Categories
ರಚನೆಗಳು

ವ್ಯಾಸರಾಯರು

ಇವೆರಡೂ ಕೀರ್ತನೆಗಳಲ್ಲಿ ಬಾಲಕೃಷ್ಣನ
(ಇ) ಶ್ರೀಕೃಷ್ಣಲೀಲೆ
೧೨೧
ಅಂಗಜನೈಯನು ಗೋಕುಲ ಪೋಗುವಾಗಕಂಗಳ್ಹಬ್ಬದ ಉಬ್ಬಿನೇನ ಬಣ್ಣಿಪೆನಾ ಪ
ಎಳೆಗರುಗಳ ಝುಂಗುಗಳನ್ನು ಮತ್ತೆಮಲೆವ ಗೂಳಿಗಳ ಗೂರಾಟವನ್ನುಒಲಿವಾವಿನ ಕೆಚ್ಚಲು ಸಂದಣಿಯಲ್ಲಿನಲಿವ ಮರಿಗರುಗಳ ನೋಡುತಲಿ ೧
ಆಡಿಸುವ ಮೊಗ ಬದಿಗಳ ತುರಿಸುತ್ತಝಾಡಿಸುವಾಕಾರ ಬೆದರು ನೋಟಏಡಿಸುವ ಹುಬ್ಬಿನ ಗೋವಳರಕೋಡಂಗಿ ಆಟಕ್ಕೆ ಕುಲುಕಿ ನಗುತ ೨
ಒಂದು ಹುಬ್ಬೊಂದು ಕಿವಿಯನಲಗಿಸುತಮುಂದಣ ಚಂಡಿಕೆ ತಾಳದ ಗತಿಗೆಚಂದದಿ ಕುಣಿಸುವ ಭೃಂಗಿ ಆಟಕೆ ಗೋಪಸಂದೋಹಕೆ ಮೆಚ್ಚಿ ಬಲಗೆ ತೋರಿಸುತ ೩
ಕೆಲರು ಕೋಗಿಲೆಯಂತೆ ಕೆಲರು ನವಿಲಿನಂತೆಕೆಲರು ಹಂಸದಂತೆ ಸಾರಸದಂತೆಗಳರವದಿಂ ಗೋಪರು ಕೂಗೆ ಋತುಗಳುನಳಿನಾಕ್ಷನ ಸೇವೆಗೆ ಕೂಡಿದಂತಿರೆ ೪
ಒಂದೊಂದು ತಾಳಕ್ಕೆ ಒಂದೊಂದು ಪದಗತಿಒಂದೊಂದು ರಸಕ್ಕೆ ಮತ್ತೊಂದು ಕೈಗತಿಒಂದೊಂದು ಭಾವಕ್ಕೆ ಒಂದೊಂದು ನೇತ್ರವಾನಂದದಿ ಗೋವರ್ಧನ ನಾಟ್ಯವಾಡೆ ೫
ಕಿನ್ನರ ಗಾನ ಗೋಪರ ಗೀತ ದೇವಕನ್ಯೇರ ನಾಟ್ಯ ಗೋಪರನಾಟ್ಯಚೆನ್ನಾರ ಕುಣಿಸುವ ಚಿಣ್ಣರ ಕಣ್ಣುಸನ್ನೆ ಝೇಂಕರಿಸುವ ಗೋಪರ ನೋಡುತ೬
ನಾರಂದನ ವೀಣೆ ಗೋಪರ ಕಿನ್ನರಿಗೀರ್ವಾಣದುಂದುಭಿ ಗೋಪರ ಮುರಜಆ ರಂಭೆಯರಾಟ ಗೋಪರ ತಾಂಡವಕ್ಷೀರೋದಕದಂತೆ ಕಲೆಸಿ ಬೆರೆಸಿರೆ ೭
ರಸತುಂಬಿ ತುಳುಕುವ ಕೊಳಲ ರವಂಗಳುಹಸುಗಳ ಕೊರಳ ಘಂಟೆಗಳ ನಿನಾದಎಸೆವೆಳಗಂದಿಯ ಅಂಬಾರವಂಗಳು ಪಸರಿಸೆ ಗೋವಳೆಯರು ಸಡಗರಿಸಿ೮
ಜಂಗುಳಿ ಗತಿಯರ ಮುಖ ಕನ್ನಡಿ ಊರೋ-ಜಂಗಳೆ ಮಂಗಳ ಪೂರ್ಣ ಕುಂಭಗಳುಕಂಗಳೆ ನೀಲೋತ್ಪಲಂಗಳು ಕರಗಳೆತುಂಗ ಪಲ್ಲವ ತೋರಣದಂತೆಸೆಯೆ ೯
ಚೆಂದದ ನೋಟವು ಮಂಗಳಾರತಿಯಾಗೆಮಂದಹಾಸವು ಪೂಮಳೆಯಾಗೆ ಆನಂದ ಪುಳಕಗÀಳೆ ಕೋಡಿಯಾಗೆ ಗೋಪವೃಂದವಿದಿರುಗೊಳ್ಳ ಬಂದರೊಲವಿಲಿ ೧೦
ಕಂಗಳ ಕುಡಿ ನೋಟಂಗಳಿಂ ಸೆಳೆದುರಂಗನ ತಮ್ಮಂತರಂಗದೊಳಿಟ್ಟುಹಿಂಗದಾಲಂಗಿಸಿ ಸುಖಾಂಬುಧಿಯ ತ-ರಂಗದಿ ಗೋಪಾಂಗನೆಯರು ಮುಳುಗಿ೧೧
ಗೋಪಿಜನರು ರಂಗಗೆ ಮರುಳಾಗಿರೆನೂಪುರ ಮರಕತ ಪ್ರಭೆ ಸಾರಳೆಯಾಗೆಆ ಪದ್ಮರಾಗವೆ ಕೆಂಪು ಕಾರಳೆಯಾಗೆಶ್ರೀಪದನಖ ಕಾಂತಿ ರಂಗವಲ್ಲಿಯಾಗೆ ೧೨
ಬೃಂದಾರಕರು ಪೂಮಳೆಗರೆಯಲು ಬೇಗಬಂದಾಳಿಗಳು ಬೃಂದಾವನದಲ್ಲಿ ಮಕರಂದವನುಂಡು ಸ್ವರ್ಗವ ಹಳಿದಿಳೆಗೆಬಂದಳಿಂದಿರೆಯೆಂಬ ಸಂಭ್ರಮದಿಂದ ೧೩
ತುರುಗಾತಿಯರ ನೋಟದ ಬೇಟಂಗಳುಹರಿಮುಖೇಂದವಿನಲ್ಲಿ ಚಕೋರಗಳುಹರಿನಾಭಿಸರೋವರದಲ್ಲಿ ಮೀನ್ಗಳುಹರಿಪಾದಪದುಮದಿ ತುಂಬಿಗಳಾಗೆ೧೪
ಇತ್ತ ಗೋವಳರಾಟಕೆ ತಲೆದೂಗುತಅತ್ತ ದೇವತೆಗಳ ಸ್ತುತಿ ಕೇಳುತ್ತಇತ್ತ ಗೋವಳೆಯರ ನಗಿಸುತ್ತ ನಗುತ್ತಅತ್ತಿತ್ತ ಮುನಿಗಳ ಸ್ತುತಿ ಕೇಳುತ್ತ ೧೫
ಕಂಜಾಸನ ನಮಿಸಲು ಕೈಹಿಡಿದೆತ್ತಿ ಮೃ-ತ್ಯುಂಜಯ ವಂದಿಸೆ ಬಾ ಯೆನ್ನುತ್ತಅಂಜಲಿ ಪುಂಜದ ಇಂದ್ರಾದಿಗಳನ್ನುಕಂಜನೇತ್ರಗಳ ಸನ್ನೆಯಲಿ ಮನ್ನಿಸುತ೧೬
ಸಿರಿ ವನಿತೆಗೆ ವನಮಾಲೆ ಉಯ್ಯಾಲೆಮೊರೆವಳಿಕುಲಗಳ ರವ ಸಂಗೀತ ವರ ಮುತ್ತಿನ ಹಾರ ಚಾಮರ ಶ್ರೀಕೃಷ್ಣ-ನುರಮಧ್ಯವೆ ಮಂಟಪವಾಗೆಸೆಯೆ ೧೭

 

ಇವೆರಡೂ ಕೀರ್ತನೆಗಳಲ್ಲಿ ಬಾಲಕೃಷ್ಣನ
೧೨೨
ಅಂಗನೆ ನೋಡುವ ಬಾರೆ ಪ
ಹೀಂಗಿರಲಾರೆ ನಿನ್ನಾಣೆ ಕಂಗಳು ಪಡೆದ ಫಲವ ರಂಗಕೊಳಲುನೂದುತ ಗೋ-ಪಾಂಗನೆಯರೆಲ್ಲ ನೆರೆದು ಸಂಗಡ ಲೋಲಾಡುತಿಪ್ಪುದ ಅ.ಪ.
ಏಣಲೋಚನೆ ಕೇಳವ್ವ ದಾನವಾಂತಕನ ಕೈಯವೇಣು ಮಾಡಿದ ಸುಕೃತಫಲವ ಪ್ರಾಣದೊಲ್ಲಭೆಯರೆಲ್ಲಮಾಣದೆ ಸವಿವ ಅಧರ ಪಾನವ ತಾ ಸೂರೆಗೊಂಬುದತಾನು ನೆಲೆಸಿದ ವೃಕ್ಷ ಮೂಲಗ-ಳೇನು ಸುಕೃತಮಾಡಿದವೋ ಭೂಲತಾವನದಾ ಪುಣ್ಯಗಳೇನೆಂಬೆನಾನು ಮಾಡಿದ ಪೂರ್ವಸಂಚಿತಏನು ಒದಗಿತೊ ಕೃಷ್ಣರಾಯನವೇಣು ಗೀತಾಮೃತವ ಸವಿವರೆ ೧
ಹುಲ್ಲೆಯ ಹಿಂಡುಗಳೆಲ್ಲ-ಪುಲ್ಲನಾಭನ ಕೊಳಲ ಧ್ವನಿಯ ಸೊಲ್ಲನಾಲೈಸುತ ವೇಗದಿಚೆಲ್ಲ ಗಂಗಳೇರಂತೆ ಕೃಷ್ಣನಲ್ಲಿ ಚಿತ್ತವೆರಗಿ ಅನ್ಯ-ವಿಲ್ಲದಿಪ್ಪ ಸಡಗರವನ್ನುಪಲ್ಲವಾರುಣ ಪಾಣಿಯಿಂದಮೆಲ್ಲನೆ ಮಧುರಾಗೀತವಕಲ್ಲು ಕರಗುವಂತೆ ಹಾಡಲುಹುಲ್ಲು ಮೇಯುವ ತುರುಗಳೆಲ್ಲತಲ್ಲಣದಿಂದಲಿ ಬಂದುವಲ್ಲಭರಂತೆ ನೋಡಲು ೨
ಅರಗಿಳಿ ಹಂಸಗಳೆಲ್ಲ ತರುಗಳ-ಕೊಂಬೆಗಳನೇರಿಪರಮ ಹರುಷದಿ ಕುಳ್ಳಿರ್ದು ಕೊರಳ-ಕಲರವಗಳುಳುಹಿಪರಮ ಪುರುಷನ ಧ್ಯಾನದಿಂದ ಯೋಗಿಗಳ ತೆರದಿ ಮೈಮರೆದುಕರಗಿ ಕಂಬನಿಗಳನೆ ಸುರಿಸುತಸರಸಿಜಾಕ್ಷನ ವೇಣುಗೀತದಸ್ವರಗಳನಾರೈದು ಬಾಹ್ಯವತೊರೆದು ಪರಮಹಂಸರಂತೆನಿರುತ ಕೃಷ್ಣನ ಪಾದಯುಗಳಸರಸಿಜದ ಲೋಲ್ಯಾಡುವ ಸುಖವ ೩

 

೧೨೩
ಅಂತರಂಗದಲಿ ಹರಿಯ ಕಾಣದವನೆಹುಟ್ಟು ಕುರುಡನೋ ಪ
ಸಂತತ ಸಿರಿಕೃಷ್ಣ ಚರಿತೆ ಕೇಳದವನೆಜಡಮತಿ ಕಿವುಡನೊ ಎಂದೆಂದಿಗುಅ.ಪ.
ಹರುಷದಲಿ ನರಹರಿಯ ಪೂಜೆಯ ಮಾಡದವನೆ ಕೈ ಮುರಿದವನೊಕುರುವರ ಸೂತನ ಮುಂದೆ ಕೃಷ್ಣಾಯೆಂದುಕುಣಿಯದವನೆ ಕುಂಟನೋನರಹರಿ ಚರಣೋದಕ ಧರಿಸದ ಶಿರನಾಯುಂಡ ಹೆಂಚು ಕಾಣೊಸುರವರ ಕೃಷ್ಣ ಪ್ರಸಾದವಿಲ್ಲದ ಊಟಸೂಕರ ಭೋಜನವೋ ಎಂದೆಂದಿಗು ೧
ಅಮರೇಶ ಕೃಷ್ಣಗರ್ಪಿತವಿಲ್ಲದಾ ಕರ್ಮಅಸತಿಯ ವ್ರತನೇಮವೋರಮೆಯರಸಗೆ ಪ್ರೀತಿಯಿಲ್ಲದ ವಿತರಣೆರಂಡೆ ಕೊರಳ ಸೂತ್ರವೊಕಮಲನಾಭನ ಪಾಡಿ ಪೊಗಳದ ಸಂಗೀತಗಾರ್ಧಭ ರೋದನವೊಮಮತೆಯಿಂದಲಿ ಕೇಶವಗೆ ನಮಸ್ಕಾರಮಾಡದವನೆ ಮೃಗವೊ, ಎಂದೆಂದಿಗು ೨
ಜರೆ ಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟುಸುರೆಯ ಸೇವಿಸಬೇಡವೊಸುರಧೇನುವಿರಲಾಗಿ ಸೂಕರ ಮೊಲೆಹಾಲುಕರೆದು ಕುಡಿಯಬೇಡವೊಕರಿರಥಾ ತುರಗವಿರಲು ಬಿಟ್ಟು ಕೆಡಹುವಕತ್ತೆಯೇರಲಿಬೇಡವೊಪರಮ ಪದವನೀವ ಸಿರಿಕೃಷ್ಣನಿರಲಾಗಿನರರ ಸೇವಿಸಬೇಡವೊ, ಎಂದೆಂದಿಗು ೩

 

೨. ಆತ್ಮ ನಿವೇದನೆ
೧೭೯
ಅಪರಾಧವೆನ್ನದೈಯ ಹೇ ಜೀಯಅಪರಾಧವೆನ್ನದೈಯ ಅಪರಿಮಿತವೆ ಸರಿ ಪ
ಕೃಪೆ ಮಾಡೊದಿಲ್ಲವೆ ಕೃಪಣವತ್ಸಲ ಕೃಷ್ಣ ಅ.ಪ
ಹುಡುಗರು ಮಾಡುವ ತಪ್ಪಿಗೆ ಜನನಿ ತಾಬಿಡುವಳೆ ಅದರಿಂದ ಕೃಪೆಯ ಮಾಡದಲೆನಡೆವ ಕುದುರೆ ತಾನು ಎಡಹಿದರೆ ಸ್ವಾಮಿಕಡೆಗೆ ಕಟ್ಟುವನೇನೊ ತಿರುಗಿ ನೋಡದಲೆ ೧
ಮಾಡು ಎಂದದ್ದನು ಬಿಟ್ಟರೆ ಅಪರಾಧಬೇಡವೆಂದನು ಮಾಡುವುದಪರಾಧಈಡಿಲ್ಲ ನಿನ್ನ ದಯ ಬೇಡುವೆನೋ ನಿನಗೆಮಾಡುವೆ ಬಿನ್ನಹ ನಾಚಿಕೆಯಿಲ್ಲದಲೆ ೨
ಬೇಡಿಕೊಂಬೆನೊ ವಾಸುದೇವ ಶ್ರೀಹರಿಯೆನೋಡದಿದ್ದರೆ ಭಕುತ ಜನರು ತಮ್ಮಬೀಡ ಸೇರಿಸರೆನ್ನ ಕೇಡೇನೊ ಇದಕಿಂತನೋಡೊ ನೀ ದಯದಿಂದ ಭಕುತವತ್ಸಲ ಕೃಷ್ಣ ೩

 

ಶ್ರೀ ಮಧ್ವಚಾರ್ಯರ ಸ್ತುತಿಪರ ಕೀರ್ತನೆ
(ಈ) ಅವತಾರತ್ರಯ
೧೫೫
ಆರು ನಿನಗಿದಿರಧಿಕ ಧಾರುಣಿಯೊಳಗೆ ಪ
ಸಾರ ಶಾಸ್ತ್ರವನೊರೆದ ಸರ್ವಜ್ಞ ಮುನಿರಾಯ ಅ.ಪ.
ಆರೊಂದು ವೈರಿಗಳ ತರಿದು ವೈಷ್ಣವರಿಗೆಆರೆರಡು ಊಧ್ರ್ವ ಪುಂಡ್ರಗಳ ಇಡಿಸಿಆರು ಮೂರರಮೇಲೆ ಮೂರಧಿಕ ಕುಮತಗಳಬೇರೊರಸಿ ಕಿತ್ತೊಮ್ಮೆ ಬಿಸುಟಂಥ ಧೀರ ೧
ಆರು ನಾಲ್ಕು ತತ್ವದಭಿಮಾನಿಗಳಿಗೊಡೆಯಮಾರುತನ ಮೂರನೆಯ ಅವತಾರನೆಆರೈದು ಮೇಲೆರಡು ಅಧಿಕ ಲಕ್ಷಣವುಳ್ಳಮೂರುತಿಯೊಳೊಪ್ಪುತಿಹ ಮುನಿವರೇಣ್ಯ ೨
ಆರಾರು ಮೇಲೊಂದು ಅಧಿಕ ಲೆಖ್ಖದ ಗ್ರಂಥಸಾರವನು ರಚಿಸಿ ಸಜ್ಜನರಿಗಿತ್ತುಪಾರಮಾರ್ಥಿಕ ಭೇದ ಪಂಚಕ ಸ್ಥಾಪಿಸಿದೆ ಉ-ದಾರ ಶ್ರೀಕೃಷ್ಣನ ದಾಸರೊಳು ದೊರೆಯೆ ೩

 

೧೮೧
ಆವಾವ ಬಗೆಯಿಂದ ನೀನೆ ರಕ್ಷಿಸುವೆಯೊದÉೀವಾದಿ ದೇವ ಶ್ರೀಕೃಷ್ಣ ನೀನೆನ್ನನು ಪ
ಹಿಂದಿನ ಕಾಲವ ವ್ಯರ್ಥವಾಗಿ ಕಳೆದೆನೊಮುಂದಿನ ಗತಿ ಚಿಂತೆ ಲೇಶವಿಲ್ಲವೊಸಂದು ಹೋಯಿತು ದೇಹದೊಳಗಿನ ಬಲವೆಲ್ಲಮಂದವಾದವು ಇಂದ್ರಿಯ ಗತಿಗಳೆಲ್ಲ ೧
ಆಸೆಯೆಂಬುದು ಅಜನ ಲೋಕಕ್ಕೆ ಮುಟ್ಟುತಿದೆಕಾಸು ಹೋದರೆ ಕ್ಲೇಶವಾಗುತ್ತಿದೆಮೋಸಮಾಡಿ ಮೃತ್ಯು ಬರುವುದ ನಾನರಿಯೆವಾಸುದೇವನೆ ಎನ್ನ ದಯಮಾಡಿ ಸಲಹೊ ೨
ಜನರು ದೇಹವ ಬಿಟ್ಟು ಪೋಪುದ ನಾ ಕಂಡುಎನ್ನ ದೇಹ ಸ್ಥಿರವೆಂದು ತಿಳಿದುಕೊಂಡುದಾನ ಧರ್ಮ ಮೊದಲಾದ ಹರಿಯ ನೇಮವ ಬಿಟ್ಟುಹೀನ ವಿಷಯಂಗಳಿಗೆರಗುವೆ ಸಿರಿಕೃಷ್ಣ ೩

 

(ಆ) ಶ್ರೀಹರಿಯ ಗುಣಗಾನ
೧೦೧
ಇದು ಬಲು ಸುಖಕಾಣೆ ಕೇಳಿದಕೆಣೆಗಾಣೆ ಪ
ಒದಗಿ ಬರುವ ಮೃತ್ಯುವ ಪರಿಹರಿಸುವ
ಪದುಮನಾಭನ ಪದಪದುಮಕ್ಕೆರಗುವ ಅ.ಪ
ಚಂಚಲ ಸಿರಿಗಾಗಿ ಲೋಕ ಪ್ರ-
ಪಂಚಕೆ ಬೆರಗಾಗಿ
ಸಂಚಿತ ಕರ್ಮವ ಕಳೆಯದೆ ಕಾರ್ಯವು
ಮಿಂಚಿದ ಬಳಿಕಾಯಾಸಕ್ಕಿಂತಲು೧
ಚಿಂತೆಯೆಲ್ಲವ ಕಳೆದು ಮನದಿ ನಿ-
ಶ್ಚಿಂತೆಯಾಗಿ ನಲಿದು
ಅಂತರಂಗದಿ ಲಕ್ಷ್ಮೀಕಾಂತನ ತುತಿಸುತ
ಸಂತೋಷ ಶರಧಿಯಳೋಲ್ಯಾಡುವುದು ೨
ಶರಣ ಜನರ ಪೊರೆವ, ದ್ವಾರಕಾ-ಪುರವರದಲಿ ತಾನಿರುತಿರುವಪರಮ ಪುರುಷ ನಮ್ಮ ಸಿರಿಕೃಷ್ಣರಾಯನಮುರಳಿಧರನ ಸೇವಿಸಿ ಸುಖಿಯಾಗುವ.೩

 

೧೫೬
ಈತನೀಗ ವಾತಜಾತನು ತನ್ನ ಪ
ತÁತಗಾಗಿ ದನುಜಕುಲವಘಾತಿಸಿದ ವನೌಕಸಾರ್ಯಅ.ಪ.
ಅಂಬುಧಿಯ ಲಂಘಿಸಿ ಭರದಿಲಂಬ ಶಿಖರದಲ್ಲಿ ಧುಮುಕಿಸಂಭ್ರಮದಿಂದ ಲಂಕೆಗೆ ಪೋಗಿಅಂಬುಜಾಕ್ಷಿಯನರಸಿದಾತ ೧
ಧರಣಿಸುತೆಯ ಚರಣಕೆರಗಿಕರುಣಿ ರಾಮನುಂಗುರವಿತ್ತುಕರದಿ ದಾನವರನು ಸವರಿಶರಧಿಯನುತ್ತರಿಸಿದಾತ ೨
ಕಡಲ ತಡಿಯೊಳಿರ್ದ ಕಪಿಗ-ಳೊಡನೆ ರಾಮನಂಘ್ರಿಗೆರಗಿಮಡದಿ ಚೂಡಾರತುನವಿತ್ತುಕಡು ಕೃತಾರ್ಥನೆನಿಸಿಕೊಂಡ ೩
ದುರುಳ ಕೌರವನನುಜನುರವಕರದಿ ಸೀಳಿ ರಕ್ತವ ಸುರಿದುನರಸಿಂಹನಿಗೆ ಅರ್ಪಿಸಿದಧರೆಗೆ ಭೀಮನೆನಿಸಿದಾತ ೪
ಇಳೆಯೊಳಿದ್ದ ಮಧ್ಯಗೇಹನಕುಲದಿ ಜನಿಸಿ ಶುದ್ಧವಾದನಳಿನನಾಭನ ಒಲುಮೆಯಿಂದಮಲಿನರನ್ನು ಅಳಿದ ಧೀರ ೫
ಇಪ್ಪತೊಂದು ಕುಮತಗಳನುಒಪ್ಪದಿಂದ ಗೆಲಿದು ಭಕ್ತಕಲ್ಪವೃಕ್ಷನೆನಿಸಿ ಮೆರೆದಸರ್ಪಶಯನನ ನಿಜವ ತೋರ್ದ ೬
ಧರಣಿ ಮಂಡಲದೊಳಗೆ ಭೂಮಿಸುರರ ಗಣಕೆ ಶಾಸ್ತ್ರಾಮೃತವಎರೆದು ಕೃಷ್ಣನ ಇರವ ತೋರಿವರ ಬದರಿಯೊಳ್ ನಿಂದ ಧೀರ ೭

 

‘ಉಕ್ಕುವ ತುಪ್ಪದಲ್ಲಿ ಕೈಯಿಕ್ಕುವೆ’-
೧೮೨
ಉಕ್ಕುವ ತುಪ್ಪಕೆ ಕೈಯಿಕ್ಕುವೆ ನಾನು ಪ
ಚಕ್ರಧರ ಪರಮಾತ್ಮನೊಬ್ಬನಲ್ಲದಿಲ್ಲವೆಂದು ಅ.ಪ
ಪೊರೆಯೊ ಪರದೈವವೆಂದು ಕರಿ ಮೊರೆಯಿಡಲು ಕಂಡುನೆರೆದ ಬೃಂದಾರಕರು ಅಂದು ಪೊರೆದರೆ ಬಂದುಕರದಲೊಪ್ಪುವ ಮುತ್ತಿಗೆ ಕನ್ನಡಿಯ ನೋಡಲೇಕೆಭರದಿ ಗಜೇಂದ್ರನ್ನ ಕಾಯ್ದ ಹರಿಯೆ ಪರದೈವವೆಂದು ೧
ಮತಾಂತರದಲ್ಲಿ ಭಗವದ್ಗೀತೆಯನದ್ವೈತವೆಂದುವಾತಗುದ್ಧಿ ಕೈಗಳೆರಡು ನೋಯಿಸಲೇಕೆ‘ಏತತ್ಸರ್ವಾಣಿ ಭೂತಾನ್ಯೆಂ’ಬ ಶೃತ್ಯರ್ಥವ ತಿಳಿದುಜ್ಯೋತಿರ್ಮಯ ಕಿರೀಟಿ ಅಚ್ಯುತಾಂತರ್ಯಾಮಿಯೆಂದು ೨
ತಾನೆ ಪರಬ್ರಹ್ಮನೆಂಬ ಮನುಷ್ಯಾಧಮನು ತಾನುಜ್ಞಾನಹೀನನಾಗೆ ಲೋಕದಾನವನೆಂದುಭಾನು ಕೋಟಿ ತೇಜೋತ್ತಮ ವರದ ಶ್ರೀಹರಿಯೆಂಬಜ್ಞಾನವೆ ಕೈವಲ್ಯದ ಸೋಪಾನವೆಂದು ಸಭೆಯಲ್ಲಿ ೩
ತಪ್ಪಾದ ವಿಚಾರದಿಂದ ತತ್ತರವ ಪಡಲೇಕೆತಪ್ಪು ಶಾಸ್ತ್ರ ವೋದಿ ದೇಹ ದಂಡಿಸಲೇಕೆಕಲ್ಪ ಕಲ್ಪಾಂತರದಲ್ಲಿ ವಟಪತ್ರಶಯನನಾಗಿಮುಪ್ಪು ಮೊದಲಿಲ್ಲದ ಮುಕುಂದನಲ್ಲದಿಲ್ಲವೆಂದು ೪
ಶಕ್ತಿ ಶೂನ್ಯನಿವನೆಂದು ಸಂಶಯವ ಪಡಲೇಕೆಕೃತ್ಯದಿಂದ ನೋಡೆ ಶ್ರೀಕೃಷ್ಣನೊಬ್ಬನೆಹತ್ತಾರು ಸಾಸಿರ ನೂರು ಗೋಪಸ್ತ್ರೀಯರನ್ನು ಆಳಿನಿತ್ಯ ಬ್ರಹ್ಮಚಾರಿಯೆನಿಪ ನಿಷ್ಕಳಂಕನೊಬ್ಬನೆಂದು ೫

 

೧೫೭
ಎಂತು ಪೊಗಳಲೊ ನಿನ್ನ-ಯತಿಕುಲ ಶಿರೋರನ್ನ ಪ
ಶಾಂತ ಮಧ್ವಾಚಾರ್ಯ ಸಂತ ಕುಲವರ್ಯ ಅ.ಪ.
ಪ್ರಥಮಾವತಾರದಲಿ ವ್ರತತಿ ರಾಮನ ಭಜಿಸಿಅತಿ ಪಂಥದಿಂದ ಶರಧಿಯನು ದಾಟಿಕ್ಷಿತಿಜೆಗಂಕಿತವಿತ್ತು ಪೂದೋಟವನು ಕಿತ್ತೆಪ್ರತಿಗಾಣೆ ನಿನಗೆ ಅಪ್ರತಿ ಪರಾಕ್ರಮಿಯೆ ೧
ದ್ವಿತಿಯಾವತಾರದಲಿ ದೇವಕೀಜನ ಕಂಡುಸತಿಗೆ ಕಾಮಿಸಿದವನ ಸಾಹಸದಿ ಸದೆದೆಪ್ರತಿಯಾದ ಮಾಗಧನಪೃತನದಲಿ ನೀ ಕೊಂದೆಪ್ರತಿಯ ಕಾಣೆನೊ ನಿನಗೆ ಮೂಜ್ಜಗದೊಳಗೆ ೨
ತೃತಿಯಾವತಾರದಲಿ ತ್ರಿಜಗನುತಿಸಲು ಬಂದುಯತಿಯಾಗಿ ಮಹಾಮಹಿಮನನು ಭಜಿಸಿದೆಕ್ಷಿತಿಗಧಿಕ ಉಡುಪಿಯಲಿ ಕೃಷ್ಣನ್ನ ನಿಲಿಸಿ ಪ್ರತಿಮತಮತವ ಮುರಿದೆ ಪೂರ್ಣಪ್ರಜ್ಞ ಮುನಿವರನೆ ೩

 

೧೦೨
ಎಂಥಾದ್ದೊ ಹರಿಯ ಕರುಣ ಪ
ಎಂಥಾದ್ದೊ ಹರಿಯ ಮಹಿಮೆಎಂಥಾದ್ದೆನ್ನ ಬಾರದು ಗಡ ಅ.ಪ
ಅಂತ್ಯವಿಲ್ಲದ ನಿಜಾನಂದ ತೃಪ್ತನು ಗಡಸಂತರೊಕ್ಕುಡಿತೆಯ ಜಲಕೆ ಹಿಗ್ಗುವ ಗಡ ೧
ಸನಕಾದಿ ಮುನಿಮನಕೆ ಸಿಲುಕದಗಮ್ಯನು ಗಡನೆನೆವರ ಮನದಣಿಯೆ ತನ್ನ ತೋರುವ ಗಡ೨
ಶ್ರ್ರುತಿತತಿಗೆ ಮೈದೋರದತಿ ಮಹಿಮನು ಗಡಮತಿಯುಳ್ಳವನ ಭಕ್ತಿ ಸ್ತುತಿಗೆ ಹಿಗ್ಗುವ ಗಡ೩
ಲೋಕ ಪತಿಗಳಿಗೆಲ್ಲ ಒಡೆಯ ತಾನೆ ಗಡಬಾಕುಳಿಕನಾಗಿ ಭಕುತರ ವಶದಲ್ಲಿಪ್ಪ ಗಡ ೪
ಆರರೊಳು ಸಡ್ಡೆಯಿಲ್ಲದ ನಿಸ್ಸಂಗನು ಗಡಸಾರಿದವರಿಗೆ ತಂದೆತಾಯಿ ಸಿರಿಕೃಷ್ಣ ಗಡ ೫

 

೧೨೫
ಎಂದ ಮಾತು ಚಂದವಾಯಿತಿಂದು ಗೋಪಿ-ಮುನಿ-ಸಿಂದ ನಮ್ಮನಾಡಲೇಕೆ ನಂದಗೋಪಿ ಪ
ಭಂಟ ನಂಟರನ್ನು ಮಾತಿನಿಂದ ಹೋಗಿ-ಬರಿಕಂಟಕದ ನುಡಿಗಳಿನ್ಯಾಕೆ ಗೋಪಿ ೧
ಕರಿಯ ಭಂಟ ಕಳ್ಳ ಕೃಷ್ಣ ಕಾಣೆ ಗೋಪಿ- ಹತ್ತಿಲಿರುವ ಹರಿಯು ಬಲು ತುಂಟ ಕಾಣೆ ಗೋಪಿ೨
ಹರವಿ ಹಾಲ ಬರಿದು ಮಾಡಿ ಬಂದ ಗೋಪಿ-ಎನ್ನಸೆರಗ ಪಿಡಿದು ಬಿಡೆನೆಂದ ಕಾಣೆ ಗೋಪಿ ೩
ಅಪರಿಮಿತದಾಟಗಾರನಿವ ಗೋಪಿ-ಕೃಷ್ಣಕಪಟನಾಟಕ ಸೂತ್ರಧಾರ ಗೋಪಿ೪
ತಿರುಪತಿಯ ತಿಮ್ಮರಾಯನಿವ ಗೋಪಿ-ಗೊಲ್ಲಗರತಿಯರ ಕಂಡರೆ ಸುಪ್ರೀತ ಗೋಪಿ ೫
ಶರಣ ಜನರ ಸಿಧ್ಧಿ ಕೊಡುವ ದಾತ ಗೋಪಿ-ನಾವುಪುರದೊಳಿರುವ ತೆರನ ಮಾಣೆ ಜಾಣೆ ಗೋಪಿ ೬
ನಿಪುಣ ಬೆಣ್ಣೆ ಕಳ್ಳ ನಿನ್ನ ಮಗನೆ ಗೋಪಿ-ನಮ್ಮತಪಸಿಗೊಲಿದು ಜನಿಸಿದ ಶ್ರೀಕೃಷ್ಣ ಗೋಪಿ ೭

 

೧೨೬
ಎಂದಿಗಾದರು ಒಮ್ಮೆ ಕೊಡು ಕಂಡ್ಯ ಹರಿಯೆ ಪ
ಬೃಂದಾವನಪತಿ ದಯದಿಂದಲೆನಗೆ ಅ
ಫಲಭಾರಗಳಿಂದ ತಲೆವಾಗಿ ಶುಕಪಿಕಕಲಕಲದೊಳು ನಿನ್ನ ತುತಿಸಿ ತುಂಬೆಗಳಗಳರವದಿಂ ಪಾಡಿ ಅಪ್ಸರರಂತೆ ಪೂ-ಮಳೆಯಗರೆವ ತರುಲತೆಯ ಜನ್ಮವನು೧
ಕೊಳಲ ಶೃತಿಯ ಕೇಳಿ ಸುಖದ ಸಂಭ್ರಮದಲಿಹೊಲಬು ತಪ್ಪಿ ತಾವು ಅರೆಗಣ್ಣು ಮುಚ್ಚಿನಳಿನಾಸನದಿ ಮೌನಗೊಂಡು ಪರಮ ಹಂಸಕುಲದಂತೆ ಧ್ಯಾನಿಪ ಹಂಸ ಜನ್ಮವನು ೨
ನಖಗಳೆಂಬ ಸಂತತ ಪೂರ್ಣಚಂದ್ರನ್ನಅಕಳಂಕ ನವ ಚಂದ್ರಿಕೆಯನ್ನು ಸವಿದುಸುಖದ ಸುಗ್ಗಿಗಳಲ್ಲಿ ಸೊಕ್ಕಿ ಯೋಗಿಗಳಂತೆಅಖಿಳವ ಮರೆದ ಚಕೋರ ಜನ್ಮವನು೩
ಭಾವಜನೈಯನ ಕಡುಚಲ್ವಿಕೆಯನ್ನುಭಾವಿಸಿ ನಿಡುಗಂಗಳಿಂದ ದಣಿದುಂಡುಗೋವಳೇರಂತೆ ಮನೆ ಮಕ್ಕಳ ಹಿಂಗಿ ನಿನ್ನ ಆವಾಗ ಈಕ್ಷಿಸುವ ಗೋವ್ಗಳ ಜನ್ಮವನ್ನು ೪
ತೋಳದಂಡಿಗೆಮಾಡಿ ಹೀಲಿಯ ಚಾಮರವಮೇಲೆ ಎತ್ತಿದ ತಾವರೆ ಗೊಂಡೆಯಿಂದಓಲೈಸಿ ನಿನ್ನನು ಒಲಿಸಿ ಮುಕುತರಂತೆನಾಲೋಕ್ಯ ಸುಖವುಂಬ ಗೋಪರ ಜನ್ಮವನು೫
ಕೊಳಲ ಧ್ವನಿಯ ಕೇಳಿ ಎದುರುಗೊಳ್ಳುತ ನಿನ್ನನಳಿನನಾಭಾ ಅವಧಾರೆಂದು ಪೊಗಳೇತಳಿಗೆ ಆರತಿಯೆತ್ತಿ ಲಕ್ಷ್ಮಿಯಂತೆ ನಿನ್ನಚೆಲುವ ಸವಿವಂಥ ಗೋಪೇರ ಜನ್ಮವನು ೬
ಇಂದಿರೆಯರಸ ಬ್ರಹ್ಮೇಂದ್ರಾದಿ ವಂದಿತಎಂದು ಮೊಸರ ಕಡೆಯುತ್ತಲಿ ನಿನ್ನಅಂದಿನ ಶ್ರುತಿಯೋ ಉಪ್ಪವಡಿಪ ವ್ರಜ-ದಿಂದುಮುಖಿಯರ ಜನ್ಮವ ಸಿರಿಕೃಷ್ಣ೭

 

ಸತಿ-ಪತಿ ಭಕ್ತಿಯ ಆವಿರ್ಭಾವ ಇಲ್ಲಿದೆ.
೧೮೩
ಎಂದೆಂದೆನ್ನ ಮನದಿಂದ ಅಗಲದಿರೋನಂದ ನಂದನನೆ ಆನಂದ ಮೂರುತಿಯೆ ಪ
ಬಹುಕಾಲ ನಿನ್ನ ಶ್ರವಣವೆಂಬ ಹೊನ್ನೋಲೆಯಬಹುಮಾನದಿಂದೆನ್ನ ಕಿವಿಯೊಳಿಟ್ಟುಮಹಿತ ಮಂಗಳಸೂತ್ರವೆಂಬೊ ದಾಸ್ಯವನ್ನು ಮಹದಾನಂದದಿ ಎನ್ನ ಕೊರಳೊಳ್ ಕಟ್ಟಿದೆಯಾಗಿ೧
ಸುಲಲಿತ ಸೈರಣೆಯೆಂಬ ಭೂಷಣವಿತ್ತುಸಲಹಿದೆ ಬಹು ಪ್ರೀತಿ ಸಖಿಯೆಂದೆನ್ನಬೆಲೆಯಿಲ್ಲದ ಸುಜ್ಞಾನ ನಿಧಿಯನಿತ್ತುಜಲಜಾಕ್ಷ ಎನ್ನನು ಒಲಿದು ಆಳಿದೆಯಾಗಿ ೨
ಎಲ್ಲಿ ನೀ ನಿಲಿಸಿದರೆನಗೇನು ಭಯವಿಲ್ಲಬಲ್ಲೆನೊ ವಿಶ್ವವ್ಯಾಪಕನೆಂಬುದಸಲ್ಲದೊ ಈ ಮುನಿಸೆನ್ನೊಳು ಸಿರಿಕೃಷ್ಣಒಲ್ಲದಿದ್ದರೆ ನಿನ್ನ ಸೆರಗಪಿಡಿದೆಳೆವೆ ೩

 

ಟೀಕಾಕೃತ್ಪಾದರೆನಿಸಿದ ಶ್ರೀ ಜಯತೀರ್ಥರ
(ಊ) ಯತಿವರರು
೧೬೮
ಶ್ರೀ ಜಯತೀರ್ಥರು
ಎದುರಾರೊ ಗುರುವೆ ಸಮರಾರೊ ಪ
ಮದನ ಗೋಪಾಲನ ಪ್ರಿಯ ಜಯರಾಯ ಅ.ಪ
ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದಗಡಣೆಯ ಕೇಳುತ ನುಡಿ ಮುಂದೋಡದೆಗಡಗಡ ನಡುಗುತ ಮಾಯ್ಗೋ ಮಾಯ್ಗಳುಅಡವಿಯೋಳಡÀÀಗೋರು ನಿಮ್ಮ ಭೀತಿಯಲಿ ೧
ಕುಟಿಲ ಮತಗಳೆಂಬೊ ಚಟುಲಂಧಕಾರಕ್ಕೆಪಟುತರ ತತ್ವ ಪ್ರಕಾಶಿಕೆಂತೆಂಬಚಟುಲಾ ತಪದಿಂದ ಖಂಡಿಸಿ ತೇಜೋ-ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ೨
ಅಮಿತ ದ್ವಿಜಾವಳಿ ಕುಮುದಗಳರಳಿಸಿವಿಮತರ ಮುಖ ಕಮಲಂಗಳ ಬಾಡಿಸಿಸ್ವಮತರÀ ಹೃತ್ಸಂತಾಪಗಳೋಡಿಸಿವಿಮಲ ಸುಕೀರ್ತಿಯ ಪಡೆದೆಯೊ ಚಂದ್ರ ೩
ವೇದ ಶಾಸ್ತ್ರಗಳೆಂಬೊ ಶೃಂಗಗಳಿಂದ ಸು-ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ವಬೋಧನೆಯೆಂಬ ದುಗ್ಧ ಶಿಷ್ಯವತ್ಸಂಗಳಿಗೆಆದರದಲಿ ಕೊಟ್ಟ ಯತಿಸುರಧೇನು ೪
ವ್ಯಾಸ ಸೂತ್ರಗಳೆಂಬ ಮಂದರವನು ವೇದರಾಸಿಯೆಂಬ ವಾರಾಶಿಯೊಳಿಟ್ಟುಶ್ರೀ ಸರ್ವಜ್ಞರ ವಾಕ್ಯ ಪಾಶದಿ ಸುತ್ತಿಭಾಸುರ ನ್ಯಾಯಸುಧಾ ಪಡೆದೆ ಯತೀಂದ್ರ೫
ವನಜನಾಭನ ಗುಣಮಣಿಗಳು ಸರ್ವಜ್ಞಮುನಿಕೃತ ಗ್ರಂಥಗಳವನಿಯೊಳಡಗಿರೆ ಸ-ಜ್ಜನರಿಗೆ ಟೀಕಾಂಜನದಿಂದ ತೋರಿಸಿಘನ ಸುಖಸಾಧನ ಮಾಡಿದ್ಯೊ ಧೀರ ೬
ಅರ್ಥಿಮಂದಾರ ವೇದಾರ್ಥ ವಿಚಾರ ಸ-ಮರ್ಥ ಶ್ರೀಕೃಷ್ಣ ಪಾದಾಂಬುಜಲೋಲ ಪ್ರ-ತ್ಯರ್ಥಿ ಮತ್ತೇಭಕಂಠೀರವಕ್ಷೋಭ್ಯ-ತೀರ್ಥಕರ ಜಾತ ಜಯತೀರ್ಥ ಯತೀಂದ್ರ ೭

 

೧೮೪
ಎನ್ನ ಬಿಂಬಮೂರುತಿಯ ಪೂಜಿಪೆ ನಾನುಮನಮುಟ್ಟಿ ಅನುದಿನ ಮರೆಯದೆ ಮರೆಯದೆ ಪ
ಗಾತ್ರವೆ ಮಂದಿರ ಹೃದಯವೆ ಮಂಟಪನೇತ್ರವೆ ಮಹದೀಪ ಹಸ್ತ ಚಾಮರವುಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳು ೧
ನುಡಿವ ಶಬ್ದಗಳೆಲ್ಲ ಹೂವುಗಳಾಯಿತುನಡೆವುದೆಲ್ಲವು ಬಹು ನಾಟ್ಯಂಗಳುಉಡುವ ಹೊದಿಕೆಯೆಲ್ಲ ಉಚಿತವಾದ ವಸ್ತ್ರಕೊಡುವ ಭೂಷಣವೆಲ್ಲ ದಿವ್ಯಾಭರಣ೨
ಧರಿಸಿದ ಗಂಧವೆ ಚರಣಕ್ಕೆ ಗಂಧವುಶಿರದಲ್ಲಿ ಮುಡಿಯುವ ಪುಷ್ಪವೆ ಮಾಲೆಸ್ಥಿರವಾಗಿ ಕೂಡಿದ ಬುದ್ಧಿಯೆ ಆರುತಿಅರಿತೊಡಲಿಗೆ ಉಂಬನ್ನವೆ ನೈವೇದ್ಯ೩
ಎನ್ನ ಸ್ವರೂಪವೆಂಬುದೆ ರನ್ನಗನ್ನಡಿಎನ್ನ ಮನೋವೃತ್ತಿ ಎಂಬುದೆ ಛತ್ರಇನ್ನು ನುಡಿವ ಹರಿ ನಾಮಾಮೃತವೇ ತೀರ್ಥಎನ್ನ ಮನವೆಂಬುದೆ ದಿವ್ಯ ಸಿಂಹಾಸನ ೪
ಅನ್ಯ ದೇವತೆ ಯಾಕೆ ಅನ್ಯ ಪ್ರತಿಮೆಯು ಯಾಕೆಅನ್ಯವಾದ ಮಂತ್ರ ತಂತ್ರವ್ಯಾಕೆಎನ್ನಲ್ಲಿ ಭರಿತ ಸಾಧನ್ನಂಗಳಿರುತಿರೆಚೆನ್ನಾಗಿ ಶ್ರೀಕೃಷ್ಣ ಸ್ವಾಮಿಯ ಪೂಜಿಪೆ ೫

 

೧೮೫
ಎನ್ನ ಮನ ಕಂಡಕಡೆಗೆ ಎರಗುತಿದೆನಿನ್ನಲ್ಲಿ ನಿಲಿಸಿ ಕಾಯೊ ಪ
ಚಕ್ಷುರಿಂದ್ರಿಯಗಳಿಂದ ಚದುರೆಯರಈಕ್ಷಿಸಿ ನೊಂದೆನೈಯಶಿಕ್ಷಕನು ನೀನೆ ಎನಗೆ ಸಿರಿಯರಸಭಕ್ಕುತರೊಳಿಟ್ಟು ಕಾಯೋ ೧
ಶ್ರೋತ್ರೇಂದ್ರಿಯಗಳಿಂದ ಸತತ ದು-ರ್ವಾರ್ತೆಗಳ ಕೇಳಿ ಕೆಟ್ಟೆಕರ್ತೃ ಎನಗೆ ನಿನ್ನಯಾ ಕಥೆಗಳನುಅರ್ಥಿಯಿಂದೆರೆದು ಕಾಯೋ ೨
ಘಾಣೇಂದ್ರಿಯಂಗಳಿಂದ ದುರ್ಗಂಧಗಳಘ್ರಾಣಿಸಿ ನೊಂದೆನೈಯಪ್ರಾಣೇಶ ನಿನಗರ್ಪಿತ ಪರಿಮಳವಮಾಣದೆ ಇತ್ತು ಕಾಯೋ ೩
ರಸನೇಂದ್ರಿಯಂಗಳಿಂದ ಷಡ್ರಸಗಳನುಹಸಿದು ನಾ ಸೇವಿಸಿದೆನೋಬಿಸಜಾಕ್ಷನೇ ನಿನ್ನಯ ಪ್ರಸಾದವನುಆಸ್ವಾದಿಸೆನಗೆ ದೇವ ೪
ತ್ವಚೇಂದ್ರಿಯಂಗಳಿಂದ ತಾಮಸರಸೋಕಿ ನಾ ಕೆಟ್ಟೆನೆಯ್ಯಕಾಕು ಮಾಡದೆ ಎನ್ನನು ಸಿರಿಕೃಷ್ಣಸಾಕಾರನಾಗಿ ಸಲಹೋ ೫

 

೧೨೭
ಎಲ್ಲಿ ಮಾಯಾವಾದನೆ ರಂಗಯ್ಯನುಎಲ್ಲಿ ಮಾಯಾವಾದನೆಪ
ಎಲ್ಲಿ ಮಾಯಾವಾದ ಫುಲ್ಲನಾಭಕೃಷ್ಣಚೆಲ್ಲೆ ಗಂಗಳೆಯರು ಹುಡುಕ ಹೋಗುವ ಬನ್ನಿ ಅ.ಪ.
ಮಂದ ಗಮನೆಯರೆಲ್ಲ ಕೃಷ್ಣನ ಕೂಡೆಚೆಂದದಿ ಇದ್ದೆವಲ್ಲಕಂದರ್ಪ ಬಾಧೆಗೆ ಗುರಿಯ ಮಾಡಿದನಲ್ಲಮಂದಮತಿ ನಮಗೆ ಬಂದು ಒದಗಿತಲ್ಲ ೧
ಸರಸಿಜಾಕ್ಷಿಯರು ಕೂಡಿ ಕೃಷ್ಣನ ಕೂಡೆಸರಸವಾಡುತಲಿದ್ದೆವೆಕರೆಕರೆಗೊಳಿಸಿ ಮನ್ಮಥ ಬಾಧೆಗೊಪ್ಪಿಸಿಚರಣ ಸೇವಕರಾದ ತರಳೆಯರನು ಬಿಟ್ಟು ೨
ಭಕ್ತವತ್ಸಲ ದೇವನು ತನ್ನವರನ್ನುಅಕ್ಕರದಲಿ ಪೊರೆವನುಸಿಕ್ಕದೆ ಹೋಗನು ಹುಡುಕುತ್ತ ಹೋಗುವಅಕ್ಕಯ್ಯ ಬನ್ನಿರೆ ಉಡುಪಿ ಶ್ರೀಕೃಷ್ಣನು ೩

 

ಬಾಲಕೃಷ್ಣನಿಗೆ ಗೋಪಿ (ಯಶೋದೆ)
೧೨೮
ಎಷ್ಟು ಜನ್ಮದಲಿ ಮಾಡಿದಳೊ ಗೋಪಿ ಶ್ರೀ-ಕೃಷ್ಣನ ಲೀಲೆಯನು ನೆನೆದು ಹಿಗ್ಗುವ ಸುಕೃತ ಪ
ಅಂಬುರುಹನಾಭನಿಗೆ ಅರಳೆಲೆಯಲಂಕರಿಸಿತುಂಬೆಗುರುಳಿಗೆ ಸುತ್ತ ಜಡೆಯನ್ನು ಹೆಣೆದುಸಂಭ್ರಮದಿ ಚಂಡಿಕೆಗೆ ಸರಸಮಲ್ಲಿಗೆ ಸುತ್ತಿನಂಬಿಸುತ ನಗಿಸಿ ಮುದ್ದಾಡುವೊ ಸುಕೃತ ೧
ಮದನ ಜನಕನಿಗೆ ಮಾಗಾಯಿ ಬಾವುಲಿಯಿಟ್ಟುಪದಕ ವೈಜಯಂತಿಯನೆ ಕೊರಳಿಗ್ಹಾಕಿಮುದದಿ ಕೌಸ್ತುಭ ತುಲಸಿ ವನಮಾಲೆಯನು ಧರಿಸಿಪದುಮನಾಭನ ಪಾಡಿ ಪೊಗಳುವೊ ಸುಕೃತ ೨
ಕಸ್ತೂರಿಯಿಟ್ಟು ಕಂಗಳಿಗೆ ಕಾಡಿಗೆ ಹಚ್ಚಿಮತ್ತೆ ಕದಪಿನಲಿ ಕುಂಕುಮವನೊತ್ತಿಮುತ್ತಿನಂದದೊಳಿರುವ ಬೆವರ ಸೆರಗಿನೊಳೊರೆಸಿಮುತ್ತು ತಾರೈಯೆಂದು ಮುದ್ದಾಡುವೋ ಸುಕೃತ೩
ಅಸುರಕುಲ ಹರಣನಿಗೆ ಅಂಗಿಯನು ತೊಡಿಸಿ ಬಲುಕುಶಲದಿ ಪೀತಾಂಬರವನ್ನು ಉಡಿಸಿಪೊಸ ರತುನ ಬಿಗಿದ ಮಣಿಮಯದ ಮಕುಟವ ಮಂಡೆ-ಗೊಸವಿಟ್ಟು ನಲಿ ನಲಿದು ಮುದ್ದಾಡುವೊ ಸುಕೃತ೪
ಶಂಖ ಚಕ್ರಾಂಕಿತಗೆ ಭುಜಕೀರ್ತಿಯನೆ ಧರಿಸ್ಯ-ಲಂಕಾರದಲಿ ತಾರೆ ಮಣಿಯ ಕಟ್ಟಿಕಂಕಣವು ಕಡಗ ಥಳಥಳಿಪ ಪವಳದಿ ರಚಿಸಿಬಿಂಕದಲಿ ತೊಟ್ಟಿಲೊಳಗಿಟ್ಟು ತೂಗುವ ಸುಕೃತ೫
ಮುಂಗೈಯ ಮುರಿ ಮುತ್ತಿನುಂಗುರವು ಥಳಥಳಿಸೆರಂಗು ಮಾಣಿಕದ ಒಡ್ಯಾಣ ಹೊಳೆಯೆಕಂಗೊಳಿಸುತಿಹ ಕಾಂಚಿದಾಮವಲಂಕರಿಸಿ ಸ-ರ್ವಾಂಗದೊಳು ಗಂಧ ಪರಿಮಳವ ಸೂಸುವ ಸುಕೃತ೬
ಕಡಗ ಪೊಂಗೆಜ್ಜೆ ಕನಕದ ಘಂಟೆ ಸರಪಳಿಯಬಿಡದೆ ಶ್ರೀಹರಿಯ ಚರಣದಲ್ಲಿ ಧರಿಸಿಪೊಡವಿಯನು ಅಳೆದ ಶ್ರೀಪುರುಷೋತ್ತಮನಿಗೆ ಮೆ-ಲ್ಲಡಿಯನಿಡು ಎಂದೆನುತ ನಡೆಯ ಕಲಿಸುವ ಸುಕೃತ೭
ನೆಲನ ಈರಡಿಮಾಡಿ ಬಲಿಯ ಮೆಟ್ಟಿದ ಪಾದಚೆಲುವ ಚರಣದಿ ಭೂಮಿಯಳೆದ ಪಾದಶಿಲೆಯೆಡಹಿ ಬಾಲೆಯನು ಮಾಡಿದ ದಿವ್ಯವಾದಒಲಿದಿಟ್ಟು ನಡೆಯೆಂದು ನಡೆಯ ಕಲಿಸುವ ಸುಕೃತ೮
ಅಂದಿಗೆ ಪಾಯ್ವಟ್ಟು ಕುಂದಣದ ಕಿರುಗೆಜ್ಜೆಸಂದಣಿಸಿ ಕಿರಿಬೆರಳೊಳುಂಗುರಗಳುಚೆಂದದ ಕಡಗ ಪಾಡಗ ಘಂಟೆ ಸರಪಣಿಯುಮಂದಗಮನನ ಪಾದಪದ್ಮಕ್ಕಿಡುವೊ ಸುಕೃತ೯
ಪನ್ನಂಗಶಯನ ಆನೆಯನಾಡು ಶ್ರೀಕೃಷ್ಣಹೊನ್ನು ತಾ ಹೊನ್ನು ತಾ ಗುಬ್ಬಿಯೆಂದೆನುತತನ್ನ ಕರಗಳಲಿ ತಾರಮ್ಮಯ್ಯನಾಡಿಸುತರನ್ನ ರಂಗಯ್ಯ ತೋಳಾಡು ಎಂಬುವ ಸುಕೃತ ೧೦
ದಿನಕರ ನಿಭಾಂಗ ಕೇಶವ ರಾಮಚಂದ್ರ ಮುನಿಸನಕಾದಿವಿನುತ ಕುಣಿದಾಡು ಎನುತತನ್ನ ಕರಗಳಲಿ ತಕ್ಕೈಸಿ ಕೃಷ್ಣನ ದಿವ್ಯಘನ್ನ ಚರಿತೆಯ ಪಾಡಿ ಪೊಗಳುವ ಸುಕೃತ೧೧

 

೧೨೯
ಎಸಳುಗಂಗಳ ಕಾಂತಿ ಹೊಳೆವ ಮುಖದ ಢಾಳಶಶಿಮುಖಿ ಚೆಲುವಿಕೆಯ ಪ
ಕುಸುಮನಾಭನ ಕೂಡೆನೆಂಬೋ ಭರದಿಂದಬಿಸಿ ಹಾಲನೆ ಹೊತ್ತಳು ಅ
ಹಾಲಕೊಂಡೀರೆಂದು ಸಾರಿದಡಾ ಬಾಲೆಕೇರಿ ಕೇರಿಯ ಒಳಗೆಹಾಲಿನ ಬೆಲೆಯನ್ನು ಹೇಳೆ ಮಾನಿನಿ ರನ್ನೆಕೇಳೀದ್ದು ಕೊಡುವೆನೆಂದ ೧
ಕಮ್ಮನೆ ಕಾದಿಹ ಎಮ್ಮೆಯ ಹಾಲಿಗೆಒಮ್ಮನ ಹೊನ್ನೆಂದಳುಬೆಣ್ಣೆಗಳ್ಳ ಕೃಷ್ಣ ಕಣ್ಣು ಸನ್ನೆಯ ಮಾಡಿನಿನ್ನ ಮೋಹಿಪೆನೆನ್ನಲು ೨
ಕೆಟ್ಟೆ ಕೆಟ್ಟೆನೊ ಕೃಷ್ಣ ಇತ್ತಲೇತಕೆ ಬಂದೆಅತ್ತೆ ಮಾವಂದಿರುಂಟುಥಟ್ಟನೆ ಕಂಡರೆ ಬಿಟ್ಟು ಬಿಡರು ನಿನ್ನಮುಟ್ಟದಿರೆಂದಳಾಕೆ೩
ಎಂದ ಮಾತಿಗೆ ನಾನಂಜುವನಲ್ಲವೆಇಂದಿನ ದಿನದೊಳಗೆಮಂದಿರದೊಳಗಿದ್ದು ಮರುದಿನ ಪೋಗೆಂದುಮುಂಗೈಯ ಪಿಡಿದುಕೊಂಡ೪
ಗಂಡನುಳ್ಳವಳ ಮುಂಗೈಯ ಪಿಡಿವಂಥಪುಂಡುತನವು ಸರಿಯೆಪುಂಡರೀಕಾಕ್ಷಿ ಕೇಳ್ ದುಂಡುಮಲ್ಲಿಗೆ ಹುವ್ವಕಂಡರೆ ಬಿಡುವರೇನೆ ೫
ಬಾಳುವ ಹೆಣ್ಣಿನ ತೋಳನೆ ಪಿಡಿವುದುನ್ಯಾಯವೇನೋ ನಿನಗೆಫುಲ್ಲನಯನೆ ಕೇಳೆ ಆಯ್ದ ಮಲ್ಲಿಗೆ ಹುವ್ವಬಲ್ಲವರು ಬಿಡುವರೇನೆ೬
ಬೈಗಾಯಿತು ಬೈದಾರು ಮನೆಯಲ್ಲಿಬಿಡು ಬಿಡು ಎಲೊ ಗೋವಳಐಗಾರ ನಾ ಕಾಣೆ ಜಗದಲ್ಲಿ ಜೀವರಹಿಡಿದು ಬಿಡುವನಲ್ಲವೆ ೭
ಸಕ್ಕರೆ ಚಿಲಿಪಾಲು ಅರ್ಥಿ ಆಯಿತೆಂದುಎತ್ತಿಕೊಂಡು ಕುಡಿದಅಕ್ಕರೆಯಿಂದಲಿ ಬೇಡು ನೀ ಕೇಳಿದವಸ್ತುವ ಕೊಡುವೆನೆಂದ೮
ವಸ್ತುವೇತಕೆ ಪರವಸ್ತುವೆ ನಾ ನಿನ್ನಮೆಚ್ಚಿ ಬಂದೇನೆಂದಳುಭಕ್ತರ ಸಿರಿಕೃಷ್ಣ ಕುಕ್ಷಿಯೊಳಗೆ ಇಟ್ಟುರಕ್ಷಿಸು ಎಂದಳಾಕೆ ೯

 

ಇದೊಂದು ವ್ಯಾಜನಿಂದಾಸ್ತುತಿಯ ಜನಪ್ರಿಯ ಹಾಡು.
೧೮೭
ಏನ ಬೇಡಲೊ ನಿನ್ನ ದೇವಾಧಿ ದೇವ ಪ
ಏನಹುದೊ ನಿನ್ನೊಳಗೆ ಮಹಾನುಭಾವ ಅ.ಪ
ಮನೆಯ ಬೇಡಲೆ ವನಧಿ ಹಾಸಿಗೆಯು ವಟಪತ್ರವನಿತೆಯರ ಬೇಡಲೆ ಬ್ರಹ್ಮಚಾರಿಘನ ಸಖ್ಯವನು ಬಯಸೆ ನೆನೆಯುವರ ಮನದಲಿಹೆತಿನುವುದಕೆ ಕೇಳುವೆನೆ ನವನೀತಚೋರ ೧
ಒಡವೆಗಳ ಬಯಸೆ ಶಿಖಿಪಿಂಛ ತುಳಸಿ ಪತ್ರಕಡು ಸೈನ್ಯವನೆ ಬಯಸೆ ಗೋಪಾಲನುಬಿಡದೆ ರೂಪವÀ ಬಯಸೆ ನೀಲಮೇಘಶ್ಯಾಮಉಡುವುದಕೆ ಕೇಳುವೆನೆ ಸ್ತ್ರೀವಸನ ಚೋರ ೨
ಶಕ್ತಿಯನು ಗೋಪಿಕಾ ಸ್ತ್ರೀಯರಲಿ ವ್ರಯಗೈದೆಭಕ್ತಿಯನು ಸತ್ಯವಂತರಿಗಿತ್ತಿಹೆಭಕ್ತರನು ವಂಚಿಸುತ ನೀನು ಬಚ್ಚಿಟ್ಟಿರುವಮುಕ್ತಿ ಕಾಂತೆಯ ಕೊಡು ಸುಖಿಪೆನೊ ಶ್ರೀಕೃಷ್ಣ೩

 

(ಎ) ಹರಿದಾಸವರ್ಗ
೧೭೪
ಏನು ಸುಖವೊ ಎಂಥಾ ಸುಖವೊ ಹರಿಯಧ್ಯಾನ ಮಾಡುವರ ಸಂಗ ಪ
ತಂಬೂರಿ ಮೀಟುತ ದ್ವಯಅಂಬಕದಿ ಬಾಷ್ಪ ಬಿಂದುತುಂಬಿ ಆನಂದದಿಂದಸಂಭ್ರಮವಾಗಿಹರ ಸಂಗ ೧
ಗೆಜ್ಜೆಯ ಕಾಲಲ್ಲಿ ಕಟ್ಟಿಲಜ್ಜೆಬಿಟ್ಟು ಹರಿಯ ನಾಮಗರ್ಜನೆ ಮಾಡುತ್ತ ಅಘ-ವರ್ಜಿತರಾಗಿಪ್ಪರ ಸಂಗ ೨
ಪುಷ್ಪದಿ ಸುಗಂಧ ಹ್ಯಾಗೆಇಪ್ಪುದೊ ತದ್ವತು ಜಗ-ದಪ್ಪ ಬ್ರಹ್ಮಾದಿಗಳೊಳಗಿಪ್ಪನೆನ್ನುವರ ಸಂಗ ೩
ತುಚ್ಛ ವಿಷಯವ ತೊರೆದುನಿಶ್ಚಲ ಭಕುತಿಯಿಂದಅಚ್ಯುತಾನಂತನ ಪಾದಮೆಚ್ಚಿಸಿದವರ ಸಂಗ೪
ದರ್ವಿಯಂತೆ ಜೀವವನ್ನುಸರ್ವತ್ರ ತಿಳಿದು ಶೇಷಪರ್ವತವಾಸನ ಕಂಡುಉರ್ವಿಯೋಳಿಹರ ಸಂಗ ೫
ನಡೆವುದು ನುಡಿವುದುಕೊಡುವುದು ಕೊಂಬುವುದುಒಡೆಯನ ಪ್ರೇರಣೆಯೆಂದುನುಡಿದು ಹಿಗ್ಗುವರ ಸಂಗ ೬
ಸೃಷ್ಟಿಗೊಡೆಯನ ಮನ-ವಿಟ್ಟು ಭಜಿಸುತ ಜ್ಞಾನಶಿಷ್ಟರಾಗಿ ಸಿರಿ ಕೃಷ್ಣ-ಗಿಷ್ಟರಾಗಿಪ್ಪರ ಸಂಗ೭

 

೧೫೮
ಏನೆಂಬೆ ನಿಮ್ಮ ಕರುಣವು ದೇವವರ್ಯ, ಶ್ರೀಮ- ಪ
ದಾನಂದತೀರ್ಥಾರ್ಯ ಹರಿಕಾರ್ಯಧುರ್ಯ ಅ.ಪ.
ವಾರಿಧಿಯ ಗೋಷ್ಪಾದ ನೀರಂತೆ ದಾಟ್ಯಂದುಮಾರು ಮಲೆತಾಕ್ಷನನು ಮುರಿದು ಮೆರೆದೆಸಾರಿ ಬಹ ರಕ್ಕಸರ ಮುರಿದÉೂಟ್ಟಿ ನೀನಿಂದುಮೇರೆಯಿಲ್ಲದ ಭವಾಂಬುಧಿಯ ದಾಟಿಸಿದೆ ೧
ದಾನವನಶೋಕವನ ಕಿತ್ತು ಈಡ್ಯಾಡಂದುಶ್ರೀನಾಥಗೆನುತ ಲಂಕೆಯನುರುಪಿದೆಮಾನವರ ಶೋಕವನ ಬೇರೊರಸೆ ಕಿತ್ತಿಂದುದಾನವರಿಹ ಪುರವ ಪೂರೈಸಿ ಮೆರೆದೆ ೨
ಬೇಗ ಸಂಜೀವನವ ತಂದಿತ್ತು ಪೊರೆದ್ಯಂದುನಾಗಪಾಶದಿ ನೊಂದ ಕಪಿಕಟಕವಈಗ ಹರಿಭಕುತಿ ಸುಧೆಯ ನೆರೆದು ಪಾಲಿಸಿದೆರಾಗದಿಂ ಭವಪಾಶಬದ್ಧ ಜನರುಗಳನ್ನು ೩
ಮೂಲ ರಾಮಾಯಣವ ಪಾಡಿ ಪಾಡಿದೆ ಅಂದುಓಲ್ಯಾಡಿ ಹರಿಭಕ್ತಿ ಸಾಗರದೊಳುಮೂರ್ಲೋಕದೊಳಗೆಲ್ಲ ಅದರ ಸಾರವ ಬೀರಿತೇಲಿಸಿದೆ ಭವಾಬ್ಧಿ ಮಗ್ನ ಜನಗಳನಿಂದು ೪
ಹತ್ತು ದಿಕ್ಕನು ಗೆಲಿದು ರಾಜಸೂಯದಿ ಅಂದುಚಿತ್ತೈಸಿ ಹರಿಗಗ್ರ ಪೂಜೆಯನು ಮಾಡಿದೆಹತ್ತೆರಡು ಮತ್ತೊಂದು ದುರ್ಭಾಷ್ಯ ಜರಿದಿಂದು ಬಿತ್ತರಿಸಿದೆ ಭಾಷ್ಯದಿಂದಗ್ರಪೂಜೆಯನು ೫
ದ್ರೌಪದಿಯ ಸಂತವಿಟ್ಟಂದು ಮುಡಿ ಪಿಡಿದೆಳೆದಪಾಪಿ ದುಶ್ಶಾಸನನ ಬಸುರನ್ನು ಬಗೆದೆಪಾಪಿ ಜನರುಗಳೆಳೆಯೆ ವೇದಾಂತ ದೇವಿಯರಶ್ರೀಪತಿಗೆ ಸೇರಿಸಿದೆ ಭಾವವರಿದಿಂದು ೬
ಅಂದು ಕಲಿಯಂಶ ದುರ್ಯೋಧನನ ಸಂದುಗಳಕುಂದದೆ ಮುರಿದೆ ಗದೆಯಿಂದ ಸದೆದುಇಂದು ಕಲಿಯನನೇಕ ಶಾಸ್ತ್ರ ಶಸ್ತ್ರಗಳಿಂದಕೊಂದೆಳೆದೆ ಹರಿಯ ಮನ್ನೆಯದಾಳು ಭಳಿರೆ ೭
ಶ್ರುತಿಪಂಕಜಗಳರಳೆ ಅಜ್ಞಾನ ತತಿಯೋಡೆಗತಿಗಳಡಗೆ ಮಿಥ್ಯವಾದಿ ಖಳರಕುಮತಗಳು ಮುರಿಯೆ ಸತ್ಪಥವು ಕಾಣಿಸಲುವಿತತವಾಯಿತು ನಿನ್ನ ಪ್ರಭೆ ಸೂರ್ಯನಂತೆ ೮
ಜ್ಞಾನಚಂದ್ರಿಕೆ ಪೊಳೆಯೆ ಭಕ್ತಿವಾರಿಧಿಯುಕ್ಕೆಮನ ಚಕೋರವು ವಿಷ್ಣುಪದದಿ ನಲಿಯೆದೀನ ಜನ ಭಯವಡಗೆ ತಾಪತ್ರಯಗಳೋಡೆಆನಂದತೀರ್ಥೇಂದು ಶ್ರೀ ಕೃಷ್ಣ ತಾ ಮೆಚ್ಚೆ ೯

 

‘ಮದ್ದಳೆಯ ಇಲಿ’-
೧೮೮
ಒಂದರಿಂ ಸುಖವಿಲ್ಲ ಹುಟ್ಟು ಮೊದಲು ಡಂಭ- ಪ
ದಿಂದ ಭೈರೂಪ ತೊಟ್ಟು ತಿರುಗುತಿದೆಅ.ಪ
ಕಾಯ ದುರಾಸೆಯಲಿ ಕರಗಿಹೋಯಿತು ವೃಥಾಪ್ರಾಯದಿರುವಿಕೆಯು ಬಯಲಾಗಿ ಹೋಯ್ತುಸಾಯ ಬಟ್ಟೆ ಸಂಸಾರ ವಿಷಯ ಕೋಟಲೆಗೊಂಡುನಾಯ್ ಬಾಯ ಕೊಚೆಯಂತೆ ನಸಿಯುತಿದೆ ದೇಹ ೧
ಬುದ್ಧಿ ದೃಢ ದುರ್ಮಾರ್ಗದಿಂದ ನೋಡದೆ ಹೋಯ್ತುಶುದ್ಧ ಸತ್ಕರ್ಮವಿಲ್ಲದೆ ಸೂರೆ ಹೋಯ್ತುದುರ್ದೆಸೆಯ ಪಥದ ಲಂಪಟ ಮಾಯಕೆ ಸಿಲುಕಿಮದ್ದಳೆಯ ಇಲಿಯಂತೆ ಆಯಿತೀ ದೇಹ ೨
ಭೋಗ ಸಂಗವಮಾಡಿ ಪೋಗಲೈಸಿತು ದೇಹರಾಗಲೋಭವು ಹೆಚ್ಚಿ ವೈರಾಗ್ಯ ಹೊಯ್ತುಆಗಮವ ತಿಳಿಯದೆ ಕೃಷ್ಣನ್ನ ಧ್ಯಾನಿಸದೆಜೋಗಿ ಕೈ ಕೋಡಗನಂತೆ ತಿರುಗುತಿದೆ ೩

 

೩. ನೀತಿಬೋಧೆ
೨೦೬
ಓಲಗ ಸುಲಭವೋ ರಂಗೈಯನ ಪ
ಓಲಗ ಸುಲಭವೊ ಪುಸಿಯಲ್ಲ ಕರುಣಾಲ-ವಾಲನಾದ ಕರಿರಾಜ ವರದನ ಅ.ಪ
ದೂರ ಹೋಗಲಿಬೇಡ ತೊಡೆಯ ಗುದ್ದಲಿ ಬೇಡನೀರ ನೆರೆಯಬೇಡ ನಿಗಡದಲ್ಲಿರಬೇಡನಾರಾಯಣನೆಂಬ ನರನ ಯೋಗಕ್ಷೇಮಭಾರ ತನ್ನದೆಂಬ ಪ್ರಹ್ಲಾದ ವರದನ೧
ಸಂತೇಲಿ ಮಾಡಿದ ಸಾಷ್ಟಾಂಗ ನಮಸ್ಕಾರದಂತೆ ಅಲ್ಲವೆ ಅನ್ಯರ ಭಜಿಸುವುದುಅಂತರಂಗದಲ್ಲಿ ಹರಿ ನೀನೆ ಗತಿಯೆಂದುಚಿಂತಿಸಿದರೆ ಕಾಯ್ವ ಶ್ರೀರಾಮಚಂದ್ರನ೨
ತಪ್ಪು ಸಾಸಿರಗಳ ತಾಳಿ ರಕ್ಷಿಸುವತಪ್ಪು ಮೇಘವರ್ಣ ಕಾಂತಿಯಿಂದೊಪ್ಪುವಸರ್ಪಶಯನನಾದ ಸರ್ವಲೋಕೇಶÀನಅಪ್ರಮೇಯ ನಮ್ಮಪ್ಪ ಶ್ರೀಕೃಷ್ಣನ ೩

 

ಪುರಂದರದಾಸರನ್ನು ಕುರಿತ ಇವೆರಡು
೧೭೭
ಕಂಗಳಿಗೆ ಹಬ್ಬವಾಯಿತಯ್ಯಮಂಗಳಾತ್ಮಕ ಪುರಂದರದಾಸರನು ಕಂಡು ಪ
ಸಕಲ ತೀರ್ಥಕ್ಷೇತ್ರ ಯಾತ್ರೆ ಮಾಡಿದ ಫಲವುಸಕಲ ಸತ್ಕರ್ಮ ಸಾಧಿಸಿದ ಫಲವುಭಕುತಿಯಿಂ ಭಾಗೀರಥೀ ಮಜ್ಜನದ ಫಲವುರುಕುಮಿಣಿ ಪತಿಯ ಪದ ಭಕುತರನು ಕಂಡು ೧
ಇವರ ನರರೆಂದವರು ನರಕದಲಿ ಬೀಳುವರುಕವಿಜನರು ಒಪ್ಪಿ ಕೈಹೊಡೆದು ಹೇಳಿರಲುಅವನಿಯೊಳಗತಿ ದುರ್ಲಭವು ನಂದಗೋಪನ್ನಕುವರನಿದ್ದೆಡೆಯ ವೈಕುಂಠವೆಂಬುವರ ಕಂಡು ೨
ಧನ್ಯನಾದೆನು ನಾನು ಮನುಜನ್ಮದಿ ಪುಟ್ಟಿಮಾನ್ಯನಾದೆನು ಇನ್ನು ಈ ಜಗದೊಳಗೆಪನ್ನಂಗಶಯನ ಶ್ರೀಕೃಷ್ಣನ ದಾಸರನುಚೆನ್ನಾಗಿ ಸ್ಮರಿಸಿ ಪಾವನ್ನನಾದೆನಿಂದು ೩

 

೧೦೩
ಕಂಡೆ ಕನಸಿನಲಿ ಕಾರುಣ್ಯ ಮೂರುತಿ ಹರಿಯ ಪ
ಪುಂಡರೀಕಾಕ್ಷ ಪುರುಷೋತ್ತಮನ ಸಿರಿಯ ಅ.ಪ
ಚಂಡು ರನ್ನದ ತಾಯ್ತಿ ಮಲುಕು ಅರಳೆಲೆ ಹೊನ್ನಗೊಂಡೆಗಳ ಬಿಗಿದ ಶಿಖಿ ದಾರದೆಡೆಯದುಂಡು ಮಲ್ಲಿಗೆಯ ಪರಿಮಳವು ಘಮಘಮಿಪ ಅಳಿ-ವಿಂಡುಗಳ ಜರಿವಂಥ ಸುಳಿಗುರುಳಿನಿರವ೧
ಶಶಿವದನ ನಯನ ನಾಸಾಪುಟದ ಚಲುವಿಕೆಯನೊಸಲ ಸಿರಿ ನಾಮ ಕಸ್ತೂರಿ ತಿಲಕದಎಸೆವ ಕುಡಿ ಹುಬ್ಬುಗಳ ಕುಂಡಲದ ಕಾಂತಿಗಳದÉಸೆದೆಸೆಗೆ ಬೆಳಗುತಿಹ ವರದೀಪ್ತಿಗಳನು ೨
ಕೆತ್ತನೆಯ ಪದಕೆ ಕೆಲಬಲಕೆ ಒಲಿದಾಡುತಿಹಮುತ್ತು ಮಾಣಿಕದ ಹುಲಿಯುಗುರು ಸರದ
ಚಿತ್ತಾರದ ಹೊನ್ನ ಬಂದಿಯ ಯಣ್ಣೆ ಮಣಿ ಇದರ
ಒತ್ತಿನಲಿ ಶಿರಿವತ್ಸ ವೈಯಾರದಿರವ ೩
ತÉೂೀಳ ಬಳೆ ತಾಯ್ತಿ ಕಡಗ್ಹವಳ ಕಂಕಣವಾಕು
ನೀಲ ಮಾಣಿಕ್ಯದ ಬೆರಳುಂಗುರಗಳ
ಸಾಲು ಗಂಟೆಗಳ ರಂಜಿಸುವ ಕಾಂತಿಗಳ ಈ-
ರೇಳು ಭುವನಗಳ ಧರಿಸಿದ ಉದರವನು ೪
ಬಟ್ಟದೊಡೆಗಳಿಗೆ ಬಿಗಿದುಟ್ಟ ಚಲ್ಲಣ ಮೈಯ
ತೊಟ್ಟ ಜರತಾರದಂಗಿಯ ಚರಣದಿ
ಕಟ್ಟಿರುವ ಗೆಜ್ಜೆ ಸರಪಣಿ ಕಾಲ ಕಡಗಗಳ
ದಟ್ಟಡಿಯನಿಡುತ ಬಹ ಪುಟ್ಟ ಗೋಪಾಲಕನ ೫
ಬಾಲಕನು ಕರೆಯೆ ಬಹು ಕಂಬದಲಿ ಬಂದೊಡೆದು
ಬಾಲಕನ ತರಿದು ಸಾಂದೀಪಗಿತ್ತ
ಬಾಲೆ ಚೀರಿದರೆ ಅಕ್ಷಯವಿತ್ತ ದೇವಕಿಯ
ಬಾಲಕನ ಬಹು ಬಗೆಯ ಲೀಲೆಗಳನೆಲ್ಲ ೬
ಪೊಗಳಲೆನ್ನಳವಲ್ಲ ಪೊಸಬಗೆಯ ಮಹಿಮೆಗಳ
ಅಘಹರನ ಅಗಣಿತದ ಗುಣ ಗಣಗಳ
ನಿಗಮ ನಿಕರಕೆ ಮೈಯಗೊಡದ ಉಡುಪಿನ ಕೃಷ್ಣ
ನೊಗುಮಿಗೆಯ ಉನ್ನತದ ವೈಯಾರಗಳನು ೭

 

೧೩೦
ಕಂದನಿಗೆ ಕಾಲಿಲ್ಲವಮ್ಮ, ಪುಟ್ಟಿ-ಪ
ದಂದಿಂದ ಈ ಅಂಬೆಗಾಲು ಬಿಡದಮ್ಮ ಅ.ಪ
ಮಳೆ ಹೊಳೆ ಕತ್ತಲೊಳು ತರಳ ಮಗ ಬೆದರಿದನೊಕಳೆಯುಳ್ಳ ಮುಖಕೀಗ ಗ್ರಹ ಸೋಕಿತೋಎಳೆಯ ಬೆಳದಿಂಗಳೋಳೆತ್ತಣ ದೃಷ್ಟಿ ತಾಕಿತೊಲಲನೆ ಮೀಸಲ ಹಾಲು ಮೆರೆದೆರೆದ ಪರಿಯೊ ೧
ಬೆಣ್ಣೆಯನು ಮೆಲ್ಲುತ ಬೆದರಿ ಬಾಯಾರಿದನೊಉಣ್ಣೆ ಪೂತನಿ ಮೊಲೆಯ ವಿಷ ಸೋಂಕಿತೋಅಣ್ಣ ಪಾಪಿಯ ಭಯಕೆ ಅಂಜಿ ಕಾಲಿಟ್ಟನೊಹೆಣ್ಣು ದೈತೇಯರ ಕಾಲಲಿ ಬಂದ ಸರಕೊ ೨
ಧುರವಿಜಯ ಶ್ರೀಕೃಷ್ಣರಾಯಗೆ ನಿಮ್ಮಹರದೇರಂದವ ತೋರಬಂದ ಪರಿಯೋಧರೆಗಧಿಕ ವಿದ್ಯನಗರವಳಿತೆಂದು ಉದಯಗಿರಿಯಿಂದ ಬಂದ ಮುದ್ದು ಬಾಲಕೃಷ್ಣಗೆ ೩

 

೧೩೧
ಕಡೆಗೋಲ ತಾರೆನ್ನ ಚಿನ್ನವೆ- ಮೊಸರೊಡೆದರೆ ಬೆಣ್ಣೆಬಾರದು, ಮುದ್ದುರಂಗ (ಮಗುವೆ ಪಾ)
ಅಣ್ಣನ ಒಡಗೊಂಡು ಬಾರೈಯ-ಸವಿಬೆಣ್ಣೆಯ ಮುದ್ದೆಯ ಮೆಲುವಿರಂತೆಬಣ್ಣದ ಸರವನ್ನು ಕೊರಳಲ್ಲಿ ಹಾಕುವೆಚಿಣ್ಣರೊಡನೆ ಆಡಕಳುಹುವೆ ರಂಗ ೧
ಪುಟ್ಟ ಬಚ್ಚಿಯ ತಂದು ನಿನ್ನಯ ಚಿನ್ನದತೊಟ್ಟಿಲ ಕಾಲಿಗೆ ಕಟ್ಟಿಸುವೆಬಟ್ಟಲು ತುಂಬಿದ ಸಕ್ಕರೆ ನಿನಗೀವೆಕಟ್ಟಾಣಿ ಮುತ್ತಿನ ಸರವನೀವೆ ೨
ಬಡವರ ಭಾಗ್ಯದ ನಿಧಿಯೆ ಗೋಕುಲ-ದೊಡೆಯನೆ ಮಾಣಿಕ್ಯದ ಹರಳೆಕಡುಮುದ್ದು ಉಡುಪಿನ ಬಾಲಕೃಷ್ಣಯ್ಯದÀುಡುಕು ಮಾಡುವರೇನೊ ಪೆಂಗಳೊಳುರಂಗ೩

 

೧೩೨
ಕಣ್ಣಿಗೆ-ಕಟ್ಟಿದಂತಿದೆ ಪ
ಬಣ್ಣದ ಕೊಳಲ ಭಾವಿಸಿ ನೋಡಬಾರದೆಅ.ಪ.
ಕೂಡಿಹ ಸೋಗೆಗರಿಯ ಕಡುಸೊಂಪುಸೊಗಸುವಡೆದ ಸುಳಿಗುರುಳಿನ ಗುಂಪುಆಡುವ ಮುರುಹು ಮಾಗಾಯ್ಗಳ ಪೆಂಪುಕೂಡಿ ಕುಣಿವ ಕುಡಿಹುಬ್ಬಿನಲಂಪು ೧
ಕೊಳಲೆಡೆಗೆಡೆಗೆ ತೋರುವ ಕೆಂಬೆರಳುಕೊನಬು ವಡೆದ ಕೊಂಕಿದ ಗೆರೆಗೊರಳುಥಳಥಳಿಸುವ ತೇಲುವ ಕಣ್ಣರಳುತನುಗಂಪನು ಸೂಸುವ ಸುಯ್ಯೆಲರು ೨
ಸಿರಿಯೆದೆಯಲಿ ತೊಳಲುವ ಪುಲಿಯುಗುರುಸಿಂಗರಿಸಿದ ಸಿರಿ ಗಂಧದ ತಿಗುರುಕೊರಳ ದಂಡೆಯ ತುಳಸಿಯ ಹೊಸ ಚಿಗುರುಕೊನೆ ಮುಸುಕಲು ಪೊನ್ನುಗುರಿನ ಪೊದರು ೩
ಮುಳಿದು ಯಶೋದೆ ಕಟ್ಟಿದ ಪೊಡೆದಾರಮುದ್ದು ಪೊಳೆಯನೇವಳದುಡಿದಾರಬಳಸಿದ್ಹವಳಸರದ ಶೃಂಗಾರಬಣ್ಣದುಡಿಯ ಬಿಗಿದುಟ್ಟ ವೈಯಾರ ೪
ಒಂದಡಿ ನೆಲದೊಳು ನಿಂದಿಹ ನಿಲುವು, ಮ-ತ್ತೊಂದಡಿ ಸಾರ್ಚಿಪ ಬಲು ಗೆಲುವುಮುಂದೆ ಪಶುಗಳ ಮನ್ನಿಪನಿಲವು ತಂದೆ ಶ್ರೀಕೃಷ್ಣನಂದಿಗೆ ಪಾದದೊಲವು ೫

 

೧೦೪
ಕರೆತಾರೆಲೆ ರಂಗನ ಶ್ರೀಹರಿಯ ನೀ
ಕರೆತಾರೆಲೆ ರಂಗನ ಪ
ಕರೆದು ತಾರೆಲೆ ಕಮಲನಾಭನ
ಕರೆದು ತಾರೆಲೆ ಕರುಣನಿಧಿಯನು
ಕರೆದು ತಾ ಕಾಲಲ್ಲಿ ಗಂಗೆಯ
ಸುರಿದ ಬಾಲ ಬ್ರಹ್ಮಚಾರಿಯ ಅ.ಪ
ಮಧು ಕೈಟಭಾಸುರರ ಸಂಹರಿಸಿದ,
ಮತ್ಸ್ಯಾವತಾರನನು
ಮುದದಿ ಮಂದರಗಿರಿಯನೆತ್ತಿದ
ಸುರರಿಗಮೃತವನಿತ್ತ ಕೂರ್ಮನ
ಧರೆಯನುದ್ಧರಿಸಿದ ವರಾಹನ
ತರುಣಿ ನೀನೀಗ ತಂದು ತೋರೆಲೆ ೧
ಬಾಲನಿಗೊಲಿದವನ,
ಭಕ್ತ ನಿಧಿಯಾದ ನರಸಿಂಹನ
ಧರೆಯ ನೀರಡಿ ಅಳೆದ ವಾಮನ
ದೊರೆಯ ನಾನಿನ್ನೆಂದು ಕಾಂಬೆನೆ
ಭರದಿ ಭಾರ್ಗವನಾದ ರಾಮನ
ತರುಣಿ ತ್ವರಿತದಿ ತಂದು ತೋರೆಲೆ ೨
ದಶಶಿರ ನಳಿದವನ ಗೋಕುಲದಲ್ಲಿ,
ದಧಿಘೃತ ಮೆದ್ದವನ
ದುರುಳ ತ್ರಿಪುರರ ಗೆಲಿದ ಬೌದ್ಧನ
ಹರುಷದಲಿ ಹುಯವೇರಿ ಮೆರೆದನ
ಸುಜನ ರಕ್ಷಕನಾದ ಕೃಷ್ಣನ
ಸುದತಿ ನೀನೀಗ ತಂದು ತೋರೆಲೆ ೩

 

೨೧೮
ಕರ್ಪೂರದಾರತಿಯ ತಂದೆತ್ತಿರೆ ಚೆಲ್ವಸುಪ್ರಕಾಶಗೆ ಸುಜನರ ಕಾಯ್ವಗೆಪಾಂಡವಭಾವಗೆ ದೇವರ ದೇವಗೆನಿರ್ಜರೇಂದ್ರನ ಬಲಿ ಗರ್ಜಿಸುತಿರೆ ಕಂಡುಅರ್ಜುನಪ್ರಿಯ ತಾನು ಕುಬ್ಜನಾಗಿಹೆಜ್ಜೆ ಭೂಮಿಯ ಬೇಡಿ ಬಲಿಯ ಗರ್ವವನುನಿರ್ಜಿಸಲು ಬಂದ ವಾಮನಗೆ ನಿಸ್ಸೀಮನಿಗೆ ಪೂರ್ಣ ಕಾಮನಿಗೆ ೧
ನಳಿನನಾಭನೆಂದು ತಿಳಿದು ಬೇಗನೆ ಬಲಿಕೆಳದಿಯ ಕರೆದುದಕವತರಿಸಿಚಲುವ ಪಾದವ ತೊಳೆದಿಳೆಯ ದಾನವ ಮಾಡೆನಳಿನಜಾಂಡಕ್ಕಾಗಿ ಬೆಳೆದವಗೆ ಬಹು ತಳೆದವಗೆ-ಭೂಮಿಯಳೆದವಗೆ ೨
ಬಲಿಯ ಭಕ್ತಿಗೆ ಮೆಚ್ಚಿ ಚೆಲುವ ಉಡುಪಿನ ಕೃಷ್ಣಉಳಿದ ಭೂಮಿಯ ತೋರೆನ್ನುತ ನುಡಿಯೆಸತಿ ನಾಚಿಕೆಯಿಂದ ತನ್ನಳೆದುಕೋ ಎನ್ನತಲೆಯ ಮೆಟ್ಟಿದ ಬಹು ವಿಕ್ರಮಗೆ ಪರಾಕ್ರಮಗೆ ತ್ರಿವಿಕ್ರಮಗೆ೩

 

ಕಾಳಿದಾಸನ ಯಕ್ಷನು ಮೇಘವನ್ನು
೧೩೩
ಕಾಣದೆ ನಿಲ್ಲಲಾರೆ, ಕಮನೀಯ ಮೂರುತಿಯಪ್ರಾಣೇಶನ ತೋರೆ ಗಿಣಿಯೆ ಪ
ಮಾಣಿಕ್ಯ ಪದಕವ ಮನ್ನಿಸಿ ನಿನಗೀವೆಜಾಣೆ ಕೃಷ್ಣನ ತೋರೆ ಗಿಣಿಯೆ ಅ.ಪ.
ಮಕರಕುಂಡಲಧರನ ಮಕರಧ್ವಜನ ಪಿತನಮಕುಟ ಭೂಷಣನ ತೋರೆ ಗಿಣಿಯೆಮಕರಾಕ್ಷ ಸಂಹರನ ಮಕರಾರಿ ರಕ್ಷಕನಮಕರ ಶಿಕ್ಷಕನ ತೋರೆ ಗಿಣಿಯೆ ೧
ಇಂದುಕುಲ ಪಾವನನ ಇಂದು ರವಿಲೋಚನನಇಂದು ನೀ ಕರೆತಾರೆ ಗಿಣಿಯೆಇಂದುಶೇಖರನುತನ ಇಂದಿರೆಯರಸನತಂದು ತೋರೆ ಮುದ್ದುಗಿಣಿಯೆ೨
ಒಂದು ನಿಮಿಷವೊಂದು ಯುಗವಾಗಿ ತೋರಿತೆಸೌಂದರ್ಯನ ತೋರೆ ಗಿಣಿಯೆಮಂದಮಾರುತ ಸೋಕೆ ಮರುಳುಗೊಂಡೆನೆ ಎನ್ನಮಂದಿರಕೆ ಕರೆತಾರೆ ಗಿಣಿಯೆ ೩
ಕಾಯಜನ ಬಾಣದಲಿ ಕಾಯವೆಲ್ಲವು ಬಹಳಘಾಯವಾಯಿತು ನೋಡೆ ಗಿಣಿಯೆಮಾಯೆಗಳ ಮಾಡದೆ ಮಮತೆಯಿಂದಲಿ ಎನ್ನನಾಯಕನ ಕರೆತಾರೆ ಗಿಣಿಯೆ ೪
ಪಂಕಜೋದ್ಭವ ಪಿತನ ಪಂಕಜನಯನನಪಂಕಜನಾಭನ ತೋರೆ ಗಿಣಿಯೆಪಂಕಜಾಕ್ಷ ಸಿರಿಕೃಷ್ಣನ ಪದಪದ್ಮಶಂಕೆಯಿಲ್ಲದೆ ತೋರೆ ಗಿಣಿಯೆ ೫

 

೧೩೪
ಕಾಳಿಂಗನಾ ಮೆಟ್ಟೆ ನಾಟ್ಯವಾಡಿದ ಕಂಜನಾಭ ಕೃಷ್ಣನು ಪ
ಕಾಳಿಂಗನಾ ಮೆಟ್ಟಿ ಆಡಿದ ಭರದಲ್ಲಿಶ್ರೀವತ್ಸ ಉರದಲ್ಲಿ ಕೊರಳಲ್ಲಿ ವನಮಾಲೆತರಳತನದಲ್ಲಿ ಯಮುನೆಯ ಮಡುವಿನಲ್ಲಿಆಡುತ್ತ ಪಾಡುತ್ತ ಅ.ಪ.
ಕಾಲಲಿ ಗೆಜ್ಜೆ ಘಲುಘಲು ಘಲುಕೆನ್ನೆಫಾಲದಿ ತಿಲಕವು ಹೊಳೆ ಹೊಳೆಯುತ್ತಜ್ವಲಿತ ಮಣಿಮಯ ಲಲಿತ ಪದಕಹಾರಜ್ವಲಿತ ಕಾಂತಿ ಬೆಳಗುತ ದಿಕ್ಕುಗಳಲ್ಲಿ ೧
ಸುರರು ದುಂದುಭಿಯ ಢಣಢಣ ಢಣರೆಂದುಮೊರೆಯೆ ತಾಳಗಳು ಝಣಝಣ ಝಣಾರೆಂದುಹರಬ್ರಹ್ಮ ಸುರರು ತಥ್ಥೈತಥ್ಥೈಯೆನ್ನಲುನಾರದ ತುಂಬುರ ಸಿದ್ಧರು ವಿದ್ಯಾ-ಧರರು ಅಂಬರದಲ್ಲಿ ಆಡುತ್ತ ಪಾಡಲು ೨
ಯೋಗಿಗಳೆಲ್ಲ ಜಯ ಜಯ ಜಯಯೆನ್ನೆಭೋಗಿಗಳೆಲ್ಲ ಭಯಭಯ ಭಯವೆನ್ನೆನಾಗಕನ್ಯೆಯರು ಅಭಯ ಅಭಯವೆನ್ನೆನಾಗಶಯನ ಸಿರಿಕೃಷ್ಣ ಜನನಿಯ ಕಂಡುಬೇಗನೆ ಬಿಗಿದಪ್ಪಿ ಮುದ್ದನು ತೋರಿದ೩

 

೨೦೭
ಕೃಷ್ಣ ಕೃಷ್ಣ ಕೃಷ್ಣಯೆಂದು ಮೂರುಬಾರಿ ನೆನೆಯಿರೊ ಪ
ಸಂತುಷ್ಟವಾಗಿ ಮುಕುತಿ ಕೊಟ್ಟು ಮಿಕ್ಕ ಭಾರ ಹೊರುವನೋಅ.ಪ
ಸಕಲ ವೇದ ಶಾಸ್ತ್ರ ಪಠಿಸಿ ಸಾರವನ್ನು ತಿಳಿದರೇನುಮಕರ ಕುಂಡಲಧರನ ನಾಮಕೆ ಸರಿಯಿಲ್ಲವೊ ೧
ಕಮಲನಾಭನ ಚಿನ್ಹೆಯನ್ನು ಧರಿಸಿಕೊಂಡು ಮೆರೆಯಿರೊಯಮನ ಭಟರು ನೋಡಿ ಅಂಜಿ ಅಡವಿ ಹೊಗುವರೋ ೨
ಜನ್ಮವೆತ್ತಿ ಮಧ್ವಮತವ ಅನುಸರಿಸಿ ನಡೆಯಿರೊಸುಮ್ಮಾನದಿ ಸಿರಿಕೃಷ್ಣ ತನ್ನ ಲೋಕ ಕೊಡುವನೋ ೩

 

೧೩೫
ಕೃಷ್ಣಾ ನೀ ಬೇಗನೆ ಬಾರೊಮುಖವನೆ ತೋರೋ ಪ
ಕಾಶೀ ಪೀತಾಂಬರ ಕೈಯಲಿ ಕೊಳಲುಪೂಸೀದ ಶ್ರೀಗಂಧ ಮೈಯೊಳಗಮ್ಮ ೧
ಉಡಿಯಲ್ಲಿ ಉಡಿಗೆಜ್ಜೆ ಬೆರಳಲಿ ಉಂಗುರಕೊರಳಲಿ ಹಾಕಿದ ಹುಲಿಯುಗುರಮ್ಮ ೨
ತಾಯಿಗೆ ಬಾಯಲ್ಲಿ ಜಗವನ್ನೆ ತೋರಿದಜಗದೋದ್ಧಾರಕ ನಮ್ಮ ಉಡುಪಿಯ ಶ್ರೀಕೃಷ್ಣ ೩

 

೧೩೬
ಕೇಳೆ ಯಶೋದೆ ನಿನ್ನ ಮಗನ ಲೂಟಿಯಪ
ತಾಳಲಾರೆವೆ ನಾವು ತರಳನ ದುಡುಕುಪೇಳಬಾರದೆ ಗೋಪಾಲಕೃಷ್ಣಗೆ ಬುದ್ಧಿಅಮ್ಮಾ-ಇದು ಚೆನ್ನಾಯಿತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ ಅ.ಪ.
ಬಾಲಕನೆಂದು ಲಾಲಿಸಿ ಕರೆದರೆಮೂಲೆ ಮನೆಯೊಳಗೆ ಪೊಕ್ಕುಪಾಲು ಮೊಸರು ಬೆಣ್ಣೆಗಳ ಮೆದ್ದುಕೋಲಲಿ ನೀರ ಕೊಡಗಳೊಡೆದನೀಲವರ್ಣದ ದಿಟ್ಟ ನಿತ್ಯವೀ ಹೋರಾಟಬಾಲೆಯರಲ್ಲಿ ನೋಟ ಬಹಳ ಬಗೆಯಲ್ಲಿತಿಳಿದೆವೆಂದರೆ ಮೇಲೆ ಎಂಜಲುಗುಳಿ ಪೋದಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ ೧
ಮತ್ತೆ ಭಾಮಿನಿಯರೆಲ್ಲರು ಕೂಡಿಮಡುವಿನೊಳು ಜಲಕ್ರೀಡೆಯನಾಡಲುಚಿತ್ತಚೋರ ನಮ್ಮ ಸೀರೆಗಳೆಲ್ಲವಹೊತ್ತು ಕೊಂಡು ಮರವನೇರಿದಬತ್ತಲೆ ಭಾಮೆಯರೆಲ್ಲ ಬೇಡಿದರೆ ಕೊಡನಲ್ಲಯುಕ್ತಿ ಬಹುಬಲ್ಲ ಹತ್ತಿಲಿ ಬಂದು ಕರವೆತ್ತಿ ಮುಗಿದರೆ ವಸ್ತ್ರ ಕೊಡುವೆನೆಂದಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ ೨
ಸದ್ದು ಮಾಡದೆ ಸರಿ ಹೊತ್ತಿಲಿನಿದ್ದೆಗಣ್ಣಿಲಿ ನಾನಿರಲುಮುದ್ದು ಕೃಷ್ಣ ನಮ್ಮ ಮನೆಯವರಂತೆಮುದದಿಂದಲೆನ್ನನು ತಾ ಕೂಡಿದಎದ್ದು ನೋಡುವೆನಲ್ಲ ಆಹ ಏನೆಂಬುವರೆಲ್ಲಬುದ್ಧಿ ಮೋಸ ಬಂತಲ್ಲ ಪೊದ್ದಿ ಸಲ್ಲಿಸಿದೆಬುದ್ಧಿವಂತನೆಂದರೆ ಪರಿಹಾಸ್ಯ ಮಾಡಿ ನಗುವಅಮ್ಮಾ ಇದು ಚೆನ್ನಾಯ್ತು ತಿಳಿದವನಲ್ಲವೆನೀ ಕೇಳೆ ಯಶೋದೆ ನಿನ್ನ ಮಗನ ಲೂಟಿಯ ೩

 

೧೩೭
ಕೊಡೋ ಕೊಡೋ ಕೊಡೋತಡಮಾಡಬೇಡ ಹರಿಮಡದಿಯರುಡುವ ಸೀರೆಗಳ ಪ
ದೀನರಕ್ಷಕ ಎಮ್ಮ ಮಾನವನುಳಿಸೋಮಾನಿನಿ ಲೋಲಾ ಮಮತೆಯ ನಿಲಿಸೋ ೧
ಭಂಡು ಮಾಡದಿರೊ ಭಾವಜನೈಯನೆಪುಂಡರೀಕಾಕ್ಷ ನೀ ದಯಮಾಡೊ ೨
ಗರತಿಯರನು ಗೇಲಿ ಮಾಡುವುದೇಕೊಸರಸಿಜನಾಭ ಶ್ರೀಕೃಷ್ಣರಾಯ ೩

 

೧೩೮
ಕೊಳಲನೂದುವ ಚದುರನ್ಯಾರೆ ಪೇಳಮ್ಮಯ್ಯತಳಿರಂದದಿ ತಾ ಪೊಳೆವ ಕರದಿ ಪಿಡಿದು ಪ
ನಾದದಿ ತುಂಬಿತು ಗೋವರ್ಧನಗಿರಿಯಾದವಕುಲ ಘನ ಒರೆದಿತು ಖಗಕುಲ ಸಾಧಿಸಿ ನೋಡಲು ಕೃಷ್ಣನ ಈಗಲೆಸಾಧ್ಯವೆ ನೀ ಬೃಂದಾವನದೊಳು ೧
ಮೇವು ಮರೆತವು ಗೋವುಗಳೆಲ್ಲವುಸಾವಧಾನದಿ ಹರಿದಳು ಯಮುನಾಆವು ಕಾವುತಲಿ ಗೋವಳರೆಲ್ಲರಹಾವ ಭಾವದಲಿ ಬೃಂದಾವನದೊಳು ೨
ಸುರರು ಸುರಿದರಾಕಾಶದಿ ಸುಮಗಳಸರಿದು ಪೋಗಿ ನೋಡೆ ಬೃಂದಾವನದೊಳುಸಾರಿ ಸಾರಿ ಈ ಕೃಷ್ಣನು ಈಗಲೆತುರಗಳ ಕಾಯ್ವ ಕದಂಬ ವನದೊಳು ೩

 

೧. ದೇವದೇವತಾ ಸ್ತುತಿ
(ಅ) ಶ್ರೀ ಗಣೇಶ ಸ್ತವನ
೧೦೦
ಗಜಮುಖನೆ ಸಿದ್ಧಿದಾಯಕನೆ ವಂದಿಪೆ ಶರಣು
ಭಜಕರಿಷ್ಟವ ಕೊಡುವೊ ಗಣನಾಥ ಶರಣು ಪ.
ತ್ರಿಜಗ ವಂದಿತನಾದ ದೇವ ದೇವನೆ ಶರಣು
ಸುಜನರಿಗೆ ವಿಘ್ನವನು ಪರಿಹರಿಪೆ ಶರಣು ಅ.ಪ
ಮಂದ ಮತಿಯನು ಬಿಡಿಸಿ ಚಂದ ಜ್ಞಾನವನಿತ್ತು
ಇಂದಿರೇಶನ ಪಾದ ಹೊಂದಿಪ್ಪ ತೆರದಿ
ಸುಂದರಾಂಗನೆ ನಿನ್ನ ಪದದ್ವಂದ್ವಕೆರಗುವೆನು
ಸಂದೇಹ ಮಾಡದಲೆ ಇಂದು ಕರುಣಿಪುದು ೧
ಹರನ ತನಯನೆ ಕರುಣಾಕರನೆ ಸುರನರ ವರದ
ಮೊರೆಯ ಲಾಲಿಸಿ ಎನ್ನ ಕರಗಳನೆ ಪಿಡಿದು
ಪೊರೆಯದಿದ್ದರೆ ಬಿಡೆನು ನೆರೆದೆ ನಿನ್ನಡಿಗಳನು
ತ್ವರಿಯದಿಂದಲಿ ನೋಡು ಶರಣೆಂಬೆ ನಿನಗೆ ೨
ಸಿದ್ಧಿದಾಯಕ ನಿನ್ನ ಹೊದ್ದಿ ಮೆರೆವೆನೊ ನಾನು
ಅಬ್ಧಿಶಯನನ ಮಹಿಮೆ ಶಬ್ದದಲಿ ಪೇಳ್ವ
ಶುದ್ಧಮತಿಯನು ಕೊಟ್ಟು ಉದ್ಧರಿಸಬೇಕೆನ್ನ
ಮಧ್ವವಲ್ಲಭವೇಣುಕೃಷ್ಣಗತಿಪ್ರಿಯ ೩

 

೧೯೦
ಗೋವಿಂದ ಗೋವಿಂದ ಕೃಷ್ಣ ಹರಿ ಪ
ಗೋವಿಂದ ಮುಕುಂದ ಗೋಪಾಲಕೃಷ್ಣ ಅ.ಪ
ಕಡೆಗಣ್ಣಿಲಿಂದೊಮ್ಮೆ ನೋಡೋ ನಿ-ನ್ನಡಿಗೆರಗುವೆನೋ ನೀ ದಯಮಾಡೋಬಿಡದೆನ್ನ ನಿನ್ನವರೊಳು ಕೂಡೋ ಎ-ನ್ನೊಡೆಯ ನಿತ್ಯಾನಂದ ನೀ ನಲಿದಾಡೋ ೧
ಮಕ್ಕಳಿಗೊಡೆಯ ನೀನಾಗಿ ಹಸುಮಕ್ಕಳ ಕೂಡೆ ನೀನಾಡ ಹೋಗಿಸಿಕ್ಕದೆ ಬಹು ದಿನಕಾಗಿ ದಿಂಧಿ-ಮಿಕ್ಕೆಂದು ಕುಣಿಸುವೆ ಬಾ ಚೆನ್ನಾಗಿ೨
ಹೃದಯ ಕಮಲದೊಳಗೆನ್ನ ನಿನ್ನಪದಕಮಲವನೀ ದಯೆಗೈಯೊ ಮುನ್ನಚದುರಕುಣಿಯೊ ಚೆಲ್ವರನ್ನ ವಿ-ಬುಧರೊಡೆಯನೆ ನಿತ್ಯಾನಂದ ಕೃಷ್ಣ ೩

 

೧೯೧
ಚಿತ್ತಗೊಟ್ಟು ಸಿರಿಕೃಷ್ಣ ಕಾಯಿ ಕಂಡ್ಯ ಪ
ಮತ್ತೊಬ್ಬ ನಾನಲ್ಲ ನಿನ್ನ ಭೃತ್ಯರ ಭೃತ್ಯಅ.ಪ
ಕಾಲನವರ ಮುನ್ನ ಮುಂಚೂಣಿ ದಾಳಿಗೆಕೀಳು ಮನಮಂತ್ರಿ ಮೂಲೆಯ ಪೊಗಲುಮೂಲ ಬಲದಾಳಿಗೆ ಮುರಿದು ನಾನೋಡಲುಕಾಲಗೆಟ್ಟು ನಾನಿಹ ಕಾಲದಲ್ಲಿ ೧
ಪಿತ್ತವೆಂಬ ಕಿಚ್ಚು ವಾತಕೂಡ್ಹೆಚ್ಚಿತುಹತ್ತಿಕೊಂಡು ದೇಹಪುರ ಸುಡುವಾಗಮತ್ತೆ ಶ್ಲೇಷ್ಮವು ಕೂಡಿ ಸುತ್ತು ಮುತ್ತೆಳೆವಾಗಎತ್ತ ಹೋಗಲೆಂಬ ಸಂಕಟದೊಳಗೆ ೨
ತಿಂದೋಡಿ ಬಂಧುಗಳೆಲ್ಲ ಕೈಬಿಟ್ಟರುಮುಂದೆಮದೂತರು ಬಂದು ನಿಂದಾಗಎಂದಿಗಾದರು ಒಮ್ಮೆ ನೆನೆದುದ ಕೈಗೊಂಡುಹಿಂದಿಟ್ಟುಕೊಂಡೆನ್ನ ಕಾಯಿ ಕಂಡ್ಯ ಕೃಷ್ಣ ೩

 

೨೦೮
ಛೀ ಛೀ ಮನವೆ ನಾಚದ ತನುವೆನೀಚವೃತ್ತಿಯ ಬಿಟ್ಟುನೆನೆ ಕಂಡ್ಯ ಹರಿಯ ಪ.
ಕಿವಿಗೊಟ್ಟು ಗಂಟೆಯ ನಾದಕ್ಕೆ ಹುಲ್ಲೆಯನಿವಹ ಬಲೆಗೆ ಸಿಕ್ಕಿ ಬಿದ್ದುದನರಿಯನವ ಯೌವನೆಯರ ಕೋಕಿಲಾಲಾಪದಸವಿನುಡಿಗೇಳದಚ್ಯುತನ ಕಥೆ ಕೇಳೊ ೧
ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದುಉಣ್ಣದುರಿವುದ ನೀ ಕಂಡು ಕಂಡರಿಯಬಣ್ಣದಬಲೆಯರ ರೂಪಿಗೆ ಮರುಳಾಗಿಮಣ್ಣ ತಿನ್ನದೆ ಮಾಧವನ್ನ ನೀ ಸ್ಮರಿಸೋ ೨
ಗಾಣದ ತುದಿಯ ಮಾಂಸವ ಮೆಲ್ಲುವ ಮತ್ಸ್ಯಪ್ರಾಣವ ಬಿಡುವುದಂಗನೆಯರಧರವಮಾಣದೆ ಬಯಸಿ ಕೆಡದೆ ಶ್ರೀಮನ್ನಾರಾ-ಯಣ ನಾಮಾಮೃತಸವಿ ಎಲೆ ಮನವೆ ೩
ಅಳಿಯೆದ್ದು ಕರಿ ಕರಿಣಿಯ ಸ್ಪರುಶಕೆ ಪೋಗಿಕುಳಿಯ ಬಿದ್ದುದ ನೀ ಕಂಡು ಕಂಡರಿಯಲಲನೆಯರಾಲಿಂಗನಕೆÀಳೆಸದೆ ಸಿರಿ-ಲಲನೇಶನಂಘ್ರಿಯ ಅಪ್ಪಿಕೋ ಮನವೆ ೪
ಅಳಿ ಪರಿಮಳಕ್ಕಾಗಿ ನಳಿನದೊಳಗೆ ಸಿಕ್ಕಿಅಳಿವಂತಂಗನೆಯ ಮೈಗಂಧವ ಬಯಸಿಬಳಲದೆ ವರದ ಶ್ರೀಕೃಷ್ಣನಂಘ್ರಿಯೊಳಿಪ್ಪತುಳಸಿಯನಾಘ್ರಾಣಿಸು ಕಂಡ್ಯಮನವೆ ೫

 

೧೯೨
ಜನುಮ ಜನುಮದಲ್ಲಿ ಕೊಡು ಕಂಡ್ಯ ಹರಿಯೆ ಪ
ಅನಿಮಿತ್ತ ಬಂಧು ಕೃಷ್ಣ ದಯದಿಂದಲೆನಗೆ ಅ.ಪ
ಮೆರೆವ ಊಧ್ರ್ವ ಪುಂಡ್ರ ಎರಡಾರು ನಾಮವುಕೊರಳೊಳು ತುಲಸಿಯ ವನಮಾಲೆಯುಮೆರೆವ ಶಂಖಚಕ್ರ ಭುಜದೊಳೊಪ್ಪುತ ನಿಮ್ಮಸ್ಮರಿಸುತ್ತ ಹಿಗ್ಗುವ ವೈಷ್ಣವ ಜನುಮವ ೧
ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮಹರ ಇಂದ್ರಾದ್ಯಖಿಳರು ತವ ಸೇವಕರುವರ ತಾರತಮ್ಯ ಪಂಚ ಭೇದ ಸತ್ಯವೆಂದುನೆರೆ ಪೇಳುವ ವಾಯುಮತದ ಸುಜ್ಞಾನವ ೨
ಸಕಲ ವಿಬುಧೋತ್ತಮರಲ್ಲಿ ನಮ್ರತೆಯುಸುಖ ತೀರ್ಥರಲಿ ಮುಖ್ಯ ಗುರು ಭಾವನೆಯುಮುಕುತಿ ಪ್ರದಾಯಕ ಸಿರಿ ಕೃಷ್ಣ ನಿನ್ನಲ್ಲಿಅಕಳಂಳವಾದ ನವವಿಧ ಭಕುತಿಯನು ೩

 

೧೫೯
ಜಯ ವಾಯು ಹನುಮಂತ ಜಯ ಭೀಮ ಬಲವಂತ ಪ
ಜಯಪೂರ್ಣ ಮತಿವಂತ ಜಯ ಸಲಹೊ ಸಂತ ಅ.ಪ.
ಅಂಜನೆಯಲಿ ಹುಟ್ಟಿ ಅಂದು ರಾಮನ ಸೇವೆನಂದದಿಂದಲಿ ಮಾಡಿ ಕಪಿ ಬಲವ ಕೂಡಿಸಿಂದು ಲಂಘಿಸಿ ಖಳರ ವನ ಭಂಗಿಸಿ ಸೀತೆ-ಗುಂಗುರವ ಕೊಟ್ಟೆ ಲಂಕಾಪುರವ ಸುಟ್ಟೆ ೧
ಹರಿಗೆ ಚೂಡಾಮಣಿಯನಿತ್ತು ಹರಿಗಳ ಕೂಡಿಶರಧಿಯನು ಕಟ್ಟಿ ಅರಿಬಲವ ಕುಟ್ಟಿಉರಗ ಬಂಧನದಿಂದ ಕಪಿವರರು ಮೈಮರೆಯೆಗಿರಿಯ ಸಂಜೀವನವ ತಂದು ಬದುಕಿಸಿದೆ ೨
ದ್ವಾಪರಾಂತ್ಯದಿ ಪಾಂಡು ಭೂಪನಾತ್ಮಜನೆನಿಸಿಶ್ರೀ ಪಾರ್ಥಸಾರಥಿಯ ಭಜಕ ನೀನಾದೆಪಾಪಿ ಮಾಗಧ ಬಕ ಕೀಚಕ ಹಿಡಿಂಬಕರಕೋಪದಿಂದಲಿ ತರಿದೆ ಮೂಜ್ಜಗದಿ ಮೆರೆದೆ ೩
ಧಸ್ುರದಲಿ ದುರ್ಯೋಧನನ ಬಲವನು ತರಿದೆಅರಿತು ದುಶ್ಶಾಸನನ ಒಡಲನ್ನು ಬಗೆದೆಉರವ ತಪ್ಪಿಸಿ ಕೌರವನ್ನ ತೊಡೆಗಳ ಮುರಿದೆಹರಿಯ ಕಿಂಕರ ಧುರಂಧರಗಾರು ಸರಿಯೆ 4
ಕಲಿಯುಗದಲಿ ಕಳ್ಳರುದಿಸಿ ದುರ್ಮತಗಳನುಬಲಿಸಿ ಶ್ರೀಹರಿಯ ಗುಣಗಳನು ಮರೆಸಿಕಲಿಯನನುಸರಿಸಲು ಗುರುವಾಗಿ ಅವತರಿಸಿಖಳರ ದುರ್ಮತ ಮುರಿದೆ ಶ್ರೀಕೃಷ್ಣಪರನೆಂದೆ 5

 

೧೬೦
ಜಾಣ ನೀನಹುದೋ ಗುರುಮುಖ್ಯಪ್ರಾಣ ನೀನಹುದೊ ಪ
ರಾಣಿ ಭಾರತೀ ರಮಣ ನಿನಗೆಣೆಕಾಣೆ ತ್ರಿಭುವನದೊಳಗೆ ಸರ್ವಪ್ರಾಣಿಗಳ ಹೃದಯದಲಿ ಮುಖ್ಯಪ್ರಾಣನೆಂದೆನಿಸಿದೆಯೊ ಧಿಟ್ಟ ಅ.ಪ
ಧೀರ ನೀನಹುದೋ ವಾಯುಕುಮಾರ ನೀನಹುದೊಸಾರಿದವರ ಮನೋರಥಂಗಳಬಾರಿ ಬಾರಿಗೆ ಕೊಡುವೆನೆನುತಲಿಕ್ಷೀರನದಿ ತೀರದಲಿ ನೆಲೆಸಿಹಮಾರುತಾವತಾರ ಹನುಮ ೧
ಧಿಟ್ಟ ನೀನಹುದೊ ಬೆಟ್ಟವ ತಂದಿಟ್ಟವ ನೀನಹುದೊರೆಟ್ಟೆ ಹಿಡಿದಕ್ಷಯ ಕುಮಾರನಕುಟ್ಟಿ ದೈತ್ಯರ ಕೆಡಹಿ ಬೇಗದಿಸುಟ್ಟು ಲಂಕೆಯ ಸೀತೆಗುಂಗುರಕೊಟ್ಟೆ ಜಗಜ್ಜಟ್ಟಿ ಹನುಮ೨
ಚಂಡ ನೀನಹುದೊ ದುರಿತ ಮಾರ್ತಾಂಡ ನೀನಹುದೊಕುಂಡಲ ಕಿರಿಘಂಟೆ ಉಡಿಯಲಿಪೆಂಡೆ ನೂಪುರ ಕಾಲಲಂದಿಗೆತಂಡ ತಂಡದಿ ಕೃಷ್ಣನಂಘ್ರಿಪುಂಡರೀಕಕೆ ಕೈಯ ಮುಗಿದ ೩

 

೧೩೯
ತಣ್ಣನೆ ಹೊತ್ತಿಲಿ ನಾವು ಬೆಣ್ಣೆ ತೆಗೆಯುವ ಸಮಯದಿಚಿಣ್ಣ ಬಂದು ಕಣ್ಣು ಮುಚ್ಚಿ ಬೆಣ್ಣೆ ಸವಿದು ಪೋದನೆ ಪ
ಹಿಂಡುಗೆಳೆಯರ ಕೂಡಿಕೊಂಡುಬಂದು ಬಾಗಿಲೊಳಾಡುತಚೆಂಡು ಬುಗುರಿಯ ಹುಡುಕುತ ನಮ್ಮದುಂಡು ಕುಚಗಳ ಪಿಡಿದನೆ ೧
ಆಕಳ್ಹಾಲನು ಕಾಸಿ ನಾವುಮೀಸಲೆಂದಿಟ್ಟಿದ್ದೇವೆಜÉೂೀಕೆಯಿಂದಲಿ ಕೃಷ್ಣ ಬಂದುಮೀಸಲಳಿದು ಪೋದನೇ ೨
ಇದ್ದ ಮಾನವನುಳುಹಿಕೊಂಡುಎದ್ದು ಪೋಗುವುದುಚಿತವೆಬುದ್ಧಿ ಪೇಳಬಾರದೆ ನಮ್ಮಮುದ್ದು ಶ್ರೀಪತಿ ಕೃಷ್ಣಗೆ ೩

 

ಗೋಪಿಯೊಬ್ಬಳ ವಿರಹವ್ಯಥೆಯ ಚಿತ್ರಣವಿದೆ.
೧೪೦
ತುಂಬಿತು ಬೆಳೆದಿಂಗಳು-ಈ ವನದೊಳುತುಂಬಿತು ಬೆಳೆದಿಂಗಳು ಪ
ತುಂಬಿತು ಬೆಳೆದಿಂಗಳೀವನದೊಳಗೆಲ್ಲಅಂಬುಜನಾಥನು ಬಾರ ಕಾಣಕ್ಕ ಅ.ಪ.
ಮಾಗಿ ಹೋಗಿ ವಸಂತವು ಬರುತಿದೆಕೋಗಿಲೆ ತುಂಬಿಲ್ಲಿ ಕೂಗುತಿದೆಆಗಲೆ ಎಳೆಮಾವು ತಳಿರೇಳುತಲಿದೆನಾಗಶಯನ ಕೃಷ್ಣ ಬಾರ ಕಾಣಕ್ಕ೧
ಕಟ್ಟಿದ್ದ ಬಿಳಿಯೆಲೆ ತೊಟ್ಟಾರುತಲಿದೆಪಟ್ಲ ಜಾಜಿಯ ಮೊಗ್ಗು ಅರಳುತಿದೆಬಟ್ಟೆ ಬಟ್ಟೆಲಿ ನೋಡಿ ಕಣ್ಣು ಝುಮ್ಮಿಟ್ಟಿತುಧಿಟ್ಟತನದ ರಂಗ ಬಾರ ಕಾಣಕ್ಕ ೨
ಕಾದ ನೀರು ಎಲ್ಲ ಆರಿ ಹೋಗುತಲಿದೆಕಾಯ್ದ ಮಲ್ಲಿಗೆ ಹೂವು ಬಾಡುತಿದೆಮದನನ ಬಾಧೆಯು ಬಹಳವಾಗಿದೆ ಈಗಮದನನೈಯನು ಕೃಷ್ಣ ಬಾರ ಕಾಣಕ್ಕ೩
ಅಡವಿಲಿ ಕೆರೆಕಟ್ಟೆ ಕುಡಿವೋರಿಲ್ಲದೆ ಬತ್ತಿನಡೆವೋರಿಲ್ಲದೆ ದಾರಿ ಹಸಗೆಟ್ಟಿತುಕಾಡಮಲ್ಲಿಗೆ ಹೂವ ಕುಯ್ದು ಮುಡಿವರಿಲ್ಲನೋಡದೆ ಎನ್ನ ಜೀವ ಹಸಗೆಟ್ಟಿತಮ್ಮ ೪
ಹಾಸಿದ್ಹಾಸಿಗೆ ಮಂಚ ಹಸಗೆಟ್ಹೋಗುತಿದೆಪೂಸಿದ ಶ್ರೀಗಂಧ ಬೆವರುತಿದೆಲೇಸಾದ ನಮ್ಮೆದೆ ಮಿಂಚೇರುತಲಿದೆವಾಸುದೇವನು ಕೃಷ್ಣ ಬಾರಕಾಣಕ್ಕ ೫
ಕಾಯ ಹೊಳವು ಮಾಡಿ ಕುಚವ ಸೋರೆಯಮಾಡಿಮನವೆಂಬ ತಂತಿಯ ಹೂಡಿಕೊಂಡುಎರಡು ಕಂಗಳನ್ನು ಎರಡು ತಾಳವÀ ಮಾಡಿಮೇಳಕೊಪ್ಪುವೆ ರಂಗ ಬಾರ ಕಾಣಕ್ಕ೬
ಒಳದೊಡೆ ನಡುಗಿತೆ, ನೆರಿಯು ಹಾರುತಲಿವೆಕಳಕಳಿಸುತಲಿದೆ ಕಳವಳವುಪುಳಕವಾಗುತಲಿದೆ ಕಳೆಯುಗುಂದುತಲಿದೆನಳಿನಾಭನು ಕೃಷ್ಣ ಬಾರ ಕಾಣಕ್ಕ೭

 

ಉಡುಪಿಯ ಶ್ರೀಕೃಷ್ಣನ ಪೂಜಾಕಾಲಕ್ಕೆ
೧೪೧
ತುಳಸಿ ಮಧ್ಯದಿ ಇರುವ ಕೃಷ್ಣನಬಳಸಿ ನೋಡುವ ಬನ್ನಿರೆ ಪ
ಗೊಲ್ಲ ಸತಿಯರ ಗಲ್ಲ ಪಿಡಿದುಎಲ್ಲ ನಟನೆಯ ತೋರುವಫುಲ್ಲ ನಾಭನಮೆಲ್ಲ ಮೆಲ್ಲನೆಎಲ್ಲ ಹೆಂಗಳು ನೋಡಿರೆ ೧
ಕಾಮಿ ಜನರಿಗೆ ಕಾಮಿತಾರ್ಥವಪ್ರೇಮದಿಂದಲಿ ಕೊಡುತಿಹಕಾಮನೈಯನ ಚರಣ ಕಮಲವನಂಬಿ ಬದುಕುವ ಬನ್ನಿರೆ೨
ಅಂಗರಾಗ ಶ್ರೀರಂಗ ಮಂಗಳಸಿಂಗರದಿ ತಾ ನಿಂತಿಹಮಂಗಳಾಂಗನ ಮಂಗಳಾರತಿಎಲ್ಲ ಹೆಂಗಳು ನೋಡಿರೆ ೩
ಒಂದು ಕೈಯಲಿ ಗಂಧಪುಷ್ಪ ಮ-ತ್ತೊಂದು ಕೈಯಲಿ ರಂಗನುಮಂದಹಾಸದಿ ಇಂದುಮುಖಿಯರಿ-ಗ್ಹೊಂದಿಸುವನತಿ ಚಂದದಿ ೪
ಶುಕ್ರವಾರದಿ ಪೂಜೆಗೊಂಬುವಚಕ್ರಧರ ಶ್ರೀಕೃಷ್ಣನು ನಕ್ರಹರ ತ್ರಿವಿಕ್ರಮನು ಮನ-ವಾಕ್ರಮಿಸಿ ಸುಖ ಕೊಡುತಿಹ ೫

 

೧೯೩
ತೊಂಡನು ಕಂಡುದ ಬಿನ್ನೈಸುವೆನುಪಾಂಡವ ಪ್ರಿಯ ಎನ್ನ ತಪ್ಪು ಕಾಯಯ್ಯ ಪ
ಹರಿ ನಿನ್ನ ನಾಮ ಕಾಮಧೇನುವಿಗೆದುರಿತದೊಟ್ಟಿಲು ಮೇವು ಭವಾಂಬುಧಿಯುಅರಸಿ ಕುಡಿವ ನೀರೆರೆವಡೆನ್ನಲ್ಲಿಭರಿತವಾಗಿರೆ ಒಲಿದು ಎನ್ನೊಳ್ಯಾಕಿರಿಸೆ ೧
ಮುನಿಗಳ ಮನದ ಮೊನೆಯಾದ ಕೊನೆಯಲ್ಲಿಘನಭಕ್ತಿ ಪಾಶದಿ ಸಿಲುಕಲ್ಯಾಕೆಎನ್ನ ಚಿತ್ತ ಚಂಚಲದುಯ್ಯಾಲೆಯಲಿನಿನ್ನ ಮನಬಂದಂತೆ ಓಲ್ಯಾಡಲಾಗದೆ ೨
ಕರ್ಣರಂಧ್ರದಿ ಮನವನು ಪೊಕ್ಕು ಪಾಪವನಿನ್ನವರಲಿ ತಳವರಸಲ್ಯಾಕೆಎನ್ನೊಳ ಹೊರಗೆ ಪಾಪರಾಸಿಗಳಿವೆನಿನ್ನ ಮನಬಂದಂತೆ ಸೊರೆಗೊಳ್ಳೆಲೊ ಕೃಷ್ಣ ೩

 

ಈ ಕೀರ್ತನೆಯಲ್ಲಿ ಒಂದೊಂದು
೧೦೮
ತÉೂೀರೆ ಬೇಗನೆ ತೋಯಜನಯನೆಮದವಾರಣ ಗಮನೆ ಪ
ಮಾರನ ತಾಪವ ಸೈರಿಸಲಾರೆನೆನೀರೆ ನಿನಗೆ ಮುತ್ತಿನ್ಹಾರವ ಕೊಡುವೆನೆ ಅ.ಪ
ನೀರೊಳು ಮುಳು ಮುಳುಗಾಡುತ ಬಂದುಮಥಿಸಿದ ಪಯ ಸಿಂಧುಧಾರುಣಿ ಚಿಮ್ಮುತ ಮೇಲಕೆ ತಂದುದನುಜನ್ನ ಕೊಂದುಮೂರುಪಾದವ ಬೇಡುತ ನಿಂದುಮುನಿಕುಲದಲಿ ಬಂದುನಾರಿಬಿಟ್ಟು ಪರನಾರಿಯರಾಳಿದತೋರೆರಮಣಿ ಹಯವೇರಿ ಮೆರೆದನ ೧
ಕತ್ತಲೆ(ತಾಮಸ ದೈತ್ಯ)ನೊಡನೆ ಕಾದಿದನು ಧೀರಕಡೆದನು ಕೂಪಾರಕುತ್ತಿ ಮಣ್ಣಗಿದು ಮೆದ್ದನು ಬೇರದಾನವ ಸಂಹಾರ ಒತ್ತಿ ಬಲಿಯನು ಕಾಯ್ದನು ಶೂರಕುಜನ ಕುಠಾರ ಹತ್ತು ಶಿರನ ಕತ್ತರಿಸಿ ಗೋಕುಲದೊಳುಬತ್ತಲೆ ರಾಹುತನಾಗಿ ಮೆರೆದನ ೨
ನಿಗಮ ಕದ್ದವನ ನೀಗಿದ ಧಿಟ್ಟನೆಗಹಿದ ಬೆಟ್ಟಅಗಿದು ಮಣ್ಣನೆ ಜಠರದಲ್ಲಿಟ್ಟಘುಡಿ ಘುಡಿಸುವಸಿಟ್ಟಜಗಕೆಲ್ಲ ನೋಡೆ ಎರಡಡಿಯಿಟ್ಟಕೊಡಲಿಯ ಪೆಟ್ಟಮೃಗವ ಕೆಡಹಿ ಕುಂತಿಮಗಗೆ ಸಾರಥಿಯಾಗಿಜಗವ ಮೋಹಿಸಿ ಹಯವೇರ್ದ ಶ್ರೀಕೃಷ್ಣನ ೩

 

ಪುರಂದರದಾಸರನ್ನು ಕುರಿತ ಇವೆರಡು
೧೭೮
ದಾಸರೆಂದರೆ ಪುರಂದರದಾಸರಯ್ಯ ಪ
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಅ.ಪ
ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತಕಾಸುಗಳಿಸುವ ಪುರುಷನವ ದಾಸನೇ ೧
ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದಲೆತಂಬೂರಿ ಮೀಟಲವ ಹರಿದಾಸನೇ ೨
ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟುಗಾಯನವ ಮಾಡಲವ ದಾಸನೇನೈಯ೩
ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿಕೂಟ ಜನರ ಮನವ ಸಂತೋಷಪಡಿಸಿಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನುತ,ತೂಟಕವ ಮಾಡಲವ ದಾಸನೇನೈಯ೪
ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯವಾತಸುತನಲ್ಲಿಹನ ವರ್ಣಿಸುತಲಿಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವಪೂತಾತ್ಮ ಪುರಂದರ ದಾಸರಿವರೈಯ ೫

 

‘ಬಿಗಿಯದಿರು ಬೀಗರು’ ಎಂದು
೨೦೯
ದೂರಕ್ಕೆ ದೂರನೆಂದು ಹೆರೆ ಸಾರಲಿ ಬೇಡಸಾರಿಗೆ ಸಾರಿ ನಮ್ಮ ಕೃಷ್ಣನ್ನ ಸಾರಿರೈಯ ಪ
ಅನಂತ ಜನುಮದೊಳೊಂದೆ ಜನುಮಅನಂತ ಕ್ಷಣದೊಳಗೊಂದೆ ಕ್ಷಣಅನಂತ ನಾಮದೊಳೊಂದೇ ನಾಮವಮುನಮುಟ್ಟಿ ನೆನೆದರೆ ಬೆನ್ಹತ್ತಿ ಬಿಡನೈಯ ೧
ಅನಂತರೂಪದೊಳೊಂದೆ ರೂಪಅನಂತ ಗುಣದೊಳಗೊಂದೆ ಗುಣಅನಂತ ಜೀವರೊಳಗಾವನಾದರುಂ ಕನಸಿಲಿ ನೆನೆದರೆ ಋಣಿಯಾಗಿಪ್ಪನೈಯ ೨
ಒಂದೆ ಹೂವು ಒಂದೆ ಫಲವೊಂದೆಬಿಂದು ಜಲವೊಂದೆ ತುಳಸಿಒಂದೇ ವಂದನೆಯೊಂದೆ ಪ್ರದಕ್ಷಿಣೆಒಂದನರ್ಪಸಿದೊಡಂ ಕುಂದದಾನಂದವೀವನೈ ೩
ಹರಿ ಚಿನ್ಹಾಂಕನ ಹರಿದಿನದುಪವಾಸನೆರೆಯೂಧ್ರ್ವ ಪುಂಡ್ರ ತುಳಸಿಮಾಲೆಹರಿಯುತ್ಸವ ಸೇವೆ ಹರಿದಾಸರ ಸಂಗದುರಿತಾಬ್ಧಿಗೆ ಕುಂಭಸಂಭವನಲ್ಲವೆ ೪
ಹರಿಪಾದ ತೀರ್ಥವು ಹರಿಯ ನಿರ್ಮಾಲ್ಯವುಹರಿ ಆರತಿ ಧೂಪ ಶೇಷಂಗಳುಹರಿಯ ಪ್ರಸಾದ ಶಂಖೋದಕ ಪ್ರತ್ಯೇಕದುರಿತ ರಾಸಿಗಳನ್ನು ಸೋಕಲು ಸುಡದೆ ೫
ಒಮ್ಮೆ ಪಾಡಿದಡಂ ಒಮ್ಮೆ ಪೊಗಳಿದೊಡಂಒಮ್ಮೆ ಬೇಡಿದಡಂ ಒಮ್ಮೆ ನೋಡಿದಡಂಒಮ್ಮೆ ಸಾರಿದಡಂ ಮತ್ತೊಮ್ಮೆ ಕರೆದಡಂನಮ್ಮಾತನಿವನೆಂದು ಕೈಯ ನೀಡುವನೈಯ ೬
ತನ್ನಲ್ಲಿಪ್ಪನಾಗಿ ದೂರನಲ್ಲ ನರಹೊನ್ನು ಬೇಡ ಲಕುವಿರಮಣಗೆ ಅನ್ಯವ್ಯಾತಕ್ಕೆ ಈ ಪರಿಪೂರ್ಣಾನಂದಗೆನಿನ್ನವನೆಂದರೆ ತನ್ನನೀವನು ಕೃಷ್ಣ೭

 

೧೭೦
ಶ್ರೀ ಶ್ರೀಪಾದರಾಜರು
ಧರೆಯೊಳು ಮೂರೇಳು ಕುಮತರ ಭಾಷ್ಯವಕಿರುಕು ಹಾವಿಗೆ ಎಂದದಿ ರಚಿಸೆಚರಣದಿಂದಲಿ ತುಳಿದು ಶತ್ರು ಖಳರಾ ಕರೆದುಮೊರೆಯಿಡುತಿವೇ ಶಾಸ್ತ್ರಸೆರೆಯ ಬಿಡಿಸೀರೆಂದು ಪ . . .
ಹರಿಪ್ರೀತಿಗಾಗೆ ನಿರ್ಮಿಳ ಸುಕೃತಂಗಳಾಧರಿಸಿದಾ ಕುಸುಮಪರಿಮಳಂಗಳಾನರನೊಬ್ಬ ದೂಷಿಸೆ ಕೇಳಿ ಸರ್ವವನುಳುಹೆಅರಕ್ಷಣದಿ ಅವನ ತನು ಬಿರಿಯೆ ರಕ್ಷಿಸಿದೆ ೨
ಸುರನಾಥಪುರಕಂದು ಘನ ಪುಷ್ಪವಿಮಾನದಿಸರಿವುತ್ತಲಿರೆ ರಘುನಾಥೇಂದ್ರರವರಯೋಗಿ ವೃಂದಾವನ ಪ್ರದಕ್ಷಿಣೆ ಗೈಸಿಕರೆದು ಭಾಷಿಸಿ ಕಳುಹಿದಾಶ್ಚರ್ಯ ಚರಿತಾ ೩
ಸರಸಿಜಾಕ್ಷನ ಧ್ಯಾನದೊಳಿರೆ ವ್ಯಾಸಮುನಿಯಾಉರಗ ಬಂಧಿಸಲು ಧ್ಯಾನದೊಳೀಕ್ಷಿಸಿಮರುತ ವೇಗದಿ ಪೋಗಿ ಫಣಿಪನೊಡನೆ ಭಾಷಿಸಿತೊಡರು ಬಿಡಿಸಿದ ಅಹಿಪಾಶವ ಗುರುರಾಯ ೪
ಸಿರಿಕೃಷ್ಣ ಪದಕಂಜಭೃಂಗನೆಂದಿನಿಸುವವರ ಹೇಮವರ್ಣತೀರ್ಥರ ಕುವರಸುರನರೋರುಗರೋಳು ಪ್ರಖ್ಯಾತರೆನಿಸುವಅರಿಶರಭ ಭೇರುಂಡನೆನಿಪ ಶ್ರೀಪಾದರಾಯ ೫

 

ಈ ಹಾಡಿನ ಕೊನೆಯ ನುಡಿಯಲ್ಲಿ
೧೬೧
ಧೀರನ ನೋಡಿರೈ ಕರುಣಾಪೂರನ ಪಾಡಿರೈ ಪ
ವಾರಿಜವದನ ಸಮೀರಜ ಕಪಿನೃಪ, ದ್ವಿಜನ ಭಾವಿ ಅಜನ ಅ.ಪ
ಕಣಕಾಲಂದಿಗೆ ಒಪ್ಪುವ ಸರ, ಕಂಠಮಣಿಯ ವಜ್ರದ ಖಣಿಯಮಣಿಯದ ಬಹಳ ಕಠಿಣ ದಿತಿಜರನೆಲ್ಲ ಹಣಿಯಬೇಕೆಂಬ ಧಣಿಯಪ್ರಣತಿಸಿ ನಾರಾಯಣ ಪದ ಭಕ್ತಾಗ್ರಣಿಯ, ಚಿಂತಾಮಣಿಯತೃಣೀಕೃತಮರಪತಿವಿಶೋ(?) ಮಾಧವ ಫಣಿಯಕಪಿಶಿರೋಮಣಿಯ-೧
ಮಂದಸ್ಮಿತಯುತ ಕುಂದಕುಟ್ಮಲಸಮರದನ ಪೂರ್ಣಚಂದ್ರವದನಇಂದುಧರಾದಿಸುರ ವೃಂದವಂದಿತ ಪದಯುಗನ ಹಸ್ತಾಯುಧನಬಂದೀಕೃತ ಸುರಸುಂದರೀ ಸಮುದಯ ಸದನ ಜಿತನೇಕಮದನಮಂದಮತಿ ಜರಾಸಂಧನಂಗವ ಸೀಳಿದನ ಬಹು ಬಲ್ಲಿದನ ೨
ಮುದ್ದು ಮುಖವ ನೋಡಿ ತಿದ್ದಿ ಮಾಡಿದಮೈಸಿರಿಯ ಇನ್ನೊಮ್ಮೆ ದೊರೆಯಒದ್ದಕ್ಷಕುವರನ ಗುದ್ದಿಬಿಸುಟ ಹೊಂತಕಾರಿಯ ಭಾರತಿ ದೊರೆಯಶುದ್ಧಾನಂದ ಸಮುದ್ರ ಶ್ರೀಕೃಷ್ಣಗೆ ಕಿರಿಯ ಮಿಕ್ಕ ಜಗಕ್ಹಿರಿಯಅದ್ವೈತಶಾಸ್ತ್ರದ ಸದ್ದಡಗಿಸಿದ ಆರ್ಯಾ ನಮ್ಮ ಮಧ್ವಾಚಾರ್ಯಾ ೩

 

ಇದೊಂದು ಜನಪ್ರಿಯ ಕೀರ್ತನೆ.
೧೦೯
ನಂಬಿ ಕೆಟ್ಟವರಿಲ್ಲವೊ, ರಂಗೈಯನನಂಬದೆ ಕೆಟ್ಟರೆ ಕೆಡಲಿ ಪ
ಅಂಬುಜನಾಭನ ಅಖಿಳ ಲೋಕೇಶನಕಂಬು ಕಂಧರ ಕೃಷ್ಣ ಕರುಣಾ ಸಾಗರನಅ.ಪ
ತÀರಳ ಪ್ರಹ್ಲಾದ ಸಾಕ್ಷಿ ಸರಸಿಯೊಳಿದ್ದಕರಿರಾಜನೊಬ್ಬ ಸಾಕ್ಷಿ
ಮರಣಕಾಲದಿ ಅಜಾಮಿಳ ಮಗನನು ಕರೆಯೆಗರುಡನೇರಿ ಬಂದ ಗರುವ ರಹಿತನ
ದೊರೆಯೂರು ಯೇರಬಂದ ಪುತ್ರನನ್ನುಕೊರಳಿÀ್ಹಡಿದ್ಹೊರಡಿಸಲು
ಅರಣ್ಯದೊಳಗವನಿದ್ದ ಸ್ಥಳದಲ್ಲಿಭರದಿಂದೋಡಿ ಬಂದ ಭಕ್ತವತ್ಸಲನ್ನ
ತರುಣಿ ದ್ರೌಪದಿ ಸೀರೆಯ-ದುಶ್ಯಾಸನಸರಸರ ಸೆಳೆಯುತಿರೆಕರುಣಿ ತನ್ನೊಡತಿಯೊಡನೆ ಆಡುವುದ ಬಿಟ್ಟುತÀ್ವರದಿ ಅಕ್ಷಯವಿಟ್ಟ ಸಿರಿ ಕೃಷ್ಣರಾಯನ

 

(ಉ) ರುದ್ರದೇವರು
೧೬೬
ನಮೋ ಪಾರ್ವತೀಪತಿ ನುತಜನಪರ ನಮೋ ವಿರೂಪಾಕ್ಷ ಪ
ರಮಾರಮಣನಲ್ಲಮಲ ಭಕುತಿ ಕೊಡು ನಮೋ ವಿಶಾಲಾಕ್ಷ ಅ.ಪ
ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತ ರಕ್ಷಫಾಲನೇತ್ರ ಕಪಾಲ ರುಂಡಮಣಿ ಮಾಲಾಧೃತ ವಕ್ಷಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷಶ್ರೀ ಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ ೧
ವಾಸವನುತ ಹರಿದಾಸ ಈಶ ಕೈಲಾಸವಾಸ ದೇವದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವಭಾಸಿಸುತಿಹುದಶೇಷ ಜೀವರಿಗೆ ಈಶನೆಂಬ ಭಾವಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ ೨
ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೊ ಸರ್ವತ್ರಹತ್ತಿರ ಕರೆದು ಅಪತ್ಯನಂದದಿ ಪೊರೆಯುತ್ತಿರೊ ತ್ರಿನೇತ್ರತೆತ್ತಿಗನಂತೆ ಕಾಯುತ್ತಿಹ ಬಾಣನ ಸತ್ಯದಿ ಸುಚರಿತ್ರಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತೃ ಕೃಪಾಪಾತ್ರ೩

 

ಆತ್ಮನಿವೇದನೆಯ ಕಾಲಕ್ಕೆ ಆತ್ಮನಿಂದನೆಯಲ್ಲಿ
೧೯೫
ನಾನೆಲ್ಲಿ ಜ್ಞಾನಿಯು ನಾನೆಲ್ಲಿ ಸುಜನನು ಹೀನ ವಿಷಯಗಳುಂಬ ಶ್ವಾನನಂತಿರುವೆ ಪ
ಮೂತ್ರದ ಮನೆಗಾಗಿ ಗಾತ್ರ ಬಳಲಿಸಿ ಮದನಸೂತ್ರ ಬೊಂಬೆಯು ಎನಿಸಿ ನೇತ್ರದಿಂದಪಾತ್ರದವರನು ನೋಡಿ ಸ್ತೋತ್ರಮಾಡುತ ಹಿಗ್ಗಿರಾತ್ರೆ ಹಗಲು ಕೆಟ್ಟ ವಾರ್ತೆಯಲ್ಲಿರುವೆ ೧
ಧನದಾಸೆ ಘನವಾಗಿ ಅಣು ಮಹತ್ಕಾರ್ಯದೊಳುತಣಿಸಿ ದಣಿಯಲು ತೃಣವು ದೊರೆಯದಿರಲುಮನೆ ಮನೆಗೆ ಬಾಯ್ದೆರೆದು ಶುನಕನಂತೆ ದಿನಗಳೆವೆಮನುಜ ಪಶುವಿಗೆ ಇನ್ನು ಮುನಿಯೆಂಬಿರೆಂತೋ ೨
ನಾಲಗೆಯ ರುಚಿಯಿಂದ ಸಾಲದಾಯಿತು ಬಯಕೆಕಾಲ ಕಾಲಕೆ ನೆನಸಿ ಹಾಳಾದರೂಶೀಲಗಳ ಕಳಕೊಂಡು ಚಾಲುವರಿಯುತ ಪರರಆಲಯದ ಉಚ್ಚಿಷ್ಠ ಮೇಲಾದ ಸವಿಯ ೩
ಸ್ನಾನಧ್ಯಾನವನರಿಯೆ ಸಾನುರಾಗದಿ ಭಕ್ತಿಕೂನ(ಗುರುತು)ವಿಲ್ಲದೆ ಡಂಭ ಮೌನಿಯೆನಿಸಿನಾನಾ ವಿಷಯ ಮನದಿ ನಾ ನೆನೆಸುವೆ ನಿತ್ಯಏನಾದರೂ ಕಷ್ಟ ಕಾಣದಂತಿರುತಿಪ್ಪೆ ೪
ಪತಿತರೊಳು ಎನ್ನಂಥ ಪತಿತರೊಬ್ಬರ ಕಾಣೆಗತಿಯು ನೀನಲ್ಲದೆ ಅನ್ಯರಿಲ್ಲಪತಿತ ಪಾವನನೆಂಬೊ ಬಿರುದುಂಟುಮಾಡುವಕ್ಷಿತಿಪತಿ ಶ್ರೀಕೃಷ್ಣರಾಯ ನೀನಹುದೋ ೫

 

೧೯೬
ನಿದ್ರೆ ಬಂತಿದೆಕೋ ಅನಿ- ಪ
ರುದ್ಧನ ಸೇವೆಗೆ ವಿಘ್ನವ ಮಾಡುತ್ತ ಅ
ಅಸ್ತಮಾನದಿಂದ ಉದಯವಾಗೋತನಕಸ್ವಸ್ಥದಿ ಪಗಡೆ ಪಂಜಿಯನಾಡುತವಿಸ್ತಾರದಿ ವೇಷನೋಡೆ ನಿದ್ರೆಯಿಲ್ಲಪುಸ್ತಕ ಹಿಡಿಯಲು ಮಸ್ತಕ ಮಣಿಸುತ ೧
ಹರಿಕಥಾಶ್ರವಣ ಮಾಡಬೇಕೆನುತಲಿಪರಮ ಭಕುತಿಯಿಂದ ಕುಳ್ಳಿರಲುಕಿರಿಗಣ್ಣ ನೋಟದಿ ಸ್ಮರಣೆ ತಪ್ಪಿಸುತ್ತಗುರುಗುರು ಗುಟ್ಟುತ ಕೊರಳ ತೂಗಿಸುತ ೨
ಇಲಿಗಳಿಗೆ ಬೆಕ್ಕು ಸಾಧಿಪ ಪರಿಯಂತೆಹಲವು ಪರಿಯಲ್ಲಿ ಈ ನಿದ್ರೆಯುಛಲದಿಂದ ಮನುಜರ ನೇಮ ಕೆಡಿಸುತಿದೆಒಲಿದು ಶ್ರೀಕೃಷ್ಣನ ಜಾಗರ ಮಾಳ್ಪಲ್ಲಿ ೩

 

ಪರಮಾತ್ಮನ ಧ್ಯಾನ ಮಾಡುವಾಗ
೧೯೮
ನಿನಗಾರು ಸರಿಯಿಲ್ಲ-ಎನಗನ್ಯ ಗತಿಯಿಲ್ಲ ಪ
ನಿನಗೂ ನನಗೂ ನ್ಯಾಯ ಪೇಳುವರಿಲ್ಲ ಅ.ಪ
ಒಂದೇ ಗೂಡಿನೊಳು ಒಂದು ಕ್ಷಣವಗಲದೆಎಂದೆಂದು ನಿನ್ನ ಪಾದ ಪೊಂದಿರುವೆಬಂದ ವಿಷಯಂಗಳಿಗೆ ಎನ್ನನೊಪ್ಪಿಸಿಕೊಟ್ಟುಅಂದಗಾರನಂತೆ ನೋಡುವುದುಚಿತವೆ೧
ಪರ ಸತಿಗಳುಪಲು ಪರಮ ಪಾತಕಿಯೆಂದುಪರಿ ಪರಿ ನರಕಕ್ಕೆ ಗುರಿಮಾಡುವಿಪರಸತಿಯರ ಒಲುಮೆ ನಿನಗೊಪ್ಪಿತೆಲೊ ಕೃಷ್ಣದೊರೆತನಕಂಜಿ ನಾ ಶರಣೆಂಬೆನಲ್ಲದೆ ೨
ನಿನ್ನಾಜ್ಞದವನೊ ನಾ ನಿನ್ನ ಪ್ರೇರಣೆಯಿಂದಅನ್ನಂತ ಕರ್ಮವ ನಾ ಮಾಡಿದೆಎನ್ನವಗುಣಗಳನೆಣಿಸಲಾಗದೊ ಸ್ವಾಮಿಮನ್ನಿಸಿ ಸಲಹಯ್ಯ ಪರಮ ಪುರುಷ ಕೃಷ್ಣ ೩

 

ಶ್ರೀಹರಿಯನ್ನು ಒಲಿಸಿಕೊಳ್ಳಲು ಸ್ನಾನ,
೧೧೧
ನಿನಗೆ ನೀನೇ ಕೃಷ್ಣ ದಯಮಾಡಿ ಸಲಹೋಎನಗೊಂದು ಸಾಧನ ಲೇಶ ಕಾಣಬರದೋ ಪ
ಸ್ನಾನವ ಮಾಡಿ ನಿನ್ನ ಸಮತಿಸುವೆನೆಂದರೆಸ್ನಾನ ಮಾಡದೆ ಕಪ್ಪೆ ಸರ್ವಕಾಲದಲೀಧ್ಯಾನವ ಮಾಡಿ ನಿನ್ನ ಸಮತಿಸುವೆನೆಂದರೆಧ್ಯಾನವ ಬಕ ಸರ್ವಕಾಲದಲೀ ೧
ಜಪವÀ ಮಾಡಿ ನಿನ್ನ ಸಮತಿಸುವೆನೆಂದರೆಜಪದಲ್ಲಿ ಮನಸು ಎನ್ನಾಧೀನವÉೀನಯ್ಯಉಪವಾಸವೆ ನಿನ್ನಾ ಸಾಧನವೆಂದರೆಉಪವಾಸವಿರದೆ ಆ ಉರಗ ಸರ್ವ ಕಾಲದಲೀ ೨
ಸನ್ಯಾಸವೇ ನಿನ್ನ ಸಾಧನವೆಂದರೆಸನ್ಯಾಸವಿರದೇ ಆ ರಾವಣಗೇಕನ್ಯಾದಾನವೆ ನಿನ್ನಾ ಸಾಧನವೆಂದರೆಕನ್ಯಾದಾನ ಮಾಡಾನೆ ಕಂಸಗೆ ಜರಾಸಂಧ೩
ಜ್ಞÁತಿತ್ವವೆ ನಿನ್ನ ಸಾಧನವೆಂದರೆದಿತಿ ಕಶೆಪಾಸುತರು ದೈತ್ಯರಾಗಿಹರೇಭೂತಿಯೆ ನಿನ್ನ ಸಾಧನವೆಂದರೆಭೂತಿ ಇರದೆ ಆ ದುರುಳ ದುರ್ಯೋಧನಗೆ ೪
ಬಂಧುತ್ವವೇ ನಿನ್ನ ಸಾಧನವೆಂದರೆಬಂಧುತ್ವವಿರದೇ ಆ ಶಿಶುಪಾಲಗೆಒಂದೂ ಸಾಧನ ಕಾಣೇ ಉಚಿತಾವೇ ಶ್ರೀಕೃಷ್ಣಎಂದೆಂದಿಗೂ ನಿನ್ನ ದಾಸನೆನಿಸೊ ೫

 

ಕೋಳು ಹೋಗದ ಮುನ್ನ
೧೯೯
ನಿನ್ನ ಧ್ಯಾನವ ಮಾಡುತ್ತ ಮಾಡುತ್ತ
ಎನ್ನ ಮನ ಅನ್ಯಕ್ಕೆರಗುತ್ತಿದೆ ಪ
ಪತಿ ಅಂಗ ಸಂಗದೊಳಿರುತಿದ್ದು ಇದ್ದುಸತಿ ಉಪಪತಿಯನ್ನು ಬಯಸುವಂತೆಶ್ರುತಿ ತತ್ವ ಶಾಸ್ತ್ರಗಳರಿತಿದ್ದು ಇದ್ದು ದು-ರ್ಮತಿ ದುಷ್ಟ ಚರಿತೆಗೆ ಎಳೆಯುತಿದೆ ಎನ್ನ೧
ಪರಮಾನ್ನವನು ನಿತ್ಯ ಉಣುತಿದ್ದು ಇದ್ದುಸುರೆಯ ಚಿಂತಿಸಿ ರುಚಿಗೊಳ್ಳುವಂತೆಕರಿ-ಸುರನದಿಯಲ್ಲಿ ಮೀಯುತಿದ್ದು ಇದ್ದುಪರಮ ಹರುಷದಿ ಕೆಸರ ಚೆಲ್ಲಿಕೊಂಬಂತೆ ೨
ಪರಮ ಪಾವನ ಗುಣಪೂರ್ಣನೆ ನಿನ್ನಚರಣಯುಗಳವನ್ನು ಧ್ಯಾನಿಸುತನೆರೆಹೊರೆಯಲಿ ಮನ ಹೋಗದಂದದಲಿಕರುಣಿಸಿ ನಿಲ್ಲಿಸೊ ಸಿರಿಕೃಷ್ಣರಾಯ ೩

 

೧೪೨
ನಿನ್ನ ಮಗನೇನೆ ಗೋಪಿಚೆನ್ನಾರಿ ಚೆಲುವ ಉಡುಪಿಯ ಕೃಷ್ಣರಾಯಾ ಪ
ಮುಂಗುರುಳು ಮುಂದಲೆಗೆ ಭಂಗಾರದರಳೆಲೆರಂಗು ಮಾಣಿಕದುಂಗುರವಿಟ್ಟುಪೊಂಗೆಜ್ಜೆ ತೊಡರು ಅಂದಿಗೆ ಘಲು ಘಲುರೆನೆಅಂಗಳದಲಾಡುತ ಈ ಮುದ್ದುಬಾಲ ೧
ಕಟವಾಯಿ ಬೆಣ್ಣೆ ಕಾಡಿಗೆಗಣ್ಣು ಕಟಿಸೂತ್ರಪಟವಾಳಿ ಕೌಪೀನ ಕೊರಳಲ್ಲಿ ಪದಕಸಟೆಯಿಲ್ಲ ಬ್ರಹ್ಮಾಂಡ ಉದರದಲಿಂಬಿಟ್ಟುಮಿಟಮಿಟನೆ ನೋಡುವ ನೀ ಮುದ್ದುಬಾಲ ೨
ಹರಿವ ಹಾವನು ಕಂಡು ಹೆಡೆ ಹಿಡಿದಾಡುವಕರುವಾಗಿ ಆಕಳ ಮೊಲೆಯುಂಬುವಹಿರಿದಾಗಿ ನೋಡಲು ಅಂತರಂಗದ ಸ್ವಾಮಿಧರೆಯೊಳಂಬುಧಿ ತೀರ ಉಡುಪಿನ ಕೃಷ್ಣ ೩

 

೨೦೦
ನಿನ್ನಾಜ್ಞದವನೊ ನಾನೆನ್ನನೊಪ್ಪಿಸದೆಬಿನ್ನಹ ಚಿತ್ತೈಸಿ ಎನ್ನ ಪಾಲಿಸೊ ಕೃಷ್ಣ ಪ
ಏಳು ಸುತ್ತಿನಕೋಟೆ ಯಮನಾಳು ಮುತ್ತಿಕೊಂಡುಪಾಳು ಮಾಡೇವೆಂದು ಪೇಳುತಿರಲುಆಳು ಸಾಮಗ್ರಿಯ ಅಪಾರ ಬಲಮಾಡಿಕೋಳುಹೋಗದ ಮುನ್ನ ಕೋಟೆ ರಕ್ಷಿಸಬೇಕು ೧
ಆರು ಮೂರರ ಬಾಧೆ ಆರು ಎಂಟರ ಬಾಧೆಕ್ರೂರರೈವರ ಬಾಧೆ ಹೋರುತಲಿದಕೋಆರಿಂದ ನಿರ್ವಾಹವಾಗದು ಇವರನುಮೇರೆಲಿಡುವನೊಬ್ಬ ಧೀರನ್ನ ಬಲಮಾಡೊ ೨
ಲಕ್ಷ ಎಂಭತ್ತು ನಾಲ್ಕು ಜೀವರಾಶಿಗಳೊಳುಸೂಕ್ಷ್ಮದ ಕೋಟೆಂದುಪೇಕ್ಷಿಸದೆಪಕ್ಷಿವಾಹನ ನೀನು ಪ್ರತ್ಯಕ್ಷ ನಿಂತರೆಅಕ್ಷಯ ಬಲವೆನಗೆ ರಕ್ಷಿಸೊ ಸಿರಿಕೃಷ್ಣ ೩

 

೧೪೩
ನಿನ್ನಿಂದ ನಿನ್ನ ದಾಸರೆ ಮಿಗಿಲೋ ಕೃಷ್ಣ ಪ
ನಿನ್ನಿಂದ ನಿನ್ನ ದಾಸರೆ ಮಿಗಿಲಾಗಿಮನ್ನಿಸುವುದು ನಿನಗೇಸು ಪ್ರಿಯವೊರಂಗ ಅ.ಪ
ತನ್ನ ¸ತ್ಯಕಾಗಿ ಸತ್ಯಕಾಮನೆಂಬ ನಿನ್ನ ಪ್ರತಿಜ್ಞೆಯ ಬಿಡಿಸನೆ ಭೀಷ್ಮನು ೧
ಮೂರ್ಲೋಕಪತಿಯೆಂಬ ನಿನ್ನ ಧರ್ಮರಾಯಕಾಲು ತೊಳೆವ ಕೀಳು ಊಳಿಗಕ್ಕಿಕ್ಕನೆ೨
ದೇವರಥಾಯೂಥಪತಿಯೆಂಬ ನಿನ್ನನುಬೋವನ ಮಾಡನೆ ಪಾರ್ಥನು ಬಂಡಿಯ೩
ಬೊಮ್ಮಾದಿಗಳಗಮ್ಯಾಚೋರ ಪರ-ಬ್ರಹ್ಮ ನಿನ್ನನು ಬಲಿ ಬಾಗಿಲ ಕಾಯ್ಸನೆ ೪
ಶ್ರೀಪತಿ ಭೂಪತಿ ಈ ಪೆಸರಿರಲುಗೋಪಾಂಗನೇಯರ ನೀ ಕೂಡಿದೆಯೊ ಕೃಷ್ಣ ೫

 

೨೦೧
ನೀನೆ ಗತಿ ಮುಕುತೆನೆಗೆ ಅನಂತ ಜನುಮಗಳಲಿ ಪ
ಆನೇನರಿಯೆ ಗರುಡಗಮನ ಸಿರಿಕೃಷ್ಣ ರಾಯಾ ಅ.ಪ
ಅನ್ಯವಾರ್ತೆ ಅನ್ಯಸಂಗ ಅನ್ಯಜನರಾರಾಧನೆಅನ್ಯಸತಿ ಅನ್ಯಕರ್ಮ ಮೊದಲು ಸಕಲತನ್ನು ಮನ್ನ(=ತನುಮನ) ವಾಕ್ಯಗಳಿಂದ ಜರಿದೆ ನಿನ್ನವರೊಳುಎನ್ನ ಕೂಡಿಸೊ ನಿನ್ನ ಚರಣ ಭಕುತಿಯಲಿ ಶ್ರೀಶ ೧
ಅಂದು ವೇದೋದ್ಭವಳ ಮೊರೆಯನು ಕೇಳಿ ಕಾಯ್ದಂತೆಮಂದ ಗಜೇಂದ್ರನಿಗೊಲಿದು ರಕ್ಷಿಸಿದ ಪರಿಯಂತೆತಂದೆತಾಯಿ ಬಂಧುಬಳಗ ಎಂದೆಂದು ನೀನೇ ದಯಾ-ಸಿಂಧು ನಿನ್ನ ದಾಸರ ದಾಸನೆಂದೆನಿಸೆನ್ನ೨
ರನ್ನನಖಾಂಗುಳಿ ಪಾದ ಜಂಘೆ ಜಾನೂರುಕಟಿಘನ್ನ ಬಾಹು ಉದರವಕ್ಷ ಭುಜ ಕುಂತಳದಿಚನ್ನ ಕಿರೀಟ ಸರ್ವಾಲಂಕಾರದಿಂ ಶೋಭಿಸುವನಿನ್ನ ಮೂರ್ತಿಯನ್ನೆ ತೋರೊ ಭಕ್ತವತ್ಸಲ ಸಿರಿಕೃಷ್ಣ೩

 

೧೬೨
ನೀನೆ ವರಗುರು ಮುಖ್ಯಪ್ರಾಣನಿರಂತರವು ನಂಬಿದೆನೊ ನಿಖಿಳ ಗುಣಪೂರ್ಣ ಪ
ಜಾಣೆ ಕೋಮಲೆ ಭಾರತೀಶ ಸಕಲಪ್ರಾಣಿಗಳ ಹೃದಯಾಬ್ಜ ವಾಸ ಸುರೇಶಅ.ಪ
ವಾತಸುತನಾಗಿ ರಘುನಾಥ ಪ್ರಿಯ ದೂತ ಬಲುಯೂಥ ಲಂಕೆಯ ಪೊಕ್ಕು ಖ್ಯಾತಿಯನು ಪಡೆದೆಸೀತೆಗುಂಗುರವಿತ್ತು ವೀತಿಹೋತ್ರಗೆ ಪುರವಪ್ರೀತೆನಿಸಿದಾತ ದಿತಿಜಾತರಿಗೆ ಭೀತಿಕರ ೧
ಲಂಡ ಕೀಚಕ ಬಕರ ಮಂಡೆಯನು ಒಡೆದು ಉ-ದ್ದಂಡ ಮಗಧಾಧಿಪನ ದಂಡವನು ಸೀಳಿಭಂಡ ಕೌರವರ ಶಿರ ಚೆಂಡಾಡಿ ಪ್ರಬಲ ರಣ-ಮಂಡಲದಿ ಚಂಡರಿಪು ದಂಡೆಗಳ ಖಂಡಿಸಿದೆ ೨
ಸಾಂಗದಲಿ ಮಧ್ವಮತದಂಗವನು ಏರ್ಪಡಿಸಿಕಂಗೆಟ್ಟ ಕುಮತ ದುಸ್ಸಂಗಗಳನಳಿದುಗಂಗೆಪಿತ ಕೃಷ್ಣಪದ ಭೃಂಗ ಮೂಜ್ಜಗದೊಳಗೆತುಂಗ ಭವಭಂಗ ದಯಾಪಾಂಗ ಯತಿಪುಂಗವನೆ೩

 

೧೭೧
ನೆನೆದು ಬದುಕಿರೋ ಸತತ ನೆನೆದು ಬದುಕಿರೋ ಪ
ನೆನೆದು ಬದುಕಿ ಸುಜನರೆಲ್ಲಘನಗುಣಾಂಬುಧಿ ಶ್ರೀಪಾದರಾಯರ ಅ.ಪ
ಇತರ ಧ್ಯಾನವೆಲ್ಲವನುಳಿದುಅತಿಶಯದ ವಿರಕ್ತಿ ಬಲಿದುಮತಿ ವಿಶೇಷವೆನಿಪ ಮಧ್ವಮತಾಂಬುನಿಧಿಗೆ ಪೂರ್ಣಚಂದ್ರನ ೧
ಅಮಿತ ಪುಣ್ಯ ಅಗ್ರಗಣ್ಯನವಿಮತ ಹರನ ವಿನಯ ಪರನದ್ಯುಮಣಿತೇಜನ ದುರಿತ ದೂರನಶಮದಮಾದಿ ಗುಣಸಮುದ್ರನ೨
ಹೀನ ಕುಮತ ಮಾನಭಂಗನಸೂನ ಶರನ ಗೆಲಿದ ಘನ್ನನದಾನ ಕರ್ಣನ ದಯಾರ್ಣವನಜ್ಞಾನಪೂರಿತ ಶುಭ ಚರಿತನ ೩
ವಾದಿಕುಂಜರ ಪಂಚಮುಖನಸಾಧು ಸಜ್ಜನ ಕಲ್ಪವೃಕ್ಷನವೇದ ಶಾಸ್ತ್ರ ಪುರಾಣದಲಿಆದಿಶೇಷನ ಪೋಲ್ವ ಮುನಿಯ ೪
ವನಜನೇತ್ರ ಕೃಷ್ಣನ ಪ್ರಿಯನಕನಕವರ್ಣ ತೀರ್ಥರ ಸುತನ ಜನಸಮೂಹ ಸನ್ನುತ ಪರಮವನಧಿ ಗಂಭೀರ ಶ್ರೀಪಾದರಾಯರ ೫

 

ಆತ್ಮನಿವೇದನೆಯ ಕಾಲಕ್ಕೆ ಆತ್ಮನಿಂದನೆಯಲ್ಲಿ
೨೦೨
ನ್ಯಾಯವೆ ನಿನಗೆ ಎನಗೆ ಸಿರಿಕೃಷ್ಣ ಪ
ಬಾಯಾಡಬಹುದೆ ಕೈಯೊಳಿತ್ತ ಹಣಗಳ ಅ.ಪ
ಆರು ಅರಿಯದ್ಹಾಂಗೆ ಒಂಭತ್ತು ಕೊಡುವಾಗತೋರಿಯಾಡಿದೆ ಒಮ್ಮೆ ನಿನ್ನ ಹೆಸರಗಾರುಮಾಡದೆ ಬಡ್ಡಿ ತೆತ್ತು ಬರುವೆನೆಂದುಹಾರೈಸಿ ಕೊಡದೆ ಚುಂಗುಡಿಯ ನಿಲಿಸುವರೆ ೧
ಸಾಲವ ಬೇಡಿದರೆ ಕೋಪವೇ ಕಮಲಾಕ್ಷಕಾಲಿಗೆ ಎನ್ನ ಕೊರಳ ಕಟ್ಟಿಕೊಂಬೆಆಲಯದವರ ಕೇಳದೆ ನಿನಗೊಳಗಾದೆಭೋಳೆಯತನದಲ್ಲಿ ನಿನ್ನ ನಂಬಿದೆ ಹರಿ೨
ಅಸಲು ನಿನಗೆ ಸಮರ್ಪಣೆಯಾಯಿತೆಲೊ ದೇವಮೀಸಲು ಪೊಂಬೆಸರು ನಿರುತ ನಡೆಯಲಿಶಶಿಧರ ಬ್ರಹ್ಮಾದಿ ವಂದ್ಯ ಸತ್ಯವೆಂಬಮೀಸಲುಳುಹಿ ಎನ್ನ ಸಲಹೊ ಶ್ರೀಕೃಷ್ಣ ೩

 

೨೦೩
ಪುಟ್ಟಿದೆ ಭುವಿಯೊಳು ಬಹುದಿನ ಕಳೆದೆನೊಪುಟ್ಟಿಸ ಬೇಡವೆನ್ನ ಪ
ಪಟ್ಟಾಭಿರಾಮನೆ ಪರಮಘಟ್ಯಾಗಿ ನಿನ್ನ ಪಾದಗಳ ನಂಬಿದೆ ದೇವ ಅ.ಪ
ಎಂಭತ್ತು ನಾಲ್ಕು ಲಕ್ಷ ಯೋನಿಯಚೀಲಗಳಲಿ ಬಂದೆನೊ ಕುಂಭಿಣಿಯೊಳು ಪುಟ್ಟಿ ಬಹು ಪಾಪಗಳ ಮಾಡಿಕುಂಭೀಪಾಕದಿ ಬೆಂದೆನೊ
ಅಂಬುಜಮಿತ್ರನ ಸುತನಾಳುಗಳ ಕೈಲಿಅಮಿತಯಾತನೆಗೊಂಡೆÉನೊಅಂಬುಜನಾಭನೆ ಅಖಿಳ ಸುರರೊಡೆಯನೆಅರ್ತಾರ್ತಿಹರನೆಂದು ಕೇಳಿ ಬಂದೆನು ನಾನು ೧
ಜೇನಿನೊಳಗೆ ಬಿದ್ದ ನೊಣದಂತೆ ಸತಿಸುತ
ಜನಪಾಶ ಬದ್ಧನಾದೆಮೀನು ಮಾಂಸದಾಸೆಗ್ಹೋಗಿ ಸಿಕ್ಕಿದಂತೆಮೋಸ ಹೋದೆನೊ ಬರಿದೆಏಣವು ಕಿಂಕಿಣಿಧ್ವನಿಗೆ ಮರುಳಾದಂತೆಇಳೆಯೊಳು ಮಂಕಾದೆನೊಏನೆಂಬೆ ದಾಸರಿ ಕೋಡಗದಂದದಿಕುಣಿಯುವೆ ನಾನೆಲ್ಲ ಜನಗಳ ಮುಂದೆ ೨
ಕಾಯ ಪೋಷಣೆಗಾಗಿ ಹೇಯಕರ್ಮಂಗಳಕಾಲ ಕಾಲದಿ ಮಾಡ್ದೆನೊಜಾಯಾದಿಗಳ ರಕ್ಷಣೆಮಾಡೆ ಅದರಿಂದಜಾಗರೂಕನಾದೆನೊನ್ಯಾಯರಹಿತನಾಗಿ ಗುರು ಹಿರಿಯರ ಪಾದಭಜನೆ ಮಾಡದೆ ಪೋದೆನೊಕಾಯಜನೈಯನೆ ಶ್ರೀಕೃಷ್ಣರಾಯನೆಕಾಯಬೇಕೆನ್ನಪರಾಧಗಳನು ದೇವ೩

 

೧೬೩
ಪ್ರಾಣಪತೇ ನೀ ಸಲಹೊ ಪ
ಜಾಣ ಲಕ್ಷ್ಮಣನಿಗೆ ಪ್ರಾಣದಾನವ ಗೈದ ಅ.ಪ
ಧೀರಶೂರ ಗಂಭೀರ ಕಪಿ ವೀರನೆಭಾರತಿಕಾಂತನೆ ಮರುತಾವತಾರನೆ೧
ಸೀತಾಪತಿಯ ದೂತ ಖ್ಯಾತ ಹನುಮಂತನೆಮತಿವಂತ ಭೀಮನೆ ಯತಿ ಮಧ್ವರಾಯ೨
ದುಷ್ಟ ಶಿಕ್ಷ ಬಲು ಕಷ್ಟ ನಿವಾರಣಇಷ್ಟವ ಪಾಲಿಪ ಸಿರಿಕೃಷ್ಣನ ದೂತನೆ ೩

 

ಶ್ರೀಹರಿಯು ಸರ್ವವ್ಯಾಪಿಯೆಂಬುದನ್ನು
೧೧೨
ಬಲ್ಲವಗಿಲ್ಲಿದೆ ವೈಕುಂಠ ಪ
ಬಲ್ಲವಗೆಲ್ಲೂ ಶ್ರೀಹರಿ ಪೂಜೆ ಅ
ಶÀರೀರ ಹರಿಯ ಪಟ್ಟಣ ಹೃದಯಸರೋಜವಾತನ ಅರಮನೆ ಸೂರ್ಯಾದಿ ದೇವರು ಚಕ್ಷುರಾದಿಗಳಲ್ಲಿದ್ವಾರಪಾಲಕರಾಗಿ ಇಪ್ಪರೆಂದು ೧
ನಡೆ ಸರ್ವದಾ ಶ್ರೀಹರಿಯ ಯÁತ್ರೆ ನುಡಿ ಸರ್ವ ಶಬ್ಧಾರ್ಥ ಹರಿಯನಾಮಬಿಡದೆ ಶ್ರೀಹರಿಗೆರಗುವ ಚೇತನಜಡಗಳೆಲ್ಲ ಶ್ರೀಹರಿಯ ಪ್ರತಿಮೆಯೆಂದು ೨
ನಾರಾಯಣ ಅನಿರುದ್ಧ ರೂಪಗಳಿಂದಶ್ರೀರಮಣನೆ ಭೋಜ್ಯಗಳಲ್ಲಿಪ್ಪಸಾರ ಅಂಶವನು ಪ್ರದ್ಯುಮ್ನ ಸಂಕರುಷಣಮೂರುತಿಯಿಂದ ಭುಂಜಿಪನೆಂದು ೩
ಹರಿ ಚರಾಚರ ಸರ್ವ ಜಗದ್ಭರಿತಮುರಹರನಿದ್ದುದೆ ವೈಕುಂಠನರಹರಿಯಲಿ ನವವಿಧ ಭಕುತಿಗೆಸರಿಸಮವೆಂದಿಗಿಲ್ಲವೆಂದು ೪
ಜಾಗರಾದಿಗಳಲ್ಲಿ ವಿಶ್ವಾದಿ ಮೂರುತಿಯೋಗಿ ಶ್ರೀಕೃಷ್ಣನೆ ವಿಷಯಂಗಳಭೋಗಿಪನೆಂಬ ಯೋಗಿಗೆ ವಿಹಿತಭೋಗಂಗಳೆಲ್ಲ ಯಾಗಂಗಳೆಂದು ೫

 

ತನ್ನ ಬಾಯಿಯಲ್ಲಿ ಪಾದದ ಅಂಗುಷ್ಟವನ್ನಿರಿಸಿಕೊಂಡು
೧೧೩
ಬಾಯೊಳು ಉಂಗುಷ್ಟವನಿಟ್ಟಮಾಯವ ನÉೂೀಡಮ್ಮಾ ಪ
ಶ್ರೀಯರಸನೀಲಮೇಘಛ್ಛಾಯ ಕೃಷ್ಣರಾಯತನ್ನ ಅ.ಪ.
ಕಂಜಜಾತ ಕಾಶೀಶಾ ಮೃತ್ಯುಂಜಯಾಹಿ ವಿಷವಲಭಂಜನಾದಿಗಳು ಈತನಿಗಂಜಿಕೊಂಬುವರುಮಂಜುಳಾತ್ಮ ನಿಜಕರ ಕಂಜದಿಂದ ಪಾದವೆತ್ತಿಎಂಜಲ ಮಾಡುವನು ನಿರಂಜನ ತಾ ಲೀಲೆಯಿಂದ೧
ಪುಟಿತ ಹಾಟಕ ಮಣಿಘಟಿತ ಕಂಕಣಾಂಗದಕಟಿಸೂತ್ರಗಳನಿಟ್ಟು ನಟನಂದದಿವಟಪತ್ರ ಶಾಯಿ ಓಷ್ಠಪುಟದಿ ಪಾದವನಿಕ್ಕಿಕಟಬಾಯೊಳಮೃತವ ಸ್ಫುಟವಾಗಿ ಸುರಿಸುತ ೨
ಲಿಂಗದೇಹ ಭಂಗವಾಗಿ ಸಂಗವನ್ನು ದೂರಗೈಸೆತುಂಗಮತಿವಂತ ಋಷ್ಯಶೃಂಗಾದಿಗಳುಅಂಗೀಕರಿಸುವ ನಿತ್ಯ ಮಂಗಳ ದೇವಿಯರಗಂಗೆಯ ಪಡೆದ ಶಿವನಂಗ ಶುದ್ಧಿಗೈಸಿದಾತನ೩
ರÀಮ್ಮೆ ಅರಸನು ತನ್ನ ಅಮ್ಮನೆಂಬ ಗೋಪಿ ಗೃಹಕರ್ಮರತಳಾಗಿರಲು ಒಮ್ಮನದಿಂದಅಮರಗಣಾರಾಧೀತ ಕ್ಷಮೆಯನಳೆದ ಪಾದಸುಮ್ಮನೆ ಕರದೊಳೆತ್ತಿ ಕಮ್ಮಗಿಹದೆಂದು ತನ್ನ ೪
ಕರಪಲ್ಲವಾಮೃತ ಲೋಕವಂದ್ಯರೂಪ ಫಣಿಶೇ-ಖರಾದ್ರಿವಾಸ ಭಕ್ತನಾಕ ಭೂರುಹ ನೀಕರೆಸಿ ದುರಿತವ ಸೋಕದಂತೆ ನಮ್ಮನೀಗಸಾಕುವ ಪರಮ ಕರುಣಾಕರ ಶ್ರೀಕೃಷ್ಣ ೫

 

೨೦೪
ಬಾರಯ್ಯ ಎನ್ನ ಮನ ಮಂದಿರಕೆ ಪ
ಬೇರೊಂದು ಯೋಚನೆ ಮಾಡದೆ ಸಿರಿಪತಿಅ.ಪ
ನಾ ರಾಜಸ ಬುದ್ಧಿಯೆಂಬಿಯ ನಿನ್ನಕಾರುಣ್ಯದ ಸೋನೆ ಸೊರಗುವುದೆವಾರ ವಾರಕೆ ಮೇಘವಾರಿಯ ಕರೆದರೆಧಾರುಣಿಗೆ ಕ್ಷಾಮ ಬರುವುದೆ ಕೃಷ್ಣ೧
ತಾಮಸ ಬುದ್ಧಿಯೆಂಬಿಯ ನಿನ್ನಶ್ರೀಮೂರ್ತಿ ಹೊಳೆದರೆ ತಮವಡಗದೆಶ್ರೀ ಮನೋಹರನೆ ಭಾನು ಉದಿಸಿದರೆತಾಮಸವಡಗದೆ ಜಗದೊಳು ಕೃಷ್ಣ ೨
ನಾ ದೋಷಿ ಕಠಿಣನೆಂತೆಂಬೆಯ ನಿನ್ನಪಾದಪದುಮ ಪಾಪಹರವಲ್ಲವೆಆ ದುಷ್ಟ ಶಿಲೆ ಸೋಕೆ ಋಷಿಪತ್ನಿಯಾದಳುನೀ ದಯಮಾಡೆ ನಾ ನೀಚನೆ ಸಿರಿಕೃಷ್ಣ ೩

 

೧೪೪
ಬಾರೊ ಬೇಗ ನೀರಜಾಕ್ಷದೂರು ಇದು ಯಾತಕೊ ಪ
ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ ಪಿಡಿದುವಶನಾಗು ಎಂದು ಪೇಳಿನಸುನಗುತಲಿದ್ದೆಯಂತೆ ೧
ಕುಸುಮಶರನ ಪೆತ್ತವನೆಬಸವನಾದೆ ಊರೊಳಗೆಶಶಿಮುಖೇರ ದೂರು ಬಹುಪಸರಿಸಿತು ಪೇಳಲಾರೆ ೨
ಕಂದಕೇಳು ಇಂದುಮುಖಿಯರಹೊಂದಿ ಆಡಲೇಕೆ ಈಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ ೩

 

೨೧೦
ಬಿಗಿಯದಿರು ಬಿಗಿಯದಿರು ಎಲೆ ಮಾನವಾಧಿಗಿ ಧಿಗಿ ಧಿಗಿಯೆನುತ ನಿನಗೇಕೆ ಗರ್ವ ಅ
ವಿರಕ್ತಿಯಲಿ ಹನುಮನೆ ವಿವೇಕದಲಿ ವಸಿಷ್ಠನೆಶೂರತನದಲಿ ಶಂತನುತನಯನೇನೊಸ್ವರದಲಿ ತುಂಬುರನೆ ಗೀತದಲಿ ನಾರದನೆಪರಾಶರ ಮುನಿಯೆ ವ್ರತತಿ ಪಟ್ಟದಲ್ಲಿ ೧
ಚೆಲುವಿನಲಿ ರಾಮನೆ ಸತ್ಯದಿ ಹರಿಶ್ಚÀ್ಚಂದ್ರನೆಛÀಲದಲ್ಲಿ ಋಷಿ ವಿಶ್ವಾಮಿತ್ರನೇನೋಬಲದಲ್ಲಿ ವಾಲಿಯೇ ಹಲಧರನೆ ಹಿರಣ್ಯಕನೆಬಿಲು ವಿದ್ಯದಲಿ ಪರಶುರಾಮನೇ ನೀನು ೨
ತ್ಯಾಗದಲಿ ಕರ್ಣನೇ ಭೋಗದಲಿ ಶತಮಖನೆಯೋಗದಲಿ ಶುಕಸನಕ ಜನಕನೇನೋಭಾಗ್ಯದಲಿ ಬಲಿಚಕ್ರವರ್ತಿಯೋ ದಶಶಿರನೊದೀರ್ಘದಲಿ ಮೇರುವೇ ಮಂದರವೆ ನೀನು ೩
ಭಕ್ತಿಯಲಿ ಭರತನೆ ಭಾವದಲಿ ಲಕ್ಷ್ಮಣನೆಯುಕ್ತಿಯಲಿ ನೀನಿಂದುಸೂತನೇನೊ
ಶಕ್ತಿಯಲಿ ಕಾಲನೆ ಭುಕ್ತಿಯಲಗಸ್ತ್ಯನೆಮುಕ್ತಿ ಪಡೆವಲ್ಲಿ ಖಟ್ಟಾಂಗರಾಯನೇನೊ ೪
ಶಾಪದಲಿ ಬ್ರಹ್ಮನೆ ತಾಪದಲಿ ಸೂರ್ಯನೆಕೋಪದಲಿ ಮಹೇಶನೇನೋ ನೀನುತಪದಲ್ಲಿ ಹನುಮನೆ ವ್ರತದಿ ರುಕ್ಮಾಂಗದನೆಕೃಪೆಯಲ್ಲಿ ಶ್ರೀ ಕೃಷ್ಣದೇವನೆ ನೀನು ೫

 

‘ಕುಬುಜೆ ತಂದ ಗಂಧಕೆ ಮೆಚ್ಚಿ’-
೧೪೫
ಬಿಡದೆ ನಿಮ್ಮನು ಪೂಜಿಸುವ ದಾಸರಿಗೆಪ
ತಡೆಯದೆ ವೈಕುಂಠವಹುದು ಸೋಜಿಗವೆ ಅ.ಪ.
ಬಡತನವಾಗೆ ಬಾಲತ್ವದ ಸಖನೆಂದುಮಡದಿ ಪೋಗೆನ್ನೆ ಕುಚೇಲ ಬಂದುಪಿಡಿತುಂಬ ಅವಲಕ್ಕಿಯ ತಂದು ಕೊಡಲಾಗಕಡು ಮೆಚ್ಚಿ ಅವನಿಗೆ ಸೌಭಾಗ್ಯವನಿತ್ತೆ ೧
ಷಡುರಸಾಯನದೂಟ ರಚಿಸಿರಲು ಕುರುಪತಿಯುಬಡವಿದುರನ ಮನೆಯ ಕುಡುತೆ ಪಾಲ್ಕುಡಿದು ಪೊಡವಿಯನು ಮೆಟ್ಟಿ ಪಾಪಿಷ್ಠನನು ಕೆಡಹಿದೆಬಡವರಾಧಾರಿಯೆಂಬ ಬಿರುದನು ಪಡೆದೆ ೨
ಕಡಲಶಯನನೆ ಕುಬುಜೆ ತಂದ ಗಂಧಕೆ ಮೆಚ್ಚಿಒಡನೆ ಅವಳನು ಸುರೂಪಿಯ ಮಾಡಿದೆಸಡಗರದಿ ಅನವರತ ಬಿಡದೆ ಪೂಜಿಸುವಂಥದೃಢಭಕ್ತಗೇನುಂಟು ಏನಿಲ್ಲ ಸಿರಿಕೃಷ್ಣ ೩

 

೧೪೬
ಬೃಂದಾವನದಿ ನೋಡುವ ಬಾರೆ ಗೋ-ಪ
ವಿಂದನಾಡುವ ಸಂದಣಿ ಸಾಲದೆ ಸಖಿ ಅ.ಪ.
ಮುನಿಗಳು ತರು ಪಕ್ಷಿ ಮೃಗಂಗಳಾಗಿರೆಸನಕಾದಿಗಳು ಗೋವುಗಳಾಗಿರೆಅನಿಮಿಷರೆಲ್ಲರು ಗೋಪಾಲರಾಗಿರೆದನುಜಾಂತಕನು ಮನುಜನಂತಾಗಿರೆ ೧
ತಳಿತ ತೋರಣದಿಂ ತಂಪಿನ ನೆಳಲಿಂಮಳೆಯಾಗಿ ಸುರಿವಾ ಮಕರಂದ ಜಲದಿಂಫಲ ಪುಂಜಗಳಿಂ ಶುಕಚಾಟುಗಳಿಂನಳಿನನಾಭನನುಪಚರಿಪ ವೃಕ್ಷಗಳುಳ್ಳ ೨
ತಳಿತ ತರುಗಳೆಲ್ಲ ತಂತಮ್ಮ ಜಾತಿಯಉಲುಹನುಳಿದು ಕಣ್ಣುಮುಚ್ಚಿ ತೆರೆಯುತ್ತನಳಿನನಾಭನ ವೇಣುಗೀತೆಯ ರಸದಲ್ಲಿಮುಳುಗಿ ಮುನಿಗಳಂತಿಪ್ಪ ಪÀಕ್ಷಿಗಳುಳ್ಳ ೩
ಚಿತ್ತಜನೈಯನ ವೇಣುನಾದವಎತ್ತಿದ ಕಿವಿಯಿಂದ ಸವಿಯುತಲಿಮತ್ತಾದ ಸುಖಜಲ ಕಡಲಾಗಿ ಹರಿಯಲುಚಿತ್ತರದಂತಿಪ್ಪ ತುರುವಿಂಡುಗಳುಳ್ಳ ೪
ರಂಗನ ಪದ ನಖ ತಿಂಗಳ ಬೆಳಕಿಗೆತುಂಗ ಚಂದ್ರಕಾಂತ ಶಿಲೆ ಒಸರಿಹಿಂಗದೆ ಹರಿದು ಕಾಳಿಂದಿಯ ಕೂಡಲುಗಂಗೆ ಯಮುನೆಯರ ಸಂಗಮದಂತಿಪ್ಪ ೫
ಸಿರಿಯರಸನ ನಗೆಮೊಗವೆಂಬ ಚಂದ್ರನುವರಕೌಸ್ತುಭವೆಂಬ ಬಾಲರವಿಯುಎರಡನು ಕಂಡು ಚಕೋರ ಚಕ್ರವಾಕಇರುಳು ಹಗಲು ಎಂದು ಹೋಗುತಲಿರುತಿಪ್ಪ೬
ಹರಿಯ ಕೊಳಲ ಸ್ವರದತಿ ಮೋಹನಕೆತರುಮೊಗ್ಗೆಗಳಿಂ ಪುಳುಕಿತವಾಗೆಗಿರಿಯು ಝರಿಯಾ ನೆವದಿಂ ಕರಗಲುತೊರೆಯು ಸುಳಿಯ ನೆವದಿಂದ ತಾ ನಿಲ್ಲುವ೭
ಅಳಿಗಳು ಗಾನದಿಂದುಲಿದುಲಿದಾಡುತ್ತ ಹಲವು ವರ್ಣದ ವನದೇವತೆಗಳೆಲ್ಲಚಲುವ ಕುಂಡಲ ತಾಳಮೇಳದ ರಭಸಕ್ಕೆನಲಿನಲಿದಾಡುವ ನವಿಲ ಹಿಂಡುಗಳುಳ್ಳ ೮
ನಳನಳಿಸುವ ವನಮಾಲೆ ಇಂದ್ರಚಾಪಪೊಳೆವ ಪೊಂಬಟ್ಟೆ ಮಿಂಚು ವೇಣುಗಾನಎಳೆಯ ಗರ್ಜನೆ ಶ್ಯಾಮಮೇಘ ಕೃಷ್ಣಮಳೆಯ ಮೇಘವೆಂದು ಚಾತಕ ನಲಿಯುತ೯

 

ಭವರೋಗ ನಿವಾರಣೆಗೆ ಔಷಧ-
೧೧೪
ಭವರೋಗ ಹರವಾದೊಂದೌಷಧಿತ್ರೈಭುವನ ವಿಖ್ಯಾತವಾಗಿದೆ ಬುದ್ಧಿವಂತರಿಗೆ ಪ
ಚತುರ ವೇದಶಾಸ್ತ್ರ ಮೇಣಷ್ಟಾದಶವಾದಸ್ರ‍ಮತಿತರ್ಕ ಪೌರಾಣದಡವಿಯಲ್ಲಿಮತಿವಂತ ಮುನಿಗಳಾರಿಸಿ ತಂದು ತಾವುಪ್ರತಿಗಂಡು ಲೋಕಕ್ಕೆ ಹಿತವಾಗಿ ತೋರುವ ೧
ಅಡವಿಯೊಳರಸಿ ಅಗಿಯಲಿಲ್ಲ ತಂದುಇಡಿದು ಚೂರ್ಣವಮಾಡಿ ಒಣಗಿಸಲಿಲ್ಲಕುಡಿದು ಕಹಿಖಾರವೆಂದೆನಲಿಲ್ಲ ನೋಡೆಬಡವ ಬಲ್ಲಿದರೆಲ್ಲರಿಗೆ ಸಾಧ್ಯವಾಗಿಪ್ಪ ೨
ಪಥ್ಯಪಾನದ ನೇಮಗಳಿಲ್ಲ ಹೋಗಿಸ್ತೋತ್ರ ಮಾಡಿ ವೈದ್ಯನ ಬೇಡಲಿಲ್ಲನಿತ್ಯಸೇವಿಸೆ ಆಲಸ್ಯಗಳಿಲ್ಲ ನೋಡೆಮತ್ಯಾರ ಮಾತ ನಡೆಸುವ ಬಗೆಯಿಲ್ಲ೩
ರಸಪಾಷಾಣಾದಿ ಮೂಲಿಕೆಯನು ತಂದುಕುಶಲದಿ ಶೋಧಿಪ ಕೋಟಲೆಯಿಲ್ಲಮಿಸುಣಿ ವರ್ಣದ ಭಸ್ಮ ತೈಲಗಳೆಂತೆಂಬಫಸಣೆಯಿಲ್ಲದೆ ಗಾಂಧರ್ವರು ಸೇವಿಪ ೪
ಒಮ್ಮೆ ಸೇವಿಸೆ ಜನ್ಮ ಜನ್ಮಂಗಳ ದು-ಷ್ಕರ್ಮ ಸವೆದು ಸಕಲಾನಂದವೀವಘಮ್ಮನೆ ಕೃಷ್ಣರಾಯನ ಪುರದಲಿ ಬಿಡದÉಮ್ಮ ರಕ್ಷಿಪ ಮುದ್ದುಕೃಷ್ಣ ಕೃಷ್ಣಯೆಂಬ ೫

 

೧೬೪
ಮಂಗಳ ಮುಖ್ಯ ಪ್ರಾಣೇಶಗೆ ಪ
ಜಯ ಮಂಗಳ ಶುಭಮಂಗಳ ವಾಯುಕುಮಾರನಿಗೆ ಅ.ಪ
ಅಂಜನಾದೇವಿಯ ಕಂದಗೆ ಮಂಗಳಕಂಜಾಕ್ಷ ಹನುಮಂತಗೆ ಮಂಗಳಸಂಜೀವನವ ತಂದಾತಗೆ ಮಂಗಳಸಜ್ಜನ ಪರಿಪಾಲಗೆ ಮಂಗಳ೧
ಅತಿ ಬಲವಂತ ಶ್ರೀಭೀಮಗೆ ಮಂಗಳಪ್ರತಿಮಲ್ಲರ ಗೆಲಿದಗೆ ಮಂಗಳಸತಿಯ ಸೀರೆಯ ಸೆಳೆದ ದೈತ್ಯನ ಕೊಂದುಪೃಥ್ವಿ ಮೇಲೆ ಚೆಂಡನಾಡಿದಗೆ ೨
ಸೀತಾದೇವಿಯ ಬಾಲಗೆ ಮಂಗಳಶ್ರೀರಾಮನ ಭಂಟಗೆ ಮಂಗಳಗೋಪಾಲ ಕೃಷ್ಣನ ಪೂಜೆಯಮಾಡುವಗುರು ಮಧ್ವ ಮುನಿರಾಯಗೆ ಮಂಗಳ೩

 

೧೪೭
ಮನ್ನಿಸೆನ್ನ ಮನ್ಮಥಜನಕ ಮಧು ಸೂ-ದನ್ನ ಮಂದರೋದ್ಧಾರ ನಿನ್ನ ನಂಬಿದೆ ನಿರಂತರದಿ ನೀನಿಹಪರದಲಿ ಕಾಯಯ್ಯ ಅ
ಶ್ರೀರಂಗ ಖಗ ತುರಂಗ ಜಗದಂತÀರಂಗವಿಧಿ ಕುರಂಗಧರ ನಮಿತ ಸಾರಂಗಪರಿಪಾಲ ಸುಗುಣಜಾಲ ಲಕುಮಿಲೋಲಕೃಪಾರಸತರಾಂಗಿತಾಪಾಂಗ ದುರಿತಭಂಗಧಸ್Àೃತರಥಾಂಗ ಶುಭಾಂಗ ೧
ಕಾರುಣ್ಯನಿಧಿ ಶರಣ್ಯವತ್ಸಲ ಲೋಕಶರಣ್ಯ ದೇವವರಣ್ಯ ಘನಶ್ಯಾಮ ಚರಣ ಕಮಲಕ್ಕೆ ಶರಣು ಹೊಕ್ಕೆ ತಾಮಸವ್ಯಾಕೆಸಲಹೊ ಶ್ರೀಧರ ಯದುವೀರ ದುರಿತದೂರವೇದಸಾರ ಗಂಭೀರ ೨
ಸನಂದನಾದಿ ಮುನಿಪ್ರಿಯ ಸಚ್ಚಿದಾನಂದನಂದತನಯ ಏನೆಂದು ಪೇಳ್ವೆ ನಿನ್ನ ಮಾಯಾಮರೆಯಲರಿಯೆ ಯುಧಿಷ್ಠಿರ ಧನಂಜಯಸಹಾಯ ಶ್ರೀಕೃಷ್ಣರಾಯ ಸಹೃದಯಗೇಯ ನಮೋ ನಮೋ ಜೀಯ೩

 

೧೪೮
ಗದ್ಯ ದಂಡಕ
ಮರುಗ ಮೊಲ್ಲೆ ಮಲ್ಲಿಗೆ ಜಾಜಿ ಸಂಪಿಗೆತುರುಬಿಲೊಪ್ಪುವ ಚೂಡಾರತುನ ಮಾಣಿಕದಮೆರೆವ ಚಂದ್ರ ಸೂರಿಯ ಮುಡಿಯಲೊಪ್ಪೆಕುರುಳು ಗೂದಲು ಬೈತಲೆ ಥಳವುಗಳಮೃಗನಾಭಿ ತಿಲಕನೊಸಲಲಿ ಹಚ್ಚೆ ಬಟ್ಟುಮದನ ಸಿಂಗಾಡಿ ಸೋಲಿಸುವ ಪುರ್ಬುಗಳಕುಡುತೆಗಂಗಳ ಢಾಳ ಜಗವ ಮೋಹಿಸುತಿಪ್ಪಕಡೆಗಣ್ಣು ಕೆಂಪು ಹಚ್ಚೆಯ ರೇಖೆಗಳಬೆಡಗು ಮುತ್ತಿನ ಮೂಗುತಿ ನಾಸಿಕದಲ್ಲಿಕಡುಕೆಂಪು ಅಧರ ಚುಬುಕ ದಂತಗಳ ೧೦
ಥÀಳಥಳಿಸುವ ಕದಪಿನ ಮೇಲೊಪ್ಪುವಹೊಳೆವೊ ಮುತ್ತಿನವಾಲೆ ಕೊಪ್ಪುವೆಂಠೆಗಳನಳನಳಿಸುವ ಎಳೆ ನೀಲದ ಬಾವುಲಿಹೊಳೆವ ಆಣೆ ಮುತ್ತಿನಗೊಂಚಲುಗಳಶಂಖ ತ್ರಿರೇಖೆಯಿಂದೊಪ್ಪುವ ಗಳದಲ್ಲಿಕುಂಕುಮ ಕಸ್ತೂರಿ ಅಗರು ಚಂದನದಮುತ್ತಿನ ಮಲುಕು ಪೆಂಡೆಯಸರ ಕೊರಳಲ್ಲಿಹತ್ತೆಗಟ್ಟಿದ ವಾಗ್ಗೊರಳು ಮುತ್ತುಗಳಮುತ್ತು ಮಾಣಿಕ ನವರತ್ನದ ಚಿಂತಾಕ-ವತ್ತಿ ಸೇರಿದ ಕಂಠಮಾಲೆ ಸರಗಳ ೨೦
ಪವಳದಸರ ಏಕಾವಳಿ ಸರಗಳುಪರಿಪರಿ ಒಪ್ಪುವ ಪದಕ ತಾಳಿಗಳಕರಿಯ ಸೊಂಡಿಲು ಸೋಲಿಸುವ ತೋಳ್ಗಳ ಮೇಲೆಮೆರೆವ ಭುಜಕೀರ್ತಿ ತೋಳ ಬಂದಿಗಳಝಡಿವೊದುಂಡು ರಕ್ಷೆಯ ಮಣಿ ತಾಯಿತ್ತುಮೆರೆವ ಹಮ್ಮೀರ ತಾಯಿತಿ ಕಾಂತಿಗಳಕಡಗ ಕಂಕಣ ಸುರಿಗೆ ಬಿಚ್ಚು ಬಳೆಗಳುಹಿಡಿವುಡಿಯಲ್ಲಿ ವಜ್ರದ ಥಳವುಗಳಕಡು ಮೋಹವಾದ ಮುರುಡಿಯ ಸರಪಣಿಝಡಿವ ಮುಂಗೈಯ ಮುರಾರಿ ಕವಡೆಯ೩೦
ಚಾತಿಪವಳ ಕೈ ಕಟ್ಟು ಮುಂಗೈಯಲ್ಲಿಖ್ಯಾತಿವಡೆದ ಮುತ್ತಿನ ಕಂಕಣಗಳಅರುಣನ ಉದಯ ಸೋಲಿಸುವ ಅಂಗೈಯಲ್ಲಿಪಿಡಿದು ಕಡೆವ ಕಡೆಗೋಲು ನೇಣುಗಳಬೆರಳ ಮುದ್ರಿಕೆ ರಂಗು ನೀಲ ಮಾಣಿಕ್ಯಗಳುಪ್ರತಿಫಲಿಸುವ ಚಂದ್ರಕಾಂತಿಯ ಚೆಳ್ಳುಗುರುಕನಕ ಕಲಶ ಕುಚಗಳ ಮೇಲೊಪ್ಪುವಮಿನುಗುವ ಚಂದ್ರಗಾವಿಯ ರವಿಕೆಗಳಉರದಲೊಪ್ಪುವ ಶ್ರೀವತ್ಸ ಕೌಸ್ತುಭರತ್ನಮೆರೆವ ವೈಜಯಂತಿ ಮಾಲೆ ಶೋಭಿಸುವ ೪೦
ಉರದ ತ್ರಿವಳಿನಾಭಿ ಕಟಿಯಮೇಲೊಪ್ಪುವಪದುಮ ಪಟ್ಟೆಯ ಚುಂಗುನೆರೆಯ ಸೊಬಗಿನನಡುವಿಲೊಪ್ಪುವ ಚಲತಮದೊಡ್ಯಾಣವುಕಡುಮುದ್ದು ಉಡಿಗಂಟೆ ಝಡಿತನೇವಳದಉರುಟು ಕದಳಿ ಕಂಭದಂತೆ ಪೇರ್ದೊಡೆಗಳಮೆರೆವ ಜಾನುಜಂಘೆ ಚರಣ ಕಮಲದಮೆರೆವ ಕಾಲಂದಿಗೆ ಕಿರುಗೆಜ್ಜೆ ಸರಪಣಿವೀರಮುದ್ರಿಕೆ ಮೆಂಟೆಕೆಯ ಪಿಲ್ಲೆಗಳಅಂಕುಶಧ್ವಜವಜ್ರ ರೇಖೆಯಿಂದೊಪ್ಪುವಕುಂಕುಮಾಂಕಿತವಾದ ನಖ ಚಂದ್ರಿಕೆಯ ೫೦
ಶಂಕೆಯಿಲ್ಲದ ಶಕಟನ ತುಳಿದ ಪಾದಬಿಂಕದಿಂದಲಿ ಕಾಳಿಂಗನ ಶಿರದಿ ನಿಶ್ಶಂಕನಾಗಿ ತುಳಿದ ಮುದ್ದು ಪಾದದುರುಳ ಕೌರವನ ಧರೆಗೆ ಕೆಡಹಿದ ಪಾದಶರಣ ಜನರು ಸೇವಿಸುವ ಶ್ರೀಪಾದಸಿರಿಯರಸಿಯು ಸೇವಿಸುವ ಶ್ರೀಪಾದನಿರುತ ಸೇವಿಪ ನಮ್ಮ ಗುರು ಮಧ್ವಮುನಿಯಹೃದಯ ಕಮಲ ವಾಸವಾಗಿಪ್ಪ ಕೃಷ್ಣನಪದುಮ ಚರಣಕ್ಕೆ ನಮೊ ನಮೊ ನಮೋ ಎಂಬೆ ನಾ. ೬೦

 

೧೭೨
ಮಹಿಮೆ ಸಾಲದೆ, ಇಷ್ಟೇ ಮಹಿಮೆ ಸಾಲದೆ ಪ
ಅಹಿಶಯನನ ಒಲುಮೆಯಿಂದಮಹಿಯೊಳೆಮ್ಮ ಶ್ರೀಪಾದರಾಯರ ಅ.ಪ
ಮುತ್ತಿನ ಕವಚ ಮೇಲ್ಕುಲಾವಿರತ್ನ ಕೆತ್ತಿದ ಕರ್ಣಕುಂಡಲಕಸ್ತೂರಿ ತಿಲಕ ಶ್ರೀಗಂಧ ಲೇಪನವಿಸ್ತರದಿಂದ ಮೆರೆದು ಬರುವ ೧
ವಿಪ್ರ ಹತ್ಯ ದೋಷ ಬರಲುಕ್ಷಿಪ್ರ ಶಂಖೋದಕದಿ ಕಳೆಯೆಅಪ್ರಬುದ್ಧರು ದೂಷಿಸೆ ಗೇರೆಣ್ಣೆಕಪ್ಪು ವಸನ ಶುಭ್ರಮಾಡಿದ೨
ಹರಿಗೆ ಸಮರ್ಪಿಸಿದ ನಾನಾಪರಿಯ ಶಾಕಗಳನು ಭುಂಜಿಸೆನರರು ನಗಲು ಶ್ರೀಶಕೃಷ್ಣನಕರುಣದಿಂದಲಿ ಹಸಿಯ ತೋರಿದ೩

 

೧೪೯
ಮಾನಾಗ, ಉರಿಯು ಹೆಣ್ಣು ಹೈಕಳ ಕೂಡೆಶ್ರೀನಾಥ ನಿನಗೆ ಸಲ್ಲದು ಮಕ್ಕಳಾಟ ಪ
ತರಳ ನೀನೆಮ್ಮ ಸೀರೆಗಳನೆತ್ತಿಕೊಂಡುತರುವನೇರುತ ಕಕ್ಕಳ ಕೆಳೆವೆತರುವಳಿತನ ಸಾಕು ನಿನ್ನ ಪೇರುರದಲಿತರುಣಿ ನಗುತಾಳೆ ಪೊಕ್ಕಾಟ ಸಾಕು ೧
ಅರಸಿನ ಮಗನೆಂದು ತಾಳಿದೆವಲ್ಲದೆಸರಸಿಜಾಕ್ಷಿಯ ಮನೆಯ ಮಳಲಲ್ಲಿಸರಸದೊಳಿಹರೆ ನಿನ್ನಂಗದೊಳಿರ್ದಸುರರೋಡಬೇಕು ಸಲ್ಲದು ಮಕ್ಕಳಾಟ೨
ನಿನ್ನ ಪೊಕ್ಕಳ ಬೊಮ್ಮ ನಿನ್ನುದರದ ಜಗನಿನ್ನ ಅಂಗದೊಳಿದ್ದ ಸುರಮುನಿಗಳುನಿನ್ನನೆ ನಗುವರೊ ನೀನರಿಯದೆ ಎಮ್ಮಚೆನ್ನ ಹೆದ್ದಾಟ ಹೊಕ್ಕಾಟ ಸಾಕು ೩
ಎಸಳು ಕಂಗಳನೋಟ ನಸುನಗೆ ಕೌಂಸ್ತುಭಎಸೆವ ಕಂಠದಲಿ ತುಳಸಿಯ ಮಾಲಿಕೆಮಿಸುಣಿಯ ಸರಪಣಿ ಹೊಸ ಕಾಲ ಪೆಂಡೆಯುಹೊಸ ಹೊಸ ಚೆನ್ನಿಗ ಪರಿಹಾಸ ಸಾಕೋ೪
ತುತಿಸಿ ತುತಿಸಿ ಕಾಣರು ಬ್ರಹ್ಮರುದ್ರರುಮತಿಗೊಳಗಾಗೆ ಮುನೀಶ್ವರರಶ್ರುತಿಗಳು ನಿನ್ನನು ಪುಡುಕಲರಿಯವು ಬಾಲಸತಿಯರೊಡನೆ ಖೇಳಮೇಳವೆ ಸಾಕು ೫
ಸ್ನಾನಮಾಡಲೀಯೆ ಮೌನಗೌರಿಯನೋನಲೀಯದೆ ಮೌನವ ಕೆಡೆಸಿಧ್ಯಾನ ಮಾಡಲೀಯೆ, ನಿನ್ನ ಚೆನ್ನಿಗರುಹಾನಿ ನೀಗುವರು ಎಂಬುದರಿಯೆವೊ ೬
ಚೆಲುವರರಸ ಶಿಖರ ಶಿಖಾಮಣಿಯೆಲಲನೆಯರ ಮನ ಸೂರೆಗಾರಫಲಿಸಿತು ವ್ರತ ನಮ್ಮ ಕೃಷ್ಣ ನಿನ್ನೊಲುಮೆಯಬಲೆಗೆ ಸಿಕ್ಕದರಾರೊ ಸೊಬಗು ಸುಗ್ಗುಳಿಯೇ೭

 

೧೫೦
ಯಾಕೆ ಬೃಂದಾವನ ಯಾಕೆ ಗೋಕುಲ ನಮಗೆಯಾಕೆ ಬಂದೆಯೊ ಉದ್ಧವ ಪ
ಯಾಕೆ ಸ್ನೇಹದ ಮಾತು ಲೋಕಮೋಹಕ ತಾನುಆ ಕುಬ್ಜೆಯನು ಕೂಡಿದ ಉದ್ಧವ ಅ
ಬಿಲ್ಲುಗಾರನೈಯನ ಬ್ಯಾಟೆನಗೆ ನಡೆ ನೋಟಇಲ್ಲದಂತಾಯಿತಲ್ಲತಲ್ಲಣಿಸುತ್ತಿದೆ ತಾಪ ಮೈಯೊಳು ಹೆಚ್ಚಿಪರವಶವಾಯಿತಲ್ಲಎಲ್ಲರನಗಲಿಸಿದ ಖುಲ್ಲ ಅಕ್ರೂರ ನಮ್ಮವಲ್ಲಭನ ಕರೆದೊಯ್ದನೊಮಲ್ಲರ ಮರ್ದಿಸಿದ ಮಾವ ಕಂಸನ ಕೊಂದವಲ್ಲಭನ ತೋರಿಸೈಯ, ಉದ್ಧವ ೧
ಅನುದಿನವಾದರಸಿ ಅಧರಾಮೃತವನಿತ್ತುಆನಂದವನು ತೋರುವಮನದ ಮರ್ಮವ ತಿಳಿದು ಮನಸಿಜನೈಯನುಮಧುರ ಮಾತಿಲಿ ದಣಿಸುವಕನಸಿನೊಳು ಕಂಡ ತೆರನಾಯಿತು ನೋಡುಮುನಿವಂದ್ಯ ತಾನೆ ಬಲ್ಲವನಜಾಕ್ಷ ವಾಸುದೇವನ ತಂದು ತೋರಿಸಿಒಡಗೂಡಿಸೈಯ ನೀನೆ ಉದ್ಧವ ೨
ಕರುಣಾಬ್ಧಿಯೆಂಬರಾ ಕಪಟನಾಟಕದವನಸರಸ ವಿರಸ ಮಾಡಿದಸ್ಮರಿಸಿದವರ ಕಾಯ್ವ ಶರಣಜನ ಪಾಲಕಮರೆತನೇತಕೊ ಎಮ್ಮನುತ್ವರಿತದಿಂದಲಿ ಪೋಗಿ ತರುಣೇರ ಗೋಳ್ಹೇಳಿಬರಮಾಡಬೇಕೆಂಬೆವೊನೆರೆ ನಂಬಿದವರನ್ನು ಪೊರೆವ ಶ್ರೀಕೃಷ್ಣಗೀಪರಿಯೆಲ್ಲ ಪೇಳಿ ಬಾರೊ ಉದ್ಧವ ೩

 

೧೫೧
ರಂಗ ಬಂದ ಬೃಂದಾವನದಲಿ ನಿಂದಕೊಳಲಿನ ಧ್ವನಿ ಬಹು ಚೆಂದ ಪ
ನಂದಗೋಪಿಯರ ಕಂದ ಮುಕುಂದಸುಂದರಿಯರ ಆನಂದ ಗೋವಿಂದ ಅ.ಪ
ಮಂದಗಮನೇರ ಕೂಡಿ ಸರಸವನಾಡುತಇಂದಿರೆಯರಸ ನಗುತ ಕೊಳಲನೂದುತಎಂದೆಂದಿಗೂ ತನ್ನ ನಂಬಿದ ಭಕ್ತರಬಂದು ಪೊರೆವ ಗೋವಿಂದ ಮುಕುಂದ ೧
ಉದಧಿ ಸಂಚಾರ ಗುಣಗಂಭೀರನವನೀತದಧಿ ಭಾಂಡಚೋರ ರುಗ್ಮಿಣಿ ಮನೋಹರಮದನ ಗೋಪಾಲನು ಭಜಿಸುವ ಭಕುತರಹೃದಯದೊಳಗೆ ನಿಂದು ಮುದವನು ಕೊಡುವ೨
ಮಧುರೆಯಿಂದಲಿ ಬಂದ ಮಾವನ್ನ ಕೊಂದಕಡೆಗೋಲ ನೇಣ ಕೈಲಿ ಪಿಡಿದ ದ್ವಾರಕಾವಾಸಹಡಗಿನಿಂದಲಿ ಬಂದು ಉಡುಪಿಲಿ ನೆಲೆಸುತಬಿಡದೆ ಪೂಜೆಗೊಂಬ ಒಡೆಯ ಶ್ರೀಕೃಷ್ಣ೩

 

ಇದು ದಶಾವತಾರಸ್ತುತಿ.
೧೫೨
ರಂಗ ಬಾರ ಬಾಲೆ ಕುರಂಗನಯನೆ ಕೇಳೆ ಪ
ಹೀಂಗಿರಲಾರೆ ಶ್ರೀಹರಿಯ ಸಂಗ ಬಿಟ್ಟಮೇಲೆಈ ತಂಗಾಳಿಯ ದಾಳೆ ಬೆಳದಿಂಗಳಿÀನ ಢಾಳೆಗಿಳಿ ಭೃಂಗನ ಸ್ವರಗಳೆ ದೇವಾಂಗನಾ ಗಾಯನಗಳೆಅನಂಗಗಿದು ಪೇಳೆಅ.ಪ.
ಅನ್ನ ಉದಕ ತೊರೆದೆ ನಾ ಚಿನ್ನದೊಸ್ತುವ ಮರೆದೆಮನ್ನಣಿಂದ ಉಡುವ ತೊಡುವ ಬಣ್ಣದೊಸನವ ಜರಿದೆಸಣ್ಣವಳ ಮಾಡಿ ಆ ರನ್ನೆಯಳ ಕೂಡಿಎನ್ನ ಮೇಲೆ ಕೋಪದಿಂದ ಭಿನ್ನ ನುಡಿಗಳನಾಡಿಕಣ್ಣ ತೆರೆದು ನೋಡಿ ಕಾಠಿಣ್ಯ ರೂಪವ ಮಾಡಿಮಣ್ಣ ಕೆದರೀಡ್ಯಾಡಿ ದÀುರುಳನ್ನ ಉದರವ ತೋಡಿಬಲಿಯನ್ನೆ ದಾನವ ಬೇಡಿ ತಾ, ತನ್ನೊಳು ಕಡಿದಾಡಿಅರಣ್ಯ ವಾಸವಮಾಡಿ ಪರ ಹೆಣ್ಣುಗಳನೆ ಕೂಡಿಬಲು ಬಣ್ಣಗೆಟ್ಟೋಡ್ಯಾಡಿ ಕಲಿಯನ್ನು ಸಂಹಾರಮಾಡಿ ೧
ಯುಗಳಸ್ತನಗಳ ಮೇಲೆ ಒಳ್ಳೆ ಮುಗುಳು ಮಲ್ಲಿಗೆ ಮಾಲೆಬಗೆ ಬಗೆ ಅಲಂಕಾರದಿ ಸೊಗಸಿಲಿದ್ದ ವೇಳೆಖಗವಾಹನನು ಬಂದ ಎನ್ನ ಬಿಗಿದಪ್ಪುವೆನೆಂದನಗುತ ಮಾತನಾಡಳಿವಳು ಸುಗುಣೆಯಲ್ಲವೆಂದನಿಗಮ ಚೋರನ ಕೊಂದ ನಗವ ಬೆನ್ನಿಲಿ ತಂದಜಗವ ನೆಗಹುವೆನೆಂದ ಜಿಗಿದು ಕಂಭದಿ ಬಂದಮಗುವಿನಂದದಿ ನಿಂದ ಯಾತ್ರೆಗಳ ಮಾಡುವೆನೆಂದಅನ್ನಗಳ ಒಲ್ಲೆನೆಂದ ಬೆಣ್ಣೆಗಳ ಕದ್ದುತಿಂದನಗುತ ಬತ್ತಲೆನಿಂದ ತಾ ಸಿಗದೆ ಓಡುವೆನೆಂದ ೨
ನಾರಿ ಈಗ ನಾನು ಮುರಾರಿಯ ಕಂಡೆನುವಾರಿಜಾಕ್ಷ ಬಾಯೆನ್ನಲು ಶಿರವ ಬಾಗಿದೆನೆಮಾರನಯ್ಯನು ಜಾಣೆ ಎನ್ನ ಮೋರೆಯ ನೋಡಿದನೆಜಾರನಾರಿ ಇವಳೆಂದು ಸೇರದೆ ಪೋದನೆನೀರೊಳಡಗಿದನೆ ಮೋರೆ ಮುಚ್ಚಿದನೆಕೋರೆ ತೋರಿದನೆ ಆ ಘೋರ ರೂಪಾದನೆಬ್ರಹ್ಮ-ಚಾರಿಯೆಂತೆಂದನೆ ಕ್ಷತ್ರಿಯರ ಸವರಿದನೆವಾರಿಧಿಯ ದಾಟಿದನೆ ಬಹುಜಾರನೆನಿಸಿದನೆನಾರೇರ ವ್ರತವಳಿದನೆ ಕುದುರೆ ಏರಿದ ಶ್ರೀಕೃಷ್ಣನೆ ೩

 

೧೧೫
ರಂಗಯ್ಯ ಮನೆಗೆ ಬಂದರೆ ಅಂತ-ರಂಗದಿ ಗುಡಿಕಟ್ಟಿ ಕುಣಿವೆ ನಾ ಪ
ಎಳೆ ತುಳಸಿವನ ಮಾಲೆಯು ರಂಗ-ಗೆಳೆ ನೀಲದ ಮೈಯ ಢಾಳವುಪೊಳೆವ ಪೊಂಗೊಳಲೊಪ್ಪೆ, ಚೆಲುವನು ನಮ್ಮನಿಲಯಕ್ಕೆ ಬಂದ ಭಾಗ್ಯವು ನೋಡ ೧
ಬಾಡಿದ ಮಾವು ಪಲ್ಲವಿಸಿತು, ಹರಿನೋಡಲು ಜಗವು ಭುಲ್ಲವಿಸಿತುಕೂಡಿದ ಮನದ ತಾಪಗಳೆಲ್ಲ, ಎತ್ತ-ಲೋಡಿತೊ ಹರಿ ಬಂದ ಭರದಿಂದ ನೋಡ ೨
ಬಿಸಿಲು ಬೆಳೆದಿಂಗಳಾಯಿತು, ತಾ-ಮಸಹೋಗಿ ಜ್ಞಾನೋದಯವಾಯಿತುಕುಸುಮನಾಭನು ತಾ ಬಂದರೆ ಅಲ್ಲಿವಿಷ ಹೋಗಿ ಅಮೃತವಾಯಿತು ನೋಡ ೩
ಹಾವು ನ್ಯಾವಳವಾಯಿತು, ಅಲ್ಲಿದಾವಾನಳ ತಂಪಾಯಿತುಬೇವು ಸಕ್ಕರೆ ಆಯಿತು ನಮ್ಮದೇವಕಿಸುತ ಬಂದರೆ ನೋಡ ೪ಜಾಣೇರರಸನೋಡು ರಂಗನು, ಅವತಾನಾಗಿ ಬೆನ್ನ ಬಿಡ ನಮ್ಮನುಏನಾದರೂ ಅಗಲದಲೆ ನಮ್ಮಮಾನಾಭಿಮಾನದೊಡೆಯ ಶ್ರೀ ಕೃಷ್ಣ ೫

 

ಶ್ರೀಹರಿ ಚರಿತ್ರ ಶ್ರವಣದಿಂದ
೧೧೬
ಲಾಭವಹುದು ಹರಿಕಥಾಮೃತ ಪ
ಪದುಮನಾಭನ ಪದದ ಪಥದಿಅಹುದು ಸಜ್ಜನಗಣಕೆ ಸತ್ಯ ಅ.ಪ
ಅರಿಷಡ್ವರ್ಗಂಗಳ ತೊರೆದುಜರಿದು ತಾಪತ್ರಯವ ಕಳೆದುಮುರಹರನ ಪದದ ಪಥದಿಇರಲು ಸಜ್ಜನ ಗಣಕೆ ಸತ್ಯ ೧
ಏಳು ದಿನವು ಪರೀಕ್ಷಿತನುವೇಳೆಯರಿತು ಹರಿಯ ಕಥೆಯಕೇಳಿ ಮುಕ್ತನಾದ ಮೇಲೆಕೇಳಿದ ಕಥೆಯ ಕೇಳಬೇಕು೨
ಎರಡು ಘಳಿಗೆ ಖಟ್ಟಾಂಗರಾಯಕರಣ ಪುಟದಿ ಕೃಷ್ಣನ ಕಥೆಯಸ್ಮರಿಸಿ ಮುಕ್ತನಾದ ಮೇಲೆನಿರುತ ಕಥೆಯ ಕೇಳಬೇಕು ೩

 

೧೬೯
ವರ್ಣಿಸಲಳವೆ ಸುಗುಣಸಾಂದ್ರನ ಪ
ಕರ್ಣಜನಕಕೋಟಿ ತೇಜಶ್ರೀಶ ಭಜಕ ಜಯ ಮುನೀಂದ್ರನ ಅ.ಪ
ಮಧ್ವಶಾಸ್ತ್ರ ದುಗ್ಧ ನಿಧಿಯೊಳ್‍ಬುದ್ಧಿಯೆಂಬ ಮಂದರಗಿರಿಯಶುದ್ಧ ಸೂತ್ರ ನೇತ್ರದಿಂದಬದ್ಧಮಾಡಿ ಪಿಡಿದು ಕಡೆದುಶುದ್ಧ ಯುಕುತಿ ಸುಧೆಯ ತೆಗೆದನ ಶಿಷ್ಯ ಜನಕೆಶ್ರದ್ಧೆಯಿಂದಲದನು ಎರೆದನ ಕ್ರೋಧದಿಂದಕೃದ್ಧವಾದಿಗಳನು ಗೆಲಿದನ-ಜಯ ಮುನೀಂದ್ರನ ೧
ಮಾನನೀಯ ಶೀಲರಾದಮಾನವರನು ಕರೆದು ಹರಿಯಧ್ಯಾನದಲ್ಲಿ ನಿಲಿಸಿ ಒಲಿಸಿಹಾನಿಯಿಲ್ಲದ ಮುಕುತಿ ಪಡೆದಜ್ಞಾನಮತವ ಜನಕೆ ಸಾರ್ದನ, ಶಿಷ್ಯಜನಕೆಸಾನುರಾಗದಿ ತತ್ವಪೇಳ್ದನಜಯ ಮುನೀಂದ್ರನ೨
ಸರಸದಿಂದ ಮೂರ್ಯೋಳುವಿರಸ ದುಷ್ಟ ಭಾಷ್ಯಗಳನುಮುರಿದಕ್ಷೋಭ್ಯ ತೀರ್ಥಯತಿಪಕರಸಂಜಾತ ರಮ್ಯಚರಿತಶರಣ ಜನರ ಪೊರೆವ ಯತಿಪನ, ಶಿಷ್ಯಜನರಮರುಳ ಮೋಹತಿಮಿರ ದಿನಪನ, ನಮ್ಮ ಪರಮಗುರು ಶ್ರೀಕೃಷ್ಣ ಪಾದಭಜಕನಜಯ ಮುನೀಂದ್ರನ೩

 

೧೭೩
ವಾದಿಗಜ ಮಸ್ತಕಾಂಕುಶ ಸುಜನ ಬುಧಗೇಯ
ಮೇದಿನೀ ಸುರವಂದ್ಯ ಶ್ರೀಪಾದರಾಯ ಪ
ಸಕಲಶಾಸ್ತ್ರ ಕಲಾಪ ಸನ್ಯಾಸ ಕುಲದೀಪಸಕಲ ಸತ್ಯಸ್ಥಾಪ ಸುಜ್ಞಾನದೀಪಪ್ರಕಟ ಪಾವನರೂಪ ಅರಿಕುಜನ ಮತಲೋಪನಿಕಟ ವರ್ಜಿತ ಪಾಪ ಕೀರ್ತಿ ಪ್ರತಾಪ ೧
ಹರಿಪದಾಂಬುಜ ಭೃಂಗ ಪರಮತಾಹಿವಿಹಂಗಪರಮ ಸುಗುಣಾಂತರಂಗ ಭವದುರಿತ ಭಂಗಶರಣ ಕೀರ್ತಿತರಂಗ ಶತ್ರುತಿಮಿರಪತಂಗಶರಣು ಶುಭ ಚರಿತಾಂಗ ಷಟ್ಫಾಸ್ತ್ರಸÀಂಗ ೨
ಸಿರಿಕೃಷ್ಣ ದಿವ್ಯ ಪಾದಾಬ್ಜ ಚಿಂತಾಲೋಲವರ ಹೇಮವರ್ಣಮುನಿಪತಿಯ ಸುಕುಮಾರಗುರುತಿಲಕ ಶ್ರೀಪಾದರಾಯ ಅಮಿತೋದ್ಧಾರಶರಣ ಜನ ಸುರಧೇನು ಭಕ್ತಮಂದಾರ ೩

 

೧೫೩
ವಾಸುದೇವ ವಸುದೇವನಂದನ ಕೃಷ್ಣ ವಾಸುದೇವ ಪ
ಕುಸುಮಶರನ ಪಿತ ಅಸುರ ಮರ್ದನ ಕೃಷ್ಣ ವಾಸುದೇವ ಅ.ಪ
ಮಂದರ ಗಿರಿಧರ ಮಧುಸೂದನ ಕೃಷ್ಣ ವಾಸುದೇವಕುಂದದೆ ಪೋಗಿ ಕಂಸನ ಕೊಂದೆ ಶ್ರೀಕೃಷ್ಣ ವಾಸುದೇವ ೧
ಶಿಶುವಾಗಿ ಪೂತಣಿಯಸುವ ಹೀರಿದೆ ಕೃಷ್ಣ ವಾಸುದೇವಶಿಶುಪಾಲಾಂತಕ ಯಶೋದೆನಂದನ ಕೃಷ್ಣ ವಾಸುದೇವ ೨
ಮುರಹರ ಶರಣು ಹೊಕ್ಕೆನೊ ಕಾಯೊ ಶ್ರೀಕೃಷ್ಣ ವಾಸುದೇವಶರಣೆಂಬ ಜನರಿಗೆ ಕರುಣಿಪ ಶ್ರೀಕೃಷ್ಣ ವಾಸುದೇವ ೩
ಗರುಡ ಗಮನನಾಗಿ ಚರಿಸುವ ಶ್ರೀಕೃಷ್ಣ ವಾಸುದೇವಚರಣ ಕಮಲವನ್ನು ನಂಬಿದೆ ಶ್ರೀ ಕೃಷ್ಣ ವಾಸುದೇವ ೪
ಶೇಷಶಯನ ನೀ ಪೋಷಿಸೊ ಶ್ರೀಕೃಷ್ಣ ವಾಸುದೇವಭಾಸುರಾಂಗನೆ ಭಕ್ತವತ್ಸಲ ಶ್ರೀಕೃಷ್ಣ ವಾಸುದೇವ ೫

 

೨೧೯
ಶರಣು ಶರಣು ಪ
ಶರಣುಮತ್ಸ್ಯನೆ ಕೂರ್ಮಕ್ರೋಡನರಹರಿ ವಟುಭಾರ್ಗವಶರಣುರಾಘವ ಕೃಷ್ಣ ಬುದ್ಧಶರಣು ಕಲ್ಕಿ ರೂಪನೆ ೧
ನಂಬಿದೆ ನಾನಿನ್ನ ಕೇಶವನಾರಾಯಣನೇ ಮಾಧವಅಂಬುಜಾಕ್ಷ ಗೋವಿಂದ ವಿಷ್ಣುಸಂಭ್ರಮದಿ ಮಧುಸೂದನ ೨
ಕರುಣದಲಿ ರಕ್ಷಿಸು ತ್ರಿವಿಕ್ರಮಕಲಿತ ವಾಮನ ಶ್ರೀಧರಪರಮಪಾವನ ಹೃಷೀಕೇಶನೆಪದ್ಮನಾಭ ದಾಮೋದರ ೩
ವಾಸವಾರ್ಚಿತ ಸಂಕರುಷಣವಾಸುದೇವ ಪ್ರದ್ಯುಮ್ನನೆಶ್ರೀಶ ಅನಿರುದ್ಧ ಪುರುಷೋತ್ತಮನೀ ಸಲಹೊ ಅಧೋಕ್ಷಜ ೪
ಶ್ರುತಿಗಗೋಚರ ನಾರಸಿಂಹಾ-ಚ್ಯುತ ಜನಾರ್ದನುಪೇಂದ್ರನೆಚತುರವಿಂಶತಿ ನಾಮದಲ್ಲಿಹಚತುರ ಹರಿ ಶ್ರೀಕೃಷ್ಣನೆ ೫

 

೧೭೫
ಸಂಗವಾಗಲಿ ಸಾಧು ಸಂಗವಾಗಲಿ ಪ
ಸಂಗದಿಂದ ಲಿಂಗದೇಹ ಭಂಗವಾಗಲಿ ಅ.ಪ
ಅಚ್ಚುತಾಂಘ್ರಿ ನಿಷ್ಠರ ಯದೃಚ್ಛ ಲಾಭ ತುಷ್ಟರನಿಶ್ಚಯಾತ್ಮ ಜ್ಞಾನವುಳ್ಳ ಅಚ್ಚ ಭಾಗವತರ ೧
ತಂತ್ರ ಸಾರ ಅಷ್ಟ ಮಹಾಮಂತ್ರ ಪರಿಪೂರ್ಣಸ್ನೇಹಯಂತ್ರದಿಂದ ಬಿಗಿದು ಸ್ವತಂತ್ರ ಮೂರ್ತಿ ತಿಳಿದವರ ೨
ಪಂಚಭೇದ ಸಂಸ್ಕಾರ ಪಂಚ ಭೂತಾತ್ಮವಾದಪಂಚಭೇದ ಕೃಷúರಾಯನ ಪಂಚಮೂರ್ತಿ ತಿಳಿದವರ ೩

 

೨೦೫
ಸಂಸಾರವೆಂದೆಂಬ ಮಾರಿಗೆ ಸಿಲುಕಿದೆಕಂಸಾರಿ ಕರುಣದಿಂದೆನ್ನ ನೋಡಯ್ಯ ಪ
ಬಲಿಗಾಯತವಾದ ಕುರಿ ಮೆಲುವಂತೆ ಹೆಡ-ತಲೆ ಮೃತ್ಯುವನರಿಯದೆ ಮತ್ತನಾದೆ ೧
ಕಂಡು ಕಂಡು ಪತಂಗ ಕಿಚ್ಚಿನೊಳ್ ಬೀಳ್ವಂತೆಕಂಡ ಕಂಡ ಹೇಯ ವಿಷಯಗಳಿಗೆರಗುವೆ ೨
ಪತಿಯಿರಲು ಸತಿ ಅನ್ಯರರಸುವಂತೆಗತಿ ನೀನಿರಲು ಅನ್ಯರೆ ಗತಿಯೆಂಬೆ ೩
ಒಂದು ಮೊಲಕೆ ಆರು ಹುಲಿ ಬಂದಡರುವಂತೆಬಂದೆಳೆವುತಲಿವೆ ಅರಿಷಡ್ವರ್ಗಗಳು ೪
ಜೋಗಿಗಾಗಿ ಕೋಡಗ ಪಾಟು ಬಡುವಂತೆಲೋಗರಿಗಾಗಿ ನಾ ತೊಳಲಿ ಬಳಲುವೆ ೫
ಶುಕನ ಓದುಗಳಂತೆ ಎನ್ನ ಓದುಗಳಯ್ಯಅಕಟಕಟವೆನಗೆ ಬಂಧಕವಾದುವೊ೬
ಮಿಂದು ಮಿಂದು ಆನೆ ಹುಡಿ ಹೊಯ್ದು ಕೊಂಬಂತೆಮಂದಮತಿಯಾದೆ ಕರುಣಿಸೊ ಕೃಷ್ಣ ೭

 

ದೈತ್ಯನೊಬ್ಬ ವಿಷಸರ್ಪದ ವೇಷದಿಂದ,
೧೬೫
ಸಾರಿರೊ ಡಂಗುರವ ನಮ್ಮ ಪ
ಭಾರತಿರಮಣ ವಾಯುವೆ ಜಗದ್ಗುರುವೆಂದು ಅ.ಪ
ಭೋರಿಡುತಲಿಪ್ಪ ಸಮುದ್ರವ ಲಂಘಿಸಿಧಾರುಣಿಸುತೆಯ ದುಃಖವ ಕಳೆದುಚೋರರಾವಣ ವನವನಲಗಾಹುತಿಯಿತ್ತುಶ್ರೀರಾಮಗೆರಗಿದಾತನೆ ಪ್ರಸಿದ್ಧನೆಂದು ೧
ಕುಶಲದಿ ಕುಂತಿಗೆ ಮಗನಾಗಿ ಭೀಮನೆ-ನಿಸಿ ಆ ಕೌರವ ಕಪಟದಲಿ ಕೊಟ್ಟವಿಷದ ಕಜ್ಹಾಯವ ತಿಂದು ಜೀರ್ಣಿಸಿಕೊಂಡಅಸಮ ಬಲಾಢ್ಯ ಮೂರುತಿಯೆ ಬದ್ಧವೆಂದು ೨
ಕಲಿಯುಗದÀಲಿ ಮಧ್ಯಗೇಹಾಭಿಧಾನದತುಳುವ ಬ್ರಾಹ್ಮಣನಲಿ ಅವತರಿಸಿಒಲಿದು ಶ್ರೀ ಅಚ್ಯುತಪ್ರೇಕ್ಷಾಚಾರ್ಯರಿಂ-ದಲಿ ಆಶ್ರಮಗೊಂಡ ಪೂರ್ಣಪ್ರಜ್ಞನೆಂದು ೩
ಖೂಳ ದೈತ್ಯನು ಕೊಲ್ಲಬೇಕೆಂದು ಕಪಟದಿಕಾಳಾಹಿ ವೇಷದಿಂ ಬಂದಿರಲು ಕಾಲ ಪ್ರಳಯದ ಸಿಡಿಲು ಬಂದೆರಗಿದಂತೆಕಾಲಿಂದ ತುಳಿದವನಸುವಗೊಂಡನು ಎಂದನು ೪
ಬಳಿಕ ಇಪ್ಪತ್ತೊಂದು ದುರ್ಭಾಷ್ಯಂಗಳಹಳಿದು ವೇದಾಂತ ಶಾಸ್ತ್ರಂಗಳಲಿಉಳುಹಿ ವೈಷ್ಣವ ಮತವವನಿಯೊಳಗೆ ನಮ್ಮಸಲಹುವ ಮಧ್ವೇಶ ಕೃಷ್ಣ ಪ್ರಿಯನೆಂದು ೫

 

ಗೋಪಿಯರೊಡನೆಯ ಬಾಲಕೃಷ್ಣನ ಚೆಲ್ಲಾಟವನ್ನು
೧೫೪
ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲಭಕ್ತವತ್ಸಲ ದೇವನು ಪ
ಮಕ್ಕಳ ಚೆಂಡಿಕೆ ಮರದ ಕೊನೆಗೆ ಕಟ್ಟಿಘಕ್ಕನೆ ಕೈ ಚಪ್ಪಾಳಿಕ್ಕಿ ನಗುವ ರಂಗ ಅ.ಪ.
ಹೆಣ್ಣುಮಕ್ಕಳು ಬಚ್ಚಲೆಣ್ಣೆ ಮಂಡೆಯೊಳುಬಣ್ಣ ವಸ್ತ್ರವ ಬಿಟ್ಟು ಬರಿಮೈಯೊಳಿರಲುಚೆನ್ನಿಗ ಬಿಸಿನೀರ ಚೆಲ್ಲಿ ಸೀರೆಗಳೊಯ್ದುಉನ್ನಂತವಾದ ವೃಕ್ಷವೇರಿ ಕಾಡುವನಮ್ಮ ೧
ಪಟ್ಟೆ ಮಂಚದಮೇಲೆ ಪತಿಯಂತೆ ಮಲಗಿರೆಎಷ್ಟು ಸ್ವಾತಂತ್ರ್ಯವೆ ಎಷ್ಟು ಪೇಳುವೆನೆಉಟ್ಟಸೀರೆಯ ಸೆಳೆದು ಬಟ್ಟ ಕುಚದೊಳುಗುರುನೆಟ್ಟು ಓಡಿದ ಪರಿ ಎಷ್ಟೆಂತೆ ಪೇಳಲೆ ೨
ಸಡಗರದೊಳು ಸೋಳಸಾಸಿರ ಗೋಪೇರಒಡಗೂಡಿ ಕೊಳಲನು ಪಿಡಿದು ತಾ ಮೊಸರಕಡೆವೊ ಗೊಲ್ಲತಿಯರ ಕೈ ಪಿಡಿದಾಡುವಒಡೆಯನೆ ಇವನಮ್ಮ ಉಡುಪಿನ ಶ್ರೀಕೃಷ್ಣ ೩

 

ಭಗವಂತನ ಕೃಪೆಯನ್ನು ದೀನಭಾವದಿಂದ
೧೧೮
ಸೇರಿದೆನು ಸೇರಿದೆನು ಜಗದೀಶನನರಕಜನ್ಮದ ಭಯವು ಎನಗೆ ಇನಿತಿಲ್ಲ ಪ
ನೇತ್ರಗಳು ಕೃಷ್ಣನ ಮೂರ್ತಿ ನೋಡುತಲಿವೆಶ್ರೋತ್ರಗಳು ಹರಿಕಥೆಯ ಕೇಳುತಲಿವೆರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲ್ಲಿಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ೧
ಹಸ್ತಗಳು ಮಂಟಪಶುದ್ಧಿಯನು ಮಾಡುತಿವೆಮಸ್ತಕವು ಹರಿಚರಣಕೆರಗುತಿದೆಕೋವಿಸ್ತಾರವಾದ ಪ್ರದಕ್ಷಿಣೆಯ ಮಾಡುತಿದೆಕಸ್ತೂರಿತಿಲಕವನು ಮೂಗು ಆಘ್ರಾಣಿಸುತಿದೆ ೨
ಹರಿನಾಮಸ್ಮರಣೆಯನು ನುಡಿಯುತಿದೆ ಎನ್ನ ಜಿಹ್ವೆಹರಿಭಕುತಿ ಸುಧೆಯ ಪಾನಗಳಿಂದಲಿಹರಿಪ್ರೀತಿಯಾಗಿದೆ ನೋಡಿದರೆನ್ನ ದೇಹಸಿರಿಕೃಷ್ಣರಾಯನ್ನ ಮನಮಂದಿರದಿ ಕಂಡೆ ೩

 

ಈಶ್ವರನ ಸ್ತುತಿಪರವಾದ ಈ
೧೬೭
ಸೋಮಶೇಖರ ತಾನೆ ಬಲ್ಲ ಶ್ರೀ-ರಾಮನಾಮಾಮೃತ ಸವಿಯನೆಲ್ಲ ಪ
ಮದನಪಿತಾಯೆಂದು ಕುಣಿಕುಣಿದಾಡಲುಕೆದರಿದ ಕೆಂಜೆಡೆಗಳ ಪುಂಜದಿಒದಗಿದ ಗಂಗೆ ತುಂತುರು ಹನಿಗಳ ಕಂಡುಪದಮಜಾಂಡಹಿತ ರಾಮರಾಮಾ ಎಂಬ ೧
ಆನಂದ ಜಲದ ಸೋನೆಗೆ ಲಲಾಟ-ದಾನೇತ್ರ ಬಡಬಾನಲನಂತಿರೆ ಏನೆನ್ನಲಿಬಹುದು ಸುಖ ಸಾಗರದೊಳುತಾನೆದ್ದು ಮುಳುಗುತ ರಾಮ ರಾಮಾಯೆಂಬ೨
ಶಿರದ ಗಂಗೆಯ ವರ ಅಗ್ಗಣಿಯಾಗಿರೆಸರಸಿಜ ಬಾಂಧವ ಚೆಂದಿರ ದೀಪಉರಿಗಣ್ಣಿನ ಹೊಗೆ ಧೂಪವನೇರಿಸಿಕರಣವೆ ನೈವೇದ್ಯಯೆಂದು ರಾಮ ಎಂಬ ೩
ಚಂದದ ಸ್ಫಟಿಕದ ಕರಡಿಗೆಯಲ್ಲಿಪ್ಪಇಂದ್ರನೀಲದ ಚೆನ್ನಪುತ್ಥಳಿಯಂತೆಚಂದದಿ ತನ್ನಯ ಹೃದಯ ಮಧ್ಯದಿ ರಾಮ-ಚಂದ್ರ ಹೊಳೆಯೆ ಶ್ರೀ ರಾಮ ರಾಮ ಎಂಬ೪
ಐದು ಮುಖಗಳಿಂದ ಹರಿಯ ಕೊಂಡಾಡಲುಸ್ವಾಧೀನ ಭೂಷಣ ಫಣಿಗಳೆಲ್ಲಮೋದದಿಂದಾಡಲು ಫಣಿ ಮಣಿಯಾಘಾತನಾದ ತಾಳವಾಗೆ ರಾಮ ರಾಮ ಎಂಬ ೫
ಒಮ್ಮೆ ಹರಿಯ ಗುಣ ಅಜಪೇಳಲಾಯೆಂಬಒಮ್ಮೆ ನಾರದ ಪಾಡೆ ತತ್ಥೈಯೆಂಬಒಮ್ಮೆ ರಾಣಿಗೆ ಪೇಳಿ ಶಿರವನೊಲಿದಾಡುವಒಮ್ಮೆ ತನ್ನೊಳು ನೆನೆಸಿ ರಾಮ ರಾಮ ಎಂಬ ೬
ಅರಸಂಚೆಯ ಕಂಜ ಪುಂಜಗಳಲಿಪ್ಪಅರೆ ಮುಚ್ಚಿದ ಹದಿನೈದು ನೇತ್ರಗಳಿಂಹರಿಯ ಕೊಂಡಾಡುತ ಪಂಚ ಮುಖಗಳಿಂದಸಿರಿಕೃಷ್ಣ ಮುಕುಂದ ನರಹರಿ ರಾಮ ಎಂಬ ೭

 

ಭಗವಂತನ ಮಹಿಮೆ ಬ್ರಹ್ಮ,
೧೨೦
ಹರಿ ನಿನ್ನ ರೋಮ ಕೂಪದಲಿ ಜೀವಿಪಸರಸಿಜ ಭವಾಂಡ ಕೋಟಿಯಲಿ ಪ
ತುರುಗಿಪ್ಪ ಬ್ರಹ್ಮರುದ್ರಾದಿ ಜೀವರುಗಳುಹರಿ ನಿನ್ನ ಮಹಿಮೆಯ ಪೇರ್ಮೆಯ ಬಲ್ಲರೆ ಅ.ಪ.
ಅತ್ತಿಯ ಮರದಿಂದುದುರುವ ಫಲಂಗಳಮೊತ್ತದಲಿರುತಿಪ್ಪ ಮಶಕಂಗಳುಕತ್ತೆಯ ಬಳಗಗಳೆಲ್ಲವು ಕೂಡಿಕೊಂಡುಅತ್ತಿಯ ತರುವಿನಾದ್ಯಂತವ ಬಲ್ಲವÉ ೧
ಐವತ್ತು ಕೋಟಿ ಯೋಜನ ವಿಸ್ತರವಾದಭೂವಲಯದ ತಮ್ಮ ಗೂಡಿನಲಿಆವಾಸವಾಗಿಪ್ಪ ಕ್ಷುದ್ರ ಪಿಪೀಲಿಕಜೀವರು ಧರಣಿಯ ಮೇರೆಯ ಬಲ್ಲರೆ ೨
ನೊರಜು ಮೊದಲಾಗಿ ಗರುಡ ಪರಿಯಂತಪರಿಪರಿ ಜಾತಿಯ ಪಕ್ಷಿಗಳು ತೆರದಲಿ ಹಾರುವರಲ್ಲದೆ ಗಗನದ ಪರಿಣಾಮವೆಂತೆಂದು ಬಲ್ಲವೆ ಶ್ರೀ ಕೃಷ್ಣ೩

 

೧೭೬
ಹರಿದಾಸರ ಸಂಗಕೆ ಸರಿಯುಂಟೆ
ಗುರು ಕರುಣಕೆ ಇನ್ನು ಪಡಿಯುಂಟೆ ದೇವ ಪ
ದಾವಾನಲವ ತÀಪ್ಪಿಸಿ ಕಾಡಾನೆಯದÉೀವಗಂಗೆಗೆ ತಂದು ಹೊಗಿಸಿದಂತೆಆವರಿಸಿರುವ ಷಡ್ವರ್ಗ ತಪ್ಪಿಸಿ ಎನ್ನಶ್ರೀವರನ ಕರುಣಾರಸದಿ ತೋಯಿಸುವ ೧
ಕಂದಿ ಬೇಸಗೆಯಲ್ಲಿ ನೊಂದ ಚಕೋರಕ್ಕೆಇಂದುಬಿಂಬದ ಮುಂದೆ ಹೊಗಿಸಿದಂತೆನೊಂದ ಹಮ್ಮಮತೆಯ ನೊಂದಿಸಿ ಎನ್ನ ಗೋ-ವಿಂದನ ಪಾದ ಸನ್ನಿಧಿಯ ಸೇರಿಸುವ ೨
ಬಲೆಯ ಹಾರಿದ ಎಳೆ ಹುಲ್ಲೆಯ ಮರಿಗಳಿಗೆಒಲಮೆಯಿಂದಲಿ ತಾಯ ತೋರಿಸಿದಂತೆಬಲು ಇಂದ್ರಿಯಗಳ ಸೆರೆಯ ಬಿಡಿಸಿ ಎನ್ನನಳಿನನಾಭನ ಸನ್ನಿಧಿಯ ತೋರಿಸುವ ೩
ಕರುಡರಿಗೆ ದಿವ್ಯಾಂಜನ ಹಚ್ಚಿ ಕಣ್ಣಿತ್ತುತೆರ ತೆರದಲಿ ಉಂಬ ನಿಧಿಯನಿತ್ತಂತೆಪರಮ ಮೂಢನಾದ ಎನಗೆ ಜ್ಞಾನವನಿತ್ತುನರಹರಿ ಪಾದ ಸಂದರುಶನವನ್ನೀವ ೪
ತಡೆಯಿಲ್ಲದ ಪೂರಾ ತೊರೆಯಲ್ಲಿ ಪೋಪನಪಿಡಿದೆತ್ತಿ ತಡಿಯನು ಸೇರಿಸಿದಂತೆಕಡೆಗೆಟ್ಟು ಭವಾಬ್ಧಿ ನಡುವೆ ಸಿಕ್ಕಿದ ಎನ್ನಪಿಡಿದು ಶ್ರೀಕೃಷ್ಣನಂಘ್ರಿಗಳ ಸೇರಿಸುವ ೫

 

೨೧೧
ಹರಿದಿನ ಪಾತಕ ಪರಿಹಾರ ದನುಜರಕರುಣಕ್ಕೆ ಕಾರಣ ನಂಬೆಲೊ ಮನುಜ ಪ
ಗಂಗೆ ಮೊದಲಾದ ತೀರ್ಥಂಗಳೆಣೆಯ ಶ್ರೀ-ರಂಗ ಮೊದಲಾದ ಕ್ಷೇತ್ರವು ಸರಿಯೆ ಉ-ತ್ತುಂಗ ಜಪತಪÀ ಹೋಮಂಗಳೆದುರೆ ಶ್ರೀ-ರಂಗನಾಥನ ದಿನದೊಂದುಪವಾಸಕೆ ೧
ಹಿಂದೆ ಮಾಡಿದ ಪಾಪ ಪರಿಹಾರವು ನೀ-ನಿಂದು ಮಾಡುವ ಸುಕೃತ ಬೆಳಸುಮುಂದಣ ಮುಕುತಿಗೆ ಕಲ್ಪ ಲತಾಂಕುರಇಂದಿರೇಶನ ದಿನದೊಂದುಪವಾಸಕೆ ೨
ರುಕುಮಾಂಗದ ಮೊದಲಾದ ಭಕುತರೆಲ್ಲಸಕಲವ ಬಿಟ್ಟು ಏಕಾದಶಿ ವ್ರತವಭಕುತಿಯಿಂ ಕೂಡಿ ಶ್ರೀಕೃಷ್ಣನ ಮೆಚ್ಚಿಸಿಮುಕುತಿ ಸೂರೆಯಗೊಂಡರೆಂಬುದನರಿಯ ೩

 

೪. ಉಗಾಭೋಗಗಳು
೨೧೨
ಆವ ಜನುಮದ ತಾಯಿ ಆವ ಜನುಮದ ತಂದೆಆವ ಜನುಮದ ಸತಿ ಆವ ಜನುಮದ ಸುತರುಆವ ಜನುಮದ ಬಂಧು ಆವ ಜನುಮದ ಬಳಗಆವ ಜನುಮದ ಪಿಂಡ ಆವಂಗೆ ಜನಿಸುವೆವೊನೀ ವೊಲಿದÀು ಪಾಲಿಸೈ ಸಿರಿಕೃಷ್ಣರಾಯ

 

೨೧೩
ಇಂದಿಗೆಂತೊ ನಾಳೆಗೆಂತೊ ನಾಡಿದ್ದಿಗೆಂತೆಂಬಬೆಂದವೊಡಲ ಹೊರೆಯೆ ಹೋಯಿತು ಸಂಸಾರಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬರಿಕೆಯಿಲ್ಲಮುಂದೆ ಮುಕ್ತನಾಗಬೇಕೆಂಬೊ ಎಣಿಕೆಯಿಲ್ಲಗೊಂದಣ ತಾಪತ್ರಯ ದುಂದುಗಕ್ಕೊಳಗಾಗಿಬೆಂದು ಮೂರ್ಖರೊಡನಾಡಿ ನಾನೊಂದೆನೈಯಇಂದ್ರಿಯಂಗಳು ತಮ್ಮ ತಮ್ಮ ತಿರೆಗಳಿಗೆಬಂಧಿಸಿ ಬಳಲಿಸಿ ಎನ್ನ ಕಾಡುತ್ತಲಿವೆಬಂದೆನೆಂದರೆ ಬರಲೀಯವೊ ಎನ್ನನುನಂದನ ಕಂದ ಕೃಷ್ಣ ತಂದೆ ವಿಚಾರಿಸಿ ಕಾಯಯ್ಯಕಂಗಳು ಚೆಲುವನು ನೋಡಿ ಕ-ರ್ಣಂಗಳು ವಾರುತಿಯ ಕೇಳಿಹಿಂಗದೆ ನಾಮವ ವದನದಿ ಸವಿಯುತ್ತ ಪ-ದಂಗಳ ಮನದಿ ನೆನೆನೆನೆದು ರೋ-ಮಂಗಳು ಪುಳುಕಿತನಾಗಿ ಲೋ-ಕಂಗಳ ಕಡಲೊಳು ಮುಳುಗಿ ಮೈಯುಬ್ಬಿ-ಕೊಬ್ಬುತ್ತಅಂಗವ ಮರೆದಾನಂದದಿರಂಗಾ ಎನುತಿದ್ದರೆ ಸಾಲದೆ ಮಂಗಳ ಜಯವನ್ನು ಕರುಣಿಸೊ ಮತ್ತೊಂದುಸಂಗವನೊಲ್ಲೆನೊ ಸಿರಿಕೃಷ್ಣರಾಯ

 

೨೧೪
ಜಾರತ್ವವನು ಮಾಡಿದ ಪಾಪಗಳಿಗೆಲ್ಲಗೋಪಿಜನ ಜಾರನೆಂದರೆ ಸಾಲದೆಚೋರತ್ವವನು ಮಾಡಿದ ಪಾಪಗಳಿಗೆಲ್ಲನವನೀತಚೋರನೆಂದರೆ ಸಾಲದೆಕ್ರೂರತ್ವವನು ಮಾಡಿದ ಪಾಪಗಳಿಗೆಲ್ಲಮಾವನ ಕೊಂದವನೆಂದರೆ ಸಾಲದೆಪ್ರತಿದಿವಸ ಮಾಡಿದ ಪಾಪಗಳಿಗೆಲ್ಲಪತಿತ ಪಾವನನೆಂದರೆ ಸಾಲದೆಇಂತಿಪ್ಪ ಮಹಿಮೆಯೊಳೊಂದನಾದರು ಒಮ್ಮೆಸಂತತ ನೆನೆವರ ಸಲಹುವ ಸಿರಿಕೃಷ್ಣ

 

೨೧೫
ನಿನ್ನ ಎಂಜಲನುಂಡು ನಿನ್ನ ಬೆಳ್ಳುಡೆಯುಟ್ಟುಮುನ್ನ ಮಾಡಿದ ಕರ್ಮ ಬೆನ್ನ ಬಿಡದಿದ್ದರೆನಿನ್ನ ಓಲೈಸಲೇಕೊ ಕೃಷ್ಣಸಂಚಿತವನುಂಡು ಪ್ರಪಂಚದೊಳಗೆ ಬಿದ್ದುನಿನ್ನ ಓಲೈಸಲೇಕೋ ಕೃಷ್ಣದಿನಕರನುದಿಸಿ ಕತ್ತಲೆ ಪೋಗದಿದ್ದರೆಹಗಲೇನೋ ಇರುಳೇನೋ ಕುರುಡಗೆ ಸಿರಿಕೃಷ್ಣ

 

ಉದಯಾದ್ರಿ ಶ್ರೀಕೃಷ್ಣ
೧೨೪
ಸುಳಾದಿ
ಧ್ರುವತಾಳ
ಅಂತರಂಗದಿ ಬ್ರಹ್ಮಾನಂದನಾಗಿ ನೀನಿರಲುಅಂತಕನ ಭಯವೇನಯ್ಯ ಶ್ರೀಹರಿಯೆಪಂಥದಿ ದನುಜನು ಬಾಧಿಸಲು ಸುತನಚಿಂತೆ ಯಾರಿಗೋ ಎಂದಿರದೆ ಸಾಕಿದೆಉದಯಾದ್ರಿ ಶ್ರೀ ಕೃಷ್ಣ೧
ಮಠ್ಯತಾಳ
ಮುರಹರ ನರಹರಿ ಸಿರಿವರ ಗಿರಿಧರ ಎಂದುಕರೆಯಲು ಕರುಣದಿ ಬಂದುಕರಿಯ ಕಾಯಿದೆ ಸಂತೋಷದಿ ಕಾಯಿದೆನರಕಾಂತಕ ಉದಯಾದ್ರಿ ಶ್ರೀಕೃಷ್ಣ೨
ತ್ರಿಪುಟತಾಳ
ತನ್ನ ತಾನರಿಯದೆ ತಗುಲಿದ ಕಾಳಿಯನುನಿನ್ನ ಪರಾಕ್ರಮ ತೋರಿ ಕಾಯಿದೆ ಶ್ರೀಹರಿಯೆಮುನ್ನ ನಾನಿನ್ನ ಡಿಂಗರಿಗನಾದೆನಯ್ಯಪನ್ನಗಾಶನತುರಗ ಪಾಲಿಸು ಉದಯಾದ್ರಿ ಶ್ರೀಕೃಷ್ಣ೩
ಅಟ್ಟತಾಳ
ನಿನ್ನ ಮೃದುಪಾದವ ನೋಯದಂತೆಎನ್ನ ಶಿರಸ್ಸಿನಲ್ಲಿಡೊರನ್ನ ಕಾಲಂದಿಗೆ ಗೆಜ್ಜೆಯ ನಾದದಿಂ-ದಿನ್ನು ಧಿಮಿಧಿಮಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ ೪
ಏಕತಾಳ
ಎನ್ನ ದೃಢವ ನೀ ಕಂಡೆ ಯಾದವ ಕೃಷ್ಣನಿನ್ನ ದೃಢವ ನಾ ಕಾಣೆಎನ್ನ ದೃಢ ನಿನ್ನದೃಢವೆರಡನು ಕಂಡರೆದಿನ್ನು ಧಿಂಧಿಮಿಕೆಂದು ಕುಣಿಸುವೆ ಉದಯಾದ್ರಿ ಶ್ರೀಕೃಷ್ಣ ೫
ತ್ರಿಪುಟತಾಳ
ಎನ್ನ ಗುಣದೋಷಗಳನೆಣಿಸುವರೇನೊ ಶ್ರೀಹರಿನಿನ್ನ ಬಿರುದಾಪನ್ನ ರಕ್ಷಕನೆಂದು ವಿಭೀ-ಷಣ್ಣನು ಕೀರ್ತಿಸಲು ಆ-ಆ-ಆಅನ್ಯಥಾ ಶರಣಂ ನಾಸ್ತಿ ಅನಾಥ ನಾಥನೆ ಆರ್ತ ಬಂಧುವೆನಿನ್ನ ಚರಣವನ್ನು ನಂಬಿದೆನೊ ಸಾಕ್ಷಿ ಉದಯಾದ್ರಿ ಶ್ರೀಕೃಷ್ಣ ೬
ರೂಪಕತಾಳ
ಶರಣಾಗತ ಜನ ಪರಿಪಾಲನೆಂಬಬಿರುದೆ ನಿಷ್ಕಾರಣ ಫಲದಾಯಕವೆನುತವರುಣಿಸುತಿಹ ಕುಚೇಲನುದಿನಕರುಣಾಕರ ಎನ್ನ ಕಾಯೊ, ಉದಯಾದ್ರಿ ಶ್ರಿಕೃಷ್ಣ ೭
ಜತೆ
ಎಂಥಾ ಸುಲಭನೊ ನೀನು ಉದಯಾದ್ರಿ ಶ್ರಿಕೃಷ್ಣಚಿಂತೆ ಮಾಡುವರಿಗೆಲ್ಲ

 

೧೮೦
ಸುಳಾದಿ
ಮಠ್ಯತಾಳ
ಆಗದ ಹೋಗದ ಮನೆವಾರುತೆ ಬೇರೊಬ್ಬಲೋಗರಿಗಾಗಿ ಹೊತ್ತು ಭವಾಟವಿಯಲ್ಲಿರಾಗವೆಂಬ ಘನ ತೃಷೆಯಿಂದ ಬಾಯೊಣಗಿಭೋಗವೆಂಬ ಬಯಲಮೃಗತೃಷ್ಣೆಗೋಡುತಬೇಗೆಯಿಂದ ಬಿದ್ದೆನೊ ನರಕಕೂಪದಲಿನಾಗಶಯನ ಎನ್ನನುದ್ಧರಿಸೊ ಸಿರಿಕೃಷ್ಣ ೧
ರೂಪಕತಾಳ
ಇಂದ್ರಿಯಗಳೆಂಬ ಕಳ್ಳರೈವರುಬಂಧಿಸಿ ತಮ್ಮ ವಿಷಯಕ್ಕೊಯ್ದೆನ್ನಕಂದಿಸಿ ಜ್ಞಾನವೆಂಬ ದೃಷ್ಟಿಯಎಂದೆಂದಿನ ಧರ್ಮ ಧನವನೊಯ್ದರುಇಂದಿರೇಶ ಲೋಕಪತಿ ಸಿರಿಕೃಷ್ಣ ಕಾಯೆನ್ನ ತಂದೆ ೨
ಝಂಪೆತಾಳ
ನಾನಾಗರ್ಭವೆಂಬ ಕಂಪಿನಲೊಮ್ಮೊಮ್ಮೆಹೀನೋಚ್ಚ ಜನ್ಮವೆಂಬ ತಗ್ಗುಮಿಟ್ಟೆಯಲೊಮ್ಮೆಸ್ವರ್ಗವೆಂಬ ಪರ್ವತಾಗ್ರದಲೊಮ್ಮೆಮ್ಮೆದುರ್ಗತಿಯೆಂಬ ಕಮರಿಯಲಿ ತಾನೊಮ್ಮೆಬಂದೆ ಭವಾಟವಿಯಲ್ಲಿ ನಿನ್ನ ಪಾದಾರ-ವಿಂದದ ನೆಳಲಲಿರಿಸೆನ್ನ ಸಿರಿಕೃಷ್ಣ ೩
ತ್ರಿಪುಟತಾಳ
ಹರಿದಾಸರ ನೆರವಿಲ್ಲದೆ ಹರಿಸೇವೆಯೆಂಬ ಪಥವ ಕಾಣದೆಹರಿಪದವೆಂಬ ಜನುಮ ಭೂಮಿಯ ಪರಿದು ದೂರದಲ್ಲಿ ತಪ್ಪಿಮರುಳಾದೆ ಭವಾಟವಿಯಲ್ಲಿ ಸಿರಿಪತಿ ನನ್ನ ಸೇರಿಸೊ ಸಿರಿಕೃಷ್ಣ ೪
ಅಟ್ಟತಾಳ
ಮಾಯೆಯೆಂಬ ದುಷ್ಟರಾಯ ಮಾನವೆಂಬ ಬಿನುಗು ಮಂತ್ರಿಇಂದ್ರಿಯಗಳೆಂಬ ತಿಂದೋಡುವ ಪರಿವಾರಬಿಗಿದು ಕಟ್ಟಿ ಎನ್ನ ಹಗೆಗಳಿಗಿತ್ತರುಕಾಮಾದಿ ಹಗೆಗಳ ಶಿಕ್ಷಿಸಿ ರಕ್ಷಿಸಯ್ಯ ಸಿರಿಕೃಷ್ಣ೫
ಆದಿತಾಳ
ತಾಪತ್ರಯವೆಂಬ ದಾವಾನಲದಿಂದಪಾಪರ ಸಂಗವೆಂಬ ವಿಷವೃಕ್ಷದಿಂದಕಾಪಥವೆಂಬ ಬಹು ತಪ್ಪುಗಳಿಂದಕೋಪವೆಂಬಟ್ಟುವ ಕಾಳೋರಗದಿಂದ ೬
ಈ ಪರಿಯಲಿ ನೊಂದೆ ಭವಾಟವಿಯಲಿನೀ ಪಾಲಿಸಬೇಕೆನ್ನನು ಸಿರಿಕೃಷ್ಣ೭
ಜತೆಅತ್ತಿತ್ತ ಸುತ್ತಿ ಭವಾಟವಿಯಲಿ ನೊಂದೆಇತ್ತ ಬಾರೆಂದು ನಿನ್ನ ಹತ್ತಿಲಿರಿಸೊ ಕೃಷ್ಣ

 

೫. ವಿಶಿಷ್ಟ ಗೀತೆಗಳು
೨೧೭
(ಸುಳಾದಿ)
ಧ್ರುವತಾಳ
ಆಲದೆಲೆಯಲಿ ಮಲಗಿದಂದು ನೀ-ಲಾಲಿ ಲಾಲಿಯೆಂದು ಪಾಡಿದರಾರೈಯಮತ್ತೆ ಕ್ಷೀರಾಬ್ಧಿಯೊಳು ಮಲಗಿದಂದು ನಿನ್ನತೃವ್ವಿ ತೃವ್ವಿಯೆಂದು ತೂಗಿದರಾರೈಯಆ ಜಲಧಿಯ ದರ್ಭಶಯನದಿ ನಿನ್ನನುಜÉೂೀ ಜೋ ಜೋ ಜೋಯೆಂದು ಪಾಡಿದರಾರೈಯಆ ರಮ್ಮೆ ಶ್ರುತಿಗೂಡಿ ಪೊಗಳುವಂತೆನಾರಂದ ಮಹತಿಯ ಮೀಟುವಂತೆ ಸ-ಮೀರಜ ಸ್ವರವೆತ್ತಿ ಪಾಡುವಂತೆಶ್ರೀರಮಣ ನಿನ್ನ ಪೊಗಳಬಲ್ಲೆನೆ ನಾನುಕಣ್ಣು ಮುಚ್ಚಿ ನಗುತಿಂತೆನ್ನ ಸಥಿಗೆಕಣ್ಣು ಮುಚ್ಚಿ ಕೃಷ್ಣ ಕಿವಿಯಂತಿದ್ದ [?] ೧
ಮಠ್ಯತಾಳ
ನಿನ್ನುರದ ಮೋಹದರಸಿಯ ಚೆನ್ನ ಚೆಲುವು ಸರಸಗಳಿಂದನಿನ್ನ ಪೊಕ್ಕಳ ಬ್ರಹ್ಮನ ನಾಲ್ಕು ವದನದ ವೇದ ಘೋಷಣೆಗಳಿಂದನಿನ್ನುದರದ ಜಗದುಲುಹಿನಿಂದ ನಿನ್ನ ಭಕ್ತರು ಕರೆವ ಚೀರಾಟದಿಂದಇನ್ನು ನಿದ್ರೆ ಬಾರದೆ ಇಂತೆಂಬ ಗೋಪಿದೇವಿ ಮಾತಿಗೆಕೃಷ್ಣ ನಾಚಿ ಕಣ್ಣ ಮುಚ್ಚಿದ ೨
ರÀೂಪಕತಾಳ
ಶುಭ ಗುಣಂಗಳ ಖಣಿಯೆ ಜೋ ಜೋಭಕ್ತರ ಚಿಂತಾಮಣಿಯೆ ಜೋ ಜೋಮುನಿಹೃದಯಾಂಬರ ಹಂಸನೆ ಜೋ ಜೋಸರ್ವ ದೇವೋತ್ತಂಸನೆ ಜೋ ಜೋಮುಕುತಿ ಕಾರಣ ಪುಣ್ಯನಾಮನೆ ಜೋ ಜೋಶ್ರೀಕೃಷ್ಣ ವೈಕುಂಠಧಾಮನೆ ಜೋ ಜೋ೩
ತ್ರಿಪುಟತಾಳ
ಶ್ರೀಲೋಲುಪಾ ಲಾಲಿ ಗೋಪಾಲಿಕಾಜಾಲಲೀಲ ಮೂಲಕಾರಣ ಲಾಲಿ ಗೋಪಾಲಕಶ್ರೀಕೃಷ್ಣಯ್ಯ ಲಾಲಿ ಮೂಲಕಾರಣ ಲಾಲಿ ಗೋಪಾಲ೪
ಝಂಪೆತಾಳ
ಪರಬೊಮ್ಮನೆ ಎನ್ನ ತಮ್ಮ ಬಾರೆಂಬಅಜನತಂದೆ ಎನ್ನ ಅಪ್ಪೆಂಬಅರುಹಿ ನೋಡಲೆ ಎನ್ನ ಮರಿಯೆ ಮುದ್ದೀಯೆಂಬಗೋಪಿ ದೇವಿಯ ನೋಂಪಿ ತಾನೆಂತೊಇದಕೆ ಬಂದಪ್ಪಿ ಮುದ್ದೀವ ನಲಿವಮುದ್ದು ಮೈಯ ಕೃಷ್ಣನ ದಯ ತಾನೆಂತೊ ೫
ಆದಿತಾಳ
ಒಮ್ಮೆ ನೆನವರ ಪೊರೆಯಬೇಕೆಂಬೊ ಚಿಂತೆ
ಇಮ್ಮೆ ನೆನವರ ರಿಣದ ಚಿಂತೆ
ಆವಾಗ ಭಕುತರು ಕರೆದಾರೋ ಎಂಬ ಚಿಂತೆ
ನಿರುಪಾಧಿಶ ಭಕ್ತರ ಹಂಗಿನ ಚಿಂತೆ
ಇನಿತು ಚಿಂತೆಯುಳ್ಳ ನಿನಗೆ ನಿದ್ರೆ-
ಯಿನ್ನೂ ಬಾರದೆ ಎಂದರೆ ಕೃಷ್ಣ ನಗುವ ೬
ಏಕತಾಳ
ಬಾಲಲೀಲೆ ಬೇಕಾದರೆ ಮೂರ್ಲೋಕವಬಾಯೊಳಗೆ ತೋರುವನÀುಮಕ್ಕಳಾಟಿಕೇಲ್ಯವ ಬಲ್ಲಿದರಕ್ಕಸರಿಗೆ ಇವ ಕಕ್ಕಸನಾಗಿಚಿಕ್ಕತನವು ಇವಗಳವಡನಾಗಿದಿಕ್ಕು ದೆಸೆಯು ಸಿರಿಕೃಷ್ಣ ರಕ್ಷಿಸು ತಂದೆ ೭
ಜತೆ
ಚಿನ್ನ ಕೃಷ್ಣನ ಮುದ್ದಿಗೆ ಗೋಪಕನ್ಯೆರೆಲ್ಲರು ತನುಮಯವಾಗಿ ಇಪ್ಪರು

 

ನನ್ನ ದೋಷ ಅಥವಾ ಅಪರಾಧಗಳು ಹಲವಾರು.
೧೮೬
ಸುಳಾದಿ
ಧ್ರುವತಾಳ
ಎನ್ನ ಮಹಾದೋಷಗಳನಂತವಾದರೆ ಅಂಜೆ ನಾನುನಿನ್ನಯ ಕರುಣ ಅನಂತಾನಂತವಾಗೆನಿನ್ನ ಕಲ್ಯಾಣಗುಣ ಅನಂತಾನಂತವಾಗೆ ಬಾವನ್ನವ ಸೇರಿದ ಬೇವು ಬಾವನ್ನವಲ್ಲದೆ ಬೇವಾಹುದೆತನ್ನ ಶಿಶುವಿನ ತಪ್ಪಿಗೆ ಜನನಿ ಕೈಯ ಬಿಡುವಳೆನಿನ್ನವನೆನಿಸುವದೊಂದೆ ಸಾಲದೆ ಎನಗೆದಯಾಸಿಂಧು ಶ್ರೀಕೃಷ್ಣ ಒಂದೆ ಸಾಲದೆ ಎನಗೆ ೧
ಮಠ್ಯತಾಳ
ಹಿಂದಣ ಇಂದಿನ ಮುಂದಣ ಚಂದಾಚಂದದ ಕರ್ಮವನಂತಾನಂತಒಂದೊಂದನುಂಬ ಕಾಲದೊಳಗೆ ಮ-ತ್ತೊಂದನಂತಾನಂತ ಕರ್ಮ ಕೂಡುತಲಿವೆಅಯ್ಯಯ್ಯಯ್ಯಯ್ಯ ಇದೆಂದು ತೀರುವುದಯ್ಯತಂದೆ ಶ್ರೀಕೃಷ್ಣ ಸಂದರುಶನವಿಲ್ಲದೆ ಈದಂದುಗವ ನೀಗುವ ಬಗೆ ಬೇರಿಲ್ಲ೨
ತ್ರಿಪುಟತಾಳ
ಶ್ರುತಿಗಳು ಬಣ್ಣಿಸಿ ಸ್ತುತಿಸಿ ಸ್ತುತಿಸಿ ಅಂದದ ನಿನ್ನ ದಿತಿಸುತಾವೇಶದಿ ಸಭೆಯೊಳಗತಿಅತಿಬೈದ ಶಿಶುಪಾಲಗೆ ಮುಕುತಿಯ-ನಿತ್ತೆ ಶ್ರೀಕೃಷ್ಣ ನಿನ್ನ ಭಕುತರಿಗೆಲ್ಲಮಿತಿಯುಂಟೆ ನಿನ್ನ ದಯಕೆ ಹರಿ ಹರಿನಿನ್ನ ಭಕುತರಲಿ ಮಿತಿಯುಂಟೆ ನಿನ್ನ ದಯಕೆ ೩
ಅಟ್ಟತಾಳ
ಆದ್ಯಪರಾಧ ಮಿಥ್ಯಾಜ್ಞಾನದ್ವಿತೀಯ ಹರಿಯೆ ವಿಸ್ಮರಣತೃತೀಯ ನಿಷಿದ್ಧಾವಿಹಿತಾಚರಣಚತುರ್ಥ ಅಯೋಗ್ಯನಲ್ಲುಪದೇಶಕರಣಕರುಣಾಕರ ಈ ಅಪರಾಧಕೆಲ್ಲ ಶ್ರೀಕೃಷ್ಣನೀ ದಯದಿಂದ ನೋಡಯ್ಯ ೪
ಏಕತಾಳ
ಭಕ್ತಿಲೇಶದ ಪ್ರಸಕ್ತಿ ಎನಗಿಲ್ಲಜ್ಞಾನವೆಂಬುದನೇನ ಕಾಣೆ ನಾವೈರಾಗ್ಯದ ವಾರುತೆ ಸೇರದೆನಗೆಆಚಾರ ವಿಚಾರ ಎನಗಿಲ್ಲಜ್ಞÁನವೆಂಬುದನೇನ ಕಾಣೆ ನಾಆನೊಬ್ಬನೆ ಕೃಷ್ಣ ನಿನ್ನವರೊಳುಮಾನುಷಪಶು ದಯೆಯಿಂದೆನ್ನ ನೋಡಯ್ಯ ೫
ಜತೆ
ಮೆಚ್ಚಿದೆನೊ ಕೃಷ್ಣ ಅಚ್ಚ ಕರುಣಿಯೆಂದುಎಚ್ಚೆಂಗೆದೆಯನೊದ್ದಂಗೆ ಮುಕುತಿಯನಿತ್ತೆ

 

೧೮೯
ಸುಳಾದಿ
ಧ್ರುವತಾಳ
ಕಾಮವೆಂಬ ಹೆಚ್ಚಿನ ಕಾಡುಗಿಚ್ಚೊಂದು ಕಡೆಯಲೆನ್ನ ಸುಡುತಲಿದೆಕ್ರೋಧವೆಂಬ ಹೆಬ್ಬುಲಿ ಹಸಿದು ಒಂದು ಕಡೆಯಲೆನ್ನ ತಿನ್ನುತಲಿದೆಲೋಭವೆಂಬ ಮಹರಕ್ಕಸನೊಂದು ಕಡೆಯಲೆನ್ನ ಹೀರುತಲೈದಾನೆಮೋಹವೆಂಬ ಕಗ್ಗÀತ್ತಲೆಯು ಕವಿದು, ದಿಕ್ಕು ದೆಸೆ ಏನೂ ತಿಳಿಯದಿದೆಮದವೆಂಬ ಮದಸೊಕ್ಕಿದ ಕಾಡಾನೆ ಒಂದು ಕಡೆಯಲೆನ್ನ ಸೀಳುತಲಿದೆಮತ್ಸರವೆಂಬ ಮಹಾವಿಷದ ಚೇಳೊಂದು ಕಡೆಯಲೆನ್ನ ಊರುತಲಿದೆಈ ಪರಿ ಭವವೆಂಬಡವಿಯಲಿ ನಾನಾಪರಿಯ ಶತ್ರುಗಳಿಗೊಳಗಾದೆಶ್ರೀಪತಿ ಪರಮ ದಯಾನಿಧೆ ದೀನನಾದೆನ್ನೊಡೆಯರಕ್ಷಿಸು ಸಿರಿಕೃಷ್ಣ೧
ಮಠ್ಯತಾಳ
ಆಗದ ಹೋಗದ ಮನೆವಾರುತೆ ಬೇರೊಬ್ಬಲೋಗರಿಗಾಗಿ ಹೊತ್ತು ಭವಾಟವಿಯಲ್ಲಿರಾಗವೆಂಬ ಘನ ತೃಷೆಯಿಂದ ಬಾಯೊಣಗಿಭೋಗವೆಂಬ ಬಯಲ ಮೃಗತೃಷ್ಣೆಗೋಡುತಬೇಗೆಯಿಂದ ಬಿದ್ದೆನೊ ನರಕ ಕೂಪದಲಿನಾಗಶಯನ ಎನ್ನನುದ್ಧರಿಸೊ ಸಿರಿಕೃಷ್ಣ೨
ರೂಪಕತಾಳ
ಇಂದ್ರಿಯಂಗಳೆಂಬ ಕಳ್ಳರೈವರು ಬಂಧಿಸಿ ತಮ್ಮ ವಿಷಯಕ್ಕೊಯ್ದೆನ್ನಕಂದಿಸಿ ಜ್ಞಾನವೆಂಬ ದೃಷ್ಟಿಯಎಂದೆಂದಿನ ಧರ್ಮ ಧನವನೊಯ್ದರುಇಂದಿರೇಶ ಲೋಕಪತಿ ಸಿರಿಕೃಷ್ಣ ಕಾಯೆನ್ನ ತಂದೆ೩
ಝಂಪೆತಾಳ
ನಾನಾ ಗರ್ಭವೆಂಬ ಕಂಪಿನಲೊಮ್ಮೊಮ್ಮೆಹೀನೋಚ್ಚ ಜನ್ಮವೆಂಬ ತಗ್ಗುಮಿಟ್ಟಿಯಲೊಮ್ಮೆಸ್ವರ್ಗವೆಂಬ ಪರ್ವತಾಗ್ರದಲೊಮ್ಮೊಮ್ಮೆದುರ್ಗತಿಯೆಂಬ ಕಮರಿಯಲಿ ತಾನೊಮ್ಮೆಬಂದೆ ಭವಾಟವಿಯಲ್ಲಿ ನಿನ್ನ ಪಾದಾರ-ವಿಂದದ ನೆಳಲಲಿರಿಸೆನ್ನ ಸಿರಿಕೃಷ್ಣ೪
ತ್ರಿಪುಟತಾಳ
ಹರಿದಾಸರ ನೆರವಿಲ್ಲದೆ ಹರಿಸೇವೆಯೆಂಬ ಪಥವ ಕಾಣದೆಹರಿಪದವೆಂಬ ಜನುಮ ಭೂಮಿಯ ಪರಿದು ದೂರದಲ್ಲಿ ತಪ್ಪಿಮರುಳಾದೆ ಭವಾಟವಿಯಲ್ಲಿ ಸಿರಿಪತಿ ನಿನ್ನ ಸೇರಿಸೊ ಸಿರಿಕೃಷ್ಣ ೫
ಮಾಯೆಯೆಂಬ ದುಷ್ಟರಾಯ ಮಾನವೆಂಬ ಬಿನಗುಮಂತ್ರಿಇಂದ್ರಿಯಗಳೆಂಬ ತಿಂದೋಡುವ ಪರಿವಾರಬಿಗಿದು ಕಟ್ಟಿ ಎನ್ನ ಹಗೆಗಳಿಗಿತ್ತರುಕಾಮಾದಿ ಹಗೆಗಳ ಶಿಕ್ಷಿಸಿರಕ್ಷಿಸೈಯ ಸಿರಿಕೃಷ್ಣ ೬
ಆದಿತಾಳ
ತಾಪತ್ರಯವೆಂಬ ದಾವಾನಲದಿಂದಪಾಪರ ಸಂಗವೆಂಬ ವಿಷವೃಕ್ಷದಿಂದಕಾಪಥವೆಂಬ ಬಹು ತಪ್ಪು ಗತಿಗಳಿಂದ ಕೋಪವೆಂಬಟ್ಟುವ ಕಾಳೋರಗದಿಂದಈಪರಿಯಲಿ ನೊಂದೆ ಭವಾಟವಿಯಲಿನೀ ಪಾಲಿಸಲಿಬೇಕೆನ್ನನು ಸಿರಿಕೃಷ್ಣ ೭
ಜತೆಅತ್ತಿತ್ತ ಸುತ್ತಿ ಭವಾಟವಿಯಲಿ ನೊಂದೆ ಇತ್ತ ಬಾರೆಂದು ನಿನ್ನ ಹತ್ತಿಲಿರಿಸೊ ಕೃಷ್ಣ

 

‘ಕರಿ ಹರಿಯೆನಲಾ ಸುಪ್ತಿಯ ತಳ್ಳಿ’-
೧೦೫
ಸುಳಾದಿ
ದ್ವುವತಾಳ
ತಂದೆಯಾಗಿ ತಾಯಿಯಾಗಿ ಇಂದಿರೇಶನೆ ಎನಗೆ
ಬಂಧುವಾಗಿ ಬಳಗವಾಗಿ ಸಿಂಧುಶಯನನೆ ಎನಗೆ
ಹಿಂದಾಗಿ ಮುಂದಾಗಿ ಮುಕುಂದನೆ ಎನಗೆ
ಸ್ವಾಮಿಯಾಗಿ ಪ್ರೇಮಿಯಾಗಿ ರಕ್ಕ ಸಾಂತಕನೆ
ಗುರುವಾಗಿ ದೈವವಾಗಿ ದೇವೊತ್ತಮನೆ ಎನಗೆ
ವಿದ್ಯೆಯಾಗಿ ಬುದ್ಧಿಯಾಗಿ ವಿದ್ಯಾಪತಿಯೆ
ದಿಕ್ಕಾಗಿ ದೆಸೆಯಾಗಿ ರಾಮಚಂದ್ರನೆ ಎನಗೆ
ಇಹವಾಗಿ ಪರವಾಗಿ ಶ್ರೀಕೃಷ್ಣನೆ ಪೊರೆವ ೧
ಮಠ್ಯತಾಳ
ಬೊಮ್ಮ ನಮ್ಮ ರುಗ್ಮಿಣಿದೇವಿ ರಾಣಿ
ಪೆರ್ಮೆಯ ಅಜನು ಹೆಮ್ಮಗ
ಹಮ್ಮಿನ ರುದ್ರ ಮೊಮ್ಮಗ
ಸುಮನಸರೆಲ್ಲ ಪರಿವಾರ
ನಮ್ಮ ಸ್ವಾಮಿ ಕೃಷ್ಣ ಎಂದರೆ
ಪೆರ್ಮೆಯಿಂದೊಲಿದಿಲ್ಲವೆ ೨
ರೂಪಕತಾಳ
ದೂರದೊಳ್ನಿಂದೊಮ್ಮೆ ಗೋವಿಂದ ಗೋವಿಂದ
ಅನಾಥ ಬಂಧುವೆ ದ್ವಾರಕಾವಾಸಿಯೆಂದು
ಚೀರಿದ ದ್ರೌಪದಿಗೆ ಅಕ್ಷಯಾಂಬರವಿತ್ತ
ಸಾರಿದೆ ನಾನಿನ್ನ ನಂಬಿದೆ ಎನ್ನೆ ಶ್ರೀಕೃಷ್ಣ
ಚೀರಿದ ದ್ರೌಪದಿಗೆ ಅಕ್ಷಯಾಂಬರವಿತ್ತ ೩

ಇತೆಂಬೊದೊಂದು ಪೆರ್ಮೆಯೆ ಹರಿಸೇವೆ ಫಲರೂಪ
ಶ್ರವಣವೆ ಶುಭದ ಬೆಳಗು, ಕೀರ್ತನೆಯೆ ಲೇಸಿನ ಹೆಚ್ಚಿಗೆ
ಸ್ಮರಣವಚ್ಚ ಸುಖವೆಂಬುದನುಭವಸಿದ್ದ
ಶ್ರೀಕೃಷ್ಣನ ಪಾದಸೇವೆ ಮುಕ್ತಿಕನ್ಯಾಸೇರುವೆ ೧
ಮಠ್ಯತಾಳ
ನೆನಹಿನ ಲೇಶ ಮಾತುರದಿಂದ ಮಹ
ಘನ ಸುಖಮಯನಾಗಿಪ್ಪೆ ನಾನಾವಾಗ
ತನುಭಾವವಳಿದು ಮೌನಿಗಳಂತೆ ಮೈಮರೆದು ಕು-
ಜನಾಚಾರವಳಿದು ಸಲೆ ನಿನ್ನನನವರತ
ನೆನೆವ ಭಕುತರ ಸುಖವನ್ನೆಂತೊ ಸಿರಿಕೃಷ್ಣ೨
ತ್ರಿಪುಟತಾಳ
ಪುತ್ರಮಿತ್ರ ಕಳತ್ರ ವರ್ಗದಿಂದ
ದೇಹಕರ್ಮ ಜ್ಞಾನೇಂದ್ರಿಯಂಗಳಿಂದ
ಚಿತ್ತಬುದ್ಧಿ ಮನೋ ಹಮ್ಮುಗಳಿಂದ
ಪ್ರಾಣದಿಂದ ತನ್ನಾತ್ಮದಿಂದ
ನೀನೆ ಪ್ರಿಯನಾಗಿಹೆ ಸಿರಿಕೃಷ್ಣ
ನಿನ್ನ ನೆನೆಹಿಗಿಂತ ಬೇರೆ ಪರಮ ಸುಖವುಂಟೆ?೩
ಅಟ್ಟತಾಳ
ಆನಿನ್ನು ಧನ್ಯನಲ್ಲಾ[=ಅಲ್ಲವೆ?] ಮತ್ತೇನು ಕಾರಣ ಕೊಂಡೇನು
ನಾನಾದುರಿತ ತನ್ನಂತಾನೆ ಬೆಂದುದಲ್ಲಾ !
ಶ್ರೀನಾಥ ಶ್ರೀಕೃಷ್ಣ ತಾನೇ ನೆನೆವಿಗೆ ಬಂದನಲ್ಲಾ
ಅಂದು ವಿಷ್ಣು ಇಂದು ವಿಷ್ಣು ಎಂದೆಂದು ವಿಷ್ಣು ತಾನೆ
ಅತ್ತವಿಷ್ಣು ಇತ್ತ ವಿಷ್ಣು ಎತ್ತೆತ್ತ ವಿಷ್ಣು ತಾನೆ
ಸರ್ವಯಜ್ಞ ಸರ್ವಶಕ್ತಿ ಸಾಧುಗತಿ ವಿಷ್ಣು ತಾನೆ
ಸ್ವಪ್ನಸುಷುಪ್ತಿ ಜಾಗ್ರತೇಲಿ ವಿಷ್ಣು ತಾನೆ
ಓವಿನೋವಿ ಮನದಲ್ಲಿ ಕಾವಕೃಷ್ಣನಿರುತಿರೆ
ಆವಾಗಲೆಲ್ಲಿಹದಾವಭಯ ನಿನಗೆ ಜೀವ ೪
ಏಕತಾಳ
ಕರಿ ಹರಿಯೆನಲಾ ಸುಪ್ತಿಯ ತಳ್ಳಿ
ಸಿರಿಯ ಸಾರೆನುತ ಉರಗ ಮಂಚದಿಂ ಧುಮುಕಿ
ಕರವಿತ್ತ ವಿರಿಂಚನ ಕೈಲಾಗು ಒಲ್ಲದೆ
ಭರದಿ ಹನುಮನಿತ್ತ ಹಾವಿಗೆಯನು ದಾಂಟಿ
ಗರುಡನೊದಗುತಿರೆ ತಿರುಗಿ ನೋಡದೆ ಬಂದ
ಕರುಣವ ತೋರೆನಗೆ ನಮೋ ನಮೋ ನಮೋ ಸಿರಿಕೃಷ್ಣ ೫
ಜತೆ
ನಾರಾಯಣಾ ಎಂದು ಮಗನ ಕರೆಯೆ, ಎನ್ನ
ಕರೆದನೆಂದಜಮಿಳ ನಂಜದಿರೆಂದ ಕೃಷ್ಣ

 

‘ಶೋಕಾದಿ ದೋಷಾತಿ’ ದೂರನೆಂಬ-
೧೦೬
ಸುಳಾದಿ
ಧ್ರುವತಾಳ
ತಾಯಿ ಈ ಲೋಕಕ್ಕೆ ಶ್ರೀಹರಿ ಕಾಯದಿ ಜಗವನಿಟ್ಟನಾಗಿ
ತಂದೆ ಈ ಲೋಕಕ್ಕೆ ಶ್ರೀಹರಿ ಅಂದೆ ಬೊಮ್ಮಾದಿಗಳ ಸೃಜಿಸಿದವನಾಗಿ
ಒಡೆಯನೀ ಲೋಕಕ್ಕೆ ಶ್ರೀ ಹರಿ ಬಿಡದೆ ರಾಮಾದಿ ರೂಪದಿ
ಪೊರೆವನಾಗಿ
ಗತಿ ಈ ಲೋಕಕ್ಕೆ ಶ್ರೀಹರಿ ಶ್ರೀಪತಿ ತನ್ನ ನೆನೆವರಿಗಭಯವ ನೀವನಾಗಿ
ಈಶನೀಲೋಕಕ್ಕೆ ಶ್ರೀಹರಿ ವ್ಯಾಸಾದಿ ರೂಪದಿ ಜ್ಞಾನವನೀವನಾಗಿ
ದೈವವೀಲೋಕಕ್ಕೆ ಶ್ರೀಹರಿ ಸರ್ವಧರ್ಮಗಳಿಂದ ಸೇವ್ಯನಾಗಿ
ಪರತತ್ವವೀಲೋಕಕ್ಕೆ ಶ್ರೀಹರಿ ವರಮುಕ್ತಿ ನಾನೊಬ್ಬನೀವನಾಗಿ
ಸರ್ವವೀಲೋಕಕ್ಕೆ ಶ್ರೀಕೃಷ್ಣ ಓರ್ವನೆ ಸತ್ಯವ್ಯಾಪಕನಾಗಿ ೧
ಮಠ್ಯತಾಳ
ಪತಿಯೆಂದುಪಾಸ್ಯ ಪದುಮ ಜಾತೆಗೆ
ಪಿತನೆಂದುಪಾಸ್ಯ ಪದುಮಜರಿಗೆ
ಸ್ವಶುರನೆಂದುಪಾಸ್ಯ ಸರಸ್ವತಿಗೆ
ಪಿತಾಮಹನೆಂದುಪಾಸ್ಯ ಪಿನಾಕಧರಗೆ
ಸ್ವಾಮಿಯೆಂದುಪಾಸ್ಯ ಸರ್ವರಿಗೆ ಸಿರಿಕೃಷ್ಣ
ಈ ಮಹಿಮಗುಪಾಸ್ಯನುಗ್ರಸೇನ ಗಡ ೨
ರೂಪಕತಾಳ
ಸರಸಿಜಾಕ್ಷನು ವಿರಿಂಚಿಗೆ ಗುರು
ಪುರಹರನಿಗೆ ಪರಮಗುರು ಮಿಕ್ಕ
ಸುರತತಿಗೆಲ್ಲ ಆದಿಗುರು
ನರೋತ್ತಮರಿಗೆಲ್ಲ ಮೂಲಗುರು
ಪರದೈವ ಶ್ರೀಕೃಷ್ಣಗೆ ಗುರುವಾದ ಸಾಂದೀಪಗಡ ೩
ಝಂಪೆತಾಳ
ಶೋಕಾದಿ ದೋಷಾತಿದೂರನೆಂಬ
ಜ್ಞಾನೈಕರಸ ದಿವ್ಯ ಮೂರುತಿಯೆಂಬ
ಲೌಕಿಕಾಮಂದಾನಂದ ಸಾಂದ್ರನೆಂಬ
ಸಾಕುವ ತನ್ನ ನಿಜ ಸ್ವಾಮಿಯೆಂಬ
ನಾಲ್ಕು ಬಗೆಯ ಉಪಾಸನವಿಲ್ಲದವಗೆ
ಶ್ರೀಕೃಷ್ಣ ತನ್ನ ಮೂರುತಿಯ ತೋರ ಗಡ ೪
ಆದಿತಾಳ
ಎಡರುಗಳೆಲ್ಲಂ ಅಡರಿದಡಂ
ಕುತ್ತುಗಳೆಲ್ಲಂ ಮುತ್ತಿದಡಂ
ವ್ಯಾಧಿಗಳೆಲ್ಲಂ ಬಾಧಿಸಿದಡಂ
ಶೋಕಗಳೆಲ್ಲಂ ಮೂಕಿ ಕಟ್ಟಿದಡಂ
ಶ್ರೀಕೃಷ್ಣ ಪೂರ್ಣಗುಣ ಸ್ವಾಮಿಯೆಂಬ
ಏಕಾಂತೋಪಾಸನೆಯ ಮರೆಯದಿರಾ
ಜತೆ
ಶ್ರವಣಾದಿಯನೊಂದು ಕ್ಷಣವು ಬಿಡದೆಮಾಡು
ಭುವನಪಾವನ ಕೃಷ್ಣನ ಚಿತ್ತವ ಪಡೆವರೆ

 

ಇದರಲ್ಲಿಯ ನಿಂದಾಸ್ತುತಿ ಗಮನಿಸುವಂತಿದೆ.
೧೦೭
ಸುಳಾದಿ
ಧ್ರುವತಾಳ
ತಾಯಿಯೆಂಬೆನೆ ನಿನ್ನ-ಧ್ರುವನ್ನ ತಾಯಿಯು ನಿನ್ನಂತೆ ಕಾಯಿದಳೆ
ತಂದೆಯೆಂಬೆನೆ ನಿನ್ನ-ಪ್ರಹ್ಲಾದನ ತಂದೆ ನಿನ್ನಂತೆ ಕಾಯಿದನೆ
ಭ್ರಾತೃ ಎಂಬೆನೆ ನಿನ್ನ-ವಿಭೀಷಣನ್ನ ಭ್ರಾತೃನಿನ್ನಂತೆ ಕಾಯಿದನೆ
ಪತಿಯೆಂಬೆನೆ ನಿನ್ನ-ಪಾಂಚಾಲಿಯ ಪತಿಗಳು ನಿನ್ನಂತೆ ಕಾಯಿದರೆ
ತಾಯಿಯೆಂಬೆನೆ-ನಿನ್ನ
ಪುತ್ರನೆಂಬೆನೆ ನಿನ್ನ ಉಗ್ರಸೇನನ ಪುತ್ರ ನಿನ್ನಂತೆ ಕಾಯಿದನೆ
ಮಿತ್ರನೆಂಬನೆ ನಿನ್ನ ಗಜೇಂದ್ರನ ಮಿತ್ರರು ನಿನ್ನಂತೆ ಕಾಯಿದರೆ
ಆವ ಅನಿಮಿತ್ತ ಬಂಧುವೊ ನೀನಾವ ಕರುಣಾಸಿಂಧುವೋ
ದೇವ ಕೃಷ್ಣ ನಿನಗೆ ಭಂಟರಲ್ಲಿ ನೆಂಟತನ ಹೊಸಪರಿಯಯ್ಯ ೧
ಮಠ್ಯತಾಳ
ದಾನಿಗಳರಸಂಗೆ ದೈನ್ಯವು ಬಲಿಯಲ್ಲಿ
ಕೈವಲ್ಯಪತಿಗೆ ದಾವಿನ ಬಂಧವ
ಲಕ್ಷುಮಿಪತಿಗೆ ಯಜ್ಞದೀಕ್ಷೆ ತಿರುಕೆ
ಲೋಕ ಗುರುವಿಂಗೆ ಪೊಕ್ಕಾಟ ಗೋಪೇರಲ್ಲಿ
ಈಸುವಿನೋದ ನಿನ್ನ ದಾಸರಿಗಾಗಿಯೆ
ಶ್ರೀಪತಿ ಶ್ರೀಕೃಷ್ಣ ನಿನ್ನ ದಾಸರಿಗಾಗಿಯೆ ೨
ತ್ರಿಪುಟತಾಳ
ಹಿಂದೆ ದಾನವರ ಬರಿದೆ ಬಳಲಿಸಿ
ವೃಂದಾರಕರಿಗೆ ಸುಧೆಯನ್ನೆರೆದೆ
ಆವಪರಿಯಿಂದ ಅಸುರರ ಗೆಲುವೆ
ದÉೀವರೆಲ್ಲರನೋವಿ ಕಾವೆ
ಆವಾವ ಕಾಲದಲ್ಲಿ ಆವಾವ ದೇಶದಲ್ಲಿ
ಆಮೊತ್ತ ದೇವರಿಗೆಲ್ಲ ನೀನೊಬ್ಬನೆ ತೆತ್ತಿಗನಲ್ಲದೆ
ತೆತ್ತಿಗನಲ್ಲದೆ ಮತ್ತೋರ್ವರುಂಟೆ ಸಿರಿಕೃಷ್ಣ ಆವಾವಕಾಲದಲ್ಲಿ ೩
ರೂಪಕತಾಳ
ಹಿಂದೆ ಪಿಂಗಳೆಯಾದಂದು ನಿನ್ನ ಚೆಂದದ ಗೋಪಾಲ ಮೂರುತಿಯ
ಚಂದದ ಗೋಪಾಲ ಮೂರುತಿಯ ನಿನ್ನ ಚಂದದ ಗೋಪಾಲ
ಮೂರುತಿಯ
ಒಂದುಬಾರಿ ನೆನೆದ ಕುಬುಜೆಗೆ ಎಂದೆಂದು ನಿನ್ನನಿತ್ತೆ
ಎಂದೆಂದು ನಿನ್ನನಿತ್ತೆ ಎಂದಾದರೊಮ್ಮೆ ನೆನೆದರೆ
ಒಮ್ಮೆ ನೆನೆದರೆ ಎಂದೆಂದಿಗೂ ಬಿಡೆಯಲೆÉ ಸಿರಿಕೃಷ್ಣ ಹಿಂದೆ
ಪಿಂಗಳೆಯಾದಂದು ೪
ಅಟ್ಟತಾಳ
ಕಂಸಾರಿಯೆಂದು ಸಂಸಾರ ದಾಟುವೆಶ್ರೀಪತಿಯೆಂದು ಪಾಪವ ನೆರೆ ಅಟ್ಟುವೆಕಂಜನಾಭನೆಂದು ಅಂಜಿಸುವೆನು ಜವನನಿನ್ನ ಹೆಸರ್ಹೇಳಿ ಬದುಕುವ ದಾಸ ನಾನುಸಿರಿಕೃಷ್ಣ ಬದುಕುವ ದಾಸ ನಾನು೫
ಆದಿತಾಳ
ಆಳಿದ ನೀನು ನಿನ್ನಾಳು ನಾನುತಂದೆ ನೀನು ನಿನ್ನ ಕಂದ ನಾನುಶರಣ್ಯ ನೀನು ನಿನ್ನ ಶರಣಾಗತ ನಾನುದಯಾಳು ನೀನು ನಿನ್ನ ದಯಕೆ ಪಾತುರ ನಾನುನೋವ ನೋಡಿನ್ನು ಕಾವರಿಲ್ಲೆಂದುಶ್ರೀಕೃಷ್ಣ ಎನ್ನನು ಕಾಯಬೇಕೈ ತಂದೆ೬
ಜತೆ
ಎಂದೆಂದಿಗು ಶತ್ರು ಅಸುರ ಜೀವರಿಗೆಎಂದೆಂದಿನ ಮಿತ್ರ ಸುರರಿಗೆ ಶ್ರೀಕೃಷ್ಣ

 

ಆತ್ಮನಿವೇದನೆಯ ಕಾಲಕ್ಕೆ ಆತ್ಮನಿಂದನೆಯಲ್ಲಿ
೧೯೪
ಧ್ರುವತಾಳ
ದೇಹ ಜೀರ್ಣವಾಯಿತು ಧನನೇಹ ಜೀರ್ಣವಾಗದುಅಯ್ಯ ಕಣ್ಣು ಕಿವಿ ಮಂದವಾದವು ಹೆಣ್ಣು ಮಣ್ಣಿನಾಶೆ ಮಂದವಾಗದುಕಾಲು ಕೈ ಜವಗುಂದಿದುವು ಭೋಗಲೋಲತೆ ಜವಗುಂದವುಜರೆ ರೋಗದಿಂದ ನೆರೆಹೊರೆ ಹೇಸಿತು ಶರೀರದಲ್ಲಿ ಹೇಸಿಕೆ ಇನಿತಿಲ್ಲದೇಹ ಪಾಪಕೋಟಿಗಳ ಮಾಡಿದರಿನ್ನು ತಾಪ ಮನದೊಳಗಿನಿತಿಲ್ಲಹೀಗೆ ಸಂದು ಹೋಯಿತು ಕಾಲವೆಲ್ಲವು, ಮುಂದಣಗತಿ ದಾರಿ ತೋರದುಅನಾದಿಯಿಂದ ನಿನ್ನವನೆನಿಸಿದೆ ಎನ್ನ ಕುಂದು ನಿನ್ನದಲ್ಲವೆಇನ್ನಾದರು ದಯೆಯಿಂದೆನ್ನ ನೋಡಿ ಮನ್ನಿಸಬೇಕೈಯಎನ್ನನು ಸಿರಿಕÀೃಷ್ಣ ೧
ಮಠ್ಯತಾಳ
ಹರಿನಾಮ ಹರಿಪಾದ ತೀರಥವಿರಲುಹರಿದಿನ ಹರಿದಾಸರ ಪಾದ ರಜವಿರಲುದುರಿತದ ಭಯವ್ಯಾಕೆ ನರಕದ ಭೀತ್ಯಾಕೆದುರಿತದ ಭಯವೆ ಕೇಸರಿಯ ಇಕ್ಕೆಯೊಳಿದ್ದವಗೆಕರಿಯ ಭಯವುಂಟೆ ಶ್ರೀಕೃಷ್ಣನ ದಾಸರ ಸಂಗವಿರಲುದುರಿತ ತಿಮಿರಕ್ಕೆ ತರಣಿ ತಾನಲ್ಲವೆ೨
ತ್ರಿಪುಟತಾಳ
ಯಮಪಟ್ಟಣದ ಬಟ್ಟೆ ಕಠಿಣವಾದರೆ ಏನುಯಮಯಾತನೆ ಬಲು ತೀವ್ರವಾದರೆ ಏನುಯಮಕಿಂಕರರು ಭಯಂಕರರಾದಡೇನುಕಮಲನಾಭನ ದಾಸರಿಗೆ ಅಂಜಿಕೆಯುಂಟೆನಮೋ ನಮೋ ಶ್ರೀಕೃಷ್ಣ ಎಂದರೋಡುವರೈಯಯಮಭಟರು ತಮ್ಮಾಳ್ದನಾಜ್ಞೆಯ ನೆನೆದು ೩
ಅಟತಾಳ
ಆವನ್ನ ಚಿತ್ತವು ಅಚ್ಯುತನ ಮೆಚ್ಚದುಆವನ್ನ ನಾಲಗೆ ಶ್ರೀಲೋಲನೆನ್ನದುಆವನ್ನ ಶಿರ ಬಲಿ ಬಂಧನ್ನಗೆರಗದುಅವನೆ ನರಾಧಮ ನರಕಪಥಿಕನುಶ್ರೀಕೃಷ್ಣನವರು ವೈಕುಂಠ ಪಥಿಕರು ೪
ಸಾಂಕೇತವಾಗಲಿ ಪರಿಹಾಸ್ಯವಾಗಲಿಅಣಕದಿಂದಾಗಲಿ ಡಂಭದಿಂದಾಗಲಿಎದ್ದಾಗಲಿ ಮತ್ತೆ ಬಿದ್ದಾಗಲಿನಮೋ ನಮೋ ನಮೋ ಸಿರಿಕೃಷ್ಣ ಎಂಬ ಘೋಷಮುಕುತಿ ಕನ್ನಿಕೆಯ ಮದುವೆಯ ವಾದ್ಯಘೋಷ ೫
ಜತೆ
ಸಂತತದಲ್ಲಿ ನಿನ್ನ ನಾಮ ನಾಲಿಗೆಯಲ್ಲಿಅಂತ್ಯ ಕಾಲದಲಿ ವಿಶೇಷವಾಗಲೋ ಕೃಷ್ಣ

 

ವ್ಯಾಜನಿಂದಾಸ್ತುತಿಯು ಇಲ್ಲಿಯ ವಿಶೇಷತೆಯಾಗಿದೆ.
೧೧೦
ಸುಳಾದಿ
ಧ್ರುವತಾಳ
ನಾನಾಯಾಗದ ಹವಿಗಳಿಂದಂ ಕದ್ದ ಬೆಣ್ಣೆ ಸವಿಯೆಜ್ಞಾನಿಗಳಿತ್ತುಪಹಾರದಿಂದಂ ಯಜ್ಞಭಿಕ್ಷೆ ಲೇಸೆಶ್ರೀ ನಾರಿಮಾಡುವ ಪೂಜೆಗಳಿಂದಂ ಒಪ್ಪಿಡಿ ಅವಲೊಳಿತೆಏನೆನ್ನಬಾರದು ನಿನ್ನಾನಂದಕ್ಕೆ ವಿದುರನೌತಣ ಮಿಗಿಲೆ ಶ್ರಿಹರಿ ಹರಿ
ಮಾನಸ ವಚನಕಗೋಚರವಾದಆನಂದ ನೀನಲ್ಲವೆಜ್ಞÁನಾದಿ ಗುಣಗಣ ನಿತ್ಯ ತೃಪ್ತನಿರ್ದೋಷ ನೀನಲ್ಲವೆಏನೈಯ ನಿನ್ನ ಭಕ್ತವತ್ಸಲತನಎಲೊ ಎಲೊ ಕೃಷ್ಣಯ್ಯನೀನೆ ಕಾಡಿ ಬೇಡಿ ಯಶೋದೆಯ ಕೈಯಲ್ಲಿಉಗ್ಗವೇರಿಸಿಕೊಂಡು ನಲಿದಾಡಿವೆ ೧
ಮಠ್ಯತಾಳ
ಶ್ರೀವರ ಪರಾಕು ಚಿತ್ತಾವಧಾನವೆಂದು ನಿನ್ನಾವಾಗವೋಲೈಸುವರಜಭವಾಧಿಕಾರಿಗಳುದÉೀವ ದೇವ ಸಾರ್ವಭೌಮ ನೀನುಗ್ರಸೇನಂಗೆದೇವ ಜೀಯ ಸಾಸಮುಖವೆಂಬುದು ಇದಾವಲೀಲೆಯೊ ಭಕ್ತವತ್ಸಲ ಸಿರಿಕೃಷ್ಣ೨
ಝಂಪೆತಾಳ
ಮುನಿ ಮನಂಗಳು ತೊಳಲಿ ಕಾಣವುಅನಂತ ವೇದಗಳು ನೆಲೆಗಾಣವುವನಿತೆ ಸಿರಿಯೆಂಬ ಘನತೆಯನು ಬಿಟ್ಟುಚಿನುಮಯನೆ ನೀನು ಕುಬುಜೆಯಮನೆಯನರಸಿಕೊಂಡ್ಯಾಕೆ ಪೋದೆನೆನೆವರಲ್ಲಿ ಅಳುಕಂದಿತನವಿದುಘನವಲ್ಲ ನಿನಗೆ ಎಲೊ ಎಲೊ ಕೃಷ್ಣಯ್ಯ ೩
ಅಟ್ಟತಾಳ
ನಿನ್ನ ಮೂರುತಿಯಂ ನೋಡಿದಡಂನಿನ್ನ ನಾಮವಂ ನುಡಿದಡಂನಿನ್ನನ್ನೊಮ್ಮೆ ನೆನೆದಡಂನಿನ್ನ ಕೀರುತಿಯಂ ಪಾಡಿದಡಂಘನ್ನ ಭವಬಂಧ ಪರಿವುದು ಇಂತೆನ್ನೆ ಕಟ್ಟಿದಳೆಂತು ನಿನ್ನ ಗೋಪಿಚೆನ್ನ ಕೃಷ್ಣ ವಿನೋದಿಗಳರಸ ೪
ಏಕತಾಳ
ದಹರಾಕಾಶದಿ ತತ್ವದ್ವಾರದಿದ್ರಹಿಣಾದ್ಯರು ನಿನ್ನನೋಲೈಸುವರುಬಹುಪರಿ ಚರಿಯಲಿ ಗದೆಯನ್ನು ತಿರುಹುತಮಹಮಹಿಮ ನೀ ಪರೀಕ್ಷಿತನಪ್ರಹರಿಯ ಕಾಯ್ದುದೆಂತೊಮಹಮಹಿಮ ನೀ ಭಕುತರ ಭಾರವವಹಿಸುವ ಕಾರ್ಯಕೆ ನಮೊ ನಮೊ ಸಿರಿಕೃಷ್ಣ ೫
ಜತೆಚಕ್ರವರ್ತಿ ತನ್ನ ಜೊತೆ ಶಿಶುಗಳಿಗೆಂತಂತೆಭಕ್ತರಿಗೆ ಸುಲಭನೊ ನಮ್ಮ ಸಿರಿಕೃಷ್ಣ

 

ಇದೇ ಹಾಡು, ತುಸು ಬದಲಾವಣೆಗಳೊಂದಿಗೆ
೧೯೭
ಸುಳಾದಿ
ಮಠ್ಯತಾಳ
ನಿಧಿಯ ಮೇಲೆ ಇದ್ದು ನಿಧಿಯನರಿಯದಂತೆ
ತನ್ನ ಕಂಠಮಣಿಯ ತಾ ಮರೆತಂತೆ
ಕಣ್ದೆರೆಯದ ಹಸುಳೆ ತಾಯನರಿಯದಂತೆ
ಎನ್ನಲ್ಲಿ ಹೊಂದಿಪ್ಪ ನಿನ್ನನರಿಯದಂತೆ
ನಿನ್ನ ತೋರಿದರೆನಗೆ ನಿನ್ನ ದಾಸರು ಸಿರಿಕೃಷ್ಣ
ರೂಪಕತಾಳ
ಜನನ ಮರಣ ಮಾರ್ಗದಲ್ಲಿ ತೊಳಲಿ ಬಳಲಿ ಸ್ವರ್ಗ
ನರಕಕ್ಕೇರಿ ಮಮತೆಯೆಂಬ ಭಾರವ ಪೊತ್ತು
ಬಳಲಿ ತಾಪತ್ರಯ ತಾಪದಿಂ ಬೆಂದೆನಗೆ
ನಖಚಂದ್ರಿಕೆ ಗಂಗಾ ಶೀತಕರದಿಂ ತಂಪಾದ
ಸಿರಿಕೃಷ್ಣನ ಚರಣ ನೆಳಲು ನೆಲೆಮನೆಯಾಯಿತು
ತ್ರಿಪುಟತಾಳ
ಕಾಮಿತಫಲವೀವ ಬಹು ಶಾಖೆಗಳಿಂ
ಕೋಮಲಕರ ಚರಣಯುಗಳ ಪಲ್ಲವದಿಂ
ಶ್ರೀನಾಭಿ ಕುಸುಮದಿಂದಾದ ಮಕರಂದದಿಂ
ಶ್ರೀಸತಿ ತನುಕಲ್ಪಲತಾ ವಿಲಾಸಗಳಿಂ
ಶ್ರೀ ಶುಕಮುಖ್ಯ ದ್ವಿಜಗಣದಿಂದ ಸೊಗಸಿಪ್ಪ
ಶ್ರೀಕೃಷ್ಣ ಕಲ್ಪತರುವಾ ಸಾರಿದೆವೈಯ
ಅಟತಾಳ
ಕರುಣಾಜಲದಿಂ ಚರಣಾಬ್ಜಗಳಿಂ
ವರನಾಭಿಸುಳಿಯಿಂ ಪರಮಹಂಸಕುಲದಿಂ
ಮೆರೆವ ಅಗಾಧ ಸಿರಿಕೃಷ್ಣ ಸರೋ-
ವರದಿ ಮುಳುಗಿ ಕಳೆದೆನೊ ಭವತಾಪವ
ಆದಿತಾಳ
ಜಿಜ್ಞಾಸುವಿಗೆ ಜ್ಞಾನ ಕಾರಣ
ಜ್ಞಾನಿಗೆ ಅಪರೋಕ್ಷ ಕಾರಣ
ಅಪರೋಕ್ಷಗೆ ಅಧಿಕಾನಂದ ಕಾರಣ
ಮುಕ್ತಗೆ ತಾನೆ ಫಲರೂಪ ಸಿರಿಕೃಷ್ಣನ ಪಾದಸೇವೆ
ಇದರ ತೂಕಕ್ಕೆ ಸಾಕೆ ಕೈವಲ್ಯ
ಏಕತಾಳ
ಪಾಪಾಟವಿಗೆ ದಾವಾನಲ
ಕಾಮಾನಲಕೆ ಕಾಲಾಂಬುದ
ಮೋಹಾಂಬುದಕೆ ಝಂಝಾನಿಲ
ಕೋಪಾನಿಲಕೆ ಭುಜಂಗಮ
ಸಿರಿಕೃಷ್ಣನ ಗರುಡ
ಜತೆ
ಶ್ರೀಕೃಷ್ಣ ನಿನ್ನ ಪಾದ ನಖ ಚಂದ್ರಿಕೆಯಲ್ಲಿಸಾಕೆನ್ನ ಚಿತ್ತ ಚಕೋರವಾದ ಧರ್ಮ

 

೧೧೭
ಸುಳಾದಿ
ಧ್ರುವತಾಳ
ಶ್ರೀದೇವಿಯ ಶ್ರೀಮಂತ ಸಿಂಧೂರಗಳಿಂಅತಿ ಅತಿ ರಂಜಿತವಾದಶ್ರೀದೇವಿಯ ಕಸ್ತೂರಿ ತಿಲಕದಿಂಅತಿ ಅತಿ ವಾಸಿತವಾದ
ಶ್ರೀದೇವಿಯ ಕುಚಕುಂಭ ಕುಂಕುಮದಿಂಅತಿ ಅತಿ ಶÉೂೀಭಿತವಾದಶ್ರಿದೇವಿಯ ಕರಕಂಜ ಸುರೇಖೆಗಳಿಂಅತಿ ಅತಿ ಅಂಕಿತವಾದ
ಶ್ರೀ ವನಜಭವಾದಿ ಹೃತ್ಸರೋವರದಿಸರಸಿಜದಂತೆ ನೆಲೆಸಿಪ್ಪಸನಕಾದಿಮುನಿ ಹೃದಯಾಂಬುಜದಿಹಂಸೆಯಂತೆ ನಲಿಯುತಲಿಪ್ಪ
ಮನುಜೋತ್ತಮರ ಹೃದಯಾಂಬರದಿಮಿಂಚಿನಂತೆ ಹೊಳೆ ಹೊಳೆವಸಿರಿಕೃಷ್ಣನ ಚರಣಕಮಲಶರಣ ಎನಗೆಂದೆಂದು ೧
ಮಠ್ಯತಾಳ
ನಿಧಿಯ ಮೇಲೆ ಇದ್ದು ನಿಧಿಯನರಿಯದಂತೆತನ್ನ ಕಂಠಮಣಿಯ ತಾ ಮರೆದಂತೆಕಣ್ದೆರೆಯದ ಹಸುಳೆ ತಾಯನರಿಯದಂತೆಎನ್ನಲ್ಲಿ ಹೊಂದಿಪ್ಪ ನಿನ್ನನರಿಯದಂತೆನಿನ್ನ ತೋರಿದರೆನಗೆ ನಿನ್ನ ದಾಸರು ಸಿರಿಕೃಷ್ಣ ೨
ರೂಪಕತಾಳ
ಜನನ ಮರಣ ಮಾರ್ಗದಲ್ಲಿ ತೊಳಲಿ ಬಳಲಿ ಸ್ವರ್ಗನರಕಕ್ಕೇರಿ ಮಮತೆಯೆಂಬ ಭಾರವ ಪೊತ್ತುಬಳಲಿ ತಾಪತ್ರಯ ತಾಪದಿಂ ಬೆಂದೆನಗೆನಖಚಂದ್ರಿಕೆ ಗಂಗಾ ಶೀತಕರದಿಂ ತಂಪಾದಸಿರಿಕೃಷ್ಣನ ಚರಣನೆಳಲು ನೆಲೆಮನೆಯಾಯಿತು ೩
ತ್ರಿಪುಟತಾಳ
ಕಾಮಿತಫಲವೀವ ಬಹು ಶಾಖೆಗಳಿಂಕೋಮಲಕರ ಚರಣಯುಗಳ ಪಲ್ಲವದಿಂಶ್ರೀನಾಭಿ ಕುಸುಮದಿಂದಾದ ಮಕರಂದದಿಂಶ್ರೀಸತಿ ತನುಕಲ್ಪಲತಾ ವಿಲಾಸಗಳಿಂಶ್ರೀ ಶುಕಮುಖ್ಯ ದ್ವಿಜಗಣದಿಂದ ಸೊಗಸಿಪ್ಪಶ್ರೀಕೃಷ್ಣ ಕಲ್ಪತರುವಾ ಸಾರಿದೆವೈಯ ೪
ಅಟ್ಟತಾಳ
ಕರುಣಾಜಲದಿಂ ಚರಣಾಬ್ಜಗಳಿಂವರನಾಭಸುಳಿಯಿಂ ಪರಮಹಂಸ ಕುಲದಿಂಮೆರೆವ ಅಗಾಧ ಸಿರಿಕೃಷ್ಣ ಸರೋವರದಿ ಮುಳುಗಿ ಕಳೆದೆನೊ ಭವತಾಪವ ೫
ಆದಿತಾಳ
ಜಿಜ್ಞಾಸುವಿಗೆ ಜ್ಞಾನ ಕಾರಣಜ್ಞಾನಿಗೆ ಅಪರೋಕ್ಷ ಕಾರಣಅಪರೋಕ್ಷಗೆ ಅಧಿಕಾನಂದ ಕಾರಣಮುಕ್ತಗೆ ತಾನೆ ಫಲರೂಪಸಿರಿಕೃಷ್ಣನ ಪಾದಸೇವೆಇದರ ತೂಕಕ್ಕೆ ಸಾಕೆ ಕೈವಲ್ಯ ೬
ಏಕತಾಳ
ಪಾಪಾಟವಿಗೆ ದಾವಾನಲಕಾಮಾನಲಕೆ ಕಾಲಾಂಬುದಮೋಹಾಂಬುದಕೆ ಝಂಝಾನಿಲಕೋಪಾನಿಲಕೆ ಭುಜಂಗಮಸಿರಿಕೃಷ್ಣನ ಪದಸೇವೆಭವಭುಜಂಗಕೆ ಗರುಡ೭
ಜತೆಶ್ರೀಕೃಷ್ಣ ನಿನ್ನಪಾದ ನಖ ಚಂದ್ರಿಕೆಯಲ್ಲಿಸಾಕೆನ್ನ ಚಿತ್ತಚಕೋರವಾದ ಧರ್ಮ

 

೧೧೯
ಸುಳಾದಿ
ಧ್ರುವತಾಳ
ಹರಿಚರಿತೆಶ್ರವಣ ದುರಿತಕುಚ್ಛಾಟನಹರಿನಾಮ ಕೀರ್ತನ ಭವರೋಗಕ್ಕೆ ಸಿದ್ಧೌಷಧಹರಿಚರಣ ಸ್ಮರಣ ಮುಕ್ತಾಂಗನೆಗಾಕರುಷಣಹರಿಪಾದ ಸೇವನ ಅನಂತಫಲ ಸಾಧನ
ಹರಿಪಾದ ಸೇವನ
ಇಂತೆಂಬುದೊಂದು ಪೆರ್ಮೆಗೆ ಹರಿಸೇವೆ ಫಲರೂಪ
ಶ್ರವಣ ಶುಭದ ಬೆಳಸು ಕೀರ್ತನೆ ಲೇಸಿನ ಹೆಚ್ಚಿಗೆ
ಸ್ಮರಣವಚ್ಚಸುಖದೊಟ್ಟಿಲುಯೆಂಬುದನು ಭವಸಿದ್ಧ
ಸಿರಿಕೃಷ್ಣನ ಪಾದಸೇವೆ ತಾನನ್ಯ ಶೇಷವೆ ೧
ಮಠ್ಯತಾಳ
ನೆನಹಿನ ಲೇಶಮಾತುರದಿಂದಾನು
ಘನಸುಖಮಯನಾಗಿಪ್ಪೆನಾವಾಗ
ತನುಭಾವವಳಿದು ಮೌನಿಗಳಂತೆ ಮೈಮರೆದು ಕು-
ಜನಾಚಾರವಳಿದು ನಿನ್ನನನವರತ
ನೆನೆವ ಭಕುತರ ಸುಖವಿನ್ನೆಂತೊ ಸಿರಿಕೃಷ್ಣ೨
ತ್ರಿಪುಟತಾಳ
ಪುತ್ರಮಿತ್ರಕಳತ್ರವರ್ಗದಿಂದ
ದೇಹ ಕರ್ಮ ಜ್ಞಾನೇಂದ್ರಿಯಗಳಿಂದ
ಚಿತ್ತ ಬುದ್ಧಿ ಮನೋಹಮ್ಮುಗಳಿಂದ
ಪ್ರಾಣದಿಂದ ತನ್ನಾತ್ಮದಿಂದ
ನೀನೆ ಪ್ರಿಯನಾಗಿಹೆ ಕೃಷ್ಣ ನಿನ್ನ
ನೆನಹಿಗಿಂತ ಬೇರೆ ಪರಮಸುಕವುಂಟೆ ೩
ಅಟ್ಟತಾಳ
ಆನಿನ್ನು ಧನ್ಯನಲ್ಲ ಮತ್ತೇನುಕೊಂಡೆನ-
ಗೇನುಕಾರಣ ನಾನಾದುರಿತ ತನ್ನಿಂ-
ತಾನೆ ಬೆಂದುದಲ್ಲ ಶ್ರೀನಾಥ ಸಿರಿಕೃಷ್ಣನು
ತಾನೆ ನೆನಹಿಗೆ ಬಂದನಾಗಿ೪
ಆದಿತಾಳ
ಮರೆಹೆ ಬಡತನ, ಮರೆಹೆ ಎಡರುಮರೆಹೆ ಅವಮಾನವು, ಮರೆಹೆ ನಷ್ಟಮರೆಹೆ ಮೋಸ, ಮರೆಹೆ ಹೆಮ್ಮಾರಿಮರೆಹೆ ಅಹಂಕಾರ, ಮರೆಹೆ ನರಕಮರೆಹೆÉ ಶತ್ರು, ಮರೆಹೆ ಮೃತ್ಯುಮರೆಯದೆ ನಿನ್ನ ನೆನೆವಂತೆ ಮಾಡೊ ಸಿರಿಕೃಷ್ಣ ೫

 

ಜತೆಶ್ರೀ ಕೃಷ್ಣ ನೆನೆಹಿನ ಸಾರಿ ಬೆಳೆವ ಸುಖಬೇಕೆಂಬುವನೆ ಮುಕ್ತಿ ಸುಖವನಾಂತವನು
ಇದು ಬಲು ಸುಖಕಾಣೆ ಕೇಳಿದಕೆಣೆಗಾಣೆ
(ಆ) ಶ್ರೀಹರಿಯ ಗುಣಗಾನ
೧೦೧
ಇದು ಬಲು ಸುಖಕಾಣೆ ಕೇಳಿದಕೆಣೆಗಾಣೆ ಪ
ಒದಗಿ ಬರುವ ಮೃತ್ಯುವ ಪರಿಹರಿಸುವ
ಪದುಮನಾಭನ ಪದಪದುಮಕ್ಕೆರಗುವ ಅ.ಪ
ಚಂಚಲ ಸಿರಿಗಾಗಿ ಲೋಕ ಪ್ರ-
ಪಂಚಕೆ ಬೆರಗಾಗಿ
ಸಂಚಿತ ಕರ್ಮವ ಕಳೆಯದೆ ಕಾರ್ಯವು
ಮಿಂಚಿದ ಬಳಿಕಾಯಾಸಕ್ಕಿಂತಲು೧
ಚಿಂತೆಯೆಲ್ಲವ ಕಳೆದು ಮನದಿ ನಿ-
ಶ್ಚಿಂತೆಯಾಗಿ ನಲಿದು
ಅಂತರಂಗದಿ ಲಕ್ಷ್ಮೀಕಾಂತನ ತುತಿಸುತ
ಸಂತೋಷ ಶರಧಿಯಳೋಲ್ಯಾಡುವುದು ೨
ಶರಣ ಜನರ ಪೊರೆವ, ದ್ವಾರಕಾ-ಪುರವರದಲಿ ತಾನಿರುತಿರುವಪರಮ ಪುರುಷ ನಮ್ಮ ಸಿರಿಕೃಷ್ಣರಾಯನಮುರಳಿಧರನ ಸೇವಿಸಿ ಸುಖಿಯಾಗುವ.೩

 

ಹಾಡಿನ ಹೆಸರು :ಇದು ಬಲು ಸುಖಕಾಣೆ ಕೇಳಿದಕೆಣೆಗಾಣೆ
ಹಾಡಿದವರ ಹೆಸರು : ಚೇತನಾ ಆಚಾರ್ಯ
ರಾಗ :ದ್ವಿಜಾವಂತಿ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ವಿದ್ಯಾಭೂಷಣ

ನಿರ್ಗಮನ

 

ಓಲಗ ಸುಲಭವೋ ರಂಗೈಯನ
೩. ನೀತಿಬೋಧೆ
೨೦೬
ಓಲಗ ಸುಲಭವೋ ರಂಗೈಯನ ಪ
ಓಲಗ ಸುಲಭವೊ ಪುಸಿಯಲ್ಲ ಕರುಣಾಲ-ವಾಲನಾದ ಕರಿರಾಜ ವರದನ ಅ.ಪ
ದೂರ ಹೋಗಲಿಬೇಡ ತೊಡೆಯ ಗುದ್ದಲಿ ಬೇಡನೀರ ನೆರೆಯಬೇಡ ನಿಗಡದಲ್ಲಿರಬೇಡನಾರಾಯಣನೆಂಬ ನರನ ಯೋಗಕ್ಷೇಮಭಾರ ತನ್ನದೆಂಬ ಪ್ರಹ್ಲಾದ ವರದನ೧
ಸಂತೇಲಿ ಮಾಡಿದ ಸಾಷ್ಟಾಂಗ ನಮಸ್ಕಾರದಂತೆ ಅಲ್ಲವೆ ಅನ್ಯರ ಭಜಿಸುವುದುಅಂತರಂಗದಲ್ಲಿ ಹರಿ ನೀನೆ ಗತಿಯೆಂದುಚಿಂತಿಸಿದರೆ ಕಾಯ್ವ ಶ್ರೀರಾಮಚಂದ್ರನ೨
ತಪ್ಪು ಸಾಸಿರಗಳ ತಾಳಿ ರಕ್ಷಿಸುವತಪ್ಪು ಮೇಘವರ್ಣ ಕಾಂತಿಯಿಂದೊಪ್ಪುವಸರ್ಪಶಯನನಾದ ಸರ್ವಲೋಕೇಶÀನಅಪ್ರಮೇಯ ನಮ್ಮಪ್ಪ ಶ್ರೀಕೃಷ್ಣನ ೩

 

ಹಾಡಿನ ಹೆಸರು :ಓಲಗ ಸುಲಭವೋ ರಂಗೈಯನ
ಹಾಡಿದವರ ಹೆಸರು :ವಿದ್ಯಾಭೂಷಣ
ರಾಗ :ಭೈರವಿ
ತಾಳ :ಮಿಶ್ರ ಛಾಪು ತಾಳ
ಸಂಗೀತ ನಿರ್ದೇಶಕರು :ವಿದ್ಯಾಭೂಷಣ

ನಿರ್ಗಮನ

 

ದಾಸರೆಂದರೆ ಪುರಂದರದಾಸರಯ್ಯ
೧೭೮
ದಾಸರೆಂದರೆ ಪುರಂದರದಾಸರಯ್ಯ ಪ
ವಾಸುದೇವ ಕೃಷ್ಣನ್ನ ಸೂಸಿ ಪೂಜಿಸುವಅ.ಪ
ಗ್ರಾಸಕಿಲ್ಲದೆ ಪೋಗಿ ಪರರ ಮನೆಗಳ ಪೊಕ್ಕುದಾಸನೆಂದು ತುಲಸಿ ಮಾಲೆ ಧರಿಸಿಬೇಸರಿಲ್ಲದೆ ಅವರ ಕಾಡಿ ಬೇಡಿ ಬಳಲಿಸುತಕಾಸುಗಳಿಸುವ ಪುರುಷನವ ದಾಸನೇ ೧
ಡಂಭಕದಿ ಹರಿಸ್ಮರಣೆಮಾಡಿ ಜನರಾ ಮುಂದೆಸಂಭ್ರಮದಿ ತಾನುಂಬ ಊಟ ಬಯಸಿಅಂಬುಜೋದ್ಭವ ಪಿತನ ಆಗಮಗಳರಿಯದಲೆತಂಬೂರಿ ಮೀಟಲವ ಹರಿದಾಸನೇ ೨
ಯಾಯವಾರವ ಮಾಡಿ ವಿಪ್ರರಿಗೆ ಮೃಷ್ಟಾನ್ನಪ್ರೀಯದಲಿ ತಾನೊಂದು ಕೊಡದ ಲೋಭಿಮಾಯ ಸಂಸಾರದಲಿ ಮಮತೆ ಹೆಚ್ಚಾಗಿಟ್ಟುಗಾಯನವ ಮಾಡಲವ ದಾಸನೇನೈಯ೩
ಪಾಠಕನ ತೆರದಲ್ಲಿ ಪದಗಳನೆ ತಾ ಬೊಗಳಿಕೂಟ ಜನರ ಮನವ ಸಂತೋಷಪಡಿಸಿಗೂಟ ನಾಮಗಳಿಟ್ಟುಕೊಂಡ್ಹಿರಿಯ ತಾನೆನುತ,ತೂಟಕವ ಮಾಡಲವ ದಾಸನೇನೈಯ೪
ನೀತಿಯೆಲ್ಲವನರಿತು ನಿಗಮವೇದ್ಯನ ನಿತ್ಯವಾತಸುತನಲ್ಲಿಹನ ವರ್ಣಿಸುತಲಿಗೀತ ನರ್ತನದಿಂದ ಕೃಷ್ಣನ್ನ ಪೂಜಿಸುವಪೂತಾತ್ಮ ಪುರಂದರ ದಾಸರಿವರೈಯ ೫

 

ಹಾಡಿನ ಹೆಸರು :ದಾಸರೆಂದರೆ ಪುರಂದರದಾಸರಯ್ಯ
ಹಾಡಿದವರ ಹೆಸರು :ಶಂಕರ್ ಎಸ್.
ರಾಗ :ಕಾಂಭೋದಿ
ತಾಳ : ಖಂಡಛಾಪು ತಾಳ
ಸಂಗೀತ ನಿರ್ದೇಶಕರು :ರಮಾಮಣಿ ಆರ್. ಎ.
ಸ್ಟುಡಿಯೋ :ಅರ್ಚನ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಸಂಗವಾಗಲಿ ಸಾಧು ಸಂಗವಾಗಲಿ
೧೭೫
ಸಂಗವಾಗಲಿ ಸಾಧು ಸಂಗವಾಗಲಿ ಪ
ಸಂಗದಿಂದ ಲಿಂಗದೇಹ ಭಂಗವಾಗಲಿ ಅ.ಪ
ಅಚ್ಚುತಾಂಘ್ರಿ ನಿಷ್ಠರ ಯದೃಚ್ಛ ಲಾಭ ತುಷ್ಟರನಿಶ್ಚಯಾತ್ಮ ಜ್ಞಾನವುಳ್ಳ ಅಚ್ಚ ಭಾಗವತರ ೧
ತಂತ್ರ ಸಾರ ಅಷ್ಟ ಮಹಾಮಂತ್ರ ಪರಿಪೂರ್ಣಸ್ನೇಹಯಂತ್ರದಿಂದ ಬಿಗಿದು ಸ್ವತಂತ್ರ ಮೂರ್ತಿ ತಿಳಿದವರ ೨
ಪಂಚಭೇದ ಸಂಸ್ಕಾರ ಪಂಚ ಭೂತಾತ್ಮವಾದಪಂಚಭೇದ ಕೃಷúರಾಯನ ಪಂಚಮೂರ್ತಿ ತಿಳಿದವರ ೩

 

ಹಾಡಿನ ಹೆಸರು :ಸಂಗವಾಗಲಿ ಸಾಧು ಸಂಗವಾಗಲಿ
ಹಾಡಿದವರ ಹೆಸರು :ನಂದಿತಾ ಸಿ. ಎಸ್.
ಸಂಗೀತ ನಿರ್ದೇಶಕರು :ಹೇಮಂತ್ ಬಿ. ಆರ್.
ಸ್ಟುಡಿಯೋ :ಗಣೇಶ್ ಕುಟೀರ್, ಬೆಂಗಳೂರು

ನಿರ್ಗಮನ

 

ಸೇರಿದೆನು ಸೇರಿದೆನು ಜಗದೀಶನ
೧೧೮
ಸೇರಿದೆನು ಸೇರಿದೆನು ಜಗದೀಶನನರಕಜನ್ಮದ ಭಯವು ಎನಗೆ ಇನಿತಿಲ್ಲ ಪ
ನೇತ್ರಗಳು ಕೃಷ್ಣನ ಮೂರ್ತಿ ನೋಡುತಲಿವೆಶ್ರೋತ್ರಗಳು ಹರಿಕಥೆಯ ಕೇಳುತಲಿವೆರಾತ್ರಿ ಹಗಲು ಎನ್ನ ಮನಸು ಶ್ರೀರಂಗನಲ್ಲಿಪಾತ್ರವಾಡುತಿದೆನ್ನ ಗಾತ್ರ ಕೃಷ್ಣನ ಮುಂದೆ೧
ಹಸ್ತಗಳು ಮಂಟಪಶುದ್ಧಿಯನು ಮಾಡುತಿವೆಮಸ್ತಕವು ಹರಿಚರಣಕೆರಗುತಿದೆಕೋವಿಸ್ತಾರವಾದ ಪ್ರದಕ್ಷಿಣೆಯ ಮಾಡುತಿದೆಕಸ್ತೂರಿತಿಲಕವನು ಮೂಗು ಆಘ್ರಾಣಿಸುತಿದೆ ೨
ಹರಿನಾಮಸ್ಮರಣೆಯನು ನುಡಿಯುತಿದೆ ಎನ್ನ ಜಿಹ್ವೆಹರಿಭಕುತಿ ಸುಧೆಯ ಪಾನಗಳಿಂದಲಿಹರಿಪ್ರೀತಿಯಾಗಿದೆ ನೋಡಿದರೆನ್ನ ದೇಹಸಿರಿಕೃಷ್ಣರಾಯನ್ನ ಮನಮಂದಿರದಿ ಕಂಡೆ ೩

 

ಹಾಡಿನ ಹೆಸರು :ಸೇರಿದೆನು ಸೇರಿದೆನು ಜಗದೀಶನ
ಹಾಡಿದವರ ಹೆಸರು : ಅಜಯ್ ವಾರಿಯರ್
ಸಂಗೀತ ನಿರ್ದೇಶಕರು :ಶಂಕರ್ ಎಸ್.
ಸ್ಟುಡಿಯೋ :ಅಶ್ವಿನಿ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *