Categories
ರಚನೆಗಳು

ವಾದಿರಾಜ

೨೧೯
ಲೋಕನೀತಿ
ಅಂತರಂಗದ ರೋಗ ಯಾವುದು ಅದುಚಿಂತೆಯಲ್ಲದೆ ಮತ್ತ್ಯಾವುದು ಪ.
ಸಂತತ ಶ್ರೀಹರಿನಾಮದಿಂದ್ಹೋಹುದುಅಂತ್ಯಕೊದಗಿತಜಮಿಳನಿಗಿನ್ನಾವುದು ಅ.ಪ.
ಶ್ರವಣ ಮನನ ಸಾಧನ ನವವಿಧಭಕ್ತಿಭವಬೇರ ಕಡಿವುದೆಂದರಿಯಬೇಕುರವಿಕುಲಾಂಬುಧಿಸೋಮ ರಾಮನ್ನ ಚಿಂತಿಸಿಭವವಾರಿಧಿಯ ದಾಟುವರೆಲ್ಲರು ಕೇಳಿ ೧
ಜರಾಮರಣಾದಿ ದುಃಖಗಳ ಪರಿಹರಿಸಿಪರಿಪರಿಯಾನಂದ ಕೊಡುವುದಿದುಮರೆಯದೆ ಮನದಲಿ ಒಮ್ಮೆ ನೆನೆದು ಪಾಡೆಸರುವಾಭೀಷ್ಟವ ಕೊಡುವುದಿದೊಂದೆವೆ ೨
ಭಯಗಳ ಬಿಡಿಸಿ ಅಭಯಗಳ ಕೊಡಿಸುವಭವದೂರ ಗೋವಿಂದನೆಂದರಿತುಹಯವದನನೆ ಎನ್ನ ಉದ್ಧರಿಸೊ ಎಂದುನಯದಿಂದ ಬೇಡುವರ ಭಾಗ್ಯವೆ ಭಾಗ್ಯ ೩

೧೫೨
ಉಗಾಭೋಗ
ಅಡಿಗಾಧಾರವಿಲ್ಲ ಹಿಡಿವುದಕೆ ಕೊಂಬಿಲ್ಲಕಡೆ ಹಾಯಿಸುವರಿಲ್ಲ ಕಷ್ಟಪಟ್ಟೆನಲ್ಲಕಣ್ಣೀರು ತಪ್ಪಲಿಲ್ಲ ಕಾಯಸುಖಪಡಲಿಲ್ಲಉಣಹೋಗಿ ಬಾಯ ಮರೆತಂತಾಯಿತಲ್ಲಬಡತನವು ಬಿಡಲಿಲ್ಲ ಭಂಗಪಟ್ಟೆನಲ್ಲಗರುಡಸರ್ಪನ ಸ್ನೇಹದಂತಾಯಿತಲ್ಲಎನ್ನ ಮನದುಬ್ಬಸವ ಸ್ವಾಮಿ ಶ್ರೀಹರಿಯೆ ಬಲ್ಲಇನ್ನಾರಿಗುಸುರಲೋ ಶ್ರೀಹಯವದನರಾಯ

 

೨೪೬
ಅನುದಿನವು ಶ್ರವಣಮನನಾದಿ ಸಾಧನ ಮಾಡು
ಇನ್ನು ಸಂಶಯವ್ಯಾತಕೊ ಪ.
ಏನು ಶಪಥವ ಮಾಡಲಿ ಮತವು ಹಿರಿದೆಂದು
ಜ್ಞಾನಿಗಳ ಸಮ್ಮತವೊ ಅ.ಪ.
ಗುರುಮಧ್ವಶಾಸ್ತ್ರವೆ ಸಕಲ ಶಾಸ್ತ್ರಧಿಕೆಂದು
ಶಿರವರಿದು ಮುಂದಿರಿಸಲೆ
ಪರಮತಜಾಲವೆಲ್ಲ ವೇದವಿರುದ್ಧವೆಂದು
ಶರಧಿಯನು ನಾ ದಾಟಲೆ೧
ಭಾಗವತಶಾಸ್ತ್ರವೆ ಬಹು ಭಾಗ್ಯವೆಂತೆಂದು
ನೆಗಹಿ ಪರ್ವತವ [ನಿಲಿಸಲೆ]
ಭಾಗವತ ನಿಂದಕಗೆ ಬಹು ನರಕವೆಂತೆಂದು ಪರ್ವ-
ತಾಗ್ರದಿಂ ಧುಮುಕಲೆ ೨
ವಿದಿತ ದೈವರೊಳಗೆ ವಿಷ್ಣು ಉತ್ತಮನೆಂದು
ವೇದಂಗಳ ಒಡನುಡಿಸಲೆ
ಅಧಿಕಾರಿಗಳೊಳಗೆ ಅಂಬುಜಸಂಭವನೆಂದು
[ಕಾದೆಣ್ಣೆ]ಯೊಳು ಮುಣುಗ [ಲೆ] ೩
ಪರಲೋಕಸಾಧನಕೆ ತಾರತಮ್ಯಮತವೆಂದು
ಗರಳವನು ಕುಡಿಯಲೆ
ಹರಿದಿನಕೆ ಮರುದಿನಕೆ ಸರಿಯಿಲ್ಲವೆಂತೆಂದು
ಹರಿವ ಹಾವನು ಹಿಡಿಯಲೆ ೪
ಗುರುಮಧ್ವರಾಯರೆ ಆತ್ಮರಕ್ಷಕರೆಂದು
ಅನಲವ ಕೈ ಪಿಡಿಯಲೆ
ಸಿರಿಹಯವದನನೆ ಅಮಿತ ಗುಣಪೂರ್ಣನೆಂದು ಅ-
ಶರೀರವನು ನುಡಿಸಲೆ ೫

 

೧೫೩
ಉಗಾಭೋಗ
ಅನ್ನದಾ[ಸೆ]ಗೆ ಪರರ ಮ[ನೆ]ಯ ಬಾಗಿಲ ಕಾಯ್ದುನೇಕ ಬಗೆಯಿಂದ ನೊಂದೆನೋ ಹರಿಯೆಅನ್ಯಥಾ ಪೊರಮಟ್ಟ್ಟು ಪೋಗಲೀಸರು ಅವರುಮನ್ನಿಸಿ ಕೃಪೆಯಿಂದ ಕೂಡಿಕೊಂಡಿಹರೊಅನಾಥಬಂಧು ಶ್ರೀಹಯವದನ ನಿನ್ನಮ[ನೆ]ಯ ಕುನ್ನಿಗೆಂಜಲನಿಟ್ಟಂತೆ ಎನ್ನ ರಕ್ಷಿಸೊ

 

೨೨
ಅನ್ನವನುಣಿಸಿದರತಿ ಹರುಷದಿಂದನಂದಗೋಪನ ಕಂದನಿಗೆ ಪ
ವೃಂದಾವನದಲ್ಲಿ ನಲಿನಲಿದಾಡಿದಗೋಪಿಯ ಕಂದನಿಗೆಮಂದರೋದ್ಧರ ಅರವಿಂದ ಮೂರುತಿಗೆಇಂದಿರೆ ಅರಸ ಶ್ರೀಹರಿ ಗೋವಿಂದನಿಗೆ೧
ಪಂಚಭಕ್ಷ್ಯವೆ ಪರಮಾನ್ನ ಶಾಲ್ಯಾನ್ನವೆಚಿತ್ರಾನ್ನಗಳ ಬಡಿಸಿಚಂಚಲಾಕ್ಷಿಯರು ಚಿನ್ನದ ತಟ್ಟೇಲಿಕಂಜಲೋಚನ ಕೃಷ್ಣಗಾರತಿ ಬೆಳಗುತ್ತ ೨
ದಧಿಘೃತಬಾಂಡವನೊಡೆದು ಬ್ರಹ್ಮಾಂಡಬಾಯಲಿ ತೋರಿದ ಹರಿಗೆಹದಿನಾರು ಸಾವಿರ ಗೋಪೇರನೊಡಗೂಡಿಕೊಳಲನೂದುವ ಹಯವದನ ಮೂರುತಿಗೆ ೩

 

೨೩
ಅನ್ಯಾಯದ ಮಾತುಗಳಾಡದಿರಿ ನೀವುಹೆಣ್ಣುಗಳಿರ ಕೇಳಿಪುಣ್ಯವಂತರಾದ ಕಾರಣ ಕೃಷ್ಣನಕಣ್ಣಿಂದ ನೋಡಿದಿರಿ ಪ.
ವಾರಿಜಭವಾದ್ಯರ[ಸೇರದಿರುವವ]ಸೇರೋನೆ ಸಣ್ಣವರಸೂರ್ಯನಂತೆ ತೇಜದವ ಬಂದು ನಿಶಿಯಲಿಸೂರಿಲಿ ನಿಂತಾನೇನೆ ೧
ಕ್ಷೀರಸಾಗರಶಾಯಿ ಆಗಿದ್ದವನು ಪಾಲುಸೋರೆ ಕದ್ದದ್ದು ನಿಜವೆನಾರೇರೆಂದರೆ ಮನಕೆ ತಾರದ ಸ್ವರಮಣಪೋರೇರ ನೆರೆದಾನೇನೆ ೨
ಕಾಲಯವನನ ಕೂಡ ಕಲಹ ಕೊಟ್ಟವ ನಿಮ್ಮಬಾಲರ ಬಡಿವನೇನೆಮೂಲೋಕವನೆಲ್ಲ ಭಾರಹೊತ್ತ ಹರಿ ತಾನುಆಳುಗಳೇರುವನೇನೆ ೩
ವಾಲಯದಿ ಸುರರಿಗೆ ಸುಧೆಯನಿತ್ತ ಗೋಪಾಲಮೊಲೆಯನುಂಬುವನೇನೆಪೇಳಲಿನ್ನೇನು ದನುಜಕುಲಾಂತಕ ಹರಿಮೂಲೆಯಲಡಗುವನೇನೆ ೪
ಸುರರು ಸ್ತುತಿಸೆ ತುಟಿ ಮಿಸುದವ ತಾನು[ಬಿರು]ಮಾತನಾಡುವನೆಕರಿರಾಜ ಕ[ರೆ]ದರೆ ಓಡಿ ಬಂದವ ನೀವುಕರಿಯೆ ಬಾರದಿಪ್ಪನೆ ೫
ಸ್ಥಿರವಾದ ವೈಕುಂಠದರ¸ನೆನಿಸುವ ಸ್ವಾಮಿಕೆರೆಭಾವಿ ತಿರುಗುವನೆಗರುಡವಾಹನನಾಗಿ ಮುರಹರ[ಕರುಗಳ]ಏರುವನೆ ೬
ಪುಣ್ಯ ಪ್ರೇರಿಸುವ ದೇವರ ದೇವನು ಪರ-ಹೆ[ಣ್ಣ]ನಪ್ಪಿಕೊಂಬನೆಉಣ್ಣಲಿತ್ತ ಎಡೆ ಒಲ್ಲ ನಿತ್ಯತೃಪ್ತಬೆಣ್ಣೆಯ ಮೆಲುವನೇನೆ೭
ಕಣ್ಣಿಗೆ ಕಾಣದ ಚಿನ್ಮಯ ಸರ್ವದಾ ನಿ-ಮ್ಮನೆಯೊಳಿಪ್ಪನೇನೆಚೆನ್ನರ ಚೆಲುವ ಕಾಮನಪಿತ ನಿಮ್ಮನುಆಣಕಿಸಿ ಆಡುವನೆ ೮
ಮೃದುವಾದ ಉರಗತಲ್ಪನು ಹಸಿಬಾಣಂತಿಯಅದಟ ಮಂಚದೊಳಿ[ಪ್ಪ]ನೆಎದೆಯಲಿ ಶ್ರೀವತ್ಸ ಘಮಘಮಿಸುವ ದೇವಮದಬೆಕ್ಕು ಒಯ್ದ್ದನೇನೆ ೯
ಮದನಾರಿಗೆ ತಾನು ಅದ್ಭುತ ಮಾಡಿದವಇದು ಆತನ ಲೀಲೆಯೆಪದುಮಾಕ್ಷ ಸಿರಿಹಯವದನರಾಯನ ಭಜಿಸಿಮುದದಿಂದ ನೀವು ಬಾಳಿರೆ ೧೦

 

೩೨೨
ಅಮ್ಮಮ್ಮ ಗೋಪಿಯೆನೆ ಏನೆಂಬೆ ಪರ
ಬೊಮ್ಮ ಮಗನೆಂಬೊ ಧೈರ್ಯಕೆ ಪ.
ಬೊಮ್ಮನಯ್ಯನ ಸಿರಿರಮ್ಮೆ ಪತಿಯ ಘನ
ಪೆರ್ಮೆ ಗುಣಗಣನಿಲಯನ ಅ.ಪ.
ಹೊಳೆವ ಶ್ರೀರೂಪು ವಟಪತ್ರದಲ್ಲಿ
ಪ್ರಳಯಜಲಧಿಯ ಶಯನನ
ಸೆಳೆಮಂಚದ ಮ್ಯಾಲೆ ಮಗ್ಗುಲೊಳಿಟ್ಟು ತನ್ನ
ನಳಿತೋಳಿಂದೆತ್ತಿದಳೆ ಗೋಪಿ ೧
ಚರಾಚರಂಗಳ ಸೃಷ್ಟಿ ಸ್ವಯಿಚ್ಛೆಯಿಂದ
ಪುರುಷರೂಪವ ಧರಿಸಿದ
ಪರಮಮಂಗಳ ಮೂರುತಿಯ ತನ್ನ
ಮರಿಯಂತೆ ಎತ್ತಿದಳೆ ಗೋಪಿ ೨
ಕತ್ತಲೆಯನು ನುಂಗಿ ತತ್ವಂಗಳನು ಕೊಂಡು
ಮತ್ತೆ ಬೊಮ್ಮಾಂಡದೊಳಗೆ ಪೊಕ್ಕು
ತತ್ವಸಾರದಿಂದೊಪ್ಪುವ ಕೊಮರನ
ಪೆತ್ತೆನು ಮಗ [ನ]ನೆಂದಳೆ ಗೋಪಿ ೩
ಅದಭ್ರಸೃಷ್ಟಿಗಳಿಗಗೋಚರನಾದ
ಆದಿಮೂರುತಿ ಸಚ್ಚಿದಾನಂದನ
ಸದಾ ತನಯನೆಂದೆತ್ತಿ ಮುದ್ದಿಸಿ ಸುಖ
ಸುಧೆಯಲೋಲಾಡಿದಳೆ ಗೋಪಿ ೪
ಚತುರುಭುಜ ಶಂಖ ಚಕ್ರ ಗದೆ ಪದುಮ
ಸುತಪ ಪ್ರಶ್ನೆಗೆ ವರವಿತ್ತ
ಶ್ರುತಿಶಿರೋಮಣಿಯೆಂದರಿಯದೆ ತಾ
ಪೆತ್ತೆನು ಮಗನನೆಂದಳೆ ಗೋಪಿ ೫
ಬೊಮ್ಮಕಲುಷಾನಂತ ಸಹಸ್ರಗಳ
ನಿಮಿಷಮಾತ್ರದಿ ಪಡೆದನ
ಬೊಮ್ಮಾಂಡವೆ ತನ್ನ ರೋಮಕೂಪದಲ್ಲಿಪ್ಪ್ಪ
ರನ್ನವೆ ಮಗನೆಂದಳೆ ಗೋಪಿ ೬
ಅನ್ನಂತ ರವಿತೇಜಕಿರೀಟದ
ಅನ್ನಘ್ರ್ಯ ಸರ್ವಾಭರಣ
ಪೊನ್ನ ವಸ್ತ್ರವನ್ನುಟ್ಟ ಅದ್ಭ್ಬುತ ಬಾಲಕನ
ತನ್ನ ಕುಮಾರನೆಂದಳೆ ಗೋಪಿ ೭
ಅನ್ನಂತಾನಂತ ಜೀವಗಣಗಳು
ಅನ್ನಂತಾನಂತ ಕರ್ಮಗಳು
ಅನ್ನಂತಾನಂತ ಗಾಯತ್ರಿಗೆ ಕರ್ತೃ ವಿಷ್ಣು
ವಿನ್ನ ಪಡೆದೆನೆಂದಳೆ ಗೋಪಿ ೮
ಅನ್ನಂತಾಸನ ಶ್ವೇತದ್ವೀಪ ವೈಕುಂಠ
ದನ್ನವರತ ವಾಸವಾಗಿಪ್ಪನ
ಅನ್ನಿಮಿಷರ ಯೋಚನೆಗೆ ಒಲಿದನ
ತನ್ನ ಕುಮಾರನೆಂದಳೆ ಗೋಪಿ ೯
ಧರ್ಮದ ವೃದ್ಧಿಗೆ ಧರ್ಮದ ಹಾನಿಗೆ
ತನ್ನಿಚ್ಛೆಯಲವತರಿಸಿದ
ಮಮ ಪ್ರಾಣಾಹಿ ಪಾಂಡವನೆನಿಸಿದ
ಅಮ್ಮಮ್ಮ ಮಗನೆಂದಳೆ ಗೋಪಿ ೧೦
ಉದ್ದಾಮ ಕಾಂಚೀದಾಮ ಕಂಕಣ ಶ್ರೀ-
ಮುದ್ರೆಯ ಶ್ರೀವತ್ಸಕೌಸ್ತುಭಧರನ
ಮಧ್ವಮುನಿಗೆ ತಾನೊಲಿದು ಬಂದನ
ಮುದ್ದಿನ ಮಗನೆಂದಳೆ ಗೋಪಿ ೧೧
ಸರಸಿಜಬೊಮ್ಮಾಂಡ ಒಡೆದಾಗ
ವಿರಿಂಚಿ ತೊಳೆದ ಪಾದೋದಕವ
ಹರ ಸೇವಿಸಲಾಗ ಶಿವನ ಮಾಡಿದ
ಹರಿಯ ಮಗನೆಂದಳೆ [ಗೋಪಿ] ೧೨
ದೇವಕಿ ಉದರದಲ್ಲಿದ್ದಾಗ ಬ್ರಹ್ಮಾದಿ
ದೇವರಿಂದಲ್ಲಿ ಕೀರ್ತಿಸಿಕೊಂಡು
ಭಾವಕಿ ದೇವಕಿ ವಸುದೇವನಲ್ಲಿ ಪಿತೃ
ಭಾವನೆ ಮಗನೆಂದಳೆ ಗೋಪಿ ೧೩
ಶಿಶುರೂಪವ ತೋರಿದ ಬೊಮ್ಮನ ಕಂಡು
ವಸುದೇವಗೆ ನದಿ ಎಡೆ ಬಿಡೆ
ಸಾಸಿರನಾಮ ಚಿತ್ರವಾಗಿದ್ದ ಜಗ-
ದೀಶ ಮಗನೆಂದಳೆ ಗೋಪಿ ೧೪
ಪಾಲಗಡಲಲ್ಲಿ ಪವಡಿಸಿಪ್ಪನ
ಕಾಲಮೇಲೆ ಮಲಗಿಸಿಕೊಂಡು
ನೀಲಮೇಘಶ್ಯಾಮಯೆಂದು ಬಣ್ಣಿಸುತಲಿ
ಪಾಲ ಕುಡಿಯೆಂದಳೆ ಗೋಪಿ ೧೫
ಆದಿದೇವನು ಬ್ರಹ್ಮಸೂತ್ರವ ಕಲ್ಪಿಸಿ
ವೇದ ವಿಭಾಗವ ಮಾಡಿದನ
ಆದರದಿಂತುಂತೆಂದು ಕಲಿಸಿ ಸಂ
ಮೋದದಿ ಮುದ್ದ್ದಾಡಿದಳೆ ಗೋಪಿ ೧೬
ಭಾನುಶತಕೋಟಿತೇಜಪ್ರಕಾಶನ್ನ
ಆನಂದವನೆ ನೋಡಿ ಮನ ಉಬ್ಬಿ
ಆನಂದನಿಧಿಯ ತೊಡೆಯ ಮ್ಯಾಲೆಯಿಟ್ಟು
ಆನೆಯಾಡೈಯೆಂದಳೆ ಗೋಪಿ ೧೭
ಶೃಂಗಾರನಿಧಿಯನ್ನು ಬಾಯೆಂದು ಕರೆದು ರ-
ಥಾಂಗಪಾಣಿಯನೆ ಎತ್ತಿಕೊಂಡು
ತಿಂಗಳನೋಡಯ್ಯ ಕಂದ ಎಂದಾತನ
ಕಂಗಳಿಗೆ ಕಪ್ಪನಿಕ್ಕಿದಳೆ ಗೋಪಿ ೧೮
ಸನ್ನಕಾದಿಗಳಯ್ಯನ ಪಿತನ ಕರೆ
ದೆನ್ನ ಮಾಣಿಕವೆಯೆಂದಪ್ಪಿಕೊಂಡು
ಹೊನ್ನ ತಾ ಗುಬ್ಬಿಯೆಂದಾಡು ಎನ್ನಯ್ಯನೆ
ಉನ್ನತಮಹಿಮನೆಂದಳೆ ಗೋಪಿ ೧೯
ಗಂಭೀರವಾರಿಧಿಗೆ ಅಂಬಾ ಹೂಡಿದ ತೋಳು
ಇಂದಿರೆಯನೆ ಅಪ್ಪಿದ ತೋಳು
ಶಂಭರಾರಿಯ ಪಿತ ತೋಳನ್ನಾಡೈ ಎಂದು
ರಮಿಸಿ ಮುದ್ದಾಡಿದಳೆ ಗೋಪಿ ೨೦
ಬ್ರಹ್ಮಾಂಡಕಟಹ ಪಡೆದ ಪಾದ ಉ-
ದ್ದಂಡ ಬಲಿಯಮೆಟ್ಟಿದ ಪಾದ
ಪುಂಡರೀಕಾಯತವಾದ ಪಾದದಿ ಪ್ರ-
ಚಂಡ ಕುಣಿಯೆಂದಳೆ ಗೋಪಿ ೨೧
ನಿತ್ಯತೃಪ್ತನು ಹಸ್ತ (ಸಿದ?) ನೆಂದೆನುತಲೆ
ಇತ್ತ ಬಾ ಹೊರೀಯೆಂದಾದರಿಸಿ
ಹೊತ್ತಾರಿಂದಮ್ಮೆ ಉಣ್ಣದಿರಲು ಹೊಟ್ಟೆ
ಹತ್ತಿಕೊಂಡಿತುಯೆಂದಳೆ ಗೋಪಿ ೨೨
ಅಮ್ಮೆ ಉಂಬುವ ಪುಟ್ಟ ಬಾಯ ಮುದ್ದಿನ ಮಾ
ರಮ್ಮೆಯನರಸುವನಚ್ಚರಿಯ
ಅಮ್ಮೆ ನೋಡಿ ನಗುವ ಮುದ್ದು ಬಾಲಕನ ಪರ
ಬೊಮ್ಮನೆಂದೇನು ಬಲ್ಲಳೆ ಗೋಪಿ ೨೩
ತಾಯ ಮೊಗವ ನೋಡುತ್ತಾಕಳಿಸುತ
ಬಾಯಲ್ಲೀರೇಳುಲೋಕವ ತೋರೆ
ಆಯತೆ ನೋಡಿ ಮರಳಿ ಕಂಗೆಟ್ಟು ವಿಶ್ವ-
ಕಾಯನ್ನ ಮಗನೆಂದಳೆ ಗೋಪಿ ೨೪
ಜ್ಞಾನಘನನ ವಿಶ್ವತೋನಯನನ
ಆನಂದಚರಿತ್ರನ ಅವ್ಯಕ್ತನ
ಜ್ಞಾನಿಗಳ ಹೃತ್ಕಮಲದೊಳಿಹನ ಕಣ್ಣಮುಚ್ಚಿ
ತಾನಾರು ಪೇಳೆಂದಳೆ ಗೋಪಿ ೨೫
ಹಾಲ ಹರವಿಯ ಒಡೆದು ಬಂದು ಗೋ-
ಪಾಲ ನೀನೆಲ್ಲಿಗೆ ಪೋದೆಯೆಂದು
ಕಾಲಕರ್ಮಂಗಳಿಗೆ ಕಾರಣವಾದೋನ
ಕೋಲಕೊಂಡಟ್ಟಿ ಬಂದಳೆ ಗೋಪಿ ೨೬
ಜಗದುದರ ಜಂಘಿಸುತ ಅಡಿಯಿಡೆ
ಮೃಗಲೋಚನೆ ಮೈಮರೆದಿರೆ
ಅಗಣಿತಮಹಿಮನು ಚರಿಸುತ ಬರ
ಲಾಗ ಒರಳಿಂದಲೆ ಕಟ್ಟಿದಳೆ ಗೋಪಿ ೨೭
ಆಮ್ಮಹಾ ಮತ್ತಿಯ ಮರನ ಮುರಿದು
ಬ್ರಹ್ಮಾದಿ ಸುರರು ಜಯವೆನ್ನೆ
ಶ್ರೀಮಣಿ ಶಿವರಿಂದ ಕೀರ್ತಿಸಿಕೊಂಬ
ಸ್ವಾಮಿಯ ಮಗನೆಂದಳೆ ಗೋಪಿ ೨೮
ಕತ್ತಲೆಯೊಳಗಿದ್ದು ಅಂಜಿದ ಮಗನೆಂದು
ಶ್ರುತಿಮಂತ್ರಗಳಿಂದುಚ್ಚರಿಸಿ
ಮೃತ್ಯುಂಜಯನ ಪಿರಿಯನೆತ್ತಿಕೊಂಡು
ಮತ್ತೆ ರಕ್ಷೆಯ ಕಟ್ಟಿದಳೆ ಗೋಪಿ ೨೯
ಶೇಷಶಾಯಿಯ ಹಾಸಿ ಮಲಗಿಸಿ ಚಾರು-
ವೇಷನ್ನ ನಿದ್ರಿಗೈಸುವೆನೆಂದು
ಸಾಸಿರಮುಖಭೂಷಣನ ಪಾಡುತ್ತ ಸಂ-
ತೋಷದಿ ಮೈಮರೆದಳೆ ಗೋಪಿ೩೦
ತ್ರಿಗುಣಾತೀತನ್ನ ಪೊಂದೊಟ್ಟಿಲೊಳ್ಮಲಗಿಸಿ
ಜೋಗುಳ ಪಾಡುವ ಯಶೋದೆಯ
ಎಸೆವ ನೀಲವಸ್ತ್ರನು ಪಾಡೆನ್ನೆ ಕೃಷ್ಣ ಅನು-
ರಾಗದಿಂದಲ್ಲೆ ಪಾಡಿದಳೆ ಗೋಪಿ ೩೧
ಹರಿಯ ಹೊರಿಸುವಳಲ್ಯಲ್ಲಿ ನಿಮ್ಮಣ್ಣ
ವರ ಸಿಂಹಾಸನವಾಗಿಪ್ಪನೆಂದು
ಸಿರಿಯಕೂಡೇಕಾಂತದಲಿಪ್ಪನ್ನ
ಪರಿಯಂಕನ ಪಾಡಿದಳೆ ಗೋಪಿ ೩೨
ಸಿರಿ ಉರದಲಿಪ್ಪ ಪಾದ ನಿಮ್ಮಣ್ಣನ
ಶಿರದಲೊಪ್ಪಿದೆಯೆಲೆ ಕಂದ
ಸುರವರರ ಭಾಗ್ಯನಿಧಿಯೆ ಬಲರಾಮ
ಪಿರಿಯನೆಂದು ಪಾಡಿದಳೆ ಗೋಪಿ ೩೩
ಕಣ್ಣಮುಚ್ಚಿದ ಕೃಷ್ಣನೆಂದು ತೊಟ್ಟಿಲ ಬಿಟ್ಟು
ಪುಣ್ಯಾಂಗನೆ ಮೈಮರೆದಿರೆ
ಅಣ್ಣ ಆಶನು ಬೆಣ್ಣೆಯ ಕಳಹೋದ
ಚಿಣ್ಣನ ಕಾಣೆನೆಂದಳೆ ಗೋಪಿ೩೪
ನೀಲಾಂಬರನ ಬೆನ್ನ ಮೆಟ್ಟಿ ನೆಲವಿನ
ಮ್ಯಾಲಿನ ಬೆಣ್ಣೆಯ ಮೆಲ್ಲೆ ಕೃಷ್ಣ
ಬಾಲಕಿಯರು ಕೂಡಿ ಕಳ್ಳ ಸಿಕ್ಕಿದನೆಂದು
ಆಲಿ ಬೊಬ್ಬ್ಬಿಡೆ ಕೇಳಿದಳೆ ಗೋಪಿ ೩೫
ಹುಟ್ಟ್ಟದ ಬೆಳೆಯದ ಹಸುಳೆ ಅಣ್ಣನ ಬೆನ್ನ
ಮೆಟ್ಟಿ ನೆಲವು ಜಗ್ಗಿದನೆಂದು
ರಟ್ಟು ಮಾಡಿದಿರೆಲ್ಲ ನೋಡಿರವ್ವಾ ಎನ್ನ
ಹೊಟ್ಟೆಯ ಪುಣ್ಯವೆಂದಳೆ ಗೋಪಿ ೩೬
ಕಂದನ ಎತ್ತಿಕೊಂಡು ರಾಜ್ಯದಂಗನೆಯರ
ಮಂದಿರವನೆ ಪೊಕ್ಕು ಬರುತಿರೆ
ಒಂದೊಂದು ಕೌತುಕವನೆ ಕಂಡಾನಂದ
ಸಂದೋಹದೊಳಗಿದ್ದಳೆ ಗೋಪಿ ೩೭
ಶಶಿಮುಖಿಯಂಗಳದ ಹಾಲಹಳ್ಳ
ಮೊಸರ ಮಡುವು ಬಾಗಿಲ ಮುಂದೆ
ಪ್ರಸಾದವೆಲ್ಲ ಬೆಣ್ಣೆ ಫಲಿತವಾಗಿರೆ
ಆ ಸಿರಿಯನೆ ಕಂಡಳೆ ಗೋಪಿ ೩೮
ವಾರಿಧಿಯೊಳಗಿದ್ದ ಪನ್ನಗಶಾಯಿಯ
ತೇರ ಮೇಲೆ ಇದ್ದ ಬಾಲಕನ
ಮೂರುತಿ ಒಂದೆಂಬೋ ಅ-
ಕ್ರೂರಗೊಲಿದೋನ ಕುಮಾರನೆಂದಳೆ ಗೋಪಿ ೩೯
ದ್ರೌಪದಿಗಕ್ಷಯವಿತ್ತನ ಗುರು ಸಾಂ-
ದೀಪಗೆ ಸುತನ ತಂದಿತ್ತನ
ಪ್ರೀತಿಯಿಂದಲಿ ಯಜ್ಞಪತ್ಯರಿಗೊಲಿದ ಸುಪ್ರ-
ತಾಪನ್ನ ಮಗನೆಂದಳೆ ಗೋಪಿ ೪೦
ಘಾತಪುತ್ರರ ಆರು ಮಂದಿಯ ತರಹೇಳಿ
ಮಾತೆಯೆಚ್ಚರಿಸೆ ಅಂಗೀಕರಿಸಿ
ಅತಿ ಬೇಗದಿಂದಣ್ಣನ ತಂದು ತೋರಿದ ಅ-
ಜಿತನ್ನ ಮಗನೆಂದಳೆ ಗೋಪಿ ೪೧
ಭಕುತ ಶ್ರುತದೇವ ಬಹುಳಾಶ್ವರಾಯಗೊಲಿ
ದೇಕ ಕಾಲದಿ ರೂಪೆರಡಾಗಿ
ಆ ಕರುಣಾಬ್ಧಿಯ ಮಾಯಾರೂಪಿನ ಪರಿ-
ಪಾಕವನೇನ ಬಲ್ಲಳೆ ಗೋಪಿ ೪೨
ಪೂತನಿ ಶಕಟವತ್ಸಾಸುರ ವೃಷಭನ
ಪಾತಕಿ ಚಾಣೂರ ಕುಂಜರನ
ಘಾತಿಸಿ ಕಂಸನ್ನ ರಂಟೆಯಾಡಿದ ಬಲು
ಭೂತನ್ನ ಮಗನೆಂದಳೆ ಗೋಪಿ೪೩
ಬಾಲತನದಲ್ಲಿ ಸಖನಾಗಿ ಬಂದು ಕು-
ಚೇಲ ತಂದವಲಕ್ಕಿಯ ಧರಿಸಿ
ಮೇಲುತನದಿಂದ ಸೌಭಾಗ್ಯವಿತ್ತ ಶ್ರೀ
ಲೋಲನ್ನ ಮಗನೆಂದಳೆ ಗೋಪಿ

 

೧೫೫
ಸುಳಾದಿ
ಅರಳಿದ ಕೆಂದಾವರೆಯ ಇರವ ಧಿಕ್ಕರಿಸುವಗಿರಿಯ ತಿಮ್ಮರಾಯನ ಚರಣಗಳ ಕಂಡೆ ನಾಅರುಣ ತಳದಲಿಪ್ಪ ಅಂಕುಶ ಧ್ವಜ ವಜ್ರಾದಿಸುರುಚಿರ ರೇಖೆಗಳ ಸೊಬಗ ಕಂಡೆ ನಾಬೆರಳ ಸಾಲ್ಗಳ ಮೇಲೆ ಬೇರೆ ಬೇರೆ ತೋರುವ ಭಾಸುರ ನಖಾಮಣಿಗಳ ಕಿರಣಗಳ ಕಂಡೆನಾಕರಿಯದಂತವ ಪೋಲ್ವಜಂಘೆಗಳ ಕಂಡೆನಾಕಿರುಗೆಜ್ಜೆ ಕಡೆಯ ಪೆಂಡೆಯದ ಪ್ರಭೆಯ ಕಂಡೆ ನಾಎರಡು ರನ್ನದ ಕನ್ನಡಿಯ ತೆತ್ತಿಸಿದವೊಲುಮುರಹರನ ಮೋಹನದ ಜಾನುದ್ವಯವ ಕಂಡೆ ನಾಉರುಟು ಕದಳಿಯ ಕಂಬದಂತೆ ವರ್ತುಳವಾದಹರಿಯ ಪೀವರ ತೊಡೆಗಳ ಕಂಡೆ ಕನಸಿನಲಿವರ ಪೀತಾಂಬರ ಕಾಂಚಿ ಕಿಂಕಿಣಿ ಜಾಲಗಳಿಂದಮೆರೆವ ವೆಂಕಟೇಶನ ಕಟಿಯ ಕಂಡೆ ನಾಕಿರುಡೊಳ್ಳಿನುದರದ ನಾಭಿಯ ತ್ರಿವಳಿಯ ಇಂ-ದಿರೆಯಪ್ಪಿಕೊಂಬ ಮಧ್ಯದ ಚೆಲುವ ಕಂಡೆ ನಾಸಿರಿದೇವಿ ಸಿರಿವತ್ಸ ಕೊರಳ ಕೌಸ್ತುಭ ಹಾರಸರದಿಂ ಮಿಂಚುವ ವಿಶಾಲುರಸ್ಥಳವ ಕಂಡೆನಾತ್ರಿರೇಖೆಗಳಿಂದೊಪ್ಪುವ ಶಂಖದಂದದಕರುಣಿ ವೆಂಕಟೇಶನ ಕಂಧರವ ಕಂಡೆ ನಾಕರಚತುಷ್ಟಯದಲ್ಲಿ ಶಂಖಚಕ್ರಗದೆ ಪದುಮವರ ಅಭಯಗಳ ಕಂಡೆ ಕರ್ಣಕುಂಡಲವ ಕಂಡೆ ನಾಸರಸ ಬಿಂಬಾಧರ ಸುಸ್ಮಿತ ನಾಸಪುಟದ ಕ-ಸ್ತುರಿನಾಮದ ಸರಸಿಜನಯನಗಳಿಂದೆಸೆವ ಸಿರಿಮೊಗವ ಕಂಡೆ ನಾಕುರುಳುಕೂದಲು ಫಾಲ ಸಿಂಗಾಡಿಯಂತಿಪ್ಪ ಪುರ್ಬುಕೂರ್ಮನಂದದಿಗಲ್ಲ ಚುಬುಕ ಚುಬುಕಾಗ್ರದಿಂಸಿರಿಯರಸ ಹಯವದನ ಶೇಷಗಿರಿ ಅರಸನ ಕಿರೀಟದಪರಿಪರಿಯ ಸೊಬಗ ನಾ ಕಂಡು ಕೃತಾರ್ಥನಾದೆ ನಾ ೧
ಮಠ್ಯತಾಳ
ಇಂದಿನದಿನ ಸುದಿನ ಗೋವಿಂದನ ಕಂಡ ಕಾರಣಹಿಂದಿನ ಪಾಪವೃಂದವು ಬೆಂದುಹೋಯಿತು ಎನಗೆಮುಂದಿನ ಮುಕುತಿ ದೊರಕಿತುತಂದೆ ಹಯವದನನೊಲವಿಂದ ೨
ತ್ರಿಪುಟತಾಳ
ಪಾಪಕಂಜೆನೊ ಸಂತಾಪಕಂಜೆನೊ ನಾನುಪಾಪಿಜನರ ಬಲು ಕೋಪಕಂಜೆನೊ ನಾನುಅಪತ್ತಿಗಂಜೆ ಯಮನ ಪಾಶಕಂಜೆನೊಶಾಪಕಂಜೆನೊ ಅನ್ಯರ ಪಾಟಿಮಾಡೆನೊತಾಪಸರಿಗೊಲಿದ ಶ್ರೀಪತಿ ಹಯವದನನ ಆ ಪಾದ ಪದುಮದ ನೆನಹೊಂದಿದ್ದರೆ ಸಾಕು ೩
ರೂಪಕತಾಳ
ಗುರು ಭಕುತಿಯಿರಬೇಕು ಹಿರಿಯರ ಕರುಣವು ಬೇಕುಹರಿಕಥೆಗಳ ನಿತ್ಯದಲಿ ಕೇಳುತಿರಬೇಕುವಿರಕುತಿ ಬೇಕು ವಿಷ್ಣುವಿನಾರಾಧನೆ ಬೇಕುವರಮಂತ್ರ ಜಪಬೇಕು ತಪಬೇಕು ಪರಗತಿಗೆಪರಿಪರಿಯ ವ್ರತಬೇಕು ಸಿರಿಪತಿ ಹಯವದನನಪರಮಾನುಗ್ರಹ ಬೇಕು ವಿಷಯನಿಗ್ರಹಬೇಕು ೪
ಝಂಪೆತಾಳ
ಹರಿಸಗುಣ ಸಾಕಾರ ಸಕಲಸುರರೊಡೆಯ ನಿ-ರ್ಜರರೆಲ್ಲ ಹರಿಯ ಕಿಂಕರರೆಂದರಿಯಬೇಕುಮರಣಜನನ ದೋಷಗಳಿಗತಿ ದೂರತರನೆನಿಪಸ್ಮರಣೆ ಸಂತತಬೇಕು ದುರಾಚಾರ ಬಿಡಬೇಕುಸಿರಿ ಹಯವದನ ಶೇಷಗಿರಿ ಅರಸನಸ್ಮರಣೆಯಿದ್ದವನು ಸಂಸಾರ ಭಯವನುತ್ತರಿಸುವ ೫
ಆದಿತಾಳ
ಶ್ರೀನಾಥ ಪ್ರಭುವೆತ್ತ ಹೀನಯೋನಿಗಳೊಳುನಾನಾದುಃಖಗಳುಂಬ ಹೀನ ಮಾನವನೆತ್ತಭಾನುಮಂಡಲವೆತ್ತ ಶ್ವಾನನುಬ್ಬರವೆತ್ತಮಾನವ ಹರಿ ನಾನೆಂಬುದ ನೆನೆಯದಿರುದಾನವಕುಲವೈರಿ ಹಯವದನ ವೆಂಕಟಶ್ರೀನಿವಾಸನ ದಾಸರ ದಾಸನೆನಿಸಿಕೊ ೬
ಏಕತಾಳ
ಕೈವಲ್ಯವನೀವ ನಮ್ಮಶ್ರೀವಲ್ಲಭನ ಕೈಯಿಂದನೀವೆಲ್ಲ ಕ್ಷುದ್ರವ ಬೇಡಿಗಾವಿಲನ ಪೋಲದಿರಿಸಾವಿಲ್ಲದ ಮುಕುತಿಪಥವಬೇಡಿಕೊಳ್ಳಿರೊನೋವಿಲ್ಲದಂತೆ ಸುಖಿಸಬಲ್ಲಕೋವಿದರೆಲ್ಲರುಪೂವಿಲ್ಲನಯ್ಯ ವೆಂಕಟಪತಿ ಹ-ಯವದನನ್ನ ಪ-ದವಲ್ಲದನ್ಯತ್ರ ದಾವಲ್ಲಿ ಭಯ ತಪ್ಪದು ೭
ಅಟ್ಟತಾಳ
ಗಾತ್ರವ ಬಳಲಿಸಿ ಸ್ತೋತ್ರವ ಪಾಡುತ್ತಯಾತ್ರೆಯ ಮಾಡಿ ವೆಂಕಟೇಶನ ಮೂರ್ತಿಯನೇತ್ರದಿ ನೋಡಿ ತಮ್ಮಿಷ್ಟವ ಪಡೆವ ಸ-ದ್ಭಕ್ತರ ಕಂಡುನಿನ್ನ ಮನದ ಭ್ರಮೆಯ ಬಿಡುದೈತ್ಯ ಪೌಂಡ್ರಕಮತವ ನೆಚ್ಚಿ ಕೆಡಬೇಡಚಿತ್ರಚರಿತ್ರ ಹಯವದನನೊಲಿಸಿಕೊ ೮
ದಿಲ್ಲಿಯರಾಯನ ಕಂಡು ಪುಲ್ಲಿಗೆಯ ಬೇಡುವರೆತಲ್ಲೆಯೂರಿ ತಪಸು ಇದ್ದಲ್ಲಿ ಸಾಧಿಸಿಕೊಳ್ಳಿರೊಕ್ಷುಲ್ಲಕರೆಂಜಲನುಂಡು ಬಾಳ್ವರ ನೋಡು ಲಕ್ಷುಮಿವಲ್ಲಭನಲ್ಲದೆ ಹೀನಫಲದಾಸೆ ಸಲ್ಲದಯ್ಯಚೆಲ್ವ ಹಯವದನ ತಿಮ್ಮನಲ್ಲದೆ ಕೈವಲ್ಯಕೆಹಲ್ಲು ಹಂಚಿಗೆ ಬಾಯಿತೆರೆದಂತೆ ಅಲ್ಲಲ್ಲಿಗೆ ಪೋಗದಿರಿ ೯
ರೂಪಕತಾಳ
ಹನುಮಂತನ ನೋಡು ತನುಮನಧನಂಗಳಶ್ರೀನರಸಿಂಹಗರ್ಪಿಸಿದಪ್ರಹ್ಲಾದನ ನೋಡುಅನುದಿನ ವನದಲ್ಲಿ ತಪವ ಮಾಡುವಮುನಿಜನರ ಕಂಡು ನಿನ್ನ ಮನದ ಭ್ರಮೆಯ ಬಿಡುಘನಮಹಿಮ ವೆಂಕಟಪತಿ ಹಯವದನನ ಭೃತ್ಯರ ಪರಿಚಾರಕರ ಭೃತ್ಯನೆನಿಸಿಕೊ ೧೦
ಜತೆ
ತಿರುಮಲೆರಾಯ ತ್ರಿವಿಕ್ರಮಮೂರುತಿಸಿರಿ ಹಯವದನನ [ಚರಣವೆ ಗತಿಯೆನ್ನು]

 

೧೫೪
ಉಗಾಭೋಗ
ಅರ್ಚಿಪೆನೆಂಬಾಸೆ ಘನವಯ್ಯ ಹರಿ ನಿನ್ನಮೆಚ್ಚಿಸಿ ಬದುಕುವೆನೆಂಬ ಮನದಾಸೆ ಘನವಯ್ಯಹೆಚ್ಚು ಬಾರಿ ಬಾರಿ ಎನ್ನ ಬೆಚ್ಚಿಸುವುದು ಉದರ ಕಿಚ್ಚುಕಚ್ಚುವ ಬಲು ಹುಲಿಯಂತೆಹುಚ್ಚುಮಾಡಿ ಕೊಲ್ಲುತಿದೆ ಅಚ್ಚ ಸರ್ವೋಚ್ಚನಿಚ್ಚಟದಿಂದಲಾಚ್ಯುತ ನಿನ್ನ ಮೆಚ್ಚಿಬಂದೆನು ನಾಸಚ್ಚಿದಾನಂದ ಹಯವದನಕೊಚ್ಚಿ ನಾನಾವ್ಯಾಧಿಗಳ ದುಶ್ಚಿತ್ತವ ಬಿಡಿಸು ಬೇಗಸಚ್ಚರಿತ್ರ ಸಲಹಯ್ಯ

 

೧೦೪
ಅಹುದಹುದೊ ಹನುಮಂತ ನಿನ್ನ ಮಹಿಮೆಅಹಿತರೆದೆಶೂಲ ನಿಜಪಾಲ ಹರಿಪದಲೋಲ ಪ.
ಬೇಡಿದರಿಗಭಯಹಸ್ತದ ಪ್ರಸಾದವನಿತ್ತುಕೂಡೆ ಮನದಭೀಷ್ಟಗಳ ಕೊಡುವೆಆಡಲನ್ನಳಕೊವಿಯನೊಡದು(?)ರಿಪುಖಳ ವಿ-ಭಾಡನೆಂದೆನಿಸಿ ಸೋದೆಯ ಜನರ ಪೊರೆದೆ ೧
ರಾಮಲಕ್ಷ್ಮಣರ ಪೆಗಲಲಿ ಹೊತ್ತುಕೊಂಡು ನಿ-ಸ್ಸೀಮನೆಂದೆನಿಸಿ ಸುಗ್ರೀವನಪ್ರೇಮದಿಂದಲಿ ತಂದು ಅವನಿಗಭಯವಿತ್ತುಭೂಮಿಕಪಿಗಳ ಕೂಡಿ ಸೀತೆಯನರಸಿದೆ೨
ಮಂಡೋದರಿಯ ಸುತನ ತುಂಡುಚೂರ್ಣವ ಮಾಡಿತಂಡ ತಂಡದ ಅಂಗಡಿಯ ಸಾಲೆಯಲಿಚಂಡ ಪಾವಕನಿಪ್ಪ ಸವುದೆಯೊಳು ಖಳರಹಿಂಡ ಹೋಮಿಸಿ ರಣಾಧ್ವರಕೆ ವೀಕ್ಷಿತನಾದೆ೩
ಸ್ವಾಮಿಕಾರ್ಯದಿ ದುರಂಧರನೆನಿಸಿ ನಿನ್ನ ಪದಪ್ರೇಮ ವರ್ಧಿಪುವುದೇನು ಚಿತ್ರತಾಮಸಜನರ ಸೀಮೆಯೊಳು ಪೂಜೆಯಗೊಂಬಧೀಮಂತ ನಿನಗಲ್ಲದುಳಿದವರಿಗುಂಟೆ ೪
ಗಿರಿವನವ ತಂದು ವಾನರ ಸಮೂಹವ ರಕ್ಷಿಸಿದೆದುರುಳ ರಾವಣನ ನೀನೆ ಗುದ್ದಿ ಧರೆಯೊಳಗೆಸಿರಿರಾಮನ ಪಂಥ ಗೆಲಲೆಂದುತಿರುಗಿದೆಯೆಲೊ ಹಯವದನನ ಮೋಹದ ಬಂಟ ೫

 

೧೦೫
ಅಹುದೊ ಹನುಮಂತ ನೀನಹುದೊ ಬಲವಂತ ನೀ-ನಹುದೋ ಮುಖ್ಯಪ್ರಾಣ ಮೂಲಗುರು ಅಹುದೊ ಪ.
ಅಹುದೊ ಧರಣಿಯ ಮ್ಯಾಲೆ ದಿವಾಕರನ ಪ್ರಭೆಯಂತೆಅಹುದೊ ಮಧ್ವಮತಕೆ ಬಿರುದು ನೀ ಅಹುದೊಅ.ಪ.
ಅಂಜನೆಯ ಗರ್ಭದಲಿ ಉದ್ಭವಿಸಿದ್ಯೊ ನೀನುಸಂಜೀವನವ ತಂದ್ಯೊ ಸಕಲ ಕಪಿಗಳಿಗೆಮಂಜುಭಾಷಣ ನೀನು ಶರಧಿಯನು ದಾಟಿದೆಯೊಕಂಜಾಕ್ಷಿ ಸೀತೆಗೆ ಉಂಗುರವನಿತ್ತೆ ೧
ಕುಂತಿಯ ಗರ್ಭದಲಿ ಉದ್ಭವಿಸಿದ್ಯೊ ನೀನುಪಂಥವನಾಡಿ ದಾಯಾದ್ಯರೊಡನೆಕಂತುಪಿತನ ಕೂಡಿ ಕೌರವರ ಗೆಲಿದ್ಯೊಸಂತೋಷದಿಂದ ಸಾಮ್ರಾಜ್ಯ ಕೈಗೊಂಡೆ ೨
ಮಧ್ವಾವತಾರದಲಿ ಮುನಿವೇಷವನು ತಾಳಿಅದ್ವೈತವೆಂಬೊ ಅರಣ್ಯವನು ತರಿದೆಮಧ್ವಶಾಸ್ತ್ರವೆಂಬೊ ಮತವ ನಿರ್ಣೈಸಿದೆಮುದ್ದು ಹಯವದನದಾಸ ನೀನಹುದೊ ೩

 

೨೪೮
ಆ ಹರಿ ನಾನೆಂಬ ಕುಮತವ ಸುಡು ಸುಡು
ದೇಹಿಯುಣವುಣದವನ ನೋಡುತಲಿಹ ಪ.
ನೀರೊಳು ಬಹುಕಾಲ ಪೊಕ್ಕು ಮುಳುಗಿದವ
ಭಾರದ ಗಿರಿಯನುದ್ಧರಿಸಿರುವ
ಈರೇಳು ಲೋಕದ ಹೊರೆಯನೆಲ್ಲವ ಹೊತ್ತು
ಹಾರುವ ಹಕ್ಕಿಯ ಹೆಗಲನೇರಿ ಬಹ ೧
ಜಲಚರ ಸ್ಥಲಚರ ಯಾಚಕನೆನಿಸಿ ಮ-
ತ್ತಲಸದೆ ಮಾತೃವಧೆಯ ಮಾಡಿದ
ಛಲದಿಂದಸುರರ ಕೊಂದು ಸಿಂಧುವ ದಾಟಿ
ಬಲುಗಳ್ಳನೆನಿಸಿ ಮಾವನ ಸೀಳ್ದವ ೨
ಸತಿಯರ ವ್ರತವ ಕೆಡಿಸಿ ಕುಮಾರ್ಗವ ತೋರಿ
ಕ್ಷಿತಿಯೊಳು ಯುಗದ ರಾಯರ ಕೊಲ್ಲುವ
ಶ್ರುತಿನಿಷಿದ್ಧಪಥದಿ ನಡೆದು ಪಾಪಕಂಜದೆ
ಯತಿಶ್ರುತಿತತಿಗಳೆಲ್ಲರ ಹೊಂದಿದ ೩
ಸಾವಿರ ಫಣದ ಫಣಿಯೊಳ್ಕಟ್ಟುವಡೆದಾಗ
ಹಾವಿನ ಮೈಮೇಲೆ ಒರಗಿದವ
ಜೀವರೆಲ್ಲರ ಕೊಂದು ಧರೆಯನೆಲ್ಲವ ನುಂಗಿ
ಸ್ಥಾವರದೊಂದೆಲೆಯನೆ ಪೊಂದಿಹ ೪
ಉರಿವ ಕಿಚ್ಚ ನುಂಗಿ ಜ್ವಲಿಸುವಗ್ನಿಯೊಳು
ಸ್ಥಿರವಾದ ಪ್ರಬಲದೈತ್ಯರ ವೈರವ
ಸಿರಿ ಹಯವದನನ್ನ ದಾಸರ ದಾಸನು
ಚರಣಸೇವಕನೆಂಬ ಮತವೆ ಲೇಸು ೫

 

೧೦೬
ಆಂಜನೇಯನೆ ಅಮರವಂದಿತ ಕಂಜನಾಭನ ದೂತನೆ ಪ.
ಮಂಜಿನೋಲಗದಂತೆ ಶರಧಿಯ ದಾಂಟಿದ ಮಹಾಧೀರನೆ ಅ.ಪ.
ಆಂಜನೇಯನೆ ನಿನ್ನಗುಣಪರಾಕ್ರಮ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ ೧
ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆಯೆನಿಸಿದೆರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ ೨
ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆತಂದು ಮುದ್ರೆಯನಿತ್ತು ಮಾತೆಯ ಮನವ ಸಂತೊಷಪಡಿಸಿದೆ ೩
ಜನಕತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ ೪
ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ ೫
ಭರದಿ ಬಂದು ಶ್ರೀರಾಮಪಾದಕ್ಕೆರಗಿ ಬಿನ್ನಹ ಮಾಡಿದೆಉರಗಗಿರಿ ಹಯವದನನ ಪರಮಭಕ್ತನೆಂದೆನಿಸಿದೆ ೬

 

೨೪೭
ಆಡಿನ ಮರಿಯೆತ್ತಂಬುಧಿಯೊಳಾಡುವ ಕರಿಯೆತ್ತ
ಬೇಡಿ ತಿಂಬ ಬಿನಗು ಮಾನವ ಮಾಡದಿರಚ್ಚುತ ನಾನೆಂಬ ಮನವ ಪ.
ಯಾಡಮೂಢನೊಬ್ಬ ಎಲ್ಲಾ ಜಗದೊಳು
ಗೂಢನಾಗಿ ನೋಡುತಿಹ ಸುಖಿಯೊಬ್ಬ ಗಡ
ನಾಡರಿಯೆ ದುಃಖಿಯೊಬ್ಬ ಸುಖದಲ್ಲಿ ಲೋ-
ಲಾಡುತಿಹ ನಿರನಿಷ್ಟನೊಬ್ಬ ಗಡ೧
ಕಡಲ ಕಡೆದು ಸುಧೆಯ ನೋಡಿ ತ-
ನ್ನೊಡಲ ಧಣಿಯಉಂಡವನೊಬ್ಬ ಹೆ-
ಣ್ಣುಡಿಗೆಯನ್ನುಟ್ಟು ಅಸುರರ ಬಾಯ
ಹೊಡೆದು ಬಡಿಸಿದವನೊಬ್ಬ ಗಡ ೨
ಆಡುತಲಬ್ಧಿಯೊಳಡಗಿದದ್ರಿಯ
ಕೋಡುಗಲ್ಲನೆತ್ತಿ ಹೂಡಲು ಬಲ್ಲೆಯ
ಓಡುತಲೊಬ್ಬನೊರಗಿದ್ದನ ಕಣ್ಣೊಳೊಡದು
ಮೂಡಿದಗ್ನಿಯಿಂದ ಸುಡುವೆಯ೩
ಮಡದಿಯಿಲ್ಲದೆ ಮಂದ ನೀನೊಬ್ಬನೆ
ಮಾಡುವೆಯ ಲೆಕ್ಕವಿಲ್ಲದೆ ಮಕ್ಕಳ
ಕೂಡಿದನ ಬಹಳ ಕೋಟಿಧನಂಗಳ
ಕೂಡಿರ್ದಗೆ ಕೊಟ್ಟು ನೋಡಿ ಸುಖಿಪೆಯ ೪
ದೃಢವಾಗಿ ನಿನ್ನುಂಗುಟ ನಖದಿಂ
ದೊಡಲನಾದರು ಒಡೆಯಲಾಪೆಯ
ಮೃಡಪ್ರಿಯ ಹಯವದನನಂತೆ
ಮೂಢಜಾತಿಯಾಗಿ ವೇದ ಓದುವೆಯ ೫

 

೧೫೧
ಆತ್ಮನಿವೇದನೆ
ಅಗಲಿ ನಾ ಸೈರಿಸಲಾರೆ ಪನ್ನಗರಾಜಶಯನನ ತೋರೆ ಪ.
ಖಗರಾಜಗಮನ ನಿಗಮಗೋಚರನಜಗದೇಕವಂದ್ಯನ ಜಾಣೆ ರಂಗಯ್ಯನ ಅ.ಪ.
ಮಾರನು ಮನೆಗ್ಹೋದನಮ್ಮ ಎನ್ನಸೇರದೆ ಮುನಿದ ಕಾಣಮ್ಮಯಾರಿಗೆ ಉಸುರಲೆ ನೀರಜಾಕ್ಷಿಯೆ ಎನ್ನಬಾರದೆ ಮುನಿದು ತಾಳಲಾರೆ ನೋಡಮ್ಮ ೧
ಹೆಣ್ಣುಜನ್ಮ ವ್ಯರ್ಥಕಾಣಮ್ಮ ಎನ್ನಪುಣ್ಯವಿನ್ನಿಂತಾಯಿತಮ್ಮಬಣ್ಣ ಸರವನೀವೆ ಭಾಮಿನಿರನ್ನಳೆಕಣ್ಣಾಣೆ ಕರೆತಾರೆ ಪುಸಿಯಲ್ಲ ಕೃಷ್ಣನ ೨
ಅಂತರಂಗವ ತಿಳಿದೇನಮ್ಮ ಪ್ರಾಣ-ಕಾಂತ ಮನೆಗೆ ಬಂದನಮ್ಮಪಂಥವ ಬಿಟ್ಟೀಗ ಬಂದೆ ನಾ ಪಾಲಿಸುವಕಂತುಜನಕ ಹಯವದನ ರಂಗಯ್ಯನ ೩

 

೧೫೬
ಆದಿವರಾಹನ ಚೆಲುವಪಾದವ ಕಾಣದೆ ಕಣ್ಣುವೇದನೆಯು ಆಗಿ ಬಲು ಬಾಧಿಸುತ್ತಲಿದೆಯೆನ್ನಈ ಧರೆಯೊಳಗೆ ಶುಕ್ಲನದಿಗೆ ದಕ್ಷಿಣದಲ್ಲಿದ್ದ ಮೇ-ಣ್ ದಾಡೆ ಅತ್ತಿತ್ತಂದ ಪ.
ಅಷ್ಟಾ ಸ್ವಯಂ ವ್ಯಕ್ತ ಶ್ರೀಮುಷ್ಣಅಷ್ಟಾಕ್ಷರ ಮಂತ್ರವನ್ನು ಇಷ್ಟುಮಾತ್ರ ತಿಳಿದವರೆಷ್ಟು ಪುಣ್ಯ ಮಾಡಿದಾರೊಸೃಷ್ಟಿಯೊಳಗೆ ಇವರು ಶ್ರೇಷ್ಠರೆಂದು ಅರಿತರೆಕಷ್ಟವು ಬಾರದು ಎಂದೆಂದುಅಷ್ಟದಾರಿದ್ರ್ಯ ಹೋಹುದು ಅಷ್ಟೈಶ್ವರ್ಯವು ಬಾಹುದುಇಷ್ಟು ಮಾತ್ರವಲ್ಲ ಕೇಳೊ ಅಷ್ಟಪುತ್ರರು ಆಹೊರು ದೃಷ್ಟಿಬಾರದಂತೆ ಮನದಿಷ್ಟ್ಟಾರ್ಥವ ಕೊಟ್ಟು ಕಾವಅಷ್ಟದಿಕ್ಕಿನೊಡೆಯನೊಬ್ಬ ೧
ನಿತ್ಯ ಪುಷ್ಕರಿಣಿ ಸುತ್ತಮುತ್ತ ಹದಿನಾರು ತೀರ್ಥನಿತ್ಯನೆಲೆಯಾಗಿರಲುಪ್ರತ್ಯೇಕಶ್ಚತ್ಥವಿರಾಜೀ ಅರ್ಥಿನೋಡಬಂದರೆಂದುಶ್ರುತ್ಯರ್ಥ ಕೊಂಡಾಡುತ್ತದೆ ಅತ್ಯಂತಾಹಂಕಾರದಿಂದಲಿಸತ್ಯಲೋಕದಿ ಬೊಮ್ಮನು ಭೃತ್ಯರನೆ ಕೂಡಿಕೊಂಡುಇತ್ತೆರದಿ ನಿಂತು ಕೈಯ್ಯಎತ್ತಿ ಮುಗಿವುದೆಂದೆನೆ ರತುನ ಭೂಷಣ ಆಣಿ-ಮುತ್ತಿನೋಲೆ ಮೂಗುತಿಯುಮುತ್ತೈದೆ ಅಂಬುಜವಲ್ಲಿಗೆ ಕೊಟ್ಯಾದಿವರಾಹಎಲ್ಲೆಲ್ಲಿ ಪುಣ್ಯತೀರ್ಥ ಎಲ್ಲೆಲ್ಲಿ ಹರಿಚರಿತ್ರೆಎಲ್ಲೆಲ್ಲಿ ಸ್ನಾನಸಂಧ್ಯಾಎಲ್ಲೆಲ್ಲಿ ಜಪ ತಪವು ಎಲ್ಲೆಲ್ಲಿ ದೇವತಾರ್ಚನೆಎಲ್ಲೆಲ್ಲಿ ಶ್ರೀಹರಿ ಕಥೆಎಲ್ಲೆಲ್ಲಿ ಮಧ್ವಮತಸ್ತೋಮ ಎಲ್ಲೆಲ್ಲಿ ಯಜ್ಞಾದಿಹೋಮಎಲ್ಲೆಲ್ಲಿ ಋಷಿಆಶ್ರಮಎಲ್ಲೆಲ್ಲಿ ಗಂಧರ್ವಗಾನ ಎಲ್ಲೆಲ್ಲಿ ನಂದನವನಮಲ್ಲಿಗೆ ಹೂವನದಲ್ಲಿ ವರಾಹ ಅಂಬುಜವಲ್ಲಿ ಚೆಲ್ಲಿತ್ತಾವನದಲ್ಲಿ ಇದ್ದ್ದಾದಿವರಾಹ ೩
ದಂಡಕಾರಣ್ಯಭೂಮಿಲಿ ತೊಂಡಮಂಡಲದೊಳಗೆಹಿಂಡುಹಿಂಡುಗಟ್ಟಿ ಬಪ್ಪದಂಡಕಾಸುರ ಪಡೆಯ ದಂಡಿಸಿ ದೈತ್ಯರನ್ನೆಲ್ಲತುಂಡುತುಂಡು ಮಾಡಿದ ನುದ್ದಂಡಸೇತುವರಾಹಯ್ಯನು ಕಂಡು ಭಜಿಸಿರೊ ಗಜಗಂಡು ಸುಯಜ್ಞಮೂರುತಿಯಕೊಂಡಾಡುವ ಭಜಕರ ಮಂಡೆ ಪೂ ಬಾಡದಿಂದೆನ್ನುಪುಂಡರೀಕಾಕ್ಷ ತಾ ಸವಿದುಂಡು ಮಿಕ್ಕಪ್ರಸಾದವನಾ ಪ್ರ-ಚಂಡ ಹನುಮಂತಗೆ ಕೊಟ್ಟ ೪
ಭಾರವ ಮುಗಿಪೋವ್ಯಾಳೆ ಗರುಡನ ಕಂಡು ಈಗಗುರುಮಂತ್ರ ಉಪದೇಶ ಶ್ರೀ-ಹರಿಸ್ಮರಣೆಗಳಿಂದ ನರಕಬಾಧೆÉಗಳ ಇಲ್ಲದಂತೆ ಮಾಡಿ-ದರು ಶ್ರೀಹರಿಯ ವಾಲಗದಿಂದಲಿತಿರುಪತಿ ಸುತ್ತ ಶೇಷಗಿರಿಯ ವಾಸದಲ್ಲಿಪ್ಪವರಾಹ ವೆಂಕಟೇಶನಚರಣಕಮಲವನ್ನು ಹರುಷದಿಂದಲಿ ಕಂಡುಪರಮಸುಖವನಿತ್ತ ಹಯವದನನ ನಂಬಿರೊ ೫

 

೧೦೭
ಆನಂದ ತೀರ್ಥರೆಂಬೊ ಅರ್ಥಿಯ ಪೆಸರುಳ್ಳಗುರು ಮಧ್ವಮುನಿರಾಯಏನೆಂಬೆ ನಿನ್ನ ಗುಣ ಮಹಾತ್ಮೆಗೆಗುರುಮಧ್ವಮುನಿರಾಯ ಪ.
ಮುಖ್ಯಪ್ರಾಣ ರೂಪನಾಗಿ ಮುನಿಯ ಚಾರಿತ್ರ್ಯ ತಾಳಿದಿಗುರುಮಧ್ವಮುನಿರಾಯಸೊಕ್ಕಿದ ದೈತ್ಯರ ಸೊಕ್ಕುಮುರಿದು ಶೋಭಿಸಿದಿಗುರುಮಧ್ವಮುನಿರಾಯ ೧
ವಾನರೇಂದ್ರ ರೂಪನಾಗಿ ವಾರಿಧಿಯ ದಾಟಿದಿಗುರುಮಧ್ವಮುನಿರಾಯಜಾನಕಿಗುಂಗುರಕೊಟ್ಟು ಜಗಜಟ್ಟಿಗಳ ಕುಟ್ಟಿದಿಗುರುಮಧ್ವಮುನಿರಾಯ ೨
ಕ್ಷಿತಿಯೊಳು ಕುಂತೀಸುತ ಭೀಮನೆಂದೆನಿಸಿದಿಗುರುಮಧ್ವಮುನಿರಾಯಅತಿಹಿತದಿಂದ ಯದುಪತಿಯ ಭಜಿಸಿದಿಗುರುಮಧ್ವಮುನಿರಾಯ೩
ಚಿಕ್ಕತನದಲ್ಲಿ ಶ್ರೀಕೃಷ್ಣನ ಪೂಜಿಸಿದಿಗುರುಮಧ್ವಮುನಿರಾಯಏಕವಿಂಶತಿ ಕುಭಾಷ್ಯವ ಜರಿದೆಯೊಗುರುಮಧ್ವಮುನಿರಾಯ೪
ಅತಿ ಬಲವಂತ ಶ್ರೀಹಯವದನನ್ನ ಭಜಿಸಿದ್ಯೊಗುರುಮಧ್ವಮುನಿರಾಯಸತತ ಭಕ್ತರಿಗೆ ಕರುಣಾಮೃತ ಕರೆದೆಗುರುಮಧ್ವಮುನಿರಾಯ ೫

 

೩೦೨
ಆನಂದಮಯಗೆ ಚಿನ್ಮಯಗೆ ಆ-
ದಿನಾರಾಯಣಗಾರತಿ ಎತ್ತಿರೆ ಪ.
ವೇದವ ತಂದು ಬೆಟ್ಟವ ಪೊತ್ತು ಧರಣಿಯ
ಸಾಧಿಸಿ ಕಂಬದಿ ಬಂದವಗೆ
ಭೂದಾನವ ಬೇಡಿ ನೃಪರ ಸಂಹರಿಸಿದ
ಆದಿಮೂರುತಿಗಾರತಿ ಎತ್ತಿರೆ ೧
ಇಂದುವದನೆ ಸಹಿತ ಅರಣ್ಯದೊಳಗಾಡಿ
ನಂದಗೋಕುಲದಲ್ಲಿ ನಲಿದವಗೆ
ಮಂದಗಮನೆಯರ ಮುಂದೆ ನಿರ್ವಾಣದಿ
ನಿಂದ ಮೂರುತಿಗಾರತಿ ಎತ್ತಿರೆ ೨
ತುರಗವನೇರಿ ದುಷ್ಟರ ಸೀಳಿ ಭಕ್ತರ
ಪೊರೆವ ಮಂಗಳ ಹಯವದನನಿಗೆ
ವರದ ಯಾದವಗಿರಿ ಚೆಲುವನಾರಾಯಣನ
ಚರಣಕಮಲಕಾರತಿ ಎತ್ತಿರೆ ೩

 

೨೪
ಆರ ಮಗನೆಂದರಿಯೆವೆ ಇವ ನಮ್ಮಕೇರಿಯೊಳು ಸುಳಿದು ಪೋದ ಪ.
ನೀಲವರ್ಣನ ಮೈಯ್ಯವ ತುಲಸಿ ವನ-ಮಾಲೆ ಕೊರಳೊಳು ಕೌಸ್ತುಭಬಾಲಪ್ರಾಯದ ಚೆನ್ನಿಗ ಬಂದು ಪೋ-[ಗ]ಲು ಸನ್ನೆಯ ಮಾಡಿದ ೧
ಚಿಕ್ಕಪ್ರಾಯದ ಚೆನ್ನಿಗ ಯೌವನದಲುಕ್ಕುವ ಕಡುಚೆಲುವನೆಚೊಕ್ಕಟಾದ ಚದುರನೊಬ್ಬ ಕುಚಕೆ ಕೈ-ಯಿಕ್ಕಿ ಕಸ್ತೂರಿ ಪೂಸಿದ ೨
ಪೀತಾಂಬರನುಡಿಸಿದ ವಿನಯ ಸವಿ-ಮಾತುಮಾತಿಗೆ ನಗಿಸಿದಪ್ರೀತಿಯಿಂದಲಿ ತನ್ನ ಚೆಂದುಟಿಯ ಅಧರಾ-ಮೃತವನುಣಿಸಿದ ೩
ಪಾರಿಜಾತವ ಸೂಡಿದ ಕಸ್ತೂರಿಯಗೀರುನಾಮವ ತಿದ್ದಿದದೂರದಲಿ ನಿಂತು ಎನ್ನ ಸೋಗೆಗಣ್ಣಓರೆನೋಟದಿ ನೋಡಿದ ೪
ಆಗ ಮೊದಲಾಗಿ ತನುವಾ ಮದನಶರತಾಗಿ ಕಟ್ಟುಡುಗಿದಾವೆಬೇಗದಲಿ ಹಯವದನ ಬಂದೆನ್ನಮೋಹದಿಂದಲಿ ಕೂಡಿದ ೫

 

೩೦೩
ಆರತಿಯೆತ್ತಿದರೆ ಕೇಶವ ನಾರಾಯಣಗೆ ಪ.
ಶಾಶ್ವತವೀವ ಮಾಧವ
ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ ಅ.ಪ.
ದ್ವಾಪರ ರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ
ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ೧
ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ
ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ ೨
ದಮೋದರ ವಾಲುಳ್ಳವಗೆ(?) ಪ್ರೇಮದಿ ಸಂಕರ್ಷಣಗೆ
ಕಾಮಿತಾರ್ಥವನೀವ ವಾಸುದೇವಗಾರತಿಯನೆತ್ತಿದರೆ ೩
ಘನಮಹಿಮ ಪ್ರದ್ಯುಮ್ನನಿಗೆ ಅನಿರುದ್ಧ ಪುರುಷೋತ್ತಮಗೆ
ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ ೪
ನರಸಿಂಹರೂಪನಾದವಗೆ ವರದ ಮೂರುತಿ ಅಚ್ಯುತಗೆ
ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ ೫
ಉಪೇಂದ್ರನೆಂದೆನಿಸಿಕೊಂಡವಗೆ ಅಪಾರಮಹಿಮ ಶ್ರೀಹರಿಗೆ
ಗೋಪಾಲಮೂರುತಿ ಶ್ರೀಕೃಷ್ಣಗಾರತಿಯನೆತ್ತಿದರೆ ೬
ಚತುರವಿಂಶತಿಮೂರುತಿಗಳಾ ಅತಿಶಯ ಧವಳವ ಪಾಡೆ
ಸತುಪುರುಷರಿಷ್ಟಾರ್ಥವೀವನು ಸಿರಿ ಹಯವದನ ೭

 

೨೫
ಆರಿಗಾರೋ ಕೃಷ್ಣ ಶೂರಕುಮಾರನೆಪ.
ಆರಿಗಾರೋ ನಿನ್ನ ಹೊರತು ಪೊರೆವರೆನ್ನಶೂರ ಮಾರಜನಕ ಅಕ್ರೂರವರದ ದೊರೆಯೆಅ.ಪ.
ಸತಿಸುತರು ಹಿತರೇನೊ ಮತಿಭ್ರಾಂತಿಬಡಿಸುವರುಗತಿ ಯಾರೊ ಮುಂದೆ ಗರುಡವಾಹನ ದೇವ೧
ಆಶಪಾಶದಿ ಸಿಲುಕಿ ಘಾಸಿಪಟ್ಟೆನೊ ಬಹಳವಾಸುದೇವನೆ ನಿನ್ನ ದಾಸನೆಂದೆನಿಸಯ್ಯ ೨
ಮಾಯಮಡುವಿನೊಳ್ಮುಳುಗಿ ಗಾಯವಾಯಿತೊ ಕಾಯ ಉ-ಪಾಯ ಯಾವುದೊ ಮುಂದೆ ರಾಯ ಹಯವದನ ೩

 

೩೦೪
ಆರೋಗಣೆ ಮಾಡೊ ಆನಂದಮೂರುತಿ ಪ.
ರನ್ನದ ತಳಿಗೆಯನ್ನು ಶೋಭನವಾದ
ಪೊನ್ನ ಬಟ್ಟಲುಗಳ ನೆರವಿ ಶ್ರೀಹರಿಗೆ
ನಿನ್ನರಸಿ ಆ ಲಕ್ಷ್ಮಿ ಸೊಸೆಯರ ಕೂಡಿ ಶಾ-
ಲ್ಯನ್ನ ಸವಿಶಾಕಗಳ ನೀಡಿದ ಕೈಯಿಂದ ೧
ತುಪ್ಪ ಮಧು ಚಿತ್ರಾನ್ನ ಪಾಯಸ ಕರಿಗಳ
ಲೇಪ ಸಾರಸ ಭಕ್ಷ್ಯಗಳ
ಗೋಪಾಲಕೃಷ್ಣಗೆ ದಧಿ ಪಕ್ವಫಲಂಗಳು
ಆ ಪದ್ಮಮುಖಿ ಬಡಿಸಿದಳು ಲೇಹ್ಯಪೇಹ್ಯವ ೨
ಎನ್ನ ಕುಂದುಗಳಾಮುನಿಗೆ ದಿವ್ಯ ಅನ್ನವೊ
ಮನ್ನಿಸಿ ಕರೆದು ನಿನ್ನ ಕರಕಂಜದಿಂದ
ಪೂರ್ಣವಮಾಡು ಭುಜಿಸೊ ಹಯವದನ ಕೃ-
ಪಾಳು ಸಕಲಲೋಕಪಾಲ ಸುರರೊಡೆಯನೆ ೩

 

೩೦೫
ಆರೋಗಣೆಯ ಮಾಡು ಸಾರಸುಖದೊಡೆಯ ಪ.
ಸತ್ಯವಾದ ಜಗಕೆ ಕರ್ತುಕಾರಣ ನೀನೆ
ಮುಕ್ತಿದಾಯಕ ನಿತ್ಯತೃಪ್ತನಹುದೈ
ಸತ್ಯವಾದವತಾರ ಸಕಲಗುಣ ಪರಿಪೂರ್ಣ
ಭಕ್ತಿದಾಯಕ ಸಿರಿ ಪರಮ ದಯಾಳು೧
ಅಣುರೋಮಕೂಪದಲಿ ಅಂಡಜಾಂಡಗಳಿರಲು
ಘನಕೃಪಾಂಬುಧಿ ನಿಮ್ಮ ಪೊಗಳಲಳವೆ
ಫಣಿಶಾಯಿಯಾಗಿದ್ದ ಭುವನವ್ಯಾಪಕ ಹರಿಯ
ಘನಭಕುತಿಲ್ಯಜಭವರು ಪೂಜೆಮಾಡುವರು ೨
ಗಂಗೆಗೋದಾವರಿ ತುಂಗಭದ್ರೆ ಯಮುನೆ
ರಂಗಸನ್ನಿಧಿಯಾದ ಕಾವೇರಿಯು
ಮಂಗಳ ಭೀಮರಥಿ ನಿಮಗೆ ಮಜ್ಜನಕೆ ಅಣಿಮಾಡಿ
ಅಂಗಜನಯ್ಯ ಭಾಪೆಂದು ಪೊಗಳೆ ೩
ರನ್ನಮಯವಾಗಿರ್ದ ಹೊನ್ನಮಂಟಪದೊಳಗೆ
ಸ್ವರ್ಣಪಾತ್ರೆಗಳಲ್ಲಿ ಸ್ವಯಂಪಾಕವು
ನಿನ್ನ ಸೊಸೆ ವಾಣಿ ಭಾರತಿದೇವಿ ಕಡುಜಾಣೆ
ಚೆನ್ನಾಗಿ ನೈವೇದ್ಯವನ್ನೆ ಮಾಡುವರು ೪
ಗಂಧ ಕಸ್ತೂರಿ ಪುನುಗು[ಚಂದನ] ಜವ್ವಾಜಿ
ಮುಂದೆ ಕುಂಕುಮದ ಕೇಸರಿಯ ಲೇಪ
ಚೆಂದದ ಕೇದಿಗೆ ಮುಡಿವಾಳ ಸಂಪಿಗೆ
ಕಂದರ್ಪನಯ್ಯಗೊಪ್ಪಿತು ಮಲ್ಲಿಗೆ ೫
ದೆಸೆದೆಸೆಗೆ ಪರಿಮಳಿಪ ಕುಶಲದ ಚಿತ್ರಾನ್ನ
ಬಿಸಿದೋಸೆಗೆ ಬೆಣ್ಣೆ ಲೇಹ್ಯಪೇಯ
ಬಸಿರೊಳಗೆ ಈರೇಳು ಜಗವನಿಂಬಿಟ್ಟವಗೆ
ನಸುನಗುತ ಇಂದಿರಾದೇವಿ ಬಡಿಸೆ ೬
ನೂರು ಯೋಜನದಗಲ ಸರಸಿಜ ಬ್ರಹ್ಮಾಂಡ ಹದಿ
ನಾರು ಬಣ್ಣದ ಚಿನ್ನದ್ಹರಿವಾಣವು
ಸಾರೆಯಲಿ ಪೊಂಬಟ್ಟಲೆಂಬ ಸಾಗರದೊಳಗೆ
ಮೇರುಗಿರಿಯೆಂಬೊ ದೀಪಗಳು ಬೆಳಗೆ ೭
ಆ ಕಮಲೆ ಮಾಡಿದ್ದು ನಾಲ್ಕುಬಗೆ ಘೃತ ಸೂಪ
ಲೋಕಪತಿಗನುವಾದ ದಿವ್ಯಾನ್ನವು
ಬೇಕಾದ ಪಂಚಭಕ್ಷ್ಯ ರಸಾಯನವ
ಏಕಾಂತದಲ್ಲಿ ನಿಮ್ಮ ದೇವಿ ಬಡಿಸೆ ೮
ಖಳರಕುಲವೈರಿಗೆ ತಿಳಿನೀರುಮಜ್ಜಿಗೆ
ಎಳನೀರು ಪಾನಕ ಸೀತಳುದಕ
ಬಳಲಿದಿರಿ ಬಳಲಿದಿರಿ ಎನುತ ಹಯವದನಗೆ
ನಳಿನಾಕ್ಷಿ ಕರ್ಪೂರವೀಳ್ಯವನೆ ಕೊಡಲು ೯

 

೧೦೮
ಆರ್ಯನ್ನ ಯೋಗಧುರ್ಯನ್ನ ಭಜಿಸಿವರ್ಯನ್ನ ಮಧ್ವಾಚಾರ್ಯನ್ನಪ.
ಅಕಳಂಕ ಮಹಿಮ ಚರಿತ್ರನ್ನ ಈಸಕಲ ಭುವನಕೆ ಪವಿತ್ರನ್ನಪ್ರಕಟ ಭಾರತಿ ಸತ್ಕಳತ್ರನ್ನ ಪಾಪ-ನಿಕರಕಾನನವೀತಿಹೋತ್ರನ್ನ ೧
ನಿರ್ಜಿತ ಪಾಷಂಡಯೂಥನ್ನ ದೂರವರ್ಜಿತ ಭವದುಃಖಬದ್ಧನ್ನಸಜ್ಜನರಘಕೆ ನಿರೋಧನ್ನ ದೋಷವರ್ಜಿತ ಗುಣಪೂರ್ಣಬೋಧನ್ನ ೨
ಸದಮಲ ಲಕ್ಷಣ ತುಂಗನ್ನ ಸಿರಿಸದನನ್ನ ಕರುಣಾಂತರಂಗನ್ನಮದಮೋಹ ತಿಮಿರ ಪತಂಗನ್ನ ಹಯ-ವದನನ್ನ ಚರಣಾಂಬ್ಜಭೃಂಗನ್ನ ೩

 

೨೬
ಆವ ಕುಲವೊ ರಂಗ ಅರಿಯಬಾರದು ಪ.
ಆವ ಕುಲವೆಂದರಿಯಬಾರದು ಗೋವುಕಾವ ಗೊಲ್ಲನಂತೆಪಾರಿಜಾತದ ವೃಕ್ಷವ ಸತ್ಯಭಾಮೆಗೆ ತಂದಿತ್ತನಂತೆ ಅ.ಪ.
ಗೋಕುಲದಲ್ಲಿ ಪುಟ್ಟಿದನಂತೆ ಗೋವಳರೊಡನೆ ಆಡಿದನಂತೆತಾ ಕೊಳಲನೂದಿ ಮೃಗಪಕ್ಷ್ಷಿಗಳ ಮರುಳುಮಾಡಿದ ದೇವನಂತೆ ೧
ಕಾಲಲ್ಲಿ ಶಕಟನ ಒದ್ದನಂತೆ ಗೂಳಿಯ ಕೊಂಬ ಕಿತ್ತನಂತೆಕಾಳಿಂಗನ ಹೆಡೆಯ ತುಳಿದು ಬಾಲೇರಿಗೊಲಿದ ದೇವನಂತೆ ೨
ಗೊಲ್ಲತೇರ ಮನೆಗಳಲ್ಲಿ ಕಳ್ಳತನವ ಮಾಡಿದನಂತೆಮೆಲ್ಲನೆ ಪೂತನಿ ಅಸುವ ಹೀರಿ ಬಲ್ಲಿದ ಕಂಸನ ಕೊಂದನಂತೆ ೩
ಸರ್ಪ ತನ್ನ ಹಾಸಿಗೆಯಂತೆ ಪಕ್ಷಿ ತನ್ನ ವಾಹನವಂತೆರ್ಪಭೂಷಣ ಮೊಮ್ಮಗನಂತೆ ಮುದ್ದುಮುಖದ ದೇವನಂತೆ ೪
ತರಳತನದಿ ಒರಳನೆಳೆದು ಮರನ ಕೆಡಹಿ ಮತ್ತವರ ಸಲಹಿದುರುಳ ರಕ್ಕಸರನು ಕೊಂದ ಚೆಲುವ ಹಯವದನನಂತೆ ೫

 

೧೫೭
ಆವ ರೀತಿಯಿಂದ ನೀಯೆನ್ನ ಪಾಲಿಸೊಶ್ರೀವಿಭು ಹಯವದನ ಪ.
ಈ ವಿಧ ಭವದೊಳು ಇಷ್ಟು ಬವಣೆಪಟ್ಟೆತಾವರೆದಳನಯನ ಹಯವದನ ಅ.ಪ.
ಕಾಮನ ಬಾಧೆಯ ತಡೆಯಲಾರದೆ ಕಂಡಕಾಮಿನಿಯರನೆ ಕೂಡಿನೇಮನಿಷ್ಠೆಯಿಂದ ನಿನ್ನನು ಭಜಿಸದೆಪಾಮರನಾದೆನೊ ಹಯವದನ ೧
ಅಂಗನೆಯರಲ್ಲಿ ಅಧಿಕ ಮೋಹದಿಂದಶೃಂಗಾರಗಳನೆ ಮಾಡಿಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆಭಂಗಕ್ಕೆ ಒಳಗಾದೆನೊ ಹಯವದನ ೨
ಹೀನ ಸಂಗವನೆಲ್ಲ ಹಯಮುಖದೇ-ವನೆ ವರ್ಜಿಸುವಂತೆ ಮಾಡೊಜ್ಞಾನಿಗಳರಸನೆ ದಯವಿಟ್ಟು ನಿನ್ನನುಧ್ಯಾನಿಸುವಂತೆ ಮಾಡೊ ಹಯವದನ ೩

 


ಶ್ರೀಹರಿ ಸ್ತುತಿ
ಆವಕಡೆಯಿಂದ ಬಂದೆ ವಾಜಿವದನನೆಭಾವಿಸುವ ಮುನಿಯ ಕಾಣುತ ಪ.
ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲುನೈವೇದ್ಯವನ್ನು ಇತ್ತು ಭಜಿಸುವೆ ಅ.ಪ.
ಭಕುತಿಕಡಲೆ ಜ್ಞಾನವೈರಾಗ್ಯಬೆಲ್ಲದಮುಕುತಿ ಆನಂದಸುಖದ ಕ್ಷೀರಲಡ್ಡಿಗೆಯುಕುತಿ ಧ್ಯಾನಕೊಟ್ಟು ನೀನು ಎಲ್ಲಮಾತಲಿಶಕುತಿ ಸಂತೋಷ ಮಹಿಮೆ ತೋರಬಂದೆಯ ೧
ಹೆತ್ತತುಪ್ಪ ಸಕ್ಕರೆಯ ಮಡ್ಡಿಮುದ್ದೆಯತುತ್ತುಮಾಡಿ ಕೊಡಲು ಅದನು ಮೆಲುತ ಮೆಚ್ಚುತಅತ್ಯಂತ ಸಂತೋಷ ನೀನು ಆಟತೋರುತಭೃತ್ಯ ಮುನಿಯ ಸಲಹಬಂದೆಯ ೨
ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆನಿಲುವೋ ಜ್ಞಾನಭಕ್ತಿಯನ್ನು ನೀಡಬಂದೆಯಸುಲಭ ಸುಮುಖ ಸುಪ್ರಸನ್ನ ಹಯವದನನೆಚೆಲುವ ಚಿನ್ಮಯಮೂರ್ತಿ ನಮ್ಮ ಸಲಹ ಬಂದೆಯ ೩

 

೧೫೮
ಇಂದಿರೆ ಅರಸ ಚಂದ್ರಮಂಡಲಮಂದಿರಾಖಿಳವಂದ್ಯ ಹಯಮುಖಎಂದೆಂದೆನ್ನ ಮನದಿಂದಗಲದಿರುಮಂದರಾದ್ರಿಧರ ಪ.
ತುಂಗಮಹಿಮ ತುರಂಗವದನ ಶು-ಭಾಂಗ ರಿಪುಕುಲಭಂಗ ಸುಜನರಸಂಗ ಎನ್ನಂತರಂಗ ಮಲಿನವಹಿಂಗಿಸುವುದೆಂತೊಮಂಗಳಾಬ್ಧಿತರಂಗದುಬ್ಬಿಗೆತಿಂಗಳೆನಿಸುವ ಅಂಗಜನ ತಂದೆರಂಗ ನಿನ್ನ ಪಾದಕೆಂಗಮಲದಲ್ಲಿಭೃಂಗನಪ್ಪುದೆಂತೊ ೧
ವಾರಿಜಾಕ್ಷ ಮುರಾರಿ ಮದವೆಂಬೋಮಾರಿ ಮುಸುಕಿತು ಸಾರಿ ಮತ್ಸರಮಾರನೊಡಗೂಡಿ ದಾರಿ ತಪ್ಪಿಸಿಗಾರುಮಾಡಿತೆನ್ನ ನಾ-ನಾರೆ ಕ್ರೋಧಮಹೋರಗನ ವಿಷ-ಧಾರೆಗೆ ಭಯಕಾರಿ ಹರಿ ನಿನ್ನಚಾರುಚರಣವ ಸಾರಿದೆನಿಂದುತೋರಿ ಸಲಹಬೇಕು ೨
ಧಸ್ನ್ಯ ಸುರರಜೀವನ್ನ ಕರುಣಸಂ-ಪನ್ನ ನಿತ್ಯಪ್ರಸನ್ನ ಚಿನುಮಯಪನ್ನಗಾರಿವಾಹನ್ನ ಶಶಿಸಮ-ವರ್ನ ಹಯವದನನಿನ್ನ ಪಾದಪಾವನ್ನಸುರತರು-ವಿನ್ನ ನೆಳಲೊಳಿಟ್ಟೆನ್ನ ಸಲಹಬೇ-ಕನ್ಯಥಾ ಗತಿಶೂನ್ಯ ನಾನೆಲೊಪೂರ್ಣಪುರುಷರನ್ನ ೩

 

೧೫೯
ಇಂದಿರೆಯರಸ ಸುಕುಮಾರ ಇಂತುನೊಂದವಳ ಬಳಿಗೇಕೆ ಬಾರಇಂದವನ ಬೇಗ ತೋರ ಕರತಾರದಿರೆಕೊಂದಲ್ಲದೆ ಬಿಡ ಸಖಿ ಮಾರ ಪ.
ಮಧುರೆಗೆ ಪೋಗಿ ನಮ್ಮ ಮರೆದ ಅಲ್ಲಿಇದಿರಾದ ಖಳರನು ಜರಿದಕದನಕರ್ಕಶನೆಂಬ ಬಿರುದ ತೋರಿ ತನ್ನಪದಕೆರಗಿದವರ ಪೊರೆದ ೧
ಕಂದರ್ಪಕೋಟಿಯ ಗೆಲುವ ಇವಸೌಂದರ್ಯದಿಂದತಿ ಚೆಲುವನಂದನ ಕಂದ ಭಕ್ತರಿಗೊಲಿವ ಇವನಂದನ ಮುನಿವೃಂದಕೆ ಸಲುವ ೨
ಕೊಡುವನು ಬೇಡಿದ ಫಲವ ಇವಬಿಡ ಸಖಿ ಖಳರೊಳು ಛಲವಒಡಂಬಡಿಸಿ ರಿಪುವ ಗೆಲುವನೆಂದುಮೃಡ ಬಲ್ಲನಿವನ ಕೌಶಲವ೩
ಇಂಥ ಭವದ ದುರಂತ ಬಲುಸಂತಾಪವನುಂಬ ಭ್ರಾಂತಅಂಥಾ ಹರಿಯೊಳೆನ ಪಂಥಸಲ್ಲಸಂತತ ನಿನಗೆ ನಿಶ್ಚಿಂತ ೪
ಇನ್ನಾದರೆ ಸುಪ್ರಸನ್ನ ನಮ್ಮಚೆನ್ನಿಗ ಹಯವದನನ್ನವರ್ಣಿಸಿ ವರ್ಣಿಸಿ ನಿನ್ನವನ ತಾರೆಹೆಣ್ಣೆತೋರೆ ಬೇಗದಿ ಅವನ ೫

 


ಇಂದಿರೆಯರಸನೆ ಬಾರೊ ಇಂದುವದನನೆ ಬಾರೊಕಂದರ್ಪನ ತಂದೆ ಬಾರೊ ಮಂದರಧರ ಬಾರಯ್ಯ ಪ.
ಮಚ್ಚನಾದವನೆ ಬಾರೊ ಕಚ್ಛಪರೂಪನೆ ಬಾರೊನೆಚ್ಚಿದ ಮೇದಿನಿ ತಂದ ಸಚ್ಚರಿತ್ರನೆ ಬಾರೊಅಚ್ಚ ನರಸಿಂಹ ಬಾರೊ ಹೆಚ್ಚಿದ ವಾಮನ ಬಾರೊಕೊಚ್ಚಿ ನೃಪರತರಿದ ಸಚ್ಚಿದಾನಂದ ಬಾರಯ್ಯ ೧
ರಾವಣವೈರಿ ಬಾರೊ ಮಾವನ್ನ ಕೊಂದವನೆ ಬಾರೊಆವಾಗ ಭಕ್ತರಭೀಷ್ಟ ಈವ ದೇವನೆ ಬಾರೊಪಾವನ್ನ ಬೌದ್ಧನೆ ಬಾರೊ ಈ ವಸುಧೆಯೊಳು ಕಲ್ಕಿರಾವುತನಾಗೆಸೆದ ಶ್ರೀ ವಾಸುದೇವ ಬಾರಯ್ಯ ೨
ಇಂಗಿತವರಿತು ಬಾರೊ ಇಂಗಡಲರಸನೆ ಬಾರೊತುಂಗಗುಣಗಣ ಬಾರೊ ಸಂಗೀತಪ್ರಿಯ ಬಾರೊಉಂಗುರಗಳಿಂದೊಪ್ಪುವ ಅಂಗುಳಿಯ ಸನ್ನೆಯಿಂದಪೊಂಗೊಳಲೂದುವ ಚೆಲ್ವ ಮಂಗಳಮೂರುತಿ ಬಾರಯ್ಯ ೩
ಪಂಕಜನಾಭನೆ ಬಾರೊ ಶಂಕರಪ್ರಿಯನೆ ಬಾರೊಕಂಕಣ ಕುಂಡಲ ಹಾರಾಲಂಕೃತ ಮೂರ್ತಿ ಬಾರೊಕುಂಕುಮಶೋಭಿತ ಲಕ್ಷ್ಮಿ ಅಂಕಿತ ವಕ್ಷನೆ ಬಾರೊಕೊಂಕಿದ ಕುರುಳ ಚೆಲ್ವ ಬಿಂಕವ ಬಿಟ್ಟು ಬಾರಯ್ಯ

 

೩೦೬
ಇಂದ್ರಮಾಣಿಕ ಬಿಗಿದ ಹೊಸ ಕುಂದಣದಾರತಿನೆತ್ತಿ
ಇಂದ್ರನ ರಾಣಿ ಶಚಿದೇವಿ
ಶಚಿದೇವಿ ಆರತಿನೆತ್ತಿ ಇಂದ್ರಾಧಿಪತಿಯ ಚರಣಕೆ ೧
ಹೊನ್ನ ಹರಿವಾಣದಲಿ ಹೊಸ ಕುಂದಣದಾರತಿನೆತ್ತಿ
ಕನ್ಯೆ ಸೌಪರ್ಣಿ ಉಮಾದೇವಿ
ಉಮಾದೇವಿ ಆರತಿನೆತ್ತಿ ಬ್ರಹ್ಮಾಂಡ ಒಡೆದ ಚರಣಕೆ ೨
ಇಂತು ಹಯವದನನ ಎಂತು ನಾ ಪೊಗಳುವೆ
ಸಂತೋಷದಿಂದ ಸುರರೆಲ್ಲ
ಸುರರೆಲ್ಲ ಪಾಡಿದರು ಕಾಂತೇರಿಗೆಲ್ಲಾತನುವೆಂದು(?) ೩

 

೨೭
ಇಂದ್ರಲೋಕವ ಪೋಲ್ವ ದ್ವಾರಕೆಯಿಂದ ನಮ್ಮನು ಸಲಹಲೋಸುಗಸಿಂಧುವಿನ ಮಾರ್ಗದಲಿ ತೌಳವ ಜನರ ದೇಶಕ್ಕೆಬಂದು ಮಧ್ವಾಚಾರ್ಯರ ಕೈ-ಯಿಂದ ಪೂಜೆಯಗೊಂಬ ಕೃಷ್ಣನಮಂದಹಾಸದ ಮುದ್ದುಮೊಗ ಸೇವಿಪಗೆ ಸಂಪದವು೧
ಒಂದು ಕರದಲಿ ನೇಣಸಿರಿ ಮ-ತ್ತೊಂದರಲಿ ಕಡೆಗೋಲು ವರಮಣಿಯಿಂದ ಶೋಭಿಪ ನಾಭಿ ವಕ್ಷತಾವರೆ ಕಿರುಡೊಳ್ಳುಚಂದ್ರನಂದದಿ ವದನ ಸಮದಲಿನಿಂದ ಪಾದ ಮನೋಹರೋರುದ್ವಂದ್ವ ಶ್ರೀಕೃಷ್ಣನ ಮೂರ್ತಿಯ ನೋಳ್ಪರ ನಯನ ಸುಕೃತಫಲ೨
ನಿತ್ಯದಲಿ ಗೋಘೃತದ ಮಜ್ಜನಮತ್ತೆ ಸೂಕ್ತ ಸ್ನಾನ ತದನು ಪ-ವಿತ್ರ ಮಂತ್ರ ವಿಚಿತ್ರ ತರವಹ ಕಲಶದಭಿಷೇಕವಸ್ತ್ರಗಂಧ ವಿಭೂಷಣಂಗಳವಿಸ್ತರಿಪ ಶ್ರೀತುಲಸಿ ಪುಷ್ಪದಿಭಕ್ತಿಭರಿತರು ಮಾಡುವಾರಾಧನೆಯನೇನೆಂಬೆ ೩
ಸುತ್ತ ಸುಪ್ತಾವರಣದರ್ಚನೆವಿಸ್ತರಿಪ ಸ್ತೋತ್ರಗಳ ಗಾನ ವಿ-ಚಿತ್ರರ ನೈವೇದ್ಯವು ಸುವೀಳೆಯ ಧೂಪ ದೀಪಗಳುರತ್ನದಾರ್ತಿಗಳ ಸಂಭ್ರಮಛತ್ರ ಚಾಮರ ನೃತ್ಯಗೀತಾ-ದ್ಯುತ್ಸವಗಳೊಪ್ಪಿಹವು ದೇವನ ಮುಂದೆ ದಿನದಿನದಿ ೪
ಅಪ್ಪಮೊದಲಾದಮಲ ಭಕ್ಷ್ಯವತುಪ್ಪ ಬೆರೆಸಿದ ಪಾಯಸವ ಸವಿ-ದೊಳ್ಪ ಶಾಕಗುಡಂಗಳನು ಕಂದರ್ಪನಪ್ಪನಿಗೆಅರ್ಪಿಸುವರನುದಿನದಿ ರಸ ಕೂ-ಡಿಪ್ಪ ಪಕ್ವಫಲಾದಿಗಳು ರಮೆಯಪ್ಪಿಕೊಂಡಿಪ್ರ್ಪಚ್ಯುತಗೆ ಪೂಜಿಸುವ ಯೋಗಿಗಳು ೫
ಮೆರೆವ ದೀಪ ಸಹಸ್ರ ಅಚ್ಯುತನೆರಡು ಭಾಗದೊಳಿಂದ್ರನೀಲಸ್ಫ್ಪುರದಮಲ ಮಣಿಗಳೊಪ್ಪಿಹವೊಪ್ಪಿಹವುದುರಿತರಾಶಿಗಳವನ ಸೇವಾನಿರತ ಸುಜನರ ತನುಮನಂಗಳತೊರೆದಿಹುದು ಸಿರಿ ನೆಲಸಿಹುದು ಶ್ರೀಕೃಷ್ಣನ ಮನೆ ಶೃಂಗಾರ ೬
ತೊಟ್ಟ ಭೂಷಣವಿಟ್ಟ ಮಕುಟವನುಟ್ಟಪಟ್ಟೆಯ ಮುಟ್ಟಿ ತ್ರಿಗುಣವಬಿಟ್ಟ ದುರಿತವ ಕೊಟ್ಟನೀ ಶುಭ ವಾಕ್ಯಗಳ ನಮಗೆನಿಷ್ಠಸುಜನರು ತಟ್ಟನೆ ಮನ-ಮುಟ್ಟಿ ನೆನೆವರಿಗಿಷ್ಟ ಅಖಿಳವಕೊಟ್ಟು ಸಲಹದೆ ಸೃಷ್ಟಿಯೊಳು ನೀಗಿಪ್ಪೊ ಗುಣಪುಷ್ಪ ೭
ಏನನೆಂಬೆನು ಕೃಷ್ಣ ದೀನರ ದೊರೆಯು ನೀನೆಂದಾದ ಕಾರಣಮಾನವರ ಸುರಧೀನುತನ ನಿನಗಿಂದು ಸೇರಿತಲಹೀನತೆಯ ಪರಿಹರಿಸಿ ಭಾಗ್ಯಾಂಭೋನಿಧಿಯೆ ನಿಜರ್ಗೀವ ನಿನ್ನ ಮ-ಹಾನುಭಾವದ ಬಲುಮೆಗೆಣೆಗಾಣೆನು ಮಹಾಪ್ರಭುವೆ ೮
ಭಾಪು ದಿವಿಜರ ದೇವರಾಯನೆಭಾಪು ಭಜಕರಅಭೀಷ್ಟವೀವನೆಭಾಪು ಹರಿನೀಲೋತ್ಪಲನೆ ಶ್ಯಾಮಲನೆ ಕೋಮಲನೆಭಾಪು ಹಯವದನಾಖಿಲೇಶನೆಭಾಪು ಸುಜನರ ಪಾಪ ನಾಶನೆಭಾಪು ಕೃಷ್ಣಾಲಸತ್ರೈಪಾಲಕನೆ ಬಾಲಕನೆ ೯

 

೨೮
ಇತ್ತ ಬಾರೊ ಒಲವುತ್ತ ಬಾರೊಹತ್ತವತಾರದ ಚಿತ್ರಚಾರಿತ್ರ ಎನ್ನತ್ತ ಬಾರೊ ಪ.
ಒದ್ದು ಶಕಟನ ಮುರಿದ ಶಿಶುವೆ ನೀನೆದ್ದು ಬಾರೊ ಅ-ಳದ್ದು ಬ್ರಹ್ಮಾಂಡವ ಸೀಳ್ದ ಮಹಿಮೆಸಾಲದ್ದೆ ಬಾರೊಕದ್ದು ಬೆಣ್ಣೆನೇಕೆ ಮೆದ್ದೆ ದಾರಿದ್ರವೆ ಮುದ್ದೆ ಬಾರೊ ಆಡು-ತಿದ್ದ ಮಕ್ಕಳ ನೀನು ಗುದ್ದಿ ದೂರನು ತರುತಿದ್ದೆ ಬಾರೊ ೧
ಹಿಂದೆ ಬಾಯೆಂದರೆ ಮುಂದೆ ಬಾಹೆ ಗೋವಿಂದ ಬಾರೊ ಎನ್ನ ಕಂದ ಬಾಯೆಂದರೆ ಮುಂದೆ ನಿಲುವೆ ಮುಕುಂದ ಬಾರೊಬಂದೆನ್ನ ಮುಂದೆ ನೀ ನಿಂದಿರು ನಿತ್ಯಾನಂದ ಬಾರೊಎಂದೆಂದು ಭಕುತರ ಹೊರೆದಿಹ ಕಾರುಣ್ಯಸಿಂಧು ಬಾರೊ ೨
ಮಂಥನ ಮಾಡಲು ನಿಂತೆ ಕಡೆಗೋಲ ನೇಣಾಂತೆ ಬಾರೊಸಂತರಿಗನುದಿನ ಸಂತೋಷವೀವ ನಿಶ್ಚಿಂತ ಬಾರೊಅಂತವಿಲ್ಲದ ಮಾರಾಂತನ ಗೆಲಿದ ಕೃತಾಂತ ಬಾರೊಅಂತಿಂತೆನದೆ ಮಾಕಾಂತ ಹಯವದನನನಂತ ಬಾರೊ೩

 

೧೬೦
ಇನ್ನಾರಿಗುಸುರುವೆ ಇನ್ನಾರ ಬಳಲಿಸುವೆನಿನ್ನ ಚಿತ್ತಬಂದಂತೆ ನೀನೆ ಕಾಯಯ್ಯ ಪ.
ಅನ್ನಾಥರೊಡೆಯ ಎನ್ನ ಮುನ್ನ ಮಾಡಿದ ಪಾಪತನ್ನ ಫಲವಾಯಿತೆಂದು ಇನ್ನುಬ್ಬಿ ಕೊಬ್ಬುತಿದೆಎನ್ನುದರದಿ ಅನುದಿನ್ನ ಕೂಡಿಘನ್ನಪಿತ್ತವೆಂಬ ಬಲುಕಿಚ್ಚು ಹೆಚ್ಚುತಿದೆ ೧
ದ್ರೌಣ್ಯಸ್ತ್ರದಿಂದ ಬೆಂದ ನಿನ್ನ ತಂಗಿಯ ಮೊಮ್ಮಗಸನಕಾದಿಗಳರ್ಚಿಸುವ ಸೌಮ್ಯಪಾದದಕೊನೆಯನ್ನೆ ಮುಟ್ಟಿಸಿ ಪೆಣನಾಗಿರ್ದ ಹಸುಳೆಯ ಜನರು ಜಯಜಯವೆನೆ ಜೀವಂತನ್ನ ಮಾಡಿದೆ ೨
ಹಸ್ತದ ಸುಧೆಯಿಂದ ಭಕ್ತನ ಉದರವನೆ ತುಂಬಿನಿತ್ಯಾಮೃತಕರ ವೈದ್ಯ ಧನ್ವಂತರಿ ಬದುಕಿಸಯ್ಯಸತ್ಯಸಂಧನು ನೀನು ನಿತ್ಯ ಮೃತನು ನಾನುಭೃತ್ಯನು ಪಾಪವ ಕಿತ್ತು ಎತ್ತಿಕೋ ತಂದೆ ೩
ಅಂಜಿದ ಕಪಿಕಟಕ ಸಭೆಯ ಪಂಜರ ಬಸಿವುತಿದೆ ನಿನ್ನಕಂಜಾಕ್ಷದಿಂದ ನೋಡಿದರವರಂಜಿಪೋಗದೆಅಂಜನಾದೇವಿಯ ಸುತನಾಳಿದ ರಘುರಾಯಅಂಜಿಸಬೇಡ ತಂದೆ ನಿನ್ನ ಕಂದನ ರಕ್ಷಿಸಿಕೊ ೪
ವನ್ನದ ಹರಿಣನಂತೆ ಸುತ್ತ ಮುನ್ನ ಬರಲು ಕೃಷ್ಣಎನ್ನ ತಾಪವು ಅನುದಿನ್ನ ತಟ್ಟದುಇನ್ನೊಬ್ಬ ಮದ್ದನೀಯೆ ಅದು ಉನ್ನತವಾಗುತಿದೆ ತಂದೆಎನ್ನಾಳು ಹಯವದನ ಇನ್ನಾದರೆ ಸಲಹೊ ೫

 

೧೬೧
ಇನ್ನೇನ ಮಾಡುವೆ ಇನ್ನಾರ ಬೇಡುವೆ ಪ್ರ-ಸನ್ನ ಚೆನ್ನಕೇಶವ ಎನ್ನ ಬಿನ್ನಪವಮನ್ನಿಸಿ ದಿನದಿನದಲ್ಲಿನಿನ್ನನರ್ಚಿಪಂತೆ ಮಾಡು ಪ.
ಮೊಲೆಯುಂಬ ಹಸುಗೂಸು ಮಾತನಾಡಿ ತನ್ನಮನದಭೀಷ್ಟವ ಪೇಳ್ವುದೆಚೀರಿ ಅಳುವದೈಸೆ ಅದನರಿತು ಅದರ ತಾಯಿಅಪ್ಪ್ಪಿಮುದ್ದಾಡಿಸುತ್ತಬಳಲಿಕೆ ಪೋಪಂತೆ ನಸುಬಿಸಿಪಾಲನುಬಾಯೆಂದು ಕುಡಿಸುವಳುಸಿರಿಲಲನೆಯರಸ ನಮ್ಮ ಈ ಪರಿಯಲಿನೀನು ಲಾಲಿಸಿ ಸಲಹಬೇಕು ೧
ಪರರ ಮನೆಗಳಿಗೆ ಪರಿಪರಿದು ನಾನು ಬೇ-ಸರಲಾರೆ ತಂದೆ ನೀ-ನಿರಿಸಿದಂತೆ ಇರಲುಳ್ಳವನು ಎನ್ನಭರಭಾರ ನಿನ್ನದಯ್ಯಅರಿಯದ ಮೂಢ ನಾನು ಅರಿವಿನೊಡಲು ನೀನುಕಿರಿದಿಗೆ ಕಿರಿದು ನಾನು ನೀನುಪಿರಿಯರಿಗೆ ಪಿರಿಯನು ಕರಿ ಕರೆಯಲುಪೊರೆದಂತೆ ಪೊರೆಯೆನ್ನನುಮಕರಿಯ ಕೊಂದು ಪೊರೆದಂತೆ೨
ಹುಲಿಯ ಕಂಡೋಡುವ ಹುಲ್ಲೆಯ ಮರಿಯಂತೆಭವದ ಬೇಗೆಯಲಿ ಬೆಂದೆ ವಿಘಳಿಗೆ ಘಳಿಗೆಯೊಳು ಅಲಸದೆ ಪಾಪವಗಳಿಸುವ ಗಸಣೆಗಂಜೆತುಳಸಿಯ ದಳದಿಂದ ಸಂತುಷ್ಟನಹ ನಿನ್ನಒಲಿಸುವ ಭಾಗ್ಯದಲ್ಲೆ ಈ ಇಳೆಗೆ ಭಾರವಾದೆಇಹಪರ ದುಃಖದ ಹಂಬಲಿಕೆ ಎಳ್ಳಷ್ಟು ಇಲ್ಲಸನ್ಮಾರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ ಅಪವರ್ಗದ ಹಂಬಲಿಕೆ ಎಳ್ಳಷ್ಟು ಇಲ್ಲ೩
ಹೆಂಡಿರ ಸಾಕಲಾರದೆ ಹೆಣ್ಣು ಮಕ್ಕಳುಗಳಕಂಡ ಕಂಡವಗೆರ್ ಮಾರಿ ಜಗಭಂಡನೆನಿಸಿಕೊಂಡೆ ಬಡತನ ಹಿಂಗದೆಕೊಂಡೆಯಗಳ ಪೇಳುವೆಉಂಡುಡುವರ ಕಂಡು ಮತ್ಸರ ಮಾಡುವೆತಂಡ ತಂಡದವರಿಂದ ಕಡಗೊಂಡರ್ಧನ ಕೊಡದೆ ಕಲ್ಲಪೊರುವೆನು ಕೋ-ದಂಡವೇರಿಸಿ ಕೊಂಡೆನು ೪
ದಂಡವಿಡಿದು ವೇಷಧಾರಿಯೆಂಬುದ ಕೈಕೊಂಡು ರಾವಣನಂತೆ ಚರಿಸಿ ಎನ್ನಮಂಡೆ ಬೋಳು ಮಾಡಿ-ಕೊಂಡು ಇಳೆಯೊಳು ಪರಸತಿಯರ ಮೋಹಿಪೆಪುಂಡರೀಕಾಕ್ಷ ಈ ಪರಿಯ ಕ್ಲೇಶಗಳನುಉಂಡರೆ ವೈರಾಗ್ಯ ಬಾರದು ಎಲೆಪಾಂಡವಪ್ರಿಯ ಇನ್ನಾರಿ ಗುಸುರುವೆನು ಉ-ದ್ದಂಡಭಕ್ತರ ಸೇರಿಸೊ ಕೈ-ಕೊಂಡು ನಿನ್ನುದ್ದಂಡಭಕ್ತರ ಸೇರಿಸೊ೫
ತಪ್ಪಿದರೆ ತಾಯಿ ತನ್ನ ಮಕ್ಕಳುಗಳತಕ್ಕೈಸಿಕೊಂಬವೊಲು ಕಾಮ-ನಪ್ಪ ಎನ್ನಪ್ಪ ಒಂದು ಕೊರತೆಯ ಕಾಣದೆಕರುಣದಿ ಕಾಯಬೇಕುಅಪಾರಮಹಿಮ ನೀನಾಶ್ರಿತ ಜನರನುಅತ್ತ ಹೋಗೆನ್ನೆ ಗಡ ನೀನ-ಪ್ರತಿಮಹಿಮನೆನಿಸಿಕೊಂಡೆ ಅದರಿಂದಅಮರರ ಶಿರೋರನ್ನವೆ ಅರ್ಜುನಸಖಅಮರರ ಶಿರೋರನ್ನವೆ ೬
ಸರಿಮಿಗಿಲಿಲ್ಲದ ಸರ್ವೇಶ ಹರಿಯೆಂದುಸಿರಿಹಯವದನರಾಯ ನಿನ್ನಪರಮ ಮುನಿಗಳೆಲ್ಲಪರೀಕ್ಷೆಮಾಡಿ ನೋಡಿಮುನ್ನ ನಿರ್ಣೈಸಿದರುಹಿರಿಯರ ಮಾತನು ಪಾಟಿಮಾಡದನಗೋತ್ರ ಸೂತ್ರಗಳು ಪೋಕುಪ್ರವರ ಗೋತ್ರ ಋಷಿಮೂಲಯೆಂದು ಪ್ರಸಿದ್ಧ ಇನ್ನಾರು ನಿನ್ನಂಥವರು ೭

 

೨೯
ಇಷ್ಟು ದಯವುಳ್ಳವನ ಯಾಕೆ ಬರಬೇಡೆಂದಿಇಷ್ಟು ನಿರ್ದಯಳೆ ನೀನು ಪ.
ಇನ್ನೆಲ್ಲಿ ಪೋಗಲೆ ರತಿಯಿಲ್ಲದಿದ್ದರೆ ನಿನಗೆ ಪೂಮಾಲೆ ತಾ ಎನೆಸಣ್ಣ ಕಮಲದೆಲೆಯ ಬಣ್ಣದ ಗಿಣಿ ಬರೆದುವ ಸಣ್ಣ ಸೀರೆಯ ಕೊಡುವೆನೆಕಣ್ಣಿಗೆ ಪ್ರಿಯವಾದ ಕಮಲಮಯ ಕುಪ್ಪಸವ ಕರೆದು ಕೈಯಲಿ ಕೊಡುವೆನೆಬಿನ್ನಣದಿಂದಲಿ ಬಗೆಬಗೆಯಲಿ ನಿನಗೆ ಬಾಯಮುದ್ದನುವ ಕೊಡುವೆನೆ ಸಖಿಯೆ ೧
ಕಳಿಯಡಿಕೆಹುಡಿ ಕರ್ಪೂರದ ಕಾಚಿನ ಗುಳಿಗೆ ಕೈತುಂಬ ಕರೆದೀವೆನೆ ಇಂಥಎಳೆಮಾವಿನಂತೆ ತಳಿರು ಸುಳಿಗರೆವ ರುಮಾಲೆತಲೆಯಲ್ಲಿ ಸುತ್ತಿ ಬಾಹನ ಥಳಥಳಿಪ ನ-ವಿಲುಗರಿ ಮುತ್ತಿನ ತುರಾಯವ ಸಿಕ್ಕಿ ತರುಣಿ ನಿಲ್ಲಲಿ ಬಾಹೆನೆ ಸಖಿಯೆ ೨
ಉರುಟಾಣೆ ಮುತ್ತುಗಳುಚಿತವಾಗಿವೆ ನಿನ್ನ ಉರುಟು ಕುಚಗಳ ಪಿಡಿವೆನೆಮುದದಿಂದ ನಿನ್ನ ಮುಖ ಕಿರುಬೆವರನೆಒರೆಸಿ ಕಸ್ತೂರಿತಿಲಕವನಿಡುವೆನೆಸಿರಿಯರಸ ಹಯವದನ ರಂಗನ ಚರಣವನು ನೆರೆನಂಬಿ ಭಜಿಸು ಸಖಿಯೆ ಸಖಿಯೆ ೩

 


ಇಷ್ಟುದಿನ ಭೂವೈಕುಂಠ ಎಷ್ಟುದೂರವೆನುತಿದ್ದೆದೃಷ್ಟಿಯಿಂದಲಿ ನಿಮ್ಮ ಕಂಡೆ ಸೃಷ್ಟಿಪತಿ ಶ್ರೀರಂಗೇಶ ಪ.
ಚಿತ್ರಬೀದಿ ವಿರಾಜಿತ ಚಾರುನೂಪುರ ಶೋಭಿತಸಪ್ತ ಪ್ರಕಾರ ಸಂಪೃಷ್ಠ ಉತ್ತಮ ಶ್ರೀರಂಗಶಾಯಿ೧
ಹೇಮಕವಾಟಗಳಿಂದ ಹೇಮ ಸೋಪಾನಗಳಲ್ಲಿಹೇಮಕಟಾಂಜನದಿಂದ ಗುಣಶೋಭಿತ ಶ್ರೀರಂಗೇಶ೨
ಚತುರ ವೇದಗಳಲ್ಲಿ ಚತುರಮೂರ್ತಿವೀರ್ಯದಲ್ಲಿಚತುರ ದಿಕ್ಕುಗಳಲ್ಲಿ ಚದುರ ಶ್ರೀರಾಮ ರಂಗಶಾಯಿ ೩
ಪಂಕಜನಾಭನೆ ಏಸು ಪಾವನವೊ ನಿಮ್ಮ ದಿವ್ಯಕುಂಕುಮಾಂಕಿತ ಚರಣ ಪಂಕಜಾಕ್ಷ ಶ್ರೀರಂಗೇಶ ೪
ಪುಣ್ಯ ವಿದ್ಯಾ ದಯಾನಿಧೆ ಪನ್ನಗಶಾಯಿ ಶೋಭಿತ ಧನ್ಯ ಚಂದ್ರಪುಷ್ಕರಣ ಉನ್ನಂತ ಶ್ರೀ ಹಯವದನ ೫

 

೨೪೯
ಈ ತನುವಿನೊಳಗೆ ಅನುದಿನವಿದ್ದು ಎನಗೊಂದು
ಮಾತ ಹೇಳದೆ ಹೋದಿ ಹಂಸ ಪ.
ಜಾಳಂಧರಯೆಂಬೊ ಮಾಳಿಗೆ ಮನೆಯಲ್ಲಿ
ನೋಳ್ಪರೆ ಒಂಬತ್ತು ಬಾಗಿಲು
ಗಾಳಿ ಪುಟ್ಟುತ್ತ ಎಲೆ ಹಾರಿ ಹೋಗುವಾಗ ಈ
ಬೇರಿಗೆ ಹೇಳಿ ಹೋಯಿತೆ ಒಂದು ಮಾತ ೧
ಏರಿಯು ನೀರನು ತೆಗೆದುಕೊಂಡಿದ್ದೇನೊ
ಭೋರೆಂಬೋ ಮಳೆ ಹೊಯ್ದು
ಭೋರೆಂಬೊ ಮಳೆ ಹೊಯ್ದು ಬಣವೆದ್ದು ಹೋಗುವಾಗ ಈ
ಏರಿಗೆ ಹೇಳಿಹೋಯಿತೆ ಒಂದು ಮಾತ ೨
ಗಟ್ಟಿ ಬೆಟ್ಟಗಳಲ್ಲಿ ಅಟ್ಟಡವಿಯಲ್ಲಿ ಇಕ್ಕಿತ್ತು
ಇಟ್ಟಿತ್ತು ಜೇನು ತನ್ನ ಸುಖಕಾಗಿ
[ಇಟ್ಟ]ತುಪ್ಪವನುಂಡು ನೊಣ ಹಾರಿಹೋಗುವಾಗ ಈ
ಬೆಟ್ಟಿಗೆ ಹೇಳಿ ಹೋಯಿತೆ ಒಂದು ಮಾತ ೩
ಶತಬಾರಿ ಶತಕೂಟ ಹಂಸಕರೊಡನಾಡಿ
ಹೆಸರು ಹೇಳುವೆ ನಾನನುದಿನವು
ರಸಭೋಜನವವುಂಡು ಜೋತಿತಾಹೋಗುವಾಗ
ಪ್ರಣತಿಗೆ ಹೇಳಿ ಹೋಯಿತೆ ಒಂದು ಮಾತ ೪
ಸಪರ್ಶಯನ ಹಯವದನನಾಡಿದ ಮಾತು
ಪಣೆ ಲಕ್ಷ್ಯವ ತೊಡೆದು ಮ್ಯಾಲಿರಲಾಗಿ
ಸುಪ್ಪಾಣಿಮುತ್ತು ಬಾಯ್ಬಿಟ್ಟು ಹೋಗುವಾಗ ಈ
ಚಿಪ್ಪಿಗೆ ಹೇಳಿ ಹೋಯಿತೆ ಒಂದು ಮಾತ ೫

 

೩೦
ಈ ಮುದ್ದು ಕೃಷ್ಣನೀಕ್ಷಣದ ಸುಖವೆ ಸಾಕು ಪ.
ಶ್ರೀಮಧ್ವಮುನಿಯ ಮನೆದೈವ ಉಡುಪಿನ ಕೃಷ್ಣ[ನ]ಅ.ಪ.
ಚೆಲುವ ಚರಣದ್ವಂದ್ವ ಜಂಘೆ ಜಾನೂರು ಕಟಿವಳಿಪಂಕ್ತಿ ಜಠರ ವಕ್ಷ ಕಂಬುಕಂದರದಿನಳಿತೋಳು ಮುದ್ದುಮುಖ ನಯನ ನಾಸಿಕ ಕರ್ಣಸುಳಿಗುರುಳು ಮಸ್ತಕದ ನಳಿನನಾಭನ ಸೊಬಗು೧
ಕಿರುಗೆಜ್ಜೆ ಕಡೆ ಪೆಂಡೆ[ಗಂಟೆ] ಕಟಿಸೂತ್ರವರ ಹಾರ ಪದಕ ಶ್ರೀವತ್ಸ ಕೌಂಸ್ತುಭರತ್ನಉರುಮುದ್ರೆ ಕಂಕಣಾಂಗದ ಕುಂಡಲ ಪ್ರಭೆಯಸಿರಿನಾಮ ಮಕುಟ ನಾಸಿಕದ ವರಮಣಿಯ ೨
ಸಕಲ ದೇವೋತ್ತಮನೆ ಸರ್ವಗುಣ ಪೂರ್ಣನೆಅಕಳಂಕ ಅಖಿಳಾಗಮಸ್ತುತನೆ ಅಪ್ರಾಕೃತನೆಅಖಿಳ ಜೀವೋತ್ತಮರ ಭಿನ್ನ ಹಯವದನನೆಮುಕುರ ಕಡೆಗೋಲು ನೇಣುಗಳ ಪಿಡಿದಿಪ್ಪನೆ ೩

 

೧೬೨
ಈಗಲೊ ಇನ್ನಾವಾಗಲೊ ಈ ತನುವು ಪೋಗದಿರದು ಪ.
ಭೋಗದಾಸೆಯ ಬಿಡಿಸಯ್ಯ ನಾಗಶಯನ ನಳಿನನಯನ ಅ.ಪ.
ಎಂಬತ್ತು ನಾಲ್ಕು ಲಕ್ಷ ಯೋನಿಗಳಲಿ ಬಂದು ಅಂಬುಜಾಕ್ಷನೊಂದೆನಯ್ಯ ಅಂದಂದು ಮಾಡಿದ ಅಘದಿಕುಂಭೀಪಾಕ ಮೊದಲಾದ ಕುತ್ಸ್ಸಿತ ನರಕದಿ ಬಿದ್ದುಉಂಬ ದುಃಖವ ಬಿಡಿಸಯ್ಯ ಉದಧಿಶಯನ ಪುಣ್ಯಕಥನ ೧
ಓದಿ ಮರುಳಾದೆನಯ್ಯ ಓದನ ಮಾತ್ರಕ್ಕೆ ಸಭೆಯೊಳುವಾದಿಸುವೆ ವೇದಶಾಸ್ತ್ರ ಉಪನ್ಯಾಸಂಗಳನು ಮಾಡುವೆಕ್ರೋಧರಹಿತನಾಗಿ ಅವರು ಕೊಡಲು ಕೊಂಡಾಡುವೆಆದರಿಸದಿದ್ದರವರ ಬೈದು ಬರುವೆ ಖಿನ್ನನಾಗಿ೨
ದೇಶದೇಶಂಗಳಿಗೆ ಧನದ ಆಸೆಗಾಗಿ ಪೋಗಿ ಪೋಗಿಬ್ಯಾಸರದೆ ಕಂಡವರ ಕಾಡಿ ಬೇಡಿ ಬಳಲಿದೆಕಾಸಿನ ಲಾಭವು ಕಾಣೆ ಘಾಸಿಯಾದೆನಯ್ಯ ಶ್ರೀನಿ-ವಾಸ ನಿನ್ನ ಪೂಜಿಸದೆ ಮೋಸಹೋದೆನಯ್ಯ ನಾನು೩
ಸ್ನಾನಮೌನಂಗಳನು ಮಾಡುವೆ ಸಕಲ ಜನರ ಮುಂದೆಮಾನವರಿಲ್ಲದಾಗಲೆ ಮೌನವಿಲ್ಲ ಮಂತ್ರವಿಲ್ಲಜ್ಞಾನವ ಪೇಳುವೆ ಮೋಸಕಟ್ಟ[ಲೆ]ಯ ಮಾಡಿಕೊಂಡುಧ್ಯಾನಿಸದೆ ಹೊಟ್ಟೆಯನ್ನು ಹೊರೆವೆ ನಿನ್ನ ಮರೆವೆ೪
ಹೆಣ್ಣು ಹೊನ್ನಿನಾಸೆ ಬಿಡದು ಪುಣ್ಯಕ್ಕೆ ಮನ ಒಡಂಬಡದುಎನ್ನದೆಂಬೊ ಮಮತೆ ತಗ್ಗದು ಧನ್ಯಜನಕೆ ಶಿರವು ಬಗ್ಗದುನಿನ್ನ ವಾರ್ತೆಯ ಕರ್ಣ ಕೇಳದು ಅನ್ಯವಾರ್ತೆ[ಗೆ] ಹೊತ್ತುಸಾಲದುಇನ್ನು ಹೇಸಿಕೆ ಮನಕೆ ಬಾರದು ಮುಂದಿನ ಗತಿಗೆ ದಾರಿ ತೋರದು ೫
ಅಂಬುವರ ನಾನರಿಯೆ ಕುಟುಂಬಿಗಳ ಸಲಹಲೋಸುಗತಿಂಬೆ ಹೀನರ ಮನೆಯೊಳನ್ನವ ನಂಬೆ ನಿನ್ನ ಚರಣವಹಂಬಲಿಸಿ ವಿಷಯಗಳಿಗೆ ಡಂಭನಾಗು ಕೆಟ್ಟುವೃಥಾಕುಂಭಿಣಿಗೆ ಭಾರವಾದೆನು ಕಂಬುಕಂಧರ ನಿನ್ನ ನೆನೆಯದೆ ೬
ವೃದ್ಧನಾದೆನು ಪಲ್ಗಳೆಲ್ಲ ಬಿದ್ದವು ಕಣ್ಣುಕಾಣಬಾರದುಎದ್ದು ನಿಲ್ಲಲಾರೆನಯ್ಯ ಉದ್ಧರಿಸೊ ಹಯವದನತಿದ್ದಿ ಮನವ ನಿನ್ನ ಪಾದಪದ್ಮವ ನೆನೆವಂತೆ ಮಾಡೊಪೊದ್ದಿದವರ ಪೊರೆವ ಕರುಣಾಸಿಂಧು ಎನಗೆ ನೀನೆ ಬಂಧು ೭

 

೧೦೯
ಈತನೆ ಕಾಣಿರೊ ಮಧ್ವಮುನಿ ಪ.
ಪರಿಪರಿ ಶ್ರುತಿಗಳೆಂಬ ಗುಹೆಗಳಲಿ ಕೇ-ಸರಿಯಂತೆ ಚರಿಸುತ್ತಹರಿಯೆ ಸರ್ವೋತ್ತಮನೆಂಬ ಘೋಷಗಳಿಂದದುರುಳ ವಾದಿಗಳೆಂಬ ನರಿಗಳೋಡಿಸಿದಾತ ೧
ಸಕಲಾಗಮಗಳೆಂಬ ಶರಧಿಯೊಳಗೆಯುಕುತಿಯಿಂದಲಿ ಮಥಿಸಿಅಕಳಂಕ ಶ್ರೀಹರಿಯೆಂಬ ರತ್ನವ ಕಂಡುಮಕುಟದೊಳಿಟ್ಟು ಲೋಕದಿ ಮೆರೆಸಿದಾತ ೨
ವೇದಸಾರವೆಂಬ ಈಶತತ್ವವಾದಸುಧೆಯ ಕಲ್ಪಿಸಿಕೊಂಡುಆದಿಮೂರುತಿ ಶ್ರೀ ಹಯವದನನ ದಿವ್ಯಪಾದ ಸೇವಕನಾದ ಮಧ್ವಮುನಿಯೆಂಬಾತ ೩

 

೧೧೦
ಈತನೇ ಲೋಕಗುರು ವೇದವಿಖ್ಯಾತ ಪ.
ಭೂತಳದಿ ಶ್ರೀರಾಮದೂತನೆಂಬಾತಅ.ಪ.
ಅಂದು ಹನುಮಂತನಾಗಿ ಅಖಿಳ ದಿಕ್ಕೆಲ್ಲವನುಒಂದು ನಿಮಿಷದಲಿ ಪೋಗಿ ಉದಧಿ ಲಂಘಿಸಿದಇಂದೀವರಾಕ್ಷಿಗೆ ವಂದಿಸಿ ಮುದ್ರಿಕೆಯನಿತ್ತುಬಂದು ರಾಮರ ಪಾದಕೆರಗಿ ನಿಂದಾತ ೧
ಅರ್ಜುನಗೆ ಅಣ್ಣನಾಗಿ ಅಂದು ದುರ್ಯೋಧನನಲಜ್ಜೆಯನೆ ಕೆಡಿಸಿ ಷಡ್ರಥಿüಕರನು ಗೆಲಿದಮೂಜ್ಜಗವು ಮೆಚ್ಚಲು ಮುನ್ನ ಮಾಗಧನ ಸೀಳಿದಸಜ್ಜನಪ್ರಿಯ ಭೀಮಸೇನನೆಂಬಾತ೨
ಮೂರಾರು ಎರಡೊಂದು ಮೂಢಮತಗಳ ಜರಿದುಸಾರ ಮಧ್ವಶಾಸ್ತ್ರವನು ಸಜ್ಜನರಿಗೊರೆದುಕೂರ್ಮ ಶ್ರೀ ಹಯವದನನ ಪೂರ್ಣ ಸೇವಕನಾದಧೀರ ಮಧ್ವಾಚಾರ್ಯ ಲೋಕದೊಳು ಮೆರೆದ ೩

 


ಈರೇಳು ಲೋಕದೊಳಗೆ ಇವಗೆಣೆಗಾಣೆ ಗೋವಿಂದರಾಯನಿಗೆಮಾರನ್ನ ಪೆತ್ತ ಮನೋಹರ ಮೂರುತಿ ಗೋವಿಂದರಾಯನಿಗೆ ಪ.
ನೀಲನೀರದನಿಭ ನಿರ್ಮಲಕಾಯ ಗೋವಿಂದರಾಯನಿಗೆಪಾಲಸಾಗರದಲ್ಲಿ ಪಡಿಸಿ ಪಾಲಿಪ ಗೋವಿಂದರಾಯನಿಗೆ ೧
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಗೋವಿಂದರಾಯನಿಗೆಕುತ್ಸಿತರಾಯರ ಕೊಂದ ಕೊಡಲಿಯ ಗೋವಿಂದರಾಯನಿಗೆ ೨
ರಘುಕುಲ ಯದುಕುಲ ಬುದ್ದ ಕಲ್ಕಿಯಾದ ಗೋವಿಂದರಾಯನಿಗೆ ಸೊಗಸುನುಡಿಗೆ ಮೆಚ್ಚ್ಚಿ ಶೋಕವ
ಕಳೆವ ಶ್ರೀ ಗೋವಿಂದರಾಯನಿಗೆ ೩
ಕಡೆಗೋಲ ಪಿಡಿದು ನಮ್ಮುಡುಪಿಲಿ ನೆಲೆಸಿದ ಗೋವಿಂದರಾಯನಿಗೆಬಡನಡುವಿನ ಭಾವಕಿಯರೊಡನಾಡುವ ಗೋವಿಂದರಾಯನಿಗೆ ೪
ವರ್ಣಿಸಿ ಪೊಗಳುವ ಗೊಲಿದ ಗೋವಿಂದರಾಯನಿಗೆಚಿನ್ನದ ಚೆಲುವನೆ ಜಯ ಹಯವದನ ಶ್ರೀ ಗೋವಿಂದರಾಯನಿಗೆ ೫

 

೩೨
ಉಡುಪಿನ ರಂಗ ಕಲ್ಲುಕಂಬದಿಂದೊಡೆದ ನರಸಿಂಹಬಿಡದೆಮ್ಮ ಸಲಹೊ ಕೈವಿಡಿ ಇನ್ನೇಕೆ ತಡವೊ ಪ.
ಕರೆಯದೇ ಮುನ್ನ ಬಂದೆ ಖಳನಿದಿರಲಿ ನಿಂದೆಅರಿಯುದರವ ಸೀಳ್ದೆ ಅಸಮನೆನಿಸಿ ಬಾಳ್ದೆ ೧
ಎನಗೆ ನೀನೆ ಬಂಧು ಎಲೆಲೆ ಕರುಣಾಸಿಂಧುಧನದಾಸೆಯ ಬಿಡಿಸೊ ಧರ್ಮಮಾರ್ಗದಿ ನಡೆಸೊ ೨
ಹಯವದನನಾಗಿ ಹರಿ ನೀ ದೈತ್ಯರ ನೀಗಿನಯದಿ ವೇದವ ತಂದೆ ನಳಿನನಾಭನೇನೆಂಬೆ ೩

 

೩೧
ಉಡುಪಿನಕೃಷ್ಣ ಸಕಲ ಜಗದೀಶಬಿಡದೆನ್ನ ಸಲಹೋ ಮಧ್ವಹೃದಯ ವಾಸ ೧
ವಿಕಸಿತ ನಯನ ಜಲಜಾ[ಸ]ನನಪ್ರಕಟಿತ ತಾತ ದಿತಿಕುಲ ದಮನ ೨
ತ್ರಿಕರಣ ಪರಿಯ ತ್ರಿವಿಧತಾಪ ಶಮನಸುಕುಮಾರರೂಪ ಮೋಹನ ರಮಾರಮಣ ೩
ಎಸೆವ ಕಿರುಡೊಳ್ಳಿನ ಶುಭಾಕಾರ ಗಂಡಪಸುಳೆಯ ಭಾವದಿ ಮೆರೆವ ಪ್ರಚಂಡ ೪
ಶಶಿಸಮವದನ ಕುಂಡಲಶೋಭಿಗಂಡಅಸುರಸಂಹಾರ ದೋರ್ಧೃತ ಪಾಶದಂಡ ೫
ಶ್ರುತಿಯರು ಸೇವೆಯರು ಬಿಡದೆ ಬಣ್ಣಿಸುವರುಪ್ರತಿಯಿಲ್ಲದದುಭುತ ಮಹಿಮನು ದಾವ ೬
ಯತಿಕುಲಸೇವ್ಯ ಹಯವದನ ದೇವಪತಿಕರಿಸೊ ನಮ್ಮ ಭವವನದಾವ ೭

 

೩೩
ಉತ್ಸವದಲಾಹ್ನಿಕವ ಕಡು ಜನರು ಕೇಳಿರಯ್ಯ ಪ.
ಅರುಣ ಉದಯದೊಳೆದ್ದು ಆ ದ್ವಾರಪಾಲಕರುಭರದೆ ಘಂಟೆ ಸುವಿಘ್ನ ಮಾಡೆತರತರದ ಹರಿದಾಸರು ತಾಳ ಮೇಳಗಳಿಂದಪರಿಪರಿಯ ಗಾನ ಪಾಡೆ ತ್ವರಿತ ವಾದ್ಯಗಳಿಂದ ತರುವಾಯ ಭೋರಿಡೆ ಮುರಹರನುಪ್ಪವಡಿಸೆತರುಣ ಯತಿಗಳು ಎದ್ದು ಸ್ನಾನ ಜಪಗಳ ಮಾಡಿನಿರುತ ಶಂಖ ಭ್ರಮಣೆ ಮಾಡೆ ನೀಟಾಗಿಒಪ್ಪುತಿಹ ಉಡುಪಿಯ ಶ್ರೀಕೃಷ್ಣನ ೧
ಚಂದವುಳ್ಳ ನಿರ್ಮಾಲ್ಯ ಚಾತುರ್ಯದಿ ವಿಸರ್ಜಿಸಿ ಆನಂದಸುತಗಭಿಷೇಕವಚೆಂದದಿಂದಲಿ ಮಾಡಿ ಆ ರಮ್ಯ ಬಾಲ ಉಡಿಗೆ ಶ್ರೀ-ಗಂಧ ತುಲಸಿಮಾಲೆಯರ್ಪಿಸಿಇಂದಿರೇಶಗೆ ಬೇಗ ಇಂಬಾದ ಹರಿವಾಣದಿಇಂದು ಘೃತ ನೆನೆಕಡಲೆಯುಶುದ್ಧಾದ ಪಾಲ್ಮೊಸರು ಶುಂಠಿ ಸಕ್ಕರೆಲಡ್ಡಿಗೆತಂದ ನೈವೇದ್ಯವ ಸವಿದು ತಾ ಪೂಜೆ ಮಾಡಿಸಿಕೊಂಬ ೨
ಪದ್ಮನಾಭಗೆ ಬೇಗ ಪುರುಷಸೂಕ್ತದಭಿಷೇಕಮುದದಿಂದ ಮಾಡಿದ ಬಳಿಕವಿಧಿಯ ಪೂರ್ವಕವಾಗಿ ಅಗಿಲು ಗಂಧ ತುಲಸಿಮಾಲೆಅಧಿಕವಾಗಿ ಸಮರ್ಪಿಸಿ ಒದಗಿದ್ದ ಶುಂಠಿ ಬೆಲ್ಲ ಒಳಿತಾದ ಅನ್ನ ಸೂಪದಧಿ ಕ್ಷೀರ ಕದಳಿಫಲವು ಮುರಮರ್ದನನುಚೆಲುವ ತಾ ಹಂಸಪೂಜೆಯ ಕೊಂಬ ತದನಂತರದಲಿ ಮೃತ್ತಿಕೆಯ ತಾ ಗಣಿಯಕಟ್ಟಿಸಿಕೊಂಬ ೩
ಗುರುರಾಯ ಪುರಾಣವನು ಗುಪಿತಾರ್ಥದಲಿ ಕೇಳಿಹರಿಯ ಮಂದಿರಕೆ ಪೋಗಿ ತರುವಾಯ ಘೃತಕ್ಷೀರ ತಂದು ದಧಿ ದಿವ್ಯ ಮಧು ಸಕ್ಕರೆ ಸೀಯಾಳವು ಇಂ-ದಿರೇಶಗೆ ಬೇಗ ಶಿರದ ಮೇಲ-ಭಿಷೇಕ ಮುದದಿಂದ ಮಾಡಿದ ಬಳಿಕತಿರುಗಿ ನೈವೇದ್ಯವನು ತೀವ್ರದಿಂದಲೆ ಸ-ಮರ್ಪಿಸಿ ಚೆಲುವ ಮಂಗಳಾರತಿಯಿಂದಪಂಚಾಮೃತದ ಪೂಜೆಗೊಂಬ ೪
ಜಲಜನಾಭಗೆ ಉಷ್ಣಜಲವ ತಂದ್ಹದ ಮಾಡಿಲಲಿತವಾಗಿ ಎರೆಯುತಒಳಿತಾದ ಹೆಸರ್ಹಿಟ್ಟಿನಲಿ ಒರೆಸಿ ಮೈಯನೆತೊಳೆದು ಸುಲಭಗೆ ಪಾಲನುಣಿಸಿ ಬಳಿಕಬಾಲಉಡಿಗೆಯಿಟ್ಟು ಬಹುನೈವೇದ್ಯವನರ್ಪಿಸಿಚೆಲುವ ಉದ್ವಾರ್ಚನೆ ಪೂಜೆಚೆಂದಾಗಿ ಮಾಡಿಸಿಕೊಂಬ ೫
ಮಧ್ವ ಸರೋವರಜಲವು ಹೊಳೆವ ಚಿನ್ನ ಕಲಶದಲಿಶುದ್ಧದಲಿ ಶೋಧಿಸಿ ತುಂಬಿಸಿಬದ್ಧ ಘಂಟೆನಾದದಲಿ ಬಹುಬೇಗದಲಿಬಂದು ಸನ್ನಿಧಿಯಲಿ ಪೂಜಿಸಿವಿಧುರಥನೆ ಶಂಕರಥನೆ ಪುರುಷಸೂಕ್ತದಭಿಷೇಕಮುದದಿಂದ ಮಾಡಿದ ಬಳಿಕ ಸಜ್ಜಿ ಘೃತದೋಸೆ ಬೆಣ್ಣೆ ಸಾರು ನೈವೇದ್ಯವ ಸವಿದು ಚೆಲುವಮಂಗಳಾರತಿಯಿಂದ ಮುದದಿ ತೀರ್ಥಪೂಜೆಗೊಂಬ ೬
ಉರು ಪದಕಾಭರಂಣಗಳು ಉನ್ನಂತತೋಳ್ಬಂದಿಕರಮುದ್ರೆ ಕಂಕಣಗಳು ಚರಣಾರವಿಂದಗಳಿಗೆ ಚಾರುಚಿನ್ನದ್ಹಾವಿಗೆಕಿರುಗೆಜ್ಜೆ ಕಾಲಲಂದುಗೆವರ ಪೀತಾಂಬರ ಕಟಿಗೆ ವಡ್ಯಾಣ ನೇವಳ ಇಟ್ಟುನಿರುತ ಸುವರ್ಣದ ಕವಚವುಕೊರಳ ಕೌಸ್ತುಭಹಾರ ಕೋಮಲ ಸುವರ್ಣಕುಂಡಲಸಿರಿಮೂರುತಿ ಸಣ್ಣ ನಾಮ ಶಿರದ ಜಾವಳ ಜಡೆ ಕಡಗೋಲು ನೇಣುಸಹಿತ ೭
ಕರದಲ್ಲಿ ಪಿಡಿದಿಪ್ಪಗೆ ವಡೆ ಶಿಕುನುಂಡೆ ಹಪ್ಪಳಒಡೆಯಗೋದನನೈವೇದ್ಯಒಳಿತಾದ ಅನ್ನ ಸೂಪ-ತಡೆಯದಲಂಕಾರ ಸಂಭ್ರಮದಲೊಪ್ಪುವಪರಿಮಳದ ಗಂಧ ತುಲಸಿ ಪರಮಾತ್ಮಗರ್ಪಿಸಿಉರದಿ ಧೂಪದೀಪವೆತ್ತಿತರತರದ ಪಚ್ಚಡಿಗಳು ತಳಿಲು ಸೀಕರಣೆಯುಕರಿದ ತುಪ್ಪದ ಅಪೂಪವು ಚಿತ್ರಾನ್ನ ದಧ್ಯನ್ನ ಪಂಚಕಜ್ಜಾಯಕಲಸೋಗರ ಬಿಡದೆ ಪರಮಾನ್ನಗಳನ್ನು ಸೊಗಸುಳ್ಳಕ್ಷೀರ ದಧಿ ಶುಂಠಿ ನಿಂಬೆರಸ ತಕ್ರಜಗದೇಕ ಸವಿದ ಪರಿಯ ೮
ಬಗೆಬಗೆಯ ಮಂಗಳಾರತಿ ಬಾರಿಬಾರಿಗೆ ಮಾಡಿ ಚಾ-ಮರ ದರ್ಪಣಗಳೆಸೆಯೆ ನಗೆಮುಖದ ಕೃಷ್ಣ-ನಂಘ್ರಿಗೆ ಷೋಡಶ ಪೂಜೆಯ ಮಾಡಿಮುಗಿಸಿ ಗುರುರಾಯ ಬರಲುಹನುಮಂತದೇವರಿಗೆ ಹಸನಾದ ಭಕ್ಷ್ಯಭೋಜ್ಯಅನುದಿನದಲರ್ಪಿಸಿ ಪೂಜಿಸಿಮುನಿ ಮಧ್ವರಾಯರಿಗೆ ಮುದದಿಂದಲರ್ಪಿಸಿ ೯
ಘನ ಸಿಂಹಾಸನಕೆ ಪೋಗಿಅಣಿಯಾದ ಫಲ ನೈವೇದ್ಯ ಆ ವ್ಯಾಸಗರ್ಪಿಸಿ ಒಂದನೆ ಮಂಗಳಾರತಿ ಎತ್ತಿಜನಕೆ ತೀರ್ಥಪ್ರಸಾದ ಜಾಗ್ರತೆಯಿಂದಲೆ ಮಾಡಿ ಭೋ-ಜನವ ಮಾಡಿಸಿ ಈರೇಳು ಜನರ ಕೀರ್ತಿಯೊಳೆಸೆವಆ ಭಾಗವತರು ತಾವು ಆ ಬೆಳ್ಳಿ ಕೋಲುಗಳನೆಬೇಗದಲಿ ಪಿಡಿದು ನಿಂತುಆರು ಹೆಡಿಗೆಯ ಅರಳು ಆರಚ್ಚು ಬೆಲ್ಲವುಆ ಕಾಲದಲರ್ಪಿಸಿ ಪೂಜಿಸಿ ಕರಣದಲಿ ನೋಡಿ ನಗುವ ೧೦
ಪುಟ್ಟ ಕೃಷ್ಣರಾಯರಿಗೆ ಹೊನ್ನ ಕವಚವ ತೊಡಿಸಿಇಟ್ಟ ರನ್ನದ ಕಿರೀಟವುದಿಟ್ಟಾದ ಪದಕಂಗಳು ದಿವ್ಯಮುತ್ತಿನ ಸರಕಟ್ಟಿದ್ದ ಪೂಮಾಲೆ ಎಸೆಯೆಶ್ರೇಷ್ಠವಾದ ಧೂಪದೀಪ ಶ್ರೀಪತಿಗೆ ದೋಸೆ ಬೆಣ್ಣೆಗಟ್ಟುರುಳಿ ನೈವೇದ್ಯವು ಕಟಕಟನೆಶುಂಠೀಕಷಾಯುಂಡು ಬಾಯಿ ತೊಳೆದುತಟ್ಟನೆ ರಾತ್ರಿ ಪೂಜೆಯಗೊಂಡು ತಾ ಪಲ್ಲಕ್ಕಿಯೇರಿ ಬರುವ ೧೧
ಓಲಗದ ಮಂಟಪಕೆ ವೈಭೋಗದಲಿ ಬಂದು ಉ-ಯ್ಯಾಲೆಯಲಿ ಮುದದಿ ಕುಳಿತುಬಹಳ ಪಾನಕ ಅರಳು ಬಹುಕೊಬರಿ ಚೂರುಗಳು ಆ ಕಾಲದಲಿ ಸೂಸಿ ಪೂಜಿಸೆ ಕರುಣದಲಿ ನೋಡಿ ನಗುವ ೧೨
ಧೀರನಿಗೆ ಚತುರ್ವೇದ ದಿವ್ಯಶಾಸ್ತ್ರಪುರಾಣ ಚೆಲುವಗಷ್ಟಕ ಗೀತವುಭೇರಿಮೌಳಿ ಮೌಳಿವಾದ್ಯಮೌಳಿಮೌಳಿ ಚಕ್ರವಾದ್ಯತಾರತಮ್ಯದ ಸರ್ವವಾದ್ಯಗಳೆಸೆಯೆತಾರಿ ಸೇವೆಯ ಮಾಡಿ ಸ್ವಾಮಿ ವೀಳ್ಯ ಮಂತ್ರಾಕ್ಷತೆ ಕಾರುಣ್ಯದಲಿಬೆರೆಸಿ ಮಾರಜನಕಗೆ ಏಕಾಂತ ಸೇವೆಯ ಮಾಡಿ ನವಮಾರಜನಕನ ಹಂಪೂಜೆಯ ಜಾಗ್ರತೆಯಲಿ ನೋಡಿ ನಗುವ ೧೩
ಹಡಗಿನಿಂದಲಿ ಬಂದು ಕಡಲ ತಡಿಯಲಿ ನಿಂದುಬಿಡದೆ ಯತಿಗಳ ಕೈಯ ಬಿಂಕದಿ ಪೂಜೆಗೊಂಬಆದಿ ಕೃಷ್ಣನ ಆಹ್ನಿಕವನು ಆಧಾರದಲಿಓದಿವಿನೋದದಲಿ ಪಠಿಪ ಜನರಿಗೆಆಧಿವ್ಯಾಧಿಗಳಟ್ಟಿ ಬಹು ಭಾಗ್ಯಗಳ ಕೊಡುವಮಾಧವನ ಕೃಪೆಯಿಂದಲಿರಿಗೊಲಿದು ವಚನ ಶುದ್ಧೋಕ್ತದಲಿ ಹೇಳುವ ಜನರಿಗೆಬರುವ ದುರಿತವ ಕಳೆದು ಮೇಲಾಗಿ ರಕ್ಷಿಸಿಕೊಂಬ ಹಯವದನ ೧೪

 

೩೪
ಉಪ್ಪವಡಿಸಯ್ಯ ಉಡುಪಿನ ಕೃಷ್ಣ ಚೆಲ್ವಕಂ-ದರ್ಪನಪ್ಪನೆ ಕಣ್ದೆರೆ ಪ.
ಸರ್ಪನಂಗದಲಿ ರುಕ್ಮಿಣಿ ಸತ್ಯಭಾಮೆಯರಅಪ್ಪಿಕೊಂಡಿಪ್ಪ ಬಲು ಸುಪ್ರಸಿದ್ಧಅಪ್ರತಿಮ ಗುಣಗಣಾಂಬುಧಿ ಕರುಣಾನಿಧಿಯೆಸುಪ್ರೇಮದಿಂದ ನೋಡಾ ದೇವ ೧
ದೇಹಿಗಳ ನಿದ್ರೆಯನು ತಿಳುಹಿಸುವರಾರು ನಿ-ರ್ವಾಹಕನು ನೀನು ನಿದ್ರೆಯ ಕೈಕೊಳೆಆಹುತಿಗಳನುವಾದ ಅನಲಮುಖದಲಿ ನಿನಗೆಶ್ರೀಹರಿಯೆ ದುರಿತಾರಿಯೆ ದೇವ ೨
ನಿದ್ರೆಯಂ ತೊರೆದು ಸಿದ್ಧಾಸನದಿ ಕುಳ್ಳಿರ್ದುಸಿದ್ಧರೆಲ್ಲರು ತಮ್ಮ ಹೃದಯಕಮಲಸದ್ಮವನು ಬೆಳಗಿ ನಿನ್ನನೆ ಅರಸುತೈದಾರೆಮುದ್ದುಮೊಗವನು ತೋರಿಸಾ ದೇವ ೩
ಇನನುದಯಗಿರಿ ಪೀಠದಲಿ ಕುಳಿತು ಪದ್ಮಗಳಅನಯನ ನೇಮದಿ ಪಿಡಿದು ತಮವೋಡಿಸೆ ಅನುರಾಗಮಂ ತುಂಬಿ ಕರೆಯಕಳುಹಿದ ನಿನ್ನಮನೆಯ ಬಾಗಿಲೊಳರಸುತ್ತ ದೇವ ೪
ಕಮಲಕೊಬ್ಬಿತು ಸೂರ್ಯನತಿ ಪೆರ್ಮೆಯಂ ಪೊತ್ತಕ್ರಮದಿಂದ ನಿನ್ನ ಪೂರ್ವಜಸೋಮನೊಭ್ರಮೆಗೊಂಡವನ ಪರಿವಾರಕಾಯಿತು ಸೋಲುಸುಮುಖಚಂದ್ರನೆ ಬೆಳಗಿಸಾ ದೇವ ೫
ಅಮಲಜಲದಲ್ಲಿ ಮಜ್ಜನವ ಮಾಡುವೆನೆಂದುಕ್ರಮದಿಂದ ತೀರ್ಥಗಳು ಕರೆದು ನಿನ್ನ ರಮಣೀಯ ಮೂರುತಿಯ ಮನದಲ್ಲಿ ನಿಲಿಸುವಶ್ರಮವ ಸಾರ್ಥಕ ಮಾಡೊ ದೇವ ೬
ಅತಿಶೀತ ಹರುಷದಿಂ ಪುಳಕ ಶೋಭಿತರಾಗಿಪ್ರತಿಕ್ಷಣದಿ ನಿನ್ನನೇ ನೆನೆದು ನೆನೆದುವ್ರತದಿಂದ ಪೇಳುವ ಶ್ರುತಿ ಪುರಾಣದೊಳಿಪ್ಪಸ್ತುತಿಯನಾಲೈಸಿ ಕೇಳಾ ದೇವ ೭
ತನುವ ರಂಜಿಸಿ ಶಂಖ ಚಕ್ರೋಧ್ರ್ವಪುಂಡ್ರದಿಂಪ್ರಣಮಮಂ ಪೇಳಿ ಮಂತ್ರಿತ ವಾರಿಯಘನ ಮಹಿಮ ನಿನ್ನ ಹಸ್ತದಲಿ ತರ್ಪಣ ಮಾಡಲನುವಾದರಯ್ಯ ಬುಧರು ೮
ಎನಲುಪ್ಪವಡಿಸಿ ಶ್ರೀಕೃಷ್ಣ ಹಯವದನ ತಂ-ಪಿನ ನಾಗಭೋಗ ವಿಸ್ತರದಿ ಕುಳಿತುವನಜಸಂಭವಸಹಿತ ವಿಬುಧರೊಡ್ಡೋಲಗದಿಮುನಿಗಳರ್ಚಿಸಿ ಮೆಚ್ಚಿಸೆ ದೇವ ೯

 

೩೦೭
ಉಪ್ಪವಡಿಸಯ್ಯ ತ್ರಿವಿಕ್ರಮ ನಿನ್ನ ಪುರದೊಳಗೆ
ಇಪ್ಪ ಮುಕುತರಿಗೆ ಸಲ್ಲದು ನಿದ್ರೆ ನಿನಗಿಲ್ಲ
ಕಲ್ಪಾಂತದಲಿ ನಿತ್ಯವಾದ ವೇದವ ನೆನೆವ
ಸುಪ್ರಭಾವನಿಗೇಕೆ ಹೀನಮನುಜರ ಸಾಮ್ಯ ಪ.
ಹರಿನಾಲ್ಕು ಮನ್ವಂತ್ರಗಳನು ಹಗಲನು ಮಾಳ್ಪ
ವಿಧಿ ನಿನ್ನ ಕುವರನೆ ನಿದ್ರೆಗೊಪ್ಪದೆ ಬಂದ
ಇದು ಸರ್ವಸೊಪನ ಅನಿಮಿಷರೆಂಬ ಬಿರುದಿನವ
ರಿದಕೆ ಕೋಪಿಸಿ ಬಂದರು
ವಿಧಿ ತನ್ನ ಹಗಲ ನಡೆಸುತ ನಿನಗೆ ಈ ತೆರನ
ಮದನಪಿತ ತಾಳದೆ ಇಳೆಗೆ ನಡೆತಂದ
ಸದುಬುಧರು ತಮ್ಮ ವಿಷಯವ ನೆನೆವ ಜಂತುಗಳು
ಇದು ತಾಳೆವೆನುತ ಬಾಗಿಲೊಳು ಬಂದೈದಾರೆ ೧
ನಿದ್ರೆಗೈವರ ಹೃದಯದಲ್ಲಿ ಭೂಭೂಯೆಂಬ
ಎದ್ದು ಬಹ ಶ್ವಾಸದಭಿಮಾನಿ ಮುಖ್ಯಪ್ರಾಣ
ಕ್ಷುದ್ರಗತಿ ತನ್ನಾಳ್ದಗಿದು ಪುಸಿಯೆನುತ ಬಂದ
ಮಧ್ವಸದ್ಭಾಷ್ಯಕಾರ
ಹೊದ್ದಿ ಕರಗಳ ಮುಗಿದು ಜೀವರಿಗು ನಿನಗು ಪ್ರ-
ಬುದ್ಧಜನೆನುತ ಬಂದ ವೇದಾಂತದೇವಿಯರು
ನಿರ್ದೋಷ ನೀನೆತ್ತ ನಿದ್ರೆಯೆತ್ತೆನುತ ಪಾದ-
ಪದ್ಮಗಳ ಪಿಡಿದು ಪಾಡುವ ಸಾಮಗಳ ಸವಿದು ೨
ಅಪ್ರಾಕೃತನೆ ನಿನಗೆ ಈ ಪ್ರಕೃತಿಗುಣಗಳಿಂ-
ದಿಪ್ಪ ಯುಕ್ತಿಗಳ ಸುಪ್ತಿಗಳು ಸಲ್ಲವು ದೇವ
ಅಪ್ರಬುದ್ಧರ ಮುಂದೆ ಆಡುವಾಟಗಳು ಈ
ಸುಪ್ರಬುದ್ಧರ ಸಭೆಯಲಿ
ಸರ್ಪತಲ್ಪನೆ ತೋರಿದಯ್ಯ ಸಾಕೈನಟನೆ
ಸುಪ್ರಭಾತವು ಬಂತು ಹಯವದನ ದಿನದಿನದಿ
ತಪ್ಪದೆ ಮಾಡುವಘ್ರ್ಯದಿ ಸತ್ಕರ್ಮಗಳ
ಒಪ್ಪುಗೊಳು ಅಪ್ರತಿಮಮಹಿಮ ತ್ರಿವಿಕ್ರಮರಾಯ ೩

 

೩೫
ಎಂಜಲೆನ್ನಲಿಬಹುದೆ ಮನುಜರಿದನ ಅಘವನ ಧ-ನಂಜಯ ಸುವೈಕುಂಠದಾಸರ ವದನದ ಕಣವ ಪ.
ವದನವೆಂಬಾಕಾಶದಲಿ ಭಕುತಿ ಜೀಮೂತಪದಮನಾಭನ ನಾಮಾಮೃತದ ಕಡಲಮುದದಿಂದ ತಕ್ಕೊಂಡು ಎನ್ನಂಗ ದೇಹದಲಿಹದನರಿತು ಸುರಿದು ಮುಕ್ತಿಫಲವ ಬೆಳೆಸಿದುದನು ೧
ಹೃದಯಕಾರಾಗೃಹದಿ ಶ್ರೀಹರಿಯನಾವಾಗಹುದುಗಿ ಅಗಲಿಸದ ಕಾರಣದೊಳುಂಗುಟದಿಉದಿಸಿ ಗಂಗೆಯು ಪೋಪೆಡೆಯು ಅಳಿದರೆ ಇವರವದನದಲಿ ಪೊರಟೆನ್ನ ಮ್ಯಾಲೆ ಹರಿದುದನು ೨
ಪರಸನ್ನ ಹಯವದನ ಚರಣ ಸರಸಿಜಮಧು-ಕರ ಸುವೈಕುಂಠ ದಾಸೋತ್ತಮನ್ನವರ ವದನದಲಿ ವೇದಶಾಸ್ತ್ರಾಗಮದ ತಾ-ತ್ಪರಿಯ ಬಿಂದುಗಳೆನ್ನ ಮ್ಯಾಲೆ ಹರಿದುದನು ೩

 

೩೨೩
ಎಂಜಲೆನ್ನಲಿಬಹುದೆ ಮನುಜರಿದನ ಅಘವನಧ-
ನಂಜಯ ಸುವೈಕುಂಠದಾಸರ ವದನದ ಕಣವ ಪ.
ವದನವೆಂಬಾಕಾಶದಲಿ ಭಕುತಿ ಜೀಮೂತ
ಪದುಮನಾಭನ ನಾಮಾಮೃತದ ಕಡಲ
ಮುದದಿಂದ ತಕ್ಕೊಂಡು ಎನ್ನಂಗ ದೇಹದಲಿ
ಹದನರಿತು ಸುರಿದು ಮುಕ್ತಿಫಲವ ಬೆಳೆಸಿದುದನು ೧
ಹೃದಯ ಕಾರಾಗೃಹದಿ ಶ್ರೀಹರಿಯನಾವಾಗ
ಹುದುಗಿ ಅಗಲಿಸಿದ ಕಾರಣದೊಳಂಗುಟದಿ
ಉದಿಸಿ ಗಂಗೆಯು ಪೋಪೆಡೆಯು ಅಳಿದಿರೆ ಇವರ
ವದನದಲಿ ಪೊರಟೆನ್ನಮ್ಯಾಲೆ ಹರಿದುದನು ೨
ಪರಸನ್ನ ಹಯವದನ ಚರಣಸರಸಿಜಮಧು-
ಕರ ಸುವೈಕುಂಠದಾಸೋತ್ತಮನ್ನ
ವರವದನದಲಿ ವೇದಶಾಸ್ತ್ರಾಗಮದ ತಾ-
ತ್ಪರಿಯ ಬಿಂದುಗಳೆನ್ನ ಮ್ಯಾಲೆ ಹರಿದುದನು ೩

 

೨೭೨
ಎಂತು ವರ್ಣಿಸಲಮ್ಮ ನಾನು
ಕಂತುಜನಕನಾನಂತನಗಮ್ಯನನಂತವತಾರನಪ.
ಸಂತತ ಸಜ್ಜನರಂತರಂಗದಲಿ
ನಿಂತಿಹ ಲಕ್ಷ್ಮೀಕಾಂತನ ಮಹಿಮೆಯ ಅ.ಪ.
ನೀರೊಳಾಡುತ ಭಾರವ ಹೊರೆವ
ಧಾರುಣಿಯ ಪೊರೆವ
ಘೋರ ರೂಪದಲಿ ಭೂಮಿಯನಳೆವ
ಕ್ರೂರನೃಪರಳಿವ
ಆ ರಾವಣನ ಬಲವ ಮುರಿವ
ಚೋರ ದಿಗಂಬರವ
ಚಾರು ಕುದುರೇಯನೇರಿ ಬರುವ ಸುಕು-
ಮಾರ ಜಗದೊಳು ಶೂರ
ಜಾರುವ ಕಠಿಣಶರೀರದಿ ಭೂಮಿಯ
ಸೇರುವ ಕಂಬವಿದಾರಣ ಮಾಡುವ
ಮೀರುವಭುವನಕೆ ತೋರುವ ಪರಶುವ
ವಾರಿಧಿಶೋಷಕ ಜಾರ ವಸನಹೀನ
ಧೀರ ಸುಅಶ್ವವನೇರಿ ಮೆರೆವನ ೧
ನಿಗಮೋದ್ಧರಿಸುವ ನಗವನು ತರುವ
ಜಗತಿಯುದ್ಧರಿಸುವ
ಮಗುವ ಪಾಲಿಸುವ ಮಾಯದಿ ಬೆಳೆವ
ದುಗುಡ ನೃಪಕುಲವ
ಬಗಿದು ಭಾಸ್ಕರ ತನಯನಿಗೊಲಿವ
ನೆಗಹಿ ಗೋವರ್ಧನವ
ಬಗೆಬಗೆ ಮಾತಾಡಿ ಸುಗುಣ ವಾಜಿಯನೇರಿ
ಬಂದ ಸಚ್ಚಿದಾನಂದ
ಹುಗಿದು ಸೋಮಕನ ಅದ್ರಿಗೆ ಬೆನ್ನಿತ್ತು
ಅಗಿದು ಭೂಮಿಯ ನರಮೃಗನಾಗುತ
ಗಗನಕೆ ಬೆಳೆದು ಘಾತಿಸಿ ಕ್ಷತ್ರಿಯರ
ರಘುವರ ಯದುಪತಿ ವಿಗತವಸನನಾಗಿ
ಜಗಕೆ ಬಲ್ಲಿದ ಹಯವೇರಿ ಬರುವನ ೨
ನಳಿನೋದ್ಭವನಿಗಾಗಮವನಿತ್ತ
ಗಿರಿಯ ನಿಲಿಸಿತ್ತ
ಇಳೆಯ ಕದ್ದೊಯ್ದ ದಾನವನಳಿದ
ನರಹರಿ ತಾನಾದ
ಬಲಿಮುಖವ ಮುರಿದ ಖಳಭೂಪರಳಿದ
ದಶಶಿರನಳಿದ
ಕೊಳಲನೂದಿದ ದುಷ್ಟ ಲಲನೇರ ವ್ರತವಳಿದ
ಕಲಿಯ ಮರ್ದಿಸಿದ
ಹೊಳೆವ ಬೆನ್ನಲಿ ಗಿರಿತಳವೆತ್ತಿದನ
ನೆಲನ ಬಗಿದು ಕಂಬದಲಿ ಬಂದವನ
ಬೆಳೆದ ಬೊಮ್ಮಾಂಡಕೆ ಭಾರ್ಗವಾಧಿಪನ
ಜಲವ ಬತ್ತಿಸುವ ಗೋವಳ ಬುದ್ಧ ಕಲ್ಕಿ
ಚೆಲುವ ಹಯವದನನ ಬಲ್ಲಿದನ ೩

 

೩೬
ಎಂಥಾ ಪಾವನ ಪಾದವೋ ಕೃಷ್ಣಯ್ಯಾ ಇ-ನ್ನೆಂಥಾ ಚೆಲುವ ಪಾದವೊ ಪ.
ಎಂಥಾ ಪಾವನ ಪಾದ ಇಂತು ಜಗದಿ ಕೇಳುಪಂಥದೊಳಿದ್ದ ಕುರುಪತಿಯ ಉರುಳಿಸಿದಅ.ಪ.
ಹಲವು ಕಾಲಗಳಿಂದಲಿ ಮಾರ್ಗದಿಶಿಲೆ ಶಾಪ ಪಡೆದಿರಲುಒಲಿದು ರಜದಿ ಪಾವನಗೈದು ಕರುಣದಿಂದಬಲೆಯ ಮಾಡಿ ಸಲಹಿದ ಶ್ರೀಹರಿಯ ೧
ಬಲಿಯ ದಾನವ ಬೇಡಿ ತ್ರೈಲೋಕವನಳೆದು ಏಕಾಂಘ್ರಿಯಲಿಬೆಳೆದು ಭೇಧಿಸಲಾಗ ನಳಿನಜಾಂಡವ ಸೋಕಿಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ ೨
ಚೆÉಂಡು ತರುವ ನೆವದಿ ಕಾಳಿಂಗನು-ದ್ದಂಡ ಮಡುವ ಧುಮುಕಿಚಂಡ ಕಾಳಿಂಗನ ಮಂಡೆಯೊಳು ಪಾದಪುಂಡರೀಕವನಿಟ್ಟು ತಾಂಡವನಾಡಿದ ೩
ಸಂತತ ಸೌಖ್ಯವೀವ ಕಾವೇರಿಯಅಂತರಂಗದಿ ನೆಲೆಸಿಸಂತೋಷದಿಂದ ಅನಂತನ ಮ್ಯಾಲೆ ನಿಶ್ಚಿಂತೆಯೊಳು ಲಕುಮಿ ಭೂಕಾಂತೇರ ಸೇವಿಪ ೪
ಒಲಿದು ಗಯಾಸುರನ ಶಿರದೊಳಿಟ್ಟುಹಲವು ಭಕ್ತರ ಪೊರೆದೆನೆಲೆಸಿ ಉಡುಪಿಲಿ ಎನ್ನ ಹೃದಯಕಮಲದಲಿತೊಲಗದೇ ಇರುತಿಪ್ಪ ಸುಲಭ ಹಯವದನ೫

 

ನ್ನೆಂಥಾ ಚೆಲುವ ಪಾದವೊ ಪ.
ಎಂಥಾ ಪಾವನ ಪಾದ ಇಂತು ಜಗದಿ ಕೇಳುಪಂಥದೊಳಿದ್ದ ಕುರುಪತಿಯ ಉರುಳಿಸಿದ ಅ.ಪ.
ಹಲವು ಕಾಲಗಳಿಂದಲಿ ಮಾರ್ಗದಿಶಿಲೆ ಶಾಪ ಪಡೆದಿರಲುಒಲಿದು ರಜದಿ ಪಾವನಗೈದು ಕರುಣದಿಂದಬಲೆಯ ಮಾಡಿ ಸಲಹಿದ ಶ್ರೀಹರಿಯ ೧
ಬಲಿಯ ದಾನವ ಬೇಡಿ ತ್ರೈಲೋಕವನಳೆದು ಏಕಾಂಘ್ರಿಯಲಿಬೆಳೆದು ಭೇಧಿಸಲಾಗ ನಳಿನಜಾಂಡವ ಸೋಕಿಚೆಲುವ ಗಂಗೆಯ ಪೆತ್ತ ಜಲಜಾಸನಾರ್ಚಿತ ೨
ಚೆಂಡು ತರುವ ನೆವದಿ ಕಾಳಿಂಗನು-ದ್ದಂಡ ಮಡುವ ಧುಮುಕಿಚಂಡ ಕಾಳಿಂಗನ ಮಂಡೆಯೊಳು ಪಾದಪುಂಡರೀಕವನಿಟ್ಟು ತಾಂಡವನಾಡಿದ೩
ಸಂತತ ಸೌಖ್ಯವೀವ ಕಾವೇರಿಯಅಂತರಂಗದಿ ನೆಲೆಸಿಸಂತೋಷದಿಂದ ಅನಂತನ ಮ್ಯಾಲೆ ನಿಶ್ಚಿಂತೆಯೊಳು ಲಕುಮಿ ಭೂಕಾಂತೇರ ಸೇವಿಪ ೪
ಒಲಿದು ಗಯಾಸುರನ ಶಿರದೊಳಿಟ್ಟುಹಲವು ಭಕ್ತರ ಪೊರೆದೆನೆಲೆಸಿ ಉಡುಪಿಲಿ ಎನ್ನ ಹೃದಯಕಮಲದಲಿತೊಲಗದೇ ಇರುತಿಪ್ಪ ಸುಲಭ ಹಯವದನ ೫

 

೧೬೩
ಎಂದು ಕಾಂಬೆನು ಎನ್ನ ಸಲಹುವಬಂಧುಬಳಗ ನಮ್ಮಪ್ಪನ ತಿರುಪತಿಲಿಪ್ಪನವರಾಹ ತಿಮ್ಮಪ್ಪನ ಪ.
ದಂಡಿಗೆಯ ಬಾರಿಸುತ ಶ್ರುತಿಗೂಡಿ-ಕೊಂಡು ಪಾಡುತ ಮನದಿ ಲೋಲ್ಯಾಡುತಕುಣಿಕುಣಿದಾಡುತ ೧
ಬೆಟ್ಟದೊಡೆಯನ ಚರಣಕಮಲಕೆ ಶಿರ-ವಿಟ್ಟು ಕರಗಳ ಮುಗಿವೆ ನಾ ಕವಕವನಗುವೆ ನಾಎನ್ನೊಡೆಯನ ಪೊಗಳಿ ನಾ೨
ಸ್ವಾಮಿಪುಷ್ಕರಿಣಿಯಲ್ಲಿ ಸ್ನಾನ ನೇಮ-ವ ಮಾಡುವೆ ಪುಣ್ಯಕ್ಷೇತ್ರವ ನೋಡುವೆಹಯವದನನ ಕೊಂಡಾಡುವೆ ೩

 


ಎಚ್ಚರಿಕೆಚ್ಚರಿಕೆ ಪ.
ನಿಶ್ಚಿಂತೆಯಲಿ ಹರಿಯ ಧ್ಯಾನವ ಮಾಡುವುದಕ್ಕೆ- ಅ.ಪ
ಅಜನು ತೊಳೆದು ಅರ್ಚಿಸುವ ಶ್ರೀಪಾದಕ್ಕೆ ಎಚ್ಚರಿಕೆಧ್ವಜವಜ್ರರೇಖೆಯಿಂದೊಪ್ಪುವ ಪಾದಕ್ಕೆ ಎಚ್ಚರಿಕೆವ್ರಜದ ಗೋಪಿಯರು ಭಜಿಸುವ ಪಾದಕ್ಕೆ ಎಚ್ಚರಿಕೆಸುಜನರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆ ೧
ಸುರರೆಲ್ಲರು ಬಂದು ಎರಗುವ ಪಾದಕ್ಕೆ ಎಚ್ಚರಿಕೆ ಸರಸಿಜಾಕ್ಷಿ ಸವಿದೊತ್ತುವ ಪಾದಕ್ಕೆ ಎಚ್ಚರಿಕೆಗರುಡನೇರಿ ಮೆರೆವ ಗಂಭೀರ ಪಾದಕ್ಕೆ ಎಚ್ಚರಿಕೆಉರಗನ ಮೇಲೆ ಓಡ್ಯಾಡಿದ ಪಾದಕ್ಕೆ ಎಚ್ಚರಿಕೆ ೨
ಲಲನೆಯರ ಸ್ತನದಲ್ಲಿ ಕುಣಿದಂಥ ಪಾದಕ್ಕೆ ಎಚ್ಚರಿಕೆಜಲಜಾಸನ ಬಂದು ವಂದಿಪ ಪಾದಕ್ಕೆ ಎಚ್ಚರಿಕೆಶಿಲೆಯ ಸ್ತ್ರೀಯಳ ಮಾಡಿದ ಶೃಂಗಾರ ಪಾದಕ್ಕೆ ಎಚ್ಚರಿಕೆಚೆಲುವ ಹಯವದನನ ಚರಣಾರವಿಂದಕ್ಕೆ ಎಚ್ಚರಿಕೆ ೩

 

೨೭೩
ಎಣಿಸಲೆನ್ನಳವೆ ನಿನ್ನ ಮಹಿಮೆಗಳ
ಗುಣಗಣನುತ ನಾಮ ಕೋದಂಡರಾಮ ಪ.
ಜಲದಿ ಸಂಚರಿಸಿದೆ ಬಲುಗಿರಿಯ ಧರಿಸಿದೆ
ಲಲನೆ ಧರಿತ್ರಿಯ ಪೊರೆದೆ
ಛಲದಿ ಹಿರಣ್ಯಕಶಿಪುವ ಸಂಹರಿಸಿದೆ
ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ ೧
ದುರುಳ ರಾಯರ ತರಿದೆ
ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ
ತರುಣಿಯರ ವ್ರತ ಗೆಲಿದೆ
ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ ೨
ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ
ಕರುಣಿಸು ಗುಣಸಂಪನ್ನ
ಸ್ಮರನಜನಕ ಚೆನ್ನ ಧರಣಿಜೆಯ ಮೋಹನ್ನ
ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ ೩

 

೧೧೧
ಎಣೆಯಾರೊ ನಿನಗೆ ಹನುಮಂತರಾಯ ಪ.
ಎಣೆಯಾರೊ ನಿನಗೆ ತ್ರಿಭುವನದೊಳಗೆಲ್ಲಪ್ರಣತಜನಮಂದಾರ ಪವನಸುಕುಮಾರ ಅ.ಪ.
ಅಡಿಗಡಿಗೆ ರಾಮ ಪದಾಂಬುಜಕೆ ವಂದಿಸುತನಡೆನಡೆದು ಮುದ್ರಿಕೆಯ ಪಡೆದು ಮುದದಿದಡದಡನೆ ಅಂಬುಧಿಯ ದಾಟಿ ಸೀತೆಗೆ ಗುರುತಕೊಡುಕೊಡುತ ಕುಸ್ತ್ತರಿಸಿದಂಥ ಹನುಮಂತ ೧
ಗರಗರನೆ ಪಲ್ಗಡಿದು ಕಲುಷದೈತ್ಯರನೆಲ್ಲಚರಚರನೆ ಸೀಳಿ ಸಂಭ್ರಮದಿಂದಬಿರಬಿರನೆ ಕಣ್ಬಿಡುತ ಬಿಂಕದಲಿ ಲಂಕೆಯನುಸುರಸುರನೆ ಬಾಲದಲಿ ಸುಟ್ಟ ರಣದಿಟ್ಟ ೨
ಫಳಫಳನೆ ಆರ್ಭಟದಿಂದ ರಾವಣನ ನಳನಳನೆ ಬೆಳೆದ ನಂದನವ ಕಿತ್ತುಖಳಖಳನೆ ನಗುತ ದಶಕಂದರನ ಗುದ್ದಿ ಬಂದೆಭಳಿಭಳಿರೆ ಹಯವದನ ದಾಸ ನಿಸ್ಸೀಮ ೩

 

೧೧೨
ಎದ್ದು ನಿಂತ ಖಳರ ಕೃತಾಂತಹೊದ್ದಿದವರ ಪೊರೆವ ಧವಳಗಂಗೆ ಹನುಮಂತ ಪ.
ಕಂಜಾಕ್ಷಿಯನು ಕಂಡು ಕಪಟ ದಶಮುಖನ ಮದಭಂಜನ ಮಾಳ್ಪೆನೆಂದೆದ್ದು ನಿಂತಸಂಜೀವನವ ತಂದು ಕಪಿಗಳ ಕಾಯ್ದಆಂಜನೆಯ ತನಯ ತಾನೆದ್ದು ನಿಂತ ೧
ಗುದ್ದ್ದಿ ರಾವಣನ ಧರೆಯೊಳು ಕೆಡಹಿ ಅರಿಕಟಕಮರ್ದನ ಮಹಾಮಹಿಮನೆದ್ದು ನಿಂತಯುದ್ಧದಲಿ ರಘುಪತಿಯ ಹೊತ್ತು ಭಕುತಿಯ ತೋರ್ದಶುದ್ಧಸ್ವಭಾವ ತಾನೆದ್ದು ನಿಂತ ೨
ರಾಗಗಳ ಮೇಳೈಸಿ ಹಯವದನನೊಲಿಸಿಯೋಗಿಗಳನುದ್ಧರಿಸಲೆಂದೆದ್ದು ನಿಂತಈಗ ಧರೆಯೊಳು ಸುಜನರ ಮನೋಭೀಷ್ಟಗಳವೇಗದಲಿ ಕೊಡುವೆನೆಂದೆದ್ದು ನಿಂತ ೩

 

೧೧೩
ಎದ್ದುನಿಂತ ಬಂದು ನಿಂತ ಮುಂದೆ ನಿಂದಂಥಮಾರಾಂತರ್ಗೆ ಕೃತಾಂತ ನಿಶ್ಚಿಂತ ಹನುಮಂತಬಲವಂತ ಯೆದೆಗೊಂತ ತನಪಂಥ ಸಲಲೆನುತಸಂತರಿಗೆ ಸಂತತ ಶಾಂತ ನಿಂತ ಮಾರಾಂತ ಕೃತಾಂತ ಪ.
ದುರುಳ ರಾವಣನ ವನದ ತರುವಿನ ಕೊನೆಯೇರಿದಕರಚರಣಗಳ ಘಾಯದಿ ಮರಂಗಳ ಮುರಿದಅರಿಗಜ ಗಂಡಭೇರುಂಡನೆಂಬ ತನ್ನ ಬಲುಬಿರುದಮೆರೆದು ಮಾರುತಿ ಪ್ರತಿಭಟರ ಶಿರಂಗಳ ತರಿದ ೧
ಸೀತೆಗೆ ಉಂಗುರವನ್ನಿತ್ತು ಮತ್ತೆ ಕೈಗಳ ಮುಗಿದಪ್ರೀತಿಯಿಂ ಪೊನ್ನಕಚ್ಚುಟಕ್ಕಿಟ್ಟ ಗಂಟನು ಬಿಗಿದಖ್ಯಾತ ಮಂಡೋದರಿಕುವರನ ಬಸುರನು ಬಗಿದವಾತಸುತನು ವೈರಿಪುರವ ಸುಡಲು ತೊಡಗಿದ ೨
ನಲಿದು ಲಂಘಿಸಿ ನಳನಳಿಸುವ ಬಾಲವನೆತ್ತಿಖಳರೆದೆ ಶೂಲ ಹುಬ್ಬುಗಳ ಗಂಟಿಕ್ಕಿ ನೋಡುವ ಅರ್ಥಿಆಳುತಲಿಹ ಅಬಲೆಯರ ಭಯಂಕರಮೂರ್ತಿಸುಳಿದನು ಕೇರಿಕೇರಿಯಲಸುರರ ನುಗ್ಗೊತ್ತಿ ೩
ಲಂಕಾನಗರಿಯ ಪುಚ್ಚದ ಕಿಚ್ಚಿಂದ ಸುಟ್ಟಹುಂಕರಿಸುತ ಅಹಿತರ ಬೇಗ ತೆಗೆದೊಗದಿಟ್ಟಕಂಕಣ ಮಕುಟ ಹಾರಂಗಳಿಂದೊಪ್ಪುವ ಬಲುದಿಟ್ಟಶಂಕೆಯಿಲ್ಲದನಿಲಜ ಶತ್ರುಗಳಿಗಿಂತರ್ಥಿಯ ಕೊಟ್ಟ ೪
ಹೋಗೆಲೊ ಕಪಿಯೆನೆ ಹೊಕ್ಕು ರಕ್ಕಸರನು ಬಿಗಿದಕಾಗೆಯ ಬಳಗಕೆ ಕಲ್ಲನಿಟ್ಟಂದದಿ ಮಾಡಿದಆಗಲೆ ಕಂಡ ದಶಮುಖನೆಂಬ ಕಳ್ಳನ ನೋಡಿದಬೇಗ ಜಾನಕಿಯನ್ನು ಬಿಡು ಬಿಡುಯೆನಲು ತೊಡಗಿದ ೫
ಮೂರರದೊಂದು ಪಾಲು ಖಳರ ಜನಂಗಳ ಕೊಂದಮೀರಿದ ಸೇನೆ ನಮ್ಮ ರಘುಪತಿಗಿರಲೆಂದು ನಿಂದನೂರುಯೋಜನದ ವಾರಾಶಿಯ ತೀರಕೆ ಬಂದಹಾರಿದನು ಗಗನಕೆ ಹನುಮನು ಭರವಸದಿಂದ ನಿಂದ ೬
ಕುಂಭಿನೀ ಸುತೆಯ ಕುರುಹಿನ ಸನ್ಮಣಿಯ ತಕ್ಕೊಂಡಅಂಬುಧಿಯನು ಬೇಗ ದಾಟಿ ಶ್ರೀರಾಮರ ಕಂಡತ್ರ್ಯಂಬಕ ಮೊದಲಾದ ಸುರರ ತಂಡದಲಿ ಪ್ರಚಂಡಕಂಬುಕಂಧರ ಹಯವದನನ ಭಕ್ತಿರಸಾಯನ ಉಂಡ ೭

 

೧೬೫
ಎನಗೆ ನೀ ಬಂಧು ಎಂದೆಂದು ದಯಾಸಿಂಧು ಪ.
ತಮನ ಕೊಂದೆ ಶ್ರುತಿತತಿಯ ನೀ ತಂದೆ ಕೂ-ರುಮನಾಗಿ ಗಿರಿಯನೆತ್ತಿದೆಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ ತ್ರಿವಿ-ಕ್ರಮನಾಗಿ ಬೆಳೆದೆ ತ್ರೈಲೋಕ್ಯವನಳೆದೆ ೧
ರಾಯರಾಯರ ಗೆಲಿದೆ ರಾವಣಬಲವನು ಮುರಿದೆ ಉ-ಪಾಯದಿ ಗೋವಳನಾದೆಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆಕಾಯಜನ ತಾತ ಕಾಮಿತಫಲದಾತ ೨
ಸುರರ ಶಿರೋರನ್ನ ಕರುಣಾಸಂಪನ್ನ ಮಾನ-ವರ ಮಾನ್ಯ ಸಿರಿ ಹಯವದನ ಪಾವನ್ನಪರಿಪೂರ್ಣ ಶಶಿವರ್ಣನಿರುತ ನಿನ್ನವನ್ನ ಕಾಯಬೇಕೆನ್ನ ೩

 

೧೬೪
ಎನಗೆ ನೀನೇ ಬಂಧು ಎಲೆಲೆ ಕರುಣಾಸಿಂಧುಎನ್ನ ಮನವೇ ನಿನ್ನ ಮನೆಯೆಂದು ನೆನೆದು ಬಾರೊ ತಂದೆ ಪ.
ಮಕ್ಕಳ ಕೊಡುವೆ ಕಂಡ ಸುಜನರ್ಗೆ ಮಗ ನಾನುಅಕ್ಕರಿಂದ ಬೇಡುವವರ ರಕ್ಷಿಸಿಕೊಂಡು ತಂದೆಅಕ್ಷಿಹೀನರಿಗೆ ಪೊಸಚಕ್ಷುವನೀವೆ ಎನಗಿರ್ದಅಕ್ಷಿದೋಷವ ಕಳೆದು ರಕ್ಷಿಸಿಕೊಡು ತಂದೆ ೧
ಪೋದ ಗಂಟ ತರಿಸಿಕೊಡುವುದು ನಿನ್ನ ಬಿರುದು ನಿನ್ನಬೋಧನೆಂಬ ಧನದ ಗಂಟು ನಾನು ನನ್ನ ರಕ್ಷಿಸಿಕೊಈ ಧರೆಯ ಕುಂಟರ ಬಲುಬಂಟರ ಮಾಡಿ ನಡೆಸಿದೆಮೋದನಿಧಿ ನಿನ್ನ ಭಕ್ತನ ಕುಂಟುತನವ ಬಿಡಿಸೊ ೨
ಸಿರಿಹಯವದನ ತಿಮ್ಮ ನೀ ನಿಧರ್ನರ್ಗೆ ಧನವಿತ್ತುಕರುಣಿ ಎನ್ನ ಧೈರ್ಯಧನವನು ಕೊಡೆಯದೇಕೆಧರೆಯೊಳೆನ್ನಾಜ್ಞೆಯನು ನಿಲಿಸಿಕೊಳಬೇಕಾದರೆಧುರದಿ ಅನನ್ಯಾಶ್ಚಿಂತಯೆಂತೋ ಎಂದ ಮಾತ ಸಲಿಸೋ ೩

 

೩೭
ಎನ್ನ ಮನದ ಡೊಂಕ ತಿದ್ದಯ್ಯಾ ಗೋಪಾಲಕೃಷ್ಣ ಪ
ಎನ್ನ ಮನದ ಡೊಂಕ ತಿದ್ದಿ ಮುನ್ನ ಮನ್ನಿಸದಿ[ರೆ]ತಿದ್ದಿಬನ್ನ ಪಡಲಾರೆ ಭವಾಬ್ಧಿಯನ್ನೆ ದಾಟಿಸೊ ಅಪಾರಮಹಿಮ ಅ.ಪ.
ಉದಯವಾದರೆ ಊಟದ ಚಿಂತೆ ಉಂಡಮೇಲೆ ಭೋಗದ ಚಿಂತೆದರಮೇಲೆ ಹದಿನಾಲ್ಕು ಲೋಕಂಗಳನೆ ಆಳ್ವ ಚಿಂತೆ ೧
ಸುಖವು ಬಂದರೆ ನಾನೆ ಸಮರ್ಥ ದುಃಖವು ಬಂದರೆ ಹರಿಯುಮಾಡ್ದರೊಕ್ಕ ಬಂದರೆ ನಾನೆ ಧನಿಕ ಸಿಕ್ಕಿಬಿದ್ದರೆ ಹರಿಯ ವ್ಯಾಪಾರ ೨
ತಿಳಿದು ತಿಳಿದು ಪತಂಗದ್ಹುಳವು ಕಿಚ್ಚಿನಲ್ಲಿ ಬೀಳೋಹಾಂಗೆಕಾಲಕಳೆದೆ ಮೂಕನಂತೆ ಮುದ್ದು ಹಯವದನನೆ ೩

 

೧೬೭
ಎನ್ನ ಹುಯಿಲು ಕೇಳಬಾರದೆ ಪ.
ಸ್ವಾಮಿ ನಿನಗೆ ಎನ್ನ ಮೊರೆಯು ಕೇಳಬಾರದೆ ಪ್ರ-ಸನ್ನ ಚೆನ್ನಕೇಶವರಾಯ ನಿನಗೆ ಅ.ಪ.
ಪಾಲಸಾಗರ ಮಧ್ಯದಲ್ಲಿ ಏಳು ಸುತ್ತಿನ ಎಸೆವ ಕೋಟೆನೀಲಮಾಣಿಕ್ಯ ವಜ್ರದಿಂದ ಗಾ[ರೆ]ನಿಕ್ಕಿದ ಸೆಜ್ಜೆ[ಗೃಹ]ಮೇಲೆ ಶೇಷನೊರಗು ಹಾಸಿಕೆ ಶ್ರೀರುಕ್ಮಿಣಿ ಸತ್ಯಭಾಮೆರೊಡನೆ ಸರಸ-ಸಲ್ಲಾಪನೆ ಸ್ವಾಮಿ ಕೇಳು ಸಾಮಗಾನವೇದಘೋಷಣೆ ೧
ಸುತ್ತಲು ಒಪ್ಪುವ ಸನಕಾದಿಗಳು ಮೊತ್ತದಿಂದ ದೇವತೆಯರುಮತ್ತೆ ಊರ್ವಶಿ ರಂಭೆ ಮೇನಕೆ ಭಕ್ತನಾರದರ ಗೀತಸುತ್ತ ಸುರರ ದುಂದುಭಿ ವಾಲಗ ಅಸುರರ ಕತ್ತರಿಸಿ ಕಡಿವ ಕಾಳಗಭಕ್ತಜನರಿಷ್ಟಾರ್ಥವನ್ನು ಕೊಡುವ ಊಳಿಗ ೨
ಮುನ್ನ ಈ ಭಾಗ್ಯ ಇದ್ದುದಿಲ್ಲವೆ ಸ್ವಾಮಿ ನಿಮಗೆಬನ್ನಬಟ್ಟು ಧರ್ಮನರಸಿ ಸಭೆಯಲೊದರಲು ಅಕ್ಷಯವೆಂದುಸನ್ನೆಯಿಂದ ಕರಿಯ ಸಲಹಿದೆ ಅಜಾಮಿಳನ್ನ ನಿನ್ನ ಪ-ಟ್ಟಣಕೆ ಕರೆಸಿದೆ ಹಯವದನ್ನ ಎನ್ನ ನೀನು ಸಲಹಲಾಗದೆ ೩

 

೧೬೬
ಎನ್ನನುದ್ಧರಿಸಲಾಗದೆ ಚೆನ್ನರಾಯ ಪ.
ಎನ್ನನುದ್ಧರಿಸಲಾಗದೆ ಚೆನ್ನರಾಯ ಬಿನ್ನೈಸುವೆಇನ್ನು ಬೇರೆ ಗತಿಯ ಕಾಣೆ ನಿನ್ನ ಚರಣಕಮಲದಾಣೆ ಅ.ಪ.
ಶರಣಜನರ ಪಾಲ ಕಲ್ಪತರು ಗುರುಸ್ವರೂಪನೆಂದುಧರೆಯೊಳಖಿಳ ನಿಗಮ ಉಸುರುತಿರಲು ನಿನ್ನಚರಣವನ್ನು ಶಿರದೊಳಾಂತೆ ಎನ್ನ ಮೇಲಣಕರುಣವಿಲ್ಲದದೇನುಕಾರಣ ಸಲಹಬೇಕುಸುರರ ಮಸ್ತಕದ ಸುಭೂಷಣ ೧
ಹಿಂದೆ ನಾನನಾಥನಾಗಿ ಒಂದೆರಡ[ಲ್ಲಾ]ನೇಕ ಜನ್ಮದಿಬಂದು ನರಕಯಾತನೆಯಲ್ಲಿ ನೊಂದು ಬೆಂದು ಬಾಯಬಿಡುತಬಂದೆ ನಿನ್ನ ಪೆಸರುಗೊಂಡೆನೊ ಸನಾಥನಾಗಿಮುಂದೆ ನಾಮಸುಧೆಯನುಂಡೆನೊ ನೀ ಕೃಪಾಳುಎಂದು ನುಡಿವರನ್ನು ಕಂಡೆನೊ ೨
ಹಲವು ಮಾತನಾಡಲೇನು ಒಲಿವುದಿನ್ನು ಹರಿಯೆ ನಿನ್ನಸಲಿಗೆಯೊಳೀ ಬಿನ್ನಪವನು ಸಲಿಸುತಿಹೆನು ಮುಂದಕಿನ್ನುಜಲುಮ ಬಾರದಂತೆ ವರವನು ಇತ್ತು ಎನ್ನಸಲಹೊ ದೊರೆಯೆ ನಿನ್ನ ಕರೆಯೆನೊ ಮುಂದೆ ಮುಕುತಿ-ಲಲನೆಯೊಡನೆ ಸುಖದಲಿರುವೆನು ೩
ದೇಶವರಿಯೆ ನಾನು ನಿನ್ನ ದಾಸನೆಂದು ಡಂಗುರವನು ಹೊ-ಯಿಸಿ ತಿರುಗುತಿರಲು ಮೋಹಪಾಶವೆನ್ನ ಸುತ್ತಿಕೊಂಡುಘಾಸಿ ಮಾಡುತಿರಲು ಬಿಡಿಸದೆ ಇರುವ ಪಂಥವಾಸಿಯೇನು ಇನ್ನು ಅಲೆಸದೆ ಸಲಹೊ ಸ-ರ್ವೇಶ ನಂಬಿದವನ ಕೆಡಿಸದೆ ೪
ಎನ್ನ ದುರ್ಗುಣವನ್ನು ಮರೆದು ನಿನ್ನ ಸದ್ಗುಣದಿ ಪೊರೆದುಮನ್ನಿಸಿದರೆ ಲೋಕದೊಳಗೆ ಧನ್ಯನಹೆನು ಜನಮವೆತ್ತಿಉನ್ನತಾಹುದು ನಿನ್ನ ಕೀರುತಿ ನಾಶವಾಹುದುಎನ್ನ ಭವದ ಬಹಳ ಧಾವತಿ ಸಲಹೊಚೆನ್ನ ಹಯವದನಮೂರುತಿ ೫

 

೩೮
ಎನ್ನಾಣೆ ಬ್ಯಾಡ ಬ್ಯಾಡವೋ ರಂಗ ನಿನಗಿದುಚೆನ್ನಗಿತ್ತೇರ ಮನೆ ಗೋವಿಂದ ಪ.
ಗೋಪೇರ ಮನೆಗಳ ಪೊಕ್ಕು ಬಹುಪರಿ-ತಾಪವ ಮಾಡುವರೇ ಕಂದ ಗೋವಿಂದಕಾಪಟ್ಯಸತಿಯರ ಮಾತ ನೀನಾಲಿಸಿಕೋಪಿಸಬೇಡವಮ್ಮಾ ಗೋಪೆಮ್ಮ ೧
ಎನ್ನಪ್ಪ ಕಂದನೆ ಚಿಣ್ಣ ಗೋಪೇರು ಬಂದುನಿನ್ನ ದೂರುತಲೈದಾರೋ ಗೋವಿಂದಕನ್ನೇರು ಕೊಬ್ಬಿಂದ ಅನ್ಯಾಯ ನುಡಿತಾರೆಇನ್ನೇನು ಮಾಡಲಮ್ಮ ಗೋಪೆಮ್ಮ ೨
ದಧಿ ದುಗ್ಧ ಭಾಂಡ ಒಡೆದು ಗೋಪಿಯರನ್ನುಸದರ ಮಾಡುವರೇ ಕಂದ ಗೋವಿಂದಉದಯದಿ ಗುದ್ದ್ಯಾಡಿ ಮಾರ್ಜಾಲಂಗಳು ಬೀಳೆದಧಿಭಾಂಡ ಜಾರಿತಮ್ಮ ಗೋಪೆಮ್ಮ ೩
ಬಸವನ ಆಟದಿ ಶಿಶುಗಳೆಲ್ಲರ ಕೂಡಿಮಸಿಮಣ್ಣು ಮೈಯ್ಯಾದವೊ ಗೊವಿಂದಬಿಸಜಾಕ್ಷಿಯರು ತಮ್ಮ ಮನೆಕೆಲಸದ ಕೈಯ್ಯಮಸಿಮಣ್ಣು ಒರೆಸಿದರೆ ಗೋಪೆಮ್ಮ ೪
ಒರಗಿದ್ದ ಹಸುಗಳೆಬ್ಬಿಸಿ ಕರುಗಳ ಬಿಟ್ಟುದುರುಳತನವ ಮಾಡೋರೆ ಗೋವಿಂದನೆರೆದಿದ್ದ ಶಿಶುಗಳಾಡುವ ಗುಲ್ಲ ತಾವ್ ಕೇಳಿತುರುಶಿಶು ಬೆದರಿತಮ್ಮಾ ಗೋಪೆಮ್ಮ ೫
ಅಣ್ಣ ಬಲರಾಮ ನಿನ್ನ ಬನ್ನಣೆ ಸುದ್ದಿಯಚೆನ್ನಾಗಿ ಪೇಳಿದನೊ ಗೋವಿಂದಉನ್ನಂತ ದಾಯಾದಿಯ ಮಾತುಗಳ ನೀನುಮನ್ನಿಸ ಬೇಡವಮ್ಮ ಗೋಪೆಮ್ಮ ೬
ಬಾಯೆನ್ನ ರನ್ನವೆ ಬಾಯೆನ್ನ ಚಿನ್ನವೆಬಾಯೆನ್ನ ಮೋಹದ ಗಿಣಿಯೆ ಗೋವಿಂದಬಾಯೆಂದು ಯಶೋದೆ ಕರೆದಳು ಬಿಗಿದಪ್ಪಿಬಾಯೆನ್ನ ಹಯವದನ ಗೋವಿಂದ ೭

 

೧೬೯
ಎಲೆ ಸಖಿಯೆ ಪೋಗು ವಿಠಲನ ಬಳಿಗೆಬೇಗವನ ತಾರೆ ಎನ್ನ ಮನೆಗೆ ಪ.
ಚಂದ್ರ ಉದಿಸುತಲಿ ಬಂದ ರಂಜಿಸುತರ-ವಿಂದಬಾಣ ನಡೆತಂದಮಂದಮಾರುತ ಮುಂದೆ ನಿಂದ ಅವ ಕುಸುಮ-ಗಂಧದಿಂದಲೆನ್ನ ಕೊಂದ ೧
ಕೀರ ನುಡಿಯುತಿದೆ ಧೀರ ಕೋಕಿಲಿಯಸ್ವರ ಕರ್ಣಕಠೋರಮಾರ ಬೇಗ ಹರಿಬಾರದಿರೆ ಕೆಳದಿಕ್ರೂರ ಎನ್ನ ಕೊಲ್ಲದಿರ ೨
ಜೀಯ ಸುಜನರ ಸಹಾಯ ನಿಗಮಕುಲಗೇಯ ನಿರ್ಧೂತ ಹೇಯಪ್ರಿಯ ಹಯವದನರಾಯ ಸಖಿ ಎನ್ನಕಾಯಲಿನ್ನೇನು ಉಪಾಯ ೩

 

೩೯
ಎಲ್ಲ ಲೀಲೆ ಇದೆಲ್ಲ ಲೀಲೆಎಲ್ಲ ಲೀಲೆ ರಂಗಗೆಲ್ಲ ಲೀಲೆ ಪ.
ಪುಟ್ಟಿಸುವುದು ಮನವಿಟ್ಟು ಕಾವುದುದುಷ್ಟರ ಶಿಕ್ಷೆ ಅಲ್ಲಿ ವಿಶಿಷ್ಟರ ರಕ್ಷೆ ೧
ನೀರೊಳುಲ್ಲಾಸ ಮತ್ತಾರಣ್ಯವಾಸಹಾರುವರಾಟ ತನ್ನ ನಾರಿಯ ಬೇಟ ೨
ಗೊಲ್ಲರಾಕೃತಿ ಬತ್ತಲೆಯ ಸ್ಥಿತಿಬಲ್ಲಿದ ದೈವ ಕಲಿಯ ಗೆಲ್ಲುವ ಭಾಗ ೩
ವರನಿಪ್ಪುದು ಕರೆದರೆ ಬಪ್ಪುದುಧರೆಯಜಮ ಪರಿಪರಿಯ ಕರ್ಮ ೪
ಹೆಂಗಳಕೂಟ ಅಪಾಂಗದ ನೋಟ ಹಾಸ್ಯದಂಗದಿಂದೂಟ ರಣರಂಗದಿಂದೋಟ ೫
ಅಂಬಿನ ವೇಧ ನಿನ ತುಂಬಿದ ಕ್ರೋಧ ತ್ರಿ-ಯಂಬಕ ಪೂಜೆ ತ್ರಿವಿಡಂಬನವೋಜೆ ೬
ಕರ್ತುಮಾಕರ್ತು ಮತ್ತನ್ಯಥಾಕರ್ತು ಎಂಬಶಕ್ತಿದೇವಗೆ ಬಲುಯುಕ್ತಿ ಇವಗೆ ೭
ನಾವೆಕರ್ತವ್ಯಂ ಸುಪ್ರವೆ ವಕ್ತವ್ಯಂಏಸು ಮಹಿಮೆಗೆ ಕೃತಕೃತ್ಯ ನಮಗೆ ೮
ಪ್ರಿಯಮೋದನ ದೈತ್ಯೇಯಭೇದನಹಯವದನ ನಿನ್ನರ್ಥಿ ಕಾಯಿದನ ೯

 

೨೭೪
ಎಲ್ಲಮ್ಮಾದೇವಿ ನಮ್ಮ ದೇವರು ಬಂದರು ಕಾಣ ಪ.
ಸೋಮಾಸುರನೆಂಬ ದೈತ್ಯನು
ಸಾಮಕ ವೇದವನೊಯ್ಯಲು ಮಾ
ಸೋಮಾಸುರನೆಂಬವನ ಕೊಂದು
ಸಾಮಕವೇದವ ತಂದನು ಮಾ ೧
ಗುಡ್ಡವು ಮುಳುಗಿ ಪೋಗಲು ನಮ್ಮದೇವ
ಗುಡ್ಡವ ಬೆನ್ನಲ್ಲಿಟ್ಟನು ಮಾ
ಗುಡ್ಡದಂಥ ದೈತ್ಯರನೆಲ್ಲ
ಅಡ್ಡಕೆಡಹಿ ಬಿಸುಟನು ಮಾ ೨
ಚಿನ್ನಗಣ್ಣಿನವನು ಬಂದು
ಕನ್ನೆ ಪೆಣ್ಣನೊಯ್ಯಲು ಮಾ
ವರ್ಣರೂಪವ ತಾಳಿ ಅವನ
ಭಿನ್ನ ಭಿನ್ನವ ಮಾಡಿದನು ಮಾ ೩
ಕಂಭದಿಂದಲೆ ಉದಿಸಿ ನಮ್ಮ ದೇವ
ಜಂಭದಸುರನ ಬಡಿದನು ಮಾ
ನಂಬಿದ ಪ್ರಹ್ಲಾದನ್ನ ಕಾಯಿದ
ಅಂಬುಜನಾಭ ನರಸಿಂಗನು ಮಾ ೪
ಬಲು ಮುರುಡನಾಗಿ ಭೂಮಿಯ
ಬಲಿಯ ದಾನವ ಬೇಡಿದ ಮಾ
ಇಳೆಯ ಈರಡಿಯ ಮಾಡಿ
ಬಲಿಯ ಪಾತಾಳಕೊತ್ತಿದ ಮಾ ೫
ಕೊಡಲಿಯನ್ನು ಪಿಡಿದು ನಮ್ಮದೇವ
ಕಡಿದ ಕ್ಷತ್ರಿಯ ರಾಯರ ಮಾ
ಹಡೆದ ತಾಯ ಶಿರವ ತರಿದು
ಪಡೆದನಾಕೆÉಯ ಪ್ರಾಣವ ಮಾ ೬
ಎಂಟೆರಡು ತಲೆಯ ಅಸುರನ
ಕಂಠವ ಛೇದಿಸಿ ಬಿಟ್ಟನು ಮಾ
ಒಂಟಿರೂಪವ ತಾಳಿ ಲಂಕೆಯ
ಬಂಟ ವಿಭೀಷಣಗಿತ್ತನು ಮಾ ೭
ಸೋಳಸಾಸಿರ ಗೋಪಿಯರೊಡನೆ
ಕೇಳೀಮೇಳದಲಿಪ್ಪನು ಮಾ
ಬಾಲಕನಾಗಿ ಪೆಣ್ಣರೂಪದಲಿ ಶ್ರೀ-
ಲೋಲ ಲಕ್ಷ್ಮಿಯ ಅರಸನು ಮಾ ೮
ಒಪ್ಪದಿಂದಲಿ ಬಂದು ನಮ್ಮ ದೇವ
ಇಪ್ಪೆವನದೊಳಗಿಪ್ಪನು ಮಾ
ಸರ್ಪಶರನಾಗಿ ಪೋಗಿ
ತ್ರಿಪುರಸಂಹರ ಮಾಡಿದ ಮಾ ೯
ಎಲ್ಲಮ್ಮಾ ಎಲ್ಲಮ್ಮಾ ನಮ್ಮದೇವ
ಬಲ್ಲಿದ ಕಲ್ಕ್ಯವತಾರನು ಮಾ
ಇಳೆಯ ಸ್ವರ್ಗ ಪಾತಾಳಕೊಡೆಯ
ಚೆಲುವ ಹಯವದನನು ಮಾ ೧೦

 

೧೧೪
ಎಷ್ಟು ಸಾಹಸವಂತ ನೀನೆ ಬಲವಂತದಿಟ್ಟಮೂರುತಿ ಭಳಭಳಿರೆ ಹನುಮಂತ ಪ.
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಗಳಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ ಅ.ಪ.
ರಾಮರಪ್ಪಣೆಯಿಂದ ಶರಧಿಯ ದಾಟಿಆ ಮಹಾ ಲಂಕೆಯ ಕಂಡೆ ಕಿರೀಟಸ್ವಾಮಿಕಾರ್ಯವನು ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ ೧
ದೂರದಿಂದಸುರನ ಪುರವ[ನ್ನು] ನೋಡಿಭರದಿ ಶ್ರೀರಾಮರ ಸ್ಮರಣೆಯನು ಮಾಡಿಹಾರಿದೆ ಹರುಷದಿ ಸಂಹರಿಸಿ ಲಂಕಿಣಿಯನುವಾರಿಜಮುಖಿಯನು ಕಂಡು ಮಾತಾಡಿ ೨
ರಾಮರ ಕ್ಷೇಮವ ರಮಣಿಗೆ ಪೇಳಿತಾಮಸ ಮಾಡದೆ ಮುದ್ರೆನೊಪ್ಪಿಸಿಪ್ರೇಮದಿಂ ಜಾನಕಿ ಕುರುಹನು ಕೊಡಲಾಗಆ ಮಹಾ ವನದೊಳು ಫಲವನು ಬೇಡಿ ೩
ಕಣ್ಣ್ಣಿಗೆ ಪ್ರಿಯವಾದ ಹಣ್ಣ[ನು] ಕೊಯ್ದುಹಣ್ಣಿನ ನೆವದಲಿ ಅಸುರರ ಹೊಯ್ದುಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತಬಣ್ಣಿಸಿ ಅಸುರರ ಬಲವನು ಮುರಿದು ೪
ಶೃಂಗಾರವನದೊಳಗಿದ್ದ ರಾಕ್ಷಸರಅಂಗವನಳಿಸಿದೆ ಅತಿರಣಶೂರನುಂಗಿ ಅಸ್ತ್ರಗಳ ಅಕ್ಷಯಕುವರನಭಂಗಿಸಿ ಬಿಸುಟಿಯೊ ಬಂದ ರಕ್ಕಸರ ೫
ದೂರ ಪೇಳಿದರೆಲ್ಲ ರಾವಣನೊಡನೆಚೀರುತ್ತ ಕರೆಸಿದ ಇಂದ್ರಜಿತುವನೆಚೋರಕಪಿಯನು ನೀ ಹಿಡಿತಹುದೆನ್ನುತಶೂರರ ಕಳುಹಿದ ನಿಜಸುತನೊಡನೆ ೬
ಪಿಡಿದನು ಇಂದ್ರಜಿತು ಕಡುಕೋಪದಿಂದಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದಗುಡುಗುಡುಗುಟ್ಟುತ ಕಿಡಿಕಿಡಿಯಾಗುತನಡೆದನು ಲಂಕೆಯ ಒಡೆಯನಿದ್ದೆಡೆಗೆ ೭
ಕಂಡನು ರಾವಣನುದ್ದಂಡ ಕಪಿಯನುಮಂಡೆಯ ತೂಗುತ್ತ ಮಾತಾಡಿಸಿದನುಭಂಡುಮಾಡದೆ ಬಿಡೆನೋಡು ಕಪಿಯೆನೆಗಂಡುಗಲಿಯು ದುರಿದುರಿಸಿ ನೋಡಿದನು ೮
ಛಲವ್ಯಾಕೊ ನಿನಗಿಷ್ಟು ಎಲೊ ಕೋಡಗನೆನೆಲೆಯಾವುದ್ಹೇಳೊ ನಿನ್ನೊಡೆಯನ್ಹೆಸರನ್ನುಬಲವಂತ ರಾಮರ ಬಂಟ ಬಂದಿಹೆನೊಹಲವು ಮಾತ್ಯಾಕೊ ಹನುಮನು ನಾನೆ ೯
ಬಡರಾವಣನೆ ನಿನ್ನ ಬಡಿದು ಹಾಕುವೆನೊ ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೊಹುಡಿಯೇಳಿಸುವೆನು ಖುಲ್ಲ ರಕ್ಕಸನೆತೊಡೆವೆನೊ ನಿನ್ನ ಪಣೆಯ ಅಕ್ಷರವ ೧೦
ನಿನ್ನಂಥ ದೂತರು ರಾಮನ ಬಳಿಯೊಳುಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರಿಯಾನನ್ನಂಥ ದೂತರು ನಿನ್ನಂಥ ಪ್ರೇತರುಇನ್ನೂರು ಮುನ್ನೂರು ಕೋಟಿ ಕೇಳರಿಯಾ ೧೧
ಕಡುಕೋಪದಿಂದಲಿ ಖೂಳರಾವಣನು ಸುಡಿರೆಂದ ಬಾಲವ ಸುತ್ತಿ ವಸನವನುಒಡೆಯನ ಮಾತಿಗೆ ತಡೆಬಡೆಯಿಲ್ಲದೆಒಡನೆಮುತ್ತಿದರು ಗಡಿಮನೆಯವರು ೧೨
ತಂದರು ವಸನವ ತಂಡತಂಡದಲಿಒಂದೊಂದು ಮೂಟೆ ಎಂಬತ್ತು ಕೋಟಿಯಲಿಚಂದದಿ ಹರಳಿನ ತೈಲದೊಳದ್ದಿಸೆನಿಂದ ಹನುಮನು ಬಾಲವ ಬೆಳೆಸುತ ೧೩
ಶಾಲು ಸಕಲಾತ್ಯಾಯಿತು ಸಾಲದೆಯಿರಲುಬಾಲೆರ ವಸ್ತ್ರವ ಸೆಳೆದುತಾರೆನಲುಬಾಲವ ನಿಲ್ಲಿಸೆ ಬೆಂಕಿಯನಿಡುತಲಿಕಾಲಮೃತ್ಯುವ ಕೆಣಕಿದರಲ್ಲಿ ೧೪
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತಇಣಿಕಿನೋಡುತ ಅಸುರರನಣಕಿಸುತಝಣಝಣಝಣರೆನೆ ಬಾಲದಗಂಟೆಯುಮನದಿ ಶ್ರೀರಾಮರ ಪಾದವ ನೆನೆಯುತ ೧೫
ಮಂಗಳಂ ಶ್ರೀರಾಮಚಂದ್ರ ಮೂರುತಿಗೆಮಂಗಳಂ ಸೀತಾದೇವಿ ಚರಣಂಗಳಿಗೆಮಂಗಳವೆನುತ ಲಂಕೆಯ ಸುಟ್ಟುಲಂಘಿಸಿ ಅಸುರನ ಗಡ್ಡಕೆ ಹಿಡಿದ ೧೬
ಹತ್ತಿತು ಅಸುರನ ಗಡ್ಡಮೀಸೆಗಳುಸುತ್ತಿತು ಹೊಗೆ ಬ್ರಹ್ಮಾಂಡಕೋಟಿಯೊಳುಚಿತ್ತದಿ ರಾಮರು ಕೋಪಿಸುವರು ಎಂದುಚಿತ್ರದಿ ನಡೆದನು ಅರಸನಿದ್ದೆಡೆಗೆ ೧೭
ಸೀತೆಯಕ್ಷೇಮವ ರಾಮರಿಗ್ಹೇಳಿಪ್ರೀತಿಯಿಂ ಕೊಟ್ಟಕುರುಹ ಕರದಲ್ಲಿಸೇತುವೆ ಕಟ್ಟಿ ಚತುರಂಗ ಬಲಸಹಮುತ್ತಿತು ಲಂಕೆಯ ಸೂರೆಗೈಯುತಲಿ ೧೮
ವೆಗ್ಗಳವಾಯಿತು ರಾಮರ ದಂಡುಮುತ್ತಿತು ಲಂಕೆಯ ಕೋಟೆಯ ಕಂಡುಹೆಗ್ಗದ ಕಾಯ್ವರ ನುಗ್ಗುಮಾಡುತಿರೆಝಗ್ಗನೆ ಪೇಳ್ದರು ರಾವಣಗಂದು ೧೯
ರಾವಣಮೊದಲಾದ ರಾಕ್ಷಸರ ಕೊಂದುಭಾವಶುದ್ಧದಲಿ ವಿಭೀಷಣ ಬಾಳೆಂದುದೇವಿ ಸೀತೆಯನೊಡಗೊಂಡಯೋಧ್ಯದಿದೇವ ಶ್ರೀರಾಮರು ರಾಜ್ಯವಾಳಿದರು ೨೦
ಶಂಖದೈತ್ಯನ ಕೊಂದೆ ಶರಣು ಶರಣಯ್ಯಶಂಖಗಿರಿಯಲಿ ನಿಂದೆ ಹನಮಂತರಾಯಪಂಕಜಾಕ್ಷ ಹಯವದನನ ಕಟಾಕ್ಷದಿಬಿಂಕದಿ ಪಡೆದೆಯೊ ಅಜನಪದವಿಯ ೨೧

 

೨೭೬
ಏ ರಂಗಧಾಮ ರಂಗ ಏ ರಂಗಧಾಮ ಪ.
ನಾರುವ ಮೈಯವನತ್ತ ಸಾರು ಮುಟ್ಟದಿರೊ ಎನ್ನ
ದೂರನಿಲ್ಲು ತರವಲ್ಲ ಏ ರಂಗಧಾಮ
ಸಾರ ಶ್ರುತಿಗಳ ತಂದು ವಾರಿಜಸಂಭವಗಿತ್ತೆ
ಧೀರ ಮತ್ಸ್ಯರೂಪಕಾಣೆ ಎಲೆ ಸತ್ಯಭಾಮೆ ೧
ಚೆಂದವಂತನೆಂದು ನಾ ಬಂದೆ ತರ್ಕಿಸಿ ನಿನ್ನ ಬೆನ್ನು
ಡೂಂಕಿದೇನೋ ಪೇಳೋ ಏ ರಂಗಧಾಮ
ಸಿಂಧುಮಥನವ ಮಾಡಲಂದು ಮಂದರ ಮುಳುಗೆ
ಬಂದು ನೆಗಹಿದ ಕೂರ್ಮ ಎಲೆ ಸತ್ಯಭಾಮೆ ೨
ನೋಡಿದರೆ ಮೈಯೊಳಗೆ ಮೂಡಿರುವ ರೋಮಗಳು
ಗಾಡಿಕಾರ ನೀನಾರಯ್ಯ ಏ ರಂಗಧಾಮ
ಕ್ರೋಡರೂಪದಿಂದಿಳೆಯ ದಾಡೆಯ ಮೇಲಿಟ್ಟು ತಂದ
ಕಾಡವರಾಹನು ಕಾಣೆ ಎಲೆ ಸತ್ಯಭಾಮೆ ೩
ಮನುಷ್ಯಾಗಿದ್ದಮೇಲಣಕಾನನದ ಮೃಗರಾಜ
ಆನನವಿದೇನೊ ಪೇಳೊ ಏ ರಂಗಧಾಮ
ಮಾನಿನಿ ಕೇಳೆ ಪ್ರಹ್ಲಾದನ್ನ ಮಾನಭಂಗಕ್ಕೊದಗಿದ
ಶ್ರೀ ನರಸಿಂಹ ಕಾಣೆ ಎಲೆ ಸತ್ಯಭಾಮೆ ೪
ದೊರೆತನವುಳ್ಳವನೆಂದು ಮರುಳುಗೊಂಡೆ ನಾ ನಿನಗೆ
ತಿರುಕನೆಂಬೋದರಿಯದಾದೆನೊ ಏ ರಂಗಧಾಮ
ತರಳೆ ಸುರರಿಗಾಗಿ ಬಲಿಯ ತುಳಿದು ಪಾತಾಳಕೊತ್ತಿದ
ಗರುವ ವಾಮನ ಕಾಣೆ ಎಲೆ ಸತ್ಯಭಾಮೆ ೫
ಅಡವಿಯೊಳು ಕಟ್ಟಿಗೆಯ ಕಡಿವವನಂತೆ ಕೊಡಲಿಯ
ಪಿಡಿವುದೇನೊ ಪುಣ್ಯವಾಸ ಏ ರಂಗಧಾಮ
ಮಡುಹಿ ಕ್ಷತ್ರೇರನೆಲ್ಲ [ಮುದದಿ] ಸೇರ್ದ ಮಾತೆಗಾಗಿ
ಒಡೆಯನಾದ ಪರಶುರಾಮ ಎಲೆ ಸತ್ಯಭಾಮೆ ೬
ಊರಬಿಟ್ಟರಣ್ಯವನು ಸೇರಿ ಮುನಿಗಳಂತಿಪ್ಪ
[ಕಾರಣ]ವಿದೇನೊ ಪೇಳೊ ಏ ರಂಗಧಾಮ
ಕ್ರೂರರಾವಣನ ಗೆಲಿದು ನಾರಿಸೀತೆಯನು ತಂದ
ಧೀರರಾಘವನು ಕಾಣೆ ಎಲೆ ಸತ್ಯಭಾಮೆ ೭
ವಲ್ಲಭೆಜನರಿಗೆಲ್ಲ ನೀ ವಲ್ಲಭನಾಗಿ
ಗೊಲ್ಲನಂತೆ ಗೋವ ಕಾಯುವ ಕಾರಣವೇನೊ ಏ ರಂಗಧಾಮ
ಬಿಲ್ಲಹಬ್ಬಕ್ಕೆ ಹೋಗಿ[ಮಲ್ಲ] ಕಂಸನ ಕೊಂದ
ಬಲ್ಲಿದ ಶ್ರೀಕೃಷ್ಣ ಕಾಣೆ ಎಲೆ ಸತ್ಯಭಾಮೆ ೮
ನಗೆಗೀಡು ಮಾಡಿಕೊಂಡು ದಿಗ್ವಸನನಾಗಿ ನಿಂತ
ಹಗರಣವಿದೇನೊ ಪೇಳೊ ಏ ರಂಗಧಾಮ
ಮಿಗೆ ಮೂರುಪುರದ ಸತಿಯರ ವ್ರತವ ಕೆಡಿಸಿ
ಜಗವ ಮೋಹಿಸುವ ಬೌದ್ಧ ಎಲೆ ಸತ್ಯಭಾಮೆ ೯
ಕರದಿ ಖಡ್ಗವನೆ ಪಿಡಿದು ತರಳ ಅಶ್ವವನೇರಿ
ತಿರುಗುವುದಿದೇನು ಪೇಳೊ ಏ ರಂಗಧಾಮ
ವರ ಹಯವದನ ಹರುಷದಿಂದಲಾಡಿ ಪಾಡಿ ಕಲ್ಕಿಯಾದೆ
ಹರಿಲೋಚನೆ ಎಲೆ ಸತ್ಯಭಾಮೆ ೧೦

 

೩೨೪
ಏಕಾದಶಿ ನಿರ್ಣಯ ಅನಲು [ಸಮನೆ] ಮನೆಗೆ
ಪೇಳಬಂದ ಅನಾಥಬಂಧು ಹಯವದನ ಗೋವಿಂದ ಪ.
ತನ್ನ ನಂಬಿದವರ ತಾಪತ್ರಯವಳಿದು
ಉನ್ನಂತ ಪದವೀವ ದಿನತ್ರಯವನ್ನು ೧
ವೃದ್ಧಿಮಾತ್ರ ಅರುಣೋದಯದ ಕೆಳಗೆ
[ಶುದ್ಧಿದಂ] ಘಳಿಗೆ ಸಾಕುಯೆಂದು ೨
ಅತಿವೃದ್ಧಿ ಒಂದುಘಳಿಗೆಯ ಕೆಳಗೆ ವಿಂ
ಶತಿ [ಫಣಫಲ] ದೊಳಗೆ [ಶುದ್ಧಿ] ಬೇಕೆಂದು ೩
ತಿಥಿ ವೃದ್ಧಿಆದಾಗೆ ಹತ್ತು [ಫಣಪಲ]
ತಿಥಿಕ್ಷಯದಲ್ಲಿ ಅದರೊಳು [ಶುದ್ಧಿ] ಬೇಕೆಂದು ೪
ಇಂದು ದಶಮಿ ಶಾಖವ್ರತವ ಮಾಡಿ ನೀವು
ಒಂದು ಬಾರಿ ಭೋಜನ ಮಾಡಿರೊಯೆಂದು ೫
ತಾಂಬೂಲಚರ್ವಣ ಸಲ್ಲ ಸ್ತ್ರೀಸಂಗ
ಹಂಬಲವನ್ನು ನೀವು ಬಿಡಿರಿಯೆಂದು ೬
ನಾಳೆ ಏಕಾದಶೀ ಉಪವಾಸ ಜಾಗರ
ಆಲಸ್ಯ ಮಾಡದೆ ಆಯತಾಕ್ಷಗೆಯೆಂದು ೭
ಫಲಹಾರವು ಸಲ್ಲ ಭೋಜನವು ಸಲ್ಲದು
ಜಲಪಾನ ಸಲ್ಲ ಮೆಲಸಲ್ಲದೆಂದು ೮
ನಾಲ್ಕುಹೊತ್ತಿನ ಆಹಾರವ ಬಿಡುವುದು ಹದಿ
ನಾಲ್ಕು ಜಾವದ ಜಾಗರ ಮಾಡಿರೊಯೆಂದು ೯
ಪೇಳ ಅರ್ಧದ್ವಾದಶಿಬಂದಾಗ ನೀವೆಲ್ಲ
ಒಲುಮೆಯಿಂದ ಪಾರಣೆಯ ಮಾಡಿರೊಯೆಂದು೧೦
ಇಂತು ತಿಥಿತ್ರಯ ಮಾಡುವ ಜನರನ್ನು
ಸಂತತ ಪೊರೆವ ಶ್ರೀಕಾಂತ ಹಯವದನ ೧೧

 

೧೧೫
ಏನ ಬಣ್ಣಿಪೆನಮ್ಮ ಪ.
ಏನ ಬಣ್ಣಿಪೆ ಪೂರ್ಣಪ್ರಜ್ಞ ಪಂಡಿತರಾಯರ ಅ.ಪ.
ಮಧ್ವಸರೋವರ ತೀರದ ಮುದ್ದುಕೃಷ್ಣನ ಪ್ರ-ಸಿದ್ಧಿಯಿಂದ ಪೂಜೆಮಾಡಿ ಗೆದ್ದ ಬಲವಂತ ರಾಯರ ೧
ಭವಬಂಧ ಮಾಯಿಗಳ ಕಾಲಲೊದ್ದು [ಮೂಲೆಲ್ಹಾಕಿ]ಮಧ್ವಶಾಸ್ತ್ರವೆಲ್ಲ ಪ್ರಸಿದ್ಧ ಮಾಡಿದ ಯತಿರಾಯರ ೨
ಸಿರಿ ಹಯವದನನ ಚರಣಕಮಲವನುನಿರುತವಾಗಿ ಸೇವಿಸುವ ಅಚ್ಛಿನ್ನ ನಿಜದಾಸರ ೩

 

೧೭೦
ಏನ ಹೇಳಲಿ ನರಹರಿ ನಿನ್ನ ಮಹಿಮೆಯ ಪ.
ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ ಅ.ಪ.
ಸಚ್ಚಿದಾನಂದನ ಪಾದಾರವಿಂದವಮೆಚ್ಚಿ ಹಸನಾಗಿ ಇರು ಎಂದೆಡೆಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಲಿಕಿಚ್ಚುಕಂಗೊಂಡು ಎನ್ನ ಕಾಡುತಿದೆ ರಂಗ ೧
ವಾಸುದೇವನ ಗುಣಗಳ ಸ್ತುತಿಸದೆ ದು-ರಾಸೆಯೊಳು ಬಿದ್ದು ಕಾಡುತಿದೆಲೇಸಾಗಿ ನಾಯಿಬಾಲಕೆ ನಾರಾಯಣ ತೈಲಏಸುಬಾರಿ ತೀಡಿದರೆ ನೀಟಾಗುವುದೊ೨
ಸಾಧು ಸಜ್ಜನರ ಸಂಗವ ಮಾಡಲೊಲ್ಲದೆಬಾಧಿಸುತಿದೆ ದುಷ್ಟಸಂಗದಿಂದಮಾಧವ ಭಕ್ತವತ್ಸಲ ಹಯವದನನೆನೀ ದಯಮಾಡಿ ನಿನ್ನಂತೆಮಾಡೆನ್ನ ಮನ ೩

 

೧೭೧
ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿಪ.
ದಾನಧರ್ಮ ಮಾಡಲಿಲ್ಲ ದಯಬುದ್ಧಿ ಪುಟ್ಟಲಿಲ್ಲಜ್ಞಾನವರಿತು ಹರಿಪೂಜೆ ಮಾಡಲಿಲ್ಲಜ್ಞಾನಿ ಸುಜ್ಞಾನಿಗಳಸನ್ನಿಧಿಯಲ್ಲಿರಲಿಲ್ಲ ನಿರ್ಮಲಮನದಲಿ ಒಂದುದಿನವಿರಲಿಲ್ಲ ೧
ಸತಿ ಪುರುಷರು ನಾವು ಸಂತೋಷದಿಂದಿರಲಿಲ್ಲಯತಿಯಾಗಿ ತೀರ್ಥಯಾತ್ರೆ ಮಾಡಲಿಲ್ಲಶ್ರುತಿಶಾಸ್ತ್ರ ಪುರಾಣಗಳ ಕಿವಿಗೊಟ್ಟು ಕೇಳಲಿಲ್ಲಮೃತವಾಗೋಕಾಲ ಬಂತು ಬರಿದೆ ಮುಪ್ಪಾದೆನಲ್ಲ ೨
ಉಂಡು ಸುಖಿ ಅಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲದುಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆಮೊಂಡಜೋಗಿಗುಣಂಗಳ ಬಿಡಿಸೊ ಹಯವದನ ೩

 

೪೦
ಏನು ಸುಕೃತವ ಮಾಡಿದಳೊ ಯಶೋದೆಶ್ರೀನಿಧಿಯಾದ ಕೃಷ್ಣನ್ನ ಕರೆದು ಮುದ್ದಿಸುವಳಂತೆಪ
ಗಂಗಾಜನಕನಿಗೆ ಗಡಿಗೆನೀರೆರೆವಳಂತೆಮಂಗಳಾಂಗಗೆ ಭಾಮೆ ಶೃಂಗರಿಸುವಳಂತೆತುಂಗ ಭೂಧರನ್ನ ತೊಟ್ಟಿಲೊಳು ತೂಗುವಳಂತೆಕಂಗಳಿಗಗೋಚರನ ಕರೆದಪ್ಪಿಕೊಂಬಳಂತೆ ೧
ನಗವನೆತ್ತಿದವನ ಮಗುವೆಂದೆತ್ತುವಳಂತೆನಿಗಮಗೋಚರನ ತಾ ನಿಟ್ಟಿಪಳಂತೆಅಗಣಿತ ಸತ್ವನ್ನ ಹಗ್ಗದಿ ಕಟ್ಟುವಳಂತೆಮಿಗೆ ನಿತ್ಯತೃಪ್ತಗೆ ಪಾಲನೆರೆವಳಂತೆ ೨
ಬಹುಮುಖನಿಗೆ ಭಾಮೆ ಮುದ್ದುಕೊಡುವಳಂತೆಅಹಿತಲ್ಪನಿಗೆ ಹಾವತುಳಿದೀಯೆಂಬಳಂತೆಮಹಾದೈತ್ಯದಲ್ಲಣನಿಗೆ ಬಹು ಭಯವ ತೋರುವಳಂತೆಮಹಿಮ ನರಸಿಂಹಗೆ ಗುಮ್ಮನ ತೋರುವಳಂತೆ ೩
ಚತುರ್ಮುಖಪಿತನ ಸುತನೆಂದೆತ್ತುವಳಂತೆಶ್ರುತಿವಿನುತಗೆ ಜೋಗುಳ ಪಾಡುವಳಂತೆಶತರವಿತೇಜಗಾರತಿಯನೆತ್ತುವಳಂತೆಗತಭೀತನಿಗೆ ಭಾಮೆ ರಕ್ಷೆಯಿಕ್ಕುವಳಂತೆ ೪
ಕಡೆಗೋಲ ನೇಣ ಕೈಯಲಿ ಪಿಡಿದೊಲವಿಂದಪಡುಗಡಲತಡಿಯ ದ್ವಾರಕೆನಿಲಯಬಿಡದೆ ನೆಲೆಸಿದ ಹಯವದನ ಮುದ್ದುಉಡುಪಿನ ಕೃಷ್ಣನ ಉಡಿಯೊಳೆತ್ತುವಳಂತೆ ೫

 

೨೭೫
ಏನೆಂದು ಸ್ತುತಿಸಲಿ ದೇವ ರಂಗಯ್ಯ ನಿನ್ನ ಜಾಣ-
ತನವ ನೀನೆ ಬಲ್ಲೆ ಶ್ರೀ ರಂಗಯ್ಯ ಪ.
ಮತ್ಸ್ಯನಾಗಿ ಶ್ರುತಿಯ ತಂದೆ ರಂಗಯ್ಯ ನೀನು
ಕುತ್ಸಿತ ತಮನ ಕೊಂದೆ ರಂಗಯ್ಯ
ಸ್ವಚ್ಛ ಕೂರುಮನಾದೆ ರಂಗಯ್ಯ ಭಕ್ತ
ರಿಚ್ಛೆಯ ಪಾಲಿಸಿದೆ ಶ್ರೀ ರಂಗಯ್ಯ೧
ಆದಿವರಾಹ ನೀನಾದೆ ರಂಗಯ್ಯ ನೀನು
ಪೋದ ಮೇದಿನಿಯ ತಂದೆ ರಂಗಯ್ಯ
ಭೇದಿಸಿ ಕಂಬದಿ ಬಂದೆ ರಂಗಯ್ಯ ಪ್ರ-
ಹ್ಲಾದನ ಕಾಯ್ದೆ ಶ್ರೀ ರಂಗಯ್ಯ ೨
ಬಲಿಯನ್ನು ವಂಚಿಸಿದಂಥ ರಂಗಯ್ಯ ನೀನು
ನೆಲವ ಓರಡಿ ಮಾಡ್ದೆ ರಂಗಯ್ಯ
ಬಲವಂತ ಭಾರ್ಗವನಾದೆ ರಂಗಯ್ಯ ನೀನು
ಛಲದಿ ಕ್ಷತ್ರಿಯರ ಗೆದ್ದೆ ರಂಗಯ್ಯ ೩
ಜಲಧಿಯನು ಕಟ್ಟಿದೆ ರಂಗಯ್ಯ ಹತ್ತು-
ತಲೆಯವನ ಕುಟ್ಟಿದೆ ರಂಗಯ್ಯ
ಮಲೆತ ಮಾವನ ಕೊಂದೆ ರಂಗಯ್ಯ ಯದು-
ಕುಲವನುದ್ಧರಿಸಿದೆ ಶ್ರೀ ರಂಗಯ್ಯ ೪
ಸತಿಯರ ಮೋಹಿಸಿದೆ ನೀನು ರಂಗಯ್ಯ ಬಲು
ಚತುರ ಬೌದ್ಧನಾದೆ ರಂಗಯ್ಯ
ಖತಿಯಿಂದ ಹಯವೇರಿದೆ ರಂಗಯ್ಯ ದು-
ರ್ಮತಿಯ ಕಲಿಯ ಕೊಂದೆ ಶ್ರೀ ರಂಗಯ್ಯ ೫
ತ್ರಿಭುವನದೊಳಧಿಕ ರಂಗಯ್ಯ ನೀನು
ಉಭಯ ಕಾವೇರಿವಾಸ ರಂಗಯ್ಯ
ವಿಭೀಷಣನಿಗೆ ಪ್ರಸನ್ನ ರಂಗಯ್ಯ ನೀ-
ನಭಯವಿತ್ತೆನ್ನ ಕಾಯೊ ಶ್ರೀ ರಂಗಯ್ಯ ೬
ಗೊಲಿದೆ ರಂಗಯ್ಯ ನೀನು
ಮೋದಿ ಹಯವದನನಾದೆ ರಂಗಯ್ಯ
ಸಾಧಿಸಿ ಖಳರ ಕೊಂದೆ ರಂಗಯ್ಯ ವಿ-
ನೋದದಿ ವೇದವ ತಂದೆ ಶ್ರೀ ರಂಗಯ್ಯ ೭

 

೧೧೬
ಏಳು ಮಾರುತಿ ಎಂದೆಬ್ಬಿಸಿದಳಂಜನೆಯು ಪ.
ಶ್ರೀರಾಮರ ಸೇ[ವೆ]ಗೆ ಹೊತ್ತಾಯಿತೇಳೆಂದು ಅ.ಪ.
ಸೇತುವೆಯ ಕಟ್ಟಬೇಕು ಸಮುದ್ರವನೆ ದಾಟಬೇಕುಸೀತೆಗುಂಗುರವನ್ನು ಕೊಡಲಿಬೇಕುಪಾತಕಿ ರಾವಣನ ವನವ ಕೀಳಬೇಕುಸೀತೆಯನು ರಾಮರಿಗೆ ಒಪ್ಪಿಸಲಿಬೇಕು ೧
ನಿಂತು ಮಾಡಲಿಬೇಕು ಅಜ್ಞಾತವಾಸವನುಅಂತು ಕೀಚಕರನ್ನ ಸವುರಬೇಕುಕಂತುಪಿತನಾಜ್ಞದಿಂ ಕೊಲ್ಲಬೇಕು ಕೌರವರಕುಂತಿ ಸುತನು ಎಂದೆನಿಸಬೇಕಯ್ಯ ೨
ಮಧ್ವರಾಯರು ಎಂದು ಪ್ರಸಿದ್ಧರಾಗಲಿ ಬೇಕುಅದ್ವೈತಮತವನು ಗೆದ್ದು ಮುರಿಯಲಿ ಬೇಕುಶುದ್ಧಮಾಡಲಿ ಬೇಕು ಸಕಲ ಶಾಸ್ತ್ರಗಳನೆಲ್ಲಮುದ್ದು ಹಯವದನನ ದಾಸನೆನಿಸಬೇಕು ೩

 

೨೫೦
ಒಂದು ಪ್ರಕಾರವೆ ಸ್ವಾಮಿ ಮಂದಿಯ ರಕ್ಷಿಸುವುದು
ನಿಂದವರ ದೇಹದಲ್ಲಿ ಹಿಂದೆಮುಂದಭಯವನಿತ್ತು ಪ.
ಅಪಾರ ಮಹಿಮ ನೀನು ಒಪ್ಪುವ ಹಯಾಸ್ಯನಾಗಿ
ಎಪ್ಪತ್ತೆರಡು ಸಾವಿರ ಇಪ್ಪ ನಾಡಿಗಳೊಳಿದ್ದು ೧
ಮುಖ ನಾಸ ನೇತ್ರ ಶ್ರೋತ್ರ ತ್ವಕ್ ನಖೇಂದ್ರಿಯ ತದ್ಗೋಳಕ
ಸಕಲರೂಪಗಳಲ್ಲಿ ನೀನೆ ಆಧಾರವಾಗಿದ್ದು ೨
ಶ್ವಾಸೋಚ್ಛ್ವಾಸ ಚೇಷ್ಟವಿಚಕ್ಷಣ ಹಾಸವಿಲಾಸ ಭೂಷಣ
ಗ್ರಾಸಾವಾಸಂಗಳಿಗೆ ನಿವಾಸವಾಗಿ ಪ್ರೇರಿಸುವೆ ೩
ಅನ್ನಪ್ರಾಣ ಮನೋಮಯ ಜ್ಞಾನ ಆನಂದೋತ್ತಮ
ಅನಂತ ರೂಪಗಳಲ್ಲಿ ನೀನೆ ಆಧಾರವಾಗಿದ್ದು ೪
ಪ್ರಾಣೋಪಾನ ರೂಪಿನಿಂದ ವ್ಯಾನೋದಾನರೂಪನಾಗಿ
ವ್ಯಾನೋದಾನ ರೂಪಿನಿಂದ ಉದಾನ ಸಮಾನನಾಗಿದ್ದು ೫
ಪೂಜಾ ವ್ಯಾಖ್ಯಾನ ಕೀರ್ತನ ಭೋಜನ ಮಜ್ಜನಸುಖ
ಭಾಜನೆಗಳಲ್ಲಿದ್ದು ಪೂಜ್ಯನಾಗಿ ಪ್ರೇರಿಸುವ ೬
ವಿಶ್ವ ತೇಜಸ್ಸು ಪ್ರಾಜ್ಞಾ ತುರ್ಯಾ ಅವಸ್ಥಾತ್ರಯಂಗಳೆಲ್ಲ ಕೊಡುವೆ
ಜಾಗ್ರತ್ಸ್ವಪ್ನ ಸುಷುಪ್ತಿಯಲ್ಲಿ ವಿಶ್ವಪ್ರೇರಕನಾಗಿದ್ದು ೭
ಆತ್ಮರೂಪ ಆದ್ಯ ಅನಂತ ಅಂತರಾತ್ಮ ರೂಪನಾಗಿ ಜ್ಞಾ-
ನಾತ್ಮ ರೂಪಿನಿಂದ ಪರಮಾತ್ಮರೂಪನಾಗಿ ೮
ಅನಿರುದ್ಧ ಸಂಕರ್ಷಣ ಪ್ರದ್ಯುಮ್ನ ಘನ ವಾಸುದೇವ
ನೆನೆವರ ಪಾಪ ಪರಿಹರಿಸುವ ನರಹರಿ ೯
ನೀನು ನಿನ್ನ ದಾಸರಿಗಾಗಿ ಮನುಷ್ಯಮುಖದಿಂದ ತತ್ವ
ತನುಗಳಿಂದ ಕುಡುವ ಅವರವರ ದೇಹ್ಯದೊಳಿದ್ದು ೧೦
ಸರ್ವರೊಳಗೆ ನೀನಿದ್ದು ಅವರವರ ವಿಭಾಗದ
ಕರ್ಮ ಪರೀಕ್ಷಿಸಿ ಪ್ರೇರಿಸುವ ವರ ಶ್ರೀಹಯವದನ ೧೧

 

೧೧೭
ಒಂದು ಬಾರಿ ಸ್ಮರಣೆ ಸಾಲದೆ ಆನಂದ- ಪ.
ತೀರ್ಥರ ಪೂರ್ಣಪ್ರಜ್ಞರ ಸರ್ವಜ್ಞರಾಯರ ಮಧ್ವರಾಯರಅ.ಪ.
ಹಿಂದನೇಕ ಜನ್ಮಗಳಲಿ ನೊಂದು ಯೋನಿಯಲ್ಲಿ ಬಂದುಇಂದಿರೇಶ ಹರಿಯ ಪಾದವ ಹೊಂದಬೇಕೆಂಬುವರಿಗೆ ೧
ಪ್ರಕೃತಿ ಬಂಧದಲ್ಲಿ ಸಿಲುಕಿ ಸಕಲ ವಿಷಯಗಳಲಿ ನೊಂದುಅಕಳಂಕಚರಿತ ಹರಿಯ ಪಾದಭಕುತಿ ಬೇಕೆಂಬುವರಿಗೆ ೨
ಆರುಮಂದಿ ವ್ಶೆರಿಗಳನು ಸೇರಲೀಸದಂತೆ ಜರಿದುಧೀರನಾಗಿ ಹರಿಯ ಪಾದವ ಸೇರಬೇಕೆಂಬುವರಿಗೆ ೩
ಘೋರ ಸಂಸಾರಾಂಬುಧಿಗೆ ಪರಮಜ್ಞಾನವೆಂಬ ವಾಡೆಏರಿ ಮೆಲ್ಲನೆ ಹರಿಯಪಾದ ಸೇರಬೇಕೆಂಬುವರಿಗೆ೪
ಹೀನಬುದ್ಧಿಯಿಂದ ಶ್ರೀ ಹಯವದನನ್ನ ಜರಿದು ತಾನು ಬದುಕಲರಿಯದಿರಲು ತೋರಿಕೊಟ್ಟ ಮಧ್ವಮುನಿಯ ೫

 

೩೨೫
ಒಂದು ಮೂರುತಿಯಲ್ಲಿ ಹರಿಹರದೇವರಿಬ್ಬರು
ಬಂದು ನೆಲೆಗೊಂಡುದನ ಕಂಡೆನದ್ಭುತವ ಪ.
ಭಾವಜನಪಿತನೊಬ್ಬ ಅವನ ಕೊಂದವನೊಬ್ಬ
ಹಾವ ತುಳಿದವನೊಬ್ಬ ಧರಿಸಿದವನೊಬ್ಬ
ಗೋವ ಕಾಯಿದನೊಬ್ಬ ಅದನೇರಿದವನೊಬ್ಬ
ಭಾವಿಸಲು ವಿಪರೀತಚರಿತರಂತಿರ್ದು೧
ಬಾಣನ ಗೆಲಿದವನೊಬ್ಬ ಬಾಗಿಲ ಕಾಯಿದವನೊಬ್ಬ
ದಾನವರ ರಿಪುವೊಬ್ಬ ವರವೀವನೊಬ್ಬ
ಏನನೆಂಬೆನೊ ಜಗವ ಕಾವುತಿಹನೊಬ್ಬ ನಿ-
ಧಾನಿಸಲು ಸಂಹರಿಸಿ ಕೊಲ್ಲುತಿಪ್ಪನೊಬ್ಬ ೨
ಯಾಗ ಪಾಲಕನೊಬ್ಬ ಯಾಗಭಂಜನನೊಬ್ಬ
ನಾಗರಕ್ಷಕನೊಬ್ಬ ನಾಗಶಿಕ್ಷಕನು [ಒಬ್ಬ]
ಈಗ ನಲ್ಲಳಿಗರ್ಧದೇಹವನಿತ್ತ ಶಿವನಂತೆ
ಭೋಗದೊಳು ಹೊಂದಿಹ ಹಯವದನ ಬಲ್ಲ ೩

 

೩೦೮
ಒಯ್ಯೆ ಬಾಹ ಉಳಿಯೆ ಹೋಹ ನಲ್ಲನ ತಾಹ
ಉಯ್ಯಾಲೆ ಉತ್ಸಾಹ ನಮ್ಮಪ್ಪನಿವ ತಾಯಿ ತಮ್ಮ ಪ.
ಚಿನ್ನದ ಸರಪಣಿಯ ಚೆಲುವ ಪೊನ್ನಮಣಿಯ
ರನ್ನದ ನೇಣ ತುದಿಯ ರಮಣಿಯರೆಲ್ಲರರ್ಥಿಯ೧
ಈ ಮೈಯಲ್ಲಿ ಮಲಗಿಪ್ಪ ಈ ಮಹಾಲಕ್ಷ್ಮಿಯ ನೋಳ್ಪ
ಸನ್ಮೋದನೆನಿಪ ಶೇಷಶಯನನ ವಟತಲ್ಪ ೨
ಇಂದಿರೆ ಇಷ್ಟವನೀವ ಇಂದಿರೆಗಿವನು ಧವ
ಎಂದೆಂದು ಭಕ್ತರ ಕಾವ ಎಸೆÉವ ಮಂಚದ ದೇವ ೩
ಬಾರಯ್ಯ ಭಕ್ತರಬಂಧು ಬಾರಯ್ಯ ಕರುಣಾಸಿಂಧು
ಬಾರಯ್ಯ ಹರುಷದಿ ಇಂದು ಬಾರಯ್ಯ ಮುಕುಂದನೆಂದು ೪
ಕುಂಜರ ಕೂಗಲು ಬಂದೆ ಕೂಡೆ ಮಕರಿಯ ಕೊಂದೆ
ಕಂಜಾಕ್ಷ ಕಾಮನ ತಂದೆ ಕಾಯೆಂದು ಪಾಡಲು ಬಂದೆ ೫
ಕಾಕರ ಗಂಟಲಗಾಣ ಕಾಮಿಸದೆನ್ನಯ ಮನ
ಏಕೋದೇವನೆಂಬ ಜಾಣ ಏರಿದ ಮಣಿಯ ನೇಣ ೬
ಸಕಲ ನಿಗಮನೀತ ಅಖಿಳ ಸುರರ ತಾತ
ರುಕುಮಿಣಿ ಪ್ರಾಣನಾಥ ರೂಢಿಗತಿಯ ಪ್ರತಿ ಈತ ೭
ಮಾಯದ ದೈತ್ಯರ ಕೊಂದು ಮಲಗಬೇಕೆಂದು
ಬಂದು ಹಯಗ್ರೀವರಾಯ ನಿಂದು ಹರುಷವ ತಾಳ್ದನೆಂದು ೮
ಮುಂದೆ ದೇವಾಂಗನೆಯರು ಮುಖಸುತ್ತ ಮುಕ್ತಿಸುರ
ವೃಂದದ ಮಧ್ಯದೊಳರವಿಂದಾಕ್ಷಿ ಪೊಳವುತ್ತಿರೆ ೯
ಅಪ್ಸರಸ್ತ್ರೀಯರ ನೃತ್ಯ ಅಪ್ಪಂತ ಗಂಧರ್ವಗೀತ
ಒಪ್ಪುವ ತಾಳಗಳೊಪ್ಪೆ ಒರಗಿಪ್ಪ ದೇವನುತ ೧೦
ಮಾನ್ಯ ಶ್ರೀ ಹಯವದನ್ನ ಮನದ ಮಧುಸೂದನ್ನ
ಎನುತ ತೂಗುವ ಜನ ಎಂದೆಂದು ಭಕ್ತಮೋದನ೧೧

 

೧೭೨
ಒಲ್ಲೆ ದುರಿತಗಳೊಲ್ಲೆ ಒಲ್ಲೆಫುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ ಪ.
ದುರ್ಜನರ ಸಂಗವನೆಂದೆಂದಿಗೂ ಒಲ್ಲೆಸಜ್ಜನರ ವಿರಸಗಳೊಲ್ಲೆ ಒಲ್ಲೆಅರ್ಜುನಸಖ ನಿನ್ನ ಸೇವೆಯ ಬಿಡಲೊಲ್ಲೆಅಬ್ಜಬಾಣನ ಮೇಳ ಒಲ್ಲೆ ಒಲ್ಲೆನೊ ಸ್ವಾಮಿ ೧
ಬಲ್ಲೆನೆಂಬೊ ಅಹಂಕಾರ ಎಂದೆಂದಿ[ಗೂ]ಒಲ್ಲೆಸಲ್ಲದ ಸುಖಗ[ಳ]ಒಲ್ಲೆ ಒಲ್ಲೆಬಲ್ಲಿದ ಹರಿ ನಿಮ್ಮ ಪಾದವ ಬಿಡಲೊಲ್ಲೆಕ್ಷುಲ್ಲದೇವರ ಪೂಜೆ ಒಲ್ಲೆ ಒಲ್ಲೆನೊ ಸ್ವಾಮಿ ೨
ಹರಿನಾಮ ಸ್ಮರಣೆಯ ಮನದಿ ತೊರೆದಿರಲೊಲ್ಲೆದುರುವಿಷಯದಿ ಹರುಷ ಒಲ್ಲೆ ಒಲ್ಲೆಕರುಣ ಹಯವದನನ್ನ ಕಂಡಲ್ಲದೆ ಮಿಕ್ಕಕಾರುಣ್ಯದ[ಹವಣು]ಒಲ್ಲೆ ಒಲ್ಲೆನೊ ಸ್ವಾಮಿ ೩

 

೨೫೨
ಓದಿ ಮರುಳಾದರಯ್ಯ ಬೋಧವಿಲ್ಲದೆ
ಓದಿನೋಡಲದನರಿತು ಹರಿಯ ನೆನೆಯಲೊಲ್ಲದೆ ಪ.
ಪರತತ್ವವಿಚಾರವರಿಯದ ಪಾಪದಾವುದು ತನ್ನ
ಕರಣೇಂದ್ರಿಯ ಕಾಟಕೆ ಸಿಲುಕದ ಕರ್ಮದಾವುದು
ಪರಗತಿ ವಿಚಾರವಿಲ್ಲದ ನಿಜದಾವುದು
ಗುರುಚರಣ ಪರಿಚಯವಿಲ್ಲದ….ಯಾವುದು೧
ಅಂತರಂಗ ಶುದ್ಧಿಯಿಲ್ಲದ ಕಂತೆಯಾವುದು ನಿತ್ಯ
ಶಾಂತಿ ಶಮದಮವಿಲ್ಲದ ಭ್ರಾಂತಿ ಯಾವುದು
ಸಂತತ ಸಮಾಧಾನದ ಚಿಂತೆಯಾವುದು ನಮ್ಮ
ಕಂತುಪಿತನ ನೋಡಗೊಡದ ಕಪಟ ದಾವುದು ೨
ಮಧ್ವಮತದ ಮಾರ್ಗವನ್ನು ಮೀರಿದಾವುದು ಶ್ರುತಿ
ಸಿದ್ಧ ಹರಿಯ ಗುಣವ ಹಾಡಿಪಾಡದ್ಯಾವುದು
ವೃದ್ಧರನ್ನು ಕೆಣಕಿ ಕಾಡಿ ಕೊಂಬದಾವುದು ಅದು
ಸಿದ್ಧಯಮನ ಬಾಧೆಗೆ ಒಳಗಾಗುವದಾವುದು ೩
ಸಾರತತ್ವ ಸುಧೆಯ ಸವಿಯ ದೂರಿದಾವುದು ಪರಿ-
ವಾರ ಜನರ ಪೊರೆವರುಪಚಾರ ದಾವುದು
ಸಾರಿ ತನ್ನ ಸಾಕ್ಷಿಗಿನ್ನು ಬಾರದಾವುದು ಅದು
ಕೀರನಾಕ….ಯಾ ಸಂಸ್ಕಾರ ದಾವುದು ೪
ಅನ್ನದ ಜೀವ ಭಿನ್ನಹರಿ ಎನ್ನದಾವುದು ದ್ವಾಸು-
ಪರ್ನಪಥವ ಪಾ….ಮಾಡದಾವುದು
ಧನ್ಯ ಹಯವದನ ನಾನೆನ್ನುವುದು ಅದು
ಕುನ್ನಿಯಂತೆ ಹಲವು ಪರಿಯ ಕೂಗುವುದದು ೫

 

೨೨೦
ಓದುವುದು ವೇದ ಹಾಕುವುದು ಗಾಳ ಪ.
ಮಾಧವನು ತಾನೆ ಗಡ ಮನುಜರನುಸರಣೆ ಗಡವ್ಯಾಧಿಗಳು ಬಿಡವು ಗಡ ಸುರನದಿಯಯಾತ್ರೆ ಗಡ ೧
ಆ ದೇವನೆ ತಮ್ಮ ಮನೆಮನೆಗೆ ದೈವ ಗಡಪೋದ ನಿಗಮವ ತಂದ ಹಯವದನನೇ ಜಗವ(?) ೨
ಕಾದಿಗೆಲಿದನು ಗಡ ಎಡರುಗಳು ಬಿಡವು ಗಡಕ್ರೋಧದಿ ದೋಷವಲ್ಲದವಸ್ತು ತಾನೆ ಗಡ ೩
ಶಿವನಲ್ಲ ಹರಿಯಲ್ಲ ವಿಪ್ರರುಗಳಲ್ಲಅವರ ನೋಡಲಿ ಬೇಡ ಅವರಿಗೀಯಲಿ ಬೇಡ ೪
ಇಂತೆಂಬ ನುಡಿಯೊಳು ದ್ವೇಷ ಕಾಣಿಸಲುಸಂತರೆಲ್ಲರು ನೋಡಿ ಹಯವದನನಿದ ಮೆಚ್ಚ ೫

 

೧೭೩
ಕಂಜಾಕ್ಷ ಕಾಯಯ್ಯ ಕರುಣಾನಿಧಿಯೆ ಬಲಭಂಜನನನುಜನೆ ನೋಡೆನ್ನ ಪ .
ಅಂಜದೆ ನಾ ನಿನ್ನ ಅಡಿಳಿಗೆರಗುವೆಕುಂಜರವರದನೆ ಕೂಡೆನ್ನ ಅ.ಪ.
ನೀನೊಲಿದಾಗಲೆ ನಿಖಿಳ ಸಂಪದ ತನ್ನಿಂ-ತಾನೆ ಬಹುದು ತಡವಿಲ್ಲಆ ನಳಿನಭವಾದ್ಯಮರರಿದಕೆ ಸಾಕ್ಷಿಭಾನುಸನ್ನಿಭ ಬಾರೊ ನಲ್ಲ ೧
ಪುಂಡರೀಕಾಕ್ಷನ ಪೂಜಿಪ ಭಕ್ತರಮಂಡೆಯ[ಹೂವು]ಬಾಡದೆಂದುಕಂಡೆ ನಾ ರಣದಲ್ಲಿ ಕಲಿಪಾರ್ಥನಿಗೊಲಿದುಬಂಡಿಯ ಬೋವ ನೀನಾದಂದು ೨
ವೃಂದಾರಕೇಂದ್ರ ಶ್ರೀ ಹಯವದನ ಮುಕುಂದಮಂದರೋದ್ಧಾರ ಮತ್ತೊಂದರಿಯೆಇಂದಿರೆಯರಸ ಬಾ ಇಂದುವದನ ದೀನ-ಬಂಧುವೆ ಭಕ್ತರ ಸಿರಿಯೆ ೩

 

೧೭೪
ಕಂಜಾಕ್ಷ ಹರಿಯ ಕಂಡಲ್ಲದೆ ಈಪಂಜರದಿ ಈ ಗಿಣಿ ನಿಲ್ಲದೆ ಪ.
ಬಾಲತನದಲ್ಲಿ ಮನೆಮನೆಯ ಪೊಕ್ಕುಪಾಲಕುಡಿದನು ಮನದಣಿಯಲಾಲಿಸಿದವನು ಇನ್ನು ಮುನಿಯಲೋಲಾಕ್ಷಿ ಬಿಡನ್ಯಾಕೀ ಗಸಣೆಯ ೧
ಏಳುವರುಷದ ಶಿಶು ಪೋಗಿಆಲಸ್ಯ ಹಸುತೃಷೆಯ ನೀಗಿಶೈಲವಾಗಿ ನಿಂತಿದ್ದ ನಮಗಾಗಿಕಾಲಮ್ಯಾಲೆ ಬಿದ್ದನಿಂದ್ರ ಬಾಗಿ ೨
ಕಾಳಿಂದಿಯ ಮಡುವಿನೊಳಾಡಿಕಾಳಿಯಾ ನಾಗಗೆ ಮದ ಹುಡಿಮೇಲೆ ಅವರೊಳು ಕೃಪೆಮಾಡಿಪಾಲಿಸಿದ ಕರುಣದಿ ನೋಡಿ ೩
ಪಾರಿಜಾತದ ಪೂಗಳ ತಂದುನಾರದ ಮುನೇಂದ್ರ ತಾನೆ ಬಂದುಸಾರಿದನಲ್ಲೆ ಗತಿ ನೀನೆಂದುನರ ಸುರರುಗಳಿಗೆ ಬಂಧು ೪
ವೃಂದಾವನದೊಳಿವನ ಲೀಲೆ ಆ-ನಂದವನುಣಿಸಿತೆಲೆ ಬಾಲೆಎಂದವನ ಕತೆ ಕರ್ಣದೋಲೆ ಹಾ-ಗೆಂದು ಭಾವಿಸೆ ಪುಣ್ಯಶೀಲೆ ೫
ಸಕಲ ಸುರರ ಶಿರೋರನ್ನಮುಕುತಿದಾಯಕ ಸುಪ್ರಸನ್ನಶ್ರೀಕೃಷ್ಣ ಅಟ್ಟಿದ ಉದ್ಧ್ದವನ್ನ ಬಂದುವಾಕು ಕೇಳಿ ಮನ್ನಿಸಿಯವನ ೬
ಚೆಲ್ವ ಹಯವದನನ್ನ ನೀರೆ ನಮ್ಮನಲ್ಲನವನಿಲ್ಲಿ ಬಾರದಿರೆಸುಲಭನ್ನ ಬೇಗ ಕರೆತಾರೆ ನಾ-ವೆಲ್ಲರವನಲ್ಲಿ ಹೋಹ ಬಾರೆ ೭

 

೨೨೧
ಕಂಡದ ನುಡಿದೆ ಗಂಡಸಲ್ಲವೆ ನೀಕಂಡಕಂಡರ ದುಡಿಸಬೇಡಕೆಂಡವ ಕೊಂಡು ಮಂಡೆ ತುರಿಸುವಭಂಡನಂತೆ ಉದ್ದಂಡನಾಗದಿರು ಪ.
ಕೋಶಕಾರ ಪುಳುಗಳುಣವೆಮೀಶೆಯ ತೋರಿ ಬಂಟ ಬಾಳನೆ ಕ-ಳಾಸವ ಕೊಂಡು ಸೂಳೆಉಣಳೆ ಈಸತಿ ಸಂತರ್ಗಾಗಿ ಕುಣಿಯದೆಕೇಶವ ಹೃಷಿಕೇಶ ಎನ್ನುಭಾಸುರ ಹರಿಮೂರ್ತಿಯ ನೆನೆಸಾಸಯೆಂದೆನಿಸಿಕೊಳ್ಳದೆಏಸುಬಂದರೈಸರೊಳಿರು ೧
ಆಶೆಯೆಂಬ ಪಾಶವ ಬಿಡು ಈಸಂಸಾರವಾರಾಶಿಯನೆನೀಸಲಾರದೆ ಕಾಸಿಗಾಗಿವೇಷವ ತೋರಿ ಘಾಸಿಯಾಗದೆದಾಸರೊಳಾಡುವ ಸರ್ವೇಶ ನಿ-ರಾಶೆನಲ್ಲದೆ ಲೇಸ ಕೊಡನುರೋಷಬೇಡ ಸಂತೋಷದಲಿರುಆಸರು ಬೇಸರಿಗಂಜಬೇಡ ೨
ಹಾಸುಮಂಚವ ಬಯಸಿ ಬಯಸಿಹೇಸರುಗತ್ತೆಯಂತೆ ಪರರಿ-ಗೀ ಶರೀರವ ಮಾರಬೇಡಕಸೆಯ ಕಟ್ಟಿ ಕುಣಿಯ ಬೇಡದೇಶದೇಶಕೆ ಹಾರಬೇಡನಾಶದ ಮೇಲೆ ಕ್ಲೇಶ ಉಂಬೆಭಾಸಕೆ ನೀನೊಳಗಾಗದೆಶೇಷಶಾಯಿ ಹಯವದನನ ನೆನೆ ೩

 

೪೨
ಕಂಡೆ ಕಂಡೆನು ಕೃಷ್ಣ ನಿನ್ನಯ ದಿವ್ಯಮಂಗಳ ವಿಗ್ರಹಕಂಡು ಬದುಕಿದೆ ಇಂದು ನಾನು ಕರುಣಿಸೊ ಎನ್ನೊಡೆಯನೆ ಪ.
ಉಟ್ಟ ಞ್ಟ್ಟ್ಟಿಯು ಪಿಡಿದ ವಂಕಿಯುತೊಟ್ಟ ಕೌಸ್ತುಭ ಭೂಷಣಮೆಟ್ಟಿದ ನವರತ್ನದ್ಹಾವಿಗೆಇಟ್ಟ ಕಸ್ತೂರಿ ತಿಲಕವ ೧
ಮಂದಹಾಸವು ದಂತಪಂಙÉ್ತಯುಉಂದದ ಕಡೆಗಣ್ಣ ನೋಟವುಅಂದವಾದ ಕುರುಳುಗೂದಲುಮುದ್ದು ಸುರಿವೋ ಮುಖವ ನಾ ೨
ಮೊಲ್ಲೆ ಮಲ್ಲಿಗೆ ದಂಡೆ ಕೊರಳಲಿಚೆಲ್ವ ಕಂಕಣ ಕೈಯಲಿಗೊಲ್ಲಸತಿಯರ ಕುಚಗಳಲ್ಲಿ[ಅಲ್ಲಳಿ] ಮಾಡಿ ನಗುವನ೩
ಸುರರು ಪುಷ್ಪದ ವೃಷ್ಟಿ ಕರೆಯಲು ಅ-ಸುರರೆಲ್ಲರು ಓಡಲುಕ್ರೂರ ಕಾಳಿಯ ಫಣಗಳಲ್ಲಿಧೀರ ಕುಣಿಕುಣಿದಾಡಿದ ೪
ಎನ್ನ ಬಂಧನ ತರಿಸಿದನೆಎನ್ನ ಪಾಪವು ಓಡಿತುಅನ್ಯದೈವವ ಭಜಿಸಲ್ಯಾತಕೆಮನ್ನಿಸೊ ಹಯವದನನೆ ೫

Leave a Reply

Your email address will not be published. Required fields are marked *