Categories
ರಚನೆಗಳು

ವಾದಿರಾಜ

೪೪
ಕಡುಮುದ್ದು ಮೋಹನನಾದ ಈ ಸೊಬಗ ನ-ಮ್ಮುಡುಪಿನ ಕೃಷ್ಣರಾಯನ ನೋಡು ನೋಡುಪ.
ಬೊಮ್ಮರುದ್ರಾದಿಗಳ ಕಣ್ಗೆಗೋಚರಿಸದನಿರ್ಮಲ ಚಿನ್ಮಯ ಬೊಮ್ಮವೆನಮ್ಮ ಚರ್ಮದೃಷ್ಟಿಗಳಿಗೆ ಗಮ್ಯವಾಯಿತ-ಮ್ಮಮ್ಮ ಇನ್ಯಾರ ಪುಣ್ಯವೊ ನೋಡು ನೋಡು ೧
ಶುದ್ಧ ಸಿದ್ಧಾಂತವ ಜಗಕೆ ತೋರಿಸಿದಮಧ್ವಮುನಿಗೊಲಿದು ಬಂದಅಬ್ಧಿಜೆಯರಸನೀತನು ತನ್ನಹೊದ್ದಿದರಿಗರ್ಧ ಶರೀರವನೀವನೆ ನೋಡು ನೋಡು ೨
ಚೆಲುವ ಪಾದ ಜಾನೂರು ಕಟಿ ನಾಭಿ ಕಿರಿಡೊಳ್ಳು ವಕ್ಷ ಕಂಬುಕಂಧರಬಳ್ಳಿಗೋಲು ಗಲ್ಲ ವಕ್ತ್ರ ನೇತ್ರ ಮೌಳೀಯ ನಲ್ಲಗೊಲ್ಲಪಳ್ಳಿಯ ನೊಲ್ಲದೆ ಬಂದನೆ ೩
– – – – – – – – – – ಅಲ್ಲಿ ಬೆಣ್ಣೆಗಳ್ಳನೆಂಬೊರಿವನೆಲ್ಲಇಲ್ಲದಿದ್ದರೆಲ್ಲಿಂದೆಲ್ಲಿಗಿಲ್ಲಿಯ ವಾಸ ನೋಡು ನೋಡು ೪
ಶ್ರುತಿಗಗೋಚರನೆನಿಪ ಯತಿತತಿಮತಿಗೆ ಮೈಗೊಡದ ಬೊಮ್ಮಪತಿತ ಪಾತಕಿಗಳಿಗೆ ಕ್ಷಿತಿಯೊಳ-ಗತಿ ಸುಲಭವಾಯಿತಿನ್ನು ನೋಡು ನೋಡು ೫
ಬಲ್ಲವರೆ ಬಲ್ಲರಿವನ ಈ ಮಹಿಮೆಯದುರ್ಲಭಕ್ಕೆ ದುರ್ಲಭನವಚೆಲ್ವ ಹಯವದನನಾದ ಭಕುತ ಯತಿ-ವಲ್ಲಭನಿಂದಿಲ್ಲಿ ಸುಲಭ ನೋಡು ನೋಡು ೬

 

೧೭೫
ಕರುಣವ ಬೀರು ಚೆನ್ನ ಕಾಯಬೇಕೋ ಎನ್ನಮರೆತಿರೆ ಕಾವರ ಕಾಣೆಪ.
ಸೊಪನ ಜಾಗರದಲ್ಲಿ ನಿನ್ನ ಧ್ಯಾನವೆ ಬಂದುತೃಪ್ತನಾಗಿ ನಾನು ಜೀವಿಸುವೆಕಪಟದ ನುಡಿಯಲ್ಲ ನೀನೆ ಬಲ್ಲೆವಿಪತ್ತುಗಳನೆ ಬಿಡಿಸಯ್ಯ ೧
ಕಡಲಮಗಳ ಗಂಡ ಕಾಮಧೇನು ನೀ ಕಂಡ್ಯಾಬಡವ ನಿನ್ನಡಿಗೆ ಪೊಡಮಡುವೆಒಡಲ ಬಳಿಯ ನೆಳಲಂತೆ ಬಿಡದೆ ನಿನ್ನದೃಢವಾಗಿ ನಾನು ಕೂಡುವೆನು ೨
ತಂಡ ತಂಡದ ವ್ಯಾಧಿಯ ಉಂಡು ಉಂಡು ಬಳಲಿದೆಕಂಡ ಕಂಡವರ ಬೇಡಿ ನೊಂದೆಹಿಂಡುಹಿಂಡುಗಟ್ಟಿ ಬಂದ ಚಂಡ ದಂಡಧರನವರುತುಂಡು ತುಂಡು ಮಾಡಿ ಕಾಡುವರು ೩
ಘೋರತರ ವ್ಯಾಧಿಗಳ ತೋರಿ ತೋರಿ ನರಕದಿಮುರಹರನುಣಿಸದೆ ಬಿಡನುಮೀರಿ ಮೀರಿ ಬಹ ಮೃತ್ಯು ಆರನಂಜಿಸುವುದುಭಾರಿ ಭಾರಿ ಗಳಿಸಿದ ಪಾಪ ೪
ಹರಿ ನಿನ್ನ ಚರಣದ ಸ್ಮರಣೆ ಒಂದಿರೆ ಸಾಕುಮರಣಗಿರಣಕಂಜೆನಯ್ಯಶರಣಜನರು ನಿನ್ನ ಪ್ರಾಣಕ್ಕೆ ಸರಿಯೆಂಬೆಸಿರಿರಮಣನೆ ಸಲಹೆನ್ನ ೫
ಶರಧಿಯೊಳಾಡುವ ಮಂದರಧರ ವರಾಹನೆಹಿರಣ್ಯಾಕ್ಷವೈರಿ ವಾಮನನೆಪರಶುರಾಮನೆ ರಘುರಾಮ ಕೃಷ್ಣ ಬೌದ್ಧನೆಧುರದಿ ಕಲ್ಕಿಯಾಗಿ ಮೆರೆದೆ ೬
ಕರಕರ ಮತತತ್ವವ ಒರದೊರೆದು ಪೇಳುವೆಥರಥರದ ಹಿರಿಯರನೆಲ್ಲಮಿರಿ ಮಿರಿ ಮಿಂಚುತಿಹ ಮುರಹರನ ಭಜಿಸದೆಹರಿಹರಿಯೆಂದು ಪೇಳೆನೊಮ್ಮೆ ೭
ಮನೆಮನೆವಾರ್ತೆಗೆ ಧನಂಗಳ ಗಳಿಸಿದೆಚಿನಿಚಿನಿಯಂಬರಕೆ ಮರುಳಾಹೆಮನೆಮನೆ ಮಹಿಮೆಯ ಕಾಣೆ ಕಾಣೆ ಕೆರೆಗಳನೆನೆನೆನೆದಾಡುತ್ತ ನಾ ಭಜಿಸಿ ೮
ತನು ಜೀರ್ಣವಾಯಿತು ಕರಣ ಎನ್ನಿಚ್ಛೆಯೊಳಿಲ್ಲಮನವೆನ್ನ ಮಾತು ಕೇಳದಯ್ಯಇನಿತು ಸಂಕಟದವ ಇನ್ನು ನಾನೆಂತರ್ಚಿಪೆವನಜನಾಭನೆ ಹಯವದನ ೯

 

೧೭೬
ಕರುಣಿಸಿ ಕೇಳು ಕಂದನ ಮಾತಗರುಡವಾಹನನೆ ಗಂಗೆಯ ಪೆತ್ತ ಹರಿಯೆ ಪ.
ಇತ್ತ ಬಾರೆಂಬುವರಿಲ್ಲ ಇರವ ಕೇಳುವರಿಲ್ಲಹತ್ತಿಲಿ ಕುಳ್ಳಿರು ಎಂಬ ದಾತರಿಲ್ಲತತ್ತರಗೊಳ್ಳುತಲಿದೆ ತಾವರೆಯೆಲೆಯೊಳನೀರಿನಂತೆಹತ್ತು ನೂರಾರು ನಾಮವುಳ್ಳ ಶ್ರೀಹರಿಯ ನೀ ಕೇಳೊ ೧
ಇಂದು ಬಂಧನವಿಲ್ಲ ಇದ್ದವ ಕೇಳುವುದಿಲ್ಲಒಂದು ಸುತ್ತಿಗೆ ಬಟ್ಟೆಯಾದರೂ ಇಲ್ಲ ಈಬೆಂದೊಡಲಿಗೆ ಒಬ್ಬ ಅಯ್ಯೋ ಎಂಬುವನಿಲ್ಲಬಿಂದು ಮಾತ್ರದಲ್ಲಿ ಸುಖವ ಕಾಣೆ ಹರಿಯೆ ೨
ಎಲ್ಲಿಯೂ ಧಾರಣೆಗೊಂದು(?)ನೆರಳನು ಕಾಣೆ[ಅಲ್ಲವತಿಂದಿಲಿಯಂತೆ]ಬಳಲುತಿದ್ದೆಫುಲ್ಲಲೋಚನ ಪೂರ್ಣ ಹಯವದನ[ಸಲ್ಲುವ]ನಾಣ್ಯವ ಮಾಡಿ ಸಲಹೋ ಎನ್ನ ಹರಿಯೆ ೩

 

೨೫೩
ಕರೆದುತನ್ನಿರೊ ಕನ್ನಗಾರನ
ಹರಿಯ ಗು[ಣ]ಗಳ ಕದ್ದ ಹಗಲುಗನ್ನಗಾರನ ಪ.
ರೂಪವಿಲ್ಲ ಗುಣ [ವಿಲ್ಲಾತನೆ] ಪರಬ್ರಹ್ಮನೆಂಬ
ಪಾಪಿಗನ್ನ ಕರೆದು ಮುಖಭಂಗಿತನ್ನ ಮಾಡಿರೊ ೧
ಹರಿ ಇಲ್ಲ ಗುರುಇಲ್ಲ ಹರಿಹರರು ಒಂದು ಎಂಬೊ
ಶಿರಕೆ ಪಿತ್ತ ಅಡರಿದಂ[ಥ]ಮರುಳು ಮಾತುಗಾರ[ನೆ] ೨
ವೇದಶಾಸ್ತ್ರ ಹುಸಿಯೆಂದು ಸಾಧುಜನರ ಕಾಡುತಿಹನು
[ಕಾದಿ]ತಮಸಿನೊಳಗೆ ಬಿದ್ದು ಕಾಣ ಹಯವದನನ್ನ ೩

 

೨೭೭
ಕಾಮನ ಪೆತ್ತನ ಕೋಲೆ ನಿ-
ಸ್ಸೀಮ ಚರಿತ್ರನ ಕೋಲೆ
ಶ್ಯಾಮಲ ಗಾತ್ರನ ಕೋಲೆ ನಮ್ಮ
ಕಾಮಿತವಿತ್ತನ ಕೋಲೆ ಪ.
ಕಂಜಜ ತಾತನ ಕೋಲೆ ಧ
ಸ್ನಂಜಯ ಸೂತನ ಕೋಲೆ
ಕುಂಜರ ಗೀತನ ಕೋಲೆ ಸುರ-
ಪುಂಜ ವಿಖ್ಯಾತನ ಕೋಲೆ ೧
ಶ್ರುತಿಗಳ ತಂದನ ಕೋಲೆ ಬಲು
ಮಥನಕೊದಗಿದನ ಕೋಲೆ
ಕ್ಷಿತಿಯನೆತ್ತಿದವನ ಕೋಲೆ ಭಕ್ತ
ಹಿತಕಾಗಿ ಬಂದನ ಕೋಲೆ ೨
ಪೃಥ್ವಿಯಳದನ ಕೋಲೆ ಅಲ್ಲಿ
ಸುತ್ತ ಸುಳಿದನ ಕೋಲೆ
ಅರ್ಥಿಗಳದನ ಕೋಲೆ ದ್ವಾರಾ-
ವತ್ತಿಯಾಳಿದನ ಕೋಲೆ ೩
ಮುಕ್ತಾಮುಕ್ತ ಜಗತ್ತ ತನ್ನ
ಗಾತ್ರದಿ ಪೆತ್ತನ ಕೋಲೆ
ಭಕ್ತನ ವಿತ್ತ ಸಂಪತ್ತ ಕಲಿ-
ವೊತ್ತಿ ಮಾಡಿತ್ತನ ಕೋಲೆ ೪
ಜಗತಿಧನ್ಯನ ಕೋಲೆ
ನಿಗಮೋಕ್ತ್ತ ವಣ್ರ್ಯನ ಕೋಲೆ
ಅಘಲೇಶಶೂನ್ಯನ ಕೋಲೆ ಸರ್ವ
ಸುಗುಣಾಬ್ಧಿಪೂರ್ಣನ ಕೋಲೆ ೫
ಸಿರಿಹಯವದನನ ಕೋಲೆ ಸುಖ
ಕರ ಸಿಂಧುಮಥನನ ಕೋಲೆ
ಹರಮಾನ್ಯಸದನನ ಕೋಲೆ ಗೋಪಿ-
ಯರ ಕಣ್ಗೆ ಮದನನ ಕೊಲೆ ೬

 

೧೭೭
ಕಾಯಬೇಕು ಶ್ರೀ ತ್ರಿವಿಕ್ರಮಯಜನಯ್ಯ ಕಂಜನಯನ ಪ .
ಆರು ನಿನ್ನ ಬಣ್ಣಿಪರು ಅಮರಗುಣನಿಲಯಸಾರಿದ ದೇವೇಂದ್ರನಿಗೆ ಸಕಲಸಂಪದವಿತ್ತೆ ೧
ಈರೇಳು ಲೋಕಂಗಳನು ಇಷ್ಟಷ್ಟು ಎನ್ನದ ಮುನ್ನಈರಡಿಯ ಮಾಡಿದೆ ನೀ ಮುಕುಂದ ಮುರಮರ್ದನ ೨
ಪಾವನ್ನ ಗಂಗಾಜಲವು ಪಾದವೆಂಬ ಪದುಮವ ತೊ-ಳೆವ ನೀರುಗಡವಿನ್ನು ತೋರೊಮ್ಮೆ ಹಯವದನ ೩

 

೧೭೮
ಕಾಯಯ್ಯ ಕರುಣಿ ಮುಕ್ತಿಸರಣಿಮೋಹಾಂಧಕಾರ ತರಣಿ ಕರುಣಿ ಕಾಯಯ್ಯ ಪ.
ನಾನಾ ಯೋನಿಗಳಲ್ಲಿ ನಿಂದು ನೊಂದೆಹೀನತೆಯ ಕಳೆದು ಕಾಯಯ್ಯಗೋವಿಂದ ಮುಕುಂದ ಇದೇನು ಚೆಂದ ೧
ನೀನಲ್ಲದನ್ಯರನು ನಾನರಿಯೆಜ್ಞಾನಿಗಳರಸ ಕಾದುಕೊಂಬುದಿನ್ನಾರುಎನ್ನ ತೋರು ಮುಂದಾರು ೨
ಶ್ರೀಹಯವದನ ಪ್ರಭುವೆ ನೀನು ಸರ್ವಜ್ಞನೇಹವನು ಮಾಡು ಎಂದೆಂದು ನಾ ದಾಸಶ್ರೀನಿವಾಸ ಪಾಪನಾಶ ೩

 

೨೫೫
ಕಾಲು ತೊಳೆದವನೊಬ್ಬ ತೊಳೆಸಿಕೊಂಡವನೊಬ್ಬ
ಮೌಳಿ ಮೇಲಾಜಲವ ಸತತ ಧರಿಸಿದನೊಬ್ಬ
ಪಾಲಿಸುವ ಪ್ರಭುವೊಬ್ಬ ಕೊಲುವ ತಳವಾರನೊಬ್ಬ
ಮೂರ್ಲೋಕವರಿಯೆ ಪುಟ್ಟಿಸಿದ ಪಿತನೊಬ್ಬ
ಆಲೋಚನೆಯ ಬಲ್ಲವಗೆ ಸಂಶಯ ಸಲ್ಲ
ಮಾಲೆಯನು ಮಹಲಕ್ಷುಮಿ ಹಯವದನಗಿತ್ತಳಾಗಿ ೧
ರಾವಣನ ಕೊಂದ ಪಾಪವ ಕಳೆಯಬೇಕೆಂದು
ದೇವ ರಘುಪತಿ ಸದಾಶಿವನ ಪೂಜಿಸಿದ ಗಡಾ
ಆ ವಿಧಿಯ ಒಂದು ತಲೆಯನು ಕಡಿದ ಮಾತ್ರದಿಂದ
ಆವಾಗ ಕರದಲ್ಲಿ ಇಹ ಕಪಾಲವ ಕಾಣನೆ
ದಾವಘದೊಳು ಪೊರಳುವನ ದಾವಾತ ಭಜಿಸುವನು
ಜೀವರಿಗೆ ಉಳ್ಳಷ್ಟು ವಿವೇಕ ಹಯವದನಗಿಲ್ಲವೆ ೨
ರಾಮಾಯಣದ ಕತೆಯು ಮಹಾಪುಣ್ಯ ಕಥೆಯು ಗಡಾ
ರಾಮ ರಾವಣನ ಕೊಂದದ್ದು ಮಹಾಪಾಪ ಗಡಾ
ಆ ಮನುಮುನಿಗಳೆಲ್ಲ ಪಾಪಕಂಗೀಕರಿಸಿದರೆ
ಸ್ವಾಮಿಯು ಲಯದಿ ಬೊಮ್ಮನ ಮೊದಲು ಕೊಲಿಸದೆ
ಧೀಮಂತ ಹಯವದನ ಕೊಂದ ಹಿರಣ್ಯಕ ಮುಖ್ಯ
ತಾಮಸ ದಿತಿಜರು ಕಶ್ಯಪ ಋಷಿ ಸುತರಲ್ಲವೆ೩
ಶ್ರುತಿಯಿವ ಕರ್ಮಣಾನೋಕನೀಯ ಎಂದು
ತುತಿಸುತಿರೆ ನಿಮ್ಮ ನಿರ್ಗುಣ ಬೊಮ್ಮಗೆ ಕರ್ಮವುಂಟೆ
ಕ್ಷಿತಿಯೊಳಗೆ ರಾವಣನ ವಧೆಯ ಮಾಡಿದ
ಸೇತುಪತಿಯ ಪಾವನನೆನಲು ಅವನ ಕೊಂದವನ
ಪತಿತಪಾವನನೆಂಬುದೆ ಕುಚಿತ್ತಯುಕುತಿಯು
ಸತತ ಹಯವದನನೊಬ್ಬನೆ ಶುದ್ಧ ಕಾಣಿರೊ ೪
ಒಂದು ಕಡೆಯಲಿ ವಿಭೀಷಣನ ಪ್ರತಿಷ್ಠಿಸಿದನು ಮ-
ತ್ತೊಂದು ಕಡೆಯಲಿ ಸದಾಶಿವನ ಪೂಜಿಸಿದ ಇಂ-
ತೆಂದು ಪುರಾಣಗಳು ಕೂಗುತಿವೆ ತ್ರಾಸಿನೊಳು
ಹೊಂದಿಸಿ ಸಮನೆಂದು ತೂಗಿ ತೋರು
ಮದದಲಿ ಸಂದೇಹ ಸಲ್ಲ ಹಯವದನ ರಘುಪತಿಗಿಬ್ಬರು
ಸಂದ ಭಕುತರೆಂಬುದು ಸಲೆ ಸುಪ್ರಸಿದ್ಧ ೫
ಸೇತುವೆಯ ಕಂಡ ನರರಿಗೆ ಬ್ರಹ್ಮಹತ್ಯಾದಿ
ಪಾತಕವು ಬಿಡುವುದೆಂಬ ಶ್ರುತಿಯ ಮನ್ನಿಸಲು
ಖ್ಯಾತ ಬೊಮ್ಮನ ತಲೆಯ ಕಡಿಯೆ ಕರದಲಿಕೊಟ್ಟ ತಾ-
ಪ ತಪ್ಪಿಸಲು ಸುಕೃತ ಸೇತುಮುಖದಿಂದ
ಸೀತೆಯರಸನು ಶಿವನ ನಿಲ್ಲಿಸಿ
ಪ್ರತಿಷ್ಠಾಪಿಸಿದ ಜಗನ್ನಾಥ ಹಯವದನ ಭಕ್ತರಬಂಧು ಕಾಣಿರೊ ೬
ರಾಮ ಶ್ರೀರಾಮರಾಮೇತಿ ರಮೆಯೆಂಬ
ಆ ಮಹಾದೇವ ಭಗವದ್ಭಕ್ತನಲ್ಲವೆ
ಸ್ವಾಮಿ ತನ್ನ ಭಕ್ತರನು ಪ್ರತಿಷ್ಠಿಸಿದ ನಿ-
ಸ್ಸೀಮ ಕರುಣಾಂಬುಧಿ ಮಹಾಮಹಿಮನೆಂಬರು
ಭ್ರಾಮಕದ ನುಡಿಗೆ ಮರುಳಾಗದಿರು ಹಯವದನ
ರಾಮಚಂದ್ರನೆ ಕಾಶಿಯ ತಾರಕಬೊಮ್ಮ ಕಾಣಿರೊ ೭
ಕಾಶಿಯಲಿ ರಾಮಮಂತ್ರೋಪದೇಶವ ಮಾಳ್ಪ
ಈಶ ಜಾಣರ ಮತದಿ ಜಗಕೆ ಗುರುವೆಂತೆಂಬ
ಆ ಶಿವನ ಮಂತ್ರದೇವತೆ ತಾರಕಬೊಮ್ಮಯೆನಿಪ
ವಾಸುದೇವನೆ ಜಗಕೆ ಪರದೈವ ಕಾಣಿರೊ
ಈ ಸುತತ್ವವ ಪೇಳ್ವ ಹರಗೆ ನಮ್ಮ ಹಯವದನ
ಏಸುಮನ್ನಣೆ ಮಾಡಿದರುಚಿತ ಕಾಣಿರೊ ೮
ವರವ ಶೋಧಿಪೆನೆಂದು ಕರವ ತನ್ನ
ಶಿರದ ಮೇಲೆ ಇರಿಸಬಂದ ಖಳಗಂಜಿ
ಹರ ಸಕಲ ಸುರೇಶ್ವರರ ಅರಮನೆಗಳಿಗೆ ಪೋಗಿ
ಪರಿಹರವ ಕಾಣದೆ ನಮ್ಮ ಸಿರಿವರನ ಮರೆಹೊಗಲು
ಪರಿಣಾಮವನು ಪೊರೆದ ಗಡಾ
ಶರಣರಕ್ಷಕನೆಂಬ ಬಿರುದುಳ್ಳ ಹಯವದನ
ಹರಿಯಲ್ಲದೆ ಪಿರಿದೊಂದು ಪರದೈವವಿಲ್ಲವಯ್ಯ ೯
ರೋಮಕೋಟಿಲಿಂಗನೆನಿಸಿದ ಹನುಮನೊಂದು
ರೋಮಕೆ ಕೋಟಿ ಶಿವರ ಮಾಡುವ ಶಕ್ತ ಕಾಣಿರೊ
ಆ ಮಹಾತ್ಮನ ತನ್ನ ಆಳುಮಾಡಿ ನಡೆಸಿಕೊಂಡ
ರಾಮಚಂದ್ರನೆ ಜಗಕ್ಕೆ ಪರದೈವ ಕಾಣಿರೊ
ಸ್ವಾಮಿ ಹಯವದನ ವೇದವ ತಂದು ಕಮಲಜನ
ಕಾಮಿತವನಿತ್ತನಾಗಿ ಅವನೆ ಜಗದೊಡೆಯ ೧೦
ನೂರು ರುದ್ರರು ಪೇಳೆ ಕಾರ್ಯವಾದರೇನವರು
ಈರೇಳು ಜಗವ ಸಂಹರಿಸಲರಿಯರು ಗಡಾ
ಕಾರ್ಯವಿಲ್ಲದ ಶಿವರ ಪೇಳಲದ್ವೈತಮತ ಹಾರಿಹೋಗದೆ
ಬರಿದೆ ಹಲವು ಹಂಬಲಿಸದೆ
ಶ್ರೀರಮಣ ಹಯವದನನೊಡಂಬಟ್ಟನಿ
ಬರನು ದೂರ ಕಳಚಿದನೆಂದು ಪೂರ್ವದವರನೆ ನಂಬು ೧೧
ಯಾತ್ರೆಯ ಮಾಡಿಸಿಕೊಂಡು ಹರ ಹಿರಿಯ ತಾನಾಗಿ
ಯುಕ್ತಿ ಬಾಧಕವಾಯಿತ್ತು ಹರಿಹರರೊಳೈಕ್ಯ
ಚಿತ್ರ ನಿನ್ನ ಮತಕೆ ನೀನೆ ಶತ್ರುವಾದೆ
ಪ್ರತ್ಯುತ್ತರವ ಪೇಳೆ ಪರಾಜಯ ಬಾರದಿಹುದೆ
ಮತ್ತೆ ನೆನೆಯೊ ಶ್ರೀಹಯವದನಗಿದು ಲೀಲೆಯಾದರೆ
ಸತ್ವ ಹೆಚ್ಚಿತು ಸರ್ವೋತ್ತಮನೆಂಬ ಶ್ರುತಿಗೆ ೧೨
ವಂದ್ಯಮಾನಂ ಪಿತಾನಾಂ ಪ್ರತಿ ಪ್ರಮಾಣಂ
ಎಂದು ರುದ್ರನ ಕೂಡೆ ಶ್ರುತಿ ಪೇಳಿತಾಗಿ
ತಂದೆ ಮಕ್ಕಳ ಮನೆಗೆ ಪೋದಂತೆ ಪೋಗಿ ಮು-
ಕುಂದ ಮೊಮ್ಮಗನಿಗೆ ಹಿರಿತನವ ಕೊಡಲೆಂದು
ಮುಂದೆ ಜನಿಸುವ ಕಿರಿಯ ಕುವರರೊಳು ತನ್ನ
ಕಂದನ ಸೃಜಿಸಿದ ಹಯವದನ ಚತುರನಲ್ಲವೆ ೧೩
ಮೂಲರೂಪದಿ ಸುರರು ದ್ವಾರಕಾಪುರ ಯಾತ್ರೆಯಲಿ
ಪಾಲಸಾಗರಯಾತ್ರೆ ಗರ್ಭಯಾತ್ರೆ ಕಳೆಯೆ
ಶೂಲಧರ ಖಳಗಂಜಿ ಭುವನವೆಲ್ಲವ ಸುತ್ತಿ ಶ್ರೀ-
ಲೋಲನಿಹ ವೈಕುಂಠಯಾತ್ರೆಯಿಂದ ಬದುಕನೆ
ಭೂಲೋಕದಲಿ ಪುಟ್ಟಿ ಹಯವದನ ಕೃಷ್ಣ ಮಾಡಿದ
ಕೈಲಾಸಯಾತ್ರೆ ಕೈವಲ್ಯಪತಿಗೆ ಲೀಲೆ ೧೪
ಹರನಾರು ಪುರಾಣಗಳು ವಿರಿಂಚನಾರು ಪುರಾಣಗಳು
ಹರ ವಿರಿಂಚರವಲ್ಲವೆಂದು ಹಿರಿಯರೆ ಮನ್ನಿಸಲಾಗಿ
ಪರಮ ಸಿದ್ಧಾಂತಕೋವಿದರೆನಿಪ ಬುಧರಿಗೆ
ಪುರಾಣಗಳ ಮ್ಯಾಲೆ ಮಾಡುವ ಪರಮಾದರ ಸಲ್ಲದಯ್ಯ
ದುರಾಗ್ರಹವ ಮಾಡಬ್ಯಾಡ ಗುರುಮತವ ಬಿಡಬ್ಯಾಡ
ಸಿರಿ ಹಯವದನನಾರುಪುರಾಣಗಳ ನೋಡಿರೊ ೧೫
ಒಂದು ಬೊಮ್ಮಚಿತ್ತು ಒಂದು ಜೀವಚಿತ್ತು ಇಂ-
ತೆಂದು ಶ್ರುತಿಸ್ಕಂಧ ಚೇತವೆಲ್ಲ ಗ್ರಂಥ[ಆ]ಸ್ಯ
ದಿಂದ [ಒರೆಯೆ] ಹರಿಜಡನೋ ಹರಜಡನೋ
ಮಂದಹಾಸದಿಂದ ಜಡರು ಮನುಮುನಿಗಳೆಲ್ಲ
ಇಂಥ ಶಿವನ ವಹಿಸಿಕೊಂಡು ವಾದಿಸುವರು
ಹಿಂದು ಮುಂದರಿಯರೆಂದು ಹಯವದನ ನಗನೆ ೧೬
ಯಂ ಬ್ರಹ್ಮವೇದಾಹಂ ಬ್ರಹ್ಮ ವೇದಶ್ರುತಿಶಬ್ದ ಬ್ರಹ್ಮ-
ವೆಂಬ ವೇದ ಬೋಧಿಸಿತಾಗಿ
ಇಂಥ ಮನುಜರಿಗೆಲ್ಲ ಭಾವಾಭಾವ ಪೇಳ್ವ
ಹೊಂದಿಬದುಕು ಹಯವದನನ ಚರಣವ
ಹೊಂದಿಬದುಕೊ ಜೀವ ಹರಿಯೆ ನಾನೆನ್ನಬ್ಯಾಡ ೧೭

 


ಕಾವುದೆಮ್ಮನು ಜಗವ ಕಾವ ಕರುಣಿಯೆ ಪ.
ಈವುದೆಮಗೆ ಸಕಲಸುಖವ ದೇವ ಲಕುಮಿನಾರಾಯಣ ಅ.ಪ.
ಕಮಲಕರ್ಣಿಕಾ ಮಧ್ಯದಲ್ಲಿ ವಿಮಲ ವಿಹಂಗಪತಿಯ ಶಿರದಿಕಮಲಭವನು ಬಿಡದೆ ಪೂಜಿಪ ಅಮರಕುಲಲಲಾಮ ವಿಭುವೆ ೧
ಮಧ್ವಮುನಿಯ ಕರಗಳೆಂಬೊ ಪದುಮಗಳಿಂದ ಪೂಜಿತ ಚರಣಗೆದ್ದು ಕುಜನತತಿಯ ಸುಜನರುದ್ಧರಿಸುವ ಗುಣನಿಧಿಯೆ ೨
ಶಂಖಚಕ್ರ ಗದಾಪದುಮ ಆಂಕಗಳಿಂದ ಶೋಭಿತ ಕರಪಂಕಜಾಕ್ಷ ಪಯೋಧಿಶಯನ ಶಂಕೆಯಿಲ್ಲದೆ ಹಯವದನ ೩

 

೪೫
ಕುಣಿದಾಡೊ ರಂಗ ನಲಿದಾಡೊ ಪ.
ಕುಣಿದಾಡೊ ಕುಂದಣದ ಸರಳೆನಲಿದಾಡೊ ಮಾಣಿಕದ ಹರಳೆ ಅ.ಪ.
ಪತಿಶಾಪದಿ ಶಿಲೆಯಾದ ಗೌತಮಸತಿಯ ಮೆಟ್ಟಿ ಪೆಣ್ಣಮಾಡಿಅತಿದಿವ್ಯ ಶ್ರೀಚರಣಾರವಿಂದಗತಿಯಿಂದಲಿ ಧಿಂಧಿಮಿಕೆನ್ನುತ ೧
ಗಕ್ಕಸದಿಂ ಶಕಟಾಸುರನಸೊಕ್ಕ ಮುರಿದು ಬಂಡಿಯನೊದೆದುಚೊಕ್ಕ ಶ್ರೀಚರಣಾರವಿಂದಧಿಕ್ಕಿಟ ಧಿಮಿಕಿಟ ಝಂಕಿಟವೆನ್ನುತ ೨
ಬಲಿಯ ಮೆಟ್ಟಿ ಕಾಳಿಂಗನ ಹೆಡೆಯತುಳಿದು ನಾಟ್ಯವನಾಡಿಚೆಲುವ ಶ್ರೀಹಯವದನ ನಿಮ್ಮಘಲುಘಲು ಗೆಜ್ಜೆ ಘಿಲುಘಿಲುಕೆನ್ನುತ ೩

 

೨೫೬
ಕುತ್ಸ್ಸಿತರೊಲ್ಲದ ಮತ್ಸರವಿಲ್ಲದ
ಸತ್ಸಭೆ ಕೇಳಲೀ ಕೃತಿಯ ಪ.
ಈ ಯುಗದವರಿಗೆ ಕಲಹ ಮಂಡಿಸಿದಗೆ
ಆ ಯುಗದವರುಕ್ತಿ ಬೇಕು
ನ್ಯಾಯದವರ ಕೇಳು ಪೂರ್ವಶಾಸನ ಸಾಕ್ಷಿ
ಹೇಯವೆಂದಾರು ಪೇಳುವರು೧
ನಿಮ್ಮವರಾಗಮ ನಮ್ಮವರಿಗೆ ಸಲ್ಲ
ನಮ್ಮೋಕ್ತಿ ನಿಮಗೆ ಮೆಚ್ಚಲ್ಲ
ಇಮ್ಮನದವರಿಗೆ ಇನ್ನೊಬ್ಬ ಹಿರಿಯರ
ಸಮ್ಮತಿ ಬೇಕು ನಿರ್ಣಯಕೆ೨
ಯುಕ್ತಿ ಮಾತ್ರವ ನಂಬಿ ನಡೆವುದುಚಿತವಲ್ಲ
ಯುಕ್ತಿ ಸರ್ವತ್ರ ಬಂದಿಹುದು
ಕುತ್ಸಿತ ದೇಹಬಂಧವ ಬಿಡಿಸುವ ನರ-
ರುತ್ತಮರೆಂದರೇನೆಂಬೆ ೩
ಹಿಂಸೆ ಸಲ್ಲದು ಗಡ ಕರದ ಚಿಮುಟಿಯಿಂದ
ಏಸು ಕೂದಲ ಕೀಳುತಿರಲು
ಏಸೋ ಜೀವಗೆ ನೋವು ಅದು ಹಿಂಸೆ
ದೋಷದ ಒಂದಂಶಕ್ಕೆ ಸರಿ ಬಂದಿಹುದೆ ೪
ಕೇಶ ಆಚ್ಛಾದನ ಸಂಕಟದಿಂದೆಂದ ಕ್ಲೇಶ
ಸೂಸುವ ನಯನಾಂಬುಧಾರೆ
ಆ ಸಮಯದಿ ಪರಮಸುಖವೆಂಬ ಮಾತು
ಸತ್ಯವ್ರತಕೆ ಎಂತೊಪ್ಪಿಹುದೊ ೫
ವೇದಶಾಸ್ತ್ರವ ಬಲ್ಲ ಹಾರವನಲ್ಲ ಹು-
ಟ್ಟಿದ ದಿವಸ ಮೊದಲಾಗಿ
ಸಾಧಿಸಿ ಮಾಂಸವ ತಿಂಬ ಪಾತಕಿ ತಮ್ಮೊ –
ಳಾದನೆಂಬುದು ಬಲು ಚೋದ್ಯ೬
ಪಾಪ ಸಲ್ಲದು ಗಡ ಪರನಿಂದೆಯಿಂದಾದ
ಪಾಪವೆ ತಾವು ಶುದ್ಧರೆಂಬ
ಈ ಪರಿ ಆತ್ಮಸ್ತುತಿಯಿಂದೊಂದಾ ಪಾಪ
ಲೇಪಿಸದಿಹುದೆ ತಮ್ಮವರ ೭
ಸ್ಥಾವರಜೀವರ ಸಾವಿರ ಕೋಟಿಯ
ಆವಾಗ ಕೊಂದು ತತ್ತನುವ
ಜೀವಿಪೆನೆಂದು ಬೇಯಿಸಿ ತಿಂಬ ಪಾಪವ
ಆವ ನಿಮಗೆ ಅಹುದೆಂದ ೮
ಇಂದ್ರಿಯಹತ್ತಿಲ್ಲದವರ ಕೊಲ್ಲುವುದಕ್ಕೂ ಹಾ-
ಗೆಂದ ಗುರುವ ನಾನೇನೆಂಬೆ
ಅಂದಚೆಂದಗಳ ಮೂಕರ ಪಕ್ಷ್ಷಿಯಂಡದ
ನಿಂದ್ಯ ಹಿಂಸೆಯ ಸಲಿಸುವರೆ ೯
ಸಂಗೀತಶ್ರವಣದಿ ಧೂಪಾಘ್ರಾಣದಿ ಮೂಲ
ಹಿಂಗೂಡಿದುದಕ ಸ್ವಾದನಾದಿ
ಅಂಗನೆ ಈಕ್ಷಣ ಸ್ಪರ್ಶನದಿಂ ಸ್ಥಾವ-
ರಂಗಳು ಜಂಗಮದಂತೆ ೧೦
ತಮ್ಮ ಕರ್ಮದಿ ತಾವೆ ಸಾವರೆಂಬ ಮತದಿ
ಅಮ್ಮಮ್ಮ ಬಹುದಾತ್ಮಹಿಂಸೆ
ಕಮ್ಮಿಯಾದ ವ್ರಣಕ್ಕೆ ಮದ್ದನಿಕ್ಕಲು
ನಿರ್ಮಾಯನದೊಳಗೇಸೊ ಹಿಂಸೆ ೧೧
ಅಕ್ಕಿಯ ಕುಟ್ಟಲು ಬಕ್ಕು ಜೀವರ ಹಿಂಸೆ
ನೆಕ್ಕುವ ನಾಲಗೆ ಮಾಂಸ
ಮಕ್ಕಳುಂಬುದು ಮಾಂಸ ಪ್ರಿಯಳ ಚೆಂದುಟಿ ಮಾಂಸ
ಇಕ್ಕು ಬಾಯೊಳು ದಂತದೆಲುವೆ ೧೨
ಕರದ ತುಂಬವಿದೇನು ಕೊರಳ ಹಾರವಿದೇನು
ಚರಣದ ನಖಪಂಕ್ತಿಯಿದೇನು
ಖರ ಭೂತಪಂಚಕ ಅನ್ನ ಮಾಂಸಗಳೊಳು
ಬರಿದೆ ನಿಂದಿಸಲೇಕೆ ಪರರ ೧೩
ಉಪ್ಪಿನೊಳಗೆ ತೋರ್ಪ ಚಿಪ್ಪ ನೋಡದೆ ಪರ-
ರಲ್ಪ ದೋಷಗಳರಸುವರೆ
ಒಪ್ಪುವುದೆಂತೊ ಶತ್ರುಗಳ ನಿಂದನೆ ಕೊಲು-
ತಿಪ್ಪ ನೃಪಗೆ ಜಿನಮಾರ್ಗ ೧೪
ಬಸ್ತಿಯ ಕಟ್ಟಲು ಭೂಸ್ಥ ಜೀವರ ಹಿಂಸೆ
ಸುತ್ತ ಯಾತ್ರೆಯ ಮಾಡಲೇಸೊ
ತತ್ತಜ್ಜೀವರ ಹಿಂಸೆ ತೈಲಸ್ನಾನದಿ ಹಿಂಸೆ
ವಸ್ತ್ರ ಒಗೆಯಲೇಸೋ ಹಿಂಸೆ ೧೫
ಸಲ್ಲದ ಹಿಂಸೆಯ ಸಲಿಸಿದರೆಂಬರ
ಬಲ್ಲವಿಕೆಯ ನಾನೇನೆಂಬೆ
ಬಲ್ಲಿದ ಹಿಂಸೆಗೆ ಒಳಗಾದರು ಎಲ್ಲ ತಾ-
ವೆಲ್ಲ ಕೈವಲ್ಯ ಸಾಧಕರು ೧೬
**** ತೊಳೆಯದ ಬಲುಹಿರಿಯರ
ನಾತಕ್ಕೆ ಸೋತು ಬೆಂಬಿಡದೆ
ಆತುರದಿಂ ಬಪ್ಪನೊಣಗಳ ಗೀತವ-
ನೋತು ಕೇಳುವ ಶಿಷ್ಯ ಧನ್ಯ ೧೭
ಮೂತ್ರ ದ್ವಾರದ ಮಲ ಶ್ರೋತ್ರನೇತ್ರದ ಮಲ
ಗಾತ್ರ ನಾಸಿಕದ ಮಲ
ಯಾತ್ರೆಯ ಮಾಡುವರಕ್ಷಿಗೆ ಕೌತುಕ
ಪಾತ್ರವಾಯಿತು ಬಲು ಚಿತ್ರ ೧೮
******************* ೧೯
ಪ್ರಾಕಾರದೊಳಗೊಂದು ಕಡೆಯಲ್ಲಿ ಮುನಿವಾಸ
ಏಕ ಭಾಗದೊಳು ಸ್ತ್ರೀ ವಾಸ
ಏಕಾಂತದಿಪ್ಪುದು ಲೋಕಸಲ್ಲದೆಂಬರ
ಈ ಕಾಮನೆಂತು ಬಿಟ್ಟಿಹನು ೨೦
ಬಸ್ತಿಯ ಪ್ರತಿಮೆಯಲಿಪ್ಪ ದೇವನದಾರು
ಮುಕ್ತರಿಗೀಭೋಗ ಸಲ್ಲ
ಮುಕ್ತರಲ್ಲದ ಜೀವ ದೇವರೆಂತಹರೆಂದು
ವ್ಯರ್ಥವಾಯಿತು ನಿನ್ನುತ್ಸಾಹ ೨೧
ನೋಡುವ ನಯನಕ್ಕೆ ಮಾಡುವ ಪೂಜೆಗೆ
ಕೂಡಿದ ಬಹುವಿತ್ತ ವ್ಯಯಕ್ಕೆ
ಈಡಾಯಿತಂಶ ಕೇವಲ ಬೊಂಬೆ ಶಿವಶಿವ
ಆಡುವ ಶಿಶುಗಳ್ಪೇಳಿದರೆ ೨೨
ಹೆಂಡಿರೆ ಸಂಸಾರವಾದರೆ ಹಸಿತೃಷೆ
ಉಂಡು ಮಲಗುವುದು ಮುಕ್ತರಿಗೆ
ಮಂಡೆಯ ಬೋಳಿಸಿ ದೇಹದಂಡನೆ ಮಾಡಿ ಕೈ-
ಕೊಂಡ ಮಾತ್ರದಿ ಮುಕ್ತರಹರೆ ೨೩
ಮತ್ರ್ಯ ದೇಹವಿರಲು ಮುಕ್ತರೊಬ್ಬರು ಅಲ್ಲ
ಸತ್ತಮೇಲೇನಾದರೆಂತೊ
ಅತ್ತು ಕಾಡುವ ಶಿಷ್ಯರೆಂತರು ಕಾಂಬರು ಸರ್ವ-
ಕರ್ತೃ ಶ್ರೀಹರಿ ತಾನೆ ಬಲ್ಲ ೨೪
ದುಃಖವೆ ಸಂಸಾರ ದುಃಖವಿಲ್ಲದ ಸುಖ
ಮುಕ್ತಿಯೆಂಬುದು ಬುಧರ್ಗೆ ಮಾತ್ರ
ಮಿಕ್ಕದೆ ದುಃಖವಿತ್ತರೆ ಭವವೆನಿಪುದು
ದುಃಖವೆ ದೂರ ಮುಕ್ತರಿಗೆ ೨೫
ಪುನರ್ಭವವೆÉನ್ನೆ ಶ್ರುತಿ ಅಮೃತವುಂಡರೆ ಮೋಕ್ಷ
ಜನನ ಮರಣವಿಲ್ಲದಖಿಳ
ಜನರ ದುಃಖವನವತರಿಸಿ ಕಳೆವ ನಾರಾ-
ಯಣನೆ ನಿರ್ದೋಷ ನಿತ್ಯಸುಖಿ ೨೬
ಸೂತಕ ಪಾತಕ ವ್ರತವ ಕೈಗೊಂಡ ಸ್ತ್ರೀ-
ಜಾತಿಯ ಮುಟ್ಟಲ್ಲೆಂಬುವನು
ಖ್ಯಾತ ಶ್ರೀಹರಿಗೆ ಪಾತಕಮುಟ್ಟದೆಂಬರ
ಮಾತನದೇಕೆ ಮನ್ನಿಸನು ೨೭
ಕೆಸರ ತೊಳೆದ ನೀರು ಕೆಸರ ಬಾಧಿಪುದೆ ತಾ-
ಮಸ ವೈರಿ ಸೂರ್ಯನೊಳು ತಮವೆ
ವಿಷಹರ ಗರುಡಗೆ ವಿಷ ಲೇಪಿಸುವುದೆ ಕ-
ಲುಷ ಮುಟ್ಟುವುದೆ ಪಾಪಾಂತಕನ ೨೮
ಸುಡುವಗ್ನಿ ಕಡಿವಸ್ತ್ರ ಕಡುಕೋಪಿ ಸರ್ಪನ
ತಡೆಯಬಲ್ಲರೆ ತುಡುಕುವರೆ
ಬಿಡು ಮನಭ್ರಾಂತಿಯ ಹಯವದನನೆ ಜಗ-
ದೊಡೆಯ ಸರ್ವತ್ರ ನಿರ್ದೊಷ ೨೯

 


ಕುದುರೆ ಬಂದಿದೆ ಚೆಲುವಕುದುರೆ ಬಂದಿದೆ ಪ.
ಕುದುರೆ ಬಂದಿದೆ ಗೆಮುದದಿ ಜ್ಞಾನ ಭಕುತಿ ಕೊಡುವ ಅ.ಪ.
ಹಿಂಗಾಲಿಂ ರಕ್ಕಸರ ಒದೆವ ಕುದುರೆಮುಂಗಾಲು ಕೆದರಿ ಬಾಲವ ಬೀಸಿತಗ್ಗಿಸಿ ತಲೆಯ ಅಡಿಗಡಿಗೆಜಿಗಿದು ಹಾರಿ ಹುಂಕರಿಸುವ ೧
ಗರುವಿ ಮಹಲಕ್ಷ್ಮಿ ತನ್ನವರನೆಂದು ಒಲಿದು ಬರುವಉರದಿ ಶ್ರೀವತ್ಸ ಕೌಸ್ತುಭಧಸ್ರಿಸಿ ತಾಂ ಮೆರೆಯುವಂಥ ೨
ಹಲ್ಲಣವಿಲ್ಲದೆ ನಿಲ್ವುದು ಕುದುರೆಒಲ್ಲದು ಕಡಿವಾಣ ಕುದುರೆಬೆಲ್ಲಕಡಲೆ ಮೆಲ್ಲುವ ಕುದುರೆಚೆಲುವ ಹಯವದನನೆಂಬೊ ಕುದುರೆ ೩

 

೨೨೨
ಕುಲಮದ ವೈಭವಮದ ವಿದ್ಯಾಮದಗಳನುಳಿದು ಹರಿದಾಸರ ಮರೆಯೊಕ್ಕು ಸುಖಿಯಾಗು ಪ.
ಚಿಪ್ಪಿನೊಳ್ಪುಟ್ಟಿದ ಮುತ್ತಿನ ಮಹಿಮೆಗೆತಪ್ಪೇನೊ ಮರುಳೆ ಮಾನವ ಪೇಳೆಯಸರ್ಪತಲ್ಪನ ಪೂಜೆಗುಚಿತನಾದರೆ ಅವನಇಪ್ಪತ್ತೊಂದು ಕುಲ ಸುಕುಲ ನೋಡಾ ೧
ಸುರರ ಸೋಲಿಸಿ ಸ್ವರ್ಗಸಿರಿಯ ಭೋಗಿಸಿದ ದೈ-ತ್ಯರ ಭಾಗ್ಯ ಬಿಸುಟುಪೋದುದ ಕೇಳೆಯಸ್ಥಿರವಲ್ಲ ಸಂಪತ್ತು ಪರಕೆ ಪ್ರತ್ಯಹವೆಂದರಿದುನರಹರಿಯ ಚರಣಸೇವೆಯ ಮಾಡು ೨
ಎತ್ತು ಹೊತ್ತಗೆಯ ಹೊರೆ ಹೊತ್ತಡದಕೆ ಸಂ-ಪತ್ತೇನೋ ಮರುಳ ಸರ್ವಜ್ಞರುಂಟೆಭಕ್ತಿಯುಳ್ಳವನೊಬ್ಬ ನೆರೆಜಾಣ ಜಾಣರಿವರೆತ್ತ್ತೆಂದರಿಯದ ಹಯವದನನಂಘ್ರಿಯ ಬಲ್ಲ ೩

 

೪೬
ಕೃಷ್ಣ ಕಲಿಯ ಕಾಯ್ದ ಕರುಣಿ ಜಿಷ್ಣುಸಖನೆ ಕೃಷ್ಣನೆ ಪ.
ಕೃಷ್ಣ ಪೊರೆಯೊ ಎನ್ನ ವಿಷಯತೃಷ್ಣೆಯಿಂ ಸಾಯಲೆ ದಮ್ಮಯ್ಯ ಅ.ಪ.
ಹಿಂದೆ ಮಾಡಿದ ಕರ್ಮದಡವಿಯೊಂದಿಗೆ ಸವರುವೆನೊ ಗೋ-ವಿಂದ ನಿನ್ನ ಕರುಣಸುಧೆ ಇನ್ನೆಂದು ಪಡೆದು ಸುಖಿಪೆನೊಇಂದು ಮಾಡಿದ ಅಘಗಳು ಬಲು ದಂದುಗಕೊಳಗಾದೆ ನೀನುಕುಂದು ಕುಜನದೂರ ನಿನ್ನ ಕಂದನೆಂದು ಸಲಹೊ ತಂದೆ ೧
ಕಾಮವೆನ್ನ ಕಮಲನಾಭ ಸೀಮೆಗಾಣಲಿಯ್ಯದೊ ನಿ-ಸ್ಸೀಮಮಹಿಮ ಕ್ರೋಧ ಎನ್ನ ಸಾಮವ ನಡುಗಿಸುತಿದೆಭ್ರಮಿತನಾದೆ ಬಲುಪ್ರೇಮವ ತಪ್ಪಿಸಿ ಸುರಕ್ತಾನು ಹೆ ದೈವ ಎನ್ನಆ ಮಹಾಭಯವ ನಿವಾರಿಸೊ ೨
ಸುಖದುಃಖ ಜೀವನಕ್ಕೆ ಕಕ್ಕು ಬಕ್ಕು ಭಯದ ಬೊಸರಕ್ಕೆ ಬಿಡದೆ ಬಿಡದೆ ನಿನ್ನ ಲೆಕ್ಕ ಮಾಡಲಿಯ್ಯದೊಚಿಕ್ಕತನದಿ ಸಿಕ್ಕಿ ದುರ್ವಿಷಯದಿ ನೊಂದೆ ಮೇ-ಯಿಕ್ಕದಂತೆ ಹಯವದನ ದಕ್ಕಿಸೆನ್ನ ಅನುದಿನ ೩

 

೪೮
ಕೃಷ್ಣ ಭವರೋಗದ ಮದ್ದುಕೃಷ್ಣ ಅಭಿಮಾನವ ಕಾಯ್ವಾತ ನಿಂದಲ್ಲಿದ್ದುಪ.
ದುಷ್ಟ ದನುಜರ ಹುಡಿಗುಟ್ಟಿ ನಂಬಿದ ಸುರರದಿಟ್ಟರ ಮಾಡಿದ ಜಗಜಟ್ಟಿ ರಂಗ ಧೀರ ೧
ಮತ್ತೆ ಕೌರವರ ಗೆದ್ದು ಚಿತ್ತದಿ ತನ್ನ ನಂಬಿದಪಾರ್ಥನ ಪಾಲಿಸಿದ ಸಮರ್ಥ ಪಾದ ೨
ಮಧ್ವರ ಪೂಜಿತ ಪಯೋಬ್ಧಿ ತನುಜೆಯರಸಹೃದ್ಯ ಹಯವದನ ಸಮೃದ್ಧ ವೈಕುಂಠಾಧೀಶ ೩

 

೪೯
ಕೃಷ್ಣ ಮುರಾರಿ ಕೇಶವ ಮುರಾರಿಅಚ್ಚುತಾನಂತ ಗೋವಿಂದ ಮುರಾರಿಪ.
ವೇಷಧಾರಿಯಾಗಿ ಬಂದು ಅಸುರರ ಸಂಹರಿಸಿಭೂಸುರರಿಗ್ವೊರವನಿತ್ತ್ಯೋ ಕೇಶವ ಮುರಾರಿ ೧
ನಾ ತಾಳಲಾರೆನೊ ಲೋಕಾಧಿಪತಿಯೆ ಕಾಯೊಅನಾಥರಕ್ಷಕ ನಾರಾಯಣನೆ ಮುರಾರಿ ೨
ಮನಸು ನಿಲ್ಲದು ದೇವ ಮಾರನಟ್ಟುಳಿಗೆನ್ನಮನಕಾಗಿ ನೀನೆ ಬಾರೊ ಮಾಧವ ಮುರಾರಿ೩
ಅನೇಕ ಗೋವ್ಗಳ ಕಾಯ್ದ ಗೋಪಾಲಮೂರುತಿಗೋಪಿಯರರಸ ಗೋವಿಂದ ಮುರಾರಿ ೪
ಕಟ್ಟಿದ ಕಾಮನೆಯ ಬಿಟ್ಟು ಕಳಚಿ ಮನ-ದಿಷ್ಟಾರ್ಥವನೀವ ವಿಷ್ಣು ಮುರಾರಿ ೫
ಮಧುರವಾಕ್ಯಗಳಿಂದ ಮಂದಿರಕಾಗಿ ಬಾರೊಮನಸಿಜನಯ್ಯ ಮಧುಸೂದನ ಮುರಾರಿ ೬
ತಿದ್ದಿದ ಕಸ್ತುರಿತಿಲಕ ತಿಗುರಿದ ಪರಿಮಳಗಂಧಮುದ್ದು ನಸುನಗೆಯ ತ್ರಿವಿಕ್ರಮ ಮುರಾರಿ೭
ಕಾಮಿನಿ ಅಗಲಿಬಂದು ಸೀಮೆನಾಳುವೆನೆಂದುನೇಮವಾಕ್ಯದಿ ನಿಂದ ವಾಮನ ಮುರಾರಿ ೮
ಶ್ರೀಯರಸ ಮೇಳದಿ ರಮಿಸಿ ಬಹುಕಾಲದಿಸಿಂಧುಶಯನ ಶ್ರೀಧರನೆ ಮುರಾರಿ ೯
ಋಷಿಗಳಿಗ್ವರವಿತ್ತು ಬೃಂದಾವನದಲ್ಲಿ ನಿಂದುಹರುಷವಾರಿಧಿ ಹೃಷಿಕೇಶ ಮುರಾರಿ ೧೦
ಪಾವನ್ನ ಮೂರುತಿ ಪರಮದಯಾಳು ನೀನೆಪಾಲಿಸೊ ಶ್ರೀಪದ್ಮನಾಭ ಮುರಾರಿ೧೧
ದಾನವರ ಮರ್ದಿಸಿ ಸುಮನಸರಿಗೊಲಿದದಾನದತ್ತನೆ ದಾಮೋದರನೆ ಮುರಾರಿ ೧೨
ಶಂಕೆಯಿಲ್ಲದೆ ಗೆಲಿಸು ಶಂಖಚಕ್ರವ ಧರಿಸಿ ಅ-ಲಂಕಾರವಾದ ಸಂಕರ್ಷಣನೆ ಮುರಾರಿ ೧೩
ಶೇಷಶಯನ ಸಾಧು ಸಜ್ಜನರ ಪೋಷನೀ ಸಲವೊ ವಾಸುದೇವ ಮುರಾರಿ ೧೪
ಇದ್ದ ಗೋಪೇರಮನೆಯ ಕದ್ದು ಬೆಣ್ಣೆಯ ಮೆದ್ದಪದ್ಮದಳಾಕ್ಷ ಪ್ರದ್ಯುಮ್ನ ಮುರಾರಿ ೧೫
ಅನಿಮಿಷನಾಗಿ ಬಂದು ಯಾದವರನೆಲ್ಲ ಗೆಲಿದಆ ಮಹಾಮಹಿಮ ಅನಿರುದ್ಧ ಮುರಾರಿ೧೬
ಪುನಗು ಕಸ್ತೂರಿಗಂಧ ಪರಿಮಳಪುಷ್ಪದಿಂದ ಪುಣ್ಯಮೂರುತಿ ಪುರುಷೋತ್ತಮನೆ ಮುರಾರಿ ೧೭
ರಕ್ಷಿಸೋ ನೀ ಎನ್ನ ಅಕ್ಷಯದಿಂದಲಿರಕ್ಷಿಸೋ ಅವನಿ ಅಧೋಕ್ಷಜ ಮುರಾರಿ ೧೮
ನಾನೇನ ಪೇಳಲಿ ನಗೆನಗೆಯಲ್ಲಿ ಅಕ್ಷಿಕ್ರೂರವಾಯಿತು ನಾರಸಿಂಹ ಮುರಾರಿ ೧೯
ಮೆಚ್ಚಿದೆ ನಾ ನಿನ್ನ ಪಕ್ಷಿವಾಹನ ಸ್ವಾಮಿಮುಚ್ಚುಮರೆಗಳ್ಯಾಕೊ ಅಚ್ಚುತ ಮುರಾರಿ ೨೦
ಜಾಣತನದಿ ಪೋಗಿ ಜಾರಸ್ತ್ರೀಯರನ್ನುಒಡಗೂಡಿ ಆಡಿದ ಜನಾರ್ದನ ಮುರಾರಿ೨೧
ಉಗುರಲ್ಲಿ ಹಿರಣ್ಯಕನ ಸೀಳಿ ಉರದಲ್ಲಿ ಮಾಲೆಯ ಧರಿಸಿಉಬ್ಬಲ್ಲಿ ಮೆರೆದ ಉಪೇಂದ್ರ ಮುರಾರಿ ೨೨
ಹಿರಣ್ಯಾಕ್ಷತನಯನಂದು ಕರೆಯೆ ಕಂಬದಿ ಬಂದಗರುವದಿಂದಲೆ ನರಹರಿಯೆ ಮುರಾರಿ ೨೩
ಅಟ್ಟಡವಿಯ ತಪಸು ಎಷ್ಟುದಿನವೊ ಸ್ವಾಮಿಪಟ್ಟಣಕಾಗಿ ಬಾರೊ ಕೃಷ್ಣಮುರಾರಿ ೨೪
ಎಲ್ಲರ ಸಲಹಿದ ಫುಲ್ಲಲೋಚನ ಸ್ವಾಮಿಪಾಲಿಸೊ ಶ್ರೀಹಯವದನ ಮುರಾರಿ ೨೫

 

೪೭
ಕೃಷ್ಣನ ಮೂರ್ತಿಯ ಮನದಿ ನೆನೆವುದುತೃಷ್ಣೆಯ ಬಿಡಿಸುವುದು ಎನ್ನ ಘನ್ನ ತೃಷ್ಣೆಯ ಪ.
ಮುದ್ದು ಮೊಗದ ಸುಲಿಪಲ್ಲಿನ ಗಲ್ಲದವಿದ್ರುಮಾಧರದ ನಾಸಿಕದಪದ್ಮದೆಸಳ ಪೋಲ್ವ ನಯನದ ನೊಸಲಿನೊ-ಳಿರ್ದ ಕುಂತಳತತಿಯ ಪುರ್ಬುಗಳೆಂಬ ಸದ್ಧನುವಿನ ಸ್ಥಿತಿಯಕರ್ಣದಲ್ಲಿ ಸಂಬದ್ಧ ಕುಂಡಲ ತತಿಯ ಈ ಚೆಲ್ವಿನಸದ್ರತ್ನತಿಲಕದ ಸೊಬಗನ ಕಂಡೆರಗದವನಾವ ಸುಖಿ ಗೋಕುಲದೊಳಗಿದ್ದ ಮಾನವನೆ ಸುಖಿ ಅಮ್ಮ ನಮ್ಮ ೧
ಕಡೆವ ಶಂಖದಂದದಿ ಕೊರಳ ಕೌಸ್ತುಭಹಾರಬಡನಡು ಜಠರ ಪೇರುರದಉಡಿಗಂಟೆ ಕಿರುಗೆಜ್ಜೆ ಎಸೆವ ಕಟಿಯ ಪಾದಒಡೆದು ಮೂಡಿದ ಚಂದ್ರನಂತಿಹ ಕೈಯ್ಯೊಳ್ಪಿಡಿದ ಬೆಣ್ಣೆಯ ಚಂದದಿಂದ ಮೆ-ಲ್ಲಡಿಯಿಡುತಲೆ ಬಂದ ಇವನು ನಮ್ಮಮೃಡಮುಖ್ಯ ಸುರರೆಲ್ಲ ಅಂಬರದಲಿ ತ-ನ್ನೊಡೆಯನೆಂದೆಂಬರಮ್ಮ ಈ ದೇವನಅಡಿಗಳಿಗೆರಗುವ ಬೊಮ್ಮ ನೋಡು ನೋಡು ೨
ವರ್ತುಳೋರು ಜಾನು ಜಂಘಗಳ ಸಂ-ಪತ್ತ ನೋಡು ಕರಿಕರದರತ್ನದರ್ಪಣದ ಕಾಮನ ಬೆನ್ನಿಲೊಪ್ಪುವಬತ್ತಳಿಕೆಯ ಚೆಲುವ ಪೋಲುವ ಬೆರ-ಳರ್ಥಿಯಿಂದಲಿ ಪೊಳೆವ ಚಿತ್ರ ಚಾರಿತ್ರಚಿತ್ತಜನಯ್ಯನ ಚರಣಕಮಲವೆನ್ನಚಿತ್ತದಿ ನೆಲೆಸಿಪ್ಪುದು ಅದರಿಂದ ಸ-ರ್ವತ್ರ ಸುಖವು ತಪ್ಪದು ಹಯವದನ್ನ ೩

 

೨೭೮
ಕೇಶವ ಜಗದೀಶ ಸಾಸಿರಭಾಸುರಕೋಟಿಸಂಕಾಶ
ವಾಸವಾದಿಗಳ ವಂದ್ಯ ಸೀತಾಪತೆ ೧
ನಾರಾಯಣ ಸಕಲವೇದಪಾರಾಯಣ ಕೃಷ್ಣ
ನಾರದಾದಿಗಳ ವಂದ್ಯ ಸೀತಾಪತೆ ೨
ಮಾಧವ ಮಂಗಳಗಾತ್ರ ವೇದವನ್ನೆ ಕದ್ದು ಒಯ್ದ
ಆ ಖಳನ ಕೊಂದೆ ಸೀತಾಪತೆ ೩
ಗೋವಿಂದ ಗೋಕುಲಬಾಲ ಗೋಪಿಯರ ಮನೋಹರ
ಆದಿ ಕೂರ್ಮಾವತಾರ ಸೀತಾಪತೆ ೪
ವಿಷ್ಣುವೆ ಯತಿಗಳ ವಂದ್ಯ ಅಷ್ಟಲಕ್ಷ್ಮಿಯರ ನಾಥ
ದಿಟ್ಟ ವರಾಹರೂಪನಾದ ಸೀತಾಪತೆ ೫
ಮಧುಸೂದನ ಮಾವನ ವೈರಿ ಯದುಕುಲಕ್ಕೆ ತಿಲಕನಾದ
ಚೆಲುವನಾದ ಹರಿ ನೀನೆ ಸೀತಾಪತೆ ೬
ತ್ರಿವಿಕ್ರಮರೂಪನಾಗಿ ತ್ರಿಜಗವನ್ನೆ ಪಾಲಿಸಿದ
ವಾಮನರೂಪಿ ನೀನೆ ಸೀತಾಪತೆ೭
ವಾಮನರೂಪವ ತಾಳಿ ಆ ಮಹಾಬಲಿಯನ್ನೆ ತುಳಿದು
ನೇಮದಿ ಕ್ಷತ್ರೇರ ಕೊಂದ ಸೀತಾಪತೆ ೮
ಶ್ರೀಧರ ನೀನೆಂದೆನಿಸಿ ಶೋಷಿಸಿ ಖಳಗ್ ನೆಲ್ಲ
ಜಾನಕಿಯ ತಂದ ರಾಮ ಸೀತಾಪತೆ ೯
ಹೃಷೀಕೇಶ ನೀನೆಂದು ಋಷಿಗಳು ಸ್ತುತಿಯ ಮಾಡಿ
ವಸುದೇವಸುತ ಕೃಷ್ಣ ಸೀತಾಪತೆ ೧೦
ಪದ್ಮನಾಭನೆಂದು ವೇದಸಿದ್ಧಾವಾಗಿ ಪೊಗಳುತಿದೆ
ಬುದ್ಧಾವತಾರ ಕೃಷ್ಣ ಸೀತಾಪತೆ ೧೧
ದಾಮೋದರನೆಂದು ನಿಮ್ಮ ದೇವತೆಗಳೆಲ್ಲ ಕರೆಯೆ
ಆ ಮಹಾ ಕಲ್ಕ್ಯ್ಕನಾದ ಸೀತಾಪತೆ ೧೨
ಸಂಕರುಷಣ ದೇವ ನಿಮ್ಮ ಕಿಂಕರರು ನಾವೆಲ್ಲರಯ್ಯ
ಪಂಕಜಾಸನವಂದ್ಯ ರಾಮ ಸೀತಾಪತೆ ೧ ೩
ವಾಸುದೇವ ನಿಮ್ಮ ಪಾದಕ್ಕೆ ವಂದನೆಯ ಮಾಡುವೆನಯ್ಯ
ದೋಷರಾಶಿ ನಾಶಮಾಡು ಸೀತಾಪತೆ ೧ ೪
ಪ್ರದ್ಯುಮ್ನನೆಂದು ಸುರರು ಎದ್ದು ನಿನ್ನೆ ಪೊಗಳುತ್ತಿರೆ
ಉದ್ಧಾರ ಮಾಡಿದ ದೇವ ಸೀತಾಪತೆ ೧೫
ಅನಿರುದ್ಧನೆ ಗತಿಯೆಂದು ಅನುದಿನ ನಿನ್ನ ಕರೆಯೆ
ಅನಿಮಿತ್ತಬಂಧು ಕೃಷ್ಣ ಸೀತಾಪತೆ ೧೬
ಪುರುಷೋತ್ತಮ ಪುಣ್ಯನಾಮ ಸ್ಮರಿಸುವ ಜನರ
ಮನೋಹರುಷ ನೀಡಿದ ರಾಮ ಸೀತಾಪತೆ ೧೭
ಅಧೋಕ್ಷಜ ಲೋಕಗಳಿಗೆ ಆಧಾರಭೂತನಾ ಗಿರುವೆ
ವೇದವೇದ್ಯರಾಮ ಸೀತಾಪತೆ ೧೮
ನಾರಸಿಂಹ ನರನಿಗೆ ವೇದಗೀತೆಗಳನೆಲ್ಲ
ಬೋಧನೆಯನ್ನು ಮಾಡಿದ ಸೀತಾಪತೆ ೧೯
ಅಚ್ಯುತ ವಿಶ್ವಾಮಿತ್ರ ಅತಿಶಯ ಯಾಗವ ಕಾಯ್ದ
ಭಕ್ತವತ್ಸಲ ರಾಮ ಸೀತಾಪತೆ ೨೦
ಜನಾರ್ದನರೂಪನಾಗಿ ಜಾನಕಿಯ ತಂದ
ಜಾಹ್ನವೀಜನಕ ರಾಮ ಸೀತಾಪತೆ ೨೧
ಉಪೇಂದ್ರನೆ ಉದ್ಧವಗೆ ಉಪದೇಶವನೆ ಮಾಡಿ
ಅಪರಿಮಿತಪದವಿ ಕೊಟ್ಟ ಸೀತಾಪತೆ ೨೨
ಹರಿಹರಿಯೆ ರಕ್ಷಿಸೆಂದು ಹಲವು ಕಾಲ ತಪವ ಮಾಡಿ
ಚರಿಸುವರಿಗೆ ಮೋಕ್ಷವಿತ್ತೆ ಸೀತಾಪತೆ ೨ ೩
ರಕ್ಷಿಸಯ್ಯ ಕೃಷ್ಣ ರಾಮ ರಕ್ಷಿಸಯ್ಯ ಹಯವದನ
ಪಕ್ಷಿವಾಹನ ರಾಮ ಸೀತಾಪತೆ ೨೪

 

೫೦
ಕೇಳಲೊಲ್ಲನೆ ಎನ್ನ ಮಾತನು ರಂಗ ಪ.
ಕಾಳೀಮರ್ದನ ಕೃಷ್ಣಗೆ ಹೇಳೆ ಗೋಪ್ಯಮ್ಮ ಬುದ್ಧಿಅ. ಪ.ಬಿಟ್ಟ ಕಣ್ಣನು ಮುಚ್ಚಲೊಲ್ಲನೆ ದೊಡ್ಡ
ಬೆಟ್ಟಕ್ಕೆ ಬೆನ್ನೊತ್ತಿ ನಿಂದನೆ ಬಲುಸಿಟ್ಟಲಿ ಕೋರೆ ಹಲ್ಲ ಕಿರಿದನೆ ಈಗಗಟ್ಟಿ ಉಕ್ಕಿನ ಕಂಬವೊಡೆದು ಬಂದನೆ ರಂಗ ೧
ಮೂರಡಿ ಭೂಮಿ ಬೇಡಿ ಬಂದನೆ ತಾಯ- ಶಿರವ ಕಡಿಯಲಿಕೆ ಕೊಡಲಿ ತಂದನೆನಾರಸೀರೆಯನುಟ್ಟುಕೊಂಡನೆ ಬಲುಚೋರತನದಲಿ ಹರವಿಹಾಲ ಕುಡಿದನೆ ರಂಗ ೨
ಬತ್ತಲೆ ನಾರಿಯರ ಅಪ್ಪಿದ ಹೋಗಿಉತ್ತಮ ಅಶ್ವವ ಹತ್ತಿದಹತ್ತವತಾರವ ತೋರಿದ ದಿಟ್ಟಮೂರ್ತಿ ನಮ್ಮ ಚೆಲುವ ಶ್ರೀ ಹಯದವನ ೩

 

೨೨೩
ಕೈಲಾಸದಾಶೆಯಲ್ಲಿಹುದೊಶೈಲೇಂದ್ರಸುತೆಯರಸ ಶಿವನ ಒಲವಿಲ್ಲದವಗೆ ಪ.
ಗುರುಹಿರಿಯರರಿಯದಗೆ ಪರಗತಿಯ ತೊರೆದವಗೆವರಧರ್ಮಪಥವ ಮರೆದವಗೆದುರುಳರನೆ ಪೊರೆದು ಪರಸತಿಯ ನೆರೆದವಗೆ ೧
ದೀನಜನರೊಡನಾಡಿ ಹೀನಕರ್ಮವ ಮಾಡಿಆನೆಂಬ ಮಮತೆಯನೆ ಕೂಡಿದಾನವನೆ ಬೇಡಿ ದುರ್ದಾನಕೆ ಮರುಳಹಗೆ ೨
ಅನಾಚಾರಂಗಳ ಬಿಡದೆ ಮನೆಗೆ ಬಂದರು ಕೊಡದೆಧನದ ಗಂಟುಗಳನು ಕಡಿಯದೆಅನುಸರಿಸಿ ನಡೆಯದೆ ಪರರ ಜರಿದು ನುಡಿವವಗೆ ೩
ನ ನುಡಿಯ ಹಿತವೆಂದು ಲಾಲಿಸದೆಕ್ರೋಧಮಯನಾಗಿ ದೂಷಿಪಗೆಪಾದಕೆರಗದೆ ಜನನಿಯನಾದರಿಸದವಗೆ ೪
ಹಯವದನನಲ್ಲೆಂದು ತಾನೆಲ್ಲ ಬಲ್ಲೆಯೆಂದುದಯವುಳ್ಳವರ ದೈವನೆನದೆ ಈಸ್ವಯಂಭು ಲಿಂಗದ ಕಲ್ಲೇ ದೈವವೆಂಬುವಗೆ ೫

 

೨೭೯
ಕೊಂಡಾಡಲಳವೆ ನಿನ್ನಯ ಕೀರ್ತಿ ಭೂ-
ಮಂಡಲದೊಳು ಹಯಗ್ರೀವಮೂರ್ತಿ ಪ.
ವೇದಂಗಳ ಜಲದಿಂದ ತಂದೆ ನೀ
ಪೋದ ಗಿರಿಯ ಬೆನ್ನೊಳಾಂತು ನಿಂದೆ
ಮೇದಿನಿಯ ಕದ್ದೊಯ್ದನ ಕೊಂದೆ ಸಂ-
ವಾದದಿಂದ ಕಂಬದಿಂದಲಿ ಬಂದೆ ೧
ಚರಣಾಗ್ರದಲಿ ನದಿಯನು ಪೆತ್ತೆ ತೀಕ್ಷ್ಣ
ಪರಶು ಪಿಡಿದು ಬಾಹುಜರ ಕಿತ್ತೆ
ನೆರೆನಂಬಿದಗೆ ಸ್ಥಿರಪಟ್ಟವನಿತ್ತೆ ದೊಡ್ಡ
ದುರುಳಕಾಳಿಂಗನ ಶಿರದಿ ನಿಂತೆ ೨
ಪರವ್ರತೆಯರ ಮಾನಭೇದನ
ಚತುರ ತುರಗವೇರಿ ನಲಿವನ
ಕ್ಷಿತಿಯೊಳುತ್ತಮ ನ ಸ್ವಾಮಿ
ಸತತ ರಕ್ಷಿಪ ಶ್ರೀ ಹಯವದನ ೩

 

೫೧
ಕೊಲ್ಲು ಬೇಗ ಕಳ್ಳರ ಸಿರಿನಲ್ಲ ಮಧ್ವವಲ್ಲಭ ಪ.
ಕೊಲ್ಲದಿದ್ದರೆ ನಿಲ್ಲರವರು ಕಲಿಯುಗದ ಕಳ್ಳರು ಅ.ಪ.
ಎಲ್ಲ ಕೂಡಿ ನಿನ್ನ ಪೂಜೆಗೆ ಕಲ್ಲು ಹಾಕುತಿದ್ದರುಬಲ್ಲೆನವರ ಕೊಳ್ಳೆಕಾರರ ಹಲ್ಲ ಕೀಳದೆ ನಿಲ್ಲರು ೧
ಒಳ್ಳೆಮಾತನಾಡಲವರು ಕೋಲಾಹಲದಿ ಬೈವರುಗೆಲುವ ಶಕ್ತಿ ಇಲ್ಲ ನಮಗೆ ಬಲ್ಲೆ ಮಧ್ವರಿಗೊಲಿದನೆ ೨
ಕಳ್ಳತನವ ಒಲ್ಲೆವೆಂಬರು ಮುಳ್ಳು ಮೊನೆಯಂತಿಪ್ಪರುಚೆಲುವ ಹಯವದನ ಅವರ ಕೊಲ್ಲು ನಮ್ಮ ಗೆಲಿಸು ೩

 

೨೮೦
ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲೆ
ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲು
ಕೋಲು ಕೋಲೆನ್ನ ಕೋಲೆ ಪ.
ತಮನ ಕೊಂದನ ಕೋಲೆ ಕಮಠನಾದನ ಕೋಲೆ
ಕ್ಷಮೆಯನೆತ್ತಿದನ ಕೋಲೆ ಕೋಲು
ಕಮನೀಯ ನರಸಿಂಹರೂಪನಾದನ ಕೋಲೆ
ಸುಮುಖ ವಾಮನನ ಕೋಲೆ ೧
ಪರಶುರಾಮನ ಕೋಲೆ ರಘುಕುಲದಲುದಿಸಿ ದಶ-
ಶಿರನ ಕೊಂದವನ ಕೋಲೆ ಕೋಲು
ಸಿರಿಕೃಷúರಾಯನ ಸುಕೋಲೆ ಬುದ್ಧನ ಕೋಲೆ
ತುರಗವೇರಿದನ ಕೋಲೆ ೨
ನಿಗೊಲಿದು ಸೋದೆಪುರದಿ ನಿಂದು
ಮೋದಿ ತ್ರಿವಿಕ್ರಮನ ಕೋಲೆ ಕೋಲು
ಕಾದಿ ಖಳರನು ಕೊಂದ ವೇದಗಳ ತಂದ ವಿ
ನೋದಿ ಹಯವದನ ಕೋಲೆ ೩

 


ಗಣೇಶ ಪ್ರಾರ್ಥನೆ
ಗಜಮುಖ ವಂದಿಸುವೆ ಕರುಣಿಸಿ ಕಾಯೊ ಪ.
ಗಜಮುಖ ವಂದಿಪೆ ಗಜಗೌರಿಯ ಪುತ್ರಅಜನ ಪಿತನ ಮೊಮ್ಮಗನ ಮೋಹದ ಬಾಲ ಅ.ಪ.
ನೀಲಕಂಠನ ಸುತ ಬಾಲಗಣೇಶನೆಬಾರಿ ಬಾರಿಗೆ ನಿನ್ನ ಭಜನೆ ಮಾಡುವೆನಯ್ಯ ೧
ಪರುವತನ ಪುತ್ರಿ ಪಾರ್ವತಿಯ ಕುಮಾರಗರುವಿಯಾ ಚಂದ್ರಗೆ ಸ್ಥಿರಶಾಪ ಕೊಟ್ಟನೆ ೨
ಹರಿಹರರು ನಿನ್ನ ಚರಣ ಪೂಜೆಯ ಮಾಡಿದುರುಳ ಕಂಟಕರನು ತರಿದು ಬಿಸುಡಿದರಯ್ಯ ೩
ಮತಿಗೆಟ್ಟ ರಾವಣ ಪೂಜಿಸದೆಸೀತಾಪತಿ ಕರದಿಂದಲಿ ಹತವಾಗಿ ಪೋದನು ೪
ವಾರಿಜನಾಭ ಶ್ರೀ ಹಯವದನನ ಪದಸೇರುವ ಮಾರ್ಗದ ದಾರಿಯ ತೋರಿಸೊ ೫

 

೧೨೦
[ದಿತಿಜರಿಗೆದುರಾಂತ] ಕೃತಾಂತಗತಿ ನೀ ನಮಗೆ ಗುಣವಂತ ಹನುಮಂತ ಪ.
ಕೇಸರಿತನಯ ದಕ್ಷಿಣಗಾಗಿ ಬಂದೆ ವ-ರುಷಗಳಿಂದಲಿ ಬಲುಗಿರಿಯನು ತಂದೆಈಶ ರಘುಪತಿ ಸೇವೆ ಘನವಾಗಿ ನಿಂದೆಅಸುರ ರಾವಣನ ಸರ್ವ ಸೈನ್ಯವ ಕೊಂದೆ ೧
ಅಂಬುಧಿಯ ದಾಂಟಿ ಸೀತೆಯ ರೂಪ ಕಂಡೆಕುಬುದ್ಧಿಯ ರಾವಣನ ಪುರವ ಸೂರೆಗೊಂಡೆವಿಬುಧರ ಸ್ನೇಹವ ಮಾಡಿದೆ ಬಲುಗಂಡೆಪ್ರಬುದ್ಧರಂದದಿ ಪುಣ್ಯಫಲರಸ ಉಂಡೆ ೨
ಹಯವದನನ ಕೃಪೆ ಪ್ರಿಯ ಹೂಡಿ ಪೊತ್ತೆ ಪ್ರಿಯವಾದ ಭವತರುವಿನ ಬೇರ ಕಿತ್ತೆಭಯವ ಖಂಡಿಸಿ ನಮಗಭಯವನಿತ್ತೆಜಯಜಯ ಪ್ರಾಣನಾಥ ನಮೋ ನಮಸ್ತೆ ೩

 

೫೨
ಗಾಡಿಕಾರ ಶ್ರೀಕೃಷ್ಣ ರನ್ನ ಬಿಡದಿರೊ ಎನ್ನ ಪ.
ಬಡವರ ರಕ್ಷಿಪನ್ನ ಅಡಿಗೆರಗುವೆ ನಿನ್ನ ಅ. ಪ.
ಕಡಲ ಮಗಳ ಗಂಡ ಒಡಲೊಳು ತೋರ್ದಜಾಂಡಪಿಡಿದ ದಂಡ ದೋರ್ದಂಡ ಬೇಡಿದಿಷ್ಟ ದಾನಶೌಂಡ ೧
ಶರಧಿ ಮಧ್ಯದಿ ಪುರವ ನಿರ್ಮಿಸಿದ ಧೀರಈರೇಳು ಭುವನೋದ್ಧಾರ ನೀರದಶ್ಯಾಮಲಾಕಾರ ೨
ಮಂದಸ್ಮಿತ ಮುಖದಿಂದ ಬಂದ ಉಡುಪಿಲಿ ನಿಂದನಂದನ ಕಂದ ಮುಕುಂದ ವೃಂದಾರಕೇಂದ್ರ ಗೋವಿಂದ ೩
ಭಾವಗೊಲಿದಜೋದ್ಭವ ಭವಸಂಜಾತರ ಕಾವಭವಾಬ್ಧಿತಾರಕದೇವ ಭಾವಿಸುವರ ಸಂಜೀವ ೪
ಮಧ್ವಮುನಿಪನೊಡೆಯ ಶುದ್ಧಯತಿಗಣಪ್ರಿಯಶುದ್ಧವಾದಾಗಮಜ್ಞೇಯ ಮುದ್ದುಹಯವದನರಾಯ ೫

 

೨೨೪
ಗಾಳದ ಪುಳುವಿನಾಶೆಯ ಮೀನ್ಗಳಂತೆ ಮುಂದುಗಾಣರುಹಾಳುಬಾವಿಯ ಪೋಲ್ವ ಭವದಿ ಬಳಲುವ ಜೀವರು ಪ.
ಮೇಲೆ ಬಹ ಕಾರ್ಯಜಾಲ ಹಂಬಲಿಸುವಖೂಳ ಜಲಜದ ಕೋಳದೊಳು ಹಲುಬುವಳಿಯಂತೆಕಾಲಪಾಶಕ್ಕೆ ಸಿಕ್ಕಿ ಪುಸಿಯಾಗದೆ ಉಳಿಯಫಾಲದ ಬರಹವ ಮೀರಿ ನಡೆವ ಮನುಜನು ದಾವ ೧
ತೈಲ ವಿಕ್ರಯದ ಶೆಟ್ಟಿ ಮೇಲೆ ಬಹ ಲಾಭಗಳಸಾಲ ಯೋಚಿಸಿ ತನ್ನ ಮೂಲಧನವ ನೀಗಿದ ಗಡಬಾಳುವ ಸುತನ ಬಯಸಿ ಮದುವೆಯ ಮಾಡಿದ ಚೆಲ್ವಬಾಲಕಿ ಬದುಕದೆ ಗರ್ಭದೊರಸೆ ಬಿದ್ದುಹೋಗಳೆ ೨
ಖೂಳಕೊಬ್ಬಿನಲ್ಲುಂಡು ಶಾಲ್ಯಾನ್ನ ದಕ್ಕದಿರೆನಾಳೆಬಹ ಸಂಕಟವನರಿಯದ ಮನುಜನಲ್ಲವೆತಾಳದಮರನ ನೆಳಲಿಗೆಂದು ಬಂದು ಕುಳಿತರೆಬೋಳುತಲೆಯಲಿ ಅದರ ಫಲ ಬಿದ್ದು ಸಾಯನೆ ೩
ಸೂಳೆಯರ ಮೆಚ್ಚಿದವ ಅವರು ಕೊಟ್ಟ ಮದ್ದಿನಿಂದಬೀಳ್ವುದೀ ತನುವೆಂದು ಅಕಟಕಟ ಬಲ್ಲನೆಮಾಳಿಗೆಯ ತೊಲೆ ಮುರಿದು ಮರಣ ಬಂದೀತೆಂದುಲೋಲಾಕ್ಷಿಯರ ಸಂಗಡ ಮಲಗಿದವ ಬಲ್ಲನೆ ೪
ಶೂಲಧರ ಖಳನಿಗೆ ವರವ ಕೊಟ್ಟು ಕಂಗೆಟ್ಟುಕೋಲುತಾಗಿದ ಹರಿಣನಂತೆ ಹರಿಯ ಸಾರ್ದಗಡಆಲಸ್ಯಭಯ ಭಕ್ತಿಭರಿತ ನರರೇನ ಬಲ್ಲರುಕೇಳೆಯಾನಋತೇ ಯೆಂಬ ಶ್ರುತಿಯ ಸಂಭ್ರಮವ ೫
ಬಾಲ ಧ್ರುವನಿಗೆ ಯಾರು ಶೀಲವನು ಕಲಿಸಿದರುತ್ರೈಲೋಕವೀರ ಪಾರ್ಥನ ತಿದ್ದಿದವರಾರುಆಲಸ್ಯವಿಲ್ಲದೆ ಎಲ್ಲವ ಬಲ್ಲ ಬೊಮ್ಮ ತಾಕಾಲೂರಿ ತಪಗೈದು ಜಗವ ಮಾಡಿದ ಗಡ ೬
ಶ್ರೀಲೋಲ ಹಯವದನ ಸರ್ವಸ್ವತಂತ್ರ ತನ್ನತೋಳ ಬಲದಿಂದೊಬ್ಬನೇ ತೊಡಗಿದ ಕಾರ್ಯ ಈಡೇರಿಸುವಈಲೋಕವೆಲ್ಲವಳಿಯಲು ಆಲದೆಲೆಯ ಮೇಲೆಲೀಲೆಯಿಂ ಪವಡಿಸಿ ಸೃಜಿಸಿದಗೆ ಪರರ ಹಂಗೇ ೭

 

೧೭೯
ಗಿಣಿಯೆ ನಿನಗೇನು ಬೇಕದನೀವೆ ಹಯವದನ-ನೆನಿಪ ಹರಿಯನು ಕರೆತಾರೆ ಗಿಣಿಯೆಮುನಿ ನಿಗೆ ವರವೀವ ದೇವನವನೆನೆವವರ ಬಿಡನೆಲೆ ಗಿಣಿಯೆ ಪ.
ವೃಂದಾವನದಿ ಚಂದ್ರನಂತೆಸೆವ ಗೋವಿಂದಚಂದದಿ ನಿನ್ನ ಮಾತ ಮನ್ನಿಸುವನಂದಗೋಪಿಯ ಮುದ್ದುಕಂದನೆನಿಪ ಮುಕುಂದನ-ನಿಂದಿರುಳು ತಂದು ತೋರು ಗಿಣಿಯೆ ೧
ಮೂರು ಬಣ್ಣದ ಕೊರಳ ತಿರಿಯುಳ್ಳ ಗಿಣಿ ನೀನುಮೂರು ಬಣ್ಣದ ಚಾರುನಯನಮಾರನನುಚರ ನೀನು ಮಾರನ ಜನಕನವನುಮೀರ ನಿನ್ನ ಬಿನ್ನಪವ ಗಿಣಿಯೆ ೨
ಸತತ ಸಿರಿದೇವಿಯರ ಸುತನೆನಿಪ ಕಾಮನಿಗೆರಥವಾಗಿ ಮೆರೆವೆ ನೀ ಗಿಣಿಯೆಕೃತಕೃತ್ಯನಾದರೂ ಅದರಿಂದ ನಿನ್ನ ಮಾತಪ್ರತಿಪಾಲಿಸುವನೆಲೆ ಗಿಣಿಯೆ ೩
ಎಲ್ಲರು ಭುಂಜಿಸುವ ಮೊದಲೆ ಭುಂಜಿಸುವ ನಮ್ಮಿನಿಯಬಲ್ಲಿದಾತನ ಬಿರುದ ನಿನಗಿತ್ತಚೆಲುವ ಸಸಿಗಳ ತೆನೆಯ ತಂದು ತಂದು ಮೆಲುವೆ ಗಡಸಲುವುದು ಮೋಹನದ ಗಿಣಿಯೆ ೪
ಪಚ್ಚೆಯ ಬಣ್ಣದ ಗರಿಯ ಸಿರಿಯುಳ್ಳ ಗಿಣಿ ನೀನುಪಚ್ಚೆಯ ಬಣ್ಣದ ವ್ಯಾಸನವನುಎಚ್ಚರಿಸಿ ಕೊಡುತಿದೆ ನಿನ್ನ ಕಂಡರಾ ಮುನಿಯಮೆಚ್ಚಿದೆ ನಾನವನ ತಂದು ತೋರು ಗಿಣಿಯೆ ೫
ಕೆಂದಾವರೆಯ ಪೋಲ್ವ ನಿನ್ನ ಚರಣ ಹರಿಯ ಪದದಂದವನು[ತಂದುತೋರು]ಗಿಣಿಯೆಚೆಂದದ ಅವನ ಚೆಂದುಟಿಯಂತೆ ನಿನ್ನ ಚೆಲುವ ಮುಖ ಕೆಂಪುತಂದು ಮುಂದಿರಿಸು ನೀ ಗಿಣಿಯೆ ೬
ಅವನ ವಾಹನನೆನಿಪ ಗರುಡನ ಕುಲದಲುದ್ಭವಿಸಿ-ದವ ನೀನೆಲೆ ಗಿಣಿಯೆಅವನ ಮುದ್ದು ನುಡಿಯ ಬಲ್ಲರೆ ನೀನು ಜಗದೊಳಗೆಸವಿಮಾತುಗಳ ನುಡಿವೆ ಗಿಣಿಯೆ ೭
ಗಗನದಲಿ ನೆಲೆಸಿಹುದು ನಮ್ಮ ಪತಿಯ ಚೆಲುವ ಪಾದಗಗನದೆಡೆಯೆ ಗಮನ ನಿನಗೆಸೊಗಸುನುಡಿಯಿಂದವನ ಪದಕೆ ಬಿನ್ನಹ ಮಾಡಿಸುಗುಣನ ಕರೆತಾರೆ ಗಿಣಿಯೆ ೮
ತಮ್ಮ ತಮ್ಮ ಮನೆಗಳಲ್ಲಿ ರಮೆಯರಸ ಕೃಷ್ಣನ-ನು ಮನದಲ್ಲಿ ಅರ್ಚಿಸಿ [ಪೂಜಿಸುವರು]ಸುಮುಖನೆಂದು ನಿನ್ನ ಮನೆಯ ಚಾವಡಿಯಲಿ ಇಹ-ನ ಮನ್ನಿಪರೆಲೆ ಗಿಣಿಯೆ ೯
ಉರದಲ್ಲಿ ಸಿರಿವತ್ಸಯೆಂಬ ಕುರುಹುಂಟವಗೆಕರಗಳಲಿ ಶಂಖಚಕ್ರಗಳು ಕೊರಳಲ್ಲಿ ಕೌಸ್ತುಭಮಣಿಯಿಹ ಹಯವದನ ನ-ಮ್ಮರಸನೆಂದರಿತುಕೊ ಗಿಣಿಯೆ ೧೦

 

೩೨೬
ಗುಬ್ಬಿಯಾಳೊ ಗೋವಿಂದ ಗೋವಿಂದಾ
ಗೋವಿಂದ ಗೋವಿಂದಾನೆಂದು ನೆನಯಿರೊ ಗುಬ್ಬಿಯಾಳೊ ಪ.
ಕೇಶವನ್ನ ನೆನೆದರೆ ಕ್ಲೇಶ ಪರಿಹಾರವು ಗುಬ್ಬಿಯಾಳೊ
ನಾರಾಯಣನ ಧ್ಯಾನದಿಂದ ನರಕಭಯವಿಲ್ಲವೊ ಗುಬ್ಬಿಯಾಳೊ ೧
ಮಾಧವನ ನೆನೆದರೆ ಮನೋಭೀಷ್ಟ ಕೊಡುವೊನು ಗುಬ್ಬಿಯಾಳೊ
ಗೋವಿಂದನ್ನ ದಯದಿಂದ ಘೋರದುರಿತ
ನಾಶನವು ಗುಬ್ಬಿಯಾಳೊ ೨
ವಿಷ್ಣುಭಜನೆಯಿಲ್ಲದವಗೆ ವೈಷ್ಣವರ ಜನ್ಮವುಂಟೆ ಗುಬ್ಬಿಯಾಳೊ
ಮಧುಸೂದನನ ಧ್ಯಾನದಿಂದ ಅತಿಶಯವು
ಇಹುದೊ ಗುಬ್ಬಿಯಾಳೊ ೩
ತ್ರಿವಿಕ್ರಮನ ನೆನೆದರೆ ಸಾವಿತ್ರಿಯಾಗಿಹರೊ ಗುಬ್ಬಿಯಾಳೊ
ವಾಮನದೇವರು ನಮಗೆ ವರಗಳ ಕೊಡುವೋರು ಗುಬ್ಬಿಯಾಳೊ ೪
ಶ್ರೀಧರನ್ನ ನೆನದರೆ ಸಿರಿ ನಮಗೆ ಒಲಿವಳೊ ಗುಬ್ಬಿಯಾಳೊ
ಹೃಷೀಕೇಶನ ಧ್ಯಾನದಿಂದ ಹೃದಯ ಪರಿಶುದ್ಧವೊ ಗುಬ್ಬಿಯಾಳೊ ೫
ಪದ್ಮನಾಭ ನಮ್ಮೆಲ್ಲರ ಪಾಲಿಸಿ ರಕ್ಷಿಪನೊ ಗುಬ್ಬಿಯಾಳೊ
ದಾಮೋದರನ ನೆನೆದರೆ ಪಾಮರತ್ವ ಬಿಡಿಸುವನೊ ಗುಬ್ಬಿಯಾಳೊ ೬

ಸಂಕರ್ಷಣನ ಧ್ಯಾನದಿಂದ ಸಂತಾನ ಅಭಿವೃದ್ಧಿಯು ಗುಬ್ಬಿಯಾಳೊ
ವಾಸುದೇವನ ದಯದಿಂದ ವಂಶಉದ್ಧಾರವೊ ಗುಬ್ಬಿಯಾಳೊ ೭
ಪ್ರದ್ಯುಮ್ನನ ನೆನೆದರೆ ಭೂಪ್ರದಕ್ಷಿಣೆ ಫಲವು ಗುಬ್ಬಿಯಾಳೊ
ಅನಿರುದ್ಧನ [ಸೇವಿಸೆ ಪುನೀತರಹೆವೊ] ಗುಬ್ಬಿಯಾಳೊ ೮
ಪುರುಷೋತ್ತಮನ್ನ ಪುರಾಣಪುರುಷನೆಂದು
ತಿಳಿಯಿರೊ ಗುಬ್ಬಿಯಾಳೊ
ಅಧೋಕ್ಷಜ ನಮ್ಮೆಲ್ಲರಿಗಾಧಾರವಾಗಿಹನೊ ಗುಬ್ಬಿಯಾಳೊ ೯
ನಾರಸಿಂಹದೇವರು ನಮ್ಮ ಕುಲದೈವವೊ ಗುಬ್ಬಿಯಾಳೊ
ಅಚ್ಯುತ ಲಕ್ಷ್ಮಿಯ ಕೂಡಿ ಸಚ್ಚಿದಾನಂದನೊ ಗುಬ್ಬಿಯಾಳೊ ೧೦
ಜನಾರ್ದನದೇವರು ಜಗಕೆಲ್ಲ ಶ್ರೇಷ್ಠರೊ ಗುಬ್ಬಿಯಾಳೊ
ಉಪೇಂದ್ರನು ನಮ್ಮ ಅಪರಾಧವ
ಕ್ಷಮಿಸುವನೊ ಗುಬ್ಬಿಯಾಳೊ ೧೧
ಹರಿನಾಮಾಮೃತಕೆ ಸರಿಧರೆಯೊಳಗೆ ಇಲ್ಲವೊ ಗುಬ್ಬಿಯಾಳೊ
ಶ್ರೀಕೃಷ್ಣ ರಂಗೇಶಯೆಂಬೊ ಸಿದ್ಧಕ್ರಿಯ ಬಲ್ಲರೆ ಗುಬ್ಬಿಯಾಳೊ೧೨
ಈ ಗುಬ್ಬಿ ಪಾಡುವರಿಗೆ ಇಹಪರವು ಸಂತತವು ಗುಬ್ಬಿಯಾಳೊ
ಧರಣಿಯೊಳು ಆಚಂದ್ರಾರ್ಕ ತಾರಕವಾಗಿಹರು ಗುಬ್ಬಿಯಾಳೊ ೧೩
ಹಯವದನನ್ನ ಪಾದಧ್ಯಾನ ನಿತ್ಯ ಮರೆಯದೆ ನೀ ನೆನೆಮನವೆ
ನಮ್ಮ ಹಯವದನನ್ನ ಪಾದವೇ ನಿತ್ಯ ಮನವೆ ಗುಬ್ಬಿಯಾಳೊ ೧೩

 

೨೨೫
ಗುರುಹಿರಿಯರನುಸರಿಸಿ ಹರಿಯ ಮನದೊಳಗಿರಿಸಿಪರಗತಿಯ ಬೇಗ ಸಾಧಿಸಿರೊ ಪ.
ಲೆಕ್ಕವಿಲ್ಲದ ದೇಹವೆಂಬ ಸೆರೆಮನೆಯೊಳಗೆಸಿಕ್ಕಿ ಬಹುಕಾಲ ಬಳಲದಿರಿರಕ್ಕಸಾರಿಯ ಭಕ್ತರೊಳು ಸೇರಿ ಮುಂದೆ ಸೆರೆ-ಯಿಕ್ಕದಂತವನ ಮರೆಹೋಗಿರೊ ೧
ಕಂಬಳಿಯ ಬುತ್ತಿಯಂತೀ ದೇಹದೊಳಗೆ ಸುಖವೆಂಬುದಿಲ್ಲವು ದುಃಖಭರಿತಅಂಬುಜಾಕ್ಷನ ದಿವ್ಯ ಮಂಗಳ ಕಥಾಮೃತವ-ನುಂಬ ಸಂಭ್ರಮಕೆ ಸರಿಗಾಣೆನು ೨
ಮಕ್ಕಳುಗಳಳುವಾಗ ಮಡದಿಯರು ಜರಿವಾಗಭಿಕ್ಷುಕರು ಬಂದು ಬೈದ್ಹೋಗುವಾಗಇಕ್ಕಿ ಪೊರೆವುದಕೆ ಬಗೆಯಿಲ್ಲದ ದರಿದ್ರಂಗೆಸೌಖ್ಯವೆತ್ತಣದು ಮನುಜರಿಗೆ ೩
ತಾಯ ಮಾರಿ ತೊತ್ತಕೊಂಬ ಪಾಮರನಂತೆಹೇಯಕುಜನರ ಚರಣಕೆರಗಿಶ್ರೀಯರಸನಂಘ್ರಿಗಳ ನೆನೆಯಲೊಲ್ಲದ ಮನುಜರಿಗೆಆಯುಷ್ಯ ಬರಿದೆ ಹೋಯಿತಲ್ಲ ೪
ಐವರಿತ್ತೊಡವೆಯನು ಅವರವರು ಒಯ್ವರು ಮ-ತ್ತೈವರೆಂಬುವರು ತೊಲಗುವರುಮೈಯ ಹತ್ತರಕೂಟ ಹರಿದು ಹೋಗುವ ಮುನ್ನಕೈಯ ಪಿಡಿದೆತ್ತುವರ ಕಾಣೆ ೫
ಕಾಲು ಜವಗುಂದಿದವು ರೋಗರುಜಿನಗಳಿಂದಕಾಲನ ಭಟರು ಬಂದು ಕವಿದುಸಾಲಾಗಿ ನಿಂತಾಗ ಮುಖಘಂಟೆಯೊಳಗಿನನಾಲಿಗೆಗೆ ನಾದವೆಲ್ಲಿಹುದೊ ೬
ಈಗಲೆ ಹರಿನಾಮನಾದದಿಂದೆಚ್ಚೆತ್ತುನಾಗಶಯನನ ಪುರದ ಪಥವಆಗಮಜ್ಞರ ಕೈಯ ಕೇಳಿಕೊಳ್ಳಿರೊ ನೀವುಈ ಗಾಳಿದೀಪ ಸ್ಥಿರವಲ್ಲ೭
ಜರೆ ಬಂದು ಕಡೆಯಲ್ಲಿ ಗುರುಗುರುಟ್ಟುವಾಗಶರೀರಸಂಬಂಧಿಗಳ ಕಾಟತರುಣಿಯರ ಮೇಲಾಸೆ ತಮ್ಮ ಹಿತವರಿಯದೆಬರಿದೆ ಭವದೊಳಗೆ ಬಳಲದಿರಿ ೮
ವೇದಶಾಸ್ತ್ರವನೋದಲಿಲ್ಲ ಜಪತಪಸಾಧು ಸತ್ಕರ್ಮಗಳ ಸರಕಿಲ್ಲಮಾಧವನ ಪೂಜೆಯನು ಮಾಡಿದವನಲ್ಲ ಹರಿಪಾದತೀರ್ಥ ವ್ರತಗಳಿಲ್ಲ ೯
ಊಧ್ರ್ವಪುಂಢ್ರಸ್ಗಳೆಲ್ಲಿ ಹರಿಯ ಲಾಂಛನವೆಲ್ಲಿಪದ್ಮಾಕ್ಷಿ ಶ್ರೀತುಲಸಿ ಸರಗಳೆಲ್ಲಿಸದ್ಧರ್ಮಪಥವೆಲ್ಲಿ ವಿಷಯಾಂಧಕೂಪದೊಳುಬಿದ್ದು ಹೋರಳುವ ಮನುಜರೆಲ್ಲಿ ೧೦
ಏಕಾದಶಿಯ ಮಾಡಿ ಯತಿಗಳೊಡನೆ ಆಡಿಪೋಕವೃತ್ತಿಗಳನೀಡಾಡಿಶ್ರೀಕಾಂತನನು ಬೇಡಿ ಸುಕೃತಿಗಳನೆ ಕೂಡಿಆ ಕೃಷ್ಣನಂಘ್ರಿಗಳ ಪಾಡಿ ೧೧
ಉಕ್ಕಿ ಹರಿಯನೆ ಪೊಗಳಿ ಅವನಂಗಣದಿ ಹೊರಳಿಶುಷ್ಕ ತರ್ಕಗಳ ಮೇಲೆ ಉಗುಳಿಭಕ್ತಿಜ್ಞಾನಗಳಿರಲಿ ಮಿಕ್ಕ ಪಥದಿಂ ಮರಳಿಮುಕ್ತಿಮಾರ್ಗದಲಿನ್ನು ತೆರಳಿ ೧೨
ಕೊಳ್ಳೆನಾಯಕ ಬಂದು ಕೋಟೆಗಡರದ ಮುನ್ನಕಳ್ಳರೈವರ ಕಾಟದಿಂದಉಳ್ಳ ಪುಣ್ಯಾರ್ಥಗಳು ಕೊಳ್ಳೆ ಹೋಗದ ಮುನ್ನಫುಲ್ಲನಾಭದಲಿ ಬಚ್ಚಿಡಿರೊ ೧೩
ಮಲಮೂತ್ರರಕ್ತಮಾಂಸದ ರಾಸಿಗಳು ಕೂಡಿಎಲುವಿನ ಬಿಲದಲ್ಲಿ ಗೂಡಮಾಡಿಬೆಳೆಸಿದೀ ತನುವೆಂಬ ನರಕದಾಸೆಯ ಬಿಟ್ಟುಜಲಜನಾಭನ ಸೇರಿಕೊಳ್ಳಿರೊ೧೪
ಒಂಬತ್ತು ಛಿದ್ರವುಳ್ಳ ದೇಹವೆಂಬ ಮಡಕೆಯಲ್ಲಿತುಂಬಿದ ವಾಯು ಸ್ಥಿರವೆಂದುನಂಬಿಕೊಂಡಿರಬೇಡಿ ಹಯವದನ ಹರಿಯ ಪಾ-ದಾಂಬುಜವ ಸೇರಿ ಬದುಕಿರೊ ೧೫

 

೨೮೧
ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು
ನಲ್ಲೆಯರು ಬಂದು ಮೆಚ್ಚುಮದ್ದು ಮಾಡಿ ಹೋದರಮ್ಮ ಪ.
ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮ
ಹೆಂಗಳ ನೋಡುತಲೆ ಚಟ್ಟಿಕ್ಕಿದನಮ್ಮ
ತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮ
ಭಂಗಪಡಿಸುತ ಬಾಯ ತೆರೆದನಮ್ಮ ೧
ನೀನು ಮೈಯ ನೋಡಮ್ಮ ತನುವು ಕಿರಿದಾಯಿತಮ್ಮ
ಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮ
ಅನ್ನವ ಕೊಳಲೊಲ್ಲನಮ್ಮ ಅತಿಭೀತನಾದ ದೈತ್ಯ
ಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ ೨
ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮ
ಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮ
ಬೊಮ್ಮಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲವಾಯಿತಮ್ಮ
ನಮ್ಮ ಹಯವದನಗಿನ್ನು ಅಂಜಿಕಿಲ್ಲಮ್ಮ ೩

 

೫೩
ಗೋಕುಲದ ಸತಿಯರೆಲ್ಲ ಶ್ರೀಕೃಷ್ಣನಾಟಗಳದೂರುತಲೆ ಪಾಡುವರು ಪ.
ಕಣ್ಣಮುಚ್ಚನು ಕಪಟ ಸರ್ವಾಂಗದೊಳಗಿದಕೊಮಣ್ಣ ಮೆಲುವನು ತನ್ನ ತೆರೆಬಾಯಿ ತೆರೆವನಿವಚಿಣ್ಣತನದಾ ತನುವ ತೋರುತಲೆ ವನದೊಳಗೆಪಣ್ಣು ಫಲಗಳ ಸವಿವುತಅಣ್ಣನೊಡನೆ ಕೊಳಲನೂದುತಲಿ ಗೋಕುಲದಹೆಣ್ಣುಗಳ ಮರುಳು ಮಾಡುವ ಗಂಡುಗಲಿಯಿವನಿನ್ನ ಮಗ ಅಮ್ಮಮ್ಮ ಶುಕನ ನುಡಿಗಳ ಗೆಲುವಬಣ್ಣಿಸುವ ಕವಿಯದಾವ ೧
ಮುತ್ತಿನೋಲೆಯು ಮುಕುತಿ ಮುದ್ದು ಮೊಗದ ನಿನ್ನಪುತ್ರ ಚೆಲುವನು ಸ್ಮರನ ಸೋಲಿಸುವನಮ್ಮಮ್ಮಯುಕ್ತಿ ಚತುರತೆಗೆ ಚತುರ್ಮುಖ ಶಿಷ್ಯನಾಗಿ ಸಕಲತತ್ವಗಳ ಕೇಳುವ ನಕೊಸುತ್ತಿಯಿವನ್ನ ಬಾಲಲೀಲೆಗೆ ಸುರರು ಸೋಲುತಿರೆಆರ್ತಿಯ ಕಳೆವರೆ ಭವರೋಗಕಿವನೆ ಮದ್ದುಇತ್ತಲೀತನ ಚೆಲುವ ಕಾಣುತಲಿ ಕಂದರ್ಪಪೃಥ್ವಿಯಲಿ ಬಿಲ್ಲ ಬಿಸುಟ ೨
ಎತ್ತ ನೋಡಿದರಿವನ ಮೂರ್ತಿ ಕೀರ್ತಿಯ ಸೊಬಗುಚಿತ್ರ ಚರಿತ್ರಗಳ ಕಂಡಿರೆ ನಿಮ್ಮ ಕುಮಾರನಾದ ಹತ್ತುಸಾವಿರ ಪೆಸರು ಸಲ್ಲುವುದಮ್ಮ ಸ-ರ್ವತ್ರ ನೋಡುವ ಸುಜನರುಚಿತ್ತದೊಳಗೆಲ್ಲ ಪುರವಿಟ್ಟವರು ಅರಸುತಿರೆವ್ಯಾಪ್ತನೆಂಬುದಕೆ ತಮ್ಮ ತಮ್ಮ ಮನವೇ ಸಾಕ್ಷಿಮುಕ್ತಿ ನಮಗೇಕೆ ಹಯವದನನಂಘ್ರಿರಗಳಾಣೆನಿತ್ಯದಲಿ ಇವನ ನೋಡುತಲಿಹುದು ಸಾಕೆಲೆ ಗೋಪಿ ೩

 

೧೪೪
ಗೋದೆ ಸಮಸ್ತಫಲದೆ ಸ್ನಾನ ಒದಗಿಮಾ-ದರೊಮ್ಮೆ ವೈಕುಂಠಪದವೀವೆ ಪ.
ಬ್ರಹ್ಮಾದಿ ಶಿಖರದಿಂ ಪುಟ್ಟಿ ನೀನು ಬಲುಬ್ರಹ್ಮ ಋಷಿಯಾದ ಗೌತಮ ಮುನಿಯಬ್ರಾಹ್ಮರಿಂದಲಿ ಬಂದ ಗೋಹತ್ಯ ಪರಿಹರಿಸಿಅಮ್ಮಮ್ಮ ಸಪ್ತಮುಖದಿಂದ ಸಾಗರವ ಬೆರೆದೆ ೧
ಆದಿಯಲಿ ತ್ರಿಯಂಬಕನ ಜ[ಡೆ]ಯಲುದಿಸಿದೆ ನೀನುಮುದದಿಂದ ಪಶ್ಚಿಮಕಾಗಿ ನಡೆಯೆ ಕಂಡುಒದಗಿ ಗೌತಮನು ಕುಶದಿಂದ ತಿರುಗಿಸಲು ನೀಸದಮಲ ಕುಶಾವರ್ತಳೆಂದೆನಿಸಿಕೊಂಡೆ ೨
ಔದುಂಬರ ವೃಕ್ಷಮೂಲದಿಂದುದ್ಭವಿಸಿಉದಧಿಯನು ಕೂಡಬೇಕೆಂದು ಬೇಗಮೇದಿನಿಯಿಳಿದು ತಿರುಗುತಲಿ ನೀ ಮುದದಿಂದಆದರದಿ ಪೂರ್ವಾಬ್ಧಿಯನು ಕೂಡಿದೆ ೩
ಸಿಂಹರಾಸಿಯಲಿ ಸುರಗುರು ಬಂದುದು ಕೇಳಿಅಂವ್ಹ ರಾಸಿಗಳು ಸಂಹಾರಕಾಗಿಬಂಹ್ವಾಯಾಸದಿ ಬಂದು ನಿಮ್ಮನು ಕಂಡೆಅಂವ್ಹಂಗಳು ಪರಿಹರಿಸಿ ಮುಕುತಿಯ[ಕೊಡು]ದೇವಿ ೪
ವಿನಯದಲಿ ಸ್ನಾನಪಾನವನು ಮಾಡುವರಿಗೆವನಜಾಕ್ಷ ಹಯವದನ ಹರಿಯವನಜನಾಭನ ಲೋಕಸಾಧನವಾದಘನ ಭಕುತಿಯನಿತ್ತು ರಕ್ಷಿಸುದೇವಿ ೫

 

೫೪
ಗೋಪಗೋಪನೆಂಬಾ ಕೋಗಿಲೆ ನಮ್ಮಶ್ರೀಪತಿಯ ಕಂಡರೆ ಬರಹೇಳೆ ಕೋಗಿಲೆ ಪ .
ಕೆಂಗಾವಳೆಯಾಲೆದಲಿ (?) ಪಾಂಡುರಂಗಮಂಗಳ ಮೂರುತಿಪ್ಪಶೃಂಗಾರವಾದ ಸುರತರುವಿನ ನೆರಳೊಳುರಂಗನಾಥನ ಕಂಡರೆ ಬರಹೇಳೆ ಕೋಗಿಲೆ ೧
ಮಧುಮಾಸದಲಿ ಮಾಧವನಿರಲುಚದುರೆ ಗೋಪಿಯರಸ ಮೇಳದಲ್ಲಿಮುದದಿ ವನಂತರನಾಡುವ ಭರದಿಂದಪದುಮನಾಭನ ಕಂಡರೆ ನೀ ಬರಹೇಳೆ ೨
ಅಟ್ಟಿ ಅರಸುವ ಶ್ರ್ರುತಿಗಳಿಂದ ಸುಖಬಿಟ್ಟೆವೆಂದರವ ಪರಬ್ರಹ್ಮಸೃಷ್ಟಿಯೊಳು ಉಡುಪಿನ ಹಯವದನ ಸ್ವಾಮಿಯದೃಷ್ಟಿಲಿ ಕಂಡರೆ ಬರಹೇಳೆ ಕೋಗಿಲೆ ೩

 

೫೫
ಗೋಪಿ ನಿನ್ನ ಮಗನು ಬಂದು ತಾಪಿಸಿದ ಮಕ್ಕಳನ್ನು ಪ.
ಕೋಪಿಸಬ್ಯಾಡವೆ ನೀನು ಭೂಪತಿಗ (ಳಿಗ್ಯೇಳೆ) ನು ಅ. ಪ.
ಕಂಡವರ ಮನೆಯೊಳಿವನು ಪುಂಡುತನವ ಮಾಡಿದದುಮಕ್ಕಳೆಂಬುವನು ದಿಂಡೆತನವ ಮಾಡಿದನು ೧
ಹಿತ್ತಿಲ ಬಾಗಿಲೊಳ್ಬಂದು ಒತ್ತಿದ ಹಾಲನ್ನೆ ತಂದವೃತ್ತಪಯೋಧರಿಯರ ಮುತ್ತಿನ ಹಾರವ ಕಳೆದ ೨
ಬೆಣ್ಣೆಗಳ ಕದ್ದು ತಿಂದು ಮಣ್ಣಿನ ಭಾಂಡವನೊಡೆದಹೆಣ್ಣುಗಳ ಬೆನ್ನ ಬಡಿದ ಸಣ್ಣ ಮೊಲೆಗಳ ಪಿಡಿದ ೩
ನಿದ್ರೆ ಹೊತ್ತಿನೊಳು ಬಂದು ಕ್ಷುದ್ರತನವ ಮಾಡುತ್ತನಿಂದಸದ್ದು ಮಾಡದಿರೆಯೆಂದ ಮುದ್ದು ಕೊಡುವೆ ನಿನಗೊಂದ ೪
ಅರುಣೋದಯದಿ ಬಂದ ತರುಣಿ ನಿನ್ನ ಅಳಿಯನೆಂದತರಳಾಕ್ಷಿ ಬಾರೆನುವ ಸಿರಿ ಹಯವದನ ಬಂದ ೫

 

೫೬
ಗೋವಿಂದ ಗೋಪಾಲ ಗೋಪಿಕಾವಲ್ಲಭೂೀವರ್ಧನೋದ್ಧಾರಕ ಪ.
ನಾರಾಯಣಾಚ್ಚುತ ನರಮೃಗರೂಪಶ್ರೀಪತಿ ಶೌರಿ ಹರಿವಾರಿಜೋದ್ಭವವಂದ್ಯ ವಂದಿತ ಚರಿತ್ರಪುರಮರ್ದನಮಿತ್ರ ಪರಮಪವಿತ್ರ ೧
ಗರುಡತುರಗಗಮನ ಕಲ್ಯಾಣಗುಣಗಣನಿರುಪಮಲಾವಣ್ಯನಿರ್ಮಲಶರಣ್ಯ ಪರಮಮುನಿವರೇಣ್ಯಭಕ್ತಲೋಕಕಾರುಣ್ಯ ೨
ಇನಶಶಿಲೋಚನ ಇಂದುನಿಭಾನನಎನುತ ಕುಂಡಲನಾದನಕನಕಮಯವಾಸನ ಘನ ಪಾಪನಾಶನಎನುತ ಕುಂಡಲನಾದ ವೇಣುನಾದ ಹಯವದನ ೩

 

೨೮೨
ಚರಣಕಮಲವನು ನೆನೆವೆ ನಾ ನಿನ್ನ ಪ.
ಚರಣಕಮಲವನು ನೆನೆವೆ ನಾ
ದುರಿತರಾಶಿಗಳ ಸಂಹರಿಪನ ಅ.ಪ.
ಶ್ರುತಿಯನುದ್ಧರಿಸಿದುದಾರನ ಸಿಂಧು-
ಮಥನಕೊದಗಿದ ಗಂಭೀರನ
ಕ್ಷಿತಿಯನೆತ್ತಿದ ಬಲುಧೀರನ ಶಿಶು
ಸ್ತುತಿಸೆ ಕಂಬದಿ ಬಂದ ವೀರನ ೧
ಇಂದ್ರನ ಧಾರೆಯ ನಿಲಿಸಿದನ್ನ ತನ್ನ
ತಂದೆಯ ಮಾತು ಸಲಿಸಿದನ್ನ
ಕಂದರದಶನ ಸೋಲಿಸಿದನ್ನ ವ್ರಜ-
ದಿಂದುಮುಖಿಯರ ಪಾಲಿಸಿದನ್ನ ೨
ವಧುಗಳ ವ್ರತವ ಖಂಡಿಸಿದನ್ನ ದುಷ್ಟ
ರುದಿಸಲು ತುದಿಯ ತುಂಡಿಸಿದನ್ನ
ಇದಿರಾದ ಖಳರ ಖಂಡಿಸಿದನ್ನ ಹಯ
ವದನಪೆಸರ ಕೊಂಡುದಿಸಿದನ್ನ ೩

 

೨೫೭
ಚಿತ್ತಾಭಿಮಾನಿ ನೀನು ಮತ್ತೆ ನಾ ಬಲಗೊಂಡು
ದುಷ್ಟವಿಷಯಕ್ಕೆ ಎರಗುವ ಮನವನ್ನು
ಅಚ್ಚುತನ ಚರಣದಲಿ ಇರಿಸುವೆ೧
ಮನದಭಿಮಾನಿಯೆ ಇವನ ನಾ ಬಲಗೊಂಡು
ದುರುಳ ವಿಷಯಕೆ ಎರಗುವ ಮನವನ್ನು
ನರಹರಿಯ ಚರಣದಲಿ ಇರಿಸುವೆ ೨
ಅಚ್ಚುತನೆ ನಾ ನಿನ್ನ ಹೆಚ್ಚು ಬೇಡೋದಿಲ್ಲ
ಕಷ್ಟಕಾಲದಲ್ಲಿ ಹರಿಯೆಂಬ ಸ್ಮರಣೀಯೊ
ರಕ್ಷಿಸೋ ಲಕ್ಷ್ಮೀರಮಣನೆ ೩
ನರಹರಿಯೆ ನಾ ನಿನ್ನ ಹಿರಿದ ಬೇಡೋಳಲ್ಲ
ಸರ್ವಕಾಲದಲಿ ಹರಿಯೆಂಬೋ ಸ್ಮರಣೀಯ
ಕರುಣಿಸೋ ಲಕ್ಷ್ಮೀರಮಣನೆ ೪
ಪಾಲ್ಗಂಜಿಯೆಂದರೆ ಅರಗಂಜಿಯಾಹೋದೆ
ಲಕ್ಷ್ಮೀರಮಣಗೆ ಎಂಟುಗುಣಳುಂಟೆಂದರೆ
ಮೇಲಿದ್ದ ಗುಣಗಳಡಗೋದೆ ೫
ಪಂಚಕನ ದೇಹದಲಿ ನಿಂತೆರಡು ಪಕ್ಷಿಗಳು
ಸಂತತ ದುಃಖಿ ಸುಖಿಯೊಬ್ಬ ಜೀವಗೆ
ನಿಂತು ಸುಖ ದುಃಖ ಕೊಡುತಿತ್ತು ೬
ಪಂಚಮೂರುತಿ ಹರಿಯ ಅಂತರಂಗದಿ ಇಟ್ಟು
ಸಂತತ ಸ್ವಪ್ನ ಸುಷುಪ್ತಿ ಏರಿಸುವ
ಪ್ರಾರ್ಥಿಸಿ ಪ್ರಾಜ್ಞರಿಗೆ ಸರಿಯೆಂಬೆ೭
ಈ ಜಾಗ್ರದವಸ್ಥೆಯಲಿ ನಾನಾವಿಧ ಕರ್ಮಗಳ
ಪ್ರೇರಿಸಿ ಸಕಲ ಶ್ರೀಕಾರ ಮಾಡುವೊ
ಸ್ವಾಮಿ ಶ್ರೀಹರಿಗೆ ಶರಣೆಂಬೆ ೮
ನಡೆವುದು ನಿನ್ನ ಯಾತ್ರೆ ನುಡಿವುದು ನಿನ್ನ ನಾಮಸ್ಮರಣೆ
ಅಡಿಯಿಡೋದೆಲ್ಲ ಹರಿಯಾತ್ರೆ ಗುರುಪೂಜೆ
ಸ್ಮರಣೇಯ ಪಾಲಿಸೋ ಲಕ್ಷ್ಮೀರಮಣನೆ ೯
ವಿಷ್ಣುಭಕ್ತಿಯಿಲ್ಲದೋರ ಹತ್ತಿರ ನಾನಿರೆ
ಎಚ್ಚರಿತು ಮಾಡೆ ಗೆಳೆತನವ
ಅವರ ಕಂಡರೆ ನಾನು ಕಿಚ್ಚ ಕಂಡಂತೆ ಕೊಲ್ಲಿಸುವೆ ೧೦
ಹರಿಭಕ್ತಿಯಿಲ್ಲದೋರ ಹತ್ತಿರಲಿ ನಾನಿರೆ
ಅರೆಘಳಿಗೆ ಮಾಡಿ ಗೆಳೆತನವ
ಅವರ ಕಂಡರೆ ತಾನು ಉರಿಯ ಕಂಡಂತೆ ತೊಲಗುವೆ ೧೧
ಕಾಶೀಪಟ್ಟಣ ಶ್ರೀ ವಾಸುದೇವರು
ಭೂಮಿ ಹರಿದಾಸರು ಕಟ್ಟಿಸಿದ ಸ್ಥಳದಲ್ಲಿ
ಹರಿಯ ನಿಜದಾಸಗೆ ವಿಶ್ವನಾಥನೆಂತೆಂಬೊ ಪೆಸರುಂಟು ೧೨
ಹರಿದಾಸರ ಒಳಗೆ ಪರಮ ವೈಷ್ಣವನ್ಯಾರೆ
ಕಿರಿಯ ಕೆಂಜೆÉಡೆಯ ಮಕುಟನೆ
ಅಜನ ಸುತನಾ ಶಿವನು ಹರಿದಾಸಕಾಣೆ ಹುಸಿಯಲ್ಲ೧೩
ಗುಣಮಣಿಧಾಮಗೆ ಮಣಿದೊಮ್ಮೆ ಇಕ್ಕದೆ
ಹಲವು ದೈವಗಳ ಭಜಿಸಿದ ಪಾಪಿ ನೀನು
ಮಣಿಮಂತ ಹೋದಗತಿಗ್ಹೋಗ್ವೆ ೧೪
ಬಿದ್ದ್ಹೋಗೊ ಶರೀರವನು ಮುದ್ದು ಶ್ರೀಹರಿಗೆ ಸರಿಯೆಂಬೆ
ಎದ್ದು ತಮಸಿಗೆ ಉರುಳುವೊ ಪಾಪಿ ನೀ
ಅದ್ವೈತ ಹ್ಯಾಗೆ ಬಿಡದ್ಹೋದಿ ೧೫
ಅಳಿದ್ಹೋಗೊ ಶರೀರವನು ನರಹರಿಗೆ ಸರಿಯೆಂಬೆ
ಬಿಡದೆ ತಮಸಿಗೆ ಉರುಳವೊ ಪಾಪಿ ನೀ
ಚಲಹವನು ಹ್ಯಾಗೆ ಬಿಡದ್ಹೋದಿ ೧೬
ನಾಶ್ವಾಗೊ ಶರೀರವನು ವಾಸುದೇವಗೆ ಸರಿಯೆಂಬೆ
ಹೇಸದೆ ತಮಸಿಗೆ ಉರುಳವೊ ಪಾಪಿ ನೀ
ವಾಸನೆ ಹ್ಯಾಗೆ ಬಿಡದ್ಹೋದಿ ೧೭
ಈ ಸೃಷ್ಟಿಯೊಳಗೆ ಅಚ್ಚುತಗೆ ಸರಿಯುಂಟೆ
ಮೆಚ್ಚಿ ನೀ ಮನವೆ ಕೆಡಬೇಡ
ಅಲ್ಲಿತ್ತಾರಾ(ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ ೧೮
ಭೂಮಿಯೊಳಗೆ ಶ್ರೀರಾಮನಿಗೆ ಸರಿಯುಂಟೆ
ಮಾನುನೀ ಮನವೇ ಕೆಡಬೇಡ
ಅಲ್ಲಿತ್ತಾರಾ(ಅಲ್ಲದ?)ಎಲೆಯ ಒತ್ತಿ ಹಿಂಡಿದರೆ ರಸವುಂಟೆ ೧೯
ಭೂಮಂಡಲದೊಳಗೆ ರಂಗಗೆ ಸರಿಯುಂಟೆ
ಅಂದು ನೀ ಮನವೆ ಕೆಡಬೇಡ
ಅಲ್ಲಿತ್ತಾರಾ (ಅಲ್ಲದ?) ಎಲೆಯ ಒತ್ತಿ ಹಿಂಡಿದರೆ ರಸವುಂಟೆ ೨೦
ವಿಷ್ಣು ಸರ್ವೋತ್ತಮನೆಂದು ಇಟ್ಟರೆ ಮುಂಡಿಗೆಯ
ಮುಟ್ಟಲಂಜಿದನೆ ಪರವಾದಿ
ಪರವಾದಿ ತತ್ವದ ಬಟ್ಟೇನೂ ಕಾಣದಿರುತಿದ್ದ೨೧
ಹರಿಸರ್ವೋತ್ತಮನೆಂದು ಇರಿಸಿದರೆ ಮುಂಡಿಗೆಯ
ಹಿಡಿಯಲಂಜಿದನೆ ಪರವಾದಿ
ಪರವಾದಿ ತತ್ವದ ವಿವರವನು ಕಾಣದಿರುತಿಹ ೨೨
ಅರಣ್ಯದ ಅಡವೀಲಿ ಗೋಡೇನು ಹಾಕಿದರೆ
ಯಾರು ಕೂಲೀನಕೊಡುವೋರು
ಸಂಕರನ ಮತವನು ಮಾಯದಿಂ ಮೆಚ್ಚಿ ಕೆಡಬ್ಯಾಡ ೨೩
ಅತ್ತಿಹಣ್ಣಿನಂತೆ ಮಿಥ್ಯವಾದಿಮತ ಬಿಚ್ಚಿನೋಡಿದರೆ
ಕ್ರಿಮಿರಾಶಿ ಮಧ್ವರಾಯರ ಮತ
ಮುತ್ತಿನ ಸರವ ತೆಗೆದಂತೆ ೨೪
ಆಲಹಂಣೀನಸಂತೆ ಮಾಯಾವಾದಿಮತ ಸೀಳಿ
ನೋಡಿದರೆ ಕ್ರಿಮಿರಾಶಿ ಮಧ್ವರಾಯರ ಮತ
ಹೂವ್ವಿನ ಸರವ ತೆಗೆದಂತೆ ೨೫
ಭಾರತ ಭಾಗವತ ಅರ್ಥಸಾರವೆಲ್ಲವ ತಿಳಿದು
ಹೇಳಿದನೆ ತತ್ವ ಕಥೆಗಳ ಜ್ಞಾನ
ಭಕ್ತಿವೈರಾಗ್ಯವ ಈವನೆ ನಮ್ಮ ಹಯವದನ ೨೬

 

೧೮೦
ಚೆನ್ನಕೇಶವದೇವರಾಯಇನ್ನು ಸುಖಿಪೆನೆಂತೆನಗೆ ಅನ್ಯಥಾ ಗತಿಯಿಲ್ಲ ಪ.
ಹೆಣ್ಣಿನಾಸೆ ಮಣ್ಣಿನಾಸೆ ಹೊನ್ನಿನಾಸೆ ಮನೆಯಾಸೆಉಣ್ಣಬೇಕೆಂಬ ಬಲು ದುರಾಶೆ ಈಪುಣ್ಯಹೀನನ ಮನದಿ ಅನುದಿನ ಸಂದಣಿಸೆ ೧
ಉಡುವಾಸೆ ನುಡಿವಾಸೆ ಬೇಡುವಾಸೆ ಕೊಡುವಾಸೆಒಡಲ ತುಂಬಬೇಕೆಂಬ ಆಸೆಕೊಡದವನ ಬಡಿದು ಜಡಿವಾಸೆ ಬಿಡದಿರಲು ೨
ಹಯವದನನೆ ದೇವ ನಿನ್ನ ನೆನೆಯದಿದ್ದೀಮನಕೆಭಯವೆಲ್ಲಿಹುದು ಜಗನ್ನಾಥ ನಿನ್ನದಯವನೆ ಬೀರಿ ನಿರ್ದಯನನ್ನುದ್ಧರಿಸೊ ೩

 

೧೮೧
ಜನ್ಮ ಸಫಲವಾಯಿತು ಪ.
ಆದಿ ಅನಂತ ಜನಾರ್ದನನ ಕಂಡುಎನ್ನ ಜನ್ಮ ಸಫಲವಾಯಿತು ಅ.ಪ.
ಬ್ರಹ್ಮಾನಂದ ಸುಗುಣ ನಿಮ್ಮ ಮಹಿಮೆಯ ಅ-ಗಮ್ಯಗೋಚರನೆಂದು ಸ್ತುತಿಸುತಿರೆಬ್ರಹ್ಮರುದ್ರಾದಿಗಳು ಇಂದ್ರ ಚಂದ್ರಾದಿಗಳುನಿರ್ಮಲಮೂರುತಿ ನಿಮ್ಮ ನಿಜವ ತೋರಿದಮ್ಯಾಲೆ ೧
ಚತುರಮುಖನು ಬಂದು ಪೃಥುವಿ ಒಳಗೆ ನಿಂದುಕ್ರತುಗಳ ಮಾಡಿ ಆಹುತಿ ಕೊಡಲುಅತಿಗ್ರಾಸವಾಯಿತೆಂದು ಅನಲ ಬಂದು ಮೊರೆಯಿಡಲುದ್ವಿತೀಯ ಗ್ರಾಸಕೆ ಕೈಯ ಒಡ್ಡಿ ನಿಂತದ್ದು ಕಂಡು ೨
ಮೊದಲ ಬಾಗಿಲಲಿ ನಿಮ್ಮ ಮುಖಕಮಲವ ಕಂಡೆಮುದದಿಂದ ಮಕರಕುಂಡಲ ಕಿರೀಟವ ಕಂಡೆಭುಜದ್ವಯವನು ಕಂಡೆ ಶ್ರೀವತ್ಸ ಕೌಸ್ತುಭ ಕೊರಳವೈಜಯಂತೀ ಮಾಲಿಕೆಗಳ ಕಂಡು ಎನ್ನ ೩
ನಡುವಿನ [ಬಾಗಿಲಲಿ]ನಾಭಿಕಮಲ ಕಂಡೆಉದ್ಭವಿಸಿ ಮೆರೆವ ವಿರಿಂಚಿಯ ಕಂಡೆಜಡಿವೊ ಪೀತಾಂಬರ ನಡುವಿನೊಡ್ಯಾಣವಉಡಿಗೆಜ್ಜೆ ಮೇಲಿನ ಕಿರುಗೆಜ್ಜೆಗಳ ಕಂಡು ೪
ಮೂರನೆ ಬಾಗಿಲಲಿ ಮುದ್ದು ಶ್ರೀಚರಣವುಶ್ರೀದೇವಿ ಭೂದೇವಿ ಸೇವೆಮಾಳ್ಪುದ ಕಂಡೆಸುರರು ಮಾನವರ ಕಂಡೆ ಸ್ತೋತ್ರಮಾಳ್ಪುದ ಕಂಡೆಉರಗಶಯನ ಮ್ಯಾಲೆ ಹಯವದನನ ಕಂಡು ಎನ್ನ ೫

 

೩೦೯
ಜಯ ಜಯ ಶ್ರೀ ಹಯವದನ ಜಯ ಜಯ ಶ್ರೀ ಖಳದಮನ
ಜಯತು ಸಜ್ಜನಸದನ ಸಕಲ ಆಭರಣ ಪ.
ರಾಘವಾನ್ವಯಸೋಮ ಖರನಿಶಾಚರ ಭೀಮ
ಸಕಲ ಸದ್ಗುಣ ಧಾಮ ಸೀತಾಭಿರಾಮ
ಕಾಮಿನೀಜನಕಾಮ ಶರಣಪಾಲಕ ಧಾಮ
ಸ್ವಬಲ ಪಾಲಿತ ರಾಮ ಪಟ್ಟಾಭಿರಾಮ ೧
ಯಾದವಾನ್ವಯಜಾತ ವರಸತ್ಯಭಾಮೇತ
ವ್ಯಾಸರಾಯಸನ್ನುತ ಸಕಲವಾಗ್ವಿದಿತ
ಕಂಜಾಸನಾದಿಸುತ ಕಮಲಮಾರ್ಗಣಪಿತ
ಸರಸರುಕ್ಷ್ಮಿಣೀಸಕಲೇಷ್ಟದಾತ೨
ವಾಸಿಷ್ಠಕುಲವಾರ್ಧಿ ಸತ್ಕಳಾಧರರೂಪ
ಮಧ್ವಾರ್ಯ ಸದ್ರೂಪ ದಳಿತಬಹುತಾಪ
ಮಾಯಿಜನ [ಧೃ] ತಕೋಪ ಕೃತಸದ್ವೀಕ್ಷೋ[ದ್ದೀ]ಪ
ಸೃತಾನಿ ಸತ್ಸುಖರೂಪ ಹಯವದನ ರೂಪ ೩

 

೧೧೯
ಜಯ ಭೀಮಸೇನ ಪ.
ಜಯ ಭೀಮಸೇನ ದುರ್ಜನತಿಮಿರಮಾರ್ತಾಂಡಜಯ ಶಾಂತ ಉದ್ದಂಡ ಕದನಪ್ರಚಂಡಅ.ಪ.
ಕಿಮ್ಮೀರ ಬಕ ಹಿಡಿಂಬ ಕೀಚಕಧ್ವಂಸದುರ್ಮತವನಚ್ಛೇದೋತ್ತಂಸ ೧
ಅನುಜ ಸೇನಾಸಹಿತ ಕಲಿಧಾರ್ತರಾಷ್ಟ್ರನ್ನದನುಜಗಜ ಪಂಚಾಸ್ಯನೆಂದೆನಿಸಿದ ಘನ್ನ ೨
ದ್ರೌಪದೀಪ್ರಿಯ ಸಕಲವಿದ್ಯಾಪ್ರದೀಪಪಾಪಹರ ಹಯವದನಪದಕಂಜಮಧುಪ ೩

 

೩೧೧
ಜಯ ಮಂಗಳಂ ನಿತ್ಯ ಶುಭ ಮಂಗಳಂ ಪ.
ವೈಕುಂಠವಾಸನಿಗೆ ವಾಣೀಶಗ್ವಲಿದವಗೆ
ಲೋಕದಲಿ ಪ್ರಹ್ಲಾದಗ್ವಲಿದ ಲಕ್ಷ್ಮೀಶಗೆ
ಪ್ರಾಕೃತದಲಿ ವಸುದೇವ ಪುತ್ರನೆಂದೆನಿಸಿ
ಜೋಕೇಲಿ ಗೋಕುಲಕೆ ಜಾರಿ ಬಂದವಗೆ ೧
ಪುಟ್ಟ ಮಗುವಾದವಗೆ ಪೂತಣಿಯ ಕೆಡಹಿದಗೆ
ತೊಟ್ಟಿಲೊಳು ಮಲಗಿ ತೂಗಿಸಿಕೊಂಬಗೆ
ದುಷ್ಟ ಶಕಟನ ಮುರಿದು ತೃಣಾವರ್ತನೆಂಬ ದೈತ್ಯನ
ಮುಟ್ಟಿ ಪ್ರಾಣವ ತೆಗೆದ ಮುದ್ದುಕೃಷ್ಣನಿಗೆ ೨
ಅಂಬೆಗಾಲಿಕ್ಕಿದಗೆ ಅಂಗಳದೊಳಾಡಿದಗೆ
ತುಂಬಿದಾ ಪಾಲುಗಳ ತಾನೆ ಸವಿದು
ಇಂಬಿಟ್ಟು ಬಾಲರಿಗೆ ಸವಿ ಇಕ್ಕಿ ಸವಿದವಗೆ
ಅಂಬುಜಾಕ್ಷ ನಮ್ಮ ಹಯವದನಗೆ ೩

 

೫೭
ಜಯ ಮಂಗಳಂ ನಿತ್ಯ ಶುಭಮಂಗಳಂ ಪ.
ವಸುದೇವತನಯನಿಗೆ ವೈಕುಂಠನಿಲಯನಿಗೆಕುಸುಮನಾಭನಿಗೆ ಕೋಮಲರೂಪಗೆಯಶೋದೆನಂದನಗೆ ವಸುಧೆಯ ರಮಣನಿಗೆನಸುನಗೆಯೊಳೊಪ್ಪುವ ನರಸಿಂಹಗೆ೧
ಕನಕಕಿರೀಟನಿಗೆ ಕಸ್ತೂರಿ ತಿಲಕನಿಗೆಕನಕಕುಂಡಲನಿಗೆ ಕೌಸ್ತುಭ ಹಾರಗೆಕನಕಾಂಬರಧರನಿಗೆ ಕಾರುಣ್ಯರೂಪನಿಗೆಸನಕಾದಿ ಮುನಿವಂದ್ಯ ನರಸಿಂಹಗೆ ೨
ಪಂಕಜನಾಭನಿಗೆ ಪಾಂಚಾಲಿರಕ್ಷಕಗೆಲಂಕೆಯನು ವಿಭೀಷಣನಿಗಿತ್ತವಗೆಕುಂಕುಮಾಂಕಿತನಿಗೆ ಕುವಲಯನೇತ್ರನಿಗೆಬಿಂಕದಿಂದಲಿ ಮೆರೆವ ನರಸಿಂಹಗೆ ೩
ಪಕ್ಷಿವಾಹನನಿಗೆ ಪರಮಪಾವನನಿಗೆಕುಕ್ಷಿಯೊಳು ಜಗವನಿಂಬಿಟ್ಟವನಿಗೆಲಕ್ಷುಮೀಕಾಂತನಿಗೆ ಲಕ್ಷಣವಂತನಿಗೆಲಕ್ಷಣದೊಳೊಪ್ಪುವ ನರಸಿಂಹಗೆ ೪
ಭಕ್ತವತ್ಸಲನಿಗೆ ಭವದುಃಖದೂರನಿಗೆಮುಕ್ತಿದಾಯಕಗೆ ಚಿನ್ಮಯರೂಪಗೆಮಿತ್ರೆರುಕ್ಮಿಣಿ ಸತ್ಯಭಾಮೆಯರರಸನಿಗೆನಿತ್ಯಕಲ್ಯಾಣ ಶ್ರೀಹಯವದನಗೆ ೫

 


ಜಯ ಮಧ್ವವಲ್ಲಭ ಜಯಶುದ್ಧ ಸುಲ್ಲಭಜಯ ಪದ್ಮನಾಭ ಉಡುಪಿನ
ಜಯ ಪದ್ಮನಾಭ ಉಡುಪಿನ ಶ್ರೀಕೃಷ್ಣಜಯ ದುರ್ಜನರಿಗೆ ಅತಿದೂರ ಸುವ್ವಿಸುವ್ವಿ ಸುವ್ವಾಲೆ ಪ.
ಸುರರ ಶಿರೋರನ್ನ ಗರುಡವಾಹನನೆ ಕರುಣಸಂಪನ್ನ ಉಡುಪಿನ
ಕರುಣಸಂಪನ್ನ ಉಡುಪಿನ ಶ್ರೀಕೃಷ್ಣಶರಣಾಗು ಧನ್ಯ ಜನರಿಗೆ ೧
ಮೇಲೆ ಸತ್ಯಲೋಕ ಆಳುವ ಧೀರನೆಶ್ರೀಲೋಲನಂಘ್ರಿಭ್ರಮರನೆ
ಶ್ರೀಲೋಲನಂಘ್ರಿಭ್ರಮರನೆ ಶ್ರೀಕೃಷ್ಣಶ್ರೀ ಮುಖ್ಯಪ್ರಾಣ ಭಾರತೀರಮಣಗೆ ಎರಗುವೆ ೨
ರಾಮನಂಘ್ರಿಯ ಸೇವೆ ಪ್ರೇಮದಿಂ ಮಾಡಿದಶ್ರೀಮಂತ ನಮ್ಮ ಹನುಮಂತ
ಶ್ರೀಮಂತ ನಮ್ಮ ಹನುಮಂತನೆಂದವಗೆಕಾಮಿತಾರ್ಥಗಳ ಕೊಡುವನೆ ೩
ಭಾರತ ಯುದ್ಧದಲಿ ಬಾಹುಬಲ ತೋರಿದಧಾರಿಣೀಶ್ವರ ತಿಲಕನೆ
ಧಾರಿಣೀಶ್ವರ ತಿಲಕನೆ ಶ್ರೀ ಭೀಮಸಾರಿದ ಜನರ ಸಲಹುವ ೪
ಶುದ್ಧಶಾಸ್ತ್ರಗಳಿಂದ ಗೆದ್ದು ವಾದಿಗಳನು ಹೊದ್ದಿದ ಜನರ ಕರುಣದಲಿ
ಹೊದ್ದಿದ ಜನರ ಕರುಣದಲಿ ಹೊರೆವ ಶ್ರೀಮಧ್ವಮುನಿಪನ ಭಜಿಸುವೆ ೫
ಹರಿಯ ಸತ್ಕರದಲ್ಲಿ ಕರುಣಂಗಳೊಡನೆದುರುಳ ವಾದಿಗಳ ಗೆಲಿದನೆ
ದುರುಳ ವಾದಿಗಳ ಗೆಲಿದನೆ ಹೃಷಿಕೇಶಗುರುಗಳಂಘ್ರಿಗೆ ನಮಿಸುವೆ ೬
ದೇಶ ದೇಶದೊಳುಳ್ಳ ದೂಷಿವಾದಿಗಳನ್ನು ದೂಷಿಸಿ ಹರಿಯ ಮಹಿಮೆಯನು
ದೂಷಿಸಿ ಹರಿಯ ಮಹಿಮೆಯ ಮೆರೆದ ಶ್ರೀನೃಸಿಂಹತೀರ್ಥಯತಿರಾಯ೭
ಅದ್ವೈತವಾದಿಗಳ ಗೆದ್ದು ನಿರ್ಮಲವಪ್ಪಮಧ್ವಮಾರ್ಗವನು ಜಗಕೆಲ್ಲ
ಮಧ್ವಮಾರ್ಗವನು ಜಗಕೆಲ್ಲ ತೋರಿದ ಜ-ನಾರ್ದನತೀರ್ಥಯತಿರಾಯ೮
ಇಂದಿರೆಯರಸನ ಎಂದೆಂದು ಪೂಜಿಸಿಮಂದಮಾಯಿಗಳ ಕುಮತವ
ಮಂದಮಾಯಿಗಳ ಕುಮತವ ಗೆಲಿದ ಉ-ಪೇಂದ್ರತೀರ್ಥಯತಿರಾಯ ೯
ಈ ಮಹಿಯೊಳಗುಳ್ಳ ತಾಮಸ ಜನರನ್ನುಶ್ರೀಮಧ್ವ ಮುನಿಪನ್ನ ಮತದಿಂದ
ಶ್ರೀಮಧ್ವಮುನಿಪನ್ನ ಮತದಿಂದ ಖಂಡಿಸಿವಾಮನತೀರ್ಥರೆಸೆದರು ೧೦
ಧೀರ ತಾಪಸರಾಗಿ ಗುರುಮಧ್ವಮುನಿಯಚಾರುಚರಣಂಗಳ ಪಿಡಿದಿರ್ದ
ಚಾರುಚರಣಂಗಳ ಪಿಡಿದಿರ್ದ ಶ್ರೀವಿಷ್ಣು-ತೀರ್ಥರಡಿಗೆ ನಮಿಸುವೆ ೧೧
ಕಾಮನ ನೆರೆ ಅಟ್ಟಿ ಶ್ರೀಮಹಾವಿಷ್ಣುವೇ ಸ್ವಾಮಿ ಎಂಬುದನು ಜಗಕ್ಕೆಲ್ಲ
ಸ್ವಾಮಿ ಎಂಬುದನು ಜಗಕ್ಕೆಲ್ಲ ತೋರಿದ ರಾಮತೀರ್ಥಯತಿರಾಯ ೧೨
ಮನುಮಥನಯ್ಯನ ಘನತೆಯ ತೋರಿಸಿನರ ಮೋಹಗಳ ಬಿಡಿಸಿದ
ಜನರ ಮೋಹಗಳ ಬಿಡಿಸಿದ ಅಧೋಕ್ಷಜಮುನಿಕುಲಾಗ್ರಣಿಗೆ ನಮಿಸುವೆ ೧೩
ಮಧ್ವಕಿಂಕರರಾದ ಪದ್ಮನಾಭಾರ್ಯರವಿದ್ಯಾವೈಭವಗಳ ಪೊಗಳುವ
ವಿದ್ಯಾವೈಭವಗಳ ಪೊಗಳುವ ಕವಿಯಾರುಶುದ್ಧ ಮುನಿಗಳಿಗೆ ಅಳವಲ್ಲ ೧೪
ಸ್ವದೇವ ಹಯವದನನ ಆವಾಗ ಪೂಜಿಪ ಪಾವನ್ನ ಮಧ್ವಮುನಿಪನ
ಪಾವನ್ನ ಮಧ್ವಮುನಿಪನ ಶಿಷ್ಯರಾದದೇವತೆಗಳ ಮರೆಹೊಕ್ಕೆ ೧೫

 

೧೧೮
ಜಯಜಯತು ಶುಭಕಾಯ ಜಯಜಯತು ಹರಿಪ್ರೀಯಜಯತು ಜೀಯ ಮಧ್ವಾಖ್ಯಮುನಿರಾಯಪ.
ರಾಮಾವತಾರದಲಿ ಹನುಮಂತನಾಗಿ ನೀತಾಮಸನ ಪುರವ ಅನಲಗಾಹುತಿಯನಿತ್ತೆಭೂಮಿಜೆಯ ಕುಶಲವನು ರಘುನಾಥಗರುಹಿದೆಸ್ವಾಮಿಕಾರ್ಯವ ವಹಿಸಿ ಖಳರ ನೀ ತರಿದೆ ೧
ದ್ವಾಪರಾಂತ್ಯದಲಿ ಶ್ರೀಕೃಷ್ಣನಂಘ್ರಿಯ ಭಜಿಸಿಪಾಪಿಮಾಗಧ ಬಕ ಕೀಚಕಾದಿಗಳಕೋಪದಿಂದಲಿ ತರಿದು ಕುರುಕುಲವ ನೀನಳಿದೆ ಪ್ರ-ತಾಪದಿಂದಲಿ ಮೆರೆದೆ ಖಳರ ನೀ ಮುರಿದೆ ೨
ಮಾಯಿಗಳು ಹೆಚ್ಚಿ ಮತವೆಲ್ಲ ಸಂಕರವಾಗಿತಾಯಿಗಳಿಲ್ಲದ ಶಿಶುಗಳಂತೆ ಸುಜನರಿರಲುನೀಯವತರಿಸಿ ಮತವೆಲ್ಲ ಉದ್ಧರಿಸಿ ನಾ-ರಾಯಣನೆ ಮೂಜಗಕೆ ಪರದೈವವೆಂದೊರೆದೆ ೩
ದುರುಳ ವಾದಿಗಳಿಗುತ್ತರವ ಕೊಡಬೇಕೆನುತಸರುವ ಶಾಸ್ತ್ರಾಮೃತವ ಸೃಜಿಸಿ ವಾಕ್ಯಗಳ ಕ್ರೋಡಿಸಿದರುಶನ ಗ್ರಂಥಗಳ ರಚಿಸಿ ಶಿಷ್ಯರಿಗಿತ್ತೆಪರಮ ತತ್ವದ ಖಣಿಯೆ ಗುರುಶಿರೋಮಣಿಯೆ ೪
ನಿನ್ನ ಮತವೇ ವೇದಶಾಸ್ತ್ರಗಳ ಸಮ್ಮತವುನಿನ್ನ ಮತವೇ ಇಹಪರಕೆ ಸಾಧನವುಪನ್ನಂಗಶಯನ ಶ್ರೀ ಹಯವದನದಾಸರೊಳುನಿನ್ನ ಪೋಲುವರುಂಟೆ ಮಧ್ವಮುನಿರಾಯ ೫

 

೨೫೯
ಜಯಪ್ರದನು ಜಗಕೆ ಶ್ರೀಹಯವದನ ಮೂರ್ತಿರೆ
ಭಯವ್ಯಾಕೆ ಭಕ್ತ ಜನಕೆಪ.
ನಯದಿಂದ ಗೆಲಿಸುವನು ನಾಲ್ದಿಕ್ಕಿನೊಳಗಿದ್ದ
ಮಾಯವಾದಿಗಳನ್ನು ಅ.ಪ.
ಆದಿಯಲ್ಲಿ ಬ್ರಹ್ಮನಿಗೆ ಭೀತಿಯನು ಬಿಡಿಸಿದ
ನಾದಮಯನಾದ ದೇವ ಭೇದವಿಲ್ಲದೆ ಎಲ್ಲಾ
ಭೇದವೆಂಬುವರನ್ನು
ಕಾದ ಬಾಣಲೆಗೆ ತಟ್ಟಿ ಮೋದಿಸಿ ಕೊಲುವ ೧
ಉದಯದಲ್ಲಿ ಎದ್ದು ನರ ಸದಮಲಾತ್ಮಕನಾಗಿ
ಹೃದಯದೊಳಗೆ ಹರಿಯ ತಂದು ಮುಂದು
ಸದಯನು ನೀನೆನುತ ಸದ್ರ‍ವತ್ತಿಲುದಯನು ನೀನೆನುತ
ದಧಿಚೋರ ಕೃಷ್ಣನ್ನ ಮುದದಿ ಭಜಿಪರಿಗೆ ೨
ದುಷ್ಟಮಲ್ಲರ ಎದೆ ಮೆಟ್ಟಿ ಮೆರೆವ ಜಗ-
ಜಟ್ಟಿ ಮಧ್ವರಾಯರ ಮುಟ್ಟಿ ಭಜಿಸುತ ನಿತ್ಯ
ಇಷ್ಟವನು ಬೇಡಿದರೆ ಕಷ್ಟಗಳನು ಕಳೆವ ಉ-
ತ್ರ‍ಕಷ್ಟ ಹಯವದನ ದೊರೆ ೩

 

೩೧೦
ಜಯಮಂಗಳಂ ನಿತ್ಯ ಶುಭಮಂಗಳಂ ಪ.
ಮಂಗಳಂ ಶ್ರೀ ಭೂಮಿದೇವಿಯ ರಮಣಗೆ
ಮಂಗಳಂ ಸದ್ಗುಣಗಣಪೂರ್ಣಗೆ
ಮಂಗಳಂ ನಿರ್ದೋಷ ನಿಗಮತತಿ ವೇದ್ಯನಿಗೆ
ಮಂಗಳಂ ಶ್ರೀ ವೇಂಕಟಾಧೀಶಗೆ ೧
ವಂದಾರು ಸುರವೃಂದ ರುಚಿರಮಣಿಮಯ ಮಕುಟ
ಸಂದೋಹ ಸಂಘಟಿತಪದಪೀಠಗೆ
ಇಂದಿರಾಕರಕಮಲರಂಜಿತ ಧ್ವಜವಜ್ರ
ಸಂದಿಪ್ಪ ಪಾದಾದಿ ಶುಭರೇಖಗೆ ೨
ದಿವ್ಯನಖಮಣಿರಾಗರಂಜಿತಾಂಗುಲಿ ರಮ್ಯ
ಭವ್ಯ ಮಂಗಳದಾಯಿ ಭಯಹಾರಿಗೆ
ನವ್ಯ ಜಲರುಹಭಾಸ ಮುನಿಜನಾರ್ಚಿತ ಪುಣ್ಯ
ಸೇವ್ಯ ಗಂಗಾಜನಕ ಶ್ರೀಚರಣಗೆ ೩
ವರಕನಕವನಯುತ ಉರುನಿತಂಬದ್ವಯಗೆ
ಸರಸಕೇಳೀವಾಸಸಜ್ಜಘನಕೆ
ಸ್ಥಿರರತ್ನ ಮೇಖಲಾ ಸುಕಲಾಪ ಭೃತ್ಕಟಿಗೆ ಹೃ-
ತ್ಸರಸಿಜಾಸನಜನಿತ ಶುಭನಾಭಿಗೆ ೪
ಭುವನ ಪೂರಿತ ವಳಿತ್ರಯರಾಜದುದರಗೆ
ವಿವಿಧ ಕುಸುಮಾಕಲಿತ ಸುಮಮಾಲಿಗೆ
ರವಿಮಂಡಲೋದ್ಭಾಸ ಕೌಸ್ತುಭ ಶ್ರೀವತ್ಸ
ನವಹಾರಕೃತ ರಮಾಶ್ರಿತ ವಕ್ಷಕೆ ೫
ದೈತ್ಯಜನತಿಮಿರಹರ ವರದೀಪ್ತಿ ಚಕ್ರಕೆ
ಶತ್ರುಭೀಷಣ ಘನಧ್ವನಿ ಶಂಖಕೆ
ಗೋತ್ರಪತಿ(ತಿಯ?) ಸಮಬಲ ಪ್ರೋದ್ಭಾಸಿ ಸದ್ಗದೆಗೆ
ಶ್ರಿತಜನ ಭಯಹಾರಿ ವರಪದ್ಮಕ್ಕೆ ೬
ಸುರುಚಿ ಬಿಂಬಾಧರ ಸ್ಥಿತಿತ(?) ಕಂದರ ವದನಕೆ
ಸುರಭಿ ನಾಸಿಕ ಕಾಲ ಸನ್ಮುಖಕಮಲಕೆ
ಅರುವಾರಿಜನೇತ್ರ ಶೋಭನ ಭ್ರೂಯುಗಳ
ವರ ಫಾಲತಿಲಕ ಕುಂತಳರಾಯಗೆ ೭
ಕಮನೀಯ ಕರ್ಣಯುಗ ರಕ್ತಕುಂಡಲ ಲಲಿತ
ವಿಮಲದರ್ಪಣ ಭಾಸ ಗಂಡಯುಗಕೆ
ಸುಮಮಾಲಿಕಾಸ್ಥಿತಿತ ವೃತ್ತಕೇಶ ಸಂತತಿಗೆ
ರಮಣೀಯ ಗುಣರಚಿತ ವರ ಮಕುಟಕೆ ೮
ಉದಯಗಿರಿನಿಕರ ವಿಸ್ಫುರಿತ ಶುಭಗಾತ್ರಕೆ
ಮದನಮದಗಜಶೀಲ ಲಾವಣ್ಯಕೆ
ಸದಭೀಷ್ಟದಯ ಪೂರ್ಣಪ್ರಜ್ಞಮುನಿಸೇವ್ಯ
ಪದ ಹಯವದನ ವೆಂಕಟರಮಣಗೆ ೯

 

೧೪೬
ಜಯರಾಯ ಜಯರಾಯ ಪ.
ಜಯರಾಯ ನಿನ್ನ ದಯವುಳ್ಳ ಜನರಿಗೆಯವಿತ್ತು ಜಗದೊಳು ಭಯಪರಿಹರಿಸುವಅ.ಪ.
ಖುಲ್ಲರಾದ ಮಾಯ್ಗಳ ಹಲ್ಲು ಮುರಿದುವಲ್ಲಭ ಜಗಕೆ ಶ್ರೀನಲ್ಲನೆಂದರುಹಿದಿ ೧
ಮಧ್ವರಾಯರ ಮತ ಶುದ್ಧಶರಧಿಯೊಳುಉದ್ಭವಿಸಿದ ಗುರು ಸಿದ್ಧಾಂತಸ್ಥಾಪಕ ೨
ಸಿರಿಹಯವದನನ ಚರಣಕಮಲವನುಭರದಿ ಭಜಿಸುವರ ದುರಿತಗಳ ಹರಿಸುವ ೩

 

೨೮೫
ಜಯವೆನ್ನಿ ಜನರೆಲ್ಲ ಸ್ವಾಮಿ
ಭವರೋಗವ್ಶೆದ್ಯಗೆ ಭಾವಜನಯ್ಯಗೆ
ಕುವಲಯಧರಸ್ವಾಮಿಗೆ ನಾರಾಯಣ ಪ.
ಆಗಮಚೋರನ ಗೆಲಿದ ರಾಮ
ಬೇಗನೆ ಸುರರಿಗೆ ಸುಧೆಯೆರೆದ ಕೃಷ್ಣ
ನಾಗಲೋಕವ ಹೊಕ್ಕವನ ಕೊಂದಾಗ ಶಿಶು
ಕೂಗೆ ಕಂಬದಿ ಬಂದಗೆ ನಾರಾಯಣ ೧
ಭಾಗೀರಥಿಯ ಪಡೆದೆ ರಂಗ
ಬಾಗಿಸಿ ತಾಯ ಶಿರವ ಕಡಿದೆ ರಾಮ
ಯಾಗರಕ್ಷಕ ತುರುಗಾಯಿ ಲಜ್ಜೆಯ
ನೀಗಿದಶ್ವವಾಹಕಗೆ ನಾರಾಯಣ ೨
ಜಲದೊಳಗಾಳ್ದನ ಸೀಳ್ದ ರಾಮ
ಅಲಸದೆ ಗಿರಿಯ ಬೆನ್ನಲಿ ತಾಳ್ದ ಕೃಷ್ಣ
ನೆಲನ ಕದ್ದೊಯ್ದಸುರನ ಮರ್ದಿಸಿದ ಶಿಶು-
ಗೊಲಿದು ಬಲಿಯ ತುಳಿದೆ ನಾರಾಯಣ ೩
ಛಲಪದದಿ ರಾಯರ ಕಡಿದೆ ರಾಮ
ಬಲು ಬಿಲ್ಲನು ಕರದಲ್ಲಿ ಪಿಡಿದೆ ಕೃಷ್ಣ ಕೋ-
ಡುಳ್ಳವ ಕೋಪದ ಮುಖ ದೈನ್ಯದಿ
ಬೇಡುವೆ ಕೊಡಲಿಗಾರ ನಾರಾಯಣ ೪
ರೂಢಿಯೊಳು ರಾಯರ ಗೆಲಿದ ರಾಮ
ಓಡಿ ಹೊಕ್ಕನೆ ದುರ್ಗದ ಜಲ ಕೃಷ್ಣ
ನೋಡೆ ನಾರಿಯರ ವ್ರತವಳಿದೆ ಹಯವದನ
ರೂಢರಾವುತನಾದ ನಾರಾಯಣ ೫

 

೨೮೩
ಜಯಾ ಜಯಾ ಪ
ಈ ಮುದ್ದುಮುಖವೊ ಮತ್ತೆ ತನುವಿನ ಕಾಂತಿ
ಈ ಬಿಲ್ಲು ಈ ಬಾಣ ನಿಂತಭಾವ ೧
ಈ ತನು ಈ ರಾಣಿ ಈ ಬಂಟ ಈ ಭಾಗ್ಯ
ಆವ ದೇವರಿಗುಂಟು ಮೂಲೋಕದೊಳಗೆ ೨
ಜಯ ಇನಕುಲೋದ್ಧರಣ ಜಯ ಮುನಿಕೃತ ಶರಣ
ಜಯ ದನುಜವಿದಾರಣ ಜಯ ತಮಹರಣ ೩
ಧರೆಯೊಳತಿಭಾರವನು ಇಳುಹಿ ಕಮಲಜ ಮುಖ್ಯ
ಸುರರ ಮೊರೆಯನು ಕೇಳ್ದು ನರರೂಪ ತಾಳ್ದು ೪
ದಶರಥನ ಗರ್ಭದಲಿ ಜನಿಸಿ ಮುನ್ನ ಮುನಿ
ಮನೋರಥ ಕಾಯಿದ ಪುಣ್ಯಚರಿತ್ರ೫
ಅಸುರರನು ಅಳಿದು ಅಹಲ್ಯಳಿಗಿತ್ತ ವರವಿತ್ತು
ಮಿಥಿಳ ಪುರದಿ ಹರನ ಧನುವನುರೆ ಮುರಿದು ೬
ಅತುಳ ಬಲದಲಿ ಸೀತೆಯ ಒಲಿಸಿದ ಭಾರ್ಗವ ಮ-
ಹಿತಳ ಬಲವಂತ ದೇವೋತ್ತುಂಗ ಜಯತು ೭
ಭರದಿಂದಲಯೋಧ್ಯಾಪುರವನು ಶೃಂಗರಿಸೆ
ಹರುಷತನದಲಿ ರಾಮಗರಸುತನವೆನಲು ೮
ಕಿರಿಯ ಮಾತೆಯು ಬಂದು ಭರತನಿಗೆ ಪಟ್ಟವೆನೆ
ಸಿರಿಸಹಿತ ಹೊರಹೊಂಟ ಕರುಣಾಳು ಜಯತು ೯
ಅನುಜ ಅವನಿಜೆ ಸಹಿತ ವನವಾಸವ ಮಾಡಿ
ವನಜಾಕ್ಷ ಪತಿಯಾಗೆಂದು ರಾಕ್ಷಸಿಯು ಬರಲು ೧೦
ಅನುವಾಯಿತೆಂದು ನಾಸಿಕವ ಹರಿದು ಭಂಗಿಸಿದೆ
ಬಿನುಗು ಹೊಮ್ರ‍ಮಗವೆಚ್ಚ ಘನಮಹಿಮ ಜಯತು ೧೧
ಜಕ್ಕಿದ ವಾಲಿಯನು ಕೊಂದು ಕುಲಸೈನ್ಯ ಸಹವಾಗಿ
ನಿಲ್ಲದೆ ಸೇತುವೆಗಟ್ಟಿ ಅಸುರರೊಡಗೂಡಿ ೧೨
ಖುಲ್ಲ ದಾನವ ಕುಂಭಕರ್ಣ ರಣಮುಟ್ಟಿ
ಎಲ್ಲರನು ತರಿದಂಥ ಬಲ್ಲಿದನೆ ಜಯತು ೧೩
ದÉೀವಕ್ಕಳು ಹರುಷದಲ್ಲಿ ಪೂಮಳೆಗರೆಯೆ
ಭೂಮಿಜೆಯ ಸಹಿತ ಸೌಮಿತ್ರಿಯೊಡಗೂಡಿ ೧೪
ಕ್ಷೇಮದಿಂದಯೋಧ್ಯಪುರದಿ ಸುಖದಲ್ಲಿರ್ದ
ಸ್ವಾಮಿ ಶ್ರೀಹಯವದನ ರಘುಕುಲತಿಲಕನಲ್ಲವೆ ೧೫

 

೫೮
ಜೋಜೋ ಕಂದರ್ಪಕೋಟಿ ಲಾವಣ್ಯಜೋಜೋ ವೃಂದಾರಕ ಶಿರೋರನ್ನ ಪ
ಜೋಜೋ ನಂದನ ಸುಕೃತದ ಫಲವೆಜೋಜೋ ಮುನಿಮನಮಧುಪ ಕಮಲವೆ ಅ.ಪ.
ಪೊನ್ನ ತೊಟ್ಟಿಲ ಮೇಲೆ ಮಣಿಮಯವಾದ ವಿತಾನ್ನವ ಕಟ್ಟ್ಟಿ ಪಟ್ಟೆಯ ಮೇಲ್ವಾಸಿನಲಿಚಿನ್ನ ಶ್ರೀಕೃಷ್ಣನ ಮಲಗಿಸಿ ಗೋಕುಲದಕನ್ನೆಯರೆಲ್ಲ ತೂಗುತ ಪಾಡಿದರೆ ೧
ಶಶಿಯ ಚೆಲುವ ಪೋಲ್ವ ಮೊಗದ ಚೆನ್ನಿಗನೆಎಸೆವ ಕಿರುಡೊಳ್ಳಿನ ಸೊಬಗ ಬಾಲಕನೆಪೊಸಕೆಂದಾವರೆಯಂದದಿ ಮೃದುಪದನೆಬಿಸರುಹನಯನ ಬಿಡದಿರೆಮ್ಮ ಕಂದ ೨
ಪೂತನಿ ಅಸುವನೀಂಟಿದ ಪೋತ ಶಿಶುವೆವಾತದೈತ್ಯನ ಗೆಲಿದದುಭುತ ಬಾಲಭೂತಗಳನಂಜಿಸುವರ್ಭಕನೆಓತೆಮ್ಮ ಶಿಶುಗಳ ಸಲಹೊ ಶ್ರೀಹರಿಯೆ ೩
ಅಮೃತವನೂಡಿ ಸುರರ ಬೆಳೆಸಿದನೆಭ್ರಮಿತನಾದ ಕರಿವರನ ಕಾಯ್ದವನೆಸುಮುಖತನದಿ ಪರೀಕ್ಷಿತನ ಪೊರೆದನೆಮಮತೆಯಿಂದೆಮ್ಮ ಶಿಶುಗಳ ನೀ ಸಲಹೊ ೪
ಪೊಳೆವ ಮೂಲರೂಪದಿ ತೋರಿದೆ ನೀ-ನುಳಿದ ಶಿಶುಗಳಂತೆ ಶಿಶುವೆನ್ನಬಹುದೆಲಲನೆ ಬೇಡಿಕೊಳ್ಳೆ ತನ್ನ ತಾನೆ ಶಿಶು-ಗಳ ಭಾವವಿಡಿದೆಯೆಂದೆಂಬರು ನಿನ್ನ ೫
ಈ ಮಹಿಯೊಳು ಹರಿ ಶಿಶುವಾಗೆ ತನ್ನ ಮ-ಹಿಮೆಯ ತುತಿಸುವ ಶ್ರುತಿವನಿತೆಯರುವ್ಯಾಮೋಹದಿ ಬಂದು ಲಲನೆಯರಾದರುಆ ಮುಗ್ಧೆಯರು ಪಾಡುತ ತೂಗಿದರೆ ೬
ನೀ. ಶಿಶುವಾದರೆ ನಿನ್ನುದರದೊಳಿರ್ದ ಶ್ರುತಿಮುಕ್ತರು ಶಿಶುಗಳೆಂತಾಹರೊವೇಷಧರನಾಗಿ ಶಿಶುಗಳ ವಾಸಿನೊಲಿದೆವಾಸುದೇವ ನಮ್ಮ ಬಿಡದಿರು ಶ್ರೀ ಕೃಷ್ಣ ೭
ಆವಳಿಸಲು ನಿನ್ನ ಗರ್ಭದೊಳಗೆ ಭುವ-ನಾವಳಿ ಗೋಪಗೋಪಿಯರನ್ನು ತೋರಿದೆಶ್ರೀವರ ನೀನೆಲ್ಲರ ತಂದೆಯಲ್ಲದೆಭಾವಜ್ಞರ ಮತದಿ ಶಿಶುವೆಂತಪ್ಪೆ ೮
ಹಯವದನನಾಗಿ ವೇದವ ತಂದುಪ್ರಿಯಸುತ ಚತುರಮುಖಗೆ ಪೇಳಿದಖಿಳ ವಿ-ದ್ಯೆಯ ಖನಿ ನೀನೀಗಳೇನೆಂದು ನುಡಿಯಲ-ರಿಯದ ಬಾಲಕನಾದ ಬಗೆ ಪೊಸತಯ್ಯ

 

೩೧೨
ಜೋಜೋ ಜೋಜೋ ಜೋ ಮುಖ್ಯಪ್ರಾಣ
ಜೋಜೋ [ಮಲೆವರ] ಗಂಟಲಗಾಣ ಪ.
ಜೋಜೋ ರಾಕ್ಷಸಶಿಕ್ಷ ಕಲ್ಯಾಣ
ಜೋಜೋ ಸಕಲವಿದ್ಯಾ ಪ್ರವೀಣ ಅ.ಪ.
ಆ ಜಗದಲಿ ನೀ ಬಾಲಬ್ರಹ್ಮಚಾರಿ
ಸೋಜಿಗದಲಿ ಕಪಿ ರಾಜ್ಯವನಾಳಿ
ತೇಜಮುತ್ತಿನ ಕವಚಕುಂಡಲಧಾರಿ
ಪೂಜಿಪರ ಪಾಲಿಪೆ ಸುಜನರುಪಕಾರಿ ೧

ಭೂಮಿ ಭಾರವನಿಳಿಸಿದ ಭೀಮ
ಕಾಮಿ ಕೀಚಕನ ಕುಟ್ಟಿ ರಣಧಾಮ
ಭಾಮಿನಿ ದ್ರೌಪದಿ ಕಷ್ಟ ನಿರ್ಧೂಮ
ಕಾಮಿತಾರ್ಥವನೀವ ಕಲ್ಪತರು ಭೀಮ ೨
ಸೌಂದರ್ಯರೂಪದ ಶ್ರೀಮದಾನಂದ
ತಂದೆ ಹಯವದನನ ಮೋಹದ ಕಂದ
ಬಂದು ಉಡುಪಿಯಲಿ ನೆಲೆಯಾಗಿ ನಿಂದ
ವಂದಿಸುವೆ ನಿದ್ರ್ರೆಗೈ ಹರಿಧ್ಯಾನದಿಂದ ೩

 

೫೯
ತಂಗಿ ಮೊಸರ ಸುತ್ತ ಚೆಲ್ಲಿದ ಮುದ್ದುರಂಗ ಬೆಣ್ಣೆಯ ಮೆದ್ದ ಬಲ್ಲಿದ ಪ.
ಪುಟ್ಟ್ಟಿದಾಗಲೆ ಮೂಲರೂಪವ ತೋರಿಅಟ್ಟಿದ ಸುಜನರ ತಾಪವಕೊಟ್ಟ ನಮಗೆ ಜ್ಞಾನದೀಪವ ಕೃಷ್ಣತೊಟ್ಟ ದುರ್ಜನರೊಳು ಕೋಪವ ೧
ಯಶೋದೆಯ ಮೊಲೆವಾಲನುಂಬಾಗ ನಸುಬಿಸಿನೀರನೆ ಎರೆಸಿಕೊಂಡಾಗಶಿಶುವು ಪೂತಣಿಯ ಕೊಂದಿತೆಂಬಾಗ ರ-ಕ್ಕಸರಿಗೆ ಇವ ಬಲುದಿಮ್ಮಿಗ ೨
ಇಂದಿರೆಯನು ಬಿಗಿದಪ್ಪಿದ ಸಖವೃಂದಾರಕರೊಳಗೊಪ್ಪಿದಕಂದರ ಕಲ್ಲಿಂದ ಜಪ್ಪಿದ ತಾಯಿಹಿಂದಟ್ಟಿ ಬರಲೋಡಿ ತಪ್ಪಿದ೩
ಪುಟ್ಟ ಕೃಷ್ಣನ ಕಟ್ಟಬೇಕೆಂದು ತಂ-ದೊಟ್ಟಿ ಹಗ್ಗಗಳ ತಂದುಬೆಟ್ಟವಾಗಿರಲು ದುರ್ಜನರ ಕೊಂದು ಈಗಗಟ್ಟಿಮಾಡಿದಳಿವ ಹರಿಯೆಂದು೪
ಒರಳನೆಳೆದ ಬಲುಮತ್ತಿಯ ದೊಡ್ಡಮರನ ಕಿತ್ತಿದ ನೋಡಿವನರ್ಥಿಯತರಳಾಕ್ಷಿ ಕೃಷ್ಣನ ನೆತ್ತಿಯ ಬೆಣ್ಣೆಸುರಿಯೆ ಪಾಡಿದಳವನ ಕೀರ್ತಿಯ ೫
ಗಗನಕೆ ಏರಿ ವಾತನ ಕೊಂದ ನೀರೊ-ಳಗೆ ಪೊಕ್ಕು ತಂದೆಯ ಕರೆತಂದಖಗನಂತೆ ಕಡಹದಮರದಿಂದ ಹಾರಿವಿಗಡ ಸರ್ಪನ ಹೆಡೆಯೇರಿ ನಿಂದ೬
ತುಳಿದಹಿತಲೆಯನು ಬಿಚ್ಚಿದನಾಗಲಲನೆಯರುಕ್ತಿಗೆ ಮೆಚ್ಚಿದ ಅಲರು ಮಳೆಯ ಸುರಿಯ ಹಚ್ಚಿದ ಕೃಷ್ಣಖಳರಳಕೆಗಳ ಕೊಚ್ಚಿದ ೭
ನಂದನ ರಾಣಿಗೆ ಮೆಚ್ಚಿದ ತಾಯಚಂದದ ಕೈಗಳಿಂದುಚ್ಚಿದಇಂದೆನ್ನ ಮನೆಯೊಳು ಸಚ್ಚಿದಾ-ನಂದ ಹಿಡಿಯೆ ಕೈಯ್ಯ ಕಚ್ಚಿದ ೮
ಕಣ್ಣೊಳು ಪಾಲನುಗುಳಿ ಪೋದ ಈಚಿಣ್ಣಗೆ ನೋಡಿದೆ ವಿನೋದಮಣ್ಣಮೆದ್ದಖಿಳವ ತೋರಿದ ಕೃಷ್ಣಸಣ್ಣ ಬಾಯನು ಮುಚ್ಚಿ ಮಗುವಾದ ೯
ಕುಸುಮವೆತ್ತ ಖಡುಗ ವೆತ್ತ ಈಹಸುಗೂಸು ಎತ್ತ ಪರ್ವತವೆತ್ತಹಸಿವು ತೃಷೆಯ ಬಿಟ್ಟು ಗಿರಿಯ ಪೊತ್ತ ಈಶಶಿಮುಖಿ ಜನಕಿವನು ಸುಖವಿತ್ತ ೧೦
ಮೂರು ಲೋಕವಾಳುವ ಸಖಿಯರ ಗಂಡ ನೀಲ-ವರ್ಣನು ತೊಂಡರತೊಂಡ ಬಾಲಕನೀತಸರ್ವೇಶ ಕಂಡಾ ಇವಕೀಳೆಂದವ ಜಗದಲಿ ಭಂಡ ೧೧
ಅರಳೆಲೆ ಮಾಗಾಯಿ ಮುಂಗೈಯ್ಯಲಿಟ್ಟುಸರಭಂಗಿ ಕೂಡಿ ತ್ರಿಭಂಗಿಯವರವೇಣುವನು ತನ್ನಂಗೈಯಲಿಟ್ಟ-ಧರದಲ್ಲೂದಿದ ನಮ್ಮ ರಂಗಯ್ಯ ೧೨
ಪಶುಪಕ್ಷ್ಷಿಗಳು ತರತರದಲ್ಲಿಎಸೆವ ಗೀತವ ಕೇಳಿ ವನದಲ್ಲಿಹಸುಳೆಯ ನೆನೆಯುತ್ತ ಮನದಲ್ಲಿ ಪರ-ವಶವಾದುವು ಆಕ್ಷಣದಲ್ಲಿ ೧೩
ಕೊಳಲೂದಿ ಸುರರನ್ನು ಸೋಲಿಸಿದ ರಾಗಕಲೆಗಳಿಂದೆಲ್ಲವ ಒಲಿಸಿದಇಳೆಯೊಳು ಗೀತವ ಕಲಿಸಿದ ಇಂತುಒಲಿದು ವಿಠಲ ನಮ್ಮ ಪಾಲಿಸಿದ ೧೪
ತರುಲತೆಗಳು ಪುಳಕಿತವಾಗೆ ಈಚರ ಪ್ರಾಣಿಗಳೆಲ್ಲ ಸ್ಥಿರವಾಗೆಹರಿಯ ವೇಣುನಾದ ಹೊಸಬಗೆ ಅತಿಹರುಷವ ನೋಡಲೈದಿದೆವೀಗ ೧೫
ಚೆಲ್ಲಿದ ಕೈಯಿಂದಮಲ ನೀರ ನಮ್ಮೆಲ್ಲರ ನೀರಿಗಂಜನು ಧೀರನಲ್ಲ ನಾವಂದ ಮಾತನು ಮೀರನಿವಸುಲಭನೊಮ್ಮೆ ಮೊಗವ ತೋರ ೧೬
ಪಾಲನೊಲೆಯೊಳಿಟ್ಟು ಪೋದೆವು ಈಕಾಲಭೂಷಣ ಕೈಗಾದವುಬಾಲರ ಕೆಲರು ಮರೆತು ಪೋದೆವು ಗೋ-ಪಾಲ ಸಂಗಕ್ಕೆ ಮರುಳಾದೆವು ೧೭
ಉಂಬುವರಿಗೆ ಬಡಿಸಲಿಲ್ಲ ಪತಿಎಂಬುವನಾಜ್ಞೆಯೊಳಗೆ ನಿಲ್ಲದೆನಂಬಿದೆವು ನಾವು ಹರಿಯಲ್ಲದೆ ಅನ್ಯರೆಂಬುದು ಭಕ್ತ ವರ್ಗಕೆ ಸಲ್ಲದೆ ೧೮
ಧೇನು ಮಾತ್ರದಿಂದ ಫಲವೇನು ಕಾಮ-ಧೇನು ಶ್ರೀಕೃಷ್ಣನ್ನ ಕರೆದೆನುಮಾನಿನಿ ಮೊದಲು ಕರೆವಧೇನು ಬಿಟ್ಟುಜಾಣೆ ಸೇರಿದಳು ಕೃಷ್ಣನ ಪದವನು ೧೯
ಶಿಶುವ ಬಿಟ್ಟೊಬ್ಬಳು ನಿಜಕನ್ಯೆತನದೆಸೆಯ ತೋರಿಸಬಂದಳಚ್ಚುತನ್ನಎಸೆವ ಶ್ರೀಪತಿ ತನ್ನ ರಮಣನು ಎಂದುಸುಟಳು ಮೊದಲಾಳ್ದ ಗಂಡನ ೨೦
ಲಲನೆ ಕಣ್ಣಂಜನವಬಿಟ್ಟಳು ಜ್ಞಾನಚೆಲುವನಂಜನಕೊಡಂಬಟ್ಟಳುಒಲೆಯಪಾಲಗ್ನಿಗೆ ಕೊಟ್ಟಳು ಕೃಷ್ಣ-ಗೊಲಿದಧರ ಮನವಿಟ್ಟಳು ೨೧
ಇಂತು ತೊರೆದು ವಿಷಯಂಗಳ ಆ ಶ್ರೀ -ಕಾಂತನೆ ಕಾವ ಜಗಂಗಳಚಿಂತೆಯ ತೊರೆದೆವು ಮಂಗಳ ಲಕ್ಷ್ಮೀ -ಕಾಂತನೆ ಕಾಯೊ ಜಗಂಗಳ ೨೨
ಕೇಶಿಯೆಂಬ ದೈತ್ಯನ ಕೊಂದ ಖಳನಾಶದಲಿ ಸದಾ ಮುಕುಂದಆ ಸಮಯದಲಿ ಅಕ್ರೂರ ಬಂದ ಅವಂಗೆಲೇಸಪಾಲಿಸಿ ಕೃಷ್ಣ ನಡೆತಂದ ೨೩
ಮಧುರೆಯಲಿ ಮಲ್ಲರ ಸೋಲಿಸಿದ ತನ-ಗಿದಿರಾದ ಕಂಸನನೊರೆಸಿದಕದನಕೋಲಾಹನೆನಿಸಿದ ನಮ್ಮಮದನಶರಕೆ ಗುರಿಮಾಡಿದ ೨೪
ಎಲ್ಲ ದೇವರನಿವ ಮೀರಿದ ಸಖಿಬಲ್ಲವರಿಷ್ಟವ ಬೀರಿದಕಲ್ಲಕಂಬದಿ ಬಂದು ತೋರಿದ ಖಳರೆಲ್ಲಿದ್ದರಲ್ಲಿಗೆ ಹಾರಿದ ೨೫
ದಯದಿಂದ ಸಖನಮಗಾದವ ಚೆಲ್ವಹಯವದನ್ನ ಕೃಪೆಯಾದವನಯದಿ ಜಲವ ಪೊಕ್ಕು ಪೋದವ ವೈ-ರಿಯ ಕೊಂದು ವೇದವ ಕಾಯ್ದವ ೨೬

 

೬೦
ತಂದು ತೋರೆ ಮಂದರಧರ ಮು -ಕುಂದ ಮುರಹರನ ಪ.
ಬೇಗದಿ ಪೋಗೆ ನೀ ಸಾಗರದೊಳಗೆಭೋಗಿ ಭೋಗದೊಳಿಪ್ಪ ಸೊಬಗುಮೂರುತಿಯ ೧
ಸಾರಿದ ಸುಜನರ ಸಲಹುವ ಧೀರನನೀರೆ ನಿಗಮಸ್ತೌತ್ಯ ನಿರ್ಮಲರೂಪನ ೨
ಮಂಗಳಮೂರುತಿ ಸಿರಿಹಯವದನನಸಂಗಿಸು ಎನ್ನೊಳು ಸಖಿ ಸುಖಮಯನ ೩

 

೬೧
ತಂದು ತೋರೆ ಶ್ರೀ ಮುಕುಂದನ ಗೋವಿಂದನಎಂದೆಂದುಡುಪಿಲಿ ನಿಂದನ ಗೋವಿಂದನ ಪ.
ದಂಡಪಾಶಧರನು ಭೂಮಂಡಲದಿ ಮುನಿಗಳಹೆಂಡರಿತ್ತ ಭಿಕ್ಷೆಯುಂಡನ ಚೆಲ್ವಕುಂಡಲ ಮಂಡಿತ ಗಂಡನ ಉ -ದ್ದಂಡ ಕಠೋರ ಪ್ರಚಂಡನ ಗೋವಿಂದನ ೧
ಹಾರ ಪದಕ ಕಂಕಣ ಕಿರುಗೆಜ್ಜೆ ಉಡು -ದಾರ ವೀರ ಪೆಂಡ್ಯಗಳಿಟ್ಟನ ತನ್ನಸೇರ್ದರಿಗಿಷ್ಟವ ಕೊಟ್ಟನನೀರಸ ಜನರ ಬಿಟ್ಟನ ಗೋವಿಂದನ ೨
ಮಂದಹಾಸವೆಂಬ ನವಚಂದ್ರಿಕೆಯಿಂದೆಸೆವ ಮುಖಇಂದುವಿನ ನೀರಜಾಕ್ಷನ ನವಚಂದನ ಕರ್ಚಿತವಕ್ಷನಎಂದೆಂದು ಭಕ್ತರ ಪಕ್ಷನ ಗೋವಿಂದನ ೩
ಮಂದಜಜಾಂಡಾದಿಂದ್ರ ಮುಖ್ಯ ವೃಂದಾರಕರೊಡೆಯನಇಂದಿರೆಯಪ್ಪುವ ತೋಳ್ಗಳ ಶುಭಕುಂದ ಕುಟ್ಮಲ ಪಲ್ಗಳಅಂದುಗೆ ಒಪ್ಪುವ ಕಾಲ್ಗಳ ಗೋವಿಂದನ ೪
ಇಂದು ಹಯವದನನ್ನ ಸಂದೇಹವ ಕಳೆಯುತ್ತ ಆ-ನಂದದಿಲ್ಲಿಗೆ ಬಂದನಚಂದದಿ ವೇದವ ತಂದನ ಆನಂದನ ರಾಣಿಯ ಕಂದನ ಗೋವಿಂದನ ೫

 

೨೨೬
ತಾಳುವಿಕೆಗಿಂತ ತಪವು ಇಲ್ಲ ಪ.
ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ಅ.ಪ.
ದುಷ್ಟಮನುಜರು ಪೇಳ್ವ ನಿಷ್ಠುರದನುಡಿ ತಾಳುಕಷ್ಟಬಂದರೆ ತಾಳು ಕಂಗೆಡದೆ ತಾಳುನೆಟ್ಟಸಸಿ ಫಲಬರುವತನಕ ಶಾಂತಿಯ ತಾಳುಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು೧
ಹಳಿದು ಹಂಗಿಸುವ ಹಗೆಯ ಮಾತನು ತಾಳುಸುಳಿನುಡಿ ಕುಹಕ ಕುಮಂತ್ರವನು ತಾಳುಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳುಹಲಧರಾನುಜನನ್ನು ಹೃದಯದಲಿ ತಾಳು ೨
ನಕ್ಕನುಡಿವರ ಮುಂದೆ ಮುಕ್ಕರಿಸದೆ ತಾಳುಅಕ್ಕಸವ ಮಾಡುವರ ಅಕ್ಕರದಿ ತಾಳುಉಕ್ಕೋಹಾಲಿಗೆ ನೀರು ಇಕ್ಕಿದಂದದಿ ತಾಳುಪಕ್ಷೀಶ ಹಯವದನ ಶರಣೆಂದು ಬಾಳು ೩

 

೩೨೯
ತೇಜಿಯೇರಿ ಮೆರೆದು ಬಂದ
ರಾಜಬೀದಿಯೊಳಗಿಂದ ಕಸ್ತೂರಿ ರಂಗ ಪ.
ಸುತ್ತಮುತ್ತ ಸಾವಿರಾರು ಸಾಲುದೀವಟಿಗೆ
ಹತ್ತುದಿಕ್ಕಿಲಿ ಬೆಳಗುತಿಹ ಹಗಲುಬತ್ತಿಗಳು
ಇತ್ತೆರಪು ಭೂಸುರರು ಸಾಲುಗಟ್ಟಿ ನಿಂತಿರಲು
ಮತ್ತೆ ಸಭಾದಿಂದ ತೇಜಿ ಮೆಲ್ಲನೆ ನಡೆಸುತ್ತ ಜಾಣ೧
ತಾಳ ಶಂಖ ಭೇರಿ ತಮ್ಮಟೆ ತಂಬೂರಿ ಮೊದಲಾದ
ಮೇಲು ಪಂಚಕಂಗಳೆಲ್ಲ[ಮಿಗೆ] ಪೊಗಳಲು
ಗಾಳಿ ಗೋಪುರದ ಮುಂದೆ ರಾಯಬಿಡದಂತೆ ಸುತ್ತ
ಧೂಳುಗಳೆಬ್ಬಿಸಿ [ವೈಹಾಳಿ] ನಿಕ್ಕುತ ಜಾಣ ೨
ಮುತ್ತಿನ ತುರಾಯಿ ಅಂಗಿ ಮುಂಡಾಸು
ತತ್ಥಳಿಪ ವಜ್ರಕೆಂಪಿನ ತಾಳಿ ಚೌಕಳಿ
ಮುತ್ತಿನ ಕುಂಡಲವಿಟ್ಟು ಮೋಹಿಸುತ ಬೀದಿಯೊಳು
ಕತ್ತಿಯ ಉಡಿಯಲ್ಲಿ ಕಟ್ಟಿ ಕೈಯಲಿ [ತೇಜಿಯ] ಪಿಡಿದು ೩
ರಂಭೆ ಮೊದಲಾದ ದೇವರಮಣಿಯರು
ಕುಂಭದ ಆರತಿಯೆತ್ತಿ ಕೂಡಿ ಪಾಡಲು
ಶಂಭು ಮುಖ್ಯ ನಿರ್ಜರರೆಲ್ಲ ಸ್ವಾಮಿ ಪರಾಕೆಂದೆನುತ
ಅಂಬುಜಭವಾದಿಗಳ ಆಳಿದ ಶ್ರೀರಂಗಧಾಮ ೪
ವೇದಘೋಷದಿಂದ ವಿಪ್ರರು ಸ್ತುತಿಸಲು
ಮೋದದಿಂದ ಗಾಯಕರು ಹಾಡಿ ಪಾಡಲು
ಹಾದಿ ಬೀದಿಯಲಿ ನಿಂತು ಸಜ್ಜನರಿಗೆಲ್ಲ ದೇವ
ಆದರದಿಂದಿಷ್ಟಾರ್ಥವಿತ್ತು ಮೋದದಿಂದ ಮನ್ನಿಸುವ ೫
ಹಚ್ಚನೆ ಹೆಸರುಬೇಳೆ ಹಾಲುಕೆನೆಗಳು
ಮುಚ್ಚಿತಂದ ಕೆನೆಮೊಸರು ಮೀಸಲು ಬೆಣ್ಣೆಯು
ಅಚ್ಚ ತುಪ್ಪದಿ ಪಕ್ವವಾದ ಅತಿರಸ ಹುಗ್ಗಿಗಳು
ಮೆಚ್ಚಿವುಂಡು ಪಾನಕ ನೀರುಮಜ್ಜಿಗೆಗಳನೆ ಕುಡಿದು ೬
ಸಣ್ಣಮುತ್ತು [ತೆತ್ತಿಸಿದ] ಸಕಲಾತಿ ಗೊಂಡ್ಯ
ಹೊನ್ನ [ತೆತ್ತಿಸಿದ ಹೊಸ] ಹೊಳೆವ ಸೊಬಗಿನ
ಉನ್ನಂತ ಗುಣರಾಯ ಉತ್ತಮರಾಜಾಶ್ವವೇರಿ
ಎನ್ನ ಹಯವದನ ರಂಗ ಎಲ್ಲರಿಗಿಷ್ಟಾರ್ಥಕೊಡುವ ೭

 

೧೦
ತ್ರಿವಿಕ್ರಮರಾಯನ ನಂಬಿರೊಭುವನದೊಳ್ ಭಾಗ್ಯವ ತುಂಬಿರೊಸವೆಯದ ಸುಖವ ಮೇಲುಂಬಿರೊ ವಾ-ಸವನ ಮನ್ನಣೆಯ ಕೈಕೊಂಬಿರೊ ಪ.
ಗೊಲಿದುಬಂದನ ಚೆಲ್ವಸೋದೆಯ ಪುರದಲ್ಲಿ ನಿಂದನಸಾಧಿಸಿ ಖಳರನು ಕೊಂದನ ತನ್ನಸೇರ್ದಜನರ ಬಾಳ್ ಬಾಳೆಂದನ ೧
ಕಾಲಿಂದ ಬೊಮ್ಮಾಂಡ ಒಡೆದನ ಪುಣ್ಯ-ಶೀಲೆ ಗಂಗೆಯನು ಪಡೆದನಪಾಲಸಾಗರವನ್ನು ಕಡೆದನ ಶ್ರುತಿ-ಜಾಲ ಗದೆಯಿಂದ ಹೊಡೆದನ ೨
ಇಂದಿರಾದೇವಿಯ ಗಂಡನ ಸುರಸಂದೋಹದೊಳು ಪ್ರಚಂಡನಇಂದ್ರಾದಿ ಗಿರಿವಜ್ರದಂಡನ ಮುನಿವೃಂದಾರವಿಂದಮಾರ್ತಾಂಡನ ೩
ಇಂದುವರ್ಣದ ಕಂಜನೇತ್ರನ ಕಂಬುಕಂಧರ ಮಂಜುಳಗಾತ್ರನವೃಂದಾರಕರಿಗೆ ನೇತ್ರನ ಜಗಕಿಂದೇ ಸುಪವಿತ್ರನ ೪
ವನಿತೆಯರರ್ಥಿಯ ಸಲಿಸದೆ ಮನೆಮನೆವಾರ್ತೆಯ ಹಂಬಲಿಸದೆದಿನ ದಿನ ಪಾಪವ ಗಳಿಸದೆ ಅಂತ-ಕನ ಭಟರಿಂದೆಮ್ಮ ಕೊಲಿಸದೆ ೫
ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊಹರಿಯರ್ಚನೆಯನು ಮಾಡಿರೊ ಶ್ರೀ-ಹರಿಯ ಮೂರುತಿಯ ನೋಡಿರೊ ೬
ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನ ಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ ೭
ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- – – – – – – – – – – – – – – – – – – -೮
ಜಯಿಸಿ ಕಂಸನೆಂಬ ಮಾವನ ಭಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ ೯

 

೧೮೨
ದಯಮಾಡೊ ಕಾಶಿ ಬಿಂದುಮಾಧವಮಾಡದಿರೆನಗೆ ತಂದೆ ಭೇಧವ ಪ.
ಪಾಪನಾಶನ ಪಾಲಿಸೊ ಎನ್ನಸರ್ಪಭೂಷಣನತಾತನೆಂದೆನಿಸುವ ತವ ನಾಮಸ್ಮರಣೆಪಾರ್ವತಿಪತಿಯ ಧ್ಯಾನದೊಳಿರಿಸೊ ೧
ಮೋಕ್ಷದಾಯಕ ಪಾಲಿಸೊ ಎನ್ನಲಕ್ಷ್ಮೀನಾಯಕಕುಕ್ಷಿಯೊಳೀರೇಳುಭುವನ ತಾಳಿದವನೆಭಿಕ್ಷಾಪಾತ್ರ ಶಿವನಧ್ಯಾನದೊಳಿರಿಸೊ ೨
ಆದಿಮೂರುತಿ ವಿಶ್ವೇಶ್ವರಗೆ ವಿಷ್ಣುಪಾದವೆ ಗತಿಮೇದಿನಿಯೊಳು ಸೋದೆಪುರದಿ ನೆಲೆಸಿವರದನೆ ಬಂದೆ ಹಯವದನನೆ ೩

 

೨೨೭
ದಾನವಿಲ್ಲ ಧರ್ಮವಿಲ್ಲ ಜ್ಞಾನವಿಲ್ಲಏನು ಹೇಳಿದರೇನು ವಿಷಯಮೆಚ್ಚಿದವಗೆ ಪ.
ಕಂಡಕಂಡವರ ಅನ್ನಕೆ ಸಿಲುಕಿ ಅನುಗಾಲಭಂಡತನದಲಿ ಕಾಲವ ಕಳೆಯುತತಂಡ ತಂಡದಿ ಬಾಹ ಔತಣಕೆ ಮೈಯ್ಯುಬ್ಬಿಉಂಡು ಎನಗಿಂದಧಿಕ ಯೋಗ್ಯನಿಲ್ಲವೆಂದು ೧
ಪರ್ವಕಾಲ ಪಿತೃದಿವ್ಸ ಗುರುಗಳ ಪುಣ್ಯದಿನಸರ್ವಕರ್ಮವ ತ್ಯಜಿಸಿ ಅತಿಥಿಗೀಯದೆಪರರ ಅನ್ನವ ಬಿಡದೆ ಉತ್ಸಾಹದಲಿ ಪೋಗಿನಲಿನಲಿದುಂಡು ಸ್ತೋತ್ರವ ಮಾಡಿ ದಿನಕಳೆವೆ ೨
ಅನ್ಯರೊಡವೆಯು ತನಗೆ ಬಂದರೆ ಸಂತೋಷತನ್ನೊಡವೆ ಒಬ್ಬರಿಗೆ ಕೊಡಲು ಕ್ಲೇಶಉನ್ಮತ್ತನಾಗಿ ಉದರವ ಪೊರೆವ ಈ ದೋಷಮನ್ನಿಸಿ ದಯಮಾಡಿ ಸಲಹೋ ಹಯವದನ ೩

 

೬೨
ದಾರಿಯ ತೋರೋ ಗೋಪಾಲ ಪ.
ವಾರಿಜನಾಭ ವೈಕುಂಠಲೋಲ ಅ.ಪ.
ಸಿಕ್ಕಿದೆ ಭವಕಾಡಿನೊಳಗೆಲೆಕ್ಕವಿಲ್ಲದ ಜಂತುಗಳಿಗೆದಿಕ್ಕೊಬ್ಬರಿಲ್ಲವೊ ಎನಗೆಕಕ್ಕಸವ ಕಳೆದು ನಿನ್ನಯ ಪಾದಗಳಿಗೆ ೧
ಗಜರಕ್ಷಕನು ನೀನೆಂದುಅಜರುದ್ರಾದಿಗಳಂದುನಿಜವಾಗಿ ಪೇಳಿದರೆಂದುಸುಜನರೊಡೆಯನೆ ಕೇಳಿದೆ ನಾನಿಂದು ೨
ವರದ ಶ್ರೀಹಯವದನ ಬಾರೈಕರೆದೆನ್ನ ದಾರಿಯ ತೋರೈಪರಮ ಭಕ್ತರೊಳಿನ್ನಾರೈಪರಮಪುರುಷ ನೀನಲ್ಲದೆ ಗತಿಯಾರೈ ೩

 

೩೩೦
ದಿನಗಳನು ಕಳೆವ ಜನರೆ ಸುಜನರು
ವನಜನಾಭನ ದಾಸರ ಸಮಾಗಮದಿಂದ ಪ.
ಅರುಣೋದಯದಲೆದ್ದು ಆಚಮನ ಕೃತಿಯಿಂದ
ಪರಿಶುದ್ಧರಾಗಿ ಇಹಪರಗಳಿಂದ
ಎರಡುವಿಧ ಸುಖವೀವ ಗುರುಮಧ್ವಮುನಿವರನ
ಪರಮಮತವಿಡಿದು ಹರಿಕಥಾಮೃತ ಸವಿದು ೧
ಸ್ನಾನವನು ಮಾಡಿ ಸಂಕಲ್ಪಪೂರ್ವಕದಿ ಸಂ-
ಧ್ಯಾನ ಗಾಯಿತ್ರಿ ಗುರು ಮಂತ್ರ ಜಪವು
ಭಾನುನಾಮಕನಾದ ಪರಮಾತ್ಮನಂಘ್ರಿಯನು
ಧ್ಯಾನವನು ಮಾಡಿ ಅಧ್ಯಯನ ಪಾಠಗಳಿಂದ ೨
ಶ್ರೀ ವಾಸುದೇವ ಅಡಿಗಡಿಗೆ ನೆನೆದು
ಪಾವಕಗೆ ಪ್ರಾತರಾಹುತಿಯನಿತ್ತು
ಭಾವಜ್ಞರಲಿ ಸಕಲಪುರಾಣಗಳ ಕೇಳಿ
ಹೂವು ಶ್ರೀತುಲಸಿವನಗಳ ಸೇವೆಯನು ಮಾಡಿ ೩
ನದನದಿಗಳಲಿ ಸ್ನಾನವನು ಮಾಡಿ ಕಂಠದಲಿ
ಪದುಮಾಕ್ಷಿ ಶ್ರೀತುಲಸಿ ಮಾಲೆಗಳನು
ಮುದದಿಂದ ಧರಿಸಿ ಮಧ್ಯಾಹ್ನ ಕಾಲದಿ ಬ್ರಹ್ಮ ಯ-
ಜ್ಞ ದೇವ ಋಷಿ ಪಿತೃಗಳ ತೃಪ್ತಿಯನು ಬಡಿಸಿ೪
ಸಾವಧಾನದಿ ತಂತ್ರಸಾರೋಕ್ತ ವಿಧಿಯಿಂದ
ದೇವಪೂಜೆಯ ಮಾಡಿ ದೇವೇಶಗೆ
ನೈವೇದ್ಯಗಳನಿಟ್ಟು ನಿತ್ಯತೃಪ್ತಗೆ ವೈಶ್ವ-
ದೇವ ಬಲಿಹರಣ ಅತಿಥಿ ಪೂಜೆಗಳಿಂದ ೫
ಪರಮ ಹರುಷದಿಂದ ದೇವ ಪ್ರಸಾದವನು
ವರ ಮಾತೃ ಪಿತೃ ಸೋದರರು ಸಹಿತ
ಪರಮ ಸಖರ ಪಂಙÂ್ತ ಪಾವನರೊಡಗೂಡಿ
ನರಹರೆ ಎನುತ ಭೋಜನ ಮಾಡಿ ಮೋದಿಸುತ ೬
ಸಾಯಾಹ್ನದಲಿ ಸಂಧ್ಯಾನ ಗಾಯಿತ್ರಿ ಜಪ
ಶ್ರೀಯರಸನಂಘ್ರಿ ಸೇವೆಯನು ಮಾಡಿ
ವಾಯುಸಖನೊಳಗಾಹುತಿಯನಿತ್ತು ಲಕ್ಷ್ಮೀನಾ-
ರಾಯಣನ ಗುಣಗಳನು ಪೊಗಳುತಲಿ ೭
ತನುಮನವ ಶ್ರೀಹರಿಯಾಧೀನವ ಮಾಡಿ
ಅನುಸರಿಸಿ ಭಾಗ್ಯಬಡತನ ಎಣಿಸದೆ
ಮನವರಿತು ಹರಿಕೊಟ್ಟುದು ತನ್ನದಲ್ಲದೆ ಅಧಿಕ
ಅಣುಮಾತ್ರ ಬಾರದೆಂದು ಅಲ್ಪ ಸಂತುಷ್ಟನಾಗಿ೮
ಈ ವಿಧದಿ ಅನುದಿನವಾಚರಿಸಿ ರಾತ್ರಿಯಲ್ಲೊಂದು
ಜಾವದಲಿ ತೋಷದಿಂ ನಿದ್ರೆಗೈದು
ಜಾವ ಜಾವಕೆ ಎದ್ದು ನೆರೆಹೊರೆಯು ಕೇಳ್ವಂತೆ
ಪಾವನ ಚರಿತ್ರ ಹಯವದನನ ನೆನೆದು ೯

 

೬೩
ದಿಮ್ಮಿ ಸಾಲೆ ರಂಗ ದಿಮ್ಮಿ ಸಾಲೆ ಪ.
ದಿಮ್ಮಿ ಸಾಲೆನ್ನಿರೊ ಗೋಮಕ್ಕಳೆಲ್ಲ ನೆರೆದುಗೋಪಾಂಗನೇರ ಮೇ¯ ಒಪ್ಪಿ ಭಸ್ಮ ಸೂಸುತ ಅ.ಪ.
ಶಂಖನಾದ ಕೊಳಲ ಭೇರಿ ಪೊಂಕದಿ ಪಂಚಮಹಾವಾದ್ಯದಿಅಂಕವತ್ಸಲನ ನಿರಾತಂಕದಿಂದ ಹಿಡಿವ ಬನ್ನಿ ೧
ಗಂಧ ಕಸ್ತೂರಿ ಪುನುಗು ಚೆಂದದಿಂದ ಲೇಪಮಾಡಿನಂದಗೋಪಸುತನ ಮೇಲೆ ತಂದು ಸೂಸಿ ಭಸ್ಮವ ೨
ಎರಳೆಗಣ್ಣಿನ ಬಾಲೇರು ಹರುಷದಿಂದ ಬಂದು ನಿಂತುವರದ ಕೆÉೀಶವನ ಮೇಲೆ ಪರಿದು ಸೂಸಿ ಭಸ್ಮವ ೩
ಮತ್ತೆ ಕುಶಲದ ಬಾಲೆಯರುಗಳಿತ್ತೆರದಲಿ ಬಂದು ನಿಂತುಚಿತ್ತಜನಯ್ಯನ ಮೇಲೆತ್ತಿ ಸೂಸಿ ಭಸ್ಮವ ೪
ಗೊಲಿದು ಬಂದು ಸೋದೆಪುರದಲ್ಲಿ ನಿಂದಮೋದಿ ಹಯವದನನ ಮೇಲೆ ಪರಿದು ಸೂಸಿ ಭಸ್ಮವ ೫

 

೬೫
ದೇವ ರಿಪುವನದಾವ ದುರಿತಾಬ್ಧಿನಾವನ ಮಿತ್ರರಕಾವ ಶರಣ ಸಂಜೀವ ದೀಪ್ತಿಪೂರ್ಣ ಪ.
ದೇವ ದೇವರದೇವ ನೀನಹುದೊದೇವಕಿಯೊಳವತರಿಸಿ ಗೋಕುಲವನ್ನುಪಾವನ ಮಾಡಿ ಮಡುಹಿಮಾವನ ಮಧುರಾವನಿಯ ಉಗ್ರಸೇನನಿಗಿತ್ತು ದೈ -ತ್ಯಾವಳಿಯ ಸವರಿಜೀವಸಖನಾಗಿ ಪಾಂಡವರೊಳ್ಪಾರ್ಥಸೇವೆ ಕೈಕೊಂಡು ತರಿದು ಕೌರವರ ದ್ವಾ-ರಾವತಿಯಿಂದ ಹಯಮೇಧಕ್ಕೆ ಬಂದದೇವ ನೀನಹುದೊ ೧
ಧರ್ಮಾರ್ಜುನರೆಜ್ಞತುರಗರಕ್ಷಕ ಕೃತ-ವರ್ಮಾದ್ಯರುಗೂಡಿ ನಡೆದು ನಿಲ್ಲುತ್ತಮರ್ಮವರಿದು ಮುರಿದು ಹಂಸಧ್ವಜನಧರ್ಮವನು ತಡೆದುಕರ್ಮವಶದಿಂದ ಬಭ್ರುವಾಹನ ಕೈಯ್ಯಾದುರ್ಮರಣವಾದ ವಿಜಯ ಕರ್ಣಾತ್ಮಜಗೆಪೆರ್ಮೆಯಿಂದಸುವಿತ್ತು ಪೊರೆದ ನಿತ್ಯನಿರ್ಮಲಾತ್ಮನಹುದೊ ೨
ಪಿಂತೆಬಾಹರ್ಜುನರ ಕಂಡು ತಾಮ್ರಧ್ವ -ಜಂ ತಡೆಯೆ ಬಡದ್ವಿಜನಾಗಿ ಶಿಖಿಕೇತು-ವಂ ತಾನು ಬೇಡಿ ವೀರವರ್ಮನ ಗೆಲಿದುಕುಂತಳೇಂದ್ರಗೊಲಿದುದಂತಿಪುರಕ್ಕವರನು ತಂದು ಹಯಮೇಧವಂತು ಮಾಡಿಸಿ ಮೈದುನರ ಕಾಯ್ದಹೊಂತಕಾರಿ ಹಯವದನನೆ ಶ್ರೀ ಲಕ್ಷೀ -ಕಾಂತ ನೀನಹುದೊ ೩

 

೬೪
ದೇವರ ದೇವನೆ ಕಾಯೊ ದೇವಕಿನಂದನೆ ಕಾಯೊಜೀವರಾಸಿಗಳಿಗೆ ಸಂಜೀವನ ದೇವನೆ ಕಾಯೊ ಪ .
ಮಕರಿ ಕೈಗೆಸಿಕ್ಕಿ ಮಾನಭಂಗಗೊಂಡ ದೀನಪ್ರಕೃತಿ ಬಂಧನದಿಂದ ಪಾಡು ಬಡುತ್ತಿದ್ದೆನಯ್ಯ ೧
ಕಾಮವೆಂಬ ಕಡುವೈರಿ ಕಂಡಕಂಡಕಡೆಗೆನ್ನಸೀಮೆಯೊಳು ಸುಳಿವಂತೆ ಶ್ರೀಧರ ಮಾಡಿದ ನೋಡು ೨
ಶ್ರೀ ಹಯವದನ ನೀನು ಶ್ರಿತಜನ ಕಾಮಧೇನುಮಹಂತನೆಂಬುದ ಕೇಳಿ ಮೆಚ್ಚಿಬಂದೆನಯ್ಯ ನಿನ್ನ ೩

 

ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ-
ಧವನ ತೋರಿಸಯ್ಯ ಗುರುಕುಲೋತ್ತುಂಗ ಪ.
ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ಬೇಗನೆ ತರಿವ
ದುಶ್ಚರಿತರನ್ನೆಲ್ಲ ದೂರದಲ್ಲಿಡುವ ನ-
ಮ್ಮಚ್ಚುತಗಲ್ಲದ ಅಸುರರ ಬಡಿವ ೧
ಮಾರನ ಗೆದ್ದ ಮನೋಹರಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ
ಹರಿಯ ತೋರಿಸಯ್ಯ ನಿನಗೆ ಶರಣಾರ್ಥಿ ೨
ಚೆನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀ ಎನ್ನ
ಅನ್ಯರನರಿಯೆನೊ ಗುರುವೆಂಬೆ ನಿನ್ನ
ಇನ್ನಾದರು ಹರಿಯ ತೋರೊ ಮುಕ್ಕಣ್ಣ ೩

 

೬೬
ನಂದಗೋಪನ ಕಂದ ನಾನುವೃಂದಾರಕೇಂದ್ರ ಖಳಕುಲ ಮರ್ದನಪ.
ಎಂದೆಂದು ಎನ್ನ ನಂಬಿದ ಭಕುತರಿಗೆ ಸುತ್ತಿಂದಬಂದ ಕ್ಲೇಶಗಳನ್ನೆಲ್ಲ ಖಂಡಿಸಿತಂದೆ ಮಕ್ಕಳ ಪೊರೆವಂತೆ ಪಾಲಿಸುತಿಹೆಕಂದರ್ಪನಾಣೆ ಇದು ಎನಗೆ ಬಿರುದು ೧
ಅಂದಂದು ಅವರು ಬೇಡಿದ ಇಷ್ಟಂಗಳನಿತ್ತೆಸಂದೇಹವಿಲ್ಲ ಸಂತತ ಸಲಹುವೆಮಂದಜನರೊಡನಾಡಿ ಮರುಳುಗೊಳದಿರು ಮನುಜ ಚೆಂದದಿಂದೆನ್ನ ಪೂಜೆಯನು ಮಾಡು ೨
ಇಂದ್ರ ಗರ್ವಿಸಲವಗೆ ಸಾಂದ್ರ ಸುರತರುವ ಆನಂದನವನವನು ಪೊಕ್ಕು ಕಿತ್ತುತರಲುಒಂದಾಗಿ ರಣಕೆ ಬಂದು ನಿಂದಮರರನು ಕರುಣದಲಿಅಂದು ಪಾಲಿಸಿದೆ ಭಕ್ತರ ಬಂಧುವೆನಿಸಿ ೩
ಇಂದುಮುಖಿ ಸಭೆಯಲ್ಲಿ ಕರೆಯಲಾಕ್ಷಣದೊಳಗೆಬಂದವಳ ಅಭಿಮಾನವನು ಕಾಯ್ದೆಇಂದುಧರ ಭಸ್ಮನುಪದ್ರದಲಿ ಬಳಲುತಿರೆಬಂದೊದಗಿ ಶಿವನ ಕಾಯಿದವನರಿಯಾ ೪
ಅಂಧಂತಮವ ದಾಟಿ ಅನಂತಾಸನಕೆ ಪೋಗಿಒಂದು ನಿಮಿಷದೊಳಗೆ ದ್ವಿಜನ ಸುತನ ತಂದೆಸಿಂಧುವಿನೊಳಗೆ ದೈತ್ಯನ ಕೊಂದು ಸಾಂದೀಪ -ನಂದನನ ಯಮನಪುರದಿಂದ ತಂದೆ ೫
ಬಂಧಿಸಿ ಬಳಲಿಸುವ ನೃಪರ ಬಹುಬಲ ಜರಾ -ಸಂಧನ ಗಧೆಯ ಗಾಯದಿ ಕೊಲಿಸಿಅಂದವನ ದೆಸೆಯಿಂದ ನೊಂದ ನೃಪರನು ಬಿಡಿಸಿಕುಂದದುಡುಗೊರೆಯ ನಾ ಕೊಡಿಸಿ ಮೆರೆದೆ ೬
ಹಿಂದಾಗಜೇಂದ್ರನಿಗೊದಗಿದವನಾರು ಪಿತನಿಂದನೊಂದ ಪ್ರಹ್ಲಾದನ್ನ ಕಾಯ್ದವರದಾರುಮಂದರಗಿರಿಯನೆತ್ತಿ ಸುರರಿಗಮೃತ ಉಣಿ-ಸಿಂದಿರೆಯನಾಳ್ದ ಹಯವದನನರಿಯಾ ೭

 

೨೨೮
ನಂಬು ನಂಬು ನಾರಾಯಣನ ಈಮಿಕ್ಕ ದೈವಗಳು ಕಾಯಬಲ್ಲವೆ ಪ.
ಅಂಬರದಿ ಧ್ರುವನ್ನ ನೋಡು ಈ ಭಕ್ತಿಮೌಳಿಯೆಂಬೊ ಪ್ರಹ್ಲಾದನ್ನ ನೋಡುಕುಂಭಿಣಿಯೊಳು ವಿಭೀಷಣಗೆ ಶ್ರೀರಾಮ ಕೊಟ್ಟತುಂಬಿದ ಭಾಗ್ಯವ ನೋಡಯ್ಯ ೧
ಹಿರಣ್ಯಾಕ್ಷನೆಂಬೊ ದೈತ್ಯನ ಆ ಸಿರಿಯೆಲ್ಲಕರಗಿ ಹೋದದ್ದು ನೋಡಯ್ಯದುರುಳರಾವಣ ಏನಾದ ಆ ದುಃಖವನ್ನುಪಾರಂಪರ್ಯದಿಂದ ಕೇಳಯ್ಯ ೨
ನ್ಯಾಯಕ್ಕಾಗಿ ಮನೆಗೆ ಬಂದ ಶ್ರೀಕೃಷ್ಣನ[ಕಟ್ಟೆಂದ] ಖಳನೇನಾದಹಯವದನನ್ನ ನಂಬಿದ ನಮ್ಮ ಧರ್ಮ-ರಾಯನ ಭಾಗ್ಯ ನೋಡಯ್ಯ ೩

 

೧೪೩
ನದಿಗಳು
ವೇಣೀ ಮಾಧವನ ತೋರಿಸೆ ಜಾಣೆ ತ್ರಿವೇಣಿಕಾಣದೆ ನಿಲ್ಲಲಾರೆನೆ ಪ.
ಕಾಣುತ ಭಕ್ತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಸಾರೆ ಸುಖವಾಣಿ ಅ.ಪ.
ಬಂದೆನೆ ಬಹಳ ದೂರದಿ ಭವಸಾಗರತರಣಿನಿಂದೆನೆ ನಿನ್ನ ತೀರದಿಒಂದು ಗಳಿಗೆ ಹರಿಯಗಲಿ ನಾನಿರಲಾರೆಮಂದಗಮನೆ ಎನ್ನ ಮುಂದಕೆ ಕರೆಯೆ ೧
ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದುಕರುಣದಿಂದೆನ್ನ ಪೊರೆಯೆಸ್ಮರಣೆ ಮಾತ್ರದಿ ಭವತಾಪವ ಹರಿಸುವಸ್ಮರನ ಪಿತ ಮುರಹರನ ಕರುಣದಿ ೨
ಸುಜನರಿಗೆಲ್ಲಾಧಾರಳೆ ಸುಖಶೀಲೆ ಕೇಳೆಕುಜನ ಸಂಗವನು ಕೀಳೆನಿಜಪದವಿಯನೀವ ಹಯವದನನ ಪಾದ ವಾ-ರಿಜ ತೋರಿಸೆ ಮದಗಜಗಮನೆ ೩

 

೧೦೧
ನಮಸ್ತೆ ವಿಮಲೆ ಕೋಮಲೆ ರಮಾದೇವಿನಮಸ್ತೆ ನಮಸ್ತೆ ಪ.
ತರುಣಿ ಶಿರೋಮಣಿ ನಿನ್ನ ಶೀಲ ಸೌಂದರ್ಯವನುಧರೆಯೊಳು ವರ್ಣಿಸುವ ಕವಿಯು ದಾವಸ್ವರಮಣನೆನಿಪ ರಮಣನುರದೊಳೆಂದೆಂದು ನೀ-ನರಮನೆಯ ಮಾಡಿ ಭಾಪುರೆ ಮೆರೆದೆಲೆಲೆ ೧
ತನ್ನ ಮೈಯಿಂದ ಮಕ್ಕಳ ಸೃಜಿಸಿ ಯುಗಯುಗದಿನಿನ್ನ ತಾರುಣ್ಯ ಲಾವಣ್ಯಗಳನುಮನ್ನಿಸಿ ಪೊರೆವ ಹರಿಯ ಪಟ್ಟದ ರಮಣಿ ಜಗ-ನ್ಮಾನ್ಯೆ ಚೈತನ್ಯೆ ಲಾವಣ್ಯೆ ಗುಣಗಣಸದನೆ ೨
ನಿನ್ನಂಗವಪ್ಪಲು ನೋಡಲು ಮುಖವ ಚುಂಬಿಸಲುಅನಂತ ಕರ ವಕ್ತ್ರನೇತ್ರಗಳು ಪೂರ್ಣ ಹಯವದನ ಕೈಕೊಂಡ ನಿನ್ನ ಗಂಡಸ್ವರ್ಣಸಮವರ್ಣೆ ಕರ್ಣಾಯತಾಕ್ಷಿ ೩

 

೨೨೯
ನಮಿಸಿರೊ ನಾರಾಯಣನಂಘ್ರಿಗೆ ಭವಕ್ರಮವಿನ್ನು ಸಾಕು ಮುಕ್ತಿಸುಖವೆ ಬೇಕೆಂಬುವರು ಪ.
ಮೂರುಬಾರಿ ಪೊಡವಡಿರೊ ಮ-ತ್ತಾರು ಬಾರಿ ಪೊಡವಡಿ ಪುರುಷೋತ್ತಮಗೆಆರೆರಡಕೂಡಿ ಪೊಡವಡಿ ಪುರುಷೋತ್ತಮಗೆರ ಇಪ್ಪತ್ತಮೂರಕ್ಕೊಂದ ಕೂಡಿ ಪೊಡವಡಿರೊ ೧
ಶಕ್ತಿಯಿದ್ದರೆ ನಾಲ್ವತ್ತೆಂಟು ಸಾರಿ ಹರಿ-ಗರ್ತಿಯಿಂದಲಿ ಪೊಡವಡಿರೊಆರ್ತಬಂಧು ಸಿರಿರಮಣಗೆ ಅಷ್ಟಾಂಗಯುಕ್ತವಾಗಿ ದಂಡದಂತೆ ಭೂತಳದಲಿ ೨
ಉರಸಾ ಶಿರಸಾದೃಷ್ಟ್ಯಾ ಮನಸಾ ವಚಸಾ ತಥಾಪದ್ಬ್ಯಾಂ ಕರಾಭ್ಯಾಂ ಜಾನುಭ್ಯಾಂ ಪ್ರಣಮೋಷ್ಟಾಂಗಾಈ ರೀತಿಯೆಂಬ ವ್ಯಾಸನಮಂತ್ರ ಗುರುಮಂತ್ರವನೆನಂಬಿ ಭಕುತಿರಸ ತುಂಬಿ ೩
ಸಂಧ್ಯಾಂ ದೃಷ್ಟ್ವಾಗುರುಂ ಸಾಧ್ಯಂ ಗುರು ಸ್ವಗುರು ಮೇವಚಾದ್ವಿಚತುರ್ವಿಂಶತ್ತದರ್ಧಂ ನಾತದರ್ಧಮಥವಾನಮೇ ನಮೋತದರ್ಥಯಥವಾತದರ್ಧಂ ಸರ್ವದಾ ಮಮೇ ೪
ಆರೋಗಣೆಯ ಮಾಡಲಾಗ ವಂದಿಸಬೇಡಗುರು ಹಿರಿಯರ ಸಂಗದೊಳೆರಗಬೇಡಸಿರಿ ಹಯವದನನಗ್ರಪೃಷ್ಟಾತ (?)ಪುರ ವಾಮಭಾಗ ಮಜ್ಜನಕಾಲಂಗಳ ಬಿಟ್ಟು ೫

 

೧೮೪
ನಮ್ಮ ಗಿರಿಯ ತಿಮ್ಮ ಪರಬೊಮ್ಮನಮ್ಮ ಒಮ್ಮೆ ಕಾಯೋದ(ತ?)ಮ್ಮ ಪ.
ರಂಗದುರಿತ ಭಂಗ ಗುಣ ತ-ರಂಗ ಜಗದೊಳಗೆ ನೀನೆ ಸರ್ವೋತ್ತುಂಗ ೧
ನೋಡೋ ಎನ್ನಲ್ಲಿ ಕೃಪೆಮಾಡೋ ಕೈಯನೀಡೋ ಎನ್ನ ಪೊರೆವನೆಂಬ ಮಾತನಾಡೊ ೨
ಏಳು ಎನ್ನ ಮಾತ ಕೇಳು ಕಡು ಕೃ-ಪಾಳು ನಿನ್ನ ಹದನ ಎನಗೊಲಿದು ಪೇಳು ೩
ಎಂದ ಮಾತಿಗೆ ಮುಂದೆ ನಿಂದ ನೀ ಕರುಣಿ ಗೋ-ವಿಂದ ಎಂಬುದಿನ್ನು ನಿನಗೆ ಚೆಂದ ೪
ಪ್ರಿಯ ಎನ್ನ ಕಾಯೊ ಜೀಯ ಮುಕ್ತ್ಯು-ಪಾಯ ಹಯವದನ ಶೇಷಗಿರಿರಾಯ ೫

 

೪೧
ಕಂಜನಯನನ ಕಂಡೆ ಕಾಮನಯ್ಯನ ಪ.
ಮಂಜುಗುಣಿಯೊಳಿಪ್ಪನ ತಿಮ್ಮಪ್ಪನಅ.ಪ
ಪುಟ್ಟ ಪಾವುಗೆಯೊಳ್ಮೆಟ್ಟಿ ತೊಟ್ಟಂಬುಚಕ್ರವಕಟ್ಟಿದ ಕಠಾರಿಯಿಂದ ದುಷ್ಟರ ಹುಡಿಗುಟ್ಟುವ ೧
ಚಕ್ರ ಶಂಖಧರನಾಗಿ ಕಕ್ಕಸರ ರಕ್ಕಸರಶಿಕ್ಷಿಸಿ ಶಕ್ರಮುಖ್ಯರ ಅಕ್ಕರಿಂದ ರಕ್ಷಿಸುವ ೨
ಆಗಮವೈರಿಯನು ಕೊಂದಾಗ ಹಯವದನನ್ನಈಗ ಮಾನಿಸರಿಗೆ ಸೌಭಾಗ್ಯವೀವ ದೇವನ ೩

 

೬೭
ನಲಿವ ಬೆಣ್ಣೆಯನು ಮೆಲುವ ಕೃಷ್ಣ ನಮ-ಗೊಲಿವ ಖಳರನ್ನೆ ಕೊಲುವಪ.
ನಗವ ಕರದಿಂದ ನೆಗೆವ ಅದರೊಳಗೆಪೋಗುವ ನರರ ಕಂಡು ನಗುವ ೧
ಕಡೆವ ಕೋಲನ್ನು ಪಿಡಿದ ಭೂಷಣವತೊಡುವ ಪಟ್ಟೆಗಳನುಡುವ ೨
ಬಡವರಭೀಷ್ಟಗಳ ಕೊಡುವ ದುರಿತಗಳಜಡಿವ ದೈತ್ಯರನು ಬಡಿವ ೩
ಶರಣನಾಯಕನ ಚರಣದ್ವಯಕೆಪುರಹರನ ಮಸ್ತಕಾಭರಣ೪
ಶರಣಜನರ ಹಿತಕರಣ ಹಯವದನಸ್ಮರಣ ಭವಕೆ ಸಂಹರಣ ೫

 

೨೮೬
ನಾಗಶಯನನು ನಿನಗಾಗಿಯೆ ಬಂದಿಹೆ
ಬಾಗಿಲ ತೆಗೆಯೆ ಭಾಮೆ ನೀ
ಬಾಗಿಲ ತೆಗೆಯೆ ಭಾಮೆ ಪ.
ಕೂಗುವ ನೀನ್ಯಾರೊ ಈಗ ಹೊತ್ತಲ್ಲ
ಕೂಗಬೇಡ ಪೋಗೋ ನೀ
ಕೂಗಬೇಡ ಪೋಗೋ ಅ.ಪ.
ನೀರೊಳು ಮುಳುಗಿ ನಿಗಮ ಚೋರನ ಗೆದ್ದ
ನೀರಜಾಕ್ಷನೆ ಭಾಮೆ ನಾ
ನೀರಜಾಕ್ಷನೆ ಭಾಮೆ
ನಾರುವ ಮೈಯನ್ನು ಎನ್ನಲ್ಲಿ ತೋರದೆ
ಸಾರು ಸಾರು ನೀ ದೂರ ರಂಗ
ಸಾರು ಸಾರು ನೀ ದೂರ ೧
ಮಂದರ ಗಿರಿಯನು ಬೆನ್ನಲಿ ಪೊತ್ತ
ಇಂದಿರೆಯರಸನೆ ಭಾಮೆ ನಾ-
ನಿಂದಿರೆಯರಸನೆ ಭಾಮೆ
ಇಂದು ನಿನಗೆ ತಕ್ಕ ಭಾರಗಳಿಲ್ಲವು
ಸಿಂಧುವಿನೊಳು ನೀ ಪೋಗೈ ಕೃಷ್ಣ
ಸಿಂಧುವಿನೊಳು ನೀ ಪೋಗೈ ೨
ಧರಣಿಗೆ ಸುಖವನು ತೋರಿದ ಸೂಕರ
ಪರಮಪುರುಷನೆ ಭಾಮೆ ನಾ
ಪರಮ ಪುರುಷನೆ ಭಾಮೆ
ವರಾಹರೂಪದ ನಿನ್ನ ಗುರುಗುರು ಶಬ್ದವ
ಅರಿವಳಲ್ಲವೊ ನೀ ಪೋಗೈ ರಂಗ
ಅರಿವಳಲ್ಲವೊ ನೀ ಪೋಗೈ ೩
ಬಾಲನ ತಾಪವ ಕೋಪದಿ ತರಿದ
ನಾರಸಿಂಹನೆ ಭಾಮೆ ನಾ
ನಾರಸಿಂಹನೆ ಭಾಮೆ
ಜ್ವಾಲೆಯ ವದನ ಕ್ರೂರ ಕಾರ್ಯಂಗಳ
ಕೇಳಿ ಅಂಜುವಳಲ್ಲ ಪೋಗೈ ರಂಗ
ಕೇಳಿ ಅಂಜುವಳಲ್ಲ ಪೋಗೈ ೪
ವಾಸವನನುಜನೆ ವಾಮನರೂಪನೆ
ನಾಶರಹಿತನೆ ಭಾಮೆ ನಾ
ನಾಶರಹಿತನೆ ಭಾಮೆ
ಕೂಸಿನ ರೂಪದಿ ಮೋಸವ ಮಾಡಿದಗೆ
ದಾಸಿ[ಯೊ]ಬ್ಬಳು ಬೇಕೇ ರಂಗ
ದಾಸಿ[ಯೊ]ಬ್ಬಳು ಬೇಕೇ ೫
ತಾತನ ಮಾತಿಗೆ ತಾಯಿಯನಳಿದ
ಖ್ಯಾತ ಭಾರ್ಗವನೆ ಭಾಮೆ ನಾ
ಖ್ಯಾತ ಭಾರ್ಗವನೆ ಭಾಮೆ
ಮಾತೆಯನಳಿದ ಘಾತಕ ನಿನಗೆ
ದೂತಿಯೊಬ್ಬಳು ಬೇಕೇ ರಂಗ
ದೂತಿಯೊಬ್ಬಳು ಬೇಕೇ ೬
ದಶರಥನಂದನ ದಶಮುಖಭಂಜನ
ಪಶುಪತಿವಂದ್ಯನೆ ಭಾಮೆ ನಾ
ಪಶುಪತಿ ವಂದ್ಯನೆ ಭಾಮೆ
ಹಸನಾದ ಏಕಪತ್ನೀವ್ರತದವಗೆ
ಸುದತಿಯೊಬ್ಬಳು ಬೇಕೇ ರಂಗ
ಸುದತಿಯೊಬ್ಬಳು ಬೇಕೇ ೭
ಹದಿನಾರು ಸಾಸಿರ ನೂರೆಂಟು ಸುದತೇರ
ಬದಿಯಲಿಟ್ಟವನೆ ಭಾಮೆ ನಾ
ಬದಿಯಲಿಟ್ಟವನೆ ಭಾಮೆ
ಹದನಕ್ಕೆ ಬಾರದ ಮಾರ್ಗಂಗಳ್ಯಾತಕ್ಕೆ
ವದನ ಮುಚ್ಚಿಕೊಂಡು ಪೋಗೈ ರಂಗ
ವದನ ಮುಚ್ಚಿಕೊಂಡು ಪೋಗೈ ೮
ಬೌದ್ಧರಕುಲದಲ್ಲಿ ಹುಟ್ಟಿ ಅವರಂತೆ
ಮುಗ್ಧರ ಮಾಡಿದೆ ಭಾಮೆ ನಾ
ಮುಗ್ಧರ ಮಾಡಿದೆ ಭಾಮೆ
ಶುದ್ಧಗುಣಗಳೆಲ್ಲ ಇದ್ದಲ್ಲಿಗೆಪೇಳೆ
ವೃದ್ಧಳು ನಾನಲ್ಲ ಪೋಗೈ ರಂಗ
ವೃದ್ಧಳು ನಾನಲ್ಲ ಪೋಗೈ ೯
ವರ ತುರಗವನೇರಿ ಧರೆಯೆಲ್ಲ
ಚರಿಸಿದ ದೊರೆವರ ನಾನೆ ಭಾಮೆ
ಚರಿಸಿದ ದೊರೆವರ ನಾನೆ
ತುರಗದ ಚಾಕರಿಯೊ[ಳಗಿರುವವನಿಗೆ]
ತರುಣಿಯ ಭೋಗವು ಬೇಕೇ ರಂಗ
ತರುಣಿಯ ಭೋಗವು ಬೇಕೇ ೧೦
ಸರುವ ಪ್ರಾಣಿಗಳ ಉದರದೊಳಿಂಬಿಟ್ಟು
ಶರಧಿಯೊಳ್ಮಲಗಿದವ ಭಾಮೆ ನಾ
ಶರಧಿಯೊಳ್ಮಲಗಿದವ ಭಾಮೆ
ದೊರೆ ಹಯವದನ ಚರಣಕ್ಕೆರಗುತ
ತೆರೆದಳು ಬಾಗಿಲ ಭಾಮೆ ಆಗ
ತೆರೆದಳು ಬಾಗಿಲ ಭಾಮೆ ೧೧

 

೧೮೫
ನಾನು ಸಜ್ಜನನಾದೊಡೆಹೀನವಿಷಯಂಗಳಿಗೆ ಎರಗುವೆನೇನಯ್ಯ ಪ.
ಚಿತ್ತವ ಪುರುಷೋತ್ತಮನಲ್ಲಿಡದೆಉತ್ತಮರಾದವರೊಡನಾಡದೆತತ್ವವಿಚಾರವೊಂದರಿಯದೆ ನಾನು-ನ್ಮತ್ತರಸಂಗವ ಮಾಡುವೆನೇನಯ್ಯ ೧
ನಿರುತವು ಪರನಿಂದೆಗಳ ಮಾಡುತಲಿಗುರುಹಿರಿಯರನು ವಿಚಾರಿಸದೆಗುರುವೆ ದೈವವೆಂದರಿಯದೆ ನಾನುಪರರ ಒಡವೆಯನು ಬಯಸುವೆನೇನಯ್ಯ ೨
ಹೇಯಶರೀರವ ಪೋಷಿಸುವೆನೆಂದು-ಪಾಯವನು ಮಾಡಿ ನಾ ಬಳಲುತಿಹೆರಾಯರು ಮಾಡಿದ ಶರಣರ ಹೊರೆವಹಯವದನ ನಿನ್ನ ನಾ ಮರೆತಿಹೆನೇನಯ್ಯ ೩

 

೩೨೭
ನಾರದ ಕೊರವಂಜಿ
ಜಯ ಜಯ ದಯಾಕರನೆ ಹಯವದನ ಭಯಹರನೆ
ಜಯ ಶೀಲಸಾಧ್ವರನೆ ಜಯ ದೀನೋದ್ಧರನೆ
ನಿಯತ ಶ್ರೀಭೂಧರನೆ ನಯಗುಣ ಸ್ವೀಕರನೆ
ಪ್ರಿಯಜನ ಮನೋಹರನೆ ಸುಯತಿ ಸಾಕಾರನೆ ೧
ಹರಿಯೇ ಪತಿಯಾಗಬೇಕೆಂದು ರುಕುಮಿಣಿ
ಪರದೇವತೆಯ ನೆನವುತಿರಲು
ಕೊರವಂಜಿ ವೇಷದಿ ರುಕುಮಿಣಿದೇವಿಗೆ
ಪರಮ ಹರುಷವೀವೆನೆಂದು ನಾರದ ಬಂದ ೨
ಧರಣಿ ಮಂಡಲದಲ್ಲಿ ನಾರದ
ಧರಿಸಿ ಕೊರವಂಜಿ ವೇಷವ
ಸುರನರಾದಿಗಳೆಲ್ಲರಿಗೆ ತಾ
ಪರಮ ಆಶ್ಚರ್ಯ ತೋರುತ್ತ ೩
ಬಂದಳು ಕೊರವಂಜಿ ಚಂದದಿಂದಲಿ
ಮಂದಹಾಸವು ತೋರುತ್ತ
ಅಂದಿಗೆ ಪಾದ ಧಿಂಧಿಮಿ ಧಿಮಿ-
ಕೆಂದು ನಿಂದಭೀಷ್ಟವ ಪೇಳುತ ೪
ಗಗನದಂತಿಹ ಮಧ್ಯವು ಸ್ತ-
ನಘನ್ನ ಭಾರಕೆ ಬಗ್ಗುತ
ಜಗವನೆಲ್ಲವ ಮೋಹಿಸಿ
ಮೃಗ ಚಂಚಲಾಕ್ಷದಿ ನೋಡುತ ೫
ಕನಕಕುಂಡಲ ಕಾಂತಿಯಿಂದಲಿ
ಗಂಡಭಾಗವು ಹೊಳೆವುತ್ತ
ಕನಕಕಂಕಣ ನಾದದಿಂದಲಿ
ಕಯ್ಯ ತೋರಿ ಕರೆಯುತ್ತ ೬
ಕುಂಕುಮಗಂಧದಿ ಮಿಂಚುವೈಯಾರಿ
ಚುಂಗು ಜಾರಲು ಒಲವುತ್ತ
ಕಿಂಕಿಣಿ ಸರಘಂಟೆ ಉಡಿಯೊಳು
ಘಲ್ಲು ಘಲ್ಲೆಂದು ಬಂದಳು
ಘಲ ಘಲ ಘಲ್ಲು ಘಲ್ಲೆಂದು ಬಂದಳು ೭
ಕರೆದಾಳೆ ಸುಪಲ್ಲವ ಸುಪಾಣಿ ಕೀರವಾಣಿ
ಪರಿಮಳಿಸುವ ಫಣಿವೇಣಿ ೮
ಪರಿಪರಿ ಬೀದಿಯಲ್ಲಿ ನಿಂದು ಹಿಂದೂ ಮುಂದೂ
ಸರಸವಾಡುತ್ತ ತಾನೆ ಬಂದು ೯
ಕೊರವಂಜಿ ಯಾರೊಳಗೆ ನೋಡಿ ಕೂಡಿಯಾಡಿ
ಸರಿಯಿಲ್ಲವೆಂದು ತನ್ನ ಪಾಡಿ ೧೦
ಮನೆಮನೆಯಿಂದ ಬಂದಳು ಕೊರವಂಜಿ
ತಾನು ಮನೆಮನೆಯಿಂದ ಬಂದಳು
ರನ್ನವ ತೆತ್ತಿಸಿದ ಚಿನ್ನದ ದಿವ್ಯ ಬುಟ್ಟಿ
ತನ್ನ ನೆತ್ತಿಯಲ್ಲಿಟ್ಟು ಬೆನ್ನಿಲಿ ಸಿಂಗಾನ ಕಟ್ಟಿ ೧೧
ಗದ್ಯ : ಸುಗುಣಾಂಗಿಯರು ಪೇಳಲು ಮುದದಿಂದ ರುಕುಮಿಣಿದೇವಿ ತಾನೂ ಮುಗುಳು ನಗೆಯಂ ನಗುತ ಕೊರವಂಜಿಯನೆ ಅತಿಬೇಗ ಜಗವರಿಯೆ ಕರೆಯೆಂದಳು.
ಶ್ರೀ ರುಗ್ಮಿಣಿ ತಾ ಬಂದಳು ಸ್ತ್ರೀಯರ ಕೂಡಿ
ಚಾರುಹಾಸದಿಂದೊಪ್ಪುತ ಚೆಲ್ವ ದಿವ್ಯ ನೋಟಂಗಳಿಂದ
ರಾಜಿಪ ಕಂಕಣದಿಂದ ರಮ್ಯ ನೂಪುರಗಳಿಂದ
ರಾಜಚಿಹ್ನೆಗಳಿಂದ ರಾಜೀವನೇತ್ರೆ ಒಲವುತ್ತ೧೨
ರಾಜಾಧಿರಾಜ[ರು]ಗಳಿಂದ ರಾಜಸಭೆಯಲ್ಲಿ ಪೂಜಿತಳಾದ ರಾಜಹಂಸಗ-ಮನೆಯು ಬರಲು ರಂಜಿತಳಾಗಿ ಒಲೆವುತ್ತ
ಗದ್ಯ : ಆಗಲಾ ದೂತಿಕೆಯರು ಕೊರವಂಜಿಯನೆ ಅತಿ ಬೇಗ ಕರೆಯಲು ಬೇಕಾದ ವಜ್ರವೈಢೂರ್ಯ ರಾಗವಿಲಸಿತವಾದ ದ್ವಾರ ಭೂಭಾರದಿಂದೆಸೆವ ಭಾಗಧೇಯದಿಂ ರಾಜ ಸತ್ಕುಲವಾದ ದಿವ್ಯ ಮಂದಿರಕೆ
ತ್ಯಾಗಿ ರುಕುಮಿದೇವಿ ನೋಡಲಾ ಶ್ರೀ-
ರಾಗದಿಂ ಗಾನವಂ ಪಾಡುತ್ತ ಕೊರವಂಜಿಯು ಬಂದ ಚೆಂದ೧೩
ಬಂದಾಳಂದದಲಿ ಬಾಗಿಲೊಳಗೆ ದಿಂಧಿಮಿಕೆನ್ನುತ ೧೪
ಚೆಲುವ ತುರುಬಿನಿಂದಲಿ ಜಗುಳುವ
ಚಲಿಸುವ ಪುಷ್ಪದಂದದಿ
ನಲಿನಲಿ ನಲಿದಾಡುತ್ತ ಮಲ್ಲಿಗೆ
ಝಲಝಲಝಲ ಝಲ್ಲೆಂದು ಉದುರುತ್ತ
ಕಿಲಿಕಿಲಿ ಕಿಲಿ ಕಿಲಿ ಕಿಲಿಯೆಂದು ನಗುತ್ತ ೧೫
ಗದ್ಯ :ಥಳಥಳನೆ ಹೊಳೆವುತ್ತ ನಿಗಿನಿಗೀ ಮಿಂಚುತ್ತ ರನ್ನದ ಬುಟ್ಟಿಯ ಕೊಂಕಳಲಿಟ್ಟು ಧಿಗಿಧಿಗಿಯೆಂದು ನೃತ್ಯವನ್ನಾಡುತ್ತ ಎತ್ತರದಲಿ ಪ್ರತಿಫಲಿಸುವ ಮುತ್ತಿನಹಾರ ಉರದೊಳಲ್ಲಾಡುತ ನಿಜಭಾಜ ಮಾರ್ತಾಂಡ ಮಂಡಲ ಮಂಡಿತಾ ಪ್ರಭು ಪ್ರತಿಮ ದಿಶದಿಶ ವಿಲಸಿತವಾದ ಭುಜಕೀರ್ತಿಯಿಂದೊಪ್ಪುವ ಆಕರ್ಣಾಂತ ಸುಂದರ ಇಂದೀವರದಳಾಯತ ನಯನ ನೋಟಗಳಿಂದ ಚಂಚಲಿಸುವ ಮಿಂಚಿನಂತೆ ಮಿಂಚುವ ಕಾಂತೀ ಸಂಚಯಾಂಚಿತ ಕಾಂಚನೋದ್ದಾಮ ಕಾಂಚೀ ಪೀತಾಂಬರಾವಲಂಬನಾಲಂಬಿತಾ ನಿತಂಬದಿಂದೊಪ್ಪುವ ಝೇಂಕರಿಸುವ ಭೃಂಗಾಂಗನಾಸ್ವಾದಿತ ಜಗುಳುವ ಜುಗುಳಿಸುವ ಪರಿಮಳಿಸುವ ಜಘನ ಪ್ರದೇಶಗಳಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತ ನಿತಾಂತಕಾಂತಿಕಾಂತಾ ಸುಧಾಕುಂತಳ ಸಂತತಭರದಿಂದೊಪ್ಪುವ ಪುಂಜೀಕೃತ ಮಂಜುಭಾಷಣ ಅಪರಂಜಿ ಬಳ್ಳಿಯಂತೆ ಮನೋರಂಜಿತಳಾದ ಕೊರವಂಜಿಯು ನಿಶ್ಶಂಕೆಯಿಂದ ಕಂಕಣಕ್ಷಣತೆಯಿಂದ ಕೊಂಕಳ ಬುಟ್ಟಿಯ ಪೊಂಕವಾಗಿ ತನ್ನಂಕದಲ್ಲಿಟ್ಟುಕೊಂಡು ಬೆನ್ನಸಿಂಗನ ಮುಂದಿಟ್ಟು ಚೆಂದವಾಗಿ ರುಕುಮಿಣಿ ದೇವಿಯ ಕೊಂಡಾಡಿದಳು.
ಗದ್ಯ :ಅವ್ವವ್ವ ಏಯವ್ವ ಕೈಯ್ಯ ತಾರೆ ಕೈಯ್ಯ ತೋರೆ ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡ್ಹಾಗೆ ಪೇಳುವೆನವ್ವಾ.
ಗದ್ಯ :ಬ್ರಹ್ಮಾಣಿ ಸುರಾಗ್ರಣೀ ಸಕಲ ಸುಜನಾಂಬುಜದ್ಯುಮಣಿ ಕಲ್ಯಾಣಿ ಗುಣಮಣೀ ಕೋಗಿಲಾಲಾಪವಾಣೀ ಅಂಗನಾಮಣೀ ಶಿಖಾಮಣಿ ಏನೇ ರುಕುಮಿಣಿ ನಿನ್ನ ಚೆಲುವಿಕೆಯನೇನೆಂತು ಬಣ್ಣಿಪೆ.
ಗದ್ಯ : ತೆರೆದ ಕನ್ನಡಿಯಂತೆ ಥಳಥಳಿಸುವ ನಿನ್ನ ಮುಖಚಂದ್ರಜ್ಯೋತಿ-ನೀಲದ ಕಾಂತಿಯಂತೆ ದಿವ್ಯವಾದ ನಿನ್ನ ಕುಂತಳ ಸಂತತಿ ಬಾಲಚಂದ್ರನ ಸೋಲಿಸುವ ನಿನ್ನ ಪಟುವಾದ ದಿವ್ಯ ಲಲಾಟಫಲಕ ಏರಿದ ಬಿಲ್ಲ ನಿರಾಕರಿಸುವ ನಿನ್ನ ಹುಬ್ಬುರೆಪ್ಪೆಯುಗಳ ಎರಳೆಕಂಗಳ ತಿರಸ್ಕರಿಸುವ ನಿನ್ನ ಕಣ್ಣುನೋಟ ಮದನ ಚಕೋರನಿದಿರಿಸುವ ನಿನ್ನ ಕರ್ಣೋತ್ಪಲ ಸರಸಸಂಪಿಗೆ ಮೊಗ್ಗೆಯ ಸೋಲಿಸುವ ನಿನ್ನ ನಾಸಾಮಣೀ ಸುವರ್ಣ ಮರ್ಯಾದೆಗಳ ಧಿಕ್ಕರಿಸುವ ನಿನ್ನ ಗಲ್ಲಯುಗಳ ಕುಂದಕುಟ್ಮಲಗಳ ಮೋಹಿಸುವ ನಿನ್ನ ದಂತಪಂಕ್ತಿಯುಗಳಾ ಖಂಡ ಸಕ್ಕರೆಯಿಂದಧಿಕ ರಸವಾದ ನಿನ್ನ ಅಧರಬಿಂಬ ಭಕ್ತರ ಮನದ ಅಜ್ಞಾನವ ನಿರಾಕರಿಸುವ ನಿನ್ನ ಮುಗುಳುನಗೆಚಂದ್ರಿಕೆ ಹಚ್ಚೆಬೊಟ್ಟಿನಿಂದೊಪ್ಪುವ ನಿನ್ನ ಶುಭ ಚುಬುಕಾಗ್ರ ಮದನಕಂಬುಕಂಠಕೆ ಹೆಚ್ಚಿದ ನಿನ್ನ ಕಂಬುಕಂಠ ಕರಿಕರವು ಮೀರದ ನಿನ್ನ ದಿವ್ಯಭೂಷಣ ಕರಯುಗಳ ದಂತಿಕುಂಭಸ್ಥಳಗಳ ನಿರಾಕರಿಸುವ ನಿನ್ನ ಕುಚಕುಂಭಯುಗಳ ಹಾರ ರೋಮಾವಳಿಯಿಂದೊಪ್ಪುವ ನಿನ್ನ ನಾಭಿತ್ರಿವಳೀ ನವಮೇಘವನೆ ಸೋಲಿಸುವ ನಿನ್ನ ಸೀರೆ ರತ್ನ ಮೇಖಲಾ ಘಂಟೆ ಕಿಂಕಿಣೀ ಕಿಣಿಕಿಣೀಯೆಂಬ ಶಬ್ದದಿಂದೊಪ್ಪುವ ನಿನ್ನ ಕಟಿಯು ಪುಟ್ಟ ಬಾಳೆರೆಂಬೆಯನಿವ (ವಾ?) ಳಿಸುವ ನಿನ್ನ ಊರುಯುಗಳ ಎರಡು ನವರತ್ನ ಖಚಿತಕನ್ನಡಿಗಳ ಧಿಕ್ಕರಿಸುವ ನಿನ್ನ ಜಾನುಯುಗಳ ಹಸ್ತದಂತದಂಡವಲೀಯೆಂಬ ನಿನ್ನ ಗುಲ್ಫಯುಗಳ ಕೆಂದಾವರೆಯಿರವ ಝಲ್ಲನೇ ಮೋಹಿಸುವ ಪಾದಪದ್ಮಯುಗಳ ಸುಂದರಿಯಲ್ಲವೊ ರತಿಗನುಕೂಲವಾದ ಮನೋರಥದ ಗಿಣಿಯೋ ಇದು ಗಿಣಿಯಲ್ಲ ಇದು ಗಿಣಿಯಲ್ಲ ರಾಯರು ಮೆಚ್ಚಿದ ಹೆಚ್ಚಿನ ಪ್ರತಿಮೆಯೊ ಇದು ಪ್ರತಿಮಲ್ಲ ಇದು ಪ್ರತಿಮಲ್ಲ ಘನ್ನ ಹೆಚ್ಚಿದ ಮಿಂಚೊ ಇದು ಮಿಂಚಲ್ಲ ಇದು ಮಿಂಚಲ್ಲ ನವಲಾವಣ್ಯದ ಖಣಿಯೋ ಇದು ಖಣಿಯಲ್ಲ ಘಮ್ಮನೆ ಘಮ ಘಮಿಸುವ ಕನ್ನೈದಿಲ ಪುಷ್ಪದ ಚಂಡೊ ಇದು ಚಂಡಲ್ಲ ಇದು ಚಂಡಲ್ಲ ಹೀಗೆಂದು ಅಂಗನಾಮಣಿಗಳೊಳಗೆ ಅಮಿತ ರಸಶೃಂಗಾರದಿಂದೊಪ್ಪುವ ನಿನ್ನ ಕೀರ್ತಿಯ ಕೇಳಿ ಬಂದೆನಮ್ಮಾ
ಅಂಗ ವಂಗ ಕಳಿಂಗ ಕಾಶ್ಮೀರ ಕಾಂಭೋಜ
ಸಿಂಧೂ ದೇಶವನೆಲ್ಲ ತಿರುಗಿ ಬಂದೆನಮ್ಮಾ ೧೬
ಮಾಳವ ಸೌರಾಷ್ಟ್ರ ಮಗಧ ಬಾಹ್ಲೀಕಾದಿ
ಚೋಳ ಮಂಡಲವನೆಲ್ಲ ಚರಿಸಿ ಬಂದೆನಮ್ಮಾ೧೭
ಲಾಟ ಮರಾಟ ಕರ್ಣಾಟ ಸೌಮೀರಾದಿ
ಅಶೇಷ ಭೂಮಿಯ ನಾನು ನೋಡಿ ಬಂದೆನಮ್ಮಾ ೧೮
ಶ್ಲೋಕ || ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚಿ
ಅವಂತಿಕಾಪುರೀ ದ್ವಾರಾವತೀ ಚೇದಿ||
ಇವು ಮೊದಲಾದ ಪುಣ್ಯಪುರಗಳೆಲ್ಲ
ಮೆಚ್ಚಿ ಬಂದ ಕೊರವಿ ನಾನಮ್ಮ
ಪುರಗಳಿಗೆ ಹೋಗಿ ನರಪತಿಗಳಿಗೆ
ಸಾರಿ ಬರ ಹೇಳಿ ನಾ ಕಪ್ಪವ ತಂದೆ ೧೯
ಸತ್ಯಮುಗಾ ಚೆಪ್ಪುತಾನಮ್ಮಾ ಸಂತೋಷಮುಗಾ ವಿನುವಮ್ಮ
ಸತ್ಯ ಹರುಶ್ಚಂದ್ರನಿಕಿ ಚಾಲ ಚೆಪ್ಪಿತಿ ೨೦
ಕನ್ನೆ ವಿನವೆ ನಾ ಮಾಟ ನಿನ್ನ ಕಾಲಂನೆ ನೇನಿಕ್ಕು(?)
ಚಿನ್ನ ಸಿಂಗಾನೀ ತೋಡೂನೆ ಚೆಪ್ಪ್ಪೆಗಮ್ಮಾನೇ ೨೧
ಗದ್ಯ :ಆಗ ರುಕುಮಿಣಿದೇವಿಯು ಚಿತ್ರವಿಚಿತ್ರ ಚಿತ್ತಾರ ಪ್ರತಿಮೋಲ್ಲಸಿತ ತಪ್ತ ರಜತರಂಜಿತಸ್ಫಟಿಕ ಮಣಿಗಣ ಪ್ರಚುರ ತಟಿಕ್ಕೋಟಿ ಜ್ವಾಲಾವಿಲಸಿತವಾದ ವಜ್ರಪೀಠದಲಿ ಕುಳಿತು ಚಿನ್ನದ ಮೊರಗಳಲ್ಲಿ ರನ್ನಗಳ ತಂದಿಟ್ಟುಕೊಂಡು ಕೊರವಂಜಿಯನೆ ಕುರಿತು ಒಂದು ಮಾತನಾಡಿದಳು.
ತಲ್ಲಿ ನಾ [ಅ] ಭೀಷ್ಟಮುಲೆಲ್ಲ ತಾಕ್ಕ್ರ್ಕಣ್ಯಮುಗಾ ಚರ್ಪಿತಿನಿಕ್ಕು
ವೊಲಿಸೀನ ಸೊಲ್ಮೂಲೆಲ್ಲ ವನಿತೆನೆ ನಿಂತೂ(?) ೨೨
ಗದ್ಯ : ಆಗ ರುಕುಮಿಣಿದೇವಿಯಾಡಿದ ಮಾತ ಕೇಳಿ ಕೊರವಂಜಿಯುಯೇ-ನೆಂತೆಂದಳು.
ನೆನೆಸಿಕೊ ನಿನ್ನಭೀಷ್ಟವ ಎಲೆ ದುಂಡೀ ನೆನೆಸಿಕೊ
ವನಿತೆ ಶಿರೋಮಣಿಯೆ ಘನಮುದದಿಂದ ನೆನೆಸಿಕೊ ೨೩
ರನ್ನೆ ಗುಣಸಂಪನ್ನೆ ಮೋಹನ್ನೆ
ಚೆನ್ನಾಗಿ ಮುರುಹಿಯ ಮಾಡಿ ನೆನೆಸಿಕೊ ೨೪
ಗದ್ಯ :ಕಲ್ಯಾಣಿ ಪರಮಕಲ್ಯಾಣಿ ರುದ್ರಾಣಿ ಅಂಬಾ ಜಗದಂಬಾ ಮಹಾದೇವೀ ಮಹಾಲಕ್ಷ್ಮೀ ಕಾಳಿಂದೀ ಮಾಧವೀ ಸರಸ್ವತೀ ಪಾಂಡುರಂಗ ಕಸ್ತೂರಿರಂಗ ಬಿಂದು ಮಾಧವ ಸೇತುಮಾಧವ ವೀರರಾಘವ ಚಿದಂಬರೇಶ್ವರ ಅರುಣಾಚಲೇಶ್ವರ ಪಂಚನದೇಶ್ವರ ಶ್ರೀಮುಷ್ಣೇಶ್ವರ ಉಡುಪಿನ ಕೃಷ್ಣ ಮನ್ನಾರು ಕೃಷ್ಣ ಸೋದೆ ತ್ರಿವಿಕ್ರಮ ಬೇಲೂರು ಚೆನ್ನಪ್ರಸನ್ನ ವೆಂಕಟೇಶ್ವರ ಸೂರ್ಯನಾರಾಯಣ ಇವು ಮೊದಲಾದ ದೇವತೆಗಳೆಲ್ಲ ಎನ್ನ ವಾಕ್ಯದಲಿದ್ದು ಚೆನ್ನಾಗಿ ಸಹಕಾರಿಗಳಾಗಿ ಬಂದು ಪೇಳಿರಯ್ಯಾ
ಮಂಗಳದ ಕೈಯ್ಯ ತೋರೇ ಎಲೆದುಂಡೀ
ಬಯಸಿದೆಲ್ಲವನು ನಾನು ಪೇಳುವೆನು
ಕೈಯ ತೋರೆ ಕೈಯ ತೋರೆ ೨೫
ಕೇಳೆ ರನ್ನಳೆ ಎನ್ನ ಮಾತ ಬೇಗ
ಇಳೆಯರಸನಾದನು ಪ್ರಿಯ೨೬
ಕಳಸಕುಚಯುಗಳೆ ಚಿಂತೆ ಬೇಡ ನಿನ್ನ
ಕರೆದಿಂದು ಕೂಡ್ಯಾನು ರಂಗ ೨೭
ನಾಡಿನೊಳಧಿಕನಾದ ನಾರಾಯಣನ
ಈಡಿಲ್ಲದ ಪತಿ ನೀನು ಮಾಡಿ
ಕೊಂಡೆನೆಂದು ಮನದಲ್ಲಿ
ನೆನಸಿದೆ ಕಂಡ್ಯಾ ನಮ್ಮ ಕೃಷ್ಣ ಕುತೂಹಲದಿ ೨೮
ಅಲ್ಲವಾಡು ವಚ್ಚೀ ಕೂಡೇನಮ್ಮ ಇಂದುಬಿಂಬಮುಖೀ
ಸುಂದರಶ್ಯಾಮ
ಅಲ್ಲಿ ನಂದಾ ನಂದಾನಾಡುವಾನಂದಮುಗಾವಚ್ಚಿ ಕೂಡೇನಮ್ಮಾ ೨೯
ಶಂಖಚಕ್ರಯುಗಲ
ಪಂಕಜನಾಭುಂಡು ಪಂಕಜಮುಖೀ ನೀವು
ಪ್ರಾಣಿಗ್ರಹಣಮು ಚೇಸಿ ಕೂಡೆನಮ್ಮಾ ೩೦
ಚೆಲುವಾ ನಾ ಮಾಟಾ ನೀಕು ಪುಚ್ಚಾ
ಚೆಲುವಾ ನಾ ಮಾಟ
ಕಲ್ಲಗಾದು ನಾ ಕಣ್ಣೂಲಾನೂ
ಪಿಲ್ಲ ವಿನುವಮ್ಮ ಪಲ್ಲವಪಾಣೀ ಚೆಲುವಾ ನಾ ಮಾಟ ೩೧
ದಮಯಂತೀಕೀನೇ ಚೆಪ್ಪಿತಿ ನಮ್ಮವೆ ಮಾಟ
ಅಮರುಲಕೆಲ್ಲಾ ಅನುಮೈನವಾಡು ಚೆಪ್ಪೀ
ಅಮಿತ ಬಹುಮಾನಾಮಂದೀತೀನಮ್ಮಾ
ಚೆಲುವ ನಾ ಮಾಟ ಚೆಲುವ ೩೨
ಬಂತೆ ಮನಸಿಗೆ ನಾ ಹೇಳಿದ್ದು ಚಿಂತೆ
ಸಂತೋಷದಿ ನಾನಾಡಿದ ಶಾಂತ
ಮಾತೆಲ್ಲ ಇದು ಪುಸಿಗಳಲ್ಲ
ಬೇಗ ಬಂದಾನೋ ನಲ್ಲಾ ಆಹಾ
ಆಹಾ ಬಂತೇ ಮನಸ್ಸಿಗೆ

Leave a Reply

Your email address will not be published. Required fields are marked *