Categories
ರಚನೆಗಳು

ವಾದಿರಾಜ

೨೩೦
ನಾರಾಯಣ ಎನ್ನಿರೊ ಸಜ್ಜನರೆಲ್ಲಪ.
ಸಾರರಹಿತ ಸಂಸಾರದಲಿ ಪರಸಾರ ಇದು ಎಂದು ಸಂಸಾರಿ ನೀವೆಲ್ಲ ಅ.ಪ.
ಇಹಪರ ಸುಖವುಂಟೋ ಇದರ ಫಲಬಹಳ ಕಟ್ಟಿದ ಗಂಟೋ ಘನಮಹಿಮಗೆ ಇದುಮಹಮಹಿಮೆ ಇದಲ್ಲದೆ ಮಹಿಮೆಯೊಳಗಿದುಮಹಾರಸವಾದಂಥ ಮಂತ್ರ ಮಹಭಕುತಿಪೂರ್ವಕವಾಗಿ ಒಮ್ಮೆ ೧
ಹಸಿವೆಯ ಶ್ರಮವಿರಲಿ ಹಸಿವಿರದೆ ಹ-ರುಷವು ತಾನಿರಲಿ ರಸಿಕಶ್ರಮ ಕೆರಳಿ ಮಾ-ನಸ ವಶವು ಆಗಲಿ ಆಗದಿರಲಿದೋಷವಾಗಲಿ ಶುದ್ಧವಾಗಲಿ ಶ್ರೀಶನ ಮರೆಯದೆ ಹಾಂಗೆ ೨
ಚೋರನೆಂದೆನದೆ ಚಿತ್ತದಲಿಜಾರನೆಂದೆಣಿಸದೆ ಸ್ಮರಣೆ ಮಾತ್ರದಿ ಬಹಳಪಾರರಹಿತ ಅನರ್ಥಸಂಚಿತಹರಣ ಮಾಡುವ ಪವನ ಪ್ರಿಯ ಸರ್ವರಂತರ ಹಯವದನ ೩

 

೧೧
ನಾರಾಯಣ ನಾರಾಯಣನಾರಾಯಣ ನಳಿನೋದರ ಪ
ನಾರದಪ್ರಿಯನಾಮ ಜಯನಾರಾಯಣ ನರಕಾಂತಕಅ.ಪ.
ಸುರಸಂಚಯ ಸುಖಕಾರಣ ದಿತಿಜಾಂತಕ ದೀನ ಶರಣಪರಾತ್ಪರ ಪಾಂಡವಪ್ರಿಯ ಪರಿಪೂರ್ಣ ಪರಮ ಜಯ೧
ಅಘಕುಲವನದಾವಾನಲ ಅಗಣಿತಗುಣಗಣನಿರ್ಮಲತ್ರಿಗುಣಾತೀತ ತ್ರಿಭುವನ ತ್ರಿದಶೇಶ್ವರವಂದ್ಯ ಜಯ೨
ಅತಿಮೋಹನಚರಿತ ನಮೋ ಅತಿ ಸದ್ಗುಣಭರಿತ ನಮೋಹತ ಕಲ್ಮಶ ಹಯವದನ ಹರಿ ಹಯರಿಪುಹರಣ ಜಯ ೩

 

೨೩೨
ನಾರಾಯಣ ನಾರಾಯಣ ನಾರಾಯಣನಾರಾಯಣ ಪ.
ಭಕ್ತಿಬೇಕು ಪರಮ ವಿರಕ್ತಿ ಬೇಕು ಹರಿ ಸ-ರ್ವೋತ್ತಮವೆಂಬೊ ನೆನವಿರಬೇಕು೧
ಅರಿಷಡ್ವರ್ಗದ ವಿಜಯ ಬೇಕು ಗುರುಕುಲತಿಲಕಗುರುಮಧ್ವಮತ ಬೇಕು ಗುರುಭಕ್ತಿ ಬೇಕು ೨
ಹರಿಯ ಡಿಂಗರಿಗರ ಸಂಗ ಬೇಕು ಶಂಖಚಕ್ರ-ಧರನಾಗಿ ಇರಬೇಕು ಸ್ವರೂಪಯೋಗ್ಯತೆ ಬೇಕು ೩
ವೇದದಭ್ಯಾಸವು ಬೇಕು ಅದರರ್ಥ ಹರಿಯೆಂಬಬೋಧವಿರಲುಬೇಕು ಖಳರಳಿಯಲುಬೇಕು೪
ನೊಡೆಯ ಹಯವದನನ್ನ ದಿವ್ಯ-ಪಾದ ನಂಬಿಯಿರಬೇಕು ವರಾದಿಗಳ ಬಯಸುವೋರು ೫

 

೨೮೮
ನಾರಾಯಣ ನಾರಾಯಣ ನಾರಾಯಣ
ನಾರಾಯಣ ನಾರಾಯಣ ನರಹರಿಯೆ ಪ.
ನಾರಾಯಣ ನರಹರಿಯೆ ಹಯವದನ
ಸ್ವಾಮಿ ನೀ ಎನಗೆ ದಯವಾಗೊ ಅ.ಪ.
ನಿಗಮವ ಕದ್ದೊಯ್ದ ದುಗುಡ ದೈತ್ಯನ ಕೊಂದು
ಆಗಮವ ತಂದು ಅಜಗಿತ್ತೆ
ಆಗಮವ ತಂದು ಅಜಗಿತ್ತೆ ಹಯವದನ
ಆದಿಮೂರುತಿಯೆ ದಯವಾಗೊ ೧
ಕೂರ್ಮರೂಪದಿ ಬಂದು ಆ ಗಿರಿಯನೆತ್ತಿದ
ಪ್ರೇಮದಿ ಸುರರಿಗಮೃತವ
ಪ್ರೇಮದಿ ಅಮೃತವನಿಕ್ಕಿದ ಹಯವದನ
ಸ್ವಾಮಿ ನೀ ಎನಗೆ ದಯವಾಗೊ ೨
ಕ್ರೋಡರೂಪದಿ ಬಂದು ಮೂಢದೈತ್ಯನ ಕೊಂದು
ರೂಢಿಯ ನೆಗಹಿ ಜಗಕಿತ್ತೆ
ರೂಢಿಯ ನೆಗಹಿ ಜಗಕಿತ್ತೆ ಹಯವದನ
ಪ್ರೌಢ ನೀ ಎನಗೆ ದಯವಾಗೊ ೩
ಶಿಶುವ ಬಾಧಿಸುತಿರ್ದ ಕಶಿಪನ್ನ ಸೀಳಿದಿ
ಕುಶಲದಿಂ ಕರುಳ ಮಾಲೆಯ
ಕುಶಲದಿಂ ಮಾಲೆ ಧರಿಸಿದ ಹಯವದನ
ಬಿಸಜಾಕ್ಷ ಎನಗೆ ದಯವಾಗೊ ೪
ವಾಮನರೂಪದಿ ಬಂದು ಭೂಮಿ ಓರಡಿ ಮಾಡಿ
ವ್ಯೋಮಕ್ಕೆ ಚರಣವ ನೀಡಿದೆ
ವ್ಯೋಮಕ್ಕೆ ಚರಣವ ನೀಡಿದ ಹಯವದನ
ವಾಮನ ಎನಗೆ ದಯವಾಗೊ ೫
ಕೊಡಲಿಯ ಪಿಡಿದು ಕಡಿದೆ ದುಷ್ಟನೃಪರ
ಹಡೆದ ತಂದೆಯ ಮಾತು ಸಲಿಸಿದೆ
ಹಡೆದ ತಂದೆಯ ಮಾತು ಸಲಿಸಿದ ಹಯವದನ
ಒಡೆಯ ನೀ ಎನಗೆ ದಯವಾಗೊ ೬
ಸೀತೆಗೋಸ್ಕರ ಪೋಗಿ ಸೇತುವೆಯ ಕಟ್ಟಿದೆ
ಭೂತ ರಾವಣನ ಮಡುಹಿದೆ
ಭೂತ ರಾವಣನ ಮಡುಹಿದೆ ಹಯವದನ
ಖ್ಯಾತ ನೀ ಎನಗೆ ದಯವಾಗೊ ೭
ಗೊಲ್ಲರ ಒಡನಾಡಿ ಬಲ್ಲಿದಸುರನ ಕೊಂದು
ಮಲ್ಲರೊಡನಾಡಿ ಮಡುಹಿದೆ
ಮಲ್ಲರೊಡನಾಡಿ ಮಡುಹಿದ ಹಯವದನ
ಫುಲ್ಲಾಕ್ಷ ಎನಗೆ ದಯವಾಗೊ ೮
ತ್ರಿಪುರರ ಸತಿಯರಿಗುಪದೇಶವನಿಕ್ಕಿ
ತ್ರಿಪುರರನೆಲ್ಲ ಮಡುಹಿದೆ
ತ್ರಿಪುರರನೆಲ್ಲ ಮಡುಹಿದ ಹಯವದನ
ನಿಪುಣ ನೀ ಎನಗೆ ದಯವಾಗೊ ೯
ತೇಜಿಯನೇರಿ ರಾಹುತನಾಗಿ ನೀ ಮೆರೆದೆ
ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ
ಮೂರ್ಜಗಕ್ಕೆ ಕಲ್ಕಿಯೆಂದೆನಿಸಿದೆ ಹಯವದನ
ಭೋಜ ನೀ ಎನಗೆ ದಯವಾಗೊ ೧೦
ರಿಗೊಲಿದು ಸ್ವಾದೆಪುರದಲಿ ನಿಂದು
ವೇದದ ಕಥೆಯನರುಹಿದೆ
ವೇದದ ಕಥೆಯನರುಹಿದ ಹಯವದನ
ಮಾಧವ ನೀ ಎನಗೆ ದಯವಾಗೊ ೧೧

 

೨೮೯
ನಾರಾಯಣ ನಾರಾಯಣ ನಾರಾಯಣ ನಾರಾಯಣ
ನಾರಾಯಣ ಲಕ್ಷುಮಿ ಅರಸನೇ ಪ.
ನಾರಾಯಣ ಲಕ್ಷುಮಿಅರಸನೆ ಹಯವದನ
ಸ್ವಾಮಿ ನೀ ಒಲಿದು ದಯವಾಗು ಅ.ಪ.
ಕಾಮವೆಂಬ ಕೊಂಡ ಕ್ರೋಧವೆಂಬ ಕನ್ನಡಿ (ಕೆಂಗಿಡಿ?)
ಲೋಭಮೋಹಗಳನುವಾದೊ
ಲೋಭಮೋಹಗಳನುವಾದೊ ಹಯವದನ
ಸ್ವಾಮಿ ನೀ ಒಲಿದು ದಯವಾಗು ೧
ಮನುಗಳ ಕಾಲದಲ್ಲಿ ಜಲದೊಳಗವತರಿಸಿ
ಜಗವೇಳು ಧರೆಯ ನೆಗಹಿದೆ
ಜಗವೇಳು ಧರೆಯ ನೆಗಹಿದೆ ಹಯವದನ
ಮತ್ಸ್ಯವತಾರ ದಯವಾಗು ೨
ಕೂರ್ಮಾವತಾರದಲಿ ಭೂಮಿಯ ನೆಗಹಿದೆ
ಕೂಡೆ ಸಜ್ಜನರ ಸಲಹಿದೆ
ಕೂಡೆ ಸಜ್ಜನರ ಸಲಹಿದೆ ಹಯವದನ
ಕೂರ್ಮಾವತಾರ ದಯವಾಗು ೩
ವರಾಹಾವತಾರದಲಿ ದುರುಳ ದಾನವಗಂಜಿ
ಕೋರೆದಾಡೆಯಲಿ ನೆಗಹಿದೆ
ಕೋರೆದಾಡೆಯಲಿ ನೆಗಹಿದೆ ಹಯವದನ
ವರಾಹಾವತಾರ ದಯವಾಗು ೪
ಸೊಕ್ಕಿದ ಅಸುರನ ಕರುಳ ಕುಕ್ಕಿ ಮಾಲೆಯ ಮಾಡಿ
ಭಕ್ತನಿಗಭಯ ಸಲಿಸಿದೆ
ಭಕ್ತನಿಗಭಯ ಸಲಿಸಿದೆ ಹಯವದನ
ಅಪ್ಪ ನರಸಿಂಹ ದಯವಾಗು ೫
ವಾಮನನಾಗಿ ನೀ ಭೂಮಿದಾನವ ಬೇಡಿ
ಭೂಮಿ ಪಾದದಲಿ ಅಳೆದೆಯೊ
ಭೂಮಿ ಪಾದದಲಿ ಅಳೆದೆಯೊ ಹಯವದನ
ವಾಮನಾವತಾರ ದಯವಾಗು ೬
ಹೆತ್ತವಳ ಶಿರ ಕಡಿದು ಕ್ಷತ್ರಿಯಕುಲ ಸವರಿ
ಮತ್ತೆ ಕೊಡಲಿಯ ಪಿಡಿದೆಯೊ
ಮತ್ತೆ ಕೊಡಲಿಯ ಪಿಡಿದೆಯೊ ಹಯವದನ
ಅಪ್ಪ ಭಾರ್ಗವನೆ ದಯವಾಗು ೭
ಸೀತೆಗೋಸ್ಕರವಾಗಿ ಸೇತುವೆ ಕಟ್ಟಿಸಿದೆ
ಪಾತಕಿ ರಾವಣನ ಮಡುಹಿದೆ
ಪಾತಕಿ ರಾವಣನ ಮಡುಹಿದೆ ಹಯವದನ
ಖ್ಯಾತ ರಘುನಾಥ ದಯವಾಗು ೮
ಕೃಷ್ಣಾವತಾರದಲಿ ದುಷ್ಟಕಂಸನ ಕೊಂದೆ
ಹೆತ್ತವಳ ಬಂಧನ ಬಿಡಿಸಿದೆ
ಹೆತ್ತವಳ ಬಂಧನ ಬಿಡಿಸಿದೆ ಹಯವದನ
ಕೃಷ್ಣಾವತಾರ ದಯವಾಗು ೯
ಉತ್ತಮ ಸತಿಯರ ಹೆಚ್ಚಿನ ವ್ರತ ಸವರಿ
ಮತ್ತೆ ಹಯವೇರಿ ಮೆರೆದೆಯೊ
ಮತ್ತೆ ಹಯವೇರಿ ಮೆರೆದೆಯೊ ಹಯ[ವದನ
ಉತ್ತಮ ಬೌದ್ಧ ಕಲ್ಕಿ ದಯವಾಗು] ೧೦
ಅಂಗಜನಯ್ಯನೆ ಮಂಗಳಮಹಿಮನೆ
ಗಂಗೆಯ ಪೆತ್ತ ಗರುವನೆ
ಗಂಗೆಯ ಪೆತ್ತ ಗರುವನೆ ಹಯವದನ
ಮಂಗಳ ಮಹಿಮ ದಯವಾಗು ೧೧
ರಿಗೊಲಿದೆ ಸ್ವಾದೆಪುರದಲಿ ನಿಂತೆ
ವೇದಾಂತ ಕಥೆಯ ಹರಹಿದೆ
ವೇದಾಂತ ಕಥೆಯ ಹರಹಿದೆ ಹಯವದನ
ವೇದಮೂರುತಿಯೆ ದಯವಾಗು ೧೨

 

೨೮೭
ನಾರಾಯಣ ನಾರಾಯಣ ನಾರಾಯಣ ನಾರಾಯಣ ಪ.
ದೇವರದೇವನೆ ಬಾರೊ ದೇವಕಿನಂದನ ಬಾರೊ
ದೇವೇಂದ್ರನ ಸಲಹಿದ ದೇವ ಬಾರೊ ಹರಿಯೆ ಅ.ಪ.
ಮಚ್ಚನಾಗಿ ಶ್ರುತಿಯ ತಂದಿತ್ತ ಭಕ್ತವತ್ಸಲನೆ ಭೃತ್ಯ
ಸತ್ಯವ್ರತನಿಗೊಲಿದ ಮಚ್ಚಬಾರೊ ಹರಿಯೆ ೧
ಸಾರಿದ ಸುರರಿಗಾಗಿ ನೀರೊಳಗೆ ಮುಳುಗಿ
ಗಿರಿಯಬೆನ್ನಲಿ ಪೊತ್ತ ಕೂರ್ಮ ಬಾರೊ ಹರಿಯೆ ೨
ಧಸ್ರೆಯನುದ್ಧರಿಸಲು ವರಾಹನಾದವನೆ
ಹಿರಣ್ಯಾಕ್ಷನ ಸೀಳ್ದ ಧೀರ ಬಾರೋ ಹರಿಯೆ ೩
ನಂಬಿದ ಭಕ್ತರ ಕಾವ ನಂಬೆ ಕರುಣದಿ ಕಲ್ಲ-
ಕಂಬದಿಂದ ಉದಿಸಿದ ಡಿಂಬ ಬಾರೊ ಹರಿಯೆ ೪
ಮಾಣವಕವೇಷನಾಗಿ ಕ್ಷೋಣಿ ಅಳೆದವನೆ
ದಾನವನ ಸೋಲಿಸಿದ ಜಾಣ ಬಾರೊ ಹರಿಯೆ೫
ಕಡಿ[ದು] ದುಷ್ಟನೃಪರ ಬಿಡದೆ ಚಪ್ಪೆಕೊಡಲಿಯ
ಪಿಡಿದುಗ್ರ ಒಡೆಯ ಬಾರೊ ಹರಿಯೆ ೬
ವೃಂದಾರಕವಂದ್ಯ ಸೇತುಬಂಧದಿ ದಶಕಂಧರನ
ಕೊಂದ ರಾಮಚಂದ್ರ ಬಾರೊ ಹರಿಯೆ ೭
ಮಲ್ಲರ[ನೆಲ್ಲ] ಸೀಳಿ ಬಲ್ಲಿದ ಮಾವನ ಕೊಂದೆ
ಎಲ್ಲರ ವಲ್ಲಭ ಎಂಬೊ ಮಲ್ಲ ಬಾರೊ ಹರಿಯೆ ೮
ಬೌದ್ಧನಾಗಿ ದೈತ್ಯರಿಗೆ ಶುದ್ಧಬುದ್ಧಿಯ ತೋರಿ
ರುದ್ರನ್ನ ಸೋಲಿಸಿದ ಸುಭದ್ರ ಬಾರೊ ಹರಿಯೆ ೯
ಕರ್ಕಶದ ಖಳರನ್ನು ಕಲ್ಕಿರೂಪನಾಗಿ [ಮೂಲೆ
ಲಿಕ್ಕಿಸುವ ಸುಜನರ ಚೊಕ್ಕ ಬಾರೊ ಹರಿಯೆ ೧೦
ವಿಜಯ ಹಯವದನ ಭಜಕರ ಭಾಗ್ಯನಿಧಿ
ಸುಜನಾಬ್ಧಿ ನ ತೇಜ ಬಾರೊ ಹರಿಯೆ ೧೧

 

೨೩೧
ನಾರಾಯಣನ ನೆನೆ ವರ್ಣಿಸು ಮನ್ನಿಸುಆರಾಧನೆಗಳ ಮಾಡುತ ಪಾಡುತನೀರಾಜನದಿಂದಲರ್ಚಿಸಿ ಮೆಚ್ಚಿಸಿ ವೇದಪಾರಾಯಣಪ್ರಿಯನ ಪ.
ಅವನ ಶ್ರವಣ ಮನನ ನಿಧಿಧ್ಯಾಸನಶ್ರೀವಿಷ್ಣುವಿನ ಭಕ್ತಿಮಹಾಪ್ರಸಾದಂಗಳುಕೈವಲ್ಯ ಪದಕಿಕ್ಕಿದ ನಿಚ್ಚಣಿಕೆ ಎಂದು ಭಾವಜ್ಞರು ಪೇಳ್ವರೊಜೀವನ ಜವನಬಾಧೆಯ ತಪ್ಪಿಸಿಪಾವನ ವೈಕುಂಠಪುರದೊಳಗೆಂದೆಂದುಆವಾಸವನು ಮಾಡಿ ಸುಖಿಸಬೇಕಾದರೆ ಸೇವಿಸು ವೈಷ್ಣವರ ೧
ಲೋಕದಿ ವರಂ ವರಯ ಭದ್ರಂತೆಋತೆ ಕೈವಲ್ಯಮಾತ್ಮನಃಏಕಮೇವೇಶ್ವರಸ್ತ ಸಾದ್ಭಗವಾನ್ ವಿಷ್ಣುರವ್ಯಯ ಎಂಬಾಈ ಕಲಿಯುಗದಲಿ ಬೇಕಾದ ಪುರಾಣಾದಿವಾಕುವಿವೇಕವ ಮನದಿ ವಿಚಾರಿಸಿಸ್ವೀಕರಿಸು ವೈಷ್ಣವ ಮತವ ಜೀವ ನಿರಾಕರಿಸನ್ಯಮತವ ೨
ದ್ವಾರಾವತಿಯ ಗೋಪಿಚಂದನದಿಂದಶ್ರೀರಮಣನ ವರ ನಾಮವ ನೆನೆ-ದೆರಡಾರೂಧ್ರ್ವ ಪುಂಡ್ರಗಳ ಧರಿಸೆಂದೆಂದು ವೀರವೈಷ್ಣವಗುರುವಸೇರಿ ಸಂತಪ್ತ ಸುದರುಶನ ಶಂಖಧಾರಣವನು ಭುಜಯುಗದಲಿ ಮಾಡಿಮುರಾರಿಯ ಮಂತ್ರಗಳವರಿಂದ ಕೇಳುತ ಓರಂತೆ ಜಪಿಸುತ್ತಿರು ೩
ಹರಿ ನಿರ್ಮಾಲ್ಯವ ಶಿರದಿ ಧರಿಸುತಿರುಹರಿ ನೈವೇದ್ಯವನೆ ಭುಂಜಿಸುತಿರುಇರುಳು ಹಗಲು ಹರಿಸ್ಮರಣೆಯ ಬಿಡದಿರು ದುರುಳರ ಕೂಡದಿರೊಹರಿಪದ ತೀರ್ಥದ ನೇಮವಬಿಡದಿರುಹರಿಪರದೇವತೆ ಎಂದರುಪುತಲಿರುಗುರುಮುಖದಿಂದ ಸಚ್ಛಾಸ್ತ್ರ ಪುರಾಣವ ನಿರುತದಿ ಕೇಳು ೪
ತುಷ್ಟನಹನು ಎಳ್ಳಷ್ಟು ಮುಂದಿಟ್ಟರೆಅಷ್ಟಿಷ್ಟೆನ್ನದೆ ಸಕಲೇಷ್ಟಂಗಳಕೊಟ್ಟುಕಾಯ್ವನು ಶಕ್ರನಿಗೆ ತ್ರಿವಿಷ್ಟಪಪಟ್ಟವ ಕಟ್ಟಿದವದುಷ್ಟರನೊಲ್ಲ ವಿಶಿಷ್ಟರಿಗೊಲಿವ ಅ-ನಿಷ್ಟವ ತರಿದೊಟ್ಟುವ ಜಗಜಟ್ಟಿ ಅರಿಷ್ಟಮುಷ್ಟಿಕಾದ್ಯರ ಹುಡಿಗುಟ್ಟಿದ ವಿಠಲ ಬಹು ದಿಟ್ಟ ೫
ಕಂದ ಬಾಯೆಂದರೆ ನಂದನಿಗೊಲಿದಿಹಕುಂದುಕೊರತೆ ಬಂದರೆ ನೊಂದುಕೊಳನುಇಂದಿರೆಯರಸ ಮುಕುಂದ ಮುಕುತಿಯ ನಂದನವನೀವ ದೇವಸಂದೇಹವಿಲ್ಲದೆ ಒಂದೆಮನದಿ ಸ-ನಂದನಾದಿಗಳು ಭಜಿಸಲು ಒಲಿವ ಉ-ಪೇಂದ್ರನ ಶುಭಗುಣಸಾಂದ್ರನ ಯದುಕುಲಚಂದ್ರನ ವಂದಿಸಿರೊ ೬
ಓಡುವ ಅಡಗುವ ದೇವರೆ ಬಲ್ಲರುಬಾಡುವ ಬೇಡುವ ಮುನಿಗಳೆ ಬಲ್ಲರುನೋಡುವ ಕೂಡುವ ಮುಕುತರೆ ಬಲ್ಲರೊಡನಾಡುವ ರಮೆ ಬಲ್ಲಳುಊಡುವ ಪಾಡುವ ಯಶೋದೆ ಬಲ್ಲಳುಕಾಡುವ ಖಳರ ಮರ್ದಿಸಿ ಹುಡಿಗುಟ್ಟಿದನಾಡೊಳು ಕೇಡುಗಳೆವ [ಕೃಷ್ಣನಿಗೀಡೆಂದಾಡದಿರು] ೭
ಆವನ ಪಕ್ಷವದಕೆದುರಿಲ್ಲಆವನ ಕುಕ್ಷಿಯೊಳಕ್ಕು ಜಗತ್ರಯಆವನು ಶಿಕ್ಷಿಪ ರಕ್ಷಿಪನು ಮತ್ತಾವನು ಪಾವನನುಆವನ ಶಿಕ್ಷೆಯ ಮಿಕ್ಕವರಿಲ್ಲ ಕೇ-ಳಾವನುಪೇಕ್ಷೆ ಕುಲಕ್ಷಯವೆನಿಪುದುಆವನುರುಕ್ರಮ ವಿಕ್ರಮನೆನಿಸಿದ ದೇವನಿಗಾವನೆಣೆ ೮
ಸಿರಿದೇವಿ ಆವನಿಗರಸಿ ಸುರರ ಗುರುವಿರಿಂಚಿ ಪವನರು ಆವನ ಕುವರರೆಂಬರುಉರಗಾಧಿಪನಾವನ ಮಂಚ ವಿಹಗೇಶ್ವರನಾವನ ವಾಹನಪುರಹರನಾವನುಂಗುಟನೀರಪೊತ್ತ ನಿ-ರ್ಜರ ಪತಿ ಆವನ ಚರಣಸೇವಕನಾದಸುರರೊಳಗೀ ಹಯವದನಗಿನ್ನಾರನು ಸರಿಯೆಂದುಸುರುವೆನೊ ೯

 

೧೮೬
ನಾರಾಯಣನೆಂಬ ನಾಮವೇ ಮೂಲಮಂತ್ರಓರಂತೆ ಜಪಿಸುವೆನು ಶ್ರೀಹರಿ ಹರಿ ಪ.
ಆರ ಬಿಡುವೆನು ಮತ್ತಾರ ಕೂಡುವೆನುಆರಾರಿಗೊಡಲನೀವೆಆರಂಘ್ರಿಗೆರಗುವೆ ಆರಾರ ಮನ್ನಿಸುವೆಆರಿಂದ ಉದರ ಪೂರ್ತಿ ೧
ಆರಿದ್ದರೇನುಫಲ ಆರು ಬಗೆಯನರಿತುಆರುಸಾವಿರವನೋದಿನೂರ ನೀರೊಳಗಿಟ್ಟು ಆರೆಂಟ ನೆನೆದು ಹದಿ-ನಾರನಾದರು ಕೊಟ್ಟನೆ ೨
ಇಬ್ಬರೊಳಗೆ ಎನಗೊಬ್ಬನೆ ಸಾಕು ಕಣ್ಗೆಹಬ್ಬವಾವನ ಕಂಡರೆಒಬ್ಬನಿಗೋಸುಗ ಮತ್ತೊಬ್ಬನ ಭಜಿಸುವೆಅಬ್ಜಾಕ್ಷ ಹಯವದನ ೩

 

೧೮೭
ನಿತ್ಯ ನಿಗಮನಿಕರ ನಿಶ್ಚಿತ ನಿರ್ಮಲ ನಿನ್ನವನ್ನಸತ್ಯಸಂಧ ಹಯವದನ್ನ ಸಲಹಬೇಕೆನ್ನ ಪ.
ಉದಧಿಸುತೆಯ ಉರದಿ ಧರಿಸಿ ಉತ್ತಮೋತ್ತಮಸುಧೆಯನುಣಿಸಿ ಸುರರ ಪೊರೆದೆ ಸುಜನ ಸುಖಕರಮಧುರವಚನ ಮಾನ್ಯರಚನ ಮೃತ್ಯುಮೋಚನಕದನಕರ್ಕಶ ಕಲಿಮಲಘ್ನ ಕಮಲಲೋಚನ ೧
ಮಂಗಳಾಂಗ ಮಧ್ಯರಹಿತ ಮದನಮೋಹನಕಣ್ಗೆ ಎನಗೆ ಕಾಣಿಸು ನಿನ್ನ ಕಾಯಕಾಂತಿಯಭಂಗರಹಿತ ಭವ್ಯಚರಿತ ಭಯಕೆ ಭಯಹರರಂಗರಾಯ ರಸಿಕರರಸ ರಕ್ಷಿಸಬೇಕೆನ್ನ ೨
ಮಧುಕೈಟಭರ ಮರ್ದಿಸಿ ಮತಿಯ ಮಗಗಿತ್ತನಅದರಿಂದ ಅಮರರೆಲ್ಲ ಅರಿತುಕೊಂಡರುಇದಿರುಗೊಂಡು ಇವನ ನೋಡಿ ಇರವ ಮರೆತರುಹೃದಯಸದನ ಹಯವದನ್ನ ಹೊರೆಯಬೇಕೆನ್ನ ೩

 

೨೬೦
(ಅ?)ನಿತ್ಯವೆಂಬುದ ಕೇಳು ಜೀವ ಬಲು
ನಿತ್ಯವೆಂಬುದು ಈಗ ಬಾಳುವ ಕಾಯ ಪ.
ಸತ್ಯ ಸತ್ಯ ಸರ್ವ ಜೀವರನಿಟ್ಟುಕೊಂಡು
ವಿಸ್ತಾರವಾದೊಂದಾಲದೆಲೆಯಲ್ಲಿ ಮಲಗಿದ್ದು ಅ.ಪ.
ಹರಿ ಹ್ಯಾಗೆ ನಿತ್ಯನೊ ಹಾಗೆ ಜೀವನು ನಿತ್ಯ
ಹರಿಯೆಂಬೋ ಧಣಿಗೆ ಈ ಜೀವನು ಭೃತ್ಯ
ಹರಿ ಜೀವರೊಳಗೆ ಹೀಗೆ ತಿಳಿದವನು
ಧರೆಯೊಳಗೆಂದೆಂದಿಗು ಕೃತಕೃತ್ಯನು ೧
ಹರಿಯೆಂಬೊ ರಾಜಗೆ ಗುರುಮೂರುತಿ ಮಂತ್ರಿ
ಪರಿವಾರ ಇವರಯ್ಯ ಜೀವಂಗಳು
ಅರಿತು ಈ ವಿಧದಲ್ಲಿ ನಿರುತ ಪಾಡುವರಿಗೆ
ಪರಲೋಕದಲಿ ದಿವ್ಯಭೋಗಂಗಳು ೨
ಭಿನ್ನ ಭಿನ್ನ ಜೀವ ಭಿನ್ನ ಭಿನ್ನ ಕರ್ಮ-
ವೆನ್ನುವುದೆ ಘನ್ನತತ್ವಂಗಳು
ಅನ್ಯಥಾನುಡಿಯಲ್ಲ ಇನ್ನು ಸಂಶಯವಿಲ್ಲ
ಎನ್ನೊಡೆಯ ಹಯವದನ ಬಲ್ಲ ೩

 

೨೯೦
ನಿದ್ರೆಮಾಡಿದ ರಂಗ ನಿದ್ರೆಮಾಡಿದ
ಭದ್ರಹಾಸಿಗೆ ಮೇಲೆ ಸಮುದ್ರರಾಜನ ಮಗಳ ಸಹಿತ ಪ.
ವೇದಕದ್ದ ಅಸುರನಿಗಾಗಿ ಆ ಮತ್ಸ್ಯರೂಪವ ಧರಿಸಿ
ಸಾಧಿಸಿ ಅಸುರನ ಕೊಂದ ವಾರಿಜಾಕ್ಷ ಬಳಲಿ ಬಂದು ೧
ತರಳ ಹಿರಣ್ಯಕಶ್ಯಪನ ಕರುಳ ಬಗೆದು ಕೊರಳೊಳಿಟ್ಟು
ನರಮೃಗ ರೂಪವ ತಾಳಿ ನರಸಿಂಹ ಬಳಲಿ ಬಂದು ೨
ಬಲಿಯ ದಾನವನ್ನೆ ಬೇಡಿ ನೆಲನ ಮೂರಡಿ ಮಾಡಿ
ಒಲಿದು ಬಾಗಿಲನ್ನೆ ಕಾಯ್ದ ವಾಮನನಾದ ಬಳಲಿ ಬಂದು ೩
ತಂದೆಯ ಮಾತನ್ನೆ ಕೇಳಿ ತಾಯಿ ಶಿರವನ್ನೆ ಅಳಿದು
ಏಳುಮೂರು ಬಾರಿ ನೀನು ಭೂಮಿಯ ಪ್ರದಕ್ಷಣೆಮಾಡಿ ೪
ಸೀತೆಗಾಗಿ ಪಡೆಯ ಸವರಿ ಸೇತುಬಂಧನವ ಮಾಡಿ
ದೂತರಾವಣನ್ನ ಕೊಂದು ಸೀತಾರಾಮ ಬಳಲಿ ಬಂದು ೫
ಗೋಕುಲದಲ್ಲಿ ಹುಟ್ಟಿ ಗೋವುಗಳನ್ನೆಲ್ಲ ಕಾಯ್ದು
ಗೋಪಸ್ತ್ರೀಯರ ಸೀರೆ ಸೆಳೆದು ಗೋಪಾಲಕೃಷ್ಣ ಬಳಲಿ ಬಂದು ೬
ಬತ್ತಲೆ ಕುದುರೆಯನೇರಿ ಮತ್ತೆ ತೇಜಿಯನ್ನೆ ನಡೆಸಿ
ಹತ್ತಾವತಾರವ ತಾಳಿ ಮತ್ತೆ ಕಲ್ಕಿರೂಪನಾಗಿ ೭
ಧರೆಯೊಳತ್ಯಧಿಕವಾದ ಶ್ರೀರಂಗಪಟ್ಟಣದಿ ನೆಲೆಸಿ
ಕರುಣದಿಂದ ಭಕ್ತರನ್ನು ಸಲಹಬೇಕು ಹಯವದನನೆ ೮

 

೬೮
ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯಎನಗೊಂದು ಸಾಧನ ಲೇಸುಕಾಣಬಾರದು ಪ.
ಸ್ನಾನಮಾಡಿಯೆ ನಿನ್ನ ಸಂಪಾದಿಸೇನೆಂದರೆಸ್ನಾನಮಾಡದೇ ಕಪ್ಪೆ ಸರ್ವಕಾಲದಲಿಧ್ಯಾನ ಮಾಡಿಯೇ ನಿನ್ನ ಸಂಪಾದಿಸೇನೆಂದರೆಧ್ಯಾನ ಮಾಡದೇ ಬಕಪಕ್ಷಿಯು ಸರ್ವದಾ ೧
ಜಪವ ಮಾಡಿಯೆ ನಿನ್ನ ಕೃಪೆಗೊಳಗಾಗುವೆನೆನೆಜಪದಲ್ಲಿ ಮನಸ್ಸೆನ್ನಾಧೀನವಿಲ್ಲಉಪವಾಸವೇ ಉಚಿತ ಸಾಧನವೆಂಬೆನೆಉಪವಾಸವೇ ಇರದೆ ಉರಗನು ತಾ ಸರ್ವದಾ ೨
ಸನ್ನ್ಯಾಸ ಸುಖಸಾಧನವು ಎಂತೆಂಬೆನೆಸನ್ನ್ಯಾಸಿಯಾಗಿರನೆ ರಾವಣನುಕನ್ಯಾದಾನವೆ ಮುಖ್ಯ ಸಾಧನವೆಂಬೆನೆಕನ್ಯಾದಾನವ ಕೊಡನೆ ಕಂಸಗೆ ಜರಾಸಂಧ ೩
ಜಾತಿಲಿ ನಿಮ್ಮ ದಯ ಸಂಪಾದಿಸೇನೆಂದರೆಜಾತಿಲಿ ಕಶ್ಯಪಸುತರು ದೈತ್ಯರಾಗಿರರೆಭೂತಿಲಿ ನಿಮ್ಮ ದಯ ಸಂಪಾದಿಸೇನೆಂದರೆಭೂತಿಯಾಗಿರನೆ ಈ ದುರುಳ ದುರ್ಯೋಧನ ೪
ಬಂಧುತ್ವವೇ ಗತಿ ಸಾಧವವೆಂಬೆನೆಬಂಧುತ್ವವಿರದೆ ಶಿಶುಪಾಲನಿಗೆಒಂದರಿಂದುಚಿತ ಕಾಣೆ ಹಯವದನರಾಯನೆಎಂದೆಂದಿಗೂ ದಾಸನೆಂದೆನಿಸೊ ೫

 

೧೮೮
ನಿನ್ನ ದಾಸನು ನಾನು ಎಂತಾಹೆನಯ್ಯಅನ್ನಂತ ಅಪರಾಧಕಾಕರಾದವನು ಪ.
ಅರುಣೋದಯವ ಜರಿದು ಆಹ್ನಿಕ ಕರ್ಮವ ತೊರೆದುಪೊರೆವ ನಿನ್ನಡಿಯ ಮರೆದುದುರುಳರಿಗೆ ಬಾಯ್ದೆರೆದು ದೈನ್ಯದಲಿ ಪಲ್ಗಿರಿದುಮರಿಯಾದೆಗೆಟ್ಟು ತಿರಿದುಇರುಳು ಹಗಲೆನ್ನದೆ ಈ ವಿಧದಿ ಹೊಟ್ಟೆಯಹೊರೆದು ಇದು ಪುಣ್ಯ ಇದು ಪಾಪವೆಂದರಿಯದವ ೧
ಜಟ್ಟಿಗಳ ಮನೆಯ ನಾಯಂತೆ ಒಳ್ಳೆಬಟ್ಟೆಗಳತೊಟ್ಟವರ ಹಿಂದೆ ತಿರುಗಿಅಟ್ಟುಂಡು ಬಾಳಿಬದುಕಿದ ತಮ್ಮ ಹಿರಿಯರುಕೆಟ್ಟು ಮುರಿದುದನು ಪೇಳಿಉಟ್ಟ ಅರಿವೆಯ[ಕೋರಿ] ಹೊಟ್ಟೆ ಬಾಯನೆ ತೋರಿಕೊಟ್ಟುದಕೆ ತೃಪ್ತನಾಗದೆ ಅವರ ಬಯ್ವವನು ೨
ವೃತ್ತಿ ಅಲ್ಲದ ಶೂದ್ರ ವೃತ್ತಿಗಳನನುಸರಿಸಿ ಅ-ಕೃತ್ಯ ಶತಗಳನು ಮಾಡಿಸತ್ಯ ಶೌಚಂಗಳ ಬಿಟ್ಟು ಶ್ರವಣ ಮನನಾದಿ ಪ್ರ-ಸಕ್ತಿಗಳ ಹೋಗಲಾಡಿಉತ್ತಮರು ತಾಯಿತಂದೆ ಗುರುಹಿರಿಯರುಗಳಅರ್ಥಗಳನಪಹರಿಸಿ ಅವರ ನಿಂದಿಸುವನು ೩
ಪರ್ವ ಉಪರಾಗ ದ್ವಾದಶಿ ಅಯನಗಳಲ್ಲಿಸರ್ವವಿಹಿತಗಳ ಮೀರಿಉರ್ವಿಯೊಳು ಉಳ್ಳ ಯೋಗ್ಯರನೆಲ್ಲ ಹಳಿದೆನ್ನನಿರ್ವಾಹಗಳನೆ ತೋರಿದುರ್ವಿಚಾರದಿ ಸ್ವಲ್ಪಧನಕಾಗಿ ಎನ್ನೊಳಿಹಪೂರ್ವಸಂಚಿತಮಂತ್ರ ತುಚ್ಛರಿಗೆ ಮಾರಿದವ ೪
ಛಲ ಚಾಡಿ ಡಂಭ ಮಿಥ್ಯಾಜ್ಞಾನ ದುರ್ವಿಷಯಕುಲಸತಿಯ ಕೂಡೆ ಕಲಹಕಳವು ಕಠಿಣೋಕ್ತಿ ದುಷ್ಟಾನ್ನಭೋಜನ ಮದುವೆ-ಗಳ ಮುರಿವ ಪಾಪಚಿಂತೆಹಳಿವ ಹರಿವಾಸರ ವ್ರತಭಂಗದಿಂದ ನಾನಾಗಿಸುಲಭ ಹಯವದನನ್ನ ಮರೆತ್ಹಾಳುಹರಟೆಯವ ೫

 

೧೯೦
ನೀ ಕರುಣದಿಂದ ಪಾಲಿಸದಿದ್ದರೆ ಇನ್ನುನಾ ಕಾಣೆ ಮನ್ನಿಸುವರ ಪ.
ಸಾಕಾರ ಮೂರುತಿ ಸರ್ವೋತ್ತಮನೆನೀ ಕಾಯೊ ಪರಾಕುಮಾಡದೆ ಎನ್ನನು ದೇವ ಅ.ಪ.
ಗುರುಹಿರಿಯರನು ಕಂಡು ತರಳತನದಲಿ ನಾನುಚರಣಕೆರಗದೆ ತಿರುಗಿದೆವರ ಸಕಲ ಸಂಪದವ ಬೇಡಿ ಬಯಸುತ ನಿನ್ನಸ್ಮರಣೆಯನು ಮರೆತಿದ್ದೆನೊಸ್ಮರನ ಬಾಣಕೆ ಸಿಲುಕಿ ಪರಸತಿಗೆ ಮರುಳಾಗಿದುರ್ಗತಿಗೆ ನೆಲೆಯಾದೆನೊಸಿರಿಯರಸನೆ ನಿನ್ನ ಚರಣವನು ನಂಬಿದೆನೊಕರುಣದಿಂ ಕಡೆಹಾಯಿಸೊ ೧
ಆರುಮಂದಿಗಳೆಂಬ ಕ್ರೂರವೈರಿಗಳಿಂದಗಾರಾದೆನವರ ದೆಸೆಗೆಮಾರಿಹಬ್ಬದ ಕುರಿಯು ತೋರಣವ ಮೆಲುವಂತೆತೋರುತಿದೆ ಎನ್ನ ಮತಿಗೆಘೋರ ಸಂಸಾರವೆಂಬೋ ವಾರಿಧಿಯ ದಾಟಿಸುವಚಾರುತರ ಬಿರುದು ನಿನಗೆಮಾರನಯ್ಯನೆ ನಿನ್ನ ಚರಣವನು ನಂಬಿದೆನುಪಾರಗಾಣಿಸೊ ಎನ್ನನು ೨
ಹಲವು ಜನ್ಮಗಳಲ್ಲಿ ಬಲುನೊಂದು ಬಾಯಾರಿತೊಳತೊಳಲಿ ಬಳಲುತಿಹೆನುಸಲೆ ಉದರ ಪೋಷಣೆಗೆ ತಲೆಹುಳುಕ ನಾಯಂತೆಹಲವು ಮನೆ ತಿರುಗುತಿಹೆನೊಜಲದ ಮೇಲಿನ ಗುಳ್ಳೆಯಂತಿಪ್ಪ ಈ ದೇಹನೆಲೆಯೆಂದು ನೆಚ್ಚುತಿಹೆನೊಜಲಜನಾಭನೆ ನಿಮ್ಮ ಮಹಿಮೆಯನು ಪೊಗಳುವೆನುಚೆಲುವ ಶ್ರೀ ಹಯವದನ ರನ್ನ ೩

 

೧೯೧
ನೀ ಕಾಯೊ ಎನ್ನ ಎನಗೆ ನೀ ಬಂಧುಎಂದೆಂದೂ ದಯಾಸಿಂಧುಪ.
ತಮನ ಕೊಂದೆ ಶೃತಿತತಿಯ ನೀ ತಂದೆಕೂರ್ಮನಾಗಿ ಗಿರಿಯನೆತ್ತಿದೆಕ್ಷಮೆಯ ಪೊತ್ತೆ ಹಿರಣ್ಯಕನ ಕಿತ್ತೆ ತ್ರಿ-ವಿಕ್ರಮನಾಗಿ ಬೆಳೆದೆ ತ್ರೈಲೋಕವನಳೆದೆ ೧
ರಾಯರಾಯರ ಗೆಲಿದೆ ರಾವಣ ಬಲವನು ಮುರಿದು-ಪಾಯದಿ ಗೋವಳನಾದೆಸ್ತ್ರೀಯರ ಕೆಡಿಸಿದೆ ಕಲಿಯಾಗಿ ಕೊಲಿಸಿದೆಕಾಯಜನ ತಾತ ಕಾಮಿತಫಲದಾತ ೨
ಸುರರ ಶಿರೋರನ್ನ ಕರುಣಾಸಂಪನ್ನಸರುವ ಮಾನವರ ಮಾನ್ಯಸಿರಿಹಯವದನ್ನ ಪರಮಪಾವನ್ನಪರಿಪೂರ್ಣ ಶಶಿವರ್ಣ ನಿರುತ ನೀಲವರ್ಣ ೩

 

೧೯೨
ನೀಲವರ್ಣ ವಿಠಲ ನಾ ನಿನ್ನ ಮೆಚ್ಚಿದೆ ಎನ್ನಪಾಲಿಸಯ್ಯ ಪರಮಪಾವನ್ನ ಮೆಚ್ಚಿದೆ ಪ.
ಅರವಿಂದ ಶರಧಿ ಲೋಚನಕೆ ಭಯ ನಿನ್ನವರ ನೀಲೋತ್ಪಲದೀ ವಕ್ಷದೊಳ್ ಘಾಯಸ್ಮರನ ಧಾಳಿಗೆ ಕಡುನೊಂದೆನೊ ಪ್ರಿಯಾ ನಿನ್ನಕರುಣಕವಚವನ್ನು ತೊಡಿಸೊ ಜೀಯ ೧
ಉರದ ಮೇಲಿಡು ಪಾದ ಬಾಲರವಿಯ ನಿನ್ನತರಳಲೋಚನಕೆ ಮುಖೇಂದು ಛವಿಯಗುರುಮಾಡಿ ಸಲಹಯ್ಯ ಸಿರಿದೇವಿಯ ಎನ್ನೊಡನೆವರವ[ಪಡೆವೆನು] ನಿನ್ನಂಘ್ರಿಸೇವೆಯ ೨
ಮುನಿಜನ ಮನಕೆ ಸಿಲುಕದಿಪ್ಪನ ಎನ್ನಮನೆಗೆ ಬಾರೆಂಬುದುಚಿತವಲ್ಲ ನಿನ್ನಅನಿಮಿತ್ತ ಬಂಧುವೆ ನೀ ದಯಾಸಂಪನ್ನಎನ್ನಿನಿಯ ಬಾರಯ್ಯ ನೀನು ಹಯವದನ್ನ ೩

 

೧೯೩
ನೂರೆಂಟು ನೆನೆದು ಫಲವೇನು ಈರೇಳು ಜಗದೊಡೆಯಹರಿಯನೊಮ್ಮೆ ನೆನೆ ಮನವೆ ಪ.
ಧನದಾಸೆಗಳಲದಿರು ಭವದುಃಖ ಬಳಲದಿರುಜನಾರ್ದನನ ಮರೆಯದಿರು ಈ ತನುವ ಪೊರೆಯದಿರುಅನಘಜನರೊಡನಾಡು ದಿನದಿನ ಶುಭವಕೂಡುಇನಿತು ಜನಮವೆ ಸಾಕು ಇನ್ನು ಮುಕುತಿಯೆ ಬೇಕು ೧
ಸಾಕು ದುರ್ಜನರಾಟ ಸಾಕು ಸತಿಯರ ಬೇಟಸಾಕು ಸವಿಯನ್ನದೂಟ ಸಾಕು ಘನಕೂಟಸಾಕು ದೇಶಕೆವೋಟ ಸಾಕು ಸಲೆ ಭವನೋಟಸಾಕದೆಲ್ಲ ಖಳಕೂಟ ಸಾಕುಮನೆ[ಮಠ] ೨
ಕೇಳು ಹರಿಮಹಿಮೆಯನು ಪೇಳು ಹರಿನಾಮವನುಬಾಳು ಬಂದಷ್ಟರಿಂದ ತಾಳು ಹಸಿತೃಷೆಗಳಶ್ರೀಲಲನೆಯಾಳ್ದ ಹಯವದನ ಸಿರಿನರಹರಿಯಆಳುತನವನು ಬೇಡು ಕೀಳು ಬುದ್ಧಿಯ ದೂಡು ೩

 

೭೦
ನೆನೆವೆನನುದಿನ ನೀಲನೀರದವರ್ಣನ ಗುಣರನ್ನನಮುನಿಜನಪ್ರಿಯ ಮುದ್ದು ಉಡುಪಿನ ರಂಗನ ದಯಾಪಾಂಗನ ಪ.
ದೇವಕೀ ಜಠರೋದಯಾಂಬುಧಿಚಂದ್ರನ ಸುಖಸಾಂದ್ರನಗೋವ್ರಜಕೆ ಘನ ಯಮುನೆಯನು ದಾಟಿ ಬಂದನ ಅಲ್ಲಿ ನಿಂದನಮಾವ ಕಳುಹಿದ ಮಾಯಶಠವಿಯ ಕೊಂದನ ಚಿದಾನಂದನ ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿಸಿದ್ಧನ ೧
ಗೋಕುಲದ ಗೋಪಿಯರ ಸಂಚಿತ್ತ ಚೋರನ ಬಹು ಧೀರನ ಅ-ನೇಕ ನಾರಿಯರ್ವಸನವನು ಕದ್ದೊಯ್ದನ ಪುರಗಾಯ್ದನನಾಕಿಯರ ನೋಯಿಪಧೇನುಕ ವತ್ಸವಿಘಾತ ವಿಖ್ಯಾತನಕಾಕುಮತಿ ಕಾಳಿಂಗನ ಫಣ ತುಳಿದನ ಆವಗೊಲಿದನ ೨
ಶೈಲವನು ಶೇಷಶಯನ ಬೆರಳಲಿ ಆಂತನ ಬಲವಂತನಸೋಳಸಾಸಿರ ಬಾಲೆಯರ ಕರ ಪಿಡಿದನ ಸುಧೆಗುಡಿದನಬಾಲ ಭಾಮೆಯರೊಡನೆ ಜಲಕ್ರೀಡೆಗಿಳಿದನ ಅಲ್ಲಿ ನಲಿದನಲೀಲೆಯಲಿ ಲಲನೆಯರಿಗಿಷ್ಟವ ಕೊಟ್ಟನ ಸಂತುಷ್ಟನ ೩
ಕ್ರೂರ ಬಕ ಕೇಶಿಗಳನೆಲ್ಲ ಸೀಳ್ದನ ಸುರರಾಳ್ದನ ಅಕ್ರೂರ ಕರೆಯಲು ಹರುಷದಿಂದಲಿ ಬಂದನ ಸುರವಂದ್ಯನಸಾರಿ ಕುಬ್ಜೆಗೆ ಭೂರಿಸಂತಸವಿತ್ತನ ಅತಿಶಕ್ತನವಾರಣವ ಒದ್ದು ಕೆಡಹಿದಾಪ್ರತಿಮಲ್ಲನ ಅತಿಚೆಲ್ವನ೪
ಸುಲಭದಿಂದಲಿ ಶಿವನ ಧನುವನು ಮುರಿದನ ನೆರೆಮೆರೆದನಮಲೆತ ಮಲ್ಲರ ಮಡುಹಿರಂಗದಿ ನಿಂತನ ಜಯವಂತನಖಳಕುಲಾಗ್ರಣಿ ಕಂಸನೆಂಬನ ಹೊಡೆದನ ಹುಡಿಗೆಡೆದನಬಲದಿ ತಾಯಿತಂದೆ ಬಂಧನ ಕಡಿದನ ಕೀರ್ತಿ ಪಡೆದನ ೫
ಭುವನ ಪಟ್ಟವನುಗ್ರಸೇನಗೆ ಕೊಟ್ಟನ ಅತಿ ದಿಟ್ಟನಯುವತಿಯರಿಗುದ್ಧವನ ಕಳುಹಿದ ಜಾಣನ ಸುಪ್ರವೀಣನವಿವಿಧ ವಿದ್ಯಾ ಕಲೆಗಳನ್ನೆಲ್ಲ ಅರಿತನ ಶುಭಚರಿತನ ಜವನ ಶಿಕ್ಷಿಸಿ ದ್ವಿಜನ ಕಂದನ ತಂದನ ಆನಂದನ ೬
ಕುಮತಿ ಖಳ ಮಾಗಧನ ಯುದ್ಧದಿ ಗೆದ್ದನ ಅನವದ್ಯನದ್ಯುಮಣಿಸಮ ದ್ವಾರಕೆಯ ರಚಿಸಿದುದಾರನ ಗಂಭೀರನಸುಮತಿ ಮುಚುಕುಂದನೊದ್ದ ಯವನನ ಸುಟ್ಟನ ಅತಿದಿಟ್ಟನವಿಮಲ ಸುಚರಿತ್ರಾಷ್ಟಮಹಿಷಿಯರಾಳ್ದನ ನೆರೆಬಾಳ್ದನ ೭
ಮುರನರಕ ಮುಖ್ಯರನು ಚಕ್ರದಿ ತರಿದನ ಕರಿವರದನಸುರತರುವ ಸತಿಗಾಗಿ ತಂದ ಸಮರ್ಥನ ಜಗತ್ಕರ್ತನದುರುಳ ಶಿಶುಪಾಲಾದಿ ದೈತ್ಯ ಸಂಹಾರನ ಬಹು ಶೂರನಕುರುಕುಲಕೆ ಲಯವಿತ್ತ ಪಾಂಡವಪ್ರೀಯನ ಕವಿಗೇಯನ ೮
ಸಂತತವೀ ಸಾರ ಕತೆಯನು ಕೇಳ್ವರ ನೆರೆ ಬಾಳ್ವರಕಂತುಪಿತ ಕಾರುಣ್ಯದಿಂದಲಿ ಹೊರೆವನು ಸುಖಗರೆವನುಇಂತು ಇಳೆಯ ಸುಜನರ ಸಲಹುವ ಕಾಂತನ ಸಿರಿವಂತನಪಂಥವುಳ್ಳ ಪ್ರಸನ್ನ ಹಯವದನ್ನನಮುನಿಮಾನ್ಯನ ೯

 

೧೨೧
ನೆರೆನಂಬಿ ಪಡೆಯಿರೊ ಹಿತವ ನಮ್ಮಗುರು ಮಧ್ವಮುನಿಯ ಸಮ್ಮತವ ಪ.
ತ್ರೇತೆಯೊಳಂಜನೆತನಯನಾಗಿಸೀತಾರಮಣ ರಘುಪತಿಗತಿಪ್ರಿಯದೂತತನದಿ ಖಳತತಿಯ ಕೊಂದುಖ್ಯಾತಿ ಪಡೆದ ಹನುಮಂತನಾದ ಯತಿಯ೧
ದ್ವಾಪರದಲಿ ಭೀಮನೆನಿಸಿ ಪಾಂಡು-ಭೂಪನರಸಿ ಕುಂತಿ ಉದರದಿ ಜನಿಸಿಶ್ರೀಪತಿಗರ್ಥಿಯ ಸಲಿಸಿ ದೈತ್ಯ-ರೂಪ ನೃಪನ ಕೊಂದ ಮುನಿಪನ ಭಜಿಸಿ೨
ಕಲಿಯುಗದಲಿ ಯತಿಯಾಗಿ ಈಇಳೆಯ ದುಶ್ಶಾಸ್ತ್ರವ ಜರಿದವರಾಗಿಕುಲಗುರು ಮಧ್ವಪತಿಮುನಿಯೋಗಿ ನಮ್ಮಬಲು ಹಯವದನನ ಬಂಟನೆಂದು ಬಾಗಿ ೩

 

೩೩೧
ನೆಲದಲ್ಲಿ ಪಸರಿಸಿದ ಪಾಲಮೇಲೊರಗಿದ್ದ
ಹಳೆಯ ಹಾವ ಕಂಡೆನದರಲದ್ಭುತವ ಕಂಡೆ ಪ.
ನಡುಗಡಿದ ಸಿಂಗಡಿಯ ಬಿಲ್ಲ ಕಂಡೆನದರಮೇ-
ಲ್ಗಡೆಯಲಧೋಮುಖದ ತುಂಬಿಗಳ ಹಿಂಡ ಕಂಡೆ
ಮಡುವೆರಡ ಕಡೆಯಲ್ಲಿ ಒಂದೊಂದು ಮಕರಿಯ ಕಂಡೆ
ಕಡೆದ ಶಂಖ ಚತುರ್ವೇದಕೊದಗುವುದ ಕಂಡೆ ೧
ಪದುಮದೆಸಳ್ಗಳಿಗೆ ಮೂರು ವಿಧದ ಬಣ್ಣವ ಕಂಡೆ
ಮೃದುವಾದ ಕೂರ್ಮಗಳ ಬೆನ್ನಸೊಬಗ ಕಂಡೆ
ಮಧುರ ಪವಳೊಳಗೆ ಪುಟ್ಟ ಕರಡಿಗೆಯ ಕಂಡೆ
ಅಧೋಮುಖದ ಸಂಪಿಗೆಗೆರಡು ವಿವರವ ಕಂಡೆ ೨
ನೇಲುತಿದ್ದ ಲತೆಗಳ ತುದಿಯ ಜಾಲವ ಕಂಡೆ ವಿ-
ಶಾಲವಾದ ನೀಲಮಣಿಯ ಹಲಗೆಯಲಿ ಹೆಣ್ಣ ಕಂಡೆ
ಏಳು ಲೋಕಗಳೊಳಗೆ ಪುಟ್ಟ ಕರಡಿಗೆಯ ಕಂಡೆ
ಈ ಲೋಕವ ಮೋಹಿಸುವ ಮೂರು ಚಿನ್ನದ ಕೋಲ ಕಂಡೆ ೩
ಬಾವಿಯೊಳು ಪುಟ್ಟಿಕೊಂಡ ಸ್ಥೂಲ ಪದ್ಮವ ಕಂಡೆ
ಭಾವಿಸೆ ಕರಿಯಿಲ್ಲದ ಕುಂಭಸ್ಥಳವ ಕಂಡೆ
ಆವಾಗಳಿವಿಲ್ಲದ ಕದಳಿ ಕಂಬಗಳ ಕೆಳಗೆ
ಈ ವಸುಧೆಯ ಮೋಹಿಸುವೆರಡು ಕನ್ನಡಿಗಳ ಕಂಡೆ ೪
ಬೆಳೆದೆರಡು ಗಜದಂತಗಳ ಕಂಡೆ ನಳನಳಿಪ
ನಳಿನಯುಗ್ಮವ ಕಂಡೆನದರೆಸಳುಗಳಲ್ಲಿ
ತೊಳೆದ ಹತ್ತು ಮುತ್ತುಗಳ ಕಂಡೆ ಬೇಗದಲಿ ಶ್ರೀ-
ಲಲನೆಯಾಳ್ದ ಹಯವದನನಾಳ್ಗಳೆ ಬಲ್ಲರೈಸೆ ೫

 

೭೧
ನೋಡಿದೆ ಶ್ರೀಕೃಷ್ಣನ ನೋಡಿದೆ ಪ.
ನೋಡಿದೆ ಒಂಬತ್ತುಗೂಡಿನ ಕಿಟಕಿಯೊಳ್ಕೂಡಿದ ಮಂದಿಯೊಳ್ಗಾಡಿಕಾರನನಿಂದು ಅ.ಪ.
ನಾರಿಪುರುಷರೊಂದುಗೂಡಿ ಮುಂದೆದಾರಿಯ ಬಿಡದೆ ಹೋರ್ಯಾಡಿ ದೇಹಯಾರದಂತೆ ಪುಡಿಪುಡಿ ಮತ್ತೆಶ್ರೀರಮಣನ ಪಾಡಿ ಬೇಡಿ ಆಹಾ ಸುತ್ತಸೇರಿದ ಜನರಿವರ ಮಧ್ಯದಿಚಾರು ಮೌಕ್ತಿಕದ ಮಣಿಹಾರ ಶೃಂಗಾರನ್ನ ೧
ಅಂಗದೊಳಿಹ ದಿವ್ಯಾಭರಣ ಕನ-ಕಂಗಳೊಪ್ಪಿದ ರವಿಕಿರಣ ಮುನಿ-ಪುಂಗವೆ ವಂದಿಪ ಚರಣಕಮ-ಲಂಗಳ ನೆನೆವರ ಕರುಣ ಆಹಾ ಹಿಂಗದೆÉ ಪೊರೆವ ಶ್ರೀರಂಗನುತ್ಸವಕೆಂದುಮಂಗಲಾರತಿಯಾಗಿ ಸಂಗಡ ಪೊರಡಲು ೨
ಭರದಿಂದ ಪಲ್ಲಕ್ಕಿನೇರಿ ಮಧ್ವಸರೋವರದೆಡೆಯನು ಸಾರಿ ಸುತ್ತಮೆರೆವ ದೀಪದಿಂದೀರಿ (?) ನೋಳ್ಪ ಜ-ನರಿಗೆ ಜಲಕ್ರೀಡೆ ತೋರಿ ಆಹಾಸಿರಿ ಅರಸನು ಹಯವದನನೇರಿ ಮೆರೆವ ಉಡುಪಿಯೊಳ್ಪರಿಯಾಯ ವಿನೋದವನ್ನು ೩

 

೭೨
ನೋಡೆ ನೋಡೆ ನೋಡೆ ಗೋಪಿನೋಡೆ ನಿನ್ನ ಮಗನಾಟವ ಪ.
ಮಧುರೆಯೊಳಗಿರುವೋದೆ ಕಠಿಣವೆ ಮದನಜನಕನ ಕಾಟವೆ ಹೆದರಿಸಿ
ಬೆದರಿಸಿ ನಮ್ಮಾ ನಮ್ಮಗುಗಳ ಚೂಟೋಡಿ ಹೋದನೆ ೧
ನಿನ್ನಿನಾ ದಿನದಲ್ಲಿ ಬಂದುಗನ್ನಗತಕ ಕೃಷ್ಣನು ಹೆಣ್ಣಮಕ್ಕಳ ಕಣ್ಣ ಮುಚ್ಚಿ
ಬೆಣ್ಣೆಯ ಮೆಲುವುತ ಓಡಿದ ೨
ಜಾರಬುದ್ಧಿ ಮಾಡದಿರೆಂತ ಪೇಳಿದೆವು ಬಹಳ ನಾವು
ಕಂಸಾಂತಕ ಕೃಷ್ಣ ನಮ್ಮನೆ ಹಾಳುಮಾಡಿ ಹೋಳಿ ಆಡಿದ ೩
ನಿತ್ಯ ನಮ್ಮನೆಯಲ್ಲಿ ಬಂದುಸುತ್ತ ಸುತ್ತಿ ಸುಳಿಯುತಾನೆ
ಅಚ್ಚುತಾನಂತಾದ್ರೀಶನುರಚ್ಚಿಗೆ ಬರುತಾನೆ ಗೋಪಿ ೪
ಸರಸ ತೇಜಿಯನೇರಿ ಮೆರೆವನೆಹರುಷ ಹಯವದನ ಕಾಂತನೆ
ಪರಮಪಾವನಚರಿತ್ರಗಾತ್ರನೆಹರುಷದಿ ಭಕ್ತರನು ಪೊರೆವನೆ ೫

 

೨೯೧
ಪರಮಪಾವನ್ನನಾಮ ಭಳಿರೆ ಸಂಗರ ಭೀಮ
ಸರಸಗುಣಾಭಿರಾಮ ತರಣಿವಂಶ ಲಲಾಮ
ತಾರಾನಂದನ ಪ್ರೇಮ ಪರಿಪೂರ್ಣಧಾಮ ಪಟ್ಟಾಭಿರಾಮ ಪ.
ಚಿಕ್ಕಪ್ರಾಯದಲಿ ಬಲುರಕ್ಕಸಿಯನು ಸೀಳಿ
ತಾಕಲದೆ ಕಾಲ್ಪೆಣ್ಗೈದು ರಾಜಮೌಳಿಯ ಬಿಲ್ಲ
ಗಕ್ಕನೆ ಖಂಡ್ರಿಸಿ ಕೈವಿಡಿದು ಸೊಬಗನುಕ್ಕುವ ಜಾನಕಿಯ
ಧಿಕ್ಕರಿಸುತ ಪೋಗಿ ದಿತಿಯ ಕೈಕೆಯ ಮಾತು
ದಕ್ಕಲೆನುತ ಪೋಗಿ ದಂಡಕಾರಣ್ಯವ
ಪೊಕ್ಕು ದೂಷಣ ಮುಖ್ಯ ಭೂರಿ ದಾನವಹಿಂಡ
ಚಕ್ಕಂದದಲಿ ಕೊಂದ ಜಾಣ ನೀನಹುದೊ ೧
ಭುವನೇಶ ಶಬರಿಯ ಪೂಜೆಯ ಕೈಕೊಂಡು
ಪವನಾತ್ಮಜನ ಕಂಡು ಬರಹೇಳಿ
ರವಿಯ ಸೂನನ ಕಾಣಿಸಿಕೊಂಡು ತವಕದಿಂ ವಾಲಿಯ
ಹವಣರಿಯದಸುವ ಕೊಂದು
ಪ್ಲವಗ ಬಲವನು ಕೂಡಿ ಬಲು ಸಮುದ್ರವ ಬಂಧ-
ನವ ಮಾಡಿ ಕುಂಭಕರ್ಣ ರಾವಣನ ಸಂಹಾರ ಮಾಡಿ ಲಂಕಾರಾ
ಜ್ಯ ವಿಭೀಷಣಗಿತ್ತು ಅವನಿಜೆಸಹ ಪುಷ್ಪಕವನೇರಿ ನಡೆದೆ ೨
ಸುರರೆಲ್ಲ ಪೂಮಳೆಗರೆಯೆ ಸುಗ್ರೀವಾದಿ
ವರರಾವಣರ ಸೇನೆ ಬೈಲಾಗಿ ನೀ ನಡೆಯೆ ಶೃಂ-
ಗಾರವಾದ ಸಾಕೇತಪುರಕೆ ಭರದಿ ಬಂದು
ನಿರುತ ಸೌಖ್ಯದಲಿ ನಿಂದು ಸಿರನೆಲೆವಿನಯದಿ ಚಿನ್ಮಯನಾ
ಗಿರಿಯ ಶುಭಕರ್ಣವೊ(?) ಸೀತಾಲಕ್ಷ್ಮಣ
ಭರತಶತ್ರುಘ್ನಯಿರೆ ಹನುಮನ ಸೇವೆ ದಿವ್ಯಸಿಂಹಾಸನವೇರಿ
ಧರೆ ಆಳಿದ ಪರಿಣಾಮದಿ ಹಯವದನ ರಾಮ ೩

 

೨೩೪
ಪಾಥೇಯವ ಕಟ್ಟಿರೊ ವೈಕುಂಠಕೆ ಪಯಣ ಸ-ಮ್ಮತವಾದರೆ ಪ.
ಮಾತಾಪಿತರುಯೆಂಬೊ ಭಕ್ತಿಚಿತ್ರಾನ್ನವಪಾರ್ಥಸೂತನ ಪಾದಪದ್ಮಪತ್ರವ ಹಾಸಿ ಅ.ಪ.
ಹರಿಭಕ್ತಿಹರಿಗೋಲಿಂದ ಮೆಲ್ಲನೆ ನೀವುವಿರಜಾನದಿಯ ದಾಟಿರೊಕರಜಾಗ್ರಗಳಿಂದ ಹಿರಣ್ಯಕನನು ಸೀಳಿದಪರವಾಸುದೇವನ ದರುಶನವಾಹೋದಯ್ಯ ೧
ಪ್ರಳಯದ್ಹಾವಳಿಯಿಲ್ಲವೊ ಪೇಳುವುದೇನುಚಳಿ ಮಳೆ ಬಿಸಿಲಿಲ್ಲವೊಬೆಳಸು ಬಿತ್ತಿಲ್ಲದ ಬೇಕಾದ ಸಂಪತ್ತುನಳಿನನಾಭನ ಪುರದೊಳಗೆ ನೆಲಸಿಹುದಯ್ಯ ೨
ಶುದ್ಧ ಸಾತ್ವಿಕ ಪುರವು ತಾಮಸರಿಗೆ[ಪೊದ್ದಲಳವಲ್ಲವೊ]ಅಧ್ಯಾತ್ಮ ಅರ್ಜುನಗೆ ನಿರ್ಧಾರ ಪೇಳಿದತದ್ಧಾಮ ಪರಮಂ ಮಮವೆಂಬೊ ಪುರವೊ ೩
ಕೂಗಳತೆಗೆ ಕೊಂಚವೊ ಹರಿಯ ಪುರನಾಗರಾಜನ ಸಾಕ್ಷಿಯೊನಾಗಶಯನನಲ್ಲಿ ನಮ್ಮ ಕಂಡರೆಹೋಗಬೇಡಿರೆಂದು ಹುಟ್ಟ ತಡೆವನೊ ೪
ಬರವೆಂಬ ಮಾತಿಲ್ಲವೊ ಒಂದುಕಾಸುತೆರಿಗೆಯ ಕೊಡಬ್ಯಾಡಿರೊಪರಮಕರುಣಿ ಹಯವದನ ವೈಕುಂಠದಿಸರುವಮಾನ್ಯವನಿತ್ತು ಶರಣರ ಪೊರೆವನು ೫

 


ಪಾನವ ಮಾಡುವೆನು ನಾಮನದಣಿಯ ನಾಮಾಮೃತವ ಪಾನವ ಮಾಡುವೆನು ಪ.
ಶ್ರೀನಿವಾಸನ ನಾಮಸುಧಾರಸಏನುರುಚಿಯೋ ಕಾಣೆ ಜೇನುತುಪ್ಪದಂತೆ೧
ಸಕ್ಕರೆ ಬೆರೆಸಿದ ಚೊಕ್ಕಪಾನಕವನ್ನುಮಿಕ್ಕು ಮೀರುತಲಿದೆ ರಕ್ಕಸಾರಿಯ ಧ್ಯಾನ ೨
ಕದಳಿ ಖರ್ಜುರ ದ್ರಾಕ್ಷಿ ಅಡಕೆಯಿಮ್ಮಿಗಿಲಾಗಿಮುದಕೊಡುವುದು ಜಿಹ್ವೆಗೊದಗಿದ ತತ್‍ಕ್ಷಣ ೩
ಕಾಸಿದ ಕೆನೆಹಾಲ ದೂಷಿಸುವಂತಿದೆಏಸುರುಚಿಯೋ ಹರಿದಾಸರೆ ಬಲ್ಲರು ೪
ಹಯವದನನ ನಿರ್ಭಯದಿಂ ಭಜಿಸಲುದಯಮಾಡುವ ಸಾಯುಜ್ಯಪದವನಿತ್ತು ೫

 

೧೯೪
ಪಾಲಗಡಲೊಡೆಯ ಬಾರೊ ಎನ್ನಲೆ ಕರುಣಾಮೃತದ ರಸಮಳೆಯ ಸುರಿವುತಲಿ ಪ.
ನಾನಾ ರತುನ ಕಾಂತಿ ನವರಂಗ ಬಲಿಯಾಗಿಧ್ಯಾನಿಪರ ಮನದಾಶ್ರಯಶ್ರೀನಾಥ ಕಿಂಕಿಣಿ ಸ್ವರ ಮಂಜುರವದಿಂದ ೧
ನೂಪುರ ಧ್ವನಿಯೆಂಬ ನೂತನದ ರಸಮಳೆಯಪಹರ ನಖಕಾಂತಿಯದೀಪಾವಳಿಯ ನಡುವೆ ದೀನೋಕ್ತಿಯು ಕೆಡದಂತೆ ೨
[ಉರುಟು]ವಸನದ ಮಧ್ಯ ಹೊಳೆವ ನಾನಾಭರಣಕರಕಂಜ ಕಂಬುಕಂಠಸರಸಮುಖಚಂದ್ರ ಶೋಭನಮೂರ್ತಿ ಹಯವದನ ೩

 

೩೩೨
ಪೋ ಪೋಗೆಲೋ ಸಾ ಸಾರೆಲೊ
ನಗೆಗಿಂತೆನಲು ಮುನಿದು ಪೋದನೆ
ಮನುಮಥನಯ್ಯ ಕಾಣೆ ಪ.
ಎನ್ನ ಪೆಸರು ಮಾಧವನೆಂದೆಂಬರು
ಅನ್ಯರನೊಲ್ಲದೆ ನಿನ್ನೊಳು ಮನವಿಟ್ಟೆ
ವನವ ತಿರುಗುವ ವಸಂತ ನೀನಾದರೆ
ಮನೆಗ್ಯಾತಕೆ ಬಂದೆ ೧
ವಕ್ರದ ನುಡಿಗಳ ನುಡಿಯದಿರೆನ್ನನು
ಚಕ್ರಧರನೆಂದೆಂಬರು ಎನ್ನನು
ರೊಕ್ಕಕ್ಕೆ ಮಡಕೆಯ ಮಾರುವ ಕುಂಬಾರ
ಒಕ್ಕಲ ಮನೆಗೆ ಪೋಗೋ ೨
ಹಿರಿಯರು ಹರಿಯೆಂದೆಂಬರು ಎನ್ನನು
ತರಳೆ ನೀನೇನಾದರೆ ಎಂದೆನದಿರು
ತರುಗಳೇರಿ ಕುಣಿದಾಡುವ ಕಪಿಗಳ
ತೆರದೊಳಾಡು ಪೋಗು ೩
ಸರ್ಪನ ಮಸ್ತಕದಲಿ ನಲಿದಾಡುವೆ
ಅಲ್ಪಕನೆಂದು ನೀ ಬಗೆಯದಿರೆನ್ನನು
ತಪ್ಪದೆ ಗಗನದೊಳಿಪ್ಪ ಗರುಡನು
ಬಪ್ಪನೆ ಪುರದೊಳಗೆ ೪
ಎನ್ನ ಮಹಂತರನಂತನೆಂದೆಂಬರು
ಮನ್ನ ಬಂದಂತೆ ನೀ ಮಾತುಗಳಾಡದಿರು
ಪನ್ನಂಗನಾದರೆ ಪಾತಾಳಕ್ಕೆ ಪೋಗು
ನಿನ್ನ ಸಂಗಕ್ಕೆ ಅಂಜುವೆ ೫
ಕಡಲೊಳಗಿಪ್ಪನೆಂದೆಂಬರು ಎನ್ನನು
ಮಡದಿಯೇನಾದರು ಎಂದೆನ್ನದಿರು
ಮಡಿದು ಮಡಿದು ಹೋಹ ಮೀನು ಮೊಸಳೆಗಳ
ಗಡಣವ ಕೂಡು ಪೋಗು ೬
ಸಚರಾಚರಂಗಳ ಸೃಜಿಸಬಲ್ಲವನೆಂದು
ಸುಚರಿತ್ರ ದೇವತೆಯೆಂದೆಂಬರು
ಉಚಿತವೆ ಹೆಣ್ಣುಮಗಳ ಕೂಡೆ ಮೋಹದ
ವಚನವು ನಿನಗೆ ರಂಗ ಪೋಗು ೭
ಆಲದೆಲೆಯಮೇಲೆ ಮಲಗಿಪ್ಪ ವಸ್ತು ನಾನು
ಪಾಲಮಾರುವವರಿಗೆ ಪರತತ್ವನೆಂಬರು
ಕಾಲಬೆರಳ ಚುಂಬಿಸುವಗ್ಯಾತಕೆ ಗೋ
ಪಾಲಬಾಲೆಯರಾಟ ೮
ಮೈಯೊಳು ಸಾವಿರ ಕಣ್ಣುಗಳುಳ್ಳವನಯ್ಯನೆಂದು ದೇವತೆಗ-
ಳ್ದಿವ್ಯಚಾರಿತ್ರ ದೇವತೆಯೆಂತೆಂಬರು
ಅಯ್ಯ ನೀನಾದರೆ ಅಹಲ್ಯಾದೇವಿಯ
ಕಯ್ಯ ಪಿಡಿದ ಕಳ್ಳನೆ ಪೋಗು ೯
ಕಂಗಳ ಕುಡಿನೋಟಗಳಿಂದ ತ್ರಿಜ-
ಗಂಗಳನೆಲ್ಲವ ಸಂಹರಿಸುವೆ ನಾನು
ರಂಗ ನೀನಾದರೆ ಕೊಲೆಗಡುಕನು ನ-
ಮ್ಮಂಗಳಕ್ಕೆ ಬರಬೇಡವೊ ೧೦
ಸ್ವರ್ಗಕ್ಕೆ ಹೋದರೆ ನಿನ್ನವಗುಣವಿದು
ಅಗ್ಗಳಿಯದ ಹೊನ್ನನ್ಗೆ(?) ಬಗ್ಗುವಳಲ್ಲ ನೀ
ಒಗ್ಗುವೆ ನಾ ನಿನಗಯ್ಯ ಸ್ವರ್ಗಾಪ-
ವರ್ಗವ ಕೊಡುವವನೆ ಪೋ ಪೋ ೧೧
ಒಲಿದು ನಾ ನಿನ್ನ ಮನೆಗಾಗಿ ಬಂದರೆ
ಕಲಹದ ಮಾತುಗಳಾಡದಿರು ಎನ್ನ
ಲಲನೆ ಉರದಲ್ಲಿದ್ದು ನಾಭಿಕಮಲದಿಂದ
ಛಲದಿ ಮಗನ ಪಡೆದೆ ೧೨
ಮುನಿಗಳರ್ಚಿಸುವ ಶ್ರೀಹಯವದನನು ನಾನು
ವನಿತೆಯೆನ್ನಿರವನು ಬಲ್ಲವರೆ ಬಲ್ಲರು
ಉಣಲೀಸೆ ಉಡಲೀಸೆ ತಲೆಯೂರಿ ತಪವನು
ವನದೊಳು ಮಾಡಿಸುವೆ ೧೩

 

೨೬೧
ಪ್ರಳಯಜಲದಲಿ ನೀನಾಲದೆಲೆಯ ಮ್ಯಾಲೆ
ಹಲವು ಜೀವರು ನಿನ್ನ ಹೃದಯದೊಳಿರಲು
ಕೆಲವುದಿನದಿ ಯೋಗನಿದ್ರೆಯೊಳಿರೆ
ಒಲವಿಂದ ಸೃಜಿಸುವೆನೆಂದು ನೇಮಿಸುವೆ೧
ಪ್ರಕೃತಿಯ ಮೂಲಕಾರಣವನು ಮಾಡಿ
ಸಕಲತತ್ವಗಳ ಸಮ್ಮೋಹದಿ ಕೂಡಿ
ವಿಕಳಿಸದಂತೆ ತನ್ಮಾತ್ರೆಯ ಕೂಡಿ
ಅಖಿಳೇಶ ಮಹತತ್ವಗಳ ನಿರ್ಮಿಸಿದೆ ೨
ಮಹತತ್ವದಿಂದಹಂಕಾರವ ಪುಟ್ಟಿಸಿ
ಅಹಂಕಾರದಿಂದ ವೈಕಾರಿಕ ಮೊದಲಾದ
ತ್ರಿವಿಧತತ್ವಗಳ ನಿರ್ಮಾಣವ ಮಾಡ್ದೆ
ಮಹಮಹಿಮೆಯ ಮೆರೆದೆ ಜಗವರಿಯೆ ೩
ಇಪ್ಪತ್ತುನಾಲ್ಕು ಅಯಿದಾರುತತ್ವಗಳಿಂದ
ತಪ್ಪದೆ ಬೊಮ್ಮಾಂಡವ ನಿರ್ಮಿಸಿದೆ
ಸರ್ಪಶಯನನಾಗಿ ನಾಭಿಕಮಲದಿಂದ
ಅಪ್ಪಬ್ರಹ್ಮನ ಪ್ರಸವಿಸಿದೆ ನೀನೆಂದು ೪
ಒಂದು ಮೂರುತಿಯಿಂದ ಸೃಷ್ಟಿಯ ಮಾಡಿ
ಮತ್ತೊಂದು ಮೂರುತಿಯಿಂದ ಪಾಲನೆ ಮಾಡಿ
ಒಂದು ಮೂರುತಿಯಿಂದ ಸಂಹರನೆ ಮಾಡಿ
ಒಂದೊಂದು ಮಹಿಮೆಯು ಅನಂತಾದ್ಭುತವು ೫
ಒಂದು ರೋಮಕೂಪದಲಿ ಬ್ರಹ್ಮಾಂಡ
ಇಂದಿರೆ ಅನಂತಕೋಟಿ ನಾಮಗಳಲ್ಲಿ
ಬಂದು ಗೋಕುಲದಲ್ಲಿ ಶಿಶುವಾಗಿ ತೋರಿದೆ ಆ-
ನಂದದಿಂದಲಿ ಶರಣೆಂದರು ಸುರರು ೬
ಜನನಮರಣ ಭಯದಿಂದ ದೇವತೆಗಳು
ಅನುದಿನ ನಿನ್ನ ಪೂಜೆಯ [ಮಾಡೇವೆನಲು]
ಪುನರಾವೃತ್ತಿ ರಹಿತವಾದ ಫಲವೆತ್ತಿ
ಮನುಜನಂತೆ ತೋರುವುದೇನುಚಿತವೊ ೭
ಬೊಮ್ಮರುದ್ರಾದಿ ದೇವತೆಗಳಿಗೆ ಅವಸರ
ಒಮ್ಮೆಕಾಣಲು ಸಿರಿರಮ್ಮೆ ಚೆಲುವನ
ಒಮ್ಮನದಿಂದ ನೋಡೇನೆಂಬ ಭಯದಿಂದ
ರಮ್ಮೆ ಮೊಗವ ತಗ್ಗಿಸಿ ನಾಚಿಸಿದಳೆ ೮
ದಶದಿಕ್ಕು ನೋಡುತ್ತ ಭಯದಿಂದ ಕಮಲಜ
ಶಶಿನಾಳದೊಳಗಿದ್ದ ದಾರಿಯ ಕಾಣದೆ
ದಶಶತವರುಷ ನಿಮ್ಮನು ಧ್ಯಾನಿಸುತಿರೆ
ವಸುಧೀಶ ನಿಮ್ಮ ನಿಜವ ತೋರಿದಿರಿ ೯
ಆಲೋಚನೆಯಿಂದ ಸರ್ವ ವಿಷಯದಿಂದ
ಲೀಲೆಯಿಂದ ಪಾಡಿ ಕಮಲಸಂಭವನ
ವೋಳು ಮಾಡದಂತೆ ಒಳಿತಾಗಿ ತಲೆವಾಗೆ
ಮೂಲ್ಲೋಕವ ಕೃಪೆಯಿಂದ ಪಾಲಿಸಿದೆ ೧೦
ನಂದ ಯಶೋದೆ ವಸುದೇವ ದೇವಕಿಯರು
ಹಿಂದೆ ಮಾಡಿದ ಸುಕೃತ ಫಲವಾಯಿತೆಂದು
ಇಂದಿರಾಪತಿ ಜನಿಸಿದನೆಂಬ ಹರುಷದಿ
ಬಂದ ಬ್ರಾಹ್ಮಣರ ದ್ರವ್ಯದಿ ದಣಿಸಿದರು ೧೧
ಜಾತಕರ್ಮವ ಮಾಡಿ ಮಧುವ ಬಾಯೊಳಗಿಟ್ಟು
ಒತ್ತುಮೊರನ ಗೊಟ್ಟಿನಲಿ ಮಲಗಿದ್ದು ಸಾ-
ಕ್ಷಾತ್ ಶ್ರೀ ನಾರಾಯಣನ ಅವತಾರವೆಂದು
ಮಾತೆಯ ಮೊಲೆವಾಲನುಂಡ ಬೇಗದಲಿ ೧೨
ಈರಾರು ದಿನದಲಿ ಭಾರತಿ ಪಾರ್ವತಿ ವಾರುಣಿ ಶ-
ಚಿ ರತಿ ಮೊದಲಾದ ಸತಿಯರು
ನಾರಾಯಣ ಪರದೇವತೆಯೆಂದು
ನಾರಿಯರೆಲ್ಲ ಪಾಡಿದರತಿ ಹರುಷದಲಿ ೧೩
ನಾಮಕರಣ ದಿವಸ ಬ್ರಹ್ಮಾದಿ ಸುರರು
ಈ ಮಹಾಶಿಶುವ ನೋಡೇವೆಂಬ ಭರದಿಂದ
ಆ ಮಹಾಸ್ತೋಮವೆಲ್ಲ ಕೂಡಿಬರ-
ಲೀ ಮಹಾಶಿಶುವ ನೋಡಿದರೆ ಅರ್ಥಿಯಲಿ ೧೪
ವ್ಯಾಸ ಧೌಮ್ಯಾಚಾರ್ಯರೊಲಿದು ಮಂತ್ರಗಳಿಂದ
ಸಾಸಿರಕೋಟ್ಯನಂತ ನಾಮಗಳುಳ್ಳ
ವಾಸುದೇವ ಕೃಷ್ಣನೆಂಬ ನಾಮಗಳಿಟ್ಟು
ಸೂಸಿದರಕ್ಷತೆ ಸುಮೂಹೂರ್ತದಲಿ ೧೫
ಕ್ಷೀರಾಂಬುಧಿಯನ್ನೆ ತೊಟ್ಟಿಲು ಮಾಡಿ
ಓರಂತೆ ನಾಲ್ಕುವೇದಗಳ ನೇಣನೆ ಮಾಡಿ
ಧೀರಶೇಷನು ಬಂದು ಹಾಸಿಕೆ ಹಾಕಲು
ನಾರಿಯರೊಡನೆ ಮಲಗಿದೆಯೊ ಹಯವದನ ೧೬

 

೧೨೨
ಪ್ರಾಣನ ನೋಡಿರೈ ಮುಖ್ಯಪ್ರ್ರಾಣನ ಪಾಡಿರೈ ಪ.
ಕ್ಷೋಣಿಯೊಳಗೆ ಎಣೆರಹಿತ ಪಾವನಚರಿತ ಸದ್ಗುಣಭರಿತ ಅ.ಪ.
ಮರ್ಕಟ ರೂಪಿಲೆ ಅವತರಿಸಿದ ಅಂಜನೆ ಸುತನೊ ಮಹಾ ಅದ್ಭ್ಭುತನೊತರಣಿ ಮಂಡಲಕೆ ಮುಟ್ಟಿಹಾರಿದ ಬಲದ ಶ್ರುತಿಯೊ ವಿಕ್ರಮಗತಿಯೊಸುರರಾಯುಧ ನೆಗ್ಗಿಸಿದ ಕಪಿಯಗ್ರಣಿಯೊ ವಜ್ರದ ಖಣಿಯೊಶರಣ ವಂದಿತ ಚರಿತ ಮೂರ್ಲೋಕ ಗುರುವೊ ಕಲ್ಪತರುವೊ ೧
ರಾಮ ಪದಾಂಬುಜ ಬಿಂಬಪರಾಗ ಮಧುಪನೊ ದೇವಾಧಿಪನೊತಾಮಸ ರಾವಣನೆದೆಗೊತ್ತಿದ ಈ ಕರವೊ ಸಿಡಿಲಬ್ಬರವೊಪ್ರೇಮದಿ ರಣದೊಳಗ್ಹಾರಿ ರಥವನೊದ್ದ ಮಾರುತಿಯೊ ಪುಣ್ಯ ಮೂರುತಿಯೊರೋಮಕೆ ಸಿಲ್ಕದ ಹನುಮನ ಬಾಲದ ಸರಳೊ ದೈತ್ಯರಿಗುರುಳೊ ೨
ಕ್ಷಣದೊಳು ಸಂಜೀವನ ಗಿರಿಯನೆ ತಂದ ತಪವೊ ತಾ ನೃಪಹಿತವೊವನಜನಾಭನ ಪಾದ ಪಡೆದಂಥ ಪದವೊ ಸಾಗರ ಮದವೊನೆನೆಯಲು ದುರಿತನಿವಾರಣ ಕರುಣಾವಾರಿಧಿಯೊ ಭಕ್ತರ ಸುಧೆಯೊಅನುದಿನದಲಿ ಹಯವದನನ ನೆನೆಯುವ ದಯವೊ ಗತಿ ಆಶ್ರಯವೊ ೩

 

೩೧೩
ಫಲಾಹಾರವ ಮಾಡೊ ಪರಮಪುರುಷನೆ
ಲಲನೆ ಲಕುಮಿಯ ಕರಕಂಜದಿಂದ ಪ.
ಕದಳಿ ಕಾಮಾರೆ ಖರ್ಜುರ ಕಿತ್ತಳೆ ಕಂಚಿ
ಬದರಿ ಬೆಳಲು ಬಿಕ್ಕೆ ಹಲಸು ದ್ರಾಕ್ಷಿಗಳು
ಮಧುರಮಾವು ಮಾದಳ ತೆಂಗಿನಕಾಯಿ
ತುದಿಮೊದಲಾದ ಪರಿಪರಿ ಫಲಗಳು ೧
ಉತ್ತತ್ತೆ ಜೇನು ಅಂಜೂರ ಸೇಬು ದಾಳಿಂಬೆ
ಮತ್ತಾದ ತುಮರೆ ಪರಗಿ ಕಾರೆ ಕವಳಿ
ಕತ್ತರಿಸಿದ ಕಬ್ಬು ಜಂಬುನೇರಳೆಹಣ್ಣು
ಒತ್ತಿದ ಬೇಳೆ ನೆನೆಗಡಲೆ ಕರ್ಬುಜೀಹಣ್ಣು ೨
ಹಾಲು ಸಕ್ಕರೆ ಬೆಣ್ಣೆ ತುಪ್ಪ ಸೀಕರಣೆಯು
ಸಾಲುರಸಾಯನ ಸವಿಯೆಳನೀರು
ಮೂಲೋಕದೊಡೆಯ ಹಯವದನ ವೆಂಕಟರೇಯ
ಪಾಲಿಸೊ ಲಕುಮಿಯ ಕರಕಂಜದಿಂದ ೩

 

೭೩
ಬಂದ ಶ್ರೀಕೃಷ್ಣ ನಲಿಯುತ್ತ ನಸುನಗೆ-ಯಿಂದ ಬೇಗ ಯಶೋದೆಯಿದ್ದೆ[ಡೆಗೆ] ಪ.
ಉದಯದೊಳೆದ್ದು ಮೊಸರ ಕಡೆವಾಗ ತನ್ನಅದುಭುತ ಬಾಲಲೀಲೆಗಳ ಪಾಡೆಮುದದಿ ನಯನದಿ ಜಲ ತುಳುಕಾಡುತಿರೆ ಕಂಡುಮದನನಯ್ಯನು ನಚ್ಚಿ ಬೆಣ್ಣೆಯ ಬೇಡುತ್ತ ೧
ಮಕ್ಕಳುಗಳ ಕೂಡಿ ಮನೆಮನೆಯೊಳಗಾಡಿಮಿಕ್ಕುಮೀರಿದ ರಕ್ಕಸರನೀಡ್ಯಾಡಿಅಕ್ಕರಿಂದಲಿ ತಾಯ ಮುಖವನೀಕ್ಷಿಸುತಲಿಗಕ್ಕನೆ ಸೆರಗ ಪಿಡಿದು ಮೊಲೆಯ ಕೊಡೆನ್ನುತ ೨
ಕುರುಳಕೂದಲು ಅರಳೆಲೆ ಮಾಗಾಯಿಕೊರಳಪದಕ ಹಾರ ಎಸೆಯುತಿರೆಚರಣದಂದುಗೆ ಗೆಜ್ಜೆ ಘಲುಘಲುಕೆನ್ನುತಲಿಸಿರಿಯರಸ ಹಯವದನನೆನಿಪ ಮೋಹನಾಂಗ ೩

 

೭೪
ಬಣ್ಣಿಸಲಳವೆ ನಾನು ಬಣ್ಣಿಸಲಳವೆ ನಾ ಬಹುವೇಷವುಳ್ಳ ಲಾ-ವಣ್ಯದ ಕಣಿಯಾದ ಉಡುಪಿನ ಕೃಷ್ಣನ ಪ.
ಕರಗುವ ಮಿಸುನಿಯ ಕಾಂತಿಯಿಂ ಗರುಡನಗರಿಗಳ ಇರವ ಧಿಕ್ಕರಿಪ ಪೀತಾಂಬರಎರಡು ಪಾಶ್ರ್ವಗಳಲ್ಲಿ ಶಿರದ ಕಿರೀಟವುಕೊರಳಹಾರದ ಜೋಡು ಇರಲು ಈ ಪರಿಯಿಂದಮರೆಯಲಬ್ಜದ ಕಂಕಣ ಭೂಮಿಗೈದುವವರ ಸೂರ್ಯನಾರಾಯಣ ಬಾಹುಗಳುಳ್ಳಮಕರಕುಂಡಲ ಬಾಹುಪುರಿಗಳಿಂದೆಸೆವನ೧
ಅಳಿಗಳ ಕೂಟದಿ ಪೊಳೆವ ನೆತ್ತಿಯ ಗೊಂಡೆಎಳೆಯ ಮುತ್ತಿನ ಸರ ದುಂಡುರಕ್ಷಾಮಣಿಗಳ ಕೂಟ ಪೊಳೆಯಲು ಕೆಂಪುದಗಲೆಯಿಂದಕೆಳಗಾಗಲರುಣನ ಗರಿ ಪಾದ ಕಂಸೆಯಗಲಿ ಇಂದ್ರ ನೀಲದದಾಳ ದಿಕ್ಕುಗಳನೆಬೆಳಗುತಲೆ ಬಹಳ ಲೀಲೆಯ ತೋರ್ಪಖಳರೆದೆ ಶೂಲನ ಚೆಲುವ ಗೋಪಾಲನ ೨
ಜಾತಿಮುತ್ತಿನ ಚುಂಗು ಖ್ಯಾತಿಯಿಂದೊಪ್ಪುವಚಾತುರ್ಯದಿ ವಾರೆಗೊಂಡೆಯ ಕಟ್ಟಿಆ ಜೂತದಿಂದಲಿ ಅತಿ ಮೈಜೋಡು ತೊಟ್ಟು ಈ-ರೀತಿಯಿಂದೆಡಗೈಯ ವಂಕಿ ಮಧ್ಯದೊಳಾನುಚ್ಚುತ ಖಡ್ಗದಿಂದೊಪ್ಪುವ ಭೂತಳದಿವಿಖ್ಯಾತಿ ಪಡೆದು ಮೆರೆವ ದುಷ್ಟಮೃಗವಘಾತಿಸಿ ಬಿಡುವ ಕಿರಾತ ಸ್ವರೂಪನ್ನ ೩
ಮಿಸುನಿಯ ಮುಂಡಾಸು ಪೊಸರವಿಯಂತಿರೆಶಶಿಯ ಪ್ರಭೆಯಂತೆ ಪಸರಿಸಲಂಗಿಯುಹಸನಾದ ನವರಂಜು ವಶದಲ್ಲಿ ತುಂಬಿರೆಕುಸುಮನಂದದಿ ಧೋತ್ರವ ಉಟ್ಟುವೈರ್ವಸನವ ಸುತ್ತಿ ಗಾತ್ರದಿ ಕುಲಾಯಿ ಒಪ್ಪಿನಸುನಗೆಯಿಂದೊಪ್ಪುವ ನವವಿಪ್ರವೇಷನ್ನ ೪
ಕಡೆದ ಬೊಗರಿಯಂತೆ ಕಡೆದು ಮಾಡಿದ ಬಾಹುದೃಢವಾದ ಕುಚಗಳು ದುರಿತದುನ್ನತವಾದಬಡನಡು ಬಳುಕಲು ಕಡೆಗಣ್ಣ ನೋಟದಿಮೃಡ ಮುಖ್ಯರ್ಮೋಹಿಸಿ ಒಡಲ ಮಾರದಿರಲುಮುಡಿಯ ನೋಡುತ ನವಿಲು ನಾಚಿ ಮೊಗಗೊಡದಡವಿಯ ಸೇರಲು ಭೂಷಣಗಳುಜಡಿವುತ್ತ ಜಗದೊಳು ಕಡುಮೋಹಿನೀ ಬಲು ೫
ಶಂಕೆಇಲ್ಲದ ಕರ್ಮ ಕಿಂಕರರೊಳಗಾಗಿಟೊಂಕದಿ ಕೈಯಿಟ್ಟು ಶಂಕಿಸಲು ತನ್ನಂಘ್ರಿಪಂಕಜಂಗಳ ಬೇಡಿ ಪುರುಷಾರ್ಥ ಪಡೆಯಿರೊಶಂಕೆ ಬೇಡವೊ ಎಂದು ಲೆಂಕರಿಗೆ ಸೂಸಿಪ್ಪ-ಸಂಖ್ಯಾತ ಕರಯುಗಳದಿಂದೊಪ್ಪುವಶಂಖ ಚಕ್ರ ಆಯುಧಂಗಳ ಪಿಡಿದು ಸರ್ವಾಲಂಕಾರದಿಂ ವೆಂಕಟೇಶನ ರೂಪ ೬
ಈ ವಿಧ ತಪ್ಪದೆ ಏಳು ವಾರಗಳಲ್ಲಿಪಾವನಮತ ಗುರು ಬಳಿಗೆ ಬಂದವರೆಲ್ಲಶ್ರೀವರ ಹಯವದನನ ಸೇವೆಗೊಳ್ಳಿರೋ ನಿತ್ಯಆವಾವ ನಾಡಿನ ಆಶ್ರಿತ ಜನರನ್ನುಭಾವಶುದ್ಧಗಳರಿತು ಕೋರಿಕೆಗಳಈವ ಭಕ್ತರಿಗೊಲಿದು ಪಾಷಂಡಾದಿಶೈವರ ತರಿದ ಸದ್ವೈಷ್ಣವರ ದೇವನ್ನ ೭

 

೧೪೧
ಬಲ್ಲಹ ಮುಟ್ಟದಿರೆನ್ನನುಪ.
ಬಲ್ಲಹ ಮುಟ್ಟದಿರೆನ್ನ ಬಗೆಯ ಮೋಹನ್ನ ರನ್ನಮಲ್ಲಿಗೆಗೋಲಮದಭಂಗ ಮಧುರೇಶ ಲಿಂಗ ಅ.ಪ.
ಕನ್ನೆವೆಣ್ಣ ಕಂಡಮ್ಯಾಲೆ ಕದಡಿತು ನಿನ್ನ ಲೀಲೆನನ್ನ ಕೂಡಿನ್ನ್ಯಾತರ ಲಲ್ಲೆ ನಗೆಯ ಬಲ್ಲೆಇನ್ನು ನಾನ್ಯಾತಕೆ ಬೇಕು ಇಷ್ಟರ ಬಗೆಯೆ ಸಾಕುಮುನ್ನಿನ ಗುಣ ನಿನ್ನಲ್ಲಿಲ್ಲ ಮುದ್ದ್ದಿಸಸಲ್ಲ ೧
ಮಂಡೆಯೊಳಗೆ ಪೆಣ್ಣ ಮಡುಗುವರೆ ಮುಕ್ಕಣ್ಣಲೆಂಡತನವ್ಯಾತಕೆನ್ನೊಳು ಲೇಸೆ ಕೇಳುಕಂಡು ನಾ ತಾಳುವಳಲ್ಲ ಕಪಟ ಎಳ್ಳಿನಷ್ಟಿಲ್ಲಉಂಡಮ್ಯಾಲಿನ್ಯಾತಕೊ ಹಟ ಉಣ್ಣೆನೊ ಬೇಟ ೨
ಯತಿಕುಲಕಲ್ಪಭೂಜ ಎಸೆವ ಶ್ರೀ ರವಿತೇಜಸತತ ಶ್ರೀ ಹಯವದ[ನ]ನ್ನ ಸಖ ಮೋಹನ್ನಗತಿ ನೀನೆ ದೇವೋತ್ತುಂಗ ಗಂಭೀರ ನವಮೋಹನಾಂಗಮತಿಯಿತ್ತು ಕೂಡೊ ಎನ್ನ ಮಧುರೇಶ[ರ]ನ್ನ ೩

 

೨೩೫
ಬಹುದೂರ ಮುಕ್ತಿಪಥದಿ ನಡೆದು ನೀವುಹೋಗಲದನಳವಡಿಸಿಕೊಳ್ಳಿರೊ ಪ.
ಸಂಸಾರವೆಂಬಡವಿಯ ಸುತ್ತ ಸುಳಿವಸಂಕಟವ ಕಳೆವರೆಕಂಸಾರಿ ತ್ರಿವಿಕ್ರಮನಿಗೆ ಸೇವೆಯಅಂಶುಪ್ರದಕ್ಷಿಣವ ಮಾಡಿರೊ ೧
ಏಕಂ ವಿನಾಯಕೇ ಕುರ್ಯಾದ್ವೇ ಸೂರ್ಯೇನತ್ರೀಣೆ ಶಂಕರೆಚತ್ವಾರಿ ಕೇಶವೇ ಕುರ್ಯಾತ್ ಸಪ್ತಶ್ವತ್ಥಪ್ರದಕ್ಷಿಣವ ಮಾಡಿರೊ ೨
ಬ್ರಹ್ಮತ್ಯವೆಂಬ ಪಾಪವ ಕಳೆವರೆಬ್ರಹ್ಮಪಿತನ ಪಟ್ಟದರಸಿಗೆಒಮ್ಮನದಲೊಮ್ಮೆ ಪ್ರದಕ್ಷಿಣವಮಾಡಿನಿರ್ಮಲ ಸುಖವ ಪಡೆಯಿರೊ ೩
ತೀರ್ಥಯಾತ್ರೆಗಳು ಬೇಡ ನೀವು ಗಳಿಸಿದರ್ಥವ್ಯರ್ಥವ ಕೆಡಿಸಬೇಡಚಿತ್ತದಲ್ಲಿ ಹರಿಯ ಚರಣವನು ಕೂಡಿಸತ್ಸುಖವನುಂಬುದು ಕಾಣಿರೊ ೪
ಅಸ್ವಸ್ಥರಾದ ಜನರು ಬಿಡದೆ ನಮ್ಮ-ಶ್ವತ್ಥ ನಾರಾಯಣನಿಗೆದಾಸ್ಯಮಂ ಪಡೆದು ಭಕ್ತಿಯಿಂತುತತ್ಸುಖವನುಂಬುದು ಕಾಣಿರೊ ೫
ಇಂತು ಪ್ರದಕ್ಷಿಣವ ಮಾಡಿ ಲಕ್ಷ್ಮೀಕಾಂತನ ಕೃಪೆಯ ಪಡೆವರೆಚಿಂತೆಗಳ ಕಳೆದಮೇಲೆ ಮುಕ್ತಿಯಲಿಸಂತೋಷದಲಿ ಸುಖಿಪರು ೬
ಹಯವದನನೆಂಬ ಗುರುಕೊಟ್ಟಮಂತ್ರದಿಭಯವೆಂಬ ಭುಜಂಗನ ಜಯಿಸಿ ಮೂರು ಬಾರಿ ಸುತ್ತಿ ಹರಿಯ ಪದದಣಿಯ ಕಟ್ಟಿ ನಡೆಯಿರೊ ೭

 

೨೯೨
ಬಾ ಬಾ ಬಾರೈ ಬಾ ಬಾ ಬಾ ಬಾರೈ ಬಾ
ಬೇಗ ಬಾರೆಂದು ಭಕುತರು ಕರೆಯಲು ಹರಿ ಪ.
ಶ್ರೀಸತಿಯಪ್ಪಿಕೊಂಡಿಪ್ಪನೆ ಬಾ
ಶೇಷಶಯನ ಎನ್ನಪ್ಪನೆ ಬಾ ೧
ಮತ್ಸ್ಯನಾಗಿ ಜಲದೊಳಾಡಿದವನೆ ಬಾ
ಕಚ್ಛಪವತಾರವ ಮಾಳ್ದನೆ ಬಾ ೨
ಧಸ್ರೆಗಾಗಿ ಜಲದೊಳಗಿಳಿದನೆ ಬಾ
ಹಿರಣ್ಯಕನುದರವ ಸೀಳ್ದನೆ ಬಾ ೩
ಶಕ್ರನ ಪೊರೆದ ಶ್ರೀ ವಾಮನನೆ ಬಾ
ವಕ್ರನೃಪಾಲಕುಲಶಮನನೆ ಬಾ ೪
ರಾವಣಾಂತಕ ರಘುರಾಮನೆ ಬಾ
ದೇವಕಿ ನಿಜಸುತ ಪ್ರೇಮನೆ ಬಾ ೫
ಸತಿಯರ ವ್ರತವ ಕೆಡಿಸಿದನೆ ಬಾ
ಚತುರ ಕಲಿಯನೋಡಿಸಿದನೆ ಬಾ ೬
ಹಯವದನಾಶ್ರಿತ ಶರಣನೆ ಬಾ
ಪ್ರಿಯಸುರ ಸೇವಿತ ಚರಣನೆ ಬಾ ೭

 

೭೫
ಬಾಗಿಲಲಿ ಬಿದ್ದಿಹ ಭಜಕನು ನಾನುಶ್ರೀ ಗೋಪಾಲ ಭೂಪಾಲ ಕಾಯಯ್ಯ ನೀನು ಪ .
ಯೋಗದ ಪಥಗಳನ್ನು ಏನೊಂದು ಅರಿಯೆನುನೀ ಗತಿಯೆಂದು ಬಂದು ಕೂಗುವೆನು ಹರಿಯೆ ೧
ಭೋಗವ ಬಯಸುವೆ ಬಗೆಬಗೆಯಲಿ ರತಿಯರೋಗ ಬಲವಾಯಿತು ತಿದ್ದೆನ್ನ ಮತಿಯ ೨
ಆಗಮಸಿದ್ಧ ಸುಗುಣಪೂರ್ಣ ಶ್ರೀಲೋಲಬೇಗ ಸಲಹೋ ಮಮಸ್ವಾಮಿ ಹಯವದನ ೩

 

೭೬
ಬಾರಯ್ಯ ಕೃಷ್ಣ ಬಾರೈ ಬಾಹದಿದ್ದಡೆಕಾರುಣ್ಯನಿಧಿಯೆಂಬ ಕಥೆಯ ಅ-ದಾರು ಬಣ್ಣಿಪರು ವೇದಾಂತದೇವಿಯರೆಮ್ಮದೂರುವರೀಗೆ ಪ.
ಕುಂಜರವರದ ನೀಲಾಂಜನವರ್ಣ ನೀಕಂಜನೇತ್ರನೆ ಕಾಮನಯ್ಯಮಂಜುಳಮೂರ್ತಿ ಮನೋಹರಕೀರ್ತಿ ಪ್ರ-ಭಂಜನನೊಡೆಯ ಬಾರೊ ೧
ಮಂದರಗಂಧದ ಮಂದಮಾರುತ ಬಂದಚಂದಿರಮುಡಿದ ಚದುರಬಂದಕಂದರ್ಪನರವಿಂದನೆಂಬ ಕಣೆಯ ತೊಟ್ಟ ಮಂದರಧರನೆ ಬಾರೊ ೨
ನೋಡುವೆ ನುಡಿಸುವೆ ಪಾಡುವೆ ಬಯಕೆಯಬೇಡುವೆ ಹಯವದನನಮಾಡುವೆ ಪೂಜೆಯ ಕೂಡುವೆ ನಿನ್ನೊಡ-ನಾಡುವೆನೊ ಬೇಗನೆ ಕಾಡದೆ ಬೇಗ ಬಾರೊ ೩

 

೧೯೫
ಬಾರಯ್ಯ ದಯಮಾಡಿ ತ್ವರಿತದಿ ಬೇಗಬಾರಯ್ಯ ದಯಮಾಡಿ ಪ.
ಒದರಲು ಕರಿರಾಜನೊದಗಿ ಬಂದೆ ಅಲ್ಲಿಮದಭಯ ಭಾಗ್ಯವು ಒದಗಿದುಬ್ಬಸದಿಂದ ೧
ಸ್ತಂಭದಿ ನರಹರಿ ಎಂಬಭಾವದಿ ಬಂದುಕುಂಭಿನಿಪತಿ ಬಹು ಸಂಭ್ರಮಗೊಳುತಲಿ ೨
ನರನು ಅರ್ಚಕನೆತ್ತ ನರಹರಿ ನೀನೆತ್ತಕರುಣದಿ ಬರಬೇಕು ಸಿರಿಹಯವದನ ೩

 

೭೭
ಬಾರಯ್ಯ ಯದುಕುಲತಿಲಕ ತೋರಯ್ಯ ನಿನ್ನ ಮುದ್ದು ಮುಖವಓರಂತೆ ಮುದ್ದಿಸಿ ಯಶೋದೆ ಕುಮಾರನೆ ಬಾರೆಂದಳೈ ಪ.
ಅಂದವಾದ ನಿನ್ನ ಮುದ್ದುಮುಖದ ಚೆಂದವನ್ನು ತಾ ನೋಡಿಕಂದಿಕುಂದಿ ಇಂದಿರೆಯು ಮರುಳಾಗಿ ಕಂದ ನಿನ್ನ ಪೊಂದೇನೆಂದಳೈ ೧
ಕೃಷ್ಣ ನಿನ್ನ ಮಕ್ಕಳಾಟಿಕೆ ಶ್ರೇಷ್ಠರಿಗೆ ಮೋಹನವಾಯಿತುದುಷ್ಟಮತಮಾತಂಗಕ್ಕೆ ಅಟ್ಟುವೊ ಸಿಂಹದ ಮರಿಯೆ೨
ಇಂಥ ಹಯವದನನ ಇಂಥ ದೇವರ ನಾ ಕಾಣೆಪಂಥವೇನೊ ಎನ್ನ ಕೂಡೆ ದಿನಮಣಿ ತಿಂತಿಣಿಯೆ ಬಾರೆಂದಳೈ೩

 

೧೯೬
ಬಾರಾ ನಾನರಿಯೆ ಸಿರಿಧರ ಮಾರ ಪ.
ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನುಹೀನಜನರೊಡನಾಡಿ ಕಡುನೊಂದೆನುಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದುದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು ೧
ಕಂಡ ಕಂಡವರ ಬೇಡಿ ಬೇಸರಲಾರೆನೊ ತಂದೆಪುಂಡಾರೀಕಾಕ್ಷ ಪುರುಹೂತವಂದ್ಯಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನತೊಂಡರೊಳಗೆನ್ನನಿರಿಸೊ ದುರುಳರ ಸಂಗವ ಬಿಡಿಸೊ ೨
ಶ್ರೀಹಯವದನರಾಯ ಆಶ್ರಿತಜನಸುಖೋಪಾಯಮೋಹಾಂಧಕಾರಮಾರ್ತಾಂಡ ಶೂರನೇಹದಿಂದೆನ್ನ ಕೈವಿಡಿದು ದುಷ್ಟರ ಬಿಡಿಸುಕಾಹುಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು ೩

 

೭೮
ಬಾರೈ ನಿನ್ನ ಮುದ್ದು ಮೊಗವನು ತೋರೈ ಯದುಕುತಿಲಕ ಎಂ-ದೋರಂತೆ ಮುದ್ದಿಸಿ ಯಶೋದೆ ಕುಮಾರನ ಬಾಯೆಂದಳೈ ಪ.
ಥೈ ಥೈ ಥೈ ಥೈ ಥೈಯಿಥೈಯಿ ಥೈಯಿ ಥೈಯಿ ಥೈಯಿಥೈ ಥೈ ಥೈಯೆಂದು ಕೃಷ್ಣನ ಪಾಡಿದಳೆ ೧
ಕೃಷ್ಣ ನಿನ್ನ ಮಕ್ಕಳಾಟಿಕೆ ಕಷ್ಟರಿಗೆ ಕಾಲಕೂಟವಾಯಿತುದುಷ್ಟದೈತ್ಯ ಮತ್ತ ಮಾತಂಗಗಳಟ್ಟುವ ಸಿಂಹದ ಮರಿಯೆ ೨
ದೀಪ್ತೋಷ್ಣ ಕಿರಣನು ಬರೆ ಕತ್ತಲೆಯತ್ತಲೆ ಪೋಪುದುಮತ್ತಿತ್ತ ಸುತ್ತಮುತ್ತಸುಳಿವುದೆ ಚಿತ್ತಜನ ಪೆತ್ತ ಹರಿಯೆ ೩
ಚೆಂದದ ನಿನ್ನ ಚೆಲ್ವ ಸಿರಿಮೊಗದಂದವನು ತನಗಿಲ್ಲವೆಂದುಕಂದಿಕುಂದಿದಳಿಂದಿರೆ ಮರುಳಾಗಿ ಕಂದ ನಿನ್ನ ಹೊಂದಿ ನಿಂದಳೊ ೪
ಇಂಥ ಸಿರಿಹಯವದನ ನಿನ್ನಂಥದೇವನು ದಾವನುಪಂಥವೇ ನಿನ್ನಗೂಡೆ ಗುಣಮಣಿತಿಂತಿಣಿಯಂತೆ ನೀನು ೫

 

೧೨೩
ಬಾರೊ ಮುಂದಿರೊ ಪರನಾರಿಸಹೋದರಮಾರ ನಿನಗಾರ ಮುದ್ದತಾರ ವೀರಹನುಮ ಪ.
ಮರಗಳ ಮುರಿದೆ ಕರೆಕರೆದು ನೆರೆದಸುರರಶಿರಂಗಳ ತರಿದೆ ನಿನ್ನ ಸರಿಯಾರೋ ವೀರ ಹನುಮ ೧
ಕಂಡೆ ನಿನ್ನ ಬಲವ ಸುಪ್ರಚಂಡ ರಿಪುಕುಲವತುಂಡು ತುಂಡಿಕ್ಕಿ ಮೆರೆದೆ ಬಲುಗಂಡೆ ವೀರ ಹನುಮ ೨
ಎನ್ನೊಡೆಯ ಶ್ರೀಹಯವದನಗೆ ರನ್ನದ ಕನ್ನಡಿಯಂತೆ ಪ್ರಸನ್ನ ಮೋಹದ ……ಬಾಳು ಬಾಳು ವೀರ ಹನುಮ ೩

 

೭೯
ಬಾರೊ ಮುರಾರಿ ಬಾಲಕ ಶೌರಿ ಪ.
ಸಾರ ವಿಚಾರಿ ಸಂತೋಷಕಾರಿ ಅ.ಪ.
ಆಟ ಸಾಕೇಳೊ ಮೈಯೆಲ್ಲ ಧೂಳೊಊಟಮಾಡೇಳೊ ಕೃಷ್ಣ ಕೃಪಾಳೊ೧
ಅರುಣಾಬ್ಜಚರಣ ಮಂಜುಳಾಭರಣಪರಮ ವಿತರಣ ಪನ್ನಂಗಶಯನ ೨
ಅರವಿಂದನಯನ ಶರದೇಂದುವದನವರ ಯದುಸದನ ಸಿರಿ ಹಯವದನ ೩

 

೨೯೩
ಬಾಲನೇನೆ ನಿನ್ನ ಮಗನು ಗೋ-
ಪಾಲಕೃಷ್ಣನು ಪ.
ಬಾಲನೇನೆ ನಿನ್ನಮಗನು
ಬಾಲಕಿಯರಾಲಯ ಪೊಕ್ಕು
ಶೀಲಗೆಡಿಸಿ ಸಾಲದೆ ಗೋ-
ಕುಲವನು ಸೂರೆಮಾಡಿದ ಅ.ಪ.
ಕಾಲು ಇಲ್ಲದೆ ನಡೆವನೀತ ಮೇಲುಗಿರಿಯ ಬೆನ್ನಲಾಂತ
ಮೂಲಬೇರ ಮೆಲ್ಲುವಾತ ಜ್ವಾಲರೂಪಿ ಸ್ಥೂಲಕಾಯ
ಬಾಲನಾಗಿ ಭೂಮಿಬೇಡಿದ ಹಾಲು ಕುಡಿಸಿದ ತಾಯ
ತಲೆಯ ಎರವು ಮಾಡಿದ ವಲ್ಕಲವನುಟ್ಟು ಅಡವಿ
ಆಲಯವ ತಿರುಗಿದ ಶ್ರೀರಾಮಚಂದ್ರ
ನೀಲವರ್ಣ ನಿಗಮಗೋಚರ
ವೇಲಾಪುರದ ಸೋರುಮುಡಿಯ
ಬಾಲೆಯನು ಸೋಲಿಸಿ ಕಾಲದಲ್ಲಿ ಕಲ್ಕ್ಯನಾದ ೧
ಮಡುವಿನಲ್ಲಿ ಅಡಗಿಯಿರುವ ಪೊಡವಿ ದೊಡ್ಡನೆತ್ತಿ ಪೊರೆವ
ಅಡವಿಯಲ್ಲಿ ಆಡುತಿರುವ ಕಡುಕ್ರೂರ ಹಿಡಿದ ಹಟವ
ಹುಡುಗನಾಗಿ ಪೊಡವಿ ಬೇಡಿದ ಕೊಡಲಿ ಪಿಡಿದು
ಕಡಿದು ಕ್ಷತ್ರಿಯರ ಕುಲವ ತರಿದನೆ ರಾವಣಾದಿ
ಪಡೆಯನೆಲ್ಲ ಸಂಹರಿಸಿದ ಶ್ರೀರಾಮಚಂದ್ರ
ತುಡುಗು ಮಾಡಿ ಗಡಿಗೆ ಪಾಲ ಕುಡಿದು ಕಡಹದಲ್ಲಿ ಅಡಗಿ
ಬಿಡದೆ ತ್ರಿಪುರವ್ರತಕೆಡಿಸಿ ಪಿಡಿದು ತೇಜಿಯ ನಡೆಸುತಿಹನು ೨
ನೀರಪೊಕ್ಕು ವೇದತಂದು ಭಾರಪೊತ್ತು ಬೆನ್ನಲಿಟ್ಟು
ಕೋರೆಹಲ್ಲು ತೋರುವ ಕ್ರೂರವದನ ಅಪಾರ ಮಹಿಮ
ಮೂರು ಪಾದ ಭೂಮಿ ಬೇಡಿದ ವಿಪ್ರರ ಕರೆಸಿ
ಧಾರುಣಿಯನೆ ದಾನ ಮಾಡಿದ ಪರ್ವತಗಳ ತರಿಸಿ
ಶರಧಿಯನ್ನು ಸೇತುಕಟ್ಟಿದನೆ ಶ್ರೀರಾಮಚಂದ್ರ
ಜಾರ ಚೋರ ಮಾರನಯ್ಯ ನಾರೇರಪ್ಪಿ ಮರುಳುಮಾಡಿ
ವಾರಿಜಾಕ್ಷ ಹಯವದನ ಏರಿ ಕುದುರೆ ವೈಹಾಳಿಮಾಡಿದ ೩

 

೧೯೭
ಬಾಳು ಬಾಳು ಹರಿ ಪೂಜಾಲೋಲುಪಳೊ ಬಾಳೊ ಮುನಿಬಾಳೆಂದಕ್ಷತಿನಿಟ್ಟು ದೇವಕ್ಕಳೆಲ್ಲಬಲು ಕೃಪೆಯಲಿ ಹರಸಿದರೊಪ.
ಮಕ್ಕಳ ಮ್ಯಾಲೆಂದೆಂದು ಬಲುಅಕ್ಕರುಳ್ಳ ತಾಯಿ ಬಳಗಅಕ್ಷತಿನಿಕ್ಕಿ ಹರಸುವಂದದಿ ದೇ-ವಕ್ಕಳೆನ್ನ ಹರಸಿದರೊ ೧
ಸಾಲಿಗ್ರಾಮ ತೀರ್ಥವನು ಮ್ಯಾಲೆಫಲವೀವ ಕ್ಷೇತ್ರವನುಕಾಲಕಾಲದಿ ಹರಿಸ್ಮರಣೆಯ ಬಿಡದಿರುಕೀಳು ಭವವೆಂಬ ಶತ್ರುವನು ೨
ತುಲಸಿ ಪದ್ಮಾಕ್ಷಿಯ ಸರವ ನಿನ್ನಕೊರಳ ರವದಲ್ಲಿ ಮೆರೆವಅಲಸದೆ ಹರಿವಾಸರವನೆ ಬಿಡದಿರುಸುಲಭದಿ ಹರಿ ನಿನ್ನ ಪೊರೆವ ೩
ಭ್ರಾಮಕರೊಡನಾಡದಿರು ಕಂಡಕಾಮಿನಿಯರ ಕೂಡದಿರುನೇಮನಿಷ್ಠೆಗಳನ್ನು ಬಿಡದಿರು ಎಂದೆಂದುತಾಮಸನಾಗಿ ಕೆಡದಿರು ೪
ಹಯವದನಗೆ ನಮಿಸುತಿರು ನಿ-ರ್ಣಯದ ಶ್ರುತಿಯಸೇವಿಸುತಿರುಪ್ರಿಯ ಪುರಾಣಗಳ ಕೇಳುತಿರು ನಿ-ರ್ಭಯದಿಂದವನ ಪೊಗಳುತಿರು ೫

ಹರಿಭಕುತರೊಳೆಂದೆಂದಾಡಿರೊ ನರ-ಹರಿಯ ನಾಮಗಳನು ಪಾಡಿರೊ ಹರಿ ಅರ್ಚನೆಯನು ಮಾಡಿರೊ ಶ್ರೀಹರಿಯ ಮೂರುತಿಯನು ನೋಡಿರೊ ೬
ದೂರಕ್ಕೆ ದೂರನು ದಾವನ ಹ-ತ್ತಿರ ಬಂದ ಭಕುತರ ಕಾವನಆರಾಧಿಸಲು ಫಲವೀವನ ಹ-ತ್ತಿರ ಸೇರುವ ಭಾವ ದಾವನ ೭
ಕಾಮದೇವನ ಪೆತ್ತ ಕರುಣಿಯ ಸುತ್ತಸೇವಿಪರಘತಮ ತರಣಿಯ- – – – – – – – – – — – – – – – – – – – -೮

ಜಯಿಸಿ ಕಂಸನೆಂಬ ಮಾವನ ಅ-ಸ್ಯವಿತ್ತು ಭಕುತ ಸಂಜೀವನಹಯವದನನಾಗಿ ಪಾವನ ಶ್ರು-ತಿಯ ತಂದ ದೇವರದೇವನ ೯

 

೧೯೮
ಬಿಂದುಮಾಧವ ಮಾಡದಿರೆನಗೆ ತಂದೆ ಭೇದವಕಂದುಗೊರಳಾಧೀಶ ಕಾಶಿಯ ಪುರವಾಸಕಂದನ್ನ ತಡೆಯದೆ ಕಾಯನುದ್ಧರಿಸೊ ಪ.
ಮೋಕ್ಷದಾಯಕ ರಕ್ಷಿಸೊ ಎನ್ನ ಲಕ್ಷ್ಮೀನಾಯಕಕುಕ್ಷಿಯೀರೇಳು ಭುವನವ ತಾಳ್ವನಭಿಕ್ಷಾಪಾತ್ರ ಶಿವನ ಧ್ಯಾನದೊಳಿರಿಸೊ ೧
ಪಾಪನಾಶನ ಪಾಲಿಸೊ ಎನ್ನಸಪರ್ಭೂಷಣ ತಾತನೆಂದೆನಿಸಿ ತವ-ನಾಮಸ್ಮರಣೆಯ ಪಾರ್ವತೀಪತಿ ಯತಿ ಧ್ಯಾನದೊಳಿರಿಸೊ ೨
ಆದಿಮೂರುತಿ ವಿಶ್ವೇಶ ವಿಷ್ಣು-ಪಾದವೆ ಗತಿ ವೀರನೆಂದೆನಿಸುವಸೋದೆಯ ಪುರವಾಸ ವರದವಂದೇ ಹಯವದನ ೩

 

೨೩೭
ಬಿಟ್ಟು ಬನ್ನಿರೊ ಸಂಸಾರದ್ಹಂಬಲ ಪ.
ಸೃಷ್ಟಿಪತಿಯ ಸೇರಿ ನೀವು ಸುಖಿಸಬನ್ನಿರೊ ಅ.ಪ.
ಹೆಂಡಿರುಮಕ್ಕಳು ಎಂಬೋ ಹಂಬಲ ಬೇಡಿರೊಕೊಂಡವರಲ್ಲ ಕೊಡುವರಲ್ಲ ಮುಂದಿನ ಗತಿಯನು ೧
ಎಷ್ಟು ಮಾಡಿ ಗಳಿಸಿ ತಂದರು ಸಾಲದೆಂಬರೊನಷ್ಟಮಾಡಿ ಇವನ ಬದುಕು ಎಲ್ಲ ತಿಂಬರು ೨
ನಡುಬೀದಿಯಲಿ ಇವನ ಎಳೆದು ಸೆಳೆವರೊಕಡೆಗಣ್ಣು ಕುಡಿಹುಬ್ಬು ನೋಟದಿಂದಲಿ ೩
ಉಂಡು ಉಟ್ಟು ಗುಂಡಿನಂತೆ ಮನೆಯಲಿರುವರೊಚಂಡ ಯಮನದೂತರು ಬಂದು ಎಳೆದು ಒಯ್ವರೊ೪
ಮುಟ್ಟಿ ಭಜಿಸಿರೊ ಹಯವದನನಂಘ್ರಿಯನೆಟ್ಟನೆ ಮುಕ್ತಿಮಾರ್ಗ ತೋರಿಕೊಡುವೆನೊ ೫

 

೨೩೮
ಬಿಡದೆ ಭಜಿಸಿ ಬೊಮ್ಮ ಮೃಡ ಮುಖ್ಯ ಸುರರಿಗೆಡೆಯನೆನಿಪ ಮುದ್ದು ಉಡುಪಿಯ ಕೃಷ್ಣನ ಪ.
ಪೊಡವಿಯೊಳಗೆ ತನ್ನ ಅಡಿಗಳ ಧೇನಿಪ-ರಡಿಗಡಿಗವರ ವಾಂಛಿತ ವಸ್ತುವಕಡೆದು ಕೊಡುವೆನೆಂದು ಕಡೆಗೋಲ ನೇಣನೆಪಿಡಿದಿಹ ಸಿರಿಯರಾ ದೃಢಕೆ ಮೆಚ್ಚಿದನ ೧
ಹರಿಸರ್ವೋತ್ತಮನೆಂಬೊ ಪರಮಸಿದ್ಧಾಂತಕ್ಕೆ ಮ-ಚ್ಚರಿಸುವ ಕುಮತದ ಕುಜನರಭರದಿ ಬಂಧಿಸಿ ಬನ್ನಂಬಡಿದು ಶಿಕ್ಷಿಪೆನೆಂದುವರಪಾಶದಂಡಧಾರಿಯಾಗಿ ತೋರಿಪ್ಪನ ೨
ಭಕ್ತವತ್ಸಲನೆಂಬೊ ಸುಲಭೋಕ್ತಿಯನು ಬಂದನಿಕರಕ್ಕೆ ಪೇಳಲು ದ್ವಾರಕಾಪುರಿಯಸುಖತೀರ್ಥಮುನಿಗೆ ಸುಖಕರನಾಗಿ ಬಂದಅಕುಟಿಲ ಕೃಷ್ಣ ಹಯವದನರಾಯನ ೩

 

೧೯೯
ಬಿಡೆನೊ ಬಿಡೆನೊ ನಿನ್ನ ಚರಣಕಮಲವ ಎನ್ನಹೃದಯಮಧ್ಯದೊಳಿಟ್ಟು ಭಜಿಸುವೆ ಅನುದಿನ ಪ.
ಬಲಿಯ ದಾನವ ಬೇಡಿ ಅಳೆಯೆ ಬ್ರಹ್ಮಾಂಡವಪದುಮನಾಭನೆ ನಿನ್ನ ಪಾದ ಸೋಕಲಾಗಿಉಗುರಕೊನೆಯಿಂದ ಉದಿಸಿದಳಾ ಗಂಗೆಹರಿಪಾದತೀರ್ಥವೆಂದು ಹರ ಧರಿಸಿದನಾಗ ೧
ಆ ಪತಿಶಾಪದಿ ಅಹಲ್ಯೆ ಸಾವಿರಯುಗಪಾಷಾಣವಾಗಿ ಪಥದೊಳಿರಲುದೇವ ನಿನ್ನಯ ಪಾದ ಸೋಂಕಿದಾಗಲೆಸತಿಪಡೆದಳು ದಿವ್ಯದೇಹವನು ೨
ವಜ್ರಾಂಕುಶ ಧ್ವಜ ಪದ್ಮರೇಖೆಗಳಿಂದ ಒಪ್ಪುವಸಿರಿಪಾದಪದುಮವನುಭಕ್ತಿಯಿಂದ ಭಜಿಸಲು ಸಿರಿ ಹಯವದನನೆ ಪ್ರತ್ಯಕ್ಷವಾಗಿ ಸಲಹುವ ನಮ್ಮನು ೩

 

೨೯೪
ಬೆಳಗುಂಝಾವದಿ ಬಾರೊ ಹರಿಯೆ ಚರಣ
ತೊಳೆದು ಜಲದಿ ತೀರ್ಥಪಾನ ಮಾಡುವೆನೊ ಪ.
ನೀರ ಒಳಗೆ ನಿಂತುಕೊಂಡು ಬೆನ್ನ
ಭಾರ ಪೊತ್ತು ನಿನ್ನವರ ಕಾದುಕೊಂಬೆ
ಮೋರೆ ತಗ್ಗಿಸಿದರೇನೆಂಬೆ ಜಗದಿ
ನಾರಸಿಂಹನಾಗಿ ಪೂಜೆಯಗೊಂಬೆ ೧
ಬಲಿಯ ದಾನವ ಬೇಡಿದೆಲ್ಲೊ ಕ್ಷತ್ರಿ
ಕುಲವ ಸವರಿ ಕೊಡಲಿಯ ಪಿಡಿದೆಲ್ಲೊ
ಬಲವಂತ ನಿನಗಿದಿರಿಲ್ಲೊ ನಿನ್ನ
ಲಲನೆಯ ತಂದು ರಾಜ್ಯವನ್ನಾಳಿದೆಲ್ಲೊ ೨
ಗೋಕುಲದೊಳು ಪುಟ್ಟಿದೆಲ್ಲೊ ಲೋಕ
ಪಾ(ಕಾ?) ಕು ಮಾಡಲು ಬುದ್ಧರೂಪನಾದೆಲ್ಲೊ
ಯಾಕೆ ಹಯವನೇರಿದೆಲ್ಲೊ ನಮ್ಮ
ಸಾಕುವ ಹಯವದನ ನೀನೆ ಬಲ್ಲೆಲ್ಲೊ ೩

 

೧೩
ಬೇಗ ಬಾರೊ ಬೇಗ ಬಾರೊ ನೀಲಮೇಘವರ್ಣ ಪ.
ಬೇಗ ಬಾರೊ ಬೇಗ ಬಾರೊ ವೇಲಾಪುರದ ಚೆನ್ನ ಅ.ಪ.
ಇಂದಿರ ರಮಣ ಗೋವಿಂದ ಬೇಗ ಬಾರೊನಂದನ ಕಂದ ಮುಂಕುಂದ ಬೇಗ ಬಾರೊ ೧
ಋದ್ಧ ಸಮೃದ್ಧ ಅನಿರುದ್ಧ ಬೇಗ ಬಾರೊಹದ್ದನೇರಿದ ಪ್ರಸಿದ್ಧ ಬೇಗ ಬಾರೊ ೨
ರಂಗ ಉತ್ತುಂಗ ನರಸಿಂಗ ಬೇಗ ಬಾರೊಕಂಗಳಿಗೆಸೆವ ಶುಭಾಂಗ ಬೇಗ ಬಾರೊ ೩
ಧೀರ ಉದಾರ ಗಂಭೀರ ಬೇಗ ಬಾರೊಹಾರಾಲಂಕಾರ ರಘುವೀರ ಬೇಗ ಬಾರೊ ೪
ಅಯ್ಯ ವಿಜಯ್ಯ ಸಾಹಯ್ಯ ಬೇಗ ಬಾರೋ ಉ-ದಯಾದ್ರ್ರಿವಾಸ ಹಯವದನ ಬೇಗ ಬಾರೊ ೫

 

೮೧
ಭಕುತರಪರಾಧವ ಬಗೆಯನೀ ದೇವಭಕುತರು ತಪ್ಪಿದರೆ ಬಲು ಭಯವೀವ ಪ .
ಇಟ್ಟುಣಿಸಿದ ಬಲಿ ಕಟ್ಟಿದ ಯಶೋದೆಗೆಇಷ್ಟಾರ್ಥಗಳನಂದು ಕೊಟ್ಟು ಕಾಯನೆದುಷ್ಟತನದಿ ಧೃತರಾಷ್ಟ್ರತನಯ ತನ್ನಕಟ್ಟಲು ಹವಣಿಸೆ ಕಷ್ಟವನುಣಿಸನೆ ೧
ಕಾಲಲಿ ತನ್ನ ಅಂಗವನೊದ್ದ ಮುನಿಪನಮೂಲೋಕವರಿಯೆ ಮುದ್ದಿಸಿ ಮೆರೆಯನೆತಾಳದೆ ನೃಪತಿಯ ತಾನೆಂದು ತಿಳಿಯನುಕಾಲಯವನ ಬಂದು ಕಾಳು ಮಾಡಿಸನೆ ೨
ಪರವಶಚಿತ್ತನಾಗಿಫಲುಗುಣ ಜರೆಯಲುಹರಿ ದೂರಾಗದೆ ಹರಣವ ಕಾಯನೆಅರಸೆಂಬ ಗರ್ವದಿಂದ ಅರಿಭಟ ಪೌಂಡ್ರಕನಧುರಕೆ ಗುರಿಯ ಮಾಡಿ ಧುರದಿ ಕೊಲಿಸನೆ ೩
ಶರಕೆ ಗುರಿಯ ಮಾಡಿ ಸಮರದೊಳೊಡ್ಡಿದಸುರವ್ರತಗಂದು ಶುಭವನೀಯನೆಹರನ ಮೆಚ್ಚಿಸಿ ತನ್ನ ಗೆಲುವ ಬಿಲ್ಲ ಬೇಡಿದಶರೀರ ಸಂಬಂಧಿಯ ಕೊಲಿಸನೆ ೪
ಮಕುಟವ ಕದ್ದೊಯ್ಯಲು ಮಹಾಬಲಿಯ ಬಾಗಿಲಅಕಳಂಕನಂದು ಕಾವುದ ಬಿಟ್ಟನೆಈ ಕೃಷ್ಣ ಹಯವದನನಿಂದುಡುಪಿನ ಜನಕೆಶೋಕವಿತ್ತ ಕಳ್ಳನಿಗೆ ಶೂಲಗತಿಯೀಯನೆ ೫

 

೮೦
ಭಕುತರ್ಗೆ ಭಯಬಾರದು ಸುಖವೀವ ಕಾವದೇವನಕಾಕುಜನರಿಂದ ಬಂದಾನೇಕ ಶೋಕಂಗಳ ಕಳೆವಶ್ರೀರಂಗನ ದೇವೋತ್ತುಂಗನ ಭವಭಂಗನ ಪ.
ಹಿರಣ್ಯಕನುದರ ವಿದಾರಣನ ಸ್ವಚರಣಕರಣ ಪ್ರಹ್ಲಾದನ ಭಯನಿವಾರಣನಕರಿವರ ಕರೆಯೆ ಮಕರಿಯ ಸೀಳಿದ ಸಿರಿಯನಾಳಿದಪಿರಿಯ ಶ್ರೀಹರಿಯ ಧೂರ್ತಾರಿಯ ಬಕವೈರಿಯ ೧
ಯತಿಕುಲಪತಿಯ ಮಧ್ವಾಚಾರ್ಯರಕೃತಿಯಾಶ್ವರ್ಯ ಚಾತುರ್ಯಕೊಲಿದನಸತಿ ಸಭೆಯಲ್ಲಿ ಸಿರಿಪತಿ ನೀನೆ ಗತಿಯೆನೆಅತಿ ದೂರದಿಂದಕ್ಷಯವೆಂದ ಗೋವಿಂದನ ಮುಕುಂದನ ೨
ಕಂಕಣ ಕುಂಡಲ ಮಕುಟ ಪಾದುಕಾ ಹಾರಕಿಂಕಿಣಿ ಕೌಸ್ತುಭ ನೂಪುರ ಮೊದಲಾದ-ಲಂಕೃತಿಯಿಂದೊಪ್ಪುವ ನೀಲಗಾತ್ರನಪಂಕಜನೇತ್ರನ ಪರಮಪವಿತ್ರನ ಸುಚರಿತ್ರನ ಸುರಮಿತ್ರನ ೩
ಗುರುವೆಂದರಿವ ಹರಿಯೆಂದು ಕರೆವ ತ-ಮ್ಮಿರವ ಮರೆವ ಸದ್ಗುಣ ವಿಸ್ತಾರವ-ನ್ನೊರೆವ ನಯನದಿ ಸುರಿವ ಪರಿವ ಸುಖಾಂಬುಧಿಕರೆವ ತೋರುವ ಖಳನಿರವ ಮುಕ್ತಿಗೆ ಕೂರುವ ೪
ಹರಿಯನೆ ಪಾಡುವ ಹರಿಯ ಕೊಂಡಾಡುವಹರಿಯ ನೋಡುವ ಹರಿಯನೆ ಬೇಡುವದುರುಳರ ಕಾಡುವ ತಪದಿಂ ಬಾಡುವದುರಿತವ ಬಿಡುವ ಸುಕೃತವನೆ ಕೊಡುವ ಪಾಡಪಾಡುವ ನಲಿದಾಡುವ ೫
ಹರಿಯನೆ ಸ್ಮರಿಸುವ ಹರಿಯನನುಸರಿಸುವಹರಿಯನೆ ಪರಿಹರಿಸುವ ಹರಿಯನೆಬೆರಿಸುವಹರಿಯನೆ ತೋರಿಸುವ ಹರಿಯನೆ ಮರೆಸುವಹರಿಪಾದಕೇರಿಸುವ ಸುಖರಸವ ಎರೆಸುವ ೬
ಒಂದು ಕೈಯಲಿ ಕಡೆಗೋಲನೆ ಪಿಡಿದು ಮ-ತ್ತೊಂದು ಕೈಯಲಿ ನೇಣನಾಂತ ಶ್ರೀಕಾಂತನಮುಂದೆ ನಿಂದು ಒಲಿವುತ್ತ ನಲಿವುತ್ತತಂದೆ ಹಯವದನನರ್ಚಿಸುವ ಮೆಚ್ಚಿಸುವ ಹೆಚ್ಚಿಸುವ ೭

 

೧೪೨
ಪಾರ್ವತಿ
ಭದ್ರಾಣಿ ದೇಹಿ ಮೇ ಗೌರಿ ಪ.
ಭದ್ರಾಣಿ ದೇಹಿಮೇ ಗೌರಿ ರುದ್ರಾಣಿ ಭೂರ್ಯಾ (ರಿ?) ಭರಣಿ ಅ.ಪ.
ಗರ್ವಾದಿ ನಿರ್ಮಿತಾನಿ ದುರ್ವಾಸ ಸುಖದಾನಿ(?)ಸರ್ವಾಣಿ ಪಾತ ಕಾನಿ ಸರ್ವಾಣಿ ಭಿಂತಾನಿ(?) ೧
ಅಂಬೋಜನಾಭ ಸುಹಿತೇ ರಂಬೋರು ಶಂಭೋದಯಿತೇಗಾಂಭೀರ್ಯ ಸುಗುಣಸಹಿತೇ ಕುಂಭೋದ್ಭವಾದಿ ವಿನುತೇ ೨
ಇಂದೀವರಾಭ ನಯನೇ ನಂದಿತ ಹಯವದನೇಕುಂದಕುಟ್ಮಲರದನೆ ಚಂದ್ರಸಹಸ್ರ ವದನೆ ೩

 

೧೪೭
ಭಳಿರೆ ನಿಮ್ಮಯ ಗುಣವ ವರ್ಣಿಸಲಳವೆಜಲಧಿಸಮಗಂಭೀರ ಜಯತೀರ್ಥವರ್ಯ ಪ.
ನಿನ್ನ ಕೃತಿಯೆಂಬಂಜನವ ದೃಷ್ಟಿಯೊಳಿಟ್ಟುಸನ್ನ್ಯಾಯ ವಿವೃತ್ತಿ ಮತ ಭೇದಗಳಲ್ಲಿಪನ್ನಂಗಶಯನನ ಭಕ್ತಿಯಿಂದ ಪ್ರ-ಸನ್ನವನೆ ಮಾಡಿ ಪುರುಷಾರ್ಥವೀವುದೊ ೧
ಆವ ಪರಿಯಿಂದ ಅರ್ಜುನನು ರಣದೊಳು ಪೊಕ್ಕುದೇವನುದರದಿ ಕಂಡನೀ ವಿಶ್ವರೂಪಆವಂದದಿ ಗುರು ಶ್ರೀಮದಾನಂದತೀರ್ಥರಭಾವಗಳನೆ ತಿಳಿದೆ ಭಾಷ್ಯಾದಿಗಳಲಿ ೨
ಬುಧರು ನಿನ್ನಯ ನ್ಯಾಯಸುಧೆಯ ಶ್ರವಣವ ಸ-ವಿದು ಉದ್ಧರಿಸಿ ಮೋಹಂಗಳ ಮುಪ್ಪುಗಳ ಕಳೆದುಒಂದಧಿಕ ಬಲದಿಂದ ಒದ್ದು ಮಾಯಿ ದಿತಿಜರನುಒದಗಿ ಕಾಮವೆಂಬ ಕ್ಷುಧೆಗಳ ಅಳಿವರೊ ೩
ಮಧ್ವರಾಯರೆಂಬುದು ಮತ್ತೊಂದು ರೂಪದಲಿಇದ್ದು ನುಡಿದಂದದಲಿ ಸಿದ್ಧಾಂತವನು ನೀ ಉದ್ಧರಿಸಿ ಲೋಕದಲಿಅದ್ವೈತ ಮತದವರ ಉದ್ಯೋಗದಿಂದ ಬಲುಮುಗ್ಧರನು ಮಾಡಿದೆ ೪
ಬರಿದೆ ಮಾತುಗಳಿಂದ ಬಂದ ವಿದ್ಯಾರಣ್ಯನಮರುಳು ಮಾಡಿದೆ ಗ್ರಂಥಸ್ಕರಣದಿಂದ ಪರರನರಿಗಳನು ಮಾಡಿದಾಶ್ಚರ್ಯ ಕಾರಣಪುರುಷವರ ಹಯವದನನ ಪಾದಸರಸಿಜಭೃಂಗ ೫

 

೧೫೦
ಭಾಗ್ಯವಂತನು ಇನ್ನು ಯಾರಯ್ಯ ಪ.
ಯೋಗ್ಯ ವೈಷ್ಣವಕುಲದ ಭಾಗವತನಲ್ಲದೆ ಅ.ಪ.
ಚತುರನೆನಿಸಿ ಲಕ್ಷ ಮನೆಮನೆ ತಿರುಗಿದೆಚತುರಾನನನಾ ಮಾತು ಅನುಸರಿಸಿದೆಸತು ಚಿತು ಆನಂದ ಆತ್ಮ ಹರಿಸ-ರ್ವೋತ್ತಮನ ದಾಸರದಾಸ ಎಂಬುವನಲ್ಲದೆ ೧
ತಾರತಮ್ಯ ಪಂಚಭೇದವನೆ ತಿಳಿದು ಶ್ರೀಮಾರುತನ ಮತಗಳೇ ಹಾರೈಸುತಕರ್ಮ ವಂಚನೆಯಿಲ್ಲದನುದಿನದಿ ಮಾಡುತಚರಿಸುತ ಸಂಚಿತಾಗಾಮಿ ಕಳೆವವನಲ್ಲದೆ ೨
ಪತಿತಪಾವನ ಶ್ರೀಹರಿಗುರುಗಳನು ಮೋದದಿಕ್ಷಿತಿಯೊಳಗೆ ಭಜನೆಯೆ ಧನವೆನ್ನುತಅತಿಶಯದಿ ಶೇಷಾದ್ರಿ ಹಯವದನನ್ನ ನೆನೆನೆನೆದುಪ್ರೀತಿಯಿಂದಲಿ ಭಜಿಸುವವನಲ್ಲದೆ ೩

 

೧೩೭
ಭಾರತಿ ದೇವಿಯೆ ಮಾರುತಿ ರಾಣಿಯೆ ಪ.
ಮಂದಿ ನಾಲ್ವರನು ಹೊಂದಿಸಿ ಉದರದಿಒಂದೆ ರೂಪದಿ ಜನರಿಗೆ ತೋರುವ ಸತಿ೧
ಸೀತಾಕಾಂತನ ದೂತನಾಗಿ ಪ್ರ-ಖ್ಯಾತಿಯ ಪಡೆದನ ಪ್ರೀತಿಯ ಸತಿಯಳೆ ೨
ದುಷ್ಟ ಕಲಿಯ ಕುಲಕುಟ್ಟಿ ಕೆಡಹಿದ ಭಲಕಟ್ಟಾಳು ಭೀಮನ ಪಟ್ಟದಸತಿಯಳೆ ೩
ಮೂರುಏಳುಕುಲ ಮಾಯಿಗಳನು ಗೆದ್ದುಬೋರೆಮರದ ಕೆಳಗಿರುವನ ಸತಿಯಳೆ ೪
ಹಗಲಿರುಳೆನ್ನದೆ ಹಯವದನನ ಪದಹೃದಯ ಕಮಲದೊಳು ಭಜಿಪನ ಸತಿಯಳೆ ೫

 

೧೨೪
ಭೀಮ ನಿಸ್ಸೀಮಮಹಿಮ ಅಗಣಿತ ಗುಣಸ್ತೋಮಮಪಿತನ ಬಂಟ ನೆನೆವರಿಗೆ ನಂಟಪ.
ನಿನ್ನ ಬಲವತ್ತರ ಶಕ್ತಿಯಿಂದಲಿ ಕಲಿಯಬಣ್ಣಗೆಡಿಸಿದೆ ಪಿಡಿದು ಗದೆಯಿಂದ ಸದೆದುಇನ್ಯಾರು ನಿನಗೆ ಸರಿ ರಿಪುಕದಳಿಮತ್ತಕರಿಎನ್ನ ನೀ ರಕ್ಷಿಸಯ್ಯ ಪಿಡಿ ಬ್ಯಾಗ ಕಯ್ಯ ೧
ಕುಂತಿಯ ಕುಮಾರ ಕೌರವಕುಲಕುಠಾರಅಂತರಂಗದಿ ಶುದ್ಧ ಎನ್ನ ಮನದೊಳಿದ್ದಸಂತಾಪಗಳ ಕೆಡಿಸೊ ಹರಿಭಕುತಿಯನು ಕೊಡಿಸೊ ಅ-ಚಿಂತ್ಯ ಬಲ ಶೌರ್ಯ ದುರ್ಜನಕುಮುದಸೂರ್ಯ ೨
ದೇವ ನೀ ವಿಷದಲಡ್ಡುಗೆಯನುಂಡು ದಕ್ಕಿಸಿದ ಕಂಡುಭಾವಶುದ್ಧದಿ ಮರೆಹೊಕ್ಕೆ ದೊರೆಯೆ[ಆವಾವುದುಂಡರೆನಗೆ ದಕ್ಕುವಂತೆ ಮಾಡೊ]ದೇವ ನಿನಗೆಣೆಗಾಣೆ ಹರಿಪದಗಳಾಣೆ ೩
ಬಕಹಿಡಿಂಬಕಿಮ್ಮೀರರಿಪುವೆ ಘನಸಮೀರನಖಾಗ್ರದಲಿ ಕೊಂದೆ ರಣಾಗ್ರದಲಿ ನಿಂದೆಭಕುತಿಯಲಿ ನಿನ್ನಪಾದ ಭಜಿಸುವವರಿಗೆ ಮೋದ ೪
ಯುಕುತಿಯಲಿ ಕೊಡಿಸೊ ವಾದಿಗಳೋಡಿಸೊದುರುಳದೈತ್ಯರವೈರಿ ಖಳಕುಲಕೆ ನೀ ಮಾರಿ ದು-ಸ್ತರಣ ಭವತಾರಿ ಸುಜನರಿಗುಪಕಾರಿಹರಿಭಕುತಿ ತೋರಿಸಿದಿ ಮುಕುತಿಪಥ ಸೇರಿಸಿದಿಪೊರೆಯಯ್ಯ ಹಯವದನ ಶರಣ ಇದು ಕರುಣ ೫

 

೧೨೫
ಭೀಮರಾಯನ ನಂಬಿ ಭೀಮಸೇನನಭೀಮಭವವಾರಿಧಿಯ ಬೇಗದಾಟುವರೆ ನಮ್ಮ ಪ.
ಬಕ ಮೊದಲಾದ ಹಿಡಿಂಬಕ ದುರ್ಜನರ ಕೊಂದುಸುಖಪಡಿಸಿದನಂದು ದ್ವಿಜಕುಲಜರಾಗ ಕೂಡ ೧
ಜರಾಸಂಧನ ಕೂಡೆ ವರ ಯುದ್ಧವನ್ನೆ ಮಾಡಿಸರಕು ಮಾಡದೆ ಕೊಂದ ಧಾರುಣಿಯೊಳಗೆ ನಿಂದ ೨
ಅಸುರ ಕೀಚಕನೆಂಬುವ ಸತಿ ಕೃಷ್ಣೆಯಬಾಧಿಸೆ ಘಾಸಿಮಾಡಲು ವಂದ್ಯರ ಹೇಸದೆ ಮೋಸದಿ ಕೊಂದ೩
ಕಡುತೃಷೆಗೆ ದುಶ್ಶಾಸನನೊಡಲ ಬಗಿದು ರಕ್ತಕುಡಿದಂತೆ ತೋರ್ದ ನಮ್ಮೊಡೆಯ ದ್ರೌಪದಿಪ್ರಿಯ ೪
ಭೀಮ ತನ್ನ ಮರೆಹೊಕ್ಕ ಸುಜನರ ಕಾವಸ್ವಾಮಿ ಶ್ರೀಹಯವದನ ರಾಮನಾಣೆ ಸತ್ಯವಿದು ೫

 

೧೨೬
ಭೀಮಸೇನ ಭಾಮಿನಿಯಾದನು ಪ.
ಭೀಮಸೇನ ಭಾಮಿನಿಯಾಗಲುಪ್ರೇಮದ ಸತಿಯ ಕಾಮಿಸಿದವನಝಾಮರಾತ್ರಿಗೆ ಸೀಳುವೆನೆನ್ನುತಸಾಮಜವರದನ ಪಾಡುತಲಿ ಅ.ಪ.
ರಾಜಾಧಿರಾಜನು ಗಜಪುರದಲ್ಲಿಜೂಜಾಡಿ ತಮ್ಮ ರಾಜ್ಯವನು ಸೋತುವಿಜಯಮುಖ್ಯ ಅನುಜರೊಡಗೂಡಿಭುಜಂಗಶಾಯಿಯ ಭಜಿಸುತ್ತಸೂಜಿಮೊನೆಯಷ್ಟು ಗೋಜಿಲ್ಲದೆ ಬೇರೆವ್ಯಾಜದಿಂದ ರೂಪಮಾಜಿಕೊಂಡು ಪೋಗೆರಾಜ ಮತ್ಸ್ಯನೊಳು ಭೋಜನ ಮಾಡುತ್ತಪೂಜಿಸಿಕೊಂಬೋ ಸೋಜಿಗವೇನಿದು೧
ಮಾನಿನಿ ದ್ರೌಪದಿ ಶ್ರೇಣಿಯೊಳು ಬರುತ ತ್ರಾಣಿ ವಿರಾಟನ ರಾಣಿಯು ಕಾಣುತಧ್ಯಾನಿಸಿ ಯಾರೆಂದು ಮನ್ನಿಸಿ ಕೇಳಲುಮುನ್ನಿನ ಸಂಗತಿ ಪೇಳಿದಳುಆಣಿಮುತ್ತಿನಂಥಾ ವಾಣಿಯ ಕೇಳಲುಕ್ಷೋಣಿಲಿ ನಿನ್ನಂಥ ಜಾಣೆಯ ಕಾಣೆನುಪ್ರಾಣ ನೀನೆನಗೆ ವೇಣಿ ಹಾಕೆನುತಪಾಣಿ ಪಿಡಿದು ಕರೆತಂದಳಾಗ೨
ಈಶ ಕೇಳೊ ಪರದೇಶದಿಂದೊಬ್ಬಳುಕೇಶಕಟ್ಟುವಂಥ ವೇಷದಿ ಬಂದಳುಸಾಸಿರಮುಖದ ಶೇಷನೀರೂಪವಲೇಶವು ತಾ ವರ್ಣಿಸಲರಿಯನುವಾಸಮಾಡುವೆನು ಮಾಸಯೀರಾರುಗ್ರಾಸವ ಕೊಟ್ಟೆನ್ನ ಪೋಷಿಸೆಂದಾ ನುಡಿದೋಸನು ಪೇಳಲು ಮೀಸೆಯ ತಿರುವುತಮೀಸಲೆನಗೆಂದು ತೋಷಿಸಿದ ೩
ನಾರಿ ಅಕ್ಕನಲ್ಲಿ ಸೇರಿಕೊಂಡಿಹಳುಮೋರೆಯ ನೋಡಲು ಭಾರಿ ಗುಣವಂತೆತೋರುತಲಿದೆ ಎನ್ನ ಸೇರಿದ ಮೇಲನು-ಚಾರಿ ಎನಿಸುವೆ ಮೀರಿದ್ದಕ್ಕೆವಾರೆಗಣ್ಣಿಲೊಂದು ಸಾರಿ ನೋಡ್ಯಾಳೆಂದುಬಾರಿ ಬಾರಿಯಾಕೆ ಮೋರೆ ನೋಡುತಿರೆನೀರೆ ಆ ಕ್ರೂರನ್ನ ಘೋರರೂಪಕಂಜಿಮೋರೆ ತೋರದೆ ಗಂಭೀರದಿಂದಿರೆ ೪
ಅಕ್ಕನಿಗೆ ಬಾಚಿ ಹಿಕ್ಕುವ ಸೇವೆಗೆಪುಕ್ಕಟೆ ಅನ್ನಕೆ ಸಿಕ್ಕುವರೆ ನೀನುಚಿಕ್ಕಪ್ರಾಯಕೆನ್ನ ಪಕ್ಕಕ್ಕೆ ಬಂದರೆಸಕ್ಕರೆದುಟಿಸವಿ ದಕ್ಕಿಸುವೆರಕ್ಕಸ ನಿನಗೆ ದಕ್ಕುವಳೆ ನಾನುಮುಕ್ಕಣ್ಣನಾದರು ಲೆಕ್ಕಿಸದಾ ಪತಿಗಕ್ಕನೆ ಬಂದರೆ ತಿಕ್ಕಿ ನಿನ್ನ ಕಾಯದಿಕ್ಕು ದಿಕ್ಕಿಗೆ ಬಲಿಯಿಕ್ಕುವರೊ ೫
ಭಂಡಕೀಚಕನುದ್ದಂಡತನ ಕೇಳುಮಂಡೆ ಹಿಕ್ಕುವಳೆಂದು ಕಂಡಕಂಡ ಬಳಿಪುಂಡು ಮಾಡುವನು ಗಂಡಕಂಡರೆ ತಲೆಚಂಡನಾಡುವನು ಖಂಡಿತದಿಮಂಡಲಾಧಿಪನ ಹೆಂಡತಿ ನೀನಮ್ಮಉಂಡಮನೆಗೆ ಹಗೆಗೊಂಡಳೆನ್ನದಿರುಲಂಡನಿಗೆ ಬುದ್ಧಿ ದಂಡಿಸಿ ಪೇಳದೆಹಿಂಡಿಕೊಳ್ಳದಿರು ದುಂಡುಮುಖ ೬
ತರಳ ನಿನ್ನಯ ದುರುಳತನದಬೆರಳ ಸನ್ನೆಯು ಗರಳವಾಯಿತೆಸರಳ ಗುರಿಗೆ ಕೊರಳ ಕೊಡದೆಪುರದೊಳಿರದೆ ತೆರಳೊ ನೀಅರಳಮೊಗ್ಗೆಯ ಹೆರಳಿಗ್ಹಾ ಕುತಕುರುಳು ತಿದ್ದುವ ತರಳೆಯ ಕಂಡುಇರಳು ಹಗಲು ಬಾರಳು ಎನ್ನುತಮರುಳುಗೊಂಡರೆ ಬರುವಳೆ ೭
ನಿಷ್ಠೆ ಸೈರಂಧ್ರಿಯ ದೃಷ್ಟಿಸಿ ನೋಡಲುನಷ್ಟವಾಗುವುದು ಅಷ್ಟೈಶ್ವರ್ಯವುಭ್ರಷ್ಟ ನಿನಗೆ ನಾನೆಷ್ಟು ಪೇಳಲಿನ್ನುಕಟ್ಟಕಡೆಗೆ ನೀನು ಕೆಟ್ಟಿಕಂಡ್ಯಾಸೃಷ್ಟಿಲಿ ನನ್ನಂಥ ಗಟ್ಟಿಗನ್ಯಾರಕ್ಕದುಷ್ಟರ ಎದೆಯ ಮೆಟ್ಟಿ ಸೀಳುವೆನುಗುಟ್ಟಿಂದ ನಾರಿಯ ಕೊಟ್ಟುಕಳುಹಲುಪಟ್ಟದ ರಾಣಿಯೊಳಿಟ್ಟುಕೊಂಬೆ ೮
ಕೀಚಕನಾಡಿದ ನೀಚನುಡಿ ಕೇಳಿನಾಚಿ ಪತಿಯೊಳು ಸೂಚಿಸಬೇಕೆಂದುಯೋಚಿಸಿ ಸುಮ್ಮನೆ ಈಚೆ ಬರುತಿರೆ ನಿಶಾಚರ ಕರವ ಬಾಚಿದನುಬಾಚಿ ಹಿಕ್ಕುವಂಥ ಪ್ರಾಚೀನವೇನಿದುವಾಚನಾಡು ಮೀನಲೋಚನೆ ಎನ್ನಲುಆಚರಿಸಿ ಮುಂದುತೋಚದೆ ಖಳನವಿಚಾರಿಸಿಕೊ ಶ್ರೀಚಕ್ರಪಾಣಿ ೯
ಪೊಡವಿಪತಿಗಳ ಮಡದಿ ನಾನಾಗಿಬಡತನವು ಬಂದೊಡಲಿಗಿಲ್ಲದೆನಾಡದೊರೆಗಳ ಬೇಡುವುದಾಯಿತುಮಾಡುವುದೇನೆಂದು ನುಡಿದಳುಕೇಡಿಗ ಕೀಚಕ ಮಾಡಿದ ಚೇಷ್ಟೆಗೆಕಡಲಶಾಯಿ ಕಾಪಾಡಿದ ಎನ್ನನುಆಡಲಂಜಿಕೇನು ಷಡುರಸಾನ್ನದಅಡುಗೆ ರುಚಿಯ ನೋಡುವರೇ ೧೦
ನಡುಗುವೊ ಧ್ವನಿ ಬಿಡುತ ಕಣ್ಣೀರಿಂ-ದಾಡುವ ಮಾತನು ಬಾಡಿದ ಮುಖವನೋಡಿದನಾಕ್ಷಣ ತೊಡೆದು ನೇತ್ರವಬಿಡುಬಿಡು ದುಃಖ ಮಾಡದಿರುಪುಡುಕಿ ನಿನ್ನನು ಹಿಡಿದವನನ್ನು ಬಡಿದು ಯಮಗೆ ಕೊಡುವೆ ನೋಡೀಗತಡವ ಮಾಡದೆ ಗಾಢದಿ ಪೋಗು ನೀಮಾಡಿದ ಚಿಂತೆ ಕೈಗೊಡಿತೆಂದು ೧೧
ಮೋಸಮಾಡಿ ಪೋದಳಾ ಶಶಿಮುಖಿ ಯೆಂ-ದಾಸೆ ಬಿಡದೆ ತಾ ವ್ಯಸನಗೊಳ್ಳುತಪೂಶರತಾಪಕ್ಕೆ ಕೇಸರಿ ಗಂಧವದಾಸಿಯರಿಂದ ಪೂಸಿಕೊಂಡುಹಾಸುಮಂಚದಲ್ಲಿ ಬೀಸಿ ಕೊಳುತಲಿಗಾಸಿ ಪಡುತಿರೆ ಆ ಸಮಯದಲಿಲೇಸಾಗಿ ನಿನ್ನಭಿಲಾಷೆ ಸಲ್ಲಿಸುವೆಈಸು ಸಂಶಯ ಬೇಡ ಭಾಷೆ ಕೊಟ್ಟೆ ೧೨
ನಳಿನಮುಖಿಯು ಪೇಳಿದ ಮಾತನುಕೇಳಿ ಹರುಷವ ತಾಳಿದನಾಕ್ಷಣಖಳನು ಹೊನ್ನಿನ ಜಾಳಿಗೆಯ[ತೊಟ್ಟಿನ್ನುಳಿಯದಲೆ] ರತಿಕೇಳಿಗಿನ್ನುಕಾಳಗದ ಮನೆಯೊಳಗೆ ಬಾರೆಂದುಪೇಳಿದ ಸುಳುವು ಪೇಳಲು ಭೀಮಗೆಖಳನ ಕಾಯವ ಸೀಳುವವೇಳೆ ಬಂತೆನ್ನುತ ತೋಳ ಹೊಯಿದ ೧೩
ನಾರಿಯಿನ್ಯಾವಾಗ ಬರುವಳೋಯೆಂದುದಾರಿಯ ನೋಡುವ ಚೋರ ಕೀಚಕನುತೋರಿದ ಠಾವಿಲಿ ಸೇರುವ ಬೇಗನೆಊರೊಳಗಾರು ಅರಿಯದಂತೆಕ್ರೂರನು ಮೋಹಿಪತೆರದಿ ಎನಗೆನಾರಿಯ ರೂಪ ಶೃಂಗರಿಸು ನೀನೆಂದುವಾರಿಜಮುಖಿಯ ಮೋರೆಯ ನೋಡಲುನೀರೆ ದ್ರೌಪದಿ ತಾ ನಾಚಿದಳು೧೪
ಬಟ್ಟ ಮುಖಕೆ ತಾನಿಟ್ಟಳು ಸಾದಿನಬಟ್ಟು ಫಣೆಯಲಿ ಇಟ್ಟು ಕಣ್ಣಕಪ್ಪಪಟ್ಟ್ಟೆಪೀತಾಂಬರ ಉಟ್ಟುಕೋ ನೀನೆಂದುಪುಟ್ಟಾಣಿ ಕುಪ್ಪಸ ಕೊಟ್ಟಳಾಗಕಟ್ಟಾಣಿ ಮುತ್ತು ತಾಕಟ್ಟಿ ಕೊರಳಿಗೆಗಟ್ಟ್ಯಾಗಿ ಚಿನ್ನದಪಟ್ಟಿಯುಡುದಾರದಿಟ್ಟನ ಬೆರಳಿಗಿಟ್ಟಳು ಉಂಗುರವಿಟಪುರುಷರ ದೃಷ್ಟಿತಾಕುವಂತೆ೧೫
ಮುತ್ತಿನ ಮೂಗುತಿ ಕೆತ್ತಿದ ವಾಲೆಯುಇತ್ತೆರ ಬುಗುಡಿಯು ನೆತ್ತೀಗರಳೆಲೆಚಿತ್ರದ ರಾಕಟೆ ಉತ್ತಮಕ್ಯಾದಿಗೆಒತ್ತೀಲಿ ಶ್ಯಾಮಂತಿಗ್ಹ್ಹೂವು ಗೊಂಡ್ಯಾಹಸ್ತದ ಕಡಗವು ಮತ್ತೆ ಚೂಡ್ಯ ವಂಕಿಮುತ್ತಿನ ಹಾರವು ರತ್ನದ ಪದಕವುಅರ್ತಿಲಿ ನಾರಿಯು ಕುತ್ತಿಗ್ಗ್ಯೆಹಾಕಲುಹಸ್ತಿನಿಯೋ ಈಕೆ ಚಿತ್ತಿನಿಯೊ೧೬
ಮುಡಿಗೆ ಮಲ್ಲಿಗೆ ಮುಡಿಸಿ ಸುಗಂಧತೊಡೆದು ತಾಂಬೂಲ ಮಡಿಸಿಕೊಡುತಪ್ರೌಢನ ಸ್ತ್ರೀರೂಪ ನೋಡಲು ಖಳನುಕೊಡದೆ ಪ್ರಾಣವ ಬಿಡನೆಂದಳುಮಾಡಿದ್ಯೋಚನೆ ಕೈಗೂಡಿತು ಇಂದಿಗೆನೋಡು ಆ ಕೃಷ್ಣನು ಹೂಡಿದ ಆಟವಮಡದಿ ನೀನೆನ್ನ ಒಡನೆ ಬಾರೆಂದುನಡೆದ ಖಳನ ಬಿಡಾರಕೆ ೧೭
ಇಂದುಮುಖಿ ಅರವಿಂದನಯನದ ಮಂದಗಮನೆಯು ಬಂದಳು ಎನ್ನುತನಂದನತನಯನ ಕಂದನ ಬಾಧೆಗೆಕಂದಿ ಕುಂದಿ ಬಹು ನೊಂದೆನೆಂದಹಿಂದಿನ ಸುಕೃತದಿಂದಲಿ ನಿನ್ನೊಳಾ-ನಂದವಾಗಿಹುದು ಇಂದಿಗೆ ಕೂಡಿತುಕುಂದದಾಭರಣ ತಂದೆ ನಾ ನಿನಗೆಚಂದದಿಂದಿಟ್ಟು ನೀನಂದವಾಗೆ೧೮
ಗುಲ್ಲುಮಾಡದಿರೊ ಮೆಲ್ಲಗೆ ಮಾತಾಡೊವಲಭರ್ತಾಕಂಡರೆ ಹಲ್ಲು ಮುರಿವರೊಬಲ್ಲವ ನಿನಗೆ ಸಲ್ಲದು ಈ ಕಾರ್ಯಗೆಲ್ಲಲರಿಯೆ ನೀ ಕೊಲ್ಲಿಸಿಕೊಂಬೆಚೆಲ್ವೆ ಕೇಳು ನಿನ್ನ ಹುಲ್ಲೆಗಣ್ಣ ನೋಟಕೊಲ್ವಬಗೆ ಗೆಲ್ಲಲಾರೆನೆಂದುಗಲ್ಲವ ಮುದ್ದಿಟ್ಟು ಮೈಯೆಲ್ಲ ಹುಡುಕಲುಕಲ್ಲೆದೆಯಲ್ಲ್ಲಿರೆ ಖೂಳ ನೊಂದ ೧೯
ನಾರಿಯೊ ನೀನೇನು ಮಾರಿಯೊ ಇನ್ನೊಂದುಬಾರಿ ನೀ ಎನಗೆ ಮೋರೆ ತೋರಿಸೆಂದಧೀರನ ಸಮೀಪಬಾರದೆ ಓಡುವದಾರಿಯ ನೋಡುತಿರಲಾಗಬಾರದಂಥಾ ಪರದಾರರ ಮೋಹಿಪಕ್ರೂರಗೆ ಈ ರೂಪ ಘೋರವಾಗಿಹುದುಸಾರದ ಮಾತಿದು ಯಾರಾದರೇನೀಗಮಾರನ ತಾಪವ ಪರಿಹರಿಸುವೆ ೨೦
ಶುದ್ಧಹೆಣ್ಣೆಂದು ಪ್ರಸಿದ್ಧವಾಗಿಹ ಎನ್ನವಿದ್ಯವ ನಿನಗೆ ಸದ್ಯಕ್ಕೆ ತೋರುವೆನಿದ್ರೆಯಗೆಡುವೊ ಬುದ್ಧಿಯು ನಿನ್ನದುಸದ್ದು ಮಾಡದೆ ಬಂದು ಮುದ್ದಿಸೆನ್ನಬದ್ಧವೊ ಏನೆಂದು ಬದ್ದಿಗೆ ಹೋಗಲುಎದ್ದು ಸಮೀರಜ ಗುದ್ದಲು ಕೀಚಕಬಿದ್ದನು ಭೂಮಿಲಿ ಗೆದ್ದೆನೆನುತ ಅನಿ-ರುದ್ಧನ ಸ್ಮರಿಸುತಲೆದ್ದ ಭೀಮ ೨೧
ಕೆಟ್ಟ ಕೀಚಕ ತಾ ತೊಟ್ಟ ಛಲದಿಂದಬೆಟ್ಟದಂಥ ದೇಹ ಬಿಟ್ಟಿನ್ನವನಪಟ್ಟಾಗಿ ತೋರುವೆ ದೃಷ್ಟಿಸು ಎನ್ನಲುಭ್ರಷ್ಟನ ನೋಡುವುದೇನೆಂದಳುಕೊಟ್ಟ ಭಾಷೆಯು ಈಗ ಮುಟ್ಟಿತು ನಿನಗೆಕೃಷ್ಣನ ದಯದಿ ಕಷ್ಟವು ಹಿಂಗಿತುಪಟ್ಟಣಕೀಸುದ್ದಿ ಮುಟ್ಟದ ಮುಂಚೆಗುಟ್ಟಲಿ ಪೋಗುವ ಥಟ್ಟನೆಂದ ೨೨
ಅರಸಿ ನಿನ್ನೊಳು ಸರಸ ಬೇಕೆಂದಪುರುಷನ ಜೀವ ಒರೆಸಿ ಕೊಂದೆನುಹರುಷದೀ ಪುರದರಸು ನಮ್ಮನುಇರಿಸಿಕೊಂಡೊಂದೊರುಷವಾಯಿತುಬೆರೆಸಿದ ಸ್ನೇಹಕ್ಕೆ ವಿರಸ ಬಂತೆಂದುಸರಸಿಜಾಕ್ಷಿಯು ಕರೆಸಿ ನಿನ್ನೊಳಗಿರಿಸದಿದ್ದರೆ ಹಯವದನನಸ್ಮರಿಸಿ ಗದೆಯನು ಧರಿಸುವೆ ೨೩

 

೩೧೪
ಭೂರಿ ನಿಗಮವ ಕದ್ದ ಚೋರದೈತ್ಯನ ಗೆದ್ದ
ಸಾರ ವೇದಗಳ ವಿಧಿಗಿತ್ತ
ಸಾರ ವೇದಗಳ ವಿಧಿಗಿತ್ತ ಮತ್ಸ್ಯಾವ-
ತಾರಗಾರತಿಯ ಬೆಳಗಿರೆ ೧
ವಾರಿಧಿ ಮಥನದಿ ನೀರೊಳು ಗಿರಿ ಮುಳುಗೆ
ತೋರಿ ಬೆನ್ನಾಂತ ಸುರನುತ
ತೋರಿ ಬೆನ್ನಾಂತ ಸುರನುತ ಕೂರ್ಮಾವ-
ತಾರಗಾರತಿಯ ಬೆಳಗಿರೆ ೨
ಧಾತ್ರಿಯ ಕದ್ದೊಯ್ದ ದೈತ್ಯನ ಮಡುಹಿದ
ಎತ್ತಿ ದಾಡೆಯಲಿ ನೆಗಹಿದ
ಎತ್ತಿ ದಾಡೆಯಲಿ ನೆಗಹಿದ ವರಾಹ-
ಮೂರ್ತಿಗಾರತಿಯ ಬೆಳಗಿರೆ ೩
ಕಡು ಬಾಲನ ನುಡಿಗೆ ಒಡೆದು ಕಂಬದೊಳುದಿಸಿ
ಒಡಲ ಸೀಳಿದ ಹಿರಣ್ಯಕನ
ಒಡಲ ಸೀಳಿದ ಹಿರಣ್ಯಕನ ನರಸಿಂಹ
ಒಡೆಯಗಾರತಿಯ ಬೆಳಗಿರೆ ೪
ಸೀಮಾಧಿಪತಿ ಬಲಿಯ ಭೂಮಿ ಮೂರಡಿ ಬೇಡಿ
ಈ ಮೂರು ಜಗವ ಈರಡಿಯ
ಈ ಮೂರು ಜಗವ ಈರಡಿ ಮಾಡಿ ಅಳೆದ
ವಾಮನಗಾರತಿಯ ಬೆಳಗಿರೆ ೫
ಅಂಬರಕೇಶನ್ನ ನಂಬಿದ ಕತ್ರಿಯರ
ಸಂಭ್ರಮ ಕುಲವ ಸವರಿದ
ಸಂಭ್ರಮ ಕುಲವ ಸವರಿದ ಪರಶುರಾ-
ಮೆಂಬಗಾರತಿಯ ಬೆಳಗಿರೆ ೬
ತಂದೆ ಕಳುಹಲು ವನಕೆ ಬಂದಲ್ಲಿ ಸೀತೆಯ
ತಂದ ರಾವಣನ ತಲೆಹೊಯ್ದ
ತಂದ ರಾವಣನ ತಲೆಹೊಯ್ದ ರಘುರಾಮ-
ಚಂದ್ರಗಾರತಿಯ ಬೆಳಗಿರೆ ೭
ಶಿಷ್ಟ ಯಮಳಾರ್ಜುನರಭೀಷ್ಟವ ಸಲಿಸಿದ
ದುಷ್ಟ ಕಂಸನ್ನ ಕೆಡಹಿದ
ದುಷ್ಟ ಕಂಸನ್ನ ಕೆಡಹಿದ ನಮ್ಮ ಶ್ರೀ
ಕೃಷ್ಣಗಾರತಿಯ ಬೆಳಗಿರೆ ೮
ರುದ್ರನ್ನ ತ್ರಿಪುರದೊಳಿದ್ದ ಸತಿಯರ
ಬುದ್ಧಿ ಭೇದಮಾಡಿ ಕೆಡಿಸಿದ
ಬುದ್ಧಿ ಭೇದಮಾಡಿ ಕೆಡಿಸಿ ಬತ್ತಲೆ ನಿಂದ
ಬೌದ್ಧಗಾರತಿಯ ಬೆಳಗಿರೆ ೯
ಪಾಪಿಜನ ಭಾರಕ್ಕೆ ಈ ಪೃಥ್ವಿ ಕುಸಿಯಲು
ತಾ ಪಿಡಿದು ಖಡ್ಗ ತುರಗವ
ತಾ ಪಿಡಿದು ಖಡ್ಗ ತುರಗವೇರಿದ ಕಲ್ಕಿ-
ರೂಪಗಾರತಿಯ ಬೆಳಗಿರೆ ೧೦
ಮುತ್ತೈದೆ ನಾರಿಯರು ಮುತ್ತಿನಾರತಿ ಮಾಡಿ
ಹತ್ತವತಾರಿ ಹಯವದನ
ಹತ್ತವತಾರಿ ಹಯವದನನ ಪಾಡುತ
ಚಿತ್ರದಾರತಿಯ ಬೆಳಗಿರೆ ೧೧

 

೩೧೭
ಮಂಗಳ ಜಯ ಜಯ ಜಯ ಮಂಗಳ ಪ.
ಮಂಗಳ ಮೂರ್ತಿಗೆ ಮಂಗಳ ಕೀರ್ತಿಗೆ
ಮಂಗಳ ದೇವಿಯರರಸನಿಗೆ
ಮಂಗಳ ಮನುಮಥಪಿತನಿಗೆ ಮಂಗಳ
ಮಂಗಳ ಮಹಿಮಗೆ ಮಂಗಳ ೧
ಅಚ್ಚುತಾನಂತ ಗೋವಿಂದಗೆ ಮಂಗಳ
ಸಚ್ಚರಿತ್ರನಿಗೆ ಸಕಲ ಮಂಗಳ
ಸಚ್ಚಿದಾನಂದ ಸ್ವರೂಪಗೆ ಮಂಗಳ
ಅಚ್ಚಹೃದಯನಿಗೆ ಅತಿ ಮಂಗಳ ೨
ಕೇಶವ ನಾರಾಯಣನಿಗೆ ಮಂಗಳ
ಕೇಶಿಸೂದನನಿಗೆ ಅತಿ ಮಂಗಳ
ಶೇಷಶಯನ ಹೃಷೀಕೇಶಗೆ ಮಂಗಳ
ವಾಸುದೇವನಿಗೆ ಸಕಲ ಮಂಗಳ ೩
ದಾನವವೈರಿ ದೆಸೆದೆಸೆಗಳಿಗೆ ಮಂಗಳ
ಹೀನಕುಲದವಗೆ ಹೆಚ್ಚು ಮಂಗಳ
ಆನಂದತೀರ್ಥಮುನಿಯ ಮುದ್ದುಕೃಷ್ಣಗೆ
ಶ್ರೀನಾರಿಯೆತ್ತುವ ಶುಭಮಂಗಳ ೪
ನಿಗಮವ ತಂದ ಮತ್ಸ್ಯನಿಗೆ ನಿತ್ಯಮಂಗಳ
ನಗಧರ ಕೂರ್ಮಗೆ ಅತಿಮಂಗಳ
ಜಗತಿಯನೆತ್ತದ [ವರಾಹಗೆ]ಮಂಗಳ
ಮಗುವ ಕಾಯಿದ ನೃಸಿಂಹಗೆ ಮಂಗಳ ೫
ದಾನವ ಬೇಡಿದ ಸ್ವಾಮಿಗೆ ಮಂಗಳ
ಕ್ಷೋಣಿಶಾಂತನಿಗೆ ಸಕಲ ಮಂಗಳ
ಜನಕೀರಮಣ ರಾಮಗೆ ಮಂಗಳ
ಶ್ರೀನಂದಾಚ್ಯುತನಿಗೆ ಶುಭಮಂಗಳ ೬
ಬುದ್ಧವತಾರ ಶ್ರೀಬದ್ಧಗೆ ಮಂಗಳ
ಸದ್ಧರ್ಮ ಮೂಲಸ್ವಾಮಿಗೆ ಮಂಗಳ
ಮಧ್ವವಲ್ಲಭ ಹಯವದನರಾಯನಿಗಿಂಥ
ಶುದ್ಧಸ್ವಭಾವಗೆ ಶುಭಮಂಗಳ ೭

 

೮೨
ಮಂಗಳಂ ಕ್ಷೀರಸಾಗರಶಯನ ಮಂಗಳಂಮಂಗಳಂ ಬ್ರಹ್ಮಾದಿ ವಂದಿತನಿಗೆಮಂಗಳಂ ನಿತ್ಯ ಕರ್ಮೇಂದ್ರಿಯ ಸೇವಿತನಿಗೆಮಂಗಳಂ ಉಡುಪಿನ ಶ್ರೀಕೃಷ್ಣನಿಗೆ ಪ.
ನಂದನ ಕಂದನಿಗೆ ವೃಂದಾರಕೇಂದ್ರನಿಗೆಮಂದರ ಗಿರಿಧರಗೆ ಇಂದಿರಾಕಾಂತನಿಗೆನಂದ ಸುರವ್ರಾತನಿಗೆ ನಂದ ತೀ-ರ್ಥೇಂದ್ರ ಗೋವಿಂದ ಹರಿಗೆ ೧
ಮಕರ ಕುಂಡಲಧರ ರುಕುಮಿಣಿ ರಮಣನಿಗೆಅಕಳಂಕ ಮಹಿಮಗೆ ಅಕುಟಿಲನಿಗೆಶುಕವಾಹನನ ಪಿತಗೆ ಭಕುತವತ್ಸಲಗೆ ಅ-ಧಿಕ ಕೋಟಿರವಿತೇಜ ಮಕುಟ ದಿಟ್ಟನಿಗೆ ೨
ಸರಸ ಮಂದಹಾಸನಿಗೆ ನರಹರಿ ರೂಪನಿಗೆವರ ಕೌಸ್ತುಭಹಾರ ಧರಿಸಿದವಗೆಕರುಣದಿ ಗೋಪಿಯರ ಧುರದಿ ರಕ್ಷಿಪನಿಗೆಸಿರಿಮುದ್ದು ಹಯವದನ ಮುರಹರನಿಗೆ ೩

 

೩೧೫
ಮಂಗಳಂ ಜಯ ಮಂಗಳಂ ಪ.
ನಿಗಮವ ತಂದ ಮತ್ಸ್ಯಗೆ ನಿತ್ಯ ಮಂಗಳ
ನಗಧರ ಕೂರ್ಮಗೆ ಅತಿ ಮಂಗಳ
ಜಗವವನುದ್ಧರಿಸಿದ ವರಾಹಗೆ ಮಂಗಳ
ಮಗುವ ಕಾಯ್ದ ನರಸಿಂಹನಿಗೆ ೧
ದಾನವ ಬೇಡಿದ ವಾಮನಗೆ ಮಂಗಳ
ಕ್ಷೋಣಿಪರನು ಕೊಂದಗೆ ಮಂಗಳ
ಜನಕಿ ರಮಣ ರಾಮಗೆ ಮಂಗಳ
ಜ್ಞಾನಿಗಳ ಕಾಯ್ದ ಗೋಪಾಲಗೆ ೨
ಬುದ್ಧ ರೂಪದಲಿಹ ದೇವಗೆ ಮಂಗಳ
ಶುದ್ಧ ಅಶ್ವಾರೂಢಗೆ ಮಂಗಳ
ಮಧ್ವವಲ್ಲಭ ಹಯವದನಗೆ ಮಂಗಳ
ಉದ್ಧರಿಸುವ ದೇವರ ದೇವಗೆ ೩

 

೩೧೬
ಮಂಗಳಂ ಶ್ರೀರಾಮಚಂದ್ರಗೆ ಜಯ
ಮಂಗಳಂ ಸೀತಾಸಮೇತನಿಗೆ ಪ.
ಮಚ್ಛಾವತಾರಗೆ ವೇದವ ತಂದಗೆ
ಕೂರ್ಮರೂಪದಿ ಜಲದೊಳು ಪೊಕ್ಕವಗೆ
ಹಿರಣ್ಯಾಕ್ಷಸುರನ ಗೆಲಿಯೆ ಬಂದು
ಮೆಚ್ಚೆ ವರಹರೂಪ ತೋರಿದಗೆ ೧
ಛತ್ರಿಯ ಪಿಡಿದು ಭರತ ನಿಂದಿರಲಾಗ
ಶತ್ರುಘ್ನ ಚಾಮರವನು ಬೀಸಲು
ಮತ್ತೆ ಲಕ್ಷ್ಮಣ ಮಡುದೆಲೆ ಕೊಡುತಿರಲಾಗಿ
ವಿಸ್ತಾರ ವೈಭೋಗ ರಘುರಾಮಗೆ ೨
ತಮ್ಮ ಲಕ್ಷ್ಮಣ ಸಹ ಒಲ್ಮೆಯಿಂದಲಿ ಬಂದ
ನಮ್ಮ ಶ್ರೀರಘುರಾಮಚಂದ್ರನಿಗೆ
ಸನ್ಮಾನದಲಿ ರಾಮ ಸಾಗರಶಯನಾಗೆ
ಚೆನ್ನ ಚುಂಚನಕಟ್ಟೆಸ್ಥಿರವಾಸಿಗೆ ೩
ಎಡದ ಕರದಿ ಬಿಲ್ಲು ಬಲದ ಕರದಿ ಬಾಣ
ಕರದ ಕಮಲದೊಳಗಿಪ್ಪವನಿಗೆ
ಬಲದ ಭಾಗದಿ ಸಿರಿ ಸೀತೆಯ ಧರಿಸಿದ
ಚದುರ ಶ್ರೀ ಕಲ್ಯಾಣ ಚಂದ್ರನಿಗೆ ೪
ಹರುಷದಿ ದೇವತೆಗಳಿಗೊರವಿತ್ತಗೆ
ದುರುಳ ರಕ್ಕಸರ ಸಂಹರಿಸಿದಗೆ
ಪರಮ ಭಕ್ತನಿಗೆ ಸ್ಥಿರರಾಜ್ಯವನೆ ಕೊಟ್ಟ
ಹಯವದನಮೂರ್ತಿ ಎಂದೆನಿಸಿದಗೆ ೫

 

೩೧೮
ಮಂಗಳದೇವಿಯರರಸಗೆ ತುಂಗಮಹಿಮ ತ್ರಿವಿಕ್ರಮಗೆ
ಅಂಗನೆಯರು ಸಿರಿರಂಗಗಾರತಿಯನೆತ್ತಿದರೆ ಪ.
ಶ್ರೀರುಕುಮಿಣಿ ಮೊದಲಾದ ನಾರಿಯರೆಲ್ಲರು ನೆರೆದು
ವಾರಿಜದಳಲೋಚನಗಾರತಿಯನೆತ್ತಿದರೆ ೧
ಮುತ್ತಿನ ಹರಿವಾಣದಲಿ ರತ್ನದ ಸಾಲ್ಗಳ ನೆರಪಿ
ಚಿತ್ತಜನಯ್ಯಗೆ ಮುತ್ತ್ತಿನಾರತಿಯನೆತ್ತಿದರೆ ೨
ಚಿನ್ನದ ಹರಿವಾಣದಲಿ ರನ್ನದ ಸಾಲ್ಗಳ ನೆರಪಿ
ಚೆನ್ನಕೇಶವನಿಗೆ ಚಿನ್ನದಾರತಿಯನೆತ್ತಿದರೆ ೩
ಹೃದಯದ ತಮವ ಗೆಲುವಗೆ ಸದುಗತಿಪಥವ ತೋರುವಗೆ
ಸುದತಿಯರೆಲ್ಲರು ಮಂಗಳಾರತಿಯನೆತ್ತಿದರೆ ೪
ಚಂದದ ಭೂಷಣಮಣಿಯೊಳು ನಂದಾದೀಪಗಳೆಲ್ಲ ಹೊಳೆಯೆ
ಒಂದನಂತವ ಮಾಡಿಕೊಂಬಗಾರತಿಯನೆತ್ತಿದರೆ ೫
ಕಂದರ್ಪಕೋಟಿಲಾವಣ್ಯಗೆ ಸೌಂದರ್ಯವಾದ ಮೂರುತಿಗೆ
ಇಂದುಮುಖಿಯರೆಲ್ಲ ಮಂಗಳಾರತಿಯನೆತ್ತಿದರೆ ೬
ಅಗಣಿತ ಗುಣಸಾಗರಗೆ ನಿಗಮವಂದಿತ ವೈಭವಗೆ
ಅಘಕುಲದೂರಗೆ ಮಂಗಳಾರತಿಯೆನೆತ್ತಿದರೆ ೭
ನಳಿತೋಳ್ಗಳ ನಸುನಗೆಯ ಹೊಳೆವ ಕಡಗ ಕಂಕಣದ
ಸುಲಲಿತ ಕಾಂತಿಗೆ ಮಂಗಳಾರತಿಯೆತ್ತಿದರೆ ೮
ಶೇಷವಂದಿತಪದಗೆ ಸುರೇಖಾದಿಗಳೊಡೆಯನಿಗೆ
ಭಾಸುರಸುರಮಯಪೀಠಗಾರತಿಯನೆತ್ತಿದರೆ೯
ಶ್ರೀಸತಿಯಪ್ಪಿಕೊಂಡಿಪ್ಪಗೆ ವಾಸುದೇವಾದಿವಿಗ್ರಹಗೆ
ಕೇಶವ ನಾರಾಯಣಗಾರತಿಯನೆತ್ತಿದರೆ ೧೦
ಸಕಲಸುರರನಾಳ್ದನಿಗೆ ನಿಖಿಳ ಖಳರ ಸೀಳ್ದನಿಗೆ
ಅಕುತೋಭಯನಿಗೆ ಮಂಗಳಾರತಿಯನೆತ್ತಿದರೆ ೧೧
ಮತ್ಸ್ಯ ಕೂರ್ಮ ವರಾಹನಿಗೆ ಕುತ್ಸಿತರೊಲ್ಲದ ಹರಿಗೆ
ಚಿತ್ಸುಖರೂಪಗೆ ಮಂಗಳಾರತಿಯನೆತ್ತಿದರೆ೧೨
ಶಂಕೆಯಿಲ್ಲದ ಹಯವದನಗೆ ಕಿಂಕರವರದ ಶ್ರೀಹರಿಗೆ
ಪಂಕಜಮುಖಿಯರು ಮಂಗಳಾರತಿಯೆತ್ತಿದರೆ ೧೩

 

೨೦೦
ಮಂಡೆ ಬೋಳಾದರೇನು ಮನಶುದ್ಧಿಯಿಲ್ಲವು ಪ.
ಕಂಡು ಹಯವದನನ್ನ ಒಲಿಸಿಕೊಂಡವ ಧನ್ಯ ಅ.ಪ.
ನಾರದರವತಾರವೆಂದು ಜಗಕೆ ತೋರಿ ಸಿರಿಪುರಂದರದಾಸರ ಮನೆಯಲ್ಲಿಪರಿಪರಿ ಲೀಲೆಯ ಮಾಡಿ ಬಿಡದೆ ನಿತ್ಯಅರಿತು ಅವರ ಸಾಧನಕೆ ಸಾರಥಿಯಾದಿ ೧
ಗುರುವ್ಯಾಸಮುನಿ ನಿಮ್ಮ ನೋಡುವೆನೆಂತೆಂದೊಡೆಮರೆಮಾಡಿ ಮೂರುರೂಪ ಜನುಮವೆಂದಿಹರುಷದಿ ಕನಸಿನೊಳಗೆ ಬಂದುಭಯರಿಗೆಅರುಪಿಸಿ ಸ್ವರೂಪ ಅರಿಯದಂತಿದ್ಯೊ ದೇವ ೨
ಅವರ ಮೇಲಿದ್ದ ದಯ ಎನ್ನ ಮೇಲೆಂದಿಗೋ ದೇವಯಾವುದು ಭರವಸೆದೋರದಯ್ಯಕವಿದೆಮ್ಮಭಿಮಾನ ಬಿಟ್ಟರೆ ಬಿಡದಯ್ಯಆವಕಾಲಕ್ಕೆ ನಿನ್ನ ದಾಸನೆಂಬಂತೆ ಮಾಡೊ ೩
ನಮ್ಮ ಗುರುಗಳ ಸಮ್ಮತದಿಂದುಡುಪಿಯಲಿಗಮ್ಮನೆ ಪೇಳಿದೆನು ಸಟೆಯಲ್ಲವುಸುಮ್ಮನೆ ತಿಳಿಯದೆ ಅಲ್ಲವೆಂದವರ್ಗಿನ್ನುಗಮ್ಮನೆ ತಮಸಿನೊಳಿಹುದು ಸತ್ಯವು ೪
ಓದಿದಾಕ್ಷಣದಿಂದ ಧನ್ಯನೆಂದೆನು ನಾನುಸಾಧಿಸಲಾಪೆನೆ ನಿನ್ನ ಸೇವೆಯನುಆದಿಮೂರುತಿ ಸಿರಿಹಯವದನರೇಯಮೋದದಿಂದ ನಿನ್ನ ದಾಸರ ಸಂಗದಲ್ಲಿಡು ಕಂಡ್ಯ ೫

 

೧೪
ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ ಪ.
ಶ್ರದ್ಧೆಯಿಂದಲಿ ನಿನ್ನ ಭಜಿಸುವ ಭಕ್ತರಿಗೆಬುದ್ಧ್ಯಾದಿಗಳ ಕೊಟ್ಟುದ್ಧರಿಸೊ ದೇವರದೇವಅ.ಪ.
ದ್ವಾಪರದಲಿ ಒಬ್ಬ ಮುನಿಪ ತನ್ನಕೋಪದಿಂದಲಿ ಕೊಡಲು ಶಾಪಸ್ಥಾಪಿಸಲು ಜ್ಞಾನ ಲೋಪಅಪಾರ ತತ್ವಸ್ವರೂಪಶ್ರೀಪತಿಯೆ ಕಾಯೆಂದು ಮೊರೆಯಿಡೆಪಾಪ ವಿರಹಿತಳಾದ ಯಮುನೆಯದ್ವೀಪದಲಿ ಅಂಬಿಗರ ಹೆಣ್ಣಿನರೂಪಕ್ಕೊಲಿದವಳಲ್ಲಿ ಜನಿಸಿದೆ ೧
ವೇದವಾದಿಗಳೆಲ್ಲ ಕೆಡಲು ತತ್ವವಾದಿಜನರು ಬಾಯಿ ಬಿಡಲುಮೇದಿನಿ ಸುರರ್ಮೊರೆಯಿಡಲು ನಾಲ್ಕುವೇದ ವಿಭಾಗ ರಚಿಸಲುಮೋದದಿಂದ ತದರ್ಥ ಬೋದಕ-ವಾದ ಸೂತ್ರ ಪುರಾಣ ರಚಿಸಿವಾದಗಳ ನಿರ್ವಾದ ಮಾಡಿಸಾಧುವಂದಿತ ಬಾದರಾಯಣ ೨
ಸುಮತಿಗಳಿಗೆ ನೀ ಬೋಧಿಸಿದೆ ಮಿಕ್ಕಕುಮತಗಳನ್ನು ಛೇದಿಸಿದೆ ಕ್ರಿಮಿಯಿಂದ ರಾಜ್ಯವಾಳಿಸಿದೆ ಜಗತ್‍ಸ್ವಾಮಿ ನೀನೆಂದು ತೋರಿಸಿದೆವಿಮಲರೂಪನೆ ಕಮಲನಾಭನೆರಮೆಯ ಅರಸನೆ ರಮ್ಯ ಚರಿತನೆಮಮತೆಯಲಿ ಕೊಡು ಕಾಮಿತಾರ್ಥವನಮಿಸುವೆನು ಹಯವದನಮೂರುತಿ ೩

 

೩೩೩
ಮನುಜ ತಪ್ಪೆ ಮಂಡೆಯ ಬೋಳು ಶುನಕ ತಪ್ಪೆ ಕುಂಡೆಯ ಬೋಳು
ತೃಣದಾಸೆಗೆ ಕುರಿಯ ಸರ್ವಾಂಗ ಬೋಳ ಕಂಡೆನಯ್ಯ ೧
ತನುಬೋಳಾದ ಬೋಳೆಲ್ಲ ತಮ್ಮ ಗೋಳು ಕಾಣಿರೊ
ಮನದೊಳು ದುರಾಶೆಂಬ ಹೀನಕ್ಲೇಶಗಳ್ಹೆಚ್ಚುತಿರಲು ೨
ಅನಾಥಬಂಧು ಹಯವದನ ನಿನ್ನ
ಧ್ಯಾನ ಚಿಮ್ಮಟದೊ [ಳೆನ್ನ] ಕೂದಲಕಿತ್ತು
ಮುಕ್ತಿಬೋಳನ ಮಾಡೊ ೩

 

೮೩
ಮನ್ನಿಸೆನ್ನ ಮಧುಸೂದನ ಪ.
ಮದನನಯ್ಯ ಮೋಹನಕಾಯಉನ್ನತಗುಣನಿಲಯ ಉಡುಪಿನ ಕೃಷ್ಣರಾಯ ಅ.ಪ.
ಶ್ರುತಿಗಳ ತಂದೆ ಮುನ್ನ ಸುರಮುನಿಗಳ ಮನ-ಕತಿ ಹರುಷವ ಕೊಟ್ಟೆ ಅಗಣಿತಗುಣರನ್ನಯತಿಗಳ ಪಾಲಿಸಿದೆ ಮುಂದುವರಿವದಿತಿಜರ ಸೋಲಿಸಿದೆ ಈ ಮಹಿಯೊಳುಮತಿವಂತರ ಪೊರೆದೆ ಮಹಿಮೆಯಿಂದ ಮೆರೆದೆ ೧
ಅಚ್ಚಹಾರಶೋಭಿತ ಕಂಠ ಆಶ್ರಿತರಿಗೆ ನೀ ನಂಟಮೆಚ್ಚಿದ ಪಾರ್ಥನ ಮಿತ್ರನೆನಿಸಿದೆ ಸುಚರಿತ್ರಮೆಚ್ಚಿದ ನಿನ್ನಯ[ಭಕ್ತ್ತ]ವೈಕುಂಠದಮುಚ್ಚಳ ತೆಗೆಸಲು ಶಕ್ತ ಅಚ್ಚುತ ನಿನ್ನಅರ್ಚಿಸಿದವ ಕೃತಾರ್ಥ ಅವನೆ ಸರ್ವಸಮರ್ಥ ೨
ಎಂದೆಂದು ನಿನ್ನವರೊಳು ಎನ್ನ ಕೂಡಿಸೊ ಕೃಪಾಳುವಂದ್ಯ ಗರುಡನ ಸ್ಕಂಧವೇರಿ ಬಹ ಗೋವಿಂದತಂದೆ ನೀನೆ ತಾಯಿ ನೀನೆ ಹಯವದನಬಂಧು ನೀನೆ ಬಳಗ ನೀನೆ ಮತ್ತದರಿಂದಕುಂದುಮಾಡುವುದು ಬಿಡೋ ಕಂಡು ಕರುಣವ ಮಾಡೋ ೩

 

೧೨೭
ಮನ್ನಿಸೊ ನೀ ಎನ್ನ ಮಧ್ವಮುನಿರನ್ನಚೆನ್ನಿಗ ಶ್ರೀಹರಿಪಾದ ಸೇವಕನೆ ಪ.
ಅಂಜನೆಯ ಗರ್ಭ ಪರಿಪೂರ್ಣಚಂದ್ರಮನೆಕಂಜಪ್ರಿಯಸುತನಿಗೆ ಕಲ್ಪತರು ನೀನೆರಂಜಿಸುವೆ ಶ್ರೀರಾಮಚಂದ್ರನ್ನ ಸೇವಕನೆಸಂಜೀವಗಿರಿಯನು ತಂದ ಮಹಾತ್ಮನೆ ೧
ಅರ್ಜುನನಿಗೆ ಅಣ್ಣನಾಗಿ ಅಖಿಲ ದಿಕ್ಕೆಲ್ಲವನುಲಜ್ಜೆಯನು ಕೆಡಿಸಿ ಷಡ್ರಥಿಕರನು ಜರಿದೆಮೂಜಗವು ಮೆಚ್ಚಲು ಮಾಗಧನ ಸೀಳಿದೆಸಜ್ಜನಪ್ರಿಯ ಭೀಮಸೇನ ಉದಾರ೨
ಮೂರಾರು ಎರಡೊಂದು ಮೂಢಮತಗಳ ಜರಿದುಸಾರ ಮಧ್ವಶಾಸ್ತ್ರ ಸಜ್ಜನರಿಗೊರೆದೆಧೀರ ಶ್ರೀ ಹಯವದನನ ಕೂರ್ಮ ಸೇವಕನಾದಧೀರ ಮಧ್ವಾಚಾರ್ಯ ದೇಶದೊಳು ಮೆರೆದೆ ೩

 

೨೯೫
ಮನ್ನಿಸೊ ಶ್ರೀ ವೆಂಕಟೇಶ ಮಂಜುಗುಣಿಪುರ ವಾಸ ಪ.
ಸನ್ನುತ ಸದ್ಗುಣಪೂರ್ಣ ಸುಪ್ರಸನ್ನ ಹಯವದನ ಅ.ಪ.
ದೇಶದೇಶದಿಂದ ಬಂದ ಜನರಿಗೆ ಮುದದಿಂದ
ಲೇಸಿನ ವರನನೀವೆ ನಿರುತ ಕಾವೆ
ಭಾಸುರ ಮೋಹನವೇಷ ಭಾನುಕೋಟಿಸುಪ್ರಕಾಶ
ಶ್ರೀಸತಿಯ ಪ್ರಾಣೇಶ ಶ್ರೀ ಶ್ರೀನಿವಾಸ ೧
ವಾರಿಧಿಯೊಳಗಾಡಿದೆ ಗಿರಿಯ ಬೆ[ನ್ನ] ಲೆತ್ತಿದೆ
ಭಾರವಹ ಧರೆಯ ತಂದೆ ದೈತ್ಯನ ಕೊಂದೆ
ದುರುಳ ಬಲಿಯನು ಮೆಟ್ಟಿ ದೈತ್ಯನೃಪರನೆ ಕುಟ್ಟಿ
ತರುಣಿಗಭಯವನಿತ್ತೆ ತರುವ ಕಿತ್ತೆ ೨
ಪುರದ ನಾರಿಯರನು ಪಂಥದಿ ಗೆಲಿದೆ ನೀನು
ವರ ಕಲ್ಕಿಯಾಗಿ ತುರಗವನೇರಿ ಮೆರೆದೆ
ವರದ ಪ್ರಸನ್ನ ಹಯವದನ ವೆಂಕಟರಾಯ
ಪೊರೆಯೊ ಎಂದೆಂದೂ ಎನ್ನ ಪುರುಷರನ್ನ ೩

 

೧೨೮
ಮರುದಂಶ ಮಧ್ವಮುನಿರನ್ನ ನಿನಗೆಸರಿಗಾಣೆ ಜಗದೊಳಗೆ ಸರ್ವರೊಳು ಪೂರ್ಣ ಪ.
ಹಿಂದೆ[ರಾಮರು] ಮುಂದೆ ಬಂಟನಾಗಿ ನೀ ನಿಂದೆಚಂದ್ರದ್ರೋಣದ ಗಿರಿಯ ತಂದೆ ದನುಜರ ಕೊಂದೆ[ಎಂದೆಂದಿಗಳಿವಿಲ್ಲದ]ಬ್ರಹ್ಮ ಪದವಿಗೆ ಸಂದೆಇಂದ್ರಾದಿ ಸುರರುಗಳ ತಂದೆ ಸ್ವಾಮಿಇಂದೆಲ್ಲರಿಗೆ ನೀನು ಗುರುವೆನಿಸಿ ನಿಂದೆ ೧
ಕೌರವ ಬಲವ ತರಿದೆ ಕೀಚಕನ ಕುಲವ ಮುರಿದೆಒರ್ವನೆ ಬೇಸರದೆ ಷಡ್ರಥಿಕರನು ಗೆಲಿದೆಉರ್ವಿಯೊಳು ಭುಜಬಲದಿ ಭೀಮನೆನಿಸಿ ಮೆರೆದೆ ಹರಿಯ ಕಿಂಕರರ ಪೊರೆದು ಈಗಸರ್ವವನು ತೊರೆದು ಶಾಸ್ತ್ರಾಮೃತವಗರೆದೆ ೨
ದುರುಳವಾದಿಗಳೆನಿಪ ಘನತಾಮಸಕೆ ದಿನಪಸಿರಿಯರಸ ಹಯವದನಪದಕಂಜಯುಗಮಧುಪಗುರುಮಧ್ವಮುನಿಪ ನಿರ್ಲೇಪ ಶುದ್ಧಸ್ಥಾಪ ವರ-ವಿದ್ಯಾಪ್ರತಾಪ ಭಾಪುರೆಪರಮಪಾವನರೂಪ ಭಳಿರೆ ಪ್ರತಾಪ ೩

 

೧೦೦
ಮಹಾಲಕ್ಷ್ಮಿ
ಇಂದಿರೆ ಮಂದಿರದೊಳು ನಿಂದಿರೆ ಪ.
ಇಂದಿರೆ ಹೊಂದಿದೆ ನಿನ್ನ ಮುದ-ದಿಂದ ಪಾಲಿಸು ನಿತ್ಯ ಎನ್ನ ಆಹಾಗಂಧ ತುಳಸಿ ಅರವಿಂದ ಮಲ್ಲಿಗೆ ಪುಷ್ಪದಿಂದ ಪೂಜಿಸುವೆನು ಕುಂದುಗಳೆಣಿಸದೆ ಅ.ಪ.
ಘಲು ಘಲು ಗೆಜ್ಜೆಯ ನಾದದಿಂದಫಳಫಳಿಸುವ ದಿವ್ಯಪಾದದೊಳುಪಿಲ್ಯ ಕಾಲುಂಗುರನಾದ ಅಂಘ್ರಿಚಲಿಸುವ ದಿವ್ಯಸುಸ್ವಾದ ಆಹಾಕಾಲಂದಿಗೆ ಗೆಜ್ಜೆ ಝಳಪಿಸುತ್ತ ನ-ಮ್ಮಾಲಯದೊಳು ನಿಲ್ಲೆ ಪಾಲವಾರಿಧಿಕನ್ನೆ ೧
ಹರಡಿ ಕಂಕಣ ವಂಕಿ ಡೋರ್ಯಕೊರಳೊಳಗೆ ನಾನಾ ವಿಧದ್ಹಾರ ಬಾಯ-ಲಿರುವೋ ಕರ್ಪೂರವೀಳ್ಯಸಾರೆ ಸುರಭಿ ನಾಸಿಕಚಂಪಕ ಪುಷ್ಪದ್ಹಾರ ಆಹಾಎರಳೆಗಂಗಳೆ ಸಿರಿ ಅರಳೆಲೆ ಕುಂಕುಮಹೆರಳಗೊ[ಂ]ಡೆಗಳಿಂದ ಹರಿಯ ಮೋದಿಸುವೆ ೨
ಜಯ ಜಯ ವಿಜಯಸಂಪೂರ್ಣೆ ಭಕ್ತಭಯನಿವಾರಣೆ ಎಣೆಗಾಣೆ ಎನ್ನಕಾಯುವರನ್ಯರ ಕಾಣೆ ಶೇಷ-ಶಯನನ್ನ ತೋರೆ ಸುಶ್ರೇಣೆ ಆಹಾಕೈಯ ಪಿಡಿದು ಭವಭಯವ ಪರಿಹರಿಸೆ ಸಿರಿಹಯವದನನ ದಯವ ಪಾಲಿಸೆ ಲಕ್ಷ್ಮಿ ೩

 

೮೪
ಮಹಿಮೆಯನಾರು ಬಲ್ಲರುನಹಿಪ್ರತಿಯೆಂದು ನಿನ್ನ ಪಾಡುವರಲ್ಲದೆ ರಂಗ ನಿನ್ನ ಪ.
ವಾಮನನಾಗಿ ಬಂದು ಬಲೀಂದ್ರನಿಗೆ ಸಂದಸೀಮೆಯನೆಲ್ಲವ ಸಲೆವಿಟ್ಟ ತ್ರಿವಿಕ್ರಮ ನಿನ್ನಸಾಮಥ್ರ್ಯವ ಶ್ರುತಿಗಳು ಪೇಳೆ ಉಗುರ್ಗೊನೆಆ ಮಹಾ ಬೊಮ್ಮಾಂಡವ ಸೀಳೆ ದೇವೇಂದ್ರನುಸಾಮ್ರಾಜ್ಯದಿ ಸುಖದಿಂ ಬಾಳೆ ಕೃಷ್ಣ ನಿನ್ನ ೧
ಇಂದ್ರ ಕೋಪಿಸಿ ಮಳೆಗರೆಯಲು ನಿನ್ನತಂದೆ ತಾಯಿ ಬಂಧು ಬಳಗಂಗಳೆಲ್ಲ ಕಂಗೆಡಲುಅಂದು ಬಲುಗಿರಿಯನೆತ್ತಿ ಗೋ ಗೋಪಾಲರವೃಂದದ ಭಯವ ನುಗ್ಗೊತ್ತಿ ಪಾಲಿಸಿದೆಚೆಂದದಿ ನಿನ್ನಯ ಸಂಪತ್ತಿ ಕೃಷ್ಣ ನಿನ್ನ ೨
ಇಂದು ಮಧ್ವಮುನೀಂದ್ರಗೊಲಿದು ಕಡುಕೃಪೆಯಿಂದತಂದೆ ಹಯವದನ ಮುಕುಂದ ಉಡುಪಿನೊಳಗೆನಿಂದು ಸದಾ ಪೂಜಿಸಿಕೊಂಡೆ ನಿನ್ನ ಮುಂದೆನಂದಾದೀಪಗಳನು ಕಂಡೆ ಭಕ್ಷ್ಯಭೋಜ್ಯಕಂದಮೂಲ ಫಲಂಗಳುಂಡೆ ಕೃಷ್ಣ ನಿನ್ನ ೩

 

೨೯೬
ಮಾಕಾಂತೆಯರಸನ ತೋರೆನಗಮ್ಮ
ಸಾಕುವ ಸರಸನ ತೋರೆ ಪ.
ಕಣ್ಣೆರಡು ಸಾಸಿರುಳ್ಳವನಂಗದಿ
ಕಣ್ಣಮುಚ್ಚಿ ಮಲಗಿಪ್ಪನ
ಹೊನ್ನು ಮಣ್ಣಿನ ರಾಶಿಯಿಂದ ಕೂಡಿಪ್ಪನ
ಮಣ್ಣ ಕೂಡಿದ ದಿವ್ಯಕಾಯನ ೧
ಮಣ್ಣಿನ ದೇವರ ಮುಖದಿಂದ
ಮಣ್ಣಿಗೆ ಸೆಣಸುವರ ಭುಜದಿಂದ
ಮಣ್ಣ ಪಾ(ನಾ?)ಡುವರ ತೊಡೆಯಲ್ಲಿ ಮೂಡಿ ಮತ್ತೆ
ಮಣ್ಣ ಚರಣದಿ ಪುಟ್ಟಿಸಿದನ ೨
ಕಣ್ಣ ಮುಚ್ಚದನ ಕಣ್ಣ ತೋರದನ
ಹೆಣ್ಣಾಳಿನುರುಬಿನಲಿ ಮುಕ್ಕಣ್ಣನ
ಮಣ್ಣನಳೆದು ಮಣ್ಣಿನರಸನೊರೆಸಿದ
ಮಣ್ಣಿನ ಮಗಳನಾಳಿದನ ೩
ಮಣ್ಣ ಪೊತ್ತನಧರಿಸಿದ ಚಿಣ್ಣನ
ಮಣ್ಣ ಮೆದ್ದ ಸಣ್ಣ ಬಾಯೊಳು
ಮಣ್ಣನೆ ತೋರಿದ ನಂದನರಾಣಿಗೆ
ತಲ್ಲಣ ಹಬ್ಬವ ಕೊಟ್ಟ ಧೀರ೪
ಕನ್ನಗಳ್ಳರ ಕೊಂದು ಕಣ್ಣಿಲ್ಲದವರಿಗೆ
ಕಣ್ಣ ತರಿಸಿಕೊಟ್ಟ ಚದುರನ
ಕಣ್ಣಿಲ್ಲದವನಿಗೆ ಕಣ್ಣ ಕೊಟ್ಟನಂತ
ಕಣ್ಣುಳ್ಳ ರೂಪವ ತೋರ್ದನ ೫
ಹೆಣ್ಣ ಮೋಹಿಸುವನ ಸುಟ್ಟುರಿ-
ಗಣ್ಣನ ಮರುಳು ಮಾಡಿದನ
ಹೆಣ್ಣನುಂಗುಟದಿ ಪಡೆದು ತಮ್ಮಣ್ಣನ
ಮಣ್ಣಿನೊಡೆಯ ಮಾಡಿಸಿದನ ೬
ಮಣ್ಣಿಗಾಗಿ ಬಂದ ಮಣ್ಣನಾಳಿದ ದುರ್ಜನ
ದಾನವರ ಕೊಂದನ
ಹೆಣ್ಣು ಮಣ್ಣೊಲ್ಲದ ನಿಗೆ
ಪ್ರಸನ್ನನಾದ ಹಯವದನನ ೭

 

೧೫
ಮಾತುಮಾತಿಗೆ ಕೇಶವ ನಾರಾಯಣ ಮಾಧವ ಎನಬಾರದೆ ಪ.
ಪ್ರಾತಃಕಾಲದಲೆದ್ದು ಪಾರ್ಥಸಾರಥಿಯನುಪ್ರೀತಿಲಿ ನೆನೆದರೆ ಪ್ರೀತನಾಗುವ ಹರಿ ಅ.ಪ.
ಜಲಜನಾಭನ ನಾಮವು ಈ ಜಗಕೆಲ್ಲ ಜನನ ಮರಣ ಹರವುಸುಲಭವೆಂದೆನಲಾಗಿ ಸುಖಕೆ ಕಾರಣವಿದುಬಲ್ಲಿದ ಪಾಪಂಗಳೆಲ್ಲ ಪರಿಹರಿಸುವುದೆಂದುತಿಳಿದು ತಿಳಿಯದಿಹರೆ ಹೇ ಜಿಹ್ವೆ ೧
ತರಳೆ ದ್ರೌಪದಿ ಸೀರೆಯ ಸೆಳೆಯಲಾಗ ಹರಿ ನೀನೆ ಗತಿಯೆನಲುಪರಮಪುರುಷ ಭವಭಂಜನ ಕೇಶವದುರುಳರ ಮರ್ದಿಸಿ ತರಳೆಗಭಯವಿತ್ತಹರಿ ನಮ್ಮೊಡೆಯನಲ್ಲವೆ ಹೇ ಜಿಹ್ವೆ ೨
ಹೇಮಕಶ್ಯಪಸಂಭವ ಈ ಜಗಕೆಲ್ಲ ನಾಮವೆ ಗತಿಯೆನಲುವಾಮನ ನೀನೆಂದು ವಂದಿಸಿದವರಿಗೆ ಶ್ರೀಮದನಂತಸ್ವಾಮಿ ಹಯವದನನುಕಾಮಿತಫಲವೀವನು ಹೇ ಜಿಹ್ವೆ ೩

 

೨೦೧
ಮಾರ ಜಗದೇಕವೀರ ನಿನ್ನ ಕೊಮಾರ ನೀ ದುಃಖದೂರ ಸುಖಕರ ಎಲೆ ನಾರಾಯಣ ಜಗದ್ಧರ ಮುಕ್ತಿದಾ-ತಾರ ಎನಗೆ ನಿನ್ನ ತೋರ ಇನ್ನುಬಾರಾ ನಾನರಿಯೆ ಸಿರಿಧರ ಪ.
ನಾನಾಯೋನಿಗಳಲ್ಲಿ ಬಂದು ಬಂದು ಬಳಲಿದೆನುಹೀನಜನರೊಡನಾಡಿ ಕಡುನೊಂದೆನುಶ್ರೀನಾಥ ನಿನ್ನ ಸುಕಥಾಮೃತವ ನೆನೆನೆನೆದುದೀನಜನರನು ಪೊರೆವ ಪಿರಿಯರೊಳು ಎನ್ನನಿರಿಸು ೧
ಕಂಡಕಂಡವರ ಬೇಡಿ ಬೇಸರಲಾರೆನೊ ತಂದೆಪುಂಡರೀಕಾಕ್ಷ ಪುರುಹೂತವಂದ್ಯಪಾಂಡವಪ್ರಿಯ ಪರಮಪುರುಷ ನಿರ್ದೋಷ ನಿನ್ನತೊಂಡರೊಳಗೆನ್ನನಿರಿಸಿ ದುರುಳರಸಂಗವ ಬಿಡಿಸು ೨
ಶ್ರೀ ಹಯವದನರಾಯ ಆಶ್ರಿತಜನಸುಖೋಪಾಯಮೋಹಾಂಧಕಾರ ಮಾರ್ತಾಂಡ ಶೂರನೇಹದಿಂದೆನ್ನ ಕೈವಿಡಿದು ದುಷ್ಟರ ಬಡಿದುಕಾಹುಕಟ್ಟಳೆಯ ಮಾಡು ಕರುಣಾಕಟಾಕ್ಷದಿ ನೋಡು ೩

 

೨೦೨
ಮಾರನಯ್ಯನ ಚದುರನ ತಂದುತೋರು ವೆಂಕಟರಮಣನ ಪ.
ನಲ್ಲ ನುಡಿದರೆ ನುಡಿದರಗಿಣಿಯನು ನಾಚಿಸುವಚೆಲ್ವಮೊಗದಿ ಶಶಿಯನುಗೆಲ್ವ ಭಾರಿಯ ಸೊಬಗ ತೋರಿಫುಲ್ಲಬಾಣನ ಜರೆವನೊ ೧
ಕಂಬನಿಯ ತೊಡೆದು ತನ್ನ ಮೊಗವಚುಂಬಿಸಲು ತರುಣಿ ತನ್ನ ಬಾಯತಾಂಬೂಲವನಿತ್ತು ಎನ್ನಮನ ದ್ಹಂಬಲ ಸಲಿಸಲು ಪೂರ್ಣ ೨
ಇಂದೆನ್ನನಗಲಿದರೆ ಮನದಕುಂದು ಬಿಡಿಸುವನದಾರೆಇಂದುಮುಖಿ ಕರೆದು ತಾರೆ ಹಯವದನನಬಂದು ಬೇಗದಲಿ ಸಾರೆ ೩

 

೨೦೪
ಮುದದಿ ನಂಬಿದೆನೊ ಹಯವದನನೆ ಪ.
ಭಕ್ತರನ್ನು ಭವಸಮುದ್ರದಿಂದ ನೂಕೊಇತ್ತ ಒಂದು ತಿಳಿಯಧ್ಹಾಗೆ ಹೀಗೆ ಇರುವರೊ ೧
ಮಾಯಪಾಶದೊಶಕೆ ಕೊಟ್ಟ ಮಾಯಕಾರನ ತೋಯಜಾಕ್ಷ ನಾನಿದಕುಪಾಯ ಕಾಣೆನೊ ೨
ಸತ್ಯಸಂಧನೆಂಬೊ ಬಿರುದು ಎತ್ತಹೋಯಿತೊ ಹಸ್ತಿವರದನೆಂಬೋ ಕೀರ್ತಿ ಸುತ್ತಮೆರೆಸಿತೊ ೩
ಗೂಢತನದಿ ಗುಡಿಯ ಮಾಡದಲ್ಲಿ ಇರುವರೆನಾಡಜನರು ನಿನ್ನ ಆಡಿಕೊಳದೆ ಬಿಡುವರೆ ೪
ಸಿರಿಹಯವದನ ಶೈನ (ಎನ್ನ?) ಗುರು ಶಿರೋಮಣಿಧರೆಯೊಳರಸಿದೆನೊ ನಿನಗೆ ಸರಿಯು ನಾ ಕಾಣೆ ೫

 

೧೨೯
ಮುದ್ದುಮುಖದಾತ ನಮ್ಮ ಮುಖ್ಯಪ್ರಾಣನಾಥನೊಸದ್ಗುಣ ವಂದಿತ ವಾಯುಜಾತನೊ ರಾಮದೂತನೊ ಪ.
ಜಾನಕೀಶನ ವೈರಿ ಶೂಲನೊ ಬಹು ಧೀರನೊಮಾನಿನಿ ಸೀತೆಯ ಕಂಡು ಬಂದನೊ ಮುಂದೆ ನಿಂದನೊ ೧
ವಾನರ ರೂಪಿಲಿ ಮುದ್ರೆಯಿತ್ತನೊ ವನ ಕಿತ್ತನೊಆ ನಗರವನೆಲ್ಲ ಸುಟ್ಟನೊ ಬಹು ದಿಟ್ಟನೊ ೨
ಸಾಗರವನು ದಾಟಿದ ಧೀರನೊ ಕಂಠೀರವನೊರಾಗ ತಾಳ ಮೇಳದಲ್ಲಿ ಜಾಣನೊ ಪ್ರವೀಣನೊ ೩
ನಂಬಿದ ಭಕ್ತರ ಕಾಯ್ವ ದಾತನೊ ಪ್ರಖ್ಯಾತನೊಅಂಬುಜಾಸನಪದಕೆ ಬಂದು ನಿಂತನೊ ಹನುಮಂತನೊ ೪
ಹಯವದನನ ಭಕ್ತ ಚೆಲ್ವ ತೇಜನೊ ಯತಿರಾಜನೊದಾನವಕುಲಕೆ ಬಹು ಭೀಮನೊ ಸಾರ್ವಭೌಮನೊ ೫

 

೧೩೦
ಮುದ್ದುರಾಮರ ಬಂಟ ಬುದ್ಧಿವುಳ್ಳ ಹನುಮಂತಹದ್ದಾಗಿ ಹಾರಿದನೆ ಆಕಾಶಕೆನಿದ್ರೆಗೈವ ಸಮಯದಲಿ ಎದ್ದು ಬಾರೆಂದರೆ ಅಲಿದ್ದ ರಕ್ಕಸರನೆಲ್ಲ ಗೆಲಿದಾತನೆ ೧
ದಾರಿ ದೂರವೆಂದು ದಾರಿಯನೆ ನಿರ್ಮಿಸಿದಧೀರ ರಾಮರ ಬಂಟ ಹನುಮಂತನ ನೋಡಿ-ಬಾರೆಂದರೆ ಪೋಗಿ ಲಂಕೆಯ ಸುಟ್ಟು ಬೇಗದಲಿಮರನೇರಿಕೊಂಡಾತನೆ ೨
ಆತನ ಮಾತಿಗೆ ಸೇತುವೆಯ ಕಟ್ಟಿಸಿದಸೀತಾರಾಮರ ಬಂಟ ಹನುಮಂತನೆಸೀತಾದೇವಮ್ಮನಿಗೆ ಪ್ರೀತಿಯ ಬಂಟನಾದಮುಖ್ಯ ಪ್ರಾಣ ಹಯವದನನ ದೂತನೆ ೩

 

೨೦೫
ಮೂಢನು ನಾನಯ್ಯ ನಿನ್ನನುಬೇಡಲರಿಯೆನಯ್ಯ ಪ.
ದಯಾಸಿಂಧು ಹರಿಯೆ ದಯದಲಿ ನೋಡು ವಜ್ರದಖಣಿಯೆಭಯಪಡುವೆನು ಈ ಭವಸಾಗರದಿ ಅ-ಭಯವ ಪಾಲಿಸೊ ಹಯವದನನೆ ಹರಿ ೧
ದಿಕ್ಕುಯಾರು ಇದಕೆ ಪಾಪವು ಉಕ್ಕಿತು ದಿನದಿನಕೆಸೊಕ್ಕಿ ಸಿಲುಕಿದೆನು ಯಮನ ಪಾಶಕೆಚಿಕ್ಕವನನು ನೋಡಕ್ಕರದಲಿ ಹರಿ ೨
ಸಿರಿಹಯವದನನ್ನ ಶರಣರ ಶಿರೋಮಣಿರನ್ನಗುರುದೊರೆಯೆ ನಂಬಿದೆ ನಿನ್ನಕರಿಯ ರಕ್ಷಕನೆಂದು ಕರೆವೆನೊ ಮುನ್ನ೩

 

೨೬೩
ಮೂಲೋಕದೊಳಗೆ ಮುಕುಂದನೆ ದೈವವಿದ-
ಕಾಲೋಚನೆಯ ಮಾಡಬೇಡ ಇವ
ಲೋಲಾಕ್ಷಿ ಎಂದೆಂದು ಬಿಡ ಅಲ್ಲದಿದ್ದರೆ
ಮೇಲಣ ಸಂಪದವ ಕೊಡ ಇಂಥವನಾವ ಪ.
ಆಡಲೇಕಿನ್ನು ಸಖಿ ಅಂಜಿದವನಂತೋಡುವ
ಕಾಡುವ ಖಳನಾಗಿ ನಿತ್ತ (ನಿಂತ?) ಇವ
ರೂಢಿಯೊಳಗೆ ಬಲುದೈತ್ಯ ಇದನೋಡಿ
ಪಾಡುವರು ಸುಖ ನಲಿವುತ್ತ ಇಂಥವನಾವ ೧
ಕಾಳಿಯ ನಾಗನ ತುಳಿದ ಮತ್ತವಗೊಲಿದ
ಬಾಲಗೋಪಾಲ ಸುಕೃಪಾಳು ಇವ
ನಾಳು ನಾನೆಂದು ಸಖಿ ಬಾಳು ಗಿರಿಯ ಭಾರವ
ತಾಳಿತಿವನದೊಂದು ತೋಳು ಇಂಥವನಾವ ೨
ಕಣ್ಣಾರೆ ಕಂಡೆವಲ್ಲ ಮಣ್ಣಮೆದ್ದೆಯೆನಲು
ಸಣ್ಣ ಬಾಯೊಳು ಸರ್ವಜಗವ ಎಲೆ
ಹೆಣ್ಣೆ ತೋರಿ ತೊಳೆದ ನಮ್ಮಘವ ಇನ್ನು ಹಯವ
ದನ್ನ ತನ್ನವನೆನ್ನಾಳುವ ಇಂಥವನಾವ ೩

 

೧೩೧
ಮೆರೆದೆ ಮಹಿಮೆ ಉದಾರ ನಮ್ಮಗುರು ಭೀಮಸೇನ ಸುಧೀರ ಪ.
ಮಂಗಳ ಮಹಿಮ ವಿಹಾರ ಮಾಯವಾದಿಗಳಿಗತಿ ಕ್ರೂರ ಅ.ಪ.
ಹರಿಯ[ನಿರೂಪ] ವ ಧರಿಸಿ ಮರುತ ಕುಂತಿಯೊಳವತರಿಸಿಹರನೊಳು ವಾದಿಸಿ ಜೈಸಿ ಹರಿಸರ್ವೋತ್ತಮನೆಂದೆನಿಸಿ ೧
ಬಕ ಹಿಡಿಂಬಕ ಕೀಚಕ ಜರಾಸುತರ ಮಣಿಮಂತ ಕೀಚಕ ದುರ್ಜನರಸಕಲ ಕೌರವ ಅತಿರಥರ ಕೊಂದು ಸುಖಪಡಿಸಿದೆ ಸಹೋದರರ ೨

ಜ್ಞಾನಭಕುತಿಸಂಪನ್ನ ಅಜ್ಞಾನಾರಣ್ಯಛೇದನ ಮುದ್ದುಜ್ಞಾನೇಂದ್ರ ಹಯವದನನ್ನ ಧ್ಯಾನದೊಳಿರಿಸು ಪ್ರಸನ್ನ ೩

 

೧೪೫
ಯತಿಗಳು
ಆನೆ ಬರುತ್ತಿದಿಕೋ ದಾಸರ ಮರಿ-ಯಾನೆ ಬರುತ್ತಿದಿಕೋ ಪ.
ಮದವೇರಿ ಹದಮೀರಿ ಮದನಾರಿ ತಾನೆಂಬಅಧಮರೆದೆಯ ಮೆಟ್ಟಿ ಸೀಳಲು ಅ.ಪ.
ಮರುತಮತ ನಿರಂತರ ಚರಣದ ಧೂಳಿಕರದಲಿ ಪಿಡಿದು ಶಿರದ ಮೇಲೆ ಚೆಲ್ಲುತ್ತ ೧
ಇದ್ದು ಜಗಕ್ಕಿಲ್ಲೆಂಬ ಶುದ್ಧ ಮೂರ್ಖತೆಯುಳ್ಳಅದ್ವೈತಿಗಳ ಬುದ್ಧಿಮಡುವನ್ನೆ ಕಲಕುತ್ತ ೨
ಜಗಕೆ ಕರ್ತ ನಾನೆಂದು ಬೊಗಳಿಕೊಂಬುವ ನಾ-ಯಿಗಳ ಕರದಲ್ಲಿ ಪಿಡಿದು ಮೊಗದ ಮೇಲೆ ಉಗುಳುತ್ತ೩
ಮಧ್ವಮುನೇಂದ್ರರ ಶುದ್ಧತೀರ್ಥದಿ ಮಿಂದುತಿದ್ದಿದ ನಾಮ ಶ್ರೀಮುದ್ರೆ ಶೃಂಗಾರದಿ ೪
ಮುರಿಯಲು ದುರುಳನ ಗರುವವನೆ ಮುನ್ನಸಿರಿ ಹಯವದನನ ಅರಮನೆ ಪಟ್ಟದ ೫

 

೨೦೬
ಯಾಕೆ ಬಾರ ಸಖಿ ತ್ರಿವಿಕ್ರಮನ್ಯಾಕೆ ಬಾರ ಸಖಿ ಅ-ನೇಕ ಮಹಿಮ ವಿವೇಕನಿಲಯ ಮೂ-ಲೋಕ ಮೋಹನಮೂರ್ತಿ ಮುಕ್ತಶೋಕ ಪ.
ಕಂಜಲೋಚನ ಕಡು ಕರ್ಮ ವಿಮೋಚನಮುಂಜರಗ ಪಿಡಿದೆಳೆಯೆಸಂಜೆ ಬರಲೆಂದು ಸವಿನುಡಿಯ ನುಡಿವಕುಂಜರನ ಭಯಭೇದಿ ಬಹಳ ವಿನೋದಿ ಸಕಲರಿಗಾದಿ ಸುಗುಣನಿಧಿ ೧
ನಿನ್ನಿನಿರುಳು ನಿನ್ನ ನೇಮಿಸದ ಮುನ್ನಮನ್ನಿಸಿ ಮನೆಗೆ ಬಂದಾತಅನ್ಯವರಿಯದ ಅಬಲೆ ನಾನೆಂದೀಗಕಣ್ಣಾರ ತಾ ಕಂಡನಲ್ಲ ಪುಸಿಯಿನ್ನು ಸಲ್ಲ ಸಕಲವು ಬಲ್ಲ ಎನ್ನ ನಲ್ಲ ೨
ಇಂದಿರೆಯನು ಬಿಟ್ಟು ಇರವ ಎನ್ನೊಳಗಿಟ್ಟುಎಂದೆಂದು ಎತ್ತಿಕೊಂಡಾತಕುಂದದೆ ತಾನಿಂದು ಕೂಡಿದರೆ ಬಂದುತಂದು ಹಯವದನನೊಲಿಸು ಸ್ನೇಹವ ಬಲಿಸು ಮದನನೊಲಿಸು ಎನಗೊಲಿಸು ೩

 

೨೩೯
ಯಾಕೆ ಮೈಮರೆದೆ ನೀನು ಪ.
ಯಾಕೆ ಮೈಮರೆದೆ ಶ್ರೀ ಹಯವದನನ ಪಾದವನುಬೇಕೆಂದು ಬಿಡದೆ ಭಜಿಸೊ ನಿನ್ನಕಾಕು ವ್ಯಸನಗಳ ತ್ಯಜಿಸೊ ಈ ದೇಹತಾ ಕಂಡ ಕನಸೋ ಸ್ಥಿರವಲ್ಲ ಇನ್ನುನೀ ಕೇಳದಿರೆ ನಿನ್ನ ಮನಸೋ ಪ್ರಾಣಿ ಅ.ಪ.
ಪರಹೆಣ್ಣುಗಳ ನೋಡಿ ಪಾತಕಿಗಳ ನೀಡಾಡಿಹರಿದೆದ್ದು ಕಡೆಗೆ ಕರೆವೆ ಎಲೆಮರುಳೆ ಹರುಷದಿಂದವಳ ನೆರೆವೆ ಅಕಟಕಟದುರುಳ ಜೀವನೆ ನಿನಗೆ ತರವೆ ಮತ್ತೊ-ಬ್ಬರಿಗೆ ಬರಿದೆ ನೀ ಹೇಳುವೆಲ್ಲೊ ಶಾಸ್ತ್ರಗಳನೊರದೊರದು ಕೇಳ್ವೆಯಲ್ಲೊ ನೀ ಹೋಗಿನರಕದೊಳು ಬೀಳ್ವೆಯಲ್ಲೊ ಪ್ರಾಣಿ ೧
ಧನವ ಕೂಡಿಸಿಕೊಂಡು ದಾನ ಧರ್ಮವ ಮಾಡ-ದೆನಗಾರು ಸಾಟಿಯೆಂಬೆ ಇಷ್ಟಜನರ ಬಿಟ್ಟೊಬ್ಬನುಂಬೆ ಎಲೊ ಎಲೊಮುನಿದು ಸಕಲರ ಮುನಿಯಗೊಂಬೆ ಆಧನವು ಮನಶುದ್ಧವಾಗಿ ಇಹುದೆ ಅದು ಸಾವದಿನದೆ ಸಂಗಡ ಬಾಹುದೆ ಕುಬೇರನಬಿಟ್ಟು ಕಡೆಗೆ ಹೋಹುದೆ ಪ್ರಾಣಿ ೨
ಅಳೆವ ಕೊಳಗದ ಮಾಟ ಆತ್ಮನಿನ್ನೋಡಾಟ ಸರ-ಕಳೆದ ಬಳಿಕ ನೋಡೊ ದೇಹ ತಾ-ನುಳಿಯದು ಹಮ್ಮು ಮಾಣೊ ಎಲೆ ಮರುಳೆಗಳಿಸಿರೋ ಧರ್ಮಗಳ ವ್ಯರ್ಥ ಕೆಡಬ್ಯಾಡೊ ದಿನಮಾನಗಳ ಕಳೆಯದಿರು ನಿತ್ಯವಲ್ಲ ಇದಕೆಉಳಿದರ್ಥ ಕೆಲಸಕಿಲ್ಲ ಹಿಂದೆಉಳಿದವರೊಬ್ಬರಿಲ್ಲ ಪ್ರಾಣಿ ೩
ಕೊಲೆ ದೋಷವೆಂದರಿಯೆ ಕೊಸರು ಒಬ್ಬನ ಜರೆವೆಇಳೆಯೊಳದಾವನೀತ ನಿನಗೆ ನೀತಿಳಿದುಕೊ ನಿನ್ನಮಾತ ನೀಖಿಲಗೊಳಬೇಡ ಆಭಾಸ ಸೂಚಿಸಿ ಜರೆವರೆಕೊಲೆಗೆ ಗುರಿಯಾದೆ ಕಾಣೊ ಈ ಕೋಪಹೊಲೆಗೆ ಸರಿಯಲ್ಲವೇನೊ ನಿನ್ನಹುಳುಕು ಬುದ್ಧಿಯನು ಮಾಣೊ ಪ್ರಾಣಿ ೪
ಮರೆದು ಕಳೆ ಕ್ರೋಧವನು ಮಾಡದಿರು ಲೋಭವನುಗುರುಹಿರಿಯರಾದವರಿಗೆರಗೂ ಅನಾ-ಥರಿಗೆ ಚೆನ್ನಾಗಿ ಮರುಗೊ ಇದೆಪರಮಗತಿಯ ಸೆರಗೊ ಭಕ್ತರಿಗೆಸಿರಿಯರಸ ಹಯವದನನೊಡೆಯ ಲೋಕಪರನಿಂದಕರಿಂಮುಕ್ತಿಪಡೆಯೊ ಭಜಿಸಿದುರಿತ ಸಂಕಲೆಯ ಕಡಿಯೊ ಪ್ರಾಣಿ ೫

 

೧೩೮
ಯಾತಕಯ್ಯ ತೀರ್ಥಕ್ಷೇತ್ರಗಳುಶ್ರೀ ತುಲಸಿಯ ಸೇವಿಪ ಸುಜನರಿಗೆ ಪ.
ಅಮೃತವ ಕೊಡುವ ಹರುಷದೊಳಿರ್ದಕಮಲೆಯರಸನಕ್ಷಿಗಳಿಂದಪ್ರಮೋದಾಶ್ರು ಸುರಿಯೆ ಕ್ಷೀರಾಬ್ಧ್ದಿಯೊಳುಆ ಮಹಾತುಲಸಿ ಅಂದುದಿಸಿದಳು ೧
ಪರಿಮಳಿಸುವ ಮಾಲೆಯ ನೆವದಿ ಹರಿಯುದರದಲ್ಲಿಸಿರಿಯೊಲಿಹಳುತರುಣಿ ತುಲಸಿ ತಪ್ಪದೆಯವನಚರಣವ ರಮೆ ಭಜಿಸೆ ಭಜಿಪಳು ೨
ಪೂಜಿಸುವರ ಶಿರದಿ ನಿರ್ಮಾಲ್ಯಗಳವ್ಯಾಜದಿಂದ ಲಕ್ಷ್ಮಿಯ ಕೂಡೆ ಬಹಳುಈ ಜಗದೊಳು ತಾವಿಬ್ಬರಿದ್ದಲ್ಲಿಆ ಜನಾರ್ದನನಾಕ್ಷಣ ತಹಳು ೩
ಒಂದು ಪ್ರದಕ್ಷಿಣವನು ಮಾಡಿದವರಹೊಂದಿಪ್ಪುದು ಭೂಪ್ರದಕ್ಷಿಣ ಪುಣ್ಯಎಂದೆಂದಿವಳ ಸೇವಿಸುವ ನರರಿಗೆಇಂದಿರೆಯರಸ ಕೈವಲ್ಯವೀವ ೪
ತುಲಸಿಯ ನೆಟ್ಟವನು ಮತ್ತೆ ತನಗೆ ಇಳೆಯೊಳು ಪುಟ್ಟುವ ವಾರ್ತೆಯ ಕಳೆವಜಲವೆರೆದು ಬೆಳೆಸಿದ ಮನುಜರಕುಲದವರ ಬೆಳೆಸು ವೈಕುಂಠದಲ್ಲಿ ೫
ತುಲಸಿಯೆ ನಿನ್ನ ಪೋಲುವರಾರುಮೂಲದಲ್ಲಿ ಸರ್ವತೀರ್ಥಂಗಳಿಹವುದಳದಲ್ಲಿ ದೇವರ್ಕಳ ಸನ್ನಿಧಾನಚೆಲುವಾಗ್ರದಿ ಸಕಲ ವೇದಗಳು ೬
ತುಲಸಿ ಮಂಜರಿಯೆ ಬೇಕಚ್ಚುತಂಗೆದಳಮಾತ್ರ ದೊರಕಲು ಸಾಕವಗೆಸಲುವುದು ಕಾಷ್ಠಮೂಲ ಮೃತ್ತಿಕೆಯುಫಲವೀವನಿವಳ ಪೆಸರ್ಗೊಳಲು ೭
ಕೊರಳಲ್ಲಿ ಸರ ಜಪಸರಗಳನ್ನುವರ ತುಲಸಿಯ ಮಣಿಯಿಂದ ಮಾಡಿಗುರುಮಂತ್ರವ ಜಪಿಸುವ ನರರುಹರಿಶರಣರ ನೆಲೆಗೆ ಸಾರುವರು೮
ಎಲ್ಲಿ ತುಲಸಿಯ ಬನದಲ್ಲಿ ಲಕ್ಷುಮೀ-ವಲ್ಲಭನು ಸರ್ವಸನ್ನಿಹಿತನಾಗಿನೆಲಸಿಹನಿವಳೆಸಳೊಂದಿಲ್ಲದಿರೆಸಲ್ಲದವಂಗನ್ಯಕುಸುಮದ ಪೂಜೆ ೯
ಎಲ್ಲ ಪಾಪಂಗಳೊಮ್ಮೊಮ್ಮೆ ಕೈಮುಗಿಯೆಎಲ್ಲಿ ಪೋಪುದು ದೇಶದೇಶಂಗಳಿಗೆನೆಲ್ಲಿ ಮಲ್ಲಿಗೆ ಮೊದಲಾದ ಸೈನ್ಯಅಲ್ಲೀಗಲು ನಮ್ಮ ಬನದಲೊಪ್ಪಿಹಳು ೧೦
ಹರಿಪಾದಕೆ ಶ್ರೀತುಲಸಿಯೇರಿಸಿದನರರನು ಪರಮ ಪದಕೇರಿಸುವುದುನಿರುತದಿ ತುಲಸಿಯ ಕಂಡರವಗೆನರಕಗಳ ದರುಶನ ಮತ್ತಿಲ್ಲ ೧೧
ಧನ್ಯ ತುಲಸಿಯ ದಳವಿಟ್ಟು ತೂಗೆಮುನ್ನ ಕೃಷ್ಣಗೆ ಪಡಿ ಆಯಿತು ಗಡನ್ನಿವಳ ವೃಂದಾವನದಲ್ಲಿ ನೆಟ್ಟುಮನೆಮನೆ ಮನ್ನಿಸದವನ್ಯಾವ ೧೨
ಕನಸಿನಲಿ ಕಂಡಂತೆ ಇನ್ನೊಂದುಕೊನೆವೆರಸಿದ ಪುಷ್ಪದಿ ಜಪಿಸಿಅನುದಿನ ಹಯವದನನ್ನ ತೀರ್ಥವನು ಕೊಂಡು ನಾ ಧನ್ಯನಾದೆನು ೧೩

 

೮೫
ಯಾದವರರಸಿಲ್ಲೆ ಸಿಕ್ಕಿದನಲ್ಲೆ ಪ.
ಸಿಕ್ಕಿದನಲ್ಲೇ ದಕ್ಕಿದನಲ್ಲೆ ಅ.ಪ.
ಗೋಪಿಯ ಕಂದನೆ ಬೆಣ್ಣೆಯ ತಿಂದನೆಪೂತಣಿಯ ಕೊಂದನೆ ಮಧುರೆಗೆ ಬಂದನೆ ೧
ಮಾಧವನಿವನೇ ವೇದಕೆ ಸಿಲುಕನೆಸಾಧುಗಳರಸನೆ ಸಜ್ಜನಪೋಷನೆ ೨
ಜಾಣರಜಾಣನೆ ಗಾನಕೆ ಪ್ರೀಯನೆಮುನಿಗಳ ವಂದ್ಯನೆ ಮನ್ಮಥಪಿತನೆ ೩
ಕಾಮಿತವೀವೋನೆ ಭಾಮಾಪ್ರೀಯನೆನೇಮದಿಭಜಿಪರ ಸದನಕ್ಕೆ ಬರುವನೆ ೪
ವೇದವ ತಂದನೆ ಗಿರಿಯ ಪೊತ್ತನೆಬೇರನು ತಿಂದನೆ ಕಂಬದಿ ಬಂದನೆ ೫
ದಾನವ ಬೇಡನೆ ಕ್ಷತ್ರೇರ ಕೊಂದನೆವನಕೆ ಪೋದನೆ ದುರುಳರ ಕೊಂದನೆ ೬
ಕಾಳೀಯ ಭಂಜನೆ ಬತ್ತಲೆ ನಿಂದನೆಹಯವನೇರ್ದನೆ ಹಯವದನನೆ ೭

 

೮೮
ರಂಗ ನಿನಗಾರೇನೆಂದರು ಮರೆತು ನಿದ್ರೆಗೈದೆಯಾನೀ ಮಾಧವ ಸ್ವಾಮಿ ಪ.
ಬಿಕ್ಕಿ ಬಿಕ್ಕಿಯಳುತ ಬಂದ ಗೋಪಿಯ ಕಂದಉಕ್ಕಿಹರಿವ ಕಣ್ಣನೀರ ತೊಡೆದಳೆಶೋದೆಅಕ್ಕರದಿಂದಲಿ ಮಗನ ಅತಿಮುದ್ದನಾಡಿಮಕ್ಕಳ ಮಾಣಿಕ್ಯವೆ ನೀ ಮನೆಯೊಳಗಾಡೈ ೧
ಹಳ್ಳಿಯ ಮಕ್ಕಳು ಎನ್ನ ಬೈದರಮ್ಮಕಳ್ಳನೆಂದು ಎನ್ನಕೂಡೆ ಆಡಲೊಲ್ಲರುಮೆಲ್ಲನೆ ಬೈಯುತ್ತ ಬರಲು ಕಲ್ಲಲಿಟ್ಟರಮಯ್ಯಅಲ್ಲಿಂದಂಜಿ ಅಳುತ ನಾನು ಓಡುತ ಬಂದೆ ೨
ಬಾಗಿಲ ಗೊಲ್ಲರು ಗೋಪಗೋಪಿಯರೆಲ್ಲಹಗಲುಗಳ್ಳ ಹಾಲು ಬೆಣ್ಣೆ ಚೋರನೆಂದರುಮಗುವೆಂದೆನಿಸಿಕೊಂಡು ಮನೆಯೊಳಗಾಡೈಹೋಗುನ್ನಂತ ಉಡುಪಿಯಲ್ಲಿ ಮುದ್ದು ಹಯವದನರಾಯ ೩

 

೮೯
ರಂಗ ಬಾರೊ ನರಸಿಂಗ ಬಾರೊ ಪ.
ಅಂಗಜನಯ್ಯ ಕೋನೇರಿತಿಮ್ಮ ರಂಗ ಬಾರೊ ಅ.ಪ.
ಸಾಸಿರ ಮೂರುತಿ ವಾಸವವಂದ್ಯನೆಸಾಸಿರನಾಮದೊಡೆಯನೆಸಾಸಿರನಾಮದೊಡೆಯನೆ ನರಹರಿಕೇಶವ ನಮ್ಮ ಮನೆದೈವ ೧
ವಾರಣವಂದ್ಯನೆ ಕಾರುಣ್ಯರೂಪನೆಪುರಾಣಗಳಲ್ಲಿ ಪೊಗಳುವಪುರಾಣಗಳಲ್ಲಿ ಪೊಗಳುವ ನರಹರಿನಾರಾಯಣ ನಮ್ಮ ಮನೆದೈವ೨
ಯಾದವಕುಲದಲ್ಲಿ ಸಾಧುಗಳರಸನೆಭೇದಿಸಿ ದನುಜರ ಗೆಲಿದನೆಭೇದಿಸಿ ದನುಜರ ಗೆಲಿದನೆ ನರಹರಿಮಾಧವ ನಮ್ಮ ಮನೆದೈವ ೩
ದೇವೆಂದ್ರ ಮಳೆಗರೆಯೆ ಗೋವರ್ಧನ ಗಿರಿಯೆತ್ತಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿಆ ಗಿರಿಯ ಶ್ರೀಕೃಷ್ಣ ಕೊಡೆಮಾಡಿ ಕಾಯಿದನೆಗೋವಿಂದ ನಮ್ಮ ಮನೆದೈವ ೪
ಸೃಷ್ಟಿಗೆ ಕರ್ತನೆ ದುಷ್ಟಕಂಸನ ಗೆಲಿದುಶಿಷ್ಟಪರಿಪಾಲನೆನಿಸಿದಶಿಷ್ಟಪರಿಪಾಲನೆನಿಸಿದ ನರಹರಿವಿಷ್ಣುವೆ ನಮ್ಮ ಮನೆದೈವ೫
ಮಧುವೆಂಬೊ ದೈತ್ಯನ ಮುದದಿಂದ ಗೆಲಿದನೆವಿದುರನ ಮನೆಯಲಿ ನಲಿದುಂಡವಿದುರನ ಮನೆಯಲಿ ನಲಿದುಂಡ ನರಹರಿಮಧುಸೂದನ ನಮ್ಮ ಮನೆದೈವ ೬
ಚಕ್ರವ ಪಿಡಿದನೆ ಭೂಚಕ್ರವ ಗೆಲಿದನೆಅಕ್ರೂರನೊಡನೆ ಮಧುರೆಗೆಅಕ್ರೂರನೊಡನೆ ಮಧುರೆಗೆ ಪೋದ ತ್ರಿ-ವಿಕ್ರಮ ನಮ್ಮ ಮನೆದೈವ೭
ಸಾಮವನೋದುತ್ತ ದಾನವ ಬೇಡುತ್ತನಾಮದ ಮಹಿಮೆ ಪೊಗಳುತ್ತನಾಮದ ಮಹಿಮೆ ಪೊಗಳುತ್ತ ನರಹರಿವಾಮನ ನಮ್ಮ ಮನೆದೈವ೮
ಶ್ರೀಧರ ಎಸಿಸಿದ ಶ್ರೀವತ್ಸ ಲಾಂಛನಶ್ರೀಧರ ಗೋಪೀತನಯನೆ ಶ್ರೀಧರ ಗೋಪೀತನಯನೆ ನರಹರಿಶ್ರೀಧರ ನಮ್ಮ ಮನೆದೈವ ೯
ಋಷಿಜನ ವಂದ್ಯನೆ ಬಿಸಜನಾಭನೆ ದೇವಋಷಿಜನರಿಗೆಲ್ಲ ಅಭಯವಋಷಿಜನರಿಗೆಲ್ಲ ಅಭಯವ ಕೊಡುವೋನೆಹೃಷಿಕೇಶನೆ ನಮ್ಮ ಮನೆದೈವ೧೦
ಪದುಮಸಂಭವಪಿತ ಪದುಮದಾಮೋದರ[ಪದುಮ]ದಿಂದಭಯವ ಕೊಡುವೋನೆ[ಪದುಮ]ದಿಂದಭಯವ ಕೊಡುವೋನೆ ನರಹರಿಪದುಮನಾಭನೆ ನಮ್ಮ ಮನೆದೈವ ೧೧
ನಾಮದ ಮಹಿಮೆಯ ಪ್ರೇಮದಿ ಪೊಗಳಲುಕಾಮಿತಾರ್ಥಗಳ ಕೊಡುವೋನೆಕಾಮಿತಾರ್ಥಗಳ ಕೊಡುವೋನೆ ನರಹರಿದಾಮೋದರ ನಮ್ಮ ಮನೆದೈವ ೧೨
ಸಂಕಟಗಳ ತರಿವೋನೆ ಪಂಕಜನಾಭನೆಶಂಕೆಯಿಲ್ಲದೆ ಅಸುರರಶಂಕೆಯಿಲ್ಲದೆ ಅಸುರರ ಸಂಹರಿಸಿದಸಂಕರ್ಷಣ ನಮ್ಮ ಮನೆದೈವ ೧೩
ವಸುದೇವತನಯನೆ ಶಿಶುಪಾಲನ ಗೆಲಿದನೆವಶವ ಮಾಡಿದೆಯೊ ತ್ರಿಪುರರವಶವ ಮಾಡಿದೆಯೊ ತ್ರಿಪುರರ ನರಹರಿವಾಸುದೇವ ನಮ್ಮ ಮನೆದೈವ೧೪
ಶುದ್ಧಸ್ವರೂಪನೆ ಶುದ್ಧ ಭಕ್ತರನು ಸಲಹಯ್ಯಹದ್ದುವಾಹನನಾದ ದೇವನೆಹದ್ದುವಾಹನನಾದ ದೇವನೆ ನರಹರಿಪ್ರದ್ಯುಮ್ನ ನಮ್ಮ ಮನೆದೈವ ೧೫
ವನಜಲೋಚನ ಹರಿ ವಿನಯ ಉಳ್ಳವನೆಧ್ವನಿಕೇಳಿ ಬಂದ ಕುಬುಜೆಯ ಧ್ವನಿಕೇಳಿ ಬಂದ ಕುಬುಜೆಯ ನರಹರಿಅನಿರುದ್ಧ ನಮ್ಮ ಮನೆದೈವ ೧೬
ಪಾರಿಜಾತದ ಹೂವ ನಾರಿಗೆ ಇತ್ತನೆವೀರ ದಾನವರ ಗೆಲಿದನೆವೀರ ದಾನವರ ಗೆಲಿದನೆ ನರಹರಿಪುರುಷೋತ್ತಮ ನಮ್ಮ ಮನೆದೈವ ೧೭
ಅಕ್ಷಯಪದವೀವ ಪಕ್ಷಿವಾಹನಸ್ವಾಮಿಕುಕ್ಷಿಯೊಳೀರೇಳು ಭುವನವಕುಕ್ಷಿಯೊಳೀರೇಳು [ಭುವನವನಾಳಿದ] ನರಹರಿ ಅ-ಧೋಕ್ಷಜ ನಮ್ಮ ಮನೆದೈವ೧೮
ನರಕಾಸುರನ ಕೊಂದು ಹಿರಣ್ಯನ ಮರ್ದಿಸಿಕರುಳ ಬಗೆದು ವನಮಾಲೆ ಹಾಕಿಕರುಳ ಬಗೆದು ವನಮಾಲೆ ಹಾಕಿದ ಹರಿನರಸಿಂಹನೆ ನಮ್ಮ ಮನೆದೈವ೧೯
ಅಚ್ಚ್ಚುತಾನಂತನೆ ಸಚ್ಚಿದಾನಂದನೆ[ಮಚ್ಚಾವತಾರದಿ] ನಲಿದನೆ[ಮಚ್ಚಾವತಾರದಿ] ನಲಿದನೆ ನರಹರಿಅಚ್ಚುತ ನಮ್ಮ ಮನೆದೈವ ೨೦
ಜಾನಕಿರಮಣನೆ ದಾನವಾಂತಕನೆದೀನರಕ್ಷಕನೆ ಸಲಹಯ್ಯದೀನರಕ್ಷಕನೆ ಸಲಹಯ್ಯ ನರಹರಿಜನಾರ್ದನ ನಮ್ಮ ಮನೆದೈವ ೨೧
ಅಪರಿಮಿತಮಹಿಮನೆ ವಿಪರೀತ ಚರಿತನೆ[ಗುಪಿತವೇಷಗಳ] ತಾಳಿದನೆ[ಗುಪಿತವೇಷಗಳ] ತಾಳಿದ ನರಹರಿಉಪೇಂದ್ರ ನಮ್ಮ ಮನೆದೈವ ೨೨
ಹರನ ಭಸ್ಮಾಸುರನು ಮರಳಿ ಬೆನ್ನ್ಹತ್ತಲುತರುಣಿರೂಪವನು ತಾಳಿದನೆತರುಣಿರೂಪವನು ತಾಳಿದ ನರಹರಿ ಶ್ರೀ-ಹರಿಯೆ ನಮ್ಮ ಮನೆದೈವ ೨೩
ಕೃಷ್ಣಾವತಾರದಲಿ ದುಷ್ಟರ ಗೆಲಿದನೆವೃಷ್ಣಿಯರ [ಕುಲತಿಲಕನೆ]ವೃಷ್ಣಿಯರ [ಕುಲತಿಲಕನೆ] ನರಹರಿ ಶ್ರೀ-ಕೃಷ್ಣನೆ ನಮ್ಮ ಮನೆದೈವ ೨೪
ಇಪ್ಪತ್ತು ನಾಲ್ಕು ನಾಮಂಗಳ ಪಾಡುವೆನುಅಪ್ಪ ಕೇಶವನ ಚರಿತೆಯನುಅಪ್ಪ ಕೇಶವನ ಚರಿತೆಯನು ಪಾಡಲುಒಪ್ಪಿಸಿಕೊಳ್ಳುವ ಹಯವದನ ೨೫

 

೮೬
ರಂಗನಾಥನೆ ನಿಮ್ಮ ಕಾಣದೆ ಭಂಗಪಟ್ಟೆನೊ ಬಹುದಿನಮಂಗಳಾಂಗ ನಿಮ್ಮ ಪಾದವ
ಎನ್ನ ಕಂಗಳಿಗೆ ತೋರೊ ಶ್ರೀಕೃಷ್ಣ ಪ.
ಕರಿಯ ಮೊರೆ ಲಾಲಿಸಿದಿ ಬೇಗನೆನೆರೆದ ಸಭೆಯಲಿ ದ್ರೌಪದಿಗೆ ಅಭಯವನಿತ್ತಿ ಅಡವಿಅರಣ್ಯದಿ ಅಹಲ್ಯೆಯ ಸಲಹಿದಿಮುಚುಕುಂದನ ರಕ್ಷಿಸಿದಿ ೧
ಸೂರ್ಯನುದಿಸುತ ಅಂತ್ಯಕಾಲದಿಶರತಲ್ಪದಲಿ ಅವಗೆ ತೋರಿದಿಶರಣು ಕಾಳೀಪಣೆಯ ಮೇಲಿಟ್ಟ ಮುದ್ದುಚರಣವ ತೋರೊ ರಂಗನಾಥ ೨
ಪುಟ್ಟ ಪ್ರಹ್ಲಾದನ ಸಲಹಿದಿಪಟ್ಟವನು ವಿಭೀಷಣನಿಗೆ ಸ[ಲಿಸಿ]ದಿನೆಟ್ಟನಡವಿಲಿ ಬಂದ ಧ್ರುವನಆದರಿಸಿ ಕಾಯ್ದಿ ರಂಗನಾಥ ೩
ಘನವಾಗಿ ಕ್ಷೀರಾಬ್ಧಿಯಲಿ ನಿಂತಿಉನ್ನಂತವಾಗಿದ್ದ ಸತ್ಯಲೋಕವನಾಳಿದಿ ಪ್ರಸನ್ನನಾಗಿಕ್ಷ್ವಾಕು ಕಾಯಗೆಒಲಿದ ಪಾದವ ತೋರೊ ರಂಗನಾಥ ೪
ಎಷ್ಟು ಹೇಳಲಿ ನಿಮ್ಮ ಮಹಿಮೆಯಸೃಷ್ಟಿಸ್ಥಿತಿಲಯವನ್ನು ಅಳೆದೀ ಪುಟ್ಟ ಪಾದವ ಎನ್ನ ಮನದಲಿಇಟ್ಟು ದಯಮಾಡೊ ಶ್ರೀಕೃಷ್ಣ ರಂಗನಾಥ ೫
ದಕ್ಷಿಣಮುಖವಾಗಿ ಪವಡಿಸಿದಿ ದೇವಶಿಖಾಮಣಿ ಏಳೈ ಬಂದ ಭಕ್ತರಿ-ಗೆಲ್ಲ ಅಭಯ ಹಸ್ತವ ಕೊಡುವಿರಾಜೀವನೇತ್ರ ಹಯವದನ[ರಂಗನಾಥ] ೬

Leave a Reply

Your email address will not be published. Required fields are marked *