Categories
ರಚನೆಗಳು

ವ್ಯಾಸವಿಠ್ಠಲರು

೧೨
ಬ್ರಹ್ಮದೇವರ ಸ್ತೋತ್ರ*
ಮಟ್ಟತಾಳ
ಅಂಬುಜ ಭವನಯ್ಯ ಕಂಬು ಚಕ್ರಪಾಣಿಶಂಬರಾರಿ ಜನಕ ಶಾಮ ಸೀತಾಂಗ ಹೃದಯಾಂಬರ ನಿವಾಸಾ ಹಂಬಲಿಸುವ ಜನಕೆ ಹಗಲಿರುಳು ಬಿಡದೆಬೆಂಬಲವಾಗಿದ್ದು ಬೇಡಿದಾ ದಿವಾರಾತ್ರಿ ತ್ರಿ-ಯಂಬಕ ಸಹಾಯ ತ್ರಿಗುಣ ರಹಿತ ಕಾಯಾತುಂಬುರಾದಿ ವಂದ್ಯ ತುರಿಯ ನಾಮಕ ದೇವಅಂಬುಚರಗೆ ಸಿಲಿಕಿ ಅಳಲಿ ಬಹುಕಾಲಾಇಂಬುಗಾಣದೆ ನಿನ್ನ ಇಚ್ಛೈಸಲು ಬಂದುತಂಬಲಾ ಪಾಣಿಯಲಿ ತಡವರಿಸಿದ ಕರುಣಿಮುಂಬಿಸಿಲಿಗೆ ಕುಮುದ ಮುದರಿದಂತೆ ಆರೆಂಬ ಕರ್ಮವು ಎನ್ನ ಅಣಗೊತ್ತಿದವೇನೆಂಬೆ ವಿಶ್ವಮೂರ್ತಿ ವಿಹಂಗ ಗಮನ ವಿಭುವೆನಂಬಿದವರ ಪೊರೆವ ವ್ಯಾಸವಿಠಲ ನೀ-ನೆಂಬುವರನ ನಂಬಿದ ನೀಚನ ಮರಿಯಾದಿರು ೨
ತ್ರಿವಿಡಿತಾಳ
ಶ್ರವಣದಲಿ ಮನಸು ಲವ ಮಾತ್ರ ಎರಗದುಕವಿಗಳ ಒಡನೆ ಸ್ನೇಹವ ಬಳಸದುರವಿ ಉದಯಸ್ತಮಾನ ದಿವಸದೊಳಗೆ ಮಾ-ಧವನೆ ನಿನ್ನಯ ನಾಮವ ಜಿಹ್ವೆ ನುಡಿಯದುಸವಿಯದ ನಾನಾ ರಸವನುಂಡು ಬಹುಕಾಲಸವೆದು ಪೋದವು ನಟ್ಟ ಮನವು ಇನ್ನು ತಿರಗದುತವ ವಿಸ್ರ‍ಮತಿಯಲಿಂದ ಭೂ ವನದೊಳಿದ್ದ ಮಾ-ನವರ ಚರಿಯದಲಿ ಕೋಪವೆ ತಗ್ಗದುಎವೆ ಇಡುವಿನಿತು ಕಾಲವಾದರು ಪೂಜಾವಿವರದಲ್ಲಿಗೆ ಚಿತ್ತವು ನಿಲ್ಲದು ಭವವಿದೂರನೆ ಕೇಳುಕವಲ ಬುದ್ಧಿಯಲಿಂದ ನವನವ ರೂಪದ ಯುವತಿಯರನಿವಹದ ಅನುಭವ ದ್ವಿವಿಧವಿಂದಿಗೇ ಕಾ-ಯವ ನೋಡಲಿದ್ದಂತೆ ಇಲ್ಲದಂತೆಧ್ರುವದಲಿ ನುಡಿವೆ ಎನ್ನವಗುಣವಿನ್ನೊಂದುಭವಸಾಗರವ ದಾಟಿಸುವ ಜ್ಞಾನಿಗಳ ಪ್ರೀತಿಯನೆ ತ-ಗ್ಗುವಂತೆ ಚತುರ ತೋರುವೆಇವುಗಳಿಂದಾಗುವ ಜನನ ಬಾಧಿಯ ಬಲ್ಲೆಜೀವರಲ್ಲಿ ಹೀನ ಜನ್ಮವ ಬರುವದು ಬಲ್ಲೆಸ್ಥಾವಿರಾಯ ವ್ಯಾನಾದಿ ನೆಗುವವು ಪುಣ್ಯಾಖ್ಯಗಿರಿಗೆಪವಿಯಂಬದನುಗಾಲ ಪಠಿಸಬಲ್ಲೆಪವನನಂತರ್ಯಾಮಿ ಶ್ರೀವ್ಯಾಸವಿಠಲ ಇಂಥಅವಿವೇಕ ಮನುಜಂಗೆ ಆವಗತಿಯಾಗುವದೊ ೩
ಅಟ್ಟತಾಳ
ಅನ್ಯಾಯ ನಡತಿಗಳ ಚರಿಸುತಲಿಪ್ಪಮನುಜಾಧಮನಿಗೆ ಮಹಿಯೊಳಗೆ ವಿಪ್ರಜನ್ಮವ ನೀನಿತ್ತದಾವ ಬಗೆಯ ಕಾಣೆಇನ್ನೀಗ ಮಾಡುವ ಅನ್ಯಾಯ ನಡತಿಯುತಣ್ಣನ ಕಿಡಿಯಂತೆ ತತ್ಕಾಲಕಿಪ್ಪದುಘನ್ನ ಬವಣೆ ಮುಂದೆ ಅನುಭವವೇ ನಿಜಪನ್ನಗ ಶಯನ ಶ್ರೀ ವ್ಯಾಸವಿಠ್ಠಲ ಸುಪ್ರಸನ್ನ ವದನ ದೇವ ನಿನ್ನ ಪಾದವೆ ಗತಿ ೪
ಆದಿತಾಳ
ನಿನ್ನ ದಾಸರ ಪಾದ ಚೆನ್ನಾಗಿ ಪೊಂದಿಸಿನಿನ್ನವನಿವನೆಂದು ಮನುಜರಿಂದ ನುಡಿಸಿನಿನ್ನ ಕೀರ್ತನೆಯ ವದನದಿಂದ ಪೇಳಿಸಿಇನ್ನು ಈ ಬಗೆ ಮಾಳ್ಪರೆ ಘನ್ನದಯಾಂಬುಧೇಮನ್ನ ವಾಚ ಕಾಯದಿ ಅನ್ಯಾಯ ಪೆಚ್ಚಿಸದೆಎನ್ನ ಬೆಳವಿಗೆಯಂತೆ ಬೆಳಸದಂತೆ ಮಾಡಿದೆಮನ್ನಣಿಸುವ ಜನರಿಂದ ಮಾಂದ್ಯವ ಮಾಡಿಸಿದೆಸನ್ಯಾಯವಲ್ಲ ಧೊರಿಯೆ ನಿನ್ನ ಚಿತ್ತವೊ ಸ್ವಾಮಿಸನ್ಮುನಿಗಣ ಪ್ರೀಯ ವ್ಯಾಸವಿಠ್ಠಲರೇಯಾನಿನ್ನವರವನೊ ನಿನ್ನ ಸರಿ ಬಂದ ಬಗೆ ಮಾಡೊ ೫
ಜತೆ
ವೇಣುಗೋಪಾಲ ದಾಸರ ಮನ ಮಂದಿರಾ |ಪ್ರಾಣ ನಿನ್ನದೊ ವ್ಯಾಸವಿಠ್ಠಲ ಗೋಪಾಲಕೃಷ್ಣ ||

 

೧೧೩
ಅನಾದ್ಯನಂತ ಕಾಲದಲಿ ನೀ ನಿರ್ದೋಷಅನಾಥ ಬಂಧುವೆ ಆಪ್ತ ಕಾಮಅನವರತ ನಿನ್ನಾಧೀನದವನಯ್ಯಕಾಣೆ ನಿನ್ನಗಲಿಪ್ಪ ಕಾಲವನ್ನುಜ್ಞಾನೇಚ್ಛ ಪ್ರಯತ್ನ ಚೇತನ ನಿಷ್ಠವೊ ||ತಾನಾದರಾಗಲಿ ತನ್ನಿಯಾಮಕ ನೀನುಈ ನೀತಿ ಸಿದ್ಧವಾಗಿದೆ ಹಾನಿ ವೃದ್ಧಿಗೆನಾನೆ ಕಾರಣನಲ್ಲಾನಂದ ಮೂರ್ತಿಪ್ರಾಣಾಂತರ್ಯಾಮಿ ಶ್ರೀ ವ್ಯಾಸವಿಠ್ಠಲರೇಯನೀನಿಟ್ಟ ಪರಿಯಲ್ಲಿ ನಿಜವಾಗಿ ಇರುತಿಪ್ಪೆ ||೧

 

೧೦೧
ಇಂದಿರಾ ಪಾಲಿಸು ಎನ್ನ ಇಂದಿರಾ ಪ
ಇಂದಿರಾ ದೇವಿಯೆ ನಿನ್ನ | ಪಾದಪೊಂದಿದೆ ಸಲಹಬೇಕೆನ್ನಾ | ಆಹಕಂದರ್ಪ ಇಂದ್ರ ಫಣೀಂದ್ರ ಗರುಡ ಕಂದುಕಂಧರ ಬ್ರಹ್ಮಾದಿ ವಂದ್ಯಳೆ ಪಾಲಿಸು ಅ.ಪ.
ಶ್ರೀಮಾಯೆ ಜಯ ಕೃತಿ ಶಾಂತಿ | ದುರ್ಗೆಭೂಮಿ ಶ್ರೀದೇವಿ ಜಯಂತಿ | ಲಕ್ಷ್ಮೀರಮೆ ದಕ್ಷಿಣೆ ಗುಣವಂತಿ | ಸತ್ಯಭಾಮೆ ರುಕ್ಮಿಣಿ ಮಹಾಕಾಂತಿ | ಆಹಈ ಮಹಾನಂತ ರೂಪ ನಾಮಗಳುಳ್ಳಕೋಮಲ ಗಾತ್ರಿಯೆ ಕಾಮಜನನಿ ಕಾಯೆ ೧
ಶ್ರೀಭಾಗ ಮಹಾ ಪ್ರಳಯದಲ್ಲಿ | ಪದ್ಮನಾಭಾಗೆ ಬಹು ಭಕ್ತಿಯಲ್ಲಿ | ದಿವ್ಯಆಭರಣಗಳಾಕಾರದಲ್ಲಿ | ಮಿಕ್ಕವೈಭವನೇಕ ರೂಪಾದಲ್ಲಿ | ಆಹಸ್ವಾಭಿಮಾನದಿ ಬಹು ಶೋಭನ ಪೂಜೆಯಲಾಭಗಳೈದಿದ ಶೋಭನವಂತಳೆ ೨
ದೇಶಕಾಲಾದಿಗಳಲ್ಲಿ | ಜೀವರಾಶಿ ವೇದಾಕ್ಷರದಲ್ಲಿ | ಇದ್ದುವಾಸುದೇವನ ಬಳಿಯಲ್ಲಿ | ಸರಿಸೂಸಿ ವ್ಯಾಪ್ತಿ ಸಮದಲ್ಲಿ | ಆಹಲೇಸಾಗಿ ಒಪ್ಪುತ್ತ ಈಶ ಕೋಟಿಯೊಳುವಾಸಾಳೆ ಎನ್ನಭಿಲಾಷೆ ಸಲ್ಲಿಸಬೇಕು೩
ಅನಾದಿಯಿಂದಲಿ ಬಂದ | ಮೋಹಾಜ್ಞಾನ ಕಾಮ ಕರ್ಮದಿಂದ | ಕೇತುನಾನಾ ಜನ್ಮದಿ ಬಹು ನೊಂದ | ದೆಲ್ಲಏನ ಪೇಳಲಿ ಭವ ಬಂಧಾ | ಆಹನೀನೆ ಕಳೆದು ದಿವ್ಯ ಜ್ಞಾನ ಭಕುತಿಯಿತ್ತುಪ್ರಾಣಪತಿಯ ಪಾದವನ್ನು ತೋರಿಸಬೇಕು ೪
ನಿತ್ಯ ಭಾಗ್ಯವು ನಿನಗೊಂದೆ | ಅಲ್ಲರತ್ನಾಕರನು ನಿನ ತಂದೆ | ತಾಯಿರತ್ನಗರ್ಭಳು ಕೇಳು ಮುಂದೆ | ಪತಿಗತ್ಯಂತ ಪ್ರಿಯಳಾದೆ ಅಂದೆ | ಆಹಸತ್ಯಬೋಧರು ಮಾಳ್ಪ ಅತ್ಯಂತ ಪೂಜೆಯಿಂಯುಕ್ತೆ ಶಿರಿಯೆ ನಿನಗೆತ್ತ ಕತ್ತಲು ಕಾಣೆ ೫
ಲೋಕ ಜನನಿಯು ಎಂದು ನಿನ್ನಾ | ಕೀರ್ತಿಸಾಕಲ್ಯವಾಗಿದೆ ಘನ್ನಾ | ಎನ್ನಸಾಕಲಾರದೆ ಬಿಡಲಿನ್ನಾ | ಮುಂದೆಯಾಕೆ ಭಜಿಸುವುದು ನಿನ್ನಾ | ಆಹಸಾಕಾರವಾಗಿನ್ನು ಬೇಕಾದ ವರಗಳನೀ ಕರುಣಿಸಿ ಎನ್ನ ಜೋಕೆ ಮಾಡಲಿ ಬೇಕು ೬
ಆವ ಜನ್ಮದ ಪುಣ್ಯಫಲದಿ | ನಿನ್ನಸೇವೆ ದೊರಕಿತೊ ಈ ಕ್ಷಣದಿ | ಎನಗೀವ ಭವ್ಯ ಕೇಳು ಮನದಿ | ಆಹಶ್ರೀ ವ್ಯಾಸ ವಿಠಲನ್ನ ಸೇವಿಪ ಯತಿಗಳ ಸಹವಾಸವನೆ ಇತ್ತು ಭಾವ ಶುದ್ಧನ ಮಾಡು ೭

 

೯೯
ಇಂದು ರಂಗಾನಟ್ಟೂಳಿಗೆ | ಇರಲಾರೆವಮ್ಮಾ ನಾವುಬಂದುಪಾಯವ ಕಾಣೆವೆ | ವನಿತೆ ಗೋಪ್ಯಮ್ಮಾ ಕೇಳೆ ಪ
ಹಿರಿಯರಾದವರಿಗೆ | ಭರದಿ ಪೇಳೇವೆಂದರೆಸರಸಿಜ ಸಂಭವನಿಗೆ ಹಿರಿಯನೀತ ಕಾಣಮ್ಮ ೧
ಮಾಯಗಳ ಮಾಡಿ ನಾವೂ | ಹೊಯಿಲೆಬ್ಬಿಸೇವೆಂದರೆಮಾಯಾದೇವಿಗೆ ಸಿಗದೆ | ಮಾಯಾವ ತೋರುವನಮ್ಮ ೨
ಗುಮ್ಮನ ತೋರಿದರೀಗಾ | ಒಮ್ಮೊಮ್ಮೊ ಲೆಕ್ಕಿಸನಮ್ಮ ಅಮ್ಮಮ್ಮ ಶ್ರೀ ನಾರಸಿಂಹ | ಅದ್ಭತಾದ ದೈವ ಕಾಣಮ್ಮ ೩
ಅರಿವಿ ಸರ್ಪಾನ ಮಾಡಿ | ಭರದಿ ಅಂಜಿಸೇವೆಂದರೆಖರೆಯವಾಗಿದ್ದ ದೊಡ್ಡಾ | ಉರಗಶಾಯಿ ಕಾಣಮ್ಮ ೪
ಅರಸರಿಗ್ಹೇಳಿದರೂ | ಬರಿದಾಗುವುದೇ ನಿಜಧರೆ ಗಗನ ಪಾತಾಳದ | ಅರಸನಲ್ಲವೇನಮ್ಮ ೫
ಕಾಸು ವೀಸಾ ಕೈಯ್ಯಾಳಿಟ್ಟೂ | ಕೂಸಿಗೆ ಬುದ್ಧಿ ಹೇಳುವೆಕೋಶ ಭಾಗ್ಯದಭಿಮಾನಿ | ಶ್ರೀಶನೇ ಈಶ ಕಾಣಮ್ಮ ೬
ಪಾಪದ ಭೀತಿ ತೊರದು | ಭೂಪ ರಂಗ ಅಂಜಾನಮ್ಮಪಾಪ ರಹಿತರಾದವರ | ತಪಸಿಗಳೊಡೆಯಾನಮ್ಮ ೭
ಮ್ಯಾಣದ ಚೇಳು ತೋರುವೆ | ಜಾಣ ರಂಗ ಅಂಜಾನಮ್ಮಮೇಣು ಮೂವತ್ತಾರು ಲಕ್ಷ | ತಾಂ ಶಿಂಶುಮಾರಾನಮ್ಮ ೮
ಅನ್ನ ವಸನಗಳಿತ್ತು | ಮನ್ನಿಸೆವೆಂದಾರೆ ಪುಸಿಕನ್ಯೆ ದ್ರೌಪದಿ ದುಮ್ಮಾನ | ಮುನ್ನೆ ಇದಕ್ಕೇ ಸಾಕ್ಷಿಯಲ್ಲೆ ೯
ಅಣ್ಣ ತಮ್ಮಾ ಬಂಧೂ ಬಳಗ | ಜನರುಂಟೇನೆ ಹೇಳೇವೆಅನಾದಿ ಕಾಲದಿಂದಾ | ಘನ್ನ ತಾನೇ ಏಕಮೇವ ೧೦
ಚಿಣ್ಣ ನೀ ಅಣ್ಣಾ ಬಾಯೆಂದು | ಮನ್ನಿಸೇವೆಂದಾರೆ ಪುಸಿಅನಂತ ವೇದಗಳಿವನ | ಬಣ್ಣಿಸಿ ಹಿಂದಾಗಲಿಲ್ಲೆ ೧೧
ಊರು ಕೇರಿಗಳಾ ಬಿಟ್ಟು | ದೂರ ಬಾರ ಹೋದೇವೇನೆಸಾರ ವ್ಯಾಪ್ತನಾಗಿ ಇಪ್ಪಾ | ಯಾರಿಗೆ ದೂರುವೆನಮ್ಮಾ ೧೨
ಕದ್ದು ಕದ್ದೋಡುವಾ ನಮ್ಮ | ಲಿದ್ದು ಪಿಡಿಯಾಲೊಶವಲ್ಲೆ ರುದ್ದರನ್ನಾ ಓಡೀಸಿದಾ | ಮುದ್ದು ರಂಗಾನಿವನಮ್ಮ ೧೩
ಹಗ್ಗದಿ ಕಟ್ಟೀದರಾಗ | ಬಗ್ಗನಮ್ಮಾ ನಿನ್ನ ಮಗಅಗ್ಗಳೀಕೆ ಖಳರ ಉಕ್ಕು | ತಗ್ಗಿಸಿ ಬಂದಿಹಾನಮ್ಮ ೧೪
ಇಂದು ನಿನ್ನಾ ಕಂದನಾಟಾ | ಚಂದಾವೆಂದೂ ವಂದಿಸುವೆವೆತಂದೆ ವ್ಯಾಸಾ ವಿಠಲೆ*ಮಗೆ | ಬಾಂಧವಾನಾದನು ಕಾಣೆ ೧೫

 

೯೮
ಏನಾದರಾಗಲಿ ಹರಿ ನಿನ್ನ ಸ್ಮರಣೆ ಮಾತ್ರ ಒಂದಿರಲಿ ಪ
ಆಚಾರಿಯೆನಲಿ ಬಹು ದು | ರಾಚಾರಿಯೆನಲಿ ಜನರೆಲ್ಲನೀಚನೆಂದೆನಲಿ ಅನದಿರಲಿ ೧
ಜ್ಞಾನಿ ಎಂದೆನಲಿ ದುರ್ಮಾರ್ಗ | ನಾನೆನಲಿ ಜನರೆಲ್ಲ ಬಹು ಮಾನವಂತನೆನಲಿ ಅನದಿರಲಿ ೨
ಪಾಪಿಯಾಗಿರಲಿ ಬಹು ಸಂ | ತಾಪಿಯಾಗಿರಲಿ ಜನರೆಲ್ಲಪಾಪಿಯೆಂದೆನಲಿ ಅನದಿರಲಿ ೩
ರಾಗವೇ ಬರಲಿ ಬಹು ವೈ | ಭೋಗವೇ ಬರಲಿ ವಿಷಯ ನಿಯೋಗವೇ ಬರಲಿ ಬರದಿರಲಿ ೪
ಒಲಿದರೆ ನೀ ವ್ಯಾಸವಿಠಲ ಜನ | ರೆಲ್ಲ ಮತ್ತ್ಹಳಿಯುತಿರಲಿ ಇರದಿರಲಿ ಏನಾದರಾಗಲಿ ಹರಿಯೆ ೫

 

೧೦೭
ವೇಣುಗೋಪಾಲದಾಸರ ಸ್ತೋತ್ರ
ಕರೆದು ಕೈ ಪಿಡಿಯೊ ಎನ್ನ ವೇಣುದಾಸದೊರೆಯೆ ಪತಿತ ಪಾವನ್ನ ಪ
ಕರೆದು ಕೈ ಪಿಡಿಯೊ ನೀ ಕರಬಿಡದೆ ನಿನ್ನಚರಣವೆ ಗತಿಯೆಂದು ಮರೆ ಬಿದ್ದ ಮನುಜನ್ನ ಅ.ಪ.
ವಿಜಯರಾಯರ ಪಾದವ ಆದರದಿಂದಭಜಿಸಿ ಸಂತತ ಮೋದವಾನಿಜವಾಗಿ ಹೃದಯ ಪಂಕಜದೊಳಾಗಲು ಭವವ್ರಜದೊಳು ಮುಣಗಿಪ್ಪ ಸುಜನ ಶಿರೋಮಣಿತ್ರಿಜಗ ವಂದಿತ ಗಜವರದ ಪಂ-ಕಜಪಿತ ಪಿನಾಕ ಜನರ ಕೂಡಾ ಸಾ-ಹಜ ಭಕುತಿಯಲಿ ಯಜಿಸಿ ಮೋಹವೃಜನ ದಾಟಿ ದ್ವಿಜವರಾಗ್ರಣಿ ೧
ಸಂತರ ಸಲಹುವನೇ ಸಂಗಡಲೇ ನಿ-ಶ್ಚಿಂತರ ಮಾಡುವುದೇಎಂತು ಪೇಳಲು ಎನಗಂತು ತೋರದು ದುಷ್ಟಭ್ರಾಂತಿಯಿಂದಲಿ ಮಾಳ್ಪ ಕಂತುಗಳಿಗೆ ಲೇಶಅಂತ ಕಾಲಕ್ಕೆ ಚಿಂತಾಕಾಲಯಾಪಂಥ ಸಾರುವದಿಂತು ಸರಿ ಜಗ-ದಂತು ರಂಗನ ಮುಂತು ತಿಳಿವ-ದೆಂತುಪಾಯವು ಶಾಂತದಾತನೆ ೨
ಅರಿದೇನು ಆಪ್ತ ಬಂಧು ಪಾಮರನ ಉ-ದ್ಧರಿಪದು ನಿನಗೆ ಇಂದುಸರಿಸಾ ದೂರದಿ ನಿನ್ನ ಸ್ಮರಣೆ ಮಾಡುವೆ ಆ-ಲ್ಪಿರಿದು ಬಾಯಿ ಬಿಡುವೆನೊ ಮರೆಯಲಾಗದು ತಂದೆದುರುಳ ವಿಷಯಕ್ಕೆರಗುವೆ ಅಂತಃ-ಕರುಣ ನಿಲಿಸಿ ಪೊರೆವ ಭಾರವುನಿರುತ ನಿನ್ನದು ವ್ಯಾಸವಿಠಲನಭರದಿ ಪೊಗಳುವ ಪರಮ ಧನ್ಯಾನೆ ೩

 

೯೫
ಗಿರಿರಾಜ ಚಿತ್ತವುದಾರ ಜೀಯಾ | ನಾ ನಿನ್ನ ಪಾದಕ್ಕೆರಗಿ ಯಾಚಿಸುತಲಿ ಮುಗಿವೆನು ಕೈಯಾ | ನೆರೆ ನಂಬಿದವರನುಎರವು ಮಾಡಲು ನಿನಗೊಳಿತೇನಯ್ಯಾ | ಪಿಡಿ ಬೇಗ ಕೈಯಾ ಪ
ಕರುಣಿಗಳರಸನೆ ಕಾಮಿತ ಫಲದನೆ ಕರಿರಾಜನ ಭೀಕರ ಹರ ವಂಕಟ ಅ.ಪ.
ಅಪಾರ ಮಹಿಮಾ ಆಪದ್ಬಂಧೂ | ಆಪನ್ನರ ಪಾಲಿಪ ವ್ಯಾಪಾರ ನಿನಗಲ್ಲದೆ ಮತ್ತೊಂದೂ | ನಾ ಕಾಣೆನೊ ಜಗದಿಭೂಪಾನೆ ಭೂಮಾ ಗುಣ ಗಣ ಸಿಂಧೂ | ಸ್ವಾಮಿಯೆ ಸಿರಿಗೆಂದೂ ||ಪಾಪದ ಪಂಕವು ಲೇಪವಾಗದಂ | ತೀ ಪರಿಪಾಲಿಸೊ ಶ್ರೀಪತಿ ಅಂಜನ ೧
ತರು ಜಾತಿ ಮೃಗಪಕ್ಷಿಗಳಾಕಾರ | ಮೊದಲಾದ ರೂಪದಿಸುರರೂ ಕಿನ್ನರರೂ ತಮ್ಮ ಪರುವಾರ | ಒಡಗೂಡಿ ನಿನ್ನಾಶರಣರ ಚರಣಾರಾಧನೆಗೆ ವಿಸ್ತಾರ | ಈ ಬಗೆ ಶೃಂಗಾರಾ ||ದೊರೆತನ ಠೀವಿಗೆ ಧರಣಿ ಮಂಡಲದಿ | ಸರಿಗಾಣೆನೊ ಹೇ ತಿರುಪತಿ ವೆಂಕಟ ೨
ಹದಿನಾಲ್ಕು ಲೋಕದ ಭಾಗ್ಯವನೆಲ್ಲಾ | ಅಮರರಿಗೆ ಕೊಟ್ಟವಿಧವೆಲ್ಲಾ ಪ್ರತ್ಯಕ್ಷವು ಪುಸಿಯಲ್ಲಾ | ನಾನವರನು ನೋಡೆಅಧಮಾಧಮನು ಸರಿ ಬಲ್ಲೆಲ್ಲಾ | ಎನ್ನ ಯೋಗ್ಯ ತದಾ ||ಹದುಳವೆ ನೀವುದು ಹದಗೆಡಿಸದಲೆ | ವದಗಿ ಪಾಲಿಸು ವಸುಮತಿಧರ ಫಣಿ ೩
ಕಲಿಯುಗದೊಳಗೀ ಪರ್ವತದಲ್ಲಿ | ಸರಿಗಾಣೆನೊ ಎಂದುನೆಲೆಸೀದೆ ನೀನೆ ಈ ಸ್ಥಳದಲ್ಲಿ | ವೈಕುಂಠಕಿಂತನೆಲೆಯಾ ವೆಗ್ಗಳವೆಂದು ನೀ ಬಲ್ಲಿ | ಅದ ಕಾರಣದಲ್ಲಿ ||ಜಲಜ ಭವಾದ್ಯರು ಒಲಿದೊಲಿಯುತ | ತಲೆದೂಗುವರೈ ಭಳಿರೆ ಕಾಂಚನ ೪
ಸುವರ್ಣ ಮುಖರಿ ತೀರವಾಸ | ಆ ಬ್ರಹ್ಮೋತ್ಸವನವರಾತ್ರಿಯಲ್ಲಿ ನೋಡಲು ಶ್ರೀಶ | ಸಂ ಪದವಿಯನಿತ್ತುಕಾವನು ಕಲುಷದ ಭಯ ಬರಲೀಸ | ಶ್ರೀ ಶ್ರೀನಿವಾಸ ||ಶ್ರೀವರ ಭೂಧರ ವ್ಯಾಸವಿಠಲ* ಪ | ರಾವರೇಶ ಶ್ರೀ ದೇವನೆ ದೇವಾ ೫

 

ಸಂಪ್ರದಾಯದ ಹಾಡು
೧೦೮
ವೆಂಕಟೇಶನ ಉರುಟಣೆಯ ಹಾಡು
ಜಯ ಜಯ ವೆಂಕಟರಮಣ | ಜಯತು ಪನ್ನಂಗ ಶಯನಾಜಯತು ಭಾರ್ಗವಿ ರಮಣಾ | ಜಗದಾಭಿ ರಮಣಾ ಪ
ಲೋಕನಾಯಕ ಸ್ವಾಮಿ | ವೈಕುಂಠಾದಿಂದ ಬಂದೂಏಕಾಂತವಾನಾಡಿದಾ | ಲಕ್ಷೀಯರೊಡನೆ ೧
ಧರೆಗೆ ವೈಕುಂಠಾದ | ಚರ್ಯವ ತೋರುವೆನೆಂದುಶಿರಿ ಮಹಾಲಕ್ಷೀಯೊಡನೆ | ಸಂಧಿಸಿದಾನೂ ೨
ಸ್ವಾಮಿ ಕಾಸಾರದಲೀ | ಧಾಮಾವ ರಚಿಸೂವೆಆ ಮಹಾ ವೈಕುಂಠಾವ | ಅಗಲೀ ಬಂದೂ ೩
ವತ್ಸರ ಕಾಲದಲೊಂದು | ಉತ್ಸವ ಮಾಡುವೆನೆಂದುಇಚ್ಛೆ ಮಾಡಿದನೂ ವೆಂಕಟ ಇಂದಿರೆಗೂಡಿ ೪
ನವರಾತ್ರಿ ದಿವಸದಲೀ | ವಿವಾಹ ಲಗ್ನವ ರಚಿಸೀಅವನಿಯೊಳು ಡಂಗುರವನ್ನು ಹೊಯಿಸೀದ ಸ್ವಾಮೀ ೫
ಕಾಶಿ ಕರ್ನಾಟಕದ | ದೇಶಾ ದೇಶದ ಜನರುಶ್ರೀಶಾನುತ್ಸವಕೇ ಜನರು ಒದಗೀದರಾಗಾ ೬
ಹದಿನಾಲ್ಕು ಲೋಕಾದ | ಪದುಮಜಾದಿಗಳೆಲ್ಲಾ ಮದುವೆಯಾ ದಿಬ್ಬಣದಾ | ಜನರು ಬಂದರಾಗಾ ೭
ಗರುಡಾ ಕಂಬದ ಸುತ್ತಾ | ಪರಿಪರಿ ವೈಭವದಿಂದಗಿರಿಯಾ ವೆಂಕಟಗೇ | ಕಂಕಣ ಕಟ್ಟಿದರಾಗಾ ೮
ಆಗಮಾ ಪುರಾಣ | ರಾಗ ಮದ್ದಳೆ ತಾಳಭಾಗವತರೂ ಸುತ್ತ ಮಾಡುತಿರಲೂ ೯
ತಾಳ ತಮ್ಮಟೆ ಕಾಳೆ | ಭೋರೆಂಬೋ ವಾದ್ಯಗಳೂವರ ನಾರಿಯರು ಸುತ್ತಾಗ್ಹಾಡುತಿರಲೂ ೧೦
ಚಿನ್ನದ ಕರಿಮಣಿ | ರನ್ನ ಮಂಗಳಸೂತ್ರಹಿರಿಯಾ ವೆಂಕಟನೂ ಲಕ್ಷ್ಮೀಗೆ ಕಟ್ಟಿದ ನಗುತಾ ೧೧
ಮುತ್ತಿನಾ ಕರಿಮಣಿ | ರತ್ನ ಮಂಗಳಸೂತ್ರಾಸ್ವಾಮಿ ವೆಂಕಟ ಲಕ್ಷ್ಮೀಗೆ ಕಟ್ಟಿದ ನಗುತಾ ೧೨
ಅಂತರಾ ಮಾರ್ಗದೊಳೂ | ನಿಂತು ದೇವತೆಗಾಳು ಸಂತೋಷದಿಂದಲಿ ಜಯ ಜಯವೆಂದು ಪಾಡಿದರಾಗ ೧೩
ಅಂಗಾನೆ ಶ್ರೀ ಭೂಮಿ | ರಂಗಾಮಂಟಪದೊಳಗೆಬಂಗಾರ ಗಿರಿಯಾ ವೆಂಕಟ ಒಪ್ಪಿದ ಸ್ವಾಮೀ ೧೪
ಅತಿರಸಾ ಮನೋಹರ | ಮಿತಿಯಿಲ್ಲದ ಪದಾರ್ಥಗಳೂಸತಿಯರೆಲ್ಲರು ಭೂಮಕೆ ತಂದು ಬಡಿಸಿದರಾಗ ೧೫
ಬೆರದ ನಾರಿಯರೆಲ್ಲ | ಹರಿಭೂಮಾ ನಂತರದೀಭರದಿ ಉರುಟಣಿಗೆ ಅಣಿ ಮಾಡಿದರಾಗಾ ೧೬
ಮಿತ್ರೆ ಲಕ್ಷ್ಮೀಗೆ ತಕ್ಕ | ಹಿರಿಯರು ಪೇಳಲುಛಂದದಿಂದಲಿ ಅರಿಷಿನ ಕಲಸಿ ನಿಂತಳಾಗ ೧೭
ದೊಡ್ಡ ಪನ್ನಗ ನಗವಾ | ಸೇರಿದ ಮಹರಾಯದುಡ್ಡು ದುಡ್ಡಿಗೆ ಬಡ್ಡಿಯನ್ನು ದುಡಿವಾ ಲೋಭಿ ೧೮
ವಂಚಿಸಿ ಜನರನ್ನು | ಲಂಚಾ ಲಾವಣಿ ತೆಗೆದುಹಿಂಚಾಸಿ ವರ ಕೊಡುವಾ ಹಿತದಾ ದೇವಾ ೧೯
ಬಡವಾ ಬಲ್ಲಿದರೆಂದು | ಬಿಡದಾಲೆ ಅವರಿಂದಮುಡುಪು ಹಾಕಿಸಿಕೊಂಡು (ಮುಂದಕೆ) ಬಿಡುವೋ ದೇವಾ ೨೦
ಅನ್ನವೆಲ್ಲವ ಮಾರಿ | ಹೊನ್ನು ಕಟ್ಟುವೆಯಲ್ಲೊಅನ್ನದಾನವ ಮಾಡಲೊಲ್ಲಿ ಅನ್ಯಾಕಾರಿ ೨೧
ಹೊನ್ನು ಸಾಲವ ತೆಗೆದು | ಎನ್ನಾ ಕಟ್ಟಿಕೊಂಡುಮನೆ ಮನೆಗೆ ಭಿಕ್ಷವ ಬೇಡುವ ಮಾನವಂತಾ ೨೨
ಹೊನ್ನು ಸಾಲದು ಎಂದು | ಎನ್ನ ಸಾಕುವೆ ಹೇಗೋನಿನ್ನಾ ಕೃಪಣತನಕೆ ನಾನು ಎಣೆಗಾಣೆನೋ ೨೩
ಇಪ್ಪತ್ತು ದುಡ್ಡೀಗೆ | ಸೇರು ತೀರ್ಥವ ಮಾರಿದುಡ್ಡು ಕಟ್ಟಿ ಜಾಳಿಗೆ ಗಳಿಸುವ ಜಾಣ ನೀನೂ ೨೪
ಅಟ್ಟಾ ಮಡಿಕೆಯಲ್ಲಾ | ಕುಟ್ಟಿ ನಾಮವ ಮಾಡಿಗಟ್ಟಿಯಾಗಿ ಗಂಟು ಗಳಿಸುವ ಘನವಂತಾ ೨೫
ದೇಶದೊಳು ನಿಮ್ಮಂಥಾ | ಆಸೆ ಉಳ್ಳವರಿಲ್ಲಕಾಸು ಕಟ್ಟಿ ಕವಡೆ ಗಂಟು ದುಡಿವ ಲೋಭಿ ೨೬
ಮಡದಿ ನಾನಿರಲಿಕ್ಕೆ | ಕಡಿಮೆ ಏನಾಗೋದುಬಡತನ ನಿನಗೆ ಯಾತಕೆ ಬಂತೂ ಸ್ವಾಮೀ ೨೭
ನಾರೀಯಾ ನುಡಿ ಕೇಳಿ | ವಾರೆ ನೋಟದಿ ನೋಡಿಮೋರೆ ತಗ್ಗಿಸಿ ವೆಂಕಟ ಮುನಿದು ನಿಂತಾ ೨೮
ಕಡುಕೋಪಾ ಮಾಡುವರೆ | ಹುಡುಗನಂತಾಡುವರೆಕೊಡಲೀಯ ಪಿಡಿವಾರೆ ನಾನು ನುಡಿದಾ ನುಡಿಗೇ ೨೯
ಕಣ್ಣಾನೆ ಬಿಡಬ್ಯಾಡ | ಬೆನ್ನ ತೋರಲಿ ಬ್ಯಾಡಾಇನ್ನು ಮುಖವಾ | ತಗ್ಗಿಸಬ್ಯಾಡ ಇತ್ತ ನೋಡೂ ೩೦
ಎನ್ನರಸಾ ಹೊನ್ನರಸಾ | ಚೆನ್ನಿಗ ವೆಂಕಟರಾಯಾನಿನ್ನ ಪೋಲುವರ್ಯಾರೊ | ಜಗದೊಳು ನೀಲಗಾತ್ರಾ ೩೧
ಎನ್ನರಸಾ ಚೆನ್ನರಸಾ | ಚೆನ್ನಿಗ ವೆಂಕಟರಮಣಾನಿನ್ನ ಮುದ್ದು ಮುಖವ ತೋರೊ ಅರಿಷಿಣ ಹಚ್ಚೇನು ೩೧
ಎನ್ನುತ ಅರಿಷಿಣ | ಹಚ್ಚಿ ಕುಂಕುಮವಿಟ್ಟುರನ್ನ ಹಾರವ ಹಾಕಿ ತಾನು ಕುಳಿತಾಳಾಗ ೩೩
ಮಂದರಧರ ತಾನೂ | ಛಂದದರಿಶಿನ ಪಿಡಿದೂಇಂದಿರಾದೇವಿಯನ್ನು ಮಾತನಾಡಿಸಿದಾ ೩೪
ಎನ್ನರಸಿ ಹೊನ್ನರಸಿ | ಚೆನ್ನಿಗ ಮಾಯಾದೇವಿನಿನ್ನ ಮುದ್ದು ಮೊಗವಾನೆ ತೋರು ಅರಿಷಿನ ಹಚ್ಚೇನು ೩೫
ಭಿಡೆಯಾ ನೋಡದೆ ಇಂಥಾ | ನುಡಿಗಳಾಡಿದ ಮ್ಯಾಲೆನಡುಗಿ ಮೋರೆಯ ತಗ್ಗಿಸಲಿಹುದೆ ನಾಚಿಕೆ ಯಾಕೆ ೩೬
ಭಾಗ್ಯಾದ ಮೊಬ್ಬಿಲಿ | ಬಾಗಿ ನೀ ನಡೆಯಾದೇಅಗ್ಗಳಿಕೆ ಮಾತುಗಳನ್ನು ಆಡಿದೆಯಲ್ಲೇ ೩೭
ಮಿಂಚಿನಂದದಿ ಬಹಳಾ | ಚಂಚಲ ಬುದ್ಧ್ಯವಳೇವಂಚಿಸೂವಳೆ ಜಗವಾ ವಾರಿಜಾಕ್ಷೀ ೩೮
ಬಂಗಾರಾ ಮುಡುಪಿಗೆ | ಎನ್ನ ಕಂಗೊಳಿಸೀಗಾ ಹಿಂಗಾದೆ ಮಂಕು ಮಾನವರ ಮಾಡುವುದರಿದೇ ೩೯
ಮುಡಿಯ ದಂಡೆಗೆ ಮುಡಿಸಿ | ಎಡದ ಕೈಯಲಿ ಬ್ಯಾಗಾತೊಡಕ ಕಂಚುಕ ವೆಂಕಟ ಬಿಗಿದಾ ನಗುತಾ ೪೦
ತಾಂಬೂಲವನೆ ಮೆದ್ದು | ಮಡದಿಯಾ ಮುಖ ಸೂಸೆಇಂಬೀಲ್ಹಚ್ಚೆ ಬರೆದರಾಗ ಅತಿ ಸಂಭ್ರಮದೀ ೪೧
ತಿರುಮಲೇಶನು ತನ್ನ | ಮಡದೀಯನು ಎತ್ತಿಭರದಿಂದಾ ತನ್ನರಮನೆಗಾಗಿ ತೆರಳಿದಾನು ೪೨
ದ್ವಾರದಾದಡಿಯಲ್ಲಿ | ನಾರೇರೆಲ್ಲರು ನಿಂತುವಾರಿಜಾಕ್ಷಿ ಪತಿಯ ಹೆಸರಾ ಹೇಳೆಂದರು ೪೩
ಕಿರುನಗೆಯಿಂದ ಲಕ್ಷ್ಮೀ | ಗಿರಿಯಾ ವೆಂಕಟನೆನಲೂಹರಿಯೆ ನಿನ್ನ ರಮಣಿ ಹೆಸರಾ ಹೇಳೆಂದರೂ ೪೪
ಜಾತಿ ನಾಚಿಕೆ ತೊರೆದು | ಶ್ರೀ ತರುಣಿ ಎನುತಾಲೆಪ್ರೀತಿಯಿಂದಲಿ ಸಿಂಹಾಸನದಿ ಕುಳಿತರಾಗಾ ೪೫
ಮತ್ತೆ ನಾರಿಯರೆಲ್ಲಾ | ಮುತ್ತಿನಾರತಿ ಪಿಡಿದೂಸತ್ಯಾಭಾಮೆಗೆ ಜಯ ಜಯವೆಂದರಾಗ ೪೬
ವಿಭುವಿನ ಗುಣವನ್ನು ವಿಸ್ತರ ಪೇಳಿದ ಜನಕೆಸಮಯದಂಥ ಭಾಗ್ಯವನಿತ್ತು ಸಲಹುವ ಸ್ವಾಮಿ ೪೭
ಮಂಗಳ ವೆಂಕಟರಾಯಾ | ಮಂಗಳ ಮಾಧವರಾಯಾಮಂಗಳ ಮಾನಸಗೇಯಾ | ಮಂಗಳ ಮಾಧವರಾಯಾ ೪೮
ಧರೆಯೊಳಧಿಕನಾದ | ದೊರೆ ವ್ಯಾಸವಿಠಲಾನುಪರಮ ಭಕ್ತಿ ಸುಜ್ಞಾನವನು ಪಾಲಿಸೂವಾ ೪೯

 

೧೦೦
ತಿಳಿಯದೋ ನಿನ್ನಾಟ ತಿರುಪತಿಯ ವೆಂಕಟ ಪ
ಪೊಳೆವ ನೀರೊಳು ಗೆಲುವ ಮೋರೆಯನೆಲವ ನೋಡುವ ಸುಳಿವ ಕಂಬದಿ |ಇಳೆಯನಳೆಯುವ ಭಳಿರೆ ಭಾರ್ಗವ ಖಳನ ಛೇದಿಸಿ ಕೊಳಲ ಧ್ವನಿಗೆ ||ನಳಿನಮುಖಿಯರ ನಾಚಿಸುವ ಬಲು ಹಯದಳದ ಬಹು ಹವಣಿಗಾರನೆ ಅ .ಪ.
ಆರು ಬಲ್ಲರು ನಿಮ್ಮ – ಶ್ರೀ ಲಕುಮಿ ಮನಸಿಗೆತೋರುದಿಹ ಪರಬೊಮ್ಮ _ ಉಳಿದವರು ಬಲ್ಲರೆನೀರಜಾಸನ ಬೊಮ್ಮ _ ಇದು ನಿನ್ನ ಮರ್ಮ ||ನೀರೊಳಗೆ ಮನೆ ಭಾರ ಬೆನ್ನಿಲಿಕೋರೆ ದಾಡೆಯ ನಾರಸಿಂಹನೆ |ಧರೆಯ ಬೇಡಿದ ಧೀರ ಪುರುಷನೆವಾರಿ ಬಂಧನ ಮಾರಜನಕನೆ ||ನಾರಿಯರ ವ್ರತವಳಿದು ಕುದುರೆಯನೇರಿ ಮೆರೆಯುವ ಸುಂದರಾಂಗನೆ ೧
ಸಕಲ ಮಾಯವಿದೇನು _ ವೃಕನ ವಾಯುಸಖನ ಸಲಹಿದೆ ನೀನು _ ಭಕುತಿಯಿಂದಲಿತುತಿಪರಿಗೆ ಸುರಧೇನು _ ಸುರ ಕಾಮಧೇನು ||ನಿಖಿಳ ವೇದೋದ್ಧಾರ ಗಿರಿಧರ ಅಖಿಳ ಭೂಮಿಯ ತಂದ ನರಹರಿ |ಯುಕುತಿಯಲಿ ನೆಲನಳೆದ ಭಾರ್ಗವಮುಕುತಿಗೋಸುಗ ಫಲವ ಸವಿದನೆ ||ರುಕುಮನನುಜೆಯ ರಮಣ ಬೌದ್ಧನೆಲಕುಮಿ ರಮಣನೆ ಕಲ್ಕಿರೂಪಿಯೆ ೨
ನಿನ್ನ ರೂಪಿನ ಲೀಲಾ – ನೋಡುವ ಜನಕೆಕಣ್ಣು ಸಾಸಿರವಿಲ್ಲಾ _ ನಾ ಪಾಡಿ ಪೊಗಳಲುಪನ್ನಗಾಧಿಪನಲ್ಲ _ ನೀನರಿಯದಿಲ್ಲ ||ಕಣ್ಣು ಮುಚ್ಚದೆ ಬೆನ್ನು ತೋರಿದಿಮಣ್ಣು ಕೆದರುವೆ ಚಿಣ್ಣಗೊಲಿದನೆ |ಸಣ್ಣ ವಾಮನ ಅಣ್ಣ ರಾಮನೆ ||ಪುಣ್ಯ ಪುರುಷನೆ ಬನ್ನ ಬಡುಕನೆ ||ಹೆಣ್ಣುಗಳ ವ್ರತ ಕೆಡಿಸಿ ತೇಜಿಯಬೆನ್ನನೇರಿದ ವ್ಯಾಸ ವಿಠ್ಠಲ* ೩

 

೯೦
ತೂಗೀ ಲಾಲನೆ ಲಾಲಿಸಿದೆಯಾ ರಾಮ | ತೊಟ್ಟಿಲೊಳ್ಮಲಗಿಹನಾಗಾರಿ ವಾಹನ ನರಜನ ಪ್ರೇಮಾ | ಹರಿ ಸಾರ್ವಭೌಮ ಪ
ಯೋಗಿ ಮಧ್ವಮತದಾಗಮ ವಂದಿತಭಾಗವತಾಗ್ರಣಿ ಶ್ರೀಗುರುಗಳ ಕೈ ಅ.ಪ.
ಪ್ರಳಯ ಕಾಲದಲಿ ಹರಿ ನೀನಂದು | ಶ್ರೀ ಭೂ ದುರ್ಗಾತ್ಮಕಜಲದಾಲದೆಲೆಯಲಿ ತೊಟ್ಟಿಲಲಂದೂ | ಕತ್ತಲೆಯೊಳಗಂದೂಎಲ್ಲಾ ಜೀವರ ಪೊಕ್ಕಳ ಎಡಬಲ ತಂದೂ | ದೀನ ಜನರ ಬಂಧೂ ||ಥಳಥಳ ಪೊಳೆಯುವ ಮಣಿಯ ತೊಟ್ಟಿಲೊಳುಲಲನೆ ಸಹಿತ ಎಡಬಲ ವೈಭೋಗದಿ ೧
ಗೋಕುಲದೊಳೊ ಗೋಪಿಯರಿಂದ ತೂಗಿಸಿಕೊಂಡುಸಾಕಾಗಲಿಲ್ಲೇ ಎಲೊ ಮುಕುಂದ | ಕೌಸಲ್ಯಾದೇವಿಯುಬೇಕೆಂದು ಮುದ್ದಿಸಿ ಮೋಹದಲಿಂದಾ | ಆದ ಕಾರಣದಿಂದಾ ||ಏಕ ಮನಸಿನಲಿ ಈ ಪರಮುನಿಪಗೆಬೇಕೆಂದೊಲಿದು ಪರಾಕನು ಕೊಳ್ಳುತ ೨
ಶ್ರುತಿ ಗೀತೆಯಿಂದ ಸುಂದರವಾದ | ಅಂಭ್ರಣಿ ಸೂಕ್ತದಲಿಸ್ತುತಿಸೀದುದೆಲ್ಲವು ಅತ್ಯಗಾಧಾ | ಅದಕಿಂತ ಇವರಲಿಅತಿಶಯವೇನೊ ಪೇಳಲಿ ಮೋದ | ಸತ್ಯಬೋಧಾರ್ಯರ ||ಮತಿಗೆ ನೀ ಮರುಳಾದೆ ಮಧುಸೂದನನೆ ಪತಿತ ಪಾವನನೆ ವ್ಯಾಸ ವಿಠಲ ನೀನೇ ೩

 

೧೦೬
ದಯ ಮಾಡೊ ಪ್ರೀಯಾ ದಾಸರ ಶುಭೋ-ದಯ ವಿಜಯರಾಯ ಸಾ |ಹಯವಾಗಿ ಒದಗುವೋಭಯ ನಿವಾರಣ ಮಾಡಿ ಪ
ಪ್ರಬಲವಾಗಿಹ ಮೋಹ ನಿಬಿಡವಾದದರಿಂದಅಭಯದಾಯಕ ನಿನ್ನ ಶುಭವಾದ ಪಾದಕ್ಕೆಅಭಿವಂದಿಸದಲೆ ಅಲ್ಪರ ಸೇರಿಅಬಲನಾಗುತಲೆ ಪಾಪದ ವನಧಿಊಭೀರ ನೋಡದಲೆ ಬಾಳಿದೆ ಯನ್ನಅಭಿಮಾನದೊಡೆಯನೆ ಅಗಡು ಮಾಡದಲೆ ೧
ನೆರೆ ನಂಬಿದವರಿಗೆ ದುರಿತ ರಾಶಿಯ ಕಳೆದುಪರಿ ಪರಿ ವರಗಳ ಗರೆವ ಕಾರಣ ನಿನ್ನಬಿರಿದು ನಾ ಬಲ್ಲೆ ಎನ್ನಯ ಭಾರಸರಿ ನಿನ್ನದಲ್ಲೆ ಲೌಕೀಕದಪರಿ ಮತ್ತೊಂದೊಲ್ಲೆ ಇಹಪರದಲ್ಲೆ ಪರಮ ಸೌಖ್ಯಕೆ ನಿನ್ನ ಸ್ಮರಣೆ ವಂದಲ್ಲೆ ೨
ಪಾಮರ ಜನರಿಗೆ ಸುಮಾರ್ಗಗೋಸುಗಶ್ರೀಮನೋಹರ ನಿನ್ನ ಪ್ರೇಮದಿಂದಲಿ ಸೃಜಿಸಿಭೂಮಿಯೊಳಿಡಲೂ ಹರಿಯ ದಿವ್ಯನಾಮ ನಾ ಬಿಡಲು ದುರ್ವಿಷಯವಕಾಮಿಸಿ ಕೆಡಲೂ | ಸುಮ್ಮನಿರದೆಯಾಮ ಯಾಮಕೆ ನಿನಗೆ ನಾ ಮೊರೆಯಿಡಲೂ ೩
ಜಗದಂತರ್ಯಾಮಿಯ ಹಗಲು ಇರುಳು ಬಿಡದೆಸುಗುಣ ಮಾರ್ಗದಲಿದ್ದು ಬಿಗಿಯಾದ ಕವನಕ್ಕೆಬಗೆ ತೋರಿದವನೆ ಹರಿಯ ಕ್ಷಣ ಅಗಲದಿದ್ದವನೆ ಕಾಮದ ಬಲಿಗೆಸಿಗದೆ ನಡೆವವನೆ ಅನುನಯದಿ ಕರವಮುಗಿದು ಬೇಡುವರಲ್ಲಿ ಮುದದಿಂದ ನಲಿವನೆ ೪
ಎನ್ನೊಬ್ಬಗಲ್ಲ ಈ ಬಿನ್ನಪ ಕರುಣಾಳೆನಿನ್ನ ಪೊಂದಿದವರ ಮನ್ನಿಸಿ ಸಲಹಯ್ಯಾಬೆನ್ನು ಬಿಡದಲೆ ವ್ಯಾಸ ವಿಠ-ಲನ್ನ ಪಾಡುತಲೆ ಕಾಲವ ಕಳೆವ ಸನ್ಮಾರ್ಗವನೆ ತೋರೋ ತಡಮಾಡದಲೆ ೫

 

೧೦೩
ಟೀಕಾಚಾರ್ಯರ ಸ್ತೋತ್ರ
ದಯದಿ ಪಾಲಿಸೋ ಜಯತೀರಥ ರಾಯಾ | ಅಕ್ಷೋಭ್ಯರ ತನಯಾ ಪ
ಅತ್ಯಂತ್ಹರುಷದಿ ಎತ್ತಾಗಿರುತಿರಲೂ ಶ್ರೀ |ಆನಂದ ತೀರಥರೂನಿತ್ಯ ಪಠಿಸುವೋ ಪುಸ್ತಕ ಹೊರುತಿರಲೂ |ಗುರುರಾಯರು ಪೇಳಿದತತ್ವ ಗ್ರಂಥವನೆ ಕಿವಿಯಲಿ ಕೇಳುತಲೀ | ತಲೆಯನು ತೂಗುತಲೀಮತ್ತೆ ಪುಟ್ಟಿದ್ಯೋ ಮಂಗಳವೇಡೆಯಲೀ | ಅತಿ ಮತಿವಂತರಲೀ ೧
ದೇಶಪಾಂಡೆರಾ ಕೂಸಾಗಿ ಜನಿಸೀ | ಘನ ರಾವುತನೆನಿಸೀದೇಶ ದೇಶದೋಳ್ ಸೈನ್ಯವನೇ ಚರಿಸೀ | ಹಣವನ್ನೇ ಗಳಿಸೀವಾಸುಕಿಯೆಂಬೋ ಗುರುತನೆ ತಪ್ಪಿಸೀ | ನದಿಗೇ ನೀರಡಿಸೀಶ್ರೀಶನಾಜ್ಞೆಯೊಳಿವರನೆ ಕರೆತರಿಸೀ |ಶಿಖೆ ಸೂತ್ರವ ತೆಗೆಸೀ೨
ಹಿಂಡು ಹಿಂಡು ಜನ ಅಂಡಲಿಯುತ ಬದೂ | ಅಕ್ಷೋಭ್ಯ ತೀರಥರಾಕಂಡು ಭೇಟಿಯಾ ಮಾಡುತಲೇ ನಿಂದೂ | ಧೋಂಡೋ ರಘುನಾಥನಹೆಂಡತಿ ಗಂಡನ ಕೂಡಿಸಬೇಕೆಂದೂ | ಸುಮ್ಮನೆ ಕರೆತಂದೂ – ಪ್ರಚಡ ಸರ್ಪನಾ ರೂಪವ ತಾಳ್ದಂದೂ ಭಯವ ಪಟ್ಟರಂದೂ ೩
ಮಧ್ವ ಶಾಸ್ತ್ರಗಳನುದ್ಧರಿಸುತಲದನಾ | ಟೀಕೆಯನೇ ಮಾಡೀವಿದ್ವಜ್ಜನರಿಗೆ ತಿದ್ದಿಯೆ ಪೇಳುತಲೀ |ನಾನಾ ಬಗೆಯಿಂದಲಿಪದ್ಧತಿ ತಿಳಿಸಿದ ಗುರುರಾಯರು ನೀವು | ಯತಿವರ ಸುರಧೇನುಅದ್ವೈತರ ಗುರು ವಿದ್ಯಾರಣ್ಯರ | ಗೆದ್ದ ಸಿಂಹ ನೀನೂ ೪
ಆಷಾಢ ಬಹುಳ ಪಂಚಮಿಯೂ ಬರುತಾ ಕಳೆಬರವನೆ ಬಿಡುತಾವ್ಯಾಸ ವಿಠ್ಠಲನ ಪಾದದಲೇ ನಿರುತಾ | ಮಳಖೇಡದೊಳುವಾಸಿಪನೆಂಬೋ ಬಲು ಪ್ರಖ್ಯಾತಾ |ನಿಜಗುಣ ಗಣನೀತಾಬ್ಯಾಸರದಲೆ ಕೊಂಡಾಡಿದರೆ ನಿತ್ಯಾ | ಇಷ್ಟಾರ್ಥವನಿತ್ತಾ ೫

 

೯೪
ನೆರೆ ನಂಬಿದೆ ಮದ್ ಹೃದಯ ಮಂಟಪದೊಳುಪರಿಶೋಭಿಸುತಿರು ಪಾಂಡುರಂಗ ||ಶರಣ ಜನರ ಸಂಸಾರ ಮಹಾಭಯಹರಣ ಕರುಣ ಸಿರಿ ಪಾಂಡುರಂಗ ಪ
ಪರದೇವನೆ ನಿನ್ನ ಲೀಲಾ ಸ್ರ‍ಮತಿಯನುನಿರುತ ಎನಗೆ ಕೊಡು ಪಾಂಡುರಂಗ ||ಪರರಾಪೇಕ್ಷೆಯ ಬಿಡಿಸಿ ನಿರಂತರಪರಗತಿ ಪಥ ತೋರೊ ಪಾಂಡುರಂಗ ೧
ನೆರದಿಹ ಬಹು ಜನರೊಳಿದ್ದರು ಎನ ಮನ ಸ್ಥಿರವಿಡು ನಿನ್ನಲಿ ಪಾಂಡುರಂಗ ||ಪರಿಪರಿ ಕೆಲಸವು ನಿನ್ನ ಮಹಾಪೂಜೆನಿರುತ ಎನಗೆ ಕೊಡು ಪಾಂಡುರಂಗ ೨
ಸುಖವಾಗಲಿ ಬಹು ದುಃಖವಾಗಲಿಸಖ ನೀನಾಗಿರು ಪಾಂಡುರಂಗ ||ನಿಖಿಲಾಂತರ್ಗತ ವ್ಯಾಸ ವಿಠಲ ತ್ವ-ನ್ಮುಖ ಪಂಕಜ ತೋರೊ ಪಾಂಡುರಂಗ ೩

 

೯೨
ಮಧ್ವಾಂತರ್ಗತ ಶ್ರೀನಿವಾಸಾ | ಕಾಯೊಸಿದ್ಧ ಮೂರುತಿ ವೆಂಕಟೇಶಾ ಪ
ಇದ್ಧರೆಯೊಳು ನಿನ್ನ | ಹೊದ್ದಿದವರ ಪಾಪಬದ್ಧವಾಗದು ಅನ್ಯೋಪದ್ರವೆ ಮೊದಲಿಲ್ಲ ಅ.ಪ.
ಸಾಕಾರ ಸರ್ವಾಧಾರೀ | ಸ್ವಾಮಿಲೋಕನಾಯಕನೆ ಉದಾರೀ ||ಭೂಕಾಂತ ಭವ ಭಯಹರೀ | ಜಗದೇಕನೆ ಪರ ಉಪಕಾರೀ |ನಾ ಕರ ಮುಗಿವೆ ಕೃಪಾಕರ ಮೂರ್ತಿ ಇ |ನ್ಯಾಕೆ ನಿರ್ದಯ ಮಾಡಿ ನೀಕರಿಸುವಿ ಎನ್ನ ||ಸಾಕು ನಿನಗೆ ಪರಾಕು ಪೇಳುವ | ದ್ಯಾಕೆ ಭಕುತರ ಸಾಕಲರಿಯೆಸಾಕು ಭವ ಸುಖನೇಕ ಪರಿಯಲಿ | ಬೇಕು ಪಾಲಿಸು ಏಕ ಭಕುತಿಯ ೧
ಧರೆಗೆ ವೈಕುಂಠದ ಪರಿಯೇ | ತೋರಿಮರೆವಿ ಮಹಾತ್ಮ ಶ್ರೀಹರಿಯೇ ||ಸರಿ ನಿನಗಿದು ಹೊಸ ಪರಿಯೇ | ಭಾಗ್ಯಮರಿಯಾದ ಮರಿತಿ ನೀ ಧೊರೆಯೇ ||ಶಿರಿಯೆ ಮಂದಿರವಾಗಿ ಪರಿಪರಿ ರೂಪದಿಕರವ ಜೋಡಿಸಿ ಉಪಚರಿಯ ಮಾಡಲು ಇತ್ತಸರಸಿಜೋದ್ಭವ ಗರುಡ ನರಹರ | ಸುರಪಮುಖ ದಿವಿಜರು ಪರಾಕೆನೆಪರಮ ಪದ ಸಂಪದವಿದಲ್ಲದೆ | ಶಿರಿಯ ಭಾಗ್ಯದಿ ಪರವೆ ನಿನಗೇ ೨
ಮಣಿಮಯ ಖಚಿತ ಕಿರೀಟಾ | ಸಾರೆಅನುವಾದ ನಾಮ ಲಲಾಟಾ ||ಮಿನುಗುವ ನಗೆ ವಾರೆನೋಟಾ | ದಿನಮಣಿ ಕರ್ಣ ಕುಂಡಲ ಮಾಟಾ ||ಘನ ಶಂಖ ಚಕ್ರ ಭೂಷಣ ಶ್ರೀ ವತ್ಸಾಂಕ ಶೋ-ಭನ ಕೌಸ್ತುಭ ಮಣಿ ಗಣ ಹಾರ ಶೃಂಗಾರ ||ಖಣಿಯೆ ಕಟಿಕರ ಕನಕಮಯ ಸುವಸನ ಕಾಂಚೀದಾಮ ಒಪ್ಪಲುಪ್ರಣತರ ಭಯಪ್ರದಕರ ಕುಂಭಿಣಿಗೆ ತೋರುವ ಅನಘ ವೆಂಕಟನೆ ೩
ನಿಗಮ ಗೋಚರ ನಿತ್ಯ ಮೋದಾ | ವಾದಝಗ ಝಗಿಸುವ ದಿವ್ಯ ಪಾದಾ ||ಯುಗಳಾರಾಧನಿ ಪರರಾದಾ | ವರಿಗೆಅಗಣಿತ ಸುಖವೀವ ಶ್ರೀದಾ ||ಗಗನ ಭೂಮಿಪ ಗತಿಪ್ರದ ದಶರಥ ಪಂಚಮೊಗನಾದಿ ಭುವನದೊಳಣುಗ ಮೊದಲಾದ ||ಜಗದಿ ಬಹು ತಾಪಸಿಗಳ ಭಾವದಿ | ಸಿಗದೆ ಮೋಹಾದಿಗಳ ಪಾಶದಿ ಮುಗದಿ ಕರಗಳ ಪೊಗಳುವರಿಗೆ | ಬಗೆ ಬಗೆಯ ಕಾಮಗಳ ಹರಿಸಿದ ೪
ಸ್ವಾಮಿ ಪುಷ್ಕರಣಿ ನಿವಾಸಾ | ನಾದಕಾಮಿತ ಪ್ರದನೆ ಲಕ್ಷ್ಮೀಶಾ ||ಧೀಮಂತ ಮಣಿ ದೀನ ಪೋಷಾ | ಎನ್ನಯ ಮರೆಯದಿರು ನಿನ್ನ ದಾಸಾ ||ಸಾಮಗಾಯನ ಲೋಲ ಸತತ ಸದ್ಗುಣ ಶೀಲಸಾಮಜ ವರದ ಮಹಾ ಮಹಿಮನೆ ಸಾರ್ವ ||ಭೌಮ ಭವ್ಯ ತ್ರಿಧಾಮ ಸಂತರ ಪ್ರೇಮ ಪೂರಣ ಕಾಮ ದಿವಿಜ ಲ-ಲಾಮ ಭೂಡÀರ ವ್ಯಾಸ ವಿಠಲ ಯಾಮ ಯಾಮಕೆ ಎನ್ನ ಪಾಲಿಸೋ ೫

 

ಕಲ್ಪಾದಿಯಲ್ಲಿ ವಿಷ್ಣು ವಟಪತ್ರಶಾಯಿಯಾಗಿ
೮೯
ಮರೆಯದಿರು ಮರೆಯದಿರು ಮಾರಮಣನೇ ಪ
ಗುರು ಸತ್ಯಬೋಧಾರ್ಯ ವರದ ರಘುರಾಮಾ ಅ.ಪ.
ವನ ವನಂಗಳ ತಿರುಗಿ | ಹಣ್ಣು ಹಂಪಲ ಮೆದ್ದುದಣುವಾದ ಪಾಡು ನಿನಗರಿಕಿಲ್ಲವೇ ||ದಿನ ದಿನದಿ ಚಿತ್ರ ವಿಚಿತ್ರ ಭೋಜ್ಯಗಳನ್ನುಕ್ಷಣ ಬಿಡದೆ ಕೈಕೊಂಬ | ಘನ ಗರ್ವದಿಂದೆನ್ನ೧
ನಾರ ವಸ್ತ್ರವನುಟ್ಟು | ತಲೆ ಜಡೆ ಗಟ್ಟಿದುದುತೋರದೇನೊ ನಿನ್ನ ಮನಸಿಗಿಂದೂ ||ಮೇರೆಯಿಲ್ಲದ ಪದಕ | ವಜ್ರ ಮಣಿ ಮಕುಟಗಳಭಾರವನು ನೀ ವಹಿಸಿ | ಬಹು ಬಿಂಕವನೆ ತಾಳೀ ೨
ಅರ್ಭಕನ ತೆರನಂತೆ | ದರ್ಭೆ ಹಾಸಿಕೆ ಮೇಲೆಗುಬ್ಬಿಯಂದದಿ ಮಲಗಿದುದು ಮರತೆಯಾ ||ಲಭ್ಯವಾದಾ ಹೇಮ ತೊಟ್ಟಿಲೊಳು ನೀ ಮಲಗಿಉಬ್ಬಿ ಓಲಗಗೊಂಬ ಉತ್ಸಾಹದಿಂದೆನ್ನ ೩
ಹೆಂಡತಿಯ ಕಳಕೊಂಡು | ಕಂಡ ಕಂಡವರಿಗೇಅಂಡಲಿದ ಮಾತುಗಳು ಅನಲೇತಕೇ ||ಮಂಡಿತಾದಾಭರಣ | ಮತ್ತೆ ಎಡದಲಿ ಸತಿಯುಕಂಡು ಸುಖ ಬಡುವಂಥ | ಕಳವಳಿಕೆಯಿಂದೆನ್ನ ೪
ಈಗಲೀ ಸತ್ಯಬೋಧರ ಬಳಿಯಲಿರಲಾಗಿನೀಗಿ ಹೋಯಿತೆ ನಿನ್ನ ಪಡಿಪಾಟಲೂ ||ಆಗೀಗಲೆನ್ನದೇ ಕ್ಷಣ ಬಿಡದೆ ಕೈಕೊಂಡು ವೈಭೋಗ ಬಡುವುದೂ ಮೊದಲಿಗಿದ್ದಿಲ್ಲ ೫
ನಮ್ಮ ಗುರುಗಳು ನಿಮಗೆ | ಈ ಪರೀಯುಪಚಾರಘಮ್ಮನೇ ಮಾಡಲೂ ಘನತೆಯಿಂದಾ ||ನಮ್ಮ ಸಾಕದೆ ಇನಿತು ದೂರ ಮಾಳ್ಪುದು ನಿನಗೆಧರ್ಮವಲ್ಲವೊ ಸ್ವಾಮಿ ದಯದದಿಂದ ನೋಡೆಮ್ಮ ೬
ಸಾಕಾರ ರೂಪ ಸರ್ವೋತ್ತಮನೆ ವೈಕುಂಠಬೇಕಾಗಲಿಲ್ಲ ಹೊಸ ಪರಿ ಭಾಗ್ಯವೂ ||ಯಾಕೆ ಭಕುತರ ಮಾತು ನಿರಾಕರಿಸಿ ಬಿಡುವುದೂಶ್ರೀಕಾಂತ ಎರಗುವೆ ವ್ಯಾಸ ವಿಠಲ ರೇಯಾ ೭

 

೯೩
ವೆಂಕಟಾಚಲ ವಾಸಾ | ವೇದಾಂತ ವೇದ್ಯಾತಂಕ ರಹಿತ ವಿಲಾಸಾ | ವಿಧಿ ಭವ ಸುರಾರ್ಚಿತಪಂಕಜಾಂಘ್ರಿ ಸುಪೋಷಾ | ಲಕ್ಷ್ಮೀ ನಿವಾಸಾ ಪ
ಶಂಖ ಚಕ್ರ ವರಾಭಯಕರ ಶ | ಶಾಂಕ ವದನ ಕಳಂಕ ರಹಿತನೆಕಿಂಕರನ ಅವಗುಣಗಳೆಣಿಸದೆ | ಪಂಕಜಜ ಪರಿಪಾಲಕನೆ ಶ್ರೀ ಅ.ಪ.
ಶ್ರೀ ರಮಣ ಶೃಂಗಾರಾ | ಶುಭ ಗುಣ ಭರಿತ ಭವತಾರಕನೆ ತಾತ್ಸಾರಾ | ಮಾಡದಲೆ ತವ ಪರಿಚಾರಕರ ವಿಸ್ತಾರಾ | ಸೇವೆಯನು ಪಾಲಿಸೊವಾರ ವಾರಕೆ ಧೀರಾ | ದೇವಕಿ ಕುಮಾರಾ ||ತಾರತಮ್ಯನುಸಾರ ತತ್ವ ವಿ | ಚಾರದಿಂದಲಿ ವಿವಿಧ ಮೋಹದಿಪಾರಗಾಣಿಸೊ ಪಾರ್ಥಸಾರಥಿ | ಭಾರ ನಿನ್ನದೊ ಭಕ್ತವತ್ಸಲ ||ಕೌರವಾಂತಕ ಕಾರುಣಿಕ ಪಂ | ಕೇರುಹೇಕ್ಷ ಪರಾವರಜ್ಞ ಮು-ರಾರಿ ಮುಕ್ತ ವಿಹಾರ ಮುನಿ ಪರಿ | ವಾರ ಮಾಮನೊಹಾರ ಮೂರುತಿ೧
ತಾಟಕಾಂತಕ ರಾಮಾ | ತಡಮಾಡದಲೆ ಶಶಿಜೂಟನುಳುಹಿದ ಪ್ರೇಮಾ | ಭವ ಸಾಗರದೊಳುಪಾಟು ಬಡುವೆನೊ ಕಾಮಾ | ಕ್ರೋಧಾದಿಗಳ ಆರಾಟ ಮಗ್ಗಿಸೊ ಸೋಮಾ | ಸತ್ಕುಲ ಲಲಾಮ ||ಹಾಟಕಾಂಬರ ಹನುಮವಂದ್ಯ ವಿ | ರಾಟ ಮೂರುತಿ ವಿಷ್ಣು ತುರಿಯ ಲಲಾಟಕೆಸೆದನ ಮನ್ನಿಸಿದ ಮಧು | ಕೈಟಭಾರಿ ಮಹಾಮಹಿಮ ಗುಣ ||ಕೂಟದಿಂದಲಿ ಜಗವ ನಿರ್ಮಿಸಿ | ಹಾಟಕೋದರ ಹರ ಪ್ರಮುಖ್ಯರನೀಟು ಸೂತ್ರದಿ ಈಟದಿಂದದಿ | ಚೂಟದಲಿ ಚೆಲ್ಲಾಟವಾಡಿದ ೨
ಜನನ ಮರಣ ವಿದೂರಾ | ಜಾನಕಿ ಮನೋಹರಪ್ರಣತ ಜನ ಮಂದಾರಾ | ಪ್ರಾಕೃತ ರಹಿತ ಚಿದ್ಘನ ಶರೀರ ಅಪಾರಾ | ಕರ್ಮಗಳಿಗೊಪ್ಪಿಸಿದಣಿಸುವರೆ ಯದುವೀರಾ | ಪರ ತತ್ವ ಸಾರಾ ||ವನಜ ಜಾಂಡಾ ವರೂಥಖಿಳ ಸ | ಜ್ಜನ ಶಿರೋಮಣಿ ಸಾತ್ವತಾಂಪತಿಮಣಿದು ಬೇಡುವರೊಡೆಯ ಮದ್ ಹೃದ್ | ವನಜ ದಿನಮಣಿ ದಿತಿಸುತಾಂತಕ ||ಜನುಮ ಜನ್ಮಾರ್ಚಿತ ಕಲುಷ ಕಾ | ನನವ ಖಂಡಿಸೊ ವ್ಯಾಸ ವಿಠ್ಠಲಮನ ವಚನ ಕಾಯದಲಿ ನಮಿಸುವೆ | ಘನ ಮಹಿಮ ಗಜವರದ ಸುಂದರ ೩

 

೯೭
ಸಂಸಾರವನು ಮಾಡಿ ಸಕಲ ಜನರೂ ಪ
ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ.
ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ ೧
ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ ೨
ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ ೩
ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ ೪
ಹೊರಗಿದ್ದ ಪದವಿ ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ ೫

 

೯೧
ಸತ್ಯ ಸಂಕಲ್ಪ ಸ್ವಾತಂತ್ರ ಸರ್ವೇಶ ಸರ್ವೋತ್ತಮನೆ ಸಾರ್ವಭೌಮಾ ಪ
ಭೃತ್ಯರಿಗೆ ಬಂದ ಪರಿಪರಿ ಭಯಗಳನೆ ಕಳೆದುನಿತ್ಯದಲಿ ಕಾಯ್ವ ಸ್ವಾಮೀ ಪ್ರೇಮೀ ಅ.ಪ.
ಆವ ಜನುಮದ ಫಲವೊ | ಆವ ಕ್ರಿಯಗಳಿಂದಆವ ಸಾಧನದ ಬಗೆಯೋ ||ಆವುದಿಂದಾವುದಕೆ ಘಟನೆಯನು ಮಾಳ್ಪೆಯೊಆವುದೊ ನಿನ್ನಾಟವೋ ||ಆವ ಪರಿಯಿಂದಲ್ಲಿ ಜೀವಿಗಳ ಸಲಹುವಿಯೊಆವ ನಿನ್ನಾಧೀನವೋ |ದೇವ ದೇವೇಶ ನಿನ್ನ | ಭಾವ ಬಲ್ಲವರಾರೊಭಾವಜನ ಪಿತ ಕೃಪಾಳೊ | ಕೇಳೋ ೧
ತ್ರಿಪದ ತೈಜಸ ಪ್ರಾಜ್ಞ ವಿಶ್ವರೂಪಗಳಿಂದಸ್ವಪ್ನ ಕಾಲದಲಿ ನೀನೂ ||ಸುಪರ್ವಾಣ ದೈತ್ಯರ ಸೃಜಿಸಿ ಮನೆಯನು ಮಾಡಿಅಪರಿಮಿತ ಕಾರ್ಯಗಳನೂ |ಸುಫಲ ದುಷ್ಕರ್ಮಗಳ ತೋರಿಸೀ ಜೀವಕ್ಕೆಕ್ಲುಪುತವಾಗಿದ್ದವೆಲ್ಲಾ |ಕೃಪೆಯಿಂದ ತೋರಿ ಬದಾಪತ್ತುಗಳ ಕಳೆವಅಪರಿಮಿತ ಸಾಗರಾ | ಶೂರಾ ೨
ಎನ್ನಂಥ ಪಾಪಿಷ್ಠರಿನ್ನಿಲ್ಲ ಧರೆಯೊಳಗೆ ನಿನ್ನಂಥ ಕರುಣಿಯಿಲ್ಲಾ ||ಚೆನ್ನಗುರು ವಿಜಯರಾಯರ ಪೊಂದಿದವನೆಂದೂಮನ್ನಿಸಿ ಸಲಹಬೇಕೋ |ಘನ್ನ ಸಂಸಾರದೊಳು ಬವಣೆ ಬಂದಟ್ಟಿದರುನಿನ್ನ ಸ್ರ‍ಮತಿಯೊಂದು ಬರಲೀ |ಸನ್ನುತಾಂಗಿಯ ರಮಣ ವ್ಯಾಸವಿಠಲ ಮಧ್ವಮುನಿಗೊಲಿದೆ ಉಡುಪಿವಾಸಾ | ಶ್ರೀಶಾ ೩

 

೧೦೨
ಸೂತ್ರನಾಮಕ | ಸುಂದರನೇಕ | ಸೂತ್ರನಾಮಕ ಪ
ಸೂತ್ರನಾಮಕ ಸತ್ಪಾತ್ರ ಗರಡ ಶಿಖಿನೇತ್ರ ವಿನುತ ಶುಭಗಾತ್ರ ಪವಿತ್ರ ಅ.ಪ.
ರಾಮಪದ ಭೃಂಗಾ | ರಾವಣ ಮದಭಂಗ | ಗಜಸಿಂಗಾತಾಮಸ ಕುಲಕೆ ನೀ ಧೂಮಕೇತು ಬುಧಸೌಮನಸಾಗ್ರಣಿ ಕಾಮಿತ ಫಲದಾ ೧
ಪಾಂಡುನಂದನಾ | ಪಾಲಿಸು ಯನ್ನಾ | ಖಂಡ ಪಾವನಾಅಂಡಜಾಧಿಪನ ಕಂಡು ಭಜಿಸಿ ದೋ-ರ್ದಂಡ ಖಳ ಕುಲ ಚಂಡ ಪ್ರಚಂಡಾ ೨
ಜ್ಞಾನದಾಯಕಾ | ಆನಂದತೀರ್ಥ | ದೀನ ಪೋಷಕಭಾನುಕೋಟಿ ತೇಜ ವ್ಯಾಸ ವಿಠಲನಧ್ಯಾನದೊಳಿಹ ಮಮ ಮಾನಸ ಹಂಸಾ ೩

 

೯೬
ಹ್ಯಾಂಗೆ ನಿಮ್ಮ ಚರಣಾ | ಕಾಂಬೆನೊಯೋಗಿ ಜನರ ಶರಣಾ ಪ
ನಾಗಶಯನ ಭವಸಾಗರ ಮಮತೆಯನೀಗಿ ನಿರುತ ಅನುರಾಗದಿಂದ ಪೊರೆ ಅ.ಪ.
ವ್ಯರ್ಥವಾಯಿತಲ್ಲಾ | ಜನ್ಮವು | ಸಾರ್ಥಕಾಗಲಿಲ್ಲಾಮುಕ್ತಿ ಬಯಸಲಿಲ್ಲಾ | ಜ್ಞಾನ ವಿ | ರಕ್ತಿಯು ಮೊದಲಿಲ್ಲಎತ್ತ ತಿಳಿಯದೇ ಸುತ್ತಿ ಭವದೊಳುನ್ಮತ್ತ ನಡತೆಯಲಿ ಹೊತ್ತು ಕಳೆದ ಪೊರೆ ೧
ಮಾಯ ಬಿಡದು ಹರಿಯೇ | ಮುಂದೆ ಉಪಾಯವೇನು ದೊರೆಯೇ ||ಧೇಯ ನಿಮ್ಮನು ಮರೆಯೇ | ಅನ್ಯ ಸಹಾಯವು ನಾನರಿಯೇ ||ಕಾಯಜ ಪಿತ ಕಮಲಾಯತ ಲೋಚನಮಾಯವ ಬಿಡಿಸಯ್ಯ ನ್ಯಾಯದಿಂದ ಹರಿ ೨
ಸಾಕು ಭವದ ಸಂಗಾ | ಗರ್ಭದೊಳ್ಹಾಕದಿರೆಲೊ ರಂಗಾ ||ಶ್ರೀಕರ ಉತ್ತುಂಗ | ಕರುಣಿಸಬೇಕು ಕೃಪಾ ಪಾಂಗಾ ||ಧಿಕ್ಕರಿಸುವದಿನ್ಯಾಕೆ ಪೇಳುವೆ ಕರುಣಾಕರ ಎನ ವಾಕು ಪಾಲಿಸೊ ಹರೆ ೩
ಎಲ್ಲಿ ನೋಡಲು ನಿನ್ನಾ | ಸರಿಇಲ್ಲ ಕೇಳು ಚೆನ್ನಾ ||ಫುಲ್ಲನಾಭನೆ ಎನ್ನಾ | ಕಾಯಿದುಎಲ್ಲಿ ನೋಡಲು ದಯ ಸಲ್ಲಿಸಿ ಎನ್ನಯಸೊಲ್ಲು ಲಾಲಿಪುದು ಮಲ್ಲಮರ್ದನ ಕೃಷ್ಣ ೪
ವ್ಯಾಸವಿಠಲರಾಯಾ | ಮನದಭಿಲಾಷೆ ಸಲ್ಲಿಸಯ್ಯಾ ||ದಾಸನೆಂದು ಕಯ್ಯಾ | ಪಿಡಿದುಪೋಷಿಸುವುದು ಪ್ರೀಯಾ ||ಶ್ರೀಶನೆಂದು ನಿನ್ನ ಸೇರಿದೆನೋ ಪರದೇಶಿಯೆಂದು ಉದಾಸೀನ ಮಾಡದೆ ೫

 

೧೧೧
ಶ್ರೀಲಕ್ಷೀದೇವಿಯ ಸ್ತೋತ್ರ
ಧ್ರುವತಾಳ
ಚಿತ್ತ ಚಂಚಲಿಸದೆ ಚೆನ್ನಾಗಿ ನಿಂದೆ ಶ್ರೀಸತ್ಯಬೋಧಾರ್ಯರಲ್ಲಿ ಶ್ರೀ ಲಕ್ಷೀಯುಅತ್ಯಂತ ಅಜಭವ ರುದ್ರ ಇಂದ್ರಾದಿಗಳಒತ್ತಿಯಾಳುವಂಥ ವಾರಿಜ ಸದನೆಪೃಥಿವಿಯೊಳಗೆ ನಿನಗೆ ಪ್ರತಿ ಕಕ್ಷಿಗಳಿವರೆಂದುಮತ್ತೆ ನೀ ಸೋತು ನಿಂತೆ ಮಾತಾಡಮ್ಮಾ ನೈ-ಮಿತ್ಯ ಮಹಾ ಪ್ರಳಯದಲ್ಲಿದೆ ಹರಿಯ ಪೂಜೆಅತ್ಯಂತವಾಗಿ ಮಾಡಿ ಧನ್ಯಳಾದೆ ಇಲ್ಲಿನಿಂತು ಮುನಿಪ ದಿನ ದಿನ ರಾತ್ರಿಯಲ್ಲಿಯೆಚ್ಚತ್ತು ಪೂಜಿಸುವಂಥ ಬೆಡಗು ನೋಡಿಎತ್ತ ಮರುಳಾಗಿ ಬಂದೆ ವರದಿ ಭಯದಿ ಇರುವ ವಶವಾದ್ಯೋಉತ್ತರ ಇದಕ್ಕೊಂದು ತಿಳಿಸಬೇಕುಹತ್ತಾವತಾರ ನಮ್ಮ ವ್ಯಾಸವಿಠಲನ್ನ ಪಾ-ಡುತ್ತ ಸುಖಿಸುವಂಥ ಪಾವನಚರಿತಳೆ ೧
ಮಟ್ಟತಾಳ
ಜಲಜನಾಭಗೆ ನೀನು ಸಲಿಗೆ ಬಿನ್ನೈಸಿದೆಹಲವು ಬಗೆಯಿಂದ ಸ್ಥಿತಿಕಾಲದಿ ನಿನಗೆಕುಳಿತಿರಲಿಂಬಿರದೆ ದೇವತೆಗಳ ಸರಿ ತಾಬಲು ಬಗೆಯಲ್ಲಿ ಜಗದ ವ್ಯಾಪಾರವು ನಿನಗೆನೆಲೆ ಇಲ್ಲವು ನೋಡೆ ಇದರಿಂದಲಿ ನಿನ್ನಸಲೆ ಸಂಪೂಜೆ ನಿಚ್ಚಳ ಮುಗಿಯದು ಎಂದುಪ್ರಳಯದಿ ನೀನೆ ಸೇವೆ ಪಾಲಿಸಲಿಲ್ಲೆಂದು ಬೇಡೆನೆಲೆಯಾಗಿ ನಿನಗೆ ವರವಿತ್ತನು ನೋಡಾಬಲಿಮರ್ದನ ನಮ್ಮ ವ್ಯಾಸವಿಠ್ಠಲನ್ನಘಳಿಗೆ ಬಿಡದೆಯಿಪ್ಪ ಬಲವಂತಳೆ ಕೇಳು ೨
ತ್ರಿವಿಡಿತಾಳ
ಸಾಧನ ಲೋಭದಿ ಶ್ರೀ ಸತ್ಯಬೋಧರುಆದಿಯಿಂದ ಹೇಗೆ ಬಿನ್ನೈಸಿದರು ಭೂ ದೇವ ಜನು-ಮದಿ ಹಗಲು ಸ್ನಾನ ಜಪ ಆದಿ ವ್ಯಾಖ್ಯಾನ ಕಾರಣದಲ್ಲಿಸಾಧಿಸಿದರು ಮನಕೆ ಸಾಲದೆನಿಸಿ ಯಲ್ಲೆಮೋದ ಮನಸಿಲಿ ಹರಿಯ ಪೂಜಿಪೆನೆಂದು ”ಸತ್ಯ ಬೋಧಾ ನಿದ್ರೆಯಾ ನಿದ್ರೆ ಆಹಾರ ರಾಗತಃ ಪ್ರಾಪ್ತಿ’’ಯಾದದೆ ನಿಜವೆಂದು ನೀ ಕರಿಸೆಶ್ರೀದೇವಿ ನಿನ್ನ ಕೂಡ ಸೆಣಿಸಲು ಮನದೆಗಿ-ಯದೆ ನಿಂತ್ಯೋ ಹೇಗೋ ವ್ಯಾಸವಿಠ್ಠಲನ ರಾಣಿ ೩
ಅಟ್ಟತಾಳ
ಆ ಮಹಾ ಪ್ರಳಯದಿ ಬ್ರಹ್ಮಾದಿಗಳ ಕಾರ್ಯಒಮ್ಮಿಗು ಕೊಳದಂತೆ ಹರಿ ಉದರದೊಳಿಟ್ಟುಈ ಮಹಾ ಮುನಿಗಳು ಹಿಮ್ಮಟ್ಟಿ ಅಂಜದೆಅಮ್ಮನೊ ವೃತ್ಯಾಭಿಮಾನಿ ದೇವತೆಗಳಘಮ್ಮನೆ ಕರುಣಾಭಿಮಾನಿ ದಿವಿಜರನೆಲ್ಲತಮ್ಮ ಸ್ಥಾನದಲ್ಲಿ ಸುಮ್ಮನೆ ಇರಪೇಳಿಘಮ್ಮನೆ ಚಿನ್ಮನಸಿನ ಕಾರ್ಯ ಪ್ರಾಚುರ್ಯಆ ಮಹಾಮಹಿಮನ ಅರ್ಚಿಪರು ಅನುಪಮ ಮೂರುತಿ ನಮ್ಮ ವ್ಯಾಸವಿಠಲನ್ನಸಮಾನವೆನಿಪಳೆ ಸಾಕು ನಿನ್ನ ಬರಿದು ೪
ಆದಿತಾಳ
ಮತ್ತೆ ಜಲ ಭೂಮಿ ಬಗೆ ಬಗೆ ವಸ್ತುಗಳಿಂದ ಹರಿಯಜತ್ತಾಗಿ ಪೂಜಿಸಿದೆನೆಂಬೊ ಗರ್ವವೆ ಬೇಡ ಮತ್ತೆ ನಮ್ಮ ಗುರುಗಳು ವಾಸನಮಯದಿಂದ ಮುತ್ತು ಮಾಣಿಕ ರಜತ ಹೇಮ ಚಾಮರ ನವರತ್ನಖಚಿತವಾದ ಮಂಟಪ ಕುಸುಮಗಳುಛತ್ರ ಪರಿಮಳ ಭೋಜನಗಳು ನಿತ್ಯ ಈ ಬಗೆ ನಿರ್ಮಿಸಿಇತ್ತ ಇದರ ವಿನಃ ಬಾಹ್ಯ ಪೂಜೋಪಸ್ಕಾರ ವಸ್ತ್ರಾಭರಣವಿತ್ತು ನಿತ್ಯ ಎಲ್ಲ ಪರಿ ಇತ್ತಂಡವಾಗಿ ಹರಿಯಾರಾಧನೆ ಮಾಡಿದರುಯತ್ನವಿಂದು ಕೊಳ್ಳದು ಏನು ಮಾಡಲೆಂದು ಇವರಚಿತ್ತವನುಸರಿಸಿ ತಿದ್ದಿಕೊಂಡ ಬಗೆಯೊ ದೂ- ರತ್ತ ಪೋದರೆ ಮತ್ತಿನೇನಾಹದೆಂಬೋ ಚಿಂತ್ಯೋಸತ್ಯಭೋಧರ ದಿವ್ಯ ಭಕ್ತಿಗೊಲಿದು ನಿಂದ್ಯೊ ಕೃತ್ಯಮತ್ತೊಂದು ಬಿಡದೆ ಎನಗೆ ತೋರುವುದು ಪ್ರೀತಿಲಿಹತ್ತಿಲಿರುವುದು ನಿಗಮ ಸಮ್ಮತವೆಂಬೊ ಬಗೆಯೊಭೃತ್ಯವತ್ಸಲ ನಮ್ಮ ವ್ಯಾಸವಿಠ್ಠಲನ್ನಅತ್ಯಂತ ಪ್ರಿಯಳೆ ಅನುವಾಗಿ ತಿಳಿಸಬೇಕು ೫
ಜತೆ
ಆವ ಬಗೆಯಲಿ ನಿನ್ನ ಭಕ್ತರ ಬಿಡದಿಪ್ಪಭಾವ ನಿನ್ನದೆ ನಿಜವು ವ್ಯಾಸವಿಠಲನ ರಾಣಿ ||

 

೧೦೯
(ಸೃಷ್ಟಿ ವಿವರ, ತ್ರಿವಿಧ, ಜಡಚೇತನ ಲಕ್ಷಣ ವಿಚಾರ)
ಧ್ರುವತಾಳ
ತೊಲಗಿ ಪೋಗುವದಲ್ಲ ತೋಂಡನಾದ ಕಾಲಕ್ಕುಜಲಜ ಸಂಭವನು ಅನಾದಿಯಿಂದನೆಲೆಯಾಗಿ ಮಾಡಿದ ಸಂಕಲ್ಪವೆಂದಿಗುತಲೆದೂಗಿದರೆ ತಪ್ಪಲರಿಯದಿದಕೋಕಾಲ ಕಾಲಕ್ಕೆ ತಿಳಿಯದ ಕಠಿಣವಾದ ಮೋಹಬಲೆಯೊಳು ಸಿಗಬಿದ್ದು ಭ್ರಮಣನಾಗಿತಿಲ ಮಾತುರ ದುಃಖ ಅನುಭವವಲ್ಲೆಂದುಹಲವು ಸೌಖ್ಯಂಗಳ ಹಂಬಲಿಸಿಹಲುಬಿ ಹಲುಬಿ ನಿತ್ಯ ತಳಮಳಗೊಂಡರಾಗೆಫಲವಿಲ್ಲ ಫಲವಿಲ್ಲ ನಿಜವಾಹದುಬಲು ಮೂಢತನವುಳ್ಳ ಬಾಲಭಾವದ ಚಂ-ಚಲ ಬುದ್ಧಿಯನ್ನೆ ಬಿಟ್ಟು ಚತುರನಾಗಿತಿಳಿವ ಮಾರ್ಗವೆ ಕೇಳು ತೀವ್ರದಿಂದಲಿ ನಿ-ರ್ಮಳ ಪರಿಚ್ಛೇದದಲ್ಲಿ ನಿಲ್ಲಿಸಿಹ ಮನವೆಬಲವಂತಳಾಗಿದ್ದ ಸಿರಿ ಬೊಮ್ಮ ಜೀವ ಜಡಮಿಳಿತವಾಗಿದ್ದ ಜಗವೆ ಚಿದ ಚಿದಾತ್ಮಕವೆಂದುಪೊಳೆಯುತ್ತಲಿದೆ ಬಲ್ಲ ಜ್ಞಾನಿಗಳಿಗೆಜಲಧಾರಾ ವರ್ನ ನಮ್ಮ ವ್ಯಾಸವಿಠಲನಂಘ್ರಿನಿಲಿಸಿ ನಿನ್ನೊಳು ಮುಂದೆ ತಿಳಿಯೊ ಇದರ ವಿವರ ೧
ಮಟ್ಟತಾಳ
ದ್ವಿವಿಧಾತ್ಮಕವಾದ ಜಗವು ನಾಲ್ಕು ಬಗೆವಿವರದಲ್ಲಿಪ್ಪದು ಪ್ರಾಕೃತ ಅಪ್ರಾಕೃತ ವೈಕೃತತ್ರಿವಿಧವು ಅತಿಸ್ಥೂಲ ವೈಕೃತವೆಂದು ಸಂಭವಿಸಿಪ್ಪ ದುಗಡಾ ಒಂದು ಮಾತುರ ಬಿಟ್ಟುತವಕದಿನೀಕ್ಷಿಸಲು ಒಂದಕ್ಕೆ ಒಂದಧಿಕದ್ವಿವಿಧವು ಸರಿ ಎನ್ನು ಅನುಮಾನವೆ ಸಲ್ಲಾಪವನನಂತರಯಾಮಿ ವ್ಯಾಸವಿಠಲ ಇಂತುನವ ನವ ಕೃತ್ಯವನು ಮಾಡುವನೆಂದರಿಯೊ೨
ತ್ರಿವಿಡಿತಾಳ
ವರ್ಣಾತ್ಮಕವಾದ ವೇದ ದೇಶ ಕಾಲಪರಮಾಣು ಪುಂಜ ಪ್ರಕೃತಿಯೆ ನಾಲ್ಕು ಬಗೆಕರಿಸಿಕೊಳುತಲಿವೆ ಪ್ರಾಕೃತ ನಾಮದಲಿ ಚ-ತುರ ಪದಾರ್ಥಂಗಳು ಚಿರಕಾಲದಿಪರಿಮಿತ ತೊರದು ಬ್ರಹ್ಮಾದ್ಯರಿಗೆ ಅ-ಪರಿಚ್ಛಿನ್ನವಹದು ಆಗಮ ವಾಕ್ಯವೆ ಸಿದ್ಧಾಪರಿಯ ಕೇಳಿದು ಒಂದರಂತೆ ಒಂದಲ್ಲ ಮುಂ-ದರಿಯೊ ವಿಕಾರವು ಎಂದಿಗಾದರು ಚಿರ ಪದಾರ್ಥಂಗಳು ಚಿನ್ಮಯ ಹರಿಯಿಂದಸರಿಯಿಂತು ಜಡದ ವಿಚಾರವೆನ್ನುಮರಳೆ ಮನವೆ ಕೇಳು ನಿತ್ಯ ಮುಕ್ತಳುಭರಿತಳಾಗಿ ಹರಿಯ ಧೇನಿಸುತ್ತಸ್ಥಿರವಾಗಿ ಇಪ್ಪಳು ಇವುಗಳಲಿ ಸಿದ್ಧಾಅರಿಯಲಾಗದು ಇತರ ಜಡ ಚೇತನಗಳಲ್ಲಿಮರಿಯಲಾಗದು ಚತುರ ಬಗೆ ತತಿ ಜಗದೊಳುಸರಿಯಿಂತು ಪ್ರಕೃತಿಯು ಚೇತನಾಚೇತನಪರಮ ಪುರುಷ ವ್ಯಾಸವಿಠಲನಂಘ್ರಿಗೆಎರಗಿ ತಿಳಿಯೊ ಪ್ರಾಕೃತದ ವಿಚಾರ ೩
ಅಟ್ಟತಾಳ
ಸಾದಿ ಗುಣತ್ರಯ ಮಹದಾಹಂಕಾರವುಮೋದದಿಂದಲಿ ಮನ ಗಗನಾದಿ ಪಂಚವುಅದೆ ಸರಿ ಆವರ್ಣ ಭೇದದಿಂದ ಶೋಧಿಸೊಬುಧರೊಳು ಪ್ರಕೃತಿ ಭಾಗಗಳೆಲ್ಲಭೇದಿಸಿಪ್ಪವು ನಿತ್ಯವಹುದು ನಾಶವಿಲ್ಲಸಾಧಿಸಿ ತಿಳಿ ಮುಂದೆ ಚೇತನದ ವಿಚಾರವೇದಗರ್ಭನಿಂದ ಶನಿ ಪರಿಯಂತ ವಿ-ವಾದವಿಲ್ಲದೆ ದೇವತಿಗಳಿಗಿಪ್ಪರು ಎನ್ನುಈ ದೇವತಿಗಳ ಅಂಶಗಳು ವಿಚಾರಗಳುಕ್ರೋಧ ಮೋಹಗಳಿಲ್ಲ ಅಸುರಾವೇಶವಿಲ್ಲಸಾಧನಕೆ ಜ್ಞಾನ ತಿರೋಹಿತಯಿಲ್ಲಆದರಿಸಿ ನೋಡ ಪ್ರಾಕೃತ ಜಡ ಚೇತ-ನದ ಸ್ಥಿತಿಯು ಇಂತು ಇತರ ಜೀವರು ಇಲ್ಲವಾದವಿಲ್ಲ ವಿಕೃತ ಇದರಂತೆ ಸಿದ್ಧ ವಿ-ನೋದದಿಂದಲಿ ಜಡವಧಿಕ ಉಭಯದಲ್ಲಿಬೋಧ ಮೂರುತಿ ನಮ್ಮ ವ್ಯಾಸವಿಠಲ ಜಗ-ದ್ವೇದನೆಂದು ನಂಬು ಮುಕ್ತಿಲಿ ಇಂಬು ೪
ಆದಿತಾಳ
ಕೇಳು ವೈಕೃತದೊಳಗೆ ಪಿಂತೆ ಪೇಳಿದವೆಲ್ಲಸಾಲಾಗಿ ಬಂದಿವೆ ಜಡ ಚೇತನಗಳಿಲ್ಲಿಗೆಶ್ರೀ ಲಕುಮಿ ದೇವಾಂಶಿಗಳು ಮೇಲೆ ತ್ರಿವಿಧ ಜಡವುಸ್ಥೂಲ ಜಡ ಜೀವರಲ್ಲಿ ಮಿಳಿತವಾಗಿಪ್ಪವುಹೇಳುವೆ ಇದರ ವಿನಹಾ ಇತರ ಮುಕ್ತಿ ಯೋಗ್ಯರುಖೂಳ ಜನರು ನಿತ್ಯ ಸಂಸಾರಿಗಳು ಇಂತುಆಲಸವಿಲ್ಲದೆ ಸಿದ್ಧವಾಯಿತು ವೈಕೃತ ಲಾಲಿಸು ಜಡ ಚೇತನ ಇವೆ ಸಿದ್ಧ ಇನ್ನೊಂದಿಲ್ಲಪಾಲಸಾಗರ ಶಾಯಿ ವ್ಯಾಸವಿಠ್ಠಲನ ಪಾದ-ವೆಲ್ಲವಿಂತು ಭಜಿಸಿ ಕೇಳು ಯೋಚನೆ ಬಿಡು ೫
ಜತೆ
ನಿತ್ಯಾ ನಿತ್ಯಗಳಲ್ಲಿ ನಿಸ್ಸಾರ ಸಾರವಅತ್ಯಂತದಲಿ ತಿಳಿದು ವ್ಯಾಸ ವಿಠ್ಠಲನ್ನ ಭಜಿಸು ||

 

೧೧೦
ಧ್ರುವತಾಳ
ಶ್ರೀಯರಸನೆ ಶೃಂಗಾರ ಗುಣಾಂಬುಧಿಮಾಯವರ್ಜಿತ ಮದನಕೋಟಿ ತೇಜತೋಯಜ ನಯನ ಸರ್ವ ಜಗದಂತರ್ಯಾಮಿ ಸುರ-ಗೇಯ ಜ್ಞಾನಾನಂದ ಕಾಯ ಕರುಣಿಹೇಯೋಪಾದೇಯ ರಹಿತ ಹೆಂಗಳ ಮೊರೆಯ ಕೇಳಿಕಾಯಿದ ಮಹಿಮ ಕಂಬು ಚಕ್ರಾಂಕಿತಆಯಾಸ ವರ್ಜಿತ ಅಜಭವಾದಿಗಳಿಗೆಸಾಯುಜ್ಯವಿತ್ತು ಸರ್ವ ಕಾಲದಲ್ಲಿನ್ಯಾಯದಿಂದಲಿ ಸ್ವಸ್ವಾನಂದವನುಣಿಸುತಪ್ರೀಯನೆಂದೆನಿಸುವ ಪ್ರೀತಿವಂತಾಓಯೆಂದು ಕೂಗಿ ನಿನಗೆ ಮಾತುಉಸುರುವೆ ಎಮ್ಮ ಗುರುರಾಯರಂತರಿಯಾಮಿ ರಘುನಂದನಹೇಯ ಕರ್ಮಗಳೆಂಬೊ ಹೆಬ್ಬುಲಿ ಬಲಿಗೆ ಸಿಲುಕಿಬಾಯ ಬಿಡುವೆನೊ ಸ್ವಾಮಿ ಭಕುತರೊಡಿಯಾಈಯವನಿಯೊಳಗೆ ಇದರಿಂದ ಉಳಿವ ಅನ್ಯೋ-ಪಾಯವೆಂಬೋದು ಕಾಣೆ ನಿನ್ನ ವಿನಃತಾಯಿ ತನ್ನ ಶಿಶುವು ತನಗೆ ಹರುಷವೆಂದುವಾಯು ಸಖ ತುಡಿಕೆ ನೋಡುವಳೆನ್ಯಾಯವೆ ಜಗದೊಳಗೆ ಅನಂತತಾಯಿಯಂದದಲಿಪ್ಪ ತಮ ವರ್ಜಿತಾಕಾಯಬೇಕೆನ್ನ ಕರ್ಮ ಕೆಳೆಗ್ಯಾದಿಗೆ ಸಾ-ಹಾಯವಾಗಿಪ್ಪ ಸತತ ನಿರ್ವಿಕಾರಪೇಯಪನನುಜ ನಮ್ಮ ವ್ಯಾಸವಿಠ್ಠಲ ಮುನಿಗೇಯ ಮುಕ್ತಾಶ್ರಯ ಮುಚಕುಂದ ವರದಾ ೧
ಧ್ರುವತಾಳ
ಸಾಧನವಾವುದೊ ಸರ್ವ ಕಾಲದಲ್ಲಿಭೂದೇವಿ ರಮಣ ಭೂತಿವಂತ ಕೃಷ್ಣಮೇದಿನಿಯೊಳು ಪುಟ್ಟ ಮಿತಿಯಿಲ್ಲದ ಪಾಪಹಾದಿಯ ಪಿಡಿದು ಕೆಟ್ಟೆ ಹರಿಯೆ ಕೇಳೊಕ್ರೋಧ ಮೋಹ ಲೇಶ ಕೊರತೆ ಎಂಬುದು ಕಾಣೆಪಾದುಕ ಬಿಟ್ಟು ನಡೆದ ಪರಿಯಂತವೊಬಾಧೆ ಬಡುವೆನಯ್ಯ ಭವದೊಳು ಸಿಗಬಿದ್ದುಏ ದಯಾನಿಧಿಯೆ ಯದುಕುಲ ನಂದನಭೂದೇವ ತತಿಗಳಿಗೆ ಭಕುತಿಯಿಂದಲಿ ಅವರಪಾದಕೆ ಎರಗಿ ಪರಿ ಪರಿ ಸ್ತೋತ್ರವಮೋದದಿಂದಲಿ ಮಾಡಿ ಮೋಕ್ಷ ಮಾರ್ಗವ ಬೇಡದಾದೆ ಬಿಂಕವ ತಾಳಿ ಬಿರಿದಾಂಕನೆಸಾಧಿಸಿಕೊಂಡೆ ನಿರಯದಲ್ಲಿ ಕಷ್ಟಪಡುವ ಸಾಧನದ ಬಗೆಯನ್ನು ಸಂತೋಷದಿಆದರದಿಂದಲಿ ಆಪ್ತ ನೀನಾಗಿ ಪೂರ್ಣಬೋಧರ ಮತದಲ್ಲಿ ಪೊಂದಿಸಿರಲುಓದನದ ವಿದ್ಯವನ್ನು ಒಲಿಸುತ್ತ ಎನ್ನೊಳಗೆಕಾದುವೆ ಜನರ ಕೂಡ ಕಠಿಣದಲ್ಲಿಸಾಧು ಜನರ ವಚನ ಸರ್ವದಾ ಕೇಳಿ ಅನುಮೋದನ ಮಾಡದಲೆ ಮದದಿಂದಲಿವೇದ ಶಾಸ್ತ್ರವನೋಡಿ ವೈಜ್ಯದಿಂದಲಿಗಾದಿ ಮಜ್ಜನಗೈದೆ ಗರ್ವದಲ್ಲಿಆದಿ ಮೂರುತಿ ನಮ್ಮ ವ್ಯಾಸವಿಠಲ ಪಂಚಭೇದ ಮಾರ್ಗವ ಕಾಣದಾದೆ ಕರುಣಿ ೧
ಮಟ್ಟತಾಳ
ಶಬ್ದಾದಿ ವಿಷಯ ಅಬ್ಧಿಯೊಳಗೆ ಮಹಾಹಬ್ಬಿದ ಕರಣಗಳು ದೊಬ್ಬಿ ದುಃಖ ಬಡುವ ಅಬ್ಬರವೇನೆಂಬೆ ಅನುಪಮ ಚರಿತನೆಹೆಬ್ಬುಲಿ ಎಂತಿಪ್ಪ ಹೆಚ್ಚಿದಹಂಕಾರದುರ್ಭಾಗ್ಯನ ಮಾಡಿ ದುಃಖದೊಳಿಡುವದುಕರ್ಬುರರ ಕಾಟ ಕಡಿಮೆಯೆಂಬುದೆಯಿಲ್ಲಾಅರ್ಬುದ ಜನ್ಮಕ್ಕೆ ಆರನಾ ಕಾಣದಾಅರ್ಭಕ ನಾನಯ್ಯ ಅನಿಮಿತ್ಯ ಬಂಧುಮಬ್ಬು ಕವಿಸದಿರು ಮನಸಿಜನಯ್ಯನೆಶಬ್ದಗೋಚರನೆ ವ್ಯಾಸವಿಠ್ಠಲ ದು-ಗ್ಧಾಬ್ಧಿಜ ಪತಿಯೆ ಪಾಪಭ್ರಾನಿಲನೆ ೨
ತ್ರಿವಿಡಿತಾಳ
ದಾಮೋದರನಂತ ದಶರಥನಂದನರಾಮ ರಾಜ ತೇಜ ರಾಜೀವ ನಯನಮಾ ಮನೋಹರ ಮಧುಸೂದನ ನಿಜಭಕ್ತಸ್ತೋಮ ಪಾಲಕ ಪಾರತಂತ್ರ ರಹಿತಾವ್ಯೋಮಕೇಶನೊಡಿಯ ವ್ಯಾಪ್ತ ಮೂರ್ತಿ ಪೂರ್ಣಧಾಮ ಧಾರಕ ದೈತ್ಯ ಕುಲ ನಾಶನಸಾಮಜವರದ ಸಾಕಾರ ಸಾತ್ವಿಕ ಲ-ಲಾಮ ಲಕ್ಷಣವಂತ ಲಕ್ಷೀಕಾಂತಾಕಾಮಿತ ಜನ ಚಿಂತಾಮಣಿ ರಣರಂಗಭೀಮ ಭಯಂಕರ ಭೀತಿರಹಿತಾಭೂಮಿ ಭಾರಕ ದೈತ್ಯಾ ರಾಮ ಕುಠಾರ ಸುಖ ದುಃ-ಖಾಂಬುಧಿ ಸೂರ್ಯ ಕೋಟಿ ಪ್ರಕಾಶನೇಮವಿಲ್ಲದೆ ನಿನ್ನ ನಾಮಗಳನಂತಈ ಮಹಿಯೊಳಗುಂಟು ಈಶನೊಡಿಯಯಾಮ ಯಾಮಕೆ ಎನಗೆ ಎಲ್ಲಿದ್ದ ಕಾಲಕ್ಕುಸ್ವಾಮಿ ಪಾಲಿಸಬೇಕು ಜಿಹ್ವಾಗ್ರದಿಈ ಮಹಾ ಕಲಿಯುಗದೊಳಗಿಂಬಾವದು ಪಾಪಸ್ತೋಮ ಬತ್ತಿಸಿ ಮುಂದೆ ಗತಿ ಮಾರ್ಗಕ್ಕೆಶಾಮಸುಂದರ ಕಾಯಾ ವ್ಯಾಸವಿಠಲ ಕಾಯೊಪಾಮರ ಮನುಜನ್ನ ಪತಿತ ಪಾವನನೆ ೩
ಅಟ್ಟತಾಳ
ಶತಕಲ್ಪವಾದರು ಇತರಾಲೋಚನೆಯಿಲ್ಲಾಮತಿಹೀನ ಜನರಿಗೆ ಯತನದಿಂದಲಿ ನೋಡೆಕ್ಷಿತಿ ಸುರ ಜನ್ಮ ವಿಹಿತವಾಗಿ ಬಂದರುಶ್ರುತಿ ಪುರಾಣಗಳಲ್ಲಿ ಚತುರನಾಗಿದ್ದರುಕ್ರತು ಮೊದಲಾದದ್ದು ವ್ರತಗಳಾಚರಿಸಲುಮತಿವಂತ ಜನರಿಗೆ ನತನಾಗಿ ಇದ್ದರುರತುನಾದಿ ಧನಗಳು ಮಿತಿಯಿಲ್ಲದಿತ್ತರುಸ್ವತಯೇವ ನಿತ್ಯ ಸದ್ಗತಿಗೆ ಕಾರಣನಲ್ಲಶತಧೃತಿ ಪಿತ ನಿನ್ನ ಹಿತವಾದ ನಾಮ ಸಂ-ಗತಿಯಾಗದಲೆ ಸಮ್ಮತವಾಗದೆಂದಿಗುಯತಿಗಳಾದರು ಮತಿಗೆ ತೋರುವದಿದೆಚ್ಯುತ ವಿದೂರನೆ ನಮ್ಮ ವ್ಯಾಸವಿಠಲ ನಿನ್ನಮತವಿದೆ ಮತವಿದೆ ರತಿಪತಿ ಜನಕಾ ೪
ಆದಿತಾಳ
ಎನ್ನ ಯೋಗ್ಯತಾ ಗುರುಗಳಲ್ಲಿ ನೆಲಸಿಪ್ಪ ಸಂ-ಪನ್ನ ಮೂರುತಿಯೆ ಸರ್ವ ಜಗದಂತರ್ಯಾಮಿನಿನ್ನ ಪಾದವೆ ಗತಿ ನಿಖಿಳ ಬಗೆಯಿಂದಅನ್ಯರೊಬ್ಬರ ಕಾಣೆ ಆವಲ್ಲಿ ನೋಡಿದರು ಎನ್ನ ಪಾಲಿಸುವರ ಯದು ಕುಲೋತ್ತಮ ಕೃಷ್ಣಅನ್ಯಾಯ ನಡತೆಗಳು ಆಚರಿಸಿದೆನಯ್ಯಾಅನ್ನಂತ ಬಗೆಯಿಂದ ಅತಿ ನಿರ್ಭೀತನಾಗಿಎನ್ನಪರಾಧಗಳು ಎಣಿಸಿದರಾಗೆ ಹರಿಯೆಇನ್ನಾವ ಗತಿ ಕಾಣೆ ಇಹಪರದಲ್ಲಿ ಸಿದ್ಧಬನ್ನ ಬಡುವದೆ ಸರಿ ಬಹುಕಾಲ ನರಕದಲ್ಲಿ ಅನಾಥ ಬಂಧುವೆ ಅತಿ ದಯಾಪರ ಮೂರ್ತಿಘನ್ನ ಪತಿತ ಪಾವನ್ನ ಘನ್ನ ಭವಾಂಬುಧಿ ನಾವಇನಿತು ಬಿರಿದು ಉಳ್ಳ ಇಭರಾಜ ವರದನೆನಿನ್ನ ಮೊರೆ ಬಿದ್ದೆ ಎನ್ನ ಮರೆಯದಿರುಅನಾಥ ಬಂಧು ದೇವ ವ್ಯಾಸವಿಠಲರೇಯಾನಿನ್ನ ಜ್ಞಾನವ ಕೊಟ್ಟು ನಿರ್ಭೀತನ ಮಾಡೊ ೫
ಜತೆ
ಯೇನಮ್ಮೋಚಯಾಮಿ ಎಂಬೊ ಇಚ್ಛೆಯು ಒಂದೆಕಾಣಿಸುವದು ಸಾಧನ ವ್ಯಾಸವಿಠ್ಠಲ ಎನಗೆ ||

ಸಂಸಾರವನು ಮಾಡಿ
೯೭
ಸಂಸಾರವನು ಮಾಡಿ ಸಕಲ ಜನರೂ ಪ
ಕಂಸಾರಿ ಶ್ರೀಕೃಷ್ಣ ಕೈಪಿಡಿದು ಸಲಹುವನು ಅ.ಪ.
ಬುದ್ಧಿಯೆಂದೆಂಬ ಕನ್ನಿಕೆಯ ಮದುವೆಯ ಮಾಡಿಸದ್ಧರ್ಮದಭಿಮಾನದಿಂದ ಬೆಳಸೀ ||ಶುದ್ಧ ಭಕ್ತಿಗಳೆಂಬ ಮಕ್ಕಳನು ಪಡೆದು ಬಹುಅದ್ಭುತ ಭವಾಬ್ಧಿಯನು ದಾಟಿರಯ್ಯಾ ೧
ಚಾರು ಸುಜ್ಞಾನವೆಂಬುವ ಮುದ್ದು ಮಗನ್ಹಡೆದುವೈರಾಗ್ಯವೆಂಬ ಭಾಗ್ಯವನೆ ಬೇಡೀ ||ಸಾರ ಹರಿನಾಮಗಳ ರಸ ಪದಾರ್ಥಗಳುಣಿಸಿಕಾರುಣ್ಯದಲಿ ಬೆಳೆಸಿರಯ್ಯ ಮಕ್ಕಳನೂ ೨
ಯಮ ನಿಯಮ ಅಷ್ಟಾಂಗ ಅಣಿಮಾದಿಗಳುಕ್ಷಮೆ ದಮಾದಿಗಳೆಂಬ ಬಂಧು ಬಳಗಾ ||ಮಮತೆ ಪೆರ್ಚಿಸಿಕೊಂಡು ಬೀಗತನ ಮೊದಲಾದಅಮರಿಕೆಯ ಸಂಬಂಧವನೆ ಮಾಡಿರಯ್ಯಾ ೩
ಶೀಲ ಸನಕಾದಿಗಳು ಮುನಿ ದೇವತಾದಿಗಳುತಾಳಿ ತಮ್ಮೊಳಗೆ ಸಮ ವಿಷಯರಾಗಿ ||ಆಲಂಪಟಗಳ್ಹಚ್ಚಿಕೊಂಡು ಭವನಿಧಿ ದಾಟಿಸಾಲೋಕ್ಯ ಮೊದಲಾದ ಮುಕ್ತಿಗೈದಿದರೂ ೪
ಹೊರಗಿದ್ದ ಪದವಿ ಸತಿ ಸುತರು ಭಾಗ್ಯವೆ ನಿಮಗೆಹರಿಯಿತ್ತ ಕಾಲಕ್ಕು ಹೃದಯದೊಳಗೇ ||ಮರೆಯಲಾಗದು ಹಿಂದೆ ಸಂಸಾರದಾ ಬಾಧೆ ದುರಿತಾರಿ ವ್ಯಾಸ ವಿಠ್ಠಲ ಬ್ಯಾಗ ಒಲಿವಾ ೫

 

ಹಾಡಿನ ಹೆಸರು :ಸಂಸಾರವನು ಮಾಡಿ
ಹಾಡಿದವರ ಹೆಸರು :ರಾಜಪ್ಪ ಡಿ. ಆರ್.
ರಾಗ :ಜುಂಜೂಟಿ ಆಧಾರಿತ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು : ಪಿಚ್ಚಳ್ಳಿ ಶ್ರೀನಿವಾಸ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಹ್ಯಾಂಗೆ ನಿಮ್ಮ ಚರಣಾ
೯೬
ಹ್ಯಾಂಗೆ ನಿಮ್ಮ ಚರಣಾ | ಕಾಂಬೆನೊಯೋಗಿ ಜನರ ಶರಣಾ ಪ
ನಾಗಶಯನ ಭವಸಾಗರ ಮಮತೆಯನೀಗಿ ನಿರುತ ಅನುರಾಗದಿಂದ ಪೊರೆ ಅ.ಪ.
ವ್ಯರ್ಥವಾಯಿತಲ್ಲಾ | ಜನ್ಮವು | ಸಾರ್ಥಕಾಗಲಿಲ್ಲಾಮುಕ್ತಿ ಬಯಸಲಿಲ್ಲಾ | ಜ್ಞಾನ ವಿ | ರಕ್ತಿಯು ಮೊದಲಿಲ್ಲಎತ್ತ ತಿಳಿಯದೇ ಸುತ್ತಿ ಭವದೊಳುನ್ಮತ್ತ ನಡತೆಯಲಿ ಹೊತ್ತು ಕಳೆದ ಪೊರೆ ೧
ಮಾಯ ಬಿಡದು ಹರಿಯೇ | ಮುಂದೆ ಉಪಾಯವೇನು ದೊರೆಯೇ ||ಧೇಯ ನಿಮ್ಮನು ಮರೆಯೇ | ಅನ್ಯ ಸಹಾಯವು ನಾನರಿಯೇ ||ಕಾಯಜ ಪಿತ ಕಮಲಾಯತ ಲೋಚನಮಾಯವ ಬಿಡಿಸಯ್ಯ ನ್ಯಾಯದಿಂದ ಹರಿ ೨
ಸಾಕು ಭವದ ಸಂಗಾ | ಗರ್ಭದೊಳ್ಹಾಕದಿರೆಲೊ ರಂಗಾ ||ಶ್ರೀಕರ ಉತ್ತುಂಗ | ಕರುಣಿಸಬೇಕು ಕೃಪಾ ಪಾಂಗಾ ||ಧಿಕ್ಕರಿಸುವದಿನ್ಯಾಕೆ ಪೇಳುವೆ ಕರುಣಾಕರ ಎನ ವಾಕು ಪಾಲಿಸೊ ಹರೆ ೩
ಎಲ್ಲಿ ನೋಡಲು ನಿನ್ನಾ | ಸರಿಇಲ್ಲ ಕೇಳು ಚೆನ್ನಾ ||ಫುಲ್ಲನಾಭನೆ ಎನ್ನಾ | ಕಾಯಿದುಎಲ್ಲಿ ನೋಡಲು ದಯ ಸಲ್ಲಿಸಿ ಎನ್ನಯಸೊಲ್ಲು ಲಾಲಿಪುದು ಮಲ್ಲಮರ್ದನ ಕೃಷ್ಣ ೪
ವ್ಯಾಸವಿಠಲರಾಯಾ | ಮನದಭಿಲಾಷೆ ಸಲ್ಲಿಸಯ್ಯಾ ||ದಾಸನೆಂದು ಕಯ್ಯಾ | ಪಿಡಿದುಪೋಷಿಸುವುದು ಪ್ರೀಯಾ ||ಶ್ರೀಶನೆಂದು ನಿನ್ನ ಸೇರಿದೆನೋ ಪರದೇಶಿಯೆಂದು ಉದಾಸೀನ ಮಾಡದೆ ೫

 

ಹಾಡಿನ ಹೆಸರು :ಹ್ಯಾಂಗೆ ನಿಮ್ಮ ಚರಣಾ
ಹಾಡಿದವರ ಹೆಸರು :ಸದಾಶಿವ ಪಾಟೀಲ್
ರಾಗ :ಮಿಶ್ರ ಭೈರವ್
ತಾಳ :ಕೆಹರವ ತಾಳ
ಸಂಗೀತ ನಿರ್ದೇಶಕರು :ಸದಾಶಿವ ಪಾಟೀಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *