Categories
ರಚನೆಗಳು

ವಿಜಯ ರಾಮಚಂದ್ರವಿಠಲ

೧೩
ಇಂದಿರೆ ಚಂದಿರವದನೆ ಮಂದಗಮನೆ
ಕಂದರ್ಪ ಕೋಟಿ ಲಾವಣ್ಯೆ ಪ
ಮಂದನಾಗಿ ಭವಸಿಂಧುವಿಲಿ ಪೊಂದಿದೆ
ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ.
ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ
ಹೊಗಳುವ ಮತಿ ನೀಡೆ ಕಲ್ಯಾಣಿ
ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು
ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ ೧
ಸರಸಿಜೋದ್ಭವ ಮಾತೆ ವಿಖ್ಯಾತೆ
ಸುರ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ
ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು
ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ ೨
ಹರಿಗುಣ ಮಣಿಯೆಣಿಸುವ ಧೀರೆ
ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ
ಅರಿದೂರ ವಿಜಯ ರಾಮಚಂದಿರವಿಠಲನ
ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ ೩

 

೨೫
ಇದನಾ ಬೇಡಿದವನಲ್ಲಾ
ಬುಧರಂತರ್ಯಾಮಿ ಲಕುಮಿನಲ್ಲ ಪ
ಪಾಪ ಕಾರ್ಯದ ಪಾಪ ವ್ಯಾಪಿಸಿ ದೇಹದಿ
ಲೋಪಗೈಸೋದು ಸತ್ಕರ್ಮ
ದೀಪ ನೀನಾಗಿರೆ ಉಪದೇಶಿಸೀ ಭವ
ಕೂಪದಿಂದೆತ್ತೆಂದು ಬೇಡಿದೆನಲ್ಲದೆ ೧
ವಿಷಯದೊಳ್ ಸಂಚರಿಪ ದೋಷಕಾರಿ ಮನ
ಆಶೆಯೊಳು ಪೊಕ್ಕು
ನಾಶಗೈಪೋದೆನ್ನ ವಿಶೇಷ ಸಾಧನಗಳ ನೀ
ಪೋಷಿಸು ಎಂದು ಬೇಡಿದೆನಲ್ಲದೇ ೨
ಸುಧೆ ತಂದ  ನಿನ
ಗೆದುರ್ಯಾರೊ ಪೇಳುವರು
ಮುದದಿಂದ ಕೃಷ್ಣಾರ್ಯರೊಳು ಬೇಡಿದೆನಲ್ಲದೇ ೩

 


ಇನ್ನುಪೇಕ್ಷೆಯ ಮಾಡೆ ಎನ್ನ ಕಾಯುವರಿಲ್ಲ
ಮನ್ನಿಸಿ ಸಲಹೊ ದಯದಿ ಪ
ಪನ್ನಗಾದ್ರಿನಿಲಯ ಆಪನ್ನ ಪರಿಪಾಲ
ಶ್ರೀನಿವಾಸ ಅಖಿಳಾಮರೇಶ | ಶ್ರೀಶಾ ಅ.ಪ
ಕ್ರೂರತರ ಸಂಸಾರ ದಾವಾಗ್ನಿ ಮೇರೆಯಿಲ್ಲದೆ ಸುಟ್ಟು
ಘೋರ ದುಃಖ ಬಿಡಿಸುತಿಹುದೊ
ವಾರಿಜಾಕ್ಷ ನಿನ್ನ ನಾಮಾಮೃತವೆಂಬ ಮಳೆಗರೆದು
ಹರಸಿ ಪೊರೆಯಯ್ಯ | ಜೀಯ ೧
ಸತಿಸುತರ ಹಿತಕಾಗಿ ಅತಿ ನೀಚವೃತ್ತಿಲಿ ನಡೆದು
ಪತಿತ ನಾನಾದೆನಯ್ಯ
ಪತಿತಪಾವನ ನಿನ್ನ ಕಥೆಗಳನು ನುಡಿಸಿ ಸ-
ದ್ಗತಿಯ ಪಾಲಿಸಯ್ಯ | ಪ್ರೀಯ ೨
ಆರು ಮಂದಿಗಳೆಂಬ ವೈರಿಗಳೆನ್ನನು ಸೇರಿ
ಗಾರು ಮಾಡುತಲಿಹರೊ
ಮೀರಿದವರ ಬಡಿವ ಕಂಸಾರಿ ಮುರವೈರಿ
ಸೇರಿದೆ ಪರಿಹರಿಸೊ ಕಷ್ಟ | ನಿನ್ನಿಷ್ಟ ೩
ವಿಷಯದಾಸೆಗಳೆಂಬ ಪಶುಪತಿ ಘುಡುಘುಡಿಸಿ
ವ್ಯಸನದಿಂ ಕೊಲ್ಲುತಿಹುದೋ
ಶ್ವಸನ ಅಂತರ್ಯಾಮಿ ನಿಶಾಚರ ವೈರಿ
ವಶಮಾಡಿ ಎನ್ನ ಪೊರೆಯೊ | ಕಾಯೊ ೪
ಅತಿತ್ತ ಪೋಗದಲೆ ಹಿತವಾದ ಚಿಂತೆಯೊಳು
ರತನಾಗಿ ಖತಿಗೊಳ್ಳುತಿಹೆನೊ
ಚ್ಯುತದೂರ ಅಚ್ಯುತಾನಂದ ಗುಣಪೂರ್ಣ ನಿನ್ನ
ಸ್ರ‍ಮತಿಯಿತ್ತು ಪಾಲಿಸೊ | ಸಲಿಸೊ ೫
ಒಂದು ಕ್ಷಣವಾದರು ಕುಂದು ಮಾಳ್ಪಾಲೋಚನೆ
ಯಿಂದ ಮನ ಹಿಂದಾಗದೊ
ಆನಂದ ಮುನಿವಂದ್ಯ ದ್ವಂದ್ವತಪ ಪಾದದಿ ಮನ
ಹೊಂದುವಂದದಿ ಮಾಡೊ | ಎನ್ನ ಕೂಡೊ ೬
ಬಹುವಿಧದ ಐಹಿಕ ಸುಖ ಬಯಸಿ ಲೋಕದ
ವಿಹಿತಗಳೆಲ್ಲ ಮರೆದೆ
ಅಹಿ ತಲ್ಪ ವಿಜಯರಾಮಚಂದ್ರವಿಠಲ
ಪಾಹಿ ಸತತಯೆನ್ನ | ಮುನ್ನ ೭

 

ಕಷ್ಟಪಡಿಸಲಿಬೇಡ ಇಷ್ಟ ಕೃಷ್ಣಾರ್ಯನೆ
೨೨
ಇಷ್ಟವಿಲ್ಲದ ಕಾರ್ಯ ಕಟ್ಟುಣಿಸುವುದು
ಕಟ್ಟಳೆ ನಿನ್ನದೆಂತೊ ಪ.
ನಷ್ಟಗೈಸುವುದಿನ್ನು ಕಷ್ಟಪಡಿಸಲಿಬ್ಯಾಡ
ಇಷ್ಟ ಕೃಷ್ಣಾರ್ಯನೆ ಅ.ಪ
ಪುಟ್ಟಿದಾ ಮೊದಲಾಗಿ ನಷ್ಟತನವನೆ ಹೊಂದಿ
ದುಷ್ಟರೊಳು ಶ್ರೇಷ್ಠನಾದೆ
ಎಷ್ಟುದಿನ ಇದರಂತೆ ಇಟ್ಟಿರುವೆಯೊ ಗುರುವೆ
ಇಷ್ಟೇವೆ ಎನ್ನ ಯೋಗ್ಯತೆಯು ೧
ಪಾಪಿ ವಿಷಯ ಜ್ವಾಲೆಯು ಕುಪಿತದಿಂದೆನ್ನ
ತಪಿಸಿ ಬೇಯಿಸುತಿದೆ
ಕೃಪೆಯೆಂಬ ಮಳೆಗರೆದು ಉಪಶಮನವನೆ ಮಾಡು
ಆಪದ್ಭಾಂಧವನಲ್ಲವೇ ಗುರುವೆ ೨
ಪಾಪಕಾರ್ಯರತನ ಪಾಪಿ ಎಂದೆನಿಸದೆ | ಜನರಿಂದ
ತಪಸಿ ಎಂದೆನಿಸುವುದ್ಯಾತಕೆ
ಭೂಪ ನ
ಆ ಪಾದ ಪದುಮವ ನಂಬಿಹ ಗುರುವೆ ೩

 

೨೬
ಏನು ಕಾರಣ ಹರಿಯೆ ಅನುಮಾನಿಸಿದಿ ದೊರೆಯೆ
ಘನವಲ್ಲ ನಿನಗಿದು ತೆರೆದ ಬೀಗ ಜೋಡಿಸುವುದು ಪ
ವದನದಿಂದಲಿ ನಿನ್ನ ಮಹಿಮೆ ಪೊಗಳಲರಿಯದೆ
ಸದನದಿ ಅನ್ಯರ ಪಾಡುತ್ತಿದ್ದೆನೇನೋ ೧
ಪಾಡದಿದ್ದರೆ ನಾನೊಬ್ಬ ನೋಡಿ ಬಂದದ್ದೇನೊ ನಿನಗೆ
ಬೇಡಿಕೊಂಬೆನೊ ಬಾಯ ಬೀಗ ತಗೆಸೊ ಹರಿಯೆ ೨
ವೇದ ಪೊಗಳಲರಿಯದ ನ್ನ
ಹಾದಿ ತೋರಿಸೆಂದು ನಾ ಸ್ತುತಿಪೆನೊ
ಮೋದಮಯ ದೇವ ೩

 

೨೭
ಏನು ಮಾಡಿದರೆ ನಿನ್ನ ಕಾಣುವೋ ಸನ್ಮಾರ್ಗ ದೊರೆವುದೊ
ಮಾನನಿಧಿ ಶ್ರೀ ವೇಣುಗೋಪಾಲ ಇನ್ನಾದರು ತೋರಿಸೊ ಪ
ಉರಗನ ಪಿಡಿಯಲೇ ಹರಿಯ ಪೂಜಿಸಿದ ಕರಗಳಿಂದಲಿ ಶ್ರೀ
ಹರಿ ನಿನ್ನ ಕರೆದು ಕೊಂಡಾಡದದುರುಳಜಿಹ್ವೆಯಕೊಯ್ಯಲೆ ೧
ವರ ತೀರ್ಥಕ್ಷೇತ್ರಕೆ ಹೊರಡದ ಕಾಲ್ಗಳ ಉರಿವೊ
ಜ್ವಾಲೆಯೊಳಿಡಲೆ
ಹರಿಕಥೆಕೇಳದಾಎರಡುಕರ್ಣಗಳಿಗೆಮಿರಿ
ಮೀರಿಕೆಂಡತುಂಬಲೆ ೨
ನಿನ್ನ ನೋಡದ ನಯನಕ್ಕೆ ಮಣ್ಣನೆ ತುಂಬಲೆ
ನರಸಿಂಗನ ಸ್ಮರಿಸದ
ಮನವನು ಏನು ಮಾಡಲೊ  ೩

 

ತ್ರಿಧಾಮನಿಲಯನೆ ಶ್ರೀಹರಿಯನ್ನು

ಓಂಕಾರ ಪ್ರತಿಪಾದ್ಯ ಶಂಖಚಕ್ರಾಭಯಕರ
ಬಿಂಕದಿಂದ ಬಾಕು ಟೊಂಕದಿ ಕಟ್ಟಿ ಮೆರೆವ ದೇವ ೧
ಇಷ್ಟು ಜನರ ರೋಗ ತೊಟ್ಟಿ ತೀರ್ಥದಿಂದ ಕಳೆವ
ಕಷ್ಟದ ಕಂಕಣ ಕಟ್ಟಿ ಮೆರೆವ ದೇವಾ ೨
ದೇಶದೇಶದಿ ಬರುವ ದಾಸ ಜನರ ಅರ್ಥಿ
ಕಾಸುವೀಸಕೆ ಕೊಟ್ಟು ಲೇಸಾಗಿರುವಿಯಿಲ್ಲಿ ೩
ನಾಮ ತೀರ್ಥ ಪ್ರಸಾದ ಕಾಮಿಸೆ ವಿಕ್ರಯಿಸುವ
ನೇಮಗಳನೆ ಕೊಟ್ಟು ತ್ರಿಧಾಮ ನಿಲಯನೆ ೪
ಮಂಗಳ ಮಹಿಮನೆ ಗಂಗಾಜನಕನೆ
ಅಂಗಜನಯ್ಯನೆ ವೆಂಕಟರಮಣನೆ ೫
ತಾಳ ತಂಬೂರಿ ದಮ್ಮಡಿ ಮೇಳದೊಳು ದಾಸರು
ವೇಳೆ ವೇಳೆಗೆ ಸೇವಿಸೆ ಕಾಳ ದೋಷವ ಕಳೆವ ೬
ರಮಾ ಸೇವಿತ
ನೇಮದಿಂದಲಿ ನಿತ್ಯ ನಿನ್ನ ನಾಮಗಳನೆ ನುಡಿಸೊ ೭

 

೩೯
ಕರುಣಿಸು ಜಯೇಶವಿಠಲ
ವರ ಅಂಕಿತವಿದನು ಇತ್ತೆ ಪ
ತರಳ ನಿನ್ನವನೆಂದು ಗುರುವಾತ ಸ್ಥಿತನಾಗಿ
ಭರದಿ ಪಾಲಿಸಿದೆ ಇವನ ಹರಿ ನೀನಿದ್ದೆಡೆಗೆ ಕರೆಸಿ ಅ.ಪ
ಇರಿಸು ವರ್ಣಾಶ್ರಮ ವರಧರ್ಮ ಕರ್ಮಗಳಲಿ
ಮರೆಸಿ ಕಾಮ್ಯಕರ್ಮಗಳೆಲ್ಲವನು
ಸ್ಮರಿಸದಂತೆ ಮಾಡು ಪರಸತಿಯರೊಲುಮೆ
ಮರೆಯದಂತಿರಲಿ ಪರತತ್ವವನು ೧
ಅತಿಥಿ ಅಭ್ಯಾಗತರ ಪೂಜೆ ಸತಿ ಸುತ ಪರಿವಾರದಿ
ಕೃತಕೃತ್ಯನಾಗಿ ಮಾಡಿಸಿ
ಪತಿತರ ಸಹವಾಸ ಹಿತವೆಂದರುಪದೆ ಸ-
ದ್ಗತಿಯೀವ ಮಾರ್ಗ ತಿಳಿಸಿ ೨
ನಿರುತ ತತ್ವ ನಿಶ್ಚಯದಲ್ಲಿ ಜ್ಞಾನ ಗುರುಹಿರಿಯರಲ್ಲಿ ಭಕ್ತಿ
ದುರ್ವಿಷಯದಲಿ ವಿರಕ್ತಿನಿತ್ತು
ವರ  ಸುರರೊಡೆಯ
ಬರೆದು ನಾಮಾಮೃತವ ನುಡಿಸಿ ೩
(ಜಯೇಶವಿಠಲರಿಗೆ ಅಂಕಿತ ನೀಡಿದ ಸಂದರ್ಭ)
ಸರಸಾಕಾರ ದುರಿತ ವಿ ದೂರ
ಕರುಣಾಕರ ಸುಂದರ ಗಂಭೀರ ೧
ದೀನೋದ್ಧಾರ ವಿರ್ಪಿವಿಹಾರ
ದಾನವಹರ ಸುರಕಾವ್ಯ ವಿಚಾರ ೨
ಸೀತಾನಾಥ ವಾನರಯೂಥ
ವಾರಾತ್ಮಜ ನುತ ಶ್ರೀ ಲಕ್ಷ್ಮೀಕಾಂತ ೩

 

ವಾಯುದೇವರನ್ನು, ವಾಯುದೇವರ
೧೪
ಕರುಣಿಸು ಭಾರತೀರಮಣ ಕರುಣಿಸು ಪ
ಕರುಣಿಸು ಭಾರತಿ ರಮಣಾ ನಿನ್ನ
ಚರಣಕ್ಕೆ ನಮೊ ಎಂಬೆ ಪರಣ | ಆಹ
ಪರಮದಯಾದಿಂದ ಹರಿಯನ್ನ ತೋರಿಸು
ದುರುಳರೊಳಡಗಿದೆ ನಿಲಿಸೊ ಜ್ಞಾನಿಗಳಲ್ಲಿ ಅ.ಪ
ತ್ರೇತಾಯುಗದಲ್ಲವತರಿಸಿ | ಕಪಿ
ವ್ರಾತ ಶಿರೋಮಣಿ ಎನಿಸಿ | ಪಕ್ಷ –
ಚೂತ ಫಲಗಳನ್ನು ಸಲಿಸಿ | ಭೂಮಿ –
ಜಾತೆಯ ಪಾದಕ್ಕೆ ನಮಿಸೀ | ಅಹ
ಘಾತಿಸಿ ಖಳರನ್ನು ಸೀತಾಪತಿ | ಮನೋ
ರಥವನು ಸಲಿಸಿದ ಮಾತರಿಶ್ವನೆ ನೀ ೧
ಕುಂತಿಯ ಉದರದಿ ಜನಿಸಿ | ಬಹು
ಪಂಥದಿ ವನವ ಸಂಚರಿಸಿ | ಸಿರಿ –
ಕಾಂತನ ಪಾದಕ್ಕೆ ನಮಿಸಿ | ಮಡದಿ
ಚಿಂತೆಯನು ದೂರಗೈಸಿ | ಅಹ
ಸಂತಾಪಗೊಳುತಿಪ್ಪ ದಂತಿಪುರಾಧಿಪನ
ತಂತುಗೆಡಹಿತ ಬಲವಂತ ಶಿರೋರನ್ನ ೨
ಕಲಿಯುಗದಲುದ್ಭವಿಸಿ | ಬಹು
ಲೀಲೆಯೊಳನ್ಯರ ಜಯಿಸಿ | ಸತ್ಯ
ಶೀಲರನ್ನುದ್ಧರಿಸಿ | ಸಿರಿ
ಲೋಲನೆ ಪರದೈವವೆನಿಸಿ | ಆಹ
ಬಾಲ ರವಿ ತೇಜ ವಿಜಯ ರಾಮಚಂದಿರವಿ –
ಠಲನ್ನ ಪೂಜಿಸುವಂಥ ಆಲವ ಬೋರ್ಧಾಯನೆ ೩

 

೩೦
ಕವನ ಪೇಳು ನೀ ಮನವೆ
ಆವಾವ ನೆವದಿದಾದ್ದು ಘನವೆ ಪ
ಭುವನ ಪಾವನ ಲಕ್ಷ್ಮೀ –
ಧವನ ನವಗುಣ ರೂಪ ಕ್ರಿಯವನ್ನೆ ಅ.ಪ
ಸ್ತವನ ಮಾಡಬೇಡ ನ್ಯಪನನ್ನು
ನವ ಯುವತೇರ ಮೆಚ್ಚಬೇಡ
ಪವನ ಭವ ಮತ ಬಿಡಬ್ಯಾಡ
ಭವದೊಳು ಮಮತೆ ಕೊಡಬ್ಯಾಡ ೧
ಹರಿಕಥಾ ಶ್ರವಣ ಬಿಡಬ್ಯಾಡ
ಹರಿದಾಸರೊಳು ಛಲ ಇಡಬ್ಯಾಡ
ದುರುಳ ಮಾಯವಾದಿರ ಸ್ನೇಹ
ಅರಿತು ಮಾಡಲು ಅದು ಮಹಾಮೋಹ ೨
ಅಜನಪಿತನ ಸ್ಮರಣೆ ಮರಿಬ್ಯಾಡ
ರುಜುಮಾರ್ಗವ ಬಿಟ್ಟು ನಡಿಬ್ಯಾಡ
ನ ಮರೆದು
ಗೋಜು ಕರ್ಮವ ಮಾಡಲಲ್ಲೇನು ಮಾತು ೩

 

ಅಂಬೆಗಳಸುತ
೩೫
ನಂಬಿದೆ ನಾನಿನ್ನ ಚರಣವನಂಬಿಗ
ಅಂಬೆಗಳ ಸುತನೆ ಕೋ ಬ್ಯಾಗಂಬಿಗ ಪ
ಇಂಬಾಗಿ ದಡ ಸೇರಿಸೆನ್ನನೇನಂಬಿಗ
ತುಂಬಿ ನದಿ ಸೂಸುತಲಿದೆ ನೋಡಂಬಿಗ ಅ.ಪ.
ಕರ್ಮವೆಂಬ ಪ್ರವಾಹವ ನೀ ನೋಡಂಬಿಗ
ಚರ್ಮದಿಂದೇಳು ಹೊದ್ದಿಕಿ ಅಂಬಿಗ
ಮರ್ಮ ಒಂಭತ್ತು ರಂಧ್ರ ಉಂಟಂಬಿಗ
ಶರ್ಮವಿದಕೆ ಕಾಯದ್ಹರಿಗೋಲಂಬಿಗ ೧
ಆಳ ಬಹಳ ಗೊತ್ತಾಗದಂಬಿಗ
ಶೆಳವು ಘನ ಉಳ್ಳುಹುದು ನೋಡಂಬಿಗ
ಸುಳಿಗಾಳಿಗೆ ಸಿಗಿಸದಿರೊ ಅಂಬಿಗ
ಬಳಸಿ ಕೊಂಡೊಯ್ಯೋದು ಒಳ್ಳೇದೆ ಅಂಬಿಗ ೨
ಸಂಚಿತಾಪ್ತಿ ಇವರೊಳುಂಟಂಬಿಗ
ಮಿಂಚಿ ಭಾರ ಜಡಿಯೋದು ನೀ ನೋಡಂಬಿಗ
ವಂಚಕ ಮಾತು ರಾಗವು ಹೆಚ್ಚಂಬಿಗ
ಚಂಚಲಗೊಂಡು ಭ್ರಮಿಸೋದು ಕಾಣಂಬಿಗ ೩
ಆಶಾಜಲ ಮೇಲೆ ಮೇಲೆ ಬರುವುದಂಬಿಗ
ಮೋಸ ಮಾಡುವುದೇನೊ ಕೊನೆಗೆ ಅಂಬಿಗ
ಪೊಸ ಪೊಸ ಕಾಮತೆರೆ ತುಂಬಾಯಿತಂಬಿಗ
ಲೇಶವಾದರು ಬತ್ತದು ನೋಡಂಬಿಗ ೪
ಅಷ್ಟ ಆನೇ ಒಳಗಿಟ್ಟುಕೊಂಡಿಹುದಂಬಿಗ
ಹುಟ್ಟು ಹಾಕೋದು ಬಿಟ್ಟು ಜಲ್ಲೆ ಕೊಳ್ಳಂಬಿಗ
ಬೆಟ್ಟ ಆರಕ್ಕೆ ಸಿಕ್ಕಿಸದೆ ನೋಡಂಬಿಗ
ನೆಟ್ಟ ನಡುವಿನ ಪಥದಿ ಒಯ್ಯೋ ಅಂಬಿಗ ೫
ಸುತ್ತ ಕಾರ್ಮುಗಿಲು ಬಂತಲ್ಲೊ ಅಂಬಿಗ
ಹತ್ತು ಹನಿಗಳು ಬಿತ್ತು ನೋಡಂಬಿಗ
ಎತ್ತಿ ನಡೆಸೋದು ಶಕ್ತಿ ನಿನ್ನದು ಕಾಣಂಬಿಗ
ಹತ್ತಿಸೊ ಭಕ್ತಿದಡಕಿನ್ನಂಬಿಗ ೬
ಮರಕಟಿ ಸೇರಿಹದಿದರೊಳಗಂಬಿಗ
ಕರೆಕರೆಗೆ ಗುರಿ ಮಾಡೊದಿದೆ ಅಂಬಿಗ
ಸರಿಯಾಗಿ ನಡೆಸೊ ಇನ್ನಾದರಂಬಿಗ
ವರದ ನೀನಂಬಿಗ ೭

 


ನಾರಸಿಂಹ ನಾರಸಿಂಹ ನಾರಸಿಂಹ ಪ
ನಿತ್ಯದಲಿ ಬರುವ ಅಪಮೃತ್ಯುವಿನ ಬಾಧೆಯ
ಕೃತ್ತಿ ಒತ್ತಿ ಪರಿಹರಿಸಿ
ಭೃತ್ಯನಾದ ಜೀವನ್ನ ತೃಪ್ತಿಪಡಿಸುವ ದೇವ
ಭಕ್ತವತ್ಸಲ ನಾರಸಿಂಹ ೧
ಅಂದು ಸ್ವಪ್ನದಿ ಬಂದೆ ದ್ವಂದ್ವ ಪಾದಕ್ಕೆರಗಿ
ನಿಂದು ನಾ ನಿನ್ನ ಬೇಡೆ
ಸಂಧಿಸಿ ಕ್ರೂರ ದೃಷ್ಟಿಯಿಂದ ನೋಡಿ
ಮಂದೀಗೆ ಕುಂದು ಮಾಡಬ್ಯಾಡೆಂದೆ ೨
ಅಂದಿನಾರಭ್ಯ ಬಲು ಬಂಧನಕೆ ಸಿಲ್ಕಿ ನಾ
ನೊಂದ ಪರಿ ಪೇಳಲಾರೆ
ಹಿಂದಿನ ಅಘವೆಣಿಸದೆ ಬಂದು ನಾರಿ ಸಹಿತ
ತಂದೆ ಈ ಸುತನ ಕಾಯೋ ೩
ತಂದೆ ತಾಯಿಯು ನೀನೆ ಬಂಧು ಬಳಗವು ನೀನೆ
ಎಂದು ಎನ್ನಗಲದೆ
ಬಂದು ನೆಲಸೆನ್ನಲ್ಲಿ ಅಜ್ಞಾನ ಕೊಡದಿರು
ವಂದಿಸುವೆನು ನಾರಸಿಂಹ ೪
ಮುಂದಾದರು ಹೃನ್ಮಂದಿರದಿ ನೆಲೆಗೊಂಡು
ಸಂದರ್ಶನವನೀಯೊ ದೇವ
ಕಂದರ್ಪಹರ ರೇಯ
ವಂದೆ ಭಕ್ತಿಯ ಪಾಲಿಸು ೫

 

೧೫
ನೀನ್ಯಾಕೊ ನಿನ್ನ ಗೊಡಿವ್ಯಾಕೊ ಹನುಮೇಶ ಪ
ಅನ್ಯಮತಿ ಪೊಂದಿ ಮಿಥ್ಯಾಜ್ಞಾನಿಯಾಗದೆ
ಮಾನ್ಯ ಶ್ರೀಮದಾನಂದರ ಪಾದ ಪೊಂದಿದ್ದರೆ ಸಾಕೊ ಅ.ಪ
ಜೀವೋತ್ತಮರ ಭಾವವನನುಸರಿಸಿ
ನೋವಾಗುವ ಮಾರ್ಗವ ಜರಿದು
ಭಾವಜನಯ್ಯ ನಿನ್ನ ಭಾವವ ಕಂಡು
ಆವಾಗಲು ಸುಖಿಪರ ಗೃಹ ಕಾವನಾದರೆ ಸಾಕು ೧
ದೇಹಸ್ಥಿರವಲ್ಲ ದಹನಶೀಲಭವ
ಇಹಸುಖ ಹೇಯವೆಂದು
ಮೋಹಪಾಶಕೆ ಸಿಗಿಸದೆ ನಿನ್ನನುಪಮ
ಮಹಿಮೆಗಳ ಕೇಳುತ ಆನಂದವಾದರೆ ಸಾಕು ೨
ಮೋದತೀರ್ಥರೆ ಸದ್ಗುರು ಭೇದ ಜ್ಞಾನವೆ ಗತಿಪ್ರದ
ವೇದ ಸಚ್ಛಾಸ್ತ್ರಂಗಳೆ ಸತ್ಯ ತಿಳಿದು
ಆದಿ ನೆ ಅಗಾಧಮಹಿಮ
ಮಮ ಪ್ರೀಯನೆಂಬ ಭಕ್ತಿ ಇತ್ತರೆ ಸಾಕೊ ೩

 

೩೧
ನೆನಸದಿರು ಎಲೆ ಮನವೆ ಅನುದಿನ
ವಿಷಯ ಸುಖವು ಎಂದು
ಕನಸಿಲಾದರು ಸ್ಮರಿಸಲಾಗದು ಮನವೆ ಪ
ಘನ ಸಂತೋಷವಿಲ್ಲವಿದು ನಿತ್ಯಾನಿತ್ಯ ಸುಖ ಬಯಸಿ
ಮನದಲ್ಲಿ ನೀ ಸ್ಮರಿಸೆ ಹರಿಯೆ | ತೊರೆಯ ಅ.ಪ
ಅಶನ ವಸನ ಪಶುವ್ರಾತ ವಶವಿರುವಾಭರಣ
ಹಸನಾದ ರಥ ಪದಾತಿಗಳು
ಸ್ವಸ್ವರೂಪವಲ್ಲ ಭಿನ್ನ ತಿಳಿಯೊ | ಮಮತೆ ಅಳಿಯೊ ೧
ಬುದ್ಧಿ ವಿದ್ಯಾಕುಶಲ ಗತಿ ಅಧ್ವರ್ಯ ಪ್ರಭು ಮನ್ನಣೆ
ಶುದ್ಧ ರೂಪ ಲಾವಣ್ಯ ಯೌವನ
ತಿದ್ದಿದ ಮತಿಯೆ ಸಿರಿ ಶೌರ್ಯ ಪರಾಕ್ರಮ
ವದ್ಯವಾಗಿ ಪೋಪುದು ಸ್ಥಿರವಲ್ಲ | ಸುಳ್ಳಲ್ಲ ೨
ಇಚ್ಛೆಯಿಲ್ಲದೆ ನೀನು ಜನರ ಮೆಚ್ಚಿಗಾಗಿ ಮಾಡಿದ ದಾನ
ವೆಚ್ಚವಾಗಿ ಪೋಪವೊ ಧನವಲ್ಲದೆ
ನಿಚ್ಚಳ ಪುಣ್ಯಬಾರದು ಮನವೆ ಹೆಚ್ಚಿನ ಸ್ತೋತ್ರಕೆ ಮರುಳಾಗಿ
ನೆಚ್ಚದಿರು ವಿಹಿತೋಕ್ತಿಯ | ಬಿಡದಿರು ಸನ್ಮತಿಯ ೩
ಆರ್ತನಾಗದಲೆ ನೀನು ಕೀರ್ತಿಗೋಸುಗ ಕಥಾಶ್ರವಣ
ಕರ್ತಭಾವದಿ ಸತತ ಮಾಡೆ
ವರ್ತಿಸುವ ಪುಣ್ಯಪ್ರಾಪ್ತಿ ವೈಷಿಕ ಸುಖವಲ್ಲದೆ
ಶಾಸ್ತ್ರಮರ್ಮ ತಿಳಿಯದೊ | ಅಹಂ ಮಮವಳಿಯದೊ ೪
ಮಾನಿತನು ನಾನೆಂದು ನಾನಾ ಮತವಾಶ್ರಯಿಸಿ
ಜ್ಞಾನಿಗಳಿಗೆ ಶಿರಬಾಗಲೊಲ್ಲಿ
ಏನು ಇದರಿಂದೆಂಬ ತ್ರಿಕರಣ ಶುದ್ಧಿಕಾರಣ
ದ್ಯುನದಿ ಸ್ನಾನವಾಹವಲ್ಲಾ | ಇದು ಬಿಡಸಲ್ಲಾ ೫
ಜ್ಞಾನ ಭಕ್ತಿ ವೈರಾಗ್ಯವನು ಅನುವಾಗಿ
ಕೈಗೊಳುವುದೇ ಮಾನ
ಅನ್ಯಾಧೀನವೆನ್ನದೆಂಬುದೇ ಲಜ್ಜಾ
ಅನುಭವ ಜ್ಞಾನಿಗಳ ಸಹವಾಸ ಸ್ನಾನ ಸಚ್ಛಾಸ್ತ್ರಾಲಾಪ
ನಾನು ನನ್ನದು ಬಿಡುವುದೇ ತ್ಯಾಗ | ಇದೇ ಯೋಗ ೬
ಕರಣ ವಿಷಯಗಳಲ್ಲಿ ಹರಿಯ ಚಿಂತಿಸುತ ನಿತ್ಯ
ವರ ಯೋಗ ಭೋಗದಲ್ಲಿ
ವರ ರಾಮಚಂದ್ರವಿಠಲರಾಯನು ನಿನ್ನ
ದುರಿತ ಕಳೆದು ಪಾಲಿಸುವ ೭

 

೩೬
ಪತಿ ಪೋದನೆಂದು ಶೋಕಿಸುವುದ್ಯಾಕೆ ಶ್ರೀ –
ಪತಿಯು ಇರಲಾಗಿ ಮರುಳೆ ಪ
ಪ್ರತಿ ಪ್ರತಿ ಜನ್ಮದಿ ಜತೆ ಮಾಡಿದ ಪಂಚ –
ಭೂತದ ಕಾಯ ಸತ್ಯ ಸ್ಥಿರವಲ್ಲವೇ ಮರುಳೆ ಅ.ಪ
ನೋತ ಪುಣ್ಯಾಪುಣ್ಯದ ಫಲ
ವ್ರಾತ ಸುಖ ಸುಖವಿತ್ತು ಬರಿದಾಗುವುದು
ನಿತ್ಯವಾಗಿ ಸುಖವೆ ಇರಲೆಂದು ಬೇಡಿದರೆ
ವ್ಯರ್ಥಧಾವತೆ ಅಲ್ಲದೆ ಸಾರ್ಥಕೆಲ್ಲಿ ಮರುಳೆ ೧
ಸೃಷ್ಟಿಯಲಿ ಎಲ್ಲರೂ ನಷ್ಟವಾಗುವರಲ್ಲದೆ
ಶ್ರೇಷ್ಠರಾಗಿ ಬಾಳುವರೊಬ್ಬರಿಲ್ಲ
ಎಷ್ಟು ಶೋಕಿಸಿದರು ಪೋದ ಕಾಷ್ಠ ಬರಲರಿಯದು ಎ-
ಳ್ಳಷ್ಟು ಲಾಭ ಇದರಿಂದ ಇಲ್ಲ ಮರುಳೆ ೨
ಮುಟ್ಟಿ ಕಟ್ಟಿದ ತಾಳಿಯ ಸಂಬಂಧ
ಕೊಟ್ಟ ಹರಿ ತಾ ತಟ್ಟನೆ ಒಯ್ದ ಮೇಲೆ
ದುಷ್ಟವೆನ್ನದಲೆ ಇಷ್ಟವೆಂದೆಣಿಸಲು
ಸೃಷ್ಟಿಪತಿಯು ತುಷ್ಟನಾಗುವ ಮರುಳೆ ೩
ಸರಿಯಲ್ಲಾ ಬರಿದೆ ಚಿಂತಿಸುವುದು ನಿನಗೆ
ಕರೆಕರೆಯು ಹೆಚ್ಚುವುದು ಮುಂದೆ ಬಹಳ
ಹರಿಕಥೆಯ ಕೇಳು ಹರಿದಾಸರೊಳ್ ಬೀಳು
ಹರಿಗೆ ಪೇಳು ನಿನ್ನಯ ಗೋಳು ೪
ಇನ್ನಾದರೂ ನೀನು ಹರಿಯ ಸಂಕಲ್ಪವಿದೆಂದು
ನಿನ್ನ ಮನದೊಳು ತಿಳಿದುಕೊಂಡು
ಘನ್ನ ಮಹಿಮಾ ನ್ನ
ಸನ್ನುತಿಸಲು ಮುನ್ನೆ ಹತಿಯಾಗುವುದು ಮರುಳೆ ೫

 

೩೭
ಬಲ್ಲನೆಂಬೊ ಮಮಕಾರ ಬಿಡು
ಎಲ್ಲೆಲ್ಲಿ ಇರುವ ಶ್ರೀಹರಿಯ ನೋಡು
ಒಲಿಸಿ ಒಲಿಸಲು ನಿಲುವುದು ಜಿತವಾಗಿ ಹಾಡು ಪ
ನೋಡಿದ್ದನ್ನೆ ನೀ ನೋಡು | ನಿನ್ನೆ
ನೋಡಿದೆನೆಂಬೊ ಖೋಡ್ಯಾಲಸ್ಯ ಬಿಡು
ಹುಡುಕಿ ತತ್ವಂಗಳ ಸಮನಾಗಿ ಜೋಡು
ನಡುವೆ ತತ್ಪತಿಯ ಒಡೆಯನ ಇಡು ೧
ಕೇಳಿದ್ದನ್ನೇ ನೀ ಕೇಳು | ನಿನ್ನ
ಆಳುವರ ಪಾದಕೆ ಬೀಳು
ಹಳೆವ ವಾರ್ತಿಗೆ ಅಳುಕುವ ಮನ ಸೀಳು
ಬಲು ಪರಿಯಲಿ ಕಾಮ ಕ್ರೋಧಂಗಳ ಹೂಳು ೨
ಅಭಿವೃದ್ಧೀಗೆ ಬರುವುದು ಲೋಭ
ನಿಭಾಯಿಸಲು ಅದು ಹೊರುವುದು ಲಾಭ
ಸಭೆಯೊಳು ಪೇಳಬ್ಯಾಡ ಸ್ವಭಾವ
ಇಭವರದನಾಗುವ ಅಭಾವ ೩
ನರ ಜನ್ಮವೇ ಬರುವೊದು ಕಷ್ಟ
ಹರಿ ಸರ್ವೋತ್ತಮೆಂಬೋದೆ ಇಷ್ಟ
ಸ್ಥಿರವಲ್ಲ ತ್ವರಿತ ಮಾಡೆಲೊ ಭ್ರಷ್ಟ
ಅರಿತವರ ಕೂಡೆ ನಿರತಾಡು ಶ್ರೇಷ್ಠ ೪
ಅಂಕುರಾವು ಪುಟ್ಟಿಹದೀಗ
ಬಿಂಕದಿಂ ಪರಿಪಾಲಿಸೊ ಬೇಗ
ಶಂಕರನುತ ನ ಪದ-
ಪಂಕಜಕೆ ಅಳಿಯಂತೆ ಸಾಗು ೫

 

ಕುಬುಜೆ ಗಂಧವ ಬೇಡುವ

ಬಾರನಲ್ಲೆ ಸಖಿ ಪರಿಪೂರ್ಣ ಕಾಮನು ಪ
ತೋರನಲ್ಲೆ ಅವನ ಚರಣ ಕಮಲವನ್ನು ಅ.ಪ
ಪತಿಸುತರ ಬಿಟ್ಟು ಕೃಷ್ಣನೆ ಗತಿಯೆಂದು ನಂಬಿದ
ಸತಿಯರ ದಣಿಸುವುದು ಲಕ್ಷ್ಮೀಪತಿಗೆ ಸರಿಯೆ ನಲ್ಲೆ ೧
ಸರಸಿಜಾಕ್ಷಿಯರ ಕೂಡ ಅವನೂ ಸರಸವಾಡುವ
ತುರುಗಳಲ್ಲಿ ಗುಡುಗ್ಯಾಡಿ ಕರುಗಳನು ಬಿಚ್ಚುವ೨
ಒರಳನೆಳೆದು ಮರವನ್ನು ಮುರಿದು ನಿಲ್ಲುವ
ಅರಿಯದಬಲೆಯರ ಸೀರೆ ಮರಕೆ ಕಟ್ಟಿ ಪೋಗುವ ೩
ವ್ರಜದ ನಾರೇರ ಬಿಟ್ಟು ಕುಬುಜೆ ಗಂಧವ ಬೇಡುವ
ಭುಜಬಲವನ್ನು ತೋರಿ ನಿಜ ವೈರಿಯರ ಕೊಲ್ಲುವ ೪
ಏಸು ಕಾಲದಿಂದ ಅವನ ಬಯಸಿ ನಾ ಬೇಡುವೆ
ವಾಸುದೇವ ನ ೫

 


ಬಾರೊ ಗೋಪಿನಾಥ ನಿನ್ನಗಲಿರಲಾರೆನೊ ಪ
ವಾರೆ ನೋಟದಿ ನಾರೇರ ಮನ ಸೆಳೆವೊ ಶೌರಿ ಅ.ಪ
ವಾರಿಚರ ಕೂರ್ಮನೆ ಧಾರುಣಿ ತಂದನೆ
ತೋರ ಕೊರಳ ಹಾರ ವರಮೃಗರೂಪನೆ ೧
ಭೂದಾನವ ಬೇಡಿ ಮೇದಿನಿ ಪಾಲಕರ ಕೊಂದು
ಆ ದಶಾಸ್ಯನಳಿದ ಸೋದರ ಮಾವನ ವೈರಿ ೨
ಬೆತ್ತಲೆ ನಿಂತು ದುಷ್ರ‍ಕತ್ಯ ಮಾಳ್ಪರ ಕೊಂದು
ಉತ್ತಮ ತುರಗವೇರಿದ ಭೃತ್ಯವತ್ಸಲ ದೇವ ೩
ರಾಯನೆ
ಸುಜನ ವಂದಿತ ನಿನ್ನ ಭಜನೆಯ ಪಾಲಿಸೊ ೪

 


ಬಾರೊ ಗೋವಿಂದ ಹೃತ್ಸರೋಜಕ್ಕೆ ಪ
ಧರಾದೇವಿ ರಮಣ ಸುರವರಾರ್ಚಿತ ಚರಣ ಶೃಂ-
ಗಾರ ಗುಣಪೂರ್ಣ ಮಾರಜನಕನೆ ಅ.ಪ
ಅಂಡಜವಾಹನ ಬ್ರಹ್ಮಾಂಡ ಗುಣಪೂರ್ಣ
ತೊಂಡರ ಪಾಲಿಪೊ ಪುಂಡರೀಕಾಕ್ಷನೆ ೧
ತುಂಗವಿಕ್ರಮನೆ ಸಂಗೀತಲೋಲನೆ
ಮಂಗಳಮಹಿಮನೆ ಗಂಗೆಯ ಪಿತ ಹರಿ ೨
ದುರಿತದೂರನೆ ಸಿರಿ ಸಹಿತ ನಿಲಯನೆ
ಕಿರೀಟಿ ಸಖ ಶೌರಿ ವಾರಿಜದಳ ನಯನ ೩
ರಾಯನೆ
ಅಜವಂದಿತ ನಿನ್ನ ಭಜನೆಯ ಪಾಲಿಸೊ ೪

 


ಬಿಟ್ಟಿರಲಾರೆ ಬಾ ಗೋವಿಂದಾ ಸೃಷ್ಟಿಶಾನಂದ ಪ
ಬಿಟ್ಟಿರಲಾರೆ ಮನಮುಟ್ಟಿ ಭಜಿಪೆನಯ್ಯ
ಅಷ್ಟಮಹಿಷೇರ ಸಹಿತ ನಾಟ್ಯವಾಡುತ ಬೇಗ ಬಾ ಅ.ಪ
ಗೊಲ್ಲರ ಮನೆ ಪೊಕ್ಕು ಪಾಲ್ಬೆಣ್ಣೆಗಳ ಮೆದ್ದು
ಚೆಲ್ವ ಲಲನೇರ ಗಲ್ಲ ಮುದ್ದಾಡುತ ಬೇಗ ೧
ಮಂದಗಮನೆಯರ ಮಂದಹಾಸದಿ ಅಪ್ಪಿ
ದ್ವಂದ್ವ ಕುಚದಲ್ಲಿಟ್ಟ ನಂದಜ ಕರಗಳಿಂದ ೨
ಮಿರಿಮಿರಿ ಮಿಂಚುವ ಕಿರೀಟ ಕುಂಡಲ
ಧರಿಸಿ ವಾರೆ ನೋಟದಿ ನಾರೇರ ಮನ ಸೆಳೆವ ೩
ಸುಮನಸರೊಂದಿತ ಯಮುನಾ ಪುಳಿನದಿ
ವಿಮಲ ವೇಣುಸ್ವರದಿ ಕಮಲಾಕ್ಷಿಯರೊಲಿಸಿದ ೪
ಶ್ರೀವತ್ಸ ಕೌತ್ಸುಭ ಪವಳ ಮುತ್ತಿನಹಾರ
ನ್ಯಾವಳ ಸರಿಗಿಟ್ಟು ಗೋವಳರೊಡಗೂಡಿ ೫
ತುತ್ತೂರಿ ಝಾಂಗಟೆ ಒತ್ತಿ ಪಿಡಿದಿಹ ಕಹಳೆ
ಬತ್ತೀಸ ರಾಗದಿ ತತ್ಥೈವಾದ್ಯದೀ ೬
ಎತ್ತಿ ಪಿಡಿದಿಹ ಛತ್ರಿ ಸುತ್ತು ಮಾಗಧ ಮಂದಿ
ಸ್ತೋತ್ರವ ಮಾಡೆ ನೇತ್ರೋತ್ಸವ ತೋರುತ ೭
ದಿವಪನ ಸೋಲಿಪ ನವ ಪೀತಾಂಬರ ಧರಿಸಿ
ಭುವನವ ಮೋಹಿಪ ನವ ಸುವಿಶೇಷನೆ ೮
ರಾಯನೆ
ನಿಜ ಪರಿವಾರದಿಂ ಭಜಕರ ಪಾಲಿಪ ೯

 

೨೦
ಬಿಡನೆ ಬಿಡನೆ ನಿನ್ನ ಕೂಡ ವಾಸ
ಮೃಡನ ಜಟಾಂತರವಾಸಿ ನಾಮಕಳೆ ಪ
ನಿರುತ ಹರಿ ಗುರು ಕರುಣಾ ಪಾತ್ರೆ
ಪರಮ ಪುರುಷ ದೂಷಿ ನಿಚಯ ವೀತಿ ಹೋತ್ರೆ ೧
ದುರಿತ ಮಾರ್ಗಚರಿತ ಜನ ಹೃತ್‍ಶೂಲೆ
ಪರಿಹತ ಮದನ ಶರಜಾಲೆ ೨
ನಿವಾರಿತ ಮಮತಾ ಪಾಶ ವಾರಂ ವಾರೆ
ಹರಿಕಥಾಶ್ರವಣ ದಳಿತ ಅಶ್ರುಧಾರೆ ೩
ವರಸತ್ಕಲಾಪ ಮಂದಾಯು ಹರಣೆ
ಪರಿಪರಿ ಸುಕ್ಷೇತ್ರ ಚರಿತ ಚರಣೆ ೪
ಗುರುದತ್ತಾಶ್ರೀತ ವರಸುಪಥೆ
ಹರಿಸ್ಮರಣಾವಿನಾ ನ ಜೀವಿತ ಶಪಥೆ ೫
ಪರಿಕರಾ ಪರಿತದಾಕಾರ ವೀಕ್ಷಿತ ನೇತ್ರೆ
ಸರಿತಶ್ವಾಸ ಸಾವೃತ ಪರಿಮಳಗಾತ್ರೆ ೬
ಲಜ್ಜೋದಧಿ ನಕ್ಷೇಪಿತ ಗಜಗಮನೆ
ಅರ್ಜಿತಾಂಗಾರ ವಿಲಸಿತ ಶೃಂಗಾರ ವದನೆ ೭
ರುಜು ಜ್ಞಾನಭಕ್ತಿ ವಿಧಾರಣ ಶಕ್ತೆ
ಪದ ಸೇವಾಸಕ್ತೆ ೮

 

೩೨
ಬೆದರದಿರು ಚಿನ್ನಾ ನೀ ಬೆದರದಿರು ಪ
ಸದಯ ಸುಹೃದಯದಿ ಒದಗಿ ಸಂ –
ಮ್ಮುದವನಿತ್ತು ವಿಪದವ ಕಳೆವನು ಅ.ಪ
ಆದಿಯಲಿ ಬೆದರಿಸಿ ಮನದ ಹದುಳವ ನೋಡುವ
ಪದವಿ ಪೊಗಿಪ ಸಂಪದವೀಯನಿವನು ೧
ಒಂದೆ ಮನದಿ ಗೋವಿಂದನ ಪದ ನಂಬು
ಹಿಂದಾಗುವುದು ಚಿಂತೆ ಮುಂದುಳಿಯದು ೨
ಎಂದೆಂದು ಇಂದಿರೆ ಅರಸ ವಿಜಯ ರಾಮ-
ಚಂದ್ರವಿಠಲ ನಿನ್ನ ಬೆನ್ಹಿಂದೆ ಇರುವನು ೩

 

೩೩
ಭಾವ ವೈರಾಗ್ಯದಿಂದ ಭಜಿಸು ದೇವಿ ಲಕುಮೀರಮಣನ ಪ
ಕಾವ ಕೊಲ್ಲುವ ತಾನೆ ಒಬ್ಬನೆ ಕೊನೆಗೆ ನಿಲ್ಲುವೆನೆಂದು ಅ.ಪ
ಸತಿಸುತ ವಿಯೋಗದಿಂದ ಖತಿಗೊಂಡು ಭ್ರಂಶನಾಗಿ
ಮತಿಗೇನು ತೋರದೆ ಮಿತ ವ್ಯಾಪಾರದೊಳಿರಲು ೧
ಪುರಾಣ ಕೇಳಿದಾಗ ನರಕ ಭಯವು ಮನಕೆ ತೋರಿ
ದುರಿತ ದೂರ ಕಾಯೊ ಎಂದು ದೂರ
ಬರಲು ಮರದು ಪೋಗಲು ೨
ಸಿರಿಯು ಬೇಕೆಂದು ನರರ ಪೂಜೆ ಮಾಡಿ ಧನವ ಕೂಡಿಸಿ
ಪರಮ ಗೋಪ್ಯದಿಂದ ಇಡೆ ಸರ್ವ ಸ್ವತ್ತು
ಪೋಗಲಾಗ ಹರಿಯ ನೆನೆಯೊ ೩
ತಾರೊಡಲ ಆರಿಸಲು ಪರರ ಮನೆಗೆ ಪೋಗಿ
ತಿರುಗಿ ಬೇಡಲು
ನೀರಿನ ಲಾಭವಿಲ್ಲದೆ ನರಹರಿಗೆ ಮೊರೆಯಿಡಲು ೪
ಅನುಕೂಲವೆಲ್ಲ ಇರಲು ಅನಿಮಿತ್ತದಿಂದ ಭಜಿಸು
ಅನಿಮಿಷರೊಡೆಯ ನ್ನ ೫

 

೧೯
ಮಂಗಳಂ ಮಂಗಳಂ ತುಲಸಿದೇವಿಗೆ ಪ
ಮಂಗಳಂ ರಂಗನ ಅರ್ಧಾಂಗಿಗೆ
ಮಂಗಳ ಮಾಧವ ಪ್ರಿಯಳಿಗೆ
ಮಂಗಳ ಭಕ್ತರ ಸಲಹುವ ತಾಯಿಗೆ
ಮಂಗಳ ಮಹಿಷಾಸುರಮರ್ದಿನಿಗೆ ೧
ಮಂಗಳ ಮಂದಾರ ವನವಾಸಿಗೆ
ಮಂಗಳ ಶರಧಿ ಉದ್ಭವಳಿಗೆ
ಮಂಗಳ ರಾಮದಾಸಗಭಯವಿತ್ತವಳಿಗೆ
ಮಂಗಳ ಸಂಜೆಯೊಳ್ ಪೂಜೆಗೊಂಬುವಳಿಗೆ ೨
ಮಂಗಳ ನಾರದನುತ ಅಂಬೆಗೆ
ಮಂಗಳ ಸೇವಿತ ಸುರ ಸಮುದಾಯಗಳಿಗೆ
ಮಂಗಳ ಮನೋಭೀಷ್ಟದಾಯಕಳಿಗೆ
ಮಂಗಳ ಹರಿದ್ರಾ ಕುಂಕುಮನಿಡುವಳಿಗೆ ೩
ಮಂಗಳ ಕೃಷ್ಣನ ಅಂತಸ್ಥಿತಳಿಗೆ
ಮಂಗಳ ಜಗನ್ಮೋಹನ ದೇವಿಗೆ
ಮಂಗಳ ಹಾಟಕ ಸಮಕಾಂತ್ಯಾವಳಿಗೆ
ಮಂಗಳ ಬೃಂದಾವನ ದೇವಿಗೆ ೪
ಮಂಗಳ ಕಮಲ ಲೋಚನದೇವಿಗೆ
ಮಂಗಳ ಪೀತಾಂಬರಧಾರಿ ಸುಂದರಿಗೆ
ಮಂಗಳ ಸರ್ವಾಭರಣ ಭೂಷಿತಳಿಗೆ
ಮಂಗಳ ನ ರಾಣಿಗೆ ೫

 

೧೬
ಮಧ್ವರಾಯರಿಗೆ ನಮೋ ನಮೋ ಪ
ಮಾಯವಾದಿಗಳ ಮತವ ಸೋಲಿಸಿ
ಸುಯತಿಗಳಿಗೆ ಸದ್ಗತಿ ಮಾರ್ಗವ ತೋರಿದ ಅ.ಪ
ದೈತ್ಯ ರಾವಣಗೆ ಹಲವು ಭೀತಿ ತೋರಿಸಿ
ಮಾತೆ ಜಾನಕಿಯಿಂದ ಖ್ಯಾತಿ ಪಡೆದ ಗುರು ೧
ಮಂದ ಜರಾಸಂಧನಂಗವ ಸೀಳಿ
ತಂದ ಕಪ್ಪವನ್ನು ಬಂದು ಧರ್ಮಗಿತ್ತ ೨
ಕುಜನಾದಿಗಳ ನಿಜವಚನದಿ ಸೋಲಿಸಿ
ಸರ್ವೋತ್ತಮನೆನಸಿದ ೩

 

೧೭ವಾಯುದೇವರನ್ನು, ವಾಯುದೇವರ
ಮಟ್ಟತಾಳ
ಮರುದಂಶ ಭಾರತೀಶ ತ್ರಾಹಿ
ಉರಗ ಗರುಡಾದಿ ಪೂಜ್ಯ ಚರಣ ಭಾಸಾ
ಧೂರಿಕೃತ ಭಯಾಜ್ಞಾನ ಲೇಶ
ಪರಮೋತ್ತಮ ಜ್ಞಾನ ವಿಲಾಸ
ಸರಸಿಜಾಂಡಾಂತ ಬಹಿರ್ವಾಸ
ಹರಿ ಪೂಜಾದಿ ಗುಣಭರಿತ ಪ್ರಾಣೇಶ ೧
ತಾಳ
ಅಂಜನಿಗರ್ಭ ಸುಧಾಂಬುಧಿ ಸಂಜಾತ
ಮಂಜುಳ ಭಾಷಣ ಕಂಜನೇತ್ರ ಶ್ರೀರಾಮದೂತ
ವಜ್ರಮುಷ್ಟಿ ಪ್ರಹಾರೇಣ ಹತ ರಾಕ್ಷಸ
ರಾಜಿತ ಕರಧೃತ ಸಂಜೀವ ಪರ್ವತ
ಉಜ್ಜೀವಿತ ಕಪಿನುತ ಪುಂಗವ
ಭರ್ಜಿತ ರಾವಣ ಮದ ಗರ್ವ ಹೇ ಹನುಮನ್ ೨
ತಿಶ್ರಗತಿ ತಾಳ
ಇಂದು ಮೌಳಿ ಪಾದದ್ವಂದಾರಾಧಕ ಜರಾ –
ಸಂಧಾದಿ ಸುರ ವೈರ ವರ್ಗ ಮಾತಂಗ ವೈರಿ
ಇಂದುಮುಖಿ ಯುಗ್ಮಭೈಷ್ಮೀಸತ್ಯ
ಸ್ಕಂದ ನಿಹಿತ ಬಾಹುಜಿತ ಕಂದರ್ಪ ಶೃಂಗಾರ ಗುಣ
ಸಿಂಧು ಶ್ರೀ ಕೃಷ್ಣದಾಸ ಭೀಮ ೩
ಝಂಪೆತಾಳ
ಧರ್ಮರತ ಮೌನಿಜ ನಿರ್ಮಮಾದಿ ಗುಣಪೂರ್ಣ
ದುರ್ಮತಿ ವಾದಿ ವಾಗ್ಯುದ್ಧ ಕೋಲಾಹಲ ಅ-
ಧರ್ಮ ರಚಿತ ದುಶ್ಯಾಸ್ತ್ರ
ನಿರ್ಮೂಲೀಕೃತ ಯತಿರಾಜ
ಭರ್ಮವರ್ಣ ವಿಜಯ
ರಾಮಚಂದ್ರವಿಠಲ ಭಕ್ತ ಆನಂದಮುನೇ ೪

 

ನಾರಿ ಸತ್ಯಭಾಮೆ ಹರಿ ನಿನ್ನ ದಾನಮಾಡೆ

ಯಾಕೆ ಬರವಲ್ಲಿ ಭಕುತನವಸರಕೆ ಪ
ಬೇಕಿಲ್ಲೆ ಭಕ್ತವತ್ಸಲನೆಂಬ ಬಿರುದೀಗ ಅ.ಪ
ಸುರಮುನಿ ನುಡಿಕೇಳಿ ನಾರಿ ಸತ್ಯಭಾಮೆ
ಹರಿ ನಿನ್ನ ದಾನಮಾಡೆ
ವರ ವೀಣ ಪುಸ್ತಕ ಹೊರಿಸಿ ಕರೆದೊಯ್ದನೇನೊ ೧
ಮಾತೆಯ ಹಂಗಣೆಯ ಮಾತಿಗೆ ಖತಿಗೊಂಡು
ಪೋತ ಧ್ರುವ ಅರಣ್ಯ ಪೋಗೆ
ಪ್ರೀತಿಯಿಂದಲವನ ಕಾಯ ಪೋದ್ಯಾ ೨
ಕುರುಪ ಧರ್ಮಾದ್ಯರ ಕರೆಸಿ ಪಗಡೆಯಾಡೆ
ಸರಸಿಜಾಕ್ಷಿಯ ಸೀರೆಯ
ದುರುಳ ಸೆಳೆಯೆ ಕಾಯ ಪೋದ್ಯಾ ೩
ಹಿರಣ್ಯಾಕ್ಷನನುಜ ತರಳನ ಬಾಧಿಸೆ
ಥೋರ ಕಂಬದಿ ಒಡೆದು
ನರಮೃಗ ರೂಪನಾಗಿ ಪೋದ್ಯಾ ೪
ನೀರಡಿಸಿ ಗಜರಾಜ ಸರೋವರಕೆ ಬರಲು
ಕ್ರೂರ ನಕ್ರ ಪಿಡಿದೆಳೆಯೆ
ಮೊರೆಯಿಡೆ ಕಾಯ ಪೋದ್ಯಾ ೫
ವರವೇದ ಶಾಸ್ತ್ರ ತೊರದು ಪರಮ ನೀಚಳ ಕೂಡಿ
ಮರಣ ಕಾಲದಲ್ಲಜಮಿಳ
ನಾರಗನೆಂದು ಕರೆಯೆ ಪೋದ್ಯಾ ೬
ಕರುಣಿ  ಅವರ
ಸರಿ ನಾನಲ್ಲವೊ ತವ
ಚರಣ ಸೇವಕರ ಸೇವಕನೊ ೭

 

೨೪
ರಮಾನುತ ಪಾದಪಲ್ಲವ ಶ್ರೀಕರ ಚರಣ
ಸೇವಕರ ಸಂಗದೊಳಿರಿಸು ವಿಜಯರಾಯ ಪ
ನಿಮ್ಹೊರತು ಪೊರೆವರನ್ಯರನು ನಾಕಾಣೆ
ನಿಮ್ಮ ಚರಣವ ನಂಬಿದೆ ಕರುಣದಿ ಕಾಯೊ ಅ.ಪ
ಪಂಡಿತ ಪಾಮರರನು ಉದ್ಧಾರ
ಮಾಡೆ ಕರುಣದಿಂದ ಸಕಲ ವೇದಗಳ
ಕ್ರೋಡೀಕೃತವಾದ ನಿರ್ಣಯ ಭಾಷ್ಯಗಳರ್ಥವ
ಮಾಡಿದಿ ಪದಗಳ ಸಕಲರೂ ತಿಳಿವಂದದಿ ೧
ನಿನ್ನವರಾದ ರಂಗ ಒಲಿದ ರಾಯರ ನೋಡು
ನಿನ್ನ ಉಕ್ತಿಯ ನಂಬಿದ ವೆಂಕಟರಾಯರ ನೋಡು
ನಿನ್ನವನೆಂದೆನ್ನನು ಅವರಂತೆ ನೋಡದೆ
ಎನ್ನ ಕೈ ಸಡಿಲ ಬಿಡುವದೇನೋ ೨
ಎಂದಿಗಾದರು ನಿನ್ನ ದಾಸರ ಕರುಣದಿಂದ
ಪಾದದ್ವಂದ್ವ ಹೊಂದದೆ ಹೋಗುವೆನೆ ದಾಸರಪ್ರಿಯನೆ
ತಂದೆ ರಾಯನ
ಹೊಂದುವ ಮಾರ್ಗವ ಬಂದು ತೋರಿಸಬೇಕೊ ೩

 

೧೦
ರಾಮ ಬಂದ ನಮ್ಮ ಪ್ರೇಮ ಬಂದಾನೊ ಪ
ಕೋಮಲಾಂಗ ಕಮಲಾಪತಿ ಬಂದಾನೊ ಅ.ಪ
ಸರಸಿಜನಾಭ ಬಂದ ಕರಿವರದನು ಬಂದ
ಕರುಣಾಕರ ನರಹರಿಯು ತಾ ಬಂದನೊ ೧
ಕಂಸ ಮರ್ದನ ಬಂದ ಹಂಸ ದೇಹನು ಬಂದ
ಮೋಸಗೊಳಿಸಿ ದೈತ್ಯರ ವಂಚಿಸಿದಾತ ಬಂದನೊ ೨
ಚಕ್ರಪಾಣಿಯು ಬಂದ ವಕ್ರೆಗೊಲಿದವ ಬಂದ
ತ್ರಿವಿಕ್ರಮ  ಬಂದಾನೊ ೩

 

೧೮
ರುದ್ರ ಮಹದೇವ ವೀರಭದ್ರ
ಭದ್ರ ಮಾರ್ಗೋಪದೇಶಿ ಅದ್ರಿಕುವರಿ ವಲ್ಲಭ ಪ
ಕ್ಷುದ್ರ ಖಳರ ಉಪದ್ರವ ಪರಿಹರಿಸಿ
ಉದ್ರೇಕ ಮಾಡು ಸುಜ್ಞಾನ ಭಕ್ತಿ ವೈರಾಗ್ಯವ
ಕದ್ರುಜಧಾರಿ ರೌದ್ರ ಮೂರುತಿಯೆ ಅ.ಪ
ಪೊಂದಿಸು ಹರಿಭಕ್ತರ ಸಂದಣಿ | ತ್ರಿಶೂಲಪಾಣಿ
ವಂದಿಪೆನು ಸುರಾಗ್ರಣಿ
ಬಂದಿಹ ವ್ಯಾಧಿಯ ಕಳೆಯೊ
ಕಂದರ್ಪಹರ ಕರುಣಾಕರ ಶಿವನೆ ೧
ಶಿತಕಂಠ ಭಸಿತ ಭೂಷಿತ | ದಾತ ಸಂಭೂತ
ಭೂತಗಣಾಧೀಶ ವಿಖ್ಯಾತ
ವಾತನೊಡೆಯನ ಗುಣ ಸಂಪ್ರೀತಿಯಲಿ ಪೊಗಳುವಂತೆ
ಆತುರಮನ ನೀಡೊ ಯಾತರವನಲ್ಲವೊ ೨
ನಿಟಿಲಾಕ್ಷಾಂಧಕಾಸುರ ಸಂಹಾರಿ | ಜಟಮಕುಟಧಾರಿ
ಸ್ಪಟಿಕ ಹಾರಾಲಂಕಾರಿವಟು ನ ಸಂ
ಪುಟದೊಳು ನಟಿಪಂತೆ ಪಟುತರ ಮಾಡೋ ೩

 

ಆಕಾಶಾಭಿಮಾನಿ: ಪಂಚಭೂತಗಳಲ್ಲಿ

ವಿಘ್ನೇಶ ಪಾಹಿಮಾಂ
ವಿಘ್ನ ನಿವಾರಕ ನಿರ್ವಿಘ್ನದಾಯಕ ಪ
ಭಗ್ನದಂತಾಕಾಶಾಭಿಮಾನಿ
ಮಗ್ನಂ ಕೃತ್ವಾವೋ ಮನ
ಅಗ್ನಿ ನೇತ್ರಸುತ ತವ ಪದದೆ ಅ.ಪ
ಕುಕ್ಷಿ ಮಹಾಲಂಬೋದರ ಇಕ್ಷುಚಾಪಹರ
ಅಕ್ಷತ ಶೋಭಿತ ಗಜಪಾಲ
ರಾಕ್ಷಸ ಮದಹರ ಅಂಕುಶಪಾಶ
ಯಕ್ಷ ಕಿನ್ನರ ವಂದಿತ ಚರಣ ೧
ಗಜಾನನ ಮನೋಹರ ಗಾತ್ರ
ಅಜಿನ ಬದ್ಧ ಪ್ರಲಂಬ ಪವಿತ್ರ
ಭಜಕೇಷ್ಟದ ಪರಮ ಸೂತ್ರ
ಸುಜನ ಪಾಪ ಪರ್ವತ ವೀತಿ ಹೋತ್ರ ೨
ಚತುರ್ಹಸ್ತ ಮೂಷಕ ಗಮನ
ವಾಯಭುಗ್ ಭೂಷ ಆದಿಪೂಜ್ಯ
ವಿತತ ಮಹಿಮ ಏಕದಂತ ಗಂಧಲೇಪಿತ ವಕ್ಷ
ಪತಿತ ಪಾವನ ವಿಶ್ವೋಪಾಸ್ಯ ೩
ವ್ಯಾಸೋಕ್ತ ಪುರಾಣ ಲಿಖಿತನೆ ಶೂರ
ವಿಂಶತ್ಸೇಕ ಮೋದಕ ಭಕ್ಷ
ವಾಸುಕಿ ಬದ್ಧ ಕಟಿ ವಿರಾಜಿತ ಕ್ಲೇಶನಾಶನ ಸುಂದರ
ಆಶಾಪಾಶ ರಹಿತ ಭೂತ ಗಣೇಶ ೪
ಹಾಟಕ ಮಣಿಮಯ ಮಕುಟ
ತಟಿತ್ತೇಜ ನಿತ್ಯವಹಿರೂಪ
ಪಟಪಟ ಶಬ್ದಘಟಿತ ಗಜಕರ್ಣ
ನಿಟಿಲಾಕ್ಷ್ಯವಂದ್ಯ ವಿಜಯರಾಮಚಂದ್ರ
ವಿಠಲ ಪೂಜಕ ಶತಸ್ಥ ೫

 

೩೪
ಸುತ್ತಬೇಕು ಜನ್ಮವೆತ್ತಬೇಕು ಪ
ಕತ್ತಲೆ ಸಂಸಾರದೊಳು ಹೊತ್ತು ಹೊರೆಯ
ಹೊತ್ತುಕೊಂಡು ತತ್ತರಗೊಳುತ್ತ ನಿತ್ಯ ಅ.ಪ
ಭರತಖಂಡದೊಳು ಪುಟ್ಟಿ
ಮರುತ ಮತವ ಪೊಂದಿಕೊಂಡು
ಗುರುಕೃಪೆಯನು ಪಡೆದು
ಹರಿ ಸರ್ವೋತ್ತಮನೆಂದರಿಯೋ ತನಕ ೧
ಅರಿಷಡ್ವರ್ಗವನ್ನೆ ತ್ಯಜಿಸಿ
ದುರುಳರ ಸಂಗ ಕತ್ತರಿಸಿ
ಪರಿ ಪರಿ ಕಾರ್ಯ ಕರ್ಮದೊಳು
ಹರಿಯು ತೋರುವ ತನಕ ೨
ಬಿಂಬ ವಿಜಯ ರಾಮಚಂದ್ರ –
ವಿಠಲರಾಯನು ಹೃದಯ
ಅಂಬರದೊಳಗೆ ಪೊಳೆದು
ಅಂಬವಿರಜೆಯಲಿ ಮುಳುಗೊ ತನಕ ೩

 

೧೧
ಸುದ್ದಿಯ ಕೊಟ್ಟು ಬಾರೆ
ಬುದ್ಧಿ ಶರಧಿ ಸುಮ ಗಂಭೀರೆ ನೀರೆ ಪ
ಹದ್ದನೇರಿ ಮೆರೆವ ಮುದ್ದು ಮೋಹನ್ನ
ಇಂದುವದನ ಗೋಪಾಲಕೃಷ್ಣಗೆ ಅ.ಪ
ಮುಟ್ಟಳು ಅನ್ನ ಆಹಾರವನ್ನು
ಬಿಟ್ಟಳು ಇಷ್ಟ ಪದಾರ್ಥವೆಲ್ಲ
ದೃಷ್ಟೀಸಿ ನೋಡಳನ್ಯರು
ಸೃಷ್ಟೀಲಿ ಭಾರಜೀವಿತ
ಕಷ್ಟದೆಶೆಯಲಿರುವುಳೆಂದು ೧
ಇಡಳು ಕನಕಾಭರಣಂಗಳು
ತೊಡಳು ವರವಸ್ತ್ರಂಗಳು
ಬಡುವಾಗಿ ನಡು ಬಳುಕುತಿಹಳು
ಒಡೆಯ ನೀ ಬಾರದಿರಲು ಪ್ರಾಣ
ಬಿಡುವಳು ನಿಶ್ಚಯವೆಂದು ೨
ಬಯಸುವಳು ನಿನ್ನ ಆಗಮನವನ್ನು
ಸಯಿಸಳು ವಿರಹ ತಾಪ
ಧ್ಯೇಯ
ಕೈಯಿ ಸೇರ ಸರ್ವಾವಯವ
ಕಾಯ ಸಮರ್ಪಿಸುವಳೆಂದು ೩

 

೨೮
ಸುಮ್ಮನೆ ಹರಿದಾಸರೆಂಬಿರೆ ಎಮ್ಮನೆಲ್ಲಾ ಪ
ಹಮ್ಮಿನ ಅರಿಷಡ್ವರ್ಗ ಬಿಡದೆ ಅಧರ್ಮರ ಸೇವೆ ಮಾಡಿ
ಘಮ್ಮನೆ ಕಾಲ ಕಳೆವ ಪಾಮರ ಮನುಜನ ಅ.ಪ
ಹರಿದಿನದುಪವಾಸ ಮರುದಿನ ಪಾರಣೆ
ಸರಿಯಾಗಿ ಮಾಡಿದೆನೆ
ಕೊರಳಲ್ಲಿ ತುಳಸೀ ಸರಗಳ ಧರಿಸಿ
ಹರಿಗೆ ಮೈಮರೆದಾನೊಂದಿಸಿದೆನೆ ೧
ಪಾತ್ರರ ಕೂಡ ಯಾತ್ರೆ ಮಾಡಿ ಪುಣ್ಯ
ಕ್ಷೇತ್ರಗಳ ಬಳಸಿ
ಕ್ಷೇತ್ರಜ್ಞನಾ ಪಾದ ನೇತ್ರದಿಂದ ನೋಡಿ
ಕೃತಾರ್ಥ ನಾನಾದೆನೆ ೨
ವರ ನಾರೇರ ಕಂಡು ನರಕ ಭಯವಿಲ್ಲದೆ
ಕರೆದು ಮನ್ನಿಸುವ
ವರ ಗಾಯಿತ್ರಿ ಮೊದಲಾದ ಪರಿಪರಿ ಮಂತ್ರಗಳು
ನಿರುತ ನಾ ಜಪಿಸುವೆನೆ ೩
ಕಾಲಿಗೆ ಗೆಜ್ಜೆಕಟ್ಟಿ ಶಿರಿಲೋಲನ ಮುಂದೆ
ಲಲಿತದಿಂ ಕುಣಿಯುವೆನೆ
ತಾಳ ಮ್ಯಾಳಾದಿಂದ ನೀಲಮೇಘಶ್ಯಾಮನ
ಬಾಲಲೀಲೆ ಪಾಡಿ ಲೋಲನಾಗುವೆನೆ ೪
ಕಂದರ್ಪ ಪಿತನಾದ ವಿಜಯ ರಾವಇ
ಚಂದ್ರವಿಠಲನ್ನ ಮಂದಹಾಸ ಮುಖವನ್ನು
ಒಂದಿನವಾದರು ನೋಡ್ಯಾನಂದಪಟ್ಟು
ಮಂದ ಜ್ಞಾನ ತೊರೆದನೆ ೫

 

ಇದು ವೆಂಕಟರಾಯದಾಸರ
೨೧
ಸ್ಮರಿಸಿ ಸೇವಿಸಿ ವೆಂಕಟರಾಯದಾಸರ ಪ
ದುರಿತ ಹರಿಸಿ ಪೊರೆವ ನಮ್ಮ ಪ್ರತಿ ವಾಸರ ಅ.ಪ
ನೆನೆದ ಮಾತ್ರಕೆ ನಮ್ಮ ಪರಮ ಗುರುಗಳ
ಮನದಿ ಅನುದಿನ ಪುಷ್ಟಿ ಕರೆವ ವರಗಳ ೧
ಧ್ಯಾನಮಾಡಲು ಸುಜ್ಞಾನ ಪಾಲಿಸಿ
ತಾನೆ ಒಲಿವನು ಕರುಣಿ ಇದನೆ ಲಾಲಿಸಿ ೨
ಕುಂಭಕೋಣದಿ ವಾಸವನ್ನೆ ಮಾಡುತ
ಡಂಭ ವೇಷವ ತ್ಯಜಿಸಿ ಹರಿಯ ಪಾಡುತ ೩
ಕ್ಷೇತ್ರ ಕ್ಷೇತ್ರವ ಚರಿಸಿ ಬರುತ ಅಲ್ಲಿಹ
ಆರ್ತ ಜನರನು ನೋಡಿ ಪೊರೆವ ಅನುದಿನ ೪
ಸುಲಭ ಶ್ರೀಗುರು ವಿಜಯರಾಮಚಂದಿರವಿ
ಠಲ ಒಲಿವನು ಭವಾಟವಿಯ ತರಿವನು ೫

 

೩೮
ಹರಿಕರ್ತ ನಾನಲ್ಲೆಂದು ಹಿರಿಯರಾಡಿದ ಮಾತು
ಅರಿ ಜೀವೋಪಿ ಕರ್ತನೆಂಬ ವಿರೋಧ ಪ
ಸಿರಿ ಅರಸ ತತ್ವೇಶರ ಕೈಯೊಳು
ಚರಿಪಾಧೀನ ಜೀವನಲ್ಲವೆ
ಪರಮ ನಿಷ್ಕ್ರಿಯ ನಾ ಹೀನ ಮನವೆ ಅ.ಪ
ಜಲಾಗ್ನಿ ಸ್ತಂಭ ಜಪ ಕಲಿತ ಮಾತ್ರಕೆ ಪ್ರಾಣಿ
ನಿಲಬಹುದೆ ಅನಲ ಜ್ವಾಲೆಯೊಳು
ಮ್ಯಾಲೆ ಸುಖದಾಸೆಯಿಂದ ಹಲವು ಕರ್ಮಾಚರಿಸಿ
ಗೆಲಬಹುದೆ ನಿಲಯ ಹರಿಕರ್ತನೆಂದ ನುಡಿಗೆ ೧
ಬಿಡಿಬಾಯ ಮಾತಿಗೆ ಪೊಡವಿಪ ಒಪ್ಪುವುದಾದರೆ
ಪಡುವದ್ಯಾಕೆ ತದ್ಧಿತಪಃ ಪ್ರಮಾಣ
ಬಿಡುವುಧ್ಯಾಗೆ ಶ್ರುತಿ ಸ್ರ‍ಮತಿ ಹರಿ ಆಜ್ಞೆ
ಕೊಡವು ಫಲ ಮನ ವಚನ ಕಾಯ ಏಕವಾಗೋ ತನಕ ೨
ಜ್ಞಾನೇಚ್ಛಾಕ್ರಿಯ ಶಕ್ತಿ ಮಿನುಗುವ ಜೀವಕ್ಕೆ
ಅನಾದಿ ನಿತ್ಯ ಸ್ವಭಾವದಲ್ಲೆ
ಜ್ಞಾನಿಗೆ ಕೊಡುವ ಯಥೇಷ್ಟಾಚರಣೆ
ಏನೇನು ಕೂಡದು ಶ್ರವಣಾಧಿಕಾರಿಗೆ ೩
ನಾನು ನನ್ನದು ಎಂಬ ಜ್ಞಾನ ಅನುಗಾಲ ಇರಲಾಗಿ
ನೀನು ನಿನ್ನದು ಎಂಬ ವಂಚನೆಯಲ್ಲವೆ
ಹೀನ ಬಿಡದು ಇದರಿಂದ ಅನುಮಾನ ಮಾಡಸಲ್ಲ
ತನ್ನ ಕ್ರಿಯ ಅನ್ಯಕ್ರಿಯದಂತಾಗೋತನಕ ಮನವೆ ೪
ಜ್ಞಾತಾಜ್ಞಾತ ಕರ್ಮದೊಳು ಜ್ಞಾತಾನುಷ್ಠಾನ ವಿಶೇಷ
ಪೀತನಾಹ ಶ್ರೀಶ ತಾನು
ನೋತಾಜ್ಞಾತ ಕರ್ಮ ನಿಷ್ಪಲವಲ್ಲವು
ಜ್ಞಾತ  ೫

 

೧೨
ಹ್ಯಾಗೆ ಬರುವ ವೇದ ವೇದ್ಯ
ನಾಗವೇಣಿ ಶುಕವಾಣಿ ಸಖಿ ಪ
ಭೋಗ ಭಾಗ್ಯ ಬಯಸುವ | ಕು
ಯೋಗ ಕುತ್ಸಿತಳಲಿ ಅ.ಪ.
ಅಗಣಿತ ಗುಣಾರ್ಣವಗೆ
ಸುಗುಣನೆಂದರಿತು ನಾ ಮಣಿಯಲರಿಯೆ
ಬಗೆ ಬಗೆ ಕುಸುಮಂಗಳನು ಸೊಗಸಿನಿಂದಲಂಕರಿಸಿ
ನಗಧರನ ಸ್ತುತಿಸಲರಿಯದವಳಲ್ಲಿ ೧
ರಮಾಭಿಮಾನ್ಯನಂತಾಸನ ಸದನಗೆ
ಕಮಲಾಸನವಿತ್ತು ಪ್ರೇಮ ಮಾಡಲರಿಯೆ
ಸೋಮ ಸೂರ್ಯನಂತರುಧಾಮದಿ ಬೆಳಗುತ್ತಿರೆ
ನೇಮದಿಂದ ದೀಪದಾರತಿಯ ಮಾಡುವಳಲ್ಲಿ ೨
ಸಿರಿಭವಾದ್ಯರೆ ಆಭರಣ ಉಳ್ಳವಗೆ
ಕರಗುವ ಕನಕ ತೊಡಿಸಲರಿಯೆ
ಕರಿವರದ ನ್ನ
ಅರಿತು ಒಲಿಸಲರಿಯದವಳಲ್ಲಿ ೩

 

ಕವಿಗಳಿಗನ್ನ ಕೊಟ್ಟವನಲ್ಲ
೨೯
ಹ್ಯಾಗೆ ಸದ್ಗತಿ ಆಗುವುದೆನಗೆ
ಯೋಗಿಗಳ ಒಡೆಯ ಹರಿಯೆ
ಈಗಾಗಲೆ ತಿಳಿಸಿ ಸಾಗುವಂತೆ ಸಾಧನ
ಬ್ಯಾಗ ಮಾಡಿಕೊ ನಾಗತಲ್ಪನೆ ಪ
ಮೇಲಧಿಕಾರಿಯು ಕೊಂಡಾಡಲು
ಕುಲ ಉದ್ಧಾರವೆಂದು ಹಿಗ್ಗುವೆ
ಮಲಗದಿಕ ಕಲುಷ ಕಂಡಾಗಲು
ಅಳುತ ಧರೆಗೆ ಇಳಿವೆನೊ ನಾನು ೧
ಶಿಕ್ಷ ರಕ್ಷ ಸಧ್ಯಕ್ಷ ಲಕ್ಷ್ಮೀಪತಿಯೆಂದರಿಯದೆ
ಕುಕ್ಷಿ ಭರಣಕೆ ಯೋಚಿಸುವೆ
ಪಕ್ಷಿವಾಹನನಲ್ಲಿ ಲಕ್ಷ್ಯವಿಲ್ಲದೆ ಬಕ
ಪಕ್ಷಿಯಂತೆ ಧೇನಿಸುವೆ ನಾ ೨
ನಷ್ಟ ದೇಹ ಪುಷ್ಟಿಗಾಗಿ ದುಷ್ಟರಿಗೆ ಎನ್ನ
ಕಷ್ಟ ಪೇಳಲು
ದೃಷ್ಟಿಸಿ ನೋಡಿದರೆ ಬೆಟ್ಟ ಮೇಲಿದ್ದಂತೆ ಕಂ
ಗೆಟ್ಟು ಮೊರೆಯಿಸುವೆ ೩
ಒಂದು ಲಾಭವಿಲ್ಲದೆ ಮಂದಿ ನೆರಹಿ
ಸಂದಿಗೊಂದ್ಹರಿದ್ಯಾಡಿ
ಸಂದು ಹೋಯಿತು ಹೊತ್ತಯೆಂದು ಆಸ್ಥಾನಕೆ
ಮಿಂದು ಬ್ಯಾಗನ್ನ ತಿಂದೋಡುವೆನೊ ೪
ಮಾನನೀರ ಚೆಲ್ವಿಕೆಗೆ ಮನಸೋತು
ನೆನೆನೆನೆದು ಬೆಂಡಾಗುವೆ
ಹೀನರಾ ಕೂಡಿಕೊಂಡು ದೀನರಾ ಬಾಯಿಬಡಿದು
ಧನ ಸಾಧಿಸಿದ್ದು ಕೊನೆಗೆ ಸಾಯುವ ನರಗೆ ೫
ಉದಯದಲೆದ್ದು ನದಿಗೆ ಪೋಗಿ ನಾ
ಮುದದಿಂದ ಮಿಂದು
ಉದಯಾರ್ಕಗಘ್ಯ ಒದಗೀಸಿ ಕೊಡದ
ಮದಡನಾಗಿದ್ದವಗೆ ೬
ವರ ಸುದರ್ಶನ ಗ್ರಂಥಗಳ ಗುರುಗಳಲ್ಲಿ
ನಿರುತ ಪಠಿಸಲಿಲ್ಲ
ಭಾರತ ಭಾಗವತ ಪುರಾಣಗಳು
ಪರಮ ಭಕ್ತೀಲಿ ಕೇಳಲಿಲ್ಲ ೭
ಭಾವ ಶುದ್ಧಿಯಿಂದ ದೇವತಾರ್ಚನೆ
ಆವ ಕಾಲಕು ಮಾಡಲಿಲ್ಲ
ಪವನಸಖ ಮಖದೊಳಾಹುತಿನಿತ್ತು
ಕವಿಗಳಿಗನ್ನ ಕೊಟ್ಟವನಲ್ಲ ೮
ಧ್ಯಾನ ಮಾಡುವುದನ್ನು ಮೌನಿಗಳ ಕೇಳಿ
ಮನನ ಮಾಡಲಿಲ್ಲ
ಸನಕಾದಿ ವಂದ್ಯ  ನಿನ್ನ ಪಾದ
ಕನಸಿನಲಾದರೂ ಒಮ್ಮೆ ನೋಡಲಿಲ್ಲ ೯

 

ಇಂದಿರೆ ಚಂದಿರವದನೆ ಮಂದಗಮನೆ
೧೩
ಇಂದಿರೆ ಚಂದಿರವದನೆ ಮಂದಗಮನೆ
ಕಂದರ್ಪ ಕೋಟಿ ಲಾವಣ್ಯೆ ಪ
ಮಂದನಾಗಿ ಭವಸಿಂಧುವಿಲಿ ಪೊಂದಿದೆ
ಬಂದು ನೀ ಕರಪಿಡಿದು ಮುಂದಕೆ ಕರೆಯೆ ಅ.ಪ.
ನಾಗವೇಣಿಯೆ ಸುರಶ್ರೇಣಿ ಅಗಣಿತಗುಣಮಣಿಯ
ಹೊಗಳುವ ಮತಿ ನೀಡೆ ಕಲ್ಯಾಣಿ
ಹಗಲಿರುಳು ನಡೆಯುವ ಬಗೆ ಬಗೆ ಕ್ರಿಯೆಗಳು
ನಗಧರನೆ ಮಾಳ್ಪಾನೆಂಬ ಮಿಗೆ ಜ್ಞಾನ ಪಾಲಿಸೆ ೧
ಸರಸಿಜೋದ್ಭವ ಮಾತೆ ವಿಖ್ಯಾತೆ
ಸುರ ನಿಕರ ಸನ್ನುತೆ ಕಂಕಣಾಭರಣ ಭೂಷಿತೆ
ಕರೆ ಕರೆಗೊಳಿಸುವ ಅಹಂ ಮಮತೆ ಶರಧಿಯು
ತೆರೆಯಂತೆ ಬರುವುದು ಮರೆಸಿ ನೀ ಪೊರೆಯೆ ೨
ಹರಿಗುಣ ಮಣಿಯೆಣಿಸುವ ಧೀರೆ
ಪರಿಪರಿ ಅಲಂಕಾರೆ ಸ್ಮರಿಸದವರಿಗೆ ದೂರೆ
ಅರಿದೂರ ವಿಜಯ ರಾಮಚಂದಿರವಿಠಲನ
ನಿರುತ ಧೇನಿಸುವಂತೆ ಮರೆಯದೆ ಮಾಡೆ ತಾಯೆ ೩

 

ಹಾಡಿನ ಹೆಸರು :ಇಂದಿರೆ ಚಂದಿರವದನೆ ಮಂದಗಮನೆ
ಸಂಗೀತ ನಿರ್ದೇಶಕರು :ಶ್ರೀಲತಾ ಆರ್. ಎನ್.
ಸ್ಟುಡಿಯೋ :ಶಂಕರಿ ಡಿಜಿಟಲ್ ಸ್ಟುಡಿಯೊ, ಮೈಸೂರು

ನಿರ್ಗಮನ

Leave a Reply

Your email address will not be published. Required fields are marked *