Categories
ರಚನೆಗಳು

ಶಂಕರಭಟ್ಟ ಅಗ್ನಿಹೋತ್ರಿ

೩೬೦
ಅಜ್ಞಾನಿ ಜೀವನಿಗೆ ಅಭಿಮಾನ ಬಹಳ
ಸುಜ್ಞಾನಿಯಾ ನುಡಿಯ ಲಕ್ಷಿಸನು ಕೇಳಾ ಪ
ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ
ಇದ್ದುದನು ಮರೆತು ತಾ ಜಾಣನೆನಿಸುವನು
ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು
ಗುದ್ದಾಡುತಲಿ ತಾನು ಸುಖವ ಹುಡುಕುವನು ೧
ಸಟಿಯಾದ ಸಂಸಾರ ದಿಟವೆಂದು ನಂಬುತಲಿ
ಸೆಟೆದಾಡುತಿರುವೆಯೋ ತಿಳಿದು ನೋಡಾ
ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು
ನಟನೆಯಾ ಮಾತಲ್ಲವೆನೆ ಕೇಳನವನು ೨
ಬರಿಯ ಜಂಭವು ಬೇಡ ಅರಿ ನೀನು ನಿನ್ನ
ಅರಿವಿನಾ ಹೊರತು ನೀ ಸುಖ ಪೊಂದಲಾರೆ
ಆರು ಸುಖಪಡೆದಿಲ್ಲ ಅಜ್ಞಾನದಿಂದೆನಲು
ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ ೩
ಬಾಳುವೆಯು ನಿಜವೆಂದು ನಂಬಲಿವನಾ ಗೋಳು
ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ
ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು
ಮೇಲೆ ನೀರೆರೆದಂತೆ ಎನೆ ಕೇಳನವನು ೪
ಗೊಡ್ಡು ಮಾತೆಂದು ತಾ ಜ್ಞಾನಕೆರವಾಗುತಲಿ
ದಡ್ಡತನವನೆ ತೋರಿ ದುಃಖಿಯಾಗುವನು
ಶುದ್ಧಜ್ಞಾನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು ೫

 

೩೬೩
ಅರಿ ನಿನ್ನ ನಿಜವಾ ಆನಂದಘನವಾ
ಚೈತನ್ಯದಿರವಾ ಮರಣರಹಿತವಾ ಆತ್ಮಾನುಭವ ಪ
ಮನವಾಣಿ ಮೀರಿ ತನು ಮೂರ ಮೀರಿ
ಕಲ್ಪನ ತೀರೀ ತಾ ನಿರ್ವಿಕಾರಿ
ಅದೇ ನೀನು ತಿಳಿಯೈ ಇದು ನೀನಲ್ಲ ೧
ಜಗವಿದು ಕನಸೋ ಪುಸಿಯೆಂದೆಣೆಸೋ
ಮನದಿ ವಿವೇಕವ ಮಾಡಿ ನಿಶ್ಚಯಿಸೋ
ಶಂಕರಬೋಧಾ ಇದುವೇ ಮೋದಾ ೨

 

೩೬೧
ಅರಿ ನಿನ್ನಯ ನಿಜವನು ಜೀವಾ
ಅರಿವಿಂದೆ ನೀನೆ ಆ ದೇವಾ ಪ
ಸಾರಿ ಪೇಳಿತು ಈ ನುಡಿ ಶಾಸ್ತ್ರ
ಅರಿತು ನೋಡಲು ನೀನೆ ಕೃತಾರ್ಥ
ದೇಹಮನಗಳ ತ್ಯಾಗದಿಂದೆ
ಉಳಿವುದಾ ನಿಜವೊಂದೇ ೧
ಈ ಬೋಧಾದಾ ಅನುಭವ ಪಡೆಯೈ
ನಾಶಮಾಡು ಈ ಮನವಾ
ಈಶಜೀವರಾ ಐಕ್ಯದ ನಿಜವಾ
ಪೇಳ್ದ ಶಂಕರದೇವಾ ೨

 

೩೬೪
ಅರಿ ಬೇಗನೇ ಪರಮಾತ್ಮ ನೀನೈ
ಪರತತ್ವನಾ ತ್ವರಿತದಲಿ ತಿಳಿಯೊ ಪ
ಮೂರು ತಾಣಗಳ ಮೀರಿ ಗೋಚರಿಪ
ತೋರುತಿಹ ಈ ದೇಹಾದಿಗಳಿಗೆ
ಬೇರೆಯಾಗಿಪುದೆ ಪರಮಪದವು
ಧೀರ ನೀನರಿಯೊ ಅದೆ ನಾನು ಎಂದು ೧
ಕೋಶಪಂಚಕವ ಲೇಸಾಗಿ ಕಳೆದು
ವಾಸನೆಯ ಪಾಶವನೆ ಹರಿದೊಗೆದು
ಕ್ಲೇಶ ಪಡುವದನು ತ್ಯಜಿಸಿ ಮುದದಿ
ನಾಶರಹಿತಾದ ಪದವು ತಾನೆಂದು ೨
ಜನನಮರಣಗಳಿಗಾಚೆಗಿರುವಂಥ
ಮನವಾಣಿಗಳಿಗೆ ನಿಲುಕದಿರುವಂಥ
ಘನಪದವು ಇದುವೆ ಪರಮಾತ್ಮನೈ
ಅನುನಯದಿ ಪೇಳ್ವ ಗುರುಶಂಕರಾರ್ಯ ೩

 

೩೬೨
ಅರಿವಿನ ಅರಿವಾ ತಿಳಿ ಜೀವಾ ಆನಂದರೂಪದ ಸಿರಿಯಾ
ಅದೇ ನೀನು ಜೀವಾ ಜೀವಾ ಅದೇ ನೀನು ಜೀವಾ ಪ
ಅನಿಸಿಕೆಯಡಗಲು ಉಳಿಯುವ ಸತ್ಯವೆ ನೀನಿಹೆ ನೀನಿಹೆ
ಮನಸಿನ ತೋರಿಕೆಅಡಗುವಿಕೆಗಳಿಂ ಬೇರಿಹೆ ಬೇರಿಹೆ
ಈ ನಾನೆಂಬುದು ಮನಸಿನದು
ಆನಾನೆ ನೀನಾಗಿರುವಿ ಅದೇ ನಿಜವು ಜೀವಾ ೧
ಕನಸಿನ ಪರಿ ಈ ತೋರುವ ಜಗವೈ
ನೋಡು ನೀ ನೋಡು ನೀ
ನಾನಾವಿಧಗಳು ಪುಸಿಯಾಗಿಹವೈ ದೂಡು ನೀ ದೂಡು ನೀ
ಆನಂದಾತ್ಮನೆ ನೀನಿರುವೀ ಆನಂದದಿಂದಲಿ ತಿಳಿಯೈಶಂಕರಾನಂದಬೋಧಾ ತಿಳೀನೀನೆ ನಿನ್ನೋಳ್ ೨

 

೩೬೭
ಅಳಿವ ಬಾಳ ನಂಬುತಲೀಗ ತಿಳಿ ತಿಳಿಯೊ ಧೀರನಾಗಿ
ಪರಾಶಾಂತಿಯ ಬೇಗ ಪರಾಶಾಂತಿಯಬೇಗ ಪ
ದೊರಕುವದೆ ಶಾಂತಿ ಜೀವನೆ ಹೊರಹೊರಗೆ ನೋಡಲು
ಅರಿ ನಿನ್ನ ಹೃದಯದೋಳ್ ಸಲೆನಾಸಿಪುದು ತಿಳಿಯಲು
ಸಲೆ ಮರೆತಿರುವಿ ನೆನೆಸಿ ನೋಡು ನಿನ್ನ
ಮೂಲಸ್ವರೂಪ ನಿನ್ನ ೧
ಈ ದೇಹ ನಾನು ಎಂಬ ಭ್ರಾಂತಿ ಬೇಗ ತ್ಯಜಿಸುತ
ಬಾಧಿಸುತ ಬುದ್ಧಿಯನ್ನು ಬೇರೆಯಾಗಿ ತಿಳಿಯುತ
ಬಾಧಾರಹಿತ ನಾ ವಾದ ಪದವೆ ನಾನಿಹೆನೆನುತ ೨
ಈ ನಿರ್ವಿಕಲ್ಪವಾದ ಸ್ಥಿತಿಯೇ ತಾನಿಹೆನೆಂದು
ಅನುಭವದಿ ತಿಳಿದುಕೊಳ್ಳು ಪರಾಶಾಂತಿಯದೆಂದು
ನೀನೇ ಪ್ರಶಾಂತರೂಪನಿರಲು ಶೋಕಿಸಬೇಡ ೩

 

೩೬೫
ಆನಂದವಾ ನೋಡು ನೀ ವಿಚಾರಿಸಿ
ಏನೊಂದುಮಿಲ್ಲಾಗಿ ತಾನೆ ತಾನಾಗಿಹ ಪ

ಅನಿಸಿಕೆ ತೋರಿಕೆ ಅಡಗುತಲಿರುತಿರೆ
ತನಿನಿದ್ರೆಯೆನಿಸದ ಘನಪದವಾಗಿಹ
ಮನಸಿನಿಂದಾಚೆಗೆ ನಿಜವಾಗಿ ನೆಲಗೊಂಡ ೧
ಇದೇ ಬ್ರಹ್ಮಾನಂದವು ನೋಡೈ ಸದಾ
ನಿರ್ವಿಕಲ್ಪವಾಗಿರುವಾ ಆ ಸ್ಥಿತಿಯನೆ ಗುರುತಿಸಿ
ಅನುಭವಿಸುತದನಾ
ಮರಳಿ ಜಾಗರದಲಿ ನೆನೆಸಿ ಆ ಸ್ಥಿತಿಯನು
ಮರಣರಹಿತವದು ಅದೇ ಪರಮಾತ್ಮನುಗುರುಶಂಕರನು ಪೇಳ್ದ ಅದೇ ತಾನು ಎನ್ನುತ ೨

 

೩೬೬
ಆಲಿಸು ಮನುಜಾ ಮಾಯಾಕಾರ್ಯಕೆ
ಮೋಸಹೋಗಲು ಬೇಡಾ ವಿಚಾರಿಸು
ತೋರಿಕೆಯು ಪುಸಿಯಹುದು ಈ ಪ
ಜಗದೊಳು ತೋರುವ ಅಘಟಿತಘಟನೆ
ಮಿಗಿಲೆನಿಸುತಲಿಹುದೋ ಗಡಾ
ಅಘಟಿತಘಟನೆಯೆ ಜ್ಞಾನವದೆಂದು
ಬಗೆಯುತ ನೀ ಕೆಡಬೇಡ ೧
ಸಿದ್ಧಿಯ ಫಲವದು ಅಘಟಿತಘಟನೆ
ಬುದ್ಧಿವಂತನೆ ತಿಳಿ ನೀ
ಶುದ್ಧ ಚೈತನ್ಯದಿ ಮಾಯೆಯದಿಲ್ಲೈ
ಸಿಧ್ದಿ ಮಾಯೆಯ ಮಗಳು ೨
ಜ್ಞಾನಸಿದ್ಧಿಗಳ ಭೇದವನರಿಯುತ
ಜ್ಞಾನಿಯಾಗೆಲೊ ಮನುಜಾ
ನಾನಾಪರಿಯಿಂ ಪೇಳಿದನಿದನಾ
ಜ್ಞಾನಿ ಶಂಕರಗುರುರಾಯಾ ೩

 

ದೇವತಾಗುರುಸ್ತುತಿ
೩೩೧
ಆಶೀರ್ವದಿಸು ಗುರುರಾಜ
ನಾ ಶೀರ್ಷವನೆ ಬಾಗುತ ನಮಿಸುವೆ

ಜ್ಞಾನದಾತ ಕರುಣಿಸು ತಾತಾ
ಆತ್ಮಾನುಭವಾ ಪಡೆವ ವರವಾ
ಜ್ಞಾನನಿಧಿಯ ಬೇಡುವೆ ನಿನ್ನೋಳ್
ಮನದಿ ಜ್ಞಾನವು ಹೊಳೆಯುವತೆರನಾ
ದೇವನಾನೆಂದರಿವತೆರದಿ
ಜೀವಭಾವ ಮರೆವತೆರದಿ
ಭಾವದಿ ನೀನೆ ನೆಲೆಸುವ ತೆರದಿ
ಸಾವಿನಂಜಿಕೆ ಸರಿಯುವತೆರನಾ
ಅನುಭವನಿಧಿಯೆ ಚಿನುಮಯರೂಪಾ
ಮನವು ನಿನ್ನೋಳ್ ಮುಳುಗುವ ತೆರದಿ
ಆ ನಾರಾಯಣ ಶಿಷ್ಯ ಶಿಖಾಮಣಿ
ಜ್ಞಾನಿಶಂಕರ ಗುರುರಾಜಾ

 

ಇದೇ ಕೇಳ್ ಭಾಗವತಧರ್ಮ ಸ್ವರೂಪಾನಂದದಾಮರ್ಮ
ತಿಳಿಯದಾಮೂಢಮನುಜರಿಗೂ ತಿಳಿಸುವಾ ಸುಲಭದಾಧರ್ಮ
ಸದಾ ತನ್ನಂತರಂಗದಲಿ ಮನನವಾಮಾಡಿ ಬೋಧೆಯನು
ಸದÀಮಲಾತ್ಮಾನುಭವವ ಪಡೆವುದಿದುವೇ
ಭಾಗವತಧರ್ಮ ಸ್ವರೂಪಾನಂದದಾ ಮರ್ಮ
ಅಳೀ ನೀ ಭೇದಭಾವನೆಯಾನಿಕಾಯಾ ಅಳೀ ನೀ ತಿಳೀ ನೀ
ನಿರ್ವಿಕಲ್ಪಾನಂದವಿಭುವೆ ನಾನೆ ಇದÉನೆಂದು ಸ್ವರೂಪಾ
ಇದೋ ಮಿಥ್ಯಾ ಜಗವಿದೆಲ್ಲ ತಿಳೀ ನೀನೆ ಕನಸಿನಂತೆ
ಅದೊಂದೇ ಬ್ರಹ್ಮಸತ್ಯ ಇದುವೆ ಶ್ರೀಗುರು ಶಂಕರನ
ಬೋಧಾ ಸ್ವರೂಪಾ

 

ಇದೇ ಕೇಳು ಜ್ಞಾನ ಇದೇ ಸ್ವಾತ್ಮಭಾವ
ಇದÉೀ ಸೌಖ್ಯ ತಾಣ ತಿಳೀ ನೀನೆ ಜಾಣಾ ಪ
ಶರೀರಾದಿ ಸಂಘಾತವೆಲ್ಲ ವಿಕಾರಿ
ಬರೀ ತೋರಿಕೆ ಸ್ವಪ್ನವೇ ಕೇಳ್ ವಿಚಾರಿ
ಅರೀ ನೀ ಸ್ವರೂಪಾ ಶರೀರಾದಿ ಭಿನ್ನ ೧
ಸದಾ ನಿರ್ವಿಕಾರ ಪರಾನಂದಸಾರ
ಈ ಜಾಗರ ಸ್ವಪ್ನ ನಿದ್ರಾದಿ ದೂರ
ಅದೇ ನೀ ಇದೇ ಕೇಳ್ ಸ್ವರೂಪಾತ್ಮಜ್ಞಾನ ೨
ತಿಳೀ ನಿನ್ನ ನೀ ಈ ವಿಚಾರಾಕ್ಷಿಯಿಂದೆ
ಇದೇ ಮೋಕ್ಷವೆಂದ ಸ್ವರೂಪಾನಂದ
ಇದೇ ಶಂಕರಾರ್ಯಾ ನಿಜಾನಂದವೆಂದ ೩

 

ಇದೇ ನೋಡು ನಿನ್ನ ನಿಜವಾದ ಸ್ವರೂಪ ಜೀವ
ಇದೇ ಸಕಲ ಜಗದ ಕಾರಣಾ ಬ್ರಹ್ಮ ಪೂರಣ ಪ
ಅನಿಸುವಿಕೆಯು ಇಲ್ಲದಿರುವಾ ತೋರಿಕಿಲ್ಲದಾ ಬರಿ ಇರವಿದೇ
ಮನಸಿಲ್ಲದೆ ಬೆಳಗುತಿರುವ ನಿದ್ರೆಹೊದ್ದದಾ ಬರಿ ಅರಿವಿದೆ
ಅನುಭವದ ರೂಪನಾಗಿ ಉಳಿಯುವಾ ಎರಡನೆಯದಿಲ್ಲದ
ಘನ ನಿರಾಕಾರವೇ ೧
ವಿಷಯಜನಿತ ದುಃಖಸುಖದ ಸುಳಿವು ತೋರದ
ಘನಾನಂದವೇ ಶೇಷ ಮಾತ್ರನಾಗಿ ಸದಾ ಶಾಂತಿರೂಪದ
ನಿರ್ವಿಕಾರ ನೀ ಹಸನಾಗಿ ತಿಳಿದುಕೊಳ್ಳು ಬೋಧವಾ
ನೀನದೆ ಎಂಬುದ ಈ ಸತ್ಯಸ್ವರೂಪವೇ ೨
ಸ್ವರೂಪಾತ್ಮ ಮಾತ್ರ ಪರಮಸತ್ಯನಾಗಿಹ ನಿತ್ಯನಾಗಿಹ
ಬರೀ ತೋರಿ ಅಡಗುತಿರುವ ಜಗವು ಭ್ರಾಮಕಾ
ಮಿಥ್ಯಾಭಾಸಕ ಗುರುವರ್ಯ ಶಂಕರಾತ್ಮಬೋಧನಾವೇದಾಂತಸಾರವಾ ಪರಮಾತ್ಮ ಜ್ಞಾನವಾ ೩

 

ಇದೇ ಪರಮಾರ್ಥ ಪ್ರಾಪ್ತಿಗೆ ಸೋಪಾನ
ತಿಳಿ ಇದರಲ್ಲಿ ಬೇಡಿನ್ನು ಅನುಮಾನ
ಇದೇ ಬಕುತಿಮಾರ್ಗವೇ ಸುಲಭ ಸೋಪಾನ
ತಿಳಿ ವೈರಾಗ್ಯಜ್ಞಾನಾದಿಗಳ ತಾಣಾ ಪ
ಸಂಸಾರದೊಳಗಿರ್ದ ಜೀವಂಗೆ
ಸುಖದುಃಖದಿ ಬಳಲುವ ಮನುಜಂಗೆ
ಕಂಸಾರಿ ಶ್ರೀ ಕೃಷ್ಣನಾಮವೊಂದೇ
ಪಾಪ ಸಂಹಾರಿ ಪರಶಿವನಾಮವೊಂದೇ
ಈ ಸಂಸಾರ ದಾಂಟುವಾ ನಿಜತಾಣಾ ೧
ನಿಷ್ಕಾಮ ಮನದಿಂದ ಭಜಿಸಲ್ಕೆ
ಬಹು ದುಷ್ಕರ್ಮ ಫಲವೆಲ್ಲ ತೊಲಗಲ್ಕೆ
ಶ್ರೇಷ್ಠ ವೈರಾಗ್ಯವು ನೆಲೆಸಲ್ಕೆ
ಬಲು ಜಿಜ್ಞಾಸೆ ಮನದಲ್ಲಿ ಜನಿಸಲ್ಕೆ
ಈ ಪರಮಾತ್ಮಧ್ಯಾನ ಮಹಾಸಾಧನಾ ೨
ಆತ್ಮಜ್ಞಾನದ ಬೋಧನೆಗೊಂಡು
ಪರಮಾತ್ಮನ ರೂಪವೆ ತಾನೆಂದೂ
ಬರಿ ತೋರ್ಕೆ ಜಗವೆಲ್ಲ ಪುಸಿ ಎಂದೂ
ಪರಮಾತ್ಮನೆ ನಿತ್ಯನು ನಿಜವೆಂದೂ
ಪರಜ್ಞಾನವ ನೀಡಲ್ಕೆ ಈ ಸಾಧನ ೩
ಪರಮಾರ್ಥನುಭವಿಗಳ ಸಂಗ
ನೆರೆದೊರಕುತಲಿರುತಿರೆ ಭವಭಂಗ
ವರ ಭಕ್ತಿ ಮಾರ್ಗದಿ ದೊರಕುವದೆಂದ
ಇದೆ ಪರಮಾರ್ಥ ಪ್ರಾಪ್ತಿಗೆ ಮೂಲವೆಂದ
ಇದೆ ಗುರುಶಂಕರಾನಂದಕೃಪೆಯಿಂದ ೪

 

ಇದೇ ಪುರುಷಾರ್ಥ ಮನಜ ಪರಮಾತ್ಮ
ಪಡೆವುದಿದು ವೇದಾರ್ಥ
ಇದನ್ನು ಬಿಸುಟಿನ್ನು ಬಾಳುವೆ ಬದುಕನ್ನು
ಮಾಡುವುದಿದುದೇ ವ್ಯರ್ಥ ಶ್
ದೇಹವಿರುವಾಗಲೇ ಪೂರ್ಣಪದನಾ ದೊರಕಿಪನೆ ಜಾಣ
ಮೋಹಮಾಯಾವಿಕಾರವ ದಾಂಟಿ ಪೋಗುವನೆ ಜಾಣ
ಸಾಹಸದಿ ಈ ಸಾವನು ನೀಗೀ ಮೋದಿಸುವ ಜಾಣ
ಉಳಿದ ನರ ಕೋಣ ಅವನಿಯುಳು ಪ್ರಾಣ
ತಳೆದಿರುವುದೇ ವ್ಯರ್ಥ
ತನ್ನ ಒಳಗಿರ್ವ ಸಂಪೂರ್ಣ ಸುಖತಾ ಅರಿಯುವನೆ ಜಾಣ
ಭಿನ್ನವಾಗಿರ್ಧ ತೋರಿಕೆ ಇದನಾ ಭಾದಿಸುವ ಜಾಣ
ಮುನ್ನ ಸುಖದುಃಖಗಳನ್ನು ನೀಗಿ ನಿಲ್ಲುವನೆ ಜಾಣ
ಇವನೇ ಗುರುನಾಥಾ ಶಂಕರ ಭಗವಂತಾಪೇಳಿದ ನುಡಿ ವೇದಾರ್ಥ

 

ಇದೇ ಪೂರ್ಣಪದಾ ತಿಳಿ ಜೀವಾ
ಆತ್ಮಸ್ವರೂಪಾ ನೋಡು ನೀ
ಈ ಜಗಕೆಲ್ಲ ಆಧಾರಾ ಪರಮಪದವದೇ ನೊಡು ನೀ ಪ
ತೋರುವೀ ಜೀವರಾಧಾರ
ತೋರದಾ ಪೂರ್ಣಾಜ್ಞಾನರೂಪ
ಅದೇ ಕಲ್ಪನೆರಹಿತ ಅದ್ವೈತ
ಪರಮಪದವದೇ ನೋಡು ನೀ ೧
ಮನವಾಣಿಗೆ ಸಿಗದ ಆ ಸ್ಥಿತಿ ಪೂರ್ಣಾ ಪರಮಾತ್ಮನೈ
ಅದೇ ನೀನಿಹೆ ಜೀವಾ ತಿಳಿಯಿದನಾ
ಗುರು ಶಂಕರನಾ ಬೋಧನಾ ೨

 

ಇದೇ ಭಕ್ತವರ್ಯನ ಲಕ್ಷಣ ಪಾವನವಿದು ಕಾಣಾ
ಕಾಣುವನಿವ ಪರಮಾತ್ಮ ಸರ್ವಾತ್ಮಾ ಕಾಣುವನಿವ
ಪರಮಾತ್ಮನ ರೂಪ ಚರಾಚರದ ಜಗದಲ್ಲಿ ೧
ಇದೇ ಪರಿಯಲಿ ಸ್ವರೂಪದಲ್ಲಿ ಜಗವೆಲ್ಲಾ ಕಾಂಬಾ
ಆತ್ಮರೂಪ ಭಗವಂತನೆ ಸತ್ಯ ಮಿಕ್ಕವೆಲ್ಲಾ ಮೀಥ್ಯ
ಲಕ್ಷ್ಯವೆಲ್ಲಾ ತನ್ನೋಳ ತಿರುಗಿಸಿ ಆನಂದವ ಪಡೆವ
ಕಾಣುವನಿವ ಪರಮಾತ್ಮ ಸರ್ವಾತ್ಮ ೨
ಸಂಸಾರದಲಿ ವಿಷಯದ ಭೋಗ ಪ್ರಾರಬುಧದಲಿಪಡೆ
ಮಾಯೆಮಾತ್ರವಿದು ಎನ್ನುತ ತಿಳಿವಾ ೩
ನಿಜಾಸಕ್ತಿ ಪಡೆಯದಲೇ ನಿರುತ ತನ್ನಯ ಹೃದಯಾಂತ
ಪರಮಾತ್ಮನ ನೆನೆವ ದೇಹಾದಿಗಳ ಈ ಪರಿಣಾಮಗಳಿಗೇ
ಮೋಹಗೊಳಲಾರ ಕಾಮನೆಯಾ ಬೀಜಾಂಕುರವೆಂದೂ
ನಾಟದು ಇವನಲ್ಲೀ ಕಾಣುವನಿವ ಪರಮಾತ್ಮ ಸರ್ವಾತ್ಮ
ಕಾಣುವನಿವ ಪರಮಾತ್ಮನ ರೂಪಾ
ಪ್ರಭೂಶಂಕರನ ರೂಪಾ ೪

 

ಇದೇ ಸೀತಾ ಮಹಾಮಂತ್ರ ಭವಾಬ್ದಿ ದಾಂಟುವಾ ಮಂತ್ರಾ
ಮನುಜ ತಾ ನಿತ್ಯ ಈ ಗೀತಾ
ಅನುದಿನಾ ಪಠಿಸುತಿರುವಾತಾ
ಮುಕುತಿಪಂಥ ಪಡೆವ ನಿರುತಾ
ಇದೇ ದೇಹದಲಿ ತಾನಿರುತಾ ೧
ವಿರಾಗಿಯಾಗಿ ಮನದಲ್ಲಿ
ಪರಾನಂದಾತ್ಮರೂಪವನು
ತಿಳಿಯುವಾ ಚೈತನ್ಯರೂಪವನು
ಇದೇ ಗೀತಾಪರಣಫಲ ತಾ
ಪ್ರಶಾಂತಾಕಾಮನಾಗಿರುತಾ ೨
ನಿಧಾನಾ ನೊಂದಮನನಿಗಿದೆ
ಪ್ರಧಾನಾ ಶಾಸ್ತ್ರ ಸಂಚಯ ದೇ
ಪ್ರಧಾನಾ ಷಟ್‍ಶಾಸ್ತ್ರ ಸಂಚಯದೇ
ಸದಾ ಧ್ಯಾನಾ ಇದೇ ಮನನಾ
ಮನುಜನೇ ಇದುವೆ ಸುಖತಾಣಾ ೩
ತಿಳಿ ನೀ ಗೀತೆಯಾ ಬೋಧಾ
ಅಳಿ ನೀ ಜೀವಪರ ಬೇಧಾ
ತಿಳಿ ನೀ ಪರಮಾತ್ಮಪದ ಬೋಧಾ
ಪಡೆವ ಮೋದಾ ಶ್ರವಣದಿಂದಾ
ಇದೇ ಶ್ರೀ ಶಂಕರನ ಬೋಧಾ ೪

 

ಈ ದೇಹಾಭಿಮಾನವೇ ಸಂಸಾರಮೂಲ
ಈ ದೇಹಾಭಿಮಾನವÉೀ
ಸಂಸಾರಮೂಲವಯ್ಯ ಕೇಳೀಗಲೇ ಜ್ಞಾನದಿಂದಾ
ಈ ಜ್ಞಾನದಿಂದ ಈ ದೇಹಭಿಮಾನ ದೂಡ
ನೀ ದೂಡನಿನ್ನಭಿಮಾನ
ವಿಷಯಾಭಿಲÁಷಾ ಮನದಲ್ಲಿ ಮೂಡಿ
ಜೀವಂಗೆ ಗುಣದಲ್ಲಿ ಅನುರಾಗ ಕೂಡಿ
ಇದೇ ಭೋಗನೇ ಮುಂದೆ ಸುಖದುಃಖವಾಗಿ
ಜನುಮಕ್ಕೆ ಮೂಲಾದಿದೇ ವಾಸನಾಳಿ ಇದೇ ವಾಸನಾಳಿ
ಇದೇ ಬಾಳುವೆ ಇದೇ ಬಾಳುನೆ
ಇದೇ ಬಾಳು ದೇಹಾಭಿಮಾನಾಸ್ಪದಾ
ಮೂಲ ಕೇಳಿಗಲೇ ಜ್ಞಾನದಿಂದ ೧
ಮನದೇಹಗಳು ನಿನ್ನ ನಿಜರೂಪವಲ್ಲ
ಇವುತೋರಿ ಬಯಲಾಗುತಿಹವಾಗಿವೆಲ್ಲ ನಿಜರೂಪವಲ್ಲ
ಇದರಾಚೆಗಿಹ ಶುದ್ಧ ಚೈತನ್ಯ ನಾನೇ
ಮನಬುಧ್ಧಿಗಾಧಾರ ಚಿನ್ಮಾತ್ರನಾನೇ ಸತ್ಯಾತ್ಮನಾನೇ
ಅದೇನಾನಿಹೆ ಅದೇ ನಾನಿಹೆ ಅದೇ ಸತ್ಯನೆಂದಾಗ
ಹರಿವುದು ದೇಹಾಭಿಮಾನ ನೋಡುನೀ ಜ್ಞಾನದಿಂದ ೨
ಈ ರೀತಿ ಸುವಿಚಾರವನು ಮಾಡಿಕÉೂಂಡು ನಿಜನನ್ನು ಕಂಡು
ಸ್ವರೂಪಾತ್ಮನೋಳು ನಾನು ನೆಲೆ ನಿಂತು ಕೊಂಡು
ಇದೆಲ್ಲ ಈ ಸಂಸಾರ ಕನಸೆಂದು ಕಂಡು
ಪರಮಾತ್ಮನನೆ ವೃತ್ತಿಯೊಳು ತುಂಬಿಕೊಡು
ಆನಂದ ಉಂಡು ಬಿಡೋ ಚಿಂತೆಯ ಬಿಡೋ ಚಿಂತೆಯಾ
ಬಿಡೋ ಬಾಳ ಚಿಂತೆಯಾ ಶ್ರೀ ಶಂಕರಾಚಾರ್ಯರಿ
ಬÉೂೀಧದ ಜ್ಞಾನದಿಂದ ೩

 

ಈ ವಿಬುಧರ ಸಂಗವೆ ಮಹಾಪ್ರಮೋದ
ದುರ್ಲಭ ಜ್ಞಾನಿಯ ನಿಜಾತ್ಮಬೋಧ
ಭಾಗ್ಯವಿದೇ ಬಹುಜನ್ಮದ ಪುಣ್ಯ
ಯೋಗ್ಯರಬೋಧಾ ದೊರಕುವುದಣ್ಣ
ಬೋಗ್ಯದಿ ಲಂಪಟನಾದವಗಿನ
ಅಗ್ಗದಿ ಸಿಗುವದೆ ಸಜ್ಜನರನ್ನಾ
ಸ್ವರ್ಗದಿ ಸಿಗದಿಹ ಸಂತರ ಬೋಧ
ದುರ್ಲಭ ಜ್ಞಾನಿಯ ನಿಜಾತ್ಮಬೋಧ ೧
ಉಪದೇಶದಿ ಈ ಭವವನು ಕಡಿವಾ
ಬಾಧೆಯ ಸುಡುವಾ ಮುಕುತಿಯ ಕೊಡುವಾ
ಹೃದಯದೊಳಿರುವಾ ಆತ್ಮಸ್ವರೂಪ
ಜ್ಞಾನದಿ ತಿಳುಹಿನಿ ಮೋದವ ಕೊಡುವಾ
ಸ್ವಾನು ಭವಾನಂದಾನ್ವಿತರೂಪ
ಸನ್ನುತ ಶಂಕರಗುರುಸ್ವರೂಪ ೨

 

ಈ ಸಾಧನೆಯ ಈ ಧರ್ಮಗಳ ಗುರಿಯೊಂದÉ ಕೇಳಿರಿ ಇಂದೇ
ಪರಮಾತ್ಮಪ್ರಾಪ್ತಿ ಇದರಿಂದೇ ಪ
ನಿಷ್ಕಾಮ ಕರ್ಮವ ಮಾಡುವನು
ನಿಷ್ಕಾಮ ಬಕುತಿಯ ಮಾಡುವದು
ಆ ವೈರಾಗ್ಯ ಆ ಸುವಿವೇಕ
ಮನದಲ್ಲಿ ಮೂಡುವದಿಂದೇ ಪರಮಾತ್ಮಪ್ರಾಪ್ತಿ ೧
ವಿಷಯಾಭಿಲಾಷಾ ಬಿಡುವುದಕೆ
ಮನದಲ್ಲಿ ಸ್ಥಿರತೆಯು ನಿಲುವುದಕೆ
ಗುರು ಬೋಧೆಯಲಿ ಮನ ರಮಿಸುತಲಿ
ಜಿಜ್ಞಾಸೆ ಮೂಡುವದಿಂದೇ ಪರಮಾತ್ಮಪ್ರಾಪ್ತಿ ೨
ಹಗುರಾದ ಸಾಧನವಿದಕೆಲ್ಲ
ಜಗದಲ್ಲಿ ಇರುವ ಜನಕೆಲ್ಲ
ಅಘನಾಶಕ ಶ್ರೀಶಿವಶಂಕರನೋಳ್
ಘನಪ್ರೇಮ ಬಕುತಿಯಿದೋಂದೇ ಪರಮಾತ್ಮಪ್ರಾಪ್ತಿ ೩

 

ಎಂತು ಪೊಗಳಲಿ ನಿನ್ನಾ
ಮನವಾಣಿಗಳಿಗೆ ಅನಂತನಾಗಿಹೆ ಘನ್ನ ಪ
ಪದ ಪರಮಪಾವನ ನಿನ್ನ ನೆನೆದೊಡೆ ಬನ್ನಾ
ದೂರಾದುದೆನ್ನ ೧
ನಿತ್ಯನಿರ್ಮಲ ನಿರವಯವ ನೀಗ
ಸತ್ಯವಸ್ತುವು ಜಗವಿದೆಲ್ಲವು ೨
ಮಿಥ್ಯವಿದು ಪರಮಾತ್ಮ ನೀನೇಸತ್ಯ ನಾನೇ ನೀನು ಶಂಕರ ೩

 

ಎಂದೂ ಬಂಧವಿಲ್ಲ ಆತ್ಮಗೆ
ಬಂಧವ ಕಲ್ಪನೆ ಮಿಥ್ಯವಿದೆಲ್ಲ
ಮಂದರ ನುಡಿಯಿದು ಈ ಸಂಸಾರ ಪ
ನಿತ್ಯಮುಕ್ತನೇ ತಾನಾದವಗೆ
ಮಿಥ್ಯವ ಕಲ್ಪನೆ ಬರುವದೆಂತೋ
ತಥ್ಯವಿಲ್ಲದ ಮಾತಿನ ಮಾಲೆ
ಮತ್ತೆ ಬಂಜೆಯಾ ಮಗನೆಂಬುವವೋಲ್ ೧
ಆತ್ಮನೆ ತಾನೆಂಬನುಭವ ಪಡೆಯದೆ
ಮತ್ತೆ ಶಬ್ದ ಮಾತ್ರವನರಿತವಗೆ
ಸುತ್ತಿಕೊಳ್ಳುವುದು ಸಂಶಯ ವಿದುವೆ
ಅನುಭವದೊಳಗೇನಿಲ್ಲ ವಿಕಲ್ಪ ೨
ಭಾನುವಿಗುಂಟೇ ಉದಯಾಸ್ತಗಳು
ಮಾನವಕಲ್ಪನೆಗಳು ತಾನೆಲ್ಲ
ತಾನೇ ತಾನಾದವಗಿನ್ನು
ಹೀನಭವದ ಭಾಧೆಯುತಾನುಂಟೇ ೩
ಅನುಭವರೂಪನು ತಾನಾದಾಗ
ಅನುಭವ ಬರುವದು ಈ ನುಡಿ ಕೇಳೈ
ಮನವಾಣಿಗೆ ಮೀರಿದ ಸ್ವಾತ್ಮನುನೀ
ಚಿನುಮಯ ಶಂಕರತಾನಾದವಗೇ ೪

 

ಎಲೆ ಮಾನವಾ ಅಭಿಮಾನವಾ ಅವಿವೇಕವಾ ದೂಡೈ
ಸುಖದುಃಖದಾ ಘನ ಮೂಲವಾ ಸುವಿವೇಕದೀ ನೋಡೈ ಪ
ಪರರಿಂದ ಈ ಪರಿತಾಪವು ಬರುತಿರ್ಪುದೆಂಬುದಿದೋ
ಬರಿ ಬ್ರಾಂತಿಯೋ ನಿಜವಲ್ಲವೋ ಅಲೋಚಿಸಿ ನೋಡೈ ೧
ಗ್ರಹಕಾಲಗಳ್ ಘನ ಕರ್ಮಗಳ್ ಇವು ಕಾರಣಲ್ಲವಿದೋ
ಮನವೇ ಇದೇ ಪರಿತಾಪದ ಘನಮೂಲವೈ ನೋಡೋ ೨
ಸಟೆಯಾಗಿಹ ಸಂಸಾರವ ದಿಟವೆಂದು ತೋರ್ಪುದಿದೋ
ಮನದಿಂದಲೇ ಇದು ಕಾಂಬುದೋ ಮನವಿಲ್ಲದಾಗಿಲ್ಲ ೩
ಪರಮಾತ್ಮನ ಪರಿಪೂರ್ಣನ ಮರೆಮಾಡುತೀಮನವು
ಹರಿದಾಡುತಾ ಸುಖದುಃಖವಾ ಗುಣಿಸುತ್ತ ತಾನಿಹುದೋ ೪
ವನದಾಟಕೇ ಮರುಳಾಗದೇ ಗುರುಶಂಕರಾರ್ಯನಲಿ
ಮನ ನಿಲ್ಲಿಸಿ ಈ ಮೋಹವಾ ಬಿಡು ಬೇಗ ನೀನೀಗ ೫

 

ಏಕ ಚಿಂತಿಸಲಯ್ಯ ಈ ಜಗದ ಸುಖಕಾಗಿ
ಸಾಕು ಇದರೊಳು ಸುಖದ ಲೇಶವನು ಕಾಣೆ ಪ
ಒಂದು ಸುಖ ಬಯಸಿದೊಡೆ ಹಿಂದೆ ನೂರೆಂಟಾಗಿ
ಸಂದಣಿಪ ದುಃಖಗಳು ಬಂದು ಒದಗುವವಿದಕೆ
ಎಂದಿಗೂ ಬಯಸೆನಾ ಈ ತೆರೆದ ಸುಖವನ್ನು
ಹಿಂದಿನಾ ಕರ್ಮದಂತಾಗುತಿರುವುದಕೆ ೧
ಮೊದಲು ಸವಿಯಾಗಿಹುದು ತುದಿಯಲಿದು ವಿಷವಹುದು
ಬದಲಾಗುತಿಹ ಇಂಥ ಸುಖ ಬೇಡವೆನಗೆ
ಮೊದಲುಕೊನೆ ಇಲ್ಲದಿಹ ಸದಮಲಾನಂದವಹ
ಪದವ ಮರೆಯಿಸುತಿರುವದಿದು ಬೇಡವೆನಗೆ ೨
ಅನಿಸಿಕೆಯೆ ಕೂಡಿರುವ ಈ ಸುಖವು ನಿಜವಲ್ಲ
ಮನವಾಣಿಗಳಿಗಾಚೆಗಿಹ ಸುಖವು ನಿಜವು
ತಾನೆ ಸುಖರೂಪನೆಂದನಿತರೊಳು ನಿಶ್ಚಯಿಸಿ
ಜ್ಞಾನಿಶಂಕರನೆ ನಾನಾದ ಮೇಲಿನ್ನು ೩

 

ಏಳೇಳು ಬಾಲಕನೆ ಅಜ್ಞಾನನಿದ್ರೆಯಿಂ
ಏಳು ತಿಳಿವಿಕೆ ಎಂಬ ಎಚ್ಚರವ ಹೊಂದುತಲಿ ಪ
ಹಾಳು ಮಾಯೆಯು ಎಂಬ ಮೇಲುಮುಸುಕನು ತೆಗೆದು
ಕೀಳು ಬಾಳುವೆಯೆಂಬ ಹಾಸಿಗೆಯ ಸುತ್ತುತಲಿ
ಕೇಳು ಕಿವಿದೆರದೇಕಚಿತ್ತದಿಂ ಶ್ರುತಿಯೆಂಬ
ಕೋಳಿ ಕೂಗುತಲಿಹುದು ‘ತತ್ವಮಸಿ’ ಎಂದು ೧
ಬಿತ್ತರಿಸಿಹುದು ಮುಮುಕ್ಷುತ್ವ ಮುಂಬೆಳಗಾಗೆ
ಚಿತ್ತವೆನ್ನುವ ಕಮಲವರಳಿಹುದು ನೋಡೀಗ
ಸುತ್ತಲಡಿಗಿದ ಸುವಾಸನೆಯ ಮೂಸುತಲಿ ನೀ
ಉತ್ತು ಮೋತ್ತುಮ ನಿಜಾನಂದವನು ಪಡೆವುದಕೆ ೨
ಜ್ಞಾನನಿಂದಕರೆಂಬ ಗೂಗೆಗಳು ಅಡಗಿದವು
ಕಾಣದಾದವು ಕುತರ್ಕಗಳೆಂಬ ತಾರೆಗಳು
ಸ್ವಾನುಭವಸುಜ್ಞಾನಭಾನುವುದಯಿಸುತಿಹನು
ಜ್ಞಾನಿಶಂಕರನ ಸದ್ಬೋಧವನೆ ಸ್ಮರಿಸುತಲಿ ೩

 

ಕೇಳು ಇದು ನಿಜಸಾಧನಾ
ಮಾಡು ಕೈವಲ್ಯಪ್ರಾಪ್ತಿಯಿದೋ
ಮಾಡು ನೀ ಮಾಡು ಆನಂದಪ್ರಾಪ್ತಿಯಿದೋ ಪ
ಭಕ್ತಿಭಾವದಿ ಭಜಿಸುತ ನಿನ್ನ
ಚಿತ್ತವನು ಪರಮಾತ್ಮನೊಳಿನ್ನು ನಿಜಾತ್ಮದೊಳಿನ್ನು
ನಲೆಸುತಲಿ ಭವಬಂಧವಾ ನೀಗಿ
ಆನಂದಪ್ರಾಪ್ತಿಗಿದೊ೧
ವಿಷಯಚಿಂತನೆ ಮನದೊಳಗಿಹುದೇ
ನಾನು ನನ್ನದಿದೆಂಬುದು ಬೆಳೆಯೆ ಇದೇ ಕೇಳ್ ಮಾಯೆ
ನಾಶವಹುದೀ ಮಾಯೆ ನೀ ನೋಡು ಈ ಭಕ್ತಿಯೋಗದಲಿ
ಮಾಡು ನೀ ಮಾಡು ಸನ್ಮಾರ್ಗಸಾಧನೆಯಾ ೨
ಭಕ್ತಿಯೊಂದೇ ಸುಲಭದ ಸಾಧನೆ ಚಿತ್ತಶುದ್ಧಿಯನೀವುದು ನಿಜದಿ
ಮನುಜಗಿದು ಜಗದಿ ತತ್ವದಿ ತಿಳಿವಾ ಮಾರ್ಗವತೋರಿ
ಕೈವಲ್ಯವೀವುದಿದೋ ಕೇಳು ನೀ ಕೇಳು
ಶ್ರೀ ಶಂಕರನ ಬೋಧಾ ೩

 

ಕೇಳೈ ಈಗಾ ಈ ಕರ್ಮಯೋಗಾ ಕಳೆವುದು ಸಂಸಾರರೋಗಾ
ಬಂಧಕ್ಕೆ ಈ ಕರ್ಮವೇ ಕಾರಣಾಗಿ
ಬಂದಿತು ಜನುಮಾ ಅನಿವಾರ್ಯವಾಗಿ
ಈ ಬಂಧವ ನೀಗಿ ಚಿರಶಾಂತಿಗಾಗಿ
ಈ ಯೋಗ ಬೆರಸಿ ಇದೆ ಕರ್ಮವೆಸಗಿ
ಅರ್ವಿನಿ ಫಲವಾ ಪರಮಾತ್ಮಭಾವಾ
ತಳೆಯುವದೆ ಈ ಕರ್ಮಯೋಗಾ ಕಳೆವುದು ೧
ವಿಷಯಾಭಿಲಾಷಾ ನೀಗಿಸಿ ಆಶಾ
ಹರಿಸುವದಿದುವೇ ನಿಷ್ಕಾಮ ಕರ್ಮ
ಮನಸಿನ ಮಲಿನಾ ಕಳೆದೆಲ್ಲ ಹಸನಾ
ಮಾಳ್ಪುದು ಇಹುವೇ ಜಿಜ್ಞಾಸೆಯೆನ್ನಾ
ಹುಟ್ಟಿಸಿ ಜ್ಞಾನಾ ಕೇಳ್ವ ಭಾನಾ
ಉದಿಸುವುದು ವೈರಾಗ್ಯಭಾಗ್ಯ ಕಳೆವುದು ೨
ವಿಷಧಾತುಗಳ ತಂದು ಪುಟಹಾಕಿಕೊಂಡು
ಹೆಸರಾದ ಸಿದ್ಧೌಷಧಿ ಮಾಡಿಕೊಂಡು
ಉಪಯೋಗ ಕಂಡು
ಜಡದೇಹಗಳ ಬೇನೆ ನೀಗಿಪತೆರದಿ
ಈ ಕರ್ಮವಿಷವಾ ಪುಟಹಾಕುತಿಹುದೀ
ನಿಷ್ಕಾಮತನದೀ
ಈ ಸೂಕ್ಷ್ಮದೇಹಾ ರೋಗ ಕಳೆವಾ
ಘನವಾದ ಪರಮೋಪಾಯಾ
ಇದೇ ಪೇಳ್ದೆ ಗುರುಶಂಕರಾರ್ಯ ೩

 

೩೩೨
ಗುರುಬೋಧ ಪರಮಸುಖಕಾರಿ
ಬಾರಿ ಬಾರಿಗೂ ಕೇಳೈ ಭವರೋಗೀ ಪ
ಬಿಡು ಬಾಳಿನ ಭ್ರಮೆಯ ಸಂಸಾರಿ
ದುಃಖದ ಬಾಳಿದು ವಿನಾಶಕಾರಿ
ಇದರೊಳು ಸಿಗುತಿಹ ಸುಖವು ವಿಕಾರಿ
ತಿಳಿಯೈ ಮುಕ್ತನಾಗಲಿದು ದಾರಿ ೧
ಆರಿ ನಿನ್ನಯ ನಿಜವಾ ಸುವಿಚಾರಿ
ಅರಿವೇ ನಿನ್ನಯ ಈ ಭವತಾರಿ
ಬೇರಾವುದು ನಿನಗಾಗದು ದಾರಿ
ಈ ನುಡಿ ಪೇಳುತಿಹುದು ಶೃತಿಸಾರಿ ೨
ಜಾಗರಾ ಕನಸು ನಿದ್ರೆಯ ಮೀರಿ
ಅಮರವಾಗಿರುವ ಪದವನೆ ತೋರಿ
ಅದೆ ನೀನೆನ್ನುತ ಪರಿಪರಿ ಸಾರಿ
ಶಂಕರಭೋಧವಿದುವೆ ಭವಹಾರಿ ೩

 

ಗಂಟೆ ಹೊಡೆಯುತಿದೆ ಕೇಳೆಲೋ ಮೂಢಾ
ಪಂಟು ಬಡಿಯುತ ಕೊಡಲುಬೇಡಾ ಪ
ಶ್ರುತಿಶಿರಗಳ ಬೋಧದ ಈ ಗಂಟೆ
ಮತಿವಿಭ್ರಮೆಯ ಬಿಡಿಸುವ ಗಂಟೆ
ಅತಿಮಾನವಸ್ಥಿತಿ ಸಾರುವ ಗಂಟೆ
ಕ್ಷಿತಿಯೊಳಗಿದುವೆ ಸಾರ್ಥಕ ಗಂಟೆ ೧
ಜೀವೇಶ್ವರರೈಕ್ಯದ ಘನ ಗಂಟೆ
ದೇವನೆ ನೀನೆಂದರುಹುವ ಗಂಟೆ
ಸಾವಿನ ಸಂಕಟ ಕಳೆಯುವ ಗಂಟೆ
ಕಿವಿಯಿದ್ದು ಕೇಳದೆ ಬಿಡುವವರುಂಟೇ ೨
ತೋರಿಕೆ ಅನಿಸಿಕೆ ಪುಸಿ ಎಂಬ ಗಂಟೆ
ಪಾರಮಾರ್ಥ ಸತ್ಯದ ಸವಿ ಗಂಟೆ
ಘೋರನಿದ್ರೆಯಿಂದೆಚ್ಚರಿಸುವ ಗಂಟೆ
ಗುರುಶಂಕರನಾ ಪ್ರವಚನ ಗಂಟೆ ೩

 

ಚರಣ ಕಮಲಕರ್ಪಿಸುವೆ
ಗುರುನಾಥಾ ಈ ಸೇವೆಯು
ಕರುಣನಿಧಿಯೆ ಜ್ಞಾನರೂಪ
ಪರಮಾತುಮ ಪರಮಪುರುಷ ಪ
ರಾಜವಿದ್ಯೆ ರಾಜಗುಹ್ಯ
ಆತ್ಮತತ್ವ ಬೋಧಿಸಿ ನೀ
ಮೂಢತನದ ತಮವ ಕಳೆದು
ತೇಜದಿಂದ ಮೆರೆವ ನಿನ್ನ ೧
ಬಾಲನ ತೊದಲಾದ ನುಡಿಯ
ಕೇಳಿ ಜನನಿ ನಲಿವ ತೆರದಿ
ಲೀಲೆಯಿಂದ ಆಲಿಸುತಲಿ
ಪಾಲಿಸು ಗುರುಶಂಕರನೆ ೨

 

೩೩೩
ಚಿರಶಾಂತಿ ಪ್ರದಾತಾ ಗುರುವರಾ
ಪರಮಾರ್ಥಪ್ರಬೋಧಾ ಸುಖಕರಾ
ಭವವಿತರಣಾ ದಿವ್ಯಚರಣಾ
ಅಮಿತ ಕರುಣಾ ಜ್ಞಾನಭರಣಾ
ಮೋಹಜಾಲದ ತಿಮಿರ ಮುಸುಕಿರೆ
ಸೋಹಮೆನಿಪ ಜ್ಞಾನಸೂರ್ಯ
ಉದಿಸಿ ನೀ ಘನಸ್ವಾತ್ಮರಂಜನಾ
ಶೃತಿಶಿರಗಳಿಗೂ ಪೇಳಲಾಗದೆ
ನೇತಿ ಎನ್ನುವ ಮೌನವ ಧರಿಸಿದ
ಆತ್ಮತತ್ವವ ಪೇಳ್ದೆ ಧೀರನೇ
ಭವಶರಧಿಯಲಿ ನಾವಿಕ ನೀನೇ
ಸಾವಕಾಶದಿ ದಾಂಟಿಸುತಿರುವೀ
ನಮಿಪೆ ನಾ ಗುರುದೇವ ಶಂಕರಾ

 

ಚಿರಶಾಂತಿಯ ಪಡೆವುದಕೆ ಮನ ತ್ಯಾಗಮಾಡು ಜೀವಾ
ಮನವೇ ಭವಬಂಧನಕೆ ಘನಕಾರಣವೈ ಜೀವಾ ಪ
ತಿಳಿ ಈ ಮನದಾ ನಾಶಾ ಆದಾಗಲೆ ನಿಜಮುಕುತಿ
ಮನ ಮೋಕ್ಷದ ಸಾಧನವೈ ಅನುಮಾನಿಸದಿರು ಜೀವಾ ೧
ಮನವಿಲ್ಲದ ಆ ಸ್ವರೂಪ ಅದು ತಾನೆ ನಿರ್ವಿಕಲ್ಪ
ಅದೆ ನಾನಿಹೆನೆಂದರಿಯೈ ಇದೆ ಮನದ ತ್ಯಾಗ ಜೀವಾ ೨
ಇದು ಪರಮ ಪದ ಆನಂದ ವೇದಾಂತದ ಘನಬೋಧಾ
ಗುರುಪುಂಗವ ಶಂಕರನಾ ಪರಮಾರ್ಥ ಬೋಧಸಾರ ೩

 

ಚೈತನ್ಯವೊಂದೆ ಸತ್ಯ ಈ ಜಗವೆಲ್ಲ ಭ್ರಾಂತಿ ಮಿಥ್ಯ
ಅನಿಸುವಿಕೆ ಇಲ್ಲದಿರುವಾ ಮನವಾಣಿ ಮೀರುತಿರುವಾ
ಘನವಾದ ಸ್ವಪ್ರಭಾವ ಅದೆ ನೋಡು ಆತ್ಮಭಾವಾ ೧
ನಿಜವಾದ ಚೇತನವದು ಅಜರಾಮರಾಗಿರುವದು
ಅದೆ ನೀನು ಎಂದು ತಿಳಿಯೈ ಇದು ಎಲ್ಲ ಕನಸುಮಿಥ್ಯ ೨
ಇದು ನೋಡು ಶಾಸ್ತ್ರಸಾರಾ ಇದನರಿತ ಮನುಜ ಧೀರ
ಇದನೊಂದೆ ತಿಳಿದುಕೊಳ್ಳೈ ಇದು ಶಂಕರಾರ್ಯಬೋಧ ೩

 

ಜಗವಿದು ಪುಸಿಯೈ ಬಗೆವೊಡೆ ಮನುಜಾ
ತೋರುತಿಹ ಕನಸಿನಂತೆ ಇರುವೆ ಪ
ನನಸಿನ ಅರಿವದು ದೊರಕುವ ತನಕ
ಕನಸಿದು ಎನ್ನುವ ಕಲ್ಪನೆ ಇಹುದೆ ?
ನನಸಿನ ನನಸಾಗಿಹ ಪರವಸ್ತುವೆ
ತಾನೆ ನಿಜವು ಎಂಬರಿವಾಗುತಲಿರೆ ೧
ನಿರುತದಿ ಸಮನಾಗಿರಲರಿಯದ ಈ
ತೋರಿಕೆ ಅನಿಸಿಕೆಗಳು ನಿಜವಲ್ಲವು
ಪರಿಕಿಸೆ ಸತತದಿ ಸಮನಾಗಿರುತಿಹ
ಪರಮ ಪದವೆ ತಾನೆಂದರಿಯುತಲಿರೆ ೨
ಅಳಿಯುವ ಜಗವಿದು ಬೆದರುವಿ ಏತಕೆ
ತಿಳಿಯುತಲೀಪರಿ ನಿಜವಸ್ತುವನು
ಗಳಿಸಿಕೊಂಡು ನೀ ನಿನ್ನಯ ಮುಕುತಿಯ
ಕಲುಷರಹಿತಶಂಕರನಡಿಯರಿಯಲು ೩

 

ಜಿಜ್ಞಾಸುವಿನ ಲಕ್ಷಣಾ ಕೇಳು ನೀಕ್ಷಣಾ
ಪರಮಸುಖಾಕಾಂಕ್ಷಕನಾ
ಬಾಳಿನ ವಿಷಯದಿ ಬೇಸರಗೊಳು ತಾ ವಿರತಿಯಿಂದರುವಾ
ತಾಳುತ ಪ್ರೇಮವ ಜ್ಞಾನಿಗಳು ತಾ ಬೋಧ ಕೇಳ್ವನಿವಾ
ಚಿತ್ತದಿ ಭಕ್ತಿಭಾವನಾ ತಾಳುತ ಸಾಧನಾ
ಮಾಡುತಲಿಹನಿವ ಕಾಣಾ
ಆತ್ಮಾನಾತ್ಮನಿವೇಕ ವಿಚಾರ ಕೇಳುತ ತನ್ನೊಳಗÉೀ
ಮಿಥ್ಯಾರೊಪಿತ ಜೀವಭಾವನನಾ
ಜರÉಯುತ ಮನದೊಳಗೇ ಮಾಡುವ ಸುವಿಚಾರಾ
ಇವನೆ ಧೀರ ಪರಮಸುಖಕಾಂಕ್ಷಕನಾ
ವಿಷಯದಿ ಹರಿಯುವ ಮನವÀನೆಳೆÀದು ಬೋಧದೊಳಗಿರುವಾ
ಆ ಶಮೆದಮೆಗಳ ಸಾಧಿಸಿಕೊಳುತಾ ಮೋದ ಹೊಂದುವ ತಾ
ಶ್ರೀ ಗುರುಶಂಕರನಾ ಆನಂದರೂಪನಾಬೆರೆತು ನಾ ಸುಖಿಸುವನಾ

 

ಜೀವಾ ತಿಳಿ ತಿಳಿ ನಿಜದರಿವಾ ಪ
ಶಾಂತಮಯಾ ಆನಂದನಿಕಾಯ
ಮನಸಿನ ಮೂಲದಾ ಘನಪದವಾ ಅ.ಪ.
ಕಲ್ಪನಾಜಾಲದಾ ನಾಶದ ಸ್ಥಿತಿಯೇ
ಪರಮಸೌಖ್ಯದಾ ನಿಧಿಯನು ನೀನೇ
ಮನದಲಿ ಯೋಚಿಸಿ ತಿಳಿನಿನ್ನಾ ೧
ಜನನಮರಣದಾ ಸಂಕಲೆ ಹರಿಯೋ
ಘನವಿವೇಕದಾ ಬಲದಲಿ ತಿಳಿಯೋ
ಸನ್ನುತ ಶಂಕರಗುರುಬೋಧಾ ೨

 

ಜ್ಞಾನಸುಧೆಯ ಪಾನಮಾಡಿ ಸ್ವಾನುಭವದಿ ಲೀನನಾದೆ
ಹೀನ ಭವದ ತಾಪವೆನಗೆ ಬಾಧಿಸುತಿರೆ ಗುರು ನೀಡಿದ ಪ
ಜೀವನ ಸುಖದುಃಖದಾ
ಭಾವ ಜೋಲಿಗಳನು ಮರೆದು
ದೇವ ನಾನೆ ಎಂದು ತಿಳಿದು
ಪಾವನಾತ್ಮನೊಳಗೆ ಬೆರೆದು ೧
ನಾನು ನೀನು ಎಂಬ ಭೇದ
ಏನು ಮೋಜು ಮಾಯವಾಯ್ತು
ಕಾಣದಾಯ್ತು ಜೀವಭಾವ
ಜ್ಞಾನಬೋಧದಾ ಪ್ರಭಾವ ೨
ಭಾನ ಮರೆದು ದೇಹಮನದ
ಜ್ಞಾನಗೀತೆಗಳನು ಪಾಡಿ
ತಾನೆ ತಾನಾಗಿರುವ
ಜ್ಞಾನಿ ಗುರುವಿನೊಳಗೆ ಕೂಡಿ ೩
ಕಲ್ಪನಾವಿಲಾಸ ಪೋಗಿ
ಅಲ್ಪನೆಂಬ ಮತಿಯ ನೀಗಿ
ಅಲ್ಪನಾತೀತನಾದನಲ್ಪನಾದ ಶಂಕರನಾ ೪

 

ಜ್ಞಾನಾಮೃತ ಭುಜಿಸು ಜೀವ
ಮಾನವಜನುಮದ ಗುರಿಯಿದು ಪ
ಶುದ್ಧಮನದ ಪಾತ್ರೆಯಲ್ಲಿ
ಸದ್ಗುರುವಿನ ಬೋಧದನ್ನ
ಶುದ್ಧ ಚೈತನ್ಯಾತ್ಮ ನೀನೆ
ಬದ್ಧಜೀವನಲ್ಲವೆಂಬ ೧
ಶಿವರೂಪನು ಸಚ್ಚಿದಾತ್ಮ
ಭವಬಂಧನವೆನ್ನೊಳಿಲ್ಲ
ಆವಿನಾಶಿಯೆ ನಾನು ಎಂಬ
ಸುವಿಚಾರದ ಬಾಯಿಯಿಂದ ೨
ಸದ್ ರೂಪದ ಆರೋಗ್ಯ
ಚಿದ್ ರೂಪದ ಪರಮ ಭಾಗ್ಯ
ಆನಂದದ ನಿಧಿಯಾಗುವಿ
ಸದ್ಗುರುಶಂಕರನ ಬೋಧ ೩

 

ತಿಳಿ ಆತ್ಮರೂಪವಾ ನಿಜಾನಂದವಾ ನೀ
ತಿಳಿ ಬ್ರಹ್ಮರೂಪವಾ ನಿಜಾಧಾರವಾ ನೀ
ಬಿಡು ಗರುವದ ಭಾವಾ ಇದೇ ಜ್ಞಾನವಾ
ಇದೇ ಬೋಧವಾ ಪ
ಕಲ್ಪನೆರಹಿತಾ ಚೈತನ್ಯಾತ್ಮಾ
ಜಗದಾಧಾರನು ತಾ
ಆನಂದಾತ್ಮನ ತಿಳಿವಿದು ನಿನಗೆ
ಶಾಂತಿಗೆ ಸಾಧನವೈ ೧
ಶ್ರವಣಮನನವಾ ಸುವಿಚಾರವನ
ಗುರುಮುಖದಲಿ ನಿಜವಾ
ತಿಳಿದನುಭವದಲಿ ನೀ ನಿಶ್ಚಯಿಸೈ
ಶಂಕರ ಬೋಧವನಾ ೨

 

೩೯೬
ತಿಳಿ ತಿಳಿ ನೀ ತಿಳಿ ತಿಳಿ ನೀ
ಅಳಿಯದಾಗಿಹ ಸ್ಥಿರಪದವಾ ಪ
ತೋರಿ ಅಡಗುವ ಜಗಕಾಧಾರ
ತೋರಿಕೆ ಅಡಗಲು ತಾನುಳಿವಾ
ಪಾರಮಾರ್ಥವೆ ತಾನೆನುತಾ ೧
ಅನಿಸಿಕೆಯೆಲ್ಲವು ಪುಸಿಯಿಹುದೆಂದು
ಘನಾನುಭವವಾ ನೀ ಪಡೆಯುತಲಿ
ಅನುದಿನ ಮನನವ ಮಾಳ್ಪುದು ನಿನ್ನೋಳು
ಅನುಭವವಾ ದೃಢಪಡಿಸೈ
ವಿನುತ ಶಂಕರಗುರುನುಡಿಯಾ ೨

 

ತಿಳಿ ನಿನ್ನಯ ನಿಜವಾ ಎಲೆ ಜೀವಾ ಅಳಿ
ದೇಹದ ಭಾವಾ
ಮೋಹವಾ ಕಳೆ ನಾನೀನೆನ್ನುವ ಭೇದವಾ ಪ
ತನು ಮೂರರ ಸಾಕ್ಷೀ ನೀನಿಹೆ
ಘನ ಚಿನ್ಮಯರೂಪಾ ನೀನಿಹೆ
ಅನುಮಾನಿಸದೀಪರಿ ಯೋಚಿಸು ನೀ
ಮನವಾರೆ ಇದೇ ನಿಜವೆಂದೆನುತಾ
ಅನುದಿನದಲಿ ನಿಶ್ಚಯಗೊಳಿಸುತಲಿ
ಅನುಭವದಲಿ ತಿಳಿ ಈ ಬೋಧವಾ
ಕಳೆ ನಾನೀನೆನ್ನುವ ಭೇದವಾ ೧
ಇದು ತೋರಿ ಅಡಗುವಾ ಕಲ್ಪನೆ
ಅದು ತೋರಿಕೆಯಳಿದ ಆತ್ಮನೇ
ಇದು ಕನಸಿನ ಪರಿ ಈ ಜಗವೆಲ್ಲ
ಅದು ನೀನಿರುವಿ ಇದು ನೀನಲ್ಲ
ಇದೆ ತಿಳಿವಿಕೆಯಿಂದಲಿ ಮುಕುತಿ ಕಣಾ
ಇದೆ ಶಂಕರಗುರುವಿನ ಬೋಧವಾ
ತಿಳಿದಾನಂದಿಸು ನೀನೇ ಶಿವಾ ೨

 

ತಿಳಿ ನೀನೆ ಪರಬ್ರಹ್ಮ ರೂಪ ಏ ಜೀವಾ ತಿಳಿ ನೀನೆ ಪ
ಪ್ರಾಣಕ್ಕೂ ಪ್ರಾಣ ಇದೆ ನೋಡು ಜಾಣ
ಈ ವಿಶ್ವದಲ್ಲೇಕ ತಾಣಾ
ಒಳ ಹೊರಗೂ ತುಂಬಿರ್ದ ಘನವೇ
ನಿರಾಕಾರ ವಿಭುವೇ ಈ ಬ್ರಹ್ಮ ತಿಳಿ ನೀನೆ ೧
ಕಲ್ಪನಾ ನೀಗಿ ತಾನೊಂದೆ ಆಗಿ ಅಲ್ಪತ್ವವೆಲ್ಲವು ಪೋಗಿ
ಅದೇ ನೋಡು ಸುಖರೂಪಬ್ರಹ್ಮ ಅದೇ ಪೂರ್ಣಬ್ರಹ್ಮ
ಆ ಬ್ರಹ್ಮ ತಿಳಿ ನೀನೆ ಪರಬ್ರಹ್ಮರೂಪಾ ೨
ಸರ್ವಾಧಾರಾ ನಭದಂತೆ ಪೂರಾ
ನಿರ್ವಿಕಲ್ಪ ಸುಖಸಾರಾ
ಅದೇ ನೋಡು ಘನಾನಂದರೂಪ ಶಂಕರರೂಪಈ ರೂಪಾ ತಿಳಿ ನೀನೆ ಪರಬ್ರಹ್ಮರೂಪಾ೩

 

ತಿಳಿ ಮನದಾಚೆಯ ಪದವನು ನೀ
ತಿಳಿ ಆದೆ ದೇವನು ಇರುತಿಹೆ ನೀ ಪ
ಅದು ಕೊನೆಯಾಚೆಗೆ ಬೇರಿಲ್ಲ
ಅದು ಮನಸಿಗೆ ನಿಲುಕುವದಲ್ಲ
ಅದನನು ಭವದಲಿ ತಿಳಿಯಲ್ಲ
ಬಿಡು ಮನಸಿನ ಗೊಡವೆಯನೆಲ್ಲ
ಇದೆ ಜ್ಞಾನಾಗ್ನಿಯು ಸುಡುತಿಹುದೋ
ಒದಗಿದ ಕರ್ಮದ ಕಾಷ್ಮಗಳ ೧
ಮನವಡಗಿದ ಪದ ಪರಿಚಯವ
ತನಿನಿದ್ರೆಯ ಮೀರಿದ ಸ್ಥಿತಿಯ
ಅನುಭವದಲಿ ತರುವುದೆ ಯೋಗ
ಅದನೇ ಯತ್ನದಿ ಸಾಧಿಸು ತಾ
ನನಸಿನಲೇ ಗುರು ಮುಖದಿಂದ
ಕೇಳಿ ನಿವೇಕದಿ ತಿಳಿ ಬೇಗಾ ೨
ಎಚ್ಚರವಿದು ತಿಳಿ ಕನಸೆಂದು
ಅಚ್ಚಳಿಯದ ಸ್ಥಿತಿ ನಾನೆಂದು
ನಿಚ್ಚಳದಲಿ ನಿಶ್ಚಯಿಸುವದು
ತುಚ್ಛದ ತೋರಿಕೆ ಎಂದು ತಿಳಿ
ಸಚ್ಚಿತ್‍ಶಂಕರ ಬೋಧವನಾ ೩

 

ತಿಳಿ ಸತ್ಯರೂಪವÀ ಪರಮಾನುಭವವ
ಸುವಿಚಾರದಿಂದ ಯೋಚಿಸು ಜೀವಾ ಪ
ನಾ ನೀನು ಎನುವಾ ಇದು ಅದು ಎನುವ
ನಾನಾತ್ಮಭಾವಾ ಪುಸಿಯಿದು ಜೀವಾ
ಏನೊಂದು ಮಿಲ್ಲದೆ ತಾನುಳಿದಿರುವ
ಸ್ವಾನುಭವಾತ್ಮಾ ಸತ್ಯನಾಗಿರುವ ೧
ಕರ್ತೃವೆನಿಸದ ಭೋಕ್ರ‍ತವೆನಿಸದ
ಅನಿಸಿಕೆಯಳಿದಾ ನಿತ್ಯನಿರಂಜನ
ಮಾಯಾವಿಲಾಸದಿ ತೋರುವನೀಪರಿ
ಕನಸಿನೊಲಿದುವೇ ಪುಸಿ ಈ ಜಗವು ೨
ಅವಿಚಾರಗಳಿಗೆ ಬೇರಾಗಿ ತೋರೇ
ಸುವಿಚಾರದಿಂ ನೋಡೇ ತಿಳಿವುದು ಇದುವೇ
ಅದೇ ಪರಮಾತ್ಮನೇ ನೀನಿರುವಿಯಿದೋ
ಗುರು ಶಂಕರರಾರ್ಯನ ವರಬೋಧವಿದೋ ೩

 

ತಿಳಿ ಸುಖಕರವೀ ಬೋಧ ಅಹ ಅಹ
ಗೆಳೆಯನೆ ಮುಕುತಿಪ್ರದಾ ಘನಮೋದ
ಬಲು ಆನಂದವೀವ ಪದ ಪ
ಪರಮಾನಂದಾ ನೀಡಿ ತೋರಿಕೆ ಪುಸಿಮಾಡಿ
ನಿಜತೋರಿ ನಿಜ ಸಾಯುಜ್ಯವೀಯುವದೈ ೧
ಮರುಳರ ಮಾತೆಂದು ಮದದಲಿ ಗಳಹದಿರೈ
ಇಂತೆಂದು ಮದದಲಿ ಗಳಹದಿರೈ
ಗುರುಶಂಕರ ಬೋಧವಿದು ೨

 

ತಿಳೀ ತಿಳೀ ಅನುಭವದಾಳಾ
ಪೇಳ್ವೆ ಸ್ವಾನಂದವ ನೀ ಕೇಳಾ ಪ
ತನುಮನಕರಣಕೆ ಮೀರಿರುವಾ
ಸನಾತನಾ ಸಂಪೂರ್ಣಘನಾ
ನೀನೆ ಆನಂದಾತ್ಮನದೆಂದು ೧
ದೇಹಾದಿಗಳೇ ನಾನೆಂಬ
ಮಹಾದೃಢದ ಈ ಮತಿಯಂತೆ
ನೀನೆ ಆತ್ಮಸ್ವರೂಪನು ಎಂದು ೨
ಗಟ್ಟಿಗೊಳಿಸು ಈ ವಿಷಯಾ ಮನದೋಳ್
ಎಟ್ಟಿ ಮನಸಿನಾ ನಷ್ಟವ ಮಾಡಿ
ಕೆಟ್ಟಾ ಬಾಳಿದು ಪುಸಿ ಎಂಬುದನು ೩
ಜೀವನ್ಮುಕುತಿ ಆನಂದ
ದೇವನೆ ತಾನೆನ್ನುವದೇ ಚೆಂದ
ಭವಹಾರಿ ಶಂಕರನ ಜ್ಞಾನಾ ೪

 

ತಿಳೀಮನವೇ ತಿಳೀಮನವೇ ತಿಳೀಮನವೇ
ತಿಳಿ ಸಂಪೂರ್ಣ ಸುಖತಾಣಾ ತಿಳಿ ಸಂಪೂರ್ಣ ಸುಖತಾಣಾ
ಸಾವಿನ ಬಾಧೆಯ ನೀಗುವಿ ನಿಜವಾಗೀ ಸಾವಿನ ಬಾಧಾ
ಭಾವಾತೀತನ ನೀ ತಿಳೀಮನವೇ ಪ
ನೋಡು ನೀನೇ ಆತ್ಮಸ್ವರೂಪಾ ಪೇಳಿದ ಗುರುಭೂಪಾ
ಪೇಳ್ದೆ ಗುರುಭೂಪಾ ದೂಡು ದೇಹಾದಿಗಳ ತಾಪಾ
ನೋಡುನಿಜರೂಪಾ ನೀ ನುಡಿಮನಗಳಿಗೂ ಕಡೆಯಾಗಿರುವ
ಅಡಗಿದ ಗೂಢವಿದು ತಿಳೀಮನವೇ ೧
ಕರ್ಮ ಪಾಶಕೆ ಕಠಾರಿಯಿದು ಜ್ಞಾನಾ
ಮರ್ಮವಿದು ಘನಶಾಂತಿಯಾ ಸ್ಥಾನಾ
ಧರ್ಮಾಧರ್ಮವ ಮೀರಿಹ ತಾಣ
ದುರ್ಮತಿಯಾ ಬಿಡು ಜಾಣಾ
ಘೋರತರದ ಸಂಸಾರದ ನಾಶಾ
ಪೂರಣಗೊಂಬುದು ಆಶಾ
ಪರಾಶಾಂತಿಗಿನ್ನೊಂದನು ಕಾಣೆ
ಗುರುಶಂಕರನಾಣೇ ಗುರುಶಂಕರನಾಣೇ ತಿಳೀಮನವೇ ೨

 

೩೩೪
ದತ್ತ ದಿಗಂಬರನೇ ವಂದಿಪೆ ನಾ ಕಾಯೈ ನೀ
ಕರುಣಾ ಸಾಗರ ವಲ್ಲಭರಾಮಾ
ಪಾಡುವೆನಾ ಹೇ ಜಗದೀಶಾ
ನೀಗುಸು ಆಶಾ ಬೇಡುವೆ ಶ್ರೀಶಾ
ಚೈತನ್ಯಾಂಬುಧಿ ಆತ್ಮಸ್ವರೂಪಾ
ವಿಷಯದೊಳಿರುವಾ ಈ ಘನಪ್ರೇಮಾ
ನಿನ್ನೊಳಗಿರಲೈ ನಿರ್ಗುಣಧಾಮಾ
ಸದ್ಗುರುನಾಥಾ ಹೇ ಅವದೂತಾ
ಸತ್ಯ ಸ್ವರೂಪಾ ನಿತ್ಯಾನಂದಾ
ಮಿಥ್ಯಾಕಲ್ಪನೇ ಈ ಜಗ ನಿನ್ನೊಳ್‍ಬ್ರಹ್ಮಾನಂದಾ ಶಂಕರಾರೂಪ

 

 

ದೂಡು ಧನಮಾನಗರ್ವವ
ಅಭಿಮಾನವೆಲ್ಲವ ತರವಲ್ಲವೋ ಪ
ಶಮೆದಮೆವೈರಾಗ್ಯ ದೃಢವಾಗಿಹ
ಶೃತಿವಿದಿತಾಗಿಹ ಘನ ವಿನಯಾದಿ ಸಾಧನೆ
ಪರಮಾರ್ಥಕೆ ಬೇಕು ತಿಳಿ ಜೀವನೇ ೧
ಅನುಭಾವಕುಚಿತಾದ ಪರಿ ಪ್ರಶ್ನೆಯಾ
ಮಾಡು ನಿಜ ಶೋಧವಾ ನೀಡು ಶಿರವನ್ನು
ಗುರು ಶಂಕರನ ಪಾದಕೆ ೨

 

೩೩೫
ದೇವನಾ ದರುಶನಾ ಜೀವನಾ ಪಾವನಾ
ಗುರುವಿನಾ ಪ್ರವಚನಾ ಸಾವಿನಾ ನಾಶನಾ ಪ
ಸ್ವಾತ್ಮದ ಜ್ಞಾನೋದಯ ಜಗದಿ ಪೂರ್ಣ ನಿರ್ಭಯ
ಬ್ರಹ್ಮಪದದ ತನುಮಯ ತಾನೇ ಶುದ್ಧ ಚಿನುಮಯ ೧
ಜ್ಞಾನದ ಪೂರ್ಣಾನುಭವ ನಿರ್ವಿಕಲ್ಪ ಸ್ಥಿತಿಯೆ ಶಿವಾ
ನೀಗಿತು ಈ ದುರುಳ ಭವ ಗುರುವಿತ್ತಾತ್ಮಾನುಭವ ೨
ಜೀವನ್ಮುಕುತಿ ಆನಂದ ತಿಳಿಯೆ ನೀನೆ ಮುಕುಂದ
ಅರಿತು ನೋಡು ಇದನೆಂದ ಗುರುಶಂಕರನಾ ಕಂದಾ ೩

 

೩೩೬
ನಂಬಿ ಕೆಟ್ಟವರಿಲ್ಲವೊ ಸದ್ಗುರುವಿನ
ನಂಬಿ ಕೆಟ್ಟವರಿಲ್ಲವೊ
ನಂಬದೆ ಗುರುವಿನ ಜ್ಞಾನದ ಬೋಧವ
ಹುಂಬತನವ ಮಾಡಿ ಕೆಟ್ಟರೆ ಕೆಡಲಯ್ಯ ಪ
ಬಾಳು ದುಃಖದ ಆಗರ ಸ್ವರೂಪದಿ
ಕೇಳಬೇಡೆಲೊ ದುಃಖವಾ
ಏಳು ಎಚ್ಚರಗೊಳ್ಳು ಕೀಳುತನವ ಬಿಡು
ಹೇಳಿಕೊಡುವೆನೆಂಬ ಗುರುವಿನ ನುಡಿಯನು ೧
ದೇಹಬುದ್ಧಿಯ ಬಿಡಿಸಿ ವಿವೇಕದಿ ದೇವಬುದ್ದಿಯನಿರಿಸಿ
ಸೋಹವೆಂಬುವ ಮಹಾಮಂತ್ರವ ಬೋಧಿಸಿ
ಮೋಹವನೋಡಿಸಿ ಕಾಯುವ ಗುರುವಿನ ೨
ಪಂಚಕೋಶವ ಕಳಿಸಿ ಸಂಚಿತ ಮೊದಲಾದ ಕರ್ಮವ ನೀಗಿಸಿ
ಹಂಚಿಕೆಯಿಂದಲಿ ಮುಕ್ತನ ಮಾಡುವ
ಪಂಚಕಸಾಕ್ಷಿ ಶ್ರೀಗುರುವಿನ ಬೋಧವ ೩
ತಾನೆ ದೇವನು ಎನ್ನುವಾ ಪಾವನವಾದ
ಸ್ವಾನುಭವನೀಡುವಾ
ಏನೊಂದು ಬಯಸದೆ ಜ್ಞಾನದಾನವ ಮಾಳ್ಪ
ಜ್ಞಾನಿ ಶಂಕರಗುರುರಾಯನ ನುಡಿಯನು ೪

 

೩೩೮
ನಮಿಪೇ ನಮಿಪೇ ನಮಿಪೇ ಶ್ರೀ ಗುರುದೇವಾ
ನಮಿಪೇ ನಾ ಅಮಿತನಾದ ಜ್ಞಾನಭೋಧಾ ನೀತಿದಾ ವಿ¨Àುಧಾ
ಜ್ಞಾನಬೋಧಾ ನೀಡಿ ಮನದಾ ದೀನತನ ಬಿಡಿಸಿ
ನೀನೆ ಆ ಪರಮಾತ್ಮನೆನುವಾ ಸ್ವಾನುಭವ ಹಿಡಿಸಿ
ಹೀನವಿಷಯಾಸಕ್ತಿಯಾ ನೀಗಿಸಿ ಎನಗಾಗಿ
ಅಮಿತವಾದಾ ಜ್ಞಾನಬೋಧಾ ನೀಡಿದಾ ವಿಬುಧಾ
ಜಗದಸುಖದ ಮರುಳು ಬಿಡಿಸಿ ಸೊಗಸ ತೋರಿಸಿದಿ
ಅಘವನಳಿದು ಸೊಗಸಿನೊಳಗೆ ಖಗೆಯ ನಿಲಸಿದಿ ನೀ
ಬಗೆಯ ರೋಗವೆಲ್ಲವ ನೀಗಿಸಿ ಎನಗಾಗಿ
ಬಗೆಬಗೆಯಲಿ ಬೋಧಿಸಿದ ಶ್ರೀ ಶಂಕರಾರ್ಯನೇ ನಾ

 

೩೩೯
ನಮಿಸುವೆ ನಿನ್ನ ಶ್ರೀಗುರುವೆ ಅಮಿತಾನಂದಾತ್ಮಸ್ವರೂಪನೇ
ಶಮನ ಮಾತು ಈ ಭವಭಾಧೆಯ ನೀ
ಚಿನುಮಯ ಮೂರುತಿಯೇ ಪ
ಬೆಂದೆನು ಸುಖದುಃಖಗಳಲಿ ನಾ
ಬಹು ನೊಂದೆನು ಜನಿಮೃತಿ ಹೊಂದುತಾ
ಎಂದಿಗೆ ಪರಮಾನಂದವ ಪಡೆವೇ
ಬಂದೆನು ಶರಣಾಗಿ ೧
ಭೋಗದಿ ಸುಖಿಸುವೆನೆಂಬುವಾ ಅನು
ರಾಗದಿ ವಿಷಯಗಳಲಿ ಸಿಲುಕಿ
ಭೋಗಿಸಿದಂತೆಯೆ ವಾಸನಾ ಬಲ
ವಾಗಂತ ಬಂದಿತು ಮನದಲ್ಲಿ ೨
ಈ ಗತಿಯಲಿ ಸುಖಕಾಣದೆ ಭವ
ರೋಗದಿ ಬಳಲುವೆನೀಗಲೇ
ತ್ಯಾಗದಿ ನಿಜಸುಖ ದೊರಕುವ ರೀತಿಯ
ತಿಳುಹಿಸು ಗುರುವರನೆ ೩
ವಿಶ್ವದ ತೊಡಕನು ಹಾಕಿಕೊಂತು
ಈಶ್ವರನನ್ನೇ ಮರೆತಿರುವೆ
ನಶ್ವರವಾಗಿಹ ಈ ಜಗವನು
ಶಾಶ್ವತವೆಂದೇ ತಿಳಿದಿರುವೇ ೪

 

೩೪೦
ನಮೋ ಸಚ್ಚಿದಾನಂದಾ
ಪರಾತ್ಮಾ ಶ್ರೀಶಿವಾನಂದಾ ಪ
ನಮಿಸುವೇ ಪುಣ್ಯ ವಿಚಿತಾತ್ಮಾ
ಮಹಾತ್ಮಾ ಸತ್ಯ ಸರ್ವಾತ್ಮಾ
ಸ್ವರೂಪಾನಂದವಾ ಪಡೆವಾ
ಸನ್ಮತಿಯಾ ನೀಡು ಗುರುದೇವಾ
ಚರಣಕೆ ಎರಗುವೆನು ದೇವಾ ೧
ಸದಾನಂದಾ ಮನೋಹರಾ
ಹೃದಯದಾವಾಸ ನಿಜಸಾರಾ
ಗುರುವರಾ ಶಂಕರಸ್ವರೂಪಾ
ಕರುಣಿಸೈ ಬೋಧದಾನಂದಾ
ಪರಾತ್ಮಾ ಶ್ರೀಶಿವಾನಂದಾ ೨

 

ನಾ ಪೊಗಳೆಲು ನಿನ್ನಾಗಾನಾ ಪರಿಪೂರ್ಣಾ ಸತ್ಯಜ್ಞಾನಾ
ಗುರುಮೂರ್ತಿ ಎನಗೆ ದಾನಾ ನೀಡಿದೆ ನೀ ದಿವ್ಯಜ್ಞಾನಾ
ಅವಿಚಾರದಿಂದ ತೊಳಲಿ ಭವಭಾಧೆಯಿಂದ ಬಳಲಿ
ಕಿವಿಗೊಡದೆ ನಿನ್ನನುಡಿಗೆ ಭುವನದಲಿ ದುಃಖಿಯಾದೆ
ಶಿವ ನೀನೆ ಎಂದು ಪೇಳಿ ಸವನಿಸಿದೆ ಮೋಕ್ಷಪದವಾ
ಏನೆಂದು ಪಾಡಲಯ್ಯಾ ನಾನೆಂಬ ಭಾವವಡÀಗಿ
ನೀ ನಾನೆ ಎಂಬ ತಿಳಿವು ಘನವಾಗಿನೆಲಿಸಿತೀಗ
ಏನೊಂದು ತೋರದಯ್ಯಾ ನಾನಾತ್ವವೆಂಬ ಭಾವ
ಈ ಸೋಹವೆಂಬ ಪದವ ಲೇಸಾಗಿ ಬೋಧಿಸಿದ ನೀ
ಆಶಾನಿವಾಸೆ ನೀಗಿ ನಾ ಶಾಂತನಾದೆ ಮನದಿ
ನೀ ಸಚ್ಚಿದಾತ್ಮಗುರುವೇ ಶಂಕರನೆ ಕಲ್ಪತರುವೆ

 

ನಿನ್ನ ಸ್ವರೂಪ ಚೈತನ್ಯರೂಪ ಆನಂದರೂಪ ನೀ ನಿರ್ವಿಕಲ್ಪ ಪ
ಬುದ್ಧಿ ಮನಸುಗಳುಹೊದ್ದದ ತಾಣ
ನಿದ್ರಾದ್ಯವಸ್ಥಾ ಮೀರಿರ್ದ ಸ್ಥಿತಿಯೇ ನಿನ್ನ ಸ್ವರೂಪ ೧
ನಾನಾತ್ವವೆಲ್ಲವಪುಸಿ ಎಂದು ಪೇಳ್ದ
ನೀನೇ ಪರಮ ಶ್ರೀ ಶಂಕರರೂಪ ೨

 

ನಿನ್ನೊಳು ನೀ ತಿಳಿಯೋ ಮನುಜ ಪ
ಪರಮಾತ್ಮನೆ ನೀನಿರುವಿಯೊ ಮನುಜಾ
ಅರಿತು ನೋಡು ನಿನ್ನಯ ನಿಜವಾ
ಮರೆತಿರುವಿಯೊ ನೀ ನಿನ್ನಿರುವಿಕೆಯಾ
ತೋರುವ ದೇಹವು ನಾನಲ್ಲೆಂದು ೧
ನನಸಿನ ದೇಹವು ಕನಸಿನೊಳುಂಟೆ
ನೆನಸಿ ನೋಡು ನಿನ್ನಿರುವಿಕೆ ಸಮವು
ಮನಸಿನಿಂದ ನೀ ತಿಳಿಯೀ ವಿಷಯವ
ನನಸಿನ ದೇಹವು ನಾನಲ್ಲೆಂದು ೨
ಗಾಢನಿದ್ರೆಯಲಿ ಅಡಗಿತು ಬುಧ್ಧಿಯು
ಗಡನೆ ನೋಡು ನಿನ್ನಿರುವಿಕೆಯಾ
ಜಡದೇಹವು ಮನಬುದ್ಧ್ಯಾದಿಗಳಿಂ
ಬಿಡಿಯಾದಿರುವಿಕೆಯುಳಿವುದು ನೀನೇ ೩
ಮೂರು ಜಾಗೆಯಲಿ ನಿರುತದೊಳಿರುತಿಹ
ಇರವರಿವಾನಂದವೆ ನೀನೈ
ಮರೆತು ಇದನು ನೀ ಬರಿದೇ ಮಿಡುಕುವಿ
ದೊರಕುವದೇ ಸುಖ ಹೊರಗೆ ಹುಡುಕಲು ೪
ತೋರಿಕೆ ಅನಿಸಿಕೆಗಳು ಕ್ಷಣಭಂಗುರ
ಮರಣರಹಿತ ಪರವಸ್ತುವು ನೀನೆ
ಅರಿವೇ ಪರಬ್ರಹ್ಮವು ತಾನೆಂದು
ವರಶ್ರುತಿ ಸಾರಿತು ಬ್ರಹ್ಮನೆ ನೀನೈ ೫
ಗರುವಿನ ಕರುಣದಿ ತಿಳಿಯೇ ವಿಷಯವ
ಮರುಳಾಗದಿರೈ ಮಾಯಾಕಾರ್ಯಕೆ
ಮರಣಜನನಗಳ ನೀಗುತಲಿ ವರ
ಗುರುಶಂಕರನಾ ಪದವಿಯ ಪಡೆಯುವಿ ೬

 

ನಿರ್ವಿಕಲ್ಪರೂಪವÉೀ ಆನಂದರುಪವೇ
ಸರ್ವಾಧಾರ ಚಿನ್ನಭಾ ನೀನೆ ಆ ಸ್ವಯಂಪ್ರಭಾ ಪ
ನೀ…… ಅನುಭವದಿ ಮನಗಾಣುವಧೀ
ಭಾವಾತೀತ ಬೋಧವಾ ನಿತ್ಯಾನಂದದಾತ್ಮವಾ
ಕಲ್ಪನೆ ಎರಡರ ಮಧ್ಯದೊಳಿರುವ ಕಲ್ಪನೆ ಸಾಕ್ಷಿರೂಪವೇ
ಪೂರ್ಣಾನಂದ ನೀನಿಹೆ ೧
ಈ……….. ತೋರಿಕೆ ಎಲ್ಲಾ ಕಲ್ಪಿತಾ
ಮನಸಿನದೆಲ್ಲ ಜೀವಿತಾ
ಮನವೇ ಚಿತ್ತಾಕಾಶ ತಾ
ಕನಸಿನ ಪರಿ ಈ ತೋರಿಕೆ ಮಿಥ್ಯಾ
ಚಿನುಮಯ ಮಾತ್ರ ನೀನಿಹೆ
ಶಂಕರಗುರುವಿನ ಬೋಧವೇ೨

 

ನೀ ನೀಡು ವರವ ದೇವಾ ಭವಚಾಲಕಾರಣಾದ
ಈ ವಾಸನಾಪಿಶಾಚಾ ಬಿಡುವಂತೆ ಕರುಣಿಸೀಗ
ವಿಷಯೇಚ್ಛಯಿಂದ ಬಳಲಿ ವಿಷಯಗಳ ಭೋಗಪಡೆದೆ
ಪುಸಿಯಾದ ವಿಷಯಸುಖದ ವ್ಯಸನದಲ್ಲಿ ಬೆಂದು ಹೋದÉ
ವಿಷಯೇಚ್ಛೆ ಹೋಗಲಿಲ್ಲ ಕಸವಿಸಿಯ ಬಿಡುತಲಿರುವೆ
ಹಸನಾಗಿ ಬೋಧಮಾಡೈ
ಘೋರಾದ ಭವಜಲಧಿಯಾ ಪಾರಾಗುವುದೆ ಯುಕುತಿಯಾ
ಚಿರಶಾಂತಿ ಪಡೆವ ಪರಿಯಾ ಪರಮಾತ್ಮಜ್ಞಾನಸಿರಿಯಾ
ಕರುಣಿಪುದು ಶಂಕರಾರ್ಯ ಶರಣಾದೆ ಜ್ಞಾನಿವರ್ಯಾ

 

ನೀನೆ ನಿರಂಜನ ಪರಮಾತ್ಮ
ಸ್ವಾನುಭವವ ಪಡೆದು ನೋಡು ಪ
ಬಿಡು ದೇಹದಿ ಆತ್ಮಭಾನ
ಪಡೆ ಗುರುವಿನ ದಿವ್ಯ ಜ್ಞಾನ
ನುಡಿ ಮನಸಿಗೆ ನಿಲುಕದಿರುವ
ಕಡೆ ಇಲ್ಲದ ಸ್ಥಿತಿಯ ನೋಡು
ಒಡಲುಪ್ರಾಣಮನಾದಿಗಳು
ಜಡವಾದವು ಎಂದು ತಿಳಿದು
ದೃಢನಿಶ್ಚಯದಿಂದ ಕಳೆಯೆ
ಕಡೆಗುಳಿಯುವ ಮೂಲರೂಪ ೧
ಪರಮಾತ್ಮನ ನೋಡುವುದಕೆ
ಹೊರಗೆಲ್ಲಿಯು ಹೋಗಬೇಡ
ಭರಿತನವನು ವಿಶ್ವದಲ್ಲಿ
ಇರನೆ ನಿನ್ನ ಹೃದಯದಲ್ಲಿ
ಮರೆಯದೆ ಈ ನುಡಿಯ ಬೇಗ
ಅರಿತುಕೊಳ್ಳು ನಿನ್ನ ರೂಪ
ಪರಮಪದವ ಪೊಂದುವಿ ನೀ
ಗುರುಶಂಕರನುಕ್ತಿಯಂತೆ ೨

 

೩೪೧
ನೀನೇ ಭವಾಬ್ಧಿ ದಾಂಟಿಸಿದಿ ಸದ್ಗುರುನಾಥಾ
ನೀನೇ ಸ್ವರೂಪಾವಬೋಧ ನೀಡಿದಿ ತಾತಾ
ಜ್ಞಾನಾಸಿಯಿಂದ ಕಡಿದೈ ಸಂಸಾರಪಾಶವ
ನಾನಾತ್ಮವಳಿದು ಕಳೆದೈ ಅಜ್ಞಾನದೋಷವಾ
ನಾನೆನ್ನ ರೂಪ ತಿಳಿದೆ ಪ್ರಭೋ ಶ್ರೀಗುರುದೇವಾ
ನಾನೇಂ ಪೇಳ್ವೆ ನಿನ್ನ ದಿವ್ಯ ಬೋಧಪ್ರಭಾವಾ
ಈ ವಿಶ್ವವೆಲ್ಲ ಕನಸಿನಂತೆ ಎನಗೆ ತೊರ್ಪುದೈ
ಆವಾಗ ಬೋಧವಾಯ್ತು ನಾನರಿತೆ ಸತ್ಯವಾ
ನಾವೀರ್ವರೆಂಬ ಭಾವವಡಗಿ ಸೇರಿದೆ ನಿನ್ನೋಳ್‍ಈ ವಾಣಿಯಿತ್ತು ಸಲುಹಿದ ಶ್ರೀ ಶಂಕರ ಗುರುವೆ

 

ನೀವೆಲ್ಲ ಪರಮಾತ್ಮನೆ ಏಳಿ
ಸಾರುವೆ ಈ ನುಡಿ ಕೇಳಿ ಪ
ತುಂಬಿಹ ಜಗವನು ನಿಮ್ಮೊಳಗಿರನೇ
ಅಲೋಚಿಸಿರೀನುಡಿಯಾ
ನಂಬಿರಿ ಶ್ರುತಿಶಿರ ಸಾರಿತು ಪರಮನು
ಹೃದಯದ ಗುಹೆಯೊಳಗಿರುವಾ
ಕಾಂಬನು ಗುಹೆಗಳ ಕಳೆದುಳಿದಾ ನಿಜ
ಸಂಪೂರ್ಣಪದವೇ ಪರಾನಂದಾ ೧
ಸ್ಥೂಲದೇಹಮೊದಲಾಗಿಹ ಗುಹೆಗಳ
ನೈದನು ಕಳೆಯಲು ಉಳಿವಾ
ಮೂಲರೂಪ ಪರಮಾತ್ಮನೆ ತಾನೆಂ
ದರಿಯುತ ತಿಳಿಯಿರಿ ನಿಜವಾ
ತಿಳಿಯಿರಿ ನಿರುತದಿ ನೀವೇ ಆ ಪದ
ಕಳೆದು ಪೇಳ್ದ ಮಾಯಾ ಶಂಕರಾರ್ಯ ೨

 

ನಿ…………… ನೇ ಪರಮಾತ್ಮನು ನೋಡೈ
ವಿಚಾರಿಸಿ ನಡೆ ಬೇಗ
ಸ್ವಮಾನಸದಿ ತಿಳಿಯೆಂದಾ
ತಿಳಿಯೇ ದೇವನಾಗುವಿ ಎಂದಾ
ಗುರು ಶಂಕರನಾ ಕಂದಾ

 

ನೋಡು ನೋಡು ಜೀವನೆ ನೀ ನಿನ್ನಯ ನಿಜರೂಪವಾ
ತಿಳಿದು ನಲಿದು ಜ್ಞಾನಪಥದಿ ಆನಂದವ ಹೊಂದು ನೀ ಪ
ಅಮರನಾದ ಆತ್ಮ ನೀನು ಆನಂದದ ನಿಧಿಯೇ ನೀ
ಅರಿತು ಇದನು ನಿನ್ನ ಮನದಿ ಶಾಂತರೂಪನಾಗು ನೀ ೧
ನಾನೆನ್ನುವ ಅನಿಸಿಕೆಯದು ಅಡಗಲು ತಾನುಳಿಯುವಾ
ತೋರಿಕೆಯನು ಮೀರಿದಾ ನಿರ್ವಿಕಲ್ಪ ನೋಡು ನೀ
ಶ್ರವಣ ಮನನ ನಿದಿಧ್ಯಾಸ ಸಾಧನೆಗಳ ಮಾಡುತಾ
ತಿಳಿವುದಾತ್ಮರೂಪ ನಾನೆ ಎಂದು ನಿನ್ನ ಮನದಲಿ ೨
ಮನದೊಳಗೀಪರಿಯಾ ದೃಢತರದಲಿ ನಿಶ್ಚಿತಮಾಡೀ
ದೇಹ ಮನಸು ಬುದ್ಧಿಗಳಿವು ನಾನಲ್ಲೆಂದರಿಯುತ
ತೋರಿ ಅಡಗುತಿರುವ ಜಗವು ಕನಸೇ ಎಂದರಿತು ನೀ
ಪರಮಸತ್ಯ ಆತ್ಮರೂಪ ನಾನಿಹೆನೆಂದರಿತುಕೋ ೩
ಪ್ರೇಮರೂಪ ನೀನೆ ಎಂದು ಸಾರಿ ಪೇಳ್ದ ಜ್ಞಾನವ
ಆ ಮಹಾತ್ಮಶಂಕರಗುರುರಾಜನ ನುಡಿ ತಿಳಿಯೋ ನೀ ೪

 

೩೪೨
ಪರಮಾತ್ಮ ದಿವ್ಯಚರಣಾ ಭಜಿಸುವೆವು ಜ್ಞಾನ ಪೂರ್ಣ
ನೀ ತೋರ್ಪುದಯ್ಯ ಕರುಣಾ
ಸಂಸಾರ ತಾಪ ಹರಣಾ
ಆನಂದ ರೂಪ ತಾಣಾ ನಾರಾಯಣಾತ್ಮಪೂರ್ಣ
ನಿನ್ನಿರವೇ ಜಗವಿದೆಲ್ಲ ನಿನ್ನರಿವೇ ಜೀವರೆಲ್ಲಾ
ನಿನ್ನಿಂದೆ ಸುಖವಿದೆಲ್ಲಾ ನೀನೆ ಇದೆಲ್ಲಾ ದೇವಾ
ನೀ ಸತ್ಯ ನಿರ್ವಿಕಾರ ನೀನಾತ್ಮರೂಪಸಾರಾ
ನೀ ಪರಮ ಮೋಕ್ಷತಾಣಾ
ಮರೆತಿರಲು ಜೀವ ನಿನ್ನ ದೊರೆಯುವುದೆ ಶಾಂತಿ ನಿನ್ನ
ಪರಿತಾ¥ಬಿಡುತ ಮುನ್ನಾ ತಿರುಗುವನೋ ಜನ್ಮ ಜನ್ಮ
ಗುರು ಶಂಕರಾರ್ಯ ನಿನ್ನ ಶರಣುಹುದೆ ಶಾಂತಿತಾಣ
ನೀ ಸರ್ವರಾತ್ಮಪೂರ್ಣ

 

ಪರಮಾತ್ಮನ ನೆನೆಯಲು ಬೇಕು
ಪರತರಸುಖವನು ಪಡೆಯುವನಿದರಿಂ
ದುರಿತಗಳೆಲ್ಲವ ನೀಗಲು ತಾ ಪ
ಮೊದಲನೆ ಕಾರ್ಯವು ಜೀವರೆಲ್ಲರಿಗೆ
ಇದು ಬಲು ಸುಲಭವು ಸಾಧನಗಳಲೀ
ಪದುಮನಾಭನನು ನೆನೆಯದಿರುವವ
ಅಧಮನು ಜಗದಿ ವ್ಯರ್ಥ ಜೀವಿಸುವ ೧
ಎಲ್ಲ ವೇದಗಳು ಎಲ್ಲ ಶಾಸ್ತ್ರಗಳು
ಎಲ್ಲ ಸಾಧನೆಗಳು ಆತನ ಪ್ರಾಪ್ತಿಗೆ
ಬಲ್ಲವರಿಂದಲಿ ತಿಳಿದು ವಿಚಾರಿಸಿ
ನಿಲ್ಲದೆ ಸಾಧನೆ ಕೈಕೊಳ್ಳುವುದು ೨
ಕೇಳುವದೈ ಪರಮಾತ್ಮನ ತತ್ವವ
ತಿಳಿವುದು ತನ್ನೊಳು ತಾನೇ ನಿರುತಾ
ಪೇಳಲೇನು ಧ್ಯಾನಿಸುವುದಾತನ
ಮೇಳವಿಸುವದೈ ಜೀವನ್ಮುಕುತಿ ೩
ನಾರಾಯಣನೇ ಪರಮಗತಿಯು ಈ
ನರಜನ್ಮಕೆ ಬಂದಿರೆ ಲಾಭವಿದೇ
ಅರಿತು ಇದನು ತಾ ಸಾಧನೆ ಮಾಳ್ಪುದು
ಗುರುಶಂಕರನಾ ಬೋಧಸಾರವಿದು ೪

 

೩೪೩
ಪರಮಾನಂದ ಪರಿಪೂರ್ಣಾ ನೀ
ಗುರುವರಾ ಜ್ಞಾನಾದಾತಾ
ಮಾನಿತಾ ನೀ
ದೇಹಾದಿಸಂಘಾತವಾ ಮೀರಿರ್ದ ಸ್ವರೂಪವಾ
ಮಹಾಗೂಢವಾ ಬೋಧಿಸೀ
ಮುಕುತಿ ನೀಡುತಿರುವಾ ನೀ
ಸ್ವರೂಪಾಜ್ಞಾನಾ ಮಹಾಸಾಧನಾ
ಪೇಳಿದ ನೀನೇ ದಯಾಘನಾ ಮಾನಿತನೇ
ಪರಾತ್ಪರಾ ನಿರಾಮಯಾ
ನೀನೇ ಸ್ವರೂಪಾತ್ಮನೈ
ನೀನೇ ನಾನಾದೆ ದೇವಾಗುರುವೇ ಶಂಕರಾರ್ಯ

 

ಪರಸುಖಕರಾ ಗುರುಬೋಧಸಾರಾ
ಮರಣಾ ಜರಾ ದುರಿತಾದಿ ದೂರಾ ಪ
ಜೀವಭಾವವಾ ಸಟೆಯಾಗಿ ಗೈವ
ದೇವಭಾವನಾ ಬಗೆಸಿನಿಲಿಸುವಾ
ಸಾವಿನಂಜಿಕೆ ದೂರಾಗಿ ಮಾಳ್ಪ
ಜೀವಂತಮುಕುತಿ ಕರದೀಯುವಾ ೧
ದೃಶ್ಯವೆಂದು ತೋರ್ಪ ವಿಶ್ವತ್ಯಾಗ ಮಾಡಿ
ದೃಶ್ಯವಸ್ತುವಿಂದ ಬೇರೆನಿಸುವಾ
ಶಾಶ್ವತಾದ ಆ ಪದ ತೋರಿ ಮನದ
ಕಶ್ಮಲವನು ಕಳೆವ ಭವತಾರಕಾ ೨
ಭೇದಭಾವವಾ ಛೇದಿಸುತ ಮನದಿ
ಬೋಧನಾರಾಯಣನ ಕೃಪೆ ಪೊಂದಿದಾ
ಬೋಧರೂಪ ಗುರುವು ಪೇಳಿರ್ದ ಬೋಧ
ಸಾಧು ಶಂಕರಾರ್ಯ ತಾನೆನ್ನುವಾ ೩

 

೩೪೫
ಬನ್ನವನಾ ನೀಗಿದೆ ಜವದಿ
ಧನ್ಯನಾದೆ ಶ್ರೀ ಗುರುವೆ ಧನ್ಯನಾದೆ
ಸದ್ಗುರುವೇ ಧನ್ಯನಾದೆ ಪ
ಭವಸಾಗರವಾ ದಾಟಿದೆ
ಜವನ ಬಾಧೆಯ ನೀಗಿದೆ
ಜೀವಭಾವವು ಸಟಿಯೆಂದೆನಿಸಿ
ದೇವನಾದೆ ಪಾವನನೆ ಧನ್ಯನಾದೆ ೧
ಅರಿತೆನೆನ್ನಯ ನಿಜರೂಪವನಾ
ದುರಿತವ ನೀಗಿದೆ ಅರಿವಿನ ಬಲದಿ
ದೊರಕಿತು ಮುಕುತಿ ಧನ್ಯನಹುದು ನಾ
ನೀನೆ ನಾನೈ ಶಂಕರನೇ ಧನ್ಯನಾದೆ ೨

 

೩೪೬
ಬಾ ಬಾ ಬಾ ಗುರು ದತ್ತಾತ್ರೇಯ ನೀ ಕರುಣಾಮಯಾ
ನೀ ತೋರೈದಯಾ ಬಾ ಬಾ ಬಾ ಗುರುವತ್ತಾ
ಅನುಸೂಯಾಸತಿತನಯಾ ಪರಿ ಹರಿಸೆನ್ನಯ ಮಯಾ
ಎರಗುವೆ ಚರಣಕ್ಕೆ ಜೀಯಾ ಕರುಣಿಸುನೀ ಗುರು ರಾಯಾ
ಈ ಭವಾ ಈ ಭವಾಬ್ಧಿದಾಂಟಿಸು
ಕೈವಲ್ಯ ತೋರಿಸು ದತ್ತಾತ್ರೇಯ
ಬಾಳಿನ ಭ್ರಮಯನು ಬಿಡಿಸಿ ಪಾಲಿಸು ಹೃದಯ ನಿವಾಸಿ
ನಿನ್ನ ಸ್ವರೂಪವ ತಿಳಿಸಿ ಬೋಧಿಸು ಕುರುಪುರವಾಸಿ
ಶ್ರೀ ಗುರÉೂೀ ಶ್ರೀ ಗುರೋ ನಮಿಸುವೆನು
ಪ್ರಭೋ ದಯಾಮಯ ದತ್ತಾತ್ರೇಯಾ
ಚಿನು ಮಯರೂಪನು ನೀನು ಚಿರನದ್ವೈತನುನೀನು
ನೀಡೈ ಚಿತ್ತಕೆ ಶಾಂತಿ ನೀಗಿಸು ಎನ್ನಯ ಭ್ರಾಂತಿ
ನೀ ಗುರೋ ನೀ ಗುರೋ ಶ್ರೀ ಶಂಕರ
ಆನಂದ ಸಾಗರ ದತ್ತಾತ್ರಯ

 

೩೪೭
ಬಾಗಿ ನಾ ನಮಿಪೆ ಗುರುದೇವ
ಯೋಗಿರಾಜಾ ಪಾಲಿಸು ಮತಿಯಾ
ಶ್ರೀಗುರುವೆ ಪರಮಾತ್ಮರೂಪ
ಜ್ಞಾನ ಬೋಧಕಾ ಮುಕುತಿ ಪ್ರದಾತಾ
ಸ್ವಾನುಭವನಂದಾಮೃತದಾತಾ
ಮಾನವಾಕೃತಿ ತಳೆದಬಿಳಾತ್ಮಾ
ಹೀನಭವದ ಭಯ ಬಿಡಿಸಿರುವಾತಾ
ನಿತ್ಯ ನಿರಂಜನ ಸತ್ಯಸ್ವರೂಪ
ಭೃತ್ಯರ ಬೋಧಿಸಿ ಮುಕ್ತಿಯ ನೀವಾ
ಶ್ರೋತ್ರಿಯ ನೀಘನ ಬ್ರಹ್ಮನಿಷ್ಠಗುರುಮತಿಯನೆ ಪ್ರೇರಿಸು ಶ್ರೀಗುರುಶಂಕಗ್

 

೩೪೮
ಬಾಗುವೇ ಶ್ರೀಗುರೋ ಸತ್ಯಸ್ವರೂಪಾ
ಓ ಜ್ಞಾನಿಯೇ ಪರಾತ್ಮರೂಪನೇ
ನೀ ಬೋದಿಸೈ ನಮೋ ಮಹಾತ್ಮನೇ
ಶರಣಾದೆ ಕರುಣಿಸು ನೀ ಭವದಬಾಧೆ ನೀಗಿಸೈ
ಈ ದರುಶನಾ ಪಾದಾಭಿವಂದನಾ
ಈ ಸ್ಪರ್ಶನಾ ಪುನೀತವೀಮನಾ
ಭಾಗ್ಯವಿದೇ ಜೀವನದೀ ನಿನ್ನಂಥ ಗುರು ದೊರಕಿದಿ
ಆನಂದದಾ ಸುಬೋಧ ನೀಡುವಾ
ಈ ಬುಧವಾ ನಿವಾರಿಸುವ ಮಹಾ
ಬೋಧಾತ್ಮ ಶಂಕರಗುರು

 

ಬಿಡು ಬಿಡು ಮನುಜಾ ಜಡದಭಿಮಾನ
ಪಡೆ ಗುರುವಿನಲಿ ಸ್ವಾತ್ಮದ ಜ್ಞಾನಾ ಪ
ಈ ಸುಖದುಃಖದ ಬಡಿದಾಟದಲಿ
ಗಾಸಿಯಾಗುತಲಿ ಸಾಯುವದೇ ದಿಟ
ಲೇಸಾದರು ಸುಖ ಕಾಣಿಯಿದರೊಳು
ಕ್ಲೇಶವ ನೀಗುವಿ ನಿನ್ನ ನೀ ತಿಳಿವೊಡೆ ೧
ಮರಳಿ ದೇಹ ಪಡೆಯದ ದಿವ್ಯ ಬೋಧ
ಪರಮಶಾಂತಿ ದೊರಕಿಸುವ ಪ್ರಮೋದ
ದುರುಳಸಂಸ್ರ‍ಕತಿಯ ಪಾಶದ ಛೇದ
ಮರೆಯದೆ ಮಾಳ್ಪುದು ಸ್ವಾತ್ಮದ ಶೋಧ ೨
ಈ ಘಟ ಮರಣಕೆ ಶಿಲುಕಿದಾದರೂ
ಈ ಘಟದಲಿ ನೀ ಅಮರನೆ ಇರುವೀ
ಬೇಗನೆ ಜೀವನ್ಮುಕುತಿಯ ಪಡೆಯೈ
ಯೋಗಿ ಶಂಕರನ ಸದ್ಬೋಧದಲಿ ೩

 

ಬಿಡೋ ಭ್ರಾಂತಿ ಜೀವಾ ಬಿಡೋ ಕಾಮ್ಯಸೇವಾ
ಅಹಂತಾ ಮಮತ್ವ ಮಹಾಮೂಢಭಾವಾ ಪ
ಜಗವನೆಲ್ಲ ಈಶ್ವರನೆ ಸೃಷ್ಟಿಸಿದ ಕೇಳೋ
ಇದೋ ನಿನ್ನದೆಂಬುವದು ಏನಿಲ್ಲ ತಾಳೋ
ಜಗವ ಸೃಷ್ಟಿಸಿದನಾತ ಪಾಲಿಸುವನಾತ
ಇಗೋ ನಾನೆ ಪಾಲಿಸುವೆನೆನ್ನುವದು ವ್ಯರ್ಥ
ಇದೇ ಭ್ರಮೆಯು ಮಮಕಾರ ಸಂಸಾರ ಭಾರ ೧
ನೀ ಧರಿಸಿರ್ದ ದೇಹವಿದ ನೀ ಸೃಷ್ಟಿಸಿದೆಯಾ
ಇದೇ ರೀತಿ ಹೆರವರದು ಬಿಡು ನಿನ್ನ ಮಾಯಾ
ಇದನು ಪಾಲಿಸುವನಾತನೀಶ್ವರನು ನೋಡಾ
ಇದೇ ರೀತಿ ಪಾಲಿಸುವನೆಲ್ಲವನು ನೋಡಾ
ಮಹಾ ವಿಶ್ವವೆಲ್ಲ ತಿಳೀ ಈಶಲೀಲಾ ೨
ಜಗವ ನಾಶಗೊಳಿಸುವನು ಪ್ರಳಯದಲಿ ಈಶಾ
ಮಗುಳೆ ಜಗ ಜೀವರನು ಸೃಷ್ಟಿಸುವ ತಾನೆ
ಜಗದಿ ವರ್ಣವಾಶ್ರಮದ ಬಲುಕಾರ್ಯ ಪಾಶಾ
ಬಗೆಯಲೀಗ ಪಶುವಿನೊಳು ತಿರುಗಿಸುವನೀಶ
ಮಹಾಯೋಗಿ ಶಂಕರನ ಶರಣಾಗೋ ಜೀವಾ ೩

 

ಬೇಗ ತಿಳಿಯೈ ಶುದ್ಧ ಮನದಿ
ಶ್ರೀಗುರು ಪೇಳ್ದ ಬೋಧಾ
ನೀಗುವಿ ಭವದಾ ಭಾಧಾ
ಸ್ವರೂಪಾ ನಂದ ಪಡೆಯುವಿ ನೀ ಸ್ವರೂಪಾ ಪ
ಪರಮಸತ್ಯದ ತತ್ವವರಿಯಲು
ಮರಣಭಯವಾ ನೀಗುವೀ
ಕರುಣಿ ಗುರುವಿನ ಚರಣಕಮಲದಿ
ಬೆರೆತು ಸುಖಿಸುವಿ ನೀ ಸ್ವರೂಪಾ ೧
ಅರಿಯೊನೀ ಪರಮಾತ್ಮನೆಂಬುದ
ಪರಮ ಶಾಂತಿಯ ದೊರಕಿಸೀ
ಗುರುಶಂಕರನಾ ಬೋಧದಾ
ಸವಿಯುಂಡು ತಣಿಯುವಿ ನೀ ೨

 

೩೪೯
ಬೇಡುವೆ ನಾ ಯಾದವಾ ಬÉೂೀತಿ ಮನದ ಮೋಹವಾ
ಓಡಿಸುತಲಿ ಮಾಧವಾ ನಿನ್ನ ಸೇರಿಕೊಂಬುವಾ
ನೀಡು ಇನಿತು ಭಾಗ್ಯವಾ
ನಾನು ಇದುವೆ ನನ್ನದು ಮಾನವಗಿದು ಪಾಶವು
ದೀನಬಂಧು ಇವನು ನೀ ಮಾಣದೆ ಬಿತಿಸೈ ಪ್ರಭೋ
ಬೇಡಿಕೊಂಬೆ ಹೇ ವಿಭೋ ನೀನೆ ಪರಮಸದ್ಗುರು
ಹೃದಯದಲ್ಲಿ ನೆಲೆಸಿದಾ ಆತ್ಮರೂಪವನು ಸದಾ
ಮುದದಿ ತಿಳಿಯುವಂತೆ ನೀ ಸನ್ಮತಿ ದಯಪಾಲಿಸೈ
ಸದಮಲಾತ್ಮಶಂಕರಾ ಬೇಡುವೆ ನಿನಗೀಶ್ವರಾ

 

ಬೋಧದ ಘನಮಳೆಯುಸುರಿದು
ಮುಕುತಿಬೆಳೆಯು ಬಂದುದು ಪ
ಮಾಯೆಯ ಬಲು ಬಿಸಿಲುತಾಪ
ಕಾಯದೊಳಗೆ ಹೆಚ್ಚುತಿರಲು
ಹೇಯವೆನಿಸಿ ಜನನಮರಣ
ಮುಮುಕ್ಷುತ್ವ ಮೋಡಗವಿದು ೧
ಸುವಿಚಾರದ ಮಿಂಚು ಹೊಳೆದು
ಶ್ರುತಿಶಿರಗಳ ಗುಡುಗು ಹೊಡೆದು
ಶ್ರವಣದ ಸುಳಿಗಾಳಿ ಬೀಸಿ
ಭವತಾಪವ ಹರಿಸುತಿರಲು ೨
ವೈರಾಗ್ಯದ ರಂಟೆ ಹೊಡೆದು
ಶಮೆದಮೆಗಳ ಹರತೆಯಾಗಿ
ಪರಮಾರ್ಥದ ಬೀಜ ಬಿದ್ದ
ನರಜನ್ಮದ ಹೊಲದ ಮೇಲೆ ೩
ದೃಷ್ಟಿಯೊಳಗಿನಾನಂದ
ಸೃಷ್ಟಿಯಾಗಿ ತೋರಿ ಚಂದ
ಶ್ರೇಷ್ಠನಾದ ಶಂಕರಗುರುವರನ ಸಹಜಕರುಣೆಯಿಂದ ೪

 

ಬೋಧಾ ಜ್ಞಾನದಾ ಬೋಧ
ಮೋದಾ ಶಾಂತಿಯಾ ಸ್ವಾದಾ ಪ
ಸ್ವರೂಪದಾ ಸುಖಸ್ಪದಾ ಪ್ರಶಾಂತ ಗುರುಬೋಧಾ
ಮೋದಾ ಜ್ಞಾನದಾ ಬೋಧ ಅ.ಪ.
ಸುಲಭಸಾಧ್ಯ ಸುವಿಚಾರಾ
ವೇದಾಂತಶಾಸ್ತ್ರದ ಸಾರಾ
ತಾನೇ ಪರಮಾತ್ಮನು ಎನುವಾ
ಸ್ವಾನುಭವಾಮೃತಜಲಧಾರಾ
ಘೋರಾ ಸಂಸ್ರ‍ಕತಿಯ ಪಾರಾ ೧
ಜೀವಭಾವವ ಮರೆಯಿಸುತಿರುವಾ
ಸಾವ ನೀಗುವಾ ಮಂತ್ರವಾ
ಸಾರಿ ಪೇಳ್ವ ಶಂಕರಾರ್ಯ
ಮೋದಾ ಶಾಂತಿಯಾ ಸ್ವಾದಾ ೨

 

೩೫೦
ಬೋಧಿಸು ಗುರುವರನೇ ಆತ್ಮರೂಪನೇ
ಬಾಧೆಯ ನೀಗುಸು ಬೋಧಾತ್ಮನೇ
ಶಾಂತಿಯನೀವಾ ಭ್ರಾಂತಿಯ ಕಳೆವಾ
ಏಕಾಂತಪೂರ್ಣ ನಿರಾತಂಕವಾದ
ಚಿಂತೆದೂರಮಾಡುವಾ ಅಂತರಾತ್ಮಜ್ಞಾನವಾ
ಸಂತೋಷದಿಂದ ತಿಳಿಸೈ ಮಹಾತ್ಮನೆ
ಸದ್ಗುರುರಾಯಾ ಕರುಣಿಸು ಜೀಯಾ
ಓತಿಸು ಮಾಯಾ ಮಹಾಮೋಹನಿಧಿಯಾ
ಜ್ಞಾನಬೋಧ ನೀಡುವಾ ಸ್ವಾನುಭಾವ ತೋರುವಾ
ಗುರುಶಂಕರಾರ್ಯ ಕೃಪೆಮಾಡು ಜೀಯಾ

 

೩೫೧
ಭಾಗ್ಯ ಬೇಕೈ ಗುರುವೇ ಬೋಧವ ಕೇಳೆ
ಭಾಗ್ಯ ಬೇಕೈ ಜೀವಿಗೆ ಭಾಗ್ಯದ ಹೊರತಾಗಿ
ಯೋಗ್ಯವಾಗಿಹ ಬೋಧ ಭೋಗಲಂಪಟ ಭವ
ರೋಗಿಗೆ ದೊರಕೀತೆ ಪ
ಮಾನವಜನ್ಮವ ತಾಳೆ ಬೇಕೆಲೋ ಭಾಗ್ಯ
ಹೀನಬಾಳುವೆ ಬೇಸರಾಗೆ ಬೇಕೆಲೋ ಭಾಗ್ಯ
ಜ್ಞಾನಿಯ ದರುಶನವಾಗೆ ಬೇಕೆಲೋ ಭಾಗ್ಯ
ತಾನು ತನ್ನಯ ನಿಜವ ತಿಳಿಯೆ ಪರಮ ಭಾಗ್ಯ ೧
ಬಾಳಿನ ಸುಖಕಾಗಿ ಆಳಾಗಿ ದುಡಿವಂಗೆ
ಕೀಳುತನದಿ ಜ್ಞಾನವಲ್ಲಗಳೆಯುವಗೆ
ಮೇಲು ತಾನೆಂದು ತಿಳಿದೋಡಾಡುವವನಿಗೆ
ಕಾಲನಂಜಿಕೆ ಕಳೆವ ಬೋಧವು ತಿಳಿವೊಡೆ ೨
ಏನಾದೊಡೇನಯ್ಯ ಎನ್ನ ಪೂರ್ವದಭಾಗ್ಯ
ನಾನಾದೆ ದೇವನು ಗುರು ನೀನೇ ಯೋಗ್ಯ
ಹೀನರ ಕೊಂಡೇನು ನಾನೊಂದು ಪಾರಾದೆ
ಜ್ಞಾನಿಶಂಕರನೆ ನಾನಾದೆ ಎನ್ನಯ ಭಾಗ್ಯ ೩

 

ಮಂಗಲಂ ಗುರುರಾಜಗೆ
ಮಂಗಲ ಪರಮಾನಂದಸ್ವರೂಪಗೆ ಪ
ಜೀವÀಪರಮರೈಕ್ಯವ ತಿಳುಹಿಸುವಾ
ದೇವನೆ ನೀನೆನ್ನುತ ಬೋಧಿಸುವಾ
ಸಾವು ಸಂಕಟಗಳ ಮೂಲವ ಕಡಿಯುವಾ
ಪಾವನಾತ್ಮ ಘನಜ್ಞಾನರೂಪಗೆ ೧
ವೇದವೇದಾಂತದ ಸಾರವ ತಿಳುಹಿ
ಶೋಧಿಸಿ ದೇಹತ್ರಯಗಳ ಕಳಹಿ
ಬಾಧರಹಿತ ಪರಮಾತ್ಮನ ಅರಿವನು
ಬೋಧಿಸಿ ಅನುಭವದಲಿ ನೆಲೆಸಿದಗೆ ೨
ತೋರಿಕೆ ಅನಿಸಿಕೆ ಎನಿಸುವ ದ್ವೈತವ
ಧೀರತನದಿ ಸುಳ್ಳೆಂದು ತಿಳಿಸುವಾ
ನಾರಾಯಣಗುರುವರನ ಕೃಪಾಪ್ರಿಯ
ಪೂರಣಬ್ರಹ್ಮಸ್ವರೂಪ ಶಂಕರಗೆ ೩

 

ಮಂಗಲವಾ ಪಾಡುವೆನಾ
ಮಂಗಲಾಂಗ ಗುರುದೇವಗೆ
ಸಂಗರಹಿತ ಸಂಪೂರ್ಣಗೆ
ಕಂಗೊಳಿಸುವ ಪರಮಾತ್ಮಗೆ ಪ
ಬೋಧಿಸುತಲಿ ಪ್ರೇಮದಿಂದ
ಸಾಧನೆ ಸಾಧ್ಯಗಳ ಮರ್ಮ
ಛೇದಿಸುತಲಿ ಭವಜಾಲವ
ಮೋದವೀವ ಘನ ಮಹಿಮಗೆ ೧
ಬಲು ಶಾಸ್ತ್ರದ ತೊಡಕಿಲ್ಲದೆ
ಸುಲಭದಿಂದ ಬೋಧಿಸುವಾ
ತಿಳಿ ಆತ್ಮನೇ ನೀನೆನ್ನುತ
ಘನ ಶಾಂತಿಯ ನೀಡಿದವಗೆ ೨
ನಾರಾಯಣ ಗುರುದೇವನ
ಪರಮ ಪ್ರೀತಿ ಪಾತ್ರನೀತ
ಧರೆಯೊಳಗವತರಿಸಿದ ಶ್ರೀ
ಗುರುಶಂಕರದೇವನಿಗೆ ೩

 

ಮನುಜಶರೀರವು ವರವೊ ದುರ್ಲಭವೊ ಪ
ಭವಸಾಗರವನು ದಾಂಟಲು ನೌಕೆಯಿದೊ
ಭವಭಾಧೆಯ ನೀಗಲು ಇದು ಸಾಧನವೊ
ಪಾವನಸ್ವರೂಪಜ್ಞಾನವನರಿಯಲು
ದೇವನೆ ತಾನೆನಿಸುವನೊ ಆ ನರನು ೧
ತಿಳಿ ನೀನೀಗಲೆ ನಾನಾರೆಂಬುದ ಮನುಜಾ
ಅಳಿವೀ ದೇಹದೊಳೇ ತಿಳಿಯಲುಬಹುದಿದನಾ
ಉಳಿದ ದೇಹಗಳು ಹಲವಾರಿರುತಿರೆ
ಫಲವೇನೈ ತಿಳಿವಿರದೇ ತಿಳಿ ಭರದೇ ೨
ಪಾಪಿ ಜನ್ಮವು ಎಂದು ಶಪಿಸಲು ಬೇಡಾ
ತಾಪನೀಗಲು ಇದೇ ದಾರಿಯೈ ನೋಡಾ
ಆ ಪರವಸ್ತುವೆ ತಾನಿಹೆನೆಂಬತಾಪಸ ಶಂಕರನಡಿಯೇ ಭವ ಕಡಿಯೇ ೩

 

೩೫೨
ಮೂರ್ಖ ತಿಳಿವನೆ ಗುರುವೆ ನಿನ್ನ ಬೋಧದ ಸವಿಯ
ಅರ್ಕನಾ ತೇಜವನು ಗೊಗೆಯರಿದಪುದೇ ಪ
ನೀನೆ ಪರಮಾತ್ಮನಿಹೆ ಎಂದು ನೀ ಬೋಧಿಸಲು
ಹೀನ ಮಾನವ ನಾನು ಪರಮಾತ್ಮನೆ
ಏನಾದರೂ ಪೇಳಿ ಮೋಸಮಾಳ್ಪನು ಎಂದು
ಸ್ವಾನುಭವ ಪಡೆಯದಲೆ ನಿನ್ನ ನಿಂದಿಸುವಾ ೧
ಕರ್ಮದಾ ಸಂಕಲೆಯ ಕಟ್ಟಿಕೊಂಡಿಹ ಜೀವ
ಕರ್ಮ ಕಳೆಯುವ ದಿವ್ಯ ಜ್ಞಾನವರಿಯುವನೇ
ದುರ್ಮತಿಯು ದ್ವೇಷಿಸುತ ಬೋಧದಲಿ ಮನವಿಡದೆ
ಧರ್ಮವಂತನು ಎಂಬ ಒಣ ಹೆಮ್ಮೆ ಪಡುತಿರುವ ೨
ಈ ನಿಂದೆ ಸ್ತೋತ್ರಗಳಿಗೊಳಗಾಗುವವನೆ ನೀ
ಸ್ವಾನುಭವಸಂವೇದ್ಯ ಕೇವಲಾನಂದಾ
ನೀನೆ ಸರ್ವವ್ಯಾಪಿ ನಿನ್ನ ನಿಂದಿಸಿದೊಡೆ
ತಾನು ತನ್ನನು ಬೈದು ದೂರಿಕೊಂಡಂತೆ ೩
ಜಗದ ಸುಖಕಾಗಿ ಬಲು ಕಾತರಿಪ ಮನುಜನಿವ
ಜಗದಾಚೆಗಿಹ ಪರಮಶಾಂತಿಯರಿಯುವನೇ
ಸೊಗಸಾಗಿ ತಿಳಿಯುವೊಡೆ ಜಿಜ್ಞಾಸುವಲ್ಲದೆ
ಅಘನಾಶಶಂಕರನೆ ಅನ್ಯರರಿಯುವರೇ ೪

 

೩೫೫
ವಂದಿಪೆ ಗುರುವೆ ನೀ ಕಲ್ಪತರುವೇ
ಬಂಧನ ಕಳೆಯುವ ಭೋಧಾತ್ಮ ಗುರುವೆ
ಅಗಣಿತ ಮಹಿಮಾ ಜಗದಾಧಾರ
ಬಗೆಗೆ ನಿಲುಕದಿಹ ಘನನಿರ್ವಿಕಲ್ಪ
ಜ್ಞಾನ ಬೋಧನೆಗಾಗಿ ಮಾನವ ರೂಪದಿ
ಸ್ವಾನುಭವವ ತೋರ್ದ ಮುಕುತಿದಾಯಕನೇ
ಪರಮಾತ್ಮ ನೀನೆಂದು ಪರಶೃತಿ ಪೇಳೆ
ಸರಿಯಾಗಿ ಬೋಧಿಸಿ ಕರುಣೆದೋರುವನೇ
ಜಗವೆಲ್ಲ ಪುಸಿಯೆಂದು ಜಗಕೆಲ್ಲ ಪೇಳುವ
ಭಗವಂತ ದಯದೋರಿ ಪೊರೆವುದು ದೇವಾ
ಚಿನುಮಯರೂಪನೆ ಸ್ವಾನಂದರೂಪಾ
ಮನವು ನಿನ್ನೊಳಗಿರಲಿ ಶಂಕರರೂಪಾ

 

ವಂದಿಪೆ ನಾ ಭಗವಾನ್ ಪೂರ್ಣಘನಾ
ನೀ ಮುಕುತಿನಿದಾನಾ ಜ್ಞಾನಘನಾ ಆನಂದಘನಾ
ನಿತ್ಯಾನಂದನು ನೀ ಚೈತನ್ಯ
ಮೂಲಪದ ಮಾಯಾರಹಿತ ಸದಾ
ಆ ನಿರ್ವಿಕಲ್ಪಾತ್ಮಾ ಸತ್ಯನು ನೀ
ಹೇ ಸರ್ವಾಂತರ್ಯಾಮೀ ಪ್ರೇಮಘನಾ ಆನಂದ
ಕಣ್ಣು ಮನಗಳಿಗೆ ನಿಲುಕದಲೇ
ನೀ ಸಾಕ್ಷಿಸ್ವರೂಪಾ ಇವುಗಳಿಗೇ
ಕಲ್ಪಿತವ್ಯೆ ಮಾಯಾಮೋಹಿತವೈ
ಈ ಜಗವೆಲ್ಲಾ ನಿನ್ನೊಳ್ ಸತ್ಯಘನಾ ಆನಂದ
ಎಂತು ಬಣ್ಣಿಸಲೈ ನಿನ್ನನು ನಾ
ಈ ವಾಣಿಯಿಂ ದೂರಾ ನಿಜಸಾರಾ
ಯೋಗಿವರಾ ಗುರು ಶ್ರೀ ಶಂಕರಾ
ಹೇ ಸರ್ವಾತ್ಮಪೂರ್ಣಾನಂದಘನಾ ಆನಂದ

 

೩೫೬
ವಂದೇ ವಂದೇ ವಂದೇ ನಾರಾಯಣ ಗುರುದೇವಾ
ವಂದೇ ವಂದೇ ವಂದೇ
ಪರಿಪೂರ್ಣ ಬ್ರಹ್ಮರೂಪ ಪರಮಾತ್ಮ ಜ್ಞಾನದೀಪ
ನೀಬೆಳಗಿ ಭವದ ತಾಪ ಪರಿಹರಿಪ ಜ್ಞಾನಿ ಭೂಪ
ಶಿರವಿಡುವೆ ಚರಣಯುಗದೀ ಗುರುದೇವ ಎನ್ನಮನದಿ
ಪರತತ್ವ ತಿಳಿವ ತೆರದಿ ಕರುಣಿಪುದು ನೀನೇ ಮುದದಿ
ಜÁಗರಣ ಕನಸು ನಿದ್ರಾ ಆಗುಗಳನರಿಯುತಿರ್ದಾ
ಈ ಗತಿಗಳೆಲ್ಲ ಮೀರ್ದಾ ಆ ಘನವೆ ನಿರ್ವಿಕಲ್ಪ
ಅದೇ ನೀನು ಎಂದು ಪೇಳ್ದೀ ಇದು ಎಲ್ಲ ಮಿಥ್ಯವೆಂದಿ
ಇದೊ ಮರಣಭಯವ ಕಳೆದಿ ನಿಜಬೋಧವಚನ ಬಲದಿ
ಮರೆದಿರ್ದ ತತ್ವವಿದನು ಪರತತ್ವ ಶೋಧಕರನು
ಬೊಧಿಸುತ ನೀ ನಿಜವನು ತೋರಿಸುತ ಕಾಯುವವನು
ವರಜ್ಞಾನ ಜಗದಲೆಲ್ಲಾ ಮರೆದಾಡಿ ತಮವನೆಲ್ಲಾ
ಪರಿಹರಿಸಲೆಂದು ನೀನೇ ಗುರುಶಂಕರನಿಗೆ ಪೇಳ್ದೀ
ವಂದೇ ಶಂಕರಾ ಗುರುದೇವಾ
ವಂದೇ ಶಂಕರ ಗುರುದೇವಾ
ಪಾವನಚರಣಾ ತೋರೈ ಕರುಣಾ
ಜ್ಞಾನಾಂಬುಧಿ ಪೂರ್ಣಾ ವಂದೇ

 

೩೫೭
ವಂದೇ ಶಂಕರ ಗುರುದೇವಾ
ವಂದೇ ಶಂಕರ ಗುರುದೇವಾ
ಪಾವನ ಚರಣಾ ತೋರೈ ಕರುಣಾ
ಜ್ಞಾನಾಂಬುಧಿ ಪೂರ್ಣಾ ವಂದೇ
ನಿತ್ಯ ನಿರಂಜನ ಸತ್ಯ ಸ್ವರೂಪಾ
ಪ್ರತ್ಯಗಾತ್ಮನೇ ಆನಂದರೂಪಾ
ನೀಡೈ ಘನಜ್ಞಾನಾ ಬೋಧಾ
ಬೇಡುವೆ ನಿನ್ನೊಳ್ ಗುರುವೇ ವಂದೇ
ಆತ್ಮಸ್ವರೂಪವ ಬೋಧಿಸಿ ಎನ್ನ
ಮುಕ್ತ ಮಾಡುನೀ ಶ್ರೀ ಗುರುದೇವಾ
ನಾರಾಯಣಪದದಾ ಜ್ಞಾನಾ
ಸಾರಿದ ಶಂಕರ ಗುರುವೇ ವಂದೇ

 

ವಿಷಯ ಸುಖ ಕ್ಷಣಭಂಗುರ
ಕೊನೆಯಲಿಯಿದು ದುಃಖರೂಪ
ಪೂರ್ಣಶಾಂತಿ ದೊರಕದು ಈ ಪ
ಮೋಹದಿಂದ ಬಯಸುತಿರುವ
ಇಹಪರಲೋಕಗಳ ಸುಖವು
ನಾಶವಂತ ಕೊನೆಯಲೊಮ್ಮೆ
ಕ್ಲೇಶದಾಯಕವು ತಿಳಿಯೈ ೧
ಪರಮಸೌಖ್ಯ ಆತ್ಮರೂಪ
ಅರಿತುಕೊಂಡು ನಿನ್ನೊಳಗೆ
ಮರುಳಾಗದೆ ವಿಷಯಸುಖಕೆ
ಗುರುಶಂಕರನಡಿ ಸೇವಿಸು ೨

 

೩೫೩
ಶ್ರೀ ಗುರುವೇ ಮಹಾಮಹಿಮಾ ಪೂರ್ಣಾತ್ಮಸುಖಧಾಮಾ
ಬಾಗಿ ನಮಿಪೆ ಪ್ರಶಾಂತಕಾಮಾ ಬೇಗ ನೀ ಬೋಧಿಸೈ
ಅನುಭಾವಪೂರ್ಣ ಜ್ಞಾನದಾ ದಾರಿಯಾ ತೋರು ನೀ
ದಯೆದೋರು ಜ್ಞಾನ ನಿಧಿಯೇ ವಂದಿಪೆ ಬೋಧಿಸೈ
ಸಂಸಾರ ಘೋರವಾರಿಧಿ ದಾಂಟಿಪಾ ಧೀರ ನೀ
ನಿಜರೂಪನಿಷ್ಠ ವಿಭುವೇ ವಂದಿಪೆ ಬೋಧಿಸೈ
ಗುರುಸಾರ್ವಭೌಮ ನಿನ್ನ ಈ ಪಾದವಾ ನಂಬಿದೆ
ಗುರು ಶಂಕರಾರ್ಯ ದೇವಾ ವಂದಿಪೆ ಬೋಧಿಸೈ

 

೩೫೪
ಶ್ರೀ ಪಾದವಲ್ಲಭಾ ದೇವಾ ಗುರುನಾಥಾ ದತ್ತರಾಜಾ
ವರಗಾಣ ಪುರಾಧೀಶಾ ಅವದೂತಾ ದತ್ತರಾಜಾ
ನರಸೋಬವಾಡಿವಾಸಾ ಶ್ರೀ ಗುರುನಾಥಾ ದತ್ತರಾಜಾ
ತ್ರಿಗುಣಾತ್ಮಕಾ ಘನಮಹಿಮಾ ತ್ರಿಗುಣಾತೀತ ಭೂಮಾ
ಅಘನಾಶ ಪೂರ್ಣಕಾಮಾ ಜಗದೀಶ ಸೌಖ್ಯಧಾಮಾ
ಬಗೆಹರಿಸೈ ಮೋಹಮಾಯಾ ಭಗವಂತ ನೀ ಗುರುರಾಯಾ
ವೈರಾಗ್ಯ ಶಾಂತಿ ಸುಖವಾ ಪರಮಾರ್ಥಜ್ಞಾನದರಿವಾ
ಗುರುಪಾದಸೇವೆ ಗೈವಾ ವರಭಾಗ್ಯ ನೀಡು ದೇವಾ
ಪರಿಹರಿಸೈ ವಿಷಯಚಿಂತಾ ಪ೦ರಮಾತ್ಮ ಸದ್ಗುರುನಾಥಾ
ಘನ ನಿರ್ವಿಕಲ್ಪರೂಪಾ ನೀನೆನ್ನ ಸ್ವಾತ್ಮಾರೂಪಾ
ಮನವಾಣಿ ಮೀರ್ದ ರೂಪಾ ಆನಂದ ಬ್ರಹ್ಮರೂಪಾ
ಕನಸೈ ಈ ಜಗವು ನಿನ್ನೋಳ್ ಗುರುರಾಜ ಶಂಕರಾರೂಪಾ

 

೩೩೭
ಸಮಿಪ ಸದ್ಗುರುರಾಯಾ
ಆ ನಿನ್ನ ದಯದಿ ಪುನೀತವಾದುದು ಕಾಯಾ
ಅರಿವಾಯ್ತು ಎನ್ನ ಸ್ವರೂಪದನುಭವ ಜೀಯಾ
ದೂರಾಯ್ತು ಮಾಯಾ
ಘೋರಕರ್ಮವ ನೀಗಿದೆನು ನಾ
ಪಾರಮಾರ್ಥಿಕ ಸತ್ಯವರಿಯುತ
ಮೀರಿದಾನಂದದಲಿ ಮುಳುಗತ
ಸೇರಿ ಒಂದಗಿಹೆನು ನಿನ್ನೊಳು
ಸರಸ ನಿನ್ನಯ ಬೋಧಾ
ಈ ಮರುಳು ಮಾನವರೇನು ಬಲ್ಲರು ಮೋದ
ಮಾತೆನಲುಬೇಗನೇ ಸಚ್ಚಿದಾತ್ಮನ ಶೋಧಾ
ತೋರುವರು ಕ್ರೋಧಾ
ಮರುಳುಮತಿಗಳು ಅರಿದರೆಂತೋ
ಪರಮತತ್ವವ ಪರವಿಚಾರದಿ
ದುರುಳರಾ ಮಾತೇಕೆ ನಿನ್ನಯಕರುಣೆಯಿಂದಲಿ ಪಾರುಗಂಡÉನು

 

೩೫೮
ಹಾಸ್ಯದ ಮಾತಿದು ಮಾನವಗೆ
ವಿಷಯೇಚ್ಛೆಯ ಜೀವನವೆಂಬುದು
ಶಾಶ್ವತ ಶಾಂತಿಯ ನೀಡುವ ನಿನ್ನಯ
ಪದವನೆ ಮೆರೆತಿಹದು
ಗುರುವೇ ಈಶ್ವರನೀತನೆಂದು
ಸಾರಿತು ಶೃತಿ ಇದ ಕೇಳುತ ನಾ
ಕರುಣಾ ನಿಧಿಯೇ ನಿನ್ನ ಹೊರತಿ
ನ್ನನ್ಯರು ಗತಿಯಿಲ್ಲೆನ್ನುತ ನಾ
ಚರಣಕಮಲಕೆ ಮೊರೆಹೊಕ್ಕೆ
ಪರಮಾನಂದಾತ್ಮ ಸ್ವರೂಪದಾ
ಅರಿವನು ನೀಡಿ ಪೊರೆವುದು ಎನ್ನಶಂಕರ ಗುರುದೇವಾ

 

ಹೃದಯಾಧಿವಾಸಾ ಚಿನ್ಮಂಇÀಇ ಪಾವನ ಅವನೆ ದೇವಾಧಿದೇವ
ಮೂರು ಕಾಲದ ಸಾಕ್ಷಿ ಪರಮಾತ್ಮನೇ
ಅವನೇ ಜಗದಾಧಿವಾಸ ಪ
ಆಕಾರದೊರ ಏಕಾಂತಪೂರ
ಏಕಾಂತಘನಪೂರ ತಾ ನಿರ್ವಿಕಾರ ಮನೋವಾಣಿದೂರ
ಮನೋವಾಣಿಗೆದೂರ
ಜಗಕೆಲ್ಲ ಆಧಾರ ತಾನಾಗಿಹ ಇವನೆ ಪರಮಾತ್ಮ ಈಶ
ಹೃದಯಾಧಿವಾಸ ೧
ಮನವೆಲ್ಲ ಉಡುಗಿ ಅನಿಸಿಕೆಯಡಗಿ
ಅನಿಸಿಕೆ ತಾನಡಗಿ ತನಿನಿದ್ರೆಯಲ್ಲಿ ಇವು ಎಲ್ಲ ಮುಳುಗಿ
ತಾನೇ ತಾನಾಗಿರ್ದ ಚಿನ್ಮಾತ್ರನೆ
ಅವನೆ ಆನಂದರೂಪ ಹೃದಯಾಧಿವಾಸ ೨
ಅವನೇ ನಾನೆಂದು ತಿಳಿ ಈಗ ನಿಂದು
ಜಗವೆಲ್ಲ ಕನಸೆಂದು ಪರಮಾರ್ಥ ಸತ್ಯ ಶ್ರೀನಾರಾಯಣ
ಇವನೇ ಗುರುಶಂಕರೇಶ ಹೃದಯಾಧಿವಾಸ ೩

 

ತಾತ್ವಿಕ ವಿಚಾರದ ಹಾಡುಗಳು
೩೫೯
ಅಜ್ಞಾನಹೋಮದಾ ಅಗ್ನಿ ಹೋತ್ರಿಯು ತಾನು
ಸುಜ್ಞಾನಸ್ವರ್ಗವನು ಸೇರಿ ಸುಖಿಸಿಹನು ಪ
ತನುವು ಯಜ್ಞದ ಶಾಲೆ ಮನವು ಬ್ರಹ್ಮನು ಅಲ್ಲಿ
ಅನಿಸಿಕೆಗಳುದ್ಗಾತೃಋತ್ವಿಜರು
ಘನತರದ ಶ್ರದ್ಧೆಯಂಬಿನಿಯಳೊಡಗೂಡಿದಾ
ಚಿನುಮಯಾತ್ಮಾರಾಮ ದೀಕ್ಷಿತನು ಮರೆವ ೧
ಎದೆಯೆ ಯಜ್ಞದ ಕುಂಡ ಅದರಲ್ಲಿ ಜ್ಞಾನಾಗ್ನಿ
ಮುದದಿಂದ ಹೊತ್ತಿಸುತ ಕರ್ಮಕಾಷ್ಠಗಳಾ
ಒದಗಿಸಿ ಶಮಾದಿಗಳೆ ಸಾಮಗ್ರಿಯಾಗಿರಲು
ಸದಸದ್ವಿವೇಕಸಾಮವನು ಘೋಷಿಸುವಾ ೨
ಅನಿಸಿಕೆಯು ಸತ್ಯವೆನ್ನುವ ಹವಿಯ ಹಾಕುತಲಿ
ಕನಸಿದೆಲ್ಲವು ಎಂಬ ಸ್ರ‍ಮತಿರೂಪ ಶಿಖಿಯ
ಘನವಾಗಿ ಹೊತ್ತಿಸುತ ದೇಹಬುದ್ಧಿಯ ದಹಿಸಿ
ಜನನಮರಣದ ಭಸ್ಮಮಾಡಿ ಪೂಸುವನು ೩
ವಾಸನಾಪಾಶವೆನ್ನುವ ಪಶುವ ವಧಿಸುತಲಿ
ಮೀಸಲಾಗಿಹ ಜ್ಞಾನಸೋಮವನು ಕುಡಿದು
ಆ ಸಕಲಯಾಗಗಳ ಭೋಕ್ರ‍ತ ತಾನಾಗುತಲಿ
ನಾಶವಿಲ್ಲದ ಸ್ಥಿತಿಯನಾಕ್ಷಣದಿ ಪಡೆವ ೪
ಚಿನುಮಯನೆ ತಾನೆಂಬ ಜ್ಞಾನಗಂಗಾಜಲದಿ
ಅನುಭವದ ಅವಭೃತಸ್ನಾನವನು ಮಾಡಿ
ತನುವಿದಿರುವಾಗಲೇ ಆನಂದಧಾಮದಲಿ
ಅನವರತ ನೆಲೆಸಿರುವ ಶಂಕರಾನಂದಾ ೫

 

ಅಜ್ಞಾನಿ ಜೀವನಿಗೆ
೩೬೦
ಅಜ್ಞಾನಿ ಜೀವನಿಗೆ ಅಭಿಮಾನ ಬಹಳ
ಸುಜ್ಞಾನಿಯಾ ನುಡಿಯ ಲಕ್ಷಿಸನು ಕೇಳಾ ಪ
ಬುದ್ಧಿ ಮನದೇಹಗಳು ತಾನೆಂದು ತಿಳಿಯುತಲಿ
ಇದ್ದುದನು ಮರೆತು ತಾ ಜಾಣನೆನಿಸುವನು
ಒದ್ದಾಡುತಿದ್ದರೂ ಅಭಿಮಾನವನೆ ಹÉೂತ್ತು
ಗುದ್ದಾಡುತಲಿ ತಾನು ಸುಖವ ಹುಡುಕುವನು ೧
ಸಟಿಯಾದ ಸಂಸಾರ ದಿಟವೆಂದು ನಂಬುತಲಿ
ಸೆಟೆದಾಡುತಿರುವೆಯೋ ತಿಳಿದು ನೋಡಾ
ಹಟವ ಹಿಡಿಯಲು ಬೇಡ ತೋರ್ಪುದೇ ದಿಟವೆಂದು
ನಟನೆಯಾ ಮಾತಲ್ಲವೆನೆ ಕೇಳನವನು ೨
ಬರಿಯ ಜಂಭವು ಬೇಡ ಅರಿ ನೀನು ನಿನ್ನ
ಅರಿವಿನಾ ಹೊರತು ನೀ ಸುಖ ಪೊಂದಲಾರೆ
ಆರು ಸುಖಪಡೆದಿಲ್ಲ ಅಜ್ಞಾನದಿಂದೆನಲು
ಇರಲಿ ಹೋಗೆಂದೆನುತ ಮೋರೆ ಹೊರಳಿಸುವಾ ೩
ಬಾಳುವೆಯು ನಿಜವೆಂದು ನಂಬಲಿವನಾ ಗೋಳು
ಗಾಳಿಯನೆ ಗುದ್ದಿ ಮೈ ನೊಯ್ಸಿಕೊಂಡಂತೆ
ಕೇಳು ಚಿತ್ರದೊಳಿರುವ ಬೆಂಕಿ ತಾ ದಿಟವೆಂದು
ಮೇಲೆ ನೀರೆರೆದಂತೆ ಎನೆ ಕೇಳನವನು ೪
ಗೊಡ್ಡು ಮಾತೆಂದು ತಾ ಜ್ಞಾನಕೆರವಾಗುತಲಿ
ದಡ್ಡತನವನೆ ತೋರಿ ದುಃಖಿಯಾಗುವನು
ಶುದ್ಧಜ್ಞಾನವನಂಬಿ ತನ್ನ ತಾ ತಿಳಿಯದಲೆಬುದ್ಧ ಶಂಕರನುಕ್ತಿಗೆರವಾಗುತಿಹನು ೫

 

ಹಾಡಿನ ಹೆಸರು :ಅಜ್ಞಾನಿ ಜೀವನಿಗೆ
ಹಾಡಿದವರ ಹೆಸರು :ಶಂಕರ ಶಾನುಭಾಗ್
ಸಂಗೀತ ನಿರ್ದೇಶಕರು :ಸುಂದರಮೂರ್ತಿ ಎ.

ನಿರ್ಗಮನ

 

ಘಂಟೆ ಹೊಡೆಯುತಿದೆ
ಗಂಟೆ ಹೊಡೆಯುತಿದೆ ಕೇಳೆಲೋ ಮೂಢಾ
ಪಂಟು ಬಡಿಯುತ ಕೊಡಲುಬೇಡಾ ಪ
ಶ್ರುತಿಶಿರಗಳ ಬೋಧದ ಈ ಗಂಟೆ
ಮತಿವಿಭ್ರಮೆಯ ಬಿಡಿಸುವ ಗಂಟೆ
ಅತಿಮಾನವಸ್ಥಿತಿ ಸಾರುವ ಗಂಟೆ
ಕ್ಷಿತಿಯೊಳಗಿದುವೆ ಸಾರ್ಥಕ ಗಂಟೆ ೧
ಜೀವೇಶ್ವರರೈಕ್ಯದ ಘನ ಗಂಟೆ
ದೇವನೆ ನೀನೆಂದರುಹುವ ಗಂಟೆ
ಸಾವಿನ ಸಂಕಟ ಕಳೆಯುವ ಗಂಟೆ
ಕಿವಿಯಿದ್ದು ಕೇಳದೆ ಬಿಡುವವರುಂಟೇ೨
ತೋರಿಕೆ ಅನಿಸಿಕೆ ಪುಸಿ ಎಂಬ ಗಂಟೆ
ಪಾರಮಾರ್ಥ ಸತ್ಯದ ಸವಿ ಗಂಟೆ
ಘೋರನಿದ್ರೆಯಿಂದೆಚ್ಚರಿಸುವ ಗಂಟೆ
ಗುರುಶಂಕರನಾ ಪ್ರವಚನ ಗಂಟೆ ೩

 

ಹಾಡಿನ ಹೆಸರು :ಘಂಟೆ ಹೊಡೆಯುತಿದೆ
ಹಾಡಿದವರ ಹೆಸರು :ಶ್ರೀನಿವಾಸ್ ಹೆಚ್.
ರಾಗ :ಅಹಿರ್ ಭೈರವ್
ತಾಳ :ಆದಿ ತಾಳ
ಶೈಲಿ :ತತ್ವಪದ
ಸಂಗೀತ ನಿರ್ದೇಶಕರು :ಜಯಶ್ರೀ ಅರವಿಂದ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ನಂಬಿ ಕೆಟ್ಟವರಿಲ್ಲವೊ
೩೩೬
ನಂಬಿ ಕೆಟ್ಟವರಿಲ್ಲವೊ ಸದ್ಗುರುವಿನ
ನಂಬಿ ಕೆಟ್ಟವರಿಲ್ಲವೊ
ನಂಬದೆ ಗುರುವಿನ ಜ್ಞಾನದ ಬೋಧವ
ಹುಂಬತನವ ಮಾಡಿ ಕೆಟ್ಟರೆ ಕೆಡಲಯ್ಯ ಪ
ಬಾಳು ದುಃಖದ ಆಗರ ಸ್ವರೂಪದಿ
ಕೇಳಬೇಡೆಲೊ ದುಃಖವಾ
ಏಳು ಎಚ್ಚರಗೊಳ್ಳು ಕೀಳುತನವ ಬಿಡು
ಹೇಳಿಕೊಡುವೆನೆಂಬ ಗುರುವಿನ ನುಡಿಯನು ೧
ದೇಹಬುದ್ಧಿಯ ಬಿಡಿಸಿ ವಿವೇಕದಿ ದೇವಬುದ್ದಿಯನಿರಿಸಿ
ಸೋಹವೆಂಬುವ ಮಹಾಮಂತ್ರವ ಬೋಧಿಸಿ
ಮೋಹವನೋಡಿಸಿ ಕಾಯುವ ಗುರುವಿನ ೨
ಪಂಚಕೋಶವ ಕಳಿಸಿ ಸಂಚಿತ ಮೊದಲಾದ ಕರ್ಮವ ನೀಗಿಸಿ
ಹಂಚಿಕೆಯಿಂದಲಿ ಮುಕ್ತನ ಮಾಡುವ
ಪಂಚಕಸಾಕ್ಷಿ ಶ್ರೀಗುರುವಿನ ಬೋಧವ ೩
ತಾನೆ ದೇವನು ಎನ್ನುವಾ ಪಾವನವಾದ
ಸ್ವಾನುಭವನೀಡುವಾ
ಏನೊಂದು ಬಯಸದೆ ಜ್ಞಾನದಾನವ ಮಾಳ್ಪ
ಜ್ಞಾನಿ ಶಂಕರಗುರುರಾಯನ ನುಡಿಯನು ೪

 

ಹಾಡಿನ ಹೆಸರು :ನಂಬಿ ಕೆಟ್ಟವರಿಲ್ಲವೊ
ಸಂಗೀತ ನಿರ್ದೇಶಕರು :ಶಂಕರ ಶಾನುಭೋಗ
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಬಿಡು ಬಿಡು ಮನುಜಾ
ಬಿಡು ಬಿಡು ಮನುಜಾ ಜಡದಭಿಮಾನ
ಪಡೆ ಗುರುವಿನಲಿ ಸ್ವಾತ್ಮದ ಜ್ಞಾನಾ ಪ
ಈ ಸುಖದುಃಖದ ಬಡಿದಾಟದಲಿ
ಗಾಸಿಯಾಗುತಲಿ ಸಾಯುವದೇ ದಿಟ
ಲೇಸಾದರು ಸುಖ ಕಾಣಿಯಿದರೊಳು
ಕ್ಲೇಶವ ನೀಗುವಿ ನಿನ್ನ ನೀ ತಿಳಿವೊಡೆ ೧
ಮರಳಿ ದೇಹ ಪಡೆಯದ ದಿವ್ಯ ಬೋಧ
ಪರಮಶಾಂತಿ ದೊರಕಿಸುವ ಪ್ರಮೋದ
ದುರುಳಸಂಸ್ರ‍ಕತಿಯ ಪಾಶದ ಛೇದ
ಮರೆಯದೆ ಮಾಳ್ಪುದು ಸ್ವಾತ್ಮದ ಶೋಧ ೨
ಈ ಘಟ ಮರಣಕೆ ಶಿಲುಕಿದಾದರೂ
ಈ ಘಟದಲಿ ನೀ ಅಮರನೆ ಇರುವೀ
ಬೇಗನೆ ಜೀವನ್ಮುಕುತಿಯ ಪಡೆಯೈ
ಯೋಗಿ ಶಂಕರನ ಸದ್ಬೋಧದಲಿ ೩

 

ಹಾಡಿನ ಹೆಸರು :ಬಿಡು ಬಿಡು ಮನುಜಾ
ಹಾಡಿದವರ ಹೆಸರು :ಚಂದನ ಬಾಲಾ
ಸಂಗೀತ ನಿರ್ದೇಶಕರು :ಶೀಲಾ ಎಂ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

 

ಮನುಜಶರೀರವು ವರವೊ
ಮನುಜಶರೀರವು ವರವೊ ದುರ್ಲಭವೊ ಪ
ಭವಸಾಗರವನು ದಾಂಟಲು ನೌಕೆಯಿದೊ
ಭವಭಾಧೆಯ ನೀಗಲು ಇದು ಸಾಧನವೊ
ಪಾವನಸ್ವರೂಪಜ್ಞಾನವನರಿಯಲು
ದೇವನೆ ತಾನೆನಿಸುವನೊ ಆ ನರನು ೧
ತಿಳಿ ನೀನೀಗಲೆ ನಾನಾರೆಂಬುದ ಮನುಜಾ
ಅಳಿವೀ ದೇಹದೊಳೇ ತಿಳಿಯಲುಬಹುದಿದನಾ
ಉಳಿದ ದೇಹಗಳು ಹಲವಾರಿರುತಿರೆ
ಫಲವೇನೈ ತಿಳಿವಿರದೇ ತಿಳಿ ಭರದೇ ೨
ಪಾಪಿ ಜನ್ಮವು ಎಂದು ಶಪಿಸಲು ಬೇಡಾ
ತಾಪನೀಗಲು ಇದೇ ದಾರಿಯೈ ನೋಡಾ
ಆ ಪರವಸ್ತುವೆ ತಾನಿಹೆನೆಂಬತಾಪಸ ಶಂಕರನಡಿಯೇ ಭವ ಕಡಿಯೇ ೩

 

ಹಾಡಿನ ಹೆಸರು :ಮನುಜಶರೀರವು ವರವೊ
ಹಾಡಿದವರ ಹೆಸರು :ಶ್ರುತಿ ಆನಂದ್
ಸಂಗೀತ ನಿರ್ದೇಶಕರು:ಶೀಲಾ ಎಂ. ಎಸ್.
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *