Categories
ರಚನೆಗಳು

ವೇಣುಗೋಪಾಲದಾಸರು

೬೮
ಕರುಣವ ಮಾಡೊ ಶರಣರ ಪ್ರೇಮಿಕರುಣವ ಮಾಡೊ ಅರುಣನಿಭನೆ ಗುರು | ಕರುಣವ ಮಾಡೊ ಪ
ಸುರ ತರುವಿನ ಅನುಸರಿಸಿದ ಮನುಜಗೆ ಮೃಷ್ಟಾನ್ನದ ಬರವೆಸುರನದಿ ಅನುಸರಿಸಿದ ಮನುಜಗೆ ಘನ ತೃಷಿಯ ಬಾಧೆ ೧
ಕಾಮಧೇನು ತನ್ನ ಧಾಮದೊಳಗೆಯಿರೆ ಸೀಮೆ ಆಳುವರಾಸೆರಾಮನ ಪದಯುಗ ತಾಮರಸವನಂಬೆ ಪಾಮರರಂಜಿಕೆಯೆ ೨
ವ್ರಜತಾಧಿಪ ವೇಣುಗೋಪಾಲ ವಿಠಲನ್ನ ನಿಜವಾಗಿ ಸ್ಮರಿಸುವರಕುಜನ ದಲ್ಲಣ ಗುರು ವಿಜಯದಾಸರೆ ಸ್ಮರಿಸುವರೆಯಿವರ ೩

 

೭೦
ಕಾಯೊ ಕಾಯೊ ಗುರು ವಿಜಯರಾಯಕಾಯೊ ಕಾಯೊ ವರವೀಯೊ ವಿಜಯ ಗುರುರಾಯ ನೀನಲ್ಲದೆ ಉಪಾಯವೆ ಯಿಲ್ಲ ಪ
ತಾಪತ್ರಯಗಳುದ್ದೀಪನವಾಗಿವೆನೀ ಪರಿ ಪಾಲಿಪದೀ ಪರಿ ಥರವೆ ೧
ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ ೨
ದೂರ ನೀ ನೋಡಲು ಆರು ಯಿಲ್ಲವೊ ಗತಿಕಾರುಣ್ಯದಲಿ ನಿವಾರಿಸು ದುರಿತ ೩
ಸ್ವೀಕರ ಮಾಳ್ಪದು ನೀ ಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ ೪
ಪರಿಹರಿಸಲಿ ಸಲ್ಲ ಕರವಿಡಿ ಬ್ಯಾಗನೆಗುರುವೆ ನಿಮ್ಮಯ ಚರಣ ಸೇವಕನ ೫
ನೀನಾಳುವರೊಳು ಈ ನರಮೂರ್ಖನುಏನು ಅರಿಯೆ ಬಲು ದೀನವಾಗಿಹನೊ ೬
ಆಲಸ ತಾಳದು ಪಾಲಿಸು ವೇಣು ಗೋ- ಪಾಲ ವಿಠಲನ ಆಳು ಕೃಪಾಳೊ ೭

 

೬೭
ಶ್ರೀ ವಿಜಯದಾಸರ ಸ್ತೋತ್ರ ಪದಗಳು
ಕಾಯೋ ಕಾಯೋ ಕಾಯೋ – ವರವೀಯೋ ಪ
ಕಾಯೋ ಕಾಯೋ ವರವೀಯೋ ವಿಜಯ ಗುರುರಾಯ ನೀನಲ್ಲದುಪಾಯ ಮತ್ತಿಲ್ಲ ಅ.ಪ
ತಾಪತ್ರಯ ಬಲುದ್ದೀಪನವಾಗಿದೆನೀ ಪರಿಪಾಲಿಸದೀಪರಿ ಥರವೇ ೧
ಪಾಪಗಳೆಣಿಸದೆ ಪಾವನ ಮಾಳ್ಪದುಶ್ರೀಪತಿ ಪಡೆದ ಸುರಾಪಗದಂತೆ ೨
ಸ್ವೀಕರಿಸೆನ್ನ ನಿರಾಕರಿಸದೆ ಬಲುವ್ಯಾಕುಲನಾಗಿಹೆ ನೀ ಕರುಣದಲಿ ೩
ದೂರ ನೀ ನೋಡಲು ಆರು ಇಲ್ಲವೊ ಗತಿಕಾರುಣ್ಯದಿಂದ ನಿವಾರಿಸೊ ದುರಿತ ೪
ಒಂದರಿತವನಲ್ಲ ಇಂದಿರೇಶನ ಪದದ್ವಂದ್ವವ ತೋರೋ ಹೇ ತಂದೆ ಕರುಣದಿ ೫
ಮಾನವರೊಳಗೆಲ್ಲ ಈ ನರಮೂರ್ಖನುಏನು ಅರಿಯ ಬಲು ದೀನನಾಗಿಹನು ೬
ಆಲಸ್ಯ ತಾಳದು ಪಾಲಿಸು ವೇಣು ಗೋ-ಪಾಲ ವಿಠಲನ ಆಳು ಕೃಪಾಳು ೭

 

ಸಂತೈಸು ತವ ದಾಸನೆಂದೆನ್ನನು
೬೨
ಕೃಷ್ಣನ ನೋಡಿದೇ ಸರ್ವೋತ್ರ‍ಕಷ್ಟನ ಪಾಡಿದೆ ಪ
ಕೃಷ್ಣನ ನೋಡಿ ಸಾಷ್ಟಾಂಗವ ಮಾಡಿದೆಕಷ್ಟವ ಪರಿಹರಿಸೀಷ್ಟವನೀವನ ಅ.ಪ
ಶಿಷ್ಯನ ನೋಡಿದೆ – ವರ ನಿರ್ದುಷ್ಟನ ನೋಡಿದೆಹೃಷ್ಟ ಪುಷ್ಟ ಸಂತುಷ್ಟನ ಶ್ರೇಷ್ಠನ ಶಿಷ್ಟರ ಕಷ್ಟ ನಿವಿಷ್ಟನ – ದೇವನ ೧
ರಂಗನ ನೋಡಿದೆ – ದೇವೋತ್ತುಂಗನ ನೋಡಿದೆಅಂಗಸಿಂಗ ಕಾಳಿಂಗ ಮರ್ದನನಮಂಗಳಾಂಗ ಭವ ಭಂಗನ ನೋಡಿದೆ ೨
ದೇವನ ನೋಡಿದೆ ಮುಕುತಿಯೀವನ ನೋಡಿದೆಗೋವ ಕಾವ ಭೂದೇವ ವಂದಿತ ಬಲ-ದೇವಾನುಜ ಹಯಗ್ರೀವನ ನೋಡಿದೆ ೩
ಧೀರನ ನೋಡಿದೆ- ಜಗದ ಉದ್ಧಾರನ ನೋಡಿದೆವೀರ ಶೂರ ಪರಾತ್ಪರ ತಾನ-ಕ್ರೂರ ವರದ ಸಿರಿಧಾರನ ನೋಡಿದೆ ೪
ಶ್ಯಾಮನ ನೋಡಿದೆ – ಬಲು ನಿಸ್ಸೀಮನ ನೋಡಿದೆವಾಮನ ರಾಮನ ಕಾಮನ ಅಯ್ಯನಸಾಮನ ಸೀಮನ ಸೋಮನ ನೋಡಿದೆ ೫
ಬಾಲನ ನೋಡಿದೆ – ಲಕುಮೀ ವಿಲೋಲನ ನೋಡಿದೆಶೀಲ ಶೂಲಧರ ಪಾಲ ಲೀಲ ಶಿಶು- ಪಾಲ ಕಾಲ ವನಮಾಲನ ನೋಡಿದೆ ೬
ಜಾಣನ ನೋಡಿದೆ – ಬಲು ವಿನೋದನ ನೋಡಿದೆಗುಣಗಣ ಅಗಣಿತ ಪ್ರಾಣರ ಪ್ರಾಣನವೇಣುಗೋಪಾಲ ವಿಠ್ಠಲ ಕಲ್ಯಾಣನ ೭

 

೬೪
ಶ್ರೀ ಮಧ್ವಾಚಾರ್ಯರ ಸ್ತೋತ್ರ ಪದ
ನಮೋ ನಮೋ ಹರಿಪ್ರೀಯ ನಮೋ ನಮೋ ಸುರಗೇಯನಮೋ ನಮೋ ಗುರುರಾಯ ಮಧ್ವ ಮುನಿ ಜೀಯಾ ಪ
ಧರೆಗೆ ಭಾರವಾಗಿ ಚರಿಸುತಿರೆ ಮಾಯಿಗಳುಧರಿಸಲಾರದೆ ಧರಣಿ ಸರಸಿಜೋದ್ಭವಗೆಮೊರೆಯಿಡಲು ಅಜನಾಗ ಹರಸುರರ ಸಹವಾಗಿಹರಿಯ ಸದನವ ಸಾರಿ ಅರುಹಿದನು ಇದನೆಲ್ಲ ೧
ಕಾವನಯ್ಯನು ವಸುಧೆ ಭಾವವನು ತಿಳಿದನಿಲದೇವನೇ ನಿನಗೆ ಆಜ್ಞೆಯನೀಯಲುದೇವ ನೀ ನವತರಿಸಿ ಪಾವನವ ಮಾಡಿ ಸ-ಜ್ಜೀವಿಗಳ ಪೊರೆದರ ದುರ್ಜೀವಿಗಳ ನೀ ಮುರಿದೆ ೨
ಕಾಮವನು ಕಡಿದು ಸನ್ನೇಮವನೆ ಹಿಡಿದು ಬಹುಸೀಮೆಯೊಳು ವಾದಿಗಳ ಸ್ತೋಮ ತರಿದುಹೇಮಕಚ್ಚುಲ ವೇಣುಗೋಪಾಲ ವಿಠಲನನಾಮಸುಧೆ ಸುಜನರಿಗೆ ಪ್ರೇಮದಲಿ ಸಮಿಯಿತ್ತೆ ೩

 

೬೯
ನಿನ್ನ ನಂಬಿದ ನರಗೆ ಅನ್ಯರಾಶ್ರಯವೇಕೋಚನ್ನ ಗುರು ವಿಜಯರಾಯ ||ಬನ್ನ ಬಡುವೆನೊ ಜೀಯ ಘನ್ನ ಭವದೊಳು ಶಿಲ್ಕಿಇನ್ನು ಕಡೆಗ್ಹಾಕೋ ಬ್ಯಾಗ ಈಗ ಪ
ಸಪ್ತ ದ್ವೀಪಾಧಿಪನ ಪುತ್ರನೊಬ್ಬನ ಪರರಭೃತ್ಯನಾಗುವುದುಚಿತವೆ ||ವತ್ತಿ ಸುರನದಿ ನರನ ಸುತ್ತ ಪರಿಯಲು ನೀರಿಗಾರ್ತನಾಗುವುದುಚಿತವೆ ||ಮತ್ತೆ ಸುರಧೇನುವಿನ ಹತ್ತಿಲಿರುವ ಯಿನ್ನುಹಸ್ತು ಬಳಲುವುದುಚಿತವೆ ||ನಿತ್ಯ ಸುಖದಾರಿ ವಿಚಿತ್ರ ನೀ ತೋರೆ ನಾಹಸ್ತ ನರಗೊಡ್ಡುವುದು ಯತ್ನ ಉಚಿತವೆ ಗುರುವೆ ೧
ಕ್ಷೀರವಾರಿಧಿ ಸೇರಿ ನೀರ ಮಜ್ಜಿಗೆಗಾಗಿಚೀರಿ ವರಲುವುದುಚಿತವೆ ||ನೂರಾರು ವಸನದ ಹೇರು ಮನೆಯೊಳಗಿರಲುಕೋರಿ ವುಡುವುದು ವುಚಿತವೆ ||*ವಾರವಾರಕೆ ಹರಿಯ ತೋರುವರನ ಬಿಟ್ಟುಕ್ರೂರ ವನ ಸೇವಿಸುವ ದಾರಿಗುಚಿತವೊ ಗುರುವೆ ೨
ಸಾಕಿ ಸಲಹೆಂದು ಅತಿ ವ್ಯಾಕುಲದಿ ಬಂದವನನೂಕಿ ಬಿಡುವುದುಚಿತವೆ ||ಬೇಕಾದ ವರವು ನೀ ಲೋಕರಿಗೆ ಕೊಡುವೆನ್ನಕಾಕುಗೊಳಿಸವುದುಚಿತವೆ ||ಏಕ ಬುದ್ಧಿಯಿನಿತ್ತು ಜೋಕೆ ಮಾಡೆ ಮನ-ನೇಕ ಮಾಡುವದುಚಿತವೆ ||ಶ್ರೀಕಾಂತ ವೇಣುಗೋಪಾಲ ವಿಠಲ ನಿನ್ನವಾಕು ಮನ್ನಿಸಲು ನಾ ಕೆಡುವದುಚಿತವೆ ಗುರುವೆ ೩

 

೬೩
ಶ್ರೀ ಪಾರ್ವತಿದೇವಿಯ ಸ್ತೋತ್ರ
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆಪಾರ್ವತಿ ಪಾಲಿಸೆನ್ನ ಪ
ಪಾರ್ವತಿ ಭಕ್ತರ ಸಾರಥಿ ವಂದಿತೆಸುರಪತಿ ಗಜಮುಖ ಮೂರುತಿ ಮಾತೆ ಅ.ಪ
ಮನದಭಿಮಾನಿಯೆ ನೆನೆವೆನು ನಿನ್ನನುಅನುಕರಿಸೆನ್ನನು ಅಂಬುಜಪಾಣಿ ೧
ಮಂಗಳೆ ಮೃಡನಂತರಂಗಳೆ ಹರಿಪದಭೃಂಗಳೆ ತುಂಗಳೆ ಪನ್ನಗವೇಣಿ ೨
ಗುಣಪೂರ್ಣ ವೇಣುಗೋಪಾಲ ವಿಠಲನ್ನಕಾಣಿಸಿ ಕೊಡುವಂಥ ಶೂಲಿಯ ರಾಣಿ ೩

 

೬೬
ಶ್ರೀ ಪುರಂದರದಾಸರ ಸ್ತೋತ್ರ ಪದ
ವಂದಿಪೆ ಪುರಂದರದಾಸರ ಪಾದದ್ವಂದ್ವಕೆ ನಾನು ನಿರಂತರ ಪಮಂದರೋದ್ಧರ ಗೋವಿಂದ ಮುಕುಂದನಎಂದಿಗೂ ವಂದಿಸುತಿರ್ಪರ ಅ.ಪ
ಒದಗಿದ ಜ್ಞಾನವನೋಡಿಸಿ ಮತ್ತೆಸದಮಲ ಜ್ಞಾನವ ಪಾಲಿಸಿಪದುಮನಾಭನ ಕಥೆ ಕೇಳಿಸಿ ಸನ್‍ಮುದದಿ ಪಾಲಿಪರ ಧ್ಯಾನಿಸಿ ೧
ಮೊರೆ ಹೊಕ್ಕ ಸುಜನಗಿಹಪರದ ಸುಖತರಗಳನೊದಗಿಸಿ ಹರಿಪದದಪರಮಭಕ್ತಿಯ ನೀವರೆಂದರೆ ದಾವಾಗಸ್ಮರಿಸುವೆನವರಿಗೆ ಕರಮುಗಿದು ೨
ಅನಾಥಜನರನು ಮನ್ನಿಸಿವೇಣುಗೋಪಾಲ ವಿಠಲನ್ನ ಕಾಣಿಸಿಜ್ಞಾನಭಕ್ತಿಯ ಪಥ ತೋರಿಸಿ ಕಾಯ್ವಜ್ಞಾನಿಗಳರಸನ ತುತಿಸಿ ತುತಿಸಿ ೩

 

೬೫
ಶ್ರೀ ವಾದಿರಾಜರ ಸ್ತೋತ್ರ ಪದ
ವಾದಿರಾಜರೆ ನಿಮ್ಮ ಪಾದಕ್ಕೆರಗಿ ನಾಮೋದದಿಂ ಬೇಡುವೆ ಮಾಧವನ ತೋರೋ ಪ
ಸಕಲವೇದ ಪುರಾಣ ಶಾಸ್ತ್ರಗಳೆಲ್ಲಾಪ್ರಕಟಿಸಿದೆ ಕನ್ನಡದಿ ಪ್ರೇಮದಿಂದನಿಖಿಳ ಜನರು ತಾವಾನಕ ದುಂದುಭಿ ಸುತನಭಕುತಿಯ ಪಡೆದು ಮೇಣ್ಮುಕುತಿಯೈದಲಿ ಎಂದು ೧
ಗಣನೆ ಇಲ್ಲದೆ ಕೀರ್ತನೆ ಸುಳಾದಿಗಳನ್ನುಮನವೊಲಿದು ಮಾಡಿದ್ದು ಜನರು ಪಠಿಸಿವನಜನಾಭನ ಕರುಣವನು ಪಡೆದು ತಾವನುಭವಿಸಲಾನಂದನೆನುತಲಿ ೨
ನಿನ್ನ ನೆನೆಯೆ ಧನ್ಯ ನಿನ್ನ ಪಾಡಲು ಮಾನ್ಯ ನಿನ್ನ ಕೊಂಡಾಡಲು ಪಾಪಶೂನ್ಯನಿನ್ನವನೆನೆ ವೇಣುಗೋಪಾಲ ವಿಠಲಮನ್ನಿಸಿ ಸದ್ಗತಿ ಪಾಲಿಪ ಮುದದಿ ೩

 

೭೧
ಸ್ಮರಿಸಿದದರಘನನಾಶನ ಸ್ಮರಿಸಿದವರಘನಾಶಸ್ಮರನಯ್ಯನಂಘ್ರಿ ಯುಗ ಸರಸಿಜವ ಪೂಜಿಸುವಗುರು ವಿಜಯರಾಯರ ಚರಣಾಬ್ಜ ಸಾರಿದವದುರಿತಾಬ್ಧಿ ಮೀರಿದವ ಹರಿಪುರವ ಸೇರಿದವನೊ ಪ
ಹಿಂದೆ ದ್ವಾಪರದಿ ಅರವಿಂದನಾಭನು ಭಕ್ತವೃಂದವನು ಸಲಹುವೆನೆಂದು ಅವತರಿಸಿ ಸಭೆವಂದು ದಿನ ವಿಸ್ತರಿಸಿ ಕುಳಿತಿರಲು ಸುರಮುನಿ ಬಂದು ನುತಿಗೈದು ವರವ ||ಪೊಂದಿ ಕಲಿಯುಗದಲ್ಲಿ ನಿಂದು ನರಹರಿಯನಲು-ವಿಂದ ವೊಲಿಸಿಕೊಳುತ ನಂದವನಧಿಯೊಳಗೆಸಂದಣಿಸಿ ಸತಿಸುತರೊಡನೆ ಜನರ ಅಘ ಬಂಧ ಪರಿಹರ ಮಾಡುತಾ ಜನರು ೧
ಇನಿತು ಜನಸಮುದಾಯದೊಳು ಯಿರುತಿರ್ದ ಇಭವರದ ನನುದಿನವು ಗಾಯನದಿ ಕೊಂಡಾಡಿ ಮನಮುಟ್ಟಿವಿನಯಾತಿಶಯದಲ್ಲಿ ಗುರುವರ್ಯರಾ ಸೇವೆ ಘನವಾಗಿ ಮಾಡಿ ಮುದದಿ ||ತನುವೆತ್ತಿ ವರಸರಿತ ತೀರದಾ ಅಣು ಬದರಿಜನ ಶ್ರೇಷ್ಠರೊಳು ಹರಿಯ ದಾಸ ಪೆಸರಲಿ ಬಂದುಘನ ಯಾದವಾದ್ರಿ ಪಟ್ಟಣದೊಳಗೆ ಯಿದ್ದು ಬಗೆ ಜನನಿ ಅನುಜಾತಿ ಸಹಿತ ೨
ಕೆಲವು ದಿನ ಸಂಸಾರ ಗಲಭಿಯೊಳು ಯಿರುತಿರ್ದುಜಲದೊಳಗೆ ಅಂಬುಜವು ಮಿಳಿತವಾಗಿದ್ದ ತೆರಹಳಿದು ದುಷ್ಟಾಸಿಯನು ಕಳೆದು ಕಡು ಮಮತೆಯನು ಪುಳಕೋತ್ಸ ಮನದಿ ತಾಳಿ ||ಜಲದೊಳುತ್ತಮವಾದ ಭಾಗೀರಥೀ ಯಾತ್ರಿಛಲ ಭಕುತಿಯಿಂದಲಿ ಮಾಡಿ ಮೋದದಿ ಹರಿಯಹಲವು ಬಗೆ ಲೀಲೆಯನು ಹರುಷದಿಂದಲಿ ಯಿನ್ನು ತಿಳಿದು ಗುರು ಕರುಣ ಬಲದಿ ೩
ಅಲ್ಲಿ ಗುರುಗಳ ಧ್ಯಾನದಲ್ಲಿ ದೃಢವಾಗಿ ಮನನಿಲ್ಲಿಸೀ ವರ ಪಡೆದು ನಾನಾಕು ಪರಿಯುಸಿರವಲ್ಲಭನ ಮೂರ್ತಿ ಮನದೊಳು ಕಂಡು ಸುಖವನಧಿಯಲ್ಲಿ ಲೋಲ್ಯಾಡಿಕೊಳುತ ||ಅಲ್ಲಿಂದ ತೆರಳಿ ಗಿರಿಯಲ್ಲಿದ್ದ ವೆಂಕಟನಸಲ್ಲುವಾ ಭಕುತರೊಳು ಸಲೆ ಶ್ರೇಷ್ಠನೆಂದೆನಿಸಿಮಲ್ಲ ಮರ್ದನನಾದ ಮುರಹರನ ಮಹಿಮೆ ಮನ ಬಲ್ಲನಿತು ವಿಸ್ತರಿಸುತ ಜನರು ೪
ಈ ತೆರದಿ ಇಭವರದನಾತುಮದೊಳಗೆ ತಂದುಭೂತಳದ ಬಲು ವಿಧದ ತೀರ್ಥಕ್ಷೇತ್ರಗಳಲ್ಲಿಪ್ರೀತಿಯಿಂದಲಿ ಪರಮ ಪುರುಷನ್ನ ಧೇನಿಸುತ ಖ್ಯಾತಿ ಮಹಿಯೊಳಗೆ ಮೆರದು ||ವಾತಜಾತನ ಮತದ ವೊಳಗಿಪ್ಪ ವೈಷ್ಣವರತಾತನೆಂದೆನಿಸಿ ಸುಖವ್ರಾತದೊಳಗಿಡುವಲ್ಲಿಚಾತುರ್ಯದಿಂದ ಬಲುದಾತನೆನಿಸುತಲಿ ಭವತೀತರನ ಮಾಡಿ ಪೊರವ ಜನರು ೫
ಆ ಬಗೆಯಲೀ ಕಮಲನಾಭ ಕರುಣಿಸಿ ಯಿವರಈ ಭುವನದೊಳು ಯಿಟ್ಟು ಜನರ ವುದ್ಧರಿಸುವಲೋಭದಿಂದಲಿ ಸಕಲ ಸಜ್ಜನರ ಸನ್ಮಾರ್ಗ ಲಾಭದೊಳು ಸೇರಿಸಿದನೊ ||ತ್ರ್ರಿಭುವನದೊಡೆಯನ್ನ ಕಥೆಯ ತಿಳಿಸುವ ಜನಕೆಶೋಭಿಸುವ ಗಾಯನದ ಸೊಬಗಿನಿಂದಲಿ ಕೇಳಿಶ್ರೀಭೂರಮಣ ವೊಲಿದು ಪಾಲಿಸುವನಾಮೇಲೆ ಶೋಭನ ಗತಿಯ ನೀವನೊ ೬
ಶ್ರೀಕಾಂತ ಸಕಲ ಜಗ ವ್ಯಾಪಕನು ಸರ್ವೇಶಲೋಕದೊಳು ಇವರಲ್ಲಿ ಬೇಕಾದ ಚರಿತೆಯು ಅ-ನೇಕ ಬಗೆಯಿಂದಿವರ ಮುಂಭಾಗ ತೊಲಗದಲೆ ತಾ ಕುಣಿವ ತೋರಿಕೊಳುತ ||ಕಾಕು ಜನರಿಗೆ ಕಲುಷ ವಾಕು ವುಪಜೀವರಿಗೆ ಏಕ ಮನದಿಂದಿರುವದೇ ಈ ಕಲಿಯುಗದಲಿಸಾಕಾರ ಗುಣಪೂರ್ಣ ಶ್ರೀನಿವಾಸನು ಬಿಡದೆ ಸಾಕುವನು ಸಮ್ಮೊಗದಲಿ ಜನರು ೭
ದೇವಮುನಿ ನಾರದನು ಜೀವಿಗಳನುದ್ಧರಿಪಭಾವದಲಿ ಯಮಪುರಿಯ ದೇವನಲ್ಲಿಗೆ ಪೋಗಿಸಾವಧಾನದಿ ಸಕಲ ಸತ್ಕಾರಕೊಳಗಾಗಿ ನೋವು ಬಡವರನೀಕ್ಷಿಸಿ || ಸಾವಧಾನದಿ ಕೇಳಿ ಕಲಶಾರುಣೀ ಭಕ್ತ- ರಾವಳಿಯ ಸಲಹುವ ದೇವ ದೇವೇಶನನುತಾ ವದರಿ ಕೂಗಲಾ ಜೀವರೆಲ್ಲರು ಕೇಳಿ ಪಾವಿತ್ರವನೆಗೈದರೊ ಜನರು ೮
ಸಾಧುಗಳು ಇದು ಕೇಳಿ ಸಂತೈಸುವದು ಶಬ್ದಬಾಧೆಗಳು ಯಿದ್ದರೂ ತಿಳಿದು ತಲೆದೂಗಿ ಮಹಮೋದಕೊಳಗಾಗುವುದು ಮನಮುಟ್ಟಿ ನಲಿದು ಬುಧರಾದವರು ಭವ ವರ್ಜರೊ ||ವೇದಶಾಸ್ತ್ರಗಳು ಬಲು ಸಾಧನ ಪುರಾಣಗಳುಶೋಧಿಸೀ ಮನದಲ್ಲಿ ಪೇಳಿದವನಲ್ಲ ಗುರುಪಾದ ರೇಣುಗಳನ್ನು ಆಶ್ರೈಸಿ ಅರ್ಪಿಸಿದೆ ಶ್ರೀಧವನ ಸಿರಿ ಚರಣಕೆ ಜನರು ೯
ಪರಮಾತ್ಮ ಸಿರಿ ಬ್ರಹ್ಮ ಪುರಹರನು ಹರಿರಾಣಿ ಗಿರಿಜೆ ಗಿರಿವೈರಿ ಪ್ರಾಣಾನಿರುದ್ಧ ಮರುತ ತರಣಿ ವರುಣಾ ದೇವ ಮುನಿ ಭೃಗು ಋಷಿಗಳು ಸಪ್ತ ವರವಿಶ್ವಾಮಿತ್ರ ವೈವಸ್ವತಾನುತಾರಾದಿ ಚತುರಗಣಪ ಮೊದಲಾದ ಶೇಷಶತರು||ಭರತಾದಿ ಕರ್ಮಜರು ಗಂಗೆ ಸ್ವಹಾ ಬುಧನುಸುರರ ವೈದ್ಯರ ಮಡದಿ ಶನಿ ಪುಷ್ಕರಾಮತ್ತೆಇರುವ ದೇವತೆಗಳ ತಾರತಮ್ಯವ ತಿಳಿಸಿ ಶರಧಿ ಶಯನನ ತೋರುವ ಜನರು ೧೦
ದಾನವಾಂತಕ ದನುಜರನ್ನು ಸಂಹರಿಸುವಾಜ್ಞಾನಪೂರ್ಣನು ಗುಪ್ತ ತಾನಾಗಿ ಜಗದೊಳಗೆಹಾನಿ ವೃದ್ಧಿಂಗಳಿಗೆ ಹೊರಗಾಗಿ ಜೀವಿಗಳ ಮಾಣದಲೆ ಪರಿಪಾಲಿಪ ||ಕ್ಷೋಣಿಯೊಳು ಭಕುತರಘ ಹಾನಿಗೈಸುವ ಬಗಿಗೆಈ ನಿರುದ್ಧಕೆ ಯಿವರಧೀನ ಮಾಡಿದ ನಮಗೆವೇಣುಗೋಪಾಲ ವಿಠಲರೇಯ ತಾನೊಲಿದು ಸ್ವಾನಂದವನೆ ವುಣಿಸುವ ಜನರು ೧೧

 

೮೪
ಕಪಟ ನಾಟಕ ಸೂತ್ರ ಅಖಿಳಗುಣಪೂರ್ಣನೆಶಕಟ ಭಂಜನ ದೇವ ಅಕುಟಿಲಾತ್ಮಪ್ರಕಟ ಜಗದೊಳು ವ್ಯಾಪ್ತ ವಿಕಟ ರಕ್ಕಸ ಮರ್ದ ಗಿ-ಟಿ ಕಿರಿದು ಪಲ್ಲನು ಕೀರಿದವನೆಭ್ರಕುಟಿ ಪಿತನೊಡೆಯ ಸಿರಿ ವೇಣುಗೋಪಾಲ ವಿಠಲಮುಕುಟ ಚೋರನ ಬಾಗಿಲನು ಕಾಯ್ದ ಮಹಾಮಹಿಮಾ.

 

೮೫
ಜೀವಿಗಳಿಗೆ ಸಂಸಾರವೆಂಬೋದೆ ಸತ್ಯ ಠಾವಿ ಠಾವಿನಲಿ ವಿಚಾರಿಸಲುಕಾವಳ ಮದಮೋಹ ಮಮತೆಯಿಂದಲಿವಕ್ಕುಭಾವಿ ಜನನಾಗಳಿಗೆ ಕಾರಣವೊಬೇವುತಲಿರಬೇಕು ಬಹು ವಿಧದಲಿ ಸತತಆವಾದ ಕಾಲಕ್ಕು ಅಗಲದಯ್ಯಕೋವಿದರು ಕೇಳಿ ಇದನು ದಹಿಸುವಂಥದಾವಾಗ್ನಿ ಉಂಟು ದಾವಾವನಿಗಾದರೂಶ್ರೀ ವಲ್ಲಭನ ದಿವ್ಯ ಕಥೆಯನು ಸವಿ ಸವಿದು ದುಃಖಜೀವಾದಿ ಜಡಕೆ ಕರ್ತೃ ವೇಣುಗೋಪಾಲ ವಿಠಲತಾವಲ್ಲ ನಾನಲ್ಲ ಸರ್ವೇಶ ನೀನೆನಬೇಕು.

 

೮೬
ಕೆಡದಿರು ಕ್ಲೇಶದಿಂದಲಿ ಮನವೆ ನೀ ಸತತಬಡದಿರು ಭವದೊಳಗೆ ಬಿದ್ದು ಕಷ್ಟಾತೊಡದಿರು ತೀವ್ರದಲಿ ಕೃದ್ಧಾದಿಗಳ ತ್ವರಿತಇಡು ದೂರದಲ್ಲಿ ದುಷ್ಟ ವ್ಯಾಪಾರವಒಡಿಯಾ ನಿನಗಾರು ಕೇಡು ನುಡಿಯನುಡಿವನಾರು ಒಡನೆ ಕೊಂಡಿಯ ಮಾತು ಪೇಳ್ವನಾರುಒಡೆಯ ಜಗಕೆಲ್ಲ ಶ್ರೀ ವೇಣುಗೋಪಾಲ ವಿಠಲ-ನಡಿಗಳಲಿ ಮನವಿಟ್ಟು ಬಿಡು ಸರ್ವ ಮೋಹಗಳ.

 

೮೭
ನಿನ್ನ ನಾಮದ ಸುರ ತರುವಿನ ನೆರಳಲ್ಲಿ ಇನ್ನು ಇರುತಿಹನೆಂದು ಮಹ ರಾಶಿನಿನ್ನ ಪಾದಾಂಬುಜವ ಸ್ಮರಿಸುವ ಸುಖಕಿಂತಚುನ್ನ ವಿಷಯಂಗಳ ಭೋಗ ಲೇಶೆಮುನ್ನೊಬ್ಬ ನರಗೆ ಬಾವನ್ನಗಳೆರಡುಮನ್ನಿಸಿ ಮೋದಗಳನೀವುತಿರಲುತನ್ನ ಇಚ್ಛೆಯಿಂದ ಕಂಟಕ ತರುವಿನ ರಿಂಬಯಸಿಖಿನ್ನನಾಗಿಹ ತೆರನೊ ಎನ್ನಾಶೆಯೂಕನ್ಯ ನೃಪರನ್ನೆ ಗಜವನ್ನೆ ಕಾಯ್ದ ದೇವಸನ್ನದ್ಧನಹುದೊ ಭಕ್ತರ ಪಾಲಿಸಾಉನ್ನತೋನ್ನತ ಮಹಿಮಾ ವೇಣುಗೋಪಾಲ ವಿಠಲನಿನ್ನನೇ ನಂಬೆ ನರನೆನ್ನಲಾರೆನೊ ಅವನ.

 

೮೮
ನೀನಿತ್ತದೆನಗಾವದಾದರು ನಿಜ ಸುಖವುನೀನಿತ್ತ ಬವಣೆ ಎನಗಾನಂದದನುಭವವೊನೀನಿಟ್ಟ ಪರಿಯೊಳಗೆ ಆನಿರುವೆನಲ್ಲದೆಹೀನ ಲೇಸುಗಳೆರಡು ಎಣಿಸೆನಯ್ಯಾದೀನ ಮಾನವರು ಮಾಡುವದೇನೊ ಎಲೊ ರಂಗಸ್ಥಾಣು ಆದನೆಂದು ಹರ ಗರ್ವದೀವೇಣುಗೋಪಾಲ ವಿಠಲ ನಿನ್ನ ಬಲ್ಲ ಬಳಿಕಏನಾದರೇನು ಭವಖತಿ ತಿಮಿರ ಭಾನು.

 

೭೮
ಸೃಷ್ಟಿಕ್ರಿಯಾ ಸುಳಾದಿ
ಝಂಪೆತಾಳ
ಅಷ್ಟ ಮಹಾ ಮಂತ್ರಗಳು ನಿಷ್ಠಿಯಿಂದಲಿ ಕ್ಷುತುತೃಷ್ಣಿಗಳ ಕಟ್ಟಿ ಸಂತತ ಮಾಡಲುಸ್ಪಷ್ಟವಾಗುವದೇನೊ ನಿನಗೆ ಜ್ಞಾನವು ಬಲುಕಷ್ಟವಲ್ಲದೆ ಬರಿದೆ ಮನುಜ ಕೇಳೊದೃಷ್ಟಿಯೇನು ಮುಚ್ಚಿ ಪ್ರತಿಷ್ಠಿಯಲಿ ಅಂಗಗಳುಬೊಟ್ಟಿಲಿಂದಲಿ ಎಷ್ಟು ಮುಟ್ಟಲೇನುಬೆಟ್ಟವನು ಏರಿ ಬಿಸಲೊಳಗೆ ಬಳಲಿಸಿ ದೇಹಪುಷ್ಟವನು ತೊರೆದರೆ ಇಷ್ಟವಾಹದೆ ಅಷ್ಟ ಮದಗಳು ಮುರಿದು ನಷ್ಟ ವಿಷಯವ ಜರಿದುಅಷ್ಟು ಇಷ್ಟೆಂದು ಹರಿ ಕೊಟ್ಟದೆನ್ನದೆಮುಟ್ಟಿ ಮನವನು ತಿಳಿಯೊ ಸೃಷ್ಟಿಯೆ ಮೊದಲಾದಅಷ್ಟ ಕರ್ತು ಜಗಕೆ ವಿಷ್ಣು ಎಂದೂಗಟ್ಟಿ ಭಕುತಿಯಿಂದ ವಿಠ್ಠಲನ ದಾಸರಲ್ಲಿಇಟ್ಟ ಚಿತ್ತಗೆ ದುರಿತ ಮುಟ್ಟುವವೆಸೃಷ್ಟೀಶ ನಮ್ಮ ಸಿರಿ ವೇಣುಗೋಪಾಲ ವರಕೊಟ್ಟ ಬಳಿಕ ಕೆಡದು ಅನಂತ ಕಲ್ಪಕ್ಕು ೧
ಮಟ್ಟತಾಳ
ಸಿರಿದೇವಿ ತುತಿಸಲು ಕೇಳಿ ಆತುಮ ಸೃಷ್ಟಿಯನು ಮಾಡಿದತರುವಾಯ ಮೊತ್ತಾದಿ ದೇವರಿಗೆ ಇತ್ತು ಸೂಕ್ಷ್ಮ ದೇಹ ತೆತ್ತುವರಗಳ ತೆಗೆದು ವಿಸ್ತಾರ ಮಾಡಿ ಸ-ರ್ವೋತ್ತಮ ಸಿರಿಹರಿ ಸೃಜಿಸಿದ ಬ್ರಹ್ಮಾಂಡಹತ್ತು ನಾಲಕು ಲೋಕ ಸಪ್ತಸಾಗರ ಪ-ರ್ವತ್ತವೆ ಮೊದಲಾದ ಜಡ ಸೃಷ್ಟಿಯನು ಮಾಡಿತೆತ್ತಿಸರ ಸಕಲ ಸ್ಥಳಗಳ ಸೇರಿಸೆಇತ್ತ ಸಕಲ ಜನಕೆ ಸ್ಥೂಲ ದೇಹವನಿತ್ತುತತ್ತ ಸ್ಥಾನದಲಿ ತಾನು ವ್ಯಾಪಿಸಿ ಸಕಲಕರ್ತೃತ್ವ ಹರಿಯಾಗಿ ಸೃಜಿಸುವ ಸರ್ವರಿಗೆಮಿತ್ರನು ತಾನಾಗಿ ಮನುಜನೊಳಗೆ ನಿಂದುಚಿತ್ರ ಪುತ್ರ ಗೃಹಾಮೋದ ಕ್ರಿಯಾ ಪೊತ್ತುಪತ್ನಿಗೆ ಸರ್ಪ ದ್ವಾರದಿ ಕಾರಣನೋಸತ್ಯ ಸಂಕಲ್ಪ ಸಿರಿವೇಣು ಗೋಪಾಲನ್ನಸತ್ಯ ಸೃಷ್ಟಿಯ ವಿವರಗಳನು ತಿಳಿದವ ಬಲು ಧನ್ಯಾ ೨
ರೂಪಕತಾಳ
ಸಿರಿ ವಿರಿಂಚಿ ಮೊದಲಾದ ತೃಣಾಂತ ಈಗಿರಿ ವನಧಿ ಲೋಕಗಳು ವನಜಜಾಂಡವಹರಿ ತಾನು ವ್ಯಾಪಿಸಿ ಒಬ್ಬರಿಂದ ಒಬ್ಬರ ಪಾಲಿಸುವನರ ನಾಡಿನೊಳಗಿದ್ದು ಕುಟುಂಬ ರಕ್ಷಿಸುವಧರೆ ಪತಿಗಳೊಳಗಿದ್ದು ಪೋಷಿಸುವನರ ತಿರಿಯಾದಿ ನಾನಾ ಜೀವರಾಸಿಗೆ ಪರಿಪರಿ ಪರಿಯ ಗ್ರಾಸವ ಸೃಜಿಸಿಟ್ಟು ಅವರವರಅರಿತು ಕಾಲಗಳನ್ನು ಮೀರಗೊಡದೆ ದೇವನುಮರಿಯಾಗಿ ಸರುವರನ ಪೊರೆವನು ಭಾರಕರ್ತಾಇರೋದು ಇನ್ನಿದರೊಳು ಬಲು ಪರಿ ವಿಧಅರಿತ ಮಾನವನಿಗೆ ಸರಿಯಿಲ್ಲ ಧರೆಯೊಳುಪರಮ ಕಾರುಣಿಕ ಸಿರಿ ವೇಣುಗೋಪಾಲ ವಿ-ಸ್ತರ ಮಹಿಮನೆಂದು ಪೊಗಳುವನೆ ಸುಗುಣಾ ೩
ತ್ರಿವಿಡಿತಾಳ
ತನ್ನ ಇಚ್ಛಿಯಲಿಂದ ಜಗವ ಪಾಲಿಸುವತನ್ನ ಇಚ್ಛೆಯಲಿಂದ ಜಗವ ಸೃಜಿಸುವತನ್ನ ಇಚ್ಛೆಯಲಿಂದ ಜಗವ ಕೆಡಿಸುವ ತೆರವನ್ನು ಕೇಳಿ ಸಕಲ ಸಜ್ಜನರು ಅನಂತ ಜೀವರಮುನ್ನ ಕಾರಣಗಳನ್ನು ಮಾಡಿ ಸಂಹರಿಸುವನುಇನ್ನು ತತ್ವಗಳನ್ನು ಸೂಕ್ಷ್ಮದಿಂದಬಣ್ಣಾ ಬಣ್ಣಗಳ ಐದಿಸುವ ಹರಿತನ್ನ ಭಕ್ತರಾದ ಅನಂತ ತಾತ್ವಿಕರಚೆನ್ನಾಗಿ ಲಯವ ಐದಿಸುವ ಕಡೆಗೆಇನಿತು ಸರ್ವರನ ಐದಿಸಿ ಆಮೇಲೆತನ್ನ ಸುತನ ಚರ್ಮವನ್ನೆ ತೆಗೆದುಸಣ್ಣರಂತೆ ಶಿರಕೆ ಸುತ್ತಿ ಕುಣಿವನುತನ್ನಿತೆ ಸಿರಿ ವ್ಯಾಪಾರಾ ಬಿಡಿಸುವಘನ್ನ ಸಂಸಾರದೊಳಗೆ ಆಗುವ ಲಯ ಕ್ರಿಯಾಅನಂತ ವಿಧಗಳಿಗೆ ಹರಿ ಕಾರಣವೆನ್ನುತ ಸುಖಿಸುವ-ಗೆನಿತೊ ಸುಖಗಳು ಬಣ್ಣಿಸಲಳವಲ್ಲ ಒಬ್ಬರಿಂದಪನ್ನಗಾದ್ರಿ ನಿವಾಸ ವೇಣುಗೋಪಾಲ ಭವವನ್ನೇ ದಾಟಿಸುವನು ಈ ವಿವರವನ್ನೇ ತಿಳಿಸಿ ೪
ಝಂಪೆತಾಳ
ಕಾಲಾ ದ್ರವ್ಯಾದಿ ಸುಖ ದುಃಖ ಜೀವೇಶ ವಿ-ಶಾಲ ಕ್ರಿಯದ ತೊಡರು ಈಡು ವಚನಶೀಲ ದುಶ್ಶೀಲ ಕುಲಾಲ ಕ್ರಿಯಾದಿಗಳುಶ್ರೀಲೋಲನಿತ್ತರೆ ಜ್ಞಾನವಾಹದೋಆ ಲಕುಮಿಯೊಳಗೆ ತಾನಿದ್ದು ಪ್ರಳಯಾಂತಕಾಲ ಜ್ಞಾನವ ನಿತ್ತಾದಾರಂಭಿಸಿಬಾಲಕಗೆ ಕ್ಷುಧಿಯಾಗೆ ಬಳಲುವಾ ಮಿತಕ್ಕೆಆ ಲಿಂಗದೇಹದಿ ಮನೆಮಾಡಿ ಜೀವರಿಗೆಕಾಲನಾಮಕ ಹರಿ ಯುಗಪ್ರವೃತ್ತ ಮೇಲುಕೆಳಗಾಗದಿರು ಇದರೊಳಗೆ ಇನ್ನು ಬಹುಸ್ಥೂಲ ಸೂಕ್ಷ್ಮಗಳು ಉಂಟು ಮತ್ತೆಆಲದೆಲಿಯ ಶಾಯಿ ವೇಣುಗೋಪಾಲ ಶುಭಆಲಯವ ಸೇರುವಗೆ ಭಕ್ತರಲಿ ತಿಳಿಸುವಾ ೫
ಧ್ರುವತಾಳ
ಸ್ರ‍ಮತಿ ರಹಿತಾದಲಿ ಕರ್ತು ನಾನಹುದಿನ್ನುಸತಿ ಪುತ್ರರಿಗೆ ಮಾತ್ರ ದಯ ಮಾಡುವತೃತಿಯಾಕ್ಷವುಳ್ಳ ಸರ್ವ ಜೀವರಿಗೆಮತಿ ತಿರೋಭೂತಾ ಮಾಡಿ ತಿರುಗಿಸುವಕ್ಷಿತಿಯೊಳು ಊಚ ನೀಚ ಜೀವರಲ್ಲಿ ಸ್ರ‍ಮತಿಗೆಖತಿ ಸುಖಗಳು ಕೂಡಾ ನಾವಲ್ಲವೋತೃತಿಯಾಗಳವಲ್ಲ ದಿತಿ ಸುತರು ಮೊದಲಿಲ್ಲಕೃತು ಭುಜರಲ್ಲಾವಯ್ಯ ಸ್ವಾತಂತ್ರದಿಪತಿತ ಪಾವನ ವೇಣುಗೋಪಾಲರೇಯಾ-ದ್ಭುತ ಮಹಿಮನ ಲೀಲೆ ತಿಳಿಯೊ ಭಕ್ತಿಯ ಪಡೆಯೊ ೬
ಅಟ್ಟತಾಳ
ಸಿರಿದೇವಿ ಮೊದಲಾಗಿ ತೃಣಜೀವ ಕಡೆಯಾಗಿ ಬ-ಹಿರಂತರದಲ್ಲಿ ಪ್ರೇರಕ ನರಹರಿಸರುವರ ಮನ ಮೊದಲಾದ ಇಂದ್ರಿಯಗಳೊಳುಬೆರೆತುಕೊಂಡಿಹನು ಹರಿ ತಾನು ಸ್ಥಿರವಕ್ಕುಪರಮ ಪುರುಷ ತಾನು ವೊಳಗೆ ನಿಯಾಮಕಹೊರಗೆ ಅಧಿಷ್ಠಾನದಿಂದ ಉಪದೇಶವರಾವರನರಿತು ಮಾಡುತಲಿ ವಿಹರಿಸುವ ವಿ-ಹರಿಸುವ ನರನ ತಪ್ಪೇನಯ್ಯಾ ಇದರ ಮೇಲೆ ತಿಳಿ-ದರೆ ಒಂದು ವ್ಯಾಪಾರ ಒಬ್ಬರ ವಶವಲ್ಲಹರಿ ಸ್ವಾತಂತ್ರ ಸಿದ್ಧವೆನಿಸಿಕೊಂಬಗರುವ ದೈವರ ದೇವ ವೇಣುಗೋಪಾಲ ವಿ-ಸ್ತರ ಮಾಡಿ ತೋರುವ ಮತ್ತು ವಿಚಾರಿಸೆ ೭
ಆದಿತಾಳ
ಖಗರಾಜ ವರದನ್ನ ಜಗದೊಳು ವ್ಯಾಪ್ತನ್ನಅಗಣಿತ ಬಂಧ ಕ್ರಿಯಾ ವಿಗಡ ಮಾಡುವ ತನ್ನಬಗೆ ಬಗೆ ಶಕುತಿಯಿಂದ ಬಾಧೆ ಬಡಿಸುವನಗುವ ನೋಡಿ ತಾನು ಹಗಲಿರುಳೆನ್ನದೆಸಿಗನಯ್ಯಾ ಒಬ್ಬರಿಗೆ ಸಿಲುಕಾನು ಸಿಲುಕೆಮಿಗೆಲೊಬ್ಬರಾಧೀನದವನಲ್ಲ ದನುಜಾರಿನಿಗಮ ಗೋಚರ ಸಿರಿ ವೇಣುಗೋಪಾಲರೇಯಾ ಈ ಬಗೆಯಲ್ಲಿ ಬಂಧಕ ಶಕ್ತನಹುದೊ ತಿಳಿಯಬೇಕು ೮
ಜತೆ
ಸಿರಿ ಮೊದಲಾದ ಚೇತನ ಜಡಗಳ ಮೋಕ್ಷಸಿರಿ ವೇಣುಗೋಪಾಲನಾಧೀನ ತಿಳಿದವ ಸುಖಿಯೊ ||

 

೭೩
ಧ್ರುವತಾಳ
ಎಲೆ ಎಲೆ ಕೃಷ್ಣಯ್ಯಾ ಎನ್ನ ಈ ಪರಿಯಿಂದ ಭವದಬಲೆಯೊಳಗಿಟ್ಟು ಸತತ ಬಾಧಿಸುವರೆಛಲವೇನೊ ನಿನಗೆ ಎನ್ನ ಮೇಲೆ ಚಲುವ ಚನ್ನಗಲಭೆ ಕೇಳುವೆ ಬಲು ಕರುಣಿ ಎಂದುನೆಲೆಯಲ್ಲಿ ನರಲೋಕದ ಜನದ ಸಾಧನವೇನೊಸುಲಭವೆನ್ನರೆ ಬುಧರು ಕಲಿಯುಗವಸಲೆಯಮಗೆ ಭಾರತ ವರ್ಷ ಉತ್ಪತ್ತಿ ಎಂದುತಲೆದೂಗಿ ಕೊಂಡಾಡರೇ ಅಮರಗಣರುನಳಿನನಾಭನೆ ನಮಿತಾವಳಿಯ ಕಾಯ್ವ ಭಕ್ತ ಬಂಧುಹಳಿವದು ಹಿಂದೆ ಇದ್ದ ಪ್ರತಿಬಂಧಕತಿಳಿಪದು ಎನ್ನೋಳಿದ್ದು ನಿನ್ನ ಮೂರುತಿಯನ್ನು ಕಳೆವದು ಮುಂದೆ ಹೀನ ಆಗಾಮಿಯಪುಳಕೋತ್ಸವವಾಗಲೆನ್ನ ಮನ ಮಿಕ್ಕಾದಿಂದ್ರಿಯಗಳುಜಲಜಾಕ್ಷ ನಿನ್ನಾಧೀನವೆನ್ನೆ ಅರಿತುಇಳಿಯೊಳಗೆ ನಿನ್ನಂಘ್ರಿ ಭಜಕಾ ಭಜಕರಾ ತೊಂ- ಬಲಿಗಾನೆಂದೆನಿಸಿ ಬಲು ಸಾಕು ಬಲು ಹೆಚ್ಚುಬಲರಾಮನನುಜ ನಮ್ಮ ವೇಣುಗೋಪಾಲ ವಿಠಲಹಲವು ಬಂಧಗಳ ಪರಿದು ನಿನ್ನವರ ನೆನಿಸೊ ೧
ಮಟ್ಟ ತಾಳ
ಆನು ನೋಡುವದೆಲ್ಲ ನಿನ್ನ ಮೂರುತಿ ಎನಿಸೊಆನು ನುಡಿವದೆಲ್ಲ ನಿನ್ನ ತುತಿಗಳೆನಿಸೊಆನು ನಡಿವದೆಲ್ಲ ನಿನ್ನ ಯಾತ್ರೆ ಎನಿಸೊಆನು ಪಿಡಿವದೆಲ್ಲ ನಿನ್ನ ಸ್ಪರಿಶ ಎನಿಸೊಆನು ಉಡುವದೆಲ್ಲ ನಿನ್ನ ಉಡಿಗೆ ಎನಿಸೊಆನು ತೊಡುವದೆಲ್ಲ ನಿನ್ನ ತೊಡಿಗೆ ಎನಿಸೊಆನು ಬೇಡುವ ಕೊಡುವ ಆವಾವಾದರುನೀನೆ ಕೇಳಿಕೊಡುವೆ ಎಂದೆನಿಸೊ ದೇವಆನು ಅನುದಿನ ಪೇಳಿ ಕೇಳುವದೆಲ್ಲಶ್ರೀನಾಥನೆ ನಿನ್ನ ಕೀರ್ತಿ ವಾರ್ತಿ ಎನಿಸೊಆನನುಭವಿಸುವ ಖತಿ೧ ನಿದ್ರೆ೨ಗಳೆರಡುಮಾಣದೆ ತಪ ಆಲಿಂಗನೆ ಎಂದೆನಿಸೊಆನು ಆಲಸದಿಂದ ಪವಡಿಸುವದೆಲ್ಲಜ್ಞಾನಪೂರ್ಣನೆ ನಿನಗೆ ದಂಡ ಪ್ರಣಾಮ ಎನಿಸೊಆನು ಅನ್ಯ ಜನರು ಮಾಡುವ ಮರಗುವ- ದೇನು ಆದದ್ದು ಸಕಲ ದೇಹಾದಿಗಳಲ್ಲಿಅನಂತ ಸುಖಪೂರ್ಣ ಅತಿ ನಿರ್ದೋಷನೆಏನಾದರು ನಿನ್ನಾಧೀನವೆಂದೆನಿಸೊದಾನವ ಕುಲ ವೈರಿ ವೇಣುಗೋಪಾಲ ವಿಠಲನೀನಲ್ಲದೆ ಜಗವು ಮಾಡುವದೇನಯ್ಯಾ ೨
ರೂಪಕತಾಳ
ಮನದೊಳು ನೀನೆ ಘನ ವಿಷಯಂಗಳೊಳು ನೀನೆಇನಶಶಿ ಮೊದಲಾದ ಇಂದ್ರಿಯವರೊಳು ನೀನೆಕನಸು ಸುಷುಪ್ತಿ ಜಾಗರಾದಿಗಳಲ್ಲಿ ನೀನೆಮನ ಬಂದ ವ್ಯಾಪಾರ ಮಾಡಿ ಮೋದಿಪೆ ನೀನೆಎನಗೆ ಸ್ವಾತಂತ್ರ ಯಳ್ಳನಿತಾದರು ಇದ್ದ-ರನುನಯದಿ ಅರ್ಚಿಸದಿಪ್ಪೆನೆ ದೇವಾಅನುದಿನ ವ್ಯಾಪಾರ ಆ ರಮೆ ಸಂಗಡ(ತನಿಸಲಾ)೧ ತನುಸಲಾ ವಿಚಿತ್ರಮೊನೆ ಸ್ವಲ್ಪ ಮಾಡಿಪ್ಪೆ ಭೋಗ ಬಡುವದ-ಕೆ ನ್ಯಾಯ ಇನಿತು ಬಗೆ ಇರಲಾಗಿ ಈ ಪರಿಯಾತಕೊದಿನಮಣಿ ತೇಜನೆ ದೀನರುದ್ಧಾರಿಯೆಫಣಿಶಯನ ಪಾವನ್ನ ಕಾಯಾ ಕೇಶವರಾಯಘನವಲ್ಲವೊ ನೀನೊಯ್ಯಾದಿರೆ ಎನಗೆವನಜಾಂಡದೊಡಿಯಾ ಸಿರಿ ವೇಣುಗೋಪಾಲ ವಿಠಲಎನಿತಾದರೆನ್ನಯ್ಯ ಮನ ನಿನ್ನಾಧೀನವೊ ೩
ತ್ರಿವಿಡಿತಾಳ
ವಾಣಿವಲ್ಲಭ ವಂದ್ಯಾ ಕ್ಷೋಣಿಧರ ಖಗಪತ್ರಿಣಿನೇತ್ರ ದೇವಾ ಶ್ರೇಣಿಯಿಂದಲಿ ಸೇವ್ಯಾಜಾಣ ಜಗದೊಳು ವ್ಯಾಪ್ತಾ ಜಾಣುರಾರಿ ಮರ್ದನಕಾಣಿಸಿದೆ ವಿಶ್ವ ಮಾತೆಗೆ ಬಾಯೊಳುಏಣಲೋಚನಿಯರ ಮಾಣದೆ ಮೋಹಿಸಿದವೇಣುಗೋಪಾಲ ವಿಠಲ ಪಾಣಿ ಪಿಡಿವದೆನ್ನ ೪
ಝಂಪೆತಾಳ
ನಿನ್ನ ಕರುಣವಾಗೆ ಇನ್ನು ನರಗೆಬನ್ನ ಉಂಟೇನಯ್ಯಾ ಭವದೊಳಗೆಅನ್ನ ವಸನಾದಿಗಳ ಆಶೆ ಉಂಟೆ ಪಾ-ವನ್ನ ನಿನ್ನಯ ಪಾದವನ್ನು ಪೊಂದಿದವಂಗೆಇನ್ನು ಮಹಿಪದಿ೧ ಭಯಗಳುಂಟೆ ಪ್ರ-ಸನ್ನ ಮೂರುತಿ ನಿನ್ನ ತಿಳಿಯದವಂಗೆಸನ್ನುತಾಂಗಿಯ ರಮಣ ವೇಣುಗೋಪಾಲ ವಿಠಲಎನ್ನೊಳೀ ದೃಢ ಸತತ ನಿಲ್ಲಿಸುವದು ಹರಿಯೆ ೫
ಅಟ್ಟತಾಳ
ಹಲವು ಜನ್ಮಂಗಳಲ್ಲಿ ಜಲಜಾಕ್ಷ ನಿನ್ನಂಘ್ರಿನಲವಿಂದ ಭಜಿಸುವ ಛಲ ಭಕ್ತಿ ಎನಗಿತ್ತು ಸುಲಭದಿ ಸಂಸಾರ ಬಲಿಗೆ ದೂರನ ಮಾಡಿಚಲುವ ನಿನ್ನವರ ಬಾಗಿಲ ಕಾಯಿದವನ ಮಾಡೊಇಳಿಯೊಳು ನಿನ್ನ ಮಾಯಾ ತಿಳಿವವನಾರುಜಲಜ ಸಂಭವಗೆ ಮಿಕ್ಕಾದವರಿಗೆಲ್ಲ ಅಳವಲ್ಲಬಲಿಯನುದ್ಧರಿಸಿದ ವೇಣುಗೋಪಾಲ ವಿಠಲಹಲವು ಬಗೆ ಮನ ನಿಲುವಂತೆ ಮಾಡೋ ೬
ಆದಿತಾಳ
ಪಾಲಿಸುವದೆನ್ನ ಪಾಲಸಾಗರ ಶಾಯಿಮೂಲೋಕದೊಡಿಯ ಮುಚುಕುಂದ ಕೃಷ್ಣಏಳಲ ಮಾಡದಿರು ಎನ್ನನು ನಿನ್ನ ಭಕ್ತರೊಳಗಾದವನೆನ್ನಿಸಿ ನೀಯೋ ಸೇವೆಖೂಳರ ಸಂಗದಿಂದ ಕೀಳು ವಾರ್ತಿಗೆ ಮನಆಲಸದಂತೆ ಮಾಡೊ ಅಂಬುಜನಾಭಾಸ್ಥೂಲದೇಹವೆ ತೆತ್ತುವಾಲಯ ನಿನ್ನ ಧ್ಯಾನಲೋಲನಾಗುವೆನೆಂಬ ಆಶೆ ಘನವೋಚಾಲವರದರೇನು ನಿನ್ನಿಚ್ಛೆಯ ಮಾಡದಿರೆಲೀಲಾ ವಿನೋದನೆ ಅಣುಸ್ಥೂಲ ವ್ಯಾಪ್ತಾ-ಬಾಲನ ಬಲದಂತೆ ಎನ್ನ ಮೊರೆಯ ನಿನಗೆಮೇಲೆ ನಿನ್ನಯ ಮನಾ ಮಾಧವನೆಜಾಲಾ ಮಾಯಾ ವೇಣುಗೋಪಾಲ ವಿಠಲಕಾಲ ಅಕಾಲವು ನೀನೆ ಬಲ್ಲಿಯಾ ಹರಿಯೆ ೭
ಜತೆ
ಖೇದ ಮೋದಗಳೊಳು ಸಾಧು ಸಂಗದಿ ನಿನ್ನಪಾದ ಸ್ಮರಣೆ ನೀಯೊ ವೇಣುಗೋಪಾಲ ವಿಠಲ ||

 

೭೨
ಧ್ರುವತಾಳ
ಏನಯ್ಯಾ ಸಿರಿಪತಿ ನಾ ನಿನ್ನ ನಂಬಿ ಇತರಜ್ಞಾನವೇ ಮರೆದು ತನು ನಿನಗೊಪ್ಪಿಸಿಹಾನಿ ವೃದ್ಧಿಗಳೆರಡು ಏನಾದರೆನ್ನ ನಿನ್ನಧೀನವೆಂದು ನಿತ್ಯ ನಿಧಾನದಲ್ಲಿನಾನಿಳಿ ಇತ್ತ ವಿಷಯ ಕಾನನಕ್ಕೆನ್ನೊಪ್ಪಿಸಿನೀ ನಗುತಲಿಪ್ಪುದು ಸೋಜಿಗವೋಆನಂದ ಶರಧಿಯಲ್ಲಿ ನಾನಾಗಿದ್ದ ಮನುಜಹೀನ ಪೂಯಾವ ಸೇರಿದಂತಾಯಿತೋಅನಘ ರಾಶಿಗಳು ಆವಾವ ಜನುಮದಲ್ಲಿಏನೇನು ಮಾಡಿಸಿದ್ದು ಒದಗಿಸಿದಿಯೊನಾನು ನಿನಗೆರವಾದದೇನಯ್ಯಾ ಕಾವನಯ್ಯಾಭಾನುತೇಜನೆ ಭಕ್ತಾಧೀನ ಪ್ರೀಯಾಆ ನಳಿನಭವ ರುದ್ರ ಇಂದ್ರಾದಿ ದಿವಿಜರಿಗೆನೀನಲ್ಲದೆ ಎನಗಾರು ಗತಿಯೊಶ್ರೀನಾಥನಾದ ವೇಣುಗೋಪಾಲ ವಿಠಲರೇಯಾಅನಾದಿಯಿಂದ ನೋಡು ನಿನ್ನಾಧೀನವೆ ಸಿದ್ಧಾ ೧
ಮಟ್ಟತಾಳ
ತಾಯಿ ತನ್ನ ಶಿಶುವು ತವಕದಿಂದಲಿ ಎತ್ತಿಬಾಯಿಲೆ ಕೊಂಡಾಡಿ ಮುದ್ದಿಸಿ ಮೊಲೆಗೊಟ್ಟುಕಾಯವ ಪೋಷಿಸುತ ಕರುಣವ ತಪ್ಪಿ ಒಮ್ಮೆನೋಯದಾ ನುಡಿಯಿಂದ ನುಡಿದು ಬಡಿದು ನೂಕೆಆ ಎಂದಬ್ಬರಿಸಿ ಅಳುವದಲ್ಲದೆ ಒಮ್ಮೆಛೀ ಎನ್ನಲಾಪದೆ ಚಿತ್ತ ಪಲ್ಲಟ ಮಾಡಿಕಾಯಜ ಪಿತ ನೀನು ಜನನಿಯಮಾಯದ ಗುಣ ಮೂರು ಮೀರಿದ ಮಹಾ ಮಹಿಮತಾಯಿ ನೀನು ಸಕಲ ಜಗಕೆ ಜನಕನಾಗಿತಂದೆ ನೀನು ಜಗಕೆ ಪೋಷಣೆ ಭಿಕ್ಷೆಯಿಂದಈಯಬಲ್ಲವರೊಡಿಯ ವೇಣುಗೋಪಾಲ ವಿಠಲಧೇಯ ನೀನು ಸತ್ಯ ನಿನ್ನ ಬಿಡೆನೊ ನಾನು ೨
ತ್ರಿವಿಡಿತಾಳ
ಭಕುತರ ಸಲಹುವಿ ಭಕುತರಗಲಿಸೂವಿಭಕುತರ ವಶದಿ ಸಂಚರಿಸುವೆ ಅಯ್ಯ ನೀನುಭಕುತರೆ ನಿನ್ನ ಬಳಗ ಭಕುತರೆ ನಿನ್ನ ಬಂಧುಭಕುತರೆ ನಿನ್ನ ಶಳದು ಬದಿಗೆ ತಾ ಹರಯ್ಯಭಕುತರು ಇಲ್ಲದಿರೆ ಏಕಾನಲ್ಲವೆ ನೀನುಉಕುತಿ ಶಕುತಿಗಳು ಆರಗೋಸುಗವಯ್ಯಾಭಕುತರೊಡಿಯನಾಗಿ ಅನಾದಿಯಿಂದ ಮೆರೆವಲಕುಮಿ ವಲ್ಲಭ ವೇಣುಗೋಪಾಲ ವಿಠಲಭಕುತರೊಳ್ಕೇವಲ ಶಕಲನ ಸಲಹಯ್ಯಾ ೩
ಅಟ್ಟತಾಳ
ಮಂಗಳಾಂಗನೆ ಶ್ರೀರಂಗಾಂಬುಧಿತಿಂಗಳನ ಪ್ರಭೆ ಪಿಂಗೊಳಿಸುವ ನಖಅಂಗುಲಿಯ ಸನ್ನೆ ಪೊಂಗೊಳಲ ನಾದಸಂಗೀತದಿ ಗೋಪ ಅಂಗನಿಯರಸಾಕಂಗೊಳಿಸಿದ ಶುಭಾಂಗಾ ರಿಪುಕುಲಭಂಗ ಮಾಡಿದ ಭವ್ಯ ಮೂರುತಿಯೆತುಂಗ ವೇಣುಗೋಪಾಲ ವಿಠಲಹಂಗಿಸುವದೇಕಾಪಾಂಗದಲಿ ನೋಡೊ ೪
ಆದಿತಾಳ
ಸುಖವಾದರೆ ಬಿಡೆ ದುಃಖವಾದರೆ ಬಿಡೆಅಖಿಳವು ಒದಗಿಸಿದರೆ ನಾ ನಿನ್ನ ಬಿಡೆನಯ್ಯಾಸಖ ನೀ ಎನಗೆ ಅನಾದಿ ಕಾಲದಲಿಂದಮುಖತಾ ಪೇಳವದೇಕೆ ಪ್ರಕಟವಾದ ಪರಿಸುಖ ಗುಣ ಗಣ ಪೂರ್ಣ ವೇಣುಗೋಪಾಲ ವಿಠಲಮಖಜ ಮಿಕ್ಕಾದವರ ಯುಕುತಿಯಿಂದಲಿ ಪೊರದೆ ೫
ಜತೆ
ಆವದಾದರು ನಿನ್ನ ಸೇವಕ ನಾ ಸತ್ಯದೇವ ವೇಣುಗೋಪಾಲ ವಿಠಲ ನೀ ಬಿಡು ಮಾಯಾ ೬

 

೮೨
ಶ್ರೀವಿಜಯದಾಸರ ಸುಳಾದಿ
ಧ್ರುವತಾಳ
ಏಸೇಸು ಜನುಮಗಳು ಸೂಸಿ ಬಂದರೆ ಏನುಕಾಸಾವೀಸಗಳನ್ನು ಬಡೆನೋ ಬಡೆನೋಶ್ರೀಶನಂಘ್ರಿಯ ಸತತ ಸೇವಿಪ ವಿಜಯಾಖ್ಯದಾಸರ ಕರುಣ ವಿಶೇಷವಾಯಿತು ಎನಗೆಆಶಿಯೆ ಮೊದಲಾದ ಅಖಿಳ ಬಂಧಾಂಬುಧಿಯುಈಸುವೆ ನಾನು ಇತರ ಕ್ಲೇಶ ಬಡೆನೋಲೇಶವಾದರು ಸಿಲ್ಕಿದಾಚೆಗೆ ಪೋಪೆ ಅಲ್ಲಿತೋಷ ಬಡುವೆ ಹರಿಯ ದಾಸರೊಡನೆಈ ಶರೀರದ ಸುಖ ಲೇಸಾಗಿ ತಿಳಿಯೆ ಮ-ಹೀಷಿಯ ಕೂಡಿದಹಿ ಸಮೀಪ ತೆರನಂತೆಲೇಸು ತೋರುತಲಿದೆ ಮನವೆ ನೀ ಕೇಳು ಮತ್ತೆಘಾಸೆಯಲ್ಲಡೆ ಒಂದು ಕಾಸಿನ ಲಾಭವಿಲ್ಲದೋಷ ವಿದೂರ ನಮ್ಮ ವೇಣುಗೋಪಾಲನಂಘ್ರಿಶಾಶ್ವತ ನೆನವಿಲಿ ನೀ ಸೇರು ಭಕ್ತರೊಳಗೆ ೧
ಮಟ್ಟತಾಳ
ದೇಶ ಆಳುವುದಿಲ್ಲ ಕೋಶ ಘಳಿಸಿ ಇಲ್ಲದಾಸಿ ದಾಸರ ಪೋಷಣೆ ಮಾಡುವದಿಲ್ಲಸಾಸಿರವನು ವಂಚಿಸದೆ ಸದನವಿಲ್ಲಸೂಸಿದ ಸುಖವಿಲ್ಲ ಶೇಷು ಪಾಶಗಳಿಲ್ಲಾಈಸುವದ್ಯಾತಕೆ ವಿಷಯಗಳೊಳು ಬಿದ್ದುಭೂಸುರ ಜನ್ಮವು ದುರ್ಲಭವೋನಾಶರಹಿತ ನಮ್ಮ ವೇಣುಗೋಪಾಲನ್ನದಾಸರ ಪಾದದಲಿ ವಾಸವಾಗು ಬೇಗ ೨
ತ್ರಿವಿಡಿತಾಳ
ಜನನಿ ಅನುಜಾಗ್ರಜರು ಜನುಮ ಜನುಮದಿ ನಿನಗೆಘನವಾಗಿ ಅತ್ತೆಲ್ಲಿ ಇದ್ದಿಲ್ಲವೇಮನವೇ ಸತಿ ನಿನಗೆ ಅನಿಮಿತ್ಯಳೆಂದುಕನಸಿನಲ್ಯಾದರು ಕನಿಕರಿಸದಿರುತನು ಸಂಬಂಧಿಗಳಿವರು ನೆನೆದುಕೊ ನಿನ್ನೊಳಗೆಅನುದಿನ ಕೇಳಿ ಕೇಳಿ ದಣಿದೆಯಲ್ಲಹನುಮ ವಂದಿತ ನಮ್ಮ ವೇಣುಗೋಪಾಲನ್ನಅನುಸರಿಸಿ ಇರುತಿಹರ ಸೇರು ಅನುಮಾನ ಸಲ್ಲ ೩
ಅಟ್ಟತಾಳ
ಸಾಸಿರ ದೇಶವು ಸಾಸಿರ ಕಾಲವುಸಾಸಿರ ಪಾತ್ರರು ಈಸು ಒಂದಿನ ಕೂಡೆಆಶೆ ಬಿಡದೆ ಪೂಜೆ ಏಸು ಮಾಡಿದರೇನುಮೀಸಲ ಮನದಿಂದ ಶ್ರೀಶಗರ್ಪಿಸದಲೆಕಾಶಿಯೆ ಮೊದಲಾದ ದೇಶ ತಿರುಗಿವನವಾಸಿಯಾದರೇನು ಲೇಶವೊಲಿಯ ಹರಿವಾಸುದೇವ ನಮ್ಮ ವೇಣುಗೋಪಾಲನ್ನದಾಸರ ತೋಂಡರ ದಾಸನಾಗದವ ೪
ಆದಿತಾಳ
ಭಕ್ತಿ ಜ್ಞಾನ ವೈರಾಗ್ಯಾಸಕ್ತನಾಗಿ ಇರುತ ಪರಮಾಭಕ್ತರಾದ ಜನರಿಂದ ವ್ಯಕ್ತಿ ಉಕ್ತಿ ಭುಕ್ತನಾಗಿಶುಕ್ತಿ ರಜತ ತೋರಿದಂತೆ ಉಕ್ತಿ ನಾನು ಎಂಬುದೆಂದುಶಕ್ತಿಯಿಂದ ನೆನೆದು ಸರ್ವಾಸಕ್ತಿಯನ್ನು ಕಡಿಯಬೇಕುಮುಕ್ತ ವಂದ್ಯ ಚರಣ ವೇಣುಗೋಪಾಲನ್ನಭಕ್ತ ಸಂಗ ಸೇರು ಈ ದುರಕ್ತವನ್ನು ಜ್ಯಾರು ಮನವೆ ೫
ಜತೆ
ಭಕುತರೊಳಿರುವಂಥ ಸುಖವಿಲ್ಲಾ ಸುಜನಂಗೆಲಕುಮಿವಲ್ಲಭ ವೇಣುಗೋಪಾಲವೊಲಿದಂಗೆ ||

 

೭೫
ಧ್ರುವತಾಳ
ಕರುಣಿಸುವದು ನೀನು ಶರಣರ ಪರಿಪಾಲಾಪರಣ ಶಯನ ಜಗದಾವರಣ ವ್ಯಾಪುತ ದೇವಾತರುಣಿ ಲಕುಮಿ ಸಹಿತಾ ಭರಣ ಸಕಲವಿಟ್ಟುನಿರ್ವಾಣ(ರು)ಣದಲ್ಲಿ ಪ್ರಜೆ ನಿರುತ ಕೈಕೊಂಬ ಚಲುವಸ್ಮರಣೆ ಮಾಡಲು ವೇಗ ವರಣ ವರಣದ ವಸನತರುಣಿ ದ್ರೌಪದಿಗಿತ್ತು ತುತಿಸಿಕೊಂಡೆ ಅಯ್ಯಾಮರಣ ಭಯಕೆ ನಿನ್ನ ಮನದಿಂದ ಕೊಂಡಾಡಲುಗರುಡನ್ನೇರದೆ ಬಂದು ಕರಿಯನ್ನುದ್ಧರಿಸಿದೆತರುಣಾವಸ್ತಿಯಲಿ ಧ್ರುವನು ನೆನಿಯೆ ಗಲ್ಲಕೆ ಕಂಬು-ಸ್ಫುರಣ ಬುದ್ಧಿಗೋಸುಗ ವತ್ತಿ ಪೊಗಳಿಸಿಕೊಂಡೆವರಣಿಸಬಲ್ಲರಾರು ಸಿರಿ ಅರಸನೆ ನಿನ್ನಹರಣದೊಳಗೆ ಒಲಿದು ಪೊಳೆಯೊ ನಿನ್ನಿಂದ ನೀನೆಧರುಣಿಯೊಳಗೆ ನಿನಗೆ ಸರಿಯು ಮತ್ತುಂಟೆ ದೇವಾಹರುಣಾಕ್ಷಿಯರ ನಾಳೆ ಬ್ರಹ್ಮಚಾರಿ ಎಂದೆನಿಪೆವರುಣ ಲೋಕಕೆ ಪೋಗಿ ತಂದೆಯ ಬಿಡಿಸಿ ತಂದೆಅರುಣೋದಯದಲ್ಲಿ ಪಾರಣೆ ಮಾಡಿಸಿ ಕಾಯದೆಪೂರಣ ಆನಂದನಾಗಿ ಪೊರದೆ ಭಕ್ತರನ್ನೆಲ್ಲಾ-ಚರಣೆ ಮಾಡಲು ಎನಗೆ ಸ್ಥಿರವಾದ ಮತಿಯನೀಯೊವರುಣ ಶಬ್ದ ವಾಚ್ಯನೆ ವೇಣುಗೋಪಾಲರೇಯಾಸರಿ ಬಂದ ಪರಿಯ ಮಾಡಿ ಭವ ದಾಟಿಸೋ ಎನ್ನ ೧
ಮಟ್ಟತಾಳ
ಸಕಲ ದೇವೋತ್ತಮನೆ ಸಕಲರ ಕಾಮಾನೆಸಕಲ ಜಗದಿ ಭರಿತ ಸಕಲ ಗುಣಪೂರ್ಣಸಕಲರಿಗೆ ಸೌಖ್ಯ ಖತಿಗಳ ಕೊಡುವಪತಿದೈವನು ನೀನು ಸಕಲ ಕಾಲಗಳಲ್ಲಿಸಕಲ ಬ್ರಹ್ಮಾದಿಗಳು ಸಾಕಲ್ಯದಿ ನಿನ್ನಕೃತಿಗಳು ಬಲ್ಲರೆ ಅದ್ಭುತ ಚರಿತಾಸಕಲ ಭಕ್ತರಂತೆ ಬೇಡೆನೊ ನಾ ನಿನ್ನಪ್ರಕಟವಾಗಿ ವೇಣುಗೋಪಾಲರೇಯಾಸಕಲವು ಚಿತ ದುರಿತ ನಿಕರವ ಪರಿಹರಿಸಿಹಕಲಗೊಳಿಸದೆನ್ನ ಸಕಲ ಭಕುತನೆನಿಸೊ ೨
ರೂಪಕತಾಳ
ನಿರುತ ಸಜ್ಜನ ಸೇವೆ ಭರಿತವಾಗಲಿ ದೇಹತ್ವರಿತ ಬೀಳುವ ವಿಷಯ ಮರಿಸಿ ಬಿಡುವದು ಹರಿಯೆಶರಧಿ ತೆರೆಯಂದದಿ ಬರುವ ಕ್ಲೇಶಕೆ ಜ-ರ್ಝರಿತವಾಗಿ ಎನ್ನ ತನುವು ನಡಗುತಿದೆನರಹರಿ ನರಕಾರಿ ಪುರಹರಾದಿ ಪಾಲಾಮುರಹರ ಮುಕ್ಕುಂದ ತರಿವದು ದುರ್ವಿಷಯಹಿರಿದಾಗಿ ಅಜಮಿಳನು ಕರದ ಮಾತುರದಿಂದು-ದ್ಧರಿಸಿದೆ ವೇಗದಿ ಪರಮ ಕರುಣಿಯೋ ನೀನುಹರಲಾಪೆ ಜಗದೊಳು ಇರುವೆ ವ್ಯಾಪುತನಾಗಿಅರವಿಂದಾಲಯಳಾದ ಲಕುಮಿ ಸಹಿತಸರುವರ ಸರಿ ನಾನು ಅಲ್ಲವೊ ಅವರ ದಾ-ಸರ ದಾಸ ಅವರ ಪಾದದ ಸೇವಿಯಲ್ಲಿರಿಸೊಸರಿಯಲೀಸದೆ ಮನವ ಸರಳು ಮಾಡೆಲೊ ದೇವದೊರೆಯಲ್ಲವೆ ನೀನು ಪರಮ ಮುಖ್ಯದಿಂದಶರಣರಾದಿಗಳ ಪಾಲಾ ವೇಣುಗೋಪಾಲ ನೀಮರಿಯದೆನ್ನನು ಭಕ್ತ ಪುರದೊಳಿಟ್ಟು ಪೊರೆಯೊ ೩
ಝಂಪಿತಾಳ
ಸತತ ಸಂಸಾರದೊಳಗಾಸಕ್ತನಾಗಿದ್ದುಪಥಿಸಿ ಧರೆಯನು ಗುರಿ ನಿನ್ನ ಮಾಡಿಇತರ ಶಬ್ದಗಳಲ್ಲಿ ರತನಾಗಿದ್ದರೆ ಸರಿಪ್ರತಿನಾಮ ನಿನ್ನವೊ ಎನ್ನುತಾಮತಿಹೀನರಲ್ಲಿ ಅಮಿತವಾದ ಮಾತು ಅನು -ಮತವಾದವರ ಪ್ರೀತಿ ಬಡಿಸಿವ್ರತ ಭ್ರಷ್ಟನಿವನೆಂದು ತೋರಿ ದುರುಳರಿಗೊಂದುಪ್ರತಿವಾಕ್ಯ ನುಡಿಯದಲೆ ಸುಮ್ಮನಿದ್ದುತುತಿಯ ಬೈಗಳು ಎರಡು ಸಮವೆಂದರಿಯಲವಗೆಶೃತುವ್ಯಾಕೊ ಮಾಡೆಲೊ ಮತ್ತೆ ಅವನುರತಿಪತಿಯ ಜನಕ ಸಿರಿ ವೇಣುಗೋಪಾಲನೆರುತು೧ (ಋತು)೨ ಮಾಡು ಎನ್ನ ಮನದಲ್ಲಿ ವಿಶ್ರುತವಿದು ೪
ತ್ರಿವಿಡಿತಾಳ
ಇನಿತು ಮಾಡಿಸೆ ನಿನ್ನ ಘನತೆ ಅತಿಶಯವಯ್ಯಾದಿನಮಣಿ ತೇಜ ಯಜನಾದಿಗಳು ದೂರಾದಿನ ದಿನದಲಿ ಎನ್ನ ತನುವೆಂಬ ಮಂದಿರದಿಮಿನಗುವದು ಬಂದು ಕನಿಕರದಿಂದಲಿವನಜನಾಭನೆ ನೀನು ನೆನೆಸಲು ಸಲುಹಿದೆಕನಕನ್ನ ಕುವರನ್ನ ಕರುಣದಿಂದಹನುಮ ವಂದಿತ ಚರಣ ವೇಣುಗೋಪಾಲ ಪಾವನ ಮಾಡು ಎನ್ನ ಇನ್ನವರ ಸೇವಕನೆಂದು ೫
ಅಟ್ಟತಾಳ
ನಿನ್ನವರೊಳು ಇಡು ಬನ್ನ ಬಡಲಾರೆನೊಇನ್ನು ವಿಷಯ ಬಾಧೆಯನ್ನು ಬಿಡಿಸಿ ದೇವಕುನ್ನಿಯಂದದಿ ದುರುಳರನ್ನು ಆಶ್ರೈಸಲುಅನ್ನವ ಕೊಡುವರೇನೊ ನಿನ್ನ ಹೊರತು ಬೇರೆಧನ್ಯವಾದ ಬುಧರನ್ನು ಪೊಂದಿಸಿ ವೇಗಘನ್ನ ಭವರೋಗವನ್ನು ಮಾಣಿಸಿ ಕಾಯೊಹೆಣ್ಣು ಹೊನ್ನು ಮಣ್ಣಾಶೆಯಂಬೊದು ಎನ್ನಸುಣ್ಣದ ಕಲ್ಲಿನಂತೆ ಸುಡುವುದೊ ಪ್ರತಿದಿನಚನ್ನ ಮೂರುತಿ ಸಿರಿ ವೇಣುಗೋಪಾಲನೆಎನ್ನ ದೇಹದಿ ಸೇವೆಯನ್ನು ಕೈಕೊಳ್ಳೊ ಧೊರೆಯೆ ೬
ಏಕತಾಳ
ಶಿರ ನಿನ್ನ ಚರಣಕ್ಕೆ ಎರಗುವಂತೆ ಮಾಡೊಕರ ನಿನ್ನ ಪೂಜೆ ವಿಸ್ತರವಾಗಿ ಮಾಡಲಿನ್ನುಚರಿಸಲಿ ಪಾದಗಳು ಪುಣ್ಯದೇಶಗಳಲಿಹರಿ ನಿನ್ನ ನಾಮ ಉಚ್ಚರಿಸಲಿ ಆನನವುವರನಾಶಿಕ ಕರ್ನಾ ಸಿರಿ ಅರಸನೆ ನಿನ-ವರ ಕಥೆ ನಿರ್ಮೂಲ್ಯಗಳ ಸವಿಯಲಿ ಅನುದಿನಪರಮ ಪುರುಷ ಮಿಕ್ಕ ಇರುವ ಇಂದ್ರಿಯಗಳೆಲ್ಲಸರಿಯದೆ ನಿನ್ನ ಸೇವೆಯನು ಪೊಂದಿದರಲಯ್ಯಾಸರಸಿಜ ದಳ ನಯನ ವೇಣುಗೋಪಾಲರೇಯಾಇರಳು ಹಗಲು ನಿನ್ನುಚ್ಚರಿಸುವಂತೆ ಮಾಡೊ ೭
ಜತೆ
ಭಕ್ತವತ್ಸಲ ವೇಣುಗೋಪಾಲ ನಿನಗೆಯುಕ್ತವಾದದು ಮಾಡೊ ಹಸ್ತ ಮುಗುದೆ ನಾನು ||

 

೭೭
ಧ್ರುವತಾಳ
ಚಿಂತಿಸದಿರು ಮನವೆ ಚಿತ್ತ ಚಂಚಲನಾಗಿಸಂತೋಷವನು ತಾಳು ಸತತ ತಿಳಿದುಅಂತುಗಾಣದ ಕರ್ಮ ಅತಿಶಯವೆಂದು ತಿಳಿದುಭ್ರಾಂತನಾಗಲು ಬೇಡ ಬಲು ಮೋಹದಿಸಂತರ ವಚನಕೆ ಸಂಶಯವಾಗದೆ ನಿ-ಶ್ಚಿಂತನಾಗುವದು ನಗುತ ನೀನುಮುಂಚಿನ ಪುಣ್ಯ ನಿನಗೆ ಮುಂಕೊಂಡು ಎದುರಲಿನಿಂತಿಹದದರಿಂದ ನಿರುಪಾಧಿಕಸಂತತ ಗುರುಗಳು ಸಮ್ಯಗರಾಗಿ ನಿನಗೆಕಂತುಪಿತನ ಮಹಿನೆ ತಿಳಿಸುವರೊಎಂತು ಯಳ್ಳಿನಿತಾದರು ಹೃದಯದೊಳಗಿದ್ದೆ ನಿ- ಪಂಥನು ಸರಿಯಾಗು ಗುರುವಾಕ್ಯದಿಜಂತು ಜಡಗಳಲಿ ಶ್ರೀಕಾಂತ ಒಳ ಹೊರಗಿದ್ದುತಂತು ನಡಿಸುವ ತನ್ನ ತೋರಗೊಡದೆಅಂತರ್ಯಾಮಿ ಪರಾಖಿಳ ವ್ಯಾಪಾರ ಮಾಡೆಎಂತು ನಿನಗೆ ಸುಖ ಯೋಚಿಸಿಕೊರಂತಾಗಗೊಡದಿರು ರಹಸ್ಯವೆಂದೀ ಮಾತುಅಂತಃಕರುಣನು ಭವದಿ ಭಜಿಸು ಹರಿಯದಂತಿವರದ ನಮ್ಮ ವೇಣುಗೋಪಾಲ ವಿಠ್ಠಲಎಂತಾದರೇನು ತನ್ನ ಬಳಿಯನೀವಾ ೧
ಮಟ್ಟತಾಳ
ಜ್ಞಾನವಂತನಾಗು ಜ್ಞಾನಿಗಳಿಗೆ ಬಾಗುಜ್ಞಾನ ಕರ್ಮವನೆಸಗುಜ್ಞಾನ ಒಳಗಿನಿಂದ ಜ್ಞಾನ ತಮವ ನೀಗುಜ್ಞಾನವೇ ಸಕಲ ಸಾಧನಕ್ಕೆ ಪ್ರಧಾನಜ್ಞಾನವೇ ಮುಖ್ಯ ಮುಕುತಿಗೆ ಸೋಪಾನಜ್ಞಾನವೇ ಭವ ಪಾಶ ಮೋಚನ ಮಾಡುವದುಜ್ಞಾನವೇ ಹರಿ ಮೂರ್ತಿ ಸೂಚನೆ ಮಾಡುವದುಜ್ಞಾನಕ್ಕಿಂತಲಿ ಮತ್ತೆ ಏನತ್ಯಧಿಕವಿಲ್ಲಜ್ಞಾನಕ್ಕಿಂತಲಿ ಸುಖ ಯೇನು ತೋರುವದಿಲ್ಲಜ್ಞಾನಹೀನರ ಸಂಗ ನೀನು ಮರಿಯೊ ಸು-ಜ್ಞಾನ ಜ್ಞಾನವಂತರ ಸಂಗ ನೀನು ಪಡಿಯೊ ಮಹಜ್ಞಾನವಂತರೊಡಿಯ ವೇಣುಗೋಪಾಲ ವಿಠ್ಠಲನೀನೆ ನೀನೆ ಎಂದು ನಲಿನಲಿದಾಡುವದೊ ೨
ತ್ರಿವಿಡಿತಾಳ
ಹರಿ ಇಚ್ಛೆ ಜಗದೊಳು ಹರಿಯೆ ಸಕಲ ಠಾವುನರರಿಗೆ ತಿಳಿಯಗೊಡದೆ ಇರುತಿಪ್ಪದೊಹರಿಭಕ್ತರಿದರೊಳು ಹರಿ ಪ್ರೇರಣೆಯಿಂದಅರುವರು ನರಹರಿಯ ಲೀಲೆಯನ್ನುಪರಮ ಕರುಣದಿಂದ ಗುರುಗಳು ನಿನಗೊಂದುಗುರುತಿನ ವಾಕ್ಯವ ತೋರಿರಲುಅರಿತುಕೋ ಅದರೊಳು ಸಕಲ ಸಾಧನವುಂಟುಗುರುಗಳು ನುಡಿದ ವಚನ ದೃಢವಾಗಿಅರಮರೆ ಮಾಡದೆ ಆದರದಿ ಭಕುತಿಯಗುರು ಹಿರಿಯರಿಗೆರಗಿ ಹರಿಲೀಲೆಯಾಗುರುತಿಟ್ಟು ಮನ ಸರ್ವ ಇಂದ್ರಿಯಗಳೊಳುಬೆರಸಿದರೆ ಮುಖ್ಯ ಸಾಧನದ ಶಿ-ಖರ ಮುಖ್ಯ ಎಂದರಿಯೊ ಇ-ತರ ಸಂಶಯ ಸಾಕು ಒಂದು ಹರಿಪಾದದಲ್ಲಿ ಮನವೆರಕ ಮಾಡುಪರಮಾಣು ಜೀವರೊಳು ನಾರಿ ಸಿರಿದೇವಿ ಸಹಿತದಿಇರುತಿದ್ದು ಹರಿ ಸಕಲ ಕಾರ್ಯಗಳನ್ನುಹೊರ ಹೊರಗೆ ಇರುತಿಪ್ಪ ಅಧಿಷ್ಠಾನಾದಿ ಸಕಲಸರಸಿಜೋದ್ಭವಾದಿಗಳ ಮನೆಯನು ಮಾಡಿಹೊರಗೆ ಒಳಗೆ ತಾನೆ ಯಾವತ್ತು ವ್ಯಾಪಿಸಿಹರುಷದಿಂದಲಿ ಸತಿಯಳ ವೊಡಗೂಡಿಸರಿಸಮಾನರು ಒಬ್ಬರಿಲ್ಲದು ದೇವ ತನ್ನ-ವರ ಸಂಕಲ್ಪಾನಾದಿ ಸತ್ಯ ಮಾಳ್ಪಾನಿರುತ ನೀನು ಕಾಂಬ ಯಾವತ್ತು ಆಕಾರಪರಮಾಣಾತ್ಮಕ ಕಾರ್ಯ ಕಾರಣದಅರಿಯೊ ನೀ ಅದುಭೂತ ವ್ಯಾಪ್ತರಾಗಿರುವರುಹರಿ ಸಿರಿ ವಿರಿಂಚಿ ಮುಖ್ಯರೆಲ್ಲಪರಮ ಪುರುಷ ಹರಿಸೇವೆ ಮಾಡುತ ಅಲ್ಲಿಇರುವರು ತದ್ವರ್ನ ತದಾಕಾರದಿಭರದಿಂದ ಜಡದೊಳು ಶಬ್ದ ಪುಟ್ಟಲು ಅದುಸಾರುವರಹುದಹುದು ಹರಿ ಪ್ರೇರಣೆಯಹರಿ ಶಬ್ದ ವಾಚ್ಯಾ ಹರಿ ನಿಯಾಮಕಾ ಹರಿ ಶಬ್ದ ಮಾಡೆ ಸರ್ವರು ಮಾಳ್ಪರುಹರಿ ಸುಮ್ಮನಿರೆ ಒಂದು ಆಗದು ನುಡಿ ನಡೆಹರಿಯೆ ಈ ಜಗಕೆ ಕಾರಣ ಮುಖ್ಯದಿಸುರರು ಸಾಂಶರು ಹರಿಯು ಅಭಿನ್ನನೊಪೂರ್ಣ ದ್ರವ್ಯವಂತೆ ಎಲ್ಲಿದ್ದರುಧರೆಯೊಳು ವಸ್ತ್ರಾಗ್ರಾಹದ ಸಮ್ಮೋಹಗಳೊಳುಬೆರಿಸಿ ವ್ಯಾಪಿಸಿದಂತ ಹರಿ ವ್ಯಾಪ್ತಿಯೋಪರಮ ಅದ್ಭುತ ಮಹಿಮ ಪರಮ ಆಶ್ಚರ್ಯಚರಿತಪರಬೊಮ್ಮ ಪರಮೂರ್ತಿ ಪರಮಾತ್ಮನಾಅರಕ್ಷಣ ಮರಿಯದೆ ಸ್ಮರಿಸುವದು ನೀನುಕುರುಹ ಕಾಣುವಿ ಇದರಿಂದ ವೇಗ ಪರಮ ಮುಖ್ಯ ಪ್ರಾಣ ಜಗಕೆ ವೇಣುಗೋಪಾಲ ವಿಠ್ಠಲಅರಸಿನ ಲೀಲೆ ಅರಿತು ಸುಖಿಸುವದು ೩
ಅಟ್ಟತಾಳ
ದಾನ ಧರ್ಮ ಪರ ಉಪಕಾರ ಯಾಗಾದಿಏನೇನು ಕರ್ಮ ಸಫಲವಾಗಲು ಮತ್ತೆಜ್ಞಾನಿಗಳ ಕರುಣ ಸಂದಿಸುವದು ಮಹಾ ಹರಿ ವ್ಯಾಪಾರಕಾಣಿಸಿ ಸುಖ ಸಿಂಧುವೆ ಸೇರುವನು ಸುರಶ್ರೇಣಿಯ ಕರುಣ ಸೇವಾರ್ಕದಿಂದ ಹಲವು ಬಗೆ ಯೋಚಿಸಿ ಸತತ ಹೀನನಾಗದಿರು ಹರಿಧ್ಯಾನಕೆದಾನವಾರಿ ವೇಣುಗೋಪಾಲ ವಿಠ್ಠಲತಾನು ಒಲಿದು ನಿನ್ನ ಮಾನಸದಲ್ಲಿ ಪೊಳೆವಾ ೪
ಆದಿತಾಳ
ಹಸಿದವನಿಗೆ ಷಡುರಸನ್ನ ದೊರಕಿದಂತೆತೃಷಿಯ ಪೀಡಿತಗೆ ಪೀಯೂಷ ಮಡು ಸಿಕ್ಕಿದಂತೆವಸನ ಹೀನಗೆ ವಜ್ರ ಹೊಸ ಕವಚ ದೊರೆತಂತೆಬಿಸಲಿಂದಾರ್ತನ್ನ ವನಕೆ ವಸಂತವೈದಂತೆಪುಸಿಯಲ್ಲ ಕೇಳು ಮನವೆ ಹಸಗೆಟ್ಟು ಪೋಪೆನಗೆಬಿಸಜ ಮಿತ್ರನ ಏಕರಸ ಸಿಕ್ಕಿದದರಿಂದನಸುನಗೆ ಮೊಗ ವೇಣುಗೋಪಾಲ ವಿಠ್ಠಲನ್ನಕುಶಲಕ್ಕೆ ಮೆಚ್ಚಿ ಪಾದ ಬಿಸಜಕ್ಕೆ ಭೃಂಗನಾಗೊ ೫
ಜತೆ
ಆಧೀನ ತಿಳಿವದಕ್ಕಿಂತ ಅಧಿಕ ಸಾಧನವಿಲ್ಲಒದಗಿ ಸ್ಮರಿಸು ವೇಣುಗೋಪಾಲ ವಿಠ್ಠಲನ ||

 

೮೧
ಶ್ರೀ ಪುರಂದರದಾಸರ ಸ್ತೋತ್ರ
ಧ್ರುವತಾಳ
ತಂದೆ ಪುರಂದರದಾಸರ ಮಹಿಮೆಗಳುಒಂದೊಂದು ನೋಡಲು ವಿಚಿತ್ರ ತೋರುತಲಿವೆಛಂದ ಛಂದ ಗುಣ ಮಂದಮತಿಗಳ ಮನ್ಮನಕೆಅಂದು ವಾವೆ ವಿಷಯ ಹೊಂದಿಕೊಂಡಿಪ್ಪರಿಗೆಒಂದೆ ಮನಸಿನಲ್ಲಿ ಪೊಂದಿ ಪಾದಾರವಿಂದದ್ವಂದ್ವವ ಭಜಿಸಲು ಬೆಂದು ಪೋದವು ಪಾಪಾಅಂದದಿ ಇನನು ಉದಯಿಸೆ ನಿಂದಿರುವದೆ ತಮಸುಂದರಂಗದ ಬೆಳಗಿನಿಂದ ಅಘವೋಡುವದುಹಿಂದೆ ಬಹು ಜನುಮಾ ಪಿಡಿದು ಮಂದರಧರನ ಪೂಜೆಯಿಂದ ಸಾಧುಗಳಿಗೆ ವಂದನೆ ಮೊದಲಾದಕುಂದದ ಸೇವೆಗಳಿಂದ ಸತತ ಅವರಮಂದಿರದೊಳಗಿದ್ದು ನಂದಾಬಡುವಗಲ್ಲದೆಮುಂದುವರೆಯದೆ ದುರುಳರಿಂದ ಉಪಜೀವಿಯಾದಾಅಂಧ ಬಲ್ಲನೆ ಇವರಿಂದಾಗುವ ಚರಿತೆಯನ್ನುಸಿಂಧುಶಯನ ಸಿರಿ ವೇಣುಗೋಪಾಲ ಇವರಮುಂದೆ ಕುಣಿದಾಡಿದನು ವಂದರ ಘಳಿಗಿ ಬಿಡದೆ ೧
ಮಟ್ಟತಾಳ
ಯಾತ್ರಿಗಳು ಎಲ್ಲಾನೇಕವಾಗಿ ಮಾಡಿತೀರ್ಥಗಳು ಎಲ್ಲಾ ಖ್ಯಾಪಿ ಖ್ಯಾಪಿಗೆ ಮಿಂದುಪಾತ್ರರಾದ ಬುಧರ ಪ್ರೀತಿ ಸಂಪಾದಿಸಿಸ್ತೋತ್ರಗಳು ಎಲ್ಲಾ ವಾರ್ತಿಯಿಂದಲಿ ಮಾಡಿಗಾತ್ರವ ಬಳಲಿಸಿ ಸಾರ್ಥಕ ತಪದಿಂದಮಾತೃ ಪಿತೃಗಳ ಮಾತು ಲಾಲಿಸಿ ಮುದದಿನೇತ್ರದಿಂದ್ರಿಯ ಹರಿಯ ಮೂರ್ತಿಯಲ್ಲಿಟ್ಟುಸ್ತೋತ್ರಗಳೆಲ್ಲಾ ಜರಿದು ಆರ್ತಿಯ ಪರಿಹರಿಸಿಕೀರ್ತಿವಂತ ನಮ್ಮ ವೇಣುಗೋಪಾಲ ವಿ-ಚಿತ್ರಗಳ ತೋರುವ ತನ್ನ ಭಕ್ತರ ಮಹಿಮೆಗಳ ೨
ತ್ರಿವಿಡಿತಾಳ
ದೇಶವಾ ತಿರುಗಲು ಲೇಸು ಬಪ್ಪುದು ಯೇನು ? ಕಾಸಿ ಪಟ್ಟಣದಲ್ಲಿ ವಾಸವಾಗಿದ್ದರೇನು ?ಸೂಸಿ ಉದಕ ವಾರಣಾಸಿಯಿಂದಲಿ ತಂದು ಸೇ-ತು ಶಿವಗೆ ಅಭಿಷೇಕ ಮಾಡಿದರೇನು ?ಈಶಾ ವೊಲಿವೊನಲ್ಲ ಶಾಶ್ವತ ತಿಳಿವೊದುಲೇಸಾಗಿ ನಿರುತ ದ್ವಾದಶನಾಮ ಸಿರಿಮುದ್ರೆ ಪೂಸಿ ಗಂಧದಿ ಅಂಗಭೂಷಣ ಮಾಡಿಕೊಂಡುಮೋಸಗೊಳಿಸಿ ನರರ ಆಶ್ರೈಸಿ ಕೊಡುವದೇನುಆಶಯ ಬಿಟ್ಟು ಜಗದೀಶನ್ನ ದಾಸರ ಭ-ಜಿಸಿದವನ ಜನುಮಾ ಕಾಶಿಗಿಂತಧಿಕವೆನ್ನುದೋಷ ದೂರರಾಗಿ ಚರಿಸುವರಾ ಗುಣಆಸೂ ತಿಳಿಯದಿರೆ ಲೇಶವಂದೆರಡಾದರುಮೀಸಲ ಮನದಿಂದ ಉಣಿಸಿದವಗೆ ಇತರದೋಷವು ಬರಲುಂಟೇ ಶ್ರೀಶವೊಲಿವ ಮತ್ತೆಶೇಷಶಯನ ನಮ್ಮ ವೇಣುಗೋಪಾಲ ತನ್ನದಾಸರ ಮೂಲದಿಂದುಪದೇಶ ಮಾಡುವ ಜ್ಞಾನ ೩
ಅಟ್ಟತಾಳ
ಇಂದಿರಾದೇವಿಯ ರಮಣನ್ನ ರೂಪವಮುಂದೆ ಕುಣಿಸುವರು ಛಂದದಿಂದಲಿ ಸರ್ವನಂದಿವಾಹನ ಮೊದಲಾದ ಅಮರ ವೃಂದಬಂದು ಆಕಾಶದಿ ನಿಂದು ನೋಡುತಲಿರೆನಂದನ್ನ ಕಂದನಾಡುವ ತಾಳಗತಿಯಿಂದಅಂದ ಬಣ್ಣಿಪರಾರು ಯೆಂದು ಅಮರಗಣ-ದಿಂದ ಜಯ ಜಯವೆಂದಾನಂದ ಭರಿತರಾಗಿಇಂದ್ರಾನುಜ ನಮ್ಮ ವೇಣುಗೋಪಾಲನ್ನಪೊಂದುವ ನರನಾದರೊಂದಿಸುವ ಇವರ ೪
ಆದಿತಾಳ
ಪರಿ ಪರಿಯಲಿನ್ನು ಸಿರಿ ಅರಸನ್ನ ಭಜಿಸಿಪಿರಿದಾಗಿ ಸರ್ವರಿಂದ ಅರುಹಿ ಉದ್ಧರಿಸುವಕರುಣದಿಂದಲಿವರ ಕಲಿಯುಗದಲ್ಲಿ ಹರಿಯಾಚರಿತೆಯ ಕವನವ ಬಿತ್ತರಿಸಿ ಪೇಳಿದರಾಗಿಪರಮ ಗುರುಗಳೆಂದು ಅರುವಾರು ಸುಜನರುನಿರುತ ಸಂಸಾರದೊಳಿದ್ದು ದುರಿತ ಉಂಬುವದ್ಯಾಕೆಪರಮ ರಹಸ್ಯ ತತ್ವ ಸುರಿವವು ಕವನವುಅರಿತು ಬದುಕಬೇಕು ನರಜನ್ಮ ಬಂದುದಕ್ಕೆಧರಾಧರ ನಮ್ಮ ವೇಣುಗೋಪಾಲನ್ನ ಚರಣವಿಡಿದ ಪುರಂದರದಾಸರ ನಂಬಿರೋ ೫
ಜತೆ
ಪುರಂದರದಾಸರ ಚರಿತೆ ಗುಣಿಸಿದರೆಸಿರಿ ವೇಣುಗೋಪಾಲ ಪೊರೆವ ನಿತ್ಯದಲ್ಲಿ ||

 

೭೬
ಧ್ರುವತಾಳ
ತಡವ್ಯಾಕೆ ತಿಳಿ ಮನವೆ ಒಡಿಯ ವಿಠಲನ ಮಹಿಮೆದೃಢವಾಗಿ ಬುದ್ಧಿಯಿಂದ ಬಿಡದೆ ಸಂಚರಿಸುಜಡವೆಲ್ಲ (ಜಡವಲ್ಲ) ಹರಿಯ ಮಹಿಮೆ ನುಡಿಯಲಾ ಹರಿ ನಾಮಾಪೊಡವಿ ಪ್ರಾಣಿಗಳ ಒಡಲೊಳಿದ್ದು ನಡೆದು ನಡೆಸುವನುನುಡಿದು ನುಡಿಸುವನು ಪಿಡಿದು ಪಿಡಿಸುವನು ತಡೆದು ತಡೆಸುವನುಜಡಜ ಸಂಭವ ಸಿರಿ ಮೊದಲಾದವರಿಗೆಲ್ಲತುಡುಕಿ ಒಂದಾದರು ಎವೆ ಇಡಲು ಸ್ವಾತಂತ್ರವಿಲ್ಲಬಡವರಾಧಾರಿ ವೇಣುಗೋಪಾಲ ವಿಠ್ಠಲನುಸಡಗರದ ಲೀಲೆ ಸಕಲ ಕಾಲದಿ ಮಾಳ್ಪ ೧
ಮಟ್ಟತಾಳ
ಇದೆ ಜಪವೆಂದೆನ್ನು ಇದೆ ತಪವೆಂದೆನ್ನುಇದು ತಿಳಿದು ಸರ್ವ ಸಾಧನವೆಂದೆನ್ನುಅದು ಭೂತ ಚರಿತ ಅಗಾಧ ಮಹಿಮಸದಮಲಾನಂದನ್ನ ಹೃದಯದೊಳಗೆ ಪಥವಿ-ಡಿದು ಮೌಳಿಯ ಪರ್ಯಂತದಲ್ಲಿಪದುಮಾಷ್ಟ ದಳದೊಳಗೆ ಚಿಂತಿಸಿ ಸತತಬುಧ ಜನ ಸಂಗತಿಯ ಪಡೆದು ಪಾಪವ ಕಳೆದುಸುಧೆ ಉಂಡ ತೆರದಿ ಸುಮುಖದಿ ಸಂಚರಿಸುಮಧು ವೈರಿ ವೇಣುಗೋಪಾಲ ವಿಠ್ಠಲನ್ನಬದಿ ದೂರವೆರಡು ಸ್ಥಳದಲ್ಲಿ ಧೇನಿಸುತ ೨
ತ್ರಿವಿಡಿತಾಳ
ಕೋಪ ನೀಗುವುದು ತಾಪ ನೀಗುವುದುಭೂಪರ ಸೇವಿಸಿ ತಾಪಸರನು ಸರಿಸುಅಪವರ್ಗ ದಾರಿ ರಾಪಾಗದಂತೆ ನೀಖ್ಯಾಪಿ ಖ್ಯಾಪಿಗೆ ತಿಳಿದು ಪಾಪದೂರನಾಗುರೂಪ ಅಪರೂಪದಲಿ ಶ್ರೀಪತಿಯ ಮೂರುತಿಆಪಾದ ಶಿರಸದಿ ಅವಯವ ಸಹಿತ ಸ್ವರೂಪವ ಇರನೋಡಿ ಅಲ್ಲಲ್ಲೆ ಸಿರಿ ವಾಯುಆ ಪುರವೈರಿ ಅಮರೇಶ ಮೊದಲಾದತಾಪಸರಿಂದಲಿ ಸೇವೆಯ ಕೊಳುತಲಿಶ್ರೀಪತಿ ವೇಣುಗೋಪಾಲ ವಿಠ್ಠಲನ್ನ ಚಿಂತಿಸುವ್ಯಾಪಾರ ಸಕಲ ಶ್ರೀಹರಿಯಾಧೀನವೆನ್ನು ೩
ಅಟ್ಟತಾಳ
ತನುವು ನಿನ್ನದೆನ್ನು ಮನವು ನಿನ್ನದೆನ್ನುವನಿತೆ ಮೊದಲಾದ ಸಕಲ ಸಂಪತ್ತು ಯಳ್ಳಿನಿತುಎನ್ನದಲ್ಲ ಯಾವತ್ತು ನಿನ್ನದುಕನಸು ಸುಷುಪ್ತಿ ಜಾಗರಾದಿಗಳಲ್ಲಿಮಿನುಗುವ ಶುಭಂಗಳು ಏನೇನು ಆದರುಘನ ಮಹಿಮನೆ ನಿನ್ನವೆನ್ನು ಮತ್ತೆ ಎನ್ನುಅನಿಮಿತ್ಯ ಬಂಧು ವೇಣುಗೋಪಾಲ ವಿಠ್ಠÀಲನುದಿನ ದಿನದಲ್ಲಿ ಸುಖ ವನಧಿ ಸೇರಿಸುವನು ೪
ಆದಿತಾಳ
ನಾನು ನಿನ್ನಾಧೀನ ನಾನಾವಿಧ ಶ್ರೀಯಂಗಳುನೀನು ನೇಮಿಸಿದಂತೆ ಮಾಡುವೆನೊ ಎಂದುಮಾನಸದಿ ಕ್ರಿಯಗಳಿಗೆ ನೀನೆ ಪ್ರೇರಕನೊ ಸ್ವಾಮಿದಾನವ ದೇವತೆಗಳ ಹೊರಗೆ ಒಳಗೆ ಇದ್ದುಮಾಣದೆನ್ನ ಮಾಜದೆನ್ನ ಪ್ರಾಣ ಪ್ರೇರಕ ನೀ ಎಂದುಮೇಣು ಚಿಂತೆಯ ಮಾಡಿ ಭವದ ಕಾನನವ ದಾಟುವದುವಾಣಿಯರಸನೊಡಿಯಾ ವೇಣುಗೋಪಾಲ ವಿಠ್ಠಲನುಆನು ನಿನ್ನಾಧೀನನೆಂಬ ಜ್ಞಾನಪೂರ್ಣನ ಮಾಡೆ ಇನ್ನು ಎನ್ನ ೫
ಜತೆ
ಬಾಹಿರಂತರ ಭರಿತಾ ವೇಣುಗೋಪಾಲ ವಿಠ್ಠಲನ್ನಸ್ನೇಹದಿಂದಲಿ ನೆನೆದು ಸುಖಿಸುವದು ||

 

೮೩
ಆತ್ಮನಿವೇದನೆಯ ಸುಳಾದಿ
ಧ್ರುವತಾಳ
ನಿರ್ಮಳ ಮನಮಾಡೊ ನಿಶ್ಚಯವಾಗಿ ಎನ್ನಕರ್ಮಗಳಿಗೆ ಇನ್ನು ಕಡೆ ಯಾವದೊ ವಿಷಯಊರ್ಮಿಯೊಳಗೆ ಬಿದ್ದು ಉಣತಿಹೆನಯ್ಯಾ ಗತಿಯಮರ್ಮವ ತಿಳಿಯದೆ ಮೋಹದಿಂದಪರ್ಮಿಳಕಾಗಿ ವೇಗ ಪೋದ ಮಧುಪದಂದಾದುರ್ಮತಿಯಿಂದ ಕೆಟ್ಟೆ ದನುಜಾರಿಯೆಪೇರ್ಮೆಯ ನೋಡಿ ಜನರು ಪರಿಪರಿಯಿಂದ ತಿಳಿದುವರ್ಮದಂತೆ ಬಾಹ್ಯ ವೃತ್ತಿಯಿಂದ ಮೋಹಿಪರುಶರ್ಮಾಖ್ಯಾ ಸದಾ ಕ್ರಿಯಾಚರಿಸುತಲಿನ್ನು ಸತತಧರ್ಮವಂತರ ಸೇವಾದವನ ಮಾಡೊಕೂರ್ಮ ಮೂರುತಿ ಸಿರಿ ವೇಣುಗೋಪಾಲನೆ ಅಧರ್ಮ ಬುದ್ಧಿಯ ಕೊಡದೆ ಕಡೆಹಾಯಿಸೊ ಜೀಯಾ ೧
ಮಟ್ಟತಾಳ
ಸರವ ಇಂದ್ರಿಯಗಳೆಲ್ಲ ಸರಿಯದೆ ವಿಷಯದಧರೆಗಳೊಳಗೆ ಬಿದ್ದು ಸ್ಥಿರವಾಗಿ ಭುಂಜಿಸಿದರುಕರೆಕರೆಯ ಕಾಮ ಕ್ರೋಧಾದಿಗಳೆನ್ನಅರೆಮರೆಯಗೊಳಿಸದಂತೆ ಕಾಪಾಡುವದೊಸರಸಿಜಭವ ಮುಖ್ಯ ಸಕಲ ಸುರರು ನಿತ್ಯನರಕ ಸೇರುವ ಕಲಿ ಮೊದಲಾದವರೆಲ್ಲತೆರೆದ ಕಣ್ಣನೆ ಮುಚ್ಚುವ ತೆರನೇನು ಬಲ್ಲರೊಪರಮ ಬಲಿಷ್ಠ ನೀನೆ ನೀನೆ ಈ ಜಗದೊಳು ಶರಧಿಶಯನ ಸಿರಿ ವೇಣುಗೋಪಾಲನ್ನಕರುಣದಿಂದಲಿ ನಿನ್ನ ಕುರುಹ ತೋರಿಸುವದೊ ೨
ತ್ರಿವಿಡಿತಾಳ
ನರಹರಿ ನರಕಾರಿ ನವನೀತ ಚೋರನೆಅರೆಮರೆ ಸಲ್ಲದೊ ಅಮರ ಪೂಜಿತ ದೇವಬಿರಿದಿಲಿ ಜಗದೊಳು ಭರಿತನಾಗಿ ಸಕಲಸರಸಿಜ ಭವಾದ್ಯರಿಗೆ ಸುಖವನೀವೆಅರಸು ನೀನೆ ಸಿರಿ ಅಜಭವ ಇಂದ್ರ ಕಾಮಸರಸಿಜ ಸಖ ಸೋಮ ಇತರ ದೇವ ದನುಜರಿಗೆಮುರಹರನೆ ಮುಕ್ತರಿಗೆ ಮುನಿ ಸನಕಾದಿಗಳಿಗೆನರತೃಣ ತಿರಿಯಾದಿ ನಾನಾ ಜಂತುಗಳಿಗೆದುರುಳ ವರವ ಕೊಡುವ ಪರಿಭೂತಾದಿಗಳಿಗೆತೋರೆ ವೇದಕಾಲ ಪ್ರಕೃತಿ ಅಭಿಮಾನಿಗಳಿಗೆಎರಡೇಳು ಲೋಕದೊಳು ಆರೋ ಸಾಕುವರಿನ್ನುಮೀರಿ ನಿನ್ನನು ಬೇರೆ ಇರುವರೇನೊನಾರಾಯಣನೆಂಬ ನಾಮದರ್ಥವು ನೋಡುಸಾರುತಿಹುದು ಸಕಲ ಶ್ರುತಿಗಳಿಂದಸರಿಯದೆ ವಿಹಾರ ಪರಿಪರಿ ಮಾಡುತ್ತಚರಿಸುವೆ ಜಗದೊಳು ಚದುರತನದಿಂದಮರುತನೊಡಿಯ ಸಿರಿ ವೇಣುಗೋಪಾಲ ಈಮರವೆ ಕರ್ಮಕೆ ಗುರಿಯಾರೊ ನಾನಾಗಲು ೩
ಅಟ್ಟತಾಳ
ಇನಿತು ಬೊಮ್ಮಾಂಡದೊಳ್ಯಾವತ್ತು ವ್ಯಾಪಾರಘನವಾಗಿ ನೀನು ಮಾಡುತ್ತಲಿರೆ ಮುದದಿಂದವನಜನಾಭನೆ ಕೇಳು ವಿಧಿ ನಿಷೇಧಗಳೆಂದುದಿನ ದಿನ ಯಾತನೆ ಜನರಿಗ್ಯಾಕೊಮನುಜರ ಕರ್ಮ ಪ್ರಬಲವೆಂದೆನಬೇಕುದಿನಮಣಿ ನಿಭ ನಿನ್ನ ಅಗಲಿ ಮಾಡಿದದೆಂದೊದನುಜ ದೇವತಿಗಳು ಕಾರಣರೆಂಬಿಯಾಮನನ ಮಾಡಿಕೊ ಹಿಂದೆ ನುಡಿದ ವಚನಗಳುಮನಸಿಜನಯ್ಯಾ ಮಮತೆಯಿಂದಾಗುವದೆನೆಮನ ಮೊದಲಾದ ಇಂದ್ರಿಯಗಳ ಒಡಿಯ ನೀನುಎನಿತು ನೋಡಲು ನರಗೆ ಅಪರಾಧಗಳು ಕಾಣೆದನುಜರ ರಿಪುವೆ ಇನ್ನೆನಿತು ಇಪ್ಪದು ಪೇಳೊಸನಕಾದಿ ವಂದಿತ ವೇಣುಗೋಪಾಲನೆನನಗಾರು ದಿಕ್ಕಿಲ್ಲಾ ನಿನಗೊಬ್ಬರೆದುರಿಲ್ಲ ೪
ಆದಿತಾಳ
ಚಿತ್ತಜನಯ್ಯಾ ಮಹತ್ತು ಅಲ್ಲವೊ ಏಕಛತ್ರಾಧಿಪತಿ ತನ್ನ ಭೃತ್ಯನ್ನ ಬಳಲಿಸುವುದುಹೆತ್ತ ತಾಯಿ ಹಿತವ ವತ್ತಿ ಗರಳವ ಸಣ್ಣಬತ್ತಿಗೆ ಎರಿಯಲು ಮತ್ತೆ ಪೇಳುವರಾರೊಹತ್ತಿಲಿಯಿದ್ದು ಸಕಲ ಕೃತ್ಯ ಅಕೃತ್ಯ ಕ್ಷಣಹೊತ್ತು ಬಿಡದೆ ಮಾಳ್ಪು ತತ್ತಳವೇನೊ ಇದುಉತ್ತಮ ಗುಣವಲ್ಲ ಸತ್ವರ ಸಲಹೊ ಏಕಕರ್ತು ನೀನೆ ಜಗಕೆ ಕಾಯೊ ಅನುಮಾನವ್ಯಾಕೆಮಿಥ್ಯಾ (ಸಟಿಯಾಡುವ) ಚಾರಿ ನಿನಗೆ ಸತ್ಯವೊ ಸಾಧನವೆನಗೆಹೊತ್ತು ಹೊತ್ತಿಗೆ ಎನ್ನ ಚಿತ್ತದೊಳಿದ್ದು ಮಾಡೊಅತ್ಯಾವಿಯೋಗಿ ಸಿರಿ ವೇಣುಗೋಪಾಲ ನಿನ್ನಭೃತ್ಯರೊಳಿಟ್ಟೆನ್ನ ಭಕ್ತಿ ಭರಿತನ್ನ ಮಾಡೊ ೫
ಜತೆ
ಸತ್ಯ ಸಂಕಲ್ಪ ಸಿರಿ ವೇಣುಗೋಪಾಲ ವಿ-ರಕ್ತಿ ಪೂರ್ವಕ ಶಕಲ ಭಕ್ತನೆಂದೆನಿಸುವದೆನ್ನ ||

 

೮೦
ಶ್ರೀ ಪ್ರಾಣೇಶದೇವರ ಸುಳಾದಿ
ಧ್ರುವತಾಳ
ಪರಮ ಮುಖ್ಯಪ್ರಾಣನೆ ಪರಿಶುದ್ಧ ಚರಿತನೆಪರಿಪೂರ್ಣ ಭಕ್ತಿಯುಳ್ಳಪಾರ ಮಹಿಮನೆವರಣಿಪರಾರು ನಿನ್ನ ವದನದಿಂದಲಿ ಗುರುವೆನರಹರಿಯ ನವವಿಧ ದ್ವೇಷಿ ಹಂತಾಥರವಲ್ಲ ಥರವಲ್ಲ ತರುಣಿ ಭಾರತಿ ಮಿಕ್ಕಸುರರಿಗೆ ಸುಲಭವಲ್ಲ ಸುಖ ಪೂರ್ಣನೆಶರಧಿಯ ಉದಕ ನಭ ಭರಿತವಾದು ಗಣಣೆತೋರೆ ಮಳಲು ಮಹಾ ಮಳೆಯ ಬಿಂದುಕರಣಾದಿ ವಿಸ್ತರಿಸಿ ಎಣಿಸಿ ಗುಣಿಪರಾರುವರ ದೇವ (ವೇದ) ವೇದ್ಯಾ ಸರ್ವ ಜಡ ಚೇತನಾಇರುವ ಪುಟ್ಟುವ ಮುಂದೆ ಸರಸಿ ಜಭವ ಮಿಕ್ಕಸುರರು ಸುಗುಣ ಒಂದು ಅಧಿಕರೆನಿಸಿಕರುಣಿಸಿ ಭೂಮಿಯೊಳು ವರದೇಹವನು ಇತ್ತುಹರಿ ನಿನ್ನ ಮತದೊಳು ತಂದಿಟ್ಟರೊಮರಿಯಾದೆ ಮತ್ತೆ ಎನ್ನ ಮನದೊಳು ಪೊಕ್ಕು ಮತ್ತೆಗುರುಗಳ ಪಾದ ಭಕುತಿ ಎರಕ ಮಾಡಿ-ದರು ಮತ್ತೆ ಅದರೊಳು ಗುರುಗಳುಕರುಣಿಸೆನ್ನ ಉದರದೊಳು ತಿಳುಹಿ ಸ್ತೋತ್ರ ನುಡಿಸಿದಂತೆಬರಿವೆನಯ್ಯಾ ನಾನು ಒಂದರಿತವನಲ್ಲಸರುವ ತಂತ್ರ ನೀನೆ ಕಾರಣನೊಗಿರಿಜೇಶಾದಿಗಳೆಲ್ಲ ಕರಮುಗಿದು ಕೊಂಡಾಡುತಭರದ ಭಕುತಿಯೊಳು ಲೋಲ್ಯಾಡಲು ಈನರನೇನು ಎಂದು ದೂರ ನೋಡಲಾಗದು ಇನ್ನುದುರವಿಯಿಂದ ರಿಕ್ತನಿಗೆ ಪೂಜೆಯುಂಟುಪರಿಪಾಲಿಸಿ ಎನ್ನನು ಕರೆವದು ವಚನವನೆರೆ ನಂಬಿದವ ನಿನ್ನ ದಾಸರನುದುರುಳ ಭಂಜನ ವೇಣುಗೋಪಾಲ ವಿಠ್ಠಲಂಗವ-ಸರದಾಳು ನೀನು ಕೊಡುವೆ ತ್ರಿವಿಧ ಜೀವರಿಗೆ ೧
ಮಟ್ಟತಾಳ
ಪ್ರತಿ ಪ್ರತಿ ಭೂಮಿಗಳು ಪ್ರತಿ ಪ್ರತಿ ವನಧಿಗಳುಪ್ರತಿ ಪ್ರತಿ ಲೋಕಗಳು ಪ್ರತಿ ಪ್ರತಿ ಸ್ಥಾನಗಳುಪ್ರತಿ ಪ್ರತಿ ಪರ್ವತ ಪ್ರತಿ ಪ್ರತಿ ಆವರಣಪ್ರತಿ ಪ್ರತಿ ವೇದ ಪ್ರತಿ ಪ್ರತಿ ಕಾಲಾಪ್ರತಿ ಪ್ರತಿ ದೇಶ ಪ್ರತಿ ಪ್ರತಿ ನಭಪ್ರತಿ ಪ್ರತಿ ಜೀವರಿಗೆ ಪ್ರತಿ ಪ್ರತಿ ದೇಹಗಳುಪ್ರತಿ ಪ್ರತಿಗಳಲ್ಲಿ ಸತತ ನಿನ್ನಯ ರೂಪತತು ತತು ಆಕಾರ ತತು ವರ್ನಾತತು ನಾಮದಲ್ಲಿ ಒಳಗೆ ಹೊರಗೆ ಅಂಶಪ್ರತತನಾಗಿ ಇದ್ದು ಪರಮ ಗುಣಗಳಲ್ಲಿಸತಿಯ ಸಹಿತ ಸರ್ವಾಕಾರಾ ವ್ಯಾಪ್ತನಾಗಿರತಿಪತಿ ಜನಕನ ನುತಿಸಿ ಪೂಜಿಸಿ ಭ-ಕುತಿ ಭರಿತ ವೇದೋಕುತ ಮತ್ಯಾನು ಗುಣಗಳನ್ನವಿತತದಿ ಕೊಂಡಾಡಿದಿ ವಿಶ್ವದೊಳಗೆ ಜೀವಗತನಾದ ಹರಿಯ ಗುಣಗಳ ಮಹಿಮೆಗಳಅತಿಶಯದಲಿ ತಿಳಿದು ಅನಂತ ತ್ರಿರೂಪತತು ತತು ಸ್ಥಾನದಲಿ ನಿನ್ನ ಪೂಜಿಪೆ ಸತ್ಯಾಮಿತ ಮಹಿಮಾ ಮೂಲ ಸ್ಥಾನದಿ ಬಿಂಬನ್ನಕೃತಿ ಧ್ಯಾನ ಮಾಳ್ಪೆ ಸರ್ವ ಸಂಧಾನದಿ ಕ್ಲಿ-ಪುತ ಕಾಲದಲಿ ಕಾಂಬಿನೆ ಪ್ರವಾಹವತುಇತರ ರೂಪತ್ರಯವ ಅಲ್ಲಲ್ಲೆ ನುತಿಗೈವೆಪೃಥಿüವಿ ಮೊದಲಾದಾವರಣದಿಂದಲಿ ಯು-ಕುತವಾದ ಬೊಮ್ಮಾಂಡವ ಮತ್ತೆ ಉಂಗುಟದಿಂದಗತಿ ತಪ್ಪದಂತೆ ಗಮನಾಗಮನಗಳನುಯೈದಿಸ್ಥಿತಿವಾಗುವದೆ ಏನೇನು ಮಾಡಿದರದು ಕೃತಿ ವೇಣುಗೋಪಾಲ ವಿಠಲನ್ನಾಶ್ರಿತನಾಗಿ ಸ್ವಲ್ಪು ಕೃತಿ ತೋರುವ ಜಗಕೆ ೨
ರೂಪಕತಾಳ
ಮಿನಗುವ ಮೂರಾದ ಪರಿಚ್ಛೇದಗಳಲ್ಲಿಘನ ವ್ಯಾಪಾರದ ಸಿರಿ ಭೂದುರ್ಗಾರಮಣನ್ನಅನುದಿನ ಪೂಜಿಸುತ ಅಲ್ಲಿಂದ ಸೂಕ್ಷ್ಮತನು ಮೊದಲಾದ ಈ ಸ್ಥೂಲ ದೇಹಗಳಲ್ಲಿಅನಿಮಿಷರು ಇರುವರು ವಿನುತ ಸುತ ಮೊದಲಾದದನುಜರು ಅಲ್ಲಲ್ಲಿ ಪೊಂದಿಕೊಂಡಿಪ್ಪರುಮನನ ಮಾಡುತ ದ್ವೇಷ ತಾರತಮ್ಯದಿಂದದನುಜೇಂದ್ರಗೆ ನೀನೆ ಪ್ರೇರಕನೊ ಅಸುರಗಣಕೆ ಸುರರೆಲ್ಲರು ಪ್ರೇರಕರೊ ನಿನ್ನಿಂದತೃಣ ಜೀವ ಕಡಿಯಾಗಿ ವಾಣಿ ಮೊದಲಾದತೃಣ ತುಲ್ಯರಯ್ಯಾ ನೀ ಚೇಷ್ಟೆ ಮಾಡಿಸದಿರಲುವನಜಜಾಂಡದೊಡಿಯ ಸಿರಿ ವೇಣುಗೋಪಾಲ ವಿಠಲಅನುಕೂಲವಾಗಿ ನಿನ್ನೊಳು ಪೊಂದಿವೊಲಿದಿಪ್ಪಾ ೩
ಝಂಪೆತಾಳ
ನಿನ್ನಿಚ್ಛೆಯಾದರೆ ಹರಿ ಇಚ್ಛೆಯಾದಂತೆನಿನ್ನ ಬಲವಾಗೆ ಹರಿಯ ಬಲವಾದಂತೆನಿನ್ನ ದಯವಾಗಲು ಹರಿಯ ದಯವಾದಂತೆನಿನ್ನ ಒಲಿಸಲು ಹರಿಯ ಒಲಿಸಿದಂತೆನಿನ್ನ ಪೊಗಳಲಾಗಿ ಹರಿಯ ಪೊಗಳಿದಂತೆನಿನ್ನ ಗಾಯನ ಹರಿಯ ಗಾಯನದಂತೆನಿನ್ನ ಪೂಜೆಯ ಮಾಡೆ ಹರಿಯ ಪೂಜಿಸಿದಂತೆನಿನ್ನ ಪೊಂದಿರಲು ಹರಿಯ ಪೊಂದಿದಂತೆನಿನ್ನಾಜ್ಞ ಮೀರಿ ನಡೆದವರುಂಟೆ ಜಗದೊಳಗೆನಿನ್ನ ಚಾರಿತ್ರೆಗಳಿಗೀಡುಂಟೆ ಜಗದೊಳಗೆನಿನ್ನ ಪೋಲುವರಾರು ಘನ್ನದಯ ಸುರತರುವೆಅನಂತ ಚರಿತ ಗುಣಪೂರ್ಣ ಗುರುವೆಚನ್ನ ಮಾರುತಿ ವೇಣುಗೋಪಾಲ ವಿಠ್ಠಲನಿನ್ನಾಧೀನದಿ ಜಗದ ವ್ಯಾಪಾರಗೈಸುವಾ ೪
ತ್ರಿವಿಡಿತಾಳ
ಆವಾವಾ ಲೋಕದೊಳಗೆ ನಿನಗೆ ಪ್ರತಿಭಟರಿಲ್ಲಆವಾವಾ ಲೋಕಗಳು ನೀನು ಅರಿಯದವಲ್ಲಆವಾವ ಜೀವರಿಗೆ ಆಗುವ ಗತಿಗಳುದೇವ ನಿನ್ನಿಂದಲೆ ತಾ ಒಂದು ಮಾಳ್ಪದಿಲ್ಲಾಈ ವನಜಜಾಂಡವು ಹಿಂದೆ ಮುಂದಾಗುವಆ ವನಜಾಂಡದಲಿ ಆಗುವದೆಲ್ಲಜೀವರ ಗತಿ ಜಡ ಭಾವ ವಿಶೇಷಗಳುಸಾವಧಾನದಿ ನಿನ್ನ ಚಿತ್ತದಲಿ ತಿಳಿವೆಯ್ಯಾಈ ವಿಧವಾದ ನಿನ್ನಯ ಶಕುತಿಗೆ ಮತ್ತೆಆವನಯ್ಯಾ ಈಡು ಈ ಜಗದಿಪೂವಿಲ್ಲನಯ್ಯಾ ಸಿರಿ ವೇಣುಗೋಪಾಲ ವಿಠ್ಠಲಧಾವಂತವಿಲ್ಲದೆ ನಿನ್ನ ಸಲಹುವ ಅಧಿಕಾ ೫
ಅಟ್ಟತಾಳ
ಅಪರಮಿತ ಅಂಶ ಅಪರಮಿತ ಬಲಅಪರಮಿತ ಜ್ಞಾನ ಅಪರಮಿತ ತೇಜಅಪರಮಿತ ಧೈರ್ಯ ಅಪರಮಿತ ತನು ವಿನೋ-ದಿಪಾ ಅಹಿಪಾದಿ ವ್ಯಾಪಕ ದೇವಾರಿಗಳ ಮಲ್ಲಶಪಥ ಪೂರ್ವಕದಿಂದಚಪಲ ಸಿರಿವರ ವೇಣುಗೋಪಾಲ ವಿಠಲನ್ನಅಪನಿಯನಾಗಿ ಧೇನಿಪೆ ಸರ್ವಕಾಲಾ ೬
ಆದಿತಾಳ
ಈ ರೀತಿ ಮಹಿಮನು ಧಾರುಣಿಯೊಳಗಿನ್ನುಮೂರಾವತಾರದಿ ತೋರಿದೆ ಕೃತ್ಯಗಳನುಬಾರಿ ಬಾರಿಗೆ ಹರಿಯ ಸೇವಿ ಎನಿಸಿ ಬಹುಮೀರಿದ ಭಕ್ತನೆಂದು ಕೀರುತಿ ಪಡೆದೆ ಅಯ್ಯಾಓರಂತೆ ಹಗಲು ಇರುಳು ನೀನು ಹೊತ್ತುಮೀರದೆ ಒಂದು ಕ್ಷಣ ಪಾರ ಜೀವರೊಳಗೆಮಾರುತ ಮಂತ್ರವನ್ನು ಒಬ್ಬೊಬ್ಬರಲ್ಲಿ ನಿಂದುಮೂರೇಳು ಸಾವಿರ ಆರು ನೂರುವ ಮಾಡಿಆರಾಧಿಸುತ್ತ ಹರಿಯಾಕಾರವ ಕಾಣಲದುಚೋರ ಭಕುತಿ ಎಂದವತಾರ ಮಾಡಿದೆ ಧೊರಿಯೆಕ್ರೂರ ರಸ ಒಂದು ಎಲ್ಲಿಹದೆನಬೇಕುಪ್ರೇರಣೆ ನಿನ್ನ ಹೊರತು ತೋರು ಅವರೊಳಗಿನ್ನುಸಾರ ಹೃದಯರ ಸಂಸಾರ ವೃಕ್ಷದ ಮೂಲಬೇರರಸಿ ಕೀಳಲು ಆಕಾರ ಧರಿಸಿದೆ ನಿನ್ನವಾರೆ ನೋಟದಿ ನೀನು ಎನ್ನ ನೋಡಿದರೆಆರು ಉಳದವರು ಉದ್ಧಾರವಾಗಲು ಮತ್ತೆಅರಿತೀ ಸಂಗತಿ ವ್ಯಕ್ತನಾದೆನು ಎನ್ನ ತೋರು ನೀನಿಲ್ಲದ ಪರಮಾಣು ಪ್ರದೇಶ ಒಂದುಕಾರಣ ಒಂದು ಎನಗೆ ಕೂಗಿಸುವನು ಜೀಯ್ಯಾಕಾರುಣ್ಯ ದ್ವೇಷಾ ಭಕ್ತಿ ಲವಲವಿಕೆ ಮೂರು ಪರಿಈ ರೀತಿ ಅಲ್ಲದಿನ್ನು ಬೇರೆ ಒಂದಿಲ್ಲ ನಿನಗೆತೋರಿದ ಬಗೆಯನ್ನು ಸಾರಿದೆ ಬಿನ್ನಪದಿಕಾರುಣ್ಯ ನಿಧಿ ವೇಣುಗೋಪಾಲ ವಿಠ್ಠಲಂಗೆಸಾರಥಿಯಾಗಿ ಜಗ ವ್ಯಾಪಾರಗೈಸುವೆ ಮುಖ್ಯ ೭
ಜತೆ
ನಿನ್ನ ಬಿನ್ನಪದಂತೆ ಮಾಡುವ ಕ್ರಿಯಗಳನುಇನ್ನು ಜೀವರೊಳಿದ್ದ ವೇಣುಗೋಪಾಲ ವಿಠ್ಠಲಾ ||

 

೭೯
ಶ್ರೀ ಮುಖ್ಯ ಪ್ರಾಣದೇವರ ಸ್ತೋತ್ರ
ಧ್ರುವತಾಳ
ಮರುತಾ ನಿನ್ನ ಮಹಿಮೆ ಪರಿಪರಿಯಿಂದ ತಿಳಿದುಚರಿಸಿದ ಮನುಜಗೆ ದುರಿತ ಬಾಧೆಗಳ್ಯಾಕೆಸರಸಿಜಾಸನ ಸಮ ಸಿರಿದೇವಿ ಗುರುವೆಂದುಪರತತ್ವ ಹರಿ ಎನುತ ವಂದಿಸಿ ಅಖಿಳಭರಿತನಾಗಿಪ್ಪ ಜಗದಿ ಅರಸಿ ಭಾರತಿ ಸಹಿತಹೊರಗಿದ್ದು ನವಾವರಣಗಳಿಗೆ ಜೀವರ ಬೀಜಸರಿ ಬಂದ ವ್ಯಾಪಾರದಿ ಆಡಿಸುವೆ ಜಡ ಜೀವರನುಪುರಹರ ಮೊದಲಾಗಿ ಅರಿಯರು ಒಂದು ಕಾರ್ಯಗುರುವೆ ನಿನ್ನ ಹೊರತು ಹೊರಗೆ ಬೊಂಬಿಗಳತೋರಿ ಒಳಗೆ ತರ ತರದಿ ನೀನುಇರುವೆ ಸರ್ವರಿಗೆ ಆಧಾರ ರೂಪದಿ ಅತಿಸ್ಥಿರ ಭಕುತಿಯಿಂದ ಹರಿಯ ಧೇನಿಸುತಮಿರಗುವ ಪ್ರಭೆ ನಿನ್ನದು ಪದ ರೂಪಧ್ವನಿ ನಿನ್ನದು ದೇವಬರುವ ಹೋಗುವ ವ್ಯಾಪಾರ ನಿನ್ನದು ದೇವಶರಧಿ ಶಯನ ಸಿರಿ ವೇಣುಗೋಪಾಲರೇಯಾಪರಮ ಹರುಷದ ಲೀಲೆ ತೋರುವ ನಿನ್ನೊಳಿದ್ದು ೧
ಮಟ್ಟತಾಳ
ಅಖಿಳಾಗಮ ವೇದ್ಯ ಅಖಿಳಾಗಮ ಸ್ತೌತ್ಯಾಅಖಿಳಾಗಮ ನಿಗಮ ವ್ಯಾಪುತ ದೇವನೆಅಖಿಳದೊಳಗೆ ನಿಂದು ಸಕಲ ಕಾರ್ಯಗಳೆಲ್ಲಅಕುಟಿಲ ನೀನಾಗಿ ಮಾಡಿಸಿ ಮುದದಿಂದಯುಕುತಿಯಿಂದಲಿ ಜಗವ ಅತಿಶಯವನು ತಿಳಿದುಲಕುಮಿಪತಿಯ ನೀನು ಕಾಣುವೆ ಸರ್ವದಶಕತ ಮೂರುತಿ ನಿನ್ನ ತುತಿಸಿ ಬಲ್ಲವರಾರುಭಕುತಿಯ ಅಭಿಮಾನಿ ಭಾರತಿಗಳವಲ್ಲಾಭ್ರಕುಟಿಲಾ ವಂದಿತ ನೀನು ವೇಣುಗೋಪಾಲನ್ನಪ್ರಕಟದಿ ಬಲ್ಲದ್ದು ಅರಿಯರು ಉಳಿದವರು ೨
ತ್ರಿವಿಡಿತಾಳ
ಪೃಥಿವಿ ಶಬ್ದದಿ ಭೂತ ಮಾತ್ರ ಪರಮಾಣುಗಳಲ್ಲಿಪ್ರತಿ ಪ್ರತಿ ರೂಪನಾಗಿ ಇರುತಿಪ್ಪ ಮಡದಿ ಸಹಿತ ಪ್ರಾ-ಕೃತ ಪಿಡಿದು ಸಕಲ ವ್ಯಾಪ್ತಾ ತಾ-ತ್ಪಿಕರಲ್ಲಿ ವ್ಯಾಪಾರ ನಿನ್ನದಯ್ಯಾ ಲೋಕ ವಂ-ದಿತ ದೈವಾ ಶಾತಕುಂಭಾರಿಯಿಂದ ನಿರ್ಮಿತ ಬೊಮ್ಮಾಂಡತಾತ ನಿನಗೆ ಎಣಿಯೆನುತಲೋಡುವದಯ್ಯಾ ಶ್ರೀಕಾಂತನಾದ ಸಿರಿ ವೇಣುಗೋಪಾಲನುಪ್ರೀತಿಯಿಂದಲಿ ನಿನಗೆ ಒಲಿದಿಪ್ಪ ಅಧಿಕವಾಗಿ ೩
ಅಟ್ಟತಾಳ
ಈ ರೀತಿಯಲಿ ಜಗದಾಧಾರನಾಗಿರುತಿರ್ದುಧಾರುಣಿಯೊಳು ಮೂರು ಅವತಾರಗಳ ಧರಿಸಿಕ್ರೂರರ ಸದೆದದ್ದು ಮೂರ್ಖರ ಕಾರ್ಯವೇಮೇರು ನುಂಗುವ ಒಂದು ಚೂರು ನುಂಗಲಿಬಹುದುಶೂರತಹವೇನೋ ಮಾರಾರಿ ವಂದ್ಯನೆಆರು ಬಣ್ಣಿಪರೊ ವಿಚಾರಿಸಿ ನಿನ್ನನುನಾರಾಯಣ ಕೃಷ್ಣ ವೇಣುಗೋಪಾಲನಾ-ಧಾರದಿಂದಲಿ ಸೇವೆ ಬಾರಿ ಬಾರಿ ಮಾಳ್ಪೆ ೪
ಆದಿತಾಳ
ಒಂದು ಅವತಾರದಿ ಅಸುರ ವೃಂದವ ಘಾತಿಸಿದೆನಂದತೀರ್ಥ ರೂಪದಿಂದ ಸಕಲ ದುರುಳ-ರಂದ ವಚನಗಳ ಕಡಿದಾನಂದದಿಂದಲಿ ಮೆರದೆತಂದೆಯ ಕೃತಿಗಳು ನಿನ್ನಿಂದಾದು ನೋಡಿಮಂದಾರವು ಸುಖವ ಪೊಂದುವವಯ್ಯಾ ಬಹುಸಿಂಧು ಸಪುತ ಯೇಕಾದಿಂದ ಹಾರುವನುಮುಂದಿದ್ದ ಕಾವಲಿಯ ನಿಂದು ನಿಂದು ದಾಟಿದಂತೆಮಂದಮತಿಗಳ ಮನಕೇನೆಂಬೆಯೋ ಎಲೊ ದೇವಸುಂದರಾಂಗನೆ ಸುಖದಿಂದ ಪೊರೆಯುತ ವಾಯುನಂದಾ ಹನುಮ ರಾಮನಿಂದ ಆಲಿಂಗನ ಪಡೆದುಬಂದು ವಂದಿಸಿದೆ ಗೋಪಿ ಕಂದನ್ನ ಬಿಡದೆ ಭೀಮಾ-ನಂದ ಮೂರುತಿ ವ್ಯಾಸನಿಂದ ತತ್ವಗಳೆಲ್ಲಅಂದದಿ ಓದುವ ಅಮರೇಂದ್ರ ವಂದಿತ ಮಧ್ವತಂದೆ ಎನ್ನಯ ಬಿನ್ನಪ ಬಂದು ಲಾಲಿಸುವದುಪೊಂದಿ ಭೂಪತಿಯ ಪೂಜೊಂದು ಬಿಡದಂತೆಇಂದು ಬೇಡುವೆ ಮನದಿಂದ ವಂದನೆ ಮಾಡಿಕುಂದದೆ ಎನ್ನೊಳಿದ್ದು ಮಂದಿರದೊಳು ನಿನ್ನಅಂದವಾದ ರೂಪ ಇಂದು ತೋರುವದೆನಗೆಸಿಂಧುಶಯನ ಸಿರಿ ವೇಣುಗೋಪಾಲನುನಿಂದು ನಿನ್ನೊಳು ಲೀಲೆ ಒಂದೊಂದು ಮಾಳ್ಪ ಚಿತ್ರಾ ೫
ಜತೆ
ಪವನ ನಿನ್ನಯ ಪಾದ ಪೊಂದಿದ ಮನುಜನುಜವನ ಪುರಕೆ ಸಲ್ಲಾ ವೇಣುಗೋಪಾಲ ಬಲ್ಲಾ* ||

 

೭೪
ಧ್ರುವತಾಳ
ರಕ್ಷಿಸುವದು ಬಿಡದೆ ಪಕ್ಷಿವಾಹನ ಸತತಕುಕ್ಷಿಯೊಳಿದ್ದ ದುರುಳ ರಕ್ಕಸರ ಬಾಧೆಯಿಂದಅಕ್ಷಯ ಫಲ ನೀನು ಲಕ್ಷೆಯೆ ಇವರು ನಿನಗೆಮಕ್ಷಕ ಸಮನಾದ ಶಕ್ತಿ ಸುಕ್ಷಮರೆಲ್ಲಚಕ್ಷುರಿಂದ್ರಿಯದಿಂದ ನೀಕ್ಷಿಸಿ ದುಷ್ಟ ವಿಷಯಪೇಕ್ಷಿಸಿ ಸರ್ವಕಾಲ ವಿಷಯ ಮಾಳ್ಪರಯ್ಯಾ ಮೋಕ್ಷ ಮಾರ್ಗದ ಜ್ಞಾನ ವಕ್ಷಮಾನರಲ್ಲಿಕಕ್ಷ ಕ್ರಮಾನು ಸಾಧನದ ಶಿಕ್ಷೆಯ ಕೈಗೊಂಡು -ಪೇಕ್ಷ ಮಾಡದೆ ಸದಾ ತತ್ವಬುಭುಕ್ಷಿತನಾಗಿಲಕ್ಷುಮಿಪತಿ ನಿನ್ನ ಲಕ್ಷಿಸುವಂತೆ ಮಾಡೊರಾಕ್ಷಸಾಂತಕ ನೀನು ಪ್ರತ್ಯಕ್ಷನಾದರೆ ಈಭಿಕ್ಷುಕರೆಲ್ಲ ಪೋಗಿ ಬಚ್ಚಿಟ್ಟುಕೊಂಬರಯ್ಯಾರಿಕ್ಷಾವಂದಿತ ಸಿರಿ ವೇಣುಗೋಪಾಲ ಸಹ-ಸ್ರಾಕ್ಷನ್ನ ಪ್ರಿಯ ಕುಪಿತಾಕ್ಷನೊಡಿಯ ಕಾಯೊ ೧
ಮಟ್ಟತಾಳ
ದಾಸರೊಳಿಡುವದು ವಾಸುದೇವನೆ ಎನ್ನಆಶೆಯ ಮೊದಲಾದ ಮೋಸಗಳಿಗೀಮನಸೂಸಿ ಪೋಗದಂತೆ ಶ್ರೀಶನೆ ನೀ ಮಾಡೊಏಸೇಸು ಕಾಲ ವಿಶೇಷನಾಗಿ ನಿನ್ನಲೇಸಾಗಿ ಪೂಜೆ ನೇಮಿಸಿ ಮಾಡಿದರೆಭೂಸುರರಿಂದ ಉಪದೇಶ ಕೈಕೊಂಡುಸಾಸಿರ ಸಾಸಿರ ವತ್ಸರ ತಪ ಮಾಡೆ ದೇಶದೇಶದೊಳಿದ್ದ ಕ್ಷೇತ್ರ ತೀರ್ಥಗಳೊಮೀಸಲು ಮನದಿಂದ ಶೇಷನೇರಿಸಿದವಗೆಈಶ ನಿನ್ನಂಘ್ರಿಯ ಶಾಶ್ವತ ಭಜಿಸುವದಾಸರು ತೋರುವ ರಹಸ್ಯವಲ್ಲವೊ ಮಾಯಾನಾಶರಹಿತ ನಮ್ಮ ವೇಣುಗೋಪಾಲನೆಈಸು ಬಗೆಗೆ ನಿನ್ನ ವಾಸವೊ ಜಗದೊಳು ೨
ತ್ರಿವಿಡಿತಾಳ
ವನಜಾಕ್ಷ ನಿನ್ನ ಶ್ರವಣವನು ಕೇಳಿರಬೇಕುಮನನಾದಿಗಳು ಬಹುದಿನ ಮಾಡಿ ಇರಬೇಕುಧ್ಯಾನಾದಿಗಳು ಬಲುದಿನ ಮಾಡಿ ಇದ್ದಮನುಜನಲ್ಲದೆ ನಿನ್ನ ದಾಸರ ತಿಳಿಯನಯ್ಯಾವನಜಾಂಡದೊಡಿಯ ಸಿರಿ ವೇಣುಗೋಪಾಲನೆಇನಿತು ಮಾಡಿಸದೆ ನಿನ್ನ ನೆನೆವರ ತೋರಿಸಯ್ಯಾ ೩
ಅಟ್ಟತಾಳ
ಲೋಕರುದ್ಧಾರಕ್ಕೆ ದಾಸರ ನೇಮಿಸುವೆಲೋಕರುದ್ಧಾರಾರ್ಥ ಲೀಲೆಯ ತೋರುವೆಲೋಕರುದ್ಧಾರಕ್ಕೆ ಮಹಿಮೆಗಳನು ಅನೇಕವಾಗಿ ತಿಳಿದು ಸಾಕುವೆ ಭಕುತರಏಕಚಿತ್ತದಿ ನಂಬಿ ಲೋಕದಿ ಇರುವರಜೋಕೆ ಮಾಡದೇವೆ ಬಿಡದೆ ಬೇಕೆಂದು ಪ್ರತಿದಿನವಾಕೇಶನಂಇÀಇ್ಯ ಸಿರಿ ವೇಣುಗೋಪಾಲನೆಕಾಕುಗೊಳಿಸದೆ ಸಲಹೊ ನಾಕೇಶನೊಡೆಯಾ ೩
ಆದಿತಾಳ
ಸಕಲ ಜಗದೊಳಗೆಯಿದ್ದು ಯುಕುತಿಯಿಂದ ಮಾಡಿಸುವೆಲಕುಮಿ ಮೊದಲಾದವರಿಗೆ ಅತಿಶಯವೇನೊ ನೀನುಭಕ್ತರೆಂದೆ ನೀ ಬಿಡದೆ ತುತಿಪರು ಸರ್ವದಮುಕುತಿಯಪೇಕ್ಷದಿಂದ ಸಕತರಾಗಿಪ್ಪರನೆಮುಕುತನು ನಿತ್ಯ ಸಿರಿ ಮತ್ತೆ ನೀ ಕೊಡುವದೇನುವಿಕಸಿತನಾಗಿ ನಂದಾ ಉಕುತದೆನಬೇಕುರಿಕುತವಲ್ಲವೋ ಲಕುಮಿ ಬಹುಪೂರ್ಣ ಮತ್ತಳಯ್ಯಾಮಿಕುಣದ ಕಾರ್ಯವೇನು ತೊರೆವದಿಲ್ಲವೊ ಇನ್ನುಶಕುತ ಮುಕುತಿ ನಿನ್ನಲ್ಲಿ ಚಿತ್ರ ಒಂದುಂಟು ದೇವಾವಿಕಸಿತನಯ್ಯಾ ನಿನ್ನ ನಿನ್ನ ಪಕ್ಷದಲ್ಲಿದ್ದು ಧ್ಯಾನಾ _ಸಕತಳಾಗಿ ಅತಿ ಆಶ್ಚರ್ಯವ ಕಂಡು ದೇವನಿಕರಕ್ಕೆ ಬೋಧಿಸುತ್ತ ಕಡೆಗಾಣಲಾರಳುಶಕಟ ಭಂಜನ ವೇಣುಗೋಪಾಲರೇಯನೆಸಿಖರವೊ ನಿನ್ನ ಭಕುತರು ಸೇವಿಸುವ ಸಾಧನ ೫
ಜತೆ
ಸಿರಿಗೆ ದುರ್ಲಭ ಮಹಿಮಾ ವೇಣುಗೋಪಾಲ ಸು-ಸ್ಥಿರ ಮಾಡು ನಿನ್ನ ಸೇವೆಯಲಿ ಎನ್ನಯ ಮನಾ ||

 

ಪಾರ್ವತಿ ಪಾಲಿಸೆನ್ನ
೬೩
ಶ್ರೀ ಪಾರ್ವತಿದೇವಿಯ ಸ್ತೋತ್ರ
ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆಪಾರ್ವತಿ ಪಾಲಿಸೆನ್ನ ಪ
ಪಾರ್ವತಿ ಭಕ್ತರ ಸಾರಥಿ ವಂದಿತೆಸುರಪತಿ ಗಜಮುಖ ಮೂರುತಿ ಮಾತೆ ಅ.ಪ
ಮನದಭಿಮಾನಿಯೆ ನೆನೆವೆನು ನಿನ್ನನುಅನುಕರಿಸೆನ್ನನು ಅಂಬುಜಪಾಣಿ ೧
ಮಂಗಳೆ ಮೃಡನಂತರಂಗಳೆ ಹರಿಪದಭೃಂಗಳೆ ತುಂಗಳೆ ಪನ್ನಗವೇಣಿ ೨
ಗುಣಪೂರ್ಣ ವೇಣುಗೋಪಾಲ ವಿಠಲನ್ನಕಾಣಿಸಿ ಕೊಡುವಂಥ ಶೂಲಿಯ ರಾಣಿ ೩

ಹಾಡಿನ ಹೆಸರು :ಪಾರ್ವತಿ ಪಾಲಿಸೆನ್ನ
ಹಾಡಿದವರ ಹೆಸರು :ವಿರೂಪಾಕ್ಷ ವಂದಲಿ
ರಾಗ : ಮಿಶ್ರ ಕಾಪಿ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ಸದಾಶಿವ ಪಾಟೀಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *