Categories
ರಚನೆಗಳು

ವಾದಿರಾಜ

೨೦೭
ರಂಗನಾಥನೆ ನೀಲಘನಂಗ ದೇವರದೇವ ಗು-ಣಂಗಳ ಖಣಿಯೆ ನಿನ್ನ ಪದಂಗಳು ಗತಿಯೆಮಗೆ ಪ.
ಉಭಯಕಾವೇರಿ ಮಧ್ಯದಲಭಯನೀವುತ ಪವಡಿಸಿದಬುಜಲೋಚನನೆ ನಿನ್ನ ವಿಭವಕ್ಕೆ ನಮೋಯೆಂಬೆ ೧
ದೋಷದೂರನೆ ಭೂಮಿಗೆ ಭೂಮೋಹನನೆ ರಂಗಶ್ರೀಶ ನಿನ್ನ ನಂಬಿದೆ ಶೇಷಶಯನ ಕಾಯೊ ೨
ಚೆಲುವ ನಿನ್ನನು ಪೋಲುವರಿಲ್ಲ ಮೂಜಗದೊಳು ಲಕುಮಿಯನಲ್ಲ ನಿನ್ನನು ಬಣ್ಣಿಸಲಳವಲ್ಲವೋ ಹಯವದನ ೩

 

೮೭
ರಂಗನ್ಯಾಕೆ ಬಾರ ತಂಗಿ
ಮಂಗಳ ಮಹಿಮನ ದಿವ್ಯಾಂಗವ ಕಾಣದೆ ಎನ್ನಕಂಗಳು ಕಂಗೆಡುತಿವೆಪ.
ರಂಗುಮಾಣಿಕದುಂಗುರದಂಗುಲಿಯ ಸನ್ನೆಯಿಂದಪೊಂಗೊಳಲೂದುವನ ತೋರೆ ರಮಣಿ ಅ.ಪ.
ತಿಂಗಳು ಮೂಡಿತು ಪಿಕ ಸಂಗೀತವ ತೊಡಗಿತುಭೃಂಗ ತನ್ನಂಗನೆಯರ ಸಂಗಡ ನಲಿದು ಬಂದಶೃಂಗಾರವನದ ಮೃದು ತಂಗಾಳಿ ಬೀಸಿತು ನೋಡಾ-ನಂಗ ನೆಚ್ಚ ಬಾಣಗಳೆಂತೊ ಅಂತರಂಗವ ತಾಕಿದರೆನ್ನ ಇಂಗಿತವರಿತು ದೇವೋ-ತ್ತುಂಗ ಕಾಯದಿರೆ ಉಳಿವಂಗನ ನಾಕಾಣೆ ನಮ್ಮಪೆಂಗಳಿಗೆ ಬಂದ ಬಲುಭಂಗ ತನ್ನದಲ್ಲವೆ ಸಾ-ರಂಗಾಕ್ಷಿ ಬೇಗವನ ತೋರೆ ರಮಣಿ ೧
ಹಾರ ಸರ ಉರದಲ್ಲಿ ಸಿರಿದೇವಿ ಸಿರಿವತ್ಸಕೊರಳ ಪದಕ ಕೌಸ್ತುಭ ರತ್ನಕರ್ಣಕುಂಡಲಸರಸಿಜಮುಖದಿ ಕಸ್ತೂರಿ ತಿಲಕವೆಸೆಯೆಪರಿಮಳಿಸುವ ಪೂಮಾಲೆಮೆರೆಯೆ ಪೊಳೆವ ಪೀತಾಂಬರದ ಸುತ್ತಲೊಲೆವಕಿರುಗೆಜ್ಜೆ ಮಣಿಮಯಕಾಂತಿ ಮಿಂಚುತಿರಲುಚರಣನೂಪುರ ಘಲುಘಲುಕೆನೆ ಕುಣಿವ ಶ್ರೀಹರಿಯನು ಕರೆದುತಾರೆ ರಮಣಿ ೨
ಮಂದಜಾಸನನ ತಂದೆಯೆಂದೆನಿಪ ಗೋವಿಂದನಕಂದರ್ಪ ವೃಂದಾದಿಗಳ ಕಂದಿಸುವ ಕುಂದಿಲ್ಲದಸೌಂದರ್ಯಸಂದೋಹದೊಳಗೊಂದೊಂದನಾರು ಬಲ್ಲರುಎಂದೆಂದಿವನನು ಪೊಂದಿಪ್ಪಇಂದಿರೆ ಇವನ ಗುಣಸಾಂದ್ರ ಕಿರುಬೆರಳಿನಂದವನೋಡುತ್ತ ಆನಂದಸಿಂಧುವಿನೊಳ್ಮುಣುಗಿದಳಿಂದು ಹಯವದನ ಮುಕುಂದನ ತಂದೆನ್ನ ಮುಂದೆಇಂದುಮುಖಿ ಕರೆದುತಾರೆ ರಮಣಿ ೩

 

೧೩೨
ರಾಮಪದಸರಸೀರುಹಭೃಂಗರೋಮಕೋಟಿಲಿಂಗ ಅಸುರಮದಭಂಗ ಪ
ಒಂದು ನಿಮಿಷಕೆ ಪೋಗಿ ಸಂಜೀವನವ ತಂದೆಂದುಗೊರಳನ ಭಜಕ ನಂದನನ ನೀ ಕೊಂದೆಇಂದ್ರಸೂನುವಿನ ಭಕುತಿಗೆ ರಥಾಗ್ರದಿ ನಿಂದೆಮಂದರಧರನ ಮುಂದೆ ಸುರ-ವೃಂದವರಿಯೆ ಪುರವ ಹೋಮಗೈದು ಬಂದೆ ೧
ಉರುಗದೆಯಿಂದ ಕೌರವನ ತೊಡೆಗಳ ತರಿದೆಧುರದಲ್ಲಿ ಮಾಗಧನ ಮರ್ಮಸ್ಥಳ ಮುರಿದೆದುರುಳ ದುಶ್ಶಾಸನನ ಕರುಳುಗಳನೆ ಹಿರಿದೆಕರವೆತ್ತಿ ಬಲವೆರಡ ಕರೆದೆಗುರು ಮಧ್ವಮುನಿಯಾಗಿ ಶಾಸ್ತ್ರ್ರಗಳನೊರೆದೆ ೨
ಧರೆಯೊಳತ್ಯಧಿಕ ಸೋದೆಪುರನಿವಾಸಸಿರಿ ಹಯವದನನ ಪರಮಪ್ರಿಯ ದಾಸನೆರೆನಿನ್ನ ನಂಬಿರ್ದ ಭಕ್ತರಿಗೆ ಕೊಡು ಲೇಸಕರುಣವಾರಿಧಿ ಪುಣ್ಯವಾಸ ಜಗಕೆಗುರುವೆನಿಸಿ ಮೆರೆದೆ ಮುಖ್ಯಪ್ರಾಣೇಶ ೩

 

೧೪೦
ರುದ್ರದೇವರು
ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ-ಧವನ ತೋರಿಸಯ್ಯ ಗುರುಕುಲೋತ್ತುಂಗಪ.
ಅರ್ಚಿಸಿದವರಿಗಭೀಷ್ಟವ ಕೊಡುವಹೆಚ್ಚಿನ ಅಘಗಳ ಬೇಗನೆ ತರಿವದುಶ್ಚರಿತರನ್ನೆಲ್ಲ ದೂರದಲ್ಲಿಡುವ ನ-ಮ್ಮಚ್ಚುತಗಲ್ಲದ ಅಸುರರ ಬಡಿವ ೧
ಮಾರನ ಗೆದ್ದ ಮನೋಹರಮೂರ್ತಿಸಾರ ಸಜ್ಜನರಿಗೆ ಸುರ ಚಕ್ರವರ್ತಿ ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿಹರಿಯ ತೋರಿಸಯ್ಯ ನಿನಗೆ ಶರಣಾರ್ಥಿ ೨
ಚೆನ್ನ ಪ್ರಸನ್ನ ಶ್ರೀ ಹಯವದನನ್ನಅನುದಿನ ನೆನೆವಂತೆ ಮಾಡೊ ನೀ ಎನ್ನಅನ್ಯರನರಿಯೆನೊ ಗುರುವೆಂಬೆ ನಿನ್ನಇನ್ನಾದರು ಹರಿಯ ತೋರೊ ಮುಕ್ಕಣ್ಣ ೩

 

೩೧೯
ಲಕ್ಷ್ಮಿ ರಮಣಗೆ ಮಾಡಿದಳು ಉರುಟಾಣಿ ಪ.
ಇಳೆಯೊಳಗತಿಜಾಣೆ ಸುಂದರ ಫಣಿವೇಣಿ ಅ.ಪ.
ಮಚ್ಛ ಕಚ್ಛಪ ಕಿರನೆ ಕೇಸರಿಯಂದದ ಮುಖನೆ
ಸ್ವಚ್ಛಮುಖವ ತೋರೈ ಅರಿಸಿನ ಹಚ್ಚುವೆನು ೧
ದುರುಳ ಕ್ಷತ್ರಿಯರನ್ನು ಕೊರಳ ತರಿದ ಹರಿಯೆ
ಹರುಷದಿಂ ಕೊರಳ ತೋರೈ ಗಂಧವ ಹಚ್ಚುವೆನು ೨
ದಶರಥಸ್ನಲಿ ಜನಿಸಿ ದಶಮುಖನ ಸಂಹರಿಸಿ
ಶಶಿಮುಖಿಯ ತಂದವನೆ ಕುಸುಮ ಮುಡಿಸುವೆನು ೩
ಹರಿನಾರು ಸಾಸಿರ ಸುದತಿಯರನಾಳಿದನೆ
ಪದುಮಕರವ ತೋರೈ ವೀಳ್ಯವ ಕೊಡುವೆನು ೪
ವಸನರಹಿತನಾಗಿ ವಸುಧೆಯ ತಿರುಗಿದೆ
ಬಿಸಜನಾಭನೆ ನಿನಗೆ [ವಸನ ಉಡಿಸುವೆನು] ೫
ವರ ತುರಗವನೇರಿ ಕಲಿಯ ಸಂಹರಿಸುವಿ
ಸಿರಿಹಯವದನನೆ ಆರತಿಯೆತ್ತುವೆನು ೬

 

೨೦೮
ಲಕ್ಷ್ಮೀನಾರಾಯಣ ಕಾಯೋ ನಿನ್ನ ನಂಬಿದವರುಕ್ಷಿಯೊಳು ಜಗಂಗಳನಿತ್ತು ರಕ್ಷಿಸಿದ ಶ್ರೀಶ ಪ.
ಕಂದ ಪ್ರಹ್ಲಾದನ್ನ ಕಾಯ್ದೆ ಚಂದದಿ ಕಾಯೊಯೆಂದು ಬಂದಮುಂದೆ ನಿಂದ ಮಂದಿಯೊಳು ನಿಂದು ನೀ ಸಲಹಯ್ಯ ೧
ಕರಿರಾಜ ಕರೆಯಲು ಭರದಿ ಬಂದು ಪೊರೆದೆ ನೀಶರಣು ರಕ್ಷಾಮಣಿಯೆ ಸಿರಿಯಮ್ಮಗೊಲಿದೆ ನೀ ೨
ಶರಣು ಮುಖ್ಯ ಸುರರ ವರದೈವವಾದೆ ನೀನುಶರಣು ರಕ್ಷಾಮಣಿಯೆ ಸಿರಿಯಮ್ಮಗೊಲಿದೆ ನೀ ೩
ಶಂಖಚಕ್ರಧರಾಕಾರ ಕಿಂಕರ ಭಯಹರಅಂಕದ ಶ್ರೀದೇವಿಗೆ ಮೀನಾಂಕ ತಲೆದೊರಿದೆ ನೀ ೪
ಹಯವದನನಾಗಿ ನೀ ತ್ರಯೀಚೋರರನ್ನು ಕೊಂದುಸ್ತ್ರೀಯರಿಗೆ ನ್ಯಾಯದಿಂದ ದಯ ಬೀರಿದೆಯಲ್ಲ ೫

 

೯೦
ಲಾಲಿ ಆಡಿದ ರಂಗ ಲಾಲಿ ಆಡಿದ ಪ.
ಬಾಲೆ ರುಕ್ಮಿಣಿ ದೇವೇರೊಡನೆ ಮೂರು ಲೋಕನಾಳ್ವ ದೊರೆಯು ಅ.ಪ.
ಸಾಧು ಮಚ್ಚಕಚ್ಚಪರೂಪನಾಗಿ ಭೇದಿಸಿ ತಮನ ಕೊಂದುವೇದವನ್ನು ಮಗನಿಗಿತ್ತು ಭೂದೇವಿಯರೊಡನೆ ಕೃಷ್ಣ ೧
ಬೆಟ್ಟವನ್ನು ಬೆನ್ನಲಿಟ್ಟು ಮಿತ್ರೆಮೋಹಿನಿ ರೂಪತಾಳಿಭಕ್ತರಿಗೆ ಅಮೃತ ಬಡಿಸಿ ಸತ್ಯಭಾಮೆಯರೊಡನೆ ಕೃಷ್ಣ ೨
ಕ್ರೋಡ ವರಾಹ ರೂಪನಾಗಿ ಆದಿ ಹಿರಣ್ಯಕನ ಕೊಂದುಮೇದಿನಿಯ ಮೇಲಕೆ ತಂದು ರಾಧೆಯೊಡನೆ ನಗುತ ಕೃಷ್ಣ ೩
ಪುಟ್ಟಬಾಲನ ನುಡಿಯ ಕೇಳಿ ಕೆಟ್ಟ ಕಶ್ಯಪನುದರ ಸೀಳಿಅಷ್ಟಮಂಗಳವಾದ್ಯವಾಗಲು ಅಷ್ಟ ಸ್ತ್ರೀಯರೊಡನೆ ಕೃಷ್ಣ ೪
ಯುಕುತಿಯಿಂದ ಭೂಮಿ ಅಳೆದು ಭಕುತ ಬಲಿಯ ತಲೆಯ ತುಳಿದುಶಕುತನೆಂದು ಪೊಗಳೆ ಸುರರು ಲಕುಮಿಯೊಡನೆ ನಗುತ ಕೃಷ್ಣ ೫
ಯುದ್ಧದಲಿ ಕೊಡಲಿ ಪಿಡಿದು ಗುದ್ದಿ ಕ್ಷತ್ರೇರ ಶಿರವ ತರಿದುಗೆದ್ದ ಸಿಂಹನೆನಿಸಿಕೊಂಡು ಪದ್ಮಾವತಿಯ ಕೂಡೆ ಕೃಷ್ಣ ೬
ಸೇತುಬಂಧನವನ್ನೆ ಮಾಡಿ ಧೂರ್ತರಾವಣನ್ನ ಕೊಂದುಖ್ಯಾತಿಪಡೆದು ಪುರಕೆ ಬಂದು ಸೀತೆಯೊಡನೆ ರಾಮಚಂದ್ರ ೭
ಒಂದು ಏಳು ಎಂಟುಸಾವಿರ ಇಂದುಮುಖಿಯರನ್ನು ಕೂಡಿಮಂದಮಾರುತ ಚಂದ್ರ ಬರಲು ನಂದಗೋಕುಲದ ದೊರೆಯು ೮
ಅಂಬರವ ತೊರೆದು ದಿಗಂಬರ ವೇಷವನ್ನೆ ಧರಿಸಿಮಂಗಳಾಂಗ ಮಾರಜನಕ ರಂಗನಾಯಕಿಯೊಡನೆ ಕೃಷ್ಣ ೯
ಅಚ್ಚಮುತ್ತಿನಾಭರಣವಿಟ್ಟು ಲಕ್ಷವಿಲ್ಲದೆ ಹಯವನೇರಿಭಕುತರಿಗೆ ಅಭಯಕೊಡುತ ಭಕ್ತವತ್ಸಲ ಹಯವದನ ೧೦

 

೯೧
ಲಾಲಿ ಶ್ರೀ ಹಯವದನ ಲಾಲಿ ರಂಗವಿಠಲಲಿ ಗೋಪೀನಾಥ ಲಕ್ಷ್ಮೀಸಮೇತ ಪ.
ಮುತ್ತು ಮಾಣಿಕ ಬಿಗಿದ ತೊಟ್ಟಿಲೊಳಗೊಲ
ಮನೆಯೊಳಗೆ ಇರನೀತ ಬಹುರಚ್ಚೆವಂತಮನೆವಾರ್ತೆ ಯಾರು ಮಾಡುವರು ಶ್ರೀಕಾಂತಗುಣಿಗುಣಗಳೊಳಗಿಪ್ಪ ಬಹು ಗುಣವಂತಗುಣಬದ್ಧನಾಗದಿಹ ಶ್ರೀ ಲಕ್ಷ್ಮೀಕಾಂತ ೨
ಕ್ಷೀರಾಂಬುನಿಧಿಯೊಳಗೆ ಸೆಜ್ಜೆಯೊಳಗಿರುವಶ್ರೀರಮಣ ಭಕ್ತರಿಚ್ಚೆಗೆ ನಲಿದು ಬರುವಕಾರುಣ್ಯ ಹಯವದನ ಕಾಯ್ವ ತುರುಕರುವನೀರೆ ಗೋಪಿಯರೊಳು ಮೆರೆವ ಕಡುಚೆಲುವ ೩

 

೯೨
ಲೋಕ ಭರಿತನೊ ರಂಗಾನೇಕಚರಿತನೊ ಪ.
ಕಾಕುಜನರ ಮುರಿದು ತನ್ನಏಕಾಂತಭಕ್ತರ ಪೊರೆವ ಕೃಷ್ಣ ಅ.ಪ.
ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನುಯೀತನೇ ಸಭಾಪೂಜ್ಯನೆಂದು ಮನ್ನಿಸಿದನಾಗ ೧
ಮಿಕ್ಕನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ ೨
ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲುಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ ೩
ಉತ್ತರೆಯ ಗರ್ಭದಲ್ಲಿ ಸುತ್ತಮುತ್ತಿದಸ್ತ್ರವನ್ನುಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ ೪
ತನ್ನ ಸೇವಕಜನರಿಗೊಲಿದು ಉನ್ನಂತ ಉಡುಪಿಯಲ್ಲಿ ನಿಂತುಘನ್ನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ ೫

 

ವಾಣಿ ಪರಮಕಲ್ಯಾಣಿ ನಮೋ ನಮೋ ಅಜನರಾಣಿ ಪಂಕಜಪಾಣಿ ಪ.
ಭಳಿರೆ ಭಳಿರೆ ಅಂಬೆ ಭಕ್ತಜನಸುಖದಂಬೆಸುಳಿದಾಡು ಶುಭನಿತಂಬೆ ಅಮ್ಮ ನಿಮ್ಮಹೊಳೆ ಹೊಳೆವ ಮುಖ ಮುಕುರ ಬಿಂಬೆಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಬೊಂಬೆ ೧
ಶರಣು ಶರಣೆಲೆ ದೇವಿ ಸ್ಮರಣೆ ಮಾತ್ರದಿ ಕಾಯ್ವೆಚರಣದಂದುಗೆಯ ಠೀವಿ ನಳನಳಿಸುವಾ-ಭರಣಗಳನಿಟ್ಟು ಸುಖವೀವಿಧರೆಯೊಳಗೆ ಹರಿಣಾಕ್ಷಿ ನೀ ಸಲಹೆ ವಾಗ್ದೇವಿ ೨
ಜಯಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆದಯಮಾಡು ಧವಳಗೀತೆ ಸತತ ಶ್ರೀಹಯವದನ ಪದಕೆ ಪ್ರೀತೆ ಇಳೆಯೊಳಗೆನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ ೩

 

೨೦೯
ವಿಷಯಾಸೆ ಬಿಡಲೊಲ್ಲದೋ ದೇವ ಪ.
ವಸುದೇವಸುತ ನಿನ್ನ ವಶವಾಗೋತನಕ ಅ.ಪ.
ಉದಯದಲಿ ಎದ್ದು ಹರಿಪದಗಳನು ಸ್ಮರಿಸದಲೆಕುದಿದು ಪರರನ್ನೆ ಬೈದು ಸುಯಿದುಮುದದಿಂದ ಮಜ್ಜನವ ಮಾಡದಲೆ ಕಂಡಕಡೆಒದಗಿ ಪರಸದನಕಾಗಿ ಪೋಗಿಮದಗರ್ವದಿಂದ ಗುರುಹಿರಿಯರಿಗೆ ವಂದಿಸದೆಕದನವನೆ ತೆಗೆದು ಬಂದು ನಿಂದುಇದೆ ಸಾಧನವೆಂದು ಉದರ ನೆವದಿ ತಿರುಗಿಸುದತಿಯರ ಸುಖಬಡಿಸಿ ಮದನವೆಗ್ಗಳನಾದೆ ೧
ಓದುವೆನು ವಿದ್ಯೆಗಳ ಓದನದ ಬಯಕೆಯಲಿಸಾಧುಶಾಸ್ತ್ರಗಳ ಮರೆದು ತೊರೆದುಕಾದುವೆನು ತರ್ಕವ್ಯಾಕರಣ ಬಲದಿಂದಬೀದಿಬೀದಿಯಲಿ ಚರಿಸಿ ಅರಸಿಮಾಧವನ ಪೂಜಿಸದೆ ಪರರ ಅನ್ನವನುಂಡು ಶೋಧಿಸದೆ ಪುಣ್ಯಪಾಪ ಲೇಪಕ್ರೋಧದಿಂದಲಿ ಇನಿತು ಪರಿಪರಿಯ ಬವಣೆಯಿಂದಬೋಧನೆಗೆ ಒಳಗಾಗಿ ಕುಧರ್ಮವನು ಪಡೆದೆ ೨
ಪರರ ಸೌಭಾಗ್ಯ ವಿದ್ಯಾ ಮಕ್ಕಳ ಕಂಡುಮರುಗಿ ಮನದೊಳಗೆ ಕೊರಗಿ ಸೊರಗಿತರತರಕೆ ಪರರಾಂಗನೆಯರ ಚೆಲುವಿಕೆ ಕಂಡು[ತೆರೆದ] ಕಣ್ಣಿಂದ ನೋಡಿ ಬಾಡಿಎರಗಿ ಮನ ಅವರಲ್ಲಿ ಏಕಾಂತದಲಿ ಕಂಡುಕರದಿ ಸನ್ನೆಯನು ಮಾಡಿ ಕೂಡಿಹೊರಗೆ ಗುಣವಂತನೆಂದೆನಿಸಿ ಧರೆಯೊಳಗೆ ಪಾಮರ ಬುದ್ಧಿಯಿಂದ ಸಂಚರಿಸಿ ನಿನ್ನನು ಮರೆದೆ ೩
ದೇಶದೇಶಕೆ ಧನದಾಸೆಗಾಗಿ ನಡೆದುಬ್ಯಾಸರದೆ ಮನೆ ಮನೆಗೆ ಪೋಗಿ ಕೂಗಿಭೂಸುರೋತ್ತಮರು ನಾವೆಂದು ಪರರಮುಂದೆಹೇಸದಲೆ ಪೇಳಿಕೊಂಡು ಭಂಡುಮೋಸಗೊಳಿಸಿ ಪರರ ಆಶ್ರಯವನೆ ಮಾಡಿಭೇಷಜವ ತೋರಿ ಕಳೆದೆ ಪೊಳೆದೆಈಸುಪರಿ ಧನವ ತಂದು ಕೂಳನೆ ಹಾಕಿಆಸತಿಸುತರೆನಗೆ ಗತಿಯೆಂದು [ಗುಣಿಸಿದೆ] ೪
ಕಾಯದಾಸೆಗಾಗಿ ನೋಯಬಯಸದಲೆ ಉ-ಪಾಯವ ಚಿಂತಿಸುತ್ತಲಿತ್ತಹೇಯವಿಲ್ಲದೆ ಸ್ನಾನ ಸಂಧ್ಯಾವಂದನೆ ತೊರೆದುತೋಯಿಸದೆ ದೇಹವನ್ನು ಇನ್ನುಮಾಯಮೋಸಗಳಿಂದ ಬಾಯಿಗೆ ಬೇಕಾದ್ದುಆಯಾಸಪಟ್ಟು ತಂದು ತಿಂದುಶ್ರೀಯರಸ ಹಯವದನರಾಯನೆ ನಾ ನಿನ್ನಮಾಯವನು ತಿಳಿಯದನ್ಯಾಯದಿಂದಲಿ ಕೆಟ್ಟೆ ೫

 

೧೩೯
ವೃಂದಾವನದ ಸೇವೆಯ ಪ.
ವೃಂದಾವನದ ಸೇವೆಮಾಡಿದವರಿಗೆ ಭೂ-ಬಂಧನ ಬಿಡುಗಡೆಯಾಗುವುದು ಅ.ಪ.
ಏಳುತಾಲಿದಿರೆ ಕಂಡು ಕರವ ಮುಗಿದು ಬೇಗೀ-ರೇಳು ಲೋಕದ ಮಾತೆಗೆ ನಮೋಯೆಂಬೋದಲ್ಲದೆಏಳು ಪರದಕ್ಷಿಣೆಯನು ಮಾಡಿದವರಿಗೆಏಳು ಜನಮದ ಪಾಪ ಹಿಂಗುವುದು ೧
ಸಾರಿಸಿ ರಂಗವಲ್ಲಿಯನಿಟ್ಟು ಮೇಲೆ ಪ-ನ್ನೀರನೆರೆದು ಪ್ರತಿದಿವಸದಲ್ಲಿಸಾರಿ ಸೇವೆಯ ಮಾಡಿದವರಿಗೊಲಿದು ಮುನ್ನಸೇರಿಸುವಳು ತನ್ನ ಪದವಿಯನು ೨
ಒಡೆಯನ ಮನೆಗೆ ನೀರುತರುತಲೊಬ್ಬಳುಎಡಹಿ ಬಿದ್ದಳು ತನ್ನ ಕೊಡನೊಡೆಯೆಸಿಡಿದು ಶ್ರೀತುಳಸಿಗೆ ತಂಪಾಗಲು ಮುನ್ನಕೊಡಳೆ ಅವಳಿಗೆ ಮೋಕ್ಷಪದವಿಯನು ೩
ಕೇಶವ ಎಂಬ ಭೂಸುರಗೆ ಶುಕಯೋಗಿ ಉಪ-ದೇಶಿಸಿದನು ತನ್ನ ಭಾಗವತದಲ್ಲಿಕಾಸುವೀಸ ಹೊನ್ನು ಹಣ ಸವೆಯದಾಮುನ್ನ ನಿ-ರಾಶೆಯಿಂದಲಿ ಮುಕ್ತಿ ದೊರಕುವುದು ೪
ಪೊಡವಿಗಧಿಕವಾದ ಸೋದೆ ಪುರದ ತ್ರಿವಿಕ್ರಮಎಡಭಾಗದಲಿ ಲಕ್ಷ್ಮಿದೇವಿಯ ಸಹಿತಸಡಗರದಿಂದಲಿ ಹಯವದನನ ಪಾದಬಿಡದೆ ಪೂಜಿಸಿ ಭಕ್ತಿ ಪಡೆಯಿರಯ್ಯ ೫

 

೯೩
ವೇಣುನಾದ ಪ್ರಿಯ ಗೋಪಾಲಕೃಷ್ಣ ಪ.
ವೇಣುನಾದ ವಿನೋದ ಮುಕುಂದಗಾನವಿನೋದ ಶೃಂಗಾರ ಗೋಪಾಲ ಅ.ಪ.
ವಂದಿತಚರಣ ವಸುಧೆಯಾಭರಣಇಂದಿರಾರಮಣ ಇನಕೋಟಿತೇಜಮಂದರಧರ ಗೋವಿಂದ ಮುಕುಂದಸಿಂಧುಶಯನ ಹರಿ ಕಂದರ್ಪಜನಕ ೧
ನವನೀತಚೋರ ನಂದಕುಮಾರಭುವನೈಕವೀರ ಬುದ್ಧಿವಿಸ್ತಾರರವಿಕೋಟಿತೇಜ ರಘುವಂಶರಾಜದಿವಿಜವಂದಿತ ದನುಜಾರಿ ಗೋಪಾಲ ೨
ಪರಮದಯಾಳು ಪಾವನಮೂರ್ತಿವರ ಕೀರ್ತಿಹಾರ ಶೃಂಗಾರಲೋಲಉರಗೇಂದ್ರಶಯನ ವರ ಹಯವದನಶರಣರಕ್ಷಕ ಪಾಹಿ ಕೋದಂಡರಾಮ ೩

 

೨೧೦
ವೇದವ ತಂದು ವಿಧಿಗೀವಂದೆ ನೀಸಾಧು ಜನರ ಸಲಹಲಿ ಬಂದೆ ಪ.
ಮೋದದಿಂದೆಮ್ಮ ಮನದಿ ನಿಂದೆ ನೀಬಾಧಿಪ ದುರಿತತತಿಯ ಕೊಂದೆ ಅ.ಪ.
ಸಕಲ ಸುರರಿಗೆ ಶಿರೋರನ್ನ ನೀಅಕಳಂಕಾಶ್ರಿತಜನಮಾನ್ಯನಿಖಿಲ ನಿಗಮನಿಕರದಿ ವಣ್ರ್ಯ ನಿನ್ನಕರುಣಾಕಟಾಕ್ಷದಿ ನೋಡೆನ್ನ ೧
ಕೈವಲ್ಯಪದವಿಯ ಕೊಡಬಲ್ಲ ನಿನ್ನಸೇವಿಪ ಸುಜನರಿಗೆಣೆಯಿಲ್ಲಭಾವಜಕೋಟಿಯಿಂದಚೆಲ್ವ ನೀಶ್ರೀವನಿತೆಗೆ ಸಿಲುಕುವನಲ್ಲ ೨
ಹಯವದನ ಹೃದಯಸದನಜಯ ಶಶಿವರ್ಣ ಜಗತಿಪೂರ್ಣಭಯಹರ ಭಾಸುರ ಸಿರಿಚರಣ ನಿನ್ನದಯಪಾತ್ರಾನುದ್ಧರಿಸೆನ್ನ ೩

 

೨೪೦
ಶಂಭು ಸ್ವಯಂಭುಗಳ ಹೃದಂಬರಕಿಂದು-ಬಿಂಬದಂತಿಹ ಕಂಬುಧರನ ನಂಬು ಮನುಜಡಂಬ ಮತವ ಹಂಬಲಿಸದೆ ಪ.
ಕೃದ್ಧ ಖಳರ ಗೆದ್ದು ವೇದವೇದ್ಯವೆನಿಪ ಶುದ್ಧಸುಧೆಯಉದ್ಧರಿಸಿದ ಮಧ್ವಮುನಿ ಪ್ರಸಿದ್ಧವರಗೆ ಊಧ್ರ್ವಹರಿಯಹೊದ್ದಿ ಬದುಕು ಊಧ್ರ್ವಪುಂಡ್ರ ಶ್ರೀಮುದ್ರೆಯನ್ನುಸದ್ವ್ರತಿಯಾಗು ವೃದ್ಧರಂಘ್ರಿಪದ್ಮಕೆರಗು ಕದ್ಯಕರಗದಾದ್ವವ (?) ಬಿಡು ೧
ವ್ಯರ್ಥ ವಿತ್ತ ಪುತ್ರಮಿತ್ರರರ್ಥಿಗೆ ಸುತ್ತ ತಿರುಗುತಿರದೆತೀರ್ಥಕ್ಷೇತ್ರಯಾತ್ರೆಗಳನು ಹೊತ್ತು ಹೊತ್ತಲಿ ವರ್ತಿಸುತಿರುಭಕ್ತರೆ ನಿನ್ನ ಮಿತ್ರರು ಹರಿಭಕ್ತಿಯ ನಿನಗಿತ್ತು ಮತ್ತೆಮುಕ್ತಿಪಥವ ಹತ್ತುವ ಸಂಪತ್ತ ನಿನ್ನತ್ತ ಮಾಡು ೨
ಕೋಪವ ಕಳೆ ತಾಪವ ತಾಳು ಪಾಪದ ಬಲು ಲೇಪಕಂಜುಭೂಪರ ಸೇವೆ ಆಪತ್ತಿಹುದು ತಾಪಸರ ಸಮೀಪವ ಸೇರುಶ್ರೀಪತಿ ಹಯವದನನ ಪದದೀಪದ ಬೆಳಕಿನಲಿ ವಿಷಯಕೂಪವ ಕಳೆದಾಪರಮನಲಿ ಪರಸೇವೆಲಾ [ಪೂ]ರನಾಗು ೩

 

೧೬
ಶರಣು ಶರಣುಪ.
ಶರಣು ಸಕಲೋದ್ಧಾರ ಅಸುರಕುಲ ಸಂಹಾರಅರಸು ದಶರಥಬಾಲ ಜಾನಕಿಯ ಲೋಲವಾಲಿಸಂಹಾರ ವಾರಿಧಿಗೆ ನಟುಗಾರಏಕಪತ್ನಿಯಶೀಲ ತುಲಸಿವನಮಾಲ ಅ.ಪ.
ಈ ಮುದ್ದು ಈ ಮುಖವು ಈ ತನುವಿನ ಕಾಂತಿಈ ಬಿಲ್ಲು ಈ ಬಾಣ ಈ ನಿಂತ ಭಾಮಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯಇನ್ಯಾವದೇವರಿಗುಂಟು ಮೂರ್ಲೋಕದೊಳಗೆ ೧
ಉಟ್ಟಪೀತಾಂಬರವು ಉಡಿಗಂಟೆವೊಡ್ಯಾಣತೊಟ್ಟ ನವರತ್ನದಾಭರಣ ರಸಕರುಣಕೊಟ್ಟ ನಂಬಿಕೆ ತಪ್ಪ ಕರುಣದಲಿ ರಕ್ಷಿಸುವಸೃಷ್ಟಿಯೊಳಗೆಣೆಗಾಣೆ ಕೌಸಲ್ಯರಾಮ ೨
ಭಾವಿಸಲು ಅಯೋಧ್ಯಪಟ್ಟಣದ ಪುರವಾಸಬೇಡಿದವರಿಗೆ ವರವ ನೀಡುವೆನೆಂದುರೂಢಿಯೊಳಧಿಕ ಚುಂಚನಕಟ್ಟೆಯಲಿ ನೆಲೆಸಿದಸ್ವಾಮಿ ಶ್ರೀ ಹಯವದನ ಪಾಲಿಸೊ ನಿಸ್ಸೀಮ ೩

 

೩೩೪
ಶರಣು ಶರಣೂ ಪ.
ಮಹಾದೇವರಾ ಗರ್ಭದಲಿ ಉದ್ಭವಿಸಿದಿಯೊ ನೀನು
ಸಾಧುಮಾತೆಯ ಶಾಪವನ್ನು ಕೈಗೊಂಡು
ಆದಿಪೂಜೆಗೆ ಅಭಿಮಾನಿದೇವತೆಯಾದಿ
ಮಾಧವ ನಮ್ಮ ಹಯವದನನ್ನ ಪ್ರಿಯ ೧
ಹಿಮಗಿರಿಗೆ ಮಗಳಾಗಿ ಜನಿಸಿ ತಪವನು ಗೈದು
ಕಮಲಸಂಭವಸುತನ ಒಲಿಸಬೇಕೆಂದು
ರಮಣಿ ರಾಮಮಂತ್ರ್ರ ದಿನಸಹಸ್ರವು ಜಪಿಸೆ
ಕಮಲಾಕ್ಷನೆಮ್ಮ ಹಯವದನನ್ನ ಪ್ರಿಯೆ ೨
ಮಡದಿ ಹೋದಾಗ್ರಹಕೆ ಜಡೆಯ ಕಿತ್ತಪ್ಪಳಿಸಿ
ಕಡುಘೋರ ತಪಗೈಯೆ ಮನ್ಮಥನು ಬರಲು
ಕಿಡಿಗಣ್ಣಿನಲಿ ಅವನ ಭಸ್ಮವನು ಮಾಡಿದಿ
ಕಡಲೊಡೆಯ ನಮ್ಮ ಹಯವದನನ್ನ ಪ್ರಿಯ ೩
ಮತ್ಸ್ಯದೇಶಕೆ ಪೋಗಿ ಮನದ ಚಿಂತೆಯಲಿರಲು
ತುಚ್ಛರಕ್ಕಸನು ನಿಮ್ಮನು ಪಿಡಿಯ ಬರಲು
ಚಿತ್ತದೊಲ್ಲಭಘೇಳಿ ಕೊಚ್ಚಿಸಿದಿ ಅವನ ಶಿರ
ಅಚ್ಯುತ ನಮ್ಮ ಹಯವದನನ್ನ ಪ್ರಿಯೆ ೪
ಕೇಸರಿಯ ಗರ್ಭದಲಿ ಉದ್ಭವಿಸಿದಿಯೊ ನೀನು
ತ್ರೇತೆಯಲಿ ರಾಮರ ಸೇವೆಯನು ಮಾಡಿ
ಭೂತಳದೊಳು ಭೀಮ ಕಡೆಗೆ ಯತಿಯಾಗಿ ನೀ
ಶ್ರೀಪತಿ ಹಯವದನ ದೂತ ಪ್ರಖ್ಯಾತ ೫
ಈರೇಳು ಲೋಕದ ಜನರ ನಾಲಗೆಯಲ್ಲಿ
ಬೀಜವನು ಬಿತ್ತಿ ಅನ್ನವ ಕೊಡುವ ತಾಯೆ
ವಾರಿಜಸಂಭವನ ಹಿರಿಯ ಪಟ್ಟದ ರಾಣಿ
ನೀರಜಾಕ್ಷ ನಮ್ಮ ಹಯವದನನ್ನ ಪ್ರಿಯೆ ೬
ಜನನಿ ಹುಟ್ಟಿದ ನಾಳದಲ್ಲಿ ಜನಿಸಿದಿ ನೀನು
ಜನರ ಸೃಷ್ಟಿ ಸ್ಥಿತಿಗೆ ಕಾರಣನೆಂದು
ಅನಿಮಿಷರೆಲ್ಲರೂ ಸ್ತುತಿಸಿ ಕೊಂಡಾಡಲು
ವನಜಾಕ್ಷ ನಮ್ಮ ಹಯವದನನ್ನ ಪ್ರಿಯ ೭
ಪದ್ಮದಲ್ಲುದ್ಭವಿಸಿ ರಾಮರ ಕೈಹಿಡಿದು
ಪದ್ಮಾಕ್ಷನ ರಥಕ್ಕೆ ಕೈ ನೀಡಿ ಬಂದೆ
ಪದ್ಮಾವತಿ ಎಂದು ಖ್ಯಾತಿ ಮೂರ್ಲೋಕದೊಳು
ಪದ್ಮಾಕ್ಷ ನಮ್ಮ ಹಯವದನನ್ನ ಪ್ರಿಯೆ ೮
ಅನಂತ ನಾಟಕಾನಂತ ಸೂತ್ರಧಾರಿ
ಅನಂತ ಚರಿತ ನಿತ್ಯಾನಂದಭರಿತ
ಅನಂತಾಸನ ಶ್ವೇತದ್ವೀಪ ವೈಕುಂಠ
ಅನಂತಗುಣಭರಿತ ಹಯವದನ ಚರಿತ ೯
ಶರಣು ಮತ್ಸ್ಯ ಕೂರ್ಮ ವರಾಹ ನಾರಸಿಂಹ
ಶರಣು ವಾಮನ ಭಾರ್ಗವ ರಾಮಚಂದ್ರ
ಶರಣು ಕೃಷ್ಣ ಬೌದ್ಧ ಕಲ್ಕ್ಯಸ್ವರೂಪನೆ
ಶರಣು ಹಯವದನನ್ನ ಚರಣಗಳ ನುತಿಪೆ ೧೦

 

೯೫*
ಶೋಭನವೆ ಹರಿ ಶೋಭನವುವೈಭವಾಮಲ ಪಾವನ ಮೂರುತಿಗೆಶೋಭನವೆ ಶೋಭನವು ಪ.
ಕುಂಡಲಿ ನಗರದ ರುಕ್ಮಿಣಿ ಸ್ವಯಂವರಗಂಡಕಿ ಕ್ಷೋಣಿಯ ತೀರದಲಿ ಚಂದ್ರಮಂಡಲ ಕ್ಷೋಣಿಜಾತೆ ಪ್ರಭೆದುಂದುಭಿ ಪಾರಿಜಾತ ಎಸೆಯೆ ೧
ಕನ್ನಡಿ ಕಲಶವು ಕನಕದುಪ್ಪರಿಗೆ ಸು-ವರ್ಣ ಮಾಣಿಕದ ಗಗನದಲೆಸೆಯೆರನ್ನದ ಕಿಟಕಿ ಉಜ್ವ[ಲ]ಪನ್ನಗಾಸ್ಯಲಿ ಸು-ವರ್ಣ ಮಾಣಿಕದ ತೋರಣವೆ ೨
ಪಚ್ಚದ ಪರಿಮಳ ತಳಿರುತೋರಣ ಕಟ್ಟಿನಿ[ಚ್ಚ]ಕಲ್ಯಾಣ ನೀಲವರ್ಣಉ[ಚ್ಚ]ಹವಾಯಿತು ಇರುಳಿನ ಚರಿತ್ರಾಅಚ್ಚುತನೆ ಗಮ್ಮನೆ ಬಾಹುದು ೩
ಭೀಷ್ಮಕ ರುಕ್ಮಿಣಿ ಶಿಶುಪಾಲ[ಗೀವೆ]ನೆಂದುಸೇಸೆಯ ತಳೆದು ಧಾರೆನೆರೆಯೆಆ ಸಮಯದಲಿ ದ್ವಾರ[ಕೆ]ಕೃಷ್ಣಗೆಲೇಸಾದ ಓಲೆಯ ಬರೆದಳಾಕೆ ೪
ಬರೆದೋಲೆಯ ಕಾಣಿಸಿ ತೆಗೆದೋದಿಪುರೋಹಿತ ಗಗ್ರ್ಯಾಚಾರ್ಯರುನಿರೂಪ ಕೊಡು ನಮಗೆ ನಿಗಮಗೋ- ಚರನು ಗರುಡವಾಹನ ಗಮ್ಮನೆಬಾಹೋನು ೫
ಗವರಿಯ ನೋನುವ ಮದುವೆಯ ಸಡಗರಭುವನೇಶ ತಾ ತಡೆದನ್ಯಾಕೆಂದುತಾ ಚಿಂತಿಸಿದಳು ತಾವರೆಗಂಗಳೆಹವಣಿಸಿದಳು ವಿಲಕ್ಷಣಗಾಗಿ ೬
ಚಂದದಿ ರುಕ್ಮಿಣಿ ಮುತ್ತೈದೆರಿಗೆಲ್ಲಸಂಭ್ರಮದಿಂದ ಬಾಗಿಣ[ಬೀರೆ ಐ]ತಂದು ತಾಳಿಯ ಮಂಗಳಸೂತ್ರ ಮು-ಕುಂದ ಕಟ್ಟಿ ಕಲ್ಯಾಣವಾದ ೭
ಅಂಬಿಕೆಗುಡಿಯಲಿ ಚಂದದಿಂದ ಪೂಜೆಯ ಮಾಡಿರಂಗ[ನ] ಕೂಡಿದ ಸಂಭ್ರಮದಿಂದಮಂದಾರಮಾಲೆಯ ಚಂದದಿಂದಲಿ ತಂದುರಂಗನ ಕೊರಳೊಳು ಹಾಕಿದಳು ೮
ಹಿಂದಿಂದ ಬಹ ರುಕುಮನ ಕಂಡುಭಂಗಿಸಿ ಕರೆದು ಭಂಗವ ಮಾಡಿಹಿಂದಿಂದ ಕರೆದು ಮುಂದಕೆ ಕಟ್ಟಿ ಮು-ಕುಂದ ಹಯವದನ ದ್ವಾರಕೆ ಪೊಕ್ಕ ೯

 

೩೨೧
ಶ್ರೀ ಮಹಾಲಕ್ಷುಮಿವಲ್ಲಭಗೆ ಕಾಮಿತಫಲದಾಯಕಗೆ
ಆ ಮಹಿಮಗೆ ಮಂಗಳಾರತಿಯ ಎತ್ತಿದರು ೧
ಮತ್ಸ್ಯಾವತಾರ ಶ್ರೀಹರಿಯ ಅಕ್ಷಗಂಗಳದೊಂದು ಬೆಳಕು
ನಿತ್ಯವೇದವ ತಂದ ಬೆಳಕು ತುಂಬಿತು ದ್ವಾರಾವತಿಗೆ ೨
ಕೂರ್ಮಾವತಾರ ಶ್ರೀಹರಿಯ ಹೇಮಗಿರಿಯ ತಂದ ಬೆಳಕು
ಬಲ್ಲಿದ ಕಾಯನ್ನ ಬೆಳಕು ತುಂಬಿತು ದ್ವಾರಾವತಿಗೆ ೩
ವರಾಹಾವತಾರ ಶ್ರೀಹರಿಯ ಹೊಳೆದ ಕೋರೆದಾಡೆಯ ಬೆಳಕು
ಧಾರುಣಿಯ ನೆಗವಿದ ಬೆಳಕು ತುಂಬಿತು ದ್ವಾರಾವತಿಗೆ ೪
ನರಮೃಗರೂಪ ಶ್ರೀಹರಿಯ ಮೆರೆವೊ ನಖದ ಬೆಳಕು
ಉರಿಗಣ್ಣು ಜ್ವಾಲೆಯ ಬೆಳಕು ತುಂಬಿತು ದ್ವಾರಾವತಿಗೆ ೫
ವಾಮನಾವತಾರ ಶ್ರೀಹರಿಯ ಭೂಮಿಯನಳೆದೊಂದು ಬೆಳಕು
ಬಾಲಕ ತನಯನ ಬೆಳಕು ತುಂಬಿತು ದ್ವಾರಾವತಿಗೆ ೬
ಭಾರ್ಗವಾವತಾರ ಶ್ರೀಹರಿಯ ಮೆರೆÉವೊ ಬಲುಭುಜದೊಂದು ಬೆಳಕು
ದುರುಳ ಕ್ಷತ್ರೆÉೀರ ಗೆದ್ದ ಬೆಳಕು ತುಂಬಿತು ದ್ವಾರಾವತಿಗೆ ೭
ದಶರಥತನಯ ಶ್ರೀಹರಿಯ ಎಸೆವೊ ಬಿಲ್ಲುಬಾಣದ ಬೆಳಕು
ಶಶಿವದನೆಯ ತಂದ ಬೆಳಕು ತುಂಬಿತು ದ್ವಾರಾವತಿಗೆ ೮
ಗೋವಳರಾಯ ಶ್ರೀಹರಿಯ ಗೋಪಿ ಮುದ್ದಾಡಿದ ಬೆಳಕು
ದೇವಕ್ಕಿತನಯನ ಬೆಳಕು ತುಂಬಿತು ದ್ವಾರಾವತಿಗೆ ೯
ಬೌದ್ಧಾವತಾರ ಶ್ರೀಹರಿಯ ಬುದ್ಧಿಪಲ್ಲಟದೊಂದು ಬೆಳಕು
ರುದ್ರನ್ನ ಗೆಲಿದೊಂದು ಬೆಳಕು ತುಂಬಿತು ದ್ವಾರಾವತಿಗೆ ೧೦
ಕಲ್ಕ್ಯವತಾರ ಶ್ರೀಹರಿಯ ಹೊಳೆವಾಖಂಡದೊಂದು ಬೆಳಕು
ಗುರು ಹಯವದನನ್ನ ಬೆಳಕು ತುಂಬಿತು ದ್ವಾರಾವತಿಗೆ ೧೧

 

೨೧*
ಶ್ರೀಕೃಷ್ಣಸಂಕೀರ್ತನೆ
ಅಕ್ಕ ನಂದಗೋಪನ ಅರಮನೆಯೊಳಗೊಬ್ಬಅಕ್ರೂರ ಬಂದನಂತೆಹೊಕ್ಕು ಬಳಸಲಿಲ್ಲ ಹುಸಿಯನಾಡುವಳಲ್ಲಇಕ್ಕೋ ಬಾಗಿಲಮುಂದೆ ಈಗ ರಥವ ಕಂಡೆ ಪ.
ಮಧುರಾಪಟ್ಟಣವಂತೆ ಮಾವನ ಮನೆಯಂತೆನದಿಯ ದಾಟಲಿಬೇಕಂತೆಎದುರು ದಾರಿಲ್ಲವಂತೆ ಏನೆಂಬೆ ಏಣಾಕ್ಷಿಉದಯದಲ್ಲಿ ಪಯಣವಂತೆ ಒಳ್ಳೆಯ ವೇಳೆಯಂತೆ ೧
ಮಲ್ಲರ ಕೂಟವಂತೆ ಮತ್ತೆ ಕಾಳಗವಂತೆಬಲ್ಲಿದ ಗಜಗಳಂತೆಬಿಲ್ಲಹಬ್ಬವಂತೆ ಬೀದಿ ಶೃಂಗಾರವಂತೆಅಲ್ಲಿ ತಾಯಿ[ತಂದೆಯರ]ಕಾಲಿಗೆ ನಿಗಡವಂತೆ ೨
ಅಲ್ಲಿ ಹುಟ್ಟಿದನಂತೆ ಅರಸಿನ ಮಗನಂತೆಇಲ್ಲಿಗೆ ಬಂದನಂತೆಎಲ್ಲ ಕಪಟವಂತೆ ಎಂದೂ ಹೀಗಿಲ್ಲವಂತೆನಿಲ್ಲದೆ ಯಶೋದೆಯ ಕಣ್ಣಲುದಕವಂತೆ ೩
ಮತ್ತೆ ಪಾಂಡವರಂತೆ ಮೋಹದ ಸೋದರರಂತೆಅತ್ತೆಯ ಮಕ್ಕಳಂತೆಸುತ್ತ ಶತ್ರುಗಳಂತೆ ಸಕಲ ಕಾರ್ಯಗಳಂತೆಚಿತ್ತಜನಯ್ಯನ ಚಿತ್ತವೆರಡಾದುವಂತೆ ೪
ತಾಳಲಾರೆವು ನಾವು ತಾಟಂಕ ಹಯವದನಬಾಲಕನಗಲಿದನೆನೀಲವೇಣಿಯರೆಲ್ಲ ನಾಳೆ ಉದಯದಲ್ಲಿಆಲೋಚನೆ ಮಾಡದೆ ಆಣೆಯಿಕ್ಕಿ ತಡೆವ ೫

* ಈ ಕೀರ್ತನೆ ಪುರಂದರದಾಸರ ಅಂಕಿತದಲ್ಲೂ ಇದೆ.

 

೧೪೮
ಶ್ರೀಪಾದರಾಯರ ದಿವ್ಯ ಶ್ರೀಪಾದವ ಭಜಿಸುವೆ ಪ.
ವಾಗ್ವಜ್ರಗಳಿಂದ ಮಾಯಾವಾದಿಗಳೆಲ್ಲರ ಬಾಯಬೀಗನಿ(ವಿ?)ಕ್ಕಿ ಮುದ್ರಿಸಿದ ಬಿಂಕಗಳ ಬಿಡಿಸುವ ೧
ವ್ಯಾಸರಾಯರಿಗೆ ವಿದ್ಯಾಭ್ಯಾಸವ ಮಾಡಿಸುವದಾಸರ ನಾಮಗಳಿಂದ ಲೇಸುಲೇಸೆಂದೆನಿಸಿಕೊಂಬ ೨
ಮಧ್ವಮತದಲ್ಲಿ ಪುಟ್ಟಿ ಮಾಯಾವಾದಿಗಳ ಕುಟ್ಟಿಗೆದ್ದು ಮೆರೆದನು ದಿಟ್ಟ ಗುರುರಾಯ ಜಗಜಟ್ಟಿ ೩
ಸುವರ್ಣವರ್ಣತೀರ್ಥರ ಸುತ ಶ್ರೀಪಾದರಾಯರಅವರ ನಾಮಗಳಿಂದ ಕಾವನಯ್ಯ ಕರುಣಾನಿಧಿ ೪
ವರದ ವೆಂಕಟೇಶನ್ನ ಒಲಿದು ಪೂಜಿಸುವನಕರುಣದಿಂದ ಹಯವದನ ಸಲಹೋ ಯತಿರನ್ನನ ೫

 

೯೪
ಶ್ರೀರಂಗ ಬಾರನೆ ಪ.
ಕರೆದರಿಲ್ಲಿ ಬಾರನೆ ಕಾಂತೆ ಮುಖವ ತೋರನೆ ಮಧುರ ಪುರದ ಅರಸನೆ ಕೂಡಿ ಎನ್ನ ರಮಿಸನೆ ಅ.ಪ.
ಮುನಿಸು ಮನದಲ್ಲಿಟ್ಟನೆ ಮೋಹವನ್ನು ಬಿಟ್ಟನೆಮನದಿ ಛಲವತೊಟ್ಟನೆ ಮನೆಗೆ ಬಾರದೆ ಬಿಟ್ಟನೆ ೧
ಎಂತು ನಂಬಿ ಇದ್ದನೆ ಎಂತು ಗುರುತು ಮರೆತನೆಪಂಥವ್ಯಾತಕೆ ಕಲಿತನೆ ಕಾಂತೇರ ಕೂಡಿ ಮೆರೆದನೆ ೨
ಸೋಳಸಾಸಿರ ಗೋಪಿಸಹಿತ ಜಲದಲಾಡಿ ಪೋದನೆಸೆಳೆದು ಒಬ್ಬಳ ಒಯ್ದನೆ ಚೆಲುವ ಹಯವದನನೆ ೩

 

೨೧೧
ಶ್ರೀರಮಣನೆ ಕಾಯೊ ದಯಮಾಡು ರಂಗಶ್ರೀರಮಣನೆ ಕಾಯೊ ಏ ಕರುಣದಿ ಪ.
ನೀರಜಭವಜನಕ ತಾರಿದೆ ಭವದಿಂದ ಏ ಮುರಹರೆಸೇರಿದೆ ನಿನ್ನ ಪದವ ಶ್ರೀರಮಣನೆ ಕಾಯೊ ಅ.ಪ.
ಕರುಳ ಸಂಬಂಧವೆಂಬೊ ಎನ್ನ ಕೊರಳಿಗೆಉರುಳುಗಳನೆ ಸಿಲುಕಿ [ಸಿ]ಬರಿದೆ ಮದಗಳೆಂಬ ಈಕರಿಗಳ ಧುರತಗ್ಗದು ಹರಿಯೆ ೧
ಅರಿಷಡ್ವರ್ಗವೆಂಬ ಈ ಮಹಾಉರಗಭಯಕೆ ಸಿಲುಕಿಬರಿದೆ ಮದಗಳೆಂಬ ಈ ಕರಿಗಳ ಧುರತಗ್ಗದು ಹರಿಯೆ ೨
ಬಲುದುರ್ವಿಷಯಂಗಳ ಈ ಬಲೆಗಳಸಾಲಿಗೆ ಒಳಗಾದೆಕಲಾವತಿ ಜನರೆಂಬ ಈಖಳರ ಒಳಬಿದ್ದೆನೊ ಹರಿಯೆ ೩
ಜರೆನರೆಗಳು ಬಂದು ಇರುವಾಗಪರಸತಿಯರ ಕಾಟನರನಾಯಿಗಳಂತೆ ಈ-ಪರಿ ನೆರೆಹೊರೆಗಳ ಕೂಟ ೪
ದಯವಿಲ್ಲದ ಸತಿಯು ಈ ದುರುಳರುನಯಹೀನರು ಸುತರುಭಯದಿಂದಲಿ ನೊಂದೆದಯಾಂಬುಧೇ ಹಯವದನ ನೀ ಬಂಧು ೫

 

೧೮
ಶ್ರೀಶ ನೀನಹುದೋ ಶೇಷಾಚಲವಾಸ ನೀನಹುದೊ ಪ.
ಶೇಷಶಯನ ಸುರೇಶವಂದಿತಶೇಷಜನರನು ಪಾಲಿಸಿ ಬಡ್ಡಿಕಾಸು ಸೇರಿಸಿ ಗಂಟುಕಟ್ಟುವಕ್ಯಾಸಕ್ಕಿ ತಿಮ್ಮಪ್ಪ ನೀನೆ ಅ.ಪ.
ತಂದೆ ನೀನಹುದೊ ಕರುಣಾಸಿಂಧು ನೀನಹುದೊಅಂದುದ್ರುಪದನ ನಂದನೆಯ ಎಳೆತಂದು ಘಾಸಿಯ ಮಾಡುತಿರಲುಮುಂದೆ ಬಂದು ಅಕ್ಷಯವೆಂದು ಸಲಹಿದಮಂದಹಾಸ ಮುಕುಂದನು ನೀನೆ ೧
ಧೀರ ನೀನಹುದೊ ಜಗದೋದ್ಧಾರ ನೀನಹುದೊಬಾರಿ ಬಾರಿಗೆ ನಿನ್ನಪಾದ ಸುವಾರಿಜಂಗಳಸೇರಿದ ಭಕ್ತರ ಘೋರ ದುರಿತವದೂರಗೈಸುವ ಮಾರಜನಕ ಅ-ಪಾರ ಮಹಿಮನೆ ೨
ಧನ್ಯ ನೀನಹುದೊ ಸುರಮುನಿಮಾನ್ಯ ನೀನಹುದೊಪನ್ನಗಾರಿವಾಹನ್ನ ಧರೆಯೊಳುಇನ್ನು ನಿನಗೆದುರ್ಯಾರ ಕಾಣೆನೊ ಪ್ರ-ಸನ್ನನಾಗೆಲೊ ಬಿನ್ನಹ ಕೇಳು ಪ್ರ-ಪನ್ನವತ್ಸಲ ಶ್ರೀ ಹಯವದನ ೩

 

೨೧೨
ಸಕಲಸಾಧನವೆನಗೆ ಕೈಸೇರಿತುಮುಕುತಿಯ ಮಾತಿಗೆ ಬಾರದ ಧನವು ಪ.
ಸಂಸಾರದಲಿ ಜ್ಞಾನ ಸತಿಸುತರಲಿ ಭಕ್ತಿಕಂಸಾರಿಪೂಜೆಯಲಿ ವೈರಾಗ್ಯವುಸಂಶಯದ ಜನರಲ್ಲಿ ಸಖತನವ ಮಾಡುವೆನುಹಿಂಸೆಪಡಿಸುವೆನು ಜನಸಂಗ ಹರಿ ರಂಗ ೧
ವಿಷಯಂಗಳಲಿ ಧ್ಯಾನ ಲೌಕಿಕದಲಿ ಮನನವಶವಲ್ಲದ ಕತೆಗಳಲ್ಲಿ ಮನವುಹಸನಾಗಿ ಎಣಿಸುವ ಹಣಹೊನ್ನಿನ ಜಪವುಬಿಸಿಲೊಳಗೆ ಚರಿಸುವುದದೆ ಮಹಾ ತಪವು ೨
ಪೀಠ ಪೂಜೆಂಬುವುದು ಲಾಜಚೂರಣವಯ್ಯಮಾಟದ ಪಯೋಧರವೆ ಕಲಶಪೂಜೆಚೂಟಿಯಲಿ ಉದರದ ಯಾತ್ರೆಯೆ ಮಹಾಯಾತ್ರೆ ಬೂಟಕತನದಲಿ ಅನೃತವನು ಪೇಳ್ವುದೇ ಮಂತ್ರ ೩
ಹೆಂಡತಿಯ ಕೊಂಡೆಯ ಮಾತುಗಳೆ ಉಪದೇಶಚಂಡಕೋಪವೆಂಬೋದಗ್ನಿಹೋತ್ರಪಂಡಿತನೆನಿಸುವುದೆ ಕುವಿದ್ಯ ಪಠನೆಗಳುಕಂಡವರ ಕೂಡೆ ವಾದಿಸುವುದೆ ತರ್ಕವಯ್ಯ ೪
ಓದಿದೆನು ಎಲ್ಲಣ್ಣ ಕಲ್ಲಣ್ಣ ಎನುತಲಿಸ್ವಾಧ್ಯಾಯವು ಎನಗೆ ಪಗಡೆ ಪಂಜಿಸಾಧಿಸಿ ಈ ಪರಿಯ ಧನವನ್ನು ಕೂಡ್ಹಾಕಿಮೋದಿ ಹಯವದನ ನಾ ನಿನ್ನ ಮರೆತೆ ೫

 

೨೯೭
ಸಾಕು ಸಡಗರವ ಬಿಟ್ಟು ಹರಿಯ ನೆನೆ ಬೇಗ
ನೂಕು ಭವದ ಬೇಸರ ದುಷ್ಕರ್ಮವನೀಗ ಪ.
ವೇದವ ಗಿರಿಯ ಧರೆಯನುದ್ಧರಿಸಿದವನ್ಯಾರು
ಬಾಧಿಪ ಖಳನುದರ ಸೀಳ್ದಗೆ ಸರಿದೋರು
ಪಾದನಖದಿ ಬೊಮ್ಮಾಂಡವನೊಡೆದನ ಸಾರು
ಕ್ರೋಧದಿ ನೃಪರನು ಕೊಂದವನ ಮಹಿಮೆಯ ಬೀರು ೧
ಸೇತುವೆಗಟ್ಟಿದ ರಾಮನಿಂದಿಷ್ಟವ ಬೇಡು
ಭೂತರುಣಿಗೆ ಸುಖವಿತ್ತನ ಪೂಜೆಯ ಮಾಡು
ಖ್ಯಾತ ದಿಗಂಬರದೇವನ ಕುಶಲವ ನೋಡು
ಭೀತಿಯ ಬಿಡುತಲಿ ಭಜನದಿ ಲೋಲ್ಯಾಡು ೨
ಅನುದಿನ ಪೊಕ್ಕು ನೀ ಸಾರಿ [ಸಜ್ಜನರೆಡೆಗೆ]
ಮನೆಮನೆವಾರ್ತೆಯ ಬಿಟ್ಟು ಧೇನಿಸುವುದು ಗಳಿಗೆ
ಕನಸಿನೊಳಾದರು ಪೋಗದಿರಧಮರ ಬಳಿಗೆ ಗು-
ಣನಿಧಿ ಹಯವದನನ ನಿಲಿಸಿಕೊ ಮನದೊಳಗೆ ೩

 

೧೯
ಸಾರಿದವರನು ಹೊರೆವ ಧೀರನಿವನಾಗ್ನೀರೆ ನಂಬು ಹಯವದನನುದಾರ ಶ್ರೀಮಂತೂರ ಹರಿಯ ಪ.
ಲೆಕ್ಕವಿಲ್ಲದೆ ನಿಗಮವರಸಿದಿಕ್ಕುಕಾಣದೆ ಧಾವತಿಗೊಳಲುಸೊಕ್ಕಿದ ವಜ್ರ ವಧುಗಳಲ್ಲಿವಾಕ್ಯಕೆ ತನ್ನ ನಿಜವ ತೋರನೆ ೧
ಅಸುರ ಭಟರ ನಿಶಿತ ಶರಕೆಪೆಸರುಗೊಳ್ಳದ ಗೋಪಸತಿಯರಶಶಿಮುಖಿಯರ ನಖದ ಕೊನೆಗೆವಶವ ಮಾಡನೆ ರಸಿಕರರಸ ೨
ಮಲ್ಲರ ಬಲುಭುಜದ ಕುಶಲದಲ್ಲಿ ಸಿಲುಕದದ್ಭುತಮಹಿಮಚೆಲ್ವ ಗೋಪಿಯರಪ್ಪಲು ಕರ-ಪಲ್ಲವದೊಳಾದುದಿಲ್ಲವೆ ೩

 

೨೧೪
ಸಾರಿದೆನೊ ನಿನ್ನ ವೆಂಕಟರನ್ನ ಪ.
ನೀರಜನಯನನೆ ನಿರ್ಮಲಗುಣಪೂರ್ಣ ಅ.ಪ.
ಅನಾಥನು ನಾನು ಎನಗೆ ಬಂಧು ನೀನುನಿನ್ನವನೆಂದು ನೋಡೊ ನೀನಾಗಿ ದಯಮಾಡೊ ೧
ಎನ್ನ ಕುಂದುಗಳನ್ನು ಎಣಿಸಲಾಗದೊ ದೇವಪನ್ನಗಾದ್ರಿವಾಸ ನೀನೆ ನಿರ್ದೋಷ ೨
ದೇಶದೇಶದವರ ಪೊರೆವಂತೆ ಪೊರೆಯೆನ್ನಶೇಷಾಚಲಘನ್ನ ಶ್ರೀಶ ಹಯವದನ ೩

 

೧೩೫
ಉಗಾಭೋಗ
ಹನುಮ ಭೀಮ ಮಧ್ವಮುನಿರಾಯ
ಗುಣಧಾಮ ಹರಿಪಾದ ಸೇವೆಯೊಳಧಿಕ ಪ್ರೇಮ
ಆಂಜನೇ ವರಪುತ್ರ ಅಕಳಂಕ ಚರಿತ್ರ
ಸಂಜೀವಗಿರಿಧರನೆ ಸಾಧುವರನೆ
ಸೀತೆಗುಂಗುರವಿತ್ತು ಪ್ರೀತಿಪಡಿಸಿದ ಹನುಮ ರಾಮದೂತನೆಂದು ಎನಿಸಿಕೊಂಡಿಶರಣು ಶರಣೆಂಬೆ ನಾ ನಿನ್ನ ಚರಣಗಳಿಗೆ ದುಷ್ಟಸಂಹಾರ ಭಕ್ತರುದ್ಧಾರ ಹಯವದನದೂತ ದುರಿತ ದೂರ

ಸರಸ್ವತಿ-ಭಾರತಿ-ತುಳಸಿ

 

೧೩೩
ಸುತ್ತಲು ಕಾಣೆನು ಪಿರಿಯ ಸುಖಮುನಿಗೆ ಸರಿಯನೋಡಿವನ ಪರಿಯ ಚಿತ್ತಜನ ಪೆತ್ತ ಹರಿಯಭಕ್ತನಿವನತಿ ಶಕ್ತನರಿಯ ಪ .
ವಿಷಯಂಗಳ ತೊರೆದ ವಿಮಲ ಶಾಸ್ತ್ರದಿ ಮೆರೆದಅಸದುಕ್ತಿಯ ಜರೆದ ಅಹಿತರೆಲ್ಲರ ಮುರಿದಋಷಿ ಇವ ನಮ್ಮ ಪೊರೆದ ರಸಿಕರರ್ಥಿಯ ಕರೆದಹೃಷೀಕೇಶಗೆ ವರದ ಪಿರಿಯ ದೈವನೆಂದೊರೆದ ೧
ಹಿಂದೆ ಹನುಮಂತನಾದ ಹೀನರಾವಣನ್ನ ಪುರದಮಂದಿಯನೆಲ್ಲರ ಸದೆದ ಮನೆಯ ತನ್ನ ಬಾಲದಮಂದ ವಹ್ನಿಯಿಂದುರುಪಿದ ಮರಗಳ ಚೆಂದದಿ ಕೆಡಹಿದಇಂದಿರೆಗೆ ರಾಮನುಡಿದ ಇಷ್ಟವಾರ್ತೆಯ ಪೇಳಿದ ೨
ಭೀಮನಾಗಿ ಕಲಿಯ ಗೆದ್ದ ಭೀತ ದುಃಶ್ಯಾಸನ್ನನೊದ್ದತಾಮಸ ಮಾಗಧನ ಸೀಳ್ದ ತನ್ನ ನಂಬಿದವರನಾಳ್ದಸ್ವಾಮಿ ಹಯವದನನಿರ್ದ ಸೀಮೆಯರ್ತಿಯ ಬಿಡಿಸಿಬಾಳ್ದಆ ಮಹಾ ಭುಜಬಲನೆ ಮಧ್ವಾಚಾರ್ಯನೆಂಬುದು ನಿಗಮಸಿದ್ಧ ೩

 

೨೬೬
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ
ಸುವ್ವಿ ಸುವ್ವಿ ನಮ್ಮ ಭೂರಮಣಗೆ ಸುವ್ವಿ
ಸುವ್ವಿ ಎಂದು ಪಾಡಿ ಸಜ್ಜನರೆಲ್ಲ ಕೇಳಿ ಪ.
ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ
ವರ ವಾಣಿರಮಣಗೆ ಶರಣೆಂಬೆ ಸುವ್ವಿ
ವರ ವಾಣಿರಮಣಗೆ ಶರಣೆಂದು ಪೇಳಿದ
ಗುರುವಾದಿರಾಜೇಂದ್ರನ ಕೃತಿಯೆಂದು ಸುವ್ವಿ ೧
¥ಕ್ಕಿವಾಹನ್ನ ಜಗಕ್ಕೆ ಮೋಹನ್ನ
ರಕ್ಕಸದಾಹನ್ನನಿವ ಸುವ್ವಿ
ರಕ್ಕಸದಾಹನ್ನನಿವ ತನ್ನ ಮರೆ-
ಹೊಕ್ಕರ ಕಾಯ್ವ ಪ್ರಸನ್ನನಿವ ಸುವ್ವಿ ೨
ಯಶೋದೆಯ ಕಂದ ತನ್ನ ವಿಷವನುಣ್ಣೆಂದ
ಕರ್ಕಶದ ಪೂತನಿಯ ಶಿಶುವಾಗಿ ಸುವ್ವಿ
ಕರ್ಕಶದ ಪೂತನಿಯ ಶಿಶುವಾಗಿ ಕೊಂದ ನಮ್ಮ
ಎಸೆವ ಗೋವಿಂದ ಪಾಲಿಸ ಬಂದ ಸುವ್ವಿ ೩
ಶಕಟಾಸುರನ್ನ ಮೆಟ್ಟಿ ಕೊಂದ ಬಲು
ವಿಕಟ ದೈತ್ಯನ್ನ ಕೊರಲೆತ್ತಿ ಸುವ್ವಿ
ವಿಕಟದೈತ್ಯನ್ನ ಕೊರಲೆತ್ತಿ ಕೊಂದು ಸರ್ಪನ ಮ-
ಸ್ತಕದಮೇಲೆ ನಲಿವುತ ನಿಂದ ಸುವ್ವಿ೪
ಕರುಗಳ ಕಣ್ಣಿಯ ಬಿಡುವಾಗ ನಾರಿಯರೆಲ್ಲರು
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುವ್ವಿ
ಪೊರವಡಲು ತಾ ಪೊಕ್ಕು ಪಾಲ್ಮೊಸರನೆ ಸುರಿದು
ಅವರ್ಬರಲು ಬೆಣ್ಣೆಯ ಕೊಂಡೋಡುವ ಸುವ್ವಿ ೫
ಮತ್ತಿಯ ಮರಗಳ ಕಿತ್ತುವಾಗ ಅಲ್ಲಿ
ಭೃತ್ಯರಿಗೊಲಿದು ವರವಿತ್ತ ಸುವ್ವಿ
ಭೃತ್ಯರಿಗೊಲಿದು ವರವಿತ್ತ ತನ್ನ
ಮಿತ್ರಜನಕಾಗಿ ಗಿರಿಯೆತ್ತಿದನೆ ಸುವ್ವಿ ೬
ವೃಂದಾವನದಿ ನಿಂದು ಚಂದದಿ ನಲಿವಾಗ ತನ್ನ
[ಕೊಂದಪೆ]ನೆಂದು ಬಂದ ಬಕನ ಸುವ್ವಿ
[ಕೊಂದಪೆ]ನೆಂದು ಬಂದ ಬಕನ ಸೀಳಿ ಪುಲ್ಲಂದದಿ
ಕೊಂದು ಬಿಸುಟಾನೆ ಸುವ್ವಿ ೭
ಕಲ್ಪತರುವಂತೆ ನಮ್ಮ ತನ್ನಧರಿಂದ
ಕೊಳಲನೂದುವ ಚೆಲುವಗೆ ಸುವ್ವಿ
ಕೊಳಲನೂದುವ ಚೆಲುವ ಗಾನಲೋಲ ಗೋ-
ಪಾಲಕೃಷ್ಣನಿಗೆ ಶರಣೆಂಬೆ ಸುವ್ವಿ ೮
ರಂಗ ರಾಸಕ್ರೀಡೆಯೆಂಬ ಶೃಂಗಾರರಸ ಬಸಿವ
ಮಂಗಳ ವಿಲಾಸವನು [ರಚಿಸಿದ]ಸುವ್ವಿ
ಮಂಗಳ ವಿಲಾಸವನು ರಚಿಸಿದಾತನ ಕಂಡು ದೇ
ವಾಂಗನೆಯರೆಲ್ಲರು ತನುವ ಮರೆತರು ಸುವ್ವಿ ೯
ಮಧುರೆಗೆ ಪೋಗಿ ಮಲ್ಲರಸುವ ನೀಗಿ
ಮದಾಂಧ ಮಾವನ್ನ ಮಡುಹಿದ ಸುವ್ವಿ
ಮದಾಂಧ ಮಾವನ್ನ ಮಡುಹಿದ ಶ್ರೀಕೃಷ್ಣ
ಮುದದಿ ತನ್ನವರ ಮುದ್ದಿಸಿದ ಸುವ್ವಿ ೧೦
ಧರ್ಮವ ಬಿಡಬೇಡ ದುಷ್ಕರ್ಮ ಮಾಡಬೇಡ
ದುರ್ಮನವ ಬಿಡದೆ ಹರಿಯಲಿಡು ಸುವ್ವಿ
ದುರ್ಮನವ ಬಿಡದೆ ಹರಿಯಲಿಡು ಮನವ
ಕಾಮಿನಿಯೊಳಾಡಿ ಕೆಡಬೇಡ ಸುವ್ವಿ ೧೧
ದುರುಳರ ನೋಡಿ ದೂರಕ್ಕೋಡು ಹರಿ-
ಶರಣಡಿಗೆ ಪೊಡಮಡು ಸುವ್ವಿ
ಶರಣರಡಿಗೆ ಪೊಡಮಡು ಶ್ರೀಕೃಷ್ಣನ ಸು-
ಚರಿತವ ಪಾಡುವರೊಳಗಾಡು ಸುವ್ವಿ ೧೨
ಏರಲರಿಯದವ ಮರನೇರಿ ಬಿದ್ದು ಸಾವಂತೆ
ನೀರ ಮೀನುಗಳು ಕರಗುವಂತೆ ಸುವ್ವಿ
ನೀರ ಮೀನುಗಳು ಕರಗುವಂತೆ ಮನುಜ ನೀ
ಬಾರದ ಭಾಗ್ಯಕ್ಕೆ ಹೋರಬೇಡ ಸುವ್ವಿ ೧೩
ಹಿಂದೆ ಪುಣ್ಯದ ಬೀಜವ ಕುಂದದೆ ಬಿತ್ತಿದರೆ
ಇಂದು[ಬಾಹದೈಶ್ವರ್ಯ ಮುಂದಿಪ್ಪೋದು] ಸುವ್ವಿ
ಇಂದು [ಬಾಹದೈಶ್ವರ್ಯ ಮುಂದಿಪ್ಪೋದು] ಬರಿದೆ ನೀ
ನೊಂದು ವಿಧಿಯ ಬೈದರೆ ಎಂದೆಂದು ಕೆಡುವೆ ಸುವ್ವಿ ೧೪
ಪರಸತಿಯ ಬಯಸಿ ದುರುಳ ಕೀಚಕ ಕೆಟ್ಟ
ಪರಧನಕೆ ಮರುಳಾಗಿ ಕುರುರಾಯ ಸುವ್ವಿ
ಪರಧನಕೆ ಮರುಳಾಗಿ ಕುರುರಾಯ ಕೆಟ್ಟನೆಂದು
ಒರೆವ ಭಾರತವ ನಿರುತ ಕೇಳು ಸುವ್ವಿ ೧೫
ವಾದಿಯೂ ಹರಿಯಾದ ಪ್ರತಿವಾದಿಯೂ ಹರಿಯಾದ
ಭೇದವಿಲ್ಲವೆಂಬ ಮತದಲ್ಲಿ ಸುವ್ವಿ
ಭೇದವಿಲ್ಲವೆಂಬ ಮತದಲ್ಲಿ ತಾನೊಬ್ಬನೇ ಕಾದಿ
ಗೆದ್ದಾನೆಂತು ಬಿದ್ದಾನೆಂತು ಸುವ್ವಿ ೧೬
ಎಲ್ಲ ಒಂದಾಂದರೆ ಶಾಲ್ಯಾನ್ನನುಂಬುವರು
ಪುಲ್ಲನ್ಯಾಕೆ ಮೆದ್ದು ಬದುಕರು ಸುವ್ವಿ
ಪುಲ್ಲನ್ಯಾಕೆ ಮೆದ್ದು ಬದುಕರು ಸ್ಥಳಚರರು
ಜಲದೊಳು ಚರಿಸೆ ಅಳುವದ್ಯಾಕೆ ಸುವ್ವಿ ೧೭
ವರ್ತಿಯ ಸಂಸಾರ ವ್ಯವಹಾರಕ್ಕೀಗ ಸ-
ರ್ವತ್ರ ಜೀವ ಭೇದವುಂಟೆಂಬುವಗೆ ಸುವ್ವಿ ಸ-
ರ್ವತ್ರ ಜೀವ ಭೇದವುಂಟೆಂಬುವಗೆ ಭೇದ
ಸತ್ಯವಾದರೈಕ್ಯ ಎತ್ತಿಹೋದು ಸುವ್ವಿ ೧೮
ಅತ್ತೆ ಸೊಸೆಯರಿದ್ದಾಗ ಮನೆಯೊಳು ಮತ್ಸರವು
ಕತ್ತೆನಾಯಿಗಳಂತೇಕೆ ಬೆರಸರು ಸುವ್ವಿ
ಕತ್ತೆನಾಯಿಗಳಂತೇಕೆ ಬೆರಸರು ಅದರಿಂದ
ಪ್ರತ್ಯೇಕ ಜೀವರ ಇರವು ಸುವ್ವಿ ೧೯
ಮಿಥ್ಯಾ ಭೇದಾದರೆ ಅದು ಶುಕ್ತಿರೂಪದಂತೆ ತ-
ನ್ನರ್ಥವ ತಾ ಕಾಣಲರಿಯನು ಸುವ್ವಿ ತ-
ನ್ನರ್ಥವ ತಾ ಕಾಣಲರಿಯನು ಅದರಿಂದ ನಾ-
ವೆತ್ತಿದ ದೂಷಣೆಗೆ ಉತ್ತರವಿಲ್ಲ ಸುವ್ವಿ ೨೦
ಸತ್ಯವಾದ ಬೊಮ್ಮ ಮಿಥ್ಯವಲ್ಲವೋ ನಿನ್ನ
ಮಿಥ್ಯ ಶಶಶೃಂಗ ಸತ್ಯವಲ್ಲ ಸುವ್ವಿ
ಮಿಥ್ಯಶ ಶಶೃಂಗ ಸತ್ಯವಲ್ಲ ಶೃಂಗ್ಯೆರಡು ಜ-
ಗತ್ತಿನೊಳು ಕೂಡವು ಕುಯುಕ್ತಿಯ ನಿನಗಾವ ಕಲಿಸಿದ ಸುವ್ವಿ ೨೧
ಸತ್ತ ಪೆಣನುಂಟು ಸಾಯದ ವಸ್ತುಂಟು
ಸತ್ತು ಸಾಯದ ಮತ್ರ್ಯರಿಲ್ಲ ಸುವ್ವಿ
ಸತ್ತು ಸಾಯದ ಮತ್ರ್ಯರಿಲ್ಲ ಮತ್ರ್ಯನಾಗಿ ನಿನ್ನ
[ಮಿಥ್ಯಾವಾದ]ವೆಂತು ನಿತ್ಯವಹುದು ಸುವ್ವಿ ೨೨
ಸತ್ಯವೆಂದರುಂಟು ಮಿಥ್ಯವೆಂದರಿಲ್ಲ ಎಂ-
ಬರ್ಥ ತಾ ಕೂಡಲರಿಯದು ಸುವ್ವಿ ಎಂ-
ಬರ್ಥ ತಾ ಕೂಡಲರಿಯದು ಅದರಿಂದ
ಅರ್ಥವಪೇಳೆ ಮಿಥ್ಯಕೆ ನಾಮಾಂತರ ಸುವ್ವಿ೨೩
ಭರ್ತೃಯಿಲ್ಲದವಳ ಮುತ್ತೈದೆಯೆಂಬಂತೆ ನಿನ್ನ
ಮಿಥ್ಯಜಗಕಿಟ್ಟ ಸತ್ಯನಾಮ ಸುವ್ವಿ
ಮಿಥ್ಯಜಗಕಿಟ್ಟ ಸತ್ಯನಾಮ ನಿನ್ನ
ಯುಕ್ತಿಶೂನ್ಯನೆಂದು ಸುತ್ತ ನಗುತಿಪ್ಪುದು ಸುವ್ವಿ ೨೪
ಇಲ್ಲ ಜಗವೆಂಬುದನು ಈಗ ಕಂಡದ ಕಾರಣ
ಇಲ್ಲವಾತನ ವಾದಕ್ಕೆ ಪೊಗಳಲರಿಯದು ಸುವ್ವಿ
ಇಲ್ಲವಾತನ ವಾದಕ್ಕೆ ಪೊಗಳಲರಿಯದ ಹೊಲೆಯನ
[ಎಲ್ಲರರಿಯದಿದ್ದರೆ] ಹೊಲೆಜಾತಿ ಹೋಕ ಸುವ್ವಿ ೨೫
ಗಿರಿಯ ಪಿರಿಯ ಗುಹೆಯೊಳು ದಳ್ಳುರಿಯ ಬೇಗೆಗೆ ಬೆಂದ
ಕರಿಯನರಿಯದ ಕಾರಣ ಮರನ ಮುರಿವುದೆ ಸುವ್ವಿ
ಕರಿಯನರಿಯದ ಕಾರಣ ಮರನ ಮುರಿವುದೆ ವಾದಿಯೀ
ಪರಿಯಲಿ ನಿನ್ನ ಮಿಥ್ಯದಿ ಕಾರ್ಯವಾಗದು ಸುವ್ವಿ ೨೬
ಹಳೆಯ ಮಲವೆಲ್ಲವು ಮಲವೆ ಅಲ್ಲದೆ ಮತ್ತೆ
ಜಲಜಾಕ್ಷಿಯರ ಸಂಗಕ್ಕೆ ಪರಿಮಳವೀವುದೆ ಸುವ್ವಿ
ಜಲಜಾಕ್ಷಿ ್ಷಯರ ಸಂಗಕ್ಕೆ ಪರಿಮಳವೀವುದೆ ಶೂಲದಿ
ಸತ್ತ[ಪೆಣನು] ಸುಳಿವುತಿಪ್ಪುದೆ ಸುವ್ವಿ ೨೭
ನಾಸ್ತಿಯೆಂಬ ವಸ್ತುವ ನಾಸ್ತಿಯೆಂದರಿಯದೆ
ಆಸ್ತಿಯೆಂದು ಕಂಡರೆ ಅತಿಮೂರ್ಖ ಸುವ್ವಿ
ಆಸ್ತಿಯೆಂದು ಕಂಡರೆ ಅತಿಮೂರ್ಖ ಅಕಟಕಟ ಜ-
ಗತ್ತಿನ ಮಹಂತರ ಉನ್ಮತ್ತರ ಮಾಡಿದ ಸುವ್ವಿ ೨೮
ಏಕಾಕಿ ನ ರಮತೆಯೆಂಬ ವೇದವಾಕ್ಯ ವಿ-
ವೇಕಿಗಳೆಲ್ಲ ಬಲ್ಲರು ಸುವ್ವಿ ವಿ-
ವೇಕಿಗಳೆಲ್ಲ ಬಲ್ಲರು ಅದರಿಂದ ನಿನ್ನ ಮುಕ್ತಿ
ಏಕಾಕಿಯಾದರೆ ಶೋಕಕ್ಕೊಳಗಾದೆ ಸುವ್ವಿ ೨೯
ಲೋಕದೊಳು ಹಾಳೂರ ಹಂದಿಯ ಬೇಸರದೆ ನೋಡೊ ನಿ-
ನ್ನ ಕೈವಲ್ಯದ ಘಸಣೆ ಸಾಕು ಸಾಕು ಸುವ್ವಿ ನಿ-
ನ್ನ ಕೈವಲ್ಯದ ಘಸಣೆ ಸಾಕು ಸಾಕು ನಮ್ಮ ಶ್ರೀ
ವೈಕುಂಠದ ವಾಸನೆ ಲೇಸು ಸುವ್ವಿ ೩೦
ಅಲ್ಲಿ ಸಹಬ್ರಹ್ಮಣಾ ಸರ್ವಕ ಮಂಗಳೆಂಬಾರಂತೆ
ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ಸುವ್ವಿ
ಅಲ್ಲಿ ಸರ್ವೇನಂದತಿ ಎಂಬ ಶ್ರುತಿಯು ನೀ ಕೇಳು
ಎಲ್ಲ ಮತ್ರ್ಯರಲ್ಲಿ ಹರಿಯನುವ್ರತರಂತೆ ಸುವ್ವಿ ೩೧
ಅಲ್ಲಿ ನರ ನಾರಿಯರು ಚಿನುಮಯ ಚೆಲುವರಂತೆ
ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಸುವ್ವಿ
ಅಲ್ಲಿ ಚತುರ್ಬಾಹುಗಳಾಗಿಪ್ಪರಂತೆ ಅವರ ಶ್ರೀ-
ವಲ್ಲಭ ಲಾಲಿಸಿ ಪಾಲಿಸುವನಚಿಂತೆ ಸುವ್ವಿ ೩೨
ಅನಂತಾಸನವೆಂದು ಮತ್ತೊಂದು ನಗರ ಕೃಷ್ಣಗೆ
ಘನೋದಕದ ಮೇಲೆ ಮಿಂಚುತಿಪ್ಪುದು ಸುವ್ವಿ
ಘನೋದಕದ ಮೇಲೆ ಮಿಂಚುತಿಪ್ಪುದು ಅಲ್ಲಿ
ಮನೆ ಮನೆಯಲಿ ಮುಕ್ತರ ಸಂದಣಿ ಸುವ್ವಿ೩೪
ಇಂತು ಹಯವದನ ನಿಶ್ಚಿಂತ ಜಗತ್ಕಾಂತ
ಸಂತರನು ಸದಾ ಸಲಹುವ ಸುವ್ವಿ
ಸಂತರನು ಸದಾ ಸಲಹುವ ಮಾರಾಂತರ ಕೃ-
ತಾಂತನ ಬಳಿಗೆ ಕಳುಹುವ ಸುವ್ವಿ ೩೫

 

೨೬೭
ಸುವ್ವಿ ಸುವ್ವಿ ನಮ್ಮ ಶ್ರೀರಮಣಗೆ ಸುವ್ವಿ
ಸುವ್ವಿ ಸುವ್ವಿ ನಮ್ಮ ಶ್ರೀರಮಣನೆನೆಸಿದ
ವಿನೋದಿ ಹರಿ ಸರ್ವೋತ್ತಮಗೆ ಸುವ್ವಿಪ.
ಹರಿಗೆ ಶರಣೆಂಬೆ ಸಿರಿಗೆ ಶರಣೆಂಬೆ
ಪರಮೇಷ್ಠಿ ಗುರುಗಳಿಗೆ ಶರಣೆಂಬೆ ಸುವ್ವಿ
ಪರಮೇಷ್ಠಿ ಗುರುಗಳಿಗೆ ಹರಿ ಪರನೆಂದು ಪೇಳ್ವ
ಶ್ರೀಮದಾನಂದತೀರ್ಥರಿಗೆ ಸಾಸೀರ ಶರಣೆಂಬೆ ೧
ಆ ಹರಿ ಪುರುಷಾಕಾರ ವಾಸುದೇವ ಪರ
ಸಂಕರ್ಷಣ ಅತಿಕ್ರೂರಸಂಹಾರಕಾರ ಸುವ್ವಿ
ಸಂಕರ್ಷಣ ಅತಿಕ್ರೂರಸಂಹಾರಕಾರ ಪ್ರದ್ಯುಮ್ನ
ಅನಿರುದ್ಧಗೆ ಬೊಮ್ಮ ಕುಮಾರನಂತೆ ಸುವ್ವಿ ೨
ಮತ್ಸ್ಯ ಕೂರ್ಮರೂಪ ಸೂಕರ ನರಹರಿ ಕಾಯ
ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣ ಸುವ್ವಿ
ವಾಮನ ಭಾರ್ಗವ ರಾಮನೆನಿಪ ಭೂಪ ಕೃಷ್ಣನಾದ
ಬೌದ್ಧ ಕಲ್ಕಿ ರೂಪ ಪ್ರಸಿದ್ಧವಂತೆ ಸುವ್ವಿ೩
ಯಾವಲ್ಲಿ ಮುಖ್ಯಪ್ರಾಣ ಆವಲ್ಲಿ ನಾರಾಯಣ
ಇವರಿಬ್ಬರ ಗುಣವನರಿಯದವನೆ ಸುವ್ವಿ
ಇವರಿಬ್ಬರ ಗುಣವ ಅರಿಯದವನೆ ಗೌಣನೆಂಬರ್ಥದಲಿ
ಬ್ರಹ್ಮಸೂತ್ರ [ದಂಬಂತೆ] ಸುವ್ವಿ೪
ಆತ್ಮನು ಅತಂತ್ರ ಪರಮಾತ್ಮನು ಸ್ವತಂತ್ರ ದುಃ-
ಖಾತ್ಮನು ಜೀವಾತ್ಮ ಪರಮಾತ್ಮನಲ್ಲ ಸುವ್ವಿ ದುಃ-
ಖಾತ್ಮನು ಜೀವಾತ್ಮ ಪರಮಾತ್ಮನಲ್ಲ ವಾದಿ
ಜ್ಞಾನಾನಂದಕ ಹರಿಗೆ ಸಮರಿಲ್ಲ ಸುವ್ವಿ ೫
ಜಡದಲ್ಲಿ ಜೀವಾತ್ಮ ಜಡ ಜೀವರಲಿ ಪರಮಾತ್ಮ
ಕ್ರೀಡೆಯಿಂದ ಏಕಾತ್ಮ ಬಿಡದಿಹ ಸುವ್ವಿ
ಕ್ರೀಡೆಯಿಂದ ಏಕಾತ್ಮ ಬಿಡದಿಹುದು ವಾದಿ ದ್ವಾಸುಪರ್ಣ
ವೆಂಬೋ ಶ್ರುತಿ ಲೇಸು ಲೇಸು ಸುವ್ವಿ ೬
ಜಡ ಹರಿಗಳ ಭೇದ ಜೀವ ಜೀವಕೆ ಭೇದ
ಜೀವೇಶ್ವರಗೆ ಭೇದ ಶರೀರ ಭೇದ ಸುವ್ವಿ
ಜಡ ಜೀವರಿಗೆ ಭೇದ ಶರೀರ ಭೇದ [ವೆನ್ನಿ]
ಜಡಜೀವ ಭೇದ ಪಂಚಭೇದಗಳು ಸುವ್ವಿ ೭
ಪಂಚಭೇದಗಳೆಂಬ ಪ್ರಪಂಚದಲಿ ಸಕಲ
ವೈಕುಂಠದೊಳಗಿನ ವಿವರ ಒಂದುಂಟು ಕೇಳು ಸುವ್ವಿ
ವೈಕುಂಠದೊಳಗಿನ ವಿವರ ಒಂದುಂಟು ಕೇಳು ವಾದಿ
ಸಾಕು ಸಾಕು ನಾಲ್ಕುವಿಧ ಮುಕ್ತಿಯುಂಟಲ್ಲಿ ಸುವ್ವಿ ೮
ಶ್ರವಣಕೀರ್ತನ ಹರಿಸ್ಮರಣೆ ಸೇವನ ಪೂಜನ ವಂದನ
ಹರಿದಾಸ್ಯ ಸಖ್ಯಮಾತ್ಮನಿವೇದನೆ ಸುವ್ವಿ
[ಹರಿದಾಸ್ಯ ಸಖ್ಯಮಾತ್ಮ ನಿವೇದನೆಗಳು ತಮ್ಮ]
ಅರ್ಥ ಕೂಡೊಂಬತ್ತುಭಕ್ತಿ ಸತ್ಯ ಉಂಟು ಸುವ್ವಿ ೯
ಜೀವೇಶ[ನೊಂದು] ಹರಿನಿರ್ಗುಣನೆಂದು ಅಪೂರ್ಣ
ಗುಣನೆಂದು ಬ್ರಹ್ಮಾದಿಗಳೊಂದು ಸುವ್ವಿ
ಬ್ರಹ್ಮಾದಿಗಳೊಂದು ಸಮರಧಿಕಾರ ಅವತಾರ
ಎಲ್ಲ ಒಂದೆ ಎಂಬುವಗೆ ಸುವ್ವಿ ೧೦
ಅವತಾರವೆಲ್ಲ ಅಂಶವತಾರವೆಂದ ಹರಿಭಕ್ತರಲ್ಲಿ
ಕೋಪ ಸುವ್ಯಕ್ತವಾಯಿತು ಸುವ್ವಿ
ಕೋಪ ಸುವ್ಯಕ್ತವಾಯಿತು ವಾದಿ ಹರಿಭಕ್ತರೊಡನೆ
ಕೋಪಂಗಳು ವ್ಯರ್ಥವಾಯಿತು ಸುವ್ವಿ ೧೧
ಪಂಚಮಹಾಭೂತ ದೇಹ ಸಂಚಯರೆಲ್ಲ
ಸಂಚಿತಾದಾ ಕರ್ಮಗಳ ಸಂಚಯರೆಲ್ಲ ಸುವ್ವಿ
ಸಂಚಿತಾದಾ ಕರ್ಮಗಳ ಸಂಚಯರೆಲ್ಲ ಮುಕ್ತರ
ದೇಹವೆಲ್ಲ ಸುಖದ ಸಂದೋಹವಂತೆ ಸುವ್ವಿ ೧೨
ಶರೀರದಲ್ಲಿ ಎಪ್ಪತ್ತೆರಡು ಸಾವಿರ ನಾಡಿಗಳಲ್ಲಿ
ಪಿರಿಯವಾದವು[ನೂರೊಂದು] ಐದು ಸುವ್ವಿ
ಪಿರಿಯವಾದವು[ನೂರೊಂದು] ಐದು ಮೂರು ಒಂದು ಈ
ಪರಿಯಾಗಿ ಇಪ್ಪುವಂತೆ ಸುವ್ವಿ ೧೩
ಇಳಾನಾಡಿ ಸಾವಿರ ಸೀಳುಮಾಡಿ ಅದರೊಳು
ಸೀಳುಮಾಡಿದರೇಳು ವಿರಳನಂತೆ ಸುವ್ವಿ
ಸೀಳುಮಾಡಿದರೇಳು ವಿರಳನಂತೆ ನಾಡಿಯಲ್ಲಿ
ರಕ್ತವರ್ಣನಾಗಿ ನಾರಾಯಣನಿಹ್ಯ ಸುವ್ವಿ ೧೪
ಒಂದುನಾಡೀ ಪೆಸರು ಸುಷುಮ್ನನಾಡಿಯೆಂಬರು
ಅದರಂತರ ಕಡೆಯಲಿ ರಂಧ್ರವಂತೆ ಸುವ್ವಿ
ಅದರಂತರ ಕಡೆಯಲಿ ರಂಧ್ರ್ರವಂತೆ ನಾಡಿಯಲಿ ಕಮಲ
ಮಧ್ಯದಲಿ ತಾ ವಿಮಲನಂತೆ ಸುವ್ವಿ ೧೫
ನಾಡಿ ಮೂಲದೊಳು ನಾಲ್ಕುದಳದ ಕಮಲವುಂಟು
[ನೀಲ]ವರ್ಣದಿಂದ ಸಂಪೂರ್ಣನಂತೆ ಸುವ್ವಿ
[ನೀಲ]ವರ್ಣದಿಂದ ಸಂಪೂರ್ಣ[ನೀಲವರ್ಣ
ಅನಿರುದ್ಧ] ನಲ್ಲಿ ತಾ ವಾಸನಂತೆ ಸುವ್ವಿ ೧೬
ಪೊಕ್ಕುಳಲಿ ಆರುದಳ ಇಕ್ಕ್ಕು ರೀತಿಯಿಂದಲೇಳು
[ಬಿಂಕನಾದ] ಸಂಕರ್ಷಣ ಮುಖ್ಯನಂತೆ ಸುವ್ವಿ
[ಬಿಂಕನಾದ ಸಂಕರ್ಷಣ] ಮುಖ್ಯನಂತೆ ಜೀವಗೆ
ಪಿಂಗಳ ವರ್ಣನಾಗಿ ಹಿಂಗದಿಹ ಸುವ್ವಿ ೧೭
ಇಡಾನಾಡಿ [ಉದೀಚಿ] ಪಿಂಗಳ ದಕ್ಷಿಣದಲಿ
ಪ್ರತೀಚಿ [ವಜ್ರಿಕೋ ಪೂರ್ವಾ ಅಂತೆ] ಸುವ್ವಿ
ಪ್ರತೀಚಿ ವಜ್ರಿಕೋದೀಚಿ ಬ್ರಹ್ಮನಾಡಿ ಸುತ್ತಾ
ಪಂಚನಾಡಿಗಳ ಪಂಚರೂಪಗಳೆ ಸುವ್ವಿ ೧೮
ಎಂಟುದಳ ಕೆಂಪು ಉಂಟು ಹೃದಯ ಕಮಲದಲಿ
ವೈಕುಂಠಪತಿ ಚತುರನ ಮಂಟಪವೆ ಸುವ್ವಿ
ವೈಕುಂಠಪತಿ ಚತುರನ ಮಂಟಪದ ಮಧ್ಯದಲಿ
ವಾಯು ಜೀವರಿಗೆ ಸಹಾಯನಂತೆ ಸುವ್ವಿ ೧೯
ಕೂದಲ ಕೊನೆಯ ಹತ್ತು ಸಾವಿರ ವಿಧವನೆಮಾಡಿ
ಜೀವ ಪರಿಮಾಣ ಒಂದೆ ಕಂಡ್ಯ ಸುವ್ವಿ
ಜೀವ ಪರಿಮಾಣ ಒಂದೆ ಕಂಡ್ಯ ಚತುರನ
ಅಂಗುಷ್ಟದಷ್ಟು ಜೀವ [ಅಂಶನಂತೆ] ಸುವ್ವಿ ೨೦
ಸ್ಥೂಲಾಂಗುಷ್ಠ ಪರಿಮಾಣ ಪ್ರಾಜ್ಞನಾದ ನಾರಾಯಣ
ಹೃದಯಕಮಲದ ಒಳಗೆ ವಿಮಲನಂತೆ ಸುವ್ವಿ
ಹೃದಯಕಮಲದ ಒಳಗೆ ವಿಮಲನಂತೆ [ಜೀವಂಗಾ
ರೂಪದಲಿ] ಹರಿ ತಾ ರಕ್ಷಿಪನಂತೆ ಸುವ್ವಿ ೨೧
ಹೃದಯಾಕಾಶದಲಿ ಪ್ರಾದೇಶ ಪರಿಮಾಣ
ಆದಿ ಪುರುಷನಿಹ್ಯ ಈ ವಿಧವಾಗಿ ಸುವ್ವಿ
ಆದಿ ಪುರುಷನಿಹ್ಯ ಈ ವಿಧವಾಗಿ ಜೀವಗೆ
ಗೃಹದೋಪಾದಿಯಲಿ ಹರಿ ರಕ್ಷಕನಂತೆ ಸುವ್ವಿ ೨೨
ಕಂಠದೇಶದಲಿ ಉಂಟು ತೈಜಸಮೂರ್ತಿ
ನಾಲ್ಕು ಕರ ಹತ್ತೊಂಬತ್ತು ಶಿರಗಳು ಸುವ್ವಿ
ನಾಲ್ಕು ಕರ ಹತ್ತೊಂಬತ್ತು ಶಿರಗಳು ಮಧ್ಯದಲ್ಲಿ
ಕರಿಮುಖ ಹಸ್ತಿಯಾಗಿಪ್ಪನಂತೆ ಸುವ್ವಿ ೨೩
ಕಿರುನಾಲಗೆಯಲ್ಲಿ ಎರಡುದಳ ಕಮಲ
ಅರವಿಂದ ಪದ್ಮದಲಿ ನಾರಾಯಣನಿಹ್ಯ ಸುವ್ವಿ
ಅರವಿಂದ ಪದ್ಮದಲಿ ನಾರಾಯಣನಿಹ್ಯ ಹರಿಯು
ರೂಪವೆಲ್ಲವಾಗಿ ಇಪ್ಪನಂತೆ ಸುವ್ವಿ ೨೪
ದಕ್ಷಿಣಾಕ್ಷಿಯಲಿ ಲಕ್ಷಣ ವಿಶ್ವಮೂರ್ತಿ ಶಿಕ್ಷಕನಾಗಿ
ಜೀವರ ವಂಶರಕ್ಷಕನಂತೆ ಸುವ್ವಿ
ಜೀವರ ವಂಶರಕ್ಷಕನನ್ನೆ [ಜಾಗರವ ಕಾಣಿಸೋನಷ್ಟೆ]
ವಾಣಿ ನಿಪುಣನಂತೆ ಸುವ್ವಿ ೨೫
ಈ ದೇವರು ಪ್ರಾಜ್ಞನಾದ ಹರಿಯ ಕೂಡಿ
ನಿದಾನಿಸಲು ಜೀವಂಗೆ ಸುಖತೇಜಸವು ಸುವ್ವಿ
ನಿದಾನಿಸಲು ಜೀವಂಗೆ ಸುಖತೇಜಸವು ಅನೇಕಾಗಿ
ತೈಜಸನಲ್ಲಿ ಸ್ವಪ್ನಭಾಗ್ಯ ಸುವ್ವಿ ೨೬
ಹುಬ್ಬುಗಳ ಮಧ್ಯದಲಿ ಶುಭ್ರ ನಾಲ್ಕುದಳ ಕಮಲ
ಒಬ್ಬ ನಾಥ ಅನಿರುದ್ಧ ನೀಲಾಭ್ರವರ್ಣ ಸುವ್ವಿ
ಒಬ್ಬ ನಾಥ ಅನಿರುದ್ಧ ನೀಲಾಭ್ರವರ್ಣನಾಗಿ ಹರಿ ಅಲ್ಲಿ
ಅದೃಶ್ಯವಾಗಿರುವನಂತೆ ಸುವ್ವಿ ೨೭
ಶಿರದಲ್ಲಿ ಶುಭ್ರ ಹನ್ನೆರಡುದಳ ಕಮಲ
ಅರುಣವರ್ಣನಾದ ನಾರಾಯಣನಿಹ್ಯ ಸುವ್ವಿ
ಅರುಣವರ್ಣನಾದ ನಾರಾಯಣನಿಹ್ಯ ಹರಿಯು
ಈ ಪರಿಯಲಿ ತಿಳಿದವರಧಿಕರಂತೆ ಸುವ್ವಿ ೨೮
ಬ್ರಹ್ಮಹತ್ಯ ಶಿರಸ್ಕಂಚ ಸ್ವರ್ಣಸ್ತೇಯ ಭುಜದ್ವಯಂ
ಸುರಾಪಾನ ಹೃದಾಯುಕ್ತಂ ಗುರುತಲ್ಪ ಸುವ್ವಿ
ಸುರಾಪಾನ ಹೃದಾಯುಕ್ತಂ ಗುರುತಲ್ಪ ಕಟಿದ್ವಯಂ
ತತ್ಸಂಯೋಗ ಪಾದ ಪಾಪರೂಪಗಳೆ ಸುವ್ವಿ೨೯
ಪಾತಕ ಪ್ರತ್ಯಂಗಗಳು ಉಪಪಾತಕ ರೋಮಂಗಳು
ಪಾಪಪುರುಷ ರಕ್ತನೇತ್ರ ನೀಲಪುರುಷ ಸುವ್ವಿ
ಪಾಪಪುರುಷ ರಕ್ತನೇತ್ರ ನೀಲಪುರುಷನಾಗಿ
ವಾಸ ವಾಮಕುಕ್ಷಿಯಲಿ ನ್ಯಾಸವಂತೆ ಸುವ್ವಿ ೩೦
ಪುರುಷ ಷೋಡಶನಾದ ಷಟ್ಕೋಣದಲ್ಲಿ ಪ್ರದ್ಯುಮ್ನನಿಹ್ಯ
ತ್ರಿಕೋಣದಲಿ ಧ್ಯಾನ ಸಂಕರ್ಷಣ ಕೊಡುವ ಸುವ್ವಿ
ತ್ರಿಕೋಣದಲಿ ಧ್ಯಾನ ಸಂಕರ್ಷಣ ಕೊಡುವ ದೇಹ
ಪವಿತ್ರ [ವಾಸುದೇವರಲ್ಲಿ ಸುವ್ವಿ]೩೧
ಹನ್ನೆರಡಂಗುಲಮೇಲೆ ಹನ್ನೆರಡುದಳ ಕಮಲ
[ಪ್ರಪನ್ನರಿಗೆ] ಮೋಕ್ಷ ಪ್ರಸನ್ನ ಕೊಡುವ ಸುವ್ವಿ
[ಪ್ರಪನ್ನರಿಗೆ] ಮೋಕ್ಷ ಪ್ರಸನ್ನ ಕೊಡುವ ತುರಿಯ
ಸಿತದಳದಲ್ಲಿ ನಿಧಾನಿಸಲು ಸುವ್ವಿ ೩೨
ಮುಖ್ಯಪ್ರಾಣನೆಂಬೊ ಗುರುವು ಹರಿಗೆ ಸಖ್ಯನಾದ
ಬಂದ ದುಃಖ ಪರಿಹರಿಸಿ ಸುಖಬಡಿಸುವ ಸುವ್ವಿ
ಬಂದ ದುಃಖ ಪರಿಹರಿಸಿ ಸುಖಬಡಿಸುವ
ಮಾರುತನು ಹನುಮ ಭೀಮಸೇನ ರೂಪಗಳು ಸುವ್ವಿ ೩೩
ಮೂರನೆ ಅವತಾರ ಆನಂದತೀರ್ಥರು
ವೀರವೈಷ್ಣವರಿಗೆ ಆದಿಗುರುಗಳು ಸುವ್ವಿ
ವೀರವೈಷ್ಣವರಿಗೆ ಆದಿಗುರುಗಳ ಪಾದ ನೆನೆದರೆ
ಘೋರ ಸಂಸಾರವನು ನೀಗಿಸುವನು ಸುವ್ವಿ ೩೪
ಘೋರ ಸಂಸಾರವನು ನೀಗಿಸುವ ಹಯವದನ ತನ್ನ
ಪಾದದ ಸಮೀಪದಲಿಟ್ಟು ಸಲಹುವ ಸುವ್ವಿ
ಪಾದದ ಸಮೀಪದಲಿಟ್ಟು ಸಲಹುವ ಹಯವದನ
ಖೇದಗಳ ಬಿಡಿಸಿ ರಕ್ಷಿಸುವ ಸುವ್ವಿ ೩೫

 

೨೧೫
ಸೇವಕನೆಲೊ ನಾನು ನಿನ್ನಯ ಪಾದಸೇವೆ ನೀಡೆಲೊ ನೀನು ಪ.
ಸೇವಕನೆಲೊ ನಾನು ಸೇವೆ ನೀಡೆಲೊ ನೀನುಕಾವದೇನೆಲೊ ಶ್ರೀವಧೂವರ ರಾವಣಾಂತಕ ರಕ್ಷಿಸೆನ್ನನುಗೋವರ್ಧನ ಗಿರಿಧರ ದೇವ ಗೋವುಗಳ ಕಾವಶ್ರೀಮಹಾನುಭಾವ ವರಗಳನೀವ ದೇವಶ್ರೀವಲ್ಲಭ ದಯಮಾಡೆನ್ನನುಈ ವ್ಯಾಳೆಗೆ ಇಂದಿರೆರಮಣ ಅ.ಪ.
ರಾಮ ದಶರಥನಂದನ ರಘುಕುಲಾಬ್ಧಿಸೋಮ ಸುಂದರವದನವಾಮನ ಪರಿಪೂರ್ಣಕಾಮ ಕೌಸಲ್ಯರಾಮಸ್ವಾಮಿ ಶ್ರೀರಂಗಧಾಮ ದೈತ್ಯವಿರಾಮಶ್ರೀಮದನಂತ ನಾಮಭೀಮ ಮುನಿಜನಸ್ತೋಮರಮ್ಯಗುಣಧಾಮ ರಣರಂಗಭೀಮಕೋಮಲಶ್ಯಾಮ ಹೇಸಾಮಜವರದ ನೀನನುದಿನಕಾಮಿತಫಲವನು ಕರುಣಿಸಿ ಕಾಯೊ ೧
ಶಂಕರ ಸುರಸೇವಿತ ಶೇಷಗರುಡಾ-ಲಂಕಾರ ಮಣಿಶೋಭಿತಪಂಕಜನಯನ ಮೀ-ನಾಂಕ ಜನಕ ಪಾದ-ಪಂಕಜಾಸನವಿನುತ ತಿರುಪತಿವೆಂಕಟ ಬಿರುದಾಂಕ ಜಯ ಜಯಶಂಖಚಕ್ರಗದೆ ಪಂಖ ಪಿಡಿದಕಳಂಕ ಚರಿತ ತಾ-ಟಂಕಗೊಲಿದ ನಿಶ್ಶಂಕಲಂಕಾಧಿಪರಿಪು ರಘುಪತಿಕಿಂಕರರಿಗೆ ಕಿಂಕರ ನಾನೆಲೊ ೨
ಮಂದರೋದ್ಧರ ಮಾಧವ ಮಧುಸೂಧನನಂದಮಂಗಳ ವಿಗ್ರಹಬಿಂದುಮಾಧವ ಶ್ರೀಮುಕುಂದ ಶ್ರೀಮದಾ-ನಂದ ವಂದಿತಾಮರವೃಂದ ಶ್ರುತಿಗಳ ತಂದ ತುರಗವನೇರಿ ಬಂದವೃಂದಾವನದೊಳಗಿಂದ ಯಶೋದೆಯಕಂದ ಹರಿಗೋ-ವಿಂದ ಶೇಷಗಿರಿಯಲಿ ನಿಂದಮಂದಾಕಿನಿ ಪಡೆದೆಲೊ ಧ್ರುವಗೊಲಿ-ದಂದದಿ ಎನಗೊಲಿಯೊ ಹಯವದನ ೩

 

೯೬
ಸೊಕ್ಕಿದ ಕಲಿ ಇಕ್ಕೊ ಶಿಕ್ಷಿಸು ಬೇಗ ಎಲೆಲೆರಕ್ಕಸಾಂತಕ ನಿನ್ನ ಪಕ್ಕದೊಳಿಟ್ಟು ರಕ್ಷಿಸೆನ್ನ ಪ.
ಅಚ್ಚುತಾನಂದ ಗೋವಿಂದ ಕಲಿ ಛಲದಿಂದನಿಚ್ಚಟದ ನಿನ್ನ ಭಕುತನ್ನ ಅನುದಿನ ಎನ್ನಬೆಚ್ಚಿ ಬೇಸರಿಸಿ ಕೆಡಿಸುವುದು ನಿನ್ನಹೆಚ್ಚಿಗೆಗದು ಸಾಕೆ ಸಚ್ಚರಿತ ಗುಣಭರಿತ ೧
ಕರಿಯ ಆನೆಗಳು ಪಿಡಿಯಲತಿಭರದಿಂದ ಬಂದುಚಕ್ರಧರ ಮಕರಿಯನೆ ತರಿದುಶರಣನ ನೀ ಪೊರೆದೆ ಗಡ ಮರೆಯೊಕ್ಕವರ ಕಾವಕರುಣಿ ಆ ತರುಣಿಗಕ್ಷಯಾಂಬರವ ಕುರುಸಭೆಯೊಳಿತ್ತೆ ೨
ಉತ್ತರೆಯ ಗರ್ಭದಲಿ ಸುತ್ತಸುಳಿವುತ್ತ ಹರ-ನಸ್ತ್ರವನು ನಿನ್ನಸ್ತ್ರದಿಂದ-ಲತ್ತತ್ತಲೇ ವತ್ತಿ ಚಿತ್ತಪರಾಕಿಲ್ಲದೆ ಪರೀ-ಕ್ಷಿತನ ಕಾಯಿದೆ ಭಕ್ತವತ್ಸಲ ಪಾಥರ್ಮಿತ್ರ ಹಯವದನ ೩

 

೨೯೮
ಸೋಮಾಸುರನೆಂಬ ಅಸುರನು
ಸಾಮಕವೇದವ ಒಯ್ಯಲು ಮಾ
ಸೋಮಾಸುರದೈತ್ಯನ ಕೊಂದು
ಸಾಮಕವೇದವ ತಂದನು ಮಾ ೧
ಗುಡ್ಡವು ಮುಳುಗಿ ಪೋಗಲು ನಮ್ಮ ದೇವ
ಗುಡ್ಡ ಬೆನ್ನೊಳಗಿತ್ತನು ಮಾ
ಗುಡ್ಡದಂಥ ದೈತ್ಯರನೆಲ್ಲ
ಅಡ್ಡ ಕೆಡಹಿ ಬಿಸುಟನು ಮಾ ೨
ಚಿನ್ನಗಣ್ಣಿನವನು ಬಂದು
ಕನ್ನೆ ಹೆಣ್ಣನೊಯ್ಯಲು ಮಾ
ವರ್ಣರೂಪವ ತಾಳಿದಸುರನ
ಛಿನ್ನಭಿನ್ನವ ಮಾಡಿದನು ಮಾ ೩
ಕಂಬದಿಂದಲಿ ಬಂದು ನಮ್ಮ ದೇವ
ಇಂಬಾದಸುರನ ಬಗಿದನು ಮಾ
ನಂಬಿದ ಪ್ರಹ್ಲಾದನ ಕಾಯ್ದ
ಅಂಬುಜನಾಭ ನೃಸಿಂಹನು ಮಾ ೪
ಮುರುಡನಾಗಿ ಬಂದು ನಮ್ಮ ದೇವ
ಬಲಿಯ ದಾನವ ಬೇಡಿದನು ಮಾ
ಇಳೆಯ ಈರಡಿಯ ಮಾಡಿ
ಬಲಿಯ ಪಾತಾಳಕ್ಕೊತ್ತಿದನು ಮಾ ೫
ಕೊಡಲಿಯನು ಪಿಡಿದು ನಮ್ಮ ದೇವ
ಕಡಿದ ಕ್ಷತಿಯರಾಯ (ಯರ?) ನು ಮಾ
ಹಡೆದ ತಾಯಿಯ ಶಿರವ ತರಿದು
ಪಡೆದನಾಕೆಯ ಪ್ರಾಣ(ಣವ?) ನು ಮಾ ೬
ಎಂಟು ಎರಡು ತಲೆಯ ಅಸುರನ
ಕಂಠವ ಛೇದಿಸಿ ಬಿಸುಟನು ಮಾ
ಒಂಟೀ ರೂಪವ(?) ತಾಳಿದಸುರನ
ಗಂಟ ವಿಭೀಷಭಣಗಿತ್ತನು ಮಾ ೭
ಸೋಳಸಾಸಿರ ಗೋಪಿಯರೊಡನೆ
ಕೇಳಿಮೇಳದೊಳಿದ್ದನು ಮಾ
ಬಾಲಕನಾಗಿ ತನ್ನುದರದಲಿ
ಲೋಲ ಲಕ್ಷ್ಮಿಗರಸನು ಮಾ ೮
ಒಪ್ಪದಿಂದಲಿ ಬಂದು ನಮ್ಮ ದೇವ
ಇಪ್ಪ್ಪೆವನದೊಳಗಿಪ್ಪನು ಮಾ
ಸರ್ಪಶಯನನಾಗಿ ಪೋಗಿ
ತ್ರಿಪುರಸಂಹಾರ ಮಾಡಿದನು ಮಾ ೯
ಏನು ಮಾಯನು ಮಾಯನು ಮಾ ನಮ್ಮ ದೇವ
ಬಲ್ಲಿದ ಕಲ್ಕ್ಯಾವತಾರನು ಮಾ
ಇಳೆಯ ಸ್ವರ್ಗ ಪಾತಾಳಕ್ಕೊಡೆಯ
ಚೆಲುವ ಶ್ರೀ ಹಯವದನನು ಮಾ ೧೦

 

೨೪೧
ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ ಪ.
ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ ಅ.ಪ.
ಬೆಲೆಯಾಗದವನೆಲ್ಲ ಬೆಲೆಯ ಮಾಡಿಸುವಿ
ಎಲ್ಲ ವಸ್ತುಗಳನಿದ್ದಲ್ಲೆ ತರಿಸುವಿ
ಕುಲಗೆಟ್ಟವರ ಸತ್ಕುಲಕೆ ಸೇರಿಸುವಿ
ಹೊಲೆಯನಾದರೂ ತಂದೊಳಗಿರಿಸುವಿ ೧
ಅಂಗನೆಯರ ಸಂಗ ಅತಿಶಯದಿ ಮಾಡಿಸುವಿ
ಶೃಂಗಾರಾಭರಣಂಗಳ ಬೇಗ ತರಿಸುವಿ
ಮಂಗನಾದರೂ ಅನಂಗನೆಂದೆನಿಸುವಿ
ಕಂಗಳಿಲ್ಲದವಗೆ ಮಗಳ ಕೊಡಿಸುವಿ ೨
ಚರಣಕ್ಕೆ ಬಂದಂಥ ದುರಿತವನು ಬಿಡಿಸುವಿ
ಸರುವರಿಗೆ ಶ್ರೇಷ್ಠನರನ ಮಾಡಿಸುವಿ
ಅರಿಯದ ಶುಂಠನ ಅರಿತವನೆನಿಸುವಿ
ಸಿರಿ ಹಯವದನನ ಸ್ಮರಣೆ ಮರೆಸುವಿ ೩

 

೧೩೪
ಹನುಮಂತ ನೀ ಬಲು ಜಯವಂತನಯ್ಯ ಪ.
ಅನುಮಾನವಿಲ್ಲವೊ ಆನಂದತೀರ್ಥಾರ್ಯ ಅ.ಪ.
ರಾಮಸೇವಕನಾಗಿ ರಾವಣನ ಪುರವ ನಿ-ರ್ಧೂಮಮಾಡಿದ್ಯೊ ನಿಮಿಷದೊಳಗೆಭೂಮಿಪುತ್ರಿಗೆ ಮುದ್ರೆಯುಂಗುರವನಿತ್ತು ನೀಪ್ರೇಮಕುಶಲವ ರಾಮಪಾದಕರ್ಪಿಸಿದೆ ೧
ಕೃಷ್ಣಾವತಾರದಲ್ಲಿ ಭೀಮನಾಗ್ಯವತರಿಸಿದುಷ್ಟ ದೈತ್ಯರನ್ನೆಲ್ಲ ಸಂಹರಿಸಿದೆದೃಷ್ಟಿಹೀನನಾದ ಧೃತರಾಷ್ಟ್ರವಂಶವನ್ನುಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಗರ್ಪಿಸಿದೆ ೨
ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲುಮತಿಹೀನರಾಗೆ ಸಜ್ಜನರೆಲ್ಲಅತಿ ವೇಗದಲಿ ಮಧ್ವಯತಿಯಾಗಿ ಅವತರಿಸಿಗತಿಯ ತೋರಿಸಿದೆ ಹಯವದನ ನಿಜದಾಸ ೩

 

೧೦೩
ಹನುಮ-ಭೀಮ-ಮಧ್ವರು
ಅಸುರರನು ಅಳಿಯ ಬಂದೆನು ನಾನು ನಿನ್ನ ವೈರಿದಶರಥರಾಮನಾಳೆಂದ ಪ.
ಹೊಸಕಪಿಯೆ ನೀನು ಬಂದುದೇನುಕಾರಣವೆನಲುದಿ[ಶೆ]ಗೆ ಬಲ್ಲಿದ ಹನುಮ ನಾ ಕೇಳೊ ನಿ-ನ್ನಸುರ ಪಡೆಯ ಮಡುಹಬಂದೆ ನಿನ್ನಎಸೆವ ಪಾದದಲೊದೆಯ ಬಂದೆ ವನದಸಸಿಯ ಕಿತ್ತೀಡ್ಯಾಡಿ ನಿಂದೆ ನಿನ್ನದಶಶಿರವ ಕತ್ತರಿಸಿ ಎಸೆವ ರಾಮರ ಮಡದಿಹಸುಳೆ ಸೀತೆಯ ಅರಸಲು ಬಂದೆ ೧
ಎನ್ನ ವೈರಿಗಳು ಇನ್ಯಾರೆಂದು ರಾವಣನುಹೊನ್ನಕುಂಡಲದ ಹನುಮನೆ ಕೇಳೊಮುನ್ನವರ ಸಾಹಸವಯೇನೆಂಬೆ ಅವರಪರ್ಣಶಾಲೆಯ ಹೊಕ್ಕು ಬಂದೆ ರಾಮ-ಕನ್ಯೆ ಸೀತಾಂಗನೆಯ ತಂದೆತನ್ನ ಬಿಲ್ಲ ತಾ ಹೊತ್ತು ತಿರುಗುವುದ ಕಂಡೆ ೨
ಇನ್ನು ಹೆಮ್ಮೆಮಾತ್ಯಾತಕೊ ಕಪಿಯೆಕಚ್ಚಿ ಕೀಳಲೋ ಕಣ್ಣು ಹತ್ತುತಲೆಯನೆ ಹಿಡಿದುನುಚ್ಚುನುರಿ ಮಾಡಿ ಕೊ[ಲ್ಲಲೊ]ನಿನ್ನ ಇಷ್ಟುಹೆಚ್ಚಿನ ಮಾತ್ಯಾಕೊ ನಿನಗೆ ಬಹಳಕಿಚ್ಚು ತುಂಬಿತು ಕೇಳೋ ಎನಗೆ ಒಂದುಮೆಚ್ಚು ಹೇಳುವೆನೊ ರಾಮರಿಗೆಅಚ್ಚುತನ ಬಣಕೆ ಮೀಸಲಾಗಿರು ನೀನು ೩
ಎಚ್ಚೆತ್ತು ತಾಳು ತಾಳೊಮುನ್ನೂರ ಮೂವತ್ತು ಕೋಟಿ ದೇವತೆಗಳನುಇನ್ನು ನಾ ಸೆರೆಯಾಳುತಿ[ಹೆ]ನೊ ಕಪಿಯೇ ಈಗಎನ್ನಮ್ಯಾಲೆ ದಂಡೆತ್ತಿ ಬಾಹೊನ್ಯಾರೊ ನೀನುಎನ್ನ ಮನೆ ಭಂಡಾರ ನೋಡೊಎನ್ನ ಸಾಹಸಕೆ ಈಡ್ಯಾರೊಮುನ್ನ ಹಣೆಯಲಿ ಬರೆದ ವಿಧಿ ಕಾಲಮ[ಣೆ]ಯಾಗಿಬೆನ್ನಬಿಡದಿಹ ಪರಿಯ ನೋಡೊ ೪
ಎನ್ನ ಸೋದರಮಾವ ವಾಲಿಯನು ಕೊಂದೀಗತಮ್ಮ ಸುಗ್ರೀವಗೊಲಿದು ವರವಿತ್ತುನಿನ್ನ ಕೊಂಡೊ[ಯ್ದ]ನೆಂಬುವರೊ ನಿನ್ನಚಿನ್ನನ ತೊಟ್ಟಿಲಿಗೆ ಕಟ್ಟುವರೊ ನಿನ್ನಹೊನ್ನತುಂಬೆಂದು ಆಡ್ಸುವರೊನಿನ್ನ ಶಿರವರಿದು ವಿಭೀಷಣಗೆ ಪುರವ ಕೊಡಬೇಕೆನುತಎನ್ನೊಡೆಯ ಬರುತಾನೆ ತಾಳೊ ಎಂದ ೫
ಎತ್ತಿಹಿಡಿವ ಕೈಪಂಜು ಲೆಕ್ಕವಿಲ್ಲ ನಾ ಹಿಡಿದವಕತ್ತಿ ಇಪ್ಪತ್ತು ಕಾಣೋ ಕಪಿಯೆಎತ್ತಿ ಕಡಿವೆನು ಬಾಹುದಂಡ ಬೆ-ನ್ನ್ಹ್ಹತ್ತಿ ಬಡಿಯದೆ ಬಿಡೆನು ಕಂಡ್ಯಾ ನಿನ್ನಚಿತ್ತದಲಿ ತಿಳಿದುಕೊಳ್ಳೆಂದಮತ್ತೆ ನಾ ತಾಳಿ ಕೈಗಾಯಿದೆನಲ್ಲದೆ ಬಾಯಬತ್ತಿಸದೆ ಬಿಡುವೆನೇನೋ ಕಪಿಯೆ ೬
ಮತ್ತ ರಾವಣ ನೀನು ಹೊತ್ತಿದ ಭೂಮಿ ಹಣತಿಸುತ್ತಣ ಸಮುದ್ರವೆ ತೈಲಎತ್ತಿ ಹಿಡಿವಳು ಸೀತೆ ದೀಪ ನಮ್ಮಚಿತ್ತದೊಲ್ಲಭನ ಪ್ರತಾಪ ನಿನ್ನಲಂಕಪಟ್ಟಣವು ಸುಡುವಂತೆ ಶಾಪಹತ್ತು ತಲೆ ಹುಳ ಹಾರಿಬಂದು ಬ್ಯಾಗಸುತ್ತಿ ಬೀಳುವುದು ದೀಪದೊಳಗೆ ೭
ಹೆಚ್ಚಿನ ಮಾತಿಷ್ಟು ಇವಗ್ಯಾಕೆ ಹಿಡಿತಂದುಕಿಚ್ಚು ಹಚ್ಚಿರೊ ಬಾಲಕೆ ಎಂದ ಆಗಪೊಚ್ಚಸೀರೆಗಳ ಸುತ್ತಿದರು ತ್ವರಿತಅಚ್ಚ ಎಣ್ಣೆಯಲಿ ತೋಯಿಸಿದರು ಬಾಲಹೆಚ್ಚಿಸಲು ಕಂಡು ಬೆದರಿದರುಕಿಚ್ಚು ಹಚ್ಚಲು ರಕ್ಕಸರ ಗಡ್ಡಮೀಸೆ ಸಹಎಚ್ಚರಿಸಿ ಸುಟ್ಟ ಲಂಕಾಪುರವ ೮
ಅಸುರುರೆಲ್ಲರ ಮಡುಹಿ ಪುರವನೆಲ್ಲವ ಸುಟ್ಟುವಸುಧೆ ಅಂಬುಧಿಯ ದಾಟಿ ಬಂದವಸುಧೆಯೊಳ್ವಾಸ ಯತಿಯಿಂದ ಪೂಜಿತನಾಗಿಎಸೆವ ಚಕ್ರತೀರ್ಥದಲಿ ನಿಂದ ಭವಭಜಿತ ಯಂತ್ರೋದ್ಧಾರಕಾನಂದಅಸಮ ಹಯವದನ ಕೋದಂಡರಾಮರ ಬಂಟಮಿಸುನಿ ಮುಖ್ಯಪ್ರಾಣ ವರದ ಮೆರದ ೯

 

೨೬೮
ಹಮ್ಮನಳಿದು ನಮ್ಮ ಮತವ-
ನೆಮ್ಮ ಜಯಮುನೀಂದ್ರ ಕೃತಿಯ
ರಮ್ಯರಸವ ಸವಿದು ಸವಿದು
ನಿಮ್ಮ ದುರ್ಮತಗಳನೆ ಬಿಡಿರೊ ಪ.
ಸುಖಮುನಿ ಚತುರ್ಮುಖರು ಕುಮತ
ನಿಕರವ ನೋಡಿ ಮನಕೆ ತಂದು
ಸುಕೃತಿಯೆಂಬ ಶ್ರೌತ ಜಲದಿ ಕೃಷ್ಣನ ಪಾದ ತೊಳೆಯಲು
ಭಕುತಿಭರದಿ ಗಿರೀಶಮುಖ್ಯ
ಸಕಲ ಸುರರು ಶಿರದ ಮೇಲೆ
ಲಕುಮಿ ಆತ್ಮಕರಾಗಿ ಧರಿಸಿ
ಸುಖಿಸಿದ ಕಥೆ ಸ್ರ‍ಮತಿಯೊಳಿರಲು ೧
ಆಗ ಭಗೀರಥನ ತೆರದಿ ಯೋಗಿ ಜಯಮುನೀಂದ್ರ ಕೃಪಾ-
ಸಾಗರನಾಗಿ ಧರೆಗೆ ಬಂದು
ಈ ಗುರುಕೃತಿಗಂಗೆಯ
ಬೇಗ ತಾನು ತುತಿಸಿ ಮೈಯ
ಯಾಗಗೊಳಿಸಿ ಸಹಸ್ರ ಮುಖದಿ
ಭಾಗವತರೆಂಬ ಬುಧರಿಗಿತ್ತ
ಭಾಗ್ಯವ ನೀವೆಲ್ಲ ನೋಡಿರೊ ೨
ಶ್ರುತಿಮಯವಾದ ಬಹಳ ಬಲು ಯು
ಕುತಿಯನೆ ಅಳವಡಿಸಿ ಸು-
ಮತಿಯೆಂಬ ಮಂದರ ಹೂಡಿ
ಮಥಿಸಿ ಮಧ್ವಮತಾಬ್ಧಿಯ
ಯತಿಶಿರೋಮಣಿ ಜಯಮುನಿ ಶ್ರೀ-
ಪತಿ ಹಯವದನ್ನ ಬಲದಿ
ಶ್ರುತಿಯಮೃತವ ರಚಿಸಿದ ನಮ್ಮ
ಕ್ಷಿತಿಸುರರೆ ಕುಡಿದು ನೋಡಿರೋ ೩

 

೨೪೨
ಹಯವದನನ ಪಾದದ್ವಯವ ನೆನೆಯದವ
ಜಯಿಸುವನೆಂತೋ ಸಂಸ್ರ‍ಮತಿ ಫಲವ ಪ.
ಕಾಗೆಯಂತಾದರು ಬಿದ್ದರು ಎದ್ದರು
ಯೋಗದೊಳಿದ್ದರು ಬಿದ್ದವನೆ
ಆಗಮವನು ತಂದು ಅಜನಿಗೆ ಬೋಧಿಸಿ-
ದಾ ಗುಣನಿಧಿಯನರ್ಚಿಸದವನು ೧
ಬೂದಿಗೆ ವಾದಿಸಿ ಮಣ್ಣಮೇಲುಣ್ಣಲು
ಸಾಧಿಪುದೇನವ ಶ್ರವ ಶ್ರಾವಕ ವ್ರತವ
ಬೂದಿಯ ಮಾಡಿದ ಮಣ್ಣಿನ ಗಂಡನ
ಹಾದಿಯನೊಲ್ಲದ ಹಂಚುನರ೨
ಉಟ್ಟದ ಬಿಟ್ಟು ತನ್ನಟ್ಟಲು ಬಟ್ಟೆಯ
ಕಷ್ಟ ತಾ ಬಟ್ಟು ಕಂಗೆಟ್ಟನೈಸೆ
ಸೃಷ್ಟಿಸಿ ಸಲಹುವ ಹಯವದನನ ಪರಿ-
ತುಷ್ಟಿಗೆ ಪುಟ್ಟದ ದುಷ್ಟಪಶು ೩

 

೨೦
ಹರಿ ನಾರಾಯಣ ಹರಿ ನಾರಾಯಣ ನಾಮಂ ಜಯ ಪ.
ನಾರಾಯಣ ನಾರದಪ್ರಿಯ ನಾರಾಯಣ ನರಕಾಂತಕನಾರಾಯಣ ನಳಿನೋದರಾ ಅ.ಪ.
[ಸುರಸಂಚಯ]ಸುಖಕಾರಣ ದಿತಿಜಾಂತಕ ದೀನಶರಣಮರುತಪ್ರಿಯ ಪಾಂಡವಪ್ರಿಯ ಪರಿಪೂರ್ಣ ಪರಮ ಜಯ ೧
ಅಘಕುಲವನದಾವಾನಳ ಅತಿಸದ್ಗುಣಗಣ ನಿರ್ಮಲತ್ರಿಗುಣಾತೀತ [ತ್ರಿದಶೇಶ್ವರ]ವಂದಿತ ಜಯ ೨
ಅತಿಮೋಹನಚರಿತ ನಮೊ ಅತಿಸದ್ಗುಣ ಭರಿತ ನಮೊಹತರಿಪುಪೂರ್ಣಂ ಜಯ ಗತಕಲ್ಮಷ ಹಯವದನ ೩

 

೨೭೦
ಹರಿ ಪರಮಪುರುಷ ಮಿಕ್ಕಾಮರರೆಲ್ಲ ಅಚ್ಯುತನ
ಚರಣಸೇವಕರೆಂದು ನೆರೆ ನಂಬಿರೊ ಪ.
ಒಂದುಮನೆಯೊಳೆರೆಡು ಕೇಣಿಯಲ್ಲಿಪ್ಪುವರ
ಒಂದಾದರೆಂದು ಬಗೆಯೆ ಬುಧರಿಗುಚಿತವೆ
ಇಂದಿರೇಶನು ಭಾಗಭಾಗವ ತಾಳಿ
ಒಂದು ಪ್ರತಿಮೆಯೊಳಿದ್ದರೊಂದಾಹರೆ ೧
ಒಬ್ಬನಿಂದಲಿ ಸಾಯನೆಂಬೋ ರಕ್ಕಸರೊಲ್ಲರೊಬ್ಬರ
ರ್ಧಭಾಗವ ತಾಳಿ ಐತಂದು
ಕೊಬ್ಬಮುರಿವರು ಖಳನ ಹರಿಹರರು ತಾವೀಗ
ಒಬ್ಬನಿಂದಲಿ ದನುಜನೆಂತಳಿದನು ೨
ನರಸಿಂಹನಂತೆ ಕೃಷ್ಣನು ತನ್ನ ಲೀಲೆಯಲಿ
ಹರನಂದವ ತಾಳಿ ಗುಹನ ಗೆಲಿದನು ಗಡಾ
ಪರಿಪರಿ ವೇಷದಲಿ ನಟನಂತೆ ನಲಿವ ದೇ-
ವರದೇವನಿರವನಾವನು ಬಲ್ಲನು ೩
ಆವನಂಘ್ರಿಯ ತೀರ್ಥ ಗಂಗೆಯಾದಳು ಭಸ್ಮ
ದÉೀವರಿಪುವನು ಗೆಲಿದ ಭೃಗುಮುನೀಂದ್ರನು
ಆವವನು ಮೂರ್ಲೋಕದೊಳಧಿಕನೆಂದೊರೆದ
ಆ ವಿಷ್ಣು ಹಯವದನ ಹರಿಯಂತೆ ೪

 

೯೮
ಹರಿ ಬಾರನೆ ನರಹರಿ ಬಾರನೆಕರಿಭಯಹರ ಮುರಾರಿ ಬಾರನೆ ಪ.
ವೃಂದಾವನದ ಗೋವಿಂದ ಬಾರನೆÉಕಂದರ್ಪನ ತಂದೆ ಮುಕುಂದ ಬಾರನೆ ೧
ಎಂದು ಕಾಂಬೆವೊ ನಾವವ[ನ]ನೆಂದು ಕಾಂಬೆವೊಇಂದಿರೆಯರಸನನೆಂದು ಕಾಂಬೆವೊ ೨
ಧನ ನಿತ್ಯವೆÉ ಯೌವನ ನಿತ್ಯವೆಜನ ನಿತ್ಯವೆ ಕರಣ ನಿತ್ಯವೆ ೩
ಭವಗೊಲಿದ ಪಾಂಡವಗೊಲಿದಧ್ರುವಗೊಲಿದ ಮಾಧವ ಒಲಿದ ೪
ಇಂದುವರ್ಣದ ಹಯವದನನಾದಮಂದರಧರನ ಸಖಿ ತಂದು ತೋರೆನಗೆ ೫

 

೯೭
ಹರಿಚರಣವ ನೋಡಬರಲಿ ಕೃಷ್ಣಶರಣಜನರು ಸುಕೃತವ ಸೊರೆಗೊಳಲಿ ಪ.
ಬ್ರಹ್ಮರುದ್ರಾದಿಗಳೆಲ್ಲ ತಮ್ಮತಮ್ಮ ಮನದಿ ನೆನೆವುದು ಪುಸಿಯಲ್ಲನಮ್ಮ ದೃಷ್ಟಿಗೆ ತೋರಿತಲ್ಲ ಇನ್ನುಜನ್ಮ ಸಫಲವಪ್ಪುದಲಸಿಕೆ ಸಲ್ಲ ೧
ಶ್ರುತಿಸ್ರ‍ಮತಿ ಕೊಂಡಾಡುತಿ[ದಿ]ಕೋ ನಾನಾಮತದಲ್ಲಿ ಮಾಡುವ ವಹಮಾನ ಸಾಕುಪತಿತಪಾವನೆಗಂಗೆ ಇದಕೋ ಇನ್ನುಮತಿಯುಳ್ಳ ನಿಪುಣರು ನಿಶ್ಚೈಸಬೇಕು ೨
ವೇದೇ ರಾಮಾಯಣೇ ಎಂಬಆಧ್ಯೇಯಂ ಸದಾಯೆಂಬ ವಚನವನೆಂಬಮೋದಿ ಹಯವದನ ಡಂಬವಿಲ್ಲ-ದಾದರಮಾತ್ರ ಪೂಜೆಯನೆ ಕೈಕೊಂಬ ೩

 

೧೪೯
ಹರಿದಾಸರು
ದಾಸೋತ್ತಮ ನೀನೆ ಶ್ರೀ ವೈಕುಂಠ-ದಾಸೋತ್ತಮ ನೀನೆ ಪ.
ಮಕ್ಕಳುಗಳಿಗೆ ಮೊಮ್ಮಕ್ಕಳುಗಳಿಗೆ ದೇ-ವಕ್ಕಳಿಗೆ ಮನುಮುನಿಗಳಿಗೆಸಿಕ್ಕದ ಪರಬೊಮ್ಮನ ಕೂಸುಮಾಡಿ ತಂ-ದಿಕ್ಕಿ ತೊಡೆಯಮ್ಯಾಲೆ ಆಡಿಸಿ ಮುದ್ದ್ದಿಸುತಿ[ಹ]೧
ವೇದ ಶಾಸ್ತ್ರಾದಿಗಳಿಗೆ ಮೈಯದೋರದ-ನಾದಿ ಪುರುಷನ ನೀನೊಲಿಸಿಕೊಂಡೆಈ ಧರೆಯವರ ಪಾವನ ಮಾಡಲೋಸುಗಸಾಧು ಸಜ್ಜನ ಅಪರೋಕ್ಷ ಜ್ಞಾನಿಯಾ[ದೆ] ೨
ಹರಿಸರ್ವೋತ್ತಮ ಹಯವದನ ಮೂರುತಿ ವೇಲಾ-ಪುರದರಸಗೆ ಪ್ರತಿಬಿಂಬನಾದವರ ವೈಕುಂಠ ದಾಸೋತ್ತಮ ಎನಗೆ ಹರಿಯತೋರಿಸಿ ಪರಮ ಧನ್ಯನಮಾಡಿದ ೩

 

೨೪೩
ಸುಳಾದಿ
ಧ್ರುವತಾಳ
ಹರಿಪದವ ನೆನೆವಂಗೆ ನರಕದ ಭಯವಿಲ್ಲ
ಹರಿಪದವ ನೆನೆವಂಗೆ ಮಾಯೆಯ ಭಯವಿಲ್ಲ
ಹರಿಪದವ ನೆನೆವಂಗೆ ವಿಷದ ಭಯವಿಲ್ಲ
ಹರಿಪದವ ನೆನೆವಂಗೆ ಭವದ ಭಯವಿಲ್ಲ
ಹರಿಪದವ ನೆನೆವಂಗೆ ಜನನದ ಭಯವಿಲ್ಲ
ಹರಿಪದವ ನೆನೆವಂಗೆ ಮರಣದ ಭಯವಿಲ್ಲ
ಬರಿಯ ಮಾತೇ ಅಲ್ಲ ಅಕುತೋಭಯನೆಂದು
ವರದ ಹಯವದನನ ಪದಪದುಮವ ನಂಬು ೧
ಮಠ್ಯತಾಳ
ಧ್ರುವನ ನೋಡು ಸುರಲೋಕದಿ
ಭುವಿ ವಿಭೀಷಣನ್ನ ನೋಡಿರೊ
ಅವನಿಯ ಕೆಳಗೆ ಬಲಿಯ ಉತ್ಸಹವ ನೋಡಿ ಮನುಜರೆಲ್ಲರು
ಭುವನ ತೃತೀಯದವರೆ ಸಾಕ್ಷಿ ಹಯವದನನ ಭಜಕರಿಗೆ ೨
ತ್ರಿಪುಟತಾಳ
ಹತ್ತಾವತಾರದಿ ಭಕ್ತರ ಭಯಗಳ
ಕಿತ್ತು ಭೃತ್ಯರ ಕಾಯ್ವ ಕಥೆÉಯ ಕೇಳ್ವರು
ಮತ್ತೆ ಮೃತ್ಯುಗಳ ಭೀತನೆಂಬುವುದ್ಯಾಕೆ
ಹೆತ್ತ ತಾಯಿಯಿಂದ ತತ್ವವ ಕೇಳಯ್ಯ
ಕರ್ತೃ ಹಯವದನನೆ ಭಕ್ತರ ಭಯಕ್ಕೆ
ಕತ್ತಲೆಗಿನನಂತೆ ಹತ್ತು ಎಂಬುದು ನಂಬು೩
ಝಂಪೆತಾಳ
ಕರಿಯ ಕಾಯ್ದವನ ಪಾದವ ನಂಬು
ಉರಿಯ ನುಂಗಿದವನ ಪಾದವ ನಂಬು
ಸಿರಿ ಹಯವದನನೆ ಭಕ್ತರ ಭಯ ಸಂ-
ಹರಣನೆಂಬುದಕ್ಕಿನ್ನು ಸಂಶಯವಿಲ್ಲ ೪
ರೂಪಕತಾಳ
ದ್ರೌಪದಿಯ ಭಯ ಪರಿಹರಿಸಿದವನಾರೈ
ಆ ಪರೀಕ್ಷಿತನ ಭವಭಂಜನನಾರೈ
ತಾಪಸರಿಗಸುರರಿಂದ ಬಂದ ಪರಿಪರಿಯ
ಆಪತ್ತುಗಳನೆಲ್ಲ ಖಂಡಿಸಿದನಾರೈ
ಶ್ರೀಪತಿ ಹಯವದನನೊಬ್ಬನೆ ತನ್ನವರ
ತಾಪತ್ರಯವ ಬಿಡಿಸಿ ತಕ್ಕೈಸಿಕೊಂಬ ೫
ಅಟ್ಟತಾಳ
ವಿಷನಿಧಿಯನೊಂದು ದಾಟಿ
ವ್ಯಸನಗಳನೆಲ್ಲ ಖಂಡಿಸಿ
ಬಿಸಜವನಿತೆಯ ಕಂಡು ಬಂದ
ಅಸಮ ಹನುಮನ ನೋಡಯ್ಯ
ಕುಸುಮವನು ತರಪೋಗಿ
ಅಸುರರ ಕುಸುರಿದರಿದುದ ನೋಡಯ್ಯ
ಬಿಸಜಾಕ್ಷ ಹಯವದನ ತನ್ನ
ಹೆಸರುಗೊಂಡರೆ ಭಕ್ತರ
ವಶಕ್ಕಿಪ್ಪುದು ಪಾರ್ಥನ
ಯಶವ ಪಸರಿಸಿದ ಅಚ್ಚುತ ೬
ಏಕತಾಳ
ಪೂರ್ವಕಾಲದಿ ತೀರದ ಕಥೆಗಳ ನಿ-
ವಾರಿಸಿ ಜರಿದುದ ನರರೆಲ್ಲ ಕಾಣರೆ
ಶರೀರವೆರಸಿದವರಿಗೆ ಸ್ವರ್ಗಗತಿಯುಂಟೆ
ಕರುಣಾಕರ ಕೃಷ್ಣನ ಕಂಡವರಿಗೆ ಭಯವುಂಟೆ
ಈರೇಳು ಲೋಕದೊಳಗೆ ಈ ಹಯವದನನಂತೆ
ಶರಣಾಗತಜನರ ಸಲಹುವರುಳ್ಳರೆ ೭
ಜತೆ
ಸುರಾಸುರಚಕ್ರವರ್ತಿ ಅಸುರಮದಭೇದನ್ನ
ಸಿರಿ ಹಯವದನನ್ನ ಚರಣವೆ ಗತಿಯೆನ್ನು

 

೧೦೨
ಹರಿಯ ಪಟ್ಟದರಾಣಿ ನಿಮ್ಮ ಸಿರಿಚರಣಕ್ಕೆ ನಾ ಶರಣೆಂಬೆಧರಣಿ ಒರೆಸಮ್ಮ ದುರಿತಘಮ್ಮ ಹರಿಸುದಮ್ಮ ಪ.
ಧನಧಾನ್ಯವಿತ್ತು ಮತ್ರ್ಯರ ಪೊರೆವೆ ಎಂದೆಂದುಮನೆಗಿಂಬುಕೊಟ್ಟು ರಕ್ಷಿಸಿದೆದಿನದಿನದಿ ಚರಣವಿಟ್ಟರೆ ನೊಂದುಕೊಳೆ ನಿನ್ನಗುಣಕೆ ಭೂದೇವಿ ಸರಿಗಾಣೆ ಸಕಲಮುನಿ-ಜನರ ಪೊರೆವುದು ನಿಮ್ಮಾಣೆ ನಾರಾಯಣ ಬಂದುನಿನ್ನ ಸಲಹುವ ಪ್ರವೀಣೆ೧
ಸಪ್ತಸಮುದ್ರಗಳ ಪೊತ್ತಿಪ್ಪೆ ನಿತ್ಯ ಸಮಸ್ತಪರ್ವತಭಾರವ ನೀ ತಾಳ್ವೆಉತ್ತಮ ತ್ರಿವಿಕ್ರಮನ ರಥೋತ್ಸವವೆ ಮೊದಲಾದಪವಿತ್ರಾಂಕುರಾರ್ಪಣಕೆ ನೀ ಬಂದು ವರಿಯಸುತ್ತಿನ ಪವಳಿಯೊಳಗೆ ನಿಂದು ನಮಗೆಮುಕ್ತಿ ಪದವೀವುದಕೆ ಬಾ ಕೃಪಾಸಿಂಧು ೨
ನಿನಗೆ ದ್ರೋಹವ ಮಾಡಿದ ಹಿರಣ್ಯಾಕ್ಷನೆಂಬ ದುರ್ಜನದನುಜನ ವರಾಹನಾಗಿ ಮೊನೆಯದಾಡೆಯಕೊನೆಯಲಿಂದು ಕೊಂದು ನಿನ್ನ ಮನೋಹರತೊಡೆಯಲಿಟ್ಟು ಕೊಂಡ ಸಿರಿ ಹಯವದನಹರಿಯಕರ ಕರಿಭೇರುಂಡ ಸಿರಿಗೆ ಸರಿಯೆನಿಸಿನಿನ್ನನ್ನು ಪೊರೆಯುತಲಿಹನು ಕಂಡಾ ೩

 

೨೪೪
ಹರಿಯ ಭಜನೆ ಮಾಡೋ ನಿರಂತರ ಪ.
ಪರಗತಿಗಿದು ನಿರ್ಧಾರ ಅ.ಪ.
ಮೊದಲೆ ತೋರುತದೆ ಮಧುರ ವಿಷಯಸುಖ
ಕಡೆಯಲಿ ದುಃಖ ಅನೇಕ ೧
ವೇದಶಾಸ್ತ್ರಗಳನೋದಿದರೇನು
ಸಾಧನಕಿದು ನಿರ್ಧಾರ ೨
ಸಾರವೊ ಬಹುಸಂಸಾರ ವಿಮೋಚಕ
ಸೇರೊ ಶ್ರೀಹಯವದನನ್ನ ೩
ತತ್ವವಿವೇಚನೆ

 

೩೩೫
ಹರಿವಾಸರದುಪವಾಸದ ಫಲವು ಕಂಡವರಿಗೆ ದೊರಕುವುದೆ ಪ.
ಹಿರಿದು ಜನ್ಮಗಳಲಿ ಹರಿಯನಾರಾಧಿಪ
ಪರಮ ಭಾಗವತರ ಭಕ್ತರಿಗಲ್ಲದೆ ಅ.ಪ.
ಸ್ನಾನಸಂಧ್ಯಾನವು ಮೊದಲಾದ ಕರ್ಮ
ನ್ಯೂನದ ಪಾಪಂಗಳು
ದೀನತ್ವದಿಂದ ತುಚ್ಛರಕೈಯ ಹಿಡಿದ ದು
ರ್ದಾನದ ಪಾಪಂಗಳು
ಭಾನುಬಿಂಬವ ಕಂಡ ಹಿಮದಂತೆ
ಚಿದಾನಂದವಾದ ವ್ರತಕೆ ಸರಿ ಬಾರದು ೧
ಪರಸತಿಯರ ನೋಡಿ ಮನವಿಟ್ಟ ಪಾಪವು
ಪರದೂಷಣೆಯ ಪಾಪವು
ಪರಮಾತ್ಮನ ಹೊಗಳುವ ನಾಲಗೆಯಲ್ಲಿ
ನರರ ಹೊಗಳುವ ಪಾಪವು
ಪರರ ಹಿಂಸೆಯ ಮಾಡಿ ಪರ ವಸ್ತುಗಳನಪ-
ಹರಿಸುವ ಪಾಪಂಗಳು
ಹರಿಯ ಮರಿಯ ಕಂಡು ಕರಿ ಓಡುವಂತೆ
ದುರಿತ ಕೋಟಿಗಳನು ಪರಿಹರಿಸುವ ಶ್ರೀ ೨
ಆಡುವ ಅನೃತವಾಕ್ಯಗಳಿಂದ ಸಂಭವವಾಗುವ ಪಾಪಂಗಳು
ನೋಡಿಕೊಳ್ಳದೆ ದುರಾನ್ನವನುಂಬ ದುರ್ದಾನದ ಪಾಪಂಗಳು
ಮಾಡಬಾರದ ದಿನದಲಿ ಸ್ತ್ರೀಗೋಷ್ಠಿಯ ಮಾಡಿದ ಪಾಪಂಗಳು
ಕಾಡುಕಿಚ್ಚನೆ ಕಂಡ ಖಗಮೃಗತತಿಯಂತೆ
ಓಡುವುದಘಸಂಘ ಉತ್ತಮವಾಗಿಹ೩
ಮತ್ತೆ ಈ ಬಹಳ ಪಾಪಗಳಿಗೆಲ್ಲ ತಾ ಪಕ್ಷ ಪ್ರಾಯಶ್ಚಿತ್ತವು
ಉತ್ತಮವಾದ ವ್ರತಗಳಿಗೆಲ್ಲ ತಾ ಉತ್ತಮವೆನಿಸುವುದು
ಚಿತ್ತಶುದ್ಧಿಯನಿತ್ತು ಜ್ಞಾನವೈರಾಗ್ಯದಿ ಭಕ್ತಿ ಮಾರ್ಗವನೀವುದು
ಮುಕ್ತಿಗೆ ಸೋಪಾನವಾಗಿ ಭವಾಭ್ಧಿಯ ದಾಟಿಸಿ
ಹರಿಯ ಸನ್ನಿಧಿಗೆ ದಾರಿಯನೀವ ೪
ತೋರುವ ದಶಮಿ ದ್ವಾದಶಿಗಳು ಸಂಪುಟಾಕಾರದಿ ಹರಿದಿನವು
ಮೂರುದಿನದ ವ್ರತ ನಾಲ್ಕು ಹೊತ್ತಿನ ಆಹಾರಗಳು ವರ್ಜಿತವು
ಊರುದಾರಿಗಳ ನಡೆಯದೆ ತಾಂಬೂಲ ಚರ್ವಣಂಗಳೊರ್ಜಿತವು
ನಾರಾಯಣನ ದಾಸರ ಸಂಗದೊಡನೆ
ಜಾಗರ ಮಾಡಿ ವ್ರತವಾಚರಿಸುವ ೫
ಅತಿಶಯವಾದ ಶ್ರೀಹರಿದಿನದಿ ಪಿತೃತರ್ಪಣಗಳು ವಜ್ರ್ಯವು
ಪ್ರತಿವರುಷದಲಿ ಆಚರಿಸುವ ತಾಯಿತಂದೆ ತಿಥಿಗಳೆಲ್ಲ ವಜ್ರ್ಯವು
ಸತತವು ಮಾಡುವ ಯಜ್ಞಪುರುಷಗೆ ಆಹುತಿಗಳೆಲ್ಲ ವಜ್ರ್ಯವು
ಇತರ ಭೋಗ ಕೃತ್ಯಗಳನೆಲ್ಲ ವರ್ಜಿತಮಾಡಿ ಈ ವ್ರತವನಾಚರಿಸುವ ೬
ಹಲವು ವ್ರತಗಳಾಚರಿಸಿ ದಾನಂಗಳ ಹಲವು ಮಾಡಿದರೇನು
ಹಲವು ಪುಣ್ಯತೀರ್ಥನದಿಯಲ್ಲಿ ಸ್ನಾನವ ಮುದದಿ ಮಾಡಿದರೇನು
ಹಲವು ಪುರಾಣಂಗಳ ಹಲವು ಶಾಸ್ತ್ರಂಗಳ ಹಲವು ಕೇಳಿದರೇನು
ಹಲವು ದೈವಂಗಳಿಗೊಡೆಯನಾದ
ಶ್ರೀಹಯವದನನ್ನ ದಿನಕೆ ಸರಿಬಾರದು ೭

 

೨೯೯
ಹರಿಹರರಿಬ್ಬರು ಒಲಿದು ಮಾತಾಡಲು
ಕೊಳವ ಕಂಡಲ್ಲಿ ಎಲೆತೋಟ
ಕೊಳವ ಕಂಡಲ್ಲಿ ಎಲೆತೋಟದೊಳಗಾಡುವ
ಹೆಣ್ಣಿನ ಕಂಡು ಹರ ಮರುಳಾದ ಪ.
ತೆಂಗಿನ ತಿಳಿಗೊಳ ನಿಂಬೆ ಕಿತ್ತಲೆ ಬಾಳೆ
ಹೊಂಬಾಳೆ ಅಡಿಕೆ ಬನಗಳು
ಹೊಂಬಾಳೆ ಅಡಿಕೆ ಬನದೊಳಗಾಡುವ
ರಂಭೆಯ ಕಂಡು ಹರ ಮರುಳಾದ ೧
ಅರಿಸಿನ ತಿಳಿಗೊಳ ಹಲಸು ಕಿತ್ತಲೆ ಬಾಳೆ
ಬೆರಸಿ ಮಲ್ಲಿಗೆಯ ಬನದೊಳು
ಬೆರಸಿ ಮಲ್ಲಿಗೆಯ ಬನದೊಳಗಾಡುವ
ಸರಸಿಜಾಕ್ಷಿಯ ಕಂಡು ಹರ ಮರುಳಾದ ೨
ಮೊಲ್ಲೆ ಮಲ್ಲಿಗೆ ಜಾಜಿ ಅಲ್ಲೆ ಪಾರಿಜಾತ
ನಿಲ್ಲದೆ ನುಡಿವೊ ಗಿಳಿಗಳು
ನಿಲ್ಲದೆ ನುಡಿವೊ ಗಿಳಿಗಳು ನುಡಿಗಳ
ಚೆಲುವೆಯ ಕಂಡು ಹರ ಮರುಳಾದ ೩
ಸೋಗೆ ನವಿಲುಗಳು ಗಿಳಿಹಿಂಡು ತುರುಗಳು
[ಕೋಗಿಲೆ ನಲಿಯೊ ಪಂಸೆಗಳು]
[ಕೋಗಿಲೆ ನಲಿಯೊ ಪಂಸೆಯೊಳಾಡುವ] ಸೊ-
ಬಗಿಯ ಕಂಡು ಹರ ಮರುಳಾದ ೪
ಚೆಲುವ ಚರಣಗಳು ಜಂಘೆ ಜಾನೂರು ಕಟಿ
ವಳಿಪಂಙ್ತ ಜಠರ ವಕ್ಷಸ್ಥಳವು
ವಳಿಪಂಙ್ತ ಜಠರ ವಕ್ಷಸ್ಥಳಗಳ ಹೆಣ್ಣಿನ
ಸ್ತನವ ವರ್ಣಿಸಲಾರಿಗಳವಲ್ಲ ೫
ಕಾಲುಂಗುರ ಅಕ್ಕಿ ಪಿಲ್ಯ ಜೋಡುಮೆಂಟಿಕೆಗಳು
ವೀರಮುದ್ರಿಕೆಯು ಕಿರುಪಿಲ್ಯ
ವೀರಮುದ್ರಿಕೆಯು ಕಿರುಪಿಲ್ಯ ನಿಟ್ಟಿದ್ದ
ಬಾಲೆಯ ಕಂಡು ಹರ ಮರುಳಾದ ೬
ನಡು ಬಳುಕಿ ಮುಡಿ ಸಡಲಿ ಉಡಿಗಂಟೆ ಹೊಳೆಯುತ
ಕೊರಳ ಪದಕ ಹಾರ ಒಲೆಯುತ
ಕೊರಳ ಪದಕ ಹಾರ ಒಲೆಯುತ ಹೆಣ್ಣಿನ
ಇರವ ವರ್ಣಿಸಲಾರಿಗಳವಲ್ಲ ೭
ಹಸಿರು ಕುಪ್ಪಸಗಳು ಮುಂಗೈನಗಗಳು
ನಳಿತೋಳುಬಂದಿ ಬಳೆಗಳು
ನಳಿತೋಳುಬಂದಿ ಬಳೆಗಳು ಹೆಣ್ಣಿನ
ಥಳುಕು ವರ್ಣಿಸಲಾರಿಗಳವಲ್ಲ೮
ಹಾರ ಹೀರಾವಳಿ ಕೇಯೂರ ಕಂಕಣ
ತೋಳ ಭಾಪುರಿ ಭುಜಕೀರ್ತಿ
ತೋಳ ಭಾಪುರಿ ಭುಜಕೀರ್ತಿನಿಟ್ಟಿಹ
ಇಂದುಮುಖಿಯ ಕಂಡು ಹರ ಮರುಳಾದ ೯
ಅರಳೋಲೆ ಮೂಗುತಿ ಹಣೆಯ ಹಚ್ಚೆಯ ಬೊಟ್ಟು
ಕದಪು ಕನ್ನಡಿಯು ಕುಡಿಹುಬ್ಬು
ಕದಪು ಕನ್ನಡಿಯು ಕುಡಿಹುಬ್ಬು ಹೆಣ್ಣಿನ
ಬೆಳಕ ವರ್ಣಿಸೆ ಹರಗಳವಲ್ಲ ೧೦
ನೊಸಲು ಕಸ್ತೂರಿಗಳು ಎಸೆವ ಬೈತಲೆಗಳು
ಕುರುಳು ಕೂದಲುಗಳು ಕುಂತಲಗಳು
ಕುರುಳು ಕೂದಲುಗಳು ಕುಂತಲಗಳು ಹೆಣ್ಣಿನ
ಜಡೆಯ ವರ್ಣಿಸಲಾರಿಗಳವಲ್ಲ ೧೧
ಕುಂಭಕುಚದ ಮೇಲೆ ಗಂಧವ ಪೂಸಿದಳೆ
ಅಂದಕೆ ಹಿಡಿದಳೆ ಕಮಲವ
ಅಂದಕೆ ಹಿಡಿದಳೆ ಕಮಲವ ಕಡೆಗಣ್ಣ
ಚಂದ ಬಂದ್ಹರನ ಕಂಗೆಡಿಸಿತು ೧೨
ತೂೀರ ಕುಚದ ಮೇಲೆ ಸಾದು ಗಂಧವ ಪೂಸಿ
ಆಯಕೆ ಹಿಡಿದಳೆ ಕಮಲವ
ಆಯಕೆ ಹಿಡಿದಳೆ ಕಮಲವ ಕಡೆಗಣ್ಣ
ಢಾಳ ಬಂದ್ಹರನ ಕಂಗೆಡಿಸಿತು ೧೩
ಕಕ್ಕಸ ಕುಚದಮೇಲೆ ಅಷ್ಟಹಾರಗಳು ಹೊಳೆಯೆ
ಹಸ್ತಕಟ್ಟುಗಳು ಹೊಳೆಯುತ
ಹಸ್ತಕಟ್ಟುಗಳು ಹೊಳೆವುತ್ತ ಹೆಣ್ಣಿನ
ದೃಷ್ಟಿ ಬಂದ್ಹರನ ಕಂಗೆಡಿಸಿತು ೧೪
ಅಮ್ಮಾಲೆ ಆಡೋಳು ಒಮ್ಮೊಮ್ಮೆ ನೋಡೋಳು
ತನ್ನೊಳಗೆ ತಾನು ನಗುವೋಳು
ತನ್ನೊಳಗೆ ತಾನು ನಗುವೋಳು ಬೊಮ್ಮನ
ಮಗನ ಮರುಳು ಮಾಡಿ ನಡೆದಳು ೧೫
ನೋಡಳು ನುಡಿಯಳು ಹರನ ಕೂಡೆ ಮಾತಾಡಳು
ಓಡುತ್ತ ಚೆಂಡ ಹೊಯ್ವಳು
ಓಡುತ್ತ ಚೆಂಡ ಹೊಯ್ವವೇಗವ ಕಂಡು
ಮೂರುಕಣ್ಣವನು ಮರುಳಾದ ೧೬
ಕೆದರಿದ ಕೆಂಜೆಡೆ ಕೊರಳ ರುದ್ರಾಕ್ಷಿ
ಕರದಿ ತ್ರಿಶೂಲ ಹೊಳೆಯುತ
ಕರದಿ ತ್ರಿಶೂಲ ಹೊಳೆಯುತ ಹೆಣ್ಣಿನ
ನುಡಿಸುತ್ತ ಹಿಂದೆ ನಡೆದನು ೧೭
ರೂಢಿಗೊಡೆಯನ ಕೂಡೆ ಆಡುವ ವನಿತೆ
ನೋಡೆ ನೀ ಎನ್ನ ಕಡೆಗಣ್ಣ
ನೋಡೆ ನೀ ಎನ್ನ ಕಡೆಗಣ್ಣ ಹೆಣ್ಣಿನ
ಕಾಡುತ ಹಿಂದೆ ನಡೆದನು ೧೮
ಪೀತಾಂಬರದ ಮುಂಜೆರಗನು ಕಾಣುತ್ತ
ಸೋತೆ ಬಾರೆಂದು ಕರೆದನು
ಸೋತೆ ಬಾರೆಂದು ಕರೆದ ಧ್ವನಿಯ ಕೇಳಿ
ಕಾಂತೆ ಬನದೊಳು ಮರೆಯಾದಳು ೧೯
ಮಂಗಳ ಮಹಿಮಗೆ ಅಂಜಿಕೆ ಇಲ್ಲದೆ
ಗಂಗೆ ಪೊತ್ತವನ ತಿರುಗಿಸಿದ
ಗಂಗೆಪೊತ್ತವನ ತಿರುಗಿಸಿದ ತನ್ನಯ
ಮುಂದಣ ಅಂದವೆಲ್ಲ ಇಳುಹಿದ ೨೦
ಸೃಷ್ಟಿಯನೆಲ್ಲ ಹೊಟ್ಟೆಯೊಳಿಂಬಿಟ್ಟು
ವಟಪತ್ರ ಶಯನನಾಗಿ ಮಲಗಿದ
ವಟಪತ್ರ ಶಯನನಾಗಿ ಮಲಗಿದ ಉಡುಪಿನ
ಕೃಷ್ಣನೆಂದ್ಹರನು ತಿಳಿದನು ೨೧
ಭೂಮಿಯನೆಲ್ಲ ಈರಡಿ ಮಾಡಿದ
ಆಲದೆಲೆ ಮೇಲೆ ಮಲಗಿದ
ಆಲದೆಲೆ ಮೇಲೆ ಮಲಗಿದ ಶ್ರೀಹಯ-
ವದನನೆಂದು ಹರ ತಿಳಿದನು ೨೨

 

೩೩೬
ಹಲವು ಜನ್ಮದಲ್ಲಿ ಹರಿಯ ನೆನೆಯಲಿಲ್ಲ
ಕಲಿಗಳು ಆಗಿ ನೀ ಕೆಡಬೇಡ ಮನುಜ ೧
ನೀಚಜಾತಿಯಲಿ ಪುಟ್ಟಿ ಅಧಮನಾಗಿರಬೇಡ
ಭಜಿಸು ಭಕ್ತಿಗಳಿಂದ ಮಹಾಮಹಿಮ ಕೃಷ್ಣರ2
ನಂದ ಭದ್ರಾ ಜಯರಿಕ್ತ ಪೂರ್ಣ ವೆಂಬೊ
ಚೆಂದುಳ್ಳ ತಿಥಿಯಲ್ಲಿ ಘೃತ ನವನೀತ ದಧಿಕ್ಷೀರ ೩
ನಂದದಿ ಸಕ್ಕರೆ ಘೃತ ನವನೀತ ದಧಿಕ್ಷೀರ
ದಿಂದಲಿ ಅರ್ಚಿಸಿ ಸುಕೃತವ ಪಡಿ ೪
ಶಯನಾದಿಗಳಿಂದ ಶಾಖಾದಿ ಫಲವ್ರತ
ಭಯದಿಂದ ಮಾಡೋರೆ ಸತತ ೫
ಅದರಿಂದ ಚಾತುರ್ಮಾಸ ನಾಲ್ಕು ತಿಂಗಳು
ಉಳಿದಿನ ಬಂತಲ್ಲ ಭವನ ಪಾವಕ(?) ಭೀತಿ ೬
ಆಷಾಢ ಶುದ್ಧ ಏಕಾದಶಿ ಮೊದಲಾಗಿ
ಕಾರ್ತಿಕ ಶುದ್ಧ ದ್ವಾದಶಿ ಪರಿಯಂತ್ರ ೭
ಶ್ರೀಕಾಂತ ಯೋಗನಿದ್ರೆಲಿ ತಾ ಪವಳಿಸಿ
ಈಕ್ಷಿಸುತಿರುವೋನೆ ಭಕ್ತರ ೮
ಹರಿ ಮಲಗ್ಯಾನೆ ಎಂದು ಅಞೆನದಲಿ ನೀವ್ ಕೆಡಬೇಡಿ
ಪರಿ ಪರಿ ಕಲ್ಪೋಕ್ತದ ಪ್ರಕಾರದ ವ್ರತಗಳ ಮಾಡಿ ೯
ಸ್ನಾನ ಸಂಧ್ಯಾವಂದನೆಯ ಕಾಲಕಾಲದಲಿ ಮಾಡಿ
ಮನದಲ್ಲಿ ವಾಮನನ ನೆನದು ಸುಕೃತವ ಪಡಿ10
ಅತಿಥಿಗಳ ಮನ್ನಿಸಿ ಅನಾಚಾರಗಳ ಬಿಡಿ
ಸತಿಸುತರನೆ ಒಡಗೂಡಿ ವಿಹಿತವ್ರತಗಳ ಮಾಡಿ ೧೧
ಆಷಾಡಮಾಸದಲಿ ಶಾಕ ಹದ್ದಿನ ಮಾಂಸ
ಭೂಷಣ ಶ್ರಾವಣದಲಿ ದಧಿ ನಾಯಿಶ್ಲೇಷ್ಮ ೧೨
ಭಾದ್ರಪದ ಮಾಸದಲಿ ಪಾಲು ಸುರಾಪಾನ ಆಶ್ವೀಜ
ಕಾರ್ತೀಕ ಮಾಸದಲಿ ಚಿತ್ರಕ್ರಿಮಿರಾಶಿ ದ್ವಿದಳ ಬಹುಬೀಜ ೧೩
ಮಾಸ ನಿಷಿದ್ಧ ವಸ್ತುವನು ಕುದಿಸಿ ಬೇಯಿಸಿದರೆ
ಅಸ್ತ್ರವನು ದೇವರ ಅಂಗದೊಳಿಟ್ಟಂತೆ ೧೪
ಮಾಸನಿಷಿದ್ಧ ವಸ್ತುವನು ದೇವರಿಗೆ ಸಮರ್ಪಿಸಿದರೆ
ಬಹುಕಲ್ಪ ನರಕದೊಳದ್ದುವಿರಿ ಪಿತೃಗಳ ೧೫
ಧರ್ಮಜರು ನಾರದರು ಸ್ತುತಿ ಮಾಡುತಿರುವೋರು
ಧರ್ಮರಾದರ ಸಂವಾದ ಚಾತುರ್ಮಾಸದ ಸಂಕಲ್ಪ ೧೬
ಈ ಕಥೆ ವ್ರತವನೆಲ್ಲ ಅರಿತು ಯೋಚಿಸಿದವರಿಗೆ
ಬೇಕೆಂಬೊ ಮುಕ್ತಿಯನು ಕೊಡುವ ಹಯವದನ ೧೭

 

೨೧೭
ಹಿಂದೂ ಮುಂದೂ ಎಂದೆಂದಿಗೂ ಗೋವಿಂದನೆ ಎನಗೆ ಬಂಧು ಪ.
ಮನೆಯೆಂಬೋದೆ ಸುಮ್ಮನೆ ಮಕ್ಕಳೆಂಬೋದೆ ದಂಧನೆಹಣವೆಂಬೋದೆ ಬಲುಬೇನೆ ಹಾರಿಹೋಗುವದು ತಾನೆ ೧
ಮಂದಗಮನೆಯರ ಕೂಡಿ ಮದವೆಲ್ಲ ಹೋಗಲಾಡಿಮುಂದೆ ತೋರದಂತೆ ಬಾಡಿ ಮೋಸಹೋಗಲಾಡಬೇಡಿ೨
ಪರಧನ ಪರಸತಿ ಪರಕ್ಕೆಬಾರದಿದು ಘಾಸಸಿರಿಹಯವದನನ ಚರಣ ಭಜಿಸಿ ಪಡೆಯೆಲೊ ಕರುಣ೩

 

೩೩೭
ಹುಂಕಾರದಿಂದಲಿ ನಿತ್ಯ ಭೂತಗಳಟ್ಟಿ
ಕಿಂಕರರನು ಸಲಹುತಲಿ
ಪಂಕಜಾಕ್ಷನ ಪಾಡಿ ಪೊಗಳುವೆ ಕೊಡಗಿಯ
ಶಂಕರನಾರಾಯಣರ ಪ
ಪಡುವಿನ ಗಡಲಿನ ತಡಿಯಲಿ ವಿಪ್ರನ
ಗಡಣದ ನಡುವೆ ಕಾನನದಿ
ಒಡೆದುಮೂಡಿದ ದೇವರೊಡೆಯನ ಕೊಡಗಿಯ
ಮೃಡನಾರಾಯಣರ ವರ್ಣಿಸುವೆ೧
ಕಪ್ಪುರಗೌರನ ಮೇಘಶ್ಯಾಮಳನಾ ಕಂ-
ದರ್ಪನ ವೈರಿಯಪಿತನ
ತಪ್ಪದೆ ನಂದಿ ಗರುಡವಾಹನನಾ-
ಗಿಪ್ಪದೇವನ ಕಂಡೆನಿಂದು ೨
ಮಂಜುಳ ಸರ್ಪಾಭರಣನ ಕಂಡೆನು
ಮಂಜುಳ ಹಾರಪದಕನ
ಕುಂಜರ ಚರ್ಮವು ಪೊಂಬಟ್ಟೆವಸನವು
ಕೆಂಜೆಡೆ ಮಕುಟದ ಪ್ರಭೆಯು ೩
ಮುರಹರ ಪುರಹರ ಗೌರೀಶಲಕ್ಷ್ಮೀಶ
ಗಿರಿವಾಸ ವೈಕುಂಠವಾಸ
ವರಚಕ್ರ ತ್ರಿಶೂಲಧರ ತ್ರಾಹಿಯೆಂಬ ಮ-
ತ್ರ್ಯರ ಮನ್ನಿಸುವ ಕರುಣದಲಿ ೪
ವ್ರತದಿಂದ ನೋಡುವ ಯತಿಗಳ ಸಂದಣಿ
ಕ್ಷಿತಿಯನಾಳುವ ರಾಯರರ್ಥಿ
ಶ್ರುತಿ ಪುರಾಣಗಳರ್ಥಿ ಕೊಡಗಿಯ ದೇವನ
ಮತಿಗೆ ಮಂಗಳವೀವುತಿದಿದಕೊ ೫
ರಂಗಪೂಜೆಗಳ ಸಂದಣಿ ಒಂದು ಕಡೆಯಲ್ಲಿ
ಮಂಗಳಾರತಿಯ ಸಂಭ್ರಮವು
ತುಂಗವಿಕ್ರಮನ ಸ್ತುತಿಸಿ ಪಾಡಿ ಪೊಗಳುವ
ಹಿಂಗದೆ ನೋಡುವ ಜನರು ೬
ಅಯನದ ಶ್ರೀಬಲಿ ದೀಪದುತ್ಸಹಗಳು
ಭುವನದ ನಡುವೆ ಕಾನನದಿ
ಹಯವದನನೆಂಬ ಕೊಡಗಿಯ ದೇವನ
ನಯದಿ ನರರಿಗೆ ತುತಿಸಲಿನ್ನಳವೆ ೭

 

೯೯
ಹೆಜ್ಜೆ ನೋಡೋಣ ಬಾರೆ ಗೋಪಾಲಕೃಷ್ಣನಗೆಜ್ಜೆಯ ಕಾಲಿನ ಅರ್ಜುನಸಾರಥಿ ಮೂರ್ಜಗದೊಡೆಯನ ಪ.
ಮಚ್ಛನಾಗಿ ವೇದವ ತಂದವನಂತೆ ಕೂರ್ಮನಾಗಿ[ಭೂಧರ]ಪೊತ್ತವನಂತೆವರಹ ನರಹರಿಯಾಗಿ ದುರುಳರ ಸೀಳಿದಚೆಲುವ ರೂಪದಿ ದಾನವ ಬೇಡಿ ತುಳಿದ ಪುಟ್ಟ ೧
ಸೂರ್ಯಕೋಟಿ ಪ್ರಕಾಶದಿ ಮೆರೆವನಚಂದ್ರಕೋಟಿ ಶೀತಲದಿಂದ ಬರುವನಮಂದೆಯ ಕಾಯುತ ಮೈಯ್ಯೆಲ್ಲ ಧೂಳ್ಗಳುಚೆಂದದಿಂದ ಕೊಳಲನೂದುತ ಬರುತಿಹ ೨
ಮಾತೃದ್ರೋಹವ ಮಾಡಿದ ಪರಶುರಾಮನಪಿತೃವಾಕ್ಯವ ಸಲಿಸಿದ ಶ್ರೀರಾಮನ ಕೃಷ್ಣಾವತಾರನಬೌದ್ಧ ಸ್ವರೂಪನ ಹಯವನೇರಿದ ಕಲ್ಕಿಹಯವದನನ ದಿವ್ಯ ೩

 

೨೧೮
ಹೋಗುತಿದೆ ಹೊತ್ತು ಬರಿದೆ ವ್ಯರ್ಥವಾಗಿಹರಿಗುರುಗಳ ನೆನೆಯದೆ ಪ.
ನರರ ನೂರಮೂವತ್ತೆರಡುಕೋಟಿವರುಷ ದಿವಸವೊಂದೆ ಬೊಮ್ಮಗೆಪರೀಕ್ಷಿಸಲು ಬ್ರಹ್ಮಕಲ್ಪಸಾಸಿರ ಕೋಟಿನರಕದೊಳಗೆ ಬಿದ್ದು ಮರಳಿ ಭವದಿ ಬಂದು ೧
ಒಂದೊಂದಕೆ ಇಪ್ಪತ್ತೊಂದುಲಕ್ಷ ಯೋನಿಎಂದೆನಿಸುವ ಸ್ವೇದಜ ಉದ್ಬಿಜಬಂದು ಜರಾಯುಜಾಂಡಜ ಕುಲದಿ ಪುಟ್ಟಿನೊಂದೆ ಎಂಬತ್ತುನಾಲ್ಕುಲಕ್ಷ ಯೋನಿಯಲಿ ೨
ಮಾಸ ಒಂಭತ್ತು ಮತಿಗೆಟ್ಟು ಗರ್ಭದಿಹೇಸದೆಬಂದು ಜೀವಿಸಿ ಬಳಲಿಮೋಸವನರಿಯದೆ ಮುನ್ನಿನ ಕರ್ಮದಿಘಾಸಿಯಾದೆನೊ ಯೌವನಮದದಿ ಸೊಕ್ಕಿ ೩
ಕೆಲಹೊತ್ತು ಚದುರಂಗ ಪಗಡೆ ಆಟಗಳಿಂದಕೆಲಹೊತ್ತು ಹಸಿವೆ ನಿದ್ರೆಗಳಿಂದಲಿಕೆಲಹೊತ್ತು ಕಾಕಪೋಕರ ಕತೆಗಳಿಂದಕೆಲಹೊತ್ತು ಪರನಿಂದೆ ಪರವಾರ್ತೆಗಳಿಂದ ೪
ಕಾಲವು ಕಡೆಯಾಗಿ ಹರಿ ನಿಮ್ಮನರ್ಚಿಸೆವೇಳೆಯಿಲ್ಲದೆ ಹೋಯ್ತು ಬಂಜೆಯಾಗಿಜಾಲಿಸಿಹೋಗುತಿದೆ ಈ ವಿಧದಿ ಹೊತ್ತು ಬೇಗನೆಪಾಲಿಸಿ ದಯಮಾಡೊ ಸಿರಿಹಯವದನ ೫

 

೩೦೦
ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ ಪ.
ಶೃಂಗಾರಪುರುಷರು ಬಹುಮಂದಿಯಿರಲುಅ.ಪ.
ಗುಷ್ಟುನಾರುವಮೈಯ್ಯಿ ಬಿಟ್ಟಿದ್ದಬಿರುಗಣ್ಣು
ಮುಟ್ಟಿನೋಡಿದರೆ ಮೈಯತಿ ಕಠಿಣವು
ಸೊಟ್ಟ ಮೋರೆಯು ಇವಗೆ ಎಷ್ಟುದ್ದ ಹಲ್ಲುಗಳು
ಇಷ್ಟು ಘೋರಮುಖದಳಿಯನೆಲ್ಲ್ಲಿ ದೊರಕಿದನೊ ೧
ಬಡವನು ಭಿಕ್ಷುಕನು ಬಡಬನಂದದಿ ಕೋಪವು
ನೋಡಿದರೆ ತಲೆ ಜಟಿಯು ಕಟ್ಟಿಹುದು
ಬೆಡಗುನುಡಿಗಾರ ಜಾರ ಚೋರನಿಗೆ
ನೋಡಿ ನೋಡಿ ಹೆಣ್ಣ ಹ್ಯಾಂಗೆ ಕೊಟ್ಟನು ೨
ಭಂಡನಾಗಿರುವನು ಕಂಡವರೊಡನೆ ಕಾಳಗವ
ಕೊಂಡುಬಹ ಬಲು ಉದ್ದಂಡನಿವನು
ಅಂಡಜವಾಹನಗೆ ಯೋಗ್ಯವಾದ ಹೆಣ್ಣ
ಕಂಡುಕಂಡೀ ಹಯವದನಗೆ ಕೊಟ್ಟನ್ಹ್ಯಾಗೆ ೩

 

೩೦೧
ಹ್ಯಾಂಗೆ ಮೆಚ್ಚಿದೆ ಹೆಂಗಳರನ್ನೆ
ಹಲವುರೂಪ ತಾಳಿದವನ ಪ.
ರಾಗ ಮಿಗಿಲು ಲಕುಮಿರಮಣ
ಭೋಗಿರಾಜಶಯನನ ಅ.ಪ.
ಜಲದಿ ಚರಿಸುತಿಹನು ಸತತ
ಒಲಿದು ಶಿರವ ನೆಗಹಿ ನೋಡ
ಸಲೆವಿಕಾರ ಕೋರೆಹಲ್ಲ
ಚಲ ಮಹೋಗ್ರ ರೂಪನ
ನೆಲವನಳೆದು ತಾಯಿತಲೆಯ ತರಿದು ಕರಡಿ ಕಪಿಯೊಳಾಡಿ
ಒಲಿದು ಗೋವುಕಾಯ್ದು ಬತ್ತಲೆತೊಳಲಿ ತುರಗವೇರ್ದನ ೧
ಸೊಗಡುಗಂಧವೆಸೆವ ತನುವು
ತೆಗೆದ ಬಾಯಿ ಕುಗ್ಗಿದ ಬೆನ್ನು
ಅಗೆದು ನೆಲವ ಬಗೆದು ರೌದ್ರ
ಹೊಗೆಯತೋರ್ವ ವದನನ
ವಿಗಡವಿಪ್ರ ರಾಜವೈರಿ ಬಗೆಯಬಡದಾರಣ್ಯವಾಸಿ
ನಗವ ಬೆರಳ ತುದಿಯಲೆತ್ತಿ ಜಗದ ಲಜ್ಜೆಯ ತೊರೆದ ಕಲ್ಕಿಯ ೨
ಮಿಡಿದು ಹೊಳೆವ ಚಂಚಲಚಿತ್ತ
ಕಡುಕಠಿಣ ದೇಹದವನ
ಹಿಡಿದ ರೋಮಮಯ ಶರೀರ
ಕಿಡಿಯನುಗುಳ್ವ ನಯನನ
ಬಿಡದೆ ದಾನಬೇಡಿ ಕೊಡಲಿಪಿಡಿದು ಮೃಡನ ಧನುವ ಮುರಿದು
ಜಡಿದು ಅಗ್ರಪೂಜೆಗೊಂಡ ಕಡುನಿರ್ವಾಣ ಹಯವದನನ ೩

ಸಂಪ್ರದಾಯದ ಹಾಡುಗಳು

 

೨೮೪
ಉಗಾಭೋಗ
ಜಯ ಮತ್ಸ್ಯಕೂರ್ಮ ವರಾಹ ನಾರಸಿಂಹ ಜಯ
ಜಯ ಜಯ ವಾಮನ ತ್ರಿವಿಕ್ರಮನೆ
ಜಯ ಪರಶುರಾಮ ರಘುರಾಮ ಜಾನಕಿರಮಣ
ಜಯವೃಷ್ಣಿಕುಲರನ್ನ
ಜಯ ಬೌದ್ಧಾ ಖಿಳ ಮೋಹನ್ನ ಮಹಾಮಹಿಮ
ಜಯ ಜನನಮರಣವಿದೂರ
ಜಯ ಕಲ್ಕಿಯಇಗಿ ಕಲಿಯನೆ ಗೆಲಿದ ದೇವ
ಜಯ ರಾಮ ಪುಣ್ಯ ಶ್ರೀರಾಮ
ಜಯ ಬದರಿಕಾಶ್ರಮದ ನಾರಾಯಣನೆ ಜಯ
ಜಯ ಬಾದರಾಯಣಪ್ರವೀಣ
ಜಯ ಪ್ರಯಾಗದಲಿಪ್ಪ ಮಾಧವನೆ ಜಯ ಜಯ
ಜಯ ಜಯ ಕಾಶಿ ಬಿಂದುಮಾಧವನೆ
ಜಯ ಜಗನ್ನಾಥ ಸಿಂಹಾದ್ರೀಶ ಜಯಜಯ
ಜಯ ಅಹೋಬಲ ನರಸಿಂಹ
ಜಯ ತಿರುಮಲರಾಯ ಕಂಚಿ ವರದರಾಜ
ಜಯರಂಗನಾಥ ಶ್ರುತಿಗಾಥ
ಜಯ ಸೇತುವಿನ ರಾಮ ಜಯ ಪದ್ಮನಾಭ ಜಯ
ಜಯ ಮುದ್ದು ಉಡುಪಿನ ಕೃಷ್ಣ
ಜಯ ಸ್ವಾದೆಯಲಿ ಮೆರೆವ ತ್ರಿವಿಕ್ರಮರಾಯ
ಜಯ ದ್ವಾರಾವತಿಯ ಗೋವಿಂದ
ಜಯ ಪುಂಡರೀಕಮುನಿವರದವಿಠಲರಾಯ
ಜಯ ಗದಾಧರ ಗಯಾಧೀಶ
ಜಯ ಪ್ರಿಯ ಹಯವದನ ಜಿತಕದನ
ಜಯ ಮಧ್ವಗುರುವರಾರಾಧ್ಯ

 

೧೮೩
ಉಗಾಭೋಗ
ಧಸ್[ರೆ]ಯೊಳಗೆ ಬಹು ದೀನನಾಗಿ ಬಾಳುವೆನಯ್ಯನರರಿಗೆ ಬಾಯಿತೆರೆದು ನಿತ್ಯಇರುಳು ಹಗಲೆನ್ನದೆ ಮನೆಮನೆಯ ತಿರುಗುವೆನೊಕರುಣ ಬಾರದು ಕಠಿಣಜನರಿಗೊಮ್ಮೆಮರೆಮೋಸದಲಿ ಮಾತುಗಳನಾಡುತಾರೆಗರುವಿನಿಂದಲಿ ಗಜದಂತಿ[ಪ್ಪರು]ಅರಸುಗಳು ನಾವೆಂದು ಅಹಂಕಾರದಲಿ ಮುಣುಗಿಕರವ ಮುಗಿದರೆ ಮುಗಿಯರೊಂದುಕಾಲದುರುಳಜನರ ಸೇವೆ ವ್ಯರ್ಥವೊ ದೇವೇಶಚೆಲು[ವ]ಹಯವದನ ಮಹಾರಾಜ ರಾಜ

 

೧೮೯
ಉಗಾಭೋಗ
ನಿನ್ನ ಧ್ಯಾನದ ಶಕ್ತಿಯ ಕೊಡೊಅನ್ಯರಲಿ ವಿರಕ್ತಿಯ ಕೊಡೊನಿನ್ನ ನೋಡುವ ಯುಕ್ತಿಯ ಕೊಡೊನಿನ್ನ ಪಾಡುವ ಭಕ್ತಿಯ ಕೊಡೊ-ನ್ಹ್ನತ್ತೆ ಬರುವ ಸಂಪತ್ತಿಯ ಕೊಡೊಚಿತ್ತದಿ ತತ್ವದ ಕೃತ್ಯವ ತೋರೊಮತ್ತೆ ತುದಿಯಲಿ ಎನಗೆ ಮುಕ್ತಿಯ ಕೊಡೊಅತ್ತತ್ತಮಾಡೊ ಭವಕತ್ತಲೆಯೆನಗೆಮುತ್ತಿದೆ ಹಯವದನ

 

೨೩೬
ಉಗಾಭೋಗ
ಬ್ಯಾಡ ಭವದ ಬ್ಯಾಸರ ಸುಡು ಸುಡು ಸುಡು ಮರುಳೆಆಡಾ ಹರಿದಾಸರೊಡನೆ ಸಂತತ ಮರುಳೆನೋಡ ತೀರ್ಥಯಾತ್ರೆ ಹರಿ ಪ್ರತಿಮೆಗಳಮಾಡ ಉಪವಾಸ ಜಪತಪ ವ್ರತಾದಿಗಳಪಾಡು ಕೃಷ್ಣಚರಿತ್ರೆಗಳ ಪರಿಪರಿನಾಡ ಮಾತುಗಳಿಂದೇನು ಫಲಇಡ[ಬೇಡ] ಮಮತೆಗಳಬೇಡಾ ಭಕುತಿ ವಿರಕುತಿ ಮುಕುತಿಗಳ ಕೂಡಾಚಂಚಲ ತನುಮನ ನೆಚ್ಚದಿರು ಮೂಢಬ್ಯಾಡಿನ್ನು ಹಯವದನ ಹರಿಯೆಂಬ ಜೋಡಕಟ್ಟಿಕೋ ವೈಕುಂಠಪುರದೊಳಗೆ ಬಂದು

 

೨೪೫
ಸುಳಾದಿ
ಧ್ರುವತಾಳ
ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ-
ಯಂಬಕನ ಗೌರಿಯರಸನ ತುತಿಸುತಿದಕೊ
ಸಾಂಬಶಿವನೆಂಬುವನು ಇವನೆ ಆದಡೆ ಜಡೆಯ
ಸಂಭ್ರಮದಿಂದ ಗಂಗೆ ಗರ್ವಿಸುವಳು
‘ಡಂಭ ಏಕೋರುದ್ರನದ್ವಿತೀಯವದನ್ತೌ’
ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವಸಖನು ಒ-
ಡಂಬಡದು ವಿಷ್ಣುವೆಂಬವತಾರ ಮೂಲರೂಪ
ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ
ಇಂಬು ಸಲ್ಲುವುದು ‘ಸೃಷ್ಟ್ಯಾಧಿಕಾ ಏಕೋ ಮಹಾನೀ’
ಯೆಂಬ ಹಿರಿಯರ ಮತವ ಸುಮತವೆಂದು
ನಂಬು ದನುಜ ಸ್ತಂಭಸಂಭವ ರುದ್ರಶೀರ್ಷಕನು ಪುರಹರನೆ ಗಡ
ಅಂಬುಜಾಕ್ಷ ಹಯವದನ ಅಖಿಳರೊಡೆಯ ೧
ಮಠ್ಯತಾಳ
ಆರು ಪುರಾಣ ಗೌರಿಯ ಗಂಡನವು ಮ-
ತ್ತಾರು ಪುರಾಣ ಚತುರಮುಖನವು
ಆರು ಪುರಾಣ ಹಯವದನನವು
ತೋರೊ ಸಾಂಬಶಿವನ ಪುರಾಣವ
ಭಾರತ ಪುರಾಣದೊಳಗಿಲ್ಲದ ಕಾರಣ ಶಶಶೃಂಗ ನಿನ್ನ ಶಿವ ೨
ತ್ರಿಪುಟತಾಳ
ಕೈಲಾಸ ರುದ್ರನದು ವೈಕುಂಠಲೋಕ ನಮ್ಮ
ಶ್ರೀಲೋಲನಿಹಲೋಕ ಜಲಜಸಂಭವನಿಗೆ
ಮೂಲೋಕವಲ್ಲದೆ ಮೇಲಿನ ಸತ್ಯಲೋಕ
ಪೇಳೊ ನಿನ್ನ ಸಾಂಬಶಿವನ ಲೋಕ
ಖೂಳಜನರೊಡನಾಡದಿರು ದುರುಕ್ತಿಯನು ಬಿಡು
ಸಾರೊ ಸಜ್ಜನ ಕುಲದೈವ ಹಯವದನನ್ನ
ಆಳಾಗಿ ಬದುಕು ಶ್ರೀಹರಿ ಸರ್ವೋತ್ತಮನೆಂಬ
ಸಾರಮತವನು ಸೇವಿಸು ಮನುಜ ೩
ರೂಪಕತಾಳ
ಶ್ರುತಿ ಪುರಾಣದೊಳಿಲ್ಲದ ಕ್ಷಿತಿಯೊಳರ್ಚನೆಗಲ್ಲದಾ-
ದಿತಿ ದೇವಕ್ಕಳೊಲ್ಲದ ಮತಿವಂತರ[ಮುಂದೆ]ನಿಲ್ಲದ
ಮತವಿದ್ಯಾತಕೊ ಸಲ್ಲದು ನಮ್ಮ
ಗತಿ ಹಯವದನ ಬಲ್ಲಿದ ೪
ಝಂಪೆತಾಳ
ಪರಶಿವ ನಿರಾಕಾರನಾದಡೆ ನಿರ್ಗುಣ ಬೊಮ್ಮ
ಹರಶಿವಾದಿ ಪೆಸರು ಪಂಚಮುಖನಿಗಲ್ಲದೆ ಸಲ್ಲ
ಶರೀರವೆರಸಿದಡೆ ಜನ್ಮ ಮರಣಗಳು ಬಿಡವು ನಿನ್ನ
ದುರುತ್ಸಹ ಬರಿದೆ ಹೋಯಿತು
ಪರಶಿವ ಪರದೇವನೆಂದು ವಾಸುದೇವಗೆ ಸಾ-
ಸಿರನಾಮದೊಳಿದ್ದ ಕಾರಣ ಪರಶಿವನವನೆ
ಪೆರತೊಬ್ಬ ಶಿವನಿಲ್ಲ ಪರಾತ್ಪ್ಪರ ನಮ್ಮ
ಸಿರಿದೇವಿಯರಸ ಹಯವದನ ಕಾಣೊ ೫
ರೂಪಕತಾಳ
ತ್ರಯತ್ರಿಂಶದ್ವೈದೇವಾ ಸೋಮಪಾ-ಯೆಂದು
ಪ್ರಿಯಾತ್ಪ್ರಿಯಧಾಮ ಮೂವರು ಜೀವರು ನಿ-
ಶ್ಚಯಿಸಿ ಪೇಳಿದ ಕಾರಣದಿ ಇನ್ನೊಂದು
ಹೆದ್ದೈವ ಮತ್ತೆಲ್ಲಿಹುದೊ
ನ್ಯಾಯವೆಲ್ಲಿಹುದೊ ಪೇಳೆಲೊ ಕುವಾದಿ
ನ್ಯಾಯಕೋವಿದರೊಳು ಶ್ರೀ
ಹಯವದನನ ಬೊಮ್ಮ ಶಿವರೆಂಬೊ ಈ
ನ್ಯಾಯವು ತಪ್ಪದು ಇನ್ನೊಬ್ಬರೊಪ್ಪರೊ ೬
ಜತೆ
ಹಯವದನನೇಗತಿ ಹಯವದನನೇ ಪತಿ
ಹಯವದನನೇ ಸುರಪತಿ ಸುರಾಸುರರುಗಳಿಗೆ

 

೨೫೧
ಸುಳಾದಿ
ಧ್ರುವತಾಳ
ಒಪ್ಪುವ ಮಾನಿಸ ದೇಹಂಗಳೆಲ್ಲ ಬ್ರಹ್ಮಪುರಕೊಂಬತ್ತು ದ್ವಾರಗಡಾ
ಎಪ್ಪತ್ತೆರಡುಸಾವಿರ ನಾಡಿಯೊಳು ಇಪ್ಪವುಗಡಾ ಬೀದಿಬೀದಿಯಂತೆ
ಅಪ್ರತಿ ಮಧ್ಯೇಕನಾಡಿ ರಾಜಬೀದಿ ಷಟ್ಪದ್ಮವದರೊಳು ಬಗೆ ಬಗೆಯ
ಸರ್ಪಶಯನನೋಲಗಶಾಲೆ ಗಡಾ ಸೂರ್ಯನ ಪ್ರಭೆ ಪಂಜುಬೆಳಕು ಗಡಾ
ತಪ್ಪದೆ ಸುಖವೆಂಬೊ ಸಕ್ಕರೆ ಹೇರು ಒಪ್ಪುದು ಗಡಾ ದ್ವಾರದಲ್ಲಿ
ಅಪ್ರತಿಮೊದಲಾದ ದೇವಕ್ಕಳೆಲ್ಲ ಬ್ರಹ್ಮಪಾಲಕರಾದರು ಪಟ್ಟಣ ಸ್ವಾಮಿಗೆ
ಅರ್ಪಿಸುವರು ಗಡಾ ಹಯವದನನಿಗೆ ಅವನಪ್ಪಣೆಯಲ್ಲಿ ತಮಗಲ್ಪ ಗಡಾ
ಅಲ್ಪಸಾರ ಜೀವರಂಗದಿ ಎಲ್ಲಿ ಗಡಾ ೧
ಮಠ್ಯತಾಳ
ಬೀದಿಬೀದಿಯಲ್ಲಿ ಇರುಳು ಹಗಲು
ಕಾದುಕೊಂಡಿಹ್ಯರು ತಳವಾ[ರ]ರೈವರು
ಮಾಧವಗತಿಪ್ರಿಯರೆಂದೆಂದೂ
ಹಾದಿಯ ತೊಡರು ದೈತ್ಯ ಚೋರರಿಗೆ
ಅಧಿಕಾರಿ ಕಮಂಡಲಾಗ್ರೇಸರರು
ಈ ಧರೆಯೊಳು ಹಯವದನನಾಳುಗಳು
ಮಾಧವಗತಿ ಪ್ರಿಯರಿವರೆಂದೆಂದೂ ೨
ರೂಪಕತಾಳ
ಭಿಕ್ಷುಕ ಮೊದಲಾದ ಎಲ್ಲ ಪಟ್ಟಣದೊಳು
ಪೊಕ್ಕು ಬೇಡುವರು ಬೀದಿಬೀದಿಯಲ್ಲಿ
ಅಕ್ಕಟಾ ಈ ಜೀವವೊಂದೇ ನಾಡಿವಾಸ
ರಕ್ಷಿಸಿಕೊಂಬುವರಲ್ಲಿಹ್ಯ ಮೂವರು
ಪಕ್ಷಿವಾಹನಗಲ್ಲದೀ ದೇಹ ದೊರೆತನ
ದುಃಖಿ ಜೀವರಿಗೆಂತಪ್ಪುದೊ ಹಯವದನ ೩
ಝಂಪೆತಾಳ
ಇಂತಾಪಟ್ಟಣ ನಾಡಿ ಒಂದೇ ಎಂಬ
ಭ್ರಾಂತಮಯವಾದೀಸೆರೆಯ ಮನೆಯೊಳು
ಅಂತವಿಲ್ಲದ ಜೀವರಾಸಿಯಲ್ಲಿ ಪೊಗಿಸಿ
ಚಿಂತೆಗೊಳಗು ಮಾಡಿ ಕರ್ಮಪಾಶದಿ ಕಟ್ಟಿ
ಸಂತತವಾಳುತಿಹ್ಯ ಹರಿಯ ಪುರವಿದು
ಸಂತೆ ಜೀವರಿಗೆ ಎಂತಪ್ಪೊದೋ ಹಯವದನ ೪
ತ್ರಿಪುಟತಾಳ
ತಾಯಿ ಪೊಟ್ಟೆಯೊಳಿರಲು ದೇಹವಾರಿಚ್ಛೆ
ಬಾಯಿಬಿಟ್ಟಳುವಾಗ ದೇಹವಾರಿಚ್ಛೆ್ಛ
ಕಾಯ ತನ್ನಗಲುತಿಹ ದೇಹವಾರಿಚ್ಛೆ
ಆಯಾ ಬಿಟ್ಟಾಯಾಹಿಡಿಯೆ ದೇಹವಾರಿಚ್ಛೆ
ಶ್ರೀಯರಸ ಹಯವದನ ಹರಿಪುರದರಸು ೫
ಅಟ್ಟತಾಳ
ಅನಿಲಾನು ಅನಳಾನು ಅಣುತೃಣವೆಂದು ಮುನ್ನ
ಕೆಣಕಲಾರದೆ ದುರ್ಮನದಿ ತಿರುಗಿದರೇನು
ಇನಿತು ತತ್ವದ ಜೀವರನು ಮುನ್ನೆ ಹರಿ ತಾನು
ಅನೇಕರೂಪದಿ ಪೊಕ್ಕು ನಡೆಸಿಕೊಂಬೆನೆನಲು
ಅನಿಮಿಷರಿಗಲ್ಲದೆ ಘನತೆ ನರರಿಗುಂಟೆ
ಗುಣನಿಧಿ ಹಯವದನನಾಧೀನ ಜಗವೆಲ್ಲ೬
ಅಟ್ಟತಾಳ
ದೇಹಬಂಧನವ ಬಿಡಿಸುವುದೇ ಹರಿ ಯಾಕೆ
ದೇಹದಾತ ನೀನಾದಡೆ ಮರುಳ
ದೇಹಕೆ ಕ್ಲೇಶಸಂಕಟವಿದ್ಯಾತಕೆ
ದೇಹದಾತ ಶ್ರೀ ಹಯವದನ ನೀನೆ
ದೇಹಿಗೆ ದೇಹ್ಯಾ ದೇಹದ ಯೋಗ ವಿಯೋಗಕಧಿಪತಿ ೭
ಆದಿತಾಳ
ನಿನ್ನದಂತಿಹ್ಯ ಇಂದ್ರಿಯ ಇಂದ್ರಿಯ
ನಿನ್ನದಿಂತಿಂದ್ರಿಯದರಸುಗಳಿರಲು
ನಿನ್ನದಂತಸುಗಳ ವರ್ತನೆ
ನಿನ್ನದೆಂತ ದೇಹವಿಚಾರ ತನುವಿದಾರದು
ನಿನ್ನದಂತೇ ದೇಹ ನಿದ್ರೆಗೈಯಲು
ಮನ್ನದಿ ನಂಬು ಜೀವ ಸಿರಿಹಯವದನನ ೮
ಜತೆ
ದೇವ ಅರಸು ನೀನೆ ದೇಹದರಸು ನೀನೆ
ಶ್ರೀ ಹಯವದನನೆ ಸರ್ವರರಸು ನೀನೆ

 

೨೫೪
ಸುಳಾದಿ
ಧ್ರುವತಾಳ
ಕಲ್ಕಿಯಾಗಿ ತುರಗವನೇರಿ ಖಳಕಟಕವ
ಪೊಕ್ಕಾಡಿ ಭವದಿ ಆ ರಕ್ಕಸರ ಶಿಕ್ಷಿಪೆನೆಂದು
ಭಕ್ತರ ಬಾಧಿಪ ಮೃತ್ಯುಕರೆಗಳ ಬಾರಿ ಬಾರಿ
ಸೊಕ್ಕು ಮುರಿವೋದಕ್ಕೆ ಭಜಕ್ಕರ ಮೇಲಕ್ಕರಿಂದ
ಮುಕ್ತಿ ಪಥವನೇರಿಸಿ ಮಧ್ಯಮಾಧಮ ಜೀವರ
ಕುಕ್ಕಿ ಕೆಡಹಬೇಕೆಂದು ಬುದ್ಧಚಾರುವಾಕರ
ಉಕ್ಕು ತಗ್ಗಿಸುವುದಕ್ಕೆ ಚಿನ್ನದೆರಡು ನೇಜಯವ
ಇಕ್ಕೆಲದೊಳಿಕ್ಕಿಕೊಂಡ ಕಕ್ಕಸ ರಕ್ಕಸವೈರಿ
ಲಕ್ಷುಮಿಯ ರಕ್ಷೆಗಾಗಿ ಪಚ್ಚೆಯದ ಕಠಾರಿಯ
ಪಕ್ಕೆಲಿ ಸಿಕ್ಕಿಸಿದ ಪರಾಕ್ರಮಿ ಹಯವದನ ೧
ಮಠ್ಯತಾಳ
ಕಟ್ಟಿದ ಪೊನ್ನ ಕಠಾರಿಯ ನೋಡು
ಮೆಟ್ಟಿದ್ದ ರನ್ನದ ಹಾವಿಗೆ ನೋಡು
ತೊಟ್ಟಿದ್ದ ಕನಕ ಕವಚವ ನೋಡು ಹತ್ತಿ
ಲಿಟ್ಟಿದ್ದ ಕರಚೂರಿಯ ಕಾಂತಿಯ ನೋಡು
ದುಷ್ಟರ ತರಿವ ತನ್ನಿಷ್ಟರ ಪೊರೆವ ಜಗ
ಜಟ್ಟಿ ನಮ್ಮ ದಿಟ್ಟ ಹಯವದನ೨
ತ್ರಿಪುಟತಾಳ
ಹಂಸರ ನೋಯಿಸಿದ ಹಂಸ ಡಿಬಿಕರ
ಹಿಂಸೆಯ ಮಾಡಿದನಿವ ವೈರಿಕೋಲಾಹಲ
ಅಂಶಂಶುವಾಗಿ ಜರಾಸಂಧ ತರಿದ ಸೈನ್ಯ ವಿ-
ಧ್ವಂಸ ವಿನೋದಿಯಿವ ಸಮರ ನಿಃಶ್ಯಂಕ
ಹಂಸವಾಹನ ಗುರು ಹಯವದನನೆ ಖಳ-
ವಂಶಕುಠಾರನೆಂಬ ಬಿರುದ ಮೆರೆದ ೩
ಅಟ್ಟತಾಳ
ಆವನ್ನ ಪೊಟ್ಟೆ ಲೋಕಮಯನೆಂಬ
ಜೀವನ್ನ ಗುಟ್ಟು ಕೆಡಿಸಿತು ನೋಡಾ
ಭವನ್ನಟ್ಟಿ ಬಂದ ಭಸುಮಾಸುರನ
ಜೀವವ ಕೊಂಡಿತಾವನ ಮುಟ್ಟು ನೋಡಾ
ಆವನ್ನ ದಾಡೆ ಧರೆಭಾರವನೆತ್ತಿ-
ತಾವನುಂಗುಷ್ಟ ಈ ಕ್ಷಿತಿಯ ತಗ್ಗಿಸಿ
ಜೀವವ ಕಾಯಿತು ಅರ್ಜುನನ ಗಂಗಾ
ದೇವಿಯಿಂದ ಶಿವನ ಪಾವನ್ನ ಮಾಡಿತು
ಆವನ್ನ ಕೋಡು ಭರದಿಂದಿಳೆಗಿಳಿದ
ಶಿವನ ರಥವನೆತ್ತಿಕೊಟ್ಟಿತು
ಆವನ್ನಾಟ ಅಕ್ಷಯವೆಂದು ನುಡಿಯೆ ಲೆ-
ಕ್ಕವಿಲ್ಲದಂಬರ ನಿತಂಬಿನಿಗೆ ತುಂಬಿಸಿತು
ಆವನ್ನ [ಬಾಯಿ]ಕಾಡುಕಿಚ್ಚು ನುಂಗಿತು
ಆವನ್ನ ಕರುಣಾಮೃತ ಕಪಿಕಟಕವೆಬ್ಬ್ಬಿಸಿತು
ಆವನ್ನೆದೆ ಭಗದತ್ತನ ಆಯುಧವ ತಾಳಿ ತನ್ನವನ
ಜೀವ ಕಾಯಿದು ಕೊಂಡಿತು
ಆವನ್ನ ಬೆರಳ್ಗಳು ಮುನಿಗಿಷ್ಟಾನ್ನವ ಕೊಟ್ಟವು
ಆವನಂಗೈ ಸುಧೆಯನಾವಾಗ ಕರೆವುತಿದೆ
ಆವಸಿರಿಹಯವದನನ್ನ ಪುಟ್ಟವದನವೆ ಪೂತನಿಯ ಕೊಂದಿತು ೪
ಝಂಪೆತಾಳ
ಒಂದು ಕರವೆ ಮಧುವ ಮರ್ದಿಸಿ ಕೊಂದು ಕೈಟಭನ
ಚೆಂದದ ಪೆರ್ದೊಡೆಯಲಿಟ್ಟು ಪುಡಿ ಮಾಡಿ ಕೊಂದಿತು
ಒಂದು ಕರವೆ ಕಲ್ಪತರುವ ಕಿತ್ತು ಪುರಕೆ ತಂದಿತು
ಒಂದು ಕರವೆ ಸುರಾಸುರರ ವೃಂದಕೆ ನಿರ್ಬಂಧವ ಕೊಟ್ಟ
ಮಂದರವೆತ್ತಿ ಪಕ್ಷೀಂದ್ರನ ಸ್ಕಂದದ ಮ್ಯಾಲಿರಿಸಿತು ಮ-
ತ್ತೊಂದು ಕರವೆ ತಾಳೆಮರದಲ್ಲಿ ಖಳರ ಕೊಂದಿತು
ಒಂದು ಪಾದ ಹೆಬ್ಬಾವ ಮೆಟ್ಟಿ ಗಂಧರ್ವ ಪುರಕೈಸಿತು
ಒಂದು ಪಾದದಗುರು ಲಕುಮಿಯ ಭ್ರಮೆಗೊಳಿಸಿತು ಮ-
ತ್ತೊಂದು ಪಾದದುಗುರು ಬ್ರಹ್ಮಾಂಡ ಒಡೆದು ತಂದಿತು
ಒಂದು ಪಾದ ನ್ನ ಚೆಂದದ ಪದವಿಯಲ್ಲಿರಿಸಿ
ದಂದುಗವನುಣಿಪ ಭೂತವೃಂದದ ಶಕ್ತಿ ಕುಂದಿಸಿತು
ಅಂದು ಸೀತೆಯ ಸ್ತನದ ಮೇಲೆ ಬಂದು ನಿಂತ ಖಳನ ರಾಮ
ಚಂದ್ರನ ಕೈಯಿಂದ ತೃಣದಿಂದ ಕೊಲ್ಲಿಸಿತು
ಒಂದೊಂದು ರೋಮಕೂಪ ಲೋಕಗಳನಡಗಿಸಿ ಕೊಂಡುವು
ಒಂದು ಕೂದಲು ಭೂಭಾರವ ಕುಂದಿಸಿತು ಹಯವದನನ ೫
ತ್ರಿಪುಟತಾಳ
ಅದಂತಿರಲಿ ಆವನ ಬೆನ್ನು ಮಂದಾರವ ಪೊತ್ತು
ತ್ರಿದಶರಿಗೆ ಸುಧೆಯನುಣಿಸಿ ದಣಿಸಿತು
ವಿಧಿಯ ದೇಶಕೋಶವೆನಿಪ ಬೊಮ್ಮಾಂಡವ ಪೊತ್ತು
ಮುದದಿಂದ ಉದಕದೊಳು ಧರಿಸಿತಾವನ ಬೆನ್ನು
ತುದಿಯಲವನ ಕಡೆಗಣ್ಣಿನ ಕೋಪದ ಕಿಚ್ಚು
ವಿಧಿ ರುದ್ರ ಮುಖ್ಯಸುರರ ಭಸುಮವ ಮಾಡಿತು
ಕದನಾಗ್ರದಲ್ಯವನ ಕರಕಂಜದುಗುರು ಖಳನ
ಉದರವ ಸೀಳಿ ಕರುಳ ಕೊರಳೊಳ್ಹಾಕಿತು
ಮುದ್ದುಮಯ ನಮ್ಮ ಹಯವದನನಿಗೆ ಆ-
ಯುಧದ ಹಂಗುಂಟೆ ನೀವೆ ವಿಚಾರಿಸಿರೊ ೬
ಅಟ್ಟತಾಳ
ಕುಂಜರ ಮೊರೆಯಿಡೆ ಬಂದೊದಗಿದನಿವ
ಕಂಜಾಕ್ಷಿ ಕರೆಯೆ ಅಕ್ಷಯ ಅಂಬರವನಿತ್ತನಿವ
ಸಂಜೆಯ ತೋರಿ ಧನಂಜಯನ ಕಾಯ್ದನಿವ
ಅಂಜಿದ ಪ್ರಹ್ಲಾದನಿಗೆ ಅಭಯವನಿತ್ತನಿವ
ನಂಜುಂಡನ ಗೆಲಿದ ಹಯವದನ ಭಕ್ತವಜ್ರ-
ಪಂಜರನೆಂಬ ಬಿರುದು ಒಪ್ಪುವುದು ನೋಡಿಕೊಳ್ಳಿರೊ ೭
ಏಕತಾಳ
ಆದಿಕಾಲದಲಬ್ಜಭವನ ಪೆತ್ತವನಿವ
ವೇದಗಳ ಬೋಧಿಸಿದವನಿವ
ಸಾಧಿಸಿಕೌರವಕುಲವ ತರಿದವನಿವ
ಮೇದಿನಿಯನು ಕದ್ದ ಖಳನಕೊಂದವನಿವ
ಆಧಿವ್ಯಾಧಿಗಳನು ದೂರ ಓಡಿಸಿ ಮುಕ್ತಿ
ಹಾದಿಯ ತೋರಿಸಿ ನಮ್ಮ ಪೊರೆವ ಹಯವದನ೮
ಜತೆ
ಶ್ರೀದೇವಿಯರಸ ಹಯವದನನೆ ಬೇಕು ಬೇಕು
ಈ ದೇವನಲ್ಲದೆ ಇನ್ನೊಂದು ದೈವ ಸಾಕು ಸಾಕು

 

೧೬೮
ಸುಳಾದಿ
ಧ್ರುವತಾಳ
[ಎಲು]ಚರ್ಮಚೀಲದೊಳಗೆ ರಕ್ತಮಲಮೂತ್ರ ಎಲುವು ಜಂತುಗಳನ್ನುತುಂಬಿಸಿ ತನ್ಮಧ್ಯ ಅದರೊಳು ಮಾಸಚೀಲವನೊಂದು ನಿರ್ಮಿಸಿ ಪೊಟ್ಟೆಯೊಳಗಣಶುಕ್ಲ ಶೋಣಿತದಿ ಮುಳುಗಿಸಿ ತುಂಬಿಡೆದಶಮಾಸ ಪರಿಯಂತ ಎಲೆ ಜೀವ ಬಹಳಕ್ಲೇಶಗಳನುಂಬೆ ನೀನು ಇಳೆಗೆ ಬಂದುಬಾಲಕನಾಗಿ ಪುಟ್ಟಿ ತೊಟ್ಟಿಲೊಳು ಹೊರಳಿಮಲಮೂತ್ರದಲಿ ಅಳುವೆಹಸುತೃಷೆಯಾದದ್ದೊಂದು ಪೇಳಲರಿಯೆಬಳಲುವೆ ಏಸು ಜನುಮಗಳಪೊತ್ತುಹುಳು ಪಕ್ಷಿ ಶ್ವಾನಸೂಕರ ಯೋನಿಯಲಿ ಬಂದುಕೊಲೆಗೊಳಗಾದೆ ಹಯವದನನ ಮರೆದೆ ೧

ಮಠ್ಯತಾಳ
ವೇದಶಾಸ್ತ್ರಗಳನ್ನೆ ಓದಿ ವಾದಿಸುವೆ ವೃತ್ತಿ ಕ್ಷೇತ್ರಕಾಗಿಕ್ರೋಧನೃಪರನೋಲೈಸಿ ನೊಂದುಬಾಧೆಗೊಳಗಾಗಿ ಸಾಧಿಸುವೆ ಪಾಪರಾಶಿಗಳಸಾಧುಸೇವ್ಯ ಹಯವದನನೊಲ್ಲೆ ೨

ಧ್ರುವತಾಳ
ಧರ್ಮಕರ್ಮಂಗಳನು ಡಂಬದಿಂದಲಿಹೆಮ್ಮೆಗಾಗಿಯೆ ಮಾಡಿ ಬಳಲುವೆನಿರ್ಮಲಾತ್ಮರ ನಾನು ನಿಂದಿಪೆಬೊಮ್ಮರಕ್ಕಸನಪ್ಪೆ ತುದಿಯಲಿಚಿನ್ಮಯ ಶ್ರೀ ಹಯವದನನಒಮ್ಮೆಯಾದರು ನೆನೆಯದೆ ೩

ಝಂಪೆತಾಳ
ನಾನಾ ನರಕಯಾತನೆಗೆ ಗುರಿಯಪ್ಪೆಹೀನಾಂಧಂತಮಸಿನ ಕ್ಲೇಶವ ನೆನೆದುಕೊಮಾನವ ಜನ್ಮವ ಬರಿದೆ ಹೋಗಾಡದೆಶ್ವಾನಾದಿ ಶ್ವಾಸರಣ ಭೋಗಕ್ಕಿಕ್ಕದೆಶ್ರೀನಾಥ ಹಯವದನನ್ನ ನಂಬಿರೊ ೪

ರೂಪಕತಾಳ
ಮದಮತ್ಸರದಿ ಬೆಂದು ಕೆಲವು ಕಾಲ ಕಳೆದೆಕುದಿವ ಕಾಮಕ್ರೋಧಗಳಲ್ಲಿ ಸಂಕಟಗೊಂಬೆಅಧಮನಾಗಿ ಪರರ ಬೇಡಿ [ಬೇಸರಿಸುವೆ]ಸಾಧನ ಸಂಪಾದನೆಗೆ ಬಳಲುವೆನೊಮ್ಮೊಮ್ಮೆಅದರೊಳಗೆ ಬಹುವ್ಯಾಧಿಗಳಲ್ಲಿ ಸಂಕಟಪಟ್ಟೆಪದುಮನಾಭ ಹಯವದನನ ಬಿಟ್ಟೆ ೫

ಅಟ್ಟತಾಳ
ಬಿಸಿಲಿನಿಂದಲಿ ಬ್ಯಾಸರುವೆ ಬ್ಯಾಸರುವೆಹಸಿವು ತೃಷೆಗಳಿಂದ ಹರುಷಗುಂದುವೆಯಶೋಹಾನಿಯ ಮಾಡುವೆ ನಿಂ-ದಿಸುವವರ ಅಕ್ಷರಕೆ ಸಿಲುಕುವೆಅಸುರ ಭೂತಗಳ ಪೂಜಿಸುವೆ ಮತ್ತೆಪ್ರಸನ್ನ ಹಯವದನನರ್ಚಿಸಲೊಲ್ಲೆ ೬

ತ್ರಿಪುಟತಾಳ
ಅಶನಾನಶನಂಗಳು ಸರಿಯೆಂಬ ನರನಿಗೆದಿನದಿನದಲಿ ಮಾಳ್ಪ ವ್ರತವೆಲ್ಲ ವೃಥಾಯಿತುಅನಲನು ತುಹಿನವು ಒಂದಾಗುವುದುಂಟೆಘನಮಹಿಮ ಮುಕುಂದ ಅಣುಜೀವರೆಂತಾಹುದೊಮನದಿತದ್ರ‍ಭತ್ಯರ ಭೃತ್ಯನೆನ್ನದೆಮನುಜನೆಂತು ಹಯವದನ ತಾನೆಂಬುವನು ೭

ಏಕತಾಳ
ಇಂತೀ ಭವವೆಂಬ ಫಣಿಪಗೆ ಮಹಂತರ ಸಂಗ ನಿಜವೈರಾಗ್ಯವೆಮಂತ್ರರಾಜ ಈ ಜಗದೊಳು ಮಂತ್ರರಾಜಸಂತರ ಚರಣಕಮಲ ಸೇವೆ ಔಷಧಸಂತತ ಗರುಡವಾಹನ ಹಯವದನ್ನ ಶ್ರೀ-ಕಾಂತನಂಘ್ರಿಯೇ ಗರುಡಾಯುಧ ಜಗದೊಳು ೮

ಜತೆ
ವೈರಾಗ್ಯಭಾಗ್ಯವಿತ್ತೆನ್ನ ಸಲಹಯ್ಯಸರ್ವವಂದ್ಯ ಹಯವದನ ದೇವೇಶ

 

೨೫೮
ಸುಳಾದಿ
ಧ್ರುವತಾಳ
ಚಿನುಮಯಮೂರುತಿ ಪ್ರಳಯ ಜಲಧಿಯೊಳು
ವನಿತೆ ಶ್ರೀ ಭೂಮಿ ದುರ್ಗೆಯರೊಡನೆ
ತನ ಉದರದಲ್ಲಿ ಲಿಂಗವಿಶಿಷ್ಟರಾದ
ಇನಿತು ಜೀವರ ಹಿಡಿ ತುಂಬಾ ಕೊಂಡು
ತನಯನ ನೂರುವರುಷ ಪರಿಯಂತದಿ
ವನಜಾಕ್ಷ ವಟಪತ್ರಶಯನನಾಗಿ
ಜನರೆಲ್ಲ ತಮ್ಮ ತಮ್ಮ ಗತಿಗೆ ತಕ್ಕ ಸಾ-
ಧನವ ಸಾಧಿಸಿಕೊಳ್ಳಲೆಂದು ಕರುಣಿ
ಪುನರಪಿ ಸೃಷ್ಟಿಯ ಮಾಡುವೆನೆಂದು ಲಾ-
ಲನೆಗೆ ಪ್ರಕೃತಿಯ ಮಮತೆಯಿತ್ತು
ಗುಣತ್ರಯಾತ್ಮಕ ಸೂಕ್ಷ್ಮ ತತ್ವರಾಶಿಯ ಜೀವ
ರನು ಸೃಜಿಸಿದ ಹಯವದನ ಪ್ರಭು೧
ಮಠ್ಯತಾಳ
ಮಹತತ್ವವ ಸೃಜಿಸಿ ಮರುತ ಬ್ರಹ್ಮರಿಟ್ಟ
ಅಹಂಕಾರದಿ ಗರುಡ ಶೇಷ ರುದ್ರರಿಟ್ಟ
ಅಹಂಕೃತಿ ತೃತೀಯ ಭಾಗವನೆ ಮಾಡಿ
ಶ್ರೀ ಹಯವದನ ಭೂತೇಂದ್ರಿಯಗಳ ಮಾಡಿದ೨
ರೂಪಕತಾಳ
ತಾಮಸದಿಂದ ಪಂಚಭೂತಂಗಳ ಸೃಜಿಸಿ
ಯೋಮಾಂತರದಿ
ಆ ಮುನ್ನೆ ತೈಜಸದಿ ಸಾಧಿಸಿದ ದಶೇಂದ್ರಿಯ
ಸೋಮ ಸೂರ್ಯಾದಿ ದೇವತೆಗಳನೆ ನೆಲಸಿ
ಶ್ರೀ ಮನೋಹರ ಹಯವದನ ವೈಕಾರಿಕದಿ
ಆ ಮನವ ದೇವತೆಗಳ ತನುವ ಮಾಡಿದ ೩
ತ್ರಿಪುಟತಾಳ
ಇಂತೀ ತತ್ವ ಸೃಷ್ಟಿಗೆ ಮೊದಲು
ಕಾಂತೆಯರಪ್ಪಿಕೊಂಡಿಪ್ಪ ಶ್ರೀಕೃಷ್ಣ ತಾನೆ
ಅಂತವಿಲ್ಲ ಸ್ವರೂಪವಿಲ್ಲ ವಿರೂಪನಲ್ಲಾ-
ನಂತಮೂರುತಿ ಸಿರಿ ಹಯವದನ ೪
ಝಂಪೆತಾಳ
ಕಥಾಸ್ಮರಾಣಾಂ ವಿಶದಾಸ್ಮರಾಣಾಂ
ರೂಪೇಣ ತೇಷಾಂ ಬಲವೀರ್ಯ ಚೋದಿತಾಂ
ವಂದೇಪರಂದೇವ ಗುಣೈಕ ವಿಷ್ಣೋಃ
ದೇವೇನ ನಾಗೇಂದ್ರ ಮತಃ ಪರೇಣ
ತಥ ಬ್ರಹ್ಮರುದ್ರಾದಿ ಜೀವರ ಸೃಜಿಸಿ
ತತ್ ಸ್ವರೂಪವ ಪೊಕ್ಕು ನಡೆಸಿದನು ಹಯವದನ ೫
ಅಟ್ಟತಾಳ
ಅದರಿಂದ ತತ್ವದೇವತೆಗಳೆಲ್ಲರು ಕೂಡಿ
ಮುದದಿ ಬ್ರಹ್ಮಾಂಡ ಮಾಡಲರಿಯದೆ ಪೋಗಿ
ಪದುಮನಾಭನ ತುತಿಸಲು ಅವರೊಳು ಪೊಕ್ಕು
ಅದುಭೂತ ಬ್ರಹ್ಮಾಂಡವನು ರಚಿಸಿದನು
ಅದರೊಳು ಬಂದು ಬಹುಕಾಲ ಪರಿಯಂತರ
ಉದಕಶಾಯಿಯಾದ ಮುದದಿ ಹಯವದನ ೬
ಆದಿತಾಳ
ಶಿಷ್ಟರನು ಶುಭಪಥಕೆ ನಡೆಸಿ ಉ-
ತ್ರ‍ಕಷ್ಟ ಸುಗತಿಯನು ಕಡೆಯಲ್ಲೀವನು
ದುಷ್ಟರನ್ನು ದುರ್ಗತಿಯೈದಿಸುವನು
ಹೃಷ್ಟಮೂರುತಿ ಶ್ರೀ ಹಯವದನ ಈ
ಸೃಷ್ಟಿಯೊಳು ಮಧ್ಯಮರನು ಮಾಡಿದ ಎ-
ಳ್ಳಷ್ಟು ವೈಷಮ್ಯವಿಲ್ಲ ಕಾಣಿರೊ ೭
ಜತೆ
ಇಂತೀ ತತ್ವಸೃಷ್ಟಿಯ ನೆನೆವ ಮಹಾತ್ಮರ
ಸಂತತ ಪೊರೆವ ಶ್ರೀಕಾಂತ ಹಯವದನ

 

೨೩೩
ಅಪೂರ್ಣ ಸುಳಾದಿ………………………………………………………………………………………………………………………………….ನೇಮದಿಂದ ಸ್ನಾನ ಮಾಡಿ ನಾಮವ ಧರಿಸುವಾಗರಾಮ ರಾಮನೆಂದು ಪಾಡಿ ವಾಮನ ಕಪಿಲ ಬುದ್ಧಸ್ವಾಮಿಗಳು ಶುದ್ಧದಿಂದ ಈ ಮಹಿಯೊಳ್ಜಪಿಪರಿಗೆಕಾಮಿತಾರ್ಥಗಳ [ನೀವ] ಶ್ರೀಮದಾನಂದತೀರ್ಥರಹೇಮಕರದಿಂದರ್ಚಿತ ದಾಮೋದರ ಹಯವದನನಂಘ್ರಿಯಚಿಂತಿಸು ಹೀಗೆ ೩
ಕಪಟತನವ ಬಿಟ್ಟು ಗುಪಿತದಿಂ ಜಪಿಪರ ಅಪರಿಮಿತಮಹಿಮಕಪಟನಾಟಕ ಸೂತ್ರವ ಧರಿಸಿ ಮೆರೆವ ನಮ್ಮಕೃಪಾನಿಧಿ ಹಯವದನ ಸುಪಥವ ತೋರಿಸುವ ೪
ನಿತ್ಯ ನಿತ್ಯ ಉಪಾಸನ ಮಾಡುವಂಥ ಭಕ್ತಜನಕೆನಿತ್ಯ ನಿತ್ಯ ಭಕ್ತಿಯಿಂದ ತುತಿಸಿಕೊಂಡಾಡುವರಿಗೆಎತ್ತಣವೊ ದುರಿತವು ಎತ್ತಣವೊ ದುರ್ಗತಿಯುಸತ್ಯಭಾಮಾಪತಿ ನಮ್ಮ ನಿತ್ಯತೃಪ್ತ ಹಯವದನತೆತ್ತಿಗ ಸರ್ವೋತ್ತಮನ್ನ ಚಿತ್ತದೊಳಗಿಟ್ಟುಕೊಂಡುಮತ್ತೆ ಯೋಚಿಸದ್ಹಾಂಗೆ ನೀ ಮನದಿ ಕೊಂಡಾಡಿ ಪಾಡಯ್ಯ ೫

ಜತೆ
ಹತ್ತುನೂರುನಾಮದೊಡೆಯ ಹಯವದನ ಮೂರ್ತಿಯಮಸ್ತಕದೊಳಿಟ್ಟುಕೊಂಡು ಮತ್ತನಾಗಯ್ಯ

Leave a Reply

Your email address will not be published. Required fields are marked *