Categories
ರಚನೆಗಳು

ವಿದ್ಯಾಕಾಂತಯತಿಗಳು

ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ
ನೀ ಪೇಳಬಾರದೆ ರುಕುಮಿಣಿ ನೀ ಪೇಳಬಾರದೆ ಸತ್ಯಭಾಮ ಪ
ಪಾಪ ಮಾಡುವನೆಂದು ಕೋಪ ಮಾಡಿದಿರೆಂದು
ನಾ ಪಾದಪದುಮಕ್ಕೆ ಶರಣೆಂಬೆ ತಾಯೆ ೧
ನಿಮ್ಮ ನುಡಿಗಳಿಂದ ಸಮ್ಮತಿಸುವ ದೇವ
ಸುಮ್ಮನೆ ತಿಳಿಸೆನ್ನ ಹಡದಮ್ಮ ತಾಯೆ ೨
ಏನೊ ಪೇಳಿದನೆಂದು ನೀನೂಪೇಕ್ಷಿಸದಲೆ
ಜಾನಕಿದೇವಿ ಪೇಳೆ ರಘೂಪತಿಗೆ ತಾಯೆ ೩
ಪಾದ ನಂಬಿದವರಿಗೆ ಮೋದವ ಕೊಡುವಂಥ
ವೇದವ್ಯಾಸಗೆ ರಮೆ ತಿಳಿ ಹೇಳೆ ತಾಯೆ ೪
ವಿದ್ಯಾಕಾಂತನ ಮನವಿದ್ದಂತೆ ಒಲಿಯುವ
ಸದ್ದಯಾನಿಧಿ ನಮ್ಮ ನರಸಿಂಹ ತಾಯೆ ೫

 

ಕೊಡಬೇಕು
ಕಾಪಾಡಬೇಕೆಂದು ಗೋಪಾಲ ಕೃಷ್ಣಗೆ
ನೀ ಪೇಳಬಾರದೆ ರುಕುಮಿಣಿ ನೀ ಪೇಳಬಾರದೆ ಸತ್ಯಭಾಮ ಪ
ಪಾಪ ಮಾಡುವನೆಂದು ಕೋಪ ಮಾಡಿದಿರೆಂದು
ನಾ ಪಾದಪದುಮಕ್ಕೆ ಶರಣೆಂಬೆ ತಾಯೆ ೧
ನಿಮ್ಮ ನುಡಿಗಳಿಂದ ಸಮ್ಮತಿಸುವ ದೇವ
ಸುಮ್ಮನೆ ತಿಳಿಸೆನ್ನ ಹಡದಮ್ಮ ತಾಯೆ ೨
ಏನೊ ಪೇಳಿದನೆಂದು ನೀನೂಪೇಕ್ಷಿಸದಲೆ
ಜಾನಕಿದೇವಿ ಪೇಳೆ ರಘೂಪತಿಗೆ ತಾಯೆ ೩
ಪಾದ ನಂಬಿದವರಿಗೆ ಮೋದವ ಕೊಡುವಂಥ
ವೇದವ್ಯಾಸಗೆ ರಮೆ ತಿಳಿ ಹೇಳೆ ತಾಯೆ ೪
ವಿದ್ಯಾಕಾಂತನ ಮನವಿದ್ದಂತೆ ಒಲಿಯುವ
ಸದ್ದಯಾನಿಧಿ ನಮ್ಮ ನರಸಿಂಹ ತಾಯೆ ೫

 

ಹಾಡಿನ ಹೆಸರು:ಕೊಡಬೇಕು
ಹಾಡಿದವರ ಹೆಸರು:ವಿಜಯಲಕ್ಷ್ಮಿ ಬಾಲಾಜಿ
ರಾಗ:ತಿಲಂಗ್
ತಾಳ:ಆದಿ ತಾಳ
ಸಂಗೀತ ನಿರ್ದೇಶಕರು:ವಾಗೀಶ್
ಸ್ಟುಡಿಯೋ:ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *