Categories
ರಚನೆಗಳು

ವಾದಿರಾಜ

೨೬೨
ಸುಳಾದಿ
ಧ್ರುವತಾಳ
ಬೊಮ್ಮನಿಮ್ಮ ಹೆಮ್ಮೆಗಿಮ್ಮೆ ಸುಮ್ಮನೆ ಕಮ್ಮುಕಿಮ್ಮೆನ್ನಬೇಡ
ರಮ್ಯ ರಮೇಶ ಹಯವದನ ಅಮ್ಮಮ್ಮ ನಿಮ್ಮ ಗುರುವಲ್ಲದೆ
ಹಮ್ಮು ಉಮೇಶ ನಿಮಗೆ ಪರಬೊಮ್ಮವಿದಿರದಮ್ಮಯ್ಯ
ನೆಮ್ಮಿ ಇವನ ಧರ್ಮದಿಂದ ಭಸುಮ್ಮಾಸುರನ ಗೆಲ್ಲೆಯ
ತಮ್ಮ ತಮ್ಮ ಸೀಮೆಯೊಳ್ಮಿಕ್ಕ ಸುಮ್ಮನಸರ ಸಮ್ಮೋಹವನು
ಕ್ರಮಕ್ರಮದಿಂದಾಳ್ದ ಹರಿಗೆ ಸಮರಾದವರ ಮಹಿಯೊಳು ಕಾಣೆನು
ಸನ್ಮುನೀಂದ್ರರಮರ ಸ್ತೋಮದಿ ವರ್ಮವರಿತು ಹರಿಯೆ ಸರ್ವೋ-
ತ್ತ್ತುಮ್ಮ ಮಹಾಮಹಿಮನೆಂಬದನೊಳ್ಮನವಿಟ್ಟು ನಮಿಸರೆ
ಆಮ್ನಾಯಾರ್ಥದ ಸೊಮ್ಮು ನಮ್ಮ ಕಾಮನಯ್ಯನೆಂಬುದು
ನಿರ್ಮಲ ಮಾರ್ಗವಿದೆ ಮಿಕ್ಕಿನ ದುರ್ಮತ ಭ್ರಮೆಯ ಮತ ೧
ಮಠ್ಯತಾಳ
ಪದ್ಮನಾಭನ ನಾಬಿಯಿಂದುದ್ಭವಿಸಿದ್ದ ಕಾರಣ
ಪದ್ಮಜನೆಂಬ ಪೆಸರು ಪ್ರಸಿದ್ಧ ಪ್ರಸಿದ್ಧವಲ್ಲವೆ ಬೊಮ್ಮಗೆ
ಬುದ್ಧನಾಗಿ ಪುರದ ಸತಿಯರಿಗೆ ಕುಬುದ್ಧಿಯನು ಪೇಳ್ದಕಾರಣ
ಮುದ್ದುಗೋವಾಗಿ ಪುರದ ಕೂಪದೊಳಿದ್ದ
ಸುಧೆಯ ನೀಂಟಿದನಾಗಿಯು ಬಿದ್ದರಥನೆತ್ತಿದೆತ್ತಿದನ ಪ್ರ-
ಸಿದ್ಧದಿಂದ ರುದ್ರ ಗೆದ್ದಗಡ ಸಿದ್ಧವಂದ್ಯ ಹಯವದನ್ನಗೆ ಉ-
ಳಿದ್ದ ಸುರರು ಸರಿಯೆ ನೋಡಿರೊ೨
ರೂಪಕತಾಳ
ಇಂದ್ರಗೆ ರಾಜ್ಯ ಉಪೇಂದ್ರ ತಂದುಕೊಡನೆ
ಮಂದರಗಿರಿಯೆತ್ತಿ ವೃಂದಾರಕ ವೃಂದಕ್ಕೆ
ಅಂದು ಸುಧೆಯನುಣಿಸಿದ ದೇವದಾನವ
ಎಂದು ನೆನೆದು ಮನದ ಸಂದೇಹವ ಕಳೆಯಿರೊ
ಇಂದಿರಾದೇವಿ ಹಯವದನನ ಹೊಂದಿದಳಾಗಿ
ಎಂದೆಂದು ನಮ್ಮ ಶ್ರೀ ಮುಕುಂದನೆ ಪರದೈವ ೩
ಝಂಪೆತಾಳ
ವಿಷ್ಣೋರ್ನು ಕಂ ಪೀರ್ಯಾಣಿಯೆಂಬ ಶ್ರುತಿಯ
ಕೃಷ್ಣೋ ಮುಕ್ತೈರಿಜ್ಜ್ಯತೇಯೆಂಬ ಸ್ರ‍ಮತಿಯ
ಸ್ಪಷ್ಟವಾದಥರ್ವ ನೀವೆ ವಿಚಾರಿಸಿರೊ
ವೃಷ್ಣಿವಂಶದಿ ಪುಟ್ಟಬೇಕೆಂದು ದೇವಕಿಯ
ಪೊಟ್ಟೆಯೊಳಿದ್ದಾಗ ಹಯವದನದೇವಗೆ ಪೊಡ-
ಮಟ್ಟು ತುತಿಸಿದ ಬೊಮ್ಮಾದ್ಯರ ಕೇಳಿರೊ ೪
ಆದಿತಾಳ
ಮತ್ತಃ ಪರತರಂ ನಾಸ್ತಿಯೆಂಬ ಕೃಷ್ಣ-
ನುಕ್ತಿಯ ನೋಡಿರೋ ಪುರು-
ಷೋತ್ತಮನು ತಾನೆಂಬ ಮತ್ತೊಂದು ವಚನದರ್ಥವ
ವಿಚಾರಿಸಿರೊ ಸ-
ರ್ವೋತ್ತಮನು ಹರಿಯೆಂದು ಮನಕೆ ತಂದುಕೊಳ್ಳಿರೊ
ಪಾರ್ಥನಿಗೆ ಹಯವದನ ತೋರ್ದ ವಿಶ್ವರೂಪದಲಿ
ಸುತ್ತಮುತ್ತಿಹ ಸುರರ ತತಿಯ ನೋಡಿ ನಂಬಿರೊ ೫
ತ್ರಿಪುಟತಾಳ
ಶಿಶುವ ಕಟ್ಟಬೇಕೆಂದು ಮನೆಮನೆಯ ಪಾಶವ
ಯಶೋದೆ ತಂದು ತಂದು ಬೇಸರಳೆ ಲೋಕವರಿಯೆ
ವಿಷವನೂಡಲು ಬಂದ ಪೂತನಿಯ ಕೊಂದನಾ ದಿ-
ವಸವೆ ನೋಡಿರೊ ಇವ ಹೊಸಬಗೆಯ ಹಸುಳೆ
ಅಸಮ ಗೋವರ್ಧನಗಿರಿಯನೆತ್ತಿದವ ಮಾ-
ನಿಸನೆ ನಮ್ಮ ಹಯವದನ ದೇವೋತ್ತಮ ೬
ಅಟ್ಟತಾಳ
ಗೋವಾಗಿ ಭೂಮಿದೇವಿ ಬೊಮ್ಮನಿಗೆ ತನ್ನ
ನೋವ ಪೇಳಬೇಕೆಂದು ಹರನ ಕರೆಸಿಕೊಂಡು
ದೇವರೆಲ್ಲರು ಕೂಡಿ ಕ್ಷೀರಾಂಬುಧಿಯೊಳಗೆ
– – – – – – – – – -ಬೇಡಿಕೊಳ್ಳನೆ
ಈವ – – – – -[ಹಯ] ವದನನೆ ಸರ್ವದೇವರಿಗೆ
ದೇವನೆನ್ನು ಶ್ರುತಿ ಸ್ರ‍ಮತಿ – – – – – – ೭
ಆದಿತಾಳ
– – – ಚಂದ್ರಮೌಳಿಯೆಂದು ಮುಕುಂದ ನಿಂದವಗೆ
ವಂದಿಸಿದ ನಿಂದಿಸಿದನೆಂಬ ಮಾತನಂಬದಿರೊ
ವಂದ್ಯ ಹಯವದನ ತನ್ನ ನಿಂದಿಸಿ ಖಳರ
ವೃಂದ ವಂಧಂತಮಕ್ಕೈದಲೆಂದೀಯಂ[ದ]ದಾಟವನಾಡುವ ೮
ಏಕತಾಳ
ಆವನ ಪದವು ಕಟಹವನೊಡೆಯಿತು
ಆವನ ಪದ ವಿಧಿಯಿಂದ ಪೂಜಿಸಿಕೊಂಡಿತ್ತು
ಆವನ ಪಾದೋಕವನು ಶಿವ ಶಿರದ ಮೇ-
ಲಾವಾಗಧರಿಸಿ ಪಾವನನೆನಿಸಿದ ಗಡ
ಶ್ರೀವರ ಹಯವದನಗೆ ಸರಿಯಪ್ಪವ
ನಾವ ಚತುರ್ದಶ ಭುವನದೊಳೆಲೆ ಜೀವ ೯
ಜತೆ
ಇನ್ನೊಂದು ದೈವವಿದ್ದರೆ ನಮ್ಮ ದೇವನಂತೆ ಕಸ
ಕಗ್ಗೆಲೆಯ ಮೇಲಾದರು ಲಯದಲಿರಬೇಡವೆ

 

೨೦೩
ಸುಳಾದಿ
ಧ್ರುವತಾಳ
ಮುಂದೆ ನೃಸಿಂಹ ನಮ್ಮತ[ಟ]ಕ್ಕೀಗಬಂದ ವ್ಯಸನಗಳ ಬೇಗದಿ ಖಂಡಿಸಯ್ಯತಂದೆ [ಹಿಂದೆ] ನೊಂದಿರ್ದ ಕಂದನ ಕಾಯ್ದಂತೆಇಂದೆನ್ನ ಕಾಯಬೇಕು ವೃಂದಾರಕಸ್ವಾಮಿನಂದಕುಮಾರ ನೀನು ಹಿಂದೆ ಚಕ್ರವಿಡಿದುಇಂದ್ರನತನಯಗೆ ಅಂದಂದು ಬರುತಿಪ್ಪದಂದುಗವ ಬಿಡಿಸಿ ಚಂದದಿ ಕಾಯ್ದಂತೆಎಂದೆಂದು ಎಡರನು ತಪ್ಪಿಸಿ ಕಾಯಬೇಕುಇಂದೀವರ ಶ್ಯಾಮಲ ಒಂದು ಭಾಗದಿ ರಾಮಚಂದ್ರ ಸೂರ್ಯನ ಬಂಧು ಸಿಂಧು ಬಂದವಿಹಾರಮುಂದೆ ನೃಸಿಂಹ ಇಂದಿರೇಶನ ಕಿತ್ತು ಕಠಾರಿಯಲ್ಲಿವೃಂದವ ಕೊಂದು ಕೊಂದು ನಂದಿವಾಹನಪ್ರಿಯಒಂದು ಭಾಗದಿ ನಿಂದು ಮಂದಜಾಸನನಯ್ಯಇಂದು ನಿನ್ನ ಹನುಮ ಕಂದರ್ಪನ ಗೆದ್ದವಹಿಂದೆ ಬಾರದಂತೆನ್ನ ಸಲಹಬೇಕಯ್ಯಮಂದರಗಿರಿಧರವಂದ್ಯ ಹಯವದನ್ನಸಂದೇಹದೂರ ತತ್ವಸಂದೇಹವ ಬಿಡಿಸಿಇಂದೆನ್ನ ಮನದಿ ನಿಂದು ನೀ ಸಲಹಯ್ಯಕುಂದಿಲ್ಲದ ಸರ್ವೇಶ ತೋರಿ ಹರಿಯನೆಮಂದಮತಿ ಎತ್ತಿ ದಯ ಕೃಪೆಯಿಂದ ಮನದಿನಿಂದು ಮುಂದೆ ನೃಸಿಂಹ ೧

ಮಠ್ಯತಾಳ
ಶ್ರವಣ ಮನನ ಧ್ಯಾನದಿರವನು ಭುವನಪವನ ಎನ್ನ ಮನದಲ್ಲಿ ಬರಿಸಯ್ಯದಿವಿಜರಾಯ ನಿನ್ನ ತೋರಿಸೊಸವೆಯದ ಕರ್ಮದ ದಾರಿಯ ಬಿಡಿಸೊದಿವಿಜ ಆಆಆ ಮಾಯೆಯ ತೊಲಗಿಸಯ್ಯದಿವಿಜ ಜನನ ಮರಣ ಮಾರ್ಗವ ತಪ್ಪಿಸಿ ಹ-ಯವದನ ಉತ್ಕಾಂತ್ರಿಯ ಪಥದಲ್ಲಿ ನಡೆಸೊ ೨

ಧ್ರುವತಾಳ
ಆರ್ಜಿರಾದಿ ಮಾರ್ಗವ ಪೊಗೆ ವಾಯುದೇವರುಹೆಚ್ಚು ಕುಂದನು ನೋಡಿ ಅಪ್ರತೀಕಾಲಂಬನರಅಚ್ಚುತನಿಂದಲಿದ್ದವ ಬಚ್ಚಿಟ್ಟು ಪ್ರತೀಕಾಲಂಬನರ ವಿ-ರಿಂಚರ ಇಚ್ಛೆಯಲಿರಿಯೆಂಬರುಮುಚ್ಚಿಕೊಂಡಿಹ ಲಿಂಗಶರೀರ ಹಯವದನಮೆಚ್ಚಿ ವಿರಜೆÉಯಲ್ಲಿ ಕೊಚ್ಚುವರೆಲ್ಲರು ಅಚ್ಚುತ ೩

ರೂಪಕತಾಳ
ಸಾಯುಜ್ಯ ಸಾಲೋಕ್ಯ ಸಾಮೀಪ್ಯವೆಂದುಸಾರೂಪ್ಯದಿ ಮುಕ್ತಿಯೋಗ್ಯರಿಗಪ್ಪುದುಯುಜಿರ್ಯೊಗೇಯೆಂಬ ಧಾತುವ ಪೇಳಲುಶ್ರೀಹರಿಯೊಳೈಕ್ಯಬಾರದುಯೆಂದೆಂದುಶ್ರೀವರಾಹ ಹಯವದನನಾಣೆ ಶ್ರೀವರಪುರುಷೋತ್ತಮನೆಂಬ ನಾಮವ ನೋಡಿರೊ ೪

ಝಂಪೆತಾಳ
ಅಲ್ಲಿ ಜಗದ್ವ್ಯಾಪಾರವು ವಜ್ರ್ಯಯೆಂದೆಂದುಬಲ್ಲಿದ ಹರಿಯ ಮಹಿಮೆ ಮುಕ್ತರಿಗೆಸಲ್ಲದಾಗಿ ಬಲ್ಲವರು ಗುರುವ್ಯಾಸನಚೆಲ್ವಸೂತ್ರವ ನೋಡಿ ಮನದ ಭ್ರಮೆಗಳ ಬಿಡಿರೊಜಲಜಾಕ್ಷನ ಮುಕ್ತಚರಿತ್ರೆ ಮುಕುತರಿಗೆಸಲ್ಲದಾಗಿ ಹಯವದನ ಹರಿ ಸರ್ವೇಶ್ವರನು ೫

ತ್ರಿಪುಟತಾಳ
ವೃದ್ಧಿಹ್ರಾಸಗಳಲ್ಲಿ ಜನನ ಮರಣವಿಲ್ಲಶುದ್ಧಸದಾನಂದ ಒಪ್ಪುವುದೆಂದೆಂದುಸ್ವಾದನ್ನಗಳನುಂಬರು ಇದ್ದ ಸುಖವ ತೋರುವುದೈಸೆ ಬೇರೊಂದು ಸುಖ ಉದ್ಭವಿಸದು ನೀವೆಲ್ಲ ನೋಡಿರೊಹೃದ್ಯ ಹಯವದನ ಎಲ್ಲ ಮುಕ್ತರೊಡೆಯಪದ್ಮಭವಾದ್ಯರು ಅಲ್ಲಿಯು ಗುರುಗಳು ೬

ಅಟ್ಟತಾಳ
ಅಲ್ಲಿ ಬಹಳ ಸೇವೆಯ ಮಾಡಿದವರಲ್ಲಿಅಲ್ಲಿಯು ಗುರುಗಳೆಂಬುದು ಯುಕ್ತಿಸಿದ್ಧಬಲ್ಲವರೆಲ್ಲ ನೀವೆ ನೋಡಿರೊಅಲ್ಲದಿದ್ದರೆ ಕೃತ ಅನ್ಯಕೃತಾಗಮಎಲ್ಲಿ ಪೋದರು ಬಿಡದೆಂಬುದು ಸಿದ್ಧಫುಲ್ಲನಾಭ ಹಯವದನಗೆ ವೈಷಮ್ಯಸಲ್ಲದಗೀವನು ಸರಿಫಲವೀವನು ೭

ಏಕತಾಳ
ಮನುಜವೇಷಸಮ ಬಭೂವಯೆಂಬ ನಿಗಮವಮನಕೆ ನೀವೆಲ್ಲ ತಂದುಕೊಳಿರೊಚಿನುಮಯ ವಾದ ಸಜ್ಜನರು ಮುಕ್ತಿಕಾಲದಿಹೀನೋಚ್ಚ ಭಾವವಿದ್ದರು ಗುರುಶಿಷ್ಯರಂತೆ ಮತ್ಸರವನು ಕಳೆದುಅನುಕೂಲ ಸ್ತ್ರೀಯರಿಗೆ ಪತಿಸೇವೆ ಘನವಲ್ಲವೆಘನಮಧ್ವಪತಿಮತಹಯವದನ ಮೆಚ್ಚುವ ಮತ ೮

ಜತೆ
ಹರಿಯೆ ಸರ್ವೋತ್ತಮ ಸುರರೆಲ್ಲ ಗುರುಗಳುಸಿರಿಹಯವದನನೆ ಮಧ್ವಾಚಾರ್ಯರ ದೇವ

 

೨೬೪
ಸುಳಾದಿ
ಧ್ರುವತಾಳ
ವನಜಸಂಭವಭವ ಸುರಪತಿ ಜಗಕೊಬ್ಬನೆ
ಸ್ವಾಮಿ ಸರ್ವಜ್ಞ ಮಹಮಹಿಮನು
ಇನಿತು ಜ್ಞಾನವ ಕೂಡಿ ಅತಿ ದೃಢವನೆ ಮಾಡಿ
ತನುವನಿತಾದಿ ವಿಷಯವ ಜರಿದು
ಅನೇಕ ಗುಣವಾಗಿ ಹರಿಯಲ್ಲಿ ನೆಲೆಗೊಂಡು
ಮನದ ನೇಹವೆ ಭಕ್ತಿಯಿಲ್ಲದಾವಗೆ ಆ-
ತನ ದುರ್ಗವೆನಿಪ ಮುಕ್ತಿಸ್ಥಾನ
ಅನಂತ ಯತ್ನವಿದ್ದರು ದೊರಕೊಳ್ಳದು
ತನ್ನ ಪ್ರಿಯರಿಗಲ್ಲದೆ ತನ್ನ ದುರ್ಗದಿ ನೆಲೆ-
ಮನೆಗಿಂಬುಗೊಡುವನೆ ನೃಪ ಮತ್ತೊಬ್ಬಗೆ ನಿದ-
ರ್ಶನವ ನೋಡು ಹಯವದನಭಕ್ತಿಯ ಮಾಡು ೧

ಮಠ್ಯತಾಳ
ಯುಕ್ತಿಯ ಬಲದಿಂದಲೆ ಪೇಳುವುದಲ್ಲ
ಭಕ್ತ್ಯಾತ್ಮನ ನ್ಯಾಯ ಶಕ್ಯ ಇದ್ದ್ಹಂಗೆ ಇದಂ ಗೀ-
ತೋಕ್ತಿಗಳನೆ ನೋಡು ಭಕ್ತೈಕಲಭ್ಯ
ಇತ್ಯಾಗಮಪ್ರಯೋಗ ಮತ್ತೊಂದು ನೀನಿನ್ನು ಬಯಸದೆ ಮನುಜ
ಭಕ್ತಿಯ ಮಾಡು ಹಯವದನನ ಚರಣದಿ ೨
ಧ್ರುವತಾಳ
ದ್ವೇಷದಿ ಚೈತ್ಯ ಮುಕ್ತನಾದೆನೆಂಬುಕ್ತಿ ಬಲು
ದ್ವೇಷವಿದ್ದರೂ ತನ್ನವರ ಬಿಡನೆಂಬುದು
ದ್ವೇಷಿಯ ಪೋಷಿಸೆ ಬಂತೈಸೆ ಭಕ್ತಿಯ ಮಹಿಮೆ
ದ್ವೇಷದಿಂದಲೆ ಮುಕ್ತಿಯೆಂಬುದಾತನ ಮತ
ಶ್ವಾಸಯದಲ್ಲಿ ನಿತ್ಯ ರತ ಆಸುರಕೃತ
ದ್ವೇಷವ ತಾಳಿ ಹಯವದನ ಕಾಯಿದನೆಂದು ೩
ರೂಪಕತಾಳ
ಸಾಧನಧ್ಯಾಯದಲ್ಲಿ ಪೇಳದ ಸಾಧನ
ವೇದವ್ಯಾಸಮುನಿಮತವೆಂತಪ್ಪುದೊ
ವಾದವ್ಯಾತಕೊ ನಿರ್ಣಯಗ್ರಂಥಗಳ
ಓದಿಸಲಿಲ್ಲ ನಿರ್ಣಯದಂತಿನ್ನು
ಓದಿಕೊ ಹಯವದನನಂಘ್ರಿಯೊಲುಮೆಗೆ
ವೇದಮಯವಾದ ಶ್ರೀ ಮಧ್ವಶಾಸ್ತ್ರವ ನಂಬು ೪
ಝಂಪೆತಾಳ
ದೈತ್ಯಕುಲದಲ್ಲಿ ಜನಿಸಿದ ಪ್ರಹ್ಲಾದನಿಗೆ
ಭಕ್ತಿಯಿದ್ದುದರಿಂದ ಮುಕ್ತಿಯಾಯಿತು ಗಡ
ಚಿತ್ರವೀತನ ಬಲದಿ ಪಾತಕಿ ಪಿತನಿಗೆ
ಮುಕ್ತಿ ಸೇರಿತು ಶುಕಮುನಿಪನೊರೆದ ಗಡ
ಭಕ್ತರಲ್ಲದೆ ಹಯವದನದ್ವೇಷಿ ಕೆಲರು
ಮುಕ್ತಿಪಥವೇರಿದರೆ ಸುತನ ಬಲವ್ಯಾತಕೆ ೫
ತ್ರಿಪುಟತಾಳ
ಮಾಮಾತ್ಮ ಪರದೇಹೇಷು ಹರಿಯೆಂದು
ಶ್ರೀಮದ್ಗೀತವಚನವ ಕಂಡು ಹರಿಯ ನೋಡಿ
ಸಾಮಾನ್ಯ ವಚನವೆಂದರ್ಥಗಳ
ಧೀಮಂತರೆಲ್ಲ ಯೋಜಿಸಿಕೊಳ್ಳರೆ
ತಾಮರಸಜನಕ ಹಯವದನ ಮ-
ತ್ತಾ ಮಗನಿಗೊಲಿದು ಖಳರನೆ ಕೊಂದ ೬
ಅಟ್ಟತಾಳ
ಹರಿಗುರುಗಳ ನಿಂದೆಯನು ಕೇಳಿ ಕೆರಳದ
ನರರಿಗೆ ಅಂಧತಮವಿಪ್ಪುದೆಂದು
ಒರೆದು ಹೇಳಿದ ಮುನಿ ನಿಂದ್ಯ ಮಾತ್ರದಿಂದಲೆ
ಪರಗತಿಯಹುದೆ ಅಕಟ ಪೇಳುವರೆ
ಸಿರಿ ಹಯವದನನ್ನ ಮೆಚ್ಚಿದವರ ಪಾದ-
ಕ್ಕೆರಗದ ನರ ಪುರಾಣವ ಕೇಳಲೇಕೆ ೭
ಏಕತಾಳ
ಭಕ್ತಿಯ ಮಾಡುವ ವಿಬುಧರ ಕೂಡಿ ವಿ-
ರಕ್ತಿಯ ಮಾಡುವ ಮುನಿಗಳ ಕೇಳಿಕೊ
ಹತ್ತ್ತೆಂಟು ಸಾವಿರ ವರುಷ ಪರಿಯಂತ
ನೆತ್ತಿಯನೂರಿ ತಪವನು ಚರಿಸಿಕೊ
ಹೊತ್ತ ಕಳೆಯದೆ ಹಯವದನನ ಪಾದ
ಭಕ್ತಿಯ ಮಾಡು ವಿಮುಕ್ತಿಯ ಪಡೆವರೆ ೮
ಜತೆ
ನಿತ್ಯತೃಪ್ತ ಹಯವದನ ದೇವೋತ್ತಮನೆ
ಭಕ್ತಿಯನಿತ್ತೆನ್ನ ಹತ್ತಿರ ಕರೆದುಕೊ

 

೨೬೫
ಸುಳಾದಿ
ಧ್ರುವತಾಳ
ವೇದಶಾಸ್ತ್ರ ಪುಸಿ ಪ್ರತ್ಯಕ್ಷವೆ ಮನವೆಂಬ
ವಾದ ನೋಡಿದ ತನ್ನ ಶಾಸ್ತ್ರವ ತಾನೆ ನೀಗಿದ
ಸ್ಯಾದೆಂಬ ವಾದಿಗೆ ನಾಶ್ಯವೆಂಬ ಮಾತು ಸಲ್ಲದಾಗಿ
ವಾದದಲ್ಲಿ ಪರರನಲ್ಲೆಂಬುದೆಂತಯ್ಯ
ಆದಿವಸ್ತುವನ್ನೆ ಶೂನ್ಯವೆಂಬ ವಾದಿ ತನ್ನಿಷ್ಟವ
ಸಾಧಿಸಿಕೊಡುವ ಕರ್ತು ಆರೆಂದೆಂಬನು ಬುದ್ಧಿಯ
ಹೋಮವೆ ಸಾಕು ದೈವ ಬೇಡವೆಂಬ
ವಾದಬೋಧೆಯನೆಲ್ಲ ಬುಸ್ಯಾಟಿಯ ಮಾಡಿದ
ಸೊದಗನದಿಂದಲಿ(?) ಪರಮಣುಗಳೆ ಜಗವ ಮಾಡಿದ
ವಾದಿಗಳ ಕುಂಬಾರರ ಕಾಣೆನೆ
ಮಾಧವನೆ ತಾನೆಂಬುವ ಮನೆಮನೆಗೆ ಪೋಗಿ
ಬಾರದ ಬವಣೆಯನ್ಯಾಕೆ ಬರಿಸಿಕೊಂಬಾ
ವೇದಶಾಸ್ತ್ರ ಕ್ರೋಧ ಮದ ಮತ್ಸರವ ಕಳೆದು
ಕೋವಿದರಿಗೆ ಆದುದ ಪೇಳದಾರೈಸೆ ದೂಷಕನಲ್ಲ
ಶೋಧಕರೆಲ್ಲ ನೋಡಿ ಗುಣಬಲ್ಲ ಜಾಣು ಬಲು
ಸ್ವಾದುರಸ ದೊರಕಲು ಸವಿಸಬೇಕು
ಶ್ರೀ ಧರೆಯನಾಳ್ದ ವಿದ್ಯಪ್ರದ ಹಯವದನನ
ಪಾದವ ಸೇರಿದರೈಸೆ ಇಹ ಪರ ತಪ್ಪದು ೧
ಮಠ್ಯತಾಳ
ಬೊಮ್ಮನಿಷ್ಟವ ಮಾಡಿದ ಸುಮ್ಮನಸರ ಸುಧೆಯನೂಡಿದ
ಇಮ್ಮನೆಯ ಶಿಶುವ ಪೊರೆದ ವಾಮನ ರಾಮನೆನಿಸಿ ಮೆರೆದ
ನಮ್ಮ ಸ್ವಾಮಿ ಹಯದನ ಕೃಷ್ಣ
ಧರ್ಮರಾಜ ಕಲಿಯೆನಿಸಿ ಮೆರೆದ
ಸುಮ್ಮನಸರ ಸುಧೆಯನೂಡಿದ ೨
ಧ್ರುವತಾಳ
ಭಾರತ ರಾಮಾಯಣ ವರಮಹಿಮೆಯನ್ನುಸುರುವೆಂಬುದು ವಿ-
ಚಾರಿಸು ಮನುಜ ಆರು ದರುಶನದ ವಾರಿಯುಗದವರು
ಪೂರುವಯುಗದ ಮುನೀಂದ್ರರ ಗ್ರಂಥವಿದು ಸುರರಿಗಾ
ಸಿರಿಹಯವದನ್ನ ಕ್ಷುದ್ರ ನರರಿಲ್ಲ ಗಡ ನೋಡಿವರ ಮತ ೩
ರೂಪಕತಾಳ
ಪಾಲ ಸವಿಗೆ ಗೋಪಾಲ ಬಾಲನೆ ಬೇಕು
ಫಲದ ಬರೆಹಕ್ಕೆ ಸಾನುತೊ (?) ಬರಬೇಕು
ಶ್ರೀಲೋಲ ಹಯವದನ ಪಾಲಕನೆಂಬುದ
ಈಲೋಕದೊಳಗೆ ಕೇಳಿದುದಿಲ್ಲವೆ
ಕಾಲನ ಸೂನು ಧರ್ಮಜ ಶ್ರೀಕೃಷ್ಣನ
ಆಳೆಂದು ಬಲ್ಲವಗೆ ಆಲೋಚನೆಯೆ ಸಲ್ಲ ೪
ಝಂಪೆತಾಳ
ಅಂದು ವಾಮನವಾಗಿ ಬಲಿಯ ಬಂಧಿಸಿ ತನ್ನ
ಚಂದದ ಪದಕ್ರಮವ ತಂದು ಮೂಲೋಕದೊಳು
ಬಂದು ಬಂದುದುಭವಿಶಿ ತಮತಮ್ಮ ಕರ್ಮದ ಫಲದಿ
ದಂದುಗವನುಂಬರು ಮನುಜರು ಮಂದಿಯೊಳಗಿನ್ನು
ಕುಂದುಕೊರತೆಗಳಿಲ್ಲ ಹಯವದನನ-
ಲ್ಲೆಂದು ವಾದಿಸುವವನ ಬಲ್ಲವಿಕೆಯನೇನೆಂಬೆ ೫
ತ್ರಿಪುಟತಾಳ
ಉಂಡವಗೆರಡುಬಗೆವ ಬಂಢಸ್ ಉದ್ದಂಡತನವನೀಗ
ಕಂಡು ಮನಗತಿ ಕೊಂಡಾಡ ಬ್ಯಾಡವೆ ಕೊಟ್ಟುಪೊರೆವ ನಮ್ಮ
ಪುಂಡರೀಕಾಕ್ಷ ತ್ರಿವಿಕ್ರಮರಾಯನ
ಚಂಡಮತವ ಬಿಟ್ಟು ಹಯವದನನಂಘ್ರಿಯ
ತಂತಂಡದ ವಾದಿಗಳೆಲ್ಲರು ಭಜಿಸಿರೊ ೬
ಅಟ್ಟತಾಳ
ದರ್ಪವ್ಯಾತಕೊ ವಾದಿ ಹರಿಯ ರಾಣಿ
ಸಿರಿಯ ಪ್ರಸಾದದಿಂದ ಬಂದ ಸಂಪದಮದದಿಂದ
ತತ್ಪತಿ ಹಯವದನನ ಜರೆದಳಾ ಸತಿಯೊಪ್ಪಿಕೊಂಡಿಪ್ಪರೆ
ನಿಮ್ಮ ಪತ್ನಿಯರ ಕೇಳಿ
ಉಪ್ಪು ತಿಂಬರೆ ನೀರು ಕುಡಿವರೆ ಲಕುಮಿಯ
ಅಪ್ಪುವನ ಚರಣ ತಪ್ಪಿಸಿಕೊಳಬೇಡ ೭
ಏಕತಾಳ
ಹರಿಯೆನ್ನುವನು ಹರಿಯ ನಮಿಸುವೆನು
ಹರಿಕಥೆಗಳನೆ ನಾ ನುತಿಸುವೆ ಮತಿಸುವೆ
ಹರಿಯ ಪರಾಕ್ರಮಗಳನೆ ನಾ ಬಣ್ಣಿಸುವೆ
ಹರಿ ಹರಿ ಹರಿಯೆಂದು ದುರಿತವ ಕಳೆವೆನು
ಸಿರಿ ಹಯವದನನ್ನ ಚರಣದ ಭಕುತಿಯು
ದೊರೆಕೊಂಡರೆ ಸಾಕೆನ್ನ ಜನುಮಜನುಮಕಿನ್ನು ೮
ಜತೆ
ತಮತಮ್ಮ ಮನಕೆ ಬಂದಂತೆ ಪೇಳಲವರು
ನಮಗೆ ಹಯವದನನೆ ಸರ್ವೇಷ್ಟದಾಯಕ

 

೨೧೩
ಸುಳಾದಿ
ಧ್ರುವತಾಳ
ಸಲಹಯ್ಯ ಕರುಣಿ ಸಕಲದೇವ ಸಾರ್ವಭೌಮಸುಲಭ ವೆಂಕಟರಮಣ ಸುಜನರ ಪ್ರಾಣಬಲವಂತ ಖಳಕುಲಭಂಜನ ನಿರಂಜನಜಲಜನಯನ ಪರಸನ್ನ ಹಯವದನ ೧

ಮಠ್ಯತಾಳ
ದೇಶ ದೇಶದಿಂದ ಬಂದ ಜನರ ಆಸೆಗಳನು ಪೂರೈಸಿ ಕೊಡುವೆವಾಸುದೇವ ನಿನ್ನ ಭಜಕರನುದಾಸೀನ ಮಾಡಬೇಡವಾಸುದೇವ ಭಾಸುರರಮಣ ಸಂಪನ್ನ ಶೇಷಗಿರಿಯವಾಸ ತಿಮ್ಮರಾಯ ೨

ರೂಪಕತಾಳ
ದೀನಜನರ ಕಾವೆನೆಂಬುದು ನಿನ್ನಯ ಬಿರುದುಮೌನದಿ ಬಂದು ಗಜೇಂದ್ರನಿಗೊಲಿದುಮಾಣದೆ ಯಮನಾರ್ತಿಯನು ಪರಿಹರಿಸಿದೆಶ್ರೀನಾಥ ಭಜಕರ ಬಂಧು ಗುಣಸಿಂಧು ಮಾಣದೆದಾನಿಗಳರಸ ವೆಂಕಟರಮಣ ನೀಎನ್ನ ಕ್ಲೇಶಗಳ ಬಂಧಿಸಿ ಕಾಯೊ ಬಿಡಿಸಿ ರಕ್ಷಿಸೊ ತಂದೆ ಮಾಣದೆ ೩

ಝಂಪೆತಾಳ
ಮುನಿದಿಂದ್ರ ಮಳೆಯ ಕರೆಯಲು ಗೋಪಗೋಪಿಯರುವನಜಾಕ್ಷ ನಿನ್ನ ಮರೆಯೊಗಲು ಗಿರಿಯನುದ್ಧರಿಸಿಘನತರಕರುಣದಿ ಭಜಕರನು ಪೊರೆದೆವನಜಜಭಸ್ವಪಿತ ನಿನ್ನ ಮರೆಯೊಕ್ಕೆನಯ್ಯ ನಾನುಘನತರ ಇನಿತು ಭವದಟ್ಟುಳಿಯ ಬಿಡಿಸಿ ನಿನ್ನ ಮೂರುತಿಯನೆನೆವಂತೆ ಮಾಡು ಶೇಷಗಿರಿಯವಾಸ ತಿಮ್ಮರಾಯ ೪

ತ್ರಿಪುಟತಾಳ
ಹಿಂದೆ ನಾನಾ ಭವದಲ್ಲಿ ಬಂದು ಬಂದು ನೊಂದೆನಯ್ಯತಂದೆ ಇಂದಿರಾರಮಣ ಗೋವಿಂದ ನಿನ್ನ ಭಕುತಿಯಎಂದೆಂದಿಗೆನಗಿತ್ತು ಕಾಯೊ ಗೋವಿಂದ ಮು-ಕುಂದ ಮುನಿಜನಮಾನ್ಯ ಮನುಮಥಕೋಟಿಲಾವಣ್ಯವೆಂಕಟಾಚಲನಿವಾಸ ಗೋವಿಂದ ನಿನ್ನ ಭಕುತಿಯ ೫

ಅಟ್ಟತಾಳ
ಶ್ರೀನಿವಾಸ ನಿನ್ನ ಮೂರುತಿಯನು ಎನ್ನಮಾನಸದೊಳು ನೆನೆವಂತೆ ಮಾಡುಅನಾಥಜನಪ್ರಿಯ ಅಖಿಳ ಲೋಕದೊಡೆಯಭಾನುಸನ್ನಿಭಕಾಯ ಶೇಷಗಿರಿಯ ಶ್ರೀನಿವಾಸ ೬

ಏಕತಾಳ
ದೇವ ನಿನ್ನ ಮೂರುತಿ ಕರುಣಾವಲೋಕನದಿಂದೆನಗೆ ತೋ-ರುವ ಭಾವಜನಯ್ಯ ಭಕುತಪರಣ ಭಾವಜ ಈವಕಾವ ದುರಿತ ಪರಿವ ಸುಪ್ರಭಾವ ವೆಂಕಟಾಚಲನಿವಾಸ ೭

ಜತೆ
ಪನ್ನಗಾದ್ರಿನಿವಾಸ ಪಾಲಿಸೊ ಪರಮಪುರುಷ ಪ್ರ-ಸನ್ನ ಹಯವದನ ಶೇಷಗಿರಿಯ ತಿಮ್ಮ

 

೨೬೯
ಸುಳಾದಿ
ಧ್ರುವತಾಳ
ಹರಿ ನಿನ್ನ ಜ್ಞಾನಸಿರಿಗೆಣೆಗಾಣೆ ಮತ್ಸ್ಯಾವ-
ತಾರದಿ ಶ್ರುತಿಗಳ ವಿಧಿಸಿ ಪೇಳಿದೆಯಾಗಿ
ಹರಿ ನಿನ್ನ ಶಕುತಿಗೆ ಎಣೆಗಾಣೆನಜಾಂಡ ಮಂ-
ದರಗಳ ಬೆನ್ನಲಿ ಧರಿಸಿ ಮೆರೆದೆಯಾಗಿ
ಹರಿ ನಿನ್ನ ಕರುಣಕ್ಕೆ ಎಣೆಗಾಣೆ ವರಾಹಾವತಾರದಿ ದಾಡೆಯಲಿ
ಧಾರುಣಿಯ ನೆಗಹಿದೆಯಾಗಿ
ಹರಿ ನಿನ್ನ ಉದಾರತ್ವಕ್ಕೆಣೆಗಾಣೆ ಮಹಿಯ ವಿ-
ಸ್ತರದಿ ನಿನ್ನ ವೈರಾಗ್ಯಭಾಗ್ಯಕ್ಕೆ ಎಣೆಗಾಣೆ
ಅರಸತ್ವ ತೊರೆದು ಅರಣ್ಯಕ್ಕೆ ಪೋದೆಯಾಗಿ
ಹರಿ ನಿನ್ನ ಲೀಲೆಗೆ ಎಣೆಗಾಣೆನೊ ಮಹಾ-
ಧುರದೊಳು ಕಲಿಪಾರ್ಥನ ಸಲಹಿದೆಯಾಗಿ
ಹರಿ ನಿನ್ನ ಮಾಯಕ್ಕೆ ಎಣೆಗಾಣೆನೊ ಮು-
ಪ್ಪುರದ ಸತಿಯರ ವ್ರತವ ಕೆಡಿಸಿದೆಯಾಗಿ
ಹಯವದನನೆ ಕಲಿಭಂಡನೆಂಬ ಬಿರುದು
ತೋರಿದೆ ಕಲ್ಕಿಯಾಗಿ ಬಲ್ಲವರಿಗೆ೧
ಮಠ್ಯತಾಳ
ಅಸುರರ ಮುರಿದೆ ಸುರರನು ಪೊರೆದೆ
ಶಶಿಮುಖಿ ದ್ರೌಪದಿಗಕ್ಷಯಾಂಬರವನಿತ್ತು ಮೆರೆದೆ
ಅಸಮ ರಕ್ಕಸಿಯ ಕಿವಿ ಮೂಗು ತರಿದೆ
ಸುರ ರಣರಲ್ಲದೆ ಅನ್ಯರನೊಲ್ಲೆ
ಪೊಸಬಗೆಯೊ ಸಿರಿಹಯವದನನೆ ಇಂಥ
ಅಸಮಮಹಿಮನೆಂಬ ಪೆಸರು ಧರಿಸಿಕೊಂಡೆ೨
ತ್ರಿಪುಟತಾಳ
ಸುಧೆಯ ಸಾಧಿಸಿ ತ್ರಿದಶರಿಗಿತ್ತು ಪೊರೆದೆ ಮ-
ತ್ತದಕೊದಗಿದ ದಾನವರ ಮರ್ದಿಸಿದೆ
ಇದೆ ಸಾಕ್ಷಿಯಲ್ಲವೆ ನೋಡಲು ಬುಧಜನರು
ಕದನಕರ್ಕಶನೆಂಬ ಬಿರುದ ತೋರಿದೆ ಜಗಕೆ
ಮಧುವೈರಿ ಸಿರಿಹಯವದನ ದೇವೋತ್ತಮ
ಮದವಿಲ್ಲದವರ ಎಂದೆಂದು ಪೊರೆವನು
ಮದಾಂಧರನು ಎಂದೆಂದು ಮರ್ದಿಸುವನು ೩
ಝಂಪೆತಾಳ
ಸಾತ್ವಿಕರಿಗೆ ಊಧ್ರ್ವಲೋಕವ ಮಾಡಿದ ನೋಡಿರೊ
ಮತ್ರ್ಯರಿಗೆ ಸ್ವರ್ಗ ಭೂ ನರಕ ಮಾಡಿದ ನೋಡಿರೊ
ವ್ರಾತ್ಯಜನರಿಗೆ ದುರ್ಗತಿಯ ಮಾಡಿದ ನೋಡಿರೊ
ಸತ್ಯ ಸತ್ಯಸಂಕಲ್ಪ ಹಯವದನ ಎಲ್ಲರಿಗೇನೆಂಬೆ ೪
ತ್ರಿಪುಟತಾಳ
ಅದರಿಂದ ದುಮಾರ್ಗದಲಿ ನಡೆಯಬಾರದು
ಮದಿರಾಕ್ಷಿಯರ ಮೆಚ್ಚಿ ಮರುಳಾಗಬಾರದು
ಅಧಮ ದುರ್ಮತಗಳ ಮನಕೆ ತರಬಾರದು
ಪದುಮನಾಭನ ಒಮ್ಮೆ ಮೈಮರೆದಿರಲಾಗದು
ಸುದರ್ಶನಧರ ಸಿರಿಹಯವದನನ ಪಾದ-
ಪದುಮ ತೋರಿದ ಗುರುಮಧ್ವರಾಯರ ನಂಬೊ ೫
ಅಟ್ಟತಾಳ
ಆರಾಧನ ನೀರಾಜನವೆತ್ತಿ ನಮ್ಮ
ನಾರಾಯಣಗೆ ನಾನಾವಿಧವಾದ
ಭೂರಿ ನೈವೇದ್ಯಗಳಿಟ್ಟು ಪೂಜಿಸಿ ಅವ-
ನಾರೋಗಣೆಯ ಶೇಷ ಭುಂಜಿಸಿ ಸುಖಿಸು ನೀ
ಶ್ರೀರಮಣ ಹಯವದನನ ಚರಿತ್ರೆಯ
ಓರಂತೆ ತುತಿಸಿ ಹಿಗ್ಗುತಲಿರು ಮನದಲ್ಲಿ
ತಾರತಮ್ಯವರಿತು ಸಾರು ಸುರರ ೬
ಆದಿತಾಳ
ಪರಮ ವೈಷ್ಣವ ಗುರುಗಳ ಪಾದಕೆರಗು ನೀ
ಪುರಾಣ ಶಾಸ್ತ್ರಂಗಳ ನಿರುತ ಕೇಳುತಲಿರು
ಹರಿ ಪರದೇವತೆಯೆಂಬ ಜ್ಞಾನ ವಿಸ್ತರಿಸುತ
ಧರೆಯೊಳು ಚರಿಸುತಲಿರು ಜೀವ
ಪರಮ ಕರುಣಿ ಸಿರಿ ಹಯವದನನ ಈ
ಪರಿಯಲಿ ಸ್ಮರಿಸಲು ಪೊರೆವ ಸಂದೇಹವಿಲ್ಲ೭
ಜತೆ
ಸಾಕು ಸಾಕು ಸಂಸಾರ ಸಂಕಟಗಳನೆಲ್ಲ
ನೂಕು ನೂಕು ಹಯವದನನ ಒಲುಮೆಯಿಂದ

 

೨೧೬
ಸುಳಾದಿ
ರೂಪಕತಾಳ
ಹರಿ ನಿನ್ನ ಸತತ ವ್ಯಾಪಕನೆಂಬ ಬಿರುದ ಶರಣರುಕರೆದ ಮಾತ್ರದಿ ಬಿಸುಟು ಪರಿಪರಿಯ ವೇಷದಲಿಧರೆಯೊಳಗವತರಿಸಿ ಶರಧಿಯೊಳ್ ನಲಿದೆಗಿರಿಯನೆತ್ತಿದೆ ಧರೆಯ ಕಾಯ್ದೆ ಶಿಶುವ ಪೊರೆದೆ ಬೇಡಿದೆ ಬಲಿಯತರಿದೆ ಕ್ಷತ್ರಿಯರ ಮುರಿದೆ ರಾವಣನ ನರನ ಪಾಲಿಸಿದೆಸುರಸತಿಯರ ಸೋಲಿಸಿದೆ ದುರುಳ ಕಲಿಯ ಗೆಲಿದೆಮೆರೆದೆ ಜೀಯ ಕರಿಯ ಭಯವ ಕಿತ್ತೆಸಿರಿ ಹಯವದನ ದೀನರ ಬಂಧು ನೀನೆಂದುಅರಿಯದ ಮೂಢಸೇವಕರು ನಾವುಕರೆಯದಿದ್ದರೆ ಬಂದು ಕಾಯಬೇಕೆಂದುಕರುಣಾಸಿಂಧುವೆ ನಿನ್ನ ತೋರಬೇಕುಕರೆದು ಬೇಸರವು ಕಿಂಕರಗೆ ನಿನ್ನ ಮೂರುತಿಯಮರೆಯ ಮಾಡುವರೇನೆಂದರಿದೆನಯ್ಯಬರಿದೆ ಇನ್ನಿರದೆ ಮುರಹರ ನಿನ್ನ ತೋರು ಸಂ-ಸಾರದಿಂದ ಬೇಗೆನ್ನುದ್ಧರಿಸು ತಂದೆ ೧

ಮಠ್ಯತಾಳ
ಮರೆಯೊಗಲು ದೊರೆಗಳೆಲ್ಲ ಕಾಣಿಸಿಕೊಂಬುದ ನೋಡು ನೋಡುಪುರದೊಳಗೆ ಮರಳಿಯವರ ಪೊರೆವುದ ನೋಡು ನೋಡಯ್ಯಸರಿದೊರೆಗಳೆಲ್ಲ ಸಾರಿದರ ಮೀರಿದನೆಂಬ ದೂರ ಪೊರದಿರಯ್ಯಸರಿನಗುವರೆಂಬ ಭಯದಿಂದವರ ಪಕ್ಕದೊಳಿಟ್ಟವರ ಬಿಡನಯ್ಯಸಿರಿಹಯವದನ ನಿನ್ನ ತೋರೆನಗೆ ಹಿರಿಯಹರಿಯಪುರಿಯ ಹೊಗಿಸಿ ಪೊರೆ ೨

ಧ್ರುವತಾಳ
ಕಂದರ್ಪಕೋಟಿಲಾವಣ್ಯವ ಗೆಲುವಸೌಂದರ್ಯದ ನಿನ್ನ ದಿವ್ಯಮೂರುತಿಯಎಂದು ನೋಡುವೆ ನಾನೆಂದು ನುಡಿವೆನುಎಂದು ಪಾಡುವೆ ನಾನೆಂದೊಡನಾಡುವೆಎಂದು ಇಂದಿರೇಶನೆ ಲೋಕಪತಿ ಶ್ರೀಕೃಷ್ಣ ಎನ್ನತಂದೆ ಹಯವದನ ಇದನೆನ[ಗೀ]ಯಯ್ಯ ೩

ರೂಪಕತಾಳ
ಸಾಸಿರ ನಾಮದೊಳೊಂದನಾದರು ಕೊಡುಈಸು ಮೂರುತಿಯೊಳಗೊಂದನಾದರು ತೋರುಶ್ರೀಶ ನಿನ್ನ ಪುರದೊಳಗೊಂದರಲ್ಲಾದರುವಾಸವ ಎನಗೆ ಕೊಡು ಕರುಣವ ಮಾಡುದೇಶ ದೇಶದವರ ಪೊರೆದು ಎನ್ನೊಬ್ಬನಆಸೆಯ ಮುರಿಯದಿರಯ್ಯ ಸಿರಿ ಹಯವದನಶ್ರೀಶ ನಿನ್ನ ಪುರ ೪

ಝಂಪೆತಾಳ
ನಿತ್ಯನ್ನಮೋಸ್ತು ಹರಿ ಭಕ್ತಿಭರಿತೇಭ್ಯಃನಿತ್ಯನ್ನಮೋಸ್ತು ಹರಿ ಚಿತ್ರಚರಿತೇಭ್ಯಃನಿತ್ಯನ್ನಮೋಸ್ತು ಹರಿ ದೈತ್ಯದಾವೇಭ್ಯಃನಿತ್ಯನ್ನಮೋಸ್ತು ಹರಿಸತ್ವದೇವೇಭ್ಯಃನಿತ್ಯಂ ಗುರುಭೃಶ್ಛ ಪರಮ ಗುರುಭೃಶ್ಛನಿತ್ಯಂಚ ಹಯವದನ ಹರಿಯೆ ಶರಣೇಭ್ಯಃ ೫

ಝಂಪೆತಾಳ
ನಿತ್ಯಂ ತಥಾದಿ ಗುರುಭ್ಯಶ್ಚ ಭೂಯಂ ನಮೋನಿತ್ಯಂಚ ಮೂಲ ಗುರುಭ್ಯೋಪ ಭೂಯಂ ನಮೋನಿತ್ಯಂಚ ಮಂತ್ರ ದೇವತಾಯಂ ನಮೋ ನಮೋನಿತ್ಯಂ ಶ್ರೀವಾಸುದೇವಾಯ ಚ ನಮೋ ನಮೋನಿತ್ಯಂ ಮಮಕ್ಷಿ ಹಯವದನ ಹರಿರಸ್ತುಮುಕ್ತಿದಾತಶ್ಚ ಭವತ್ರಾತಾ ಚ ಕೃಪೆಯಸ್ತು ನಿತ್ಯಂ ಚ ಮಂತ್ರ ೬

ತ್ರಿಪುಟತಾಳ
ಹರಿಯ ಭಜಿಸದ ಮಾನವರಿರವೇನುಹರನ ಭಜನೆಯಾದರೆ ಮಾಡಿರೊಹರಿಹರರಿಬ್ಬರು ಪುಸಿ ತಾನೆ ದೈವವೆಂಬಮರುಳರ ಮಾತ ಮನ್ನಿಸಬ್ಯಾಡವಯ್ಯಸಿರಿಹಯವದನನ ಚರಣದ ಭಕುತಿಯುದೊರಕೊಂಡಿರೆ ಸಾಕು ಜನುಮಜನುಮದಲ್ಲಿ ೭

ಅಟ್ಟತಾಳ
ರಮ್ಮೆಯರಸ ನಮಗಿಷ್ಟವದೈವಬೊಮ್ಮರುದ್ರಾದಿಗಳೆಮಗೆ ಗುರುಗಳುಶ್ರೀಮಧ್ವಾಚಾರ್ಯರೆಮ್ಮ ಮತಾಚಾರ್ಯರು ಜ-ನುಮಜನುಮದಲ್ಲಿ ತಪ್ಪದಿದ್ದರೆ ಸಾಕುಮಾಮನೋಹರ ಹಯವದನನಲಿ ಭಕ್ತಿಈ ಮಾಹಾತ್ಮ್ಯ ಭಕ್ತಿ ಎಂದೆಂದು ದೊರಕಲಿ ೮

ಏಕತಾಳ
ಭಕುತರ ಬಿಡದಿರು ನಿನ್ನ ಪಾದಾಂಬುಜಭಕುತಿಯ ಕೊಡು ಕೊಡು ಕಮಲದಳಾಕ್ಷದೈತ್ಯರ ಕೊಲ್ಲು ಕೊಲ್ಲು ಸಿರಿಹಯವದನ ದು-ರುಕ್ತಿಯ ಶೌರ್ಯ ನಿಜವನ ಧುರ್ಯಮಿತ್ರ ಸಹಸ್ರಾರಪ್ರಭೆಯ ಗೆಲುವ ನಿನ್ನಯಗಾತ್ರದ ಭಕುತಿಗೆ ನಮೋ ನಮೋಯೆಂಬೆ ೯

ಜತೆ
ಎನ್ನ ಕುಂದುಕೊರತೆಯ ನೋಡಲಾಗದು ಪ್ರ-ಸನ್ನ ಹಯವದನ ನಿನ್ನ ತೋರು ಮುಂದಿರು

 

೨೭೧
ಸುಳಾದಿ
ಧ್ರುವತಾಳ
ಹರಿ ಸ್ವತಂತ್ರ ಸರ್ವೇಶ ಸಿರಿ ವಿರಿಂಚಿ ಸಮರು
ಗರುಡಶಂಕರಶೇಷಶಕ್ರಾದ್ಯಮರರಿಗೆ
ಪರದೈವ ಸಾಕಾರ ಸಕಲ ಸದ್ಗುಣಪೂರ್ಣ
ನಿರುಪಮ ನಿರ್ದೋಷ ನಿತ್ಯತೃಪ್ತ
ವರ ಸುವರ್ಣವರ್ಣ ಅಖಿಳ ಜನ್ಮಾದಿಕಾರಣ
ಸ್ಥಿರತರ ಜಗಕೆ ಅತ್ಯಂತ ಭಿನ್ನ
ಪರಮೋಕ್ಷವೆಂಬುದು ತನ್ನ ವೈಕುಂಠಲೋಕ
ಪರ ಪಂಚಭೇದ ಪಂಚಕಭರಿತ
ಪರಮಾತ್ಮ ಸತ್ಯಒಂದೆ ಪುಸಿಯಲ್ಲವೆಂದು
ಕರುಣಾಕರ ಹಯವದನ ಬಲ್ಲ ೧
ಮಠ್ಯತಾಳ
ತ್ರಿವಿಧ ಜೀವರಿಹರು ಜಗದೊಳು
ತ್ರಿವಿಧ ಸಾಧನಂಗಳಿಗೆ ವಿಷ್ಣುವಿನ
ಭವಕರ್ಮಬೀಜತಮಕೆ ಹಯವದನದ್ವೇಷ ಕಾರಣ೨
ರೂಪಕತಾಳ
ನಾನಾವತಾರದಿ ಜ್ಞಾನೇಕ ಕಾರಣ
ಶೋಣಿತ ಶುಕ್ಲ ವಿಕಾರಾತಿದೂರ
ಆನಂದಮಯ ಮೂಲರೂಪದಿ ಬಾಯೊಳು
ಕಾಣಳೆ ಮಗನ ಬಾಯೊಳು ತಾಯಿ ಜಗವ
ಶ್ರೀ ನರಸಿಂಹ ಹಯವದನನಿರವ ನಿ-
ಧಾನಿಸಿ ನೋಡು ಸಂಶಯವನೀಡಾಡು ೩
ಝಂಪೆತಾಳ
ಲೀಲಾವತಾರದೊಳು ಕದನ ಗುಣಲೀಲೆ
ಕೈಲಾಸಯಾತ್ರೆ ಧರ್ಮದ ಯಾತ್ರೆಯಂತೆ
ಮೂಲರೂಪದಿ ವಿಷ್ಣು ಮರಳಿ ಶಿವನಾದವನು
ಶ್ರೀಲೋಲ ಏನಮಾಡುವ ಪೇಳು ಮನುಜ
ಬಾಲಕತನವ ಬಿಟ್ಟು ಹಯವದನ ಹರಿಯು ಜಗ-
ತ್ಪಾಲನೆಂಬುದ ನಂಬು ನರನ ನಟನೆ ಡಂಬು ೪
ತ್ರಿಪುಟತಾಳ
ಸತ್ಯಂವದ ಎಂಬ ಶ್ರುತಿಯಿರೆ
ಮುಕ್ತನಾ ಪರಮಗತಿಯೆಂಬ ಪೆಸರಿದೆ
ಮುಕ್ತಿಯೊಳು ಭೇದ ಸಂಸಾರದೊಳು ಭೇದ
ಇಂಥ ಪುರಾಣೋಕ್ತ್ತಿಗಳಿರೆ
ಭೃತ್ಯನಾಗಿ ಹಯವದನನ್ನ ನೆರೆನಂಬು ೫
ಅಟ್ಟತಾಳ
ಭೃಗುಮುನಿ ವಿಚಾರಿಸಿ ಕೃಷ್ಣಗೆ ಸರಿಮಿಗಿಲಿಲ್ಲವೆಂದು
ನಿಗಮಾರ್ಥ ಋಷಿಗಳಿಗೆ ಪೇಳಿದಕಟಾ
ತೆಗೆ ಸಂದೇಹ ಹಯವದನನ ಪದ
ಯುಗವನು ನೆರೆನಂಬು ಸಕಲಸುಖದಿಂಬು೬
ಏಕತಾಳ
ಅಪ್ರಾಕೃತ ಹರಿಯ [ದಶೇಂದ್ರಿಯಗಳು]
ಅಪ್ರಾಕೃತ ಆತನ ಗುಣಗಣಗಳು
ಅಪ್ರಾಕೃತ ಆತನ ದಿವ್ಯದೇಹಗಳು
ಅಪ್ರಾಕೃತ ಹಯವದನನ ನೆನೆ೭
ಜತೆ
ಇಂತೀ ಜೀವ ನಿತ್ಯವಾಗಿ ಎಂದೆಂದು
ಸಂತರೊಡೆಯ ಹಯವದನ ನೀ ಪಾಲಿಸೊ

ಇಷ್ಟುದಿನ ಭೂವೈಕುಂಠ

 


ಇಷ್ಟುದಿನ ಭೂವೈಕುಂಠ ಎಷ್ಟುದೂರವೆನುತಿದ್ದೆದೃಷ್ಟಿಯಿಂದಲಿ ನಿಮ್ಮ ಕಂಡೆ ಸೃಷ್ಟಿಪತಿ ಶ್ರೀರಂಗೇಶ ಪ.
ಚಿತ್ರಬೀದಿ ವಿರಾಜಿತ ಚಾರುನೂಪುರ ಶೋಭಿತಸಪ್ತ ಪ್ರಕಾರ ಸಂಪೃಷ್ಠ ಉತ್ತಮ ಶ್ರೀರಂಗಶಾಯಿ ೧
ಹೇಮಕವಾಟಗಳಿಂದ ಹೇಮ ಸೋಪಾನಗಳಲ್ಲಿಹೇಮಕಟಾಂಜನದಿಂದ ಗುಣಶೋಭಿತ ಶ್ರೀರಂಗೇಶ ೨
ಚತುರ ವೇದಗಳಲ್ಲಿ ಚತುರಮೂರ್ತಿವೀರ್ಯದಲ್ಲಿಚತುರ ದಿಕ್ಕುಗಳಲ್ಲಿ ಚದುರ ಶ್ರೀರಾಮ ರಂಗಶಾಯಿ ೩
ಪಂಕಜನಾಭನೆ ಏಸು ಪಾವನವೊ ನಿಮ್ಮ ದಿವ್ಯಕುಂಕುಮಾಂಕಿತ ಚರಣ ಪಂಕಜಾಕ್ಷ ಶ್ರೀರಂಗೇಶ ೪
ಪುಣ್ಯ ವಿದ್ಯಾ ದಯಾನಿಧೆ ಪನ್ನಗಶಾಯಿ ಶೋಭಿತ ಧನ್ಯ ಚಂದ್ರಪುಷ್ಕರಣ ಉನ್ನಂತ ಶ್ರೀ ಹಯವದನ ೫

 

ಹಾಡಿನ ಹೆಸರು :ಇಷ್ಟುದಿನ ಭೂವೈಕುಂಠ
ಹಾಡಿದವರ ಹೆಸರು :ಸಹನಾ ರಾಮಚಂದ್ರ
ರಾಗ :ಷಣ್ಮುಖಪ್ರಿಯ
ಸಂಗೀತ ನಿರ್ದೇಶಕರು : ಪದ್ಮನಾಭ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಏನ ಹೇಳಲಿ ನರಹರಿ ನಿನ್ನ ಮಹಿಮೆಯ
೧೭೦
ಏನ ಹೇಳಲಿ ನರಹರಿ ನಿನ್ನ ಮಹಿಮೆಯ ಪ.
ನಿನ್ನ ಧ್ಯಾನ ಮಾಡೇನೆಂದರೆ ನಿಲ್ಲಗೊಡದು ಮನ ಅ.ಪ.
ಸಚ್ಚಿದಾನಂದನ ಪಾದಾರವಿಂದವಮೆಚ್ಚಿ ಹಸನಾಗಿ ಇರು ಎಂದೆಡೆಹುಚ್ಚೆದ್ದ ಕಪಿಯಂತೆ ವಿಷಯವೆಂಬಡವಿಲಿಕಿಚ್ಚುಕಂಗೊಂಡು ಎನ್ನ ಕಾಡುತಿದೆ ರಂಗ ೧
ವಾಸುದೇವನ ಗುಣಗಳ ಸ್ತುತಿಸದೆ ದು-ರಾಸೆಯೊಳು ಬಿದ್ದು ಕಾಡುತಿದೆಲೇಸಾಗಿ ನಾಯಿಬಾಲಕೆ ನಾರಾಯಣ ತೈಲಏಸುಬಾರಿ ತೀಡಿದರೆ ನೀಟಾಗುವುದೊ೨
ಸಾಧು ಸಜ್ಜನರ ಸಂಗವ ಮಾಡಲೊಲ್ಲದೆಬಾಧಿಸುತಿದೆ ದುಷ್ಟಸಂಗದಿಂದಮಾಧವ ಭಕ್ತವತ್ಸಲ ಹಯವದನನೆನೀ ದಯಮಾಡಿ ನಿನ್ನಂತೆಮಾಡೆನ್ನ ಮನ ೩

 

ಹಾಡಿನ ಹೆಸರು :ಏನ ಹೇಳಲಿ ನರಹರಿ ನಿನ್ನ ಮಹಿಮೆಯ
ಹಾಡಿದವರ ಹೆಸರು :ಮದೂರು ಬಾಲಸುಬ್ರಹ್ಮಣ್ಯ
ರಾಗ :ಚಾರುಕೇಶಿ
ತಾಳ :ಆದಿ ತಾಳ ತ್ರಿಶ್ರ್ರನಡೆ
ಸಂಗೀತ ನಿರ್ದೇಶಕರು :ವಿದ್ಯಾಭೂಷಣ

ನಿರ್ಗಮನ

 

ತಾಳುವಿಕೆಗಿಂತ ತಪವು ಇಲ್ಲ
೨೨೬
ತಾಳುವಿಕೆಗಿಂತ ತಪವು ಇಲ್ಲ ಪ.
ಕೇಳಬಲ್ಲವರಿಗೆ ಹೇಳುವೆನು ಸೊಲ್ಲ ಅ.ಪ.
ದುಷ್ಟಮನುಜರು ಪೇಳ್ವ ನಿಷ್ಠುರದನುಡಿ ತಾಳುಕಷ್ಟಬಂದರೆ ತಾಳು ಕಂಗೆಡದೆ ತಾಳುನೆಟ್ಟಸಸಿ ಫಲಬರುವತನಕ ಶಾಂತಿಯ ತಾಳುಕಟ್ಟುಬುತ್ತಿಯ ಮುಂದೆ ಉಣಲುಂಟು ತಾಳು೧
ಹಳಿದು ಹಂಗಿಸುವ ಹಗೆಯ ಮಾತನು ತಾಳುಸುಳಿನುಡಿ ಕುಹಕ ಕುಮಂತ್ರವನು ತಾಳುಅಳುಕದಲೆ ಬಿರುಸು ಬಿಂಕದ ನುಡಿಯ ನೀ ತಾಳುಹಲಧರಾನುಜನನ್ನು ಹೃದಯದಲಿ ತಾಳು ೨
ನಕ್ಕನುಡಿವರ ಮುಂದೆ ಮುಕ್ಕರಿಸದೆ ತಾಳುಅಕ್ಕಸವ ಮಾಡುವರ ಅಕ್ಕರದಿ ತಾಳುಉಕ್ಕೋಹಾಲಿಗೆ ನೀರು ಇಕ್ಕಿದಂದದಿ ತಾಳುಪಕ್ಷೀಶ ಹಯವದನ ಶರಣೆಂದು ಬಾಳು ೩

 

ಹಾಡಿನ ಹೆಸರು :ತಾಳುವಿಕೆಗಿಂತ ತಪವು ಇಲ್ಲ
ಹಾಡಿದವರ ಹೆಸರು :ವಿಭಾ ಕಿನ್ಹಾಳ
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಧವಳಗಂಗೆಯ ಗಂಗಾಧರ
ಧವಳಗಂಗೆಯ ಗಂಗಾಧರ ಮಹಾಲಿಂಗ ಮಾ-
ಧವನ ತೋರಿಸಯ್ಯ ಗುರುಕುಲೋತ್ತುಂಗ ಪ.
ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ಬೇಗನೆ ತರಿವ
ದುಶ್ಚರಿತರನ್ನೆಲ್ಲ ದೂರದಲ್ಲಿಡುವ ನ-
ಮ್ಮಚ್ಚುತಗಲ್ಲದ ಅಸುರರ ಬಡಿವ ೧
ಮಾರನ ಗೆದ್ದ ಮನೋಹರಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿನ್ನ ಕೀರ್ತಿ
ಹರಿಯ ತೋರಿಸಯ್ಯ ನಿನಗೆ ಶರಣಾರ್ಥಿ ೨
ಚೆನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀ ಎನ್ನ
ಅನ್ಯರನರಿಯೆನೊ ಗುರುವೆಂಬೆ ನಿನ್ನ
ಇನ್ನಾದರು ಹರಿಯ ತೋರೊ ಮುಕ್ಕಣ್ಣ ೩

 

ಹಾಡಿನ ಹೆಸರು :ಧವಳಗಂಗೆಯ ಗಂಗಾಧರ
ಹಾಡಿದವರ ಹೆಸರು :ಕಾರ್ತಿಕ್ ಹೆಬ್ಬಾರ್
ಸಂಗೀತ ನಿರ್ದೇಶಕರು :ಪದ್ಮನಾಭ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಾರಾಯಣ ಎನ್ನಿರೊ ಸಜ್ಜನರೆಲ್ಲ
೨೩೦
ನಾರಾಯಣ ಎನ್ನಿರೊ ಸಜ್ಜನರೆಲ್ಲಪ.
ಸಾರರಹಿತ ಸಂಸಾರದಲಿ ಪರಸಾರ ಇದು ಎಂದು ಸಂಸಾರಿ ನೀವೆಲ್ಲ ಅ.ಪ.
ಇಹಪರ ಸುಖವುಂಟೋ ಇದರ ಫಲಬಹಳ ಕಟ್ಟಿದ ಗಂಟೋ ಘನಮಹಿಮಗೆ ಇದುಮಹಮಹಿಮೆ ಇದಲ್ಲದೆ ಮಹಿಮೆಯೊಳಗಿದುಮಹಾರಸವಾದಂಥ ಮಂತ್ರ ಮಹಭಕುತಿಪೂರ್ವಕವಾಗಿ ಒಮ್ಮೆ ೧
ಹಸಿವೆಯ ಶ್ರಮವಿರಲಿ ಹಸಿವಿರದೆ ಹ-ರುಷವು ತಾನಿರಲಿ ರಸಿಕಶ್ರಮ ಕೆರಳಿ ಮಾ-ನಸ ವಶವು ಆಗಲಿ ಆಗದಿರಲಿದೋಷವಾಗಲಿ ಶುದ್ಧವಾಗಲಿ ಶ್ರೀಶನ ಮರೆಯದೆ ಹಾಂಗೆ ೨
ಚೋರನೆಂದೆನದೆ ಚಿತ್ತದಲಿಜಾರನೆಂದೆಣಿಸದೆ ಸ್ಮರಣೆ ಮಾತ್ರದಿ ಬಹಳಪಾರರಹಿತ ಅನರ್ಥಸಂಚಿತಹರಣ ಮಾಡುವ ಪವನ ಪ್ರಿಯ ಸರ್ವರಂತರ ಹಯವದನ ೩

 

ಹಾಡಿನ ಹೆಸರು :ನಾರಾಯಣ ಎನ್ನಿರೊ ಸಜ್ಜನರೆಲ್ಲ
ಹಾಡಿದವರ ಹೆಸರು : ವಿದ್ಯಾಭೂಷಣ
ರಾಗ :ಹಿಂದೋಳ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಿದ್ಯಾಭೂಷಣ

ನಿರ್ಗಮನ

 

ಭೂರಿ ನಿಗಮವ ಕದ್ದ
೩೧೪
ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ
ಸಾರ ವೇದಗಳ ವಿಧಿಗಿತ್ತ
ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-
ತಾರಗಾರತಿಯ ಬೆಳಗಿರೆ ೧
ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ
ತೋರಿ ಬೆನ್ನಾಂತ ಸುರನುತ
ತೋರಿ ಬೆನ್ನಾಂತ ಸುರನುತ ಕೂರ್ಮಾವ-
ತಾರಗಾರತಿಯ ಬೆಳಗಿರೆ ೨
ಧಾತ್ರಿಯ ಕದ್ದೊಯ್ದ ದೈತ್ಯನ ಮಡುಹಿದ
ಎತ್ತಿ ದಾಡೆಯಲಿ ನೆಗಹಿದ
ಎತ್ತಿ ದಾಡೆಯಲಿ ನೆಗಹಿದ ವರಾಹ-
ಮೂರ್ತಿಗಾರತಿಯ ಬೆಳಗಿರೆ ೩
ಕಡು ಬಾಲನ ನುಡಿಗೆ ಒಡೆದು ಕಂಬದೊಳುದಿಸಿ
ಒಡಲ ಸೀಳಿದ ಹಿರಣ್ಯಕನ
ಒಡಲ ಸೀಳಿದ ಹಿರಣ್ಯಕನ ನರಸಿಂಹ
ಒಡೆಯಗಾರತಿಯ ಬೆಳಗಿರೆ ೪
ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ
ಈ ಮೂರು ಜಗವ ಈರಡಿಯ
ಈ ಮೂರು ಜಗವ ಈರಡಿ ಮಾಡಿ ಅಳೆದ
ವಾಮನಗಾರತಿಯ ಬೆಳಗಿರೆ ೫
ಅಂಬರಕೇಶನ್ನ ನಂಬಿದ ಕತ್ರಿಯರ
ಸಂಭ್ರಮ ಕುಲವ ಸವರಿದ
ಸಂಭ್ರಮ ಕುಲವ ಸವರಿದ ಪರಶುರಾ-
ಮೆಂಬಗಾರತಿಯ ಬೆಳಗಿರೆ ೬
ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ
ತಂದ ರಾವಣನ ತಲೆಹೊಯ್ದ
ತಂದ ರಾವಣನ ತಲೆಹೊಯ್ದ ರಘುರಾಮ-
ಚಂದ್ರಗಾರತಿಯ ಬೆಳಗಿರೆ ೭
ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ
ದುಷ್ಟ ಕಂಸನ್ನ ಕೆಡಹಿದ
ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ
ಕೃಷ್ಣಗಾರತಿಯ ಬೆಳಗಿರೆ ೮
ರುದ್ರನ್ನ ತ್ರಿಪುರದೊಳಿದ್ದ ಸತಿಯರ
ಬುದ್ಧಿ ಭೇದಮಾಡಿ ಕೆಡಿಸಿದ
ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ
ಬೌದ್ಧಗಾರತಿಯ ಬೆಳಗಿರೆ ೯
ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು
ತಾ ಪಿಡಿದು ಖಡ್ಗ ತುರಗವ
ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ-
ರೂಪಗಾರತಿಯ ಬೆಳಗಿರೆ ೧೦
ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ
ಹತ್ತವತಾರಿ ಹಯವದನ
ಹತ್ತವತಾರಿ ಹಯವದನನ ಪಾಡುತ
ಚಿತ್ರದಾರತಿಯ ಬೆಳಗಿರೆ ೧೧

 

ಹಾಡಿನ ಹೆಸರು :ಭೂರಿ ನಿಗಮವ ಕದ್ದ
ಹಾಡಿದವರ ಹೆಸರು :ಮಾನಸಿ ಪ್ರಸಾದ್
ರಾಗ :ರಾಗಮಾಲಿಕೆ
ಸಂಗೀತ ನಿರ್ದೇಶಕರು :ಪದ್ಮನಾಭ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಲೋಕ ಭರಿತನೊ
೯೨
ಲೋಕ ಭರಿತನೊ ರಂಗಾನೇಕಚರಿತನೊ ಪ.
ಕಾಕುಜನರ ಮುರಿದು ತನ್ನಏಕಾಂತಭಕ್ತರ ಪೊರೆವ ಕೃಷ್ಣ ಅ.ಪ.
ರಾಜಸೂಯ ಯಾಗದಲ್ಲಿ ರಾಜರಾಜರಿರಲು ಧರ್ಮ-ರಾಜಸುತನುಯೀತನೇ ಸಭಾಪೂಜ್ಯನೆಂದು ಮನ್ನಿಸಿದನಾಗ ೧
ಮಿಕ್ಕನೃಪರ ಜರಿದು ಅಮಿತವಿಕ್ರಮ ಯದುವರನೆ ತನಗೆತಕ್ಕ ರಮಣನೆಂದು ರುಕ್ಮಿಣಿ ಉಕ್ಕಿ ಮಾಲೆಯಿಕ್ಕಿದಳಾಗ ೨
ಜ್ಞಾನಶೂನ್ಯನಾಗಿ ಸೊಕ್ಕಿ ತಾನೆ ವಾಸುದೇವನೆನಲುಹೀನ ಪೌಂಡ್ರಕನ ಶಿರವ ಜಾಣರಾಯ ತರಿದನಾಗ ೩
ಉತ್ತರೆಯ ಗರ್ಭದಲ್ಲಿ ಸುತ್ತಮುತ್ತಿದಸ್ತ್ರವನ್ನುಒತ್ತಿ ಚಕ್ರದಿಂದ ನಿಜಭಕ್ತ ಪರೀಕ್ಷಿತನ ಕಾಯ್ದ ೪
ತನ್ನ ಸೇವಕಜನರಿಗೊಲಿದು ಉನ್ನಂತ ಉಡುಪಿಯಲ್ಲಿ ನಿಂತುಘನ್ನಮಂದಿರ ಮಾಡಿಕೊಂಡ ಪ್ರಸನ್ನ ಹಯವದನ ಕೃಷ್ಣ ೫

 

ಹಾಡಿನ ಹೆಸರು :ಲೋಕ ಭರಿತನೊ
ಹಾಡಿದವರ ಹೆಸರು :ಆತ್ಮಾ ವೆಂಕಟೇಶ್
ಸಂಗೀತ ನಿರ್ದೇಶಕರು :ವಿನಾಯಕ ತೊರವಿ
ಸ್ಟುಡಿಯೋ : ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಸಾರಿದೆನೊ ನಿನ್ನ ವೆಂಕಟರನ್ನ
೨೧೪
ಸಾರಿದೆನೊ ನಿನ್ನ ವೆಂಕಟರನ್ನ ಪ.
ನೀರಜನಯನನೆ ನಿರ್ಮಲಗುಣಪೂರ್ಣ ಅ.ಪ.
ಅನಾಥನು ನಾನು ಎನಗೆ ಬಂಧು ನೀನುನಿನ್ನವನೆಂದು ನೋಡೊ ನೀನಾಗಿ ದಯಮಾಡೊ ೧
ಎನ್ನ ಕುಂದುಗಳನ್ನು ಎಣಿಸಲಾಗದೊ ದೇವಪನ್ನಗಾದ್ರಿವಾಸ ನೀನೆ ನಿರ್ದೋಷ ೨
ದೇಶದೇಶದವರ ಪೊರೆವಂತೆ ಪೊರೆಯೆನ್ನಶೇಷಾಚಲಘನ್ನ ಶ್ರೀಶ ಹಯವದನ ೩

 

ಹಾಡಿನ ಹೆಸರು :ಸಾರಿದೆನೊ ನಿನ್ನ ವೆಂಕಟರನ್ನ
ಹಾಡಿದವರ ಹೆಸರು :ಕಾರ್ತಿಕ್ ಹೆಬ್ಬಾರ್
ಸಂಗೀತ ನಿರ್ದೇಶಕರು :ಪದ್ಮನಾಭ ಆರ್. ಕೆ.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *