Categories
ರಚನೆಗಳು

ವಿಜಯೀಂದ್ರತೀರ್ಥರು

ರಾಘವೇಂದ್ರತೀರ್ಥರ ಕೃತಿ

ಇಂದು ಎನಗೆ ಗೋವಿಂದ ನಿನ್ನ ಪಾದಾರ
ವಿಂದವ ತೋರೊ ಮುಕುಂದ ಪ
ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧರ ಆನಂದ ಇಂದಿರಾ ರಮಣ ಅ.ಪ
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪ ಜನಕನೆ ೧
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ೨
ಧಾರುಣಿಯೊಳು ಭೂಭಾರ ಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರಗಾಣಿಸೊ ಹರಿಯೆ ೩

 


ಚಂದಿರರಾಮನ ರಾಣಿ ಸೀತೆಯ ಮುಖ
ದಂದಕೆ ಸೋತು ಲಜ್ಜೆಯಿಂದ ರಾತ್ರಿಚರನಾದ ಪ
ಭಾರತಿ ಮೊದಲಾದ ಸತಿಯರಕ್ಷಿ ಕುಮುದ
ಕೋರಿಕೆ ಬಿರಿಯೆ ರಾಜಿತ ಚಕೋರ
ಪಾರವಾರವೆಂಬ ಸುರನಿಕರ ನಲಿಯೆ
ವಾರಿಜಮುಖಿಯ ಆನಂದ ಶರಧಿಯುಕ್ಕೆ ೧
ನೊಸಲಲೊಪ್ಪುವ ಕಸ್ತೂರಿತಿಲಕ ಕಲಂಕ
ಹೊಸ ಮುತ್ತಿನೋಲೆ ವರಹಾರದ
ಕುಸುಮ ತಾರೆಗಳಾಗೆ ಆ ಕಿರಣ ಲೋಕಂಗಳು
ನಸುನಗು ಬೆಳದಿಂಗಳಾಗೆ ನಗೆಗೀಡಾಯಿತೆಂದು ೨
ನಂದ ಮೂರುತಿ ವಿಜಯೀಂದ್ರಸ್ವಾಮಿ ರಾಮ
ಚಂದ್ರ ಸೀತೆಯ ಮುಖದೊಳು ಮುಖವ
ಸಂದಿಸೆ ಉಪರಾಗದಿ ಪೋಲ್ವ ಈಶ್ವರ ಹಾರ
ಮಂದಾಕಿನಿ ಯಮುನ ಎಂದಾಗ ಅವರು ಮೀಯೆ ೩

 


ಯೋಗಿ ವ್ಯಾಸರಾಯರೆಂಬ ವಿಚಿತ್ರ ಮೇಘ
ಬೇಗ ವಿಷ್ಣುಪದವ ತೋರುಸುತ್ತ ಬಂತಿದೆಕೊ ಪ
ಮಾಯಿಮತವೆಂಬ ತಾರಾಮಂಡಲವ ಮುಸುಕುತ್ತ
ವಾಯುಗತಿಯಂತೆ ಗಮಿಸುತಲಿ
ಹೇಯ ಕಾಮಾದಿಗಳೆಂಬ ರಜವನಡಗಿಸುತ
ನಾಯಕನುಪೇಂದ್ರನಾಜ್ಞೆಯ ಪಡೆದು ೧
ಅಂಗಜನಯ್ಯನೆ ಪರನೆಂದು ಫುಡಿಫುಡಿಸುತ್ತ
ಕಂಗಳೆಂಬ ಮಿಂಚನೆ ನೆರಹಿ ಲೋಕದಿ
ಹಿಂಗದೆ ಪರಿವ ಅಜ್ಞಾನವೆಂಬ ಕತ್ತಲೆಯ
ಭಂಗಿಸಿ ಸುರಪಥವ ತೋರಿಸುತ್ತ ೨
ಸಿರಿಯರಸನ ಸಮ್ಯಕ್ಜ್ಞಾನವೆಂಬ ಪೈರಿಗೆ
ಬೇರುಬಿಡಿಸಿ ಹರಿಕಥೆಯೆಂಬ ಮಳೆಗರೆದು
ನೆರೆ ಶಿಷ್ಯಮನವೆಂಬ ಕೆರೆತುಂಬಿಸಿ ಕರಗಳೆಂಬ
ಭರಕೋಡಿ ಹರಿಸುತ ವಿಜಯೀಂದ್ರನ ಗುರು ೩

 

ಉಗಾಭೋಗ
ತಪ್ಪುಗಳನರಸ ತನ್ನ ನಂಬಿದವರ ಶ್ರೀಪತಿ
ತಪ್ಪುಮಾಡಿದ ಅಜಮಿಳ ಉಮಾಪತಿ ಮುಖರ
ತಪ್ಪು ನೋಡಿದನೆ ಎ
ನ್ನಪ್ಪ ಶ್ರೀವಿಜಯೀಂದ್ರರಾಮ ದಯಾನಿಧಿ

 


ಸುಳಾದಿ
ಅಟ್ಟತಾಳ
ಪರಬೊಮ್ಮ ಹರಿಯು ತಾ ನರರೂಪವ ತಾಳಿದ
ನರನಾದ ದಶರಥನ ವರದೇಹದಲವತರಿಸಿ
ಸಿರಿರಾಮನೆಂಬ ಪುಣ್ಯನಾಮದಿಂದ ಮೆರೆವುತ್ತಿರೆ
ಹರುಷದಿಂದ ಲೀಲೆಗೈದು ಕರೆಯ ಬಂದ ಕೌಶಿಕನ
ಉರು ಯಜ್ಞ ವಿಘ್ನವನು ಪರಿಹರಿಸುವುದಕ್ಕಾಗಿ ಪರಬೊಮ್ಮ
ಪರಿತಂದು ವಿಘ್ನವನು ಪರಿಹರಿಸಿದ ಮುನಿವರನ
ಹರುಷದಿಂದ ಪರಮಾನಂದ ಶರಧಿಯಲೋಲಾಡಿಸಿದ
ಸಿರಿ ವಿಜಯೀಂದ್ರ ನಾಮ ಹೊರೆಯಲೆಮ್ಮ ಯಾವಾಗಲೂ ೧
ಮಠ್ಯ
ಈತನೆಂತು ಯಜ್ಞದ ವಿಘ್ನವ ಪರಿಹರಿಸುವ
ಪೋತ ಮಹಾದ್ಭುತರಂತಿಹ ರಕ್ಕಸರ
ವೀತ ಭಯನಾಗಿ ಕೊಲ್ಲುವುದೆಂತೊ
ಭೂತಳಕಚ್ಚರಿ ವಿಜಯೀಂದ್ರ ರಾಮನ ಚರಿತ ೨
ರೂಪಕ
ಜನಕನೆಂಬ ಜನಪತಿಯ ಮನೆಗೆ ಹೋಗಿ
ಜಾನಕಿಯ ಮನಕೆ ಹರುಷವಪ್ಪಂತೆ
ಜನಪದ ಕೈವಾರಿಸುತ್ತಿರೆ ಮನಕೆ
ಅಣಕವಾಡಿ ಶಿವನಧನುವ ಮುರಿದ ವಿಜಯೀಂದ್ರರಾಮ
ಮನಕೆ ಹರುಷವಪ್ಪಂತೆ ೩
ಝಂಪೆ
ಇವನರ್ಭಕನೆ ಇವನ ಮುನಿಗಳಾದವರೆಲ್ಲ ಮನದಿ
ಭಾವಿಸಿ ಕಾಣದೆಂಬುದರಿಯಾ ಎಲೆ ರಮಣಿ
ಭುವನ ಪಾವನ ನಾಮ ಸಿರಿ ವಿಜಯೀಂದ್ರರಾಮ
ಭಾವಿಸೆ ಮನದಿ ೪
ತ್ರಿಪುಟ
ರಾಮ ಜಾನಕಿಯ ಮದುವೆಯಾಗಿ ಬರುವಾಗ ಪರಶು-
ರಾಮನಿದಿರಸಿ ಅವನ ಬಿಲ್ಲನೇರಿಸಿ ಮೆರೆದ
ರಾಮನಿದಿರಸಿ ಶ್ಯಾಮಲಾಂಗ ವಿಜಯೀಂದ್ರ
ರಾಮ ಬಾಲಕನೆ ಹೇಳಾ ೫
ಅಟ್ಟ
ನೊಸಲಲಿ ಕಣ್ಣು ಪಡೆದವನ ಗೆಲಿದೆ
ಅಸುಳೆಯೆಂದು ಬೆಂಕೊಂಡು ಕಂದನ ಕಾಯ್ದೆ
ಕುಸುರಿಜವಕೊಂದೆ ಬಾಣದಿಂದ ನಿಮಿಷದಿ
ಅಸಮ ವಿಕ್ರಮ ವಿಜಯೀಂದ್ರರಾಮ ಜಗದೊಳು ೬
ಏಕ
ಉರವಣಿಸಿ ಬಹ ತಾಟಕಿಯ ಮಹಾ
ಕರಗಳ ನಿಮಿಷದಿ ಕತ್ತರಿಸುಯೆಂದು
ಹಿರಿಯರು ಪೇಳಲಿದಿರು ಪೇಳದೆ ಅಸುರೆಯ
ಕರಗಳ ಕಡಿದ ವಿಜಯೀಂದ್ರರಾಮ
ಸರಸಿಜಾಸನ ವಿನುತ ಸಿರಿ ಮೂಲರಾಮ ೭
ಜತೆ
ಲೋಕಾಭಿರಾಮ ಸದ್ಗುಣಧಾಮ
ಲೋಕೈಕಭೌಮ ವಿಜಯೀಂದ್ರರಾಮ ೮

 

೩(ಅ)
ಸುಳಾದಿ
ಧ್ರುವ ತಾಳ
ಯಾಕೆಲ ಮನವೇ ನೀ ಎನ್ನ ಕೀಕಟ ದೇಶಕ್ಕೆ ಶಳದು ಇಂದು
ಲೋಕೈಕನಾಥ ಹರಿಯ ಪಾದಕೆನ್ನನು ದೂರನ ಮಾಡಿ ಇಂದು ಮಾ-
ಯಕ್ಯೆಲ ಜಿಹ್ವೆ ಲೋಕ ವಾರ್ತಿಗಳ ಸೇವಿಪದು
ಶ್ರೀಕಾಂತನ ವಾರುತಿ ನುಡಿಸದಂತೆ ಮಾಡಿದೆಯಾ
ಯಾಕೆಲ ಕಿವಿಯೆ ಪೋಕರ ಆಲಾಪಗಳ ಕೇಳಿ ಕೆಡದೀ
ಸಾಕು ಸಾಕು ನಿಮ್ಮ ಸಂಗತಿ ಎಂಬಂತೆ ನೀ ಮಾಡಿದಿ
ಯಾಕೆಲ ಕಣ್ಣೆ ಪರವಧುಗಳ ಆಲೋಕಿಸಿ ಎನ್ನನು ಬಯಸಿದಿ
ಕಾಕು ಮಾಡದೆನ್ನ ಸಿರಿ ವಿಜಯೀಂದ್ರರಾಮನ್ನ ಆಗಲಿಸಿದಿ ೧
ಮಟ್ಟತಾಳ
ಹರಿಚಿಂತನ ನಾಮ ಮೂರುತಿ ಕೀರುತಿಗಳ
ವಿರಚಿಸಿ ಸವಿಯದ ನೋಡದ ಕೇಳದ
ಕರಣಗಳಿದ್ದೆಡೆ ಇಲ್ಲದಿದ್ದಡೇನೊ
ಹರಿಗೆ ಸಮ್ಮುಖವಾಗದ ಕಾರಣ
ಕರಣಂಗಳ ಶಿರವಳಿವದೊಳಿತೊ
ಸಿರಿ ವಿಜಯೀಂದ್ರರಾಮನಲ್ಲದನ್ಯ ವಿಷಯ-
ಕ್ಕೆರಗುವ ಕರಣಂಗಳ ಶಿವರಿವದ್ದೊಳಿತೊ ೨
ರೂಪಕತಾಳ
ಮನುಮಥನಯ್ಯನಕಿಂತ ಕಡು ಚಲ್ವನಾವನೊ|
ವನಜ ಭವನ ತಂದೆಕಿಂತ ದೇವರೊಳದಾವನೊ|
ಮುನಿ ಮನಕೆ ಗೋಚರನಾಗಿ ತೋರಿ ತೋರನದಾವನೊ|
ಘನ ವಿಜಯೀಂದ್ರಶಾಮ ಪೊರೆಯಲೆಮ್ಮನುದಿನ ೩
ಝಂಪತಾಳ
ನಿನ್ನ ಕೀರುತಿ ಕಿವಿಗೆ ನಾಮ ಎನ್ನ ನಾಲಿಗೆ |
ಎನ್ನ ಕಣ್ಣಿಗೆ ನಿನ್ನ ಮೂರ್ತಿ ದೊರೆಯಲೊ|
ಎನ್ನ ಮನಕೆ ನೆನೆವ ಸಿರಿ ವಿಜಯೀಂದ್ರರಾಮ
ಎನ್ನ ಕಣ್ಣಿಗೆ ನಿನ್ನ ಮೂರ್ತಿ ದೊರೆಯಲೊ| ೪
ತ್ರಿವಿಡಿತಾಳ
ಮೂರೇಳು ಕರಣಂಗಳಿರೇ ನೀವು|
ಸಿರಿ ಪತಿಗೆ ದೂರರಾಗಿ ನರಕಯಾತನೆ ಗೈದದೆ
ಹರಷಗುಂದಲಿ ಲೇಸಾದೆ
ಸುರೇಶ ಮೊದಲಾಗಿ ಅರ್ಚಿಪ ಪರಮ ಪಾವನಾ ಚರಣ
ಶ್ರೀ ಗರುಡ ದೇವರ ದೇವನ
ಸಿರಿ ವಿಜಯೀಂದ್ರರಾಮ ಪೊರೆಯಲೆಮ್ಮನುದಿನ ೫
ಆದಿತಾಳ
ನಾರಾಯಣನೆಂದು ಮಗನ ಕರಿಯಲಾಗ
ಆರತನಾಗಿ ಆವಾತ ಕರದನೆಂದು ಆ
ದರದಿಂದಲಿ ಕೇಳಿ ಅಜಾಮಿಳನ
ಭೂರಿ ಭೀತಿಗಳು ಕ್ಷಣದಿ ಬಿಡಿಸೆನೆ
ಸಾರಹೃದಯನೆಂದರಿದರೆ ಬಿಡುವನೆ
ಮಾರಮಣ ಸಿರಿ ವಿಜಯಿಂದ್ರರಾಮ ೬
ಜತೆ
ಸಾಧುಗಳನು ಸಂತತ ಸಲಹುವ ಸು
ಬೋಧ ಮೂರುತಿ ಸಿರಿ ವಿಜಯೀಂದ್ರರಾಮ ೭

 

ಇಂದು ಎನಗೆ ಗೋವಿಂದ
ರಾಘವೇಂದ್ರತೀರ್ಥರ ಕೃತಿ

ಇಂದು ಎನಗೆ ಗೋವಿಂದ ನಿನ್ನ ಪಾದಾರ
ವಿಂದವ ತೋರೊ ಮುಕುಂದ ಪ
ಸುಂದರ ವದನನೆ ನಂದಗೋಪನ ಕಂದ
ಮಂದರೋದ್ಧರ ಆನಂದ ಇಂದಿರಾ ರಮಣ ಅ.ಪ
ನೊಂದೆನಯ್ಯ ಭವಬಂಧನದೊಳು ಸಿಲುಕಿ
ಮುಂದೆ ದಾರಿ ಕಾಣದೆ ಕುಂದಿದೆ ಜಗದೊಳು
ಕಂದನು ಎಂದೆನ್ನ ಕುಂದುಗಳೆಣಿಸದೆ
ತಂದೆ ಕಾಯೊ ಕೃಷ್ಣ ಕಂದರ್ಪ ಜನಕನೆ ೧
ಮೂಢತನದಿ ಬಹು ಹೇಡಿ ಜೀವ ನಾನಾಗಿ
ದೃಢಭಕುತಿಯನು ಮಾಡಲಿಲ್ಲವೊ ಹರಿಯೆ
ನೋಡಲಿಲ್ಲವೊ ನಿನ್ನ ಪಾಡಲಿಲ್ಲವೊ ಮಹಿಮೆ
ಗಾಡಿಕಾರ ಕೃಷ್ಣ ಬೇಡಿಕೊಂಬೆನೊ ನಿನ್ನ ೨
ಧಾರುಣಿಯೊಳು ಭೂಭಾರ ಜೀವ ನಾನಾಗಿ
ದಾರಿತಪ್ಪಿ ನಡೆದೆ ಸೇರಿದೆ ಕುಜನರ
ಆರೂ ಕಾಯುವರಿಲ್ಲ ಸೇರಿದೆ ನಿನಗಯ್ಯ
ಧೀರ ವೇಣುಗೋಪಾಲ ಪಾರಗಾಣಿಸೊ ಹರಿಯೆ ೩

 

ಹಾಡಿನ ಹೆಸರು :ಇಂದು ಎನಗೆ ಗೋವಿಂದ
ಹಾಡಿದವರ ಹೆಸರು :ಮುರಳಿ ಬಿ. ಎನ್. ಎಸ್.
ರಾಗ :ಭೈರವಿ
ತಾಳ :ಮಿಶ್ರ ಛಾಪು ತಾಳ
ಶೈಲಿ :ಕರ್ನಾಟಕ
ಸಂಗೀತ ನಿರ್ದೇಶಕರು :ಸತ್ಯವತಿ ಟಿ. ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

ಚಂದಿರರಾಮನ ರಾಣಿ ಸೀತೆಯ ಮುಖ

ಚಂದಿರರಾಮನ ರಾಣಿ ಸೀತೆಯ ಮುಖ
ದಂದಕೆ ಸೋತು ಲಜ್ಜೆಯಿಂದ ರಾತ್ರಿಚರನಾದ ಪ

ಭಾರತಿ ಮೊದಲಾದ ಸತಿಯರಕ್ಷಿ ಕುಮುದ
ಕೋರಿಕೆ ಬಿರಿಯೆ ರಾಜಿತ ಚಕೋರ
ಪಾರವಾರವೆಂಬ ಸುರನಿಕರ ನಲಿಯೆ
ವಾರಿಜಮುಖಿಯ ಆನಂದ ಶರಧಿಯುಕ್ಕೆ ೧
ನೊಸಲಲೊಪ್ಪುವ ಕಸ್ತೂರಿತಿಲಕ ಕಲಂಕ
ಹೊಸ ಮುತ್ತಿನೋಲೆ ವರಹಾರದ
ಕುಸುಮ ತಾರೆಗಳಾಗೆ ಆ ಕಿರಣ ಲೋಕಂಗಳು
ನಸುನಗು ಬೆಳದಿಂಗಳಾಗೆ ನಗೆಗೀಡಾಯಿತೆಂದು ೨
ನಂದ ಮೂರುತಿ ವಿಜಯೀಂದ್ರಸ್ವಾಮಿ ರಾಮ
ಚಂದ್ರ ಸೀತೆಯ ಮುಖದೊಳು ಮುಖವ
ಸಂದಿಸೆ ಉಪರಾಗದಿ ಪೋಲ್ವ ಈಶ್ವರ ಹಾರ
ಮಂದಾಕಿನಿ ಯಮುನ ಎಂದಾಗ ಅವರು ಮೀಯೆ ೩

 

ಹಾಡಿನ ಹೆಸರು :ಚಂದಿರರಾಮನ ರಾಣಿ ಸೀತೆಯ ಮುಖ
ಹಾಡಿದವರ ಹೆಸರು :ಹೇಮಂತ್
ರಾಗ : ಕಲ್ಯಾಣ ವಸಂತ
ತಾಳ : ಏಕ ತಾಳ
ಸಂಗೀತ ನಿರ್ದೇಶಕರು :ರಾಜು ಅನಂತಸ್ವಾಮಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *