾಂಧವನುದಿಸೆ ಮಂಜು ಎದುರಿಸುವುದೇ
ಎಂಜಲ ಮಾತನು ಕೇಳಿ ನಂಜಿ ನಂಜಾಡದಿರು
ಬಂಜೆ ಭಕುತಿಯ ಬಿಡು ಭುಂಜಿಸು ಪುಣ್ಯ ಸಮಿ
ತಿಂಜಯ ನಾಮ ಶಿರಿ ವಿಜಯ ವಿಠ್ಠಲಗೆರುಗು
ನಂಜು ಸುಧಾರಸವು ಅಂಜುಳಿವಿ ಮರುಳೆ ೧
ಮಟ್ಟ ತಾಳ
ಒಮ್ಮನದಲ್ಲಿರೊ ಒಮ್ನನದಲ್ಲಿರೊ
ರಮ್ಮೆಯರಸನು ಸುಮ್ಮನದಿಂದಲ್ಲಿ
ನಮ್ಮನ್ನು ಪೊರೆವನು ಒಮ್ಮನದಲ್ಲಿರೊ
ರಮ್ಮೆಯರಸ ಪರಬೊಮ್ಮ ಬೊಮ್ಮನಯ್ಯಾ
ತಿಮ್ಮ ವಿಜಯ ವಿಠ್ಠಲ ಮಹ ಮೂರುತಿ
ಘಮ್ಮನದಿಂದಲಿ ಬಂದು ದುಮ್ಮನವ ಕಳೆವ ೨
ಧ್ರುವತಾಳ
ವಾರಿಧಿಯ ಮಥಿಸಲು ಘೋರ ವಿಷ ಉದುಭವಿಸಿ
ಮಾರುತನುಂಡು ತೇಗಿದ ಕಾಣಿರೋ
ಮಾರರಿಪು ಧರಿಸಿ ರಘುವೀರನ್ನ ನಾಮದಿಂದ
ಜೀರಣಕ್ಕೆ ತಂದದ್ದು ಧಾರುಣಿ ಅರಿಯದೆ
ನಾರಾಯಣನೆಂಬ ಸಾರನಾಮಾಮೃತವು
ಭಾರತೀಶನ ಕಾಯ್ದು ಆತನ ಸೇವಕನೆಂದು
ಗೌರೀಶನ ಕಾಯಿತು ಗೌರದಿಂದ
ಚಾರುವಾಳ ಮನವೆ ನಿನ್ನ ಕಾಯುವದರಿದ
ಶ್ರೀ ರತುನ ಗರ್ಭನು ವಿಜಯ ವಿಠ್ಠಲ ಬಂದು
ಬೇರರಸಿ ಕೀಳಿ ಸಂಸಾರದ ಪರಿವ೩
ರೂಪಕ ತಾಳ
ತುದಿನಾಲಿಗೆಯಿಂದ ಪದುಮ ನಾಭನ ನಾಮಾ
ತುದಿಯನ್ನಿತ್ತು ಸೇವಿಸಲು ಮಧುರಾಮೃತವಾಗಿ
ಕ್ಷುಧೆ ಬಾಧೆ ಹಿಂಗೋದು ಮದಗರ್ವವಡಗೋದು
ಇದ ಸವಿದು ಪದೊಪದಿಗೆ, ವಿದುರಾದಿ ಭಕುತರು
ಪದವಿಯ ಸೇರಿದರು, ಯದು ಶ್ರೇಷ್ಠ ವಿಜಯವಿಠ್ಠಲನ
ಒಂದೇನಾಮ ಹ್ಲೃದಯದಲ್ಲಿರಿಸೆ ಅಘದ
ಉದಧಿ ಬತ್ತುವುದು ೪
ತ್ರ್ರಿವಿಡಿ ತಾಳ
ಮೀನಿನ ಮರಿಗೆ ಈಸು ಕಲಿಸುವರಾರು
ಮೀನಾಂಕಗೆ ಕಾಮ ತುಂಬಿ ಇತ್ತವರಾರು
ಆನಿಗೆ ಸೊಂಡಿಲ ತೂಗು ಎಂದವರಾರು
ಜ್ಞಾನಿಗೆ ಹರಿನಾಮ ತೋರಿಕೊಟ್ಟವರಾರು
ನೀನರಿದು ತಿಳಿದುಕೋ ನಿನಗೆ ಗುರುವಾದರೂ
ತಾನತಿ ಸೂಕ್ಷ್ಮ ಪೇಳುವನಲ್ಲದೆ
ಹೀನ ಜೀವವೆ ನಿನ್ನ ಧ್ಯಾನಕ್ಕೆ ಮನ ಬಂದು
ಪ್ರಾಣದ ವಿಜಯ ವಿಠ್ಠಲನ್ನ ಸೂಕ್ಷ್ಮ ಚರಣವ
ಕಾಣು ಕುಬುಧ್ದಿಗಳ ಮಾಣು ಗತಿಗಾಣು ೫
ಅಟ್ಟತಾಳ
ಕ್ಷುದ್ರ ದೇವತೆ ಪೂಜೆ ಚಿರಕಾಲ ಮಾಡಲು
ಕದ್ದು ತಿಂದಂತೆಯಾಗುವುದು ಸಿದ್ಧ
ಛಿದ್ರ ಗೋಣಿಯಲ್ಲಿ ಉತ್ತಮ ಸರಕನು ತುಂಬೆ
ಬಿದ್ದು ಪೋಗದಲೆ ಸೇರುವುದೆ ತನ್ನ
ಉದ್ಧಟತನ ಬಿಡು ಉಚಿತ ಸಾಧನದಿಂದ
ಸಿದ್ಧ ಸಂಕಲ್ಪ ಶ್ರೀ ವಿಜಯ ವಿಠ್ಠಲನ್ನ
ಉದ್ದಿನಷ್ಟು ನೆನೆದು ಉದ್ಧಾರವಾಗೊ ೬
ಆದಿತಾಳ
ಆವುದಾದರು ಬಿಡು ಆವುದಾದರು ಕೊಡು
ಆವುದಾದರು ತೊಡು ಆವುದಾದರು ಇಡು
ಆವುದಾದರು ಪೋಗೆ ಹವರಗಾಯಿತು
ಈ ವಸ್ತ ಮರದರಿನ್ನು ಆವಲ್ಲಿ ದೊರೆಯದು
ದೇವೇಶ ವಿಜಯ ವಿಠ್ಠಲ ನಿನ್ನ
ಯಾವ ಜೀವಕ್ಕೆ ಮುಡಿ ಇಟ್ಟು ೭
ಜತೆ
ಭಯಕೃದ್ಭಯನಾಶನನೀತನಲ್ಲ
ದೆ ಎಲ್ಲಿ ದೈವ ಮತ್ತೊಂದಿಲ್ಲ ವಿಜಯವಿಠ್ಠಲನ್ನ

ರು ಸಾಧನೆಯನ್ನು ಮಾಡಿಕೊಳ್ಳುವಂತಹ

೧. ಭಕ್ತ್ಯಾತ್ಮಕ ಸುಳಾದಿಗಳು

ಧ್ರುವತಾಳ
ಅಂಜುವೆವು ನಿನ್ನ ಕಪಟನಾಟಕ ತನಕೆ !
ಅಂಜುವೆವು ನಿನ್ನ ಅದ್ಭುತ ಕರ್ಮಕ್ಕೆ !
ಅಂಜುವೆವು ನಿನ್ನ ಅಗಣಿತ ಗುಣಕ್ಕೆ !
ಅಂಜುವೆವು ನಿನ್ನ ಕಾಲಾಖ್ಯ ರೂಪಕ್ಕೆ !
ಅಂಜುವೆವು ಅಂಜಿ ಅಂ[ಜ]ಲಿಬೇಕು ನಿನ್ನ ಧೊರತನಕ್ಕೆ !
ಪ್ರಾಂಜಲಿ ಮುಗಿದು ನಮೋನಮೋಎಂಬೆ !
ಮುಂಜಿಯಾಗದ ಮುನ್ನ ಮಕ್ಕಳ ಪಡದೆ !
ಸಂಜೆಯಮಾಡಿ ಸೈಂಧವನ ಕೊಂದು !
ಅಂ[ಜ]ನೆಸುತ ಕೇತುವಿನ ಸಾಕಿದೆ !
ಅಂಜುವೆವು ನಿನ್ನ ಮರೆಮೋಸತನಕ್ಕೆ !
ಅಂಜನಾಭ ಖಂಡದೊಳು ಪುಟ್ಟಿಸಿ ಕರ್ಮ !
ಭುಂಜಿಸಿ ಹಲುಬುವಂತೆ ಎನ್ನ ಮಾಡಿದಿ !
ಕಂಜನಾಭನೆ ನಿನಗೇ ಎನಬಾರದು !
ಗಂಜಿಹಾಕುವೆನೆಂಬೊ ಗರ್ವಾವು ನಿನಗೆ !
ಅಂಜದಲೆ ನಿನಗೆ ನುಡಿದೆನಾದಡೆ ಅದ !
ಕಂಜಿಕೆ ನಿನಗೇನು ಲೇಶವಿಲ್ಲ !
ಗುಂಜಿದವರಿಗೆ ವಜ್ರಪಂಜರಾಗುವೆ !
ಕುಂಜರವರದ ಶ್ರೀ ವಿಜಯವಿಠ್ಠಲ, ಪ್ರಾ !
ಭಂಜನ್ನ ಪಾಪ ಜೀಮೂತಕ್ಕೆ ಅಜಿತಾ ೧
ಮಟ್ಟ ತಾಳ
ಒಂದು ಕರ್ಮವನ್ನು ತಂದು ನಮಗೆ ಹಚ್ಚಿ !
ಇಂದಿರೆ ರಮಣನೆ ಅಂದು ಸೃಜಿಸಿ ಜಗವ !
ಒಂದೊಂದು ಪರಿಯಲ್ಲಿ ಮುಂದುಗೆಡಿಸಿ ಭವದ !
ಸಿಂಧುವಿನೊಳಗಿಟ್ಟು ಪೊಂದಿಸಿದೆ ಹೀಗೆ !
ನೊಂದು ನೋವಾದರು ಅಂದೇ ಬಲ್ಲದಲೆ !
ಅಂದರೆ ನಿನಗರಿಂದೇನಾಗುವದೊ !
ತಂದೆ ತಂದೆಯ ತಂದೆ ವಿಜಯ ವಿಠ್ಠಲ ದೀನ !
ಬಂಧುವೆ ನಿನಗೊಮ್ಮೆ ಅಂದಾರೆ ಬಿಡುವ ೨
ರೂಪಕ ತಾಳ
ಏನಾಗುವದು ನಿನಗೆ ನಾನಂದ ನುಡಿಗಳು!
ಹಾನಿ ವೃದ್ಧಿಗಳಿಲ್ಲದ ಶ್ರೀ ನಾರಾಯಣ ಮೂರ್ತಿ
ಕೇಣಿಗೊಂಡಾನೀಚ ಮಾನವ ನಾನಯ್ಯ !
ಏನರ ಮನವೆನ್ನಾಧೀನವಲ್ಲವೆ ಕೇಳು !
ಭಾನುಕುಲೋದ್ಭವ ವಿಜಯ ವಿಠಲ ನಿನಗೆ !
ಏನೇನು ಅಂದರೆ, ಊನ ಆಗುವದೇನೊ ೩
ಝಂಪೆ ತಾಳ
ಕಡಿಮೆ ಆಯುಷವೆಂದು ನುಡಿವೆನೆಂದಾದರೆ!
ಕಡೆಯಾವದು ನಿನ್ನ ದಿವಸಗಳಿಗೆ !
ಕುಡಿಯಲಿ ನೀರು ದೊರಕಲಿ ಬ್ಯಾಡವೆಂಬೆನೆ !
ಪಡದೆ ನಿನ್ನುಂಗುಟದಲಿ ಗಂಗೆಯ !
ಒಡಲ ಕ್ಷುಧಿಯನ್ನು ವೆಗ್ಗಳಿಸಿದೆಂಬೆನೆ !
ಬಿಡದೆ ಎಂದಿಗೂ ನೀನು ನಿತ್ಯತೃಪ್ತ !
ಕಡು ದಾರಿದ್ರ್ಯ ನಾಗಿನ್ನಿರು ಪೋಗು ಎಂಬೆನೆ !
ಒಡನೆ ಇಪ್ಪಳು ಲಕುಮಿ ನಿನ್ನ ಗಲದೆ !
ಉಡಲಿ ವಸನವ ಕಾಣದಲೆ ಪೋಗು ಎಂಬೆನೆ !
ಕಡುರಮ್ಯವಾದ ಪೀತಾಂಬರವೊ !
ಬಡವನಲ್ಲ ನೀನು ವಿಜಯ ವಿಠ್ಠಲ ನಿನಗೆ !
ಎಡಬಿಡದೆ ನುಡಿದವನು ಅವನೆ ದಾರಿದ್ರ೪
ತ್ರಿವಿಡಿ ತಾಳ
ಭೂಷಣವಿಲ್ಲದೆ ಪೋಗಲಿ ಏನೆಂಬೆನೆ !
ದೋಷರಹಿತ ಅಪ್ರಾಕೃತ ಭೂಷಣ !
ಲೇಸು ನಿನಗೆ ಆಗದೆ ಪೋಗಲೆಂಬೆನೆ !
ಲೇಸು ಕೊಡುವೆ ನೀನು ಬೊಮ್ಮಾದಿಗೆ !
ಈ ಸಂಸಾರ ಪಾಶದೊಳಗಿರು ಎಂಬೆನೆ !
ಏಸೇಸು ಸಂಸಾರಿಗಳನ ದಾಟಿಸುವೆ !
ಹಾಸಿಕೆಯಿಲ್ಲದೆ [ಹೋ]ಗಲಿ ಎಂಬೆನೆ !
ಶೇಷನೆ ನಿನಗಯ್ಯ ಘನ ಹಾಸಿಕೆ !
ದ್ವೇಷಿಗಳ ಕೈ[ಯ] ಸೋತು ಪೋಗೆಂಬೆನೆ
ನೀ ಸಮರ್ಥನು ಕಾಣೋನಿತ್ವದಲಿ !
ಪಾಶಧರಾರ್ಚಿತ, ವಿಜಯ ವಿಠ್ಠಲರೇಯ !
ಏಸುಪರಿ ಭಾಗ್ಯವಂತನು ನೀನಯ್ಯ ೫
ಅಟ್ಟತಾಳ
ದೊರೆತನ ನಿನಗೆ ಇಲ್ಲದೆ ಪೋಗಲಿಯೆಂಬೆನೆ !
ಅರಸನಾಗಿ ಸರ್ವರ ನೀನಂಜಿಸಿಕೊಂಬೆ !
ಭರದಿಂದಲೇರುವ ರಥ ಬ್ಯಾಡವೆಂಬೆನೆ !
ತಿರುಗುವ ಖಗರಾಜ ಈರೇಳು ಲೋಕದ !
ಪರಿವಾರಯಿಲ್ಲದೆ ಇರು ನಿನಗೆಂಬೆನೆ !
ಸುರರು ಮೊದಲಾದವರು ಸೇವಕರಯ್ಯ !
ಅರಮನಿ ನಿನಗಾಗಲಿ ಬೇಡವೆಂಬಿನೆ !
ಮಿರುಗುವ ತ್ರಿಧಾಮ ಜಗಕೆ ವಿರಹಿತ !
ತರಳ ಯವ್ವನ ಜರೆತನವಾಗಲಂಬೆನೆ !
ಪರಮಪುರುಷ ನಿನ್ನ ಜನನ ಮತ್ತಾವದೊ !
ಧರಾಧರ ವಿಜಯವಿಠಲನಿಗೆ ಮಂದರು !
ಅರಿಯಾದೆ ನುಡಿದು ಭವದೊಳಗಿಪ್ಪರು ೬
ಆದಿತಾಳ
ಕುಲಗೋತ್ರದಿಂದ ನಿನ್ನ ಕೆಲಸಾರು ಎಂಬಿನೆ !
ತಿಳಿಯಾದು ನಿನ್ನ ಕುಲಗೋತ್ರವೆನಗೆ !
ಚಲುವನಾಗದೆ ಪೋಗು ಚನ್ನಿಗನೆಂಬೆನೆ !
ಎಳೆ ನಖಕಾಂತಿಗೆ ಬೆಳಗುವದು ಲೋಕ !
ಛಳಿ ಘಾಳಿ ಬಿಸಿಲು ತಾಕಲಿ ನಿನಗೆಂಬೆನೆ !
ಒಳಗೆ ಹೊರಗೆ ನೀನೆ ಸರ್ವ ವ್ಯಾಪಕನು !
ಸೆಳೆವ ಮೃತ್ಯು ನಿನ್ನ ತಡಹಲಿ ಎಂಬೆನೆ !
ಬಲು ಮೃತ್ಯುಗಳ ನೀನೆ ತಲೆ ಮೆಟ್ಟಿ ಆಳುವೆ !
ಸುಲಭನೆ ನಿನಗೊಂದು ಅಂದೆನೆಂದರೆ ಕಾಣೆ !
ನೆಲೆಯಾವದು ನಿನ್ನ ಬಲವಂತ ತನಕ್ಕೆ !
ಕುಲದೇವ ಕಮಲೇಶ ವಿಜಯ ವಿಠ್ಠಲರೇಯ !
ಸಲಿಗೆಲಿ ನುಡಿದೇನು ಸಲಹುವ ದಾತಾರ ೭
ಜತೆ
ಸ್ತೋತ್ರ ರೂಪವಿದೆಂದು [ನಿ]ನ್ನ ಕೊಂಡಾಡಿದೆ !
ಮಿತ್ರನಾಗಿ ಕಾಯೊ ವಿಜಯ ವಿಠ್ಠಲ ಪ್ರಭುವೆ ೮

ಈ ಸುಳಾದಿಯೂ ತಿರುಪತಿಯ

೩೮. ತಿರುಪತಿ
ರಾಗ:ಭೈರವಿ
ಧ್ರುವತಾಳ
ಅಂತರಂಗದೊಳು ಪೊಳೆವವನು ಶ್ರೀ |
ಕಾಂತನೊ ಬೊಮ್ಮನ ಪಡೆದ ದೇವಾನೊ |
ಕಂತುಜನಕಾನೊ ಅನಂತ ನದಿಯ ಪಿತನೊ |
ಅಂತಕಾಂತಕನ ಪೆತ್ತಯ್ಯನೊ ಅಯ್ಯನೊ |
ಸಂತತ ಚಿಂತಿಪ ಭಕ್ತರ ಮನೋಹರನೊ |
ಅಂತಕನೊ ದೈತ್ಯಸಂತತಿಗೆ |
ದಂತಿಯ ಪಾಲಿಸಿದ ಪರಮ ಪವಿತ್ರನೊ |
ದಂತವಕ್ರಾದಿಯ ಕೊಂದ ಬಲವಂತನೊ |
ಹೊಂತಕಾರನೊ ಜಗದಂತರಿಯಾಮನೊ |
ತಂತುಗಾರನೊ ಶ್ರಿಂಗಾರವರನೊ |
ಪಂಥದ ವೈವಾವೆ ವಿಜಯವಿಠಲರೇಯಾ |
ಎಂಥಾವರನ ಭ್ರಾಂತಿಗೊಳಿಸುವ ದಿಟ್ಟನೊ ೧
ಮಟ್ಟತಾಳ
ಶ್ರೀಶ ಈಶ ಶೇಷ ಭೂಷಾಧೀಶ ದಾಸ |
ರಾಶಾ ಪಾಶಾ ಕ್ಲೇಶನಾಶ ದಾಶವೇಷ ದಾಶಧೀಶಾ |
ಕಾಶವಾಸ ಹೃಷಿಕೇಶ ವಿಜಯವಿಠಲ |
ಶೇಷಪೋಷ ಲೇಶವೆನಿಸ ೨
ತ್ರಿವಿಡಿತಾಳ
ಅಲೌಕೀಕ ವಸ್ತುವೊ ಅಮಂದನಂದಾನೊ |
ಮೂಲಾಧಾರನೊ ಸಕಲಗುಣ ಪರಿಪೂರ್ಣನೊ |
ಕಾಲಾದಿಗಳಧಿಷ್ಠಾನವಾದ ಮಹಿಮನೊ |
ಮೂಲೋಕದಲಿ ಮೆರೆವ ಮುದ್ದು ಲಾವಣ್ಯನೊ |
ಬಾಲಕ್ರೀಡೆಯ ತೆರದಿ ಆಡುವ ಅಗಣಿತನೊ |
ಏಳು ಕಮಲದಲ್ಲಿ ವಾಸವಾಗಿದ್ದವನೊ |
ಏಳು ಗೂಳಿಯನು ಒಂದೇ ಬಾರಿ ಬಿಗಿದವನೊ |
ಲಾಲಿಪಾಡಿಸಿಕೊಂಡ ನಾಗಾರಿಗಮನನೊ |
ಮೇಲುಗಿರಿಯವಾಸ ವಿಜಯವಿಠಲ ವೆಂಕಟ |
ಶೈಲದಲ್ಲಿ ಇಪ್ಪ ಸರ್ವರಾಭೀಷ್ಟನೊ ೩
ಅಟ್ಟತಾಳ
ವೀರ ಮುದ್ರಿಕೆ ಬೆರಳರವಿಂದಪಾದನೊ |
ಭೋರಗರುವಗೆಜ್ಜೆ ಚಾರು ಹೇಮಪೆಂಡೆ |
ವಾರಣ ಜಾನು ಜಂಘೆವುಳ್ಳ ಚಲುವಾನೊ |
ಊರರಂಭ ಉಡದಾರ ಪೀತಾಂಬರ |
ಧಾರನೊ ನಾಭಿ ಕಮಲ ವೈಯಾರನೊ |
ಹಾರ ಕೌಸ್ತುಭ ಹೀರತಾರಾದಿಸರನೊ |
ಶ್ರೀ ರಮಣಿ ವಕ್ಷ ಸಿರಿಗಂಧಲೇಪ ಶೃಂ |
ಗಾರದ ದರಹಸ್ತ ಸಾರಿಕಂಬುಧರನೊ |
ಚಾರು ಮೊಗದಂತ ನಾಸನಯನ ಕರ್ನಾ |
ಪಾರ ಭೂಷಣವಾದ ಕಿರೀಟಾಂಗದ ನೂ |
ಪುರ ತಿರುಗಿ ತಿರುಗಿ ತೋರುವ ಜಾಣನೋ |
ಸಾರ ಹೃದಯವಾಸ ವಿಜಯವಿಠಲ ಕಂ |
ಸಾರಿ ಸಾರಿ ಸಾರಿಗೆ ಪೊರೆವವನೊ ೪
ಆದಿತಾಳ
ಮಸ್ತಕದಲ್ಲಿ ಅಭಯ ಹಸ್ತವನು ಇಟ್ಟ ಬಲು |
ಅಸ್ತಮಾನ ಉದಯದಾವಸ್ತಿಯನು ಹರಿಸುತ್ತಾ |
ಸ್ವಸ್ಥಾನದಲ್ಲಿ ಯೆನ್ನ ಪ್ರಸ್ತುತವನ್ನು ನಡಿಸಿ |
ಹಸ್ತಕನ್ನ ಮಾಡು ಪರವಸ್ತುವೆ ವಿಜಯವಿಠಲ |
ವಿಸ್ತಾರ ಮಹಿಮನೊ ಕಸ್ತೂರಿ ಮೃಗದಂತಂ |
ತಸ್ತವಾಗಿ ಪೊಳೆವನೊ ೫
ಜತೆ
ಇಂದು ಸುಳಿದಂತೆ ಅನುಗಾಲ ಎನ್ನೊಳಗೆ |
ಬಂದು ಉದ್ಧರಿಸೋದು ವಿಜಯವಿಠಲರೇಯಾ ೬

ವಾಯುದೇವರ ಸ್ತೋತ್ರವಾದ ಈ ಸುಳಾದಿಯಲ್ಲಿಯೂ

೧೫೨
ಧ್ರುವತಾಳ
ಅಂದಿಗೆ ಪೊಂಗೆಜ್ಜೆ ಬಿರುದಿನ ಕಾಲ್ಪೆಂಡೆ
ಯಿಂದ ಝಗ ಝಗಿಸುವ ಅರುಣಾಕಾಂತಿಯ ಚರಣ
ಇಂದುವಿನ ಸೋಲಿಸುವ ಪ್ರಕಾಶಪೂರ್ಣಮಯ
ದಿಂದ ಬ್ರಹ್ಮಾಂಡವನ್ನು ಬೆಳುಗುತಿಪ್ಪ ಚರಣ
ತಂದನ್ನ ತಾನ ಎಂದು ಕೈಯ್ಯಲ್ಲಿ ಕಿನ್ನರಿ ಧರಿಸಿ
ಅಂದವಾಗಿ ಶ್ರೀ ಹರಿಯ ಮುಂದೆ ಕುಣಿವ ಚರಣ
ಇಂದು ಮೌಳಿ ಮುಖ್ಯ ಸುರರಾದ್ಯರಿಂದ ಆ
ನಂದವಾಗಿ ನಿತ್ಯ ಪೂಜೆ ಗೊಂಬ ಚರಣ
ಅಂದಿಗೆ ಪೊಂಗೆಜ್ಜೆಯನಿಟ್ಟಚರಣ
ಮಂದ ಮಾನವರಿಗೆ ಪ್ರೀತಿ ಬಡಿಸಿ ಸುಖ
ಸಿಂಧುವಿನೊಳಗಿಟ್ಟು ದಯ ಮಾಳ್ಪುದೀ ಚರಣ
ಸಂದೇಹ ವಿಪರೀತ ಜ್ಞಾನ ಜೀವರಿಗೆ ನಿ
ರ್ಬಂಧನದೊಳು ಪೋಗಿಸಿ ಕಷ್ಟಬಡಿಸುವ ಚರಣ
ಮುಂದೆ ಬೊಮ್ಮನಾಗಿ ಸತ್ಯ ಲೋಕದಲ್ಲಿ ಮೃ
ಗೇಂದ್ರನ ಗದ್ದುಗಿ ಮೇಲೆ ವಾಲಗಗೊಂಬುವ ಚರಣ
ಒಂದೊಂದು ರೂಪ ಗುಣ ಕ್ರಿಯ ಸಮೂಹಗಳು ಅ
ತೀಂದ್ರಿಯವಾಗಿ ಮನಕೆ ತೋರುವ ಶ್ರೀ ಚರಣ
ಸುಂದರ ಭಾರತಿ ದೇವಿ ಏಕಾಂತದಲಿ ನೋಡಿ
ಗಂಧ ಪರಿಮಳ ಪೂಸಿ ಅಪ್ಪಿಕೊಂಬುವ ಚರಣ
ತಂದೆ ತಾಯಿಗಳಂತೆ ತಪ್ಪದೆ ಅನುದಿನ
ಅಂದದಭಿಲಾಷೆ ಕೊಡುವ ಕಮನೀಯ ಚರಣ
ಅಂದಿಗಂದಿಗೆ ಸಮನಾಗಿ ಸಾಧ್ಯವಾಗಿ
ಒಂದೇ ಪ್ರಕಾರದಲ್ಲಿ ಭಕ್ತರಿಗೆ ಒಲಿವ ಚರಣ
ಪೊಂದಿದವರಲ್ಲಿ ವಿಶ್ವಾಸ ಮಾಡುವ ಜನರ
ಬಂಧನ ಪರಿಹರಿಸಿ ಪಾಲಿಸುವುದೀ ಚರಣ
ಇಂದು ಹೃತ್ಕಮಲ ಮಧ್ಯದಹರಾಕಾಶದಲ್ಲಿ
ನಿಂದು ಪೂಜೆ ಮಾಡಲ್ಪಟ್ಟ ಮಂಗಳ ಚರಣ
ಕಂದರ್ಪ ಪಿತ ನಮ್ಮ ವಿಜಯ ವಿಠ್ಠಲಗೆ ಶರ
ಣೆಂದು ಬಾಗುವ ಸೂತ್ರ ಪ್ರಾಣನ ಪರಮ ಚರಣ ೧
ಮಟ್ಟತಾಳ
ಅಂಜನೆ ದೇವಿಯಲಿ ಉದ್ಭವಿಸಿ ಬಂದು
ಕಂಜಸಖನೆಡೆಗೆ ಹಾರಿದುದೀ ಚರಣ
ಕಂಜ ಮಿತ್ರನ ಸುತನ ಕರೆದು ಮನ್ನಿಸಿ ಅವನ
ಅಂಜಿಕೆಯನು ಬಿಡಿಸಿ ಎರಗಿಸಿಕೊಂಡ ಚರಣ
ಕಂಜನಾಭನ ಕಂಡು ಪರವಶದಲಿ ಹಾ ಹಾ
ರಂಜಿಸುತಲಿ ವೇಗ ಜಿಗದ್ಹಾರಿದ ಚರಣ
ಕುಂಜರನಾಥನ ಮಗನ ಮಹಾಗರ್ವ
ಭಂಜನೆ ಮಾಳ್ಪುದಕೆ ನಡೆದಾಡಿದ ಚರಣ
ಮಂಜುಭಾಷಣ ರಾಮ ಪೇಳ್ದಾಕ್ಷಣ ಕಪಿ
ಪುಂಜರರೊಳಗೊಂಡು ತೆರಳಿದುದೀ ಚರಣ
ನಂಜುಸವಿದ ಧೀರ ಗಿರಿಯ ಜಿಗಿದು ನೋಡಿ
ಅಂಜಿದ ಜಲನಿಧಿಯ ಲಂಘಿಸಿದ ಚರಣ
ಝಂಝೂನಿಳನಂತೆ ದೈತ್ಯ ಪಟ್ಟಣಪೊಕ್ಕು
ಕಂಜಮುಖಿಗೋಸುಗ ಸಂಚರಿಸಿದ ಚರಣ
ಗುಂಜಿ ತೂಕದಿನಿತು ಭಯವಿಲ್ಲದೆ ಪುರ
ನಂಜಯಗೆಡೆಣಿಸುತ ಓಡ್ಯಾಡಿದ ಚರಣ
ವ್ಯಂಜಕೆ ತಾನಾಗಿ ಸ್ವಾಮಿ ಕಾರ್ಯದಲ್ಲಿ ಮೃ
ತ್ಯುಂಜಯ ಶಿಷ್ಯರ ಸವರಿಸಿದ ಬಲು ಚರಣಾ
ಭುಂಜಿಪ ಎಡೆಗೊಂಡು ದೇವನಲ್ಲಿ ಇಡಲು
ಎಂಜಲವೈದೊಂದು ಮರವೇರಿದ ಚರಣ
ಅಂಜಲಿಪುಟಿಬಿಟ್ಟು ಬಿಂಕದಲಿ ಧ
ನಂಜಯನ ರಥಕ್ಕೆ ಬಂದೇರಿದ ಚರಣ
ಕಿಂಜಲ್ಕವಾಸ ವಿಜಯವಿಠ್ಠಲನಂಘ್ರಿ
ಕಂಜ ಪೂಜಿಪ ಹನುಮನ ನಾನಾ ವರ್ಣವಾದ ಚರಣ ೨
ತ್ರಿವಿಡಿತಾಳ
ಗಿರಿಯ ಮಧ್ಯದಿ ಜಿಗುಳಿ ಒದ್ದಾಡಿದ್ದ ಚರಣ
ಗಿರಿಯ ಮಧ್ಯದಿ ದ್ವಿಜ ಗೂಳೆ ಒದ್ದ ಚರಣ
ಮರದ ಮೇಲೆ ಇದ್ದವರ ಕೆಡಹಿದಾ ಚರಣ
ಸುರನದಿಯೊಳು ಬಿದ್ದ ಅಹಿಗಳ ಕುಟ್ಟಿದ ಚರಣ
ನಿರುತ ಪರಿಪರಿಯಿಂದ ನಲಿದಾಡಿದ ಚರಣ
ಅರಗಿನ ಮನೆ ಗೆದ್ದು ಬಂದು ರಾತ್ರೆ ಹಿಡಿಂಬನ
ವರಿಸಿ ಸತಿಯಳಿಂದ ಅರ್ಚನೆಗೊಂಡ ಚರಣ
ಪುರದೊಳು ಭಿಕ್ಷವ ಬೇಡುತ ತಿರುಗಿದ ಚರಣ
ದುರುಳ ಬಕನ ಒದ್ದ ದುಸ್ತರದಾ ಚರಣ
ಅರಸಿನ ಸಭೆಯಲ್ಲಿ ಹುಂಕರಿಸಿ
ಹರುಷದಲಿ ನೆನೆದು ದ್ರೌಪದಿ ಬಂದು ಕಂಡ ಚರಣ
ನರನಾಥ ರಾಜಸುಯಾಗವ ಮಾಡಲು ಪೋಗಿ
ಧರೆಯಲ್ಲಿ ತಿರುಗಿ ವಂದಿಸಿಕೊಂಡ ಚರಣ
ಸುರರೊಳು ಅಧಿ ಕಾದಾ ಭೀಮನ ಚರಣ
ತೆರಳಿವನದಲ್ಲಿ ಕುಸುಮ, ಘೋಷಯಾತ್ರೆ ಮತ್ಸ್ಯನ
ಪುರದಲ್ಲಿ ಮೆರೆದ ಮಂದಾರ ಚರಣ
ಧುರದೊಳು ನಿಂದು ಬಲ್ಲಿದ ಅನ್ಯೋ
ನ್ಯರನ್ನು ನೆಲಕಿಕ್ಕಿ ದುರುಳ ಸೈನ್ಯವೆಲ್ಲ
ಪರಿಹರಿಸಿದ ಚರಣ ಅಪ್ರತಿ ಚರಣ
ತರುಣಿ ಪಾಂಚಾಲಿಯ ಎಳೆದ ಖಳನ ಭಂಗಿಸಿ
ಉರದ ಮೇಲೆ ನಿಂತು ಕುಣಿದಾಡಿದ ಚರಣ
ದುರ್ಯೋಧನನು ಬಂದು ತರುಬಲಾ ಕ್ಷಣಕೆ ಅವನ
ತರಿದು ಬಿಸಾಟಿ ಶಿರವ ಮೆಟ್ಟಿದ ಮಹಾ ಚರಣ
ಹರಿಗೆ ಸಮ್ಮೊಗವಾಗಿ ಅಟ್ಟಹಾಸದಲಿ ನಿಂದಿರದೆ
ನಿದಾನದಲಿ ನಾಟ್ಯವಾಡಿದ ಚರಣ
ಹರನ ಕಡಿಯಿಂದ ಹರಿಯ ಅಸ್ತ್ರ ಬರಲು
ಶಿರವ ಬಾಗದೆ ಧರಣಿಯ ಮೇಲೆ ಕುಣಿದ ಚರಣ
ವರ ವೃಕೋದರನ ಚರಣ ಶರಣ ಪಾಲಕ ಚರಣ
ಪರಮ ಪುರುಷ ಕೃಷ್ಣ ವಿಜಯ ವಿಠ್ಠಲರೇಯನ
ಶರಣರೊಳಧಿಕನಾದ ಭೀಮಸೇನನ ಚರಣ ಅಪ್ರತಿ ಚರಣ ೩
ಅಟ್ಟತಾಳ
ವಿಪ್ರನ ಮನೆಯನ್ನು ಪಾವನ ಮಾಡಿದ ಚರಣ
ಸ್ವಪ್ರಕಾಶದಿಂದ ಪೊಳೆವುದೀ ಶಿರಿ ಚರಣ
ಸುಪ್ರೇಮದಿಂದ ಜನನಿಯು ಕರೆಯಲು
ಕ್ಷಿ ಪ್ರತನದಲ್ಲಿ ಧುಮುಕಿದ ಚರಣ
ಸರ್ಪನ ವರಿಸಿದ ಚರಣ ದಿವ್ಯ ಚರಣ
ತಪ್ಪದೆ ಹೆಬ್ಬುಲಿ ಕೂಡ ಚರಿಸಿದ ಚರಣ
ಅಪ್ಪನ ಮಾತಿಗೆ ಯತಿಯಾಗಿ ಮುನಿಯಾಗಿ ಲೇಸಾಗಿ
ಒಪ್ಪದಿಂದ ತೀರ್ಥಯಾತ್ರೆ ಮಾಡಿದ ಚರಣ
ಗುಪ್ತಮಾರ್ಗದಿಂದ ನದಿಯ ದಾಟಿದ ಚರಣ
ತೃಪ್ತಿಯ ಕೊಡುವುದು ನಮಗೆ ಇದೇ ಚರಣ
ದರ್ಪವುಳ್ಳ ಮಹಾಮಯಿ ಅರಣ್ಯಕ್ಕೆ
ಚಪ್ಪಗೊಡಲಿಯಾಗಿ ಇರುತಿಪ್ಪದೀ ಚರಣ
ಪುಷ್ಪದೋಪಾದೇಲಿ ಬದರಿಕಾಶ್ರಮದಲ್ಲಿ
ಸುಪ್ರೇಮದಿಂದಲಿ ಪೂಜೆಗೊಂಬ ಚರಣ
ತುಪ್ಪಸಕ್ಕರಿ ಪಾಲು ಉಣಿಸುವುದೀ ಚರಣ
ಕಪ್ಪು ಕಲುಷವಿಲ್ಲ ರಾತ್ರಿಲಿ ಓದುವ
ಅಪ್ಪಾರ ಜನಕ್ಕೆ ಬೆಳಕು ಮಾಡಿದ ಚರಣ
ಮುಪ್ಪು ಇಲ್ಲದೆ ಜೀವನ ಸಾಧನಗಳ
ದರ್ಪಣದಂತೆ ತೋರಿಕೊಡುವುದೀ ಚರಣ
ಒಪ್ಪ ಪೋಗುವ ಶಕುತಿ ಏನು ಪೇಳಲಿ ಕಂ
ದರ್ಪ ಎಣಿಸಲಾಗಿ ನೆಲೆದೋರದಾ ಚರಣ ಕಂ
ದರ್ಪನಯ್ಯನ ನೆನಸಲಾಗಿ ನೆಲೆದೋರುವುದೀ ಚರಣ
ಕಪ್ಪುಗೊರಳನಂದ ವಂದಿತ ಚರಣ
ಸುಪ್ತಭುವನೇಶ ವಿಜಯ ವಿಠ್ಠಲಗೆ
ಆಪ್ತವಾದ ಆನಂದತೀರ್ಥರ ಚರಣ೪
ಆದಿತಾಳ
ಚತುರಯುಗದೊಳು ಮಹಿಮೆ ತೋರಿದ
ಚತುರವಿಂಶತಿ ತತ್ವವ್ಯಾಪಿಸಿ ಇದ್ದ ಚರಣ
ಸ್ತುತಿಸಿದ ಜನರಿಗೆ ಭೇದ ಜ್ಞಾನಕೊಟ್ಟು
ಗತಿಗೆ ಸತ್ಪಂಥಕ್ಕೆ ತೋರುವ ಶ್ರೀ ಚರಣ
ಪತಿತನಾದರೆ ಒಂದೇ ಸಾರಿ ಶ್ರೀ ನಾರಾಯಣನಿಗೆ ಮುಖ್ಯ
ಪ್ರತಿಬಿಂಬ ಎಂತೆಂದೆನಲು ಪಾಲಿಸುವುದೀ ಚರಣ
ಸತತ ಈತನೆ ಮುಖ್ಯ ಗುರುವೆಂದು ತಿಳಿದು ಅನವ
ರತದಲ್ಲಿ ಇದ್ದವಗೆ ವಜ್ರ ಪಂಜರ ಈ ಚರಣ
ಕ್ಷಿತಿಯೊಳಗೆ ಎನಗಿದು ಸುರಧೇನು ಈ ಚರಣ
ಪ್ರತಿಗಾಣಿನೊ ಎನಗಿದೆ ಇದೇ ಸುರತರು ಚರಣ
ಮತ್ತೊಂದೆನಗಿಲ್ಲ ಇದೇ ಚಿಂತಾಮಣಿ ಚರಣ
ಮಿತಿಯಿಲ್ಲದ ಜನ್ಮ ಬರಲಿ ಬಂದಿರಲಿ ಶಾ
ಶ್ವತವಹುದೋ ಲೇಶಮಾತ್ರ ಅನುಮಾನವಿಲ್ಲ ವಿ
ಹಿತವಾಗಿ ನಂಬಿದೆ ಈ ಚರಣ ಈ ಚರಣ
ಅತಿಶಯದಿ ಜನ್ಮ ಜನ್ಮಾಂತರದಿಂದ ನಂಬಿದದೀ ಚರಣ
ಅರ್ತಿಯಿಂದಲಿ ತಂದೆ ತಾಯಿಯಂತೆ ಪೊರೆದು ಸ
ದ್ಗತಿಯನಿತ್ತು ನಿಜಸುಖ ಉಣಿಸುವುದೀ ಚರಣ
ಆರ್ತಜನರ ಸಂತಾಪ ಕಳೆವುದೀ ಚರಣ
ಉತ್ತಮ ಶ್ಲೋಕನ ಉತ್ತಮನ ಮಾಡುವುದೀ ಚರಣ
ಕತ್ತಲೆ ಹರಿಸಿ ಅರ್ತಿಯಿಂದಲಿ ಸುಜ್ಞಾನ ಭಕುತಿ
ಇತ್ತು ಸುಖ ಬಡಿಸುವದೀ ಚರಣ
ಭೃತ್ಯರೆನಿಸಿ ಸತತ ಪಾಲಿಸುವುದೀ ಚರಣ
ಚ್ಯುತ ದೂರ ನಮ್ಮ ವಿಜಯವಿಠ್ಠಲನ ರ
ಜತ ಪೀಠದಲ್ಲಿ ಧ್ಯಾನ ಮಾಡುತಿಪ್ಪ
ಮಧ್ವಮುನಿಯ ಮುದ್ದು ಚರಣ೫
ಜತೆ
ಚಿತ್ತದಲ್ಲೀ ಚರಣ ಭಜಿಸಿದ ಜೀವಿಗೆ
ನಿತ್ಯಾಯು ಉತ್ಸಹ ವಿಜಯ ವಿಠ್ಠಲ ಕೊಡುವ ೬

ಒಮ್ಮೆ ವಿಜಯ ದಾಸರು ಪಂಢರಪುರಕ್ಕೆ ಹೋದಾಗ,

ಸಂಕೀರ್ಣ

ಧ್ರುವತಾಳ
ಅಂದು ನಿನ್ನ ದರುಶನಕ್ಕೆ ಆರ್ತ ಉಳ್ಳವನಾಗಿ
ಬಂದು ಒಂದೆಡೆಯಲ್ಲಿ ಏಕಾಂತದಿ
ನಂದಾವಾಗಿ ಕುಳಿತು ಧ್ಯಾನಮಾಡುತಲಿರೆ
ಮಂದರಧರ ನೀನೆ ಪದಜಾರೂಪ
ದಿಂದ ಮಾಡಿದ ವಸನ ತೊತ್ತ ಚಲ್ಲಾಣ ಬಿಗಿವಿ
ನಿಂದ ಮೆಟ್ಟಿದ ಕೆರಹು ಈ ಪರಿಯಲ್ಲಿ
ಮುಂದೆ ಬಂದು ನಿಂದು ಅಂದಾವ ತೋರಿ ನಗೆ
ಯಿಂದ ಮಾತನಾಡಿದೆ ಚಿತ್ರದಲ್ಲಿ
ಕಣ್ದೆರದು ನಿನ್ನ ನೋಡಿದೆನಲ್ಲಾದೆ
ವಂದಿಸಲಿಲ್ಲಾ ಕುರುಹು ತಿಳಿಯಲಿಲ್ಲಾ
ಪೊಂದಿದ ಅಜ್ಞಾನದಿಂದಲಿ ಅಸೂಯಾ
ತಂದುಕೊಂಡೆನಲ್ಲಾದೆ ಪಾಂಡು ರಂಗಾ
ನಿಂದಿರ ಪೇಳಿ ತುತಿಸಿ ನೀನೆ ಅನಿಮಿತ್ತ
ಬಂಧುವೆ ನಿಜವೆಂದು ಪದಕೆ ಎರಗೀ
ಸುಂದರಾಂಗ ಸುಲಭ ಭಕುತವತ್ಸಲ ಪರಾ
ನೆಂದು ಪದಕೆ ಎರಗೀ
ಸುಂದರಾಂಗ ಸುಲಭ ಭಕುತವತ್ಸಲ ಪರಾ
ನೆಂದು ಕಾಯಯ್ಯಯೆಂದು ಹಸ್ತಾ ಮುಗಿದು
ಇಂದ್ರಿಯಂಗಳು ಎಲ್ಲಾ ಸರ್ವದಾ ನಿನ್ನ ಪ್ರಜೆ
ಯಿಂದ ಓಲ್ಯಾಡಲಿ ಎಲ್ಲಿ ಇದ್ದರೂ
ಎಂದೆಂದಿಗೆ ಇದನೆ ಬೇಡಿಕೊಂಡು ದುಃಖ
ದಿಂದ ಕಡೆ ಬೀಳಲಿಲ್ಲಾ ಅಕಟಕಟಾ
ಅಂದೆ ಅಪುನರಾನರ್ತಿ ಐದುವೆನೇನೊ ನಿನ್ನ
ಸಂದರುಶನವನ್ನು ಮದಿಕೊಳು ತಾ
ಒಂದೊಂದಧಿಕವಾಗಿ ನಿನ್ನ ದಾಸರ ಸಂಗ
ದಿಂದ ಮೇಲು ಮೇಲಾಗಿ ಇಪ್ಪೆನಲ್ಲಾ
ಮಂದಮತಿಗ ನಾನು ಮಾನು[ಷಾ]ನ್ನ
ತಿಂದ ಕಾರಣದಿಂದ ಇನಿತಾಯಿತೋ
ತಂದೆ ಎನ್ನನು ಹೀಗೆ ಕರ್ಮಾದ ಮಾರ್ಗಕ್ಕೆ
ತಂದೆಯಲ್ಲದೆ ನಿನಗೆ ಲಾಭವೇನೊ
ಸಂದುವೆನಲ್ಲದೆ ಅಂದಿನ ದಿನದಿ ನಿನ್ನ
ಚಂದ ಚಂದಾದರೂಪ ವ್ಯಕ್ತವಾಗೇ
ಅಂದುಂಟು ಇಂದಿಲ್ಲಾ ಎನದಿರೀ
ಅಂದು ಪುರಂದರದಾಸರು ಪೇಳಿದ ಮಾತು
ತಂದುಕೊಳ್ಳಲಿಲ್ಲಾ ಅನುಭವಕೆ ಈಗ ಹಾಹಾ
ಎಂದರೆ ಏನಾಹುದೊ ಎನ್ನ ಭಾಗ್ಯ
ಇಂದು ಈ ಪರಿಯಲ್ಲಿ ಕ್ಲೇಶಶೋಕ ಪ್ರತಿ
ಬಂಧಕದೊಳು ಹೊರಳಿ ನಾನಾ ಪರಿ ದು
ರ್ಗಂಧದಲಿ ಮುಳುಗಿ ಮುಂಗಾಣದಿಪ್ಪ ದುಃಖ
ವೃಂದಗಳಿರಲಿಕ್ಕೆ ಎಂತಾಹುದೋ
ಮಂದಿಯ ಬಯಸಿದಂತೆ ಸಾಧ್ಯವಾದರೆ ಗೋ
ವಿಂದ ನಿನ್ನ ಮಾಯಕ್ಕೆ ದುಸ್ತರ ದೂರವೆಂಬೊ
ಅಂದ ಮಾತಿಗೆ ವ್ಯಾಹತಿ ಬಾರದೇನೊ ನಿತ್ಯಾ
ನಂದ ವಿಗ್ರಹ ವಿಶ್ವಾ ನಾರಾಯಣಾ
ಇಂದಿರೆ ಬ್ರಹ್ಮ ವಾಯುವೀಂದ್ರ ಫಣೀಂದ್ರ
ಕಂದು ದಂಧರ ಇಂದ್ರ ಕಂದರ್ಪಾದಿ ಮಿಕ್ಕ
ವೃಂದಾರಕವೃಂದ ಯಾವಜ್ಜೀವರು ಮು
ಕುಂದಾ ನಿನ್ನ ಮಾಯಾವೆಂಬೊ ಮಹಾ
ಸಿಂಧುವಿನೊಳು ಮುಣುಗಿಸಿದಂದವಾದ ಗುಣ
ದಿಂದಲಿ ಗುಣರೂಪ ಕ್ರೀಯಗಳೆಲ್ಲಾ
ಒಂದೊಂದು ಎಣಿಸಾದರೊಳಗಾನಂತಾ
ಒಂದಾನಂತ ಯುಕ್ತ ಅಣು ಅತ್ಯಣು
ಸಂದಿಸಿಕೊಂಡಿಪ್ಪವೊ ಅನವಸ್ತಿಯಾಗಿ ಬಿಡದೆ
ಬಿಂದು ಮಾತುರ ಪಾರಗಾಣರದಕೊ
ದ್ವಂದ್ವ ಸೈರಿಸದಿಪ್ಪ ಅಲ್ಪ ಬುದ್ಧಿಗ ನಿನ್ನ
ಬಂಧಕ ಶಕುತಿಗೆ ಪ್ರತಿಕೂಲನೇ
ಹಿಂದೆ ಏನಾದದ್ದು ಆಗಿಪೋಯಿತು ಮುಚ
ಕುಂದ ಪಾಲಕನೆನೆ ಎನ್ನ ಹೃದಯ
ಮಂದಿರದೊಳು ಮುಖ್ಯ ಪ್ರಾಣಾನಧಿಷ್ಠಾನ
ದಿಂದಲಿ ಆ ಪರಿಯಲಿ ಪೊಳದು
ಕುಂದದೆ ಭ್ರಾಂತಿಯನ್ನು ಗೊಳಿಸುವುದೇನೊ ಅರ
ವಿಂದ ದಳಾಕ್ಷ ಪುಂಡರೀಕವರದಾ
ಅಂದಿಗೆ ಗೆಜ್ಜೆ ಪೆಂಡೆ ಸರಪಳಿ ಪೀತಾಂಬರ
ಕುಂದಣಹಾರ ಪದಕ ವೈಜಯಂತಿ
ವೃಂದಾವನ ಮಧ್ಯಯಿದ್ದ ಮಾಲೆ ವನಮಾಲೆ
ಗಂಧ ಕಸ್ತೂರಿ ಪುನಗು ಪರಿಮಳದ್ರವ್ಯ
ದಿಂದಲ್ಲೊಪ್ಪುವ ಮತ್ತೆ ಕೌಸ್ತುಭ ಮಣಿ ಸಿರಿ
ಯಿಂದ ವಕ್ಷಾಂಗದ ಕಂಕಣ ಮುದ್ರೆ
ಇಂದುವಿನಂತೆ ಕರ್ನಕುಂದಲ ನೊಸಲು ತಿಲಕ
ಮಂದಹಾಸದಿ ನೋಳ್ಪ ನೋಟ ಮಾಟಾ
ಸಂದೋಹ ಮಣಿಗಣಕಿರಣ ಕಿರೀಟ ಕಾಂತಿ
ಯಿಂದ ಈರೈದು ದಿಕ್ಕು ಬೆಳಗುತಿಪ್ಪ
ಸಿಂಧುಶಯನ ಪೂರ್ಣ ಸದ್ಗುಣಸಾಂದ್ರ ಹರಿ
ಮಂದಾಕಿನಿಯ ಪೆತ್ತ ಮಹಮಹಿಮಾ
ಒಂದೊಂದು ಇಂಥ ಇಂಥರೂಪಗಳಾನಂತ ವಿ[ರುವೆ]
ನೆಂದು ತೋರಿದೆ ಎನಗೆ ಈ ರೂಪವಾ
ಸಂದೇಹಗೊಳಿಪುದೇ ಸಕಲಾರ್ಥ ಕೊಡುವನೇ
ಕಂದನಂತೆ ಎನ್ನ ಸಲಹ ಬೇಕೋ
ಛಿಂದಿ ಛಿಂದಿಯ ಮಾಡು ಮನದಲ್ಲಿದ್ದ ಸಂಶಯ
ಗಂಧವಾದರು ನಿಂದಿರಗೊಡದೆ
ನಿಂದಿಸಿದನಿಗೆ ನಿನ್ನ ಶರೀರದೊಳು
ಪೊಂದಲಿಟ್ಟುಕೊಂಡೆ ಸರ್ವರು ನೋಡಾ
ಸಂದಿ ಗೊಂದಿಯಲ್ಲಿ ಆಡಿದರೇನುಂಟು
ಸಂಧಾನ ವ್ಯಾತಕೆ ಮುಕ್ತಾವಿರಲೂ
ನಿಂದಲ್ಲಿ ಕುಳಿತಲ್ಲಿ ಅವಲ್ಲ್ಯಾದರೂ ಸಂ
ಬಂಧಿಗನಾಗಿ ಒಡನೆ ಇಪ್ಪನೆ
ಇಂಧನದೊಳಗಗ್ನಿ ಇದ್ದಂತೆ ಎನ್ನೊಳಗೆ
ಸಂದಿಸಿಕೊಂಡಿಪ್ಪ ಪರಮ ಪುರುಷಾ
ಹಂದಿ ನಾಯಿ ನರಿ ಜನುಮ ಬಂದರೆ ನಿನ
ಗೆಂದಿಗೆ ತಪ್ಪದು ಕಾವ ಬಿರಿದು
ಅಂದ ಮಾತಿಗೆ ನೀನೊಪ್ಪದಿರಲಾನಕ
ದುಂದುಭಿಗೆ ಮೊದಲು ರೂಪತೋರಿ ಮ
ತ್ತೊಂದು ರೂಪವನ್ನು ತೋರಲಿಲ್ಲವೇ ನಾ
ರಂದ ಗಾಯನಕೆ ಬೆಂಬಲ ದೇವಾ
ಬೆಂದ ಸಂಸಾರದೊಳು ಸುಖವಿಲ್ಲ ಸುಖವಿಲ್ಲ
ನೊಂದು ಬದುಕಬೇಕು ಕ್ಷಣ ಭೃಂಗುರಾ
ರಂಧ್ರವಲ್ಲದೆ ಪೂರ್ಣಸೌಖ್ಯ ಕಾಣೆನೊ ವ
ಸುಂಧರದಲ್ಲಿ ಜನಿಸಿ ಜಪಿಸಿದರೂ
ನಂದ ಗೋಪನಕಂದಾ ನಿನ್ನ ನಿಜರೂಪ
ಸಂದರುಶನದಲ್ಲಿ ಕರ್ಮ ಕ್ಷಯವೊ
ಸ್ಯಂದನ ಅಂದಣ ಸಿಂಧುರ ಮಂದರ
ಸುಂದರ ಮಂದಿರ ಚಂದನಾದಿ
ಇಂದೀವರಾಕ್ಷ ನಂದಿವಾಹನ ನಿನ್ನ ನಲ
ವಿಂದೆ ನೋಡದಲೆ ಪ್ರಾರಬ್ಧ ಭೋಗ
ಕಂದುಕ ಆಡಿದಂತೆ ಉಂಡು ತೃಪ್ತನಾಗೆ
ಖಂಡವಿಲ್ಲದೆ ಪದವಿ ಒಪ್ಪದಯ್ಯಾ
ಸಂಧ್ಯಾಕಾಲ ವಾಹದಕೆ ಹೊತ್ತು ಸ್ವಲ್ಪವೆ ಉಂಟು
ದಂಧಾನ ಮಾಡದಿರು ದಯವಂತನೇ
ಇಂದ್ರಿಯ ಗೋಚರ ವಿಜಯ ವಿಠ್ಠಲರೇಯ
ಅಂಧ ಕೂಪದಿಂದ ಕಡಿಗೆತ್ತು ಕರುಣದಲ್ಲಿ ೧
ಮಟ್ಟತಾಳ
ನಮೋನಮೋ ಲಕುಮೀಶ ನಮೋನಮೋ ಧರಣೀಶ
ನಮೋನಮೋ ದುರ್ಗೇಶ ನಮೋನಮೋ ಯಜ್ಞೇಶ
ನಮೋನಮೋ ಲೋಕೇಶ ನಮೋನಮೋ ವಿತ್ತೇಶ
ನಮೋನಮೋ ಹೃಷಿಕೇಶ ನಮೋನಮೋ ಭೂತೇಶ
ನಮೋನಮೋ ಗುಣೇಶ ನಮೋನಮೋ ಮಂತ್ರೇಶ
ನಮೋನಮೋ ಯೋಗೇಶ ನಮೋನಮೋ ಕಾಲೇಶ
ನಮೋನಮೋ ವರುಣೇಶ ನಮೋನಮೋ ಗಗನೇಶ
ನಮೋನಮೋ ಪ್ರಕೃತೇಶ ನಮೋನಮೋ ಜೀವೇಶ
ನಮೋನಮೋ ಕರ್ಮೇಶ ನಮೋನಮೋ ಸರ್ವೇಶ
ನಮೋನಮೋ ಭಕುತೇಶ
ನಮೋನಮೋ ವಿರಕುತೀಶ
ನಮೋನಮೋ ಜ್ಞಾನೇಶ ನಮೋನಮೋ ಪ್ರಾಣೇಶ
ನಮೋನಮೋ ಎಂದು ನಮಿಸಿ ಬೇಡಿದೆ ವರವ
ನಮಿಪರ ಸುರಧೇನು ದ್ರುಮವೆ ಚಿಂತಾಮಣಿಯೆ
ನಮೋನಮೋ ನಿನಗೆ ನಿನ್ನೈಶ್ವರ್ಯಕ್ಕೆ
ನಮೋನಮೋ ನಿನಗೆ ನಿನ್ನಯ ಬಲಕ್ಕೆ
ನಮೋನಮೋ ನಿನಗೆ ನಿನ್ನಯ ಕೀರ್ತಿಗೆ
ನಮೋನಮೋ ನಿನಗೆ ನಿನ್ನಯ ವೀರ್ಯಕ್ಕೆ
ನಮೋನಮೋ ನಿನಗೆ ನಿನ್ನಯ ಜ್ಞಾನಕ್ಕೆ
ನಮೋನಮೋ ನಿನಗೆ ನಿನ್ನಯ ವಿಜ್ಞಾನಕ್ಕೆ
ನಮೋನಮೋ ಭಗವಂತಾ ನಮೋನಮೋ ಎಂದವರಿಗೆ
ಶಮದಮಗಳನಿತ್ತು ಶ್ರಮಗಳ ಪರಿಹರಿಸಿ
ಅಮಿತಸೌಖ್ಯವ ಕೊಡುವ
ನಮೋನಮೋ ಪಾಂಡುರಂಗ ನಮೋನಮೋ ಪಂಢರಿರಾಯಾ
ನಮೋ ಭೀಮಾ ತೀರ ವಿಮಲಸದನ ವಾಸಾ
ನಮೋನಮೋ ಗೋವಳರಾಯಾ
ನಮೋನಮೋ ನಮೋನಮೋ ಅನುಪಮಿತ
ನಮೋನಮೋ ಪವಿತ್ರ ನಮೋನಮೋ ವಿಚಿತ್ರ
ನಮೋನಮೋ ಶುಭಗಾತ್ರ ರಮೆಯ ಸಂಗಡನಿತ್ಯ
ರಮಿಸುವ ನಿರ್ದೋಷಾ ಕಮಲದಳ ನೇತ್ರಾ
ತಮ ನಿಯಾಮಕನೆ ಮಮತೆಯಿಂದಲಿ ಮೋಹ
ಭ್ರಮಣದೊಳಗೆ ಇದ್ದ ಕುಮತಿಯ ಹರಿಸು
ಕುಮುದ ಬಾಂಧವ ವರ್ಣಾ
ನಮೋನಮೋ ವಿಠ್ಠಲ ನಮೋನಮೋ ವಿಜಯ
ನಮೋನಮೋ ಕೃಷ್ಣ ನಮೋನಮೋ ವೆಂಕಟ
ನಮೋನಮೋ ಎಂದು ನಮಿಸಿದೆ ನಿನ್ನಂಘ್ರಿ ಕಮಲಕೆ ಶಿರವಾಗಿ
ತಮಹರ ಗೋಪಾಲ ವಿಜಯವಿಠ್ಠಲ ನಿನಗೆ
ಸಮವಿಲ್ಲ ಎಲ್ಲ ಕಮಲಗರ್ಭನು ಬಲ್ಲಾ ೨
ತ್ರಿವಿಡಿತಾಳ
ಇದೆ ರೂಪದಿಂದಲ್ಲ ಮುಕುತಿಯಾಗದು ಜೀಯಾ
ಪದುಮನಾಭನೆ ಕೇಳೊ ನಿತ್ಯ ಎನ್ನ
ಹೃದಯದೊಳಗೆ ಬಂದು ಪೊಳೆವ ರೂಪವ ತೋರು
ಪದವಿಗೆ ಇದೆ ಅಲ್ಲದಿನ್ನೊಂದುಂಟೇ
ಬದಿಯಲ್ಲಿ ನಿಂತು ಮಾತಾಡಿದ ಕಾಲಕ್ಕೂ
ನಿದರುಶನ ನಿನ್ನ ಮೂರ್ತಿ ಬೇರೆ
ಅದರಿಂದ ಮೋಕ್ಷಕ್ಕೆ ತೀವ್ರಗತಿಯುಂಟು
ಇದೆ ಇದೆಯಾದರೆ ಪಾಪಾನಾಶಾ
ಸುಧಿಯಿಂದ ನಿಶ್ಚಯವಾದರೆ ಪಂಚ
ಭೇದದ ಸಮಾಧಿಗೆ ಸಿದ್ಧಯೋಗ್ಯತದಂತೆ
ಯದು ಕುಲೋತ್ತುಮ ನಿನ್ನ ರೂಪಗಳು ಅನಂತಾ
ವಿಧವಾಗಿ ಉಂಟಯ್ಯಾ ಲಾಲಿಸಯ್ಯಾ
ಪದುಮ ಮೊದಲಾದ ಚೇತನ ಜಡ ನಿತ್ಯಾ ನಿತ್ಯಾ
ಅಧಿಷ್ಠಾನ ಅವತಾರ ಆವೇಶ ಅಂಶವು
ಮುದದಿಂದ ಅಂಶಿ ಈ ಪರಿಯಲ್ಲಿ ನಮಗೆ ಸಂ
ಪದವಿಗೆ ಧ್ಯಾನಕ್ಕೆ ನಿರುತಸಿದ್ಧಾ
ಇದರೊಳಗೆನಗಾವದು ನಿಧಾನದ ಕಾಣೆ
ಸದಮಲ ವಿಗ್ರಹವೆ ಸಾರ್ವಭೌಮಾ
ಪದೊಪದೆಗೆ ನಿನ್ನ ಪಂಚ ವಿಧ ಮೂರ್ತಿಗಳು
ನಿದರುಶನ ನಿಜವಕ್ಕು ಮುಕುತರಿಗೇ
ಅಧಿಕಾರ ಭೇಧದಿಂದಲಿ ಕಲ್ಪಕಲ್ಪಕ್ಕೆ
ತುದಿ ಮೊದಲು ಮಧ್ಯ ಸರ್ವಾಂಗದಲ್ಲೀ
ಇದೆ ಇದೆ ಸಿದ್ಧವು ಎನಗೆ ನಿಶ್ಚಯವಾವದು
ಮೊದಲು ಕಂಡದ್ದು ಈಗ ನೋಡುವುದೂ
ಎದುರಿಲಿ ನಿಂದು ಕುಣಿದಾಡಿ ಬಾಹಿರದಲ್ಲಿ
ಬದಿಯಲಿ ಓಡ್ಯಾಡುತಲಿ ಇರಲೂ
ಮದನಾರಿಗಾದರೂ ಅಪರೋಕ್ಷವಲ್ಲೆಂದು
ಒದಗಿ ಶಾಸ್ತ್ರಗಳಲ್ಲಿ ಸಾರುತಿದಕೊ
ಪದುಮನಾಭನೆ ಕೇಳು ಎಂಥವರಿಗೆ ತನ್ನ
ಹೃದಯದಲ್ಲಿ ಮೂರ್ತಿಯ ಕಾಣದನಕ
ಹದುಳೆಸೇರರುಹ ಕಾಣೊ ಸ್ಪಷ್ಟತ್ವದಲಿ ಭೇದ
ತದನಂತರದಲಿ ಪ್ರಾಚುರ್ಯ ನಿತ್ಯಾ
ಬುಧರು ಇಂತೆಂದು ಪೇಳುವರು ಗ್ರಂಥದಲ್ಲಿ

ವಿಜಯ ದಾಸರು ಈ ಸುಳಾದಿಯಲ್ಲಿ


ಧ್ರುವತಾಳ
ಅಂದು ಮಹಾಪ್ರಳಯ ರಾತ್ರಿ ಸಂಪೂರ್ಣೇಯ |
ಸಂಧಿಸಿದ ಸಮಯದಲ್ಲಿ ವಿಪ್ರಜಾತಿ |
ಎಂದೆನಿಸುವ ವಾಸುದೇವ ಭಗವದ್ರೂಪ |
ದಿಂದ ಪುಟ್ಟಿದ ಪುರುಷನಾಮಾ ಬ್ರಹ್ಮ
ಗೊಂದು ಶರೀರವಿದು ಆದಿಯಲುದ್ಭವ |
ಪೊಂದಿದನಾದಿಲಿಂಗ ಕಾರಣವಿದಕೋ |
ನಿಂದಿಹ ಪುರುಷ ಬ್ರಹ್ಮನೀ ತತ್ವದೇಹದಲ್ಲಿ |
ಮುಂದೆ ಮತ್ತೊಂದು ಗಾತ್ರ ನಿರ್ಮಾಣವೋ |
ಅಂದವಾಗಿದೆ ಭಾಗತ್ರಯವಾದ ಏಕರೂಪ |
ದಿಂದ ಮೆರೆದ ಪ್ರಕೃತಿ ಶಬ್ದವಾಣೀ |
ಯಿಂದ ಪುಟ್ಟಿದನೊಂದು ಅಂಶದಿಂದ ವಿರಂಚಿ |
ಹಿಂದಣ ದೇಹದೊಳಗೆ ಅತಿ ಪ್ರಭೇಧ |
ಸಂದೇಹವಿದಕಿಲ್ಲ ಮನ ಚಿತ್ತ ಬುದ್ಧಿಯಂತೆ |
ಬಿಂದು ಪಾದಾನಾತಿಳಿ ತ್ರಯಗುಣ ಜೀವರು |
ಇಂದಿಗೆ ಎಂಟು ವರ್ಷ ಸವೆದು ಪೋದವು ಮೇಲೆ |
ಇಂದು ಮೌಳಿಯ ಪೆತ್ತನಾತರುವಾಯಾ |
ಒಂದೊಂದು ಸಂವತ್ಸರ ಮೀರಿ ಪೋಗಲಲ್ಲಿಗೆ |
ಸಂದಿಪೋಯಿತು ಅಜಗೆ ಹತ್ತು ಅಬ್ದಾ (ವರ್ಷ)
ಮುಂದೆ ಅನಿರುದ್ಧದೇವ ಜನಿಸಿದ ಜೀವಿಗಳ |
ಛಂದದಿಂದಲಿ ಗರ್ಭದೊಳು ತಾಳಿದ |
ಮಂದಹಾಸದಿಂದ ಎಲ್ಲರಿಗೆ ತನ್ನಾಮಕ |
ವೆಂದೆಂಬದೇಹ ವಿತ್ತ ತಾರತಮ್ಯದಿ |
ಕಂದರ್ಪಪಿತನಮ್ಮ ವಿಜಯ ವಿಠ್ಠಲ ಶತಾ |
ನಂದಗೆ ಕರುಣಿಸಿವ ದೇಹಗಳೆಣಿಕೆ ನೋಡೂ ೧
ಮಟ್ಟ ತಾಳ
ವಾರಿಜ ಸಂಭವಗೆ ತ್ರಿಗುಣಾತ್ಮಕ ಲಿಂಗ |
ಶರೀರದಿಂದ ಬಂದ ಗಾತ್ರಗಳೆಣಿಕೆ |
ಹಾರೈಸು ಮೊದಲವ್ಯಕ್ತ ತತ್ವ |
ಮೂರೊಂದು ವಿಧ ಮಹಾನದಹಂಕಾರಾ ತ್ರಿವಿಧಾ |
ವರಣ ಮನ ದಶಯಿಂದ್ರಿಯಂಗಳು |
ಸಾರತನ್ಮಾತ್ರಕ ನಭವಯು ವಂ |
ಗಾರ ಉದಕ ಧರಣೆ ಈ ರೀತಿಯಲ್ಲಿ ಒಂದೊಂದು |
ಶರೀರ ಬೇರೆ ಬೇರೆಯಕ್ಕು ಕವಚವ ತೊಟ್ಟಂತೆ |
ಚಾರು ಪ್ರಕಾಶದಲ್ಲಿ ಪ್ರಥಮ ಕಳೇ |
ವರಕೆ ವಂದಾವರಣ ಈ ರನೆ ದೇಹಕ್ಕೆ ಅವ್ಯಕ್ತದ ಸಹಿತ |
ಮೂರನೆ ಗಾತ್ರಕ್ಕೆ ಮಹತತ್ವದ ಕೂಡ |
ಸಾರ ಪ್ರಮೇಯ ತಿಳಿಯಿದೆಯಿದೇ ಪ್ರಕಾರ |
ಮೂರೆಂಟು ತತ್ವಗಳೊಂದಧಿಕ |
ಕಾರಣ ಕಾರ್ಯಗಳು ಅಂಶಿ ಅಂಶಯುಕ್ತ |
ಮಾರನಯ್ಯ ನಮ್ಮ ವಿಜಯ ವಿಠಲ ವಿ |
ಸ್ತಾರ ಮಾಡಿದಗಿನಿತು ಬೊಮ್ಮಗೆ ದೇಹಗಳನು ೨
ತ್ರಿವಿಡಿ ತಾಳ
ಗುಣ ವಿಶಿಷ್ಟರಾಶಿ ಭೂತ ಪ್ರಕೃತಿ ಸೂಕ್ಷ್ಮ |
ವೆನಿಸುವ ಲಿಂಗ ಷೋಡಶ ಕಳಾಭಾಗ |
ಮಿನಗುವಂದೊಂದು ಪರಮಾಣುಪುಂಜ ವ |
ಖ್ಖಣಿಸಬಲ್ಲನಾರು ತುಂಬಿಹವೊ |
ಅನುಕೂಲ ಮುಂದೆ ಪುಟ್ಟುವ ಅನಿರುದ್ಧಕ್ಕೆ |
ಮನೋಹರ ವಾಗಿದೆ ಬ್ರಹ್ಮರಾಯಾ |
ತನುವು ತೆತ್ತನು ನೋಡು ಬೀಜಾಂಕುರದಂತೆ
ಗಣನೆಯಿಲ್ಲದೆ ತತ್ವ ಸಂಖ್ಯೆಯಿಂದ ಜನಕ |
ಜನಕಭಾವ ಪರಮಾಣುಗತಿ ಕಾ |
ರಣ ಕಾರ್ಯವೆನಿಸಿ ಪ್ರತಿ |
ತನವುಗಳಾದವು ಆವರ್ಕಸಾಕಾರ |
ಅನಿರುದ್ಧ ನಿರ್ಮಾಣ ಮಾಡಿದನಯ್ಯಾ |
ವನಜ ಸಂಭವಗೇಕೋನ ತ್ರಿಂಶತಿ ದೇಹ ಲ |
ಕ್ಷಣ ಪೂರ್ಣದಿಂದಲಿ ಬೆಳದವದಕೋ |
ಘನ ಮೂರುತಿ ನಮ್ಮ ವಿಜಯ ವಿಠ್ಠಲರೇಯ |
ಗುಣ ಪೂರ್ಣ ಶಾಂತಿಯಿಂದಲಿನಿತು ಪುಟ್ಟಿಸಿದ ೩
ಅಟ್ಟ ತಾಳ
ಏಕದ್ವಯತ್ರಯ ಚತು:ಪಂಚಷಟ್ ಸಪ್ತ |
ಈ ಕ್ರಮಕ್ಕೆ ಕಾಯ ಚರಮ ಪರಿಯಂತ |
ಲೋಕೇಶಗೆ ಇಪ್ಪತ್ತೆಂಟು ಭಿನ್ನಾಂಶದಲ್ಲಿ
ವಾಕುವ್ಯವಹಾರ ಜಗದೊಳುಪಾದಾನಾದಾ |
ಪ್ರಕೃತಿಗಳೆಲ್ಲ ಲಿಂಗ ಸಂಬಂಧವೊ |
ಆಕಾರವೆನ್ನಿ ಸೂಕ್ಷ್ಮ ನೋಡಲು ಸ್ಥೂಲ |
ಪ್ರಾಕು ವಿಚಾರಿಸಿ ದ್ವಿತೀಯ ಶರೀರವು |
ಶೋಕ ವಿನಾಶನ ವಿಜಯ ವಿಠಲರೇಯ |
ಬೇಕಾದ ವರವೀವ ಈ ಪರಿಕೊಂಡಾಡೆ ೪
ಆದಿತಾಳ
ವಿಷಮಾವಸ್ಥೆ ಯಾಗದ ತತ್ಪೂರ್ವದಲ್ಲಿಯಿದೆ |
ಪುಸಿಯಲ್ಲವನಿರುದ್ಧ ದೇಹ ಪ್ರಾಪ್ತಿ |
ಬಿಸಿಜ ಭವಾಂಡ ಬಾಹ್ಯ ಪ್ರಥಮಾವರಣ ತತ್ವ |
ವಸುಮತಿ ಪರಿಯಂತ ಎಣಿಸು ಮೂಲ ಪ್ರಕೃತಿ |
ವಶನಾದ ವ್ಯಕ್ತ ಮಹಾಗುಣತ್ರಯಾತ್ಮಕ ಹಂಕಾ |
ರೆಸೆವ ಮನ ಜ್ಞಾನ ಕರ್ಮ ಮಾತ್ರ ಭೂತ ಪಂಚ |
ಮಿಸುಣಿಯೆಂದಂದಿ ದೇಹವಷ್ಯ ವಿಂಶತಿ ರಾ |
ಜಿಸುತಿಪ್ಪವು ನೋಡು ಯಿದೆಯಿದರೊಳು ಲಿಂಗ |
ದೆಶೆಯಿಂದ ಪಲ್ಲೈೀಸಿದ ಅನಿರುದ್ಧದೇಹ ಪ್ರಜ |
ನಿಸಿದವು ಭಿನ್ನಂಗಿ ತತ್ವ ತತ್ವದೇಹ |
ಬಿಸಿಜ ಸಂಭವಗೆ ದ್ವಿವಿಧ ಪ್ರಕೃತಿಯಿಂದ |
ದಶ ಪಂಚ ಮೇಲಾರು ಸಿದ್ಧವಾದವು ಪು |
ರುಷಗಾತ್ರ ಇದರಂತೆ ತಿಳಿದು ಕೂಡಿಸುವುದು |
ಅಸಂಭಾವಿತವಲ್ಲ ಇದರ ವಿನಾಯಿನ್ನು |
ಎಸಳು ಶರೀರವುಂಟು ವಿಜ್ಞಾನ ಚಿತ್ತ ಬುದ್ಧಿ |
ಅಶ್ರದ್ಧ ವ್ಯೆರಾಗ್ಯ ಬಲ ವೀರ್ಯ ಲೋಕ ಮಂತ್ರ |
ಪೆಸರನ್ನ ತಪ ಕರ್ಮ ಕರಾದಿಯೆಲ್ಯುಂಟು |
ಹಸನಾಗಿ ಇವುಯೆಲ್ಲ ಸಪ್ತಾ ವರ್ಕದೊಳಗೆನ್ನಿ |
ತ್ರಿಸರದ ಗುಣದ ಕಾರ್ಯ ಚತುರವಿಂಶತಿ ತತ್ವ |
ಮಿಸರಿಯಾದ ಮೇಲೆ ವಿರಾಟ್ ಸತ್ಯಲೋಕ |
ವಸುಧಿಗೆ ನಾಭಿಗಿರಿ ಸ್ವರ್ಗ ಭೂರ್ಭುವರಾದಿ |
ದಶದಿಕ್ಕಿನೊಳಗೆ ಈ ಪರಿ ರೂಪಾಂತರ ರೂಪ |
ಕುಶಲ ಸರ್ವದ ಕಾಣೊ ಪರಮಾಣು ಪ್ರದೇಶ |
ವಸತಿಯಾಗಿಪ್ಪನು ಅಂಶಿ ಅಂಶಾನಂತ |
ಬೆಸಸ ಬಲ್ಲವರಾರೊ ಈತನ ಮಹಿಮೆ ಮಾ |
ನಸದಲ್ಲಿ ನಿರ್ಜರಾದಿಗಣ ಎಣಿಸಲಾರದು |
ಅಸುರ ಸಂಹರ ವಿಜಯ ವಿಠಲರೇಯ |
ಪಶುಪತಿ ಸುರರಿಗೆ ಉತ್ತುಮನ ಮಾಡಿದ ೫
ಜತೆ
ಚತುರ್ಮುಖ ಧರಿಸಿದ ಶರೀರ ಇನಿತಯ್ಯಾ |
ಚತುರ ಮೂರುತಿ ತುರ್ಯ ವಿಜಯವಿಠಲನಿಂದ ೬

ಪಂಢರಪುರದಲ್ಲಿ ಪಾಂಡುರಂಗ ವಿಠಲನು

೭೩. ಪಂಢರಪುರ
ಧ್ರುವತಾಳ
ಅಂದು ಮಾನಿಸನಾ[ದೆ]ಲೋ ಹಾಹ ಕ್ಷೇತ್ರದಲ್ಲಿ |
ಬಂದು ಸುಳಿದು ಪೋದು [ದ] ಅರಿಯಾದೆ |
ಮಂದಮತಿಗ ನಾನು ಮನುಷ್ಯನ್ನವ ಬಿಡದೆ |
ತಿಂದ ಪ್ರಯುಕ್ತದಲ್ಲಿ ಇನಿತಾಯಿತೊ |
ಹಿಂದೆ ಮಾಡದೆ ಕರ್ಮಾವರ್ಪವಾಗಿದ್ದ ಮರವೊ |
ಸಂದೇಹ ಗೊಳಿಸುವುದು ನಿನ್ನ ಬಗೆಯೇ |
ಎಂದಿಗೆಂದಿಗೆ ತಿಳಿಯಾದಿದ್ದೆ ವಿಷಯಂಗಳಿಗೆ |
ಪೊಂದಿಕೊಂಡು ನಿನ್ನ ಒಗೆಯೋ |
ಎಂದೆಗೆಂದಿಗೆ ತಿಳಿಯಾದಿದ್ದೆ ವಿಷಯಂಗಳಿಗೆ |
ಪೊಂದಿಕೊಂಡು ನಿನ್ನ ಮಹಾಮಹಿಮೆಯಾ |
ಇಂದು ನೀನೆ ಕೃಪೆಯಿಂದ ಬಾಂಧವ ನಾಗಿ |
ಬಂದು ತಿಳಿಪಿದ ಕಾರಣದಿಂದಲಿ |
ನಂದವಾಯಿತು ಮನಕೆ ಉತ್ಸಾಹವೆಂದೆಂಬೋ |
ಸಿಂಧುವಿನೊಳಗೆ ಮುಣುಗಿ ತೇಲಾಡಿದೆ |
ಅಂದೆ ಈ ಪರಿಯಲ್ಲಿ ತಿಳಿಸಿದರಾದರೆ |
ಮಂದಿಯೊಳಗೆ ತಲೆ ಹೊರೆಯಾಗು ವೆನೆ |
ಇಂದಲ್ಲ ನಿನ್ನ ಮಾಯಾ ಅನಂತ ಕಲ್ಪಕೆ |
ಒಂದೊಂದು ಪರಿ ಉಂಟು ಬೊಮ್ಮಗರಿದು |
ಕುಂದದೆ ಸತ್ವರಿಗೆ ಮೊದಲು ವಿಷಯಾ ಆಮೇಲೆ |
ಸಂದು(ವೊ)ದಮೃತ ನೋಡ ನೋಡೆ |
ಎಂದು ನಿನ್ನಂಘ್ರದ್ವಯ ಪೂಜಿಪ ಸಜ್ಜನರು |
ಒಂದೆ ಮನಸಿನಲಿ ಸಾರುವರೊ |
ನಂದ ಗೋಕುಲದಲ್ಲಿ ಗೋಪಾಲಕನಾಗಿದ್ದೆ ದೇವ | ೧
ಮಟ್ಟತಾಳ
ಜ್ಯಾರಿಪೋದ ಜೀವ ಇಂದ್ರದೇವರ ಮನೆಯ |
ದ್ವಾರದ ಬಳಿಯಲ್ಲಿ ದಾಸ್ಯ ಭಾವ ವೆಂದು |
ಕಾರುಣ್ಯವೆ ಮಾಡಿ ಸ್ವಪ್ನದಲ್ಲಿ ಇದೆ |
ವಾರುತಿ ಪೇಳಲಾಯು ನಿಶ್ಚಯಿಸಿಕೊಂಡೆ |
ಆರಾರ ಸಾಧನ ಅವುದೊ ನಾನರಿಯೇ |
ಘೋರಪಾತಕ ಹರ ವಿಜಯವಿಠಲ ಹದಿ |
ನಾರು ಸಾವಿರ ಗೋಪಸ್ತ್ರೀಯರಾಳಿದ ಕೃಷ್ಣ ೨
ತ್ರಿವಿಡಿತಾಳ
ಈರ್ವರ ಕರಸುವದೆಂದವ ಪೇಳಿದ |
ಗೀರ್ವಾಣ ಸಭೆಯಲ್ಲಿ ನುಡಿದ ಮಾತು |
ಊರ್ವಿಯೊಳಗೆ ಸಿದ್ಧಪ್ರಮೇಯ ಇದೆ ನಿಜವೆಂದು |
ನಿರ್ವಾಧಿಕ ಬಾಲಾಪ್ರಾಯವೆನದೆ |
ಗರ್ವವ ತಗ್ಗಿಸಿ ಕರದು ಒಯ್ಯದೆ ಬಿಡರು |
ನಿರ್ವಾಹಕರ್ತರು ಮೇಲಿನವರು |
ನಿರ್ವಹಿಸಲಾರರು ಮತ್ರ್ಸರೆಂದೆನುತ ಆ |
ಓರ್ವನು ಕೂಗಿ ಸಾರಿಪೋದನು |
ಸರ್ವಥಾ ನಾನಿದಕೆ ಶಂಕಿಸುವವನಲ್ಲಾ |
ಸರ್ವದ ನಿನ್ನಾ ಜ್ಞದವನೋ ನಾನು |
ಸರ್ವಶಕ್ತನೋ ಕೇಳೋ ಬಿನ್ನಪ ಒಂದುಂಟು |
ಪೂರ್ವದಲ್ಲಿದ್ದ ಮನಸ್ಸಿನ ಪೇಕ್ಷ |
ಗೀರ್ವಾಣ ನದಿಸ್ನಾನ ಗಯ ಪಿಂಡದಾನಾ |
ಸರ್ವೆಂದ್ರಿಯಾ ಗಳಿಂದ ನಿನ್ನ ಸೇವೆ |
ದರ್ವಿ ಭೂತಸ್ಥನಾಗಿಹನೆಂದು ಮನ್ನಿಸಿ |
ಪೂರ್ವಮತಿಯ ಕೊಟ್ಟು ಪಾಲಿಸುತ್ತ |
ಇರ್ವಗೆ ಮಾಡಿಸು ಪುಸಿಯ ಗೊಡದೆ ಮಾತು |
ದೂರ್ವಿನಾದರೂ ನಿನ್ನಗೆ ಕೊಡಲರಿಯಿನೋ |
ಶರ್ವಾದಿಗಳ ವಂದ್ಯ ವಿಜಯ ವಿಠಲಕೃಷ್ಣ |
ನಿರ್ವಾಣಗಿಂದಧಿಕ ನಿನ್ನ ಭಕ್ತಿ ಮುಕುತಿ ಸುಖ ೩
ಅಟ್ಟತಾಳ
ಕಸಗೊಂಡು ಭೂಪತಿ ತಿರುಗಿ ಕೊಡುವೆನೆಂದು |
ವಸಿಕರನಾಗಿ ಬಡವಂಗೆ ಒಲಿದಾರೆ |
ವಸುಧಿ ಮಾನವರೆಲ್ಲಾ ಒಂದಾಗಿ ಪೋಗಿ ಮಾ |
ಣಿಸಲಾಗಿ ಭೂಪತಿ ಕೊಡದಿಪ್ಪನೇ |
ಬಿಸಿಜ ನಾಭನೆ ಕೃಪಾರ ಸಪೂರ್ಣ ದೃಷ್ಟಿಲಿ |
ನಸುನಗೆಯಲಿ ನಿನ್ನ ಭಕುತನ್ನ ಸಂತಾಪ |
ಕೊಸರಿದರಿವರೆಂದು ಇಚ್ಛೆ ಮಾಡಿದರೆ ನಿ |
ಲ್ಲಿಸಲಾಪರೆ ಸರ್ವಲೋಕದವರು ಕೂಡಿ |
ಪಶುಪತಿ ಮಿಕ್ಕಾದವರು ಈ ಮಾತಿಗೆ |
ಕುಶಲವಾಗಲೆಂದು ನಿನ್ನ ಸ್ತುತಿಪಾರು |
ವಿಷ ಭುಂಜ ವಿಜಯ ವಿಠಲ ಕೃಷ್ಣ ಒಲಿದಾರೆ |
ಹಸಿಗೆಟ್ಟು ಪೋಗುವುದು ಅನಾದಿ ದುಷ್ಕರ್ಮ ೪
ಆದಿತಾಳ
ಚಿತ್ತವಾದರು ಹರಿಯ ಚಿತ್ತಜನಯ್ಯಾ ನಿನ್ನ
ಚಿತ್ತ ನಮ್ಮ ಭಾಗ್ಯ |
ಹತ್ತರಾ ತುತ್ತು ಪುಣ್ಯಕೀರ್ತಿಯಂ ಬರುವಂತೆ |
ವಾರ್ತಿಯಾಗಲಿ ಎನ್ನ ಅರ್ತವೆ ಪರಿಹರಿಸು |
ಸ್ವೋತ್ತಮರ ಗುರುವೆ ಎತ್ತಿ ಕರವ ಮುಗಿವೆ |
ಮತ್ತೊಂದಾವರು ಅರಿಯೆ ಮಿತ್ರಾನೆ ನಮಗೆ ನೀನು |
ನಿತ್ಯದಲ್ಲಿ ರಕ್ಷಿಸು ಸತ್ಯಸಂಕಲ್ಪ ಸಿದ್ಧಿ ವಿಜಯ ವಿಠಲ ಇದೇ |
ಉತ್ತರ ಲಾಲಿಸೈ ಅರಿಷ್ಟ ನಿವಾರಣಾ ೫
ಜತೆ
ಸಂತಾಪ ಕಳೆವಲ್ಲಿ ನೀನಲ್ಲದಿನ್ನಿಲ್ಲ |
ಶಾಂತ ಮೂರುತಿ ನಮ್ಮ ವಿಜಯವಿಠಲ ಕೃಷ್ಣ ೬

ಹರಿದಾಸರ ಮೊರೆಗೆ ಭಗವಂತನು


ಧ್ರುವ ತಾಳ
ಅಂದೆ ಹರಿಮೆರೆದರು ನಿನ್ನಲ್ಲಿಗೆ ಕರ !
ತಂದು ತವಕದಿಂದ ಬಲು ದಯಾಳು !
ಎಂದು ಒಂದು ಕಾಸುಕೊಳ್ಳದೆ ವಿಶ್ವಾಸದಲ್ಲಿ ಪು !
ರಂದರ ದಾಸರು ಪರಿಪಾಲನೆ ಮಾಡಿ !
ಒಂದೆ ಮನಸಿನಲ್ಲಿ ಒಪ್ಪಿಸಿ ಕೊಟ್ಟರಿನ್ನು !
ಸಂದೇಹವೇನು ಕಾರಣ ತಿರುವೆಂಗಳಾ !
ತೀಂದ್ರಿಯ ವಿಜಯ ವಿಠ್ಠಲ ಭಕ್ತವತ್ಸಲ !
ಎಂದೆಂಬ ಬಿರಿದುಗಳುಂಟು ಮಾಡಿಕೊಳ್ಳೊ ೧
ಮಟ್ಟ ತಾಳ
ಗರ್ತಿಯ ಬಳಿಯಲ್ಲಿ ತೊತ್ತು ಸೇರಿಯಿರಲು !
ತೋತ್ತಿನ ಎಳದೊಯ್ಯೆ ಗರ್ತಿಗೆ ಅವಮಾನ !
ಕರ್ತೃ ಕುಳಿತಿರಲು ಭೃತ್ಯರ ಎಳದೊಯ್ಯೆ !
ಭೃತ್ಯನ ಅವಮಾನ ಕರ್ತೃವಿಗಲ್ಲವೆ !
ಕರ್ತ ವಿಜಯ ವಿಠಲತ್ಯಂತ ಗುಣನಿಧಿ !
ಭೃತ್ಯನ ಪರವಶಾವರ್ತಿ ಮಾಜದಿರೊ ೨
ರೂಪಕ ತಾಳ
ಒಬ್ಬರ ಬಳಿಗೆ ಮೇಲುಬ್ಬಸ ಬದುಕಲಿ !
ಕಿಭ್ಯಾ ದಿಗೀರಿ ಕೊಂಡೊಬ್ಬಬ್ಬಾ ಎನುತಲಿ !
ಕಿಬ್ಬಿತೆಂದರೆ ಪೋಗಿ ಅಬ್ದಿಶಯನ ನಿನ್ನ !
ಹೆಬ್ಬಾಗಿಲ ಮುಂದೆ ನಿಬ್ಬರದಲಿಯಿಪ್ಪೆ !
ಯುಬ್ಬಟ ದೇವ ರಬ್ಬಾಳಿಗೆ ಸಪ್ಪು !
ತಬ್ಬಿಬ್ಬಿಗೊಳಸಾದೆ ಒಬ್ಬಿ ಒಬ್ಬಿಗೆ ಹಾಕು !
ಶಬ್ದಾತೀಗ ವಿಜಯ ವಿಠ್ಠಲರೇಯನೆ !
ಸುಬ್ಬಿದಾ ಒಡಿವೆ ಮತ್ತೊಬ್ಬರಿಗೀಯೇನೊ ೩
ತ್ರಿವಿಡಿ ತಾಳ
ಬೆಲೆಗೊಂಡ ಬದುಕು ನೀ ಕೆಲಕೀಡಾಡಿದರೆ !
ಸಲೆ ಸಲ್ಲುವದೆ ಬಿರಿದು ಸಕಲರೊಡಿಯನೆಂಬೊ
ಛಲದಲ್ಲಿ ಪೊಗಳಿಸಿಕೊಳುತ ಬಿರುದನೆತ್ತಿ !
ಇಳಿಯೊಳು ತಿರುಗುವಗ್ಗಳಿಕೆಯ ಬಿಂಕವು !
ಬಲುದೈವ ವಿಜಯ ವಿಠ್ಠಲ ನಿನ್ನ ಪಾಲಾದೆ !
ಮಲ ಮನವ ಕಳೆದು ನಿಶ್ಚಲ ಗುಣನ ಮಾಡೊ ೪
ಝಂಪಿತಾಳ
ಸಾಕದಿದ್ದರೆ ನೋಡು ನಿನ್ನ ಶರಗ ಪಿಡಿದು !
ಲೋಕದೊಳಗೆ ಎಳೆದು ರಚ್ಚಿಗಿಕ್ಕೆ !
ಪೋಕತನದಿಂದಲ್ಲಿ ದೂರದಲೆ ಬಿಡುವೆನೆ !
ವೈಕುಂಠಕೆ ನೀನು ಓಡಿ ಪೋದರೇನು !
ಲೋಕ ಬಾಂಧವ ಸಿರಿ ವಿಜಯ ವಿಠ್ಠಲ ವಿ !
ವೇಕ ಮತಿಯನು ಕೊಟ್ಟು ಲೌಕಿಕ ಬಿಡಿಸೊ ೫
ಅಟ್ಟ ತಾಳ
ನಂಬಿದೆ ನಂಬಿದೆ ನಿನ್ನನು !
ನಂಬಿದವರಿಗೆ ಸುರಧೇನು !
ಇಂಬಾಗಿ ಎನ್ನಯ ಹೃತ್ಕುಮಲದೊಳು !
ಬಿಂಬ ಮೂರುತಿ ತೋರೊ ಗಂಭೀರದಿಂದ !
ಕುಂಭಿಣಿಧರ ಸಿರಿ ವಿಜಯ ವಿಠ್ಠಲ ಆ!
ರೆಂಬರ ತೊಲಗಿಸು ಡಿಂಬ ನಿರ್ಮಳಗೈಸು ೬
ಆದಿ ತಾಳ
ಚರಣದಂಗುಟದಲ್ಲಿ ಸೇರಿಸಿ !
ಪೊರೆವುದು ದಯದಿಂದ !
ಹಿರಿದಾಗಿ ಬಂದ ಪಾಪದ ರಾಶಿಯಾ!
ಹರಿಸುವುದು ಛಂದ !
ಕರುಣಾಕರ ಮುದ್ದು ವಿಜಯ ವಿಠಲನೆ !
ತ[ರ]ಳನ ಅಪರಾಧ ನಿರುತ ಎಣಿಸದೆ !
ಪರಿ ಪರಿಯಿಂದಲಿ ಪರಮಗತಿಗೆ ಒಯ್ಯೊ ೭
ಜತೆ
ಕೈಯ್ಯಾ ಬಿಡದಿರೊ ಎನ್ನ ಕೈಯ್ಯ ಬಿಡದಿರೊ ಹರಿ !
ಕೈಯ್ಯಾ ಬಿಡದೆ ಕಾಯೋ ಅಯ್ಯಾ ವಿಜಯ ವಿಠ್ಠಲ೮

ಭಗವಂತನು ದೇಹ ಮತ್ತು ಇಂದ್ರಿಯಗಳನ್ನು


ಧ್ರುವ ತಾಳ
ಅಕಟಕಟ ಜನಿಸಿ ಭಾರಕನಾದೆ ಭೂಮಿಗೆ
ವಿಕಳಮತಿಯಿಂದ ಪಾಪಕ್ಕೆ ಎರಗುತ್ತ
ಸಕಲ ಕಾಲದಲ್ಲಿ ಪುಣ್ಯಕ್ಕೆ ಹಾನಿಬಗೆದು ನಿ
ಲಕವಿಲ್ಲವಾದ ನರಕಕ್ಕೆ ಪೋಗುವ
ಯುಕುತಿಯಲ್ಲಿ ಅಗ್ರಜನುಮಕೆ ಬಂದು
ಸುಕೃತಾರ್ಥ ಮುಕುತಾರ್ಥ ತಿಳಿಯದೆ ಹಿಂ
ದಕೆ ಬೀಳುವೆ ಶುಕ ಸೂಕರ ಶು
ನಕ ಜೀವಾದಿಯ ರಾಸಿಯೊಳಗೆ ಪೊಕ್ಕು ಹೇ
ಶಿಕೆ ಬಡುತಲಿ ದು:ಖವೆಂಬೊ ವಿಷದ ಪಾ
ವಕದೊಳಗೆ ಬೆಂದು ಸಾಧನ ಮಾಡಿಕೊಂಬುವುದಕೆ ಕಾಣೆನೊ
ಅಖಿಳ ಜೀವೇಶ ಮಹಾಮುಖ ವಿಜಯವಿಠ್ಠಲ ಪೋ
ಷಕ ನಾಫ್ರನುದ್ದಾರಕನು ನೀನೆ ೧
ಮಟ್ಟತಾಳ
ಈ ಜನುಮ ತಪ್ಪಲು ಆ ಜನುಮ ಬಪ್ಪದು
ಬೀಜ ಮಾತೇ ಇದು ಮಾಜವುದೆ ಅಲ್ಲಿ
ಜೂಜಾಡಿದಂತೆ ತನ್ನ ಜಯ ಅಪಜಯವು
ಮೂಜಗದೊಳಗೆ ಸಹಜವೆಂಬುದೆ ಸಿದ್ದ
ಬೀಜನಾಮ ವಿಜಯವಿಠ್ಠಲ ಮುನಿಗೇಯಾ
ವಾಜಿಗೆಟ್ಟು ಯಮರಾಜನಲ್ಲಿ ಸಿಗುವೆ ೨
ತ್ರಿವಿಡಿತಾಳ
ಶಿರವೆ ಬಾಗುವುದಕ್ಕೆ, ನಯನಂಗಳು ನೋಡಿ
ಹರುಷವಾಗುವುದಕ್ಕೆ, ಕರ್ನಗಳು ನಿತ್ಯ
ಹರಿಕಥೆ ಕೇಳುವುದಕ್ಕೆ ನಾಸಿಕ
ನಿರ್ಮಾಲ್ಯಾಘ್ರಾಣಿಸಲು, ನಾಲಿಗೆ ಕೊಂಡಾಡಲು
ವರವದನ ಪ್ರಸಾದ ಉದರ ತುಂಬುವುದಕ್ಕೆ
ಕರಗಳು ಸೇವಿಗೆ, ಚರಣ ತೀರ್ಥಯಾತ್ರೆಗೆ
ಶರೀರವು ನಿನ್ನ ಚರಣಕ್ಕೆರಗುವುದಕೆ
ಕರುಣಿಸಿರಲು ಸರ್ವ ದಯದಿಂದ ಒಲಿದು
ಮರದು ನಿನ್ನಯ ಲೀಲೆ ಮರನಾಗಿ ಬೆಳೆದು ಭೂ
ಸುರ ದೇಹ ಕೆಡಿಸಿದೆ ಶರಣ್ಯ ವಿಜಯ ವಿಠಲಾ ೩
ಅಟ್ಟತಾಳ
ಚರಿಸಿ ಬರುವುದಕ್ಕೆ ಪರಿಪರಿ ದೇಶಗಳ
ತಿರುತಿರುಗಬೇಕಾದರೆ ಮಾರ್ಗವ
ಹರಿ ಹರಿದಾಗೆ ಒಂದೊಂದು ಪುರಗಳು
ವಿರಚಿಸಿ ತಷಿ ಪೋಗದಂತೆ ದಶದಿಕ್ಕು
ವರ ತೃಷಿ ಹಸಿವಿಗೆ ಕೆರೆ ತೊರೆ ಫಲಗಳು
ಇರಬೇಕಾದರೆ ಗಿರಿ ಗಹ್ವರ ಚಂದ
ನೆರವ ಬರುವುದಕ್ಕೆ ತತ್ವಾಭಿಮಾನ್ಯರು
ಧರಿಯಂಬರ ಹಾಸಿಕೆ ಹೊದಿಕೆ ಮಾಡೆ
ಪೊರೆವನುದಿನ ಒಡನೊಡನೆಯಿದ್ದು
ಉರಮಾರಿಗಳು ಬಂದಡರದಂತೆ ಮಹ
ವರಹ ವಿಜಯ ವಿಠ್ಠಲ ನೀನೆ ಗತಿ ಎನಲು
ಮರಣ ಕಾಲಕೆ ತನ್ನ ಸ್ಮರಣೆ ಪಾಲಿಸುವುನು ೪
ಆದಿತಾಳ
ಇಂತು ಹರಿಕರುಣಿಸಲು ಚಿಂತಿಮಾಡಿ ವ್ಯರ್ಥನಾನು
ಸಂತಾಪ ಹಚ್ಚಿಕೊಂಡು ಭ್ರಾಂತಿಯಲ್ಲಿ ಕೆಡುವುದು
ಸಂತೆ ಕೂಟ ನೆರೆದ ತೆರದಂತೆ ಸಂಸಾರದ ಮಾಯಾ
ತಂತ್ರದಲ್ಲಿ ಸಿಗಬಿದ್ದು ಅಂತಿಗೆ ಭಂಗವಾಗೋದು
ಎಂದು ಪೇಳಲಯ್ಯಾ ಏಕಾಂತ ಹರಿಯ ಪಾದ
ಕ್ರಾತನಾಗಿ ಕಷ್ಟವಿಲ್ಲದೆ ಪಂಥವ ಪಿಡಿಯಲೊಲ್ಲದು
ಶಾಂತಿದ ವಿಜಯ ವಿಠ್ಠಲನಂತ ಮಹಿಮ ಬಲು ದಯಾಳು
ಚಿಂತೆಯನ್ನು ಕಳೆದು ತನ್ನವರಂತೆ ಮಾಡಿ ಸಾಕುವನು೫
ಜತೆ
ಪರಮಮಿತ್ರೇತಿ ಸ್ವಸ್ತಯೇ ಪರಿಪೂರ್ಣಾಯ ಕಾಮಾಯಾ
ಹಿರಣ್ಯ ಗರ್ಭನಾಮಾ ವಿಜಯ ವಿಠ್ಠಲ ಧೊರಿಯೆ೬

ನಿವೇದನಾತ್ಮಕ ಸುಳಾದಿಗಳನ್ನು

೯೧
ಧ್ರುವತಾಳ
ಅಕಳಾಂಕ ಚರಿತಾ ನಿಷ್ಕಳಂಕಾಭರಣಾ
ಅಖಿಳ ಜಗತ್ತಿನ ಸಂತತ ಧಾರಾ
ಲಕುಮಿ ಕುಚ ಕುಂಕುಮಾಂಕಿತ ರಜೋ ಭೂಷಾ
ಅಖಿಳ ಜೀವರಿಗತ್ಯಂತ ಭಿನ್ನಾ
ಶಕಟಾಸುರ ಭಂಜನ ನಿತ್ಯನಿರಂಜನ
ಮುಕುತಿ ಪ್ರದಾಯಕ ಪರಿಪೂರ್ಣ ರೂಪಕ
ಶಕುತನಿಗೆ ಮುಕುತಿಯನಿತ್ತ ಸರ್ವಸಮರ್ಥಾ
ರುಕುಮನ್ನ ಮಾನಭಂಗ ಚಾಪಸಾರಂಗ
ಭಕುತ ಪುರಂದರನ ಹೃದಯಾಬ್ಜಭೃಂಗಾ
ಶುಕನುತ ಯಜ್ಞ ಸಾಧನ ವಿಜಯವಿಠ್ಠಲ
ಮಕ್ಕಳ ಮಾಣಿಕವೇ ಪಂಚಮುಖನ ಪ್ರೀಯಾ ೧
ಮಟ್ಟತಾಳ
ರಂಗ ರಂಗ ವಿಹಂಗ ತುರಂಗ
ಮಂಗಳಾಂಗ ತರಂಗ ಮಹಿಮಾ
ಅಂಗುಟಾಗ್ರದಿ ಗಂಗೆಯ ಪೆತ್ತಾ
ನಂಗಜ ಜನಕ ತುಂಗಕಾಯ ಸು
ರಂಗಳ ಕೋಶ ಮಂಗಳ ದಾಸ
ರಂಗಳದೊಳಗೆ ಸಂಗ ಸುಖದಲ್ಲಿ
ಸಂಗೀತ ಸ್ವರಜಾಗಂಗಳಿಗೆ ಬೆಡಗಂಗಳನು ತೋರಿದ ಪಾ
ರಂಗತ ದೈವ ಲಾಂಗುಲಿರಮಣ ವಿಜಯವಿಠ್ಠಲ
ರಂಗ ರಂಗ ಭೋಗಂಗಳ ಮಾತಿಗೆ
ತುಂಗ ಕಾಯ ಸುರಂಗಳ ಕೋಶಾ ೨
ತ್ರಿವಿಡಿತಾಳ
ಸ್ವಲ್ಪವಾದರು ತನ್ನ ನಂಬಿದ ಜನರ ಸಂ
ಕಲ್ಪಕ್ಕೆ ಕಡಿಮೆ ಕರ್ಮವು ಮಾಡಲು
ಅಲ್ಪಾದೊಳೆಣಿಸದೆ ಒಂದಾನಂತೆ ಮಾಡಿ
ಕಲ್ಪ ಕಲ್ಪಕ್ಕೆ ಫಲವಾ ಬೆಳಿಸುತಿಪ್ಪಾ
ಮೂಲ್ಪಂಥ ತಿಳಿಯದೆ ದುಷ್ಟ ಜೀವರು ನಿತ್ಯ
ಆಲ್ಪರಿದು ಹಗಲಿರಳು ಅರ್ಚಿಸಿದರೂ
ನಿಲ್ವನವನ ಪುಣ್ಯ ಭಸುಮ ಮಾಡಿ ಬಿಡುವ
ಬಲ್ಪಂಥಗಾರನು ಗರುಡ ಗಮನಾ
ತಲ್ಪ ಸಾಗರ ಯಜ್ಞಾ ಭೃತ ವಿಜಯವಿಠ್ಠಲ
ವಲ್ಪಿಗೆ ಮೆಚ್ಚನು ಗೂಢವಾಗದನಕಾ ೩
ಅಟ್ಟತಾಳ
ಶರಣಗಾಗಿ ತನ್ನ ಅರಸಿಯ ತೊರೆವಾನು
ಶರಣಗಾಗಿ ತನ್ನ ಪುರವನ್ನು ಬಿಡುವನು
ಶರಣಗಾಗಿ ತನ್ನ ಶರೀರವ ಕೊಡುವನು
ಶರಣಗಾಗಿ ತನ್ನ ಏಕಾಂತ ಒಲ್ಲನು
ಶರಣನ ಬಿಡನೊ ಅರಿಗಳ ಮುರಿದು
ಧರಿಯೊಳಿದರಿಯೊ ದುರಿತಾಂಥ ಹರಿದು
ಶರಣರ ಕಾಣದೆ ಅರಘಳಿಗೆ ನಿಲ್ಲಾ
ಶರಣರು ಕರೆದರಬ್ಬರಕೆ ನಿಲ್ಲದೆ ಬರುವಾ
ಶರಣು ದಕ್ಷಿಣನಾಮ ವಿಜಯವಿಠ್ಠಲನೀತ
ಶರಣರಲ್ಲದೆ ಅನ್ಯರನ ನೋಡುವನೆ ೪
ಆದಿತಾಳ
ಪುಟ್ಟಿದ ದಾಸರಿಗೆಲ್ಲ ಕಟ್ಟಿಮನೆ ಪುಂಡರೀಕ
ವಿಠ್ಠಲನ್ನ ಪಾದದಲ್ಲೆ ಪುಟ್ಟಿದ ರಾಜಕವಚ
ತೊಟ್ಟು ಪೂರ್ಣವಾಗಿ ಮನವಿಟ್ಟು ಭಕ್ತಿರಸವೆಂಬ
ಗುಟ್ಟು ಒಬ್ಬರಿಗೀಯದೆ ಕಟ್ಟಡಿ ಮಾರ್ಗವಿಡದೆ
ಬೆಟ್ಟದೊಡಿಯ ತಿಮ್ಮ ವಿಜಯವಿಠ್ಠಲ ತುಂಗವಾಸನ
ಇಟ್ಟು ಹೃದಯದೊಳಗೆ ಬಪ್ಪ
ಹುಟ್ಟು ಸಾವು ತೊಡುವದಲ್ಲಾ ೫
ಜತೆ
ಈತನ ಕಾಣದಲಾರಿಗೆ ಗತಿಯಿಲ್ಲಾ
ಆತುಮವಂತ ನಾಮ ವಿಜಯವಿಠ್ಠಲ ಬಲ್ಲಾ೬

ಭಕ್ತರಲ್ಲಿ ಭಗವಂತನಿಗೆ ಇರುವ

೯೨
ಧ್ರುವತಾಳ
ಅಚ್ಯುತಾನಂತ ಕೃಷ್ಣ ಗೋವಿಂದ ಮಾಧವ
ಸಚ್ಚಿದಾನಂದಾತ್ಮಕ ಸರ್ವೋತ್ತಮಾ
ಸುಚ್ಚರಿತ ರಂಗಾ ಕಾಳಿಂಗ ಮದಭಂಗಾ
ನಿಚ್ಚ ಭಕ್ತರ ಮನೋಹರಾ ವಿಶ್ವಂಭರಾ
ಅಚ್ಚಾಟಾಡುವ ದೈವ ಶ್ರೀ ವಾಸುದೇವಾ
ಅಚ್ಚಾ ಕೌಸ್ತುಭಹಾರ ಅಸುರಕುಲ ಕುಠಾರಾ
ಪುಚ್ಛ ಭಾಗದಲ್ಲಿ ಭಕ್ತನ್ನ ಇಟ್ಟ ಧಿಟ್ಟಾ
ಎಚ್ಚರವುಳ್ಳ ಪುರುಷಾ ಯಾದವೇಶಾ
ಮೆಚ್ಚಿದೆ ನಾನು ನಿನ್ನ ಬಲು ಪ್ರತಾಪವ ಕೇಳಿ
ಚಚ್ಚಾರದಲ್ಲಿ ಸಲಹೋ ಚಂದ್ರವದನಾ
ಮುಚ್ಚುಮರೆ ಯಾತಕೆ ಮುಚುಕುಂದ ನ್ನಪ ವರದ
ಮೆಚ್ಚುಗೊಳಿಸಿದವರ, ನಿರುಪಾ ಕಾಯ್ವ ದ್ವಾರಾ
ನೆಚ್ಚಿದವರ ಬಂಟಾನೆನಿಪಾ ವೈಕುಂಠಾ
ಹೆಚ್ಚಿನ ಹೆದ್ದೈವ ವಿಜಯವಿಠ್ಠಲರೇಯಾ
ಎಚ್ಚರನೊ ನೀನು ನಂಬಿದ ದಾಸರಿಗೆ ೧
ಮಟ್ಟತಾಳ
ಭಕುತರಿಗೆ ನೋವು ಭಕುತರಿಗಾಪತ್ತು
ಭಕುತರಿಗೆ ಪವಾಡಾ ಭಕುತರಿಗೆ ಕೇಡು
ಭಕುತರಿಗೆ ಬಂಧಾ ಭಕುತರಿಗೆ ನರಕಾ
ಭಕುತರಿಗೆ ವ್ಯಾಧಿ ಭಕುತರಿಗೆ ದುಃಖಾ
ನಿಕರಂಗಳು ಹಣಿಕಿ ನೋಡದಂತೆ
ಅಖಿಳ ಜನ್ಮಾದಿ ಪಾಲಕ ನೀನೆ ಜೀಯ್ಯ
ಅಯ್ಯಾ ಅಯ್ಯಾ ಅಯ್ಯೋಯೊ
ಹೊ ಹೊ ಹೊ ಹೊ ನಿನ್ನ ಬಿರಿದು
ಸಕಲೇಶ್ವರ ನಮ್ಮ ವಿಜಯ ವಿಠ್ಠಲ ನೀನೆ
ಮುಕುತೇಶ್ವರ ನಿನ್ನ ಮೂಲವೆ ತಿಳಿಯಾದೊ೨
ತ್ರಿವಿಡಿತಾಳ
ಭಕುತರಾಡಿದ್ದೆ ಆಟಾ ಭಕುತರು ಮಾಡಿದ್ದೆ ಮಾಟ
ಭಕುತರು ನೋಡಿದ್ದೆ ನೋಟಾ ಭಕುತರುಕಾಡಿದ್ದೆ ಕಾಟಾ
ಭಕುತರು ಉಂಡದ್ದೆ ಊಟಾ ಭಕುತರು ಕೂಡಿದ್ದೆ ಕೂಟಾ
ಭಕುತರು ಓಡಿದ್ದೆ ಓಟಾ ಭಕುತರಂದದೆ ನೀಟಾ
ಭಕುತರು ವಶನೇ ಭಕುತರಾಧೀನನೇ
ಭಕುತರಿಗಾಗಿ ಬಾಳುವ ದೈವವೇ
ಭಕುತರ ಬಾಯಿಂದ ಪೊರಟಾಕ್ಷಣ ನುಡಿ
ಅಕಟಾ ಲಾಲಿಸುತಿಪ್ಪಾ ಓವಿಗನೇ
ಭಕುತರ ಕೊಟ್ಟ ಮಾತಿಗೆ ಸಲೆ ವಿನುತಲಿ
ಮುಕುಟವ ತೂಗುವ ಅಪ್ರಾಕೃತನೇ
ಭಕುತಿ ಪಾಶಕೆ ಬಪ್ಪ ವಿಜಯ ವಿಠ್ಠಲ ನಿನ್ನ
ಭಕುತವತ್ಸಲ ತನಕೆ ನಮೋನಮೋ ಎಂಬೆ೩
ಅಟ್ಟತಾಳ
ಹಿಡಿ ಹೊನ್ನು ಉಂಬಾ ಸಂಬಳಿಗನು ಕಾಯ್ದಂತೆ
ಬಿಡದೆ ಭಕುತರಿಂದ ಒಂದಡಿ ತೊಲಗದೆ
ಎಡಬಲ ಹಿಂಭಾಗ ಮುಂಬಿನಲ್ಲಿ ನಿಂದು
ಹಿಡಿದಸಿ ಚಕ್ರ ಗದಾ ಚಾಪ ಶರದಿಂದ
ಒಡ ಒಡನೆ ಇದ್ದು ಕಾಲಕಾಲಕೆ ಭುಯ
ತೊಡರು ಹೊರಿಸದಂತೆ ಸಾಕುವ ಮಹಾಧೀರ
ಬಿಡನು ಭಕ್ತರನೆಂದೊ ಮೊದಲೇ ಬಿರಿದು ಉಂಟು
ನುಡಿ ಒಮ್ಮೆಯಾದರು ಧನ್ಯನಾಗಲಿ ಬೇಕು
ಕಡು ತೇಜೋಮಯರೂಪ ವಿಜಯ ವಿಠ್ಠಲ ನಿನ್ನ
ಅಡಿಗಳ ತುತಿಪರು ಅವರೇ ಧನ್ಯರು ಕಾಣೋ೪
ಆದಿತಾಳ
ಭಕುತರಿಗಾಗಿ ನೀ ಅವತಾರ ಧರಿಸಿದೆ
ಭಕುತರಿಗಾಗಿ ನೀ ಚೋರನೆಂದೆನಿಸಿದೆ
ಭಕುತರಿಗಾಗಿ ನೀ ಜಾರನೆಂದೆನಿಸಿದೆ
ಭಕುತರೇ ಎಂದಿಗೂ ನಿನಗೆ ಪಂಚಪ್ರಾಣಾ
ಭಕುತರ ಕೈಯಿಂದ ಸೃಷ್ಟಿಯ ಮಾಳಿಪೆ
ಭಕುತರಿಗಾಗಿ ಸೂರೆ ನಿನ್ನ ಪರಾಕ್ರಮಾ
ಭಕುತರಿಗೆ ನೀನೆ ನಿನಗೆ ಭಕುತರೂ
ಭಕುತರು ದೋಷಮಾಡಲು ಪುಣ್ಯವೆನಿಸುವೆ
ಭಕುತರ ಪರಿಪಾಲಿಸೊ ವಿಜಯ ವಿಠ್ಠಲ ನಿನ್ನ
ಭಕುತರಿಗಿದ್ದ ಸ್ವಾತಂತ್ರ್ಯವಾರಿಗೆ ಇಲ್ಲಾ೫
ಜತೆ
ಭಕುತರಿಚ್ಛೆಯಂತೆ ನಡೆಸುವ ಮಹಾಮಹಿಮಾ
ಅಖಿಳ ಜೀವರ ಭಿನ್ನ ವಿಜಯ ವಿಠ್ಠಲ ನೀನೆ೬

ತೋತ ಎಂಬ ಬೇಟೆಗಾರನಿದ್ದ ಸ್ಥಳಕ್ಕೆ

೬೯. ತೋತಾದ್ರಿ
ಧ್ರುವತಾಳ
ಅಚ್ಯುತಾನಂತ ಮುಕುಂದ ಭಾರ್ಗವಿರಮಣ |
ಎಚ್ಚರಾದೈವ ಜಗದೇಕ ಮೂರ್ತಿಯಾ ಕಂಡೆ |
ಅಚ್ಚಾ ಮುತ್ತಿನ ಮುಕುಟಾ ಅರುಣೋದಯ ಕೆಂಪು |
ಪಚ್ಚಿದ ನೊಸಲ ಕಸ್ತೂರಿ ತಿಲಕನ ಕಂಡೆ |
ಅಚ್ಚಾ ಪೂವಿನ ಸರಾ ಕೊರಳೊಳು ತೂಗುತಿದೆ |
ಪಚ್ಚದ ಪದಕಾ ಉರದಲ್ಲಿ ಪೊಳೆವದು ಕಂಡೆ |
ನಿಚ್ಚಟ ಮದುವಣಿಗ ತೋತಾದ್ರಿಪುರ ವಾಸ |
ಹೆಚ್ಚಿನ ದೈವ ನಮ್ಮ ವಿಜಯವಿಠಲ ಸಂಘ್ರಿಗೆ |
ಎಚ್ಚರಿಕೆಯಾ ಪೇಳಿ ಶಿರವಾಗಿ ತುತಿಸಿಕಂಡೆ | ೧
ಮಟ್ಟತಾಳ
ಕುಂಡಲದ ಬೆಳಗು ಚಂಪನ ಶುಚಿಯಂತೆ |
ಗಂಡ ಸ್ಥಳದಲ್ಲಿ ಕಂಡೆನೊ ಎಳೆದುಳಿಸಿ |
ದಂಡೆ ಕೌಸ್ತುಭಮಣಿ ದುಂಡು ಮುತ್ತಿನ ಹಾರ |
ಕೊಂಡಾಡತೇನು ಮಂಡಲದೊಳಗುದ್ದಂಡ ತೋತಾದ್ರೀಶಾ |
ಖಂಡಪುರುಷ ಶ್ರೀ ವಿಜಯವಿಠಲನ್ನಾ |
ತಂಡ ತಂಡದಲಿಂದಾ ಕಂಡೆನು ಮನದೊಳಗೆ ೨
ತ್ರಿವಿಡಿತಾಳ
ಮಂಜು ಭಾಷಣ ತೇಜೋಪುಂಜಾಪುಷ್ಕರಾಜಾಕ್ಷಾ |
ಕಂಜಾರಿಹಸ್ತ ಶೋಭಂಜಯಾ ಕಟಿ ಚತುರ |
ಮುಂಜಾರಾಗೆಳವಾ ನಿರಂಜನವಾಸಾ ಕಾ |
ಳಂಜಾಯಾದೇವಾ [ಪ್ರ] ಭಂಜನ್ನನೋಡಿಯಾ |
ಕುಂಜಾರವರದ ತೋತಾದ್ರಿ ನಿಲಯಾ ಮೃ |
ತ್ಯುಂಜಯನುತಾ ನಮ್ಮ ವಿಜಯ ವಿಠಲಾ ವಜ್ರಾ |
ಪಂಜರ ಭಕ್ತರಿಗೆ ಪ್ರಾಂಜಲಿಯಲಿಕಂಡೆ ೩
ಅಟ್ಟತಾಳ
ಇಂದ್ರವಂದಿತ ಪಾದ ಚಂದ್ರ ವಂದಿತ ಪಾದ |
ಸ್ಕಂಧವಂದಿತ ಪಾದ ಸುಂದರ ಪಾರವಾರ |
ಇಂದು ರವಿ ಖಗೇಂದ್ರ ವಂದಿತ ಪಾದ |
ವೃಂದಾರಕ ವೃಂದವಂದಿತ ಸಿರಿ ಪಾದ |
ಅಂದಿಗೆ ಗೆಜ್ಜೆಲಿ ಅಂದವಾದ ಪಾದ |
ಇಂದು ತೋತಾದ್ರಿಲಿನಿಂದ ದೇವನ ಪಾದ |
ಮಂದರಧರ ಸಿರಿ ವಿಜಯ ವಿಠಲ ರೇಯಾ |
ಪೊಂದಿದವರ ಭವ ಬಂಧ ನಾಶನ ಪಾದ ೪
ಆದಿತಾಳ
ನಖಶಿಖ ಪರಿಯಂತ ಸಕಲಾಭರಣವಿಟ್ಟಾ |
ಸುಖ ಸಾಂದ್ರ ಲಕುಮಿನಾಯಕ ನಾಟಕಧಾರಾ |
ಅಕುಟಿಲರಾಪ್ತ ಕುಹಕರ ಸಂಹಾರಕನೆ |
ಮಕುಟಧಾರ ನಮ್ಮ ತೋತಾದ್ರಿ ಪುರವಾಸಾ |
ಧಿಕಾದೈವ ವಿಜಯ ವಿಠಲ ರೇಯನ ವ |
ನಕೆ ತಂದ ಇಂದು ನಾನು ಧನ್ಯನಾದೆ ಧರೆಯೊಳಗೆ ೫
ಜತೆ
ಭೂಮಿಯೊಳಾವಾವಾನಾದರು ಮನ್ನಿಸೆ |
ಸ್ವಾಮಿ ತೋತಾದ್ರೀಶಾ ವಿಜಯವಿಠಲ ಕಾಯ್ವಾ ೬

ಒಂದು ಕಾಲಕ್ಕೆ ಕರ್ನಾಟಕದ ಭಾಗವೇ

೭೪. ಪಂಢರಪುರ
ಧ್ರುವತಾಳ
ಅಚ್ಯುತಾನಂತನ ಕಂಡೆ |
ಸಚ್ಚಿದಾನಂದೈಕ ಸರ್ವೋತ್ತಮನ ಕಂಡೆ |
ಅಚ್ಚ ಮಲ್ಲಿಗೆ ವನಮಾಲಾನ ಕಂಡೆ |
ಪಚ್ಚಕಡಗ ವಿಹ್ಯರಾ ಕಂಡೆ |
ನೆಚ್ಚಿದ ಭಕ್ತ ಪೊರೆವದಾತನ ಕಂಡೆ ಅಚ್ಯುತಾನಂತ |
ಅಚ್ಚರಿಯಾ ದೈವಾವೆ ವಿಜಯವಿಠಲರೇಯಾ |
ನಿಚ್ಚಾ ಪಂಡರಪುರಿವಾಸಾ ರಂಗನ ಕಂಡೆ ೧
ಮಟ್ಟತಾಳ
ವಾಸುದೇವನ ಕಂಡೆ ವಾಮನನಾ ಕಂಡೆ |
ಕ್ಲೇಶನಾಶನ ಕಂಡೆ ಕೇಶವನ ಕಂಡೆ |
ವಾಸವಾನುಜನಾಗಿ ವಾಗೀಶ ಪಿತನ ಕಂಡೆ |
ಶ್ರೀಶ ವಿಜಯವಿಠಲೇಶ ಚಂದ್ರಭಾಗಾ |
ವಾಸ ರಂಗನ ಕಂಡೆ ವರನಾ ಕಂಡೆ ೨
ತ್ರಿವಿಡಿತಾಳ
ಕುಲಾ[ವಿ] ಶಿರದಲ್ಲಿ ಇಟ್ಟ ಸೊಬಗುಕಂಠ |
ದಲ್ಲಿ ಮೆರೆವ ಎಳೆ ತುಳಸಿಮಾಲೆ ನವ |
ಮಲ್ಲಿಕ ಸುರಗಿ ಜಾಜಿದಂಡೆ, ಉಡಿ |
ಯಲ್ಲಿಗುಲ್ಲಿಯ ಚೀಲಾ ಸಿಗಿಸಿಕೊಂಡಾಗೋವಾ |
ಳೆಲ್ಲಾರು ಒಂದಾಗಿ ತುರುವಿಂಡು ಕಾ[ಯುವ]ತಾ |
ಇಲ್ಲಿಗೆ ಬಂದಾ ಶ್ರೀವಲ್ಲಭಾ ಯುದುಪಾ |
ಚಲ್ಲಾಗಂಗಳ ಚಲುವ ವಿಜಯವಿಠಲ ಸ್ವಾಮಿಯಾ |
ಎಲ್ಲಿಂದ ಬಂದ ಮತ್ತೆಲ್ಲಿಪ್ಪನ ಕಂಡೆ ೩
ಅಟ್ಟತಾಳ
ಗೋಪಿಯನಂದನ ಗೋಪಿಯರರಸೆ |
ಗೋಪಾಲಾರಾ ಒಡಿಯಾ ಸಾಂದೀಪಿನಿ ಪ್ರೀಯಾ |
ದ್ರೌಪದಿಯಾ ಮಾನವ ಪರಿಪಾಲಕಾ |
ಕೋಪ ಕಾಳಿಂಗನ ತಾಪನಾಶನ ಸಂ |
ತಾಪಹರ ನಮ್ಮ ವಿಜಯವಿಠಲನ್ನ |
ಈ ಪಾಂ[ಡು]ರಂಗಾ ಕ್ಷೇತ್ರದಲ್ಲಿ ಕಂಡೆ ೪
ಆದಿತಾಳ
ಮನುಜನಾಗಿ ಧನುವನು ಮುರಿದು |
ದನುಜನ ಕಾಲಿಲೆ ಒರೆಸಿದೆ |
ಮನುಜನಾಗಿ ಮಡಿಯನ್ನು ಉಟ್ಟು |
ತನುವಿಗೆ ಗಂಧವ ಪೂಸಿದಾ |
ಮನುಜನಾಗಿ ಹರನ ಸೋಲಿಸಿ |
ತನುಜ ತನುಜನ್ನ ಬಿಡಿಸಿದ |
ಮನುಜನಾಗಿ ಮನುಜ ಧರ್ಮವ |
ಜನರಿಗೆ ಸೋಜಿಗ ತೋರಿದ |
ಮನುಜನಲ್ಲ ಇದು ಮಾಯಾದ ಬೊಂಬೆ |
ಘನ ವಿಜಯವಿಠಲನ್ನ ಕಂಡೆ |
ಮನುಜನಾಗಿ ಸೋಳಾ ಸಾಸಿರ ಗೋಪೇ[ರ] |
ಮನಸಿಗೆ ಒಪ್ಪಿದ ಮನುಜನಾಗಿ |
ಜತೆ
ಆವಾಗ ಬಿಡದಿಲ್ಲಿ ಆಡುವವನ ಕಂಡೆ |
ದೇವೇಶಾ ವಿಜಯವಿಠಲರಾಯನ ಕಂಡೆ ೬

ಕಂಚಿಯಲ್ಲಿರುವ ವರದರಾಜನನ್ನು ಕುರಿತ

೧೬. ಕಂಚಿ
ಧ್ರುವತಾಳ
ಅಡಿಗಡಿಗೆ ಭಕ್ತರನ ನೋಡುವ ರಾಜಾ |
ಎಡಿಗೆಡಿಗೆ ಭಕ್ತರನ ಪಾಲಿಸುವ ರಾಜಾ |
ನುಡಿನುಡಿಗೆ ಭಕ್ತರನ ನುಡಿಸುವ ರಾಜಾ |
ನಡಿಗಡಿಗೆ ಭಕುತರನ ಬಿಡದಿಪ್ಪ ರಾಜಾ |
ಜಡಿತಾಭರಣದಲ್ಲಿ ಝಗಝಗಿಪ ರಾಜಾ |
ಮುಡಿಗೆ ಪರಮಳ ಕುಸುಮಾ ಮುಡದಿದ್ದ ರಾಜಾ |
ಕುಡತಿ ಪಾಲವಲಿಗೆ ಒಲಿದ ವರದ ರಾಜಾ |
ಪಡಿಗಾಣೆ ಕಡೆ ಗಾಣೆ ಈತನ ವೈಭವಕ್ಕೆ |
ಪೊಡವಿಯೊಳಗೀತನ ಒಡೆತನಕ್ಕೆ |
ಒಡಒಡನಾಡುವ ವಿಜಯವಿಠಲನೀತ |
ಬಡವರಾಧಾರ ಕಂಚಿ ವರದರಾಜಾ ೧
ಮಟ್ಟತಾಳ
ರಾಜಾಧಿರಾಜಾ ರಾಜವಿರಾಜಿತ |
ರಾಜಪೂಜಿತ ರಾಜ ಶಿರೋಮಣಿ |
ರಾಜರಾಜಾಧೀಶ ರಾಜವಿಗ್ರಹ ಪೂರ್ಣ |
ರಾಜಮಂಡಲವದನಾ ರಾಜರಾಜ ವಿನುತಾ |
ರಾಜಶೇಖರ ತಾತಾ ರಾಜರಾಜಾಗ್ರಣಿಯೆ |
ರಾಜೀವದಳ ನಯನ ರಾಜ ಮೂರುತಿ ಖಗ |
ರಾಜಗಮನ ಕರಿರಾಜವರದ ದೇವ |
ರಾಜ ವಿಜಯವಿಠಲಾರಾಜ ಕಾಂಚೀನಗರ |
ರಾಜ ವರದರಾಜಾ ರಾಜರಾಜೋತ್ತುಮಾ |
ರಾಜ ರಾಜ ರಾಜಾ ೨
ರೂಪಕತಾಳ
ಒಂದು ದಿನ ವೈಕುಂಠ ಮಂದಿರದಲಿ ಹರಿ |
ಇಂದಿರಾ ಸಹಿತದಲಿ ಛಂದಾಗಿ ಇರುತಿದ್ದು |
ಮಂದಹಾಸದಲಿ ವಸುಂಧರೆದೊಳಗಿಂಥ |
ಮಂದಿರಾ ರಚಿಸಬೇಕೆಂದು ಮನದಲ್ಲಿ ತಿಳಿದೂ |
ಸುಂದರ ವಿಜಯವಿಠಲರೇಯಾ ಕಾಂಚಿಯಾ |
ಮಂದಿರ ವರದ ತಾನೆಂದು ಮೆರೆವೆನೆಂದು ೩
ಝಂಪೆತಾಳ
ಲೋಕೇಶನಿಂದಲರ್ಚನೆಗೊಂ[ಬೆ] ಮಿಗಿಲಾಗಿ |
ವೈಕುಂಠ ನಗರಕ್ಕೆ ಸರಿ ಎಂದೆನಿಸುವೇನೂ ಭೂ |
ಲೋಕದೊಳಗೆ ಚಿತ್ರಮಯವಾಗಿ ವಿರಚಿಸಿ |
ಶ್ರೀ ಕಾಂಚಿ ಎಂಬ ಅಭಿಧಾನದಲ್ಲೀ |
ಲೋಕೇಶಾದ್ಯರು ಪೊಗಳಲಾಶ್ಚರ್ಯವಾಗಿ ಅ |
ಲೌಕಿಕವೆಂದು ತಲೆತೂಗುವಂತೆ |
ಸಾಕಾರ ಕಾಂಚೀವರದ ವಿಜಯವಿಠಲಾ |
ನೇಕದಿನಕ್ಕೆ ಅಜನಿಂದಲರ್ಚನೆಗೊಂಡಾ ೪
ತ್ರಿವಿಡಿತಾಳ
ಇಂದಿರಾ ಭೂದುರ್ಗಭಾಗ ಏರ್ಪಾಟಿಸಿ |
ಒಂದೊಂದು ಅಧಿಕಕ್ಕೆ ಅಧಿಕ ಸೋಪಾನವು |
ಒಂದೆಂಟು ಚತುರವಿಂಶತಿ ದಶಾಪರಿಮಿತ |
ಕುಂದಣ ಬಲು ಮಣಿಗಳಿಂದಲಿ ಥಳಿಥಳಿಸಿ |
ಒಂದೊಂದು ಸೋಪಾನ ಮೆಟ್ಟಿ ಪೋಗಲು ಅವನ |
ನಂದಕ್ಕೆ ಸುರರು ವರ್ನಿಸಲಾರರೂ |
ತಂದುಕೊಡುವದು ಜ್ಞಾನ ಭಕುತಿ ವೈರಾಗ್ಯವ |
ಹಿಂದಾಗುವುದು ತಮೋರಾಜಸಗುಣವು |
ಪೊಂದುವಾದು ಸತ್ವಗುಣ ಸಾಧ್ಯವಾಗುವುದು |
ಇಂದಿರಾಪತಿಯ ಸಂದರುಶನಕ್ಕೆ |
ಸಿಂಧುರಾದ್ರಿ ಕಾಂಚಿವರದ ವಿಜಯವಿಠಲ |
ಬಂದಾಡಿದ ಸಕಲ ವೇದಾ ತುತಿಸುತಿರಲೂ ೫
ಧ್ರುವತಾಳ
ಸುತ್ತಾಲು ಪಾವನವಂತರಿಕ್ಷಕ್ಕೆ ತುಳ |
ಕುತ್ತಲಿವೆ ನಾನಾ ವೃಕ್ಷಂಗಳೂ |
ಮತ್ತೆ ಸರೋವರ ಮಹಾನಿರ್ಮಳವಾಗಿ |
ಚಿತ್ತಕ್ಕೆ ಮನೋಹರವಾಗುತಿದೆ |
ಎತ್ತ ನೋಡಿದರತ್ತ ಪ್ರಾಕಾರ ಗೋಪುರ |
ಕತ್ತಲೆ ಬಡಿದು ಅಂಜಿಸುತಿದೆ |
ತೆತ್ತಿಸಕೋಟಿ ದೇವತ್ತಿಗಳು ನೆರೆದು |
ಚಿತ್ತವಧಾರೆಂದು ಪೇಳೂತಿದೆ |
ಎತ್ತಿಪಿಡಿದ ಪತಾಕಿ ಸೂರೆ ಪಾನಾ |
ಮುತ್ತಿನ ಸತ್ತಿಗೆ ಪೊಳವುತಿದೆ |
ನರ್ತನೆ ಊರ್ವಶಿ ರಂಭಾದಿಗಳು ನಿಂದು |
ತತ್ತತ್ತಥೈ ಎಂದು ಒಪ್ಪುತಿದೇ |
ಜತ್ತಾಗಿ ಸ್ವರದಿಂದ ತುಂಬೂರ ನಾರದ |
ರಿತ್ತಂಡ [ಬಿ]ಡದಲೆ ಪಾಡುತಿ[ರೆ] |
ಉತ್ತಮರಸೆ ಕಾಂಚಿ ವರದಾ ವಿಜಯವಿಠಲ |
ದೈತ್ಯರಿಗೆ ಭಯಭೀತಿ ಮೆರೆವಾ ದೇವ ೬
ರೂಪಕತಾಳ
ಚತುರಾಸ್ಯಾದಿಗಳು ಚತುರತನದಲ್ಲಿ |
ಚತುರಯುಗದಲ್ಲಿ ಚತುರ ತಪವಮಾಡಿ |
ಚತುರ ಪೆಸರಿನಲ್ಲಿ ಪ್ರತಿ ಪ್ರತಿ ನಾಮಾ ಪ |
ರ್ವತವೆಂದೆನಿಸುತ್ತಾ ಕ್ಷಿತಿಯಾ ಜನರಿಗೆ |
ಗತಿಯ ಕರುಣಿಸುತ್ತ ಪತಿತ ಪಾವನ ಕಾಂಚೀ |
ಪತಿ ವರದರಾಜಾ ವಿಜಯವಿಠಲ ಭೋಜಾ |
ಸತತ ನೆರವ[ನ]ಮಿತರ ಹೃದಯದಲ್ಲಿ ೭
ಝಂಪೆತಾಳ
ಬಣ್ಣಿಸಲೆನ್ನಳವೆ ಭಕುತರಾಧಾರನ |
ಹೆಣ್ಣು ಶಿಶುವಿನ ಬಾಲಕನ ಮಾಡಿದಾ |
ಮುನ್ನ ಸೂಳಿಗೆ ಒಲಿದು ಪ್ರತಿವರುಷ ದಯದಿಂದ |
ಚನ್ನ ರೂಪದಲಿ ಸಂಚರಿಸುತಿಪ್ಪ |
ಮನ್ನೆ ರಾವುತರಾಯ ಹೆಜ್ಜಿಹೆಜ್ಜಿಗೆ ಹಿಡಿ |
ಹೊನ್ನು ಕೊಡುವನು ತನ್ನ ನಂಬಿದಂಥ |
ರಾಣ್ಗದವರಿಗೆ ಒಂದು ಘಳಿಗೆ ತಪ್ಪದಲೆ |
ಪುಣ್ಯಕೋಟಿ ರಾಜಾ ಅಮಿತ ತೇಜಾ |
ಪುಣ್ಯಕ್ಷೇತ್ರ ಕಾಂಚಿವರದ ವಿಜಯವಿಠಲ |
ಕಣ್ಣಿಗೆ ತೋರಲು ಮಣಿವೆ ಕುಣಿವೆ ದಣಿವೆ ೮
ತ್ರಿವಿಡಿತಾಳ
ಪಾಂಚಜನ್ಯ ಚಕ್ರಗಧಾ ಅಭಯಹಸ್ತಾ |
ಕಾಂಚಿಯವರದ ಹಿಮಂತದ ರಾಜಾ ಪ್ರ |
ಪಂಚದಲ್ಲಿ ಲೋಕಾ ವಂಚಿಸುವ ಮೃಗ |
ಲಾಂಛನ ತಿಲುಕದಲಿ ಮಿಂಚುವರತುನಾ |
ಕಾಂಚಿಧಾಮನೆ ವಿರಿಂಚಿಗಿರಿಯವಾಸಾ |
ಕಾಂಚಿವರದರಾಯಾ ವಿಜಯವಿಠಲರೇಯಾ |
ಪಂಚಾ[ಸ್ಯ]ವಿನುತಾ ವಿರಿಂಚಿಯ ತಾತಾ ೯
ಅಟ್ಟತಾಳ
ವರದಾನಂತಾ ಸರೋವರದ ತೀರವ ಕರಿ |
ವರದಾರಾಜಾ ಜೀವವರದ ಅಂಬರೀಷ |
ವರದಾ ಫಣಿವರದಾಭರದಿಂದ ಭಕ್ತರು |
ಕರದಬ್ಬರಕ್ಕೆ ವರಗರೆದು ಸುಖ ಸುರಿದ |
ಮೆರೆದಾ ಜಗದ ಕೂಡ ನೆರೆದ ದುರುಳರ |
ಜರಿದ ದುರಿತ ಪಾ[ಶಾ]ಪರಿದಾ ನಿಬ್ಬರದಾ |
ಪರಮಾದರದಾ ಕಾಂಚಿವರದಾ ವಿಜಯವಿಠಲಾ |
ಧುರಧೀರಾ ವೈಕುಂಠಪುರದ ರಾಶಿರಂಗಾ ೧೦
ಆದಿತಾಳ
ಈ ಸೊಗಸು ಈ ಸೊಂಪು ಈ ಸೊಬಗು |
ಈ ಸೌಭಾಗ್ಯ ಈ ಸುಮಹಿಮೆ ಈಸು ಲೀಲೆ |
ಏನೋ ಬಗೆ ಲೇಸು ಲೇಸು ಈ ಸುಲಭಯಾತ್ರೆ ದೇಶ |
ದೇಶಾದೊಳಗೆ ಕಾಣಿಸೊ ಕಾಶಿಗಿಂದಧಿಕ ಫಲಾ |
ಸೂಸುವದು ಸಾಸಿರಕ್ಕೆ ಮೀಸಲಗತಿಗೆ ಮಾರ್ಗ |
ಸಾಸಿವಿನಿತು ಕೊರತೆ ಇಲ್ಲ |
ಶ್ರೀಶ ಕಾಂಚಿವರದ ದೋಷನಾಶಾ ವಿಜಯವಿಠಲನು |
ವಾಸವಾಗಿ ಪುರಂದರದಾಸರ ಮಗನ ಪೊರೆದ ೧೧
ಜತೆ
ವೇಗಾವತಿಯ ತೀರದೊಡಿಯನೆ ವೈಕುಂಠ |
ದಾಗಾರಾ ವಿಜಯವಿಠಲ ಕಾಂಚಿವರದಯ್ಯಾ ೧೨


ಕಾಲ ಅನಂತವಾದುದಾದರೂ ಬ್ರಹ್ಮಾದಿ


ಧ್ರುವ ತಾಳ
ಅಣುದ್ವಯ ಪರಮಾಣು ಇಂಥಾದೆ ತ್ರಯವಾಗೆ |
ತ್ರಣುಯೆನಿಸಿ ಕೊಂಬೋದು ಇದೆ ತೃಸರೇಣು |
ಮನ್ಮನ ಗೋಚರವೆನ್ನು ಜಾಲಾರ್ಕಕಿರಣಾದಲ್ಲಿ |
ಘನವಾಗಿ ಚರಿಸುವ ದೇಶ ಭೇದ |
ಇನಿತು ತ್ರಸರೇಣುತೃಟಿ ತೃಟಿಮೂರು ಯೆಂಬೋದೂ |
ಅನಿಸಿ ಕೊಳುತಲಿದೆ ಒಂದು ವೇದ |
ತ್ರಣಿವೇಧವೊಂದುಲವ ಯಿಂಥವು ಮೂರಾಗಿ |
ಎಣಿಸು ನಿಮಿಷಾವೆಂದು ನಿಮಿಷ ಮೂರು |
ಕ್ಷಣವಾಗುವುದು ಕೇಳಿ ಮರಳೆ ಚೆನ್ನಾಗಿ ಐದು |
ಕ್ಷಣ ಕೂಡಿದರೆ ಒಂದು ಕಾಷವೆನ್ನಿ |
ಅನುಮಾನ ಮಾಡಸಲ್ಲ ಹೈದಿನೈದು ಕಾಷ್ಯಾಲೋ |
ಚನ ಮಾಡುವೊಂದು ಲಘುವು ಸಿದ್ಧವಕ್ಕು |
ಗುಣಿಸು ಹದಿನೈದು ಲಘವ,ವೊಂದು ನಾಡಿಯೆಂದು |
ಇನಿತು ಆರೇಳುಯೆಂಟು ಒಂದುಯಾಮಾ |
ಎಣಿಕೆಗೈಯೊ ಯಿಂಥ ಯಮ ಚತುಷ್ದವಾಗಿ |
ದಿನಮಣಿ ಅಸ್ತಂಗತ ಹನ್ನೆರೆಡುತಾಸು |
ಇನಿತು ಹನ್ನೆರಡಾಗಿ ಇರುಳು ನಾಲ್ಕು ಝೂಂವ |
ಎನಿಸುವದು ವೊಂದು ವಾಸರಕೆ |
ಗಣಿತಜ್ಞರು ಪೇಳುವರು ತಿಥಿ ತಾರ ಯೋಗ ಕರಣ |
ಮನುಜರಿ[ಗೊಂ]ದು ದಿವ[ಸಾ]ಯಿತೋ ದೇವ |
ಜನನ ಮಿಕ್ಯಾದ ಕರ್ಮಗಳಿಗೆ ಇದೆ ಆರಂಭ |
ವೆನಿ[ಸಿ] ಹತ್ತ್ಯದು ದಿವಸವೆಂಬೋದೆ ಪಕ್ಷ |
ಇನಿತು ಈ ಪರಿಯಾಗೆ ಭಿನ್ನ ಪಕ್ಷವೆಂ |
ದೆನಿಸುವುದು ಶುಕ್ಲಕೃಷ್ಣಯೆಂಬೋದೆ ಪಕ್ಷ |
ಅನುವಾಗಿ ಎರಡು ಪಕ್ಷ ಕೂಡಿಸಲು ಮಾ |
ತನು ಕೇಳು ತಿಂಗಳೊಂದು ಇಂಥವೆರಡು |
ಅನುಸಂಧಿ ನಾಲ್ಕು ಒಂದು ಋತುವಾಹದು ಇವೆ ಆರು |
ಗುಣಿಸಲು ಒಂದು ವರ್ಷ ವರ್ಷ ನೂರಾಗಲು |
ಮನುಜರಿಗೆ ಪೂರ್ಣಾಯು ಎಂದೆನಿಸುವುದು ಯೋ |
ಚನೆ ಮಾಡು ಮಾನುಷ್ಯಮಾನದ ಲೆಕ್ಕ |
ಅನಿಮಿಷ ತತಿಗಳಿಗೆ ಮತ್ತೆ ಬಗೆವೊಂದು ವತ್ಸರ |
ದಿನವೊಂದು ಹಗಲಿರಳು ಆಗೋವೆಂದು |
ವನಜಗರ್ಭನ್ನ ತನಕ ಈ ಪರಿಯಿಂದ ಎಣಿಸಿ |
ಗುಣಿಸಿ ತಿಳಿಯಬೇಕು ಕಾಲಪ್ರಭಾ |
ಅಣುಮ ಹತ್ತುರೂಪ ವಿಜಯ ವಿಠ್ಠಲರೇಯ |
ಗುಣ ನಿಧಿ ಸರ್ವ ಕಾಲದೊಡನೆ ತಿರುಗುತಿಪ್ಪ ೧
ಮಟ್ಟತಾಳ
ಮೂರೊಂದು ಯುಗವುಂಟು ಮನುಜ ಮಾನದಲ್ಲಿ |
ಸಾರುವೆ ವರ್ಷಂಗಳು ವಿವರ ವಿವರವಾಗಿ |
ಆರಂಭ ಯುಗಕೆ ಹದಿನೇಳು ಲಕ್ಷ |
ಈರೈದು ಹತ್ತುಯೆಂಟು ಸಾವಿರವೆನ್ನಿ | (೧೭,೨೮೦೦೦)
ಚಾರುದ್ವಿತೀಯ ಯುಗಕೆ ಲಕ್ಷದ್ವಾದಶ ತೊಂಭ |
ತ್ತಾರು ಸಾವಿರವಯ್ಯ ೧ (೧೨,೯೯೦೦೦)
ಮೂರನೆಯುಗಕೆ ಎಂಟು ಲಕ್ಷಮ್ಯಾಲೆ |
ಈರೆರಡರುವತ್ತು ಸಾವಿರ ವರುಷಗಳು (೮,೬೪೦೦೦)
ಈರೀತಿ ಗ್ರಹಿಸು ನಾಲ್ಕನೆ ಯುಗಕೆ ವಿ |
ಚಾರನಾಲ್ಕು ಲಕ್ಷತ್ರಿಂಶತಿದ್ವಯ ಸಹಸ್ರ | ೯೪,೩೨೦೦೦)
ಹಾರೈಸು ಎಲ್ಲ ಕೂಡಿ ಗುಣಿಸೆ ವಿ |
ಸ್ತಾರವಾಗಿದೆ ನಾಲ್ಕು ಹತ್ತು |
ಮೂರುಲಕ್ಷ ದಶ ದಶ ಸಾಸಿರವೊ | (೪೩,೨೦೦೦೦)
ಬ್ಯಾರೆ ಬ್ಯಾರೆ ಯುಗದ ಪೆಸರಂಗಳು ಶೃಂ |
ಗಾರದಿಂದಲಿ ಕೇಳಿ ಕೃತ ತ್ರೇತ ದ್ವಾಪರ ಕಲಿ |
ಸಾರ ಹೃದಯರೊಲಿದು ಸಂತತ ಕರುಣದಲಿ |
ಶ್ರೀರಮಣ ನಮ್ಮ ವಿಜಯ ವಿಠ್ಠಲರೇಯ |
ಮೂರೊಂದು ವತ್ಸರ ನಾಮಕ ಕಾಣೊ ೨
ರೂಪಕ ತಾಳ
ಏಕತ್ರಯವೊಮ್ಮೆ ತಿರುಗಿದರು ಮಹಯುಗ |
ನಾಕಮಾನದಲ್ಲಿ ದ್ವಾದಶ ಸಹಸ್ರವೊ | (೧೨,೦೦೦)
ಲೋಕದೊಳಗೆ ಸಿದ್ಧಯಿಂಥ ಮಹಯುಗ ಸಾವಿರ |
ಶ್ರೀಕಾಂತನಿಂದಲಿ ತಿರುಗಿದರದು ಅಂದು |
ಲೋಕೇಶನಿ[ಗಾ]ಗುವದು ಒಂದು ಹಗಲು ಶಬ್ದ |
ವಾಕುಲಲಿಸಿ ನಾನೂರು ಮೂವತ್ತೆರಡು ಕೋಟಿ |
—————-(೪,೩೨೦೦೦೦೦೦೦)
ಈ ಕಾಲದಂತೆ ಸಾವಿರಾವರ್ತಿ ತಿರುಗಿದರು |
ನೂಕಿ ಪೋಯಿತು ಒಂದುಯಿರಳು ಕಮಲಾಸನಗೆ |
ನಾಲ್ಕುನೂರು ಮೂವತ್ತೆರಡು ಕೋಟಿ |
ಶ್ಲೋಕಾರ್ಥದಿಂದಲಿ ಇತ್ತಂಡ ಕೂಡಿಸಿ |
ನಾಲ್ಕೆರಡು ಅರವತ್ತು ನಾಲ್ಕು ಕೋಟಿ ಗುಣಿತ |
———–(೮,೯೪ ೦೦೦೦೦೦೦)–
ವಾಕೇಶ ಚತುರ್ಮುಖಗೆ ನಿಜವೊಂದು ದಿವಸವೊ |
ಸಾಕಾರ ಮೂರ್ತಿ ಸಿರಿ ವಿಜಯ ವಿಠ್ಠಲರೇಯ |
ಲೌಕಿಕ ಮಾನದಲ್ಲಿ ಇಷ್ಟು ವರ್ಷ ಗೈದ ೩
ಝಂಪಿ ತಾಳ
ವನಜಸಂಭವನ ಒಂದು ದಿವ ರಾತ್ರಿಯೊಳು |
ಮನುಗಳು ಚತುರ್ದಶರು ತಮ್ಮ ಪದವಿ |
ಅನುಭವಿಸುವರು ಪ್ರತ್ಯೇಕ ಪ್ರತ್ಯೇಕವಾಗಿ |
ಗಣನೆ ಮಾಡಲಿಬೇಕು ಇವರ ಕಾಲ |
ಮನವೊಬ್ಬಗೆ ಎಪ್ಪತ್ತೊಂದು ಮಹಾಯುಗ ದಶ |
ಪರಗರ್ಧಾಲಕ್ಷ ಮೇಲೆ ಭುಕ್ತಿಕಾಲ |
ಎಣಿಕೆ ಮಾಡಲಿಬೇಕು ಎಪ್ಪತ್ತೊಂದು ಮಹಾಯುಗ |
ವಿನಯದಿಂದಲಿ ಒಂದು ಮಹಯುಗದ ಲೆಖ್ಖ | (೪೩,೨೦೦೦೦)
ಇನಿತು ಎಪ್ಪತ್ತೊಂದಂದ ವೆಗ್ಗಳಿಸೆ |
ಮನಕೆ ಒಪ್ಪುವುದ ತ್ರಿಂಶತಿಕೋಟಿ ಅರವತ್ತು |
ಮುನಿಲಕ್ಷ ಯಿಪ್ಪತ್ತು ಸಾವಿರ ವರುಷ | (೨೦,೬೭,೨೦೦೦೦)
ಮನು ಒಬ್ಬನಿಗೆ ಮಹಯುಗ ಎಪ್ಪತ್ತೊಂದು |
ಉಣಿಸಿ ಪೋದವು ನೂಕೆ ಅದು ಸಂಖ್ಯ ಮಾಡೆ |
ಕ್ಷಣ ಬಿಡದೆ ಒಂಭೈನೂರುವೊಂಭತ್ತು ನಾಲ್ಕು |
ಮಿನಗುವದು ಮಹಾಯುಗ ಉಳಿದನಾರು ಈ |
ಜನಕೆ ಹಂಚಿಕೆಯಿಂದ ನೋಡಲಿಬೇಕು |
ಎಣಿಸು ಹದಿನೆಂಟು ಲಕ್ಷ ಒಂದೈವತ್ತು ಸಾವಿರ |
ವನಧಿ ಶತಯಿಪ್ಪತ್ತೆಂಟು ವರುಷಾರು ತಿಂಗಳ |
ದಿನ ಇಪ್ಪತ್ತೈದು ತಾಸು ಹದಿನೇಳು ಲಘು ಐದು |
ಕೊನೆ ಮಾತ್ರವುಂಟು ಅದು ಅಲ್ಪವಿವಿಕ್ಷ |
ಮನೋರ್ವನಿಗೆ ಕೇಳು ಕಾಲಕ್ಲಪ್ತಿ ಅಬ್ದ |
ಮುನಿಗಳ ಸಮ್ಮತವೊ ಬಲ್ಲವರಿಗೆ …………………..
ಇನಿತು ಮಿಶ್ರಮಾಡೆ ಒಬ್ಬ ಮನುವಿಗೆ ಧಾ |
ರುಣಿ ವಶವಾಗಿಯಿದ್ದದು ಕೇಳಿರೊ |
ಗಣ ಹತ್ತುಕೋಟಿ ಎಂಭತ್ತೈದು ಲಕ್ಷ, ಮಾ |
ರ್ಗಣ ಎರಡು ಶತ ಮೇಲೆವೊಂದು ಸಹಸ್ರ |
ವನಧಿ ವಿಂಶತಿ ಅಷೃವರುಷ ತದುಪರಿಯಿಂದ |
ಗುಣಿಸು ಯುಗಮಹಾಯುಗ ವಿಭಾಗದಿ |
ಜನನ ಮರಣ ಶೂನ್ಯ ವಿಜಯವಿಠ್ಠಲ ತಾನೆ |
ಮನುವಿನೊಳಗಿದ್ದು ತ್ರಿಲೋಕವನು ಆಳ್ವಾ ೪
ತ್ರಿವಿಡಿತಾಳ
ಹದಿನಾಲ್ಕು ಮನುಗಳು ಇಪ್ಪರು ಸ್ವಾಯಂಭುವ |
ಇದರೊಳಗಾದಿ ಮನುವೆನಿಸಿಕೊಂಬ |
ಮುದದಿಂದ ತಿಳಿವುದು ತಾಪಸಾಖ್ಯಮನು |
ಉದುಭವವಾಗಿಹ ನಾರೆಯಣ |
ಬುಧರು ವಿವರಿಸಿ ಇದರ ಸಂಧಿ ಕಾಲದ ಕ್ಲಪ್ತಿ |
ಒದಗಿ ಕೊಂಡಾಡುವುದು ಪುಣ್ಯವಕ್ಕು |
ಮೊದಲು ಮನುವಿಗೆ ಎರಡು ಸಾವಿರ ಹಯನ |
ಅದರ ತರುವಾಯದಲಿ ಐದು ಮನುಗಳಿಗೆ |
ಹದಿನಾಲ್ಕು ನೂರು ವತ್ಸರ ಪ್ರಕಾರ |
ಇದನೆ ಗುಣಿಸಲಾಗಿ ಏಳು ಸಾವಿರವಾ |
ದುದು ಕಾಣೊ ಉಳಿದೆಂಟು ಮನುಗಳಸಂಧಿ |
ಹದಿನೈದು ನೂರಬ್ದದಂತೆ ಉಗ್ಗಡಿಸೆ ಹನ್ನೆರಡು
ಸಾವಿರ ವಾದವೆನ್ನಿ ————
ಇದರಂತೆ ಅವರವರರ ಸಂಧಿ ಕಾಲಗಳಿಗೆ |
ತ್ರಿದಶಗಣ ಬಲ್ಲ[ರು] ಕಾಲ ವಿವರ |
ಮದನ ಜನಕ ನಮ್ಮ ವಿಜಯ ವಿಠ್ಠಲರೇಯ |
ಹೃದಯದೊಳಗೆ ಪ್ರೇರಿಸಿದಂತೆ ವಿವರ ನಿಶ್ಚಯ ಮಾಡಿ ೫
ಅಟ್ಟತಾಳ
ಇಂತು ಸಾವಿರ ಬಾರಿ ತಿರುಗಿದರೆ ದೇವ |
ತಿಂತಿಣಿ ಪಿರಿಯಂಗೆ ಹಗಲಿರಳೊಂದೆ ಅಯ್ಯ |
ಸಂತಿತೊ ಕಾಣೊ ಮುಂದೆ ಗಣತಿ ಚನ್ನಾಗಿ |
ಚಿಂತಿಸು ಬೊಮ್ಮನ್ನಾ ಒಂದೆ ತಿಂಗಳಿಗೆ ಆ |
ದ್ಯಂತಕಾಲ ನೋಡೆ ಎರಡು ಅರ್ಬುದ ಐನೂರಾ ತೊಂ |
ಭತ್ತೆರಡು ಕೋಟಿ ವತ್ಸರ ಸಿದ್ಧ | ೨,೫೯೨೦೦೦೦೦೦೦
ಇಂಥವೆ ಹನ್ನೆರಡಾಗಿ ವೊಂದುವರುಷ |
ಮಂತ್ರೋಕ್ತದಿಂದಲಿ ಇವೆನೂರು ಬೊಮ್ಮಗೆ |
ಕಂತು ಜನಕ ರಂಗವಟಪತ್ರ ಶಯನನೊ |
ಎಂತು ಪೇಳಲಿ ಹರಿಯ ಶಕ್ತಿಗೆ ಸರ್ವ ಸ್ವಾ |
ತಂತ್ರನೊ ಅಜನಬ್ದ ನೂರು ವರುಷ ಪರಿ |
ಯಂತ ಮಲಗಿಪ್ಪ ಲಕುಮಿ ಸಹಿತವಾಗಿ |
ಚಿಂತಿತ ಫಲದಾಯ ವಿಜಯ ವಿಠ್ಠಲರೇಯ |
ಪಿಂತಿನಬೊಮ್ಮನಿಗೆ ಇದರಂತೆ ಫಲಿಸಿದ | ೬
ಆದಿತಾಳ
ಕಾಲಾತೀತ ವಿಷ್ಣು ಅಣು ಮಹತ್ತುವಾದ
ಕಾಲಪ್ರೇರಕನಾಗಿ ಅನಾದಿ¬ಂದ ವಿಡಿದು |
ಕಾಲನಾಮಕನೆನಿಸಿ ಸಮಸ್ತ ಜೀವಿಗಳ |
ಕಾಲಪಾಶದಿ ಸಂಸಾರದೊಳಗಿಟ್ಟು |
ಕಾಲಕಾಲಕೆ ಮಹ ಸುಳಿಯೊಳು ಸುತ್ತಿಸುವ |
ಕಾಲ ಮೂರುತಿ ಈತನ ಭಯದಿಂದ ಜಡ ಜೀವರು |
ಕಾಲ ಮಿರದೆ ಸರ್ವ ತತ್ವಥ ಕೊಡುವರು |
ಕಾಲದೊಡನೆಯಿಪ್ಪ ಕಾಲಕ್ಕೆ ಸಿಗದಿಪ್ಪ
ಕಾಲತ್ರಯದಲ್ಲಿ ಇನಿತೆನಿಸಿದ ಮಾನವ
ಕಾಲ ಜ್ಞಾನಿಯಾಗುವ ಆವಾವ ದೇಹದಲ್ಲಿ
ಕಾಲನ್ನ ಭೀತಿಯಿಲ್ಲದೆ ಸುಖಿಸುವ ಗೋತ್ರದೊಡನೆ
ಕಾಲಕ್ಕೆ ದೋಷವಿಲ್ಲ ಸು[ಬಂ]ಧದಿಂದ ದು
ಷ್ಕಾಲ ಅಕಾಲವೆಂದು
ಕಾಲ ಕರೆಸಿಕೊಳುತಿಪ್ಪವು ನೋಡಿರೊ
ಕಾಲ (ಕಾಳ) ಕಂಧರವಿನುತ ವಿಜಯ ವಿಠ್ಠಲ ಸರ್ವ
ಕಾಲಕೆ ಗತಿಯನ್ನು ಕಡೆ ಮಾಡುವ ಭವದಿಂದ ೭
ಜತೆ
ಕಾಲ ವಿವರ ತಿಳಿದು ವಿಜಯ ವಿಠ್ಠಲರೇಯನ |
ಕಾಲಿಗೆರಗಿ ಬದುಕು ಜ್ಞಾನ ಭಕುತಿಯಿಂದ ೮

ಇದನ್ನು ಹಂಸಮಂತ್ರ ಸುಳಾದಿ ಎನ್ನು ವುದುಂಟು.


ಧ್ರುವ ತಾಳ
ಅಣುಮಹತ್ತು ಆತುಮರೊಳು ನೆನೆಸಿ.
ನಾನಾ ಬಗೇಯಿಂದ ಗಾತುರ ಇಂದ್ರಿ[ಯ]ಗಳ ತಿಳಿದು
ಭೌತಿಕಾಚ್ಚಾದಿರೊ ಕಾಯನಿಂದಿರದು ಜೀ
ಮೂತದ ಛಾಯವೆನ್ನು ಇಹ ಸೌಖ್ಯ[ದ]
ಮಾತು ಈ ಪರಿ ತಿಳಿದು ಮುದದಿಂದ ಪುಣ್ಯಕ್ಕೆ ಸು
ಕೇತಮಾಡು ಮಾಳ್ಪಮಂತ್ರಗಳಿಗೆ
ಶ್ವೇತ ದ್ವೀಪವಾಸಿ ವಾಸುದೇವ ಮುಖ್ಯ ವಾತಖ
ದ್ಯೋತ ಗುರು ಇವರಲ್ಲಿಟ್ಟು ಆ ತರುವಾಯ
ಈ ತನ್ನ ಹೃತ್ಕಮಲದಲ್ಲಿ ಶ್ರೀ ಕರುಣೀಶನ್ನಧ್ಯಾನಗೈದು
ಈತನ್ನ ಮಧ್ಯದಲ್ಲಿ ಅನಂತ ಅಂಶಾತ್ಮಕ
ಆ ತನ್ನ ತಂದು ಏಕ ಚಿಂತನೇ ಗೈದು
ವಾತಸ್ಪ[ಷಾ]ವಿಲ್ಲದ ದೀಪಾದಂತೇ ಕುಳಿತು
ಜ್ಞಾತಾನುಷ್ಠಾನ ದಿಂದ ಗಮನಾಗಮನಾ ನೋಡು
ಕೌತೂ[ಕ] ವೆ [ನಿ]ಸುತ್ತಿದೆ ಈ ಮಂತ್ರವೋ
ಪೋತಕನಾರಭ್ಯ ಯೌವನ ಜಠರ ವಿಡಿದು
ಪ್ರೇತಯಾಕನ ದೇಹ್ಯ ನರಕಸ್ವರ್ಗ
ಜೋತಿರ್ಮಯಾ ಶರೀರ ಪುನರಾ ಜನನಾ ಮರಣಾ
ಈ ತೆರದಲ್ಲಿ ಬಲು ಜನ್ಮಬರಲು
ಭೂತಳ[ದೊ]ಳು ಎಂಭತ್ತು ನಾಲುಕು ಲಕ್ಷಯೋನಿ
ಜಾತನಾದಕಾಲಕ್ಕೂ ಒಳಗಿಪ್ಪಾದು
ಭೂತಿ ಕೊಡುವಾ ಪಿರಿದು ಅಪ್ರಯತ್ನ ಮಂತ್ರ
ಕಾತುರಗೊಡದಯ್ಯ ಅಜ್ಞಾನಿ ಯೇ
ಪ್ರಾತಃ ಕಾಲದಾರಭ್ಯ ಅಪರೋದಯ ಪರ್ಯಂತ
ಆತುಮಾದೊಳು ಸಿದ್ಧ ಸ್ವಚ್ಛಾವೃತ್ತಿ
ಜ್ಞಾತ ಕಾಲಾದಿಂದ ಗತ ಜನ್ಮಂಗಳ ಮಿಶ್ರಾ
ಮಾತಗರ್ಭಾದಿ ಶೇಷ ಪಾರಬ್ಧ
ಗತವಾಗುವತನಕ ಇಂದೆ ಪ್ರಾಣ ಮಂತ್ರಾವೆಂದು
ಪ್ರೀತಿಯಿಂದಾಲಿ ಜಪಿಸೊಧ್ಯಾನೋಕ್ತಾದಿ
ಪಾತಕಾ ನಿನಗಿಲ್ಲ ಕಾಲಕಾಲಕ್ಕೆ ಪುಣ್ಯ
ವ್ರಾತ ಬಂದೊದಗೋದು ಆನಂದಕ್ಕೆ
ಶ್ರೀತಾಂಸುರ ವಿಹಸ್ತ(?) ವಿಜಯಾ ವಿಠಲರೇಯಾ
ಭೀತಾರಹಿ ತನ್ನ ಮಾಳ್ಪಮಂತ್ರಾನುಸಂಧಾನಕ್ಕೆ ೧
ಮಟ್ಟತಾಳ
ಮಂತ್ರಾ ಮಾಡುವ ಬಗೆ ತಿಳಿವುದು ಚನ್ನಾಗಿ
ತಂತ್ರಾಸಾರದಿಂದಾ ಅಂಗಾಂಗುಳಿನ್ಯಾಸ
ಸಂತೋಷದಲ್ಲಿ ಮಾಡು ಧೃಢತರ ಮನಸಿ ನಲ್ಲಿ
ಅಂತರಂಗದಲ್ಲಿ ಸರ್ವರೂಪಾತ್ಮಕ
ಮಂತ್ರದೇವತಿ ಮುಖ್ಯಪ್ರಣವ ಮೂರುತಿಯ ಏ
ಕಾಂತದಲ್ಲಿ ಹೃತ್ಕಮಲ ಕರ್ಣಿಕ ಮಧ್ಯ
ಇಂತಿಹ ಕಮಲಕ್ಕೆ ಷಡಷ್ಟ ದ್ವಾದಶ
ಮುಂತೇ ಚತುರ್ವಿಂಶತಿ ಪ್ರವತ್ತೊಂದು
ಚಿಂತಿಸು ದಳ ಸಂತಿರಿ ಕೋಣೆ ಬೀಜಗಳು
ಯಾತ್ರಾವಾಹನಮ್ಮ ವಿಜಯ ವಿಠಲಾ
ಸ್ವಾತಂತ್ರ ಪುರುಷಾ ಸರ್ವನಿಯಾಮಕ
ತ್ರಿವಿಡಿತಾಳ
ವಇನವೇ ಲಾಲಿಸಿ ಕೇಳು ಅಬ್ಧಾ ಮಂತ್ರಾಕೆ ಜಿ[ತಾ]
ಸನನಾಗು ಜಯಾವೆಂದು ಹರಿಯ ಸ್ತುತಿಸಿ
ಎಣಿಕೆಯಿಂದಾಲಿ ನೋಡು ಒಂದೊಂದು ಮಂತ್ರಕೆ
ಘನವಾಗಿ ವರ್ಣಂಗಾಳುಯಿಪ್ಪಾವೊ ಲೇಸು
ಎಣಿಸೊ ಒಂದೊಂದು ದಳದಲ್ಲಿ ಒಂದೊಂದು
ವರ್ಣ ಮಿನಗೂವ ಮತಿಯಿಂದಯಿಡಲಾವಷ್ಟು
ಯಿನಿತು ಗ್ರಹಿಸು ಇವಕೆ ಒಂದೊಂದು ಹರಿರೂಪ
ಚಿನ್ಮಯ ಮೂರುತಿ ಸರ್ವಭಿನ್ನಾ
ಗುಣವಂತ ಮಂತ್ರಾತ್ಮಕನನ್ನು ಕೂಡಿಸಿ
ಮಣಿಗಣದಿಂದ ಜಪಿಸುವಲ್ಲಿ
ಅನುಭವ ವೀರಕೀ (?) ಮಂತ್ರ ದೇವತ ಸಹಿತ
ಕ್ಷಣ ಕ್ಷಣಕೆ ನಿನ್ನೊಳ ವಲಾಮಾಕಾರ
ಗುಣಿಸೋ ವರ್ಣಾಕ್ಷರ ಆದಿ ಮೂರುತಿಯಲ್ಲಿ
ಗಣನೇ ಮಾಡು ನಿತ್ಯ ನಿನ್ನಾ ನಾಸಗ್ರದ
ಕೊನೇಯಿಂದ ವಾಸಯೋಗ ಮಾಳ್ಪದರೊಳು
ಮಣಿಯಿಂದ ಮಣಿದೆ ಬೆರಳಾಸಾಸೋದು
ಅನುಭಾರತಿ ಪ್ರಿಯ ವಿಜಯವಿಠಲಾ ಸ
ದ್ಗುಣ ಮಣಿ ಖಣಿಯೆಂದು ಅನುದಿನನೆನೆಸಿ ೩
ಅಟ್ಟತಾಳ
ಇಂದೆ ಮಂತ್ರ ಸಾರ್ಥಕ ಇದೆ ಮಂತ್ರಸಿದ್ಧಿಯೋ
ಇದೆ ಮಂತ್ರಯಿದೆ ಪ್ರಕಾರದಿಂದ ತತು ತತು ಮಂತ್ರಾವ
ವಿಧಿಯಿಂದ ಪದೋಪದಿಗೆ ಬಲು ಒದಗಿ ಮಾಡುವ ಧ್ಯಾನಕ್ಕೆ
ಮುದ ಭಕುತಿಯಿಂದ ಇದರಂತೆ
ಒಂದೇ ಸಾರಿ ನೆನೆದಡೆ ತತ್ಪುಣ್ಯದ
ಉದಧಿ ಸೂಸುವುದಯ್ಯ ಮಧು
ಸೂದನಹರಿ ವಿಜಯ ವಿಠ¯ರೇಯ
ಪ್ರಧ್ಯಾನವ ಕೊಡುವಾನು ಒಂದೇ ಉಚ್ಚಾರಣೆಗೆ
ಆದಿತಾಳ
ಮಧ್ಯ ಮೂರುತಿ ಸುತ್ತ ಸೇವಾರೂಪಾದಿಂದ
ಪೊಂದಿಕೊಂಡಿಪ್ಪಾವು ಸ್ವಾಮೂರ್ತಿ ಪರಿವಾರ
ಸಿದ್ಧಾವಾದುದು ಕೇಳು ಜಪವೆ ತಿಳಿಯಾ ಬೇಕು
ಹೃದ್ಗುಹದಲಿ ಇನಿತು ಚಕ್ರಾಬ್ಜ ಮಂಡಲ ಪದ್ಮ
ಸುದರುಶನಗಳಾದಿ ವಿಚಾರ ತಿಳಿದು
ಪದ್ಧತಿ ತಪ್ಪದೆ ಪರಿಭ್ರಮಣವಾಗದೆ ಪದ್ಮ
ಬಾಂಧವ ನಮ್ಮ ವಿಜಯ ವಿಠಲರೇಯ
ಉದ್ಧರಿಸುವ ಬಿಡದೆ ಉನ್ನತ ಗತಿ ಇತ್ತು ೪
ಜತೆ
ಜನುಮದೊಳು ಒಮ್ಮೆ ಪರಿ ಜಪಿಸಾಲು
ಗುಣತ್ರಯ ನಾಶನ ವಿಜಯ ವಿಠಲ ಪೊಳೆವಾ ೫

ಕರ್ನಾಟಕ ರಾಜ್ಯದ ಮಂಗಳೂರು ಪ್ರಾಂತ್ಯದ

೯. ಉಡುಪಿ
ರಾಗ:ಶಹನಾ
ಧ್ರುವತಾಳ
ಅಣುಮೂರುತಿ ಪರಮಾಣು ಮೂರುತಿ ಇದೆ |
ಘನ ಮೂರುತಿ ಮಹಘನವಾದ ಮೂರುತಿ |
ತೃಣ ಕಾಷ್ಠ ಮೊದಲಾದ ಪರಿಪೂರ್ಣ ಮೂರುತಿ |
ಗುಣತ್ರಯಾತ್ಮಕವಾದ ಗುಣವಂತ ಮೂರುತಿ |
ಮನುಜೋತ್ರಮರವಿಡಿದ ವನಜಭವಾದ್ಯರ |
ಮನಕೆ ಪೊಳೆವ ಮೂರುತಿ ಚಿನುಮಯ ಮೂರುತಿ |
ದನುಜಕುಲಕೆ [ತ]ಲ್ಲಣವಾದ ಮೂರುತಿ |
ರಣದೊಳಗರ್ಜುನನ್ನ ತನು ಉಳುಹಿದಾ ಮೂರ್ತಿ |
ಕ್ಷಣವಗಲದೆ ಜೀವನ ಕೂಡಲಪ್ಪದಿದೆ |
ಅನಿರುದ್ಧ ಮೂರುತಿ ಅಚ್ಯುತ ಮೂರುತಿ |
ಜನನಿ ಗೋಪಿಯ ಮುಂದೆ ಮೊಸರು ಕ[ಟೆ]ವಾಗ |
ಕುಣಿದ ಮೂರುತಿ ಅಪ್ರಮೇಯ ಮೂರುತಿ ಇದೆ |
ಪ್ರಣವ ಮೂರುತಿ ಮಧ್ವಮುನಿಗೊಲಿದ ಉಡು |
ಪಿನ ವಾಸ ಶಿರಿಕೃಷ್ಣ |
ಎನ್ನ ಮೂರುತಿ ವಿಜಯವಿಠಲನಿರುತಿಪ್ಪ ೧
ಮಟ್ಟತಾಳ
ದ್ವಾರವತಿ ಎತ್ತ ಪಡುವಲ ದಿಕ್ಕಿನ |
ವಾರಿನಿಧಿ ಎತ್ತ ಗೋಪಿಚಂದನವೆತ್ತ |
ಮಾರಾಟದ ಹಡಗ ಪೋಗಿ ಬರುವದೆತ್ತ |
ಭಾರತಿ ಪತಿಯಾದ ಮಧ್ವಮುನಿ ಎತ್ತ |
ಈ ರೀತಿ ಸಂಗತಿಯಾ ಆವಲ್ಲಿ ಕಲ್ಪಿಸೀ |
ತೋರಿದಿಯೋ ದೇವ ಆರು ಬ |
ಲ್ಲರು ನಿನ್ನ ಮಹಾವಿಚಿತ್ರವು |
ಸಾರಲಾ[ಪೆನೆ] ನಿತ್ಯ ಉಡುಪಿನ ಶಿರಿಕೃಷ್ಣ |
ಜಾರ ಚೋರ ನಮ್ಮ ವಿಜಯವಿಠಲರೇಯಾ ೨
ತ್ರಿವಿಡಿತಾಳ
ಅಂದು ದೇವಕಿದೇವಿ ದ್ವಾರಕಾ ಪುರದಲ್ಲಿ |
ಒಂದು ದಿವಸ ನಿನ್ನ ಮಾಯಾ ಮುಸುಗೇ |
ಕಂದ ನೀನಾಗಿ ಗೋಕುಲದಲ್ಲಿ ಗೋಪಿಯಾ |
ಮುಂದೆ ಬಾಲಕನಾಗಿ ತೋರಿದಾಟಾ |
ಒಂದಾದರು ನೋಡಿ ದಣಿಯಲಿಲ್ಲವು ಮನಸು |
ಎಂದೆನೆ ಜನನಿಯಾ ಮಾತುಕೇಳಿ |
ನಂದನನಾಗಿ ತೋರುವೆನೆಂದು ನೆನೆದು ಗೋ |
ವಿಂದನು ಗೋಪಳ್ಳಿಯಲಿ ನಲಿದದ್ದು |
ಒಂದೊಂದು ತೋರುತ್ತ ಬರಲಾದಾರೊಳಗಿದೆ |
ಚಂದವಾದಾರೂ ಪಾ ಮನಕೆ ಪೊಳಿಯೇ |
ನಿಂದಿರ ಪೇಳಿ ಮಗನಾ ಮುದ್ದಾಡಿ ನೋಡಿ |
ತಂದೆ ಈ ರೂಪದಲಿ ಭೂಮಿಯೊಳಗೆ |
ಕುಂದಾದರ್ಚನೆಗೊಂಡು ಕೀರ್ತಿಮೆರೆವದೆಂದು |
ಮಂದಹಾಸದಲ್ಲಿ ಪೇಳಲು ಕೈಕೊಂಡೂ |
ಒಂದು ಕೈಯಲಿ ಕಡಗೋಲು ಪಿಡಿದು ಮ |
ತ್ತೊಂದು ಕೈಲಿ ನೇಣು ಧರಿಸಿ ಬಾಲಾ |
ನಂದಾದಿ ಇರಲಿತ್ತ ಭೈಷ್ಮಿ ವಿಶ್ವಕರ್ಮಾ |
ನಿಂದ ಅದರಂತೆ ರಚಿಸಾ ಪೇಳಿ |
ನಂದಾದಿಂದತಿ ತನ್ನ ಮೂಗುತಿಯನು ಇಟ್ಟು |
ಸುಂದರ ವಿಗ್ರಹ ದೊಡನಾಡುತ |
ಇಂದಿರೆ ಇರ ಇತ್ತ ಕಲಿಯುಗಬರೆ ಗೋಪಿ |
ಚಂದನದೊಳು ನಿನ್ನ ಅಡಗಿಸಲೂ |
ಸಿಂಧುವಿನೊಳಗೊಬ್ಬ ಹಡಗದ ವಶಕೆ |
ತಂದಿರೆ ತವಕದಿಂದಲಿ ಅಲ್ಲಿಂದ |
ನಂದಾತೀರ್ಥರಿಗೊಲಿದ ಉಡುಪಿನ ಶಿರಿಕೃಷ್ಣ |
ಕಂದರ್ಪಪಿತ ನಮ್ಮ ವಿಜಯವಿಠಲರೇಯಾ ೩
ಅಟ್ಟತಾಳ
ಈ ಉಡುಪಿನ ಯಾತ್ರಿ ಶ್ರೀ ವೈಕುಂಠದ ಯಾತ್ರಿ |
ಆವಾವಮನುಜನು ಸೇವಿಸಾಲು ಮರಿ |
ತವನ ದಾವನ, ಪಾವನ ಮಾಡುವ |
ಯಾವತ್ತು ಜನುವದ ನೋವುಕಳದು ತನ್ನ |
ಸೇವಿಯೊಳಿಟ್ಟು ಅಪವರ್ಗಕೊಡುವಾನು |
ದೇವಕಿ ನಂದನ ಕೃಷ್ಣ ಮೂರುತಿ ಕರು |
ಣಾವರಧಿ ನಮ್ಮ ವಿಜಯವಿಠಲರೇಯ |
ಜೀವೋತ್ತಮಾ ಮಧ್ವಮುನಿದೈವವೇ ೪
ಆದಿತಾಳ
ಇದೆ ಜನುಮ ಸಾರ್ಥಕಾ | ಇದೆ ಸರ್ವಕಾಯಸಿದ್ಧ |
ಇದೆ ಕುಲಕೋಟಿ ಉದ್ಧಾರ | ಇದಕ್ಕಿಂತಧಿಕವಿಲ್ಲ |
ಇದಕೆ ಸಮಾನವಿಲ್ಲ | ಇದೆ ಮುಖ್ಯಯಾತ್ರಿ ಎನ್ನಿ |
ಇದೆ ಇದೆ ಇದೆ ಸಿದ್ಧ | ಯದು ಕುಲೇಶನ ದಿವ್ಯ |
ಪದಗಳ ಒಮ್ಮೆ ನೋಡೆ | ಪದವಿಗೆ ಸೋಪಾನ |
ಮುದದಿಂದ ಸ್ಥಿರವಹದು | ಸದಮಲಾ |
ನಂದ ಮುನಿಗೊಲಿದ ಮುದ್ದು ಕೃಷ್ಣನು |
ಹೃದಯರ ಮನೋವಾಸ | ವಿಜಯವಿಠಲ ಪಡುವಲ |
ಉದಧಿ ತೀರದಲಿಪ್ಪ | ಇದೆ ದ್ವಾರಕಿ ಎಂದು ೫
ಜತೆ
ಮಧ್ವಸರೋವರ ಸ್ನಾನ | ಮುದ್ದುಕೃಷ್ಣನ ಧ್ಯಾನ |
ಶುದ್ಧನಾಗಿ ಮಾಡೆ ವಿಜಯವಿಠಲಕಾವಾ ೬

ಭಗವಂತನನ್ನು ಪೂಜಾ ಸಾಮಗ್ರಿಗಳನ್ನು ಜೋಡಿಸಿ


ಧ್ರುವತಾಳ
ಅಣುವೆಂದು ನಿನ್ನನು ಘನವಾಗಿ ಪೂಜಿಸುವೆನೆ
ಅಣುವಲ್ಲ ಅಣುವಲ್ಲ ಅಬುಜನಲ್ಲ
ಘನವೆಂದು ನಿನ್ನ ನಾನು ಅಣು ಮಾತ್ರ ಅರ್ಚಿಸುವೆನೆ
ಘನವಲ್ಲ ಘನವಲ್ಲ ಘನ ಸದೃಶ
ಅಣುವಲ್ಲ ಘನವಲ್ಲ ಘನ ಸದೃಶ
ಏನೆಂಬೆ ನಿನ್ನ ಸೋಜಿಗವು ನೆಲೆಯಿಲ್ಲ
ಅನಿಮಿಷರೀಶ ನಿನ್ನ ಅನಿಮಿಷ ಗಣದವರು
ಎಣಿಸಿ ಗುಣಿಸಿ ಗುಣ ನೆಲೆಗಾಣರೊ
ಮನುಜ ವನಜ ತನುಜ ಜೀವಾದಿಗಳ
ತನುವಿನೊಳಗೆ ಒಂದಿನವಗಲದೆ
ಧನ[ವ] ಕಾಯುವ ಸರ್ಪನ ತೆರದಿನ
ಮ್ಮನು ಪಾಲಿಸುವ ಕಾಸನು ಬೇಡದೆ
ಘನ ಮಹಿಮ ವಿಜಯ ವಿಠಲ
ಮುನಿನುತ ನಿನ್ನ ಅಣು ಘನರೂಪ ಕಾಣೆನೊ ನಾನು
ಮಟ್ಟತಾಳ
ಪುರುಷರ ಮೋಹಿಸುವ ಪರಮ ಸುಂದರದೇವ
ಪುರುಷೋತ್ತಮ ನೀನೆ ಪುರುಷ ಪ್ರಧಾನನೆ
ಪುರುಷನು ನೀನೆ ಪುರುಷ ಬೀಜನು ನೀನೆ
ಪುರಾರಿ ಪುರಂದರ ಪುರುಷಾರ್ಥವನೀವ
ಪುರುಷ ಮೃಗವ ತಂದ ಪುರುಷನ ಪ್ರಾಣ ಕಿಂ
ಪುರುಷ ವಂದಿತ ಪಾದ ವಿಜಯ ವಿಠ್ಠಲ
ಪರಮ ಪುರಾತನ ಪುರುಷರೂಪತ್ರಯನೆ ೨
ತ್ರಿವಿಡಿ ತಾಳ
ಪೊಡವಿ ಸಿಂಹಾಸನ, ಕೊಡೆ[ಯೆ] ಗಗನ ನಿನಗೆ
ಮಡುವಿನುದಕ ಗೋವು ಕೊಡೆ ಪಾಲಭಿಷೇಕ
ಅಡವಿ ತುಲಸಿಲತೆ ಗಿಡ ಕುಸುಮ ನಿನ್ನ
ಅಡಿಗೇರಿಸುವೆನಯ್ಯಾ ನುಡಿಮಂತ್ರಗಳಿಂದ
ಬಿಡದೆ ತಿರುಗುವ ರವಿ ಕಡಲಸುತನ ದೀಪ
ಒಡೆಯ ತಾರೆಗಳು ನಿನಗಿಡುವ ಆಭರಣವು
ಬಡಿವಾಣವೆಲ್ಲ ಅಂಗಡಿಯ ಪದಾರ್ಥಗಳು
ಕೊಡುವ ಕಪ್ಪಗಳು ನಿನಗಿಡುವ ಕಾಣಿಕೆ ದೇವ
ಸುಡುವ ದಾವಾಗ್ನಿಯೆ ಕಡುತೇಜದಾರತಿ
ಅಡಿಗಡಿಗೆ ಸಂಶಯ ವಿಡಿಯದಲೆ ನಾನು
ಒಡನೊಡನೆ ಆವಾವ ಎಡಿಯಲ್ಲಿದ್ದವೆಲ್ಲ
ತಡೆಯದೆ ಮನದಲ್ಲಿ ಕೊಡುವೆನರ್ಪಿತವೆಂದು
ಕುಡುತೆ ಜಲಕೆ ಮುಕುತಿ ಕೊಡುವ ವಿಜಯ ವಿಠಲ ೩
ಅಟ್ಟ ತಾಳ
ಏಳುವಾಗಲಿ ಮುಗ್ಗಿ ಬೀಳವಾಗಲಿ ಹರಟೆ
ಹೇಳುವಾಗಲಿ ವಾರ್ತೆ ಕೇಳುವಾಗಲಿ ದೇಶ
ಆಳುವಾಗಲಿ ಭಾರ ತಾಳುವಾಗಲೆ ಧನ
ಹೂಳುವಾಗಲಿ ಸುಖ ಬಾಳುವಾಗಲಿ ನಿತ್ಯ
ವ್ಯಾಳೆಯಾಗಲಿ ಅವೇಳೆಯಾಗಲಿ ಮನ
ದಾಲೋಚನೆಯೆಲ್ಲ ವಾಲಗ ಹರಿಯೆನ್ನಿ
ವೇಳೆ ಸವಿಯದರ ವೇಳೆ ಸವೆಯಲಿಲ್ಲ
ನಾಲಿಗೆಯಿಂದಲಿ ಪೇಳುವುದಲ್ಲದೆ
ಆಲದೆಲೆಯ ಶಾಯಿ ವಿಜಯ ವಿಠ್ಠಲ ತಾಯಿ
ಲಾಲಿಸಿದಂತೆ ಮಾತಾಲಿಸಿಕೊಂಬ ೪
ಆದಿತಾಳ
ಎತ್ತಣ ಸಮರ್ಪಣೆ ಎತ್ತಣ ಸಮರ್ಪಣೆಂದು
ಎತ್ತಲಿದ್ದ ಹರಿಯು ಎತ್ತ ತೃಪ್ತನಾಹನೆಂದು
ಚಿತ್ತದಲಿ ಭೇದಗೊಂಡು ತತ್ತಳಿಗೊಂಬುವುದಲ್ಲ
ನಿತ್ಯ ಭಕ್ತಿಯಿಲ್ಲದವನು ಹತ್ತಿಲಿ ಪದಾರ್ಥವೆಲ್ಲ
ಜತ್ತಾಗಿರಿಸಿಕೊಂಡು ಸುತ್ತ ಸಮರ್ಪಣೆಯೆಂದು
ಇತ್ತು ನಲಿದಾಡಿದರೆ ಉತ್ತಮ ಶ್ಲೋಕನು ಒಪ್ಪ
ಚಿತ್ತ ಶುದ್ಧನಾಗಿ ಕರವೆತ್ತಿ ಬಲು ದೀನನಾಗಿ
ಅತ್ತಲಿದ್ದ ಉದಕವು ಅತ್ತಲರ್ಪಿತವೆನಲು
ಚಿತ್ತಜ ಪಿತನು ಮೆಚ್ಚಿ ಚಿತ್ತದಲ್ಲಿ ಒಪ್ಪಿಕೊಂಡು
ಹತ್ತಕ್ಕೆ ನೂರಾರು ಮಾಡಿ ಬಿತ್ತಿ ಬೆಳೆಸಿ ಉಣಿಸುವ
ಇತ್ತ ಬರುವ ಭವದೂರ ವಿಜಯ ವಿಠ್ಠಲರೇಯ
ಎತ್ತಲಾದರೇನು ತನ್ನ ಭೃತ್ಯನೆಂದರೊಡಂಬಡುವ ೫
ಜತೆ
ಅಚ್ಚುತಗರ್ಪಿತವೆಂದು ದಾಸರೆನಲು ಕಲ
ಗಚ್ಚು ಕೂಡಿದ ಕಾಣೊ ವಿಜಯ ವಿಠ್ಠಲ ಮೆಚ್ಚಿ ೬

ಕಲಿಯು ಎಲ್ಲರಿಂದಲೂ ಪಾಪ ಕೆಲಸಗಳನ್ನು


ಸುಳಾದಿ – ಧ್ರುವತಾಳ
ಅತ್ಯಣು ಜೀವವಿದೆ ಅನಾದಿಯಿಂದ ಸಿದ್ಧ |
ನಿತ್ಯವಾಗಿಪ್ಪದು ಶ್ರೀಹರಿಯಾ |
ಭೃತ್ಯನೆಂದೆನಿಪುದು ಬಹುಕಾಲದಲ್ಲಿ ತಪ್ಪದಲೆ |
ಸತ್ಯವೊಇದೆ ನಿಜ ಶ್ರುತಿಯಲ್ಲಿ ಸಾರಿಸಾರಿ ಕೃತ |
ಕೃತ್ಯವಾಗುತಿಪ್ಪರು ಬ್ರಹ್ಮಾದ್ಯರು |
ಸತ್ಯ ಲೋಕಧೀಶ ಸರ್ವ ಜೀವಿಗಳೊಳು |
ಸ್ತುತ್ಯನು ಕಾಣೊ ಸರ್ವದ ನಿರ್ಮಲ |
ಕೃತ್ತಿವಾಸನಿಂದಲಿತ್ತ ವುಳ್ಳವರಾರು ಪ್ರಾ |
ಕೃತ ಬದ್ಧವಾದ ಕಲಿ ಆವಿಷ್ಯ |
ತತ್ತಳಗೊಳಿಪುದು ಅವರವರ ಯೋಗ್ಯತದ |
ನಿತ್ತು ಕಾಲವನನ್ನು ಪರೀಕ್ಷಿಸಿ |
ಸತ್ವಾದಿ ಪರಿಚ್ಛೇದವುಳ್ಳ ಲಿಂಗದೇಹ |
ಹತ್ತಿ ಕೊಂಡಿಪ್ಪದು ತ್ರಿವಿಧರಿಗೆ |
ಉತ್ತುಮ ಜ್ಞಾನಿಗಳಿಗೆ ಮೊದಲು ಪರಿಚ್ಛೇದ |
ಸತ್ವಗುಣದ ಆವರಕವೆನ್ನಿ |
ನಿತ್ಯ ಸಂಸಾರಿಗಳಿಗೆ ರಾಜಸ ಗುಣವಹುದು |
ಮತ್ತೆ ತಮೋಯೋಗ್ಯರಿಗೆ ತಮೋಪರಿಚ್ಛೇದ |
ಪ್ರತ್ಯೇಕವಾಗಿಪ್ಪದು ಒಂದಕ್ಕೊಂದು ಬಿಡದೆ |
ಜತ್ತಾಗಿ ಕಾರಣವೆನಿಸಿ ಕೊಳುತ |
ಎತ್ತ ನೋಡಿದರತ್ತ ಜೀವನ ಪ್ರಕಾಶ |
ಸುತ್ತುವಂತೆ ಮಾರ್ಗವ ಕೊಡುತ |
ಉತ್ತರೋತ್ತರದಿಂದ ತಮ ತಮ ಗುಣದ ಕಾರ್ಯ |
ವಿತ್ತವದಲ್ಲದೆ ಬಿಡದು ತ್ರಿವಿಧರಿಗೆ |
ಉತ್ತರ ಲಾಲಿಸೆ ಅಭಾವ ಜ್ಞಾನ |
ಹೊತ್ತು ಹೊತ್ತಿಗೆ ಬರುತಲಿಪ್ಪವು |
ಕತ್ತರಿಸಿ ಲಿಂಗ ಪೋಗುವ ಪರಿಯಂತ |
ನಿತ್ಯಭಾವ ಜ್ಞಾನ ಅವರಿಗಿಲ್ಲ |
ಬಿತ್ತರಿಸಿ ಅಲ್ಲಿಯಿದ್ದ ಪರಿಚ್ಛೇದಕೆ |
ಕರ್ತಳಾಗಿಪ್ಪಳು ಶ್ರೀ ಭೂದುರ್ಗನಾಮ |
ತತ್ತಳಿಸುತಿಪ್ಪ ಸ್ಥಾನದಲ್ಲಿ |
ಎತ್ತಿ ದ್ವಾರವನ್ನು ಪಾದದಲ್ಲಿ ಮುಚ್ಚಿ |
ವೃತ್ತಿರೂಪ ಜ್ಞಾನ ಕೊಡುತಿಪ್ಪಳು |
ತತ್ವೇಶರು ಲಿಂಗದೇಹದಲ್ಲಿ ಯಿಲ್ಲ |
ಎತ್ತ ನೋಡಿದರತ್ತ ಸಿರಿವ್ಯಾಪ್ತಳು |
ಕರ್ತನು ಸರ್ವರಿಗೆ ವಿಜಯ ವಿಠ್ಠಲರೇಯ |
ಅತ್ಯಂತ ಮಹಿಮನು ಸಕಲರಿಗೆ ಪ್ರೇರಕ ೧
ಮಟ್ಟ ತಾಳ
ಪ್ರಥಮ ಪರಿಚ್ಛೇದದಲಿ ಮನಸುವುಂಟು |
ದ್ವಿತೀಯ ಪರಿಚ್ಛೇದದಲಿ ದಶೇಂದ್ರಿಯಗಳು |
ತೃತಿಯ ಪರಿಚ್ಛೇದದಲಿ ಶಬ್ದಾದಿಗಳು |
ಚ್ಯುತವಾಗದೆಯಿಪ್ಪವು ಕಾರಣ ರೂಪದಲ್ಲಿ |
ಪ್ರತಿ ಪ್ರತಿ ಕಲ್ಪಕ್ಕೆ ಪೂವಿಗೆ ಪರಿಮಳ ವ್ಯಾ |
ಪುತವಾಗಿದ್ದಂತೆ ಪೊಂದಿಕೊಂಡಿಪ್ಪವು |
ಕೃತಿರಮಣ ನಮ್ಮ ವಿಜಯ ವಿಠಲ ತಾನೆ |
ಸತತ ಜೀವರ ಕೈಯ್ಯ ಚೇಷ್ಟಿಯ ಮಾಡಿಸುವ ೨
ತ್ರಿವಿಡಿ ತಾಳ
ಅಲ್ಲಿಂದ ಬಿಂದುಗಳು ಉದುರಿಸಿದ ಸಿರಿ |
ವಲ್ಲಭನು ಲಿಂಗದೇಹದೊಳಗಿದ್ದು |
ಅಲ್ಲಾಡಿಸಲು ಆಗ ಅನಿರುದ್ಧ ಶರೀರ |
ಎಲ್ಲ ಜೀವರಿಗೆ ಸಿದ್ಧವಾಯಿತು |
ಸೊಲ್ಲು ಲಾಲಿಸಿ ಕೇಳಿ ಈ ವಿವರವಾಣಿ |
ನಲ್ಲನಿಂದ ವಿಡಿದು ಕ್ರಮಾನುಸಾರ |
ಸೊಲ್ಲುವೊಂದೊಂದು ಅಧಿಕಾರವಾಗಿ ದೇಹ |
ನಿಲ್ಲದೆ ಇಪ್ಪದು ಪ್ರಥಿವಿ ತನಕ |
ಬಲ್ಲದ್ದೆ ಸರಿ ಅನಿರುದ್ಧ ಶರೀರಕ್ಕೆ |
ಎಲ್ಲ ತಾತ್ವಿಕರು ಅಭಿಮಾನ್ಯರೊ |
ಬಲ್ಲಿದ ಬೊಮ್ಮಗೆ ರುದ್ರಾದಿಗಳಿಂದ |
ಇಲ್ಲವಯ್ಯ ಮಾಳ್ಪ ಪ್ರಯೋಜನ |
ಖುಲ್ಲಮರ್ದನ ನಮ್ಮ ವಿಜಯ ವಿಠ್ಠಲರೇಯ |
ನಲ್ಲದೆ ಮತ್ತೊಬ್ಬನಿಲ್ಲ ಸ್ವಾತಂತ್ರನು ೩
ಅಟ್ಟತಾಳ
ಶ್ರೀ ರಮಣನಾಗಿ ವಿಷ್ಣು ಎನಿಸಿಕೊಂಬ |
ಭೂರಮಣನಾಗಿ ಬ್ರಹ್ಮನೆನಿಸಿಕೊಂಬ |
ದುರ್ಗಾ ರಮಣನಾಗಿ ರುದ್ರನೆನಿಸಿಕೊಂಬ
ನಾರಾಯಣ ತಾನೆ ಈ ಪರಿಯಲ್ಲಿಪ್ಪ |
ಕಾರಣಕಾರ್ಯ ಶರೀರ ತಪ್ಪದೆ |
ಮೂರು ಗುಣದ ವ್ಯಾಪಾರ ಮಾಡಿಸುವ |
ಸಾರ ಹೃದಯವಾಸಿ ಸಿರಿ ವಿಜಯ ವಿಠ್ಠಲರೇಯ |
ಸಾರಿದವರ ಸಂಸಾರ ಉತ್ತರಿಸುವ ೪
ಆದಿತಾಳ
ಪ್ರತಿ ಪ್ರತಿ ದೇಹದಲ್ಲಿ ಈ ಬಗೆ ದೇವ ದೇ |
ವತೆಗಳುಂಟು ಆ ತಮ್ಮ ವ್ಯಾಪಾರ ಮಾಡಿಸುತ |
ಪ್ರತಿಕೂಲವಾಗರು ನೀಚರುತ್ತಮ್ಮರಿಗೆ |
ಹಿತವಾಗಿ ಇಪ್ಪರು ಉತ್ತಮರು ನೀಚರಿಗೆ |
ಚತುರವಿಧ ತಿಳಿ ಅಜ್ಞಾನ ಅಪೂರ್ಣ |
ಸತು ಉಪಜೀವನ ಜೀವಿಗಳಿಗೆ ಉಂಟು |
ಸತುವ ಮೂರುತಿ ನಮ್ಮ ವಿಜಯವಿಠ್ಠಲರೇಯ |
ಮತಿಯ ಕೊಡುವನು ಇಂದ ಗುಣಸಿದ ಜನರಿಗೆ | ೫
ಜತೆ
ಧ್ಯಾನವನ್ನೆ ಮಾಡು ದಾಸಭಾವವೆ ವಹಿಸಿ |
ಜ್ಞಾನದಾಯಕ ವಿಜಯವಿಠ್ಠಲನ್ನ ಪೂಜಿಸು ೬

‘ಅನಂತಶಯನ’ ದಕ್ಷಿಣ ಭಾರತದ

೨. ಅನಂತಶಯನ
ಅನಂತ ಪರಮ ಪುರುಷ |
ಅನಂತ ಅವತಾರ ಅನಂತ ಗುಣಾರ್ಣವ |
ಅನಂತ ಮಹಿಮ ಅನಂತ ಪರದೈವ |
ಅನಂತಾದ್ಭುತ ಲೀಲಾ ಅನಂತ ಅಪ್ರಮೇಯಾ |
ಅನಂತ ವರ್ನ ಅನಂತ ವೇದಾ ವಂದ್ಯ |
ಅನಂತಾಜಾಮರರು ಅನಂತಕಲ್ಪದಲ್ಲಿ |
ನಿನ್ನಾಂತ ನೋಡಲಾಗಿ ನಿನ್ನಂತ ತಿಳಿಯರೊ |
ಅನಂತ ಶಯನ ನಿನ್ನಾನಂತ ಬಲ್ಲೆನೆ |
ಅನಂತ ಶ್ರೀಮದಾ |
ಅನಂತ ವಿಜಯವಿಠಲ ಪ್ರಸನ್ನವದನಾ |
ಅನಂತಾನಂತ ಅವಾಂತರರಸೆ |
ಅನಂತ ಪದುಮನಾಭ ಶ್ರೀ ನಾರಸಿಂಹ ಅನಂತಾನಂತ ೧
ಮಟ್ಟತಾಳ
ಹರಿಪರ ದೇವತಿಯಾ ನಿರೀಕ್ಷಿಸುವೆನೆಂದು |
ಪರಮ ಭಕುತಿಯಲ್ಲಿ ಇರತಕ್ಕವನಾಗಿ |
ಧರಣಿಯೊಳಗೆ ದಿವಾಕರ ಯತಿ ದ್ವಾರಕಾ |
ಪುರಿಯಲ್ಲಿ ತಪಸಿಗೆ ನೆರೆನಂಬಿದನೆಂದು |
ಪರ ಚರಿತರಂಗ ವಿಜಯವಿಠಲರೇಯಾ |
ತ[ರ]ಳನಾಗಿ ಬಂದು ಸರಸದಲಿ ಸುಳಿದ ೨
ರೂಪಕತಾಳ
ಹರಿ ಸುಳಿಯಲು ದಿವಾಕರಮುನಿ ವೈರಾಗ್ಯ |
ಮರೆದು ಮರುಳಾಗಿ ಪರಮಾ ಮೋಹದಿಂದ |
ಕರದು ತೊಡಿಯಲ್ಲಿ ಕುಳ್ಳಿರಿಸಿ ಬೆಸಗೊಳಲು |
ಹರಿಮಾಯಾ ಕಲ್ಪಿಸೆ ಚರಿತೆಯ ತೋರಿದ |
ಜರಿದು ಅಲ್ಲಿಂದಲ್ಲಿ ಬರುತ ಬರುತ ಮುನಿಗೆ |
ಕರ ಪ್ರಾಪ್ತಿಯಾದಂತೆ ಸರಿದು ಬಂದನು ದೂರಾ |
ಶರಣರ ಕರುಣಾಳು ವಿಜಯವಿಠಲನು ಕಿಂ |
ಕರನ ಮನೋಭಾವಾ ಅರಿದು ಆ ಕ್ಷಣದಲ್ಲಿ ೩
ಝಂಪೆತಾಳ
ಗಿಡ ಒಂದು ಮೂರು ಯೋಜನ ಪರಿಮಿತವಿರಲು |
ಹುಡುಗನಾಗಿದ್ದ ಬಾಹಿರರಂತರಾತ್ಮಕನು |
ಅಡಗಿದನು ಯತಿಯ ಕಣ್ಣಿಗೆ ಕಾಣಿಸದಿರಲು |
ನಡುಗಿದನು ಅಕಟಕಟ ಮನದೊಳಗೆ |
ಕಡುಪಾಪಿ ನಾನೆಂದು ದಿವಕರನು ಮರುಗಲು |
ಒಡನೆ ತೋರಿದ ತನ್ನ ನಿಜರೂಪವ |
ಸಡಗರದ ದೈವ ನಮ್ಮ ವಿಜಯವಿಠಲನಂತಾ |
ತೊಡೆವನು ನಂಬಿದವರ ಫಣಿಯ ದುರ್ಲೇಖಾ೪
ತ್ರಿವಿಡಿತಾಳ
ಬೇರರಿಸಿ ಕಿತ್ತಿ ಬೀಳಲದರ ಪ್ರಮಾಣ |
ತೋರಿದ ಭಕ್ತನ ಮನಕೆ ಸಂತೋಷ |
ಮೂರು ಯೋಜನದುದ್ದ ಶ್ರೀ ರಮಣನುದರಾ |
ಮೂರುತಿಯಾಗಿ ಪವಳಿಸಿದಾನಂದು ವೇಗ |
ಭಾರತಕರ್ತಾನಂತ ವಿಜಯವಿಠಲರೇಯನ |
ಆರು ಬಲ್ಲರೈಯ್ಯಾ ಕಾರುಣಿಕ ತನ[ವ] ೫
ಅಟ್ಟತಾಳ
ಬೆರಗಾಗಿ ಮುನಿನಿಂದು ಕರವ ಮುಗಿದು |
ಶಿರಿಧರನ್ನ ರೂಪವನ್ನೂ ನೋಡಿ |
ಪರಮಾಶ್ಚರ್ಯವಾನಿರವ ನೋಡುತ ವಿ |
ಸ್ತರದಿಂದ ಪೊಗಳಿದಾ |
ಹರಿ ನಿನ್ನ ರೂಪವೀಪರಿಯಲ್ಲಿ ಉಳ್ಳಾರೆ |
ಧರೆ ಮನುಜರು ನಿನ್ನ ಅರಿವುದೆಂತೆನ್ನಲಾಗಿ |
ಹರಿ ಅಣೋರಣಿರೂಪ ಕರುಣಾದಿಂದಲಿ ದಿವಾ |
ಕರನ ಕರದಲಿಂದ ವರದಂಡಾ ಪರಿಮಿತ |
ಎರಡೊಂದರೊಳಗೆ ಆಕಾರತಂದು ನಿಲಿಸಿದ |
ನರಸಿಂಹ ವಿಜಯವಿಠಲ ಪದುಮನಾಭಾ |
ವರ ಅನಂತಾ ಕ್ಷೇತ್ರನಿವಾಸಾ೬
ಆದಿತಾಳ
ವರವಿತ್ತು ಒಂದು ಕಲ್ಪಾ ಪರಿಯಂತ ನಿನ್ನಾ |
ವರಕರದಿಂದರ್ಚನೆಗೊಂಡು ಇಲ್ಲೆ ಎನುತಾ |
ನಿರುತಾವ ನರನೊಮ್ಮೆ ಕರಣ ಶುದ್ಧಿಯಲ್ಲಿ |
ಚರಿಸಿ ಯಾತ್ರಿಯ ಎಪ್ಪತ್ತೆರಡು ತೀರಥದಲ್ಲಿ |
ಪರಮನಿಷ್ಠೆಗೆ ಮನವೆರಗಿ ಯತಾರ್ಥವಾಗಿ |
ಹರಿಗೆ ಕುಡಿತೆಜಲವೆಂದು ಬಚ್ಚಿಡಲಾಗಿ |
ಪರಮ ಪದವಿಗಲ್ಲಿ ನೆರವಾಗಿ ಉಣಿಸೋದು |
ಪರಮಪಾವನನಂತ ವಿಜಯವಿಠಲ ಬಲ್ಲ |
ಧರೆಯೊಳೀಕ್ಷೇತ್ರಕ್ಕೆ ಸರಿಗಾಣೆ ಎಣಿಸಾಲು ೭
ಜತೆ
ಪದುಮನಾಭಾನಂತಾ ನರಸಿಂಹ ವೈಕುಂಠ |
ಸದ್ಮನೆ ವಿಜಯವಿಠಲದಾಸರ ಪ್ರೇಮಾ ೮

ಶ್ರೀಹರಿಯ ಸ್ವರೂಪವನ್ನು ವಿಜಯ


ಧ್ರುವತಾಳ
ಅನಂತ ಬೊಮ್ಮಾಂಡ ನಿನ್ನುದರದಲ್ಲಿ ಯಿಟ್ಟು
ಅನಂತ ಬೊಮ್ಮಾದಿಗಳ ನಿನ್ನೊಳಗಡಗಿಸಿ ಕೊಳುತ
ಅನಂತ ಸರ್ವದಲ್ಲಿ ನೀನೆ ನೀನೆ
ಅನಂತ ಮಹಿಮೆಯ ತೋರುತಲಿ
ಅನಂತ ಅನಂತ ಅವತಾರ ಮಾಡುತ್ತ
ಅನಂತ ಗುಣ ಪರಿಪೂರ್ಣ ನೀಲವರ್ನಾ
ಅನಂತ ನದಿ ಜನಕ ವಿಜಯ ವಿಠ್ಠಲ ನೀನೆ
ಅನಂತ ಪರಿಯಲ್ಲಿ ನಾಟಕ ಕರ್ತಾ೧
ಮಟ್ಟತಾಳ
ಬಹು ಶಿರಸಾ ಬಹು ಕರ್ನಾ ಬಹುನಯನಾ ಬಹುನಾಸಾ
ಬಹುವದನಾ ಬಹುಬಾಹು ಬಹುಹಸ್ತ ಬಹುಕಂಠ
ಬಹುಉದರಾ ಬಹುಕಟಿ ಬಹುಜಾನು ಬಹುಜಂಫೆ
ಬಹುಚರಣಾ ಬಹುನಖಾ ಬಹು ಮೂರುತಿ
ವಿಜಯ ವಿಠ್ಠಲರೇಯಾ
ಬಹುಕಾಲದ ಹಿರಿಯ ಬಹುವಿಧ ಪಾಲಿಸು ೨
ತ್ರಿವಿಡಿ ತಾಳ
ಜನನ ಮರಣಾರ್ಭಕತನ ಯೌವ್ವನ ಜರೆ
ತನ ನಾನಾಕಾ ಮನಸಿನ ವ್ಯಾಪಾರಂಗಳು
ಇನಿತು ನಿರ್ಮಾಣವ ಎನಗೆ ಕಲ್ಪಿಸಿಕೊಟ್ಟು
ದಣಿಸುವುದುಚಿತವೆ ದನುಜಾಂತಕಾ
ಮನುಮಥ ಜನಕ ನಮ್ಮ ವಿಜಯ ವಿಠ್ಠಲರೇಯಾ
ನಿನಗೆ ಈ ಪರಿ ವ್ಯಾಪಾರವೇ ಬಲು ಲೇಸು ೩
ಅಟ್ಟತಾಳ
ಇದರಿಂದ ನಿನಗೆ ಕಾಲಕ್ಷೇಪವಿದ್ದರೆ
ಅದರಂತೆ ಮಾಡಿ ಎನ್ನನು ಪುಟ್ಟಿಸಲಿಬೇಕು
ಮಧು ಸೂದನ ರಂಗಾ ವಿಜಯ ವಿಠ್ಠಲರೇಯಾ
ಚದುರತನ ವೆಂಬೊದದಟ ಒಂದಲ್ಲದಲೆ ೪
ಆದಿತಾಳ
ಆರಗೊಡವಿ ಏನು ಎನಗೆ ಆರ ಸಂಗವೇನು ಎನಗೆ
ಆರಿಂದಲೇನುಪಕಾರವಾಗೊದೆನಗೆ ಮುಂದೆ
ಆರನಾದರೇನು ನೀನುದ್ಧಾರವನ್ನು ಮಾಡು ಬಿಡು
ಕೋರುವನಾನಲ್ಲ ಎನ್ನ ಓರಂತೆ ಮಾಡು ಎಂದು
ಶ್ರೀರಮಣ ವಿಜಯ ವಿಠಲಾಪಾರ ಮಹಿಮ ಪರಿಪೂರ್ಣ
ಮೂರುತಿ ಮುರಾರಿ ಸರ್ವಾಧಾರಿ ವಾರಿಸ ವದನಾ ೫
ಜತೆ
ಹೊಸ ಪರಿಯ ವ್ಯಾಪಾರ ನಿನ್ನಲ್ಲಿ ಇರಲಾಗಿ
ಅಸುರ ರಿಪು ವಿಜಯ ವಿಠಲ ಎನಗೆ ಇನಿತೊ ೬

ಈ ಪ್ರಪಂಚದಲ್ಲಿ ಜೀವರಾಶಿಗಳು ಅನಂತಾನಂತ


ಧ್ರುವತಾಳ
ಅನಂತಕಾಲದೊಳಗೊಂದೆ ಕಾಲವಿದೆ
ಅನಂತಾನಂತ ದೇಶದೊಳಗೊಂದೆ ದೇಶವಿದೆ
ಅನಂತ ಗುಣ ದೊಳುಗೊಂದೆ ಗುಣವಿದೆ
ಅನಂತಾನಂತ ಕರ್ಮದೊಳಗೊಂದೆ ಕರ್ಮವಿದೆ
ಅನಂತಾನಂತ ಜನುಮದೊಳಗೊಂದೆ ಜನುಮವಿದೆ
ಅನಂತಾನಂತ ಯಾತ್ರಿಯೊಳಗೊಂದೆ ಯಾತ್ರಿಯಿದೆ
ಅನಂತಾನಂತ ತೀರ್ಥದೊಳಗೊಂದೆ ತೀರ್ಥವಿದೆ
ಅನಂತಾನಂತ ಶ್ರುತಿಯೊಗೊಂದೆ ಶ್ರುತಿಯಿದೆ
ಅನಂತಾನಂತ ಮಂತ್ರದೊಳಗೊಂದೆ ಮಂತ್ರವಿದೆ
ಅನಂತಾನಂತ ವರ್ಣದೊಳಗೊಂದೆ ವರ್ಣವಿದೆ
ಅನಂತಾನಂತ ದ್ಯವ್ಯದೊಳಗೊಂದೆ ದ್ರವ್ಯವಿದೆ
ಅನಂತಾನಂತ ಜಾಂಡಜಾಂಡದೊಳಗೊಂದೆ ಜಾಂಡವಿದೆ
ಅನಂತಾನಂತ ಕಲ್ಪದೊಳಗೊಂದೆ ಕಲ್ಪವಿದೆ
ಅನಂತಾನಂತ ಯುಗದೊಳಗೊಂದೆ ಯುಗವಿದೆ
ಅನಂತಾನಂತ ಕಾಲದೊಳಗೊಂದೆ ಕಾಲವಿದೆ
ಅನಂತಾನಂತ ಒಂದೆ ಒಂದೊಂದೆ ಅನಂತಾನಂತ
ಅನಂತ ಗುಣಪೂರ್ಣ ವಿಜಯ ವಿಠಲರೇಯಾ
ಅನಂತ ಜೀವರಾಶಿಯೊಳು ಒಂದು ಜೀವ ನಾನಾ ೧
ಮಟ್ಟ ತಾಳ
ಅನಂತ ಮೂರ್ತಿಯೊಳಗೊಂದೆ ಮೂರ್ತಿಯಿದೆ ಅನಂತಾ
ಅನಂತ ನಾಮದೊಳಗೊಂದೆ ನಾಮವಿದೆ ಅನಂತಾ
ಅನಂತ ಸ್ಮರಣೆಯೊಳಗೊಂದೆ ಧ್ಯಾನವಿದೆ ಅನಂತಾ
ಅನಂತಾನಂತಾ ಅನಂತ ಬಗೆ ವಿಜಯ ವಿಠಲರೇಯಾ
ಅನಂತಾವತಾರ ಅನಂತ ಚರಿತಾ ೨
ತ್ರಿವಿಡಿ ತಾಳ
ತೃಣ ಜೀವರಾಶಿಗಳು ಬೊಮ್ಮನ ತನಕವರು
ಗುಣದಲ್ಲಿ ಪರಮಾಣು ಪ್ರಾದೇಶದಿ
ಎಣಿಸಿ ನೋಡುವರಯ್ಯಾ ತಮ್ಮ ಯೋಗ್ಯತದರಿತು
ಎಣಿಕೆ ಅಧಿಕಾಧಿಕವೆನಿಸಿ
ಇನಿತಲ್ಲದೆ ಲಕುಮಿ ಬೊಮ್ಮನ ನೋಡಲು
ಗಣನೆ ಇಲ್ಲದೆ ಒಂದಾನಂತ ಮಡಿಯಾಗಿ
ಮನದಲ್ಲಿ ಕಾಂಬಳು ಲೇಶ ಬಿಡದೆ
ಜನುಮರಹಿತ ನೀನೆ ಲಕುಮಿ ನೋಡಿದರೊಳು
ಅಣು ಅತ್ಯಣುಗಳು ಕಾಣುತಿಪ್ಪೆ
ನಿನಗೆ ನಿನ್ನಿಚ್ಛಿಗೆ ಭೇದ ಎಂದಿಗಿಲ್ಲಾ
ಚಿನುಮಯ ರೂಪನೆ ತತ್ವ ಮೋದಾ
ಅನಿಮಿಷಾದಿಗಳಿಗೆ ಸೋಜಿಗ ತೋರುವ
ಘನ ಮಹಿಮಾ ವೈಕುಂಠವಾಸಾ ಶ್ರೀಶಾ
ತನು ಹತ್ತು ಇಂದ್ರಿಯಂಗಳು ಚಿತ್ತ ಬುದ್ಧಿಯು
ಮನ ಅಹಂಕಾರ ನಾನಾ ವರ್ಣನೆ
ತನುರೂಹ ಸರ್ವಾವಯವಗಳು ಜ್ಞಾನಪೂ
ರಣನಾಗಿ ಇಪ್ಪ ಸ್ವಂತಂತ್ರ ಪುರುಷರ್ಚನೆ ಮಾಡಿ
ನಿನ್ನ ಮೆಚ್ಚಿಸ ಬಲ್ಲನೆ ದೇವಾ
ಎನಗಾವದು ನಿನ್ನ ನೆಲೆಯೆ ತಿಳಿಯೆ
ಬಿನಗು ದೈವದೊಡಿಯಾ ವಿಜಯವಿಠ್ಠಲ ನಿನ್ನ
ನೆನಹೆ ಮುಕ್ತಿಗೆ ಮಾರ್ಗವೆಂಬೋದೆ ಶ್ರುತಿಸಿದ್ದಾ ೩
ಅಟ್ಟತಾಳ
ಧರಣಿ ಉದಕ ತೇಜ ವಾಯು ಅಂತರಿಕ್ಷಾ
ಸ್ಪರಶ ರೂಪರಸ ಗಂಧ ಶಬ್ಧ ಮಿಗಿಲಾದ
ಪರಮಾಣುಗಳು ಚತುರವಿಂಶತಿ ತತ್ವ
ವಿರುತಿರೆ ಅತಿ ಸೂಕ್ಷ್ಮವಾಗಿ ಅದರೊಳು
ಹರಿನಿನೇ ಅಂಥ ಪರಮಾಣುಗಳಲ್ಲಿ
ಪರಿ ಪರಿ ಬಗೆಯಿಂದಲಿ ಒಳಗಿಪ್ಪೆ ಕಾಣುತ್ತ
ನಿರುತ ನೀನರಿಯದ ದ್ರವ್ಯಂಗಳ ತಂದು
ವರ ಪೂಜೆ ಮಾಡು ಎಂದರೆ ಆವದಿಪ್ಪದು
ಚರಾಚರದಲ್ಲಿ ಪ್ರಾಣ ಪ್ರಕೃತಿ ನೀನಲ್ಲದೆ
ತಿರುಗುವ ವ್ಯಾಪಾರ ಮತ್ತಾವದು ಪೇಳೋ
ಚರಣದಲ್ಲಿ ಧರೆ ಅಳೆದ ಮಹಾತುಮಾ
ಸರಿಯಿಲ್ಲ ನಿನಗೆಲ್ಲಿ ವಿಜಯ ವಿಠ್ಠಲ ಎನ್ನ
ಇರವ ಬಲ್ಲವನಿಗೆ ವಿಸ್ತರಿಸುವುದೇನೊ೪
ಆದಿತಾಳ
ಸನಕಾದಿ ಮುನಿ ಮನುಗಳು
ಅನಿಮಿಷಗಣ ಪಾಕಶಾಸನ ರುದ್ರ
ಪನ್ನಗ ಖಗ ವನಜಭವನ ಮನಕೆ ತೋರದಾ
ಕಣ್ಣಿಗೆ ಪೊಳೆಯದ ಚಿನುಮಯ ಅನ್ನಮಯಾ
ಘನಕೆ ಘನ ನಿನ್ನ ಪೂಜೆಯನ್ನು ಮಾಡಿ
ದಣಿಸುವನಾರು ಬಣ್ಣಿಸಲರಿದು ಬಿ
ನ್ನಾಣದಲ್ಲಿ ಎನ್ನ ಭವದ ಬನ್ನ ಬಿಡಿಸೊ
ಅನಂತಾನಂತ ಚನ್ನ ಮೂರುತಿ ವಿಜಯ ವಿಠ್ಠಲ
ನಿನ್ನ ಪಾದವನ್ನು ನಂಬಿದೆ ೫
ಜತೆ
ನನ್ನಂಥವನ ಪೂಜೆಯಿಂದ ನಿನಗೇನು
ಅನಂತಾನಂತನೆ ವಿಜಯ ವಿಠ್ಠಲ ಸುಲಭಾ೬

ಈ ಸುಳಾದಿಯು ಅಹೋಬಲ ಎಂಬ

೮. ಅಹೋಬಲ
ರಾಗ – ಕೇದಾರಗೌಳ
ಧ್ರುವತಾಳ
ಅನಂತಾನಂತಶಯನಾ ಅಂಬುಜದಳ ನಯನ |
ಉನ್ನಂತ ಗುಣನಿಲಯಾ ಪನ್ನಗ [ಶಾಯಿ] |
ಘನ್ನ ಕಾರುಣ್ಯಮೂರ್ತಿ ಸತತ ಮಂಗಳ ಕೀರ್ತಿ |
ಚನ್ನ ಪ್ರಸನ್ನರನ್ನ ಶಿರಿ ಸಂಪನ್ನ |
ಚಿನ್ನಾಂಬರ ಚಿನ್ನರೂಪ ಚಿನ್ಮಯ ಕಾಯ |
ಭಿನ್ನ ಜೀವರಪರಿಭಿನ್ನ ವ್ಯಾಪ್ತಾ |
ಪನ್ನಗನಾಗಾತಲ್ಪಾ ನಾಗಭಯ ವಿನಾಶ |
[ಚೆ]ನ್ನಾ ಚೋರಾ ಚತುರಾ ಚತುರ್ಮೊಗನ್ನಯ್ಯಾ |
ಅಣೋರಣೀ ಅಜರಾ ಅನಾದಿದೇವ ಪಾ |
ವನ್ನಾ ಜೀವನ್ನಾ ದುಷ್ಟ ಜನ ಮರ್ದನಾ |
ಬಣ್ಣಾ ಬಣ್ಣಾದ ಘನ್ನವರ್ನಾ ಸುಪರ್ನ ವಾ |
ಹನ್ನಾ ಭವಾರಣ್ಯಾ ದಾಹನ್ನ ನಿತ್ಯಾ |
ಜೊನ್ನ ಪ್ರಕಾಶ ದಿಕ್ಕರಿಸುವ ತೇಜಾ ಪ್ರ |
ಸನ್ನಾ ಕೇಶವ ಭಂಜನ್ನಾ ಸುನಿರಂಜನ್ನಾ |
ಎನ್ನಂತರಂಗದೊಳಗಿಪ್ಪ ವಿಜಯವಿಠಲಾ |
ಅನಂತಗಿರಿವಾಸಾ ನರಕೇಸರಿವೇಷಾ ೧
ಮಟ್ಟತಾಳ
ಕಲ್ಪಾಯು ಪಡೆದ ಮುನಿ ಮಾರ್ಕಂಡೇಯಾ |
ಸರ್ಪಗಿರಿಯಲ್ಲಿ ಶ್ರೀನಿವಾಸನ ನೋಡಿ |
ತಪ್ಪದೆ ದೇವನ್ನ ವರವ ಸಂಪಾದಿಸೆ |
ಒಪ್ಪದಿಂದಲಿ ಈ ಗಿರಿಯಾ ಕಡೆ ಭಾಗಾ |
ತಪ್ಪಾಲಲ್ಲೀ ಪೋಗಿ ತಪವನುಮಾಡೆಂದು |
ಅಪ್ಪಣೆ ಕೊಡಲಾಗಿ ಶುದ್ಧನ ಒಡಗೂಡಿ |
ಸುಪ್ರೀತಿಯಿಂದ ಭುವನವ ಸಂಚರಿಸೀ |
ಅಪ್ರತಿಯಾಗಿದ್ದ ಸ್ಥಳವನೆ ನೀಕ್ಷಿಸುತ |
ಮುಪ್ಪುರದೊಳಗಿದಕೆ ಎದರುಗಾ[ಣೆ]ನೆಂದು |
ಅಲ್ಪಮನಸುಮಾಡದೆ ವಾಸವಾದನು ಇಲ್ಲಿ |
ಮುಪ್ಪು ಇಲ್ಲದ ದೇವ ವಿಜಯವಿಠಲನ್ನಾ |
ವರ್ಪಗಳು ಗುಣಿಸಿ ಧ್ಯಾನವ ಐದಿದನೂ ೨
ತ್ರಿವಿಡಿತಾಳ
ಪದಿನಾಲ್ಕು ಸಾವಿರ ವರುಷ ಭಕುತಿಯಿಂದ |
ಒದಗಿ ತಪವಮಾಡಿ ಆಹಾರ ತೊರದೂ |
ಮುದದಿಂದ ಬಂದು ನೇಮವಮಾಡಿಕೊಂಡಿಪ್ಪ |
ಸದಮಲವಾದ ಅಹೋಬಲರಾಯನ |
ಪದದರುಶನ ಮತ್ತೆ ಭವನಾಶಿ ಮಜ್ಜನ |
ಬುಧನು ಬಿಡದೆ ಬಂದು ಗುಹಾದಿಂದ |
ಉದಯಕಾಲಕೆ ಪೋಗಿ ಬಲಗೊಂಡು ಬರುವಾ ಪ್ರಾಂ |
ತ್ಯದಲಿ ಒಂದಾಯಿತು ಕೇಳಿ ಜನರೂ |
ಅದು ಭೂತಾದಿವಸ್ತ ಪ್ರಾಪ್ತವಾಯಿತು |
ಮೊದಲು ಚಾತುರ್ಮಾಸ್ಯ ಏಕಾದಸೀ |
ಅದರ ತರುವಾಯ ಕಳಮಾತ್ರಸಾಧನ |
ಪದವಿಗೆ ಕೇವಲಾ ಶುಚಿಮಾರ್ಗವೋ |
ಇದು ಉಲ್ಲಂಘಿಸಿದರೆ ಪಾಪ ಅಲ್ಲಿಗೆ ಪೋಗಾದೊ |
ಇದ್ದಾರೆ ಎನ್ನಾ ನೇಮ ಭಂಗ |
ಹದುಳ ತೋರದೇ ಮೌನಿ ಉಭಯಸಂಕಟದಿಂದ |
ಪದುಮನಾಭನ ಚರಣನೆನೆಸಿ ಗುಣಿಸೆ |
ಅದೆ ಅದೆ ಸಮಯದಲಿ ದೇವ ನುಡಿದ ತಾನೆ |
ಉದಯವಾಗದ ಮುನ್ನೆ ಅರುಣನ ಗತಿಗೆ |
ನದಿ ಭವನಾಶಿಯಾ ಕರಕೊಂಡು ಪಾರಿಜಾ |
ತದ ವೃಕ್ಷ ಸಮೇತಾ ಬರುವೆನೆಂದೂ |
ಹೃದಯದೊಳಗೆ ತಿಳಿಸಿ ಪೇಳಿದಂತೆ ಬಂದು |
ಉದಭವನಾದನು ಅಹೋಬಲರಾಯಾ |
ಗದಗದನೆ ನಡುಗುತ್ತಾ ಅಂಜಳಿ ಪುಟದಿಂದ |
ತೊದಲು ವಾಕ್ಯಗಳಿಂದ ಹರಿಯ ಸ್ತುತಿಸಿ |
ತ್ರಿದಶಾದಿ ವಂದ್ಯ ನಾರಸಿಂಹನೆ ಪರಮಾ ಸು |
ಹೃದಯನೆ ಅನಂತನಾಮಕ ದೇವನೆ |
ಮದಡಮತಿಗೆ ಒಲಿದು ಉದ್ಧರಿಸಿದೆ ಎಂದು |
ಹದನವರಿತು ಪುಣ್ಯಗಳಿಸಿಕೊಂಡ |
ಮಧುವೈರಿ ವಿಜಯವಿಠಲ ಇಲ್ಲಿಪೊಳೆಯಲು |
ವಿಧಿ ಶಿವಾದ್ಯರು ಬಂದು ವಾಲಗ ಮಾಡಿದರು ೩
ಅಟ್ಟತಾಳ
ಅನುಗ್ರಹ ಮಾಡಿದೆ ಅನಿಮಿತ್ತ ಬಂಧುವೆ |
ಎನಗೊಂದು ವರವ ಪಾಲಿಸುವದು ನೀನಿಲ್ಲಿ |
ಅನುಗಾಲಾ ವಾಸವಾಗಿರಬೇಕು ತೊಲಗಾದೆ |
ವನದಿ ಸಂಭವೆ ಬೊಮ್ಮ ಶಂಭುಸುರರು ಮಿಕ್ಕ |
ಮುನಿ ಮನುಗಳು ತೀರ್ಥಾಭಿಮಾನಿಗಳಾ |
ಜನರೆಲ್ಲಾ ಸನ್ನಿಧಿಯಾಗಿ ಇರಬೇಕು |
ಮನುಜನಾವನು ಇಲ್ಲಿಗೆ ಬಂದರವನಿಗೆ |
ಘನ ಪಾಪಾ ಓಡಿಸಿ ಪುಣ್ಯವೆ ತಂದಿತ್ತು |
ಜನುಮಾಜನುಮಾದಲ್ಲಿ ಜ್ಞಾನವೆ ಕೊಟ್ಟು ನಿ |
ನಿನ್ನನೆ ಧೇನಿಸುವಂತೆ ಕೃಪೆಮಾಡು ಎನಲಾಗಿ |
ಮುನಿಗೆ ಒಲಿದು ವರವನು ಇತ್ತನು ಇತ್ತಾ |
ಕನಕಮಯವಾದಾಗಿರಿ ಇದೆ ಇದೆ ಇದೆ |
ವನಧಿ ಬಂಧನ ಕುರು ಜಾಂಗುಲಿ ವಿಶಾಲಾ |
ಮಣಿಕರ್ಣಿಕೆ ಕಾಶಿ ಶ್ರೀರಂಗಕ್ಷೇತ್ರ |
ಮಣಿಯಾಗಿಪ್ಪಾದೆಂದು ಅತಿಶಯವಾದಾ ಮಾ |
ತನು ಕೊಟ್ಟಾ ಪರಮಾತ್ಮ |
ದಿನ ಒಂದು ನೂರೈದು ಏಳೆಂಟು ಒಂಭತ್ತು |
ಇನಿತರ ಮೇಲೆ ವೆಗ್ಗಳವಾಗಿ ಇದ್ದರು |
ಅನಿಮಿಷ ಗಂಗಾತೀರದಲ್ಲಿ ಶತವಸ್ತ್ರ |
ರನುಸರಿಸಿ ಇದ್ದ ಫಲಕೆ ಮಿಗಲಯ್ಯಾ |
ಎಣಿಕೆ ಮಾಡುವರ್ಯಾರು ಈ ಕ್ಷೇತ್ರದ ಯಾತ್ರಿ |
ಜನುಮದೊಳಗೆ ಒಮ್ಮೆ ಸಾರಿದಾನಂತ |
ಜನನಕೆ ಯಾತ್ರಿ ಮಾಡಿದಂಥ ಫಲವಕ್ಕು |
ಕನಸೀಲಿ ಮನಸೀಲಿ ಚಿಂತಿಸೆ |
ಧನವಂತನಾಗುವಾ ಇಹ ಪರದಲ್ಲಿ ಸೌಖ್ಯ |
ಹನುಮಾ ವಂದಿತ ನಮ್ಮ ವಿಜಯವಿಠಲರೇಯಾ |
ಸನತ್ಕುಮಾರ ನಾರದರಿಗೆ ಒಲಿದ ಕಾಣೋ೪
ಆದಿತಾಳ
ಎಸೆವಾ ತೀರ್ಥಂಗಳುಂಟು ಶೇಷ ಮಾರ್ಕಂಡ ಬ್ರಹ್ಮಾ |
ಬಿಸರುಹನಾಭಾ ಲಕುಮಿ ಹನುಮಾ ರುದ್ರ ರುದ್ರಾಣಿ |
ಋಷಿ ಗೌತುಮಾ ವಿಭಾಂಡಾ ಸ್ಕಾಂದ ಅಂತರಗಂಗೆ |
ಬೆಸಸುವೆ ಭೈರವ ಪಾಪವಿನಾಶನ |
ವಸುಧಿಯೊಳಗಿದ್ದ ಎಲ್ಲಾ ತೀರ್ಥಗಳಕ್ಕು |
(ಬೆಸನೆ) ಲೋಕದ ಜನರು ಬಂದು ವಿಧಾನ ತಿಳಿದು |
ಕುಶಲ ಮತಿಯಿಂದ ಸತ್ಕರ್ಮಾಚರಿಸಲು |
ವಶವಾಗಿಪ್ಪಾರು ಸರ್ವದೇವತೆಗಳು |
ವಿಷಯಗಳಲಿ ಬಿದ್ದು ಕೆಟ್ಟುಪೋಗದೆರ |
ಕ್ಕಸಯೋಗ ಮಾಡದಿರಿ ಗತಿಗೆ ಮಾರ್ಗವಾಗದು |
ಅಸುರ ವಿರೋಧಿ ನಮ್ಮ ವಿಜಯವಿಠಲರೇಯಾ |
ನಸುನಗುತ ಗಂಡಿಕಿ ಶಿತಿಯೊಳಗಿರುತಿಪ್ಪ ೫
ಜತೆ
ಪರಮಾಯು ಸಿದ್ಧಿಪದು ಮಾರ್ಕಂಡ್ಯಕ್ಷೇತ್ರಾ |
ನರಸಿಂಹಾನಂತಾ ವಿಜಯವಿಠಲ ವಾಸಾ ೬

ಭಗವಂತನನ್ನ ಅನಿಮಿತ್ತ ಬಂಧು

೯೩
ಧ್ರುವತಾಳ
ಅನಾಥ ಬಂಧು ದೀನದಯಾಳು ಅನಾದಿದೈವ
ಅನಿಮಿತ್ತ ಜೀವ ಅನಾಮಯಾ ಅನಂತ
ಅನಂತ ಮೂರ್ತಿ ಪ್ರಧಾನ ಪುರುಷರ ಧ್ಯಾನಕ್ಕೆ ದೂರಾ
ಆನಂದ ಮಯನತಿ ಜ್ಞಾನಾದಿ ಪೂರ್ಣಾ
ವಾಣಿಯರಸನಯ್ಯ ಅನರ್ಪಿತನ್ನೇ
ಪ್ರಾಣಾಪಾನಾದಿ ಪಂಚ ಪ್ರಾಣಾಹುತಿಯಿಂದ
ತ್ರಾಣರನ್ನೆ ಮಾಡಿ ಮಾಣದೆ ನಡಿಸುವ
ಜಾಣಬೃಹದ್ಭಾನು ವಿಜಯ ವಿಠ್ಠಲ ನೀನು
ನಾನಾ ಲೀಲೆಯ ತೋರುವ ನಾರಾಯಣದೇವ ೧
ಮಟ್ಟತಾಳ
ಅಚ್ಯುತಾನಂತ ಗೋವಿಂದ ಕೃಷ್ಣ
ಸಚ್ಚಿದಾನಂದ ವೈಕುಂಠರಮಣ
ಅಚ್ಚರ ಮಹಿಮ ಕಮಲ ಜಾಂಡ
ಮುಚ್ಚಿ ಬಿಚ್ಚುವಂಥ ಬಿಗಹು ಪ್ರತಾಪಾ
ಅರ್ಚಿಷ್ಮಾನೆಂಬೊ ನಾಮದೊಡಿಯ ವಿಜಯ ವಿಠ್ಠಲನೆ
ಅಚ್ಚುತ ಪದವಿಗರುಹಾ ನೀನೆ ೨
ತ್ರಿವಿಡಿತಾಳ
ನಾ ಎಂದು ನುಡಿಯಲು ನಾನಾನರಕ ನಾಶ
ರಾ ಎಂದು ಪೇಳಲು ರಾಯ ಪದವಿಯಕ್ಕು
ಯ ಎಂದು ವರ್ಣಿಸಲು ಎಲ್ಲಕಾಲದಲ್ಲಿ
ಶ್ರೇಯಸ್ಸಿನಲ್ಲಿ ಆನಂದಕ್ಕೆ ಅಭಿವೃದ್ಧಿ
ಣಾ ಎಂದುದರ ಫಲವಾರು ಪೇಳುವರಯ್ಯ
ಭೂವ್ಯೋಮ ಪಾತಾಳ ಮಧ್ಯದಲ್ಲಿ
ರಾಯಾ ಮಹಿಷ್ವಾಸಾ ವಿಜಯ ವಿಠ್ಠಲನ್ನ
ಗಾಯನ ಮಾಳ್ಪನ್ನ ಮತಿಗೆ ನಮೋ ನಮೋ೩
ಅಟ್ಟತಾಳ
ಪನ್ನಗ ಮಥನನ್ನ ಚನ್ನಾಗಿ ಮನದಲ್ಲಿ
ಸನ್ನಿಲ್ಲಿಸಿಕೊಂಡು ಉನ್ನತಧ್ಯಾನವನು ಕೈಕೊಂಡ
ವನ್ನ ಪುಣ್ಯಕ್ಕೆ ಸರಿಯೆನ್ನು ಪೇಳುವರಾರು
ಭಿನ್ನವಾಡಿದರೆ ಸುಣ್ಣಪುಡಿಯಲಿಟ್ಟು
ತಣ್ಣೀರು ಪೊಯಿಸುವನು ಪನ್ನಗಮಥನನ
ಚನ್ನಾಗಿ ಮನದಲ್ಲಿಡೆ
ಘನ್ನ ಪ್ರಜಾಪತಿ ವಿಜಯ ವಿಠ್ಠಲ ಸಂ
ಪನ್ನ ನಾಮಕ್ಕೆ ಇನ್ನಾವುದು ಸರಿ೪
ಆದಿತಾಳ
ಅಜ ಸುರ ದಿಕ್ಪಾಲಕಾ ಪ್ರಜೆಸುರ ಸಮುದಾಯ
ಗಜ ಅಜಮಿಳ ಪರಮಾ ಭಜಕರ ಮನೋಹಂಸಾ
ತ್ರಿಜಗವಂದಿತ ಪಂಕಜಪತಿ ಮಹಾಮಾಯಾ
ವಿಜಯ ವಿಠ್ಠಲರೇಯಾ ನಿಜವಾದ ಮಹಾಮಹಿಮಾ೫
ಜತೆ
ತೂಲವೆಂಬೊ ಪಾಪಕ್ಕೆ ಪಾವಕ ಹರಿನಾಮಾ
ತಿಳಿದು ಶ್ರೀಮತ ನಮ್ಮ ವಿಜಯ ವಿಠ್ಠಲನೊಲಿಸೆ೬

ಅನಾದಿಕರ್ಮವೆಂಬ ನೆಪವನ್ನೊಡ್ಡಿ ನಾನಾ


ಧ್ರುವತಾಳ
ಅನಾದಿ ಕರ್ಮವೆಂದು ಒಂದು ನೆವನ ಮಾಡಿ
ನೀನು ಎನ್ನನು ಮತಿಯ ಭ್ರಮಣನೆನಿಸಿ
ನಾನಾ ಯೋಗಿಗಳಲ್ಲಿ ಪೊಗಿಸಿ ಕ್ಲೇಶ ಬಡಿಸಿ
ಹೀನಾಯಾ ಉಣಿಪುದು ಉಚಿತವಲ್ಲೊ
ಗೇಣೂದರ ಮಾಡಿ ಅದರ ಚಿಂತೆಯಿಂದ
ಸ್ನಾನಾ ಜ್ಞಾನಾದಿಗಳು ಕಡಿಮೆ ಎನಿಸಿ
ಹಾನಿ ವೃದ್ದಿಗೆ ಎನ್ನ ಗುರಿಮಾಡಿ ಬಹು ಕರ್ಮ
ನೀನುಣಿಸುವುದೇನೊ ನಿತ್ಯಾನಂದ
ಏನೆಂಬೆ ನಿನ್ನ ಮಾಯತನಕ್ಕೆ ಆಲೋಚಿಸಿ
ವಾಣಿ ಭೂ ಪತ್ರ ಮಾಡಿ ಮೇರುಶೈಲ
ತಾನಣಿಕಿಯ ಪಿಡಿದು ಸಪ್ತಸಾಗರವೆಂಬೊ
ನಾನಾ ಬಣ್ಣದ ಕಪ್ಪಿನಿಂದ ನಿತ್ಯ
ಜ್ಞಾನವಧಿಕಳಾಗಿ ಬಲು ಪರಿಯಿಂದಲ್ಲಿ
ಧೇನಿಸಿ ನಿನ್ನ ಮಹಿಮೆ ಬರಹ ಬರೆದು
ಕಾಣದೆ ಪೋದಳಯ್ಯಾ ದಿನ ಪ್ರತಿದಿನದಲ್ಲಿ
ನಾನಾವುದು ಬಲ್ಲವನು ಮಂದಮತಿಯು
ಅನಂತ ಠಾವಿನಲ್ಲಿ ಬಿದ್ದು ಪುಟ್ಟುವಂತೆ
ನೀನಿದೆ ಕಲ್ಪಿಸಿ ನಾನು ನನ್ನದು ಎಂಬೊ
ಈ ನುಡಿಗಳ ಪಾಶ ಕಟ್ಟಿ ಬಿಗಿದು ಎನ್ನ
ತ್ರ್ರಾಣಗೆಡಿಸಿ ಇನಿತು ಮೋಸಗೊಳಿಸುತಿಪ್ಪೆ
ಆನಂದ ನಿನಗಾಗಿ ಇಷ್ಟದಲ್ಲೆ
ಭೂನಾಥ ಬಲದೊಡನೆ ತೆರಳಲಾ ದೇಶಕ್ಕೆ
ಹೀನವಾದರಾತಗೆ ಏನು ಚಿಂತೆ
ಶ್ರೀನಾಥ ನಿನ್ನ ಕ್ರೀಡಿ ನಿನಗಾನಂದವಾಗಿಹುದೊ
ಮಾನವರಿಗೆ ನೋಡೆ ಕ್ಲೇಶವಹುದೋ
ಜ್ಞಾನಿಗಳರಸ ಶ್ರೀ ವಿಜಯ ವಿಠ್ಠಲರೇಯಾ
ಏನಾದರು ಒಂದು ಅಂದು ನೋಳ್ಪೆ ೧
ಮಟ್ಟಿತಾಳ
ನೀನು ಬಾಳುವುದಕ್ಕೆ ಕಡೆ ಮೊದಲು ಇಲ್ಲ
ಜ್ಞಾನ ಪೂರ್ಣೈಶ್ವರ್ಯ ನಿತ್ಯತೃಪ್ತ ವಿಮಲ
ಆನಂದ ಗುಣವನಧಿ ಅಚಿಂತ್ಯ ಘನ ಶಕ್ತ
ಶ್ರೀನಾರಿ ನಿನಗೆ ನಿತ್ಯ ಅವಿಯೋಗಿ
ನಾನಾ ವರ್ಣದ ಅಪ್ರಾಕೃತ ನಗರಿ
ಭಾನು ಕೋಟಿ ತೇಜಾ ಸತತ ಯೋಗನಿದ್ರಾ
ದಾನವರ ಎದೆ ದಲ್ಲಣನೆಂಬೊ ಬಿರಿದು
ವೈನತೇಯ ದೇವಾ ವಾಹನನಾಗಿಹನೊ
ಮಾಣಿಕ ಫಣಿಯುಳ್ಳ ಭುಜಗನ ಹಾಸಿಕೆಯು
ಅನಂತ ಮುಕ್ತರು ವಾಲಗ ಮಾಡುವರು
ದೀನ ಉದ್ಧಾರ ವಿಜಯ ವಿಠ್ಠಲರೇಯ
ನೀ ನಿರ್ದೋಷನೊ ನಾ ನುಡಿವುದೇನೊ೨
ತ್ರಿವಿಡಿ ತಾಳ
ಭುವನ ಮಧ್ಯದಿ ಬಿದ್ದು ನೊಂದು ನೆಲಗಾಣದೆ
ಲವ ತೃಟಿ ಸಂತೋಷವನ್ನು ಪೊಂದದೆ
ಜವಗುಂದಿ ಎಲ್ಲೆಲ್ಲಿ ಪೊರೆವರಿಲ್ಲದೆ
ಅವನಿಯೊಳಗೆ ಪುಟ್ಟಿ ಕಷ್ಟಬಟ್ಟು
ತವಕದಿಂದಲಿ ನಿನ್ನ ಮೊರೆ ಬಿದ್ದು ಸ್ತುತಿಸಿ ಬಹು
ದಿವಸವಾದರಿಂದ ಮುಂದೋರದೆ
ಭವದೂರ ನಿನಗಾಣದೆನು ಈ ಪರಿಯಲ್ಲಿ
ಭವಣೆ ಬಡಲಾರದೆ ದು:ಖದಲ್ಲಿ
ಅವಿಕಾರ ಮೂರುತಿ ವಿಜಯವಿಠ್ಠಲ
ಎನ್ನವಗುಣಗಳು ಎಣಿಸಲು ಕಡೆ ಬೀಳುವೆನೇನೊ೩
ಅಟ್ಟ ತಾಳ
ಮಗನ ಠಕ್ಕಿಸಿ ತಾಯಿ ಮಲಗಿರಲಾ ಶಿಶುವು
ಮಗುಳೆ ಕ್ರಮಗೆಟ್ಟು ಕಂಡಲ್ಲಿ ಅರಿಸಿ ಕಂ
ಣಿಗೆ ಬೀಳದಿರೆ ತಾಯಿ ಮಗುವು ದು:ಖಿಸೆ ನೋಡಿ ತಾ
ನಗುತ ವೇಗನೆ ಬಂದು ತಕ್ಕೈಸಿ ಮುದ್ದಾಡಿ ಬಗೆ
ಬಗೆ ಲಾಲನೆ ಮಾಡಿ ದಿವ್ಯಾನ್ನವನು ತು
ತ್ತುಗಳ ಬಾಯೊಳಗಿಟ್ಟು ತೃಪ್ತಮಾಡಿ ಮ
ಲಗಿಸಿ ಜೋಗುಳಪಾಡಿ ಮತ್ತೆ ಏಳಲು ಎತ್ತಿ
ಮೊಗವನೀಕ್ಷಿಸಿ ಮೊಲೆಗೊಟ್ಟು ರಕ್ಷಿಸುವಳೊ
ಅಗಣಿತ ಮಹಿಮನೆ ತಾಯಿಯಂದದಿ ಎ
ನಗೆ ಇಂದು ತಿಳಿದು ಠಕ್ಕಿಸಿ ಲೀಲೆ ತೋರುವ
ಬಗೆ ಇದೆ ಸಿದ್ದವಾಗಿದೆ ದೇವ ಎನ್ನನು
ಅಗಡುಗೊಳಿಸದಿರು ಅನಿಮಿತ್ತ ಬಾಂಧವ
ಜಗದೊಳು ತಾಯಿ ಬಾಲಕನಿಗೆ ಭೇದವೆ
ಸುಗುಣ ಸುಂದರ ಕಾಯ ವಿಜಯ ವಿಠ್ಠಲರೇಯ
ಮಿಗೆ ಮನದೊಳಗೆ ವ್ಯಾಪಿಸಿದ ಕಲ್ಮಷ ಕಳೆಯೊ ೪
ಆದಿ ತಾಳ
ಸೇರು ಸಕ್ಕರೆ ತಂದು ಕೋಟ್ಯಾನು ಕೋಟಿ ಜನಕೆ
ತಾರತಮ್ಯದಿಂದ ಹಂಚಿದೋಪಾದಿಯಲ್ಲಿ
ವಾರವಾರಕೆ ಎನ್ನ ಪುಣ್ಯ ಪಾಪಗಳೆರಡು
ಆರಾರ ಭಾಗಂಗಳು ಅವರಿಗೆ ಕೊಡಲಾಗಿ
ಭಾರ ಎನ್ನ ಪಾಲಿಗೆ ಪ್ರಾಪ್ತವಾಗುವುದೆಷ್ಟೊ
ಕಾರಣ ಕಾರ್ಯದಲ್ಲಿ ಪೊಂದಿಪ್ಪನೆ ಪೇಳೋ
ಈ ರೀತಿ ಉಳ್ಳದ್ದಕ್ಕೆ ಬಲು ಜನ್ಮಂಗಳ ಕೊಟ್ಟು
ಗಾರುಗೊಳಿಸುವರೆ ಘೋರ ಮಾರ್ಗದಲಿಟ್ಟು
ನಾರದ ಮುನಿವಂದ್ಯ ವಿಜಯ ವಿಠ್ಠಲ ನಿನ್ನ
ಕಾರುಣ್ಯ ರಸದಿಂದ ನೋಡಿ ಸತತ ಕಾಯೋ ೫
ಜತೆ
ಹರಿ ನುಡಿಸಿದುದರಿಂದ ನುಡಿದೆ ಎನ್ನ ಕೃತ್ಯಾ
ಅರಸೆ ವಿಜಯ ವಿಠ್ಠಲ ಒಂದಾದರು ಇಲ್ಲ ೬

ರು ಬರೆದಿರುವ ದೀರ್ಘ


ಧ್ರುವತಾಳ
ಅನಾದಿಯಿಂದ ಬಂದ ಕರ್ಮ ಪ್ರಕೃತಿ ರೂಪ
ನಾನಾ ಪ್ರಕಾರ ಉಂಟು ದ್ವಿವಿಧವಾಗಿ
ಏನೆಂಬೆ ಇದೆ ಇದಕೆ ಅನಂತ ಕಾಲಕ್ಕೆ ಉಪಾ
ದಾನವಾಗಿ ಇಪ್ಪುದು ಪಾಪ ಪುಣ್ಯ
ಹಾನಿ ವೃದ್ದಿಗೆ ಕಾರಣ ಜ್ಞಾನ ಜ್ಞಾನಿಗಳಿಗೆ
ಮಾಣದೆ ಸಾಧನಕೆ ಬೆಂಬಲ ಪ್ರಬಲಾ
ಮೇಣು ತ್ರಿವಿಧ ಪುಣ್ಯ ತ್ರಿವಿಧ ಪಾಪಂಗಳು ಗು
ಣಾನು ಸಾರದಿಂದವಾಗುತಿದೆಕೊ
ಪ್ರಾಣನಿಗೆ ಮಾತುರ ಕರ್ಮದಿಂದಲಿ ಪ್ರ
ಧಾನ ಸಾಧನ ಕಾಣೆ ಬಲು ವಿಚಿತ್ರ
ವೈನತೇಯವಿಡಿದು ನೀಚಕ್ರಮದಿಂದಭಿ
ಮಾನಿಗಳಿಪ್ಪರು ಕರ್ಮದಲ್ಲಿ
ದಾನವಾಮರನಿಕರ ಸರಿಬೆರಿಸಿಕೊಂಡು ವೈ
ರಾನುಬಂಧ ಬುದ್ದಿ ಕೊಡುತಿಹರು
ಸ್ನಾನ ಮಿಕ್ಕಾದ ಸತ್ಕರ್ಮ ಇದರ ವಿಪರೀತ
ಕ್ಷೋಣಿಯೊಳಗೆ ಕರ್ಮದ ಸ್ಥಿತಿ ಇನಿತು
ಯೋನಿ ಎಂಭತ್ತುನಾಲ್ಕು ಲಕ್ಷ ಜೀವಿಗಳಲ್ಲಿ
ಕ್ಷೀಣ ಕರ್ಮದಿಂದ ಚರಿಸಬೇಕು
ಆನಂದ ಮುಕ್ತರಿಗೆ, ದೈತ್ಯಾವಳಿಗೆ ದು:ಖ
ಮಾನವರಿಗೆ ಮಿಶ್ರ ಜನಕಾಹುದು
ಶ್ರೀನಿವಾಸನೆ ಮುಖ್ಯ ನಿಯಾಮಕ ಪ್ರಕೃತಿ
ತಾನಿಪ್ಪಳಾ ತನ್ನ ಕರುಣದಿಂದ
ಕಾಣಿಸಿಕೊಡುವಳು ಸರ್ವಜೀವಿಗಳಿಗೆ ನೀ
ದಾನ ಯೋಗ್ಯತೆ ಗುಣ ಕಾಲಾದೊಡನೆ
ಏಣಿಸಿ ಕರ್ಮದಿಂದ ಕಡೆಬಿದ್ದವರುಂಟೆ
ಅನಂತ ಜನುಮಕೆ ನೋಡಿದರು
ತಾನಾಗಿ ಹರಿವೊಲಿದು ಸಂದರುಶನವಿತ್ತು
ಪ್ರಾಣನಾಗಿ ಇದ್ದು ಅನಾವಸ್ಥಿತಿ ಕರ್ಮ
ಏನೇನು ಉಳಿಯದಂತೆ ಅನುಭವ ಮಾಡಿಸಿ
ಜ್ಞಾನವೆ ಕೊಟ್ಟು ಪ್ರಾರಬ್ದ ಉಣಿಸಿ
ಭಾನುಪ್ರಕಾಶದಂತೆ ಪೊಳೆದು ನಿಶ್ಶೇಷ ದೋಷ
ಮಾನರಹಿತನ ಮಾಡಿ ಪೊಂದಿಸುವ
ಮಾನಿಗಳರಸ ವಿಜಯ ವಿಠ್ಠಲರೇಯ
ನೀನೆ ಸ್ವತಂತ್ರನೆನಲು ಕರ್ಮದಿಂದ ಕಡೆ ಮಾಳ್ಪ ೧
ಮಟ್ಟ ತಾಳ
ನಿತ್ಯ ನೈಮಿತ್ಯಕ ಕಾಮ್ಯ ಕರ್ಮಗಳೆಂದು
ಸತ್ಯದಲ್ಲಿ ತಿಳಿ ಮೂರೊಂದಾನಂತ
ಬಿತ್ತರಿಸಿ ಉಂಟು ಬಗೆ ಬಗೆ ವಿವರಗಳು
ನಿತ್ಯ ಕರ್ಮವೆಂಬೋದದನೆ ಲಾಲಿಸುವರು
ಮತ್ತೆ ಸ್ನಾನ ಸಂಧ್ಯಾವಂದನೆ ಜಪ ವಿ
ಹೋತ್ರಾಹುತಿ ಯಙ್ಞ ಬಲಿಹರಣ ನಾನಾ
ಸ್ತೋತ್ರ ಶ್ರವಣ ದಾನ ಮಾಡುವುದಿದಕೆ ಕಾ
ಲತ್ರಯದಲ್ಲಿ ನಿತ್ಯ ಕರ್ಮವೆಂಬುವರಯ್ಯಾ
ದಿತ್ಯ ಕುಮುದ ಬಂಧು ಉಪರಾಗ ದರ್ಶಿ
ತೀರ್ಥ ವಿಧಿಯಾತ್ರೆ ಮನ್ವಾದಿ ದಕ್ಷಿ
ಣೋತ್ತರಾಯನ ಪೂರ್ಣಮಾಸಿ ಸಂವತ್ಸರ
ಪೈತ್ರಿಕ ಮೊದಲಾಗಿ ಮಾಡುವ ಬಗೆ ನೈ
ಮಿತ್ಯಕ ಕರ್ಮಗಳೆಂದು ತಿಳಿದು ಚರಿಸಬೇಕು
ವಿತ್ತ ದೇಶಕೋಶ ಗಜ ತುರಗ ರಾಜ್ಯ
ಪುತ್ರಾದಿ ಭೋಗಾಪೇಕ್ಷಿಸಿ ಮಾಡುವುದು
ಅತ್ಯಂತವಾದ ಕಾಮ್ಯ ಕರ್ಮಗಳೆನ್ನು
ಬಿತ್ತರಿಸಿ ಕೇಳಿ ಇದಕೆ ಯಾಗಾದಿಗಳು
ಜತ್ತಾಗಿ ರಚಿಸಿ ಲೇಸು ಬರುವುದು
ಹತ್ತಿದ ದೋಷಗಳು ಕಳಕೊಂಬುವುರು ಅ
ನರ್ಥ ಸಾಧನಕಿದನೆಸಗಿದರೆ ಮುಂದೆ
ಸುತ್ತಿಸಿ ನರಕಾದಲ್ಲಿ ಜನುಮತಿ ತಂದಿತ್ತು
ತತ್ತಳಗೊಳಿಸದಲೆ ಕೆಟ್ಟು ಪೋಗುವದದಕೊ
ಹತ್ತೊಂದು ವ್ಯಾಪ್ತ ವಿಜಯವಿಠ್ಠಲರೇಯ
ಕರ್ತನಾಗಿ ಸರ್ವಕರ್ಮಕೆ ಪ್ರೇರಿಸುವಾ ||೨||
ರೂಪಕ ತಾಳ
ನೈಮಿತ್ಯಕ ನಿತ್ಯ ಕರ್ಮವೆಂಬುದೆ ಎರಡು
ನಿಮಿಷ ಮಾಡಿದರಾಗೆ ಸಬೀಜ ನಿರ್ಬೀಜ ವಕ್ಕು
ಕ್ರಮದಿಂದ ತಿಳಿವುದು ಸಬೀಜ ಕರ್ಮದವಿವರಾ
ತುಮದೊಳು ಪಾಪಬೀಜಾ ಪುಣ್ಯ ತರುವಾಯಾ
ಸಮತಳಿಸಿ ಇಪ್ಪದು ಪುಣ್ಯ ಬೀಜ ಪಾಪಾ
ಶಮದಮೆ ಉಳ್ಳ ಮಹಾತ್ಮರಿಗಾದರು ಬಿಡದು
ಕುಮುತಿಗಳ ಪಾಡೇನು ಇದು ಸಿದ್ದ ಇದು ಸಿದ್ಧ
ಯಮ ನೇಮ ತಪದಾನ ಧರ್ಮ ದೇವರಪೂಜೆ
ಸುಮನಸರ ಭಜನೆ ತೀರ್ಥಯಾತ್ರೆ ಸ್ರ‍ಮತಿ ಶಾಸ್ತ್ರಾ
ಗಮ ಓದು ನಾನಾ ಕರ್ಮಂಗಳು ಮಾಳ್ಪಾಗ
ಮಮಕಾರ ಅಹಂಕಾರ ಅಸೂಯಾ ಈರ್ಷಸಂ
ಗಮದಿಂದ ಬೆರಸಿದರೆ ಇದೆ ಪಾಪ ಜೀಜ ಪುಣ್ಯ
ರಮೆಯರಸ ವಿಜಯ ವಿಠಲರೇಯಾ ಸರ್ವೋ
ತ್ತಮ ದೇವತಿ ತಾನೆ ದಯದಿಂದ ನಡೆಸುವ ||೩||
ಝಂಪೆ ತಾಳ
ಉತ್ತಮ ಜನರು ತಂದೆ ತಾಯಿ ಗುರುಹಿರಿಯರು
ಮತ್ತೆ ಶರಣಾಗತರು ಸಹೋದರ ಬಾಂಧವರು
ಸುತ್ತಲಿದ್ದ ಪರಿವಾರ ನಾನಾ ಪ್ರಜೆ
ಸತ್ವಗುಣದಲ್ಲಿ ಪ್ರವರ್ತಿಸುತಿರೆ
ಮಿತ್ರ ಮಿಕ್ಕಾದ ಜನಕೆ ಮದುವೆಗೋಸುಗಾ
ಆರ್ತಜನರಿಗೆ ಬಂದ ಕ್ಲೇಶ ಕಳೆವುದಕೆ ಪುಶಿ
ಉತ್ತರದಿಂದವರ ಕಾರ್ಯ ಮಾಡಿಕೊಟ್ಟು ತೃಪ್ತಿಯನು
ಬಡಿಸಿದರೆ ಇವೇ ಪುಣ್ಯಬೀಜ ಪಾಪ
ಪ್ರತ್ಯೇಕ ಪ್ರತ್ಯೇಕ ತ್ರಿವಿಧ ಜನರಿಗೆ ನಿತ್ಯ
ಸತ್ಯವಿದು ಮುಕ್ತರಿಗೆ ಪಾಪ ಕೆಟ್ಟು ಪುಣ್ಯ
ಮೊತ್ತ ಅಭಿವೃದ್ಧಿಯಾಗುವದು ದಿನದಿವಸಕ್ಕೆ
ನಿತ್ಯ ಸಂಸಾರಿಗೆ ಸಮ ತಮೋಯೋಗ್ಯರಿಗೆ
ಬತ್ತುವುದು ಪುಣ್ಯ ಮಹಪಾಪವೇ ಅಭಿವೃದ್ದಿ
ಬಿತ್ತಿದಾ ಬೆಳಸು ಉಂಡಂತೆ ಉಂಡು ಕಡಿಗೆ
ತತ್ತಸ್ಥಾನಗಳು ಸೇರುವರು ಬಿಡದಲೆ
ಇತ್ತ ಲಾಲಿಸು ಪುಣ್ಯಪಾಪ ಇದರಂತಾಗೆ
ಸತ್ತು ಪುಟ್ಟುವದಕ್ಕೆ ಕಾರಣವಾಗಿಪ್ಪದು
ಎತ್ತ ನೋಡಿದರತ್ತ ಪ್ರಬಲವಾಗಿ
ಕತ್ತೆ ನರಿ ನಾಯಿ ಮೊದಲಾದ ಜನುಮಂಗಳು ಎಂ
ಭತ್ತು ನಾಲ್ಕು ಲಕ್ಷ ತಂದು ಕೊಡುತ್ತಾ
ಉತ್ತಮಾಧಮರು ಎಂದು ನೋಡ[ದೆ]
ತತ್ಕರ್ಮವೃತ್ತಿ ರೂಪದಿಂದ ಗಂಟು ಹಾಕಿ
ಚಿತ್ತಜಪಿತ ನಮ್ಮ ವಿಜಯ ವಿಠಲರೇಯನ

ತೇನವಿನಾ ತೃಣಮ ಪಿನ ಚಲತಿ ಎಂಬ


ಧ್ರುವತಾಳ
ಅನಾದಿಯಿಂದ ಸುಖ ರೂಪವಾಗಿದೆ
ನಾನಾ ಪ್ರಕಾರದಿಂದ ನೋಡಿದರು
ಏನೆಂಬ ಸೋಜಿಗ ಸಂತತ ತೋರುತಿದೆ
ಜ್ಞಾನವಂತನಾಗಿ ಗುಣಿಸಿದರೂ
ನಾನೆ ಪಾಪಪುಣ್ಯ ಮಾಡುವೆನೆಂದು ನಿ
ಧಾನದಿಂದಲಿ ಪೇಳುವುದು ಎತ್ತ
ಆನಂದವಾದ ಸ್ವರೂಪ ಭೂತಕ್ಕೆ ಅ
ಜ್ಞಾನವೆಲ್ಲೊ ಸತ್ವ ಗ್ರಂಥದಲ್ಲಿ
ಈ ನುಡಿ ಲಾಲಿಪುದು ಪ್ರಕೃತಿ ವಿಕಾರದೇಹ
ಮಾನಾಭಿಮಾನವೆಂಬಿಯಾ ಗುಣಿಸಿದರು
ಕಾಣೆನೊ ಎಂದಿಗೆ ಜಡಕೀ ನಿಯಂತ್ರವು
ಮಾಣೊ ಈ ಮಾತು ಮತ್ತೆ ಕಾಲಕರ್ಮ
ಏನೇನು ಇದ್ದರು ಯಾತಕ್ಕೆ ಪ್ರಯೋಜನಾ
ವಾಣಿ ವ್ಯರ್ಥವಲ್ಲದೆ ಅನುಭವವೆ
ಕಾಣಿ ತೂಕವಾದರು ಪಾಪಪುಣ್ಯ ಮಾಡಿಕೊಂಡು
ಪ್ರಾಣಿ ಪ್ರಾಣಂಗಳು ದು:ಖ ಸುಖ ಬಡುವಾರೆ
ಅನಂತ ಜೀವರಾಶಿ ಕೂಡಿದ ಕಾಲಕ್ಕೂ
ಮಾನಸದಲ್ಲಿ ಸ್ವಾತಂತ್ರ ಸೊಲ್ಲೆ
ಶ್ರೀನಾಥ ವಿಜಯ ವಿಠಲ ಒಲಿದು ನಿ
ರ್ಮಾಣ ಮಾಡಿ ಇಪ್ಪ ಒಂದೊಂದು ಬಗೆಯಿಂದ ೧
ಮಟ್ಟತಾಳ
ಮನಸು ಮಾಡುವುದೆಂದು ಲೋಕ ವ್ಯವಹಾರ
ಜನರು ಪೇಳುವರಯ್ಯಾ ವಿಚಾರಿಸಿ ನೋಡೆ
ಮನಸು ಜಡವೆಂದು ಯೋಚಿಸಿ ತಿಳಿಯದೆ
ಗುಣಿಸುವುದು ಇದೆ ತಾತ್ಪರ್ಯದಲ್ಲಿ
ಅನುಮಾನ ತೀರ್ಥರ ವಚನ ಸರ್ವೇಷಾಂ
ಮನೋ ನೇತಾಮನೋರೂಪಾ ಸ್ತ್ರಿಲೋ
ಚನ ತದ್ವಶಾ ಸರ್ವದೇವತಾಶ್ಚ ತೇನೈವ
ಇನಿತು ಪ್ರಮಾಣಗಳು ಸಾರಿ ಪೇಳುತಲಿವೆ
ಘನಮೂರುತಿ ನಮ್ಮ ವಿಜಯ ವಿಠ್ಠಲ ರೇಯನ
ಗುಣವೆ ಕೊಂಡಾಡುವುದು ಅಚಿಂತ್ಯಾದ್ಭುತನೆಂದು ೨
ತ್ರಿವಿಡಿ ತಾಳ
ಮನವೆಂಬೊ ನಾಮ ಮಹರುದ್ರ ದೇವರಿಗುಂಟು
ಅನುದಿನ ಈತನೆ ಕರ್ಮಂಗಳ
ಮನದಲ್ಲಿ ಇದ್ದು ತಾ ತನ್ನಾಮಕನಾಗಿ
ವಿನಿಯಾಮಕನಾಗಿ ಸರ್ವ ಕರ್ಮಾ
ವಿನಯದಿಂದಲಿ ಮಾಡಿಸುವ ಸಂತೋಷದಲಿ
ಇನಿತಾದರು ಬಿಡದೆ ಜೀವರಿಂದ
ಅನಳಾಕ್ಷನ ಮೇಲೆ ಶಬ್ದ ಇಡುವುದಲ್ಲ
ಕೊನೆಗೆ ಆಲೋಚಿಸಿ ಗ್ರಂಥದಲ್ಲಿ
ಅನಿಲ ದೇವನು ಕಾಣೊ ರುದ್ರನಿಗೆ ನಿಯಾಮಕ
ಮನವೆಂಬೊ ಅಭಿದಾನ ಸೂತ್ರನಿಗುಂಟು
ಗುಣಿಸು ಈತನೆ ಬಲು ಸ್ವಾತಂತ್ರ ಬಲವಂತಾ
ನೆನದಿರು ಎಂದಿಗೆ ವಿಚಾರಿಸು
ನೆನಸು ನಿಯಂತತ ಸ್ಯಾಚ ಪ್ರಾಣಸ್ತರೋಹಿ
ಸನುಮತವಹುದು ಮಾರುತಗೆ ಮುಂದೆ
ತನ್ನಿಯಂತ್ರಾ ಹರಿ ಸಾಕ್ಷಾತ ರಮಾನಂದಾ ಲ
ಕ್ಷಣ ಪುರುಷನೆಂಬೋದು ಶ್ರುತಿ ಸಿದ್ದವೊ
ಅನಿಮಿತ್ತ ಬಂಧುವೆ ವಿಜಯ ವಿಠಲರೇಯಗೆ
ಮಣಿದು ನಮೋ ಎನ್ನು ನುಡಿಸುವ ಪರಮಾತ್ಮ ೩
ಅಟ್ಟ ತಾಳ
ಕೇವಲ ಮನಶಬ್ಧ ಸರ್ವತಂತ್ರ ರಾ
ಜೀವನಯನ ನಾರಾಯಣಗಲ್ಲದೆ
ದೇವತಿಗಳ ಮಧ್ಯ ಮತ್ತೆ ಒಬ್ಬರಿಗುಂಟೆ
ಪಾವಕಾದಿ ಪಾವಕ ನೇತ್ರ ಪಾವಕ
ಜೀವ ಬಾಂಧವ ರಾಜೀವಗರ್ಭಾದಿಗೆ
ಆವಾವ ಕಾಲಕ್ಕೆ ಸ್ವಾತಂತ್ರವಾಗಿ ಸ
ಜ್ಜೀವಾದಿಗೆ ಮಾಡಿಸುವ ಸಾಮ್ಮರ್ಥಿಕೆ
ಭೂಲವಯದೊಳು ನಾಕಾಣೆ ನಾಕಾಣೆ
ಕೋವಿದನಾದವ ಏನೆಂದುಕೊಂಬನೊ
ಭಾವದಲ್ಲಿ ತನ್ನ ಅನುಭವ ತಾಬಲ್ಲ
ಜೀವ ಪುಣ್ಯ ಕರ್ಮಮಾಡಿತೆಂದು ವೇ
ದಾವಳಿಯಲ್ಲಿ ಉಂಟೆ ಉಂಟಾದರೆ ಕೇಳಿ
ದೇವ ದೇವತೆಗಳು ಮಾಡಿಸಿದಂತೆ ಈ
ಜೀವ ಮಾಡಿದ ಕಾರಣದಿಂದ ಜೀವಕ್ಕೆ
ನೋವು ಪ್ರಾಪುತವಾಗಿ ಬಳಲುವುದೆಂದು ಸಂ
ಭಾವನೆಯಾಗಿದೆ ಸಂಧಿ ಸಂಕಟದಿಂದ
ಕಾವಜನಕ ನಮ್ಮ ವಿಜಯ ವಿಠಲ ಕೃ
ಪಾವ ಲೋಕನ ನಿತ್ಯಾಲೀಲಾ ವಿನೋದಾ ೪
ಆದಿತಾಳ
ಚತುರ ವಿಂಶತಿ ತತ್ವೇಶರು ಕಾರಣವಲ್ಲ
ಗತಿಗಮನ ಸರ್ಗಾನಂದ ಆನಂದದ ಬುದ್ಧಿ
ಧೃತಿ ಕೀರ್ತಿ ಬಲು ಯಶಸ್ಸು ನಿರ್ಭಯ ನಿಯೋಗ
ಮತಿ ಬುದ್ದಿ ಜಾಡ್ಯ ವಾಕ್ಪಟು ಸ್ಥಿತಿ ನಾನಾಶುಭಾ ಶುಭ
ಪ್ರತಿ ಪ್ರತಿ ಕಾಲಕ್ಕೆ ಹರಿಯಿಂದಾಗುವುದೆನ್ನಿ
ತತು ಶಬ್ಧಗಳು ಶ್ರೀ ನಾರಾಯಣಗೆ ಉಂಟು
ಇತರ ಲೋಕಕ್ಕೆ ನೋಡು ಆವುದು ಸ್ವಾತಂತ್ರ
ಮಿತಿ ಮಾತ್ರ ಇಪ್ಪದು ಮನದಲ್ಲಿ ಬುಧರಿಗೆ ವಿ
ಹಿತವನ್ನು ಹರಿ ಇತ್ತ ವ್ಯಾಪರ ಮಾಡಬೇಕು
ಪತಿತ ಪಾವನ ಹರಿ ವಿಜಯ ವಿಠಲರೇಯ
ಚತುರ ಮೂರುತಿ ಕಾಣೊ ಸರ್ವದ ಮಹಾಶಕ್ತ೫
ಜತೆ
ಜೀವ ಮಾಡುವ ಕರ್ಮ ಒಂದಾದರೆ ಇಲ್ಲಾ
ದೇವ ವಿಜಯ ವಿಠಲ ಸುರರಿಂದಾಗುವುದೊ ೬

ಭಾರತೀಯರೆಲ್ಲರಿಗೂ ರಾಮೇಶ್ವರ

೮೭. ರಾಮೇಶ್ವರ
ಧ್ರುವತಾಳ
ಅನಿಲತನುಜರಿಂದ ವನನಿಧಿಯಮ್ಯಾಲೆ |
ಮುನಿದು ಅಗಸ್ತ್ಯನು ಆಪೋಷಣವೆಕೊಳ[ಲಾ]ಗಿ |
ವನಚರಾದಿಗಳು ನೀರನು ಕಾಣಾದೆ ಬಳಲೆ |
ಅನಿಮಿಷ ಮಿಗಲಾದ ಗಣದವರು ಚಿಂತಿಸೆ |
ಮುನಿಸುತೆ ನದಿಯಾಗಿ ವಿನಯದಿಂದಲಿ ಬಂದು |
ಮುನಿ ಪುಂಗವಗೆ ವಂದನಿಯಾ ಮಾಡಾಲಾಗಿ |
ಘನವಾಗಿ ಅಳಿದು ಲವಣ ಸಾಗರೆನಿಸಾಲು |
ಅನುಮಾನದಲ್ಲಿ ವರುಣದೇವರು ನಿರುತಿದೆ |
ಮುನಿ ಸುರಪಾಲಕ ವಿಜಯವಿಠಲರೇ |
ಯನ ದಯದಿಂದ ಉದ್ಧರಣೆಯಾದ ವನಧಿ ೧
ಮಟ್ಟತಾಳ
ಕೋಪದಲ್ಲಿ ಇದ್ದು ಲೋಪಮುದ್ರಾಪತಿ |
ಕೂಪಾರಗೆ ಇತ್ತಾ ಶಾಪವ ಪರಿಹರಿಸಿ, ವಿ |
ಶಾಪವನೆ ಕೊಟ್ಟು ಅಪಾರ ದಯದಿಂದ |
ಆ ಪಾವಕಜರಿಗೆ ತಾಪಸಿಗನು ಮುನಿದು |
ಶಾಪವನೀಯೆ ಕಪಿರೂಪವನು ಧರಿಸಿ |
ಶ್ರೀಪತಿ ವಿಜಯವಿಠಲರೇಯನ ಸೇವೆ |
ಆಪಾರವಾಗಿ ಲೋಪವಾಗದೆ ರಚಿಸೆ ೨
ರೂಪಕತಾಳ
ಒಂದು ದಿನ ವೈಕುಂಠ ಮಂದಿರಕೆ ಸನಕಸ |
ನಂದನರೂ ವೇಗ ಬಂದು ಬಾಗಿಲ ಮುಂದೆ |
ನಿಂದಿರಲಾಗಿ ಬ್ಯಾಡೆಂದು ಜಯ ವಿಜಯರು |
ಅಂದು ಪೇಳಲಾ[ಸ]ನಂದನರೂ ಶಾಪಾ |
ತಂದು ಇತ್ತರು ಕೋಪದಿಂದ ಖಳರಾಗನೆ |
ಒಂದು ಜನ್ಮವ ತೆತ್ತು ಹಿಂದಾದ ತುರುವಾಯ |
ಸಿಂಧು ನಡುವೆ ದಶಕಂಧರನೆಂದೆನಿಸೀ |
ಇಂದ್ರದ್ಯರನೆಲ್ಲಾ ಮುಂದುಗೆಡಿಸಿ ಶೋಕದಿಂದವರ ಬಳಲೀಸಿ |
ಮಂದರಧರ ಸಿರಿ ವಿಜಯವಿಠಲನಿಗೆ |
ಬಂದು ಬಿನ್ನೈಸಿದರಿಂದ್ರಾದಿಗಳಾಗ ೩
ಝಂಪೆತಾಳ
ಮನುಜವೇಷಧರಿಸಿ ಜನಪತಿ ದಶರಥಗೆ |
ತನುಜನಾಗಿ ಜನಿಸಿ ಮುನಿಯು ಕಾಯ್ದೂ ಶಿವನ |
ಧನುವನು ಮುರಿದು ಜನಕಜಿಯಕೂಡ ಮೆರೆದೂ |
ಅನುಜನೊಡನೆ ಚರಿಸಿ ಅನಿಲಜನ ನೋಡಿ |
ಇನಸುತನ ಕಾಯ್ದು ವನಧಿಯ ಬಂಧಿಸೀ ವಿಭೀ |
ಷಣನ ಮನ್ನಿಸಿದ ರಾವಣನ ಕೊಂದೂ |
ದಿನ ಕುಲೋತ್ತುಮ ರಾಮ ವಿಜಯವಿಠಲ ತನ್ನ |
ವನಿತೆ ಸಹಿತಲಿ ಮೆರೆದ ಅನಿಮಿಷರು ಸುಖಿಸೆ ೪
ತ್ರಿವಿಡಿತಾಳ
ಹಿಂದೆ ಬೊಮ್ಮನ ಸಿರ ಇಂದು ಶೇಖರನಿಗೆ |
ಬಂದು ಬಿಡದಿರಲು ಬಂದು ವ್ಯಾಕುಲದಿಂದ |
ಇಂದಿರಾಪತಿ ರಾಮಾಚಂದ್ರನ್ನ ಪಾದಾರ |
ವಿಂದ ತುತಿಸಿ ದೇವ ಅಂದು ಒಲಿದು ಇತ್ತ |
ಅಂದ ಭಾಷಿಗೆ ಹರಿಗೋವಿಂದ ಜನಸಿ, ದಶ |
ಕಂಧರಾದಿಯಾ ಕೊಂದು ಸಿಂಧು ತಡೆಯಲ್ಲಿ |
ಅಂಧಕ ರಿಪುವಿನ ಕಂದನಂತೆ ಮನ್ನಿಸಿ |
ದಂದದಲ್ಲಿ ರಾಮಚಂದ್ರ ಈಶನ ಸ್ಥಾಪಿಸಿ |
ಬಂದ ಬೊಮ್ಮ ಹತ್ಯಕ್ಕೆ ಒಂದು ಪಥವ ತೋರಿ |
ಸಿಂಧುವಿನಲಿ ಸೇತೂ ಬಂಧನದಲಿ ಶಿವ |
ನಿಂದರೆ ದೋಷವು ಹಿಂದಾಗುವದೆಂದು |
ಗಂಧ ಮಾದನಾದ್ರಿವಾಸ ವಿಜಯವಿಠಲ |
ಮಂದಗತಿಗಳಿಗೆ ಪರನೆಂದು ಶಿವತೋರಿದಾ ೫
ಅಟ್ಟತಾಳ
ರಾಮನೆ ಬಂದು ಸಂಚರಿಸಿದ ಕಾರಣ |
ರಾಮೇಶ್ವರವೆಂಬೊ ನಾಮದಿಂದೀ ಕ್ಷೇತ್ರ |
ಭೂಮಿಯೊಳಗೆ ಪ್ರಕಾಶಿತವಾಯಿತು |
ಈ ಮಹೋದಧಿ ಸದಾ ಪವಿತ್ರವೆನಿಸಿತು |
ಆ ಮಹ ಚತುರ ವಿಂಶತಿ ತೀರ್ಥಂಗಳೂ |
ಕಾಮಿತಾರ್ಥವನಿತ್ತು ಸಲಹುತಲಿಪ್ಪವು |
ರಾಮನೆ ವಿಜಯವಿಠಲ ಪರದೈವ, ನಿ |
ಸ್ಸೀಮ ಕೋದಂಡ ದೀಕ್ಷಾಗುರು ಗುಣನಿಧಿ ೬
ಆದಿತಾಳ
ಕೋತಿಗಳಿಂದಲಿ ರಘುನಾಥ ಗಿರಿಗಳ ತರಿಸಿ |
ಸೇತು ಲಂಕೆಗೆ ಬಿಗಿಸಿ ಖ್ಯಾತನಾದಾ ಜಗದೊಳಗೆ |
ಪೂತೂರೆ ಈತನ ಮಹಿಮೆ |
ಭೂತನಾಥ ಕಾಣಲರಿಯ ದ್ವೈತಮತದವರಿಗೆ |
ಪ್ರೀತಿಯಹುದು ಮಾಯಿಗೇನೊ |
ಸೇತು ಮಾಧವರಾಮಾ ವಿಜಯವಿಠಲರೇಯಾ |
ಸೇತುಯಾತ್ರೆ ಮಾಡಿದವರಾವಾತನಿಂದ ಪಾಲಿಸುವಾ ೭
ಜತೆ
ಏನು ಸೋಜಿಗವೊ ಸೇತು ಮಹಾತ್ಮೆಯನ್ನು |
ದ್ಯುನಾಥ ಎಣಿಸುವ ವಿಜಯವಿಠಲನಿಂದ ೮

ಕಲಿಯುಗದಲ್ಲಿ ಅನ್ನದಾನಕ್ಕೆ ವಿಶೇಷ


ಧ್ರುವತಾಳ
ಅನ್ನದಾನ ಪ್ರಧಾನ ನಿಧಾನಿಸಿ ನೋಡಲು
ಅನಂತ ಕಲ್ಪದಲ್ಲಿ ವಿಚಾರಿಸೇ
ಹೊನ್ನು ಮಿಕ್ಕಾದ ದ್ರವ್ಯ ಇತ್ತಡಾದರೆ ಮನುಜ
ಪೂರ್ಣನಾಗುನು ಕಾಣೊ ಗುಣಿಸಿ ಕೇಳೊ
ಮುನ್ನೆ ಅಧ್ಯಾತ್ಮ ಅಧಿಭೂತ ಅಧಿದೈವ
ಚೆನ್ನಾಗಿ ತ್ರಿವಿಧ ತೃಪ್ತಿಕರವೊ ನಿತ್ಯ
ಭಿನ್ನ ಭಿನ್ನ ಜೀವರಲ್ಲಿ ತ್ರಯ ವಿಕಾರ ಉಂಟು ಇವೆ
ಇನ್ನು ಲಾಲಿಸುವುದು ಸ್ಥೂಲ ಸೂಕ್ಷ್ಮ
ತನ್ನ ಮೊದಲು ಮಾಡಿ ಅಧ್ಯಾತ್ಮವೆನಿಸುವದು
ಅನ್ಯ ಜನರೆಲ್ಲ ಅಧಿ ಭೌತಿಕಾ
ದನ್ಯ ದೇವತೆಗಳೆ ಅಧಿದೈವರೆನಿಸುವರು
ಉಣಿಸಬೇಕು ಈ ಪರಿ ತಿಳಿದೂ
ಘನ್ನ ತಾಪತ್ರಯಗಳು ಹಿಂದಾಗಿ ಪೋಪವು ಪಾ
ವನ್ನನಾಗುವ ಜ್ಞಾನ ಭಕುತಿಯಿಂದ
ತನ್ನ ಮನಸು ಅಧ್ಯಾತ್ಮ ಇಂದ್ರಿಯಗಳೆ ಅಧಿದೈವ
ಚೆನ್ನ ಶರೀರವೆ ಅಧಿ ಭೂತವೊ
ಸನ್ನುಮತ ನೋಡಿದರು ಸಕಲಾದಿ ಸಂ
ಪನ್ನ ನಾಗುವ ಸಕಲಾ ಭೀಷ್ಟೆಯಲ್ಲಿ
ಅನ್ನದಾನವೆ ದಾನ ತ್ರಿಕೋಟಿಗೇ
ಪುಣ್ಯ ಮಾತುರ ತತ್ತತ್ಪ್ರಭೇದವಾಗಿಪ್ಪದು
ಇನಿತರೊಳು ನಾನಾವಿಧ ಓದನ
ಬಣ್ಣಿಸಲರಿದು ಅನ್ನವಿತ್ತವನ ಕುಲಕೋಟಿ ಸು
ವರ್ನಗಾತುರಾಗಿ ಸಂಚರಿಪರು
ಪನ್ನಗಶಯನ ನಮ್ಮ ವಿಜಯ ವಿಠ್ಠಲರೇಯನ
ಉಣಿಸುವದು ಬಹು ಅಧಿಷ್ಠಾನವನ್ನೆ ಚಿಂತಿಸಿ ೧
ಮಟ್ಟ ತಾಳ
ಏಳುಪರಿ ಅನ್ನ ಜಗದೊಳು ತುಂಬಿದೆ
ಏಳಲ ಮಾಡದೆ ಯಥಾರ್ಥ ತಿಳಿವುದು
ಕಾಲಕಾಲಕ್ಕೆ ಇದನೆ ಹರಿಗರ್ಪಿತವೆಂದು
ಊಳಿಗದವನಾಗು ಉತ್ತಮರ ಸಹಿತ
ಬಾಲ್ಯ ಯೌವನ ವೃದ್ದಾಪರಿಯಂತ ನೆನೆದು
ಕೆಲಕಾಲದಲ್ಲಿ ಕೊಡುವ ವಿಚಾರ ತಿಳಿ
ಶೀಲಗುಣ ಸಾಂದ್ರ ವಿಜಯ ವಿಠ್ಠಲರೇಯನ
ನಾಲಿಗೆಯಿಂದಲಿ ಪೊಗಳುವವನ ಮೆಚ್ಚೂ ೨
ತ್ರಿವಿಡಿ ತಾಳ
ತುತ್ತನ್ನ ಜ್ಞಾನಿಗೆ ಕರೆದು ಮನ್ನಿಸಿ ತಾನು
ಚಿತ್ತ ಶುದ್ದನಾಗಿ ವೈಷ್ಣವ ಭಕುತಿಲಿ
ಇತ್ತು ತೃಪ್ತಿಯ ಪಡಿಸದನಾದಡೆ ಅವನಲ್ಲಿ
ತತ್ವ ತತ್ವೇಶರ ನಲ್ವತ್ತಾರು ಸಂಖ್ಯೆ
ನಿತ್ಯದಲ್ಲಿ ಒಲಿದು ಶೋಭಿಸುವರು
ಗಾತ್ರದಲ್ಲಿ ಇದ್ದ ತತುತತು ಮಾನಿಗಳು
ಪೂರ್ತರಾಗುವರು ಅನುಭವಕೆ ಮೆಚ್ಚೀ
ಮತ್ತೆ ಪೇಳುವೆನಯ್ಯಾ ಒಬ್ಬೊಬ್ಬ ತಾತ್ವಿಕರ
ಗಾತ್ರದಲ್ಲಿ ಉಂಟು ಸಮಸ್ತರೂ
ಅತ್ತ ಅತ್ತಲಿ ಗುಣಿಸು ಅವರವರ ಅವರೊಳಗೆ
ಅತ್ಯಂತವಾಗಿ ಮನಸಿಗೆ ನಿಲಕಾದೋ
ಸತ್ಯವೆಂಬೊದೆ ಸಿದ್ಧ ಶೃತಿ ಪುರಾಣಗಳಲ್ಲಿ
ಸ್ತೋತ್ರ ಮಾಡುವುದಕ್ಕೆ ಅಪರಮಿತವೋ
ಚಿತ್ತಜನಯ್ಯನ ಮೂರ್ತಿಗಳು ಅನೇಕ
ಮೊತ್ತವಾಗಿದೆ ನೋಡು ನೋಡು ಒಂದಾನಂತಾ
ತುತಿಸಿ ಕೊಂಡಾಡಿ ಇದರಾನಂದ ಜ್ಞಾನ
ವಾರ್ತಿಯ ವಿಶೇಷ ಮಹಿಮೆಯನ್ನು
ಇತ್ತ ಎಣಿಸು ಮುಂದೆ ದಕ್ಷಿಣೋತ್ತರ ಎ
ಪ್ಪತ್ತು ಸಾವಿರ ಮೇಲೆ ಎರಡು ಲೆಖ್ಖಾ
ಸುತ್ತಿ ಕೊಂಡಿಪ್ಪವು ನಾಡಿ ತದ್ಗತವಾಗಿ
ತತ್ವಾಭಿಮಾನಿಗಳು ನಾರಿಯರೊಡನೆ
ಭೃತ್ಯ ವತ್ಸಲ ಹರಿ ಇಂದಿರಾ ಸಮೇತ
ತತ್ತಳಿಸುತಲಿಹಾ ಅಪ್ರಾಕೃತನೂ
ಇತ್ತಂಡ ಭಾಗದಲ್ಲಿ ಸ್ತ್ರೀ ಪೂಂಸನಾಗಿ ಮೂ
ವತ್ತಾರು ಸಾವಿರ ರೂಪದ್ವಯದಿ
ವಿಸ್ತರಿಸುವೆ ಬ್ರಹ್ಮಾದಿಗಳು ಈ ಪ್ರಕಾರ
ಪ್ರತ್ಯೇಕ ಪ್ರತ್ಯೇಕ ರೂಪ ಧರಿಸೀ
ಆತ್ಮಕ್ರೀಡೆ ಮಾಡುತಿಪ್ಪರು ತಮಗೆ ತಾವೆ
ಹತ್ತಿಲಿ ಸತಿಗಳು ನೋಡುತಿರೆ
ಉತ್ತಮ ಶ್ಲೋಕನು ಇದರಂತೆ ಕ್ರೀಡಿಸುವಾ
ಪ್ರತ್ಯಕ್ಷ ರೂಪಾಧಿಷ್ಠಾನದಲ್ಲಿ
ತುತ್ತು ತೆಗೆದುಕೊಂಬ ಜ್ಞಾನಿ ಈ ಪರಿಯಲ್ಲಿ
ಮುತ್ತೈದಿ ಬ್ರಾಹ್ಮರನ ಇವರನೇ ಮಾಡಿ
ಚಿತ್ತದಲಿ ಸ್ಮರಿಸಿ ಕವಳ ಮೇಲುವ ಮೆಚ್ಚಿ
ಸುತ್ತ ತಾತ್ವಿಕ ಜನರ ಸರ್ವೇಶನಾ
ನಿತ್ಯಾಯು ಉಳ್ಳನಕಾ ಒಂದೊಂದು ದಿವಸಕ್ಕೆ
ಎತ್ತ ನೋಡಿದರತ್ತ ನೋಡಿದಷ್ಟು
ಹತ್ತು ದಿಕ್ಕಿನಲ್ಲಿ ಪಂಕ್ತಿ ಪಂಕ್ತಿ ಸಾಗಿ ಕು
ಳಿತು ಭೋಜನ ಮಾಡಿದಧಿಕವಾಗಿ
ಗಾತ್ರದೊಳಗೆ ಇನಿತು ಕುಟುಂಬಿಗಳಿಗೆ ಸ
ರ್ವತ್ರದೊಳಗೆ ಇವನೆ ತುತ್ತು ಕೊಡುವ
ಮತ್ರ್ಯನಾದರು ಇವರ ನಡತಿ ನುಡತಿ ಬೇರೆ
ಚಿತ್ತವೆ ಹರಿಯಲ್ಲಿ ನಿಲಿಸಿಹನೋ
ಆತ್ಮ ಭೋಗದಲ್ಲಿ ತಾನು ಸುಖ ಪಡುವನು
ರಾತ್ರಿ ಹಗಲು ಪುಣ್ಯ ಸಂಪಾದಿಪಾ
ಎತ್ತಲಾದರು ಕೇಳೆ ಅವನಾದರು ಇಷ್ಟು
ಮಾತ್ರ ಗ್ರಹಿಸಿದರು ಜೀವನ್ಮುಕ್ತಾ
ಭಕ್ತಿ ಮಾತುರಬೇಕು ಕೊಡುವ ಕೊಂಬುವನಲ್ಲ
ಹತ್ತು ಕೋಟಿ ಹಣಾ ಮೆಚ್ಚಿಸಲಾಗದು
ಕೀರ್ತಿ ಬರಬೇಕೆಂದು ನೂರಾರು ಸಾವಿರಕ್ಕೆ
ಉತ್ತಮನ್ನ ಉಣಿಸೇ ಬರಿದೆ ಕಾಣೋ
ಬತ್ತಲೆ ಪುರುಷನ್ನ ಇಂಥ ಮಾನವ ಪೋಗಿ
ಕತ್ತಲೆಯೊಳು ಪೋಗಿ ಅಪ್ಪಿದಂತೆ
ಸತ್ವ ಮೂರುತಿ ನಮ್ಮ ವಿಜಯ ವಿಠ್ಠಲರೇಯ
ತುತ್ತು ತೆಗೆದುಕೊಂಬಾ ಅನ್ನಿ ಭೂಸುರದಲ್ಲಿ ೩
ಅಟ್ಟತಾಳ
ಇದು ಕರ್ಮಾಸಕ್ತ ಮಾನವರಿಗೆ ಕೇವಲ
ಇವರೆಂದಧಿಕವಾಗಿ ಸುಲಭವಿಪ್ಪದು ಕೇಳಿ
ಮಧುರಾನ್ನ ಉಣಿಸಿ ನಾನಾ ಬಗೆ ಪೂಜಿಸಿ
ವದನದಿಂದಲಿ ಒಳ್ಳೆ ಮಾತಾಡದಿದ್ದರೆ
ಇದರೊಳಗಾವುದು ಮುಖ್ಯಾನ್ನವು ಪೇಳೊ
ಒದಗಿ ಬಂದವರಿಗೆ ಆದರವಾದಡೆ
ಹೃದಯ ಸಂತಾಪವು ಪರಿಹಾರವಾಗೋದು
ಇದೆ ಇದೆ ಮುಖ್ಯವೊ ಬಲ್ಲವರಿಗೆ ಪ್ರೀತಿ

ಶ್ವೇತನೆಂಬ ರಾಜನು ಭೂಲೋಕದಲ್ಲಿ

೯೬. ಶ್ವೇತಶೃಂಗಿ
ಧ್ರುವತಾಳ
ಅನ್ನದಾನ ಮಾಡದಗೋಸುಗ ಶ್ವೇತರಾಯ |
ತನ್ನ ಮಾಂಸ ತಾನೆ ಕೆತ್ತಿಕೊಂಡೂ |
ತಿನ್ನು ತಿಪ್ಪನು ನಿತ್ಯ ಕ್ಲೇಶವ ಬಡುತಲಿ |
ಬನ್ನದೊಳಗಾಗಿ ಸ್ವರ್ಗದಲ್ಲಿ ವಾಸ |
ಮುನ್ನೆಗತಿ ಕಾಣದೆ ಇರುತಿರೆ ನಾನಾಧರ್ಮ |
ಅನಂತ ಮಾಡಿದ ಕಾಲಕ್ಕಾಗೇ |
ಅನ್ನದಾನ ಮಾಡದಗೋಸಗ ಈ ಬಗೆಯು |
ಇನ್ನೇನು ಪೇಳಲಿ ಇತ್ತ ನಾರಂದ ಮುನಿ |
ಪನ್ನಗಶಯನನ ಪಾಡುತಲೀ |
ಘನ್ನತೆಯಿಂದ ರಾಯಾನಿದ್ದೆಡಿಗೆ ಬರಲು |
ಸನ್ನುತಿಸಿ ತನ್ನ ಸ್ಥಿತಿಯಾ ಪೇಳೆ |
ಚೆನ್ನಾಗಿ ಲಾಲಿಸಿ ಅಹಹ ಹರಿಯೆ ಮಹಿಮೆ |
ಬಣ್ಣಿಸಲರಿದೆಂದು ಶಿರವ ದೂಗಿ |
ತನ್ನೊಳಗೆ ತಾನೆ ವಿ[ಸ್ಮಿ]ತನಾಗಿ ನುಡಿದನಾಗ |
ಬನ್ನಣೆಯಿಂದ ಶ್ವೇತ ಭೂಪತಿಗೆ |
ಆನಂತದೊಳಗೊಂದು ಕೃಷ್ಣ ಉತ್ತರವಾಹಿನಿ |
ಪುಣ್ಯಕ್ಷೇತ್ರ ಉಂಟು ಅಲ್ಲಿಗೆ ಪೋಗಿ ನೀ |
[ಚ]ನ್ನಮೂರ್ತಿಯ ಭಜಿಸಿ ನಿರ್ದೋಷ ನೀನಾಗೆನಲೂ ೧
ಮಟ್ಟತಾಳ
ಸುರಮುನಿ ಮಾತಿಗೆ ನಮಿಸಿ ಸಂತೋಷದಲಿ |
ಭರದಿಂದಲಿ ಮತ್ತೆ ಬೆಸನಮಾಡಿದನಯ್ಯಾ |
ಅರುಹಬೇಕು ಎನಗೆ ಆ ಕ್ಷೇತ್ರದ ಮಹಿಮೆ |
ವರಕೃಪೆಯಿಂದಲಿ ತಡಮಾಡದೆ ಎಂದು |
ಅರಸು ಬಿನ್ನೈಸಲು ನಸುನಗುತ ಮೌನಿ |
ವಿರಚಿಸಿದನು ವೇಗಾ ಪರಮ ಭಕುತಿತಯಿಂದ |
ಪರಮಪುರುಷ ನಮ್ಮ ವಿಜಯವಿಠಲರೇಯನ |
ಚರಣವ ಚಿತ್ತದಲ್ಲಿ ಧ್ಯಾನಿಸಿ ಆಗಮವ ೨
ತ್ರಿವಿಡಿತಾಳ
ಕಾರ್ಪಾರಣ್ಯ ಕ್ಷೇತ್ರಕೆ ಅಪರ ಭಾಗದಲ್ಲಿ |
ಇಪ್ಪದು ಈ ಕ್ಷೇತ್ರ ಅಲ್ಲಿಗೆ ಪೂರ್ವದಲಿ |
ತಪ್ಪದೆ ಭೃಗು ಜಾತ ಜಮದಗ್ನಿ ಮಹಮುನಿ |
ಒಪ್ಪಾದಿಂದಲಿ ತಪವಮಾಡಿ ವೇಗ |
ಸಪ್ತತಲ್ಪನ ಮಗನಮಾಡಿಕೊಂಡ ಮೇಲೆ |
ಸಪ್ತಋಷಿಗಳ ಕೂಡ ತಿರುಗುತಿಪ್ಪ |
ಗುಪ್ತಮಂತ್ರವಿದು ನೀನು ಅಲ್ಲಿಗೆ ಪೋಗಿ |
ಸಿಪ್ಪಿಯಂದದಿ ದೇಹಮಾಡಿಕೊಂಡೂ |
ಅಪ್ಪಾರ ತಂತ್ರ ಶ್ರೀಹರಿ[ಯು] ಒಲಿಸಿ ನೀನು |
ಇಪ್ಪ ದೋಷದಿಂದಾ ದೂರಾಗೆಂದಾ |
ಅಪ್ಪಣೆಕೊಂಡು ಮುನಿ ಅತ್ತಲು ಪೋಗಲು |
ಸುಪ್ರೀತಿಯಲಿ ರಾಯಾ ಇಲ್ಲಿಗೆ ಬಂದೂ |
ಇಪ್ಪತ್ತುಸಾವಿರ ವರುಷ ದೇಹ ಶೋಷಿಸಿ |
ನಿಷ್ಪಾಪನಾದನು ಈ ನದಿಯಲ್ಲಿ |
ಸರ್ಪಭೂಷಣವಿನುತ ವಿಜಯವಿಠಲರೇಯಾ |
ಸುಪ್ರಸನ್ನನಾಗಿ ಭೂಪತಿಯ ಪಾಲಿಸಿದ ೩
ಅಟ್ಟತಾಳ
ಶ್ವೇತರಾಯನು ಬಂದು ತಪವು ಮಾಡಿದರಿಂದ |
ಶ್ವೇತ ಪರ್ವತವೆಂದು ಕರೆಸಿಕೊಂಡಿತು ನೋಡ |
ಸೀತಾರಮಣ ಬಂದು ಇಲ್ಲಿ ವಾಸವಾದ |
ಆ ತರುವಾಯ ಶೃಂಗಿ ಎಂಬೊ ಮುನಿಪತಿ |
ಈ ತಟಾಕದಲ್ಲಿ ಇದ್ದು ಸಿದ್ಧನಾದ |
ಭೂತಳದೊಳಗಿದೆ ಉತ್ತಮ ನಿಧಿ ಎನ್ನಿ |
ಮಾತಿಲಿ ಒಮ್ಮೆ ಸ್ಮರಿಸಿದಕಾಲಕ್ಕೂ |
ಪಾತಕ ಕೆಡಿಸೋದು ತಡಮಾಡದೆ ಪ್ರ |
ಖ್ಯಾತನ್ನ ಮಾಡೋದು ಜ್ಞಾನ ಭಕುತಿಕೊಟ್ಟು |
ಪ್ರಾತಃಕಾಲಕ್ಕೆ ಎದ್ದು ಸ್ನಾನಾದಿಯ ಮಾಡೆ ಪ್ರ |
ನೀತನಾಗಿ ತನ್ನ ಕುಲಕೋಟಿ ಸಮೇತ |
ಪೂತುರೆ ಈ ಕ್ಷೇತ್ರ ಶತಗುಣಾಧಿಕ ವಿಶ್ವ |
ನಾಥನಿಗಿಂತ ನುತಿಸಿ ಧ್ಯಾನವಮಾಡೆ |
ಧಾತಾದಿ ಸುರರೆಲ್ಲ ಇಲ್ಲಿ ನಿಂದು ಗುಣ |
ವ್ರಾತದಿಂದಲಿ ಕೇಶವನ ಪಾಡುವರಯ್ಯಾ |
ಭೂತಳದೊಳಗಿದೆ ಶ್ವೇತ ಶೃಂಗಕ್ಷೇತ್ರ |
ಯಾತಕೆ ಸಂಶಯ ಇಲ್ಲಿ ಬಂದೂ ಪುರು |
ಹೂತ ಅಹಲ್ಯಾ ಸಂಗದಿಂದ ಬಂದಿದ್ದ |
ಪಾತಕ ಕಳಕೊಂಡ ಏನೆಂಬೆ ಏನೆಂಬೆ |
ಶ್ವೇತಕಾನನ ವಾಸ ವಿಜಯವಿಠಲರೇಯಾ |
ಭೀತಿಯ ಬಿಡಿಸುವ ಈ ಪರಿ ತಿಳಿದರೆ ೪
ಆದಿತಾಳ
ಬಿಲ್ಲಕಾರಕ್ಷೇತ್ರ ಕಾರ್ಪರಾರಣ್ಯವಿಡಿದು |
ಇಲ್ಲಿ ಪರಿಯಂತ ಎನಿಸೋದು ಸ್ರ‍ಮತಿ ಉಕ್ತಿ |
ಬಿಲ್ಲದ್ವಾರವೆ ಉಂಟು ಮುನಿಗಣ ಪೋಗಿ ಬರುವ |
ಸಲ್ಲುವ ಸಲ್ಲುವದಿದು ಪಂಚಕೋಶ ಕ್ಷೇತ್ರ |
ಮಲ್ಲಿಕಾರ್ಜುನದೇವ ಪರ್ವತದ ಸುತ್ತ |
ಸಲ್ಲಲಿತವಾದ ಅಷ್ಟತೀರ್ಥಂಗಳುಂಟು |
ಬಲ್ಲೀದ ಸೀತಾರಾಮ ಜಮದಗ್ನಿ ಶೃಂಗಿಶ್ವೇತ |
ಕಲ್ಮಷ ಹರರುದ್ರ ನರಸಿಂಹ ಮುಖ್ಯವೆನ್ನಿ |
ನಿಲ್ಲದಲೆ ಬಂದು ಮನುಜ ಸಮಸ್ತ ಸತ್ಕರ್ಮ |
ದಲ್ಲಿ ಒಂದುವಾದರು ಸದ್ಭಕ್ತಿಯಿಂದಲಿ |
ಎಳ್ಳನಿತಾದರು ಎಸಗಿದರಾಗೆ ಶಿರಿ |
ವಲ್ಲಭ ಕಾರುಣ್ಯದಲಿ ಕರುಣಮಾಡುವ ಕಾಣೊ |
ಮಲ್ಲಮರ್ದನ ನಮ್ಮ ವಿಜಯವಿಠಲರೇಯಾ |
ಎಲ್ಲ ಕಾಲದಲಿ ಬಿಡದೆ ಪೊರೆವ ಬಾಂಧವನಾಗಿ ೫
ಜತೆ
ಕೃಷ್ಣಾಚೋತ್ತಮರ (?) ವಾಹಿನಿ ಶ್ವೇತಾದ್ರಿಯಾತ್ರೆಯ |
ಶಿಷ್ಟನಾಗಿ ಮಾಡೆ ವಿಜಯವಿಠಲ ಒಲಿವ ೬

ಭಗವಂತನ ಆರಾಧನೆಯಲ್ಲಿ ನೈವೇದ್ಯ


ಧ್ರುವತಾಳ
ಅನ್ನಾಭಿಮಾನಿ ಚಂದ್ರ ಅಲ್ಲಿ ಕೇಶವ ಪರ
ಮಾನ್ನದಲ್ಲಿ ಭಾರತೀ ನಾರಾಯಣ
ಪೂರ್ಣಭಕ್ಷಗಳಲ್ಲಿ ಸೂರ್ಯ ಮಾಧವ ಘೃತಕೆ
ಕನ್ಯಾ ಲಕುಮಿ ಅಲ್ಲಿ ಗೋವಿಂದನೋ
ಬೆಣ್ಣೆ ಪಾಲಿನಲ್ಲಿ ಸರಸ್ಪತಿ ವಿಷ್ಣು ಶಿರೋ
ರನ್ನ ಮಂಡಿಗಿಯಲ್ಲಿ ವಾಗೀಶ ಮಧುಸೂದನ
ಬೆಣ್ಣೆಯಲ್ಲಿ ವಾಯು ಅಲ್ಲಿ ತ್ರಿವಿಕ್ರಮಾ
ಘನ್ನ ದಧಿಯಲ್ಲಿ ಚಂದ್ರ ವರುಣ ವಾಮನ
ಚನ್ನ ಸೂಪಿನಲ್ಲಿ ಗರುಡ ಶ್ರೀಧರ ದೇವ
ಮುನ್ನೆ ಪತ್ರಶಾಖ ಮಿತ್ರನು ಹೃಷಿಕೇಶ
ಇನ್ನು ಫಲಶಾಖಗಳಲ್ಲಿ ಸರ್ವ ಪದುಮನಾಭ
ಬಣ್ಣಿಪೇ ಆಮ್ಲದಲ್ಲಿ ಪಾರ್ವತಿ ದಾಮೋದರ
ಅನ್ನಾಮ್ಲಪತಿ ರುದ್ರ ಅಲ್ಲಿ ಸಂಕರುಷಣ
ಕಣ್ಣಿಗೆ ಇಂಪಾದ ಸಕ್ಕರಿಯಲ್ಲಿ ಸುರವ
ರೇಣ್ಯ ಇಂದ್ರನು ತದ್ಗತ ವಾಸುದೇವ
ಪನ್ನಗಶಾಯಿ ನಮ್ಮ ವಿಜಯ ವಿಠ್ಠಲರೇಯನ ಪಾ
ವನ್ನ ಮೂರ್ತಿಯ ನೆನಸಿ ಪವಿತ್ರ ನೀನಾಗೊ ೧
ಮಟ್ಟತಾಳ
ಪರಿಪರಿ ಸೋಪಸ್ಕಾರದಲ್ಲಿಗೆ ಅಭಿಮಾನಿ
ಪರಮೇಷ್ಠಿ ಎನ್ನಿ ಆತಗೆ ಪ್ರದ್ಯುಮ್ನ
ತರುವಾಯ ಕಟುದ್ರವ್ಯಕೆ ಯಮರಾಯಾ
ಇರುತಿಪ್ಪನು ಅಲ್ಲಿ ಅನಿರುದ್ಧ ಮೂರುತಿ ದೇವರು
ಸರಕು ಸಂಭಾರಗಳು ಇಂಗು ಸಾಸಿವಿ ಏಳಾ
ಮರೀಚಿ ಜೀರಿಗಿ ಮೊದಲಾದ ಕರ್ಪುರ ಚಂದನ ಕೇ
ಶರ ಮೊದಲಾದ ಬಗೆ ಬಗೆ (ಪರಿಪರಿ) ವಿಧವಾದ
ಪರಮಳ ದ್ರವ್ಯಕ್ಕೆ ಮನುಮಥ ಅಧಿಪತಿ
ಪುರುಷೋತ್ತಮ ದೇವನು ವಾಸವಾಗಿಹನಯ್ಯಾ
ಪರೀಕ್ಷಿಸು ತೈಲ ಪಕ್ವ ಜಯಂತಾ
ವರ ಅಧೋಕ್ಷಜ ಮೂರ್ತಿ ಪೊಂದಿಕೊಂಡು ನಿತ್ಯ
ಮರಳೆ ಸಂಡಿಗೆಯಲ್ಲಿ ದಕ್ಷಪ್ರಜೇಶ್ವರಾ
ನರಹರಿ ಅಲ್ಲಿಪ್ಪ ಅದ್ಭುತ ಕಾರ್ಯನು
ಅರೆಮರೆ ಇಲ್ಲದೆ ಉದ್ಧಿ ಭಕ್ಷದಲಿ
ಇರುತಿಪ್ಪನು ಮನು ಅಲ್ಲಿ ಅಚ್ಯುತಮೂರ್ತಿ
ಸುರುಚಿ ಲವಣದಲಿ ನಿರಋತಿ ಜನಾರ್ಧನ
ಸ್ಥಿರವೆನ್ನಿ ಲವಣ ಶಾಖಕ್ಕಭಿಮಾನಿ
ಮರೀಚಿ ಪ್ರಾಣನು ಅಲ್ಲಿ ಉಪೇಂದ್ರ ಭಗವಂತ
ಪರಮ ಶೋಭಿತ ತಾಂಬೂಲ ದ್ರವ್ಯಕೆ ಗಂಗಾ
ಹರಿನಾಮಕ ದೇವ ಸ್ವಾದೋದಕದಲ್ಲಿ
ತರಣಿ ಸಮನ ಪುತ್ರ ಶ್ರೀ ಕೃಷ್ಣನು ಎನ್ನಿ
ಸುರರ ಮಸ್ತಕ ಮಣಿ ವಿಜಯ ವಿಠ್ಠಲರೇಯಾ
ಸ್ಮರಿಸಿದ ಸುಜನಕೆ ತಿಳಪುವ ಇದರಂತೆ ೨
ತ್ರಿವಿಡಿ ತಾಳ
ಪಾಕಶುದ್ಧಿಗೆ ಪುಷ್ಕರ ಹಂಸನಾಮಕದೇವ
ಬೇಕಾದ ಸ್ವಾದರಸಗಳಿಗೆ ರತಿ ವಿಶ್ವಾ
ಕಾಕುಲಾತಿ ಸಲ್ಲ ವಲಿಗೆ ಪಾವಕ ಭೃಗು
ನೀ ಕೇಳು ಶುಷ್ಠ ಗೋಮಯ ಪಿಂಡಕ್ಕೆ ಈರ್ವರ
ಓಕುಳಿ ನಾಮಕ ವಸಂತ ಋಷಭನು
ಪಾಕಕರ್ತಳು ಶ್ರೀದೇವಿ ವಿಶ್ವಂಭರ ವೇ
ದಿಕ ಮಂಟಪ ಸಹ ಭೂದೇವಿ ಸೂಕರ
ಆಕಾಶಭಾಗಕ್ಕೆ ಗಣಪತಿ ಕುಮಾರ
ಶ್ರೀ ಕಾಂತನೀತನೊ ಅವರ್ಣಕ್ಕಭಿಮಾನಿ
ಸಾಕಾರವಾಗಿದ್ದ ವಿಷ್ವಕ್ಸೇನ ಪುರುಷಾ
ಲೋಕ ಪವಿತ್ರ ತುಲಸಿಯಲ್ಲಿ ರಮಾ ಕಪಿಲ
ರಾಕೇಂದುವಿನಂತೆ ಪಾಕ ಪಾತ್ರಿಗೆ ಕೇಳು
ಕಾಕೋದರನ ರಾಣಿ ವಾಣಿ ಅನಂತಾ (ಅನ್ನದಾ)
ಲೋಕಾಂಬಕನಂತೆ ಪೊಳೆವ ಭೋಜನ ಪಾತ್ರಿಗೆ
ಲೋಕ ಜನನಿ ದುರ್ಗಾ ಹರಿರಾಣಿ ಸತ್ಯ
ಶೋಕ ಕಳೆವ ನಾನಾ ಮಾಡ ತಿದ್ದಿದ ಮಾ
ಣಿಕಮಯ ಬಟ್ಟಲಿಗೆ ಸೌಪರ್ಣಿದತ್ತನು
ಶ್ರೀ ಕಳತ್ರ ನಮ್ಮ ವಿಜಯವಿಠಲರೇಯ ವೀ
ವೇಕವಂತರ ಚಿತ್ತದಲ್ಲಿ ಕೈಕೊಂಬನು ೩
ಅಟ್ಟತಾಳ
ಓದನ ಸರಸ್ವತಿ ಪರಮೇಷ್ಠಿ ಮಾಳ್ಪರು
ಶ್ರೀದೇವಿ ಚೆನ್ನಾಗಿ ಸೂಪಾ ಮಾಳ್ಪಳು ಕೇಳಿ
ಆದಿ ಜಗದ್ಗುರು ಭಕ್ಷಮಾಳ್ಪನು ರುಚಿ
ಯಾದ ಪರಮಾನ್ನ ಭಾರತಿ ಮಾಳ್ಪಳು
ಸ್ವಾದ ಶಾಖೋ ಪಶಾಖಾದಿಗಳು ಇಂದ್ರಾದಿ ಶ
ಚ್ಯಾದ್ಯರು ಮಾಡುವರು ಇನಿತು
ಮಾಧವನ ಮುಂದೆ ನೈವೇದ್ಯ ಇಡ ಬೇ
ಕಾದ ಲಕ್ಷಣ ತಿಳಿ ತಾರತಮ್ಯ ದಿಕ್ಕು
ಭೇದಗಳಿಂದಲಿ ಅಗ್ನಿ ಕೋಣೆಗೆ ಭಕ್ಷಾ
ಐದು ಮೌಳಿಯ ದಿಕ್ಕಿನಲ್ಲಿ ಪರ ಮಾನ್ನಾ
ವಾದವಿಲ್ಲದೆ ನೈಋತ್ಯ ಕೋಣೆಲಿ ಲೇ
ಹ್ಯಾದಿಗಳಿಡಬೇಕು ಭೂತ ವಾಯುವಿನಲ್ಲಿ
ಆದರಿಸಿ ವ್ಯಂಜನ ಪದಾರ್ಥಂಗಳು
ಮೋದದಲಿ ಇಟ್ಟು ಇದರ ಮಧ್ಯದಲ್ಲಿ
ಓದನ ಪಾತ್ರೆಯ ಇಡಬೇಕು ಪರಮಾನ್ನ
ಓದನದೆಡೆಯಲ್ಲಿ ಘೃತಪಾತ್ರದಧಿ ಮೊದ
ಲಾದವು ಸ್ಥಾಪಿಸಿ ಬದಿಯಲ್ಲಿ ತಾಂಬೂಲ
ಸ್ವಾದೋದಕವಿಟ್ಟು ದೇವಂಗೆ ಕೈಮುಗಿದು
ವೇದ ಮಂತ್ರಗಳಿಂದ ತುತಿಸಿ ಕೊಂಡಾಡುತ
ಬೋಧ ಮೂರುತಿ ನಮ್ಮ ವಿಜಯ ವಿಠ್ಠಲರೇಯ
ಆದಿ ಪೊರಬೊಮ್ಮ ಆತ್ಮನೆಂದು ನೆನಿಸೊ (ತಿಳಿಯೊ) ೪
ಆದಿತಾಳ
ಭೋಜನ ಪಾತ್ರಿ ಮಂಡಿಸಿ ಮೊದಲು ದಿವ್ಯಾನ್ನ ವಿ
ರಾಜಿಸುವ ಲವಣ ವ್ಯಂಜನಾದಿ ದ್ವಿತೀಯದಲ್ಲಿ
ಮಾಜದೆ ಸಾರುವೆ ಇದರ ತರುವಾಯಾ
ತೇಜವಾಗಿದ್ದ ಭಕ್ಷ ಸರ್ವವು ಇಡಬೇಕು
ಮೂಜಗತ್ಪತಿ ರಂಗಾ ಇನಿತು ಕೈಕೊಂಬನೆಂದು
ನೈಜಭಾವದಿಂದ ಚಿಂತಿಸಬೇಕು ನೋಡಿ
ಭೋಜ್ಯ ಭೋಜಕ ಭೋಕ್ತಾ ಭೋಗನು ಹರಿ ಎಂದು
ಪೂಜ್ಯ ಪೂಜ್ಯಕನೆಂದು ಅಂತರ ಮುಖನಾಗೋ
ಈ ಜಡ ದ್ರವ್ಯದಿಂದ ತೃಪ್ತಿಯಾಗುವದೆಂತೊ
ರಾಜೀವ ನೇತ್ರ ಕೃಷ್ಣ ಹೊರಗೆ ಒಳಗೆ ಇಪ್ಪ
ವ್ಯಾಜ ರಹಿತನಾಗಿ ಮಾಡೆಲೊ ಮಾಡೆಲೊ
ರಾಜ ಪದವಿ ಉಂಟು ಎಂದಿಗೂ ನಾಶವಿಲ್ಲಾ
ಬೀಜ ಮಾತು ಪೇಳುವೆ ಹಲವು ಹಂಬಲ ಸಲ್ಲಾ
ಮೂಜಗದೊಳಗಿದ್ದ ವರ್ನಂಗಳು ಶುಭ್ರ
ರಾಜಸ ಭಾಗ ಮತ್ತೆ ಪೀತ ಕಪ್ಪು ಪದಾರ್ಥ
ರಾಜಿಸುತಿಪ್ಪ ನಾಲ್ಕು ಬಗೆ ದ್ರವ್ಯಾಭಿಮಾನಿ
ರಾಜೀವ ಪೀರ ವಾಯು ಸರಸ್ವತಿ ಭಾರತಿ
ರಾಜಶೇಖರ ಮೊದಲಾದ ತತ್ವದಲಿದ್ದ
ಸುಜನರು ಕೇಳಿ ಶುಭ್ರಾದಿ ವರ್ನಕ್ರಮಕೆ
ಪೂಜಿವಂತರು ಅಲ್ಲಿ ವಾಸುದೇವ ಸಂಕರುಷಣ
ರೈಜನಕ ಪ್ರದ್ಯುಮ್ನ ಅನಿರುದ್ಧ ಮೂರ್ತಿವಾಸ
ಆ ಜನ್ಮಾರಭ್ಯವಾಗಿ ಇದೇ ಮಾತ್ರ ತಿಳಿದು ಮಹಾ
ರಾಜಾಧಿ ಲೋಕದಲ್ಲಿ ವಾಸವಾಗುವದು
ರಾಜ ರಾಜಾಪ್ತ ಪ್ರೀಯ ವಿಜಯ ವಿಠ್ಠಲ ಪರಮಾ
ಸೋಜಿಗನು ಕಾಣೋ ಸಾಲಕಾಮಂಧ ಹರಣಾ ೫
ಜತೆ
ಚಿಂತನೆ ಪ್ರಕಾರ ವಿನಿಯೋಗ ಮಾಡು ಶ್ರೀ
ಕಾಂತ ವಿಜಯ ವಿಠ್ಠಲ ಕೃಷ್ಣಗೆ ಪದಾರ್ಥಗಳಾ ೬

ಭಗವದ್ಭಕ್ತಿಯನ್ನು ಮಾಡುವುದೆಂದರೆ


ಧ್ರುವತಾಳ
ಅನ್ನಾಭಿಮಾನಿ ಚಂದ್ರ ಅಲ್ಲಿ ಕೇಶವ ಪರ
ಮಾನ್ನದೊಳು ಭಾರತೀ ನಾರಾಯಣಾ
ಪೂರ್ಣ ಭಕ್ಷಗಳಲ್ಲಿ ಸೂರ್ಯ ಮಾಧವ ಘೃತಕೆ
ಕನ್ಯಾಲಕುಮಿ ಅಲ್ಲಿ ಗೋವಿಂದನೊ
ಬೆಣ್ಣೆ ಪಾಲಿನಲ್ಲಿ ಸರಸ್ವತಿ ವಿಷ್ಣು ಶಿರೋ
ರನ್ನ ಮಂಡಿಗಿಯಲ್ಲಿ ವಾಗೀಶ ಮಧುಸೂದನಾ
ಬೆಣ್ಣೆಯಲ್ಲಿ ವಾಯು ಅಲ್ಲಿ ತ್ರಿವಿಕ್ರಮಾ
ಘನ್ನ ದಧಿಯಲ್ಲಿ ಚಂದ್ರ ವರುಣ ವಾಮನ್ನ
ಚನ್ನಾ ಸೂಪಿನಲ್ಲಿ ಗರುಡ ಶ್ರೀಧರದೇವ
ಮುನ್ನೆ ಪತ್ರಾ ಶಾಖದಲ್ಲಿ ಮಿತ್ರನು ಹೃಷೀಕೇಶ
ಇನ್ನು ಫಲ ಶಾಖಗಳಲ್ಲಿ ಸರ್ಪ ಪದುಮ ನಾಭ
ಬಣ್ಣಿಪೆ ಆಮ್ಲದಲ್ಲಿ ಪಾರ್ವತಿ ದಾಮೋದರ
ಅನ್ನಾಮ್ಲ ಪತಿ ರುದ್ರಾ ಅಲ್ಲಿ ಸಂಕರುಷಣಾ
ಕಣ್ಣಿಗೆ ಇಂಪಾದ ಸಕ್ಕರಿಯಲ್ಲಿ ಸುರವ
ರೇಣ್ಯಾ ಇಂದ್ರಾನು ತದ್ಗತ ವಾಸುದೇವ
ಪನ್ನಗಶಾಯಿ ನಮ್ಮ ವಿಜಯ ವಿಠಲರೇಯನ ಪಾ
ವನ್ನ ಮೂರ್ತಿಯನೆನಿಸಿ ಪವಿತ್ರ ನೀನಾಗೋ ೧
ಮಟ್ಟತಾಳ
ಪರಿ ಪರಿ ಸೋಪಸ್ಕರದಲ್ಲಿಗೆ ಅಭಿಮಾನಿ
ಪರಮೇಷ್ಟಿಯನ್ನಿ ಆತಗೆ ಪ್ರದ್ಯುಮ್ಮ
ತರುವಾಯ ಕಟುದ್ರವ್ಯಕ್ಕೆ ಯಮರಾಯ
ಇರುತಿಪ್ಪನು ಅಲ್ಲಿ ಅನಿರುದ್ದ ಮೂರುತಿ
ಸರಕು ಸಂಭಾರಗಳು ಇಂಗು ಸಾಸಿವೆ ಎಳಾ
ಮರೀಚಿ ಜೀರಿಗೆ ಕರ್ಪುರ ಚಂದನ ಕೇ
ಸರ ಮೊದಲಾದ ಪರಿಪರಿ ವಿಧವಾದ
ಪರಿಮಳ ದ್ರವ್ಯಕ್ಕೆ ಮನುಮಥ ಅಧಿಪತಿ
ಪುರುಷೋತ್ತಮ ದೇವನು ವಾಸವಾಗಿಹನಯ್ಯಾ
ಪರಿಕ್ಷಿಸು ತೈಲ ಪಕ್ವಕೆ ಜಯಂತ
ವರ ಅಧೋಕ್ಷಜ ಮೂರುತಿ ಪೊಂದಿಕೊಂಡು ನಿತ್ಯ
ಮರಳೆ ಸಂಡಿಗೆಯಲ್ಲಿ ದಕ್ಷ ಪ್ರಜೇಶ್ವರ
ನರಹರಿ ಅಲ್ಲಿಪ್ಪ ಅದ್ಬುತ ಕಾರ್ಯಾನು
ಅರೆಮರೆ ಇಲ್ಲದೆ ಉದ್ದಿನ ಭಕ್ಷದಲ್ಲಿ
ಇರುತಿಪ್ಪನು ಮನು ಅಲ್ಲಿ ಅಚ್ಯುತ ಮೂರ್ತಿ
ಸುರುಚಿ ಲವಣದಲ್ಲಿ ನಿಋತಿಮತಿ ಜನಾರ್ದನ
ಸ್ಥಿರವೆನ್ನಿ ಲವಣ ಶಾಖಕ್ಕೆ ಭಿಮಾನಿ
ಮರೀಚಿ ಪ್ರಾಣನು ಅಲ್ಲಿ ಉಪೇಂದ್ರ ಭಗವಂತ
ಪರಮ ಶೋಭಿತ ತಾಂಬೂಲಕೆ ಗಂಗಾ
ಹರಿನಾಮಕ ದೇವ ಸ್ವಾದೋದಕದಲ್ಲಿ
ತರಣಿ ಸಮನ ಪುತ್ರ ಶ್ರೀ ಕೃಷ್ಣನು ಎನ್ನಿ
ಸುರರ ಮಸ್ತಕ ಮಣಿ ವಿಜಯ ವಿಠ್ಠಲರೇಯಾ
ಸ್ಮರಿಸಿದ ಸುಜನಕೆ ತಿಳುಪುವ ಇದರಂತೆ ೨
ತ್ರಿವಿಡಿ ತಾಳ
ಪಾಕ ಶುದ್ದಿಗೆ ಪುಷ್ಕರ ಹಂಸನಾಮಕ ದೇವ
ಬೇಕಾದ ಸ್ವಾದುರಸಗಳಿಗೆ ರತಿ ವಿಶ್ವಾ
ಕಾಕುಲಾತಿ ಸಲ್ಲವಲಿಗೆ ಪಾವಕ ಭೃಗು
ನೀ ಕೇಳು ಶುಷ್ಕ ಗೋಮಯ ಪಿಂಡಕ್ಕೆ ಈರ್ವರಾ
ವೋಕುಳಿನಾಮಕ ವಸಂತ ಋಷಭನು
ಪಾಕ ಕರ್ತಳು ಶ್ರೀದೇವಿ ವಿಶ್ವಂಭರ ವೇ
ದಿಕಾಮಂಟಪ ಸಹ ಭೂದೇವಿ ಶೂಕರಾ
ಆಕಾಶ ಭಾಗಕ್ಕೆ ಗಣಪತಿ ಕುಮಾರಾ
ಶ್ರೀಕಾಂತನೀತನೊ ಆ ವರ್ಣಕ್ಕಭಿಮಾನಿ
ಸಾಕಾರವಾಗಿದ್ದ ವಿಷ್ವಕ್ಸೇನ ಪುರುಷ
ಲೋಕ ಪವಿತ್ರ ತುಲಸಿಯಲ್ಲಿ ರಮಾ ಕಪಿಲಾ
ರಾಕೇಂದುವಿನಂತೆ ಪಾಕ ಪಾತ್ರಿಗೆ ಕೇಳು
ಕಾಕೋದರನ ರಾಣಿ ವಾರುಣಿ ಅನಂತಾ
ಲೋಕಾಂಬಿಕನಂತೆ ಪೊಳೆವ ಭೋಜನಪಾತ್ರಿಗೆ
ಲೋಕ ಜನನಿ ದುರ್ಗಾ ಹರಿ ರಾಣಿ ಸತ್ಯ
ಶೋಕ ಕಳೆವ ನಾನಾ ಮಾಟ ತಿದ್ದಿದ ಮಾ
ಣಿಕಮಯ ಬಟ್ಟಲಿಗೆ ಸೌಪರ್ಣ ದತ್ತಾನು
ಶ್ರೀಕಳತ್ರ ನಮ್ಮ ವಿಜಯ ವಿಠ್ಠಲರೇಯಾ ವಿ
ವೇಕವಂತರ ಚಿತ್ತದಲಿ ಕೈಕೊಂಬನು ೩
ಅಟ್ಟತಾಳ
ಓದನ ಸರಸ್ವತಿ ಪರಮೇಷ್ಠಿ ಮಾಳ್ಪರು
ಶ್ರೀದೇವಿ ಚನ್ನಾಗಿ ಸೂಪಮಾಳ್ಪಳು ಕೇಳಿ
ಆದಿ ಜಗದ್ಗುರು ಭಕ್ಷ ಮಾಳ್ಪನು ಸುರುಚಿ
ಯಾದ ಪರಮಾನ್ನ ಭಾರತಿ ಮಾಳ್ಪಳು
ಸ್ವಾದ ಶಾಖಾ ಫಲಾದಿಗಳು ಇಂದ್ರಾದಿ ಶು
ಚ್ಯಾದ್ಯರು ಮಾಡುವರು ಇಂತು
ಮಾಧವನ ಮುಂದೆ ನೈವೇದ್ಯ ಇಡಬೇ
ಕಾದ ಲಕ್ಷಣ ತಿಳಿ ತಾರತಮ್ಯದ ದಿಕ್ಕು
ಭೇದಗಳಿಂದಲಿ ಅಗ್ನಿ ಕೋಣೆಗೆ ಭಕ್ಷಾ
ಐದು ಮೊಳಿಯ ದಿಕ್ಕಿನಲ್ಲಿ ಪರಮಾನ್ನ
ವಾದಾವಿಲ್ಲದೆ ನೈಋತ್ತಿ ಕೋಣಿಲಿ ಲೇ
ಹಾದಿಗಳಿಡಬೇಕು ಭೂತ ವಾಯುವಿನಲ್ಲಿ
ಆದರಿಸಿ ವ್ಯಂಜನ ಪದಾರ್ಥಂಗಳು
ಮೋದದಲ್ಲಿ ಇಟ್ಟು ಇದರ ಮದ್ಯದಲ್ಲಿ
ಓದನ ಪಾತ್ರಿಯ ಇಡಬೇಕು ಪರಮಾನ್ನ
ಓದನ್ನದೆಡೆಯಲ್ಲಿ ಘೃತ ಪಾತ್ರಿ ದಧಿ ಮೊದ
ಲಾದವು ಸ್ಥಾಪಿಸಿ ಬದಿಯಲ್ಲಿ ತಾಂಬೂಲ
ಸ್ವಾದೋಕವಿಟ್ಟು ದೇವಂಗೆ ಕೈ ಮುಗಿದು
ವೇದ ಮಂತ್ರಗಳಿಂದ ತುತಿಸಿ ಕೊಂಡಾಡುತ್ತ
ಬೋಧಮೂರುತಿ ನಮ್ಮ ವಿಜಯ ವಿಠ್ಠಲರೇಯಾ
ಆದಿ ಪರಬೊಮ್ಮಾ ಆತ್ಮನಂದು ನೆನೆಸೋ ೪
ಆದಿತಾಳ
ಬೋಜನ ಪಾತ್ರಿ ಮಂಡಿಸಿ ಮೊದಲು ದಿವ್ಯಾನ್ನ ವಿ
ರಾಜಿಸುವೋ ಲವಣ ವ್ಯಂಜನಾದಿ ದ್ವಿತಿಯಲ್ಲಿ
ಮಾಜದೆ ಸಾರುವೆ ಇದರ ತರುವಾಯ
ತೇಜವಾಗಿದ್ದ ಭಕ್ಷ ಸರ್ವವು ಇಡಬೇಕು
ಮೂಜಗತ್ಪತಿ ರಂಗ ಇನಿತು ಕೈ ಕೊಂಬನೆಂದು
ನೈಜ ಭಾವದಿಂದ ಚಿಂತಿಸಬೇಕು ನೋಡಿ
ಭೋಜ್ಯ ಭೋಜಕ ಭೋಕ್ತ ಭೋಗಾನು ಹರಿಯಂದು
ಪೂಜ್ಯ ಪೂಜ್ಯಕನೆಂದು ಅಂತರ ಮುಖನಾಗೋ
ಈ ಜಡ ದ್ರವ್ಯದಿಂದ ತೃಪ್ತಿಯಾಗುವದೆಂತೋ
ರಾಜೀವನೇತ್ರ ಕೃಷ್ಣ ಹೊರಗೆ ಒಳಗೆ ಇಪ್ಪ
ವ್ಯಾಜರಹಿತನಾಗಿಮಾಡಲೊ ಮಾಡೆಲೊ
ರಾಜ ಪದವಿ ಉಂಟು ಎಂದಿಗೂ ನಾಶವಿಲ್ಲ
ಬೀಜ ಮಾತು ಪೇಳುವೆ ಹಲವು ಹಂಬಲಸಲ್ಲ

ಮೂವತ್ತು ಮೂರು ಕೋಟಿ


ಧ್ರ್ರುವತಾಳ
ಅನ್ಯದೇವತೆಗಳ ಕಣ್ಣೆತ್ತಿ ನೋಡದಿರು
ಪುಣ್ಯವಿಲ್ಲವೊ ಮನವೆ ಎನ್ನ ಮತಕೆ ಹಿತ
ಸುಣ್ಣ ಕರ್ದಮ ಕ್ಷೀರವನ್ನು ಕುಡಿಸಿ ದಿ
ವ್ಯಾನ್ನದೊಡ ಉಂಬೊ ಕನ್ನನಂತೆ ಕಾಣಿರೊ
ಅನ್ಯಾಯವಾಹುದು ಅರಣ್ಯದೊಳು ಪೊಕ್ಕು
ಮಣ್ಣು ತೂರಿ ತೂರಿ ಧಾನ್ಯ ಆರಿಸಿದಂತೆ
ಕನ್ನಡಿ ತಿರಿವಿಡಿದು ತನ್ನ ನೋಡಿಕೊಂಡಂತೆ
ಖಿನ್ನವಾಗದಲೆ ಪಾವನ್ನು ಎಂದಿಗೆ ಇಲ್ಲ
ಬಿನ್ನ ದೈವದಗಂಡ ವಿಜಯ ವಿಠ್ಠಲನಂಘ್ರಿ
ಯನ್ನು ಭಜಿಸುವರಿಗೆ ಸಮಮತವಲ್ಲವೆನ್ನಿ ೧
ಮಟ್ಟತಾಳ
ಯಲ್ಲಾಯಿ ಯಕನಾತಿ ಬನಶಂಕರಿ
ಮಲ್ಲಗ ಜಟ್ಟಿಂಗ ಮಾಳಿಗೆ ಮನಿದೇವಿ
ಸಲ್ಲದ ಚವಡಿಕೆ ಮಾರಿ ಮಸಣೆ ಜಕ್ಕಿ
ಸಲ್ಲದ ಹಿರಿಯಣ್ಣ ಗುರುವ ಜಲದೇವಿ
ಕೊಲ್ಲುವ ಪೋತಗನು ಕಚ್ಚಿನ ಗಡಿಗೆಮ್ಮ
ಸುಳ್ಳು ಚಂದಮ್ಮನು ಖಂಡಿಕೇತಾರಯ್ಯಾ
ಬೊಳ್ಳೊಟ್ಟು ಬೊಗಳುವ ಅಡವಿಯ ಮಹಂತ
ಅಲ್ಲಾದ ಮಹದೇವಿ ತುಳಜಾ ಭವಾನಿ
ಬೆಲ್ಲಾದ ಬೇಲಾಯಿ ಕೋಣ ಕುರಿ ವೈರಿ
ಹಳ್ಳದ ಜೋಗಾಯಿ ಬೇತಾಳ ಬೊಮ್ಮಾಯ್ಯಾ
ಮುಳ್ಳಿನ ಮಹವೀರ ಸಂಕಟ ಚೌತಿಗನು
ಉಳ್ಳಾ ಮೂಕಾರತಿ ಮುಂಡೆ ಚಾಮುಂಡಣೆ
ಹಲ್ಲಿನ ಜೋಕುಮಾರ ಕರಿಯಾ ಶೀರಿಯಾ ಶಟವಿ
ಗುಳ್ಳಕೆ ಪೊಳಕಾಯಿ ಅಗಸರ ಮನೆ ಕೊಡತಿ
ಹೊಲ್ಲಿ ಮನೆವುಳ್ಳ ನರಸ ಸಕ್ಕರಿಗಾ
ಜೊಳ್ಳು ಮತಿಯ ಕೊಡುವ ಜಂಪೆ ಜಡದೈವ
ಬಳ್ಳಿ ಉಡಿಗೆ ಉಡುವ ಉಟ್ಟಿಗೆ ಪಟ್ಲಾಯಿ
ಉಳ್ಳೆ ಮೆಲುವ ಹೀನ ಮದ್ಯಪಾನದ ಭಾಂಡೆ
ಕೊಳ್ಳ ಪಚ್ಚಿಸಿಕೊಂಬ ದೀಪದ ಮಾರಯೀ
ಎಲ್ಲರುದಾಟುವ ಹೊಸ್ತಲು ಬುಡ್ಡಗನು
ಕಲ್ಲು ಮೂರರಿಂದ ತೋಟದ ಹೆಬ್ಬಯ್ಯ
ಬುಳ್ಳನು ಸುಂಕ್ಲಾಯಿ ಹಾದಿಬೀದಿ ಬಡಿಯಾ
ಬಿಲ್ಲಿಯಾ ಮಹಕೆಂಚೆ ಮಾತಂಗಿ ಬಕ್ಕಾಯಿ
ಎಲ್ಲ ನಾನಾಕದಾ ಕಳ್ಳದೇವತೆಗಳ
ನಿಲ್ಲದೆ ಒಲಿಸಿದರು ಪೊಳ್ಳೆಲ್ಲದೆ ಗತಿ
ಇಲ್ಲವೊ ಎಂದಿಗೂ ಚಿಲ್ಲರೆ ದೈವಕ್ಕೆ
ಬಲ್ಲಿದ ವಿಜಯ ವಿಠ್ಠಲನಲ್ಲದೆ ಪ್ರತಿ ಇಲ್ಲವೊ ಆವಲ್ಲಿ ೨
ತ್ರಿವಿಡಿ ತಾಳ
ಬಿನಗು ದೇವತೆಗಳಿಗೆ ಇನಿತಾದರು ಬಾಗಿ
ಕನಸಿನೊಳಾದರು ನೆನಿಸಲಾಗದು ಮನವೆ
ನಿನಗೇನು ಉಪಹತಿಯನು ಮಾಡಿದರೆ ಪ
ಲ್ಲನು ಉಚ್ಚಬಡಿ ಇದಕೆ ಅನುಮಾನ ಸಲ್ಲದು
ಘನತಿಯ ಪಿಡಿದು ತೊತ್ತಿನ ಮಕ್ಕಳನ ಜೀ
ರಣ ಕಂಟಕಾರಿಯಲ್ಲಿ ಹಣಿದು ಹಣಿಯಬೇಕು
ಹೆಣೆಗಾಡಿದರೆ ನಿನ್ನೊಡನೆ ಮಾರಿಗಳನ್ನು
ತೃಣವೆಂದು ಬಗಿದು ಗಣನೆ ಮಾಡದಿರಬೇಕು
ಜನುಮಾನಂತ ಜನುಮ ದಿನದೊಳಗೆ ಒಂದು
ಕ್ಷಣವಾದರು ಅರ್ಚನೆ ಸಲ್ಲ ದುಷ್ಟರಿಗೆ
ತನುಮನ ಒಡಿವೆ ವಾಹನ ಧನ ಸರ್ವವು
ಮುನಿದೆಲ್ಲವನು ಶಳದೂ ದಣಿಸಿದ ಕಾಲಕ್ಕೂ
ಮಣಿಯದಿರವರಿಗೆ ಸೆಣಸುತ್ತ ಧೈರ್ಯದ
ಖಣಿಯಾಗಿ ಬಾಳು ಸಾಧನವನ್ನು ಮಾಡುತ್ತ
ಸನಕಾದಿಗಳ ದಾತಾ ವಿಜಯ ವಿಠ್ಠಲನ್ನ
ಗುಣವ ಕೊಂಡಾಡುತ್ತ ಭಣಗುವುದದು ಕಳಿಯೇ ೩
ಅಟ್ಟತಾಳ
ಹೊಟ್ಟಿ ಕಿಚ್ಚಿನ ದೈವವೆಷ್ಟು ಪೂಜಿಸಲೇನು
ಪುಟ್ಟದು ವೈರಾಗ್ಯ ನಿಷ್ಠೆಯಾದಿಗಳು
ಬೆಟ್ಟದ ಕೊನೆಯಿಂದ ಸೃಷ್ಟಿಗುರುಳಿದಂತೆ
ನಷ್ಟವಲ್ಲದೆ ಎಲ್ಲ ಇಷ್ಟ ಪ್ರಾಪುತಿ ಇಲ್ಲ
ಬಟ್ಟು ನೀರೊಳಗದ್ದಿ ನೆಟ್ಟನೆ ಬಾಯೊಳ
ಗಿಟ್ಟು ಬಿಡುವನು ದಿಟ್ಟ ಮೂರುತಿ ಜಗ
ಜಟ್ಟಿ ಶ್ರೀ ವಿಜಯ ವಿಠ್ಠಲನ ಪಾದ
ಬಿಟ್ಟರೆ ಗತಿ ಇಲ್ಲ ಬಿಟ್ಟರೆ ಗತಿ ಇಲ್ಲವೋ ೪
ಆದಿತಾಳ
ಈ ಪರಿ ಇರಲು ಸ್ವರೂಪಜ್ಞಾನ ಉಂಟು
ಅಪಾರ ಜನುಮದ ಪಾಪ ಸಂಹಾರವೊ
ಶ್ರೀ ಪತಿ ಭಜನಿಗೆ ಸೋಪಾನ ಬಿಗಿದಂತೆ
ಅಪವರ್ಗದ ತನಕ ಪಥ ನಿಜವೆನ್ನಿ
ಚೀಪುಗೂಲಿಯ ದೈವ ಪಾಡಿದರನ್ನ
ತಾಪತ್ರಯವಿಲ್ಲದೆ ಪೋಪುದೆ ದುಷ್ಕರ್ಮ
ಭೂಪಾರದೊಳಗಿದ್ದ ಧೂಪದ ಹೊಗೆ ಸರ್ವ
ಲೇಪವಾದರು ತಾರಾಪಥಕೆ ಸಮವುಂಟೆ
ತ್ಯಾಪೆ ಕಂಗಾಲ ದೈವಗಳ ಪ್ರೀತಿ ಬಡಿಸಿದರು
ರೂಪಹೀನವಲ್ಲದೆ ಆಪತ್ತು ಹೋಗವಯ್ಯಾ
ಆಪನ್ನಪಾಲಾ ನಮ್ಮ ವಿಜಯ ವಿಠ್ಠಲ ಸಪುತ
ದ್ವೀಪಾಧಿಪ ಎಂದು ದೃಢವಾಗಿ ನಂಬು ಮನವೆ ೫
ಜತೆ
ಹಕ್ಕಲ ದೈವಗಳ ಹಾದಿಗೆ ಚೀಲಿ ಬಡದು
ರಕ್ಕಸಾಂತಕ ವಿಜಯ ವಿಠ್ಠಲನ್ನ ಕೊಂಡಾಡು ೬

ಜ್ಞಾನವೆಂಬುದು ಒಂದು ಜನ್ಮದಲ್ಲಿ

೧೦
ಧ್ರುವ ತಾಳ
ಅಪದ್ಧ ತಿದ್ದುವುದು ಅಪಶಬ್ಧ ಮ[ನ್ನಿಪು]ದು
ಅಪ ಪ್ರಯೋಗವಿದ್ದರು ಕ್ಷಮಿಸುವುದು ಸಜ್ಜನರು
ಅಪಹಾಸ್ಯ ಮಾಡಿದರೆ ನಿಮಗೆ ದೊರಕುವುದೇನು
ಅಪವರ್ಗಕೆ ಸಾಧನವಲ್ಲ ಅನುದಿನಾ
ಅಪಶ್ರುತಿವಿಡಿದು ಕೂಗ್ಯಾಡಿದ ಮಾನಸಂಗೆ
ಅಪವಾದ ಹೊರಿಸಲು ಚಿಂತಿಸುವೆನೇ
ಅಪಕೀರ್ತಿಗೊಳಗಾಗಿ ಕಚಕುಚ ವರ್ನಿಸಿ
ಅಪಗತಿಗೆ ಪೋಗುವ ಕವನವಲ್ಲ
ಅಪಗಾ ಜನಕ ಲಕುಮಿ ಬೊಮ್ಮಾದಿಗಳ ಚರಿತೆ
ಅಪರಮಿತವಾಗಿ ತೋರಿದನಿತೂ
ಅಪದ್ಧವೆನಿಸಿದಂತೆ ಪೇಳಿದೆ ಗುರುಗಳು
ಅಪರಾಧದದನೆಂದು ನುಡಿಯದಂತೇ
ಅಪಮೃತ್ಯುಮಿಗಿಲಾದ ಬಾಧಿಸುವ ಕ್ಲೇಶ
ಅಪಜಯವಾಗುವದು ತೊಲಗೀ ಪೋಗಿ
ಅಪರಂಪಾರ ಮಹಿಮ ವಿಜಯ ವಿಠ್ಠಲನಂಘ್ರಿ
ಅಫಲನಾಗಿ ಭಜಿಸು ಭಕುತಿ ಪ್ರಧಾನವೆನ್ನಿ ೧
ಮಟ್ಟತಾಳ
ಎಚ್ಚರವಿದ್ದಾಗ ಕಲಿ[ತ] ವಿದ್ಯಗಳೆಲ್ಲ
ಅಚ್ಚವಳಿಯದಂತೆ ಹೃದಯ ದೊಳಿಪ್ಪವು
ಎಚ್ಚರವನುತಪ್ಪಿ ತವಕದಿಂದ ಕಣ್ಣು
ಮುಚ್ಚಿಕೊಂಡು ಗಾಢನಿದ್ರೆಯೊಲಿಪ್ಪಾಗ
ನಿಚ್ಚಟವಾಗಿದ್ದವಿದ್ಯ ನಿನಗೆ ಉಂಟೋ ?
ಎಚ್ಚರ ಪಟ್ಟಿದರೆ ಮರಿಯದಲೆ ಅವನೇ
ಉಚ್ಚರಿಸುವದಕ್ಕೆ ಬರುತಿಪ್ಪವು ಮನಕೆ
ಅಚ್ಯುತ ಸಿರಿ ವಿಜಯವಿಠ್ಠಲನ ಆವಾಗ
ಮೆಚ್ಚಿಸಿ ಪೂಜಿಸಿದ ನರಗೆ ಪುಣ್ಯಪ್ರಾಪ್ತಿ ೨
ತ್ರಿವಿಡಿತಾಳ
ಜನುಮಾಂತರದಲ್ಲಿದ್ದ ಜ್ಞಾನವೇನಿದ್ದದ್ದು
ಪುನರಪಿ ದೇಹವ ತೆತ್ತುವಾಗೆ
ದಿನದಲ್ಲಿ ಮಲಗಿ ಎಚ್ಚತ್ತೋಪಾದಿಯಂತೆ
ನೆನಪಾಗಿ ಇಪ್ಪಾವು ಮೊದಲು ಜ್ಞಾನ
ಮನದಲ್ಲಿ ಮರಿಯದು ಏಸು ಕಾಲವಾಗೆ
ಘನ ಜ್ಞಾನಿಗಳ ಪುಣ್ಯವಿಂತು ಕಾಣೋ
ಎನಗವರ ದಯದಿಂದ ಫಲಿಸಿ ಇಪ್ಪದು ಇದಕೆ
ಅನಮಾನ ಸಲ್ಲದು ನೋಳ್ಪರಿಗೆ
ವನಜನಾಭನೆ ಮುಖ್ಯ ಕಾರಣನಾಗಿಪ್ಪ
ಮುನಿ ದೇವತಿಗಳಿಗೆ ಸರ್ವರಿಗೇ
ಗುಣವೆ ತಂದಿತ್ತು ಉತ್ತಮರ ದ್ವಾರದಿಂದ
ಅನುದಿನದಿ ಉದ್ಧಾರಮಾಡುವನು
ಜನಕೆ ಸಂಶಯ ಸಲ್ಲ ಜ್ಞಾನಿಗಳಿಗೆ ಈಗ
ಜನುಮವಿಲ್ಲವೆಂದು ನುಡಿಯದಿರೀ
ಎಣಿಕೆ ಇಲ್ಲದೆ ವೇದ ಶಾಸ್ತ್ರ ಪುರಾಣದಲ್ಲಿ
ಘನವಾಗಿ ಪೇಳಿದ ಪ್ರಮೇಯವಲ್ಲ
ಕೊನಿಯಗಂಡವರಾರು ಎಲ್ಲಿ ಇಲ್ಲವೆಂಬೊ
ದಣುಕೊಂಡು ಮಾತುಗಳು ನುಡಿಯಾಲ್ಯಾಕೆ
ಅನಿಮಿತ್ಯ ಬಂಧು ಸಿರಿ ವಿಜಯ ವಿಠ್ಠಲರೇಯ
ಗಿನಗೆ ತಾನೆ ವ್ಯಕ್ತನಾಗಿ ಭಕ್ತರನ ಪೊರೆವಾ ೩
ಅಟ್ಟತಾಳ
ಮಧ್ವವಿಜಯದಲ್ಲಿ ಪಂಡಿತಾಚಾರ್ಯರು
ಮಧ್ವರಾಯಗೆ ಉಪದೇಶ ಮಾಡಿದ ಪ್ರ
ಸಿದ್ಧ ಅಚ್ಯುತ ಪ್ರೇಕ್ಷಾತಮುನಿ ಧರ್ಮಜ
ಅಧ್ವರ ಮಾಡಲು ದ್ವಾಪರಯುಗದಲ್ಲಿ
ಪದ್ಧತಿಯಿಂದಲಿ ದ್ರೌಪದಿ ಕೈಯಿಂದ
ಮೆದ್ದನ್ನದಿಂದಲಿ ಅಧಿಕಾರಿಗಳಾಗಿ
ಮಧ್ವರಾಯರಿಗೆ ಗುರುಗಳಾದರೆಂದು
ಸಿದ್ಧ ಪ್ರಮೇಯವನ್ನು ಪೇಳಿದ್ದದೆ ಸತ್ಯ
[ಈ][ಧ]ರೆ ಯೊಳಗೆ ಜ್ಞಾನಿಗಳು ಸಂತತವಾಗಿ
ಉದ್ಭವರಾಗಿ ಸಂಚರಿಸುವುದಕೆ ನಿ
ಬದ್ಧವಾಗಿ ಕೇಳಿ ಪಂಡಿತಾಚಾರ್ಯರ
ಮುದುವಾಕ್ಯವಿದು ನಿಮಗೆ ಸಾಕ್ಷಿ
ಶುದ್ಧ ಮೂರುತಿ ನಮ್ಮ ವಿಜಯ ವಿಠಲನ್ನ
ಪೊದ್ದಿದ್ದ ದಾಸರ ಜ್ಞಾನವೆ ಕೆಡಗೊಡ
ಆದಿತಾಳ
ಕಲಿಯುಗದಲ್ಲಿ ದೇವಾದಿಗಳ ಜನ್ಮ
ನೆಲಿಯಾಗಿಪ್ಪದು ಜ್ಞಾನಿಗಳು ಒಂದೇ
ತಿಳುಪಿನ ತರುವಾಯ ಅನುಸರಿಸಲಿಬೇಕು
ಹಲವು ಬಗೆಯಲಿಂದ ಪೇಳಿದ ವಚನವು
ಛಲಮಾಡಿದರಿಂದ ಲಾಭ ಬರುವುದೇನು
ಖಳರು ಕಲಿಯುಗದಲ್ಲಿ ಪುಟ್ಟುವರೆಂದು ಪ್ರ
ಬಲವಾಕ್ಯ ಇರುತಿರೆ ಅವರ ಪ್ರತಿಕಕ್ಷಿ
ಬಲವಂತ ಮುಕ್ತರು ಪುಟ್ಟದೆ ಇಪ್ಪರೇ
ಪ್ರಳಂಇಇವಿದೂರ ನಮ್ಮ ವಿಜಯ ವಿಠ್ಠಲನ್ನ
ಒಲಿಸಿದವರ ಕೃಪೆ ಎನ್ನ ಮೇಲೆ ಉಂಟು ೫
ಜತೆ
ಆವಾವುದಾದರು ತಪ್ಪೆ ಲೇಶಭಂಗವಿಲ್ಲ
ಶ್ರೀ ವಿಜಯ ವಿಠ್ಠಲನ್ನ ನಾಮಾ ಬಿಟ್ಟರೆ ಭಂಗಾ ೬

ನೈಚ್ಯಾನುಸಂಧಾನ ಸಾಧಕರ ಒಂದು ಲಕ್ಷಣವಾಗಿರುತ್ತದೆ.


ಧ್ರ್ರುವತಾಳ
ಅಪರಾಧ ಎನಗುಂಟೆ ಅಪರಮಿತ ಕಾಲಕ್ಕೆ
ವಿಪುಳದೊಳಗೆ ಪುಟ್ಟಿ ಅಪವಾದದಲ್ಲಿ ಇದೆ
ಕಪಟ ನಾಟಕ ನಿನ್ನ ಚಪಲತನಕೆ ವರ್ಣಿಪನೆ ಸದಾ
ಕೃಪಣ ಮಾನವ ನಾನು ಸ್ವಪುನಾದಿಯಲಿ ನೀನೆ
ವಿಪುಲ ವ್ಯಾಪುತನಾಗಿ ಗುಪತದೊಳಗೆ ಎನ್ನಲ್ಲಿ
ಸಫಲ ದುಷ್ಕವರ್ಇಗಳು ಕ್ಲಿಪುತವಾಗಿಪ್ಪದೆ
ಸಮೀಪದಲ್ಲಿ ಇದ್ದು ನೀನುಣಿಪ ಮಹಾ ಮಾಯಾಕಾರ
ಶಪಥವ ದೈವನೆ ಕೃಪೆ ಮಾಳ್ವೆನೆಂಬೊ ನಿನ್ನ
ಉಪಕಾರ ಎನಗೇನು ಅಪಶಬ್ದ ಮೊದಲಾದ
ಅಪರಾಧಗಳು ನಾನುಪಚರಿಸುಬಲ್ಲೆನೆ
ರಿಪುಗಳು ಬಿಡದಿರೆ ಜಪತಪಗಳು ಮಾಡಿ
ಸುಪಥವ ಪಿಡಿದು ಸಂತಪುತವ ನೀಗಿ ಈವಾ
ರ್ಚಿಪಲರಿಯಾ ಎಂದು ಎನಗೆ ವಿಪರೀತ ಜ್ಞಾನ ತೋರಿ
ಕೃಪೆ ಮಾಡದಿಪ್ಪುದೇನು ನೃಪತಿ ತಾನಾಗಿ ಕುಳಿತು
ಕುಪಿತವಾದಿರೆದುರು ಮಾಡುವವರಾರಯ್ಯ
ತಪನ ಕೋಟಿ ಪ್ರಕಾಶ ವಿಜಯ ವಿಠ್ಠಲ ನೀ
ನಪರಾಧ ಮಾಡಿಸೆ ನಾನಪರಾಧದವನಯ್ಯಾ ೧
ಮಟ್ಟತಾಳ
ಎನ್ನ ಉನ್ನತವೇನೊ ಎನ್ನ ಸ್ಥೂಲವೇನು
ಎನ್ನಾಕಾರವೇನು ಎನ್ನ ಜ್ಞಾನವೇನು
ಎನ್ನ ಸ್ವತಂತ್ರವೇನೊ ಎನ್ನ ವ್ಯಾಪಾರವೇನು
ಎನ್ನ ಸ್ವಾಮಿತ್ವವೇನೊ
ಎನ್ನ ಪ್ರೇರಣೆ ಏನೊ
ಎನ್ನ ಸಾಧನವೇನೊ
ಎನ್ನ ಪುಣ್ಯವೇನೊ
ಎನ್ನ ಪಾಪವೇನೊ
ಎನ್ನಿಂದಾಗುವ
ಅನ್ಯ ಕಾರ್ಯಗಳೇನು ಎನ್ನಿಸುವ ದೈವ
ಘನ್ನದೊಳಗೆ ಘನವೆ ಅಣೋರಣಿಗಣುವೆ
ನಿನ್ನ ಚಿನ್ನಾಟಕ್ಕೆ ಅನಂತ ನಮೊ ನಮೊ
ಸನ್ಮುನಿಗಳ ಒಡಿಯಾ ವಿಜಯ ವಿಠ್ಠಲರೇಯ
ಎನ್ನ ಮೇಲಲ್ಲದೆ ನಿನ್ನ ಧೊರೆತನವು ೨
ತ್ರಿವಿಡಿತಾಳ
ಆದದ್ದೆಲ್ಲಾಗಲಿ ಶ್ರೀಧರೇಶನೆ ಅಪರಾಧಗಳೆಲ್ಲ ನಾ ಪತಿಕರಿಸುವೆ
ಆದಿ ಇಂದಲಿ ಎನಗೆ ಆಧಾರದಲಿ ಒಂದು
ನೀ ದಯದಲಿ ಆಧಿಷ್ಠಾನ ತೋರೊ
ಕೂದಲಿಗಿಂತ ಸಣ್ಣಾದ ಈ ರೂಪಕ್ಕೆ
ಈ ದೇಹಲೇಪನವಾದುದೆಂತೊ
ಸಾಧನ ಸಂಪತ್ತು ನೀನೊ ನಿನಗೆ ಒಬ್ಬ
ಬೋಧಕರ್ತರು ಉಂಟೆ ಕೇಳೊ ದೇವ
ಮೇದಿನಿಯೊಳು ನಾನೆ ಸ್ವಾತಂತ್ರನೆಂಬಿಯಾ
ಗಾದೆ ಉಂಟದಕ್ಕೊಂದು ಲಾಲಿಸಯ್ಯಾ
ಕಾದ ಬರಲು ಮಹಾರುದ್ರನ್ನ ಸ್ತಂಭದೋ
ಪಾದಿಯಲ್ಲಿ ನಿಲಿಸಿದೆ ಸುರರು ನೋಡೆ
ಆ ಧೀರವಂತಗೆ ನಿನ್ನಿಂದಲಾ ತೆರ
ನಾದ ಮೇಲೆ ಎನ್ನ ಪಾಡೇನಯ್ಯಾ
ಶೋಧಿಸಿ ನೋಡಲು ಎನಗೊಂದು ಎಳ್ಳಿನಿ
ತಾದರು ಸ್ವಾತಂತ್ರ ಎಲ್ಲಿ ಕಾಣೆ
ಬಾಧೆ ಪಡುವುದಕ್ಕೆ ಕುಶ್ಚಿತ ಸ್ವಾತಂತ್ರ
ಐದಿಸಿ ಕರ್ಮವ ಉಣಿಸಿವೆಲ್ಲಾ
ವೇದ ವಿನುತರಂಗ ವಿಜಯ ವಿಠ್ಠಲ ಜಗದಾ
ಭೇದನೆ ನಿನ್ನ ವಿನೋದಕ್ಕೆ ಅಂಜುವೆ ೩
ಅಟ್ಟತಾಳ
ಹರಿವೊ ಹೊಳಿಯೊಳು ಹರಿಗೋಲು ಇರಲದು
ನರನಿಲ್ಲದಿರೆ ತಾನೆ ಬರುವುದೆ ತೀರಕ್ಕೆ
ಪಿರಿದಾಗಿ ಪೇಳು ಉತ್ತರಕ್ಕೆ ಯಥಾರ್ಥವ
ಹರಿನಾಮಾಸಕ್ತರಿಗಿದು ಸರಿ ಬಂದುದು ಕಾಣೊ
ಕರಕರೆ ಭವವೆಂಬೊ ಹರಿವ ಹೆದ್ದೊರೆ ಘನ
ಧರೆ ಸುಳಿಯೊಳು ಬಿದ್ದು ಹರಿದು ಪೋಗುವಂಗೆ
ಕರುಣಿ ನೀನಲ್ಲಾದುತ್ತರಿಸುವರಿನ್ನುಂಟೆ
ಸರಿಸ ದೂರದಲಿ ಬಾಹಿರ ಅಂತರಂಗ ಖೇ
ಚರ ಧರಣಿಯಲ್ಲಿ ಪರಿವೇಷ್ಟಾ ಎಡ ಬಲ
ಧರಿಸಿ ಅಧಾರನಾಗಿ ಇರುಳು ಹಗಲು ಈ
ಪರಿ ವಿಶ್ವವ್ಯಾಪಿಸಿ ಸರ್ವೋತ್ತಮನೆಂಬೊ
ಬಿರಿದು ಧರಿಸಿಕೊಂಡು ಪರಮೇಷ್ಠಿಯಾದ್ಯರ
ಪೊರೆಯುತ್ತಲಿಪ್ಪನೆ ನರಗೆ ಒಳಗೆ ಸೂ
ತ್ತರ ಮೀಟಿ ಪೋಗುವ ಭರವೆ ಕಲ್ಪಿಗೆ
ಅರಹು ಮಾಡಲು ಸಂಚರಿಸುವೆನಾನಯ್ಯಾ
ಅರಸು ಕುಳಿತು ಸಾಸಿರ ತಪ್ಪು ಎಂದರು
ಪರಿಹಾರವೆಂದು ಉತ್ತರ ಪೇಳುವನಾರು
ಅರಸಿ ಇಂದಿರೆಯ ಅರಸೆ ಬಲವಂತ
ಅರಸೆ ವಿಜಯ ವಿಠ್ಠಲರಸೆ ಲೋಕದರಸೆ ೪
ಆದಿತಾಳ
ಸಾರುವೆನು ದೈನದಲ್ಲಿ ಸಾರಿದವರ ಮನೋಹಂಸ
ಧಾರುಣಿಯೊಳಗೆ ಜಾರ ಚೋರ ಹಿಂಸನಾಗಿರಲು
ಪಾರತಂತ್ರನಾದ ಕಂಸಾರಿ ನವನೀತ ಚೋರ
ಜಾರ ಶಿರೋಮಣಿ ಎಂದು ದೂರಿದರೆ
ದುರಿತ ಪರಿಹಾರವೆಂದು ಶ್ರುತಿ ಸ್ರ‍ಮತಿ
ಮೇರೆದಪ್ಪಿ ಪೇಳುತಿವೆ ಕಾರಣ ಕರ್ತ ನೀನಹುದೊ
ಈರೈದು ಇಂದ್ರಿಯ ಮನ ಶಾರೀರ ರೋಮರೋಮ
ದಾರಾಸುತಾದಿ ಪರಿವಾರ ಸಮೇತ ನೀನೆ
ಪೂರಣವಾಗಿ ನಿತ್ಯ ಪ್ರೇರಕನಾಗಿ ವ್ಯಾ
ಪಾರವನ್ನು ಮಾಳ್ಪದು ಅರಿದು ಅನಾದಿಯಿಂದ
ತೋರುವುದು ಒಂದು ಕಾಲ ತಾರಕಣ್ಯ ಸ್ವತಂತ್ರ
ಕಾರಣವೆನಿಸಿ ವಿಚಾರದಿಂದ ಕೊರಳು ಕಟ್ಟಿ
ಊರೊಳಗೆ ಇಟ್ಟು ಮಧೋ(ಧು) ಕಾರಕ್ಕೆ ನಿರೂಪ ಇತ್ತು
ವಾರವಾರಕೆ ಹಿಡಿಸಿ ನೂರಾರು ಕೋಟಿ ಬೇಡುವಂತೆ
ಗಾರುಡವ ಮಾಡಿ ಇಂಥ ಘೋರದೊಳಗೆನ್ನ ಪೊಗಿಸಿ
ಹಾರುವ ನೊಣದ ಮೇಲೆ ವಾರಣಯಿಟ್ಟಂತೆ ಮಾಳ್ಪೆ
ದೂರದಿಂದ ನಮಿಸುವೆ ಶ್ರೀರಮಣ ಎನಗಾಗಿ
ಬೇರೆ ಒಂದು ಕರ್ಮವನ್ನು ಆರಿಸಿಕೊಂಡಿಪ್ಪಿಯೇ ನೊ
ಮೂರು ಗುಣದಲ್ಲಿ ನೀನೆ ಸೇರಿಸಿಕೊಂಡು ಯಾತಕ್ಕಿನ್ನು
ಬಾರದವನ ಕರ್ಮಿ ಎಂದು ದೂರಿದರೆ ಬಪ್ಪದೇನು
ಮೀರಿದವಗೆ ಮಲತು ಎದುರಿಗೆ ನಿಂದವನಲ್ಲಾ
ಆರತನಾದವನಾ ಸಂಸಾರದಲ್ಲಿ ಪೊಗಿಸುವರೆ
ಹಾರವಲ್ಲ ಎನಗಿದು ವಿಜಯವಿಠ್ಠಲ ಉ
ದ್ದಾರ ಮಾಡು ಮಾಡದಿರು ಕೀರುತಿ ನಿನ್ನದಯ್ಯಾ &ಟಿ

ಭಕ್ತರು ಎಂದರೆ ಲೌಕಿಕವಾದ


ಧ್ರುವ ತಾಳ
ಅಪೇಕ್ಷೆ ಎನ್ನದಿದೆ ಮತ್ತೊಂದಾವುದು ಇಲ್ಲ !
ಅಪಾರ ಗುಣನಿಧಿ ಅವಧರಿಸೊ !
ಭೂಪಾಲನಾಗುವುದು ಎಂದಿಗೆಂದಿಗೆ ಬಲ್ಲೆ !
ಕೌಪೀನವಿರಲಿ ಎನಗೆ ಸಂತತದಲ್ಲಿ ಸ್ವಾಮಿ !
ಕೋಪಾವೆ ಬೇರರಸಿ ಕಿತ್ತ ಕಡೆಗೆ ಮಾಡು !
ಕಾಪಾಡು ಇದೆ ನಿನ್ನ ಬೇಡಿಕೊಂಬೆ !
ತಾಪತ್ರಯಂಗಳು ತಾಳುವಂತೆ ಪ್ರೇರಿಸಿ !
ಆಪತ್ತು ಕಾಲಕ್ಕೆ ಧೈರ್ಯವೀಯೊ !
ಅಪವರ್ಗವೆ ಒಲ್ಲೆ ಅನುದಿನ ನಿನ್ನ ನಖ !
ದೀಪದ ಬೆಳಗಿನಲ್ಲಿ ಲೋಲ್ಯಾಲಿಡಿಸೊ !
ಶ್ರೀ ಪರಮಾತ್ಮನೆ ನಿನ್ನಲ್ಲಿ ವಿಶ್ವಾಸ !
ವಾ ಪುಟ್ಟುವಂತೆ ಸದಮತಿ ಪಾಲಿಸೊ !
ಪಾಪ ಮಾರ್ಗಕ್ಕೆ ಎನ್ನ ಕೆಡಹಲಾಗದು ಚನ್ನ !
ಉಪಾಯ ನಿನ್ನದೊಂದೆ ನಾಮ ಗತಿಗೆ !
ಗೋಪಾಲ ಕೃಷ್ಣ ನಮ್ಮ ವಿಜಯ ವಿಠ್ಠಲ ನಾನಾ !
ರೂಪನೆ ಸರ್ವದ ಮನಸು ನಿನ್ನದಾಗಲಿ ೧
ಮಟ್ಟ ತಾಳ
ನಿನ್ನ ದಾಸರು ಪೊದ್ದವಸನ ಎನಗಾಗಲಿ !
ನಿನ್ನ ದಾಸರು ಉಂಡ ಎಂಜಲು ಎನಗಾಗಲಿ !
ನಿನ್ನ ದಾಸರ ಪಾದೋದಕವೆ ಎನಗಾಗಲಿ !
ನಿನ್ನ ದಾಸರು ಇಟ್ಟಾಭರಣವೆ ಎನಗಾಗಲಿ !
ನಿನ್ನ ದಾಸರು ಚರಿಸಿದ ಉತ್ತಮ ಭೂಮಿ !
ಪುಣ್ಯ ನಿಧಿಗಳೆಲ್ಲ ಎನಗಾಗಲಿ ದೇವ !
ನಿನ್ನ ದಾಸರು ಪೇಳಿದ್ದದೆ ಮಹ ಉಪದೇಶ !
ನಿನ್ನ ದಾಸರು ಕೇಳಿದ್ದದೆ ಎನಗೆ ಹರುಷ !
ನಿನ್ನ ದಾಸರ ಮಾತು ಸಕಲ ಶ್ರುತಿ ವಚನ !
ನಿನ್ನ ದಾಸರ ಲೀಲೆ ಎನಗೆ ಪುಷ್ಪದ ಮಾಲೆ !
ನಿನ್ನ ದಾಸರ ಕರುಣಾ ಎನಗೆ ವಜ್ರ ಕವಚ !
ನಿನ್ನ ದಾಸರ ಸಂದರುಶನವೆ ಲಾಭ !
ನಿನ್ನ ದಾಸರು ಕೀರ್ತಿ ಎನಗೆ ಪರಮ ಪೂರ್ತಿ !
ನಿನ್ನ ದಾಸರ ಸಂಗ ಮಹದುರಿತ ಭಂಗ !
ನಿನ್ನ ಭಕುತಿಗಿಂತ ನಿನ್ನ ದಾಸರ ಪಾದ !
ವನ್ನ ಓದಲಿ ಭಕುತಿ ಎನ್ನಗದು ಬಲು ಪ್ರೀತಿ !
ಮನ್ನಿಸು ಮೋಹನ್ನ ವಿಜಯ ವಿಠ್ಠಲ ಚನ್ನ !
ಇನ್ನು ಇದಲ್ಲದೆ ಪ್ರತಿ ಮಾತುಗಳಿಲ್ಲ ೨
ತ್ರಿವಿಡಿ ತಾಳ
ಅನುಭವವಾದ ಭಕುತಿ ಅನುಭವವಾದ ಜ್ಞಾನ !
ಅನುಭವವಾದ ವಿರಕುತಿ ಇತ್ತು !
ಅನುದಿನದಲಿ ನಿನ್ನ ದಾಸರ ದಾಸರ !
ಅನುಗ್ರಹದಲಿ ಇದ್ದು ಇರಳು ಹಗಲು !
ಅನುಚಿತ ಕರ್ಮದ ಹೊಳೆತ ಮರೆದು ಪದ !
ಅನುಮಾನ ತೀರ್ಥರ ಮತದವರ !
ಅನುಸರಿಸಿ ಪಂಚ ಭೇದವೆ ತಿಳಿದು ಆವಾಗ !
ಅನುಗುಣ್ಯನಾಗಿ ಸುಮಾರ್ಗವಿಡಿದು !
ಅನುಪತ್ಯ ಇದರೊಳು ಒಂದಕ್ಕಾದರೊ ಎನಗೆ !
ಅನುಮಾನವಾಗದಂತೀಯೊ ಮನಸು !
ಅನುಪಮ ಚರಿತ ಶ್ರೀ ವಿಜಯ ವಿಠ್ಠಲರೇಯ !
ಅನುಜನಾಗಿ ಸುರಪತಿಯ ಕಾಯಿದ ದೇವ ೩
ಅಟ್ಟತಾಳ
ಕರ ನಯನ ಕರ್ನ ಚರಣ ವದನನಾಸ !
ಮರಿಯಾದ ನಾಲಿಗೆ ತರುವಾಯ ನಾನಾ !
ಪರಿ ಪರಿ ಇಂದ್ರಿಯ ಚರಿಸು ವ್ಯಾಪಾರಾ !
ಪರಿ ಶುದ್ಧವಾಗಿ ಅಂತರ ಬಾಹಿರವೆಲ್ಲ !
ಹರಿ ನಿನ್ನ ಪರವಾಗಿ ಇರಲಿ ಕೊಂಕಾಗದೆ !
ದುರುಳ ತರುಳ ನಾನಾದರು ನೋಡಿ ದಯದಿಂದ !
ಕರದು ನಿನ್ನವರೊಳು ಇರತಕ್ಕವನ ಮಾಡು !
ಕರುಣಾಕರ ಮೂರ್ತಿ ವಿಜಯ ವಿಠ್ಠಲರೇಯ !
ಚಿರಕಾಲದಲ್ಲಿ ಇಂಥ ವರವನ್ನ ಪಾಲಿಸು ೪
ಆದಿತಾಳ
ಶಿಷ್ಟರ ಪಾಲಿಪುದು ದುಷ್ಟರ ಬಡಿವದು !
ಕಷ್ಟವಾದರು ಸಂತುಷ್ಟವಾಗಲಿ ಎನಗೆ !
ಎಷ್ಟು ಭಯ ಬಂದರು ನಿಷ್ಠೆ ನಿನ್ನಲ್ಲಿ ಮನ !
ಮುಟ್ಟಿದೊರಕಲಿ ಅರಿಷ್ಟ ದೂರಾಗಲಿ !
ಇಷ್ಟಾದ ತರುವಾಯ ಪಟ್ಟುವದಿದ್ದರೆ !
ಭ್ರಷ್ಟಮಿಥ್ಯ ಮತದವರ !
ಹೊಟ್ಟೆಯೊಳಗಿಡದಿರು !
ಕಷ್ಟದೊಳಗೆ ಎನ್ನ ಇಟ್ಟರೆ ಅದೆ ನಿತ್ಯ !
ಮೃಷ್ಟಾನ್ನ ಉಂಡಂತೆ !
ಹೃಷ್ಟ ತೋರುವುದಯ್ಯ !
ಸೃಷ್ಟಿಯೊಳಗೆ ನಾನು ಎಷ್ಟು ಕಾಲ ಉಳ್ಳರು !
ಮೆಟ್ಟಿಸದಿರು ಪಾಪದ ಬಟ್ಟಿ ಭಂಗವನು !
ಕೃಷ್ಣ ಮೂರುತಿ ವಿಜಯ ವಿಠಲ ವಿಶ್ವರೂಪ !
ಇಷ್ಟಾರ್ಥ ಕೊಡು ಅದೃಷ್ಟ ನಾಮಕ ಹರಿ ೫
ಜತೆ
ಮನೊ ವಾಚಾ ಕಾಯದಲ್ಲಿ ಕೃಷ್ಣನೆಂದೆಂಬೊ !
ನೆನವೆ ಎನಗೆ ಇರಲಿ ವಿಜಯ ವಿಠ್ಠಲರೇಯ ||೬||

ದ್ವಂದ್ವ ಕರ್ಮ ಸಮರ್ಪಣೆಯ ಬಗ್ಗೆ ಒತ್ತು

೧೧
ಧ್ರುವತಾಳ
ಅಪ್ಪಾ ಬಿನ್ನಹ ಕೇಳೊ ಒಪ್ಪಾಚಾರದಿಂದಲಿ
ಒಪ್ಪಿ ನಿನಗೆ ನಾನಾ ಪ್ರಕಾರದಿಂದ ನಾನರ್ಪಿಸಿದ ಫಲವ
ಕಪ್ಪು ಕಲುಷವಿರೆ ತಪ್ಪದು ನಿನಗಜನಪ್ಪನೆ ಕೈಕೊಳ್ಳೊ ತಿ
ಮ್ಮಪ್ಪಾ ಎನ್ನ ಮುಪ್ಪುರದೊಳು ನಿನ
ಗರ್ಪಿಸಿದ ಕರ್ಮ ಸುಫಲವೆ ನಿಜ
ತಿಪ್ಪೆ ಮೇಲೆ ಶರ್ಕರ ತುಪ್ಪ ಉಂಡಂತೆ
ಇಪ್ಪ ದೈವಂಗಳು ಒಪ್ಪದಿಂದಲಿ ಭಜಿಸಿ ಸು
ಕೃಪೆಯಾಗದೆ ಪುಣ್ಯನಿಪ್ಪ ತಾನಾಗೋದು
ಸಪ್ಪಡಿ ಮೆಲುವನ ಉಪ್ಪು ಕೇಳಿದಂತೆ
ಅಪ್ಪಗೈವ ಬರಿದೆ ಫಲ ಹೊಪ್ಪದು ಪುಣ್ಯಬಾರದಲೆ
ದರ್ಪದನಾಮ ಸಿರಿವಿಜಯ ವಿಠಲ ಕೇಳೊ ೧
ಮಟ್ಟತಾಳ
ಕಡುನಹುಷನ ಋಷಿಗಳು ಬಿಡದಲಂದಣ ಪೊತ್ತು
ನಡೆಯುತಲಿರೆ ಒಂದು ಅಡಿ ಪಲ್ಲಟವಾಗೆ
ನುಡಿದು ಕೋಪದಲ್ಲಿ ನಡೆ ಎಂದೆನಲವನ
ಒಡಿಯನಾದವ ಮುನಿದು ತೊಡಕಿಕ್ಕಿ ನೋಡೆ
ಮಿಡುಕಿದನಾ ರಾಯನೆ ಮನದಲ್ಲಿ ಚಿಂತಿಸಿ
ಒಡಿಯ ನಿನ್ನನು ಹೃದಯದೆಡಿ ನಿಂದಿರಿಸಿ
ಅಡಿಗಳ ಧೇನಿಸಲು ಒಡನೆ ಕುಳ್ಳಿರಿ ಒಂದು
ನುಡಿ ತಪ್ಪಿದರೆನ್ನ ಕಡೆಯಲಿ ನೋಡದಲೆ
ಬಿಡುವುದುಚಿತವೇನೊ ಬಿಡ ಸುಖಸ್ತಾ
ಮೃಡ ಸಖಸ್ತವ ಪ್ರೀಯ ವಿಜಯವಿಠಲರೇಯ
ಬಡವರಾಧಾರಿ ಎಂದು ಬಿಡದೆ ಭಜಿಸು ಕಂಡ್ಯಾ ೨
ತ್ರಿವಿಡಿ ತಾಳ
ಬಾಲ ವತ್ಸರಾಕಳ ಮೊಲಿಯ ಸವಿದುಂಬಾಗ
ಪಾಲು ಬರಬೇಕೆಂದು ಮೌಳಿಯಿಂದಲಿ ತಾನು
ಮೇಲುಭಾಗಕೆ ತಿವಿದು ಪಾಲುಗುಡದೆ ಕುಡಿಯಬಿಡದೆ
ಆಲಯದಲಿ ನೋಡಿ ಪಾಲಿಸುತಿಪ್ಪದು
ಮೂಲೋಕಕೆ ನೀನು ವಾಲಯ ಸುರಧೇನು
ಆಳುಗಳ¯್ಲರು ಬಂದು ಬಾಲರಾರರು ಕಾಣೆ
ಮೇಲಾದರು ಒಂದು ಕೀಳಾದರೆ ತಪ್ಪು
ತಾಳಿಕೊಂಡಿಹರಲ್ಪರ ವಾಲಗಕೊಳಬೇಕು ಶ್ರೀ
ಲೋಲಾಮೃತವಪುಷೆ ವಿಜಯವಿಠಲ ವಿಭುವೆ
ಬಾಲನಿಂದಲಿ ಬಂದ ಜಾಲಾವೆಣಿಸದಿರೊ ೩
ಅಟ್ಟತಾಳ
ದಿನ ಪ್ರತಿದಿನ ಬಡವನು ಗಳಿಸಿ
ಹಣ ಮನಿಯೊಳಗಿಡದಲೆ
ಜನಪತಿಯಲ್ಲಿಡೆ ಮುನಿದು ಚೋರ ಬಂದು
ಮನಿ ಎಲ್ಲ ಶೋಧಿಸಿ ತೃಣ ಒಂದಾದರು ಚೋ
ರನಿಗೆ ದೊರಕುವುದೇ
ಕನಸೀಲಿ ಮನಸೀಲಿ ಮಾಡಿದ ಕರ್ಮ ಸಾ
ಧನ ಲೇಸು ಹೊಲ್ಲೆಗಳೇನಾದರಾಗಲಿ
ನಿನಗೆ ಸಮರ್ಪಿಸಿ ಅನುಮಾನವಿಲ್ಲದಲೆ
ಎನಗದು ನಿಕ್ಷೇಪ ನೆನದಾಗಲೀ ದೇವ
ಬಿನಗು ಇಂದ್ರಿಯಗಳೆನ್ನ ಮುನಿದು ಮಾಡುವುದೇನೊ
ಮನೆ ಬರಿದಲ್ಲದೆ ಧನವೆಲ್ಲಿಹುದಯ್ಯಾ
ಸನಕಾದಿ ಪಾಲಾ ಸತ್ಯ ವಿಜಯವಿಠಲ
ಕ್ಷಣಕ್ಷಣಕೆ ಸಮರ್ಪಣೆಗೊಳ್ಳೊ ಎನ್ನಿಂದಾ ೪
ಆದಿತಾಳ
ಅರ್ಪಿತದೊಳಗೆ ಶ್ರೀ ಕೃಷ್ಣಾರ್ಪಿತವೆನೆ ನಿಜವೆಂದು
ಬಪ್ಪನೊ ಕಾಳ್ಗಿಚ್ಚು ಹೊಕ್ಕು ಸರ್ಪನ ತುಳುಕುವೆನೊ
ಸರ್ಪತಲ್ಪನ ಭಜಿಸುವ ನಮ್ಮಪ್ಪಗಳಿರಾ ಪೇಳಿರದಕೆ
ಸುಪರ್ದಿ ಬಿರಿದನೆತ್ತಿ ಅಪ್ಪಳಿಸಿರನ್ಯ ವಚನ
ಸರ್ಪಿ ಸಮುದ್ರಕ್ಕೆ ಪೋಗಿ ಹಿಪ್ಪಿಯನ್ನು ಬಾಯಲಿಟ್ಟು
ಚಪ್ಪರಿಸಿ ನೆಮಲಿದಂತೆ ಅರ್ಪಿತವನ್ಯರಿಗೆ ಕೊಡಲು
ದರ್ಪಹಾ ವಿಜಯ ವಿಠಲಗರ್ಪಿತವೆನಲು ಭವ
ದರ್ಪಗುಂದುವುದು ಸರ್ವ ಹೆಪ್ಪು ಹಾಕಿದಂತೆ ಸಾಧನ ೫
ಜತೆ
ಮಂತ್ರ ತಂತ್ರವಾವ ಪರಿಯಲರ್ಚಿಸಿದ ಫಲ
ಕಾಂತಾ ಶ್ರೀ ವಿಜಯ ವಿಠಲಗೆ ಸಮರ್ಪಿಸು ೬

ಮಾಡಲೇಬೇಕಾದ ಕರ್ತವ್ಯ ಮಾಡಬಾರದ

೧೦
ಧ್ರುವತಾಳ
ಅಪ್ರತಿಹತ ದ್ರವ್ಯಗತವಾಗುವುದಕ್ಕೆ ಬಾ
ಲ ಪ್ರಾಯ ವೃದ್ದ
ನಾಗಿ ಬಲು ಜನ್ಮವ
ವಿಪ್ರವಾಸನಾಗಿ ಯತಿ ತೀರ್ಥವಾಚರಿಸಿ
ಕ್ಷಿಪ್ರಗತಿಯಿಂದ ನಾನಾಯಾಗ ಯೋಗ
ವಿಪ್ರರೋಡನೆ ರಚಿಸಿ ಅನೇಕ ದಾನಂಗಳ
ದ್ಯು ಪೃಥಿವಿ ಪೊಗುಳುವಂತೆ ಮಾಡಿದರೂ
ಅಪ್ರಧಾನವಲ್ಲದೆ ಕರ್ಮದ ಸ್ವಾತಂತ್ರ
ಅ ಪ್ರಬುದ್ದರಿಗೆ ಇದು ಮೆಚ್ಚಕಾಣೊ
ಅಪ್ರೀಯವಾಗುವುದು ತಾತ್ವಿಕರಿಂದ ಹರಿಗೆ
ಅಪ್ರೀಯನಾಗುವ ಅಲ್ಪಪುಣ್ಯ
ಅಪ್ರಮೋದದಿಂದ ಉಂಡು ತೀರಿಸಿ ನಾ
ನಾ ಪ್ರಕಾರ ದೇಹವ ಧರಿಸುವರು
ಈ ಪ್ರಕರಣ ಬಿಟ್ಟು ಜ್ಞಾನವ ಸಂಪಾದಿಸಿ
ಅ ಪ್ರಮೇಯ ಹರಿಯ ರೂಪಂಗಳ
ಸುಪ್ರಮಾಣದಲ್ಲಿ ತಿಳಿದು ಕೊಂಡಾಡಿ ನಿತ್ಯ
ಸ್ವ ಪ್ರಕಾಶ ಗುಣದಿಂದ ಧ್ಯಾನಗೈದು
ಅ ಪ್ರಯಾಸ ಚಿತ್ತದಲಿ ಅನಂತ ಕಲ್ಪಕ್ಕೆ ನೀ
ಸುಪ್ರೀತಿ ಬಡಿಸು ಲಕುಮಿ ನಾರಾಯಣ
ಸುಪ್ರಸನ್ನನಾಗುವ ಪ್ರಸಾದತ್ರಯವಿತ್ತು
ಕ್ಷಿಪ್ರದಿಂದಲಿ ಅನುಗ್ರಹವ ಮಾಡುವ
ಶ್ರೀ ಪ್ರಕೃತಿನಾಥ ವಿಜಯ ವಿಠ್ಠಲರೇಯ
ನೀ ಪ್ರೇರಕನೆನೆ ಭವಸಾಗರವ ದಾಟಿಸುವಾ ೧
ಮಟ್ಟತಾಳ
ತಿರೋಹಿತ ಅತಿರೋಹಿತ ವಿಭೂತಿ ರೂಪಗಳು
ಪರಿಪರಿ ವಿಧ ಉಂಟು ಒಂದನಂತವಾಗಿ
ಸುರ ನರೋರುಗ ಉಳಿದ ತರುಮಿಗಿಲಾದ ಜೀ
ವರ ಮಧ್ಯದಲ್ಲಿ ಅನಾದಿ ಅವಾಂತರದಿ
ಇರುತಿಪ್ಪವು ಕೇಳಿ ಅವರವರ ತಕ್ಕಾ
ಚರಣೆಯ ಮಾಡಿಸುತ ಮೂಲಾವತಾರದಲ್ಲಿ
ಹಿರಿದಾಗಿ ಚಿಂತಿಸಿ ಜ್ಞಾನ ಪ್ರಬಲನಾಗು
ಪರಮ ಮಂಗಳ ಮೂರ್ತಿ ವಿಜಯ ವಿಠ್ಠಲನ್ನ
ನೆರೆನಂಬಿ ಸಾರಿ ಗುಣರೂಪ ಕ್ರೀಯಾ ೨
ತ್ರಿವಿಡಿ ತಾಳ
ವಿಶೇಷವಾಗಿ ತಿಳಿವ ಪ್ರಮೇಯ ಉಂಟು
ವಿಶೇಷದೊಳಗೆ ಭೂಸುರ ಜಾತಿಯಲಿ ಪುಟ್ಟಿ
ಶ್ವಸನ ಮತವನುಸರಿಸಿ ನಡೆದ ಮಾನವ ಬಿಡದೆ
ವಶಮಾಡಿಕೊಳ್ಳಬೇಕು ತತ್ವ ಗುಣಿಸಿ
ಬಿಸಜನಾಭನ ಎರಡು ಬಗೆ ವಿಭೂತಿ ರೂಪ
ಕುಶಲ ಮತಿಯಿಂದ ಧ್ಯಾನಿಸಲು ಬೇಕು
ಋಷಭ ಕಪಿಲ ಯಙ್ಞ ಹಯಗ್ರೀವ ಹಂಸ ತಾ
ಪಸ ಧರ್ಮ ಶ್ವೇತು ವೈಕುಂಠದತ್ತ
ಪ್ರಸನಿಗರ್ಭ ಸಾರ್ವಭೌಮ ನರನಾರಾಯಣ
ಶಶಿವರ್ಣ ವೈಕುಂಠ ಹರಿಕೃಷ್ಣ ಧನ್ವಂತ್ರಿ
ಋಷಿ ಸನತ್ಕುಮಾರ ಕುಮಾರ ಅಜಿತಾ ರಂ
ಜಿಸುವ ನಾರಾಯಣ ಯೋಗೇಶ್ವರ
ಬಿಸಜಾಪ್ತರೊಳಗಿಪ್ಪ ಉರುಕ್ರಮ ಬೃಹದ್ದಾನು
ಮಿಸುಣಿಪ ವಾಸವಿನಂದದ ಮಹಿದಾಸ
ದಶರಥರಾಮ ಜಮದಗ್ನಿ ರಾಮ
ವಾಸುದೇವ ಕೃಷ್ಣ ಮತ್ಯ್ಸ ಕೂರ್ಮವರಾಹಾಮಾ
ನಿಸಿ ಸಿಂಹ ವಾಮನ ಬುದ್ದಕಲಿೈ
ವಸುವತಿಯೊಳಗಿವೆ ಸಾಕ್ಷಾದ್ವಿ ಭೂತಿಗಳು
ಪೆಸರಾದ ಅತಿರೋಹಿತ ಎನಿಸೋವು
ಹಸನಾಗಿ ಕೊಂಡಾಡಿ ಈ ಮೂರ್ತಿಗಳುದ್ಭ
ವಿಸಿದ ಕಾಲ ಕರ್ಮ ಪೆತ್ತ ಜನರ
ಬೆಸೆಸೆ ಸ್ತೋತ್ರ ಮಾಡಿ ಮಹಿಮೆ ನಿತ್ಯ ವಿಚಾ
ರಸಿದ ಮಾನವನವನೆ ಮಹಾತ್ಮನೋ
ಪಶುಪ್ರಾಯನಾದರು ಜ್ಞಾನವಂತನಾಗಿ
ದಶದಿಕ್ಕಿನೊಳಗೆ ಶೋಭಿಸುತಿಹನೂ
ಶಶಿಕೋಟಿ ಲಾವಣ್ಯ ವಿಜಯ ವಿಠ್ಠಲರೇಯ
ವಿಷಯಂಗಳಿಗೆ ದೂರ ಜಗದೊಳಗಾಡಿದಾ ೩
ಅಟ್ಟತಾಳ
ಮನುತ್ರಯೋದಶರಲ್ಲಿ ಸರ್ವರಾಜರಲ್ಲಿ
ಮಿನುಗುವ ರಾಜರಾಜೇಶ್ವರಿ ವಿಭೂತಿ
ಇನಿತಾದರೊಳಗೆ ವಿಶೇಷವಾಗಿ ಮೊದಲಿಂದ
ಅನಿರುದ್ದ ಪ್ರದ್ಯುಮ್ನ ನರಪಾರ್ಥ ಬಲವೈನ್ಯಾ
ಎಣಿಕೆ ಮಾಡುವುದು ಅವತಾರದಲ್ಲಿ ಇಂತು
ಮನದಲ್ಲಿ ವಾಲಿ ಯುಧಿಷ್ಠರ ಸಾಂಬಾದಿ
ಜನರಲ್ಲಿ ಅನಿಷ್ಟ ಅಲ್ಪಮಾತ್ರ ಉಂಟು
ಚಿನುಮಯ ಮೂರುತಿ ಕಾಲನು ಸಾರದಿ
ಗಣನೆ ಪೇಳುವುದೇನು ಪಾತಾಳವಿಡಿದು ತ್ರಿ
ಗುಣ ತತ್ವ ಪರ್ಯಂತ ಸರ್ವವು ಸರ್ವದೀ
ಅನಿಮೇಷ ಮೊದಲಾದ ಚೇತನ ಶರೀರ
ತನುವು ಧರಿಸಿದ ತೃಣಾದಿಗಳಲ್ಲಿ
ವನಜನಾಭನರೂಪತತ್ತದಾಕಾರ
ಕ್ಷಣ ಬಿಡದೆ ಅಕ್ಕು ತಿರೋಹಿತ ಅತಿರೋಹಿತ
ಘನವಾಗಿ ಇಪ್ಪದು ವ್ಯಕ್ತ ಅವ್ಯಕ್ತದಲ್ಲಿ
ಫಣಿಶಾಹಿ ವಿಜಯ ವಿಠ್ಠಲರೇಯ ಅವರವರ
ತನುವು ತನುವುಗಳಂತೆ ರೂಪಗಳಾಹಾ
ಆದಿತಾಳ
ಶ್ರೀ ಹರಿ ಜಗತ್ತಿನೊಳು ಏಕಾಂತದಲ್ಲಿ ಪೊಕ್ಕು
ಸ್ನೇಹ ಭಾವನೆ ಇತ್ತು ವ್ಯಾಪಾರ ಮಾಡಿಸುವ
ದೇಹಧಾರಿ ಮನುಜಂಗೆ ಸಾಧನ ನಿರ್ಮಿಸಿದನು
ಮಾಹಾ ಸುಲಭವಾಗಿ ತೋರುತಿದೆ ನೋಡಿಪೋ
ಗ್ರಹಮೇಧಿಗೆ ಇದೆ ಪರಮ ಮುಖ್ಯ
ವಾಹುದು ಸಪ್ತಾನ್ನ ಬಗಿಯ ತಿಳಿಯಬೇಕು
ಸ್ವಾಹಾ ಸ್ವಧಾಕಾರ ಪ್ರಕರಣ ಹಂತಾನ್ನ
ಮಹಿರುಹ ತೃಣ ಒಂದೆ ನಾಲ್ಕು ಬಗೆಯು ಅನ್ನ
ದೇಹ ವಾಚ ಮನಸು ಕೊಡಲಾಗಿ ಸಂ
ದೇಹವಿಲ್ಲದೆ ಸಪ್ತಾನ್ನಾಯಿತು ಕೇಳಿ
ಸ್ವಾಹಾ ಸ್ವಧಾ ಅನ್ನದೇವ ಪಿತೃಗಳಿಗೆ
ಅಹಂತ ಅಗ್ನಿ ಅತಿಥಿ ಅಭ್ಯಾಗತ ಸರ್ವರಿಗೆ
ತಾಹ ತೃಣಾದಿಗಳು ಪಶುಜಾತಿಗೆ ಇತ್ತು
ಆಹಾರದಿಂದಲಿ ಸುಖಬಡಿಸಲು ಬೇಕು
ದೇಹಿ ಒಬ್ಬಗೆ ಸಪ್ತಾನ್ನ ದಾನದ ಪುಣ್ಯ
ಮಹತ್ತಾಗಿ ಬರುವುದು ಅಲ್ಪ ಮಾಡಿದರಾಗೆ
ಗಹನ ಇದೆ ಇದೆ ಸಮಸ್ತ ಜನರಿಂದ
ಆಹದೆಂದರೆ ಪುಣ್ಯ ಅವಗೆ ಸಿದ್ಧಿಸುವುದು

ರಿಗೆ ಅಂತರ್ನಿರೀಕ್ಷೆ ಇತ್ತು


ಧ್ರುವತಾಳ
ಅಬ್ಬಾಪಾರಿಗ ನಾನು ಜೀವ ಕೋಟಿಗೊಳೊಳು |
ಒಬ್ಬರಾಧಾರ ಕಾಣೆ ನಿನ್ನ ವಿನಹ |
ಊರ್ಬಿಯೊಳಗೆ ಎನ್ನ ಪುಟ್ಟಿಸಿ ಬೆಳಿಸಿದ್ದಕ್ಕೆ |
ತಬ್ಬಿಬ್ಬಿಯಿಲ್ಲವಯ್ಯ ಲೇಸೆನಿತು |
ಅಬ್ಬುಜನಾಭನೆ ಮುನ್ನೆ ಬಿನ್ನಹ ಕೇಳು |
ಅಬ್ಬರ ಹತ್ತದೆಂದು ಪೂರ್ವದಲ್ಲಿ |
ಉಬ್ಬುವ ಮತಿಕೂಡದೆ ದೇಹಧಾರಕನಾಗಿ|
ರಬ್ಬಳಿಗೆ ಸೊಪ್ಪು ಹಾಕಿ ಮನಸು |
ಹಬ್ಬಿಸಿ ನಿನ್ನ ಪಾದದಲಿ ರತಿಯಿಡಿಸಿ |
ಅಬ್ಬಿದ ಜ್ಞಾನದಲ್ಲಿ ಪೊರೆ ಯೆಂದೆನೂ|
ನಿಬ್ಬಡಿಯಾದ ಇಹ ಸುಖವೆ ಒಲ್ಲೆನೆಂದು |
ಅರ್ಭಕನಾಗಿ ಕೇಳಿಕೊಂಡಿರಲು |
ಹಬ್ಬಾ ಉಣಿಸಿದಂತೆ ದಿನಪ್ರತಿ ದಿನಬಿಡದೆ |
ಸಭ್ಯಾವಾಗಿ ಮಾಡಿಸುವ ಚರಿತೆ |
ಒಬ್ಬಗೆ ತೋರುತಿದೆ ಎಲೊ ಸ್ವಾಮಿ ಕುರಿವೆಂದು |
ಕೊಬ್ಬಲು ಕುರುಬಂಗೆ ಲಾಭವೆಂಬ
ಅಬ್ಬಗೆ ಹ್ಯಾಗೂ ಏನೊ ನಿರ್ಧರ ಮಾಡಲರಿಯೆ
ಉಬ್ಬಿಸಿ ಕೋಳಕ್ಕೆ ಹಾಕದಿರು
ಆರ್ಭಾಟವಾಗಿದ್ದ ಸಂಸಾರವೆಂದೆಂಬೊ
ಉಬ್ಬಲದೊಳುಬಿದ್ದು ಬಳಲಿ ತೊಳಲಿ
ಉಬ್ಬಸವನೆ ಬಿಟ್ಟು ಕಡಿಗೇಳುವನ್ನ ಮೇಲೆ
ಕಬ್ಬಿಣದ ಮೊಟ್ಟೆ ಹೇರಿದಂತೆ
ಆರ್ಭಟಿಸುವೆನಯ್ಯ ಇದರಿಂದ ಕಡೆಗಾಣೆ
ಒಬ್ಬರಾದರು ಧಡಿಗೆ ನಿಲಿಪಾರಿಲ್ಲ
ಹುಬ್ಬುಗಂಟಿಕ್ಕಿ ನೋಡಿ ಪಾಪಾತ್ಮನಿವನೆಂದು
ದಬ್ಬದಿರು ನರಕಕ್ಕೆ ಸರ್ವ ವ್ಯಾಪ್ತ
ಗಬ್ಬಿನವನಾನಲ್ಲ ದೈನ್ಯವೃತ್ತಿ ಉಳ್ಳವನೊ
ಮಬ್ಬು ಕವಿದಂತೆ ಮರೆಸದೀರು
ಅಬ್ಜಾಗರ್ಭನಯ್ಯ ವಿಜಯ ವಿಠ್ಠಲರೇಯ
ಶಬ್ದ ಗೋಚರ ಸರ್ವಸ್ವಾತಂತ್ರ ಸರ್ವೋತ್ತಮ ೧
ಮಟ್ಟತಾಳ
ಮನಸಿಗೆ ಬಂದಂತೆ ಉಣಿಸು ಸುಖವ ಬಡಿಸಿ
ಮನಸಿಜನಯ್ಯನೆ ಮನೆಗೆ ಪೋಗಿ ಪೋಗಿ
ಜನರ ನುತಿಸಿ ಅನುದಿನ ಪೊಟ್ಟಿಯ ಪೊರೆದು
ಘನತನದಲಿಯಿದ್ದನು ಇವನೆಂದು ಸಾ
ಧನ ಕಡಿಮೆಮಾಡಿ ಇನತನಯನ ಕೈಗೆ
ತನುವು ದಂಡಿಪುದಕೆ ಮೊನೆ ಮಾಡಿದರಿದು
ನಿನಗೇನು ಕೀರುತಿ ಏನೇನು ಬಾರದು ಕಾಣೊ
ಜನುಮ ರಹಿತ ನಿನ್ನನು ಮೊದಲಿಗೆ ಇದನುಬೇಡಿದವನಲ್ಲ
ಪ್ರಣತಜನ ಪಾಲ ವಿಜಯ ವಿಠ್ಠಲರೇಯ
ನಿನಗೆ ಕೇಳಿದದೇನು ಎನಗೆ ಕೊಡುವುದಿದೆ ೨
ತ್ರಿವಿಡಿ ತಾಳ
ನಿನ್ನ ಚಿತ್ತವೂ ಸ್ವಾಮಿ ನೆರೆನಂಬಿದ ನರನ
ಅನ್ಯಾಯ ಹೊರಿಸಿ ಅಪರಾಧಿಯೆಂದು
ಚೆನ್ನಲ್ಲಿ ಕಂಡಲ್ಲಿ ಬಾಯಿ ಸವಿಯವುಂಡು
ಟೊಣ್ಯನಾಗಿಪ್ಪೆನು ಠವಳಿ ಪೇಳಿ
ಪುಣ್ಯ ಕಾಲದಲಿ ಪರರ ಮನೆಯ
ಅನ್ನವ ತಿಂದು ಸೊಕ್ಕಿದವನೆಂದು ದೇವ ಕಾ
ರುಣ್ಯವ ತಪ್ಪದಿರು ಸರ್ವಕರ್ತ
ಮುನ್ನೆ ಎನ್ನಿಂದಾಡಿಸಿದ್ದು ಒಂದು ಪರಿ
ಇನ್ನು ಉಣಿಸುವುದು ರಸಭರಿತ
ನಿನ್ನದೆ ಮಹ ಕಪಟವಾಗಿ ತೋರುತಿದೆ
ಅನ್ಯಥಾ ಎನಗಾವ ದೋಷವಿಲ್ಲ
ಬಿನ್ನೈಸಿದಕಿಂತ ಅಧಿಕಾಪೇಕ್ಷಿಸದಿರೆ
ಉಣ್ಣೆಂದು ಕರ್ಮಗಳ ಉಣಿಸಬೇಕು
ಹಣ್ಣಿಗೆ ಅಡಿಗಂಟು ಜೋಳ ಬೇಡಿದರೆ ಬಹು
ಚಿನ್ನ ರಜತರತುನ ಕಟ್ಟ ಕೊಟ್ಟು
ಸಣ್ಣವರ ಕಳುಹೆ ಅವರವರ ದಾರಿದ್ರ
ಛಿನ್ನವಾಗಿ ಪೋದ ತೆರದಿ ಇಂದು
ಮನ್ನಿಸಿ ಮೃಷ್ಟಾನ್ನ ಉಣಿಸಿ ಉಭಯ ಕುಲಕೆ
ಸನ್ನುಮಾರ್ಗವ ತೋರುವ ಬಗೆ ಆವುದೊ
ಕಣ್ಣಿಲಿ ಮನಸಿನಲಿ ಇಲ್ಲದ ಉಪಚಾರ
ತನ್ನಿಂದ ತಾನೇವೆ ಪ್ರಾಪ್ತವಾಗೆ
ಎನ್ನಿಂದಾದದು ಅಲ್ಲ ಎಂದಿಗಾದರು ಕೇಳು
ನಿನ್ನ ಕ್ರೀಡಿಗೆ ಮಣಿದು ನಮಿಸುವೆನು
ಹುಣ್ಣಾಗಿರಲು ಮನುಜ ಮಾಯಿಸಿಕೊಳದಲೆ
ಖಿನ್ನ ಬಡುವನೇನೊ ಕೆದರಿಕೊಂಡು
ಅನ್ನಿಗರಲಿ ಜ್ಞಾನದಿಂದ ತಿಳಿದು ನೀನೆ
ತನ್ನಲೊಡಿವೆ ಎಂದು ತಿಳಿದರಾಗೆ
ಸನ್ನುತಿಪೆನುಯಿದೆ ಮನನ ಹತ್ತಿತು ಕಾಣೊ
ಬೆನ್ನು ಕಾಣದವನ ವಾದರವೆ
ಅನ್ನೋದಕ ಕೊಟ್ಟು ನಮ್ಮನ್ನು ಸಾಕುವ
ಘನ್ನ ಭಾರಂಗಳು ನಿನ್ನದಾಗೆ
ಅನ್ನಂತ ಕಾಲಕ್ಕೆ ಜೀವ ರಾಶಿಗಳು ಅ
ರಣ್ಯದಲ್ಲಿದ್ದರೂ ತಪ್ಪದಿದಕೊ
ಅನಾಥ ಬಂಧುವೆ ಅವರವರ ಮಗನಾಗಿ
ಉಣ್ಣಿಸದೆ ಬಿಡದು ತುತ್ತು ಮಾಡಿ
ಅನಾದಿಯಿಂದಲಿ ಲೋಕದೊಳಗೆ ಬ್ರ
ಹ್ಮಣ್ಯ ದೇವನೆಂಬೂ ಬಿರಿದುವುಂಟು
ಗಣ್ಯ ವಿಲ್ಲದೆ ವೇದ ಸ್ರ‍ಮತಿ ಶಾಸ್ತ್ರಾದಿಯಲ್ಲಿ
ನಿನ್ನ ಸ್ತುತಿಸುತಿವೆ ನಿತ್ಯದಲ್ಲಿ
ಶ್ರೀನಿಕೇತನ ಕೇಳು ನಮ್ಮ ಹಿರಿಯಾರಂದು
ರನ್ನದ ಬಡಿವಾಣವೈದನೆಂದು
ಇನ್ನಿತು ಆತನ್ನ ಸಮ್ಮಂಧಿಗಳೆಂದು
ನಿನ್ನಿಚ್ಛೆಯಲಿ ನಮಗೆ ಉಣಿಸುತಿಪ್ಪೆ
ಅನ್ನದಾತ ವಿಜಯ ವಿಠ್ಠಲರೇಯ
ಧನ್ಯರಹುದೊ ನಿನ್ನ ಭಜಿಸುವ ಭಕ್ತರು ೩
ಅಟ್ಟ ತಾಳ
ಮಾತಿಲಿ ಗುಕ್ಕಿಸಿ ನರಕದೊಳಗೆ ಹಾಕು
ಯಾತನೆ ಬಡಿಸು ಯಮಪುರದಲ್ಲಿಡು
ಭೂತ ಬೇತಾಳದ ಬಳಗಕ್ಕೆ ಒಪ್ಪಿಸು
ಪಾತಾಳಕ್ಕೆ ಅಟ್ಟು ಪತಿತರ ಕೂಡಿಸು
ಯಾತರ ಯಾತರ ಕಠಿಣಕ್ಕೆ ನೂಕಿಸು
ನಾ ತಳಮಳಗೊಳ್ಳೆ ನರಕಾರಿ ನರಕಾರಿ
ನೀ ತಂದೇ ನೀ ತಾಯಿ ನೀಸ್ವಾಮಿ ನೀ ಪ್ರೀಯ
ಭ್ರಾತನು ಬಾಂಧವ ನೀ ತಮ್ಮ ನೀ ಪುತ್ರ ನೀನೆ ಸರ್ವ ಬಗೆ
ಆತುಮದೊಳಗಿದ್ದು ಆದ್ಯಂತ ಕಾಲದಿ
ಚಾತುರ್ಯದಿಂದಲೆ ನಡಿಸುವ ಮಹಿಮನೆ
ನೀತವಲ್ಲವೊ ತಂದೆ ಧರ್ಮದಪ್ಪುವದು
ಜಾತ ರಹಿತ ನಿನ್ನ ದೊರೆತನವ ಕೇಳಿ
ಭೀತಿಗೊಂಬುವೆನಯ್ಯ ನಾ ತಡಹಲಾರೆ
ಗಾತುರ ನಿಲುವಂತೆ ಗಂಜಿಯ ಕುಡಿಸೆನ್ನ
ನೀ ತಂದು ದಿವ್ಯಾನ್ನ ಉಣಿಸುವೆ ಎನಮೇಲೆ
ಮಾತುಗಳಿಲ್ಲವು ಪದಾರ್ಥ ಮಾತುರ
ಮಾತುರ ಕಾಲವಾದರು ಸಥೆ ಎನಗಿಲ್ಲ
ಪಾತಕದವನೆಂದು ನುಡಿದಾದಲ್ಲದೆ ಕೀ
ರುತಿ ಬಾರದು ಭಕ್ತಜನವೆಲ್ಲ ಮೆಚ್ಚದು
ಖ್ಯಾತಿ ಮೂರುತಿ ನಮ್ಮ ವಿಜಯ ವಿಠ್ಠಲರೇಯ
ಯಾತಕೆ ಮಹಚಿಂತೆ ನಿನ್ನವನಾಗೆ ೪
ಆದಿತಾಳ
ಇಪ್ಪ ಅನುಭವಗಳೆಲ್ಲ ಆವಾವ ಕಾಲಕೆ ಬಿಡದೆ
ತಪ್ಪದೆಂದು ಎಂದು ಅಂದು ಪೇಳಿದ ಮಾತು
ಇಪ್ಪದು ಮನದೊಳಗದಕ್ಕೆ ಸಾಧನ ಮಾಡಿಸು
ತಪ್ಪು ಹೊರಿಸಿ ಪಾಪ ಕಟ್ಟಿ ಉಣಿಸುವ ಲೀಲೆ
ಒಪ್ಪಾರೂ ನಿನ್ನ ಭಕ್ತ ವತ್ಸಲತನಕೆಲ್ಲಿ
ಅಪಾರ ಕರ್ಮಂಗಳು ನಿನ್ನ ಸ್ಮರಣೆಯಿಂದ
ಹೊಪ್ಪಾದು ಎಂದು ಸರ್ವ ಮುನಿಮನುಗಳು ಕುಣಿದು
ಚಪ್ಪಾಳೆಯಿಕ್ಕುತ್ತ ಹಾರ್ಯಾಡುವರೈಯ್ಯ
ಕಪ್ಪು ಕಲ್ಮಷ ಉಂಟೆ ಚರಮದೇಹಿಗಳಿಗೆ
ಉಪ್ಪಮರ್ದನಾಗುವುದು ಪ್ರಾರಬ್ಧವಿದ್ದರು
ಅಪ್ಪ ನಾನೆಷ್ಟು ನನ್ನ ಕರ್ಮವೆಂದರೆ ಎಷ್ಟು
ತಪ್ಪಿಸುವದು ಭವದ ಪಾಶಬದ್ಧವನು
ಸರ್ಪತಲ್ಪ ವಿಜಯ ವಿಠ್ಠಲ ನಿನ್ನ ಮನಕೆ
ಬಪ್ಪದೆ ಮಾಡುವದು ನಿನ್ನ ದಯಕ್ಕೆ ಪಾತ್ರ ೫
ಜತೆ
ಹೃದಯದೊಳಗೆ ನಿಂದು ಇಂತಾಡುವುದೇನು
ವಿಧಿ ನಿಷೇಧ ಉಂಟೆ ವಿಜಯ ವಿಠ್ಠಲ ಎನಗೆ ೬

ಭಗವದ್ದರ್ಶನ ಲಾಭವಾಗಬೇಕಾದರೆ

೧೨
ಧ್ರುವತಾಳ
ಅಭಯ ಕೊಡುವುದಿಂದು ದೀನ ಮಾನವ ಬಂಧು
ಪ್ರಭುವೆ ಪ್ರಸನ್ನಮೂರ್ತಿ ನಿನ್ನ ಕೀರ್ತಿ
ಪ್ರಭೆಯ ನಾನಾ ಬಗೆಯಿಂದ ಕೊಂಡಾಡುತ್ತ
ವಿಬುಧಾದಿ ಗಣವೆಲ್ಲ ತಲೆದೂಗುತ್ತ
ರಭ ಸಮಿಗೆ ಪೇಳಿ ಹರಹಿವ ಮಹಿಮೆಯಾ
ನಭ ಭೂಮಿ ಪಾತಾಳ ತುಂಬಿತಿದೆಕೊ
ಶುಭವಾವುದಯ್ಯಾ ನಿನ್ನ ನಾಮದಿಂದಧಿಕ ಸು
ಲಭ ವಿದ್ಯಾ ಕಾಣೆನೊ ವಿಚಾರಿಸೆ
ತ್ರಿಭುವನದೊಳು ನಿನ್ನ ಪಾದ ಪೊಂದಿದವ ವೃ
ಷಭನೆನಿಸಿ ಕೊಂಬುವ ಪ್ರತಿ ಕಾಲಕ್ಕೂ
ಗಭೀರ ಸಂಸಾರದಿಂದ ಪಾರಾಗುವುದಕ್ಕೆ ನಾ
ನಭಿವಂದಿಸುವೆನಯ್ಯಾ ಮತ್ತಾರ ಪೂಜಿ ಕಾಣೆ
ಇಭರಾಜ ಮೊರೆ ಇಟ್ಟು ಕಡೆ ಬಿದ್ದದ್ದೇ ಸಾಕ್ಷಿ
ಅಭಿಮೊಗವಾಗಿಪ್ಪ ಚೆಲುವ ಕೇಳೊ
ವಿಭುವೆ ವ್ಯಾಪ್ತಿ ಪ್ರಸನ್ನಮೂರ್ತಿ ವಿಜಯ ವಿಠ್ಠಲರೇಯಾ
ಅಭಿಗಾರದಿಂದಲ್ಲಿ ಶುದ್ದ ಸರ್ವ ಪದಾರ್ಥ ೧
ಮಟ್ಟತಾಳ
ಸುಜನರವೊಳಗಿದ್ದು ದ್ವೇಷ ಮಾಡಿಸದಿರು
ರಜಗುಣದವರಲ್ಲಿ ದೃಡತರ ಕೊಡದಿರು
ಕುಜನಕೆ ಪ್ರೇರಿಸಿ ಪೂಜೆ ಮಾಡಿಸದಿರು
ತ್ರಿಜಗ ಮಧ್ಯದಿ ನಿನ್ನ ವ್ಯಾಪಾರದ ವಿನಹಾ
ಅಜ ಭವಾದ್ಯರು ಆ ಎನಲಾಪರೆ
ಭಜಿಸಿ ಬೇಡುವೆನಯ್ಯಾ ಬಹುಕಾಲವಾಗೆ ನಾನು
ಯಜಮಾನನೆಂಬ ಮಾತು ನುಡಿಸಲಾಗದು ಹರಿಯೆ
ವಿಜಯ ಸಾರಥಿ ನಮ್ಮ ವಿಜಯ ವಿಠ್ಠಲರೇಯ
ಧ್ವಿಜ ಕುಲದಲಿ ಎನ್ನ ಕೂಡಿ ಪುಟ್ಟಿದ ದೈವಾ ೨
ತ್ರಿವಿಡಿ ತಾಳ
ತರಣಿ ಉದ್ಭವನಾಗಿ ಆ ತನ್ನ ಪ್ರಕಾಶ
ಮರದ ಮೇಲೆ ಬೀಳಲದರ ನೆಳಲು ಕಪ್ಪು
ತೆರನಾಗಿ ಕಾಣಲು ಅಲ್ಲಿದ್ದ ದೋಷ ಭಾ
ಸ್ಕರನಿಂದ ಬಂದದ್ದು ಮರನ ತಪ್ಪೊ
ಪರಮ ಪುರುಷ ಪೇಳೊ ಇವರ ವಿಚಾರವ
ಎರಡು ಸಂಬಂಧವಾಗಲು ಬಾಹುದೊ
ಪರಿಪರಿ ಕರ್ಮವು ಬಂದಾನುಭವಿಸುವ
ಚರಿಯಾ ನೋಡಿದರೆ ನಿದಾನ ಕಾಣೆ
ಹರಿಯೆ ಪ್ರಕೃತಿಯಿಂದ ನಾನಾ ವಿಪರೀತ
ತಿರುಗಿ ತಿರುಗಿ ಜನನಾದಿ ಕೊಡುತಿಪ್ಪುದು
ಹಿರಿದಾಗಿ ನಾನೆಂದು ಸ್ವಾತಂತ್ರದಲಿ ನುಡಿಯೆ
ಕರ ಕರೆ ಭವದೊಳು ಹೊರಳಿದೆನೊ
ಪರಮಾತ್ಮ ನಿನ್ನ ಬಲು ಮಾಯಾವೆಂಬೊ ಪ್ರಕಾಶ
ಹೊರಗೆ ಒಳಗೆ ವ್ಯಾಪಿಸಿ ಕೊಂಡಿರೆ
ಅರಿಯದೆ ಪೋದೆನೊ ಮೋಸದಿಂದಲಿ ಬಪ್ಪ
ದುರಿತವೆನ್ನದು ಎಂದು ಪತಿಕರಿಸಿ
ಪರಮಗತಿಗೆ ಮಹಾ ದೂರಾಗಿದ್ದೆನೊ ತತ್ವ
ಕುರುಹ ತಿಳಿಯದೆ ಮಂದನಾಗಿ ಇವೆ
ನಿರೀಕ್ಷಿಸಿದರೆ ದೋಷ ಎಂದಿಗೆ ನನಗಿಲ್ಲ
ಕರುಣಾಕರ ನಿನ್ನ ಭಕ್ತಿಗಿಲ್ಲ
ತರಣಿ ಪ್ರಕಾಶ ಮರದ ಮೇಲೆ ಬಿದ್ದಂತೆ
ನಿರುತ ಎನ್ನ ಮೇಲೆ ಬಿದ್ದಿಹುದೊ
ಪರಿಪೂರ್ಣ ಮೂರುತಿ ವಿಜಯವಿಠ್ಠಲರೇಯ
ಕರುಣಾಶರಧಿ ನಿನಗೆ ಭೇದವಿಲ್ಲ ೩
ಅಟ್ಟತಾಳ
ಪತಿವ್ರತಾಗುಣನಾರಿ
ಸತತ ಗಂಡನ ಕೂಡ
ರತಿ ಕೇಳಿಯಲ್ಲಿಯೆ
ಹಿತ ಸುಖ ಬಡುತಲಿ
ಕ್ಷಿತಿಯೊಳಗೆ ಬಾಳುತ
ಪ್ರತಿ ಇಲ್ಲದೆ ಸ
ದ್ಗತಿಗೆ ಸಾಧನಳಾಗಿ
ಜಿತ ಕಾಮಳೆನಿಪಳು
ಅತಿಶಯವಾಗಿ ಹಿ
ಗ್ಗುತ ಯೌವನದಲ್ಲಿ
ಮಿತಿಯಿಲ್ಲದ ಕೀರೂತಿ
ಪೊತ್ತು ಧರೆಯೊಳು
ಚ್ಯುತ ದೂರ ನಿನ್ನಂಘ್ರಿ
ಶತಪತ್ರದಲ್ಲಿ ಭ
ಕುತಿ ಮಾಡುವ ಮಂದ
ಮತಿ ಮಾನವ ಉ
ನ್ನತ ವಿಷಯಂಗಳು
ಗತಿ ತಪ್ಪದೆ ಭುಂಜಿ
ಸುತಲಿದ್ದರು ನಿತ್ಯಾ
ಜಿತವಂತನು ಕಾಣೊ
ಶ್ರುತಿ ಶಾಸ್ತ್ರ ಸಮ್ಮತ
ಸತಿ ಪತಿಯ ಕೂಡಾ
ಡುತ ಕಾಲ ಕಳೆದರೆ
ನುತಿಸುವರು ಬುಧ
ತತಿ ತಲೆದೂಗುತ್ತ
ಪತಿತ ಪಾವನರಂಗ ವಿಜಯ ವಿಠ್ಠಲರೇಯ
ಕೃತ ಕೃತ್ಯ ನಿನ್ನ ಬಿಡದಿಪ್ಪ ಮಾನವ ೪
ಆದಿತಾಳ
ನಾಮವೆ ಕಾಯ್ವುದು ನಾಮವೆ ಉಣಿಪುದು
ನಾಮವೆ ಸರ್ವತ್ರ ಪವಿತ್ರ ಮಾಡುವುದು
ನಾಮವೆ ಘನದುರಿತ ಸಂಹಾರ ಮಾಡುವುದು
ನಾಮವ ನೆನೆವಂಗೆ ವಜ್ರಾಂಗಿಯಾಗಿಪ್ಪುದು
ನಾಮವೇ ಕಂಡಲ್ಲಿ ನಿಂದಲ್ಲಿ ಮಹಾಭಾಗ್ಯ
ನಾಮ ಒಂದು ನುಡಿಯೆ ವಿಜಯ ವಿಠ್ಠಲ ನಿನ್ನ
ಧಾಮವಾಗುವುದಯ್ಯಾ ತಡಿಯದೆ ನಮಗೆಲ್ಲ ೫
ಜತೆ
ತಿಳಿದು ನಡೆದವಗೆ ದೋಷವೆತ್ತಣದೊ ನಿ
ಶ್ಚಲ ಮೂರ್ತಿ ವಿಜಯ ವಿಠ್ಠಲ ಸರ್ವ ಸ್ವಾತಂತ್ರ ೬

ಸಾತ್ಪಿಕ ಚೇತನರಿಗೆ ಭಗವದ್ಭಕ್ತಿ

೧೧
ಧ್ರುವತಾಳ
ಅರಣಿ ಮಥನ ಪ್ರಮದಾದ್ವಾರ ಆದ್ವಾರದಿಂದ
ಪುರುಷನಿಂದ ಪುರುಷಾಪೇಕ್ಷನಿಂದಾ
ಸ್ಪರ್ಶ ಸ್ಮರಣೆ ವಾಸನೆಯಿಂದ ಸಿದ್ಧ ಗಾ
ತುರ ಪ್ರವೇಶದಿಂದ ನಾನಾಪರಿ ಸರ್ವ ಸಾ
ಧಾರಣ ಕಲಿಯುಗದಲ್ಲಿ ನಿಂ
ದಿರದೆ ಮಿಥುನ ಭಾವದಲ್ಲಿ ಜನನ
ಹರಿ ನೀನೆ ನೇಮಿಸಿದ್ದೆ ಯುಗ ಯುಗದಲ್ಲಿ ನಿ
ರ್ಜರ ಮುನಿ ಮನುಜರಿಗೆ ತಪ್ಪದಂತೆ
ಪರಮಪುರುಷ ನಾನಾ ಈ ಪರಿಯಿಂದಾದುದಕ್ಕೆ
ತಿರಿಗಿ ಆವಾವ ಜನನದಲಿ ಬಂದೆನೋ
ಕರಣಂಗಳೆಲ್ಲ ಒಂದೆಸೆಯಲ್ಲಿ ನಿಲ್ಲಿಸಾದೆ
ಮರಳೆ ಮರಳೆ ಮರಳೆ ಪುನರಾವಕ್ತಿಲೋಕದಿ
ನರಕಾನರಕದಲ್ಲಿ ಬಿದ್ದು ಎದ್ದು ಎದ್ದು
ಬರಲಾರದಲೆ ಬಂದೆನಯ್ಯಾ ಜೀಯಾ
ಕರುಣಿ ಕಾಮಿತ ಫಲದಾ ಮೊರೆಬಿದ್ದೆ ಮೊರೆಕೇಳೊ
ಮರಹೆ ನಿಶ್ಚಯ ಎನಗೆ ಹಿಂದಣ ಭವಣೀ
ಧರ ಜಲ ಔಷಧಿ ಪುರುಷವಾಣಿ ರುಕ್ಸನಿಮ (?)
ಎರಡೈದು ಮೂರ್ತಿಗಳ ಮಹಿಮೆಯನ್ನು
ತರತಮ್ಯ ನಿರ್ಭಿನ್ನವಾಗಿ ತಿಳಿದು ಕೊಂಡಾಡಿ ಸಂ
ತರ ಒಡನೆ ಬಾಳದಲೆ ಬರಿದೆ ತಿರಿದು
ಚರಿಸಿದೆ ಧೂಮ್ರ ವಾಯು ಮೇಘಾ
ಭ್ರ ರಾತ್ರಿ ತದನಂತರ ಕಷ್ಣಪಕ್ಷ ದಕ್ಷಿಣಾಯನ
(ಪರಕ್ಷುದುಕ್ಷಣ)ಮಾಸಸಂವ
ತ್ಸರ ಪಿತೃ ಗಗನ ಚಂದ್ರ ಸ್ವರ್ಗಕೆ ಪೋಗಿ
ತಿರಿಗಿ ಪಂಚಾಹುತಿಯಲ್ಲಿ ಬಿದ್ದು ಈ ದೇಹ
ಧರಿಸಿ ಬೆಳದೆ ವಿಷಯಕೂಪದಲ್ಲಿ
ಜರೆ ನರೆ ಮೊದಲಾದ ಹೇಯ ಬಂದ ಕಾಲಕ್ಕು
ನಿರಯಕ್ಕೆ ಪೋಗದಂತೆ ತೊಲಗದಿದಕೊ
ಹರಿಯೆ ಮುಂದೆ ದಾವ ಜನುಮ
ಬರುವದು ಕಾಣೆನಕಟಾ ಹರುಷವಾಗೋದು
ನೋಡು ಇದರೊಳಗೆ
ಎರಡೆರಡು ಒಂದು ಪರ್ವ ಶ್ರವಣಾದಿಯಲ್ಲಿ ಇಪ್ಪ
ಭಾರವನ್ನೆ ವಿಚಾರಿಸದೆ ಮೋಸವಾದೆ
ನಿರುತ[ಪಾಂ]ಡಿ[ತ್ಯ][ಬಲದಿ] ಮುನಿ ಮೌನದಿಂದ
ಕರುಣಾ ಸಂಪಾದನಿಗೆ ಮಾರ್ಗಕಾಣೆ
ಹರಿಯ ನಿನ್ನವತಾರ ಮತ್ಸ್ಯಾದಿ ರೂಪಶ್ರೀಯ
ಸ್ಮರಿಸೆ ಒಂದೇ ಭಾರಿ ಎಲ್ಲಿ ನಾನೂ
ವರ ವಿದ್ಯಾ ವಂಶಾವೃದ್ಧಿ ಭರ ಭಯ ಮೋಹ
ದಾರಿಂದರೆಲ್ಲಾರಿಷಡ್ವರ್ಗ ನಾಶನ ಮಾಡಿಕೊಂಡು
ಸರ್ವ ಸಂಪತ್ತು ಲಾವಣ್ಯಯೈದು ದುಃಖ
ಪರಿಹಾರದಿಂದ ಬಿಂಬಾ ಬಿಂಬಾ ನಿನ್ನಾ
ವರ ಮೂರ್ತಿಗಳ ನೋಡಿ ಸುಖಿಸಿ ಬರುವ ಜನನ
ವಿರಹಿತನಾಗದೆ ಪೋಪೆನಯ್ಯಾ
ಕರುಣಾಕರ ನಮ್ಮ ವಿಜಯವಿಠ್ಠಲ ಎನ್ನ
ಪೊರೆವ ದಾತಾರ ಹೃತ್ಕಮಲದಲ್ಲಿ ವಾಸ ೧
ಮಟ್ಟತಾಳ
ಹೃದಯಾ ವ್ಯಾಪ್ತಿ ಮೂರ್ತಿ ಪ್ರಾದೇಶದೊಳಗೆ
ಪದುಮಕರ್ನಿಕೆ ಗರ್ಭ ಮಧ್ಯದಲ್ಲಿ ಇಪ್ಪ
ಪದುಮೆಯರಸ ಪ್ರಾಜ್ಞ ನಿನ್ನ ಕಾಂಬುದೆಂತೊ
ಪದೋಪದಿಗೆ ವಿಷಯ ಧ್ಯಾನವ ಮಾಡುವೆ
ಮಧ್ಯದಲ್ಲ್ಯೆ ವಿಧ್ಯಾ ಪಂಚಕಾಲವನ್ನೆ ತಿಳಿದು
ಇದರಿಂದಲಿ ನಿನ್ನ ಪೂಜಿಸಲಿಲ್ಲೈಯ್ಯಾ
ಪದಮಗರ್ಭನಯÁ್ಯ ವಿಜಯವಿಠ್ಠಲ ನಿನ್ನ
ಪದಗಳ ನೋಡುವ ಭಾಗ್ಯವೆ ಕೊಡು ನಿತ್ಯ ೨
ತ್ರಿವಿಡಿ ತಾಳ
ವ್ಯಾಪಾರ ಆವರ್ಕ ಅವಿಷ್ಟ ಕ್ಷೋಭಕ ಪ್ರ
ತಿಪಾದ್ಯ ಸ್ಥಿತಾ ನಿಯಾಮಕ ಪ್ರವರ್ತಕ ಸ
ರ್ಗ ಪಾಲಣ ಸಂಹೃತಿ ಅವಕಾಶ ಭಯಮೋಚಕ
ಉಪರಾಶ್ರಯ ಕತರ್ುೃ ಮುಕ್ತ ವಿಭಾಗವು
ಅಪದ್ರಕ್ಷಕ ಅಭೀಷ್ಟಪ್ರದ
ಸಂಪ್ರಾಪುತ ಸಂಯೋಗ ವಿಯೋಗವು
ರೂಪ ಪಂಚನ ಪರಿಮಿತ ಅವಸ್ಥಾ ಪ್ರೇರಕ
ಪಾಪ ಪುಣ್ಯ ಬಂಧವೆ ಶತ ತತುತದಾಕಾರ
ಈ ಪರಿ ನಿನ್ನ ಮೂರ್ತಿಗಳನೇಕ
ಶ್ರೀಪತಿ ಪರಬೊಮ್ಮ ಅಸುರ ಸಂಹಾರ ಪ್ರ
ಳಾಪ ವಿದೂರ ವಿದುರ ವಂದಿತ
ಅಪಾರ ಮಹಿಮನೆ ಏಕವಿಂಶತಿ ಶ್ವೇತು
ದ್ವೀಪ ಮೂರುತಿ ಕೂಡಾ ಇಪ್ಪತ್ತೆರಡೂ
ಗೋಪಾಲ ನಿನ್ನ ಮೂರುತಿಗಳೊಂದೊಂದು ಬಗೆ
ವ್ಯಾಪಾರ ಮಾಡುತಿರಲು ಜಗದೊಳು
ಲೇಪ ನಿರ್ಲೇಪದಲ್ಲಿ ಅನಂತಾನಂತ ಗುಣ
ರೂಪ ಕ್ರೀಯಾ ಪರಿಪುರ್ಣವಾಗೀ
ಪೋಪ ಬರುವ ಕುಳಿತು ಪವಳಿಸಿ ಓಡುವ
ಭಾಪುರೆ ಒಂದೆ ಕಾಲದಲ್ಲಿ ಮಾಡುವ ಚಿತ್ರಾ
ಆಪನ್ನ ಪರಿಪಾಲಾ ಇದರೊಳೆಗೆನಗೊಂದು
ನೀ ಪಾಲಿಸು ನಿತ್ಯ ಅವರವರ ತಕ್ಕದ್ದು
ಕೋಪಾನಂದದಿಂದ ನೀನೊಲಿದು ದುಃಖ
ವ್ಯಾಪಿ ವ್ಯಾಪಿಗೆ ನಗುವ ಮೂರ್ತಿಯ ಮನದಲ್ಲಿ
ಲೋಪವಿಲ್ಲದೆ ಕರುಣದಿಂದ ಸ್ವಾಮಿ
ಚಾಪಧರಾಗ್ರಣಿ ವಿಜಯ ವಿಠ್ಠಲ ಸರ್ವ
ತಾಪತ್ರಯ ವಿನಾಶ ಸಮಸ್ತ ಗುಣನಿಧಿ ೩
ಅಟ್ಟತಾಳ
ಆವನ್ನ ಚೇತನ ಅನಾದಿಯಿಂದಲಿ
ಆವನ್ನ ಅಹಂಕಾರ ದಾಸೋಹಂ ಎನ್ನದು
ಆವನ್ನ ಬುದ್ಧಿ ಭೇದ ನಿಶ್ಚೈಸದು
ಆವನ್ನ ಚಿತ್ತ ತತ್ವ ವಿಚಾರಿಸದು
ಆವನ್ನ ಮನಸು ಸಂಕಲ್ಪ ಮಾಡದು
ಆವನ್ನ ಮಸ್ತಕ ಅಚ್ಯುತಗೆರಗದು
ಆವನ್ನ ಕರ್ನ ಸತ್ಕಥೆ ಕೇಳದು
ಆವನ್ನ ನಯನ ಹರಿ ಮೂರ್ತಿಯ ನೋಡದು
ಆವನ್ನ ನಾಸಾ ನಿರ್ಮಾಲ್ಯವೆ ಕೊಳ್ಳದು
ಆವನ್ನ ವದನ ಶ್ರೀ ಹರಿ ಕೃಷ್ಣನೆನ್ನದು
ಆವನ್ನ ನಾಲಿಗೆ ಹರಿಯನ್ನ ಪಾಡದು
ಆವನ್ನ ಕರಗಳು ಹರಿಪೂಜೆ ಮಾಡದು
ಆವನ್ನ ಚರಣವು ಯಾತ್ರಿಯ ತಿರುಗವು
ಆವನ್ನ ಶರೀರ ಹರಿಗಡ್ಡಬೀಳದು
ಆವನ್ನ ಭೂಮಿಯದಾನವ ಮಾನವ
ಆವನ್ನ ನರಕವಾಸಿಗನೆನ್ನಿ ಎಂದಿಗೂ
ಜೀವನಾಶ್ರಯವೆನ್ನಿ ಪಾವನವಲ್ಲವೊ
ಓವನ್ನ ವಿಜಯ ವಿಠ್ಠಲನೊಲಿಸಲು
ಬಾವನ್ನವಾಗುವ ಧ್ರುವನ್ನ ಪದವಿ ಐದಿ ೪
ಆದಿತಾಳ
ಕತ್ತೆಯ ಅಂಗಕ್ಕೆ ಕಸ್ತೂರಿ ಗಂಧಪೂಸಿ
ಮುತ್ತು ಮಾಣಿಕ ಹಾರ ಸುತ್ತಲು
ಸುತ್ತಿ ಕರವೆತ್ತಿ ನಮಸ್ಕರಿಸಿ
ಸತ್ತಿಗೆ ನೆಳಲಲ್ಲಿ ನಿಲ್ಲಿಸಿ
ತುತ್ತಿಸಿ ಚುಂಬನ ಕೊಟ್ಟ ಪರಿಯಂತೆ
ಸತ್ಯ ಸಂಕಲ್ಪ ನಿನ್ನ ಪಾತ್ರರ ಸಹಿತಬಿಟ್ಟ
ನಿತ್ಯ ಅನ್ಯದೇವತೆಯ ಪೂಜಿಸಲು ವ್ಯರ್ಥ
ಭೃತ್ಯ ವತ್ಸಲ ನಮ್ಮ ವಿಜಯ ವಿಠ್ಠಲರೇಯ
ಉತ್ತಮ ಶ್ಲೋಕ ನಿನ್ನ ಕೀರ್ತನೆ ಕೊಡು ಪೊಳೆದು ೫
ಜತೆ
ಈಸು ಮೂರ್ತಿಗಳಲ್ಲಿ ಒಂದು ಮೂರ್ತಿಯ ಧ್ಯಾನ
ಲೇಸಾಗಿ ಕೊಡುವುದು ವಿಜಯ ವಿಜಯ ವಿಠ್ಠಲ ಪೂರ್ಣ ೬

ಎಲ್ಲ ಹರಿದಾಸರೂ ತಿರುಪತಿಯ

ಧ್ರುವತಾಳ
ಅರಸಿನ ಭೀತಿಯಿಂದ ಆತನ ಪಾದರಕ್ಷ |
ಪರಿಚಾರಕನೊಬ್ಬ ಸತತ ಬಿಡದೇ |
ಪರಮ ವಿಶ್ವಾಸದಲ್ಲಿ ಜೋಕೆ ಮಾಡಿದಂತೆ |
ಹರಿ ನಿನ್ನ ಶರಣಾರ ಸರಸಿಜ ಭವಾದ್ಯರು |
ನಿರತರವಂದಡಿ ತೊಲಗಿ ಪೋಗಾದೆ |
ಪೊರೆವಾರು ಪರಿಪರಿ ಬಗೆಯಿಂದೊಲಿದೂ |
ದುರಿತದ ಕಡಿಗೆ ನಿನ್ನ ನಂಬಿದವನ |
ಕರಣಗಳೆರಗಗೊಡದೆ ಆವಾಗ |
ಹರಿಭೀತಿ ನರನಿವ ನೀಚನಾದಾಡಾಗಲಿ |
ಕರುಣಪಯೋನಿಧಿ ಭಕ್ತರಧೀನವಾದ |
ಧೊರಿಯೆ ನಿನ್ನಾ ಬಲು ಲೀಲಿಗೆ ನಮೊ ನಮೊ |
ಮರೆದೊಮ್ಮೆ ನೆನೆದಾಡೆ ಚನ್ನಾಗಿ ಚನ್ನಾಗಿ |
ಬರುವ ಸ್ವಾತಂತ್ರ ಚಿನ್ಮಾತ್ರ ಮುನಿಸ್ತೋತ್ರ |
ಧರೆಯೊಳು ನಿನ್ನಾ ಸರಿಯಾದ ದೈವವ |
ಕುರುಹ ಕಾಣಿಸೊ ಕುಜನರಿಗೆ ಕುಠಾರ |
ತಿರುವೆಂಗಳಪ್ಪ ತಿಮ್ಮಪ್ಪ ಶ್ರೀನಿವಾಸ |
ಗಿರಿವಾಸ ವಿಜಯವಿಠಲ ವೆಂಕಟತಂದೆ |
ಶರಣಾರು ಕರೆವ ಸೊಲ್ಲಿಗೆ ಸೋಲುವ ಮಹಿಮ ೧
ಮಟ್ಟತಾಳ
ಹುಲ್ಲ[ನೆಲ್ಲು] ಸರಿವೆ ರುವ್ವಿಗೆ ಸಲ್ಲಾದು ಬೆಲೆ ಮಾಡಲ |
ಮಲ್ಲನರನ ಪಾದದಲ್ಲಿ ಕಟ್ಟಿರಲದ |
ಸಲ್ಲುವದು ಬಿರಿದು ಎಲ್ಲ ಲೋಕದ ಮಧ್ಯ |
ಹುಲ್ಲಿಗೆಯಾದರೂ ಬಲ್ಲಿದನ ಬಳಿ |
ಯಲ್ಲಿ ಸೇರಿದರಿಂದ ಬಲ್ಲಿದತನಕೆ ಬರುವದು ಕಾಣಿರೊ |
ಕಲ್ಲು ನಾರಿಯ ಮಾಡಿದ ವಿಜಯವಿಠಲರೇಯ |
ಎಲ್ಲಿದ್ದರು ನಿನ್ನವಗೆ ಭೀತಿ ಇಲ್ಲ ೨
ತ್ರಿವಿಡಿತಾಳ
ನಾನಾ ಯೋಗಿಗಳಲ್ಲಿ ಬಂದು ಬೆಳೆದು ಬಿಡದೆ |
ನಾನಾ ದೇಶದ ಮ್ಯಾಲೆ ತಿರಗಿ ತಿರಗೀ |
ನಾನಾ ಠಾವಿನಲಿ ವಾಸವಾಗಿ ಇದ್ದು |
ನಾನಾ ಉದಕ ಧಾನ್ಯಾ ಸವಿದು ಉಂಡು |
ನಾನಿದ್ದರು ದೇವ ಅಲ್ಲಲ್ಲಿ ಪೊಂದಿದ |
ಆ ನಿರ್ಜರರು ನಿನ್ನ ಪೊಂದಿದವ |
ಜ್ಞಾನವೆ ಕೆಡದಂತೆ ರಕ್ಷಿಸುವರು ಸತತಾ |
ಏನೆಂಬೆನೈ ನಿನ್ನ ದೊರೆತನಕೇ |
ನಾನೆಲ್ಲಿ ಸರಿಗಾಣೆ ತ್ರಿಲೋಕದಲ್ಲಿ ಜಗ |
ಪ್ತ್ರಾಣನ್ನಾ ಒಡಿಯಾನೆ ದಿವ್ಯಕಾಯ |
ಜ್ಞಾನಾದ್ರಿ ವೆಂಕಟ ವಿಜಯವಿಠಲರೇಯ |
ನೀನೆಂದವನಿಗೆ ನಿತ್ಯ ನೀನೆ ಬೆನ್ನು ೩
ಅಟ್ಟತಾಳ
ಕಾಮಂಜುತಲಿದೆ ಕ್ರೋಧಂಜು[ತ]ಲಿದೆ |
ಆಮದ ಮೋಹ ಮತ್ಸರವಂಜುತಲಿದೆ |
ತಾಮಸ ಜನಗಳು ಒಮ್ಯಾದರೂ ನಿನ್ನ |
ನಾಮವೆ ಕೇಳುತಲಂಜುತಲಿಪ್ಪರು |
ಸ್ವಾಮಿ ತೀರ್ಥವಾಸಾ ವಿಜಯವಿಠಲ ವೆಂಕಟ |
ಈ ಮಹಿಯೊಳು ನಿನ್ನ ದೊರೆತನಮಿಗಿಲೊ ೪
ಆದಿತಾಳ
ಜಗತ್ಪಾವನ ಜಗಜ್ಜೀವನ |
ಜಗತ್ಕಾವನ ಕಾವನೈಯ್ಯಾ |
ಜಗದ ಜಗದ ಜೀವನ |
ಜಗವ ಸೃಜಿಸಿ ಜಗವ ನಿಲಿಸಿ |
ಜಗವ ಆಡಿಸುವೆ ಜಗವೆ ನಿನ್ನ ಭೀತಿಯಲ್ಲಿ ಚಲಿಸುತಿಪ್ಪರು |
ಜಗವ ಬಲ್ಲಿ ನಿನ್ನಾ ಸರ್ವ ಜಗವರಿಯದು |
ಜಗವೆಲ್ಲ ನಿನ್ನ ಭಕ್ತನ ಪಾಲಿಸುತಿಪ್ಪದು |
ಜಗವೆ ನಿನ್ನಯ ಗುಣಂಗಳೆಣಿಸುವದೂ |
ಜಗದಾ ದೊರೆಯಿ ಖಗಗಿರಿ ವೆಂಕಟವಿಜಯ ವಿಠಲ
ಪರಮ ದಯಾನಿಧಿ |
ಜಗವೇ ನಿನ್ನಾಧೀನವಯ್ಯಾ ೫
ಜತೆ
ಅರಸಿನಿಂದಲಿ ಅಧಿಕ ಭೃತ್ಯನಿಗೆ ಪಾಲಿಸುವ |
ಹಿರಿಯಾರಿಪ್ಪರು ಬಿಡದೆ ವಿಜಯವಿಠಲ ಧೊರಿಯೆ ೬

ಇದೊಂದು ಅಪ್ರಕಟಿತ ಸುಳಾದಿ:

೧೨
ಧ್ರುವ ತಾಳ
ಅರಸಿನಾ ಭೀತಿಯಿಂದಾ ಆತನ ಪಾದರಕ್ಷಾ
ಪರಿಚಾರಕನೊಬ್ಬ ಸತತ ಬಿಡದೆ
ಪರಮ ವಿಶ್ವಾಸದಲ್ಲಿ ಜೋಕೆ ಮಾಡಿದಂತೆ
ಹರಿ ನಿನ್ನಾ ಶರಣಾರ ಸರಸಿಜಭಾವಾದ್ಯಾರೋ
ನಿರುತಾರಾಮದಾಡಿ ತೊಲಗಿ ಪೊಗದೆ
ಪೊರೆವಾರು ಪಾರಿಪಾರಿ ಬಗೆಯಿಂದ್ಯೋದೂಲಿ
ದುರಿತಾದ ಕಡಿಗೆ ನಿನ್ನಾ ನಂಬಿದನಾ
ಕರಣಂಗಾಳೆರಗಾಗೊಡದೇ ಆವಾಗ
ಹಾರಿ ಭೀತೀ ನರನಿವಾ ನಿಜಾನದಾಡಗಲಿ
ಕರಣಾ ಪಯೋನಿಧಿ ಭಕ್ತಾರಾಧಿನನಾದ
ದೊರೆಯೆ ನಿನ್ನಾ ಬಾಲ ಲೀಲೆಗೆ ನಮೋ ನಮೋ
ಮರದೊಮ್ಮೆ ನೆನೆದಾರೆ ಚನ್ನಾಗಿ ಬೆನ್ನಾಗಿ
ಬರುವ ಸ್ವಾತಂತ್ರ ಚಿನ್ಮಾತ್ರ ಮುನಿ ಸ್ತೋತ್ರ
ಧರೆಯೊಳು ನಿನ್ನರಿಯಾದ ದೈವಾವ
[ಕ]ರುಣÁ ಕಾಣೆನೊ ಕುಜನರಿಗೆ ಕುಠಾರ
ತಿರುವೆಂಗಳಪ್ಪ ತಿಮ್ಮಪ್ಪ ಶ್ರೀನಿವಾಸ
ಗಿರಿವಾಸ ವಿಜಯವಿಠಲ ವೆಂಕಟ ತಂದೆ
ಶರಣಾಗು ಕರೆವ ಸೊಲ್ಲಿಗೆ ಸೋಲುವ ಮಹಿಮಾ ೧
ಮಟ್ಟತಾಳ
ನೆಲ್ಲೂ ಸರಿಮೇರುವಿಗೆ ಸಲ್ಲದು ಬೆಲೆ ಮಾಡಲು
ಮಲ್ಲನರನ ಪಾದದಲ್ಲಿ ಕಟ್ಟಿರಲಾದೆ
ಸಲ್ಲುವುದು ಬಿರಿದು ಎಲ್ಲ ಲೋಕದ ಮಧ್ಯ
ಹುಲ್ಲಿಗೆ ಆದಾರು ಬಲ್ಲಿದನಾ ಬಳಿಯಲ್ಲಿ ಸೇರಿದರಿಂದ್ಯಾ
ಬಲ್ಲಿದಾತನವದಕೆ ಬರುವುದು ಕಾಣಿರೋ
ಕಲ್ಲುನಾರಿಯ ಮಡಿದ ವಿಜಯ ವಿಠಲರೇಯ
ಎಲ್ಲಿದ್ದಾರು ನಿನಗೆ ಭೀತಿಯಿಲ್ಲ ೨
ಝಂಪೆ ತಾಳ
ನಾನಾಯೋನಿಗಳಲ್ಲಿ ನಾನಾದೇಶಗಳಲ್ಲಿ
ನಾನಾ ಠಾವಿನಲ್ಲಿ ವಾಸವಾಗಿ ಇದ್ದು
ನಾನಾ ಉದಕ ಧ್ಯಾನ್ಯ ಸವಿದುವುಂಡೂ
ನಾನಿದ್ದರೂ ದೇವ ಅಲ್ಲಲ್ಲಿ ಪೊಂದಿದವನಾ
ಜ್ಞಾನವೇ ಕೇಡಾದಂತೆ ರಕ್ಷಿಸುವರೋ ಬಿಡದೆ
ಏನೆಂಬೆನಯ್ಯ ನಿನ್ನ ದೊರೆತನಕೆ
ನಾನೆಲ್ಲಿ ಸರಿಗಾಣೆ ತ್ರಿಲೋಕದಲ್ಲೀ ಜಗ
ತ್ಪ್ರಾಣನ ಒಡೆಯನೇ ದಿವ್ಯಾಕಾಯಾ
ಜ್ಞಾನಾದ್ರಿ ವೆಂಕಟಾ ವಿಜಯ ವಿಠಲರೇಯ
ನಿನೆಂದವಾನೀಗೆ ನಿತ್ಯಾ ನೀನೆ ಬೆನ್ನೊ ೩
ಅಟ್ಟ ತಾಳ
ಕಾಮಾಂಜುತ್ತಲಿದೆ ಕ್ರೋಧಾಂಜುತ್ತಲಿದೆ ಮ
ಹಾ ಮೋಹವಂಜುತ್ತಲೀದೇ
ಕಾಮಂಜುತಲಿದೇ ತಾಮಸಜನಗಳೂ ವಂದ್ಯೋದರು ನಿನ್ನಾ
ನಾಮವೆ ಕೇಳಲಂದುತ್ತಲಿಪ್ಪರು
ಸ್ವಾಮಿ ತೀರ್ಥವಾಸ ವಿಜಯ ವಿಠಲ ವೇಂಕಟ
ಈ ಮಹಿಮಾಳು ನಿನ್ನಾ ದೊರೆತನ ಮಿಗಿಲೋ ೪
ಆದಿತಾಳ
ಜಗತ್ಪಾವನ ಜಗಜೀವನ ಜಗತ್ಕಾರಣಾ ಕಾಮನಯ್ಯಾ
ಜಗವ ಸೃಜಿಸಿ ಜಗವಾ ನಿಲ್ಲಿಸಿ ಜಗವಾಡಿಸುವಿ
ಜಗವೇ ನಿನ್ನಾ ಭೀತಿಯಿಂದಲಿ ಚಲಿಸುತ್ತಿಪ್ಪಾದು
ಜಗವಾ ಬಲ್ಲೆ ನಿನ್ನ ಸರ್ವ ಜಗವರಿಯದು
ರಗಾಗಿರಿ ವೆಂಕಟ ಪರಮದಯಾನಿಧೆ ವಿಜಯ ವಿಠಲ
ಜಗವೇ ನಿನ್ನಾಧೀನವಯ್ಯಾ ೫
ಜತೆ
ಅರಸಿನಿಂದಲಿ ಅಧಿಕಾ ಭೃತ್ಯನಿಗೆ ಪಾಲಿಸುವ
ಹಿರಿಯರಿಪ್ಪರು ಬಿಡದೆ ವಿಜಯ ವಿಠಲರೇಯ ೬

ಅರುಣಾಚಲ ಎಂಬ ಕ್ಷೇತ್ರದ

೭. ಅರುಣಾಚಲ
ಧ್ರುವತಾಳ
ಅರುಣಾಚಲೇಶ್ವರಾ ಕರುಣವ ಮಾಡಯ್ಯ |
ಹರಣಾ ನಿನ್ನದು ನಾಗಾಭರಣ ದೇವ |
ತರುಣ ಭಕುತಿಯಲ್ಲಿ ಶರಣು ಪೋಗುವೆ ನಿನಗೆ |
ಮರಣ ಕಾಲಕ್ಕೆ ದೈತ್ಯಾಹರಣ ಹರಿಯಾ |
ಚರಣ ಯುಗಳ ದಿವ್ಯ ಸ್ಮರಣೆ ಒದಗುವಂತೆ |
ಕರಣ ಶುದ್ಧಿಯಲ್ಲಿ ಉದ್ಧರಣ ಮಾಡೋ |
ಧರಣಿ ಧರಾ ನಮ್ಮ ವಿಜಯವಿಠಲ ಶ್ರೀ |
ಚರಣಾ ಮನದಲ್ಲಿಟ್ಟು ಅರುಣ ಕರ್ಪದಾ ೧
ಮಟ್ಟತಾಳ
ಏಳು ಯೋಜನ ಉದ್ದ ಶೈಲವಿಪ್ಪುದು ಕಾಣೊ |
ಏಳು ಯೋಜನ ಸುತ್ತಾ ಲೋಲ ಪುಣ್ಯಭೂಮಿ |
ಭೂಲೋಕದ ಒಳಗೆ ಕೇಳಿರಿ ಇದಕ್ಕೆಲ್ಲ |
ಮೇಲಾದ ಯಾತ್ರಿ ಪೇಳುವರಾರಯ್ಯಾ |
ಏಳುವಾಸರವಿದ್ದ ಆಳುಗಳ ಪುಣ್ಯ |
ಪೇಳಲಿ ಎನ್ನಳವೆ ಏಳೇಳು ಜನ್ಮಕ್ಕೆ |
ಪಾಲಸಾಗರಶಯ್ಯಾ ವಿಜಯವಿಠಲನ್ನಾ |
ಆಳಾಗಿಲ್ಲಪ್ಪಾ ಶೈಲಜಪತಿ ಶಿವನೂ ೨
ರೂಪಕತಾಳ
ಗೌರಿ, ಅರುಣ, ಗೌತಮ ಭಕ್ತರೆಲ್ಲಾ |
ಧರಣಿಯೊಳಗೆ ತಿರಿಗಿ ಈ ಗಿರಿಯಲ್ಲಿ ತಪಮಾಡಿ |
ಹರುಷಾದಿಂದಲಿ ತಮಗೆ ಸರಿಬಂಧ ಮನೋಭೀಷ್ಟಾ |
ಭರದಿಂದಲಿ ಪಡೆದು ಶ್ರೀ ಹರಿಯಾ ಕರುಣಾದಲ್ಲಿ |
ಮೆರದು ಮೈ ಮರದು ವಿಸ್ತರವಾಗಿ ಇದ್ದರು |
ಸುರರು ವರ್ಣಿಪಲರಿದು ವರ ಗೌತುಮ ಕ್ಷೇತ್ರಾ |
ಚರಿಸುವದೇಕ ಸೌರಂಭ ಮನದಲಿ |
ಕುರಬಲಾ ಸಂಹಾರಿ ವಿಜಯವಿಠಲರೇಯನ |
ಪರಮಭಕುತನಾದ ನರಗೆ ಸಿದ್ಧಿಪದು ೩
ಝಂಪೆತಾಳ
ಸುದರುಶನ ಶೈಲ ಮುದದಿಂದ ಜ್ಞಾನದಲಿ |
ಒದಗಿ ಒಂದಾದರು ಪ್ರದಕ್ಷಿಣೆ ಹೃದಯದಲಿ ಆ |
ನಂದ ಉದಧಿಯೊಳಗೆ ಮುಳುಗಿ |
ಪದೊಪದಿಗೆ ನರಹರಿಯ ಧ್ಯಾನಿಸುತ್ತ |
ಚದುರತನದಲೀ ಗಿರಿಯ |
ದಧಿಯಾ ಮರ್ದಿಸಿದ ತೆ[ರ]ದಿ ನಿನ್ನ ಮನಸು |
ಮರ್ದಿಸಿ ಕೊಳುತಾ |
ಹದುಳನಾಗಿ ಸುತ್ತಿ ಬರಲೂ |
ವಂದಡಿಗಶ್ವಮೇಧ [ಮಾಡಿದಾ] ಫಲವಕ್ಕು ಸದಮಲರಿಗೆ |
ಸುದರಶನ ಪಾಣಿ ವಿಜಯವಿಠಲನ |
ಪದಗಳರ್ಚಿಸಿ ಸಂಪದವಿಯಲ್ಲಿ ಸೇರೋ ೪
ತ್ರಿವಿಡಿತಾಳ
ಅರುಣ ಪರ್ವತದಲ್ಲಿ ಹರನು ಶ್ರೀರಾಮನಾ |
ಸ್ಮರಣೆ ಮಾಡುತಲಿಪ್ಪ ಹರುಷದಲ್ಲಿ |
ವರ ಚಿದಾಂಬರದಲ್ಲಿ ಗೋವಿಂದರಾಯನಾ |
ಚರಣ ದೆಶೆಯಲ್ಲಿ ಈಶಾ ಕುಣಿಯುತಿಪ್ಪ |
ನರಸಿಂಹನ ಧ್ಯಾನವಾವಾಗ ಜಂಬುಕೇ |
ಶ್ವರದಲ್ಲಿ ಉಮಾಪತಿ ಮಾಳ್ಪಾನೆಯ್ಯ |
ಭರದಿಂದ ಮಾವಿನ ತರುವಿನಾಶ್ರಯದಲ್ಲಿ |
ಇರುತಿಪ್ಪ ಹರಿಮಹಿಮೆ ಲಾಲಿಸುತ್ತಾ |
ವರಕಾಳ ಹಸ್ತಿ ಎಂಬೋ ಕ್ಷೇತ್ರದಲ್ಲಿ ಶಿವನು |
ಅರುಹುವಾ ಹರಿಚರಿತೆ ವೈಧಾತ್ರಗೇ |
ಧರಣಿ ಮಧ್ಯದಲ್ಲಿ ಈ ಪರಿ ಐದು ಕ್ಷೇತ್ರದಲಿ |
ಹರಿಯ ಸೇವೆಯಾ ಹರನು ಮಾಡುವನೂ |
ಹರಿಯೆ ಗತಿ ಹರಿಯೆ ನಿಜವೆಂದು ತಿಳಿದು ತೀ |
ವರದಿಂದ ಒಡಂಬಡುವುದು ಜನರೂ |
ಪರದೈವ ವಿಜಯವಿಠಲರೇಯಾ ಸೂ |
ವರ್ನಗಿರಿ ವಾಸಾಸರ್ವೇಶಾ ಸಕಲ ಸುರರ ಪೋಷಾ ೫
ಅಟ್ಟತಾಳ
ಇಂದ್ರಾದಿ ಅಷ್ಟತೀರ್ಥದಲಿ ಪೋಗಿ |
ಮಿಂದು ಮುದದಲಿ ಅಚ್ಯುತನ ಧ್ಯಾನಾ |
ದಿಂದ ಸಾಧನಗೈದು ಶುದ್ಧ ಭಕುತಿಯಲ್ಲಿ |
ಕುಂದದಲೆ ಮಾಡಿ ಹಿಂದಿನ ಕರ್ಮಗಳೊಂದಾದರಿರದಂತೆ |
ವಂದಿಸಿ ಜನರು ವರಗಳನು ಪಡೆವುದು |
ಮಂದರ ಧರ ಶಿರಿ ವಿಜಯವಿಠಲರೇಯಾ |
ಮಂದಮತಿಯ ಬಿಡಿಸಿ ನಂದದಿ ಸಲಹುವಾ ೬
ಆದಿತಾಳ
ಅರುಣಗಿರಿಯ ಯಾತ್ರೆ ಇನ್ನು ಸುರರಿಗೆ ದುರ್ಲಭವೊ |
ಹರಿಯಭಜಿಸಿ ಮುಪ್ಪುರಹರನು ಈ ಗಿರಿಯಾದ
ನರನೊಬ್ಬ ಬಂದು ಅಂತಃಕ[ರ]ಣದಿಂದಲಿ ಯಾತ್ರಿ |
ಭರದಿಂದ ಮುಗಿಸಲು ಹರಿ ಸಂತೃಪ್ತನಾಹನು |
ಸ್ಥಿರವಾಗಿ ಈ ಗಿರಿಗೆ ಹರಿದು ಇಲ್ಲಿಗೆ ಬರಲೂ |
ಪರಂಪರೆಯಾಗಿ ಸುಖಾಂತರದೊಳುಲೊಲಾಡಿ |
ಮಿರುಗುವ ಕಾಯಾದಲ್ಲಿ ತಿರುಗುವಾ ಸರ್ವದಲ್ಲಿ |
ಶರಜನ್ಮನಯ್ಯಾನೊಡಿಯಾ ವಿಜಯವಿಠಲರೇಯಾ |
ಎರವುಮಾಡದೆ ತನ್ನವರ ಸಂಗಡಾಡಿಸುವಾ ೭
ಜತೆ
ಅರುಣಾಚಲದ ಯಾತ್ರೆ ಮಾಡಿದ ನರರಿಗೆ |
ಅರುಣಾಚಲವಾಸ ವಿಜಯವಿಠಲ ಒಲಿವಾ ೮

ಭಗವಂತನ ಅರ್ಚನೆಯ ಬಗೆಯನ್ನು

೧೩
ಧ್ರುವ ತಾಳ
ಅರ್ಚಾ ಅರ್ಚನೆ ಮಾಡು ಅಧಿಕಾರ ಭೇದದಿಂದ
ನಿಚ್ಚ ವರ್ಜಿತ ಕಾಮನಾಗಿ ಬಾಗಿ
ಅಚ್ಯುತ ದೈವವೆಂದು ಆಹ್ಲಾದದಿಂದ ಸದಾ
ಸಚ್ಚಿದಾನಂದಾತ್ಮಾದಿ ಗುಣಗಳಿಂದ
ಮೆಚ್ಚಿಸು ಮನಸು ಪೂರ್ವಕ ದಿಂದ ಯೋಗ್ಯತಾದನಿತು
ಮೆಚ್ಚಿಸು ಹರಿಯ ಒಳಗೆ ಹೊರಗೆ ತಿಳಿದು
ಸಚ್ಚಿದಾನಂದಾದಿಗಳ ಗುಣಗಳಿಂದ ಧ್ಯಾನಗೈದು
ಎಚ್ಚರನಾಗು ನಿನ್ನ ಯೋಗ್ಯತಾದನಿತು
ನೆಚ್ಚಿದವರ ಪ್ರಾಣ ಪ್ರಕೃತಿ ರಮಣ ಹರಿ
ಸುಚ್ಚರಿತ್ರನು ಕಾಣೋ ತನ್ನ ತೋರಿ
ಅರ್ಚರಾದಿ ಲೋಕ ಐದಿಸಿ ತಾತ್ವಿಕರ
ಹೆಚ್ಚು ಹೆಚ್ಚಾಗಿ ಒಳಗೆ ಪೊಳೆವ ದ್ವಿವಿಧ
ಅಚ್ಯುತಾನಂತ ರೂಪಗಳಾನಂತ ನಿಚ್ಚಳವಾಗಿವೆ ನೋಡಿದಲ್ಲಿ
ಬಚ್ಚಿಡತಕ್ಕದ್ದು ಈ ಪ್ರಮೇಯ ಕಂಡಲ್ಲಿ
ಬಿಚ್ಚುವುದಲ್ಲ ಬೀದಿ ಬೀದಿ ತಿರುಗಿ
ಅಚ್ಚಟ ಜ್ಞಾನಿಗಳಿಗೆ ಕೇಳಿದಾಕ್ಷಣ ಬೆಲ್ಲ
ದಚ್ಚಾಗಿ ಯಿಪ್ಪದು ಸವಿದೋರುತ
ಸುಚಿತ್ತದಲ್ಲಿ ನಿತ್ಯ ವಿಚಾರಿಸಿ ಕೊಳುತ
ಚಚ್ಚರದಲ್ಲಿ ಗುಣವಂತರಹರೋ
ಕೊಚ್ಚಿ ಪೋಗುವದಘ ಘೋರ ದೈತ್ಯರಿಗೆ ದಿ
ಗಿಚ್ಚಾಗಿ ಯಿಪ್ಪೊದು ಸರ್ವಕಾಲಾ
ಹುಚ್ಚು ಹರಳು ಮಾತಿನಿಂದ ಫಲವಿಲ್ಲಾ
ಮುಚ್ಚು ಬಾಗಿಣದಂತೆ ಸುಕೃತವುಂಟು
ಎಚ್ಚರನಾಗು ಹರಿದಾಸರಲ್ಲಿ
ಅಚ್ಚ ಸುಖ ಬರುವುದು ವರ್ಣಾಶ್ರಮ ಧರ್ಮ
ಸಚ್ಚರಾಚರದೊಳು ಲೇಶಮಾಡೆ
ವೆಚ್ಚವಾಗದು ಕಾಣೋ ಒಂದಾನಂತಾ
ಚೊಚ್ಚಲ ಮಗನಂತೆ ಪಾಲಿಸುತಿಹರು
ಪಚ್ಚದ ಮಣಿಗೆ ಸರಿಯೆ ಗಾಜು ಮಣಿಹಾರ
ಹಚ್ಚಿದ ಕಾಲಕ್ಕೆ ಶೋಭಿಸುವುದೇ
ನುಚ್ಚುಗಳ್ಳ ದೇವರ ಎಂತ ಪೂಜಿಸಲೇನು
ಬಚ್ಚಲ ಮೋರಿ ನೀರು ಕೂಡಿದಂತೆವೋ
ಕುಚ್ಚಿತವಲ್ಲದೆ ಜಗದೊಳು ಜನನವಿಡಿದು
ರಚ್ಚೆಯಲ್ಲದೆ ಭಂಡು ಭೂತ ಪೂಜೆ
ಅಚ್ಯುತ ಪದವಿಗೆ ಇದೆ ಇದೆ ಉಪಾಯ
ಬೆಚ್ಚದೆ ಮಾಡಿರಯ್ಯಾ ಮಾನದಲಿಟ್ಟು
ಬೆಚ್ಚಿಸಿದಂತೆ ಮನಸು ಹರಿಪಾದ ಪೊಂದುವುದು
ಸಚ್ಛಾಸ್ತ್ರ ಶ್ರವಣ ಮನನ ಧ್ಯಾನೋಪಾಸನದಿಂದ
ತಚ್ಛಬ್ಧವಾಚ್ಯ ಹರಿಯ ನೋಡಬೇಕು
ಎಚ್ಚರ ದೈವ ನಮ್ಮ ವಿಜಯ ವಿಠಲರೇಯನ್ನ
ನಿಚ್ಚ ಈ ಪರಿಯಿಂದ ಚಿಂತಿಸಬೆಕು ಸತತ ೧
ಮಟ್ಟತಾಳ
ಧರಣಿ ಉದಕ ವೈಶ್ವಾನರ ಮಾರುತ ಗಗನ
ಎರಡೆರಡು ಒಂದು ಭೂತಗಳಿದ್ದಲ್ಲಿ
ಹರಿಯ ವ್ಯಾಪಾರಗಳು ಚಿಂತಿಸು ಚನ್ನಾಗಿ
ಪರಿಪರಿ ಬಗೆಯಿಂದ ಗುಣಿಸುವುದು ಬಿಡದೇ
ವರ ಗುಣ ರೂಪ ಕ್ರೀಯಗಳಾನಂತ
ಚರಿಸುವ ಬಗೆ ತಿಳಿದು ಚತುರತೆ ನೀನಾಗೊ
ಇರಳು ಹಗಲು ಭೂತಾ ಭೂತಾಭಿಮಾನಿಗಳ
ಶರೀರ ತದಿಷ್ಠಾನ ಸಿರಿ ನಾರಾಯಣ ಸಿರಿ ಲಕುಮಿ ಬೊಮ್ಮ
ಹರ ಮಿಕ್ಕಾದ ನಿರ್ಜರಗುಣ ನಾನಾ
ತರತಮ್ಯದಿಂದಲಿ ಜ್ಞಾನೇಚ್ಛಾ ಪ್ರಯತ್ನ ಸ್ವಾಭಾವಿಕವೆಂದು
ನಿರುತ ತದಾಕಾರ ನಿಃ ಸಂಗರುಯೆಂದು
ಅರಿತು ಸಂತಸನಾಗು ಸಜ್ಜನರನೊಡನಾಡಿ
ದುರಿತಾಂಬುಧಿ ತಾರಿ ವಿಜಯ ವಿಠಲರೇಯ
ಕರುಣಾಕರ ಮೂರ್ತಿಯ ಚರಣವ ನೆರೆ ನಂಬಿ ೨
ರೂಪಕ ತಾಳ
ಹೃದಯಾದ ರೋಮ ಕೂಪಗಳೊಂದೊಂದು
ಉದರನಾಸ ಶ್ರವಣ ನಯನ ರಾಜಿಸುವ
ವದನ ಹಸ್ತ ಚರಣ ಸಂಧಿಗಳ ವಿವರ
ಹೊದರು ಗುಹ್ಯ ಒಂಭತ್ತು ದ್ವಾರಕ್ಷುದ್ರ ಭಿದ್ರ
ಮುದದಿಂದ ಘಟಮಠಾಕಾಶ ಜಾಲ ರಂಧ್ರ
ಮದುವೆ ಛಪ್ಪರ ಯಜ್ಞಶಾಲಿ ಮುಡಿಗೆ ಮರು
ತ್ಪದ ಚತುರ್ವಿಧಗಳು ತತ್ತತ್ತು ಶ್ರೇಣಿಗಳು
ಚತುರಂಗಾಕ್ಷ ಮನೆಗಾವದ ಹರದಾರಿ ಲೆಖ್ಖವ ಬೈಲು
ವರಣಾ ವರಣಗರ್ಭ ದಿಗ್ಭಾಗಾ
ಹದಿನಾಲ್ಕು ಲೋಕ ವಿರಾಡ್ರೂಪ ವೈಕುಂಠ
ಪದುಮ ಭವಾಂಡ ಸಪ್ತಾವರಣ ಮೇಲೆ
ತದನಂತರ ವ್ಯಾಕೃತಾಕಾಶ ಭೂತ ಈ
ತುದಿ ಮೊದಲು ಗುಣಿಸೋದು ಆಕಾಶಪ್ರಭೇದ
ಇದರಲ್ಲಿ ಹರಿ ಚಿಂತನೆಮಾಡು ಪರಿ ಪರಿ
ಹೃದಯಾರಂಭಿಸಿಕೊಂಡು ಅಲ್ಲಿ ಪರಿಯಂತ
ತದಕಾರ ತನ್ನಾಮ ವಿಜಯ ವಿಠಲರೇಯ
ವಿಧಿದೂರ ತದ್ಭಿನ್ನಾತನ್ನ ತನ್ಮಧ್ಯಾ ಎನ್ನು ೩
ಝುಂಪೆ ತಾಳ
ನಾಸ ಮೊದಲಾದ ಶ್ವಾಸೋಚ್ವಾಸ ಮತ್ತೆ ಉಪ
ಶ್ವಾಸ ಸರ್ವ ಜೀವ ರಾಶಿಯಲ್ಲಿ
ಬೀಸುವ ವ್ಯಜನ ಚಾಮರ ನವಿಲಗರಿ
ಕೋಶ ವಾರಿಧಿ ತೆರೆ ಊದುವ ವಾದ್ಯ
ಲೇಸು ಪಕ್ಷಯಗರಿಯಿಂದ ಬರುವ ಗಾಳಿ
ಗ್ರೀಷ್ಮಋತು ಬಿರಿಸುತ್ತ ವಾಯುಪಟ ಮಿಕ್ಕ
ಈ ಸಮೀರ ಭೂತ ತತ್ತ ಲೋಕದಗತಿ
ಶೇಷ ವಿಶೇಷ ವಿರಾಟ ಬ್ರಹ್ಮಾಂಡದಲ್ಲಿ
ಭೂ ಸಲಿಲಭಾಗ ಮೇಲಾವರಣಾಚೆಯಲಿ
ಸೂಪಿಕೊಂಡಿದ್ದ ಮಾರುತ ಚಂಡವಾತಗಳ
ಈಸು ಬಗೆಯನು ಪೂರ್ವದಂತೆ ಎ
ಣಿಸುವದು ವಾಯು ಪರಮಾಣುಗಳಲ್ಲಿ
ವಾಸುದೇವನೆ ಯಿಪ್ಪನೆಂದು ಚಿಂತಿಸು ಮನ್ಮಜಾ
ದೋಷದೂರನಾಗು ಇದರಿಂದಲಿ
ಈಶ ಸರ್ವೇಶ ನಮ್ಮ ವಿಜಯ ವಿಠಲರೇಯನ್ನ
ಬೇಸರದಲೆ ಮನದೊಳಗೆ ನಿಲಿಸೋ ೪
ತ್ರಿವಿಡಿ ತಾಳ
ನೇತುರಾಗ್ನಿ ಜಠರಾಗ್ನಿ ಪಾವಕ ಕಣ
ಜ್ಯೋತಿ ಜ್ವಾಲೆ ದೀಪ ಪಂಚ ವಿಧ ಪಂಚಾಗ್ನಿ
ಜಾತ ಕರ್ಮ ವಿವಾಹ ವೈಶ್ವದೇವ ಉಪ
ನೀತ ಶಾಂತಿ ಕರ್ಮ ಅಭಿಚರಾಗ್ನಿ ಪಿತೃ
ನೀತಾ ನಿತ್ಯಾಗ್ನಿ ಹೋತ್ರ ನಾನಾ ಬಗೆ ಯಾಗಾ
ಜಾತ ವೇದ ದಾವಾ ವಡಬಾಗ್ನಿ ಧೂಮ್ರಾದಿ
ಭೂತಳ ವಿಡಿದು ವಿರಾಟ ಪರಿಯಂತ
ಜ್ಯೋತಿ ಪ್ರಕಾಶಗಳು ಪದ್ಮಜಾಂಡ ತೃತಯ
ಭೂತಾವರಣ ಸಹ ಚಿಂತಿಸು ಪರಮಾಣು
ಬಿಂದುಗಳಿನ್ನು ಪ್ರತಿ ಪ್ರತಿಕ
ಭೀತಿರಹಿತ ನಮ್ಮ ವಿಜಯ ವಿಠಲರೇಯ
ಈ ತೆರದಲ್ಲಿಪ್ಪ ಬಲ್ಲವಗೆಲ್ಲೆಲ್ಲಿ ೫
ಧ್ರುವ ತಾಳ
ರಸನೆ ಮಿಕ್ಕಾದೋದಕ ಶ್ರೀಕರ ವರಷಧಾರಿ
ಬೆಸನೆ ಅಗ್ರೋದಕ ನೈವೇದ್ಯ ವಾರಿ ತೃಷಿ
ಬಿಸಿ ನಿಧಿ ನದಿ ಕ್ಷುದ್ರ ನದಿ ತಟಾಕ ವಾಪಿ
ಕುಶಲ ಕೂಪ ದೇವಖಾತ ವರತೆ ಮಡವು
ಪ್ರಸರ ಸರೋವರ ಕ್ರೀಡಾಜಲವ ಸಂ
ದಿಸಿ ಪೂರ್ವ ಪ್ರವಹ ಸುಳೆಫೇನ ಬುದ್ಬುದ
ಎಸೆವ ತೆರೆ ಬಹುರಸ ಸಮಸ್ತ ಬೊಮ್ಮಾಂಡ
ಮುಸುಕಿದ ಸುತ್ತುಮಿತಿ ತಿಳಿದು ಕೊಂಡಾಡುವುದು
ವಸುದೇವ ಪುತ್ರನಿದೆ ರೂಪದಿಂದಿಪ್ಪನೆಂದು
ನಸುನಗುತ ತಿಳಿವುದು ಯೋಗ್ಯಜನಕ್ಕೆ
ಅಸಮ ಸಾಹಸ ನಮ್ಮ ವಿಜಯವಿಠಲರೇಯ
ವಶವಾಗಿಯಿಪ್ಪ ಸಾಕಾರ ಸರ್ವೋತ್ತಮ ೬
ಝಂಪೆ ತಾಳ
ಪುರಿ ಗೋಪುರ ದುರ್ಗ ಸಾಲಿ ಪ್ರಾಸಾದ ಮಂ
ದಿರ ಸಭೆ ಸಮಸ್ತ ದೇವಾಲಯ
ಪುರ ಅಗ್ರಹಾರ ಖೇಟಕ ಘೋಷ ವೇದಿಕ
ಅರವಂಟಿಗೆ ಆಸ್ಥಾನ ರಾಜಧಾನಿ
ಶರ ನಿಧಿ ನದಿ ಕೂಲ ದ್ವೀಪ ಪರ್ವತ ನಿಮ್ನ
ತರು ಮೊದಲಾದ ಭೂರುಹ ಜಾತಿ
ಮರಕತ ಮಿಕ್ಕಾ ನವರತುನ ರಜತ ಸ್ವರ್ನ
ಪರಿ ಲೋಹಕಾಂಶ ತಾಂಬ್ರಾದಿ ಧಾತು
ಪರಶು ನೇಗಲಿ ಶಕ್ತಿಗದ ಶಂಖ ಚಕ್ರ ತೋ
ಮರ ಪರೀಘ ಚಾಪ ನಾನಾಶಸ್ತ್ರವು
ಪರಿ ಪರಿ ಧಾನ್ಯ ರಥ ಫಲ ಪುಷ್ಪ ಹದಿನಾಲ್ಕು
ಧರಿಣಿತಳ ಉಪದ್ವೀಪ ಎಂಭತ್ತು ನಾಲ್ಕು ಲಕ್ಷ
ಶರೀರ ಧಾರಿಗಳ ಗಾತ್ರ ಚಿತ್ರಲೆಖ್ಖನಿಂ
ದಿರದೆ ಬೆಮ್ಮ್ಮಾಂಡ ಖರ್ಪರ ದ್ವಿಗುಣ
ಧರೆ ಮೀರಿ ಮೂಲ ಪ್ರಕೃತಿ ತನಕ ಯೋಚಿಸು
ಪರಮಾಣು ಮೂರುವಿಧ ಅಣಿ ಅಂಶಾ
ಭರಿತವಾಗಿವೆ ನೋಡು ಜಗವೆಲ್ಲ ಸರ್ವದಾ
ಇರುತಿಪ್ಪವು ಶುಭ್ರ ರಕ್ತ ಕಪ್ಪು
ಹರಿಯ ಚಿಂತಿಸು ಅಲ್ಲಿ ಒಂದೊಂದು ಭಾವದಲ್ಲಿ
ಮೆರೆವ ಆತುಮ ಜಗದಾತುಮನ್ನಾ
ಮರಿಯದಿರು ಆವಾವ ಕ್ರೀಯೆ ಮಾಡುವಾಗ
ಹೊರಗೆ ಒಳಗೆ ನೆನೆದು ಸುಖಿಸು ಸತತಾ
ಚರರಿಗೆ ಬದ್ಧವಾಗಿಪ್ಪ ಲಿಂಗ ಗಾ
ತುರದ ಸ್ಥಿತಿ ತಿಳಿದು ತಿಳಿದು ತಿಳಿಯೋ
ಪರಿಪೂರ್ಣ ಗುಣಪೂರ್ಣ ವಿಜಯ ವಿಠಲರೇಯ
ಸುರ ನರೋರಗರಲ್ಲಿ ಇನಿತು ನಿರ್ನೈಸಿ ೭
ಅಟ್ಟತಾಳ
ಭೂತ ಪಂಚಕದಲ್ಲಿ ಬಹುವಿಧ ತಿಳಿದು ಗು
ಣಾತಿಶಯದಿಂದ ತತ್ತದ್ಗುಣಂಗಳ
ಮಾತುರ ಕರ್ಮಜ್ಞಾನ ತತ್ವ ಹುದುಗಿಸಿ
ಪ್ರೀತಿಯಿಂದಲಿ ಪ್ರಾಣ ಅನ್ನಮಯ ಕೋಶವು
ಈ ತೆರದಲಿ ಏಳು ವೊಂದೇಳು ತತುವವೊ
ಭೂತದಲ್ಲಿ ವುಂಟು ಐದು ಸ್ಥಾನದಲ್ಲಿ
ಶ್ರೋತರ ತ್ವಕು ಚಕ್ಷು ರಸಿಕ ನಾಶಿಕವನ್ನು
ಮಾತು ಮಾತಿಗೆ ಕೇಳಿ ಈಕ್ಷಿಸಿ ದ್ಯಾನಿಸಿ
ಕೌತುಕ ಐದುವ ಕಾಲಜ್ಞರ ಕೇಳಿ
ಧಾತು ಮೊದಲಾದ ಪ್ರತಿಮೆಯಲ್ಲಿ ಈ
ಭೂತಗಳಿಟ್ಟು ಒಂದೊಂದು ಬಗೆಯಿಂದ
ಶ್ರೀ ತರುಣೀಶನ್ನ ರೂಪಂಗಳಾನಂತ
ಜ್ಯೋತಿ ಪ್ರಕಾಶ ಮಯವಾದ ದೇವನ
ನೀತಿಯಿಂದಲಿ ನಿನ್ನ ಯೋಗ್ಯತ ಪ್ರಕಾರ
ಸ್ವೋತ್ತಮರಿಂದ ಉಪಾಸನೆ ಚಿಂತಿಸಿ
ಓತ ಪ್ರೋತದಂತೆ ಹರಿವ್ಯಾಪ್ತಿ ನಿಜ
ವಾಗಿ ಭೂತಕ್ಕೆ ಒಂದೊಂದು ಹೆಚ್ಚು ಕಡಿಮೆಯಿಂದ
ಧೌತ ಪಾಪನಾಗು ಪಾರಮಾರ್ಧಿಕದಲ್ಲಿ
ಶ್ವೇತದ್ವೀಪ ಸೂರ್ಯ ಮಂಡಲ ತನ್ನಯ
ಗಾತ್ರ ಸಾಲಿಗ್ರಾಮ ಪಂಚಭೇದಸ್ಥಾನ
ವಾತ ಪ್ರತೀಕದೊಳರ್ಚನೆ ಮಾಡು
ಆತುಮ ಮೂರುತಿ ವಿಜಯ ವಿಠ್ಠಲ ಸರ್ವಾ
ತೀತನು ಮೂತ್ರ್ಯಾ ಮೂರ್ತಿಯಲ್ಲಿ ನಿಲಿಸೊ ೮
ಆದಿತಾಳ
ಏಕೇಕ ಭೂತ ಲೌಕಿಕ ವೈದಿಕ
ನೇಕ ವ್ಯವಹಾರದಲ್ಲಿ ಶ್ರೀ ಕಾಂತನ ಮೂರ್ತಿಯ
ಸಾಕಾರವಾಗಿತಿಳಿ ಬೇಕಾದ ಪುರುಷಾರ್ಥಾ
ತಾ ಕೊಡುವನು ಜಗದೇಕ ವಂದ್ಯನು ಪುಣ್ಯ
ಶ್ಲೋಕ ಶೋಭನ ದೇವನಾಕಿ ವೃಂದರ ಸಹಿತ
ಆಕಾಶ ಮೊದಲಾದ ತತ್ವಂಗಳೆಲ್ಲ ಸರ್ವ
ಲೋಕವೆ ತುಂಬಿದೆ ಪರಮಾಣು ದ್ಯಣುಕವು ಎಂದು
ಅಕಾರ ಮಿಗಿಲಾದ ಎಂಟು ವರ್ಗ ದಿಂದ
ವೈಕುಂಠವಾಗುವುದು ದೇಶಕಾಲದಿವಿಡಿದು
ಪ್ರಾಕೃತ ರಹಿತನೆ ಹರಿಯೆಂದು ಕೊಂಡಾಡಿ
ಭೂತದೊಳು ಚರಿಸು ಸತ್ಕರ್ಮದಲ್ಲಿ
ವಾಕು ಬರಿದೆ ಮಾಡಿ ಬಾಳದಿರೆಲೊ ಮನುಜ
ಏಕಾಂತದವರ ಕೇಳು ಸುಖದಲ್ಲಿ ಬಾಳು ಬಾಳು
ಈ ಕಲಿಯುಗದಲ್ಲಿ ಇದನೆ ಕೈಕೊಂಡರೆ
ಶೋಕನಾಶ ಜನ್ಮ ಜನ್ಮಾಂತರದಲಿದ್ದ
ಏಕ ಚತುರಗುಣಾವಿಡಿದು ಪೂಜಿಸಿ ವಿ
ವೇಕನಾಗೆಲೊ ಪಂಚವಿಧರೊಳು ಒಬ್ಬನೆನಿಸಿ

ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯೇ

೧೪
ಧ್ರುವ ತಾಳ
ಅರ್ಚಿಸು ಮನವೆ ನಿತ್ಯ ಅನಾದಿ ಮೂರುತಿಯ
ನಿಚ್ಚಳವಾಗಿ ನಿಸ್ಸಂಗದಲ್ಲಿ
ಅಚ್ಚಾ ಭಕುತಿಯಲ್ಲಿ ಪಂಚ ಭೇದಜ್ಞಾನ
ಎಚ್ಚತ್ತು ದಿವಾರಾತ್ರಿ ದೈನ್ಯ ವೃತ್ತಿ
ಯಾಚಕ ನಾನು ಬೊಮ್ಮಾದ್ಯರ ತಾರತಮ್ಯ ತಿಳಿದು
ಸಚ್ಚಿದಾನಂದಾತ್ಮಕ ಗುಣಗಳಿಂದ
ಅಚ್ಯುತಾನಂತ ಗೋವಿಂದ ಗೋಪಾಲಕೃಷ್ಣ
ಸುಚ್ಚರಿತಸಾರ ಸುಖಸಾಗರ
ನೆಚ್ಚಿದ ವರನೆಂಟಾ ನಿಗಮಾಗೋಚರನೆಂದು
ಮೆಚ್ಚಿಸು ಮುದದಿಂದ ಮುಂದಾಲಿಸಿ
ಬಚ್ಚಿಟ್ಟ ದ್ರವ್ಯದಂತೆ ಅನ್ಯರಿಗೆ ತೋರಿದರು
ಹುಚ್ಚು ಹುಚ್ಚಾಗಿರು ಬಾಹಿರದಲ್ಲಿ
ಹೆಚ್ಚುವದು ನಿನಗೆ ಇದರಿಂದ ಲಾಭ ಪ್ರಾಪ್ತಿ
ಬಿಚ್ಚಿ ಬಿಸಾಟಿದರು ಅಂತರಂಗ
ಸಚ್ಚರಾಚರದಂತೆ ಚರಿಸು ಚನ್ನಾಗಿ ಬಲು
ಚಚ್ಚರದಲಿ ಚಂಚಲ ಬೀರೂತ
ಹಚ್ಚಿಕೆ ಜನರನ್ನು ಒದೆದು ಓಡಿಸುವೊಳಗೆ
ಮೆಚ್ಚುಗೊಳಿಸು ತಿರು ವೈದೀಕವ
ಯಚ್ಚಾವಾಗದಂಥ ಪುಣ್ಯವೆ ಸಂಪಾದಿಸಿ
ಮುಚ್ಚು ಮರೆಯೆಲ್ಲೆ ಅನುಭವಿಸು
ಅಚ್ಚಟ ವೈರಾಗ್ಯ ಧೃಡವಾಗಿ ತಿಳಿದು ಕೆಂ
ಗಿಚ್ಚು ಬೀರೂವದು ಪಾಪದರಾಶಿಗೆ
ಲಚ್ಚು ಮನುಜನಾಗಿ ಲೋಕಕ್ಕೆ ಕಾಣಿಸು
ರಚ್ಚಿಗೆ ಹಾಕದಿರು ದಿವ್ಯ ಪ್ರಮೇಯಾ
ಸುಚಿತ್ರನಾದ ನಮ್ಮ ವಿಜಯ ವಿಠ್ಠಲರೇಯನ
ಅರ್ಚಾಗುಪ್ತ ಮಾರ್ಗದಲಿನಿಲಿಸು ಸಂತತವೊಲಿಸು ೧
ಮಟ್ಟತಾಳ
ಕರ್ಮವ ಕಡೆಮಾಡಿ ನೆಲೆಗೊಂಡವನಾರು
ಧರ್ಮವನೆ ಮಾಡಿ ಕಡೆ ಬಿದ್ದವನಾರು
ಮರ್ಮ ತಿಳಿಯದನಕ ಏನೇನು ಮಾಡಿದರು
ನಿರ್ಮಳ ಪದವಿಗೆ ನಿಶ್ಚಿಂತ ಪಥವಲ್ಲಾ
ನಿರ್ಮತ್ಸರದಿಂದ ಎಳ್ಳನಿತದಾಗೆ
ಪೆರ್ಮೆಯಿಂದಲಿ ಬಹು ಅನುಭವ ಸಿದ್ಧಿಪದು
ಚರ್ಮಾ ಪಾಲಿಸಿಕೊಂಡು ಕಷ್ಟ ತರದಿಂದ
ದುರ್ಮತಿಯಾದರೆ ಫಲ ಪ್ರಾಪ್ತಿ ಉಂಟೆ
ಕರ್ಮ ಧರ್ಮದ ಒಡೆಯ ವಿಜಯ ವಿಠ್ಠಲರೇಯನ
ಮರ್ಮಗಳನು ತಿಳಿದು ವರ್ಣಿಸು ನಿನ್ನೊಳಗೆ ೨
ತ್ರಿವಿಡಿ ತಾಳ
ಸ್ಥೂಲ ದ್ರವ್ಯಗಳ ಬಾಹಿರದಲಿ ತಂದು
ಕಾಲಕಾಲಕೆ ಆಯಾಸ ಬಡುವುದಲ್ಲಾ
ಕೇಳೋದು ಕಿವಿಗೊಟ್ಟು ಅನ್ಯರರಿಯದಂಥ
ಮೇಲು ಉಕ್ತಿಯನ್ನು ಕೇವಲ ಸುಲಭಾ
ಆಳು ಸಾಮಗ್ರಿಗಳು ಬೇಕಾದವಲ್ಲಾ
ವಿಶಾಲ ದೇಶ ಕೋಶ ಅರಸಸಲ್ಲಾ
(ವ್ಯಾ)ವೇಳ್ಯಗೆ ದೊರೆತದ್ದು ಪೂಜಿಸಲಿಬಹುದು
ಮೂಲ ಮುಟ್ಟದು ಕಾಣೋ ತಿಳಿಯದನಕಾ
ಸಾಲು ಸಾಲಾಗಿ ವೈಯ್ಯಾರ ತೋರುವುದಲ್ಲ
ಹೇಳುವೆ ಒಂದೊಂದು ದಿವ್ಯ ಮತುಗಳು ಹೀ
ಯಾಳಿಯಿಂದಲತಿ ನಿತ್ಯಮನದಾ
ಆಲೋಚನೆಯೆಲ್ಲ ಪೂಜಾವಿಧವೇ ಎಂದು
ವಾಲಯ ಹರಿಯ ಸಂಪ್ರೀತಿ ಬಡಿಸೂ
ಬಾಳು[ವು]ದನುದಿನ ಲೇಶವಾದರು ನಿನಗೆ
ಕಾಲ ಕರ್ಮದ ಭೀತಿ ಇಲ್ಲವಿಲ್ಲಾ
ಹಾಳು ಹರಟಿಯಮಾತು ಪೇಳುತ್ತಲಿದ್ದರೂ
ಓಲಾಡು ಅಂತರಂಗದ ಮಧ್ಯದಿ
ವಾಲಗವನೆ ಮಾಡು ಮರೆಯದೆ
ಏಳಲಾವೆನ್ನದಿರು ಎಲ್ಲಿದ್ದರು ನಿನಗೆ
ಕಾಲನ ಉಪದ್ರವಾಗದಿದಕೊ
ಶ್ರೀ ಲೋಲನಾದ ವಿಜಯ ವಿಠಲರೇಯನ
ಮಾಲೆಯಿಂದಲಿ ಎಣಿಸುತ ಚರಿಸುವದೂ ೩
ಅಟ್ಟ ತಾಳ
ಸುಲಭವಾಗಿದ್ದ ಪೂಜಿಯ ನೋಡು ನಿನ್ನೊಳು
ಗಲಭೆಯಾಗದಿಪ್ಪದು ಕಾಣೊ ಎಂದಿಗೂ
ಎಲೊ ಎಲೊ ಮನವೆ ಇಂಥ ಯೋಗ ಸಂಪಾದಿಸಿ
ಬಲುಧನ್ಯನಾಗು ಬಾಹಿರಂಗಡಿಬಿಡು
ಕುಳಿತದ್ದು ನಿಂತದ್ದು ನಿಂತದ್ದು ತಿರುಗಾಡತಿದ್ದದ್ದು
ಮಲಗಿ ಕೊಂಡಿದ್ದದ್ದು ಇವು ನಾಲ್ಕರೊಳು
ಹಲವು ಬಗೆ ಉಂಟು ಹೆಜ್ಜಿಗೆ ಹೆಜ್ಜಿಗೆ ಕರ
ತಳದೊಳಗಿದ್ದ ಪದಾರ್ಥ ನೋಡಿದಂತೆ
ತಿಳಿದು ತಿಳಿಯಬೇಕು ಅನುಭವ ರೂಢದಲ್ಲಿ
ಕಲಿಭಂಜನ ನಮ್ಮ ವಿಜಯ ವಿಠ್ಠಲನಂಘ್ರಿ
ಜಲಜ ಕಾಂಬುವುದಕ್ಕೆ ಇದೆ ಇದೆ ಉಪಾಯಾ ೪
ಆದಿತಾಳ
ಏಕಮೇವ ಸರ್ವ ಜಡದ್ರವ್ಯಂಗಳೆಲ್ಲಾ
ಲೋಕದೊಳಗೆ ಹರಿಯ ಆಕಾರವೆಂದು ಅರಿದು[ಅ]
ನೇಕ ವಾಕ್ಯಗಳೆಲ್ಲ ಒಡಿಯನಿಗೆ ಉಪಚಾರಾ
ನೇಕ ವಿಧದಿಂದ ನಿಜವೆಂದು ಹಿಗ್ಗುತಾ
ಈ ಕಳೇವರ ಮಿಕ್ಕಾದ ಇಂದ್ರಿಯಂಗಳು ತನ್ನ
ಜೋಕೆ ಮಾಡುವರು ಮಾನಿಸಿಕೊಂಬಾ ಸಕಲಜನರು
ಶ್ರೀ ಕಮಲಾಕ್ಷ ತನ್ನ ಅಧೀನವೆ ಎಂದು
ವ್ಯಾಕುಲ ಪಿಡಿಯದೆ ಚಿಂತಿಸಬೇಕು ನೀನೆ
ಲೌಕಿಕವಾದರು ವ್ಯರ್ಥವಾಗದು ವೈ
ದೀಕ ವೆನಿಸುವುದು ಎತ್ತಲಾದರೂ ನೋಡೆ
ಏಕೀ ಭೂತ ನಮ್ಮ ವಿಜಯ ವಿಠ್ಠಲರೇಯಾ
ಸಾಕುವ ಸಾಕುವ ಇಹ ಪರದಲ್ಲಿ ಒಲಿದೂ ೫
ಜತೆ
ದ್ವಿವಿಧ ಕರ್ಮಗಳು ಹರಿಯಾಧೀನ ಚಿಂತನೆ
ವಿವರಿಸಿ ಮಾಡಲು ವಿಜಯ ವಿಠ್ಠಲಗೆ ಪ್ರೀತಿ ೬

ವಲ್ಕಲ ಎಂಬ ಕ್ಷೇತ್ರದಲ್ಲಿ ಜನಾರ್ಧನ

೯೦. ವಲ್ಕಲ
ಧ್ರುವತಾಳ
ಅರ್ಧಮನ[ವೀ]ಯಾದಿರು ಬಿದ್ದೆ ನಿನ್ನ ಪಾದಕ್ಕೆ |
ಉದ್ಧರಿಪುದು ಸಮುದ್ರ ಶಯ್ಯಾ |
ಹದ್ದು ಹಾವಿಗೆ ಹರಿದೆದ್ದು ಕವಿದಂತೆ |
ಕೃದ್ಧಾಗಳಿಂದಲಿ ಪೊಂದಿಪ್ಪನೊ |
ಒದ್ದು ಕಡಿಗೆ ನೂಕೊ ಸದ್ದಡಗಿಸಿ ಖಳರ |
ಸದ್ದಾಗದಂತೆ ಒಳಗೆ ತಿದ್ದಿಡುವುದು |
ಶುದ್ಧ ಸ್ವಭಾವ ನಮ್ಮ ವಿಜಯವಿಠಲ ಜ |
ನಾರ್ಧನ ರಕ್ಷಣ ಅಬ್ಧಿನಿವಾಸ ೧
ಮಟ್ಟತಾಳ
ಒಂದು ದಿನದಲಜನು ಚಂದದಿಂದಲಿ ಆ |
ನಂದ ವೈಜಯಂತಿ ಎಂದೆಂಬೊ ಸಭೆಯಲ್ಲಿ |
ವೃಂದಾರಕ ಸಿದ್ಧಗಂಧರ್ವ ಸರ್ವ |
ಸಂದಣಿಯಲ್ಲಿ ನವನಂದನರ ಸಹಿತ |
ಅಂದು ವಾಲಗವಾಗೆ ಮಂದಹಾಸದಲಿನಾ |
ರಂದ ಮುನಿಪ ನಡೆತಂದನು ಎದುರಾಗಿ |
ಇಂದಿರಾಪತಿ ಗೋವಿಂದ ವಿಜಯ ವಿಠ |
ಲಂದಾಗಿರುತಿರಲು ಬಂದನು ಪಾಡುತಲಿ |
ಬಂದು ಜನಾರ್ಧನನ ಮಂದರದಲಿ ನುಡಿಸಿ ೨
ರೂಪಕತಾಳ
ಬರಲು ನಾರದಮುನಿ ಪರಮೇಷ್ಟಿ ಆತ್ಮಜನ |
ನೆರವಾಗಿ ಬರುತಿಪ್ಪ ಹರಿಮೂರುತಿಯ ನೋಡಿ |
ಸರಸರನೆ ಎದ್ದು ನಿಂದರಲಾಗಿ ನವಪ್ರಜೆ |
ಶ್ವರರು ಹಾಸ್ಯವಮಾಡೆ ಹರಿದು ಶಾಪಿಸಿ ನೀವು |
ನರರಾಗಿ ಪುಟ್ಟಿ ಸಂಚರಿಸು ಎಂದೆನಲಾಗಿ |
ಮ[ರು]ಗಿ ತಮ್ಮೊಳಗೆ ತತ್ತರಿಸೀದವರಾಗ |
ಸುರಪಾಲ ವಿಜಯವಿಠಲ ಜನಾರ್ಧನನೆಂಬೊ |
ಸುರಮುನಿಯಾ ಕೊಂಡಾಡಿ ವರದಾರೀವಾರ್ತಿ ೩
ಝಂಪೆತಾಳ
ಕೇಳಿ ಕೌತುಕವೆಂದು ತಲೆದೂಗಿ ಹರಿಲೀಲೆಗೆ |
ಪೇಳಲಾರಳವೆ ಶೃತಿವಚನದಿಂದ |
ಭೂಲೋಕದಲಿ ಪರಶು ರಾಮಕ್ಷೇತ್ರ ಉಂಟು |
ವಾಲಯಾಲಿಪ್ಪ ಅಶ್ವತ್ಥದವಲ್ಲೀ |
ಮೇಲಾದ ಕಣ್ವಮುನಿ ಆಶ್ರೈಸಿ ಇರುತಿಪ್ಪ |
ಪೇಳುವೆನು ಮನಶುದ್ಧರಾಗಿ ಕೇಳಿ |
ಅಲಸಾ ಗೈಸದತಿ ಪೋಗಿ ನಿಮ್ಮಯ ಶಾಪ |
ಬೀಳೂ ಹಾಕುವದಕುಪಾಯವಂದೂ |
ಶ್ರೀಲೋಲ ವಿಜಯವಿಠಲ ಜನಾರ್ಧನನೆಂದು |
ಬೀಳುಕೊಟ್ಟನು ನವ ಪ್ರಜೇಸರಿಗೆ ೪
ತ್ರಿವಿಡಿತಾಳ
ನಾಋದ ಕೃಪೆಯಿಂದ ಭೈರವಾಸದಜನೀ |
ವಾರವ ಕೊಡಲಾದರ ಸಂಗಡದಲ್ಲೀ |
ಶರೀರ ಧರಿಸಿ ಬಂದರು ನಾರವಸನ |
ಭೋರಾನೆತಂದಿಲ್ಲಿ ಕೇಡಾದದಂದು ಮೊದಲು |
ಧಾರುಣಿ ಒಳಗೆ ವಲ್ಕಲ ಕ್ಷೇತ್ರವೆಂದಿದು |
ಕಾರಣವಾಯಿತು ಪಂಚಕ್ರೋಶಾ |
ಸಾರಸುಂದರ ವಿಜಯವಿಠಲ ಜನಾರ್ಧನ |
ಮೀರಿದ ದೈವದ ಮಾಯಾವಿನ್ನೆಂತುಂಟೊ ೫
ಝಂಪೆತಾಳ
ಒಂಭತ್ತುಮಂದಿ ಬ್ರಹ್ಮನ ಮಕ್ಕಳು ಬಂದು |
ಸಂಭ್ರಮದಲ್ಲಿ ಅಶ್ವತ್ಥವನ್ನೂ |
ಅಂಬಕಾದಿಂದಲ್ಲಿ ನೀಕ್ಷಿಸಲು ಸ್ವರ್ಣಮಯ |
ಅಂಬರಕೆ ತುಳುಕುತಿದೆ ಅಲ್ಲಿಗಲ್ಲೀ |
ಕೊಂಬಿಕೊಂಬಿ ಎಲೆಮೂಲಾಗ್ರ ಪರಿಯಂತ |
ತುಂಬಿಹರು ಸುರರಾದಿ ತೆರವಿಲ್ಲದೆ |
ಜಂಬುದ್ವೀಪದೊಳಗೆ ಇದಕೆಣೆ ಇಲ್ಲೆಂದು |
ಇಂಬು ಮಾಡಿದರದರ ಛಾಯದಲ್ಲೀ |
ಕಂಬುಧರ ವಿಜಯವಿಠಲ ಜನಾರ್ಧನ ಪರ |
ನೆಂಬ ಮುನಿಪನು ಬಂದ ಕುಂಭಿಣಿಸುರನಾಗಿ ೬
ತ್ರಿವಿಡಿತಾಳ
ಪ್ರಜೇಶ್ವರರಿಗೆ ಉಪದೇಶವ ತಿಳುಹಿದ |
ದ್ವಿಜನಾಗಿ ಬಂದ ನಾರದಮುನಿ ಅಂದೂ |
ದ್ವಿಜಗಮನನ ಬಳಿಗೆ ಪೋಗಿ ತುತಿಸಿ ಚಕ್ರ |
ನಿಜವಾಗಿ ಕಳುಹಿ ಚಕ್ರತೀರ್ಥವೆನಿಸಿದ |
ಭಜಿಸುತ್ತ ಮನದೊಳು ಹರಿಯ ಚರಣವನ್ನು |
ಅಜನ ಬಳಿಗೆಯೈದ ಭಾಗವತರಮಣಿ |
ತ್ರಿಜಗ ಮಧ್ಯದಲೊಂದು ಯಾಗ ಮಾಡುವುದಕ್ಕೆ |
ರುಜುವಾದ ನೆಲನೆನಗರುಹೆನಲು |
ಅಜನ ಮಾತನು ಕೇಳಿ ಕರವ ಜೋಡಿಸಿನಿಂದು |
ಸುಜನರಾಗ್ರಣಿ ಪೇಳಿದನಿದರ ಮಹಿಮಿಯಾ |
ಗಜವರದಾ ವಿಜಯವಿಠಲ ಶ್ರೀಜನಾರ್ಧನ |
ಯಜಮಾನನಾಗುವ ಮೇಧದಲ್ಲಿಗೆ ಬಂದೂ ೭
ಅಟ್ಟತಾಳ
ಹರುಷದಿಂದಲಿ ಬಂದು ಪರಮೇಷ್ಟಿಯಾಗವ |
ಸುರರಸಹಿತವಾಗಿ ಸರಿಯಿಲ್ಲವಧಾನಾ |
ಸರಿಯಾದೆ ಕೊಡುತಿರೆ ನಿರುತಾದಲ್ಲಿ ವೈಶ್ವಾ |
ನರಗೆ ವಖ್ಖಸವಾಗೆ ಪರಿಹಾರಾ ಕಾಣಾದೆ |
ಭರದಿಂದಲಿ ಅಗ್ನಿ ಹರಿಯಾ ಮೊರೆಯೋಗೆ |
ಕರುಣಾದಿಂದಲಿ ಕೇಳಿ ಹರಿಬಂದಾ ಬಾಲಾ ಭೂ |
ಸುರ ವೇಷವನು ತಾಳಿ ಇರಲದೆ ಕ್ಷುದಿ ಪರಿ |
ಹರಿಸೆಂದು ಗ್ರಾಸವಾ (ನೀಡಿಸುಎನೆ) ತರಿಸಿವಾದರಿಸಿ |
ಪರಮಸೋಜಿಗವೆಂದು ಸುರಜೇಷ್ಠ ತಲೆದೂಗಿ |
ಹರಿಮಾಯಾ ವಿಜಯವಿಠಲ ಜನಾರ್ಧನ |
ಕರುಣಿಯಾ ಮನದಲ್ಲಿ ಸ್ಮರಿಸಿ ಮನ್ನಿಸಿದ ೮
ಆದಿತಾಳ
ಎಲ್ಲೆ ಓದನರಾಸಿ ಎಲ್ಲೆ ನಾನಾಕರಾಸಿ |
ಎಲ್ಲೆ ಘೃತದ ಮಡುವು ಎಲ್ಲೆಲ್ಲಿ ಇದ್ದವೆಲ್ಲಾ |
ಅಲ್ಲಿಗಲ್ಲಿಗೆ ಬಯಲು ನಿಲ್ಲದಡಗಿದವು |
ಎಲ್ಲಿ ಅದ್ಭೂತವೆಂದು ತಲ್ಲಣಿಸಲು ಇತ್ತಲು |
ಬಲ್ಲಿದ ದೈವ ಕರದಲ್ಲಿ ಆ ಪೋಷಣಿಯಾ |
ನಿಲ್ಲದೆ ಪಿಡಿದು ಗ್ರಾಸಾ |
ಇಲ್ಲಾವೆಂದರೆ ನಾನು ಕೊಳ್ಳತಕ್ಕವನೆಂದು |
ಸೊಲ್ಲು ಪೇಳಾಲೆಂದು ಅಜನು |
ಮೆಲ್ಲಾನೆ ತುತಿಸಿ ಸಿರಿವಲ್ಲಭನ ಲೀಲೆ ತಿಳಿದು |
ನಿಲ್ಲಿಸಿದ ಯಾಗವನು ಇಲ್ಲಿನವ ಪ್ರಜೇಸನು |
ಪುಲ್ಲನಾಭವೊಲಿಸಿ ವೇಗದಲಿ ಮನುಜ ದೇಹಬಿಟ್ಟು |
ಸಲ್ಲಿದರು ಪೂರ್ವದಂತೆ ಎಲ್ಲರಿಂದ ಪೂಜೆ |
ಗೊಳ್ಳುತನ ವಳ್ಳಿತಿದು ಭಾಗೀರಥೀ |
ಉಳ್ಳ ತಾಮ್ರಪರ್ಣಿಸಲಿಲಾ |
ಎಲ್ಲಾ ಪ್ರಖ್ಯಾತವಾಗಿಪ್ಪ |
ಅಲ್ಲಿಗಲ್ಲಿಗೆ ಧರೆ ನರರೂ |
ಒಲ್ಲೆ ಎನದೇ ಇಂದು ಕ್ಷಾಯದಲ್ಲಿ ಮಿಂದು ಶುದ್ಧನಾಗೆ |
ಎಲ್ಲ ದೋಷಂಗಳು ಇರದೆ ತಲ್ಲಣಿಸಿ ಪೋಗುವುವು |
ಖುಲ್ಲರರಿ ಜನಾರ್ಧನ ವಿಜಯವಿಠಲರೇಯಾ |
ಎಳ್ಳಿನಿತು ಬಿಡದೆ ಸಾರೆ ಗೆಲ್ಲಿಸುವ ಶೋಕದಿಂದ ೯
ಜತೆ
ವಲ್ಕಲಾ ಕ್ಷೇತ್ರದಾ ವಾಸ ಜನಾರ್ಧನ |
ಬಲವಂತ ವಿಜಯವಿಠಲ ಪಾವಕಪಾಲಾ ೧೦

ಪ್ರತಿಯೊಬ್ಬರ ಹೃದಯದಲ್ಲಿ ಜೀವವಿದ್ದು

೧೫
ಧ್ರುವತಾಳ
ಅಷ್ಟದಳದಲ್ಲೊಪ್ಪುವ ಕಮಲ ಹೃದಯಾಕಾಶದಲ್ಲಿ
ಅಷ್ಟದಿಕ್ಪಾಲಕರು ತಮ್ಮ ನಿಜದಳದೊಡನೆ
ಅಷ್ಟೈಶ್ವರ್ಯದಿಂದ ಶ್ರೀಶನ್ನ ಪದವಾಲಗ
ತುಷ್ಟರಾಗಿ ಮಾಡಿ ಸುಖಿಸುವರು
ಸ್ಪಷ್ಟನಾಗಿ ನಿರೂಪದಂತೆ ಕಾಲಕಾಲಕೆ ಬಿಡದೆ
ಶಿಷ್ಟಾಚಾರದಲ್ಲಿ ನಡೆಯುತಿದ್ದು
ವಿಷ್ಟು ಅಂಗುಷ್ಟ ಪ್ರಮಾಣ ವಿಶ್ವ ವ್ಯಾಪಕನಾಗಿ
ಅಷ್ಟ ಬಾಹ ಅಷ್ಟ ಆಯುಧ ಅತಿಸರ ಸೌಂದರ್ಯ
ಅಷ್ಟ ಪರಿಮಿತ ದ್ವಾತ್ರಿಂಶ ಲಕ್ಷಣ
ಸ್ಪಷ್ಟ ಕರ್ಣಿಕ ಪದ್ಮನಾಳ ಶೋಭಿಸುತಿಪ್ಪ
ಸೃಷ್ಟಿಯೊಳಗೆ ಇದು ತಿಳಿದ ಮನುಜ ಜ್ಞಾನಿ
ಇಷ್ಟಾರ್ಥ ಕೊಡುವ ಶ್ರೀ ವಿಜಯವಿಠಲ
ಕೃಷ್ಣ ಅಷ್ಟದಳ ಮಿಕ್ಕಾದಲ್ಲಿ ಸಂಚರಿಪಾ ೧
ಮಟ್ಟ ತಾಳ
ಒಂದೊಂದು ದಳದಲ್ಲಿ ಒಬ್ಬೊಬ್ಬ ಪಾಲಕರು
ಪೊಂದಿಕೊಂಡಿಪ್ಪರು ಪ್ರತಿದಿನ ತೊಲಗದಲೆ
ನಂದದಲ್ಲಿ ತಮ್ಮ ಉಚಿತ ಸಾಧನಗಳ
ಅಂದದಿಂದಲಿ ಮಾಡಿ ಅತಿಹರುಷದಲಿದ್ದು
ಇಂದಿರೆ ಭೂ ಸಹಿತ ವಿಶ್ವಗುಣಪೂರ್ಣ
ನಿಂದಲ್ಲಿ ನಿಲ್ಲದೇ ನಾನಾವಿಧವನ್ನು
ತಂದು ಕೊಡುವನು ತವಕದಿ ಜೀವಕ್ಕೆ
ಸಿಂಧು ಶಯನನಾದ ವಿಜಯ ವಿಠಲ ಹೃದಯ
ಮಂದಿರ ದೊಳಗಿದ್ದು ಬಹು ಚರಿತೆಯಮಾಳ್ಪಾ ೨
ತ್ರಿವಿಡಿ ತಾಳ
ಸುರಪನಲ್ಲಿಗೆ ಬರಲು ಪುಣ್ಯಮತಿಲಿ ಜೀವ
ನಿರುವ ಪಾವಕನಲ್ಲಿ ಬರಲಾಲಸ್ಯ ನಿದ್ರ
ತೆರಳಿ ಜವನಲ್ಲಿಗೆ ಹರಿ ಸಾಗೆ ಮಹಾಕ್ರೋಧ
ಬರುವುದು ಜೀವಕ್ಕೆ ಅಲ್ಲಿಂದತಿ ವೇಗ
ನಿರಋತಿ ಯಲ್ಲಿಗೆ ಮೆಟ್ಟಿ ಪಾಪದ ಕೃತ್ಯ
ವರುಣನ್ನ ಬಳಿಯಲ್ಲಿ ನಾನಾವಿನೋದ
ಮರುತನಲ್ಲಿ ಹರಿ ಬಂದು ಪೋಗಲು ಜೀವ
ಪರಮ ಗಮನಾಗಮನವಾಗುವುದು
ತೆರಳಿ ಕುಬೇರನಮನಿಗೆ ಬರಲು ದ್ರವ್ಯ ಪ್ರದಾನಮಾಡಿಸುವ
ನಿರುತ ಈ ಪರಿಯಲ್ಲಿ ಪರಮ ಪುರುಷನು
ತಿರುಗುತಲಿಪ್ಪನು ಅವರವರ ಯೋಗ್ಯತ
ಇರವ ನೋಡಿ ಫಲವ ತಂದು ಕೊಡುವ
ಕರುಣಾಳುಗಳ ಒಡಿಯ ವಿಜಯ ವಿಠಲರೇಯಾ
ಎರಡೊಂದು ವಿಧದವರ ಪೊರೆವ ಕರ್ತನೆನಸಿ ೩
ಅಟ್ಟತಾಳ
ಮಧ್ಯದಲ್ಲಿ ನಿಲ್ಲೆ ವೈರಾಗ್ಯ ಮಾಡುವ
ಬುದ್ಧಿ ಪಾಲಿಸುವನು ಸರ್ವ ಕೆಲಸದಲ್ಲಿ
ಪೊದ್ದಲು ಮುಕುಂದ ಜಾಗ್ರತೆ ತೋರುವ
ಸಿದ್ಧವು ಕರ್ಣಿಕೆ ಸೇರೆ ಕನಸುಗಳು
ಪಧ್ಧತಿ ತಿಳಿವುದು ನಾಳದಿ ಸಾರಲು ಗಾಢ
ನಿದ್ರೆ ಆಗುವುದು ಜೀವಕೆ ಕಾಲ ತಿಳಿಯದೆ
ಶುದ್ಧಾತ್ಮ ಪರಿಚ್ಛಿನ್ನ ಮೂರುತಿ ಇದೆ ಅ
ನಾದ್ಯ ಅನಾದಿಕರ್ಮಂಗಳ ನೋಡಿ
ಶ್ರದ್ಧೆಯನ್ನು ಕೊಟ್ಟು ಮುಖ್ಯಪ್ರಾಣನ್ನ
ಪೊದ್ಧಿ ಬದುಕುವಂತೆ ಮಾಡುವನು
ಮುದ್ದು ಮೋಹನರಂಗ ವಿಜಯ ವಿಠಲ ಕರು
ಣಾಬ್ಧಿಯೆ ಕಾಣೊ ಭಜಕರ ವಂಶಕೆ ೪
ಆದಿತಾಳ
ಹರಿ ಅಂತರಂಗದಲ್ಲಿ ಸರಿಯದೆ ವಾಸವಾಗಿ
ಇರಳು ಹಗಲು ಇಂಥ ಚರಿಯೆ ಮಾಡಿಸುತಿರೆ
ನರಲೋಕದೊಳಗೆ ಈಶ್ವರ ನಾನೆಂದು ನುಡಿವ
ಪರಮ ದುಃಖಿಷ್ಟರ ಗರ್ವಿಕೆಗೇನೆಂಬೆ ತಾ
ನರಿಯು ಸ್ವಸ್ಥಾನದಲ್ಲಿ ನೆರದು ತನ್ನ ಬಳಗಕ್ಕೆ
ಹರಿಯೆನಗೆನ್ನಿರೆಂದು ಒರಲಿಕೊಂಡರೆ ಅವು
ಶಿರ ದೂಗುವುದಲ್ಲದೆ ಸರಿ ಸರಿ ಎಂದು
ಹಿರಿದಾಗಿ ನೋಡಿದವರು ಪರಿಹಾಸ್ಯವೆಂದನ್ನರೆ
ನರಿಯ ಮಾತುಗಳೆಲ್ಲ ನರಿಗೆ ತಿಳಿದಂತೆ
ದುರುಳರಾಡುವ ಅರ್ಥ ದುರುಳರಿಗೆ ಸರಿ ಬಹದು
ಹರಿಯ ನರಿಯು ಮೆಚ್ಚುವುದೆ ಸರಕೆಂದರೆ ಓಡಿ
ಚರ ಹಾಕಿ ಪೋಗುವುದು ನರಿ ಕೇಸರಿಯಾಗುವುದೆ
ಉರಗನ ಕಾಣಲು ಸಾರಿರದೆ ಕೆಲಸಾರುವ
ನರನು ಈಶ್ವರನೇನೊ ಜರ ಮರಣ ಜನನದವ
ಹರಿಯೆಂದು ಒಮ್ಮೆ ಸ್ಮರಿಸೆ ದುರಿತ ಕೋಟಿಗಳು ಸಂ
ಹಾರವೆನ್ನಿರೊ ಇವನ ಸ್ಮರಣೆ ಇಂದೇನಾಹುದು
ಸುರರಾದಿಗಳ ಧೊರೆ ವಿಜಯ ವಿಠಲನ್ನ
ಚರಣವ ನೋಡಿದವ ಪರಮ ಜ್ಞಾನಿ ನಿತ್ಯ ೫
ಜತೆ
ಉದಯಕಾಲದಲೆದ್ದು ವಿಜಯ ವಿಠಲನ್ನ
ಅದುಭೂತ ಕ್ರೀಡೆಯ ನೆನೆಸಿ ಮುಕುತಿಯ ಬಯಸಿ ೬

ಕಾಮಾದಿ ಅರಿಷಡ್ವರ್ಗಗಳನ್ನು

೧೩
ಧ್ರುವತಾಳ
ಅಸೂಯ ಪರರಾಗಿ ಪುಣ್ಯ ಪೋಗಾಡದಿರೀ
ಭಾಸುರ ಜ್ಞಾನಿಗಳು ಒಲಿದು ಕೇಳಿ
ಈ ಶರೀರ ಈ ಶರೀರ ನಿತ್ಯವೆ
ಕಾಸಿಗಾದರು ಬೆಲೆಯಾಗದಿದಕೊ
ಲೇಶವಾದರು ಲಾಭ ಇದರಿಂದ ಉಂಟಾದರೆ
ಗ್ರಾಸದಂತೆ ಉದರ ತುಂಬಿದರೆ
ತ್ರಾಸು ಕಟ್ಟಕೊಂಡು ತೂಗಿದ ತೆರೆದಂತೆ
ತಾಸಿ ತಾಸಿಗೆ ಬಿಡದಾಡಬೇಕು
ವಾಸುದೇವನೆ ಅನಾದಿ ಜೀವದಲಿದ್ದ
ಲೇಸುಹೊಲ್ಲೆಗಳು ತಾ ವ್ಯಕ್ತಮಾಡಿ
ದೇಶಕಾಲಗಳಲ್ಲಿ ಬಗೆಬಗೆ ವಿಧದಿಂದ
ದಾಸ ದಾಸಿಯರೊಡನೆ ನಡಿಸುತಿಪ್ಪ
ಭೂಸುರ ಜನ್ಮದಲಿ ತತ್ಪರನಾಗಿ ಸಂ
ತೋಷವಾಗುವುದೆಲ್ಲ ಮತಸಮ್ಮತ
ಭೂಷಣವಕ್ಕು ಯಾವತ್ತು ಕಾಲಕ್ಕೆ ಸ
ರ್ವೇಶನು ಮೆಚ್ಚುವನು ಒಳಗೆ ಪೊಳೆದು
ಮೇಷ ಪ್ರವರ್ತಿಸಿದ ಪರಿಯಂತೆ ಮದ್ದಾನೆ
ವೇಷಧರಿಸಿದರೆ ಬರುವುದೇನೈ
ಆಶೆಯಲ್ಲದೆ ತನ್ನ ನಿಜಸ್ವಭಾವ ಹಿಂಗುವುದೆ
ಏಸುಕಾಲ ಚಿಂತಿಸೆ ಮನೋವ್ಯಾಕುಲ
ಈಶ ಸಂಕಲ್ಪಕ್ಕೆ ಆರಿಂದಲೇನಾಹುದೋ
ಕಸಿವಿಸಿ ಪಡುವುದು ಒಂದೇ ಪ್ರಾಪ್ತಿ
ಈಸು ಮನ್ನಣೆ ಇವಗೆ ಜನರಿಂದ ಸಲ್ಲದೆನಲು
ವಾಸುದೇವನ ಇಚ್ಛೆ ಇಂಥದಿದಕೊ
ಶಾಶ್ವತವಾಗಿರಲು ಅನುಭವಿಸಬೇಕು
ಬೀಸಿ ಬಿಸಾಟದಿರೆ ತೊಲಗುವುದೆ
ಸಾಸಿರ ಮಾನವರು ಒಂದಾಗಿ ಜನರಿಂದಾ
ಭಾಸಾ ಮಾಡಿಸರೊಲ್ಲನೆಂಬೇನೆ
ಸಾಸವಿ ಕಾಳನಿತು ಮಾನವಪೇಕ್ಷೆಯನ್ನು
ಆಶೆ ಮಾಡುವನಾರು ಇಳಿಯೊಳಗೆ
ದೋಷರಾಶಿ ವಿನಾಶ ವಿಜಯ ವಿಠ್ಠಲ ಬಿಡದೆ
ಪೋಷಣೆ ಮಾಡುತ್ತ ಮನದೊಳಗಿಪ್ಪುದೆ ಲಾಭ ೧
ಮಟ್ಟತಾಳ
ಮದ್ದು ಗುಣಕಿ ಬೀಜ ನೋಡಿರೊ ಧರಿಯೊಳಗೆ
ಇದ್ದ ಬೀಜಕೆ ಎಲ್ಲ ನೀಚವೆನಿಸುವುದು
ಬುದ್ದಿಯಿಂದಲಿ ಕೇಳಿ ಆರಾದರು ಒಂದು ಕ
ಪರ್ದಿ ಕರವಿತ್ತು ಬೆಲಿಗೆ ಕೊಂಬುವರೇನೊ
ಮೆದ್ದರೆ ಸಕಲ ಜನ ತಮ್ಮಿಂದಲಿ ತಾವೆ
ಎದ್ದೆದ್ದಾಡುವರು ಎಲ್ಲೆಲ್ಲಿ ನೋಡಿದರೂ
ಶುದ್ಧ ಜನರು ಕಂಡು ಇದು ಇದು ಏನೆನಲು
ಪದ್ಧತಿ ತಪ್ಪುವುದೇ ಅದರ ಸ್ವಭಾವವನು
ಪದ್ಮಸಂಭವನಯ್ಯಾ ಅಂಥಂಥಾ ಶಕುತಿ
ಹೊದ್ದಿ ಕೊಂಡಿಪ್ಪಂತೆ ನೇಮಿಸಿಪ್ಪನು ಗಡ
ಶ್ರದ್ದ ಲೋಕಕೆ ಎಲ್ಲ ಎನ್ನ ಕಾಣುತ ಇನಿತು
ಎದ್ದೆದ್ದಾಡುವರು ಸೋಜಿಗ ತೋರುತಿದೆ
ಮುದ್ದು ಸಿರಿರಂಗ ವಿಜಯ ವಿಠಲರೇಯನ
ಉದ್ದಂಡಾಟಕೆ ನಮೋ ಎಂಬೆನು ನಿತ್ಯಾ೨
ತ್ರಿವಿಡಿ ತಾಳ
ಕಲ್ಲು ಪ್ರತಿಮೆ ಒಂದು ಇಪ್ಪುದಲ್ಲದೆ ತಾನು
ಸೊಲ್ಲು ಪೇಳುವುದಲ್ಲಾ ನಗುವುದಲ್ಲಾ
ಮೆಲ್ಲ ಮೆಲ್ಲನೆ ಕಿವಿಕೊಟ್ಟು ಕೇಳುವುದಲ್ಲಾ
ನಿಲ್ಲದೆ ಕೈ ತಿರುಹಿ ಕರೆವುದಲ್ಲಾ
ಎಲ್ಲಿಂದಲ್ಲೆ ಜನರು ಪೋಗಿಬರುತ ನಿಂದು
ಪೊಳ್ಳಾಗದಂತೆ ವರವ ಬೇಡುತ್ತ
ಬಲ್ಲಿದತನದಲ್ಲಿ ಇರುತಿರೆ ಕೆಲವರಿಗೆ
ಸುಳ್ಳಾದರೆ ನೋಡದೆ ಹೋಹೋರು
ಒಳ್ಳಿತಾಗಿ ಕೆಲಕೆ ಮನೋಭಿಷ್ಟೆಯಾಗಲು
ಬಿಲ್ಲಿನಂದದಿ ಬಾಗಿ ನಿತ್ಯ ಪೂಜೆ
ಬೆಲ್ಲ ಕಾಣಿಕೆ ನಾನಾ ಭೂಷಣವನೆ ಇಟ್ಟು
ಎಲ್ಲ ಪರಿಯಿಂದ ಸುಖಿಸುವರೊ
ಕಲ್ಲು ಪ್ರತಿಮೆ ಇಂಥ ವರ ಕೊಟ್ಟಿತೇನೊ
ಅಲ್ಲಿದ್ದ ಲಕುಮೇಶನು ಅವರವರ
ಸೊಲ್ಲಿನೊಳಗೆ ತಿಳಿದು ಭಕ್ತಿವಶವಾಗಿ
ಸಲ್ಲಿಸುವನು ವರವ ಮನಸಿನಂತೆ
ಎಲ್ಲರು ಒಂದಾಗಿ ಸೈರಿಸಂದೆ ಆ
ಕಲ್ಲಿನ ಬೈದರೆ ಚಲಿಸುವುದೇ
ಹಲ್ಲು ನಾಲಿಗೆ ಬಾಯಿ ಆಡಿತಲ್ಲದೆ ಜನಕೆ
ಎನಿತು ಫಲವಿಲ್ಲ ವಿಚಾರಿಸೇ
ಕಲ್ಲಿನ ಪ್ರತಿಮೆ ಅಂದದಲಿ ಕಾಣೊ ನಾನು
ಬಲ್ಲವನೆನದಿರಿ ಅಜ್ಞಾನಿಯು
ಕಲ್ಲಿಗೆ ಎನಗೇನು ಹೆಚ್ಚು ಕೊರತೆ ಎಂಬೊ
ದಿಲ್ಲವೊ ಇಲ್ಲವೊ ಚೇಷ್ಟ ಮಾತ್ರವೆ ಉಂಟು
ಮಲ್ಲಮರ್ದನ ನಮ್ಮ ವಿಜಯ ವಿಠ್ಠಲ ಸ್ವಾಮಿ
ಇಲ್ಲಿ ವಾಣಿ ನುಡಿಸಿ ಆರಾಧನೆಗೊಂಬಾ ೩
ಅಟ್ಟತಾಳ
ಸೂಜಿಯ ಮೇಲೆ ಗಢಾರವು ಮುನಿದಂತೆ
ತೇಜಾತಿಯಾದರೆ ವ್ಯಾಪಾರವೆ ಭೇದ
ಮೂಜಗ ಮೆಚ್ಚದು ಮೆಚ್ಚದು ಮೆಚ್ಚದು
ಜೂಜಾಡಿದದರಿಂದ ತನತಕ್ಕ ಮಾನವ
ಮಾಜದೆ ನೋಳ್ಪದು ಅದಕದಕೆ ಬಂದ
ತ್ಯಾಜವಲ್ಲದೆ ಲೇಶವಾದರು ಅಧಿಕವೇ
ವಾಜಿಯ ಗಮನವು ಭೂಮಿ ಮೇಲಲ್ಲದೆ
ಗೀಜಗನಂತೆ ಪಾರುವದೇನೊ ಗಗನಕ್ಕೆ
ತೇಜಿ ಉತ್ತಮ ನೂರಾರು ಸಾವಿರ ಬೆಲೆಗೆ
ಗೀಜಗ ಕಾಸಿಗೆ ಬೆಲಿಗೆ ಪೋಗುವುದೇನೊ
ಈ ಜಗಕೆ ಮಾಯಾ ಮೋಹಿಸಿಪ್ಪ ಸ
ರೋಜದಳ ನೇತ್ರ ಸಂತತ ಸುರಮಿತ್ರ
ಪೂಜೆ ಮಾಡುವೆ ಮಾಡಿಸಿ ಕೊಂಡೆನೆಂದರೆ
ರಾಜಶೇಖರ ಬೊಮ್ಮ ಸುರರಾಜಗಾಹೋದೆ
ಭೋಜನ ವಾಹನ ವಸನ ಭೂಷಣ ಕಲ್ಪ
ಭೂಜದ ಕೆಳಗಿದ್ದ ನರಗೆ ಕಡಿಮೆ ಉಂಟೆ
ಭೋಜ ಅಮಿತತೇಜ ವಿಜಯ ವಿಠಲ ವಿ
ರಾಜಿಸುತಿಪ್ಪನಯ್ಯಾ ನಂಬಿದ ಜನರಿಗೆ ೪
ಆದಿತಾಳ
ಪರರ ಶ್ರೇಯಸ್ಸು ನೋಡಿ ಸಂಕಟ ಬಟ್ಟರೆ
ಗಿರಿಗೆ ಮಸ್ತಕವಿಟ್ಟು ಬಳಲಿ ಬೆಂಡಾದಂತೆ
ಬರಿದೆ ಅಲ್ಲದೆ ಜನಕೆ ಲಾಭ ಮತ್ತೇನು ಕಾಣೆ
ಶರಧಿ ಮೇಲೆ ಮುನಿದು ಒಂದು ಕುಡತಿ ಧೂಳಿ

ಶಾಸ್ತ್ರ ಮತ್ತು ಸಂಪ್ರದಾಯಗಳನ್ನನುಸರಿಸಿ


ಧ್ರುವತಾಳ
ಆ ಮಹಾ ಎರಡು ವರ್ಣಾಸಂಧಿ ಕಾಲಾದನಿತು
ಭೂಮಿಯೊಳಗೆಯಿದ್ದು, ಸಾಧನ ಕೈಕೊಂಡು
ನೇಮ ನಿತ್ಯವೆ ಮಾಡಿ ಪಾರಾಗುವೆನೆಂಬ ನಿ
ಸ್ಸೀಮರ ಕಾಣೆನೊ, ಅರಸಿ ನೋಡೆ
ಸ್ವಾಮಿ ನಿನ್ನ ಕರುಣ ತಡವಾದರೆ, ಪಿ-
ತಾಮಹ ಕಾಮಾರಿ ಇಂದ್ರಾದ್ಯರು
ಆ ಮೃತ್ಯು ಮೊದಲಾದ ಪರಿ ಪರಿ ಮಾರಿಗಳು
ರೋಮ ರೋಮದಲ್ಲಿ ಕಾದಿಪ್ಪರು
ಆ ಮಹಾ ಎರಡು ವರಣಾ
ಆ ಮಾತು ಲೋಕದಲ್ಲಿ ಸಾಧನ ಮಾಳ್ಪೆನೆಂಬ
ಆ ಮನುಜಾಗೇನೆಂಬೆ ಮರುಳಾತನವೊ
ಕಾಮಜನಕ ನಿನ್ನ ಕರುಣವಾಗದೆ ಲೇಶ
ತಾಮಸ ಗುಣವೃತ್ತಿ ಪೋಗದದಕೊ
ನಾ ಮೊರೆ ಇಡುವೆನು ನಾನಾ ಕರ್ಮದಿಂದ
ಪಾಮರ ಬುದ್ದಿಯ ಬಿಡದೂ ಜೀಯಾ
ನೀ ಮಾಡಿದ ಮಾರ್ಯಾದೆ ಇಂತು ಇಪ್ಪದೊ ಸದ್ವಾ-
ಚ್ಯಾಮನೆ ತಿಳಿಯದು, ಬೇಡಿಕೊಂಬೆ
ಸಮಸ್ತ ಬಗೆಯಿಂದ ಬಿನ್ನಹ ಕೇಳೂ ಪರಿ-
ಣಾಮಕ್ಕೆ ನಿನ್ನ ನಾಲಿಗೆ ತುದಿಯಿಂದಲಿ
ಶ್ರೀ ಮನೋಹರ ಕೃಷ್ಣ ಕಾಲನಿಯಾಮಕ
ಆ ಮಹ ಸರ್ವತಂತ್ರ ಸ್ವಾತಂತ್ರ ಸುಗುಣ
ರಾಮ ಜ್ಞಾನಾನಂದ ಕಾಯಾ ಪ್ರಣತಾರ್ತಿಹರ
ಭೂಮಿರುಹ ಭುಜಗತಲ್ಪ ಸರ್ವದಾ ತ್ರಿ
ಧಾಮ ದಾಮೋದರ ನಾರಾಯಣ
ನಾಮವೆ ಒದಗಲಿ ಮತ್ತೊಂದು ವಿಷಯಕ್ಕೆ
ಈ ಮನಸು ಒಯ್ಯದಿರು ವೈಕುಂಠನೇ
ಕಾಮಿಸುವೆನು ನಾನು ಇದಕೆ ಅನುಗಾಲ
ಭೀಮವಾದ ವಾರಿಧಿ ದಾಟಿಸಯ್ಯ
ಸಾಮಗಾಯನ ಲೋಲ ವಿಜಯ ವಿಠ್ಠಲ ನಿನ್ನ
ನಾಮವೆ ಎನಗೆ ಮಹಜೀವನ ಓದನ ೧
ಮಟ್ಟತಾಳ
ಇದನೆ ಬೇಡುವೆನಯ್ಯಾ ಪದುಮನಾಭನೆ ನಿನ್ನ
ಪದಗಳ ಭಜಿಸುವ ಪದುಮ ಗರ್ಭಾದಿಗಳ
ಅಧಿಕವರ ತಿಳಿದು ಹೃದಯದಲ್ಲಿ ನಿಲಿಸಿ
ವಿಧಿಪೂರ್ವಕದಿಂದ ಮುದದಿ ನಿಮ್ಮ ನಾಮ
ಸುಧೆಯನು ಎನ್ನ ನಾಲಿಗೆ
ತುದಿಯಲಿ ಸವಿಸವಿದು ಸದಮಲನಾಗುವೆನು
ಮದನ ಗಂಗಾಜನಕ ಇದನೆ ಪಾಲಿಸಯ್ಯ
ಇದಕಿಂತಲಿ ಒಂದು ಅಧಿಕ ಸಾಧನ ಕಾಣೆ
ಇದನೆ ಪಾಲಿಸಯ್ಯ ಇದನೆ ಕರುಣಿಸಯ್ಯ
ಮದಮತ್ಸರ ಹಾರಿ ವಿಜಯ ವಿಠ್ಠಲ, ಸಂ-
ಪದವಿಗೆ ಇದೆ ಮೊದಲು, ನಿರ್ಮಳ ಮಾರ್ಗ ೨
ತ್ರಿವಿಡಿತಾಳ
ಆವಾವ ದೇಶದಲಿ ಆವಾವ ಕಾಲದಲಿ
ಆವಾವ ಗುಣದಿಂದ ಆವಾವ ಬಗೆ ಮಾಳ್ಪ
ಆವಾವಲ್ಲಿ ಜನನ ಮತ್ತಾವವಲ್ಲಿ ಮರಣ
ಆವಾವಲ್ಲಿ ನೀನು ನಿರ್ಮಾಣ ಮಾಡಿದರೆ
ಆವಾವ ಪರಿಯಿಂದ ತಪ್ಪಿಸಿಕೊಳಬಹುದೆ
ದೇವ ನೀನೆ ಬಲ್ಲ್ಯೋ ಕಾಲಕರ್ಮ
ಕಾವ ಕೊಲ್ಲುವ, ಅಚಿಂತ್ಯಾದ್ಭುತ ಶಕ್ತ, ಸಂ
ಜೀವ ಜೀವರ ಒಡೆಯ, ಜಾತರಹಿತ
ಗೋವ ಕಾಯಿದ ನಮ್ಮ ವಿಜಯ ವಿಠ್ಠಲ ಎನ್ನ
ಭಾವದಲ್ಲಿ ಇದ್ದು, ಬೇಡಿದರ್ಥವ ಕೊಡೂ ೩
ಅಟ್ಟತಾಳ
ಕೆಲವರಿಗೆ ಮನೆಯಲ್ಲಿ ಕೆಲವರಿಗೆ ಧನದಲ್ಲಿ
ಕೆಲವರಿಗೆ ತುರಗವಾಹನದಲ್ಲಿ ಭೂಮಿಯಲಿ
ಕೆಲವರಿಗೆ ವನತಟಾಕದಲ್ಲಿ ಮನೆಯಲ್ಲಿ
ಕೆಲವರಿಗೆ ವನಿತೆ ನಂದನರಲ್ಲಿ ನಾನಾ ಭೋಜನದಲ್ಲಿ
ನಿಲಿಸಿ ಸಂಚಾರ ಮಾಡಿಸುವೆ, ಪುಣ್ಯ ಶ್ಲೋಕ
ಒಲಿದು ಕೇಳಯ್ಯ ಎನಗೆ ನಿನ್ನ ನಾಮ ವೆ
ಗ್ಗಳವಾಗಿ ಆವಾವ ಕರ್ಮ, ತೋರದ ಹಾಗೆ
ನೆಲೆಯಾಗಿ ಇರಲಿ ನಾಲಿಗೆ ತುದಿಯಿಂದಲಿ
ಘಳಿಗೆಯೊಳಗೆ ಅಪಾರ ನರಕದಲಿ
ಬಳಲುತ ಕರ್ಮ ಮಾಡುವ ಕಾಲಕ್ಕಾದರು
ಒಳಗೆ ನಿನ್ನ ನಾಮ ಮರೆಯದಂತಿರಲಿ
ಬಲವಂತ ವಿಜಯ ವಿಠಲರೇಯ ಮ-
ತ್ಕುಲ ದೈವವೆ, ಎನಗೆಂತು ದೊರಕುವುದೊ ೪
ಆದಿತಾಳ
ನರಕಂಠೀರವ ನಾರೆಯಣ
ನರೋತ್ತುಮ ಪತಿ ನರ ಪರಿಯಂಕ
ನರನ ಕೂಡ ಇಚ್ಛೆಗನೆ ನರನಾಥ ನಾರಾಯಣ
ನರನಟನೆ ತೋರಿದೆ, ನರಕಾರಿ
ನರಪಶುವಂದ್ಯ ನಾ ಪಶುವಯ್ಯ
ನರಸಖ ನರೇಯ ನರೋರುಗ
ಸುರನುತ ವಿಜಯ ವಿಠ್ಠಲ ನಿನ್ನ
ಅರಮನೆ ಸೇರುವ ಮನವೀಯೊ ಒಲಿದು ೫
ಜತೆ
ಮರವೆ ಕೊಡಲಾಗದು, ಮರಣಕಾಲಕ್ಕೆ ನಿನ್ನ
ಸ್ಮರಣೆ ಚಿತ್ತದಲಿರಲಿ, ವಿಜಯ ವಿಠ್ಠಲ ವ್ಯಾಪ್ತ ೬

ದತ್ತ ಸ್ವಾತಂತ್ರ ವಿಚಾರವನ್ನು ಈ ಸುಳಾದಿಯಲ್ಲಿ ತಿಳಿಸಲಾಗಿದೆ.

೧೭
ತಾಳ ಧ್ರುವ
ಆ ಶೂನ್ಯ ನಾಮಕ ಪೂರ್ಣ ಬ್ರಹ್ಮ
ದೋಷ ರಹಿತ ಪೂರ್ಣೈಶ್ವರ್ಯ
ಈಶ ಸಮಗ್ರ ಪೂರ್ಣಾನಂದ
ಭೂಷ ಸ್ವರೂಪ ಭೂತ ಅಪ್ರಾಕೃತ
ಶ್ರೀ ಸತಿ ನಾಥ ತ್ರಿಗುಣಾ ತೀತ
ದೇಶ ಕಾಲ ಸರ್ವಾ ಅವಿನಾ
ಆ ಶೂನ್ಯ ನಾಮಕ ಪೂರ್ಣ ಬ್ರಹ್ಮ
ರಾಶಿ ಜೀವಿಗಳನ್ನು ತನ್ನೊಳಗೆ
ಲೇಶಾಯಾಸ ವಿಲ್ಲದೆ ಪೂರ್ಣ ಶಕ್ತಿ
ಏಸೇಸು ಕಲ್ಪಕೇ ಲೀಲಾ ಮಾತ್ರ
ವಾಸ ವಾಗಿಪ್ಪ ನಿರ್ಲಿಪ್ತಾ ಸಂಗ
ವಾಸುದೇವಾದಿ ರೂಪ ಕೇಶವ ಹೃಷೀಕೇಶ
ಕೇಶಾ ಕೇಶಿ ಪಾದಾಂಗುಟ
ಮೀಸಲ ಜ್ಞಾನ ಪೂರ್ಣ ಸಂಪೂರ್ಣ
ಹ್ರಾಸ ವೃದ್ದಿ ವರ್ಜಿತ ವರಗಾತ್ರಾ
ಶಾಶ್ವಿತ ಪರಬೊಮ್ಮ ಪತಿತ ಪರಾ
ಸುಷುಪ್ತಿಯಲ್ಲಿ ಯೇಕ ಮೇವ
ಕ್ಲೇಶನಾಶನ ಕಾರುಣ್ಯ ಮೂರ್ತಿ
ವಿಶಾಲ ಗುಣಾನಂದ ಜಲಧಿ
ನಾಶರಹಿತ ಯುಗಪದಿ ರೂಪಾ
ವೈಷಮ್ಯ ನೈರ್ಘಣ್ಯ ಜ್ಞಾನಾತ್ಮಕಾ
ಈಸು ಮಹಿಮೆಯುಳ್ಳ ಅಣುಮಹತ್ತು
ಆಶೇಷ ಅಂಶಿ ಅಂಶ ಸರ್ವ ಪೂರ್ಣ
ಯಶೋದಾ ನಂದನ ವಿಜಯ ವಿಠ್ಠಲ ಪ್ರ
ಕಾಶಾ ಅನ್ಯಪ್ರಕಾಶಾ ಗತ ಗತಿಪ್ರದಾತ೧
ಮಟ್ಟತಾಳ
ಸಕಲ ಜೀವರಸು ಸೃಜಿಸು ಯೆಂದು ಶ್ರೀ
ಲಕುಮಿ ರೂಪಾ ಅಂಭ್ರಣಿ ದೇವಿ
ಅಖಳ ಬಗೆಯಿಂದ ನೋಡಿ ತುತಿಸಲಂದು ಕರುಣದಿಂದಲಿ
ಮುಕುತಾಮುಕ್ತರು ಮುಕ್ತರ ಗಣ ದ್ವಿವಿಧಾ
ಭಕುತಾದ್ವೇಷಾ ಜನರ ಸಾಧನಾ
ಅಕಳಂಕ ಸ್ವಾಮಿ ಅನಾದಿ ಪುರುಷ ಪುರುಷ ಬೀಜ ಶ್ರುತಿಗೇಯಾ
ಸುಕುಮಾರ ವಿಜಯ ವಿಠಲಾ
ಸುಕೃತ ದುಷ್ಕ್ರತ ನಿಯಾಮಕಾ
ತಕ್ಕದು ಮಾಳ್ಪ ಯೋಗ್ಯತಾದಂತೆ
ತ್ರಿವಿಡಿತಾಳ
ಅನಂತಾನಂತ ಗುಣ ಸ್ವಾತಂತ್ರಾತ್ಮಕ
ಏನೆಂಬೆ ಸೃಷ್ಟಿಯ ಪ್ರಾರಂಭದಿ
ಜ್ಞಾನಮಯವಾದ ಅಭಿನ್ನ ಭಾಗದಿಂದ
ಅನಂತಾಂಶಾತ್ಮಕ ಗುಣವೆ ಹತ್ತು
ಆನಂದದಿಂದ ತೆಗೆದು ಚತುರ್ಭಾಗವನ್ನೆ ಮಾಡಿ
ಅನಾದಿ ದೇವಾ ಇದರೊಳೇಕ ಭಾಗ
ತಾ ನೋಡಿ ತೆಗೆದುಕೊಂಡು ಯಾವೊಂದು ಭಾಗದೊಳು
ಎಣಿಕೆಗೆ ಹತ್ತು ಭಾಗ ಮಾಡಿ
ಪ್ರಾಣನಾಯಕನಿಗೆ ನಾಲ್ಕು ಭಾಗ ಚತು
ರಾನನಗೆ ಐದು ಭಾಗವಿತ್ತು
ವೇಣು ಉಳಿದ ಭಾಗವೊಂದು
ತನ್ನ ಬಳಿಯಲಿ ಮಾಣದೆ ಇಟ್ಟು ಕೊಂಡು
ಪುನರಾವರ್ತಿ ವೈನತೇಯ ಗಮನ ವಿಜಯ ವಿಠಲರೇಯಾ
ನಾನಾ ವಿಚಿತ್ರ ಮಹಿಮಾ ಅಚಿಂತ್ಯಾದ್ಭುತ ಶಕ್ತಾ ೩
ಅಟ್ಟತಾಳ
ಮತ್ತೊಂದು ಸಾಂಶರುಳಿದ ಮೂರರೊಳು
ಹತ್ತು ಭಾಗವ ಮಾಡಿ ಗರುಡಾಹಿರುದ್ರರಿಗೆ
ಇತ್ತನು ವಿಭಾಗ ದ್ವಯ ಮುಂದೆ ಸಾ
ವಿತ್ರಿ ಭಾರತಿಗೆ ಸಾರ್ಧದ್ವಯ ಅಲ್ಲಿಂದ
ವೃತ್ರಾರಿ ಕಾಮದೇವತಾ ಸಮುದಾಯಕೆ
ಇತ್ತನು ತ್ರಯಭಾಗ ಮೆಲರ್ದವುಳಿದ
ಇತ್ತ ಲಾಲಿಸಿ ಕೇಳು ವೊಂದು ತದರ್ಧವು
ದ್ವೆತ್ಯಾವಳಿಗೆ ಎನ್ನಿ ಮಿಕ್ಕಾ ಭಾಗ ವೊಂದು
ಮತ್ರ್ಯ ಗಂಧರ್ವ ಕ್ಷಿತಿಪ ಋಷಿ ಮನು
ಜೋತ್ತಮ ಸಮಸ್ತ ಪ್ರಾಣಿಗಿತ್ತ
ಉತ್ತಮ ಶ್ಲೋಕ ವಿಜಯ ವಿಠ್ಠಲರೇಯಾ
ಹತ್ತೆರಡು ಭಾಗ ಈಪರಿ ಹಂಚಿದಾ ೪
ಆದಿತಾಳ
ಚತುರ ಭಾಗದೊಳೆರಡು
ಮಿತಿಯಾಯಿತು ಈಬಗೆ
ಅತಿಶಯ ಉಳಿದ ಭಾಗ ಮಿ
ಳಿತದಿಂದ ತ್ರಯ ಭಾಗ ಮಾಡಿ
ಜಿತ ಶರೀರಳಾದ ತನ್ನ
ಸತಿ ಲಕುಮಿಗೆ ಒಂದು ಭಾಗ
ಹಿತದಿಂದ ಪಾಲಿಸಿದಾ
ಪ್ರತಿ ಪ್ರತಿ ಸೃಷ್ಟಿಗೆ
ಅಚ್ಚುತದೇವ ಸ್ವರೂಪಾಂಶ ಪ್ರಾ
ಕೃತಿ ಪ್ರಕೃತಿ ಬದ್ದರಿಗೆ ಕೊ
ಡುತಲಿಪ್ಪ ಸ್ವತಂತ್ರ
ಚತುರನಾಗಿ ಸರ್ವ ಜೀವಗತನಾಗಿ ತತ್ತತ್ಕಾಲ
ಗತಿಯಂತೆ ಚೇಷ್ಟೆ ಮಾಡಿಸಿ
ಮತಿಕೊಡುವ ಪಾಪ ಪುಣ್ಯಕೆ
ತುತಿಪ ಕೇಳು ಉಳಿದ ಭಾಗದಿ
ಕ್ಷಿತಿಯೊಳಗೆ ಅವತಾರಾವೇಶಾ
ಚತುರಾಸ್ಯ ಮರುತಾ ಸರ
ಸ್ವತಿ ಶ್ರದ್ಧಾ ಗರುಡಾದಿ ಕಾಮದೇವತಾ ಸಮುದಾಯ
ದಿತಿಜ ಬಳಗ ಮನಜೋತ್ತಮ ಸರ್ವಾ
ಇತರ ಜೀವಕ್ಕೆ ತತು ತತು ಉಳಿದಾ ಭಾಗದಿಂದಾ
ರತಿ ಪತಿ ಪಿತಾ ವ್ಯಾಪಾರ ಮಾಡುವ
ಚತುರ ಮೂರುತಿ ವಿಜಯ ವಿಠ್ಠಲ
ಸತತ ತೂರ್ಯಾ ಜೀವನಾಮಕ ೫
ಜತೆ
ದತ್ತ ಸ್ವಾತಂತ್ರವೆಂಬೋದಿದೆ ಜೀವರಿಗೆ
ಸತ್ಯ ಸಂಕಲ್ಪ ವಿಜಯ ವಿಠಲನಿಂದಾ ೬

ಈ ಲೊಕದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ

೧೬
ಧ್ರುವ ತಾಳ
ಆಗರ ಸತಿ ಸುತ ಸೌಖ್ಯವೆಂದೆಂಬೊ ದುಃಖ |
ಸಾಗರದೊಳಗೆ ಮುಳುಗಿ ಇರಳು ಹಗಲು|
ಲೋಗರಗೋಸುಗ ಚಿಂತಿಸಿ ಕಂಡ ಕಡೆ|
ಓಗರಕೆ ತಿರುಗಿ ಬೆಂಡಾಗುವೆ |
ಭೋಗ ರಹಸ್ಯದಿಂದ ಭ್ರಮಣನಾಗಿ ಪ್ರ |
ಜಾಗರವನ್ನು ಮರೆದು ಮಂದನಾದೆ |
ಭಾಗಾರಮಾಡಿದರು ಸತ್ಯಾಧನ ಧರ್ಮ |
ಯೋಗಾರಾಧನೆ ಕಾಣೆನಕಟಕಟ |
ರಾಗರಾಗದಿಂದ ನಾನು ನನ್ನದು ಯೆಂಬೊ |
ಈಗಾರಣ್ಯದ(?)ಮಧ್ಯ ಸುತ್ತುವೆನೊ |
ಹಾಗರ ಹಾಗದಾಸೆ ಮಲದಿಂದ ಮಾತು ಪೇಳಿ !
ವೇಗ ರಾಜ್ಯ ಸಂಚರಿಸಿ ಜಠರ ಪೊರೆದೆ |
ನಾಗರಾಜನ ಪೆಡೆಯ ಛಾಯಾದಲ್ಲಿದ್ದು ವೈ|
ಭೋಗದಾಸೆಯ ಬಯಸುವ ಮನುಜನಾಹೆ |
ಸಾಗರಶಾಯಿ ನಮ್ಮ ವಿಜಯ ವಿಠ್ಠಲ ಸ್ವಾಮಿ |
ಪೂಗಾರರಂತೆ ಮೆಚ್ಚಿಸದೆ ಭವಸಾರ್ದೆ ೧
ಮಟ್ಟತಾಳ
ಸ್ವರ್ಗ ನರಕ ಭೂಮಿ ಚರಿಸಿದೆ ಸರ್ವದಲ್ಲಿ |
ಮುಗ್ಗಿ ಮುಂಗಾಣದೆ ನಾನಾ ಪೊಟ್ಟಿಯಲ್ಲಿ |
ವೆಗ್ಗಳಿಸಿ ಪೊಕ್ಕು ವ್ಯಥೆ ಪಟ್ಟು ಮತ್ತೆ |
ನುಗ್ಗಾದೆನೊ ಬಲು ದೇಹವನೆ ಧರಿಸಿ |
ತಗ್ಗಿ ಪೋಗಲಿಲ್ಲ ತಗಲಿದ ಈ ಕರ್ಮ
ಸುಗ್ಗಿಯೊಳಗೆ ಬಿದ್ದು ಸುಖದುಃಖವನುಂಬೆ |
ಹಿಗ್ಗುವೆನೊ ವಿಷಯಾ ಹಿತವೆಂದು ನಂಬಿ |
ಮಗ್ಗಲೊಳಗೆಯಿದ್ದ ಮಾರಿಯ ಕಾಣದಲೆ |
ಸ್ವರ್ಗ ನರಕ ಭೂಮಿ ಚರಿಸಿದೆ ಕರುಣಾವೆ (ಕಾಣದೆ) |
ಕಗ್ಗತ್ತಲೆ ಮಧ್ಯಸಿಲ್ಕಿ ಬಳಲುತಿಪ್ಪೆ |
ಅಗ್ಗಳಿಕಾ ದೈವ ವಿಜಯ ವಿಠಲ ಎನ್ನ |
ಯೋಗ್ಯತೆ ಬಲ್ಲವನೆ ಬಿನ್ನಪವನು ಕೇಳು ೨
ತ್ರಿವಿಡಿ ತಾಳ
ಗಗನಾದಿಂದಲಿ ಮೇಘ ಪ್ರವೇಶವನು ಮಾಡಿ |
ಮಿಗೆ ವರುಷದ್ವಾರದಲಿ ಧರಿಗೆ ಇಳಿದು |
ಬಗೆ ಬಗೆ ಫಲದಲ್ಲಿ ಪೊಕ್ಕು ಪಕ್ವವಾಗಿ |
ಹಗಲಿರುಳು ಬಳಲಿ ಅನ್ನಮುಖದಿಂದ |
ವಿಗಡ ಮನುಜಾನಲ್ಲಿ ಪ್ರವಿಷ್ಠನಾಗಿದ್ದು |
ಮಗುಳೆ ರೇತೋ ಕಣರೂಪದಿಂದ |
ಜಿಗಳಿ ಮೂತ್ರ ದ್ವಾರಪೊಕ್ಕೆನಯ್ಯಾ ಅಕಟ |
ತ್ರಿಗುಣದಲಿ ಬೆಳೆವಾ ಪರಿಯೇನಂಬೆ |
ರಗಳೆ ವೊಂದು ದಿವಸ ತ್ರಿರಾತ್ರಿಗೆ ಕಲಿಲವು |
ಬಗೆ ಪಂಚರಾತ್ರಿಗೆ ಬೊಬ್ಬುಳಿಯಂತೆ |
ಸೊಗಡು ದಶರಾತ್ರಿಗೆ ಪೇಶಾಂಡವು |
ತಿಂಗಳಿಗೆ ಶಿರಸು ಬಾಹು ವಿಗ್ರಹ ರೂಪ |
ಮುಗಿದ ತರುವಾಯ ಮೂರನೆ ತಿಂಗಳಿಗೆ ರೋಮ |
ಉಗರು ಚರ್ಮಸ್ಥಿ ನಿರ್ಮಾಣ ಛಿದ್ರ |
ಬಿಗಿನ ಧಾತುಗಳು ನಾಲ್ಕನೆ ತಿಂಗಳಿಗೆನ್ನಿ |
ದುಗುಡವಾಹದು ಐದನೆ ಮಾಸಕ್ಕೆ ಹಸಿವಿ |
ತ್ರಿಗುಣಾತೀತ ನಮ್ಮ ವಿಜಯವಿಠ್ಠಲರೇಯ |
ಯುಗಳ ಭಾವದಿಂದಲಿ ಈ ಪರಿಚರಿಸುವೆನು ೩
ಅಟ್ಟತಾಳ
ಆರನೆ ಮಾಸಕ್ಕೆ ವಾಮಭಾಗದಿಂದ |
ಭೋರನೆ ದಕ್ಷಿಣ ಭಾಗಕ್ಕೆ ಆವರ್ತಿ |
ಈ ರೀತಿಯಲಿ ಶ್ರಮ ಜರಾಯು ಜನಾಹ |
ಮೇರೆಯಿಲ್ಲದೆ ಸಪ್ತಮಾಸಕ್ಕೆ ಜೀವಕ್ಕೆ |
ಪೂರ್ವ ಜನ್ಮದ ಕರ್ಮ ಸ್ಮರಣೆವುಂಟು |
ಭಾರಿ ಭಾರಿಗೆ ನೆನಿಸುವ ಸುಖ ದುಃಖ |
ಪಾರಗಾಣದಲಿಪ್ಪ ತಿಂಗಳೆಂಟಕ್ಕೆ ಕಟು |
ಕ್ಷಾರ ತೀಕ್ಷ್ಣ ಉಷ್ಣ ಸೀತಾಮ್ಲರಸದಲ್ಲಿ ವಿ |
ಕಾರ ಉಲ್ಬಣ ಯಾತನೆ ಬಾಧೆಯಾಗೋದು |
ಭೋರನೆ ಒಂಭತ್ತು ತಿಂಗಳಿಗೆ ಕ್ರಿಮಿ |
ಕ್ರೂರ ಕ್ಷತದಿಂದ ಸರ್ವಾಂಗ ಭಗ್ನದಿ |
ಮೋರೆ ಕೆಳಗಾಗಿ ಮೊಳಕಾಲಸಂದಿಲಿ |
ಘೋರ ನರಕ ಪೋಲುವ ಗರ್ಭದಲಿ ಬಿದ್ದು |
ನಾರುವ ದುರ್ಗಂಧ ಸನ್ನಿ ರುದ್ಧವಾಗಿ |
ದ್ವಾರಾಭಿ ಮುಖದಿಂದ ಅಳಲಿ ಬಳಲುತ |
ಶಾರೀರ ಮುರಿದು ಮುಟ್ಟಿಗೆ ಮಾಡಿ ಕಟ್ಟಿದ |
ಚೋರನಂದದಿಯಿಪ್ಪ ನಿರ್ಭಂದ ತೊಲಗದು |
ಆರಿಗೆ ದೂರಲಿ ಆರು ಬಿಡಿಪರಿಲ್ಲ |
ಆರಿಂದ ನಿರ್ವಹಿಸಿ ಆರು ಚಿಂತಿಪರಿಲ್ಲ |
ಆರು ಎನಗೆ ಗತಿ ಕಾಣೆನೊ ಶೌರಿ ಮು |
ರಾರಿ ಶ್ರೀವಿಜಯವಿಠ್ಠಲರೇಯ |
ತಾರಿ ಬೆಂಡಾಗುತ ತ್ರೈತಾಪ ಓಡಿಸೊ ೪
ಆದಿತಾಳ
ಸೂತಿಕ ಘಾಳಿಯಿಂದ ಹೊಡಿಸಿಕೊಂಡು ಬಲು |
ಭೀತಿಗಾತುರನಾಗಿ ಸಂಕಟ ಬಟ್ಟು ಅಧೋ |
ಪೂತಿ ಗಂಧದಿಂದ ಪೊರಟು ಪ್ರಳಾಪದಿಂದ |
ಭೂತಳದೊಳು ಬಿದ್ದು ಹೊರಳುವೆನೊ |
ವಾತ ಶೈತ್ಯ ಪೈತ್ಯಾಧಾತುವಿನಲ್ಲಿ ಹೀನ |
ಆತುರವಂತನಾಗಿ ಭವದಲ್ಲಿ ಮುಣಗಿ ಸರ್ವ |
ಜಾತಿಯಲ್ಲಿ ಪುಟ್ಟಿಸುವಿ ಈ ಪ್ರಕಾರದಿ ಗರ್ಭ |
ಯಾತನೆ ಪೇಳಲಳವೆ ಅಹೊ ಅಹೊ ಅಯ್ಯೊ |
ಪಾತಕ ಮತಿಯಿಂದ ಪುಣ್ಯವ ಕಳಕೊಂಡು |
ಜ್ಞಾತ ನುಷ್ಯಾನ ಮರದೆ ಮಮತೆಯಿಂದ |
ಆತುಮಾ ಅಹಂ ಮಮತೆಯಲ್ಲಿ ಸಂಚರಿಸಿ ಕಾಲಾ |
ತೀತನಾದೆ ಸ್ವಧರ್ಮ ತೊರೆದು |
ಮಾತು ಲಾಲಿಸಿ ಕೇಳೊ ಹೃದಯಾಕಾಶ ನಾಮಕನೆ |
ಮಾತುರ ಕಾಲವಾದರೆ ಪೋತತನ ಧರಿಸಿ ಈ |
ಮಾತೆ ಗರ್ಭದಲ್ಲಿ ಒಲ್ಲೆ ಒಲ್ಲೇ |
ಭೂತಾದಿ ವರ್ತಮಾನ ಬಲ್ಲ ವೈಕುಂಠರಮಣ |
ಭೌತಿಕ ಕಾಯವೆ ಬಿಡಿಸು ನಿನ್ನ ನಾಮವೆ ನುಡಿಸು |
ಜೋತಿರ್ಮಯ ಮೂರ್ತಿ ವಿಜಯವಿಠ್ಠಲರೇಯ |
ಕೌತುಕವಾಗಿದೆ ನಿನ್ನ ವ್ಯಾಪಾರ ನಿತ್ಯ ೫
ಜತೆ
ಪುಟ್ಟಿಸುವುದ ಬಿಡಿಸೊ ಪೂರ್ಣ ಕರುಣಾಂಬುಧೆ
ವಿಠಲ ವಿಜಯ ವಿಠ್ಠಲ ಅಪ್ರಮೇಯ ೬

ದೇಹದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಿವೆ

೧೭
ಧ್ರುವ ತಾಳ
ಆಚಾರವಂತನಾಗಿ ಅನುದಿನ ನಿನ್ನೊಳಗೆ
ಯೋಚಿಸು ಸುಷುಮ್ನ ನಾಡಿ ಮಧ್ಯ
ವಾಚಾಮಾದಿ ದೋಷ ಹಿಂಗಳೆದು ಚನ್ನಾಗಿ
ಆಚಮನಾದಿಯಿಂದ ಆಸನಹಾಕಿ
ಬಾಚಿ ತೊಡಕು ಬಿಡಿಸಿದಂತೆ ಭೇದವು ತಿಳಿದು
ಪ್ರಾಚೀನ ದಿಕ್ಕುಗಳ ವಿಚಾರಿಸಿ
ವಾಚಾರಂಭಣವಲ್ಲಾ ದ್ವಾದಶಾಂಗುಲಿ ಪೋಪ
ಈ ಚಕ್ರ ವಾಯು ಸಂಚಾರಗ್ರಹಿಸಿ
ಗೋಚರಿಸುವ ಮನ ಚಿತ್ತ ಬುದ್ಧಿಯಿಂದ
ಆ ಚೇತನಾಹಮ್ಮತಿ ಏಕಗೈದು
ಯಾಚಕ ವೃತ್ತಿಯಿಂದ ಪ್ರಾಣ ನಿ[ವಿ]ರೋಧ ಕರ್ಮ
ಮೋಚಕ ಮಾರ್ಗದಿಂದ ಬಹು ಶ್ರುತಿಯಲ್ಲಿ
ರೇಚಕ ಪೂರಕ ಕುಂಭಕ ನಿಲಿಸಿ ಆ
ಲೋಚನೆ ಮಾಡು ಆತ್ಮ ಅವಿಲದಿ (ಅವಿಲಂಬದಿ)
ಸೂಚನೆ ಕೇಳು ಮುನ್ನೆ ಪ್ರಸನ್ನ ವದನಾಂಭೋಜ
ಲೋಚನ ಹರಿಯ ಮೆಚ್ಚಿ ಮೆಚ್ಚಿಸಿ
ನೀಚ ಸಂಗವ ಬಿಟ್ಟು ನಿಜಭಕುತಿಯಿಂದ ನಿತ್ಯ
ಊಚ ಪ್ರವರ್ತಿ ದಿವಸ ದಿವಸಕ್ಕಧಿಕ
ಲೋಚನೇಂದ್ರಿಯ ಗೋಲಕ ಜೋತಿರ್ಮಧ್ಯಾಕಾಶ
ರೋಚಿಷ ವ್ಯಾಪ್ತಿ ಬಾಹ್ಯಪಂಚದಲ್ಲಿ
ಚಾಚುತ್ತ ಪೋಗುವದು ದಿಗ್ದೇಶ ಭೂಮಂಡಲ
ಈ ಚೇತನದ ವ್ಯಾಪಾರವದಿಂತೊ
ಸೂಚರಾಗಿದಕೆ ಅಪ ಭ್ರಷ್ಟ ದೇವತೆ ಸೂ
ರ್ಯ ಚಂದ್ರಮೌಳಿ ಪ್ರಾಣ ಶಿರಿ ಭಗವಂತ
ಪ್ರಾಚೀನ ಪುಣ್ಯ ಪಾಪದಿಂದ ಕರ್ಮ ಭೂಮಿಯಲ್ಲಿ
ಈ ಚರಾಚರ ಕಾಣಿಸಿ ಕೊಡುವರು
ಯೋಚನೆ ಬಿಡು ಹೇಯ ಅನಿತ್ಯ ಮುಂದೆ ಮುಗ
ಳಾಚರಣೆ ಮಾಡು ಇವರಿಗೆರಗಿ
ಭೂಚೋರ ಮೊದಲಾದ ರುಕ್ಷರಾಕ್ಷಸರು ಪಿ
ಶಾಚಿ ಈರ್ವರುಪದ್ರ ಓಡಿಸೆಂದು ದು
ರಾಚಾರವನ್ನೆ ಬಿಟ್ಟು ಹರುಷದಿಂದ
ನಾಚಿಕೆ ತೊರಿಯದೆಲೇ ಯಮನೇಮದಿಂದ ಸವ್ಯ
ಸಾಚಿ ಸೂತನ್ನ ನೆನಿಸು ತ್ರಿ ಬಗೆಯಿಂದ
ವಾಚಾಮ ಗೋಚರ ವಿಜಯ ವಿಠಲನ್ನ ಪ
ರಿಚಾರನಾಗು ಗುರುಗಳ ಉಪದೇಶದಿಂದ ೧
ಮಟ್ಟತಾಳ
ಹೃದಯ ನಿಮ್ನದ ಮಧ್ಯ ಗ್ರಂಥಿಮಂಡಲವುಂಟು
ಇದರಲ್ಲಿ ಉಭಯ ಭಾಗದ ನಾಡಿಗಳು
ಎದುರೆದರು ಬೆರತು ಪೋಗಿವೆ ಅಧಲೋದ್ರ್ವ
ಇದರ ವಿಭಾಗಗಳು ತಿಳಕೊಂಡವ ಧನ್ಯ
ಇದೆ ಎಡಬಲವಿಡಿದು ಸ್ತ್ರಿ ಪುರುಷರ ನಾಡಿ
ಇದೆ ಅರ್ಚಿರಾದಿ ಲೋಕದುಭಯ ಮಾರ್ಗ
ಇದರೊಳು ಬಲು ಭೇದ ಜ್ಞಾನ ಧ್ಯಾನದ ಬಲವೋ
ಸದಮಲ ಮೂರುತಿ ವಿಜಯ ವಿಠಲರೇಯನ
ಪದಗಳ ನೋಡುವ ಮಹಾತ್ಮ ಬಲ್ಲ ಕಾಣೋ ೨
ತ್ರಿವಿಡಿ ತಾಳ
ಘನ ನಾಡ್ಯಾಂತರ್ಗತ ಎಂಟು ದಳದಕಮಲ
ಮಿನಗುತಿಪ್ಪದು ನೋಡಿ ಕಳಸದಂತೆ
ಅನುದಿನ ಅದರ ಮಧ್ಯದಿ ಒಂದು ಕರ್ನಿಕೆ
ಕನಕಾದ್ರಿಯಂದದಲಿ ಶೋಭಿಸುತಿದೆ
ಅನಳಾರ್ಕ ಶಶಿ ಮಂಡಲ ಪೀಠದ ಮೇಲೆ
ಚಿನುಮಯ ಮೂರುತಿ ಕುಳಿತಿಹನೋ
ಅನಿಳ ಈತನ ಪಾದ ಮೂಲಾಶ್ರಯ ಮಾಡಿ ಭ
ಜನೆಯಿಂದ ಸುಖಿಸುವ ಜೀವ ಇಂತೊ
ಅನುಮಾನವಿದಕ್ಕಿಲ್ಲ ಅಧ್ಯಾತ್ಮನಿಶ್ಚಯ
ಇನನನುದಯ ದಿಕ್ಕಿನಲ್ಲಿ ಸಿದ್ಧವೆನ್ನಿ
ಇನಿತು ಗ್ರಹಿಸಿ ಮುಂದೆ ಜೀವ ಪ್ರಕರಣ ಕೇಳೊ
ಚಿನುಮಯಾತ್ಮನಯ್ಯಾ ಎಂದೆಂದಿಗೆ
ಗುಣತ್ರಯಾತ್ಮಕವಾದ ಲಿಂಗ ಬದ್ಧನಾಗಿ
ಎಣಿಸು ಆ ಮೇಲೆ ಅನಿರುದ್ಧ ದೇಹ
ಅನುವಾಗಿದೆ ಮತ್ತೆ ವೈಕಾರಿಕದಿಂದ
ಜನನವಾದ ಮನಸು ಪ್ರಕೃತಾದಿಂದ
ತನುವಾಗಿದೆ ನೋಡು ಮೂರು ವಿಧ ಕೂಡಿ
ಅನಿರುದ್ಧದಲಿ ಮೇಲೆ ತದಾಕಾರದಲ್ಲಿ
ವನಜ ಗರ್ಭಾದಿ ತತ್ವೇಶ್ವರರು ತಮ ತಮ್ಮ
ಮನಿಯಲ್ಲಿ ನಿಂದಿಹರು ಅಭಿಮತರಾಗಿ
ಮನಸು ಎಂಬೋದು ಕೇಳು ಒಂದೊಂದು ಪರಮಾಣು
ಎಣಿಸಿದರು ಅನಂತಾನಂತ ಅಂಶಿ
ಗಣನೆ ದೊರಕದು ಕಾಣೊ ಏನಂಬೆ ಸೋಜಿಗ
ಗುಣದ ಕಾರ್ಯದ ಸಂಗತಿ ಸಿಗಬಲ್ಲದೆ
ಮನಸು ಹೃದಯ ಇಂದ್ರಯೋನಿ ದಕ್ಷಣನಯನ
ದಿನ ರಾತ್ರಿ ಸಂಚಾರಾವಸ್ಥಿ ತ್ರಯವೋ
ಅನಿಳ ರುದ್ರ ಸೂರ್ಯರಾಮುಖ್ಯವಾಗಿ ಜೀ
ವನ ಪ್ರಕಾಶದಿಂದ ವ್ಯಾಪಾರವಾ
ಮನಸಿನ ವಶಮಾಡಿಸುವರೊ ಇದಕೆ
ಗುಣಪೂರ್ಣ ಪರಮಾತ್ಮ ಪ್ರಾಜ್ಞ ತೈಜಸ
ಪ್ರಣವ ಮೂರುತಿ ವಿಶ್ವ ಮೂರು ರೂಪಗಳೇಕ
ಕ್ಷಣಬಿಡದೆ ಸ್ಥಾನ ಸ್ಥಾನಕೆ ವೈವರು
ಅನಿಮಿಷ ತತಿಗಳಿಗೆ ಅಂಶದಿಂದಲಿ ಸಿದ್ಧ
ಮನುಜಾದಿಗಳಿಗೆ ಪ್ರಕಾಶ ವೃತ್ತಿ (ವ್ಯಾಪ್ತಿ)
ಅಣು ಜೀವವಾದರು ಪ್ರಕಾಶದಿಂದಲಿ
ಅನುಭವ ಮಾಡಿಸುವ ಹರಿಯ ಶಕ್ತಿ
ಮನಸಿನಲಿ ಜೀವನದ ಸಂಸ್ಕಾರವೀರ್ವಗೆ
ಜನುಮ ಜನುಮಾಂತರದು ತುಂಬಿಹದೊ
ದನುಜಾರಮರ ನಿಕರ ಒಂದೊಂದು ತತ್ವದಲಿ
ಗುಣ ಪ್ರವರ್ತಕರಾಗಿ ವಸತಿಯಯ್ಯಾ
ಗಣಿತ ವೆಂಬುದೆ ಇಲ್ಲ ತತ್ತತ್ಕರ್ಮಕೆ ತತ್ತ
ಜ್ಜನರು ನಿಯಾಮಕರು ನಿತ್ಯದಲ್ಲಿ
ಉಣಬೇಕು ಇವರಿಂದ ಸುಖದುಃಖ ಈ ಜೀವ
ಕೊನೆಗೆ ಯೋಗ್ಯತದಂತೆ ಸಾಧನವಾಹುದೊ
ಮನಸು ಕೇವಲ ಸೂಕ್ಷ್ಮ ಮಹವಲ್ಪ ಪ್ರದೇಶ
ಅನಿತು ಜನ್ಮದ ಸಂಸ್ಕಾರ ತುಂಬಿಹುದೊ
ತ್ರಣಕೆ ಗಜ ಜನುಮ ಆ ಗಜಕೆ ತೃಣಜನ್ಮಗಳು
ಅನಿಶಾ ಬಂದರಾಗೇ ಒಂದೇ ಸಮನೋ
ಮನಸು ನೋಡಿದರೆ ಜೀವಕೆ ಭಿನ್ನ ಸುಷುಪ್ತಿ
ಕನಸು ಜಾಗರ ಕೊಡುವದೆಲ್ಲಿದ್ದರೂ
ಪ್ರಣವ ಪಾದ್ಯ ನಮ್ಮ ವಿಜಯ ವಿಠಲರೇಯನ
ನೆನೆಸು ನಾನಾ ಚತ್ರ ವ್ಯಾಪಾರವಪಾರ ೩
ಅಟ್ಟತಾಳ
ಕಮಲ ಗರ್ಭಾಂತರ ಪ್ರಾಜ್ಞನ ಬಳಿಯಲ್ಲಿ
ತಮ ರಜ ಸತ್ವ ಗುಣಾತ್ಮಕ ಬದ್ಧ ಉ
ತ್ತಮ ಜೀವನಿರುತಿಪ್ಪ ಸಂಸಾರದೊಳು ಬಿದ್ದು
ಕ್ರಮದಿಂದ ವರ್ತಮಾನ ತಿಳಿ ಒಂದೊಂದು
ನಿಮಿಷ ಪಾಲಿಸುವಲ್ಲಿ ಸಪ್ತಾಂಗ ವಿಶ್ವನು
ಗಮಿಸಿ ಕಂಧರಭಾಗ ಇಂದ್ರಯೋನಿಯ ಮಧ್ಯ
ಸಮ ತೈಜಸ ದೇವನ್ನ ನೆರೆದು ಅಲ್ಲಿಂದ ಹೃ
ತ್ಯಮಲ ಮಧ್ಯದಲ್ಲಿದ್ದ ಪ್ರಾಜ್ಞನ ಕೊಡಲು
ತಮೋಗುಣದ ಕಾರ್ಯ ಮಿಗಿಲೋಧ್ವಗುಣದ ಮೇಲೆ
ಅಮಮ ಮನಸಿನಲ್ಲಿ ಚತುರ್ವಿಂಶತಿತತ್ವ
ಸಮ ಅಸಮವಾಗಿ ಸೂಕ್ಷ್ಮತರ ತೆರದಿಂದ ಪೂರ್ಣವಾಗಿಪ್ಪವು
ಅಮಿತ ಪ್ರಕಾಶ ಕಿರಣಮಯ ವಿಸ್ತಾರ
ರಮಣೀಯಾಗಿ ಜೀವಕಾಂತಿ ಮಿಶ್ರದಲಿ
ನಿಮಿಷಾರ್ಧದೊಳಗೆ ಅನಂತ ವಾಸನ ಮಯ
ಚಮತ್ರ‍ಕತಿ ಯಿಂದಲಿ ಸೃಷ್ಟಿಯಾವದು
ಆಗಮಸಿದ್ಧ ನಿರ್ಣಯಸಿದ್ಧವಾಗಿದೆ ಇದೆ
ಪ್ರಮೇಯ ಭಾಗಗಳೆಲ್ಲಾ ಉಪದೇಶ ಗಮ್ಯಮೊ
ಉಮೆಯ ರಸ ತತ್ವ ಏಕಭಾಗದ ಕ್ರೀಯ
ಕ್ಷಮೆಯಲ್ಲಿ ವ್ಯಾಪಿಸಿಕೊಂಡಿದೆ ಬಲು ವಿಧ
ರಮೆಯರಸ ನಮ್ಮ ವಿಜಯ ವಿಠಲನ್ನ
ವಿಮಲ ಗತಿಯಿಂದ ಧ್ಯಾನವಮಾಡು ೪
ಆದಿತಾಳ
ಕಂದ ಮೂಲದಿಂದ ಋಜುವಾಗಿ ಪೊಳೆವ ನಾಳ
ರಂಧ್ರವುಳ್ಳ ನಾಡಿಗಳು ಗ್ರಂಥಿಭೇದಿಸಿಕೊಂಡು
ಇಂದ್ರಯೋನಿಯ ಸಾರಿ ಅಗ್ರಭಾಗದಿಂದ
ಒಂದೊಂದು ಜ್ಞಾನೆಂದ್ರಿಯಕೆ ಪ್ರವೇಶವಾಗಿಹವೊ
ಅಂದವ ನೋಡು ಮುಖ್ಯ ಧ್ಯಾನಗೈಯ ಬೇಕಾದರೆ
ದ್ವಂದ್ವಾತೀತನಾಗಿ ದಕ್ಷಿಣಾಕ್ಷಿಯಲಿಂದ
ರಂಧ್ರವ ಬಂಧಿಸಿ ತಿರೊಭಾವ ಶ್ವಾಸದಿಂದ
ಸಂದಿದ್ದ ಭೌತಿಕ ತೊರದು ಪ್ರಾಕೃತದೇಹ
ಪೊಂದು ವಿಶ್ವತೈಜಸನ್ನ ಪ್ರಾಜ್ಞನೊಳಗೆ ಇಟ್ಟು
ಕುಂದದಲೆ ಭಜಿಪುದು ಇದೆ ಮಾನಸಪೂ್ರಜೆ
ಕೆಂದಳಾತ್ಮಕವಾದ ಕಮಲ ಕರ್ನಿಕೆ ಮೂಲಾಗ್ರ
ಒಂದೊಂದು ಸ್ಥಾನವೆನ್ನಿ ಹೃದಯ ವ್ಯಾಪ್ತಿ ಸಮೇತ
ನಿಂದು ಒಪ್ಪುತಲಿಪ್ಪ ಪುರುಷತ್ರಯನನು ವೊಲಿಸು
ವಂದಿರಸು ಹದಿನಾರು ಕಳಾಭಿಮಾನಿಗಳಿಗೆ
ಮುಂದೆ ಮುಂದೊಲಿದು ತಾರತಮ್ಯಂದ
ಸಂದರುಶನ ಮಾಡು ಉತ್ತಮೋತ್ತಮ ಭಕ್ತಿ
ಯಿಂದ ಮುಖ್ಯ ಪ್ರಾಣನ ಸೇವಿಸಿ ಅಲ್ಲಿಂದ
ಇಂದಿರೇಶನ ಮೂರ್ತಿ ನಿನಗಿಷ್ಟವಾದದ್ದು
ನಂದದಿಂದಲಿ ನೆನೆಸಿ ಏಕೀ ಭೂತವ ಮಾಡು
ಸಂದೇಹನಾಗದಿರು ಬ್ರಹ್ಮನಾಡಿಯ ಮಧ್ಯ
ತುಂದಿ ಊಧ್ರ್ವಭಾಗಕ್ಕೆ ದ್ವಾದಶಾಂಗುಲಿ ಹೃದಯ
ಮಂದಿರದೊಳು ಭಜಿಸು ದಹರಾಕಾಶದಲ್ಲಿ
ಎಂದೆಂದಿಗೆ ಇನಿತು ಇಷ್ಟ ಪುಣ್ಯ ಸಂಪಾದಿಸಿ
ನಿಂದಿತ ಕರ್ಮಗಳು ಪೋಗಾಡು ನಲಿದಾಡು
ಮಂದಮತಿಯಲ್ಲಿ ಕೆಡದಿರು ಬಾಳದಿರು
ಹಿಂದಕ್ಕೆ ಹಿಂದಕ್ಕೆ ಸರಿದು ಮೆಲ್ಲ ಮೆಲ್ಲನೆ ಮು
ಕ್ಕುಂದನ ಕಾಣುವುದು ಪಂಚಸ್ಥಾನದಲ್ಲಿ
ನಂದವಾದ ಜೀವಕ್ಕೆ ವಿಪರೀತ
ಬಂದಿಹುದು ನೋಡು ಅನಾದಿಯಿಂದ ಹರಿಯ
ಬಂಧಕ ಶಕ್ತಿಗೆ ಶರಣೆಂದು ಬಾಗಬೇಕು
ವೃಂದಾರಕರ ಪ್ರಿಯ ವಿಜಯ ವಿಠಲರೇಯ
ಸಂದರುಶನ ಕೊಡದೆ ಆವುದು ಸಿದ್ಧಿಸದು ೫
ಜತೆ
ಶ್ರವಣ ಮನನ ಧ್ಯಾನೋಪಾಸನೆ ಮಾಡೋದು
ಜನುಮ ರಹಿತ ನಮ್ಮ ವಿಜಯ ವಿಠಲ ಸುಳಿವ ೬

ಕಾಮ, ಕ್ರೋಧಾದಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು


ಧ್ರುವತಾಳ
ಆಟವಲ್ಲವು ಕಪಟನಾಟಕ ಧಾರಕನೆ
ಕಾಟಿಕಾರು ಕ್ರೂರ ನೋಟದಿಂದ
ಪಾಟುಗೆಡಿಸಿ ಹೀನ ಕೋಟಲೆಯೊಳು ನೂಕಿ
ಬೂಟಕತನ ಮಾಯದಾಟಲೆಯೊಳು ನೂಕಿ
ಸೂಟಿಯಲ್ಲಿದ್ದ ಪುಣ್ಯ ಕೂಟವನಗಲಿಸಿ
ನೀಟಾಗದಂತೆ ಶುದ್ಧ ಮಾಟಕಾಯ
ಧಾಟೆಯ ಕೆಡಿಸಿ ತಮ್ಮಾಟವೆ ತೋರಿ ಪಾಪ
ಊಟವನುಣಿಸಿ ಚೆಲ್ಲಾಟವಾಡುತ್ತ
ಆಟಕವೆಂದರೆ ವಟದಲ್ಲಿ ಪರ ಕವಾಟದಲ್ಲಿ ಪರಕ
ವಾಟವನು ಕಾಯ್ದೆ ಕೋಟಿ ಬಂದಿಸಿ
ಹಾಟಕಾಂಬರಧಾರ ವಿಜಯ ವಿಠ್ಠಲರೇಯ
ನಾಟಿಸೊ ನಿನ್ನ ಪಾದಪೀಠದಲ್ಲೆನ್ನ ಮನಸು ೧
ಮಟ್ಟತಾಳ
ಕಂಗಳಿಂದಲಿ ಪರಾಂಗನೆಯರ ನೋಡಿ
ಅಂಗಸಂಗವ ಬಯಸಿ ಕಂಗಳ ನಾನಾದೆ
ಕಂಗಳಿನಲಿ ಪತಂಗನೊಳಗೆ ಇದ್ದ
ಮಂಗಳ ಮೂರ್ತಿ ಶೃಂಗ ವಿಜಯವಿಠಲ
ಹಿಂಗಿಸುವದೂ ಈ ಭಂಗಗಿಕ್ಕುವ ಪಾಪ
ಶೃಂಗಾರದೇವನಂಘ್ರಿಗಳ ತೋರಿ ೨
ರೂಪಕತಾಳ
ದುರ್ಜನರಾವರ್ತಿ ದೂರಾಗಿ ನಿಲ್ಲದಲೆ
ಅಬ್ಜವಾಗಿ ಕುಳಿತು ತಿಳಿವಿಕೆಯ
ಎಜ್ಜಾದಲ್ಲಿ ಪೊಕ್ಕು ಭೇದಿಸುವ ದುರಾವರ್ತಿ
ವಜ್ಜರ ಲೇಪವಾಗಿ ವ್ಯಾಪಿಸೀಗ
ವಜ್ಜವಾಗಿ ಪಾಪವೆಂಬೊ ಭವಾಬ್ಧಿಯಲ್ಲಿ
ಮಜ್ಜನದಿ ನಾ ಬಲು ಮಂದನಾಗಿ
ಮೂಜ್ಜಗದೊಡಿಯ ಶ್ರೀವಿಜಯ ವಿಜಯವಿಠ್ಠಲ ಎನಗೆ
ಸಜ್ಜನ ಸಂಗಯಿತ್ತು ದುರವಾರ್ತಿ ಬಿಡಿಸೊ ೩
ಝಂಪಿತಾಳ
ನಾಶಿಕದಲ್ಲಿ ದುರ್ವಾಸನೆಯ ಬಿಡದಲೆ
ಹೇಸದೆ ನಾನಾ ಪದಾರ್ಥವ
ಹೇಸಿಕೆಯೆಂದು ಹಿಂದಕ್ಕೆ ಪೋಗದೆ ನಿತ್ಯ
ರೋಸಿಕೆ ಪುಟ್ಟಿಸಿಕೊಳದೆ ನಾನು
ಲೇಸು ಲೇಸೆಂದು ನಿನಗರ್ಪಿಸದ ಪರಿಮಳ
ವಾಸನಾಘ್ರಾಣಿಸುವೆ ವಾಸರದಲ್ಲಿ
ವಾಸುದೇವರಂಗ ವಿಜಯವಿಠ್ಠಲ ನಿನ್ನ
ಲೇಸಾದ ಪಾದಾಬ್ದ ವಾಸನಿಯನೀಯೊ ೪
ತ್ರಿವಿಡಿತಾಳ
ನಾಲಿಗೆ ರುಚಿ ಇನ್ನು ತಗ್ಗದು ತಗ್ಗದು
ಮೇಲಾದ ಪರಿ ಪಕ್ವ ಬಯಸುತಿಪ್ಪೆ
ಕಾಲವರಿತು ಹೊರೆಯದಿದ್ದರೆ ನಾನಾಕ
ಹಾಳ ಹರಟಿ ಯೋಚನೆ ಮಾಡಿ ಮರುಗುವೆನು
ಲಾಲಿಸು ಮನ ದುಸ್ಸಹ ಪಿಡಿಯಲಾರೆ
ಶ್ರೀಲೋಲ ಶ್ರೀಮದನಂತ ವಿಜಯವಿಠ್ಠಲ
ಪಾಲಿಸು ನಿನ್ನ ಭಕ್ತನ್ನ ಶೇಷವ ಕೊಟ್ಟು ೫
ಅಟ್ಟತಾಳ
ತ್ವಕುವೆಂದೆಂಬ ಕಕುಲಾತಿಯ ತೊರೆಯದೆ
ಸಕಲ ಭೋಗಕೆ ನಾನಕಟ ಕೆಟ್ಟೆನಯ್ಯ
ಸುಖವೆಂಬೋದ ಕಾಣೆ ಭಕುತಿ ಮಾರ್ಗ ಇಲ್ಲ
ದು:ಖವಲ್ಲದೆ ಲೇಸ ಮುಕುತಿಗೆ ಮತಿ ಇಲ್ಲ
ರುಕುಮಿಣಿಪತಿ ಶ್ರೀ ವಿಜಯ ವಿಠ್ಠಲ ಇಂಥ
ಆಕಾರವ ನಿಲ್ಲಸಯ್ಯ ಸಕಲ ಸುರರೊಡೆಯ ೬
ಆದಿತಾಳ
ಮನವೆ ಕಾರಣವಯ್ಯ ಇನಿತು ದುವ್ರ್ಯಸನಕ್ಕೆ
ಅನುಮಾನವಿಲ್ಲವಿದೆ ಎನಗೆ ನಿಶ್ಚಯ ಕಾಣೊ
ಮನತನು ಪಾಲಿಸುವ ಘನವು ನಿನ್ನದು ದೇವ
ಮುನಿವಂದ್ಯ ಮಹಕೃಪಾವನಧಿ ವಿಜಯ ವಿಠ್ಠಲ ೭
ಜತೆ
ಮನಸ ನಿಲಿಸಿ ಸಕಲ ಇಂದ್ರಿಯಗಳ ಕಾಪಾಡು
ಮನಸಿಜನಯ್ಯನೆ ವಿಜಯ ವಿಠ್ಠಲರೇಯ ೮

ಹರಿಪೂಜೆಯನ್ನು ಮಾಡದಿದ್ದರೂ ಚಿಂತೆಯಿಲ್ಲ;

೧೬
ಧ್ರುವತಾಳ
ಆತ್ಮಯಜ್ಞವ ಮಾಡು ಅನಾದಿಯಿಂದ ನಿನ್ನ
ಗಾತ್ರ ಪಾಲನೆ ಎಂಬೊ ಗರ್ವವಳಿದೂ
ಚಿತ್ರಗುಣಗಳಿಂದ ವಿಭುಕ್ತವನ್ನೆ ತಿಳಿದು
ತತ್ತದಭಿಮಾನಿಗಳ ನೆನೆಸಿ ತುತಿಸೀ
ನಿತ್ಯದಲಿ ಎಸಗು ಜ್ಞಾನ ಕರ್ಮೇಂದ್ರಿಯದಿಂದ
ಉತ್ತಮೋತ್ತಮ ಗ್ರಹಿಸು ರಸ ಪ್ರಭೇದಾ
ಸತ್ಯ ಅನಿತ್ಯವೆಂದು ಸಾರುತ ಸರ್ವತ್ರದಲ್ಲಿ
ಸತ್ವಾದಿ ಭಾಗವಿಡಿದು ಪ್ರಾಣಹೋತ್ರ
ಪ್ರತ್ಯೇಕಾಹುತಿಯಿಂದ ಪ್ರತಿ ಪ್ರತಿ ವಾರದಲ್ಲಿ
ತುತ್ತು ತುತ್ತುಗಳಲ್ಲಿ ಗೋವಿಂದ ಗೋವಿಂದ
ಚಿತ್ತಜನಯ್ಯಾ ಚಿನ್ಮಯ ಮೂರುತಿ
ಹತ್ತಾವತಾರ ಹರಿಯ ಮಗುಳೆ ಮಗುಳೆ ನಿನ್ನ
ಚಿತ್ತದಲ್ಲಿ ಸ್ಮರಿಸು ಜ್ಞಾನದಿಂದ
ಹೃತ್ತಾಪ ಪರಿಹಾರ ಮುಖ್ಯಪ್ರಾಣಾಂತರ್ಗತ
ಸತ್ಯ ಭಾಮಾ ಪತಿಗೆ ಸಮರ್ಪಿಸು
ಇತ್ತ ಪ್ರಮಾಣ ಸಿದ್ದವಿನಾ ಪ್ರಾಣ ಪ್ರತಿಕಾಂತು
ಉತ್ತರ ತೊರೆದರೆ ನೀರಜ ಸಂಭವ
ಸತ್ಯ ಸಂಕಲ್ಪ ಪಾಣಿಗೆ ಅವಿರುದ್ದ
ಮತ್ತೆ ಪ್ರಾಣನು ಶ್ರೀಶಗೆ ಅನಿರುದ್ಧಾ ಅವಿರುದ್ದ
ಇತ್ತಂಡವಾಗಿ ಕಾರ್ಯಮಾಡಿ ಮಾಡಿಸುವರು
ಹತ್ತುನಾಲ್ಕು ಭುವನ ಬಾಹ್ಯಾಂತರ
ಮೃತ್ಯು ನಾನಾ ವಾನಗೆ ಶ್ರೀ ಬ್ರಹ್ಮರುದ್ರಾದ್ಯರೆ
ಉತ್ತಮರೆಂದು ಇವರೆ ಸ್ವಾತಂತ್ರರೋ
ಈ ತೆರದಲ್ಲಿ ತಿಳಿದು ಇವರದಿಷ್ಠಾನದಲ್ಲಿ
ಉತ್ತಮ ಶ್ಲೋಕ ಹರಿಯ ಚಿಂತಿಸಾದೆ
ಭಕ್ತಿಯ ಮಾಡಿ ಭಜಿಸಿ ನೈವೇದ್ಯ ಇಟ್ಟು ಅದೆ
ತುತ್ತು ತೆಗೆದುಕೊಂಡರೆ ವ್ಯರ್ಥಾ ಅನರ್ಥಾ
ಮೊತ್ತವಲ್ಲದೆ ಲೇಶ ಸುಖವಿಲ್ಲ ಎಂದಿಗೂ
ಉಕ್ತಿ ಉಂಟು ಶ್ರೀ ಬ್ರಹ್ಮರುದ್ರೇಂದ್ರಾದಿ ಚಂಡಿಕಾ
ಶಕ್ತ್ಯಾದಿ ಕಾಮ ಮಹಾ ಕ್ಲೇಶಕ್ಕೆ ಬೀಜಾ
ವರ್ತಮಾನಕಾಲ ಇಂತು ತಿಳಿದು ಸರು
ವೋತ್ತಮ ಜಾರಚೋರ ಶ್ರೀ ಕೃಷ್ಣನ್ನ
ಹೊತ್ತು ಹೊತ್ತಿಗೆ ಸರ್ವಜಡ ಜೀವರಲಿ ನೆನೆದು
ಮುಕ್ತಿ ಸೂರೆಗೊಳ್ಳೊ ಭೋಗದಿಂದ
ಭೃತ್ಸವತ್ಸಲ ನಮ್ಮ ವಿಜಯ ವಿಠಲ ಪೂರ್ಣ
ಆತ್ಮಾದಿ ಗುಣೋಪಾಸಾ ರಸನಾಗ್ರಹದಲಿ ಸವಿವಾ
ಮಟ್ಟತಾಳ
ಪ್ರತಿಮೆ ಸಾಲಿಗ್ರಾಮ ಪಾವಕ ಬಲಿಹರಣ
ಕ್ಷಿತಿಸುರ ಮೊದಲಾದ ಚೇತನದಲಿ ಸಂ
ಗತಿಯನು ಬಿಡದೆ ದೇವತೆಗಳ ಸಹವಾಗಿ
ಮತಿಯಲ್ಲಿ ಪೊಗಳಿ ಒಂದೊಂದಧಿಷ್ಠಾನ
ಮತದವರೊಳಗಿಪ್ಪ ಹರಿರೂಪ ನೆನದು
ಹಿತ ಪದಾರ್ಥಗಳು ಹಿರಿದಾಗಿ ಸಮ
ರ್ಪಿತವೆಂದು ಕೊಟ್ಟು ತೃಪ್ತಿಯಾಗಲಿಬೇಕು
ಕೃತಭುಜಗಣದವರ ಬಹುರೂಪಗಳಿಂದ
ತತುಸ್ಥಾನದಲಿ ವಾಸ ವಾಗಿಪ್ಪನಯ್ಯಾ
ಅತಿಶಯವೇ ಕೇಳಿ ಅಂತಿ ಅಂಶಕೆ ಪರಿ
ಮಿತ ಉಂಟು ಶಕ್ತಿ ಗುಣಕರ್ಮಗಳಿಂದ
ಪ್ರತಿಮೆಯಲ್ಲಿ ಇದ್ದ ಸುರರಿಗೆ ಭಿನ್ನರಸ
ಇತರ ಸ್ಥಾನದಲ್ಲಿ ತೆಗೆದು ಕೊಂಬ ಶಕ್ತಿ
ಸತತ ಸಲ್ಲದು ಕಾಣೊ ಅಂಶಿ ಒಂದಾದರು
ಪ್ರಥಕು ಪ್ರಥಕು ಇಪ್ಪ ಅಂಶಾಂಶವು ಭೇದ
ಶತಮೋದ ವಾಯು ವಾಣಿದೇವಿ ಭಾ
ರತಿ ಈ ನಾಲ್ಕು ಜನ ಅಂಶಿ ಅಂಶಕ್ಕೆ ಸಮ
ಪತಿತ ಪಾವನ ಲಕುಮಿ ನಾರಾಯಣನು ವ್ಯಾ
ಪುತನಾಗಿ ಇಪ್ಪ ಎಲ್ಲರೊಳಗೆನಿಂದು
ತತುರೂಪದಲ್ಲಿ ತತು ರಸಭೇದ
ಕೃತಿಯನು ಕೈ ಕೊಂಬ ಸರ್ವರೂಪಾತ್ಮಕನೋ
ಅತುಳ ಪರಾಕ್ರಮನೊ ಅಧಿಷ್ಠಾನ ಭೇದದಿಂದ
ಪ್ರತಿಕೂಲವಾಗದಂತೆ ಆರೋಗಣೆ ಕೊಂಬಾ
ಚ್ಯುತದೂರ ಹರಿ ನಿಜ ಸಂಕಲ್ಪ ಇ
ನಿತು ಮಾಡಿಪ್ಪ ಗಡಾ ಭೇದ ಕಾರ್ಯವೆಂದು
ಚತುರಾತ್ಮಕ ನಮ್ಮ ವಿಜಯ ವಿಠ್ಠಲರೇಯಾ
ಯತಿಗಳ ಕೈಯಿಂದ ಇಂತು ಪೂಜೆಗೊಂಬಾ ೨
ರೂಪಕತಾಳ
ಸಾಲಿಗ್ರಾಮಗಳಲ್ಲಿ ಪರ್ವತ ತನುಗಳು
ಶಿಲಾ ಪ್ರತಿಮೆಯಲ್ಲಿ ಪ್ರತೀಕಾದಿ ಮಾನಿಗಳು
ಲೀಲೆಯಿಂದ ವೈಶ್ವದೇವಾಹುತಿಯಲ್ಲಿ
ಕಾಲಕಾಲಕ್ಕೆ ಯಾಗಾಭಿಮಾನಿಗಳುಂಟು
ವಾಲಿಯಾ ಬಲಿಹರಣದಲ್ಲಿ ದಿಜ್ಞಾನಿಗಳು
ಅಲ್ಲಿ ಸೂಭೂದೇವ ಮಿಕ್ಕಾದವರಲ್ಲಿ
ಮೇಲಾಗಿ ತತ್ತ ದೇಹಾಭಿಮತದವರೆನ್ನನು
ಶಾಲಮತಿಯಿಂದ ಎಲ್ಲರನ ಕೂಡಿಟ್ಟು
ವಾಲಗ ಮಾಳ್ಪದು ವಿಶಿಷ್ಠಾಮಾನಿಗಳು
ಜಾಲಾ ಪೂರ್ವೋತ್ತರ ಅಧಿಕಧಿಕರೆಂದು
ಸಾಲಿಗ್ರಾಮವಿಡಿದು ಭೂಸುರ ಪರಿಯಂತ
ಏಳಲವಲ್ಲವೊ ನಯನ ಪ್ರಾಣ ವಾಕು
ನಾಲಿಗಿಯಿಂದಲಿ ಭುಂಜಿಸುವ ಕಪಿಲ ಶುಂ
ಡಾಲರಿಪ್ರವದನಾ ಭಾರ್ಗವ ಕೂರ್ಮನಾಮದಲಿ
ಕೇಳಿ ಪ್ರಾಕೃತ ರಸದೊಳಗೆ ವಿವರ ಭಾಗ
ಸ್ಥೂಲಸೂಕ್ಮರೂಪದಲ್ಲಿ ಪೊಂದಿಪ್ಪವೊ
ಮೂಲ ಪ್ರಕೃತಿ ಕೂಡ ಸಿದ್ಧವಾಗಿದೆ ಹಿ
ಯಾಳಿ ಭೋಗ ದ್ರವ್ಯ ಚಿಂತನೆ ಅವಧಾರಾ
ಬೀಳು ಕೊಡುವ ಕಷ್ಟಾ ಕವಳ ಎತ್ತುವಾ ಇಂತು
ನಾಲಕು ಬಗೆ ರೂಪ ಭೋಜನವೆನಿಪದು
ಪಾಲಸಾಗರ ಶಾಯಿ ದೇವಾಂಶರ ಸಹಿತ
ಬಾಲಕ್ರೀಡೆಯಾಡುವ ಉಂಬಾ ಉಣಿಸಿ ಕೊಳುತಾ
ಶ್ರೀ ಲೋಲ ವಿಜಯವಿಠ್ಠಲರೇಯ ನವನೀತ
ಪಾಲು ಮೊಸರುಮೆದ್ದಾ ಭಕ್ತರಿಗೊಲಿದು ೩
ಝಂಪೆತಾಳ
ಚರವು ಶುಚಿ ರುಚಿ ಮೃದು ರಸ ಶುಭ್ರ ಶುದ್ಧ ಮನೋ
ಹರ ಮದ ಜಾತಿ ಕ್ರಿಯಾಭಾವ ಸಂಸರ್ಗಗುಣ
ಪರಿಕಾಲ ಧೃಷ್ಟವರ್ಜಿತ ಸುಪಕ್ವ
ಮರಮಸೂಕ್ಷ್ಮ ಸುಗಂಧ ನೂತನ ವಿಚಾರ ದ್ರವ
ಪರಿಮಿತ ಒಂದೊಂದೆ ಶಿತ ಸಂಭಾರ ಚಿ
ತ್ತರವಾಗಿಯಿದ್ದ ಹಿತ ಫ್್ಪ್ರಯಶುದ್ದಿ ಅವಿಲಂಬ
ತರತಮ್ಯದಿಂದಲಿ ದೇಶಾದಿ ಭೇದ ಪ್ರ
ಕರಣವನೆ ತಿಳಿದು ಸಮಸ್ತ ಪದಾರ್ಥವನು
ಶರಣ ನಾನೆಂದು ಮಹಾಭಕ್ತಿರಸದಿಂದ ಶ್ರೀ

ತಿರುಪತಿಯ ಶ್ರೀನಿವಾಸನನ್ನು ಕುರಿತ

೩೫. ತಿರುಪತಿ
ರಾಗ:ಕಾಂಬೋಧಿ
ಧ್ರುವತಾಳ
ಆದಿದೈವವೆ ನಿನ್ನ ಪಾದವೆ ನೆರೆನಂಬಿದೆನು ಬಿಡದಲೆ |
ಆದರಿಸು ಕಾದುವಖಳರು ವಾಮದಲ್ಲಿ ಹುರಿಗೂಡಿ |
ಬಾಧೆ ಬಡಿಸುವ[ರು] ನಾದಾರಿಗೆ ದೂರಲಿ |
ಪೋದವನೇಕ ಜನನವಾದ ಕಾಲದಲ್ಲಿ |
ಈ ದೇಹದ ಸುಖವಾದದ್ದು ಕಾಣೆನೊ |
ವೇದಾರಿಸಿ ಕಾಣದ ಬಲು ಮಹಿಮಾನೆ |
ಯಾದವ ಶಿರೋಮಣಿ ವಿಜಯವಿಠಲ ನಿನ್ನ |
ಮಾಧುರ್ಯ ನಾಮವ ಉಣಿಸಿ ಬೀದಿ ಬಸವನಮಾಡೊ ೧
ಮಟ್ಟತಾಳ
ಅಪ್ಪನ ಅಪ್ಪಾನೆಗಿರಿಯ ತಿಮ್ಮಪ್ಪನೆ |
ಸರ್ಪನತಲ್ಪನೆ ಸರ್ವರೊಳಿಪ್ಪನೆ |
ಇಪ್ಪಲು ತಪ್ಪಾನೆ ಕರದರೆ ಬಪ್ಪಾನೆ |
ದರ್ಪಣರೂಪನೆ ವಿಜಯವಿಠಲ ನಿನ್ನ ಕಪ್ಪನೆ ಚರಣದಲಿ |
ದೊಪ್ಪನೆ ಹೊರ ಹೊರಳುವೆನೊ ೨
ತ್ರಿವಿಡಿತಾಳ
ಕಟುಕನ ಕೈಯ ಶಿಲಿಕಿದ ಗೋವೊಂದು ಸಂ |
ಕಟ ಬಡುವಂತೆ ನನ್ನೊಳಗೆ ನಾನೆ ಬೀಳುವೆ ಅ |
ಕಟ ಕಟ ನಿನಗಿನ್ನು ಕರುಣಬಾರದೆ ಸುರ |
ಕಟಕದೊಡಿಯನೆ ನಿರಾಕರಿಸಿ ಎನ್ನನುಯಿ[ದಾ] (ಇಕ್ಕಟ್ಟು) |
ಕಟಕದೊಳಗೆ ಇಟ್ಟುಯೆಳಸುವರೆ ಅ |
ಕಟಾ ಕಟಾ ನಾನಾರಿಗಾಲವರಲಿ ಮರ |
ಕಟ ಕುಣಿವಂತೆ ಮನಸು ಇಂದ್ರಿಯಗಳು ವ |
ಕ್ಕಟವಾಗಿ ಕುಣಿದು ಕಂಗೆಡಿಸುತ್ತಿದೆ ವೆಂ |
ಕಟಾ ಚಲವಾಸಾ ವಿಜಯವಿಠಲನೆ ಚೊ |
ಕ್ಕಟ ಮಾರ್ಗವ ತೋರಿ ವಿಕಟಮನೆಕಳಿಯೊ ೩
ಅಟ್ಟತಾಳ
ದಾಸರ ಮನೆಯಲ್ಲಿ ವಾಸವಾಗಿದ್ದವ |
ದಾಸರ ಬಳಿಯಲ್ಲಿ ಸೇಕೊಂಡವನಾನೊ |
ದಾಸರ ಮನೆಯಲ್ಲಿ ನೀರುಪೊತ್ತವ ನಾನು |
ದಾಸರ ಮನೆಯೆಂಜಲೆಡೆ ತೆಗೆದವ ನಾನು |
ದಾಸರುಂಡದ್ದು ಉಂಡು ಬೆಳೆದವ ನಾನು |
ದಾಸರ ಮನೆ ಮುಂದೆ ರಾತ್ರಿ ಜಾಗರ ನಾನು |
ದಾಸರ ಪಂಚೆಲಿ ದಿನ ಕಳೆದವ ನಾನು |
ದಾಸರ ನಂಬಿದ ದಾಸನು ನಾನು |
ದೋಷಿ ನಾನಾದಡೆ ದೋಷರಹಿತ ಪುಣ್ಯ |
ರಾಶಿ ಪುರಂದರ ದಾಸರ ಮ್ಯಾಲೆ ದಯಾಶರಧಿಯಿಟ್ಟು |
ನೀ ಸಲಹೆಯೆನ್ನ ಪಾಶವ ಬಿಡಿಸುತ್ತ |
ಲೇಸು ಪಾಲಿಪ ನಮ್ಮ ವಿಜಯವಿಠಲರೇಯ |
ಬೀಸಿ ಬೀಸಾಟದಿರು ಬಿಂಕದ ದೈವ ೪
ಆದಿತಾಳ
ನಿನ್ನನೆ ಪೊಂದಿದ ನಿನ್ನನೆ ಸೇರಿದೆ |
ನಿನ್ನನೆ ಪಾಡಿದೆ ನಿನ್ನ ಕೊಂಡಾಡಿದೆ |
ನಿನ್ನಂಘ್ರಿಯುಗಳವನ್ನು ನಂಬಿದೆ ಪಾ |
ವನ್ನ ಚರಿತ ರಂಗ ಎನ್ನ ಸಲಹದಿರೆ |
ನಿನ್ನಾರು ಒಪ್ಪುವರು ಪನ್ನಗಾರಿವಾಹನ್ನ ವಿಜಯವಿಠಲ |
ಎನ್ನ ಬಿಡದೆ ಕಾಯೊ ಅನ್ನಾಥರೊಡಿಯಾ ೫
ಜತೆ
ದುರುಳನೆನದೆ ದುರ್ಜನರಿಗೆ ಒಪ್ಪಿಸದೆ |
ಪರಿಪಾಲಿಸಿ ಸಾಕು ವಿಜಯವಿಠಲರೇಯಾ ೬

ಈ ಸುಳಾದಿಯೂ ಉಡುಪಿಯ ಕೃಷ್ಣನನ್ನು ಕುರಿತದ್ದಾಗಿದೆ.

೧೦. ಉಡುಪಿ
ಧ್ರುವತಾಳ
ಆದಿಮೂರುತಿ ಪರಶುರಾಮನು ಸರ್ವ |
ಮೇದಿಸುರರಿಗೆ ಧಾರಿ ಎರೆದೂ |
ಮುದದಿಂದಲಿ ಸಿಂಹಾಚಲದಲ್ಲಿ ವಾಸವಾಗಿ |
ಕೈದು ಶಳದು ವಾರಿನಿಧಿಯಿಂದಲೀ |
ಮೇದಿನಿ ಬಿಡಿಸಿದ ಪ್ರತಾಪವನ್ನೆ ತೋರಿ |
ವೇದಪಾಲಕ ಮೆರದ ಸ್ತುತಿಗಳೆಂದ |
ಈ ಧರಿಗೆ ರಾಮಾ ಭೋಜನೆಂಬೊ ಭೂಪನಾ |
ಆದರದಿಂದಲಿ ಇರಪೇಳಲೂ |
ಮೇಧಾವ ರಚಿಸಿ ಭಾರ್ಗವನ ಸತ್ಕರುಣ ಸಂ |
ಪಾದಿಸುವೆನೆಂದು ಧಾರುಣಿಯಾ |
ಶೋಧಿಸೆ ಅದರೊಳು ಒಂದಹಿ ನೇಗಲಿಗೆ |
ಭೇದಾವಾಗಿ ಬರಲು ನಡುಗಿ ನೃಪತೀ |
[ಹೇ] ದಯಾಂಬುಧಿ ಎನ್ನಾಪರಾಧ ಕ್ಷಮಿಸೆಂದು |
ಪಾದಕೆ ನಮಿಸಿ ಬಿನ್ನೈಸಿ |
ಸಾಧು ಜೀವನು ರಾಮಗೆ ಮೊರೆಯಿಡಲೂ ವಿ |
ನೋದದಿಂದಲಿ ಬಂದು ತಿಳುಪಿದನು |
ಸಾಧನಾ ನಿನಗಿದೆ ಪಾಪಾ ಮತ್ತಿಲ್ಲವೆಂದು |
ಮೈದಡವಿ ಉಪದೇಶಿದಾ |
ಕ್ರೋಧದನುಜ ಭಂಗ ವಿಜಯವಿಠಲ ಪ್ರಾ |
ಬೋಧಶರೀರ ಕ್ಷೇತ್ರವರ್ಗಾಸಂಹಾರ ೧
ಮಟ್ಟತಾಳ
ಅರಸು ರಾಮಭೋಜಾ ದ್ವಾರದ ಸಭೆಯಲ್ಲಿ |
ಪರಶುಧರಗೆ ಬಂದು ಹರಿಮಣಿತೆತ್ತಿಸಿದ |
ಪರಮ ರಜತವಿಷ್ಟರವನ್ನು ನೇಮಿಸಿ |
ಹರುಷದಿಂದಲಿ ಸ್ತೋತರ ಮಾಡುತ್ತಯಾಗ |
ವಿರಚಿಸಿ ನಿತ್ಯ ಭೂಸುರರು ಸುಖಬಡಿಸಿ |
ಮರಳೆ ಸಿಂಹನಾಮಗಿರಿಯಲ್ಲಿ ಜನಿಸಿ |
ಮೆರೆವ ಸೂ-ವರ್ನಾ ಸರಿತೆಯಲ್ಲಿ ಮಿಂದು |
ಪರಿಪರಿ ಬಗೆಯಿಂದ ಇರುತಿರೆ ಇತ್ತಲು |
ಧರೆಯೊಳಗಿದು ಪೆಸರು ರಜತ ಪೀಠಪುರವೆಂದೆನಿಸಿತು |
ಸರಿಯಿಲ್ಲ ಇದಕೆ ಕರಿಸಿತು ಭಾರ್ಗವನ |
ಕರುಣದಿಂದಲಿ ಇಲ್ಲಿ ಸರಸಿಜ ಸಂಭವ |
ಪುರಹರ ಸುರನಿ[ತ]ರಾ ನೆರೆದು ಪೂಜಿಸುವರೂ |
ನಿರುತದಲಿ ಬಿಡದೆ ಕರುಣಾಕರ ಸಿರಿ ವಿಜಯವಿಠಲನ್ನ |
ಚರಣವ ನೆನದಾ ದಾಸರಿಗೆ ಬಲು ಸುಲುಭ ೨
ತ್ರಿವಿಡಿತಾಳ
ಒಂದು ಕ್ರೋಶ ಉದ್ದ ಅದರಷ್ಟು ಅಗಲಾ ಆ |
ನಂದವಾಗಿಪ್ಪ ಒಪ್ಪುವ ಗದ್ದುಗೇ |
ಕುಂದಾದೆ ತನ್ನಿಂದಾ ತಾನೆ ಇಳಿದು ವ |
ಸುಂಧರದೊಳಗಡಿಗಿತು ಸೋಜಿಗ |
ಪೊಂದಿತು ಲೋಕವು ಇತ್ತರಾಮ ಭೋಜಾ |
ಒಂದು ಕನಕ ಶೇಷಾಸನ ಮಾಡಿಸೀ |
ತಂದು ಇಡಿಸಿ ಧ್ಯಾನಮಾಡಿದ ಭಾರ್ಗವ |
ಬಂದಿದರ ಮಧ್ಯ ನಿಲಬೇಕೆಂದೂ |
ಅಂದಾಮಾತಿಗೆ ಮೆಚ್ಚಿ ಪರಶುರಾಮನು ಲಿಂಗಾ |
ದುದಾದಿ ನೆಲಸಿದ [ಅ]ಹಿ ನಡುವೆ |
ಅಂದಾರಭ್ಯವಾಗಿ ಇದೇ ಅನಂತಸನಾ |
ಎಂದೆನಿಸಿತು ಈತ ಹರಿ ಕಾಣಿರೊ |
ನಂದಿವಾಹನನಂತೆ ತೋರಿದ ಬಲುಹೀನ |
ಮಂದಾಜನಕೆ ತಮವಾಗಲೆಂದೂ |
ಸಂದೇಹಬಡಸಲ್ಲಾ ಸುಜನರು ಈತನೆ |
ಇಂದಿರಾಪತಿಯೆಂದು ವಂದಿಸಿರೋ |
ಮಂದಹಾಸವದನ ವಿಜಯವಿಠಲನಿಪ್ಪ |
ಇಂದು ಕ್ಷೇತ್ರವಿದು ವಿವರಿಸಿ ತಿಳಿವದೂ ೩
ಅಟ್ಟತಾಳ
ಜಲಜ ಸಂಭವನ ಪುತ್ರ ದಕ್ಷನು ಶಪಿಸಲು |
ಕಳೆಗುಂದಿ ಚಂದ್ರಮತಿ ತಿಳಿದು ಭಾರ್ಗವ ಕ್ಷೇತ್ರ |
ದೊಳಗೆ ಇದೇ ವೆಗ್ಗಳಿಯಾ ಸ್ಥಳವೆಂದೂ |
ಕುಳಿತಾ ಜಾರಣ್ಯ ಮಧ್ಯದಲಿ ತಪಮಾಡಿ |
ಒಲಿಸಿ ತನ್ನನು ಧರಿಸಿದ ದೇವನ ಪಾದ |
ಜಲಜಾವ ಕಂಡು ಶಾಪವನ್ನು ಪೋಗಾಡಿ |
ಕಳೆವೇರಿದನು ದಿನಪ್ರತಿಯಲ್ಲಿ ಪೊಳವುತ್ತ |
ಪುಲಿದೊ[ವ]ಲಾಂಬರ[ನು] ಅನಂತಾಸನ್ನ |
ಬಳಿಯಲ್ಲಿ ನಿಂದನು ಸಮು[ಖ]ವಾಗಿ ನಿ |
ಶ್ಚಲ ವರ[ವೀ]ವುತ ಬಂದ ಭಕ್ತರನ್ನ |
ಸಲಹುತ್ತ ಚಂದ್ರಮೌಳೇಶ್ವರನೆಂದೆಂಬಾ |
ಸತಿ ಪೆಸರಿನಲ್ಲಿ ಮೆರೆವುತಲಿಪ್ಪದು |
ಕಲಿಯುಗದಲಿ ಬಂದಾ ಕೃಷ್ಣ ವಿಜಯವಿ|
ಠಲ ನಾನಾ ಮಂಗಳಾ ನೆನೆಯುತ್ತ ನಲಿವುತ್ತ ೪
ಆದಿತಾಳ
ಪರಶುರಾಮನು ತನ್ನ ಸಿರಿಯಕೂಡಾ ವಿಮಾನ |
ಗಿರಿಯಲ್ಲಿನಿಂದಾನು [ಸು]ರರಿಂದರ್ಚನೆಕೊಳ್ಳುತ್ತ |
ಅರಸು ತಾನಾಗಿ ನಿರಂತರದಲ್ಲಿ ಒಪ್ಪುತಿಪ್ಪ |
ಪರಮಪುರಷನೀತ ನರನೆಂದು ಪೇಳಸಲ್ಲ |
ಪರಮಶುದ್ಧನಾಗಿ ನರನು ಬಂದು ಈ ಕ್ಷೇ |
ತುರದಲ್ಲಿ ಇದ್ದ ಮಹಿಮೆ ಅರಿದು ಆತುರದಿಂದ |
ಪುರುಷಗದಚಾಪ ಶರಬೊಮ್ಮ ಚಂದ್ರ ಶಂ |
ಕರ ವಶಿಷ್ಠ ಸೂದರುಶನ ಪದುಮಾ |
ಪರಿ ಪರಿ ತೀರ್ಥಂಗಳು ಚರಿಸಿ ಜ್ಞಾನದಲಿ ಮಿಂದರೆ ಬಹುಜನ್ಮದ |
ಹರಿದು ಪಾಪಗಳು ಪರಿಹರಿಪೋಗುವವು |
ಭರತ ಖಂಡದೊಳು ಸರಿಯಿಲ್ಲಾ ಇದಕೆಲ್ಲಿ |
ಸ್ಮರಣೆ ಮಾತ್ರದಲಿ ಸಂಚರಿಸುವ ಮುಕ್ತಿಯಲ್ಲಿ |
ಪರಶುಧರ ಕೃಷ್ಣ ವಿಜಯವಿಠಲರೇಯಾ |
ಪರಿಣಾಮ ಕೊಡುವನು ಪರತತ್ವ ತಿಳಿವುದೂ ೫
ಜತೆ
ಭಾರ್ಗವ ಕ್ಷೇತ್ರದೊಳಿದೆ ಕೇವಲಧಿಕ |
ದುರ್ಗರಮಣ ವಿಜಯವಿಠಲ ನಮ್ಮನ್ನು ಪೊರೆವ ೬

ಪ್ರಳಯ ಕಾಲದಲ್ಲಿ ವಿಷ್ಣುವು

೧೮
ಧ್ರುವ ತಾಳ
ಆದಿಮೂರುತಿ ಪುರುಷ ಪೂರ್ಣ ಗುಣಾಂಬುಧಿ ಪ್ರಳ |
ಯೋದಕಾತೀತ ವಟಪತ್ರಶಾಯಿ |
ಮೋದಾ ಪ್ರಮೋದಾಕಾಯ ಶ್ರೀ ಭೂದುರ್ಗೇಶ ಅ |
ನಾದಿ ಪ್ರಸಿದ್ಧ ಶುದ್ಧಾಂತಿಕಾಂತಿಕಾ |
ವೇದ ವೇದಾಂತ ಗರ್ಭ ಗಂಭೀರ ಮಹಿಮಾ ಮಧು |
ಸೂದನ ಪಾಪಸೂದ ಸುಲಭಾ ಸಹ್ಯತ್ |
ಆದಿತ್ಯಾವರ್ನ ಕೋಟಿ ಅಪ್ರತರ್ಕ ಅಪ್ರತಿ |
ಆದಿವರ್ಣಾ ಪ್ರತಿಪಾದ್ಯ ಪುಣ್ಯಶ್ಲೋಕ |
ಪಾದತ್ರಿಪಾದ ಭಿನ್ನಾಭಿನ್ನಾ ವಂಶಾರೂಪಾ ಪ್ರ |
ಸಾದ ವಿಗ್ರಹ ದೈನ್ಯಶ್ಯ ಕುಲಭಾಸ್ಕರೀ |
ಪಾದವನಂಬಿದ ಜನರ ಯಾವತ್ಸಂಶಯ |
ಛೇದಾಯಕಾ ಛೆತ್ರಾಧೀಶ ಪ್ರಭುವೆ |
ಆದಾನಾದಿಕರ್ತ ಅಶೇಷ ಸಾಕ್ಷಿ ವಿ |
ನೋದನಾನಾವತರಾತ ವಿಷ್ಣುತುರ್ಯ |
ಯಾದವ ಶಿರೋರನ್ನ ಅಮೃತಾರ್ಣವಾ ಸಪ್ರಹ |
ಲ್ಲಾದ ರಕ್ಷಕ ಗೋವ ತ್ರಾಣ ಪ್ರಾಣ |
ಪಾದೋದರ ಪರಿಯಂಕ ವಿಜಯವಿಠ್ಠಲ ದಾ |
ಮೋದರ ಸರ್ವವ್ಯಾಪ್ತನೆಂದು ಉಪಾಸನೆ ಮಾಡು ೧
ಮಟ್ಟತಾಳ
ಶೂನ್ಯನಾಮಕನಾಗಿ ಮಲಗುವ ಮಹದೈವ |
ಕನ್ಯಾಶಿರೋಮಣಿ ಲಕುಮಿಗೆ ಕೃಪೆಯಿಂದ |
ಉನ್ನತವಾಗಿದ್ದ ಸೌಭಾಗ್ಯವ ಕೊಟ್ಟು |
ತನ್ನಿಚ್ಛೆಯಿಂದ ಕ್ರೀಡಿಯಾಡುವನೆಂದು |
ಅನಂತ ಜೀವರಾಶಿಗಳ ನೋಡಿ |
ಪುಣ್ಯ ಪಾಪವುಳ್ಳ ಬೀಜ ಕರ್ಮಗಳಿಂದ |
ಭಿನ್ನಲಿಂಗಗಳನೆ ಮಾಡುವೆನೆಂದು ಪ್ರ |
ಸನ್ನನಾದನು ಕಾಣೋ ಪ್ರಕೃತಿಯ ಮಾತಿಗೆ |
ಪನ್ನಗಶಾಯಿ ವಿಜಯ ವಿಠ್ಠಲರೇಯ |
ಬಿನ್ನಾಣದಿಂದ ಮೆರೆವ ಮನ್ಮಥನಯ್ಯಾ | ೨
ತ್ರಿವಿಡಿ ತಾಳ
ಆತ್ಮಸರ್ಗವ ಮಾಡಿ ಮುಕ್ತರ ಸಂಗಡ |
ಅತ್ಯಂತ ಕ್ರೀಡೆಯ ನಾಡಿದಾ ಇರಳೂ |
ಮತ್ತೆ ಆತುರವಾಯಾ ಏಕೀಭೂತನಾಗಿ |
ಉತ್ತಮ ಶ್ಲೋಕನು ನಗುತವೇಗ |
ಹೊತ್ತು ಉಳಿದಿರಲಾಗಿ ಪ್ರಥಮ ವಾಸುದೇವ |
ವ್ಯಕ್ತಿಯಾದನು ಕಾಣ್ಣೊ ಶೂನ್ಯನಿಂದ |
ಇತ್ತ ಲಾಲಿಸುವುದು ಈತನೇ ಸರ್ವರ |
ಪೆತ್ತ ಪುರುಷಾದೇಹಾಧಾರಿಗಳ |
ಪ್ರತ್ಯೇಕ ರೂಪಗಳಧರಿಸಿ ಅನಿರುದ್ಧಾದಿ |
ಮೂರ್ತಿಯಿಂದ ಲಿಂಗೋಪಾದಾನವೊ |
ಸತ್ಯವೆ ಸರಿಯಿದು ಮರಳೆಸರ್ವರನ್ನ ಮಾ |
ಮಾರುತ್ತನಿಂದಲಿ ಕೇಳಿ ಪದವಿಯಿತ್ತ |
ಚಿತ್ತದಲಿ ತಿಳಿ ಪುರುಷ ಸೂಕ್ತಗಳಿಂದ |
ಸ್ತೋತ್ರ ಮಾಡಿಸಿಕೊಂಡ ಹಯಗ್ರೀವನೊ |
ನಿತ್ಯ ಚತುರಮೂರ್ತಿ ಒಂದಾಗಿ ಸರ್ವರನ್ನ |
ತುತ್ತು ಮಾಡಿದ ಕಾಣೊ ಅರುಣೋದಯ |
ಚಿತ್ಪ್ರಕೃತಿಯ ತನ್ನ ದೇಹಾದಿಂದ |
ಪುಟ್ಟಿಸಿದ ವಿರಜನಾಮಕವಾರಿಯಾ |
ಸತ್ವಜೀವಿಗಳಿಗೆ ಸ್ನಾನಾ ಮಾಡಿಸಿ ಲಿಂಗಾ |
ಕಿತ್ತಿ ಪೋಗುವಂತೆ ನಿಣ್ರ್ಯೆಸಿದ |
ಸತ್ಯ ಸಂಕಲ್ಪನು ನಿಶ್ಶೇಷ್ಯವಾಗಿದ್ದ |
ಚಿತ್ತುಗಳಿಗೆ ಜ್ಞಾನಿಚ್ಛೆಪ್ರಯತ್ನ |
ಇತ್ತಾನು ಸ್ವ ಸ್ವಯೋಗ್ಯತಾದನಿತು ಅಂತಾ |
ರಾತುಮ ವಾಸುದೇವನು ಪ್ರಥಮದಲ್ಲಿ |
ತತ್ವಕೆ ನೇಮಿಸಿದ ಒಬ್ಬೊಬ್ಬಸುರರೀಗೆ |
ಕರ್ತುನಮ್ಮಾ ವಿಜಯ ವಿಠ್ಠಲರೇಯ |
ಕೀರ್ತಿ ಪುರುಷ ಇಂತು ನಲಿವಾನಂದದಿಂದಾ ೩
ಅಟ್ಟತಾಳ
ಈತನಿಂದಲಿ ದೇವಾ ನಾರಾಯಣದೇವಾ |
ಜಾತನಾದನು ಕಾಣೊ ಕ್ಷೋಭಕ ಸರ್ವ |
ತೀತ ಸಮಸ್ತ ವರ್ತಮಾನರಿಗೆ ಕ್ಷು |
ತಾತುರ ಪಿಪಾಸ ಪುಟ್ಟಿಸಿದನು ಅಂದು |
ಚೇತನರಾಶಿಯ ಉದ್ಭವಮಾಡಿ ಈ |
ಗಾತುರ ಮೊದಲಾದ ಜೀವರಾಶಿಯ ದೇಹ |
ತಾ ತೋರಿಸಿಕೊಟ್ಟು ಸರ್ವರನ ನರಾ |
ಗಾತುರಾದೊಳು ಪ್ರವಿಷ್ಠ ಮಾಡಿಸಿ ತನ್ನ |
ಗಾತುರದೊಳಗಿಟ್ಟು ಅಲ್ಲಿಂದ ಚತುರ ಮೂ |
ರುತಿಯಾದನು ವಾಸುದೇವಾ ಸಂಕರುಷಣ |
ಖ್ಯಾತ ಪ್ರದ್ಯುಮ್ನ ಅನಿರುದ್ಧನಾಮದಿ |
ಶ್ವೇತ ರಕ್ತ ಪೀತ ಕೃಷ್ಣವರ್ನದಿಂದ |
ಭೂತಿ ಉಳ್ಳವನಯ್ಯಾ ಸಕಲ ರೂಪಸಮ |
ಮಾತೃ ಕಾಲಾವಣೆ ಭೇದಾವೆಂಬೋದಿಲ್ಲ |
ಈ ತೆರದಲಿ ಕೇಳಿ ದ್ವಿತಿಯ ವಾಸುದೇವ |
ಪ್ರಾತಃಕಾಲದಲ್ಲಿ ಪುರುಷನಾಮಕ ಅಜಾ |
ಜಾತನ್ನ ಪಡೆದನು ಮಹಾಲಿಂಗೋಪಾದಾನಾ |
ಸೂತ್ರನಾಮಕ ಪ್ರಾಣನ್ನ ಸಂಕರುಷಣ |
ಓತ ಪ್ರೋತ ಮಾರುತನೀತನೆಂಬರು |
ಮಾತುಪುಶಿಯಲ್ಲ ಪ್ರದ್ಯುಮ್ನ ದೇವರಿಗೆ |
ಜಾತರಾದರು ಕನ್ಯೆಯರು ಈರ್ವರು ನಿಜಾ |
ವಾತಧಾತಗೆ ರಾಣಿಯರು ಎನಿಸಿ ಬಲು |
ಆತುರದಿಂದಲಿ ಸಂತಾನ ಪಡೆದರು |
ನೀತಿಯನ್ನು ನೋಡು ಪರಂಪರೆಸರ್ಗವ |
ಚಾತರ್ಯ ಪ್ರದ್ಯುಮ್ನ ಅರ್ಧನಾರಿರೂಪ |
ತಾತಾಳಿ ಸರ್ವಜೀವರ ನುಂಗಿ ತನ್ನಯ |
ಗಾತುರ ಎಡಬಲದಿಂದ ಪುಂಪೆಂಗಳ |
ಚಾತುರ್ವರ್ಣಾಶ್ರಮ ಪುಟ್ಟಿಸಿದನು ಗಡ |
ಭೂತಳಾಧಿಪ ನಮ್ಮಾ ವಿಜಯ ವಿಠ್ಠಲರೇಯಾ |
ದಾತಾನು ಕಾಣೋ ಸರ್ವಜೀವರಿಗೆ ೪
ಆದಿತಾಳ
ಅನಿರುದ್ಧದೇವನು ಸರ್ವರಿಗೆ ಲಿಂಗದಿಂದ |
ತನುವ ಪಾಲಿಸಿದನು ಅವರವರ ತಕ್ಕದ್ದು |
ಮನಸು ಮೊದಲಾಗಿ ಪುಥವಿಪರಿಯಂತ |
ತನವು ಪಾಲಿಸಿದಾನು ಇಲ್ಲಿಗೆ ಲಿಂಗಾಸರ್ಗ |
ಘನವಾಗಿ ತಿಳಿವುದು ಹರಿ ಏಕ ಭೂತನಾಗಿ |
ಪುನರಾವತಿ ವ್ಯಕ್ತನಾದ ಚತುರ ರೂಪ |
ಗುಣ ಉಪಾದಾನದಿಂದ ಸರ್ವ ಜೀವರಿಗೆ ಸಾ |
ಧನ ಕರ್ಮ ಪಾಪಪುಣ್ಯ ಭೋಗದೇಹವನಿತ್ತ |
ಜನನ ಮರಣರೋಗಕೆ ಕಾರಣವೆನಿಸಿ ಜೀ |
ವನರಾಶಿಗಣ ದವರನ್ನ ಸುತ್ತಿಸಿಸುವ ಒಳಗಿದ್ದು |
ಅಣುರೋಣಿ ಮಹಾ ಪುರುಷ ಜಡ ತತ್ವದಿಂದಲಿ ಯೋ |
ಚನೆ ಇಲ್ಲದೇವೆ ಪಂಚಾಕೋಶಾವರ್ಣ ಮಾಡಿ |
ಮಿನುಗುವಾ ಐದು ರೂಪಕೇಳಿ ದೈವ ನಾರಾ |
ಯಣ ದ್ವಿತಿಯ ವಾಸುದೇವ ಸಂಕರುಷಣ ಪ್ರದ್ಯುಮ್ನ |
ಅನಿರುದ್ಧಾದಿಗಳಿವೆ ಆನಂದಮಯಾದಿಗಳೋ |
ನೆನಿಸಿ ಅವ್ಯಕ್ತಾತತ್ವಾದಿ ಚತುರವಿಂಶತಿ |
ವನಜ ಜಾಂಡಕೆ ಇದೇ ಅವರ್ಕರೂಪಾವೆನ್ನಿ |
ಅನಿಮಿಷಗಣವುಂಟು ತತ್‍ಸ್ಥಾನ ತರತಮ್ಯ |
ಗುಣವಂತ ಈ ಪರಿ ತಿಳಿದೈದು ರೂಪಗಳ |
ಮನದಲ್ಲಿ ನಿಲಿಸಿ ಕೊಂಡಾಡಲು ಅಪರೋಕ್ಷ |
ತೃಣ ಮಿಗಿಲಾದಲ್ಲಿ ಇದನೆ ಗ್ರಹಿಸುವುದು |
ಅನುಭವವಾಗುವುದು ಆದ್ಯಂತ ಕಾಲ ಜ್ಞಾನ |
ಮುನಿ ವೃಂದವಂದ್ಯ ನಮ್ಮ ವಿಜಯ ವಿಠ್ಠಲರೇಯ |
ದಿನ ರಾತ್ರಿಯಲ್ಲಿ ಒಡನೆ ತಿರುಗುವಾ ಬಂದು ೫
ಜತೆ
ಇರಳು ಹಗಲು ಇದನೆ ಯೊಚಿಸು ಮನದಲ್ಲಿ |
ಕರುಣಾಕರ ಮೂರ್ತಿ ವಿಜಯ ವಿಠಲ ಒಲಿವ ೬

ಲಯ ಕಾಲವು ಬ್ರಹ್ಮ ಮಾನದಲ್ಲಿ

೫೦
ಧ್ರುವತಾಳ
ಆಪ್ತ ಅಖಿಳ ಮುಕ್ತಿಯೋಗ್ಯ ಜನಕೆ ನಿತ್ಯ
ತೃಪ್ತ ತ್ರಿಗುಣಾತೀತ ಸರಸಿಜಾಕ್ಷ
ವ್ಯಾಪ್ತ ಪ್ರಕೃತಿ ವೇದಕಾಲ ಜೀವಾಕಾಶ
ಸಪ್ತಾ ಸಪ್ತ ಲೋಕದಲ್ಲಿ ಪೂರ್ಣ
ದೀಪ್ತಾ ಸ್ವ ಸ್ವಶರೀರ ವಿಜ್ಞಾನರೂಪ ಸರ್ವಾಂತರಾತ್ಮ ಸುಗುಣ
ಪ್ರಾಪ್ತನಾಗುವ ತನಗೆ ತಾನೆ ಒಲಿದು ಮೊದಲು
ಕ್ಲಿಪ್ತ ಮಾಡಿದಲ್ಲಿಗೆ ಕರುಣದಿಂದ
ತಪ್ತನಾಗಿ ಕಾಣಿಸುವ ದೈತ್ಯಾವಳಿಗೆ ದೋಷ
ಲಿಪ್ತ ರಹಿತ ಲಿಂಗಶೂನ್ಯ ಅನ್ಯ
ಸುಪ್ತಿ ಇಲ್ಲದಂತೆ ಏಕಮೇವ ನೆನಿಪ
ಶಪ್ತನೊ ಸಾಕಾರ ಮೂರ್ತಿ ಮೂಲ
ಸಪ್ತಾವರಣ ಸರಸಿಜಾಂಡದೊಳಗೆ ಸಂ
ದೀಪ್ತನಾಗಿ ಒಪ್ಪುವ ಸರ್ವೋತ್ತುಮಾ
ಗೆಪ್ತಿಗೆ ನಿಲಕುವಾ ವಿಜಯ ವಿಠ್ಠಲರೇಯ
ಆಪ್ತಾ ಅಖಿಳ ಮುಕ್ತಿಯೋಗ್ಯಜನಕ ೧
ಮಟ್ಟತಾಳ
ಅಗಣಿತ ಗುಣಧಾಮಾ ಅತ್ಯದ್ಭುತಶಕ್ತಾ
ನಿಗಮಗೋಚರ ನಿರ್ವಿಕಾರ ನಿರ್ವಿಕಲ್ಪಾ
ಜಗತಿ ವಲ್ಲಭ ಜನನ ಮರಣಾದಿದೂರ
ಬಗೆ ಬಗೆ ಲಕ್ಷಣ ಭರಿತವಾದ ಕಾಯಾ
ಯುಗ ಯುಗದೊಳು ತತ್ಕಾರ್ಯ ಮಾಡಿಸುವಂಥ
ಭಗವಂತನೆ ನಿತ್ಯ ಭಕ್ತರ ಮನೋರಥನೆ
ಮಗುವಿನ ಪಾಲಿಸಿದ ವಿಜಯವಿಠ್ಠಲ ನಿನ್ನ
ಪೊಗಳಿದವನ ಭಾಗ್ಯ ಎಂದಿಗೇ ಸವೆಯದೊ ೨
ತ್ರಿವಿಡಿ ತಾಳ
ಸದ್ಗುಣಗಣಸಾಂದ್ರಾ ಜ್ಞಾನಾನಂದ ಪೂರ್ಣ
ಚಿದ್ರೂಪಾ ಅಖಿಳ ಬೊಮ್ಮಾಂಡ ಕರ್ತಾ
ನಿರ್ದೋಷ ನಿಸ್ಸಂಗ ನಿರ್ವಿಕಾರ ನಿತ್ಯ
ವಿದ್ಯಾವಂತ ವಿಶ್ವಪರಿಪಾಲಕಾ
ಖದ್ಯೋತ ಲಾವಣ್ಯ ಬಲು ಪಾವನಧೈರ್ಯಾ
ಸಿದ್ಧ ಪರಮೈಶ್ವರ್ಯ ಯೋಗೀಶ್ವರಾ
ನಿದ್ರಾರಹಿತ ಸರ್ವಸ್ವಾತಂತ್ರ ಸಮ್ಮೋದ
ಮುದ್ದು ಮೋಹನ್ನ ಸಿರಿವಂತ ತೇಜಾ
ಬುದ್ಧಿ ವಿಸ್ತರನೆ ಜಗದಂತರ್ಯಾಮಿ
ಶುದ್ಧ ಲಕ್ಷಣವಂತ ಗರುಡಗಮನಾ
ಭದ್ರಮೂರುತಿ ಪ್ರಾಜ್ಞ ಸರ್ವೋತ್ತುಮ ಶೌರ್ಯ
ಕೃದ್ಧಾದಿ ವಿದೂರ ನಿತ್ಯ ತೃಪ್ತಾ
ನಿದ್ರ್ವಂದ ಜಡಜೀವಭಿನ್ನ ಭವರೋಗ
ವೈದ್ಯ ವೈಕುಂಠನಿವಾಸ ದೈತ್ಯ
ಮರ್ದನ ಮಹಚರ್ಯಾ ತ್ರಿಜಗಪೂಜಿತ ಕಾಯ
ಸ್ವಧರ್ಮ ರಕ್ಷಕ ಸರ್ವ ವ್ಯಾಪ್ತಾ
ಮದ್ರಮಣ ಮೊದಲಾಗಿ ಹರಿಯಭಜನೆಮಾಡಿ
ಸದ್ಭಾವದಲಿ ಇಂಥ ಗುಣೋಪಾಸನೆ
ಪದ್ಧತಿ ತಪ್ಪದೆ ಮಾಡಿದರಿಞ್ರಂತೆ
ಇದ್ದಲ್ಲಿ ಕೊಡುವನು ಇನಿತಿನಿತು
ಹೆದ್ದೈವ ವಿಜಯವಿಠ್ಠಲ ಸರ್ವದಾ ಸರ್ವ
ವಿದ್ಯಾತೀತನು ಕಾಣೋ ಎಂತೆಂತ ಇದ್ದರೂ ೩
ಅಟ್ಟತಾಳ
ಪರಮೇಷ್ಟಿ ಪವಮಾನ ಗರುಡಾಹಿ ಶಿವ ಇಂದ್ರ
ಸ್ಮರ ಪ್ರಾಣ ಅನಿರುದ್ಧ ರವಿಚಂದ್ರ ಮೊದಲಾದ
ಸುರರು ತಾತ್ವಿಕರು ಚತುರ ವಿಂಶತಿ ತತ್ವ
ಧರಿಸಿ ಇದ್ದವರು ಮಿಕ್ಕಾದ ಜೀವರಾಶಿ
ಪರಿಯಂತ ನೆನೆದು ಒಂದೊಂದಧಿಷ್ಠಾನದಲ್ಲಿ
ಹರಿಯ ಧ್ಯಾನವ ಮಾಡೆ ತತ್ಕಾರ್ಯವ
ಅರುಹಿ ಕೊಡುವನಯ್ಯಾ ಕ್ರಮದಿಂದ ನೇಮಿಸಿ
ಮರ್ಯಾದೆ ತಪ್ಪದು ತಮ್ಮ ಯೋಗ್ಯತದಷ್ಟು
ಕಿರಿಯ ಜನಕೆ ಶಕ್ತಿ ಇತ್ತು
ಮರಿಗೆ ಸರ್ವಸಾಧ್ಯವಾಗಿಪ್ಪದು ಕೇಳಿ
ಸರಸಿಜಗರ್ಭಂಗೆ ಇತರ ಸಂಶಯವಿಲ್ಲಾ
ಹರಿ ಕರುಣ ಒಂದೇ ಪ್ರಧಾನ ಸಾಧನ
ಪರಮಪಾವನ ಸಿರಿ ವಿಜಯ ವಿಠ್ಠಲ ತನ್ನ
ಶರನಿಧಿಗೊಂದೊಂದು ಕ್ಲಿಪ್ತಮಾಡಿ ಇಪ್ಪಾ ೪
ಆದಿತಾಳ
ಬಿಂಬ ಪ್ರತಿಬಿಂಬ ಬಿಂಬಭಾವದಲ್ಲಿ ಹರಿಯಾ
ಬಿಂಬವೆ ಕಾಂಬುವರು ಮುಕ್ತಿಯೋಗ್ಯರು ಎಲ್ಲಾ
ವೆಂಬೊದೆ ಸಿದ್ಧಾವೆನ್ನಿ ಸ್ಪಷ್ಟತ್ವದಲಿ ಭೇದ
ಕುಂಭಿನಿವಿಡಿದು ಅಧಿಕಾರಿಗಳ ವ್ಯಾಪ್ತಿ
ತುಂಬಿಕೊಂಡಿಪ್ಪದು ನೋಡುವುದು ತಿಳಿವುದು
ಹಂಬಲಿಸುವುದು ಉನ್ನತ ಉನ್ನತ ಮನಸು
ಅಂಜುಜಾಕ್ಷಗೆ ಅಜನು ಅಜಗೆ ಶಿವ ಶಿವಗೆ ಇಂದ್ರ
ಬಿಂಬ ಪ್ರತಿಬಿಂಬ ಇದೆ ತಳಗಿಯೊಳಗೆ ಉದಕ
ತುಂಬಿರಲದರದರೊಳಗೆ ಸೂರ್ಯನ ಬಿಂಬವಿರಲಾ
ಬಿಂಬದ ಪ್ರಕಾಶ ಮತ್ತೊಂದರಲಿ ಪ್ರತಿ
ಬಿಂಬ ತೋರಿದಂತೆ ಈ ತೆರದಲಿ ಹರಿಯ
ಬಿಂಬವೆ ಕಾಣುವರು ಸ್ವಯೋಗ್ಯ ತಪ್ಪದಲೆ
ಬೆಂಬಲವಾಗಿಯಿಪ್ಪ ವಿಜಯ ವಿಠಲ ಸ್ವಾಮಿ
ನಂಬಿದ ಮಾನವರ ಬಳಿಯ ಕುಣಿದಾಡುವಾ ೫
ಜತೆ
ಭಕ್ತಿಯಿಂದಲಿ ಭಜಿಸೆ ಭವದಿಂದ ಕಡೆಮಾಡಿ
ಮುಕ್ತಿಯಲ್ಲಿ ಇಡುವ ವಿಜಯ ವಿಠ್ಠಲ ಪೊಳೆದು ೬

ಧನ್ವಂತರೀ ನಾಮಕ ಪರಮಾತ್ಮನ

ಧನ್ವಂತರೀ ಸ್ತೋತ್ರ
೧೨೦
ಧ್ರುವತಾಳ
ಆಯು ವೃದ್ಧಿಯಾಗೋದು ಶ್ರೇಯಸ್ಸು ಬರುವುದು
ಕಾಯಾ ನಿರ್ಮಲಿನಾ ಕಾರಣವಾಹುದೋ
ಮಾಯಾ ಹಿಂದಾಗುವುದು ನಾನಾರೋಗದ ಬೀಜ
ಬೇಯಿಸಿ ಕಳೆವುದು ವೇಗದಿಂದ
ನಾಯಿಮೊದಲಾದ ಕುತ್ಸಿತದೇಹನಿ
ಕಾಯವ ತೆತ್ತು ದುಷ್ಕರ್ಮದಿಂದ
ಕ್ರೀಯಮಾಣ ಸಂಚಿತ ಭರಿತವಾಗಿದ್ದ ದುಃಖ
ಹೇಯ ಸಾಗರದೊಳು ಬಿದ್ದು ಬಳಲೀ
ನೋಯಿಸಿಕೊಂಡು ನೆಲೆಗಾಣದೆ ಒಮ್ಮೆ ತನ್ನ
ಬಾಯಿಲಿ ವೈದ್ಯಮೂರ್ತಿ ಶ್ರೀಧನ್ವಂತ್ರಿ
ರಾಯಾ ರಾಜೌಷಧಿ ನಿಯಾಮಕಕರ್ತ
ಕ್ರೀಯರಸನೆಂದು ತುತಿಸಲಾಗಿ
ತಾಯಿ ಒದಗಿಬಂದು ಬಾಲನ್ನ ಸಾಕಿದಂತೆ
ನೋಯಗೊಡದೆ ನಮ್ಮನ್ನು ಪಾಪಿಪಾ
ಧೇಯಾ ದೇವಾದಿಗಳಿಗೆ ಧರ್ಮಜ್ಞ ಗುಣಸಾಂದ್ರ
ಶ್ರೇಯಸ್ಸು ಕೊಡುವನು ಭಜಕರಿಗೆ
ಮಾಯಾಮಂತ್ರದಿಂದ ಜಗವೆಲ್ಲ ವ್ಯಾಪಿಸಿ ಸ
ನ್ಯಾಯವಂತನಾಗಿ ಚೇಷ್ಟೆ ಮಾಳ್ಪಾ
ವಾಯುವಂದಿತ ನಿತ್ಯ ವಿಜಯ ವಿಠ್ಠಲರೇಯಾ
ಪ್ರಿಯನು ಕಾಣೊ ನಮಗೆ ಅನಾದಿರೋಗ ಕಳೆವಾ ೧
ಮಟ್ಟತಾಳ
ಧನ್ವಂತ್ರಿ ಶ್ರೀ ಧನ್ವಂತ್ರಿ ಎಂದು
ಸನ್ನುತಿಸಿ ಸತತ ಭಿನ್ನ ಜ್ಞಾನದಿಂದ
ನಿನ್ನವ ನಿನ್ನವನೊ ಘನ್ನತಿಯಲಿ ನೆನೆದ
ಮನ್ನೂಜ ಭುವನದೊಳು ಧನ್ಯನು ಧನ್ಯನೆನ್ನಿ
ಚನ್ನ ಮೂರುತಿ ಸುಪ್ರಸನ್ನ ವಿಜಯ ವಿಠ್ಠಲ
ನ್ನ ಸತ್ಯವೆಂದು ಬಣ್ಣಿಸು ಬಹುವಿಧದಿ ೨
ತ್ರಿವಿಡಿತಾಳ
ಶಶಿಕುಲೋದ್ಭವ ಧೀರ್ಘತಮನಂದನ ದೇವಾ
ಶಶಿವರ್ನ ಪ್ರಕಾಶ ಪ್ರಭುವೆ ವಿಭುವೆ
ಶಶಿಮಂಡಲ ಸಂಸ್ಥಿತ ಕಲಶ ಕಲಶಪಾಣಿ
ಬಿಸಿಜಲೋಚನ ಅಶ್ವಿನೇಯ ವಂದ್ಯಾ
ಶಶಿಗರ್ಭ ಭೂರುಹ ಲತೆಪೊದೆತಾಪ ಓ
ಡಿಸವೌಷದಿ ತುಲಸಿ ಜನಕ
ಅಸುರ ನಿರ್ಜರತತಿ ನೆರೆದು ಗಿರಿಯತಂದು
ಮಿಸುಕದಲೆ ಮಹೋದಧಿ ಮರ್ದಿಸಲಾಗಿ
ನಸುನಗುತ ಪುಟ್ಟಿದೆ ಪೀಯೂಷಘಟಧರಿಸಿ
ಅಸಮ ದೈವನೆ ನಿನ್ನ ಮಹಿಮೆಗೆ ನಮೋ
ಬಿಸಿಜು ಸಂಭವ ರುದ್ರ ಮೊದಲಾದ ದೇವತಾ
ಋಷಿನಿಕರ ನಿನ್ನ ಕೊಂಡಾಡುವರೊ
ದಶದಿಶದೊಳು ಮೆರೆವ ವಿಜಯ ವಿಠ್ಠಲ ಭಿಪ್ಕಾ
ಅಸು ಇಂದ್ರಿಯಂಗಳ ರೋಗ ನಿವಾರಣ೩
ಅಟ್ಟತಾಳ
ಶರಣು ಶರಣು ಧನ್ವಂತರಿ ತಮೋಗುಣ ನಾಶ
ಶರಣು ಆರ್ತಜನ ಪರಿಪಾಲಕ ದೇವ-
ತರುವೆ ಭವತಾಪ ತರುಣ ದಿತಿಸುತ
ಹರಣಮೋಹಕ ಲೀಲಾ ಪರಮ
ಪೂರ್ಣ ಬ್ರಹ್ಮ ಬ್ರಹ್ಮ ಉದ್ಧಾರಕ
ಉರು ಪರಾಕ್ರಮ ಉರಗಶಾಯಿ
ವರಕಿರೀಟ ಮಹಾಮಣಿ ಕುಂಡಲ ಕರ್ನ
ಮಿರುಗುವ ಹಸ್ತಕಂಕಣ ಹಾರಪದಕ ತಾಂ
ಬರ ಕಾಂಚೀಪೀತಾಂಬರ ಚರಣ ಭೂಷಾ
ಸಿರಿವತ್ಸಲಾಂಛನ ವಿಜಯ ವಿಠ್ಠಲರೇಯಾ
ತರುಣಗಾತುರ ಜ್ಞಾನಮುದ್ರಾಂಕಿತ ಹಸ್ತಾ ೪
ಆದಿತಾಳ
ಏಳುವಾಗಲಿ ಮತ್ತೆ ತಿರಿಗಿ ತಿರುಗುತಲಿ
ಬೀಳುವಾಗಲಿ ನಿಂತು ಕುಳ್ಳಿರುವಾಗಲಿ
ಹೇಳುವಾಗಲಿ ಮಾತು ಕೇಳುವಾಗಲಿ ಕರೆದು
ಪೇಳುವಾಗಲಿ ಪೋಗಿ ಸತ್ಕರ್ಮಮಾಡುವಾಗ
ಬಾಳುವಾಗಲಿ ಭೋಜನ ನಾನಾ ಷಡ್ರಸ ಸಂ
ಮ್ಮೇಳವಾಗಲಿ ಮೇಲು ಪುತ್ರಾದಿ ಒಡನೊಡನೆ
ಖೇಳವಾಗಿ ಮನುಜ ಮಾರ್ಯಾದೆ ನಿನ್ನಯ
ನಾಲಿಗೆ ಕೊನೆಯಲ್ಲಿ ಧನ್ವಂತರಿ ಎಂದು ಒಮ್ಮೆ
ಕಾಲಅಕಾಲದಲ್ಲಿ ಸ್ಮರಿಸಿದರೆ ಅವಗೆ
ವ್ಯಾಳಿ ವ್ಯಾಳಿಗೆ ಬಾಹ ಭವಬೀಜ ಪರಿಹಾರ
ನೀಲಮೇಘಶ್ಯಾಮ ವಿಜಯ ವಿಠ್ಠಲರೇಯಾ
ವಾಲಗ ಕೊಡುವನು ಮುಕ್ತರಸಂಗದಲಿ ೫
ಜತೆ
ಧಂ ಧನ್ವಂತರಿ ಎಂದು ಪ್ರಣವ ಪೂರ್ವಕದಿಂದ
ವಂದಿಸಿ ನೆನೆಯಲು ವಿಜಯ ವಿಠ್ಠಲ ಒಲಿವಾ ೬

ಸಾಲಿಗ್ರಾಮ ಪೂಜೆ, ವೈಶ್ವದೇವ,

೧೪
ಧ್ರುವತಾಳ
ಆರಾದರು ಛೀ ಎನಲಿ ಆರಾದರು ಥೂ ಎನಲಿ
ಆರಾದರು ಹಳಿಯಲಿ ಆರಾದರು ಮುಳಿಯಲಿ
ಆರಾದರು ಬೈಯಲಿ ಆರಾದರು ನಿಂದಿಸಲಿ
ಆರಾದರುಪೇಕ್ಷಿಸಲಿ ಆರಾದರಾಢಿಕೊಳಲಿ
ಆರಾದರುಗುಳಲಿ ಆರಾದಂಜಿಸಲಿ
ಆರಾದರಾವಲ್ಲಿ ದೂರುತಿರಲೀ
ಧಾರುಣಿಯೊಳಗವ ನಿನ್ನ ಪಾಪ ಪುಣ್ಯಕ್ಕೆ
ಭಾರಕರ್ತನಾಗಿ ನಿಲುವಾ ನಿಲ್ಲಾ
ನಾರಾಯಣನ್ನ ಪಾದ ವಿಡಿದು ಅನ್ಯ ಚಿಂತಿಸೋ
ಹಾರದಿರು ಮನವೆ ಬೇಡಿಕೊಂಬೆ
ತೂರಿದರೆ ಜೊಳ್ಳು ರಾಶಿಯಾಗುವುದೇನೊ
ಚಾರವಾಕ ಮಾತು ನಿಶ್ಚಯವೇ
ಚೋರನು ಚಂದಿರನ್ನ ನಿಂದೆ ಮಾಡಿದರಿಂದ
ಧೀರರು ಕೇಳಿದಂತೆ ಸೈರಿಪರೇ
ಆ ರಾಹು ಅಮೃತವ ಕುಡಿದರೇನಾಯಿತು
ಕೌರವಪತಿ ಮೇಲೆ ಪುಷ್ಪವರುಷ
ಧಾರಿಯ ಸುರನಿಕರ ಎರೆದರೇನಾಯಿತು
ಸೇರಿದರೇನು ಸತ್ಪಂಥ ಪಿಡಿದೊ
ಮೊರೆ ಸಲ್ಲಿಸಿಕೊಂಡು ಪೊಟ್ಟೆ ಪೊರೆವ ಜನ
ದೂರುವರು ತಮ್ಮ ಗುಣಗಳಂತೆ
ಕೇರು ಕರ್ಪುರದೊಳಗಿಟ್ಟರೆ ತನ್ನ ನಿಜಾ
ಕಾರವ ಹಿಂಗುವುದೆ ವಿಹಿತ ತಿಳಿದು
ಊರ ಹಂದಿಗಳು ಸರಸವಾಡೊದಲ್ಲೆಂದೆಡೆ
ಶ್ರೀ ರಮಣನು ಮಾಡಿದ ಮರ್ಯಾದೀ
ಆರಿಂದ ತೊಲಗಿಸಲೊಶವೆ ಯೋಚಿಸಿದರೂ
ವಾರವಾರಕೆ ವಸ್ತ್ರದಲ್ಲಿ ಇಡಲು
ಬೇರರಿಸಿ ಪರೀಕ್ಷೆ ಮಾಡಲು ವಿಷ
ಹೀರೆ ಬಳ್ಳಿಗೆ ಸೀ ಲೇಶ ಉಂಟೇ
ದಾರಿದ್ರ ಮನುಜನು ಅರಸಿನ ಭಾಗ್ಯ ನೋಡ
ಲಾರದೆ ಹುಡಿಯೊಳು ಹೊರಳಿದಂತೆ
ಭೇರುಂಡ ಪೋಗುತಿರಲು ಆನೆ ಸಮ್ಮೊಗವಾಗಿ
ಮಾರು ಮಲತು ಕರವ ಬೀಸುವುದೇ
ತೇರ ಗಾಲಿಯ ಕೆಳಗೆ ಹರಿಯದಟ್ಟ ಬೀಳೆ
ಚೂರಾಗದೆ ಮನಜು ಬದುಕುವನೇ
ಸಾರಿದೆ ನಿನಗೆ ನಿನ್ನ ಹಿರಿಯರು ಪೇಳಿದ್ದ
ದಾರಿಯ ತಪ್ಪದಿರು ಎಲೊ ಮನವೇ
ಪಾರು ಮುಟ್ಟದು ಕಾಣೊ ಸುಜನರ ನಿಂದ್ಯಗಳಿಂದ
ಘೋರ ತಮಸಿನಲ್ಲಿ ವಾಸ ಅವಗೆ
ಭಾರಿಗೆ ನಾರಾಯಣ ತೈಲವ ತೀರಿದರೆ
ನೂರಾರು ಹೊನ್ನಿಗೆ ಬೆಲೆಯಾಹದೆ
ನೀರಡಿಸಿ ಅರಿಯದವ ಬರುತ ದಾರಿಯಲ್ಲಿ
ನೀರು ಕಾಣಲಿಲ್ಲವೆಂಬೊ ತೆರದೀ
ಓರಂತೆ ತನಗೇನು ತೋರದಿದ್ದಡೆ ವಿ
ಕಾರ ತನದ ನುಡಿ ಆಡುವನು
ಕಾರುವ ಮಾನವಗೆ ಹೇಮ ಪಾತ್ರಿಯೊಳಗೆ
ಕ್ಷೀರವ ತಂದಿತ್ತರೆ ಸುಖವಾಗೋದೆ
ಕುರಿಗೆ ಕಟ್ಟಿಕೊಂಡು ಉಸುಕು ಬಿತ್ತಿದರಿಂದ
ಹೇರು ಹೇರು ಧಾನ್ಯ ಮನೆಗೆ ಬರಲುಂಟೇನೊ
ಗಾರು ಗೆಡದಿರು ಒಬ್ಬರಂತೆ ಪರರ
ದೂರದಿರು ಪುಣ್ಯವ ಪೋಗಾಡಿಸೀ
ಮೇರೆ ತಪ್ಪದಿರು ಮನವೆ ಈ ಮಾತು ಕೇಳು
ಪಾರಮಾರ್ಥಿಕನಾಗೋ ಬೇಡಿಕೊಂಬೆ
ಪ್ರೇರಕ ಸರ್ವರಿಗೆ ವಿಜಯ ವಿಠಲನಂಘ್ರಿ
ವಾರಿಜದಳ ನಂಬು ಉಂಟು ಮುಕ್ತಿಯಲಿ ಇಂಬು ೧
ಮಟ್ಟತಾಳ
ಸಿಡಲಿಗೆ ನಡುಗದ ಶೈಲವನ್ನು
ಕಡುಮುಳಿದು ಮನುಜ ಕವಣೆಗಲ್ಲನು ಬಲು
ಹೊಡೆದು ಹೊಡೆದರದಕೆ ಮಾನಪೋಗುವುದೇನೊ
ಪೊಡವಿರಮಣ ಹರಿಯ ಕರುಣ ಇರುತಿರಲು
ಅಡಿಗಡಿಗೆ ಬಿಡದೆ ದುರುಳ ಮತಿಯವರು
ನುಡಿದರೇನಾಗುವುದು ನಿರ್ಮಳದಲಿ ಇರಲು
ಒಡಲಿಗಾರದೆ ಜೀವ ಒದರಿಕೊಂಡದರಿಂದ
ಒಡನೆ ಉತ್ತಮ ಜನರು ಮೆಚ್ಚುವರೆ ಮನವೆ
ಒಡನಾಗುವ ನಮ್ಮ ವಿಜಯ ವಿಠ್ಠಲರೇಯನ
ಬಿಡದಿರೂ ಬಿಡದಿರೂ ನೆನೆಸುವ ಸೌಭಾಗ್ಯ ೨
ತ್ರಿವಿಡಿ ತಾಳ
ಕತ್ತೆಯಕೊರಳಿಗೆ ನಾನಾ ವಿಚಿತ್ರದ
ರತ್ನ ಮುತ್ತಿನ ಮಾಲೆ ಹಾಕಿ ವೇಗ
ಸುತ್ತು ಮುತ್ತಲು ಜನರು ನೆರೆದು ಕೆನೆಮೊಸರು
ಬುತ್ತಿಯ ಕಲೆಸಿ ಅದರ ಬಾಯಿಗೆ
ತುತ್ತುಮಾಡಿ ಕೊಡುತ ತಾಳಮ್ಯಾಳದ ಕೂಡ
ಸತ್ತಿಗೆ ನೆರಳಲ್ಲಿ ಬೀದಿಯೊಳಗೆ
ಮೊತ್ತ ರಭಸದಿಂದ ಮರೆಸಿಕೊಳುತ ಬರಲು
ಅತ್ತಲಿ ಕತ್ತೆ ಮತ್ತೊಂದರ
ಹತ್ತಿಲಿ ಕಾಣುತ ಅದರ ಸ್ವರದಲ್ಲಿ ಮೊಗ
ವೆತ್ತಿ ಕೂಗದೆ ಸುಮ್ಮನಿರಬಲ್ಲದೇ
ಉತ್ತಮ ಜನರಲ್ಲಿ ಇದ್ದರೇನು ತನ್ನ
ಚಿತ್ತ ಸ್ವಭಾವ ಬಿಡ ಬಲ್ಲುದೆ
ಇತ್ತಲಿದೆ ಪರಿ ನಿಂದಕ ಮನುಜಂಗೆ
ಹೊತ್ತು ಹೋಳಾಗುವುದು ಪರನಿಂದ್ಯದಿಂದ
ತತ್ವ ತಿಳಿದವನ್ನ ನೋಡಿ ದೇ
ವತೆಗಳೆಲ್ಲ ತೋಷವಾಗುವರೈ
ತೊತ್ತಿನ ಬುದ್ಧಿ ನೀ ಮರೆದು ನಿರುತ ಏಕ
ಚಿತ್ತದಲ್ಲಿ ಭಜಿಸು ಪರಮಾತ್ಮನ
ನಿತ್ಯ ಪರವಸ್ತು ವಿಜಯ ವಿಠಲರೇಯನ
ತೆತ್ತಿಗನಾದವನ ಕೊಂಡಾಡು ಎಲೆ ಮನವೆ ೩
ಅಟ್ಟತಾಳ
ಮನವೆ ಲಾಲಿಸಿ ಕೇಳು ಇನಿತು ವಿಚಾರ ಈ
ಜನುಮದಲ್ಲಿ ಶುದ್ಧ ತನುವೆ ಬಂದಿದೆ ನೋಡು
ಹೊಣೆಯಲ್ಲಿ ನೋಡಲು ಮುಂದಿನ ಜನುಮಕೆ ಆವಾ
ತನುವೆ ಒಪ್ಪದು ಕಾಣೊ ಎನಗಿಂದು ತಿಳಿಯದು
ತೃಣ ಪ್ರಾಣಿಗಳು ಸಜ್ಜನ ವೃತ್ತಿಯಲ್ಲಿ ಇದ್ದು
ಅನಿಲ ದೇವನ ಮತವನುಸರಿಸಿಕೊಂಡು
ದಿನವ ಹಾಕುವರಿಗೆ ಪ್ರಣುತನು ನೀನಾಗು
ವಿನಯದಿಂದಲಿ ಪೋಗಿ ಘನದುರಿತ ನಾಶನ
ಗಣನೆ ಇಲ್ಲದ ದುರ್ಜನ ಸಂಗವಾಗದು
ಅನಿಮಿಷರೊಡೆಯ ಶ್ರೀ ವಿಜಯ ವಿಠಲರೇಯನ
ತನುವಿನೊಳಗೆ ನೋಡು ತಾರತಮ್ಯದಿ ಬಿಡದೆ ೪

ತತ್ವಶಾಸ್ತ್ರಗಳು ಮಾನವನಿಗೆ ಕೊಟ್ಟಿರುವ

೧೫
ಧ್ರುವತಾಳ
ಆರಾದರು ಹಳಿಯಲಿ ಆರಾದರು ದೂರಲಿ
ಆರಾದರು ಗುಳಲಿ ಆರಾದರು ಮುನಿಯಲಿ
ಆರಾದರು ಬಿಡಲಿ ಆರಾದರು ಜರಿಯಲಿ
ಆರಾದರು ಅಸೂಯ ಈರಷಾಬಡಲಿ
ಆರಾದರು ಬರಲಿ ಬಾರದಿರಲಿ
ಆರಾದರು ಕರೆಯಲಿ ಆರಾದರು ಕಂದಲಿ
ಆರಾದರು ಕೃಪೆ ಮಾಡಲಿ ಮಾಡದಿರಲಿ
ಆರಿಂದಲೇನಾಹದೋ ಆರಿಂದಲೇನಬಾಹುದು
ಆರಿಂದದಾಗುವದೇನು ಆಗದದದೇನು
ಆರ ಉಪಚಾರವೇನು ಆರ ಉಪಕಾರವೇನು
ಆರಿಂದ ನಮಗೇನು ನಮ್ಮಿಂದವರಿಗೇನು
ಆರಿಗಾದರು ಕಾಲ ಕರ್ಮಗಳಿಗೆ ಪರಿ
ಹರಿಸಿ ಪೊರೆವ ಶಕ್ತಿ ಆರಿಗಾದರು ಲೇಶವುಂಟೆ
ಸೇರದಾಜನರಿಂದ ಲಾಭ ಪೋಗುವುದೇನು
ಪಾರಮಾರ್ಥಕರಂದರಂಜವೆನೋ
ಆರು ಕೋಟಿ ಶತಕೋಟಿ ಮತ್ತೆ ಕೋಟಿ
ನೂರಾರು ಜನಬಿಡದೆ ತಿರುಗುತಿರೆ
ತಾರಕ ಉಪದೇಶ ಸ್ವರೂಪ ಜ್ಞಾನ ತಿಳುಹಿ
ದಾರಿ ತೋರುವರಿಲ್ಲ ಮುಕ್ತಿ ಪಥರೆ
ಊರಿಗೆ ಪೊಕ್ಕಳಿಸಿ ಕಣ್ಣು ಪೋಗಾಡಿ ಕೊಳಲು
ಊರೊಳಗಿದ್ದ ಜನಕೆ ಕ್ಲೇಶವೇನೋ
ನೀರು ಹೊರುವ ಧಡ್ಡ ಭೂರಿ ಬ್ರಾಹ್ಮಣ
ದಾರಿದ್ರ ದೋಷನಾಗಿ ಬಾಳುತಿದ್ದು
ಧಾರುಣಿಯೊಳಗೊಬ್ಬ ಸೌಭಗ್ಯವಂತನಿರೆ
ವಾರಣಾವಾಜಿ ತೇರು ಅಂದಣ ಪರಿ
ವಾರದೊಡನೆ ನಿತ್ಯ ಸುಖಿಸುತಿರಲು ತಾಳ
ಲಾರದೆ ಗರಳ ಉಂಡು ಮಲಗಿದಂತೆ
ಕಾರಣವೇನವಂಗ ತಿರುಗಿ ಉಳುವುದಕ್ಕೆ
ಸಾರಿರೈ ಹರಿಪಾದ ಸಾರಿದವರು
ನಾರಾಯಣ ಮೂರ್ತಿ ವಿಜಯ ವಿಠಲರೇಯನ
ಕಾರುಣ್ಯ ಉಳ್ಳವಗೆ ಮನವೆ ಭಯವಾಗದೊ ೧
ಮಟ್ಟತಾಳ
ಮಧ್ವ ಮತದಲ್ಲಿ ಪೊದ್ದಿದಾ ಸಜ್ಜನರು
ಉದ್ದಿನ ಕಾಳಷ್ಟು ಬಿದ್ದು ಪೋಗುವ ಮಾತು
ಇದ್ದ ದೋಷಗಳಿಗೆ ಸುದಿ ಎತ್ತರು ಕಾಣೊ
ಸಿದ್ದ ಮಹಿಮನ ಪಾದದ್ವಯದ ಶ್ರವಣ
ಬದ್ದವಾಗಿ ಅಪಶಬ್ದವಾಗಲಿ ಕೇಳಿ
ಬುದ್ಧಿಗೆ ತಂದು ಕೊಂಡು ಶುದ್ದವಾಗುವರು ಸು
ಖಾಬ್ದಿಯೊಳಗೆ ಮುಳುಗಿ ಎದ್ದೆದ್ದಾಡುವರು
ಪೊದ್ದಿದ ಪಾಪಗಳ ಒದ್ದು ಕಳೆವುತ್ತ
ವಿದ್ಯಾವಂತರವರು ಈ ಧರಿಯೊಳಗೆ ಗೆದ್ದರು ಭವಭೀತೆ
ಹೆದ್ದಗದಾತ್ಮನೆ ಛುದ್ರನೆ ಸಜ್ಜನನೆ
ಪದ್ದತಿ ಉಳ್ಳವನೊ ಮುದ್ದು ರಂಗನಲ್ಲಿ
ಶ್ರದ್ದೆವುಳ್ಳ ಜನರು ಗದ್ದುಗೆ ಆವಕಡೆ ಇದ್ದಲ್ಲಿ ತಿಳಿದು
ಎದ್ದು ದಂಡಾಕಾರ ಬಿದ್ದು ಭಕುತಿ ಮಾಡಿ
ಭದ್ರಲೋಕಕೆ ಸುಪಾದ್ಯ ಕಟ್ಟಲೊ ಮನವೆ
ರುದ್ರ ವಂದಿತ ನಮ್ಮ ವಿಜಯ ವಿಠ್ಠಲ ಹರಿಯ
ಸದ್ದು ನೋಡಿದವಗೆ ಸಿದ್ದಿ ದೊರಕುವುದು ೨
ತ್ರಿವಿಡಿ ತಾಳ
ವಾರಿ ಪೂರಿತವಾಗಿ ಸರಿತ ಪರಿವುತಿರೆ
ದಾರಿಕಾರನು ತವಕದಿಂದ ದಾಟೀ
ಊರಿಗೆ ತೀವ್ರವಾಗಿ ಪೋಗುವೆನೆಂದು
ಹಾರೈಸಿ ಬಂದು ತೀರದಲ್ಲಿ ನಿಂದು
ದಾರಿ ಕಾಣದೆ ಮರುಗಿ ನದಿಯ ಬೈದರೆ ಅಂಜಿ
ದಾರಿ ಕೊಡುವುದೇನೊ ತಾತ್ಕಾಲಕ್ಕೆ
ಗಾರುಗೆಡುವುದೆಂದು ನದಿಗೆಂದ ಪಾಪವು
ಈರ ಪ್ರಾಪ್ರತವಾಗಿ ಬಳಲುವನು
ಈ ರೀತಿ ಇದು ಕಾಣೋ ಮಂದಮತಿಯ ನಡತಿ
ಚಾರು ಬುಧರಿಗೆ ಜ್ಞಾನೇನು ಕಡಮಿ
ಸಾರ ಹೃದಯರ ಪಾಲ ವಿಜಯ ವಿಠ್ಠಲನಂಘ್ರಿ
ಸೇರಿ ತನ್ನೊಳು ತಾನೆ ನಲಿದಾಡಿದವ ಜ್ಞಾನಿ ೩
ಅಟ್ಟತಾಳ
ತೊಗಲ ತಿತ್ತಿಯಲ್ಲಿ ತರಲಾಗದು ಉದಕ
ಬೊಗಳಲಾಗದು ನಮ್ಮ ನಾಯಿಯ ಸಂಗಡ
ಹಗೆ ತಾಳಲಾಗದು ನಮ್ಮ ಹಂದಿಯ ಕೂಡ
ಜಗಳವಾಡಲಾಗದು ಊರ ಕತ್ತಿಯ ಕೂಡ
ತಗಿಯಲಾಗದು ನಮ್ಮ ಹಿತ್ತಲೊಳಿದ್ದದು
ಅಗಳಲಾಗದು ನಮ್ಮ ಹೆಗ್ಗಣನ ಕೊಡ
ನಗಲಾಗದು ನಮ್ಮ ಕಾಗೆಯ ಸಂಗಡ
ಪೊಗಳಲಾಗದು ನಮ್ಮ ತೊತ್ತಿನ ಮಕ್ಕಳ
ಜಗದೊಳು ನನ್ನನು ಅಪಹಾಸ ಮಾಡಿ ಅ
ನ್ನಿಗರು ದೂರಿದರೇನು ಕೊಂಡಾಡಿದರೇನು
ಗಗನಕ್ಕೆ ಮುನಿದಂತೆ ವ್ಯರ್ಥವಲ್ಲದೆ ಫಲಾ
ಮಿಗಿಲಾಗುವುದೇನು ಎಳ್ಳಿನಿತು ಕಾಣೇ
ನಗಧರ ವಿಜಯ ವಿಠಲನ ಸಿರಿ ಪಾ
ದಾಂಗುಟ ಬಿಟ್ಟವನಿಗೆ ಆವಾವ ಭಯವೊ ೪
ಆದಿತಾಳ
ಶ್ರೀ ಹನುಮನ ಮತವನು ತೊಟ್ಟು ಉತ್ತಮರ
ದ್ರೋಹವ ಮಾಡುವವೆಲ್ಲ ಕಾಲ ಬಿಡದಲೆ
ಮಹಾ ಉತ್ತಮರೆನಿಸಿ ತಿರುಗುವರೆಂಬಿಯಾ
ಆ ಹದನವ ತಿಳಿ ಪೇಳುವೆ ಎಲೋ ಮನವೇ
ಲೋಹಕ್ಕೆ ಹೇಮ ಕಾಸಿ ಪೂಸಿದರೆ ಅದರ
ಸಹವಾಸದಲಿ ನೋಡುವರ ಕಣ್ಣಿಗೆ
ಮೋಹ ಪುಟ್ಟಿಸುವುದು ಬಂಗಾರದಂತೆ ಕಾಣೊ
ಅಹುದೆ ಆ ಲೋಹ ಎಂದಿಗಾದರು ಹೇಮ
ಕುಹಕ ಜನರಿಗೆ ಪೂರ್ವ ಜನ್ಮ ಪುಣ್ಯ
ಯೂಹ ಇರಲಿ ಬಂದು ಉತ್ತಮರ ನಿಜ
ಗೃಹದಲ್ಲಿ ಪುಟ್ಟಿ ವೈಷ್ಣವನೆಂದೆನಿಸಿ
ರೂಹ ತೋರಿಸಿಕೊಂಡು ಭೂಮಿಯೊಳವತರಿಸಿ
ದ್ರೋಹವ ಮಾಡುವರು ಸ್ವಭಾವ ತೊಲಗುವುದೇ
ಬಾಹುದೆ ಅವರಿಗೆ ಉತ್ತಮಗತಿ ಮಾರ್ಗ
ರಹಸ್ಯವಿದೆ ಕೇಳು ಮರುಗುವುದ್ಯಾಕೆ ಮನವೆ
ಮಹಾ ಮಹಿಮ ನಮ್ಮ ವಿಜಯ ವಿಠ್ಠಲನಂಘ್ರಿ
ದೇಹ ಮಧ್ಯದಲ್ಲಿ ನೀ ಮರಿಯಲಾಗದು ನಿತ್ಯ ೫
ಜತೆ
ಹರಿಭಕ್ತರ ಒಮ್ಮೆ ನಿಂದೆ ಮಾಡಿದವ
ನರಕವಾಸಿ ಎನ್ನಿ ವಿಜಯ ವಿಠಲ ಒಲಿಯಾ ೬

ಉಡುಪಿಯ ಕೃಷ್ಣನನ್ನು ರು

೧೧. ಉಡುಪಿ
ರಾಗ:ಭೈರವಿ
ಧ್ರುವತಾಳ
ಆವ ಸುಕೃತವೊ ಮತ್ತಾವ ಗುರುಗಳ ದಯವೊ |
ಆವಾವ ಗೋತ್ರದಲ್ಲಿ ಉದ್ಭವಿಸಿದ ಫಲವೊ |
ಆವ ಪುತ್ರನು ಸತ್ಕರ್ಮ ಮಾಡಿದ ಪುಣ್ಯವೊ |
ಆವ ನಿಜರಾಣಿ ನಡಕೊಂಡ ಬಗೆಯೊ |
ಆವ ಸುಜನ ಬ್ರಾಹ್ಮಣರು ಹರಸೀದ ಹರಕೀಯೊ |
ಆವ ಬಾಂಧವನು ಪೇಳಿಕೊಟ್ಟ ಮಾರ್ಗವೊ |
ಆವ ಕ್ಷೇತ್ರದಲ್ಲಿ ಮಾಡಿದ ಸಾಧನವೊ |
ಆವ ತಾತ್ವಿಕರು ಪ್ರೇರಿಸಿ (ಹರಿಸಿದ) ಭಾಗ್ಯವೊ |
ಆವಾವದು ಎನಗೆ ಒಂದಾದರು ತಿಳಿಯದು |
ಭಾವಜ್ಞರು ಬಲ್ಲರು ಸ್ಥಿತಿಗತಿಯಾ |
ಈ ಉಡುಪಿನ ಯಾತ್ರೆ ಮಾಡುವಗೋಸುಗ |
ಪಾವಮಾನಿಯ ಮತದಲ್ಲಿ ಪೊಂದಿ ನಿತ್ಯ |
ಪಾವನನಾಗಿ ನಡೆತಂದವರ ಸೌಭಾಗ್ಯ |
ದೇವತಿಗಳು ಕೊಂಡಾಡುವರು |
ಜೀವನಮುಕ್ತ ನಾವಾಕುಲಗೋತ್ರರೊಡಗೂಡಿ |
ಕೈವಲ್ಯಾದಲ್ಲಿ ಮುಂದೆ ಸುಖಿಸುವರು |
ಜೀವೇಶ ಮಧ್ವಮುನಿಯಿಂದ ಪೂಜಿಯಗೊಂಡ |
ಶ್ರೀ ವಾಸಾ ನಮ್ಮ ಸಿರಿ ವಿಜಯವಿಠಲರೇಯಾ |
ಕಾವಾನು ಕೃಪೆಯಿಂದ ಧರ್ಮ ಮಾರ್ಗವು ತೋರಿ ೧
ಮಟ್ಟತಾಳ
ಸಕಲ ಸಂರಕ್ಷಕರು ಮಾತೆಯ ತರುವಾಯ |
ಸಕಲ ಬೋಧಕರೆಲ್ಲಾ ತಂದೆಯ ತರುವಾಯ |
ಸಕಲ ಸುಖಗಳೆಲ್ಲ ಭುಕ್ತಿಯ ತರುವಾಯ |
ಸಕಲ ಭೋಗಂಗಳು ಸೌಖ್ಯದ ತರುವಾಯ |
ಸಕಲ ವ್ರತಂಗಳು ಹರಿದಿನದ ತರುವಾಯ |
ಸಕಲ ಕ್ಷೇತ್ರಂಗಳು ಉಡಿಪಿನ ತರುವಾಯ |
ಸಕಲ ವಿಗ್ರಹಗಳು ಕೃಷ್ಣನ ತರುವಾಯ |
ಸಕಲ ಶಾಸ್ತ್ರಂಗಳು ಸುಧಾದ ತರುವಾಯ |
ಸಕಲ ವರ್ಚಸವೆಲ್ಲಾ ವೈಷ್ಣವ ತರುವಾಯ |
ಸಕಲೇಶ ಉಡುಪಿಯ ಶ್ರೀ ಕೃಷ್ಣಾ ವಿಜಯವಿಠಲಾ |
ಅಖಿಲ ವೈಭವದಿಂದ ಮೆರೆದ ತರುವಾಯ ೨
ತ್ರಿವಿಡಿತಾಳ
ಎಲ್ಲಿ ಕೃಷ್ಣನ ಸದನಾ ಎಲ್ಲಿ ಕೃಷ್ಣನ ಸ್ಥಾನ |
ಎಲ್ಲಿ ಕೃಷ್ಣನ ಮೂರ್ತಿ ಎಲ್ಲಿ ಕೃಷ್ಣನ ಕೀರ್ತಿ |
ಎಲ್ಲಿ ಕೃಷ್ಣನ ಗಾಯನ ಎಲ್ಲಿ ಕೃಷ್ಣನ ಧ್ಯಾನಾ |
ಎಲ್ಲಿ ಕೃಷ್ಣನ ಸ್ತೋತ್ರಾ ಎಲ್ಲಿ ಕೃಷ್ಣನ ಯಾತ್ರಾ |
ಎಲ್ಲಿ ಕೃಷ್ಣನ ಪ್ರ[ಣಾ]ಮಾ ಎಲ್ಲಿ ಕೃಷ್ಣನ ನಾಮ |
ಎಲ್ಲಿ ಕೃಷ್ಣಾರಾಧನೆ ಎಲ್ಲಿ ಕೃಷ್ಣ ಶ್ರವಣಾ |
ಎಲ್ಲಿ ಕೃಷ್ಣ ಪಾದತೀರ್ಥ ಮತ್ತೆ ಪ್ರಸಾದ |
ಎಲ್ಲಿ ಎಲ್ಲ್ಯಾದರು ಇಲ್ಲವೋ ಈ ಸೊಬಗು |
ಎಲ್ಲಿ ಈ ವೈಷ್ಣವ ರಾಗಮ ಕಾಣೆನೋ |
ಸಲ್ಲುವದೂ ಕೀರ್ತಿ ಶ್ರೀ ಮಧ್ವಾಚಾರ್ಯರಿ |
ಗಲ್ಲಾದೆ ಮತ್ತೊಂದು ದೈವವಿಲ್ಲಾ |
ಎಲ್ಲಾ ಕ್ಷೇತ್ರಂಗಳ ಶಿರೋರತ್ನವಾಗಿದೇ |
ಬಲ್ಲವಗೆ ಫಲ ದೂರವಿಲ್ಲ |
ಬಲ್ಲಿದ ಉಡುಪೀನ ಕೃಷ್ಣ ವಿಜಯ ವಿ |
ಠ್ಠಲನ್ನ ಮಹಿಮೆಗೆ ನಮೋ ನಮೋ ೩
ಅಟ್ಟತಾಳ
ಉಡುಪಿನ ಯಾತ್ರೆಯ ಮಾಡಿದವ ನಿತ್ಯಾ |
ಪೊಡವಿಯೊಳಗುಳ್ಳ ಯಾತ್ರಿಯ ಚರಿಸಿದವ |
ಉಡಿಪಿನ ಯಾತ್ರೆಯ ಮಾಡಿರೋ ಮಾಡಿರೋ |
ಕೊಡಬೇಡ ಕೊಡಬೇಡ ಕೊಟ್ಟರೊಂದೆ ಕಾಸು |
ಅಡಿಗ[ಡಿ]ಗೆ ನೂರು ಮಡಿ ಫಲವಾಹದು |
ಉಡುಪಿನ ಯಾತ್ರೆಯ ಮಾಡದಿದ್ದರೆ ಪುಣ್ಯ |
ಕೆಡುವುದು ಮುದ್ರೆ ಇಲ್ಲದ ದ್ರವ್ಯದಂತೆ |
ಜಡಮತಿ ಕಳೆವ ವಿಜಯವಿಠಲ ಕೃಷ್ಣ |
ಬಿಡನೋ ಬಿಡನೋ ತನ್ನ ಬಳಿಗೆ ಬಂದವನ ೪
ಆದಿತಾಳ
ಇದೆ ಇದೆ ಭಾಗ್ಯವಿದೆ ಇದೆ ಇದೆ ಭಾಗ್ಯವೆಂದು |
ಯದುಕುಲೋತ್ತಮನ ಪದಗಳ ನೋಡುವುದು ಭಾಗ್ಯ |
ಇದೆ ಇದೆ ಇದೆ ಲಾಭ ಇದೆ ಎನಗೆ ಪರಮಲಾಭ |
ಸುಧಾ ಗ್ರಂಥ ಓದಿದವರ ಪದದರುಶನವಾಗೆ |
ಪದ ಹಸ್ತ ನಯನನಾಸ ವದನ ಕರ್ನ ನಾಲಿಗೆ |
ಸದಾ ಇದ್ದದಕೆ ಸಿದ್ಧ ಇದೆ ಸಾರ್ಥಕ ದಿವಸ |
ಮುದದಿಂದ ಎನ್ನಯ ಹೃದಯಾನಂದವಾಯಿತು |
ಮಧುಸೂದನ ಕೃಷ್ಣ ವಿಜಯವಿಠ್ಠಲರೇಯನ |
ನಿದರುಶನ ಯಾತ್ರಿ ಇಹದಲ್ಲಿ ಫಲವ್ಯಾಕೆ ೫
ಜತೆ
ಶ್ರೀ ಮದಾಚಾರ್ಯರಿಗೆ ಒಲಿದಾ ಉಡುಪಿ[ಯ] ಕೃಷ್ಣಾ |
ಶ್ರೀಮನೋಹರ ನಮ್ಮ ವಿಜಯವಿಠ್ಠಲರೇಯಾ ೬

ಸಕಲವೂ ಶ್ರೀ ಹರಿಯ ನಿಯಂತ್ರಣದಲ್ಲಿದೆ

೯೪
ಧ್ರುವತಾಳ
ಆವನ್ನ ದಯದಿಂದ ಈ ದೇಹ ದೊರಕೋದು
ಆವನ್ನ ದಯದಿಂದ ಗುರು ಕರುಣಿಸುವನು
ಆವನ್ನ ದಯದಿಂದ ಸುಜ್ಞಾನ ತಿಳಿವುದು
ಆವನ್ನ ದಯದಿಂದ ಭಕ್ತಿವೆಗ್ಗಳಿಸುವುದು
ಆವನ್ನ ದಯದಿಂದ ವೈರಾಗ್ಯ ಪುಟ್ಟುವುದು
ಆವನ್ನ ದಯದಿಂದ ಧ್ಯಾನ ಸಂಘಟಿಸುವುದು
ಆವನ್ನ ದಯದಿಂದ ಬಿಂಬಾಪೊಳೆವುದ
ಆವನ್ನ ದಯದಿಂದ ತನ್ನತಾನರಿವನು
ಆವನ್ನ ದಯದಿಂದ ಆಗಮ ನಿಲ್ಲುವುದು
ಆವನ್ನ ದಯದಿಂದ ಸಂಚಿತ ಸರಿವುದು
ಆವನ್ನ ದಯದಿಂದ ಪ್ರಾರಬ್ದ ತೀರುವುದು
ಆವನ್ನ ದಯದಿಂದ ಈ ದೇಹ ದೊರಕೋದು
ಆವನ್ನ ದಯದಿಂದ ಭುವನತ್ರಯವಾಶ್ರರ‍ೆಸೋದು
ಆವನ್ನ ಪಾವನ್ನ ನಾಮ ನೆನೆದರೆ
ಜೀವನ್ನ ಸುಖ ಉಂಟು, ಜನರ ಭಯವಿಲ್ಲಾ
ಕಾವನ್ನಪಿತ ಹರಿ ವಿಜಯ ವಿಠ್ಠಲ ಸಂ
ಜೀವನ್ನ ನಂಬಲು ಕಾವಾನು ದಯದಿಂದ ೧
ಮಟ್ಟತಾಳ
ನಂಬುವುದು ನಂಬುವುದು ಅಂಬುಧಿಯೊಳು ಮಲಗಿ
ಅಂಬುಜ ಪೊಕ್ಕಳಲಿ ಅಂಬುಜಭವನೆಂದಂಬವನ ಪಡೆದ
ಕಂಬುಕಂಠನ ಪಾದಾಂಬುಧರಿಸಿ ತ್ರಿಯಂಬಕ ಪೆಸರಾದ
ನಂಬುವುದು ನಂಬುವುದು ಅಂಬುಜಪತಿ ಪೀ
ತಾಂಬರ ವಿಜಯ ವಿಠ್ಠಲ ನಾಮವ ಉಂಬವಗಲ್ಲದಲೆ
ಇಂಬಿಲ್ಲ ಪರದಲ್ಲಿ ಎಂಬುವುದು ಶತಸಿದ್ದಾ
ನಂಬುವದಂಬುವುದು ಅಂಬುಜನಾಭನಾ ೨
ರೂಪಕ ತಾಳ
ಗೋಕುಲದೊಳು ಜನಿಸಿ ಏಕಮಾನವನಾಗಿ
ಆಕಳ ಕಾಯಿದ ಅನೇಕ ಗೋವಳರೊಡನೆ
ಸಾಕಾರ ಸತ್ಕ್ರೀಯಾ ಏಕಮೇವನು ತಾನು
ಲೋಕಕ್ಕೆ ಬಹುಮೋಹಕ ತೋರುತ್ತಾ
ನಾಕಾದ್ಯರಿಗೆ ದೂರ ಭೀಕರಸುರಹರ
ಬೇಕಾದರೆ ಸಿಗ ನೂಕಿದರೆ ಪೋಗಾ
ಶೋಕನಾಶನ ನಾಮಾ ವಿಜಯ ವಿಠ್ಠಲರೇಯಾ
ಸಾಕಿ ಗೊಲ್ಲರಿಗೆ ಸಾಲೋಕ್ಯವ ಪಾಲಿಸಿದಾ ೩
ಝಂಪೆ ತಾಳ
ಆವ ದೇವರು ಕೊಟ್ಟ ವರಗಳನು ಜಯಿಸಿ ಮ
ತ್ತಾವವನು ಕ್ಷಿತಿಯೊಳಗೆ ಪೆಸರಾದನೂ
ಆವನಾ ತೋರು ಅನಾದಿಕಾಲದಲಿಂದ
ದೇವರಿಕೆ ಹಿಡಿಯದಲೆ ಹಿತಥವಾ
ಗೋವುಜನ್ನಿಗೆ ಪಾಲು ಶುನಕನ ಮರಿ ತಂದು
ದೇವರಾಮನೆಯೊಳು ಕೂಡಿಸಿದಂತೆ
ನೋವಿಗಾರಾಗದೆ ಸರ್ವಲಕ್ಷಣ ನಾಮ
ಶ್ರೀ ವಿಜಯ ವಿಠ್ಠಲ ಸುದೈವ ದೈವವೆನ್ನಿರೋ ೪
ತ್ರಿವಿಡಿತಾಳ
ಗುಂಡೇರಿ ಬಾಡಿ ಎದೆಗುಂಡಿಯ ಒಣಗಿಸಿ
ಕೆಂಡದ ಮಧ್ಯದಲಿ ಅಂಡೊಲಿದು ನಿಂದು
ದಿಂಡುಂದೆ ಉರುಳಿ ಮುಂಕೊಂಡು ಮಂಡಲವೆಲ್ಲ
ಕಂಡಲ್ಲಿ ತಿರುಗಿ ತಿರುಗಿ ತಿರುಗಿ ನೀವು
ದಡಾಣಿಂದಲಿ ದಣಿದು ವ್ಯರ್ಥವಾಗಿ ನೀವ
ಖಂಡಾ ಮನಸಿನಲ್ಲಿ ಭಂಡಾದರೆ ನಮ್ಮಾ
ಅಂಡಜಗಮನಾನೊಲಿಯ ಕಾಣಿರೋ
ಪುಂಡರೀಕಾಕ್ಷ ಶ್ರೀ ವಿಜಯ ವಿಠ್ಠಲನ್ನ
ಪುಂಡರೀಕ ಪಾದದೊಲಿಮೆಯಾಗದನಕಾ ೫
ಅಟ್ಟತಾಳ
ಸಪ್ತವೆರಡು ಲೋಕದೊಳಗೆ ವ್ಯಾಪ್ತನೀತಾ
ಸಪ್ತವರಣ ಬಾಹಿರದೊಳಗೀತಾ
ಸಪ್ತಾರ್ಚಿ ವಿಪ್ರರರಾ ಮುಖದಿಂದ ಭುಂಜಿಸಿ
ತೃಪ್ತಿಯ ಬಡುವನೀತಾ ನಿತ್ಯ ತೃಪ್ತನೀತಾ
ಆಪ್ತನು ಜನುಮಜನುವ ನಿಜದಾಸರಿಗೆ
ಕ್ಲಿಪ್ತಿಗೆ ಕಡಿಮೆ ಇಲ್ಲದಂತೆ ಪೊರೆವನು
ಗೋಪ್ತನಾಮ ನಮ್ಮ ವಿಜಯ ವಿಠ್ಠಲ ಸಂ
ಕ್ಷೀಪ್ತನು ಎಂದೆಂದಿಗೆ ಇಹ ಪರದಲ್ಲಿ ೬
ಆದಿತಾಳ
ಮೂರೊಂದು ಮೂರೊಂದು
ಮೂರು ಎರಡು ಮೂರು ಮೂರು
ಮೂರುತಿಯ ರೂಪನೋಡಿ
ಮೂರು ಮೂಲೆಯೊಳಗಿದ್ದಾ
ಮೂರುತಿಯಿಂದ ಕೊಡಿಸಿ ಮೂರುತಿ ನಿರ್ಮಳರಾಗಿ
ಮೂರರೊಳಗೆ ಒಂದು ಪಿಡಿದು
ಮೂರು ಪುರಾಣದಲ್ಲಿ ನೀನು
ಮೂರೊಂದು ಪದವಿಯಲ್ಲಿ ಮೂರುತಿವಂತನಾಗೋ
ಮೂರು ಆರು ಎರಡುಕಲಿತು
ಮೂರುತಿ ವಿಜಯ ವಿಠ್ಠಲನ್ನ
ಮೂರು ರೂಪಾದವನ ನಂಬಿ
ಮೂರು ಮುವತ್ತವರ ಕೂಡೊ ೭
ಜತೆ
ನೀನೆಂದು ನಂಬಲು ಲಿಂಗ ಶರೀರವ
ಹಾನಿ ಮಾಡುವ ವಿಷ್ಣು ವಿಜಯವಿಠ್ಠಲನೊಲಿದು ೮

ಭಗವಂತನ ಗುಣ ವಿಶೇಷಗಳನ್ನು ಚಿತ್ರಿಸಿ,

೧೯
ಧ್ರುವ ತಾಳ
ಆವಪರಿಯಿಂದ ನಿನ್ನರ್ಚಿಸುವೆ ನಿಗಮಮಣಿ
ದೇವ ಮಹೋತ್ತಮ ಮಹಾ ಮಹಿಮಾ
ಜೀಮೋತ್ತಮರು ಪೂರ್ವದಲ್ಲಿ ಜಪತಪ ವ್ರತ
ಪಾವಕಾಹುತಿಯಿಂದಲಾರಾಧಿಸೇ
ಭಾವದಲಿ ಕಾಣರು ಬಹುಕಾಳ ತೊಳಲೆ ರಾ
ಜೀವ ವದನನೆಂದು ಅನಂತವಾನಂತ ವೇ
ದಾವಳಿಗಳು ಕೂಗಿ ಪೇಳುತಿವಕೋ
ಹ್ಯಾವರಿಕೆ ಸಂಸಾರ ಡಾವಣಿಯನಡುವೆ ಕೊರ
ಳಾವಲಿಗೆ ಸಿಗಿಬಿದ್ದು ಮಿಡುಕುತಿಪ್ಪ
ಜೀವಾಧಮನು ನಿನ್ನ ಮೆಚ್ಚಿಸಲಾಪನೆ ವಸು
ದೇವನ ನಂದನ ದ್ವಿಜಾಪತಿ ಶಂದನಾ
ಪೂವಿಲ್ಲನಯ್ಯಾ ಅದೃಶ ವಿಜಯ ವಿಠಲ
ಸೇವಿ ಆಗುವದೆಂತೊ ಮತಿ ವಿಭ್ರಮನಿಗೆ ೧
ಅಟ್ಟ ತಾಳ
ಅರ್ಚಿಸುವೆ ನಿನ್ನ ಅರ್ಚಿಸಲಾರೆನೋ
ಮೆಚ್ಚಿಸುವನೆ ನಿನ್ನ ಮೆಚ್ಚಿಸಲಾರೆನು
ನಿಚ್ಚ ಸಪುತವನಧಿ ಅಚ್ಚಲದೊಳಗುಳ್ಳ
ಅಚ್ಚ ಕುಸುಮ ಪತ್ರಾ ನಿಚ್ಚಯಾದಿಗಳೆಲ್ಲ
ಅರ್ಚನೆ ಮಾಡಿದರು ಮೆಚ್ಚಾಗುವುದೇನೊ
ಹೆಚ್ಚಿನ ದೈವವೇ ಮುಚಕುಂದ ವರದಾ
ಅಚಿಂತ್ಯನಾಮಕನೆ ವಿಜಯ ವಿಠ್ಠಲ ನೀನೆ
ಸಚ್ಚಿದಾನಂದೈಕನೆ ನೆಚ್ಚಿನ ಕರುಣಾಳೇ ೨
ತ್ರಿವಿಡಿ ತಾಳ
ನಿತ್ಯ ತೃಪ್ತನು ನೀನು ನಿರ್ವಿಕಾರನು ನೀನು
ಸತ್ಯ ಸಂಕಲ್ಪ ಶುದ್ಧಾತ್ಮ ಅಂತರಾತ್ಮಕಾ
ಅತ್ಯಾಶ್ಚರ್ಯವ ತೋರುವ ಮಹಾಪುರುಷಾ
ದಿತ್ಯ ಸನ್ನಿಭ ಕೋಟಿ ನಿರ್ಮಲಾಂಗಾ
ಸತ್ಯಲೋಕದ ವಾಸಿ ಸಂತರ್ಪಣೆ ಮಾಡಿದರು
ಕೃತ್ಯವೇ ನಿನಗದರಲ್ಲಿ ಇಲ್ಲಾ
ಮತ್ರ್ಯ ಲೋಕದ ನೊರಜು ಏಕಾಗ್ರಮನದಲ್ಲಿ
ಅತ್ಯಂತವಾಗಿ ಪೂಜಿಸಬಲ್ಲನೇ
ಸತ್ಯಧರ್ಮ ನಾನು ವಿಜಯವಿಠ್ಠಲ ನಿನಗೆ
ಭೃತ್ಯರಂಗ ಸಂಗಾ ನಲಿವುದೇ ತೃಪ್ತಿ ೩
ಅಟ್ಟತಾಳ
ಸದನದೊಳಗೆ ಮಾಡುಳ್ಳ ಪದಾರ್ಥ
ಮುದದಿಂದಲಿ ನಿನ್ನ ಸಮ್ಮುಖದಲ್ಲಿ ಇಟ್ಟು
ಎದುರಲಿನಿಂದ ಮನಸ್ಸಿಗೆ ತೋರಿದ ಹಾಗೆ
ಪದುಮನಾಭ ನಿನ್ನ ಪದಕೆ ಸಮರ್ಪಿಸ
ಲದರೊಳಗೊಂದು ಸ್ವಲ್ಪು ಕಡಿಮೆಯಾ
ಗದು ನೋಡು ನಿನ್ನ ಮಹಿಮೆಗೆ ನಮೋನಮೋ
ಅದೆ ಮಹಾಪ್ರಸಾದ ಭಕುತರು ಭುಂಜಿಸಿ
ಪದವಿಯಲ್ಲಿ ಅಧಿಕವಾದ ಸುಖವ ಬಡುವರು
ಸುದರಶನ ನಮೊ ವಿಜಯ ವಿಠ್ಠಲರೇಯಾ
ಇದರಿಂದ ನೀ ಕೃಪಾ ಉದಧೊ ಸದ್ಗುಣ ದೇವಾ ೪
ಆದಿತಾಳ
ಮಿಗಿಲಾದ ದೈವಗಳು ಯುಗಳ ಕರಗಳನು
ಮುಗಿದು ದೂರದಲಿ ನೀನುಗುಳುವ ಬಾಯಿ ತೊಂಬ
ಲಿಗೆ ಶಿರವಾಗಿ ತಮ್ಮ ಮೊಗವನು ನೋಡುತ್ತ ನ
ಮಗೆ ಕೊಡುವನೋ ನಿಮಗೆ ಈವೆನೆನುತಲಿ
ಜಗುಳಿ ಪೋಗುವದೇ ಮನದೆಗಿಯದೆ ಸೋತಗಾರು
ಯುಗ ಯುಗಾಂತರಕೆ ಮರುಗಿ ಮರುಳಾಗುವರು
ಯುಗ ವರ್ತಿನಾಮ ಚನ್ನ ವಿಜಯ ವಿಠ್ಠಲರನ್ನ
ಹಗಲಿರುಳು ಅರ್ಚಿಸಿ ನಿನ್ನಗುರು ಕಾಣಲಳವೇ ೫
ಜತೆ
ಯಾತರಿಂದಲಿ ನಿನ್ನ ಒಲಿಸಿಕೊಳಬಲ್ಲೆನೆ
ಧಾತಾರುತ್ತಮ ನಾಮಾ ವಿಜಯ ವಿಠಲ ಪೂರ್ವಿ ೬

೧೮
ಧ್ರುವತಾಳ
ಆಶೆ ಎಂಬೊ ಪಿಶಾಚಿ ಸೋಂಕಿದೆ ಆದಿಯಲ್ಲಿ
ಏಸೇಸು ದೇಶ ಸುತ್ತೆ ತೊಲಗಯ್ಯಾ
ಲೇಶವಾದರು ಪ್ರಾಣ ಒಪ್ಪಿಸುವೆನೊ
ದೋಷಕಂಜದೆ ನಾನಾ ಬಗೆಬಗೆಯವರ ತುತಿಸಿ
ಕ್ಲೇಶದಿಂದಲಿ ಬಳಲಿ ಬರಿದಾಗುವೇ
ಘಾಸಿಮಾಡುವ ಪಿಶಾಚಿಗೆ ಬಲಿಯ ಈಯೆ
ತಾ ಸುಮ್ಮನೆ ಬಿಟ್ಟು ಪೋಗುವುದೊ
ಈ ಶರೀರದೊಳಗಿದ್ದ ಆಶೆ ಎಂಬೊ ಪಿಶಾಚಿ
ರಾಸಿ ಬಲಿ ಹಾಕಿದರು ಬಿಡದಿಪ್ಪುದು
ಈ ಸುಮೇರು ಬ್ರಹ್ಮಾಂಡ ಆಕಾಶ ಪರ್ಯಂತ
ಬ್ಯಾಸರವಿಲ್ಲದೆ ತಿರುಗುತಿದೆ
ಆಶೆಯಾಗುವುದಿದರ ಮೊದಲು ಕೊನೆ ಅವುದು
ಲೇಸಾಗಿ ನೋಡಿದರು ನೆಲೆ ತೋರದೊ
ಭೂಸುರನಾದೆನೆಂಬೊ ಗರ್ವಿಕಿಯಲ್ಲದೆ
ಮೀಸಲ ಗುಣದಲ್ಲಿ ಇರದೆ ಪೋದೆ
ಕಾಸು ಕೊಡುವರಿರೆ ವಾರ್ತಿಯ ಕೇಳುತ್ತಲೆ
ಕಾಶಿಗೆ ಪೋಗಿ ಧಾವತಿ ಬಡುವೆ
ಶೇಷಶಾಯಿ ಸಿರಿ ವಿಜಯ ವಿಠ್ಠಲ ಜಗ
ದೀಶ ನೀನೊಲಿಯದಲೆ ಆಶೆ ಪಿಶಾಚಿ ಬಿಡದೊ ೧
ಮಟ್ಟತಾಳ
ಕೊರಳಿಗೆ ಅಸ್ಥಿಯ ಸರ ಧರಿಸಿ ಮೇಲೆ
ಮಿರಗುವ ವಸನ ಪೊದ್ದರೆ ಪರರಿಗೆ ಗೋ
ಚರವಾಗದು ಕಾಣದ ತೆರದಲ್ಲಿ ನಾನು ಅಂ
ತರ ಮಲಿನ ಬಿಡದೆ ಹೊರಗೆ ನಿರ್ಮಳನೆಂದು
ಕರೆಸಿಕೊಂಡೆನೊ ನಿತ್ಯಾ
ಮರುಗುವೆ ಮಹಾ ಆಶೆ ಶರಧಿಯೊಳಗೆ ಮುಳುಗಿ
ಧರೆಯೆಲ್ಲ ಬಿಡದೆ ತಿರುಗಿ ಬಸವಳಿದೆ
ಪರಿ ಪರಿ ಗುಣವುಳ್ಳ ವಿಜಯ ವಿಠ್ಠಲ ನಿನ್ನ
ಚರಣದಲ್ಲಿ ಆಶೆ ಅರೆಕಾಲವಿಲ್ಲ ೨
ತ್ರಿವಿಡಿತಾಳ
ಒಂದು ಆಶೆಯಿಂದ ನಿತ್ಯಮಾಡುವ ಸ್ನಾನ
ಸಂಧ್ಯಾನ ಜಪತಪ ಅತಿಥಿಪೂಜೆ
ನಂದವಾಗಿಪ್ಪ ನಿನ್ನ ನಾಮಸ್ಮರಣೆಯ
ಛಂದವಾಗಿ ಮಾಳ್ಪ ಸಜ್ಜನರ
ಸಂದರುಶನವಾಗೆ ಉತ್ತಮಗತಿ ಮಾರ್ಗ
ಹಿಂದಾಗಿ ಪೋಗೋದು ಕೈ ಸೇರದೆ
ಮಂದಮತಿಯು ನಾನು ಆಶೆ ಎಂಬುದು ಬಿಡದೆ
ನೊಂದು, ಸತ್ಕರ್ಮವ ಮರೆವೆನಯ್ಯಾ
ಇಂದೆನ್ನ ಮೊರೆ ಕೇಳೊ ವಿಜಯ ವಿಠ್ಠಲ ನೀನೆ
ಬಂದು ಪೊಂದಿದ ಮೇಲೆ ಇಂತಾಗುವುದೇನೊ ೩
ಅಟ್ಟತಾಳ
ಭೋಗಿಯಾಗಿ ಬಲು ಸುಖಬಟ್ಟ ಕಾಲಕ್ಕು
ಯೋಗಿಯಾಗಿ ಮಂಡೆ ಬೋಳಾದ ಕಾಲಕ್ಕು
ರೋಗಿಯಾಗಿ ಮನೆ ಸೇರಿದ ಕಾಲಕ್ಕು
ಓಗರ ಉಂಡು ತೃಪ್ತಿಯಾದ ಕಾಲಕ್ಕು
ತಾಗಿ ನೊಂದು ನಿತ್ಯ ದು:ಖದ ಕಾಲಕ್ಕು
ತೂಗುವ ತಕ್ಕಡಿಯೊಳಗಿಟ್ಟ ಕಾಲಕ್ಕು
ಜೋಗಿಯಾಗಿ ಪೋಗಿ ತಿರಿತಿಂದ ಕಾಲಕ್ಕು
ಲೋಗರಿಗಿಂತ ಅಧಿಕವಾದ ಕಾಲಕ್ಕು
ಸಾಗರದಗಲ ಹೊನ್ನಿನ ಹಾಸಿಕೆ ಹಾಕಿ
ಜಾಗುಗೊಳಿಸದಲೆ ಹೊರಳಿದ ಕಾಲಕ್ಕು
ಈ ಗುಣ ಬಿಡವಯ್ಯ ಅನಂತ ಜನ್ಮಕ್ಕೆ
ಭೂಗೋಳದೊಳಗಿಂಥ ಆಶೆ ಬಡಕ ನಾನು
ಸಾಗರ ಸುತೆ ಪತಿ ವಿಜಯ ವಿಠ್ಠಲ ಭವ
ರೋಗದ ನರರಿಗೆ ಅಪಥ್ಯವೆ ಇದು ೪
ಆದಿತಾಳ
ಆಶೆ ಬಿಡುವದಕ್ಕೆ ಒಂದುಪಾಯವೆ ಉಂಟು
ಶೋಷಿಸಬೇಕು ತನ್ನ ದೇಹದಂಡನೆ ಮಾಡಿ
ಗ್ರಾಸವೆ ತೊರೆಯಬೇಕು ಮಿತ ಆಹಾರವೆ ಮಾಡಿ
ದೋಷಕಂಜಲಿ ಬೇಕು ಸಂಸಾರವೆಂಬೋದು
ಮೋಸವೆಂದು ತಿಳಿದು ಇದ್ದರು ಇರಲಿ ಉ
ದಾಸೀನದಿಂದಲ್ಲಿ ಕಾಲ ಕಳಿಯಬೇಕು
ರಾಸಿದ್ರವ್ಯ ತೊಲಗದೆ ಪ್ರಾಪುತವಾದರು
ಕೇಶ ಸಮಾನವೆಂದು ಬಗದು ನೋಡಲಿಬೇಕು
ಈ ಸಂಬಂಧ ವಿಲ್ಲದ ವಿಜಯ ವಿಠ್ಠಲರೇಯ
ಈಸು ಲಾಭವೆನಗೆ ಮುದದಿಂದ ಪಾಲಿಪುದು ೫
ಜತೆ
ಇದು ಬಿಡಿಸದಿರೇ ಎನಗೆ ಸಾಧನವಿಲ್ಲ
ಇದನೆ ಪರಿಹರಿಸೋದೊ ವಿಜಯ ವಿಠ್ಠಲ ಒಲಿದು ೬

ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು

೧೯
ಧ್ರುವತಾಳ
ಆಹುತಿ ಕೊಡುವುದು ಪಂಚ ಪ್ರಾಣರಿಗೆ ಸಂ
ದೇಹ ಮಾಡದಲೆ ಮನಸು ಪೂರ್ವಕದಿಂದ
ದೇಹದೊಳಗೆ ಐದು ಸ್ಥಾನಂಗಳು ತಿಳಿದು
ಸ್ವಾಹಲೋಲನ್ನ ಪ್ರೀತಿ ಬಡಿಸಿ ಉಣಿಸು
ಆಹಾರ ಮೆಲುವಾಗ ಮರಿಯಲಾಗದು ಅತಿ
ಸ್ನೇಹಭಾವದಿಂದ ಸರ್ವದಲ್ಲಿ
ಮಹ ಪುಣ್ಯ ಬಪ್ಪದು ಮಾಡಿದಾಘರಣ್ಯ
ಗಹನವಿದು ಕೇಳಿ ಕಂಡವರಿಗಿಲ್ಲಾ
ಇಹಲೋಕದಲ್ಲಿ ಸಿದ್ದಾಂತ ತಿಳಿದು
ಮೋಹಕ ಶಾಸ್ತ್ರ ಜರಿದು ಮದ ಮತ್ಸರ ಹರಿದು
ಕುಹಕ ಬುದ್ದಿ ಬಿಟ್ಟು ಉಚಿತದಲ್ಲಿ
ಶ್ರೀ ಹರಿ ವೈಶ್ವಾನರನೆಂಬೊ ನಾಮ ಚತುರ
ಯೂಹಗಳಿಪ್ಪವೆನ್ನು ಅಲ್ಲಿಗಲ್ಲಿ
ಬಹಳಾಧಿಷ್ಠಾನದಲ್ಲಿ ಶುಭಸಾರ ಭುಂಜಿಸುವಾ
ದ್ರೋಹಿ ಮಾನವರ ತೊರೆದು ತಿಳಿಯಗೊಡದೆ
ಅಹಂಕಾರ ಮಮಕಾರ ತೊರೆದು ದೈನ್ಯದಲ್ಲಿ ದಾ
ಸೋಹಂ ಎಂದವಗೆ ಫಲದಾಯಕಾ
ದೇಹಿ ದೇಹಗಳಲ್ಲಿ ಪೂರ್ಣವಾಗಿ ಇಪ್ಪ ವಾರಿ
ರುಹ ಲೋಚನ ನಮ್ಮ ವಿಜಯ ವಿಠ್ಠಲನು
ಅನುಗ್ರಹ ಮಾಡುವವರ್ಪಿತ ಕೈ ಕೊಂಡು ೧
ಮಟ್ಟತಾಳ
ಮೊಗದಲ್ಲಿ ಆಹವನಿಯ ಎಂದೆಂಬೊ ದೇವಾ
ಮೊಗನುಂಟು ಅಲ್ಲಿ ಓಂ ಪ್ರಾಣನೆಂದೊ
ಮಿಗೆ ಹೋಮಿಸುವುದು ಸ್ವಾಹ ಕಡೆಯಲ್ಲಿ
ನುಡಿದು ಕುಂಕುಮವರ್ನ ಕ್ಷುಧಾಗ್ನಿ ಋಷಿದೇವತ
ಗಗನ ಮಣಿಯನ್ನು ಗಾಯಿತ್ರಿ ಛಂದಸ್ಸು
ಬಗೆಯನ್ನು ತಿಳಿದು ತಿಳಿದು ಶಿವಪುತ್ರನು ಪವನ
ಮಗನು ಚಕ್ಷು ಶ್ವಾಸೋಚ್ವಾಸದಭಿಮಾನಿಗೆ ರವಿ ಅ
ಹಿ ಗರುಡ ಪ್ರಣವಾಚ್ಯರಿವರು
ದ್ಯುಗನಾಮಕಳು ಭಾರತಿದೇವಿ ಆಮೇಲೆ
ಜಗಜೀವನತನಕ ಅಧಿಷ್ಠಾನವ ಗ್ರಹಿಸಿ
ನಿಗಮಾಭಿಮಾನಿ ಶ್ರೀ ಲಕುಮಿಯ ಹೃದಯದೊ
ಳಗೆ ಪ್ರಾಣನಾಮಕ ಅನಿರುದ್ದಾತ್ಮಕಾ
ಅಗಣಿತ ಗುಣಸಾರ ವೈಶ್ವಾನರನಿಗೇ
ಸೊಗಸಾಗಿ ಕೊಟ್ಟು ತೃಪ್ತಿಯ ಬಡಿಸಿರೋ
ಪೊಗಳಿದವರ ಪ್ರಾಣ ವಿಜಯ ವಿಠ್ಠಲ ದೈವಾ
ದಿಗಳ ಕೈಯ್ಯಾ ವಾಲಗಕೊಳುತಿಪ್ಪಾ ೨
ರೂಪಕ ತಾಳ
ವಕ್ಷ ಪ್ರದೇಶದಲ್ಲಿ ಗಾರ್ಹಸ್ಪತ್ಯ ಚತು
ರಾಕ್ಷನಲ್ಲಿ ಅಪಾನನೆಂಬಾಹುತಿ
ತೀಕ್ಷಣವಾಗಿ ಹೋಮಿಸುವುದು ಮೊದಲಂತೆ
ಲಕ್ಷಣ ಕಡೆ ಮೊದಲು ನೋಡಿ ಪ್ರಣವ ಸ್ವಹಾ
ಗೋಕ್ಷೀರ ವರ್ನ ಶ್ರದ್ನಾಗ್ನಿ ಋಷಿ ದೇವಾದಿ
ನಕ್ಷತ್ರ ಪತಿ ತೃಷ್ಟುಪವಂದ
ದಕ್ಷಾರಿ ಪಿತನ ಪುತ್ರ ಮುಖ್ಯ ಪ್ರಾಣನ ಮಗ
ದಿಕ್ಷು ಶೋತ್ರಾಭಿಮಾನಿ ಚಂದ್ರ, ಮತ್ತೆ ಫಾ
ಲಾಕ್ಷ ಶೇಷ ಗರುಡ ತನ್ನಾಮಕರಾಗಿ
ವೀಕ್ಷಿಸುತ ತಮ್ಮ ತಮ್ಮಧಿಷ್ಠಾನದಲಿ
ಸೂಕ್ಷ್ಮ ರೂಪದಲ್ಲಿ ಇಪ್ಪರು ಇವರೊಳಗೆ
ಈ ಕ್ಷಿತಿನಾಮಕ ಭಾರತಿ ಅಲ್ಲೀಗಾ
ಸಾಕ್ಷಾತ ಪ್ರಾಣದೇವನ ತನ್ನ ಮದ್ಯದಲ್ಲಿ
ಲಕ್ಷ್ಮೀ ಇಪ್ಪಳು ಅಧಿಷ್ಠಾನದಲ್ಲಿ
ಅಕ್ಷರ ಪುರುಷ ಅಪನನಾಮಕ ಪ್ರ
ತ್ಯಕ್ಷ ಪ್ರದ್ಯುಮ್ನಾತ್ಮಕ ವೈಶ್ವಾನರಾ
ಪೇಕ್ಷಾ ರಹಿತ ತಾನೆ ಶುಭರಸ ಕೈ ಕೊಂಬ
ಮೋಕ್ಷದಾತೃ ಸ್ವಾಮಿ ವಿಜಯ ವಿಠ್ಠಲ ಕಲ್ಪ
ವೃಕ್ಷ ಕಾಣೊ ಕರ ಮುಗಿದು ಬೇಡುವರಿಗೆ ೩
ಝಂಪೆ ತಾಳ
ವ್ಯಾನನೆಂಬಾಹುತಿ ನಾಭಿಯಲ್ಲಿ ಇದ್ದ ದ
ಕ್ಷಿಣ ಪಾವಕನಲ್ಲಿ ಹೋಮಿಸುವುದು
ಈ ನುಡಿಗೆ ಪದ್ಮ ವರ್ನ ಹುತಾಶನ ಋಷ ಕೃ
ಶಾನು ದೇವತಾ ಅನುಷ್ಟುಪ್ ಛಂದಸ್ಸು
ಆ ನಿಟಿಲ ನೇತ್ರನ ಪುತ್ರನೊಬ್ಬನು ಮುಖ್ಯ
ಪ್ರಾಣ ಪುತ್ರನು ಮುಂದೆ ವಾಗಾಸ್ಪರಿಶಾಭಿಮಾನಿ
ಅಗ್ನಿ ದೇವತಾ ಪಾರ್ವತಿ ಪತಿ ಶೇಷ
ವೈನತೇಯ ಇವರಿವರು ಎಲ್ಲಾ
ವ್ಯಾನಶಬ್ದವಾಚಕರಾಗೆ ಇವರಧಿಷ್ಠಾನದಲ್ಲಿ ವಿ
ದ್ಯುನಾಮಕಿ ಭಾರತಿ ಪ್ರಾಣದೇವರು ವ್ಯಾನ ನಾಮದಲ್ಲಿ
ತಾನಿಪ್ಪಾನಾತನೊಳು ಲೋಕಾತುಮ ಉಂಟು
ವ್ಯಾನನಾಮದಲ್ಲಿ ಸಂಕರುಷಣಾತ್ಮಕ ವೈ
ಶ್ವಾನರ ಭುಂಜಿಸುವ ಶುಭರಸವನ್ನು
ಏನು ಗಣನೆ ಮಾಡಿ ಸಂಖ್ಯ ಪೇಳಲುಂಟೆ
ಆನಂದ ಮೂರುತಿ ವಿಜಯ ವಿಠ್ಠಲರೇಯಾ
ಧೇನಿಪರ ಮನಕೆ ಚಿಂತಾಮಣಿ ಸರ್ವದಾ ೪
ತ್ರಿವಿಡಿ ತಾಳ
ಶರಭಿ ಎಂಬೊ ಅಗ್ನಿ ನಾಭಿ ಬಲಭಾಗದಲ್ಲಿ
ಇರುತಿಪ್ಪುದು ಉದಾನನೆಂಬಾಹುತಿ
ಸ್ಮರಿಸು ಓಂಕಾರದಲ್ಲಿ ಸ್ವಾಹಾ ಕಡೆಯಲ್ಲಿ ನುಡಿದು
ಪರಮ ಭಕುತಿಯಿಂದ ಕೊಡಲಿಬೇಕು
ಸ್ಪರಿಶಾಗ್ನಿ ಋಷಿವಾಯುರ್ದೇವತಾ ಬೃಹತಿಛಂದ
ಹರಿಮಣಿ ವರ್ನ ಎಂಬ ಮಂತ್ರವು
ಹರಪುತ್ರ ಪ್ರಾಣಜ ಅನಿರುದ್ಧ ರುದ್ರಾಹಿ
ಗರುಡ ಇವರಿಗೆ ಉದಾನ ಶಬ್ಧಾ
ಕರೆಸಿಕೊಳುತಿಪ್ಪರೊ ಕವಚದಂದದಲಿ ಇದ್ದು
ಹಿರಿದಾಗಿ ವಾಙ್ಮನಾಮ ಭಾರತಿದೇವಿ ಮುಖ್ಯ
ಮರುತದೇವ ಉದಾನನೆಂಬೊ ನಾಮದಲಿ
ಇರಲು ರಮ್ಮೆದೇವಿ ಅವರೊಳಗೆ
ಸ್ಥಿರವಾಗಿ ಇಪ್ಪಳು ಅಧಿಷ್ಠಾನದಲ್ಲಿ
ಹರಿ ಉದಾನ ವಾಸುದೇವಾತ್ಮಕಾ ವೈಶ್ವಾ
ನರನೆಂಬೊ ಪೆಸರಿಲಿ ಕರಿಸಿಕೊಂಡು ಸ್ವೀ
ಕರಿಸುವ ದಿವ್ಯನ್ನ ಕರುಣಾರಸದಿಂದ
ಪರಮಪುರುಷ ನಮ್ಮ ವಿಜಯ ವಿಠ್ಠಲರೇಯ
ಸುರಧೇನು ಕರೆದುಂಬ ಭಕ್ತರಾಕುಲಕೆ
ಧ್ರುವತಾಳ
ಮತ್ತೆ ಸಮಾನವೆಂಬಾಹುತಿ ನಾಭಿ
ಉತ್ತರ ದಿಕ್ಕಿನಲಿ ಆವ ಶರಭಿಲಿ
ಹೋತ್ರನಲ್ಲಿ ಹೋಮಿಸು ವಿದ್ಯುದ್ವರ್ನ
ಉತ್ತಮ ವಿರುಪಾಗ್ನಿ ಈ

ಸಾಂಸಾರಿಕ ಜೀವನದಲ್ಲಿ ಸಂಬಂಧಿಗಳನ್ನು

೨೦
ಧ್ರುವತಾಳ
ಇಂತೀ ಸಂಸಾರದ ಭ್ರಾಂತಿಗೊಳಗಾಗಿ ದು
ಶ್ಚಿಂತಿಯಲ್ಲಿ ನೀ ಬಳಲದಿರು ಸಂತತದಲ್ಲಿ
ಸಂತಾಪದಲ್ಲಿ ಕುಡಿದು ಕಿಂತು ಕಳೆಯದೆ ಭವನ
ಪಂಥಿದೊಳು ಹೊರಳಿ ಅಂತನು ಕಾಣದೆ
ಸಂತತಿ ಎನ್ನದೆನ್ನದು ನೀನು ನಾನೆಂಬೊ
ಪಂಥದಲ್ಲಿ ತಿರುಗಿ ಮುಂತೆ ನೆನಿಯದೆ
ಪಾಂಥದರ ವಂಟಿಗೆಯಲ್ಲಿ ನಿಂತ ಜನರ ಕೂಟ
ದಂತೆಲವೊ ಜೀವ ನೀನೆಂತು ಮರುಳೊ
ಕಂಥೆ ಪಟಕ್ಕೆ ಸುತ್ತತಂತಿ ಜೋಡಿಸಿದ ಪರಿ
ತಂತ್ರವಿದು ನೆಚ್ಚದಿರು ಕಂಥೆ ಮಾಯಾ
ಶಾಂತ ಪಾರಾಯಣ ವಿಜಯ ವಿಠ್ಠಲ ಜಗ
ದಂತರಯಾಯಿತು ಮಂತ್ರವನ್ನು ಪಠಿಸೊ ೧
ಮಟ್ಟತಾಳ
ಹೊಳೆಯ ಹರಿಯಿಂದ ಮಳಲು ಹರಿದುಬಂದು
ಕೆಲವು ದಿನ ನೆಲೆಯಾಗಲು ಮತ್ತೆ
ಆಲವತ್ತೆಡಿ ಇಂದಾಗಲಿ ಪೋಗಿ ಮಳಲು
ಬಲ ಪರಿಯದಂತೆ ತಿಳಿವುದು ನಿನ್ನಯ
ಕುಲದ ಉತ್ಪತ್ತಿಯು ಘಳಿಗೆಯೊಳಗೆ ಮೂ
ದಲಿಸಿ ನುಡಿವರೂ ಮುಳವು ಮಾಡಿಕೊಳದೆ
ಹುಳುಕು ಯೋಚನೆ ತೊರದು
ಕೆಲಕಾಲ ವಿರಾಮ ವಿಜಯ ವಿಠಲನ್ನ
ಒಳಗೆ ಮಾಡಿಕೊಂಡು ಸುಳಿದಾಡು ವಿಹಿತದಲ್ಲಿ ೨
ರೂಪಕತಾಳ
ಸುಖವಿಲ್ಲ ಸುಖವಿಲ್ಲ ಸಂಸಾರಾಖ್ಯದಲ್ಲಿ
ದು:ಖವೆ ದು:ಖವೆ ಪ್ರಾಪ್ತಿ ಸಕಲ ಕಾಲದಲೀ
ತ್ವಕುವೇಂದ್ರಿಯಾದಿ ಮೋಹಕದೊಳು ಸಿಗಬಿದ್ದು
ಅಕಟ ಮಮತೆಯಲ್ಲಿ ವಿಕಳ ಮಾನವನಾಗಿ
ಭಕುತಿ ಶೂನ್ಯದಲ್ಲಿ ಬದುಕುವುದೇನೊ ಜೀವ
ನಿಕರ ಬಂಧನದೊಳು ಪುಕ್ಕಟೆ ತಗಲಿ ಕೊಂಡು
ಮುಖಕೆ ಹೇಡಿಯಾಗದೆ ಕುಕ್ಕುಟ ಜ್ಞಾನದಲಿ ಶೋ
ಧಕನಾಗು ಅನುಗಾಲ ಲಕುಮಿ ವಲ್ಲಭ ವಿ
ಮುಕ್ತಾತ್ಮ ವಿಜಯ ವಿಠ್ಠಲನ್ನ ದಿವ್ಯ ಪಾ
ದಕ್ಕೆ ನಮಿಸಿ ಪುಣ್ಯ ಸಾಧಕನಾಗಿ ಬಾಳೊ ೩
ಝಂಪೆತಾಳ
ಸಂಕಲೆ ಎಂಬ ಸಂಸಾರ ಕಾಲಿಗೆ ತಗಲಿ
ಸಂಕಟ ಬಡಿಸುವುದು ಕೇಳು ಪ್ರಾಣ
ಅಂಕುರವಾಗದು ಭಕ್ತಿ ಮಾರ್ಗಕ್ಕೆ ಕ
ಳಂಕವಲ್ಲದೆ ಇನಿತು ಒಳಿತೆ ಇಲ್ಲ
ಡೊಂಕ ನಡತೆಯಲಿ ಅಂಧಕೂಪದಲ್ಲಿ ಕೆಡೆದು
ಸುಂಕು ಮುಸುಕಿದಂತೆ ಮುಗ್ಧನಾಗಿ
ಪಂಕಜೋದರ ಕುಮುದ ವಿಜಯ ವಿಠ್ಠಲನ್ನ
ಅಂಕಿತವ ಜರಿದು ದುರ್ಬಿಂಕದಲಿ ಮೆರೆದೆ ೪
ತ್ರಿವಿಡಿ ತಾಳ
ಹಿಂದೆ ಸಂಸಾರ ದಾವವೆಂದೆಂಬೊ ಬಂಧನದೊಳು
ಪೊಂದಿ ಪಾಮರರಾಗಿ ಬಂದು ಪೋದವರೆಲ್ಲ
ತಂದೆ ತಾಯಿ ಭ್ರಾತೃ ಬಂಧು ಬಳಗ ಸಂ
ಬಂಧಿಗಳೇನೊ ನಿನಗಿಂದು ನೆರೆದವರು
ಮುಂದೆ ನೀನವರಿಗೆ ಬಂಧೂ ಅತಿದೂರನೊ
ದ್ವಂದ್ವ ವಾರ್ತಿಯನು ನಿಸ್ಸದೇಹದಲ್ಲಿ ಪೇಳು
ಇಂದಿರೇಶ ಸತ್ಯ ಮೇಧ ವಿಜಯ ವಿಠ್ಠಲ
ಎಂದೆಂದಿಗೆ ಪೊರೆವ ನಂದನೆಂದು ನಂಬೊ ೫
ಅಟ್ಟತಾಳ
ಹಲವು ಯೋನಿಗಳಲ್ಲಿ ಸುಳಿದು ಸುಳಿದು ಸುತ್ತಿ
ಮಲ ಮೂತ್ರ ಹೊಲಸು ಹೊಲಿಯ ಸೂತಕದಲ್ಲಿ
ಕುಲವೆ ಸಾರಲಿ ಬಂದು ಚಲಿಸಿದ ದು:ಖವ
ನೆಲೆಯಾವುದು ಜೀವ ಹುಳುತು ಪೋಗುವುದು
ಬಲೆಯಲ್ಲಿ ಬಿದ್ದ ಸಿಂಬಳದೊಳು ನೊಣ ದೇಹ
ಕೆಳಗಾಗೆ ಮಲದಂತೆ ಬಳಲುವಿ ಕೆಲಕಾಲ
ತಿಲದರ್ಧನಿತು ಸತ್ಪಲವೀಗ ಒದಗವು
ಹಳವಾದೀ ಸಂಸಾರ ಹಲವು ರಂಧ್ರವು ಕಾಣೊ
ಬಲವಂತ ದುರ್ಗಮ ವಿಜಯ ವಿಠ್ಠಲ ನಿ
ಶ್ಚಲ ಮೂರುತಿಯ ವೆಗ್ಗಳ ಮಹಿಮೆಯ ತಿಳಿಯೋ ೬
ಆದಿತಾಳ
ಖತಿಗೊಂಬ ಸಂಸಾರಕತಿ ದೂರನಾಗಿ ನಿಲ್ಲೊ
ಮತಿಗೆಡಿಸುವ ಇಂದ್ರಿಯಜಿತ ನಾಗೊ ಧೈರ್ಯದಲ್ಲಿ
ಚತುರಾವಿತನದಲ್ಲಿ ಇತರ ದೈವವ ಬಿಟ್ಟು
ಕ್ಷಿತಿಗೊಬ್ಬನುತ್ಪತ್ತಿ ಸ್ಥಿತಿಲಯಕರ್ತನು ಶ್ರೀ
ಪತಿಯೆಂದು ತಿಳಿದು ನಂಬಿ ಸತತಾರಾಧನೆಮಾಡಿ
ರತಿಯಾದ ಭಕುತಿಯಲ್ಲಿ ಲತೆ ಪಲ್ಲವಿಸಿದಂತೆ
ಪ್ರತಿದಿವಸದಲಿ ವಿಹಿತಧರ್ಮದಿಂದಸ
ದ್ಗತಿಗಭಿಮುಖನಾಗದುಚಿತ ಕುಲದಲ್ಲಿ ಬಂದು
ದ್ಯುತಿಧರ ನಾಮಪ್ರೇಮ ವಿಜಯ ವಿಠ್ಠಲರೇಯನ
ಕಥೆಕಲ್ಪ ಕೇಳಿ ನಿರ್ಗತನಾಗೊ ಚಕ್ರದಿಂದ ೭
ಜತೆ
ಕರ್ದಮದೊಳಗಿದ್ದ ಮದ್ದಾನೆ ಇದ್ದಂತೆ
ಇದ್ದು ಭಜಿಸು ದುರ್ಧರ ವಿಜಯ ವಿಠ್ಠಲನಂಘ್ರಿ ೮

ತಿರುಪತಿಯ ಶ್ರೀನಿವಾಸನ ಕಾಲಬೆರಳ

೩೯. ತಿರುಪತಿ
ರಾಗ:ಭೈರವಿ
ಧ್ರುವತಾಳ
ಇಂದಿರಾ ದೇವಿ ಗುಣಿಸಿ ಎಣಿಸುವೆನೆಂದು |
ಒಂದು ಸಾರಿ ನೋಡಲು ಬೆಡಗು ತೋರಿದ ನಖ |
ಅಂದು ಒಂದೊಂದು ಪರಿ ಪರಿ ವರ್ನಂಗಳ ತೋರಿ |
ಅಂದವಾಗಿ ಪೊಳೆದ ಮಾಯಾ ಲೀಲಾದ ನಖ |
ಮಂದ ಮತಿಗಳು ನಮಿಸಲವರ ಪಾಪ |
ವೃಂದಾವ ಕಳೆದು ಸುಜ್ಞಾನಕೊಡುವ ನಖ |
ಸುಂದರನಾಮಾ ಸಿರಿ ವಿಜಯವಿಠಲ ನಿನ್ನ |
ಸುಂದರ ನಖಗಳಿಗೆ ನಮೊ ನಮೊ ಎಂಬೆ ೧
ಮಟ್ಟತಾಳ
ಬಲಿಯ ಮನಿಗೆ ಪೋಗಿ ನೆಲನ ದಾನವಬೇಡಿ |
ಜಲ[ಜ]ಜಾಂಡ[ಕೆ] ಬೆಳೆದು ಬಲಿದ ಖರ್ಪರವನ್ನ |
ಪ್ಪಳಿಸಿ ಸೀಳಿದ ನಖ |
ಕಿಲಿಕಿಲಿ ನಗುತ ಗೋವಳ ಸತಿಯರ ಮೊಗ್ಗೆ |
ಮೊಲೆ ಮೇಲೆ ತುಳಿವುತ್ತ ಒಲಿದು ಒತ್ತಿದ ನಖ |
ಕೆಲಕಾಲ ಮುನಿಗಳು ಒಲಿಸಿ ಒಲಿಸಿ ನೋಡೆ |
ನೆಳಲಗಾಣದೆ ಪೋಗಿ ತೊಳಲಿ ತುತಿಪ ನಖ |
ಸುಲಭ ಮಹಾವೀರ್ಯ ವಿಜಯವಿಠಲ ನಿನ್ನ |
ಪೊಳೆವನಖಗಳಿಗೆ ಗೆಲುವದಾವದು ಇಲ್ಲ ೨
ರೂಪಕತಾಳ
ಬಣ್ಣಾಬಣ್ಣಾವಾಗಿ ಬಲು ಸೋಜಿಗದ ನಖ |
ಕಣ್ಣಿಂದ ನೋಡಲು ಥಳಥಳಿಸುವ ನಖ |
ಚಿಣ್ಣತನದಲಿ ಗೋಮಕ್ಕಳ ಒಡಗೂಡಿ |
ಚಿನ್ನಾಟಕೆ ಗೋಲಿ ನೆಗದು ಚಿಮ್ಮಿದ ನಖ |
ಪನ್ನಗಶಯನವ್ಯಕ್ತ ವಿಜಯವಿಠಲ |
ಚನ್ನಿಗನ ಪಾದ ಪಾವನ್ನವಾದ ನಖ ೩
ಝಂಪೆತಾಳ
ಸಕಲ ಬೊಮ್ಮಾಂಡಗಳ ವ್ಯಾಪಿಸಿಕೊಂಡ ನಖ |
ಅಕಳಂಕ ಚರಿತವಾದ ಆದಿ ಅನಾದಿ ನಖ |
ಭಕುತಿ ಭಕುತಿ ಯುಕುತಿ ಶಕುತಿ ಕೊಡುವ ನಖ |
ಮುಕುತಿ ಬೇಡಿದರೆ ಚಚ್ಚಾರದಲ್ಲಿ ನೀವ ನಖ |
ಕಕುಭಾ ಹತ್ತಕೆ ಮೀರಿ ಬೆಳಗು ತೋರುವ ನಖ |
ಸಕಲೇಶ ಚತುರ್ಭಜ ವಿಜಯವಿಠಲರೇಯನ |
ವಿಕಸಿತ ಕೆಂದಳಕೆ ಸದೃಶವಾದ ನಖ ೪
ತ್ರಿವಿಡಿತಾಳ
ಮಂದಾಕಿನಿಯ ಪಡದು ಮಹ ವೇಗದಿಂದಲಿ |
ಇಂದು ಮೌಳಿಯ ಕಾಯ ಪಾವನ್ನ ಮಾಡಿದ ನಖ |
ಹಿಂದೆ ಕುರುರಣದಲ್ಲಿ ಸುತ್ರಾಮ ನಂದನನ |
ಸ್ಯಂದನ ಎಳೆವ ವಾಜಿಯ ನಡಿಸಿದ ನಖ |
ಸಂದೋಹ ಭಕ್ತರು ನಮಿಸಿ ಸ್ತೋತ್ರಮಾಡೆ |
ಚಂದದಿಂದಲಿ ಕೇಳಿ ಹಿಗ್ಗಿ ನಗುವ ನಖ |
ಕುಂದನಾಮಾ ಸಿರಿ ವಿಜಯವಿಠಲ ನಿನ್ನ |
ನಂದದಾ ನಖದ ಲೀಲೇನೆಂದು ಬಣ್ಣಿಸುವೆ ೫
ಅಟ್ಟತಾಳ
ಗೋಕುಲ ಭೂಮಿಯ ಯಮುನಾ ನದಿತೀರ |
ಸೋಕಿ ರಜದಿ ಪಾವನ್ನ ಮಾಡಿದ ನಖ |
ಆ ಕಮಲಾಜಾಂಡವನಂತಾ ನಂತಾ |
ನೇಕ ಬಗೆಯಿಂದ ವೊಳಗೆ ತೋರುವ ನಖ |
ಪಾಕಶಾಸನಾದಿ ಮಕುಟ ಮಣಿಯ ಶಾಂತಿ |
ನೂಕಿ ಹಿಂದುಮಾಡಿ ಧಿಕ್ಕರಿಸುವ ನಖ |
ನೈಕಾದ ವಿಜಯವಿಠಲ ಗುಣಪೂರ್ಣ ರ |
ತ್ನಾಕರವಾಗಿ ರಂಜಿಸುವ ಭದ್ರ ನಖ ೬
ಆದಿತಾಳ
ಮುಕ್ತಾಮುಕ್ತಾ ಬೊಮ್ಮಾದಿಗಳು |
ಸಿಕ್ಕಾದೆಂದು ಜಪಿಸುವ ನಖ |
ಅರ್ಕಾನೋಮ ಕೋಟಿ ಕಿರುಣಾ |
ನಕ್ಕು ಹಾಸ್ಯ ಮಾಡುವ ನಖ |
ರಕ್ಕಸರ ಸಮುದಾಯದಾಯದಾ |
ಸೊಕ್ಕು ಮುರಿದು ಕಳವನಖ |
ಅರ್ಕನಾಮಾ ವಿಜಯವಿಠಲ |
ಭಕ್ತರಿಗೆ ಒಲಿದ ನಖ ೭
ಜತೆ
ಅರ್ಚಿಪರ ಹೃದಯದೊಳಗೆ ಮಿನುಗುವ ನಖ |
ಅರ್ಪಿತ ವಿಜಯವಿಠಲರೇಯನ ನಖ ೮

ಶ್ರೀಕೃಷ್ಣಾವತಾರದಲ್ಲಿ ಅವನಾಡಿದ ಲೀಲೆಗಳನ್ನು ಚಿತ್ರಿಸುವ

೧೩೧
ಧ್ರುವತಾಳ
ಇಂದಿರಾಪತಿ ಬಂದಾ ಎನ್ನ ಮುಂದೆ ನಿಂದಾ
ಇಂದು ಕುಣಿದಾ ಧಿಂ ಧಿಂ ಧಿಮಿಯೆಂದು
ಧಂ ಧಂ ಧಳಾಯೆಂದು ಅಂದಂದಂದವಾಗಿ
ಅಂದಿಗೆ ಕಿರಿಗೆಜ್ಜೆ ಒಂದಾಗಿ ನುಡಿಯೇ
ಇಂದಿರಾಪತಿ ವೃಂದಾರಕ ವೃಂದ
ಒಂದಾಗಿ ಸ್ತುತಿಸಲು ದುಂದುಭಿವಾದ್ಯ
ಸಂದಣಿ ಎಸೆಯೆ ಒಂದು ಪಾದವನೆತ್ತಿ
ಒಂದು ಪಾದದೀ ವಸುಂಧರಮೆಟ್ಟಿ ಸುಂದರ ವಿಗ್ರಹ
ಇಂದಿರಾಪತಿ ಎಂದೆಂದಿಗಿಲ್ಲದಾನಂದವೆ ಪೊಸತೆನೆ
ಪೊಂದಿಪನಯ್ಯ ತನ್ನಂದವರಲ್ಲಿ ಗುಣ
ಸಿಂಧು ಚಂದಿರಮೊಗ ಇಂದಿರಾಪತಿ ಬಂದಾ
ನಂದ ನಂದನ ಗೋಪಿಕಂದ ವಿಜಯ ವಿಠ್ಠ
ಲಂದು ಮನದಿ ಸಂಬಂಧಿಗನೆಂದೆನೆ ೧
ಮಟ್ಟತಾಳ
ಮುಖ ಬೆರಳವನಿಗೇ ಮುಟ್ಟಿ ಮುಟ್ಟಾದಿರೆ
ಕೆಂಬುಗೊರಳ ಕೃಷ್ಣ ಕೈಯಲಿ ಪೊಂಗೊಳಲು
ತುಂಬಿದ ರಾಗದಲಿ ತುತ್ತು ತುತ್ತುರಿಯನೇ
ಭೋಂ ಭೋಂ ಭೋಂ ಭೋಂ ಎಂದು ಊದುವ ಸ್ವರಕೆ
ಅಂಬುಬಂಬೆಗಳ ಎಳೆಕರು ಮಾಲೆ
ಉಂಬುವ ಹಂಬಲ ಉತ್ಸಾಹದಿ ಮೆರೆದೊ
ಬೆಂಬಿಡದಲಿ ಸಾಲುವಿಡಿದು ಓಡುತ ಬರಲು
ರಂಬಿಸಿ ಕರೆಯುತಿರೆ ಬೆರಳೊಳಗೆ ತಿದ್ದಿ
ಕೊಂಬು ಬಾಗಿಸಿ ಕೆಲವು ತಮ್ಮ ಮೊಗವನ್ನು
ಅಂಬರಕೆ ಎತ್ತಿ ಅತಿ ತ್ವರಿತದಲ್ಲೀ
ಮುಂಬಂದು ನಿಲ್ಲೆ ವಿಜಯ ವಿಠ್ಠಲ ನೀ
ಲಾಂಬರನ ಕೂಡ ಬಾಲಾಟದಲ್ಲಿಪ್ಪಾ೨
ತ್ರಿವಿಡಿತಾಳ
ಚುಂಚುಗೂದುಲು ಮೃಗಲಾಂಛನದಂತೆ ತಿಲಕಾ
ಮಿಂಚುವ ಗಲ್ಲದಲ್ಲಿ ಮಾಗಾಯಿಯ ಬೆಳಕು
ಚಂಚಲಗಣ್ಣು ಮಂಡಿಯ ಮುಕುಟ ಪೂವು
ಗೊಂಚಲು ತುರುಬಿನ ತುಂಗ ವಿಕ್ರಮ ರಂಗ
ಚಿಂಚ ಬಿಳಪು ಮಾಸಾ ಹಂಡಾ ಬೂದಗಪ್ಪು
ಕೆಂಚಾವುಗಳ ಒಂದೆಶೆಯಲ್ಲಿ ಕರೆವುತಾ
ಹಂಚಿಕೆ ಮಾಡಿದಾ ಗೋಮಕ್ಕಳಿಂದ ಸೋತು
ವಂಚಕನಾಗಿ ಅಡಗಿ ಓಡ್ಯಾಡಿದಾ
ಕುಂಚಿಕೆಯಂತೆ ಮಾಡಿ ರತ್ನಗಂಬಳಿ ಪೊದ್ದು
ಲಂಚಾ ಕೊಡುವ ತನ್ನ ಕಂಡ ಗೋವಳರಿಗೇ
ಸಂಚಾರ ಮಾಡುವ ಗೆಳೆಯರೊಳಗೆ ಸುಳಿದ
ಮುಂಚಡಿಯೊಳಗೆ ಸಿಕ್ಕದಲೆ ಸ್ತುತಿಸುವ
ಸಂಚಿತಾಗಾಮಿ ಕಡಿಮೆ ಮಾಡುವಾ ವಿ
ರಿಂಚಿ ಜನಕನೀತಾ ವಿಜಯ ವಿಠ್ಠಲರೇಯಾ
ಕಾಂಚನಮಯದಂತೆ ಥಳಥಳಿಸುತ ಸುಳಿದಾ೩
ಅಟ್ಟತಾಳ
ಚಪ್ಪಾಳೆ ಹಾಕುತ ಗೋಪಾಲಾ
ಕುಪ್ಪಳಿಸಿ ನೋಡಿ ಹಾರಾಗುಪ್ಪಿಯ ಹಾರುವಾ ತಿರುಗಿ
ಸರ್ಪಾಕಾರದ ಗೆರಿಯಾ ರೆಪ್ಪಿಯ ಇಡದೆ ದಾಟುವಾ
ತಪ್ಪದೇ ಗರಗ ಹೊಡವಾ ಬಪ್ಪಾ ಕಂದುಕವ ತಟ್ಟುವ
ಅಪ್ಪಪ್ಪಾ ಈತನೇ ಬಲುದೈವ ತಪ್ಪು ಹೊರಿಸಿ ವಾರಿಗೆಯವರ
ತಿಪ್ಪರದಂಡಾ ವಾಡಿಸುವ ಅಪ್ಪಾರ ಮಹಿಮ ಇಷ್ಟರೊಳು
ಗೋಪಳ್ಳಿಯೊಳಗೆ ದಟ್ಟಡಿ ಸಪ್ಪಳಿಲ್ಲದಂತೆ ಮನಿಮನಿಯ
ತುಪ್ಪ ಬೆಣ್ಣಿಪಾಲು ಮೊಸರು ಚಪ್ಪರಿಸಿ ಮೆದ್ದು ಚಟ್ಟಗೆ
ದೊಪ್ಪನೆ ನೆಲಕೆ ಬಿಸುಟಾ ಗಪ್ಪಚುಪ್ಪಾಗಿ ಪೊರಡುವಾ
ಅಪಥದೊಳು ನಾರೇರ ಕುಪ್ಪಸಕ್ಕೆ ಕೈಹಾಕುವ
ಅಪ್ಪಿಕೊಂಡು ಮುದ್ದಾಡುವ
ತಪ್ಪಿಸಿಕೊಂಡು ಗೋಪಿಯ ಬಳಿಯ
ಇಪ್ಪಾನು ಬಲುಬಗೆ ತೋರುತ
ಇಪ್ಪಗೆ ಲೀಲೆಯ ವಾರಿಜ ಸಂಭವ
ಸರ್ಪಭೂಷಣ ಇಂದ್ರಾದಿಗಳು
ಅಪ್ರತಿ ಎನುತ ತಲೆವಾಗಿ ತುತಿಸಿ
ಅಪ್ರಮನ್ನ ಪೊಗಳಿದರು
ಒಪ್ಪಿಡಿ ಅವಲಿಗೆ ಮೆಚ್ಚಿದ ವಿಜಯ ವಿಠ್ಠಲ ಸುಲಭಾ
ಅಪ್ಪಾ ನೌವಾರಪ್ಪಾ ಚಪ್ಪಾಳೆ ಹಾಕುತ ಗೋಪಾಲಾ೪
ಆದಿತಾಳ
ಮುನಿ ಮನುಗಳು ತಮ್ಮ ಮನಸಿಲಿ
ಎಣಿಸಿ ಗುಣಿಸಿ ಕಾಣರು
ಎಣಿಗಾಣೆನು ನಿನ್ನ ಬಾಲತ್ಪಾತನದ ಕ್ರೀಡೆಗೆ ನಾನೆಲ್ಲಿ
ಮಣಿಗಾಣ ಮಿಕ್ಕಾದ ವೇದಿಕಾ ಅನುದಿನ ಯಾಗದ ಶಾಲೇಲಿ
ಅನುವಾಗಿ ಇರಲು ಅದರಲ್ಲಿ ಕೊನೆ ಬೆರಳಾದರು ಇಡದೇ
ಗಣಣೆ ಮಾಡದಲಿಪ್ಪೆ ಇತ್ತಲು
ಮನುಜ ವಿಗ್ರಹನಾಗಿ ಗೋವಾಳಾ
ವನಿತೇರ ಮನಿಯ ಅಂಗಣಾ
ಅನುಚಿತಯಾಗಿರೇ ನೀನೊಲಿದು
ಇನಿತಾದರೆ ಪೋಗದಿರಹುದೆ
ದಿನದಿನ ಸಂಚಾರ ಮಾಡುವ
ಅನಿಮಿತ್ತ ಬಂಧು ವಿಜಯ ವಿಠ್ಠಲ
ನಿನಗೆ ನಮೋ ನಮೋ ನಿನ್ನ ಚರಿತಕೆ ನಮೋ೫
ಜತೆ
ಅಂದು ನಾರಂದ ಪುರಂದರ ದಾಸರಾಮಂದಿರದೊಳು ಕುಣಿದಾ ವಿಜಯ ವಿಠ್ಠಲ ಒಲಿದಾ೬

ತತ್ವನವನೀತವನ್ನು ತಿಳಿಯುವುದು ಸುಲಭ,

೨೧
ಧ್ರುವತಾಳ
ಇಂದಿರುಳು ಎನ್ನ ಹೃದಯ ಮಂದಿರದೊಳಗೆ ತಾನೆ
ನಿಂದಿರಗೋಸುಗ ಹರಿ ಇಂದಿರಾ ಸಹಿತ ಬಂದ
ಮುಂದಿರುವ ನೋಡಿ ಪಾಪ ಪೊಂದಿರದಂತೆ ಕಳೆದ
ಹಿಂದಿನವು ನಾನಾ ಯೋನಿ ಬಂದಿರಲು ತಾನೆ ಅಲ್ಲಿ
ಪೊಂದಿರಗಲಿ? ಕಾಯಿದ ಅಂದಿರಾಸಗಳು?ಬಾರದಂತೆ
ಚಂದಿರವದನ ವಿಜಯ ವಿಠ್ಠಲ ನಮಗಣ್ಣ ತ
ಮ್ಮಂದಿರೋಪಾದಯಲ್ಲಿ ಸಂಬಂಧ ರಾಜ್ಯರಾಜರಲ್ಲಿ ೧
ಮಟ್ಟತಾಳ
ಅಂತರಿಯಾಮಿಯಲ್ಲಿ ನಿಂತು ಪೂಜಿಯಗೊಂಬ
ಸಂತತ ಸುಮನಸ ಸಂತತಿಗಳ ಕೈಯ್ಯ
ಚಿಂತಾಮಣಿ ಕಾಣೊ ಚಿಂತಿಸುವ ಜನಕೆ
ದಂತಿ ವರದ ನಮ್ಮ ವಿಜಯ ವಿಠ್ಠಲರೇಯಾ
ಕುಂತಿ ನಂದನಗೆ ಎಂತು ಒಲಿದು ನೋಡು ೨
ತ್ರಿವಿಡಿ ತಾಳ
ಕಮ್ಮೆಣ್ಣೆ ಕಸ್ತೂರಿ ಪುನಗು ಜವ್ವಾದಿ ಆ
ಗಮ್ಯವಾಗಿದ್ದ ಕರ್ಪೂರ ಪಚ್ಚ ಗಂಧ
ಘಮ್ಮ ಘಮ್ಮ ಎಸೆವ ಅಗರು ಪರಿಮಳದ್ರವ್ಯ
ಸುಮ್ಮಾನದಲಿ ಪೊಳೆವ ದೇಹಕ್ಕೆ ಅನುಲೇಪ
ಒಮ್ಮಾಡಿಕೊಂಡಿಪ್ಪ ಪರಮ ಚರಿತ
ಚಮ್ಮಳಗಿಯ ಮೆಟ್ಟಿ ವಾಲೆದುರುಬು ಕಟ್ಟಿ
ಆ ಮಹಾ ಕುಸುಮಗಳ ಜಾತಿಒಪ್ಪೆ
ಹೆಮ್ಮೆಗಾರನು ತನ್ನ ಬಗಲಲ್ಲಿ ಇಟ್ಟಿದ
ಹೆಮ್ಮನೆ ಹಾಕಿದ ಕಠಾರಿಯ
ಧುಮ್ಮ ಗೈಸಿ ನಡೆವ ಹೆಜ್ಜೆಗಳ ಶೃಂಗಾರವ
ಉಮ್ಮೆಯರಸು ನೋಡಿ ತುತಿಸುತಿಪ್ಪ
ಹಮ್ಮಿನವರ ಗಂಡ ವಿಜಯ ವಿಠ್ಠಲ ಪರ
ಬೊಮ್ಮ ಬೊಮ್ಮಾಂಡ ದೊಡೆಯ ನಮ್ಮನೆ ಮನದೈವ ||೩||
ಅಟ್ಟತಾಳ
ವೇದ ಶ್ರುತಿ ಶಾಸ್ತ್ರ ಓದಿದರೇನು
ಸಾದುಗಳಿಗೆ ಸೋತು ನಡಿಯದ ತನಕೆ
ಶೋಧಿಸಿವ್ರತಗಳ ಆಚರಿಸಿದರೇನು
ವೇದಾರ್ಥ ಜ್ಞಾನವೆ ಇಲ್ಲದನಕ
ಓದನ ಷಡುರಸ ಉಂಡರೆ ಏನು
ಮಾಧವಗೆ ಅರ್ಪಿಸದನ್ನಕ
ಮೇದಿನಿಯಲ್ಲಿ ತಿರುಗಿದರೇನು
ಯಾದವ ಕೃಷ್ಣನ್ನ ನೋಡದನ್ನಕ
ಸಾಧಿಸಿ ತಪವನೆ ಮಾಡಿದರೇನು
ಕ್ರೋಧವ ತೆಗೆದು ಈಡ್ಯಾಡುವನಕ
ಶ್ರೀ ದೇವಿಯರಸನ ನೆನಸಿದರೇನು
ಮೋದ ತೀರ್ಥರಲ್ಲಿ ಕೂಡದನಕ
ನಿಧಾನದಲ್ಲಿ ಈ ಪರಿಯಲ್ಲಿ ನಡೆದರೆ
ಮೋದ ಪಾಥೇಯಾಗುವುದು ವೈಕುಂಠಕ್ಕೆ
ಭೂಧರರೂಪ ಶ್ರೀ ವಿಜಯ ವಿಠ್ಠಲ ಹರಿಯ
ಪಾದವ ನೆರೆನಂಬು ಪುಣ್ಯವೆ ಉಂಬುವಿ ೪
ಆದಿತಾಳ
ನೋಡು ಕಣ್ಣಿಲಿ ಆಡು ಜಿಹ್ವೆಲಿ
ಬೇಡು ಬಾಯಿಲಿ ಮಾಡು ಕೈಯಲ್ಲಿ ಸೇವೆ ಶ್ರವಣ
ತ್ರಾಡವಾಗಲಿ ಕರ್ಣಂಗಳಿಗೆ
ನಾಡೊಳು ಚರಿಸಿ ಯಾತ್ರೆಯ
ಮಾಡು ಚರಣದಲಿ, ವಾಸನೆ
ನೋಡು ನಾಸಿಕದಲ್ಲಿ ನೀಡು ನಮಸ್ಕಾರ ದೇಹದಿ
ಈಡು ಇಲ್ಲದ ಹರಿಯನೆ ಕರೆದಾಡು ಪ್ರತಿ ದಿವಸದಲ್ಲಿ
ಕೇಡು ಮನವೆ ನಿನಗೆ ಬಾರದು
ಪಾಡರಿಯ ತಿಳಿದು ತಿಳಿ
ಗಾಢದೈವ ವಿಜಯ ವಿಠ್ಠಲ
ಕಾಡುವ ದುರಿತಗಳ ಬಿಡಿಸಿ
ಗಾಢಗತಿಯನೀವ ಒಲಿದು
ಬಾಡಲೀಯ ಬಂದ ಪುಣ್ಯ ೫
ಜತೆ
ತರ್ಕೈಸಿ ಬಿಡದಿಪ್ಪ ವಿಜಯ ವಿಠ್ಠಲರೇಯ
ಪಕ್ಕೆಯೊಳಗಿರು ನಿನಗಾವ ಭಯವಿಲ್ಲ೬

ಇದು ಒಂದು ಐತಿಹಾಸಿಕ


ಧ್ರುವತಾಳ
ಇಂದು ಎನ್ನ ಮನೆಗೆ ಬಂದ ಕಾರಣವೇನು
ಇಂದಿರಾರಮಣ ಗೋವಿಂದ ಕೃಷ್ಣ
ಸುಂದರ ವಿಗ್ರಹ ಮಂದರಧರ ಸುಖ
ಸಾಂದ್ರ ಗುಣಾರವಿಂದ ಚರಣ ಉ
ಪೇಂದ್ರ ಇಂದ್ರಾನುಜ ಕಂದರ್ಪಪಿತ ದಯ
ದಿಂ ದರುಶನವಿತ್ತ ವೃಂದಾವನ ಪ್ರೀಯ
ಒಂದೆ ದೈವಾವೆ ನಮ್ಮ ವಿಜಯ ವಿಠ್ಠಲರೇಯ ಪು-
ರಂದರ ಗೊಲಿದಂಥ ನಂದ ನಂದನ ರಂಗ ೧
ಮಟ್ಟತಾಳ
ಧ್ಯಾನ ಪೂರ್ವಕದಿಂದ ಜ್ಞಾನವಧಿಕರಾದ
ನೀನೆ ನೀನೆ ಎಂಬ ಶ್ರೀನಿವಾಸಾಚಾರ್ಯರ
ಮಾನಸದಲಿ ಪೊಳೆವ ಮಾನಿಸ ರೂಪನೇ
ಏನೆಂಬೆನೂ ನಿನ್ನ ನಾನಾ ವಿಗಡಕ್ಕೆ
ದಾನವಾಂತಕ ರಂಗ ವಿಜಯ ವಿಠ್ಠಲರೇಯ
ಜ್ಞಾನ ಪುಂಜರದಿಂದ ಹೀನಗೊಲಿದದೇನೊ ೨
ತ್ರಿವಿಡಿ ತಾಳ
ಅಭಿಷೇಕದ ಉತ್ತಮ ಮನ್ನಣೆಯಲ್ಲ
ಆಭರಣ ವಸನ ಗಂಧಾಕ್ಷತೆ ಮೊದಲಿಲ್ಲ
ಶೋಭನವಾದ ಕುಸುಮ ತುಲಸಿಗಳಿಲ್ಲ
ಸೌಭಾಗ್ಯವಾದ ಧೂಪಾದಿ ಓದನವಿಲ್ಲ
ಆಭಕ್ಷ ಪಾಯಸ ಪರಿಪಡಿಗಳಿಲ್ಲ
ಅಭಿವಂದನೆ ಸರ್ವ ಪೂಜಾ ಲಕ್ಷಣವಿಲ್ಲ
ಕುಭವಾದಲ್ಲಿನಾ ಲೋಭಿಯ ಸೇರಲು
ಲಾಭವೇನು ಪೇಳು ಜಯ ಜಯನೇ
ಶ್ರೀ ಭೂರಣ ನಮ್ಮ ವಿಜಯ ವಿಠ್ಠಲ ನಿನ್ನ
ಸ್ವಭಾವ ಈ ಪರಿ ನಿನಗೆ ಪೇಳುವರಾರೊ ೩
ಅಟ್ಟತಾಳ
ಕಾಲ ಕಾಲಕೆ ಸ್ತೋತ್ರ ಕಾಲಕಾಲಕೆ ಧೂಪ
ಕಾಲ ಕಾಲಕೆ ದೀಪ ಕಾಲ ಕಾಲಕೆ ಎಡೆ
ಕಾಲ ಕಾಲಕೆ ಪ್ರೀತಿ ಕಾಲ ಕಾಲಕೆ ಇರಲು
ಹಾಲು ಸಾಗರ ಬಿಟ್ಟು ಆ ಲವಣಾಬ್ಧಿಲಿ
ಆಲಯ ಬಿಗಿದವನೋಲು ಮಾಡಿದೆ ದೇವ
ವ್ಯಾಳಿ ವ್ಯಾಳಿಗೆ ಕೃಪಾಳಿನ ಕೈಯಿಂದ
ವಾಲಗವನು ಬಿಟ್ಟು ಕೀಳು ಮಾನವಗೊಲಿದೆ
ಆಳು ಚನ್ನಾಗಿ ಇನ್ನಾಳು ವಿಜಯ ವಿಠ
ಲಾ ಲೋಕದೊಳಗೆ ನಿನ್ನಾಳಿನಾಳಿನ ತೊತ್ತು ೪
ಆದಿತಾಳ
ಉದ್ಧರಿಸುವುದು ಜೀಯ ಶುದ್ಧ ಮಂದ ಮತಿಯನು
ಪೊದ್ಧಿಕೊಂಡು ನಿರುತದಲ್ಲಿ ಒದ್ದು ಸಕಲದುರಿತವನ್ನು
ಇದ್ದು ಇಲ್ಲದಂತೆ ಮಾಡೊ ಸಿದ್ಧಾರ್ಥವ ಈ ಮಾತ
ಮುದ್ದುಲಕುಮಿ ರಮಣಾನೆ ಮಿದ್ದು ಮನವ ಸರಳ ಮಾಡೊ
ಶುದ್ಧಕಾಯ ವಿಜಯ ವಿಠ್ಠಲ
ಬುದ್ಧಿ ಪಲ್ಲಟವಾಗದಂತೆ ತಿದ್ದಿ ಅಂತರಂಗದಲ್ಲಿ
ಇದ್ದು ಸಂತೋಷವನೆ ಪಡಿಸೊ ೫
ಜತೆ
ಮೆಚ್ಚಿ ನೆಚ್ಚಿಸಲಾರೆ ಅರ್ಚಿಸಿ ಒಲಿಸಲಾರೆ
ನಿಚ್ಚ ನೀನೆ ಪೊರಿಯೊ ವಿಜಯ ವಿಠ್ಠಲ ಹರಿಯೆ ೬

ಈ ಸಾಧಕನು ಬದುಕಿನ ಸುಖ ದುಃಖ

೨೨
ಧ್ರುವತಾಳ
ಇಂದೆ ಆಭಾಸವಾಗಲಿ ನಾಳೆ ಆಭಾಸವಾಗಲಿ
ಇಂದೆ ನಾಳೆ ಎಂಬೊ ಚಿಂತೆ ಯಾತಕೆ
ಒಂದಕ್ಕನಂತವಾಗಿ ಕಾಲ ಕ್ಷಣದಲಿ
ಮುಂದೆ ಆಭಾಸವಾಗಲಿ ಇಂದೆ
ಪೊಂದಿದವರೆಲ್ಲ ತೊಲ ತೊಲಗಿ ಪೋಗಲಿ
ವಂದಿಸುವ ಜನ ನಿಂದೆಯ ಮಾಡಲಿ
ಬಂಧು ಬಳಗವು ತೊರೆದು ಬಿಡಲಿ
ಇಂದೆ ಆಭಾಸವಾಗಲಿ ನಿಂದಲ್ಲಿ ಕುಳಿತಲ್ಲಿ ಎಲ್ಲಿದ್ದರು
ಮಂದಿಗಳೆಲ್ಲ ತಮಗೆ ಸರಿ ಸರಿ
ಬಂದಂತೆ ಪೇಳಲಿ ಕೇಳಲಿ ಕಿವಿಗೊಟ್ಟು
ಇಂದೆ ಅಭಾಸವಾಗಲಿ ಕುಂದುಗಳಾರಿಗೆ ಕೊರತೆಗಳಾರಿಗೆ
ನಂದವಾರಿಗೆ ಆನಂದವಾರಿಗೆ ಸಂದೇಹವಿಲ್ಲ ಸುಖ
ಸಂದೋಹ ಎನಗುಂಟು ಇಂದಿರಾಪತಿ ಒಲಿದದ್ದೆ ಒಲ್ಲೆ
ನೆಂದರೆ ಬಿಡದು ಬರಿದೆ ವ್ಯಾಕುಲ ಮನಕೆ
ತಂದುಕೊಂಡದರಿಂದ ಅಂಥ ಜ್ಞಾನವಲ್ಲದೆ
ಇಂದೆ ಆಭಾಸವಾಗಲಿ ಗಂಧ
ಗಂಧವೆಲ್ಲ ಸಮವಾಗಿ ಇಪ್ಪೋದು
ಎಂದೆಂದಿಗೆ ಪ್ರಾರಬ್ದ ತಪ್ಪದು
ಹಂದಿ ಹಸ್ತಿ ಜನುಮ ಬರಲಿ ಬರಲಿ
ಮಂದಿಗ್ಯಾತಕೆ ಅವರಿವರ ಚಿಂತೆ
ಅಂದವಾಗಿ ಶ್ರೀ ಹರಿ ಕೊಟ್ಟದು ಉಂಡು
ಚಂದ ಚಂದ ಕರ್ಮ ಮಾಡಬಾರದೆ
ಇಂದೆ ಆಭಾಸವಾಗಲಿ ಸಿಂಧುಶಯನ
ಸಿಂಧು ಜನಕ ಕರುಣಾಸಿಂಧು ರಂಗನ ಪಾದ
ದ್ವಂದ್ವಾರವಿಂದ ಇಂದಿರೆ ಕಾಣಳು
ಮಂದಮತಿ ನರನೆಂತು ಕಾಂಬುವಾ
ಎಂದೆಂಬೊ ಸಿದ್ದವೆ ಪ್ರಸಿದ್ದ
ಮಂದರಿಗೆ ತಕ್ಕಮತಿ ಕೊಡುವನು
ಚಂದಿರನವದನ ನಮ್ಮ ವಿಜಯ ವಿಠ್ಠಲನ್ನ
ಪೊಂದಿ ಕೊಂಡಾಡು ವಂಗೆ ಏನಾದರು ಒಪ್ಪೆ ೧
ಮಟ್ಟತಾಳ
ವರುಷ ಒಂದೆರಡು ಹನ್ನೆರಡು ಎಂದು
ಪರಿ ಮಿತವನೆ ಕಟ್ಟಿ ಅನ್ಯರ ಮುಂದುಚ್ಚರಿಸುವ ಬಗೆ ಏನು
ಅರಘಳಿಗೆಯೊಳಗೆ ಮಾನವಗಾಗದ
ಪರಿ ಪರಿಲಪಹಾಸ ಬಂದೊದಗಲಿ ಇಂದೆ ಸ್ವೀ
ಕಾರ ಮಾಡುವನಾರು ಒಲ್ಲೆನೆಂಬುವನಾರು
ಪರಮ ಸೌಖ್ಯವೆ ಸರಿ ಪ್ರತಿಕೂಲ ಎನಗಲ್ಲ
ಶರಣರ ಪರಿಪಾಲ ವಿಜಯ ವಿಠ್ಠಲರೇಯನ
ಚರಣರ ನೆನಹು ಒಂದೆ ಮನದೊಳಿದ್ದರೆ ಸಾಕು ೨
ತ್ರಿವಿಡಿ ತಾಳ
ಮೊದಲೆ ಫಣೆಯಲಿ ಬೊಮ್ಮ ಬರದು ಇದ್ದ ಬರಹ
ಉದರಿಸಿ ಕೊಂಡರೆ ಪೋಗುವುದೆ
ಕುಡಿದು ವ್ಯರ್ಥ ಪರರ ಅತಿಶಯವನೆ ಕಂಡು
ಎದೆ ಬಾಯಿ ಒಣಗಿ ದು:ಶ್ಚಿತ್ತ ವೃತ್ತಿಯಲಿ
ಪದೋ ಪದಿಗೆ ನಿತ್ಯಯೋಚನೆ ಮಾಡಿ ಇ
ಲ್ಲದ ಮಾತಿಯಿಂದಲಿ ಭ್ರಮಣಗೆಟ್ಟು
ಮುದದಿಂದ ನಮಗಿದ್ದ ದಿನವೆ ಎಣಿಸಿಕೊಳ್ಳದೆ
ವಿಧಿಯ ಬೆನ್ನಿಲಿ ಕಾದುದು ನೋಡದೆ
ಉದರದೊಳಗೆ ಬಿದ್ದ ಅನ್ನ ಸಾರ್ಥಕ ಮಾ
ಡದೆ ಕೆಡೆವರೈ ತಿಳಿಯದಲೆ
ನದಿಯ ಡೊಂಕನೆ ನೋಡಿ ಪಾತ್ರಿಯೊಳಗೆಯಿದ್ದ
ಉದಕವುಲ್ಲಂಘಿಸಿ ಬರುವನಂತೆ
ಪದಗಳು ಡೊಂಕಾಗಿ ತೊರದೋದಿಪರೆ
ಅದರ ಅನ್ವಯವನ್ನು ತೋರದಿರಲು
ಇದು ಎಲ್ಲಿ ಇಲ್ಲೆಂದು ಕಂಡಕಂಡ ಮಾತು ಪೇ
ಳಿದವಂಗೆ ಏನೆಂಬೆನಯ್ಯಾ ಸತತ
ಪದುಮನಾಭನು ಒಲಿದು ಪಿರಿಯರಿಂದಲಿ ಅಂದು
ಪದವ ಪೇಳಿಸಿದ್ದು ಸತ್ಯವೆಂದು
ಹೃದಯದಲ್ಲಿ ತಿಳಿದು ಅವರ ಕಿಂಕರನಾಗಿ
ವಿಧಿ ನಿಷೇದ ವಾಕ್ಯ ನುಡಿದದ್ದೆಲ್ಲ
ಪದವಿಗೆ ಪಾವಟಿಗ ಎನಗಾಗಲಿ ಅವಗಾ
ಗದೆ ಪೋದರೆ ಇತ್ತ ಯತ್ನವೇನು
ಕುದುರೆಯ ಮೇಲೆ ಕೋಪದಿ ಪೋಗಿ ರಾಸಭ ವೇ
ರಿದ ತೆರದಿ ಕಾಣೊ ದುರುಳರಿಗೆ
ನಿಧಿಯ ಮೇಲೆ ಮುನಿದು ತಿಪ್ಪಿ ಮೇಲಿನ ಬೂದಿ
ಸದನದೊಳಗೆ ತಂದು ಹಾಕಿದಂತೆ
ಇದರಿಂದೇನು ಫಲವಾಗುವುಧೋ ತಮ್ಮ
ವದನ ಬರಿದಲ್ಲದೆ ಲಾಭವಿಲ್ಲಾ
ಮದನನಯ್ಯನೆ ನಮ್ಮ ವಿಜಯ ವಿಠ್ಠಲರೇಯನ
ಪದವ ಭಜಿಸಿ ಹದುಳ ಪಡಕೊಂಡವನೆ ಧನ್ಯ ೩
ಅಟ್ಟತಾಳ
ಜನುಮಾಂತರದಲ್ಲಿ ಮಾಡಿದ ಬಗೆ ಕರ್ಮ
ಉಣಿಸದೆ ಬಿಡನಯ್ಯಾ ದೇವದೇವೋತ್ತಮ
ದಿನ ದಿನದಲಿ ಜೀವ ಆವಾವದಾದರು
ಉಣಬೇಕು ಉಂಡು ತೀರಿಸದಲೆ ತಪ್ಪದು
ಗುಣವಾಗಲಿ ಆಗದೆ ಪೋಗಲಿ ಬಹು
ಜನರಿಗೆ ವಿರುದ್ದವಾಗಿ ತೋರಲಿ ನಿತ್ಯ
ತನುಮನ ವಾಕ್ಯೆದಿಂದಲಿ ಬಂದವೆಲ್ಲ
ಅನುಭವಿಸಬೇಕು ಆರಗೊಡವಿಯಾಕೆ
ಮನುಜರ ಭಗವಂತ ಸ್ವಾತಂತ್ರಜ್ಞಾನವ
ಎಣಿಸದೆ ಈ ಪರಿ ಉತ್ತರನುಡಿದರು
ದನುಜಮರ್ದನ ಸಿರಿ ವಿಜಯ ವಿಠ್ಠಲರೇಯನು
ಘನವಾಗಿ ಪಾಲಿಸೆ ನರ ಮುನಿದರೇನು ೪
ಆದಿತಾಳ
ಆರತಿಶಯವಾಗಿ ಬದುಕಿದರೇನವಗೆ
ಆರು ದುರ್ಜನರಾಗಿ ತಿರುಗಿದ ರೇವವಗೆ
ಪಾರಮಾರ್ಥಿಕವಾಗಿ ಇರಬಾರದೆಂದೆಡೆ
ಕ್ರೂರರ ಸ್ವಭಾವ ತೊಲಗುವುದೇನೋ ವಿ
ಸ್ತಾರವಾಗಿ ಸಜ್ಜನರಲ್ಲಿ ಇದ್ದರು
ದೂರದೆ ಬಿಡನಯ್ಯಾ ಬುದ್ಧಿ ಪಲ್ಲಟನಾಗಿ
ಶಾರೀರದೊಳು ಸಮಗ್ರ ಕುಹಕತನದಿಂದ
ಧಾರುಣಿಯಲ್ಲಿ ತಿರುಗಿ ಹೊತ್ತು ಪೋಗಾಡುವ
ಪಾರುಮುಟ್ಟನು ಕಾಣೊ ಮುಣಗುವ ಭವವೆಂಬೊ
ವಾರಿಧಿಯೊಳು ಬಿದ್ದು ಭೀತಿಬಡುತಲಿ
ಬೇರರಸಿ ಕಿತ್ತಿ ಭವವ ಕಳೆವ ದೇವ
ಭೂರಮಣ ವಿಜಯ ವಿಠ್ಠಲರೇಯನ
ಸೇರಿಕೊಂಡು ಸಾಧನೆ ಮಾಡಿದ ಬರಿದಾಹ ೫
ಜತೆ

ಕಾವೇರಿ ತೀರದಲ್ಲಿರುವ ಶ್ರೀರಂಗ

೯೩. ಶ್ರೀರಂಗ
ಧ್ರುವತಾಳ
ಇಂದ್ರಾದಿಗಳು ತಮ್ಮ ಸಂದಣಿಯ ಸಮೇತಾ |
ಒಂದಾರು ಪ್ರಾಕಾರ ಒಂದಾರು ಬೀದಿಯೊಳು |
ನಿಂದು ನಿರ್ಮಳರಾಗಿ ಒಂದೊಂದು ಪರಿ ರಂಗ |
ಮಂದರದಲ್ಲಿದ್ದ ಇಂದಿರೇಶನ ಪಾದ |
ದ್ವಂದ್ವವ ಎಣಿಸಿ ಒಂದೊಂದು ಗುಣಗಳ |
ನಂದವ ನೆನವುತ್ತ ಮುಂದುಗಾಣದ ಸುಖ |
ಸಿಂದುವಿನೊಳಿಪ್ಪರು ಕಂಧರವನ್ನು ತೂಗಿ |
ಗಂಧರ್ವತುಂಬುರ ನಾರಂದನು ಮಹಾ[ಮ]ತಿ |
ಯಿಂದ ನುಡಿಸಿ [ತಾರಾಮದಿಂದಲಿ] |
ಕಂದೆರದೂ ಮುಚ್ಚಿ ಕಂದನ ನುಡಿಯಂತೆ |
ಒಂದೊಂದು ಕೀರ್ತಿಸಿ ವಂದನೆ ಮಾಡಲು |
ಬಂದ ಶರೀರ ಸಾಲದೆಂದೆಂಬೊ ಗಾದೆಯಾಗೆ |
ಮಂದರಧರ ಗೋವಿಂದ ವಿಜಯವಿಠಲ |
ಸುಂದರವಿಗ್ರಹ ಒಂದೆ ದೈವವೆ ರಂಗ ೧
ಮಟ್ಟತಾಳ
ರಂಗ ರಂಗ ರಂಗಾಧಾಮಾರಂಗ ಕಸ್ತೂರಿರಂಗ ಕಾವೇರಿ |
ರಂಗ ವೈಭೋಗರಂಗ ಜಗದಂತರಂಗ ರಂಗರಂಗನಾಥ |
ರಂಗಶಾರಂಗ ದುರಿತ ಸಂಘ ದೂರ ರಂಗ ದನುಜ |
ಭಂಗ ಶೌರಿ ರಂಗರಾಮಾ ವಿಜಯವಿಠಲ |
ರಂಗೇಶ ರಂಗಮಂದಿರ ವಾಸ ೨
ತ್ರಿವಿಡಿತಾಳ
ಸಪುತ ಪ್ರಾಕರವೆ ಸಪುತಾವಾರಿಧಿ ಎನ್ನಿ |
ಸಪುತ ಬೀದಿಗಳು ಸಪ್ತದ್ವೀಪ ಎನ್ನಿ |
ತಪುತ ಕಾಂಚನಮಯ ಸುಮೇರು ಪರ್ವತ |
ಗುಪುತ ಮಹಿಮಾನಿಪ್ಪ ಸ್ಥಾನವೆನ್ನೀ |
ಸಪುತಾಶ್ಚ ಚಂದ್ರಮಾ ಬಿಡದೆ ತಿರುಗುವರೆನ್ನಿ |
ಸಪುತಾಋಷಿಗಳಲ್ಲಿ ವಾಸಾವೆನ್ನಿ |
ಸಪುತೆರಡು ಲೋಕದಲಿ ಇದು ವೆಗ್ಗಳವೆನ್ನಿ |
ಶಪುತ ಮಾಡುವರೊಡಿಯಾ ವಿಜಯವಿಠಲರೇಯಾ |
ಕುಪಿತರ ಸಂಹಾರಾ ಭಕುತರ ಉದ್ಧಾರಾ ೩
ಅಟ್ಟತಾಳ
ಆವಾನಾದರು ಬಂದು ಭಾವ ಶುದ್ಧದಲ್ಲಿ |
ರಾವಣಾಂತಕ ನಿದ್ದ ಈ ವೈಕುಂಠನ |
ಸೇವೆಯ ಮಾಡಾಲು ಸಾವಿರ ಬಗೆಯಿಂದ |
ಶ್ರೀ ವಾಸುದೇವನು ತಾವೊದಗಿ ಬಂದು |
ಕೋವಿದರನ ಮಾಡಿ ಪಾವನರೊಳಿಡುವ |
ಕಾವೇರಿ ನಿವಾಸಾ ವಿಜಯವಿಠಲರಂಗ |
ದೇವನ ಕ್ಷೇತ್ರವ ಆವ ಬಣ್ಣಿಪನು ೪
ಆದಿತಾಳ
ಬಯಸಾದಿರು ಮೇಲು ಲೋಕ ಬಯಸಾದಿರು ನಾಗಲೋಕ |
ಬಯಸದಿರು ಸ್ವರ್ಗ ಸಕಲದಿಕ್ಪಾಲಕರ ಸುಖಗಳ |
ಬಯಸು ಮನುಜಾ ರಂಗಕ್ಷೇತ್ರದಲ್ಲಿ ಒಂದು ದಿವಸಾವಿದ್ದು |
ದಯಪಯೋನಿಧಿಯ ಪಾದ ಭಯಭಕುತಿಯಿಂದ ನೋಡೆ |
ಬಯಲಾಗುವುದು ಪಾಪಾತ್ರಯಕಾಲದಲ್ಲಿ ಒಲಿದು |
ಜಯಾ ಮೂರ್ತಿರಂಗಾ ವಿಜಯವಿಠಲ ಸಿರಿ ರಮಣಾ |
ಈಯಬಲ್ಲ ಈ ಪರಿಗಾಯನ ಮಾಡಲು ವೇಗ ೫
ಜತೆ
ವಿಧು ಪುಷ್ಕರಣಿಯಾ ನಿವಾಸ ಶೇಷಶಾಯಿ |
ಮಧುವೈರಿ ವಿಜಯವಿಠಲ ರಂಗಧಾಮಾ ೬

೨೩
ಧ್ರುವತಾಳ
ಇಂದ್ರಿಯಂಗಳಿರ್ಯಾ ನಿಮಗೆ ವಂದಿಸಿ ನಮೋ ಎಂಬೆ
ಎಂದೆಂದಿಗೆ ಎನ್ನ ಪೊಂದಿಕೊಂಡು
ಸಂದೇಹಗೊಳಿಸದೆ ಸಂದಿಗೊಂದಿಗೆ ಎಳೆದು
ಮುಂದುಗೆಡಿಸಿ ಭೀತಿವಂದು ತೋರದಿರೀ
ಒಂದೇ ರೀತಿಯಲ್ಲಿ ಮುಕುಂದನ ಪಾದಾರ
ವಿಂದದಲ್ಲಿ ಭಕುತಿ ಕುಂದದಲೆ ನಡೆಸೋದು
ಹಿಂದಾಗದಲೆ ಬೇಕೆಂದು ದೃಢವಾಗಿ
ತರಿದೆ ಹೃಷಿಕೇಶ ವಿಜಯ ವಿಠ್ಠಲ ಹರಿಯ
ಸಂದುರುಶನಕೆಲ್ಲ ಒಂದಾಗಿ ಬಲವಾಗೀ ೧
ಮಟ್ಟತಾಳ
ಯಾತ್ರಿಗೆ ನಡಿನಡಿ ಪಾತ್ರರ ಒಡಗೂಡಿ
ಸ್ತೋತ್ರವ ಪಠಿಸುತ್ತ ಗಾತ್ರದೊಳಗೆ ಇದ್ದ
ನೇತ್ರಾದಿಗಳೆ ಕಾಲತ್ರಯವನೆ ತಿಳಿದು
ಧಾತ್ರಿಯೊಳಗೆ ನೀವನ್ಯತ್ತರ ವಿಷಯಕ್ಕೆ
ಮಿತ್ರರಾಗದೆ ದಿವಸ ರಾತ್ರಿಯಲ್ಲಿ ಬಿಡದೆ
ಧಾತ್ರಿನಾಮಕ ವಿಜಯ ವಿಠ್ಠಲನ ಪದವಣು
ಮಾತ್ರ ಮರಿಯದಿರೀ ಸೂತ್ರ ತಿಳಿದು ನೋಡಿ ೨
ತ್ರಿವಿಡಿ ತಾಳ
ಏಕಾದಶಗಳು ಕೂಡಿ ಸಂತತದಲಿ ವಿ
ವೇಕರಾಗಿ ಶುದ್ದ ಪ್ರವರ್ತಕ
ಜೋಕೆಯಿಂದಲಿ ಚರಿಸಿ ದುರುಳ ಚೇಷ್ಟಿಗಳು ನಿ
ರಾಕರಿಸಿ ಹತ್ತಿ ಬಂದು ಸೇರಿದಂತೆ
ಮಾಕಾಂತ ಮಹಾಸನ ವಿಜಯ ವಿಠ್ಠಲನ ಅ
ನೇಕ ಬಗೆಯಿಂದ ನಾಮಕಥೆಯ ಕೇಳಿ ೩
ಅಟ್ಟ ತಾಳ
ಗ್ರಾಮೇಕ ರಾತ್ರಿಯ ವ್ರತವನ್ನು ಧರಿಸುತ್ತ
ನೇಮನಿತ್ಯ ನೈಮಿತ್ಯ ಕರ್ಮಂಗಳು ನೀ
ವು ಮರಿಯದಲೆ ಉಚಿತಾರ್ಥದಲ್ಲೀಗ
ಕಾಮರಾಗಗಳೆಲ್ಲ ದೂರಾಗಿ ಓಡಿಸಿ
ಧೂಮರ ಜ್ಞಾನವ ಗಮಕದಲ್ಲಿ ಕಳೆದು
ಕಾಮಜನಕ ಕೃತು ವಿಜಯ ವಿಠ್ಠಲನ್ನ
ಕಾಮಿಸಿ ಹಗಲಿರಳರ್ಚಿಸಿ ನೋಡಿ ೪
ಆದಿತಾಳ
ಎತ್ತ ನೀವು ಪೋಗದಲೆ ಉತ್ತಮ ನಡವಳಿಯಲ್ಲಿ
ಹೊತ್ತು ಹೊತ್ತಿಗೆ ಹರಿಗೆ ಕೈ ಎತ್ತಿ ಕರಗಳ ಮುಗಿದು
ಅತ್ತಲಿತ್ತ ಚರಿಸದೆ ಹತ್ತೆ ಸೇರಿಕೊಂಡ ಗತಿ
ಉತ್ತಮ ವಿಜಯ ವಿಠ್ಠಲನ್ನ ಎತ್ತಬಿಡದೆ ಭಕುತಿಯಲ್ಲಿ
ನಿತ್ಯ ನಿತ್ಯ ನೆನೆನೆನೆದು ಉತ್ತಮ ಗತಿಗೆ ಸೇರುವುದು ೫
ಜತೆ
ಸಕಲೇಂದ್ರಿಯಗಳಿರಾ ಎನ್ನಲ್ಲಿ ಪೊಂದಿಕೊಂಡು
ಶಕುತನಾಮ ವಿಜಯ ವಿಠ್ಠಲನ್ನ ಒಲಿಸೋದು ೬

ಭಗವಂತನನ್ನು ಉತ್ರ‍ಕಷ್ಟ ರೀತಿಯಲ್ಲಿ

೨೪
ಧ್ರುವತಾಳ
ಇಕೋ ನಮ್ಮ ಸ್ವಾಮಿ ಸರ್ವರಂತರ್ಯಾಮಿ
ಮಕ್ಕಳಾಟಿಕೆ ತೆರದಿ ಮೂಲೋಕವಾ
ಸಿಕ್ಕು ತೊಡಕ ಸಿಕ್ಕಿ ಪ್ರಪಂಚ ಪಚ್ಚಿಸಿ ತಾ
ಸಿಕ್ಕದೆ ಎಲ್ಲೆಲ್ಲಿ ಇಪ್ಪ ಶಕ್ತಾ
ಭಕ್ತರು ಮದದಿಂದ ಗರ್ವಿಸಿದರವರಾ
ಉಕ್ಕು ತಗ್ಗಿಸುವನು ಭಯವ ತೋರಿ
ರಕ್ಕಸ ಜನ ಅಹಂಕಾರದಲ್ಲಿ ಇರಲು
ಸೊಕ್ಕು ಮುರಿದು ನಿತ್ಯ ನರಕದಲ್ಲಿ
ಇಕ್ಕದೆ ಬಿಡನಯ್ಯಾ ಸತ್ಯ ಸಂಕಲ್ಪನೆಂಬೊ
ದಕ್ಕಾಟ ಮಹಾ ಬಿರಿದು ಮೆರವುತಿದಕೊ
ದಿಕ್ಕಿ ದಿಕ್ಕಿನಲಿ ಈತನ ವ್ಯಾಪ್ತಿ ಪೂರ್ಣವಾಗಿ
ಚೊಕ್ಕಟ ಕಾಂತಿಯಲ್ಲಿ ತುಂಬಿಹುದೋ
ಮುಕ್ತಿ ಬೇಕಾದರೆ ಈತನ್ನ ಮೊರೆಹೋಗಿ
ಮಿಕ್ಕಾದ ದೈವಂಗಳಿಗೆ ಸ್ವಾತಂತ್ರವೆ
ಲಕ್ಷ ಎಂಭತ್ತುನಾಲ್ಕು ಯೋನಿ ಭೇದವ ಮಾಡಿ
ಕಕ್ಕಸ ಕರ್ಮವನ್ನು ಕೊರಳ ಕಟೀ
ಅಕ್ಕರದಿಂದಲಿ ತಾನೆ ಜೀವರ ಕೈಯ್ಯಾ
ತಕ್ಕ ತಕ್ಕ ಕರ್ಮ ಮಾಳ್ಪ ಮಾಳ್ಪ
ವಕ್ಕಲ ಮಾಡುವ ವಂಚನೆ ಇಲ್ಲದಲೆ
ತಕ್ಕೊಂಬ ಕರುಣವನ್ನು ತನ್ನವರಿಗೆ
ಹಕ್ಕಲವಾಗಗೊಡ ಮಾಡಿಸಿದ ಪುಣ್ಯ
ದಕ್ಕಿಸಿ ಉಣ್ಣಿಸುವ ಮನ ಬಂದಲ್ಲೀ
ಲಕ್ಕುಮಿವಲ್ಲಭ ವಿಜಯ ವಿಠ್ಠಲರೇಯ
ಉಕ್ತಿಯ ಪ್ರೇರಿಸುವ ಅವರವರ ಯೋಗ್ಯತ ನೋಡಿ ೧
ಮಟ್ಟತಾಳ
ಶರಣರು ನುಡಿದದ್ದು ಸರಿ ಎನಿಸುವ ತನ್ನ
ಚರಣ ಭಜಕರಲ್ಲಿ ನಿರುತ ಮನಸು ಇತ್ತು
ದುರುಳರಿಗೆ ಇದನೆ ಪರಿಹರಿಸುವ ಉ
ತ್ತರ ಪ್ರೇರಿಸುವ ನಿರ್ಜರರನ್ನು ಮೆಚ್ಚಿಸುವಾ
ಮರಿಯಾದೆ ಇನಿತು ಪರಿಯಲಿ ನಡಿಸುವ
ಪರಮ ಪುರುಷನ ಸುಚರಿತಕೆ ನಮೊ ನಮೊ
ಹಿರಿದಾಗಿ ಹಿಗ್ಗಿ ಮರಳೆ ಮರಳೆ ಸ್ತೋ
ತ್ತುರ ಮಾಡಿದವರನ್ನು ಪರಮ ಧನ್ಯನು ಕಾಣೊ
ಪರಮಧನ್ಯನು ಕಾಣೊ ಸುರರಿಗೆ ವಶವಲ್ಲದ
ಹಿರಿಯ ಮತ್ತಾವನೊ
ಹರಿಯಲ್ಲದೆ ಇಲ್ಲಾ ಧರಣಿಯೊಳಗೆ ಸತ್ಯಾ
ಸಿರಿವಂದಿತ ನಮ್ಮ ವಿಜಯ ವಿಠ್ಠಲನೇ
ಬಹಿರ ಅಂತರ ಪ್ರೇರಣೆಯಲ್ಲಿ ರಕ್ಷಿಸುವ ೨
ತ್ರಿವಿಡಿತಾಳ
ಜೀವ ಸ್ವಾತಂತ್ರ ಅಸ್ವಾತಂತ್ರವೆರಡಕ್ಕೆ
ಅವಾವ ಕಾಲಕ್ಕೆ ಇವಗೆಲ್ಲಿದೋ
ಜೀವ ಸ್ವಾತಂತ್ರನೆಂಬಿಯಾ ಇವನೆ ಅರಸಾಗಿ
ಪಾವನ್ನಮನಿಯಲ್ಲಿ ಸರ್ವಸೌಖ್ಯ
ತಾ ಉಂಡು ತೃಪ್ತಿಯಾಗದೆ ಇಪ್ಪ ಬಗಿ ಏನೊ
ಕೋವಿದರು ಪೇಳಿ ಮುಂದೆ ಕೇಳಿ
ಜೀವ ಅಸ್ವಾತಂತ್ರ ನೆಂಬಿಯಾ ಸುಮ್ಮನೆ
ಆವಾವ ಪ್ರಯೋಜನ ಇಲ್ಲದೊಂದೆ
ಠಾವಿನಲ್ಲಿ ಇರನೇಕೆ ಇದರ ವಿಚಾರವ
ಭಾವದಲ್ಲಿ ತಿಳಿದು ನೋಡುವುದು
ಜೀವಕ್ಕೆ ಸ್ವಾತಂತ್ರ ಅಸ್ವಾತಂತ್ರವೆಂಬೊ
ಈ ವಿಧ ಕರ್ಮಗಳು ಕಾಣಿಪುದೆ
ದೇವೇಶ ಎಂಥ ಉಪಾಯವಂತ ನೋಡಿ
ಜೀವನದೊಳಗೆ ತಾನಿದ್ದು ಇದ್ದು
ಯಾವತ್ತು ನಡತೆಯ ನಡಿಸುವ ಪರಸ್ವರ
ಜೀವರಿಂದಲಿ ಭೇದ ಬಿಂಬವೆನಿಸಿ
ಆವಾಗ ದೂಷಣ ಭೂಷಣ ಮಾತಿಲಿ
ಕಾವ ಕೊಲ್ಲುತಲಿಲ್ಪ ನಿರ್ದೋಷದಿ
ಈೀವರಾಶಿಗಳೆಲ್ಲ ಮಾಡುವ ವ್ಯಾಪಾರಾ
ಆವದೊ ರಂಗನ್ನ ತೊರದು ಮಾಳ್ಪಾ
ನೋವಾ ನೋವಿಪನಾರು ಸುಖವ ಕೊಡುವನಾರು
ಕೇವಲ ಸಂಶಯ ಬಡಿಪನಾರೂ
ಪಾವಿನ ತುಳಿದ ಶ್ರೀ ವಿಜಯ ವಿಠ್ಠಲರೇಯಾ
ಕೈವಲ್ಯ ಮಿಕ್ಕಾದ ಸ್ಥಾನದಿ ಇರುತಿಪ್ಪ ೩
ಆಟ್ಟತಾಳ
ತಾನೆ ಭಕ್ತನ ಮೇಲೆ ದಯದಿಂದ ಒಲಿದು ಸ
ನ್ಮಾನವೇ ಇತ್ತು ನಿತ್ಯ ಸಾಕುತಲಿ ನಿಜ
ಸ್ವಾನುಭವ ತೋರಿ ತಡಮಾಡದಲೆ ಅ
ಜ್ಞಾನ ಹಿಂದು ಮಾಡುವ ಮಾನವ ಪುಂಗವ
ಮಾಗಾದಿರಿ ದಿಕ್ಕು ನಮಗೆ ಈತನಲ್ಲದೆ ಇಲ್ಲ
ಪ್ರಾಣನಾಯಕ ಹರಿ ವಿಜಯ ವಿಠ್ಠಲ ಕೃಷ್ಣ
ಕಾಣಿಸಿಕೊಂಡರೆ ಕಠಿಣವೆಂಬೊದು ಇಲ್ಲಾ ೪
ಆದಿತಾಳ
ಸಕಲ ಜಡ ಜೀವರೊಳು ಹರಿ ತಾನು
ಅಕಳಂಕನಾಗಿ ನಿಚ್ಚಟ ಅಂತರಂಗದಿ
ಲಕುಮಿ ಸಮೇತ ಇದ್ದ ಕಾರಣದಿಂದ
ಭಕುತಿಯಲಿ ತನ್ನೊಳಗಿದ್ದ ಮೂರುತಿಯನ್ನು
ಭಕುತನಾದವನು ಬಿಡದೆ ಪೂಜಿಸಿದರು
ಸಕಲರ ಹೃದಯದಿ ಪ್ರೇರಿಸಿ ಅವರಿಂದ
ಸಖತನ ಮಾಡಿಸಿ ಸ್ನೇಹ ಪುಟ್ಟಿಸುವನು
ಮುಕುತಿದಾಯಕ ನಮ್ಮ ವಿಜಯ ವಿಠ್ಠಲರೇಯಾ
ಅಕುಟಿಲ ಜನರ ಸಂಗಡ ಒಡನಾಡುವ ೫
ಜತೆ
ನಂಬಿದ ಭಕ್ತರ ನಾನಾ ಪರಿಯಲ್ಲಿ
ಅಂಬುಜಾಕ್ಷ ವಿಜಯ ವಿಠ್ಠಲ ಕಾವುತಲಿಪ್ಪ ೬

ಪರಮಾತ್ಮನ ಸಾಕ್ಷಾತ್ಕಾರವನ್ನು ಬಯಸುವವರು


ಧ್ರುವತಾಳ
ಇತರ ಸ್ತೋತ್ರರ ಮಾಡಿ ಅವರಂಗಣದ ಮುಂದೆ
ಸತತ ಕಾಯಿದು ಒಂದಡಿ ತೊಲಗದೆ
ಪ್ರತಿ ಪ್ರತಿ ಉತ್ತರ ಲಾಲಿಸಿ ಕವಿಯಿಂದ
ರತುನಾದಂತೆ ಮಾತು ಮನದಲಿಟ್ಟು
ಮತಿಹೀನನಾಗಿ ಅನ್ಯರ ಬಳಿಯಲ್ಲಿ ನಿಂದು
ಪ್ರತಿದಿನದಲ್ಲಿ ದ್ರವ್ಯವ ಗಳಿಸಿ
ಅತಿಶಯವಾಗಿ ಕೂಡಲಿಟ್ಟು ಕುಲಸಹಿತ
ಶತಕಲ್ಪ ಬದುಕುವ ಬಾಳಿಕೇನೊ
ಚ್ಯುತಿದೂರ ವಿಜಯ ವಿಠ್ಠಲ ಪರಮ ಪಾವನ್ನ
ನುತಿಸಿ ಬೇಡುವೆ ನಿನ್ನ ಪದಸೇವೆ ಕೆಲಕಾಲ ೧
ಮಟ್ಟತಾಳ
ತನ್ನಿಚ್ಛೆಯಲಿ ತಾನನ್ಯರ ಹಾರೈಸ
ದಿನ್ನಿದ್ದರೆ ಒಂದು ಸುಣ್ಣದೆಲೆ ಪ್ರಾಪ್ತಿ
ಅನ್ನಂತ ಜನುಮಕ್ಕೆ ಎನಗದೆ ಸಾಕು
ಅನ್ಯಥಾ ಸೌಭಾಗ್ಯವನ್ನು ಒಲ್ಲೆನು ಸಂ
ಪನ್ನ ಗುಣಾರ್ಣವ ವಿಜಯ ವಿಠ್ಠಲ ವ್ಯಾಸ
ಮುನ್ನಿಗೊಲಿದ ಪ್ರಸನ್ನ ಪ್ರಣವ ಮೂರ್ತಿ ೨
ತ್ರಿವಿಡಿ ತಾಳ
ಭಕುತರಿಚ್ಛೆಯ ಕಾಮಧೇನು ನಿನ್ನಯ ನೆನವೆ
ಮುಕುತೆ ಪಥಕೆ ದಾರಿಗಿದೆ ಪೈಣ ಗತಿಗೆ ಕಟ್ಟಿದ ಬುತ್ತಿ
ಯುಕುತವಾಗಿರಲಿಕ್ಕೆ ವೇದದಲಿ ನಿತ್ಯ
ಸಕುತನಾಗದೆ ನಾನು ಹಗಲಿರಳು
ಭುಕುತಿಗೋಸುಗ ಪೋಗಿ ನಿಲವಿಲ್ಲದೆ ದು
ರುಕುತಿಯಲಿ ಕಾಲವ ಕಳದೆನಯ್ಯ
ಕಕುಲಾತಿ ಬಿಡದು ಈ ಕಾಯದೊಳುಳ್ಳನಕ
ತ್ವಕುವಾದಿಗಳ ದುವ್ರ್ಯಾಪಾರದಲ್ಲಿ
ಅಕಟ ನೀನೊಬ್ಬ ಬಲ್ಲವನೆಂದು ಪೇಳಿದೆ
ಸಕಲ ಸುರರ ಧೊರಿಯೆ ಲಾಲಿಪುದು
ಸುಖಸಾಂದ್ರ ವಿಜಯ ವಿಠ್ಠಲ ಸುಗುಣಮಲ್ಲ
ರುಕುಮಿಣಿಪತಿ ನಿನ್ನ ನಂಬಿದವನೊ ನಾನು ೩
ಅಟ್ಟತಾಳ
ನಿದ್ರೆಯೊಳಾದರು ಯದೃಚ್ಛಾಲಾಭವ
ಪೊದ್ದಿದ್ದರೆನಗದು ಅದ್ರಿ ಸಮಾನವೊ
ಇದ್ದಲ್ಲಿ ನಭದಿಂದ ಮೂಥ್ರ್ನಿ ಪರಿಯಂತ
ಮುದ್ದಿ ಮುದ್ದಿ ಹೇಮ ಬಿದ್ದರೆ ಅವು ಎಲ್ಲ
ಇದ್ದಲಿಯಾಗಲಿ ಬಿದ್ದ- ಕ್ಷಣದಲ್ಲಿ
ಅದ್ವೈತ ಮಹಿಮನೆ ವಿಜಯ ವಿಠ್ಠಲ ಕರು
ಣಾಬ್ಧಿಯೆ ನಿನ್ನಯ ಹೊದ್ದಿಪ್ಪುದೇ ಸಾಕು ೪
ಆದಿತಾಳ
ಹಂದರಕೆ ಬಳ್ಳಿಕುಡಿ ಛಂದದಿಂದ ಹಬ್ಬಿದರೆ
ಹಿಂದಕ್ಕೆ ಎಳೆದರೆ ತನ್ನಿಂದ ತಾನೆ ಬಪ್ಪದೇನೊ
ಇಂದಿರೆ ರಮಣ ನಿನ್ನ ದ್ವಂದ್ವ ಚರಣಕ್ಕೆ ಮನ
ನಂದವಾಗಿ ಹಬ್ಬಲು ಮತ್ತೊಂದು ಕಡೆಗೆ ಪೋಗಬಲ್ಲುದೆ
ಎಂದೆಂದಿಗೆ ದುರುಳರ ವಂದಿಸಿ ಬೇಡುವ ವಾಕು
ಕುಂದಲಿ ನಿನ್ನಯ ನಾಮ ಪೊಂದಲಿ ಜಿಹ್ವಾಗ್ರದಲಿ
ನಂದ ಮೂರ್ತಿ ವಿಜಯ ವಿಠ್ಠಲ ವಂದಿಸುವೆ ನಿತ್ಯದಯ-
ಸಿಂಧುವೆ ಆಶಾಭವ ಬಂಧನವ ಪರಿಹರಿಸೋ೫
ಜತೆ
ಪರರ ಸ್ತೋತ್ರವ ಮಾಡಿ ಉದರ ಪೊರೆವುದರಿಂದ
ಪರಗತಿಯಾಗದು ವಿಜಯ ವಿಠ್ಠಲ ಎನಗೆ ೬

ನಿರ್ಮಲವಾದ ಮನಸ್ಸನ್ನು ಎಲ್ಲ


ಧ್ರುವತಾಳ
ಇದನೆ ಬೇಡುವೆ ಇಂದು ಕರವ ಮುಗಿದು ನಿಂದು
ಯದುಕುಲೋತ್ತಮ ಪೂರ್ಣ ವಿಧುವದನ ಗುಣ
ಉದಧಿ ಉರಗಶಯ್ಯ ಕಮಲಸಂಭವನಯ್ಯ
ಪದೋಪದಿಗೆ ಇಂಥ ಮನಸೆ ಕೊಡು
ಸದಮಲವಾದ ಮಧ್ವಮತ ಪೊಂದಿದ ದಾಸರ
ಹೃದಯರ ಪಾಲಿಸುವುದು ಬಿಡದೆ
ಬದುಕುವ ಆಯುದೊಳು ಒಂದು ಘಳಗಿ ನಿನ್ನ
ಪದವ ನಂಬಿದ ನರನ ಭಾಗ್ಯವೇ ಭಾಗ್ಯ
ತುದಿಮೊದಲು ಎಣಿಸಿದರೆ ನೆಲೆಗಾಣದಲಿಪ್ಪದು
ತ್ರಿದಶರು ಭರತ ವರುಷದಲ್ಲಿ ಬಂದು
ಉದುಭವಿಸಿ ನಿನ್ನ ಪ್ರೀತಿ ಸಂಪಾದಿಸಿ
ಪದವಿಗೈಯ್ವೆವೆಂದು ಮನ ಮಾಳ್ಪರು
ಇದೆ ಇದೆ ಮಹಸೌಖ್ಯ ನಿನ್ನ ಭಕುತಿಯೇ ಭಕುತಿ
ಹದುಳವಲ್ಲದೆ ಎಂದಿಗೆ ಕೇಡಿಲ್ಲ
ಅದುಭೂತ ಮಹಿಮನೆ ಈ ಕಲಿಯುಗದಲ್ಲಿ
ಮುದದಿಂದ ಉತ್ತುಮರು ಇಪ್ಪದುಂಟು
ಮೃದುಮತಿ ಪುಟ್ಟಿದು ಕಲಿ ಪ್ರವಿಷ್ಟಾ
ಇದನೇ ನೀ ಪರಿಹರಿಸು, ಎನಗನಂತ ಕಾಲಕ್ಕೆ
ನಿಧಿಯೇ ಸತ್ಯಾ ಮತ್ತೊಂದಾವದೊಲ್ಲೆ
ಸುದರುಶನಪಾಣಿ ವಿಜಯವಿಠ್ಠಲರೇಯ
ವಿಧಿ ಬರೆದಾ ಫಣಿಲಿಪಿಗೆ ನೀನೆ ಕರ್ತ ೧
ಮಟ್ಟತಾಳ
ಉತ್ತಮರಪರಾಧ ಮಾಡಿದ ಕಾಲಕ್ಕು
ಚಿತ್ತದಲಿ ಇಡದೆ, ಛಿದ್ರವ ಎಣಿಸದೆ
ಪೆತ್ತ ಜನಕನಂತೆ ಪರಮ ಸ್ನೇಹದಿಂದ
ಹತ್ತಿದ ಪಾಪಗಳು ಹತಮಾಡು ಬಿಡದೆ
ಹತ್ತರ ವಿಷಯಕ್ಕೆ ಉಣದೆ ತೊಲಗದೆಂಬ
ಉತ್ತರವುಳ್ಳರೆ ಉಚಿತಾರ್ಥವೆ ನಿನ್ನ
ಅತ್ತ ಮನಸು ಇದ್ದ ಭಕ್ತರಿಗೆ ನರಕ
ಹತ್ತದು ಹತ್ತದಯ್ಯ ಸಾವಿರಕಿದೆ ಮಾತು
ಚಿತ್ತಜಪಿತ ನೀನೆ ಸುಮ್ಮನಾಗಿದ್ದರು
ಎತ್ತಲಾದರು ನಿನ್ನ ದಿವ್ಯ ನಾಮವೆ ಒಂದಾ
ವರ್ತಿಲಿ ಸ್ಮರಿಸಿದ್ದ ಸಂಸ್ಕಾರ ಬಲದಿಂದ
ಸುತ್ತಸುಳಿ ನರಕಾಗರ್ತದೊಳಿದ್ದರು
ಎತ್ತಿಕೊಂಡು ಬಂದು ಮ್ಯಾಲೆ ನಿಲ್ಲಿಸುವುದು
ಅತ್ಯಂತ ಬಂಧನವಾದರು ಹೂವಿನ ಸರಿಕವಾಲಿಯಂತೆ
ಅರ್ಥಿಯಾಗಿಪ್ಪದು ನಿನ್ನ ಒಲುಮೆ ಅವಗೆ
ಹತ್ತವತಾರ ಶ್ರೀ ವಿಜಯ ವಿಠ್ಠಲರೇಯ
ಆರ್ತವಾಗದು ಅವಗೆ ಅನಂತ ಜನುಮಕ್ಕೆ ೨
ತ್ರಿವಿಡಿ ತಾಳ
ಕಂದು ಬಲ್ಲೆ, ಜ್ಞಾನ ಕಟದು ಬಲ್ಲೇನಯ್ಯ
ಉಂಡದರ ಬಲ್ಲೆ ಉದಧಿಯೊಳಗೆ
ಹಿಂಡಿನೊಳಗೆ ಇದ್ದು ತುತ್ತು ಬ್ಯಾರೆ ಎಂದು
ಮಂಡಲದೊಳಗೆ ಪೇಳುವುದು ಸಿದ್ಧ
ಪುಂಡರೀಕಾಕ್ಷನೆ ನಿನಗಾಗದವರಿನ್ನು
ಮಂಡೆ ಕೆಳಗೆ ಮಾಡೆ ತಪ ಮಾಡಲು
ಪುಂಡರ ಕರದೊಯ್ದು ನೊಣದೊಡನೆ ಘೃತ
ಮಂಡಿಗೆ ಉಣಿಸಿದಂತೆ ಮಾಡುವಿ
ತಂಡ ತಂಡದ ವರವ ಅಜಭವಾದಿಗಳಿಂದ
ಲೆಂಡರಿಗೆ ಕೊಡಿಸಿ ನೀ ಪರಿಹರಿಸುವೆ
ಅಂಡಜವಾಹನ್ನ ನಿಜ ದೈತ್ಯವಂಶಕ್ಕೆ
ಕೆಂಡವಲ್ಲದೆ ನಿನ್ನ ಲೀಲೆಯೆಲ್ಲ
ಗಂಡುಗಲಿ ರಂಗ ವಿಜಯ ವಿಠ್ಠಲ ನಿನ್ನ
ಕಂಡ ದೈತ್ಯರಿಗೆಲ್ಲ ನಿತ್ಯ ತಮಸು ಕಾಣೊ ೩
ಅಟ್ಟತಾಳ
ಜ್ಞಾನಾವಲಂಬನ ಕರ್ಮಾವಲಂಬನ
ಮಾನವ ನಾನಲ್ಲ ಮಹಿಯೊಳಗೆ ಪುಟ್ಟಿ
ಆನಾವುದು ತಿಳಿಯೆ ಬಲುಮಂದ ಮತಿಯಿಂದ
ಹೀನ ಪ್ರವರ್ತಕ ಚರಿಸುವೆನಯ್ಯ
ಏನಾದರಾಗಲಿ ಸಜ್ಜನರ ವೃದ್ದಿ
ಹಾನಿಗಳೆಲ್ಲ ನೀನೆ ವಹಿಸಿಕೊಂಡು
ಮಾಣದೆ ಅನುದಿನ ಪಾಲಿಸು ಎಂದು
ನಾನಿದನೆ ಬೇಡುವೆ ಎನಗಿದೆ ಸಾಧನ
ಕಾಣಿಸುತಿದೆ ಮತ್ತೊಂದಾವುದು ಇಲ್ಲ
ದಾನವರಿಗೆ ನಿತ್ಯ ಕಷ್ಟ ತರವೆ ಕೊಡು
ಜ್ಞಾನ ಮೂರುತಿ ದೇವ ವಿಜಯ ವಿಠ್ಠಲರೇಯ
ಅನಂತಕಾಲಕ್ಕೆ ಎನಗೆ ಇದು ಜಪ ೪
ಆದಿತಾಳ
ನೀನೆ ಪರದೈವವೆಂದು ಮಾನವರವಗುಣವ
ಎಣಿಸದಿರು ಅಥವಾ ಎಣಿಸುವದಿದ್ದಡೆ
ನಾನೆ ಪತಿಕರಿಸುವೆ ಹೀನಾಯಂಗಳು ಎಲ್ಲ
ಏನೆಂಬೆ ಇದರಿಂದ ನಾನಾ ಯೋನಿಗಳಲ್ಲಿ
ನಾ ನಿಲಿಸಿದ ಕಾಲಕ್ಕು ತಾನೆ ದೈವವೆಂಬೊ
ಮಾನವರೊಡನೆ ದುಮ್ಮಾನದಲ್ಲಿ ದ್ವೇಷ
ವನು ಮಾಡುವಂತೆ, ಜ್ಞಾನವೆ ಪೊಂದಿರಲಿ
ಗಾನ ಪೇಳುವರಿಗೆ ಪ್ರಾಣ ಪ್ರಕೃತಿರಹಿತ
ನಾನಿದೆ ಬೇಡುವೆ ಜ್ಞಾನವಿದರ ವಿನಹ
ಕಾಣಿಪುದಿಲ್ಲವೆಂದು ಕ್ಷೋಣಿಯೊಳಗೆ ಸಚೇ-
ತನರು ಪೇಳುವರು ನಾನ್ಯಾತರವನಲ್ಲ
ನೀನೇ ಸರ್ವಸ್ವತಂತ್ರ ನಾನು ಮಿಕ್ಕಾದವರು
ಹೀನಾಯವೆಸಗಿದರು ದಾನವರ ಪಾಲಿಗೆ ಧಾನ್ಯದಂತೆ
ನೀನುಣಿಸುವೆ ಬಿಡದೆ ತ್ರಾಣವಂತನೆ ನಿತ್ಯ
ಆನಂದ ನಮಗೆಲ್ಲ ಅನಾಥಬಂಧುವೆ
ಧ್ಯಾನದಲ್ಲಿಗೆ ನಿಲುವ ವಿಜಯ ವಿಠ್ಠಲ ಸುರ-
ಧೀನುವೆ, ನೆನವವರ ಮಾನಸದಲ್ಲಿಗೆ ೫
ಜತೆ
ಸಾಧನ ಎನಗಿದೇ, ಇಂದಿರಾವಲ್ಲಭ
ಸಾಧುಗಳ ಪ್ರೀಯಾ, ವಿಜಯವಿಠಲರೇಯಾ ೬

ಭಗವಂತನ ಸಾಕ್ಷಾತ್ಕಾರ

೧೦
ಧ್ರುವತಾಳ
ಇದು ನಿನಗೆ ಆರಾಧನೆ ಇದು ನಿನಗೆ ಪೂಜೆಯೆ
ಇದು ನಿನಗೆ ಭಜನಿಯೆ ಇದು ನಿನಗೆ ಅರ್ಚನೆ
ಇದು ನಿನಗೆ ವಂದನೆ ಇದು ನಿನಗುಪಚಾರ
ಇದರಿಂದ ನಿನಗಿಂದು ಅಧಿಕ ಮನ್ನಣೆ ಬಂದು
ಇದು ಏನು ಆದಾನಾದಿ ಕರ್ತ ಕಾರ್ಯ
ಮುದದಿಂದ ವಿದುರನ್ನ ಸದನದಲಿ ಬಂದು ಕಂಡತಿ
ಮೆದಿಯೆ ಪಾಲಿಗೆ ಕ್ಷುಧಿಯ ಕಳದು ಮಹ
ಉದಧಿಯ ಮಾಡಿ ತೋರಿದ ಭಕ್ತರ ಪ್ರೀಯ
ಮೊದಲಿಗೆ ಪದುಮಸದ ವಿಧಿ ಶಿವ ಉಳಿದವರು
ಸದಮಲತೃಪ್ತನೆಂದು ಪದೋಪದಿಗೆ ಪೊಗಳೆ
ಹೃದಯದೊಳಗಾನಂದ ಉದಧಿ ತರಂಗದಲ್ಲಿ
ಕದಲಲಾರದೆ ಮೋದದಲಿ ಈಸುತಿಪ್ಪದು
ಉದರಗೋಸುಗ ಎರಡು ಪದಗಳ ಪೇಳಿಕೊಂಡು
ಬದುಕುವ ಮನುಜ ಇತ್ತಲದರಿಂದಲೇನಾಹುದೊ
ಪದುಮಗರ್ಭನ ಪೆತ್ತ ವಿಜಯ ವಿಠ್ಠಲರೇಯ
ಉದಧಿಯನು ಮಥಿಸಿ ಸುಧೆಯ ನೆರದ ದೇವ ೧
ಮಟ್ಟತಾಳ
ಜಲಜನಾಭನ ಸೇವೆ ಬಲು ಸುಲಭಾ ಬಲು ಸುಲಭ
ಕಲಿಯುಗದೊಳಗೆಂದು ತಿಳಿದು ಸಜ್ಜನರು
ತಿಳಿದು ಪೇಳಲು ಅದೆ ನಿಜವೆಂದು
ಸಲೆ ನಂಬಿದೆನಯ್ಯ ಸಲೆ ನಂಬಿದೆನಯ್ಯ
ಜಲ ತುಲಸಿ ನಾಮಾವಳಿ ಹರಿವಾಸರ
ಹಲವು ಬಗೆಯಿಂದ ತಿಳಿದು ಮಾಡಲು ಮಹ
ಫಲವಾಹುದು ಗತಿಗೆ ಅಳಿಯದು ಸತ್ಪುಣ್ಯ
ನಿಲವರವಕ್ಕುವದು ಒಲಿಸಿದವರ ಮುಂದೆ
ಸುಳಿವ ವಿಜಯವಿಠ್ಠಲ ಬಳಲಿಸುವ ಭವದ
ಸುಳಿಯಿಂದಲಿ ತೆಗಿಯೊ ೨
ತ್ರಿವಿಡಿ ತಾಳ
ಜಲದೊಳಗೆ ಭಾಂಡವ ಮುಳುಗಿಸಿ ಬರಿ ಕೈಯ್ಯಾ
ಜಲ ಪೋಗಿ ಬರಿದೆನಿಸೇವುದೇನೊ ಎಂದಿಗೂ
ಜಲಜನಾಭನೆ ನಿನ್ನ ಚೆಲುವ ಚರಣವ ಹಂ
ಬಲಮಾಡಿ ಕೆಲಕಾಲ ನಂಬೀದ ಮನುಜಂಗೆ
ಅಳಿಯಬಲ್ಲದೆ ಜ್ಞಾನ ದಿನ ಪ್ರತಿ ದಿನದಲ್ಲಿ
ಬೆಳೆವುದು ಒಂದಕ್ಕೊನಂತ ವೆಗ್ಗಳವಾಗಿ
ತೊಲಗದೆ ಇಹುದೊ ಪೊಂದಿ ಪ್ರಕಾಶಿಸುತ
ಬೆಳಗುವಂದರೆ ತರಲು ಹಲವು ದ್ರವ್ಯಗಳು ಕಂ
ಗಳಿಗೆ ತೋರಿದಂತೆ ನಿನ್ನ ಕರುಣರಸ
ಪ್ರಳಯರಹಿತ ನಮ್ಮ ವಿಜಯ ವಿಠ್ಠಲ ಎನಗೇ
ಸುಲಭ ಸೇವೆಯಿದು ಇದನೊಂದು ಪಾಲಿಸೂ ೩
ಅಟ್ಟತಾಳ
ನಿನ್ನವನೆನಿಪರು ಎರೆದು ನಿರ್ಮಳ ತೀರ್ಥ
ನಿನ್ನವರು ನಿನಗಿತ್ತ ಕುಸುಮ ತುಲಸಿ
ನಿನ್ನವರೆನಿಪರು ಎತ್ತಿದ ಧೂಪವು
ನಿನ್ನವರು ನಿನಗಿತ್ತ ಸರುವನ್ನ
ನಿನ್ನವರು ನಿನಗೆತ್ತಿದ ಆರತಿ
ನಿನ್ನವರು ನಿನಗೆ ಮಾಡಿದ ಪೂಜೆ
ಕಣ್ಣಿನಿಂದಲಿ ನೋಡಿ ಸಂತೋಷಬಟ್ಟು ಪಾ
ವನ್ನನಾಗುವಂತೆ ಕರುಣಿಸು ದೇವೇಶ
ಪನ್ನಗ ಶಯನ ಶ್ರೀ ವಿಜಯ ವಿಠ್ಠಲರೇಯ
ಎನ್ನ ಸಾಧನ ಇನಿತಲ್ಲದೆ ಮಿಗಿಲಿಲ್ಲ ೪
ಆದಿತಾಳ
ಒಂದು ದಿವಸದೊಳಗೆ ಮಂದಮತಿ ನಾನು
ಬಂದು ಜಲ ತುಲಸಿ ತಂದು ಏರಿಸಿ ಗೋ
ವಿಂದ ನಿನ್ನ ದಿವಸಾನಂದವಾಗಿ ಚರಿಸಾ
ಲಿಂದವಾಗಿದನೆ ಬೇಕೆಂದು ಕೈ ಕೊಳುತ ಭವ
ಬಂಧನ ಪರಿಹರಿಸಿ
ಒಂದಕ್ಕೊಂದು ಅಧಿಕವೆನಿಸಲಿಬೇಕು
ತಂದೆ ನಿನ್ನಯ ಪಾದ ದ್ವಂದ್ವ ಸ್ಮರಣೆಯಿತ್ತು
ಮಂದರಧರದೇವ ವಿಜಯ ವಿಠ್ಠಲ ನೀನೆ
ಬಂದು ಬಾಂಧವನಾಗೆ ಸಂದೇಹ ಪರಿಹಾರ ೫
ಜತೆ
ಉತ್ತಮರ ಕೂಡಾಡುವ ಮತಿಯಿತ್ತು
ಉತ್ತಮಗತಿ ಈಯೊ ವಿಜಯ ವಿಠ್ಠಲರೇಯ ೬

ಭಾರತದೇಶದಲ್ಲಿ ಅನೇಕ ಪುಣ್ಯನದಿಗಳ ಸಂಗಮ

೮೧. ಪ್ರಯಾಗ
ರಾಗ:ಭೈರವಿ
ಧ್ರುವತಾಳ
ಇದು ಪುಣ್ಯಭೂಮಿ ಆರ್ಯಾವರ್ತಾಂತರ್ಗತ |
ಇದು ಬ್ರಹ್ಮ ವೈವರ್ತಕ ದೇಶಾವೆನ್ನಿ |
ಇದು ಅಂತರಂಗ ವೇದಿ ಘ[ಟುಲಾ] ಮಧ್ಯವೆನ್ನಿ |
ಇದು ವರ ರಾಜಾತಿತೀರ್ಥ (ಕಮಲಾ) ಪ್ರಯಾಗವೊ |
ಇದು ತ್ರಿವೇಣಿ ಎನಿಸುವಾದು ಇಲ್ಲಿ ಮಾಧವರಾಯಾ |
ಇದು ವಿಷ್ಣು ಪ್ರಜಾಪತಿ ಕ್ಷೇತ್ರವೆನ್ನಿ |
ಇದು ಗಂಗಾ ಸರಸತಿಯ ಯಮುನಾತೀರವೆನ್ನಿ |
ಇದು ವೇದ ಸ್ರ‍ಮತಿ ಪ್ರತಿಪಾದ್ಯವೆನ್ನಿ |
ಇದೆ ಇದೆ ಆದಿಯಲ್ಲಿ ಹರಿಯಿಂದ ನಿರ್ಮಾಣ |
ಇದಕ್ಕಿಂತ ಅಧಿಕವಿಲ್ಲಾ ಸಾಮ್ಯವಿಲ್ಲಾ |
ಇದೆ ಮಸ್ತಕ ಸ್ಥಾನ ನಾಭಿ ವಾರಣಾಸಿ |
ಪದಸ್ಥಾನ ಗಯಾವೆನ್ನಿ ಸರ್ವದಲ್ಲಿ |
ಇದೆ ಇದೆ ಪ್ರಣವಾಕಾರ ತ್ರಯಾಕ್ಷೇತ್ರ ಕೂಡಿದರೆ |
ಇದೆ ಪೂರ್ಣಯಾತ್ರೆಯೆನ್ನಿ ಜ್ಞಾನಿಗಳಿಗೇ |
ತ್ರಿದಶಗಣಕೆ ಇಲ್ಲಿ ಮುನಿನಿ ಕರರೆ ಕಾಶಿ |
ಮುದದಿಂದಾ ಮನುಜೋತ್ತಮಕೆ ವಿಷ್ಣುಪಾದಾ |
ಇದೆ ಒಂದೆರಡು ಕ್ಷೇತ್ರ ಪ್ರತ್ಯೇಕ ಪ್ರತ್ಯೇಕ |
ಅಧಿಕಾರಿಗಳುಂಟು ತರತಮ್ಯದಿ |
ಇದೆ ಭಕ್ತಿ ಜ್ಞಾನಾ ಕರ್ಮಯೋಗ್ಯ ಜನರೊಂದಾಗಿ |
ವಿಧಿ ಮಾರ್ಗವನ್ನು ತಿಳಿದು ಪೂಜಿಸುವರೂ |
ಪದುಮೆ ಬ್ರಹ್ಮೇಶ ಇಂದ್ರ ಮಿಕ್ಕಾದ ದೇವತೆಗಳು |
ಸದಮಲವಾಗಿ ವರವ ಪಡದಿಪ್ಪರೂ |
ಉದಧಿ ಸಪುತ ಮಿಕ್ಕ ನದನದಿ ಸರೋವರ |
ಹೃದ ನಾನಾ ತೀರ್ಥಕ್ಷೇತ್ರ ತ್ರಿಲೋಕದಿ |
ಇದರ ತರುವಾಯಾ ಪೆಸರಾಗಿ ಮೆರವುತ್ತಿವೆ |
ಪದೋಪಗೆ ತೀರ್ಥರಾಜನ ಆಜ್ಞದಿಂದ |
ಮಧುರಾ ಮಿಗಿಲಾದ ಸಪ್ತಪುರಿ ಉದ್ಭವಿ |
ಸಿದವು ಏಳುಧಾತುವಿನಿಂದ ದ್ವಾರಾವೆನಿಸಿ |
ಇದೆ ಪುಣ್ಯಾನಿಧಿಸುತ್ತಾ ಏಳು ಪ್ರಾಕಾರ ಸಂ |
ಪದವಿಗೆ ಮರಿಯಾದಿ ವಲಿಯಾಕಾರಾ |
ಇದೆ ಪಂಚಕ್ರೋಶಾವಿಡಿದು ಅಯೋಧ್ಯಾದಿಗಣಿತಾ |
ಮದಮತ್ಸರವಳಿದು ಗುಣಿಸಬೇಕೂ |
ಬದುಕಿದ ದಿವಸದೊಳಗೆ ಲೇಶವಾದರು ಬಿಂದು |
ಉದಕ ಸ್ಪರ್ಶವಾದಾ ಸುಜ್ಞಾನಿಯಾ |
ಪದ ಪರಾಗವನ್ನು ಆವಾವನ ಮೇಲೆ ಬೀಳೆ |
ಸದಮಲವಾಗುವದು ಅವನದೇಶಾ |
ವದನದಲ್ಲಿ ಪ್ರಯಾಗ ವರತೀರ್ಥ ರಾಜಾರಾಜಾ |
ಉದಯಾದಲ್ಲಿ ಒಮ್ಮೆ ನೆನದಡಾಗೇ |
ಎದಿರಾರು ಅವನಿಗೆ ಸ್ವರ್ಗಾಪವರ್ಗನಿತ್ಯ |
ಸದನದಲ್ಲಿ ಇಪ್ಪದು ಸತ್ಯವೆನ್ನಿ |
ಮಧುವೈರಿ ಮಾಧವ ವಿಜಯವಿಠಲ ಸ |
ನ್ನಿಧಿಯಾಗಿಪ್ಪನು ದೇವಾದಿ ದೇವಿಗಳಿಗೆ ೧
ಮಟ್ಟತಾಳ
ಸರ್ವಕ್ಷೇತ್ರಗಳಿಗೆ ಶಿರೋಮಣಿಯಾಗಿಪ್ಪದು |
ಧರಣಿಯೊಳಗೆ ಇದೆ ವರರಾಜಾ ತೀರ್ಥ |
ತರುತಳಿತವಟಾ ಪರಮ ಮುಖ್ಯಾವೆನ್ನಿ |
ಚಿರಕಾಲಾ ಬಿಡದೆ ಮೆರವು ತಲಿಪ್ಪಾದಯ್ಯಾ |
ಎರಡೇಳು ಭುವನಾ ಭರಿತವಾಗಿಪ್ಪದು |
ಸ್ಮರಣೆ ದರುಶನ ಸಂಸ್ಮರಿಶ ಪ್ರಣಮ ಸ್ತೋತ್ರ |
ಅರಘಳಗೆ ಮಾಡೆ ಪರಿಪರಿ ಜನ್ಮಂಗಳ |
ದುರಿತ ದುರ್ಗತಿನಿಕರ ಪರಿಹಾರವಾಗುವದಯ್ಯಾ |
ಪುರಹರ ಮಿಕ್ಕಾದ ಸುರಗಣದವರಿಲ್ಲಿ |
ಹರಿಯ ಒಲಿಸಿ ಉತ್ತಮ ವರವಾ ಪಡೆದು ಸುಖದಿ |
ಇರುತಿಪ್ಪರು ಕೇಳಿ ಕರುಣಾ |
ಕರಮೂರ್ತಿ ವಿಜಯವಿಠಲರೇಯನ |
ಶರಣಜನಕೆ ಇದೆ ದೊರಕುವದೆ ಸಿದ್ಧ ೨
ತ್ರಿವಿಡಿತಾಳ
ಇಲ್ಲಿ ತಪಸು ಮಾಡಿದ ರುದ್ರ ಕಾಶಿಪುರ |
ದಲ್ಲಿ ವಾಸವಾದ ಪಿರಿಯನೆನಿಸಿ |
ಎಲ್ಲಾ ಪುರಿಗಳಲ್ಲಿ ಪಂಚತ್ವಾ ಐದಾಡೆ |
ಅಲ್ಲಿ ಪಾಪದಿಂದ ಮುಕ್ತಿಕಾಣೋ |
ಇಲ್ಲಾವಿಲ್ಲಾ ಮೋಕ್ಷಾ ಎಂದಿಗಾದರು ಕೇಳಿ |
ಸೊಲ್ಲು ಲಾಲಿಸಿ ಜನರು ಸಿದ್ಧಾಂತದಾ |
ಬಲ್ಲಿದಾ ಕ್ಷೇತ್ರರಾಜನ ಮಹಿಮೆ ಸೋಜಿಗಾ |
ಎಲ್ಲಿಂದಾದರೂ ಇಲ್ಲಿಗೆ ಬಾರದತನಕಾ |
ಸಲಾರೈ ಸದ್ಗತಿಗೆ ಮಾತು ನಿಶ್ಚಯಾ ಗೌರಿ |
ವಲ್ಲಭಾ ಕಾಶಿಲಿ ಉಪದೇಶವ |
ನಿಲ್ಲಾದೆ ಮಾಡುವ ಇನಿತು ತಿಳಿದು ಸರ್ವ |
ದಲ್ಲಿ ಕೊಂಡಾಡುವದು ಜ್ಞಾನಿಗಳೂ |
ಚಿಲ್ಲರಕ್ಷೇತ್ರದಲ್ಲಿ ಆವಾವಾ ಸತ್ಕರ್ಮ |
ಎಳ್ಳನಿತು ಬಿಡದಲೆ ಮಾಡಲಾಗೇ |
ಇಲ್ಲಿಲೇಶ ಚರಿಸೆ ಯಾವತ್ತು ಬಲು ಜನ್ಮ |
ದಲ್ಲಿ ಮಾಡಿದದಕ್ಕೆ ಬಲುವೆಗ್ಗಳ |
ಸಲ್ಲುವಾದೆ ಸರಿ ಪುಶಿಯಿಂದ ಮನುಜರಿಗೆ |
ಹಲ್ಲು [ಕೀ]ಳುವ ನರಕವಾಗುವದೂ |
ಕ್ಷುಲ್ಲಕಮತಿ ಬಿಟ್ಟು ವೈಷ್ಣವ ವ್ರತದಿಂದಾ |
ಮೆಲ್ಲಾಮೆಲ್ಲಾನೆ ಕರ್ಮ[ವೆ]ಸಗಲಾಗೇ |
ಮಲ್ಲಾಮರ್ದನ ನಮ್ಮಾ ವಿಜಯವಿಠಲರೇಯಾ |
ಇಲ್ಲಿ ಕಾಣಿಸಿಕೊಂಬಾ ಮಾಧವರೂಪದಲಿ ೩
ಅಟ್ಟತಾಳ
ದಶತುರಗ ಮೇಧವಾಸುಕಿ ಹಂಸ, ಮಾ |
ನಸ ಚಕ್ರಾ ಗರುಡೇಂದ್ರಾ ಶಂಖ ಲಕುಮಿ ಊ |
ರ್ವಸಿ ರುದ್ರಾ ಬ್ರಹ್ಮಾಗ್ನಿ ಪಾರ್ವತಿ ವರುಣಾರ್ಕ |
ಬಿಸಿಜ ಚಂದ್ರಮ ಸರಸ್ವತಿ ಭೋಗಾವತಿ ಧರ್ಮಾ |
ವಿಷಹರ ಪಾಪ ವಿನಾಶನ ಕೋಟಿಯು |
ಮಸೆವ ಗದಾ ಋಣ ಮೋಚನ, ಗೋಗುಣ |
ವಸು ವಾಯು ಕುಬೇರ ನೈರುತ್ಯ ಮಧು ಘೃತಾ |
ಕುಶ ರಾಮ ಲಕ್ಷಣ ಸೀತಾ, ಶನೇಶ್ವರಾ |
ರಸ ದೇವಗಣ ಕಾಮಾ ಭೈರವ, ವಿಘ್ನೇಶಾ |
ವಸುಮತಿ ದುರ್ಗ ತಕ್ಷಕ ಭಾರ್ಗವ ನಾನಾ |
ಋಷಿಗಳ ತೀರ್ಥ ತುಂಬಿಹವು ಬಲುಪರಿ |
ಪೆಸರುಗೊಂಡು ಸ್ನಾನಾ ಸಂಧ್ಯಾವಂದನೆ ಜಪ |
ಮಿಸುಣಿ ಸುಯಜ್ಞದಿ ಸತ್ಕರ್ಮ ಸದ್ಧರ್ಮ |
ಪೆಸರ ನಮಸ್ಕಾರ ಸ್ತುತಿ ಸಂಕೀರ್ತನೆ |
ವಸತಿಯಾಗಿಲೇಶ ಮಾತ್ರ ಮಾಡಿದವಗೆ |
ಪಶು ಜ್ಞಾನಿಗಾದರು ವಿದ್ಯಾವಂತ ನಾಹ |
ಹಸನಾಗಿ ಬದುಕಿ ಸಮಸ್ತಸುಖದಿಂದ |
ನಿಶಿ ಇಲ್ಲದ ಲೋಕದಲ್ಲಿ ಬಾಳೂವ |
ಅಸುರ ಸಂಹಾರಿ ವಿಜಯವಿಠಲರೇಯಾ |
ಬೆಸನೆಲಾಲಿಸಿ ಬೇಗ ಮನೋಭೀಷ್ಠೆಕೊಡುವ ೪
ಆದಿತಾಳ
ವಟಕಟ ಛಾಯಾದಲ್ಲಿ ಓರ್ವಮಾನವ ಬಂದು |
ಶಠನ ಬುದ್ಧಿಯಿಂದ ಆಭಾಸಮಾಡಿ ನಿಂದು |
ವಟವಟವೆಂದು ಕೂಗಿ ಕರೆದರೆ ಅವನಿಗೆ |
ಸಟೆಯಲ್ಲಾ ಸರ್ವಶಾಸ್ತ್ರ ಅನಂತ ಜನುಮದಲ್ಲಿ |
ಪಠಿಸಿದದಕ್ಕೆ ಜ್ಞಾನ ಬರುವದಧಿಕವಾಗಿ |
ಭಟನಾಗಿ ಇಪ್ಪನು ಮಾಧವನ ಮನೆಯಲ್ಲಿ |
ತುಟಿ ಮಿಸಕಲು ಮುಕ್ತಿ ಈ ಕ್ಷೇತ್ರದಲಿ ಉಂಟು |
ನಿಟಿಲಲೋಚನ ಬಲ್ಲ ಬರಿದೆ ಉತ್ತರವಲ್ಲಾ |
ವಟಪತ್ರಶಾಯಿ ವಿಜಯವಿಠಲರೇಯಾ ಬಂದು |
ತೃಟಿಯಾದರು ಇಲ್ಲಿ ಇದ್ದವಗೆ ಲಾಭವೀವ ೫
ಜತೆ
ತೀರ್ಥರಾಜನ ಯಾತ್ರಿ ಮಾಡಿದವಗೆ ಪುರು |
ಷಾರ್ಥ ಸಿದ್ಧಿಸುವುದು ವಿಜಯವಿಠಲನೊಲಿವ ೬

ನಾಹಂಕರ್ತಾ ಸರ್ವಂ ಹರಿಃ ಕರ್ತಾಃ

೨೫
ಧ್ರುವತಾಳ
ಇದೆ ಭಾಗ್ಯ ಇದೆ ಭಾಗ್ಯ ಕಲಿಯುಗದಲಿ ನಿನ್ನ
ಪದಯುಗ್ಮ ಸಂಕೀರ್ತನೆ ಚನ್ನಾಗಿ ಮಾಡಿ ಸಂ
ಪದಯುಗ್ಮ ಸಂಕೀರ್ತನೆ ಮನೋವಾಚಕಾಯದಲ್ಲಿ
ಇದಕ್ಕಿಂತಧಿಕವಾದ ಭಾಗ್ಯವಿಲ್ಲ
ಉದಯಕಾಲದಲೆದ್ದು ಸ್ನಾನ ನಾನಾ ಕರ್ಮ
ಇದರ ತರುವಾಯ ವಿಪ್ಪವಯ್ಯಾ
ನಿಧಿನಿಧಿ ಎನಗಿದೆ ಮತ್ತೊಂದು ಮಾರ್ಗ ಕಾಣೆ
ಸದಮಲಾನಂದ ಮೂರ್ತಿ ಭಕ್ತರೊಡಿಯಾ
ಬುಧರು ಪೇಳುವರು ಮಹದುರಿತಕ್ಕೆ ಇದೆ
ಇದೆ ಪ್ರಾಯಶ್ಚಿತ್ತವೆಂದು ಒಲಿದೊಲಿದು
ಹೃದಯದೊಳಗೆ ತಿಳಿದು ನೆರೆ ನಂಬಿದೆ ನಿನ್ನ
ಪದಗಳ ಕೊಂಡಾಡುವ ಕೀರ್ತನೆಯ
ವಿಧದಿಂದಾಗಲಿ ಒಬ್ಬರ ನೋಡಿ ಮಾಡಲಿ
ಸುಧಿಯನ್ನು ಕುಡಿದಂತಾಗುವುದು
ಮದ ಗರ್ವ ನಾನಾದರು ನಿನ್ನ ನಾಮದ ಮಹಿಮೆ
ಪದೋಪದಿಗೆ ಎಣಿಸಿದರು ನೆಲೆಗಾಣೆನೊ
ತ್ರಿದಶರಿಗೆ ಮೀರಿದ ವಿಜಯ ವಿಠ್ಠಲ ವೆಂಕಟ
ಮುದದಿಂದ ನಿನ್ನ ನಾಮ ಎನ್ನ ಜಿಹ್ವೆಯಲ್ಲಿರಲಿ ೧
ಮಟ್ಟತಾಳ
ನಾನಾ ವ್ಯಾಪಾರ ನಿನ್ನಾಧೀನವು
ನಾನಾ ಸಂಪತ್ತು ನಿನ್ನಾಧೀನವು
ನಾನಾ ಲೋಕಂಗಳು ನಿನ್ನಾಧೀನವು
ನಾನಾ ಜಡಗಳು ನಿನ್ನಾಧೀನವು
ನಾನಾ ಜೀವರು ನಿನ್ನಾಧೀನವು
ನಾನಾ ಕರ್ಮಗಳು ನಿನ್ನಾಧೀನವು
ನಾನಾ ಪ್ರೇರಣೆ ನಿನ್ನಾಧೀನವು
ನಾನಾ ವ್ಯಾಪಕ ನಿನ್ನಾಧೀನವು
ನಾನಾ ಬಗೆಯಿಂದ ವ್ಯಾಪ್ತ ನೀನಾಗಿದ್ದು
ನಾನಾ ಗುಣದಿಂದ ತಿರುಗಿಸುವ ದೇವ
ನೀನೆ, ಇದನೆ ಮರೆದು ನಾನು ನನ್ನದು ಎಂದು
ನಾನಾ ಗರ್ವದಲಿ ನುಡಿದು ನುಡಿದು ಬಲು
ನಾನಾ ಯೋನಿಯಲ್ಲಿ ಚರಿಸಿದೆ ದು:ಖದಲ್ಲಿ
ನಾನು ನೀನೆ ಎಂಬ ಜನಕೆ ಬರುವ ಶೋಕ
ಏನೆಂಬೆನು ಎಣಿಸಿ ಕಡೆ ಮೊದಲೆ ಕಾಣೊ
ಜ್ಞಾನಪರ್ವದ ವಾಸ ವಿಜಯ ವಿಠ್ಠಲ ವೆಂಕಟ
ಜ್ಞಾನಿ ಳರಸೆ ನಿನ್ನ ಪೊಗಳುವೆನೋ ೨
ತ್ರಿವಿಡಿ ತಾಳ
ನಾಹಂಕರ್ತಾ ಹರಿ:ಕರ್ತಾನೆಂಬೊ ವಚನವೆ ಮರೆದು
ಅಹಂಮತಿಯಿಂದಲಿ ತಿರುಗಿ ತಿರುಗಿ
ದ್ರೋಹವೆ ಘಳಿಸಿದೆ ಮಾಯಾ ಪಾಶದ ಒಳಗೆ
ಮೋಹದಿಂದಲಿ ಬಿದ್ದು ಬಹು ಕರ್ಮವ
ಸಾಹಸದಲಿ ಮಾಡಿ ಬರಿದಾದೆ ಎಲ್ಲೆಲ್ಲಿ
ಹೋಹದಲ್ಲದೆ ಲೇಶ ಸುಖಗಳಿಲ್ಲ
ಶ್ರೀ ಹರಿ ಕೇಳಯ್ಯಾ ಎನ್ನ ಮೊರೆ ಲಾಲಿಸೊ
ಈ ಹದನ ಕಲ್ಪಿಸಿದವರು ಆರೋ
ಪಾಹಿ ಪರಮ ಪುರುಷ ಪ್ರಣತಾರ್ಥಿಹರ ಸಂ
ದೇಹವಿಲ್ಲದೆ ಎನ್ನ ಮನ ದೈವವೇ
ಬಾಹಿರಂತರ ಪ್ರೇರಕ ಪರಿ ಪೂರ್ಣನಾದ
ಮಹತ್ತ ರೂಪವೆ ಸ್ಥೂಲ ಸೂಕ್ಷ್ಮ
ದೇಹದೊಳಗೆ ಇದ್ದು ದ್ವಿವಿಧ ಕರ್ಮಂಗಳು
ದೇಹಿಗಳಿಗೆ ಒಂದೊಂದು ಕಟ್ಟಿ ಸೋಹಂ ದಾ
ಸೋಹಮೆಂದು ನುಡಿಸಿ ಪುಣ್ಯ ಪಾಪ
ನೀ ಹಿತದಿಂದಲಿ ಉಣಿಸುವನೆ
ದ್ರುಹಿಣ ಪಿತ ನಮ್ಮ ವಿಜಯ ವಿಠ್ಠಲ ವೆಂಕಟ
ಸ್ನೇಹದಿಂದಲಿ ಎನಗೆ ಇದನೆ ಕರುಣಿಸಬೇಕು ೩
ಅಟ್ಟತಾಳ
ಎನ್ನ ಮನಸು ನಿನ್ನ ನಾಮಸ್ಮರಣೆಯಲ್ಲಿ
ಘನ್ನವಾಗಿ ಎರಗಿದೆ ಪ್ರಾಚುರ್ಯದಿ
ಇನ್ನೊಂದು ಕರ್ಮವ ಮಾಡಬೇಕಾದರು
ಉನ್ನತವಾಗಿ ಒಲ್ಲೆನಯ್ಯಾ ತಿರ್ಮಲ
ಚನ್ನಾಗಿ ನೀ ನಿದ್ದು ಇದೇ ಸಾಧನವನ್ನು
ಅನಂತಕಾಲಕ್ಕೂ ಮಾಡಿಸು ಬೇಡುವೆ
ಬನ್ನ ಬಡಿಸುವ ಪಾಪ ಕಳೆಯುತ್ತ
ನಿನ್ನ ಮೂರ್ತಿಯನ್ನು ಮನದೊಳು ತೋರುತ್ತ
ಎನ್ನ ಭಾಗ್ಯವಿದೆ ವಿಜಯ ವಿಠ್ಠಲ ವೆಂಕಟ
ರನ್ನ ರಾಗದೂರ ರಾಜೀವನೇತ್ರ ೪
ಆದಿತಾಳ
ದನುಜ ಭಂಜನ ರಂಜನ, ಇನಪ್ರಕಾಶ ನಿರಂಜನ
ಜನ ಪರಿಪಾಲಕ ಅಂಜನತನು ಜವಿನುತ ಕಂಜನ
ಮನದಲಿ ಇಡು ಪ್ರಭಂಜನ ಅನಮತವಾದರೆ ಒಲಿವ
ಕಂಜನಾಭ ವಿಜಯ ವಿಠ್ಠಲ ಅಂಜನಗಿರಿವಾಸ ವೆಂಕಟ ೫
ಜತೆ
ಭಕ್ತಿಲಿ ಕೀರ್ತನೆ ಮಾಡುವಂತೆ ಒಲಿಯೆ
ಮುಕ್ತಿ ದಾಯಕ ನಮ್ಮ ವಿಜಯ ವಿಠ್ಠಲ ವೆಂಕಟ ೬

ಮನುಷ್ಯ ವಿರಕ್ತನಾಗಿ ಬಾಳಲು ಯತ್ನಿಸಿದರೆ

೨೬
ಧ್ರುವತಾಳ

ಇರಬೇಕು ಸಂಸಾರದೊಳಗಿಲ್ಲದಿರಬೇಕು
ತರುಣಿ ಮಕ್ಕಳು ಮನೆ ಧನ ಪಶು ಬಂಧು ಬಳಗ
ಪರಿವಾರದೊಡನೆ ಆಸಕ್ತನಾಗಿ ಮುಳುಗಿ
ಹರಿದ ಕಾಲಕ್ಕು ನಾನಾವಿಷಯ ಲಂಪಟದಲ್ಲಿ
ಚರಿಸುತಿದ್ದರು ಬಲು ಚತುರವಂತನಾಗಿರೆ
ಇರುಳು ಹಗಲು ಉದಾಸೀನನಾಗಿ ನೋಳ್ಪರಿಗೆ
ಸರುವ ಕೋಟಲೆ ಇವನೆಂದೆನಿಸಲಿ ಬೇಕು
ನಿರುತ ಸೌಭಾಗ್ಯ ಬಲುದಾರಿದ್ರ ಬಂದಡರೆ
ಶರಧಿಯೆಂದದಿ ಸುಖಪೂರ್ಣನಾಗಲಿ ಬೇಕು
ಶಿರ ನಯನ ನಾಸಾ ಕರ್ನಾ ವದನ ಹಸ್ತಾಂಘ್ರಿಮಿಕ್ಕ
ಎರಡು ಕೂಡಿಂದಾಗುವ ಗಾತ್ರದ ವ್ಯಾಪರ
ಹರಿ ಪ್ರಕೃತಿ ತಾತ್ವಿಕರಲ್ಲೆಲ್ಲಿ ನಿಂದು ನಿಂದು
ಅರಘಳಿಗೆ ತೊಲಗದಲೆ ಮಾಳ್ಪರು ಬಿಡದೆಂದು
ಅರಿದು ಕ್ಷಣಕ್ಷಣಕೆ ಹಿಗ್ಗಬೇಕು ತನ್ನೊಳಗೆ
ಪರಮ ಕ್ಲೇಶ ಸಂತೋಷ ಬರಲಾಗಿ ಒಂದೇ ಸಮ
ಹರಿ ತತ್ಕಾಲಕ್ಕೆ ಸ್ವಯೋಗ್ಯತಾನು ಸಾರ
ಪರಿ ಪರಿ ಕರ್ಮಗಳು ಒಳಗಿದ್ದು ಮಾಡಿಸುವ
ಅರಮರೆ ತಿಳಿದು ಸಂಶಯ ಬಡಬಾರದು
ನೆರೆದು ಮಾನವರೊಳು ಕುಳಿತಿದ್ದರು ಮನಸು
ಹರಿ ಪಾದದಲ್ಲಿ ಇಟ್ಟು ಧೇನಿಸುತ್ತಿರಬೇಕು
ಹೊರಗೆ ನೋಡಿದರು ದುಗ್ಗಾಣಿಗೆ ಸಲ್ಲಾನೆಂದು
ಪರರಿಂದೆನಿಸಿಕೊಂಡು ನಗಬೇಕು ಪ್ರೀತಿಯಲ್ಲಿ
ಹರಿ ಗುರುಗಳ ದಾಸರಿಗೆ ದತ್ತ ಪ್ರಾಣ
ತರತಮ್ಯದಿಂದಲಿ ಎಣಿಪುದು ಮನದೊಳಗೆ
ಮರುಳು ಬಂದವನಂತೆ ಸಕಲ ಪುಣ್ಯಭೂಮಿಯ
ಚರಿಸಬೇಕುತಾನು ನಿಂದಲ್ಲಿ ನಿಂದಿರದೆ
ಹರಿ ಇಚ್ಛೆಯಿಂದ ಬಂದ ಲಾಭಾಲಾಭಗಳನು
ಕರಿಸಬೇಕಲ್ಲದೆ ಹತ್ತದೆಂದೆನಸಲ್ಲ
ಹರಿ ಸ್ಮರಣೆಗೆ ವಿಘ್ನವಾಗದಂತೆ ಆತನ್ನ
ಕರುಣ ಪಡಿಯಬೇಕು ಒಂದೆ ಭಕ್ತಿಯಲ್ಲಿ
ಸುರರಾದಿಗಳ ದೆಸೆಯಿಂದ ಫಲ ಐದಿದರೂ
ಹರಿ ಪ್ರೇರಣೆಯಲ್ಲದೆ ಸ್ವಾತಂತ್ರ ಒಬ್ಬರಲ್ಲ
ಬರಿದೆ ಆವಾವವರ ಪ್ರೇರಣೆ ಪಾಲಣಿಯ
ಹಿರಿಯರು ನಮಗಿಂದ ನೀಚರಿಗಹುದೆನ್ನಿ
ಬಿರಿ ಮಳಿಯೊಳಗೆ ಹೆಳ್ಳೆಸಾಲು ಇಕ್ಕಿದಂತೆ
ಕುರುಹ ನೋಡಲಿಬೇಕು ಸಂಸಾರದ ಸ್ಥಿತಿ
ಪರಕೆ ಮತ್ತಾವುದೊ ಸಹಾಯ ಎಂಬೋವೀ ಮಾ
ಯರವಾಗುವದಲ್ಲದೆ ಘಳಿಸಿದ ಸರ್ವೋಪಾಯ
ಧರಣಿವಿಬುಧ ಜನುಮ ಬಯಸೊ ಮತ್ತೆ ಬಯಸೊ
ಮರುತ ದೇವನ ಮತ ಪೊಂದೊ ಸತತನಿಂದೂ
ಗುರುಗಳಿಗೆ ಗುರು ನಮ್ಮವಿಜಯ ವಿಠ್ಠಲರೇಯನ
ಶರಣರ ಸಂಗದಲ್ಲಿ ಮನದೆಗಿಯದೆ ನಿಲ್ಲು ೧
ಮಟ್ಟತಾಳ
ಉಂಡರೆ ಉಣಲಿಲ್ಲ ಉಟ್ಟರೆ ಉಡಲಿಲ್ಲ
ಕೊಂಡರೆ ಕೊಳಲಿಲ್ಲ ಕೊಟ್ಟರೆ ಕೊಡಲಿಲ್ಲ
ಕಂಡರೆ ಕಾಣಲಿಲ್ಲ ಕರೆದರೆ ಕರೆಯಲಿಲ್ಲ
ಹೆಂಡತಿ ಎನಗೇನು ನಾನು ಅವಳಿಗಾರು
ಗಂಡುಗಲಿಯಾರೊ ಗತಿಗೆಡುವನಾರೊ
ಥಂಡ ಥಂಡದಮಾತು ಪೇಳಿಕೋಳುವನಾರೊ
ಭಂಡು ಸಂಸಾರದೊಳು ಇಟ್ಟು ತಗುವನಾರೊ
ದಂಡನೆ ಮಾಡಿಸುವ ಬಿಡಿಸಿ ಕೊಂಬವನ್ಯಾರೊ
ಮಂಡನಾದಿ ವಸ್ತು ಕೂಡಿಸಿ ಧರಿಪನಾವ
ಮಂಡಲದೊಳಗಿದ್ದು ಇದೆ ಖಚಿತವು ತಿಳಿದು
ಬೆಂಡು ಮತ್ತೆ ಕಲ್ಲು ತೇಲಿಪ ಮುಳುಗಿಸುವ
ಪುಂಡರೀಕಾಕ್ಷನ್ನ ಮಹಿಮೆ ಇನಿತೆಂದು
ಕೊಂಡಾಡುತ ಸೊರಗಿ ನಲಿನಲಿದು ತಿರುಗಿ
ಕೆಂಡವನೆ ನೋಡಿ ಶಿಶು ಭಯ ಬೀಳದಲೆ
ಅಂಡಿಯಲ್ಲಿ ಪೋಗಿ ತುಡುಕುವಂತೆ ಉ
ದ್ದಂಡ ಭವದಲ್ಲಿ ಭವಣೆಗಳಟ್ಟಿದರು
ಕೆಂಡಕ್ಕೆ ಸಣ್ಣವನು ಭಯ ಬೀಳದಂತಿರೋ
ಹಿಂಡು ದೈವದ ಗಂಡ ವಿಜಯ ವಿಠ್ಠಲರೇಯನ
ತೋಂಡರ ಬಳಿಯಲ್ಲಿ ತೊಲಗದೆ ಓಲ್ಯಾಡು ೨
ತ್ರಿವಿಡಿ ತಾಳ
ಅಂಗಣದೊಳು ಪಕ್ಕಿ ಕುಳಿತು ಹಾರಿದಂತೆ
ಅಂಗಡಿಯ ನೆರಹಿ ತಿರುಗಿ ಜನ ಪೋದಂತೆ
ಮುಂಗುಡಿ ಮಕ್ಕಳು ಮನೆಗಟ್ಟಿ ಕೆಡಿಸಿದಂತೆ
ಹಿಂಗದಲೆ ವಂತಿಗೆಯ ಮಂದಿ ಸಾಗಿದಂತೆ
ಸಂಗಾತದವರ ತನ್ನ ಕೂಡಲಿದ್ದರು ಅವರ
ಹಂಗಿಗನಾಗದೆ ಅದರಂತೆ ಗುಣಿಸೋದು
ಮುಂಗಾರಿ ಮಿಂಚಿನಂದದಿ ದೇಶದೊಳಗೆ ನಿ
ಸ್ಸಂಗನಾಗಿ ತಿರುಗಿ ಕಾಲ ಕಳೆಯಬೇಕು
ಬಂಗಾರ ಮೊದಲಾದ ದ್ರವ್ಯಗಳ ಕಂಡರೆ
ಮುಂಗಾಲಲಿ ಒದೆದು ದಾಟಿ ಪೋಗುವದಯ್ಯ
ಹಂಗಿಗನಾಗದಿರು ಪರರ ವಶಕೆ ಶಿಲ್ಕಿ
ಭಂಗವಾದರು ಲೇಶ ಖೇದ ಬಡದಿರು
ಮಂಗಳ ಮೂರುತಿ ವಿಜಯ ವಿಠ್ಠಲರೇಯನ
ಸಂಗೀತದಲಿ ಬಾಳೆ ಹರಿದಾಸರ ಪಾದಕೆ ಬೀಳೊ ೩
ಅಟ್ಟತಾಳ
ಧರಣಿಯಂತೆ ತಾಳೊ ಮರುತನಂತೆ ಸಂ
ಚರಿಸು ಪಾವಕನಂತೆ ಹೊರಗೆ ತೋರದಲಿರು
ಮರಳಿ ಉದಕದಂತೆ ಹರಿದು ಪೋಗುತಲಿರು
ಇರು ಅಕಾಶದಂತೆ ಸರಿಸದಲ್ಲಿ ದೂರ
ಪರರಾಪೇಕ್ಷೆಯ ಬಿಡು ಪರಲೋಕವ ಬೇಡು
ಪರದೈವ ವಿಜಯ ವಿಠ್ಠಲರೇಯನ ಲೀಲೆ
ಸ್ಮರಿಸಿ ಧನ್ಯನಾಗು ದುರಿತವ ನೀಗು ೪
ಆದಿತಾಳ
ಒಂದೆ ಪ್ರಯೋಜನ ಮಾಡಿದರದರೊಳು
ಇಂದಿರಾ ಪತಿ ಉಂಟು ಇಂದಿರೆ ಉಂಟು
ಒಂದೆರಡು ಗುಣ ಉಂಟು ಕಾಲ ಪ್ರಕೃತಿ ಉಂಟು
ವೃಂದಾರಕರುಂಟು ಕ್ರಮಾನುಸಾರದಿಂದ
ಗಂಧ ರಸ ರೂಪ ಸ್ಪರ್ಶ ಶಬ್ದ ಉಂಟು
ಕುಂದದೆ ನಭ ವಾಯು ಅನಳ ಪಾವನಿ ಉಂಟು
ಇಂದ್ರಿಯಂಗಳುಂಟು ಹನ್ನೊಂದು ಐವತ್ತು
ಒಂದು ವರ್ಣಗಳುಂಟು ಶ್ರುತಿ ಪುರಾಣಗಳುಂಟು
ಒಂದೊಂದು ಕರ್ಮವುತ್ಪತ್ತ್ಯಾದಿ ಸ್ವಾತಂತ್ರಗಳು ಉಂಟು
ಅಂದು ಮೊದಲಾಗಿ ಕಡೆ ಭಾಗ ಪರಿಯಂತ

ಪ್ರಾರಬ್ದ ಕರ್ಮವನ್ನು ಅನುಭವಿಸದೆ ಇರಲು

೨೮
ಧ್ರುವತಾಳ
ಈ ಪ್ರಾರಬ್ಧ ಕರ್ಮವೇಸು ದಿವಸ ಉಂಟೋ
ನೀ ಪ್ರೀತಿಯಿಂದಲಿ ಪೇಳೊ ಜೀಯಾ
ನಾ ಪ್ರಪಂಚದವನಲ್ಲ ನಿರ್ಮಳನಾಗಿ ನುಡಿದೆ
ಹೇ ಪ್ರಾಣನಾಥನೆ ವರದಾಯಕಾ
ಆ ಪ್ರಕೃತಿ ಸಂಬಂಧದಿಂದ ಬಂದ ತ್ರಿಗುಣ
ಸು ಪ್ರಯೋಜನದಲ್ಲಿ ಮಿಳಿತವಯ್ಯಾ
ನಾ ಪ್ರತಿಕೂಲಕಾಣೆ ನಿನ್ನಿಚ್ಚೆಯಲ್ಲದೇ
ಭೂ ಪ್ರವೇಶದಿಂದ ಲೇಶ ಮಾತುರ ಪೊಂದಿ
ದ ಪ್ರತಿಬಂಧಕ ತೊಲಗುವುದೇ
ಶ್ರೀ ಪ್ರೀಯನಾದ ರಂಗ ವಿಜಯ ವಿಠ್ಠಲ ನೀನೆ
ಈ ಪ್ರಕಾರ ಮಾಳ್ಪದು ಬಿಡಿಸ ಬಲ್ಲವರಿಲ್ಲಾ ೧
ಮಟ್ಟತಾಳ
ಸಾಕು ಸಾಕು ಎನಗೆ ಇಹಲೋಕದ ಸುಖ
ಬೇಕು ಬೇಕು ನಿನ್ನ ಚರಣ ಕಮಲವನ್ನು
ನೂಕು ನೂಕು ಬಂಧ ಭವವಾರುಧಿಯನ್ನು
ಸಾಕು ಸಾಕುವುದು ಭಕ್ತರೊಳಣಿಸಿ
ಹಾಕು ಹಾಕದಿರು ಗರ್ಭದ ದು:ಖಕ್ಕೆ
ಜೋಕಿ ಜೋಕಿ ಮಾಡು ಜ್ಞಾನ ಭಕುತಿ ಕೊಟ್ಟು
ಕಾಕುಲತಿ ಬಡಿಸು ಕಂಡಲ್ಲಿ ಚರಿಸಿದಂತೆ
ಲೋಕ ನಾಯಕ ನಮ್ಮ ವಿಜಯ ವಿಠ್ಠಲ ಕರು
ಣಾಕರ ಮೂರ್ತಿಯೇ ಈ ವಾಕು ಲಾಲಿಸುವುದು ೨
ತ್ರಿವಿಡಿತಾಳ
ಇದರಿಂದ ಸಾಧನ ಇಪ್ಪದಿಲ್ಲವೊ ದೇವಾ
ಅದು ಭೂತವಾಗಿದೆ ನೋಡಿದದಕೋ
ಸದರ ವಿಲ್ಲದೆ ನಾನು ಅನುಭವಿಸುವ ಕರ್ಮ
ಮುದದಿಂದ ತಿಳಿದರು ನೆಲೆಗಾಣೆನೋ
ಉದರಗೋಸುಗ ಹರಿ ತಿರುಗುವಂತೆ ಮಾ
ಡಿದನೊ ಎಂಬುದು ಎನಗೆ ತೋರುತಿದೆ
ಇದರ ವಿಚಾರ ವಿಸ್ತಾರವಾಗಿ ನಿನಗೆ
ಮೊದಲಿಂದ ಬಲ್ಲವಿಕೆ ನುಡಿವುದೇನು
ಹೆದೆ ಏರಿಸಿ ಬಾಣ ಹೂಡೆದಂತೆ ನಿತ್ಯದೇ
ಶದ ಮೇಲೆ ಚರಿಸುವೆ ನಿನ್ನಿಂದಲಿ
ಮದವುಳ್ಳ ಮನುಜರ ಉನ್ನತ ತಗ್ಗಿಸಿ
ಪದವಿಯ ಕೊಡಿಸುವ ಕೊಡುವವನೆ
ಉದಕ ಓದನವೆಲ್ಲ ಪೋರ್ವೋಕ್ತ ಪ್ರಕಾರ
ಪದೋಪದಿಗೆ ನೀನು ಇತ್ತಂತೆವೇ
ಮೇದೆವುತ್ತ? ಶಾರೀರ ಧರಣದಲ್ಲಿ ಬಾಳಿ
ಬದುಕುವೆನಯ್ಯಾ ಬಹು ಮಂದಿ ಕೂಡ
ಅಧಿಕ ಮತ್ತಾವುದು ನಿನ್ನ ಸಂಕಲ್ಪಕ್ಕೆ
ತುದಿಯಷ್ಟು ಬಿಡಿಸಿ ಕೊಂಬುವನು ಇಲ್ಲಾ
ಬದಿಯಲ್ಲಿ ಇಪ್ಪ ಸಿರಿ ವಿಜಯ ವಿಠ್ಠಲ ಸರ್ವ
ನಿಧಿ ನದಿಗಳು ನಿನ್ನ ಪದನಖದಲಿ ಉಂಟು ೩
ಅಟ್ಟತಾಳ
ಪುರ ವೈರಿ ಚಂದ್ರಮ ಸುರಪತಿ ಭಾಸ್ಕರ
ಸುರರಾದ್ಯರಿಗೆ ತಪ್ಪಲರಿಯದು ಪ್ರಾರಬ್ಧ
ನರದೇಹ ತೆತ್ತ ಮಂದರಿಗೆ ಬಿಡುವುದೆ
ಹರಿ ನಿನ್ನ ಇಚ್ಛೆಯ ಪರಿಹರಿಸುವನಾರು
ಪರಧನ ಪರ ಓದನ ಮಿಗಿಲಾದವು
ಪರಿ ಪರಿಯಿಂದ ಬಂದರೆ ಉಣಲಿ ಬೇಕು
ಶಿರವನ್ನು ಬೀಸಿ ಕೊಸರಿಕೊಂಡರೇನಯ್ಯಾ
ಬರಿದೆಯಲ್ಲದೆ ಮನುಜರಿಂದಾಗುವುದೇನು
ಧರಿ ಮೇಲೆ ಇಪ್ಪ ಪರ್ಯಂತ ನೀನಿಟ್ಟ
ತೆರದಲ್ಲಿ ಇರಬೇಕು ಸ್ಮರಣೆಯ ಮಾಡುತ್ತ
ಗುರದ್ವಾರದಲಿಂದ ದೊರೆತದ್ದು ಕೈಕೊಂಡು
ಹರಿಯ ಧ್ಯಾನದೊಳಿರಬೇಕು ಇರಬೇಕು
ಇರವ ಬಲ್ಲವ ನಮ್ಮ ವಿಜಯ ವಿಠ್ಠಲ ನಿನ್ನ
ಚರಣವೆ ಪ್ರಧಾನ ಬಲವಾಗಿ ಇರಲಿ ೪
ಆದಿತಾಳ
ಆವಗತಿ ಎನಗೆ ಚಿಂತಿಸಿ ಇದ್ದಿಯಾ
ಶೈವಾದಿ ಮತದವ ನಾನಲ್ಲ ಎಲೊನಲ್ಲ
ಲಾವಕರಿಗೊಪ್ಪಿಸಿ ಗತಿಗೆಡಸದಿರು
ಠಾವಠಾವಿನಲ್ಲಿ ನಿನ್ನ ನಿಜ ವ್ಯಾಪಾರ ಉಂಟು
ಕಾವಪ್ರದಾತ ನೀನೆ ಕಂಡವರನರಿಯ
ನೋವುನೋವಾದರೂ ಪೋಗಲಾಡುವೆ ಶುದ್ದ
ಜೀವಿಗಳಿಗೆ ಪಂಚ ಪ್ರಾಣವಾಗಿ ಇಪ್ಪನೆ
ಗೋವ ಗೋಪೆರ ಕೂಡ ನಲಿದಾಡಿದ ವಾಸು
ದೇವ ಎನಗೆ ಕೇಳೋ ದೋಷಾ ಎಂಬುಂದು ಪುಸಿ
ಈಪಾಣಿ ದಯಮಾಡಿ ಇತ್ತದದಕೆ ಮುನ್ನೆ
ಪಾವನ ಮಾಡುವುದು ಏಕ ಮನಸು ಕೊಟ್ಟು
ಕೋವಿದ ರಾಯಾ ನಮ್ಮ ವಿಜಯ ವಿಠ್ಠಲ ನಿನ್ನ
ಸೇವೆ ಒಂದುಳ್ಳರೆ ಯಾವತ್ತು ಸುಖವುಂಟು ೫
ಜತೆ
ನಿನ್ನ ಮನಸು ಬಂದದಲ್ಲದೆ ಜಗದೊಳು
ಅನ್ಯ ಯೋಚನೆಯಿಲ್ಲ ವಿಜಯ ವಿಠ್ಠಲಧೊರಿಯೇ ೬

ಮನುಷ್ಯ ಹುಟ್ಟಿದ ಮೇಲೆ ಬದುಕಲು

೧೧
ಝಂಪಿತಾಳ
ಈ ಭಾಗ್ಯವೇ ಸಾಕು ಇಹದಲ್ಲಿ ಇದ್ದನಿತು
ಸೌಭಾಗ್ಯವಲ್ಲವೆ ಸರಸಿಜಾಕ್ಷ
ಕುಭಾವ ಬಿಟ್ಟು ನಿನ್ನ ಚರಣ ಕಮಲವನ್ನು
ಲೋಭವಾಗದಂತೆ ಎನ್ನ ಮನಸು
ನಾಭಿಯಿಂದಲಿ ಏಕಭಕುತಿ ಮಾರ್ಗವ ಪಿಡಿದು
ಲಾಭವಾಗಲಿ ಬಿಡದೆ ನಿರುತಾರ್ಚನೆ
ಶ್ರೀ ಭಾಗೀರಥಿ ಜನಕ ವಿಜಯ ವಿಠ್ಠಲ ಪರ-
ಮ ಭಾಗವತರೊಡನೆ, ಕೂಡಿಸೆನ್ನಾಡಿಸೂ ೧
ಮಟ್ಟತಾಳ
ಇಡುವುದು ತೊಡುವುದು ನಡಿನುಡಿಗೆ ಹಿಗ್ಗಿ
ಒಡನೆ ಒಡನೆ ಸುಖ ಬಡುವುದು ವಿಷಯಂಗ
ಳಡಿಗಡಿಗೆ ನೋಡಿ, ಒಡವೆ ಸಕಲ ವಸ್ತ
ಕೊಡುವ ತೊಡೆವ ಸೊಬಗು, ಸದಾ ಎನಗಿವು, ಒಂ-
ದಡಿಯೊಳಗಿದ್ದರು, ನಡೆಯದು ಎನ್ನೊಡೆಯ
ಪಡೆದೆ ಮಾದಲಾದವರು ಕಡೆಗಾಣಲಿಲ್ಲ
ಪೊಡವಿಗೆ ನಾನಾ ಗಿಡದ ತೊಪ್ಪಲು, ಫಣಿಯ
ಪೆಡೆಯ ತುಳಿದ ದೇವ ವಿಜಯ ವಿಠ್ಠಲ ಜೀವ
ದೊಡೆಯನೆ ಕೊಡದಿರು ಗಡ ಅಹಂಕಾರವನು ೨
ತ್ರಿವಿಡಿ ತಾಳ
ಉತ್ತಮ ತೀರಥ ಯಾತ್ರೆ ಮಾಡುವುದೆ ಭಾಗ್ಯ
ಉತ್ತಮ ಶ್ರವಣ ಜನ್ಯವಾಗುವದೇ ಭಾಗ್ಯ
ಉತ್ತಮ ವಿಧಿಯಲ್ಲಿ ವಾಸವಾಗೋದೆ ಭಾಗ್ಯ
ಉತ್ತಮ ಸಂಗತಿಯಲಿಪ್ಪದೆ ಬಲು ಭಾಗ್ಯ
ಉತ್ತಮ ದಿನಗಳಲಿ ದಾನಧರ್ಮವೆ ಭಾಗ್ಯ
ಉತ್ತಮ ತಾನಾಗಿ ಸಂಚರಿಸುವುದೆ ಭಾಗ್ಯ
ಉತ್ತಮ ಸ್ಥಳಂಗಳಲಿ ಕಾಯ ಬಿಡುವುದೆ ಭಾಗ್ಯ
ಉತ್ತಮ ಶ್ಲೋಕ ನಮ್ಮ ವಿಜಯ ವಿಠ್ಠಲರೇಯ
ಉತ್ತಮನು ಮಾಳ್ಪದೋ ಎನಗೆ ಮಹ ಭಾಗ್ಯ ೩
ಅಟ್ಟತಾಳ
ಪರರ ಬಾಗಿಲೊಳು ಪರಿಚಾರಕನಾಗಿ ಸಾ
ಸಿರ ಬಾರಿ ಒರಲಿ ಕಂಡವರಿಗೆ
ಶಿರಬಾಗಿ ಮರಿಯಾದೆ ಇಲ್ಲದೆ ತಿರುಗಿ
ತಿರಿದು ಹಗಲಿರುಳು ಬಿಡದೆ, ಅವ-
ರರಿದಂತೆ ಅವಸರ ಪರಿ-
ಪರಿಯಿಂದಲಿ ಮಾಡಿ ಈ ಪೊಟ್ಟೆಯ
ಪೊರೆವ ಕಾರಣವಿತ್ತವ ತಂದು ಬದುಕುವು
ದಕಿಂತ, ಸುಮ್ಮನೆ ಮರಣವೆ ಲೇಸಯ್ಯ
ಪರಮಾತ್ಮ ವಿಜಯ ವಿಠ್ಠಲರೇಯ ನಿನ್ನ ಪೆ
ಸರ, ಪೊಗಳುವ ದಾಸರ ಮನೆ ಮುಂದೀಗ
ಬರಿದೆ ಇಪ್ಪದು ಭಾಗ್ಯ ಬರಿದೆ ಇಪ್ಪದು ಭಾಗ್ಯ೪
ಆದಿತಾಳ
ಅನಂತ ಜನುಮದೊಳೊಂದೆ ಜನುಮದಲ್ಲಿ
ಅನಂತ ಯುಗದೊಳೊಂದೆ ಯುಗದಲ್ಲಿ
ಅನಂತ ದಿನದೊಳಗೊಂದೆ ದಿನದಲ್ಲಿ
ಅನಂತ ಘಳಿಗೆಯೊಳೊಂದೆ ಘಳಿಗೆಯಲ್ಲಿ
ಅನಂತ ಕಾಲದೊಳೊಂದೆ ಕಾಲದಲ್ಲಿ
ಘನ್ನಭಾಗ್ಯನಾಗಿ ಒಂದಡಿ ಸುಖ ಬಡುವ
ಬಿನ್ನಣವನು ನಾನಿನ್ನು ಬಲ್ಲೆನೂ ರಂಗ
ನಿನ್ನ ಸ್ಮರಣೆಯಲ್ಲಿ ಚನ್ನಾಗಿ ರತಿ ಇಡಿಸೊ
ಪನ್ನಗಶಯನ ಶ್ರೀ ವಿಜಯ ವಿಠ್ಠಲರೇಯ
ಎನ್ನ ಸಾಕುವ ಪ್ರಸನ್ನ ಮೂರುತಿ ಕೇಳೊ ೫
ಜತೆ
ದಯ ಮಾಡೋ ಎನ್ನೊಡೆಯಾ, ದಾಸನೆಂಬುವುದು ನಿ-
ಶ್ಚಯವಾಗಿ ನಿರುತಾ, ವಿಜಯ ವಿಠ್ಠಲ ಎನಗೆ ೬

ಕಾಮವನ್ನು ರು

೧೨
ಧ್ರುವತಾಳ
ಈ ಮಾಯಾ ಸಂಸಾರ, ಆರಾಮದೊಳಗೆ ಬಂದು
ಕಾಮವೆಂಬೊ ಪೆಬ್ಬುಲಿ ಗಂಟಲ ಪಿಡೆದೆದೆ
ತಾಮಸವೆಂಬೊ ಕಾವಳ ಸುತ್ತಿ ದಶದಿಕ್ಕು
ಭೂಮಿಯೋಮಾದಲ್ಲಿ ಎತ್ತ ತಿನಿಸುತಿದೆ
ಈ ಮನವೆಂಬೊದು ಅತಿ ಚೋರನು ತನ್ನ
ಸೀಮೆಯೊಳಗೆ ಬಂದನೆಂದು ನಲಿಯುತಿದೆ
ಭೀಮ ಕರ್ಮದ ಗಣ ಸುತ್ತುಮುತ್ತಲು ಕವಿದು
ವಾಮ ದಿಕ್ಕಿಲಿ ಕ್ರೂರ ಶಬ್ಧ ಪೆಚ್ಚುತಲಿದೆ
ಸ್ವಾಮಿ ಎನಗೀ ಪರಿ ಸಂಕಟ ಹೆಚ್ಚಿತು
ವೈಮನನಾದೆ, ವೈಕುಂಠ ರಮಣನೆ
ಕಾಮಿತಪ್ರದ ನಮ್ಮ ವಿಜಯ ವಿಠ್ಠಲ ನಿನ್ನ
ನಾಮಧಾರಿಗೆ ಇಂದು ವಿರೋಧವಾಗಬಹುದೆ ೧
ಮಟ್ಟತಾಳ
ಅಂಜದಿರಿಂದೆನ್ನ ಮುಂಜೆರಗನು ಪಿಡಿದು
ಅಂಜಿಸುವ ಖಳಗಂಜಿ ಕಡೆಗೆ ಹಾಕೊ
ಪಂಜರದರಗಿಳಿಯಾ, ಮಂಜೀರನಾ ಕಯ್ಯ
ಭಂಜನಿಗಾದಂತೆ, ಜಂಝರ ನಾನಾದೆ
ಆಂಜನೇಯನ ಗುರುವೆ ವಿಜಯ ವಿಠ್ಠಲ ಧ-
ನಂಜಯನ ಪ್ರೀಯ ಪುಂಜರ ಪ್ರಕಾಶ ೨
ತ್ರಿವಿಡಿ ತಾಳ
ಸುತ್ತ ಬಲಿಯ ಬಿದ್ದು ಸುಡುತ ಬರುವ ದಾವಾ
ಎತ್ತ ಓಡಿದರು ದುರ್ಭಯವೊ ಬೆನ್ನ
ಹತ್ತಿ ಬರುವ ಶ್ವಾನ ನಿಲವಿಲ್ಲದಲೆ ಬಾ
ಗೊತ್ತಿ ಚಾಪವ ಪಿಡಿದ ದುರುಳ, ಕಿಣತ
ಎತ್ತಿ ಹೊಡೆವ ಬಾಣ, ಹೂಡಿ ತಾ ಬೊಬ್ಬಿರಿ-
ಯುತ್ತ ಹಾಕುವ ಘೋಷ ಅದರೊಳಗೆ
ತತ್ತಡಿಯಲ್ಲಿ ಒಂದು ಹರಿಣಿ ಸಿಲ್ಕಿ ಪ್ರ-
ಸುತ್ತವಾಗುವ ಕಾಲ ಒದಗಿದಂತೆ
ದತ್ತ ಸಂಸಾರದೊಳು ಹರಿಣಿಯಂತಲಿ ನಾನು
ತತ್ತಳ ಗೊಂಬೆನು ದು:ಖದಲಿ
ಕತ್ತಲೆ ಹರಸಿ ಸಿರಿವಿಜಯವಿಠ್ಠಲ ಎನ್ನ
ಎತ್ತಲಾದರು ಒಯ್ದು ಧಡಕ ಸೇರಿಸುವುದು ೩
ಅಟ್ಟತಾಳ
ಕಣ್ಣು ಬಿಗಿದಾರಣ್ಯದೊಳಗೆ ಕರ
ಚನ್ನಾಗಿ ಬಿಡದಲೆ ತನ್ನತ್ತ ಎಳದೊಯ್ದು
ಕಣ್ಣುಗೆಡಿಸಿ ಎನ್ನ ಪುಣ್ಯವಗಳದು ಹೀ-
ನನ್ನ ಮಾಡುತಿದೆ ವನ್ನಜನಯನ ಸಂ-
ಪನ್ನ ವಿಜಯ ವಿಠ್ಠಲನಂತ ಗುಣನಿಧಿ
ಘನ್ನ ಘಾತರರೊಳಗಿನ್ನು ಸೈರಿಸಲಾರೆ ೪
ಆದಿ ತಾಳ
ಧರಿಸಲಾರೆನು ಕಾಯ ಧರಣಿಧರನೆ ಕೇಳು
ಮರಿಯದೆ ನಿನ ಪಾದವನು ನಂಬಿದವನ
ದುರುಳ ಕಾಮಾದಿಗಳ ದೂರ ಮಾಡಿ ವಿ-
ಸ್ತರ ಮಹಿಮ ಪಾಲಿಸೊ ವಿಜಯ ವಿಠ್ಠಲರೇಯ ೬
ಜತೆ
ಕಾರುಣ್ಯದಲಿ ಸಂಸಾರಾರಣ್ಯವ ಬಿಡಿಸಿ
ಕಾರುಣ್ಯಮತಿ ಈಯೊ ವಿಜಯ ವಿಠ್ಠಲರೇಯ ೭


ಸಾಧನೆಯನ್ನು ಮುಂದೂಡುವುದು ಸರಿಯಲ್ಲ;

೨೭
ಧ್ರುವತಾಳ
ಈಗಲೊ ಇನ್ನಾಗಲೊ ಈ ಗಾತ್ರ ಸ್ಥಿರವಲ್ಲ
ಭೋಗದಾಶೆಯ ಬಿಡು ಜಾಗು ಮಾಡದಲೆ
ಭಾಗವತರ ಸಂಯೋಗದಿಂದಲಿ ವೀ
ರಾಗ ನೀನಾಗು ಬಲು ಜಾಗರತನದಲಿ
ಭಾಗದೆಯರ ಗೆಲ್ಲು ತ್ಯಾಗಿಯಾಗು ಸರ್ವದಲಿ
ಬಾಗಿ ಜ್ಞಾನಿಗಳಿಗೆರಗು ದಾಸನೆನಿಸೀ
ತಾಗುಣದಲಿ ಬ್ಯಾಸಿಗೆ ಬಿಸಲೊಳಗೆ
ಪೋಗುವನು ಮನುಜ ತಂಪಾಗುವೆನೆಂದು ಒಂದು
ನಾಗನ ಘಣದ ಕೆಳಗೆ ಕುಳಿತಾಗದೆ
ಆಗುವುದು ಭವಸಾಗರದ ಸುಖವೊ
ಹೀಗೆಂದು ತಿಳಿ ಜನ್ಮರೋಗ ಹಿಂದುಗಳಿಯೊ
ನೀನು ಸತ್ಕರ್ಮವು ಚನ್ನಾಗಿ ಸಾಧನ ಬಯಸಿ
ಭಾಗೀರಥಿ ಜನಕ ವಿಜಯ ವಿಠ್ಠಲನ್ನ ಲೇ
ಸಾಗಿ ಕಾಣುವುದು ಇಂಬಾಗಿ ಸಂಚರಿಸುತ್ತ ೧
ಮಟ್ಟತಾಳ
ನಾಚಿಕಿಲ್ಲದ ಮನವೆ ಯೋಚಿಸಿ ನೀ ನೋಡು
ಪ್ರಾಚೀನಕರ್ಮ ಆಚರಿಸದೆ ಬಿಡದು
ವಾಚದಲ್ಲಿ ಕೇಳು ನೀಚಮಾರ್ಗವೆ ಕಳಿಯೊ
ಈ ಚರಾಚರದಲ್ಲಿ ಯೋಚನೆ ಪರನಾಗಿ
ಪಾಚಿ ತೆರನಾದ ಮೋಜೆ ಸಂಸಾರದಾ
ಲೋಚನೆ ತೋರುವುದು ಸೂಚಿಸುವೆನು ನಿನಗೆ
ಕೀಚಕಾರಿ ಪ್ರೀಯ ವಿಜಯ ವಿಠ್ಠಲ ಭವ
ಮೋಚಕನೆಂದು ಶ್ರೀ ಚರಣವನೆನಿಸೊ ೨
ತ್ರಿವಿಡಿ ತಾಳ
ಚಂಚಲಮನವೆ ನಿನಗೆಷ್ಟು ಪೇಳಿದರೇನು
ವಂಚನೆ ಬಿಡದಲೆ ಚರಿಸುತಿಪ್ಪೆ
ಹಂಚು ನೋಡಿಕೊಂಡು ಮೊಗವ ತಿರುಹಿದಂತೆ
ಕಿಂಚಿತ್ತುವಾದರು ಸುಖಬಪ್ಪುದೇ
ಸಂಚಗಾರಕೆ ಭಕುತಿ ಸಂಪಾದಿಸು ಹುಲ್ಲು
ಗುಂಚೆಯಿಂದಲಿ ಮೋಕ್ಷವಾಗುವುದೇ
ಮಿಂಚುವ ಶರೀರ ವಿಜಯ ವಿಠ್ಠಲ ಹರಿಯ
ಪಂಚ ಭೇದವ ತಿಳಿದು ಕೊಂಡಾಡೆ ಬರುವ ೩
ಅಟ್ಟತಾಳ
ಸಂಕಟವಾದ ಸಂಸಾರದೊಳು ಬಿದ್ದು
ಪಂಕ ಮತಿಯಿಂದ ನೋಯದಿರು ಮನವೆ
ಲೆಂಕಾಲಂಕಾನಾಗು ಶ್ರವಣವ ಲಾಲಿಸಿ
ಶಂಕಗಳ ನೀಡಾಡು ಶುದ್ದ ನಡತೆಯಿಂದ
ಶಂಕೆಯ ಬಿಡುಬಿಡು ಹೀನನಾದರೆ ನಿನ್ನ
ಕೊಂಕತಿದ್ದರು ಕಾಣೊ ಕಲುಷವೆ ಬಡುವುದು
ಕುಂಕುಮಾಂಕಿತ ಭೂಷ ವಿಜಯ ವಿಠ್ಟಲನ
ಅಂಕಿತದವನಾಗಿ ಆನಂದವಾಗೊ ೪
ಆದಿತಾಳ
ಮಾಯಾದೊಳಗೆ ಬಿದ್ದು ಮರುಳಾಗದಿರು ನಿನ್ನ
ಬಾಯ ಮುಚ್ಚದಲೆ ಶ್ರೀ ಹರಿಯ ನೆನೆಸುವುದು
ಕಾಯದಲ್ಲಿದ್ದ ಕರ್ಮ ನಾಶನವಾಗಿ
ನ್ಯಾಯಲೋಕದಲಿ ಸಂಚರಿಸೋದು ಸತತದಲ್ಲಿ
ಮಾಯಾರಮಣ ನಮ್ಮ ವಿಜಯ ವಿಠ್ಠಲರೇಯ
ತಾಯಿ ತಂದೆ ಸಾಕುವ ನಂಬು ನಂಬು ನಮಿಸಿ ೫
ಜತೆ
ಕಾಲನಿನ್ನದಲ್ಲಿ ವ್ಯಾಳಿವ್ಯಾಳಿಗೆ ಸಿರಿ
ಲೋಲ ವಿಜಯ ವಿಠ್ಠಲನ್ನ ಪೂಜಿಸು ಭಕುತಿಯಲಿ ೬

ತಿರುಪತಿಯನ್ನು ಕುರಿತ ಈ ಸುಳಾದಿಯಲ್ಲಿ

೩೬. ತಿರುಪತಿ
ರಾಗ:ಸಾರಂಗ
ಧ್ರುವತಾಳ
ಈತನಾತುಮ ಮೂರುತಿ ಈತನಂತರಾತು ಮಾ |
[ಈ]ತನೆ ಪರಮಾತುಮ ಈತನೆ ಜ್ಞಾನಾತುಮ |
ಈತನೆ ಅನ್ಮಯಾದಿ ಮೂರುತಿ |
ಈತನೆ ಪ್ರಾಜ್ಞಾದಿ ಮೂರುತಿ ಕಾಣೊ |
ಈತನೆ ಅಂಗು[ಷ್ಠ] ಪರಿಮಿತ ಮೊದಲಾತ[ದ]
ಈತನೆ ಹೃದಯಾಂಬುಜ ನಿವಾಸ ಪ್ರ |
ಖ್ಯಾತ ಮೂರುತಿ ಜಗಕಾಶ್ಚರ್ಯ ಮೂರುತಿ |
ಈ ತಿರುವೆಂಗಳ ತಿಮ್ಮಪ್ಪ ಎನ್ನಪ್ಪ |
ವಾತ ವಂದಿತ ಸಿರಿ ವಿಜಯವಿಠಲ ಪರಮಾ |
ಪ್ರೀತನು ಸಕಲಸುರ ಪ್ರಾತಕನುದಿನ ೧
ಮಟ್ಟತಾಳ
ಹರಣದೊಳಗೆ ನೀನು ಇರಳು ಹಗಲು ಬಿಡದೆ |
ತರುಣಿ ಪುರುಷವೇಷ ಧರಿಸಿದೆ ಪ್ರತಿದಿನ |
ಮೆರದು ಉನ್ನತದಲ್ಲಿ ಸುರರೊಳು ಪೆಸರಾದ |
ವರಗಿರಿಯ ವಾಸ ತಿರುವೆಂಗಳೇಶ ವಿಜಯವಿಠಲದೀಶಾ |
ಕರುಣಾಕರ ಸುಜನರ ಮನೋರಥ ದೇವಾ ೨
ತ್ರಿವಿಡಿತಾಳ
ಅನಿರುದ್ಧಾದಿ ಮೂರುತಿ ಅಜಾದಿ ಮೂರುತಿ |
ಅನಿಮಿಷರೊಳಗೆ ಬಲುಪೊಳವ ಮೂರ್ತಿ |
ಮನ ಮದಲಾದ ಇಂದ್ರಿಯಂಗಳವರಲ್ಲಿ |
ಮಿನುಗುವ ಮೂರುತಿ ಪರಿಪೂರ್ಣ ಮೂರುತಿ |
ಪುನಗು ಮಘಮಘಿಸುವ ತಿರುವೆಂಗಳೇಶ ಸಾ |
ಧನ ತೋರಿಕೊಡುವ ವಿಜಯವಿಠಲರೇಯಾ ೩
ಅಟ್ಟತಾಳ
ಕೇಶವಾದಿ ತತ್ವನ್ಯಾಸದವರೊಳು |
ವಾಸವಾಗಿದ್ದ ಹೃಷಿಕೇಶ ಮೂರುತಿ |
ಸಾಸಿರ ಮೂರುತಿ ವಾಸುದೇವಾ ಆ |
ಕಾಶ ಹೃದಯದೊಳು ಸೂಸುವಾ ಮೂರುತಿ |
ಸಾಸಿರ ಸೀತಿ ಭೂಷಣಂಗುಲಿ ಪರ್ವ ಈ ಸಮಸ್ತ ಮೂರ್ತಿ |
ಶೇಷಗಿರಿ ವೆಂಕಟೇಶ ವಿಜಯವಿಠಲ |
ಲೇಶ ಮೂರ್ತಿ ಪಂಚಕೋಶದ ಮಹಿಮಾ ೪
ಆದಿತಾಳ
ಶರೀರದೊಳಗೆ ನಖ ಶಿರಸಾ ಪರಿಯಂತ |
ಭರಿತವಾಗಿ ರೋಮಾಂತರದ ಮಧ್ಯದ ಲಾವಾಂ |
ತರದ ಸಹಿತ ನಿರಂತರ ಮಾಯವಾಗಿಪ್ಪೆ |
ಹರಿಯೆ ನೀನೆ ಇಲ್ಲಿ ತಿರುಮಲನಾಗಿ ಮೆರೆವೆ |
ವರಗಿರಿವಾಸ ಶ್ರೀನಿವಾಸ ವೆಂಕಟೇಶ |
ಸುರತರುವ ಭಕ್ತರಿಗೆ ನಿರ್ಜರನಿಕರಪಾಲಾ ೫
ಜತೆ
ತಿರುವೆಂಗಳೇಶನಂತರದೊಳು ಚಿಂತಿಸಿ |
ವರಗಿರಿ (ಸಿರಿ) ವಿಜಯವಿಠಲನ ಮನದಲ್ಲಿ ಕಂಡೆ ೬

ಸಾಂಸಾರಿಕ ಜೀವನದಲ್ಲಿ ಎಲ್ಲ

೧೩
ಧ್ರುವತಾಳ
ಈಸಲಾರೆನು ನಾನು ಈ ಸಂಸಾರದೊಳು
ಏಸೇಸು ಪರಿ ವಿಚಾರಿಸಲು ನೆಲೆಗಾಣೆ
ಭೇಷಜವೆಂಬೊ ಮಾಯ ಪಾಶಗಳಕ್ಕೆ ಸುತ್ತಿ
ಶ್ವಾಸೋಚ್ಛ್ವಾಸ ಬರಲೀಸದೆ ಕೊಲ್ಲುತಿದೆ
ಕೀಸಿದಾ ಹುಣ್ಣಿಗೆ ಸಾಸಿವೆ ತೊಡಿದಂತೆ
ಘಾಸಿಗೊಳಿಸುತ್ತಾಯಾಸವ ಬಡಿಸುತ್ತಾ
ಶೇಷ ಪರ್ನಕೆ ಕರ್ಕಶವಾಗಿದೆ ಇದರ
ಘೋಷ ಕೇಳಿದರೆ ಆಕಾಶ ನಡುಗುತಿದೆ
ಹೇಸಿಕೆ ಸಂಸಾರ ಸುಲಭವೆಂದ ಮಾ
ನಿಸಗೆ ಶರಣೆಂದು ನಾ ಶಿರಬಾಗುವೆ
ದೇಶಾಧಿಪತಿ ನಿಧೆ ವಿಜಯ ವಿಠ್ಠಲ ನಿನ್ನ
ಆಶೆ ಮಾಡದೆ ವ್ಯರ್ಥ ಕ್ಷೇಶ ಮಾನವನಾದೆ ೧
ಮಟ್ಟತಾಳ
ಬಿಸಲೊಳಗೋರ್ವನು ಪೋಗುತ ಪೋಗುತಲಿ
ಬಿಸಲಿಗಾರದಲೇವೆ ತನ್ನ ನೆರಳು ತಾನೆ
ಬಿಸಲಿಗೆ ಮರೆಮಾಡಿಕೊಂಡು ಕುಳಿತು ಥ
ಮ್ಮಿಸಿ ಪೋಗುವೆನೆಂದು ಅಡವಿಯೆಲ್ಲ ತಿರುಗಿ
ದೆಸೆಗೇಡಾದಂತೆ ಸಂಸಾರವೆಂಬುವಂಥ
ವಿಷದ ನೆಳಲಲ್ಲಿ ತಂಪಾಗುವುದೆ
ವಿಷಾಕೃತೇ ನಾಮ ವಿಜಯ ವಿಠ್ಠಲರೇಯ
ಪಶು ಜ್ಞಾನಿಯಾಗಿ ಕಾಲವನು ಕಳೆದೆ ೨
ತ್ರಿವಿಡಿ ತಾಳ
ಮಡದಿ ಮಕ್ಕಳು ಸರ್ವ ಒಡೆತನ ಸಡಗರ
ಪಡದೆ ನಾನೆಂಬೊ ಉಘ್ಘಡದಲ್ಲಿ ತಿರುಗಿ
ಬಿಡದೆ ಘಲಿಸಿ ಘತ್ತೈಸಿ ಧರ ಧಾನ್ಯವ
ಕೊಡದೆ ಬಚ್ಚಿಟ್ಟು ಬಲು ಕೃಪಣನಾಗಿ
ಮಡಿದರೆ ಆರಿಗಾಗುವುದೆಂದು ತಿಳಿಯದೆ
ಮಡಗಿ ಮಡಗಿ ಕೊಂಡು ತೊಳಲುವೆನೊ
ಪೊಡವೀಶ ಮಹಯಙ್ಞ ವಿಜಯ ವಿಠ್ಠಲ ಎನ್ನ
ಒಡೆಯ ನಿನ್ನಡಿಗಳ ನೆನಿಯದೆ ಕಲಿಯಾದೆ ೩
ಅಟ್ಟತಾಳ
ಗಾಣದ ಖಣಿ ಒಬ್ಬ ಮಾನವನು ನೋಡಿ
ಏನಿದರ ಸುಖ ಕಾಣುವೆನೆನುತಲಿ
ತಾನು ರಾತ್ರಿಯಲ್ಲಿ ಲೀನವಾಗಿ ಪೋಗಿ
ಗಾಣದ ಒಳಗಿರೆ ಗಾಣಿಗ ತಿಲತುಂಬಿ
ಕಾಣದಂತೆ ಇರಲಾದಿನ ಪೋಗಲು
ಗಾಣವಾಡಲು ಒಳಗೀನ ಸುಖವನ್ನು
ಏನೇನು ಕಾಣುವ ಈ ನಾಯಿ ಸಂಸಾರ
ಕ್ಷೋಣಿಯೊಳಗೆ ಬಿದ್ದು ನಾನದರಿಮ್ಮಿಡಿ ಬ್ಯಾನೆ ಬಡುವನಯ್ಯ
ಪ್ರಾಣದನಾಮಸಿರಿ ವಿಜಯ ವಿಠ್ಠಲ ದಯ
ವಾನು ಪಾಲಿಸಿ ಪುನೀತನ್ನ ಮಾಡೊ ೪
ಆದಿ ತಾಳ
ಅಡವಿಯ ಗಿಡವೆದ್ದು ಬಡಿದರೆ ಆರು ಎನ್ನ
ಬಿಡಿಸಿ ಕೊಂಡೊಯ್ದು ಕರ ಪಿಡಿವರು ಒಬ್ಬರುಂಟೆ
ನಡು ಅಡವಿ ಸಂಸಾರ ನಡುವೆ ಬಿಡದಲಸುತ್ತ
ಮುಡಿಹಿಡಿಕೊಂಡು ಸುತ್ತ ಬಿಡದೆ ಸುತ್ತುತಲಿಹರೆ
ಹಿಡಿಯ ಪ್ರಭುವೆ ನಾಮ ವಿಜಯ ವಿಠ್ಠಲ ನಿನ್ನ
ಅಡಿಗಳ ತೋರಿ ಭವದೆಡೆಯಿಂದ ದೂರ ಮಾಡೊ ೫
ಜತೆ
ಬಂದಾಗದೆಂತೆನ್ನ ಸೊಲ್ಲು ಲಾಲಿಸು ಮಹೇ
ಶ್ವರ ನಾಮ ವಿಜಯ ವಿಠ್ಠಲ ಭವಾಂಬುಧಿ ವಡಬ ೬

ಭಗವಂತನ ವಿರಾಡ್ರೂಪದ ವರ್ಣನೆಯನ್ನು

೨೦
ಧ್ರುವತಾಳ
ಉತ್ತಮ ಶ್ಲೋಕ ನಿನ್ನ ಪೂಜಿಸುವೆನೆಂದು
ಉತ್ತಮಾಂಗವಿಡಿದು ನಖಶಿಖ ಪರಿಯಂತ
ಚಿತ್ತದಲ್ಲಿ ಗುಣಿಸಿ ಎಣಿಸಿ ತಿಳಿ ಬಿಡದೆ
ಸ್ತುತಿಸುತ್ತಾ ಅರಸಿ ನೋಡಿದರೂ ಎತ್ತಲೂ ಕಾಣಿನಯ್ಯಾ
ಚಿತ್ತು ಶರೀರದಲ್ಲಿ ಹೊತ್ತು ಹೊತ್ತಿಗೆ ಹಾರೈಸಿ ನೋಡಿದರು
ದತ್ತ ಸ್ವಾತಂತ್ರದಲ್ಲಿ ಪೂರ್ಣವಾಗಿ ಬೊಮ್ಮಾಂಡ
ತತ್ವೇಶರೊಡನೆ ತುಂಬಿಹುದಯ್ಯಾ
ಭೃತ್ಯಾವರ್ಗರಾಗಿ ತಮ್ಮ ತಮ್ಮಾಯೋಗ್ಯತೆ
ಸತ್ಯವಾಗಿ ತಿಳಿದು ಭಜಿಸುವಾರು
ತೆತ್ತಿಗನಾನಹುದು ಎರದೆಂದಿಗೆ ಕೆ[ಲ]
ಉತ್ತಮ ಜ್ಞಾನಿಗಳು ಪೂಜಿಸಿದಾ
ಪ್ರತ್ಯೇಕ ಪ್ರತ್ಯೇಕ ಪ್ರದೇಶ ಎನಗೆಂತೊ
ಮತ್ತೊಂದಪೇಕ್ಷೆ ಉಂಟು ಪೂಜಿಸುತ್ತಾಲಿಪ್ಪದು ನ್ನಿನಂಗ ಎನಗೆ
ಹತ್ತಾದು ಕಾಣಯ್ಯ ಯಥಾರ್ಥ ಪೇಳಿದೆನೊ
ಇತ್ತ ಸಮ್ಮೊಗವಾಗೊ ಗುಣವಾರುಧಿ
ವಿತ್ತಾದಿ ಭಾಗ್ಯಒಲ್ಲೆ ಕರುಣವಿದ್ದರಾದಡೆ
ಹತ್ತೀಗರದು ಮುಕ್ತಾಮುಕ್ತ ನಿಕರ
ಅತ್ಯಣು ಮಹತ್ತು ರೂಪಗಳಂ ಬಿಡದೆ
ನಿತ್ಯದಲ್ಲಿ ಭಜಿಸಿದಂಥಾ ಸ್ಥಾನ
ಎತ್ತಲಾನಿಕೆ ತೋರಿ ಹರುಷ ಎನ್ನ ಮನಕೆ
ಹತ್ತುವಂತೆ ಮಾಡೊ ಮುದದಿಂದಲೀ ತರ್ಕ
ಕೀರ್ತಿವಂತ ವಿಜಯ ವಿಠಲ ನಿನ್ನ
ಕೀರ್ತನೆ ಒಂದೇ ಸರ್ವ ಸಾಧಾರಣ ಜನಕೆ ೧
ಮಟ್ಟತಾಳ
ಚರಣ ತಳದಲ್ಲಿ ಪಾತಾಳಲೋಕ
ಇರುತಿಪ್ಪಾದು ಪಾದದಲ್ಲಿ ರಸಾತಳ
ಮಿರುಗುತಿದೆ ಜಂಘೆಯಲಿ ತಳಾ ತಳ
ಅರಳಿ ನೋಡಲು ಸುತಳ ಜಾನುಪ್ರದೇಶದಲ್ಲಿ
ನಿರುತಸಿದ್ಧವಾಹುದು ವಿತಳ ಲೋಕಭಾಗ
ಭರಿತವಾಗಿದೆ ದೇಹ ಅತಳ ಕೊಳೆಗಳಲ್ಲಿ ಕಟೆ
ತೇರವಿಲೀಹ ಅಂತರಿಕ್ಷ ಭುವರ್ಲೋಕ ನಾಭಿಉ
ಪರಿಭಾಗ ನಭೀಲಿ ಭೂಲೋಕ ಹೃದಯದಲಿ
ಸ್ವರ್ಗ ಕುಕ್ಷಿಲೀ ಮಹರ್ಲೋಕ
ಮರಳೆ ಜನೋ ಲೋಕ ಮುಖದಲ್ಲಿ ಪೋದು
ಪೊರೆನೊಸಳಲ್ಲಿ ಉಂಟು ತಪೋಲೋಕ ಮತ್ತೆ
ಶಿರಸಿನಲ್ಲಿ ಸತ್ಯಲೋಕದ ಅವಸ್ಥ
ಎರಡೇಳು ಭುವನ ಪರಿಪೂರ್ಣವಾಗಿ ನಿನಗೆ
ಭಾರವೆ ಶರಣಾರ ಪರಿಪಾಲ ವಿಜಯ ವಿಠಲರೇಯನ
ಸ್ಮರಣೆ ಒಂದಲ್ಲದೆ ಮನುಜಗೆ ಸ್ಥಳಕಾಣೆ ೨
ತ್ರಿವಿಡಿ ತಾಳ
ಶ್ರವಣದಲ್ಲಿ ಧರ್ಮಾದ್ಯರು ದಿಗ್ದೇವತೆಗಳು
ರವಿಲೋಚನದಲ್ಲಿ ಇರುತಿಪ್ಪರು
ಪವನನು ತಿತ್ಯ ಮುಖದಲ್ಲಿ ಅಶ್ವಿನಿಯ ನಾಶಿಕ
ತವಕದಿಂದಲಿ ವರುಣ ಜಿಹ್ವೆಯಲಿ
ಭವ ಅಹಂಮತಿಯಲ್ಲಿ ಖಗ ಶೇಷಾದ್ಯರು ಸಹಿತ
ಪವಮಾನ ಪ್ರಾಣದಲ್ಲಿ ಬುದ್ಧಿ ಗಿರಿಜಾ
ದಿವಿಜೇಶ ಮನುಮಥ ಮನಶಿನಲ್ಲಿ ಉಂಟು
ಪವನಾಹಂಕಾರಿಕ ಕೊಕ್ಕಿನಲ್ಲಿ
ಶಿವನಿಂದ ಭಂಗನಾದವನು ಹಸ್ತದಲ್ಲಿ
ದಿವಿಜೇಶನ ಪುತ್ರಪಾದದಲ್ಲಿ
ಹವಣದಿಂದಲಿ ನೋಡೆ ಎಡ ಬಿಡದಲೊಂದೊಂದು
ಅವಯವಗಳಲ್ಲಿ ಉಳ್ಳಾದವರು ಉದು
ಭವರಾಗಿ ಅಲ್ಲಲ್ಲಿ ನಿನ್ನ ಪೂಜಿಸುವರೊ
ಅವಸರದಿಂದಲ್ಲಿ ವಾಲೈಶಿ ಕೇಳುತ್ತಾ
ಕುವಲಯ ರಮಣ ಶ್ರೀ ವಿಜಯ ವಿಠಲರೇಯಾ
ಕವಿ ಜನರು ವಾಸವಗಿರಲು ಉತ್ತರವೇನೊ ೩
ಅಟ್ಟತಾಳ
ರೋಮ ರೋಮದಲ್ಲಿ ಬೊಮ್ಮಾಂಡ ತುಂಬಿದೆ
ಆ ಮಹಾ ಮಹಿಮನೆ ನಿನ್ನ ಪ್ರತಿಮೆ ವೊಂದು
ನೇಮ ಮಾಡಿಕೊಂಡು ಪೂಜಿಸುವೆನೆಂದು
ಕಾಮಿಸಿದದರಿಂದ ಎಂತಾಹುದೊ ದೇವ
ಕಾಮರಸಾದಿ ಪೀಠ ದೇವಾದ್ಯರು ಎಲ್ಲಾ
ಯಾಮಯಾಮವನ್ನೂ ಬಿಡದೆ ಪೂಜಿಸುವರೊ
ರೋಮ ಒಂದರಲ್ಲಿ ತೆರನು ಗಾಣೆನೊ ನಾನು
ಸ್ವಾಮಿ ವೇದಾತೀತ ವಿಜಯ ವಿಠಲ ನಿನ್ನ
ನಾಮವೆ ಅನುದಿನ ಸುಲಭವಾಗಿದೆ ನೋಡೂ ೪
ಆದಿತಾಳ
ಪ್ರತಿದಿನದಲ್ಲಿ ನಿನ್ನ ಭಕುತರು ಪೂಜಿಸಿದ
ಅತಿಶಯವಾಗಿದ್ದ ಲೀಲೆ ಯಾಕೆನಗೆ
ಪತಿತ ಪಾವನ ಕೇಳು ಆರು ಪೂಜಿಸದಿಪ್ಪಾ
ಮೃತ ಕಾಯದಲ್ಲಿ ಎನಗೊಂದು ಪ್ರದೇಶ ತೋರು
ಹಿತವಹದು ಇಂದು ನುಡಿದ ಉತ್ತರಕ್ಕೆ
ಪೃಥವಿ ಒಳಗೆ ನಿನ್ನ ನಾಮಗಳು ಅಗ
ಣಿತವಾಗಿ ತುಂಬಿ ಒಂದೊಂದಧಿಕವಾಗಿ
ತುತಿಸಿ ಕೊಂಡಾಡಿದತ್ತಿ ಕಡೆಮೊದಲು ಸಮಯವನ್ನು
ಮತಿವಂತರೊಡೆಯ ಶ್ರೀ ವಿಜಯ ವಿಠಲರೇಯ
ನುತಿಸುವೆ ನಾನು ವಿಲಕ್ಷಣ ಪುರುಷಾ ನಿನ್ನಾ ೫
ಜತೆ
ನಖಶಿಖ ಪರಿಯಂತ ಭಜಿಸೆನೆಂದರೆ ಕಾಣೆ
ಸುಖನಿಧಿ ವಿಜಯ ವಿಠಲ ಗುಣ ಪೂರ್ಣಾ ೬

ಅನ್ನದಾನದ ಪ್ರಾಶಸ್ತ್ಯವನ್ನು ದಾಸರು

೨೯
ಧ್ರುವತಾಳ
ಉತ್ತಮರಿಗೆ ಒಂದು ತುತ್ತನ್ನ ದಾನದಿಂದ
ಇತ್ತವನಕುಲ ಹತ್ತು ಹತ್ತು ಒಂದು ಸ
ಪುತ ಗೋತ್ರಾಖಿಳ ಹತ್ತಿ ಹೊಂದಿದವರು
ಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರು
ಅತ್ಯಂತವಾದ ಪಾಪ ಮೊತ್ತದಾಸಕ್ತರಾಗಿ
ಮೃತ್ಯುಲೋಕದಲ್ಲಿ ಆಪತ್ತು ಬಡುತಲಿರೆ
ಹೆತ್ತ ಜನನಿಯಂತೆ ಎತ್ತಿಕೊಂಡೊಯ್ದು ಪುನರಾ
ವರ್ತಿ ಇಲ್ಲದ ಲೋಕದತ್ತ ಸೇರಿಸುವುದು
ಎತ್ತಲು ಸರಿಗಾಣೆ ಕ್ಷುಧಾತುರ್ಯರಾಗಿ ಬಂದ
ಸ್ವೋತ್ತಮರಿಗಿತ್ತ ಫಲ ಚಿತ್ತದಲ್ಲಿ ಎಣಿಸೆ
ಹತ್ತಾವರ ಸಿರಿ ವಿಜಯ ವಿಠ್ಠಲರೇಯನ
ನಿತ್ಯ ಕರುಣ ಪಡೆದು ಸತ್ಯದಲ್ಲಿ ನಡೆದ ೧
ಮಟ್ಟತಾಳ
ಹರಿ ಸರ್ವೋತ್ತಮವೆಂಬೋ ಜ್ಞಾನ
ಮರುತದೇವನ ಮತವೆಂಬೋ ಮತವೆ
ಹರಿಗುರು ಭಕುತಿ ಎಂಬೋ ಭಕುತಿ ನಿರಂತರದಲ್ಲಿ
ವಿರಕುತಿಯಾಗಿ ಚರಿಸುವ ಜ್ಞಾನಿಗಳ ಸಂಗದಲ್ಲಿ
ಹರಿಕಥಾ ಶ್ರವಣ ನಿರಮಲ ಮನದಿ ಎರಗುತಲಿಪ್ಪಾ
ಚರಣಿಯ ಮಾನವನು ಧರೆಯೊಳಗವನೆ
ಪರಮ ಉತ್ತಮನೊ ಅರಿಧಿ
ಪರಿಯಲ್ಲಿ ವಿಜಯ ವಿಠ್ಠಲ ಹರಿಯಾ
ಶರಣನಾಗಲಿ ಬೇಕು ತಾರತಮ್ಯವ ತಿಳಿದು ೨
ತ್ರಿವಿಡಿ ತಾಳ
ಬಂದ ಅತಿಥಿಯನ್ನು ತನ್ನಯ ಬಾಗಿಲ
ಮುಂದೆ ಕಾಣುತ್ತಲವೆ ನಿಂದು ಎದಿರುಗೊಂಡು
ವಂದಿಸಿ ಕರ ಮುಗಿದು ದ್ವಂದ್ವ ಪಾದಕ್ಕೆರಗಿ
ತಂದೆ ಆವಲ್ಲಿಂದ ದಯಾಮಾಡಿ ಬಂದಿರಿ ಎಂದೂ
ಒಂದೊಂದು ಮಾತನು ನಂದಾದಿಂದಲಿ ಪೇಳಿ
ತಂದು ಪೀಠವನಿತ್ತು ಚಂದದಿಂದಲಿ ನಡು
ಮಂದಿರ ದೊಳಗೆ ವಸುಂಧರ ವಿಬುದನ್ನ
ಮಂದ ಹಾಸದಲಿ ನಯದಿಂದ ಕುಳ್ಳಿರಿಸಿ ಜಲ
ದಿಂದ ಚರಣ ತೊಳದಾನಂದ ಮಯದಿಂದ
ಸಂದೇಹ ಬಿಟ್ಟು ಸೊಬಗಿಂದ ಶಿರದ ಮೇಲೆ
ಬಿಂದು ಮಾತುರ ಜಲ ಬಂಧು ಬಳಗ ಕೊಡಿ
ಕುಂದದೆ ಧರಿಸಿ ತಾ ಮಂದಿರದಲಿ ಚಲ್ಲಿ
ಒಂದೊಂದು ಪರಿಯಲ್ಲಿ ಪೊಂದಿ ಸುಖದಲ್ಲಿರು
ಮಂದರಧರ ನಮ್ಮ ವಿಜಯ ವಿಠ್ಠಲ ಹರಿಯ
ಎಂದಿಗೆಂದಿಗೆ ಬಿಡದೆ ವಂದಿಸು ಮನದಲ್ಲಿ ೩
ಅಟ್ಟತಾಳ
ಜೀವೇಶ ಒಂದೆಂಬೊ ಪೇಳುವ ಪಾಪಿಗೆ
ಶ್ರೀ ವೈಷ್ಣವೋತ್ತಮ ಕರದು ತುತ್ತನ್ನವ
ಪಾವನನಾಗುವೆನೆಂದು ಇತ್ತರೆ ಅದು
ಪಾವಕನೊಳು ಹಾಕಿದಂತೆ ಬಯಲಾಗಿ
ಯಾವತ್ತು ಪುಣ್ಯವು ನಾಶವಾಗೋದು
ಆವಾವ ಕಾಲಕ್ಕೆ ಎಳ್ಳಿನಿತುಕಾಣೆ
ದೇವೇಶ ವಿಜಯ ವಿಠ್ಠಲ ಜಗದೊಡಿಯ ರಾ
ಜೀವನೇತ್ರ ಪದವಾವನೆ ಭಜಿಪಂಗೆ
ಕೋವಿದನಾಗಿ ಇತ್ತವಗೆ ಸರಿಗಾಣೆ ೪
ಆದಿತಾಳ
ಅನ್ನಯಿತ್ತರದು ಭವನ್ನವಾಗಿ ತೋರೋದು
ಅನ್ನವೀಯದಿರೆ ಕಾನನ್ನಕ್ಕೆ ಸರಿಯೆನ್ನಿ
ಅನ್ನದಿಂದಲಿ ಬಂದ ಘನದುರಿತ ಹರ
ಅನ್ನದಿಂದಲಿ ಸರ್ವ ಪುಣ್ಯ ಫಲಿಸುವುದು
ಅನ್ನಾ ಇತ್ತವನ ಕೀರ್ತಿ ಉನ್ನತವಾಗಿ ತ್ರಿಭು
ವನ್ನ ದೊಳಗೆ ತುಂಬಿ ಚನ್ನಾಗಿ ಪೊಳೆವುದಯ್ಯಾ
ಅನ್ನ ದಾನಕ್ಕಿಂತ ಇನ್ನು ಮಿಗಿಲೆ ಇಲ್ಲಾ
ಹೊನ್ನು ಹಣಾದಿ ಕೊಡಲು ಗಣ್ಯ ಅನ್ನದಾನಕ್ಕೆ
ಅನಂತ ಮೂರುತಿ ವಿಜಯ ವಿಠ್ಠಲರೇಯ
ತನ್ನವನಿವನೆಂದು ಮನ್ನಿಸಿ ಸಲಹುವ ೫
ಜತೆ
ಅತಿಥಿ ಅಭ್ಯಾಗತಿಯ ಸಂತೋಷಪಡಿಸಲು
ಸತತ ಪೊಳೆವ ವಿಜಯ ವಿಠ್ಠಲ ಮನಸಿನೊಳು ೬

ತಮಿಳುನಾಡಿನಲ್ಲಿರುವ ಒಂದು ತೀರ್ಥಕ್ಷೇತ್ರ

೩೧. ತಾಮ್ರಪರ್ಣಿ
ಧ್ರುವತಾಳ
ಉತ್ತರಭಾಗದಲ್ಲಿ ಮೈತ್ರಾವರಣ ಮುನಿ |
ಪೋತ್ತುಮನ್ನಾ ಶಿಷ್ಯ ವಿಂದ್ಯಾಯೆಂಬುವನೂ |
ಮಿತ್ರತಾರಾಗಣ ಮೀರಿ ಬೆಳೆದು ಜಗಕೆ |
ಕತ್ತಲೆ ಮಾಡಲು ಸುರರು ಕಂಗೆಡಲು |
ಎತ್ತಣ ನೋಡಿದರತ್ತ ನಿತ್ಯಾನೈಮಿತ್ಯಗಳು |
ತತ್ತಳಗೊಳುತಿರೆ ಹೊತ್ತು ತೋರದಾಲೆ |
ಚಿತ್ತಪಲ್ಲಟರಾಗಿ ಸರ್ವಜೀವಾದಿಗಳೂ |
ಎತ್ತಣದದ್ಭುತವೆಂದು ಯೋಚಿಸುತ್ತ |
ಚಿತ್ರ[ಚ]ರಿತ ನಮ್ಮ ವಿಜಯವಿಠಲ ದೇ |
ವೋತ್ತುಮಾ ಕಾಶಿವಾಸ ಬಿಂದುಮಾಧವ ಎಲ್ಲಾ |
ರುತ್ತುಮಾಂಗವೆ ಬಾಗಿ ತುತಿಸಾಲಿನಿತಾ ೧
ಮಟ್ಟತಾಳ
ಕರಿ[ಸಿಕೊಂಡನು] ಮಗನಾ ಕರುಣದಿಂದಲಿ ಬಂದಾ |
ದುರಿತವ ಹರಿಸೆಂದು ಹರಿ ನಿರೂಪಿಸಲು |
ವರಮುನಿ ಕೇಳುತಲೆ ಕರಗಳನೇ ಮುಗಿದೆ |
ನಿರುತದಲಿ ಮಣಿ ಕರಣಿಕೆ ಸ್ನಾನ |
ಪರಮ ಲಾಭವನು ಬಿಟ್ಟಿರಲಾರೆನು ಎಂದು |
ಹರಿಯ ಶ್ರೀ ಚರಣಕ್ಕೆ ಎರಗಲು ನಸುನಗುತ |
ಶರಣರ ಮನೋಹರ ವಿಜಯವಿಠಲರೇಯಾ |
ಪರಮ ಮುನಿಗೆ ಉತ್ತರವನು ಕರುಣಿಸಿದ ೨
ರೂಪಕತಾಳ
ಕಮಂಡಲದ ಒಳಗೆ ಈಮಣಿಕರಣಿಕಿಯಾ |
ಕಮಲಾವನ್ನು ತುಂಬಿ ಗಮಕಾದಿಂದಲಿ ನೀನು |
ಯಮನ ದಿಕ್ಕಿನಲಿ ತಪೋಕ್ರಮವನ್ನು ಮಾಡೆಂದು |
ರಮೆಯರಸಾ ಪೇಳಲಾಗ ಮುನಿ ಅಗಸ್ತ್ಯ |
ಗಮನವಾದನು ಅನುಕ್ರಮದಿಂದಲಿ ಬರುತ |
ಕುಮತಿಯನು ವಂಚಿಸಿ ಶ್ರಮವೆಲ್ಲ ಪರಿಹರಿಸಿ |
ಹಿಮಕರ ಚರಣ ಶ್ರೀ ವಿಜಯವಿಠಲನಿಗೆ |
ನಮಿಸಿ ಆತನ ಗುಣಸಮುದಾಯಾ ಪೊಗಳುತ್ತಾ ೩
ಝಂಪೆತಾಳ
ಕಾಶಿಯಿಂದಲಿ ಬಂದು ಮಲಯಾಚಲದಲ್ಲಿ |
ವಾಸವಾಗಲು ಭೂಮಿ ಸಮನಾಯಿತೂ |
ಲೇಸಾಗಿ ದೇವಗಣ ಭೇರಿಗಳು ಹೊಯ್ಯೆ, ಮು |
ನೀಶನು ಮೌನವಾದನು ಪುನರಪಿ |
ಆ ಸಲಿಲ ದಿವ್ಯ ಕಮಂಡಲದೊಳಗಿರಲು |
ಸೂಸಿತೊಂದು ಜೀವ ನಿರ್ಮಾಣವಾಗಿ |
ಈಶಾದ್ಯರು ಬಂದು ಮನ್ನಿಸಿ ತಾಮ್ರಪ |
ರ್ನಿಸಂತೆಂದು ಪೆಸರಲೀ ಕರೆಸಿದರು |
ದೇಶಾಧಿಪತಿ ನಮ್ಮ ವಿಜಯವಿಠಲ ಕರು |
ಣಾಶರಧಿ ಎಂದು ಮುನಿ ಕೊಂಡಾಡಿದ ೪
ತ್ರಿವಿಡಿತಾಳ
ಪೊಗಳಿ ಹರಿಯಾ ಚರಣಯುಗಳಕ್ಕೆ ವಂದಿಸಿ |
ಯುಗದಲ್ಲಿ ನದಿಯಲ್ಲಿ ಮೂಲ ಕಲಿ |
ಪೋಗದಿರಲೆಂದು ತಪಸಿಗಳನು ತವಕದಿಂದ |
ನಗುತ ಮನದೊಳಗಗಣಿತಾರ್ಚನೆ ಮಾಡೆ |
ನಗಧರ ವೈಕುಂಠ ನಗಧೀಶ, ನವ |
ಬಗೆ ರೂಪನಾಗಿ ಮುನಿಗೆ ವರವನಿತ್ತಾ |
ಸುಗುಣ ಸಾಹಸಮಲ್ಲ ವಿಜಯವಿಠಲನು , ತ್ರಿ |
ಜಗದೊಳಗೀ ಧರೆಯಾಮಿಗೆ ಮಾಡಿ ತೋರಿದಾ ೫
ಅಟ್ಟತಾಳ
ಕಳಸಜನಿಂದ ವೆಗ್ಗಳವಾಯಿತೀ ನದಿ |
ಮಲರಹಿತವಾಗೆ ಪೊಳವುತಿದೆ ನೋಡಿ |
ಕಲಿಯಾ ಸಂಚಾರ ಘಳಿಗೆಯಾದರು ಇಲ್ಲ |
ಇಳಿಯೊಳು ಇದು ಪುಣ್ಯಾನೆಲವೆನ್ನಿ, ನೆಲವೆನ್ನಿ |
ಕಲಿಯುಗಾಂತ್ಯದಕೆ ಹಲವುಕಡೆ ಧರ್ಮ |
[ವ]ಳಿವಾದು ಇಲ್ಲೀಗ ಉಳಿದಿಪ್ಪುದೇ |
ಕಲಿಹನ ವಿಜಯವಿಠಲ ವೈಕುಂಠಾಧೀಶಾ |
ಸಲಹುವಾ ಕೆಲಕಾಲಾ ವೊಲಿದು ಸಜ್ಜನರ ೬
ಆದಿತಾಳ
ಏಳು ಯೋಜನ ತೀರದಾ |
ಗಾಳಿ ಬೀಸಿದರೆ ಮೂರು |
ಏಳುಕುಲದವರು ತಮ್ಮ |
ಪೀಳಿಗಿಯ ಸಹಿತದಲ್ಲಿ |
ಕಾಲನಯಾತನೆ ಭಂಗಾ |
ಸೀಳಿಕೊಂಡು ಪೋಗಿ ಸಿರಿ |
ಲೋಲನಾ ಪಟ್ಟಣದಲ್ಲಿ |
ಖ್ಯಾಳಮ್ಯಾಳವಾಗುವರು |
ಹೇಳಲೇನು ಜ್ಞಾನಿ ಬಂದು |
ಕಾಲಘಳಿಗೆ ವಾಸವಾಗಿ |
ಮೇಲುಲೋಕಾ ಕೊಡುವದಕ್ಕೆ |
ಸಾಲದೆಂಬಾ [ಬರ] ರಾಮಲೋಕ |
ಕೇಳಿಬಲ್ಲವರಿದರ |
ಆಲೋಚನೆ ಸಲ್ಲ ಪುಣ್ಯದ |
ಮಾಲೆ ಹಾಕಿದಂತೆ ಅನು |
ಗಾಲಾ ಶುಚಿಯಾ ಕಂಠದಲ್ಲಿ |
ನಾಳಿಗೆಂಬಾಲಸವಿಲ್ಲ ವಿಜಯವಿಠಲ ತನ್ನ |
ಊಳಿಗವನಿತ್ತು ನಿಜದಾಳಿನೊಳು ಕೂಡಿಸುವ ೭
ಜತೆ
ಶ್ರದ್ಧೆಯಿಂದಲಿ ಯಾತ್ರೆ ತಿಳಿದು ಪುಣ್ಯರಾಗಿ |
ಅದ್ವೈತಾ ಬಿಡಿ ನಮ್ಮ ವಿಜಯವಿಠಲ ಸುಳಿವ ೮

ಕಪಿಲಾವತಾರಿಯಾದ ವಿಷ್ಣುವಿನ ಸ್ತೋತ್ರ

ಕಪಿಲಾವತಾರ ಸ್ತೋತ್ರ
೧೧೫
ಧ್ರುವತಾಳ
ಉಪಜೀವ್ಯ ನಿಜಾನಂದ ಉದಧಿಶಯನ ಸರ್ವೇಶ
ಸಪುತ ಸಪುತಲೋಕ ಪಾಲಕ ಕಾಮೇಶ
ಉಪಜೀವ್ಯ ತಪೋಧನ ಪಾನಿಷ್ಟ ಪಾಪಾವನಪಾವಕ
ಜಪಶೀಲ ಸಿದ್ಧಮೂರ್ತಿ ಸಾಕಾರ ಸರ್ವಕಾರ
ಉಪದೇಶವ ತುಂಬುರಾದಿ ನಾರದವಂದಿತ ಪಾದಾ
ನುಪಮೇಯ ರಮೆಯರಸಯೋಗಿ ಜಟಿವಲ್ಕಲವಾಸಾ
ತೃಪುತ ತ್ರಿಗುಣಾತೀತ ತ್ರಿಕಾಲ ಕಾಲನಾಮಕ
ವಿಪುಲ ಮಧ್ಯ ಯೋಗ ಶಾಸ್ತ್ರ ರಚನೆಗೈಸಿದ ಗತಿಪ್ರದ
ಕುಪಿತರಹಿತ ನಿರುತ ಅಪಾರ ಅನಾದಿ ಅಪ್ರತಿಹತ ದೇವಾ
ಚಪಲನಯನ ಅಪರಿಚ್ಛಿನ್ನ ವ್ಯಾಪ್ತ ಬೊಮ್ಮಾಂಡ ಕಾರಣ
ಉಪಜೀವ್ಯ ತ್ರಿಕೋಟಿ ಕಪಿಗಳಯ್ಯಾ ಕನಕವರ್ಣ
ಕಪಿಲ ವೃಷಾಕಪಿಪತಿ ಅಪರ ಬುದ್ಧನ ನೋಡು ಎ
ನ್ನಪರಾಧ ಕ್ಷಮೆ ಮಾಡಯ್ಯಾ ಕೃಪಣವತ್ಸಲ
ಉಪಹತಿಗಳನ್ನು ಬಿಡಿಸಯ್ಯಾ
ಉಪಜೀವ್ಯ ದೀಪುತ ವಿಜಯ ವಿಠ್ಠಲ
ಕಪಿಲಾವತಾರ ಲಾವಣ್ಯ ೧
ಮಟ್ಟತಾಳ
ಪದ್ಮಸಂಭವ ತನ್ನ ಛಾಯದಿಂದಲಿ ಪುಟ್ಟಿದ
ಕರ್ದುಮಮುನಿ ದೇವಹೂತಿಯಲ್ಲಿ ಬಂದು
ಉದ್ಭವವಾದ ಶುಕ್ಲ ಶೋಣಿತರಹಿತ
ಈಧರೆಯೊಳಗೆ ನಿನ್ನ ನಂಬಿದ ಮಾನವಗೆ
ಹೃದ್ರೋಗವೇ ಇಲ್ಲ ಸುಹೃತ ಸುಪ್ರಭ ಪ್ರಭಾ ಮೂರುತಿ
ಶುದ್ಧ ವಿಜಯ ವಿಠ್ಠಲ ಕಪಿಲಾತ್ಮಕ
ಉದ್ಧರಿಸು ಎನ್ನ ಮನದೊಳಗೆ ನಿಂದು ೨
ತ್ರಿವಿಡಿ ತಾಳ
ಮುನಿವರೇಣ್ಯ ಸ್ವಾಮಿ ಸ್ವತಂತ್ರ ಕರ್ತ ಸು
ಜ್ಞಾನ ಮನೋಭೀಷ್ಟ ಭಯನಾಶಕ ಶಕ್ತ
ಜನನಿಗೆ ಜ್ಞಾನೋಪದೇಶವ ಪೇಳಿ ಸಾ
ಧನ ಮಾರ್ಗತೋರಿ ಸಂಸಾರವೆಂಬೋ
ವನಧಿಯ ದಾಟಿಸಿ ಸ್ನೇಹ ಭಾವದಿಂದ
ನಿನಗೆ ನೀನೆ ಪೊಳೆದ ಭಕುತವಶನೇ
ವನಜ ಭವಾದಿಗಳು ನಿನ್ನ ಲೀಲೆಯನೋಡಿ
ಗುಣಿಸಿ ಎಣಿಸಿ ಮೈಮರೆದರದಕೋ
ಎಣೆಗಾಣೆನೋ ಸ್ವೇಚ್ಛಾ ಕ್ರೀಡಿಗೆ ಮಂಗಳ
ಖಣಿಯೆ ತುಳಸೀಪ್ರೀಯ ಅತುಳ ಕೀರ್ತಿ
ಪ್ರಣವ ಮೂರುತಿ ನಮ್ಮ ವಿಜಯ ವಿಠ್ಠಲರೇಯಾ
ಮಣಿದು ನಮೋ ಎಂಬೆ ಸಾರಹೃದಯಬದ್ಧ ೩
ಅಟ್ಟತಾಳ
ಆದಿಮನುವಿನ ಕಾಲದಲ್ಲಿ ಪುಟ್ಟಿ
ಭೇದಾರ್ಥ ಜ್ಞಾನವ ಶಿಷ್ಯರಿಗೆ ಪೇಳಿ
ವೇದ ವೇದಾಂತ ತಿಳುಪಿ ಅಜ್ಞಾನವ
ಛೇದಿಸಿ ಬಿಟ್ಟ ಬಿಸಿಜದಳಾಂಬಕ
ಸಾಧು ಸಾಧು ಸಚ್ಚಿದಾನಂದಾತ್ಮಾ ವಿ
ನೋದ ಮನುಜ ಕಾಯ ನಾರಾಯಣ ವರ
ಬೋಧಮುದ್ರಹಸ್ತ ಶಶಿವರ್ಣ ಸಂಕಾಶ
ಆದಿತ್ಯವಂದಿತ ವಿಜಯ ವಿಠ್ಠಲರೇಯಾ
ವೈಧಾತೃ ಸೇವ್ಯ ನಿರಾಕುಲ ಕಪಿಲಾ ೪
ಆದಿತಾಳ
ಅರುಣೋದಯದಲೆದ್ದು ಕರಣ ಶುದ್ದಿಯಿಂದ
ಗುರುಕಪಿಲ ಕಪಿಲನೆಂದು ಸ್ಮರಿಸಿದ ಮಾನವಗೆ
ನಿರುತ ಮಾಡಿದ ಮಹತ್ತರ ಕರ್ಮಬಂಧ
ಪರಿಹಾರವಾಗಿ ಪೋಗುವುದು ಪರಮ ಜ್ಞಾನಿಯಾದ
ಪರಿಮಾಣಕ್ಕೆ ತನ್ನ ಕುರುಹು
ತೋರಿಸಿ ಯಮನ ಬಾಧೆ ತಪ್ಪಿಸುವನು
ನಿರಯದೂರ ಮನುಪಾತ್ರ ವಿಜಯ ವಿಠ್ಠಲ
ಪೊರೆವ ಪ್ರಸನ್ನ ಜನರ ಹೃದಯದೊಳಗೆ ನಿಂದು೫
ಜತೆ
ಕಪಿಲ ಕಪಿಲ ದೇವ ದೇಶ ಕಾಲತಃ ಪೂರ್ಣ
ದ್ರುಪದನಂದನವರದ ವಿಜಯ ವಿಠ್ಠಲ ಮೂರ್ತಿ ೬

ಋಜುಗಣಸ್ಥರು ಎಂಬುದು ಒಂದು ಗುಂಪಿನ

೨೧
ಧ್ರುವತಾಳ
ಋಜುಗಣಸ್ಥರ ಪ್ರಕರಣವನ್ನು ಕೇಳಿ ನಿತ್ಯ |
ಸುಜನರಿಗೆ ಬಲು ಸುಜನರಯ್ಯಾ |
ಕುಜನ ಮಾರ್ಗದವರ ವ್ಯಾಪಾರ ಇವರಿಗಿಲ್ಲ |
ರಜೋಗುಣದಿಂದ ಮಹಾ ಸತ್ವವೆರಸಿ |
ತ್ರಿಜಗದೊಳಗೆ ಒಂದೊಂದಂಗವ ಧರಿಸಿ ವಾ |
ರಿಜ ಕಲ್ಪ ಪರಿಯಂತ ಚರಿಸುವರು |
ಅಜನ ಪಟ್ಟಕ್ಕೆ ಸಾರೆ ಚರಮದೇಹ ಚತು |
ರ್ಭುಜ ಯುಕ್ತ ಜಪಮಾಲೆ ಕಮಂಡಲ |
ದ್ವಿಜಗಮನ ವಾಣಿ ಪತಿ ಸರ್ವ ಜೀವಿಗಳನ್ನು |
ಸೃಜಿಸುವ ಮಹಾಯೋಗ ಚತುರವದನ |
ಭುಜಗೇಶ ಭೋಗ ತ[ಲ್ಪ] ಈತನಿಗೆ ಸ್ವಬಿಂಬ |
ನಿಜ ವಾಸುದೇವನೆಂಬೋ ನಾಮವುಂಟು |
ಭಜನೆ ಮಾಡುವ ತನ್ನಾಕಾರದಂತೆ |
ವೃಜಗುಣ ರೂಪ ಕ್ರೀಯ ಭೇದದಿಂದ |
ರಜದೂರನಾಗಿ ಒಂದರೊಳನಂತ ಕಾಣುತ್ತ |
ಗಜ ಮೊದಲಾದ ತನ್ನ ದೇಹವಿಡಿದ |
ರಜ ಮಾತುರವಲ್ಲ ಸರ್ವವು ವಿಸ್ತಾರ ಪಂ |
ಕಜ ಪಾಣಿಗಿಂತ ನೋಡಾನಂತ ಕಡಿಮೆ |
ಯಜಮಾನನೀತನಯ್ಯಾ ಮುಕ್ತಿಲಿ ಸಂಕರುಷಣ |
ನಿಜ ರೂಪದಿಂದ ಚರಿಯವಿಲ್ಲ ಇತ್ತ |
ಪ್ರಜಗಳಿಗೆ ಇವರು ಮುಖ್ಯ ಪ್ರೇರಕರು ವಾ |
ರಿಜನಾಭನ ತರುವಾಯದಲ್ಲಿ ಬಿಡದೆ |
ಯಜನಾದಿ ಕರ್ಮಂಗಳಿಗೆ ಪೂರ್ಣ ಫಲಕೆ ಪಾತ್ರರು |
ಪ್ರಜಗಳು ಮಾಡಿದ ಪುಣ್ಯ ಇವರಿಗಕ್ಕು |
ದ್ವಿಜಜಾತಿಯಲಿ ಶ್ರೇಷ್ಠನಾಗಿಪ್ಪ ಹರಿಯ ಮು |
ಖಜನಾಗಿ ಜನಿಸಿ ವಿರಾಟದಲ್ಲಿ |
ಬಿಜಯಂಗ್ಯೆವನು ಇದೇ ದೇಹದಲ್ಲಿ ವಿ |
ರಜೆಯಲ್ಲಿ ಮುಣುಗಿ ವಿಲಿಂಗನಾಗಿ ಸಾ |
ಹಜಗತಿ ಐದುವ ಸರ್ವಾಂಗ ಸಾಯುಜ್ಯ |
ರಜನಿಚರಾರಿ ವಾಸುದೇವಾನಲ್ಲಿ |
ಭಜನೆಯಿಲ್ಲವು ಕಾಣೊ ಈತನು ಅ |
ನುಜನಿತ್ತಶಾಪವನ್ನು ಮನ್ನಿಸಿದ |
ವಿಜಯ ಸಾರಥಿ ನಮ್ಮೆ ವಿಜಯ ವಿಠ್ಠಲನ ವಾ |
ರಿಜ ಪಾದ ಸಂತತ ಮನದಲ್ಲಿಟ್ಟ ಗುರುವೆ ೧
ಮಟ್ಟ ತಾಳ
ತೊಂಭತ್ತೆಂಟು ಮಂದಿ ಲಾತವ್ಯರು ಕಾಣೋ |
ಎಂಬುದು ನಿಜವೆನ್ನಿ ಒಬ್ಬಗೆ ನನ ಪದವಿ |
ಅಂಬುಜ ಸಂಭವಗೆ ಸತ್ಯಲೋಕದ ಪದವಿ |
ಉಂಬೋರು ಪ್ರಾರಬ್ಧಾ ಶತಸ್ಥರೊಂದೆ ಗಣ |
ಒಂಭತ್ತು ವಿಧ ಭಕುತಿ ಇವರಲ್ಲಿ ನಿತ್ಯಾ |
ತುಂಬಿ ಕೊಂಡಿಹದು ಅನಾರಬ್ಧ ಕಾಲಕ್ಕೆ |
ಬಿಂಬನೋಳ್ಪದು ಮತ್ತೆ ಕಾಲ ವ್ಯವಧಾನ |
ಕುಂಭಿಣಿಯೊಳಗಿವರು ಪುಟ್ಟಿದ ಕಾಲಕ್ಕೂ |
ಡಂಭಕತನ ನಡತೆ ಸಲ್ಲದು ಸರ್ವರಲಿ |
ಅಂಬುಜ ಪತಿ ನಮ್ಮಾ ವಿಜಯ ವಿಠ್ಠಲ ನಂಘ್ರಿ|
ಬೆಂಬಿಡದೇ ನೋಡಿ ನಲಿನಲಿದಾಡುವರು ೨
ರೂಪಕ ತಾಳ
ಪದುಮಜಾಂಡಾವರಣ ಪುಟ್ಟದ ಪೂರ್ವದಲಿ |
ಸದಮಲವಾಗಿದ್ದ ಲಾತವ್ಯಜನರೆಲ್ಲ |
ಉದುಭವಿಸಿದರಂದು ಸೂಕ್ಷ್ಮಶರೀರದಲಿ |
ಒದಗಿ ಇಪ್ಪತ್ತೊಂದು ಮೇಲೆ ಮೂರರ ಕೂಡಿ |
ಅದುಭೂತವಾಗಿದ್ದ ಅನಿರುದ್ಧನಿಂದಲಿ |
ಮದನಾರಿತತ್ವ ಆರಂಭಿಸಿಕೊಂಡು |
ಇದೆಯಿದೆ ಗಾತ್ರದಲಿ ಅಭಿಮಾನಿಗಳಹುದು |
ಅಧಿಷ್ಠನರಾಗಿ ಅಲ್ಲಿಗಲ್ಲಿಗೆಯಿದ್ದ |
ಮುದದಿಂದಲಿ ತಮ್ಮ ಸಾಧನ ಮಾಡುವರು |
ಎದುರಿಲ್ಲ ಈ ಜನಕೆ ಸ್ಥೂಲ ದೇಹ ಬರುವ |
ದದು ಕಾಣೊ ಮನೋಮಯ ಮುಖ್ಯ ಪ್ರಾಣ |
ವಿಧಿಗಳಿಂದಲಿ ಸಿದ್ಧ ವಿಶೇಷ ಜ್ಞಾನಿಗಳು |
ಪದೋಪದಿಗೆ ಅಯತಾರ್ಥ ಸಂಶಯವಿಲ್ಲ |
ಮಧು ವೈರಿಯ ಕರುಣ ವತ್ಸಲ ಇವರಲ್ಲಿ |
ಪದವಿ ಐದುವದಕ್ಕೆ ತರತಮ್ಯವೂಂದುಂಟು |
ನಿಧಿ ಪ್ರಧಾನ ಹರಿ ವಿಜಯ ವಿಠ್ಠಲನಲ್ಲಿ |
ವಿಧ ಬಹುವಿಧದಿಂದ ಚಿತ್ತಪೊಂದಿಸಿ ಇಪ್ಪರೊ ೩
ಝಂಪಿ ತಾಳ
ವಾಸುದೇವನಿಂದ ಒಂದು ಸೂಕ್ಷ್ಮದೇಹ |
ಲೇಸಾಗಿ ಬರುವುದು ಪ್ರಥಮದಲ್ಲಿ |
ಭಾಸುರ ಅನಿರುದ್ಧ ದೇವನಿಂದಲಿ ಪ್ರ |
ಕಾಶಿಸುವ ಗಾತ್ರ ಮೂರೊಂದು ಮೂರು |
ಈಸು ಕಳೆದು ಮುಂದೆ ಇಪ್ಪತ್ತೊಂದು ಮುಂದೆ |
ಕೋಶಗಳು ಶೇರಿದವು ವಾಣೀಶಗೆ |
ತೋಷದಿಂದಲಿ ನೋಡೆ ಅನಿರುದ್ದನಿಂದಲಜ |
ಗಾ ಶರೀರಗಳು ಅಷ್ಟ ವಿಂಶತಿ |
ವಾಸುದೇವನ ದೇಹ ಒಂದು ಗೂಡಿಸಿ ಎ |
ಣಿಸಿದರೆ ಒಂದು ಕಡಿಮೆ ಮೂವತ್ತು |
ಭೂಷಣವಾಗಿಹವು ಪ್ರತ್ಯೇಕ ಪ್ರತ್ಯೇಕ |
ಲೇಶ ಬಿಡದಲೆ ಸೂಕ್ಷ್ಮಲಿಂಗೋಪಾಧಿ |
ಅಸತ್ವರಾಜಸ ತಾಮಸದಲ್ಲಿ ಒಂದೊಂದು |
ಮೋಸವಿಲ್ಲದೆ ಮಹದಲ್ಲಿವಂದು ತೈ |
ಜಸ ವೈಕಾರಿಕ ತಾಮಸ ಕೂಡಿದಲ್ಲಿ |
ಸೂಸುತಿಪ್ಪುವು ಮೂರರಲ್ಲಿ ಮೂರು |
ಶಾಶ್ವತವಾಗಿ ಮನಸಹಿತ ಇಪ್ಪತ್ತೊಂದು |
ಅಸಮಸ್ತ ಚತುರ್ವಿಂಶ ತತ್ವದಲಿ |
ವಾಸವಾಗಿ ಇಪ್ಪತ್ತೆಂಟು ದೇಹದಿಂದ |
ಹ್ರಾಸ ವೃದ್ಧಿಗಳಿಲ್ಲ ಅಯತಾರ್ಥ ಜ್ಞಾನ |
ಅಶರೀರಂಗಳು ಭೇದ ಮಾತ್ರವೋ |
ಕೇಶವಾಚ್ಚುತನಂತ ವಿಜಯ ವಿಠ್ಠಲರೇಯನ |
ರಾಶಿಗುಣಗಳನು ಎಣಿಸುವನು ವೇದೋಕ್ತದಲಿ ೪
ತ್ರಿವಿಡಿತಾಳ
ಮೊದಲು ಪುಟ್ಟಿದ ದೇಹ ಮಹತತ್ವಾತ್ಮಕ ವೆನ್ನಿ
ಅದರ ತರುವಾಯ ಮಹಾಂಕಾರವೊ |
ಇದೆಯಿದೆ ಪ್ರಕಾರ ಒಂದರ ಮೇಲೆ ಒಂದು |
ಒದಗಿ ಕೊಂಡಿಪ್ಪವು ಸೂಕ್ಷ್ಮವಾಗಿ |
ಅದುಭೂತ ಅಂಶಿ ಅಂಶಗಳಿಂದ ಯನಿತು |
ಆದುದು ಕಾಣೋ ತತ್ವಪುಟ್ಟಿದ ಮುನ್ನಮೊ |
ವಿಧಗೆ ಈ ಪರಿಯುಂಟು ಪೃಥ್ವಿ ತತ್ವದ ತನಕ |
ವಿಧಿ ನಿಷೇಧ ಇವರಿಗೆ ಇಲ್ಲವೊ |
ಮುದದಿಂದ ಕರ್ಮಗಳು ಮಾಡುವರು ಹರಿಯ ಪಾ |
ದದ ಧ್ಯಾನ ಪ್ರವಾಹ ರೂಪದಲಿ |
ಹದುಳವೆ ಕೇಳಿಸರಿ ಎಂದೆಂದಿಗಾದರು |
ಚದರಿ ಪೋಗದು ಜ್ಞಾನ ಸಂಸಾರದೀ |
ಉದರಕ್ಕೋಸುಗ ಪದವಿ ಬೇಡುವರಲ್ಲ ಮ |
ತ್ತಿದಕೋ ಹರಿ ಪ್ರಿತ್ಯರ್ಥ ಬಯಸುವರು |
ಮಧುರ ಪುರದರಾಯ ವಿಜಯ ವಿಠಲರಂಗನ |
ಸುಧೆಯಲ್ಲಿ ನೆನಸುವ ಬ್ರಹ್ಮಾನಂತ ರೂಪ ೫
ಅಟ್ಟತಾಳ
ಜ್ಞಾನ ಪೂರ್ವೋತ್ತರ ಬ್ರಹ್ಮನ ಸಾಧನ |
ಆನಂದವಾಗಿದೆ ಇಷ್ವಾಷ್ಯಾನಿಷ್ಟಾವೆಂದು |
ಏನೆಂಬೆನಯ್ಯಾ ಈತನಿಗೆ ನಿಷ್ಕಾಮಕ |
ನಾನಾ ಸಂಕಲ್ಪವು ಮುಖ್ಯ ಹರಿಯ ಗು |
ಣಾನುಸಾರವಾಗಿ ಅನ್ಯಪ್ರೇರಣೆ ಸಲ್ಲ |
ದಾನವರಿಗೆ ಭೀತಿಬಟ್ಟದ್ದು ಭಯ ಅ |
ಜ್ಞಾನ ಶೋಕಂಗಳು ತೋರಿದುದೆಲ್ಲ |
ಭಾನು ಮಧ್ಯಗತವಾಗಿ ತೋರಿದಂತೆ |
ಮಾನವರಿಗೆ ಕಾಣಿಸುವುದು ನೋಡಲು |
ವಾಣಿಯರಸನಿಗೆ ದೋಷ ಲೇಶವಿಲ್ಲ |
ಏನೆಂಬೆ ಜೀವಕೋಟಿಗಳಲ್ಲಿ ಮೂರೊಂದು |
ಅನನನಿಗೆ ಲಿಂಗವಿರಲು ವಿಲಕ್ಷಣ |
ಜ್ಞಾನ ಕಾರ್ಯವ್ಯೆಯ್ಯ ಆವಾವ ಕಾಲಕ್ಕೆ |
ಮಾನಿತನಾಗಿ ಮುಕ್ತಾರೊಳಗಿರುತಿಪ್ಪ |
ಶ್ರೀನಾಥ ವಿಜಯ ವಿಠ್ಠಲನ ಪಾದ ಪದ್ಮ |
ಧ್ಯಾನವ ಮಾಡುವ ಸರ್ವಜೀವಾದಿಯಲ್ಲಿ ೬
ಆದಿತಾಳ
ಬೊಮ್ಮಾಂಡ ವ್ಯಾಪ್ತರೂಪ ಬೊಮ್ಮಾಂಡಂತರ ರೂಪ |
ರಮ್ಮೆಯರಸನ್ನ ನಾಭಿಯಿಂದ ಬಂದ ರೂಪ |
ಸುಮ್ಮನಸರ ವಿಡಿದು ತೃಣಜೀವಾದಿಗಳಲ್ಲಿ |
ಸಮ್ಮಾನವಾಗಿಪ್ಪ ಸತ್ಯಲೋಕದ ರೂಪ |
ಕ್ರಮ್ಮಾನುಸಾರ ಶೇಷಾದ್ಯರನು ಪುಟ್ಟಿಸಿದನು |
ಅಮ್ಮಮ್ಮ ಈತನ ಶಕ್ತಿ ಕೊಂಡಾಡಲೊಶವೆ |
ಆಮ್ಮಹಾತತ್ವ ವಿಡಿದು ಸೂಕ್ಷ್ಮಸ್ಥಲ ಸಪುತ (ಸಮೇತ)
ಸಂಮಂಧವಾಗಿ ತಾನೆ ವ್ಯಾಪಿಸಿ ಕೊಂಡಿಪ್ಪ |
ರಮ್ಯವಾದ ಪ್ರಕೃತಿ ತನಕ ಧ್ಯಾನ ಆಮೇಲೆ |
ಅಮ್ಮ್ಯೆಸಿ ತಿಳಿ ನೂರುಮಡಿ ವ್ಯಾಪ್ತತ್ವ |
ಹಮ್ಮಿದ ದೈವ ಸಿರಿ ವಿಜಯ ವಿಠ್ಠಲರೇಯ |
ಬೊಮ್ಮವಾಯು ಲಾತವ್ಯಮಿಕ್ಕಾದ ಋಜುಗಳ ಕಾವಾ ೭
ಜತೆ
ಎಲ್ಲಿಂದುದ್ಭವರೆಲ್ಲಾ ಅಲ್ಲಿಗಭಿಮಾನಿಗಳು |
ಬಲ್ಲಿದ ವಿಜಯ ವಿಠ್ಠಲನು ಬಲ್ಲನು ಕಾಣೋ ೬

ಋಣವಿಚಾರವನ್ನು ದಾಸರು

೧೪
ಧ್ರುವತಾಳ
ಋಣದಿಂದ ಕಡೆ ಮಾಡು ಘನ ಮಹಿಮ ಕೃಪೆಯಿಂದ
ಎನಗಾರು ಪೊರೆವರಾಧಾರವಿಲ್ಲ
ಘಣಿಯ ಮುಂದಾದರೂ ಭಯ ಬೀಳದಿರಲಾಪೆ
ಅನಳಗಂಜದೆ ನಿಂದಿರಲಿಬಹುದು
ಋಣಭಾರದ ಮುಂದೆ ಎದುರಿಸುವುದು ಶ್ರಮ
ತನುವನುಡುಗಿಸಿಕೊಂಡು ತಿರುಗಬೇಕು
ಋಣದ ಸೂತಕವು ಜನ್ಮ ಜನ್ಮಾಂತರಕ್ಕೆ
ತೊಲಗವು ಆವಾವ ಪರಿ ದುಡಿಯೆ
ಋಣದವನು ಪೆಣಕಿಂತಲಿ ಕನಿಷ್ಠ
ಅನಿಮಿಷರು ಪೇಳುವರು ಶ್ರುತಿಯಿಂದಲಿ
ಋಣ ಭಯಂಕರ ಭೀಮ ವಿಜಯ ವಿಠ್ಠಲರೇಯ
ಋಣ ವಿದ್ದವನು ಹೊಲಿಯನೆನಿಸುವನು ೧
ಮಟ್ಟ ತಾಳ
ಜನನಿ ಜನಕ ಮತ್ತೆ ತನುಸಮ್ಮಂಧಿಗಳ
ಋಣ ಪೋಗುವದಕ್ಕೆ ತನುಜನಾದವ ಪೋಗಿ
ಘನಮಹಿಮ ಫಲ್ಗುಣಿ ಮಳಲು ಮೆಟ್ಟಿ
ಗುಣದಿಂದಲಿ ವಿಷ್ಣುವಿನ ಚರಣದಲಿ ಪಿಂಡವನಿಡಲವರ
ಋಣ ಮೋಚನವು, ಮನೋಭೀಷ್ಟ ಸಲ್ಲುವುದು
ಕನಕಾಂಗದ ನಾಮ ವಿಜಯ ವಿಠ್ಠಲ ಸ್ವಾಮಿ
ಪುನೀತನ ಮಾಡುವುದೀ ಋಣದಿಂದಲಿ ಎನ್ನ೨
ತ್ರಿವಿಡಿ ತಾಳ
ಋಷಿಗಳ ಋಣ ಪೂರ್ವಾಶ್ರಮದಲ್ಲಿ ಪರಿಹಾರ ತ್ರಿ
ದಶಾಗಳ ಋಣ ಮೇಧಾದಿಗಳ ಮಾಡಿ
ಅಸು ಸಂಬಂಧಿಗಳ ಋಣ ಗೃಹಸ್ಥಾಶ್ರಮದಲ್ಲಿ
ಪುಶಿಯಲ್ಲ ತಿದ್ದಿ ಪೋಗುವುದೆ ಸಿದ್ಧ
ವಸುಧಿಯೆಲ್ಲ ತಿರುಗಿದರೆ ಪೋಗದಯ್ಯ
ಪಸುಪಾಲಾ ವಿಧೇಯಾತ್ಮ ವಿಜಯ ವಿಠ್ಠಲ ರಂಗ
ಬಸುರೊಳು ಪೋಗಲಿದು, ಬೆರಸದೆ ಬಿಡದಯ್ಯ ೩
ಅಟ್ಟತಾಳ
ಕೊಂಡ ಋಣವನ್ನು ಕೊಡದಿದ್ದವಗಿನ್ನು
ಮಂಡಲದೊಳಗೆ ಶುಚಿಯಿಲ್ಲವೆಂಬೋರು
ಮಂಡೆ ಬೋಳಾಗಿ ಕಮಂಡಲವನ್ನೆ ಪಿಡಿದು
ಥಂಡ ಥಂಡದ ತಪ ಮಾಡಲೇನು
ಕಂಡ ಕಂಡಲ್ಲಿ ತಿರುಗಿ ಋಣಸ್ಥನ
ತೊಂಡನಾಗಿದ್ದು ದುಡಿಯಲಿಬೇಕು
ಕುಂಡಲಿಶಯನ ಶ್ರೀ ವಿಜಯ ವಿಠ್ಠಲರೇಯ
ದಂಡವಾಯಿತು ನಿನ್ನ ಕೊಂಡಾಡಿದ ಕೀರ್ತಿ ೪
ಆದಿತಾಳ
ಋಣ ಶುದ್ಧನ ಮಾಡಿದರೆ ನಿನಗೆ ಎನಗೆ, ಮಾ-
ತಿನ ತೊಡರುಗಳುಂಟು ಮನಸಿಜನಯ್ಯ ಕೇಳು
ತನು ಶುಚಿಯಿಲ್ಲ ಸಾಧನಕೆ ಮೊದಲೆ ಸಲ್ಲಾ-
ರ್ಚನೆ ಮಾಡುವುದೆಂತೊ, ಋಣ ಪುತ್ರಗೆ
ನೆನೆದವರ ಭವ ಋಣ ಕಳೆವದರಿದಲ್ಲ
ಗುಣ ಪೂರ್ಣ ಸುವರ್ಣ ವಿಜಯ ವಿಠ್ಠಲ ನಿನಗೆ
ಮಣಿದು ದೈನ್ಯವ ಬಡುವೆ ಋಣ ಮುಕ್ತನ ಮಾಡುವುದು ೫
ಜತೆ
ಋಣ ಪೋಗದಿರೆ ನಿನ್ನರ್ಚನೆಗೆ, ಧ್ಯಾನಕೆ ಸಲ್ಲೆ
ಅನಿರ್ದೆಶಾ ವಪುಷ ಶ್ರೀ ವಿಜಯ ವಿಠ್ಠಲರೇಯ ೬

ಭಗವಂತನ ಗುಣವಿಶೇಷಗಳನ್ನು

೧೫
ಧ್ರುವ ತಾಳ
ಎಂತು ಪೇಳಲಿ ನೀನು ಅಂತರಂಗದೊಳಗೆ
ನಿಂತು ನಿರುತದಲ್ಲಿ ಚಿಂತಿಸುವ ಭಕ್ತರ
ಸಂತಾಪಗಳೋಡಿಸಿ ಸಂತರಿಸುವ ಮಹಿಮೆ
ಅಂತು ಕಂಡವರಾರು ಕಂತುವಿನ ಜನಕಾ
ನಂತ ಕಾಲದಲ್ಲಿ ಕಾಣೆ ಅಂತರಾತುಮ ಕೇಳು
ಭ್ರಾಂತ ಜನರು ನಿನ್ನ ಪಂಥ ಹಾರೈಸದಲೆ
ಅಂತಕನಲ್ಲೀಗ ಸಂತಪ್ತ ಬಡುವರು
ಯಂತ್ರ ವಾಹಕ ನಮ್ಮ ವಿಜಯ ವಿಠ್ಠಲ ನಿನಗೆ
ಸಂತರ್ಪಣೆಯಿಂದ ಫಲಾನಂತವಾಗುವುದಯ್ಯ ೧
ಮಟ್ಟ ತಾಳ
ನಿತ್ಯ ಮುಕ್ತಾಶ್ರಯನೇ ನಿತ್ಯತೃಪ್ತನೆ
ನಿತ್ಯಾನಂದನನೆ ನಿತ್ಯ ನಿರ್ಮಲನೆ
ನಿತ್ಯ ಪ್ರಕಾಶನನೆ ನಿತ್ಯ ವ್ಯಾಪಾರಕನೆ
ನಿತ್ಯ ವ್ಯಾಪಕ ದೇವನೆ ನಿತ್ಯ ಪ್ರೇರಕನೆ
ನಿತ್ಯ ಸ್ವರೂಪಕನೆ ನಿತ್ಯ ಉಪಜೀವಿಸುವವರಿಗೆ
ನಿತ್ಯ ಪದವಿನೀವ ನಿತ್ಯ ವಿಜಯ ವಿಠ್ಠಲ
ನಿತ್ಯ ನಿತ್ಯದಲ್ಲಿ ನಿತ್ಯ ನಿತ್ಯನು ನೀನೆ ೨
ತ್ರಿವಿಡಿ ತಾಳ
ಬಲ್ಲವರಾರು ನೀನೊಲಿದು ಬಪ್ಪವಾರ್ತಿ
ಬಲ್ಲಿದ ನಿನ್ನಿಚ್ಛೆಯಲಿ ಬಲವಾದರೆ
ಎಲ್ಲರೊಳೆದುರಿಲ್ಲ ಬಲ್ಲವನ
ಸೊಲ್ಲೆ ಶ್ರುತ್ಯರ್ಥವು ಹೊಲ್ಲಮನಸು ಪೋಗಿ
ಒಳ್ಳಿತಾಗುವದು ನಿಂದಲ್ಲೆ ಶುಭ ತೋರುವುದು
ಕಲ್ಲು ಹೃದಯರು ಮೃದುದಲ್ಲಿ ಮಾತಾಡುವರು
ಅಲ್ಲದವರು ಬಂದು ಬಿಲ್ಲಾಗಿ ಬಾಗುವರು
ಕೊಲ್ಲುವ ಮದಗಳು ನಿಲ್ಲುವದರಿಂದಾಗಿ
ಒಲ್ಲೆನೆಂದವರು ಸುತ್ತಲಿ ಪೋದಿಪ್ಪರು
ವಲ್ಲಭ ವಿಜಯ ವಿಠ್ಠಲ ನಿನ್ನಯ ಪಾದ
ಪಲ್ಲವ ನಂಬಲು ಎಲ್ಲ ಸಂತೋಷ ೩
ಅಟ್ಟತಾಳ
ದಿನಕೊಮ್ಮೆ ನಾಮವ ನೆನೆದವನ ಕುಲಾ
ಜನ ವಿನವಾಗಿ ರಂಗನಪುರ ಅನಂತಾ
ಸನ ಮೊದಲಾದಲ್ಲಿ ಅನುಮಾನವಿಲ್ಲದೆ
ತನುಮನಸಿನಂತೆ ಘನ ಮಹಿಮನ ಚ
ರಣವನ್ನು ಭಜಿಸುತ್ತ ಸನುರುಚಿಯಾಗಿ ಬಂ
ದನು ನ್ಯೂನವಾಗದೆ ಇನಿತಿಪ್ಪರೆಂದು
ಅನಿಮಿಷಗಣವವನಿಯಲ್ಲಿ ಪುಟ್ಟಿ ಸಾ
ಧನ ಮಾಳಿಪೆವೆಂದು ಮನ ಮಾಡುವರಯ್ಯ
ಗುಣನಿಧಿ ನಿನ್ನಯ ಕರುಣವಾವುದು ಕಾಣೋ
ಎಣೆಯಿಲ್ಲ ಎಣೆಯಿಲ್ಲ ಎಣಿಸದಿರೆನ್ನುತ
ಕ್ಷಣಕಾನಂತರೂಪ ವಿಜಯ ವಿಠ್ಠಲ ನಿ
ನ್ನನು ಪಾಡಿದವನು ಭಾಗ್ಯನು ಸೌಭಾಗ್ಯನೊ ೪
ಆದಿತಾಳ
ಒಡೆಯ ಎನ್ನ ಕಡಿಗೆ ಅಮೃತದೆಡೆಯ ನೀಡು
ತಡ ಮಾಡದೆ ಕಡೆಯವನೆಂದಿಡದೆ
ಕಡೆಗೆ ಒಡನೊಡನೆ ನುಡಿಯಂ ಪಾಲಿಸಿ
ಬಡುವ ದುಶ್ಚಿತ್ತ ಬಡದ ಹಾಗೆ ನಡಿಸಿಕೊಂಡು
ಅಡಿಗಡಿಗೆ ಪಡೆದ ಭಕ್ತಿ ಧೃಡವಾದ
ಎಡೆಗೆಡಿಗೆ ನಾಮ ರಸ ಕುಡಿದು ಭವದ
ಗಡಲಿಂದ ಒಡನೆ ಒಡನೆ ಎದ್ದು
ಸಡಗರದಿಂ ನಿನ್ನಡಿಗಳನು
ಪಿಡಿದು ಸುಖ ಬಡುವಂತೆ ನೋಡುವುದು
ಕಡುನೇಹ ಬಿಡದೆ ಮಾಡು ಮೃಡ
ನೊಡಿಯ ವಿಜಯ ವಿಠ್ಠಲ
ಪೊಡ ಮಡುವೆ ಪೊಡವಿ ರಮಣ
ಪೊಡವಿರಮಣ ನೋಡುವುದು ೬
ಜತೆ
ಆವುದು ನಾನೊಲ್ಲೆ ನಿನ್ನಯ ಪ್ರಸಾದವ
ನೀವುದು ವಿಜಯ ವಿಠ್ಠಲ ಲೋಕಪಾಲ ೭

ಭಗವಂತನ ಗುಣಗಳು ಇಷ್ಟೆಂದು

೯೫
ಧ್ರುವತಾಳ
ಎಂಥಾದೊ ನಿನ್ನ ಮಹಿಮೆ ಇಂಥಾದಂಥಾದೆಂದು
ಎಂಥವರೊ ಎಣಿಸಿ ಗುಣಿಸಿದರು
ಇಂಥಾದೆ ಎಂದು ಮತಿಗೆಟ್ಟಿಪರಾಗೀ
ಅಂತುಗಾಣುವರಾರು ಕಂತುಜನಕ
ಸಂತತಾನಂತಾ ಸಾವಿರ ಮೊಗದಲ್ಲಿ
ನಿಂತು ದ್ವಿಸಾವಿರ ಜಿಹ್ವೆಯಿಂದ
ನಂತಾನಂತಾ ಎಂದು ಒಂದೊಂದು ನಾಲಿಗಿಲಿ
ಪಂಥಿ ಸಾಗಿದಂತೆ ಪ್ರತ್ಯೇಕ ಪ್ರತ್ಯೇಕ
ಅಂತರ ಶುದ್ಧನಾಗಿ ನಿಲವಿಲ್ಲದೆ
ಚಿಂತಿಸಿ ಒಂದಿಷ್ಟು ನೆಲೆಗಾಣದೆ ಪೋಗಿ
ಭ್ರಾಂತಿಯಲ್ಲಿ ಘಣಿಪ ಸುಮ್ಮನಾದಾ
ನಂತಾವತಾರ ವಿಕರ್ತ ವಿಜಯ ವಿಠ್ಠಲ
ಎಂಥಾ ದೈವವೋ ನೀನು ಎಂಥಾ ರೂಪನು ನೀನು ೧
ಮಟ್ಟತಾಳ
ಸ್ವರೂಪ ಅರೂಪ ಅಪರೂಪಾ
ಸ್ವರತಿ ಸ್ವತೀಜ ಸ್ವಪ್ರಕಾಶ
ಸ್ವಕಾಧೇಯಾ ಆರಾಧೇಯಾ
ಸ್ವಾರೋಗಣಿಯ ಸ್ವಬಂಧುಬಂಧೂ
ಕ್ಷೀರ ಸಿಂಧುಕುಮಾರಿಯ ಪ್ರಿಯ ನಿಗಮಗೇಯಾ
ಪರಾವಸ್ತು ಪರಮ ಮಹಿಮಾ
ಪರಕೆ ಪರಾತ್ಪರಮಪುರುಷಾ
ಪರಮೇಷ್ವಿಪಿತನೆ ವಿಜಯ ವಿಠ್ಠಲಾ
ಅರಾಧೀನ ಅನಾಧೀನ ಅನಾಥ
ನೀನೆ ನಾಥನು ನೀನೆ ಸ್ವಾಮಿ
ಸ್ವರೂಪ ಅರೂಪ ಅಪರೂಪ ೨
ತ್ರಿವಿಡಿತಾಳ
ಅನಾದಿ ಬ್ರಹ್ಮಚಾರಿ ನೀನೆಂದು ಸುರರ
ಸ್ಥಾನದಲ್ಲಿ ಕೀರ್ತಿ ಪೊಗುಳುತಿದೆ
ಅನಾದಿಗ ನೀನೆ ಅವತಾರವತಾರಾ
ಕೇನಾದುದು ಎಲ್ಲ ನೀನೆ ಬಲ್ಲೀ
ನೀನಾರಿಯಾಗಿ ಸುರರಕುಲಕ್ಕೆ ಸುಧಾ
ಪಾನವೆರದೆ ಮಾಯಾನಂಬುವವೇಷಧರಿಸಿ
ದಾನವರ ಎದೆದಲ್ಲಣನೆನಿಸಿ ಮ
ತ್ತಾ ನಾರಿರೂಪವೆ ಪೊಗಲಾಡೀ
ಜಾಣತನದಲ್ಲಿ ಸರ್ವರಲ್ಲಿ ಜುಣಗಿ
ಏನು ಅರಿಯದಿಪ್ಪ ಹೊಂತಕಾರಿ
ಮಾನವವೇಷ ಮಹಾಸ್ವಾಂಗಾ ವಿಜಯ ವಿಠ್ಠಲ
ಆನು ನಿನ್ನಯ ಸಮಾನ ದೈವವ ಕಾಣೆ ೩
ಅಟ್ಟತಾಳ
ನಡೆವಾ ನಡಿಯು ಬೇರೆ, ನುಡಿದ ನುಡಿಯು ಬೇರೆ
ಅಡಿಗಡಿಗೆ ಸುಖಬಡುವ ಸಂಭ್ರಮ ಬೇರೆ
ಕೊಡುವ ಪ್ರಸಾದ ಕೈಪಿಡಿವ ಚಿತ್ರವೆ ಬ್ಯಾರೆ
ಸಡಗರ ದೈವವೇ ಅಡಿಗಡಿಗೆ ಗೋವಳರೊಡನೊಡನೆ
ಆಡಗೆಡೆಗೊಡುವುದು ಬ್ಯಾರೆ
ಪಡಿಗಾಣೆ ನೀನಿಟ್ಟ ಮುಡಿ ಸಡಿಲಿಪರಾರು
ಬಿಡು ಪೋಗಿ ಮೂರುತೊಡರನಿಕ್ಕುವ ಜಾಣಾ
ಒಡಿಯರಿಗೊಡೆಯಾ ಬಡವರ ಸಹಾಯ
ವಡವನ್ಹಿನಾಮ ವಿಜಯ ವಿಠ್ಠಲ ಸರ್ವ
ಕೂಡಲೊಳಗಾಡುವ ಕೊಡುಗೈಯಾ ದಾತಾರಾ ೪
ಆದಿತಾಳ
ಏವಂತಿ ಜಾಯತೆ ಹರಿ ನಿಜರೂಪವೆಂದು
ಆ ವೇದಾವಳಿಗಳು ಪಾವಿನಹಿರಿಯಂಗೆ ಪೇಳೆ
ದೇವಾದಿ ಕುಲದವರು ತಾವೊಲಿದು ಪೊಗಳಿದರು
ಆವುದಯ್ಯ ನಿನ್ನ ರೂಪ ಆವುದಯ್ಯಾ ನಿನ್ನ ಮಾಯಾ
ದೇವ ಮತ್ರ್ಯ ಪಾತಾಳ ಭೂ ವ್ಯಾಪಿಸಿಕೊಂಡಿವೆ
ಜೀವ ಜೀವರಾಡಿದಂತೆ ಆವಕಾಲಕ್ಕೆ ತಕ್ಕಹಾಗೆ
ವಾವಿವರಕೆ ಇಲ್ಲದಲೆ ಕಾವ ಸ್ತ್ರೀ ಪುರುಷನಾಗಿ
ಕಾವನಯ್ಯ ನಿನ್ನ ಲೀಲೆ ಆವುದೊ ಕಡಿಗೆ ನಿನ್ನ
ಭಾವಕೆ ಬಂದಂತೆ ಮಾಡುವಿ ಸೇವಕರಿವರವರೆನೆದೆ
ಭಾವನೆ ವಿಜಯ ವಿಠ್ಠಲ ದೇವ ನೀನೆ ಒಬ್ಬ ಮಿ
ಕ್ಕವರೆಲ್ಲ ನಿನ್ನ ಮಾಯಾವಳಿಗೆ ಬೀಳುವರು ೫
ಜತೆ
ಅಪ್ರತಿ ಪ್ರತಾಪಾ ಅಪ್ರತಿಯರಸೆ ಪು
ಣ್ಯ ಪ್ರಭಾವ ವಿಜಯ ವಿಠ್ಠಲನೆ ಸರ್ವೋತ್ತಮಾ ೬

ಎಲ್ಲಿಯವರೆಗೆ ಒಂದು ಆತ್ಮ

೧೬
ಧ್ರುವತಾಳ
ಎಂದಿಗೆ ಕೋಟಲೆ ತಪ್ಪವುದೊ ಎನ
ಗೆಂದಿಗೆ ಈ ಭಾರ ತಗ್ಗುವುದೊ
ಎಂದಿಗೀ ಕುಕರ್ಮ ತಗಲಾದೆ ತೊಲಗುವುದೂ
ಎಂದಿಗೀ ಮನಸು ಏಕವಾಗವುದೊ
ಎಂದಿಗೆ ನಿನ್ನವರಲ್ಲಿ ನಿಜ ಭಕುತಿ
ಎಂದಿಗೆ ನಿಲ್ಲವುದೊ ನೆಲೆ ಆಹುದೊ
ಎಂದಿಗೆ ಜ್ಞಾನ ವೈರಾಗ್ಯ ಸಿದ್ಧಿಸುವುದೊ
ಎಂದಿಗೆ ನಿನ್ನ ಕಾಂಬ ಧ್ಯಾನವಹುದೋ
ಎಂದಿಗೆ ಎಂದಿಗೆ ಎಂದಿಗೆ ಸಂಚಿತಾಗಾಮಿ ನಾಶವಾಗುವುದೋ
ಎಂದೆಗೆಂದಿಗೆ ಪ್ರಾರಬ್ಧ ತೀರುವುದೊ
ಎಂದಿಗೆ ದುರುಳರ ಸಂಗ ಹಿಂದಾಗುವುದೊ
ಎಂದಿಗೆ ಈ ಜನುಮ ಹಿಂಗುವುದೊ
ಎಂದಿಗೆ ಮೇಲು ಮೇಲು ಸಾಧನವಾಗುವುದೊ
ಎಂದಿಗೆ ನಿನ್ನ ಕೂಡ ಮಾತಾಹದೊ
ಎಂದಿಗೆ ಲಿಂಗದೇಹ ದಗ್ದಪಥವಾಗುವುದೊ
ಎಂದಿಗೆ ನಿನ್ನ ನಂದನಾದೊಳಗೆ
ಎಂದಿಗೆ ವಾಸವಾಗಿಯಿದ್ದೆನೊ ಉಪದೇಶ
ಎಂದಿಗೆ ಆಗುವದೊ ತರತಮ್ಯದಲ್ಲಿ
ಎಂದಿಗೆ ವಿರಜೆಯಲ್ಲಿ ಮುಣುಗುವೆನು ಬಂಧ
ಎಂದಿಗೆ ಪರಿಹಾರವಾಗುವುದೊ
ಎಂದಿಗೆ ಶ್ವೇತದ್ವೀಪ ಶಿಂಶುಮಾರನ ನಿಜ
ಎಂದಿಗೆ ಸಂದರುಶನ ಸಿದ್ಧಿಪದೊ
ಎಂದಿಗೆ ನಿನ್ನಯಿಚ್ಛೆ ಆವರ್ಕ ಕಡೆಗಾಗುವುದೊ
ಎಂದಿಗೆ ಆನಂದ ಭಕ್ತಿ ಅಭಿವ್ಯಕ್ತಿಯಾಹುದೊ
ಎಂದಿಗೆ ಮುಕ್ತರೊಡನೆ ಖ್ಯಾಳಮ್ಯಾಳಾಗುವುದೊ
ಎಂದಿಗೆ ಎನ್ನ ಯೋಗ್ಯತೆ ಸ್ಥಾನವೊ
ಎಂದಿಗೆಂದಿಗೆ ಅಯ್ಯ ಎಂದಿಗೆಂದಿಗೆ
ಎಂದಿಗೆಂದಿಗು ಬಲು ಸಾಧನ ಮಾಡಿದರು
ಎಂದಿಗಾದರೆ ನಿನ್ನ ಪೊಂದಲರಿಯೆ
ಅಂದಿಗಂದಿಗೆ ಜನುಮ ಬರುವುದಲ್ಲದೆ ಆ
ನಂದವಾಗುವುದೇನು ಸದ್ಗತಿಗೆ
ಎಂದಿಗಾದರು ಏನು ಸಕಲಕ್ಕು ನಿನ್ನ ಪ್ರಸಾ
ದೊಂದೆಯಲ್ಲದೆ ಮಿಕ್ಕ ಕರ್ಮ ಹೊಣೆಯೆ
ಇಂದೆ ಪ್ರಸಾದವಾದೆಡೆ ಕೇಳು ಪ್ರತಿ
ಬಂಧಕಗಳು ಅನೇಕವಿರಲು
ನಿಂದಿರದೆ ಪೋಪವು ನಿಶ್ಚಿತ ತತ್ವವಿದು
ಇಂದಿರೆ ವಲ್ಲಭ ಈಶನೊಡಿಯ
ಎಂದಿಗೆ ಕೋಟಲೆ ತಪ್ಪುವುದೊ
ವಂದಿಸುವೆ ಸ್ವಾಮಿ ವಿಜಯ ವಿಠ್ಠಲ ಎನಗೆ
ಎಂದಿಗೆ ಎನ್ನ ಮನೋರಥವಾಗುವುದೊ ೧
ಮಟ್ಟತಾಳ
ಬಿಡು ಬಿಡು ಹೃದ್ಗ್ರಂಥಿ ಸುಡುಸುಡು ಅಜ್ಞಾನ
ಹೊಡಿ ಹೊಡಿ ದಾನವರ ಹಿಡಿ ಹಿಡಿ ಹಸ್ತಗಳ
ಕೊಡು ಕೊಡು ಸತ್ಸಂಗ ಕಡಿ ಕಡಿ ಷಡ್ವರ್ಗ
ಇಡು ಇಡು ದೃಷ್ಟಿಯನು ಅಡಿಗಡಿಗೆ ಪೊಳೆದು
ಎಡೆಗೆಡೆಗೆ ಒಲಿದು ಒಡನೊಡನೆಯಿದ್ದು
ತಡೆತಡೆಯಾಗಿದ್ದ ಕಡು ಕಡಲಿಗೆ ಮಿಗಿಲು
ಮುಡಿ ಮುಡಿ ಭವದಿಂದ ಕಡೆ ಕಡೆಗೆ ತೆಗೆಯೊ
ಕಡೆಕಡೆಯುವನೆನೆದೆ ಪಡೆ ಪಡೆ ನಿನಗೆಲ್ಲ
ಪೊಡವಿಗೊಡೆಯ ನೀನೆ ನುಡಿ ನುಡಿಯವುದ್ಯಾಕೊ
ನಡ ನಡತಿ ಮ್ಯಾಲೆ ಧೃಡ ಧೃಡವಾಗಿಪ್ಪುದು
ಅಡಿಗಡಿಗೆ ಇಟ್ಟ ವಿಜಯ ವಿಠ್ಠಲರೇಯ
ತಡ ತಡ ಮಾಡದಲೆ ಬಿಡು ಬಿಡು ಹೃದ್ಗ್ರಂಥಿ೨
ರೂಪಕತಾಳ
ಕರುವಿಗೋಸುಗ ತುರುಗಳಡಿವಿಯಿಂದ
ಭರದಿಂದಲಿ ಬಂದು ಕೊರಳಿಗೆ ಕಣ್ಣಿಯಾ
ಉರಲು ಬಿಗಿಸಿಕೊಂಡ ತೆರದಂತೆ ನಾನಾ ಆ
ಪರಿಯಾದೆನೊ ದೇವ ಕರುಣಾಸಾಗರನೇ
ಮೊರೆಕೇಳೊ ಮಹಾಮಹಿಮ ಶರಣನ್ನ ಪಾಲಿಸು
ಪರಮ ಸೌಖ್ಯದ ಮಾರ್ಗ ಅರುಹು ಮಾಡಯ್ಯ
ನಿರಯ ವಿದೂರ ನಮ್ಮ ವಿಜಯ ವಿಠ್ಠಲ ನಿನ್ನ
ಸ್ಮರಣೆಯಿತ್ತಲ್ಲದೆ ಮರಹೆ ಪೋಗದು ಕಾಣೊ ೩
ಝಂಪಿ ತಾಳ
ಪ್ರಸಿದ್ಧ ಉರಗ ದಂಷ್ಟ್ರವಾದ ಮಾನವನಿಗೆ
ವಿಷಬೇವು ತಿನಲಾಗಿ ಸೀಯಾಗಿಪ್ಪುದೋ
ಮುಸುಕಿಕ್ಕಿ ಮಲಗಿದರೆ ಪ್ರಾಂತ್ಯ ಭಾಗಕೆ ಅವಗೆ
ಕುಶಲತೆ ತಪ್ಪುವದು ನಂಜು ವ್ಯಾಪಿಸಿ
ವಸುಧಿಮೇಲೆ ಬಂದು ಜನಿಸಿದ ಮಾನವಗೆ
ಅಸಮ ಸಂಸಾರವೆಂಬ ವಲ್ಮೀಕದಿ
ವಸತಿಯಾಗಿದ್ದ ಕಾಲಾಖ್ಯವೆಂಬ ಸರ್ಪ
ಪಸರಿಸಿ ಕಚ್ಚಿರಲು ಇದರ ಒಳಗೆ
ಬೆಸನೆ ಕೇಳಲೊ ಜೀವ ವಿಷ ಪೋಲುವಂಥ
ವಿಷಯಗಳ ಸವಿದು ಸೀಯಾಗಿಪ್ಪವೊ
ನಸುನಗೆ ಈ ಕ್ಷಣಕೆ ದಿವಸ ಪೋದಂತೆ ಸಂ
ತಸ ಪೋಗುವುದು ಕಾಣೊ ಮುಂದೋರದೆ
ಅಸುರ ವೈರಿ ನಮ್ಮ ವಿಜಯ ವಿಠ್ಠಲರೇಯಾ
ವಶವಾಗಿ ನಿಂದೆ ಜಾಗರಮತಿ ತೊರೆದು ೪
ತ್ರಿವಿಡಿ ತಾಳ
ಸೂತ್ರ ಶಕುನಿಯಂತೆ ನಾನಾದೆನೊ ದೇವ
ಗಾತ್ರ ಸಾಕುವದಕ್ಕೆ ಕಂಡಲ್ಲಿ ಸಂಚರಿಸಿ
ಧಾತ್ರಿಯೊಳಗೆ ಬದುಕಿ ಅಲ್ಲಿಂದತ್ತಲೆಯಿದ್ದು
ಶ್ರೋತ್ರಾದಿಂದಲಿ ನಿನ್ನ ಗುಣ ಕಥೆಗಳ ಕೇಳಿ
ಸ್ತೋತ್ರವನ್ನೆಗೈದು ಉದ್ಧಾರನಾಗಿ ಸ
ತ್ಪಾತ್ರರ ಕೂಡಾಡಿ ಸುಖಿಸದಲೇ
ಮಿತ್ರರು ಎನಗೆಂದು ಸತಿಸಹೋದರ
ಪಿತೃ ಮಾತೃ ಗೋತ್ರಜರ ಪೊರೆವೆನೆಂಬ
ಮಂತ್ರವನ್ನೆ ತಾಳಿ ಬಂದು ಈ ಪರಿ ಶಿಲುಕಿ
ರಾತ್ರಿ ಹಗಲು ಬಳಲಿ ಬೆಂಡಾಹೆನೊ
ಚಿತ್ರ ವ್ಶೆಚಿತ್ರಕ ಭವದೊಳಿಪ್ಪುದೆಂದು
ಗಾತ್ರದ ಹಿತವ ಮರೆದೆ ಮರುಳತನದಿ
ಸೂತ್ರಧಾರಿ ನಮ್ಮ ವಿಜಯ ವಿಠ್ಠಲರೇಯ
ಧಾತ್ರಿಯೊಳಗೆ ಬಂದು ಬರಿದೆ ಬಾಳಿದೆ ಬದುಕಿ೫
ಅಟ್ಟತಾಳ
ಸತಿ ವಸ್ತ್ರ ಒಡವೆ ಬೇಡಿದರೆ ಇಲ್ಲವೆನೆ
ಗತಿ ಗಂಗಮ್ಮನ್ನ ಕೂಡಿತೆ ನಿನಗೆಂದು
ಪ್ರತಿ ಉತ್ತರವನು ಇತ್ತರೆ ಮನಸಿಗೆ
ಅತಿಶಯ ಸಂತೋಷ ಘನವಾಯಿತೆಂದು
ಮತಿಯಿಂದ ಮಾತಾಡಿ ಅನುಕೂಲಕೆ ಶಾ-
ಶ್ವತವಾಗಿಪ್ಪುದೆಂದು ದೈನ್ಯವಂತನಾಗಿ
ಚತುರತೆಯಿಂದಲಿ ಕಾಲವ ಕಳೆವ
ಪತಿತಂಗೆ ಆವ ಶೋಕವಾಗುವುದೊ
ಕ್ಷಿತಿಯೊಳು ನೀನು ಮಾಡಿತ್ತ ಉಪಕಾರಕೆ
ಕೃತಘ್ನನು ನಾನಾದೆ ಸ್ಮರಿಸಿಕೊಳ್ಳದಲೆ
ನತಜನಾಶ್ರಯ ನಮ್ಮ ವಿಜಯ ವಿಠ್ಠಲರೇಯ
ಮಿತಿಯಿಲ್ಲದೆ ಸೃಜಿತನಾದೆ ಭವದಿ ೬
ಆದಿತಾಳ
ಎಚ್ಚರವಾಗದೆ ಭವವೆ ತಾರಕವೆಂದು
ನಿಚ್ಚದಲ್ಲಿ ಮುಳುಗಿ ಮುಂಗಾಣದಿಪ್ಪೆನಯ್ಯಾ
ಚಚ್ಚರದಲಿ ಹಸಿದು ಅರಣ್ಯವನೆ ತಿರುಗಿ
ಕಿಚ್ಚು ನುಂಗಿಕ್ಷುಧೆ ಬಾಧೆ ಕಳೆವೆನೆಂಬ
ಅಚ್ಚ ಮೂರ್ಖನಂತೆ ನಾನಾದೆ ಎಲೊ ದೇವ
ನೆಚ್ಚಿದೆ ಸಂಸಾರ ಗತಿಗೆ ಸಾಧನವೆಂದು
ಅಚ್ಯುತ ಮಹಕರುಣಿ ಇದನೆ ತಪ್ಪಿಸಿ ಎನ್ನ
ನಿಶ್ಚಲ ವೃತ್ತಿಯಲ್ಲಿ ಬಾಳುವಂತೆ ಮಾಡು
ನೆಚ್ಚಿದವರ ಪ್ರಾಣ ವಿಜಯ ವಿಠ್ಠಲ ನಿನ್ನ
ಮೆಚ್ಚುಮಾಡುವುದಕ್ಕೆ ಒಂದು ಕರ್ಮವೆ ಕಾಣೆ ೭
ಜತೆ
ದೇವಾದಿ ದೇವನೆ ದಯ ಮಾಡೋ ದಾಸಗೆ
ನೀ ಒಲಿಯೊ ವೇಗ ವಿಜಯ ವಿಠ್ಠಲ ಸ್ವಾಮಿ೮

ರು ವಿಜಯವಿಠಲನ ಬಿಂಬ

೧೭
ಧ್ರುವತಾಳ
ಎಂದಿಗೆ ನಿನ್ನ ಪಾದ ಎಂದಿಗೆ ಬಂದು ಕಾಂಬೆ
ಎಂದಿಗೆ ಸತುಕರ್ಮ ಎಂದಿಗೆ ನಿನಗೆಂಬೆ
ಎಂದಿಗೆ ಮನ ದೈವ ಎಂದಿಗೆ ನೀನೆ ಎಂಬೆ
ಎಂದಿಗೆ ನಿನ್ನ ನಾಮ ಎಂದಿಗೆ ಸವಿಸವಿದುಂಬೆ
ಎಂದಿಗೆ ನಿನ್ನೋಲಗ ಎಂದಿಗೆ ನೆರೆಗೊಂಬೆ
ಎಂದಿಗೆ ವೈಕುಂಠ ಎಂದಿಗೆ ಸೂರೆಗೊಂಬೆ
ಎಂದಿಗೆ ಎಂದಿಗೆ ಅಂದಿಗೆ ಅಂದಿಗೆ ಅಂದಿಗೆ ನಿನ್ನಯ
ಸುಂದರವಾದ ಮಂದಿರ ಸುತ್ತ ಕಾಲಂದಿಗೆ
ಅಂದಿಗೆ ಅಂದಿ ಅಂದಿಗೆಯಂ ಧರಿಸಿ
ತಂದ ತಂದಾನಂತನೆಂದು ಕುಣಿವೆನೊ
ಅಂದೇ ಇಂದೆ ಮುಂದೇನೆಂದು ತೋರದು
ಅಂದವಾದ ಒಂದು ಸೊಲ್ಲು ಪಾಲಿಸು
ಒಂದೆ ದೈವ ಅಮೋಘ ವಿಜಯವಿಠ್ಠಲ ನೀನೆ
ಎಂದಿಗೆ ಎನ್ನೊಳು ನಿಂದಾಡುವುದ ಕಾಂಬೆ ೧
ಮಟ್ಟತಾಳ
ದಾರಿದ್ರನಿಗೆ ಚಿಂತಾರತುನ ಬಂದು
ಸೇರಿದಂತೆ ಎನಗೆ ಸೇರಿದೆ ವಶವಾಗಿ
ವೈರಾಗ್ಯ ರತುನ ಚಾರುತನದಲ್ಲಿ
ಆರಿಗೆ ನಿಲುಕದ ಮೂರುತಿ ನಿನ್ನಿಂದ
ಕಾರ್ಯ ಕಾರಣ ಗುಹ್ಯ ವಿಜಯವಿಠ್ಠಲ ನಿನ್ನ
ವರಡಿಯಲ್ಲಿ ಎನ್ನ ಸೇರಿಸಿ ಸುಖವೀಯೊ ೨
ತ್ರಿವಿಡಿ ತಾಳ
ರಿಕುತಗೆ ಸುರಮಣಿ ಹಸ್ತ ಪ್ರಾಪುತವಾಗೆ
ದಕುವುದೆಂತೊ ಬಲು ನಿರ್ಭಾಗ್ಯನಿಗೆ
ತ್ವಕುವೇಂದ್ರಿ ಮೊದಲಾದ ಶಕುತಾ ಚೋರರು ಅಂ-
ಬಕ ಚಿತ್ರಾಂಬಕ ಮಾಯಾ ಮರಳೆ ಮಾಡಿ
ಪಿಕನಾಸಿ ಮನಕೆ ಅಧಿಕನೆಂದೆನಿಸಿ ಮುಂ-
ದಕೆ ಬಾರದಂತೆ ಹಿಂದಕೆ ಮಾಳ್ವರು
ರುಕುಮಿಣಿ ಪತಿ “ತೇಜೋವಶ” ವಿಜಯವಿಠ್ಠಲ
ಸುಖವೇನೊ ಬಂದಕಾಲಕೆ ಫಲಾರ್ಚನೆಗಳು ೩
ಅಟ್ಟತಾಳ
ಪರಿಪರಿ ಬಗೆಯಿಂದ ಹಿರಿದಾಗಿ ಬಲುಕಾಲ
ಗಿರಿ ನಗರಿ ಆಗರವೆಲ್ಲ ಶೋಧಿಸಿ
ಹರಿ ಶಾರ್ದೂಲ ಸೂಕರ ಮೃಗಗಳ ಬಿಟ್ಟು
ಸರಿಕಿನೊಳಗೆ ಇದ್ದ ಕಿರಿ ಮೂಷಕನ ಪಂ-
ಜರದಲ್ಲಿ ಇಟ್ಟು ಉದ್ಧರಿಸಿದಂತೆ ಆ
ದರಿಸಿದ ಸತುಕರ್ಮ ಬರಿದಾಗೋದೆಂದು
ಇರುಳು ಹಗಲು ಚಿಂತಾತುರ ಮಾಯವಾಗಿದೆ
ಸಿರಿಧರ ಆತ್ಮವಿತೆ ವಿಜಯವಿಠ್ಠಲ
ತರಹರಿಸಲಾರೆ ದುರುಳರ ಸಂಗ ೪
ಆದಿತಾಳ
ಮದಮತ್ಸರವಳಿದು ಸಹೃದಯವಾಗಿ ನೀಚಸಂಗ
ಒದೆದು ಸುಕೃತ ವಾಸನೆ ಒದಗಿ ಬಾರದತನಕ
ಯದುಪತಿ ನಿನ್ನ ಪಾದ ಪದುಮವ ನೆರೆನಂಬಿ
ಬದುಕುವ ಮಾರ್ಗವಾವುದು ಕಾಣೆ ವೇದದೊಳು
ಮಧುಸೂದನ ನಾಯಕನೆ ವಿಜಯವಿಠ್ಠಲ ಎನ್ನ
ಎದೆಗುದಿ ಬಿಡಿಸೊ ನೆನಸೆದೆ ನೆನಪಾದಾಗ ೫
ಜತೆ
ಸ್ವಸ್ಥವಾಗದು ಮನ ನೀನೊಲಿಯದರಿಂದ
‘ಶಕ್ತ’ ವಿಜಯವಿಠ್ಠಲ ನಿನ್ನಂತರ ತಿಳಿಯದು೬

ಭಕ್ತರಾದವರು ಭಕ್ತಿ ವಿಶೇಷದಿಂದ

೧೮
ಧ್ರುವತಾಳ
ಎಂದಿನಂತಿರದೆನ್ನ ಇರದಂಜಿಸುವುದೇನು
ಹಿಂದೆ ಹಂಗಿಸಿದದು ಅಂದೇ ಮರೆದ್ಯಾ
ಮುಂದೆ ಭಕ್ತರಿಂದ ಒಂದೊಂದು ನಿನ್ನ ಗುಣ
ವೃಂದಗಳೆಲ್ಲ ಬೇಕೆಂದು ಬಿಡದೇ
ನಿಂದಿಸಿಕೊಂಬುದಾನಂದವಾಗಿದೆ ಮು-
ಕುಂದ ನಿನಗಾರು ಎಂದೆಂಬೋದು
ಸಂದೇಹ ತೋರದೆ ಸಂದಿಗೊಂದಿಲಿ ಬೆಣ್ಣೆ
ತಿಂದು ಗೋಪಾಂಗನೆಯರಿಂದ ದೂರಾದುದು
ಅಂದು ಮಧುರಿಯೊಳು ಬಂಧನದಲ್ಲಿ ನಿನ್ನ
ತಂದೆ ತಾಯಿ ಪೆತ್ತುದು ಒಂದರಿಯೊ
ಮಂದಿರದಲ್ಲಿ ಶ್ವಾನ ಒಂದು ಬಿದ್ದಿರಲು ಬೇ-
ಕೆಂದು ಬೊಗಳಾ ಕಲಿಸಿದಂದದಲ್ಲಿ
ಇಂದೆನ್ನಲ್ಲಿ ನೀನು ಪೊಂದಿ ಸುಮ್ಮನಿರದೆ
ಮಂದ ಮತಿಗೆ ಬಲ್ಪಿಂದ ಕೆರಳಿಸದೆ
ತಂದೆ ತತ್ವವಿದೆ ವಿಜಯವಿಠ್ಠಲ ನಿನ
ಗೊಂದಿಸಿ ಸ್ತುತಿಸಲು ಕಣ್ದೆರೆಯದೇನು? ೧
ಮಟ್ಟತಾಳ
ಆರ ಮಗನು ನೀನು ಆರ ಕುಲದವನೊ
ಆರೆಂಜಲನುಂಡು ಆರಲ್ಲಿ ಬೆಳದ್ಯೊ
ಮೀರಿ ನಡೆ ವ ಉರಿ ಆರ ಕೈವಶವೊ
ಆರೊಸ್ತವು ನೀನು ಆರಿಗೆ ದಕ್ಕದ ಆರಾರ ಮೂರುತಿ
ಆರಾದರೆ ನಿನ್ನ ಅರಿಯದವರೆ ಇಲ್ಲ
ಆರೆಂಜಲನುಂಡು ಆರ ಮೈಲಿಗೆ ಪೊದ್ಯೊ
ಉರಿ ಮಾರಿ ದೈವದ ಗಂಡ ಆರಲ್ಲಿ ಬೆಳೆದ್ಯೊ ಮೀರಿ ನಡೆವ
ಧೀರ ಪ್ರಣವ ನಾಮ ವಿಜಯವಿಠ್ಠಲರೇಯ
ಆರನೆ ಸೇವಿಸಿದ್ಯೊ ಆರಿಂದಲಿ ಸುಖವೊ ೨
ತ್ರಿವಿಡಿ ತಾಳ
ತಿದ್ದುವುದೆನ್ನ ಮನದ ಡೊಂಕ ಚೆನ್ನಾಗಿ
ತಿದ್ದದಿದ್ದೆಡೆ ನೋಡು ತಿರುಮಲೇಶ
ಉದ್ದಂಡತನದಲ್ಲಿ ಮನೆ ಮನೆ ನೆಲವಡರಿ
ಕದ್ದು ಕೀರ್ತಿಯ ಮೆರೆದು ಕರಡಿಯ ಸುತೆಗೆ
ಮುದ್ದು ಕೊಟ್ಟದ್ದು ಮ್ಯಾಲೆ ಅತ್ತಿಯ ನೆರೆದದ್ದು
ಅದ್ರಿ ಕೆಳಗೆ ಹೋಗಿ ಅಡ್ಡಾಗಿದ್ದುದು
ಸದ್ದಾಗದಂತೆ ಪಾದರಕೆ ಶೇಖರನಾಗಿ
ಎದ್ದು ಪೋಗಿ ಪರರ ವ್ರತವಳಿದದು
ಸುದ್ದಿ ಎಂತಿರಲಿ ಮೊನ್ನೆ ದಾಸರ ಬಳಿಯ
ತದ್ದಿನಾದನ್ನವ ಉಣಲಿಲ್ಲವೇ
ಅದ್ರೀಶ ನಾಮ ಶ್ರೀ ವಿಜಯವಿಠ್ಠಲ ಎನ್ನ
ತಿದ್ದು ಭವರೋಗಕ್ಕೆ ಮದ್ದು ನಿನ್ನ ನಾಮ ೩
ಅಟ್ಟತಾಳ
ಚಿಂತೆ ನಿನಗೊಂದು ಇಲ್ಲವೆಂದರೆ ಏನು
ಚಿಂತೆ ನಿನಗುಂಟು ಭಕುತ ಜನರೊಮ್ಮೆ
ಚಿಂತಿಸಿದರೆ ಇನ್ನೇನು ಕೊಡಲಿ ಎಂದು
ಮುಂದೆ ನಿನ್ನ ಮಹಿಮೆ ಅರಿದರು ಎಂಬೋದು
ನಿಂತಲ್ಲಿ ನಿಲಗೊಡರೆನ್ನ ಕೂಗುವರೆಂದು
ಸಂತತ ಅವರ ಹಂಗಿಗನಾದೆನೆಂಬೋದು
ಇಂತು ಚಿಂತೆಗಳಿರೆ ನಿನಗೀಗ ಮರೆದು ಆ
ದ್ಯಂತ ಮಧ್ಯರಹಿತೆನ್ನ ಬಿಡುವುದೇನೊ
ಚಿಂತಾಯಕ ಧಾತ್ರ ವಿಜಯವಿಠ್ಠಲ ನಿನ್ನ
ಆಂತು ಬಲ್ಲವರಿಲ್ಲ ಸಂತತ ರಮಣ೪
ಆದಿತಾಳ
ಆದಿ ದೈವವೆ ಕೇಳು ಪಾಪವ ಹಾದಿ ಮೆಟ್ಟಿದಂತೆ ಎನಗೆ
ಸಾಧು ಮಾರ್ಗ ತೋರಿಪುದು ಆದರದಿಂದಲಿ ಪೊರೆದು
ನೀ ದೂರಾಗದೆ ನಿತ್ಯ ಪಾದವನ್ನು ತೋರು ಸನ
ಕಾದಿಗಳ ವಂದ್ಯ ಜಗದಾದಿ ಕರ್ತ ಪುಣ್ಯತೀರ್ಥ
ಪಾದ ಏಕ ಪಾದ ನಾಮ ವಿಜಯವಿಠ್ಠಲರೇಯ
ಮೇಧಾಧಿ ಕರ್ಮಗಳಿಗೆ ಮೈದೋರದ ಬಲು ಕರುಣಿ ೫
ಜತೆ
ಅಚ್ಯುತ ನಿನ್ನ ಪಾದಕೆ ನಿಚ್ಚ ನಮಿಸುವೆನಯ್ಯ
ಅಚ್ಯುತ ಧ್ಯಾನವನೀಯೊ ಅಚ್ಯುತ ವಿಜಯವಿಠ್ಠಲ ೬

ಈ ದೇಹ ಈಗ ಅನುಭವಿಸುತ್ತಿರುವ

೩೦
ಧ್ರುವತಾಳ
ಎಚ್ಚರ ಕೇಳೊ ಮನವೆ ನೆಚ್ಚದಿರು ಈ ಕಾಯ
ನಿಚ್ಚಲ ನಿನ್ನಾಧೀನ ಅಚ್ಚಟ ಇಪ್ಪನೆಂದು
ಬಚ್ಚಲಗಲ್ಲಿಗೆ ನೀಚತನವುಂಟೆ
ರೊಚ್ಚಲ್ಲದೆ ನೋಡೈ ಹೆಚ್ಚಳವಾಗುವುದು
ಹೆಚ್ಚಿನ ಮಮಕಾರ ಪಚ್ಚಿಕೊಂಡಿದ್ದರೆ
ಬೆಚ್ಚಿಸದಂತೆ ದೇಹ ಕಚ್ಚಿಕೊಳತಕ್ಕದೆ
ಎಚ್ಚತ್ತು ತಿಳಿದುಕೋ ಹುಚ್ಚಾಗದಿರು ನೀನು
ಮುಚ್ಚುಮರೆ ಇಲ್ಲದೆ ಬೆಚ್ಚಾಗದಿರು ನೀನು
ಸಚ್ಚಿತ್ತನಾಗಿ ಬಾಳು ಕುಚ್ಛಿತ ಪ್ರವರ್ತಿಸೆ
ಕೆಚ್ಚೆದೆ ಯಮಭಟರು ಚಚ್ಚೆಬಟ್ಟಿಯ ಮಾಡಿ
ಬಿಚ್ಚಿ ಭಂಗ ಬಡಿಪರು ಬಚ್ಚಿಟ್ಟರೀದಾರಿ
ಇಚ್ಛಕನಾಗು ಕಾಲೋಚಿತವೆಂದು ಗ್ರಹಿಸು
ರಚ್ಚಿಗೊಳಗಾಗದೆ ಕೊಚ್ಚಿ ಹರಿವ ನದಿ
ನೆಚ್ಚಿಕೆ ಇಪ್ಪದಕ್ಕೆ ಮಚ್ಚುಗೊಂಡಿರದಿರು
ಎಚ್ಚರ ಕೇಳು ಮನವೆ
ಅಚ್ಯುತಾನಂತ ನಮ್ಮ ವಿಜಯ ವಿಠ್ಠಲ ಹರಿಯ
ಸಚ್ಚರಿತವ ನೆನೆದು ಅಚ್ಚಗತಿಯನೈದು ೧
ಮಟ್ಟತಾಳ
ಹರಿದು ಹರಿವ ಉದಕ ಕರದಿಂದಲಿ ತಡದು
ಹಿರಿದಾಗಿ ನಿಲಿಸಿ ಮರಳೆ ಈಸುವೆನೆಂದೀ
ಪರಿ ಚಿಂತಿಸಿದಂತೆ ಧರಣಿಯೊಳಗೆ ಬಂದ
ಶರೀರ ಎನ್ನದೆನಲು ಹುರಳಿಲ್ಲದೆ ಮಾತು
ಬರಿದೆ ಪೋಗುವುದು ಹೊರಗೆ ಹೋಗು ಉ
ಸಿರು ನಿನ್ನಾಧೀನ ಇರಬಲ್ಲದೆ ಮನವೆ
ಬರಿದೆ ನಂಬದಿರು ಮರುಳಾಟದ ಲೀಲೆ
ಸುರಪಾಲಕ ನಮ್ಮ ವಿಜಯ ವಿಠ್ಠಲನ್ನ
ಸ್ಮರಣೆಯಲ್ಲಿ ವಾಸರವನೆ ಪೋಗಾಡು ೨
ತ್ರಿವಿಡಿತಾಳ
ಎಂಥ ದಯವಂತ ಯದುಕುಲತಿಲಕ ಶ್ರೀ
ಕಾಂತನು ಕರುಣಿಸಿ ಇತ್ತ ಸಾಮ್ರಾಜ್ಯವ
ಎಂತು ಪೇಳಲಿ ಮನವೆ ಚೆನ್ನಾಗಿ ಲಾಲಿಸು
ಸಂತತ ತೊಲಗದೆ ಹಗಲಿರಳು
ಅಂತರಂಗದೊಳು ಅಪಾರ ಮಹಿಮನು
ನಿಂತು ನಿಮಿಷ ಬಿಡದೆ ರಕ್ಷಿಸುವ
ಕಂತುಜನಕ ನಮ್ಮ ವಿಜಯ ವಿಠ್ಟಲ ಹರಿಯ
ಚಿಂತಿಸು ಚಿರಕಾಲ ಚತುರಗುಣದಲ್ಲಿ ೩
ಅಟ್ಟತಾಳ
ಕರಚರಣ ಚಕ್ಷು ನಾಸ ವದನ ಕರ್ನ
ತರುವಾಯ ಜಿಹ್ವೆ ನಾನಾ ಉಪಾಯವ
ಹರಿ ಪ್ರೇರಕನಾಗಿ ದಿನಪ್ರತಿ ನಡೆಸುತ್ತ
ದುರಿತಗಳಟ್ಟಿ ಕಾಡದಂತೆ ಪರಿ ಪರಿ
ಕರುಣದಿಂದಲಿ ಪರಿಪಾಲಿಸಿ ಸಂಗಡ
ತಿರುಗುತ್ತಲಿಪ್ಪನು ತನ್ನವನಿವನೆಂದು
ಮರುಳೆ ಮನಸೆ ನೀನು ಹಲವು ಹಂಬಲಿಸಿ ಪಾ
ಮರನಾಗಿ ಕೆಡದಿರು ಸಂಸಾರವೆಂಬೋದು
ಉರಲು ಪಾಶವು ಕಾಣೊ ಗೆಲಿಪರೊಬ್ಬರಿಲ್ಲ
ಹರಣ ಮೊದಲಾದ ಸಕಲ ಒಡವಿ ವಸ್ತ
ಹರಿಪಾದಕ್ಕರ್ಪಿಸಿ ಸುಖಿಯಾಗು ಮನವೆ
ಪರಮಪುರುಷ ನಮ್ಮ ವಿಜಯ ವಿಠ್ಠಲನ್ನ
ನೆರೆ ನಂಬೊ ನೆರೆ ನಂಬೊ ನೆರೆದು ಸಜ್ಜನರೊಡನೆ ೪
ಆದಿತಾಳ
ಧರ್ಮ ಮರಿಯದಿರು ನಿರ್ಮತ್ಸರದಲ್ಲಿರು
ಕರ್ಮರ ಕೂಡದಿರು ದುರ್ಮತಿಯಾಗದಿರು
ದುರ್ಮದದಿರದಿರು ದುರ್ಮಾಯಾ ಬಯಸದಿರು
ನಿರ್ಮಳ ತೊರೆಯದಿರು ಮಾರ್ಮಲತು ನಡಿಯದಿರು
ಮರ್ಮವ ಪೇಳದಿರು ಧರ್ಮವ ಬಿಡದಿರು
ಚರ್ಮದೇಹಕ್ಕೆ ಒಂದು ಮಾರ್ಗವ ತಿಳಿಯೋದು
ಕರ್ಮದಾರಿಯ ಬಿಡು ಧರ್ಮನು ಮೆಚ್ಚುವನು
ಪೆರ್ಮೆ ಎಂಬೋದ ದಾಟಿ ದುರ್ಮಾರ್ಗ ಪಿಡಿಯದಿರು
ನಿರ್ಮಳವಾಗಿದ್ದ ಅರ್ಮಿಪುರವ ಸೇರು
ಕೂರ್ಮಾವತಾರ ನಮ್ಮ ವಿಜಯ ವಿಠ್ಠಲನ್ನ ಸ
ತ್ಕವರ್ಇವ ನೆನೆದು ಅಧರ್ಮವ ಕಳಿಯೊ ೫
ಜತೆ
ಸುಖವಿಲ್ಲ ಸುಖವಿಲ್ಲ ಸಂಸಾರವೆಂಬೋದು
ಸಖನಾದ ವಿಜಯ ವಿಠ್ಠಲನ್ನ ನೆನಸು ಮನವೆ ೬

ಪಂಚಭೂತಗಳು ಜಡವೆನಿಸಿದರೂ ಅವುಗಳ

೨೨
ಧ್ರುವತಾಳ
ಎತ್ತಣ ಭೂತಂಗಳೊ ಎಲ್ಲಿ ಪೊಕ್ಕರೆ ಬಿಡವು |
ಹತ್ತಿಕೊಂಡಿಪ್ಪವು ನಾನಾ ಜನುಮ |
ಸುತ್ತಿದ ಕಾಲಕ್ಕು ತೊಲಗದೆ ವ್ಯಾಪ್ತವಾಗಿ |
ಅತ್ತಲಿಕು ಪೋಗದೆ ಇರುತಿಪ್ಪವು |
ಮೃತ್ತಿಕೆ ನೀರು ಬೆಳಕು ಘಾಳಿ ಬಯಲು ಎಂಬೊ |
ಮತ್ತೆ ನಾಮಗಳಿದಕೆ ಸರ್ವಕಾಲ |
ಉತ್ತರೋತ್ತರದಿಂದ ಗುಣಗಳು ಅಧಿಕವುಂಟು |
ಆತ್ತಾಗಿಪ್ಪವು ಒಂದನ್ನೊಂದು ಬಿಡದೆ |
ಹೊತ್ತು ಹೊತ್ತಿಗೆ ಲೋಕ ಪೇಳುವುದಾಡುವುದು |
ಬಿತ್ತುವುದು ಬೆಳೆಯುವುದು ಚರಿಸುವುದು |
ತುತ್ತು ಮಿಕ್ಕಾದ ಚೇಷ್ಟೆ ಈ ಭೂತಗಳಿಂದ |
ನಿತ್ಯದಲಿಯಾಗುವುದು ಬೊಮ್ಮಾಂಡದಿ |
ಮುತ್ತು ಮಾಣಿಕ ಹೇಮ ರಜತ ನಾನಾ ದ್ರವ್ಯ |
ಮೊತ್ತಂಗಳಲ್ಲಿ ಈ ಭೂತಂಗಳು |
ಸುತ್ತಿ ಕೊಂಡಿಪ್ಪವು ಬ್ರಹ್ಮಾಂಡ ಬಾಹಿರಕ್ಕೆ |
ಹತ್ತು ಹತ್ತು ಮಡಿ ಆವರ್ಕದಿ |
ಕಿತ್ತಿ ಬಿಸುಟಾಲಳವೆ ರುದ್ರಾದ್ಯರಿಗಾದರು |
ಬತ್ತದಯ್ಯಾ ಕರ್ಮವುಳ್ಳ ತನಕ |
ಉತ್ತಮೋತ್ತಮರಿದಕೆ ಆಶ್ರಯವಾಗಿಪ್ಪರು |
ಪ್ರತ್ಯೇಕ ಗುಣ ತಾರತಮ್ಯದಿಂದ |
ಅತ್ಯಂತ ಜಗದ್ಭರಿತ ವಿಜಯ ವಿಠ್ಠಲರೇಯ |
ಕರ್ತನಾಗಿ ಪಂಚಭೂತಗಳ ಪೊಂದಿಸಿಪ್ಪ ೧
ಮಟ್ಟತಾಳ
ಈ ಮಾತುಗಳಿಂದ ವೈಭವವಾಗುವುದು |
ಈ ಭೂತಗಳಿಂದ ವೈಭೋಗ ದೊರಕುವುದು |
ಈ ಭೂತಗಳಿಂದ ಶೋಭನ ಒದಗುವುದು |
ಈ ಭೂತಗಳಿಂದ ಲಾಭವೆ ಬರುವುದು |
ಈ ಭೂತಗಳಿಂದ ಸೌಭಾಗ್ಯ ತುಳುಕುವುದು |
ಈ ಭೂತಗಳಿಂದ ಭೂ ಭೂಷಣ ಕಾಣೊ |
ಈ ಭೂತಗಳಿಂದ ಪ್ರಭಾವವೆನಿಸುವ |
ಈ ಭೂತಗಳಘ ಪ್ರಭಾವ ಯಿರಲಾಗಿ |
ಶೋಭಿಸುವರು ವಿಪ್ರ ಭೂಭುಜ ಮಿಕ್ಕವರು |
ಈ ಭೂತಗಳಿಂದ ಸಾಭಿಮಾನವೆ ವುಂಟು |
ಈ ಭೂತಗಳಿಂದ ಲೋಕಕ್ಕೆ ಕಾರಣ |
ವಿಭೂತಿವಂತ ವಿಜಯ ವಿಠ್ಠಲರೇಯ |
ಈ ಭೂತಗಳಿಂದ ಭೂಭಾರ ಇಳುಹುವ ೨
ತ್ರಿವಿಡಿ ತಾಳ
ಒಬ್ಬಗೈದು ಭೂತ ಹೊಡೆದಿರಲು ಅವನ |
ಉಬ್ಬಿಸಿ ಮತ್ತೈದು ಭೂತಂಗಳ |
ಅಬ್ಬರದಲಿ ತಂದು ಕಟ್ಟಿಹಾಕಲು ನೆರೆದ |
ನಿಬ್ಬಣದ ಭೂತಂಗಳು ಒಂದಾಗಿ |
ಗಬ್ಬಿನಲಿ ಇದ್ದಾ (ತ್ತಾ) ಕೆಲವು ಕಾಲಕೆ ಮದದ |
ಗಬ್ಬು ತಾಕಲು ಹತ್ತು ಭೂತಾಕೂಡೆ |
ಇಬ್ಬಗೆಯಿಂದಲಿ ಒಂದೊಂದು ಕೂಡಲು |
ಹಬ್ಬಿತು ಭೂತದ ಬಳಗೆ ಸಂಖ್ಯ |
ನಿಬ್ಬಿಡ ಕ್ರತವಾದ ಭೂತದೊಳಗೆ ಬಿದ್ದು |
ಕಬ್ಬು ಬಾಯಲಿ ಕಚ್ಚೆ ಜಂಬೂಕನು |
ಉಬ್ಬಸ ಬಟ್ಟಂತೆ ಭೂತಗಳ ಮೋಹ |
ಇಬ್ಬಗೆಯನು ನೋಡಿ ಹೀನ (ವದು) ವಾದ |
ಮಬ್ಬಿನ ಕಡೆಗೆ ಈ ಭೂತಗಳಟ್ಟದೆ |
ಕಬ್ಬುಲ ದಾಟುವ ಉಪಾಯ ಹರಿಚರ |
ಣಾಬ್ಜ ಕೊಂಡಾಡಿ ಕೊಳುತಲಿಪ್ಪೆ |
ಒಬ್ಬರ ಮನೆಯಲ್ಲಿ ದ್ರವ್ಯ ಕದ್ದವನಲ್ಲ |
ಒಬ್ಬರ ವಸ್ತಿಕೆ ಪೋಗಲಿಲ್ಲ |
ಉಬ್ಬೀಗ ಉತ್ತುಮರ ಸರಿಯೆಂದು ಹಿಗ್ಗುತ |
ಬೊಬ್ಬಾಟದಲಿ ಪೇಳಿಕೊಳ್ಳಲಿಲ್ಲವೊ |
ಕಬ್ಬಿನಾಲಿಯಬಳಿಯ ಕುಳಿತು ಮಲಕೆ ಮೊರಿದ |
ಅಬ್ಬು ಕುಡಿದವರ್ಯಾರೊ ಮಾನವರು |
ಒಬ್ಬರ ಶ್ರೇಯಸ್ಸು ನೋಡಿ ಧರಿಸಲಾರದೆ |
ಹಬ್ಬದಲ್ಲ್ಯುಪವಾಸ ಬಿದ್ದವನಂತೆ |
ಹುಬ್ಬಿನ ಗೋಸುಗ ಕಣ್ಣು ತೆಗಸಿಕೊಂಡು |
ದೊಬ್ಬಿಸಿ ಕೊಳುತಾ ತಾ ಬದುಕಿದಂತೆ |
ಇಬ್ಬಳ ಮಣಿ ಕೊಟ್ಟು ತಿಪ್ಪಿ ಮೇಲಿನ ಬೂದಿ |
ಬೊಬ್ಬುಳಿ ಗಿಡ ಕೊಯ್ದು ಹರಹಿದಂತೆ |
ಒಬ್ಬರ ಪೋಗಲಾಡುವುದೇನು ನೀರಿನ |
ಬೊಬ್ಬುಳಿ ಸಮ ಕಾಣೊ ಈ ಶರೀರ |
ಶಬ್ದದಿಂದಲಿ ಪುಣ್ಯ ಪೋಗುವುದು ಪಾಪ |
ದಬ್ಧಿಯೊಳಗೆ ಮುಣುಗೆ ಪೊರಗಾಗರು |
ಅಬ್ಧಿಶಯನ ನಮ್ಮ ವಿಜಯ ವಿಠ್ಠಲನಂಘ್ರಿ |
ದಭ್ರವಾದರು ಭಜಿಸುವೆನೆಂಬವ ಧನ್ಯ ೩
ಅಟ್ಟತಾಳ
ಒಂದು [ಪಿ]ಶಾಚಿ ಹಿಡದವ ಮನಸಿಗೆ |
ಬಂದಂತೆ ಒರಲುವ ಕಂಡಲ್ಲಿ ತಿರುಗುತ್ತ |
ಒಂದಲ್ಲ ಎರಡಲ್ಲ ಐದು ಭೂತಂಗಳು |
ಒಂದೇ ಪ್ರಕಾರವು ಅನಾದಿ ಕಾಲದಿ |
ಲಿಂದ ಹಿಡಿದರೆ (ಹಿಡದಿರೆ)ತಮ್ಮ ಪುಣ್ಯಕೆ ಏ |
ನಂದದೆ ಸರಿ ಪ್ರತಿ ಕೂಲರಾಗುವರು |
ಬಾಂಧವ ತಾನಾಗಿ ಹರಿ ವೊಲಿದು ನಿತ್ಯ |
ಗಂಧವಾದರು ತನ್ನ ಪರವಾದ ಸ್ತೋತ್ರಗ |
ಳಿಂದವಾಗಲಿ ಮತ್ತಾಗದೆ ಪೋಗಲಿ |
ಸಂಧಿಸಿ ಕೊಂಡಿದ್ದು ಭೂತಗಳೊಳು ತಾನೆ |
ನಿಂದು ಈ ಪರಿಯಿಂದ ನಡಿಸಿದ ಯಿದರಿಂದ |
ನಂದವಾದರೆ ಯೇನು ಆಗದಿದ್ದರೆ ಯೇನು ?|
ಮಂದಿಗವನ ಚಿಂತೆ ವ್ಯರ್ಥ ಹಚ್ಚಿಕೊಂಡು |
ನಿಂದಿಸುವ ಬಗೆ ಅವಗತಿ ಮಾರ್ಗ |
ಮುಂದೆ ಕಾಣದೆ ಪೋಗಿ ಮೂರ್ಖರಾಗುವರು |
ಎಂದಿಗಾದರು ಯಮರಾಯನ ಸಭೆಯಲ್ಲಿ |
ಬಂದು ಇವನ ಕರ್ಮಕ್ಕೆ ಅಡ್ಡಬಾಹನೆ |
ತಿಂದನ್ನ ಮೈಗೆ ಹತ್ತದಂತೆ ಇಪ್ಪದು |
ಛಂದವಲ್ಲವಿದು ತಿಳಿದ ಪ್ರಾಜ್ಞರಿಗೆ |
ಕಂದುಗೊರಳಪಿತ ವಿಜಯ ವಿಠ್ಠಲರೇಯ |
ಬಂಧನದೊಳಗಿರುವ ಭಕ್ತರಿಗಂದವನ್ನ ೪
ಆದಿತಾಳ
ನಿರ್ದೋಷ ಹರಿಯೊಬ್ಬ ಆ ತರುವಾಯ ಸಿರಿ |
ತದ್ದಾಸರು ಬ್ರಹ್ಮ ವಾಯು ಭಾರತಿ |
ಶುದ್ಧರಿವರು ಕಾಣೊ ಉಳೆದಾದವರು ಮಹ |
ರುದ್ರಾದ್ಯೆಲ್ಲರು ಸದ್ದೋಷಿಗಳು ಕಾಣೊ |
ವಿದ್ಯಾವಂತರಹುದು ನಮಗಿಂದಧಿಕರು |
ಪದ್ಮ ಬಾಂಧವರ ನೋಡೆ ಇವರು ನೀಚರಾದರು |
ಬುದ್ಧಿಯ ಹಳಿಯರು ಹೊರ ಬೀಸ ಬಿಸಾಟರು |
ಇದ್ದ ಮಾನವರಿನ್ನು ಸುಮ್ಮನಿರದೆ ನಿತ್ಯ |
ಪೊದ್ಧಿದ ಸುಕೃತ ಪೋಗಲಾಡಿ ಕೊಂಬರು |
ಸದ್ಧ್ಯ ಸಂಸಾರವೆಂಬ ಮಾಯದುದ ಪಾಶ |
ಬದ್ಧರಲ್ಲಿ ಶಿಲ್ಕಿ ಚರಿಸುವ ಮಾನವರು |
ದುರ್ದೋಷಿಗಳು ಕಾಣೊ ಗುಣವ ಪೇಳುವುದೇನು |
ಕದ್ದು ತಂದವನಲ್ಲ ಅನ್ಯರ ಮನೆ ಸೇರಿ |
ಸುದ್ಧಿಗಳಾಡಿಕೊಂಡು ಪೊಟ್ಟಿ ಪೊರೆದವನಲ್ಲ |
ಸಿದ್ಧವಾದ ಮತ ಸಜ್ಜನರ ಸಮ್ಮತ |
ಇದ್ದದೆ ಭೂತಂಗಳು ಪೇಳುತಲಿವೆ ಕೇಳು |
ಕೃದ್ಧವ ತಾಳಿ ಜನರು ಪ್ರತಿ ಕೂಲವಾಗಿ ಅಪ |
ಶಬ್ಧ ನುಡಿದರೆ ಇತರ ಜನರಿಗೇನು |
ಈದ್ಧರಿಯೊಳಗಿದ್ದ ಭೂತವಾದರು ಬಂದು |
ಪೊದ್ದಿದರೇನಯ್ಯ ಹರಿನಾಮ ನುಡಿವುದು |
ಕ್ಷುದ್ರ ವತ್ತಿಯ ಪೋಗಿ ಕುಲಗೇಡಿಯಾಗಿದ್ದರೆ |
ಒದ್ದು ಬಿಡರಿಬೇಕು ಗುಣವಂತರಾದವರು |
ಸಿದ್ಧ ಮಹಿಮ ನಮ್ಮ ವಿಜಯ ವಿಠ್ಠಲರೇಯ |
ಭದ್ರ ಕೊಡುತಿಪ್ಪ ಭೂತವುಳ್ಳವನಿಗೆ ೫
ಜತೆ
ಎಲ್ಲ ಭೂತಗಳೊಡೆಯ ವಿಜಯ ವಿಠ್ಠಲನೊಬ್ಬ |
ಬಲ್ಲಿದ ಒಲಿದರೆ ಅನ್ಯಭೂತಗಳಿಲ್ಲ ೬

ಭಕ್ತರಾದವರು ತಾವೊಬ್ಬರೆ ಹರಿಯ

೧೯
ಧ್ರುವತಾಳ
ಎನ್ನ ಮಾತಾಪಿತರು ನಿನ್ನ ಸೇವಕರಯ್ಯ
ಎನ್ನ ಅನುಜಾಗ್ರಜರು ನಿನ್ನ ಸೇವಕರಯ್ಯ
ಎನ್ನ ಸತಿಸುತರು ನಿನ್ನ ಸೇವಕರಯ್ಯ
ಎನ್ನ ಬಾಂಧವರು ನಿನ್ನ ಸೇವಕರಯ್ಯ
ಎನ್ನ ಸುತ್ತಲವರು ನಿನ್ನ ಸೇವಕರಯ್ಯ
ಎನ್ನ ಪೊರೆದವರು ನಿನ್ನ ಸೇವಕರಯ್ಯ
ಎನ್ನ ಬಳಿಯ ಎಲ್ಲಾ ನಿನ್ನ ಅಧೀನವಯ್ಯ
ಯಾವದ್ದೇಹ ಪರಿಯಂತರದಲ್ಲಿ
ಜೀವಂತರಾಗಿರಲಿ ಧರ್ಮಗುಣದಲ್ಲಿ
ಯಾವಜ್ಜೀವರೊಡೆಯಾ ವಿಜಯ ವಿಠ್ಠಲಕ್ಷೋಭ್ಯಾ
ಯಾವತ್ತು ಎನ್ನಯ ಭಾರ ನಿನ್ನದಯ್ಯ ೧
ಮಟ್ಟತಾಳ
ಎನ್ನದು ಎನ್ನದು ಎನ್ನದು ಎಂಬುವುದು
ಇನ್ನು ಸಲಿಗೆ ಮಾತನ್ನಿತ್ತವರವರು
ಮನ್ನಿಸಿ ದಯ ಸಂಪನ್ನ ನೀನಾಗಿ
ಅನ್ನೋದಕವಿತ್ತು ಮನ್ನಿಸಿದಿ ನನ್ನನ್ನು
ಕನ್ಯಾಪತಿ ಪ್ರಸನ್ನ ವಿಜಯ ವಿಠ್ಠಲ
ಅನ್ನಂತ ಮೂರ್ತಿ ಎನ್ನಯ ಪರಣ ೧
ತ್ರಿವಿಡಿ ತಾಳ
ಪಶುಗಳ ಕಾವ ಸಣ್ಣ ಹಸುಮಕ್ಕಳ ನೆರದು
ಬೆಸದಾಡಿ ಎಮ್ಮಯ ಎಂದೆಂಬದು ಗಾದೆ
ವಸುಧಿಯೊಳೆಗೆ ಪುಟ್ಟಿಸಿದ ಕಾರಣ ಈ
ಅಸುಸಂಬಂಧಿಗಳೆಂದು ಉಸಿರಿದೇನೊ
ಬೆಸನ ಲಾಲಿಸು ವಿಚಾರಿಸು ಭಕ್ತಿಯನು ಕರು-
ಣಿಸುವದು ದೀನ ಬಾಂಧವ ಮಾಧವ
ವಸುರೇತಾ ವಿಜಯ ವಿಠ್ಠಲ ಜಗದ್ಧಾತಾ
ಬಸುರೊಳು ಪರೀಕ್ಷಿತನ ಪುಸಿಯಾದೆ ಕಾಯ್ದೆ ೨
ಅಟ್ಟತಾಳ
ಗೋತ್ರೇಳು ನೂರೊಂದು ಕುಲದವರು
ಧಾತ್ರಿಯೊಳಗೆ ಗಾತ್ರವುಳ್ಳನಕ
ಪುತ್ರ ಪೌತ್ರ ಪಾರಂಪರ್ಯವಾಗಿ
ಮಿತ್ರ ಭಾವದಲ್ಲಿ ಭವರೋಗಗಳೆದು
ಚಿತ್ರ ವೇಗದಿಂದ ಕಾಯಲಿ ಬೇಕು
ಸ್ತೋತ್ರ ನಾಮಕ ಸಿರಿ ವಿಜಯ ವಿಠ್ಠಲ
ನ್ನ್ಯತ್ರದೊಳಿರಿಸದೆ ಕ್ಷೇತ್ರದಂತೆ ಸಾಕು ೩
ಆದಿತಾಳ
ದೇಹ ಗೇಹ ಸಂಬಂಧ ಮೋಹ ಮಮತೆಗಳೆಲ್ಲ
ಇಹಲೋಕದಲ್ಲಿ ಬಂದು ಚರಿಸುವ ಪರಿಯಂತೆ
ಇಹುದಯ್ಯ ತಪ್ಪದಲೆ ಏಸು ಬಗೆಯಿಂದ ತಿಳಿಯೆ
ಗುಹ್ಯನಾಮ ವಿಜಯ ವಿಠ್ಠಲ ಭಕ್ತರ ಓವಿಗನೆ
ಬಾಹ್ಯಾಂತರವ ಬಲ್ಲ ಬಲಿಗೊಲಿದ ಭವದೂರ ೪
ಜತೆ
ನೀನೊಲಿದು ಸ್ವತಂತ್ರವಿತ್ತಕಾರಣದಿಂದ
ನಾನೆ ಬೇಡಿಕೊಂಡೆ ಚಕ್ರಿ ವಿಜಯ ವಿಠ್ಠಲ ೫

ಮಾನವನ ದೇಹದಲ್ಲಿ ಎಡ ಭಾಗದಲ್ಲಿ

೨೩
ಧ್ರುವತಾಳ
ಎಪ್ಪತ್ತೆರಡು ಸಾವಿರ ನಾಡಿ ಅತೀಂದ್ರಿಯ |
ಇಪ್ಪವು ದೇಹದೊಳಗೆ ನಾಭಿಮೂಲದಲ್ಲಿ |
ಒಪ್ಪುತಿವೆ ಕೇಳಿ ಎರಡು ವಿಧವಾಗಿ |
ಅಪ್ಪಸವ್ಯಾ ಸವ್ಯಾ ಅರ್ಧರ್ಧಾ ಲೆಖ್ಖದಲ್ಲಿ |
ಅಪ್ಪಾರ ಮಹಿಮನು ಪುರುಷಾಯುಷ ಪ್ರಮಾಣ |
ಸ್ತ್ರೀ ಪುರುಷ ರೂಪದಲ್ಲಿ ಮೆರೆವುತಿಹ |
ಇಪ್ಪತ್ತೊಂದು ಸಾವಿರ ಆರುನೂರು ಮಂತ್ರ ಜಪಿಸುವ |
ಅಪ್ರತಿಸೂತ್ರವಾಯು ಸತತ ಲಕುಮಿ ಪತಿಯ |
ಅಪ್ಪಣೆಯಿಂದಲಿ ಜೀವನ ಕೈಯಿಂದ |
ಸುಪುಣ್ಯ ಮಾಡಿಸುವ ದಾಸೋಹಂ ಎಂದಾ ನುಡಿಗೆ |
ಸಫಲವಾಗುವದು ಒಂದು ಕಾಸು ಕೊಟ್ಟರೆ
ಕೊಪ್ಪರಿಗೆ ಧನಮಾಡಿ ಉಣಿಸುವ ಜಗದ್ಗುರು |
ಇಪ್ಪತ್ತು ನಾಲ್ಕು ನಾಡಿ ಮೊದಲಾದ ನಾಡಿಯೊಳು |
ತಾ ಪ್ರಧಾನವಾಗಿ ಇಪ್ಪವು ಇದರೊಳು |
ತಪ್ಪದೆ ನಾಲ್ಕು ನಾಡಿ ಬಲಗಡೆ ಪೊಂದಿಪ್ಪವು |
ಒಪ್ಪದಿಂದಲಿ ನೋಡಿ ಉಳಿದ ನಾಡಿಗಳು |
ಇಪ್ಪತ್ತುಯಿವೆ ಊಧ್ರ್ವ ಅಧೋ ಮುಖವರ್ಧರ್ಧಾ |
ಗಪ್ಪನೆ ಮೇಲುಗಡೆ ಹಬ್ಬಿದ ಹತ್ತು ನಾಡಿ |
ಯಪ್ಪೆಸರು ಲಾಲಿಸುವದು ಶ್ರುತುತಿಸ್ರ‍ಮತಿ ಸಮ್ಮತ |
ಅಪ್ರಧಾನನಾಡಿ ಸರ್ವ ಇದರೊಳು |
ಇಪ್ಪದು ಸುಷುಮ್ನ ನಾಡಿ ಶ್ರೇಷ್ಠ |
ಅಪ್ಪಡಿಯಾದಿದೆ ಧ್ಯಾನಕ್ಕೆ ಶ್ರೀಹರಿ |
ಒಪ್ಪ ಸ್ಥಾನವೆ ತಿಳಿದು ನೋಪ್ಪರಿಗೆ |
ಸರ್ಪವೈರಿ ಕೇತನ ವಿಜಯ ವಿಠಲ ಹರಿಯ |
ಆಪನ್ನನಾಗುವನು ತಿಳಿದರೆ (ಯದೆ) ಗತಿಯಿಲ್ಲ ೧
ಮಟ್ಟತಾಳ
೧ ಪಿಂಗಳ ೨ ಗಾಂಧಾರಿ ೩ ಲಂಬುಸ (ಶಿಖ) ೪ ಪೂಂಸ |
೫ ಹಿಂಗದೆ ೬ ಹಸ್ತಿನಿ ೭ ಕುಹ ೮ ಶಂಖಿನಿ ೯ ಶಾರಧೀ ಇಡಾ |
ಗಂಗೆ ಎನಿಸಿಕೊಂಬ ೧೦ ಬ್ರಹ್ಮನಾಡಿ ಸಹಿತ |
ಅಂಗವಾಗಿಯಿದ್ದ ಹತ್ತು ನಾಡಿಯು ಕಾಣೊ |
ಪಿಂಗಳ ಬಲಭಾಗ ಎಡಭಾಗಕ್ಕೆ ಇಡಾ |
ಸಂಗತಿಯಾದಂತೆ ಮೂಗಿನಲಿ ಸಂಚಾರ |
ತಿಂಗಳ ಸೂರ್ಯ ಸ್ವರಗಳೆನಿಸುವವು |
ಮಂಗಳ ರಮಣನ್ನ ಚರಣ ಕಾಣುವ ಜ |
ನಂಗಳು ಜ್ಞಾನದಲಿ ಸ್ವರಭೇದ ಗ್ರಹಿಸುವದು |
ಅಂಗಜ ಪಿತ ನಮ್ಮ ವಿಜಯ ವಿಠ್ಠಲ ಅಂತ |
ರಂಗದೊಳಗೆ ಯಿದ್ದು ತನ್ನ ತೋರಿಸಿಕೊಡುವ ೨
ತ್ರಿವಿಡಿ ತಾಳ
ನಾಸಿಕದಲಿ ಇಡಾ ೧ ಪಿಂಗಳ ೨ ನಾಡಿಗಳು |
ಪುಂಸಾ ೩ ಲಂಬು ಶಿಖಾ ೪ ಎರಡು ಕಣ್ಣಿನಲಿ |
ಲೇಸು ಗಾಂಧಾರಿ ೫ ಹಸ್ತಿನಿ ೬ ಯೆಂಬೊ ನಾಡಿ ಪ್ರ |
ಕಾಶವಾಹಿವೆ ನೋಡಿ ಕರ್ಣದಲ್ಲಿ |
ಆ ಶಾರದ ೭ ಜಿಂಹ್ವೆಯಲ್ಲಿಪ್ಪುದು |
ಭೂಷಣವಗಿದ್ದ ಕುಹವೆ ೮ ಗುದದಲ್ಲಿ |
ಮೋಸವಿಲ್ಲದೆ ಲಿಂಗದಲ್ಲಿ ಶಂನಿ (೯) ನಾಡಿ |
ಈಸು ನಾಡಿಗಳು ಅಲ್ಲೆಲ್ಲಿಪ್ಪವು |
ಸುಷುಮ್ನ ೧೦ ನಾಡಿ ಮೂಲಾಧಾರ ವಿಡಿದು |
ಶಾಶಿನಿಯಿಲ್ಲದೆ ಮೂಧ್ರ್ನಿ ತನಕ |
ಶ್ವಾಸ ಅಲ್ಲಿಂದ ಪೋದವಗೆ ಪೂರ್ಣಜ್ಞಾನ |
ಮಿಸಲ ಪದವಿಗೆ ಅರ್ಹನಯ್ಯಾ |
ಈ ಸಮಸ್ತ ನಾಡಿಗಳಲ್ಲಿ ಶಿವಪುತ್ರರು |
ದಾಸ ಪ್ರಾಣರು ಮತ್ತೆ ಮುಖ್ಯ ಪ್ರಾಣ |
ಶ್ರೀ ಶನ ಸೇವೆಗೋಸುಗಾಧಿಷ್ಠಾನರಾಗಿ |
ಈ ಶರೀರದ ಸ್ಥಿತಿ ನಡೆಸುವರು |
ದೇಶ ಕಾಲ ಬಿಡದೆ ಆವಾವ ಕರ್ಮಗಳು |
ಲೇಶ ತಪ್ಪದಂತೆ ಪ್ರೇರಿಪರೋ |
ಲೇಶಿಗೆ ಇವರಯ್ಯಾ ಹೊಲ್ಲಿಗೆ ಇದೆ ನಾಮ |
ಆಸುರಿ ಜನರಲ್ಲಿ ಮಾಡಿಸುವರು |
ಈ ಶುಂಠರಿಗೆ ಮುಖ್ಯ ಕಲಿ ಪ್ರೇರಕನಾಹ |
ವಾಸುದೇವನೆ ಅವಗೆ ಶಿಕ್ಷಕನು |
ದೇಶ ಕಾಲ ವ್ಯಾಪ್ತ ವಿಜಯವಿಠಲ ಹರಿಯ |
ದಾಸರೊಳಗೆ ಮುಖ್ಯಪ್ರಾಣನೆ ಬಲ್ಲಿದ ಕಾಣೊ ೩
ಅಟ್ಟತಾಳ
ಪ್ರಾಣ ಹೃದಯದಿ ಶ್ವಾಸ ಕಾರಣ ಅ |
ಪಾನನು ಮಲ ಮೂತ್ರ ಬಿಡಿಸುವ ಅಧೋದಿಂದ |
ವ್ಯಾನ ಕಂಠದಲ್ಲಿ ತೃಷ್ಣೆಯಮಾಳ್ಪ ಉ |
ದಾನ ತಾಲು ಸ್ಥಾನದಲ್ಲಿ ಆಹಾರ |
ವಾನು ಭುಂಜಿಸುವ ಆಕಳಿಸುವ |
ಈ ನಾಭಿಯಲ್ಲಿ ಸನೂನ ವಾಯು ಕೃ |
ಶಾನುವಿಗೆ ಬೀಗೆ ದೀಪನವ ಮಾಡುವ |
ಏನೆಂಬೆ ಸಮಸ್ತ ಸೂಕ್ಷ್ಮ ನಾಡಿಯಲ್ಲಿ |
ತಾನಿದ್ದು ಆಹಾರವ ನಾಗನು ಕೊಡುತಿಪ್ಪ |
ಏಣಿಸಿ (ಎಣಿಸಿ )ಗುಂಣಿಪದು ಇವರಿವರಿದ್ದಂಥ |
ಸ್ಥಾನಂಗಳು ಅಲ್ಲಿ ಮಾಡುವ ವ್ಯಾಪಾರ |
ಜ್ಞಾನಾಂಬುಧಿ ನಮ್ಮ ವಿಜಯ ವಿಠ್ಠಲ ಬಲು |
ಜಾಣನು ಕಾಣೊ ಜಗದೊಳ ಗಾಡುವ | ೪
ಆದಿತಾಳ
ಕಣ್ಣಿನಲ್ಲಿ ಕೂರ್ಮ ರೆಪ್ಪೆ ಪಾಕಿಸುವ ಮುಚ್ಚಿಸುವ |
ಮುನ್ನೆ ಕೃಕಲ ವಾಯು ನಾಶಿಕದಲ್ಲಿ ವಾ |
ಸನ್ನೆ ತೆಗೆದುಕೊಂಬ ನಾನಾ ವಿಚಿತ್ರವಾದ |
ಧನ್ನಂ (ಧನಂ) ಜಯ ಯೆಂಬುದು ಎಂಟು ದಿಕ್ಕಿನ ಶಬ್ಧ |
ಕರ್ನದಲಿ ಶುಭಾ ಶುಭ ಕೇಳಿಸುವುದು ಬಿ |
ನ್ನಣ ದೇವದತ್ತನು ಜಿಂಹ್ವೆಯಲಿ |
ಚನ್ನಾಗಿ ವಾಕ್ಯಗಳ ನುಡಿಸುವ ಕೊಡಿಸುವ |
ಬನ್ನ ಬಡಿಸುವರು ಇವರೆ ದೈತ್ಯರೊಳಿದ್ದು |
ಗುಣ್ಣಿಸೆ ದಶವಾಯು ಪ್ರವರ್ತಿಸುವರು |
ಅನ್ನಂತ ಜೀವರಾಶಿಯೊಳಗೆ ವಾಸವಾಗಿ |
ಭಿನ್ನ ಭಿನ್ನ ಚೇಷ್ಟೆ ಮಾಡಿಸುವರು ನಿಂದು |
ಇನ್ನು ಇವರಿಗೆ ಅಧಿಷ್ಠಾನ ಮುಖ್ಯ ಪ್ರಾಣ |
ತನ್ನೊಳಗೆ ಸಿರಿ ಹರಿ ಸಹಿತ ಇದ್ದಾ |
ಗಣ್ಯವಿಲ್ಲದ ಕರ್ಮ ಮಾಡಿ ಮಾಡಿಸುತಿಪ್ಪನು |
ಅನ್ಯ ದೈವವೆ ಇಲ್ಲ ಈತನೆ ಮುಖ್ಯ ಕರ್ತ |
ಮನ್ನುಜ ಈ ಪರಿ ತಿಳಿದು ತನ್ನ ಗುರು |
ವಿನ್ನ ಮೊದಲು ಮಾಡಿ ಮುಖ್ಯ ಪ್ರಾಣಾಂತರ್ಯಾಮಿ |
ಸನ್ಮತಿಯಿಂದ ಸಮರ್ಪಣೆ ಮಾಡಿದರೆ ಪಾ |
ವನ್ನವಾಗುವ ತನ್ನ ಕುಲ ಕೋಟಿ ಕೂಡಿಕೊಂಡು |
ಬೆಣ್ಣೆಗಳ್ಳ ನಮ್ಮ ವಿಜಯವಿಠ್ಠಲನ ಕಾ |
ರುಣ್ಯ ಪಡೆದು ಮಹಾ ಧನ್ಯರೆನಿಸುವದು ೫
ಜತೆ
ತಿಳಿದು ಈ ಬಗೆಯಿಂದ ಧ್ಯಾನವ ಮಾಡಿಕೊ |
ಒಲಿವನು ವಿಜಯ ವಿಠ್ಠಲ ನಾಡಿಯೊಳು ಪೊಳೆವ ೬

ವಿಜಯವಿಠಲನ ಕರುಣಾಸಾಗರತ್ವವನ್ನು

೨೦
ಧ್ರುವತಾಳ
ಎರಗುವೆನಯ್ಯ ಎನ್ನ ಎರವು ಮಾಡದೆ ನಿನ್ನ
ಶರಣರೊಳಿಡುವುದು ಶರಣಾಗತಿಯೆ
ಕರಗಳ ಮುಗಿದು ಕಿಂಕರನೆಂದು ಬಾಗಿದರೆ
ಕರಿಯದಿಪ್ಪುದೇನೊ ಕರಿವರದ
ಕರಗದೆ ಮನವು ಮಕರ ಕುಂಡಲ ಧರನೆ
ತರುಳಾನು ನಾನು ನಿನಗೆ ತರ ತರಕ್ಕೆ
ತರಣಿಕುಲ ನಮ್ಮ ವಿಜಯ ವಿಠ್ಠಲ ಶ್ರೀ
ತರುಣೀಪಾ ಕೆಲಕಾಲ ಮರಿಯಾದೆ ನೋಡು ೧
ಮಟ್ಟತಾಳ
ಕಾಯಯ್ಯ ಎನ್ನ ಕಾಯಜನಯ್ಯನೆ
ಕಾಯ ನಿನ್ನದು ಕಾಣೊ ಕಾಯುವ ಬಿರಿದುಳ್ಳ
ವಾಯುಜ ವಂದಿತನೆ ವಿಜಯ ವಿಠ್ಠಲರೇಯ
ಕಾಯೊ ಕಾಯೋ ನೀ ಕಾಯೊ ಸುರರೊಡೆಯ ೨
ತ್ರಿವಿಡಿ ತಾಳ
ಬಿಡಿಸೊ ಬಿಡಿಸೊ ನಿನ್ನ ಅಡಿದಾವರೆಗಳು
ಇಡುವ ಹೆಜ್ಜೆಗಳಲ್ಲಿ ಹೊಡೆ ಮರುಳುವುದು
ಪಿಡಿಯೋ ಪಿಡಿಯೋ ಕರವ ಪೀಡಿಸುವ ದುರಿತ
ಕಡಿದು ಕಡೆಗೆ ನೂಕಿ ಬಡವನೆಂದು
ಒಡನೆ ಮಾತನಾಡು ವಿಜಯ ವಿಠ್ಠಲ ಎನ್ನ
ಕಡೆಯವನೆನ್ನದೆ ನುಡಿದು ಸುಖವ ಬಡಿಸೊ ೩
ಅಟ್ಟತಾಳ
ಬಲುದೂರ ನೋಡುವರೆ ಎಲೊ ದೇವ ನಿನಗೆ ವೆ
ಗ್ಗಳತನವಲ್ಲವೊ ಜಲಜಾಕ್ಷ ಜಗವನು
ಅಳೆದ ಅಂಡಜರೂಢ ಸುಳಿದು ಎ
ನ್ನೊಳಗೆ ನಿಶ್ಚಲ ಭಕುತಿಯನಿತ್ತು
ಸಲಹಬೇಕಯ್ಯ ವಿಜಯ ವಿಠ್ಠಲರೇಯ
ಬಲು ದೂರ ನೋಡದೆ ಒಲಿದು ಉದ್ಧರಿಸೊ ೪
ಆದಿತಾಳ
ಇತ್ತ ಮುನ್ನಾದರು ಎನ್ನ
ಉತ್ತರವ ಕೇಳು ದೇ
ವೋತ್ತಮನೆ ಉತ್ತಮನೆ
ಸತ್ಯಭಾಮೆ ಮನೋಹರ
ಸುತ್ತ ತಿರುಗವರಂಗ ವಿಜಯ ವಿಠ್ಠಲ ನೀನೆ
ನಿತ್ಯದಲ್ಲಿ ಪ್ರೀತನಾಗಿ ನಿತ್ಯದಲ್ಲಿ ಪ್ರೀತನಾಗೊ೫
ಜತೆ
ಶರಣೆಂದು ಪೊಕ್ಕರೆ ಕಾಯುವ ಬಿರಿದು ನಮ್ಮ
ಅರಸೆ ವಿಜಯ ವಿಠ್ಠಲನಲ್ಲಲ್ಲದೆ ಮತ್ತಿಲ್ಲ ೬

ಕೃಷ್ಣನ ಪ್ರಾರ್ಥನೆ ಹಾಗೂ ಕೃಷ್ಣನ ರೂಪ

೨೧
ಝಂಪೆ ತಾಳ
ಎಲ ಎಲ ಎಲ ಎಲ ಎಲ ಎಲವೊ ಗೋವಳರಾಯನೆ
ಒಳ ಒಳ ಒಳ ಒಳ ಒಳ ಒಳಗೆ ಮಲನಾಗಿದ್ದು
ಸುಳಿ ಸುಳಿ ಸುಳಿ ಸುಳಿ ಸುಳಿ ಸುಳಿಗುರುಳು ನಿಲುವುತಲಿ
ಕಿಲಿ ಕಿಲಿ ಕಿಲಿ ಕಿಲಿ ಕಿಲಿ ಕಿಲಿಗಳು ಎಳೆನಗೆಯಲ್ಲಿ
ಸುಳಿ ಸುಳಿದು ಒಲಿದೊಲಿದು ಪೊಳ ಪೊಳದು ನಲಿ ನಲಿದು
ಕೆಲ ಕೆಲ ಕೆಲಕೆ ನಿಲುವುದೇನು
ಅಳಲಿ ಬಳಲಿದರೆ ಅನಾದಿ ನಿನಗೊಳ್ಳೆದೇನೊ
ಖಳರುಪಟಳವು ವೆಗ್ಗಳಿಸಿದೆ ಕಳದೆಳದೆಳದು
ಕೊಲೆ ಕೊಲೆಯ ಕೊಂದೆನ್ನ ಉಳಿಯಗೊಡರೂ
ಹಲವು ಮಾತೇನು ಫಲ ಹಲವಂಗದವನೆ
ಬಲಿಯೊಳಗೆ ಬಿದ್ದು ಹಲುಬುವದು ಬಿಡಿಸೊ
ತೊಲಗದಿರು ಮಹವೀರ್ಯ ವಿಜಯ ವಿಠ್ಠಲರೇಯ
ಸಲೆ ಸಲಹಬೇಕೊ ಮನ ನಿಲಿಸಿ ಕೆಲಕಾಲ ೧
ಮಟ್ಟತಾಳ
ಗತಿಯಿಲ್ಲದವರಿಗೆ ಗತಿಯು ನೀನೆ
ಮತಿ ಇಲ್ಲದವರಿಗೆ ಮತಿಯು ನೀನೆ
ಪತಿಯಿಲ್ಲದವರಿಗೆ ಪತಿಯು ನೀನೆ
ಸಥೆಯಿಲ್ಲದವರಿಗೆ ಸಥೆಯು ನೀನೆ
ಪ್ರತಿಯಿಲ್ಲದವರಿಗೆ ಪ್ರತಿಯು ನೀನೆ
ಕ್ಷಿತಿಯೊಳಗೆ ದೇವತೆಗಳು ಇನ್ನುಂಟೆ
ಧೃತಾತ್ಮನಾಮ ಸಿರಿ ವಿಜಯ ವಿಠ್ಠಲನೆ
ಪಥಗಾಣದ ಮಂದಮತಿಯಂದದಲಿಪ್ಪೆ೨
ತ್ರಿವಿಡಿ ತಾಳ
ಬಾಣ ದಶಕಂಧರ ಒಂದೇ ರೂಪಿನಲ್ಲಿ
ಜಾಣ ಸಂಕುರುಷಣ ಮೂರ್ತಿ ವೇಗ
ಗೋಣ ತರಿಯಾಲೆಸೆಯೊ ನಿರುತ ಬಿಡದೆ ಖಳರು
ಮಾಣರು ನಿನ್ನ ಭೀಷಣಕಲ್ಲದೆ
ರಾಣಿವಾಸರದೊಳು ಶ್ವಾನ ಪೋಗಿ ಬಿದ್ದಂತೆ
ಧ್ಯಾನಾವಾಗಿದೆನಗೆ ಹಗಲಿರುಳು
ನೀನಡಗಿ ಪೋಗದೆ ಎನ್ನೊಳು ನೀನು ದು
ಗಾಣ ಗಂಟಲರಿಗೆ ವೈರಿಯಾಗೋ
ಮಾನಸಿಕವೆ ಸಲ್ಲ ಕೃತು ವಿಜಯವಿಠ್ಠಲ
ಏನಿವನೆಂದು ಸುಮ್ಮನೆ ಇರದೆ ದೇವ ೩
ಅಟ್ಟತಾಳ
ನೆಲೆಬಲ್ಲ ಕಳ್ಳರು ಜೀವದೊರಸೆ ಬಿಡರು
ನೆಲೆ ಬಲ್ಲರು ಎನ್ನ ಬಳಗಿದ್ದ ಖಳರು
ತುಳಿದಾಡುತಲಿರೆ ಕಂಡಲ್ಲಿ ನಿಲ್ಲದೆ
ಖಳ ಖಳ ನಗುತಲಿ ಕೈಯಾ ಹೊಯಿದು
ಕಳವಳಿಸಿ ಹೊಯಲಿಡುವೆನೊ ನಿನಗೆ
ಬಲು ಧೀರ ಸುವೀರ ವಿಜಯ ವಿಠ್ಠಲ ಕಾಯೊ ೪
ಆದಿತಾಳ
ಉಂಟು ಉಂಟು ನಿನ್ನ ಬಿರಿದು
ಎಂಟು ದಿಕ್ಕು ವಿದಿಕ್ಕಿನೊಳು
ಬಂಟರಿಗೆ ನೆಂಟನೆಂದು
ಘಂಟೆಯಂತೆ ಶ್ರುತಿ ಪೇಳೆ
ಎಂಟು ನೂರು ಮಡಿಯಾಗಿ
ಶುಂಠಿಗಿಂದ ಪೊಗಳ್ವೆ ನರ
ಕಂಠೀರವನೆ ನೇಹದಿಂದ
ಕುಂಟ ಜನರ ಬಿಡಿಸಿ ಎನ್ನ
ಕಂಟಕವ ಓಡಿಸು ವೈ-
ಕುಂಠಾಧೀಶ ವಿಜಯ ವಿಠ್ಠಲ
ಗಂಟು ಇಕ್ಕು ನಿನ್ನ ನಿಜ
ಬಂಟರು ಬಂಟರು ಕೂಡ೫
ಜತೆ
ಎಲ್ಲ ಕಾಲದಲ್ಲಿ ಇದ್ದಂತೆ ಇದ್ದು ಹೀನ
ಖುಲ್ಲರ ಬಡಿಯೊ ಅಕ್ಷೋಭ್ಯ ವಿಜಯ ವಿಠ್ಠಲ ೬

ಮುಕ್ತಿಪಥಕ್ಕೆ ಯೋಗ್ಯರು ಯಾರೆಂಬ ಜಿಜ್ಞಾಸೆಗೆ

೩೧
ಧ್ರುವತಾಳ
ಎಲ್ಲಿದ್ದರೇನು ಸಿರಿ ವಲ್ಲಭನ ತೋಂಡರಿಗೆ
ಇಲ್ಲವಿಲ್ಲವೊ ದೋಷ ಎಳ್ಳಿನಿತಾದರು
ಕೊಳ್ಳಿಗೆ ಕ್ರಿಮಿಗಳು ಚಲ್ಲವರಿದರು ಮುತ್ತಿ
ನಿಲ್ಲದೆ ಬದುಕಿ ತಾವೆಲ್ಲ ಪೋದುದುಂಟೇ
ಸೊಲ್ಲು ಸೊಲ್ಲಿಗೆ ರಂಗನಲ್ಲದಿನ್ನಿಲ್ಲವೆಂಬ
ಬಲ್ಲಿದ ಭಕುತಿಯುಳ್ಳ ವೈಷ್ಣವರಿಗೆ
ಎಲ್ಲಿಯ ದೋಷ ಮತ್ತೆಲ್ಲಿಯ ಜನನ
ಬಲ್ಲವನಿಗೆ ಧ್ಯಾನದಲ್ಲಿ ಆನಂದವು
ಚಿಲ್ಲರ ಮಾರ್ಗ ಬಿಡು ವಿಜಯ ವಿಠ್ಠಲ ತಿಮ್ಮ
ಸಲ್ಲಿಸುವನು ಮನ ನಿಲ್ಲಿಸಲು ೧
ಮಟ್ಟತಾಳ
ತಪ್ಪದೆ ಎಣ್ಣಿಯ ಕೊಪ್ಪರಿಗೆಯೊಳಗವನ
ಅಪ್ಪನು ಬಿಸುಟಲು ಪುಷ್ಪಗಳಾದವು
ಸರ್ಪ ತಲ್ಪನು ಭಜಿಸುತಿಪ್ಪ ಮಹಾತ್ಮರಿಗೆ
ಕಪ್ಪು ಕಲಷವ ಹಾರುತಿಪ್ಪವು ಪುಡಿಯಾಗಿ
ಮುಪ್ಪಿಲ್ಲದ ದೇವ ವಿಜಯ ವಿಠ್ಟಲ ತಿ
ಮ್ಮಪ್ಪನ ನಂಬಲು ಬಪ್ಪವು ಕೈವಲ್ಯಾ ೨
ತ್ರಿವಿಡಿ ತಾಳ
ದಾರಿ ನಡೆದರೇನು ಧರ್ಮ ಮಾಡಿದರೇನು
ಊರು ಊರಿಗೆ ನಿತ್ಯ ತಿರುಗಲೇನು
ವಾರಿಗೆಯವರ ಕೂಡ ಹರಿದಾಡಿದರೇನು
ನೀರು ಕಾವಡಿ ನಿತ್ಯ ಹೊತ್ತರೇನು
ಮೂರಾರು ಸಾರಿಗೆ ಉಂಡು ತಿಂದರೇನು
ವಾರಕಾಂತಿಯರೊಡನೆ ಇದ್ದರೇನು
ಪೋರರೊಳಗೆ ಕೂಡಿ ಕುಣಿದರೇನು
ಆರ ಸೇರಿದರೇನು ಆರ ಸೇವಿಸಲೇನು
ನಾರಾಯಣನ ಪಾದದಲ್ಲಿ ಹಗಲಿರುಳು
ಸಾರುತ್ತ ಮನವಿಟ್ಟ ಹರಿದಾಸರಿಗೆ
ಸೂರೆ ವೈಕುಂಠವೋ ಅವರಿಂದ ಸುತ್ತಲು
ಧಾರೆಯೊ ಕನಕ ಮಳೆ ಕಾಮಧೇನುವೊ ಆವಾಗ
ಸಾರೆ ಹೃದಯರೊಳಿಪ್ಪ ವಿಜಯ ವಿಠ್ಠಲನ
ಕಾರುಣ್ಯವಾದರೆ ಘೋರ ಕರ್ಮಗಳುಂಟೆ ೩
ಅಟ್ಟತಾಳ
ಜಾತಿ ರಹಿತ ಶ್ರೀನಾಥನ್ನ ಪಾದವ
ಆತುಮದೊಳಗಿಟ್ಟು ಮಾತು ಮಾತಿಗೆ ಬಲು
ಪ್ರೀತಿಲಿ ಲಕುಮೇಶ ಮಾತಾನೀತನು ಸರ್ವ
ಈತನು ನಮಗೆಂದು ತಾ ತಿಳಿದವರಿಗೆ
ಯಾತಕೆ ಸ್ನಾನ ಸಂಧ್ಯಾನ ಕರ್ಮಂಗಳು
ಪ್ರಾತರಾರಂಭದಿ ರಾತ್ರಿ ವಿಡಿದು ಮೈಯ
ಘಾತಿಸಿಕೊಂಡೀಗ ಬಾತಿ ಬಸಿವದ್ಯಾಕೆ
ತಾತನಂತಿಪ್ಪನು ವಿಜಯ ವಿಠ್ಠಲ ಸುರ
ವ್ರಾತಕ್ಕೆ ಮೀರಿದ ನಾಥನೋ ಸರ್ವದಾ ೪
ಆದಿತಾಳ
ನಿಂತಲ್ಲಿ ಕುಳಿತಲ್ಲಿ ಪಂಕ್ತಿ ಸಾಗಿದಲ್ಲಿ
ಪಂಥದಲ್ಲಿ ಏಕಾಂತದಲ್ಲಿ ಕಾಂತೆಯ ಸಂಗಡದಲ್ಲಿ
ಸಂತರ ಬಳಿಯಲ್ಲಿ ತಂತಿನಲ್ಲಿ ವನಾಂತರದಲ್ಲಿ
ವಂತು ವಂತು ವಂಶಗಳಲ್ಲಿ ಪಂಥ ಮಾಡುವಲ್ಲಿ
ಭ್ರಾಂತಿಯಲ್ಲಿರಲಿ ನಿಶ್ವಾಂತದಲ್ಲಿ
ಚಿಂತಿಯೊಳಿರಲಿ ನಿಶ್ಚಿಂತಿಯಲ್ಲಿರಲಿ
ಎಂತಾದರೂ ಮನದಂತಿರಲಿ
ಸಂತತ ಹರಿ ಪಾದ ಕ್ರಾಂತನಾಗಿ ತನ್ನ
ಸಂತರಿಸುವನ ನಿರಂತರದಲ್ಲಿ
ಅಂತರಂಗದೊಳಿಟ್ಟು ಅಂತರ ಮುಖನಾಗಿ
ಸಂತತ ಪಾಡುವ ಅಂತಿಜಗೆ ಭಯ
ಎಂತುಂಟೊ ಪೇಳಿರೊ ಅಂತ ಬಲ್ಲವರು
ಕಾಂತೇಯ ಸಹಾಯ ವಿಜಯ ವಿಠ್ಠಲ ನಂಘ್ರಿ
ಚಿಂತೆ ಮಾಡುವ ಕುಲವಂತಗೆ ಭಯದೆ ೫
ಜತೆ
ಹ್ಯಾಗಾದರಿರಲಿ ಶ್ರೀ ವಿಜಯ ವಿಠ್ಠಲನಂಘ್ರಿ
ಭೋಗದೊಳಿಟ್ಟವನೆ ಮುಕ್ತಿ ಪಥಕೆ ಯೋಗ್ಯಾ ೬

ಉಡುಪಿಯ ಕೃಷ್ಣನನ್ನು ಸ್ತೋತ್ರಗೈಯುವ

೧೨. ಉಡುಪಿ
ರಾಗ:ಕಾಂಬೋಧಿ
ಧ್ರುವತಾಳ
ಎಲ್ಲೆ ವೈಭೋಗಾವಿದು ಎಲ್ಲೆ ವೈಭವವಿದು |
ಎಲ್ಲೆ ಆನಂದಾವಿದು ಎಲ್ಲಿ ಅದ್ಭೂತವಿದು |
ಎಲ್ಲಿ ಸೌಖ್ಯಾವಿದು ಎಲ್ಲಿ ವಿಚಿತ್ರವಿದು |
ಎಲ್ಲೆ ಐಶ್ವರ್ಯವಿದು ಎಲ್ಲಿ ನಾಟಕವಿದು |
ಎಲ್ಲೆ ಅಮೋಘವಿದು ಎಲ್ಲಿ ಪರಾಕು[ಇ]ದು |
ಎಲ್ಲಿ ಸ್ತೋತ್ರವಿದು ಎಲ್ಲಿ ಪರಿವಾರವಿದು |
ಎಲ್ಲಿ ವಾಲಗವಿದು ಎಲ್ಲೆಲ್ಲಿ ನೋಡಿದರು |
ಇಲ್ಲವೊ ನಿನ್ನ ಸರಿ ಬಲ್ಲಿದರಿಳಿಯೊಳು |
ಸಲ್ಲುವಾದಿದು ಇಂದೆ ಅಲ್ಲದೆ ದ್ವಾರಾವತಿ |
ವಲ್ಲಭಾ ಗೋಕುಲದಲ್ಲಿ ನಿಂದಾಡಿದಾಗ |
ಗೊಲ್ಲರ ಮಕ್ಕಳೊಡನೆ ಕಳ್ಳತನಕೆ ಸರುವಾ |
ದಲ್ಲಿ ಸಂಚರಿಸಿದ್ದು ಎಲ್ಲ ದೇವರದೇವ |
ಕಲ್ಲಿದಾಗರ ಪೆಗಲಿನಲ್ಲಿ ಪೊತ್ತುಕೊಂಡು |
ಬಳ್ಳಿ ಉಡಿಗೆ ಉಟ್ಟ ಗುಲ್ಲಿ ಮಾಡುವ ಚೀಲ |
ಸೊಲ್ಲು ಸೊಲ್ಲಿಗೆ ಬಂದು ಸುಳ್ಳು ಮಾತುಗಳಲ್ಲಿ |
ನಿಲ್ಲಾ ದಿನಕಳದಾದ್ಯೆಲ್ಲಾ ಎಲ್ಲಿ ಪೋಯಿತೊ |
ಒಳ್ಳೆಯವನಾಗಿ ಉಡುಪಿಯಲ್ಲಿ ನೆಲಸಿ ಅರ್ಥಿ |
ಯ[ಲ್ಲಿ]ಯತಿಗಳಿಂದ ಸಲ್ಲಿಲಿತ ಸಂಪೂಜೆ |
ಗೊಳ್ಳುತ ಮೆರವವ ಭಳಿರೆ ಭಳಿರೆ ಹೊ ಹೊ |
ಎಲ್ಲ ಉಪಾಯವನ್ನು ಬಲ್ಲ ಬಲವಂತರೊಡಿಯಾ |
ಬಲ್ಲವರಾರು ಗುಣವಲ್ಲಿಗಳು ನಿನ್ನವು |
ಬೆಳ್ಳಿಗದ್ದುಗಿ ಪುರದಲ್ಲಿ ಇಪ್ಪ ವಿಜಯ ವಿ |
ಠಲ ಉಡುಪಿನ ಶ್ರೀ ಕೃಷ್ಣ |
ಪಳ್ಳಿಗೋವಳ ಹಟ್ಟಿಯಲ್ಲಿ ಮೆರದೆ ನೀನು ೧
ಮಟ್ಟತಾಳ
ನಾಕಜನರ ಸನಕಾದಿಗಳ ಶೌನಕಾದ್ಯರ [ಮ] |
ನಕೆ ತೋರದ ಕನಕಾಂಬರಧರ |
ನಾ ಕಾಣೆನೊ ನಿನ್ನ ಕಪಟತನಕೆ ಎಲ್ಲೆಲ್ಲಿ ಪಿ |
ನಾಕಧ[ರರಾ]ಪ್ತ ಜ್ಞಾನ ಕಾಯಾ ಸಿದ್ಧ ವಿಜಯವಿಠಲ ಕೃಷ್ಣ ೨
ತ್ರಿವಿಡಿತಾಳ
ಜಾರ ಚೋರನಾಗಿ ಜಗದೊಳು ಪೆಸರಾಗಿ |
ನಾರೇರಮನ ಅಪಹಾರಗೈಸಿದೆ ಅಂದು |
ಪೋರರ ಸಂಗಡ ಕೆಲವಾಡಿ ಕಂಡಲ್ಲಿ |
ಹಾರ್ಯಾಡಿ ಹ[ಲ]ಬಾರಿಂದಲಿ ಕೊಂಡಾಡಿ |
ಊರ ಜನಕೆ ಎಲ್ಲ ತಲೆ ಹೊರೆಯಾಗಿ ಸಂ |
ಸಾರವಕೊಂಡಿ ಎಲ್ಲೊ ಪರಸ್ತ್ರೀಯರ |
ಆ ರಾಸ ಕ್ರೀಡೆಯಲ್ಲಿತ್ತೆ ಮತ್ತೆವನದೊಳಬ್ಬ |
ನಾರೀಯ ಪೆಗಲೀಲಿ ಪೊತ್ತು ನಡದೆ |
ಪೋರಾತನದಲಲಿ ನೀಚೋಚ್ಚಾ ನೋಡದೆ |
ಸಾರಿಸಾರಿಗೆ ಎಂಜಲು ಮೆಲವುತ್ತ |
ಈ ರೀತಿಯಲಿ ಇದ್ದೆ ಒಬ್ಬರಾದರೂ ನಿನ್ನ |
ಆರಾಧನೆ ಮಾಡಿದವರಲ್ಲಾ ಕಾರುಣ್ಯ |
ಮೂರುತಿ ಉಡುಪಿಯ ಕೃಷ್ಣ ವಿ |
ಸ್ತಾರ ಮಹಿಮ ಸಿರಿ ವಿಜಯವಿಠಲರೇಯಾ ೩
ಅಟ್ಟತಾಳ
ಚೆಲುವನು ನಮಗೆಂದು ನಂದಗೋಪಗೋಪಿ |
ತಿಳಿದು ನಿನ್ನ ಪೂಜಿಸಲಿಲ್ಲವಯ್ಯಾ |
ಗೆಳಿ ರಾವು ಎಂದು ಗೋಮಕ್ಕಳು ಅಂದು |
ತಿಳಿದು ನಿನ್ನ ಪೂಜಿಸಲಿಲ್ಲವಯ್ಯಾ |
ಬಲು ನಾರಿಯರು ಕಾಮಾತುರದಿಂದ |
ತಿಳಿದು ನಿನ್ನ ಪೂಜಿಸಲಿಲ್ಲವಯ್ಯಾ |
ಕುಲದಲ್ಲಿ ಪುಟ್ಟಿದನೆಂದು ಯಾದವರು |
ತಿಳಿದು ನಿನ್ನ ಪೂಜಿಸಲಿಲ್ಲವಯ್ಯಾ |
ಇಳಿಯ ವಲ್ಲಭ ಉಗ್ರಸೇನನು ನಿನ್ನನಾ |
ಕೆಳಗೆ ನಿಲ್ಲಿಸಿ ವಾಲಗಾಕೊಂಡನಯ್ಯಾ |
ತಿಳಿದುಕೋನಿನಗಂದು ಒಬ್ಬರಾದರು ನಿ |
ಶ್ಚಲ ಭಕುತಿಯಿಂದ ಭಜಿಸಲಿಲ್ಲ |
ಎಲೊದೇವ ಉಡುಪಿನ ಕೃಷ್ಣ ವಿಜಯ ವಿ |
ಠಲ ನಿನಗೀ ಪೂಜೆ ಎಲ್ಲಿಂದ ಒದ[ಗಿ]ತು ೪
ಆದಿತಾಳ
ಇದ್ದರಿದ್ದಾರಾದಾರು ಒಂದಾರೆ ಅರ್ಚಕಾರು |
ಶುದ್ಧಯತಿಗಳಿಂದ ಪೂಜೆಗಳಂದು ನಿನಗೆ |
ಇದ್ದಿಲ್ಲವೆಂಬೋದು ಲೋಕವೆ ಬಲ್ಲೋದು |
ಕದ್ದು ತಿಂದವನಿಗೆ ಬಲು ಬಲು ಉಪಚಾರ |
ಉದ್ದಿನಕಾಳಷ್ಟು ಕೊರತೆಯಾಗದಂತೆ |
ಪದ್ಧತಿ ತಪ್ಪದೆ ಉದಯಾಸ್ತಮಾನ ತನಕ |
ತಿದ್ದಿಮಾಡಿದ ವಸ್ತಾದಿವ್ಯವಸನರತುನ |
ಗದ್ದುಗೆ ಮೇಲೆ ನಿಂದು ಮೇಲಾದ ಶಾಖಪಾಕ |
ಮಿದ್ದು ಮಾಡಿದ ಭಕ್ಷಾ ಪರಮಾನ್ನ ಓದನಾ |
ಮುದ್ಗನ್ನಾ ಮಿಗಿಲಾದ ಷಡುರಸ ಪದಾರ್ಥ |
ಮುದ್ದೆ ಮುದ್ದೆ ಕವಳ ತಪ್ಪದೆ ನಿರಂತರ |
ಮೆದ್ದು ಮಂಗಳಾರತಿ ಬೆಳಗಿನಿಂದಲಿ ಒಪ್ಪಿ |
ಪೊದ್ದಿಕೊಂಡಿಪ್ಪೆ ಸುಖ ಪಳ್ಳಿಯೊಳಗಿತ್ತೆ |
ಹೆದ್ದೈವತನಬಿಟ್ಟು ಚಿಕ್ಕ ಮಕ್ಕಳ ಕೈಯ್ಯಾ |
ಗುದ್ದಿಸಿಕೊಂಡದ್ದು ಮರದಿಯೊ ಎಲೊ ದೇವ |
ಬದ್ಧ ಪುಟಾಂಜಲಿ ಹಸ್ತದಿಂದಲಿ ನಿಂದು |
ಶುದ್ಧ ಯತಿಗಳು ಭಯ ಭಕುತಿಯಿಂದ |
ಎದ್ದು ಸಮ್ಮೊಗವಾಗಿ ತುತಿಸಿ ಕಾಲತ್ರಯಾ |
ಸಿದ್ಧಾಂತದಲಿ ನಿನ್ನ ಭಜಿಸುವ ಲೇಸು ನೋಡು |
ಗೆದ್ದಿಯೊ ಅಂದಿನ [ಪ]ಟ್ಟ ಪಡಿಪಾಟಲು |
ನಿದ್ರೆಕಾಣದೆ ಸ್ತ್ರೀಯರ ಕೂಡಲಿದ್ದದು |
ಬುದ್ಧಿವಂತರೊಡಿಯಾ ವಿಜಯವಿಠಲ ಕೃಷ್ಣ |
ಸಿದ್ಧಾರ್ಥ ಪಾಲಿಸುವ ಸಂತತ ನಿರ್ದೋಷ ೫
ಜತೆ
ಆವದಾದರು ನಿನಗೆ ವಿಹಿತಾವೆ ಸರಿ ಸರ್ವ |
ದೇವೇಶ ವಿಜಯವಿಠಲ ಉಡುಪಿನ ಕೃಷ್ಣ ೬

ತಿರುಪತಿಯ ಶ್ರೀನಿವಾಸನಿಗೆ ಮೊದಲಿನಿಂದಲೂ

೩೭. ತಿರುಪತಿ
ರಾಗ:ಭೈರವಿ
ಝಂಪೆತಾಳ
ಎಸವೊ ಪೊಸರತುನ ರಂಜಿಸುವ ಮಕುಟ ಮೌಳಿ |
ಅಸಿತ ಸುಳಿಗುರು[ಳು] ಶೋಭಿಸುತಿರೆ ಮಧುಪನಂತೆ |
ನೊಸಲಲ್ಲಿ ಮೃಗನಾಭಿ ತಿ[ಲ]ಕ ತಿದ್ದಿದ ಸೊಬಗು |
ದಶ[ನ] ಕುಭಕಾಂತಿ ಧಿಕ್ಕರಿಸುವ ಕುಂಡಲ ಛವಿ |
ಎಸಳು ಕಂಗಳು ಕುಸುಮಾಚಂಪಕನಾಸನ ಕಂಡೆ |
ಶಶಿವದನ ನಸುನಗೆ ರಸಸುರಿವ ಮಾತು |
ಮಿಸುಣಿಪಾವಳಿದಂತ ಕಂಬುಕೊರಳರೇಖೆ |
ಹಸನಾದ ಉರನಾಭಿ ನಡಿವೆ ಸರ್ವಲೋಕ |
ಬಸುರೊಳಗೆ ಒಪ್ಪುತಿರೆ ಕಂಡೆ ಕಟಿಕರ ಯುಗ್ಮಾ |
ಪಸರಿಸುವ ಊರು ಜಾನುಜಂಘೆ ಪದನಖಾ |
ನಿಶಿಚರನಾಶಾ ಲೋಕಾತ್ರಯಾ ಶ್ರಯಾ ನಾಮಾ |
ಝಷಕೇತನಯ್ಯಾ ಸಿರಿ ವಿಜಯವಿಠಲನ |
ಅಸಮಸ ಮೂರ್ತಿಯಾ ಕನಸಿನಲ್ಲಿ ಕಂಡೆ ೧
ಮಟ್ಟತಾಳ
ವೀರ ಮುದ್ರಿಕೆ ಬೆರಳ ಚಾರು ಶೋಭಿತ ಪೆಂಡೆ |
ಭೋರಗರವ ಗೆಜ್ಜೆ ತಿರಿತಿರಿರಿ ಝೇಂಕಾರದ ನೂಪೂರ ಶೃಂ |
ಗಾರದ ಉಡುದಾರ ಹೀರ ಕೌಸ್ತುಭ ತುಲಸೀ |
ಹಾರಾ ಪುಲಿಯುಗರು ಹೇರುರಾದಲ್ಲಿ ಕೇಯೂರ ಸಿರಿದೇವಿ |
ವಾರಣದಿಂದ ಬಂಗಾರ ಕಂಕಣ ಮುದ್ರೆ |
ತೋರುವ ಸರ್ವಾಲಂಕಾರ ಚಲುವನಾ |
ಪಾರಾ ನೋಡಿದೆ ನಖಾ ಶಿರಸ ಪರಿಯಂತಾ |
ಪಾರ ಮಹಿಮಾ ಸಮೀರಣ ನಾಮಕನು ವಿಜಯವಿಠಲನ್ನಾ |
ಪಾರನ ನೋಡಿದೆ ಸಂಸಾರ ಹರವಾಗಿ |
ಸೇರುವೆ ಗತಿಯಲ್ಲಿ ಆರಾಧನೆಯಿಂದ ೨
ತ್ರಿವಿಡಿತಾಳ
ಪೊಂಬಟ್ಟೆ ವಸನವ ನಂದ ಮಹಿಮನ ಕೈಯ್ಯ |
ಕೊಂಬು ಕೊಳಲು ಕೋಲು ತುತ್ತುರಿ ಮವ್ವುರಿ |
ಭೊಂ ಭೊಂ ಭೊಂ ಎಂದು ಧ್ವನಿಮಾಡಿ ಊದುವ ರತ್ನ |
ಗಂಬಳಿ ಕೊಪ್ಪಿಲಿ ತ್ರಿಭಂಗಿಯನ್ನು ಹೂಡಿ |
ತುಂಬಿದ ಗೋವಿಂಡಿನೊಳು ನಿಂದು ನಲಿದೊಲಿದು |
ರಂಭೆರಾಮನೆ ಕಾಲಾರಂಭಾ ತೊರವಾ ಪೆಚ್ಚಿಸಿ |
ಹಂಬಾಲಾಗೊಳಿಸಿದ ಗಂಭೀರ ಪುರುಷ ಕು |
ಟುಂಬ ಪಾಲಕ ವಿಶ್ವನೆಂಬೋದು ಶತಸಿದ್ಧ |
ನಂಬಲು ಬೆಂಬಲವಾಗಿ ಪಾಲಿಪ ಪ್ರತಿ |
ಬಿಂಬ ಹೇಮಾಂಗ ಶ್ರೀ ವಿಜಯವಿಠಲರೇಯಾ ೩
ಅಟ್ಟತಾಳ
ಗಿರಿಯ ಧರಿಸಿ ನಿರ್ಜರರ ಪೊರ[ದ] ನೀತ |
ಗಿರಿಜೇಶಗೆ ಬಂದ ಉರಿಯ ಕಳೆದನೀತ |
ಗಿರಿಯ ಬೆರಳಲೆತ್ತಿ ತುರುವ ಕಾಯಿದವನೀತ |
ಗಿರಿಯ ವೈರಿಯ ನಂದನನ ಪ್ರೀತನೀತ |
ಗಿರಿಯ ತಂದವಗತಿ ಕರುಣ ಮಾಡಿದ ನೀತ |
ಗಿರಿಯ ಬಾಯಲಿಕಟ್ಟಿ ಜಗವ ಸಾಕುವನೀತ |
ಗಿರಿ ಪಾಶಾಶಾಯಿ ಶ್ರೀ ವಿಜಯವಿಠಲನೀತ |
ಗಿರಿಯಾ ಕಿತ್ತಿದವ ನಳಿದನಂದ ಧೀರನೀತ ೪
ಆದಿತಾಳ
ಶ್ಯಾಮವರ್ನ ಕೋಮಲಾಂಗ |
ಸಾಮಗಾಯನ ವಿಲೋಲ |
ಕಾಮ ಪರಿಪೂರ್ಣ ತಿರ್ಮಲಾ ಮೇಲಗಿರಿನಿಲಯ |
ರಾಮರಂಗ ರಾಜೀವಾಕ್ಷಾ ವಾಮನಾ ಇಂದಿರಾ ಪ್ರಾಣ |
ಪ್ರೇಮಾ ಯದುಕುಲ ಲಲಾಮ ಭಕ್ತವಾರ್ಧಿಸೋಮ |
ಭೂಮಿವಾಯು ತೇಜಾ ರಾಪೂಯೋಮಂತ ಬಾಹ್ಯದಿಪ್ಪ |
ನೇಮಕನು ನ್ಯಾಮಕ ನೀಯಾಮಕನು ಗುಣಕರ್ಮಾ |
ನಾಮಕನ ನೆನಿಯೆ ತ್ರಿಧಾಮಾದಲಿ ಸೇರಿಸುವ |
ಭೀಮಾ ನಾಮಾ ದಾತಾ ನೀತಾ ವಿಜಯವಿಠಲ ಲೋಕ |
ಸ್ವಾಮಿಯನ್ನು ಕಂಡೆ ಕಂಗಳ ಮನೋಹರವಾಯಿತು ೫
ಜತೆ
ಪಾವಿತ್ರನಾನಾದೇ ಪರಮಪುರಷನ ನೋಡಿ |
ಪಾವಿತ್ರನಾಮಕ ವಿಜಯವಿಠಲರೇಯಾ ೬

ಸಾಧನೆಯ ಹಾದಿಯಲ್ಲಿ ಧ್ಯಾನ

೨೪
ಧ್ರುವತಾಳ
ಏನಾದರೇನು ನಿನ್ನ ಧ್ಯಾನವ ಬಿಡುವೆನೆ
ಏನಾದರಾಗಲಿ ಎನಗಿಂದೀಗ
ಶ್ರೀನಿವಾಸನೆ ನಿನ್ನ ಧ್ಯಾನದಿಂದಲಿ ಕರೆದು
ಆನೀಗ ನಿರುತಾರ್ಚನೆ ಮಾಡುವೆ
ನಾನಾ ಕರ್ಮದ ಶ್ರೇಣಿಯಿಂದಲಿ ಸೋ
ಪಾನವಾಗುವಗತಿಗೆ ಅನಂತ ಜನುಮದಲ್ಲಿ
ಕಾಣೆನೊ ಧ್ಯಾನ ಸಮಾನವಾದ ಭಕುತಿ
ಈ ನಿರಂತರದಲ್ಲಿ ಜ್ಞಾನಶೂನ್ಯ
ನಾನಾಗಿ ತಿಳಿಯದೆ ನೀನೆಂಬೋದು ಮರೆದು
ಧ್ಯಾನ ಹೀನನಾಗಿ ಮಾನಾವಳಿದೆ
ಕ್ಷೋಣಿಧರನೆ ನಮ್ಮ ವಿಜಯವಿಠ್ಠಲ ನಿನ್ನ
ಧ್ಯಾನವರಿದ ಮೇಲೆ ಮಾಣುವದೆಂತೊ ೧
ಮಟ್ಟತಾಳ
ಧ್ಯಾನವೆ ಗತಿಗೆ ಪ್ರಧಾನವೆ ಎನುತಲಿ
ಜ್ಞಾನಿಗಳು ತಿಳಿದು ಆನಂದವಾಗುತ್ತ
ಗಾನವ ಮಾಡುವರು ಆನಂದ ಗತಿಯಲ್ಲಿ
ಗೇಣವನೀ ಇಲ್ಲಾ ಈ ನುಡಿಯನು ಕೇಳಿ
ನಾನು ನೆಚ್ಚಿದೆ ನಿನ್ನ
ಶ್ರೀನಿವಾಸ ಮೂರ್ತಿ ವಿಜಯ ವಿಠ್ಠಲ ಎನಗೆ
ಧ್ಯಾನ ವೆಗತಿ ನಿಧಾನದ ಪದವಿಗೆ ೨
ತ್ರಿವಿಡಿ ತಾಳ
ಮನವೆ ನಿಲ್ಲದ ಧ್ಯಾನ ಗುಣವೆ ಇಲ್ಲದ ನಾರಿ
ಹಣವೆ ಇಲ್ಲದ ನೃಪತಿ ಕ್ಷಣವೆ ತಿಳಿಯದ ಜ್ಞಾನಿ
ಪ್ರಣವೆ ಇಲ್ಲದ ಮಂತ್ರಾ ಘನವೆ ಇಲ್ಲದ ದಾನಾ
ಪಣತಿ (ವೆ) ಇಲ್ಲದ ದೇಹ ಅನುವೆ ಇಲ್ಲದ ನಡತಿ
ಜನವೆ ಇಲ್ಲದ ಸಭಾ ಲಕ್ಷಣವಿಲ್ಲದ ಗುರು
ನೆನವೆ ಇಲ್ಲದ ಸಾಧನವೆ ಇಲ್ಲದ ಸಂಗತಿ
ದಿನವಸ್ತಮಾನಾ ನೂರು ಮನುಕಲ್ಪವಿರಲ ದರಂತೆ
ಜನವಾಗುವದೇನಾ ಜನ ಜನಕಾ
ತನು ಮನದಾಧೀನ ವಿಜಯ ವಿಠ್ಠಲ ಕೃಪಾ
ವನಧಿ ನಿನ್ನನು ಧ್ಯಾನವನು ಮಾಳ್ಪ ಮನವೀಯೋ ೩
ಅಟ್ಟತಾಳ
ಪಾಪವೆಂಬೋ ರಾಶಿ ಅಪಾರವಾಗೆನ್ನ
ಕೋಪವ ಪುಟ್ಟಿಸಿ ತಾಪದಿಂದ ಬಲದಿಂದ
ಲೇಪಿಸಿಕೊಂಡು ಪ್ರಳಾಪ ಬಡಿಸುತಿದೆ
ನಾ ಪೋಗುವದೆತ್ತ ಶ್ರೀ ಪತಿ ಲಾಲಿಸು
ಆಪಾರ ಕರ್ಮದಲೀ ಪ್ರಜೆಮಾಡಲು
ಶ್ರೀ ಪದವೀಗಳ ಪ್ರಾಪುತವಾಗೊವೆ
ಪ್ರಾಪುತ ಮಹನಾಮಾ ವಿಜಯ ವಿಠ್ಠಲ ನಿನ್ನ
ಆಪಾರ ಮೌಳಿಯನೂ ಪತಿಕರಿಸುವೆ ೪
ಆದಿತಾಳ
ಧ್ಯಾನವನ್ನು ಕೈ ಕೊಳ್ಳಲು ಜ್ಞಾನವನ್ನೆ ಪುಟ್ಟುವದು
ಹೀನ ಕರ್ಮವೆಂಬುದರಿತು ಕಾನನ ರಾಶಿಗೆ ಕೃ
ಶಾನ ನಾಗಿ ಪೋಗಗಳೆದು ಮಾನವಭಿಮಾನನೆನಿಸಿ
ಧ್ಯಾನ ಧ್ಯಾನ ಧ್ಯಾನವನ್ನು ದಿನ ದಿನಗಧಿಕವಾಗೆ
ಆನಂದಕ್ಕಾನಂದ ಏನೆಂದು ಪೇಳುವೆನೊ
ಧ್ಯಾನವಿನಾ ಗತಿಗೆ ಧ್ಯಾನದೊಳಗೆ
ಪೊಳೆವ ವಿಜಯ ವಿಠ್ಠಲರೇಯಾ
ದಾನಿ ದಯದಿಂದ ಉತ್ತುಮನ ಮಾಡು ಮನ್ನಿಸುತ್ತ ೫
ಜತೆ
ಸ್ಥೂಲ ಸೂಕ್ಷ್ಮ ಧ್ಯಾನವ ಭೇದವೆನಿಸೋದು
ನೀಲವರ್ಣ ವಿಜಯ ವಿಠ್ಠಲ ಪ್ರಾಕೃತರಹಿತಾ ೬

ಭಕ್ತರಾದವರು ಭಗವಂತನಲ್ಲಿ

೨೨
ಧ್ರುವತಾಳ
ಏನು ಪೇಳಲಿ ಎನ್ನ ಚರ್ಯವಿಧವನ್ನು
ದಾನವಿನೋದಿಯೇ ಧರಣೀಶನೆ
ಜ್ಞಾನ ಶೂನ್ಯನಾಗಿ ನಾನಾ ವಿಧದಿಂದ
ನಾನು ಪೂಜಿಸಿ ಮೆಚ್ಚನು ಪಡಿಯಲಾಪೆನೆ
ಕೋಣ ಮಾಳಿಗೆ ಮಣ್ಣಾನು ಪೊತ್ತು ಹಾಕಿ
ತಾನು ಭಕುತಿಲ್ಲದೇ ಬೇನೆ ಬಡುವಂತೆ
ಹೀನಮನದಲ್ಲಿ ಧ್ಯಾನವೆಂದೊಡನೆ ಸು
ಮ್ಮನೆ ಕುಳ್ಳಿರುವೆನು ಮೌನದಲ್ಲಿ
ಭೂನಾಥನಾಥ ಸ್ವಾಮಿ ವಿಜಯ ವಿಠ್ಠಲರೇಯ
ದೀನ ಮಾನವನಿಗೆ ಜ್ಞಾನ ವೆಂಬೋದೆಯಿಲ್ಲ ೧
ಮಟ್ಟತಾಳ
ಪುಣ್ಯವೆಂಬುದ ಕಾಣೆ ಪುಣ್ಯದ ಮಾರ್ಗಕ್ಕೆ
ಅನ್ಯಥ ಮನಸು ಮನ್ನೆ ನಿಂದಿರದಲ್ಲೋ
ಮಣ್ಣು ಬೊಂಬೆಗೆ ಮಜ್ಜನವೆ ಸಾಕ್ಷಿ
ಎನ್ನ ಪುಣ್ಯವೆಂಬುದಕ್ಕೆ ಘನ್ನ ಪಾಪಗಳೆಲ್ಲ
ಕಣ್ಣಿನಿಂದಲಿ ನೋಡಿ ಮಾಣದಲಾಪೇಕ್ಷಿಸುವೆ
ಸುಣ್ಣ ಕೆಸರು ಕ್ಷೀರವನ್ನು ಕಲಿಸಿದಂತೆ
ಎನ್ನ ಪುಣ್ಯವಯ್ಯ ರನ್ನ ವಿಜಯ ವಿಠ್ಠಲ
ನಿನ್ನ ಮೂರುತಿ ಧ್ಯಾನವನ್ನು ನೆಲೆಗಾಣೆ ೨
ತ್ರಿವಿಡಿ ತಾಳ
ಎರದ ಗಿಡಕೆ ಮುಳ್ಳು ಎರಡಾದರೆ ಒಂದು
ಸರಳವಾಗುವುದು ಒಂದು
ಸರಳವಾಗುವುದು ನೋಡೆ
ಎರಡರಲ್ಲೀ ಗುಣ ಪರೀಕ್ಷಿಯ ಮಾಡಲು
ದುರುಳತನವಲ್ಲದಲೆ ಮರಳೆ ಗುಣವಿಲ್ಲ
ನರಗುರಿಗನು ನಾನು ಪರಿ ಪರಿ ವಿಧದಿಂದಾಂ
ತರಿಯಲಿ ಧ್ಯಾನವಾಚರಿಸಲು ಪುಣ್ಯ ವೆಂ
ದರಿಯಲು ಮನಸು ನಿಂದಿರದೆ ಪರವಸ್ತಕೆ
ಎರಗಿ ಪಾಪದ ಕಡಿಗೆ ಪರಮ ಪ್ರೀತಿ ಬಡುವುದು
ದುರುಳ ಪಾಪವದು ದುರಿತವೆಂಬೊದೆ ಸಿದ್ಧ
ಧರಿಸಿದ ಪುಣ್ಯವೆ ನಿರಯವಾಗುವುದಯ್ಯ
ನರನ ಬೀಯನೆ ಕೇಳು ವಿಜಯ ವಿಠ್ಠಲ ಇದಕ್ಕೆ
ಕರುಣ ಮಾಡುವ ದೇವರ ದೇವನು ೩
ಅಟ್ಟತಾಳ
ಧ್ಯಾನ ಮಾಳಿಪೆನೆಂದು ಆನು ನಿಧಾನಿಸೆ
ದಾನವರಟ್ಟುಳಿ ಏನು ಪೇಳಲಿ ದೇವ
ನೀನೆ ಎನಗೆ ಕಾಮಧೇನುವಾಗಿರಲಿಕ್ಕೆ
ಹೀನರೊಡನೆ ನಿತ್ಯ ನಾನಿದ್ದು ಉಪಹತಿ
ಯಾನು ಬಡಬಹುದೆ
ಮೀನಾಂಕ£ಯ್ಯ ಶ್ರೀ ವಿಜಯ ವಿಠ್ಠಲರೇಯ
ಪ್ರಾಣ ನಿನ್ನದು ಕಾಣೊ ಜಾಣ ಜಗದೀಶ ೪
ಆದಿತಾಳ
ಎಲ್ಲಿ ತಿರುಗಿದರೇನು ಎಲ್ಲೆಲ್ಲಿ ಮಿಂದರೇನು
ಎಲ್ಲಿ ಓದಿಕೊಂಡರೇನು ಎಲ್ಲಿವಾದ ಮಾಡಲೇನು
ಎಲ್ಲ ಕಾಲದಲ್ಲಿ ನಿನ್ನಲ್ಲಿ ಮನಸು ಪೊಂದದಲೆ
ಇಲ್ಲವೊ ಕೈವಲ್ಯಮಾರ್ಗ
ಸಲ್ಲುವನಲ್ಲವೊ ಎಂದಿಗೆ
ಬಲ್ಲ ದೈವವೆ ಕೇಳು ಕಲ್ಲು ಮೇಲೆ ಮಹದೊಡ್ಡ
ಹೆಳ್ಳೆ ಬಿದ್ದು ಪೋದ ತೆರದಿ ಎಲ್ಲ ಕಾಲದಲ್ಲಿ ನಾನು
ನಿಲ್ಲದರ್ಚಿಸದಾ ದುರಿತ ತಲ್ಲಣಿಸಿ ಪುಡಿಯಾಗಲಿ
ಚೆಲ್ಲರ ದೈವದ ರಮಣ ವಿಜಯ ವಿಠ್ಠಲರೇಯ
ನೆಲೆಗೊಳಿಸು ನಿನ್ನ ಪಾದದಲ್ಲಿ ಸೇರಿಸಿ ಸರ್ವದಲ್ಲಿ ೫
ಜತೆ
ನಿನ್ನವನೆಂಬೋದೆ ನಿಜವಾಗಿ ಇದ್ದರೆ
ಚೆನ್ನಾಗಿ ಪಾಲಿಸು ವಿಜಯ ವಿಠ್ಠಲರೇಯ ೬

ಶ್ರೀ ಕೃಷ್ಣನು ಅರ್ಜುನ ಮರದ

೮೨. ಮಧ್ಯಾರ್ಜುನ
ರಾಗ:ಸಾರಂಗ
ಧ್ರುವತಾಳ
ಏನು ಪೇಳಲಿ ಮಧ್ಯಾರ್ಜುನದ ಮಹಾಮಹಿಮೆ |
ಏಣಿ ಸಾಲಳವೇನು ಜ್ಞಾನಿಗಳಿಗೆ |
ಕ್ಷೋಣಿಯೊಳಗೆ ಪುಟ್ಟಿ ಅನಂತಾಜನುವಾದಲ್ಲಿ |
ಮಾಣಾದೆ ಮಾಡಿದಾ ದುರಿತಾವೆಂಬೊ |
ಮಾಣಾದೆ ಮಾಡಿದಾ ದುರಿತಾವೆಂಬೊ |
ಕಾನನಾ ರಾಸಿಗೆ ಹವ್ಯವಾಹನನಾಗಿ |
ತಾನಿ[ರಾ]ಲಿಪ್ಪಾ[ನು] ತವಕದಿಂದ |
ಗೇಣಿಗೇಣಿಗೆ ನಿಂದು ಯಾತ್ರಿಯಾ ಪತಿಕರಿಸಿ |
ಆನಂದಾವಾಗುವದು ಅನುಗಾಲವೊ |
ಭಾನುಕೋಟಿತೇಜಾ ವಿಜಯವಿಠಲನ್ನ |
ನೀನೆಂದು ನಿತ್ಯ ಸ್ತುತಿಸೆ ಸಾನುಕೂಲಾವೆನ್ನಿ ೧
ಮಟ್ಟತಾಳ
ಕಶ್ಯಪ ವಿಭಾಂಡ ಋಷಿಗಳೀರ್ವಾರು |
ಹೃಷಿಕೇಶನ ಒಲಿಸುವೆವು ಎನುತಲಿ |
ಕುಶಲಮತಿಯಲ್ಲಿ ವಸುಧಿಯೊಳಗೆ ಯಮನಾ |
ದೆಶೆಯಲ್ಲಿಗೆ ಬಂದು ತೃಷಿಯಾದಿಯ ತೊರೆದು |
ಹಸನಾಗಿ ಇರುತಿರೆ |
ವಸುದೇವ ತನಯಾ ವಿಜಯವಿಠಲರೇಯ[ನ] |
(ಶಿಶುತನ[ದಾ]ಟ) ನೋಡುವೆವೆಂದು ೨
ತ್ರಿವಿಡಿತಾಳ
ಈ ಪರಿ ತಪಸನು ಮಾಡಾಲು ಈರ್ವರಿಗೆ |
ಗೋಪಾಲಕೃಷ್ಣನು ಅರ್ಜುನ ಮರದೆಡಿಯಾ |
ತಾ ಪ್ರೇಮದಿಂದಲಿ ಮುನಿಗಳಿಗೆ ತನ್ನಯಾ |
ರೂಪವನ್ನು ತೋರಿ ರಚನೆಯಿಂದ |
ತಪಸಿಗಾಮನೊ ಬಯಕಿಯ ಸಲ್ಲಿಸಿ |
ದ್ರೌಪದಿವರದನು ಮರದಾ ಮಧ್ಯ |
ರೂಪವಡಗಿಸಿಕೊಂಡು ಪೋದಾನಂದಿನಾರಭ್ಯ |
ಭೂಪಾರದೊಳಗೆ ಮಧ್ಯಾರ್ಜುನನೆಂಬಾ |
ತಾ ಪೆಸರಾಗಿ ಈ ಕ್ಷೇತ್ರ ಪೆಸರಾಗಿ ಈ ಕ್ಷೇತ್ರ ಗುರುತಾದರೂ |
ನಾ ಪೇಳಾಲಿನ್ನಿ[ದು] ವಿಚಿತ್ರಾ ಉ |
ಮಾಪತಿ ವಿಜಯವಿಠಲರೇಯಾ ಅನಂತ |
ರೂಪಾನಗಣಿತ ಮಹಿಮಾ ಮೆರೆದಾನಿಲ್ಲಿ ೩
ಅಟ್ಟತಾಳ
ಕಾರುಣ್ಯಾಮೃತಾತೀರ್ಥ |
ಪಾರಮಾರ್ಥದ ಕಾವೇರಿಯಾ ಸ್ನಾನವು |
ಶ್ರೀರಂಗನಾಥನಾ ಶ್ರೀಪಾದ ಪದುಮವ |
ಚಾರುಮನದಲ್ಲಿ ಸ್ಮರಿಸುತ್ತ ಮಾಡಲು |
ಮೀರಿದ ದುರಿತದ ವಾರಿಧಿ ಬತ್ತಿ ಸಂ |
ಸಾರದಿಂದಲಿ ಉದ್ಧಾರವಾಗುವುದು |
[ವಾ]ರುಣೀಂದ್ರವಂದ್ಯ ವಿಜಯವಿಠಲ ತಾನೆ |
ಭಾರಕರ್ತನಾಗಿ ಸಾರೆದಲಿಪ್ಪಾ ೪
ಆದಿತಾಳ
ಎಲ್ಲಿ ಪೋಗದಿದ್ದ ಪಾಪ ಇಲ್ಲಿ ಬಿಟ್ಟು ಪೋಪುದು |
ಎಳ್ಳನಿತು ಯಾತ್ರಿ ಬಿಡದೆ |
ಉಳ್ಳದ್ದು ಮಾಡಿ ಇದ್ದಲೀ ವೇಗಾದಲ್ಲಿ |
ಸಲ್ಲಾದ ಸಂಶಯ ಹರಿಯ |
ಬಲ್ಲವರಿಗೆ ಇದರ |
ಸೊಲ್ಲು ಒಂದು ಕೇಳಾಲು ಕೈ |
ವಲ್ಯಾವಾಗುವದು ಸಿದ್ಧಾ |
ಬಲ್ಲಿದ ಶ್ರೀ ವಿಜಯವಿ |
ಠಲನ ಕರುಣದಿಂದ |
[ಕ್ಷು]ಲ್ಲಕ ನಡತಿ ಪೋಗಿ |
ಒಳ್ಳೆ ಫಲ ದೊರಕುವದೂ ೫
ಜತೆ
ಮಧ್ಯಾರ್ಜುನದ ಯಾತ್ರಿ ಮಾಡಾಲು ಮನವರಿತು |
ಬಿದ್ದು ಹೋಹದು ಫಲಾ ನೀವ ವಿಜಯವಿಠಲ ೬

ಶ್ರೀಹರಿ ಸರ್ವೋತ್ತಮನೆಂಬ ತತ್ವಜ್ಞಾನವನ್ನು

೩೨
ಧ್ರುವತಾಳ
ಏನು ಪೇಳಿದರೇನು ಜ್ಞಾನರಹಿತನಿಗೆ
ಮಾಣುವನೆ ತನ್ನ ಹೀನ ಗುಣವ
ಶ್ವಾನನ ತಂದು ಬಾಲನೀವಿ ಲಳಗಿಯೊಳು
ತಾನಿಡಲದರಿಂದ ಮೇಣು ಸರಳಾಗುವುದೆ
ಧೇನು ಪಾಲಿಸಿದಂತೆ ಕೋಣನ್ನ ಸಾಕಿದರೆ
ಏನಾದರೂ ಕ್ಷೀರ ಸೊನೆ ಉಂಟೆ
ನಾನೆಂಬ ದುರ್ಮತಿಗೆ ಆನಂದ ತರದ ತತ್ವ
ವನು ಪೇಳಲು ಸತ್ಯವ ನೆನಿಯವನು
ಸ್ಥಾನದ ನಾಮ ದೇವ ವಿಜಯ ವಿಠ್ಠಲನ್ನ
ಕಾಣದೆ ಭವದಲ್ಲಿ ಕ್ಷೀಣವಾಗುವನೊ ೧
ಮಟ್ಟತಾಳ
ಮುಗ್ದಗೆ ಉಪದೇಶ ಸಿದ್ಧಾಂತಗಳೆಲ್ಲಾ
ಬದ್ಧವಾಗಿ ಕರದು ಬುದ್ಧಿಯಿಂದಲಿ ಪೇಳೆ
ಕ್ಷುದ್ರತನವ ಬಿಟ್ಟು ಶ್ರದ್ಧೆ ಭಕುತಿಯಲ್ಲಿ
ದುಗ್ಧಾಬ್ದಿವಾಸನ ಹೊದ್ದಿ ಬದುಕುವನೆ
ದಗ್ದ ಪಟಹದೊಳು ಮುದ್ದಿಯ ಮಾಡಿದರೆ
ಛಿದ್ರವ ಬೀಳದಲೆ ಪೊದ್ದಿಕೊಂಡಿಪ್ಪದೆ
ರುದ್ರನಾಮಕ ದೇವ ವಿಜಯ ವಿಠ್ಠಲನ್ನ
ಬದ್ದ ದ್ವೇಷಿಗೆ ಸಾಧ್ಯವೇ ಸತುಕರ್ಮಾ ೨
ತ್ರಿವಿಡಿ ತಾಳ
ಶವಬಿದ್ದಿರಲು ಪೋಗಿ ಕಿವಿಗೆ ಮೊಗವನಿ
ಟ್ಟು ಔತುನಕೆ ಬಾ ಎಂದು ಪೇಳಲು ಆಶವ
ಅವರಿಸಿ ಬಂದು ಸವಿಪಾಕನುಂಡು ಪ್ರ
ಸ್ತವ ಹೆಗಳಿ ತೃಪ್ತಿಯ ಬಡಬಲ್ಲದೇನೊ
ಭವರೋಗವೈದ ಶ್ರೀದರನ ಚರಿತೆಯನ್ನು
ಶ್ರವಣಕ್ಕೆ ಬೀರಲು ಬುದ್ದಿ ಪೂರ್ವಕದಿಂದ
ಅವಗುಣ ತೊರೆದು ಕೇಳುವನೆ ಹರುಷದಲ್ಲಿ
ಹವಿ ಶೇಷನಾಮಕ ನಮ್ಮ ವಿಜಯ ವಿಠ್ಠಲನ
ಶ್ರವಣ ತೊರೆದವನು ಆ ಶವವೆಂದು ತಿಳಿವುದೂ ೩
ಅಟ್ಟತಾಳ
ಇಂದಿರೆ ರಮಣನ ಪೊಂದದ ಪಾಪಿಗೆ
ಮುಂದಾಕಿನಿ ಜಲ ಮಿಂದರೆ ಅವಸಂಗ
ನೊಂದು ಬೆಂದು ಪೋಗುವುದು ಎಂದಿಗೆ ಸಿದ್ಧ
ಹಿಂದಕ್ಕೆ ಮಧರಿಲಿಯಿಂದ ಓಡಿ ಜರಾ
ಸಂಧನು ಗಂಗೇಲಿ ಬಂದು ಬೀಳಲಿ ಮೈ
ಬೆಂದು ಪೋಯಿತು ಕಷ್ಟದಿಂದಲಿ ಉಳಿದನು
ಸಂದೇಹವೆನದಿರಿ ವೃಂದಾರಕ ಸರ್ವ ೪
ಆದಿತಾಳ
ಅಸಮ ತತ್ವಒಯಿದು ಹೀನ ಪಿಸುರಾನಿಗೆ ಉಸರಿದರೆ
ವಶ ಮಾಡಿಕೊಂಡು ಸಂಪಾದಿಸಬಲ್ಲನೆ ಜ್ಞಾನವನು
ಹಸುವಿನ ಹಾಲುಹಿಂಡಿ ಹಸನಾಗಿ ಕಾಸಿ ಹುಳಿ
ರಸದೊಳು ಹೆಪ್ಪುಗೊಡೆ ಮೊಸರಾಗಿ ತೋರುವುದೇ
ಪುಸಿವಿವಾಧಿಗೆ ಉಪನಿಷತ್ತತ್ವಗಳು ಪೇಳೆ
ಅಸುರ ಮೋಹಕದರ್ಥ ಎಸೆದುಬಿಡನು ಕಾಣೊ
ಪೇಸಲಿ ನಾಮಕ ದೇವ ವಿಜಯ ವಿಠ್ಠಲನ್ನ
ಕುಶಲವಾರ್ತೆಯ ಕೇಳದೆ ಅಸುವ್ಯರ್ಥ ಮಾಡುವನು ೫
ಜತೆ
ಮಿಥ್ಯವಾದಿಗೆ ಸತ್ಯವೆಂದು ಪೇಳಿದರವ
ಸತ್ಯ ವಿಜಯ ವಿಠ್ಠಲನ ಭಜಿಸದೆ ಕೆಡುವನೊ ೬

೩೩
ಧ್ರುವತಾಳ
ಏನು ಮಾಡಲಿ ಹರಿ ಹೀನ ಮನಸು ನಿತ್ಯಗಾಣದೆತ್ತಿನಂತೆ ಸುತ್ತಿ ಪೊಂದಿದೆಕೊಭಾನು ಉದಯಾಸ್ತಮಾನ ಪರಿಯಂತನಾನಾಲೋಚನೆ ಧೇನಿಸುತ್ತಮಾನಾಭಿಮಾನದ ಭೀತಿಗೆ ಅಳುಕದೆಕಾನನ ಕಪಿಯಂತೆ ಚಲಿಸುತಲಿದೀನ ಜನರ ಸ್ತೋತ್ರವನು ಮಾಡೆ ಒಂದುಗೇಣುದರಲ್ಲದೆ ಅಧಿಕವಿಲ್ಲಾಕಾಣಿಸುವ ದರ್ಪಣ ಪಾಣಿಯೊಳಗಿರಲುಗೋಣಿತ್ತಿ ಗೋಡಿಗೆ ಹಲ್ಲು ತೆರದಂತೆನೀನೆ ಬಿಡದೆ ಎನ್ನಾಧೀನವಾಗಿರಲಿಕ್ಕೆಯೋನಿಜರಿಗೆ ಕರವನು ನೀಡುವೆನಯ್ಯಾಸ್ಥಾಣುವೆ ನಾಮ ನಮ್ಮ ವಿಜಯ ವಿಠ್ಠಲ ನಿನ್ನಧ್ಯಾನ ಧ್ಯಾನ ಮಾಡುತ್ತ ಏನೇನು ಬಯಸೋದು ೧

ಮಟ್ಟತಾಳ
ಅಹಂಕಾರವಳಿಯದೊ ಆಹಂಕಾರವಳಿಯದೊಅಹಂಕಾರವಳಿದರೆ ದೇಹಕ್ಕೆ ನಿರ್ಮಲವುಅಹಂಕಾರದಿಂದಲ್ಲಿ ಬಾಹ ಫಲಂಗಳುಬಹುದೂರವಾಗಿ ಸದಗತಿಗೊದಗವುಅಹ ಸಂವತ್ಸರವೆ ವಿಜಯ ವಿಠ್ಠಲ ಇಂಥದ್ರೋಹಿಗೆ ಇನ್ನಾವ ಸಹಾಯ ಸಂಪತ್ತು ೨

ತ್ರಿವಿಡಿ ತಾಳ
ಇಳಿಯ ಕಳದು ಅದಕೆ ಗಡುಸು ಕೊಟ್ಟರೆ ನಾನುಇಳಿವೆನೋ ನರಕಕ್ಕೆ ಬಲುದೂರಾಗುವೆನಯ್ಯಾಇಳಿಯೊಳು ಬಂದು ಪುಟ್ಟುವ ಕರ್ಮ ಬಾರದುಇಳಿಯ ವಲ್ಲಭ ಕೇಳು ಎನ್ನ ಮಾತಾಇಳಿತರ ಮಾಡದೆ ಇನ ಶಶಿ ಉಳ್ಳನಕಇಳಿಯ ಕಳದು ಎನ್ನ ಮನದ ಬಯಕೆಇಳಿಜಾರ ಮಾಡದಲೆ ತತ್ವ ವಿಜಯ ವಿಠ್ಠಲಇಳಿಯ ತರುವಾಯ ನೀನೆಂಬೊದಲ್ಲವೆ ರಂಗ೩

ಅಟ್ಟತಾಳ
ಶಿಲಿಯೊಳು ನಿರ್ಮಳವಾದ ಜಲದಲೆ ಪುಟ್ಟಿದಂತೆ ಚನ್ನಾಗಿ ಪುಟ್ಟಿದೆ ಎನ್ನಶೀಲೆಯೆಂಬೊ ಹೃದಯದೊಳಗೆ ನಿನ್ನ ದಯದಿಂದಥಳಥಳಿಸುವ ವಿಮಲ ನಾಮಸುಧೆ ಎಂಬಅಲೆ ಉದ್ಭವಿಸುತ್ತ ಆನಂದಮಯವಾಗಿಇಳೆಯೊಳು ದ್ರವವಾಹಿನಿಯಾಗಿ ನಿನ್ನ ನಿಶ್ಚಲ ಭಕ್ತರಂತರಂಗವೆಂಬ ಸಾಗರ ಮಿಳಿತವಾಗಲಿ ಪ್ರಕಾಶಿತದಿಂದಲ್ಲಿಲಲಿತ ಮೂರುತಿ ನಮ್ಮ ವಿಜಯ ವಿಠ್ಠಲರೇಯಶಿಲೆಯ ಪಾವನಗೈಸಿದ ಪುಣ್ಯಶೀಲಾ ೪

ಆದಿತಾಳ
ಪುರದೊಳು ನಾನಾ ಕುಲದವರಿದ್ದರುಇರಲಿ ಎನಗವರ ಬಳಿವಿಡಿದು ಮನಸ್ಸುಎರಗದಂತೆ ಮಾಡುವುದು ಆಲಯದಲ್ಲಿ ಉದ್ದರಿಸೋದು ಉತ್ತಮರ ಮನಿಗಳಿಗೆ ಪೋಗಿಪರಮ ಭಕುತಿಯಿಂದ ಶರಣೆಂದು ಬಾಗಿ ತೀವರದಿಂದ ಗತಿಗೆ ಅಂಕುರವಾಗುವಂತೆ ಎನಗೆಸ್ಥಿರವಾಗಲಿ ಮನಸು ನಿನ್ನ ದಯದಿಂದ ಜನೇಶ್ವರನಾಮ ವಿಜಯ ವಿಠ್ಠಲ ಎನ್ನಾಳುವಧೊರಿಯೆ ೫

ಜತೆ
ನತಜನ ಹೃದಯ ಕುಮುದ ವನಧಿ ಬಾಂಧವಕೃತನಾಮ ವಿಜಯ ವಿಠ್ಠಲ ಸರ್ವಾಂತರ್ಯಾಮಿ ೬

ಸ್ತ್ರೀಯರಿಗೆ ಆಭರಣಗಳೆಂದರೆ ಪಂಚಪ್ರಾಣ;

೩೪
ಧ್ರುವತಾಳ
ಒಡವೆಗಳಿಡುವುದು ಬಿಡದೆ ಪತಿ ಭಕುತಿ
ಪಿಡಿವ ನಡಿವ ಗುಣದ ಮಡದೇರು ಸರ್ವರು
ಪೊಡವಿಯೊಳಗೆ ಉಳ್ಳ ಜಡವಾದ ದ್ರವ್ಯದಿಂದ
ಜಡಿತ ವಸ್ತ್ರವ ನಿಬಿಡ ಧರಿಸಿದರದು
ಕೆಡಿಸುವದು ಸ್ವರೂಪ ತಡಿಯದೆ ಕಾಮಜನರು
ಇಡುವರು ಮನಕ್ಲೇಶ ಬಡುವರು ತಮ್ಮೊಳಗೆ
ಬಡಿವಾರ ಬಪ್ಪದು ಒಡನೆ ಅಹಂಕಾರ ಮಮತೆ
ಕಡು ಪೆಚ್ಚುವರು ಬಲು ಕಡೆ ಮೊದಲಿಲ್ಲದೆ
ಅಡಿಗಡಿಗೆ ಭಯಬಡಬೇಕು ಒಬ್ಬರಿಗೆ
ಕೊಡಬೇಕು ಕಡುದು:ಖ ಬಡಬೇಕು ಈಯದಿರೆ
ಎಡಬಲರಿಪು ಜನರು ಘುಡಿ ಘುಡಿಸುವರು ಬ
ಚ್ಚಿಡ ಬೇಕು ನಾನಾ ತೊಡಕು ಬಂದಾಗಲೂ
ಬಡತನ ಮಿಕ್ಕಾದ ತೊಡರು ಒದಗಿದಾಗ
ಮಿಡುಕ ಬೇಕು ಮತ್ತೆ ಇಡುವಾಗ ಮಾರುವಾಗ
ಬಿಡು ಬಿಡು ವಸ್ತ್ರದ ಗೊಡಿವೆ ನಿಮಗ್ಯಾತಕೆ
ದೃಢ ಮಾಡಿ ಮನ ಸಂಗಡಲೆ ಕೈವಲ್ಯಕೆ
ತಡಿಯುಂಟು ತೀವ್ರವಾಗಿ ಒಡೆತನ ಘನವೆನ್ನ
ಕಡಲ ಶಯನ ನಮ್ಮ ವಿಜಯ ವಿಠ್ಠಲನ್ನ ನಾಮವೆಂಬೊ
ಒಡವೆ ವಸ್ತ್ರ ಇಟ್ಟು ನಡೆ ಪತಿ ವ್ರತರಾಗಿ ೧
ಮಟ್ಟತಾಳ
ವಾಲಿ ಭಂಜನನೆಂಬೊ ವಾಲಿಯನ್ನು ಧರಿಸಿ
ಬಾಲ ಲೋಲನೆಂಬೊ ಕಾನಬಾವಲಿ ಇಡಿ
ಹಾಲ ಸಾಗರ ಸದನನೆಂಬೊ ಮೇಲಾದ ಬುಗುಡಿ
ಕಾಳಿಂಗ ಭಂಗನೆಂಬ ಕಠಾಣಿಯ ಕಟ್ಟಿ
ಭೂಲೋಲ ನೆಂಬೊ ಭುಜಕೀರ್ತಿಯ ಧರಿಸಿ
ಮೂಲ ಮೂರುತಿ ನಮ್ಮ ವಿಜಯ ವಿಠ್ಟಲನ್ನ
ಆಳಾದವನ ನಿಜ ತೋಳಿಲಿ ನಲಿದಾಡು ೨
ರೂಪಕ ತಾಳ
ಕಮಲನಾಭ ನೆಂಬೊ ಕಂಕಣವಿಡಿ
ಅಮರ ಪಾಲಕನೆಂಬ ಮೋಹನ ಹಾರ
ತಮಹರ ನೆಂದೆಂಬೊ ತಳಕು ಪದಕ ಹಾಕಿ
ರಮಾರಮಣ ನೆಂದೆಂಬೊ ರಾಜಿಪ ಉಂಗುರ
ಉಮೆಯರಸವಂದ್ಯ ಸಿರಿ ವಿಜಯ ವಿಠ್ಠಲನಂಘ್ರಿ
ಕಮಲವ ನೆನೆದು ಸಂತತ ಸುಖಿಯಾಗಿ ೩
ಝಂಪೆ ತಾಳ
ಶೇಷ ಹಾಸಿಕೆ ಎಂಬೊ ಸರಿಗೆಯನು ಧರಿಸುವುದು
ದೋಷನಾಶನವಾದ ದ್ವಾರೆಯನ್ನು
ವಾಸುದೇವನೆಂಬೊ ವಾಲಿಯ ಸರಪಳಿ
ಕೇಶವಾನೆಂಬೊ ಕಾಲಂದಿಗಿಯಾ
ಸಾಸಿರನಾಮವೆಂಬೊ ಸರದ ಮುತ್ತನೆ ಕಟ್ಟಿ
ದೇಶಾಧಿಪತಿ ಎಂಬೊ ಕಾಂಚಿದಾಮಾ
ಲೇಸಾಗಿ ವರವೀವ ವಿಜಯ ವಿಠ್ಠಲರೇಯನ
ದಾಸನಾದವನ ಸಂತೋಷವನು ಬಡಿಸು ೪
ತ್ರಿವಿಡಿ ತಾಳ
ಪರಮ ಪುರುಷನೆಂಬೊ ಹರಡಿಯ ಕೈ ಕಟ್ಟು
ಮುರ ವಿರೋಧಿ ಎಂಬೊ ಮುತ್ತಿನ ಸರವೊ
ಪುರುಷೋತ್ತಮನೆಂಬೊ ಪುಣಗು ಸಾದಿನ ಬೊಟ್ಟು
ಕರಿ ವರದ ನೆಂಬೊ ನ್ಯಾವಳದ ಸರ
ಪರದೈವ ಹರಿ ಎಂಬೊ ಮುತ್ತಿನ ಮೂಗುತಿಯ
ತರಣಿ ಭಾಸನೆಂಬೊ ಮುತ್ತಿನ ಚಿಂತಾಕ
ಸರುವ ದೇವರ ದೇವ ವಿಜಯ ವಿಠ್ಠಲನ್ನ
ಸ್ಮರಣೆ ಮಾಡುತ ಸಂಚರಿಸೋದು ಪ್ರತಿದಿನ ೫
ಅಟ್ಟತಾಳ
ಪಿನಾಕಿಸಖನೆಂಬ ಪಿಲ್ಲೆಯ ಇಡುವದು
ಶ್ರೀನಾಥನೆಂದಂಬೊ ಕಾಲುಂಗರನಿಟ್ಟು
ಪ್ರಾಣನಾಯಕ ನೆಂಬೊ ಕಿರಿಪಿಲ್ಲೆಯನು ಇಟ್ಟು
ವಾಣೀಪತಿ ಪಿತನೆಂಬೊ ಮೆಂಟಿಕಿಯಾ
ಬಾಣಾಂತಕನೆಂಬೊ ಬಣ್ಣ ಬಣ್ಣದ ಸರ
ಕ್ಷೋಣೆಧರನೆಂಬೊ ಚಂದ್ರ ಸೂರ್ಯರ ಕಾಂತಿ
ಮಾನದೊಡಿಯ ನಮ್ಮ ವಿಜಯ ವಿಠ್ಠಲನ್ನ
ಜ್ಞಾನದಲ್ಲಿಪ್ಪದೆ ಮಂಗಳ ಸೂತ್ರ ೬
ಆದಿತಾಳ
ಪತಿ ದೈವವೆಂದು ತಿಳಿದು ಸತತ ನಡಿಯಬೇಕು
ಪತಿ ದರುಶನವೆ ಶ್ರೀ ಪತಿ ದರುಶನವೆನ್ನಿ
ಪತಿಯ ಸಲ್ಲಾಪವೆ ಶೃತಿವಚನ ಎನಬೇಕು
ಪತಿ ಉಪಚಾರ ಲಕ್ಷ್ಮೀಪತಿ ಸೇವೆ ಎನಬೇಕು
ಪತಿಪಾದ ಜಲತೀರಥ ಜಲವೆನ ಬೇಕು
ಪತಿಉಚ್ಛಿಷ್ಟ ಅಮೃತ ಪ್ರಾಶವೆನ ಬೇಕು
ಪತಿ ಅಂಗ ಸಂಗ ಉನ್ನತಗತಿ ಎನಬೇಕು
ಪತಿಯಲ್ಲದನ್ಯತ್ರ ದೈವ ವಿಲ್ಲೆನಬೇಕು
ಪತಿ ಮಾತಿಗೆ ನಿತ್ಯ ಪ್ರತಿಕೂಲವಾಗದೆ
ಹಿತದಲ್ಲಿ ನಡೆದು ಭಕುತಿ ಪಡಿಂಇಇಲಿಬೇಕು
ಪತಿ ಅಂತರ್ಗತನಾದ ವಿಜಯ ವಿಠ್ಟಲ ಹರಿಯ
ನುತಿಸಿ ಸಾಧನದಿಂದ ಮತಿವಂತರಾಗುವುದೂ ೭
ಜತೆ
ವೈರಾಗ್ಯವೆಂಬೊ ಭಾಗ್ಯದಲ್ಲಿ ಲೋಲಾಡಿ
ವೀರನಾದ ವಿಜಯ ವಿಠ್ಠಲನ್ನ ನೆನೆಸೋದು ೮

ಭಗವಂತನು ಸತ್ಯಸಂಕಲ್ಪನಾಗಿರುವನಲ್ಲದೆ

೩೫
ಧ್ರುವತಾಳ
ಒಡಿಯಾ ನಿಲ್ಲಲಾವು ನಿಲುವೆವಯ್ಯಾ
ಒಡಿಯಾ ನಡಿಯಲಾವು ನಡಿವೇವಯ್ಯಾ
ಒಡಿಯಾ ನೋಡಲಾವು ನೋಳ್ಪೆವಯ್ಯಾ
ಒಡಿಯಾ ನುಡಿಯಲಾವು ನುಡಿವೆವಯ್ಯಾ
ಒಡಿಯಾ ಕೊಡಲಾವು ಕೊಡುವೆವಯ್ಯಾ
ಒಡಿಯಾ ಕೇಳಲಾವು ಕೇಳ್ವೆವಯ್ಯಾ
ಒಡಿಯಾ ಮಾಡಲಾವು ಮಾಳ್ವೆವಯ್ಯಾ
ಒಡಿಯಾ ಪಿಡಿಯಾಲಾವು ಪಿಡಿವೆವಯ್ಯಾ
ಒಡಿಯಾ ಸುಮ್ನನಾಹೆ ಆವು ಸುಮ್ಮನೆ
ಒಡಿಯಾ ಕುಳ್ಳಿರಲಾವು ಕುಳ್ಳುವೆವಯ್ಯಾ
ಒಡಿಯಾ ಓಡಲಾವು ಒಡನೆ ಓಡುವೆವಯ್ಯಾ
ಒಡಿಯಾ ಘಕ್ಕನೆ ನಿಲ್ಲಲಾವು ನಿಲ್ಲುವೆವಯ್ಯಾ
ಒಡಿಯಾ ವಾಸನೆ ಕೊಳಲಾವು ವಾಸನೆ ಕೊಂಬೆವಯ್ಯಾ
ಒಡಿಯಾ ಕರವ ನೀಡಲಾವು ನೀಡುವೆವಯ್ಯಾ
ಒಡಿಯಾ ತಿರುಗಲಾವು ತಿರುಗುವೆವಯ್ಯಾ
ಒಡಿಯಾ ತಲೆದೂಗಲಾವು ತೂಗುವೆವಯ್ಯಾ
ಒಡಿಯಾ ತುತ್ತುಗೊಳ್ಳಲು ಕೊಂಬೆವಯ್ಯಾ
ಒಡಿಯಾ ಮೆಲ್ಲಲಾವು ಮೆಲುವೆವಯ್ಯಾ
ಒಡಿಯಾ ಒಂದಡಿ ಇಡಲಾವು ಇಡುವೆವಯ್ಯಾ
ಒಡಿಯಾ ಮುಟ್ಟಲಾವು ಮುಟ್ಟುವೆವಯ್ಯಾ
ಒಡಿಯಾ ಬಿಡಲಾವು ಬಿಡುವೆವಯ್ಯಾ
ಒಡಿಯಾ ನಮ್ಮೊಳಗುಂಟು ಆವು ಒಡಿಯಾನೊಳಗೆ
ಒಡಿಯಾ ನಮ್ಮಾಧೀನ ಆವು ಒಡಿಯನಾಧೀನ
ಒಡಿಯಾ ಸಿರಿ ಅರಸ ವಿಜಯ ವಿಠ್ಠಲರೇಯ
ಒಡಿಯಾ ಬಾಯಿತೆರಿಯಲಾವು ಬಾಯಿ ತೆರುವೇವಯ್ಯಾ ೧
ಮಟ್ಟತಾಳ
ಒಡಿಯಾ ಪೈಣವವಾಗೆ ಆವು ಮಾಡುವುದದೇ
ಒಡಿಯಾ ಉದಾಸಿಸೇ ಆವು ಮಾಡುವದದೇ
ಒಡಿಯಾ ಮನ್ನಣೆ ಮಾಡೆ ಆವು ಮಾಡುವದದೇ
ಒಡಿಯಾ ಕರತರಲು ಆವು ಮಾಡುವದದೇ
ಒಡಿಯಾ ಮುಖತಿರುಹೆ ಆವು ಮಾಡುವದದೇ
ಒಡಿಯಾ ಸ್ಥಿರವಾಗಿ ಆವು ಮಾಡುವದದೇ
ಒಡಿಯಾ ಪವಡಿಸಾಲು ಆವು ಮಾಡುವದದೇ
ಒಡಿಯಾ ಕೊಡಲು ಉಂಟು ಕೊಡದಿದ್ದರೆ ಇಲ್ಲ
ಪೊಡವಿಯೊಳಗೆ ಉಳ್ಳ ಒಡವೆವಾಹನ ವಸ್ತ್ರ
ಒಡಿಯಾ ಮಾಡಿದವೆನ್ನಿ ಒಡಿಯಾ ಕಣ್ಣಿನಯವೆ
ಇಡದಿದ್ದರಾವು ಇಡುವ ಸ್ವತಂತ್ರರೇ
ಒಡಿಯಾ ಮತ್ತಾವನೋ ವಿಜಯ ವಿಠ್ಠಲನೆಂಬ
ಒಡಿಯನ ಬಳಿವಿಡಿದು ಪಡಿಯಿರೋ ಸದ್ಗತಿಯಾ ೨
ತ್ರಿವಿಡಿ ತಾಳ
ಒಡಿಯಾ ಭಕ್ತರಿಗಾಗಿ ಬೊಮ್ಮಾಂಡ ಪುಟ್ಟಿಸಿ
ನಡುವೆ ತಾನೆ ಒಂದು ರೂಪದಲ್ಲಿ
ಎಡೆಬಿಡದಲೆ ನಿಂದು ಸರ್ವ ಜೀವಿಗಳನ್ನು
ಜಡ ಒಂದು ತಂದಿತ್ತು ಜನಿಸುವ ಉಪಾಯ
ಒಡನೆ ಕಲ್ಪಿಸಿ ತಾನೆ ಒಳಗಿಪ್ಪ ತೊಲಗದಲೆ
ಕೊಡುವರು ಕೆಲವರು ಕೆಲವರು ಪಿಡಿವರು
ನುಡಿ ಭೇದಗಳಿಂದ ಕುಣಿಸುತಿಪ್ಪ ಮಾಯಾ
ಕಡುಗಾರನೊಬ್ಬನೆ ಎಲ್ಲೆಲ್ಲಿ ಪರಿಪೂರ್ಣ
ಬಿಡನು ಭಕ್ತರವಶ ಆಪತ್ತು ಬರಲೀಸಾ
ಹೊಡೆ ಮಗ್ಗುಲಿಡಲಾವು ತಾನೆ ಆದೆ ಮಾಡುವ
ಹುಡುಗನಾಗಿ ಗೋಪಳ್ಳಿಯೊಳಗೆ ಎಲ್ಲ
ಪಡೆದ ಗೋಪಿ ಕೈಯ್ಯ ನುಡಿಸಿ ಬಡಿಸಿಕೊಂಡ
ಕಡುಮೆಚ್ಚು ಈ ದೈವಾ ಕಡೆ ಮೊದಲಿಲ್ಲದೆ
ಕಡಲೊಳಗಿಪ್ಪದು ಒಂದೇ ಕಾಣೊ
ಹಡಗವೊ ಭವಾಬ್ಧಿಗೆ ವಿಜಯ ವಿಠ್ಠಲರೇಯ
ಒಡಗೂಡಿ ಸರ್ವವು ಬಿಡದೆ ಮಾಡಿಸುವನು ೩
ಅಟ್ಟತಾಳ
ಒಡಿಯನ್ನ ನಿಂದ್ಯೆ ಎನಗಾಗದು
ಒಡಿಯನ್ನ ಮನ ಮೆಚ್ಚೆ ಭಕ್ತರಿಗೆ ಬಲು ಮೆಚ್ಚು
ಒಡಿಯಗಾಗದವ ಭಕ್ತರಿಗಾಗದವ
ಒಡಿಯಾಳಿನ ಮಾತು ಒಂದೆ ಮಾತು ಎನ್ನಿ
ಒಡಿಯ ಬಿಟ್ಟದು ನಿಜ ಭಕ್ತ ಬಿಟ್ಟದು ಎನ್ನಿ
ಒಡಿಯ ಸುಜನರಿಗೆ ಕೊಡುವನು ಸುಕೃತ
ತಡಿಯದೆ ದುರುಳರ ಬಡಿದು ಅಲ್ಲಿದ್ದದು
ತೊಡಕಿದವರ ಗಂಡ ವಿಜಯ ವಿಠ್ಠಲರೇಯ
ಮುಡಿದು ಕುಸುಮ ಬಾಡಗೊಡದಲೆ ಪಾಲಿಪ ೪
ಆದಿತಾಳ
ಇದೆ ತಿಳಿದು ಇದೆ ತಿಳಿದು ಇದರಂತೆ ಪ್ರವರ್ತಿಪ
ಅದೆ ಮಾನವನ್ನ ಜನುಮ ಬಲು ಸಾರ್ಥಕ
ಪದೋಪದಿಗೆ ಅವನ ಕೂಡ ತ್ರಿದಶರು ತಿರುಗುವರು
ಮದ ಮತ್ಸರವಳಿದು ಕಾಮದ ಪಾಶ ಗೆಲುವನು
ಹದುಳತನದಲ್ಲಿ ಇಹದಲ್ಲಿಪ್ಪ ಅನುದಿನ
ಕ್ಷುಧಿಯಾದಿ ಸಂಕಟವ ಒದೆದು ಕಳೆವನಯ್ಯಾ
ಇದೆ ಸುಖವೆಂದು ನಂಬಿದ ನರ ಒಂದು ವಾರಾ
ಬದುಕಿದ ಬದುಕು ಲೇಸು ಸದಮಲ ಭಕುತಿಯಲ್ಲಿ
ಉದರ ನಯನ ಕರ್ನ ವದನ ನಾಶಿಕ ಕರ
ಪದ ಜಿಹ್ವೆ ಹೃದಯದಲ್ಲಿ ಸದಕೃರ್ತಂ ಕಾರಣವೊ
ಪದೋಪದಿಗೆ ಪ್ರೇರಿಸಿ ಮದನ ಪಿತ ಒಳಗೆ ನಿಂದು
ಇದೆ ಮಾಳ್ಪನೆಂದು ನುಡಿದು ಹಿಗ್ಗಿ ಭಕುತಿ ಎಂಬ
ಉದಧಿಯೊಳಗೆ ಮುಳುಗಿ ನಲಿದು ಹಾರೈಸಲು ಮಹ
ಪದವಿಗೆ ಯೋಗ್ಯನೆಂದು ಮುದದಿಂದ ವೇದಗಳು
ಒದರಿ ಪೇಳುತಲಿದೆಕೊ ಚದುರ ಮನದಲಿ ಆ
ರಿದನು ಸಂಪಾದಿಸಲು ಆದೆ ಜ್ಞಾನಪೂರ್ಣನು ವೆಂ
ಬದು ಸಾವಿರಕ್ಕೆ ಸಿದ್ದ
ಶುದ್ಧ ಮೂರ್ತಿ ವಿಜಯ ವಿಠ್ಠಲ ಬದಿಯಲ್ಲಿ
ನಿಂದು ಕರ್ಮದ ದಾರಿ ತಪ್ಪಿಸುವ
ಉದಯಾಸ್ತಮಾನ ಬಿಡದೆ ೫
ಜತೆ
ಅ ಎಂಬುದು ಮೊದಲು ಹರಿ ನುಡಿಸಿದನೆಂದು
ಕಾಯದೊಳು ತಿಳಿಯೆ ವಿಜಯ ವಿಠ್ಠಲ ಸುಳಿವಾ ೬

ಬದುಕಿನಲ್ಲಿ ಬರುವ ಸುಖ-ದುಃಖಗಳೆರಡೂ

೩೬
ಧ್ರುವತಾಳ
ಒಲ್ಲೆನೆಂದರೆ ಎನ್ನ ತೊಲಗಲಿಲ್ಲಯ್ಯಾ ನಿನ್ನ
ಬಲ್ಲ ಪರಿಯು ಮಾಡೋದೇನೋ ದೇವಾ
ಎಲ್ಲಿ ಪೊಕ್ಕರು ಬಿಡದು ಏನೆಂಬೆನಯ್ಯಾ
ನಿನ್ನ ಬಲ್ಲಿದತನಕ ಕೊಂಡಾಡಲೊಶವೆ
ಸಲ್ಲುವುದು ನೀನು ಮಾಡಿದ ಸಂಕಲ್ಪ
ಎಲ್ಲ ಕಾಲದಲ್ಲಿ ಮೀರುವುದುಂಟೆ
ಕಲ್ಲೊಳಗಿದ್ದರು ತಪ್ಪದು ದು:ಖ ಸುಖ
ಸೊಲ್ಲು ಪೇಳುವುದೇನು ಸರ್ವಕರ್ತಾ
ಇಲ್ಲಿ ಇದ್ದರೇನು ಅಡಿವಿಗೆ ಪೋದರೇನು
ಉಳ್ಳದಕೆ ಕೊರತೆ ಎಂದೆಂದಿಗೂ
ಎಳ್ಳಿನಿತಾಗದು ಯಾವತ್ತು ಜನ್ಮಕ್ಕೆ
ನಿಲ್ಲದೆ ಅನುಭವಕ್ಕೆ ತಂದುಕೊಡುವು
ದಲ್ಲದೆ ಸುಮ್ಮನಿಪ್ಪ ನಿಜ ಸ್ವಭಾವ ನಿನ್ನ
ದಲ್ಲದೊ ಕಾಣೊ ನಿತ್ಯದಲಿ ಗುಣಿಸೆ
ಅಲ್ಲಿ ನಿನ್ನಂಘ್ರಿಯ ಭಜನೆ ಮಾಡುತಲಿರೆ
ಇಲ್ಲಿಗೆ ತಂದು ಈ ಪರಿ ಮಾಳ್ಪರೇ
ಮೆಲ್ಲಮೆಲ್ಲಗೆ ವೈರಾಗ್ಯದಲ್ಲಿಡು ಎಂದು
ಪಲ್ಲು ಕಿರಿದು ನಾನು ಸ್ತುತಿಸಲಾಗಿ
ಸೊಲ್ಲು ಲಾಲಿಸಿ ಸತತ ಮನೋಭೀಷ್ಟ ಈಯದಲೆ
ಎಲ್ಲರಿಂದಲಿ ಇನಿತು ಸೋಜಿಗವೇ
ಬಲ್ಲೆ ಬಲ್ಲೆನೊ ಲೋಕದೊಳಗೆ ಮಹಾಖ್ಯಾತಿ
ಯಲ್ಲಿ ತಿರುಗುವುದು ಮನ:ಪೂರ್ವಕ
ದಲ್ಲಿ ನುಡಿದೆನಯ್ಯಾ ಸಮ್ಮೊಗನಾಗಿ ಶ್ರೀ
ವಲ್ಲಭ ಒಲಿದಂಗೆ ಚಿಂತಾಮಣಿಯೇ
ಚಿಲ್ಲರೆ ದೈವಂಗಳಿಗೆ ಈ ಪರಿ ಶಕ್ತಿಯಂಟೆ
ಚಲ್ಲಡಿ ಚಲ್ಲಿಯಡವಿಯ ಭಕ್ತರಿಗೆ ವರವ
ಭಳಿರೆ ನಿನ್ನ ಮಾಯಾ ಎಂಥದೋ ಎಂಥದೋ
ತಲ್ಲಣಿಸುತಿದೆ ದೈತ್ಯನಾಶಾ
ಬಲ್ಲವರಿಗೆ ಸಾಮಿಷ್ಯ ವಿಜಯ ವಿ
ಠ್ಠಲ ಕರುಣಾಂಬುಧಿ ಸರ್ವ ಪ್ರೇರಕ ಸ್ವಾಮಿ ೧
ಮಟ್ಟತಾಳ
ಅಂದಣ ಬಂಧನ ತುರಂಗ ಉರಂಗ
ಕುಂದಣ ಪಾಷಾಣಮಕೂಲ ವಸನ
ವಂದನೆ ನಿಂದ್ಯಗಳು ವಾಜ್ಮಾಧುರ್ಯಗಳು
ಮಂದಿ ಮಹಾರಣ್ಯ ಮನೋದಾರಢ್ಯಮ
ಮಂದಿಯ ಸಂದಣಿ ಮಹಾ ಏಕಾಂತವನೂ
ಪೊಂದೇರು ಪೊಂಬಟ್ಟೆ ಭೂಷಣ ದೂಷಣ
ಒಂದೊಂದು ಪರಿಯಲ್ಲಿ ಒಳಿತು ಹೊಲ್ಲೆಗಳೆಲ್ಲ
ಒಂದು ಕ್ಷಣ ಬಿಡದೆ ಹರಿ ನಿನ್ನಿಚ್ಚೆಯಲಿ
ತಂದಿತ್ತದು ನಾನು ತಲೆದೂಗಿ ಒಲ್ಲೆ
ನೆಂದರೆ ಬಿಡುವುದೆ ಬಿಂಕತಾಳಿದರಾಗೆ
ಸಂಧೇಹವ ಬಡಿಸಿ ಹೊತ್ತು ಪೋಗಾಡಿಸುವಾ
ನಂದವಲ್ಲದೆ ಗೋವಿಂದಾ ಗೋಪಿಯ ಕಂದಾ
ಮಂದಿರಾದ್ರಿಧರ ವಿಜಯ ವಿಠ್ಠಲ ನಿನ್ನ
ಅಂದಂದದಕ್ಕೆ ಅಂದರೆ ನೆಲೆಗಾಣಿ ೨
ತ್ರಿವಿಡಿತಾಳ
ಜಗದೊಳಗೆನ್ನ ಆಭಾಸಾ ಮಾಡುವ ಬಗೆಯೊ
ನಗೆಗೇಡುಮಾಡಿ ಬಿಡುವ ಬಗಿಯೊ
ರಗಳಿಯ ಎಬ್ಬಿಸಿ ಛೀ ಎನಿಸುವ ಬಗಿಯೊ
ಮಿಗೆ ಪುಣ್ಯಂಗಳೆಲ್ಲಾ ಪೋಗಾಡುವಾ ಬಗಿಯೊ
ಹಗೆಗಳ ಕೈಗೆ ಕೊಡುವ ಬಗಿಯೊ
ಬಿಗಿವಿನಲ್ಲಿಯಿಟ್ಟು ಪಾಪ ಕಟ್ಟುವ ಬಗಿಯೊ
ಯುಗದೊಳು ಅಪಕೀರ್ತಿ ಹೊರಿಪ ಬಗೆಯೊ
ಅಗಣಿತ ಜನುಮದ ಕರ್ಮತೀರುವ ಬಗೆಯೊ
ವಿಗಡ ಪಾಪಕ್ಕೆ ಪೋಗಿನಿಲ್ಲುವ ಬಗೆಯೊ
ಗಗನ ಭೂ ಪೊಂದದೆ ನಡುವೆ ಇಪ್ಪ ಬಗೆಯೊ
ಮಗುವೆ ನಿನ್ನಾಟದ ಗುಣದ ಬಗೆಯೊ
ತೆಗಿಯದೆ ಎನ್ನಿಂದ ನಿತ್ಯ ಮಾಳ್ಪಬಗೆಯೊ
ಖಗ ಮೃಗ ಜನ್ಮ ಕೊಡುವ ಬಗೆಯೊ
ಬಗೆ ಬಗೆ ಜನರಿಂದ ನಿಂದ್ಯೆ ಮಾಡಿಪ ಬಗೆಯೊ
ಸುಗುಣರ ಸಂಗಡ ಇಡುವ ಬಗೆಯೊ
ನಗಧರ ನೀನೆ ಎನ್ನೊಳಗಿದ್ದು ಬಲು ಪೂಜಾ
ದಿಗಳ ಕೈಕೊಂಡು ನಲಿವಾ ಬಗೆಯೊ
ನಿಗಮಾವಳಿಗೆ ಮೈದೋರದ ಮಹಿಮೆ ಎ
ನಗೆ ವಿಚಿತ್ರವಾಗಿ ತೋರುತಿದಕೊ
ನಿಗಳ ಒಂದಿರಲು ಕಡಿದು ಬಿಟ್ಟು ತಿರುಗಿಸಿ
ಸಿಗಗೊಡದಂತೆ ಅನ್ಯರಿಗೆ ಎನಿಸಿ
ಬೆಗಿದಾಡುತಿದ್ದವನ ಹಿಡಿತಂದು ನೂರಾರು
ನಿಗಳ ಹಾಕಿದಂತೆ ಮಾಡಿದೆಲ್ಲ
ಭಗವಂತಾ ನೀನೊಲಿಯೆ ಮನ್ನಣೆ ಮಾಡಿಸುವ
ಬಗೆ ಸಲ್ಲದು ಕಾಣೋ ಎನಗನುದಿನ
ಬೊಗಸೆ ಒಡ್ಡಿಕೊಂಡು ಬೇಡಿಕೊಂಬೆನು ಅ
ನ್ನಿಗ ನಾನಲ್ಲವೊ ನಿನ್ನವರ ದಾಸಾ
ಜಗದೀಶ ವಿಜಯ ವಿಠ್ಠಲರೇಯಾ ನಿನ್ನಂಘ್ರಿ
ಯುಗಳದಲಿ ಮನಸು ಪೊಂದುವ ಬಗೆ ಮಾಡು ೩
ಅಟ್ಟತಾಳ
ತೂಗಿ ಕೊಡುವ ತಕ್ಕಡಿಯಂತೆ ತಿರಿಗುವ
ಜೋಗಿ ಕೈಯ್ಯ ಕಪ್ಪಾರದಂತೆ ಧಾನ್ಯವ
ವೇಗದಲಿ ತುಂದಿ ಕೊಡುವ ಸೊಲ್ಲಿಗೆಯಂತೆ
ಬ್ಯಾಗಡಿ ಹಚ್ಚಿದ ಪಾದರಕ್ಷಿಯಂತೆ
ತ್ಯಾಗದವನ ಕೈಯ್ಯಧನದಂತೆ ಸಂತತ
ಯೋಗಿಯ ಕೈಯ (ಕರದ) ಅಜನದಂತೆ ಆವಾಗ
ರಾಗದವನ ಕೈಯ ತಾಳಮದ್ದಲಿಯಂತೆ
ಮೂಗುದಾಣಿ ಇಟ್ಟ ಎತ್ತಿನಂತೆ
ಆಗರದೊಳಗಿದ್ದ ಉಡುಗವ ಹಿಡಿಯಂತೆ
ಸಾಗರದಲಿ ಇದ್ದ ಉಸಕಿನಂತೆ ಇಪ್ಪ
ಆಗಾಲಿಗೆನ್ನದೆ ಆದ್ಯಂತ ಕಾಲದಿ
ಜಾಗರ ಸ್ವಪ್ನ ಸುಷುಪ್ತಿಯಲ್ಲಿ ನೀನೆ
ಜಾಗು ಮಾಡದೆ ಆವಾವ ಕರ್ಮಗಳನು
ರಾಗದಿಂದಲಿ ಮಾಡಿಸುವ ವಇಹಾದೈವ
ಬಾಗಿಕೊಂಡು ನಿನ್ನ ವಶವಾಗಿ ಇದ್ದು ಲೇ
ಸಾಗಿ ನೀನೊಲಿದಿತ್ತ ಸುಕೃತ ದುಷ್ರ‍ಕತ್ಯಗಳು
ಭೋಗಿಸದಲೆ ಬಿಡದು ಎಲ್ಲಿದ್ದರು
ಆಗಾಮಿ ಸಂಚಿತ ಇದರ ತರುವಾಯ
ನೀಗಗಳೆವ ಪ್ರಾರಬ್ಧಗಳೆಲ್ಲ
ಪೂಗರ್ಭಗಾದರು ತೊಲಗಿ ಪೋಗುವುದೆ
ಭೂಗೋಳದೊಳಗೆನ್ನ ಸಾಧನವೇನಯ್ಯಾ
ಯೋಗಿ ಜನರ ಪ್ರಿಯಾ ವಿಜಯ ವಿಠ್ಠಲರೇಯ

ವಿಜಯ ದಾಸರ ಸುಳಾದಿಗಳಲ್ಲಿ ಅತ್ಯಂತ

೨೫
ಧ್ರುವತಾಳ
ಕಂಕಣಾಕಾರವನ್ನು ಬರೆದು ಅದರ ಮಧ್ಯ
ಓಂಕಾರ ಎರಡು ಎಡ ಬಲದಿ ರಚಿಸಿ
ಶಂಕೆ ಇಲ್ಲದೆ ನಡುವೆ ಘೃಣಿ ಎಂದು ಲಿಪಿಸಿ ಮೀ
ನಾಂಕ ನಯನ ಪೀಠಸ್ಥಳವಿದೆಂದು
ಬಿಂಕದಲಿ ಸ್ವರದೊಳಗೆ ಕಡಿಯಣ ಸ್ವರವೆ ಎರಡಾ
ಲಂಕಾರವನೆ ಮಾಡಿ ಅದರ ಬಳಿಯ
ಕಂಕಣಾಕಾರವನ್ನು ಒಳಗೆ ಮಾಡಿಕೊಂಡು
ಮಂಕು ಮತಿಯ ತೊರೆದು ತ್ರಿಕೋಣ ಸುತ್ತಿಸಿ
ಶ್ರೀಂಕಾರ ಇಚ್ಛಾಶಕ್ತಿ ಕ್ಲಿಂಕಾರ ಕ್ರಿಯಾಶಕ್ತಿ
ಹ್ರೀಂಕಾರ ಜ್ಞಾನಶಕ್ತಿ ಮೂರುಮೂಲಿಗೆ ಬರಿಯೊ
ಪಂಕಜ ಪಾಣಿಯ ಶ್ರೀ ಭೂ ದುರ್ಗಾನಾಮಕಳು
ಪಂಕಜಾಕ್ಷನ ರೂಪ ಮೂರು ಉಂಟು

ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು
ಸಂಕೋಚವಾಗಿ ಇದೆ ದ್ವಿತಿಯ ವಲಯ
ಪಂಕಜ ಮಿತ್ರ ಸೋಮ ಅಗ್ನಿ ಜನರ ನಾಗ
ಕಂಕಣ ಅನಲ ವರುಣದಿಕ್ಕಿಗೆ ರಚಿಸಿ
ಕಿಂಕರ ಜನಪಾಲ ವಿಜಯ ವಿಠ್ಠಲ ಅಕ
ಳಂಕನ ಭಜಿಸುವುದು ಹೃದಯದಲ್ಲಿ ತಿಳಿದು ೧
ಮಟ್ಟತಾಳ
ಕರಿ ಅಜ ರಥ ವೀಧಿ ಎಂದೆಂಬವೆ ಮೂರು
ಬರದು ಇದಕೆ ಹನ್ನೆರಡು ರಾಶಿಗಳ ವಿ
ಸ್ತರವಾಗಿ ಉಂಟು ಎರಡೆರಡೊಂದು ಕಡೆ
ಅರಿವದು ಸ್ಠಿಮಿತ ಸಮಗತಿ ತ್ವರಗತಿ ಸೂರ್ಯನ್ನ
ಎರಡು ನಾಲ್ಕು ಕೋಣೆ ವಿರಚಿಸದರ ಮೇಲೆ
ಮರಳೆ ಮಧು ಮಾಧವ ಕರಸುವ ಋತು ಬಂದು
ಬರೆದು ಪ್ರಣವ ವಿವರ ಹೃದಯದಲ್ಲಿ ನಮ
ಸ್ಕರಿಸು ಜ್ಞಾನಾತ್ಮನೆಂದು
ಧರಿಸು ಈ ಪರಿ ಮೂರು ಎರಡು ಕೋಣೆಯ ಮಧ್ಯ
ತರುವಾಯ ಮಾಸ ಋತು ವರುಷ ತಾರಕ ಸಂ
ಸ್ಮರಿಸಿ ಕ್ರಮ ವರ್ಣ ಹರಿ ಐಶ್ವರ್ಯದಿ
ಪರಮ ಮೂರ್ತಿಗಳನ್ನು ಶಿರಸು ಮೊದಲು ಮಾಡಿ
ಕರತಳ ಪದತನಕ ಚರಿತೆಯ ಕೊಂಡಾಡು
ಗುರುತು ಆರುಕೋಣೆ ಸರಿ ಉಪರಿಭಾಗ
ಎರಡರ ಮಧ್ಯ ವರಣಂಗಳು ಉಂಟು
ಅರಹುದೆ ಪ್ರಥಮದಲ್ಲಿ ಎರಡೆರಡು ನಾಲ್ಕು
೧ ಅ, ಆ, ಕ, ಖ, ಡ, ಢ, ಮ, ಯ
೨ ಇ, ಈ, ಉ, ಊ, ಗ, ಘ, ಣ, ತ, ರ, ಲ
೩ ಸ್ಮರಿಸು ಮೂರನೆ ಮನಿಯಲ್ಲಿರುತಿಪ್ಪಮಾತ್ರ
ಋ, ಈೂ. ಙ, ಚ, ಥ, ದ, ವ, ಶ
೪ ಕರಿಸಿಕೊಂಡವು ಇನಿತು ನಾಲ್ಕನೆ ಸ್ಥಾನದಲಿ
ಎ, ಐ, ಛ, ಜ, ಧ, ನ, ಷ, ಸ
೫ ವರಣಂಗಳು ಗ್ರಹಿಸು ಐದನೆಮನಿಯಲ್ಲಿ
ಒ, ಔ, ಝ, ಞ, ಪ, ಫ, ಹ, ಳ
೬ ನಿರುತ ಇಪ್ಪದು ಕೇಳಿ ಕಡಿಯಣ ಮನಿಯಲ್ಲಿ
ಅಂ, ಆಃ, ಟ, ಠ, ಬ, ಭ, ಕ್ಷ ಬರೆದು
ಈ ಪರಿಯಲ್ಲಿ ಅರುವನಿ ಮಧ್ಯ
ಸರಿ ಇಲ್ಲಿಗೆಎನ್ನಿ ತರುವಾಯ ನಾಲ್ಕು
ಎರಡೂ ವಲಯಾಕಾರ ಎರಡು ಕೋಣೆಯ ಗಣಿತ
ನಿರೀಕ್ಷಿಸಿ ಮನದಲ್ಲಿ ಪರಿಶುದ್ಧನಾಗಿ
ಪರಮ ಪುರುಷ ನಮ್ಮ ವಿಜಯ ವಿಠಲ ಮೂರ್ತಿಯ
ಸ್ಮರಿಸು ಅಜಾದಿಗಳ ನರಸಿಂಹ ಪರಿಯಂತ ೨
ರೂಪಕ ತಾಳ
ಆರು ಕೋಣೆಯ ಮೇಲೆ ವರ್ತುಳಾಕಾರವನ್ನು
ಚಾರುವಾಗಿ ಬರೆದು ಅದರ ಸುತ್ತಲು ಎಂಟು
ವಾರಿಜದಳವನ್ನು ರಚಿಸಿ ರಮ್ಯವಾಗಿ
ಸೌರಿ ಸ್ವರ್ಭಾನು ಗುರು ಬುಧ ಶುಕ್ರ ಚಂದ್ರಮ
ಧಾರುಣಿಸುತ ಕೇತು ಇವರನ್ನ ಮಧ್ಯ
ಹಾರೈಸಿ ಬರೆದು ಇವರಿವರ ಬಳಿಯಲ್ಲಿ ಓಂ
ಕಾರ ಸಹಿತವಾಗಿ ನಮೋನಾರಾಯಣನೆಂಬೊ
ಈರೆರಡು ನಾಲ್ಕು ವರ್ಣಗಳು ಒಂದೊಂದರಲ್ಲಿ
ಆರಾಧಿಸಿ ಬರೆದು ಬೀಜಾಕ್ಷರವೆನ್ನು
ಸಾರವನ್ನು ತಿಳಿ ಎಂಟು ವರ್ಣ ಮಿಳಿತ
ತಾರ ಮಂತ್ರವೆ ಸತ್ಯ ಇದರ ನಿಯಾಮಕ ವಿಶ್ವ
ಮೂರುತಿ ಮೊದಲದ ಅಷ್ಟರೂಪಂಗಳುಂಟು
ಸೌರಿ ರಾಹು ಮಧ್ಯ ಆದಿ ವರ್ಣವೆ ಲಿಪಿಸಿ
ದ್ವಿರಷ್ಟ ಮಾತಾ ವರ್ಗವ ಇದಕೆ ಇಂದಿರಾ
ಮಾರುತ ದೇವನ್ನ ಬರೆದ ಶ್ರುತಿ ಕಾಲಗಳ
ಈ ರೀತಿಯಿಂದಲಿ ವಿಶ್ವನ್ನ ಸ್ಮರಿಸೆ
ಕಾರುಣ್ಯ ಮಾಡುವನು ಮುಂದೆ ಕವರ್ಗ ಉ
ಕಾರ ತೈಜಸ ದೇವನ ಬರೆದು ಕ ವರ್ಗಕ್ಕೆ
ಧಾರುಣಿ ಉದಕಾಗ್ನಿ ವಾಯು ಗಗನ ಭೂತ
ಮೂರೆರಡು ಸ್ಥಾಪಿಸಿ ಅಲ್ಲಿ ಮಾನಿಗಳನ್ನು
ತಾರೇಶ ಸ್ವರ್ಭಾನು ಮಧ್ಯದಲ್ಲಿ ಸಿದ್ಧಾ
ಆ ರೋಹಿಣಿಯ ಗುರು ಈರ್ವರ ನಡುವೆ ಮ
ಕಾರ ಪ್ರಾಜ್ಞ ಮೂರುತಿ ಚವರ್ಗ ಒಂದೊಂದಕೆ
ಈರೆರಡು ಮೇಲೊಂದು ಜ್ಞಾನೇಂದ್ರಿಯಗಳುಂಟು
ವಾರ ವಾರಕೆ ಬಿಡದೆ ತತ್ವೇಶರುಗಳ ವಾಸ
ತೋರುವ ತುರ್ಯ ದೇವನು ಟ ವರ್ಗಕೈದು
ಮೀರದೆ ಕರ್ಮೇಂದ್ರಿಯು ಪಾಣಿ ಪಾದದಿ ಪಂಚ
ಕಾರಣಿಕರಲ್ಲಿ ವಸ್ವಾದಿ ನಿರ್ಜರರೂ
ಸಾರಿರೈ ಬುಧ ಶುಕ್ರ ಅಂತರಾಳದಲಿ ವಿ
ಸ್ತಾರ ಇದನೆ ತಿಳಿದು ಶುಕ್ರ ಚಂದ್ರನ ನಡುವೆ
ಭೋರನ್ನ ಆತ್ಮಾ ಮೂರುತಿ ಬಿಂದು ತ ವರ್ಗ
ಪೂರೈಸು ಪಂಚ ತನ್ಮಾತ್ರಗಳು ಶಬ್ದಾದಿ
ಮಾರುತಗಳೈದು ಪ್ರಾಣಾದಿ ನಾಮದಲ್ಲಿ
ಕಾರಣೆಕರಲ್ಲಿ ವಸ್ವಾದಿ ನಿರ್ಜರರೂ
ಸಾರಿರೈ ಬುಧ ಶುಕ್ರ ಅಂತರಾಳದಲಿ ವಿ
ಸ್ತಾರ ಇದನೆ ತಿಳಿದು ಶುಕ್ರ ಚಂದ್ರನ ನಡುವೆ
ಭೋರನ್ನ ಆತ್ಮಾ ಮೂರುತಿ ಬಿಂದು ತ ವರ್ಗ
ಪೂರೈಸು ಪಂಚ ತನ್ಮಾತ್ರಗಳು ಶಬ್ದಾದಿ
ಮಾರುತಗಳೈದು ಪ್ರಾಣಾದಿ ನಾಮದಲ್ಲಿ
ಸೇರಿ ಕೊಂಡಿಪ್ಪರೈ ಮುಂದೆ ಲಾಲಿಸಿ ಕೇಳಿ
ಗೌರೀಶನ ಶಿರದಲ್ಲಿ ಇಪ್ಪ ಕುಜನ ನಡುವೆ
ಮೂರುತಿ ಅಂತರಾತ್ಮನು ಘೋಷ ಪವರ್ಗ
ಆರನೆ ಮನೆ ಎನ್ನಿ ಇಲ್ಲಿಪ್ಪದು ಅಹಂ
ಕಾರ ಬುದ್ಧಿ ಚಿತ್ತ ಮನಸು ಚೇತನ ತತ್ವ
ಮಾರಾರಿ ಮಿಗಿಲಾದ ದೇವತಿಗಳಕ್ಕು
ಧಾರುಣಿಸುತ ಕೇತು ಇವರ ಮಧ್ಯದಲ್ಲಿ
ಶ್ರೀರಮಣ ಪರಮಾತ್ಮ ಶಾಂತವೆಂಬೋದು ಓಂ
ಕಾರದೊಳಗಿನ ವರ್ಣ ಯ ವರ್ಗ ಚತುರ್ವಿಧಾ
ಆರೊಂದು ಧಾತುಗಳು ತ್ವಕುಚರ್ಮ ರಕ್ತಾದಿ
ವಾರಿಜ ವಿತ್ರನ್ನ ಮುಸುಕುವನ ಶನಿಮಧ್ಯ
ಬೀರುವೆನು ಜ್ಞಾನಾತ್ಮ ಅತಿಶಾಂತ ಶ ವರ್ಗ
ಕ್ಷಾರ ಸತ್ವರಜ ತಮ ತ್ರಯಾವಸ್ಥಿಗಳು
ತಾರ ನಮೋನಾರಾಯಣವೆಂಬೊವೆಂಟು
ಸೌರಿ ಮಿಕ್ಕಾದೆಂಟು ದಳದಲ್ಲಿ ಲಿಖಿಸೋದು
ವಾರಿಜ ಭವನಯ್ಯಾ ವಿಜಯ ವಿಠ್ಠಲರೇಯಾ
ಶರೀರದೊಳಗಿದ್ದು ತನ್ನವಂಗೆ ತಿಳಿಪುವಾ ೩
ಝಂಪೆ ತಾಳ
ಹನ್ನೆರಡು ದಳವುಳ್ಳ ಕಮಲ ವಲಯಾಕಾರ
ಚನ್ನಾಗಿ ಬರೆವುದು ಇದರ ಮೇಲೆ
ಇನ್ನು ಒಂದೊಂದು ದಳದೊಳಗೆ ಲಿಖಿಸಲಿಬೇಕು
ಮುನ್ನಿಪದು ಜ್ಞಾನಿಗಳು ಬಾಲಬೋಧ
ಮುನ್ನಾದಿದ¼ದಲ್ಲಿ ಮೇಷರಾಶಿಯ ಬರೆದು
ಬಿನ್ನಣದಿ ಓಂ ಓಂ ಇದಕೆ ಕೇಶವ ಮೂರ್ತಿ
ಭಿನ್ನ ವರ್ಣಗಳು (ಅ,ಕ,ಡ,ಮ) ವೆಂಬವು ನಾಲ್ಕು
ಇನ್ನಿತು ರಚಿಸಿ ಎರಡನೇ ದಳದಲ್ಲಿ
ಸನ್ನುತಿಸು ವೃಷಭ (ಆ,ಖ,ಢ,ಯ) ಚತರವರ್ಣಗಳು
ಓಂ ನಂ ನಾರಾಯಣ ಮೂರ್ತಿ ನೆನೆದು
ಘನ್ನ ಮೂರನೆಯದಳದಿ ಮಿಥುನ ರಾಶಿಯ ಬಳಿಯ
ವರ್ಣಿಸಿ ಓಂ ಮಾಧವ ದೇವನ್ನ
ಗಣ್ಯ (ಇ,ಗ,ಣ,ರ) ನಾಲ್ಕು ಮಾತ್ರಗಳ ಬರೆದು ನಿಜ
ವೆನ್ನಿ ನಾಲ್ಕನೆದಳಕೆ ಮನಸುಮಾಡಿ
ಪುಣ್ಯವೆ ಉಂಟು ಕರ್ಕರಾಶಿ (ಈ,ಘ,ತ,ಲ)ವನ್ನು
ಓಂ ಭಂ ವರ್ಣ ಗೋವಿಂದನು
ನಿನ್ನೊಳಗೆ ತಿಳಿವದು ಐದನೆ ಪತ್ರದಲ್ಲಿ
ಪೆಣ್ಣುಗಳ ಮಧ್ಯದಾ ಪೆಸರಿನ ರಾಶಿ
(ಉ,ಊ,ಙ,ಥ,ವ) ಓಂ ಗಂ ಇದಕೆ ವಿಷ್ಣು ಮೂರ್ತಿ
ಕನ್ಯಯಲಿ (ಋ,ಋ,ಚ,ದ,ಶ) ಓಂ ವಂ ವರ್ಣ ಮಧುಸೂ
ದನ ದೇವನ ಭಜಿಸು ಷಡ್‍ದಳದಲ್ಲಿ
ಸನ್ಮತ ವಹದು ತುಲರಾಶಿ (ಛ,ಧ,ಷ)ಗಳು
ಇನ್ನು ತ್ರಿವಿಕ್ರಮ ಓಂ ತೇಂ (ಓಷ್ಠ) ಸಪ್ತದಳದಿ
ಮಣ್ಣು ಭಕ್ಷಿಪ ಕ್ರಿಮಿ (ಎ,ಐ,ಜ,ನ,ಸ) ವರ್ಣ
ವನ್ನು ಓಂ ವಾಂ ವಾಮನ ಅಷ್ಟದಳದಿ
ಹೊನ್ನಿನಂಥ ಮಾತು ಧನುರಾಶಿ ಲಿಪಿಸೆ ಸಂ
ಪನ್ನ (ಓ,ಝ,ಪ,ಹ) ಓಂ ಸುಂ ಶ್ರೀಧರ
ಇನ್ನು ನೋಡು ಪತ್ರ ನವಮದಲಿ ಈಪರಿ
ಎನ್ನು ಗ್ರಹಿಸುವುದು ಹತ್ತು ದಳದಿ
ಇನ್ನಿತಾದರು ಸತ್ಯಾಮಕರ (ಜ,ಞ,ಫ,ಳ) ಓಂ ದೇಂ
ಅನಂತರೂಪಾತ್ಮಕ ಹೃಷಿಕೇಶ
ಹನ್ನೊಂದನೆ ದಳದಲ್ಲಿ ಕುಂಭ
(ಅಂ,ಟ,ಭ,ಕ್ಷ) ಓಂ ಎನ್ನುರು ಇದಕೆ ಶ್ರೀ ಪದ್ಮನಾಭ
ಹನ್ನೆರಡು ದಳದಿ ಮೀನ (ಆಃ,ಠ,ಭ) ವರ್ಣ
ಚನ್ನಾಗಿ ರಚಿಸಿ ಓಂ ಯಂ ದಾಮೋದರ
ಹನ್ನೆರಡು ದಳದೊಳಗೆ ಇಷ್ಟೆ ಭಗವದ್ರೂಪ
ಹನ್ನೆರಡು ಮಾತ್ರಕಾ ಕೂಡಿಸಲು
ಓಂ ನಮೋ ಭಗವತೆ ವಾಸುದೇವಾಯ ಪ್ರ
ಸನ್ನ ದೇವನ್ನ ನೋಡಿ ಏಕ ಪಂಚಾಶ
ದ್ವರ್ಣ ಒಂದೊಂದರಲಿ ಹಂಚಿ ಹಾಕಿ
ಹನ್ನೆರಡು ರಾಶಿಗಳ ಬರೆದು ಸ್ತುತಿಸಿ
ಧನ್ಯನಾಗೆಲೊ ಮುಂದೆ ದಳದ ಸಂಧಿಗಳಲ್ಲಿ
ರನ್ನತಾರ ಯೊಗ ಒಂಭತ್ತು ಪದದಂತೆ
ಹನ್ನೆರಡುರಾಶಿಗೆ ವಿಭಾಗಮಾಡಿ
ಪನ್ನಗಶಾಯಿ ಸಿರಿ ವಿಜಯ ವಿಠ್ಠಲನ್ನ ಕಾ
ರುಣ್ಯವನು ಪಡೆದು ಚಿಂತಿಸು ಸುಹೃದಯದೊಳಗೆ ೪
ತ್ರಿವಿಡಿತಾಳ
ದ್ವಾದಶದಳವುಳ್ಳ ಕಮಲದ ಮೇಲೆ
ದ್ವಿದ್ವಾದಶ ಪತ್ರದ ಕಮಲ ಬರೆದು
ಸಾಧಿಸು ಒಂದೊಂದು ದಳದ ಮಧ್ಯದಲ್ಲಿ ವಿ
ನೋದ ಚತುರ ವಿಂಶತಿ ವರ್ಣಂಗಳ
ವೇದ ಮಾತಾ ಮಂತ್ರ ಇದೆ ಎನ್ನು ಕೇಶವ
ಮಾಧವಾದಿ ವರ್ಣ ಮೂರ್ತಿಗಳ
ಪಾದವೆ ಸ್ಮರಿಸುತ್ತ ಮತ್ತೆ ಸೂರ್ಯನ ಗಮನ
ಭೇದದಿಂದಲಿ ತಿಳಿ ನವ ವೀಥಿಯ
ಐದಿಸು ಒಂದೊಂದು ಕಡೆ ಮೂರರ ಪ್ರಕಾರ
ಆದಾವಿಲ್ಲಿಗೆ ತಾರೆ ಇಪ್ಪತ್ತೇಳು
ಐದೇಳು ರಾಶಿಗಳು ಹಂಚಿಹಾಕಲಾಗಿ
ಪಾದ ಪಾದಾರ್ಧ ತ್ರಿಪದವಾಹದು
ಪಾದ ತ್ರಿಮಂತ್ರ ತತ್ಸವಿತುಃ ವರೇಣ್ಯಂಭ
ರ್ಗೋದೇವಸ್ಯ ಧೀಮಹಿ ಧಿಯೋಯೋನಃ ಪ್ರಚೋದಯಾ
ಆದಿ ಮೂರುತಿ ನಮ್ಮ ವಿಜಯ ವಿಠಲನ ಶ್ರೀ
ಪಾದವ ನೆರೆನಂಬು ಓಂಕಾರ ನುಡಿಯುತ್ತಾ ೫
ಅಟ್ಟತಾಳ
ಇದರ ಮೇಲೆ ಏಕ ಪಂಚಾಶದ್ದಳವುಳ್ಳ
ಪದುಮವ ಬರೆದು ಪ್ರದಕ್ಷಿಣಿ ಮಾಡಿ
ಮುದದಿಂದ ದ್ವಿರಷ್ಟ ಮಿಕ್ಕ ಮೂವತ್ತೈದು
ಇದೆ ಇದೆ ದಳದೊಳು ಲಿಪಿಸಿ ಅಜಾದಿಯ
ಒದಗಿ ಸ್ತೋತ್ರವ ಮಾಡು ವರ್ಣದೇವತವೆಂದು
ತುದಿ ಮೊದಲಿದರ ವಿಸ್ತಾರವೆ ಈ ಪರಿ
ಇದೆ ಚಕ್ರಾಂಬುಜವೆಂದು ಕರೆಸುತಿಪ್ಪದು
ಹೃದಯಾಕಾಶ ವಾರಿ ಸ್ಥಂಡಿಲ ಗಗನ ಸೂರ್ಯ
ವಿಧು ಮಂಡಲ ಸಮಸ್ತ ಉತ್ತಮ ಸ್ಥಾನ
ಇದೆ ನಿರ್ಮಾಣ ಮಾಡಿ ಸತ್ಕರ್ಮದಲಿ ನಿತ್ಯ
ಪದೋಪದಿಗೆ ಶ್ರೀ ಹರಿಯ ಧ್ಯಾನ ಮಾಡಲಿ ಬೇಕು

ಭಕ್ತಿಯು ಆಳವಾಗಿ ಒಬ್ಬ ವ್ಯಕ್ತಿ

೨೩
ಝಂಪಿತಾಳ
ಕಂಡ ಕಂಡವರ ಮನೆಯ ದುಷ್ಟಾನ್ನವನು ಬಿಡದೆ
ಉಂಡು ಉಂಡು ಊರು ಸೂಕರನಂದದಿ
ಮಂಡೆಯನು ಬಲಿತು ಮಹಮದ ಸೊಕ್ಕಿ ನಿಲ್ಲದಲೆ
ಮಂಡಲವಾ ಚರಿಸುವಂತೆ ತಿರುಗುವೆ
ಚಂಡವೃತ್ತಿಯಿಂದ ಕಾಲವನು ಕಳೆದ ಉ
ದ್ದಂಡನಾಗಿ ಇಪ್ಪೆ ಧರ್ಮ ತೊರೆದು
ತಂಡ ತಂಡದ ಸುಖವಾಗಬೇಕೆಂದು ಮುಂ
ಕೊಂಡು ಮರುಗುವೆನು ಪುಣ್ಯವನು ಮಾಡದೆ
ಷಂಡಗೆ ಯೌವ್ವನದ ಸುಂದರಿ ದೊರಕಿದಂತೆ
ಬಂಡೆ ಮೇಲೆ ಸ್ವಾತಿ ವೃಷ್ಟಿ ಬಿಡದಾ
ಖಂಡವಾಗಿ ಸುರಿದು ಪೋದಂತೆ ಎನಗೆ ಕೋ
ದಂಡಪಾಣಿಯೆ ಕೇಳು ವಿಪ್ರಜನುಮ
ಗಂಡುಗಲಿ ವೈಷ್ಣವರ ಮತದಲ್ಲಿ ಬಂದರೂ
ದಂಡವಾಗಿದೆ ನೋಡು ವಿಚಾರಿಸೆ
ದಂಡಿ ದಂಡಣೆ ಮಾಡಿ ದಂಡಿಸುವ ಬಗೆ ಕೇಳಿ
ಭಂಡು ಮನ ನಿಲ್ಲದು ಒಂದೆಸೆಯಲ್ಲಿ
ದುಂಡು ಕುಚದ ಬಾಲೆಯರು ಹದಿನಾರು ಸಾವಿರ
ಹೆಂಡರನಾಳಿದನೆಂದು ನಿನ್ನ
ಕೊಂಡಾಡಿ ಲೊಕಗಳು ಪೇಳುವ ಬಗೆ ಎಂತೋ
ಮಂಡಲದೊಳಗೆನಗೆ ನಿಜ ತೋರದು
ಕುಂಡಲಿ ಶಯನ ಎನ್ನೊಬ್ಬನ ಮನಸು ಬಲು
ಅಂಡಲಿ ಪೋಗುವುದು ನಿಲಿಸಗಾಣೆ
ಹಿಂಡು ಮಾತುಗಳ್ಯಾಕೆ ಆರಾದರನುಭವ
ಕಂಡದ್ದಲ್ಲದೆ ಒಪ್ಪಿಕೊಳರು ಜೀಯಾ
ಪುಂಢರೀಕ ವರದ ವಿಜಯ ವಿಠ್ಠಲ ನಿನ್ನ
ತೋಂಡ ನಾನಲ್ಲವೆ ಆವಾದ ಕಾಲಕ್ಕೆ ೧
ಮಟ್ಟತಾಳ
ಭೂಮಿಯೊಳಗೆ ಎನ್ನ ಪುಟ್ಟಿಸಿದ ವಿವಿಧ
ನೀ ಮೆರೆದೆಯೊ ಏನೋ ನೀಸ್ಸೀಮ ಮಹಿಮ
ಕಾಮುಕನಾಗಿವನು ಕಂಡದ್ದು ಅನುಭವಿಸಿ
ತಾಮಸತನದಲ್ಲಿ ಕೆಡಲೆಂಬೋ ಮನಸು
ಪಾಮರ ಮತಿ ಬಿಡಿಸಿ ನಾನಾ ಭೋಜನ ಕೊಟ್ಟು
ಯಾಮ ಯಾಮಕೆ ಪೊರೆವ ಆನಂದದ ಸೊಬಗು
ರೋಮ ರೋಮದಲಿ ಬೊಮ್ಮಾಂಡವಿಟ್ಟ ಸ್ವಾಮಿ ನಿ
ನ್ನಾ ಮಾಯಾ ಎನಗಾವುದು ತಿಳಿವು
ಶ್ರೀ ಮನೋಹರ ನಮ್ಮ ವಿಜಯ ವಿಠ್ಠಲ ನಿನ್ನ
ನಾಮಕೆ ಉಪಹತಿ ಬಾರದಂತೆ ಮಾಡು ೨
ತ್ರಿವಿಡಿ ತಾಳ
ಚಿತ್ತೈಸು ಚಿನ್ಮಯರೂಪ ಭಕ್ತರ ತಾಪ
ಕತ್ತರಿಸುವ ಕರುಣಿ ಕಂಜದಳ ನಯನ
ವಿತ್ತಾದಿಗಳು ನಿನ್ನ ಬೇಡಿಕೊಂಡವನಲ್ಲ
ಎತ್ತಲು ಬಿಡದೆನಗೆ ನಿತ್ಯ ಬೆನ್ನು
ಹತ್ತಿ ಕೊಂಡಿದೆ ನೋಡು ನಾನಾ ಪರಿಯಿಂದ
ಎತ್ತಿ ಹೊರಗೆ ಹಾಕೆ ಪೋಗದಯ್ಯಾ
ಕತ್ತಲೆಯೊಳಗಿರೆ ತನಗೆ ತಾನೆ ದಿವ್ಯ
ವತ್ತಿ ಹಚ್ಚಿಸಿದಂತೆ ಆಗುತಿದಕೊ
ಇತ್ತಲಾಗುವ ಕಾರ್ಯ ನಿನಗರುಹುವುದಿಲ್ಲೊ
ಅತ್ತಲೊಬ್ಬರ ಕೂಡ ಏಕಾಂತವೊ
ಬಿತ್ತಿದ ಬೆಳಸು ಉಂಡಂತೆ ಉಣಲಿ ಬೇಕು
ಸುತ್ತಿ ಸುತ್ತಿ ಬಿಡದೆ ಬಹುಕಾಲವೊ
ಹೊತ್ತೆ ಇದರಿಂದ ಪೋಗಾಡಿದೆನು ಲೇಶ
ಉತ್ತಮ ಮಾರ್ಗವ ಕಾಣದಾದೆ
ಉತ್ತಮ ಲಾಲಿಸು ಇಂಥ ಕರ್ಮ ಏಸಾ
ವರ್ತಿಲಿ ಉಂಟಯ್ಯ ತಿಳಿಯದೆನಗೆ
ಸತ್ಯ ಸಂಕಲ್ಪ ನೀನಹುದೊ ನೀ ಮಾಡಿದ್ದು
ಕಿತ್ತಿ ಬಿಸಾಟಲು ಪೋಗುವುದೆ
ನಿತ್ಯಾನಂದ ನಮ್ಮ ವಿಜಯ ವಿಠ್ಠಲ ನಿನ್ನ
ಭೃತ್ಯನಾದವನಿಗೆ ಭಯವಿಲ್ಲದಿರಬೇಕು ೩
ಅಟ್ಟತಾಳ
ನಿನ್ನ ಪಾದವನ್ನು ನಂಬಿದ ಮಾನವ
ಬನ್ನ ಬಡಲಿಬೇಕು ದಿನ ಪ್ರತಿದಿನದಲ್ಲಿ
ಅನ್ನ ಉದಕ ವಸ್ತ್ರ ಕಾಣದೆ ಇರಬೇಕು
ತನ್ನವರಿಂದ ಛೀ ಅನಿಸಿಕೊಳಲಿಬೇಕು
ಅನ್ಯರಿಂದಲಿ ನಿಂದಿತನಾಗಲಿ ಬೇಕು
ಮುನ್ನೆ ದೇಶಾಂತರ ಸಂಚರಿಸಲಿಬೇಕು
ಬೆನ್ನು ಬಿಡದಲೆ ರೋಗಗಳು ಹತ್ತಿರಬೇಕು
ಇನ್ನಿತಾದರೆ ನಿನ್ನ ಭಕ್ತಿ ದೊರಕುವುದು
ಎನ್ನ ಈ ಪರಿ ಮಾಡದೆಯಿಪ್ಪ ಬಗೆಯೇನು
ಇನ್ನು ಮುಂದೋರದು ಸುಖವೆ ಉಣ್ಣಿಸಿ ಪ್ರ
ಸನ್ನನಾಗದೆ ನರಕಕ್ಕೆ ಹಾಕುವ ಲೀಲ್ಯೊ
ನಿನ್ನ ಮಹಿಮೆ ನೀನೆ ಬಲ್ಲಿಯೊ ಭವದೂರ
ಚನ್ನ ಮಾರುತಿ ರಂಗ ವಿಜಯ ವಿಠ್ಠಲರೇಯ
ಮನ್ನಿಸು ಮುಂದಿನ ಬಿನ್ನಹ ಮಾಡುವೆ ೪
ಆದಿತಾಳ
ಆದರಾಗಲಿ ಎನಗೆ ಈ ಜನುಮದಲಿ ಇದೆ
ಮೋದ ಉಳ್ಳರೆ ತಪ್ಪದು ಕಾಣೊ ಪರಮಾತ್ಮ
ನೀ ದಯದಲಿ ಕೇಳು ಮುಂದೆ ಬಪ್ಪ ಜನುಮದಲಿ
ಭೇದವೆ ಕೊಡು ಕೊಡು ಕೊಡು ಕೊಟ್ಟು ನಿನ್ನ
ಪಾದದಲ್ಲಿ ಮನಸು ಎರಗುವಾನಂದವಿತ್ತು
ಸಾಧನ ಮಾಡಿಸು ಇದಕಿಂತಧಿಕವಾಗಿ
ಆದಿ ಮೂಲವೆ ನಿನ್ನ ಕ್ಲಪ್ತಿ ಎಂಥಾದು ಕಾಣೋ
ಭೇಧಜ್ಞಾನವೆ ಇರಲಿ ಎಂತಾದರಾಗಲಿ
ಶ್ರೀಧರ ಮಾಧವ ಮಧುಸೂದನ
ಈ ದೇಹ ದೇಹಿಯನ್ನು ಕರುಣದಿಂದಲಿ ನಿನ್ನ
ಪಾದೋದಕದಲಿ ತೊಯಿಸು ತೊಯಿಸಯ್ಯಾ
ಸಾಧು ಜನರ ಸಂಗ ಅಂತರಂಗದಲಿ ಕೊಟ್ಟು
ಬಾಧೆ ಪಡಿಸುತಿಪ್ಪ ಕ್ರೋಧರ ತೊಲಗಿಸು
ವೇದ ವೇದಾಂತದೊಡೆಯಾ ವಿಜಯ ವಿಠ್ಠಲರೇಯ
ಆರಾಧನೆ ಆಗಲಿ ಆವಾವ ಭೋಗವೆಲ್ಲ ೫
ಜತೆ
ಹಲವು ಮಾತೇನಯ್ಯಾ ನಿನ್ನಿಚ್ಛೆಯಲ್ಲದೆ
ಹಲುಬಿ ಫಲವಿಲ್ಲ ವಿಜಯ ವಿಠ್ಠಲರೇಯ೬

ಪಂಚೇಂದ್ರಿಯಗಳು ಯಾವಾಗಲೂ ತನ್ನ

೨೪
ಧ್ರುವ ತಾಳ
ಕಂಡ ಸ್ತ್ರೀಯರ ನೋಡಿ ಕಣ್ಣುಗಳು ಸವೆದವು
ಕೊಂಡಿಯನು ಕೇಳಿ ಕಿವಿಗಳು ಸವೆದವು
ಕೊಂಡ ದುರ್ಗಂಧದಲ್ಲಿ ನಾಸಗಳು ಸವೆದವು
ಉಂಡ ದುಷ್ಟಾನ್ನದಲಿ ಜಿಹ್ವೆಗಳು ಸವೆದವು
ಮಿಂಡೆಯರ ತಕ್ಕೈಸಿ ತ್ವಕು ಇಂದ್ರಿಯ ಸವೆದವು
ತಂಡ ತಂಡ ಜನುಮ ಜನುಮಾದಲೀಪರಿ
ಹಿಂಡು ಇಂದ್ರಿಯಂಗಳು ಸವೆದವು ಒಂದೊಂದು ಬಗೆ
ಭಂಡು ಮನ ಸವಿಯಲೊಲ್ಲದೊ ಲಕುಮೇಶ
ಕಂಡ ಕಂಡ ದೆಸೆಗೆ ನಿಲ್ಲದೆ ಓಡುವುದು
ಅಂಡಲಿದು ಜಿಗಿದು ಜಿಗಿದು ಚಿಗರೊಡೆದು
ಮಂಡಲ ವ್ಯಾಪಿಸಿ ಪೋದಲ್ಲೆ ಬೇರಿಳಿದು
ಗಂಡಗಲಿಯಾಗುತಿದೆ ಮಲಿನ ಮನಸು
ದಂಡಣೆ ಮಾಡುವನೆಂದು ನೋಡಿದಡೆ ಆಕಾಶ
ಮಂಡಲ ಮೀರುತಿದೆ ಹಾರುತಿದೆಕೊ
ಶುಂಡಾಲ ಸೊಂಡಿಲವ ತೂಗಿದಂತೆ ಮನಸು
ಕಂಡ ಕಂಡೆಡೆ ತೂಗುತಿದೆ ನಿಲವಿಲ್ಲದೆ
ಕುಂಡಲಿ ಶಯನ ಶ್ರೀ ವಿಜಯ ವಿಠ್ಠಲ ನಿನ್ನ
ಕೊಂಡಾಡೆನೆಂದಡೆ ವಿಷಯಂಗಳು ಬಿಡವು ೧
ಮಟ್ಟತಾಳ
ಧರೆ ಸವೆಯಿತು ಮೇರುಗಿರಿ ಸವೆಯಿತು ಮಹ
ಕರಿ ಮೊದಲಾದ ಸಂಚರ ಸವೆಯಿತು ಸರ್ವ
ಧರಣಿಯನು ಪೊತ್ತು ಉರಗರಾಜರ ದಿವ್ಯ
ಶಿರ ಸವೆಯಿತು ಸೂರ್ಯನ ವರರಥ ಸವೆಯಿತು ಅಂ
ಬರದಲಿ ಹಾರುವ ಗರುಡನ ಗರಿಗಳು
ಇರದೆ ಸವೆದವು ನಿರ್ಜರರ ಗಣ ಮಿಕ್ಕಾದ
ವರಗಾತ್ರಗಳೆಲ್ಲ ಪರಿ ಪರಿಯಿಂದಲಿ ಸವೆದವು ಸವೆದವಯ್ಯ
ಪರಮ ಪುರುಷ ನಮ್ಮ ವಿಜಯ ವಿಠ್ಠಲನ್ನ
ಮರುಳುಗೊಳಿಸುವ ಮನ ಸವಿಯದು ಕಾಣೊ ೨
ತ್ರಿವಿಡಿ ತಾಳ
ಕಾಲ ಪ್ರಕೃತಿಯೆಲ್ಲ ಸವೆದು ಪೋಯಿತು ನೋಡು
ಮೇಲಣ ಲೋಕಗಳು ಸವೆದವು ದಿನಂಪ್ರತಿ
ಏಳು ಶರಧಿ ಮಹ ಜಲ ಧಾರೆಯಿಂದಲಿ
ಏಳುವ ಮನಸಿನ ಚಿತ್ತ ವಿಷಯ
ಮ್ಯಾಲೆ ಮ್ಯಾಲೆ ಬರುವ ಹೊಯ್ಲಿನ ಆರ್ಭಟ
ಧಾಳಿ ಎಣಿಸಾಬಹುದೇ ಮನೊಧಾವಂತೆ
ಆಲಸ ಕಾಣೆನೊ ಪೋಗುವ ಗಮನಕ್ಕೆ
ಪೇಳೆನೆನಲು ಎಣಿಕೆ ದೊರಕದು
ಫಾಲದಲ್ಲಿ ಬರೆದ ಬರಹ ಮುಪ್ಪಾಯಿತು
ಶ್ರೀಲೋಲ ನಿನಂಘ್ರಿ ಭಜನೆ ಕಾಣೆ
ಮೂಲೋಕದೊಳಗಿದ್ದ ದುರ್ವಿಷಯಾಪೇಕ್ಷಿಸಿ
ಕಾಲನ್ನ ಪುರಕೆ ಮುಂದಾಗುತಿದಕೊ
ನೀಲ ಮೇಘಶ್ಯಾಮ ವಿಜಯ ವಿಠ್ಠಲ ನಿನ್ನ
ಆಳುತನವೆಂತೊ ಮನಶುದ್ಧಿಯಿಲ್ಲದಿರೆ ೩
ಅಟ್ಟತಾಳ
ಅರಮಾತ್ರ ಕಾಲದೊಳನಂತ ಯೋಜನ
ತಿರುಗುತಿದೆ ನೋಡು ನಾನಾ ದೇಹದಲ್ಲಿ
ಮರಳೆ ಮರಳೆ ವೃದ್ಧಿ ಅಭಿವೃದ್ಧಿಯಾಗುತ್ತ
ತೆರಳಿ ಪೋಗುವ ಮನಸಿನ ಕಾಲಾ ತಿಳಿಯಾದು
ನಿರುತ ಸ್ನಾನ ಸಂಧ್ಯೆ ಜಪತಪ ಮಿಗಿಲಾದ
ಪರಿಪರಿ ಕರ್ಮ ಚರಿಸಲು ಫಲವಿಲ್ಲ
ಬರಿದೆ ಎನಿಸುತಿದೆ ಆವಾವ ಕಾಲಕ್ಕೆ
ಪರಮ ಪುರುಷ ನಮ್ಮ ವಿಜಯ ವಿಠ್ಠಲ ನಿನ್ನ
ಚರಣದಲ್ಲಿ ಮನಸು ಎರಗದೊ ಲೇಶಮಾತ್ರ ೪
ಆದಿತಾಳ
ಸುತ್ತ ಕಾವಲಿ ಮಹ ನಿರ್ಬಂಧದೊಳು ಕ-
ಗ್ಗತ್ತಲೆ ಯಾಗಿದ್ದ ಅಂತಃಪುರದ ಮಧ್ಯ
ಹತ್ತು ದಿಕ್ಕಿನಲ್ಲಿ ಈಕ್ಷಿಸುವ ಸಂದಣಿ
ಹತ್ತಿಲಿ ಇರಲಾಗಿ ಅಲ್ಲಿದ್ದ ನಾರಿ ಪೋಗಿ
ನಿತ್ಯ ಉಪಪತಿಗಳ ಕೂಡ ಕ್ರೀಡಿಸುವಂತೆ ದೇವ
ತತ್ವೇಶರು ಸರ್ವದನಿತು ವಾಸವಾಗಿ
ಉತ್ತಮ ಗುಣದಲ್ಲಿ ಇರಲಾಗಿ ಎನ್ನ ಮನಸು
ಈತೆರದಲಿ ಪೋಗಿ ಹೊರಗೆ ಚರಿಸುತಿದೆ
ಹೊತ್ತು ಹೊತ್ತಿಗೆ ಇಂತು ಆಗುವದನಂತವೊ
ಅತಿಶಯವೇನೊ ನಿನ್ನ ಚರಣ ಸೇವೆ
ಸತ್ಯ ಸಂಕಲ್ಪ ಸಿರಿ ವಿಜಯ ವಿಠ್ಠಲ ಎನ್ನ
ಪೆತ್ತ ಜನಕ ನೀನೆ ಉದ್ಧಾರ ಮಾಡುವ ಜೀಯಾ ೫
ಜತೆ
ನಮಿಸಿ ಬೇಡುವೆ ಸತತ ಮನ ನಿರ್ಮಳ ಮಾಡು
ಮಮತೆಯ ಬಿಡಿಸು ಭವದಲ್ಲಿ ವಿಜಯ ವಿಠ್ಠಲ ೬

ಘನಪೂಜಾ ಬಗೆಯನ್ನು ರು ಈ ಸುಳಾದಿಯಲ್ಲಿ

೩೭
ಧ್ರುವತಾಳ
ಕಂಡಲ್ಲಿ ನಿಂದಲ್ಲಿ ಕುಳಿತಲ್ಲಿ ಪೋಗುವಲ್ಲಿ
ಮಂಡಲವೆಲ್ಲ ತಿರುಗಿ ಬರುವುದರಲ್ಲಿ
ಮಂಡೆ ಬಾಗಿ ನಿತ್ಯ ನಡುವಿಲ್ಲಿ ಓಡುವಲ್ಲಿ
ಅಂಡುಗೊಂಡಿದಲ್ಲಿ ಆಲಿಸಿಕೇಳುವಲ್ಲಿ
ಅಂಡಲಿಯದೆ ಸುಮ್ಮನಿಹದಲ್ಲಿ
ತಂಡ ತಂಡದಲಾಟ ಆಡುವಲ್ಲಿ ಅನೇಕ
ತೋಂಡಠ ಸಂಗಡ ತೊಲಗದಲ್ಲೀ
ಕಂಡ ಕಂಡ ಕಡೆ ನೋಡುವಲ್ಲಿ ಇಳಿವಲ್ಲಿ
ಚಂಡವೃತ್ತಿಯಿಂದ ಬಾಳುತ್ತಿರಲಿ
ಪುಂಡರೀಕಾಕ್ಷನು ಬೆಂಬಿಡದಲೆ ಹೊತ್ತು
ಕೊಂಡು ಬಂದಿಪ್ಪನು ಒಡನೊಡನೇ
ಅಂಡಿಲಿ ಇದ್ದು ನಾನಾ ನಾಮಾಮೃತವನ್ನು
ಉಂಡಾದಲ್ಲದೆ ಬಿಡ ಉನ್ನತವಾಗಿ ಒಳಿಲು
ಹಿಂಡಿನೊಳಗಿದ್ದರು ಹಿತವೆನಿಸೀ
ಭಂಡದೊಳಗಾಡಿಸಿ ವಿಜಯ ವಿಠ್ಠಲರೇಯಾ
ಖಂಡವಾಗಿ ದಾಸರ ಭಾರವೊಹಿಸಿ ಪೊರೆವಾ ೧
ಮಟ್ಟತಾಳ
ಒಂದೊಂದು ವಿಷಯಂಗಳೊಂದೊಂದದಿಷ್ಠಾನ
ಒಂದೊಂದು ಸರಿಯಲಿ ಒಂದಕ್ಕನಂತಾ
ಕುಂದದೆ ಶತಮಾಡಿ ಚಂದ ಚಂದದಲಿಂದ
ಮುಂದುಗೆಡಿಸುವಸಂಥ ಮಂದಮತಿಗೆ ಬಲು
ನಂದವಾಗಿ ಇರಲು ಇಂದೊಂದು ಎನಗೆ
ದ್ವಂದ್ವವ ತಿಳಿಯದಲೆ ಸಂಧಿಯಾಗುವ ಕರ್ಮ
ವೃಂದಕೆ ಹರಿತಾನೆ ನಿಂದು ನಿತ್ಯದಿ ಸಂ
ಬಂಧ ಮಾಡಿಸುವ ಏನೆಂದು ಪೇಳಲಿ ಚಿತ್ರಾ
ನಂದ ಮೂರುತಿ ರಂಗ ವಿಜಯ ವಿಠ್ಠಲರೇಯ
ತಂದುಕೊಡುವ ನಮಗೆ ಒಂದೊಂದು ವಿಧಗಳನೂ ೨
ತ್ರಿವಿಡಿತಾಳ
ನಾನಾ ಸುಖವಬಡು ಹರಿಯನ್ನೆ ಪೂಜಿಸಿ
ನಾನಾ ದು:ಖವಕಳಿ ಹರಿಯನ್ನೆ ಕೊಂಡಾಡಿ
ನಾನಾ ನಂದವ ಧರಿಸು ಹರಿಯನ್ನೆ ಮೆಚ್ಚಿಸಿ
ನಾನಾ ಚೇಷ್ಟಯಮಾಡು ಸಂತರೊಡನೆ
ಜ್ಞಾನದಿಂದಲಿ ನಿತ್ಯ ಎಲ್ಲೆಲ್ಲಿ ನೋಡಿದರು
ಶ್ರೀನಿವಾಸ ಮೂರ್ತಿಯ ಚಿಂತಿಸು
ಕಾನನ ಮಿಕ್ಕಾದ ಪ್ರಪಂಚದಲಿ ಇರೆ
ತಾನೆ ತೋರುತಲಿಪ್ಪ ಮುಂದೊಲಿದೂ
ಧ್ಯಾನಕೆ ಪೊಳೆವನು ಅಡಿಗಡಿಗೆ ನಿನಗೆ
ಹೀನಾಯ ಬರಗೊಡ ಬಲುಜೀವನೂ
ಕಾಣಿಸಿಕೊಂಬನು ಕಂಡಠಾವಿನಲಿ
ನಾನೇನೆಂಬೆ ಹರಿಯೆ ಸುಕರುಣತನಕೆ
ಆನಂದ ಮಯನಾದ ವಿಜಯ ವಿಠ್ಠಲರೇಯ
ಗಾನಕೆ ಪ್ರೀಯನು ಕಲಿಯುಗದಲಿ ಸಿದ್ದ ೩
ಅಟ್ಟತಾಳ
ಚಿಂತಿಸು ಈ ಪರಿ ಹಗಲು ಇರುಳು ನೀನು
ಭ್ರಾಂತಿಗೊಳ್ಳದಲೆ ಭಕ್ತೇಕದಲಿ ಸರ್ವ
ಸಂತೋಷದಲಿ ಜಡಜೀವ ಈರ್ವಗೆ ಇನ್ನು
ಸಂತತ ಗುಣಿಸು ಬೊಮ್ಮನ ಮೊದಲ ತೃಣ
ಜಂತುಗಳು ಕಡೆ ಆಮೇಲೆ ಜಡಸಂಖ್ಯೆ
ಯಂ ತಿಳಿ ಪ್ರಥ್ವಿ ಪರಮಾಣು ವಿಡಿದು ಕಾ
ಲಾಂತ ಪ್ರಕೃತಿಯನ್ನು ಪ್ರಾರಂಭವನ್ನು ಮಾಡಿ
ಕಂತುಪಿತನು ತಾನೆ ಇತ್ತಂಡದಲಿ ತನ್ನ
ಕಾಂತಿಯೊಡನೆ ವಾಸವಾಗಿ ಒಂದೊಂದಾ
ನಂತ ರೂಪಗಳಾಗಿ ಆನೇಕ ಬಗೆಯಿಂದ
ನಿಂತು ಕುಳಿತು ಪವಡಿಸಿ ಆಡುತಿಪ್ಪನು
ಇಂತು ತಿಳಿಕೊಂಡು ಬಗೆ ಬಗೆ ವಿಷಯಂಗ
ಳಂತವಿಲ್ಲದೆ ಜ್ಞಾನಿ ಅನುಭವಿಸಲು ಆವ
ಎಂತು ಕರ್ಮಗಳು ಲೇಪನವಾಗೋವು
ಸಂತಾಪಹರ ನಮ್ಮ ವಿಜಯ ವಿಠ್ಠಲನಂಘ್ರಿ
ಚಿಂತೆಯಲ್ಲಿ ಎಲ್ಲೆಲ್ಲಿ ಇದ್ದವ ಬಲು ಧನ್ಯ ೪
ಆದಿತಾಳ
ಅಡವಿಯಲ್ಲಿ ಆನೆಯಲ್ಲಿ, ಗಿಡದಲ್ಲಿ ಗಿಳಿಯಲ್ಲಿ
ಕೊಡದಲ್ಲಿ ಕೊಡೆಯಲ್ಲಿ, ಗುಡಿಯಲ್ಲಿ ಗುಡ್ಡದಲ್ಲಿ
ಜಡದಲ್ಲಿ ಚೇತನದಲ್ಲಿ, ಧಡದಲ್ಲಿ ಧರೆಯಲ್ಲಿ
ಗಡಿಯಲ್ಲಿ ಗಣಿಯಲ್ಲಿ, ಅಡಿಯಲ್ಲಿ ಆಳತೆಯಲ್ಲಿ
ಮಡಿಯಲ್ಲಿ ಮನೆಯಲ್ಲಿ, ಮುಡಿಯಲ್ಲಿ ಮುಳ್ಳಿನಲ್ಲಿ
ಎಡೆಯಲ್ಲಿ ಯಾಗದಲ್ಲಿ, ಕುಡಿಯಲ್ಲಿ ಕುರಿಯಲ್ಲಿ
ತಡೆಯಲ್ಲಿ ತಾಳದಲ್ಲಿ, ಕಡಲಲ್ಲಿ ಕಾಂತಿಯಲ್ಲಿ
ಹಡಗದಲ್ಲಿ ಹಳಿಯಲ್ಲಿ, ಫಡೆಯಲ್ಲಿ ಪಟ್ಟಣದಲ್ಲಿ
¥ಡಿಯಲ್ಲಿ ಪಂಥದಲ್ಲಿ ಒಡಿಮೆವಲ್ಲಿ ವಾಜಿಯಲ್ಲಿ
ಪೊಡವಿಯೊಳಗೆ ಕಂಡ ಕಡಿಯಲ್ಲಿ ಕಾಣದಲ್ಲಿ
ಎಡೆಬಿಡದೆ ಈ ಮನಸು ಅಡಿಮೇಲಾಗಿ ಪೋದಲ್ಲಿ
ನುಡಿ ಮತ್ತೆ ನುಡಿಮಾಡಿ ದೃಡವಾಗಿ ಅಲ್ಲಲ್ಲಿ
ನುಡಿಪ್ರಕಾರ ನಿಬಿಡಮಾಗಿ ಇಪ್ಪರೆಂದು
ಅಡಿಗಡಿಗೆ ತಿಳಕೊಂಡು ಕಡುಕೃತಾರ್ನಾಗೊ
ಪಡಿಯಿಲ್ಲದ ದೈವ ವಿಜಯ ವಿಠ್ಠಲ ಹರಿಯಾ
ಒಡನೊಡನೆ ನೆನಿಸುವದು ಒಡಲೊಳು ಗುಣಿಸುತ್ತ ೫
ಜತೆ
ಘನಪೂಜೆ ಇದು ಕಾಣೊ ಆಲೋಚಿಸಿ ನೋಡು
ಗುಣತೀ ವಿಜಯ ವಿಠ್ಠಲನ ಪಾದದಲ್ಲಿರು ೬

ತಿರುಪತಿಯಲ್ಲಿ ಪ್ರತಿವರ್ಷ ನವರಾತ್ರಿಯಲ್ಲಿ

೪೨. ತಿರುಪತಿ
ರಾಗ:ಕಲ್ಯಾಣಿ
ಧ್ರುವತಾಳ
ಕಂಡೆಕರುಣಾ[ಕ]ರನ ಕಣ್ಣಾರೆ ಮನದಣಿಯೆ |
ಮಂಡೆಯಲಿ ಮಕುಟ ಝಗಝಗಿಸುತಿರೆ ಬಲು ಕರ್ನಾ |
ಕುಂಡಲದ ಬೆಳಗು ಕುಂದದೆ ಶೋಭಿಸೆ ಎರಡು |
ಗಂಡ ಸ್ಥಳದಲ್ಲಿ ಮಿಂಚುವ ನಯನನಾಸ |
ಚಂಡ ಪ್ರಕಾಶ ಅಳಿಗುರುಳು [ನೊ]ಸಲಲಿ ತಿಲುಕ |
ತಂಡತಂಡದ ದಂತ ಅಧರ ಕೊರಳಲಿ ತುಲಸಿ |
ದಂಡೆ ಕೌಸ್ತುಭಮಣಿ ಉರದ ಸಿರಿವತ್ಸವು |
ದಂಡ ಬಲು ಪದಕ ಮುತ್ತಿನ ಸರ ರೇಶಿಮೆ |
ಗೊಂಡೆ ತೋಳಲಿ ವಪ್ಪೆ ಚತುರ್ಭುಜದ ಚನ್ನಿಗ |
ದುಂಡುಮಲ್ಲಿಗೆ ಉಳಿದ ಪೂವಾದಿಗಳು ಎಸೆಯೆ |
ತೋಂಡರಿಗೆ ಬಿಡದೀವ ಅಭಯಕರ ಶಂಖಚಕ್ರ |
ಗಂಡುಗಲಿ ಕಟಿಕರ ಘನವುಡಗೆ ಶೃಂಗಾರ |
ಡಂಡಣದ ಘಂಟೆ ಕಿಂಕಿಣಿ ಜಾನು ಜಂಘೆ ವೀರ |
ಪೆಂಡೆ ಪಡದಂದಿಗೆ ಛಂದವಾದದು ಕಂಡೆ |
ತೊಂಡಿಗೆ ಗತಿಯನಿತ್ತ ವೆಂಕಟ ವಿಜಯವಿಠಲ |
ಕುಂಡಲಗಿರಿವಾಸ ತಿರುವೆಂಗಳೇಶ ೧
ಮಟ್ಟತಾಳ
ಗರುಡ ವಿಶ್ವಕ್ಸೇನ ವರ ಸುದರುಶನ |
ಪರಮ ಪುರುಷನ ಎದುರಿಲಿ ಚತುರಬೀದಿ |
ಮೆರೆವುತಲಿ ಸುತ್ತ ಬರುವುದು ನಾನಾ |
ಪರಿವಾರ ಕೂಡ ಭರದಿಂದಲಿ ಕಂಡು ದುರಿತ ದೂರನಾದೆ |
ಉರಗಗಿರಿಯ ಶ್ರೀನಿವಾಸ ವಿಜಯವಿಠಲ |
ಪರಿಪರಿ ವೈಭೋಗದರಸೆ ಪರಬೊಮ್ಮಾ ೨
ತ್ರಿವಿಡಿತಾಳ
ಇಂದು ಧ್ವಜಾರೋಹಣವೆಂದು ತಿಳಿದು ವನಜ |
ನಂದನ ಇಂದುಶೇಖರ ನಿರ್ಜರ |
ಸಂದೋಹ ಸನಕಸನಂದಮುನಿ ನಾ |
ರಂದ ತುಂಬರ ಗಂಧರ್ವಸೊಬಗತಿ |
ಚಂದದಿಂದಲೊಪ್ಪುವ ಅಂದವಾದನಾರೇರು |
ಮಂದಿಮಾಗಧರು ನಿಸ್ಸಂದೇಹವಿಲ್ಲದೆ |
ನಿಂದೆಡ ಬಲದಲ್ಲಿ ಒಂದೆ ದೈವಾವೆಂದು |
ವಂದಿಸಿ ತಮ್ಮ ತಮ್ಮಗಂದವಾಗಿ ಪೊಗಳೆ |
ಚಂದಿರವದನ ತಿರ್ಮಲ ವಿಜಯವಿಠಲ |
ತುಂದಿಯಿಂದಲಿ ನೆನಿಯೆ ಅಂದ ವರವನೀವ ೩
ಅಟ್ಟತಾಳ
ಎಲ್ಲೆಲ್ಲಿ ನೋಡಿದರಲ್ಲಿ ಇದರ ಸರಿ |
ಎಲ್ಲ ನಿಧಿಗಳಿಗೆ ಬಲ್ಲಿದ ನಿಧಿಯೆನ್ನಿ |
ಬಲ್ಲವನಾಗಿದ್ದು ನಿಲ್ಲದೊಂದೆ ಸಾರೆ |
ಸಲ್ಲಲಿತ ಮನದಲ್ಲಿ ಯಾತ್ರೆಮಾಡೆ |
ಸಲ್ಲಾನು ನರಕಕ್ಕೆ ಎಲ್ಲಾ ಜನ್ಮದ ಪಾಪ |
ತಲ್ಲಣಿಸಿ ಎದ್ದು ನಿಲ್ಲದೆ ಓಡೋವು |
ಎಳ್ಳನಿತರ್ಪಿತ ಸೊಲ್ಲಿನಿಂದಲಿ ಎನೆ |
ಸಲ್ಲಿಸಿ ಈ ಮಾತ ವಿಜಯವಿಠಲ ಸಿರಿ |
ವಲ್ಲಭ ತಿರುವೆಂಗಳೆಲ್ಲೆಲ್ಲಿ ನಲಿವಾ ೪
ಆದಿತಾಳ
ಶ್ರೀನಿವಾಸನ ಕ್ಷೇತ್ರ ಅನಿರ್ಜರರು ಎಣಿಸಿ |
ಕಾಣಾರು ಎಣಿಕೆ ಗಣನೆ |
ಕ್ಷೋಣಿಯೆಳಗುಳ್ಳ ನಿಧಿಗೆ |
ಮಾಣಿಕವಾಗಿದ್ದು ಮೆರದು |
ಧ್ಯಾನಮಾಡಿದವನ ಮಾತಿಗೆ |
ನಾನಿಲುಕ ತಿಪ್ಪದೈಯ್ಯಾ |
ವಾಣಿಯರಸ ಜನಕ ತಿಮ್ಮಾ ವಿಜಯವಿಠಲ್ಲಾರತುನ |
ತಾನು ತಿರುಗಿದ ಫಲವನೀವನು ಮನ್ನಿಸಲೂ ೫
ಜತೆ
ದಿಲೀಪ ವರದ ಪನ್ನಂಗ ಮಹಿಧರಾಧೀಶ |
ಲೋಲಾ ವಿಜಯವಿಠಲ ತಿಮ್ಮರಾಯನ ಕಂಡೆ ೬

ಭಕ್ತರಾದವರು ತಮ್ಮ ಬದುಕಿನಲ್ಲಿ

೩೮
ಧ್ರುವತಾಳ
ಕಂತುತಾತನ್ನ ಭಜಕರಾನಂದವನಧಿಯೊಳು
ಸಂತತ ಮಗ್ನರಾಗಿ ಇಪ್ಪರಯ್ಯಾ
ನಿಂತಲ್ಲಿ ಕುಳಿತಲ್ಲಿ ನಾನಾ ವ್ಯಾಪಾರದಲ್ಲಿ
ಚಿಂತಿಸುವರು ಹರಿಯ ವ್ಯಾಪ್ತಿಯನ್ನು
ಅಂತರಂಗದಲ್ಲಿ ಅಜ್ಞಾತ ಕಾಲದಲ್ಲಿ
ಅಂತು ಇಲ್ಲದಲೆ ನಿಸ್ಸಂಗದೀ
ಎಂತು ಪೇಳಲಿ ಅವರ ಉತೃಷ್ಟ ಸೌಭಾಗ್ಯ
ನಂತಕಲ್ಪಕೆ ಲೇಶ ಕಡಿಮೆ ಇಲ್ಲ
ಸಂತಾಪವೆಂಬೋದೆ ಮುಟ್ಟಲಂಜುವುದು ಏ
ಕಾಂತಿಗಳಾಗಿ ಸಂಚರಿಸುವರು
ಭ್ರಾಂತಿಗೊಳ್ಳರು ನಾನಾ ವಿಪತ್ತು ಬಂದರೂ
ಸಂತೋಷದಲ್ಲಿಪ್ಪರು ಭಯವಿಲ್ಲದೆ
ಗ್ರಂಥಿ ಬಿಡಿಸಿಕೊಂಬ ಉಪಾಯ ಆವಾಗ
ಚಿಂತಿಸುವರು ಗುಪ್ತದಲ್ಲಿ ಮನದಿ
ದಂತಿ ಪೋದಂತೆ ಪೋಗುವರೆಂದು ಪೇಳೆ ಸಣ್ಣ
ಪಂಥದಲಿ ಆನೆ ತಿರುಗುವುದೆ
ಇಂತು ಗ್ರಹಿಸಬೇಕು ಧಾರುಣೀಯೊಳಗಿದ್ದ
ಸಂತರು ಸ್ವಲ್ಪು ಬೀದಿ ಮುಟ್ಟುವುರೇ
ಮುಂತೆ ಮುಂತಾಗಿ ಶೋಭಾನ ಮಾರ್ಗದಲ್ಲಿ ನಿ
ರಂತರ ಚರಿಸುವುದು ನಿವ್ರ್ಯಾಜ್ಯದಿ
ಮಂತ್ರ ಮಂಗಳ ಕರ್ಮ ಗುಣರೂಪ ಕ್ರಿಯ ಭೇದ
ತಂತುಗಳಿಗೆ ಹರಿ ನಿಯಾಮಕ
ಅಂಥದೆ ಹರಿ ಇಚ್ಛೆ ಸ್ವರೂಪ ಭೂತವೆನ್ನಿ
ಎಂತವರೊಳಗಂಥ ಪ್ರೇರಣೆಯಿಂದ
ಅಂತರಾತ್ಮಕನಾಗಿ ನಡಿಸುವನೆಂದು ಸುಧಾ
ಗ್ರಂಥ ಅನುಸರಿಸಿ ತಿಳಿದಿಪ್ಪರೂ
ವಂತು ವಶಗಳಿಲ್ಲಾ ಅವರವರ ಯೋಗ್ಯತೆ
ಯಂತೆ ನಡಿಸುವ ಸ್ವಾಮಿ ಎಂದೂ
ಶಾಂತ ಮೂರುತಿ ನಮ್ಮ ವಿಜಯ ವಿಠ್ಠಲನ್ನ ನಿ
ಶ್ಚಿಂತವಾಗಿ ಧ್ಯಾನ ಮಾಳ್ಪರು ಹೃದಯದಲ್ಲಿ ೧
ಮಟ್ಟತಾಳ
ಹರಿ ಇಚ್ಛೆಯಿಂದ ಬಂದದ್ದು ಅನುಭವಿಸಿ
ಚರಿಸುವರು ಕ್ಲೇಶ ತೋಷ ಹಚ್ಚಿಕೊಳ್ಳದೆ
ಗುರುಹಿರಿಯರು ತಿಳಿದು ಅರುಹಿದ ಉಪದೇಶ
ತರತಮ್ಯ ಭಾವದಿಂದ ಎಣಿಸಿ ಗುಣಿಸುವರು
ಕುರುಹು ಬಿಡರು ತಾವು ನಿರೀಕ್ಷಿಪ ಸ್ಥಾನದಲ್ಲಿ
ಇರುಳು ಹಗಲು ಅಲ್ಲೆ ಯೋಚಿಸುವರು ನಲಿದು
ಕರುಣಾಕರನಾದ ವಿಜಯ ವಿಠ್ಠಲರೇಯನ
ಸ್ಮರಿಸುವರು ತಮ್ಮ ಮನಸು ಪೋದ ಕಡಿಗೆ ೨
ತ್ರಿವಿಡಿ ತಾಳ
ಇಂದ್ರಿಯಗಳಿಗೆ ವಿಷಯಂಗಳೆರಡಕ್ಕೆ ಸಂ
ಬಂಧವಾಗುವಲ್ಲಿ ನಿತ್ಯಾನಿತ್ಯ
ಇಂದಿರೆ ಅರಸ ಬೊಮ್ಮಾದ್ಯರ ಸಹಿತ ಬಲು
ಮಂದಿ ತಾತ್ವಿಕರಲ್ಲಿ ತೊಲಗದಲೇ
ಪೊಂದಿಕೊಂಡಿಪ್ಪರು ಮೂರು ಬಗೆಯಲ್ಲಿ
ಸಂದೇಹವಿಲ್ಲವೋ ನುಡಿಸಿದ್ದವೊ
ಎಂದೆಂದಿಗೆ ತತ್ತಸ್ಥಾನದಲ್ಲಿದ್ದವರಾ
ದ್ವಂದ್ವಾರಹಿತರಾಗಿ ಏಕಾವೆಂದು
ಹಿಂದು ಪೋಗದಲೆ ಚಿಂತಿಸಿದವರ ಬಲುಜ್ಞಾನಿ
ನಂತವಾಗಿ ಇಪ್ಪ ಎಲ್ಲಿದ್ದರೂ
ಸಿಂಧುಶಯನ ನಮ್ಮ ವಿಜಯ ವಿಠ್ಠಲರೇಯನ
ವಂದಿಸುವ ಜನರಿಗೆ ಪ್ರತಿಬಂಧಕ ವಿಲ್ಲಾ ೩
ಅಟ್ಟತಾಳ
ತುಂಬಿದ ಕೊಡ ತುಳುಕವದೇನೊ ಮರುಳಾ
ಅಂಬುಜನಾಭನ ನಂಬಿದವರ ಜ್ಞಾನ
ಇಂಬುಕೊಡದು ಕಾಣೊ ಪಾಪದ ಮಾರ್ಗಕೆ
ಕೊಂಬೆ ಇದ್ದುನ್ನತ ಕೊಂಬೆಗೇರಿದಂತೆ
ಹಂಬಲಿಸುವುದು ಗತಿಸಾಧನವನ್ನು
ಪೊಂಬೊಟ್ಟಿ ಕೆಸರೊಳು ಬಿದ್ದರಾಗದರ
ಗಂಭೀರ ಬೆಲೆ ಕೊರತೆಯಾಗುವುದೇ
ಕಂಬು ಚಕ್ರಾಂಕಿತ ವಿಜಯ ವಿಠ್ಠಲರೇಯನ
ಅಂಬರಂಬರದಲಿ ಕಾಣು ಮಾನವ ಮಾಣು ೪
ಆದಿತಾಳ
ಜ್ಞಾನಿಯಾದವನಿಗೆ ಕರ್ತೃತ್ವವೆಂಬೊದಿದೆ
ಶ್ರೀನಾಥ ಮಾಡಿಸಿದ ವ್ಯಾಪಾರ ತರುವಾಯ
ತಾನದು ತಿಳಿವುದು ಇಷ್ಟೆಮಾತುರ ಉಂಟು
ಏನೆಂಬೆ ಇದಕ್ಕಿಂತ ಆಧಿಕ ಮತ್ತಾವದು ಕಾಣೆ
ಆನಂದ ಮತಿಕೊಡುವ ವಿಜಯ ವಿಠ್ಠಲ
ತಾನೆ ಪರಿ ಪಾಲಿಸುವ ಆತನ ಪ್ರೇರಣೆಯಿಂದ
ನಿತ್ಯ ತಿಳಿಯೋ ೫
ಜತೆ
ಆವಾಗ ಹರಿಲೀಲೆ ಕೊಂಡಾಡಿ ಜನರು
ದೇವೇಶ ವಿಜಯ ವಿಠ್ಠಲನಂತೆ ನಡೆದರೂ ೬

ಮುಖ್ಯಪ್ರಾಣದೇವರು ಭೂಲೋಕದಲ್ಲಿ ಹನುಮ,

೧೫೧
ಧ್ರುವತಾಳ
ಕಡಗ ಕಂಕಣದಿಂದ ಶೋಭಿತವಾದ ಹಸ್ತಾ
ಪೊಡವಿಪತಿ ರಘುನಾಥಗೆ ಎರಗಿ ಮುಗಿದ ಹಸ್ತಾ
ಒಡನೆ ಕುರಹುಗೊಂಡು ಸೀತೆಗಿತ್ತ ಹಸ್ತಾ
ಗಿಡಗಳು ಮುರಿದು ತರಿದಂಥದೀ ಹಸ್ತಾ
ಘುಡಿಘುಡಿಸುತ ಅಕ್ಷನ ಸದೆಬಡದ ಹಸ್ತಾ
ಜಡರಾವಣನ ಎದೆಯಲ್ಲಿ ಗುದ್ದಿದ ಹಸ್ತಾ
ತಡಿಯದೆ ಚೂಡಾಮಣಿಯ ಒಡೆಯಾಗಿತ್ತ ಹಸ್ತಾ
ಕಡು ಪರಾಕ್ರಮದ ಹಸ್ತಾ
ಕಡಲಾ ಬಂಧಿಸಲು ಗಿರಿಗಳ ತಂದ ಹಸ್ತಾ
ಬಿಡದೆ ಪೂಜಿಪರಿಗೆ ಅಭಯಕೊಡುವ ಹಸ್ತಾ
ಸಡಗರದ ದೈವ ಸಿರಿ ವಿಜಯ ವಿಠ್ಠಲರಾಮನ
ಅಡಿಗಳಲ್ಲಿ ಅನುಗಾಲ ಇಟ್ಟ ಹಸ್ತಾ ೧
ಮಟ್ಟತಾಳ
ಗದೆಯಿಂದ ಅರಿಗಳ ಸದೆ ಬಡೆದ ಹಸ್ತಾ
ಮುದದಿಂದಲಿ ಅದ್ರಿವೊದಗಿ ತಂದ ಹಸ್ತಾ
ಕದನದೊಳಗೆ ಮಾಗಧನ ಸೀಳಿದ ಹಸ್ತಾ
ಮದನೃಪನನುಜನ ಉರವ ಬಗೆದ ಹಸ್ತಾ
ಸುದತಿಯ ತುರುಬು ತಿದ್ದಿದ ಕರುಣ ಹಸ್ತಾ
ಪದೋಪದಿಗೆ ನಮ್ಮ ವಿಜಯ ವಿಠ್ಠಲನ್ನ
ಸದಮಲ ಭಕ್ತಾ ಎನಗೆ ಪೊಳೆವ ಹಸ್ತಾ೨
ತ್ರಿವಿಡಿತಾಳ
ರಣದೊಳು ಲಕ್ಷ್ಮಣನ ಎತ್ತಿತಂದ ಹಸ್ತಾ
ಕ್ಷಣದೊಳು ದ್ರೋಣನ ರಥ ಬಗೆದ ಹಸ್ತಾ
ಸೆಣಿಸುವರಿಗೆ ಎದೆ ಶೂಲವಾಗಿಹ ಹಸ್ತಾ
ವಿನಯದಿಂದಲಿ ಹರಿವಾಣ ಒಯಿದ ಹಸ್ತಾ
ಮಣಿಗಣದಿಂದ ರಾಮನ ಎಣಿಸುವ ಹಸ್ತಾ
ತೃಣಮಾಡಿ ಬಕನ ಸಂಹರಿಸಿದ ಮಹಾ ಹಸ್ತಾ
ಅನಿಮಿಷರಿಗೆ ತುತ್ತುಮಾಡಿ ನೀಡಿದ ಹಸ್ತಾ
ವನಿತೆಗೆ ಸೌಗಂಧಿ ಕುಸುಮ ತಂದ ಹಸ್ತಾ
ವನದೊಳು ಅಸುರೆಯ ಬಿಗಿದಪ್ಪಿದ ಹಸ್ತಾ
ಘನದಂಡ ಕಾಷ್ಟವ ಧರಿಸಿ ಮೆರೆದ ಹಸ್ತಾ
ಅನಿಮಿತ್ಯ ಬಂಧು ಶ್ರೀ ವಿಜಯ ವಿಠ್ಠಲ ರೇಯನ
ಮನದೊಳಿಟ್ಟು ಅರ್ಚನೆ ಮಾಡುವ ಹಸ್ತಾ೩
ಅಟ್ಟತಾಳ
ವಾರಿಜಜಾಂಡವ ಸಾಕುವುದೀ ಹಸ್ತಾ
ಭಾರತೀದೇವಿಯ ಮನಸಿಗೊಪ್ಪುವ ಹಸ್ತಾ
ನೂರಾರು ಖಂಡಗ ಪಾಕ ಗೈಸಿದ ಹಸ್ತಾ
ವಾರಣದಿಂದ ಮಸ್ತಕವ ಪಿಡಿದ ಹಸ್ತಾ
ಮಾರಾರಿಗೆ ಉಪದೇಶ ಮಾಡಿದ ಹಸ್ತಾ
ವಾರಣಗಳ ಗಗನಕ್ಕೆ ಇಟ್ಟ ಹಸ್ತಾ
ಚಾರು ಚರಿತ ನಮ್ಮ ವಿಜಯ ವಿಠ್ಠಲರೇಯನ
ಹಾರೈಸಿ ಹರುಷದಿ ಪೂಜಿಪ ಈ ಹಸ್ತಾ೪
ಆದಿತಾಳ
ವಿಷ ಉದ್ಭವಿಸಲು ಒರಸಿ ಕಳೆದ ಹಸ್ತಾ
ಶಿಶುವಾಗಿ ಹುರಳಿ ಗುಗ್ಗರಿ ಸವಿದ ಹಸ್ತಾ
ಬಿಸಿಜ ಸಖಗೆ ತುಡಿಕಿ ಕ್ರಮಗೆಡಿಸಿದ ಹಸ್ತಾ
ನಿಷಿಕ ತಿಂತ್ರಿಣಿ ಬೀಜದಿ ಸಾಲತಿದ್ದಿದ ಹಸ್ತಾ
ದಶ ಚತುರ್ಲೋಕವ ಒಳಗಡಗಿಸುವ ಹಸ್ತಾ
ಹಸಿದು ತುತಿಸಲು ಅಮೃತವಗರೆದ ಹಸ್ತಾ
ದಶಶಿರನ ಮದಕಾಯ ಶರಗು ಎಳೆದ ಹಸ್ತಾ
ಅಸುರ ವೈರಾವಣನ ಕೊಂದು ಬಿಸುಟ ಹಸ್ತಾ
ವಸುಧೆಯ ಸುರರಿಗೆ ಮುದ್ರೆ ಒತ್ತಿದ ಹಸ್ತಾ
ಶಶಿವರ್ಣದಂತೆ ನಖದಿಂದೊಪ್ಪುವ ಹಸ್ತಾ
ವಸುಧೀಶ ವಿಜಯ ವಿಠ್ಠಲ ರಾಮಕೃಷ್ಣ ವ್ಯಾಸರೆ
ಬಿಸಜ ಪಾದವ ಬಿಡದೆ ಭಜಿಪ ಮಂಗಳ ಹಸ್ತಾ೫
ಜತೆ
ಮೂರಾವತಾರದಲ್ಲಿ ಕಾರ್ಯ ಮಾಡಿದ ಹಸ್ತಾ
ಧೀರ ಶ್ರೀ ವಿಜಯ ವಿಠ್ಠಲಗೆರಗಿದ ಹಸ್ತಾ೬

ಭಕ್ತಿ ಎಂಬುದು ಛಲವಾಗಬೇಕೆಂಬುದು

೨೫
ಧೃವತಾಳ
ಕಡಲೊಳಗದ್ದಿ ಮೇಲೆ ಶೈಲ ಹೇರಿದರೇನು
ಕಾಡುವ ಕಳ್ಳರಿಗೆನ್ನ ಒಪ್ಪಿಸಿ ಬಿಟ್ಟರೇನು
ಸುಡು ಸುಡುವ ಕಾಳ್ಗಿಚ್ಚಿನೊಳು ವೈದು ಹಾಕಿದರೇನು
ಬಿಡದೆ ಹೆಮ್ಮಾರಿಗೆ ಹರಿಯಾ ಮಾರಿದರೇನು
ಅಡವೀಗೆ ನೂಕಿ ಭಂಗ ಬಡಿಸಿದರೇನು
ಬಡಬಾಗ್ನಿ ಒಡಲೊಳು ತೆಗೆದು ಬಚ್ಚಿಟ್ಟರೇನು
ಕುಡುಗೋಲು ಕುಂಬಳಕಾಯಿ ನಿನ್ನಯ ಕೈಯ್ಯ
ಬಡದಾರೆ ಒಳಿತೇ ಸಾಕಿದರೆ ಲೇಸು
ಬಡವನು ನಾನಯ್ಯ ಬಲ್ಲಿದ ನಾನಲ್ಲ
ಬಿಡಿಸೊ ಬಿಡಿಸೊ ನಿನ್ನ ಚರಣ ಎನ್ನ ತಲೆ
ಹೊಡೆದ ಕಾಲಕೆ ಒಂದು ಅರಕ್ಷಣವಾದರೆ
ಹಿಡದಿದ್ದೇನೊ ಹಿಡಿದಿದ್ದೆ ಧೃಢವಾಗಿ ಮನದಲ್ಲಿ
ಕಡುಮುದ್ದು ಅನಿರುದ್ಧ ವಿಜಯ ವಿಠ್ಠಲನೆ
ಈ ನುಡಿ ಹೊಳ್ಳಾದರೆ ಕಡೆಗೆ ನಾಲಿಗುತ್ತರವೊ ೧
ಮಟ್ಟತಾಳ
ಹಸಿದ ಹೆಬ್ಬುಲಿಗೆ ವಶಮಾಡಿದರೊಳಿತೆ
ಮಸೆದಂಬಿಗೆ ನಿಲಿಸಿ ಗುರಿಮಾಡಿದರೊಳಿತೆ
ಬಿಸಿಯ ಕುಲುಮೆಯೊಳಿರಿಸಿ ನೋಡಿದರೊಳಿತೆ
ಹಸಿವೆ ತೃಷೆಗಳೇಕ ಸಮಮಾಡಿದರೊಳಿತೆ
ವೃಷಭಾಕ್ಷ ನಾಮ ವಿಜಯ ವಿಠ್ಠಲ ಎನ್ನ
ಅಸುವೆ ನಿನ್ನಯ ಪಾದ ಬಿಸಿಜಕ್ಕೆ ಅರ್ಪಿಸುವೆ
ವಿಷವೆರಿಯೊ ಪೀಯೂಷವನೆರೆಯೊ
ವಸುಧಿಯೊಳಗೆ ಕಾಣಿಸರು ನಿನ್ನ ವಿನಾ ೨
ರೂಪಕ ತಾಳ
ಹುಚ್ಚನ ಕೈಗೆನ್ನ ಹಿಡಿದು ಕೊಟ್ಟರೊಳಿತೆ
ಕಚ್ಚುವ ಸರ್ಪಕೆ ಎಡೆ ಮಾಡಿದರೊಳಿತೆ
ಕುಚ್ಚುವ ಪಾಕದಲಿ ಬೇಯ ಬಿಟ್ಟರೆ ಒಳಿತೆ
ಹೆಚ್ಚಿ ಶರೀರಾವು ಖಂಡ್ರಿಸಿದರೊಳಿತೆ
ಅಚ್ಚುತ ವಿಜಯ ವಿಠ್ಠಲರೇಯ ಮನ್ನಿಸು
ಅಚ್ಯುತ ದಾಸರ ಹೆಮ್ಮನೆ ಮುಂದಿನ
ಚೊಚ್ಯುಲಾಗ ಉಡಿಯಾ ಮಗನಯ್ಯ ನಾನಯ್ಯ
ಮುಚ್ಚುಮರೆಯಾತಕೆ ಇಚ್ಛೆ ಆರದು ಪೇಳೊ ೩
ಝಂಪಿತಾಳ
ಬ್ಯಾಸತ್ತು ಬೇಲಿಯ ಮೇಲೆ ಹಾಸಿ ಒರಗಿದಂತೆ
ಕಾಸಿಗಾಗಿ ಪೋಗಿ ಕಾಲು ಮುರಿಯ ಬಿದ್ದಂತೆ
ಏಸೇಸು ದೈವಂಗಳು ಆಶೆ ಮಾಡಿದರೇನು
ಸಾಸಿವೆ ಕಾಳಿನಿತು ಸುಖವಿಲ್ಲವೊ ದೇವ
ಸಾಸಿರಕೆ ನಿನ್ನಯ ದಾಸನೆನಿಸಿಕೊಂಡು
ದೇಶದೊಳು ತಿರುಗುವುದು ವಿಶೇಷವೊ
ಲೇಸಾದರೂ ಒಳಿತೆ ಆಗದಿದ್ದರು ಒಳಿತೆ
ಶ್ರೀಶ ನಾಮಕ ಕೃಷ್ಣ ವಿಜಯ ವಿಠ್ಠಲ ನಿನ್ನ ದಾಸ್ಯತ್ವಘನವೊ ೪
ತ್ರಿವಿಡಿತಾಳ
ವಾರಿಧಿಯ ಮ್ಯಾಲೆ ಜಿನಗು ಮಳೆಗರೆದಂತೆ
ನೂರಾರುಳ್ಳವಗೆ ಕಾಸು ದಾನವಿತ್ತಂತೆ
ಸಾರಸುಧೆ ಉಂಡವರ ಊಟಕೆ ಕರೆದಂತೆ
ಈ ರೀತಿಯೊ ನಿನಗೆ ನಾನು ತುತಿಪದು
ಘೋರ ಕರ್ಮನು ಅಹಂಕಾರ ಮನುಜನ್ನ
ಪಾರ ನೋಡುವುದು ಬಲು ಪರಮ ದಯದಿಂದ
ಭಾರ ನಿನ್ನದು ಕಾಣೊ ಕ್ಷೀರವಾರಿಧಿಯೊಳದ್ದೆ
ಕೀರುತಿ ಯಾರದೋ ಅತುಳ ವಿಜಯ ವಿಠ್ಠಲ ೫
ಅಟ್ಟತಾಳ
ಸ್ವರ್ಗವಾಗಲಿ ನರಕ ಉಳ್ಳ ದುರ್ಗವಾಗಲಿ ಮೇಲೆ ಅಪ
ವರ್ಗವಾಗಲಿ ಅಘೋರವಾದ
ದುರ್ಘಟವಾಗಲಿ ಸುಲಭವಾಗಲಿ
ದುರ್ಗನಾಮ ವಿಜಯ ವಿಠ್ಠಲ ಅ-
ನಘ್ರ್ಯ ಕಾಣೊ ನೀನಿತ್ತದು
ದುರ್ಗ ಮನೋಹರ ಭಕ್ತವರ್ಗವನು ಪಾಲಧರ ೬
ಆದಿತಾಳ
ನಿನ್ನ ದಯವಿದ್ದರೆ ಅರಣ್ಯವಾಗಲಿ ಪುರವಾಗಲಿ
ನಿನ್ನ ದಯವಿದ್ದರೆ ಗರಳವಾಗಲಿ ಸುಧೆಯಾಗಲಿ
ನಿನ್ನ ದಯವಿದ್ದರೆ ಕರ್ಮವಾಗಲಿ ಧರ್ಮವಾಗಲಿ
ನಿನ್ನ ದಯವಿದ್ದರೆ ದುಃಖವಾಗಲಿ ಸುಖವಾಗಲಿ
ನಿನ್ನ ದಯವಿದ್ದರೆ ಎನ್ನ ಕುಲಕೆ ಸಂಪತ್ತು
ನಿನ್ನ ದಯವಿದ್ದರೆ ಎನ್ನಗೆ ಪುಣ್ಯ ಪಾವನವಯ್ಯ
ನಿನ್ನ ದಯವಿಲ್ಲದಿದ್ದ ಪುಣ್ಯವಾದರು ನಾನೊಲ್ಲೆ
ನಿನ್ನ ಚಿನ್ನ ನಗರ ದರುಶನವಾದ ಮೇಲೆ ನಾನು
ಇನ್ನು ಎಲ್ಲಿದ್ದರೇನು ಎಲ್ಲಿಪೋಗಿ ಬಿದ್ದರೇನು
ಸನ್ಯಾಸುಕ್ಕತು ನಾಮ ವಿಜಯ ವಿಠ್ಠಲರೇಯ
ನಿನ್ನ ನಾಮದಿಂದ ಎನಗೆ ಏನು ಬಂದರೊಳಿತೆ೭
ಜತೆ
ಚಿತ್ತದಲ್ಲಿ ಕಟ್ಟಿ ಎತ್ತಲು ಬಿಡೆನೊ ನಿನ್ನ
ಸುತ್ತಲಿ ತಿರುಗುವೆ ಧೀಶಾ ವಿಜಯ ವಿಠ್ಠಲರೇಯ೮

ಭಗವಂತನಾದ ವಿಷ್ಣುವನ್ನಲ್ಲದೆ ಅನ್ಯರನ್ನು

೨೬
ಧ್ರುವತಾಳ
ಕಣ್ಣು ಬಿಟ್ಟರೆ ಬಿಡೆನೊ ಜಲ
ವನ್ನು ಪೊಕ್ಕರೆ ಬಿಡೆನೊ
ಮಣ್ಣು ತೂರಿ ಕಿಡಿಯಾದರೆ ಬಿಡೆನೊ
ಸಣ್ಣನಾಗಿ ಹೆಣ್ಣು ತೊರೆದರೆ ಬಿಡೆನೊ
ಉಣ್ಣಾದೆ ವಸನ ತೊರೆದರೆ ಬಿಡೆನೊ
ಮನ್ಯು ರಾಹುತನಾದರೆ ಬಿಡೆನೊ
ಇನ್ನು ಇದರಿಂದ ಏನಾದರು ಬರಲಿ
ಇನ್ನು ಇದರಿಂದ ಏನಾದರಾಗಲಿ
ಬೆನ್ನು ಬಿಟ್ಟರೆ ಎನ್ನ ಕುಲಕೋಟಿಗೆ ಹೀನ
ಪನ್ನಗಶಯನನೆ ಶ್ರೀ ವಿಜಯ ವಿಠ್ಠಲ ತಿಮ್ಮ
ಕಣ್ಣ ಬಿಟ್ಟರೆ ಬಿಡೆ ನಾ ೧
ಮಟ್ಟತಾಳ
ಧರೆಯ ಸುತ್ತಲು ಬಿಡೆ ಗಿರಿಯೊಳಿದ್ದರು ಬಿಡೆ
ಸುರಲೋಕಕ್ಕೆ ಪೋಗಿ ಪೊಕ್ಕರು ಬಿಡೆನೊ
ನರನಾಗಿ ನಾನಾ ಸೋಗು ಮಾಡಲು ಬಿಡೆ
ಗಿರಿಯ ತಿಮ್ಮ ನಿನ್ನ ಬಿಡೆನೊ ಬಿಡೆನೊ
ಪೊರೆ ಇಲ್ಲದಿದ್ದರೆ ಭಕುತ ವತ್ಸಲನೆಂಬೊ
ಬಿರಿದು ಬಿಡು ಸಾರು ಬಿನಗು ದೈವದಗಂಡ
ಪರಿಪೂರ್ಣ ಮೂರುತಿ ವಿಜಯ ವಿಠ್ಠಲ ನಿನ್ನ
ಚರಣಕೆ ಎನ್ನ ಕೊರಳು ಕಟ್ಟಿ ಕೊಂಬೆನಯ್ಯ೨
ತ್ರಿವಿಡಿ ತಾಳ
ಎಲ್ಲ ಭಕ್ತರು ನಿನಗೆ ಸಲ್ಲಿದವರಾರು
ಸಲ್ಲದವ ನಾನಾದೆ ಸರಸಿಜನಾಭನೆ
ನಿಲ್ಲೊ ನಿಲ್ಲೊ ನಿನ್ನ ನೀತೀರುಹದ ಪಾದ
ಪಲ್ಲವ ತೋರಿಸಿ ಪಾವನ್ನ ಮಾಡಯ್ಯ
ಅಲ್ಲದಿದ್ದರೆ ಎನ್ನ ಕೊಲ್ಲೊ ಕಾಯೊ ನೀನು
ಬಲ್ಲ ಪರಿಯ ಮಾಡು ಎಲ್ಲ್ಯಾದರು ಇಡೊ
ಮಲ್ಲಮರ್ದನ ರಂಗ ವಿಜಯ ವಿಠ್ಠಲ ಎನ್ನ
ಸಲ್ಲದ ಹಣದಂತೆ ಹಸಗೆಡಿಸಲಿ ಬ್ಯಾಡ ೩
ಅಟ್ಟತಾಳ
ನೀನಿರಲು ಅನ್ಯರನ ಪೂಜಿಸುವೆನೆ
ನೀನಿರಲು ಅನ್ಯರನ ಬೇಡುವೆನೆ
ನೀನಿರಲು ಅನ್ಯರಿಗೆ ಒಡಂಬಡದೀ ಮನ
ಭಾನು ರಶ್ಮಿಗಳಿರಲು ಪೊರಗೆ ಬಡಗಿಯ ಕಳೆದು
ತಾನು ದೀವಿಗೆ ಕೊಂಡು ಅರಸುವಂಥಾ
ಹೀನ ಮಾನವನಂತೆ ನಾನಲ್ಲವೊ ದೇವ
ನೀನಿರಲು ಅನ್ಯರಿಗೆ ಕರವನು ಮುಗಿಯುವೆನೆ
ಅನಾಥ ರಕ್ಷಕ ವಿಜಯ ವಿಠ್ಠಲ ನಿನ್ನ
ಬಾಣಸಿಯ ಸೇವಿಸಿ ಬದುಕುವೆನು ನಾನು ೪
ಆದಿತಾಳ
ಪರಯ ಭಕ್ತರ ಸರಿ ನಾನಲ್ಲ ನಾನಲ್ಲ
ಥರವಲ್ಲ ಬರಿದೆ ಬಳಲಿಸಾದೆ ಪರಿಪರಿ ಭಯಂಗಳು
ಹರಿಬಿಟ್ಟು ಎನ್ನನು ಹಕ್ಕಲ ಗೈಸದೆ
ಪರಿಪಾಲನೆ ಮಾಡು ಎನ್ನ ಯೋಗ್ಯತವರಿತು
ಬರಮೂರು ದಿನ ಮಾತು ಅನುಗಾಲ ಎಂಬೋದು
ಮರಿಯದು ಕಾಣೋ ವಿಜಯ ವಿಠ್ಠಲ ವಿಠಲ ತಿಮ್ಮಾ ೫
ಜತೆ
ಎಂತಾದರೆ ನಿನ್ನ ಚರಣ ಸ್ಮರಣೆ ಬಿಡ
ದಂತೆ ಒಲಿಯೊ, ಪುರಂದರ ವಿಜಯ ವಿಠ್ಠಲ ತಿಮ್ಮಾ ೬

ತಿರುಪತಿಯ ಶ್ರೀನಿವಾಸನ ದರ್ಶನದಿಂದ ಪುಲಕಿತಗೊಂಡ

೪೦. ತಿರುಪತಿ
ರಾಗ:ಭೈರವಿ
ಧ್ರುವತಾಳ
ಕಮಲಾ ಕಮಲಾಸನದಿಂದೊಪ್ಪುವ ಪೊಕ್ಕಳವಲವಾಗಿ |
ಮೆರೆವ ಬಲುಕಾಂತಿಯಾದ ಉದರ |
ಸಮ ವಿಷಮವಿಲ್ಲದ ನೋಳ್ಪರ ಕಂಗಳಿಗೆ |
ಸಮತಳವಾಗಿ ವಿರಾಜಿಸುವ ಉದರ |
ಶಮದಮವಾನಂತ ಗುಣಪರಿಪೂರ್ಣವಾದ |
ಪ್ರಮೆಗಳು ತುಂಬಿದ ಕಲುಷಹರ ಉದರ |
ದಮುನಾಮ ನಮ್ಮ ವಿಜಯವಿಠಲೇಶನ |
ನಮಿ[ಸಿ]ದವರ ಮನಕೆ ಬೆಡಗುತೋರುವ ಉದರ ೧
ಮಟ್ಟತಾಳ
ಕುವರತನದಲ್ಲಿರೆ ಒಡ[ಲೊ]ಳಗೆ ಅವನಿಯನ್ನು ಸವರಿದ ಉದರ
ಪವಳತಿ ಮಾಣಿಕ ನವ ಮೌಕ್ತಿಕ ಹಾರ |
ರವಿಯಂದದಲಿ ತೂಗುವ ಶೃಂಗಾರುದರ |
ನಿವರ್ತಾತ್ಮ ನಾಮಾ ವಿಜಯವಿಠಲರೇಯಾ |
ಭುವನತ್ರಯದೊಳಗೆ ಧವಳವರ್ಣ ಉದರ ೨
ತ್ರಿವಿಡಿತಾಳ
ಗುಣತ್ರಯಗಳ ಬಿಡದೆ ಪೊಂದಲಿಟ್ಟಾ ಉದರ |
ಗಣನೆಯಿಲ್ಲದ ಜೀವರಾಶಿಗಳಿದ್ದುದರ |
ಅನುವರಿತು ವೇದಗಳು ಸ್ತುತಿಸಿ ಕಾಣದ ಉದರ |
ಮುನಿಗಳ ಮತಿಗೀಗ ನಿಲಕಾದಿಪ್ಪ ಉದರ |
ಜನನಿ ಗೋಪಿಗೆ ಒಳಗೆ ಲೋಕಾತೋರಿದ ಉದರ |
ಅನಿಮಿಷರು ನೋಡಿ ಬೆರಗು ಬೀಳುವ ಉದರ |
ಗುಣಸಾಂದ್ರ ಸಪ್ತೈಧಾ ವಿಜಯವಿಠಲರೇಯ |
ಮಣಿಕಾಂಚನದಂತೆ ಮಿನುಗುವ ಚಲುವ ಉದರ ೩
ಅಟ್ಟತಾಳ
ಎಂದಿಗೆಂದಿಗೆ ಕ್ಷುಧಾರಹಿತವಾದ ಉದರ |
ಗಂಧಕುಸುಮದಿಂದ ಪೂಜೆಗೊಂಬ ಉದರ |
ಒಂದೊಂದು ರೀತಿಯಲಿ ಬೆಳಕಾಗುವ ಉದರ |
ಮಂದಮತಿಗೆ ಜ್ಞಾನವನೀವ ಉದರ |
ಅಂದು ಪರ್ವತ ಪೊತ್ತು ಮೃದುವಾದ ಉದರ |
ತಂದರ್ಪಿಸಿದ ಮಿತಾತನದ ಉದರ |
ಸುಂದರ ಶ್ರೀರಂಗ ವಿಜಯವಿಠಲ ನಿನ್ನ |
ಚಂದಾದ ತ್ರಿವಳಿ ಎಸೆವಂಥ ಉದರ ೪
ಆದಿತಾಳ
ಜೊಲ್ಲು ಜೊಲ್ಲು ಸುರಿವಧಾರಿಯಲ್ಲಿ ಶೋಭಿಸುವ ಉದರ |
ಸಲ್ಲಲಿತವಾದ ಭಕ್ತರೆಲ್ಲರಭೀಷ್ಟೆಯ ಉದರ |
ಕಲ್ಲಿಬೋನಾ ಸವಿದು ಸವಿದು ತೊಳ್ಳು ಬೆಳೆಸಿಕೊಂಡ ಉದರ |
ಒಲಿದ ನಾಮಾ ವಿಜಯವಿಠಲ ಕರ್ತೃವಿನ ಉದರ ೫
ಜತೆ
ಅನಂತ ಜಾಂಡದೊಳಗೆ ಬದುಕುಮಾಡುವ ಉದರ |
ಅನಂತ ವಿಜಯವಿಠಲರೇಯನ ಉದರ ೬

ಹಲವು ದೇವತೆಗಳನ್ನು ಪೂಜಿಸಿ

೨೮
ಧ್ರುವತಾಳ
ಕರವಿಡಿದು ಪಾಲಿಪುದು ಕಿಂಕರರೊಳು ಪೊಂದಿಪುದು
ಪರಿಪೂರ್ಣ ಗುಣನಿಧಿ ಕರುಣಾಂಬುಧಿ
ಕರಿ ಮೊರೆಯಿಡಲು ಮಕರಿಯ ಸಂಹರಿಸಿ ಆ
ಕರಿಯ ಪರಿಪಾಲಿಸಿದ ಶ್ರುತಿ ವಿನೋದ
ಶರಧಿಯೊಳು ಪೋಗಿ ಪುತ್ರನ ತಂದು ಪಾರ್ಥನ
ಹರಣವನು ಕಾಯ್ದವರ ಸುಪ್ರಸಾದ
ಹರಣವುಳ್ಳನಕ ಅನ್ಯರಿಗೆ ಕರ ಮುಗಿದೊಂದು
ಶರಣೆಂದುದೆ ಎನ್ನ ಶಪಥ ಕಡಿಮೆ
ದುರುಳ ದೈವಗಳು ಮುನಿದುರವಣೆ ತಡದೆನ್ನ
ಶಿರ ತರಿದು ಮುಂದೆ ತಂದಿಟ್ಟರೇನು?
ಸರಕು ಮಾಡೆನೊ ಅವರಬ್ಬರದ ಭಯಂಕರಕೆ
ಮರುಗಿದರೆ ನಿನ್ನ ದಾಸನು ದಾಸನೆ
ಪರಮಾತ್ಮ ನಾಮ ಸಿರಿ ವಿಜಯ ವಿಠ್ಠಲ ನಿನ್ನ
ಶರಣನೆಂದೆನಿಸು ಎಂದಿಗಾದರು ಒಮ್ಮೆ ೧
ಮಟ್ಟತಾಳ
ಹಿಂಡು ಸೊಪ್ಪಿನ ದೈವ ಹಿಂಡು ಪೂಜಿಪುದೇನು
ಕಂಡರೆ ಫಲವಿಲ್ಲ ಕೊಂಡಾಡಲು ಸಲ್ಲ
ಕೆಂಡವನು ಕೊಂಡು ಮಂಡೆಯ ತುರಿಸಿದಂತೆ
ಮುಂಡ ದೇಹಕ್ಕೆ ತುಂಡು ಪೆಚ್ಚಿಸಿದಂತೆ
ಅಂಡಲಿದು ವ್ಯರ್ಥ ದಂಡವಾಗುವದಂಗ
ಚಂಡಣಿ ಬಂದೇವೆ ಉಂಡು ಉಟ್ಟರು ಇಲ್ಲ
ಚಂಡ ನಾಮಕಕೊಡಿಯಾ ವಿಜಯ ವಿಠ್ಠಲ ನಿನ್ನ
ಕಂಡ ಮಾತುರದಲ್ಲಿ ದಂಡಾಯುಧ ಬಾರಾ ೨
ತ್ರಿವಿಡಿ ತಾಳ
ಕೊಡು ಬೇಡಿದ ದೃಢ ಕೊಡಲಾರದಿರೆ ನಾನು
ಬಿಡೆನೊ ಬಿಡೆನೊ ಇನ್ನು ಭೀತಿಯಾತಕೊ ನಿನ್ನ
ತಡೆದು ಮುಂಜೆರಗನುವಿಡಿದು ಪೋಗಗೊಡೆ
ನುಡಿದೆನ್ನ ಒಡಂಬಡಿಸು ಇಲ್ಲದಿದ್ದರೆ ಸ್ವಾಮಿ
ಬಿಡುಕಟ್ಟಿದ ಬಿರಿದು ಕ್ಷುದ್ರದೇವತೆಗಳ
ಒಡೆಯಾನೆಂಬದು ಭಕ್ತರ ಪಾಲನೆಂಬೊದು
ನಡಿ ನಿನ್ನ ಅಡಿಗಳ ನೆನೆಸುವ ಉತ್ತುಮ
ರಡಿಯಲ್ಲಿ ಮುಡಿಯಾ ತೊಡರು ಪೇಳುವ
ಪೊಡವಿ ಪದಿನಾಲ್ಕಕ್ಕೆ ಒಡೆಯಾನು ನೀನೆಂದು
ತುಡುಕಿ ಹಾವನು ಮುಂಡಿಗಿ ಹಾಕುವೆ
ಕಡಲಶಯನ ಮಂತ್ರ ವಿಜಯ ವಿಠ್ಠಲ ಎನಗೆ
ಕೊಡತಕ್ಕದ್ದಲ್ಲದ ಅಧಿಕ ಬೇಡಿದರೇನು ೩
ಅಟ್ಟತಾಳ
ಪರದೈವ ಕೇಳವಧಾರುಪಕಾರವ
ಧರಿಸು ಬಿನ್ನಹವನ್ನು ಮ್ಯಾಲೊಂದು ತರುಳಗೆ
ಧರಣಿಯೊಳಗೆ ನಿನ್ನ ಸರಿಯಾದ ದೇವರ
ಕರೆದು ತೋರಿಸುವುದು ಅವರಲ್ಲಿಗೆ ಪೋಗಿ
ತಿರಿತಿಂಬೆ ಇಲ್ಲದಿದ್ದರೆ ದೇವ ನಿನ್ನಯ
ಪರಮ ಚರಿತೆಯುಳ್ಳ ತನಕ ಸಾಕುವುದು
ತರುವಾಯ ಆದದ್ದೆಲ್ಲಾಗಲಿ ಫಣಿಯಲ್ಲಿ
ಬರೆದ ಮಿತಿಗೆ ಏನಾದರು ಬರಲಿನ್ನು
ಧರಣಿಧರ ನಾಮ ವಿಜಯ ವಿಠ್ಠಲ ನಿನ್ನ
ಚರಣ ಸ್ಮರಣೆ ಬಿಡದೆ ಕರುಣಿಪುದೆನಗೆ ೪
ಆದಿತಾಳ
ನಖದ ದರುಶನ ಸಾಕು ಭಕುತಿ ಭಕುತಿ ಒಲ್ಲೆ
ಯುಕುತಿ ಒಲ್ಲೆ ಯುಕುತಿ ಒಲ್ಲೆ ಯುಕುತಿ ಒಲ್ಲೆ
ಮುಕುತಿ ಒಲ್ಲೆ ಮುಕುತಿ ಒಲ್ಲೆ ಮುಕುತಿ ಒಲ್ಲೆ
ಭಕುತಿ ಭಕುತಿ ಯುಕುತಿ ಮುಕುತಿ ಮಹ
ಭಕುತರಿಗೆ ಪಾಲಿಸಯ್ಯ ಸಕಲ ಕಾಲದಲ್ಲಿ ನಿನ್ನ
ನಖವ ನೋಡುವ ಮನವನಿತ್ತು
ಮುಕತನ್ನ ಮಾಡುವುದು ಸಕಲ ದುರಿತವ ಕಳೆದು
ಶಿಖಂಡಿ ನಾಮ ವಿಜಯ ವಿಠ್ಠಲ
ಸುಖವೆಂಬೋದಿದೆ ಸಾಕು ೫
ಜತೆ
ನಿನ್ನ ವಿನಾ ಕರುಣಿ ಇಲ್ಲ ಎನ್ನ ವಿನಾ ಪಾಪಿಯಿಲ್ಲ
ಇನ್ನು ವಿಚಾರವೇನು ಸತ್ಯ ವಿಜಯ ವಿಠ್ಠಲ ೬

ಭಕ್ತನಾದವನು ಎಷ್ಟೇ ಭಕ್ತಿಯಿಂದ

೩೦
ಝಂಪಿ ತಾಳ
ಕರವಿಡಿದೆತ್ತುವುದು ಭವ ಕರದಮದೊಳಗಿಂದ
ಕರಕರೆ ಬಡಲಾರೆ ಕರುಣಾ ರತುನಾ
ಕರನೆ ನಿನ್ನಡಿಗಳಿಗೆ ಕರಮುಗಿದು ದುರಿತ ನಿ
ಕರಗಳೆಲ್ಲ ನಿರಾಕರಣ ಗೈಸೊ
ಕರೆದ ಮಾತನು ಪತಿ ಕರಿಸಿ ವೇಗದಿ ವಸೀ
ಕರನಾಗಿ ಮುಕುತಿಗೆ ಕರೆವ ದಾತ
ಕರದಿಂದ ಒಲಿದು ವಕ್ಕರ ಪರಿಹರಿಸಿ ಭೀ-
ಕರವ ತೊಲಗಿಸು ಶ್ರೀಕರ ಮೂರುತಿ ದಿವಾ
ಕರಕುಲಾಗ್ರಣಿರಾಮ ವಿಜಯ ವಿಠ್ಠಲ ಸಾ
ಕಾರನಾಗು ನಿತ್ಯ ಮಧುಕರನಂತೆ ಮನಕೆ ೧
ಮಟ್ಟತಾಳ
ತನು ನಿನ್ನಾಧೀನ ಮನವೆ ನಿನ್ನಾಧೀನ
ಜನನ ಮರಣ ಪಾರಣ ನಿನ್ನಾಧೀನ
ಅನುದಿನ ಮಾಳ್ಪ ಸಾಧನ ನಿನ್ನಾಧೀನ
ಕ್ಷಣ ಕ್ಷಣದಾಶ್ವಾಸದ ಯೋಚನೆ ನಿನ್ನಾಧೀನ
ಗುಣ ಗುಣ ವನ ನಿಧಿ ವಿಜಯ ವಿಠ್ಠಲರೇಯ
ಎನಗೊಲಿದಿಪ್ಪನೆ ಅಣೋರಣೆ ಮಹಮಹಿಮ ೨
ತ್ರಿವಿಡಿ ತಾಳ
ಹಾರಿ ಆಡಿದರೇನು ಹಸ್ತದಲ್ಲಿ ತಂ
ಬೂರಿ ಪಿಡಿದು ಮೀಟಿ ತಾಳ ಕಟ್ಟಿದರೇನು
ಮೋರೆ ಮೇಲು ಮಾಡಿ ಪಾಡಿ ಪೇಳಿದರೇನು
ತೋರಿ ಗುಣಗಳೆಲ್ಲ ತವಕೆ ಬಿದ್ದರೆ ಏನು
ತಾರಿಕೊಳುತ ಬಲುತಪವ ಗೈದರೆ ಏನು
ಶಾರೀರ ಬಳಲಿಸಿ ಶೋಕ ಪಡೆದರೇನು
ದೂರ ಯಾತ್ರಿ ತೀರ್ಥತಿರುಗಿ ಬಂದರೆ ಏನು
ಆರೊಡನಾಡಿದರೇನು ಮತ್ತೇನು
ನಾರಾಯಣನೆ ನಿನ್ನ ಸಾರದಲೆ ಸಂ
ಸಾರದ ಮಾರ್ಗ ನಿವರ್ತಿಯಿಲ್ಲ
ಈ ರೀತಿಯಲಿ ತಿಳಿಯದೆ ಮಂದನಾಗಿ ಪೋದೆ
ಮಾರಿಗಳ ಭೀತಿ ಎಣಿಸದಲೆ
ಚಾರು ಚರಿತ ನಮ್ಮ ವಿಜಯ ವಿಠ್ಠಲ ಎನ್ನ
ಭಾರ ವಹಿಸಿ ಕಾಯುವ ಕಾರುಣ್ಯಮೂರುತಿ೩
ಅಟ್ಟತಾಳ
ಒಂದೆ ಜಲದ ಬಿಂದು ಒಂದೆ ತುಲಸಿ ದಳ
ಒಂದೆ ಚರುವನ್ನ ಮಂಗಳಾರ್ತಿ
ಒಂದೆ ಪ್ರದಕ್ಷಿಣೆ ಒಂದೆ ನಮಸ್ಕಾರ
ಒಂದೆ ಒಂದದರಿಂದ ಕುಂದದ ಮತಿಗಳ
ತಂದು ಕೊಡುವ ದಯಸಿಂಧು ನೀನಿರಲಿಕ್ಕೆ
ಮಂದಮಾನವ ಅನುಸಂಧಾನ ಅರಿಯದೆ
ಬಂದಾರು ಮಡಿಯಾಗಿ ತಂದು ಬಳಲುವೆ
ಸಿಂಧುಶಯನ ನಮ್ಮ ವಿಜಯ ವಿಠ್ಠಲರೇಯ
ಎಂದೆಂದಿಗೆ ನಾನು ಒಂದು ದಾರಿಯ ಕಾಣೆ೪
ಆದಿತಾಳ
ಗತಿಯೇನು ತೋರದು ಶ್ರೀ
ಪತಿಯ ಪೋಗುವ ಸು
ಪಥದಲ್ಲಿ ನಾನೆಂತೀ
ಕ್ಷಿತಿ ಯೊಳಗಿರಬಹುದೆ
ಹಿತವಾಗಿ ಕಾಯ್ದು ಪೂ
ರತಿ ಮಾಡೊ ಮನೊಬಯಕೆ
ಯತಿಗಳ ಮನೋಹರ ವಿಜಯ ವಿಠ್ಠಲ ನಿ
ಶ್ಚಿತದಲ್ಲಿ ನೀನೆ ಒಲಿಯೊ ಕಥಾಪ್ರಸಂಗವನಿತ್ತು೫
ಜತೆ
ಕೋಟಿಗಾದರು ನಿನ್ನ ನೆನವೆ ಭವಾಬ್ಧಿಯ
ದಾಟಿಸು ದಯದಿಂದ ವಿಜಯ ವಿಠ್ಠಲನಂದ೬

ಆನೆ, ಕುದುರೆ, ಎಮ್ಮೆ, ಹಸು ಮೊದಲಾದ ಪ್ರಾಣಿಗಳು

೩೯
ಧ್ರುವತಾಳ
ಕರಿ ತುರಗ ವೃಷಭ ಗೋವು ನೆಗಳಿ ಮಹಿಷಿ ಮೇಷ
ಹರಿಣ ಮಯೂರ ಶ್ವಾನ ಮೂಷಕ ಹಂಸ
ಹರಿ ಶಾಖಾಮೃಗ ಗರುಡ ಉರಗ ನಾನಾ ಮೃಗಾದಿ
ಇರುತಿಪ್ಪವು ಕೇಳಿ ಸ್ವರೂಪದಿ
ಸುರರು ಮಿಕ್ಕಾದವರು ಜೀವರಾಶಿಗಳುಂಟು
ಅರಿತು ನುಡಿಯಬೇಕು ಸತತದಲ್ಲಿ
ಹರಿರೂಪ ದ್ವಿವಿಧ ತಿಳಿ ಆರಾಧನೆ ಮಾಡು
ಎರಡೊಂದು ಬಗೆಯಲ್ಲಿ ಒಲಿದೊಲಿದು
ತಾರತಮ್ಯ ಭೇದಜ್ಞಾನದಿಂದ ಸ್ವಧರ್ಮಾ
ಚರಣೆ ತೊರೆಯದೆ ತವಕದಿಂದ ಯೋಚಿಸುವುದು
ಪರಮ ಪುರುಷ ನಮ್ಮ ವಿಜಯ ವಿಠ್ಠಲರೇಯ
ಪರಿ ಪರಿ ವಿಧದಿಂದ ಅರ್ಚನೆಗೊಂಬ ೧
ಮಟ್ಟತಾಳ
ಆರಾರ ಆಹಾರ ನೈವೇದ್ಯತೆ ಎನ್ನು
ಆರಾರ ವಿಹಾರ ಕ್ರಿಯಾಲಕ್ಷಣವನ್ನು
ಆರಾರು ನುಡಿಮಾತುಗಳೆ ಮಂತ್ರಗಳನ್ನು
ಆರಾರ ಆಹಾರ ನೈವೇದ್ಯವೆ ಎನ್ನು
ಆರಾರ ರೂಪಗಳು ಪ್ರತೀಕವೆ ಎನ್ನು
ಆರಾರ ಸ್ವಭಾವ ಹರಿಯಾಧಿನವೆನ್ನು
ಆರಾರು ಆರಾರು ಆವಾವ ಜನುಮದಲ್ಲಿ
ಆರಾಧನೆ ಮಾಡಿದ್ದು ಸಮರ್ಪಣಗೈಯೆ
ಮಾರಜನಕ ನಮ್ಮ ವಿಜಯ ವಿಠಲರೇಯ
ತೋರುವ ತನ್ನಯ ಪಾರಮೂರ್ತಿ ಸೊಬಗು ೨
ತ್ರಿವಿಡಿತಾಳ
ನಿನ್ನ ಕಣ್ಣಿಂದಲೆ ನೋಡಿದೆ ನೋಡಿದೆ
ನಿನ್ನ ಕರಣದಿಂದ ಕೇಳಿದೆ ಕೇಳಿದೆ
ನಿನ್ನ ನಾಲಿಗೆಯಿಂದ ಪಾಡಿದೆ ಪಾಡಿದೆ
ನಿನ್ನ ನಾಶಿಕದಲ್ಲಿ ನಿರ್ಮಾಲ್ಯ ಘ್ರಾಣಿಸಿದೆ
ನಿನ್ನ ಹಸ್ತದಲ್ಲಿ ಪಿಡಿದೆ ಪಿಡಿದೆ ನಿತ್ಯ
ನಿನ್ನ ಚರಣದಲ್ಲಿ ಯಾತ್ರೆಯ ಚರಿಸಿದೆ
ನಿನ್ನ ವದನದಲ್ಲಿ ಪ್ರಸಾದ ಸವಿದೆಸವಿದೆ
ನಿನ್ನಾರಾಧನೆಗೆ ಶುಚಿಯಾದೆ ಶುಚಿಯಾದೆ
ನಿನ್ನ ಭಜಿಪುದಕ್ಕೆ ಅನುಕೂಲ ನಾನಾದೆ
ನಿನ್ನವನೊ ನಿನ್ನವನೊ ಎನುತ ಧೇನಿಸಿ ಪಾ
ವನ್ನನಾಗಲಿಬೇಕು ನೋಡಿದಲ್ಲಿ
ಭಿನ್ನ ತಿಳಿದು ಹರಿಯ ವಿಚಿತ್ರ ಶಕ್ತಿಗೆ
ಸನ್ನು ತಿಸಿ ಸಾಕಲ್ಯ ತಿಳಿಯದಿದರೊ
ಆಣೋರಣೆ ರೂಪ ವಿಜಯ ವಿಠ್ಠಲ
ಅನುಗಣ್ಯನು ಕಾಣೊ ನಮಗೆಲ್ಲ ಎನಲಿಬೇಕು ೩
ಅಟ್ಟತಾಳ
ನದಿಜಲಧಿಕವಾಗಿ ಬಂದ ಬಂದಂತೇವೆ
ನದಿಯೊಳಗಿದ್ದು ತೆಗ್ಗುಮಿಟ್ಟಿ ಪಾಷಾಣ
ಹುದುಗಿ ಪೊಗಲು ಸಂಪೂರ್ಣ ಪ್ರವಾಹದಿ
ಅದರೊಳಗೇನೇನು ಇದ್ದವಿದ್ದವೆಲ್ಲ
ಬದಿಯಲ್ಲಿ ನಿಂದರು ಕಾಣಿಸದಿಪ್ಪವು
ಇದರಂತೆ ಮನದಲ್ಲಿ ವಾಸುದೇವನ ಪಾದ
ಪದುಮ ಭಕುತಿಯಿಂದ ಧೇನಿಸಲು ಸ್ವರೂ
ಪದ ಜ್ಞಾನ ನಿರಂತರ ವೆಗ್ಗಳವಾಗಿ ಲಿಂ
ಗದಲಿಂದ ಬಂದಿಪ್ಪ ಅಜ್ಞಾನ ಅಡಗುವುದು
ಮುದದಿಂದ ಮಾನª ಈ ಪರಿ ಇದ್ದರೆ
ಪದೋಪದಿಗೆ ಸಂಸಾರದಲ್ಲಿ ಇರನ್ಯಾಕೆ
ನದಿ ಪ್ರವಾಹದಂತೆ ನಿಜಜ್ಞಾನ ಪ್ರಕಾಶ
ಅಧಿಕವಾಗುವುದಯ್ಯಾ ಲೇಶ ಕಡಿಮೆ ಉಂಟೆ
ವಿಧಿಪಿತ ವಿಜಯ ವಿಠ್ಠಲರೇಯನ ದಿವ್ಯ ಪಾ
ದದ ಮಹಿಮೆಯನ್ನು ಪೊಗಳಿದವನೆ ಧನ್ಯ ೪
ಆದಿತಾಳ
ನಾನಾ ಜಂಗಮ ಸ್ಥಾವರ ದೇಶಕಾಲದಲ್ಲಿ
ನಾನಾ ಪ್ರಕಾಶದಿಂದ ವ್ಯಾಪಾರ ಭೇದಂಗಳ
ನಾನಾಲೋಚನೆಯ ಮಾಡೊ ನಾರಾಯಣ ಭಗವಂತ
ನಾನಾತ್ವನಿಪ್ಪನೆಂದು ಎನ್ನಿ ವೈಷಮ್ಯದಿಂದ
ನಾನಾವತಾರ ಹರಿ ಸಕಲಾಧಿಷ್ಠಾನದಲ್ಲಿ
ನಾನಾ ಗುಣದಿಂದ ಪರಿಪೂರ್ಣ ಲಕುಮಿರಮಣ
ನಾನಾ ಪ್ರಯೋಜನ ಮಾಡುವ ಬಹಿರಂತರ
ನಾನಾಗುಣದಿಂದ ವೃತ್ತಿಮಾರ್ಗವೆ ರಚಿಸಿ
ನಾನು ಎಂಬೋದು ತೊರೆದು ಅಸ್ವಂತಂತ್ರನಾಗ್ವದೆ
ನಾನಾನಂದವೆ ಉಂಟು ಜ್ಞಾನವೆ ಪರಮ ಮುಖ್ಯ
ನಾನಾಲೋಕೇಶ ಹರಿ ವಿಜಯ ವಿಠ್ಠಲರೇಯಾ
ನಾನೆ ನಿನ್ನವನೆನಲು ವಿಷಯದಲ್ಲಿ ಪೊಗಿಸಾ ೫
ಜತೆ
ಗುಣ ಕರ್ಮ ಕಾಲದಲ್ಲಿ ಪರಿಪೂರ್ಣವಾಗಿಪ್ಪ
ಗುಣನಿಧಿ ವಿಜಯ ವಿಠ್ಠಲನ ಚಿಂತೆಯ ಗೈಯೊ ೬

ಶಾಸ್ತ್ರಗಳಲ್ಲಿ ಭಗವಂತನೊಲುಮೆಯನ್ನು ಗಳಿಸಿಕೊಳ್ಳಲು

೨೯
ಧ್ರುವತಾಳ
ಕರ್ಮಠ ನಾನು ದೇವ, ನಿರ್ಮಳನಾದ ನಿವರ್ತ
ಮರ್ಮ ಮಾರ್ಗವನು, ಸುಪೆರ್ಮೆಯಿಂದಲಿ ತಿಳಿಯೆ
ಧರ್ಮದಪ್ಪಿ ಬಾಳುವ ಚರ್ಮ ದೇಹದಲ್ಲಿ ದು-
ಷ್ಕರ್ಮಂಗಳೆಂಬೊ ವನಧಿ, ಉರ್ಮಿಯೊಳಗೆ ತಗಲಿ
ಚರ್ಮಗನಿಗೊಂದು ಕರ್ಮ ಮಾಡಲನೇಕ
ಕರ್ಮಗಳಟ್ಟಿ, ಅಕರ್ಮಕ್ಕೆ ಪೋಗಗೊಡದು, ನಿ
ರ್ನಿಮಿತ್ಯ ಬಲು ಕರ್ಮದ ಹೆಣ್ಣೆ ಕೊಂಡು
ದುರ್ಮತಿಗಳ ಕೈಯ್ಯ ಮರ್ಮದಲ್ಲಿ ನೊಂದೆ
ಕರ್ಮಸಾಕ್ಷಿ ವಂದ್ಯ ವಿಜಯ ವಿಠ್ಠಲ, ಸ
ತ್ಕರ್ಮವಾಚರಿಸದೆ, ನೂರ್ಮಡಿ ತಿರುಗಿದೆ ೧
ಮಟ್ಟತಾಳ
ನಮೋ ನಮೋ ಅನಂತಾನಂತ, ಪ
ರಮ್ಮ ಪುರುಷ ಪುರುಷೇಶ್ವರ
ರಮ್ಮೆಯರಸ ರಾಗಾದಿದೂರಾ
ತುಮ್ಮ ಅಪಾನಿರುತವಾಸ
ಗಮ್ಯಗೋಚರನೆ, ಅಪಾರಮ
ಹಿಮ್ಮ ಮಹಿಧರ ಧರ
ಹಮ್ಮಿನ ದೈವ ಅನಾದಿ, ಅನಾದಿ ಅನು
ಪಮ್ಮ ಚರಿತ ಪರಿ ಪರಿರೂಪ
ಬೊಮ್ಮಜನಕ ಭವ ಭಯದೂರ
ನಿಮ್ಮಿತ್ಯ ಬಂಧು ನಾಗಾರಿಗಮನ
ಸುಮ್ಮನಸರೊಡಿಯ ಸುಗುಣ ಪುರುಷೋ
ತ್ತುಮ್ಮ ತುರಂಗ ವದನ ಬಲು
ಸೌಮ್ಯವುಳ್ಳ ಸಾಕಾರ ಮೂರುತಿ
ರಮ್ಯ ನಾಮಾ ವಿಜಯ ವಿಠ್ಠಲ
ಖಮ್ಮಹಿಪತಿ ಕಾರುಣ್ಯವನಧಿ ೨
ತ್ರಿವಿಡಿತಾಳ
ನಿನ್ನ ಪೋಲುವವರಾರು ನೀರಜದಳನಯನ
ಎನ್ನನು ಬಿಡದಿರು ಬಿರಿದು ಬಲ್ಲೆ
ಮನ್ನಿಸಿ ಸಲಹಯ್ಯ ಮರಳೆ ಕರ್ಮದಿಂದ
ಸನ್ನು ಮಾರ್ಗವ ಕಾಣೋ ಬಹುಜನ್ಮದಿ
ನಿನ್ನಿಚ್ಛೆಯಿಲ್ಲದೇ, ಲಿಂಗ ಶರೀರವು
ಭಿನ್ನವಾಗದು ಕಾಣೊ ಅನಂತ ಕಾಲದಲ್ಲಿ
ಎನ್ನಾಧೀನವಲ್ಲ ಜ್ಞಾನ ಭಕ್ತಿ ವೈರಾಗ್ಯ
ಮಾನ್ಯ ದೇವತಿಯೆ ಲಾಲಿಸು ಮಾತನು
ಕಣ್ಣೆವೆ ಇಡುವ ಸ್ವತಂತ್ರ ಎನಗಿದ್ದರೆ
ನಿನ್ನ ಬಿಡುವೆನೇನೊ ಬಸವಳಿದು
ಇನ್ನು ತ್ರಿಭುವನಕ್ಕೆ ದೈವಾವುದಿಲ್ಲೆಂದು
ಪನ್ನಗನಾದರೂ ತುಳುಕುವೇನೊ
ಚನ್ನಾಗಿ ಪಾಲಿಸು ವಿಜಯ ವಿಠ್ಠಲ ಕರುಣಿ
ನಿನ್ನ ಕಾರುಣ್ಯವೇ ವಜ್ರ ಪಂಜರವು ೩
ಅಟ್ಟತಾಳ
ಪಿಡಿಯೊ, ಪಿಡಿಯೋ ಕೈಯ್ಯ, ನುಡಿಯೊ ನುಡಿಯೊ ಸೊಲ್ಲಾ
ಕೊಡು ಕೊಡು ಮುಕುತಿಯಾ ಕೊಡವಂಥ ಸನ್ಮಾರ್ಗ
ಬಿಡಿಸು ಬಿಡಿಸು ಭಂಗ ಬಡಿಸುವಹಂಕಾರ
ಕೆಡಿಸೋದು ಷಡ್ವರ್ಗ ಒಡನೆ ಕಾಡುವ ಮ-
ದಡ ಅಷ್ಟಮದಗಳು ಒಡಲೊಳು ಇಟ್ಟುಕೊಂಡು
ಬಡಿವಾರದಲ್ಲಿ ಕರ್ಮನಡಾವಳಿ ಮಾಡುವೆ
ಸಡಗರದ ದೈವ ವಿಜಯ ವಿಠ್ಠಲ ನಿನ್ನ
ಅಡಿಗಳ ಸ್ಮರಣೆಗೆ ಪಡಿಗಾಣೆ ಆವಲ್ಲಿ ೪
ಆದಿತಾಳ
ಚಕ್ರಿಯೇ ನಿನ್ನ ಪ್ರಜೆ ಸುಕೃತ ಮಾಡಿದವನು
ಸುಕೃತ ಪೇಳಲು ಆಕ್ರಮಿಸಿದ್ದ ಸರ್ವ
ವಕ್ರಂಗಳೆಲ್ಲ ಪಾದಕ್ರಮಗೆಟ್ಟು ಪಾದಕ್ರಾಂತವಾಗೋವು
ಶಕ್ರನು ಬಲ್ಲನಿದು ವಿಕ್ರಮದಲ್ಲಿ ಜ-
ಲಕ್ರೀಡೆ ಕರಿಯಾಡೆ ಆಕ್ರಮದಿಂದ ಬಂದು
ನಕ್ರ ಘೋರಿಸುತಿರೆ
ಚಕ್ರವಟ್ಟಿ ವೇಗ ನಕ್ರವ ಪರಿಹರಿಸಿ
ನಕ್ರಿಯಾ ನೀನೆ ಕಾಯ್ದು ಚಕ್ರವರ್ತಿಗಳೊಡೆಯ
ಅಕ್ರೂರವರದ ಸಿರಿ ವಿಜಯ ವಿಠ್ಠಲ ನಿನ್ನ
ಸಕೃಪೆ ಪಿಡಿದು ಜ್ಞಾನ ಕ್ರಿಯನಾಗಬೇಕು೫
ಜತೆ
ಇನ್ನಾದರು ಎನ್ನ ಕರ್ಮ ಮಾರ್ಗವ ಬಿಡಿಸಿ
ನಿನ್ನ ಧ್ಯಾನವ ಕೊಡೊ ವಿಜಯ ವಿಠ್ಠಲರೇಯ೬

ಶ್ರೀ ಹರಿಯ ಪ್ರಸಾದಕ್ಕೆ ದುಷ್ಟ

೩೧
ಧ್ರುವತಾಳ
ಕಾಮ ಕಡಿಮ್ಯಾಗದು ಕ್ರೋಧ ಲೇಶ ತಗ್ಗದು
ನೇಮವಾಗೆ ಲೋಭ ಬಿಡದಿಪ್ಪುದು
ಆ ಮದವಡಗದು ಮತ್ಸರವಳಿಯದು
ವ್ಯಾಮೋಹ ಕೂಡಿಪ್ಪುದು ಎಲ್ಲಿದ್ದರು
ತಾಮಸಂಗಳಿದಕೆ ಬಲವಾಗಿ ನಿಂದಿಹವೊ
ಪಾಮರ ಬುದ್ಧಿ ಸಂಗತಿಯಾಗಿದೆ
ಸೀಮೆಗಾಣೆನು ನಾನು ಎಲ್ಲೆಲ್ಲಿ ತಿರುಗಿದರು
ಸ್ವಾಮಿ ನೀನೊಬ್ಬ ಬಲವಂತನೆಂದು
ನಾ ಮೊರೆ ಹೊಕ್ಕು ನಿನ್ನ ಮೊರೆಬಿದ್ದೆ ದೈನ್ಯದಲ್ಲಿ
ಈ ಮಾತು ನೀ ಮನ್ನಿಸದಿದ್ದಡೆನಗೆ
ಭೂಮಿಯೊಳಗೆ ಕಾವಾ ಕರುಣಿಯ ಕಾಣೆನಕಟ
ನಾಮ ನೆನದವಂಗೆ ಗತಿದಾಯಕ
ನೇಮ ನಿತ್ಯಗಳಿಲ್ಲ ಒಂದೊಂದು ಬಗೆ ಬಗೆ
ಪ್ರೇಮ ಪುಟ್ಟುವುದಯ್ಯ ದುರುಳ ವೃತ್ತಿಗೆ
ಸಮಸ್ತ ದುರ್ಜನರು ಒಂದಾಗಿ ತಮ್ಮ ತಮ್ಮ
ಧಾಮದಲ್ಲಿಗೆ ಒಯ್ದು ಕೆಡಿಸುವರೊ
ಈ ಮನ ನೀಚರೊಶವಾದ ಮೇಲೆ ಎನ್ನ
ನೇಮ ನಿತ್ಯಂಗಳಿಗೆ ನೆಲೆಗಾಣೆನೊ
ಸುಮಾರ್ಗವೆಂಬೋದೆಲ್ಲಿ ತೋರದೆ ಪಾಪದೊಳು
ನಾ ಮುಣುಗಿ ಇಪ್ಪೆನಯ್ಯಾ ಭವತಾರಕ
ನೀ ಮರೆದರೆ ಇನ್ನು ಅನಂತ ಜನುಮಕ್ಕೆ
ಕಾಮಕ್ರೋಧದಿಂದ ಕಡೆ ಬೀಳೆನೊ
ನಾಮದೊಡೆಯ ಸಿರಿ ವಿಜಯ ವಿಠ್ಠಲ ನಿನ್ನ
ಕೋಮಲಾಂಘ್ರಿಯ ಧ್ಯಾನ ಪಾಲಿಸು ಕರುಣದಲ್ಲಿ ೧
ಮಟ್ಟತಾಳ
ವಿಷಯಂಗಳಿಗೆ ಎನ್ನ ವಶಮಾಡಿ ನೀನು
ನಸುನಗುತಾ ಇನಿತು ಹಸಗೆಡೆಸುವುದು ಸಂ
ತಸವೇನೊ ಸ್ವಾಮಿ ವಸುಧಿಯೊಳಗೆ ಜೀವಿಸಲಾರೆ ರ
ಕ್ಕಸರ ಪ್ರೇರಣೆಯಿಂದ ಬೆಸಸುವುದೇನಿನ್ನು
ದೆಶೆಗೆಟ್ಟು ಮರುಗೀ ಘಸಣೆಗಾರದೆ ಸ್ತುತಿಸಿದೆನೊ ನಿಲ್ಲದಲೆ
ಪಶುವಿನಂದದಲಿ ಈ ಅಸುಮೆಂದೆನಿಸಿದರು?
ಕುಶಲ ಮತಿಯ ಕೊಡುವ ವಿಜಯ ವಿಠ್ಠಲ ನಿನ್ನಾ
ರ್ಚಿಸುವ ಬಗೆ ಜ್ಞಾನ ಪಾಲಿಸಿ ಕರುಣಿಸಬೇಕು ೨
ತ್ರಿವಿಡಿ ತಾಳ
ಯೋಗ ಯಾಗ ತ್ಯಾಗ ರಾಗ ಬೇಡುವುದಿಲ್ಲ
ಸಾಗರ ದ್ವೀಪಗಳು ಕೊಡು ಎಂದಾಡುವುದಿಲ್ಲ
ವೇಗದಿಂದಲಿ ಬಂದು ಸಾಕು ಎಂದೆನಲಿಲ್ಲ
ಅಗರ ಅಂಗಣ ವಾಜಿ ಕೊಡೆನಲಿಲ್ಲ
ಭೋಗದಾಶೆಯ ಮಾಡಿ ಭಾಗ್ಯಾಪೇಕ್ಷಿಸಲಿಲ್ಲ
ಲಾಗು ಮಾಡುವ ವಿದ್ಯ ಬಯಸಲಿಲ್ಲ
ಈಗಲೆನ್ನ ಬಿಡದೆ ಉದ್ಧರಿಸೆನೆಲಿಲ್ಲ
ಹಾಗ ಹೊನ್ನು ಹಣ ಬೇಡಲಿಲ್ಲ
ಭಾಗಾದೆಯಾಗಿ ಕಾಡುವ ಕಾಮಾದಿಗಳನ್ನು
ನೀಗುವುದೆಂದು ಪ್ರಾರ್ಥನೆ ಮಾಡಿದೆ
ಸಾಗರಶಯನನೇ ಇಂತು ಲಾಲಿಸದಿರೆ ಲೇ-
ಸಾಗಿ ನಿನ್ನ ನಾಮಾ ತುತಿಸಲ್ಯಾಕೆ
ಜೌಗು ಮಾಡದೆ ಇಂದೇ ನುಡಿದ ಬಿನ್ನಪವೆ ಚ
ನ್ನಾಗಿ ಕೇಳುವುದು ಬಲು ಕರುಣದಿಂದ
ಯೋಗಿ ಜನರ ಪ್ರೀಯ ವಿಜಯ ವಿಠ್ಠಲ ಎನ್ನ
ಆಗಾಮಿ ಸಂಚಿತ ಪ್ರಾರಬ್ಧಕ್ಕೆ ಯೋಚನೆ ೩
ಅಟ್ಟತಾಳ
ಗತಿಗೆ ಚಿಂತಿಪುದಿಲ್ಲ ಗತಿ ಪ್ರದಾತನೆ ಕೇಳು
ಖತಿಗೊಳಿಸುವ ದುರ್ಮತ ಸಮ್ಮಂಧವ ಕೀಳಿ
ಅತಿಶಯವಾದ ವಿಹಿತವುಳ್ಳ ಮತದಲ್ಲಿ
ಕ್ಷಿತಿ ಸುರರ ಜನನ ಸಂಗತಿಯಾಗಿ ಬಂದಿದೆ
ತತುವ ಮಾರ್ಗದ ಸುವ್ರತವನ್ನುದ್ಧರಿಸಿದ್ದು
ಪ್ರತಿಕೂಲವಾಗಿ ಸಂತತ ದುಷ್ಟರಲಿ ದು
ರಿತಕೊಳಗಾಗಿ ಜನಿತನಾಗುವೆನು ಅತಿ ಅ
ದ್ಬುತ ಭಯ ಎನಗಿದೆ ಪತಿತರ ದೆಶೆಯಿಂದ
ಹಿತ ನೀನೆ ವಿಜಯ ವಿಠ್ಠಲರೇಯ ನಮಗೆಲ್ಲ
ನತನಾಗಿ ನುತಿಸುವೆ ಚಿಂತಾರತುನವೆ ಕೊಡೊ ೪
ಆದಿತಾಳ
ಅರಿ ಅರಿ ಅರಿ ದ್ವಯವರ್ಗಗಳು
ಹರಿ ಹರಿ ಹರಿದಿಕ್ಕಿ ಕರಕರೆ ಕರಕರೆ ಮಾಳ್ಪವು
ಹರಿ ಹರಿ ಹರಿ ಹರೀ ನೀನೆಂದು
ಮೊರೆ ಮೊರೆ ಮೊರೆ ಹೊಕ್ಕೆ
ಪರಿ ಪರಿ ಪರಿ ಪರಿಬಗೆಯಿಂದ
ಸರ ಸರ ಸರ ಸರನೆ ಒಲಿದು
ಇರ ಇರ ಇರದಂತೆ ಅರಿಗಳು
ತರ ತರ ತರ ತರ ನಡಗಿಸಿ
ಅರೆ ಅರೆ ಅರೆ ಅರೆಮಾಡು ಓಡಿಸಿ
ಸುರನರೋರುಗ ನರ
ಗುರು ವಿಜಯ ವಿಠ್ಠಲರೇಯ ಎನಗೆ
ವರ ವರ ವರ ವರ ವರಗಳ ಕೊಡುವುದು ೫
ಜತೆ
ದುಷ್ಟಕಾಮಗಳ ಬಿಡಿಸದಿದ್ದರೆ ನೆಲೆಗಾಣೆ
ಧಿಟ್ಟಮೂರುತಿ ವಿಜಯ ವಿಠ್ಠಲ ಲೋಕೇಶ ೬

ಭಕ್ತರಾದವರು – ಭಕ್ತರಾಗುವವರು ಆತ್ಮ

೩೨
ಧ್ರುವತಾಳ
ಕಾಮ ವೆಗ್ಗಳಿಸಿತು ಕಪಟ ಘನವಾಯಿತು
ತಾಮಸಂಗಳ ಬಲ ಹೆಚ್ಚಿತು
ನೇಮಂಗಳು ತಗ್ಗಿದವು ನಿಷ್ಠೆ ಬಯಲಾಯಿತು
ಈ ಮನಸು ಪಾಪ ಪುರುಷನ ಸೇರಿತು
ಯಾಮಿರವಾಯಿತು ಧರ್ಮ ಹಿಂದಾಯಿತು
ಆ ಮಹ ಸತ್ಯ ಗುಣ ಶೂನ್ಯವಾಯಿತು
ನಾ ಮುಂದಾರನ ಕಾಣೆನಕಟಕಟ ಏನು ಗತಿ
ನೀ ಮರೆದರೆ ಎನಗಾವ ತೆರನೊ
ಗ್ರಾಮಣಿ ನಾಮಾ ನಮ್ಮ ವಿಜಯ ವಿಠ್ಠಲ ನಿನ್ನ
ನಾಮಕ್ಕೆ ಉಪಹತಿ ಬರುತಿದೆ ನೋಡೊ ೧
ಮಟ್ಟತಾಳ
ಈರೈದು ಮ್ಯಾಲೊಂದು ಇಂದ್ರಿಯಗಳ ಕರ್ಮ
ಸೇರಗೊಡವು ಎನ್ನ ಪುಣ್ಯದ ದಾರಿಗೆ
ಗಾರು ಮಾಡುತಲಹರೆ ಮತಿ ಭ್ರಮಣನ ಮಾಡಿ
ಆರು ಮಂದಿ ಬೇರೆ ಅತಿಕ್ರೂರರು ಉಂಟು
ಹೋರುವಮಿತ ಮದ ಹಿತದವರಾರಿಲ್ಲ
ಸೂರೆ ಹೋಯಿತು ಪುಣ್ಯ ಮೀರಿತು ಎನ್ನೊಶ
ಯಾರೊಬ್ಬರ ಕಾಣೆ ಆರು ಎನ್ನವರಿಲ್ಲ
ಶೌರಿ ವಿಜಯ ವಿಠ್ಠಲ ವಾರವಾರಕೆ ನಿನ್ನ
ಕಾರುಣ್ಯದಳತಿಯಲಿ ಕಾಯಬೇಕಯ್ಯ ೨
ರೂಪಕ ತಾಳ
ದುರುಳರು ಕೋರಿದ ಪುರುಷಾರ್ಥವು ಈಗ
ಪರಿಪೂರ್ಣವಾಯಿತು ಅವರಿಗೆ ಹರಿಯೇ
ದುರುಳರು ಕೋರಿದ ಪುರುಷಾರ್ಥವು ಈಗ
ಇರುಗೊಡರು ಎನ್ನ ಕರವಿಡಿದು ತಮ್ಮ
ಅರಸಿಗೆ ಒಯ್ದು ಒಪ್ಪಿಸುವರು ಹರಿಯೆ
ದುರುಳರು ಕೋರಿದ ಪುರುಷಾರ್ಥವು ಈಗ
ಬಿರಿದು ಪರಿಪಾಲ ವಿಜಯ ವಿಠ್ಠಲ ಪೂರ್ಣ
ಶರಣರ ಪರರಿಗೆ ಕೊಡದಿರು ಹರಿಯೆ ೩
ಝಂಪೆ ತಾಳ
ರೋಮ ರೋಮಾದ್ಯಂತ ಗರಳ ಲೇಪನವಾಗಿ
ನಾಮವೇರಿತು ನೀಚ ನಾನಾ ವೃತ್ತಿಯಲಿ
ಪಾಮರ ನರನಾಗಿ ಪಾತಕದಲಿ ಬಿದ್ದು
ಕಾಮಾತುರದಲ್ಲಿ ಕಂಡಲ್ಲಿ ತಿರುಗಿದೆ
ಸೂಮಾರ್ಗವನು ಜರಿದು ಸಜ್ಜನರ ತೊರೆದು
ಭೀಮ ಭವಂಗಳು ತೊಲಗದಲೆ ಕಾಡುತಿವೆ
ಕ್ಷೇಮನಾಮನೆ ವಿಜಯ ವಿಠ್ಠಲನೆ ಕರುಣಿಸೊ ೪
ತ್ರಿವಿಡಿ ತಾಳ
ಮಾನುಷೋತ್ತಮ ಜನುಮ ಬಾಹೋದಕ್ಕೆ ಕೇಳು
ಅನಂತ ಪುಣ್ಯ ಸಾಧನವೆ ಬೇಕು
ಮೇಣು ಜನಿಸಿದರು ದೇಹವದು ಸ್ಥಿರವಲ್ಲ
ತಾನು ಅನಿತ್ಯವಾದರು ಮಹಫಲವನೀವುದು
ಜಾಣನೆ ತನು ವ್ಯರ್ಥವಾಗಿ ಪೋಗದಂತೆ ರಕ್ಷಿಸು
ಪ್ರಾಣ ತನುಮನದೊಡಿಯ ವಿಜಯ ವಿಠಲ ನಿಧಿ
ಮಾನುಷೋತ್ತಮ ಜನುಮ ಬಾಹೋದಕ್ಕೆ ಕೇಳು ೫
ಅಟ್ಟ ತಾಳ
ಸಕಲ ದುರುಳ ಮಹ ಇಂದ್ರಿಯಂಗಳ
ನಿಕರವು ನಿನ್ನ ವಶಗಳಲ್ಲವೇ?
ಮಕರತನವಾದ ಕಕ್ಕಸದ ಬಲೆಯೊಳು
ಸಿಕ್ಕಿ ನೋಡುವುದೇನು ಉಚಿತವೇನೈ
ಮಕ್ಕಳಾಟಿಕೆ ಬೇಡ ತಿಮ್ಮಯ್ಯನೆ ಎನ್ನ
ಕಕುಲಾತೆ ಬಿಡಿಸೊ ಕಿಂಕರರೊಳಗಿಡಿಸೋ
ಭಕುತನಾಮಾ ನಮ್ಮ ವಿಜಯ ವಿಠ್ಠಲ ವಿ
ರಕುತಿಯ ಪಾಲಿಸು ಭಕುತಿಲಿ ನಿಲಿಸು
ಆದಿತಾಳ
ಏನಾದರೇನು ಇನ್ನು ಹಾನಿ ವೃದ್ಧಿಗಳಿಗೆ
ನೀನಲ್ಲದೆ ಗತಿಯಿಲ್ಲ ನಾನೀಗ ಸಟಿಯವನಲ್ಲ
ಹೀನಾಯವನು ಕಳೆದು ಜ್ಞಾನವನ್ನು ತೋರಿಸಿ
ನೀನೆಂಬುವುದು ತಿಳುಹಿ, ಆನಂದ ಮತಿ ಕೊಡುವುದು
ಸ್ಥಾಣುವೆ ನಾಮ ನಮ್ಮ ವಿಜಯ ವಿಠ್ಠಲರೇಯ
ಧೇನು ಭಕ್ತರಿಗೆ ನೀನಲ್ಲವೆ ಕರದುಂಬವ ನಾನಲ್ಲವೆ
ಧ್ಯಾನದಲ್ಲಿ ನಿಂದು, ಮಾನಸ ಪೂಜೆಯಲ್ಲಿ
ಆನಂದವಾಗಿ ಪೊಳೆವುದು, ಹೀನಮತಿಯ ಕಳೆವುದು ೭
ಜತೆ
ಕೀರ್ತಿ ಅಪಕೀರ್ತಿ, ನಿನ್ನದು ಕಾಣೊ ದೀಪುತ
ಮೂರ್ತಿ ವಿಜಯ ವಿಠ್ಠಲ ಎನ್ನಾಳುವ ಸ್ವಾಮಿ ೮

ತಿರುಪತಿಯ ಶ್ರೀನಿವಾಸನನ್ನು ಕುರಿತು ಬರೆದಿರುವ

೪೧. ತಿರುಪತಿ
ರಾಗ:ಕಲ್ಯಾಣಿ
ಧ್ರುವತಾಳ
ಕಾಯದಿಂದಲಿ ಭಕ್ತ ಮಾಡಿದಪರಾಧ |
ತಾಯಿಯಂದದಿ ತಾನೆ ಕಾರುಣ್ಯದಿಂ |
ಘಾಯವಾಗದಂತೆ ದಂಡಿಸಿ ಪಾಲಿಸುವ |
ಶ್ರೀಯರಸನ ಗುಣಕೆ ಏನೆಂಬೆನೋ |
ಸ್ತ್ರೀ ಯೋಗಾ ಮೊದಲಾದ ಪಾಪಂಗಳು ಮಾಡಿರೆ |
ಕಾಯಿದು ಕೊಂಬವನಯ್ಯ ವಾಸನಮಯದಿಂ |
ಆಯಿತೆಂದೆನಿಸುವ ಸ್ವಲ್ಪಾನುಭವದಿಂದ |
ನೋಯಾದಂತೆ ಪಾಪಾ ತೀರಿಸುವನು |
ಈಯವನಿಯೊಳಗೆ ಎಣಿಸಿದರು ಇಂಥ ಉ |
ಪಾಯ ಬಲ್ಲಂಥ ದೈವ ಒಂದೂ ಇಲ್ಲಾ |
ಬಾಯಲ್ಲಿ ಆಡಿದರು ಕೋಪದಿಂದಲಿ ಅವನ |
ಸಾಯಾಬಡುವರಲ್ಲೊ ಮುಂದೋರದೆ |
ಕಾಯುಜ ಪಿತನ ಮಹಿಮೆ ಕೇಳಿರೊ ತನ್ನವರು |
ಕಾಯದಲ್ಲಿ ಪಾಪಾಮಾಡೆ ಮನದಲ್ಲಿ ಉಣಿ ಪಾ |
ಛಾಯಾದಂತೆ ಪುಣ್ಯ ಮನದಿಂದ ಮಾಡಿದರೆ |
ಕಾಯದಲಿ ಉಣಿಸುವ ಖ್ಯಾತಿ ಇತ್ತು |
ಮಾಯಾಕಾರನ ಮಾಯ ತಿಳಿದವನಾರು ದೈ |
ತೇಯ ಜನರಿಗೆ ಇದರ ವಿಪರೀತವೊ |
ವಾಯು ವಂದಿತ ವಿಜಯವಿಠಲ ವೆಂಕಟಗಿರಿ |
ರಾಯ ತನ್ನ ಶರಣರಿಗೆ ಭೀತಿ ಬರಗೊಡನು ೧
ಅಟ್ಟತಾಳ
ಧರಣಿಯೊಳಗೆ ತನ್ನ ಶರಣರ ಸೌಭಾಗ್ಯ |
ನಿರುತರ ಶೃತಿತತಿ ಪರಿಪರಿಯಿಂದಲಿ |
ಬರದೊರದು ಪೇಳಿ ಬೆರಗಾಗುತಲಿವೆ |
ಸರಿಗಾಣೇನಯ್ಯಾ ಹರಿ ತನ್ನವರನ |
ಚರಣದಲಿ ಇಟ್ಟು ಪರಿಪಾಲಿಸುತಿಪ್ಪ |
ದುರಿತದ ಭಯವಿಲ್ಲ ದುರುಳ[ರ]ಟ್ಟುಳಿ ಇಲ್ಲ |
ಉರಗಗಿರಿ ವೆಂಕಟ ವಿಜಯವಿಠಲರೇಯ |
ಸ್ಥಿರವಾಗಿ ನಿಂದು ಕರೆದು ವರವಕೊಡುವ ೨
ತ್ರಿವಿಡಿತಾಳ
ಆವಾವ ದೈವಗಳ ನಂಬಿದರೇನಯ್ಯಾ |
ಭಾವದಲಿ ನೋಡಿದರು ಸುಖವೇ ಇಲ್ಲ |
ನೋವಾಗುವುದು ಕೇಳಿ ಬಾಯಿಲಾಡಿದದಕ್ಕೆ |
ಕೇವಲ ಬಾಧಿಯ ಬಿಡಿಸುವರು |
ದೇವದೇವೇಶನ ಕರ್ತೃತ್ವ ಇಂತಲ್ಲ |
ನೋವಾಗೊಡದಂತೆ ಉಣಿಪ ಪಾಪಾ |
ಆವಾವಗಾದರು ಇಂಥಾ ಶಕುತಿ ಉಂಟೆ |
ತ್ರಿವಿಧ ಗುಣದಿಂದ ಪ್ರತಿಬದ್ಧರೂ |
ಭೂವಲ್ಲಭ ಚೋರರ ದಂಡಿಸಿದಂತೆ ದೈ |
ತ್ಯಾವಳಿಯ ಶಿಕ್ಷಿಸುವ ನಿರ್ದೋಷನೊ |
ದೇವ ನಾರಾಯಣಗಿರಿ ವಿಜಯವಿಠಲ |
ಶ್ರೀ ವೆಂಕಟನಾಥ ನಮ್ಮನು ಕಾವಾ ೩
ಅಟ್ಟತಾಳ
ಭಾರವಹಿಸುವ ದೀನ ವತ್ಸಲ ಅಚ್ಯುತ |
ಸಾರಿಸಾರಿಗೆ ತನ್ನ ಸಾರಿದವರು ಸಂ |
ಸಾರದೊಳಗೆ ಇರೆ ಕರುಣದಿಂದಲಿ ಸಂ |
ಸಾರಿಗ ತಾನಾಗಿ ಇವರನ್ನ ತಗದು ಉ |
ದ್ಧಾರ ಮಾಡವನಯ್ಯಾ ಸುಲಭ ಮೂರುತಿ ಇದು |
ವಾರಿಯೊಳಗೆ ಬಿದ್ದ ಮನುಜಗಾಗಿ ತಾನು |
ವಾರಿಯಾ ತುಡಿಕಿ ಪಿಡಿದೆತ್ತಿ ತಂದವನ |
ತೀರದಲ್ಲಿಟ್ಟು ಪಾಲಿಸಿದಂತೆ ಕಾಣಿರೊ |
ಮಾರಜನಕ ನಮ್ಮನು ಭವದಿಂದಲಿ |
ಪಾರುಗಾಣಿಸುವನು ಪಾವನ್ನ ಶರೀರ |
ನಾರದ ವಂದ್ಯ ವಿಜಯವಿಠಲ ಸರ್ವಾ |
ಧಾರ ವೆಂಕಟ ಉರಗಾರ್ರಿವಾಸ ೪
ಆದಿತಾಳ
ವಾರಿಜ ಪಾದ ವಾರಿಜನಾಭ |
ವಾರಿಜ ಹೃದಯ ವಾರಿಜ ಕಂಧರ |
ವಾರಿಜ ಪಾಣಿಕರ ವಾರಿಜ ನಿಜ |
ವಾರಿಜ ಲೋಚನ ವಾರಿಜ ಪತಿ ವಾರಿಜ |
ವಾರಿಜ ಹಾರಾ ವಾರಿಜ ಮಿತಾ |
ಪಾರ ಕೋಟಿ ತೇಜಾ ವಿಬುಧ |
ವಾರಿಜ ನಮಗೆ ವಾರಿಜ ಸುರ ವಾರಿಜ |
ವಾರಿಜ ಸಂಭವ ನೆನೆವರ ಹೃ |
ದ್ವಾರಿಜ ಪೀಠವಾಸ ವಾರಿಜನಿಲಯ ವಿಜಯವಿಠಲ ದಯಾ |
ವಾರಿಧಿ ವೆಂಕಟಗಿರಿ ಶ್ರೀನಿವಾಸ ೫
ಜತೆ
ಶರಣರಿಗಾಗಿ ನಿರ್ಜರರ ವಾಲಗಬಿಟ್ಟು |
ಉರಗಾದ್ರಿಯಲಿ ನಿಂದಾ ವಿಜಯವಿಠಲ ವೆಂಕಟ ೬

ಭಗವಂತನನ್ನು ರು

೩೩
ಧ್ರುವತಾಳ
ಕಾಯಯ್ಯೋ ದೇವ ಕರುಣಾಪಾಂಗದಲ್ಲಿ ಎನ್ನ
ಕಾಯವೆ ನಿನ್ನದಯ್ಯ ಕಾವನಯ್ಯ
ತಾಯಿ ಇಲ್ಲದ ತರುಳ ಬಾಯಿ ತೆರವ ತೆರ-
ನಾಯಿತಯ್ಯ ಜೀಯಾ ನರನ ಪ್ರೀಯಾ
ಮಾಯಾಸಾಗರ ಅಡ್ಡ ಹಾಯಗೊಡದು ಇದಕು-
ಪಾಯವನು ತೋರಯ್ಯ ಭಕ್ತ ಪ್ರೀಯಾ
ರಾಯ ರಾಯರ ಮಧ್ಯದಲ್ಲಿ ದಾಸರ ಪೊರೆವೊ
ಪಾಯೇತರ ಬಿರುದು ನಿನ್ನದಯ್ಯ
ಛಾಯಗಾರಿಕೆಯಿಂದ ದುಷ್ಟಗ್ರಹಗಳ ಸಮು
ದಾಯ ಪೀಡಿಸಿ ಭಯಾ ತೋರುತವೇನಯ್ಯ
ಓಯೆಂದು ಕರೆವೆ ಪರಕೀಯವ ನಾನಲ್ಲ
ಬಾ ಎಂದು ಪಿಡಿಯೊ ಕಯ್ಯಾ ತರಣಿಕಾಯ
ಶ್ರೀಯಜ್ಞಪತಿನಾಮಾ, ವಿಜಯ ವಿಠ್ಠಲರೇಯ
ನೋಯಾದಂತೆನಗೀಡು ನಿನ್ನ ಪಾದ ಛಾಯ ೧
ಮಟ್ಟತಾಳ
ಬಣಗು ಗ್ರಹಂಗಳೆನ್ನ ಸೆಣಿಸಿ ಒಮ್ಯಾದರು
ಮಣಿಸಲಾಪವೆ ನಿತ್ಯ ಹೆಣಗಾಡಿದರನ್ನ
ಕೊನೆಯ ನಾಲಿಗೆಯಿಂದ ಘಣಿತಲ್ಪನೆ ನಿನ್ನ
ಗುಣಕರ್ಮಭಿಧಾನ ನೆನಿಸಲು ಗ್ರಹಕುಲವೊ
ಕುಣಿ ಕುಣಿದಾಡೆವೊ ಮನೆಯ ಮೂರು ಸುತ್ತ
ಅನುದಿನ ನಿನ್ನ ದಾಸನು ದಾಸನ ಬಳಿಯ
ಅನಿರ್ದೇಶವಪು ನಾಮಾ ವಿಜಯ ವಿಠ್ಠಲನೊಲಿಯೆ
ಬಿನಗು ಬಲ್ಲಿದರಾಶಿ ಮುನಿದು ಮಾಡುವುದೇನೊ೨
ತ್ರಿವಿಡಿತಾಳ
ಬಲವೆ ಬಲವೆ ನಿನ್ನ ಬಲ ಒಂದುಳ್ಳಾರೆ
ಕಲಿ ಮೊದಲಾದ ದುರುಳ ಗ್ರಹಗಳು ನಿತ್ಯ
ಬಲವೆ ಸಾಲದೆ ಪೋಗಿ ಬಲು ಶ್ರಮವಾದರು
ಅಳುಕೆನೊ ಈ ದೇಹ ಇಳಿಯೊಳಿಪ್ಪ ತನಕ
ಕಳವ ಮಾಡುವರಿಗೆ ಒಳಗೆ ನಿರೂಪಿಸಿ
ಹಲಬರರಿಯದಂತೆ ಉಳ್ಳ ನೃಪನ ತೆರದಿ
ಬಲು ಬಲ್ಲಿದ ಗ್ರಹಕುಲದಲ್ಲಿ ಒಳಗೆ ನಿಯಾಮಕನಾಗಿ
ಅಳಲಿಸಿ ಅವರಿಂದ, ನೆಲೆಯ ಇತ್ತೆನಿಸಿದ
ಕುಲದೈವ ಪ್ರಗ್ರಹ ವಿಜಯ ವಿಠ್ಠಲ ನೀನೆ
ನೆಲೆಯಾಗಿ ಗ್ರಹದಿಂದ ಕೊಲಿಸಲು ನಾನಂಜೆ ೩
ಅಟ್ಟತಾಳ
ಗ್ರಹಗಳ ಮ್ಯಾಲನುಗ್ರಹವ ಮಾಡದಲಿರು
ಮಹಿಯೊಳಗುಳ್ಳ ಗ್ರಹಾದಿಗಳೆನ್ನ ನಿ-
ಗ್ರಹ ಮಾಡಲಾಪವೆ, ಸಹವಾಸದಲಿಯಿದ್ದು
ಬಹುಕಾಲದಲಿಂದ ಗಹಗಹಿಸಿದರೆನ್ನ
ಮಹಾ ತೈಜಸ ನಾಮಾ ವಿಜಯ ವಿಠ್ಠಲ ನೀನೆ
ಗ್ರಹಗಳಿಗೆ ಪ್ರೇರಿಸಿ ಪರಿಹರಿಸುವೆ ಎನ್ನ ೪
ಆದಿತಾಳ
ಹರಿಣೀ ಬ್ಯಾಟೆಗಾರ ಮರೆಮಾಡಿಕೊಂಡು ಪೋಗಿ
ಗುರುತನೆ ತೋರದಂತೆ ಗುರಿ ಎಸೆದು ನೋಡುವವನ
ಪರಿಯಾಗಿ ಗ್ರ್ರಹಾಂತರ್ಯಾಮಿ ಇದ್ದು ಶ್ರಮ
ಹರಿ ಬಿಟ್ಟು ನೋಡಿ ನಗುವ ಪರಮ ಮಾಯದ ದೈವ
ಅರಿಯಾದವರೊ ದಿನಚರಿಯ, ಮಿಕ್ಕಾದ ಬಲ
ಬರಿದೆ ಸಾಲದು ಎಂದು ಮರುಳಾಗುವರು ಮನಸಿನಲ್ಲಿ
ಸುರಲೋಲ ಮಹಧೃತಿ ವಿಜಯ ವಿಠ್ಠಲ ಸಮ
ಸ್ತರ ಒಳಗೆ ಹೊರಗೆ ನೀನೀಪರಿ ವ್ಯಾಪಕನೆ ೫
ಜತೆ
ಏನಿದ್ದ ಪ್ರಾರಬ್ಧ ಉಣಿಸಿ ಕಡೆಗೆ ಕಾಯೊ
ಪ್ರಾಣದೊಲ್ಲಭ ನಾಮಾ ಎನ್ನ ಪ್ರಾಣ ವಿಜಯ ವಿಠ್ಠಲ೬

ಲಕ್ಷ್ಮಿ ಮತ್ತು ವಿಠಲರನ್ನು ಕುರಿತ ಸ್ತೋತ್ರವಿದು.

ಲಕ್ಷ್ಮೀಸ್ತೋತ್ರ
೧೪೭
ಧ್ರುವ ತಾಳ
ಕಾಯೇ ಲಕುಮಿ ಕಾಯೊ ವಿಠ್ಠಲ
ಕಾಯಾ ಸೃಜಿಸುವ ಕಮಲ ಸಂಭವ
ಕಾಯೊ ಪಾಲಕ ಕುಲಿಶ, ಕಾಯದೊಳಗುಳ್ಳ ಸಕಲ ದಿವಿಜರೇ
ಕಾಯಗೆಡುಹುವೆ ನಿಮ್ಮಯ ಪಾದಕೆ
ಮಾಯಾ ಮೃತ್ಯುವಿಗೆ ವಶಮಾಡದೆ
ಕಾಯೆಂದು ದೈನ್ಯವನು ಬಡುವೆನು ಕಾಯೆ ಲಕುಮಿ
ದಾಯಿಗರು ತಲೆದೋರದ ಮುನ್ನ
ಛಾಯಾವಾಗುವದು ಎನ್ನಯ ಶಿರಸಕೆ
ವಾಯುನಾಮಕ ವಿಜಯ ವಿಠ್ಠಲನು
ಈಯಾಬಲ್ಲನು ನೆನಸಿದಂತೆ ೧
ಮಟ್ಟತಾಳ
ಇರುಳು ಹಗಲು ಪೋಗಿ ಪರರನ್ನಾಶ್ರೈಸಿ
ಒರಲಿ ಒರಲಿ ನಿಂದು ಶರಗನು ಮಾರೊಡ್ಡಿ
ಉರಿಯೊಳು ಪತಂಗ ಭರದಿ ಬೀಳುವಂತೆ
ಅರೆಮರೆಯಿಲ್ಲದಲೆ ಅರ ಉರಿಯೊಳಗಿಳುವೆ
ಅರಿದೇನು ಫಲವೊ ಅರಿಪಾಣಿ ಹರಿಯ
ಸ್ಮರಣೆ ಗೈಯದಲೆ ಬರಿಪಾದೆನು ಮುಂದೆ
ತರಳನ್ನನವಗುಣವ ತರಲಾಗದು ಮನಕೆ
ಗರುಡಧ್ವಜ ವಿಜಯ ವಿಠ್ಠಲನೆ ಕೃಪೆಯಿರಲಿ೨
ತ್ರಿವಿಡಿತಾಳ
ಆವಾತ ಭಕುತಿಯ ಬಿಡದೆ ದೃಢ ಚಿತ್ತದಲಿ
ಆವಾತನನ ಭಜಿಸೆ, ಆತಗೆ ಒಲಿದಿಪ್ಪ
ನಾವಾತನಾ ತಾನೆ ನಮಗೊಲಿದು ಸರ್ವದ
ಕಾವಾ ತಾ ದಯದಿಂದ ಭವವೆಂಬೊ ವನಧಿಗೆ
ನಾವಾ ತಾ ಬೇಡಿದ ಪರಮ ಸದ್ಗತಿಯ
ನೀವಾತಾ ಒಂದರ್ಧಾ ನಿಮಿಷಾದೊಳು
ದೇವತಾ ಮಣಿ ವಿಶ್ವ ವಿಜಯ ವಿಠ್ಠಲನೆಂದು
ಭಾವಾ ತಾನಲ್ಲಿಡು ಆ ವಾತ ಮತ ತೊಡು೩
ಅಟ್ಟತಾಳ
ಆವಾ ಜೀವದ ಮೇಲೆ ಆವಾ ಜೀವದ ಇಂದ್ರಿ
ಆವಾ ಜೀವದ ಕರ್ಮ, ಆವಾ ಜೀವದ ಕ್ರೀಡೆ
ಆವಾ ಜೀವದಿಂದಲಾವಾ ಜೀವಕೆ ಬಂದು
ನೋವಾ ನೋವಾದೆನು ತಿಳಿಯದಲೆ
ಆವಾ ಜೀವದ ನಾರಿ ಆವಾ ಜೀವದ ಭವರು
ಆವಾ ಜೀವಾದವರು, ಆವಾವ ಜೀವರು
ಆವಾವಾಗೆ ಪೋಗೆ ನಾವೊಂದು ಬಿಡಿಸಾದೆ
ನೀವೊಂದು ಕಲ್ಪಿಸಿ, ಪ್ಲಾವಂಗನಂತೆ, ಕುಣಿಸೋದೇನೊ
ಸೂವರ್ಣ ಬಿಂದುವೆ ವಿಜಯ ವಿಠ್ಠಲನೆ ಅ
ಘಾವಳಿ, ಸವರಿ ಸಾಧನಕೆ ಬಲವಾಗು೪
ಆದಿತಾಳ
ಎಂದಿಗೆ ದುಷ್ಕರ್ಮ ನಾಶನವಾಗೋದು
ಎಂದಿಗೆ ಸ್ವರೂಪ, ಜ್ಞಾನ ಫಲಿಸವುದು
ಎಂದಿಗೆ ಚರ್ಮ ಶರೀರ ದೂರಾಗೋದು
ಎಂದಿಗೆ ಆನಂದಕಭಿವೃದ್ದಿ ತೋರೋದು
ಒಂದೊಂದು ದಾರಿಯಲ್ಲಿ, ತಾರತಮ್ಯದಿಂದ
ಬಂದು ಮುಣುಗುವೆ, ಗೋವಿಂದ ನಿನ್ನ ಬೆವರಿನೊಳು
ಎಂದಿಗೆ ನಿನ್ನಯ ನಂದನ ಕರತಂದು
ಪೊಂದಿಸುವನು, ನಿನ್ನೊಳು ಎನ್ನ ಸ್ಥಳದಲ್ಲಿ
ಅಂದಿನನತನಕ ನಿನ್ನಂದವ ತೋರುತ್ತ
ಬಂಧನದೊಳಗೆನ್ನ ನಿಂದಿರ ಗೊಡದಲೆ
ನಂದನ ವಿಜಯ ವಿಠ್ಠಲ ನಿನ್ನ ನಾಮವ
ಒಂದರಿಂದಲಿ ಪಾಪಾ, ಬೆಂದು ಪೋಗಲಿ ನಿತ್ಯ೫
ಜತೆ
ಸ್ತೋತ್ತರ ಮನೋಹರ ದೈತ್ಯಕುಲಸಂಹಾರ
ಅತ್ರಿನಾಮ ದೇವಾ ವಿಜಯ ವಿಠ್ಠಲ ದಾತ೬

ವಿಷ್ಣುವಿನ ಕೆಲವು ಗುಣಗಳನ್ನು ಸ್ಮರಿಸಿ

೩೪
ಧ್ರುವತಾಳ
ಕಾಲ ಬಿಡುವನೆ ಹರಿ ಕಾಲಯವನ ವೈರಿ
ಕಾಲವೇನಿದೆ ಕಾಲವಿಲ್ಲ
ಕಾಲ ಕಾಲಕೆ ಕಲಿಕಾಲದೊಳಗೆ ನೀ ಸೋ-
ಕಲದರಿಂದ ಶೋಕಾಲಯ ಪರಿಹಾರ
ಕಾಲನ ಬಳಿಗಾನು ಕಾಲಂದಜಮಿಳನ
ಕಾಲ ಪಾಶವ ತೆಗೆದ ಕಾಲ ಪುರುಷ
ಕಾಲ ಕಾಲಕ್ಕೆ ಖಳ ಕಾಲನಾಗಿ ಬರಲು
ಕಾಲವರಿದೆ ಭಜಕಲೋಲ ದೇವ
ಕಾಲನಾಮಕ ತ್ರಿಕಾಲ ಪ್ರೇರಕ ಪಂ
ಕಾಲಯದೊಳು ಹಾಕಲಾಗದು ದೇಶ
ಕಾಲ ಪರಿಪೂರ್ಣ ವಿಜಯವಿಠ್ಠಲಂತ್ಯ
ಕಾಲಕ್ಕೆ ನಿನ್ನ ಸ್ಮರಣೆ ಕಾಲ ಕಳೆಯದೆ ನೀ ಈಯೊ ೧
ಮಟ್ಟತಾಳ
ಹರಿ ನಿನ್ನ ಶರಣ ವರ ವಚನಂಗಳು
ಧರಿಯೆಲ್ಲ ಕರಗಿದರು ಕರಗದ ಬಲವೇನು
ದುರಿತರಾಶಿ ಎಂಬೊ ಗಿರಿಯ ನಿಕರಕ್ಕೆ
ಸರಸವೆ ವಜ್ರದ ಮುರುಕಿನ ಕೊಡಲೀ
ಹರಿ ನಿನ್ನ ನಂಬಿದ ಶರಣರಿಗೆ, ಕಾಳೋರಗನು ಸೋಕಿದರೆ
ವರ ಸುಧೆಯಾಡುವುದು, ಶರಣರ ಪರಿಪಾಲ
ಶರಣ ರಕ್ಷಾಮಣಿ ವಿಜಯ ವಿಠ್ಠಲ ನಿನ್ನ
ಚರಣದುಂಗುಟ ನಖದ ದರುಶನ ಲಾಭವೊ ೨
ತ್ರಿವಿಡಿ ತಾಳ
ಸತ್ಯ ಸಂಕಲ್ಪ ವಿಷ್ಣು ವಿನಹಾ ಇಲ್ಲೆಂದು
ಸತ್ಯವಾಗಿ ತಿಳಿದು ನಿನ್ನ ಚರಣ
ಸತ್ಯಮಾಳ್ಪರ ಶುದ್ಧ ಭಕುತಾಪಾರರಿಗೆ
ಭೃತ್ಯ ಬಂದು ನೆಂಟತನ ಬಳಸಿ ಅವನ
ನಿತ್ಯವಾಶ್ರೈಸಿಕೊಂಡು ಇಪ್ಪುದಯ್ಯ
ಕಾತ್ಯಾಯಿನೀ ತನ್ನ ಗುರುವಿನಿಂದಲಿ ಕೇಳಿ
ಕೃತ್ಯರ್ಥಳಾದ ತೆರದಿ ನಾನು ಇಂದು
ಅತ್ಯಂತವಾಗಿ ನಿನ್ನವರಿಂದಲಿ ಕೇಳಿ
ಸತ್ಯವೆಂದರಿದು ಸೇರಿದೆ ನಿನ್ನಡಿ
ದೈತ್ಯರ ಮಹಯೋಗಿ ವಿಜಯ ವಿಠ್ಠಲರೇಯ
ಮುತ್ಯನ್ನ ಪಾಲಿಸಿದ, ಮೂಲ ಪುರುಷನೆ ೩
ಅಟ್ಟತಾಳ
ಹರಿಶರಣನಾಗಿ ಚರಿಸುವ ಮಾನವ
ಇರಲು ಕಾನನದೊಳು ಪುರವಾಗಿ ತೋರುವುದು
ಸುರಿವ ತರಿಗೆಂಡ ವರುಷವಾದರು ಪೂ
ವರುಷವಂದದಿ ಬಲು ಹರುಷವಾಗುವುದು
ಹರಿಶರಣರ ನಿರಾಕರಿಸಿದ ಮಾನವ
ಸುರಿವ ಪೂಮಳೆಯೊಳು ಇರಲು ದಹಿಸಿ ತನ್ನ
ಹರಣವಳಿಯೆ ಪೋಪ ಸ್ಥಿರವೆನ್ನಿ ಸ್ಥಿರವೆನ್ನಿ
ಶರಭಂಜ ಸೌಂವರ್ತಿ ವಿಜಯ ವಿಠ್ಠಲ ಕೀರ್ತಿ
ಪರನೆ ಎಂದಿಗಾದರು ನಿನ್ನ ಬಿಡೆನೊ ೪
ಆದಿತಾಳ
ನಿನ್ನ ಚರಣವನ್ನು ನೆನಸದವನ ದಿನ ದಿನದಲಿ
ಅನ್ಯ ರಿಪು ಆವನ್ನ ಮೊಗವನ್ನು ನೋಡೆ ಮಾತನ್ನಾಡೆ
ಎನ್ನ ವ್ರತ ಇನ್ನಿತುಂಟು ಅನ್ಯಥವನ್ಯತ್ರವಿಲ್ಲ
ರನ್ನ ಪಾದವನ್ನು ತೋರಿ ಚನ್ನಾಗಿಡು ಚನ್ನ ನಾಥ
ಸಣ್ಣ ಮನವನ್ನು ಕೊಡದೆ ಮನ್ನಿಸೆನ್ನ ನಾರಾಯಣ
ಘನ್ನ ನಾಮ ವಿಜಯ ವಿಠ್ಠಲಾ
ಪನ್ನಗಾಶನ್ನ ಗಮನ ೫
ಜತೆ
ನಿತ್ಯ ಕೃತು ನಿನ್ನಂಘ್ರಿ ಕಾಣುವಂತೆ ಮಾಡು
ಕೃತ ಕೃತ್ಯ ನಾಮ ವಿಜಯ ವಿಠ್ಠಲ ಪೊಳೆದು ೬

ಭಾರತದ ಅತ್ಯಂತ ಪ್ರಸಿದ್ಧವಾದ ಕಾಶಿಯ

೨೦. ಕಾಶಿ
ಆದಿತಾಳ
ಕಾಶಿ ಕೇಶವ ನಿರ್ಮಿತಾ ಕೈವಲ್ಯಾ ಸಿದ್ಧಾ ಸ್ವಪ್ರ |
ಕಾಶವಾಗಿದೆ ಸತ್ವಾಭಾಗದಲ್ಲಿ |
ದೇಶಾಮಧ್ಯದ ಅದಕ್ಕೆ ಎಣೆ ಮಿಗಿಲುಗಾಣೆ |
ಈಶನು ಇಲ್ಲಿ ವಾಸಾ ಹರಿಕೃಪೆಯಿಂದ |
ವಾಸವಾಗಿದ್ದ ಜನಕೆ ರಾಮನಾಮ ಉಪ |
ದೇಶವನ್ನೆ ಮಾಡುವ ಮನದಿ ನೋಡಿ |
ಕ್ಲೇಶವಿದೂರ ಶಂಭು ಇಲ್ಲಿ ಆಸಕ್ತನಾಗಿ |
ಲೇಸು ಲೇಸು ಎಂದೆನುತ ತಲೆದೂಗುವ |
ರಾಸಿ ಗುಣಗಳಿಂದಾ ಹರಿಯನ್ನೆ ಹಾಡಿಪಾಡಿ |
ದೋಷರಹಿತನಾದ ಜಗವರಿಯೇ |
ಕಾಶಿ ಕೇವಲಾ ವಿಷ್ಣುಕ್ಷೇತ್ರವಾ ಕಾಣೋಗಿ |
ರೀಶಗೆ ದತ್ತಾ ಈ ಪುರದ ಪದವೀ |
ಆ ಸುರವೃತ್ತಿಯಿಂದಾ ಪೇಳುವ ಮಾತು ನಿ |
ಶ್ಚೈಸದಿರಿ ಮನದೊಳು ಮಹಾಧೀರಾರು |
ಕಾಶಿಕೇಶವ ಆದಿಕೇಶವನೆಂದಾ ಮಾ |
ನಿಸನ್ನ ಪುಣ್ಯಕ್ಕೆ ಗಣನೆ ಇಲ್ಲಾ |
ಶೇಷಪೂರಿತ ಕರ್ಮಾ ಇಲ್ಲಿದ್ದ ಜೀವಿಗಳಿಗೆ |
ತ್ರಿಸಂಬಂಧಾದಿಂದ ಕಡೆ ಬೀಳೂವ |
ಭೂಷಣವಾಗಿಪ್ಪದು ಈ ಕ್ಷೇತ್ರಕ್ಕೆ ವಾರಾ |
ಣಾಸಿ ಆನಂದಾರಣ್ಯಾ ಆ ವಿಮುಕ್ತಿಯು |
ಕಾಶಿ ಮಹಾಸ್ಮಶಾನಾ ರುದ್ರಪುರಿ ಪುಣ್ಯಪಂಚ |
ಕ್ರೋಶ ವಿಸ್ತಾರ ಚತುರ್ದಿಕ್ಕುವಲಯಾ |
ಈ ಸಮಸ್ತಕ್ಷೇತ್ರಕ್ಕೆ ಪೆಸರಾಗಿ ಇಪ್ಪಾದಿದುವೊ |
ದಾಸ ಭೂಪಾಲಾನಿಲ್ಲಿ ಶೋಭಿಸಿ ಮೆರೆದಾ |
ಕಾಶಿರಾಜಾ ಮಿಕ್ಕಾ ಸರ್ವರಾಯರು ಉ |
ಲ್ಲಾಸಾದಿದಾಳಿದಾರು ಹರಿಭಜನೆಯಲ್ಲಿ |
ಅಸುರಕರ್ಮ ಸ್ವಾಭಾವಿಕ ಪೌಂಡ್ರಿಕಾ |
ವಾಸುದೇವಾನೆಂದೆಂಬವಾ ಇಲ್ಲಿ ಇದ್ದಾ |
ಮೋಸಾವಿಲ್ಲದೆ ಇವನ ಮತದಂತೆ ನಡಿಯಾದಿರಿ |
ಕ್ಲೇಶವಾಹದು ಕಾಣೊ ಎಂದೆಂದಿಗೇ |
ದೋಷವರ್ಜಿತರಾಗಿ ಸುಜ್ಞಾನದಿಂದ ಮಂದ |
ಹಾಸದಿಂದಾಲಿ ಮುಕ್ತಿಯ ಸೇರಿದಾರೂ |
ಕಾಶಿಯಾತ್ರಿಗೆ ಬಂದಾ ಜನರ ಸಂಗಡ ತನ್ನಾ |
ದೇಶದಲ್ಯಾದರೂ ಒಂದು ಹೆಜ್ಜಿ |
ಗ್ರಾಸಾಗೋಸುಗವಾಗಿ ಪೋದವನ ಕುಲದ ಸಂ |
ತೋಷಾ ಪೇಳುವನಾರು ಅಜ ಸಭೆಯಲ್ಲಿ |
ಕಾಶಿ ನಿವಾಸ ಬಿಂದು ಮಾಧವಾತ್ಮಕ |
ವಿಶೇಷ ಮೂರುತಿ ವಿಜಯವಿಠಲಾ ಪೊಳೆವನಿಲ್ಲಿ ೧
ಮಟ್ಟತಾಳ
ಭಗಿರಥ ತನ್ನವರಾ ಉದ್ಧರಿಸುವದಕ್ಕೆ |
ಹಗಲಿರಳು ಬಿಡದೆ ತಪವನ್ನೆ ಮಾಡಿ |
ಜಗದ ವಲ್ಲಭನಾದಾ ಶ್ರೀಶನ ಮೆಚ್ಚಿಸಿ |
ಗಗನ ನದಿಯ ತಂದಾ ಶಿವನ ಪ್ರಾರ್ಥನೆಯಿಂದ |
ನಿಗಮ ಪ್ರತಿಪಾದ್ಯಾ ಸ್ತೋತ್ರಗಳಿಂದಲಿ |
ಜಗದೊಳು ಪರಿದು ಈ ಕಾಶಿಯ ಮುಂದೆ |
ಝಗಝಗಿಸುತ ಬಂದು ಯಮುನೆ ಸಂಗಡವಾಗಿ |
ಮಿಗೆ ಶೋಭಿಸುತ್ತಿದ್ದು ಮೆರೆದಾಳೈ ಗಂಗೆ |
ಮಗುಳೆ ಈ ಕ್ಷೇತ್ರ ಮಹಾ ಖ್ಯಾತಿಯಪ್ಪುದೂ |
ಬಗೆಬಗೆಯಿಂದ ಸಾಧನವಾಗುವುದಿಲ್ಲಿ |
ನಗಧರ ನಾರಾಯಣ ವಿಜಯವಿಠಲರೇಯಾ |
ಅಗಣಿತ ಗುಣಧಾಮಾ ಅಧಿಪತಿಯಾಗಿಪ್ಪಾ ೨
ತ್ರಿವಿಡಿತಾಳ
ಇದು ಪುಣ್ಯಕ್ಷೇತ್ರವೊ ತ್ರಿಲೋಕಮಧ್ಯದಲ್ಲಿ |
ತ್ರಿದಶಗಣ ಮುನಿಗಳು ಇಲ್ಲಿ ವಾಸ |
ಪದುಮನಾಭನ ಮೂರುತಿ ಒಂದೊಂದು ಪೆಸರಿಸಿ |
ಪದೊಪದಿಗೆ ಇಪ್ಪುದು ಲಾಲಿಸುವದು |
ಮಧುಸೂದನ, ಮತ್ಸ್ಯ, ಕೂರ್ಮ, ಪರಶುರಾಮ |
ಮದನಗೋಪಾಲ, ನರಸಿಂಹ, ವರಹ |
ಮುದದಿಂದ ಮಾಧವ, ಕೇಶವ, ವ್ಯಾಸ, ವಾಮನ, ರಾಮ |
ಮೊದಲಾದ ಮೂರ್ತಿಗಳು ಸಾಕ್ಷಾದ್ರೂಪ |
ಸದಮಲತನದಿಂದಾ ಭರಿತವಾಗಿಹವು |
ಬುಧರು ಕೊಂಡಾಡುವುದು ಭಕುತಿಯಿಂದ |
ವಿಧಿರುದ್ರಾದಿ ರೂಪಾ ಬಹುವುಂಟು ಸರ್ವದ |
ಹದುಳಕೊಡುತಿಪ್ಪರು ನಂಬಿದವರಿಗೆ |
ಇದೆ ವಾಸಕ್ಕೆ ಯೋಗ್ಯ ಎಂದೆಂದಿಗೆ ಎಂದು |
ತ್ರಿದಶ್ಯಾದರು ನೋಡೆ ಇಚ್ಚೈಪರು |
ಹೃದಯಾದಲ್ಲಿ ಸ್ಮರಿಸಿ ಕಾಶಿಪಟ್ಟಣ ಮಹಾ |
ನಿಧಿಯಾ ತಂದೀವುದು ದಾರಿದ್ರಗೆ |
ಬುಧರಿಗೆ ಜ್ಞಾನವ ಪಾಲಿಸುವುದು ಮುಕ್ತಿ |
ಬದಿಯಲಿ ಉಂಟು ಶ್ರೀ ನಾರಾಯಣ |
ಬದಿಯಲಿಪ್ಪ ಕಾಲಕಾಲಕ್ಕೆ ಸಂ |
ಪದವಿಗೆ ಮಾರ್ಗವ ತೋರಿ ಕೊಡುವ |
ಒದಗಿ ವಂದಡಿಯಿಟ್ಟು ತಿರುಗಿ ಪೋದರಾಗೆ |
ವಿಧಿಕಲ್ಪ ಪರಿಯಂತ ಸುಖಿಸುವನೊ |
ಸುದರುಶನ ಪಾಣಿ ವಿಜಯವಿಠಲರೇಯಾ |
ಎದುರಿಲಿ ಪೊಳೆವ ಗತಿತಪ್ಪದಲೆ ಪಾಡಿ ೩
ಅಟ್ಟತಾಳ
ಹರಿ ಬ್ರಹ್ಮ ವಿಶ್ವೇಶ ಇಂದ್ರ ಕಾಮಾದ್ಯರು |
ಹರಿಪ್ರೀಯ ಸರಸ್ವತಿ ಪಾರ್ವತಿ ಮಿಗಿಲಾದಾ |
ವರ ನಾರಿಯರು ಉಂಟು ಭೈರವ ಗಣನಾಥ ಸಮಸ್ತಜನವ |
ಸರ ಒಂದು ಬಿಡದಲೆ ಬಹು ರೂಪಗಳಿಂದಾ |
ಸ್ಥಿರವಾಗಿ ಇಪ್ಪಾರು ಮಿರಗುತ ಮೆರವುತ್ತಾ |
ವರಗಳ ಕೊಡುತಾ ಭಕ್ತರನಾ ಪಾಲಿಸೂತಲಿ |
ತರಣಿ ಮಧ್ಯಾನ್ಹಕೆ ಬರಲು ಮಜ್ಜನಕೆ ತೀ |
ವರದಿಂದಾ ಮಣಿಕರ್ನಿಕೆ ಸಾರುವರೈ |
ಧರೆಯೊಳು ವರ್ನಿಸಾಲರಿದು ನಾಲ್ಕನೆ ಕ್ಷೇತ್ರ |
ಹರಿದುಪೋಗುವದಲ್ಲಾ ಪ್ರಳಯಕಾಲಕೆ ನಿತ್ಯಾ |
ಹರಿ ಸಂಕರುಷಣಾತ್ಮಕಾ ನರಹರಿರೂಪ |
ಧರಿಸಿ ಬ್ರಹ್ಮಾದ್ಯರಾ ಒರೆಡಗೂಡಿ ಕುಣಿವಾನು |
ಪರಮ ಮುಖ್ಯಕಾಣೆ ತಿಳಿದು ಕೊಂಡಾಡುವ |
ನರನೆ ಮುಕ್ತಪ್ರಾಯ ದೇಹಾಂತ ಶುಭಪೂರ್ಣ |
ಸುರಗಂಗಾಪಿತ ನಮ್ಮ ವಿಜಯವಿಠಲ ತನ್ನ |
ಶರಣಂಗೆ ಪ್ರಾಪ್ತಿಮಾಡಿಕೊಡುವ ಒಲಿದು ೪
ಆದಿತಾಳ
ವರುಣ ಸಂಗಮ ಪಂಚಗಂಗೆ ಮಣಿಕರ್ನಿಕೆ |
ತುರಗ ಈರೈದು ಮೇಧಾ ಆಸಿ ಸಂಗಮ ನಾನಾ |
ವರ ತೀರ್ಥ ಜ್ಞಾನಾವಾಪಿ ವೃದ್ಧಾ ಕಾಳಿ ಮಿಗಿಲಾದ |
ಸುರಮುನಿ ಕುಂಡದಲ್ಲಿ ಮಿಂದು ಧನ್ಯರಾಗಿರಿ |
ಪುರದೊಳು ನಿತ್ಯಾಯಾತ್ರಿ ಅಂತರಗ್ರಹಾ, ಉ |
ತ್ತರ ದಕ್ಷಿಣ ಮಾನಸನಗರಾ ಪ್ರದಕ್ಷಣಾ |
ತರುವಾಯ ಪಂಚಕ್ರೋಶ ಯಾತ್ರಿ ಮಾಡಿ ಸರ್ವ |
ಕರಣ ಶುದ್ಧಿಯಿಂದ ದೇವಋಷಿ ಪಿತೃಗಳು |
ಹರುಷಾವಾಗುವಂತೆ ಸತ್ಕರ್ಮಾಚರಿಸಿ ಆ |
ರ್ಯರ ಸಹವಾಸದಿಂದಾ ಕಾಲಕ್ರಮಣೆ ಮಾಡು |
ದುರುಳ ಜನಾಹಾರಿ ನಮ್ಮ ವಿಜಯವಿಠಲರೇಯಾ |
ಪರಿಪರಿ ಸುಖಕೊಡುವಾ ಇಹಪರಲೋಕದಲ್ಲಿ ೫
ಜತೆ
ಕಾಶಿಯೊಳೊಂದಡಿ ಇಟ್ಟು ಪೋದಡೆ ವೇದ – |ವ್ಯಾಸರೂಪಾತ್ಮಕಾ ವಿಜಯವಿಠಲ ಬರುವಾ ೬

ಬ್ರಹ್ಮನ ಇಪ್ಪತ್ತೊಂದನೆಯ ವರ್ಷದಲ್ಲಿ

೨೬
ಧ್ರುವತಾಳ
ಕೃತಿಕಾಂತ ಅರ್ಧನಾರಿ ರೂಪ ವಧರಿಸಿ ನ |
ಗುತ ಯೋಗಸರ್ಗ ಮಾಡಿದ ಪಿತಮಹನ್ನ |
ಶತ ವತ್ಸರ ಪರುಯಂತ ವರ್ಣಾಶ್ರಮಾಚಾರ |
ಹಿತದಿಂದ ರಚಿಸಿದನು ಪ್ರತ್ಯೇಕದಿ |
ಸತತ ಸರ್ವಜೀವರನು ಬೀಜಾಂಕುರದಂತೆ |
ಅತಿಶಯದಿಂದಲಿ ಗೈಸಿ ಮುಂದೆ |
ಗತಿ ಸಾಧನಕ್ಕೆ ಕೇಳಿ ಗುಣತ್ರಯದ ಗಾತ್ರ ಉ|
ತ್ಪತ್ತಿಯಾಗುವುದಕ್ಕೆ ಅನಿರುದ್ಧ ದೇವ |
ಪತಿ ಕರಿಸಿ ತನ್ನ ಉದರದಿಂದಲಿ ನಿಜ |
ಸತಿ ಶಾಂತಿಯಲ್ಲಿಯಿಟ್ಟ ಅಭಿಮುಖದಿಂದ |
ಮತಿವಂತರು ಕೇಳಿ ಬ್ರಹ್ಮನ ಏಕವಿಂ |
ಶತಿ ಅಬ್ದ ಪ್ರಥಮಾದಿ ದಿವಸದಲ್ಲಿ ಯೆನ್ನಿ |
ಚ್ಯುತ ದೂರ ಅನಿರುದ್ಧ ಮಾಡಿದ ಸೃಷ್ಟಿಕೇಳಿ |
ಸ್ಥಿತ ಮೂಲ ಪ್ರಕೃತಿ ನಾಮಗಳಿಂದಲಿ |
ತೃತಿಯಾಗುಣಾಭಿಮಾನಿ ನಿಯಾಮಕನಾಗಿ |
ಸತುವ ರಜೋ ತಮ ಪರಮಾಣು ರೂಪ |
ಮಿತಿಯಿಲ್ಲದಲೊಂದೊಂದು ಸಾವಯವಂಗಳ ಸ |
ಹಿತವಾಗಿ ಕಾಲಾದಿಯಂತೆ ನಿತ್ಯ ವ್ಯಾ |
ಪುತವಾಗಿಯಿಪ್ಪುದು ಮಿಶ್ರವಾಗಿ ಉ |
ನ್ನತ ಮಹಿಮೆ ಯೇನಂಬೆ ವಿಚಾರಿಸಿ |
ಸ್ಥಿತಿಯಿಂತುವುಂಟು ಮೂಲ ಜಡ ಪ್ರಕೃತಿಯಿಂದ |
ಪ್ರತಿಪ್ರತಿ ಬೊಮ್ಮಾಂಡ ಪುಟ್ಟುವದಿದಕೊ |
ಗತಿಯ ಲಾಲಿಸುವುದು ಆರಂಭದಲ್ಲಿ ಉ |
ತ್ಪತ್ತಿಗೆ ತೆಗೆದುಕೊಂಡ ಪ್ರಕೃತಿ ಗಣಿತ |
ಸತುವ ರಾಜಸ ತಮೊ ಗುಣವೊಂದೊಂದಕ್ಕೆ ಕಡಿಮೆ |
ಚತುರ (೪) ದ್ವಿ (೨) ಯೇಕ (೧) ಮುಷ್ಠಿ ಪರಿಮಿತಮನಕೆ |
ಸತುವ ಗುಣರಾಶಿ ಸೃಷ್ಟಿಸಲ್ಲದು ಮು |
ಕುತವಂತರ ಕ್ರೀಡಿಗೆ ಅನುಕೂಲವೊ |
ಇತರ ಎರಡು ರಾಶಿ ಸೃಷ್ಟಿಗೆ ಕಾರಣ |
ಮಿತವಾಗಿ ಒಂದೊಂದು ರಾಶಿಯೊಳಗೆ |
ಪ್ರಥುಕು ಪ್ರಥುಕವಾಗಿ ಭಾಗ ವಿಶಿಷ್ಯ ವಿ |
ಹಿತ ರಜೊರಾಶಿ ಮೂರು ಮೂರುವುಂಟು |
ಜತೆವೊಂದು (೧) ಮಡಿತಮಸು ಅದರ ನೂರ್ಮಡಿ (೧೦೦) ರ
ಕುತ ಅದರ ನೂರ್ಮಡಿ (೧೦,೦೦೦) ಸತ್ವವೆನ್ನಿ |
ಪ್ರತಿ ನಿಧಿಯಾದ ತಮಕೆ ವಿಶಿಷ್ವಭಾಗ ಗು |
ಣಿತ ಮಾಡುವೊಂದು ಮಡಿ ರಜಸು ಆಮ್ಯಾಲೆ ಅದರ |
ಶತ (೧೦೦) ಮಡಿ ತಮಸು ಅದರ ದಶ (೧೦) ಮಡಿ (೧೦೦೦) |
ಸತುವ ಈ ವಿಧಿ ವಿಂತ ಎರಡು ರಾಶಿಗಳು ಮಿ |
ಳಿತವಾಗಿ ಇಪ್ಪುದು ತ್ರಿ (೩) ಪ್ರಕಾರ |
ಪತಿತ ಪಾವನ ರಂಗ ವಿಜಯ ವಿಠ್ಠಲರೇಯನ |
ತುತಿಸಿಕೊಂಡಾಡುವುದು ಪ್ರಕೃತಿ ವಿಚಾರ ತಿಳಿದು
ಮಟ್ಟತಾಳ
೧ಒಂದು (೧) ಶತಾಯುತ (೧೦೦) (೧೦,೦೦೦)
ವಿಶಿಷ್ವರಾಶಿ ರಜೊ |
ಒಂದೆಂಬೊ ಭಾಗ ಮೂರು ಪರಿಯೊಳಗೆ |
ಪೊಂದಿಪ್ಪವು ಕೇಳಿ ತಮೊ ರಾಜಸ ಸತ್ವ |
ಒಂದೊಂದರ ಮದ್ಧ್ಯಸಮವಾಗಿ ಪೊಳೆವುತ್ತ |
ಒಂದು ಮಡಿ ತಮಸುಇದಕೆ ವಿವರ ಸಂ |
ಮಂಧ ತಮೊ ತಮೊ ರಜ ತಮೊ ಸತ್ವ |
ಮುಂದೆ ನೂರು ಮಡಿ ರಾಜಸಕೆ ಇದ |
ರಂದದಿ ರಜೊತಮ ರಜೊರಜ ರಜಸತ್ವ |
ಸಂದಿದೆ ಆಯುತ ಮಡಿಸತ್ವಕೆ ಸತ್ವತಮ |
ವೆಂದು ಸತ್ವರಜಸಿನ ಸತ್ವ ಸತ್ವಗುಣ |
ದಿಂದ ರಜೊರಾಶಿಭಾಗ ವಿಶಿಷ್ವದಲಿ |
ಎಂದೆಂದಿಗೆ ಕರಸಿಕೊಂಬುವದುಯಿದೆ |
ಸಂದೇಹವಿಲ್ಲ ಅಂತರಗರ್ಭಿತವೊ |
ಮುಂದೆ ತಮೊಗುಣ ವಿಶಿಷ್ಟರಾಶಿಯ ಭಾಗ |
ಒಂದು ಮಡಿ ರಜಸು ಹತ್ತು ಮಡಿ ತಮಸು |
ಅಂದವಾಗಿ ನೂರು ಮಡಿಸತ್ವ ಲೆಖ್ಖ |
ದಿಂದ ತಮೊಗುಣ ಯಿದರೊಳು ವಿಭಾಗ |
ಒಂದೊಂದು ಮಡಿಯೊಳಗೆ ತ್ರಿವಿಧ ಗುಣವುಂಟು |
ಒಂದು ಮಡಿ ರಕ್ತಕೆ ರಜೊರಜ ರಜೊತಮಸ |
ಸಂದು ರಜೊಸತ್ವ ಆಮ್ಯಾಲೆ ಹತ್ತು ಮಡಿ |
ಪೊಂದಿದೆ ತಮದಲ್ಲಿ ತಮೊ ತಮೊ ತಮ ರಾಜಸ |
ಛಂದದ ತಮಸತ್ವ ಬೆರದಿದೆ ಮಿಗೆಯಿತ್ತ |
ಲಿಂದ ನೂರು ಮಡಿ ಸತ್ವದೊಳಗೆ ಕೇಳಿ |
ನಿಂದಿರದೆ ಸತ್ವತಮ ಸತ್ವರಜೊ |
ಮುಂದೆ ಸತ್ವಸತ್ವ ಇನಿತು ನೋಡಿ ಮನಕೆ |
ತಂದು ತಿಳಿದ ಇದೆ ತಮೊಗುಣದ ರಾಶಿ |
ಹಿಂದೆ ವಿಸ್ತರಿಸಿದ್ದ ರಜೋಗುಣದ ರಾಶಿ |
ಒಂದೊಂದು ರಾಶಿ ವಿಶಿಷ್ವ ಭಾಗದವು |
ಕುಂದದೆ ಎರಡರಲಿ ಮೂರರ ಪ್ರಕಾರ |
ದಿಂದ ವಿಭಾಗಗುಣ ಸಿದ್ಧವಾಗಿವೆ ಮೂಲ |
ಸುಂದರಾಂಗ ಸಿರಿ ವಿಜಯ ವಿಠ್ಠಲನಂಘ್ರಿ |
ದ್ವಂದ ಧ್ಯಾನವ ಮಾಡಿ ಯೋಚನೆಯೊಳಗಾಗು ೨
ತ್ರಿವಿಡಿ ತಾಳ
ಅಜನ ಪ್ರಳಯದಲ್ಲಿ ಗುಣ ಸಾಮ್ಯವಾಗುವ |
ರಜೊರಾಶಿ ವಿಶಿಷ್ಟ ಭಾಗಾಂತರ |
ರಜೊಮಡಿ ನೂರರೊಳು ವಿಭಾಗತ್ರಯವೆನ್ನಿ |
ರಜೋತಮ ರಜೋರಜ ರಜ ಸತ್ವವ |
ನಿಜವಾಗಿಯಿದರೊಳು ಹನ್ನೆರಡು (೧೨)ಬಿಂದು |
ತ್ರಿಜಗವ್ಯಾಪಿಸಿ ಇಪ್ಪದು ಅಂಶದಿಂದ |
ಪ್ರಜಸರ್ಗ ಮೊದಲಾದ ತತ್ವಕೆ ಉಪಾದಾನ |
ರಜ ಸತ್ವ ಪೊಂದಿದ ವಿಭಾಗವೊ |
ತೆಜಿಸು ಸತ್ವ ಅಯುತ ಮಡಿ ವೊಂದು ಮಡಿತಮಸು |
ಸೃಜಿಸಿಕೊಳ್ಳದು ಕಾಣೊ ಬ್ರಹ್ಮಾಂಡಕೆ |
ರಜಸತ್ವಬಿಂದು ಹನ್ನೆರಡು ವಿಭಾಗದಲಿ |
ಅಜತತ್ವ ಪುಟ್ಟಿತು ತಿಳಿವಿಶೇಷ |
ರಜೊರಾಶಿಯೊಳಗಿನ ಸತ್ವಮಡಿಯೊಳಗೆ |
ಭಜಿಸು ಸತ್ವ ಸತ್ವ ಬಿಂದುಹತ್ತು |
ರಜಸತ್ವ ಕೂಡಿದರೆ ಅದರಂತೆ ಒಪ್ಪಿದವು |
ಭುಜಗ ತಲ್ಪಸಿರಿ ವಿಜಯ ವಿಠ್ಠಲರೇಯ |
ವಿಜಮಾನ ತಾನಾಗಿ ಗುಣಕಾರ್ಯಂಗಳ ಮಾಡುವ ೩

ರೂಪಕ ತಾಳ
ರಾಶಿ ಭೂತವಾದ ತಮೊದೊಳಗಿನ ವಿ |
ಶೇಷ ಹತ್ತು ಮಡಿ ತಮೊಭಾಗದೊಳಗುಳ್ಳ |
ಲೇಸು ತಮೊತಮ ಗುಣದ ಬಿಂದುವೊಂದು |
ಭೂಷಣದಲಿ ಬಂದು ರಜಸತ್ವ ಕೂಡೆ ಸ್ವ |
ರಾಶಿಮಧ್ಯದಲ್ಲಿಂದ ಒಂದು ಬಿಂದು ಸಹಿತ |
ದೇಶತ್ಯಾಗವ ಮಾಡಿ ತೆರಳಲಾಗಂದು ಯೋ |
ಚಿಸಲು ಮೂರು ಭಾಗಾದವು ಕೇಳಿ |
ರಾಶಿಭೂತ ಮೂಲರಜಭಾಗ ವಿರಳ |
ಅಸತ್ವ ಸತ್ವಾಂಶ ಮಿಳಿತವಾದದು ಯೇಕ |
ರಾಶಿ ಭೂತ ಮೂಲ ರಜಭಾಗ ವಿರಳ |
ಅಸತ್ವ ಸತ್ವಾಂಶ ಮಿಳಿತವಾದದು ಯೇಕ |
ರಾಶಿಯೆನಿಸುವುದು ಅವ್ಯಕ್ತದಿಂದ ಪ್ರ |
ಕಾಶವಾಯಿತು ಕೇಳಿ ಎರಡೆ ತತ್ವಾ |
ವಾಸುದೇವಾತ್ಮಕಾ ವಿಜಯವಿಠ್ಠಲರೇಯ |
ಆರಿಯಿಲ್ಲದೆ ಸರ್ವ ನಿರ್ಮಾಣ ಮಾಡುವ | ೪
ಝಂಪಿ ತಾಳ
ಕೇಶವಾದಿ ಮೂರ್ತಿಗಳ ಸೂರ್ಯ ಪ್ರ |
ಕಾಶ ವರ್ನವು ದಿಗ್ದೇಶ ಕೃತ್ಯವು | *

ಕೃಷ್ಣನ ಚರಿತ್ರೆಯನ್ನು ನೆನೆದು ಸ್ತೋತ್ರಮಾಡುವ ಸುಳಾದಿ ಇದಾಗಿದೆ.

೧೩೨
ಧ್ರುವತಾಳ
ಕೃಷ್ಣಾ ಕಮಲನಾಭಾ ಕ್ರೀಡಾವಿನೋದ ಸರ್ವೋ
ತ್ರ‍ಕಷ್ಟ ಉದಾರ ಮನುಜವಿಗ್ರಹ ಲೀಲಾ
ಕೃಷ್ಣ ಬಾಂಧವ ಗೋಪಾ ಖಗವಾಗನ ದೇವಾ
ಅಷ್ಟ ಮಹಿಷಿ ರಮಣಾ ಶಾಮವರ್ನಾ
ಸೃಷ್ಟಿ ಸಂಹಾರ ಕರ್ತಾ ನಿರ್ದೋಷ ಗುಣವಾರಿಧಿ
ಶ್ರೇಷ್ಠಜನಕ ಸ್ವಾತಂತ್ರ ಪುರುಷಾ
ದುಷ್ಟದಾನವ ಹರಣಾ ದುಃಖನಿವಾರಣಾ
ಇಷ್ಟಾರ್ಥ ಪಾಲಿಸುವ ವಿಶ್ವಾ ಮನೋ
ಭೀಷ್ಟವೇ ಭುಜಗಶಯ್ಯ ಸಕಲರಿಗೆ ಬ
ಲಿಷ್ಟನೇ ಭವದೂರ ಅನಂತ ಕಾಲ ಧ
ರ್ಮಿಷ್ಟನೇ ವೈಕುಂಠರಮಣ ಗೋಪಾಲನಾಥ
ನಿಷ್ಠಜನರ ಪಾತ್ರ ಮಿತ್ರ ಕೋಟಿ ತೇಜ
ತೃಷ್ಟನಾಗಿ ನಾನಾ ಚರಿತೆ ನಡಿಸುವ ಮಾಯಾ
ಕಷ್ಟ ದಾರಿದ್ರರಹಿತಾ ಕರುಣಿ ದಾನಿಗಳರಸ
ವಿಷ್ಣು ವಿಶ್ವರೂಪ ಲೋಕವಿಲಕ್ಷಣ
ವೃಷ್ಣಿಕುಲೋದ್ಭವ ವಿಜಯ ವಿಠ್ಠಲ ಎನ್ನಾ
ರಿಷ್ಟ ಪೋಗಾಡು ದಿವ್ಯದೃಷ್ಟಿಯಿಂದಲಿ ನೋಡು ೧
ಮಟ್ಟತಾಳ
ಧರಣಿಯೊಳಗೆ ಮಹಾದುರುಳರು ಉದುಭವಿಸಿ
ನಿರುತ ಧರ್ಮಕೆ ಕೇಡು ತರುತಿರಲಾಗಿ ನಿ
ರ್ಜರ ಸಮುದಾಯವು ನೆರೆದು ಯೋಚಿಸಿ ತಾ
ಮರಸ ಸುತನ ಬಳಿಗೆ ಹರಿದು ಪೋಗಲು ನಿನಗೆ
ಅರುಹಲು ಕೇಳುತ್ತಲೇ ಕರುಣದಿಂದಲಿ ಆದರಿಸಿ
ಸುರರಿಗೆಲ್ಲಾ ಧರಣಿಯೊಳಗೆ ಅವತರಿಸಿ ಮುಂದಾಗಿ ಸಂ
ಚರಿಸುತ್ತಲಿರು ಎಂದು ಪರಮಾನುಗ್ರಹ ಮಾಡಿ
ಪೊರೆದಾ ಪ್ರೀತಿ ದೈವಾ ನರಲೀಲೆ ತೋರಿ ವಿಜಯ ವಿಠ್ಠಲ
ನರಹರಿ ರೂಪಧರಿಸಿದ ಪರಮ ಮಂಗಳ ಮೂರ್ತಿ ೨
ರೂಪಕ ತಾಳ
ಅಸುರ ಕಂಸನು ತಾಮಸ ಬುದ್ಧಿಯಲ್ಲಿ ವ್ಯ
ಖ್ಖಸನಾಗಿ ರೋಷದಲ್ಲಿ ವಸುದೇವ ದೇವಕಿಯ
ಮಸದು ಮತ್ಸರಿಸಿ ಇಡಿಸಿದೆ ನಿಗಳವ ಬಂ
ಧಿಸಿ ಶೆರೆಮನೆಯಲ್ಲಿ ಅಸೂಯವ ಬಡುತಲೆ
ಕುಸುಮನಾಭನೇ ಜನಿಸುವೆನೆಂದು ಮಾ
ನಿಸ ವೇಷವನು ತಾಳಿ ಕುಶಲದಿಂದಲಿ ಆ
ವಸುದೇವ ದೇವಕಿ ಬಸುರಿಲಿ ಉದುಭವಿಸಿ ಚಕ್ರಾಬ್ಜಗದಾ
ಬಿಸಿಜ ಚನ್ನಾಗಿ ಧರಿಸಿದ ಚತುರಹಸ್ತಾ
ದಿಶೆಗೆ ರವಿಯಂತೆ ರಂಜಿಸುವ ಸ್ವಪ್ರಕಾಶ
ಹಸುಳೆಯಾಗಿ ತೋರಿದ ಪರಂಜ್ಯೋತಿ
ವಸುಧಿ ಭಾರಹರಣ ವಿಜಯ ವಿಠ್ಠಲ ನೀನೆ
ಶಿಶುವಾಗಿ ಕಣ್ಣಿಗೆ ಕಾಣಿಸಿ ಕೊಂಡೆ ಈರ್ವರಿಗೆ ೩
ಝಂಪೆತಾಳ
ಮಧುರಾ ಪುರದಲಿ ಜನಿಸಿ ವೇಗದಿ ಯಮುನಾ
ನದಿದಾಟುವಾಗ ಉರಗನು ಸೇವೆಯನು ಮಾಡೆ
ಒದಗಿ ತಂದು ನಿನ್ನ ಯಶೋದಾದೇವಿಯ
ಬದಿಯಲ್ಲಿ ಇಟ್ಟು ದುರ್ಗಾದೇವಿಯ ಒಯ್ಯೇ
ಅದರಿಂದ ಕಂಸಗೆ ಖೇದ ವೆಗ್ಗಳಿಸೆ ಕ
ರೆದು ಪೂತನಿಯನಟ್ಟೀ ಅವಳ ಅಸು ಹೀರಿದೆ
ಒದೆದೆ ಶಕಟನ ವನಕ್ಕೆ ಪೋದಲ್ಲಿ ಕಾಲಿಲೀ
ಮುದದಿಂದಲಿ ಬಲು ಜಾರ ಚೋರನೆನಿಸಿದೆ
ಮದುವೆ ಇಲ್ಲದೆ ಬಹು ಮಕ್ಕಳನ್ನು ಪಡೆದೇ
ಗದೆ ಬಲ್ಲು ಗಜುಗು ಚಂಡಾಟದಲಿ ಮೆರೆದೇ
ಎದುರಾದ ಹಯ ವೃಷಭ ಬಕ ಧೇನುಕ ವತ್ಸ
ಮೊದಲಾದ ಖಳರಮರ್ದಿಸಿ ಯಮುಳಾರ್ಜುನರ
ಪದದಲ್ಲಿ ಶಾಪವನು ಕಳೆದು ಕಿಚ್ಚನೇ ನುಂಗಿ
ಹೃದಯದೊಳಗೆ ಇದ್ದ ಕಾಳಿಂಗನ ತುಳಿದು ಕಾಯ್ದು
ಸದರವಿಲ್ಲದೆ ಗಿರಿಗೆ ಹಾಕಿದನ್ನವನ್ನುಂಡು
ತುದಿಬೆರಳಲಿಂದೇಳು ದಿವಸ ಗಿರಿಯಧರಿಸಿ
ತ್ರಿದಶನಾಯಕನ ಭಂಗಿಸಿದೆ ಅಕ್ಷಣದಲೀ
ಕ್ಷುಧಿಗೆ ಅಂಬಲಿ ಕುಡಿದು ಗೋವಳರನಟ್ಟಿ ಯಾ
ಗದ ಅನ್ನಸತಿಯರಿಂದಲಿ ತರಿಸಿ ಭುಂಜಿಸಿದೇ
ಪದುಮಗರ್ಭಗೆ ಬೆಡಗು ತೋರಿದ ಮಹದೈವ
ಪದುಮಲೋಚನ ನಮ್ಮ ವಿಜಯ ವಿಠ್ಠಲರೇಯಾ
ಮದನಾಟದಲ್ಲಿ ಗೋಪಿಯರ ಕೂಡ ನಲಿದಾ ೪
ತ್ರಿವಿಡಿತಾಳ
ಕರೆಯ ಬಂದಕ್ರೂರ ಭಕುತನ್ನ ಮನ್ನಿಸಿ
ಮರಳೆ ನಾರಿಯರ ಒಡಂಬಡಿಸಿ
ಬರುತ ಉದರದೊಳು ರೂಪವ ತೋರಿ
ಕರಿಯ ಸೀಳಿದೆ ರಜಕನಸಹಿತ
ಶರಾಸನ ಮುರಿದು ಗೋಮಕ್ಕಳೊಡನುಂಡೆ
ಹರುಷದಿಂದಲಿ ಮಾಲೆ ಕೊಡಲು ಧರಿಸಿಕೊಂಡೆ
ಕುರೂಪಿಯ ತಿದ್ದಿ ದಿವ್ಯಾಂಗನಿಯ ಮಾಡಿ
ತರಳನಾಗಿ ಪೋಗಿ ಸೊಕ್ಕಿದಾನಿಯ ಕೊಂಡೆ
ವರಿಸಿದೆ ಮಲ್ಲರ ಕಾಳಗದೊಳಗೆ ನಿಂದು
ಹರಿದು ಕಂಸನ ಪಿಡಿದು ಅವನ ಈಡಾಡಿ
ಉದರ ಮೇಲೆ ಕುಣಿದು ಅವನ ಮರ್ದಿಸಿದೆ ಮುಂದೆ
ಸೆರೆಬಿದ್ದ ಜನನಿ ಜನಕರ ಬಿಡಿಸಿದೆ
ಮೆರೆದೆ ಬಾಲನಾಗಿ ಸೋಜಿಗವತೋರಿ
ಪರಮಜ್ಞಾನಿ ನೀನೆ ಸಾಂದೀಪನಲಿ ಓದೀ
ಗುರುಪುತ್ರ ಮೃತವಾಗಿರಲು ತಂದಿತ್ತೆ
ಸಿರಿರುಗ್ಮಿಣಿ ಸತ್ಯಭಾಮೆಯರ ಮಿಕ್ಕಾದಷ್ಟ
ತರುಣಿಯರ ಮದುವ್ಯಾದಿ ಚರಿತೆ ತೋರಿ
ಭರದಿಂದ ಜರಾಸಂಧ ಕಾಲಯಮ ಶಿಶುಪಾಲ
ನರಕಹಂಸಡಿಬಿಕ ಸಾಲ್ವ ಪೌಂಡ್ರಿಕ
ದುರುಳಾದಿಗಳ ದಂತವಕ್ತ್ರ ಬಲುದೈತ್ಯರ
ಒರಿಸಿದ ಅವರವರ ದರುಳತೆಯನು ನೋಡಿ
ಕರುಣದಿಂದಲಿ ಮುಚುಕುಂದನ್ನ ಪಾಲಿಸೀ
ಪರಿಪರಿ ಬಗೆಯಿಂದ ಶರಧಿಯೊಳಗೆ ನಲಿದೆ
ಹರನಲ್ಲಿ ಸಂತಾನ ಬೇಡಿ ತಪವ ಮಾಡಿದೆ
ಹಿರಿದೋ ನಿನ್ನ ಮಹಿಮೆ ಪೊಗಳಾಲಳವೇ
ಅರಸು ಉಗ್ರಸೇನಗೆ ಒಲಿದ ವಿಜಯ ವಿಠ್ಠಲ
ಸರಿಸರಿ ಬಂದಂತೆ ಲೀಲೆ ಮಾಡಿದ ದೇವ ೫
ಅಟ್ಟತಾಳ
ದ್ವಾರಕಾಪುರದಲ್ಲಿ ನಾರಿಯರ ಕೂಡ
ವಾರವಾರಕೆ ವಿಹಾರಮಾಡಿದ ದೈವಾ
ನಾರದನು ಒಂದು ಪಾರಿಜಾತವ ತರೇ
ಕಾರುಣ್ಯದಲಿ ಪೋಗಿ ನಾರಿಯ ಸಂಗಡ
ಪಾರಿಜಾತವೃಕ್ಷ ಬೇರರಸಿ ತಂದೆ
ದಾರಿದ್ರತನದಲ್ಲಿ ಧಾರುಣಿಸುರ ನಿನ್ನ
ಸಾರಲು ಭಾಗ್ಯ ಅಪಾರವಾಗಿಯಿತ್ತೆ
ಆರು ಹತ್ತುಸಾವಿರ ಸತಿಯರಲ್ಲಿ
ಈರೈದುಸುತರು ಕುಮಾರಿ ಒಬ್ಬಳ ವಿ
ಸ್ತಾರದಿಂದಲಿ ಪೆತ್ತ ಮೀರಿದಾ ದೈವವೇ
ವಾರಿಧಿಯೊಳು ಪೋಗಿ ಕಿರೀಟಿಗೋಸುಗ
ಧಾರುಣಿಸುರನ ಕುಮಾರನ ಕರೆದಿತ್ತೇ
ಭೂರಿ ದಕ್ಷಿಣದಿಂದಾಧ್ವರವ ಮಾಡಿದ
ಕೋರಿದವರ ಮನಸಾರ ವರವನೀವಾ
ವಾರಿಜಧರ ನಮ್ಮ ವಿಜಯ ವಿಠ್ಠಲರೇಯಾ
ತೋರಿದೆ ಸುರಮತಿ ನಾರದನ ಬೆಡಗು ೬
ಆದಿತಾಳ
ಏಕಮೇವ ನೀನು ಲೋಕದೊಳಗೆ ಬಲು
ಪ್ರಾಕೃತ ಚರಿತೆ ಅನೇಕ ಬಗೆಯಲಿ ತೋರಿ
ಆಕರಿದರ್ಪಜ ಪಿನಾಕಿಯ ಭಕುತನ್ನ
ಸೂಕುಮಾರಿಗೆ ಸೋತು ತಾಕಿ ಸೆರೆ ಬಿದ್ದಿರಲು
ಪಾಕಶಾಸನ ಸುಧಾಕಲಶ ತಂದವನ್ನ
ನೀ ಕರುಣದಿಂದಲೇರಿ ರಾಕಾಬ್ಜನಂತೆ ಪೊಳೆವ
ನಾಕ ಜನರ ನೋಡಿ ಶ್ರೀಕಂಠನ ಹಿಂದು ಮಾಡಿ
ಭೂಕಂಪಿಸುವ ಬಲೀಕುಮಾರನ ಕರಗ
ಳಾ ಕಡಿದು ಮೊಮ್ಮಗನ ಜೋಕೆಯಿಂದಲಿ ಬಿಡಿಸಿ
ಲೋಕ ಮೂರರೊಳಗೆ ಸಾಕಾರನೆನಿಸಿದೆ
ಸಾಕುಮಾಡಿದೆ ಯದುಕುಲವನ್ನು ಒ
ನಕೆ ನೆವದಿಂದ ಲೋಕೇಶ ತಲೆದೂಗೆ
ಸಾಕಿದೆ ಭೂಮಿಯ ತೂಕಾ ಇಳುಹಿ ವೇಗ
ವಾಕು ಉದ್ಧವಗೆ ವಿವೇಕ ಮಾರ್ಗವ ಪೇಳಿ
ಈ ಕೃಷ್ಣಾವತಾರ ಸಾಕುಮಾಡಿ ಒಂ
ದು ಕಳೇವರ ಇಟ್ಟು ಈ ಕುಂಭಿಣಿಗೆ ತೋರಿ
ದಾ ಕಪಟನಾಟಕ ಶ್ರೀ ಕಾಂತ ತಾ
ಳಂಕ ತಮ್ಮ ವಿಜಯ ವಿಠ್ಠಲಾ
ಸೋಂಕಿದಾಕ್ಷಣ ತೊಂಡೆ ಭೂಕಾಂತವಾಗಿದೆ ೭
ಜತೆ
ಪಾರ್ಥಸಾರಥಿ ಕುರುವಂಶ ಘಾತಕನೆ ಮು
ಕ್ತಾರ್ಥ ಎನ್ನ ದೊರೆ ವಿಜಯ ವಿಠ್ಠಲರೇಯಾ ೮

ತಿರುಪತಿಯ ಶ್ರೀನಿವಾಸನನ್ನು ಕುರಿತ ಸ್ತೋತ್ರ

೪೩. ತಿರುಪತಿ
ಝಂಪೆತಾಳ
ಕೆಂದಳವ ಸೋಲಿಸುವ ನಖಗಳಾನಂತ |
ಇಂದು ಕಾಂತಿಗಳುಳ್ಳ ಪಾದವನು ಕಂಡೆನಾ |
ನಂದುಳ್ಳ ಧ್ವಜ ವಜ್ರಾಂಕುಶ ಮಂಗಳ ಸುಧಾರ |
ವಿಂದ ಕುಂಕುಮ ರೇಖೆಯುಳ್ಳ ಪದತಳವ ಕಂಡೆ |
ಒಂದೊಂದು ಬೆರಳ್ಗಳಲಿ ಎಸೆವ ಪಙ್ತ ಬೆರಳಗಳಾಧಾರ |
ಸಂಧಿಯಲ್ಲಿ ಒಪ್ಪುವ ಜಗವ ಚಿತ್ರವಕಂಡೆ |
ಅಂದಿಗೆ ಕಿರಿಗೆಜ್ಜೆ ಕಾಲುಗಗ್ಗರಿಪೆಂಡೆ |
ಮುಂದೊಲಿವ ಮುಂಜೆರಗು ತೋಡ ಬಿರುದನ ಕಂಡೆ |
ಛಂದವಾದ ಜಾನು ಜಂಘೆ ಕದಳಿಯ ಮಾಟ |
ದಿಂದಲಿ ಒಪ್ಪುವ ದ್ವಯ ಉರವನು ಕಂಡೆ ನಾ |
ಮಂದಗಮನಿಯರ ಬಲು ಸೋಲಿಸುವ ಸೊಂಪಿನಲಿ |
ಒಂದೊಂದು ಬೆರಗಿನ ಸ್ವರಮಣನ ಕಂಡೆ ನಾ |
ಮುಂದೆ ಪೀತಾಂಬರ ಪೊಳೆವ ಒಢ್ಯಾಣಕರ |
ಒಂದು ಕರ ಮತ್ತೊಂದು ಕಟಿಯ ಹಸ್ತನ ಕಂಡೆ |
ಮುಂದೊಲಿವ ಹಾರಾದಿ ನಾಭಿತ್ರಿವಳಿಲೀಲೆ |
ಇಂದುರತುನಾ ಕಂಕಣಕಡಗ ಪೊಳೆಯೆ ನಲು |
ವಿಂದು ಉಂಗುರುಗಳ ಧರಿಸಿದ ಬೆರಳ ಕಂಡೆ |
ಬಂದಿ ನಳಿತೋಳ ಭುಜಕೀರ್ತಿಗಳು ಗಲ್ಲದಲಿ |
ಅಂದಾಗಿ ತೂಗುವತಿ ಕುರುಳುಗೂದಲಿನ ಕಂಡೆ |
ನಿಂದು ತ್ರಿಜಗವಿದ್ದ ಉದರ ಬದಿಯನು ಕಂಡೆ |
ಸಿಂಧು ನಂದನೆ (ಸಿಂಧುನಯನೆ) ತುಲಸಿಮಾಲಿ ಕೌಸ್ತುಭ |
ಸಿರಿಗಂಧಲೇಪಿಸಿದವುರ ವೈಜಯಂತಿಯ ಕಂಡೆ |
ಸುಂದರ [ಕಂ]ಬುಗೊರಳರ್ಯಾಖೆ ಎಡಬಲಾ |
ದ್ವಂದ್ವ ಹಸ್ತಗಳಲ್ಲಿ ಶಂಖಚಕ್ರವ ಕಂಡೆ |
[ಚಂದು]ಟಿಯು ನಗೆಮೊಗದಂದ ಪಂಙ್ತಯು ನಾಸ |
ಗಂಧಕಸ್ತೂರಿ ತಿಲಕ ನಸುಲ ಸಪ್ತದ್ವೀಪ |
ಕುಂದದಲೆ ಬೆಳಗುತಿಪ್ಪ ನಯನಂಗಳನು ಕಂಡೆ |
ಮಂದಾರ ಮಾಲೆ ಮಲ್ಲಿಗೆ ಪಾರಿಜಾತ ಸೊಬ |
ಗಿಂದ ಕುಸುಮವ ಮುಡಿದ ಚಲುವಮುಡಿಯನು ಕಂಡೆ |
ಒಂದೊಂದು ಮಣಿಗೆ ಮೂಲೋಕ ಹರಿಗೊಂಬ ಗೋ |
ವಿಂದನ ಕಿರೀಟವನ್ನು ಕಂಡು ಧನ್ಯನಾದೆ |
ಇಂದೆನ್ನ ಮಂದಮತಿ ಬೆಂದು ಪೋಯಿತು ನಿಲ್ಲದೆ |
ಇಂದೆನ್ನ ಕುಲಕೆ ಹರಿಮಂದಿರವೆ ಫಲಿಸಿತು |
ತಂದೆ ವಿಜಯವಿಠಲ ತಿರುವೆಂಗಳೇಶ ನಾ |
ಒಂದು ಕಣ್ಣಿಲಿ ನೋಡಿ ನಾನಿಂದು ಕೃತಾರ್ಥನಾದೆನಾ ೧
ರೂಪಕತಾಳ
ತಿರುಮಲ ತಿರುಪತಿವಾಸಿ ನಿರುಮಲ ನಿಸ್ಸಂಗ ಭೂಷ |
ಶರಣಜನರ ಪರಿತೋಷ ತರಣಿಪ್ರಕೋಟಿ ಸಂಕಾಶ |
ಜ[ರಾ]ಮರಣ ನಿರ್ದೋಷ ಪರಿಪೂರ್ಣಗುಣ ವಿಲಾಸ |
ಪರಮಮಾನಸರ ಹಂಸ ಹರಿ ವಿಜಯವಿಠಲೇಶ |
ಸಿರಿದೇವಿಯ ಪ್ರಾಣದರಸ ಉರಗಿರಿಯ ವೆಂಕಟೇಶ |
ಹರಿಯೆನಲು ದೋಷನಾಶ ೩
ಧ್ರುವತಾಳ
ಆರಿಗಂಜೆನೊ ನಾನು ಆರಿಗಳುಕೆನೊ ನಾನು |
ಆರನಾದರು ಲೆಕ್ಕಿಸದಿಪ್ಪೆನೊ ನಾನು |
ಮಾರಿ ಮೃತ್ಯುಗಳು [ಕೆ]ಲಸಾರದಲೆ ಬಂದರೆ |
ದೂರದಲ್ಲಿ ನಿಲ್ಲಿಸಿ ಮಾತನಾನಾಡಿಸುವೆನೊ |
[ಸೇರ]ಗೂಡೆ ದುಷ್ಟರನ ನೂರಾರೋ ಜನದೊಳಗೆ |
ಕಾರುಣ್ಯ ನಿಧಿಯನ್ನು ಕಂಡು ಬಳಿಕಾದಲ್ಲಿ |
ಘೋರಾದೂತರು ಎನ್ನಾಕಡಿಗೆ ಬಾರದಂತೆ |
ದಾರಿ ಮೆಟ್ಟಾದಂತೆ ಮಾಡಿ ಬಿಡುವೆನೊ ನಾನು |
ಭೂರಿ ದೈವವಗಂಡ ವಿಜಯವಿಠಲ ದಿವ್ಯಾ |
ಮೂರುತಿಯ ಪೊಗಳಿ ಉದ್ಧಾರನಾನಾದೆ ೪
ತ್ರಿವಿಡಿತಾಳ
ನಾರಾಯಣನಂತ ನಿರ್ದೋಷ ಗುಣಪೂರ್ಣ |
ಸಾರ ನಿತ್ಯ ಸ್ವಾತಂತ್ರಾಸುಸ್ವರಮಣ ವೇದ |
ಪಾರಾಯಣ ನಾಶರಹಿತ ಶಾಮವರ್ನ |
ಧಾರುಣಿಯೊಳಗೀತಗಧಿಕ ಸಮರಿಲ್ಲ |
ತೋರುವನಲ್ಲ ಕಂಡವರ ಮನಕೆ ಭಕ್ತ |
ಧಾರಾನು ಭವರೋಗ ವೈದ್ಯ ಬೈದ್ಯ ಮಥನ |
ನಾರದವಂದ್ಯ ಶ್ರೀ ವಿಜಯವಿಠಲ ಉ |
ದಾರಿ ಕಾಣೆಲವೊ ಸಮಸ್ತ ದೇವರೊಳಗೆ ೫
ಅಟ್ಟತಾಳ
ಶಂಕಸುರನ ಕೊಂದ ನಿಶ್ಯಂಕನೀತ |
ಪಂಕಜಸುತನ ಪಡೆದ ದೈವನೀತ |
ಶಂಕರನ್ನ ಪ್ರಾಣವನು ಕಾಯಿದ ನೀತ |
ವೆಂಕಟಗಿರಿಯಲ್ಲಿ ಮೆರೆವಾತನೀತ |
ಪಂಕಜೋದರನೀತ ಪಂಕಜಾಪತಿ ಈತ |
[ಲಂ]ಕಪುರ ವಿಭೀಷಣಗಿತ್ತನೀತ |
ಕಿಂಕರಿಗೊಲಿದಂಥ ಕೈಟಭಾರಿ ಈತ |
ಓಂಕಾರ ನಾಮ ಉಳ್ಳಾತನೆ ಈತ |
ಶಂಕಚಕ್ರಾವನ್ನು ಕೊಟ್ಟಾತನೀತ |
ಬಿಂಕಾದ ಬಿರುದನ್ನು ಕಟ್ಟಿದನೀತ |
ಶಂಖಪಾಣಿ ನಮ್ಮ ವಿಜಯವಿಠಲರೇಯಾ |
ತಂಕವಿಲ್ಲದ ಪೌರುಷದಾತನೀತ ೬

ಆದಿತಾಳ
ನಂಬಿರಯ್ಯ ನೀವು ಜಗದಂಬಿಕೆರಮಣನಾದ |
ಅಂಬುಧಿಶಯನ ಪಾದಾಂಬುಜಾಗಳಿನನುದಿನಾ |
ಬೆಂಬಿಡದೆ ಭಜಿಸಲು ಉಂಬುವಾದಕ್ಕುಡಲುಂಟು |
ಹಂಬಲೀಸಾದೀರಿ ಹೀನವೆಂಬ ದೈವಗಳ ಭಕುತಿ |
ಡಂಬಕತನದಲಿಂದ ಡಿಂಬವನು ಕೆಡಿಸಿಕೊಳದೆ |
ಗಂಭೀರನ್ನಾ ನೋಡಿ ಬಲು ಸಂಭ್ರಮದಿಂದಲಿ ಪಾಡಿ |
ಇಂಬು ತೋರುವನು ದಯಾಂಬುಧಿ ವಿಜಯವಿಠಲ |
ಕಾಂಬೆನೆಂಬಾ ದಾಸರಿಗೆ ಬೆಂಬಲವಾಗಿ ನಿಲ್ಲುವ ೭
ಜತೆ
ಆನಂದಮಯ ಸಕಲಾಮಾನಂದ ಮಹಿಮಾನೆ |
ಆನಂದಗಿರಿ ವಿಜಯವಿಠಲ ತಿಮ್ಮನ ಕಂಡೆ ೮

ಈ ಸುಳಾದಿಯು ತಾಮ್ರಪರ್ಣಿ

೩. ಅನಂತಶಯನ
ಧ್ರುವತಾಳ
ಕೇಶವ ಕೃಷ್ಣ ತ್ರಿಲೋಕೇಶ ಕೈಟಭಾರಿ |
ಸಾಸಿರಫಣಾವುಳ್ಳ ಶೇಷ ಶಯನಾ |
ಕ್ಲೇಶನಾಶನಾ ನರಕೇಸರಿ ವೇಷಾನೆ |
ಮೀಸಲಾಭರಣಾ ವಿಭೂಷಣ ಸರ್ವಹ |
ಶ್ರೀ ಸತಿ ಉರದಲ್ಲಿ ವಾಸವಾಗಿ ನಿತ್ಯ |
ತಾ ಸೇವಿಸುವಳು ಸಂತೋಷಾಬ್ಧಿಯೊಳು ಮುಳುಗಿ |
ಪೂಸಿದಾ ಶ್ರೀಗಂಧ ವಾಸನಿಯಾ ಕಮ |
ಲಾಸನ ಜಪಿಸಿ ಎಣಿಸುವವನನುದಿನ |
ಈ ಸುಖವಿನ್ನಾವ ದೇಶ ದೈವಂಗಳಲ್ಲಿ |
ಏಸೇಸು ಪರಿಯು ನಿಕ್ಷಿಸಲು ಕಾಣೆನೋ |
ಈಶಾದ್ಯಾರೊಡಿಯಾದಿ ಕೇಶಿಖಳಮರ್ದನಾ |
ಶ್ರೀಶಾ ವಿಜಯವಿಠಲಾ ಸುಲಭಾ ಆದಿ |
ಕೇಶವಾ ತಾಮ್ರಪರ್ಣಿವಾಸ ಲೋಕೇಶಾ ೧
ಮಟ್ಟತಾಳ
ಚತುರಾನನ[ನ] ಭಜಿಸಿ ಅತಿದುರುಳಾ ಕೇಸಿ |
ಸತತ ತಪಸಿಯಾಗಿ ಮಿತಿ ಇಲ್ಲದ ದಿವಸ |
ಅತಿಶಯದಲಿ ವರವ ಇತರಾದಿಗಳಿಂದ |
ಹತವಾಗದಂತೆ ನುತಿಸಿ ಬೇಡಿಕೊಂಡ |
ಕ್ಷಿತಿಯೊಳಗೆ ದಿನ ಪ್ರತಿದಿನದಲಿ ಸುರರ |
ಖತಿಗೊಳಿಸಿದನುನ್ನತ ಬಲು ಗರ್ವದಲಿ |
ಪತಿತಪಾವನನಾದ ವಿಜಯವಿಠಲನ್ನ ಭ
ಕುತ ಜನರಿಗೆ ಅಹಿತನಾಗಿ ಮೆರವುತಿರೆ ೨
ರೂಪಕತಾಳ
ಆದಿಕೇಶಾನೆಂಬ ದೈತ್ಯಾನ ಉಪಹತಿಗೆ |
[ಅ] ದೈತ್ಯರು ಬಳಲಿ ಬಲು ಬಗೆಯಿಂದಲಿ |
ಆ ದೈತ್ಯನುಪಟಳ ತಾಳಾಲಾರೆವು ಎಂದು |
ವೇದಗಳಿಂದಲೀ ವೇಧಾಗೆ ಮೊರೆ ಇಡಲು |
ಆದರಿಸಿ ತನ್ನಿಂದೂದೆ ಮೊದಲಿಗೇ |
ಕ್ರೋಧರಿಗೆ ವರವಿತ್ತದಪರಾಧಾವೆನ್ನದು ಎಂದು |
ಕಾದುವರಿದೂ ಮಿಕ್ಕಾದವರಿಗೆನುತಾ |
ಶ್ರೀದೇವಿ ಅರಸನ್ನಾ ಪಾದದಲ್ಲಿಗೆ ಸಾರಿ |
ಖೇದಿಗನು ಮಹೇಂದ್ರಾ ಪ್ರದೇಶಾದಲ್ಲಿದ್ದು |
ಬಾಧಿಯಾ ಬಡಿಸುವದು ವಿಧಿ ತಾ ಬಿನ್ನೈಸೆ |
ಮೇಧಿನಿಪತಿ ಮಿಜಯವಿಠಲಾದಿ ಕೇಶವಾ |
ತಾದಯಾದಿಂದಲಜಾದಿಯಾ ಕಳುಹೀ ೩
ಝಂಪೆತಾಳ
ಅಸುರನಿದ್ದೆಡೆಯಲ್ಲಿ ಒಮ್ಮಿಂದೊಮ್ಮೆಲೇ ರ |
ಕ್ಕಸರ ರಿಪು ಎದುರಾಗಿ ಬಂದು ನಿಂದ |
ಬಿಸಜಸಂಭವನ ರೋಮಾದಿಂದ ಜನಿಸಿದ |
ಅಸಮ ನೀನಹಮೆನುತ ಅವನ ಪಿಡಿದೂ |
ಕುಶಿಯನುಗೊತ್ತಿ ಏಳದಂತೆ ಮಲಗಿಸಿ |
ಅಸುರಾರಿ ಖಳನ ಮೈಮೇಲೆ ಪವಡಿಸಿದ |
ನಿಶಾಚರಾ ಸಾಯದಂತುಪಾಯವನು ಕ |
ಲ್ಪಿಸಿದ ಹರಿಮಹಿಮಿಗೆ ಏನೆಂಬೆನೋ |
ಕುಸುಮಶರನಯ್ಯನೆ ವಿಜಯವಿಠಲನ ತು |
ತಿಸುತ್ತಿರಲಿತ್ತ ಅಸುರನ ಮಡದಿ ಮುನಿದೂ ೪
ತ್ರಿವಿಡಿತಾಳ
ತನ್ನ ಗಂಡನ ಮೇಲೆ ಪನ್ನಗಶಯನನನ್ನು |
ಸಣ್ಣವನ ತೆರದಿನ್ನೂ ಮಲಗಿರೆ |
ಮುನ್ನೆ ಕೋಪವ ತಾಳಿ ಭಿನ್ನಾಮಾಳಿಪೆನಿವ |
ರನ್ನು ಬಿಡಿಸಿ ಎಂದು ಪುಣ್ಯ ಗಂಗಿಯಾ [ಬರ] |
ವನ್ನು ಹಾರೈಸಾಲು ತನ್ನಿಂದಾದಾ ಸೇವೆ |
ಯನ್ನು ಮುಟ್ಟಿಪೆನೆಂದು ಘನ್ನಾತೀವರ ತಾಮ್ರ |
ಪರ್ನಿಯಾ ಒಡಗೊಂಡು ಬಿನ್ನಾಣಾದಲಿ ಭೋ |
ರನ್ನೆ ಪರಿದು ಬಂದಳಾನಂತನ ನೋಡಿ |
ಸನ್ಮನಾದಿಂದಲಾ ತನ್ನ ಸುತ್ತಲು ಗಂಗೆ |
ರನ್ನದ ವನಮಾಲೆಯನ್ನು ಆದಳು ಸುರರೂ |
ಬಣ್ಣಿಸಿ ಪೊಗಳಾಲು ಕಣ್ಣೆವೆ ಇಡದಲೆ |
ಅನಂತ ಶಯನ್ನಾ ವಿಜಯವಿಠಲದೇವಾ |
ಗ್ರಣ್ಯನ ಲೀಲೆಗೆ ಅನಂತಾ ನಮೊ ನಮೊ ೫
ಅಟ್ಟತಾಳ
ಅಂದು ಪ್ರಭಾಕರಾ ಬಂಧುವಿನ ನಿಜಾ |
ನಂದನ ಗರುಡ ಪುರಂದರ ಉಳಿದಾದ |
ವೃಂದಾರರ ಬಲ ಒಂದಾಗಿ ಎದಿರಿಲಿ |
ಬಂದು ಜಯ ಜಯವೆಂದು ಪೇಳುತಲಿರೆ |
ನಿಂದವರ[ನು] ದಯದಿಂದಲಿ ನೋಡಿ ಮು |
ಕುಂದನು ವರಗಳ ಕುಂದಾದೆ ಬೇಡೆನೆ |
ಸಂದೇಹ ತೊರದು ಕಾಯೆಂದು ಶಿರಬಾಗಿ |
ಇಂದೀಖಳನ ಮ್ಯಾಲೆ ಬಂದು ನೀನು ನಾ |
ಗೇಂದ್ರ ಸಹಿತಾಲಿದ್ದಂದಾದಿ ಪವಳಿಸಿ |
ಒಂದು ಕಲ್ಪವಿರು ಎಂದು ಪ್ರಾರ್ಥನೆ ಮಾಡಿ |
ನ್ನೊಂದು ವರವಕೊಡು ಮಂದಮತಿಗಳಿಗೆ |
ಸಂದರುಶನದಿಂದ ಪೊಂದಲಿ ಕೈವಲ್ಯಾ |
ಇಂದು ವಂದಿತ ಪಾದಾ ವಿಜಯವಿಠಲ ನೀನೆ |
ಒಂದೆ ದೈವ ಜಗತ್ತಂದೆ ಕೃಪಾಸಿಂಧೂ ೬
ಆದಿತಾಳ
ತುತಿಸಾಲು ತೃಪ್ತನಾಗಿ ಚತುರ ಮೊಗಾದಿಗಳ |
ಅತಿವೇಗದಿಂದ ನೋಡುತಲಿ ನೀವಂದತೆರದೀ |
ಹಿತವಾಗುವದದಕ್ಕೆ ಪ್ರತಿಕೂಲಾವಿಲ್ಲಾವೆಂದು |
ಪಿತಾಮಹನಯ್ಯಾ ನಗುತ ಭರವಸವಿತ್ತಾ |
ಕ್ಷಿತಿಯೊಳಗಾವಾನಾರ ಮತಿವಂತನಾಗಿ ಬಂದು |
ಸಿತ ಮನದಲಿ ಯಾತ್ರಿ ಮಿತಿ ತಪ್ಪದಂತೆ ಮಾಡಿ |
ಸಿತ ನದಿ ತಾಮ್ರಪರ್ನಿ ಜತೆಯಲ್ಲಿ ಸ್ನಾನಗೈದು |
ಚತುರನಾದವಗೆ ಶಾಶ್ವತವೆನ್ನಿ ಮೇಲುಲೋಕ |
ಪುಥಮಾಂಗನೊಡಿಯಾ ವಿಜಯವಿಠಲನಂತಾ |
ರ್ಪಿತವೆಂದು ಮಾಡಿ ಕುಲಸಹಿತಗತಿಗೆ ಪೊಂದುವದು ೭
ಜತೆ
ಆದಿಕೇಶವಕ್ಷೇತ್ರದಲ್ಲಿ ಒಂದು ರಾತ್ರಿ |
ಸಾಧು ಇರಲು ಒಲಿವ ವಿಜಯವಿಠಲನಂತಾ೮

ಕೈಟಭ ಎಂಬ ರಾಕ್ಷಸನನ್ನು ಸಂಹಾರ

೧೩೩
ಧ್ರುವತಾಳ
ಕೈಯ ಬಿಡದಿರೊ ಹರಿಕೈಟಭಾಸುರ ವೈರಿ
ಅಯ್ಯಾ ನಿನ್ನ ನಂಬಿದೆನೊ, ಎನಗೆ ಮುಂದೆನೊ
ಪರಿಕರವನು ತೋರೊ ಪತಿತರ ಸುರತರು
ಜಯಿಸಲಾರೆನು ಜನನವೆಂಬೋದು ಕಾನನ
ಲಯ ಮಾಡೊ ವಿಜಯ ವಿಠ್ಠಲರೇಯ ದಯದಿಂದ
ಮಯದುನಗೆ ಒಲಿದಂತೆ ಒಲಿದು ವೇಗದಲ್ಲಿ ೧
ಮಟ್ಟತಾಳ
ಆರನ ಮೊರೆಯೊಗಲಿ, ಆರಂಘ್ರಿಗೆರಗಲಿ
ಆರನ ಕಾಡಲಿ ಆರೆನಲ್ಲೊ
ಆರಲ್ಲಿಗೆ ಪೋಗೆ ಆರೆವೆಂದರೊ
ಆರೆನಗಿಲ್ಲ ವಿಜಯ ವಿಠ್ಠಲ ನೀನೆ ಗತಿಯೊ
ಆರೈದು ಸಲಹಯ್ಯಾ ಆರೊಂದು ಪುರದೊಳು ೨
ತ್ರಿವಿಡಿತಾಳ
ಚತುರದಶ ಭುವನಗಳಲ್ಲಿ ಚತುರಾತ್ಮಕ ನೀನೆಂದು
ಚತುರವಾರ್ತಿಯ ಕೇಳಿ ಚತುರದಲ್ಲಿ ನೆರದೆ
ಚತುರ ಸಿರಿ ವಿಜಯ ವಿಠ್ಠಲ ರಂಗರಾಯಾ
ಚತುರ ಮೂರುತಿಯೆ ಚತುರನ್ನ ಮಾಡೊ ೩
ಅಟ್ಟತಾಳ
ಕಾಸನಿತ್ತು ನೃಪನ ರಾಣಿವಾಸದವರ ಕೈಯ
ಮೀಸಲನ್ನ ಬಯಸಿದಂತೆ ಬಯಸಿದೇನಯ್ಯಾ ನಾನು
ದೊಷಕಾರಿಗದು ಆಯಾಸವಲ್ಲವೆ ದೇವ
ಲೇಸನೀವಲ್ಲಿ ನಿನಗೆಲ್ಲಿ ಸರಿಯಿಲ್ಲವೆಂದು
ದೇಶದೊಳಗೆ ಪೊಗಳುತಿದೆ ಈಸು ಮೂರುತಿಯನು ಬಿಟ್ಟು
ಆಶೆಯಲ್ಲಿ ನಾನು ಬಂದೆ
ಶ್ರೀ ಶ ವಿಜಯ ವಿಠ್ಠಲ ನಿಜ ದಾಸ
ದಾಸರ ಕೂಡ ಎಣಿಸುವುದು ಬಿಡದೆ ಎನ್ನನು೪
ಆದಿತಾಳ
ನಾನು ನಿನ್ನನು ಮೆಚ್ಚಿಸುವೆನೆ ಏನಾದರಿನ್ನಾಗದಯ್ಯ
ನೀನೆ ದಯದಿಂದ ಸತ್ರಾಣನ್ನ ಮಾಡು ಮಾಡು
ಮಾನಸ ಧ್ಯಾನದಲ್ಲಿ ಜ್ಞಾನದೃಷ್ಟಿಯೊಳಗೆ ಪೊಳೆದು
ಆನಂದವಾರಿಧಿಯೊಳು ದೀನ ಮಾನವನ ಇಡು
ಶ್ರೀನಿವಾಸ ವಿಜಯ ವಿಠ್ಠಲ ನೀನೆ ಕರುಣಾಳು ಅಲ್ಲವೆ
ಭಾನುವಿಗೆ ಬಿಸಿಲಿನಿಂದ ಏನುಪಕಾರ ಪೇಳು೫
ಜತೆ
ಎಂದೆಂದಿಗೆ ನಿನ್ನ ಪೊಂದಿದವನೊ ಪು-
ರಂದರಗೊಲಿದಂತೆ ಒಲಿಯೊ ವಿಜಯ ವಿಠ್ಠಲ೬

ಭಕ್ತಿಸಾಧನೆಗೆ ಉತ್ತಮ ವಾತಾವರಣ

೩೫
ಧ್ರುವತಾಳ
ಕೊಡು ನಿನ್ನವರ ಸಂಗ ಕೆಡಿಸದಿರಲೊ ರಂಗ
ಪೊಡಮಡುವೆ ದುರಿತಭಂಗ ಕಡುಕಾರುಣ್ಯಾಪಾಂಗ
ಪಿಡಿ ಕರ ಮಂಗಳಾಂಗ ನುಡಿದವರಂತರಂಗ
ಬಿಡದೆ ಹೃದಯಾಬ್ಜ ಭಂಗ ಬಿಡಿ ಬೀಸದಲೆ ತುಂಗ
ಧೃಢವುಳ್ಳ ನರಶಿಂಗ ನಡೆಸು ಭಕ್ತಿ ತರಂಗ
ಎಡೆಗೆಡಿಸುವರ ಭಂಗ ತಡಿಗಡಿಯೊ ವಿಹಂಗ
ಮೃಡ ಸುರೇಶ ಅನಂಗರೊಡಲೊಳಗಿಪ್ಪ ಲಿಂಗ
ಕುಡಿಸು ಸುಧಾಪಿಶಂಗ ಉಡೆಗೆಯಲಿಪ್ಪರ ಧಾಂಗ
ಪಿಡಿದ ನಿತ್ಯ ನಿಸ್ಸಂಗ ಕಡುತೇಜಾ ಉತ್ತುಮಾಂಗ
ಬಡವಾರಿಗಂಗ ಸಂಗ ವಿಜಯ ವಿಠ್ಠಲ ರಂಗ
ಕೊಡು ನಿನ್ನವರ ಸಂಗ ಕೊಡು ನಿನ್ನ ವರ ಸಂಗ ೧
ಮಟ್ಟತಾಳ
ಸ್ನಾನವನು ಒಲ್ಲೇ ಮೌನವನು ಒಲ್ಲೇ
ಮಾನವನು ಒಲ್ಲೇ ದಾನವನು ಒಲ್ಲೇ
ಧ್ಯಾನವನು ಒಲ್ಲೇ ಗಾನವನು ಒಲ್ಲೇ
ನಾನಾ ಯಾಗ ಪುರಾಣಗಳು ಒಲ್ಲೇ
ಏನೇನು ಚರಿಸುವ ಶ್ರೇಣಿ ಕರ್ಮಂಗಳು
ನಾನೊಲ್ಲೆನು ಜೀಯಾ ಮಾನವೆ ಒಂದುಂಟು
ಶ್ರೀನಾಥನೆ ನಿನ್ನಾರ್ಚನೆ ಮಾಡುವಂಥ
ಜ್ಞಾನಿಗಳ ಪಾದರೇಣು ಎನಗೆ ಒಮ್ಮೆ
ಮಾಣದೆ ಸೋಕಿದರು ಅನಂತ ಜನುಮದ ಸಾ
ಧನ ಫಲವೆ ಎಂದು ಅನಂತ ಶೃತಿಯಲ್ಲಿ
ಈ ನುಡಿ ಸಿದ್ಧವಿದೆ ಸಿದ್ಧವಿದೆ ದೇವ
ಶ್ರೀನಿವಾಸ ವಿಜಯ ವಿಠ್ಠಲ ಇಂದೆ ನಿ
ರ್ವಾಣ ಕರುಣಿಸಲು ನಾನದು ಹಂಬಲಿಸೆ ೨
ತ್ರಿವಿಡಿ ತಾಳ
ಕ್ಷೇತುರ ಉತ್ತಮದಲ್ಲಿ ಜನಿಸಿ ನಿರ್ಮಳ ಕಾಲ
ಗೋತುರನಾಗಿ ಸತಿ ಅನುಕೂಲದಿ
ಪಾತಕರೊಳಗೆ ಇಪ್ಪ ಬಹುಕಾಲದಲಿ ತನ್ನ
ನೇತುರ ಕರ್ಣ ಶ್ರೋತುರ ನಾನಾಸರ್ವ
ಗಾತುರ ಹರಿ ಸೇವಿಗೆ ತಿಳಿದು ಒಪ್ಪಿಸುವ ಪ
ವೀತುರ ಮನಸಿನಲಿ ಇಪ್ಪ ಪಾಪ ರಾಶಿಯ
ಕಾತುರವಳಿದು ಕಂಡಕಡೆ ತಿರುಗದೆ
ಮಾತುರ ವ್ಯರ್ಥವೆನದೆ ಎಂದೆಂದಿಗೆ ದೇವ
ಮಾತುರಪಿತುರ ಭ್ರಾತ ನಾನಾಕುಲ ವರ್ಗ
ಮೃತರ ಪರಿವಾರ ಪರಮ ಮಂಗಳ ಪುತ್ರ ಕ
ಳಾತುರ ಈ ವಿಧವೆಲ್ಲ ಹರಿಯಿತ್ತದೆಂದರಿದು
ಸ್ತೋತುರ ಮಾಡುತ ಮುದದಿಂದ ಪ್ರತಿದಿನ
ಆತುರದಿಂದಲಿ ಕೂಗಿ ಭಕುತಿಯಿಂದ
ಪ್ರಾತುರದಿ ತೊರೆಯದೇ ಸುತ್ತಲಿದ್ದವರ ಪು
ನೀತರನೆ ಮಾಡುವ ಪೂರ್ಣವಾಗಿ
ಗೋತುರಧರ ನಮ್ಮ ವಿಜಯ ವಿಠ್ಠಲ ಅಣು
ಮಾತುರ ನಿನ್ನ ಬಿಡದವರ ಸಂಗವಾಗಲಿ ೩
ಅಟ್ಟತಾಳ
ಕ್ಷಣ ಒಂದರೊಳು ಗಣನೆ ಇಲ್ಲದ ತೀರ್ಥ
ಕ್ಷಣ ಒಂದರೊಳು ಗಣನೆ ಇಲ್ಲಞ್ ಯಾತ್ರಿ
ಕ್ಷಣ ಒಂದರೊಳು ಗಣನೆ ಇಲ್ಲದ ದಾನ
ಕ್ಷಣ ಒಂದರೊಳು ಗಣನೆ ಇಲ್ಲದ ನಾನ
ಅನುಪಮವ್ರತಗಳು ತನಗೆ ತಾನೆ ಬಂದು
ಮನೋಹರವಾಗುವವು ಅನುದಿನ ಬಿಡದಲೆ
ಮನುಜನಾಭನೆ ನಿನ್ನ ನೆಚ್ಚಿದಾಳಿನ
ಮಿನಗುವ ಚರಣ ಕೊನೆ ಧೂಳಿ ಸೋಕಲಾ
ವನೆ ಬಲು ಧನ್ಯ ಬಲುಧನ್ಯನೋ
ಅನಿಮಿತ್ಯ ಬಂಧು ಶ್ರೀ ವಿಜಯ ವಿಠ್ಠಲ ನಿನ್ನ
ಮನಸಿಗೆ ಬಂದ ದಾಸ ಮಹಿಮೆಯಿಂತೊ ೪
ಆದಿತಾಳ
ಹಲವು ಅಪೇಕ್ಷಿಸಿ ಹಲುಬುವುದ್ಯಾತಕೆ
ಫಲ ಮುಂದಿರಲು ನಭ ತಳವ ಅರಿಸಿದಂತೆ
ಸುಲಭ ಸಾಧನ ತನ್ನ ಬಳಿಯಲ್ಲಿ ಇರಲಿಕ್ಕೆ
ನೆಲಗಾಣೆನೆಂದು ಗಾತ್ರ ಬಳಲಿಸಿ ಕೊಂಡು ವ್ಯರ್ಥ
ಅಳಲಿ ತೊಳಲಿ ನಿತ್ಯ ಕಳೆಗುಂದಿ ಪೋಗುವುದೆ
ತಿಳಿದು ಈ ಪರಿ ಹಂಬಲಗೊಂವುಬುವದೇನೊ
ನಿಲವರ ಪೇಳು ಎನ್ನಾಮಲ ಮನಸಿಗೆ ಇಂದು
ಬಲುಧಾವಂತಿ ಬಟ್ಟರು ಸಲುವದೆ ಗತಿಮಾರ್ಗ
ಚಲುವ ದೇವರ ದೇವ ವಿಜಯ ವಿಠ್ಠಲ ನಿನ್ನ
ನೆಲೆಬಲ್ಲವರ ಪಾದರಜ ಭವ ಹಾರ ೫
ಜತೆ
ಇದೆ ಇದೆ ಕರುಣಿಸು ಎನಗೆ ನಿರುತದಲ್ಲಿ
ಯದುಪತಿ ವಿಜಯ ವಿಠ್ಠಲರೇಯ ನೀನೊಲಿದು ೬

ಹನುಮ, ಭೀಮಾವತಾರಗಳ ಅನೇಕ

೧೫೩
ಧ್ರುವತಾಳ
ಕೋತಿಯಾದರೆ ಬಿಡೆನೋ ಬಲುಪರಿ
ಭೂತಳದೊಳು ಪಾರ್ಯಾಡಲು ಬಿಡೆನೊ
ಖ್ಯಾತಿ ತೊರೆದು ಕಚ್ಚುಟಹಾಕಲು ಬಿಡೆನೊ
ಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊ
ಭೀತಿ ಬೀರಲು ಬಿಡೆನೊ ಮಾತು
ಮಾತಿಗೆ ಹಲ್ಲು ತೋರಲು ಬಿಡೆನೊ
ಗಾತುರ ಗಗನಕ್ಕೆ ಬೆಳಸಲು ಬಿಡೆನೊ
ಕೋತಿ ಸೇವಿಸಲು ಬಿಡೆನೊ
ಆತುರದಲಿ ವನಧಿ ಲಂಘಿಸಿದರೆ ಬಿಡೆ
ಆ ತರುಗಳ ಕಿತ್ತಲು ಬಿಡೆನೊ
ವೀತಿಹೋತ್ರನ ಬಾಲದಲ್ಲಿ ಇಟ್ಟರೆ ಬಿಡೆ
ಜಾತಿ ಧರ್ಮವ ಬಿಟ್ಟರೆ ಬಿಡೆನೊ
ಈ ತೆರದಲಿ ನೀನು ಇದ್ದರೇನಯ್ಯಾ ಬೆ
ನ್ನಾತು ಕೇಳುವುದು ನಾ ಬಿಡಬಲ್ಲೆನೇ
ತಾತಾ ಇನ್ನಿದರಿಂದ ಆವುದಾದರು ಬರಲಿ
ದಾತಾ ಮೆತ್ತಿದರಿಂದ ಏನಾದರಾಗಲಿ
ಸೋತು ಹಿಂದಾಗದು ಪೋದರೆ ನಿನ್ನ ಪದದಾಣೆ
ಯಾತಕ್ಕೆ ಸಂಶಯವೊ ಬಿಡೆನೊ ಬಿಡೆನೊ ಖ
ದ್ಯೋತ ಮಂಡಲ ಪೋಗಲು ಬಿಡೆನೊ
ಮಾತು ಪೊಳ್ಳಾದರೆ ನೂರೊಂದು ಕುಲ ಎನ್ನ
ಗೋತ್ರದವರಿಗೆ ಗತಿ ಎಲ್ಲಿದೋ
ವಾತನ್ನ ಮಗನಾದ ಆತನ್ನ ರೂಪವ
ಗಾತುರದಲ್ಲಿ ನಿನ್ನೊಳಗೆ ತೋರೋ
ಜೋತಿರ್ಮಯ ರೂಪ ವಿಜಯವಿಠ್ಠಲರೇಯನ
ದೂತ ದುರ್ಜನಹಾರಿ ದುಃಖನಿವಾರಿ ೧
ಮಟ್ಟತಾಳ
ಭೂತಳದೊಳಗೆ ಇದ್ದ ಭೂಮಿಸುತ್ತಲು ಬಿಡೆ
ಭೀತಿನಾಮವನ್ನು ಇಟ್ಟುಕೊಂಡರೆ ಬಿಡೆ
ನೀ ತಿರಿದುಂಡರೆ ಬಿಡೆನೋ ಬಿಡೆನೊ ಆ
ರಾತಿಗಳಿಗೆ ಸೋತು ಅಡವಿ ಸೇರಲು ಬಿಡೆನೊ
ಸೋತುಮತನ ಬಿಟ್ಟು ಅಡಿಗಿಮಾಡಲು ಬಿಡೆ
ಘಾತಕ ನೀನಾಗಿ ಕುಲವ ಕೊಂದರೆ ಬಿಡೆ
ಮಾತುಗಾರಿಕೆಯಿಂದ ಯತಿಯಾದರೆ ಬಿಡೆನೊ
ಪ್ರೀತ ಸಲಹೊ ಎನ್ನ ಸಾಕದಿದ್ದರೆ ನಿನ್ನ
ಪೂತರೆ ದ್ವಿತೀಯೇಶನೆಂದು ಪೊಗಳಲ್ಯಾಕೆ
ನಾಥನಲ್ಲಿ ನಿನ್ನ ಮಂತ್ರಿತನವೇನೊ
ಪೋತಭಾವ ನಮ್ಮ ವಿಜಯವಿಠ್ಠಲರೇಯನಾ
ತುಮದೊಳಗಿಟ್ಟ ಭಾರತಿ ರಮಣಾ ೨
ತ್ರಿವಿಡಿತಾಳ
ಭಾರವೇ ನಾನೊಬ್ಬ ಶರಣಾ ನಿನಗಲ್ಲವೇ
ಬಾರಿಬಾರಿಗೆ ನಿನ್ನ ಐಹಿಕ ಸೌಖ್ಯಾ
ಮೀರದೆ ಕೊಡು ಎಂದು ಬೇಡಿ ಬ್ಯಾಸರಿಸಿ ವಿ
ಸ್ತಾರವಾಗಿ ಗುರುವೆ ಕಾಡಿದೆನೇ
ಧಾರುಣಿಯೊಳು ಪುಟ್ಟಿ ಪಾರುಗಾಣದ ಸಂ
ಸಾರ ಹೇಯವೆಂದು ಕೇಳಿ ನಿನಗೆ
ದೂರಿದೆನೊ ಇದು ದೈನ್ಯದಿಂದಲಿ ವಿ
ಚಾರಿಸಿದರೊಳಿತೆ ಇಲ್ಲದಿದ್ದರೆ ಲೇಸೆ
ಸಾರಿಸಾರಿಗೆ ನಿನ್ನ ಸೌಭಾಗ್ಯ ಚರಣವ
ತೋರಿಸಿ ಧನ್ಯನ್ನ ಮಾಡೆಂದೆನೊ
ಕಾರುಣ್ಯದಲಿ ಕೈಟಭಾರಿ ಪ್ರಿಯನೆ
ಆರನ್ನ ಕಾಣೆನೊ ನಿನ್ನ ವಿನಾ
ಕೀರುತಿ ಅಪಕೀರ್ತಿ ನಿನ್ನದಯ್ಯಾ
ವಾರಣಾವರ ವಂದ್ಯ ವಿಜಯವಿಠ್ಠಲರೇಯನ
ಸೇರುವ ಪರಿಮಾಡೋ ತಾರತಮ್ಯ ಭಾವದಲಿ೩
ಅಟ್ಟತಾಳ
ನೀನು ಒಲಿಯೇ ಹರಿ ತಾನೆ ಒಲಿವನಯ್ಯ
ನೀನು ಮುನಿದಡೆ ಹರಿ ತಾನೆ ಮುನಿವನು
ಏನೆಂಬೆ ನಿನ್ನ ಮೇಲಣ ಹರಿ ಕಾರುಣ್ಯ
ನೀನಲ್ಲದಿಲ್ಲದ ಸ್ಥಾನವೆ ತಾನಿಲ್ಲಾ
ಪ್ರಾಣೇಶ ನಮೋ ನಮೋ ನಿನ್ನ ಪಾದಾಬ್ಜಕೆ
ವಾನರೇಶ ಸುಗ್ರೀವ ವಾಲಿ ಸಾಕ್ಷಿ
ಜ್ಞಾನೇಶ ಭಕ್ತಿ ವಿರಕ್ತೇಶ ಅಮರೇಶ
ಆನಂದ ಆನಂದ ಮೂರುತಿ ಗುರುರಾಯ
ಪಾಣಿಗ್ರಹಣ ಮಾಡು ಪತಿತ ಪಾವನ ದೇವ
ಪ್ರಾಣೇಂದ್ರಿಯಗಳು ದೇಹ ಚೇತನ ಚಿತ್ತವ
ಧಾನ ಮಾಡಲಿ ಸರ್ವ ನಿನ್ನಾಧೀನವೆಂದು
ನೀನಿರಲಾವಾಗ ಅನ್ಯ ಜನರಿಗೆ ಮತ್ತಾನು
ಬಿನ್ನೈಪೆನೆ ದೇಹ ತ್ಯಾಗವಾಗಿ
ಶ್ರೀನಾಥ ವಿಜಯವಿಠ್ಠಲರೇಯನ ಪಾದ
ರೇಣು ಧರಿಸುವ ಸರ್ವರುದ್ದಾರೀ ೪
ಆದಿತಾಳ
ಎಲ್ಲ ಕಾಲದಲ್ಲಿ ನಿನ್ನಲ್ಲಿ ಭಕ್ತಿ ಇಪ್ಪ
ಸಲ್ಲಲಿತ ಮನುಜರ ಪದಪಾಂಸ ಶಿರ
ದಲ್ಲಿ ಧರಿಸುವಂತೆ ಸತತ ಮತಿ ಇತ್ತು
ಬಲ್ಲಿದ ಕಾಮ ಬಿಡಿಸು ಬಲವಂತ ಗುಣವಂತ
ಬಲ್ಲವ ಭವದೂರ ನೀನೇ ಗತಿಯೋ ಜಗ
ದೊಲ್ಲಭ ಮುಂದಣ ವಾಣೀಶ ಸುಖಪೂರ್ಣ
ಅಲ್ಲದಿದ್ದರೆ ಎನ್ನ ಕಾವ ಕರುಣಿಯ ಕಾಣೆ
ಮಲ್ಲಮರ್ದನ ನಮ್ಮ ವಿಜಯ ವಿಠ್ಠಲರೇಯನ
ನಿಲ್ಲಿಸಿ ಮನದಲ್ಲಿ ಪ್ರತಿಕೂಲವಾಗದೆ ೫
ಜತೆ
ಅನಂತ ಜನುಮಕ್ಕೆ ನೀನೆ ಗುರು ಎಂಬ
ಜ್ಞಾನವೇ ಕೊಡು ಜೀಯಾ ವಿಜಯವಿಠ್ಠಲನ ದಾಸಾ ೬

ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬ ಮಾತಿನಂತೆ

೪೦
ಧ್ರುವತಾಳ
ಗರ್ಭದೊಳಗೆ ಇದ್ದು ಒಂದು ವತ್ಸರ ನಿನಗೆ
ಹಬ್ಬ ಮಾಡಿಸಿ ಉಣಲಿತ್ತರಾರೊ
ಒಬ್ಬರ ಹಾಗೆ ಹಾಗೆ ಯೋಚಿಸಿ ನೋಡು ಬಲು
ಉಬ್ಬಿ ತಿರುಗದಿರು ಮುಂದೋರದೇ
ಉಬ್ಬಸ ಗೈವರನ್ನುಬ್ಬಸರೊಳಗಿಂದ ತೆಗೆದು
ಊರ್ಭಿಯೊಳಗೆ ಇಟ್ಟು ಪಾಲಿಸುವಂತೆ
ನೆಬ್ಬವು ತೆರದಂತೆ ಸಂಸೃತಿಕಾಣೆ ನೀನು
ಗಬ್ಬಿನಲ್ಲಿ ಕೆಟ್ಟು ಪೋಗದಿರೂ
ಅಬ್ಬರದಲ್ಲಿ ನಿನ್ನ ಮಿತಿಕಾಲನೋಡಿ ಬಹು
ಆರ್ಭಟದಲ್ಲಿ ಎಳೆದುಯ್ದಾಗಲು
ಒಬ್ಬರಾದರು ಬಂದು ಬಿಡಿಸಿ ಕೊಂಬುವರಿಲ್ಲ
ಮಬ್ಬಿನಲ್ಲಿ ಇದು ಮರುಳಾ ಹರೆ
ಈರ್ಬಗೆ ಕಾರ್ಯದಲ್ಲಿ ನಿನ್ನ ನಿನ್ನವರ ಯತ್ನ
ಅಬ್ಬಿತೇನೊ ನೋಡು ಗುಣಿಸಿ ಎಣಿಸೀ
ಅರ್ಭಕತನ ಹೀಗೆ ಮದ್ಯಕಾಲವು ಬರಲು
ಲಬ್ದವಾದುದು ಎನ್ನ ಶೌರ್ಯವೆಂಬೇ
ಹುಬ್ಬಿನ ಮಧ್ಯದಲ್ಲಿದ್ದದ್ದು ಕಾಣೆ ನಿನ್ನ
ಲಬ್ದತನವೆ ಬಿಡು ಬಿಂಕವ್ಯಾಕೊ
ಅಬ್ಜಪಾಣಿಯ ಪ್ರೀಯ ವಿಜಯ ವಿಠ್ಠಲರೇಯನ
ತಬ್ಬುಬ್ಬಿಗೊಳಿಸದೆ ಕಾವುದು ಮರಿಯದಿರು ೧
ಮಟ್ಟತಾಳ
ಹರಿಯಿತ್ತ ಭಾಗ್ಯ ಹರಿಗೆ ಸಮರ್ಪಿಸಿ
ಸುರಲೋಕವ ಮೀರಿ ಪರಮ ಪದವಿಯ ಸೇರಿ
ನಿರಯದೂರರ ಕೂಡ ಹರುಷದಿಂದಲಿ ಇದ್ದು
ಪರಿ ಪರಿ ಸುಖವನ್ನು ಸರಿ ಸರಿ ಬಂದಂತೆ
ಚರಿಸಲೊಲ್ಲದೆ ಇನಿತು ಬರಿದೆ ಬಳಲಿ ತೊಳಲಿ
ನರಕಕ್ಕೆ ಬೀಳುವ ತೆರನು ಮಾಡದಿರೂ
ಒರೆದೊರೆದು ಮನವೆ ಹಿರಿದು ಪೇಳುವೆ ಕೇಳು
ಗರುವ ದೇವರದೇವ ವಿಜಯ ವಿಠ್ಠಲರೇಯನ
ಇರುಳು ಹಗಲು ನೆನೆಸಿ ನೆರೆನಂಬು ನಂಬೊ ೨
ತ್ರಿವಿಡಿತಾಳ
ಆದಿ ಅಂತ್ಯದಲ್ಲಿ ಇದ್ದಂತೆ ಇದ್ದು ಸಂ
ಪಾದಿಸು ಮಧ್ಯಕಾಲದಲಿ ಜ್ಞಾನ
ಸಾಧನದಿಂದಲ್ಲಿ ಹರಿ ಸ್ವತಂತ್ರನೆಂದು
ಭೇದಾರ್ಥದಲಿ ತಿಳಿದು ನಡೆಯಬೇಕು
ವೈದಿಕ ಮಾರ್ಗವನ್ನು ಚನ್ನಾಗಿ ಬಗೆ ಬಗೆ
ಶೋಧಿಸಿ ಸಕಲವು ನಿರ್ಣೈಸಿ
ಓದನಗೋಸುಗ ಚಿಂತೆ ಮಾಡದೆ ನೀನು
ಮೋದದಿಂದಲಿ ಮನವೆ ನಿಂದು ಕಾಮ
ಕ್ರೋಧಾದಿಗಳ ತೊರೆದು ಕೋಮಲ ಮತಿಯಲ್ಲಿ
ಮಾಧವನ್ನನಂಬು ಏಕಾಂತದಿ
ಬಾಧೆಯ ಬಿಡಿಸುವ ವಿಜಯವಿಠ್ಠಲರೇಯ
ಆದಿತ್ಯ ಜನರಿಗೆ ಆತನೆಗತಿಯನ್ನು ೩
ಅಟ್ಟತಾಳ
ನಿನ್ನ ಪ್ರಯತ್ನಂಗಳ್ಯಾತಕೆ ಬಾತಿಯಾ
ಬೆನ್ನು ಬಲವಾಗಿ ಹರಿಯದಿದ್ದರೆ ಸರ್ವ
ತನ್ನಿಂದತಾನೇನೆ ಪ್ರಾಪ್ತವಾಗುವುದು
ನಿನ್ನ ಪ್ರಯತ್ನವು ವ್ಯರ್ಥಕಾಣೊ
ಇನ್ನು ಹಿಗ್ಗದಿರು ಹಿತದಿಂದಲಿ ಹರಿ
ತನ್ನವನೆಂದಡೆ ಅತಿಶಯ ನೆನೆದದ್ದು
ಮುನ್ನೆ ತಿಳಿದನೋಡು ಆಯು ಕರ್ಮವಿತ್ತ
ವನ್ನು ವಿದ್ಯದಾರಿದ್ರ ಪೂರ್ವಕದಿಂದ
ಚನ್ನ ಹರಿ ಅಂದೆ ನಿರ್ಮಾಣ ಮಾಡಿರೆ
ಕುನ್ನಿಯಂತೆ ಕಂಡ ಕಂಡಲ್ಲಿ ಪೋಗದಿರು
ಉನ್ನತಮಹಿಮ ವಿಜಯ ವಿಠ್ಠಲರೇಯ
ಕನ್ನಡಿಯೊಳಗೆ ಇದ್ದಂತೆ ತೋರ್ವನೆಲ್ಲ ೪
ಆದಿತಾಳ
ಬಸುರೊಳಗಿದ್ದಾಗ ಸುಖಬಡಿಸಿದಾತ
ಅಸಮ ಸುಹಾಸನಾವವನೊ
ಅಸಮ ಸಾಹಸನಾವವನೊ
ವಸುಧೆ ಪಾಲಕ ಹರಿಯಲ್ಲದೆ ರಾ
ಜಿಸುವ ದೈವವು ಇಲ್ಲವೆನ್ನು
ಘಸಣಿಗೊಳ್ಳದಿರು ದೃಢಚಿತ್ತ ನೀನಾಗಿ
ಬೆಸಸು ಹರಿಯ ಗುಣಕಥೆಯ
ಅಸುರ ವೈರಿ ವಿಜಯ ವಿಠಲರೇಯ
ವಶವಾಗಿ ಇಪ್ಪ ಎಲ್ಲಿರಲು ೫
ಜತೆ
ಚಿಂತೆ ಮಾಡದಿರು ಚಿತ್ರವಿಚಿತ್ರವು
ಕಂತುಜನಕ ವಿಜಯ ವಿಠ್ಠಲಮಾಡಿದನೆನ್ನು ೬

ವಿದ್ಯೆ, ಐಶ್ವರ್ಯ, ಕೀರ್ತಿ, ಅಧಿಕಾರಗಳು ಮನುಷ್ಯನಿಗೆ

೪೧
ಧ್ರುವತಾಳ
ಗರ್ವದಲಿ ಕೆಡದಿರು ಸರ್ವ ವಿಷಯದಲ್ಲಿ
ದುವ್ರ್ಯಸನ ಚೇಷ್ಟಿಗ ನಿರ್ವಿಣ್ಯ ನಾಗು
ತೆರವಿಲ್ಲದಂತೆ ತತ್ಪೂರ್ವ ದುರಿತರಾಸಿ
ನೀರ್ವದು ಮಹ ಪರ್ವತಕಧಿಕ
ಖರ್ವ ಜನ್ಮಗಳಲ್ಲಿ ಊರ್ವಿಯ ಸುತ್ತಿದರು
ಊರ್ವಿಸುರರಾ ಜನನ ಸರ್ವದ ಸಾದ್ಯ
ಗೀರ್ವಾಣ ಸಿದ್ದ ಗಂಧರ್ವರು ಬಲ್ಲರು
ದುವ್ರ್ಯಸನ ತೊರೆದು ಓರ್ವನಾಗಿ
ಸರ್ವತ್ರ ಚಕ್ಷು ನಾಮ ವಿಜಯ ವಿಠ್ಠಲರೇಯ
ಸರ್ವರಾಧಾರನೆನ್ನು ಸರ್ವಕಾಲದಲ್ಲಿ ೧
ಮಟ್ಟತಾಳ
ನಿರ್ಮಳ ಮನಸಿನಲಿ ನಿರ್ಮತ್ಸರನಾಗಿ
ಚರ್ಮಾಂಗದೆ ಚಿಂತೆ ನಿರ್ಮೂಲವೆ ತೊರೆದು
ದುರ್ಮತಿ ಇಂದ್ರಿಯಂಗಳ ಮರ್ಮವನು ಮೆಟ್ಟಿ
ಧರ್ಮಾನುಕೂಲದ ಕರ್ಮಜ್ಞಾನೇಂದ್ರಿಯದಲ್ಲಿ
ಧರ್ಮಗುಪ್ತವಾದ ವಿಜಯ ವಿಠ್ಠಲ ರಂಗನ
ಪೆರ್ಮೆಯಿಂದಲಿ ಕರುಣವರ್ಮನ ತೊಡು ತೊಡು ೨
ರೂಪಕತಾಳ
ದೃಡಾಂಗನಾಗುವುದು ಕಡೆಕಡೆಯಲಿ ಮನ
ಬಿಡದಿರು ಭಂಇಇವಾದರೆ ಭೀತಿಗೊಳದಿರು
ಕೆಡದಿರು ದುಷ್ಟ ವ್ಯಾಪಾರದಲ್ಲಿ ಬಿದ್ದು
ಒಡಲಿಗಾಗಿ ಪೋಗಿ ಕಾಯದಿರು ಜನರ
ಬಡವನಾಗಿ ಬ್ರಹ್ಮ ವಿದ್ಯ ವಿಜಯ ವಿಠಲನ್ನ
ಅಡಿಗಳನ್ನು ಚನ್ನಾಗಿ ಹೃದಯದಲ್ಲಿರಿಸು ೩
ಝಂಪೆತಾಳ
ಚಂಚಲವನು ಬಿಟ್ಟು ಚತುರಾಥಕೊಳಗಾಗಿ
ಪಂಚೇಂದ್ರಿಯಂಗಳ ವಶಮಾಡಿಕೊಂಡು
ವಂಚನಿಯ ತೊರೆದು ಕಾಮಕ್ರೋದ ಬಲದ ಪ್ರಾ
ಪಂಚವನು ಬಿಡು ಬಿಡು ಜಡಮನವೆ
ಪಂಚದಶ ವಿಜಯ ವಿಠ್ಠಲನ ಪದಸೇವಿಗ
ಸಂಚಗಾರವ ಪಿಡಿಯೊ ವೈರಾಗ್ಯ ಪಡಿಯೋ ೪
ತ್ರಿವಿಡಿ ತಾಳ
ಹರಿ ಸೇವಿಗೆ ಅಂಗೀಕರಿಸಿ ಬಾಳಿದವಂಗೆ
ದುರಿತ ಪರ್ವತಂಗಳು ಪರಿಹಾರವೊ
ಭರದಿ ಸಿಡಿಲು ಬಂದು ಸಿರದಲ್ಲಿ ಎರಗಿದರು
ಅರಳಿದ ಮಲ್ಲಿಗೆ ಸರವಾಗಿ ತೋರೋದು
ತರುಬಿ ಮುನಿದ ಕಳ್ಳ ಪರಮ ಸಖನಾಗುವ
ಅರಸುವಾ ಅಪಮೃತ್ಯು ತೊಡರದಲೆ ದೂರದಲ್ಲಿ
ಸರಿದು ನಿಂದು ನಿರಾಕರಿಸಿ ಓಡುವುದು
ಹರಿ ಭಕುತಿಗೆ ಒಂದರೆ ಮರೆ ಇಲ್ಲವೋ
ಶರಣಾಗತ ಸ್ತೋತ್ರ ವಿಜಯ ವಿಠ್ಠಲನ್ನ
ಕರುಣ ಸಂಪಾದಿಸಿ ಮರಣರಹಿತನಾಗೋ ೫
ಅಟ್ಟತಾಳ
ಕರ್ನ ಕೇಳಿಸದಂತೆ ಕಣ್ಣು ಕಾಣಿಸದಂತೆ
ಉನ್ನತಮದ ಹುಚ್ಚು ಹಿಡಿದಂತೆ ಪೋಗುತ್ತ
ತನ್ನ ಎಚ್ಚರಿಕೆ ತನಗೆ ಇಲ್ಲದಂತೆ
ಮಣ್ಣು ಸಮಾನವೆಂದು ಪವಳಿಸುತ್ತ
ಅನ್ಯರಿಗೆ ಬಲು ಹೇಸಿಕೆ ತೋರುತ್ತ
ತನ್ನೊಳಗಿದ್ದ ಪರಮಾತ್ಮನ ಧ್ಯಾನ
ವನ್ನು ಮಾಡುತ ಸಾಧನ ಪೂರತಿಯಲ್ಲಿ
ಚಿನ್ನ ಮಲಿನದಲ್ಲಿ ಪೊಳೆದಂತೆ ತೋರುತ್ತ
ವರ್ನಾ ಕ್ರಮದೊಳು ರನ್ನ ನೀನಾಗು ಸು
ವರ್ನನಾಮ ಸಿರಿ ವಿಜಯ ವಿಠ್ಠಲ ಸಂ
ಪನ್ನನ ಮತ್ತೊಂದು ಕಣ್ಣಿನಿಂದಲಿ ನೋಡು ೬
ಆದಿತಾಳ
ನೆಳಲಿಗೆ ಅಂಜಿ ನಡೆದು ಅಳಕುವುದು ಪರ ವಸ್ತಕ್ಕೆ
ಗಲಭೆಯಿಂದಲಿ ಪೋಗಿ ಸುಳಿಯದಿರು ಎಲೊ ಮನವೆ
ಜಲಜಾಕ್ಷ ವೀರಘ್ನ ವಿಜಯ ವಿಠ್ಠಲನಂಘ್ರಿ
ಒಲಿಸಿ ಕೊಂಡಾಳಾಗಿದ್ದು ಉಳಿ ದಿನಪೋಗಾಡು ೭
ಜತೆ
ದುಷ್ಕರ್ಮ ನೆನೆಸದೆ ದೂರಾಗು ಜನನಕ್ಕೆ
ಪುಷ್ಕರಾಕ್ಷ ನಾಮ ವಿಜಯ ವಿಠ್ಠಲನೊಲಿಸೊ ೮

ತಿರುಪತಿಯ ಬೆಟ್ಟವನ್ನು ಕುರಿತು ಇರುವ

೪೪. ತಿರುಪತಿ
ರಾಗ:ಸಾವೇರಿ
ಧ್ರುವತಾಳ
ಗಿರಿಯ ಶಿಖರವ ಕಂಡೆ ಅರುಣ ಸುವರ್ಣಮಯ |
ಮಿರುಗುತಿದ ಚತುರ್ದಶ ಧರೆಯೊಳಗೆ ಮೆರುವುತಿದೆ |
ಎರಗುತಿದೆ ಮನವಿರದ ಕರಗುತಲಿದೆ ದುರಿತಪಾಶ |
ಪರಿಯುತಿದೆ ಪೀಯೂಷ ಸುರಿವುತಿದೆ ಅನುಗಾಲ |
ವರಕಲ್ಪಕಲ್ಪಕ್ಕೆ ಅರಸಿ ನೋಡಿದರು ಈ |
ಗಿರಿಗೆ ಸಮಾನೆಂದುರು ಕಾಣೆ ನಾನಾವಲ್ಲಿ |
ಪರಿ ಪರಿಯ ತೆರದಿ ಶೃಂಗಾರಲಂಕಾರ ಸುಂ |
ದರಲಕ್ಷಣಗಳಿಂದ ಸರಸದಲಿ ಒಪ್ಪುತಿದೆ |
ವರಗಿರಿಯ ತಿಮ್ಮ ತಿರುಮಲ ತಿರುವೆಂಗಳ |
ಉರಗಗಿರಿಯವಾಸ ವಿಜಯವಿಠಲರೇಯ |
ನಿರುತ ಉತ್ಸಾಹದಲ್ಲಿ ಸುರರೊಡೆಯನಿಪ್ಪ ೧
ಮಟ್ಟತಾಳ
ಧರೆಗಿದು ವೆಂಕುಂಠಪುರವಿದು ನಿಜವೆಂದು |
ಸುರರು ಕಿನ್ನರರು ಸಿದ್ದರು ಗರುಡರು ಸಾ |
ಧ್ಯರು ಗಂಧರ್ವರು ಉರಗ ಯಕ್ಷರು ಕಿಂ |
ಪುರುಷರು ಚಾರಣರು ವರಮುನಿಗಳು ಭೂ |
ಸುರರು ಮೊದಲಾದ ಪರಿಪರಿಯ ಜ್ಞಾನಿಗಳು |
ಚರಿಸುವರು ವಿಸ್ತರ ವೈರಾಗ್ಯದಲಿ |
ಪರಮಪುರುಷ ತಿಮ್ಮಾ ವಿಜಯವಿಠಲನ |
ಸ್ಮರಿಸಿ ಗಿರಿಯಲ್ಲಿ ಪರಗತಿ ಬಯಸುತ್ತ ೨
ತ್ರಿವಿಡಿತಾಳ
ಫಲ ಮರ ಗಿಡ ಬಳ್ಳಿ ಖಗಮೃಗ ನಾನಾಕ |
ಕುಲದ ಜೀವಿಗಳೆಲ್ಲ ಚರಿಸುವರಮರಾದಿ |
ಕುಲದ ಕುಲದವರೆಲ್ಲ ಜನಿಸಿ ಒಂದು ರೂಪಿಲಿ |
ಬಲು ಭಕುತಿಯಲ್ಲಿ ಸಾಧನ ಮಾಡುತ್ತ |
ಸುಲಭರಾಗಿಪ್ಪರು ಆವಾಗ ಸುಜನಕೆ |
ಪೊಳದು ಕಂಗಳಿಗೆ ಗೋಚರವಾಗುತ್ತ |
ಮಲರಿಗೆ ಎಂದಿಗೆ ಕಾಣಿಸರೂ ಇದರ |
ನೆಲಿಯಾ ಬಲ್ಲರು ಹರಿದಾಸರಯ್ಯಾ |
ಬಲವಂತ ವೆಂಕಟ ವಿಜಯವಿಠಲರೇಯಾ |
ಸಲಹೂವ ಈ ಗಿರಿಯ ಸಾರಿದ ಜನರಿಗೆ ೩
ಅಟ್ಟತಾಳ
ಉರಗಗಿರಿಯ ಯಾತ್ರಿ ದುರುಳ ಮಾನವರಿಗೆ |
ದೊರಕಾದು ದೊರಕಾದು ದೊರೆತಾರೆ ಫಲಿಸಾದು |
ಹರಿಗುರು ಭುಕುತಿಲಿ ಪರನಾಗಿ ನಡೆದಾ ಜ |
ನರಿಗಲ್ಲದೆ ಮತ್ತರಿಗೆ ಅತಿ ಸುಲಭವೆ |
ಧರಧರ ವರ್ನಾ ಶ್ರೀ ವಿಜಯವಿಠಲ ತಿಮ್ಮ |
ಕರುಣ ಮಾಡಲು ಆಶ್ಚರ್ಯಾಗದು ಕಾಣೊ ೪
ಆದಿತಾಳ
ಮಾರುತನಿಂದಲಿ ಸೋತು ವಾರುಣೀಶ |
ಮೇರುವೆ ಕುಮಾರನೊಳು ತರಂಗಾ |
ಹಾ[ರಲಾರ]ದೆ ಇಲ್ಲಿ ಬಂದು ಮೂರು ಹತ್ತು ಯೋಜನ |
ಪಾರಿಮಿತವಾಗಿ ಆದ್ರಿ ಧಾರುಣಿಯೊಳಗೆ ಸುಧಾ |
ಕರಾನಂತೆ ಪೊಳವುತಿದೆ ಆರು ಸಾರಿ ಗೇಲಿ ನಮ |
ಸ್ಕಾರ ಪ್ರದಕ್ಷಿಣೆ ಸುತ್ತ ವಾರಣದಿಂದ ಮಾಡಲು |
ದ್ಧಾರನಾಗುವ ಕುಲಸಹಿತಾ |
ಶ್ರೀ ರಮಣ ವೆಂಕಟ ವಿಜಯವಿಠಲ ತಿಮ್ಮ |
ದೂರಮಾಡಿ ಪಾಪನಿಕರ ಬಾರದಂತೆ ಪಾಲಿಸುವ ೫
ಜತೆ
ಅನಂತ ಜನ್ಮದ ಪುಣ್ಯ ಫಲಿಸಿದರೆ |
ಅನಂತ ಗಿರಿಯಾತ್ರಿ[ಯ]ನೀವ ವಿಜಯವಿಠಲ ೬

ತಿರುಪತಿಯ ಬೆಟ್ಟದ ಶಿಖರದರ್ಶನ ಪರಮ

೪೫. ತಿರುಪತಿ
ರಾಗ:ಭೈರವಿ
ಧ್ರುವತಾಳ
ಗಿರಿಯ ಶಿಖರವ ನೋಡಿ ಶಿರ[ವಾ]ಗಿ ಕರವ ಮುಗಿದು |
ಮರಳಿ ಸಾಷ್ಟಾಂಗ ನಮಸ್ಕಾರ ಮಾಡಿ |
ಪರಮ ಭಕುತಿಯಿಂದ ಕೊಂಡಾಡಿ ನಲಿದಾಡಿ |
ಪರಿ ಪರಿ ವಿಧದಿಂದ ನೆನಿಸಿ ನೆನಿಸೀ |
ಧರೆಯೊಳಗಿದೆ ಮೇರು ಪರುವತದ ಮಗನೆನಿಸಿ |
ಕರಿಸಿ ಕೊಳುತಿದೆ ವೆಂಕಟಾಖ್ಯ ನಾಮಾ |
ಸ್ಮರಿಸಿ ಮನ, ಬುದ್ಧಿಯಲ್ಲಿ ಪ್ರವೇಶ ಮಾಡಿ ನಿಂ |
ದಿರದೆ ವಿಚಿತ್ರಮಯವಾದ ಗಿರಿಯಾ |
ಮಿರಿ ಮಿರಿ ಮಿಂಚುತಿದೆ ದಶದಿಕ್ಕಿನೊಳಿದಕೆ |
ಸರಿ ಸರಿ ಸರಿಗಾಣೆ ನಿಸ್ಸಂದೇಹಾ |
ಸುರ ತರುವಿನಂತೆ ಬೇಡಿದ ಇಷ್ಟರ್ಥಾಗಳೆಲ್ಲಾ |
ಕರೆವುತಿದೆ ಶಬ್ದಾರ್ಥ ತಿಳಿದ ನರಗೇ |
ಸುರರು ಸನಕಾದಿ ಮುನಿ ಸಮಸ್ತ ಮುಕ್ತರು |
ತರು ಗುಲ್ಮಲತೆ ವಾರಿಚರ ಖಗ ಮೃಗ |
ನರರು ಮೊದಲಾದ ರೂಪವ ಧರಿಸಿ ಸಾಧನ ವಿ |
ಸ್ತರವಾಗಿ ಮಾಡುವರೂ ವಿನಯಾದಿಂದಾ |
ಅರವತ್ತಾರು ಕೋಟಿತೀರ್ಥಂಗಳು ಉಂಟು ಸುಂ |
ದರವಾಗಿ ಒಪ್ಪುತಿವೆ ಇದರೊಳಗೆ |
ಪರಮ ಮುಖ್ಯ ತೀರ್ಥಾ ಚತುರವಿಂಶತಿ (ಇಪ್ಪತ್ತನಾಲ್ಕು) ಇಪ್ಪಾವು |
ನಿರಯಾಕಳವುತ್ತ ವಂದಿಸಿದ ಜನಕೆ |
ಪರಮೇಷ್ಠಿ ಗರುಡೇಂದ್ರ ತರಣಿ ನಾಲ್ವರು ಚ |
ತುರ ದಿಕ್ಕಿನಲ್ಲಿ ಅನಿರುದ್ಧಾದಿ ಯಾ |
ಕರುಣ ಶರಣರ ಮೇಲೆ ಮಾಡುತಾ ಪ್ರತಿದಿವಸ |
ಸಿರಿವಂತರಾಗಿ ಪೂಜಿಸುತಿಪ್ಪರೂ |
ಅರಿಶಂಖ ಗದಾ ಪದುಮಾಧರರಾಗಿ ವಿಲಿಂಗರು |
ಚರಿಸುವರು ಪುಣ್ಯಕಾಮರಾಗಿ ಸಂತೋಷದಿ |
ವರವೇದ ಶಾಸ್ತ್ರ ಸ್ರ‍ಮತಿಗಳಲ್ಲಿ ನಿರುತರ |
ವರದೊರದು ಪೇಳುತಿವೆ ಒಲಿದೊಲಿದೂ |
ಅರಸಿವೆಂಜಲೂ ಮರ್ಕಟ ಮೆದ್ದರಾದಡೆ ಬಾ |
ಹಿರದಲ್ಲಿಪ್ಪಾ ಮದಕರಿ ಸರಿಯೆ |
ಉರಗಾ ಪರಿಯಂಕ ಹರಿಗಾಗಿಹ್ಯ ನೆನದೀರಿ |
ಮರುತಾ ದೇವಗೆ ಸರಿಯೆನ್ನ ಬಹುದೆ |
ತಿರುವೆಂಗಳೇಶಾ ಸಿರಿ ವಿಜಯವಿಠಲರೇಯಾ |
ಸ್ಥಿರವಾಗಿ ನೆಲೆಸಿಪ್ಪ ಇರಳು ಹಗಲು ಬಿಡದೆ ೧
ಮಟ್ಟತಾಳ
ಒಂದೊಂದು ಯುಗಕೆ ಒಂದೊಂದು ಪೆಸರು |
ಚಂದವಾಗಿಪ್ಪವು ಪೊಗಳಿದವರಗೀಗಾ |
ನಂದವೆ ಕೊಡುತಲಿ ಅತಿಶಯವೆನಿಸಿ ವ |
ಸುಂಧರದೊಳಗೆ ಸುಲಭವಾಗಿದೆ ಕೇಳಿ |
ಒಂದೆರಡು ಎರಡೂ ಯೋಜನ ವಿಸ್ತಾರ |
ಒಂದಿನಾದರೂ ಐದು ಸಾರೆ ಪ್ರದಕ್ಷಿಣೆ |
ವಂದಿಸಿ ತಿರುಗಿದರೆ ತತ್ಕಾಲಕೆ ಪದವಿ |
ನಂದನ ಕಂದ ಸಿರಿ ವಿಜಯವಿಠಲ ವೆಂಕಟ |
ನಿಂದು ಭಕುತ ಜನಕೆ ವರಗಳ ಕೊಡುತಿಪ್ಪಾ ೨
ತ್ರಿವಿಡಿತಾಳ
ಅನಂತ ಜನುಮಕೆ ಸಾಧನ ಕೂಡಾದಲ್ಲದೆ |
ಈ ನಗ ದಾರಿಗೂ ದರುಶನವಾಗದು |
ಏನೆಂಬೇನಯ್ಯಾ ಇದರ ಮಹಾತ್ಮೆಯನ್ನು |
ಸ್ಥಾಣು ಸನಕಾದ್ಯರಿಗೆ ಪೇಳಿ ಮೈಮರೆದಾ |
ಮಾನುಷ್ಯನ್ನಾ ಜನಕೆ ಎಣಿಸಿ ಪೇಳುವದರಿದೊ |
ಆನೆಂತು ವರ್ಣಿಪೆನೊ ಕೊನೆ ಮೊದಲು |
ಗೆಣಿಸದನಾ ಇಲ್ಲಿ ರಚಿಸಿ ತತ್ವಬಲ್ಲ |
ಜ್ಞಾನಿಗೆ ಮನಸು ಪೂರ್ವಕದಿಂದಲಿ |
ದಾನಾವಿತ್ತವನ ವಂಶಾ ಆವಾವ ಲೋಕದಲಿ |
ಆನಂದಾನಂದದಲೀ ಕ್ರೀಡಿಸುವರೂ |
ಶ್ವಾನ ಸೂಕರ ದೇಹಾ ಬಂದರವಕೆ ಕೇಳಿ |
ಹೀನಾವೆಂಬೋದೇ ಇಲ್ಲ ಪ್ರಬಲ ಸಂಸ್ಕಾರವೊ |
ಶ್ರೀನಿವಾ[ಸ] ನಮ್ಮ ವಿಜಯವಿಠಲರೇಯಾ |
ಕಾಣಿಸಿ ಕೊಂಬನು ಈ ಗಿರಿಯಾ ಸ್ಮರಿಸಿದರಿಗೆ ೩
ಅಟ್ಟತಾಳ
ಬಲಬಲಿ ಬಲವೈರಿ ಕವಿಗಳು |
ಒಲಿದು ಒಲುಮೆಯಿಂದ ಈ ಶೈಲ ಕಾಣಲು |
ಬಲು ಪಂಚಾಮಹಾಪಾತಕದಿಂದ ಕಡೆ ಬಿದ್ದು |
ಮಲರಹಿತರಾಗಿ ವೆಂಕಟನಾಥನ್ನ |
ಒಲಿಸಿ ವೇಗದಿಂದ ಸಿದ್ಧರಾದರು ತಮ್ಮ |
ಒಳಗಾದೊಡನೆ ಕೂಡಿ ತಾರತಮ್ಯಾದಿಂದಲಿ |
ತಿಳಿವದು ಈ ಪರಿ ರಜೋತಮ ಜನರಿಗೆ |
ಕಲಕಾಲಾ ಬಿಡದೆಲೆ ನೂರೆಂಟು ಸಾರಿಗೆಲಿ |
ಬಳಲಿ ಯಾತ್ರಿಯಾ ಮಾಡಿದರೇನೂ ಎಂದಿಗೆ |
ಫಲ ಕೊಡುವದು ಕಾಣೆ ವೃತ್ತಿ ಸೌಖ್ಯವೆವುಂಟು |
ಜಲಜ ನಯನ ನಮ್ಮಾ ವಿಜಯವಿಠಲ ವೆಂಕಟ |
ತಿಳಿದವಗಲ್ಲದೆ ಮುಕುತಿಯಾ ಕೊಡನೊ ೪
ಆದಿತಾಳ
ಮೂಜ್ಜಗದೊಳಗಿದೆ ಸರ್ವಯಾತ್ರಿಗೆ ಮಿಗಿಲೂ |
ಸಜ್ಜನಾನಾದಾವ ಈ ಗಿರಿಯಲ್ಲಿ ಒಂದು |
ಹೆಜ್ಜೆ ಇಡಲು ಅವನ ಕುಲಕೋಟಿ ಉದ್ಧಾರ |
ಆರ್ಜವ ಮಾರ್ಗದಲ್ಲಿ ಸಂಚರಿಸುವರು |
ಮಜ್ಜನಾದಿ ಕರ್ಮ ಅಲ್ಪಮಾಡಿದರುನಿ |
ವ್ರ್ಯಾಜ್ಜವಾದ ಪುಣ್ಯ ಮೇರುತುಲ್ಯವಾಗವದು |
ದುರ್ಜನರ ಉಪಹತಿಲೇಶ ಮಾತುರವಿಲ್ಲ |
ನಿರ್ಜನರು ಮೆಚ್ಚುವರು ಅವಲೋಕಾ ಮಾಡುತಾ |
ಅರ್ಜುನ ಸಾರಥಿ ವಿಜಯವಿಠಲ ವೆಂಕಟ |
ಬೆಜ್ಜರಿಕೆ ಬಿಡಿಸುವಾ ಬಿನ್ನಹ ಕೈಕೊಂಡು ೫
ಜತೆ
ಈ ಗಿರಿಯಾತ್ರಿಯಾ ಮಾಡಿದಾ ಜನರಿಗೆ |
ನಾಗಶಯನ ವಿಜಯವಿಠಲ ವೆಂಕಟವೊಲಿವಾ ೬

ಸೃಷ್ಟಿ ಸ್ವರೂಪದ ಬಗ್ಗೆ ವಿವರಿಸುವ

೨೯
ಧ್ರುವತಾಳ
ಗುಣ ಕಾಲಾ ದೇಶಾತೀತ ವ್ಯಾಪ್ತ ಪ್ರಕೃತಿ ರಮಣ |
ಪ್ರಣವ ಮೂರುತಿ ಬ್ರಹ್ಮಭಿದಾ |
ಗಣರಹಿತಾನಂದ ಸಾಂದ್ರ ವಟಪತ್ರಶಾಯಿ ನಾರಾ |
ಯಣ ಏಕಮೇವ ಮೇಲುದೇವ |
ಅಣು ಮಹತ್ತು ಯುಗಪದಿ ರೂಪಾನಂತ ರೂಪ |
ಪ್ರಣತಾರ್ಥಿ ದೂರ ಪ್ರಭುವೆ ಸುಶುಭ |
ಜನುಮ ಮೃತ್ಯುಂಜಯಾರಾತಿ ಸಂ |
ಪೂರ್ಣೈಶ್ವರ್ಯ ಘನ ರುಗ್ಮಶುಭ ರಕ್ತಪೀತ ನೀಲಾ |
ಇನಶಶಿ ಅಗ್ನಿ ನಾನಾವರ್ನ ವಾರಿಜನಯನ |
ತೃಣ ಜೀವ ಪರಿಯಂತ ಚೇಷ್ವ [ಪ್ರದ] |
ಅನುಕಂಪನಾ ಆದಿ ಅನಾದಿ ಸ್ವಾತಂತ್ರ
ತನುರೂಹ ಸರ್ವಗಾನಂದ ಪರಮಾ |
ಮಣಿಗಣ ಭೂಷ ನಾನಾ ವಸ್ತು ಭಿನ್ನಾ ನಿರ್ದೋಷ |
ಅನಿಮಿತ್ಯಾ ಬಂಧು ನಿಮಿತ್ತ ದೇವ |
ಮಣಿದು ನಮಿಪೆ ನಿನ್ನ ಮಹಶಕ್ತಿ ಲೀಲಿಗೆ |
ಮನದೊಳಗಾಡುವ ತತ್ವಾಧೀಶಾ |
ವನಜಸಂಭವನಯ್ಯ ವಿಜಯ ವಿಠ್ಠಲರೇಯ |
ಎಣಿಸಿ ಪೇಳುವನಾರು ನಿನ್ನ ಉನ್ನತಕ್ರೀಯ ೧
ಮಟ್ಟತಾಳ
ಸರಸಿಜ ಸಂಭವನ ಮಾನದಿಂದಲಿ ಏಳು |
ವರೆವರುಷ ಮ್ಯಾಲೆ ಎಂಭತ್ತು ಹಿಂದಾಗೆ
ಇರಳು ಒಂದು ಯಾಮ ಉಳಿದಿರೆ ದುರ್ಗಾ ಈ |
ಹರಿಯಾಸ್ತುತಿಯ ಮಾಡೆ ಭಿನ್ನಪ ಕೈ ಕೊಂಡು |
ತರುಣಿಯ ಸಂತೈಸಿ ತವಕದಿಂದಲಿ ಎದ್ದು |
ಪುರುಷ ರೂಪವನ್ನು ಪ್ರಥಮದಿಂದಲಿ ತಾನೆ |
ಧರಿಸಿದನೀತನೇ ವಾಸುದೇವನೆಂದು |
ಕರೆಸಿದನಾದಿಯಲ್ಲಿ ತಮ ಪರಿಹರಿಸಿದನು |
ದೊರೆಯೆಂದೆನಿಸಿದ ಸೂಕ್ಷ್ಮ ಅವ್ಯಕ್ತಕ್ಕೆ |
ಮರುಳೆ ಈ ವಾಸುದೇವ ಚತುರ ತನದಲ್ಲಿ |
ಎರಡೆರಡೊಂದು ರೂಪವನೆ ಧರಿಸಿ |
ಚರಿಯ ತೋರಿದ ನೋಡಿ ಗುಣ ಕ್ಷೋಭಕ ರೂಪ |
ಸಿರಿ ನಾರಾಯಣ ದೈವ ನಾಮಕನೆಂದು ಸರುವದ ಪೊಗಳುವರು |
ಪುರುಷ ಪ್ರಧಾನೇಶಾ ವಿಜಯ ವಿಠ್ಠಲರೇಯ |
ಪರಿಪರಿ ಸರ್ಗವನು ಮಾಡಿದ ಲಿಂಗದಿಂದ ೨
ತ್ರಿವಿಡಿ ತಾಳ
ಜೀವಾವರಣ ಪ್ರಕೃತಿ ಸಾಮ್ಯವನೆ ಬಿಡಿಸಿ |
ದೇವನಾರಾಯಣ ವೈಷಮ್ಯವ |
ತ್ರಿವಿಧ ಪರಮಾಣು ಪುಂಜಗಳೊಂದಿಸಿ |
ಮೂವತ್ತಾರು ತತ್ವನಾಮದಿಂದ |
ಆವಾವ ಬಗೆಯಿಂದ ಸತ್ವ ರಾಜಸ ತಾಮಸ |
ಭಾವಿಸುವುದು ದ್ವಾದಶ ಹತ್ತುವೊಂದು |(೧೨+೧೦+೧)
ಆವಿರಂಚಿಗೆಯಿದೆ ಅವ್ಯಕ್ತದೇಹ ಗು |
ಣಾ ವೈಷಮ್ಯದಿಂದ ಪ್ರಥಮಾವರ್ಕಾ |
ದೈವ ನಾರಾಯಣ ಇನಿತು ರಚಿಸಿ ದ್ವಿತೀಯ |
ಶ್ರೀ ವಸುದೇವನ್ನ ಕೈಗೆ ಕೊಡಲು |
ಪಾವನ್ನ ಮೂರುತಿ ತನ್ನ ಹೆಂಡತಿ ಮಾಯಾ |
ದೇವಿಯಲ್ಲಿ ವೀರ್ಯ ಧಿಟ್ಟ ಮಾಡಿ |
ಕೋವಿದ ಬ್ರಹ್ಮನ ಪಡೆದ ಈತಗೆ ಪೆಸರು |
ತಾವುಂಟಾಯಿತು ಮಹಾತತ್ವಾತ್ಮಕ |
ಈ ವಿಧಾತಗೆ ಪುರುಷನೆಂಬೊ ನಾಮವೆ ಉಂಟು |
ದೇವರೊಳಧಿಕನು ದ್ವಿತಿಯಾವರಣಾ ಮೂರ್ತಿ ಸೂ |
ತ್ರವಾತನ ಪೆತ್ತಾಜಯ ಸತಿಯಿಂದ |
ದೆೀವಿ ಪ್ರಕೃತಿ ಶುದ್ಧರೀರ್ವರ ಪಡೆದ ಕೃತಿ |
ದೇವಿಯಾ ನೆರದು ಪ್ರದ್ಯುಮ್ನ ಮೂರ್ತಿ |
ಈ ವಿಚಾರವೆ ತಿಳಿ ಅಜ ಪ್ರಾಣಾರೀ ಶುದ್ಧ |
ಪಾವಿತ್ರ ಜನ ನಾಲ್ವರಸರ್ಗ ಕಣೋ |
ಭೂಮಿವಲ್ಲಭ ನಮ್ಮ ವಿಜಯ ವಿಠ್ಠಲರೇಯ |
ಲಾವಣ್ಯ ಮೂರುತಿ ನಾನಾ ರೂಪವ ಧರಿಪ ೩
ರೂಪಕ ತಾಳ
ಸರಸಿ ಸಂಭವಗೆ ಮೊದಲು ಬಂದದೆ |
ಪುರುಷ ತತ್ವಾತ್ಮಕ ಇದೇ ಮಹಪೆಸರಿಲಿ |
ಕರಸಿಕೊಂಬುವದಯ್ಯಾ ಇತ್ತಲೂಯಿದೆ |
ಪರಮಾಣು ಲಿಂಗಗಳ ಸಮ್ಮಂಧ ಪ್ರತ್ಯೇಕ |
ಭರಿತವಾವೆ ನೋಡು ಅನಂತ ಪರಿಯಾಗಿ |
ತರುವಾಯ ಅಲ್ಲಿಂದ ಅನಿರುದ್ಧದೇವನು |
ಧರಿಸಿದನು ಬ್ರಹ್ಮಾದಿ ಜೀವರ ವುದಗ್ದಲ್ಲಿ |
ಮರಳೆ ಸರ್ವರಿಗೆ ತನ್ನಾಮಕ ದೇಹವನು |
ಕರುಣಿಸಿದನಂದು ತತ್ವ ಪುಟ್ಟದ ಮುನ್ನಾ |
ಶರೀರಗಳಾದವು ಗುಣಿತ ನೋಡು |
ಪರಮೇಷ್ಠಿಗೆ ಅವ್ಯಕ್ತ ಪರಿಚ್ಛೇದ ಮೂರು ಗಾ |
ತುರ ನೇಮಿಸಿದನು ಪುರುಷ ದೇಹದ ಮ್ಯಾಲೆ |
ತಿರಿಗಿ ಇದರ ಮ್ಯಾಲೆ ಮಹ ತತ್ವಾತ್ಮಕ ಕಾಯ |
ವಿರಚಿಸಿದನು ಇದರಂತೆ ಸರ್ವವೂ |
ಇರತಕ್ಕವಾದವು ಕ್ರಮೇಣ ಉತ್ಪತ್ತಿ |
ಪರಮ ಪುರುಷರಂಗ ವಿಜಯ ವಿಠ್ಠಲರೇಯ |
ನಿರುತ ಪ್ರಜಾಸರ್ಗ ಮಾಡುವ ಮುದದಿಂದ |
ಝಂಪಿ ತಾಳ
ಅನಿರುದ್ಧ ದೇವನು ಸರ್ವ ಜೀವರ ತನ್ನ |
ತನುವಿನೊಳಗೆ ಇಟ್ಟು ಕೊಂಡು ಲಿಂಗ |
ತನುವಿನಿಂದಲಿ ಪ್ರತ್ಯೇಕ ಪ್ರತ್ಯೇಕ |
ಎಣಿಕೆಯಿಂದಲಿ ಕೊಟ್ಟು ಉಪಚಯದಲ್ಲಿ |
ವನಜ ಸಂಭವಗೆ ಇಪ್ಪತ್ತೆಂಟು ಗಾತುರು |
ಅನುವಾಗಿ ಬಂದ ವೈಯ್ಯಾತುರ್ಯನಿಂದ |
ಗುಣಿಸು ಒಂದಾವರ್ಕವೆ ಮೊದಲು ದೇಹವೆನ್ನಿ |
ಮಿನಗುತಿಪ್ಪದು ಮಹಾ ಕಾಂತಿಯಿಂದ |
ಇನಿತು ಗ್ರಹಿಸು ಮುಂದೆ ಕ್ರಮೇಣಾವರ್ಕ ಬ್ರ |
ಹ್ಮನಿಗೆ ದ್ವಿತೀಯ ತೃತೀಯ ಚತುರ್ಥ ಪಂಚ |
ಮನಸು ಮಿಕ್ಕಾದ ತತ್ವ ಪರಮಾಣು ವ |
ಖ್ಖಣಿಸಲಿ ಬೇಕು ರೂಪಾಂತರಗಳು |
ತನುವು ಮಾತ್ರವೆ ಭೇದ ಆವಾವ ಕಾಲ ಸಾ |
ಧನ ಜ್ಞಾನವೊಂದೆ ಸಮಕಾರ್ಯದಲಿ |
ಅನಿಮಿಷರ ಪರಿಪಾಲ ವಿಜಯ ವಿಠ್ಠಲರೇಯ |
ಗುಣ ವೈಷಮ್ಯ ಇಲ್ಲದ ಮುನ್ನೆ ಇತ್ತ ೫
ಅಟ್ಟತಾಳ
ಗರುಡಾಹಿ ಈಶಾ ಮೂವರ ವಿಚಾರವ |
ಪರಮೇಷ್ಠಿ ಪುರುಷಾನಿಂದಲಿ ಜೀವನಾಯಕ |
ಉರುಗೇಂದ್ರಗೆ ಗಾತುರ ಖಗದೇವಗೆ |
ಮರುತ ಸೂತ್ರನಿಂದ ಈರ್ವರುದ್ಭವರೈಯ್ಯ |
ಹರಿಗೆ ಮೂರು ದೇಹ ಬ್ರಹ್ಮ ಪವಮಾನ |
ಉರಗಾನಿಂದಲಿ ಸತ್ವರಜೋತಾಮಸ ಭಾಗ |
ಅರಿವುದು ಇದರೊಳು ಶೇಷ ಗರುಡರಿಗೆ |
ಶರೀರಾವೆ ಒಂದೊಂದು ಪ್ರಾಪ್ತವಾಯಿತು ಕೇಳಿ |
ಎರಡೊಂದು ಶರೀರ ಗರುಡಾಹಿಶರಿಗೆನ್ನಿ |
ತರುವಾಯ ಅನಿರುದ್ಧ ದೇವನು ಸರ್ವ ಜೀ |
ವರನ ತನ್ನುದರಾದೊಳಿಟ್ಟು ಥುಕವಾಗಿ |
ಪರಮೇಷ್ಠಿ ಮೊದಲಾದ ಸರ್ವ ಚೇತನಕೆ ಸ |
ತ್ಕರುಣದಿಂದಲಿ ಇಪ್ಪತ್ತೆಂಟು ಇಪ್ಪತ್ತು ನಾಲ್ಕು ಇಪ್ಪತ್ತೊಂದು |
ಶರೀರವ ಕರುಣಿಸಿ ಸರ್ಗವ ಮಾಡಿದ |
ಪರಮ ಪುರುಷ ನಮ್ಮ ವಿಜಯ ವಿಠ್ಠಲರೇಯ |
ನಿರುತ ಬಾಲಕ್ರೀಡೆಯಾಡುವ ಸ್ವಭಾವ ೬
ಆದಿತಾಳ
ಹರಿ ನಿಮಿತ್ಯ ಕಾರಣ ಗುಣ ಉಪಾದಾನದಿಂದ |
ಪರಿ ಪರಿ ಜೀವಿಗಳ ಪುಟ್ಟಿಸುವನು ನೋಡಿ |
ಭರದಿಂದ ಅನಿರುದ್ಧ ದೇಹವನಿತ್ತು |
ತರುವಾಯ ಪ್ರಕೃತಿಯಿಂದ ಸ್ಥೂಲ ದೇಹವನಿತ್ತು |
ನರರು ಈ ಪರಿಯಿಂದ ಚಿಂತಿಸಿ ಮನದೊಳು |
ಹರಿಯನ್ನು ಕಾಣಬೇಕು ತತ್ತಸ್ಥಾನದಲ್ಲಿ |
ನಿರುತ ಸಂಪೂರ್ಣವ್ಯಾಪ್ತ ವಿಜಯ ವಿಠ್ಠಲರೇಯನ |
ಚರಣವ ನೆರೆನಂಬಿ ಧ್ಯಾನವ ಮಾಡುವುದು ೭
ಜತೆ
ದ್ವಿವಿಧ ಸರ್ಗವ ತಿಳಿದು ಯೋಚಿಸು ನಿನ್ನೊಳಗೆ |
ಭವದೂರ ವಿಜಯ ವಿಠ್ಠಲರೇಯನೆ ಬರುವ ೮

ಬೆಳಿಗಿನಿಂದ ರಾತ್ರಿಯವರೆಗೆ ನಾವು

೨೭
ಧ್ರುವತಾಳ
ಗುಣಕಾಲ ದೇಶ ಕರ್ಮ ಕ್ರಿಯ ನಾಮ ತೀರ್ಥ ದೇಹ
ಜನನ ಮಿಕ್ಕಾದ ನಾಲ್ಕು ಬಗೆ ವ್ಯಾಪಾರ
ಜನನ ನಾನಾ ಜಂತು ವರ್ಷ ಖಂಡ ದ್ವಿಪಬ್ಧಿ ಗಗನ
ಪ್ರಣವ ಮಂತ್ರ ವರ್ಣ ಉಪಕರಣಾ
ಇನಿತಾರಲ್ಲಿ ಅಭಿಮಾನಿಗಳ ತಿಳಿದು ಉದಯಾಸ್ತ
ಮಾನ ಪರ್ಯಂತರ ಸಂಚರಿಸು
ದಿನ ದಿನದಲ್ಲಿ ಎಳ್ಳಿನಿತು ಬಿಡದೆ ಸಾ
ಧನ ಮಾಡು ಮರಿಯದೆ ಸರ್ವದಲ್ಲಿ
ನೆನೆಸು ಭಾರತಿ ಗರುಡ ಗಣಪತಿ ಪುಷ್ಕರ
ಅನಲಾಂಗನೆ ಉಷಾ ಪುಷ್ಕರ ಧನಪಾ
ಇನ ಶಶಿ ಭೂಮಿಧರ್ಮ ಮಿಗಿಲಾದ ದೇವತಿಗಳು
ಮನಸ್ಸಿಗೆ ತಂದು ತತ್ತದ್ಭಗವದ್ರೂಪ
ಮನನಮಾಡುವುದು ಮಾತು ಮಾತಿಗೆ ಬಿಡದೆ
ಜನನ ಮರಣದಿಂದ ದೂರ ಕಾಣೋ
ಇನಿತು ಚಿಂತನೆಯಿಂದ ನಿಖಿಳ ಕರ್ಮಮಾಡಿದ
ಘನ ಪುಣ್ಯಕ್ಕೆ ಮಿಗಿಲು ಅಡಿಗಡಿಗೆ
ತನುವು ದಂಡಣೆ ಇಲ್ಲಾ ಪರರಿಗೆ ಬಾಯ್ದೆರದು
ದಣಿದು ಬಳಲುವದಲ್ಲಾ ತಿರುಗೆ ತಿರುಗಿ
ಹಣ ಹೊನ್ನು ವೆಚ್ಚಮಾಡಿ ಬರಿದಾಗುವದಲ್ಲಾ
ಮನದೊಳಗೆ ಉಂಟು ಬಾಹ್ಯವಲ್ಲಾ
ಅನಿಮಿಷ ಗಣದವರು ವಶವಾಗಿ ಇಪ್ಪರು
ಅನುದಿನ ಕಾರುಣ್ಯವನು ಮಾಳ್ಪರೋ
ಮಿನಗುಜ್ಞಾನವಿದೆ ಭಕ್ತಿ ವೈರಾಗ್ಯ ಮಿಳಿತ
ಕೊನೆಗೆ ಇದು ದೊರೆಯದಲೆ ಮುಕ್ತಿಯಿಲ್ಲಾ
ಎಣಿಕೆ ಮಾಡೆಲೊ ಮನುಜಾ ನಾನು ನನ್ನದೆಂಬೊ
ತನು ಮನೆ ಸಮಸ್ತ ವಿಷಯದಲ್ಲಿ
ನಿನಗೆ ಸ್ವಾತಂತ್ರ್ಯವ ಹಚ್ಚಿಕಕೊಳ್ಳದೆ ಹರಿ
ಅಣು ಮಹತ್ತು ರೂಪಯುಗಪದನೆಂದು
ಗಣಿತ ಮಾಡುವುದು ಇದೆ ನಿನಗೆ ಗುಪ್ತಾ
ರ್ಚನಿಯು ಕಾಣೋ ಈ ಪರಿ ತಿಳಿದು ನಾಮಕೀ
ರ್ತನೆ ಗೈಯೊ ಲಿಪಿಸಿ ಕೊಂಡಾಡು ನಿತ್ಯ
ಗುಣಿಸಿ ನೋಡೆಲೊ ಧ್ಯಾನ ಜಪ ತಪಿಸಿದ್ಧಿಗಿಂತ
ಮಣಿಯಾಗಿಪ್ಪನು ನಾಮಸಿದ್ಧ ಮನುಜಾ
ಜನರಿಗೆ ಅರುಹುವಾತನು ಗ್ರಹಿಸುವ ಸಾ
ಧನದಲ್ಲಿ ಬಾಳುತಿಪ್ಪ ಕಲಿಯುಗದಲ್ಲಿ
ತೃಣ ಬೊಮ್ಮಪರಿಯಂತ ತಾರತಮ್ಯ ಭೇದದಿಂದ
ಗುಣ ಬಲ್ಲವನಿಗೆ ಈ ಮಾತು ಸಿದ್ಧಾ
ಪ್ರಣತಾರ್ತಿ ಹರ ನಮ್ಮ ವಿಜಯ ವಿಠ್ಠಲರೇಯ
ನೆನಿಸು ನೆನಿಸು ಭಗವದ್ಗೀತಾರ್ಥವನ್ನೆ ತಿಳಿದು ೧
ಮಟ್ಟತಾಳ
ಪ್ರಾತಃಕಾಲದಲ್ಲಿ ನಾರಾಯಣನೆನ್ನಿ
ಶ್ರೀ ತುಲಸಿಯಲ್ಲಿ ವಿಷ್ಣುವಿನ ಸ್ಮರಣೆಮಾಡಿ
ಮೂತ್ರ ವಿಸರ್ಜನೆ ಸಮಯ ಕಾಲದಲ್ಲಿ
ನೀ ತಿಳಿಯೊ ಕೇಶವನಾಮಕ ಹರಿಯ ಮಾಡು ಮರಿಯದಿರು
ಮೃತ್ತಿಕೆ ಶೌಚಕ್ಕೆ ಶ್ರೀ ತ್ರಿವಿಕ್ರಮನೋ
ದಂತಧಾವನ ಹರಿ ನೇತುರ ಮೊದಲಾದ ಪ್ರಕ್ಷಾಲ್ಯಕ್ಕೆ ಮಾಧವ
ಗೋತಂಡವರಿಸುವ ಕಾಲಕೆ ಗೋವರ್ಧನ
ವಾತನೊಡಿಯ ನಮ್ಮ ವಿಜಯ ವಿಠ್ಠಲ ಮೂರ್ತಿಯ
ಮಾತ್ರಕಾಲ ಬಿಡದೆ ನೆನಿಸಿ ಧನ್ಯನಾಗೋ ೨
ರೂಪಕತಾಳ
ನದ್ಯಾದಿ ಸ್ನಾನಮಾಡುವ ಕಾಲಕ್ಕೆ ವರಹಾ
ಊಧ್ರ್ವ ಪುಂಢ್ರಗಳಲ್ಲಿ ಕೇಶವಾದಿ ಸೂರ್ಯ
ಮುದ್ರೆ ಇಡುವಾಗ ಕ್ರದ್ಧೋಲ್ಕಾದಿ ಐದು
ಸಧ್ಯಾ ಸಂಧ್ಯಾಕಾಲದಲ್ಲಿ ರಾಮನೆನ್ನು
ಸಿದ್ಧವಾಗಿ ಪ್ರಾಣಗ್ರಾಸದಲ್ಲಿ ಅನಿ
ರುದ್ಧಾದಿ ಪಂಚ ಭಗವನ್ಮೂರ್ತಿಗಳ ಸ್ಮರಿಸು
ಮುದ್ದೆ ಮುದ್ದೆ ಕವಳ ಮೆಲುವಾರಂಭದಲಿ ವಾ
ಸುದೇವ ಆಪೋಶನಗಳಲ್ಲಿ ಶ್ರೀ ಹರಿ
ಪೊದ್ದುಡುವ ವಸ್ತ್ರದಲಿ ಉಪೇಂದ್ರ ಭಗ
ವದ್ರೂಪ ಚಿಂತಿಸು ಉಪವೀತ ವಾಮನ
ಶುದ್ಧ ಮಂಗಳಾರ್ತಿಕೊಂಬಾಗ ಭಾರ್ಗವ ವೈ
ಶ್ವದೇವಾದಿಯಲ್ಲಿ ಇದೇ ಮೂರ್ತಿ ನಿಶ್ಚಯ
ನಿರ್ದೋಷ ತೀರ್ಥದಲ್ಲಿ ಕೃಷ್ಣರಾಮ ವ್ಯಾಸ
ನಿರ್ದಾರ ತ್ರಿವಾರ ಶಂಖೋದಕ ಮುಕುಂದ
ಭದ್ರ ಮೂರುತಿ ನಮ್ಮ ವಿಜಯ ವಿಠ್ಠಲರೇಯ
ಹೃದ್ಗುಹದೊಳಲ್ಲಿ ನೆನಿಸಿ ಸಂತೋಷವನುಭವಿಸು ೩
ಝಂಪೆತಾಳ
ತುತ್ತು ಪ್ರತಿತುತ್ತಿಗೆ ಗೋವಿಂದ ಭಕ್ಷಕವಳ
ಎತ್ತುವಾಗಚ್ಯುತ ಶಾಕಾದಿ ಧನ್ವಂತ್ರಿ
ಮತ್ತೆ ಪರಮಾನ್ನದಲಿ ಪಾಂಡುರಂಗ ನವ
ನೀತದಲಿ ತಾಂಡವ ಕೃಷ್ಣಸ್ವಾಮಿ
ಬುತ್ತಿ ಕ್ಷೀರಾನ್ನದಲಿ ಗೋಪಾಲ ಶ್ರೀನಿವಾಸ
ತತ್ತಳಿಪ ತೈಲ ಘೃತ ಪಕ್ವದಲಿ ವೈಕುಂಠ
ಉತ್ತತ್ತಿ ಕದಳಿ ಜಂಬು ಚೂತ ಮಧು
ಕಿತ್ತಳಿ ದಾಳಿಂಬ ನಾರಿಕೇಳ ನಾರಂಗ
ಧಾತ್ರಿ ಮಿಕ್ಕಾದ ಫಲ ಮೆಲುವಾಗಲಿ ಯದುಕು
ಲೋತ್ತದು ಬಾಲಕೃಷ್ಣನ್ನ ಸ್ಮರಿಸು ಮನವೆ
ಚಿತ್ತಜಪಿತ ನಮ್ಮ ವಿಜಯವಿಠ್ಠಲನಂಘ್ರಿ
ಚಿತ್ತದಲಿ ನಿಲಿಸಿ ಉದರ ಪೂರಗೈಸು ೪
ತ್ರಿವಿಡಿ ತಾಳ
ಪಾನಕದಲ್ಲಿ ನಾರಸಿಂಹ ಮೂರುತಿ ಗಂಗಾ
ಪಾನದಲ್ಲಿ ವಿಷ್ಣು ತ್ರಿವಿಕ್ರಮಾ
ಮೇಣು ಗಮನಾಗಮನದಲ್ಲಿ ಗರುಡ ಕೇತನ
ಏನೆಂಬೆ ದ್ವಿಜರಲ್ಲಿ ಸರ್ವರೂಪಾ
ಗಾನಮಾಡುವ ಕಾಲ ಯೋಗೇಶ್ವರ ದೇವ
ಆನಂದ ಕಥಾಕಾಲ ಹಯಾಸ್ಯವ್ಯಾಸ
ಮಾಣದೆ ತುಲಸಿ ದೂರ್ವಾಂಕುರ ಸಕಲ ಪ್ರಾ
ಸೂನು ಮುಡಿವ ಕಾಲ ರಾಮ ದತ್ತ ಕಪಿಲ
ಸೂ ನೀತಿಯಲಿ ನರಸಿಂಹ ಪ್ರಣಾಮ ಪ್ರದ
ಕ್ಷಣೆಗೆ ಖಗ ಶೇಷಾಂತರ್ಗತ ಹರಿ ಎನ್ನಿ
ನೀನೆ ತಿಳಿಯೊ ಉದರ ಪೂರ್ತಿಗೆ ವಾಸುದೇವ
ದಾನದಾನದಲಿ ರಾಮ ವಾಮನ ಮೂರ್ತಿ
ಧೇನುದೂಹನದಲ್ಲಿ ಗೋಪಾಲ ವತ್ಸಸ್ತನ
ಪಾನದಧಿ ಮಥನದಲಿ ಕೃಷ್ಣಹರಿ ಕಾಣೊ
ಪ್ರಾಣನೊಳಗಿಪ್ಪ ವಿಜಯವಿಠ್ಠಲರೇಯ
ಮಾನಸದಲ್ಲಿ ಪೊಳೆವ ಇಚಿತು ಕೊಂಡಾಡಿದರೆ ೫
ಮಟ್ಟತಾಳ
ಪುತ್ರಾದಿ ಚುಂಬನ ವೇಣುಹಸ್ತ ಕೃಷ್ಣ
ಮತ್ತೆ ತಾಂಬುಲಕಾಲದಲ್ಲಿ ಪ್ರದ್ಯುಮ್ನನು
ಚಿತ್ತಜನ ಕೇಳಿಯಲ್ಲಿ ಗೋಪೆರಾ
ವೃತ್ತ ಕುಜ ಕುಂಕುಮಾಂಕಿತ ಎಳೆದಳ
ಹಸ್ತ ಗೋಪಿಜನಜಾರ ಕೃಷ್ಣನೆನ್ನಿ
ಹೊತ್ತು ಹೊತ್ತಿಗೆ ಕ್ರೀಡೆ ಕಾಲಕ್ಕೆ ಗೋವಿಂದ
ಉತ್ತಮ ಶಯ್ಯಾಕಾಲಕ ಸಂಕರುಷಣ
ಇತ್ತ ನಿದ್ರೆಯಲ್ಲಿ ಪದ್ಮನಾಭದೇವ
ಅತ್ಯಂತವಾಗಿ ಕೊಂಡಾಡು ನಿರುತವಾಡು
ಸತ್ಯಸಂಕಲ್ಪನೊ ವಿಜಯ ವಿಠಲರೇಯ
ಭೃತ್ಯನಲ್ಲಿ ಮಹಿದಾಸನಾಗಿ ಇಪ್ಪಾ ೬
ಆದಿತಾಳ
ಅಡಿಗಡಿಗೆ ಮಾಡುವ ಸಂಸಾರ ಯಾತ್ರೆಯಲ್ಲಿ
ಬಿಡದೆ ಕರ್ಮಾವಳಿ [ಎ]ಸಗುವ ಕಾಲಕ್ಕೆ
ಒಡನೊಡನೆ ಕೇಶವಾದಿ ಮೂರ್ತಿಗಳ ನೆನಿಸುವದು
ನಡೆನುಡಿ ಮರಿಯದೆ ಮನದಲ್ಲಿ ಚಿಂತಿಸಿ
ಪೊಡವೀಶ ರಂಗನ್ನ ಕರುಣ ಕಟಾಕ್ಷವ
ಪಡೆದು ಧನ್ಯನಾಗೋ ಇಂಥದಕೆ ಸತ್ಕರ್ಮ
ಕಡೆ ಬೀಳುವುದು ಕಾಣೊ ಸಂಸಾರಾಂಬುಧಿಯಿಂದ
ತಡಿಯದೆ ಹೆದ್ದಾರಿ ವೈಕುಂಠನಗರಿಗೆ
ಬಡವನಾದರೆ ಇನಿತು ತಿಳಿದು ಸಂಚರಿಸಿದರೆ
ಎಡೆಬಿಡದೆ ನೂರಾರು ಯಾಗಮಾಡಿದ ಫಲ
ಕುಡಿದ ನೀರು ಮೊದಲಾಗಿ ಸರ್ವಾಂತರಿಯಾಮಿ ಹರಿಯ
ಕಡುಪೂಜಿ ಎನಿಪದು ಆವಾವಬಗೆ ಇರಲು
ಒಡಲಿಗೋಸುಗ ಇದ ಮಾಡಿದಡೆ
ಕಡಲ ಥೆರೆಯಂತೆ ಪುಣ್ಯವೆ ಬಪ್ಪುದು
ದೃಢ ಮನದಲ್ಲಿ ನಿತ್ಯ ನೆನಿಸು ಕಾಯದಿಂದ
ಬಡುವ ಕ್ಲೇಶಗಳನ್ನು ಬಿಡು ಬಿಡು ಮತ್ತೆ ಬಿಡು
ಒಡಿಯ ವಿಜಯವಿಠ್ಠಲ ಸಕಲ ವಿಷಯದಲ್ಲಿ
ಹುಡುಕಿಸಿ ಕೊಳ್ಳದಲೆ ಮುಂದೆ ನಿಂದಾಡುವ ೭
ಜತೆ
ರಸನದಲ್ಲಿ ಇಂತು ನುಡಿದರೆ ತನ್ನ ದ
ರುಶನಕೊಡುವ ನಮ್ಮ ವಿಜಯವಿಠ್ಠಲ ಒಲಿದು ೮

ಗುಣ, ಕಾಲ, ಪ್ರಕೃತಿ, ವೇದ, ಜೀವ, ಲಕ್ಷೀ

೨೮
ಧ್ರುವತಾಳ
ಗುಣಕಾಲ ದೇಶ ವೇದ ಜೀವ ಲಕುಮಿ ನಾರಾ |
ಯಣ ನಿತ್ಯ ವಸ್ತುವೆನ್ನಿ ಮಹ ಪ್ರಳಯದಲ್ಲಿ |
ಇನಿತರೊಳು ಚಿತ್ರವುಂಟು ಪ್ರಮೇಯಗಳೊಂದೊಂದು |
ತಿಳಕೊಂಬ ವಿಷಯದಲ್ಲಿ ಪರಿಪರಿಯಿಂದ |
ಗಣನೆ ಮಾಡುವುದು ಶ್ರೀ ಶೂನ್ಯನಾಮಕ ಬ್ರಹ್ಮ |
ಗುಣ ಪರಿಪೂರ್ಣ ನಿತ್ಯ ಸ್ವತಂತ್ರ ಪುರುಷ |
ಗಣನೆ ಅಸಂಖ್ಯ ಜೀವರಿಗೆ ಪ್ರೇರಕ ಮಹ ಪರಮ |
ಮಣಿ ಸ್ಥಾನಿಯಾಗಿಪ್ಪ ಪರಬೊಮ್ಮನೊ |
ಅಣೊರಣಿ ಅಪರಿಚ್ಛಿನ್ನ ಜಡ ಜೀವ ಭಿನ್ನ ಬೊಮ್ಮಾ |
ಗಣ ಜೀವಾದಿಸ್ಥಿತ ತತ್ತದ್ರೂಪ |
ಪ್ರಣವ ಪ್ರತಿಪಾದ್ಯ ಮುಕ್ತಾಮುಕ್ತ ವಿವಿಧ |
ಗಣರಾಶಿಗಳ ತನ್ನ ಗರ್ಭದಲ್ಲಿ |
ಕ್ಷಣ ಕಾಲವಾದರು ಆಯಾಸವಿಲ್ಲದಲೆ |
ಎಣೆಗಾಣೆ ಧರಿಸಿಹ ಲೀಲಾ ಮಾತ್ರ |
ಭಣಗು ದೈವಂಗಳಿಗೆ ಇನಿತು ಪ್ರತಾಪವುಂಟೆ |
ಗುಣಪೂರ್ಣ ಏಕೋಮೇವ ನಾರಾಯಣ |
ಎಣಿಸಿ ಪೇಳುವುದೇನು ಅನಾದಿ ಸಿದ್ಧ ಈ |
ಕ್ಷಣದಿಂದ ತ್ರಿಲೋಕವ ಸುತ್ತಿಸುವ |
ಅಣುದ್ವ್ಯಣುಕ ತೃಣಕ ಕಾಲಾ ಮಿಗಿಲಾದ ಜೀವರಿಗೆ |
ಹೊಣೆಯಾಗಿ ಜನ್ಮಂಗಳು ಮಾಳ್ಪುದು ಕಾಣೆ |
ಪ್ರಣತಾರ್ತಿ ದೂರ ಹರಿ ಪ್ರಳಯಾಚ್ಛಿಯಲ್ಲಿ ಸ್ವ |
ಗಣ ಮೂರ್ತಿ ಏಕನಾಗಿ ಜೀವರ ಸಹಿತ |
ಎಣಿಕೆ ಬಾಲಕನಾಗಿ ವಟದಲ್ಲಿ ಮಲಗಿ ದ್ರು |
ಹಿಣು ದ್ವಾದಶಾರ್ಧ ಉಳಿದಿರಲಾಗ |
ಗುಣ ಕಾಲ ದೇಶ ವೇದ ಸರ್ವಾಭಿಮಾನಿ ಅಂ |
ಭ್ರಣಿ ಸ್ತುತಿಯನ್ನೆ ಮಾಡೆ ಉತ್ಸಾಹದಲ್ಲಿ |
ಮಣಿ ಭೂಷಣಾಂಗ ಸೃಷ್ಟಿ ನೆನದ ಆ ಕಾಲದಲ್ಲಿ |
ಮಣಿದು ನಮೋಇನ್ನೆ ತಾತ್ವಿಕರಾಗಿ |
ಫಣಿ ಶಯನ ಅದಿಮೂರ್ತಿ ವಿಜಯ ವಿಠಲ ಲ |
ಕ್ಷಣ ಪುರುಷ ನಾನಾ ರೂಪ ದ್ವಿವಿಧ ಏಕ ಮೇವನೊ ೧
ಮಟ್ಟತಾಳ
ಇರಳು ಎಂಟನೆ ಭಾಗ ಸೃಸ್ಟಿಕಾಲವೆಂದು |
ಪರಮ ಜ್ಞಾನಿಗಳಿಂದ ಪೇಳುವುದೆ ಸಿದ್ಧ |
ಹರಿ ತನ್ನ ರೂಪಗಳು ಮತ್ತೆ ಲಕುಮಿ ರೂಪ |
ತರುವಾಯ ಸಕಲ ಮುಕ್ತರ ರೂಪಗಳು |
ಹೊರಗೆ ತೆಗೆದು ಸರ್ವಬಗೆಯಿಂದ ಕ್ರೀಡೆ |
ಹರುಷದಿಂದಲಿ ಆಡೆ ಇದಕೆ ಸಾಧನ ನಿಜ |
ಪರಿಶುದ್ಧವಾದ ಸತ್ವ ಗುಣದಿಂದ |
ಶರಧಿ ಪರ್ವತ ನದಿ ಸರೋವರ ಗಜ ಅಂದಣ |
ತುರಗ ಪದಾತಿ ನಾನಾ ಭೋಗದ್ರವ್ಯ |
ಪುರ ಪಟ್ಟಣದಲ್ಲಿ ಸತ್ಯ ವಿನಿರ್ಮಾಣದಲಿ |
ಚರಿತೆ ಮಾಡಿದನಯ್ಯಾ ಸಿರಿ ಮುಕ್ತರ ಕೊಡ |
ಪರಿ ಪರಿ ರೂಪಗಳ ಧರಿಸಿ ದಾನವಾರಿ |
ಇರುತಿಪ್ಪದು ಇಲ್ಲಿಗೆ ರಾತ್ರಿಯ ಸಮ ಭಾಗ |
ಸರಿಯಾಯಿತು ಮುಂದೆ
ಹರಿ ತನ್ನವತಾರ ಏಕೀ ಭೂತವಾಗಿ |
ಸಿರಿ ಮುಕ್ತರ ಅಂಶ ವೊಂದೆ ಮಾಡ ಪೇಳಿ |
ಬರಲು ಉದಯಕಾಲ ಆತ್ಮಸೃಷಿಯ ನೆನದ |
ವರಮೂರ್ತಿ ವಾಸುದೇವಾದಿ ಚತುರದ್ಯೂಹ |
ಸಿರಿ ಧರಿಸಿದಳು ಮಾಯಾ ಜಯಾ ಕೃತಿ ಶಾಂತಿ ಯೆಂದು |
ಕರೆಸಿ ಕೊಂಡಳೆಂದು ಕಮಲೆ ಕೋಮಲ ಗಾತ್ರೆ |
ಪುರುಷ ನಾಮಕ ಅಜನ ವಾಸುದೇವ ಪೆತ್ತ |
ಮರುತ ಸೂತ್ರನ ಸಂಕರುಷಣ ಸೃಜಿಸಿದನು |
ಸರಸ್ವತಿ ಭಾರತಿಯ ಪ್ರದ್ಯುಮ್ನ ದೇವನು ಪೆತ್ತ |
ಪುರುಷನಾಯಕ ಬ್ರಹ್ಮಸೂತ್ರ ನಾಮಕ ವಾಯು |
ಭರದಿಂದಲಿ ಜೀವಾಭಿದಾನ ಶೇಷ ಕಾಲಾಖ್ಯ |
ಗರುಡರ ಪೆತ್ತರಯ್ಯಾ ತಮ್ಮ ಸತಿಯರಲ್ಲಿ |
ಮರಳೆ ವಿರಂಚಿಯಿಂದ ಪ್ರಕೃತಿಯ ಗರ್ಭದಲಿ |
ಮರುತ ಜನಿಸಿದ ತತ್ಪತ್ನಿಯ ಸಂಗಡದಲಿ
ಮರುತ ಸೂತ್ರನಿಗೆ ಶ್ರದ್ಧಾದೇವಿಯಿಂದ |
ಗರುಡ ಶೇಷರೀರ್ವ ಜನರು ಪುಟ್ಟಿದರಂದು |
ಪರಮ ರಹಸ್ಯವಿದು ಅಜನು ತನ್ನ ಪತ್ನಿ |
ಸರಸ್ವತಿಯಿಂದ ಪುಟ್ಟಿದ ಪವನ ಸಹ |
ಹರಿಯಿಚ್ಛೆಯಿಂಥಾದೆ ಪುನಹ ಪುರುಷ ಬ್ರಹ್ಮ |
ಸರಸ್ವತಿಯಭಿಮುಖದಿ ವೈಕಾರಿಕ ಗುಣದಿ |
ಉರಗ ರುದ್ರೇಂದ್ರರೆಂಬ ಕುವರರ, ಪೆತ್ತನಯ್ಯಾ |
ಪರಣ ಭಾರತಿಯಲ್ಲಿ ತೈಜಸ ಗುಣದಿಂದ |
ಗರುಡ ರುದ್ರರೆಂಬ ಮಕ್ಕಳ ಹೆರದನಯ್ಯಾ |
ಉರಗ ನಾಮಕ ಜೀವ ತಾಮಸ ಗುಣದಿಂದ |
ಹರನ ಪುಟ್ಟಿಸಿದನು ವಾರುಣಿ ಪತಿ ಕರಿಸಿ |
ತರುವಾಯ ಇವರಿವರ ಸತಿಯರು ಜನನವಾ |
ದರು ತಮತಮ್ಮ ಪತಿಗಳು ಪುಟ್ಟಿದಲ್ಲಿ |
ಎರಡೊಂದಾಹಂಕಾರ ಪ್ರಭೇದ ಉತ್ಪತ್ತಿ |
ಪುರುಷನಾಮಕ ಸೂತ್ರ ಜೀವನಾಮಕ ಫಣಿಯಿಂದ |
ಮಿರುಗುತಿಪ್ಪದು ನೋಡೆ ಸೂಕ್ಷ್ಮ ಸೃಷಿ, ಸರ್ಗ |
ಸರುವ ನಾಮಕ ನಮ್ಮ ದಿಜಯ ವಿಠ್ಠಲರೇಯ |
ಮೆರೆವ ಪುತ್ರ ಪೌತ್ರರಿಂದ ನಿಜೈಶ್ವರ್ಯ ೨
ರೂಪಕ ತಾಳ
ಸಾವಿತ್ರಿಯಾದ ಪುರುಷನಿಂದಲಿ ಅಂದು |
ಅ ವೈಕಾರಿಕ ರುದ್ರ ಸತ್ವಗುಣ ಪ್ರಾಚುರ್ಯ |
ಭಾವದಿಂದಲಿ ತನ್ನ ನಾರಿಯನೊಡಗೂಡಿ |
ದೇವೇಂದ್ರ ಕಾಮಾಹಂಕಾರ ಪ್ರಾಣಾನಿರುದ್ಧ |
ದೇವಾಚಾರ್ಯ ಶುಕ್ರ ಶಶಿ ಭಾನು ಮೊದಲಾದ |
ದೇವಾಂಶರ ಪೆತ್ತ ತೈಜಸ ತಾಮಸ ರುದ್ರ |
ದೇವನು ಪ್ರಜಸರ್ಗ ನೆಸಗಲಿಲ್ಲವು ಕ್ಫಾಣೊ |
ಈ ವಿಚಾರದೊಳು ಗರುಡೇಂದ್ರಾಹಿ ರುದ್ರ ಯಜ್ಞ |
ಜೇವಾಭಿಮಾನಿಗಳು ಪ್ರಾಣನಿಂದುದ್ಭವ |
ಶ್ರೀ ವಿಷ್ಣು ರಥನಿಂದ ಜಯ ವಿಜಯಾದ್ಸರ ಜನನ |
ಕೋವಿದ ಪ್ರಾಣನಿಂದ ವಿಷ್ವಕ್ಸೇನೋದ್ಭವ |
ದೇವಾನಿರುದ್ಧನು ತನ್ನಾಮಕ ದೇಹ |
ಯಾವತ್ತು ಸಾಂಶ ಜೀವರಿಗೆ ಮಿಗಿಲಾದ ಜೀವರಿಗೆ ಕರುಣಿಸಿದ |
ಆವಾವ ಬಗೆಯಿಂದ ಯೇಕ ಚತುರ್ವಿಂಶತಿ |
ಈ ವಿಧ ತಿಳಿವುದು ಪ್ರದ್ಸುಮ್ನದೇವನು |
ಸಾವಿರ ವರುಷ ತನ್ನುದರದಲ್ಲಿ ತಾಳಿ |
ಜೀವ ಸಮುದಾಯಕ್ಕೆ ಈ ಪರಿ ಮಾಡಿಸಿದ |
ಕಾವ ಸೋದರನ ವತ್ಸರ ಹತ್ತು ಗ್ಫ್ರಾಹ್ಯವೊ |
ಚೇವಕಿನಂದನ ವಿಜಯ ವಿಠ್ಠಲರೇಯ |
ಪಾವನ ಮೂರ್ತಿಯ ವೈಭವ ನೋಡಿರೋ ೩
ಝಂಪಿ ತಾಳ
ಅನಿರುದ್ಧನಿಂದ ತೆಗೆದುಕೊಂಡ ಪ್ರ |
ದ್ಯುಮ್ನ ನೆನದು ಅರ್ಧನಾರಿ ವೇಷವನ್ನು |
ಘನವಾಗಿ ವಾಮ ಭಾಗದಿಂದಲಿ ಸರ್ವ |
ಆನರ ಪುಟ್ಟಿಸಿದನು ವರ್ಣಭೇದ |
ವನಿತೆ ಪುರುಷರನ್ನ ಒಂದೊಂದು ಪೆಸರಿನನಲಿ |
ವನಜ ಭವಾದಿ ಮುಕ್ತಿಯೋಗ್ಯರು |
ಅನಿತರೊಳು ಅಜವಬ್ದ ಹತ್ತು ಸವೆದವು ನೋಡ |
ಗುಣಿಸು ವಿಂಶತಿ ವರ್ಷ ಪೂರ್ಣವಾಗಿ |
ಅನಿರುದ್ಧ ಶಾಂತಿ ಪತಿ ಈ ಮೇಲೆ ಪ್ರಕೃತಿಯಾ |
ಗುಣಸಾಮ್ಯ ವ್ಯೆಷಮ್ಯ ಮಾಡಿ ಮುಂದೆ |
ಗುಣತ್ರಯಾಂತರದಿಂದ ಸತ್ವರಜ ತಮ ಅಂಶ |
ವನೆ ರಚಿಸಿ ಮಹದಾದಿತ್ವ ವೆನ್ನಿ |
ಅನುಕ್ರಮ ನಿರ್ಮಾಣವೊ ಈ ಪರಿಯು ಲಾಲಿಪುದು |
ಜನನವಾಜಯಿತು ಜಗಕೆ ಕಾರಣವಾದ |
ಗುಣತ್ರಯೋಪಾದಾನದಿಂದಲಿ ಸಕಲರಿಗೆ |
ತನುವು ಪ್ರಾರಬ್ಧ ವಾಯಿತು ಕರ್ಮಕ್ಕೆ |
ವನಜ ಸಂಭವ ತಾನೆ ಮುನ್ನಿನಂತೆ ತನ್ನ |
ವನಿತೆಯಲಿ ಪುಟ್ಟಿದನು ಪವನ ಸಹಿತ |
ಇನಿತರೊಳು ಪೂರ್ವ ಮಾರುತ ಮರುತ ಜೀವಾಖ್ಯ |
ಫಣಿಪನಿಂದಲಿ ರುದ್ರ ತಾಕ್ಷ್ರ್ಯ ಉರಗ |
ಜನಿಸಿದರು ವ್ಯೆಕಾರಿಕ ತೈಜಸ ತಮೋ |
ಗುಣದಹಂಕಾರದಲಿ ಪ್ರತ್ಯೇಕ ಪ್ರತ್ಯೇಕ |
ವನಿತೆಯರ ಸಮೇತ ಇದರಲ್ಲಿ ರುದ್ರಗೆ |
ತ್ರಿಣಿ ರೂಪ ತಿಳಿವುದು ನಾಮ ಭೇದ |
ಅನಿಮೇಷೇಶ್ವರ ಕಾಮ ಇವರ ಭಾರ್ಯರ ಜನನ |
ಗುಣ ಭೇದದೊಳಗೆ ಎಣಿಕೆಯ ಮಾಳ್ಪದೊ |
ಎಣೆಗಾಣೆ ಗುಣ ಭೇದರುದ್ರನ್ನ ಸೃಷ್ಟಿಯು |
ಅನುವಾಗಿ ನೋಡಿರೊ ಪ್ರಥಕು ಪ್ರಥಕು |
ನೆನೆಯದಲೆ ತ್ರೀರೂಪವೊಂದು ಮಾಡಿದನು ಮಾ |
ನಿನಿ ಸಹಿತ ಅರ್ಧನಾರಿಯ ರೂಪದಿ |
ಅನಲಾಕ್ಷ ಬಲವಂತ ಸವ್ಯಬಲಭಾಗದಿ |
ಇನ ದ್ವಾದಶರು ಮರುದ್ಗಣ ಹತ್ತು ರುದ್ರ |
ಜನ ವಿಶ್ವದೇವತೆ ಅಶ್ವಿನಿಯರು ಋಭು |
ಗಣವೆಂಟು ವಸುಗಳು ಗಂಧರ್ವ ಉರಗ |
ಶನಿ ಮೊದಲಾದ ಸಮಸ್ತ ಜನ ಗಜ ತುರಗ |
ವನರುಹ ನಾನಾ ವಿಚಿತ್ರ ಜೀವ |
ಗಣದವರ ಪಡೆದನು ಹರಿ ಕೃಪೆಯಿಂದ |
ವನಜ ಲೋಚನ ನಮ್ಮ ವಿಜಯ ವಿಠ್ಠಲರೇಯ |
ಘನ ಕುಟುಂಭಸ್ತನೊ ಕಲ್ಪ ಕಲ್ಪದಲಿ ೪
ತ್ರಿವಿಡಿ ತಾಳ
ಮೂರು ರೂಪಗಳೊಂದೆ ಮಾಡಿ ಮಹ ರುದ್ರ |
ಬೇರೆ ಬೇರೆ ಸೃಷ್ಟಿ ನೆಸಗಿದನು ವೈ |
ಕಾರಿಕ ದಿಂದಲಿ ಮನಸು ದೇವತ ದೇಹ |
ಚಾರು ತೈಜಸದಿಂದ ಜ್ಞಾನೇಂದ್ರಿಯು |
ಮೂರೆರಡು ಕರ್ಮೇಂದ್ರಿಯು ಮಿಷೈ ರಚಿಸಿ ವಿ |
ಹಾರ ಮತ್ತೆ ಮತ್ತೆ ತಾಮಸದಿಂದಲಿ |
ಮೂರೊಂದೊಂದು ಭೂತ ಪಂಚತನ್ಮಾತ್ರಗಳು |
ವೈರಾಗ್ಯನಿಧಿ ತಾನೆ ಸೃಜಿಸಿದನು |
ಈ ರೀತಿಯನು ತಿಳಿದು ಮುಂದೆ ಪ್ರಥಮಾಂಗ |
ಮಾರುತನಿಂದಲಿ ಗರುಡ ಶೇಷ |
ಶೌರಿ ಪಾದೋದಕಧರ ಇಂದ್ರರು ಕು |
ಮಾರರಾದರು ಕಾಣೊ ಈ ತರುವಾಯ |
ವಾರುಣಿ ಪತಿ ಶೇಷ ಗರುಡರ್ಕ ಶಶಿ ಅಹಂ |
ಕಾರಪ್ರಾಣ ಮಿಗಿಲಾದುತ್ತಮ |
ಧೀರರಿಂದಲಿ ಸರ್ವ ನೀಚ ದೇವತೆಗಳು |
ದಾರ ಸೃಷಿಯ ಪೇಳಿ ಈ ಮಧ್ಯದಿ
ವಾರುಣಿ ನಾಥಾನ್ನೆ ಪ್ರಜಾ ಸರ್ಗ ಮಾಡಿದ |
ಕಾರಣವನೆ ನೊಡು ನೀಚ ಸುರರು |
ಭಾರಣೆಯಾಗಿದ್ದ ಯಜ್ಞಾಭಿಮಾನಿಗಳು |
ಸಾರಿರೈ ಈ ಪರಿ ಉದ್ಭವವೊ |
ವಿೂರ ಬಹುದೆ ದೇವತೆಗಳ ಸೃಷ್ಟಿ ವಿ |
ಚಾರ ಮಾಡಿದರಾಗೆ ಬಲಇಪ್ಪದು |
ಸಾರಿ ಪೇಳುವನಾರು ಇವರಿವರ ಉತ್ಪತ್ತಿ |
ನಾರಾಯಣನು ಬಲ್ಲ ನಮೊ ನಮೊ |
ನೀರೇರುಹ ನಯನ ವಿಜಯವಿಠ್ಠಲರೇಯ |
ತಾರತಮ್ಯದಿಂದ ತಾನೆ ಸೃಷ್ವಿ ಮಾಡಿದ |
ಧ್ರುವ ತಾಳ
ಇಲ್ಲಿಗೆ ಮೂವತ್ತೈದು ವರ್ಷಾದವು ವಾಣಿ |
ವಲ್ಲಭ ಬ್ರಹ್ಮಮಾನದಿಂದ ಎಣಿಸಲಾಗಿ |
ಅಲ್ಲಿಂದಿತ್ತಲು ಕೇಳಿ ಕ್ರಮದಿಂದ ಸೃಷ್ಟಿಶಾಂತಿ |
ನಲ್ಲ ಮಾಡಿದ ನೈಯ್ಯ ಆವರಣ ಬೆಳಸಿ ಇದ್ದು |
ಮೆಲ್ಲ ಮೆಲ್ಲನೆ ಒಂದರೊಳಗೆ ಒಂದು ಪೊಗಿಸಿ |
ನಿಲ್ಲದೆ ಸಂಯೋಗ ಮಾಡಿದನು ದೇವ |
ಅಲ್ಲಿ ಗಲ್ಲಿಗೆ ತತ್ವ ನಿಯಾಮಕರ ನಿಟ್ಟು |
ಬಲ್ಲಿದ ತಾನೆ ವೊಳಗೆ ವ್ಯಾಪಿಸಿದ |
ಇಲ್ಲವೆಂದೆನದಿರು ಈತನ ತೊರದು ತೃಣ |
ಅಲ್ಲಾಡಿಸುವ ಶಕ್ತಿಯೊಬ್ಬನಿಲ್ಲ |
ಸಲ್ಲಲಿತ ವ್ಯಕ್ತ ಮಹ ಅಹಂ ಗಗನ |
ಚೆಲ್ಲಿಸುವ (ಚಲಿಸುವ) ವಾತಾಗ್ನಿ ಉದಕ ಧರಣಿ |
ಎಲ್ಲ ತತ್ವಾವರಣ ಎಣಿಕೆಮಾಡಲು ಯಿದಕೆ |
ಸಲ್ಲುವರು ಚತುರವಿಂಶತಿ ಜನರು |
ಅಲ್ಲಿಂದ ಲೆಖ್ಖ ಮಾಡೆ ದಶ ಸಂವತ್ಸರ ವೆನ್ನಿ |
ಎಲ್ಲ ತತ್ವಾವರಣ ಎಣಿಕೆ ಮಾಡಲು ಯಿದಕೆ |
ಸಲ್ಲುವರು ಚತುರ ವಿಶಂತಿ ಜನರು |
ಅಲ್ಲಿಂದ ಲೆಖ್ಖಮಾಡೆ ದಶ ಸಂವತ್ಸರ ವೆನ್ನಿ |

ಪಂಚಭೂತಾತ್ಮಕವಾದ ಬ್ರಹ್ಮಾಂಡದ

೩೦
ಧ್ರುವತಾಳ
ಗುಣಭಾಗತ್ರಯ ನಿತ್ಯ ಅನಾದಿಯಿಂದಲಿ |
ಎಣಿಸಿ ಸತ್ವ ರಾಜಸ ತಮ ಪೆಸರು |
ಗಣನೆ ಇಲ್ಲದೆ ಉಂಟು ಅಂಶಿ ಆಂಶಗಳಾಲೋ |
ಚನೆ ಮಾಡಿದರೆ ಒಂದಾನಂತಾನಂತ |
ಎಣಿಕೆ ಮಾಡುವುದಕ್ಕೆ ಅಂತುಗಂಡವರಾರು |
ಮನಕೆ ತೋರದು ವಟ ಬೀಜದಂತೆ |
ಇನಿತು ಪೇಳುವುದೇನು ಇದರೊಳು ಚತುರ ವಿಂಶತಿ |
ಘನ ತತ್ವ ಸೂಕ್ಷ್ಮರಾಶಿ ತರಇಪ್ಪೊವೊ |
ಗುಣ ಶುದ್ಧ ಸತ್ವ ಶುಭ್ರ ಪದ್ಮರಾಗ ರಾಜಸ ತಮ |
ಮಿನಗುವ ನೀಲವರ್ಣ ಈ ಬಗೆ ಅಕ್ಕು |
ತೃಣ ಸೂಕ್ಷ್ಮರಾಶಿ ಭೂತ ಜಗಕೆ ಉಪಾದಾನ |
ಕಣ ರಾಶಿಯಿಂದ ಪರಿಣಾಮೈಸಿ ವಲಯ |
ಅನಿರುದ್ಧ ದೇವನಿಂದ ಯಿಂತು ಪಲ್ಲೈಸುವದು |
ವನಜ – ಜಾಂಡಕ್ಕೆ ಆವರಣ ಭೂತ |
ಮಣಿ ಪ್ರಕಾಶದಂತೆ ಯೇಕೇಕ ವರ್ಣ ಸ್ವಚ್ಛ |
ಅಣು ಮಾತ್ರ ದೋಷವಿಲ್ಲ ಧೂಮಾದ್ರಿಯು |
ಕೊನೆ ಮೊದಲು ನೋಡಿದರೆ ಒಂದಕ್ಕೆ ಒಂದು ಸ್ಥೂಲ |
ಗುಣತ್ರಯದಿಂದಲಿ ಪೃಥಿವಿ ತನಕ |
ಅನುದಿನ ಅವಕಾಶ ಕೊಡುತಿದೆ ನೋಳ್ಪರಿಗೆ |
ನೆನೆದು ನೆನೆದು ಜ್ಞಾನಿ ಸಂಖ್ಯಮಾಳ್ಪ |
ಗುಣ ಸತ್ವ ವಿಶಿಷ್ಟರಾಶಿ ವಿರಳವನ್ನು |
ಕ್ಷಣ ದೊಳು ನಿರ್ಮಾಣ ಮಾಡಿದ ದೇವ |
ಗುಣ ಸತ್ವಬಿಂದು ಸಾಂಶವುಳ್ಳವ ತೆಗೆದುಕೊಂಡು |
ಮನದಿಚ್ಛೆಯಲಿ ಪ್ರದೇಶ ವ್ಯಾಪ್ತಿ |
ಯನು ಮಾಡಿದ ಹರಹಿದ ರಾಜ ಸಾವರಣಕ್ಕೆ ದ್ವಿ |
ಗುಣ ಪರಿಮಿತವಧಿಕ ವಲಯಾಕಾರ |
ಗಣಿತ ಮಾಡೆಲೊ ಯಿದರ ಲೆಖ್ಖ ಅನೇಕ ಯೋ |
ಚನೆ ವುಂಟು ನೋಡಿಕೊಂಡು ಮುಂದೆ ಅರುಣಾ |
ಗುಣದಾವರಣ ಭೂತ ಪುಟ್ಟಿದ ಬಗೆ ಕೇಳು |
ವಿನಯದಿಂದೇಕ ಭಾಗ ತಮ್ಮ ಮೂಲದಿ |
ಇನಿತು ರಜೋ ಸೂಕ್ಷ್ಮರಾಶಿ ಭೂತಾಂತರದಿಂದ |
ಗುಣಗಳು ಪೊರಟವು ನೂರು ಭಾಗ |
ಎಣಿಕೆ ಮಾಡು ಪ್ರಥಮಾವರಣದಿ ದಶಭಾಗ |
ಗಣಿತ ಮಾಡಲು ಇಷ್ಟರಿಂದಲಿದೆ |
ಗುಣವಂತ ತನ್ನ ರಾಣಿಯರ ಸಹಿತ ಪ್ರವೇಶಿಸಿ |
ಗುಣ ಮೂರರಿಂದ (ವನು) ಪರಿಣಾಮ (ಮಾಣ)ವನೆ ಮಾಡಿ |
ದಿನದಿನಕೆ ಬೆಳಸಿ ಆವರಣ ಭೂತ ತಮೊದ್ವಿ |
ಗುಣ ಮಾಡಿದನು ರಾಜಸ ಪರಿಚ್ಛೇದ |
ಎಣಿಸು ಇದರ ಯೋಜನ ಅಸಂಖ್ಯವೆಂದು |
ಮನದಲ್ಲಿ ತಮೊ ಭಾಗಾ ವರುಣೋತ್ಪತ್ತಿ |
ನೆನಸು ಆವರಣ ಭೂತ ರಾಜಸರೊಳೊಂದಂಶ |
ಗುಣ ತಮೊ ಸೂಕ್ಷ್ಮ ರಾಶಿ ಭೂತದೊಳಗೆ
ಅನುಕರಿಸು ರಾಜಸ ದ್ವಾದಶ ಮಡಿ ಕಪ್ಪು ಬಿಂದು |
ಅನುಮಾನವಿಲ್ಲ ಕೆಲವು ಸತ್ವ ಭಾಗ |
ಅನುವಾಗಿ ಇವು ಮೂರು ಕಲಸಿ ಅದರೊಳು ತಾನೆ |
ಚಿನುಮಯ ದೇಹದಲ್ಲಿ ಪೊಕ್ಕು ತನ್ನ |
ವನಿತೆ ಸಹಿತ ವಲಯಾಕಾರ ಬೆಳಸಿ ತಮೊ |
ಗುಣ ಪರಿಚ್ಛೇದ ಪುಟ್ಟಿಸಿದನು ಗಡ |
ವನಜ ಪೀಠನ ತತ್ವದ ದಶ ಮಡಿ ಎನಿಸಿ ಯೋ |
ಜನೆ (ನ) ಭೇದ ಮಾಡಿದ ಅವ್ಯಕ್ತಾವರಣ |
ಜನರು ಕೊಂಡಾಡಿ ಇಂತು ಪ್ರಥಮಾವರಣ ಭೂತ |
ಮಣಿ ಪ್ರಕಾಶದಂತೆ ಝಗಿ ಝಗಿಪುದು |
ಘನ ಆನಂದಮಯ ವಿಜಯ ವಿಠ್ಠಲರೇಯ |
ಮನದೊಳಗಾಡುವ ಅವ್ಯಕ್ತನಾಮದಿ ೧
ಮಟ್ಟತಾಳ
ದ್ವಿತೀಯಾ ವರ್ಣ ಭೂತ ಮಹತತ್ವ |
ಸತುವ ಭಾಗದಿ ಹತ್ತು ತಮೊ ಗುಣದಲಿವೊಂದು |
ಅತಿಶಯವಾಗಿ ಲೋಹಿತ ಗುಣದಲಿ ವೊಂದು |
ಮತಿವಂತರು ಕೇಳಿ ಗುಣ ಸಾಮ್ಯದಲಿ ರ |
ಕುತ ಬಿಂದುಗಳಯ್ಯ ಅವ್ಯಕ್ತದಲಿ ಮಹ |
ತತುವ ಉಪಾದಾನ ವೈಷಮ್ಯ ಕಾಲದಲ್ಲಿ |
ತೃತಿಯ ರಜಸು ತೆರಳಿ ತಮೊದೊಳಗೊಂದು ಬಿಂದು |
ಪ್ರತಿಕೂಲವಿಲ್ಲದಲೆ ಒಂದೊಂದು ವೆರಸಿ |
ಸತಿ ಸಮೇತದಲಿ ಪರಮಾತ್ಮನು ಪ್ರವೇ |
ಶಿತನಾಗಿ ಬೆಳಸಿ ವಲಯಕಾರದಲ್ಲಿ |
ಚತುರಾನನ ತತ್ವ ಪುಟ್ಟಿಸಿದನುಗಡ |
ಚತುರ ಪಂಚ ಭಾಗವೆಂದು ಪೇಳುವುದೇನು |
ಮತ ಸಮ್ಮತವಿದೆ ಭಾಗಾಂತರ ಮಹ |
ತತುವ ಸೂಕ್ಷ್ಮರಾಶಿಯೊಳಗಿನ ಇದೆ ಬಿಂದು |
ಗತಿ ತಪ್ಪದಲೆ ಬಂದು ಕೂಡಿದ ಕಾರಣ |
ಹಿತವಾಯಿತು ನೋಡಾ ತಜ್ಜಾತಿಯಾಗಿ |
ಚತುರ ಮೊಗನು ಎಮ್ಮ (ಉಂಟು)ವಾಯುದೇವರು ಸರ |
ಸ್ವತಿ ಭಾರತಿ ಉಂಟು ಅಭಿಮಾನಿಗಳಾಗಿ |
ಸತತ ಅಹಂಕಾರಕ್ಕೆ ದಶ ಮಡಿಯಾಗಿದೆ |
ಸತು ರಜೊ ತಮೊ ಬಿಂದು ಸಾಂಶಗಳು ಮಿ |
ಳಿತವಾಗಿವೆ ನೋಡು ಲಕ್ಷ ಸಾವಿರ ನೂರು |
ಶತ ಆರಂಭಿಸಿ ಒಂದೊಂದೀಪರಿಯು |
ಪತಿ ವಿಜ್ಞಾನಮಯ ವಿಜಯ ವಿಠ್ಠಲ ನಿತ್ಯ |
ತುತಿಸಿದವನ ಮಹಾಖ್ಯಾತಿ ಮಾಡುವ ಕಾಣೊ ೨
ರೂಪಕ ತಾಳ
ಶಿವನ ತತ್ವದ ಮಹಿಮೆಯ ಏನು ಪೇಳಲಿ ವನಜ |
ಭವನ ತತ್ವಾಂತರ್ಗತ ತದ್ಗತ ವಿಜ್ಞಾನಮಯ |
ವಿವರ ತಮೊಭಾಗ ಅಹಂಕಾರ ಸೂಕ್ಷ್ಮಮಿಂ |
ಚುವ ರಾಶಿಯೊಳಗೆ ತ್ರಿಭಾಗ ಕೂಡಿದ ಲೇ |
ಶವ ತೆಗೆದು ಅದರಲ್ಲಿ ಹರಿ ಪ್ರವಿಷ್ಯನಾಗಿ |
ದಿವಸ ದಿವಸಕೆ ಬೆಳಸಿ ವಲಯಾಕಾರದಿಂದ |
ತ್ರಿವಿಧ ಬಗೆ ಮಾಡಿದ ವೈಕಾರಿಕ ತೈಜಸ ತಾಮ |
ಸವನು ಇದರಿಂದ ಮಿಗಿಲಾದ ತತ್ವಜನನ |
ಕವಿಗಳು ಕೇಳಿ ಈ ಅಹಂಕಾರದಿಂದ ಚಿ |
ತ್ತವು ಬುದ್ಧಿ ಮನ ತತ್ತದ್ರಾಶಿಯಿಂದುತ್ಪತ್ತಿ |
ತವಕದಿಂದಲಿ ನೋಡಿ ಚತುರವಿಂಶತಿ ತತ್ವ |
ದಿವಿಜರ ಗಾತುರ ಬ್ಯಾರೆ ಬ್ಯಾರೆ ಉ |
ದ್ಭವವಾಯಿತು ವೈಕಾರಿಕ ಅಹಂಕಾರ ಮನದಿಂದ ತೃತಿ
ಯಾವರಣಕೆ ಭೂತ ಗಗನ ತತ್ವಕೆ ಪರಿಮಿ |
ತವಾಗಿದೆ ಹತ್ತು ಮಡಿ ಲೆಖ್ಖದ ವ್ಯಾಪ್ತಿ |
ಪವನ ಪರಿಪಾಲ ವಿಜಯವಿಠ್ಠಲರೇಯ |
ನವ ನವ ಭಕುತಿಯ ಕೊಡುವಾ ವಿರಕುತಿಯ ೩
ಝಂಪಿ ತಾಳ
ಎರಡನೇ ಅಹಂಕಾರ ತೈಜಸವೆಂಬೋದು |
ಅರುಣ ರೂಪದಲಿಂದ ಒಪ್ಪುತಿದಕೊ |
ಪರಮಾತ್ಮ ತೈಜಸ ಭಾಗದ ದೆಶೆಯಿಂದ |
ಪೊರಡಿಸಿದ ದಶವಿಧ ಬೀಜಾಂಕುರ |
ಎರಡೈದು ಇಂದ್ರಿಯಗಳು ಇದರಿಂದ ವುಪಚಯ |
ಸರಿ ಬೆರಸಿ ಇಪ್ಪವು ಸೂಕ್ಷ್ಮದಿಂದ |
ಮರಳೆ ತೈಜಸ ಭಾಗ ಮೂಲದಲ್ಲಿದ್ದ ಶ್ರೋ |
ತುರ ಶಬ್ದಾಕಾಶ ಸೂಕ್ಷ್ಮರಾಶಿಯಲ್ಲಿ |
ಇರುತಿಪ್ಪದೊಂದೊಂದು ಭಾಗವನು ತೆಗೆದು ಶ್ರೋ |
ತುರ ತತ್ವ ಪುಟ್ಟಿತು ಹರಿಯಿಂದಲಿ |
ಎರಡೆರೆಡು ಶಬ್ದ (ರಬ್ದ)ದಿಂದಲಿ ಯಿದು ನಿರ್ಮಾಣ |
ಪರಿಯಾಗಿಯಿಪ್ಪುದು ಬಲು ವಿಚಿತ್ರ |
ಅರಿವುದು ಇದರಂತೆ ಉಳಿದ ಒಂಭತ್ತು ನೇ |
ತುರ ಮೊದಲಾದ ಉಪಸ್ಥ ತನಕ |
ಧರಿಯೊಳಗೇವೆ ಜ್ಞಾನ ಕರ್ಮೇಂದ್ರಿಯಗಳೆಂದು |
ಕರೆಸಿಕೊಳುತಿಪ್ಪವು ಸರ್ವದಲ್ಲಿ |
ತರುವಾಯ ತಾಮಸ ಅಹಂಕಾರ ಭಾಗಾಂತರದಿ |
ಎರಡೈದು ವಿಭಾಗ ಮಾಡಿ ಶಬ್ದ |
ಸ್ಪರಿಶ ರೂಪ ರಸ ಗಂಧ ಪಂಚ ತನ್ಮಾ |
ತುರ ಗಗನ ಪೃಥಿವಿ ಪರಿಯಂತ ಸೃಷ್ಟಿ |
ಮಿರಗುವ ತಾಮಸ ಅಹಂಕಾರಿಕದ ಬಗೆವೊಂದು |
ವರ ಶ್ರೋತ್ರ ತತ್ವ ದಶಭಾಗವೊಂದು |
ನಿರುತ ತಾಮಸದಲ್ಲಿ ಇಪ್ಪ ಸೂಕ್ಷ್ಮರಾಶಿ |
ತರ ಭೂತದಲ್ಲಿ ಇದ್ದ ಶಬ್ದ ಗಗನ |
ಎರಡು ಪೂರ್ವದಲೆರಡು ಪೇಳಿದವು ಕೂಡಿ ನಿಂ |
ದಿರದೆ ಶಬ್ದ ತತ್ವ ಪುಟ್ಟಿತು ಗಡ |
ಸ್ಪರಿಶ ಮೊದಲಾದ ನಾಲ್ಕು ಮಾತ್ರಾ ಇದರಂತೆ |
ಪರಿಗ್ರಹಿಸು ಅಂತರಂತರ ತದ್ಗತ |
ಚರಿತೆಯನು ತಿಳಿ ಚಿತ್ತ ಬುದ್ಧಿ ಮನಸ ದಶ |
ಕರಣಗಳು ಪಂಚ ತನ್ಮಾತ್ರಗಳು ಆ |
ವರಣ ಭೂತಗಳೆಲ್ಲ ಒಂದಂದರಲ್ಲಿಸು |
ಸ್ಥಿರವಾಗಿ ಪೊಂದಿ ಕೊಂಡಿ ಪ್ಪವಯ್ಯಾ |
ಮರುತ್ಪದ ಮಿಕ್ಕಾದ ಪಂಚ ಭೂತದ ಸ್ಥಿತಿ |
ಅರುಹು ಸಜ್ಜನರ ಮನಕಾಗಬೇಕು |
ಪರಿಪೂರ್ಣ ಗುಣನಿಧಿ ವಿಜಯವಿಠ್ಠಲರೇಯ |
ಸುರನಿಕರ ಸಿರಿ ಸಹಿತ ಅಲ್ಲಲ್ಲೆ ವಾಸನೊ ೪
ತ್ರಿವಿಡಿ ತಾಳ
ಒಂದು ಅಂಶ ತಾಮಸಾಹಂಕಾರದಿಂದ |
ಬಂದದ್ದು ಆಮೇಲೆ ಶ್ರೋತ್ರ ತತ್ವದ ಭಾಗ |
ಒಂದಂಶಾ ಶ್ರೋತ್ರವು ಶಬ್ದ ತತ್ವ ವಿಭಾಗ |
ಒಂದು ಈ ವಿಧದಿಂದ ಮೂರು ಇಣಿಸೆ |
ಸಂದಿದೆ ಯಿದರಲ್ಲಿ ತಾಮಸಾವರಣ ಭೂತ |
ಪೊಂದಿದನಭ ಸೂಕ್ಷ್ಮ ರಾಶಿಯೊಳಗೆ |
ಒಂದು ಭಾಗವ ತೆಗೆದು ಆಕಾಶ ತತ್ವವ |
ಅಂದದಲಿ ಮಾಡಿದ ಹರಿ ವಿನಯದಿಂದಲ್ಲಿ |
ಕುಂದದಲೆ ಪ್ರಾದೇಶ ಗಣಿತವನ್ನು ತಿಳಿದು |
ಬಂಧಾನ ಕಳಕೊಂಡು ಸುಖಿಸುವುದು |
ಮುಂದಿನ ತತ್ವಗಳು ಇದರಂತೆ ಗ್ರಹಿಸಬೇಕು |
ಒಂದು ತಮೊಭಾಗ ಜ್ಞಾನೇಂದ್ರಿ ಮಿಗಿಲಾದ |
ಒಂದೊಂದಂಶವನೆ (ವೆ) ವುಂಟು ಸೂಕ್ಷ್ಮರಾಶಿಯ ಸಂ |
ಮ್ಮಂಧ ವಾಯುವಾದಿ ಅನುಕ್ರಮದಿಂದ |
ಛಂದ ಛಂದವಾಗಿ ಒಪ್ಪುತಿವೆ ನೋಡಿ |
ಒಂದಕ್ಕೆ ವೊಂದೊಂದು ದಶಮಡಿ ಲೆಖ್ಖ |
ಬಿಂದು ಬಿಂದುಗಳಿಂದ ಇಂತಾವರಣ ಭೂತ |
ಗಂಧಾದಿ ಇದರಲ್ಲಿ ಅಂತರವಾಸ |
ಎಂದಿಗೆಂದಿಗೆ ದೋಷ ಲೇಶವಿಲ್ಲ ಪ್ರತಿ |
ಬಂಧಕವಿಲ್ಲದೆ ಸುತ್ತಿ ಒಪ್ಪವು |
ಇಂದು ಪೇಳುವುದೇನು ಪಂಚಕೋಶದಲ್ಲಿ ಇದ |
ರಿಂದಲೆ ತಿಳಿದರೆ ತತ್ತದ್ಭಾಗ |
ಸಂದೇಹವಾಗದೆ ಮನಕೆ ಬರುವುದು ಆ |
ನಂದ ವಾಹುದು ಹರಿ ಕರಣ ಮಾಳ್ಪ |
ಇಂದ್ರಾದಿ ಜನರೆಲ್ಲ ಇವಕೆ ಮಾನಿಗಳು ಏ |
ನೆಂದು ಕೊಂಡಾಡಲಿ ಹರಿಯ ಶಕ್ತಿ |
ಸಂದೇಹದಿಂದಲಿ ಜ್ಞಾನ ಪುಟ್ಟದು ಕೇಳೊ |
ಮಂದಮತಿಗಳಿಗಿದು ಸುಲಭವೇನಯ್ಯ |
ಇಂದಿರಾಪತಿ ನಮ್ಮ ವಿಜಯವಿಠ್ಠಲರೇಯ |
ಒಂದೊಂದು ಭಾಗ ವಿಭಾಗ ತ್ರಿಗುಣ ಬಲ್ಲ
ಅಟ್ಟತಾಳ
ಕುರುಹು ತತ್ವಗಳು ಒಂದಕ್ಕೊಂದು ಕಾರಣ |
ಪರಿಮಿತವಾಗಿವೆ ಸೂಕ್ಷ್ಮ ಸ್ಥೂಲತರ |
ಧರಣಿ ವಿಡಿದು ಮಹ ಅವ್ಯಕ್ತ ತತ್ವವು |
ಸರಿಸಿ ಜಾಂಡಕ್ಕೆ ಆವರ್ಕವಾಗಿವೆ |
ವರ ತುರ್ಯಾ ಮೂರುತಿ ಅನ್ಮಯಾದಿ ನಾಮಾಂ |
ತರದಿ ಇರುತಿಪ್ಪ ತದಾಕಾರ ಅವಿಕಾರ |
ಪರಮ ಪುರುಷ ನಿತ್ಯ ಚತುರ ವಿಂಶತಿ ತತ್ವ |
ಮರಿಯಾದೆ ಮಾಡಿದ ಬೊಮ್ಮಾಂಡ ಖರ್ಪರ |
ಎರಡೇಳು ಲೋಕ ಸಮುದ್ರ ಪರ್ವತ ನದಿ |
ವಿರಚಿಸಿ ತತ್ತದ್ದೇವತೆಗಳ ಸ್ಥಾಪಿಸಿ |
ಭರತಾಖ್ಯ ಖಂಡ ಕರ್ಮ ಭೂಮಿಯಲ್ಲಿ ನಿ |
ಬ್ಬರ ಯೆಂಭತ್ತು ನಾಲ್ಕು ಲಕ್ಷ ಜೀವರ ಗಾ |
ತುರ ನಿರ್ಣೈಸಿದ ಸರ್ವ ತತ್ವಗಳಿಂದಲಿ |
ಇರತಕ್ಕವಾಯಿತು ಪ್ರಚುರ ಭಾಗ ಭೂತ |
ಭರಿತವಾಗಿದೆ ವಿರಾಟರೂಪದ ಮಧ್ಯ |
ಕರುಣಾಕರ ನಮ್ಮ ವಿಜಯ ವಿಠ್ಠಲರೇಯ |
ನಿರುತ ನಿಮಿತ್ತನೊ ಗುಣ ಉಪಾದಾನವು ೬
ಆದಿ ತಾಳ

ಭಗವಂತನ ಪೂಜೆಯನ್ನು ಗುಪ್ತವಾಗಿ

೩೧
ಧ್ರುವತಾಳ
ಗುಪ್ತದಾರ್ಚನೆ ಮಾಡು ಗುಣವಂತನಾಗಿ ಬಲು
ಆಪ್ತಾಲೋಚನದಿಂದ ಧೈರ್ಯವಿಡಿದು
ಕ್ಲಪ್ತಿಗೆ ಎಳ್ಳಿನಿತು ಕಡಿಮೆಯಾಗದಂತೆ
ಪ್ರಾಪ್ತಿಯಾಗುವಂತೆ ಎಲೆ ಮನವೆ
ತೃಪ್ತಿಯಬಡು ಹರಿಯಧ್ಯಾನ ರಸದಿಂದ
ಲಿಪ್ತನಾಗದಿರೋ ದುಷ್ಕರ್ಮದೊಳು
ಸಪ್ತ ಪ್ರಾಕಾರ ಗ್ರಾಮದೊಳಗೆ ಶತ
ಸಪ್ತಾಶ್ವನಂತೆ ಜನ್ಮ ಜನ್ಮಕ್ಕೆ
ದೀಪ್ತನಾಗಿಪ್ಪನೀತಾ ಪರಿವಾರ ಸಹಿತಾ
ವ್ಯಾಪ್ತನಾಗಿಹನು ಸರ್ವ ಠಾವೀನಲ್ಲಿ ತೊಲಗದೆ
ಶಪ್ತ ಮಾಡಿದ ಮೇಲೆ ಪೊರಿಯದೆ ಬಿಡ ಸೂ
ಷುಪ್ತಿಲಿ ಸ್ವರೂಪಾನಂತ ಉದ್ರೇಕವೀವ
ಸಪ್ತ ಸಪ್ತ ಭುವನಪಾಲಾ ವಿಜಯ ವಿಠಲ
ಅಪ್ತನೊ ಅನಿಮಿತ್ಯ ಬಂಧುನೆಂಬೊದೆ ಸಿದ್ಧ ೧
ಮಟ್ಟತಾಳ
ಛಳಿಮಳಿಯೊಳಗಿದ್ದು ಕೆಲಕಾಲ ಬಳಲಿ
ಅಳಲಿ ತೊಳಲಿ ದೇಹ ಬಳಲಿಪುದಲ್ಲ ಬಿ
ಸಿಲು ಬೇಸಿಗೆ ಸಲ್ಲ ಜಲದಲಿ ಮಿಂದು ತೊ
ಪ್ಪಲು ತೊಡಮೆ ತಿಂದು ಹಲವು ಯೋಚಿಸಸಲ್ಲ
ತಲೆ ಕೆಳಗಾಗಿ ಹಂಬಲಗೊಂಬುವುದಲ್ಲ
ಹಲಬು ಹಲಬಿ ವ್ಯರ್ಥ ತಳತಳ ಮಿಡಿಕಿ ಕ
ತ್ತಲೆ ಬೆಳಗೆನ್ನ ದಲೆ ಚಲ ಗಂಹ್ವರ ದೇಶಾ
ವಳಿ ವನದಲಿ ಪೋಗಿ ಕುಳಿತು ಕಂಗಳ ಮುಚ್ಚಿ
ಒಲಿಸುವ ಮಾತಲ್ಲ ತಿಳಿವುದು ಉತ್ತಮ
ಕುಲದಲ್ಲಿ ಜನಿಸಿದ ಮಲರಹಿತ ಜ್ಞಾನಿ ಸುಮನನಿಂದ
ಜಲಜದಳನಯನ ವಿಜಯ ವಿಠಲ ಹರಿಯ
ಒಲಿಸುವ ಉಪಾಯವ ಒಲಿವಿನಲಿ ಕೇಳಿ ೨
ತ್ರಿವಿಡಿ ತಾಳ
ಡಿಂಬದೊಳಗೆ ಹೃದಂಇಇ ಅಂಬರದಲಿ ಪೊಳಿವಾ
ಲಂಬಿಸೀದ ನೂರು ಖಂಬದಿಂದ ಬಲು
ಸಂಭ್ರಮ ಮಂಟಪ ಕೊಂಬಿ ಕೊಂಬಿಗೆ ಶತ
ಕುಂಭ ಪವಳಮಯ ತುಂಬಿದ ರತುನಾ
ದುಭೋಳಿ ಜೋಡಿಸಿದ ಮುಂಬಿಗಿಸುತ್ತಾ
ಕೆಂಬಣ್ಣ ಕಟ್ಟು ಇಂಬಾಗಿ ಎಸೆಯೆ
ಶಂಬರಾರಿಯ ಜನಕ ವಿಜಯ ವಿಠಲ ಹರಿಯ
ಬಿಂಬಾ ತೋರುವ ಸ್ಥಾನ ಚನ್ನಾಗಿ ಗ್ರಹಿಸೋದು ೩
ಅಟ್ಟತಾಳ
ದಳ ಅಷ್ಟವುಳ್ಳ ರಕ್ತಾಂಬುಜ ಮಧ್ಯ
ಪೊಳೆವ ಕರ್ನಿಕೆ ಮೇಲೆ ಮಂಡಲಾತ್ರಯ ವಪ್ಪೆ
ನಿಲವರ ಹೇಮಗದ್ದುಗೆಯಲ್ಲಿ ಸುರತರು
ಕೆಳಗೆ ಫಣಿಮಂಚ ಹಾಸಿಕೆ ಮನೋಹರ
ಲಲನಿಯರಿಬ್ಬರು ಎಡಬಲದಲಿಒಪ್ಪೆ ಕುಳಿತು
ಮೆರೆವ ಮನ್ಮಥಕೋಟಿ ಲಾವಣ್ಯ
ಜಲಧರ ವರ್ನ ಚತುರ್ಭುಜ ನಾನಾ
ಅಳವಳಿಸುವ ಭೂಷಾವಳಿಗಳು ರಂಜಿಸೆ
ಕಿಲಿ ಕಿಲಿ ನಗುವ ಶ್ರೀ ವಿಜಯ ವಿಠಲರೇಯ
ವೊಲಿಸಿದವರಘ ಅರಘಳಿಗೆ ಅಗಲನು ಕಾಣೊ ೪
ಆದಿತಾಳ
ಒಂದೇಳುಭುಜದ ಲಕ್ಷ್ಮೀ ನಾರಾಯಣ
ಇಂದ್ರನಲ್ಲಿಗೆ ಬರೆ ಐಶ್ವರ್ಯ ಇನಕು
ಲೇಂದ್ರನಲ್ಲಿಗೆ ಬರೆ ತೇಜಸ್ಸು ಯವುನಲ್ಲಿ
ಬಂದು ಪೊಂದಲು ಧರ್ಮ ವರುಣನಲ್ಲಿಗೆ ಬರೆ
ಕುಂದದೆ ರಸಕಾಂಕ್ಷಿ ವಾಯುವಿನಲ್ಲಿ ಜ್ಞಾನ
ಇಂದುಧರಸಖನಲ್ಲಿ ಧನದಾಶೆ
ಇಂದು ಮೌಳಿಯಲ್ಲಿ ವೈರಾಗ್ಯಭಾಗ್ಯ
ತಂದು ತೋರುವುದು ನಿತ್ಯದಲ್ಲಿ ಮನ
ಸಂದೇಹವಿಲ್ಲವು ಇದು ಸಿದ್ಧಾಂತವೂ
ಎಂದೆಂದಿಗೆ ತಿಳಿದಾಲೋಚನೆ ಮಾಡು
ಕಂದರ್ಪಪಿತ ನಮ್ಮ ವಿಜಯ ವಿಠಲರೇಯನ
ಸಂದರುಶನವಾಗೆ ಅವನೇ ಜೀವನ್ಮುಕ್ತಾ ೫
ಜತೆ
ಇಂತು ಚಿಂತನೆ ಮಾಡು ಸಚ್ಚಿದಾನಂದಾತ್ಮನ
ಅಂತು ತೋರದ ಮಹಿಮೆ ವಿಜಯ ಹರಿ ೬

ಗುರುವಿನ ಮಹತ್ವವನ್ನು ವಿವರಿಸುವ

೩೨
ಧ್ರುವತಾಳ
ಗುರು ಭಕುತಿ ಪ್ರಧಾನ ಸಾಧನಾ
ಗುರು ಶುಶ್ರೂಷವೆ ಮಹಾಕರ್ಮನಾಶನಾ
ಗುರು ಉಪದೇಶವೆ ಜ್ಞಾನಮಾರ್ಗ
ಗುರು ಪ್ರಸಾದ ಲಿಂಗ ಭಂಗಕೆ ಕಾರಣ ಭಕುತಿ
ಗುರು ಪರಮಾನುಗ್ರಹ ಮಾಡಿದಡಂ
ನಿರುತ ಪಾರ ವಾರ ತತ್ವ ಪ್ರಮೇಯ
ಕರತಳದೊಳಗಿದ್ದ ತೆರದಿಂ
ಅರುಹುವಾಗುವದು ಮಾನವರಿಗೆ
ಸ್ವರೂಪ ಯೋಗ್ಯತಾದನಿತು ಗುರುಭಕುತಿ
ಗುರುಬ¯ ಒಂದು ಇದ್ದಡಂ
ಧರೆ ಎಲ್ಲ ಗೆಲ್ಲವಕ್ಕು ಆವಾಗಂ
ಗುರು ಕರುಣ ಪಡದಡಂ ಧನ್ಯನೊ
ಗುರುಧ್ಯಾನ ಮಾಳ್ಪದು ಜನರಂ
ಗುರು ಚರಣಾಬ್ಜ ಭೈಂಗನಾಗೊ
ಗುರುಗಳಿಗೆ ಸರಿಗಾಣೆನೊ
ಗುರು ಒಲಿದಡೆ ಸರ್ವ ವಿದ್ಯ ಪ್ರಾಪ್ತಿ
ಗುರು ಮಂತ್ರ ಗುರೋರ್ಜಪ
ಗುರುನಾಮಸ್ಮರಣೆ
ಹಿರಿದಾಗಿ ಕೈಕೊಂಡು ಸುಖಿಸುವುದು ಜನರು
ಗುರು ಭವಾಂಬುಧಿ ದಾಟಿದನು ಸಿರಿ ವಿಜಯ ವಿಠ್ಠಲರೇಯನ
ಗುರುವಿಲ್ಲದವನಿಗೆ ಒಲಿಯನು ೧
ಮಟ್ಟತಾಳ
ದುರುಳ ಏಕಲವ್ಯನು ಏಕಾಂತದಲೊಂದು
ಗುರು ಪ್ರತಿಮೆಯನ್ನು ನಿರ್ಮಾಣವ ಮಾಡಿ
ನಿರುತ ಭಕುತಿಯಿಂದ ಶಸ್ತ್ರಾಸ್ತ್ರವಿದ್ಯ
ಹರುಷೋನ್ನತದಿಂದ ಸಂಪಾದಿಸಿಕೊಂಡಾ
ಗುರು ಭಕುತಿಯಿಂದ ಮನುಜಗಾವಲ್ಲ್ಯಾಗೆ
ಸ್ಮರಿಸಿಬೇಡಿದ ವಿದ್ಯಪಾಲಿಸುವುದೊ ಸತ್ಯ ಮರುಳ
ದುರುಳನಾದರು ಕೇಳು ಮಾಡಿದ ವಿಶ್ವಾಸ
ಬರಿದೆಯಾಗದು ಕಾಣೊ ಮುಕ್ತಿವಂತರಿಗಿದೆ
ವರ ಮೂರುತಿ ನಮ್ಮ ವಿಜಯವಿಠ್ಠಲರೇಯಾ
ಗುರುದ್ವಾರದಿಂದ ಪೊಳೆವಾ ಪಾಪವ ಕಳೆವಾ ೨
ತ್ರಿವಿಡಿತಾಳ
ಗುರುಗಳು ವರ ಶಾಪಕೊಟ್ಟರಾದಡೆ ಅವನು
ಸುರ ನರೋರುಗ ಲೋಕ ತಿರುಗಿದರೆ ತೊಲಗುವದೆ
ಸರಸರನೆ ಒಂದೆ ಜನುಮದಲ್ಲಿ ತಿಳಿವದಲ್ಲಾ
ಎರಡೊಂದು ಜನುಮಾಂತರದಲ್ಲಿ ಅನುಭವಾ
ಗುರು ಕರುಣವ ಮಾಡಿದಂತೆ ನಾನಾ ಭೋಗಾ
ಶರೀರವೆ ತೆತ್ತು ಉಣಬೇಕಾ ದ್ವಿವಿಧಾ
ಗುರುಪ್ರಸಾದದಿಂದ ಮರುತ ಮತವೆ ಪೊಂದಿ
ಚರಿಸುತಿಪ್ಪ ನರನನೋಡಿ ಜನರು
ಧರಿಸಲಾರದೆ ಮನುಜ ನುಡಿದರೇನಾಹದೊ
ಕರಣ ಶುದ್ಧವಿಲ್ಲದೆ ಕೆಟ್ಟು ಪೋಪಾ
ಗುರು ಕರುಣ ಬಂದು ಪಾವನ ಮಾಡಿದ ಮೇಲೆ
ದುರಿತದ ಭಯ ದೂಷಣೆ ಭಯವಿಲ್ಲಾ
ಅರರೆ ಅದ (ವ)ರ ಆಂತಃಕರಣ ಆವಾದಾ
ಪರಿಯಲ್ಲಿಪ್ಪದೋ ದೂಷಿಸಬಾರದು
ವರ ಸತ್ಯವತಿಸೂನು ನಾನೂರು ಕೋಟಿ ಮೇ
ಲೆರಡೊಂದು ಹತ್ತು ಕೋಟಿ ಗ್ರಂಥಮಾಡಿರೆ
ಹಿರಿಯರ ಪೇಳಿದ ಮಾತಿಗೆ ಮನತೆಗೆದು
ಸರಿಬಾರದೆಂದಾಡುವನೇ ಮೂರ್ಖ
ಉರುಗ ಶಯನ ನಮ್ಮ ವಿಜಯವಿಠ್ಠಲರೇಯನ
ಪುರವೆ ಬೇಕಾದರೆ ಉತ್ತಮ ಗುರುಬೇಕು ೩
ಅಟ್ಟತಾಳ
ನದಿಯೊಳಗೊಂದು ಅಸ್ಥಿಯ ಹಾಕಿ ತನ್ನಯ
ಬದಿಯಲ್ಲಿದ್ದವರಿಗೆ ಮುಟ್ಟಬಾರದು ಬಂ
ತಿದಕೆ ದೋಷವೆಂದು ಪೇಳಿದರಾಮಾತು
ಬುಧರು ಮೆಚ್ಚುವರೇನೊ ಕೇಳಿದಾಕ್ಷಣಲ್ಲಿ
ಮುದದಿಂದಲಿ ತಮ್ಮ ಗುರುಗಳ ಪಾದಧ್ಯಾನ
ಹೃದಯದಲ್ಲಿಟ್ಟು ಪೇಳಿದ ಕಾಮ್ಯಕೆ ಲೇಸಾ
ತುದಿ ಮೊದಲಾದರು ಸಂಶಯ ಬರುವುದೆ
ಉದಧಿಯಂತೆ ತುಂಬಿದೆ ನೋಡು ಸತ್ಕೀರ್ತಿ
ಪದೋಪದಿಗೆ ಭಗವಂತ ಸಂಗಡ
ವಿಧಿ ತಪ್ಪದಲೆ ಆಡಿದ ಮಹಾತ್ಮರು
ನಿದರುಶನ ಇಲ್ಲದಲೆ ಹೇಳರು ಕಾಣೊ
ಎದೆಗುದ್ದಿಕೊಂಡು ಕಸಿವಿಸಿ ಬಟ್ಟರೆ
ಅದರಿಂದೆನಾಹೋದೊ ಮಿಥ್ಯಾವಾದವ್ಯಾಕೆ
ಸದನದೊಳಗೆ ತಾನು ಕಾಣದಿರೆ ಕುರುಡಾ
ಪದುಮಜಾಂಡ ಓರ್ವರು ಕಾಣರೆಂಬಂತೆ
ಮದಡ ಮಾನವನ ಅಟ್ಟಹಾಸವೇನೆಂಬೆ
ನದಿಗೆ ಚಾಂಡಾಲ ಯವನ ಕೋಟಿ ಸಮುದಾಯ
ಅಧಮರು ಬಂದು ನಿಂದಿಸಿ ಬೈದು ಕಾಲಿಲಿ
ಒದೆದು ಉಗುಳಿದರೆ ದೋಷ ನದಿಗೆ ಉಂಟೆ
ನದಿಸದೃಶವಾದ ಜ್ಞಾನಿಗೆ ಅಣಕವಾ
ಡಿದರೆ ಅವಗಿನ್ನು ಕ್ಷುಣಿತಾ ಬರಲಿಲ್ಲಾ
ಮಧು ವೈರಿ ವಿಜಯ ವಿಠ್ಠಲನ ಪದಾಂಬುಜ
ಸದಮಲವಾಗಿ ಭಜಿಸುವರು ಗುರುವೆನ್ನಿ ೪
ಆದಿತಾಳ
ವ್ಯಾಸ ಮುನಿಯ ಭಾವಗರ್ಭ
ಶ್ರೀ ಮದಾಚಾರ್ಯರು ಬಲ್ಲರಯ್ಯಾ
ವ್ಯಾಸಶಿಷ್ಯರ ಭಾವಗರ್ಭ ಜಯ ಮುನಿರಾಯ ಬಲ್ಲನಯ್ಯಾ
ಲೇಸು ಜಯಾರ್ಯರ ಭಾವಗರ್ಭ
ಮುನಿವ್ಯಾಸರಾಯ ಬಲ್ಲರೈಯ್ಯಾ
ವ್ಯಾಸರಾಯರ ಭಾವಗರ್ಭ ವಿಜಯೀಂದ್ರ
ವಾದಿರಾಜರು ಬಲ್ಲರೈಯ್ಯಾ
ಈಸುಜನ ಬಲ್ಲದ್ದು ಕಾಣೊ ಎಣಿಸು
ಪುರಂದರದಾಸರ ಇದರೊಳು
ದೇಶದೊಳಗೆ ದಾಸರ ನಿಜ ಭಾವಗರ್ಭ
ಲೇಶಬಲ್ಲರು ಅವರ ಅ
ನುಸಾರಿಗಳು ಶ್ರೀಶ ವಿಜಯ ವಿಠ್ಠಲರೇಯಾ
ಕಾಶಿಯೊಳಗಿನ ಮಹಿಮೆ ಬಲ್ಲಾ ೫
ಜತೆ
ನಮ್ಮ ಗುರುಗಳ ಕವನಾ ಮಿಥ್ಯಾಮತವೆಂದವನು
ಬೊಮ್ಮ ರಕ್ಕಸ ಕಾಣೊ ವಿಜಯವಿಠ್ಠಲ ಬಲ್ಲಾ ೬

ಪುರಂದರದಾಸರನ್ನು ಕುರಿತ ಸ್ತೋತ್ರ

ಪುರಂದರ ದಾಸರ ಸ್ತೋತ್ರ
೧೬೦
ಧ್ರುವತಾಳ
ಗುರುಗಳೆಂದರೆ ಇವರೆ ಗುರುಗಳು ಎನಗೆ ಕಾಣೊ
ಧರೆಯೊಳು ಪುರಂದರದಾಸರೆ ಗುರುಗಳು
ಮರಳೆ ಮತ್ತೊಬ್ಬರುಂಟೆ ಕರುಣಿಸಿ ನೆನೆದಂತೆ
ವರಗಳ ಇತ್ತು ನಿತ್ಯ ಪರಿಪಾಲಿಸುವೆ ಹರಿ
ಮರುತನ್ನ ಲೀಲೆಗಳು ಹಿರಿದಾಗಿ ತಿಳಿಪಿ ವಿ
ಸ್ತರವಾಗಿ ಎನ್ನಿಂದಾ ಬರೆಸಿದರು ಹರಿಚರಿತೆ
ದುರಿತ ಸಂದಣಿಯಲ್ಲಿ ಶೆರೆಬಿದ್ದು ತಪಿಸುತ
ಲಿರೆ ನೋಡಿ ಲಾಲಿಸಿದರು ತಮ್ಮ ಕರುಣದಿಂದ
ಹರಿಯೆಳೆಮರಿ ತರಕ್ಷುವಿನ ವನದೊಳು
ಇರಲು ಸೆಳದು ಕಡಿಗೆ ತೆಗೆದಂತೆ ಇಂದಿಗಾ
ಗುರು ಶಿರೋಮಣಿ ಎನ್ನ ದುರಿತದಿಂದ ಸೆಳೆದು
ಪರಮಾರ್ಥದ ಮಾರ್ಗ ಅರಪುಮಾಡೀ
ಕರುಣಾಸಾಗರ ನಮ್ಮ ವಿಜಯ ವಿಠ್ಠಲನ್ನ
ಸ್ಮರಿಸುವುದಕೆ ಜ್ಞಾನವನ್ನೆ ತೋರಿದರೂ ೧
ಮಟ್ಟತಾಳ
ಅಡವಿಗೆ ಬಿದ್ದವನ ದಾರಿಗೆ ತಂದಂತೆ
ಒಡಲಿಗೆ ಇಲ್ಲದವನ ಸುಧೆಯೊಳಗಿಟ್ಟಂತೆ
ಕೊಡೆ ಇಲ್ಲಾದವಗೆ ಸುರತರು ಒಲಿದಂತೆ
ನಡಿಯಲರಿಯದವಗೆ ನಡಿಯ ಕಲಿಸಿದಂತೆ
ನುಡಿಯಲರಿಯದವಗೆ ನಿಗಮತಿಳಿಸಿದಂತೆ
ಮಡುವಿನೊಳು ಬಿದ್ದವಗೆ ನಾವಿದೊರಕಿದಂತೆ
ಪೊಡವಿ ಎಡೆಯವಗೆ ಹರಿವಾಣ ದೊರೆತಂತೆ
ಮುಡಿಯಪೊತ್ತು ಪೋಪಗೆ ಊಟವು ಸಿಕ್ಕಿದಂತೆ
ಕಡುರೋಗಾದವಗೆ ಸಂಜೀವನದಂತೆ
ಜಡಮತಿ ನಾನಾಗಿ ಪೊಡವಿಯೊಳಗೆ ಭವದ
ಒಡನೊಡನೆ ನಿತ್ಯ ಎಡೆಬಿಡದೆ ಇರಲೂ
ಕೆಡಿಸುವ ಕಳ್ಳರ ನಡುಪಿ ನುಡಿಯಾ
ತೊಡಕಿಸದಾನೆ ಕೈಪಿಡಿದು ಪಾಲಿಸುವಂತೆ
ಮೃಢಬಾಂಧವನಾದ ವಿಜಯ ವಿಠ್ಠಲರೇಯನ
ಅಡಿಗಳ ನಾಮವನು ನುಡಿಸಿದರು ಒಲಿದೂ ೨
ತ್ರಿವಿಡಿತಾಳ
ಏನು ಕರುಣಿಗಳೋ ಎಮ್ಮಾ ಗುರುಗಳು
ಏನು ಸ್ವಾಭಾವಿತಾನಂದವು ತಿಳಿಯದೂ
ಮಾನವ ಯೋನಿಯಲ್ಲಿ ಬಂದು ಬಾಳುವ ಎನ್ನಾ
ಮೀನು ಉದಕದೊಳಗಿದ್ದಂತೆ ಮಾಳ್ಪರು
ಆನವರಿಗೆ ಲೇಶ ಅಧಿಕರ ಕಾಣೆನೊ
ಅನಂತ ಜನ್ಮವ ಧರಿಸಲು
ಈ ನಾಡಿನೊಳು ಎನಗೆ ಪ್ರಾಣಕೆ ಬಲುಪರಿ
ಏನೇನು ದುರಿತಗಳು ಬಂದಟ್ಟಲೂ
ಮಾಣಗಳದು ಎನ್ನಾ ಮಾನಸದರ್ಪಣ
ವನು ಇತ್ತರು ಮುದದಿಂದ ಕರುಣಿಸೀ
ಶ್ವಾನ ಛಳಿಯೊಳಿರೆ ವಜ್ರಕವಚವನ್ನು
ಮೇಣು ದೊರತದ್ದು ನೋಡು ಎನ್ನಾಭಾಗ್ಯಾ
ನಾನಾರಿಗಂಜೆನೊ ವಿಜಯ ವಿಠ್ಠಲರೇಯಾ
ಧ್ಯಾನವನು ಮಾಳ್ಪಂಥ ಜ್ಞಾನಿಗಳನು ಕಂ ೩
ಅಟ್ಟತಾಳ
ಗಾನ ಮಾಡಿದರೇನು, ಧ್ಯಾನ ಮಾಡಿದರೇನೊ
ಕಾನನದೊಳು ಪೋಗಿ ತಪವ ಸೇರಾಲೇನು
ಮಾನವನು ಪವಮಾನ ಮತವ ನಂಬಿ
ಜ್ಞಾನ ಉಪದೇಶವಾಗದಲೆ
ತಾನು ಏಸುಕಾಲ ಬದುಕಿದ ಫಲವೇನು
ಬಾಣ ಇಲ್ಲದ ಬಿಲ್ಲಿನಂತೆ ಕಾಣೊ
ಮಾನವಂತರಾದ ಗುರುಗಳ ಉಪದೇಶ
ವನು ಪಡೆದರೆ ಸ್ನಾನಾದಿ ವ್ಯಾಪಾರವೇನು
ವಾಣೀಪತಿ ಜನಕ ವಿಜಯ ವಿಠ್ಠಲರೇಯಾ
ತಾನಾಗಿ ಒಲಿವಾ ಗುರುಭಕ್ತಿ ಉಳ್ಳವಂಗೆ ೪
ಆದಿತಾಳ
ಏಸುಬಲ ಇದ್ದರೇನು, ತನ್ನ ಗುರುಗಳ ಬಲಾ
ಲೇಸಾಗಿ ಇಲ್ಲದಿರೆ ಒಂದು ಫಲನೀಯವೊ
ದೇಶದೊಳಗೆ ಉಳ್ಳವರು ಲೇಸು ತಪ್ಪಿದರೇನೊ
ದೋಷವರ್ಜಿತರಾದ ಗುರುಗಳ ದಯವಿರೆ
ಮೋಸವೆಂಬೋದೆಂದಿಗಿಲ್ಲ ದಿನಪ್ರತಿದಿನ ಬಿಡದೆ
ಈಶಾನುಗ್ರಹ ಉಂಟು ಸಿದ್ದಾರ್ಥವೆನ್ನಿರೋ
ಕಾಶಿ ಮೊದಲಾದ ಸರ್ವಯಾತ್ರಿ ತೀರಥಾ ಮಿಂದು
ರಾಶಿ ಹಣ ಕೂಡಿಸಿ ದಾನವಿತ್ತರನೇಕಾ ಸಮಾನವಲ್ಲ ಸುಲ
ಭಾ ಸುಲಭ ಗುರುಗಳ ಸ್ಮರಣೆಗೆ ಸರಿ ಉಂಟೆ
ಕ್ಲೇಶಬಡದೆ ನಿತ್ಯ ಶುದ್ಧಮನದಿ ನಂಬಿರೊ
ದಾಸರ ಪ್ರೀಯ ನಮ್ಮ ವಿಜಯ ವಿಠ್ಠಲರೇಯಾ
ಲೇಸು ತೋರಿಸುವ ಬಿಡದೆ ಇನಿತು ನಡೆದವಗೆ೫
ಜತೆ
ಗುರು ಪುರಂದರದಾಸರ ನೆರೆ ನಂಬಲೂ
ನಿರುತ ಕಲಿತು ವಿಜಯ ವಿಠ್ಠಲ ಒಲಿವಾ೬

ತಮಿಳುನಾಡಿನ ಸುಪ್ರಸಿದ್ಧ ಶೈಕ್ಷಣಿಕ ಹಾಗೂ

೨೩. ಕುಂಭಕೋಣ
ಧ್ರುವತಾಳ
ಗೆಲ್ಲೋದರಲ್ಲಿ ನಿನಗೆಲ್ಲಿ ಎದುರು ಇಲ್ಲ|
ಕೊಲ್ಲೋದರಲ್ಲಿ ನೀನಲ್ಲಾದೆ ಒಬ್ಬರಿಲ್ಲ |
ಬಲ್ಲಿದಾರೊಳಗೆ ನೀನಲ್ಲಾದೆ ಒಬ್ಬರಿಲ್ಲ |
ಎಲ್ಲಾ ಭಕ್ತರೊಳು ನೀನಲ್ಲಾದಿನ್ನಾರಿಲ್ಲ |
ಬಲ್ಲೂರಾ ದೈವವೆ ಬಿಲ್ಲು ಕರದಲ್ಲಿ ಪಿಡಿದು |
ಇಲ್ಲಿ ಪವಳಿಸಿಪ್ಪ ಉಲ್ಲಾಸವೇನಯ್ಯಾ |
ಮಲ್ಲರಾ ಎದೆದಲ್ಲಾಣ ವಿಜಯವಿಠಲಶಾರಂಗಪಾಣಿ |
ಬಲ್ಲಗಾರರಸೆ ಎಲ್ಲೆ ವೈಕುಂಠ ನಿನ್ನಗೆಲ್ಲೆ ಈ ಪರವೊ ೧
ಮಟ್ಟತಾಳ
ಹೇಮಗಿರಿಯಂಥ ಹೇಮ ವಿಮಾನದೊಳು ಹೇಮಪುಟಿವಾಗಿ |
ಹೇಮಮಯದ ಮಕುಟಾ ಹೇಮಕುಂಡಲ ಕರ್ನಾ |
ಹೇಮಹಾರ ಕೊರಳಾ ಹೇಮಕಟಿಸೂತ್ರಾ |
ಹೇಮಾಂಬರ ಚಿತ್ರ ಹೇಮನೂಪುರ ಗೆಜ್ಜೆ |
ಹೇ ಮಹಾಮಹಿಮಾನೆ ಹೇ ಮಲಗಿಪ್ಪನೆ |
ಹೇಮಮುನಿಗೆ ಒಲಿದ ಹೇಮತೀರಥವಾಸ |
ಹೇಮಪುರಿ ನಿಲಯಾ ವಿಜಯವಿಠಲರೇಯಾ |
ಕೋಮಲದಲ್ಲಿ ಪ್ರಿಯಾ ಕೋಮಲಾಂಗನೆ ರಂಗ ೨
ತ್ರಿವಿಡಿತಾಳ
ಕಾಡುವರಿಲ್ಲೆಂದು ಕೈದುಇಳಹಿಕೊಂಡು |
ಮೇದಿನಿಯೊಳಗಿಲ್ಲಿ ಮಲಗಿದ್ದಿಯಾ |
ಕಾದಾಲಾರಿನೆಂದು ಕೈಯಾಸೋತವನೆಂತೊ |
ಪಾದಿಯಲ್ಲಿ ಬಂದು ಮಲಿಗಿದ್ದಿಯಾ |
ಕಾದುವದರಿದಲ್ಲಿ ಇದ್ದ ಸ್ಥಾನದಿಂದ ಕ್ರೋಧರಬಡಿವೆನೆಂದು |
ಮೇದಿನಿ ಪತಿಯಿಂದ ದಾನವಾ ಬೇಡಿದ ಕರದಲಿ |
ಕೈದು ಪಿಡಿಯೆನೆಂದು ಮಲಿಗಿದ್ದಿಯಾ |
ಸಾಧುಗಳಿಗೆ [ಬಾಧೆ] ಬರಲಾಡಗಿ ಬಿಲ್ಲೂ |
ಸೇದಿ ಬಾಣವನೆಸಿದನೆಂದು ಮಲಗಿದ್ದಿಯಾ |
ವೇದಾತೀತನೆ ಕಲಿಗಿತ್ತಭಾಷಿಗೆ ಅವನ |
ಹಾದಿ ಪೋಗೆನು ಎಂದು ಮಲಿಗಿದ್ದಿಯಾ |
ಶ್ರೀದರಮಣ ಶ್ರೀ ವಿಜಯವಿಠಲಾ ಶಾರಂ |
ಗಾ ಧನಸ್ಸು ಪಿಡಿದು ನಗುತಾ ಮಲಿಗಿದ ದೇವಾ ೩
ಅಟ್ಟತಾಳ
ಕುಂಭಿಣಿಯೊಳಗೊಬ್ಬಾ ಕುಂಭಾ ಮುನೇಶ್ವರ |
ನೆಂಬೊ ಮಹಾತುಮಾ ಶಂಭುವಿನೊಲಿಸಾಲು |
ಸಾಂಬಾನು ಬಂದು ನೀಲಾಂಬುದನೆ ದೈವ |
ವೆಂಬೋದೆ ಸರಿ ಎಂದೂ |
ಕುಂಭಾಗೆ ಪೇಳಲಾಗಂಬುಜಾಕ್ಷನ ಚ[ರ] |
ಣಾಂಬುಜವರ್ಚಿಸಿ ಇಂಬಾದನರಿಪಾಣಿ (?)
ಎಂಬೋ ನಾಮದಲ್ಲಿ ಕುಂಭಜನಾ ನಿಜರಂಭೆ ತೀರದಲ್ಲಿ |
ಸಂಭ್ರಮದೀ ಶತಕುಂಭ ರಥಾದೊಳು |
ಗಂಭೀರ ಕರತಲೆಗಿಂಬಾದ ದೈವಾವೆ |
ಕುಂಭಾಗೆ ಒಲಿದು ಗುಂಭಾದಿಂದ ವರವಿತ್ತೆ |
ಜಂಭಾಭೇದಿ ಪಾಲಾ ವಿಜಯವಿಠಲರೇಯಾ |
ಕುಂಭಕೋಣಿ ಪುರವೆಂಬ ನಿವಾಸ ೪
ಆದಿತಾಳ
ಮುನಿ ಭಗವಾನೆಂಬಾತನ ಗುರುವಿನ ಅಸ್ತಿ |
ಯನು ಸುರನದಿಗೆ ಶಿಷ್ಯನ ಸಹಿತಾ ಪೋಗುತಲಿ |
ವಿನಯದಿಂದಲಿ ವಸ್ತಿಯನು ಇಲ್ಲಿ ಮಾಡಲಾ |
ತನ ಶಿಷ್ಯನು ಹಸಿದು ಗಂಟನು ಬಿಚ್ಚಲಾಗಲಾ |
ವನ ಕಣ್ಣಿಗೆ ಕುಸುಮವಾಗೆ |
ಘನನದಿ ಬಳಿಯಲ್ಲಿ ಅನುಮಾನ ತೋರಲಾಗಿ |
ಮುನಿಗೆ ನಿಡಿಯಲಂದಾ ಕ್ಷಣದಲ್ಲಿ ಮರುಳೆ ಬಂದಾ |
ತನು ಪರೀಕ್ಷೆಯ ಮಾಡೆ ಮನಕೆ ಸುಖವಾಗಲು |
ಮುನಿ ಸಕಲಾ ಪುಣ್ಯನಿಧಿಗೆ |
ಮಣಿ ಎಂದದನು ಪೊಗಳಾ |
ಲ[ನಿ]ಮಿಷಾರೊಲಿದು ಮನ |
ದಣಿಯಾ ಕೊಂಡಾಡಿದರು |
ಘನ ಶಾರಂಗಪಾಣಿ ವಿಜಯವಿಠಲರೇಯಾ |
ಫಣಿ ಪರಿಯಂತ ಕುಂಭಕೋಣಪುರದಲ್ಲಿ ಮೆರೆವಾ ೫
ಜತೆ
ಗಂಗಾಜನಕ ಶಾರಂಗ ಸಾಯಕ ಹಸ್ತಾ |ರಂಗ ವಿಜಯವಿಠಲಾ ವಿಕಸಿತಾಂಬುಜ ಚರಣಾ ೬

ಶ್ರೀಕೃಷ್ಣನನ್ನು ಕುರಿತ ಈ ಸುಳಾದಿಯು

೧೩೪
ಧ್ರುವತಾಳ
ಗೊಲ್ಲನಾದಕ್ಕಿದೇ ಗುಣಗಳ ತೋರಿದೆಯೋ
ಸಲ್ಲುವುದು ನಿನ್ನ ಕಪಟತನವೋ
ಬೆಲ್ಲಗಿಂತಧಿಕ ಮಾತುಗಳು ಕಾಣಿಸುತವೆ
ಪಳ್ಳಿಗಾಧಟಿ ಉಳಿಕಾರ ಕರುಣಾಸಿಂಧು
ಎಲ್ಲೆಲೊ ಎಲೋದೇವ ಒಂದಾದರು ಮಾತು
ಸಲ್ಲಿಸಿದ್ದು ಕಾಣೇ ಮನಸಿನಂತೇ
ಮೆಲ್ಲನೆ ಸ್ತುತಿಸಿ ಕೊಡಾಡಿದರೆ ನಿನ್ನ
ದಲ್ಲವೋ ಕೊಡುವ ಕೈ ಕಮಲನಾಭಾ
ಗುಲ್ಲು ಎಬ್ಬಿಸಿ ನಾನಾ ವಿಕಾರತನದಲ್ಲಿ
ನಿಲ್ಲದೆ ನೀನು ಕದ್ದು ಮೆದ್ದದ್ದೆಲ್ಲಾ
ಅಲ್ಲಿ ಅಲ್ಲಿಗೆ ದೂರಿ ರಚ್ಚೆಗಿಕ್ಕಾದಿರೆ
ಸಲ್ಲಾದೆ ಪೋಗುವೆನು ಗತಿ ಮಾರ್ಗಕ್ಕೆ
ಬಲ್ಲವರು ಪೋಗುವೆನು ಗತಿ ಮಾರ್ಗಕ್ಕೆ
ಎಲ್ಲಿ ಪೋಗಲು ಬದುಕಿಲ್ಲವೆಂದು
ಸೊಲ್ಲುಮರಿಯದೆ ಏನೊ ಗತಿಗಾಣದಿರೆ ಭೂಮಿ
ವಲ್ಲಭ ನೀನಲ್ಲೆ ನಿನಗಂಜೆನೋ
ಕಲ್ಲಿನ ಮುಂದೆ ತಂದು ಸುರುವಿದ ಬೋನವ
ಅಲ್ಲಿ ವ್ಯಾಪುತನಾಗಿ ಬಳಿದುಂಡಿಯೇ
ಹೊಲ್ಲೆ ಲೇಸುಗಳಿಲ್ಲ ಹೊರಗೊಳಗುಳ್ಳರೆ
ಎಲ್ಲಿದೆಲ್ಲೆದು ಕಾಣೆ ನಿನ್ನ ಲೀಲೆ
ಕಳ್ಳನಾಗಿ ಪೊಟ್ಟೆ ಪೊರೆದ ವಿಜಯ ವಿಠ್ಠಲ ಭಕ್ತವ
ತ್ಸಲ ನಂಬಿದೆ ಎನಗೇನೋ ೧
ಮಟ್ಟತಾಳ
ಅರಸು ನೀನಾದಡೆ ದೇವಕಿಯಲ್ಲಿ ಅವ
ತರಿಸಿ ಬಂದಾಗಲು ಆವ ರಾಜ್ಯವನಾಳಿ
ಅರಸ ಎನಿಸಿದ್ದು ಒಬ್ಬರ ವಾಕ್ಯದಲಿ
ಸ್ಮರಿಸಿದ್ದು ಕಾಣೆ ಆವಲ್ಲಿ ಚರಿಸಿದರೂ
ತರುಳತನದಲ್ಲಿ ಗೋಮಕ್ಕಳ ಕೂಡಿ
ನೆರೆದಾಡಿ ಲಜ್ಜೆ ಹೊರಿಸಿದರು ನಿನಗೇ
ಅರಿದುಕೋ ಮನದೊಳಗೆ ತರುವಾಯದಲಿ ಗೊ
ಲ್ಲರ ಪಾಲು ಮೊಸರು ಕದ್ದದ್ದಕ್ಕೆ ಸಾವಿರ ಬೈದರು ಕಾಣೊ
ಇರಳು ಹಗಲು ಚಿದಗುವ್ಯಾಪಾರದಲ್ಲಿ
ಸರಿ ಇಲ್ಲವೊ ನಿನಗೆ ಪೇಳಿದರೇನಹುದು
ನರನ ಬಂಡಿಯ ಹೊಡಿದೆ ಭೀಷ್ಮನ ವಂಚಿಸಿದೆ
ಗುರು ಕರ್ನ ಶಲ್ಯ ಮೊದಲಾದವರ
ಮರಣವ ಗೈಸಿದೆ ಮಹಾ ಕಪಟಾಟದಲ್ಲಿ
ದೊರೆತನವುಳ್ಳರೆ ಧರ್ಮರಾಯನಲ್ಲಿ
ಪರಿಚಾರನಾಗಿ ಇದ್ದದ್ದು ಆವ ಬಗೆ
ಶರಣ ನೀನಾಗಿ ಶ್ರೀ ರುಕ್ಮಿಣೀ ಸಹಿತ ಭೂ
ಸುರನ ರಥವನ್ನು ಎಳೆದದ್ದು ಏನಯ್ಯಾ
ಪರಿಪೂರ್ಣ ಮಹಿಮನೆನಿಸಿಕೊಂಡದ್ದೆಲ್ಲ
ಬರಿದೆಯೆಂಬೋದಾಗಿ ತೋರಿದೆ ಎನಗೆ
ತುರುಕರುಗಳ ಕಾಯ್ದ ವಿಜಯ ವಿಠ್ಠಲ ಕೃಷ್ಣ
ಮರಣವ ಮಾಡಿದೆ ಮೊಲೆಗೊಡ ಬಂದವಳ೨
ತ್ರಿವಿಡಿತಾಳ
ಸಾಧು ಎತ್ತಿಗೆ ಎರಡು ಗೋಣಿ ಹೇರುವರೆಂಬೋ
ಗಾದಿಯಾಗಿದೆ ದೇವಾ ಎನ್ನ ಮಾತುರಕೆ
ಕ್ರೋಧದಲ್ಲಿ ಮುಳುಗಿ ಕಡೆಮಾಡೆಂದು ನಿನ್ನ
ಪಾದವ ನೆರೆನಂಬಿ ಇದ್ದವಗೇ
ನೀ ದಯಮಾಡದೆ ಮರಳೆ ಮರಳೆ ವೆಗ್ಗಳ
ಕ್ರೋಧವ ಪೆಚ್ಚಿಕೊಡುವದೇನೋ ಸ್ವಾಮೀ
ಕ್ಯಾದಿಗೆಯಲಿ ಸರ್ವ ಅವಗುಣಂಗಳು
ಇದ್ದರಾದರು ಅದರಲ್ಲಿ ಒಂದುತ್ತಮಾ
ವಾದ ವಾಸನೆಗುಣ ಇರತಕ್ಕದ್ದಾಗಿ ಸ
ರ್ವದಾ ಎಲ್ಲರಿಗೆ ಬೇಕಾದದ್ದಲ್ಲೆ
ಮಾಧವಾ ನಾನೊಬ್ಬ ಬಲುಪಾಪಿಯಾದರು
ಆದಿವಿಡಿದು ದತ್ತ ಸ್ವಾತಂತ್ರದಿ
ಮೇದಿನಿಯೊಳು ಪುಟ್ಟಿ ನಿನ್ನಿಂದ ಭಕುತಿ ಸಂ
ಪಾದಿಸಿಕೊಂಡು ಸ್ತುತಿಸುತಿಪ್ಪೆನೋ
ಆದದ್ದೆಲ್ಲಾಗಲಿ ಭಕುತಿವುಳ್ಳಾದರೆ ಅಪ
ರಾಧಗಳ ನೋಡದಲೇ ಕಾಯಬೇಕೊ
ಪ್ರಧಾನ ಭಕುತಿಯಿಲ್ಲದಲೇ ಮತ್ತೊಂದು ಬೇಕಾ
ದದ್ದು ಏನಯ್ಯಾ ಪರಿಪೂರ್ಣನೆ
ಸಾಧಾರಣದವನೆಂದು ಕೊಡಲಿ ವೇದಸ್ರ‍ಮತಿಗಳಲ್ಲಿ
ಸಾರುತಿವೆ ಬೀದಿ ಬೀದಿಯೊಳು ಗೋಪಳ್ಳಿಯೊಳು ನಿನ್ನ
ಯಾದವ ಕುಲಕೆ ಕೀರ್ತಿಯನು ತಂದೆ
ಸಾಧುಜನ ಪ್ರಿಯ ವಿಜಯ ವಿಠ್ಠಲ ಕೃಷ್ಣ೩
ಮಟ್ಟತಾಳ
ನೀನು ಮಾಡುವುದೇನೋ ನಾನು ನೋತದಲ್ಲದೆ
ಅನಂತ ದಿವಸಕ್ಕೆ ಮಾಣಿಸಲಾಪೆಯೋ
ಯೋನಿಗಳಲ್ಲಿ ಮಂದಾನು ಜನಿಸುವ
ಹೀನಯವನು ನೀನು ಕಾಣದೇ ಇರಲಾಪ್ಯ
ನಿನಗಂಜುವುದೇನೊ ಸಂಕಲ್ಪಕ್ಕೆ
ಕಾಣಿಯ ಏನಿತ್ತು ಕಡಿಮೆ ಎನಿಸಲಾಪ್ಯಾ
ಏನಿದ್ದ ಪರಿಮಿತ ತಾನೆ ಕ್ಲಪ್ತಿಯದೆ
ಹೇನಾಥ ನೀನೆಂದು ನಾನು ಕರೆವುದೇನೊ
ಹಾನಿವೃದ್ಧಿ ನಿನ್ನಧೀನವಾಗಿದೆ ಸತ್ಯ
ಮಾನವನೀಪರಿಯನು ಮಾಡುವರೆ
ನೀನರಸಾದಡೆ ಕಾಣಾ ಒಪ್ಪದು ಬಂಟ
ರನಾ ಸಾಕುವ ಭಾರ ಏನಾದರೇನಹುದು
ಶ್ರೀನಿಧಿ ಕೃಷ್ಣಾ ವಿಜಯ ವಿಠ್ಠಲ ಮೂರ್ತಿ
ನೀನಾಡಿದ ಕಡೆಯಿಂದ ಏನಾಡಿದರೇನು೪
ಆದಿತಾಳ
ರವಿಗೆ ಅಂಗಯ್ಯ ಒಡ್ಡಿ ಅವನಿಯೆಲ್ಲ ಕವಳ
ಕವಿವುದೇನೊ ಮೂರು ಭುವನೇಶ ಭೂತಿವಂತ
ಎವೆ ಇಡೊ ಸ್ವಾತಂತ್ರದವನು ನಾನಲ್ಲವೋ
ಅವಗುಣನೆನೆಸಿ ಕೋಪವನು ನಾನಲ್ಲವೋ
ಸವಿಗಾರ ವೊಂದರೆದಿವಸವಾದರು ಲೇಶ ಭವಲೇಪವಾದರೆ
ಭವಣೆ ತಿಳಿಯಬಪ್ಪುದು ನವನವ ಬಗೆ ಮಹಿಮೆ
ಅವನಾಗಿ ಎಲ್ಲರಿಗೆ ಪವಿತುರನಾಗಿ ಅಂದವಮಾಡಿಕೊಳುತಲಿ
ಯುವತಿ ಸಮೇತದಲ್ಲಿದ್ದು ಅವರವರ ಕರ್ಮ ನಿಮಿ
ತ್ಯವ ಮಾಡಿ ನೀನು ಚಕ್ಕಂದವನಾಡಿ ನಗುವ ಕೇ
ಶವ ಮಾಯಾ ಮೊದಲೇ
ಸವೆಯದಗತಿ ದಾತಾ ವಿಜಯ ವಿಠ್ಠಲ ನಮ್ಮ
ಭವವಿಮೋಚನ ಭೇದವ ನುಡಿಸುವ ದೇವಾ೫
ಜತೆ
ನಾಡದೈವದ ಗಂಡ ವಿಜಯ ವಿಠ್ಠಲ ನಿನ
ಗಾಡದವರೇ ಇಲ್ಲಾ ಎನ್ನ ಮನ್ನಿಸಿ ಕಾಯೋ೬

ತಿರುಪತಿಯ ಶ್ರೀನಿವಾಸನ ನೇತ್ರದರ್ಶನಕ್ಕೆ

೪೬. ತಿರುಪತಿ
ರಾಗ:ಭೈರವಿ
ಧ್ರುವತಾಳ
ಚಂದ್ರಮಂಡಲ ಪೋಲುವ ಇಂದಿರಾಮೊಗವನು |
ಚಂದದಿಂದಲಿ ಬಿಡದೆ [ಈ]ಕ್ಷಿಸುವ ಲೋಚನ |
ಮಂದಹಾಸ ಶೀತಳವಾಗಿ ಪಾದವನು |
ಪೊಂದಿದ ಭಕ್ತರನ ನೋಡುವ ಲೋಚನ |
ವಂದಿಸಿ ಕೊಂಡಾಡಿ ಒಂದೇ ಭಕುತಿಯಲ್ಲಿ ದೇವನ ನಂಬಲು |
ನಂದದಿಂದಲಿ ಸುಧಾ ಬಿಂದುಗರೆವ ಲೋಚನ |
ಅಂದು ಪ್ರಲ್ಹಾದಗೆ ಕಂಭದಿಂದಲಿ ಒಲಿದು |
ಬಂದು ಹೇರಳವಾಗಿ ಕಿಡಿತೋರಿದ ಲೋಚನ |
ವೃಂದಾದೊಳಗೆ ಸಕಲ ವೃಕ್ಷಜಾತಿಗೆ ಮಿಗಲು |
ಎಂದೆನಿಸುವ ತುಲಸಿಪೆತ್ತ ಲೋಚನ |
ಕಂದರ್ಪಪಿತ ನಮ್ಮ ವಿಜಯವಿಠಲ ನಿನ್ನ |
ದ್ವಂದ್ವಾನಂತ ಪೊಳೆವ ಸುಲೋಚನ ೧
ಮಟ್ಟತಾಳ
ಸರಸಿರುವ ದಳ ಮರೆಸಿದ ಲೋಚನ |
ಕರಿಯ ಮೇಲೆ ದಯಾಹರಿಸಿದ ಲೋಚನ |
ಕುರುಬಲದಾಯುಷ್ಯ ಹರಿಸಿದ ಲೋಚನ |
ಅರುಣ ವರುಣದ ರೇಖೆಸ್ಪುರಿತದ ಲೋಚನ |
ಕರುಣಿ ಜಿತಾಮನ್ಯು ವಿಜಯವಿಠಲ ಸರ್ವ |
ವರಣಾಶ್ರಮದಲ್ಲಿ ಭರಿತ ಲೋಚನ ೨
ತ್ರಿವಿಡಿತಾಳ
ಜಲನಿಧಿಯ ಮೇಲೆ ತಿರಹಿದ ಲೋಚನ |
ಸುಲಲಿತವಾಗಿದ್ದ ಸುಂದರ ಲೋಚನ |
ಜಲಜಾಪ್ತಶಶಿಯಂತೆ ಒಪ್ಪುವ ಲೋಚನ |
ಕಳಂಕವಿಲ್ಲದ ನಿರ್ದೋಷ ಲೋಚನ |
ಒಳಗೆ ಹೊರಗೆ ನೋಟ ತುಂಬಿದ ಲೋಚನ |
ಸಲೆ ವಿಶಾಲವಾಗಿ ಮಿರುಗುವ ಲೋಚನ |
ಬಲು ದೈವಾ ಸುಕೃತ ವಿಜಯವಿಠಲ ತಿಮ್ಮ |
ಕೆಲಕಾಲ ಜಾಗರವಾಗಿದ್ದ ಲೋಚನ ೩
ಅಟ್ಟತಾಳ
ದಟ್ಟದಾರಿದ್ರನ್ನ ದೃಷ್ಟಿಯಿಂದಲಿ ನೋಡೆ |
ಅಷ್ಟ ಭಾಗ್ಯವ ನೀವಾಭೀಷ್ಟದ ಲೋಚನ |
ಕಷ್ಟವಾದರು ಮನ್ನಿಸಿದರು ನಿಮಿಷಕ್ಕೆ |
ಶ್ರೇಷ್ಠನ್ನ ಮಾಡುವ ಸ್ವತಂತ್ರ ಲೋಚನ |
ಸೃಷ್ಟಿಯೊಳಗೆ ಸಗರಕುಲ ಹೆಣಗಲು |
ಸುಟ್ಟು ಕಳೆದ ಪರಾಕ್ರಮ ಲೋಚನ |
ಶ್ರೇಷ್ಠನಾಮಾ ಸಿರಿ ವಿಜಯವಿಠಲರೇಯಾ |
ಇಷ್ಟಾರ್ಥಪಾಲಿಪ ಶುಭಕರ ಲೋಚನ ೪
ಆದಿತಾಳ
ಸರ್ವ ಬೊಮ್ಮಾಂಡಗಳನ್ನು ಒಳಗಿಟ್ಟ ಲೋಚನ |
ಗೀರ್ವಾಣ ಮುನಿಜನಕೆ ಮಹಿಮೆ ತೋರಿದ ಲೋಚನ |
ಊರ್ವಿಯಾ ಪತಿಗಳನು ಪುಟ್ಟಿಸಿದ ಲೋಚನ |
ಸರ್ವಪ್ರಾಣಿಗಳಿಗೆ ಸಾಕಲ್ಯವಾದ ಲೋಚನ |
ಚಾರ್ವಾಕ ಖಳರನ್ನ ಜರೆವಂತ ಲೋಚನ |
ಸರ್ವಕಾಲದಲ್ಲಿ ಎವೆ ಹಾಕದಿದ್ದ ಲೋಚನ |
ಸರ್ವಶಾಸ್ತ್ರಾಭೃತ ವಿಜಯವಿಠಲರೇಯ |
ಗೀರ್ವಾಣ ಭಜನೆಯರಿತು ಭಕ್ತರಿಗೀವ ಲೋಚನ ೫
ಜತೆ
ಗುರುತನುಜನಾ ನಡುಗಿಸಿ ಕೊಂದ ಲೋಚನ |
ಸಿರಿರಂಗ ಪ್ರಭರಂಗ ವಿಜಯವಿಠಲ ಲೋಚನ ೬

ಈ ರಚನೆಯನ್ನು ಚರಣ ಸುಳಾದಿ

೩೬
ಧ್ರುವ ತಾಳ
ಚರಣವ ನಂಬಿದೆನೊ ನಂಬಿದವರ ಪ್ರಾಣ
ಕರುಣವ ಮಾಡಯ್ಯ ಕಲ್ಮಷ ಬಿಡಿಸಯ್ಯ
ಹರಣ ನಿನ್ನದು ಸ್ವಾಮಿ ಹಗಲಿರುಳು ಎನ್ನ
ಕರಣಶುದ್ಧನ ಮಾಡು ಕಮಲನಾಭಾ
ಮರಣಕಾಲಕೆ ಈ ಜಿಹ್ವಾಗ್ರದಲಿ ನಿನ್ನ
ಸ್ಮರಣೆಯೊಂದೊದಗಲಿ ಈ ಭಾಗ್ಯವೆ ಸಾಕು
ಚರಣವ ನಂಬಿದೆನೊ ತರಣಿಯುದ್ಭವಿಸಲು ತಿ
ಮಿರ ನಿಲ್ಲುವದೇನೊ? ಹರಿಣಾಂಕನುದಿನ ತಾಪವಿರಬಲ್ಲುದೆ?
ಗರುಣಾವಸ್ಥನಾರಿ ಪತಿಯ ಬಯಸುವುದು
ಧರಣಿಯೊಳಗೆ ಅಪಹಾಸವಹುದೇ?
ಕರುಣಾಕರ ಸರ್ವಾಭರಣ ಭೂಷಿತ ಭವ-
ತರಣ ತ್ರಾಹಿ ತ್ರಾಹಿ ತೇಜೋ ಮಯನೆ
ವರುಣನಾಮಕ ನಮ್ಮ ವಿಜಯ ವಿಠ್ಠಲ ನಿನ್ನಾ
ಚರಣೆ ಮಾಡುವ ಚಿತ್ತ ನಿರ್ಮಲಿನ ಮಾಡು ೧
ಮಟ್ಟತಾಳ
ಈ ಚರಣವ ಭಜಿಸಿ ಚತುರ ಮುಖಾದಿಗಳು
ಪ್ರಾಚೀನ ಕರ್ಮಕಳಕೊಂಡು ಭವದಾ
ಲೋಚನೆಯನು ಗೆದ್ದು ಸುಖಿಸುವರು ನೋಡು
ವಾಚ ಮಾತುರವಲ್ಲ ವೇದ ವೇದಾಂತದಲಿ
ಸೂಚನೆಯನು ಕೇಳಿ ಮೊರೆಹೊಕ್ಕೆನಯ್ಯ
ಕೀಚಕಾರಿ ಪ್ರೀಯ ವಿಜಯ ವಿಠ್ಠಲ ನಿನ್ನ
ಶ್ರೀ ಚರಣವ ತೋರಿಸಿ ಪ್ರಕೃತಿಯ ಬಿಡಿಸುವುದು ೨
ತ್ರಿವಿಡಿ ತಾಳ
ಅಪ್ರಾಕ್ಕತ ಚರಣ ಆತ್ಮ ಕಾಮಚರಣ
ಸ್ವಪ್ರಕಾಶ ಚರಣ ಸ್ವರತ ಚರಣ
ಸುಪ್ರಸನ್ನ ಚರಣ ಸದ್ಗುಣ ಗಣ ಚರಣ
ಕ್ಷಿಪ್ರವರದ ಚರಣ ಕ್ಷೇಮ ಚರಣ
ಸುಪ್ರಸಿದ್ಧ ಚರಣ ಸುಜನವಂದಿತ ಚರಣ
ಅಪ್ರಬುದ್ಧರ ಉದ್ಧರಿಸುವ ಚರಣ
ಸುಪ್ರಸಾದ ಚರಣ ಸುಮನೋಹರ ಚರಣ
ಅಪ್ರತೀಕಾಚರಣ ಅವತೀರ್ಣ ಚರಣ
ಅಪ್ರತಿಹತ ಚರಣ ಅಮಲ ಕೋಮಲ ಚರಣ
ಸುಪ್ರೀತ ಚರಣ ಸ್ವಾತಂತ್ರ ಚರಣ
ವಿಪ್ರಕುಲಾಗ್ರಣಿ ವಿಜಯ ವಿಠ್ಠಲ ನಾ
ನಾ ಪ್ರಕಾರದಲಿ ಎನ್ನ ಕಾವ ಚರಣ ೩
ಅಟ್ಟತಾಳ
ಆ ಹನುಮನ ನೋಡು ಅಂಬರೀಷನ ನೋಡು
ಪ್ರಾಹಲ್ಲಾದನ ನೋಡು ಪುಂಡರೀಕನ ನೋಡು
ಅಹಲ್ಯಾದೇವಿಯ ನೋಡು ಶುಕನ ನೋಡು ಶ್ವೇತ
ವಾಹನವ ನೋಡು ಧ್ರುವರಾಯನ ನೋಡು
ಮಹಿಪತಿ ಬಲಿ ನೋಡು ಗಂಗಾಸುತನ ನೋಡು
ಶ್ರೀಹರಿ ನಿನ್ನಯ ಶ್ರೀ ಚರಣ ವಾರಿ
ರೂಹ ನೆರೆನಂಬಿ ಭವ ಹಾರಿದರಯ್ಯ
ಅಹೋರಾತ್ರಿ ಎನಗಿದೆ ಗತಿಯೆಂದು ನಂಬಿದೆ
ಸ್ನೇಹ ಭಾವವಿತ್ತು ಭಕ್ತರೊಳಿಡು ನಿತ್ಯ
ಬಹುಲೀಲ ವಿಜಯ ವಿಠ್ಠಲರೇಯ ಇಂದು ಸ
ನ್ನಿಹಿತನಾಗಿ ನಿನ್ನ ಚರಣವ ತೋರಿಸು ೪
ಆದಿತಾಳ
ವ್ಯಾಪ್ತ ಚರಣ ದೀಪ್ತ ಚರಣ
ಆಪ್ತ ಚರಣ ಗುಪ್ತ ಚರಣ
ಪ್ರಾಪ್ತ ಚರಣ ನಿರ್ಲಿಪ್ತ ಚರಣ
ತೃಪ್ತ ಚರಣ ಕ್ಲುಪ್ತ ಚರಣ
ಶಪ್ತ ಚರಣ ಗೋಪ್ತ ಚರಣ
ಸುಪ್ತರಹಿತ ಚರಣ ಚರಣ ಈ ಚರಣ
ಜಪ್ತರ ಮನದಲ್ಲಿಪ್ಪ ಚರಣ
ಸಪ್ತ ಸಪ್ತ ಲೋಕೇಶ ವಿಜಯ ವಿಠ್ಠಲರೇಯ ಸಂ
ತಪ್ತ ಕಾಂಚನ ವರ್ಣ ಚರಣ೫
ಜತೆ
ಅನಿಮಿತ್ತ ಬಂಧು ನಿನ್ನ ಚರಣವೆ ಗತಿ ಎನಗೆ
ಕೊನಿಗೆ ಧ್ಯಾನವ ಕೊಡೊ ವಿಜಯವಿಠ್ಠಲ ಮೂರ್ತಿ ೬

ಹರಿಭಕ್ತನಾಗಿ ಬೆಳೆಯುವ ಅವಕಾಶ

೩೭
ಧ್ರುವತಾಳ
ಚರಣವ ಬಿಡೆನೊ ಹರಿ ಚತುರ ಮೊಗದ ಧೊರಿ
ಪೊರಿಯೊ ಪರಿಪೂರ್ಣ ಭಕುತಿ ಕರುಣಿಸು ಶುಭಮತಿ
ಮರೆಯಾ ಬಿದ್ದವಗೆ ಶುದ್ಧ ಮರಿಯಾದೆ ಬಂದು ಕಾಣಿಸೊ
ಮರೆಯದೇ ನೀನಿರು ಸರಸಿಜ ಹೃದಯದಲ್ಲಿ
ಮರಿಗಳ ಮರೆಯೆ ನಾನು ಅರಿಯೇನೊ ಮತ್ತಾರನ್ನ
ಕರುಳ ಸಮ್ಮಂಧಿಗನಯ್ಯ ವರನರ ಕೇಸರಿಕಾಯ
ತರಳನ ರಕ್ಷಿಸಿದ ಪರಿ ಭರದಲ್ಲಿ ಕಾಯೊ ಮುರಾರಿ
ಪರೇಶ ಯಜ್ಞಾಂಗ ನಾಮ ವಿಜಯ ವಿಠ್ಠಲ ಸೋಮ ೧
ಮಟ್ಟತಾಳ
ಭೂಸುರ ಜನುಮ ಪಾಲಿಸಿದೆ ಎನ್ನೊಡೆಯಾ
ಈ ಶರೀರ ನಿನ್ನ ದಾಸರ ಪದಕೆ ಪಾಯಿ
ಪೋಸು ಮಾಡಿದರೂ ಋಣಾ ಸಲ್ಲಿಸುವೆನೆ?
ಕೇಶವ ನೀನುದ್ಧರಿಸುವ ಸೊಬಗು ವಾ
ಣೀಶಾದ್ಯರು ಎಣಿಸ ಬಲ್ಲರೇನು
ವಾಸುಕಿಶಯನ ಪ್ರಕಾಶ ವಿಜಯವಿಠ್ಠಲ
ನೀ ಸರುವೋತ್ತಮನು, ನಿ ಸರುವೋತ್ತಮನು ೨
ತ್ರಿವಿಡಿ ತಾಳ
ಒಂದೆ ಗುಣವೆ ನಿನ್ನದಾನಂತ ವಾಗಿವೆ
ಒಂದೊಂದರೊಳು ನೋಡಲಾನಂತವಾಗಿವೆ
ಎಂದಿಗೆಂದಿಗೆ ಅಂದುಳ್ಳ ಗುಣಗಳು
ಬಂದಾರಭ್ಯವಾನಂತರ ಪರಿಗಣಿಸಲು
ಹಿಂದೆ ಇಂದು ಮುಂದೆ ಪುಟ್ಟುವ ಜೀವನ
ಸಂದೋಹವೆಣಿಸಿ ಇಷ್ಟೆಂದು ಪೇಳಲಾರಾರೊ
ಅಂದವಗೊಲಿವ ಪ್ರಭುವೆ ವಿಜಯವಿಠ್ಠಲ
ತಂದೆಯಾಗಿ ಸಕಲಂದಾವನೀವೆ ೩
ಅಟ್ಟ ತಾಳ
ಎಂಥ ದಯವಂತ, ಎಂಥ ಬಲವಂತ
ಎಂಥ ಗುಣವಂತ ಎಂಥ ಕೀರ್ತಿವಂತ
ಎಂಥ ನಿಜವಂತ ಎಂಥಾ ಸ್ವಾತಂತ್ರ
ಎಂಥ ಸ್ವರೂಪವು ಎಂಥ ಮೋಹನವು
ಎಂಥವರೊಳಗಿದ್ದ ಎಂಥ ಪುರುಷನು
ಪಂಥಗಾರ ನಿನ್ನ ಪಂಥ ಬಲ್ಲವರಾರು ಆ-
ನಂತರೂಪ ಸಿರಿ ವಿಜಯ ವಿಠ್ಠಲ ಶೌರಿ೪
ಆದಿತಾಳ
ನೀನು ಕೊಟ್ಟ ಪದವಿ ಕೃ
ಶಾನುನೇತ್ರ ತೆಗೆಯಬಲ್ಲನೆ
ಏನೆಂಬೆ ನಿನ್ನ ದೈವತನಾವನು
ನಾನವಲ್ಲಿ ಕಾಣೆ ಕಾಣೆ ದಶಾ
ಕೋಣೆ ವಿಕೋಣಿಯಲ್ಲಿ ಬಾಣ
ಚಾನವನ ಹರಣವನು ಹಾನಿ ಮಾಡಿದ ದಾನವಾರಿ
ದೀನಪಾಲ ವಿಜಯವಿಠ್ಠಲ ವೃಕ್ಷ
ಸ್ಥಾನವಾಗಿ ನೀನಿರಲು ನಾನು ನಿತ್ರಾಣನಾಗಲ್ಯಾಕೆ ೫
ಜತೆ
ಪಿಡಿದೆ ನಿನ್ನ ಚರಣಾ ಪೀಡಿಸುವ ಕರ್ಮಾ
ಕಡಿದು ಪಾಲಿಸುವುದು ನಿಧಿ ವಿಜಯ ವಿಠ್ಠಲ ಕರ್ತ ೬

ಭಗಂವಂತನನ್ನು ಸರ್ವ ಶಬ್ದ ವಾಚ್ಯ ಎನ್ನುತ್ತಾರೆ.

೩೪
ಧ್ರುವತಾಳ
ಚಿಂತನೆ ಮಾಡು ಮನವೆ ಚಿನ್ಮಯ ದೇವನ್ನ ಏ |
ಕಾಂತದಲಿಯಿದ್ದು ಎಲ್ಲಕಾಲ |
ಸಂತರ ಒಡಗೂಡಿ ಸಾರಿಸಾರಿಗೆ ನಿನ್ನ |
ಅಂತರಂಗದಲ್ಲಿ ಆಲೋಚಿಸಿ |
ನಿಂತಲ್ಲಿ ಕುಳಿತಲ್ಲಿ ನಾನಾ ವ್ಯಾಪಾರದಲ್ಲಿ |
ಚಿಂತಿಸು ಶ್ರೀಹರಿಯಾನಂತ ರೂಪ |
ಇಂತೆಂತು ನೋಡಿದರಂತೆ ತೊರುತಲಿಪ್ಪ |
ಮಂತ್ರ ತಂತ್ರಕ್ಕೆ ಶಿಲುಕನು ಭಕ್ತಿಗೊಶನೊ |
ಸಂತತ ನಿರ್ದೋಷ ಭಕ್ತವತ್ಸಲ ಕರುಣಿ |
ಅಂತಕನಂತಕವು ಉಭಯ ಜೀವಿಗಳಿಗೆ |
ಸಂತೋಷದಲಿಚರಿಯಾ ಮಾತ್ರಾ ಲೀಲಾ |
ಕಂತು ಕೋಟಿ ಲಾವಣ್ಯಮಿಗೆ ಶೋಭಿಸುವ ಆ |
ದ್ಯಂತ ಕಾಲರಹಿತ ತ್ರಿಗುಣಾತೀತ |
ಸಂತಾಪನಾಶ ಒಂದಾರಂಭಿಸಿಕೊಂಡ |
ನಂತ ಸೂರ್ಯ ಪ್ರಕಾಶ ತರತಮ್ಯದಿ |
ತಂತುನಾಳದಲಿಂದ ದಿಗ್ದಂತಿ ಬಿಡಿಸಿಕೊಂಡು |
ನಿಂತಂತೆ ನಿಂತುಕೊಂಡಿಪ್ಪ ಮಹಿಮ |
ಎಂತು ಭಾವಿಸಲು ಉಪಾಸ್ತಿಯ ಕೊಡುವ ಶ್ರೀ |
ಕಾಂತನು ಪ್ರಸಿದ್ಧದಿಂದ ತಾನೆ |
ಚಿಂತಾಯಕ ನಮ್ಮ ವಿಜಯವಿಠ್ಠಲರೇಯ |
ಮುಂತಿ (ತೆ) ನಲಿದಾಡುವ ಭಾಗ್ಯವ ಬೇಡು ನೋಡು ೧
ಮಟ್ಟತಾಳ
ಕ ಮೊದಲು ಕ್ಷಾ ಕಡೆ ಮೂವತ್ತೈದು |
ಈ ಮಹವರ್ಣಗಳು ಇದರವಿವರ ತಿಳಿವದು |
ಅ ಮರಿಯಾದಿಗಳು ಪದಿನಾರು ಉಂಟು |
ವ್ಯೋಮ ವ್ಯಾಪಿಸಿದಂತೆ ಸರ್ವದ ವರ್ಣಗಳು |
ಸಮಸ್ತ ಬಗೆಯಿಂದ ವ್ಯಾಪ್ತವಾಗಿವೆ ನೋಡಿ |
ಸಾಮ ಮಿಗಿಲಾದ ಶಾಸ್ತ್ರ ವೈದಿಕ ಶಬ್ದ |
ಭೂಮಿಯೊಳಗಾಡುವ ಲೌಕಿಕ ಶಬ್ದಗಳು |
ಈ ಮಹವರ್ಣದಲಿ ಪ್ರವರ್ತಕವಲ್ಲದಲೆ |
ಕಾಮಿಸಿದರೆ ಒಂದು ಪ್ರಯೋಗ (ಜನ) ವಿನ್ನಿಲ್ಲ |
ಭೂಮ ಭೂತೇಶ್ವರ ವಿಜಯವಿಠಲರೇಯನ
ನಾಮ ಮೂರ್ತಿಗಳೆಂದು ಚಿಂತಿಸು ಪ್ರಣವದಲಿ ೨
ತ್ರಿವಿಡಿತಾಳ
ಕಾವೊಂದು ಗುಣಿಸಿದರೆ ಹದಿನಾರು ಬಗೆವುಂಟು |
ಆವಾವ ಕಾಲಕ್ಕೆ ನೋಡಿದರು |
ಭಾವಿಸು ಕ ಕಿ ಕು ಕೆ ಕೈ ಕೊ ಕೌ ಕಂ |
ಈ ವಿಧ ಹ್ರಸ್ವಯಿದರಂತೆ ನಿಜವೆಂದು |
ಕೋವಿದನಾಗಿ ನೀ ತಿಳಿಯಬೇಕು |
ಕಾ ವರಣವರೂಪದಿ ಕಪಿಲಾದಿ ಹದಿನಾರು |
ಈ ಒಳಗಿನ ಹದಿನಾರುರೂಪ |
ದೇವನ್ನ ನಾಮಗಳು ಅಜಾದಿಗಳ ಸಂಖ್ಯ |
ಮೂವತ್ತೆರೆಡು ಭಗವದ್ರೂಪಗಳು |
ಪಾವನ ಮೂರುತಿ ವಿಜಯ ವಿಠ್ಠಲರೇಯ |
ಆವಾಗ ವರ್ಣಾಧಿಷ್ಟಾನದಲ್ಲಿಯಿಪ್ಪ ೩
ಅಟ್ಟತಾಳ
ಇದರ ವಿಹಿತವೊಂದುಂಟು ವರಣಕ್ಕೆ |
ಅದರಂತೆ ಕ ಚ ಟ ತ ಪ ಯ ಶ ವ |
ರ್ಗದಲಿ ಇಣಿಸಿ ಕ ಷ ಮಿಳಿತವಾದ |
ಇದನ್ನೆಲ್ಲ ಕೂಡಿಸಿ ಪಂಚತ್ರಿಂಶತಿ ಯಾ \
ದದು ಕಾಣೊ ಇದರೊಳು ಅ ಆ (ಇ) ವುಂ ಎಂಬ |
ಹದಿನಾರು ಇಡಲಾಗಿ ಕ ಅಃ ವಾಹೆದು |
ಇದನ್ನೆಲ್ಲ ವೊಂದೊಂದು ಏಕಾಕ್ಷರದಿಂದ |
ಪದುಮ ನಾಭನು ಕರೆಸಿಕೊಂಬನು ಕೇಳಿ |
ಆದೆ ಆದೆ ನಾಮ ಮತ್ತದೆ ಅದೆ ರೂಪದಿ |
ಒದಗಿ ಎಣಿಸಲಾಗಿ ಮೂವತ್ತೆರೆಡು ನಾಮ |
ಸದಮಲವಾಗಿವೆ ಅರವತ್ತು ನಾಲಕು |
ಮೊದಲಾರಂಭಿಸಿ ಮೂವತ್ತೈದಕ್ಕೆ ನೋಡು |
ಮುದದಿಂದ ಗುಣಿಸಲು ವೊಂದೊಂದು ವರ್ಣಕ್ಕೆ \
ಅದೆ ಪ್ರಕಾರದಲಿ ಅರವತ್ತು ನಾಲ್ಕುವುಂಟು |
ಅಧಿಕಾರತನ ಭೇದ ಧ್ಯಾನ ಮಾಡುವುದಕ್ಕೆ |
ಪದುಮಗರ್ಭನೈಯ್ಯ ವಿಜಯ ವಿಠ್ಠಲರೇಯ |
ಪದವಿಯ ಕೊಡುವನು ಈ ಪರಿ ಕೊಂಡಾಡೆ ೪
ಆದಿತಾಳ
ಆವನಾದರು ಹಳಿಯಲಿ ಉಗುಳಲಿ |
ಆವನಾದರು ಬೈಯ್ಯಲಿ ಕಾಯಲಿ |
ಆವನಾದರು ಹೊಡೆಯಲಿ ತಡೆಯಲಿ |
ಆವನಾದರು ಪೊಗಳಲಿ ಅಟ್ಟಲಿ |
ಆವನಾದರು ಉಣಿಸಲಿ ಉಡಿಸಲಿ |
ಆವನಾದರು ಛೀ ಛೀ ಎನಲಿ |
ಆವನಾದರು ಥೂ ಥೂ ಅನಲಿ ಆವನಾದರು ಭಂಗಿಸಲಿ ಮ |
ತ್ತಾವನಾದರು ಹಿಂಗಿಸಲಿ |
ಆವನಾದರು ಯೇನನಲಿ |
ಆವನಾದರೋ ಈ ವರ್ಣಗಳು ಭಗವನ್ನಾಮಗಳೊ |
ಜೀವನ ಮುಕ್ತನು ಈ ವಿಧದಿ ತಿಳಿದವನು |
ನೋವು ನೋವುಗಳಲ್ಲಿ ಪಾವನವಾದ ಭಕುತಿಯಲಿ ಸ್ವ |
ಭಾವಿತ ನೀನಾಗೊ ಜ್ಞಾನಿ ನೀನಾಗೊ |
ಯಾವತ್ತು ಇಂದ್ರಿಯಗಳ ವ್ಯಾಪಾರಸೇವೆ ಶ್ರೀಹರಿಗೆನ್ನು |
ತ್ಯಿವಿಧ ಜೀವರು ಇದನೆ ತೊರೆದು ಮ |
ತ್ತಾವದು ಆಡುವರೊ ವರ್ಣಗಳಿಲ್ಲದಲೆ |
ದೆೀವದೇವೇಶನ್ನ ಒಲಿಸಬೇಕಾದರೆ |
ಈ ಉಪಾಯವೆ ಬೇಕು ಎಲ್ಲಿದ್ದರು ಕೇಳು |
ಕಾವ ಜನಕ ನಮ್ಮ ವಿಜಯ ವಿಠ್ಠಲರೇಯ |
ಆವಾವ ವರ್ಣಿಗಳಂತೆ ಒಳಗಿದ್ದು |
ಕಾವನು ಶರಣರನು ಒಡನೊಡನೆ ಬರುವ ೫
ಜತೆ
ಅಕ್ಷರಾಕ್ಷರದಿಂದ ಭಗದನ್ನಾಮವೆ ಚಿಂತಿಸು |
ಅಕ್ಷರ ಕ್ಷರ ಪುರುಷ ವಿಜಯವಿಠ್ಠಲ ಸುಳಿವ ೬

ಲೌಕಿಕ, ಆಧ್ಯಾತ್ಮಿಕ ವಿಚಾರಗಳಲ್ಲಿ ಯಾವ ಬಗೆಯ

೪೨
ಧ್ರುವತಾಳ
ಚಿಂತಿಪುದೇನು ಮನವೆ ಸಂತತದಲ್ಲಿ ನೀನು
ಅಂತರಂಗದಲ್ಲಿ ಸಂತಾಪದ ಕಿಚ್ಚು ಹಚ್ಚಿಕೊಂಡು
ಮಂತ್ರಗಳಿಲ್ಲ ಎನಗೆಂತು ಸಾಧನವೆಂದು ಚಿಂತಿಸದಿರು
ಮಂತ್ರ ತಂತ್ರಾದಿಯ ಗ್ರಂಥಗಳಿಗೆ ಲಕುಮಿ
ಕಾಂತನ ನಾಮವೆ ಸಂತತದಲ್ಲಿ ಅಂತರಂಗದಲ್ಲಿ
ಚಿಂತೆ ಮಾಡಲು ಅಂತಕಾಲಕ್ಕೆ ಬಂದು
ಸಂತಾಪವಿಟ್ಟ ಅಂತಿಜಗಾದರೂ ಅಂತಕನ ಉಪದ್ರ
ಶಾಂತಿಯ ಮಾಡುವ ಕಂತು ಜನಕ
ಮಂತ್ರ ತಂತ್ರಾದಿಯ ಅಂತರಾತ್ಮಕ ಬಲು
ಶಾಂತ ವಿಜಯ ವಿಠ್ಠಲಂತರ ಗೊಳಿಸ ೧
ಅಟ್ಟತಾಳ
ಜನನಿಯ ಗರ್ಭದಲ್ಲಿ ತಂದಿಟ್ಟವನಾರು
ಜನನವಾಗುವಾಗ ಧರೆಗಿಳುಹಿದನಾರು
ಜನಿಸಿದ ತರುವಾಯ ಸಾಕುವ ಪಿತನಾರು
ಜನರೊಳಗೆ ನಡೆಸಿ ನುಡಿಸುವ ಪ್ರಿಂಇಇನಾರು
ಜನಕಸುತೆ ಪ್ರೀಯ ವಿಜಯ ವಿಠ್ಠಲರೇಯ
ಕನಸಿನೊಳಾದರು ಪೊರೆವನು ಸ್ತುತಿಸಲು ೨
ತ್ರಿವಿಡಿ ತಾಳ
ಕಾಮಕ್ರೋಧವ ಬಿಡಿಸಿ ಕಪಟಬುದ್ದಿಯ ಕಳೆದು
ತಾಮಸಗುಣವೆಲ್ಲ ಕಡಿಗೆ ನೂಕಿ
ವ್ಯಾಮೋಹ ಲೋಭವ ದೂರದಲ್ಲಿ ನಿಲ್ಲಿಸಿ
ಹೇಮಾದಿಗಳ ಕಾಂಕ್ಷಾ ಪೋಗಾಡಿಸೀ
ನೇಮನಿತ್ಯವವು ಸರ್ವ ನಿನ್ನ ಯೋಗ್ಯತೆವರಿತು
ರೋಮ ಡೊಂಕಗೊಡದೆ ನಡೆಸುತಿ
ಈ ಮರಿಯಾದಿಗಳೆಲ್ಲ ಆವ ಮಂತ್ರಗಳಿಂದ
ಕಾಮಿಸಲು ವಶವಾದುದೆಂಬಿಯಾ
ದಾಮಕ್ಕೆ ಸಿಗಬಿದ್ದ ವಿಜಯ ವಿಠ್ಠಲನ್ನ
ನಾಮಾ ಒಂದಿರಲೀಗ ನೀ ಮನೋರಥನಾದ ೩
ಅಟ್ಟತಾಳ
ಹಿಂದೆ ನಾನಾ ಜನ್ಮಂಗಳಲಿ ಪುಟ್ಟಿ
ಬಂದತಿ ಕಠೋರ ಪಾಪವ ಮಾಡಿರೆ
ಮುಂದೆ ಹಲವು ಜನನದಲ್ಲಿ ಪೋಗಿ ದು
ರ್ಗಂಧದೊಳಿದ್ದು ದುಷ್ಕರ್ಮವ ಮಾಡಲು
ಸಂದಿಗೊಂದಿ ನಿನ್ನಯ ಕುಲಕೋಟಿ ನೂ
ರೊಂದು ಜನರು ಕಲ್ಪ ಕಲ್ಪದಲ್ಲಿ ಬಿಡದೆ
ಬಂದಕೆ ಅನಂತಮಾಡಿ ಪಾಪಾ ಮಾಡಿದರೆ
ಒಂದೇ ಸಾರಿ ಕೃಷ್ಣ ನಾರಾಯಣ ಮು
ಕುಂದ ಎಂದದಕೇವೆ ಆರಾರ ದುಷ್ಕರ್ಮ
ಬೆಂದು ಪೋಗುವುದು ಸಾಲದು ದುರಿತವೊ
ಮಂದಮತಿ ಮನ ಸಂಶಯ ವಿಡಿಯದಲೆ
ತಂದೆ ವಿಜಯ ವಿಠ್ಠಲನ್ನ ನಂಬಲು ಒಬ್ಬ
ನಿಂದಲವನ ಕುಲ ಸಂದೋದು ಗತಿಗೆ ೪
ಆದಿತಾಳ
ಅವಾವ ಮಂತ್ರದಲ್ಲಿ ಆವಾವ ತಂತ್ರದಲ್ಲಿ
ಆವಕಥೆಯಲ್ಲಿ ಅವಾವ ಬಗೆಯಲ್ಲಿ
ಪಾವನವೆ ಹರಿನಾಮಾ ಕಾವುದು ಭಕ್ತರನೆಂದು
ದೇವಾದಿ ಗಣದೊಳು ಭಾವುಕೆಂದು ಪೇಳುತಿದೆ
ದೇವಮುನಿ ಭಕ್ತರಾದಿ ನೋವು ಬಂದ ಸಮಯದಲ್ಲಿ
ಕಾವನಯ್ಯನೆಂದು ಕೂಗಿ ಪಾವನವಾದರೂ ಕಾಣೋ
ಗ್ರಾವಧರ ವಿಜಯ ವಿಠ್ಠಲದೇವನ ನಾಮವನೆನಿಯೆ
ಈವನು ಬಯಸಿದ ಫಲ ತಾ ಒದಗಿ ಬಂದು ನಿನಗೆ ೫
ಜತೆ
ನಾಮವೆ ಸಕಲ ಸಾಧನಕ್ಕೆ ಬಲುಸಾಧನ
ನೀ ಮರಿಯದಿರು ವಿಜಯ ವಿಠ್ಠಲನ್ನ ೬

ಶ್ರೀಹರಿಯು ಸರ್ವೋತ್ತಮನೆಂದು ದೃಢವಾಗಿ

೪೩
ಧ್ರುವತಾಳ
ಚಿಂತೆ ಮಾಡುವುದಿಲ್ಲ ಚಿನ್ಮಯ ಮೂರ್ತಿಯ ಪಾದ
ಕ್ರಾಂತನಾಗಿದ್ದ ಮೇಲೆ ಎಲೆ ಮನವೇ
ಎಂತಾಗುವುದು ಗತಿ ಎನಗೆಂದು ವ್ಯಾಕುಲದಿ
ಸಂತತ ಬಳಲದಿರೊ ಧೃಢವ ತೊರೆದು
ಚಿಂತಾಮಣಿಯು ಒಲಿದು ಬೆಂಬಿಡದಲೆ ಇದ್ದು
ನಿಂತಲ್ಲಿ ನಿಧಾನ ಗರಿವುತಿದಕೊ
ಭ್ರಾಂತನಾಗಿ ಬರಿದೆ ಕಂಡದ್ದು ಹಂಬಲಿಸಿ
ಅಂತವಿಲ್ಲದ ನರಕಕ್ಕಿಳಿಯದಿರು
ಮಂತ್ರತಂತ್ರಕ್ಕೆ ಶಿಲುಕ ಮಹದಾದಿಗಳ ಒಡಿಯ
ಸಂತರಿಸುವ ನೋಡು ಗೆಳೆಯನಾಗಿ
ಇಂತೀಪರಿ ನಿನಗೆ ಆನಂದ ವೈಭವ
ಮುಂತೆ ಮುಂತಾಗಿ ನಿಂದಿರುವದು ಕೇಳೆಲೊ
ಚಿಂತಿಸಿದಂತೆ ಜನಕೆ ಸಾಧನ ಮೂಡಿಸುವ
ಕಂತುಪಿತ ನಮ್ಮ ವಿಜಯ ವಿಠ್ಠಲರೇಯ
ಶಾಂತ ಮೂರುತಿ ನಂಬಿದವರಿಗೆ ಸುಧಾಹೃದವೊ ೧
ಮಟ್ಟತಾಳ
ಎತ್ತಿಗೆ ಭತ್ತದ ಚಿಂತೆಯಾತಕ್ಕೆ
ಕತ್ತೆಗೆ ಬಣವಿಯ ಯೋಚನೆಯಾತಕೆ
ತೊತ್ತಿಗೆ ಒಡಿಯನ ಭವಿಷೋತ್ತರವ್ಯಾಕೆ
ಹೊತ್ತು ಹೊತ್ತಿಗೆ ಪಾಲುಕುಡಿವೊ ಬಾಲಕನಿಗೆ
ಸುತ್ತಲಿದ್ದವರ ಧಾವತಿ ಗೊಡವ್ಯಾಕೆ
ಮತ್ತವಾದ ಗಜಕೆ ಅರಸು ಪೋಗಿ ಬರುವ
ಕೃತ್ಯ ಹಚ್ಚಿಕೊಂಡು ಬಡವಾಗುವುದೇಕೆ
ಉತ್ತುಮ ಗುಣನಿಧಿ ವಿಜಯ ವಿಠ್ಠಲರೇಯ
ಪೆತ್ತ ಜನಕನಂತೆ ಹಗಲಿರಳು ಬಿಡದೆ
ತುತ್ತು ಮಾಡಿ ತಂದು ಉಣಿಸುವನು ಸತ್ಯವೊ ೨
ತ್ರಿವಿಡಿ ತಾಳ
ಸರ್ವಾಧಿಷ್ಠಾನದಲ್ಲಿ ಹರಿಯೆ ಸಂತತ ಇದ್ದು
ಶರ್ವಾದಿಗಳ ಕೈಯ್ಯ ವ್ಯಾಪಾರವ
ನಿರ್ವಹಿಸಿಕೊಂಬನು ನಿರ್ದೋಷನಾಗಿ ಬಲು
ಊರ್ವಿಯೊಳಗೆ ತಾನೆ ವ್ಯಾಪ್ತನಾಗಿ
ದುರ್ವಿಷಯಂಗಳು ನಿನಗೆತ್ತಲೊ ಮನವೆ
ದರ್ವಿಯಂದದಿ ಕಾಣೊ ನಿನಗಿಪ್ಪದು
ಸರ್ವದ ಕೇಳುವದು ಹೊರಗೆ ಬಿಟ್ಟ ಶ್ವಾಸ
ಓರ್ವನಾದರು ಒಳಗೆ ಸೇರಿಕೊಂಬ
ಗರ್ವರ ಕಾಣಿನೊ ನಿನಗೆ ಸಂಶಯಯಾತಕೆ
ಸರ್ವಥಾ ದು:ಶ್ಚಿಂತೆ ಬಡದಿರಿಂದೂ
ನಿರ್ವಾಣದಾಯಕ ವಿಜಯ ವಿಠಲರೇಯಾ
ನಿರ್ವಾಹ ಕರ್ತನು ನಮಗಾವ ಭಯವಿಲ್ಲಾ ೩
ಅಟ್ಟತಾಳ
ನುಡಿಸುವ ವರುಣನು ಮೆಲುವನು ಪಾವಕ
ನಡೆವನು ಜಯಂತ ಕೇಳುವ ದಿಗ್ದೇವ
ಬಿಡದಪ್ಪಿಕೊಂಬ ಅಹಂಕಾರಿಕ ಪ್ರಾಣ
ಒಡನೆ ಗುಹ್ಯಗಳಲ್ಲಿ ಮನುಮಿತ್ರ ಮನದಲ್ಲಿ
ಬಿಡದೆ ಇಂದ್ರನು ಇಪ್ಪ ಅಹಂಕಾರದಲ್ಲಿ ರುದ್ರ
ಪಿಡಿವನು ದಕ್ಷಕ ನೋಡುವ ಸೂರ್ಯನು
ಎಡೆ ತೊಲಗದಲೆ ಇವರಿಂದಾದಲಾಗುತಿರೆ
ಪೊಡವಿಯೊಳಗೆ ನಿನಗಾವುದೊ ಆಧೀನ
ಕಡಲಶಯನ ನಮ್ಮ ವಿಜಯ ವಿಠ್ಠಲನಲ್ಲಿ
ದೃಢ ಬಕುತಿಯನೆ ಮಾಡು ಇದೆ ಸಾಧನ ಸಿದ್ದ ೪
ಆದಿತಾಳ
ನಾನೆ ಪೋಗುತಲಿಪ್ಪೆ ನಾನೆ ಬರುತಲಿಪ್ಪೆ
ನಾನೆ ಕೊಡುತಲಿಪ್ಪೆ ನಾನೆ ಕೊಳುತಲಿಪ್ಪೆ
ನಾನೆ ಭುಂಜಿಸುತಿಪ್ಪೆ ನಾನೆ ಬಲವಂತನಿಪ್ಪೆ
ನಾನೆ ಶ್ರೇಷ್ಠನಿಪ್ಪೆ ನಾನೆ ಧನಿಕನಿಪ್ಪೆ
ನಾನೆ ಧನಾದ್ಯನಿಪ್ಪೆ ನಾನೆ ಎಂದು ಪೇಳಿಕೊಂಡನರನು
ನಾನಾ ಯಾತನೆಗಳ ಪಡುವನು ಪ್ರತಿದಿನ
ದೀನ ಮಂದಾರಹರಿ ವಿಜಯ ವಿಠ್ಠಲರೇಯ
ನೀನೆ ಮಾಳ್ಪವನೆಂಬ ಭಕ್ತರ ಕೈ ಬಿಡನೊ ೫
ಜತೆ
ಭಕ್ತಿಗೆ ಪ್ರಧಾನವಾದ ಚಿಂತನೆ ಮಾಡು
ಮುಕ್ತಿದಾಯಕ ದೇವ ವಿಜಯ ವಿಠ್ಠಲ ಒಲಿವಾ ೬

ಆಧ್ಯಾತ್ಮಿಕ ಸಾಧನೆಯ ದೃಷ್ಟಿಯನ್ನು ಬೆಳೆಸಿಕೊಂಡರೆ

೪೪
ಧ್ರುವತಾಳ
ಚಿಂತೆ ಯಾತಕ್ಕೆ ಜನನ ಅಂತ್ಯ ಕಾಲವು ಎರಡು
ಎಂಥವನಿಗೆ ತಪ್ಪದಂತಿಪ್ಪದೂ
ಕಾಂತಾರ ಗಿರಿ ವನ ಮುಂತಾದ ಲೋಕಗಳು
ನಿಂತಲ್ಲಿ ನಿಲ್ಲದಲೆ ತಿರುಗಿದರು
ಪಿಂತಟ್ಟಿ ಮೃತ್ಯು ಬಾರದಂತೆ ಇರದು ಕೇಳು
ಅಂತರವಿಲ್ಲ ಸಿದ್ಧಾಂತವೆನ್ನು
ಅಂತರ ಶುದ್ದಿಯಾಗೇಕಾಂತದಲ್ಲಿ ಬಲು
ಶಾಂತನಾಗಿ ನಿಶ್ಚಿಂತೆಯಲ್ಲಿ
ಸಂತಾಪ ತೊರೆದು ಆದ್ಯಂತ ಜ್ಞಾನದಲ್ಲಿ
ಅಂತರಂಗದಿ ಶ್ರೀಕಾಂತನ್ನ ಪಾದ
ಕ್ರಾಂತನಾಗಿ ಹೃದಯ ಗ್ರಂಥಿಯ ಪರಿಹರಿಸು
ಸಂತತ ಸುತಂತು ವಿಜಯ ವಿಠ್ಠಲನ್ನ
ಅಂತೆ ಕಾಲಕ್ಕೆ ನೆನವಂತೆ ಸಾಧನ ಬಯಸೊ ೧
ಮಟ್ಟತಾಳ
ಶರದಿ ಮೇರೆದಪ್ಪಿ ಬರಲು ತೀವರದಿಂದ ಭರದಿಂದ ಮ
ದಿರದ ಕದವನ್ನು ಇರುಹು ಸಂದಿಸದಂತೆ
ಸರಿದರೆ ಸದನ ನಿಂದಿರಬಲ್ಲದೆ ಮರುಳೆ
ಹರಿಯ ನಿರೂಪನನ್ನು ಧರಿಸಿ ಕಾಲಮೃತ್ಯು
ಅರಸಿ ಕೊಲ್ಲುತ ಬರಲು ಸುರರಾದರು ವಹಿಸಿ
ಅರಲವ ಉಳಿಸುವರೆ ಬರಿದೆ
ಬರಿದೆ ನೆಚ್ಚಿ ಮರಿಯದಿರೊ ಹರಿಯೆ
ಸ್ಮರಣೆಯನು ನಿನ್ನ ಹರಣ ಉಳ್ಳನಕ ಶಾ
ರ್ವರಿಕರ ನಾಮಾ ವಿಜಯ ವಿಠ್ಠಲನ್ನ
ಕರಣ ಶುದ್ದಿಯಲ್ಲಿ ಪರಮಾದರನಾಗೊ ೨
ತ್ರಿವಿಡಿ ತಾಳ
ಮನಸು ನಾಲ್ಕು ಪರಿ ಒಂದು ಘಳಿಗೆಯೊಳಗೆ
ನೆನಸುವದೊಂದಾಹಂಕಾರ ನಿಶ್ಚಯವೊ ಸಂಶಯ
ಎನಿಸುವದಿದರಿಂದ ಘನ ಶೋಕವೆ ಬಂದು
ಮನ ಶುಚಿಯಾಗದೆ ಕೆಡುತಿಪ್ಪದು
ಮನೆ ಸುತ ಸತಿ ಬಂಧು ಬಳಗ ನಾನಾದ್ರವ್ಯ
ಎಣಿಸದಿದರೂ ನಿನಗೆಲ್ಲಾಧೀನವೆಂದು
ತೃಣ ಸರಿಯಾಗಿ ಕಾಣುವುದು ನೆರೆನಂಬುವುದು
ಶಣಿಸು ಸಂಸಾರದ ಮರೆ ಮೋಸವೊ
ಘಣಿ ಶಾಯಿ ಮಹಾಗರ್ತ ವಿಜಯ ವಿಠ್ಠಲರೇಯನ
ನೆನಿಸು ನಿಶ್ಚಯದಿಂದ ಮನುಷ್ಯೋತ್ತಮನಾಗಿ ೩
ಅಟ್ಟತಾಳ
ಇಡದಿರು ಪದಾರ್ಥ ಇಂದು ನಾಳಿಗೆ ಎಂದು
ಪಡದಿರು ದೈನ್ಯವ ಒಬ್ಬರಲ್ಲಿಗೆ ಪೋಗಿ
ಬಿಡದಿರು ಶುದ್ದವೃತ್ತಿಯ ವ್ಯಾಪಾರವ
ಪಿಡದಿರು ವಾಗೇಂದ್ರ ನಿಗ್ರಹವನು ಮಾಡಿ
ನುಡಿದಿರು ಹೆಜ್ಜೆ ಹೆಜ್ಜೆಗೆ ಭೇದವೆಂದು
ಹಿಡಿಯದಿರು ಒಕ್ಕುಡುತಿಗೆ ಹೆಚ್ಚಾಗಿ
ಹಿಡಿಯದಿರು ದ್ವೇಷಿಗಳ ಮನೆಯ ಧಾನ್ಯ
ಒಡಿಯ ಶತ್ಥಿನೆನಾಮ ವಿಜಯ ವಿಠ್ಠಲ ನಿಂ
ದೆಡೆಯಲ್ಲಿ ಮರಿಯದೆ ನುಡಿ ಶುದ್ದ ಭಕುತಿಲಿ ೪
ಆದಿತಾಳ
ಜಿಹ್ವೆ ಗುಹ್ಯೇಂದ್ರಿಯ ಉಪಸಂಹಾರವನ್ನು ಮಾಡುತ್ತ
ಗಹ್ವರ ಭಕುತಿಯಲ್ಲಿ ಸಿಂಹನುಲಂಘಿಣಿಯಂತೆ
ಜಾನ್ಹವಿ ಮಿಕ್ಕಾದ ನದಿ ಜಿಹ್ವಾಗ್ರದಿ ಕ್ಷೇತ್ರಕೆ
ತ್ವಂಹರಿದು ಪೋಗಿ ಪಾಪ ಸಂಹಾರವ ಗೈಸುತಲಿ
ಸಿಂಹ ನಾಮ ಪರದೈವ ವಿಜಯ ವಿಠ್ಠಲನ್ನ
ಜಿಹ್ವಾಗ್ರದಲ್ಲಿ ನೆನೆದು ಬಿಂಹ್ವಾಮಧ್ಯದಲ್ಲಿ ನಿಲಿಸೊ ೫
ಜತೆ
ಕ್ಷೇತ್ರವುಳ್ಳಾಗ ಸಂಪಾದಿಸಿ ಗುರುಕರುಣ
ಶತ್ರುತಾಪ ವಿಜಯ ವಿಠ್ಠಲನ್ನ ಬಲಗೊಳ್ಳೊ ೬

ಅಂದಂದು ಮಾಡಲೇಬೇಕಾದ

೩೮
ಧ್ರುವತಾಳ
ಚಿಂತೆ ವೆಗ್ಗಳಿಸಿತು, ಚಿನ್ಮಾತುರ ಸಿರಿ
ಕಾಂತ ನಿನ್ನಯ ಪಾದಕ್ಕೆ ನಮೋ ನಮೋ
ಅಂತಿಕಾಂತಿಕವಾಗಿ, ಕಾಲಬಂದಿದೆ ನಾ-
ನೆಂತು ಉಸುರಲಿ ನೋಡಿ ನೋಡಿ
ಸಂತತ ಬಾಳಿದೆನೊ, ಜ್ಞಾನ ಭಕುತಿ ಮಂತ್ರ
ತಂತ್ರ ವೈರಾಗ್ಯ ಆಚಾರ ವಿಚಾರವ
ಮುಂದೆ ಸತ್ಕರ್ಮ ಒಂದಾದರು ಎಸಗಿ, ಏ
ಕಾಂತದಲ್ಲಿ ನಿನ್ನ ಮೆಚ್ಚಿಸಲಿಲ್ಲ
ಅಂತ್ಯಜಗಿಂತ ನಾನು ಕನಿಷ್ಠನಾಗಿ, ಸ್ವಾ-
ತಂತ್ರವೆ ಎನ್ನದೆಂದು ಹಿಗ್ಗಿ ಹಿಗ್ಗಿ
ಸಂತಿದೆ ಅರ್ಧಕಾಲ ಹಿಂದುಗಳದು ಭವ
ಭ್ರಾಂತಿಯಿಂದಲಿ ಪಾಪಕ್ಕೊಳಗಾದೆನೊ
ಎಂತು ಮಾಡಲಿ ಹರಿಯೆ, ಅಕಟಕಟ ಇನ್ನು ಎನಗೆ
ಪಿಂತೆ ಪೋದ ದಿವಸ ನೆನಪಾಗದೊ
ಹಂತಿಯಾ ಕಟ್ಟಿ ತೆನಿಯಾ, ತುಳಿಸುವಾಗ, ಸಮೀಪ
ನಿಂತ ತೆನಿಗೆ ಅವಕಾಶವುಂಟೆ?
ಚಿಂತಿತ ಫಲದಾಯ ಪರಮ ಪರಾಕು, ಹೇ
ಸಂತರಿಸುವ ದೈವ ನಿನಗೆ ನಾನೇ
ನಿಂತಲ್ಲಿ ಕುಳಿತಲ್ಲಿ ಮೊರೆಯಿಡುವೆನು ನಿತ್ಯ
ಅಂತರಂಗದೊಳಿಪ್ಪ ಸರ್ವಙ್ಞನೆ
ಅಂತಕನ ಸಭೆಯಲ್ಲಿ ವರ್ತಮಾನ ಪುಟ್ಟಿದೆ
ಸಂತಾಪ ಕಳೆವರಾರೊ ಎನ್ನಯ್ಯನೆ
ಸಂತತಿ ನೀನೆ ಸಂತಾಪ ನೀನೆ ನಿಜ
ಸಂತು ಬಾಂಧವ ನೀನೆ ಸಾರ ಹೃದಯ
ಅಂತ್ಯಕಾಲಕ್ಕೆ ನಿನ್ನ ಸ್ಮರಣೆ ಮಾಡುವ ಸಾಧನ
ತಂತು ಲೇಶವಾದರು ಮನದೊಳಿಲ್ಲ
ಎಂತಾಗುವುದೊ ಆ ಕಾಲಕ್ಕೆ ಸ್ಮರಣೆ ನರ
ಕಾಂತಕ ಭವಕಾಂತಾರ ದಹನ
ಅಂತಗಾಣಿಸೊ ಎನ್ನ, ದುರಿತಕೋಟಿಗೆ, ನಿ
ರಂತರ ಎಣಿಸಲನೇಕ ಸಂಖ್ಯಾ
ಚಿಂತಾರತುನ ನಿನ್ನ ಕರುಣವಲ್ಲದೆ, ಅ-
ನಂತ, ಸಾಧನ ನಾನಾ ಫಲ ಕೊಡುವುವು
ಸಂತೋಷ ಮೂರುತಿ ವಿಜಯ ವಿಠ್ಠಲ ಸಕ-
ಲಂತರ್ಯಾಮಿ ಸ್ವಾಮಿ ಭಕುತವತ್ಸಲದೇವ ೧
ಮಟ್ಟತಾಳ
ಧನ ಓದನ ಸದನ ಜನರ ಯೋಚನೆ ಸಂದಣೆ
ಮನದೊಳಗೆ ಇಂದಿನ ದಿನ ಪರಿಯಂತ
ಅನಿಲ ಸಂಚರಿಪದಕೆಳ್ಳಿನಿತು, ಬಯಲು ಕಾಣೆ
ನೆನೆ ನೆನೆದು ಮತ್ತೆ ನೆನೆ ನೆನೆದು ವಿಷಯ
ಘನ ನಿಬಿಡಿಯಲ್ಲಿ ತೊಲಗದಲೆ
ದಣಿಯದೆ ಇಪ್ಪದಯ್ಯ ಇನಿತು ಪೇಳಲಿ
ಮನಸು ತನುವಿನೊಳಗೆ ನಿಲಿಸಿ
ಅಣುಹೊತ್ತಿರದು, ತನಗೆ ತಾನೆ ಪುಟ್ಟದು
ಕುಣಿಕುಣಿದಾಡುತಿದೆ. ಅಣುಮಾತುರ, ನಿನ್ನ
ನೆನವಿಗೆ ನೆಲೆಗಾಣೆ, ತನು ಮುಪ್ಪಾದರಾಗೆ
ಮನಕೆ ಯವ್ವನ ಬಂದು, ಗುಣಿಸುವುದು ಹ¯ವು
ಗುಣಪೂರ್ಣ ನಮ್ಮ ವಿಜಯವಿಠ್ಠಲರೇಯ
ಎಣೆಗಾಣೆನೊ ನಾನು ಮಾಡಿದ ಪಾಪಗಳಿಗೆ ೨
ತ್ರಿವಿಡಿತಾಳ
ಅರ್ಧರ್ಧವಾಯಿತು, ದೇಶ ಕಾಲಾನೋಡೆ
ಪೊದ್ದಿರ್ಪೆ ನರಕ, ನಿರ್ಭರ ಭರದೊಳು
ಹದ್ದು ಹಾವಿಗೆ ಹೊಂಚು ಹಾಕಿದಂತೆ ಯಮನ
ಉದ್ದಂಡ ಭಟರು ನೋಡತಲಿಪ್ಪರಯ್ಯ
ಬದ್ಧಕಂಕಣರಾಗಿ, ತಮ್ಮೊಳಗೆ ತಾವು
ಎದ್ದೆದ್ದು, ಕೈ ಹೊಯ್ದು, ನಗುವರು, ನೋಡಯ್ಯ
ಇದ್ದಲ್ಲಿ ಸುಖವಿಲ್ಲ ಹೆಡತಲೆಮೃತ್ಯು, ಕಾ-
ದಿದ್ದು, ಸಿದ್ಧ ದಿನಗಳ ಎಣಿಸುತ್ತ
ಎದ್ದುನಿಲ್ಲದೆ ದಿವಸ, ಬರುತಿವೆ, ಬರುತಿವೆ
ಸದ್ದುಮಾಡದೆ ಎನಗೆ ತಿಳಿಯಾದಂತೆ,
ಕ್ರುದ್ಧ ಜನರು ಪಾಳತಿಯದ ಬಂದು, ಬಳ-
ಬಿದ್ದು ಸಂಚರಿಸುವ ತೆರನಾಗಿದೆ
ಅಬ್ಧಿಶಯನ ಕರುಣಾಬ್ಧಿಯೆ ಹೆದ್ದೈವ
ಈ ಧರಿಯೊಳಗೆ ನೀನಲ್ಲದೋರ್ವ
ಉದ್ಧರಿಸುವನೇನೊ ಗೋವರ್ಧನೋದ್ಧರ
ನಿರ್ದೋಷ ಮೂರುತಿ ನಿರಯಭಂಗ
ಕದ್ದು ತಿನುತ, ಬಲು ಜನರ ಪಾಲಿಸಿದ, ಪ್ರ
ಸಿದ್ಧ ಸುಪ್ರಸನ್ನ ಸುಪ್ರಸಾದ
ಶುದ್ಧಗಾತುರ ನಿನ್ನ ನಂಬಿಹೆ ನಂಬಿಹೆ
ಹೃದ್ಗತನಾಗಿದ್ದ ವಿಜಯರೇಯ
ಪದ್ಮಾಸನ ಜನಕ ನಿನ್ನ ಚರಣಕೆ ಅಡ್ಡ-
ಬಿದ್ದು ನಮಸ್ಕರಿಸುವೆ ಕರವ ಮುಗಿದು
ಎದ್ದು ಬೇಡಿಕೊಂಬೆ, ಯಮನಾಳುಗಳು ಬಂದು
ಒದ್ದೊದ್ದು ಕೈಕಾಲು ಕಟ್ಟಿಕೊಂಡು
ಗುದ್ದಿ ಗುದ್ದಿ ಎನ್ನ ಘಾಸಿಮಾಡಿದ ಮ್ಯಾಲೆ
ಸುದ್ದಿಗೋಸುಗ ನಿನ್ನ ದೂತ ಜನರು ಕಳು-
ಹಿದ್ದು ಕೀರ್ತಿಯಲ್ಲ, ಭಕುತವತ್ಸಲ ಬಿರಿದು
ಉದ್ದಿನಷ್ಟು ಬಿಡದೇ ತುಂಬಿದಿದೆಕೊ
ಭದ್ರಮೂರುತಿ ನಮ್ಮ ವಿಜಯ ವಿಠ್ಠಲ ನಿನ್ನ
ಪೊದ್ದಿಹೆ ಮುಂದಿನ ಪದವ ಮಾಣಿಸೊ ೩
ಅಟ್ಟತಾಳ
ಸಕಲವು ಕೃಪೆಯಿಂದ ಇಂತು ಪಾಲಿಸಿದೆ
ಲೌಕಿಕದೊಳು ಎನ್ನ ಕಾಲಕಾಲಕೆ ದೇವ
ಕಕುಲಾತಿ ಒಂದಿಲ್ಲ ಮುಂದಿನ ಅಭಿಲಾಷೆ
ಅಕಟಕಟ ನಾನು ಇದನೆ ಬೇಡಿಕೊಂಬೆ
ಅಕುಟಿಲರಾದ ನಿನ್ನ ಭಕುತರ ಕೂಡ
ಸಖತನ ಕೊಡು, ಲವಮಾತ್ರ ದ್ವೇಷವು ಬೇಡ
ಮುಕುತಿಯ ಒಲ್ಲೆ, ಮುಕುತಾರ್ಥ ಇದನೆ ಬೇಕು
ಧಿಕು ಧಿಕು ಈ ಸೌಖ್ಯ ಬೇಡದವನ ಜನ್ಮ
ಅಖಿಳೇಶ್ವರ ಎನ್ನ ನಿನ್ನದು, ಪಾ-
ತಕನೆಂದು ನೋಡದೆ ನಿನ್ನ ನಾಮದಿ, ಅಂ
ತಕನ ಭಯದಿಂದ ಕಡೆಮಾಡು ದೂರುವ
ಅಕಳಂಕನಾಯಕ ವಿಜಯ ವಿಠ್ಠಲ ತಾ-
ರಕನಾಮ ನಿನ್ನದಲ್ಲದೆ ಮತ್ತೊಂದುಂಟೆ ೪
ಆದಿತಾಳ
ತುಂಬುರ ನಾರದ ವಂದಿತ, ನೀ-
ಲಾಂಬರ ಸೋದರ ಸಂತತ
ಅಂಬರ ಸಲಿಲ ಜನಕ ಪೀ
ತಾಂಬರಧರ ಧರಣೀಶಾ
ಶಂಬರಶಾಯಿ, ಹರಿ ವಿಶ್ವ ಕು-
ಟುಂಬರಕ್ಷಕ ರಾಕ್ಷಸವೈರಿ
ಅಂಬಾರಮಣನ ಕಾಯ್ದನೆ ವೀ-
ಲಂಬರ ಸಂಗವ ಕೊಡದಿರು ಕೊಡದಿರು
ಶಂಬರ ವೈರಿಯ ಪಡೆದ
ನೆಂಬರ ಕೈಯ ಒಪ್ಪಿಸು ಔ-
ದುಂಬರ ವಂದ್ಯ ವಿಜಯ ವಿಠ್ಠಲ ಹೃದ-
ಯಾಂಬರದೊಳಗಾಡುವ ಚಲುವ ೫
ಜತೆ
ಕೋಟಿಗೆ ಇದನೆ ಬೇಡುವನೆಯ್ಯಾ ಯಮಭಟರ
ಕಾಟ ತಪ್ಪಿಸೊ ವಿಜಯ ವಿಠ್ಠಲ ನಿನ್ನವನು ೬

ಮೋಕ್ಷ ಸಂಪಾದನೆ-ಶ್ರೀಹರಿಯ ಅಪರೋಕ್ಷಕ್ಕೆ

೪೫
ಝಂಪೆತಾಳ
ಚಿತ್ತವೆ ಚಲಿಸದಿರು ಚೆನ್ನಾಗಿ ಲಾಲಿಸು
ಹೊತ್ತು ಹೊತ್ತಿಗೆ ನೀನು ಕಂಡ ಕಡಿಗೇ
ಸುತ್ತದಿರು ಸುತ್ತದಿರು ಬರಿದೆ ಹಂಬಲಿಸಿ ಪೂ
ರ್ವೋತ್ತರ ಜ್ಞಾನವನ್ನು ಮರೆದು ಮರೆದು
ಎತ್ತ ಪೋಗಲತ್ತ ಗ್ರಾಸವಾಸಕ್ಕೆ ನಿನಗೆ
ಹೊತ್ತುಕೊಂಡು ಬಂದು ಕೊಡುತಿಪ್ಪನೋ
ಹತ್ತದೆಂದರೆ ಬದಿಯಲ್ಲಿ ನಿಂದು ಒಂದೊಂದು
ತುತ್ತುಮಾಡಿ ಬಾಯಿಯೊಳಗೆ
ನೆತ್ತಿಯ ಮೇಲೆ ಟೊಣದು ವಾಂಛಲ್ಯದಿಂದ ಪುರು
ಷೋತ್ತಮನೆ ಉಣಿಸುವನು ಷಡರಸನ್ನ
ಚಿತ್ತವೆ ಚಲಿಸದಿರು ಹತ್ತುದಿಕ್ಕಿಗೆ ನೀನು ಪೋಗಲೇನು ಅಲ್ಲೆಲ್ಲಿ
ಉತ್ತಮೋತ್ತಮ ಹರಿ ಇರುತ್ತೇ ಇಪ್ಪ
ತೆತ್ತಿಗ ತಾನಾಗಿ ಆವಾವ ಕಾಲಕ್ಕೆ
ಪೆತ್ತ ಪಿತಾ ಮಾತೆಯಂದದಿ ಸಾಕುವ
ಇತ್ತ ಮುಂದಾಗಿ ಈ ಮಾತು ವನ್ನಿಸು ನಿತ್ಯ
ತತ್ತಳಗೊಳದಿರು ಧೈರ್ಯವಿರಲಿ
ಸತ್ಯ ಸಂಕಲ್ಪ ಸಿರಿ ವಿಜಯ ವಿಠಲ ನಿನ್ನ
ಹತ್ತಿಲಿ ಇಪ್ಪನು ಗುಣಿಸು ಕಾಣೋ ೧
ಮಟ್ಟತಾಳ
ಕಾಸಿಗೆ ಪೋದರೇನು ಕಲ್ಲೊಳಗಿದ್ದರೇನು
ದೇಶ ದೇಶ ತಿರುಗುಲೇನು ದೀನನಾದರೇನು
ದೇಶಿಕನಾದರೇನು ವೇಷಧರಿಸಲೇನು ವೇದ ಓದಿದರೇನು
ವಾಸುದೇವನೆ ವಾಸಗ್ರಾಸವ ವಹಿಸಿ
ಲೇಶಕಾಲ ಬಿಡದೆ ಲೇಸು ಕೊಡುತಲಿಪ್ಪ
ಈಶನು ತ್ರಿಭುವನರೆ ಈತನು ಕಾಣೆಲವೊ
ವಾಸರ ಕಳೆಯದಿರು ವಾಣಿ ಬರಿದೆ ಮಾಡಿ
ದೇಶಕಾಲ ಪೂರ್ಣ ವಿಜಯ ವಿಠ್ಠಲರೇಯ
ದಾಸನೆಂದವರಿಗೆ ದತ್ತಪ್ರಾಣನು ಕಾಣೊ ೨
ತ್ರಿವಿಡಿ ತಾಳ
ಎಲ್ಲಿಯ ವೈಕುಂಠ ಎಲ್ಲಿ ಅನಂತಾಸನ
ಎಲ್ಲಿ ನಾರಾಯಣಪುರವೊ ಎನಗೆ
ಎಲ್ಲಿ ಬ್ರಹ್ಮಾಂಡ ಮತ್ತೆಲ್ಲಿ ಲೋಕಗಳು ಅವು
ಎಲ್ಲೋ ಅಲ್ಲೋ ಇಲ್ಲೋ ಲಕುಮಿ
ವಲ್ಲಭ ಇರುತಿಪ್ಪ ಕುರುಹ ತಿಳಿಯದೆಂದು
ತಲ್ಲಣಿಸಿ ಪಾಪದಲಿ ಬಳಲದಿರು
ಸೊಲ್ಲು ಕೇಳಲೊ ಚಿತ್ತ ಏಕಾಗ್ರದಲ್ಲಿ ನಿಂದು
ಬಲ್ಲಿದನಾಗೊ ನಿಜ ಭಕುತಿಯಿಂದ
ಬಲ್ಲವರನು ಕೇಳು ಅನುಭವ ಉಂಟು ಪುಸಿ
ಯಲ್ಲವೊ ಎಂದಿಗೂ ಸಿದ್ಧಾಂತವೋ
ಎಲ್ಲ ವ್ಯಾಪುತವೊ ಹರಿಯೆ ನಿತ್ಯವೊ ಇದಕೆ
ಪ್ರಲ್ಹಾದದೇವನು ಸಾಕ್ಷಿ ಸಿದ್ಧ
ಸಲ್ಲದೊ ನಿನಗೆ ಈ ಸಂಶಯ ಸಾರಿದೆನೊ
ನಿಲ್ಲೊ ಚಂಚಲ ಬಿಟ್ಟು ಮಾರ್ಗಮೆಟ್ಟು
ಮೆಲ್ಲ ಮೆಲ್ಲನೆ ತತ್ವಜ್ಞಾನ ಸಂಪಾದಿಸಿ
ಗೆಲ್ಲೊ ಕಾಮಕ್ರೋಧ ವಿಷಯಂಗಳ
ಸಲ್ಲವುದೊ ನಿನಗೆ ವೈಕುಂಠ ಪಟ್ಟಣ
ಅಲ್ಲಿ ನೋಡು ನಾನಾಪರಿ ಸೌಖ್ಯವ
ಮಲ್ಲ ಮರ್ದನ ನಮ್ಮ ವಿಜಯ ವಿಠ್ಠಲನಂಘ್ರಿ
ಪಲ್ಲವ ನಿನ್ನೊಳಗೆ ಇಡೊ ದುಷ್ಟತನವ ಸುಡೊ ೩
ಅಟ್ಟತಾಳ
ಸುರರಿಂದ ಕೊಡುವನು ನರರಿಂದ ಕೊಡುವನು
ಗಿರಿ ತರು ಕರಿವಾಜಿ ರಥದಿಂದ ಕೊಡುವನು
ಉರಗ ವೃಷಭ ಗೋವು ಜಲದಿಂದ ಕೊಡುವನು
ಧರೆಗಗನ ವಾಯು ಪಾವಕ ಕೋಡಗ
ಕರಡಿ ಕೌತುಕ ನಾಟಕದಿಂದ ಕೊಡುವನು
ಶರಚಾಪ ನಾನಾ ಶಸ್ತ್ರದಿಂದ ಕೊಡುವನು
ವರಮಂತ್ರ ಸತ್ಕಥಾ ತಂತ್ರ ತಂತು
ತೃಣ ತರುಣಿ ನೆಳಲು ನಾದದಿಂದಲಿ ಕೊಡುವನು
ಪರಿಯಿಂದ ಪೇಳುವುದೇನು ಕಸಕುಪ್ಪೇರು ತಿಪ್ಪ ತಿಪ್ಪೆ
ಬೋರಿಗೆಯಿಂದ ಕೊಡುವನು
ಹರಿ ಕಲ್ಪಿಸಿದ ವೃತ್ತಿ ಆವಾವ ಬಲ್ಲನು
ಸಿರಿ ಅಜಭವರೆಲ್ಲ ಎಣಿಸಿ ಗುಣಿಸುವರು
ಹರಿ ಅನಂತ ಹಸ್ತದಲ್ಲಿ ಕೊಡುತಿಪ್ಪ
ಅರೆಮರೆಗೊಳದಿರು ಅನಾದಿ ಇಂದಲಿ
ವಿರಚಿಸಿದ ಕ್ಲಪ್ತಿ ಕಡಿಮೆಯಾಗದು ಕಾಣೊ
ಸರುವೋತ್ತಮ ನಮ್ಮ ವಿಜಯ ವಿಠ್ಠಲರೇಯ
ಕರೆದು ಕೊಡುವ ಬಹು ಅಮೃತ ಕರನು ೪
ಆದಿತಾಳ
ಊರಿಗೆ ಹೋದ ಮಗನ ನೋಡುವಾತುರದಿಂದ
ಸಾರಿಸಾರಿಗೆ ಜನಕ ಕಾಂಬೆನೆಂದು
ಸಾರುತಲಿ ತನ್ನ ಹೆಂಡತಿಯ ಒಡಗೂಡಿ
ದಾರಿಯ ಅರಸುತ್ತ ಹಿರಿಯ ಮಗನ ಕೂಡ
ವಾರವಾರಕ್ಕೆ ಯೋಚನೆ ಮಾಡುವಂತೆ ಸಾಕುವ
ಭಾರಕರ್ತನಾಗಿದ್ದು ಗುಣ ಪೂರ್ಣ
ಹರಿ ಲಕುಮಿ ಮಾರುತ ದೇವನೊಡನೆ
ಧಾರುಣಿಯೊಳಗೊಬ್ಬ ಚಾರುಪಾಕನಾಗಿ ಒಮ್ಮೆ ತನ್ನ ನೆನೆದವನ
ವಾರುತಿ ಕೇಳೆನಿ ಕಂಡನೆ ಎಂದು ಇನಿತು
ಪಾರತಂತ್ರನಾಗಿ ತಿರುಗುವ ನಮ್ಮ ಸ್ವಾಮಿ
ಆರಾದದಿಂದ ಉಂಟು ಅನುಕಂಪನೊ ಹರಿ
ಹಾರೈಸುವರು ತನಗೆ ಭಕ್ತರೆ ಗತಿ ಎಂದು
ಪೌರಣಗಳಲಿ ಕೇಳಿ ಕೇಳುತಲಿರುವ
ಕಾರುಣ್ಯ ಮೂರ್ತಿಯೆ ಕರುಣಾಳೊ ದಯಾಂಬುದಿಯ
ಸೂರೆ ಕಾಣೋ ಭಕ್ತರಗೋಸುಗ ಚಿತ್ತ
ಮೀರದಿರೆಲೊಯಿದೆ ಇಷ್ಟಾರ್ಥವೆನ್ನು ಉ
ದ್ಧಾರನಾಗು ಹಲವು ಹಂಬಲವನ್ನು ತೊರೆದು
ಘೋರ ಕ್ಲೇಶನಾಶ ವಿಜಯ ವಿಠ್ಠಲ ನಿನ್ನ
ತಾರಕ ಮಾಡುವ ಭವಸಾಗರದಿಂದ ೫
ಜತೆ
ಎಲ್ಲಿಗೆ ಪೋದರೇನು ಎಲ್ಲಿದ್ದರೇನು
ಒಲ್ಲೆನೆಂದರೆ ಅಭಯಕೊಡುವ ವಿಜಯ ವಿಠ್ಠಲಾ ೬