Categories
ರಚನೆಗಳು

ಶಾಮಸುಂದರ ವಿಠಲ

೯೬
ಅಂಗನೇರು ಕೂಡಿ ಸ್ವರ ಸಂಗೀತದಿಂದಲೀಗ
ಗಂಗಜನಕ ಚಾರು ಚರಣಕೆ ಹರುಷದಿಂ ಬೇಗ
ಮಂಗಳಾತ್ಮಕನಾದ ಶ್ರೀ ನರಶಿಂಗ ರಾಯನಿಗೆ
ಶೃಂಗಾರದಿಂ ಜಯಮಂಗಳವೆಂದು ಪಾಡಿರೆ ೧
ದೀನ ಜನರುದ್ಧಾರಗೈಯುವ ದಾನವಾಂತಕಗೆ
ನೀನೆ ಗತಿಯೆಂದ ಮಾನಿನಿಯಳ ಮಾನ ಕಾಯ್ದವಗೆ
ಸಾನುರಾಗದಿ ಧ್ಯಾನಿಸುತಲಿ ಶ್ರೀನಿವಾಸನಿಗೆ
ಬಲು ಛಂದದಿ ಜಯ ಮಂಗಳವೆಂದು ಪಾಡಿರೆ ೨
ಪೊಂದಿದ ಜನರನು ತ್ವರದಿ ಪೊರೆಯುವ
ನಂದಕಂದನಿಗೆ | ವಂದಿಸಿ ಕರುಣದಿ
ಇಂದು ಮುಖಿಯರು ಸಿಂಧು ಶಯನಗೆ | ಆನಂದದಿಂದಲಿ
ಶ್ರೀ ಶಾಮಸುಂದರಗೆ ಘನ ಮೋದದಿಂ
ಜಯ ಮಂಗಳವೆಂದು ಪಾಡಿರೆ ೩

 

ಶ್ರೀ ಮಹಾದೇವರು

ಅಂಬಿಕಾಪತಿ ಶಂಭು ರಕ್ಷಿಸೆನ್ನಶಂಬರಾರಿ ಹರನೆ ನಂಬಿದೆನೊ ನಿನ್ನ ಪ
ಭವಕಮಲ ಭವ ಭ್ರಕುಟ ಭವಹರನೆ ನೀಎನ್ನಅವಗುಣಗಳೆಣಿಸದಿರು ಕವಿಗೇಯನೆ ||ಅವನಿಯೊಳು ಎನಗೀಗ ಸುವಿವೇಕಿಗಳ ಸಂಗಜವದಿ ಪಾಲಿಸು ಮುದದಿ ಜವನಾರಿ ಶಿವನೆ ೧
ಬಲವಿರೋಧಿ ವಿನುತ ಇಳೆವರೂಥನೆ ನಿರುತತಲೆವಾಗಿ ಬೇಡುವೆನು ಸಲಹೆಂದು ನಾಎಲರುಣಿ ಭೂಷಣೆನೆ ಒಲಿದು ಪಾಲಿಸುದಯದಿಛಳಿಗಿರೀಶನ ಅಳಿಯ ನಳಿನಾರಿ ಧರನೆ ೨
ಸಿರಿರಮಣ  ಸಖನೆಮೊರೆ ಹೊಕ್ಕೆ ಮರೆಯದಿರು ಗರಗೊರಳನೆಕರುಣದಿಂದಲಿ ನಿನ್ನ ಚರಣ ಸೇವೆಯನಿತ್ತುಕರವಿಡಿದು ಕಾಪಾಡೊ ಕರಿಚರ್ಮಧರನೆ ೩

 

೩೮
ಅಡವಿನಿಲಯ ನಿನ್ನಡಿಗೆರಗುವೆ ಕರ
ಪಿಡಿದು ಪಾಲಿಸಯ್ಯ ಪ
ಮೃಡನುತ ಭಾರತಿ ಒಡೆಯನೆ ಪ್ರಾರ್ಥಿಪೆ |
ಬಿಡಿಸು ಭವದ ಮಾಯಾ ಅ.ಪ
ನಿನ್ನ ದರುಶನದಿ ಎನ್ನ ಜನ್ಮ ಪಾ |
ವನ್ನ ವಾಯಿತಯ್ಯ |
ನಿನ್ನನುಗ್ರಹಪಡೆದ ಸಂ |
ಪನ್ನರೊಳಿಡು ಜೀಯಾ ೧
ತರುಚರನರದ್ವಿಜ | ವರರೂಪತ್ರಯ |
ಧರಿಸಿದಂಥ ದೇವ ||
ದುರುಳ ದೈತ್ಯ ಪರಿವಾರ ಗರ್ವಹರ
ಶರಣರ ಸಂಜೀವಾ ೨
ಸೃಷ್ಟಿಯೊಳಗೆ ಅತಿ ಶ್ರೇಷ್ಟನೆಂದೆನಿಸಿದ |
ಕುಷ್ಟಗಿ ಮೂರುತಿ ಪುರವಾಸ
ಧಿಟ್ಟ ಮೂರುತಿ ಶಾಮಸುಂದರ
ವಿಠಲ ಪ್ರಿಯದಾಸ ೩

 

೯೪
ಅರಿತವರನ ಕಾಣೆ ನಿನ್ನ | ಕಾಣೆ ನಿನ್ನ ದೇವ
ಅರವಿದೂರನೆ ತವ ಮಹಿಮೆಯು ಘನ್ನ ಪ
ಬಂಡಿಕಾಲನು ಪಿಡಿದೆಯಂತೆ | ಹತ್ತು
ಬಂಡಿರಾಯಗೆ ಸುತ ನೀನಾದಿಯಂತೆ
ಬಂಡಿ ಅಸುರನ ಕೊಂದಿಯಂತೆ | ಧುರದಿ
ಬಂಡಿ ನಡಸಿ ನರನ ಸಲಹಿದೆಯಣತೆ ೧
ತಂದೆ ತಂದೆಗೆ ತಂದೆಯಂತೆ | ಜಗದ
ತಂದೆ ನಿನಗೆ ತಂದೆ ತಾಯಿಗಳಂತೆ
ತಂದೆ ವಿಪ್ರಜರ ನೀನಂತೆ | ಸ್ವಾಮಿ
ತಂದೆ ನೃಪಾಲನ ಸುತೆಗೀಶನಂತೆ ೨
ಸಿಂಧೂರದ್ವಯ ವರದನಂತೆ | ಮಧ್ಯ
ಸಿಂಧೂರವದನವು ನಿನಗಿಹುದಂತೆ
ಸಿಂಧು ಮಂದಿರ ನಿನಗಂತೆ ಶಾಮ
ಸುಂದರ ನಿನಗೆ ಭಕ್ತರ ಚಿಂತೆಯಂತೆ ೩

 

೨೭
ಆನಂದ ಆನಂದ ಪ್ರದವೋದಾಶರಧಿ ಧ್ಯಾನಾ ಪ
ಭಕ್ತಿಯುಕ್ತನಾಗಿ ಮನದಿ ನಿತ್ಯಪಾಡೋ ರಾಮಚರಣ ಅ.ಪ
ಕಾಲನಪುರ ಭಯವಿಲ್ಲವೋ | ವಾಲ್ಮೀಕಿಯು ಸಾಕ್ಷಿ ಇದಕೆ
ಬಾಲಧ್ರುವನು ವನದಿ ಭಜಿಸಿ
ಮೇಲುನಭದಿ ಮೆರೆವಾ ನೋಡೋ ೧
ಶ್ರೀರಾಮನಾಮದಿಂದ ಮಾರುತಿಯು ಬ್ರಹ್ಮನೆ ನಿಪ
ಮಾರಹರನು ತನ್ನ ಸತಿಯಾ ಸೇರಿ ಸತತ ಭಜಿಪ ಕೇಳೋ ೨
ಹಿಂದೆ ಮಾಡಿದ ನಿನ್ನ ದುರಿತವೃಂದವೆಲ್ಲ | ಛೇದಿಸುವದು
ಒಂದೆ ಭಾವದಿಂದ ಶಾಮಸುಂದರನ ನಾಮ ಪಾಡೋ ೩

 

ಪರಮೇಶ್ವರನು ಭೂಮಿಯನ್ನು
ದೇವತಾವೃಂದ
ಶ್ರೀಗಣಪತಿ

ಆರಂಭದಲಿ ನಮಿಪೆ ಬಾಗಿ ಶಿರವಹೇರಂಬ ನೀನೊಲಿದು ನೀಡೆನಗೆ – ವರವ ಪ
ದ್ವಿರದ ವದನನೆ ನಿರುತ | ದ್ವಿರದ ವರದನ ಮಹಿಮೆಹರುಷದಲಿ ಕರಜಿಹ್ವೆ ಎರಡರಿಂದಬರೆದು ಪಾಡುವದಕ್ಕೆ | ಬರುವ ವಿಷ್ನುನವ ತರಿದಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ೧
ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರು |ಂಬರಾಧಿಪ ರಕುತಾಂಬರನೆ ನಿನ್ನ ||ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ೨
ಸೋಮಶಾಪದ ವಿಜಿತ | ಕಾಮ ಕಾಮಿತ ದಾತವಾಮ ದೇವನ ತನಯ ನೇಮದಿಂದಶ್ರೀಮನೋಹರನಾಥ ಶಾಮಸುಂದರ ಸ್ವಾಮಿನಾಮನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ೩

 

೯೧
ಆರುತಿ ಬೆಳಗುವೆವು ಕೃಷ್ಣಗೆ
ರಾಧಾಕೃಷ್ಣಗೆ ಬೆಳಗುವೆವು ಪ
ಗೋಕುದಲಿ ಹುಟ್ಟಿ | ಗೋವುಗಳನು |
ಕಾಯ್ದವಗೆ ಗೋಪಾಲಕೃಷ್ಣಗೆ ಬೆಳಗುವೆವು ೧
ನಂದಕುಮಾರನಿಗೆ ಇಂದೀವರಾಕ್ಷ ಬಾಲನಿಗೆ |
ರಾಧಾಕೃಷ್ಣಗೆ ಬೆಳಗುವೆವು ೨
ಶಾಮಸುಂದರನಿಗೆ ಕಾಮಿತಶೀಲ
ಕೃಷ್ಣನಿಗೆ ರಾಧಾಕೃಷ್ಣಗೆ ೩

 

೬೦
ಆರುತಿ ಬೆಳಗೆ | ವಾರಿಧಿ ಸುತಿಗೆ
ಸಾರ ಸಂಗೀತದಿಂದಲಿ ಪ
ಸಕಲ ವಸ್ತುವೆನಿಸಿ ಮುಕುತಿದಾಯಕ ಹರಿಗೆ
ಭಕುತಿಯಿಂದಲಿ ಬಿಡದೆ | ಸದಾಪೂಜಿಪ ಸಿರಿಗೆ
ವಿಖನ ಸಾದ್ಯಮರ ಗಣಕೆ | ಸುಖ ಕೊಡುವಳಿಗೆ
ಮಕರಧ್ವಜನ ಮಾಲೆಯಾದ ರುಕುಮನನುಜಗೆ ೧
ಚಾರುಶ್ರಾವಣ ಭಾರ್ಗವ ಶುಭವಾರದ ದಿನದಿ
ಭೂರಿ ಭಕ್ತಿ ಭರಿತಳಾಗಿ ನಮಿಸುತ ಮನದಿ ನೀ
ಆರಾಧಿಸೆ ಘೋಡಶ ಉಪಚಾರದಿ ಮುದದಿ
ಕೋರಿಕೆಯನು ಗರೆಯುವ ವರಲಕ್ಷ್ಮಿಗೆ ಜಯದಿ ೨
ತಾಮರಸ ಸುಧಾಮಳಾದ ಸೋಮವದನಿಗೆ
ಗೋಮಿನಿ ಸೌದಾಮಿನಿ ಸಮ ಕೋಮಲಾಂಗಿಗೆ
ಶಾಮಸುಂದರ ಸ್ವಾಮಿಯ ಸುಪ್ರೇಮದ ಸತಿಗೆ
ಕಾಮಿತ ಫಲದಾಯಿನಿ ಶ್ರೀ ಭೂಮಿಜೆ ರಮಗೆ ೩

 

೯೭
ಆರುತಿ ಮಾಡೆವೆವು ನಾವು
ಆನಂದನಿಲಯಗೆ ಆನಂದದಿಂದಲಿ ಪ
ಗೋಕುಲದಲಿ ಪುಟ್ಟಿ |
ಗೋವುಗಳನೆ ಕಾಯ್ದ ಗೋಪಾಲಕೃಷ್ಣನಿಗೆ ೧
ನಂದಕುವರಗೆ | ಸಿಂಧುಶಯನಗೆ |
ಇಂದೀವರಾಕ್ಷನಿಗೆ ನಾವು ೨
ಶಾಮಸುಂದರಗೆ ದಾಮೋದರನಿಗೆ |
ಪ್ರೇಮದಿಂದಲಿ ಶ್ರೀ ಕಮಲಾಕ್ಷಗೆ ೩

 

೭೮
ಆರುತಿಯ ತಾರೆ ಸಖಿ |
ನೀರಜಾಕ್ಷಿ ವಾರುಣೀಶನಿಗೆ ಪ
ವಾರಿಚರಗಿರಿಧಾರ ಹರಿ ಗೋಚರ ಹರಿ |
ನರಸಿಂಹಗೆ ಮೂರಡಿ ಧಾರುಣಿ ದಾನವ ಬೇಡಿದವಗೆ ೧
ದಾಶರಥಿದಾಸ ಹರಿಕೃಷ್ಣಗೆ ವಸನವರ್ಜಿತ
ಕಲ್ಕಿಗೆ ಶ್ರೀಶನಿಗೆ ಸರ್ವೇಶನಿಗೆ ವಾಸುಕಿಗಿರಿ ವಾಸನಿಗೆ ೨
ಸಾಮಗಾನ ವಿಲೋಲಗೆ ಶಾಮಸುಂದರವಿಠಲಗೆ |
ರಾಮಗೆ ನಿಸ್ಸೀಮಗೆ | ಕಾಮಿತಾರ್ಥಪ್ರದಾತಗೆ ೩

 

೧೦೬
ಆರುತಿಯ ತಾರೆ ಹರಿಗೆ |
ರಾಧಾಕೃಷ್ಣಗೆ ಶ್ರೀಹರಿಗೆ ಪ
ಬೆಟ್ಟವ ಎತ್ತಿದವಗೆ ಪುಟ್ಟಸೀತೆಯಚಿ
ತಂದ ಹರಿಗೆ | ಶ್ರೇಷ್ಟ ರಾಮನಿಗೆ ಶ್ರೀಹರಿಗೆ ೧
ಅಮಿತ ಕರುಣಾಶಾಲಿಗೆ ವಿಮಲ
ಸುಜನ ಪಾಲನಿಗೆ ಕಮಲನಾಭನಿಗೆ ಶ್ರೀಹರಿಗೆ ೨
ಶಂಖಚಕ್ರಧಾರನಿಗೆ ಪಂಕಜಾಕ್ಷ
ಕೃಷ್ಣನಿಗೆ ನಿಗೆ ಶ್ರೀ ಹರಿಗೆ ೩

 

ಶ್ರೀ ರಾಘವೇಂದ್ರರು
೧೧೮
ಇಂಥಾ ಗುರುಗಳ ಕಾಣಿನಾ | ಭೂತಳದೊಳು
ಇಂಥಾ ಯತಿಗಳ ಕಾಣಿನಾ ಪ
ಇಂಥ ಗುರುಗಳ ಕಾಣಿ | ಮಂತ್ರ ಮಂದಿರದಲ್ಲಿ
ನಿಂತು ಭಜಕರಿಗೆ | ಚಿಂತೆ ಕಳೆವ ಕರುಣಿ ಅ.ಪ
ದೇವಸ್ವಭಾವನೀತನು | ಸತತ ಪವನ
ದೇವನಾವೇಶಯುಕ್ತನು ||
ಆವ ಸಂಶಯವ್ಯಾಕೆ | ದೇವಾಧಿದೇವ ನರಮೃಗ
ದೇವನೀತನ ಭಕ್ತಿಗೆ | ಧಾವಿಸಿ ಬಂದ ಸ್ತಂಭದಿ
ಭಾವ ಭಕ್ತಿಯಲಿ | ಸೇವಿಪರಿಗೆ ಭವ
ನೋವು ಕಳೆದು ಸುರ | ಗೋವಿನ ತೆರ ವರ
ವೀವನು ಕರುಣದಿ | ಕಾಮನು ಪರಮ
ಪಾವನ ಚರಿತನು | ಕೋವಿದರೊಡೆಯನು ೧
ವರಹಜ ತಟದಲ್ಲಿರುವ ಭಕ್ತರು ಕೂಗಿ
ಕರೆದಲ್ಲಿಗೋಡಿ ಬರುವ |
ಮರುತ ಶಾಸ್ತ್ರದ ಮರ್ಮ ಭರಿತವಾದಂಥ ದಿವ್ಯ
ಪರಿಮಳ ಗ್ರಂಥವ ವಿರಚಿಸಿ ಬುಧರಿಗೆ
ಗರೆದನು ಕರುಣದಿ ಪೊರೆದನು ಪರಮತ
ಮುರಿದನು ಜಗದೋಳ್ ಮೆರೆದನು ಹೊಸ ಹೊಸ
ಪರಿ ಸುಮಹೋತ್ಸವ ಹರುಷದಿ ಪ್ರತಿದಿನ
ಗುರು ಸುಯಮೀಂದ್ರರ | ಕರದಿಂಗೊಂಬರು ೨
ಮಂದಹಾಸನ ಶ್ರೀ ಶಾಮಸುಂದರ
ರಂಘ್ರಿ ಸೇವಕ |
ಕಂದರ್ಪಶರಕರಿ ವೃಂದ ಕೇಸರಿ ಎನಿಸಿ
ಗಂಧವಾಹನ ಮತ | ಸಿಂಧುವಿಗೆ ಶಶಿ
ಯಂದದಿ ರಾಜಿಸಿ ವೃಂದಾವನವನು
ಒಂದೆ ಮನದಲಿ ವಂದಿಸಿ ನಮಿಸುವ
ವಂದ್ಯಾಂಧಕರಿಗೆ | ಕಂದರಕ್ಷಿಗಳ
ಕುಂದದಿ ಕೊಡುವ | ಕರ್ಮಂದಿ ಕುಲಾಗ್ರಣಿ ೩

 

೫೭
ಇಂದಿರೆ ಮಜ್ಜನನಿಯೆ | ಇಂದಿರೆ ಪ
ಇಂದಿರೆ ಸಿಂಧು ಸಂಭೂತೆ | ಪೂರ್ಣ
ಚಂದಿರ ಮುಖಿ ಸುಖದಾತೆ ಅ.ಪ
ಇಂದೀವರಾಕ್ಷಿಯೆ | ಪೊಂದಿ ತ್ವತ್ವಾದಕೆ
ವಂದಿಪೆ ಮನ್ಮನ ಮಂದಿರದೊಳು ಬಾರೆ ||
ಕೃತಿ ಶಾಂತಿ ಜಯಮಾಯೆ ಸೀತೆ ದೇವಿ
ಪತಿತಪಾವನೆ ಕ್ಷಿತಿಜಾತೆ | ವಿಧಿ
ಶಿತ ಕಂಧರಾದಿ ನಮಿತೆ | ಮಹ |
ಪತಿವ್ರತೆ ಪರಮವಿಖ್ಯಾತೆ ಆಹಾ
ಶೃತಿವಿನುತಳೆ ಸದಾ | ನುತಿಸಿ ಬೇಡಿ ಕೊಂಬೆ
ಅತಿಹಿತದಲಿ ತವ ಪತಿಯ ಪಾದವ ತೋರೋ ೧
ಹರಿಣಲೋಚನೆ | ಶ್ರೀರುಕ್ಮಿಣೀ | ಮದ
ಕರಿ ಮಂದಗಮನೆ ಕಲ್ಯಾಣಿ ದ್ವಿಜ
ಪರಿವಾರ ಸಂಸ್ತುತೆ ಜಾಣೆ | ಚಾರು
ಚರಿತೆ ಚಂಚರೀಕ ಸುವೇಣಿ || ಆಹಾ ||
ಸಿರಿ ಸತ್ಯಭಾಮೆಯ | ಮರೆಯದೆ ಎನ್ನಯ
ದುರಿತ ವಿಚ್ಛೇದಿಸಿ | ಹರಿಸ್ಮರಣೆ ನೀಡೆ ೨
ಕುಂದರದನ ಲಕುಮಿಯೆ | ಕಂಬು ಕಂಧರೆ
ಕಾಮನ ತಾಯೆ ಅರ
ವಿಂದ ಸದನೆ ಜಾನಕಿಯೆ | ಭವ
ಬಂಧನ ಬಿಡಿಸಿ ಕರಪಿಡಿಯೆ ಆಹಾ
ಚಂದನ ಗಂಧಿಯೆ | ನಂದ ನಂದನ ಶಾಮ
ಸುಂದರವಿಠಲನ್ನ ಸಂದರುಶನವೀಯೆ ೩

 

೧೦೫
ಇಂದಿರೇಶ ಬಂದು ಕಾಯೋ ಸಿಂಧು ಶಾಯಿವಾಸುದೇವ
ನೊಂದೆನಯ್ಯ ತಾಪತ್ರಯದಿ | ಪಾಲಿಸಯ್ಯ
ಹರಿಯೇ ಪಾಲಿಸಯ್ಯ ಪ
ಧ್ಯಾನ ವರಿಯೆ ಜ್ಞಾನವರಿಯೆ | ಮೌನವರಿಯೆ ನಾ
ದೀನ ಬಂಧು ನೀನೆ ಎಂದು |
ನಾನಂಬಿದೆ ಹರಿಯೆ ನಾನಂಬಿದೆ ೧
ಸಾರವೆಂಬೊ ಸಂಸಾರ | ಶರಧಿಯಲ್ಲಿ ಮುಳುಗಿರುವೆ
ಪಾರುಗಾಣದೆ ಬಾಯಿ ಬಿಡುವೆ
ನಾರಾಯಣ ಶ್ರೀಮನ್ನಾರಾಯಣ ೨
ಆಸೆಯೆಂಬ ಪಾಶಕಡಿಯೊ | ದಾಸನೆಂದು ನೀ ಎನ್ನ |
ದೋಷದೂರ ಶಾಮಸುಂದರ |
ಫೋಷಿಸಯ್ಯ ಹರಿಯೆ ಪೋಷಿಸಯ್ಯ ೩

 

೧೦೦
ಇಂದು ನಿನ್ನ ಪಾದಕಮಲವಾ | ಪೊಂದಿದೆ ದೇವಾ ಪ
ನಂದಸುತ ಪುರಂದರಾನುಜ | ಸಿಂಧೂರ ವರಪೋಷಕ ಸುರ
ವೃಂದ ವಿನುತ ಇಂದಿರೇಶಾ ಅ.ಪ
ಪಿತನೆ ನಿನ್ನ ಒಮ್ಮೆ ನೆನೆಯದೆ | ಮತಿಹೀನನಾಗಿ
ಸ್ರ‍ಮತಿ ಪುರಾಣ ಕಥೆಯ ಕೇಳದೆ |
ವಿತತ ಮಹಿಮ ಪತಿತ ನಾನಾದೆ
ಅತಿವೇಗದಿ ಎನ್ನನು ನೀ ಹಿತದಿ ಪಾಲಿಸು ಕ್ಷಿತಿಜೇಶನೆ ೧
ವಿಧಿಸುರೇಂದ್ರವಂದ್ಯ ನಗಧರ ಬಿಡದೆ ಸಲಹೊ
ಮದನವಿತ ನೀನಧಮ ದೈತ್ಯರ
ಮದವಳಿದು ಮುದದಿ ಒದಗಿದ
ಸುಧೆಯನು ಸುರರಿಗೆ ನೀ ದಯದಿಕ್ಕಿದ ಪದುಮನಯನಾ ೨
ಸಿಂಧುಶಯನ ಶಾಮಸುಂದರ ವಂದಿಸುವೆ
ಕಂದುಗೊರಳ ಸಖ ಶ್ರೀಮನೋಹರ
ಕಂದನೆಂದೀಮಂದಭಾಗ್ಯನ ತಂದೆಯ ಮರೆಯದೆ ನೀ
ಚಂದದೀ ಪೊರೆ ದಶಕಂಧರಾರಿ ೩

 

೪೦
ಇಂದು ಪವಮಾನ ಪಿಡಿಎನ್ನಕೈಯಾ ನಿನ್ನ ನಾ
ಪೊಂದಿ ಪ್ರಾರ್ಥಪೆನಯ್ಯಾ ಪ.
ಬಂಧನದೊಳು ನೊಂದೆನಯ್ಯ
ಮುಂದೆ ಸನ್ಮಾರ್ಗತೋರಿಸು ಜೀಯಾ | ಎನ್ನ
ಕುಂದುಗಳೆಣಿಸದಿರಯ್ಯಾ ಗುರು
ಗಂಧವಾಹನ ವಜ್ರಕಾಯಾ ಅ.ಪ
ನಾನು ನನ್ನದು ಎಂಬ ಮದ ಬಿಡಿಸೊ
ಜ್ಞಾನ ಭಕ್ತಿ ವಿರಕ್ತಿ ಕೊಡಿಸೊ
ಜಾನಕಿಪತಿ ಪದದಿ ಮನ ನಿಲಿಸೊ
ಸಾನುರಾಗದಿ ಸತತ ಉದ್ಧರಿಸೊ ೧
ನಿನ್ನ ದಯದಿಂ ರವಿಜ ಭಯ ಕಳೆದಾ
ನಿನ್ನ ವಲಿಮೆಲಿ ಪಾರ್ಥ ಜಯ ಪಡೆದಾ
ನಿನ್ನ ನಂಬದೆ ರಾವಣನು ತಾ ಮಡಿದಾ೨
ಶ್ರೀಮದಾನಂದತೀರ್ಥ ಮಧ್ವೇಶಾ
ಶಾಮಸುಂದರ ಸ್ವಾಮಿ ನಿಜದಾಸಾ
ಕಾವಿತಾರ್ಥಗಳಿತ್ತು ಪೊರೆ ಅನಿ ಶಾ ೩

 


ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ | ಸದ್ಧರ್ಮದಲಿ ಸತತ
ಶುದ್ಧಮನವನು ಕೊಟ್ಟು | ನೀಲ ಲೋಹಿತ ವಿಗತ
ಚೈಲ ಭೂಷಿತ ಭನಿಸಿತ ಕಾಲಾರಿ ಶಿವ ದ್ರೌಣಿಂ ಶೂಲಪಾಣಿ
ಹಾಲವಿಪುರವಾಸ | ಹಾಲಾ ಹಲವ ಮೆದ್ದು ತಾಳಲಾರದೆ
ಕೊಂಡ ಮೇತೌಷಧವನಿತ್ತು ೧
ವ್ಯಾಧ ರೂಪದಿ ರಣದಿ ಕಾದು ಪಾರ್ಥನೆ ಸೋತು
ನೀ ದಯದಿ ದಿವ್ಯಾಸ್ತ್ರ ಪಾಲಿಸಿದೆಯೋ | ಸಾದರದಿ
ನಾ ನಿನ್ನ ಪಾದಕೆರಗುವೆ | ಎನಗೆ ಮೋದದಿಂದಲಿ
ಪಂಚಭೇದ ಜ್ಞಾನವನರುಹಿ ೨
ಕಾಮಾರಿ ಸುಪವಿತ್ರ ಸೋಮಾರ್ಕ ಶಿಬಿನೇತ್ರ
ಸ್ವಾಮಿ ಮಿತ್ರ | ಪ್ರೇಮಾಬ್ಧಿ
ಸುಚರಿತ್ರ | ಹೈಮವತಿ ಕಳತ್ರ | ತಾಮರಸ
ಭವಪುತ್ರ ಧವಳಗಾತ್ರ ೩

 

೨೧೬
ಉರುಟಣಿಯಾ ಸರಸಿಜನಾಭಾಗ್ಹರುಷದಲಿ ಮಾಡುವೆನಾ ಪ
ಶಂಖಚಕ್ರಧರಾ ವೆಂಕಟೇಶ ನಿಮಗೆ |
ಕುಂಕುಮ ಹಚ್ಚುವೆ ಪಂಕಜಾಕ್ಷಿ ನಾ ೧
ನಂದಗೋಪಿಕಂದ ಹಚ್ಚುವೆ ಗಂಧ
ಹಚ್ಚುವೆ ಸುಗಂಧ | ಮುಕುಂದಗೆ ೨
ಯಶೋದೆಯ ಬಾಲಾ ಕಾಮಿತಶೀಲಾ
ಹಾಕುವೆನು ಮಾಲಾ ಗೋಪಾಲಗೆ ೩
ಪೊಡವಿ ಪಾಲಿಪಾ | ಕಡಲಶಯನಾ |
ಕೊಡುವೆನು ವಿಡಾ ಪಿಡಿ ಬೇಗನೆ ೪
ಪೊಡವಿ ಪಾಲಿಪಾ ಕಡಲಶಯನಾ |
ಶಾಮಸುಂದರವಿಠಲಾಗೆ ಬೇಗ |
ವಂದಿಸಿ ಪ್ರಾರ್ಥನೆಗೈಯುವೆನಾ ೫

 

ಶ್ರೀ ಭಾರತೀದೇವಿ
೧೯
ಎಂತು ನೀವಶವಾದಿಯೇ ಭಾರತಿದೇವಿ
ಎಂತು ನೀ ಮರುಳಾದಿಯೆ ಪ
ಎಂತು ನೀವಶವಾದಿ | ಕಂತು ಹರನ ತಾಯಿ
ದಂತಿಗಮನೆ ದಮಯಂತಿ ಕಾಂತಸುತೆ ಅ.ಪ
ಧರೆಯೊಳು ಪುಟ್ಟುತಲಿ | ಆಕಾಶಕ್ಕೆ ಭರದಿಂದ ಜಿಗಿಯುತಲಿ
ಸರಸಿಜ ಸಖನಾದ | ತರಣಿಯ ಫಲವೆಂದು
ಅರಿತು ಭಕ್ಷಿಸಲ್ಹೋದ | ತರು ಚರ ರೂಪಿಗೆ ೧
ಪುಂಡರೀಕಾಕ್ಷ ಕೇಳಿ | ದ್ವಾಪರದಿ ಪ್ರಚಂಡಗೆ ಒಲಿಯುತಲಿ
ಭಂಡ ಬಕನ ಶಿರದಿಂಡು ಗೆಡಹಿ ಅವನ
ಭಂಡಿ ಓದನವನ್ನು ಉಂಡ ಪುಂಡಗೆ ಮಾತೆ ೨
ಶ್ರೀ ಶಾಮಸುಂದರನೇ ತ್ರೈಲೋಕ್ಯಕ್ಕೆ ಈಶನೆಂಬುದು ತಾನು
ಲೇಸಾಗಿ ಪೇಳಲು | ಲೇಶವಾದರು ನಿನ್ನ
ಆಶೆ ಇಲ್ಲದೆ ಸನ್ಯಾಸಿ ಆದವನಿಗೆ ೩

 

೨೩೯
ಎಂಥ ಕರುಣಿಯೋ | ಐಕೂರು ಗುರುಗಳೆಂಥ ಸುಗುಣಿಯೋ
ಎಂಥ ಪರಮ ಕರುಣಿಯೋ ಇವ
ರೆಂಥ ಸುಗುಣ ಶಾಲಿಯೋ ಸು
ಸ್ವಾಂತದಿ ಏಕಾಂತದಿ ಶ್ರೀಕಾಂತನ ಪದಕ್ರಾಂತ
ಶಾಂತರಂತಃಕರುಣಿಯೋ ಅ.ಪ
ವಸುಧಿ ತಳದಲಿ ಶ್ರೀಶನಾಜ್ಞೆಯಿಂದ
ಶಶಿಯಮತದಲಿ ಬಂದು | ಸುನಿತ ಮನದಲಿ
ವಸುಮತಿ ಸುಶಾಸ್ತ್ರಧರ್ಮ | ನಿಶಿಹಗಲಾಚರಿಸಿ ಶಿಷ್ಯ
ನಿಕರುಪದೇಶಿಸಿ ಭವ | ಘಸಣೆ ಕರೆದು ಕುಶಲಗರೆದ ೧
ಎಷ್ಟು ಹೇಳಲಿ ಇವರು ನಿತ್ಯ | ಕೃಷ್ಣತಟದಲಿ ಮಿಂದು
ಉತ್ರ‍ಕಷ್ಟ ಭಕುತಿಲಿ
ದೃಷ್ಟಿನಾಶಿಕಾಗ್ರದಲ್ಲಿ ಇಟ್ಟು ಬಿಂಬ ಮೂರ್ತಿಯ ಮನ
ಮುಟ್ಟಿ ಪಾಡಿ ನೋಡಿ ಕುಭವ ದಟ್ಟುಳಿಯನಿಟ್ಟವರು ೨
ಜ್ಞಾನ ಶೀಲರು ದಾಸಕವನ | ಗಾನಲೋಲರು
ನೆರೆನಂಬಿದಂಥ ದೀನಪಾಲರು
ಶ್ರೀನಿಧಿವರ ಶಾಮಸುಂದರ | ಧ್ಯಾನಾಮೃತಪಾನಗೈದು
ಕ್ಷೋಣಿ ಮಂಡಲದಿ | ಮದಿಸಿದಾನೆಯೆಂತೆ ಚರಿಸಿದವರು ೩

 

೧೩೫
ಎಂಥ ದಯವಂತನೋ | ಮಂತ್ರ ಮುನಿನಾಥನೊ
ಸಂತಸದಿ ತನ್ನನು | ಚಿಂತಿಪರಿಗೆ ಸುರಧೇನು ಪ
ವರ ಪ್ರಹ್ಲಾದನು | ಮರಳಿ ಬಾಹ್ಲೀಕನು |
ಶ್ರೀ ಗುರುವ್ಯಾಸರಾಯನೊ | ಪರಿಮಳಾಚಾರ್ಯನೊ ೧
ಇರುವ ತುಂಗಾತಟದಲ್ಲಿ | ಬರುವ ತಾನು ಕರೆದಲ್ಲಿ
ಕರಪಿಡಿದು ಪೊರೆವಲ್ಲಿ ಸರಿಗಾಣೆ ಧರೆಯಲ್ಲಿ ೨
ಮರುತಾವೇಶಯುಕ್ತನು | ದುರಿತ ಕಳೆವ ಶಕ್ತನು
ತರಣಿ ನಿಭಗಾತ್ರನು | ಪರಮಸುಚರಿತ್ರನು ೩
ಶಿಶುವಿಗವುಗರೆದನು | ವಸುಧಿ ಸುರರ ಪೊರೆವನು
ಅಸಮ ಮಹಿಮನೊ | ಸುಶೀಲೇಂದ್ರ ವರದನೊ ೪
ಭೂಮಿಯೊಳು ಖ್ಯಾತನು | ಶಾಮಸುಂದರ ಪ್ರೀತನು
ಕಾಮಿತಾರ್ಥದಾತನು | ಸ್ವಾಮಿ ನಮಗೆ ಈತನು ೫

 

೮೯
ಎಂದು ಕಾಂಬೆನು ನಂದ ಗೋಪನ | ಕಂದ ಶ್ರೀ ಗೋವಿಂದನ
ಮಂದರಾಚಲಧರ ಶ್ರೀಯದುಕುಲ | ಚಂದ್ರಗುಣಸಾಂದ್ರ
ವಿಜಯಸೂತನ ವಿಶ್ವಪಾಲನ | ಭುಜಗವರ ಪರಿಯಂಕನ
ರಜನಿಚರರಳಿದ ಜನ ಜನಕನ | ಶ್ರೀ ಜಗಪತಿ ದ್ವಿಜವರಗಮನನ ೧
ಪಾಲುದಧಿ ನವನೀತ ಚೋರನ ಬಾಲಕೃಷ್ಣ ಗೋಪಾಲನ
ಶೈಲ ಬೆರಳಿಲಿ ತಾಳಿ ಗೋಕುಲ ಪಾಲಿಸಿದ ಪರಮಾತ್ಮನ೨
ಭಾಮೆ ರುಕ್ಮಿಣಿ ರಮಣ ರಂಗನ ಸಾಮಗಾನ ವಿಲೋಲನ
ಶ್ರೀಮದಾನಂದ ಮುನಿಕರಾರ್ಚಿತ ನ ೩

 

ಆತ್ಮನಿವೇದನೆ ಮತ್ತು ಲೋಕನೀತಿ
೨೦೫
ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ
ಜನರೊಳಗೆ ನಾನೋರ್ವ ಮನಜಾಧಮ ಪ
ಸ್ನಾನ ಜಪ ತಪ ಮೌನ ಧ್ಯಾನ ವರಮಂತ್ರಗಳ
ಖೂನವಿಲ್ಲದೆ ಜ್ಞಾನ ಹೀನನಾಗಿ
ಏನು ಹೇಳಲಿ ದುಷ್ಟ ಮಾನಿನಿಗೆ ಮನಸೋತು
ಶ್ವಾನನಂದದಿ ದಿನವ ನಾ ನೂಕಿದವನಯ್ಯ ೧
ಹತ್ತೆರಡು ಮತೈದು ಗಾತ್ರದೊಳು ಧರಿಸದಲೆ
ಸೋತ್ತುಮರ ಸತ್ಯಂಗನವು ಮಾಡದೆ
ಚಿತ್ತ ಚಂಚಲನಾಗಿ ಲೆತ್ತ ಪಗಡಿಗಳಾಡಿ
ಕತ್ತೆಯಿಂದದಿ ವ್ಯರ್ಥ ಹೊತ್ತು ಕಳೆದವ ನಾನು ೨
ನೇಮಪೂರ್ವಕ ಒಂದು ಯಾಮವಾದರು ಮನದಿ
ಶಾಮಸುಂದರ ಧ್ಯಾನ ಮಾಡದೆ
ಕಾಮಾರಿ ಷಡ್ವೈರಿ ಸ್ತೋಮಕ್ಕೆ
ಭೂಮಿಯೊಳು ಜಡವಾದ ನಾಮದಲಿ ಚರಿಸುವೆನು ೩

 

೯೮
ಏಕೆ ನೀಮರುಳಾದೆ ನಾಕೇಶ ವಿನುತೆ | ರ
ತ್ನಾಕರನ ತಾಯೆ ಪ
ಗೋಕುಲದೊಳಿದ್ದು | ಆಕಳ ಕಾಯ್ದಗೆ
ಲೋಕಪಾವನೆ ಸಿರಿಯೆ ಅ.ಪ
ನೀರೊಳಗೆ ಇದ್ದು ನಗಭಾರ ಬೆನ್ನಲಿಪೊತ್ತು
ಬೇರು ಮೆಲ್ಲುವನಿಗೆ |
ಚೀರಿ ಕಂಭದಿ ಬಂದು | ಘೋರ ರೂಪದಿ ಬಲಿ
ದ್ವಾರ ಕಾಯ್ದವಗೆ |
ವೀರ ನೆನಿಸಿ ಪೆತ್ತ | ನಾರಿಯ ಶಿರವ ಸಂ
ಹಾರಮಾಡಿದವಗೆ |
ಭೂರುಹಚರ ಪರಿವಾರ ದೊಳಗಿದ್ದು ದಧಿ
ಚೋರನೆನಿಸಿದವಗೆ ೧
ಸಂದೇಹವಿಲ್ಲದೆ ವಸನ ತ್ಯಜಿಸುತ
ಬಂದು ನಿಂದವನಿಗೆ |
ಇಂದಿರಾಧವ ನಿನ್ನ ಹಿಂದೆ ಬಂದವನ
ಅಂದು ಕೊಂಡವನಿಗೆ |
ಕುಂದರದನೆ ನಿನ್ನ ಪೊಂದದೆ ಛಂದದಿ
ಕಂದರ ಪಡೆದವಗೆ ೨
ಜಾತಿಯನರಿಯದೆ ಶಬರಿಯ ಎಂಜಲ
ಪ್ರೀತಿಲಿ ಉಂಡವಗೆ
ಶ್ವೇತವಾಹನಜಗೆ ತಾ ಸೂತನೆಂದೆನಿಸುತ
ಖ್ಯಾತಿ ಪಡೆದವಗೆ
ನೀತಿ ಇಲ್ಲದೆಯ ಮಾತೆಯ ಅನುಜನ
ಘಾತಿಸಿದಾತನಿಗೆ ||
ವಾತಾಶನವರ ತಲ್ಪದೊಳು ಮಲಗಿದ
ಶಾಮಸುಂದರ ಧೊರೆಗೆ ೩

 

೧೨೫
ಏನು ಧನ್ಯರೋ ಜಗದಿ ಎಂಥ ಮಾನ್ಯರೋ |
ಕ್ಷೋಣಿ ವಿಬುಧ ಶ್ರೇಣಿ ನಮಿಪ
ಮೌನಿ ಶ್ರಿ ರಘುಪ್ರೇಮತೀರ್ಥರು ಪ
ಕಲಿಯುಗದಿ ಕ್ರತುಗೈದ ಇಳಿಯ ಜನಕ ಸಾಧ್ಯವೆಂದು
ತಿಳಿದು ನಾಕದಿಂದಳಿದು ಬಂದು
ಕುಲಿಶಪಾಣಿಯಂತೆ ತೋರ್ಪರು ೧
ಧೂರ್ತರಿಂದ ದೂರವಿದ್ದು | ಸ್ವಾರ್ಥರಹಿತರಾಗಿ | ಸಕಲ
ತೀರ್ಥಕ್ಷೇತ್ರ ಚರಿಸಿ ಜನ್ಮ ಸಾರ್ಥಕೆನಿಸಿದ ಯತಿಯು ೨
ಧನ ಧಾನ್ಯ ಭರಿತ ಸದನ ತೃಣಸಮಾನವೆನಿಸಿ ಮುದದಿ |
ವಿನಯಶೀಲ ದ್ವಿಜರಿಗಿತ್ತು ಮುನಿಯೆನಿಸಿ ವಿರುಕ್ತರು ೩
ಚತುರಾಶ್ರಮ ವ್ರತದಿ ನೇಮ ಸತತಾ ಚರಿಸುತಲಿ |
ಶಿಷ್ಯರಾದಿಗೆ ವ್ರತಬೋಧವೃಷ್ಟಿ ಹಿತದಿಗರೆದು
ಪೊರೆವ ಯತಿಯು ೪
ಶ್ರೀಮಧ್ವಸುಮತವಾರಿಧಿ ಸೋಮನೆಂದೆನಿಸಿ |
ಜಿತ ಕಾಮರಾಗಿ ಕಠಿಣ ತಪದಿ | ಶ್ರೀ |
ಶಾಮಸುಂದರನ ವಲಿಸಿದವರು ೫

 

೨೪೪
ಏಳಯ್ಯ ಸದ್ಗುರುರಾಯ | ಈಗ
ಏಳು ತುರಗ ಸೂತನುದಯಿಸುವ ಸಮಯ ಪ
ಎದ್ದು ಶಿಷ್ಯರ ಕರೆಯಬೇಕು | ಗುರು
ಮಧ್ವಮತದ ತತ್ವ ಭೋಧಿಸಬೇಕು
ಇದ್ದ ದೋಷವ ಕಳೆಯಬೇಕು ಪರಿ
ಶುದ್ಧರ ಮಾಡಿ ನೀನುದ್ಧರಿಸಬೇಕು ೧
ಶೌರಿಕಥಾಮೃತ ಸಾರೋದ್ಧಾರ | ಭಾಗವತ ಶಾಸ್ತ್ರವಿಚಾರ
ಮುರೆರಡು ವಿಧ ಭೇದ ತಾರತಮ್ಯ
ಸಾರುತ ಸಲಹೋ ಶಿಷ್ಯಪರಿವಾರ ೨
ಪದಸುಳಾದಿಗಳ ಕೇಳಬೇಕು | ಕೇಳಿ
ಅದರೊಳಿರುವ ತತ್ವವಿವರಿಸಬೇಕು
ಮದಡತನವ ಕಳೆಯಬೇಕು ನಿನ್ನ
ಪದ ನಂಬಿದವರಿಗೆ ಮುದಗರಿಯ ಬೇಕು ೩
ಸತ್ಯನಾರಾಯಣ ಕಥೆಯ | ಬಹುವಿಸ್ತಾರವಾಗಿ
ನೀ ಬಿತ್ತರಿಸಯ್ಯ | ಭೃತ್ಯರಾ ಮಾಯೆ
ಓಡಿಸಯ್ಯ ಅಜ್ಞಾನ
ಜ್ಞಾನ ಭಕ್ತಿ ವೈರಾಗ್ಯ ಸಂಪತ್ತು ನೀಡಯ್ಯ ೪
ಒಂದೂರು ನಿಲಯನೆ ಏಳೊ ಶಾಮ
ಸುಂದರವಿಠಲನ ಮಂದಿರನಾಳೋ
ಬಂದ ನಿಂದೆಗಳೆಲ್ಲ ಹೂಳೋ ನಿನ್ನ
ಪೊಂದಿದ ನಮ್ಮನ್ನು ಅಗಲಿದೆ ಆಳೊ ೫

 

೧೧೧
ಕಂಡೆ ನಾ ಕಣ್ಣಾರೆನಾ | ಕಂಡೆನಾ ಪ
ಕಂಡೆನು ಕರುಣಾಸಾಗರನ | ಕರ
ದಂಡ ನಾಮಕೊಲಿದವನ | ಆಹಾ
ದಂಡ ಧಂಡದ ಲೀಲೆ ತೋಂಡರೊಡನಾಡು
ಫಂಢರಿಪುರವಾಸ | ಪಾಂಡುರಂಗನ ಮೂರ್ತಿ ೧
ವ್ಟಿಟತಮತ್ಕೋಟಿ ಸನ್ನಿಭನ | ದೇವ |
ತಟಿನಿಯ ಪದದಿ ಪೆತ್ತವನ | ಚಾರು
ಕಟಿಯಲ್ಲಿ ಕರವ ನಿಟ್ಟವನ | ನಿಜ
ಭಟ ಜನರಿಗೆ ಮುಕ್ತಿ ಪ್ರದನ ||ಆಹಾ ||
ಜಠರದಿ ಜಗವಿಟ್ಟು ವಟದೆಲೆಯೊಳು ಮಲಗಿ
ವಟುರೂಪದಲಿ ಪಾದಾಂಗುಟವನು ಮೆಲುವನ ೨
ಭುವನದೊಳು ಸಂಚರಿಸುವನ | ಕೂರ್ಮ
ಕುವರ ಮಾನವ ಪಂಚಮುಖನ | ಋಷಿ
ಕುಮಾರ ಕುವರರ ಕಡಿದವನ ಮಹಿ
ಕುವರಿಯ ಕರವ ಪಿಡಿದವನ | ಆಹಾ
ಕುವಲಯ ಸಖ ಕುಲೋಧ್ಭವ ಭವಮಾರ್ಗಣ
ಬವರದಿ ಹಯವೇರಿ ಯವನರ ಬಡಿದನ ೩
ನಿಗಮಗಳಿಗೆ ಸಿಗದವನ | ನಾ
ಲ್ಮೊಗನ ನಾಭಿಲಿ ಪಡೆದವನ | ರವಿ
ಮಗನಿಗೆ ಮಗನಾದವನ ತನ್ನ
ಪೊಗಳುವಂಥರಫÀ ಕಳೆಯವವನ ಆಹಾ
ಜಗನ್ನಾಥದಾಸರಿಗೆ | ಸೊಗಸಾದ ಮೃಷ್ಟಾನ್ನ
ಬಗೆ ಬಗೆ ಉಣಿಸಿದ ಖಗಪತಿ ಗಮನನ೪
ಸಾಸಿರನಯನನುಜನ | ಮಹಿ
ದಾಸ ಕಪಿಲದತ್ತಾತ್ರೇಯನ ವೇದ
ವ್ಯಾಸ ವೃಷಭ ಹಯಮುಖನ ಭಾರ
ಶ್ರೀಶ ಮಾನಸಮಂದಿರ ||ಆಹಾ ||
ಶ್ರೀಶ ತಂದೆ ವೆಂಕಟೇಶ ವಿಠಲಂಘ್ರಿ
ದಾಸರ ಸತ್ಯಹವಾಸದಿಂದಲಿಯಿಂದು ೪
ತಂದೆ ತಾಯ್ಗಳ ಸುಕೃತವೊ | ನಮ್ಮ
ಒಂದೂರಾರ್ಯರ ಅನುಗ್ರಹವೋ | ಸ್ತಂಭ
ಮಂದಿರ ರಾಯರ ದಯವೊ | ದಾಸ
ವೃಂದ ಕೃತಾಶೇಷ ಫಲವೊ | ಆಹಾ
ಇಂದು ಭಾಗದಿ ಭಕ್ತಾವೃಂದಕೆ ದರುಶನಾ
ನಂದಗರೆವ ನ ೫

 

೬೫
ಕಂತು ಜನಕ ಶ್ರೀಕಾಂತನ ಸ್ತುತಿಸಲ
ನಂತನಿಗಸದಳವೈ ಪ
ದಂತಿಚರ್ಮಧರಾಧ್ಯರು ಈತನ
ಅಂತುಗಾಣದಲೆ ಚಿಂತಿಪರೈ ಅ.ಪ
ಮಾವನ ಮಥಿನಿದ ಮಾವನಿಗೊಲಿದ
ಮಹರಾಯನವನು |
ಮಾವನ ಮಗನ ಮೋಹದ ಮಗಳಿಗೆ
ಮಾವನೆನಿಸಿದವನು
ಮಾವನ ತಮ್ಮಗೆ ತನ್ನಯ ಭಕುತನ
ಮಹಿಮೆ ತೋರಿಸಿದನು ||
ಮಾವನ ತನಯರ ಪರಿ ಪರಿ ಪೊರೆದನು ಉ
ಮಾವಲ್ಲಭನುತ ನಗಧರನಿವನು ೧
ಸತಿಯ ಪಿತನ ಪೆತ್ತನ ಮಾತೆಗೆ
ಪತಿಯಾದವ ನಿವನು |
ಸತಿಯಳ ಪಿಡಿದೊಯ್ದಾತನ ಭ್ರಾತನ
ಸುತನ ಪಾಲಿಸಿದನು
ಸತಿಯ ಪಡೆದವಳ ಸುತನ ಮರ್ದಿಸಿ
ಸತಿಯರ ಕೂಡಿದನು |
ಸತಿಗೆ ಕೊಟ್ಟ ವರ ಹಿತದಿ ನೀಡಲು
ಸತಿಯನ್ನಗಲಿದ ಶತಕ್ರತು ವಂದ್ಯನು ೨
ಕಾಲುರಹಿತ ಕೈಕಾಲು ಮುದುರುವ
ಕೋಲರೂಪಿ ಇವನು
ಕಾಲನಂತೆ ಘನ ಕೋಪಿಯಾಗಿ ನದಿ
ಕಾಲಲಿ ಪಡೆದವನು
ಕಾಲಕ್ಷತ್ರಿಯರ ತಾ
ಬಾಲೆಯ ಸಲಹಿದನು
ಕಾಳಿವೈರಿ ಶ್ರೀ ಶಾಮಸುಂದರ
ಕಾಲಕಾಲ ನಖ ಸಖ ಕಲಿ ಭಂಜನನು ೩

 

೭೯
ಕಂಬು ಕಂಧರ ಸತತ ಬಿಡದೆ ರಕ್ಷಿ
ಸಂಬೋಜೋಧ್ಭವನ ತಾತ ಪ
ಜಂಭಾರಿ ವೈರಿಕುಲಾಂಬುಧಿ ಕುಂಭಜ
ಕುಂಭಿಣಿಸುರ ನಿಕÀರುಂಬ ಪೋಷಕದೇವ ಅ.ಪ
ನಳಿನಾಕ್ಷ ನರಕೇಸರಿ ನಂಬಿದೆ ನಿನ್ನ |
ಹಲಧರಾನುಜ ಶೌರಿ ||
ಇಳಿಜದಾಯಕ ಸಿರಿ | ನಿಲಯ ನಿತ್ಯಾನಂದ
ಎಲರುಣಿ ವರಶಾಯಿ ಕಲುಷಸಂಹಾರಕ
ಜಲದರಿಪುವಿನ ತನಯಾನನುಜನ
ಕಲಹದೊಳು ಜೈನಿದನ ತಾತನ
ಕುಲವಿರೋಧಿಯ ಧ್ವಜನ ಜನಕಗೆ
ಒಲಿದು ಬೆಂಬಲನಾದ ಕೇಶವ ೧
ನಿಗಮ ರಕ್ಷಕ ಕೂರ್ಮಕೀಟ ಮಾನವ
ಮೃಗವಟು ಪರಶುರಾಮ
ಅಗಜೇಶ ಶರಕಾಲ | ನಗಪತಿ ವರದನೆ
ಅ(ಗ)ಗಜರಾಜನ ಮಗಳಿಗೋಸುಗ
ನಗುತ ಮಡದಿಯನಗಲಿ ಬಂದು
ಜಗದಿ ಪೊತ್ತನ ನಗದಿ ನೆಲಸಿದ
ತ್ರಿಗುಣ ವರ್ಜಿತ ಖಗವರೂಧನೆ ೨
ಮಂದರೋದ್ಧರ ವಿಶಾಲಮಹಿಮನಾದ
ಸಿಂಧೂರ ಪರಿಪಾಲ |
ಕಂದರ್ಪಪಿತ ಶಾಮಸುಂರವಿಠಲನೆ
ವಂದಿಸುವೆನು ಎನ್ನ | ಬಂಧನ ಬಿಡಿಸಯ್ಯ
ಗಂಧವಾಹನವೀಂದ್ರ ಫಣಿ ಪತಿ
ಸಿಂಧುಜೋಧ್ಭವೆ ಪತಿ ವಿರೋಧಿ | ಪು
ರಂದರಾರ್ಯರ ವೃಂದ ವಂದಿತ
ನಂದ ಸುತ ಗೋವಿಂದ ಗೋಪತಿ ೩

 

೧೮೦
ಕರವ ಪಿಡಿ ಗುರುರಾಯ | ಶಿರಬಾಗಿ ಬೇಡುವೆ
ಪೊರೆಯೊ ಸತ್ಕವಿಗೇಯ | ನೆರೆನಂಬಿದೆನು ನೀ
ಮರೆಯದಿರು ಶುಭಕಾಯ | ಹೇ ಸೂರಿವರ್ಯ ಪ
ಉರಗಕೇತನ ಮೊರೆಯ ಲಾಲಿಸಿ
ತರಣಿಜನಿಗೆರಡೊಂದು ಯುಗದಲಿ
ಧುರದಿ ಸಾರಥಿಯಾಗಿ ಸ್ಯಂದನ
ಭರದಿ ನಡೆಸಿದ ಪರಮ ಪುರುಷನೆ ಅ.ಪ
ಶರಣು ಜನ ಸುರಧೇನು | ಹೇ ತಾತ ನೀ
ಮೂರೆರಡು ಜನುಮಗಳನ್ನು | ಕಳೆದು ಮ
ತ್ತುರುವ ಅವತಾರವನು ಭಕ್ತಿಪೂರ್ವಕ
ಪಿರಿಯರಾಜ್ಞದಿ ನೀನು ಪೂರೈಸಲಿನ್ನು
ಧರಣಿಯೊಳಗವತರಿಸಿ ನರರಿಗೆ
ಅರಿಯದಂದದಿ ಹರಿಯ ದಿಸೆಯೋಳ್
ಹರಿಯ ಸ್ಮರಿಸುತ ಚರಿಪ ಧೊರೆ ತವ
ಚರಣ ದರುಶನಗರೆದು ಕರುಣದಿ ೧
ಬಿಡಿಸೊ ಎನ್ನ ಕ್ಲೇಶ ತಡಮಾಡದಲೆ ನೀ
ಕಡಿಯೊ ಈ ಭವ ಪಾಶ | ದೃಢಮನವ ಕೊಡು ನಿ
ನ್ನಡಿಗಳಲಿ ನಿರ್ದೋಷ | ನುಡಿಯಲಾಲಿಸಿ
ಬಿಡದೆ ಮಾಡುಪದೇಶ ಪೊಡವೀಶದಾಸ
ಒಡೆಯನೇ ನೀನಡಗಿ ಎನ್ನನು
ಕಡೆಗೆ ನೋಡಲು ಪಡೆದ ಜನನಿಯು
ಪಿಡಿದು ಬಾಲನ ಮಡುವಿನೋಳ್ ತಾ
ಬಿಡುವ ತೆರ ತವ ನಡತೆ ಎನಿಪುದು ೨
ಮಂದನಾನಿಜವಯ್ಯ | ಸಂದೇಹವಿಲ್ಲದೆ
ಕುಂದು ಎಣಿಸದೆ ಜೀಯ ಬಂದೆನ್ನ ಮನದಲಿ
ನಿಂದು ನೀಸಲಹಯ್ಯ ವಂದಿಪೆನು ಶ್ರೀ ಪು
ರಂದರಾರ್ಯರ ಪ್ರೀಯ ಆನಂದ ನಿಲಯ ೩

 

೧೧
ಕರುಣದಿ ಕೊಡು ವರವಾ ಗುರು ಮಹಾದೇವ ಪ
ನಿರುತ ಸ್ಮರಿಸುವ ಶರಣ ಸಂಜೀವಾ
ಪರಿಪಾಲಿಸು ಅನುದಿನ | ಹರಿಕುಮಾರನ
ಗರ್ವವನದಾವಾನಲ ಮಹಾನುಭಾವ ಅ.ಪ
ಸ್ಪಟಿಕ ಸನ್ನಿಭ ಧವಳ ಶುಭಗಾತ್ರ
ಕುಟಲ ದಾನವ ಕಟಕ ವಂಚಕ ಯಕ್ಷಪತಿ ಮಿತ್ರ
ಚಟುಲ ವಿಕ್ರಮ ನಿಗಮ ಹಯ
ಧೂರ್ಜಟಿಯ ಸುಚರಿತ್ರ ಹೇ ನಿಟಲ ನೇತ್ರ ೧
ಅದ್ರಿವೈರಿಯತನಯನೊಡನೆ ಯುದ್ಧಗೈದಾತ
ಭದ್ರದಾಯಕ ರುದ್ರದೇವ ಪ್ರಸಿದ್ಧ
ಮುನಿ ನಮಿತ ಶ್ರೋದ್ರು ನೀಧರ ದದ್ದಲಾಪುರ
ಸದ್ಮಸುಖದಾತ ಹೇ ಸದ್ಯೋಜಾತ ೨
ಶಾಮಸುಂದರ ಸ್ವಾಮಿ ಪ್ರಿಯ ಸಖ
ಸೋಮಶೇಖರನೆ ಪ್ರೇಮದಿಂದಲಿ
ರಕ್ಷಿಸೆನ್ನನು ಭೂಮಿಶ್ಯಂದನನೆ ಕಾಮಿತ ಪ್ರದ
ವಾಮದೇವನೆ ಹೇಮಾತಿಧವನೆ ನಿಸ್ಸೀಮ ಮಹಿಮನೆ ೩

 

ದಶಾವತಾರಗಳು
೭೭
ಕರುಣದಿ ಪಾಲಿಸೆನ್ನ ಶ್ರೀ ಹಯ ವದನ ಪ
ಕರುಣದಿ ಪಾಲಿಸೊ ಕರಿವರದನೆ ನಿನ್ನ
ಚರಣ ಕಮಲಗಳಿಗೆರಗಿ ಬೇಡಿಕೊಂಬೆ ಅ.ಪ
ಅಗಣಿತ ಮಹಿಮನೆ ನಗಪಾಣಿ ಶ್ರೀಶನೆ
ಖಗವರ ವಾಹನ ನಿಗಮ ಗೋಚರನದ
ಮೃಗರೂಪ ಮೂರ್ಜಗದೊಡೆಯನೆ ನಿನ್ನ
ಮೀಗೆ ಹರುಷದಿಂದ ಪೊಗಳುವ ಸುಖವಿತ್ತು
ಹಗಲಿರುಳೆನ್ನದೆ ಅಘು ಕಳೆದು ಕಾಯೊ
ಗಗನಾಳಕ ವಂದಿತ ತ್ವರಿತದಿ ಕರ
ಮುಗಿದು ಬೇಡುವೆ ಸಂತತ ಮರಿಯದೆಪೊರೆ ಪ
ನ್ನಗ ಶಾಯಿ ಶ್ರೀ ಭೂನಾಥ ನಿನ್ನಯ ಪಾದ
ಯುಗ ಸೇವೆ ನೀಡಯ್ಯ ನಗವೈರಿ ಮಗ ಸೂತ ೧
ಕ್ಷಿತಿಜೆರಮಣ ದ್ರೌಪದಿ ರಕ್ಷಕನೆ ನಿನ್ನ ಸುರ
ಯತಿ ತತಿ ಸನ್ನುತ ಪತಿತೋದ್ಧಾರಕಮನ್
ಮಥ ಪಿತ ಮುರಹರ ಶೃತಿ ಪತಿ ಪಾದ್ಯನೆ ಸಂ
ತತ ನಿನ್ನಯ ಪಾದ ಶತಪತ್ರ ನಂಬಿದೆ
ಹಿತದಿ ಎನ್ನಯ ದುರ್ಮತಿ ಕಳೆದು ಕಾಯೊ
ಶತ ಮಖಾನುಜ ಗೋವಿಂದ ಬಾಗುವೆ ಶಿರ
ದಿತಿಜಾರಿ ನಿತ್ಯಾನಂದ ಮಾತುಳ ವೈರಿ
ವಿತತ ಮಹಿಮ ಮುಕುಂದ ನಿನ್ನನುದಿನ
ಸ್ತುತಿಪ ಭಾಗ್ಯವ ಕೊಡು ಕೃತಿ ಪತಿ ಭರದಿಂದ ೨
ಇಂದಿರಾಧವ ನೆ
ಮಂದರ ಗಿರಿ ಪೊತ್ತು ಮಂದಜಾಸನಪಿತ
ವಂದಿತ ಭಕ್ತಮಂದಾರ ಮಾಧವ ಸುರ
ವೃಂದ ವಿನುತ ದಯಾಸಿಂಧು ದಿನ ಬಂಧು
ಇಂದು ನಿನ್ನಯ ಪಾದ ಪೊಂದಿದೆ ಸಂತತ
ಕಂದನೆಂದರಿದೆನ್ನ ಕುಂದು ಎಣಿಸದೆ ದಯ
ದಿಂದ ಪಾಲಿಸು ಹೇದೇವ ನಂಬಿದೆ ದಶ
ಕಂಧರಾಂತಕ ರಾಘವ ಬೇಡುವೆ ದಶ
ಶ್ಯಂದನ ಸುತ ವರವ ಪಾಲಿಸಿ ಕಾಯೊ
ಕಂದರ್ಪ ಪಿತ ಕುಂತಿನಂದನರ ಭಾವಾ ೩

 

೭೦
ಕರುಣದಿ ಪಿಡಿಕೈಯ್ಯ | ಸಿರಿ ಮನುಜಕೇಸರಿ
ಧರಣಿ ಸುಮನಸಗೇಯ | ಮೊರೆಹೊಕ್ಕೆ ನಿನ್ನನು
ತರಣಿ ಸನ್ನಿಭಗಾತ್ರ | ಕೀರಾಬ್ಧಿಶಯ್ಯ ಪ
ಸರಸಿಜಾನನ ನಜಕ ತವಪದ
ಮರೆದ ಪಾಮರನಾಗಿ ನಾ ಭವ
ಶರಧಿಯೊಳು ಬಿದ್ದು ಪರಿದು ಪೋಗುವೆ
ಎರಗರಿಪುಧ್ವಜನಾಗಿ ನೀ ಬಂದು
ಅಜಿತ ದೇವಕಿ ಸೂನು | ಸರ್ವೇಶ ರಾಘವ
ಭಜಕಜನ ಸುರಧೇನು | ಸ್ವರತ ಸುಖಮಯ
ಸುಜನ ವಾರಿಜ ಭಾನು ಖಳವನ ಕೃಶಾನು
ತ್ರಿಜಗ ಪೋಷಕ ಪರಮ ಸುಲಭ ನೀ
ನಿಜದಯದಿ ಹರಿಮದವ ಖಂಡ್ರಿಸಿ
ವೃಜದ ತುರುಗಳ ಕಾಯ್ದ ಸಜನುತ
ದ್ವಿಜಪ ಸುತೆ ಪತಿಧ್ವಜನ ಸುತನೆ ೧
ಪತಿತ ಪಾವನ ರಂಗ | ಸಂತತದಿ ನಿನ್ನನು
ಸ್ತುತಿಪ ಸುಜನರ ಸಂಗ | ನೀನಿತ್ತು ಪಾಲಿಸು ದಿಜ
ತತಿ ಮಾತಂಕ ಮರಿಗಳಿಗೆ ಸಿಂಗ
ಸಿತ ತುರಂಗನ ರಥದಿ ಶೋಭಿಪ
ಅತುಳ ಮಹಿಮನ ಜನನಿ ಅನುಜನಿಗೆ
ಹಿತದಿ ಭ್ರಾತದಿ ಭೀತಿ ಬಿಡಿಸಿದ
ಶೃತಿಗೆ ನಿಲುಲದ ಚ್ಯುತ ವಿದೂರನೆ ೨
ಸಾಮಗಾನ ವಿಲೋಲ ಸುರರಾಜ ಪೂಜಿತ
ಹೇಮಕಶ್ಯಪ ಕಾಲ | ಕರಿದನುಜ ಹರನುತ
ಸ್ವಾಮಿ ಶ್ರೀವನಮಾಲಧರ ಸುಗುಣಶೀಲ
ಕಾಮಪಿತ ಹಿಮಧಾಮ ವದನ ಸು
ಧಾಮಸಖ ಸುರಸ್ತೋಮ ವಂದಿತ
ಯಾಮಿನೀ ಚರವೈರಿ ವಾಮನ
ಶ್ರೀಮನೋಹರ ಶಾಮಸುಂದರ ೩

 

೧೦೩
ಕರುಣಾಕರ ದೇವಾಧಿ ದೇವಾ ತವ ಪಾದವ ಪ
ನೆರೆನಂಬಿದೆ ಜವನಂಜಿಕೆ ಜವದಿ ಓಡಿಸೋ ೧
ಮುರಭಂಜನಾ ನರಸಾರಥಿಯೇ
ಶಿರಬಾಗಿ ನಾ ಪ್ರಾರ್ಥಿಸುವೆ ೨
ಶ್ರೀಶಾಮಸುಂದರ ವಿಠಲಾ ಅಸುರಾಂತಕ
ಪಶುಪಾಲಕ ೩

 

೧೭೬
ಕರುಣಿಸಿ ಪಿಡಿಯಾ ಕೈಯ್ಯಾ | ಗುರುರಂಗವೊಲಿದರಾಯ ಪ
ನಂಬಿದೆ ನಿನ್ನ ಚರಣ | ಬೆಂಬಿಡದೆ ಕಾಯೋ ಸತತ
ಸ್ತಂಭದಲಿ ನೆಲಸಿದಂಥ | ಕುಂಭಿಣಿಪ | ದಾಸವರ್ಯ ೧
ದೀನರ್ಗೆ ದಿವಿಜಧೇನು | ನೀನೆಂದು ಕ್ಷೋಣಿ ತಳದಿ
ಜ್ಞಾನಿಗಳು ಪೇಳಿದಂಥ ವಾಣಿಯನು ಸತ್ಯಮಾಡೊ ೨
ನಿನ್ನ ಸ್ಥಳವು ಪುಣ್ಯಕ್ಷೇತ್ರ | ನಿನ್ನಲ್ಲಿ ಸಕಲ ತೀರ್ಥ
ನಿನ್ನ ಕವನ ಮಧ್ವಶಾಸ್ತ್ರ | ನಿನ್ನವನು ನಿಜಕೃತಾರ್ಥ೩
ಹರಿದಾಡುವಂಥ ಮನಸು | ಹರಿಯಲ್ಲಿ ಸ್ಥಿರವಗೊಳಿಸೊ
ಹರಿನಾಮ ಸುಧೆಯ ಕುಡಿಸೊ | ಹರಿವರನ ಮತವ ಪಿಡಿಸೊ ೪
ಮತಿಭ್ರಷ್ಟನಾಗಿ ನಿನ್ನ ಕೃತಿಗಳನು ಪಾಡದ್ಹೋಗಿ
ಕ್ಷಿತಿ ಭಾರನಾದೆ ಮುಂದೆ ಗತಿ ತೋರಿ ಸಲಹೊ ತಂದೆ ೫
ಹೆತ್ತವರು ಸುತನ ದೋಷ | ಕೃತ್ಯಗಳ ಕ್ಷಮಿಸದಿಹರೆ
ಚಿತ್ತೈಸು ಎನ್ನ ಮಾತ | ಉತ್ತಮರ ಸಂಗವಿತ್ತು ೬
ತಳೆದೇಳು ಜನುಮಗಳಲಿ | ಇಳೆಯೊಳಗೆ ಚರಿಪ ಸಮಯ
ಸುಳಿದಾಡು ಮತ್ತೊಮ್ಮೆ ಘೋರ ಕಲಿಬಾಧೆ ತಪ್ಪಿಸಯ್ಯ ೭
ಮಾನವಿಯ ಸ್ಥಾನದಲ್ಲಿ | ನೀನಿರಲು ನಿನ್ನ ಮರೆದು
ತಾನೆಲ್ಲಿ ಪೋದರೇನು | ಆ ನರಗೆ ಉಂಟೆ ಮೋದ ೮
ಕಂದರ್ಪಜನಕ ಶಾಮಸುಂದರ ಮೂರ್ತಿಹೃದಯ
ಮಂದಿರದಿ ತೋರೋದಾತ ವಂದಿಸುಎ ನಿನ್ನ ಪದಕೆ ೯

 

೧೩೬
ಕರುಣಿಸು ಗುರುವರ ಪರಿಮಳಾರ್ಯ |
ಕರುಣಾಬ್ಧಿಯ ಜಿತಕಾಯ ಜಾತ |
ವರಶುಭ ಚರಿತನೆ ನೀ | ಕನಕಶಯನ ಜಾತ |
ನಮಿಪೆ | ಅನುದಿನ ಪೊರೆವುದು ನೀ ೧
ವರಹಸುತೆಯ ತೀರ ನಿಲಯ |
ಶರಣರ ಸುರತರು ನೀ ೨
ಶಾಮಸುಂದರನನಾಮಸುಧೆಯಾ |
ಮಮತೆಯಲಿ ಗರೆವುದು ನೀ ೩

 

೪೪
ಕರುಣಿಸೋ ಗುರು ಮಾರುತಿ
ಶ್ರೀಧರ ಪರನೆಂದು ಬೋಧಿಸುತಲಿ ಪರ
ವಾದಿಯ ಜಯಸಿದ ಮೋದತೀರ್ಥಮುನಿ ೧
ಅಬಲೆಯ ಪ್ರಾರ್ಥನೆ ಲಾಲಿಸಿ ನಿಶೆಯೊಳು
ಖೂಳನುದರವನ್ನು ಸೀಳಿ ಮೆರೆದ ಘನ ೨
ಸ್ಮರಿಸುವ ಜನರ ಕೋರಿಕೆ ನೀಡಲು
ಕೊರವಿ ಪುರದೊಳು ನೆಲೆ ನಿಂತ ಧೀರ ೩
ಸೋಮಧರಾರ್ಚಿತ ಶಾಮಸುಂದರನ
ನಾಮಾಮೃತವನು ಪ್ರೇಮದಿಂದ ಕೊಡು ೪

 

೭೬
ಕರ್ಪೂದಾರುತಿ ತಾರೆ ಕೊಪ್ಪರದಪ್ಪನಿಗೆ
ಸರ್ಪಸುತಲ್ವಗೆ ಮುಪ್ಪಾದ ದೇವನಿಗೆ ಅಪ್ರತಿಮರಿಹಿಮೆಗೆ ಪ
ನೀರೆ ನಲುವಿಂದಲಿ ನೀಮುದದಿಂದಲಿ | ಸಖಿ ನಿಜಮನದಲಿ ಅ.ಪ
ಫಾಲಾಕ್ಷ ವಂದಿತಪಾದ
ಪಾಲಾಬ್ಧಿವಾಸಗೆ | ಪಾಂಚಾಲಿವರದರಂಗಗೆ |
ಶಿಶುಪಾಲ ಖರಮುರ ಹಾರಿಗೆ |
ಕಾಳಿಂಗನ ಫಣೆಯಲ್ಲಿ ತಥೈವಿಎಂದು ಕುಣಿದವಗೆ |
ಬಾಲೆಯರಾಲಯ ಪೊಕ್ಕು ಪಾಲು ಬೆಣ್ಣೆ ಕದ್ದವಗೆ |
ಗೋಪಾಲಕೃಷ್ಣನಿಗೆ ನೀರೆ ನಲುವಿಂದಲಿ |
ನೀ ಮುದದಿಂದಲಿ | ಸಖಿ ನಿಜಮನದಲಿ ೧
ದೇವಾಧಿದೇವನಾದ ಭಾವಜನಯ್ಯನಿಗೆ |
ವÀಸುದೇವದೇವಕಿ ಕಂದಗೆ ಭೂದೇವೌಕ್ಷವಂದ್ಯಗೆ |
ಪಾವನ್ನ ಮೂರುತಿಯಾದ ಶ್ರೀದೇವಿ ಅರಸಗೆ |
ಗೋವಳರಿಂಧ ಕೂಡಿ ಗೋಹಿಂಡು ಕಾಯ್ದವಗೆ |
ದೇವಾರಿ ವೈರಿಗೆ ಶ್ರೀವಾಸುದೇವಗೆ ೨
ಮಂಗಳಾಂಗ ಗಂಗಾಜನಕ |
ತುಂಗವಿಕ್ರಮದೇವಗೆ | ಜಯ
ಸಂಗೀತ ಪ್ರಿಯಲೋಲಗೆ | ಪತಂಗಜವೈರಿ ದೇವಗೆ
ಶೃಂಗಾರದಿ ಶಾಮಸುಂದರ ಗಾಂಗೆಯಂಬರಧಾರಿಗೆ ೩

 

೧೮೪
ಕಳೆಯ ಬ್ಯಾಡವೋ ಕಾಲವ | ತಿಳಿ ನೀ ಮಾನವಾ | ವೃಥಾ | ಪ
ಹರಿಚರಿತಾಮೃತ ವರಸುಗ್ರಂಥವನು
ಪರಮತತ್ವವೆಂದರಿಯದೆ ಜಗದೊಳು ೧
ಶುದ್ಧಮನದಿ ಗುರುಮಧ್ವಮುನಿಯ ಚರಣದ್ವಯಕೆರಗದೆ
ಹದ್ದುಗಳಂದದಿ ಕಳೆಯಬ್ಯಾಡವೋ ಕಾಲವ ೨
ವಾಸುಕಿಶಯನನ ವಾಸರದಲಿ ಉಪವಾಸವ ಮಾಡದೆ
ದೋಷಿಗಳಮದದಿ ಕಳೆಯಬ್ಯಾಡವೋ ಕಾಲವ ೩
ತನುಮನಧನ ಸತಿಯರನು ವಿಧಿಜಕಗರ್ಪಿಸದೆ
ಶುನಕನಂದದಿ ಕಳೆಯ ಬ್ಯಾಡವೋ ಕಾಲವ ೪
ಪ್ರೇಮದಿಂದಲಿ ಶಾಮಸುಂದರನ ನಾಮವು ಪಾಡದೆ
ಪಾಮರನಂದದಿ ಕಳೆಯಬ್ಯಾಡವೋ ಕಾಲವ ೫

 

೨೨೩
ಕಾಮಿನಿ ಮಣಿ ಗರಿಗಾಮಿನಿ ಸುಖವಾಣಿ ಪ
ವರಮೌಕ್ತಿಕ ಮಣಿಮಯ ಪೀಠಿಕೆ ಬಾಗುಣ ಶ್ರೇಣಿ
ಮರುಗು ನಾಗ ಸುರಗೆ ಜಾಜಿ
ಸರಸ ಸೂಮಾಲೆ ಧರಿಸಿ
ವರಶೃಂಗಾರಳಾಗುತಲಿ ೧
ಅಗರು ಗಂಧ ಚಂದನವನು
ಮೃಗ ಮದ ಗಜ ಜೌವ್ವನವನು
ಮಿಗೆ ಶ್ರೀ ಲೇಪಳಾಗುತಲಿ ೨
ಶಾಮಸುಂದರನಂಘ್ರಿ ಕಮಲ
ಭಾಮಿನಿನೀನು ಮನದಿ ಸ್ಮರಿಸೆ
ಕೋಮಲಾಂಗಿ ಶಶಿವದನೆ ೩

 

೫೮
ಕಾಯೆ ದುರ್ಗಾಂಭ್ರಣಿಯೆ | ಕಾಯೆ ಶ್ರೀ ರುಕ್ಮಿಣಿಯೆ
ಕಾಯೆ ಕಾಯೆ ಶುಭ ಕಾಯೆ ದಯದಿ ಹರಿ
ಕಾಯ ನಿಲಯೆ ವಿಧಿ ಕಾಯಜ ತಾಯೆ ಪ
ಮಾಕುಮತಿ ಶ್ರೀಕರಳೆ | ಪೋತನ ನುಡಿ ಕೇಳೆ
ಭೀಕರಳೆನಿಸುತ | ವ್ಯಾಕುಲಗೊಳಿಸದೆ
ನೀಕರುಣಿಸು ರತ್ನಾಕರನ ಮಗಳೆ ೧
ಸೀತೆ ಸಾರಸನಯನೆ | ಶೀತಾಂಶುವಿನ ಭಗಿನಿ
ಮಾತೆ ನಮಿಪೆ ತವ | ಘಾತಕ ವ್ರಾತದ
ಭೀತೆಯ ತೋರದೆ | ಪ್ರೀತಿಯಿಂದೊಲಿದು ೨
ಲಕ್ಷ್ಮಿಕೃತಿ ಶಾಂತಿ ಅಕ್ಷರಳೆ ಜಯವಂತಿ
ಈಕ್ಷಣ ಕರುಣಕವಾಕ್ಷದಿಂದೀಕ್ಷಿಸು
ಪೇಕ್ಷವ ಮಾಡದೆ ಮೋಕ್ಷದಾಯಕಳೆ ೩
ವಟದೆಲೆಯೊಳು ಮಲಗಿರುವ | ವಟುರೂಪಿ ಪತಿಪದವ
ಪಠಿಸುತಬ್ಜಸೀಕರ | ಪುಟದಿ ನಮಿಸುವಂಥ
ಕುಟಿಲರಹಿತೆ ಶತ | ತಟಿತ ಸನ್ನಿಭಳೆ ೪
ಭಾಮೆ ಶ್ರೀ ಭೂಸುತೆಯೆ | ಶಾಮಸುಂದರ ಸತಿಯೆ
ನಾ ಮೊರೆ ಹೊಕ್ಕೆನು | ಪ್ರೇಮದಿಂದಲಿ |ಸು
ಕ್ಷೇಮಗರೆದು ಮಮಧಾಮದಿ ನೆಲಸೆ ೫

 

೪೬
ಕಾಯೊ ಕಪಿವರ | ಕಾಯಜವೈರಿ ವಿನಮಿತ ಪ
ಅನಿಲಜ ಮಹಾಚಾರುಚರಿತ |
ಅನಘುನೆ ಕರುಣನಮಿಪೆ ಸದಾ ೧
ರಘುಜನ ದಿವ್ಯಪಾದ ಭಜಕಾ |
ಅಗಣಿಕ ಸುಗಣ ಸ್ಮರಿಪೆ ಸದಾ ೨
ಶಾಮಸುಂದರಗೆ ಧಾಮಾ ನೆಂದೆನಿಪ
ಭೀಮವೃಕೋದರ ಸುಖತೀರಥನೆ ೩

 

೧೦೪
ಕಾಯೊ ಕಾಯೊ | ಕಾಯೊ ಕಾಯೋ ಕಂಸಾರಿ ನಿನ್ನ ಪದ
ತೋಯಜಕೆರಗುವೆ | ಕಾಯಜ ಜನಕ ಪ
ಪಾಥÀಜ ಭವವಿಧಾತ ಸುಮನಸ
ಪ್ರಾತವಿನುತ ಮಾನಾಥನೆ ನಿರುತ ೧
ಭದ್ರಮೂರುತಿ ಬಲಭದ್ರಾನುಜ ಮಂದ
ರಾದ್ರಿಪಾಣಿ ಸಮುದ್ರ ಶಯನ೨
ಖೇಟವರೂಧ ಕಿರೀಟಸೂತ ಶತ |
ಕೋಟಿದಿನಪ ನಿಭ ಘೋಟಕವದನ ೩
ಕಂತು ಜನಕ ಮಾವಾಂತಕ ಮಾನವ
ದಂತಿವೈರಿ ಜಗದಂತರಿಯಾಮಿ ೪
ಸಾಮಗಾನಪ್ರೀಯ ಶಾಮಸುಂದರ
ವ್ಯೊಮ ನೃಪನ ಜಾಮಾತನೆ ಜವದಿ ೫

 

೧೬೦
ಕಾಯೊ ಕಾಯೊ ಜಿತಕಾಯ ಗುರು ಬಾದ
ರಾಯಣ ತತ್ವಜ್ಞರಾಯ ಪ
ನಾ ಯಾರಿಗೆ ಬಿನ್ನೈಪೆ | ಹೇಯಸಂಸಾರದ
ಮಾಯವ ಬಿಡಿಸಿ ವಿಧೇಯನೆಂದರಿದೆನ್ನ ಅ.ಪ
ಎರಡೊಂದು ಮಠದಲಿ ಧರಿಸಿ ತೂರ್ಯಾಶ್ರಮ
ಸಿರಿಯರಸನ ದಿವ್ಯ ಮೂರ್ತಿಗಳ
ಕರದಿಂದ ಪೂಜಿಸಿ | ಮರುತ ದೇವನ ಮತ
ಪರಮಾನಂದವೆಂದು ಧರೆಗೆ ಬೀರಿದ ಕರುಣಿ ೧
ಜ್ಷಾನಿಗಳರಹುವ | ವಾಣಿಯಿಂದಲಿ ದೇ
ವಾನನ ನೀನೆಂದು ನಾ ನಂಬಿದೆ
ಮೌನಿವರಿಯ ಎನ್ನ | ಹೀನಪಾತಕವೆಂಬ
ಕಾನನ ದಹಿಸೆಂದು | ಸಾನುರಾಗದಿ ನೋಡಿ ೨
ಭೂಸುರ ಪರಿಪಾಲ | ಶ್ರೀ ಶಾಮಸುಂದರನ
ಲೇಸಾಗಿ ಒಲಿಸುತಲಿ ಕಿಟಜದಲಿ
ಭಾಸುರ ಘನವೇಣಿ | ಭೇಶಪುರದಿ ನೆಲಸಿ
ದಾಸರ ಮನದಭಿಲಾಷೆ ನೀಡುವ ದಾನಿ ೩

 

ಶ್ರೀರಂಗನಾಥ
೧೦೭
ಕಾಯೋ ಕಾವೇರಿರಂಗ | ಕಾರುಣ್ಯಪಾಂಗಾ ಪ
ಕಾಯೊ ಕಾಯೊ ಕಾವೇರಿ ನಿಲಯನೆ
ಕಾಯೊ ವಾಙ್ಮನ ಪೂರ್ವಕದಿ ತವ
ತೋಯಜಾಂಘ್ರಿಯ ನಂಬಿದೆನುಭವ
ಮಾಯಗೆಲುವ ಉಪಾಯ ತೋರಿ ಅ.ಪ
ದೇವಾಧಿದೇವ ನೀನು | ಪ್ರಣತ ಜನರಿಗೆ
ದೇವತರು ಮಣಿಧೇನು | ಎಂದರಿತು ನಿಷ್ಟಿಲಿ
ಧಾವಿಸಿ ಬಂದೆ ನಾನು | ರಘುವಂಶ ಭಾನು
ಕಾವನಯ್ಯ ನೀನೊಲಿದು ಕರುಣದಿ
ಪಾವಮಾನಿಯ ಶಾಸ್ತ್ರವರಿತು
ಭಾವ ಭಕ್ತಿಲಿ ನಿನ್ನ ಪಾಡುವ
ಕೋವಿದರ ಸೇವಕನ ಮಾಡಿ ೧
ಪನ್ನಂಗಪತಿಶಯನ | ಶಿರಬಾಗಿ ಪ್ರಾರ್ಥಿಪೆ
ಪನ್ನಂಗರಿಪುವಾಹನ | ಎನ್ನಪರಾಧವ
ಮನ್ನಿಸೊ ಹಯವದನ | ವೈಕುಂಠ ಸದನ
ನಿನ್ನನುಗ್ರಹ ಪೂರ್ಣಪಡೆದು ಜಗನ್ನಾಥದಾಸರ
ಸನ್ನಿಧಾನದಿಂ ಬಂದೆ ತಂದೆ ೨
ನೇಸರ ಕುಲಜಾತ | ವೇದೋಕ್ತಕ್ರಮದಿಂ
ಭೂಸುರ ಕರಪೂಜಿತ | ಕೌಶಿಕನ ಯಜ್ಷವ
ಪೋಷಕ ಪವನಪಿತ | ಪಾವನ್ನ ಚರಿತ
ವಾಸುದೇವಾನಂತ ಮಹಿಮೆ | ವಿಭೀಷಣಪ್ರಿಯ
ದೋಷಕಳೆಯುವ | ಭೇಷಪುಷ್ಕರಣೀಶ
ಕೇಶವ ದಾಶರಧಿ ಶ್ರೀ ಶಾಮಸುಂದರ ೩

 

೧೫೮
ಕಾಯೋ ಜಿತಾಮಿತ್ರ | ಯಮಿಕುಲ ನಾಯಕ ಸುಚರಿತ್ರ ಪ
ಕಾಯೊ ಕಾಯೊ ಜಿತಕಾಯಜಾತ ಶಿತ
ಕಾಯೊ ನಿನ್ನ ಪದ ತೋಯಜಕೆರಗುವೆ ಅ.ಪ
ಅಭಯದಾತನೆಂದು ತ್ವತ್ಪದ | ಕಭಿನಮಿಸುವೆ ಬಂದು
ಕುಭವ ಕುಧರ ಪವಿ ಶುಭ ಗುಣನಿಧಿ ಗುರು |
ವಿಭುದೇಂದ್ರಕರ ಅಬುಜ ಸಂಭೂತ ೧
ಮೌನಿ ಕುಲಾಧೀಶ | ಪ್ರಾರ್ಥಿಪೆ ಭಾನಪ್ರಕಾಶ
ದೀನಜ ನಾಮಕರ ಧೇನು ಪುರಾತನ
ಗೋನದ ತರು ನಿಜ ತಾಣಗೈದ ಗುರು ೨
ತುಂಗಮಹಿಮ ಭರತ | ಕುಮತ ದ್ವಿಜಂಗಮ ದ್ವಿಜನಾಥ
ಮಂಗಳ ಕೃಷ್ಣ ತರಂಗಿಣಿ ಭೀಮಾ
ಸಂಗಮದಲಿ ಸಲೆ | ಕಂಗೊಳಿಸುವ ಗುರು ೩
ಮರುತ ಸುಮತ ಶರಧಿ | ಸುಧಾರಕ | ದುರಿತ ಕದಳಿದ್ವಿರದಿ
ಧರಣಿ ದಿವಿಜ ಪರಿವಾರ ನಮಿತ ನಿಜ
ಕರುಣಿ ನಂಬಿದೆನು ಮರಿಯದೆ ನಿರುತ೪
ಕಂದುಕೊರಳ ವಿನುತ | ಶಾಮಸುಂದರಾಂಘ್ರಿ ದೂತ
ಪೊಂದಿದ ಜನರಘ ವೃಂದ ಕಳಿವ ರಘು
ನಂದನ ಮುನಿಮನ ಮಂದಿರವಾಸ ೫

 

೪೫
ಕಾಯೋ ದಯಾಭರಿತ ಮಾರುತಿ ಪ
ಸುರಪಾ ಫಣಿಪಾ ಧ್ವಿಜಪಾ ಸೇವಿತಾ
ಗೌರಿಕಾಂತ ವಿನುತ ಭರಿತ ೧
ಹೇಸಿ ವಿಷಯದಾಸೆಯ ಬಿಡಿಸಿ
ದಾಸನೆಂದುದಾಸೀನ ಮಾಡದೆ ೨
ಶಾಮಸುಂದರ ಪ್ರೇಮದ ತನಯ
ಭೀಮಾನಂದ ಮುನಿಯೆ ಧಣಿಯೇ ೩

 

೨೨೨
ಕುಂದಣದ ಹಸೆಗೆ ಛಂದದಿಂದ ಬಾರೆ |
ಸಿಂಶುಕುಮಾರೆ ಬಾ ಸಿಂಧು ಕುಮಾರೆ |
ಶೃಂಗಾರಮಯವಾದ ಕಂಗೊಳಿಸುವ ಬಹು
ರಂಗಮಂಟಪದಲ್ಲಿ ತಿಂಗಳ ಸಹೋದರಿ ೧
ಸಿಂಧುರಮಂದಗಮನೆ ಕುಂದಕುಟ್ಮಲರದನೆ
ಇಂದು ಧರೆಯಲಿ ಸುರವೃಂದವಂದಿತ ಜನನಿ ೨
ಕಾಮನ ಜನನಿ ಕಾಮಿತದಾಯಿನಿ
ಗೋಮಿನಿರುಕ್ಮಿಣಿ ಶಾಮಸುಂದರನ ರಾಣಿ ೩

 

೬೮
ಕುಂದಣದಾರುತಿ ತಾರೆ ಕುಂದಣದಾರುತಿ |
ಸುಂದರವದನ ಕಮಲನಾಭನಿಗೀಗ ಪ
ಶೌರಿ ಸುರವಂದ್ಯಗೆ ವಾರಿಧಿಶಯನಗೆ |
ಮುರವೈರಿ ಮದನಪಿತನಿಗೀಗ ೧
ಮುಕ್ತಿ ಶುಭದಾತಗೆ | ಭಕ್ತರ ಪರಿಪಾಲಗೆ |
ಲಕುಮೀಶಗೆ ಶುಭದಿ ಪೋಷಗೆ ೨
ಶಾಮಸುಂದರಾಂಗಗೆ ಸಾಮಜೇಂದ್ರ ಪಾಲಗೆ
ಸುಮನಯನ ಶಮಲದೂರಗೀಗ ೩

 

೫೯
ಕುಂದಣಾರುತಿ ತಾರೆ ಸಖಿ | ಸಿಂಧುನಂದನೆಗಿಂದು ಮುಖಿ ಪ
ಕೃತಿ ಶಾಂತಿ ಜಯೆ ಮಾಯೆ | ಕ್ಷಿತಿಜಾತೆಗೆ | ವಿಧಿ ಮಾತೆಗೆ
ವರದಾತೆಗೆ | ಕೃತಿಲೀಲೆ ನುತಿನೀಲೆ ರುಕ್ಮಿಣಿಗೆ ೧
ಜಂಭಾರಿ ವಂದಿತೆ ಶ್ರೀರಂಬೆಗೆ ಜಗದಂಬೆಗೆ |
ಸುನೀತಾಂಬೆಗೆ | ಅಂಬುಜ ಮಂದಿರ ಅಂಭ್ರಣಿಗೆ ೨
ಶ್ರೀ ಶಾಮಸುಂದರನರ್ಧಾಂಗಿಗೆ ಶುಭಾಂಗಿಗೆ |
ದಯಾಪಾಂಗೆಗೆ | ಭೂಸುರ ಸುಚರಿತ ಭಾರ್ಗವಿಗೆ ೩

 

೪೭
ಕುರುಣಾವಾರುಧೀಶ ಭಾರತೀಶ
ಕರಪಿಡಿದು ಕಾಪ್ಯಾಡೊ ಕೊರವಿಯ ವಾಸ ಪ
ಭಜಿಸುವವರಿಗೆ ಅಮರ ಕುಜವು ನೀನೆಂದೆನುತ
ಸುಜನರೆನ್ನಗೆ ಹಿಂದೆ ಸೂಚಿಸಿದ್ದರೊ ದ್ವಿಜ ಕುಲಾರ್ಚಿತ ಇಂದು
ನಿಜವಾಯ್ತು ಆ ಮಾತು ಅಜಪದಾರ್ಹನೆ
ನಿನ್ನ ಭಕುತರಲ್ಲಿಡು ಎನ್ನ ೧
ದಂತಿಪುರಪತಿಗೆ ಕೃತಾಂತನೆನಿಸಿದ ಧೀರ |
ವಿಂತು ಪೊಗಳಲಿ ನಿನ್ನ ಮಹಿಮೆಯನು
ಕುಂತಿಜನೆ ತವನಾಮ ಚಿಂತಿಯನು
ಸಂತತದಲಿ ಸಲಹೋ ಧೀಮಂತ ನಂಬಿದೆ ಪರಮಾ ೨
ಕಾಮಾರಿಸುತ ನಮೊ ಸೋಮಕುಲಭವ ಭೀಮ |
ಶ್ರೀಮಧ್ವಮುನಿನಾಥವರ ಪ್ರದಾತ
ಭೂಮಿಜಾತೆಯ ಪ್ರವೀತ ಶಾಮಸುಂದರದೂತ
ಸ್ವಾಮಿಗುರು ತವನಾಮ ಸ್ಮರಿಪೆ ಘುನ್ನ ೩

 

೫೧
ಕೃಪಾಳೊ ಗುರುವರ ಶ್ರೀಪವಮಾನ
ಭಾರತಿ ಭವಹಾರಿ ಸ್ಮರಹರನುತ ದೀನಜನಮಂದಾರ ಅ.ಪ
ಕಾವಕರುಣಿ ಜೀವವರೇಣ್ಯ
ದಿವ್ಯವೃಂದ ವಿನುತ ಜಯಶೀಲಾ
ಪಾವನಾತ್ಮಕ ಪಾಹಿ ಪಾಹಿ
ಭಾವಿ ವಿಧಿ ದುರಿತೌಷ ಹಾರಿ ೧
ಆದಿಪುರದಿ ಮೆರೆವನಾಥಾ
ಸದಯ ಭಕ್ತ ಜನಕೆ ಶುಭದಾತ
ಬುಧರಾರಿ ಸಜಾತ ಭ್ರಾತಾ
ಸದಯ ಧರ್ಮಾನು ಜಾತಾ ೨
ಪ್ರೇಮಶರಧಿ ವಾನರೇಶಾ
ಅಮಿತ ಸತ್ವಯತಿ ಮಹಿಮಯತಿರಾಜಾ
ರೋರೋಮ ವ್ಯೋಮಕೇಶಾ
ಶಾಮಸುಂದರನ ಮೋಹದ ದಾಸಾ ೩

 

೨೦೮ ಅ
ಕೇಳ್ ಕೇಳೆಲೊ ತತ್ವಜ್ಞಾನ
ನಿನಗೆ ಬೋಧಿಸುವೆ ನಾ ಪ
ಮೋಟರು ವಾಹನ ನಾಟಕ ದರುಶನ
ಹೋಟಲೊಳಗೆ ಸುಭೋಜನ ಇದೇ ಪೀಯೂಷಪಾನ ೧
ವೇಶ್ಯಾಲಯ ಪ್ರವೇಶಿಸುವದೆ ಘುನ
ಕಾಶಿ ಪ್ರುಯಾಗ ಸಮಾನ ಭವಕ್ಲೇಶ ಭಂಜನ ೨
ಹರಿದಿನ ಮರುದಿನ ಇರುಳು ಹಗಲು ಉಂಬನ
ನರನ ಜನ್ಮವೆ ಬಲು ಪಾವನ ಮಹಾಪಾಪನಾಶನ ೩
ಸೋಪುಲೇಪನ ಕ್ರಾಫು ಬಿಡೋಣ
ನಾಪಿತ ಕಾರ್ಯ ಕೈಗೊಳ್ಳೋಣ | ಇದೆ ವೇದಾಧ್ಯಯನ ೪
ಸೋಡಾ ಪಾನ ಬೀಡಿ ಸೇದೋಣ
ಕೂಡಿ ಇಸ್ಟೇಟ ಆಡೋಣ ಭವಕ್ಲೇಶ ಭಂಜನ ೫
ಕುಲದಭಿಮಾನ ಕಳೆದನುದಿನ
ನಳದೊಳಗಿನ ಜಲಸ್ನಾನ ಮಹಕಲುಷ ನಾಶನ ೬
ಈ ಕಲಿ ಬೋಧೆ ನಿರಾಕರಿಸುವವರಿಗೆ
ಶ್ರೀಕರಶ್ಯಾಮಸುಂದರನ ದಿವ್ಯಾನಂದ ಭವನ ೭

 

೨೧೨
ಕೇಳಮ್ಮ ತಂಗಿ ಕೇಳಮ್ಮ ಪ
ಕೇಳಿ ಪುರಾಣದಿ ಪೇಳಿದ ಕೃಷ್ಣನ
ಲೀಲೆಯ ಪಾಡುತ ”ಬಾಳಮ್ಮ” ಅ.ಪ
ನಿಷ್ಟೆಯಿಂದಲಿ ಬಲು ಶಿಷ್ಟಳಾಗುತ
ದುಷ್ಟರಿಂದ ದೂ”ರಾಗಮ್ಮ” ೧
ಹರಿದಾಸರಪದ ಹರುಷದಿ ಹಾಡುತ
ಗುರು ಹಿರಿಯರ ಮನ ”ಕೊಪ್ಪಮ್ಮ” ೨
ಹಾಳು ಹರಟೆಯಲಿ ಕಾಲ ಕಳೆಯದೆ
ಶೀಲಮತಿ ನೀ “ನಾಗಮ್ಮ” ೩
ವಿದ್ಯೆಯ ಕಲಿತು ಬದ್ಧಿವಂತ | ಳಾ |
ಗಿದ್ದರೆ ಸುಖ ಶತ “ಸಿದ್ಧಮ್ಮ” ೪
ವಂದಿಸಿ ತುಲಸಿ ವೃಂದಾವನ ಪೂಜಿಸು
ಮುಂದೆ ನಿನಗೆ ”ಆನಂದಮ್ಮ” ೫
ಹೀನರ ಬೆರೆಯದೆ ಮೌನವ್ರತದಲಿ |
ಜ್ಞಾನಿ ಜನರ ನೀ ”ನರಸಮ್ಮ” ೬
ಮೂಢ ಜನರ ಒಡನಾಡದೆ ಭಕ್ತಿಲಿ
ಮಾಡುವ ಸಜ್ಜನರ ”ಸಂಗಮ್ಮ” ೭
ಧರ್ಮದಿಂದ ಸತ್ಕರ್ಮ ಮಾಡುತ
ನಿರ್ಮಲಗೊಳಿಸಿ ಸಂತ ”ರಂಗಮ್ಮ” ೮
ಪವನ ಪಿತನ ಕಥಾಶ್ರವಣವೆ ಪುಣ್ಯವು
ಭವ ವಿದು ಕತ್ತಲು ”ಕಾಳಮ್ಮಾ” ೯
ಸದನಕೆ ಬಂದಿಹ ಬುಧರಾವರಿಸಲು
ಮಂದಬಲು ನಿನಗದ ”ರಿಂದಮ್ಮ” ೧೦
ಎಂದೆಂದಿಗು ಪರನಿಂದೆಯ ಮಾಡದೆ
ಮಂದಿರದಿರುವದೆ ”ಚಂದಮ್ಮ” ೧೧
ಸಾರಿದ ಜನರಘದೂರಗೈದು ಹರಿ
ತೋರುವ ನುಜಗುರು ”ಈರಮ್ಮ” ೧೨
ಅತ್ತಿಯ ಮನಿಗೆ ಹೆತ್ತವರಿಗೆ
ಉತ್ತಮ ಕೀರ್ತಿ ”ತಾರಮ್ಮ” ೧೩
ಗೋವಿಪ್ರಾಳಿ ಸೇವಿಸುತಿರುವದೆ
ಕೋವಿದರಿಗೆ ಬಲು ”ಜೀವಮ್ಮ” ೧೪
ಭಾವದೊಳಗೆ ಪರದೇವನೆ ಪತಿಯೆಂದು
ಭಾವಿಸುತಲಿ ಪಡಿ ”ಭೋಗಮ್ಮ” ೧೫
ಭೇದಜ್ಞಾನ ಸಂಪಾದಿಸು ಕ್ಷಮಿಸುವ
ಶ್ರೀಧರ ನಿನ್ನಾಪ ”ರಾಧಮ್ಮ” ೧೬
ಕೋಪದಿ ಪರರಿಗೆ ತಾಪವ ಬಡಿಸಲು
ಲೇಪವಾಗುವದು ”ಪಾಪಮ್ಮ” ೧೭
ಇಂಗಡಲಾತ್ಮಜನಂಘ್ರಿ ಸರೋಜಕೆ
ಭೃಂಗಳೆನಿಸು ಸತಿ ”ತುಂಗಮ್ಮ” ೧೮
ದಾಸಜನರ ಸಹವಾಸದೊಳಿರುವದೆ
ಕಾಶಿಗಿಂತ ವಿ”ಶೇಷಮ್ಮ” ೧೯
ಕಲಿಯುಗದಲಿ ಸಿರಿನಿಲಯನ ನೆನೆದರೆ
ಸುಲಭ ಮುಕ್ತಿ ತಿಳಿ ”ಕಂದಮ್ಮ” ೨೦
ಪತಿಯು ಸದ್ಗತಿಗೆ ಗತಿ ಎಂದರಿತಹ
ಮತಿಯುತ ಸತಿಯೆ ”ಯವನಮ್ಮ” ೨೧
ಮಧ್ವಸಿದ್ಧಾಂತದ ಪದ್ಧತಿ ತಪ್ಪದೆ
ಇದ್ದರೆ ಹರಿಗತಿ ”ಮುದ್ದಮ್ಮ” ೨೨
ಸೋಗಿಗೆ ನೀ ಮರುಳಾಗಿ ನಡೆದರೆ
ಯೋಗಿ ಜನರ ಮನ ”ಕಲ್ಲಮ್ಮ” ೨೩
ಶೀಲೆ ಗುಣದಿ ಪಾಂಚಾಲೆಯು ಎಲ್ಲ
ಬಾಲೆಯರೊಳು ”ಮೇಲಮ್ಮ” ೨೪
ನೇಮದಿ ನಡೆದರೆ ಪ್ರೇಮದಿ ಸಲಹುವ
ಶಾಮಸುಂದರನು ”ಸತ್ಯಮ್ಮ” ೨೫

 

೬೧
ಕೊಡು ವರವಾ ಪಿಡಿ ಕರವಾ ಪ
ಜಡಜ ಸದನೆ ಪಾಲ್ಗಡಲ ನಂದನೆ
ಪೊಡವಿ ಜನನಿ ನಿಮ್ಮಡಿಗಳಾಂಬುಜವಾ
ಧೃಡ ಸುಜ್ಞಾನದಿ ಬಿಡದೆ ಪೂಜಿಸುವೆ ೧
ಇಕ್ಷುಶರನ ಪಿತ ವಕ್ಷನಿಲಯೆ | ಕಮ
ಲಾಕ್ಷಿ ಕೋಮಲೆ ಮೋಕ್ಷದಾತಳೆ
ಲಕ್ಷ್ಮಿಯ ಕರುಣ ಕಟಾಕ್ಷದಿಂದೀಕ್ಷಿಸಿ ೨
ಧಿಟ್ಟ ಶಾಮಸುಂದರವಿಠಲನ
ನಿಷ್ಟೆಯಿಂದಲಿ ಮನಭಜಿಸೊ ಸುಖ ಕೊಟ್ಟು
ಕಠಿಣ ಭವ ಕಟ್ಟಿ ಓಡಿಸಿ ೩

 

೪೯
ಕೋಲದೇವ ತನಯ ಕೂಲ ಸುನಿಲಯ
ಪಾಲಿಸು ಜೀಯಾ ನೀ ಪಾಲಿಸು ಜೀಯಾ ಪ
ದೇವಸ್ವಭಾವ ಮಹಿದೇವ ಸಂಸೇವಿತ
ಪಾವನ ಸುಚರಿತ ದೇವ ಮುನಿಗತಿಪ್ರೀತ ೧
ದೈಶಿಕ ಕುಲನಾಥ ಪೂಶರನಿರ್ಜಿತ |
ಭಾಸುರ ಕಾಷಾಯ ವಾಸ ಭೂಷ ವ್ಯಾಸರಾಯಾ ೨
ಶಾಮಸುಂದರ ಮೂಲರಾಮಪದಾರ್ಚಕ
ಕಾಮ ಕಾರ್ಮುಕ ಗಜಸ್ತೋಮಸಿಂಗ ಮಂಗಳಾಂಗ ೩

 

೨೩೦
ಖಾದಿ ಧರಿಸುವ ಜನಕೆ ಕ್ರೋಧವುಂಟೇ ಪ
ಕ್ರೋಧ ಜೈಸಿದ ನರಗೆ ಕಲಹಗಳುಂಟೇ
ಪಥ್ಯದಿಂದಿರುವವಗೆ ವ್ಯಾಧಿ ಭಯವೇ
ನಿತ್ಯ ಉಪವಾಸಿಗೆ ಭತ್ತದಾ ವ್ಯಥೆಯುಂಟೇ
ಚಿತ್ತ ಶುದ್ಧಿದ್ದವಗೆ ಮೈಲಿಗೆಯ ಪರವೇ ೧
ಆಶೆ ಬಿಟ್ಟವನಿಗೆ ಅರಸರಾಭಯವುಂಟೆ
ದಾಸನಾದವನಿಗೆ ದೋಷವುಂಟೆ |
ದೇಶ ಉದ್ಧಾರಕಗೆ ಸೆರೆಮನೆಯ ಭಯವುಂಡೆ
ಪೂಶರನ ಗೆದ್ದವಗೆ ಕಾಮಿನಿಯ ಭಯವೇ ೨
ಗೀತಾರ್ಥ ತಿಳಿದವಗೆ ಪಾತಕದ ಭಯವುಂಟೆ
ಶೀತೋಷ್ಣ ಸಹಿಸುವವಗೆ ಛಳಿ ಬಿಸಿಲು ಭಯವೆ |
ನೀತಿ ಕೋವಿದರಿಗೆ ಜಾತಿ ಪಕ್ಷಗಳುಂಟೆÉ
ದಾತನಿಗೆ ದುರ್ಭಿಕ್ಷು ಭೀತಿ ತಾವುಂಟೆ ೩
ವಿದ್ಯಾಭಿಲಾಶೆಗೆ ತೇರ್ಗಡೆಯ ಭಯವುಂಡೆ
ಉದ್ಯೋಗವಿದ್ದವಗೆ ಉದರ ಭಯವೇ
ಯುದ್ಧ ಶೂರರಿಗೆಲ್ಲ ಮದ್ದುಗುಂಡಿನ ಭಯವೇ
ಬುದ್ಧಿವಂತರಿಗೆಂದಿಗಪಮಾನ ಭಯವೇ ೪
ನೇಮದಿಂದಲಿ ನಡೆವವಗೆ ಸೋಮಾರಿತನವುಂಟೆ
ಭೂಮಾತೆ ಮಕ್ಕಳಿಗೆ ಕ್ಷಾಮವುಂಟೆ
ಸಾಮಗಾನವಿಲೋಲ ಶಾಮಸುಂದರವಿಠಲ
ನಾಮ ನೆನವವಗೆ ಯಮಧಾಮದಂಜಿಕೆಯೇ ೫

 

೪೩
ಗಂಧವಾಹನ ಮತವ ಪೊಂದವರು
ಹಂದಿನಾಯಿಗಳಾಗಿ ಬಹುಕಾಲ ಕಳೆದಂತೆ ಪ
ಇಳೆಯಾಣ್ಮನಿಲ್ಲದಾ ನಾಡು ಶೋಭಿಸದಂತೆ
ಜಲವಿಲ್ಲದಾ ವಾಪಿ ಕೂಪದಂತೆ
ನಳಿನ ಬಾಂಧವ ಮಿತ್ರನುದಯಿಸದ ದಿನದಂತೆ
ಕುಲಹೀನನಾದವರ ಸಂಗಮಾಡಿದಂತೆ ೧
ಕೋಣನಾ ಸಮ್ಮುಖದಿ ವೀಣೆ ಬಾರಿಸಿದಂತೆ
ಜಾಣತನವಿಲ್ಲದಾಮಾತ್ಯನಂತೆ
ವಾನರನ ಕೈಯಲ್ಲಿ ಮಾಣಿಕವ ಕೊಟ್ಟಂತೆ ೨
ಶಾಮಸುಂದರನಾಮ ವರ್ಣಿಸದ ಕವಿಯಂತೆ
ಪಾಮರಗೆ ಪೌರಾಣ ಪೇಳಿದಂತೆ
ಕಾಮಾದಿಗುಣ ಬಿಡದೆ ಸನ್ಯಾಸಿಯಾದಂತೆ
ಕೋಮಲಾಂಗದ ಸತಿಗೆ ಕ್ಲೀಬ ದೊರಕಿದಂತೆ ೩

 

೧೭೦
ಗುರುಗಳ ಭಜಿಸೋ | ದುರಿತ ತ್ಯಜಿಸೋ |
ವರ ಮಾನವಿ ಪುರದಿ ಮೆರೆವ ಪ
ಆದಿಯಲ್ಲಿ ಪ್ರಹ್ಲಾದನ ಸಹೋದರನೀತ |
ಯೋಧ ಶಲ್ಯ ದ್ವಾಪರದಿ ರಾಧೇಯಗೆ ಸೂತ |
ವಾದಿರಾಜ ಪುರಂದರ ದಾಸಾರ್ಯರ ಪ್ರೀತ |
ಸಾಧುರಂಗವೊಲಿದ ಭಾಗವತರತಿ ಖ್ಯಾತ ೧
ತ್ವರವಾಟದಿ ಕರುಣಿಕ ನರಸಾರ್ಯರಪುತ್ರ |
ಧರೆಸುರ ಪರಿಪಾಲಕ ವರದೇಂದ್ರ ಛಾತ್ರ
ತುರ ರಕ್ಷಕ ದಾಸರಾಯರ ಕರುಣಕೆ ಪಾತ್ರ
ದುರಿತಾಟವಿ ವೀತಿ ಹೋತ್ರ ಘನ ಸುಚರಿತ್ರ ೨
ಸೀಮದಿಂದ ಭಜಿಸುವರ ಕಾಮಿತ ಫಲವಾ |
ಪ್ರೇಮದಿಂದ ಗರೆಯಲು ಸ್ತಂಭ ದೊಳಿರುವಾ ||
ಶಾಮಸುಂದರ ಸ್ವಾಮಿಯ ಕಥೆಪೀಯೂಷರಸವ |
ಭೂಮಿ ವಿಬುಧ ಸ್ತೋಮಕೆರೆದ ಮಹಾನುಭಾವ ೩

 

೧೮೭
ಗುರುಗಳ ಶ್ರೀಪಾದವ ನಿತ್ಯ ಭಜಿಸು
ದುರಿತಗಳಲ್ಲವು ತ್ಯಜಿಸು ಪ
ಯದುಪತಿ ಕಥಾ ಬುಧರಿಗೆ ಎರೆದು ಸಾಧುವಕೀಣ್ಯರ
ಮಮತೆಯ ಘಳಿಸು ೧
ಕವಿವರರೆನಿಸಿದ ಇವರ ಸುವಚನವಾ
ಸವಿಯನು ಸಂತತ ಭಾವದಿ ಗ್ರಹಿಸು ೨
ಸ್ತಂಭನಿವಾಸರ ನಂಬಿಸುತ
ಕುಂಭಿಣೆ ತಳದೊಳು ಧನ್ಯನೆಂದೆನಿಸಲು ೩
ಮಾನವಿ ನಿಲಯರ ನೀನೊಲಿಸುತಘುನ
ಮಾನವ ಜನ್ಮ ಸಾರ್ಥಕಗೊಳಿಸು ೪
ಶಾಮಸುಂದರ ಪ್ರೇಮವ ಪಡೆದಾ
ಈ ಮಹಾ ಮಹಿಮರ ಸೇವಕನೆನಿಸೋ ೫

 

೧೯೭
ಗುರುಜಗನ್ನಾಥಾರ್ಯ ಕರುಣಿಸಯ್ಯ
ಮೊರೆ ಹೊಕ್ಕೆ ತ್ವತ್ವದಕೆ ಮರೆಯದಲೆ ಪಿಡಿಕೈಯ್ಯ ||
ಪ್ರಹ್ಲಾದನನುಗ್ರಹವು ಎಲ್ಲ ಕಾಲದಲಿ ನಿ
ನ್ನಲ್ಲಿ ಸುಂಪೂರ್ಣವಾಗಿರುವದೆಂಬಾ
ಸೊಲ್ಲು ಲಾಲಿಸಿ ನಿನ್ನ ಪಲ್ಲವಾಂಘ್ರಿಗೆ ನಮಿಪೆ
ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ ೧
ಕನಕಾಗ್ರ ಜಾತಾರ್ಯನೆನಿಸಿ ಜನಿಸುತ ಮಂತ್ರ
ಮುನಿ ನಿಲಯ ಮುನಿವರ್ಯ ಶ್ರೀರಾಯಾರಾ
ಗುಣಸ್ತವನ ವಿರಚಿಸುತ ಪ್ರಣತರಿಗೆ ಪಠಿಸುತ್ತ
ಮನದಿಚ್ಛೆ ಪಡೆವದಕ್ಕೆ ಅನುಕೂಲಿಸಿದ ಜ್ಞಾನಿ ೨
ಶ್ರೀ ಶಾಮಸುಂದರ ದಾಸವರ್ಯರ ಉಪ
ದೇಶವನು ಕೊಂಡ ಉಪವಾಸನೆಯನು
ಲೇಸಾಗಿ ಬಿಡಿದೆ ಪ್ರತಿವಾಸರದಿ ಗೈವಂಥ
ಭೂಸುರಾಗ್ರಣಿಯಾದ ಕೋಸಿಗೆಯ ದಾಸಾ ೩

 

೧೩೪
ಗುರುರಾಯ ಕಾಯೋ ಪ್ರೇಮಾಂಗ ಶುಭಾಂಗ ಪ
ಅನುದಿನ ಪಾದ ನಂಬಿದೆ
ದೀನಪಾಲಾ ಕರುಣಿಸಿ ೧
ಹರಿಪಾದ ಕಮಲವಾ ತೋರೋ ಚಿತ್ತದಿ
ಧೀರ ಅಪಾರ ಮಹಿಮನೆ ೨
ಸಿರಿಮನೋರಮಣ ಶಾಮಸುಂದರ
ವಾರಿಜಾಂಷ್ರಿ ಸುಮಧುಪ ೩

 

೧೫೭
ಗುರುರಾಯನೆ ಪಾಹಿ ಪಾಹಿ |
ಕರುಣದಲಿ ಬಾರೋ ನಿ ಬೇಗನೆ ಪ
ದಯಾಸಾಗರ ಭಯದೂರ ಧೀರ
ಸುಯಮೀಂದ್ರಪ್ರಿಯ ೧
ಮಂತ್ರಾಲಯಾ ಆಲಯಾಧ್ವಾಂತಾರಿ ತೇಜ
ಶಾಂತದಿ ಶೀಲಾ೨
ವರಶಾಮಸುಂದರನಂಘ್ರಿಯ
ನೆರೆ ಪೂಜಿಸುವ ಶ್ರೀ ರಾಘವೇಂದ್ರ ೩

 

೧೩೩
ಗುರುರಾಯರ ತೂಗೋ ಬಾಗೋ
ಪರಿಪರಿಯ ರತ್ನಗಳ ಪೆಚ್ಚೇಮುತ್ತುಗಳ ಹಚ್ಚೆ
ತೊಟ್ಟಿಲು ಕಟ್ಟೇವ | ಮೆಟ್ಟಲು ಮಾಡೇದ
ಮಟ್ಟಲು ಮಾಡೇದ
ತರತರದ ಹೂಗಳು ಸುತ್ತ | ತರ ತರದ ಹೂಗಳು ಸುತ್ತ
ಸುವಾಸನೆ ಮತ್ತ | ತುಂಬ ಇಡಗಿತ್ತ
ಪರಿಮಳಾರ್ಯರ ಬಳಿ ಸಾಗೇದ ೧
ವರಮಧ್ವಶಾಸ್ತ್ರ ವಿಸ್ತರಿಸಿ | ವರಮಧ್ವಶಾಸ್ತ್ರ ವಿಸ್ತರಿಸಿ
ಜರಿದ ಮಾಯ್ಗಳಾಗ ಮೆರೆದ ಭೂಮಿಯೊಳಗ
ಮೆರದ ಭೂಮಿಯೊಳಗ |
ತರತಮ ಸ್ಥಾಪಿಸುತ್ತ | ತರತಮ ಸ್ಥಾಪಿಸುತ್ತ
ಮರುತ ನಿದ್ಧಾಂತ ತ್ವರಿತ ಗುಣವಂತ
ಭರದಿ ಗುರು ಚರಣಕೆ ಬಾಗೋ೨
ನಮಿಸುತಲಿ ಸಾಗೋನೀ ಬೇಗ | ನಮಿಸುತಲಿ
ಸಾಗೋನೀ ಬೇಗ |
ಕರವ ಮುಗಿ ಹೋಗಿ | ವರವ ಬೇಡೀಗ
ವರವ ಬೇಡೀಗ ವರವ ಬೇಡೀಗ
ನಾಮಾಮೃತವ ಸವಿಯುತ್ತ | ನಾಮಾಮೃತವ ಸವಿಯುತ್ತ
ಕುಣಿಯೋ ಮತ್ತೆ | ಮಣಿಯ ಬಾಗುತ್ತ
ಬಾಗುತ್ತ | ಮೆಣಿಯೆ ಬಾಗುತ್ತ
ಶಾಮಸುಂದರನ ಪ್ರಿಯಗೀಗ ೩

 

೧೧೫
ಗುರುವ್ಯಾಸರಾಯ ಪಾಲಿಸೊ | ಮೊರೆ ಹೊಕ್ಕೆ ನಿನ್ನ
ಶರಣನ್ನ ಮಾತು ಲಾಲಿಸೊ ಪ
ಕರುಣಾಕರ ಭವ ಕರಕರಿಗಾರದೆ ಕರವ ಪಿಡಿದು
ಪೊರೆ ಎಂದು ನಿನ್ನ ನಾ ಕರೆವೆ ಬಾಯ್ದೆರೆವೆ
ಆಲ್ವರಿವೆ ನತಜನ ಸುರತರುವೆ ಅ.ಪ
ಮಧ್ವಮುನಿ ಸುಮತೋದ್ಧಾರಕ ಯತಿಕುಲ ತಿಲಕ
ಅದ್ವೈತಾರಣ್ಯ ಪಾವಕ | ವಿದ್ವತ್ ಜನತತಿ
ಸದ್ವಿನುತನೆ ಪಾದ ಪದ್ಮಕೆ ನಮಿಸುವೆ
ಶುದ್ಧ ಸುಜ್ಞಾನವ ನೀಡೊ ಅಘದೂಡೋ
ಕೃಪೆ ಮಾಡೋ | ಸುತನೆಂದು ನೋಡೋ ೧
ವಿರಚಿಸಿ ಗ್ರಂಧತ್ರಯವ | ಬೋಧಿಸಿ ಭೇದ
ಪೊರೆದಿ ದ್ವಿಜ ಪರಿವಾರವ |
ನೆರೆನಂಬಿದ ಭೂಪಗೆ ಧಾವಿಸುತ
ಭರದಿ ಬರುವ ಕುಹಯೋಗ ಕಂಟಕವ ದಯದಿ
ನೀತರಿದಿ | ಸುಖಗರೆದಿ ಧಾರುಣಿಯೊಳು ಮೆರಿದಿ ೨
ವಂದಿಪೆ ಸುಸುಗತಿದಾಯಕ ಶ್ರೀವರ ಶಾಮ
ಸುಂದರ ಕೃಷ್ಣೋಪಾಸಕ
ತಂದೆ ಎಂದು ನಿನ್ನ ಪೊಂದಿ ಪ್ರಾರ್ಥಿಸುವೆ
ಬಂದು ಜವದಿ ಪುರಂದರದಾಸರ ಪ್ರಿಯಾ ೩

 

೧೪೨
ಗುರುಸುಶೀಲೇಂದ್ರ | ಚರಣವಾರಿಜ ಯುಗ್ಮ
ಸ್ಮರಿಸುವ ನರರು ಶ್ರೀಹರಿದಾಸರು ಪ
ಹರಿವರ ಸುಮಚಾಬ್ಧಿ | ಹರಿಣಾಂಕರೆನಿಸಿದ
ವರಸುವೃತೀಂದ್ರರ ತೀರ್ಥರ ಕರಕಮಲಜ ಅ.ಪ
ಕಡೆಯ ಆಶ್ರಮವ ಕೈಕೊಂಡು ಮಾಸ ತ್ರಯದಿ
ಸಡಗರದಲಿ ಮಹ ಸಭೆ ನಿರ್ಮಿಸಿ
ಪೊಡವಿಯೊಳಿದ್ದ ಭೂಸರರಾಜ್ಞ ಪತ್ರ ಬರಮಾಡಿ
ವಿದ್ವಾಂಸರ ಒಡಗೂಡಿ | ಮಧ್ವಾಗಮನವನು ನೋಡಿ
ಬೆಲೆಯುಳ್ಳವೆಗ್ಗಳ ಒಡವೆ ಉಡುಪಗಳನು ಕರುಣಿಸಿ
ಮೃಷ್ಟಾನ್ನ ದ್ವಿಜರಿಗೆ ಕಡು ಸುಪ್ರೇಮದಿ ಸಲಿಸಿ | ಮುದ
ಬಡಿಸಿ ಜಡಕುಮಾಯ್ಗಳ | ಗಡಣ ಜಡಧಿಗೆ ವಡೆಯ ತಾನೆನಿಸಿ
ಕ್ರೋಢ ಜಾಸ್ಥಿತ | ಒಡೆಯ ಶ್ರೀಗುರು
ರಾಘವೇಂದ್ರರ ಅಡಿಗಳಾಬ್ಜಕಾ
ರಡಿಯಂತೊಪ್ಪುತ | ಬಿಡದೆ ಸಂತತ
ಧೃಢದಿ ಸೇವಿಸಿ ಜಡಜ ಜಾಂಡದಿ ಮೆರೆದ ಅಸ್ಮದ್ ೧
ಮರುತಾಂತರ್ಗತ ಮೂಲ ತರಣಿ ಕುಲೇಂದ್ರನ
ಕರುಣವೆಷ್ಟಿವರೊಳು ಅರುಹಲಾರೆ
ವರಕಾಪ್ಯಾಸನ ಪುರಕೆ
ಎರಡಾರು ಯತಿಗಳ ವತಿಯಿಂದ
ತಮ್ಮಯ ಶಿಷ್ಯ ತತಿಯಿಂದ
ಬಹುವಿಧ ಬಿರುದಾವಳಿಯಿಂದ
ತೆರಳಿ ಶಶಿರವಿವರ ಸುವಾದ್ಯಧ್ವಾನ ಮೊಳಗಿಸುತ
ಘÀನ ಭಕ್ತಿ ಪರವಶರಾಗಿ ಸುರಚಿರ
ಕನಕಮಣಿ ಧನ ತನುಮನ ತ್ವರಿತ
ತೃಣ ಬಗೆಯ ದೇವಕಿ ತರಳ ರುಕ್ಮಿಣಿ
ವರ ಮುರಾಂತಕÀ ಚರಣಗರ್ಪಿಸುತ | ಆನಂದಪಡುತ
ಸರ್ವಮುನಿ ಜನಗಳಿಗೆ ಬಲು ಉಪಚರಿಸಿ | ಮನ್ನಣೆ ಧರಿಸಿ
ಹರುಷದಿ ವರ ಸುಧೀಂದ್ರರ ಕರಜರನು ನೆರೆಸ್ಥಾಪಿಸಿ
ಆಶ್ಚರ್ಯ ಚರಿತ ೨
ಕ್ಷಿತಿಯೊಳು ಭಾರತಿ ಪತಿ ಶೃತಿ
ಶಾಸ್ತ್ರಾರ್ಥ ಚತುರ ತನದಿ ಪಡೆದು
ವಿತತ ಮಹಿಮನಾದ ಪತಿತ ಪಾವನ ಶಾಮಸುಂದರನ
ಸ್ತುತಿಸುತಲಯ ಚಿಂತನೆ ಗೈಯುತ ಶ್ರೀಯುತ
ಸಂಸ್ಥಾನಮತಿ ವಿಶಾರದರಾದವರ ಸುವೃತೀಂದ್ರ
ತೀರ್ಥರಿಗೆ ಹಿತದಿಂದ ಒಪ್ಪಿಸಿ | ಯತಿ ಧೀರೇಂದ್ರರ
ಚಾರುಸ್ಥಳದೊಳಗೆ ತನುವಿತ್ತು | ಹರಿಪುರಪಥವ
ಪಿಡಿದೈದಿದರು ಚನ್ನಾಗಿ | ಸೇವಿಪ ಜನರಿಗೆ
ಅತಿದಯದಿ ಮನೋರಥವ ನೀಡುತ
ಸತತ ಮಾಣದೆ ಪರಮ ಭಕುತಿಲಿ
ಪೃಥ್ವಿ ಸುರಕರ ಶತಪತ್ರಗಳಿಂದ
ನುತಿಸಿಕೊಳುತಲರ್ಚನೆಗೊಂಬ ೩

 

ಶ್ರೀ ಪಾರ್ವತೀದೇವಿ
೧೫
ಗೌರಿ ದೇವಿಗೆ ಸಖಿ ತಾರೆ ಆರುತಿಪ
ಮುನಿಜನ ವಂದಿತೆ ಮನದಭಿ ಮಾನಿಯೆ |
ಗಣಪತಿ ಷಣ್ಮುಖ ಜನನಿ ದೇವಿಗೆ ೧
ಶಂಕರಿ ಭಕ್ತಸುಶಂಕರಿ ದೈತ್ಯ ಭ
ಯಂಕಾರಿಯಾದ ಶಶಾಂಕ ಮುಖಿಗೆ ೨
ಶಾಮಸುಂದರನಾಮ ಪತಿ ಸಹ
ನೇಮದಿ ಪಠಿಸುವ ಹೈಮಾವತಿಗೆ ೩

 

೧೪೩
ಚಂದ್ರನ ನೋಡಿರೈ ಸುಶೀಲೇಂದ್ರ ಪಾಡಿರೈ
ವಂದಿಪ ಸುಜನ ಮಂದಾರ | ಮಾಘ ವಿರೋಧಿ
ಸುಮ ತಪಯೋಗಿ ಪ
ಯತಿ ಕುಲವರ್ಯ ಸುವೃತೀಂದ್ರ ಕರಾಂಬುಜ |
ಜಾತ ಜಿತ ಮನೋಜಾತ ||
ಪೃಥ್ವಿ ಸುರಾರ್ಚಿತ ಪತಿತ ಮತಾರಣ್ಯಜಾತ ವೇದಸನೀತ
ಕ್ಷಿತಿಪತಿ ಸುತೆ ತಟಸ್ಥಿತ ಶ್ರೀರಾಯರಚರಣ | ನಳಿನ ಷಟ್ಚರಣ
ಅತಿಶಯ ವಿಭವದಿ ಜಗದಿ ಮೆರೆದರವಿತೇಜ ಕುಜನ ಸರೋಜ೧
ವರದುಕೂಲದಿ ಪರಿಶೋಭಿಪರಿತ್ತಿಗ್ರಾಮ ಕೃತ ನಿಜಧಾಮ
ಗುರುವರೇಣ್ಯ ಧೀರೇಂದ್ರರ
ಪೂರ್ಣಸುಪ್ರೇಮ ಪಡೆದಸನ್ಮಹಿಮ ||
ಪರಿಮಳ ಸುಧಾನ್ಯಾಯಾಮೃತ ತತ್ವದಸಾರವರೀತ ಗಂಭೀರ
ಧರಣಿ ಸುರಾಗ್ರಣಿ ಸುವೃತೀಂದ್ರ ಹೃಕುಮದ ಸುಮನ ಶರತದ ೨
ಅಕ್ಷಯ ವತ್ಸರಾಷಾಢ ಸುನೀತ ತಿಥಿ ತ್ರಯದಲಿ |
ಲಕ್ಷ್ಯವಿಟ್ಟು ಲಯ ಚಿಂತನೆ ಗೈದ್ಹರುಷದಲಿ ಸುಸ್ವಾಂತದಲಿ ||
ತ್ರ್ಯಕ್ಷವಿನುತ ಶಾಮಸುಂದರನಂಘ್ರಿ ಧ್ಯಾನಿಸುತಕ್ಷೋಣಿತ್ಯಜಿಸುತ
ಸಾಕ್ಷ್ಯಾನ್ಮೋಕ್ಷ ಸಂಸ್ಥಾನಕೆ ತೆರಳಿದ ಧೀರ ಭಕ್ತ ಚಕೋರ ೩

 

೧೭೨
ಜಗನ್ನಾಯಕ ಗುರುಪಾಹಿಮಾಂ | ಅಘನಾಶಕ
ವರದಾಯಕಾ | ಪ
ವರಮಾನವಿ ಪುರ ಮಂದಿರ
ಕರುಣ ಭರಣ ಶಾಂತ ಮೂರುತಿ೧
ನಿರುತ ನಿನ್ನಯ ಚರಣನಂಬಿದೆ
ದುರಿತ ತರಿದು ತೋರೋ ಸತ್ವಥ ೨
ಭೂಮಿಜಾವರ ಶಾಮಸುಂದರ
ನಾಮಗರಿಯೋ ಪ್ರೇಮಸಾಗ ೩

 

೫೩
ಜನನಿ ಪಾಲಿಸೆ ಶುಭಾಂಗಿ ಸಲೆ ದಯದಿ ವಲಿಸುತಲಿ
ಪಾಲಾಬ್ಧಿ ಬಾಲೆ ಶೀಲೆ ಪ
ವಾರಿಜಾರೊ ಸಹೋದರಿಯೆ | ಮೂರು ಭುವನೋದ್ಧಾರಿ
ಚಾರುಗಾತ್ರಿ ಶ್ರೀರಮಣಿ | ದೂರ ನೋಡದಿ ಬಾರೆ ಮನೆಗೆ ೧
ದಾತೆ ಖ್ಯಾತೆ ಮಾತೆ | ಸುಜನೋಪಕಾರಿ
ಸೀತಾಮಾತೆ ಭೂತರುಣಿ ಜಾತೆ | ಪಾವನಿ ಪ್ರೀತೆ ಸದಯೆ ೨
ಶಾಮಸುಂದರ ರಾಣಿಯೆ ಸುರ |
ಸ್ತೋಮವಂದಿತೆ ತ್ರಿಗುಣಮಾನಿ
ಭಾಮೆ ಭಾಗ್ಯದಾಯಕಿಯೆ ಪ್ರೇಮವಾರಧಿ ಬೀರು ದಯವ ೩

 

ಯತಿವೃಂದ
೧೧೨
ಜಯತೀರ್ಥ ಜಯತೀರ್ಥ ಪ
ದಯವಾರಿಧಿ ಭವ | ಭಯಹರ ಗುರುವರ ಅ.ಪ
ಕಾಗಿಣಿ ತಟ ಸ್ಥಿತ | ಮೇಘನಾಥಪುರ
ಆಗರವೆನಿಸಿದ ಯೋಗಿವರೇಣ್ಯ ೧
ತತ್ವಗಳರ್ಥವ | ಪುಸ್ತಕ ಭಾರವ
ಎತ್ತಿನ ರೂಪದಿ | ಪೊತ್ತ ಮಹಾತ್ಮ ೨
ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ
ಮುರಿದು ಕುಭಾಷ್ಯವ | ಮೆರೆದ ಮಹಂತ ೩
ನೆರೆನಂಬಿದೆ ಶ್ರೀ | ಹರಿನಾಮವ
ನಿರುತಗರಿದು ಪೊರಿ | ನರನವತಾರಿ ೪
ಭೀಮ ಭವಾಟವಿ | ಧೂಮ ಶ್ರೀ
ಶಾಮಸುಂದರ ಪ್ರೇಮದ ದಾಸ ೫

 

೫೦
ಜಯದೇವಿ ತನಯಗೆ ಮಂಗಳಂ
ವಯನ ಪ್ರದಾತೆಗೆ ಶುಭ ಮಂಗಳಂ
ಯುಗ ಯುಗದಿ ಪುಟ್ಟಿ | ಜಿಗಿದು ಗಗವ ಮೆಟ್ಟಿ
ಹಗಲೊಡೆಯನ ಫಲ ಬಗೆಯ ಬಕ್ಷಿಸಿ
ಮಿಗೆ ಭಕುತಿಲಿಂದ ರಘುಪನೊಲಿಸಿನಾ
ಲ್ಮೊಗನ ಪದವಿ ಪಡೆದ ಸುಗುಣ ನಿಧಿಗೆ ೧
ಪುನಃ ದ್ವಾಪರದಲ್ಲಿ ಇನಜನ ತನುಜಗೆ
ಅನುಜನೆಂದೆನಿಸಿ ಹರಿಯಾಜ್ಞೆಯಿಂದಲಿ
ಮಣಿಮಂತ ಮೊದಲಾದ ದನುಜರ ಗಣವೆಲ್ಲ
ರಣದೊಳು ಹಣಿದಂಧ ಘವವೀರನೆ ೨
ಬಂದು ಭೂಮಿಯಲ್ಲಿ ಮಧ್ಯಮಂದಿರ ನಂದನನಾಗಿ
ಮಂದ ಮಾಯ್ಗಳ ಮತ ಖಂಡಿಸುತಲಿ
ಶಿಂಧುತೀರದಿ ಮೆರೆವ ಇಂದುಕ್ಷೇತ್ರದಿ ಶಾಮ
ಸುಂದರ ಸ್ಥಾಪಿಸಿದಾನಂದಮುನಿಗೆ ೩

 

೮೪
ಜಯಮಂಗಳಂ ಶುಭ ಮಂಗಳಂ
ಸುಮಂಗಳಂ ರಘವರಗೆ
ದಯಾವಾರಿನಿಧಿ ಮುರುಹರಗೆ
ನರಸಾರಧಿ ಗಿರಿಧರ ಮಾಧವಗೆ | ಶೌರಿ
ರವಿನಿಭಾಂಗ ಕೃಪಾನಿಧಿಗೆ | ದುರಿತಾನಲ
ಫಣಿವನಮಾಲೆಯ ಶುಭದಾಯಕಗೆ
ದಯವಾರಿಧಿ ಮುರಹರಗೆ ೧
ನಿಗಮಾಗಮ ಸನ್ನುತ ಶ್ರೀಧರಗೆ
ದೂರೀಕೃತದೋಷ ನಿರಾಮಯಗೆ
ನಗಜಪತಿ ಪಾಲಕ ದೇವಕಿ ಸುತಗೆ
ದಯವಾರಿಧಿ ಮುರಹರಗೆ ೨
ಅಮರಾದಿಪವಿನಮಿತ ಮೂರುತಿಗೆ
ಭಾಮೆ ನವಮೋದ ಪ್ರದಾಯಕಗೆ
ಸ್ವಾಮಿ ಶ್ರೀನಿಧಿ ಶಾಮಸುಂದರ ಧೊರೆಗೆ
ದಯವಾರಿಧಿ ಮುರಹರಗೆ ೩

 

೮೭
ಜಯಮಂಗಳೆನ್ನಿರೆ ದೇವಗೆ | ಸಂಗೀತದಿಂದಲಿ ಶ್ರೀಶಯನಿಗೆ ಪ
ನಾಗಭೂಷಣ ಸುತ ನಾಗಶಯನೆಗೆ |
ನಾಗವೇಣಿಯರು ನಾರದವರದಗೆ ೧
ಪೂವಿನ ಶರವಿತ ಪಾವನ ಮೂರ್ತಿಗೆ |
ರಾವಣಾರಿ ರಘುವೀರನಿಗೆ ೨
ಶ್ರೀಮಹೀವಲ್ಲಭ ಶಾಮಸುಂದರಗೆ |
ಸೀಮಂತಿನಿಯರು ಕೋಮಲಾಂಗಗೆ ೩

 

೩೯
ಜವದಿ ಪಾಲಿಸೊ ಪ್ಲವಗೋತ್ತುಮ ಮರುತಾ ನಂಬಿದೆ ನಿರುತಾ ಪ
ಅವನಿಶಾರ್ಚಿತ ಪವನಾತ್ಮಜ ಹನುಮಾ ಭವಸುರನುತ ಭೀಮಾ ಅ.ಪ
ಮಾರುತಿ ಅಂಜನ ಗರ್ಭದೊಳುದವಿಸಿ ವಾರಿಧಿಯುತ್ತರಿಸಿ
ಧಾರುಣಿ ಸುತೆಗತಿ ಹರುಷವಗೊಳಿಸಿದಿ | ನೀ ದ್ವಾಪರ ಯುಗದಿ
ನಾರಿಯ ಮೊರೆ ಕೇಳಿ ದುರುಳನ ಶಿರ ತರಿದಿ ಆ ನಾರಿವೇಷದಿ ೧
ಅದ್ವೈತರ ನೀನಳಿಸುವಲೋಸುಗದಿ | ಸದ್ಗುರುವರ ಜಗದಿ
ಮಧ್ಯಾಸದನ ಸತಿಯುದರದಿ ಜನಿಸಿದಿ | ಸದ್ವೈಷ್ಣವರ ಪೊರೆದಿ
ಸಿದ್ಧಾಂತವ ಸ್ಥಾಪಿಸಿ ಬದರಿಗೆ ನೀಪೋದೆ | ಮದ್ವಾಭಿದಾನದಿ ೨
ಅಸುಪತಿ ಕುಸುಮಜ ಪರಿವಾಳುವ ಧೀರಾ |
ನಂಬಿದೆ ವೃಕೊಜಠರಾ
ಋಷಿ ನಿಕರಾಂಬುಜ ದಿನಮಣಿ ಮಧ್ವೇಶಾ |
ದಶಶಿರ ಪುರನಾಥಾ
ವಸುಧಿಜೆ ಪತಿ ಶಾಮಸುಂದರ ಪ್ರಿಯ ದೂತಾ |
ಶಶಿಕುಲಸಂಜಾತಾ ೩

 

೨೨೭
ಜಾಣೆ ನಂಬಿದೆ ಇಸ್ಟೇಟರಾಣೀ ನೀನೊಲಿದೆನ್ನ
ಪಾಣಿಯೊಳಗೆ ಬಂದು ಕಾಣಿಸಮ್ಮ ಪ
ವಾಣಿ ಶ್ರೀಲಕುಮಿಶ ರುದ್ರಾಯಣಿಯರಿಗಿಂತ
ಕ್ಷೋಣಿಯೊಳಗೆ ಬಹುಮಾನಿತೆ | ನೀನಮ್ಮ ಅ.ಪ
ಜನಕನು ಗಳಿಸಿದ ಧನವೆಲ್ಲಾ ಕಳಕೊಂಡೆ
ದನಕರ ಹೊಲಮನೆಯನು ಮಾರಿದೆ
ಜನರೊಳಗಪಹಾಸ್ಯಗೊಳಗಾದೆ ಕೇಳಮ್ಮ
ವನಿತೆ ಮಕ್ಕಳ ಕೈಲಿ ಕೊನೆಗೆ ಪರಟೆ ಕೊಟ್ಟೆ ೧
ಉಣಲು ಅನ್ನವು ಕಾಣೆ | ಉಡಲು ವಸ್ತ್ರವು ಕಾಣೆ
ಕಡುಕಷ್ಟ ಕಡಲೋಳು ಮುಳುಗಿದೆ ನೋಡಮ್ಮ
ಪೊಡವಿಯೋಳ್ ನಿನ್ಹೊರತು ಕಡೆ ಹಾಯಿಸುವಂಥ
ಒಡೆಯರ ಕಾಣಿ ಕೈಪಿಡಿದು ರಕ್ಷಿಸೊ ರಕ್ಷಿಸೋ ನೀನಮ್ಮ ೨
ಎಷ್ಟೆಂತ ಹೇಳಲಿ ಮಡದಿಯ ಗೋಳಾಟ ತಾಳಿ ಹೊರೆತು
ಎಲ್ಲಾ ಹಾಳಾಯಿತು | ಸಾಲ ಬಹಳಾಯಿತು ಜೋಳಿಗೆ ಬಂದಿತು
ಕೂಳಿಗೆ ಮನೆ ಮನೆ ಚಾಲುವರಿದೆನಮ್ಮಾ ೩
ಚಾರರುಭಯರಲ್ಲಿ ಸೇರಿ ಬಂದಾಕ್ಷಣ
ಹಾರಿ ಹೋಗುವದಮ್ಮಾ ಪಕ್ಕಾರಂಗು
ಧಾರುಣೀಶರ ಮಧ್ಯ ತೋರೀದ ಸಮಯದಿ
ಆ ರಾಣಿ ವರ್ಗವ ಥರ ಥರ ನಡುಗಿಸುವಿ ೪
ಅಕ್ಕರದಲಿ ಎರಡೆಕ್ಕದೊಳು ಬಂದು
ಪಕ್ಕನೆ ನೀ ಎನ್ನ ಕೈಯೊಳು ಬಾರೆ
ಮುಕ್ಕಣ ಸಖ ತನ್ನ ಬೊಕ್ಕಸದೊಳಗಿನ
ರೊಕ್ಕ ಹಾಕಲು ಅವನ ಲೆಕ್ಕಸೆ ನಮ್ಮ ೫
ಕಾಮಿತ ದಾಯಿನಿ ಕಾಮಿನಿ ಶಿರೋಮಣಿ
ಶಾಮಸುಂದರ ಸಾರ್ವಭೌಮನ ರಾಣಿ
ಶ್ರೀಮಂತ ಜೋಕರನ ಪ್ರೇಮದ ಭಗಿನಿಯೆ
ನಾ ಮೊರೆ ಹೊಕ್ಕೆನು ನೀ ದಯಮಾಡು ತಾಯೆ ೬

 

೨೨೦
ಜೀವಿಸು ಜಗದಿ ಬಾಲಕನೆ | ಚಿರಂಜೀವಿಯಾಗುತ ಪ
ಚಿತ್ತಸುಶಿದ್ಧಿಯಿಂದಲಿ | ನಿತ್ಯಾನುಷ್ಟಾನ ಗೈಯುತಲಿ ||
ಸತ್ಯಸುಶೀಲನಾಗುತ | ಅತ್ಯಾನಂದವನನುಭವಿಸು ೧
ಕ್ರೋಧಾದಿ ಗುಣವ ನಿಗ್ರಹಿಸಿ | ಸಾಧುಸತ್ವಥವಲಂಬಿಸಿ
ಭೂದೈವರಾರಾಧಿಸುತ ನೀ | ಸಂಪದಿಸು ಪರಮಸತ್ಕೀರ್ತಿ ೨
ಶ್ರೀಮಧ್ವಮತವಲಂಬಿಸಿ | ಪಾಮರ ಮತವ ಧಿಕ್ಕರಿಸಿ |
ಶಾಮಸುಂದರನ ನೀ ಒಲಿಸಿ |
ಈ ಮಹೀಮಂಡಲದಿ ಸುಖಿಸು ಜೀವಿಸು ೩

 

೨೨೧
ಜೀವಿಸು ನೀ ಸುಖಿಯಾಗು ಜಗದಿ ಪ
ಬಾಲೆ ನೀ ಗುಣವಂತೆ ಸುಶೀಲಳೆಂದೆನಿಸಿ ||
ಬಾಲರ ಪಡೆದು ಬಾಲೆ ಸನ್ಮುದದಿ ೧
ಪತಿಯ ಆರಾಧಿಸುತ ಬಲುಹಿತ ತೋರುತಲಿ ೨
ಶಾಮಸುಂದರನ ನಾಮ ಸಂಕೀರ್ತನ |
ಪ್ರೇಮದಿ ಪಾಡುತ ಕಾಮಿನಿ ಮಣಿ ನೀ ೩

 

೧೯೫
ಜೋ ಜೋ ಜೋ ಜೋ ಸಹ್ಲಾದರಾಜ
ಜೋ ಜೋ ಜೋ ಜೋ ಪ್ರಹ್ಲಾದನನುಜ
ಜೋ ಜೋ ಜೋ ಜೋ ಜಾತರೂಪ ಶಯ್ಯಜ
ಜೋ ಜೋ ಜೋ ಜೋ ಭಕ್ತಸುರ ಕಲ್ಪಭೂಜ ಪ
ಮನುಜ ಮೃಗಾರ್ಯರ ಸುತನೆನಿಸಿಸುತ
ಅಣುಗ್ರಾಮ ಬ್ಯಾಗವಾಟದಿ ಜನಿಸುತ
ಮುನಿ ವರದೇಂದ್ರತೀರ್ಥರ ಸೇವಿಸುತ
ಅನಿಲ ಸುಶಾಸ್ತ್ರವನರಿತ ಸುದಾತ ೧
ಗುರುಧೇನುಪಾಲ ದಾಸಾರ್ಯರ ಮಮತ
ಪರಿಪೂರ್ಣದಿಂದ ನೀ ಪರಮ ಪುನೀತ
ಸಿರಿಜಗನ್ನಾಥವಿಠಲಾಂಕಿತ
ಶರಧಿಜ ಭಾಗದಿ ಪಡೆದ ಪ್ರಖ್ಯಾತ ೨
ಸರಸಿಜ ತುಲಸಿ ಸುಮಾಲೆ ಶೋಭಿತ
ವರದಿ ಸ್ವಾದಿ ರಾಜೇಂದ್ರಾರ್ಯರ ಪ್ರೀತ
ಹರಿಕಥಾಮೃತ ಗ್ರಂಥ ವಿರಚಿತ
ಪುರುಹೂತರಾರ್ಯರ ಪ್ರೇಮದ ಪೋತ ೩
ಗುಣನಿಧಿ ದ್ವಾಪರದಲ್ಲಿ ಪುಟ್ಟುತ
ಫಣಿವರ ಕೇತನ ಮೊರೆ ಲಾಲಿಸುತ
ದಿನಮಣಿ ಜಾತನ ದಿವ್ಯ ವರೂಥ
ಮಾನಿತ ಮಾನವಿ ಕ್ಷೇತ್ರ ನಿವಾಸ೪
ಶ್ರೀ ನಿಧಿ ಶಾಮಸುಂದರ ದಾಸ
ಕ್ಷೋಣಿ ಸುರಾರ್ಚಿತ ದುರಿತ ವಿನಾಶ
ಹೀನ ಮತಾಖ್ಯ ಪನ್ನಗಕುಲವೀಶ ೫

 

೧೦೨
ತಂದು ಬೆಳಗಿರೆ ಛಂದದಿ ಕುಂದಣಾದಾರುತಿ |
ನಂದಕುಮಾರ ಗೋವಿಂದಗೆ ಪ
ಪಂಚಾಶ್ಯನಮಿತಗೆ | ಪಾಂಚಾಲಿ ವರದಗೆ
ಪಂಚಬಾಣನಪಿತ ಶೌರಿಗೆ ೧
ಕುಂಡಲಿ ಶಯನಗೆ ಪುಂಡರೀಕಾಕ್ಷಗೆ |
ತೋಂಡವತ್ಸಲ ಪಾಂಡುರಂಗಗೆ ತಂದು ಬೆಳಗಿರೆ ೨
ಯಾಮಿನಿಚರವೈರಿ ಶಾಮಸುಂದರನಿಗೆ |
ಕಾಮಿನಿಯರು ರಘುರಾಮಗೆ ತಂದು ಬೆಳಗಿರೆ ೩

 

೮೧
ತಾರೆ ಮುಕ್ತಕದಾರತಿ ಹರಿಗೆ
ನೀರೆ ತಾರೆ ಕಮಲ ಮುಖಿ ಗಿರಿಧರಗೆ ಪ
ಮೀನ ಕಮಟಗೆ | ಕ್ರೋಢ ನರಮೃಗಗೆ
ಮಾಣವಕನಿಗೆ ವೀರಭಾರ್ಗವಗೆ
ಧರಣಿಜಾಪತಿ ಪಾರ್ಥಸಾರಥಿಗೆ
ಸ್ಥಾಣು ಬಾಣವ ತುರಗವಾಹನಗೆ ೧
ಮಂದರೋದ್ಧರ ಮಾತುಳಾಂತಕಗೆ
ಶಿಂಧು ಮಂದಿರ ಸಾರಸಾಂಬಕಗೆ
ವಂದಿಸುತ ಗೋವೃಂದ ಗೋಪಾಲಗೆ ೨
ಸಾಮಗಾನವಿಲೋಲ ರಂಗನಿಗೆ
ಶ್ರೀಮಹಿ ರಮಣ ವೆಂಕಟಗೆ
ಕಾಮಿತಾರ್ಥವ ಕೊಡುವ ಕೋಮಲಾಂಗಗೆ
ಶ್ರೀ ಶಾಮಸುಂದರವಿಠಲ ಮೂರುತಿಗೆ ೩

 

೧೩೮
ತುಂಗಾತೀರದಿ ಕಂಗೊಳಿಸುವ ಮುನಿ
ಪುಂಗವರಾಯರ ನಯನದಿ ನೋಡೆ | ಮನದಿ
ಕೊಂಡಾಡೆ ವರಗಳ ಬೇಡೆ ಪ
ಆದಿ ಯುಗದಿ ಪ್ರಹ್ಲಾಲದನೆನಿಸಿ ಕ
ಯಾದವಿನುದರದಿ ಜನಿಸುತಲಿ | ಸಖಿಜನಿಸುತಲಿ
ವಾದಿಸಿ ಪಿತನೊಳು | ಮಾಧವ ಪರನೆಂದುಮೋದದಿ
ಸ್ತಂಭದಿ ತೋರಿದ ಧೀರನೆ ೧
ಅದ್ವೈತಾಟವಿ ದಗ್ಧಕೃತಾನಲ
ಮಧ್ವಮತಾಬ್ಧಿಗೆ ಭೇಶನೆಂದೆನಿಸಿ
ಸದ್ವೈಷ್ಣ ವರುದ್ಧಾರಕನಾದ ಪ್ರ
ಸಿದ್ಧನಾದ ವ್ಯಾಸಕರ್ಮಂದ ಕುಲೇಂದ್ರನೆ ೨
ಧರಣಿ ತಳದಿ ರಾಘವೇಂದ್ರ ಸುನಾಮದಿ
ಮರಳಿ ಜನಿಸಿ ದಿವ್ಯ ಪರಿಮಳ ರಚಿಸಿ | ಪರಿಮಳ ರಚಿಸಿ
ಕರುಣದಿ ದ್ವಿಜರಿಗೆ ಎರದು ಪೊರೆವಗುರು
ಮರುತಾವೇಶದ ದೇವಸ್ವಭಾವನೆ ೩
ಸ್ವಾಂತದಿ ಭಜಿಪರ ಚಿಂತೆಯ ಕಳೆಯಲು
ಚಿಂತಾಮಣಿಯಂತೆ ಸತತ ಸಖಿಯೇ | ಸಂತತ ಸಳಿಯೇ
ಮಂತ್ರನಿಕೇತನ ಕ್ಷೇತ್ರದಿ ಸ್ಥಿರವಾಗಿ
ನಿಂತ ಪರಮ ಸುಶಾಂತ ಮೂರುತಿಯೆ ೪
ವಂದಿಸಿ ಸ್ತವಿಸುವ ವಂದ್ಯಾಂಧಕರಿಗೆ
ಕಂದ ರಕ್ಷಿಗಳ ಕರುಣಿಸಿಹರೇ | ಕರುಣಿಸಿಹರೇ
ಇಂದು ಧರಾಮರ ವಂದಿತ ಶಾಮ
ಸುಂದರ ವಿಠಲನ ದಾಸೋತ್ತಮನೆ ೫

 

೧೯೪
ತೂಗಿರೆ ಶ್ರೀ ರಂಗವಲಿದ ದಾಸಾರ್ಯರ
ತೂಗಿರೆ ಜಗನ್ನಾಥರಾಯರ ಪ
ತೂಗಿರೆ ಭಾಗಣ್ಣ ಗುರುವರನುಗ್ರಹಪಾತ್ರ
ಭಾಗವತ್ತೋತ್ತಮರ ತೂಗಿರೆ ಅ.ಪ
ಘನ ಸುಜ್ಷಾನ ಸದ್ಭಕುತಿ | ಗುಣದಿ ಬಂಧಿತವಾದ
ಅನಿಲಮತವೆಂಬ ತೊಟ್ಟಲದಿ
ವನಜನಾಭನ ಧ್ಯಾನ ಯೋಗ ನಿದ್ರೆಯ ಮಾಳ್ಪ
ಕನಕ ಶಯ್ಯಾತ್ಮಜರ ತೊಗಿರೆ ೧
ಯುದ್ಧದಿ ಸಾರಥಿ ಪದ್ಮಮಿತ್ರಜಗಾದ
ಮದ್ರದೇಶಾಧಿಪರ ತೂಗಿರೆ
ವೃದ್ಧಾಶ್ರವಾರ್ಯರ ಸದ್ಮನದಿ ಶಿಶುವಾಗಿ
ಉದ್ಭವಿಸುವರ ತೂಗಿರೆ ೨
ಶಾಮಸುಂದರ ಸ್ವಾಮಿ ಧಾಮ ಪದಾರ್ಹರ
ಪ್ರೇಮವ ಪಡೆದವರ ತೂಗಿರೆ
ಶ್ರೀಮನ್ ಮಾನವಿಯಲ್ಲಿ ನೇಮದಿ ಭಜಿಪರ
ಕಾಮಿತ ಕೊಡುವವರ ತೂಗಿರೆ ೩

 

೧೩೨
ತೂಗೋಣ ಬನ್ನಿ ರಾಯರ | ರಾಯರ ತೂಗೋಣ ಬನ್ನಿ ಪ
ಪ್ರಥಮದಿ ಪ್ರಹ್ಲಾದನಾಗಿ | ಭಕುತಿಯಿಂದ ಹರಿಯಕೂಗಿ |
ಪಿತಗೆ ಮುಕುತಿ ಪಥವಾ ತೋರಿದಾ ರಾಯರ ೧
ಚಂದ್ರಿಕಾರ್ಯ ಭೂಮಿಯೊಳುಭ
ಪೂರ್ಣಚಂದ್ರನಂತೆ ಮೆರೆಯುತಿರುವಾ |
ಆನಂಧತೀರ್ಥ ಮತೋದ್ಧಾರರ | ರಾಯರ ತೂಗೋಣ ಬನ್ನಿ ೨
ಬೋಗ ಭಾಗ್ಯವೆಲ್ಲ ತೊರೆದು ಯೋಗಿವರ್ಯರಾಗಿ ಮೆರೆದ |
ರಾಘವೇಂದ್ರ ಯತೇಂದ್ರರ | ರಾಯರ ತೂಗೋಣ ಬನ್ನಿ ೩
ಮಂತ್ರಪುರದಿ ನಿಂತು ಭಜಿಪರಂತರಂಗವನ್ನೆ ತಿಳಿದು
ಸಂತಸದಿ ಪೂರ್ಣಗೊಳಿಪ ರಾಯರ ತೂಗೋಣಬನ್ನಿ ೪
ನಾಮಸ್ಮರಣಿ ಮಾತ್ರದಿಂದ ಕಾಮಿತಾಥ್ವರ್ಥವನ್ನೆ ಕೊಡುವ |
ಶಾಮಸುಂದರ ಹರಿಗೆ ಪ್ರಿಯರ | ರಾಯರ ತೂಗೋಣ ೫

 

೨೧೯
ತ್ವರಿತದಿ ಬಾರೆ ಸಖಿ ಸುನೇತ್ರೆ |
ಹರುಷದಿ ಪೀಠಕೆ ಮಂಗಳಗೀತೆ ಪ
ಮಿನುಗುವ ನಯನಾ ಕನಕಾಭರಣಾ |
ಮಣಿಮುತ್ತಿನ ವನಮಾಲೆಯು ಧರಿಸುತ ೧
ರತ್ನದಹಾರ ದಿವ್ಯಾಂಬರದಿ | ಮಿತ್ರಿ
ನೀಶೋಭಿಸುತ ಪೀಠಕೆ ಮುದದಿ ೨
ಕೋಮಲೆ ಬಾಲೆ ಸುಶೀಲೆ
ಶಾಮಸುಂದರನ ನಾಮವ ಪಾಡುತ ೩

 

೧೧೩
ದಯದಿ ಸಲಹೋ | ಜಯರಾಯ ಪ
ಕಾಗಿಣಿ ನಿಲಯ | ಕವಿಜನಗೇಯ
ಯೋಗಿವರಿಯ ಕೃಪಾಸಾಗರ ಸತತ ೧
ಮರುತ ಸುಶಾಸ್ತ್ರಕೆ | ವಿರಚಿಸಿ ಟೀಕೆಯ
ಮುರಿದು ಕುಭಾಷ್ಯವ | ಮೆರೆದ ಮಹಾತ್ಮ ೨
ಭೀಮ ಭವಾಟಲಿ | ಧೂಮಧ್ವಜ ಸಂ
ತ್ರಾಮಜ ಸಖ ಸಿರಿ | ಶಾಮಸುಂದರಪ್ರಿಯ ೩

 

೧೫೨
ದಾನಿಗಳೊಳು ಪ್ರತಿಗಾಣೆನೊ ನಿನಗೆಸ
ನ್ಮೌವಿ ಶ್ರೀ ಸುಶೀಲೇಂದ್ರ |
ನೀನೇವೆ ಗತಿ ಎಂದ ದೀನರ ಮನೋಭೀಷ್ಟ
ಸಾನುರಾಗದಿ ಕೊಡುವಿ | ಕೈಪಿಡಿಯುವಿ ಪ
ಶ್ರೀಸುವೃತೀಂದ್ರ ಸುಯಮೀಂದ್ರಗಳಿಂದಲಿ ಸ |
ನ್ಯಾಸತ್ವ ಸ್ವೀಕರಿಸಿ
ಭೂಸುತೆ ಪತಿ ಮೂಲ | ದಾಶರಥಿಯ ಪಾದ
ಲೇಸಾಗಿ ಒಲಿಸಿದೆ ನೀ | ಸುಜ್ಞಾನಿ ೧
ಕರಿವರದನ ಪೂರ್ವ ಕರುಣ ಪಡೆದು ದಿವಾ
ಕರನಂತೆ ರಾಜಿಸುತ |
ಗುರುರಾಘವೇಣದ್ರಾಖ್ಯ | ಸುರಧೇನುವಿಗೆ ಪುಟ್ಟ
ಕರುವೆನಿಸುತ ಮೆರದಿ ಭೂವಲಯದಿ ೨
ಮೋದತೀರ್ಥಾಗಮ ಸಾಧು ಸಜ್ಜನರಿಂದ
ಶೋಧಿಸಿ ಬಹುವಿಧಧಿ
ಮೇದಿನಿಯೊಳು ಪಂಚಭೇದ | ಶಿಷ್ಯರಿಗೆಲ್ಲ
ಬೋಧಿಸುತಲಿ ಪೊರೆದಿ ದಯಾಂಬುಧಿ ೩
ಸಿಂಧುತೀರದಿ ನೆಲಸಿ
ಮಂದಾರ ಕುಜದಂತೆ | ಮಂದ ಜನರಿಗೆ | ಕ
ರ್ಮಂದಿ ಪವರಗಳನು | ನೀಡುವಿ ನೀನು ೪
ಶ್ರೀ  ವಾಸಿಸುವ | ಕಾ
ಪ್ಯಾಸನ ವರಕ್ಷೇತ್ರದಿ |
ದೇಶ ದೇಶದಿ ಬಂದ | ಭೂಸುರರಿಗೆ ಧನ
ರಾಶಿ ಸೂರೆ ಮಾಡಿದಿ | ಸನ್ಮೋಹದದಿ ೫

 

೧೧೬
ದಾಸಗುರೂ | ದಾಸಗುರೂ |
ವಾಸವ ನಾಮಕ ಪ
ಭೂಸುರರಿಗೆ ಧನರಾಶಿ ಸಮರ್ಪಿಸಿ
ವ್ಯಾಸರಾಯರುಪದೇಶಗೊಂಡ ಹರಿ ಅ.ಪ
ಜಲಜಭವನ ಪಿತನಾಜ್ಞೆಯಲಿ
ಕಲಯುಗದಲಿ ಜನ್ಮ ತಾಳುತಲಿ
ಅಲವ ಬೋಧಾಮೃತ ನೆಲೆಯನು ಸುಲಭದಿ
ತಿಳಿಗನ್ನಡದಲ್ಲಿ ತಿಳಿಸಿ ಸಲುಹಿದ ೧
ಪವನದೇವನ ಒಲಿಸುತಲಿ | ಮಾ
ಧವನ ಸ್ತುತಿಸಿ ಸಲೆ ಕುಣಿಯುತಲಿ
ಕವನದಿ ಭಕುತಿಯ ನವವಿಧ ಮಾರ್ಗವ
ಅವನಿಗೆ ಬೀರಿದ ದಿವಜ ಮೌನಿವರ ೨
ಕಾಮಿತ ಫಲಗಳ ಗರಿಯುತಲಿ ಬಲು
ಪಾಮರ ಜನರನು ಸಲಹುತಲಿ
ಶ್ರೀಮನೋವಲ್ಲಭ ಶಾಮುಂದರ
ನಾಮಾಮೃತವನು ಪ್ರೇಮದಿಂದುಣಿದ ೩

 

೭೪
ದಾಸರ ನೋಡಿರೈ ಮನದಭಿಲಾಷೆಯ ಬೇಡಿರೈ |
ಭಾಸುರ ಕಾರ್ಪರಾಧೀಶನಾ ಸನ್ನಿಧಿ
ವಾಸ ಕೃತನತ ಪೋಷಾ ||
ಹಿಂದೆ ಪ್ರಲ್ಹಾದನು ಮಾತೆಯ ಗರ್ಭದೊಳಿರಲು
ಅತಿ ಹರುಷದೊಳು
ಮುಂದೆ ಈತ ಹರಿಭಕ್ತಾಗ್ರೇಸರನೆಂದು
ಮನಸ್ಸಿಗೆ ತಂದು |
ಛಂದದಿ ಹರಿಪರನೆಂಬೊ ತತ್ವ ಬೋಧಿಸಿದ
ಜ್ಞಾನವ ಗರೆದ ||
ವೃಂದಾರಕ ಮುನಿಯೆಂದಿವರನು ಭಾವಿಸುತ
ಅಭಿವಂದಿಸುತ ೧
ಅಲವ ಬೋಧ ಸಚ್ಛಾಸ್ತ್ರ ಧರ್ಮವ ಮುದದಿ
ತಿಳಿಗನ್ನಡದದಿ
ಸತಿ ಸುಳಾದಿ ರೂಪದಿ ವಿರಚಿಸಿ ದಯದಿ
ಸಾರುತ ಜಗದಿ |
ಬಲುವಿಧ ಭವದೊಳು ಬಳಲುವ ಸಜ್ಚನ ಕೊಲಿದ
ಕಲುಷವ ಕಳೆದ |
ಇಳೆಯೊಳು ಇವರು ಪೇಳಿದ ವಚನವು ವೇದ
ದೊಳಗಿನ ಸ್ವಾದ ೨
ಈ ಮಹಾಕ್ಷೇತ್ರದ ಸ್ವಾಮಿ ನರಸಿಂಹ ಪಾದ
ಅರ್ಚಕರಾದ |
ಭೀಮಾರ್ಯರ ಸದ್ಭಕ್ತಿಗೆ ನೆಲಸಿಹರಿಲ್ಲಿ
ಅನುದಿನದಲ್ಲಿ ||
ನೇಮದಿ ತನ್ನನು ಸೇವಿಪ ಭಕುತರ ಕರವ
ಕರುಣದಿ ಪಿಡಿವ ||
ಶಾಮಸುಂದರನ ನಾಮ ಸುಧಾರಸವೆರದ
ಜಗದೊಳು ಮೆರೆದ ೩

 

೧೬೬
ದಾಸರಾಯ ವಿಜಯದಾಸರಾಯ |
ದೋಷವೆಣಿಸದೆ ಸದಾ ಪೋಷಿಸು ಕರುಣದಿ ಪ
ಸಕಲಜಗತ್ತಿಗೆ ಲಕುಮೀಶಪರೆನೆಂದು
ಮಖವಾಚರಿಪ ಮುನಿ ನಿಕರಕೆÉ ಸಾರಿದ ೧
ಜ್ಞಾನಿ ಶಿರೋಮಣಿ ಧೇನುಪಾಲಾರ್ಯರ |
ಮಾನಸ ಕುಮುದಕೆÉ ಏಣಾಂಕನೆನಿಸಿದ ೨
ಮುದ ತೀರ್ಥಾಗಮ ಮರ್ಮ ಮಧುರ ಕನ್ನಡದಲಿ
ವಿಧ ವಿಧ ರಚಿಸಿದ ಸದಮಲ ಸುಚರಿತ್ರ ೩
ಬೇಸಿಗೆ ಬಿಸಲೊಳು ರಾಸಭ ತೃಷೆಯಿಂದ |
ಷಾಸಿಯಾಗಿರೆ ಜಲಪ್ರಾಶನಗೈಸಿದ ದಾಸರಾಯ ೪
ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಪರಿಗೆ
ಇಷ್ಟಾರ್ಥಗರೆಯುವ ಪುಟ್ಟ ಬದರಿವಾಸ ೫
ತಪ್ಪದೆ ಭಕ್ತಿಲಿ ಬರುವ ಭಕ್ತರಿಗೆಲ್ಲ
ತಪ್ಪು ಮನ್ನಿಸಿ ಭಜಿಪಭಕ್ತರಿಗೊಲಿದು
ಪೊರೆವ ಚಿಪ್ಪಶಿಖರನಿಲಯ ೬
ಪಾಮರನಾದೆನಗೆ ಶಾಮಸುಂಧದರ ಸ್ವಾಮಿ
ನಾಮಾಮೃತಪಾನ ಪ್ರೇಮದಿ ನೀಡಯ್ಯ ದಾಸರಾಯಾ ೭

 

೧೦೧
ದೀನಮಂದಾರ ಶ್ರೀಧರಾ | ದಾನವಕುಲ ಹರಣಾ ಪ
ಕೃಪಾಳೋ ಮುನಿಜನ ಮನೋನಿಲಯ ಅ.ಪ
ವಿಮಲಾ ಸುಮಹಿಮ ಜಗದೊಡೆಯ |
ಮಾನವ ದ್ವಿರದಾರಿಪುದೇವ ೧
ಧರಣೇಶ ರಾಘವ |
ಗಿರಿಧರ ತ್ರಿಗುಣಭವದೂರ ೨
ಮಾವರ ರಾಧಾಮನೋಹರ
ಪ್ರೇಮಾಕರ ಮುರಲಿ ವಿನೋದ | ವಿಹಂಗಧ್ವಜ
ಶಾಮಸುಂದರ ಕುಜನ ಸಂಹಾರಾ ೩

 

೩೬
ದೇವ ಮಾರುತಿ ಜಯಮಂಗಲಂ
ಶುಭ ಮೂರುತಿ ದಯಾಬ್ಧಿ ಜಯಮಂಗಳಂ ೧
ರಘುರಾಮ ಶ್ರೀಪಾದ ಪ್ರಿಯ ಸೇವಕ
ವರದಾಯಕ ಹರಿನಾಯಕ ಕರುಣಿಸೊ
ವಜ್ರಾಂಗ ಜೀವೇಶ್ವರ ೨
ಶ್ರಿ ಶಾಮಸುಂದರ ಭಕ್ತಾಗ್ರಣಿ
ಘನ ಸದ್ಗುಣಿ ಚಿಂತಾಮಣಿ ಕೊರವೀಶ
ಭಯನಾಶ ನತಪೋಷ ೩

 

೩೦
ದೇವ ಹನುಮಶೆಟ್ಟ | ರಾಯ ಜಗಜಟ್ಟಿ
ಕಾವೋದು ಭಾವಿ ಪರಮೇಷ್ಟಿ ಪ
ಪಾವನಚರಿತ ಸಂಜೀವನ ಗಿರಿಧರ
ಪಾವಮಾನಿ ಕರುಣಾವಲೋಕನದಿ
ನೀ ನಲಿಯುತಲಿ ಸದಾವಕಾಲ ತವ
ತಾವರೆ ಪದಯುಗ ಸೇವೆಯ ಕರುಣಿಸೊ ಅ.ಪ
ವಾನರ ಕುಲನಾಯಕ | ಜಾನಕಿಶೋಕ ನಿವಾರಕ
ಕಾನನ ತೃಣಪಾವಕ | ಹೀನ ಕೌರÀವ ನಾಶಕ |
ಸನ್ಮಾನಿ ತಿಲಕ ಆನಂದತೀರ್ಥನಾಮಕ |
ಕ್ಷೋಣಿಯೊಳಗೆ ಎಣೆ | ಗಾಣಿ ಪಿಡಿದು ಪೊರೆ
ಸ್ಥಾಣು ಜನಕ ಗೀರ್ವಾಣ ವಿನುತ ಜಗತ್ಪ್ರಾಣ
ಕಲ್ಯಾಣ ಮೂರುತಿ ೧
ಮರುತನಂದನ ಹನುಮ | ಪುರಹರರೋಮ
ಪರಮಪುರುಷ ಶ್ರೀ ಭೀಮಾ
ಕರುಣಸಾಗರ ಜಿತಕಾಮ | ಸದ್ಗುಣ ಭೌಮ
ಪರವಾದಿ ಮತವ ನಿರ್ನಾಮ ಗರಿಸುತ ಪಾಲಕ
ಜರಿಜ ವಿನಾಶಕ ||
ಹರಿಮತ ಸ್ಥಾಪಕ | ದುರಿತ ವಿಮೋಚಕ
ಶರಣು ಜನರ ಸುರತರು ಭಾರತಿವರ
ಮರಿಯದೆ ಪಾಲಿಸೊ ನಿರುತ ಮಮ ಚರಿತ ೨
ಧಿಟ್ಟ  ಕುವರ
ದುಷ್ಟರಾವಣ ಮದಹರ
ಜಿಷ್ಣುಪೂರ್ವಜ ವೃಕೋದರ | ರಣರಂಗಶೂರ
ಶಿಷ್ಟ ಜನರುದ್ಧಾರ | ನಿಷ್ಟೆಯಿಂದ ಮನಮುಟ್ಟಿ
ನಿನ್ನಪದ ಥಟ್ಟನೆ ಪಾಡುವ
ಶ್ರೇಷ್ಠ ಸುಜನರೋಳ್ | ಇಟ್ಟು ಸಲಹೊ ಸದಾ
ಸೃಷ್ಟಿಮಂಡಲದಿ | ಪುಟ್ಟಗ್ರಾಮ ಬಲ್ಲಟಿಗಿವಾಸ ೩

 


ದ್ವಿರದ ವದನಾಪಾಹಿ | ವಿಘ್ನವಿದೂರ | ನಭೇಶ ಕೃಪಾಬ್ಧಿಗೌರಿ ಸುಕುಮಾರ ಪ
ಸಿದ್ಧಿವಿನಾಯಕ ವಿದ್ಯಾಪ್ರದಾಯಕ |ಉದ್ಧರಿಸೈಸುಜನೋಪಕಾರಿ ೧
ವುಂದರ ವಾಹನ ಬಂಧವಿಮೋಚನ |ಚಂದಿರ ಶಾಪದ ಮಾರವಿದೂರ ೨
ಶಾಮಸುಂದರ ಸ್ವಾಮಿಯ |ನಾಮಾಪ್ರೇಮದಿ ಜಿಂಹ್ವೆಗೆ ಕರುಣಿಸುದಾರಿ ೩

 

೧೬೫
ಧ್ಯಾನಿಸೋ ಮಾನವಾ ದೀನೋದ್ಧಾರಿ ವಿಜಯದಾಸರನಾ |
ದೇವಮಾನಿತರು ಧೇನು ಸಮ ಪ.
ಭೃಗುಮುನಿಯೆ ಈ ಜಗದಿ | ಸಂಜನಿಸಿ ಮದಪಾಲಿಸಿ
ಘೋರ ಭವಕ್ಲೇಶ ಪರಿಹರಿಸಿ ಸುಖವಾ ಬೀರಿದಾ೧
ಗುರುಪವನ ಶಾಸ್ತ್ರವ ಕನ್ನಡದಿ ವಿರಚಿಸಿ |
ಜ್ಞಾನಪಥ ತೋರಿ ಶಿರಿವದನ ಮಹಿಮೆ ಸಾರಿದಾ೨
ಶ್ರೀವರ ಶಾಮಸುಂದರನ ಸ್ತವಿಸಿ ಸಂಸೇವಿಸಿ |
ಭಾವದಲಿ ನೋಡಿ ನಲಿದವರು ಕರುಣಾಶಾಲಿ ೩

 

೧೭
ನಂಬಿ ನಮಿಸುವೆನೋ ನಿನ್ನ | ಕಂಬುಕಂಧರ ಕಮಲನಯನ ಪ
ವಾತಾಶನಗಿರಿ ನಿವಾಸ | ಯಾತುಧಾನಕುಲವಿನಾಶ ||
ಶ್ವೇತವಾಹನ ಸೂತ ತ್ರಿದಶವ್ರಾತವಂದ್ಯ ಭಕುತ ಪೋಷ ೧
ತೋಂಡಮಾನವರಪ್ರದಾತ | ಪಾಂಡುರಂಗದ್ವಿಜ ವರೂಢ
ಅಂಡಜಾಧಿ ಜಾಂಡನಾಥ | ಪುಂಡರೀಕವರದ ಸತತ ೨
ಯಾಮಿನೀಶವರ್ನ ತ್ರಿಪಥಗಾಮಿನೀಪಿತ ಶಾಮಸುಂದರ
ವಾಮದೇವನಮಿತ ಚರಣ | ಸಾಮವೇದ್ಯ ಸಲಹೊ ಸತತ ೩

 

೯೯
ನಂಬಿದೆ ತವ ಚರಣ ಸಲಹೋ | ಅಂಬುಧಿಸುತೆ ರಮಣ
ಅಂಬುಜ ಸಂಭವ ಶಂಭು ವಿನುತ ಮನ |
ದ್ಹಂಬಲವನು ಸಲಿಸೆಂದು ನಿರುತ ನೆರೆ ಪ
ತಾವರೆದಳನಯನಾ ಭವಹರಣ
ತವಕದಿ ಸುಜ್ಞಾನವಗರೆಯೋ ೧
ತಂದೆ ನಾ ಜನಿಸುತ ಭೂಸುರ ಜನ್ಮದಿ
ಹಿಂದಿನ ಸುಕೃತದಲಿ ಬಂದೆನೊ ಭುವಿಯೊಳ್
ಮಂದರ ಸಂಗದಿ ಕೊಂದಿದೆ ನಿನ್ನನು
ನೊಂದೆನೋ ಕರುಣಿಸು ೨
ಹೇಸಿ ಸಂಸಾರದ ಪಾಶವ ಬಿಡಿಸುತ
ಶ್ರೀಶಾಮಸುಂದರವಿಠಲನೆ
ದೋಷವ ನೋಡದೆ | ಪೋಷಿಸು ಮರೆಯದಲೆ
ವಾಸುಕಿಶಯನನೆ ೩

 


ನಂಬಿದೆನು ನಿನ್ನ ಪಾದ ಲಂಬೋದರಅಂಬರಾಧಿಪ ಮನದ್ಹಂಬಲವ ನೀಡೆಂದು ಪ
ನಾಕನಾಥನುತ ಪಿನಾಕಿಸುತ | ಕಾಕುಮತಿಯ ಕಳೆದು ಕಾಯೊಖುವಾಹನೇಕದಂತ ೧
ಭದ್ರಮೂರುತಿಯೆ ಕರುಣಾಬ್ಧಿತ್ವರಿತದ್ಧರಿಸು ಎಂದು ನಮಿಪೆ ಅದ್ರಿಜೆ ಕುಮಾರ ನಿರುತ ೨
ಸಿಂಧೂರ ವದನನೆ ಸುರವೃಂದ ವಂದಿತವಂದಿಸಿ ಬೇಡುವೆ ಶಾಮಸುಂದರನ ಪ್ರೀತಿ ಪಾತ್ರ ೩

 

೧೮೧
ನಂಬಿಭಜಿಸೊ ನಿರಂತರ | ನೆರೆ ನಂಬಿ ಭಜಿಸಿ ಮನವೆ ಪ
ಕುಂಭಿಣಿನಾಥ ದಾಸಾರ್ಯ | ಸಹ್ಲಾದರಾ | ಶಲ್ಯಾಖ್ಯರಾ ಅ.ಪ
ಆದಿಯುಗದಿ ಪ್ರಹ್ಲಾದನನುಜ | ಸಹ್ಲಾದನೆಂದೆನಿಸಿದರಾಯರ ೧
ದ್ವಾಪರದಲ್ಲಿ ಶರಚಾಪಧಾರಿ | ಶಲ್ಯಭೂಪರೆನಿಸಿದ ರಾಯರು ೨
ಪುರಂದರರಾರ್ಯರ ಪುಟ್ಟ ತರಳರೆನಿಸಿ
ಭಾವಿ ಮರುತರಾಜರ ಪ್ರೀಯ ದೂತರ ೩
ಶೀಲ ಸುಜ್ಞಾನ ಮಹಿಮಶಾಲಿ ವಿಜಯಧೇನು
ಪಾಲದಾಸರ ದಯಷಾತ್ರರ ೪
ಡಿಂಗರೀತಗಮರಾಂಘ್ರಿಪರೆನಿಸಿದ
ರಂಗವಲಿದ ಗುರುರಾಯರ ೫
ದೀನಜನರಾಮರಧೇನುವೆಂದೆನಿಸಿದ ಮಾನವಿಕ್ಷೇತ್ರ ನಿವಾಸರ ೬
ಶ್ರೀ ಶಾಮಸುಂದರನ ಭಾಸುರಕಥೆ | ಪೀಯೂಷ
ಬುಧರಿಗೆರೆದ ರಾಯರ ೭

 

೩೫
ನಮಿಸುವೆ ಪಾಲಿಸೊ ಪ್ರಾಣಪತೆ ಪ್ರೇಮವಾರುಧಿ |
ವಾನರನಾಥಾ ಪೊಂದಿದೆ ಚರಣಾ ಪ
ನೊಂದೆನು ಘೋರ ಭವದಿ ಪಾಶದಿ
ತಂದೆಯೆ ಪಿಡಿನೀ ಬಂದು
ಕರವ ಕುಂದಗಳೆಣಿಸದೆ ನೀ ಬೇಗನೆ ೧
ಕರಿವರ ಭೀಮಾ ಗುರು ಸುಖತೀರ್ಥಮರಿಯದೆ ಗರಿಯೊ
ನರಹರಿ ಧ್ಯಾನಾ | ಕೊರವಿ ನಿಲಯನೆ ಪ್ರಾರ್ಥಿಪೆ ೨
ಶ್ರೀವರ ನ ಸೇವಕನಾದ ಭಾವಿ
ಧಾತ ಪಾವನನೇ ಪವಿಗಾತ್ರ ಸದಾ ೩

 

೭೫
ನಮೊ ನಮೊ ನರಮೃಗರಾಜ ಸದಾ
ನಮಿಪ ಸುಜನರಿಗೆ ಅಪಾರ ಮಹಿಮ ಪ
ಕಮಲ ಸಂಭವ ಸುಮನಸೇಂದ್ರ ಪ್ರಮುಖ
ನಮಿತ ಸುಮಹಿಮ ಗಜರಿಪು
ದಮನ ದ್ವಿಜವರ ಗಮನ ಗುಣ ನಿಧಿ
ಮಲೆಯಳ ಮುಖ ಕುಮುದ ಹಿಮಕರ ಅ.ಪ
ಜಾತರಹಿತ ಜಗದೀಶ ದನು
ಜಾತ ವ್ರಾತಾರಸ್ಯ ಜಾತವೇದನ
ಶೀತಾಂಶು ಭಾನು ಸಂಕಾಶ ಭೂನಾಥ
ಭೂತೇಶ ಹೃತ್ವಾದೋದಕ ವಾಸ
ಶಾತಕುಂಭ ಕಶ್ಯಪನ ಗರ್ವಜೀ
ಮೂತವೃಂದಕೆ ವಾತನೆನಿಸುತ
ಪೋತ ಪ್ರಹ್ಲಾದನಿಗೆ ಒಲಿದು ಸು
ಪ್ರೀತಿಯಲಿ ವೊರೆದಾತ ದಾತನೆ ೧
ಮಾತುಳವೈರಿ ಗೋಪಾಲ ವೇಣು
ಗೀತ ಸಂಪ್ರೀತ ಶ್ರೀ ರುಕ್ಮಿಣಿ ಲೋಲ
ಧಾತಾಂಡೋದರ ವನಮಾಲಾಧೃತ
ಪೂತನ ಬಕ ಶಕಟಾರಿ ಹೃತ್ ಶೂರ
ಪಾತರೌದ್ರಿ ಶತಧಾರ ಶುಭಕರ
ಶ್ವೇತ ದ್ವೀಪಾನಂತ ಪೀಠ ಪು
ನೀತ ವರವೈಕುಂಠ ಘನ ಸು
ಕೇತನ ತ್ರಯವೀತ ಭವ ಭಯಹರ ೨
ಮಾರ ಜನಕ ಶುಭಕಾಯ ಕೃಷ್ಣಾ
ತೀರ ಸುಶೋಭಿತ ಕಾರ್ಪರ ನಿಲಯ
ದೂರ ನೋಡದೆ ಪಿಡಿ ಕೈಯ್ಯ ಶ್ರೀಸ
ಮೀರ ಸನ್ನುತ ಶಾಮಸುಂದರರೇಯ
ವಾರಿಚರ ಗಿರಿ ಭಾರಧರ ಭೂ-
ಚೋರ ಹರ ಗಂಭೀರ ವಟು ಕು
ಠಾರಕರ ರಘುವೀರ ನಂದ
ಕುಮಾರ ವಸನವಿದೂರ ಹಯಧ್ವಜ ೩

 

೧೫೬
ನಮೋ ನಮೋ ಗುರು ಸುಶೀಲೇಂದ್ರ | ಶ್ರೀ ಸಂ
ಯಮಿ ಕುಲೋತ್ತಮ ಮಧ್ವಮತ ಸುಮತಾಬ್ಧಿ ಚಂದ್ರ ಪ
ಶ್ರೀ ಸುವೃತೀಂದ್ರ ಕುಮಾರ | ಜಿತ ಪೂತರ
ಭಾಸುರ ಚರಿತ ಉದಾರ
ಭೂಸುರ ಸೇವಿತಧೀರ | ಮೂಲ
ದಾಶರಥಿಯ ಪಾದಾಂಭೋಜಭಾರ ೧
ಶ್ರೀರಾಘವೇಂದ್ರ ಪ್ರಿಯ ಗುರುವರದ
ತೀರ ಶೋಭಿಪರಿತ್ತಿ ಸುಕ್ಷೇತ್ರ ನಿಲಯ
ವಾರಿಜ ಸಖ ನಿಭಕಾಯ | ಭವ |
ದೂರ ದಯಾಂಬುಧಿ ದ್ವಿಜಕುಲ ಪರಿಯ ೨
ಶಮಸುಂದರ ದಾಸಾಗ್ರಣಿಯೆ | ಬುಧ
ಸ್ತೋಮವಂದಿತ ಪದನತ ಸುರಮಣಿಯೆ
ಈ ಮಹಿಯೊಳು ನಿನಗೆಣೆಯೆ | ಮಮ
ಸ್ವಾಮಿ ಕುಮತ ಕುಲತಮಗೆ ದ್ಯುಮಣಿಯೆ ೩

 

೧೪೭
ನಮೋ ನಮೋ ಸುಶೀಲೇಂದ್ರ | ಗುರುವರಿಯ ವೈಷ್ಣವ
ಸುಮತವಾರಿಧಿ ಚಂದ್ರ | ಸಕುವಿ ಸಂಸ್ತುತ |
ಅಮಿತ ಸದ್ಗುಣ ಸಾಂದ್ರ || ಸುಮತಾಹಿವೀಂದ್ರ ಪ
ನಮಿಪ ಜನರಿಗೆ ಅಮರ ಭೂರುಹ
ಸಮಸುಖಪ್ರದ ವಿಮಲ ಚರಿತನೆ
ಯಮಿವರ್ಯ ಸುವೃತೀಂದ್ರ ಮಾನಸ
ಕಮಲರವಿ ಮಹಿ ಸುಮನಸಾಗ್ರಣಿ ಅ.ಪ
ಅಸಮ ಮಹಿಮೋದರ | ತವಸುಪ್ರಭಾವವ
ವಶವೆ ಪೊಗಳಲು ಧೀರಾ | ಸುಜನ ವಂದಿತ
ಸ್ವಶನ ಸುಮತೋದ್ಧಾರ || ದಯ ಪಾರವಾರ ||
ವಸುಧೆಯೊಳು ಮೊರೆಹೊಕ್ಕ ಜನರಿಗೆ
ಕುಶಲಪ್ರದ ನೀನೆಂದು ಬುಧ ಜನ
ಉಸುರುವದು ನಾ ಕೇಳಿ ನಿನ್ನ ಪದ
ಬಿಸಜ ನಂಬಿದೆ ಪೋಷಿಸನುದಿನ ೧
ದೀನಜನ ಸುಖದಾತ | ಸುಕೃತೀಂದ್ರ ಕೋಮಲ
ಪಾಣಿ ಪದ್ಮ ಸುಜಾತ | ಜಯವಂತ ಜಿತಸ್ಮರ
ಬಾಣಲೋಕ ವಿಖ್ಯಾತ || ದ್ವಿಜಕುಲಕೆ ನಾಥ ||
ಕ್ಷೋಣಿಯೊಳು ನೀ ಒಲಿದ ಮಾತ್ರದಿ
ಮೌನಿವರ್ಯ ಶ್ರೀ ರಾಘವೇಂದ್ರರು
ಸಾನುರಾಗದಿ ಸಲಹುವರು ಪವ
ಮಾನ ಶಾಸ್ತ್ರ ಪ್ರವೀಣ ಜಾಣ ೨
ಪಿಂಗಲೇಂದ್ರ ಪ್ರಕಾಶ | ಸುಪವಿತ್ರ ವರದತ
ರಂಗಿಣಿ ತಟವಾಸ | ಸದ್ಧರ್ಮ ಸ್ಥಾಪಕ
ಮಂಗಳಾಂಗ ಯತೀಶ | ಪಾಪೌಘನಾಶ ||
ತುಂಗವಿಕ್ರಮ ಶಾಮಸುಂದರನಂಘ್ರಿ ಕಮಲಕೆ
ಭೃಂಗ ಭವಗಜಸಿಂಗ ಕರುಣಾ
ಪಾಂಗದೀಕ್ಷಿಸೆ ಇಂಗಿತಜ್ಞರ ಸಂಗಪಾಲಿಸು ೩

 

೩೪
ನಾನೇನಿನಗಂದೆನೋ ಬಿಡದೆ ಪವ
ಮಾನ ಪಾಲಿಸೋ ಎನ್ನನು ಪ
ದೀನರ ಪಾಲಿಪ ದಾನವಾಂತಕ ಎನ್ನ
ಜ್ಞಾನಾನಂದದ ನಾಮ ಧ್ಯಾನವಗೈದೆನೊ ಅ.ಪ
ಎರಡನೆಯುಗದಲ್ಲಿ ಶರಧಿ ಲಂಘಿಸಿ ರಘು
ವರನ ಕುಶಲವಾರ್ತೆಧರೆಜಾತೆಗೆ
ಅರುಹಿ ದಶಾಶ್ಯನ ಪುರವ ದಹಿಸಿದಂಥ
ಪರಮಸಮರ್ಥನೆಂದರಿತ ಕೊಂಡಾಡಿದೆನಲ್ಲದೆ ||
ತರು ಚರುವರನೆಂದಿನೆ | ಶಿರದಿ ಕಲ್ಲು
ಧರಿಸಿ ತಂದವನೆಂದಿನೆ | ಬ್ರಹ್ಮಾಸ್ತ್ರಕೆ
ಭರದಿ ಸಿಲ್ಕಿದಿ ಎಂದೆನೆ ಭಕ್ತೀಲಿ ಭಾವಿ
ಸರಸಿಜಾಸ್ರನನೆಂದು ಸ್ಮರಿಸಿದೆನಲ್ಲದೆ ೧
ಕೃತಯುಗದಲಿ ಕುಂತಿಸುತನಾಗಿ ಜನಿಸುತ
ರತಿ ಪತಿ ಪಿತನಂಘ್ರಿ ಭಜಿಸುತಲಿ
ಕ್ಷಿತಿ ಭಾರಕೆ ಖಳ ತತಿಯ ಸಂಹರಿಸಿದಾ
ಪ್ರತಿಮಲ್ಲ ನೀನೆಂದು ಸ್ತುತಿಸಿದೆ ನಲ್ಲದೆ
ಖತಿವಂತ ನೀನೆಂದಿನೆ ದುನುಜಾತೆಗೆ
ಪತಿಯಾದವನೆಂದಿನೆ ಅವಳ ಕೂಡಿ
ಸುತನ ಪೆತ್ತವನೆಂದನೆ ಯಾಮಿನಿಯಲಿ
ಸತಿಯೆನಿನದವ ನೆಂದೆನೇ ನಿನ್ನನು ಬಿಟ್ಟು
ಗತಿನಮಗಿಲ್ಲೆಂದು | ನುತಿಸಿದೆ ನಲ್ಲದೆ ೨
ನಡುಮನಿಸುತನಾ ಪೊಡವಿಯೊಳಗೆ ಪುಟ್ಟ
ಉಡುಪಿ ಕ್ಷೇತ್ರದಿ ಶಾಮಸಂದರನ
ಧೃಡವಾಗಿ ಸ್ಥಾವಿಸಿ | ಜಡ ಕುಮಾಯ್ಗಳಗೆದ್ದ
ಸಡಗರ ಮುನಿಸುತನಾಗಿ ಪೊಡೆವಿಯೊಳಗೆ ಪುಟ್ಟ
ಉಡುಪಿ ಕ್ಷೇತ್ರದಿ ಶಾಮಸುಂದರನ
ಧೃಡವಾಗಿ ಸ್ಥಾಪಿಸಿ | ಜಡ ಕುಮಾಯ್ಗಳಗೆದ್ದ
ಸಡಗರ ಮುನಿ ಎಂದು ನುಡಿದೆನಲ್ಲದೆ ಹುರಳಿಮೆದ್ದ
ಬಡದ್ವಿಜ ಶಿಶುವೇದಿನೆ | ಎತ್ತಿನ ಬಾಲ ಪಿಡಿದೋಡಿ
ದವನೆಂದಿನೆ | ಬೆಸರದಿಂದ ಮಡದಿ ಬಿಟ್ಟವ
ನೆಂದಿನೆ ಕಡಿಗೆ ಬೋರಿ ಗಿಡವ ಸೇರಿದಿ
ಎಂದಿನೆ ಒಲಿದುನಿನ್ನ ಒಡೆಯನ
ತೋರೆಂದು ಅಡಿಗಳಿಗೆರಗಿದೆ ನಲ್ಲದೆ ೩

 

೨೪೭
ನಿಂದೆ ಮಾಡುವಿ ಯಾತಕೋ | ಮಂದಮಾನವ ಶ್ರೀಗೋವಿಂದ
ದಾಸಾರ್ಯರನ್ನ ಎಂದೆಂದಿಗೀಮಾತು | ಇಂದಿರೇಶನ ಭಕುತ
ವೃಂದ ಮೆಚ್ಚುವದಿಲ್ಲವೋ ಮೂಢ ಪ
ಬಾಲತನದಾರಭ್ಯ ಶೀಲ ಸದ್ಭಕುತಿಯಲಿ ತಾಳ ತಂಬೂರಿ
ಪಿಡೆದು | ಶ್ರೀಲೋಲ ಹರಿನಾಮ ಹೇಳುತಲಿ
ಸತತ | ಗೋಪಾಳ ವೃತ್ತಿಯ ಮಾಡಿ ಕಾಲವನು ಕಳೆದವರು ೧
ಕುಸುಮಶರನಟ್ಟುಳಿಗೆ ವಶವಾಗದಿರಿ ಎಂದು
ಉಸುರುತಲಿ ಶಿಷ್ಯಗಣಕೆ | ಅಸುರಾರಿ ಮಹಿಮೆಯನು
ರಸವತ್ ಕವಿತೆಯಲಿಂದ ನಿಶಿ ಹಗಲು
ವರ್ಣಿಸಿದ ಅಸಿಫ್ಯಾಳು ನಿಲಯರನು ೨
ಆಶ ಕ್ರೋಧವ ತೊರೆದು ಕ್ಲೇಶ ಸುಖ ಸಮ ತಿಳಿದು
ಲೇಸಾಗಿ ಗುರುಸೇವೆಗೈದು ವಾಸಸ್ಥಾನಕೆ ತೆರಳಿದೀ
ಸುಗುಣರನು ವ್ಯರ್ಥ ನಿಂದೆ ಮಾಡುವಿ ಯಾಕೋ ೩

 

೨೩೬
ನಿತ್ಯ ಬಿಡದೆ ಭಜಿಸೋ | ಕೋಸಿಗಿ
ಮುತ್ಯನ ಕೃಪೆ ಗಳಿಸೋ
ಸತ್ಯವಾಗಿ ಭವ ಕತ್ತಲೆ ಓಡಿಸಿ
ಉತ್ತಮಗತಿಯನು | ಇತ್ತು ಪಾಲಿಸುವ ಪ
ಯಾತಕೆ ಅನುಮಾನ | ಈತನೆ
ಜಾತರೂಪಶಯನ |
ಜಾತದಾತಯತಿ | ನಾಥ ಶ್ರೀರಾಯರ
ಪ್ರೀತಿಪಡೆದ ಪಿತ | ಭ್ರಾತಾರ್ಯರು ನಿಜ ೧
ಪುನಃ ಜಗದಿ ಜನಿಸಿ | ಗಣಪತಿ
ಅನುಚರ ನಾಮವ ಧರಿಸಿ
ಅಖಿಲ ನಿಗಮದೋಳ್ | ಮಿನುಗುವ ಹರಿಗುಣ
ಮಣಿ ಬೆಳಕನು ಗುಣ ಜನಕೆ ತೋರಿದನು ೨
ಮಂದಾಜಾತಶಯನ | ನ
ಪೊಂದಿದ ಮಾನವಿ ಮಂದಿರ ನೊಲಿಸುತ
ಮಂದಜನರ ದಯದಿಂದ ಸಲಹುವರು ೩

 

೧೫೯
ನಿತ್ಯ ವ್ಯಾಸತತ್ವಜ್ಞರಂಘ್ರಿ ಭಜಿಸೊ | ಕೃತ ಕೃತ್ಯನೆಂದೆನಿಸೊ |
ಎತ್ತಿದ ಮಾನವ ಜನ್ಮ ಸಾರ್ಥಕೆನಿಸೊ | ಪುರುಷಾರ್ಥವಗಳಿಸೊ ಪ
ಮೂರುವತಾರನ ಮತದೊಳು ಜನಿಸಿದರು
ಮೂರನು ತ್ಯಜಿಸಿದರು
ಮೂರು ಹತ್ತರಿಗೆ ಮುಖವಾಗಿರುತಿಹರು
ಇವರಿಗೆ ಸಮರ್ಯಾರೊ ೧
ಮಾನವ ಸ್ರ‍ಮತಿ ಮೊದಲಾದ ಗ್ರಂಥಗೈದ
ದ್ವಿಜರಿಗೆ ಬೋಧಿಸಿದ ||
ಸಾನುರಾಗದಲಿ ಜ್ಞಾನಾಮೃತವೆರೆದ
ದಶದಿಕ್ಕಿಲಿ ಮೆರೆದ |
ಏನು ಪೇಳಲಿ | ಇವರ ದಿವ್ಯಪಾದ |
ಸೇವಿಪರಿಗೆ ಮೋದ ೨
ಶಾಮಸುಂದರನ ಕವನದಿ ಕೊಂಡಾಡಿ
ಬಹಿರಂತರ ನೋಡಿ ||
ಸೋಮಪುರದಿ ದ್ವಿಜ ಸ್ತೋಮದಿಂದ ಕೂಡಿ
ಇರುವರು ಮನೆ ಮಾಡಿ
ಈ ಮಹಾತ್ಮರನು ನರನೆಂದವ ಖೋಡಿ
ಸಂದೇಹ ಬ್ಯಾಡಿ ೩

 

೨೩೭
ನಿರುತ ಭಜಿಸಿರೋ ಘೋರ | ದುರಿತ ತ್ಯಜಿಸಿರೋ
ಪರಮ ಸಾಧ ಐಕೂರು ನರಸಿಂಹಾರ್ಯರ ಪ
ಕೃಷ್ಣತೀರದಿ ಮಿಂದು | ಕೃಷ್ಣÀವರನೊಳು
ಜಿಷ್ಣು ಸೂತನ ನೋಳ್ಪ | ವಿಷ್ಣು ದಾಸರ ೧
ತರುಳತನದಲಿ | ಸದ್ಗುರುವರೇಣ್ಯರ
ಚರಣ ಸೇವಿಸಿ ಶಾಸ್ತ್ರವರಿತ ಧೀರರ ೨
ಸತತ ನಂಬಿದ ಶಿಷ್ಯತತಿಗೆ ಹರಿಗುಣ
ಹಿತದಿ ಸುರಿದ | ಅಪ್ರತಿಮ ಮಹಿಮರ ೩
ಪವನ ಶಾಸ್ತ್ರವೇದ | ಕವನವೆನ್ನುತ
ವಿವರಿಸುತ್ತಲಿ ತನ್ನವರ ಪೊರೆದರ ೪
ಏನು ಬಂದರು ಮನದಿ ಶ್ರೀನಿವಾಸನ
ಧ್ಯಾನ ಬಿಡದಿಹ | ಮಹಾನುಭಾವರ ೫
ಭಕುತಿ ಜ್ಞಾನವ ತಮ್ಮ ಭಕುತ ವರ್ಗಕೆ
ಪ್ರಕಟಗೊಳಿಸಿದ ಇಂಥ | ಮುಕುತಿ ಯೋಗ್ಯರ ೬
ಭುವನ ಮೇಲಿಹ ಇವರು ದಿವಿ ಭವಾಂಶರು
ರವಿ ನಿಭಾಂಗರು | ಜವನ ಭವಣೆ | ತರಿದರು ೭
ಇವರು ಪೇಳುವ ವಚನ ಶ್ರವವಣಗೈಯಲು
ಭವದಿ ಬಳಲದೆ ಶೌರಿ ಭುವನ ಪಡೆವರು ೮
ಕಂತುಪಿತ ಕಥಾ ಸುಧಾ | ಗ್ರಂಥ ಮರ್ಮವ ಆ
ದ್ಯಂತ ಬಲ್ಲರು ಪರಮ ಶಾಂತಿ ಶೀಲರು ೯
ಮೌನಧ್ಯಾನದ ಜ್ಞಾನ ಖೂನ ತೋರದೆ
ಹೀನರಂದದಿ ಹೊರಗೆ ಕಾಣಿಸುವರು ೧೦
ಬಾಲಕೃಷ್ಣನ ದಿವ್ಯಲೀಲೆ ಚರಿತೆಯ
ಕೇಳಿ ಹೇಳದೆ ನಿಮಿಷ ಕಾಲ ಕಳೆಯರು ೧೧
ನಿಂದ್ಯ ವಂದನೆ ಬಂದ ಕುಂದು ಶ್ಲಾಘನೆ
ಇಂದಿರೇಶನೆ ತಾನೆ ತಂದ ನೆಂಬರು ೧೨
ಪಾದ ಪೊಂದಿದ ಜನಕೆ | ಮೋದಗರೆವರು
ವ್ಯಾಧಿ ಕಳೆದರು ವೇದ ಬೋಧಿಸಿದರು ೧೩
ವಿವಿಧ ವೈಭವ ಮೇಣ್ | ಕುವರ ಭಾಗ್ಯವ
ವಿವಿಧ ಭೋಗವ ಶಿಷ್ಯ ನಿವಹಕಿತ್ತರು ೧೪
ಸತ್ಯದೇವನ ಮಹಿಮೆ ನಿತ್ಯ ಪೇಳುತ
ಭೃತ್ಯನಿಕರಕೆ ಸಧೃಡ ಚಿತ್ತವಿತ್ತರು ೧೫
ಕಾಮವಾಸನೆ ಸುಟ್ಟು | ನೇಮ ಪೂರ್ವಕ
ರಾಮನೊಲಿಮೆಯ | ವಿಶ್ವಪ್ರೇಮವೆಂಬರು ೧೬
ಈ ಸುಮಹಿಮರ | ಸದುಪದೇಶ ಕೊಳ್ಳಲು
ಕ್ಲೇಶಬಾರದು | ಯಮನು ಘಾಸೆÉಗೊಳಿಸನು ೧೭
ಧರಣಿವಲಯದಿ ಇವರ ಚರಿತೆ ತಿಳಿಯದೆ
ಜರಿವ ಮನುಜರು ಘೋರ ನಿರಯ ಪಾತ್ರರು ೧೮
ಇನಿತುಪಾಸನೆಗೈವ ಘುನ ಮಹಾತ್ಮರ
ಗುಣಗಣಂಗಳ | ತುತಿಸಲೆನಗೆ ಸಾಧ್ಯವೆ ೧೯
ಅರುಣನುದಿಯದಿ | ಇವರ ಚರಣ ಕಮಲವ
ಸ್ಮರಣ ಮಾಡಲು | ಹರಿಯ ಕರುಣವಾಹದು ೨೦
ಸಾಮಜವರ ವರದ ಶಾಮಸುಂದರನ
ಪ್ರೇಮಪಾತ್ರ ನಿಷ್ಕಾಮ ಪೂರ್ಣರು ೨೧

 

೨೩೮
ನೀ ಸುಮಂಲಿ ವರಗುಣಶೀಲೆ ನೀ ಸುಮಂಗಲಿ ಪ
ಸತತ ಮಾತಾ ಪಿತರ ವಚನ ಹಿತದಿ
ನೀನು ಆಲಿಸುತ | ಪತಿಯು ಪರದೈವವೆಂದು
ನೇಮದಿ ತಿಳಿದು ನೀ ಮಾಡುವುದು ವ್ರತ ೧
ನಿರುತ ಗೋವು ಭೂಸುರರ ಸೇವಾ ಹರುಷದಲಿ
ಶ್ರೀ ಗೌರಿ ಪೂಜಾ ತರುಣಿ ಗೈದು ಜಗದಿ ನೀನು
ಮಾರಪಿತನ ಪಾದ ನೀ ಭಜಿಸೆ |
ಸುಕುಮಾರ ಪಿತನಪಾದ ಭಜಿಸೆ ೨
ಕೋಮಲಾಂಗಿ ಸೋಮವದನೆ ಆ ಮಹಾತ್ಮ
ಶೀಲೆ ರಾಧಾ ಭಾಮೆ ತಾರಾಸೀತೆಯಂತೆ
ಶಾಮಸುಂದರನ ದಯ ಪಡೆಯೆ
ಶಿರಿಶಾಮಸುಂದರ ದಯ ಪಡೆಯೆ ನೀ ೩

 

೨೦೭
ನೆಚ್ಚದಿರು ಸಂಸಾರ ಕಾಡಗಿಚ್ಚಿನಂದದಿ
ದಹಿಸುವದತಿ ಘೋರ ಪ
ಕ್ಷುದ್ರ ಜನರ ಸಂಗತ್ಯಜಿಸೊ | ಸದಾ
ಮಧ್ವಸುಶಾಸ್ತ್ರ ಕೇಳಿ ನೀ ಗ್ರಹಿಸೊ
ಸದ್ಗುರುಗಳ ಪಾದಾಶ್ರೈಸೊ | ನೀನೆ
ಉದ್ಧಾರಕನೆಂದು ಹರಿಯನ್ನೆ ಬಯಸೊ ೧
ನಾನೆಂಬೊ ಅಹಂಕಾರಸಲ್ಲ | ನಿನ್ನ
ಮಾನಿನಿ ಸುತರು ಸಂಗಡ ಬಾಹೋರಿಲ್ಲ
ಈ ನುಡಿ ದಿಟ ಸಟಿಯಲ್ಲ | ಹೀಗೆ |
ನೀನಾಚರಿಸಲು ಒಲಿವ ಶ್ರೀನಲ್ಲ೨
ಆಶಾಕ್ರೋಧಂಗಳ ಕೀಳೊ | ಹರಿ |
ದಾಸರ ದಾಸರ ದಾಸನೆಂದ್ಹೇಳೊ ||
ದೋಷಕ್ಕೆ ಅಂಜಿ ನೀ ಬಾಳೊ | ಎಲ್ಲ |
ಈಶನಾಧೀಶವೆಂಬುದೆ ಮುಕ್ತಿ | ಕೇಳೋ ೩
ಹರಿವಾಸರುಪವಾಸ ಮಾಡೊ | ಇರುಳು
ಹರುಷದಿಂದಲಿ ಜಾಗರ ಮರಿಬ್ಯಾಡೊ
ಮರುದಿನ ನಿದ್ರೆಯ ದೂಡೊ | ಇಂತು
ಪರಿಯಲ್ಲಿ ನಡೆದರೆ ನಿನಗಿಲ್ಲ | ಕೇಡು ೪
ಇಂದ್ರಿಯಗಳ ನಿಗ್ರಹಿಸೊ | ಮನಿಗೆ |
ಬಂದ ಭೂಸುರರಿಗೆ ವಂದಿಸಿ | ಉಣಿಸೊ
ಕುಂದು ನಿಂದೆಗಳೆಲ್ಲ ಸಹಿಸೊ | ಶಾಮ
ಸುಂದರ ವಿಠಲನ್ನ ನೀ ಪೊಂದಿ ಸುಖಿಸೊ ೫

 

೧೯೩
ನೋಡಿ ಭಕ್ತಿಮಾಡಿ ಪಾಡಿರಿ ರೂಢಿಗೊಡೆಯ ದಾಸರಾ
ಕಾಡುವಾ ದುರಿತಂಗಳ ಓಡಿಸಿ ಸಲುಹುವರಾ ಪ
ನಂಬಿದೆ ಶರಣರ ಹಂಬಲ ನೀಡಲು ಸಂಭ್ರಮದಲಿ | ಇದೆ
ಸ್ತಂಭದಿ ನೆಲೆಸಿಹರಾ ೧
ಇವರ ಕವನ ಶ್ರವಣ ಮನನಗಳಿಂದ |
ಲವತೀಶವಾಗದು ಜವನ ಭವನ ಬಂಧು ೨
ಶ್ರೀಮಹೀವಲ್ಲಭ ಶಾಮಸುಂದರನ
ಪ್ರೇಮಕೆ ಪಾತ್ರಧರಾಮರ ದಾಸರಾ ೩

 

೨೦೮
ನೋಡಿದೆ ವೆಂಕಟರಮಣನ | ದ್ವಾರ
ವಾಡ ಗ್ರಾಮದಿ ನಿಂತ ದೇವನ ಪ
ರೂಢಿಪ ದಾಸರಿಗೆ ನೀಡಲು ದರುಶನ
ಗೂಢ ಪಾದಾದ್ರಿಯಿಂ ಬಂದ ಮಹಾತ್ಮನ ಅ.ಪ
ಈತನೆ ವೈಕುಂಟನಾಥನು ನಿಜ |
ಶಾತಕುಂಭೋದರ ತಾತನು
ಮಾತಂಗ ವರದಾತ ಶ್ವೇತವಾಹನ ಸೂತ
ಜಾತರಹಿತ ದನುಜಾತ ಕುಲಾಂತಕ ೧
ತೋಂಡಮಾನಗೊಲಿದಾತ | ತನ್ನ
ತೋಡ ಜನಕೆ ಸುಖದಾತನ |
ಅಂಡಜಾತ ಪ್ರಕಾಂಡ ವರೂಥ ಬ್ರ
ಹ್ಮಾಂಡನಾಯಕನಾದ ಪಾಂಡವಪಾಲನ ೨
ಇಂದು ಧರಾಮರ ವಂದ್ಯನ ಶಾಮ
ಸುಂದರ ವಿಠಲನ ಮುಕುಂದನ
ಸಂದರುಶನ ಮಾತ್ರದಿ ಹಿಂದೆ ಮಾಡಿದ ದೋಷ
ವೃಂದವೆಲ್ಲವು ಇಂದು ಬೆಂದು ಪೋದವು ಘನ ೩

 

೨೦೪
ಶ್ರೀ ಹರಿದಾಸವೃಂದ ಸ್ತೋತ್ರ
(ಕೋಲು ಪದ)
ಶ್ರೀ ಪುರಂದರದಾಸರು
ಪರಮೇಷ್ಟಿ ಪಿತನಾಜ್ಞೆ ಧರಿಸಿ ಬಂದ
ವರಸುರ ಮೌನಿಯವತಾರಿ ಕೋಲೆ |
ವರಸುರ ಮೌನಿಯವತಾರಿಯಾದ
ಪುರಂದರದಾಸರ ಬಲಗೊಂಬೆ ಕೋಲೆ ೧
ಶ್ರೀ ವಿಜಯದಾಸರು
ಪುಟ್ಟ ಬದರಿಯಲ್ಲಿ ಪುಟ್ಟಿ ಪುರಂದರ
ಶ್ರೇಷ್ಟದಾಸರ ದಯಾಪಾತ್ರ ಕೋಲೆ |
ಶ್ರೇಷ್ಟದಾಸರ ದಯಪಾತ್ರರಾದ ವಿಜಯ
ವಿಠಲದಾಸರ ಬಲಗೊಂಬೆ ಕೋಲೆ ೨
ಶ್ರೀ ಗೋಪಾಲದಾಸರು
ನಾಗಭೂಷಣಸುತ ನಾಗಾಶ್ಯವಂಶಜ
ಭಾಗವತಾಗ್ರಣಿ ಭಾಗಣ್ಣ ಕೋಲೆ |
ಭಾಗವತಾಗ್ರಣಿ ಭಾಗಣ್ಣದಾಸರಿಗೆ
ಬಾಗಿ ನಮಿಸಿ ಪ್ರಾರ್ಥಿಪೆ ಕೋಲೆ ೩
ಶ್ರೀ ಜಗನ್ನಾಥ ದಾಸರು
ಹಿಂದೆ ಪ್ರಹ್ಲಾದನ ಹಿಂದೆ ಸಂಜಾತನಾಗಿ
ಬಂದ ಸಹ್ಲಾದನಂಶಜ ಕೋಲೆ |
ಬಂದ ಸಹ್ಲಾದನಂಶದ ಮಾನವಿ
ಮಂದಿರ ದಾಸರಿಗೆ ವಂದಿಪೆ ಕೋಲೆ ೪
ಶ್ರೀ ಪ್ರಾಣೇಶದಾಸರು
ಶ್ರೀ ಗುರು ರಂಗವೊಲಿದ ಭಾಗವತರ ಛಾತ್ರ
ದಾಗಿ ಶ್ರೀ ಹರಿಯ ಬಣ್ಣಿಸಿ ಕೋಲೆ |
ಛಾತ್ರರಾಗಿ ಶ್ರೀಹರಿಯ ಬಣ್ಣಿಸಿದಂಥ ಲಿಂಗ
ಸೂಗೂರ ದಾಸರಿಗೆ ವಂದಿಪೆ ಕೋಲೆ ೫
ಶ್ರೀ ಗುರುಪ್ರಾಣೇಶದಾಸರು
ಪ್ರಾಣೇದಾಸರ ಸೂನುವೆನಿಸಿದ
ಮಾನವಿ ರಾಯರ ಸೇವಿಸಿ ಕೋಲೆ |
ಮಾನವಿ ರಾಯರ ಸೇವಿಸಿದಂಥ ಗುರು
ಪ್ರಾಣೇಶದಾಸರ ಬಲಗೊಂಬೆ ಕೋಲೆ ೬
ಶ್ರೀ ಶ್ರೀಶಪ್ರಾಣೇಶದಾಸರು
ಗಂಧದ ಕೊರಡು ಪೆಟ್ಟು ತಿಂದು ಮಾವಂದಿರಿಂದ
ಛಂದಾಗಿ ತತ್ವವರಿದಂಥ ಶ್ರೀ ರಘು |
ನಂದನ ದಾಸರಿಗೆ ವಂದಿಪೆ ಕೋಲೆ ೭
ಶ್ರೀ ಶೇಷದಾಸರು
ಇಳೆಯೊಳು ಚಿಂತರವೇಲಿ ವಾನರೇಂದ್ರನ
ಸಲೆ ಸೇವಿಸುತ ವಲಿಸಿದ ಕೋಲೆ |
ಸಲೆ ಸೇವಿಸುತ ವಲಿಸಿದ ಗುರು ಪ್ರಥಮ
ಶಿಲೆ ಶೇಷದಾಸರ ಬಲಗೊಂಬೆ ಕೋಲೆ ೮
ಪಾರ್ಥಿವ ವರ್ಷದಿ ಪಾರ್ಥಸಾರಥಿ ಭವ್ಯ
ಮೂರ್ತಿಯ ಮುದದಿ ಸ್ಥಾಪಿಸಿ ಕೋಲೆ |
ಮೂರ್ತಿಯ ಮುದದಿ ಸ್ಥಾಪಿಸಿದಂಥ
ಪೂರ್ವ ಪಾರ್ಥಾಹಿಪಾರ್ಯರ ಪ್ರಾರ್ಥಿಪೆ ಕೋಲೆ ೯
ಪರಿವಾರ ಸಹಿತ ಚರಿಸುತ ಕೋಲೆ |
ಪರಿವಾರ ಸಹಿತ ಚರಿಸುತ ಅಸಿಘ್ಯಾಳು
ಪುರವಾಸ ದಾಸರಿಗೆ ಶರಣೆಂಬೆ ಕೋಲೆ ೧೦
ಶ್ರೀ ಗುರು ಜಗನ್ನಾಥದಾಸರು
ಸ್ವಾಮಿರಾಯರ ವಲಿಸಿ ಸ್ವಾಮಿರಾಯನಿಗೊಲಿದು
ಸ್ವಾಮಿ ಶ್ರೀಹರಿಯ ಮಹಿಮೆಯ ಕೋಲೆ
ಸ್ವಾಮಿ ಹರಿಯ ಮಹಿಮೆ ಪೇಳಿದ ಕೋಸಿಗಿ
ಸ್ವಾಮಿರಾಯಾರ್ಯರ ಬಲಗೊಂಬೆ ಕೋಲೆ ೧೧
ಶ್ರೀ ಇಂದಿರೇಶದಾಸರು
(ತಿರುಪತಿ ಶ್ರೀ ಹುಚ್ಚಾಚಾರ್ಯರು)
ಅಚ್ಭ ಸದ್ಭಕ್ತಿಯಲಿ ಅಚ್ಯುತಕೃಷ್ಣನ
ಅರ್ಚಿಸಿ ವಿಧ ವಿಧ ಮೆಚ್ಚಿಸಿ ಕೋಲೆ |
ಅರ್ಚಿಸಿ ವಿಧ ವಿಧ ಮೆಚ್ಚಿಸಿದಂಥ ಜ್ಞಾನಿ
ಹುಚ್ಚಾಚಾರ್ಯರನ ಬಲಗೊಂಬೆ ಕೋಲೆ ೧೨
ಶ್ರೀ ಭೀಮಸೇನಾಚಾರ್ಯರು ಕೊಪ್ಪರ
ಶ್ರೀಮತ್ ಕಾರ್ಪರಕ್ಷೇತ್ರಧಾಮ ನರಸಿಂಹನ
ನೇಮ ಪೂರ್ವಕದಿ ಪೂಜಿಸಿ ಕೋಲೆ |
ನೇಮ ಪೂರ್ವಕದಿ ಪೂಜಿಸಿದಂಥ ಪೂಜ್ಯ
ಭೀಮಸೇನಾರ್ಯಋ ಬಲಗೊಂಬೆ ಕೋಲೆ ೧೩
ಶ್ರೀ ರಾಘಪ್ಪದಾಸರು
ಮರುತನ ಪ್ರತ್ಯಕ್ಷಗೈದು ತನ್ನ
ಗುರುತು ತೋರದೆ ಚರಿಸಿದ ಕೋಲೆ |
ಗುರುತು ತೋರದೆ ಚರಿಸಿದ ರಘುಪತಿ
ಚರಣ ಕಿಂಕರಗೆ ಶರಣೆಂಬೆ ಕೋಲೆ ೧೪
ನೂರಾರು ಶಿಷ್ಯಪರಿವಾರ ಸಹಿತರಾಗಿ
ಶೌರಿಕಥಾಮೃತ ಸವಿಯುತ ಕೋಲೆ |
ಶೌರಿಕಥಾಮೃತ ಸವಿದಂಥ ಶ್ರೀ ರಘುವೀರನ
ದಾಸರಿಗೆ ನಮಿಸುವೆ ಕೋಲೆ ೧೫
ಗೋವಿಂದದಾಸರ ಭಾವಕ್ಕೆ ಮೆಚ್ಚಿ
ದೇವನ ಮಹಿಮೆ ತೋರಿದ ರಾಘವಾಖ್ಯ
ಕೋವಿದರಾಗ್ರಣಿಯ ಬಲಗೊಂಬೆ ಕೋಲೆ ೧೬
ಶ್ರೀ ಗೋವಿಂಧದಾಸರು
ಎಳೆಯತನದಿ ವಿದ್ಯ ಕಲಿಯದೆ ಹರಿನಾಮ
ಬಲದಿಂದ ಜ್ಞಾನಿಗಳಿಸಿದ ಕೋಲೆ |
ಬಲದಿಂದ ಜ್ಞಾನಗಳಿಸಿ ಅಸಿಷ್ಯಾಳು
ನಿಲಯ ದಾಸರಿಗೆ ವಂದಿಪೆ ಕೋಲೆ ೧೭
ಮಾವನ ವೈರಿಯಾದ ಮಾವರನ ಮನದಿ
ಮಾವನನಂತೆಂದು ಭಾವಿಸಿ ಕೋಲೆ |
ಮಾವನಂತೆಂದು ಭಾವಿಸಿ ಸ್ತನಿಸಿದ
ಗೋವಿಂದದಾಸರ ಬಲಗೊಂಬೆ ಕೋಲೆ ೧೮
ಬಂದ ವಿಪ್ರರಿಗೆ ಸಂದರುಶನದಿಂದ
ವಂದಿಸಿ ಪರಮಾನಂದವ ಕೊಲೆ
ವಂದಿಸಿ ಪರಮಾನಂದವ ಬಡು ಗೋ
ವಂದಿಸಿ ದಾಸರಿಗೆ ವಂದಿಪೆ ಕೋಲೆ ೧೯
ಲೇಸು ಭಕ್ತಿಯಿಂದ ದಾಸರ ಕವನ ಸುಧೆ
ಪ್ರಾಶನಗೈದು ಸಂತತ ಕೋಲೆ |
ಪ್ರಾಶನಗೈದು ಸಂತತ ಅಶಿಷ್ಯಾಳು
ವಾಸದಾಸರಿಗೆ ಶರಣೆಂಬೆ ಕೋಲೆ ೨೦
ಹರಿವಾಸರುಪವಾಸ ಇರುಳು ಜಾಗರ ಶಿಷ್ಯ
ಶ್ರೀ ಐಕೂರಾಚಾರ್ಯರು
ಏಕಾಂತದಲಿ ಕುಳಿತು ಶ್ರೀಕಾಂತನ್ನ ವಲಿಸಿ
ಲೋಕಾಂತರದಲಿ ಚರಿಸಿದ ಕೋಲೆ |
ಲೋಕಾಂತರದಲಿ ಚರಿಸಿದ ನಮ್ಮಗುರು
ಐಕೂರಾಚಾರ್ಯರಿಗೆ ಶರಣೆಂಬೆ ಕೋಲೆ ೨೧
ಹುಟ್ಟಿದು ಒಂದೂರು ಮೆಟ್ಟಿದ್ದು ಬಹು ಊರು
ಕಟ್ಟ ಕಡೆಯಲಿ ಹರಿಯೂರು ಕೋಲೆ |
ಕಟ್ಟ ಕಡೆಯಲ್ಲಿ ಹರಿ ಊರು ಸೇರಿದಂಥ
ಶ್ರೇಷ್ಟ ಸದ್ಗುರುಗಳ ಬಲಗೊಂಬೆ ಕೋಲೆ ೨೨
ಶ್ರೀ ಮಾಧವೇಶಾಚಾರ್ಯರು
ಸಾಧಕರನ ಕರೆದು ಸಾದರದಲಿ ಮುಕ್ತಿ
ಹಾದಿ ಇದೆಂದು ಬೋಧಿಸಿದಂಥ ನಮ್ಮ
ಮಾಧವೇಶಾಚಾರ್ಯರ ಬಲಗೊಂಬೆ ಕೋಲೆ ೨೩
ಚತುರ ವಿಂಶತಿ ವರನುಡಿಗಳಿಂದೆಸೆಯುವ
ರತುನ ಹಾರದ ಕೋಲುಪದ ಕೋಲೆ |
ರತುನ ಹಾರದ ಕೋಲುತದ ನಿತ್ಯಪರಿಸುವರಿಗೆ
ಶಾಮಸುಂದರವಿಠಲ ಮುದವೀವ ಕೋಲೆ ೨೪

 

೬೨
ಪರಿಪಾಲಿಸು ದಯದಿ ನಿರುತ ದಾಸಪುರಂದರ ಗುರುವೆ
ಧರ್ಮಪಥವನು ತೋರಿ ಉದಾರಿ ಪ
ಸುರಮೌನಿಯೆ ಮುದದಿ ಹರಿನಾಮವಾ ಘನ ಬೀರುತಾ
ನಿರಯಾ ಪಾತ್ರರ ಸಲಹಿದಿನೀ ೧
ಬಾಣಾಲಕ್ಷಕೆ ಪಾದನ್ಯೂನ ಕವನ ನೀ ವಿರಚಿಸುತಾ
ವನಜನಾಭನ ಸ್ತಪಿಸಿದ ನೀ ೨
ಶಿರಿಶಾಮಸುಂದರನಾ ಚರಣಾಬ್ಜಕಾರಡಿಯಂದದಿ
ಚರಿಪ ಜ್ಞಾನಿಯೆ ನಮಿಸುವೆನು ೩

 

೪೮
ಪವಮಾನದೇವ ಪರಿಪಾಲಿಸೋ
ತವ ಪಾದವಾ ನೆರೆನಂಬಿದೆ ನಾ
ಮೂರು ಕೋಟಿರೂಪ ಮೂರು ನೇತ್ರ ನಮಿತ
ಮೂರುವತಾರಿ ಭಾರತಿ ಕಾಂತ ೧
ಕೃಷ್ಣಾಚಾರ್ಯರ ನಿಷ್ಟೆಗೊಲಿದು ಜ್ಞಾನವ
ಕೊಟ್ಟು ಸಲಹಿದ ಶ್ರೇಷ್ಠ ಮೂರುತಿಯೆ ೨
ಅಂಧಕೀವನ ಮಂದಿರಾಂಜನೇಯ
ನಂದ ಜಾತ ಶಾಮಸುಂದರಾಂಘ್ರಿಪ್ರಿಯ ೩

 

೩೩
ಪವಮಾನಸದಾ ಸಲಹೈ | ಪ್ರೇಮಾಂಬುಧಿಯೆ
ತವಪಾದವ ನಂಬಿದೆನೈ | ನೀ ಪಾಲಿಸು ದಾತ ಪ
ಹರಿಕುಲೇಶ ಸಿರಿವರನ | ಚರಣಧ್ಯಾನಗೈಯದಲೆ
ಕರುಣಸಿಂಧು ಜ್ಞಾನಪದ ಪಥಕಾಣಿ |
ಕೊನೆಗೆ ತೋರೋ ಎನಗೆ ೧
ನಾನೆಂಬೋ ಗರ್ವದಲಿ | ಶ್ರೀನಾಥನ ಪದ ಪೊಂದದೆ
ಹೀನತನದಿ ಕಾಲಕಳೆದೆ | ಮಾಣದೆ ನೋಡಿಂದಿನಾ ದಿನದಿ ೨
ಶ್ರೀ ಶಾಮಸುಂದರನ ದಾಸಾಗ್ರಣಿ | ಪವಿಸಮಾಂಗ
ಶ್ವಾಸದೊಡೆಯೆ ಕೊರವಿಯ | ಪೋಷಿಸು ಗುರು ನಾವಂದಿಪೆ ೩

 

೨೩೪
ಪಾಂಡುನಂದನರಂತೆ ತೋರುತಿಹರು
ಪಂಡಿತೋತ್ತುಮ ಸತ್ಯಧ್ಯಾನ ತೀರ್ಥರು ಪ
ನಿಜಜ್ಞಾನ ಚಿಹ್ನದಿ ವಿಜಯಾದಿ ಸುದ್ಣುಣದಿ
ದ್ವಿಜರಾಜ ಸತ್ಕುಲದಿ ಸುಜನ ಗಣದಿ |
ಕುಜನ ಗರ್ವವ ನೀಗಿ ವೃಜಿನ ವರ್ಜಿತರಾಗಿ
ಗಜವರದನಂಘ್ರಿಯುಗ ಭಜನ ತತ್ಪರರಾಗಿ ೧
ಧರಮ ಬಲ್ಲವರಾಗಿ ಗುರುಭಕ್ತಿ ಯುತರಾಗಿ
ವರ ಸುಗೀತಾರ್ಥ ತತ್ವಜ್ಞರಾಗಿ
ಧರಣಿ ಮೇಲುಳ್ಳ ಸುಕ್ಷೇತ್ರ ತತ್ತೀರ್ಥ
ಚರಿಸುತಲಿ ಕರಿತುರಗ ಪರಿಪಾಲಿಸುವರಾಗಿ ೨
ಋಷಿ ವ್ಯಾಸರುಕ್ತಿಯಲಿ ನಿಶೆಹಗಲು ಮನವಿರಿಸಿ
ವಸುಧಿ ಸುರರಿಗೆ ಸನ್ಮೋದಗೊಳಿಸಿ
ವಸುದೇವಸುತ ಶಾಮಸುಂದರನ ವಶಗೊಳಿಸಿ
ದಶ ದಿಶದಿ ಜಯಭೇರಿ ಅಸಮರೆಂಡೊಡೆಸುತಲಿ ೩

 

೧೫೫
ಪಾಲಯಮಾಂ ಸುಶೀಲೇಂದ್ರ ಸನ್ಮಹಿಮ
ಶಾಲಿ ಶ್ರೀವರದ ಕೂಲ ನಿವಾಸ ಪ
ಅನಿಲಮತಾಂಬುಧಿ | ಅನಿಮಿಷಧೀರ
ಅನುಪಮ ಚರಿತ ಸದ್ಗುಣ ಗಂಭೀರ
ಮುನಿ ಸುವೃತೀಂದ್ರ ಸನ್ಮಾನಸ ನಿಲಯ ೧
ಕರುಣ ಭರಿತ ಶರಣು ಸುಪ್ರೀತ
ಪರಮ ಪುರುಷ ಸುವೃತೀಂದ್ರ ಕುಮಾರ
ಪರಮತ ಪರ್ವತ ಕುಲಿಶ ಸುಧೀರ ೨
ಕೋವಿದರೊಡೆಯ ಪಾವನಕಾಯ
ಭೂವಿಭುದಾವಳಿ ಸೇವಿತ ಸದಯ
ಶ್ರೀವರ ಶಾಮಸುಂದರಗತಿ ಪ್ರೀಯ ೩

 

೧೩೧
ಪಾಲಿಸು ರವಿತೇಜಾ | ಮಂತ್ರಾಲಯ ಗುರುರಾಜಾ ಪ
ಶ್ರೀ ಸುಖತೀರ್ಥ ಮತಾಂಬುಧಿಗೆ ಭೇಶಾ
ಭಾಸುರ ವರ ವೃಂದಾವನ ನಿವಾಸ
ಭೂಸುರ ಸಂಸೇವಿತ ನತಜನ ಪೋಷಕ ಮುನಿವ್ಯಾಸ ೧
ತುಂಗಭದ್ರ ಸುತರಂಗಿಣಿ | ತೀರ ನಿಲಯ
ಸಂಗೀತ ಪ್ರಿಯ ಸತ್ಕವಿಜನಗೇಯ
ತುಂಗ ಮಹಿಮ ಕಮತ ದ್ವಿರದ ಸಿಂಗನೆ ಪಿಡಿಕೈಯ್ಯ ೨
ಶಾಮಸುಂದರ ಮೂಲ ಶ್ರೀರಾಮಚಂದ್ರನ ಚರಣಾ
ತಾಮರಸ ಯುಗ್ಮಂಗಳಿಗೆ ಷಟ್ ಚರಣ
ಕಾಮಿತ ಶುಭದಾಯಕ ನಿನ್ಸೀಮ ಕರುಣ ಭರಣ ೩

 

೫೬
ಪಾಲಿಸೆನ್ನ ಮಾತೆ ಕರುಣದಿ
ಪಾಲಾಂಬುಧಿ ಜಾತೆ ಪ
ಕಾಲಕಾಲಕೆ ಕಮಲಾಲಯೆ ಗೋಪಿಯ
ಬಾಲನಾಳುಗಳ ಊಳಿಗವಿತ್ತು ಅ.ಪ
ಜಾನಕಿಶುಭಗಾತ್ರೆ ನಮಿಸುವೆ |
ಮಾನಿತೆ ಚರಿತ್ರೆ
ಸಾನುರಾಗದಿ ತವ ಸೂನುವೆನಿಪ ಪವ
ಮಾನಸುಶಾಸ್ತ್ರದ ಜ್ಞಾನವಿತ್ತು ಸದಾ ೧
ಶಂಭು ದೃಹಿಣಿ ವಿನುತೆ ತ್ರೈಜಗ
ದಂಬೆ ಸುಗುಣ ಭರಿತೆ |
ಕುಂಭಿಣಿ ಸುತೆ ದುರ್ಗಾಂಭ್ರಣಿ ಮಮಹೃದ
ಯಾಂಬುಜದೊಳಿಹ ಬಿಂಬನ ತೋರಿ ೨
ಪ್ರೇಮದಿಂದ ನೋಡೆ ಮನ್ಮನ |
ಧಾಮದಿ ನಲಿದಾಡಿ |
ಕಾಮಿನಿಮಣೀ ಗಜಗಾಮಿನಿ ಗೋಮಿನಿ
ಶಾಮಸುಂದರನ ವಾಮಾಂಗಿಯೆ ಸದಾ ೩

 

೩೧
ಪಾಲಿಸೆನ್ನನು ನಿರುತ ಪವನರಾಯ |
ಫಾಲಲೋಚನ ನಮಿತ ಪಾವನ್ನಕಾಯ ಪ
ಅಭಿನಮಿಸಿ ಭಜಿಪರಿಗೆ ಉಭಯ ಕಷ್ಟವ ಕಳೆದಿ |
ಶುಭವಿಭವನೆಗರಿದು ಪೊರಿಯುವಲ್ಲಿ |
ಪ್ರಭುವನಧಿ ನಿನ್ನಂಥ ಪ್ರಬಲ ಪ್ರಭುಗಳ ಕಾಣಿ
ವಿಬುಧ ಸನ್ನುತ ಮಹಿಮ ಅಭಿಗಾರಪುರವಾಸ ೧
ನಿನ್ನನೆ ನೆರೆನಂಬಿ ನಿನ್ನನೆ ಧ್ಯಾನಿಸುತ ನಿನ್ನ
ಸನ್ನಿಧಿಯಲ್ಲಿ ನೆಲೆಸಿಪ್ಪೆ ನಾ | ಬಿನ್ನಪವ ಲಾಲಿಸಿ
ಬನ್ನಗಳ ಪರಿಹರಿಸಿ ನಿನ್ನೊಡೆಯನಂಘ್ರಿಯಲಿ
ಘನ್ನ ಭಕುತಿಯ ಕೊಟ್ಟು ೨
ಭೂಮಿಜಾತೆಯ ರಮಣ ಶಾಮಸುಂದರ | ಬದರಿ
ಧಾಮ ಮೂರುತಿತ್ರಯ ಪ್ರೇಮ ಪಾತ್ರ |
ಕಾಮಿತಪ್ರದ ಹನುಮ ಭೀಮ ಗುರುಸುಖತೀರ್ಥ
ಯಾಮ ಯಾಮಕೆ ಹರಿಯ ನಾಮ ಜಿಂಹ್ವೆಯೊಳಿಟ್ಟು ೩

 

೧೨
ಪಾಲಿಸೆನ್ನನು ಪಂಪಾಕ್ಷೇತ್ರವಾಸ
ಫಾಲಲೋಚನ ಶಂಭೋ ವ್ಯೋಮಕೇಶ ಪ
ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ
ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ ||
ವ್ಯಾಳಮಾಲನೆ ನೀನು | ಕಾಲ ಕೂಟವ ಮೆದ್ದು
ತಾಳಲಾರದೆ ಕೊಂಡ ಮೇತೌಷಧವನಿತ್ತು ೧
ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು
ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ
ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ
ವೇದನಂದನ ನಿನ್ನ ಪಾದಕ್ಕೆ ನಮಿಸುವೆನು ೨
ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ
ಶಾಮಸುಂದರವಿಠಲ ಸ್ವಾಮಿ ಮಿತ್ರ
ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ
ಹೈಮಾವತಿ ಕಳತ್ರ | ಮಹಿಮ ಚಿತ್ರಾ ೩

 

೧೬೭
ಪಾಲಿಸೈ ಗೋಪಾಲರಾಯಾ ಶೀಲ ಭಕುತಿ ಜ್ಞಾನವ
ನಿತ್ಯ ಸಲಿಸುತ ಪ್ರಸನ್ನನಾಗಿ ಪ
ಓಡಿಸಿ ವಿಷ್ಣುವ ನೀಡು ವೈರಾಗ್ಯವ
ಬೇಡುವೆ ನಾ ಕೃಪೆ ಮಾಡಿ ಗತಿ ೧
ಆರ್ತರಭೀಷ್ಟೆಯ ಪೂರ್ತಿಪದಾನಿ
ಪ್ರಾರ್ಥಿಸುವೆ ಶುಭ ಮೂರ್ತಿಸದಾ ೨
ಶಾಮಸುಂದರ ಸ್ವಾಮಿಯ ನಿಜ ದಾಸ
ಮೌನಿಯ ಘನ ಪ್ರೇಮಾನಿಸ್ವಿತಾ ೩

 

೧೪
ಪಾಲಿಸೋ ಸದಾ ಪರಿಪಾಲಿಸೋ
ಪಾಲಿಸೋ ಪಾರ್ವತಿ ರಮಣ | ತ್ರಿದ
ಶಾಲಯ ಪತಿಸುತ ಚರಣ ಆಹಾ
ನಾಲಿಗೆಯಿಂದಲಿ | ಶ್ರೀಲಕುಮೀಶನ
ಲೀಲೆ ಪಾಡುವ ಸುಖ ಕಾಲ ಕಾಲಕ್ಕೆ ಕೊಟ್ಟು ಅ.ಪ
ಭೇಷಪಾವಕ ಪತಂಗ | ನಯನ
ಭಾಸುರ ಸ್ಪಟಿಕ ನಿಭಾಂಗ | ಹರಿ
ದಾಸ ಜನರ ಸುಸಂಗವಿತ್ತು
ದೋಷ ಕಳೆಯೊ ರಾಮಲಿಂಗ ಆಹಾ ೧
ಕೇರ ಕುಮಾರ ಕುಮಾರ | ಪಿತ
ಕೀರನಾಮಕನವತಾರ |ಕೀರಾ
ದೇವನ ಗರ್ವಪರಿಹಾರ | ತಾಟ
ಕಾರಿನಾಮ ಸವಿಗಾರ | ಆಹಾ
ಕಾರುಣ್ಯ ಶರಧಿ ವೈಕಾರಿಕÀ | ತತ್ವಾಧಿ
ಕಾರಿ ವಿಕಾರಿ ಷಕಾರ ಪದಾರ್ಚಕ ೨
ನಂದಿವಾಹನ ನಾಗಶರನೆ | ನೀಲ
ಕಂಧರ ಸುರನದಿ ಧರನೆ | ಶಾಮ
ಸುಂದರ ವಿಠಲನ ಸಖನೆ ಮಹಿ
ಶ್ಯಂದನ ಶಿವಶಂಕರನೆ | ಆಹಾ
ಒಂದೂರಾರ್ಯರ ಕರದಿಂದ ಪೂಜಿತನಾಗಿ
ನಿಂದು ಭಜಿಪರಿಗಾನಂದವೀವ ದೇವ ೩

 

೫೫
ಪೂಜೆಗೈಯಲು ಬಾ ಸಖಿ ಸುಮುಖಿ
ರಾಜಾಸಹೋದರಿಗೆ | ರಾಜೀವಾಂಬಕಿ
ಪೂಜೆಗೈಯಲು ಬಾ ಸಖಿ ಸುಮುಖಿ ಪ
ಕುಂಕುಮ ಅರಿಷಿಣ ಮೃಗ ಮುದದಿ
ಮುದದಿ ಶಕ್ರಂದನವಂದಿತ ಶ್ರೀಪಂಕಜಾಕ್ಷಿಗೆ ೧
ಗಂಧಗರು ಕುಸುಮಾಕ್ಷತೆಯಿಂದಾ |
ಛಂದ ಮಂದಗಾಮಿಗತಿ ಭಕ್ತಿಲೆ ಸಿಂಧು ಜಾತೆಗೆ ೨
ಶಾಮಸುಂದರನ ರಾಣಿಗೆ | ಹರಿಗೆ | ಭೂಮಿಜಾವರಗೆ |
ಭೂಮಿಜಾತೆಗೆ ಜವದಲಿ ವಾಮಲೋಚನೆ ೩

 

೨೦೧
ಪೊಂದಿ ಭಜಿಸೊ ನಿರುತ
ಮಾನವ ಮಹಿವೃಂದಾರಕವ್ರಾತ ಪ
ವಂದಿತ ಶ್ರೀ ಸುಯಮೀಂದ್ರರ ಹೃದಯಾರ
ವಿಂದ ಭಾಷ್ಕರ ಸುವೃತೀಂದ್ರ ಪದಮುಗ ಅ.ಪ
ಧರೆಯೊಳು ದ್ವಿಜನಿಕರ ಉದ್ಧರಿಸಲು
ಗುರುವರ ಸುಶೀಲೇಂದ್ರರ
ಕರದಿ ತುರಿಯಾಶ್ರಮ ಧರಿಸುತ ಶ್ರೀಮೂಲ
ತರಣಿ ಕುಲೇಂದ್ರನ ಚರಣವ ಪೂಜಿಸಿ
ಮರುತ ಶಾಸ್ತ್ರವ ಭಕ್ತಿ ಪೂರ್ವಕ
ನಿರುತ ಪ್ರವಚನ ಗೈದು ಶಿಷ್ಯರಿ
ಗೊರೆದು ಕರುಣದಿ ಪೊರೆದ ಪಾವನ
ಚರಿತರಡಿದಾವರೆಗಳ್ಹರುಷದಿ ೧
ಸತಿಭಕ್ತಿ ಸುವಿರಕತಿ ಶಾಂತಾದಿ
ಹಲವು ಸದ್ಗುಣ ಪ್ರತತಿ
ಕಲಿಯಾಳಿಕೆಯೊಳು ಸ್ಥಳವಕಾಣದೆ ವಿಧಿ
ಬಳಿಗೆ ಬಿನ್ನೈಸಲು ನಳಿನಜ ಯೋಚಿಸಿ
ಇಳೆಯೊಳಗೆ ಸುವೃತೀಂದ್ರ ತೀರ್ಥರ
ಚಲುವ ಹೃದಯ ಸ್ಥಾನ ತೋರಲು
ಬಳಿಕ ಸುಗುಣಾವಳಿಗಳಿವರೊಳು
ನೆಲಸಿದವು ಇಂಥ ಅಲಘು ಮಹಿಮರ ೨
ಸಿರಿಯಾಸ್ಯ ಸಂವತ್ಸರದಿ ಸುವೈಶಾಖ
ವರಮಾನ ಶಿತಪಕ್ಷದಿ
ಹರಿದಿನದಲಿ ದಿವ್ಯ ಮೂರನೆಯಾಮದಿ
ವರ ಮಂತ್ರ ಮಂದಿರ ಪರಮ ಸುಕ್ಷೆತ್ರದಿ
ಸಿರಿಮನೋಹರ ಶಾಮಸುಂದರ ೩

 

೯೫
ಪೊಂದಿದ ಭಕುತರ ತ್ವರದಿ ಪೊರೆಯುವವನಿಗೆ |
ನಂದಕಂದ ವಂದಿಸಿ ಕರುಣದಿ ||
ಇಂದು ಮುಖಿಯರು ಶಿಂಧುಶಯನಾಗೆ |
ಮಂದಿರದೊಳಗೆ ಆನಂದದಿಂದ ಶ್ರೀ ||
ಶಾಮಸುಂದರಗೆ | ಘನ ಮೋದದಿಂದ |
ಜಯ ಮಂಗಳವೆಂದು ಪಾಡಿರೆ ||

 

೧೯೨
ಪೊಗಳು ಮನವೆ ನೀ ಯುಗಯುಗದಲಿ ಘನ
ಸೊಗಸಿಲಿಂದ ಗುರು ಜಗನ್ನಾಥರಾಯರ ಪ
ಪುಲ್ಲಜಾಂಡದಿ ಸಿರಿವಲ್ಲಭನ ಪದ
ಪಲ್ಲವ ಪೂಜಿಸಿದ ಸಹ್ಲಾದರಾಯರ ೧
ಮಾನವಿಕ್ಷೇತ್ರದಿ ಧೇನಿಪ ಸುಜನರ
ಮಾಣದೆ ಕಾಯುವ ಮಹಾನುಭಾವರ ಸದಾ ೨
ಧರಿವರ ಶಾಮಸುಂದರ ಚರಿತಾಮೃತ
ಸರಸ ಸುಗ್ರಂಥವ ವಿರಚಿಸಿದೋಡೆಯರ ೩

 

೨೯
ಪೋತನ ಪಾಲಿಸೋಪವಮಾನಾ | ಈ
ಭೂತಳದೊಳು ನಿನ್ನ ಖ್ಯಾತಿ ಘುನಾ
ಒದಗಿನ ವ್ಯಾಧಿಯ ಪರಿಹರಿಸೊ ನಿನ್ನ
ಪದರಿಗೆ ಬಿದ್ದವನೆಂದು ಗ್ರಹಿಸೋ ೧
ತಾಯಿಯು ಇಲ್ಲದ ಬಾಲಕನು | ಇವನ
ಕಾಯಲು ನೀ ದಯಾ ಸಾಗರನು ೨
ಶ್ವಾಸದೊಡಿಯ ನೀನೆಂತೆಂದು | ಶೃತಿ
ಘೋಷಿಸುವದು ಆನತ ಬಂಧು೩
ಶಿಶುವಿಗೊಲಿದು ನೀ ಸಲಹಿದರೆ | ದೇವ
ಅಸುನಾಯಕನೆಂಬ ಬಿರುದು ಖರೆ ೪
ಗ್ರಾಮ ಬಲ್ಲಿಟಗಿ ಕೃತವಾಸ | ಶಿರಿಶಾಮಸುಂದರನ ಪ್ರಿಯದಾಸ ೫

 

೨೪೦
ಪೋದರಯ್ಯ ತೆರಳಿ ಪೋದರು | ಸಾಧುನರಸಿಂಹಾರ್ಯರು
ಮಾಧವನ ಮಂದಿರಕೆ ಪ
ಶ್ರೀಕರ ಕೃಷ್ಣಾತಟದಿ
ಐಕೂರು ಗ್ರಾಮದಿ ನೆಲೆಸಿ | ಏಕೋ ಭಾವದಿಂ
ಸದಾ ಶ್ರೀಕಾಂತನ್ನ ಧ್ಯಾನಂಗತರು ೧
ಭಾರತ ಭಾಗವತ ಸಾರೋದ್ಧಾರ ಸತ್‍ಶಿಷ್ಯರಿಗೆ
ಸಾರುತ ಸದ್ಭಕ್ತಿಜ್ಞಾನ | ವೈರಾಗ್ಯಮಾರ್ಗವ ತೋರಿ ೨
ಮಧ್ವಮತದಿ ಸಿದ್ಧಾಂತ ಪದ್ಧತಿಯನುಸರಿಸಿ |
ಸದ್ಧರ್ಮದಿ ನಡೆಸುವ ಪ್ರಸಿದ್ಧ ವಿದ್ವಾಂಸರು ೩
ವ್ಯಾಸದಾಸಕೂಟ ಮರ್ಮಲೇಸಾಗಿ ಸಜ್ಜನ ತತಿಗೆ
ಬ್ಯಾಸರಿಲ್ಲದಲೆ ಪ್ರತಿವಾಸರುಪದೇಶಿಸುವರು ೪
ನಿತ್ಯಗೈವ ಕೃತ್ಯಂಗಳು | ತತ್ವೇಶ್ವರ ದ್ವಾರಾ ಹರಿಗೆ
ಚಿತ್ತಪೂರ್ವಕರ್ಪಿಸುವ ಸೋತ್ತುಮರೋತ್ತುಮರು ಲೋಕಕೆ ೫
ಅಂತರಂಗದಲ್ಲಿ ಲಯದ ಚಿಂತನೆಯಗೈದು ಮುಕ್ತಿ
ಪಂಥವನ್ನೆ ಪಿಡಿದು | ಜ್ಞಾನ ಸಂತತಿಯ ಜಗದಿ ನೆಲೆಸಿ ೬
ಯಾವ ಸಂಶಯವ್ಯಾಕೆ ಕೋವಿದವರ್ಯರಾದ |
ಭಾವಜ್ಷರ ಮುಖದಿಂದ ದೇವಾಂಶರೆನಿಸಿಕೊಂಡವರು ೭
ವ್ಯಯ ಸಂವತ್ಸರಂತ್ಯಮಾಸ | ದ್ವಯತಿಥಿ ಸಿತವರ್ಷ
ಹಯಸಪ್ರಸುತನ ವಾರದಿ ತ್ರಯ ಝಾವ ರಜನಿಯಲ್ಲಿ ೮
ಆಸನಸ್ಥರರಾಗಿ ನಾಸಿಕಾಗ್ರದಲಿಟ್ಟು ಶ್ವಾಸಮಂತ್ರ ಜ
ಪಿಸಿ ಬಿಂಬೋಪಾಸನಗೈವ ಬುಧರು ೯
ಸಾಗರಶಯನನ ಧ್ಯಾನ ಯೋಗ ಬಲದಿ ತಿಳಿದು ಭುವಿ
ಭೋಗ ತೀರಿತೆಂದು ಕೊಯಿಲು ತಾಗಿದ್ದೊಂದೆ ನೆವನದಿಂದ ೧೦
ಆಶೆಕ್ರೋಧಂಗಳನಳಿದು | ಕ್ಲೇಶಮೋದ ಸಮ ತಿಳಿದು |
ಭೂಸುರ ವೃಂದಕೆ ಸುಗ್ರಾಸವಿತ್ತು ತೋಷಿಸುವರು ೧೧
ಹರಿಯಪುರಕೆ ಪೋಪ ಸಮಯ ಹರಿಸು ಬಂದು ಕೃಪ್ಣೆ ಇವರ
ಹರುಷದಿಂದ ಸೋಂಕಿದಂಥ ಚರಿಯ ನರೆÉದ ಜನಕೆ ತೋರಿ ೧೨
ಸ್ವಾಮಿಶಾಮಸುಂದರನ | ನಾಮದ ಸನ್ಮಹಿಮ ಸತತ |
ಪಾಮರ ಜನಕೆ ಪೇಳಿ ಪ್ರೇಮದಿಂ ಸಲಹಿದವರು ೧೩

 

೨೩೫
ಪೋಷಿಸು ಎನ್ನಯ ದೋಷಗಳೆಣಿಸದೆ ದಾಸರಾಯ
ಶೇಷನಾಮಕನೆ ವಿಶೇಷ ಜ್ಞಾನವ ನೀಡೋ ದಾಸರಾಯ ಪ
ಸಂತತ ಕರಪಿಡಿ ಸಂತರೊಡೆಯ ಗುರು ದಾಸರಾಯ
ಸಂತೋಷ ತೀರ್ಥರಂತಃ ಕರಣ ಪಾತ್ರ ದಾಸರಾಯ ೧
ಚಿಂತಿಪ ಜನರಿಗೆ ಚಿಂತಾಮಣಿತಯ ನೀನೆ ದಾಸರಾಯ
ಚಿಂತಿರಹಿತವರ ಚಿಂತಾಮಣಿಯು ನೀನೆ ದಾಸರಾಯ ೨
ಚಿಂತ ರಹಿತವರ ಚಿಂತರವೇಲಿವಾಸ ದಾಸರಾಯ
ಕುಂಭಿಣಿ ದೇವ ಕದಂಬ ಸಂಕೇಶ ವಿನುತ ದಾಸರಾಯ ೩
ಬೆಂಬಿಡದಲೆ ಮನದ್ಹಂಬಲ ಪೂರೈಸು ದಾಸರಾಯ
ನಂಬಿದ ದ್ವಿಜರಿಗೆ | ಶಂಭುಗಿರಿಯಲ್ಲಿ ದಾಸರಾಯ ೪
ಬಾಂಬೊಳೆ ತೋರಿಸಿ ಸಂಭ್ರಮಗೊಳಿಸಿದ ದಾಸರಾಯ
ಹರಿಕೇತು ಹರಿಸುತ ಹರಿಣಾಂಕ ಕುಲಜಾತ ದಾಸರಾಯ ೫
ಹರಿಕೇತು ಹರಿಸುತಾದ್ಯರನ ಸಂಹರಿಸಿದ ದಾಸರಾಯ
ಹರಿದಾಡುತಿಹ ಮನ | ಹರಿಯಲ್ಲಿ ನಿಲಿಸಯ್ಯದಾಸರಾಯ ೬
ಹರಿವೈರಿ ಮತಕರಿ | ಪರಿಪರಿ ಹರಿಸಘು ದಾಸರಾಯ
ಪೂರ್ತಿಸುವ ನಿನ್ನ ವಾರ್ತೆಕೇಳಿ ಬಂದೆ ದಾಸರಾಯ ೭
ಪಾರ್ಥಿವ ವರುಷದಿ
ಪಾರ್ಥಸಾರಥಿ ಭವ್ಯದಾಸರಾಯ
ಮೂರ್ತಿಯ ಸ್ಥಾಪಿಸಿ ಕೀರ್ತಿಯ ಪಡೆದ ದಾಸರಾಯ ೮
ನೇಮನಿಷ್ಟೆಯ ಬಿಟ್ಟು ಪಾಮರನಾದೆನಗೆ ದಾಸರಾಯ
ಶ್ರೀಮಧ್ವನಿಗಮಾರ್ಥ | ಪ್ರೇಮದಿ ತಿಳಿಸಯ್ಯ ದಾಸರಾಯ ೯
ಕಾಮಾದಿ ಷಡ್ವೈರಿ | ಸ್ತೋಮಾದಿ ಕುಲಿಶನೆ ದಾಸರಾಯ
ಕಾಮಿತ ಫಲದಾಯಕ ಶಾಮಸುಂದರ ದೂತ ದಾಸರಾಯ ೧೦

 

ದಾಸವೃಂದ
೨೩೨
ಪೋಷಿಸೆನ್ನ ಜೀಯ ಶ್ರೀ ಪ್ರಾಣೇಶದಾಸರಾಯ ಪ
ಭೂಸುರ ಸೇವಿತ | ಭಾಸುರ ಮಹಿಮ ಉ
ದಾಶೀನ ಮಾಡದೆ | ದೋಷಗಳೆಣಿಸದೆ ಅ.ಪ
ಪದುಮಸಂಭವ ಕುಲದಿ ಜನಿಸುತ
ವಿದುರಾಗ್ರಜ ಜಗದಿ | ಯದುಪತಿ ಸುಕಥೆಯ
ವಿಧ ವಿಧದಿ ಬೋಧಿಸಿ
ಮದಡರುದ್ಧರಿಸಿದ | ಸದಮಲ ಹೃದಯ ೧
ನತಜನ ಸುರತರುವೆನಿನ್ನನು
ತುತಿಸಿಲೆನಗೊಶವೆ |
ಸತತದಿ ಸೇವಿಸಿ | ಯತಿ ವರದೇಂದ್ರರ
ಹಿತದಲಿ ಪಡೆದ ಪ್ರತಿ ಪ್ರಭಾಕರ ೨
ತರತಮ ಭೇದವನು | ಶ್ರೀವರ
ಹರಿದಿನ ಮಹಿಮೆಯನು
ಸರಳಕನ್ನಡದಿ ವಿರಚಿಸಿ ಕವನವ
ನೊರೆದು ಸಜ್ಜನರ ಪೊರೆವ ಮಹಾತ್ಮಾ ೩
ವಾತಜಾತ ಸುಮತ ಸಾಗರ
ಶೀತಕಿರಣ ನಿರುತ
ಪೋತನೊಳೀತರ | ಯಾತಕೆ ನಿರ್ದಯ
ನೀತವಕದಿ ಸಂಪ್ರೀತಿಯಿಂದೊಲಿದು ೪
ಪ್ರೇಮದಿ ಪಿಡಿಕೈಯ | ಮಾನವಿ
ಧಾಮರ ಸುವಿಧೇನು
ಶಾಮಸುಂದರೆನ | ನಾಮನೆನೆವ ಸುಖ
ಯಾಮ ಯಾಮಕೀಪಾಮರಗೀಯುತ ೫

 

೧೯೬
ಪೋಷಿಸೆನ್ನ ದಾಸಶ್ರೇಷ್ಠನೆ ವಸುಧಿದೇವ ನಿಕರಪಾಲ
ವ್ಯಾಸರಾಯನ ಪ್ರೇಮಪಾತ್ರನೆ ಪ
ವೇದಸಾರವಾದ ಕವನಗೈದು ಪ್ರಾಕೃತದಿ ಜಗದಿ
ಭೇದಜ್ಷಾನ ತಾರತಮ್ಯ ಬೋಧಿಸಿದ ಸಾಧುಶೀಲ ೧
ಜ್ಞಾನಿ ವೀಣಾಪಾಣೆ ದೇವ ಮೌನಿ ದಾನಿ | ಸ
ನ್ಮಾನಿ ಗಾನಲೋಲ ದೀನಪಾಲನ ೨
ನಂದಗೋಪಕಂದ ಶಾಮಸುಂದರವಿಠಲಗೆ ಪರಮ
ಯೆಂದು ಸಾರಿ ಸುಪಥ ತೋರಿ ಮಂದÀರನ್ನು ಪೊರೆದ ೩

 

ಶ್ರೀ ಶೇಷದೇವರು
೧೮
ಪೋಷಿಸೆನ್ನನು ನಿರುತ ಶೇಷದೇವ
ದೋಷ ನಾಶನಗೊಳಿಸಿ ಲೇಸಾಗಿ ಪಿಡಿಕರವ ಪ
ವನಧಿ ಶಯನಗೆ ತಲ್ಪ | ಅನುಜ ಪೂರ್ವಜನಾ
ಘನಸೇವೆಯನು ಗೈದು | ಫಣಿರಾಜನೆ
ವಿನಯದಲಿ ಬಿನ್ನೈಪೆ | ನಿನಗಶನವಾದಾತ
ಎನಗೊಲಿದು ಪೊರೆವಂತೆ | ಅನುಗ್ರಹಿಸಿ ಅನುದಿನ ೧
ಭೂಗಗನ ಪಾತಾಳ | ಸಾಗರವ ವ್ಯಾಪಿಸಿದ
ಯೋಗ ಸಾಧನ ಶೂರ | ನಾಗನಾಥ
ಬಾಗಿಬೇಡುವೆ ಭವದ ರೋಗಕೌಷಧವಾದ
ಭಾಗವತ ಶ್ರವಣ ಸುಖರಾಗದಲಿ ನೀಕೊಟ್ಟು ೨
ಸಾನಿಸಿರಾಂಬಕ ನಮಿತ | ಸಾಸಿರಾನನನಾದ
ವಾಸುಕೀವರ | ವಾರುಣೀಶ ನಿನ್ನ ||
ಹಾಸಿಗೆಯಗೈದಂಥ ಶ್ರೀ ಶಾಮಸುಂದರನ
ದಾಸರಾದವರ ಸಹವಾಸ | ಪಾಲಿಸಿ ನಿತ್ಯ ೩

 

೩೨
ಪ್ರಥಮಾಂಗ | ಪ್ರಥಮಾಂಗ
ಪೃಥ್ವಿಸುರಾರ್ಚಿತ | ಅತುಳ ಮಹಿಮ ಗುರು ಪ
ದಶವರೂಢನ ಕುಶಲವ ತ್ವರಿತದಿ
ವಸುಧಿಜೆಗರುಹಿದ | ಅಸಮಚರಿತ ಗುರು ೧
ಕುಂಜರ ಪುರಪತಿ | ಭಂಧನ ಭಾವಿ
ಕಂಜಜ ಕಾಯೊ ಮೃತ್ಯುಂಜಯವಂದಿತ ೨
ಅಧಮಾದ್ವೈತರ | ಮದವಳಿಯಲು ನಡು
ಸದನನ ಸುದತಿಯ | ಉದರೊಳುದಿಸಿದ ೩
ಬಕಕೀಚಕ ಖಳ | ನಿಕರ ತರಿದ ಪಾ |
ವಕ ಸಖ ವೃಕೋಪದರ | ಸುಖ ತೀರ್ಥರಗುರು ೪
ಹೇಮೋದರಪಿತ | ಶಾಮಸುಂದರನ ಪ್ರೀತ
ಪ್ರೇಮದ ಸುತ | ಸುತ್ರಾಮನಮಿತ ಗುರು ೫

 

೨೩೩
ಪ್ರಭುರಾಯ ಪ್ರಭುರಾಯ
ಅಭಿನಂದಿಸುವೆನು | ಶುಭಮತಿ ಪಾಲಿಸು ಪ
ಶ್ರೀಶಗುರಪ್ರಾಣೇಶದಾಸರಿಂದ
ಪೋಷಿತನಾದ ಭೂಸುರ ಪ್ರೀಯ ೧
ಭಾವÀಭಕ್ತಿಲಿ ಸೇವಿಸಿ ಸಂತಸ
ಶ್ರೀವರದೇಂದ್ರರ | ನೀಮೊಲಿದಘನ ೨
ಕೋಶಿಗಿ ಗುರು ಉಪದೇಶದಿಂದ ವರ
ದೇಶವಿಠಲನ ದಾಸನೆಂದೆನಿಸಿದ ೩
ಕಪ್ಪುಗೊರಳನುತ | ಕುಪ್ಪಿಯ ಭೀಮನ
ತಪ್ಪು ಕ್ಷಮಿಸೆಂದು | ತಪ್ಪದೆ ಸ್ತವಿಸಿದ ೪
ಅನ್ಯನಲ್ಲನಾ ನಿನ್ನಾಪ್ತನು ನಿಜ
ವೆನ್ನುತ ಬಿನ್ನಪ ಮನ್ನಿಸಿ ನೋಡೋ ೫
ರಾಮಸ್ತವನವನು ನೇಮದಿಗೈಯುವ
ಕೋಮಲಾಂಗದ ಹೇಮಮ ಬಂಧು ೬
ನಂದಜ ಶಾಮಸುಂದರವಿಠಲನ
ಪೊಂದಿದವರ ಪದ ಮಂದಜ ಮಧುಪ ೭

 

೨೫೪
ಧ್ರುವತಾಳ
ಬಂದೆನ್ನ ಕಾಯೊ ಕರುಣದಿಂದ ಕೈಪಿಡಿದು
ದೀನ ಬಂಧುವೆ | ಒಂದೂರು ಮಂದಿರಾರ್ಯ | ಸಂದೇಹವ್ಯಾಕೆ
ನಿನ್ನ ಪೊಂದಿದ ಸತ್ಯಶಿಷ್ಯವೃಂದದೊಳಗೆ ನಾ ಕಡೆಯವನೋ
ತಂದೆ ನೀನಗಲಿದಕೆ ನೊಂದೆನೊ ನಾ ಭವ
ಬಂಧದೊಳಗೆ ಬಿದ್ದು ಬಹುವಿಧದಿ
ಬಂಧುರ ಮಹಿಮನೆ | ನಿನ್ಹೊರತು
ನಮಗಿನ್ನು ಹಿಂದು ಮುಂದು
ಯಾರು ಗತಿಯಿಲ್ಲವೋ | ಕಂದನ ಕುಂದುಗಳ
ಮನಕೆ ನೀ ತಾರದಲೆ
ಕಣ್ಣೆರೆದು ಈಕ್ಷಿಸಿ ಎನ್ನೊಳಿದ್ದ | ಮಂದಮತಿಯ ಬಿಡಿಸಿ
ಮಧ್ವಶಾಸ್ತ್ರವ ತಿಳಿಸೋ | ಮಂದರಕುಜ ಭಕ್ತಸಂದೋಹಕೆ |
ಹಿಂದೆ ವರದಾತನೆಂದೆನಿಸಿದ ಕರ್ಮಂದಿಗಳರಸರ ಕ್ಷೇತ್ರದಲ್ಲಿ |
ಬಂದ ಸಮಯವೆನ್ನ ಬಿನ್ನಪ ಚಿತ್ತಕೆ | ತಂದು ತವಕದಿಂದ
ಭೂಸುರರ ಸಂದಣಿಯಲ್ಲಿ ನಿನ್ನ ಮಹಿಮೆ ಪ್ರಕಟಿಸಿ
ಇಂದುವಿನಂತೆ ಪೊಳೆದು ಮೆರೆದ ಕರುಣೀ
ಅಂದಿನಾರಭ್ಯ ನೀನೆ ಸ್ವರೂಪೋದ್ಧಾರಕರ್ತನೆಂದು
ದೃಢನಾಗಿ ನಂಬಿ ತ್ವತ್ವಾದಕೆ ವಂದಿಸಿ ಮೊರೆ ಇಡೆ
ಸಂಶಯ ಬಿಡು ಇನ್ನು ಇಂದು ನೀನು ನಮ್ಮ ಛಾತ್ರಮಾಲೆಯಲ್ಲಿ
ಸಂದವನೆಂದು ಮನದಿ ಭಾವಿಸಿದೆವು | ಎನುತ ಛಂದದಿ
ನೀನಭಯವಚವಿತ್ತೆ ಸಿಂಧು ಪೋಲುವ ಕರುಣಿ
ಸುಜ್ಞಾನ ಸದ್ಭಕ್ತಿ ಕುಂದದ ವೈರಾಗ್ಯ ಭಾಗ್ಯವ ಕೊಟ್ಟು
ದ್ವಂದೈಕ ಧಾಮ ಶಾಮಸುಂದರವಿಠಲನ ಒಂದೇ ಮನದಿ
ಭಜಿಪಾನಂದ ಭಾಗ್ಯವ ನೀಡೋ ೧
ಮಟ್ಟತಾಳ
ಅನುಪಮಸುಚರಿತ್ರ | ಅನುದಿನದಲಿ ಎನ್ನ
ಅಣುಗನೆಂದರಿತೊಂದು ಕ್ಷಣವಗಲದೆ ಇದ್ದು
ಬಿನುಗು ಬುದ್ಧಿಯ ಕಳದು | ಧನದಾಶೆಯ ಕಡಿದು
ಮನದ ಚಂಚಲ ಬಿಡಿಸಿ | ಹನುಮ ಭೀಮಾನಂದ
ಮುನಿಕೃತ ಪಾದವನಜ ಸೇವಿಪುದಕೆ
ತನುವಿಗೆ ಬಲವಿತ್ತು ದಿನದಿನದಲಿ
ನೆನೆಯುವ ಸಂಪದ ಗುಣನಿಧಿಯನುಗ್ರಹಿಸೋ ೨
ತ್ರಿವಿಡತಾಳ
ವಿಧಿ ಭವ ಮೊದಲಾದ ಬುಧರು ಹರಿಯಾಜ್ಞೆಯಲಿ
ಮದಡಾರುದ್ಧರಿಸಲು ಜಗದಿ ಬಂದು | ಸುಧೆಯಂತೆ ಸವಿಯಾದ
ಮಧುರ ಕನ್ನಡದಲ್ಲಿ | ಮುದದಿ ರಚಿಸಿದಂಥ | ಪದಸುಳಾದಿಗಳಲ್ಲಿ
ಹುದುಗಿದ ವೇದಾರ್ಥ ತ್ವತ್ವಾದಾಶ್ರಿತರಿಗೆ | ವಿಧ ವಿಧದಿಂದಲಿ
ಬೋಧಿಸುತಾ | ವದಗಿದ ಅಜ್ಞಾನ ಸದೆದು ಸುಮತಿ ಕೊಟ್ಟು
ಸದಾಚಾರ ಸಂಪನ್ನನೆನಿಸಿ | ಅವರ ಬದಿಗನು ನೀನಾಗಿ
ಸುಕ್ಷೇಮ ಚಿಂತಿಸಿ | ಅಧಮರಿಂದಲಿ ಬಾಧೆ ಬಾರದಂತೆ
ಸದಯನೆ ಸಲಹಿದ ಕಾರಣದಿಂದಲಿ | ವಿದಿತವಾಯಿತು
ನಿನ್ನ ಮಹಿಮೆ ಮನಕೆ ಪದೆ ಪದೆ ಪ್ರಾರ್ಥಿಪೆ ಸದಮಲಗಾತ್ರನೆ
ಅಧೋಗತಿ ತಪ್ಪಿಸಿ ಬಿಡದೆ ಒಲಿದು | ಯದುಕುಲೋದ್ಭವ
ಶಾಮಸುಂದರವಿಠಲನ್ನ | ಹೃದಯಸದನದಲ್ಲಿ
ಪೊಳೆವಂತೆ ಕೃಪೆಮಾಡು ೩
ಅಟ್ಟತಾಳ
ಗುರುವರ ಶ್ರೀ ನರದ್ವಿರದಾರಿ ನಾಮಕ | ವರ್ಣಿಸಲಳವಲ್ಲ
ನಿನ್ನುಪಕಾರವು | ಜ್ವರಬಹುಜನರಿಗೆ ಪರಿಹಾರ ಮಾಡಿದಿ
ತುರಗ ಕಚ್ಚಿದ ಘಾಯ ತಕ್ಷಣ ಮಾಯಿಸಿದಿ | ಶರಣಗೆ
ಬಂದಪಮೃತ್ಯು ಓಡಿಸಿದಿ | ಅರಿಯದರ್ಭಕಿ ಹೋಮಕುಂಡದಿ ಬೀಳೆ |
ತ್ವರಿತಭಿಮಂತ್ರಿಸಿ | ಭಿಸ್ಮವಲೇಪಿಸಿ ಉರಿತಂಪುಗೈಸಿದಿ ||
ಪುರದವರ ಮೊರೆ ಕೇಳಿ ಮಾರಿಯ ಭಯ ಕಳೆದಿ |
ತರುಳರು ದಕ್ಕದ ದೀನಕುಟುಂಬಕ್ಕೆ ಚಿರಕಾಲ ಬಾಳುವ
ಸಂತಾನ ನೀಡಿದಿ | ಸ್ಮರದೂರ ನಿಮ್ಮಾಜ್ಞೆ ಮೀರದ ಕಿಂಕರನ
ತರುಣಿಗೆ ಸೋಂಕಿದ ಭೂತವ ಬಿಡಿಸಿದಿ | ನೆರೆನಿನ್ನ
ಪದವನುಸರಿಸೀದ ಸುಜನಕ್ಕೆ ವರಭಾಗವತಶಾಸ್ತ್ರ ಅರುಹೀದಿ
ಸಲುಹೀದಿ | ಹರಿಕಥಾಮೃತಸಾರವ ಸಾರೀದಿ | ತರತಮದ
ಭೇದಜ್ಞಾನವ ಬೀರಿದಿ | ವರದಾಯಕ ಸತ್ಯದೇವನ ಪಾವನ
ಚರಿತೆ ವಿಚಿತ್ರವಾಗಿ ಪರಿಪರಿ ಪೇಳುತ್ತ ಪೊರೆದೆ ನಿನ್ನವರನ್ನು
ಧರೆ ಋಣ ತೀರಿದ ಕುರುಹು ಅರಿತು ಒಬ್ಬರಿಗೆ ಸೂಚಿಸದೆ
ಪರಲೋಕಯಾತ್ರೆಗೆ ತೆರಳಿದದಕೆ ನಿನ್ನ ಪರಿವಾರದ
ನಾವೆಲ್ಲರೂ ನಿತ್ಯಸಿರಿಯ ಕಳೆದುಕೊಂಡ ಲೋಭಿಗಳಂದದಿ
ಪರಿತಪಿಸುವೆವು | ಕರುಣ ಶರಧಿ ಕಾಯ ತೊರೆದರೇನಾಯಿತು
ಮರೆಯಾದೆ ಗೋವತ್ಸನ್ಯಾಯದಂತೆ ನೀ ದರುಶನ
ಸ್ವಪ್ನದಿಗರೆದು ಸಂತೈಸುತ ನಿರಯಕೆ
ನಮ್ಮನು ಗುರಿಮಾಡದೆ ಪೊರೆ ತರುಳಗೊಲಿದ
ಶಾಮಸುಂದರವಿಠಲ ಸರಸಿಜಾಂಘ್ರಿಯುಗ್ಮ ಮಧುಪನೆಂದೆನಿಸಿ ೪
ಆದಿತಾಳ
ಭೂಮಿ ವಿಬುಧವರ ರಾಮವಿಠಲಾರ್ಯರ ಶ್ರೀ ಮುಖದಿಂದ
ಸಕಲಶಾಸ್ತ್ರಮನನಮಾಡಿ | ಶ್ರೀಮತ್ಸು ಶೀಲೇಂದ್ರಸ್ವಾಮಿಗಳಿಂದಲಿ
ನೀ ಮಾನಿತನಾಗಿ ಕಾಮಿತಫಲಪ್ರದ ರಾಯರ ದಯಪಡೆದು
ಕಾಮಾದಿ ಷಡ್ರಿಪುವರ್ಗ ಜಯಿಸುತಲಿ | ನೇಮನಿಷ್ಟೆಯಲಿ
ಜಪತಪಾಚರಿಸುತ ಹೇಮರಜತಧನ ತೃಣಸಮಾನೆನಿಸುತ
ಆ ಮಹಾ ಹರಿದಾಸ ಸ್ತೋಮದೊಳಗೆ ಬೆರದು |
ಸಾಮಜವರದನ
ನಾಮವಿಲ್ಲದೆ ಒಂದು ಯಾಮವ
ಕಳೆಯದೆ ಪಾಮರ ಜನರನು
ಪ್ರೇಮದಿಂದದ್ಧರಿಸಿ | ಸಾಮಗಾನಪ್ರೇಮ ಶಾಮಸುಂದರನ
ಧಾಮವ ಸೇರಿದ ಹೇ ಮಹಾಮಹಿಮನೆ ೫
ಜತೆ
ನಿನ್ನೊಡೆಯನ ದ್ವಾರಾ ಶ್ರೀ ಶಾಮಸುಂದರನ
ಎನ್ನಂತರಂಗದಿ ನೋಳ್ವಂತೆ ಕರುಣಿಸೋ ||

 

೨೧೧
ಬಲುಕಷ್ಟ ಬರಗಾಲ ಬಂದಿತಯ್ಯ
ಕೊಲುವ ವೈರಿ ಜನಕೆ ಬರಬಾರದಯ್ಯ ಪ
ಶಿಶುಗಳಿಗೆ ಹಾಲಿಲ್ಲ ಪಶುಗಳಿಗೆ ಮೇವಿಲ್ಲ
ಉಸರಲು ಬಾಯಿಲ್ಲ ವೃದ್ಧ ಜನಕೇ
ಅಶನ ವಸನಕ್ಕಾಗಿ ವ್ಯಸನ ಪೂರಿತರಾಗಿ
ನಿಶಿ ಹಗಲು ಜನರೆಲ್ಲ ಉಸುರು ಹಾಕುತಲಿಹರು ೧
ಧÀವಸಧ್ಯಾನ್ಯದ ಬೆಲೆಯು ದಿವಸ ದಿವಸಕೆ ಮಹಾ
ಪ್ರವಾಹದಂದದಿ ವೃಧ್ಧಿಯಾಗುತಲಿಹುದು
ಅವಸರಕೆ ಬೇಡಿದರೆ ಲವಣದೊರೆಯದು ಮೇಲೆ
ಶಿವಶಿವಾಯೆಂದು ಭವಣಿಯನನುಭವಿಸುವರು ೨
ಶಾರೆ ಕಾಳು ಭಿಕ್ಷೆಕೆರೆಯುವದಕೆ ಗತಿಯಿಲ್ಲಾ
ಶರಗೊಡ್ಡಿ ಕರೆದರೂ ಕೊಂಡರೊಬ್ಬರುಯಿಲ್ಲಾ
ಅರೆಹೊಟ್ಟಿಯುಂಡು ಹರಕು ಬಟ್ಟಯನುಟ್ಟ
ಮರಮರನೆ ಮನದೊಳಗೆ ಮರುಗುವರು ಬಡಜನರೂ ೩
ಜೋಳನವಣಿ ಸಜ್ಜಿ ಕಾಳಿಗೇರಿದ ಬೆಲೆಗೆ
ತಾಳಿ ಮನದಲಿ ವ್ಯಥಿಯ ಕೂಲಿ ಜನರು
ಕೂಳಿಗಾಗದು ಎಂದು ಬಾಳುವೆಯ ಗೈಯುವಂಥ
ಕೂಲಿವಲ್ಲೆವು ಎನುತ ಗೋಳಿಡುತಲಿಹರು ೪
ಕಡಲೆ ಕಾಣದ ಹರಿಯು | ಕಡಲೊಳಡಗಿದ
ಮೃಡನು ಸೊಡರೆಣ್ಣೆಸಿಗದೆಂದು ಸುಡುಗಾಡು ಸೇರಿದಾ
ಅಡಕಿ ಸಕ್ಕರೆ ಗೋಧಿ ಕೊಡುವ ಬೆಲೆಯನು ಕೇಳಿ
ಮಿಡುಕಿ ಮನದೊಳು ಕಣ್ಣ ಬಿಡುತಿಹರು ಸುಮನಸರು ೫
ಮಳೆರಾಯ ಮುನಿದುದಕೆ ಹೊಲ ಬೆಳೆಯದಿದ್ದುದಕೆ
ಬಳುತಿಹವು ಬಡಜನರ ಕಣ್ಣಿಂದ ನೀರು
ಜಲಹರಿಸುವದು ನೋಡಿ ನಲಿದಾಡಿ ನಗುತಿಹಳುಕ್ಷಾಮದೇವಿ ೬
ಕ್ಷಾಮದೇವಿಗೆ ತನ್ನ | ಧಾಮಸೇರುವಂತೆ ನೀಡಿ ಮಾಡಿ ಸಾಕು
ನಮ್ಮ ಸಕಲ ಜನಕೇ |
ಕ್ಷೆಮ ಸೌಖ್ಯವಗರೆದು | ಪ್ರೇಮದಲಿ ಪೊರೆ
ಕರವ ನಾ | ಮುಗಿದು ಪ್ರಾರ್ಥಿಸುವೆ ಶಾಮಸುಂದರ ಸ್ವಾಮಿ ೭

 

೧೬೮
ಬಾಗಿ ಬೇಡುವೆ ಪಿಡಿಯೊ ಬೇಗ ಕೈಯಾ
ಭಾಗವತ ಜನಪ್ರೀಯ ಭಾಗಣ್ಣದಾಸಾರ್ಯ ಪ
ದ್ವಿಜ ಕುಲಾಬ್ಧಿಗೆ ಪೂರ್ಣ | ದ್ವಿಜರಾಜನೆಂದೆನಿಪ
ವಿಜಯವಿಠಲದಾಸರೊಲುಮೆ ಪಾತ್ರ ||
ನಿಜಮನದಿ ನಿತ್ಯದಲಿ | ಭುಜಗಶಯನನಪಾದ
ಭಜಿಪ ಭಾಗ್ಯದಿನಲಿವ | ಸುಜನರೊಳಿಡು ಎಂದು ೧
ನೀನೇವೆ ಗತಿಯೆಂದ | ದೀನರಿಗೆ ನಾನೆಂಬ
ಹೀನಮತಿ ಕಳೆದು ಪವಮಾನ ಪಿತನ |
ಧ್ಯಾನಗೈಯ್ಯುವ ದಿವ್ಯ ಜ್ಞಾನ ಮಾರ್ಗವ ತೋರಿ |
ಸಾನುರಾಗದಿ ಪೊರೆವ | ದಾನಿ ದಯಾವಾರಿಧಿಯೆ ೨
ಮಂದಜನ ಸಂದೋಹ | ಮಂದಾರ ತರುವಿಜಿತ ||
ಕಂದರ್ಪ ಕಾರುಣ್ಯಸಿಂಧು ಬಂಧೋ ||
ಕಂದನಂದರಿದೆನ್ನ | ಕುಂದು ಎಣಿಸದೆ ಹೃದಯ
ಮಂದಿರದಿ ಶ್ರೀ ಶಾಮಸುಂದರನ ತೋರೆಂದು ೩

 

೨೧೮
ಬಾರೆ ಬೇಗನೆ ವಾರಿಜಾಮುಖಿ
ಚಾರುವೇದಕೆ ನೀ ಬಾ ಬೇಗನೆ ಪ
ಕನಕಾಂಬರವನುಟ್ಟು ಘÀನಕಂಚುಕವ ತೊಟ್ಟು
ಹಣೆಗೆ ತಿಲಕವಿಟ್ಟು ವನಜಾಜಿ ಮಲ್ಲಿಗೆಯಾ
ಮುಡಿಯುತ ನೀ ಬೇಗನೆ ಬಾ ೧
ಲುಲ್ಲ ಪೈಜಣದಿ ಘಿಲ್ಲು ಘಿಲುರೆನುತಲಿ
ನಿಲ್ಲದೆ ಉಲ್ಲಾಸದೀಗ |
ಬೇಗ ಫುಲ್ಲನಯನೆ ಬಾ ೨
ಕಾಮನ ಶಿರೋಮಣಿ ಕಾಮನ ಕರುಣಿ
ಶಾಮಸುಂದರನ ರಾಣಿ ನೀ ಬೇಗೆನ
ಪ್ರೇಮದಿಂದಲಿ ಬಾ ೩

 

೫೪
ಬಾರೆ ಭಾಗ್ಯದ ನಿಧಿಯೆ | ಬಾರೆ ಜಾನಕಿಯೆ ಪ
ಬಾರೆ ಬಾರೆ ಚಕೋರ ಸುಖಾಗ್ರಣೆ
ಸೇರಿದೆ ತವಪದ ವಾರಿಜ ನಿಲಯೆ ಅ.ಪ
ಕೃತಿ ಶಾಂತಿ ಜಯ ಮಾಯೆ
ಕ್ಷಿತಿಜಕೋಮಲ ಕಾಯೆ
ಶಿತಕಳೆವರ ವಿಧಿಶತಕ್ರತು ಸುಮನಸ
ತತಿನುತೆ ಪಾವನೆ ರತಿಪತಿ ತಾಯೆ ೧
ಮಂಗಳೆ ಮುದ ಭರಿತೆ
ತಿಂಗಳ ಮುಖಿ ಸೀತೆ
ಇಂಗಡಲಜೆ ಕೃಪಾಂಗಿಯೆ ಎನ್ನಂತ
ರಂಗದಿ ಮಾನವ ಸಿಂಗನ ತೋರೆ ೨
ಶಾಮಸುಂದರ ರಾಣಿ ವಾಮಾಕ್ಷಿ
ಕಾಲ್ಯಾಣಿ ಕಾಮಿನಿ ಮಣಿ
ಸತ್ಯಭಾಮೆ ರುಕ್ಮಿಣಿ ಗೋಮಿನಿ
ರಮೆ ಶುಭನಾಮ ಲಲಾಮೆ ೩

 

೧೮೮
ಬಾರೈ ಪ್ರಭುವೆ ಬಾರೈ ಪ್ರಭುವೆ ಪ
ತೋರೈ ಹರಿಪಾದವ ಗುರುವೆ
ತವಾಂಘ್ರಿ ಕಮಲ ನಂಬಿದೆ
ಭವ ಬಂಧನ ಹರಿಸಿ ಕರುಣದಿ
ಜವನ ಭವನ ಬಿಡಿಸೋ ದೀನ
ದಿವಿಜ ತರುವೆ೧
ಹರಿಕಥಾ ಸುಧಾ ಸಾರ
ವರ ರಹಸ್ಯವ ಪೊರೆ
ಕರುಣದಿಂದಲರುಹಿಸದಾ
ಪೊರೆಯೋ ವಿಭುವೆ ೨
ಮಂದರ ಗಿರಿಧಾರಿ ಶಾಮ
ಸುಂದರ ಸುಪ್ರೇಮ ಪಾತ್ರ
ಕಂದನನುದಾಶಿಸುವದು
ತಂದೆಗೆ ಥರವೆ ೩

 

೨೮
ಬಾರೈ ಬಾರೈ ಭಾರತಿ ಮನೋಹರ
ಮಾರುತಿ ಗುರುವರನೆ ದೇವ ಪ
ಪವನದೇವ ಬಾರೋ ಪವಿಸಮಗಾತ್ರ ಬಾರೋ
ರವಿಜನ ಭಯ ಹರ | ಪಾವನ್ನ ಮೂರುತಿ ೧
ಮಧ್ವಮುನಿಯೆ ಬಾರೋ | ಉದ್ಧರಿಸಲು ಬಾರೋ |
ಶುದ್ಧ ಮುಕುತಿದಾತ ದದ್ದಲಪುರವಾಸ ೨
ಗಂಧವಾಹನ ಬಾರೋ | ಸಿಂಧು ಬಂಧನ ಬಾರೋ |
ಮಂದರೋದ್ಧಾರ ಶಾಮಸುಂದರ ಪ್ರಿಯಸಖ ೩

 

೨೪೩
ಬಾರೈಯ ಬಾರೈಯ
ಸೂರಿವರಿಯ ಐಕೂರು ನಿಲಯ ಪ
ನೀನ್ಹಾಕಿದ ಸುಜ್ಞಾನದ ಸಸಿಗಳು
ಮ್ಲಾನವಾಗುತಿವೆ ಸಾನುರಾಗದಲಿ ೧
ಸತಿ ತವಕರುಣ ಸಲಿಲವ ಎರೆದು
ಫಳಿಲನೆ ವೃಥ್ಧಿಯ ಗಳಿಸಿ ಸಲಹಲು ೨
ನಾಟಿಸಿದ ಸಸಿಗಳು ನೀಟಾಗುವ ಪರಿ
ತೋಟಗ ನೀ ಕೃಪೆ ನೋಟದಿ ನೋಡಲು ೩
ಕೋವಿದರ ನೀ ಕಾವಲಿ ಇರಲು | ಕು
ಜೀವಿಗಳಿಂದಲಿ ಹಾವಳಿಯಾಗದು ೪
ನೀಮರೆದರೆ ಸುಕ್ಷೇಮವಾಗದು
ಶಾಮಸುಂದರನ ಪ್ರೇಮದ ಪೋತ ೫

 

೩೭
ಬಾರೈಯ್ಯಾ ಬಾರೈಯ್ಯಾ
ಭಾರತಿ ಚಿತ್ತ ಚಕೋರ ಶಶಾಂಕಾ ಪ
ಹೇಸಿ ಸಂಸಾರದ ಕ್ಲೇಶ ಕಳೆದು ತವ
ದಾಸ ಜನರ ಸಹವಾಸವ ನೀಡಲು ೧
ಹನುಮ ಭೀಮ ಮುದ | ಮುನಿವರ ಹರಿಪದ
ನೆನೆಯುವ ಭಾಗ್ಯವ | ಅನುದಿನ ಗರೆಯಲು ೨
ವಾತಜ ನಿನ್ನಯ ದೂತರು ನಾವೈ
ಪಾತಕ ಭೀತಿಯ | ಪ್ರೀತಿಲಿ ಬಿಡಿಸಲು ೩
ಭಾವ ಭಕ್ತಿಯಲಿ | ಸೇವಿಪರಿಗೆ ಸುಖ |
ವೀವ ದೇವಗುರು | ಛಾವಣಿ ನಿಲಯಾ ೪
ತಂದೆ ನೀನೊಲಿದರೆ | ನಂದಜ ಶಾಮ
ಸುಂದರ ಸಲಹುವನೆಂದು ಪ್ರಾರ್ಥಿಪೆವು ೫

 

೧೩೦
ಬಾರೋ ಬಾರೋ ಶ್ರೀಗುರುರಾಯ
ಬಾರೋ ಬಾರೋ ಭೂಸುರವರ್ಯ
ಬಾರೋ ಬಾರೋ ಭಕ್ತಪ್ರೀಯ
ಭಾಸುರ ಕಾಯ ಪ
ಘೋರಾರಣ್ಯದೊಳು ಬಂದು ಸೇರಿದೆನೊ ದುಷ್ಕರ್ಮದಿ]
ಕ್ರೂರ ಮೃಗಗಳೆನ್ನತಿ ಬಾಧಿಸುತಿಹವು
ಚೋರರುಪದ್ರವವನ್ನು ನಾ ಸಹಿಸಲಾರೆ ಇಷ್ಟೆನುತ
ದೂರ ನೋಳ್ವರೆ ವ್ಯಾಳ್ಯಕೆ ಸೂರಿವರೇಣ್ಯ ೧
ಮಂದಜನ ಸಂಗದಿಂದ ತಂದೆ ತ್ವತ್ಪಾದಾರ
ವಿಂದ ಪೊಂದದಿರೆ ಸಂಧಿಸಿಎನ್ನಗೆ ಬಂದÀ
ನಿಂದೆಗೈದ ದೋಷದಿಂದ ಬಂದ ಬನ್ನ ಪರಿಹಾರಕ್ಕೆ
ಹಿಂದೆ ನೀ ನಾಲ್ವರಿಯಲಿಲ್ಲೆ ಸಂದೇಹವ್ಯಾಕೆ ೨
ಇಂದ್ರ ಸಮವಿರಾಜಿತ ಇಂದ್ರ ವಿರೋಧಿ ಸಂಭೂತ
ಇಂದ್ರ ದೇವಾಧಿ ಮಾನಿತ ಆನಂದ ಪ್ರದಾತ
ಇಂದ್ರ ಜಾರಿ ಸೂತ ಶಾಮಸುಂದರವಿಠಲ ದೂತ
ಇಂದ್ರ ಜಾತಾಖ್ಯರ ಪ್ರೀತ ಇಂದ್ರಾರ್ಯಪೋತ ೩

 

೨೧೭
ಬಾಲನೆ ಬಹುವಿಭವದಲಿ ಬಾಳೆಲೊ ಚಿರಕಾಲದಲಿ ಪ
ಶುದ್ಧ ಸದ್ಭಕುತಿ ಭಾವದಲಿ ಮಧ್ವಶಾಸ್ತ್ರವ ಪಠಿಸುತಲಿ |
ಸದ್ವೈಷ್ಣವನೆಂದೆನಿಸುತಲಿ ಬಾಳೆಲೋ ನೀ ಚಿರಕಾಲದಲಿ ೧
ತಾಯಿನುಡಿಯ ಸೇವೆಗೈದು ನ್ಯಾಯಮಾರ್ಗದಲಿ ನಡೆದು |
ಬೇಗ ಆಯಿತ ಜಯ ಯಶ ಪಡೆದು ಬಾಳೆಲೊ ೨
ದಾಸವೃತ್ತಿಯನು ಅನುಸರಿಸಿ ಶ್ರೀ ಶಮಸುಂದರ ನೊಲಿಸಿ
ಸತಿ ಸುತರಿಂದಲಿ ಹಿತದಿಂದಲಿ ಬಾಳೋ ೩

 

೬೯
ಬೆಳಗಿರಿ ಶ್ರೀಹರಿಗೆ ಆರುತಿಯಾ ನಾರಿಯರು ಪ
ಇಂದುಬಿಂಬ ಮುಖಿಯರು | ಮದನಾರಿ ಸಖಗೆ
ವೇದವೇದ್ಯ ಯದುಕುಲನಾಥಗೆ೧
ಜಗದಾದಿ ಪತಿಗೆ ನಗಪಾಣಿಗೆ
ಜಗದಾದಿ ಗಜವರ ಪಾಲಿಗೆ ೨
ಗೆ ಬೇಗ
ಕೋಮಲಾಂಗರಘುರಾಮ ಚಂದ್ರಗೆ ೩

 

೯೨
ಬೆಳಗಿರೆ ಗೋಪಾಲ ಬಾಲಗೆ |
ಬೆಳಗಿರೆ ಗೋಪಾಲಕೃಷ್ಣಗೆ ಆರುತಿ |
ಬೆಳಗಿರೆ ಗೋಪಿಯ ಕಂದಗೆ ಪ
ಗೋಪಿ ಮನೋಹರಗೆ ಗೋಪಾಲಕನಿಗೆ ಆಕಳಕಾಯ್ವನಿಗೆ ೧
ನಂದಕುವರಗೆ ಶಿಂಧುಶಯನಗೆ ಇಂದೀವರಾನನಗೆ ೨
ಶಾಮಸುಂದರಗೆ | ದಾಮೋದರಗೆ |
ಪ್ರೇಮದಿಂದಲಿ ಕಮಲಾಕ್ಷಗೆ ಬೇಗ ೩

 

೯೩
ಬೆಳಗಿರೆ ಹರುಷದಿ ಆರುತಿಬೇಗ |
ಸತಿ ಮುದದಿ ಶಿರಿ ನಿಲಯನಿಗೀಗ ಪ
ನಿರಂಜನ | ನಿರಾಮಯ | ನೀರೇರುಹದಳ ಲೋಚನ
ನರಪ್ರಿಯ | ಸುಮಹಿತ ಸುಚರಿತ ಮರುತ ವಿನುತಗೆ ೧
ದೀನಾಪ್ತಗೆ | ಶ್ರೀನಾಥಗೆ | ಆನಂದಾತಿಶಯದಲಿ ಸಭೆಯೊಳು
ಮಾನಿನಿಯಳ ಅಭಿಮಾನ ಕಾಯ್ದವಗೆ ೨
ಹೇಮಾಂಬರ | ಶ್ರೀಮಾವರ | ಪ್ರೇಮಾದರದಿ | ಸು
ಧಾಮನ ಸಲಹಿದ ಶಾಮಸುಂದರ
ಶುಭಮೂರುತಿಗೀಗ ಆರುತಿ ಬೇಗ ೩

 

೮೬
ಬೆಳಗೆ ಬೇಗ ಭ್ರಮರವೇಣಿ
ನಳಿನನಾಭನಿಗಾರುತಿಯ ಪ
ಬಾಲಧ್ರುವ ಪಾಂಚಾಲಿಯರ
ಪಾಲಿಸಿದ ಶ್ರೀಲೋಲನಾದ
ವಾಲಿ ಮದವ ಭಂಜಗೆ ೧
ಇಂದು ಮುಖದ ಸುರೇಂದ್ರವರದ
ಕಂದುಗೊರಳ ಸಖ ನವನೀತ ಚೋರ
ನಂದಸುತ ಗೋವಿಂದಗೆ ೨
ತಟಿತ ನಿಭ ವೆಂಕಟ ಗಿರೀಶ
ಚಟುಲ ಮೂರ್ತಿಗೆ ೩

 

೭೧
ಬೆಳಗೋಣು ಹರಿಗೆ ಆರುತಿಯ | ಸಂಗೀತಹಾಡಿ ಪಾಡಿ
ನಲುವಿಂದ ಬೇಗ ಬಾರೆ ನಳಿನಾಕ್ಷಿ ಬಾ ಪ
ಬಾಲೆ ಶೀಲೆ ದ್ರೌಪದಿ ಭಕುತಿಲಿ ಧ್ಯಾನಿಸಿ ಧೇನಿಸಿ
ಕೇಳಿ ಅಕ್ಷಯಶಾಲಿ ಗರೆದ ದೇವ ದೇವಗೆ ||
ಶೈಲವನೆತ್ತಿದಾತಗೆ | ಗೋಪಗೆ | ಬಹುರೂಪನಿಗೆ |
ಶೃಂಗಾರ ಸುಗುಣಾಂಬುಧಿಗೆ ಜಯಶುಭ ಮಂಗಳೆಂದು ೧
ದೀನೋದ್ಧಾರಿ ಧೇನುಕ ಮಾತುವೈರಿಗೆ | ಶೌರಿಗೆ |
ವೇಣುನೂದುತ ಗೋವ್ಗಳ ಸಲುಹಿದಾತಗೆ ನಾಥಗೆ |
ಶ್ರೀನಿಧಿ ಚಕ್ರಪಾಣಿಗೆ ರಂಗಗೆ ಯದುಪುಂಗವಗೆ
ಮಂದರ ಕರುಣಾತರಗೆ ೨
ಭಾಸುರ ಶಾಮಸುಂದರವಿಠಲ ಸ್ವಾಮಿಗೆ | ಪ್ರೇಮಿಗೆ |
ವಾಸವಾತ್ಮಜಗೆ ಒಲಿದು ಧುರದೊಳು ಕಾಯ್ದಗೆ ಶ್ರೀದಗೆ ||
ವಾಸುಕಿತಲ್ವಶಾಯಿಗೆ | ಗೋಪಗೆ | ಬಹುರೂಪನಿಗೆ |
ದಾಸರ ಒಡನಾಡುವಗೆ | ಜಯಶುಭ ಮಂಗಳೆಂದು ೩

 

೬೩
ಭಕ್ತಿಪಥ ಸಲ್ಲಿಸೈ ಸತತ ಸುಖಿ ಮುರವೈರಿ | ಸಂಸಾರ
ಘೋರ ಭಯದೂರೋಡಿಸಿ ಹರಿಯೆ | ತ್ವತ್ವಾದ
ಸಂಸೇವಿಪ ಸೌಭಾಗ್ಯತ್ವರ ನೀಡೋ ಶ್ರೀಕಾಂತನ ಪ
ಅಪರಾಧ ನೋಡದಲೆ ಕೃಪೆಯಿಂದ ಕರಪಿಡಿಯೊ | ಪಾಪಾಂಧ
ಕೂಪದಲ್ಲಿ ತಪಿಸುತಲಿ ಬಲುಭವಣಿ ಪರಿಪರಿ ಅನುಭವಿಸುವೆ
ಗೋಪಾಲಾ ನೀ ಪಾರುಗೈಯುವದು ೧
ಮಡದಿ ಸುತರಾ ಮೋಹಕಡಲಲಿ ಮುಳುಗಿ | ನಾ
ದಡವ ಸೇರದೆ | ಕಡೆಗೆ ಅಡಿದಾವರೆ ನಂಬಿದೆನೈ |
ಕಡೆಹಾಯಿಸೋ ದೇವನೆ ತಡಮಾಡದೆ ಜಡಜಾಂಬಕ ಶ್ರೀಹರೇ ೨
ಶ್ರೀಶಾಮಸುಂದರನೆ | ಶಿಶುನಿಂಗೆ ಪಡೆದವರು
ಮೋಸದಿಂದ ಘಾತಿಸುವರೆ | ದಾಶರಥ ಭವಘುಸಣೆ
ತ್ವರಿತದಿ ಪರಿಹರಿಸುತ ಗೋವಿಂದನೆ ನೀನೋಡೊ ಸುಜ್ಞಾನವಾ ೩

 

೪೧
ಭಾರತಿ ಗುರುವರ ಗುರುಮಾರುತಿ ಕರುಣಿಸೊ
ಸಾರಿದೆ ತವ ಪದ ಸಾರಸವ ಪ
ದಾಶರಧಿಗೆ ನಿಜ ದಾಸನೆನಿಸಿ | ಕಮಲಾ
ಸನ ಪದವಿಯ ಪೊಂದಿದ್ಯೋ ನೀ
ಭೂಸುತೆ ಚೋರನ ಭಾಸುರ ಪುರವ ಹು
ತಾಶನಿಗುಣಿಸಿದ ಕೀಶ ನಮೋ ೧
ಪುನಃ ದ್ವಾಪರದಲಿ ಜನಿಸಿ ಧ
ರ್ಮಾನುಜನೆನಿಸಿ | ಭೂಭಾರ
ದನುಜರ ರಣದಿ ಹೂಂಕಾರದಿ ಕುಣಿದು ಹರಿ
ಮನ ಘನ ಮೆಚ್ಚಿಸಿದ ಭೀಮ ನಮೋ ೨
ಶ್ರೀಮದಾನಂದ ಮುನಿ ನಾಮದಿ ಪರಾತ್ವರ
ಶಾಮಸುಂದರನೆಂದು ಸ್ಥಾಪಿಸಿದಿ
ನೇಮದಿ ಭಜಪರ ಕಾಮಿತ ಗರಿಯುವ
ಗ್ರಾಮ ಬಲ್ಲಟಗಿ ಧಾಮ ನಮೋ ೩

 

೨೪೮
ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ
ಧಾಮವ ಸೇರಿದರು ||
ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ
ಪ್ರೇಮ ಪಡೆದವರು | ಕೇಳಿದವರು ಪ
ಪರಿಮಳ ಗಾತ್ರರ ಕರುಣ ಪ್ರಸಾದದಿ
ಧರೆ ಸುರಾಗ್ರಣಿ ಎನಿಪ
ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ
ಶರಧಿಗೆ ಹರಿಣಾಂಕರು ಸುಶಾಂತರು ೧
ಎಡರೇಸು ಬಂದರೂ ಬಿಡದೆ ಸ್ವಧರ್ಮವ
ಕಡುಭಕ್ತಿ ಪೂರ್ವಕದಿ
ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ
ಒಡೆಯನರ್ಚಿಸಿದವರು | ಕೋವಿದರು ೨
ಪಂಚಬಾಣನ ಗೆದ್ದು | ಪಂಚ ಭೇದವನರಿತು
ಪಂಚಾಸ್ಸನುತ ಮಾನವ
ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ
ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು ೩
ಅರವತ್ತು ವತ್ಸರ ಪರಿಯಂತ ನಿಷ್ಟೆಯಲಿ
ನಿರುತ ತಪ ಚಳಿ ಮಳೆ ಸಹಿಸಿ
ತರುವರ ಮೂಲಸ್ಥ ಪರಮೇಷ್ಟಿ ಜನಕನ
ನಿರುತ ಸೇವಿಸಿದವರು | ನಿರ್ಮಮರು ೪
ವಿನಯ ಸುಶೀಲ ಸದ್ಗುಣದಿ ಭೂಷಿತರಾದ
ತನಯರೀರ್ವರ ಕರೆದು ರಿಣವಿನು ತೀರಿತು ಎನುತ
ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ ೫
ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್
ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ
ಯಾಮದಿ | ಸ್ಮರಿ ಸಿಲಯ ಚಿಂತನೆಯ ತೊರೆದು ಕಾಯ ೬
ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ
ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ
ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು ೭

 

೧೯೧
ಭೋ ದಾತಾ ಬಾರೋಗುರುವರಿಯಾ || ನಂಬಿದೆ ನಾನಿನ್ನ
ಪಾದ ಭೂನಾಥ ದಾಸಾಗ್ರಣಿ ಪ
ದೀನ ಜನರ ಧೇನು ಚಿಂತಾಮಣಿ ಮಾನಿತ ನಿನ್ನ
ನೆರೆ ಪೊಂದಿದೆನೈ ಅನುದಿನ ಪಾಲಿಸು ಘನ
ಹರಿನಾಮವ | ಸ್ತಂಭ ನಿವಾಸನೆ ದಯತೋರೋ ೧
ಪೋತನೊಳೀಪರಿ ಯಾತಕೆ ನಿರ್ದಯ ತಾತನೆ
ನಿನಗೆ ರೀತಿಯ ನೋಡೈ | ಸುತನಪರಾಧವ
ಹಿತದಲಿ ಮನ್ನಿಸು ಪಾತಕ ಬಿಡಿಸೊ ಮತಿ ಬೀರೋ ೨
ಕರುಣಿಸು  | ವರಿಚರಿ
ತಾಮೃತ ಸವಿಯನು ಎನಗೆ | ಸೂರಿವರೇಣ್ಯನೆ
ಮೂಕÀಗೊಲಿದಂತ | ತ್ವರಿತದಿ ನೋಡೈ ತಡವ್ಯಾತಕೆ ೩

 

೧೫೩
ಮಂಗಳಂ ಮಂಗಳಂ ಜಯ
ಮಂಗಳಂ ಶ್ರೀ ಸುಶೀಲೇಂದ್ರ ಸನ್ಮುನಿಪ ಪ
ದಾತ ಧರಾಮರ | ವ್ರಾತ ವಿನುತ ಯತಿ
ನಾಥ ಶ್ರೀರಾಯರ ಪ್ರೀತ ಪ್ರಖ್ಯಾತ ೧
ಯತಿವರ ನತಸುರ ಕ್ಷಿತಿರುಹ ಜಿತ ರತಿ
ಪತಿ ಶರ ಸುಕೃತೀಂದ್ರ ಸುತ ಸೂರಿವರಿಯ ೨
ಸೋಮಧರಾರ್ಚಿತ | ಶಾಮಸುಂದರ ಮೂಲ
ರಾಮಪದಾರ್ಚಕ ಕೋಮಲಕಾಯ ೩

 

೧೮೫
ಮಂಗಳಂ ಮಂಗಳಂ ದಯಾಬ್ಧೆ ಜಯ
ಮಂಗಳಂ ಶ್ರೀರಂಗವೊಲಿದ ದಾಸಾರ್ಯ ಪ
ಪ್ರಹ್ಲಾದನನುಜ ತಾ | ಸಹ್ಲಾದ ವಿಖ್ಯಾತ
ಬಲ್ಲಿದ ಬಲ್ಲಾಳು ಶಲ್ಯ ನೃಪಾಲ ೧
ನಾರದ ಗುರು ಭಾವಿ | ಮಾರುತ ಭೃಗು ವಿಘ್ನ
ದೂರಗೈಸುವ ರತಿ | ಕಾರುಣ್ಯಪಾತ್ರ ೨
ಇಂದಿರಾಧವ ಶಾಮಸುಂದರ ಪ್ರಿಯ ಭಕ್ತ
ಮಂದಾರ ಮಾನವಿ ಮಂದಿರ ಧೀರ ೩

 

೮೫
ಮಂಗಳಗಾನ ವಿಲೋಲಾ | ಮುನಿಪಾಲಾ ಫಣಿಮಾಲಾ
ಮುನಿಪಾಲಾ ಫಣಿಮಾಲಾನಂತ ಶೀಲಾನಂತ ಶೀಲಾ ಪ
ಬಲಿಮದ ಭಂಜನಾ | ಕುಲಿಶ ಧರಾರ್ಚಿತ
ಯಲರುಣಿ ತಲ್ಪಸುಶಯನ | ಸುಶಯನಾ
ಶಶಿವದನಾ ವಿಪಗಮನಾ ೧
ಘುನಗುಣನಿಧಿ ವನಜಾಸನ ಜನಕಾ
ದಿವಕೋಟ ಪ್ರಕಾಶ ಅಘುನಾಶ
ಜಗದೀಶಾ ಜಗದೀಶಾ ಶ್ರೀನಿವಾಸಾ ೨
ಸಾಮಜ ಭಯಹರ ರಾಮ ಶ್ರೀರಾಮಾ
ಶಾಮಸುಂದರ ರಘುವೀರಾ ಭವದೂರ
ಮುರಹರಾ ಮುರಹರಾ ಸುಕುಮಾರ ೩

 

೧೦೮
ಮಂಗಳೆಂದು ಪಾಡಿಕೆ ಶ್ರೀರಂಗನಿಗೀಗ
ಭೃಂಗಾಲಕಿಯರು ಕೂಡಿ ಶೃಂಗಾರದಿ ಬೇಗ ಪ
ದೇವಾಧಿದೇವ ಹರಿಗೆ ದೇವೌಷ ವಂದ್ಯಗೆ
ಗೋವರ್ಧನಾದ್ರಿಧರಗೆ ಗೋವೃಂದ ಪಾಲಗೆ
ಪಾವನಾಂಗ ಪಾವಿನ ಮೇಲೆ
ಪವಳಿಸಿದವಗೆ ಭೃಂಗಾಲಕಿಯರು ೧
ಮೀನಾಗ ಫಾಣಿಕಿಟಗೆ ಶ್ರೀನಾರಿಸಿಂಹಗೆ
ಕ್ಷೋಣಿಯ ತೊರೆದ ದಶಾನನಾರಿಗೆ
ಧೇನುಪಾಲ ಸ್ಥಾಣು ಬಾಣ ಘೋಟಕಧ್ವಜಗೆ ಭೃಂಗಾಲಕಿಯರು ೨
ಪ್ರೇಮಾಬ್ಧಿ ಪವನ ಪಿತಗೆ ಹೇಮಾಂಬಕಾರಿಗೆ |
ಸಾಮಜೇಂದ್ರ ಪ್ರಿಯಗೆ ತ್ರಿಧಾಮ ದೇವಗೆ
ಸುಧಾಮ ಸಖಗೆ ಭೃಂಗಾಲಕಿಯರು ೩

 

೮೦
ಮಂಗಳೆಂದು ಬೆಳಗಿರಾರುತಿ ರಂಗಗೇ ನೀಲಾಂಗಗೆ ಪ
ತುಂಗವಿಕ್ರಮನಿಮಗಿ ಭೂವರದಗೆ ನರಮೃಗನಿಗೆ ಅ.ಪ
ಬಾಲ ಭಾರ್ಗವ ರಾಮ ಮಾತುಳಕಾಲ ವೀತಚೈಲಗೆ |
ಶೀಲ ಮೂರುತಿಯಾದ ಕಲ್ಕಿರೂಪಗೆ | ರಮೆಯರಸಗೆ ೧
ಧುರದಿ ರವಿಸುತ | ಉರುಗಗಳವನು ಭರದಿ
ಬಿಡೆ ಕಡು ಕರುಣದಿ ನರನರಧ ಧರೆಗೊತ್ತಿ
ಸಲಹಿದ ಶೌರಿಗೆ ಮುರವೈರಿಗೆ ೨
ವಟದ ವೃಕ್ಷದಿ ವಟುರೂಪಿಯಲಿ ಪವಳಿಸಿದ ಪರಮಾತ್ಮಗೆ |
ತಟತಸನ್ನಿಭ ಶಾಮಸುಂದರವಿಠಲಗೆ
ವಿಪಗಮನಗೆ ೩

 

೯೦
ಮಂಗಳೆಂದು ಬೆಳಗಿರೆ
ಭುಜಂಗಶಯನಗೆ ಶೃಂಗಾರದಿಂದಲಿ ಪ
ಶ್ರೀಧರಗೆ ಭೂಧವಗೆ ಯಾದವ
ಗೋಕಾಯ್ದವಗೆ | ಮೋದದಿ ಮಧುಸೂದಗೆ |
ಜಗದಾದಿ ಮೂರ್ತಿಗೆ | ಅಗಾಧಮಹಿಮಗೆ ೧
ಧೀರಗೆ ಯದುವೀರಗೆ | ದಧಿ ಚೋರಗೆ |
ಭವದೂರನಿಗೆ | ಶೌರಿಗೆ ಮುರವೈರಿಗೆ |
ಗಿರಿಧಾರಿ ರಂಗಗೆ | ಅಪಾರ ಮಹಿಮಗೆ ೨
ರಾಮಗೆ ತ್ರಿಧಾಮಗೆ | ಸಖಪ್ರೇಮಗೆ |
ಗುಣಧಾಮನಿಗೆ | ಶಾಮಸುಂದರ ಸ್ವಾಮಿಗೆ |
ಸುತ್ರಾಮನನುಜಗೆ ಸುಧಾಮಸಖನಿಗೆ ೩

 

೧೫೦
ಮಂದ ಮಾನವ ತ್ವರಿತ ||
ವೃಂದಾರಕ ಸದ್ವಂಶಜರಿವರೆನುತ
ಮನದೊಳು ಭಾವಿಸುತ ಪ
ಗುರುಸುವೃತೀಂದ್ರರ ಕರಕಮಲದಿ ತಾನು
ತುರಿಯಾಶ್ರಮವನು |
ಧರಿಸುತ ಹರುಷದಿ ರಘುಕುಲಜನ ಚರಣ
ಆರಾಧಿಸಿ ಘನ್ನ ||
ಮರುತಾತಮ ಮರ್ಮಜ್ಞನು ತಾನಾಗಿ
ಮೆರೆದನು ಚೆನ್ನಾಗಿ೧
ವರಹಜನದಿ ವಾಸರ ಒಲಿಮೆಯಲಿ
ಧರೆಯಲಿ ಚರಿಸುತಲಿ
ಪರವಾದಿಯ ಮತ-
ಜರಿಯುತ ವೈಷ್ಣವರ ಉದ್ಧರಿಸಿದ ಧೀರ
ನರನೆಂದಿವರನು ನಿಂದಿಸುವನೆ ದೈತ್ಯ
ನಾ ಪೇಳುವೆ ಸತ್ಯ ೨
ಶ್ರೀಮನೋವಲ್ಲಭ ಶಾಮಸುಂದರ
ನಾಮವ ಪ್ರತಿದಿನ |
ನೇಮದಿ ಪಠಿಸುತ ಪ್ರೀಮದಿ ಶಿಷ್ಯರನ
ಸಲಹಿದ ಸಂಪನ್ನ |
ಧೀಮಜ್ಜನ ಸಂಸೇವಿತ ಸುವೃತೀಂದ್ರ
ಹೃತ್ಕುಮುದಕೆ ಚಂದ್ರ ೩

 

೧೧೦
ಮಗಳೆಂದು ಬೆಳಗಿರೆ ಕುರಂಗಕೇತು ವದನೆಯರೆ ಪ
ಕುಂಡಲಿಶಯನ ಶ್ರೀಧವಗೆ | ಕೋದಂಡಪಾಣಿ ವಾವನಗೆ |
ಪಾಂಡವಪಕ್ಷ ಪಿಡಿದವಗೆ | ಪಂಢರಿಪುರ ನಿವಾಸನಿಗೆ ೧
ಸುರೇಶಮದವಿಭಂಜನಗೆ | ಪುರಾರಿ ಹರನ ಪೊರೆದವಗೆ |
ದರಾರಿ ಪದುಮಗದಾಧರಗೆ | ಧರಾಮರಾರ್ಚಿತಾಂಘ್ರಿಗೆ ೨
ಚಟುಲ ಶಾಮಸುಂದರಗೆ | ವಿಠಲವೀಶವಾಹನಗೆ |
ಕುಟಿಲ ಚದುರೆಯರು ಬೇಗ | ಕುಠಾರಿಧರ ನರಮೃಗಗೆ ೩

 

೨೪೯
ಮರೆಯುವರೆ ಮರೆಯುವರೆ ರಾಮರಾಯಾ |
ಗುರುಗಳಾರಾಧನೆಗೆ | ಶಿರಿವಾರದೊಡೆಯಾ ||
ಪರಿವಾರ ಸಹಿತಾಗಿ ತೆರಳುವದು ನಿಶ್ಚಯಿಸಿ
ಬರೆವದಕೆ ಕಾಗದವು ಸಿಗದ್ಹೋಯಿತೆ | ಭರದಿ
ಬರಬೇಕೆಂದು | ಕರೆಕಳುಹದಕೆನ್ನ | ಚರನೋರ್ವ
ನಾದರು ದೊರೆಯದಾದನೆ ಅಕಟ ೧
ಕ್ರೋಧ ವಿರಹಿತರಾದ ಸಾಧುವರ್ಯರ ಸಮಾರಾಧ |
ನೆಗೆ ನಾ ಭಾರವಾದೆನೇನೈ | ಆದರವು ತಗ್ಗಿತೇ |
ಅಭಿಮಾನ ಕುಗ್ಗಿತೇ | ಭೇದವರಿಯದ
ಯುಗ್ಮಪಾದಪಶುವಾದಿನೇ ೨
ಗುರುಕರುಣವೆಗ್ಗಳದ ಗರುವಿಕೆಯೋ
ಕಾರ್ಪರ ನರಸಿಂಹರರ್ಚಕರಮೋಕ್ಷ ಬಲವೋ
ಪರಮ ಸತ್ಪುರುಷರುಪದೇಶ ಶ್ರವಣದ
ಮದವೋ | ಹರಿಕಥಾ ಪಾನದ ಹಂಕಾರವೋ ೩
ಇರಬೇಕು ಸರ್ವದಾ ಸಕಲರಲಿ ಸಮದೃಷ್ಟಿ
ಹಿರಿಯರಾದವರಲ್ಲಿ ಏಕನಿಷ್ಟಿ | ನಿರುತದಲ್ಲಿ ಸದ್ಗೋಷ್ಟಿ
ಪರನಾಗಿ ಮನಮುಟ್ಟಿ ಹರಿಪಾದಸ್ಮರಿಪರಿಗೆ ಕೈವಲ್ಯಷಟ್ಟಿ ೪
ಶ್ರೀ ಶಾಮಸುಂದರನ ದಾಸಕೂಟಸ್ಥರೊಳು ನಾ
ಸಲ್ಲದವನೆಂದು ಧೃಡವಾಯಿತೇ | ಭೂಸುರವೇಷದಲಿ
ಬೇಸರಿಕೆ ಕೊಡುವಂಥ ಆಶೆ ಬುರುಕನು
ಎಂದು ಉದಾಸೀನ ಮಾಡಿನ್ನು ೫

 

೪೨
ಮಾಣೆದೆ ಅನುದಿನ ಸಾನುರಾಗದಿ ಸಲಹೋ
ವಾನರೋತ್ತಮ ಮಾರುತಿ ಪ
ವಾಣಿಯ ಮುದಕೆ ಕ್ಷೋಣಿ ಕುಮುದಕೆÉ
ಏಣಿಲಾಂಛನನೆನಿಸಿ ಗಾಣಧಾಳದಿ ತಾಣಗೈದಿಹ ಪ್ರಾಣದೇವನೆ ಅ.ಪ
ಯುಗಯುಗದಲಿ ಜನಿಸಿ | ರಘುಕುಲೇಶನ ಸ್ತುತಿಸಿ
ಜಿಗಿದು ವಾರಿಧಿ ಲಂಘಸಿ ||
ಜಗದ ಜನನಿಗೆ ಕ್ಷೇಮತಿಳುಹಿದ ಒದೆದು
ದಶಾನನನ ನಗರ ದಹಿಸಿದ | ಸುಗುಣ ನಾಲ್ಮೊಗ
ಪದಾರ್ಹನೆ ಮುಗಿವೆ ಕರವನು ಅಘವ ಓಡಿಸಿ ೧
ದ್ವಾಪರದಲ್ಲಿ ಬಹುಪಾಪಾತ್ಮಕರಾದ
ಭೂಪಾಲರ ಧುರದಿ | ಕೋಪದಿ ಸಂಹರಿಸಿ
ಸತಿಮಣಿ ದ್ರೌಪದಿಗೆ ಮುದವಿತ್ತು ಸೇವೆಯನು
ಗೋಪತಿ ಶ್ರೀಕೃಷ್ಣ ಸಲಹಿದ ಭಾಪು ಭಾಪು ಪರಾಕ್ರಮಶಾಲಿ ೨
ಬಂದು ಈ ಯುಗದಿ ಮಧ್ಯಮಂದೀರಾತ್ಮಜನಾಗಿ
ಮಂದರ ಮತವ ಮುರಿದು ||
ನಂದಕಂದ ಮುಕುಂದ ಶಾಮಸುಂದರನೆ ಪರ |
ನೆಂದು ವಿಜಯದಿ ದುಂದುಭಿ ಮೊಳಗಿಸಿದ
ಕಾರಣ ಗುರುಗಂಧವಾಹನ ೩

 

ಶ್ರೀಕೃಷ್ಣ
೮೮
ಮಾರಮೋಹನಾಂಗಗೀಗ | ಮಾರಮೋಹನಾಂಗಗೀಗ |
ಮಾಡಿರಾರುತಿ ಸಖಿ ಗೋಪಾಲಕೃಷ್ಣಗೆ ಪ
ದಿವ್ಯಚಾರು ಚಂದ್ರವದನಾ | ದಿವ್ಯ ಚಾರುಚಂದ್ರವದನಾ |
ಆನಂದದಿಂದಲಿ ಸಖಿ ಗೋಪಾಲಕೃಷ್ಣಗೆ ೧
ಶಾಂತಿ ಶುಭವು ಕಾಣೆ ಮನದಿ |
ಮೋದ ಬೀರುವವಗೆ ಸಖಿ ಮೋದದಿಂದಲಿ ೨
ಶಾಮಸುಂದರಾಂಗೀಗ | ಶಾಮಸುಂದರರಾಂಗಗೀಗ |
ಮಾಡಿರಾರುತಿ ಸಖಿ ಗೋಪಾಲಕೃಷ್ಣಗೆ ೩

 

೧೩
ಮೃಡದೇವ ಭವ್ಯ ಸ್ವರೂಪ ಜಡೇಂದ್ರ | ಗುರು ಜಿತಕೋಪ ಪ
ಭಸಿತ ವಿಭೂಷಿತ ಪರ ಉಪಕಾರಿ
ಅಸಮ ಸುಗುಣ ಗಂಭೀರ ಉದಾರಿ
ಎಸೆವ ರುದ್ರಾಕ್ಷಿ ಸುಮಾಲಾಧಾರಿ ೧
ದೀನ ಜನಾಭಿಮಾನ ಸಂಪ್ರೀತ
ಮಾನಿತ ನಿರ್ಮಲ ಹೃದಯ ದಯಾನ್ವಿತ
ಧ್ಯಾನಿತ ಹರಿಪದ ಮಾನಸ ನಿಜ ೨
ಗ್ರಾಮ ಬಲ್ಲಟಗಿ ಶಿವಮಠಾಧೀಶ
ಪಾಮರ ಜನರಘು ಗರ್ವವಿನಾಶ
ಶಾಮಸುಂದರ ಸಖ ಸ್ವಾಮಿ ಚಿನ್ಮಯ ಕೈಲಾಸವಾಸ ೩

 

೧೨೭
ಯತಿರಾಜ ಯತಿರಾಜ
ಕ್ಷಿತಿದೇವ ತತಿನುತ ರಾಘವೇಂದ್ರ
ಆದಿಯುಗದಿ ಪ್ರಹ್ಲಾದ ಸುನಾಮದಿ
ಮೋಹದಿ ಭಜಿಸುತ ಮಾಧವನೊಲಿಸಿದ ೧
ಘನ ವಿರಾಗ್ರಣಿ ಜನಪತಿ ಬಾಹ್ಲೀಕ
ನೆನಿಸಿ ದ್ವಾಪರದಿ ಜನಿಸಿದ ಗುಣನಿಧಿ ೨
ವಾಸವನಾಯಕ ದಾಸಾರ್ಯರಿಗುಪ
ದೇಶಗೈದ ಗುರುವ್ಯಾಸ ಪೋಷಿಸೈ ೩
ಕ್ಷೋಣಿಯೊಳಗೆ ಕುಂಭಕೋಣ ಸುಕ್ಷೇತ್ರದಿ
ವೀಣೆ ವೆಂಕಟಾಭಿಧಾನದಿ ಜನಿಸಿದ ೪
ದೀನ ಜನಾಮರಧೇನು ಸುಧೀಂದ್ರರ
ಪಾಣಿಪದ್ಮಭವ ಮಾಣದೆ ಕಾಯೋ ೫
ತುಂಗಭದ್ರ ಸುತರಂಗಿಣಿ ತೀರದಿ
ಕಂಗೊಳಿಸುವ ಶತಪಿಂಗಳ ತೇಜ೬
ಕಲುಷ ಕುಲಾದ್ರಿಗೆ ಕುಲಿಶನೆಂದೆನಿಸಿದ
ಅಲವ ಬೋಧಮತ ಜಲಧಿ ಶಶಾಂಕ ೭
ಬಾಲನ ಬಿನ್ನಪ ಲಾಲಿಸಿ ಪ್ರೇಮದಿ
ಪಾಲಿಪುದೈ ಮಂತ್ರಾಲಯ ನಿಲಯ೮
ಪರಿಮಳ ಗ್ರಂಥವ ವಿರಚಿಸಿ ದುರ್ಮತ
ಮುರಿದು ಸಜ್ಜನರಿಗೊರೆದ ಮಹಾತ್ಮ ೯
ಪರಿಪರಿಭವದೊಳು ಪರಿತಪಿಸುವೆನೈ
ಪರಮ ಕರುಣದಲಿ ಪರಿಕಿಸಿ ಪೊರೆಯೊ ೧೦
ಕಾಮಿತದಾಯಕ ಭೂಮಿಜೆನಾಯಕ
ಶಾಮಸುಂದರನ ಪ್ರೇಮದ ಸೇವಕ ೧೧

 

೨೪೨
ಯಾಕೆ ವ್ಯರ್ಥ ಕಾಲ ಕಳೆಯುವಿ ನಮ್ಮ
ಐಕೂರಾರ್ಯರ ಸುವಾಕು ಕೇಳದೆ ಜೀವಿ ಪ
ಮರುತಾಗಮ ಮರ್ಮವರಿಯದವರಿಗೆಲ್ಲಾ | ವರ ಭಾಗವತ
ಗೀತಾ ಹರಿಕಥಾ ಮೃತ ತತ್ವ | ಯರಡೊಂದು ಕಾಲ
ಬ್ಯಾಸರಿಯದೆ ಬೋಧಿಪ | ನರಸಿಂಹಾರ್ಯರ
ಕೃಪೆ ನೆಳಲಾಶ್ರಯಿಸದೆ ೧
ಹರಿಮೂರ್ತಿ ಹರಿವ್ಯಾಪ್ತಿ ಹರಿಸತ್ಯ ಸುಚರಿತ್ರೆ |
ಹರಿದಾಸರುಕ್ತಿ | ಹಿರಿದು ಕಿರಿದು ಭೇದ ನೆರೆ |
ಸುರಹಸ್ಯವನರುಹಿ ಕಗ್ಗತ್ತಲೆ ಹರಿಸುವರಿವರೆ ನರ ನೀನಂಬದೆ೨
ಮದಡ ಜನರಿಗೆಲ್ಲ ಪದಸುಳಾದಿಗಳನು |
ಚತುರತನದಲಿಂದ | ವಿಧ ವಿಧ ವಿವರಿಸಿ | ಸದಮಲ
ಸುಜ್ಞಾನ | ವದಗಿಸುವಂಥ ಈ ಬುಧರುಪದೇಶ
ಮುದದಿ ಪಡೆಯದೆ ೩
ಆಶೆ ಕ್ರೋಧಂಗಳ ಜಯಿಸುತ ಮನದಿಂದ ಕ್ಲೇಶಮೋದ
ಸಮ ತಿಳಿದಿಹರೋ | ಯೇಸೇಸು ಕಾಲಕ್ಕೆ ಭೂಸುರೋತ್ತಮ
ರಾದ | ಈ ಸುಗುಣರ ಸಹವಾಸ ದೊರೆವುದೆ ೪
ಈ ಮಹಾಮಹಿಮರ
ಶ್ರೀ ಮುಖವಾಣಿಯು ಸಾಮಾನ್ಯವಲ್ಲವೋ
ನೇಮದಿಂ ಕೇಳ್ವರ | ಶಾಮಸುಂದರ ಸುಧಾಮನಿಗೊಲಿದಂತೆ |
ಪ್ರೇಮದಿಂ ಸಲಹುವ ನೀ ಮನದಲಿ ತಿಳಿ ೫

 

೨೪೧
ಯಾಕೆಮ್ಮನಗಲಿ ಪರಲೋಕ ಸೇರಿದೆ ಗುರು
ಐಕೂರು ನರಸಿಂಹಾರ್ಯ ಪ
ಲೌಕಿಕವ ಬಿಟ್ಟು ಸುವಿವೇಕ ನಡೆವ
ವಾಕು ಪೇಳ್ವರ ಕಾಣೆ ಲೋಕದೊಳು ನಿನ್ಹೊರತು ಅ.ಪ
ಅತಿಮಂದರಾದೆಮಗೆ | ಶ್ರುತಿ ಶಾಸ್ತ್ರ ಪುರಾಣ
ಕಥೆ ದಾಸ ಕವಿತೆ ಸತತ ಪೇಳಿ
ಮತಿವಂತರೆನಿಸಿ ಸ್ಪತ್ವಥ ಪಡಿಸಿ ಮುಂದೆ ಸ
ದ್ಗತಿ ಕಾಣಿಸದೆ ಜಗದಿ ಹತಭಾಗ್ಯರನು ಮಾಡಿ ೧
ಸಾಧುವರ್ಯನೆ ನಿಮ್ಮ ಪಾದವೇ ಗತಿ ಎಂದು
ಸಾದರದಿ ನಿರುತ ನೆರೆನಂಬಿದಂಥ
ಸೋದರಿಯರು ಪಂಚ ಭೇದ | ತರತಮಜ್ಞಾನ
ಬೋಧಿಸುವರಿಲ್ಲೆಂದು ಖೇದದಿಂದಿರುತಿಹರು ೨
ಸೂರಿವರ ನಿನ್ನಗಲಿದಾರಭ್ಯ ಧರೆಯೊಳಗೆ
ನೀರಿಂದ ದೂರಾದ ಮೀನಿನಂತೆ
ಘೋರ ದುಃಖದಿ ಮುಳುಗಿ ಪಾರುಗಾಣದೆ ದಿಕ್ಕು
ತೋರದಾಗಿಹುದೀಗ ಬಾರೋ ಮನಮಂದಿರದಿ ೩
ತನುವು ತ್ಯಜಿಸಿದರೇನು | ಅನಿಮಿಷಾಂಶನೆ ನಮ್ಮ
ಕನಸು ಮನನಿನೊಳಗೆ ಸುಳಿದಾಡುತ
ಕೊನೆಯಲ್ಲಿ ಹರಿನಾಮ | ಅನುಗ್ರಹಿಸುವೆವು ಎಂಬ
ಘನ ಅಭಯ ನೀಡೆಂದು ಮಣಿದು ಪ್ರಾರ್ಥಿಪೆನಯ್ಯ ೪
ಪುಣ್ಯಪುರುಷನೆ ನಮಗೆ ಇನ್ನಾವ ಬಯಕಿಲ್ಲ
ಜನ್ಮ ಜನ್ಮಕೆ ನಿನ್ನ ಚರಣಾಬ್ಜವ
ಚನ್ನಾಗಿ ಸೇವಿಸುವ ಘನ್ನ ಸುಖಗರಿಯೆಂದು
ಸನ್ನುತಿಸಿ ವಿನಯದಲಿ ಬಿನ್ನೈಸುವೆವು ನಿತ್ಯ ೫
ನಿನ್ನಿಂದ ಸತ್‍ಶ್ರವಣ | ನಿನ್ನಿಂದ ಅಘಹರಣ
ನಿನ್ನಿಂದ ಶ್ರೀವಾಯು ಹರಿಯಕರುಣ
ನಿನ್ನಿಂದ ಉಪದೇಶ \ ನಿನ್ನಿಂದ ಭವನಾಶ
ನಿನ್ನಿಂದ ಬಿಂಬ ದರ್ಶನವು ನಮಗಿನ್ನು ೬
ಪಾಮರರ ಅಪರಾಧ ನೀ ಮನಕೆ ತಾರದಲೆ
ಹೇಮ ಕಾಮಿನಿ ಭೂಮಿ ಈಮೂರರ
ವ್ಯಾಮೋಹವನೆ ಬಿಡಿಸಿ | ಶಾಮಸುಂದರ ಭಕ್ತ
ಸ್ತೋಮ ಸಂಗದೊಳಿಟ್ಟು ಪ್ರೇಮದಲಿ ಪಿಡಿಕೈಯ್ಯ ೭

 

೧೮೬
ಯಾತರಂಚಿಕೆ ಜಗದೊಳಗೆ ಜಗ
ನ್ನಾಥ ದಾಸರ ದಯಪಡೆದ ಸುಜನರಿಗೆ ಪ
ಪದುಮಜಾಂಡದಿ ವಿಧಿ ಮದನಾರಿ ವಂದಿತ ಒ
ಲಿದು ಪತಿ ಮಧುರಿಫು ಹರಿಕೃತಾ
ಸುಧೆಸಾರ ಸುಗ್ರಂಥರಚಿಸಿದ ಗುರುಗಳ
ಪದ ಸರಸಿಜ ಪೊಂದಿದಸುಗುಣರಿಗೆ ೧
ನಳಿನ ಜನಕನ ವÀಲಿಸಿ ಹರುಷದಿಂದಲಿ
ಥಳ ಥಳ ಪೊಲೆಯುವ ಸ್ತಂಭದಲಿ
ಕುಳಿತು ಸೇವಿಸುವರ ಸಲಹುವ ಶ್ರೀ ರಂಗ
ವಲಿದ ದಾಸಾರ್ಯರ ಒಲಿಮೆ ಉಳ್ಳವರಿಗೆ ೨
ಸಿರಿವರ ಶಾಮಸುಂದರ ಸರ್ವೋತ್ತುಮ
ಮರುತಾತ್ಮಜ ಗುರುವರ್ಯಕಿಂದು
ಧರಿಯೊಳು ಸಾರಿದ ಸಲ್ಹಾದ ದಾಸರ
ಚರಣ ಸರೋರುಹ ನೆರೆನಂಬಿದವರಿಗೆ ೩

 

೧೩೭
ಯೋಗಿ ಕುಲಪುಂಗವ ಕಾಯೋ
ಕೋಲ ತನಯ ತಟಿ ಸದನಾ ವಿಬುಧವೃಂದ
ನುತ ಪ್ರೇಮಸಾಗರ ಪ
ದೈಶಿಕಾಗ್ರಣಿ ಸುಜನ ಪಾಲಾ ವಿಜಿತಾನಂಗನ
ಭಾಸುರ ಮಹಿಮ೧
ಪಾವನಾತ್ಮಕ ಪಾಪ ವಿದೂರ
ಕಾವುದೈ ಸದಾ ಕೋವಿದರೊಡೆಯ೨
ಶಾಮಸುಂದರ ಪ್ರೇಮ ಸುಪಾತ್ರ ಸ್ವಾಮಿ
ಶ್ರೀಗುರು ರಾಘವೇಂದ್ರಾರ್ಯ ೩

 

೭೩
ರಂಗನ ಪಾಡಿರೈ | ಮಾನವ ಸಿಂಗನ ಪಾಡಿರೈ ಪ
ಇಂಗಡಲಜೆಪತಿ | ಮಂಗಳ ಚರಿತ ಭು
ಜಂಗಶಾಯಿ ಶುಭಾಂಗ ಅ.ಪ
ವಸುಗರ್ಭಾದಿಗಳ ಮೊರೆಯನು |
ಲಾಲಿಸಿ ದೇವ | ಮಹಾನುಭಾವ |
ವಸುದೇವನ ಸತಿಯುದರದೊಳು
ಅವತರಿಸಿದನು ಅಸುರಾಂತಕ |
ಹಸುಗಳ ಸಲುಹಿದ ಕುಸುಮನಯನ
ಪ್ರೇಮದಲಿ ಗೋಕುಲದಲ್ಲಿ |
ಶಿಶುಪಾಲಾದಿಗಳಸುನೀಗಿದ ಯದು ನಾಥ | ವಿಧಿ ಕುಲ ಜಾತ ೧
ತಂದೆ ತಾಯ್ಗಳ ಬಂಧನ ಬಿಡಿಸಿದ ಧೀರ | ಭಕ್ತಮಂದಾರ |
ಒಂದೆ ಬೆರಳಲಿ ಗೋವರ್ಧನ ಶೈಲವನು | ತಾ ಧರಿಸಿದನು
ವೃಂದಾರಕ ಪತಿಗೊದಗಿದ
ಮದವನು ಮುರಿದ | ಮೋದವಗರೆವ
ಸಿಂಧುಶಯನ ತನಗ್ಹೊಂದಿದ
ಶರಣರ ಕರವ | ಕರುಣದಿ ಪಿಡಿವ ೨
ನಾಮವೇದ್ಯ ಬಲರಾಮನನುಜ ಹರಿ | ಶ್ವೇತ ವಾಹನ ಸೂತ
ಕಾಮಜನಕ ಸತ್ಯಭಾಮೆ ರಮಣ ಗೋಪಾಲ | ಸ್ವಾಮಿ ಕುಲಾಲ
ಭೀಮಗೊಲಿದ ನಿಸ್ಸೀಮ ಮಹಿಮಾ ಶ್ರೀ ಗೌರಿ | ಮಾತುಳವೈರಿ
ಹೇಮಾಂಬರಧರ  | ಧೃತವನಮಾಲ೩

 

೧೬೯
ರಂಗವಲಿದ ಗುರುರಾಯರ ನೀ ನೋಡೋ |
ಅಂತರಂಗದಿ ಪಾಡೋ
ಭಂಗ ಬಡಿಪ ದುರಿತಂಗಳ ಈಡ್ಯಾಡೋ
ಸತ್ ಸಂಗವ ಬೇಡೋ ಅ.ಪ
ಹಿಂದೆ ಮೂರೊಂದವತಾರ ಧರಿಸಿದಾತ
ಇದು ಹಿರಿಯರು ಮಾತ |
ಬಂದ ಮರಳಿ ಮಹೀತಳದಿ ಜಗನ್ನಾಥ
ದಾಸಾರ್ಯ ಪ್ರಖ್ಯಾತ ||
ತಂದೆ ನಮಗೆ ತಿಳಿ ಎಂದೆಂದಿಗು ಎಂದೆಂದಿಗು
ಈತ ಆನಂದ ಪ್ರದಾತ ೧
ಬಣ್ಣಿಸಲೆನಗಿನ್ನೊಶವೆ ಇವರ ಚರಿಯ
ಕಣ್ಣುಗಳಿಂದಲಿ ಕಾಣುತ ಪೂರ್ಣಯ್ಯತಾನಾಗಿ ವಿಧೇಯ
ಧನ್ಯನೆನಿಸಿ ಸತ್ಪುಣ್ಯ ಪಡೆದುದರಿಯ
ಪುಸಿಯಲ್ಲವೊ ಖರಿಯ ೨
ದಾಸವರ್ಯರಾ ವಾಸಗೈದ ಸ್ಥಾನ
ಗಯಕಾಶಿ ಸಮಾನ
ಲೇಸು ಭಕ್ತಿಯಲಿ ಸೇವಿಸಲನುದಿನ ಕೊಡುವುದುಸುಜ್ಞಾನ
ಈ ಸನ್ಮಹಿಮರ ದೂಷಿಸುವನೆ ಶ್ವಾನ | ಯಾತಕೆ ಅನುಮಾನ ೩
ನಿಗಮವಾಣಿಯ ಸಾರ ನಿರ್ಮಿಸಿರುವ ದೇಹಾಖ್ಯ ರಥವ
ಸೊಗಸಿಲಿಂದ ತಾನೇರಿ ನಗುತ ಬರುವ ಚತುರ್ದಿಕ್ಕಿಲಿ ಮೆರೆವ
ಮಿಗೆ ವಿರೋಧಿಸುವ ಪಾಪಿಗೆ ಪಲ್ಮುರಿವ ಪೊಗಳುವರಷತರಿವ ೪
ಶಾಮಸುಂದರನ ಸುಕಥಾಮೃತಸಾರ | ರಚಿಸಿದ ಬಹುಚತುರ
ಪಾಮರ ಜನರ ಪ್ರೇಮದಿ ಉದ್ಧಾರ ಮಾಡಲು ಗಂಭೀರ
ಶ್ರೀಮಾನ್ ಮಾನವಿಕ್ಷೇತ್ರನೆ | ನಿಜಾಗಾರವೆಂದೆನಿಸಿದ ಧೀರ ೫

 

೧೭೯
ರಂಗವಲಿದ ದಾಸರಾಯ | ಸಾಧು
ಸಂಗವಿಡಿಸಿ ಕರುಣದಿ ಪಿಡಿ ಕೈಯ್ಯ ಪ
ಕುಂಭಿಣಿ ಸುರನಾಥ | ನಂಬಿದೆ ನಿನ್ನ ಪಾದ
ಬೆಂಬಿಡದಲೆ ಕಾಯೊ ||
ಸ್ತಂಭ ಮಂದಿರ | ಕಂಬು ಕಂಧರ
ಭಕ್ತಮಂದಾರ ೧
ಹರಿಕಥೆ ಸುಧಾಸಾರ | ಸುರಸಗ್ರಂಥವ ಜಗದಿ |
ವಿರಚಿಸಿರುವ ನಿನ್ನ ||
ವರ ಉಪಕಾರ | ವರ್ಣಿಸಲಪಾರ |
ಪರಮೋದಾರ ೨
ಸಾಮಗಾನ ವಿಲೋಲ | ಶಾಮಸುಂದರವಿಠಲ
ಸ್ವಾಮಿಯ ಭಕುತಿ | ನಿ |
ಸ್ಸಿಮ ಪ್ರಹ್ಲಾದ | ಅನುಜ ಸಲ್ಹಾದ
ನೀಡೆನಗಲ್ಹಾದ ೩

 

೧೯೮
ರಂಗವಲಿದ ದಾಸಾಗ್ರಣಿ ಮಾನವ
ಶಿಂಗಾರ್ಯರ ಸುತನಮೋ ನಮೋ ಪ
ಮಂಗಳಕರ ಕುಲಿಶಾಂಗ ಮತಾಂಬುಧಿ
ತಿಂಗಳಸುಗುಣಿತ ನಮೊ ನಮೊ ಅ.ಪ
ತುಂಗಮಹಿಮ ದ್ವಿಜ ಪುಂಗವ ವಿಜಿತಾ
ನಂಗ ಶರ ದಯಾಪಾಂಗ ನಮೋ ||
ಡಿಂಗರೀಕ ಜನಪಾಲ ನಮೊ ಭವ
ಭಂಗ ವಿದಾರಣ ನಮೊ ನಮೊ ೧
ಜಾತರೂಪ ಶಯ್ಯಾತ್ಮಜ್ಯಾತೆ ಹರಿ |
ದೂತ ಪ್ರಹ್ಲಾದರನುಜ ನಮೊ ||
ಪೂತುರೆ ಘನ ಸತ್ವಾತಿಶಯದ ಪ್ರ
ಖ್ಯಾತ ದಿನಪ ಪ್ರಸೂತ ನಮೊ ೨
ಪಾತಕಾದ್ರಿಜೀಮೂತ ಭ್ರಾತ ಪಣಿ
ನಾತ ಪುರಂದರ ಪೋತನಮೊ
ಪೂತಗಾತ್ರ ಶುಭದಾತ್ರ ಭರಿಕ್ಷ
ಣ್ಮಾತಿರಿಷ್ಯಶ್ವ ಸುಪ್ರೀತ ನಮೊ ೩
ಮೌನಿವರ್ಯ ವರದೇಂದ್ರ ಪಾದಾಂಬುಜ
ರೇಣು ವಿಭೂಷಿತ ಪಾಲಯಮಾಂ
ಧೇನು ನಿಧೆ ದೇವಾಂಶಜ ಪರಮತ
ಕಾನನ ಪಾವಕ ಪಾಲಯಮಾಂ ೪
ಮಾನವಿ ಕ್ಷೇತ್ರನಿಕೇತನ ಸನ್ನುತ
ಮಾನಿತ ಗುರುವರ ಪಾಲಯ ಮಾಂ
ಧೇನುಪಲ ವಿಜಯರಾರ್ಯ ಕೃಪಾನ್ವಿತ
ಧೀನೋದ್ಧರಣ ಫಾಲಯಮಾಂ
ಮಾನದಿ ಕ್ಷೇತನಿಕೇತನ ಸನ್ನುತ
ಮಾನಿತ ಗುರುವರ ಪಾಲಯಮಾಂ
ಜ್ಞಾನನಿಧೆ ದೇವಾಂಶಜ ಪರಮತ
ಕಾನನ ಪಾವಕ ಪಾಲಯ ಮಾಂ ೫
ಶೌರಿಕಥಾಮೃತ ಸಾರಗ್ರಂಥ ಕೃತ
ಸೂರಿ ಕುಲೋತ್ತುಮ ಜಯ ಜಯಭೋ
ಧಾರುಣಿ ಸುರಪರಿವಾರ ನಮಿತ ಪದ
ಚಾರುಸ್ತಂಭಾಲಯ ಜಯ ಜಯ ಭೀ ೬
ಮಂದವೃಂದ ಮಂದಾರ ಭೂಜನತ
ಬಂಧೋ ಭಯಾಪಹ ಜಯ ಜಯ ಭೋ
ನಂದಜ ಶಾಮಸುಂದರಾಂಘ್ರಿ ಅರ
ವಿಂದ ಮರಂದುಣಿ ಜಯ ಜಯ ಭೋ ೭

 

೧೭೩
ರಂಗವಲಿದ ರಾಯರ ಪಾಡಿರೆ ಪ
ಸಲೆನಂಬಿದವರ ಕಲುಷಗಳೋಡಿಸಿ
ಸಲುಹಲು ಸ್ತಂಭದಿ ನೆಲೆಸಿದಂಥ ರಾಯರ ೧
ಬಾಗಿ ನಮಿಸಿ ಮುಂ
ನವ್ಯಾತಕೆ ತವ
ಸೂಸು ನಾನಲ್ಲವೆ | ಮಾನವಿ ನಿಲಯ ೧
ದಾಸವರ್ಯನೆ | ಭಾಸುರಸ್ತಂಭ ನಿವಾಸ ಧೀರನೆ
ಈ ಸಮಯಿದಿ ಷಡ್ದ್ವೇಷಿಗಳೆನ್ನತಿ
ಘಾನಿಗೊಳಿಸುವರುದಾಸೀನ ಮಾಡದೆ ೨
ಸಾಧು ಶೀಲನೆ ಪ್ರಹ್ಲಾದ ನನುಜ ಸÀಹ್ಲಾದ ಶಲ್ಯನೆ
ವಾದಿರಾಜ ಶತಮೇಧ ನಾಮಾರ್ಯರ
ಪಾದಾರಾಧಕ ಭೇದ | ಬೋಧಕ ೩
ಭಾರತಿವರ ಕೃತ ಶಾಸ್ತ್ರಮರ್ಮವಿಚಾರ ಬಂಧೂರ
ಸಾರಸಭವ ಪಿತ | ಶ್ರೀರಮಾಪತಿ
ಶೌರಿ ಹರಿಕಥಾಮೃತ | ಸಾರ ವಕ್ತಾರ ೪
ನ ಒಲಿಸಿದ
ಪ್ರೇಮಸಾಗರ ನೀ ಮರೆದರೆ
ಈ ಪಾಮರನಿಗೆ ಯಮ
ಧಾಮವೆ ಗತಿ ನಿಜ ಹೇ ಮಮ ಸ್ವಾಮಿ ೫

 

೧೮೨
ರಂಗವಲಿದ ರಾಯಾ ಸಜ್ಜನ ಸಂಗ ಪಾಲಿಸಯ್ಯಾ
ಮಂಗಳ ಚರಿತ ಕೃಪಾಂಗನೆ ಎನ್ನಂತ
ರಂಗದಿ ನಿಲಿಸುತ ತವಾಂಘ್ರಿ ಸೇವಕನೆಂದು ಅ.ಪ
ನತಜನ ಸುರಧೇನು ನೀನೆಂದು
ನುತಿಸಿ ವಂದಿಸುವೆನೋ
ರತಿಪತಿಪಿತ ನುತ ಕಥಾಮೃತ ಗ್ರಂಥದಿ
ಸತತ ಎನಗೆ ಮತಿ ಹಿತದಲಿ ಪ್ರೇರಿಸು ೧
ಧನ್ಯನ ನೀಮಾಡೋ ಕರುಣದಿ
ಮನ್ನಿಸಿ ಕಾಪಾಡೋ
ಘನ್ನ ಮಹಿಮಕಿನ್ನು ನಿನ್ನ ಹೊರತು
ಇನ್ನಾರು ಕಾವರರಿಯೆ ಕಾಣೆ ಗುರೋ ೨
ಮಂದಮತಿ ಬಿಡಿಸೋ ಈ
ಭವ ಬಂಧನ ಪರಿಹರಿಸೊ
ಇಂದಿರೆ ಪತಿ ಶಾಮಸುಂದರವಿಠಲ
ದ್ವಂದ್ವ ಪದದಿ ಮನಹೊಂದಿಸೊ ಪೋಷಿಸೊ ೩

 

೧೭೮
ರಂಗವಲಿದರಾಯಾ ನೀ ಸತ್ಸಂಗ ಪಾಲಿಸಯ್ಯಾ ಪ
ಮಂಗಳಪ್ರದ ಪ್ರಥಮಾಂಗಾ ಪ್ರಥಮಾಂಗ ಮತಾಂಬುಧಿ
ತಿಂಗಳ ವರ ಕವಿ ಜಂಗುಳಿಗೆ ಅ.ಪ
ಬುಧಜನನುತ ಮನುಜಾ ಪಂಚವದಾನಾರ್ಯರ ತನುಜಾ
ಸದಯ ನಿನ್ನಯ ಪಾದ ಪದುಮವ ಭಜಿಸದೆ
ಅಧಮನಾದೆ ನಾ ಸದಮಲ ಕಾಯಾ೧
ಸುತಿಸುವೆ ಜಗದೊಡೆಯಾ ನಾಮಕ ಸತತ ಪಿಡಿಯೊ ಕೈಯ್ಯಾ
ಕ್ಷಿತಿಯೊಳು ಪೂರ್ವದಿ ಪತಿತರ ಸಲಹಲು
ಶತಕ್ರತುರಾಯರ ಸುತನೆನಿಸಿದ ಗುರು ೨
ವೃಂದಾರಕ ಸ್ತೋಮಾ ವಂದಿತ ನಂದನಂದನ ಶಾಮ
ಸುಂದರನೊಲುಮೆಲಿ ಛಂದದಿ ಸ್ತಂಬ ಸು
ಮಂದಿರದೊಳು ಘನ ಸಿಂದು ಮೆರೆವ ಗುರು ೩

 

೧೮೩
ರಂಗವೊಲಿದ ದಾಸರಾಯ | ಸತ್ಕವಿಜನಗೇಯ ಪ
ಮಂಗಳಕರ ಕುಲಿಶಾಂಗ ಮತಾಂಬುಧಿ
ತಿಂಗಳ ಮಾನವ ಸಿಂಗಾರ್ಯರ ಸುತ ಅ.ಪ
ಶರಣು ಮಂದಾರ ಪರಮೋದಾರ ಪರಿಪಾಲಿಸು ಧೀರ
ಸರಸಿಜ ತುಳಸಿ ಮಣಿ ಸುಹಾರ ಶೋಭಿತ ಕಂಧರ
ಶಿರಿವರ ಹರಿಕಥಾ ಮೃತ ಸಾರ ಸು
ರಸಗ್ರಂಥ ಕೃತ ಕರುಣಾನಿಧೆ ಗುರು ೧
ಜ್ಞಾನಿಕುಲನಾಥ ಭಾನುಜಸೂತ ಭವವಾರಿಧಿ ಪೋತ
ಕ್ಷೋಣಿ ಸುರವ್ರಾತ ನಮಿತ ಸುಖ್ಯಾತ ವರದಾನಿ
ಪುನೀತ | ಧೇನುಪಾಲ ದಾಸಾರ್ಯರ ಪದಯುಗ
ಧ್ಯಾನಿತ ಮಾನಿತ ಮಾನವಿ ನಿಲಯ ೨
ಕಾಮಿತದಾತ ದುರಿತ ವಿದೂರ ಸನ್ಮಹಿಮಾಪಾರ
ಪಾಮರ ಹೇಮಶಯ್ಯ ಕುಮಾರ ಕುಮತಾಬ್ಧಿ ಸಮೀರ
ಕೋಮಲಾಂಗ ಮಮಸ್ವಾಮಿ ಸೋಮನುತ
ಶಾಮಸುಂದರ ಸುಧಾಮ ಪ್ರೇಮ ಸಖ ೩

 

ಶ್ರೀ ನರಸಿಂಹ ದೇವರು
೭೨
ರಕ್ಷಿಸೆನ್ನನು ನಿರುತ ನರಮೃತನಾಥ ಪ
ರಕ್ಷಿಸೆನ್ನ ಜಗತ್ಕುಕ್ಷಿಯೆ ಕರುಣಾಕ
ಟಾಕ್ಷದಿಂದೀಕ್ಷಿಸಿ ತ್ರ್ಯಕ್ಷಾಂತರ್ಗತದೇವ ಅ.ಪ
ಪತಿತಪಾವನ ಪರಶತ ಮೋದಗತ ಬೇದ
ಚತುರ್ವೇದ ಪಾಲ ಶತಕ್ರತು ಕೃತಿನಾಥ ||
ಯತಿ ತತಿ ಮಾನಸವೃತ ತೇಜ ಭಾಸ್ಕರ
ಸತತ ನಿನ್ನಯ ಪಾದವ | ಸದ್ಭಕುತಿಯಲಿ
ಸ್ತುತಿಪ ದಾಸರ ಸಂಗವ | ಗರೆದು ಭವ
ವ್ಯಥೆಯ ಬಿಡಿಸಿ | ಮಾಧವ ನೀನೊಲಿದತಿ
ಹಿತದಿಂದುಣಿಸು ನಿನ್ನ ಕಥೆ ಸುಧಾರಸವ ೧
ಅರಿದರ ಗದಾಪದ್ಮಧರ ಚತುಷ್ಟಯಕರ
ಶರಚರಗಿರಿ ಧೃತ ಧರಣ ತಸ್ಕರ ಹರ
ನರಗಾತ್ರ ಹರಿವಕ್ರ ಸುರಪಾನುಜವಟು
ಪರಶುಪಾಣಿಯೆ ವಾನರ ನರಪಾಲಕವಿಗ್ಹಿÀ ತಾಂ
ಬರಕಲ್ಕಿ ಶರಣ ಜನರು ಭಕ್ತಿಪರವಶದಲಿ ಕೂಗಿ
ಕರೆಯಲಾಕ್ಷಣ ಓ ಎಂದು ಭರದಿ ಬಂದು
ಪೊರೆವ ಪ್ರಭು ನೀ ಎಂದು ಬುಧರು ಪೇಳ್ವ
ವರವಾಕ್ಯ ಮನಕೆ ತಂದು ಪ್ರಾರ್ಥಿಪೆ ನಿನ್ನ
ಚರಿತೆ ಪಾಡುವ ಸುಖಗರಿಯೊ ಬಂಧು ೨
ಸಿಂಧುರ ವರದಾತ ಸಿಂಧು ಶಯನ ಶಾಮ
ಸುಂದರ ವಿಠಲ ಇಂದಿರಾತ್ಮಕ ತ್ರಯ
ಮಂದಿರ ಕಾರ್ಪರ ಮಂದಿರ ತರುರಾಜ
ಮಂದಿರ ದ್ವಿಜ ಮಧ್ಯ ಮಂದಿರಾತ್ಮಜ ಹೃ
ನ್ಮಂದಿರ ಸದ್ಧಕ್ತ ಮಂದಾರ ಭೂರುಹ ೩

 

ಶ್ರೀಗರುಡದೇವರು
೧೬
ರಕ್ಷಿಸೆನ್ನನು ಪಕ್ಷೀಂದ್ರನೆ ನೀನು ಪ
ರಕ್ಷಿಸೆನ್ನನು | ಪಕ್ಷಿಪ ಕರುಣಿಕ
ವಾಕ್ಷದಿಂದೀಕ್ಷಿಸು | ತೀಕ್ಷಣ ಬಿಡದೆ ಅ.ಪ
ತಂದೆಯನುಜ್ಞದಿ | ಸಿಂಧೂರ ಕೂರ್ಮ
ದ್ವಂದ್ವ ಪ್ರಾಣಿಗಳ | ತಿಂದ ಮಹಾತ್ಮ ||
ಅಂದು ಪೀಯೂಷವ | ತಂದು ಮಾತೆಯ
ಬಂಧನ ಬಿಡಿಸಿದ ಬಂಧುರ ಮಹಿಮ
ಗಗನ ಗಮನ ಪನ್ನಪನೆ ಪ್ರಾರ್ಥಿಪೆ
ಮಿಗೆ ಕರುಣದಿ ಯನ್ನಘು ದೂರೋಡಿಸಿ ೧
ಧಾರಣಿಯೊಳವತಾರ ರಹಿತ ಶೃಂ
ಗಾರವಾದ ಬಂಗಾರ ಶರೀರ ೨
ವಂದಿಪೆ ವಿನುತ ನಂದನ ಶಾಮ
ಸುಂದರವಿಠಲನ | ಶ್ಯಂದನ ಶೂರ ೩

 

೬೪
ರಕ್ಷಿಸೋ | ಬೇಗನೆ ಬಂದು ರಕ್ಷಿಸೊ | ಪ
ರಕ್ಷಿಸೊ ರವಿಕೋಟಿ ತೇಜ | ಜಗತ್
ಕುಕ್ಷಿನಂಬಿದೆ ಕಲ್ಪಭೂಜ | ಆಹಾ
ಪಕ್ಷೀಂದ್ರವಾಹನ | ಲಕ್ಷ್ಮೀಪತಿಯೆ ನೀನು
ಪೇಕಿಸದೆನ್ನನು ಈಕ್ಷಿಸಿ ಕರುಣದಿ ಅ.ಪ
ಕೇಶವ ಖಳಕುಲ ನಿಧನ | ನರ
ಕೇಸರಿ ಶ್ರೀಹಯವದನ | ಗುರು
ಕೀಶ ನಮಿತ ಪಾದ ನಳಿನ | ಸಮೀ
ರಾಶನ ಪರ್ಯಂಕಶಯನ | ಆಹಾ
ದಾಶರಥಿಯೆ ಭವದಾಶೆ ಬಿಡಿಸಿ ತವ |
ದಾಸ ಜನರ ಸಹವಾಸದೋಳಿಟ್ಟನ್ನ ೧
ಪಶುಪಾಲ ಮಿಸುನೀಯ ವಸನ | ಧ್ರುವ
ಪಶುಪತಿ ಸುತ ಗುಣಪೂರ್ಣ | ದುಷ್ಟ
ಶಿಶುಪಾಲ ಮದವಿಭಂಜನ | ಪಾಹಿ |
ವಸುದೇವ ಸುತ ನಿರಂಜನ | ಆಹಾ |
ವಸುಗರ್ಭನ ಪೆತ್ತ ಕುಸುಮದಳೇಕ್ಷಣ |
ವಸುಮತಿಯೊಳು ಎನ್ನ ಪಿಸುಣನೆಂದೆನಿಸದೆ ೨
ನಾಶರಹಿತ ವನಮಾಲ | ಧರ
ಶ್ರೀಶಾಮಸುಂದರವಿಠಲ | ಗುಡಾ
ಕೇಶ ವರದ ಸುಶೀಲ | ಪಾಕ |
ಶಾಸನಾನುಜ ಗಾನಲೋಲ | ಆಹಾ |
ಪೂಶರಪಿತ ಸ್ವಪ್ರಕಾಶ ಪರಮ | ವಿ
ಲಾಸವ್ಯಾಸ ಮಹಿದಾಸ ಲೋಕೇಶನೆ ೩

 

ಶ್ರೀ ರಾಮಚಂದ್ರ
೮೩
ರಘುರಾಮಾ ರಘುರಾಮಾ
ಮುಗಿವೆ ಕರವ ಎನ್ನಫ ಓಡಿಸಿ ಪೊರೆ ಪ
ಕ್ಷಿತಿ ಭಾರಕೆ ಖಳ ತತಿ ಸಂಹರಿಸಲು
ದ್ವಿತಿಯ ಯುಗದಿ ದಶರಾಥಸುತನೆನಿಸಿದ ೧
ಶಿಲೆಯಾದ ಅಹಲ್ಯೆಯ ತುಳಿದ ಪಾದದಿಂ
ಕಲುಷಿತ ಕಳೆದುಸಿರದೆ ಸಲುಹಿದ ಕರುಣಿ ೨
ಧನುಮುರಿದು ಕ್ಷೋಣಿ ಕುಮಾರಿಯ
ಪಾಣಿ ಪಿಡಿದ ಮೂರುತಿಯೇ ೩
ಪ್ರೀತಿಯಿಂದ ರವಿಜಾತನ ಭ್ರಾತಗೆ
ಭೀತಿಯ ಬಿಡಿಸಿದ ವಾತಜ ನಮಿತ ೪
ದುರುಳ ದುಶ್ಯಾಸನನ ಧುರದಿ ತರಿದು ಘನ
ಸುರರಿಗೆ ಸೌಖ್ಯವಗರೆದ ಮಹಾತ್ಮ ೫
ನಿನ್ನ ದರುಶನದಿಲೆನ್ನ ಜನ್ಮ ಪಾವನ್ನವಾಯತೈ
ಸನ್ನುತ ಮಹಿಮಾ೬
ಶಿಂಧಶತಪುರ ಮಂದಿರ ಶಾಮ
ಸುಂದರವಿಠಲ ಬಂಧುರ ಚರಿತ ೭

 

೧೭೫
ರಥವೇರಿ ಬರುತಿಹ ಗುರುರಾಯ ನಾ ನೋಡಮ್ಮಯ್ಯ ಪ
ಅತಿಸದ್ಭಕುತಿಲಿ ಸ್ತುತಿಸುವರಿಗೆ ಸತ್ಪಥವನೆ ತೋರುವ
ಕ್ಷಿತಿಪತಿದಾಸರೆ ಅ.ಪ
ತಿದ್ದಿಹಚ್ಚಿದ ನಾಮ ಮುದ್ರೆಗಳಿಂದಲೋಪ್ಪುತಿಹರೇ ನೋಡಮ್ಮಯ್ಯ |
ಅರ್ಥಚಂದ್ರಸಮ
ಫಣಿಯೊಳು ತಿಲಕ ಶೋಭಿಪರೇ ನೋಡಮ್ಮಯ್ಯ |
ಕ್ಷುದ್ರರ ಮುಖಕೆ ಬೀಗ ಮುದ್ರೆಯ ನೊತ್ತುತ ಸದ್ವೈಷ್ಣವರ
ನುದ್ಧರಿಸಿದ ಕರುಣೀ ೧
ವರಶ್ರುತಿ ಸಮ್ಮತರಥ ನಿರ್ಮಿತವಾಗಿಹುದೇ ನೋಡಮ್ಮಯ್ಯ ||
ಸ್ಮರಪುರಹರ ಸಾರಧಿಯಾಗಿಹರೆಂದರಿತವರಿಗೆ
ಶುಭಗರೆವ ದಯಾನಿಧೇ ೨
ಶಾಮಸುಂದರನ ನಾಮಸುಧಾರಸವ ನೋಡಮ್ಮಯ್ಯ
ಶ್ರೀಮಾನ್ ಮಾನವಿ ಕ್ಷೇತ್ರವೆ ತವನಿಜ
ಧಾಮವೆಂದೆನಿಸಿ ಸುಸ್ತಂಭದೊಳಿಹರೇ ೩

 

೧೨೬
ರಾಘವೇಂದ್ರ ಗುರುರಾಯ ಬಾಗಿ ನಮಿಸುವೆ ಬೇಗ
ಕೈಯ್ಯ ಪಿಡಿದು ಪಾಲಿಸಯ್ಯ | ಭಾಗವತ ಜನಪ್ರಿಯ ಪ
ಮಧ್ವಮತಪಾರಾವಾರ | ಶುದ್ಧಪೂರ್ಣ ಸುಧಾಕರ
ಅದ್ವೈತಾದ್ರಿ ಶತಧರ | ಉದ್ಧರಿಸೈ ಯೋಗೀಶ್ವರ ೧
ಭಾಸುರ ಶ್ರೀಮಂತ್ರ್‍ಗಾರ | ವಾಸ ಸುಕಾರಷಾಂಬರ
ಭೂಷ ಭೂಸುರ ಪರಿವಾರ ಪೋಷ ಪ್ರಹ್ಲಾದವತಾರ ೨
ತುಂಗಾಭದ್ರಾ ಸುತೀರದಿ |ಶೃಂಗಾರ ಸದ್ರ‍ವಂದಾವನದಿ
ಪಿಂಗಳ ಸನ್ನಿಭಾಂಗದಿ | ಕಂಗೊಳಿಸಿದ ದಯಾಂಬುಧಿ ೩
ಮರುಥಾವೇಶ ಯಮಿವರಿಯಾ | ದುರಿತಾಹಿ ವೈನತೇಯ |
ಪರಮೋದಾರ ಪರಿಮಳಾರ್ಯ | ತರಳನೆಂದು ಕರುಣಿಸಯ್ಯ ೪
ಶಾಮಸುಂದರ ಭಕ್ತಾಗ್ರಣಿ | ಭೂಮಿಯೊಳು ನಿನಗಾರಣೆ |
ಕಾಮಿತಾರ್ಥ ಚಿಂತಾಮಣಿ | ಸ್ವಾಮಿ ಶ್ರೀ ವ್ಯಾಸ ಸನೌನಿ ೫

 


ರಾಜತಾದ್ರಿ ನಿಲಯನ | ರಜನೀಶ ಧರನತೋರೆ ಪಾರ್ವತಿಯೆ ಪ
ಪಂಚಾನನ ಶಂಕರನ | ಶ್ರೀ ಹರಿಮಂಚಪದವ ಪಡೆದವನಪಂಚಬಾಣ ಮದಹರನ ಉರುವಿರಂಚಿ ಕುವರ ದೂರ್ವಾಸ ಶುಕನ ತೋರೆ ಪಾರ್ವತಿಯೆ ೧
ನಂದಿಸುಶ್ಯಂದನ ಶಿವನ ಗರಳಕಂಧರ ತ್ರಿಪುರಾಂತಕನಮಂದಾಕಿನಿಧರ ಭವನ ಸುರವೃಂದ ವಿನುತ ನಗಚಾಪಭವನ ತೋರೆ ಪಾರ್ವತಿಯೆ ೨
ಸಾಮಜ ಚರ್ಮಾಂಬರನ | ಶುಭಕಾಮಿತ ಫಲದಾಯಕನವಾಮದೇವ ಮುನಿಸುತನ | ಶ್ರೀವರಶಾಮಸುಂದರನ ಸುಖನ ತೋರೆ ಪಾರ್ವತಿಯೆ ೩

 

೧೦
ರಾಮೇಶ್ವರನ ನೋಡೋ ಹೇ ಮಾನವ
ರಾಮೇಶ್ವರನ ನೋಡೋ | ನೇಮದಿ ಕೊಂಡಾಡೊ
ನೀಮಾಡಿದಂಥ ಪಾಪ | ಸ್ತೋಮಗಳೀಡ್ಯಾಡೋ ಪ
ಘೋರಾಘದೂರವು ಭಯ ವಾರಿಧಿ ಮಧ್ಯದಲ್ಲಿ
ನಾರಶೂರ ರಘುವೀರನು ಸ್ಥಾಪಿಸಿದ ೧
ಚಿತ್ತಶುದ್ದಿಲಿ ಬಂದ | ಭೃತ್ಯಜನರ ಬಹ್ಮ
ಹತ್ಯಾದಿ ದೋಷ ಕಳೆದು | ಉತ್ತಮಗತಿ ಕೊಡುವ ೨
ಶ್ರೀ ಶಾಮಸುಂದರ | ದಾಶರಧಿ ಮಹಿಮೆ
ಲೇಸಾಗಿ ಸತಿಗೆ ಪೇಳ್ದ | ಭೇಶ ಶೇಖರನಾದ ೩

 

೧೨೯
ರಾಯರೆ ಗತಿಯು ನಮಗೆ |
ವಾಯುಮತೋದ್ಧಾರ ಶ್ರೀ ರಾಘವೇಂದ್ರಗುರು ಪ
ಶುಕವಿತ ಮೊದಲಾದ ವಿಕುಲಕ್ಕೆ ಮಧುರಫಲ
ಯುಕುತ ಮಾಗಿಹ ಚೂತ ಸುಕುಜ ಗತಿಯು |
ಮುಕುತಿಗೆ ಸುಜ್ಞಾನ ಭಕುತಿ ವಿರಕುತಿಗತಿಯ
ಅಕಳಂಕ ಶ್ರೀಮಂತ್ರಮಂದಿರದಿ ನೆಲೆಸಿಪ್ಪ ೧
ಋಷಿಗಳಿಗೆ ಪ್ರಣವೆಗತಿ ಝಷಗಳಿಗೆ ಜಲವೆ ಗತಿ
ಸಸಿಗಳಭಿವೃದ್ಧಿಗೆ ಶಶಿರವಿ ಗತಿಯೊ
ಶಿಶುಗಳಿಗೆ ಜನನಿಗತಿ ಪಶುಗಳಿಗೆ ತೃಣವೆ ಗತಿ
ಅಸಮ ಮಹಿಮೆಯಲಿ ಮೆರೆವ ಮಿಸುನಿ ಶಯ್ಯಜರಾದ ೨
ಕಾಮಿನಿ ಮಣಿಯರಿಗೆ ಕೈಪಿಡಿದ ಕಾಂತಗತಿ
ಭೂಮಿ ಬುಧರಿಗೆ ಮಧ್ವಶಾಸ್ತ್ರ ಗತಿಯೊ
ತಾಮರಸ ಸಖ ಸುತನ ಧಾಮ ಭಯ ಪೋಪುದಕೆ
ಶಾಮಸುಂದರವಿಠಲ ಸ್ವಾಮಿ ನಾಮವೆ ಗತಿಯೊ ೩

 


ಲಂಬೋದರನೆ ನಿನ್ನ ನಂಬಿರುವೆನು ಎನ್ನ
ಬೆಂಬಿಡದಲೆ ಪೊರೆ | ಅಂಬಿಕಾತನಯನೆ ಪ
ಖೇಶನೆ ಎನ್ನನು | ದಾಸೀನ ಮಾಡದೆಲೇಸಾಗಿ ಪೋಷಿಸು | ವಾಸುಕಿ ಭೂಷಣ ೧
ನಾಕೇಶವಂದಿತ | ಆಖುವಾಹನ ಎನ್ನ |ಕಾಕುಮತಿ ಕಳೆದು ನೀಕಾಯೊ ಕರುಣದಿ ೨
ಶ್ರೀಮನೋಹರ ಸ್ವಾಮಿ | ಶಾಮಸುಂದರ ಸಖಕಾಮಹರಸುತ | ಸಾಮಜವದನನೆ ೩

 

೧೧೭
ವಂದಿಪೆ ಚರಣಾರವಿಂದಕೆ ಸದ್ಗುರು ವಾದಿರಾಜ
ಮಂದ ಮತಿಯ ಬಿಡಿಸಿಂದಿರೇಶನ ತೋರೋ ಪ
ದುರುಳ ಬುದ್ಧಿಲಿಂದ ಮರೆದು ಬಿಟ್ಟೆ ನಿನ್ನ ವಾದಿರಾಜ
ಧರಣಿಮಂಡಲದೊಳು ಪಾಪಿಷ ನಾನಾದೆ ವಾದಿರಾಜ
ಪರಮ ಪುರುಷ ಭಾವಿ ಮರುತ ನೀನೆಂದು ವಾದಿರಾಜ
ಹಿರಿಯರ ಮುಖದಿಂದ ನಿಶ್ಚೈಸಿದೆ ವಾದಿರಾಜ ೧
ಶಿರದೊಳು ಹೂರಣದ್ಹರಿವಾಣ ಧರಿಸುತ ವಾದಿರಾಜ
ವರ ಭಕ್ತಿಯಿಂದಲಿ ತುರುಗಾಸ್ಯಗುಣಿಸಿದ ವಾದಿರಾಜ
ಗುರು ಜಗನ್ನಾಥ ದಾಸರ ಸ್ವಪ್ನದೊಳು ಬಂದು ವಾದಿರಾಜ
ಹÀರಿಕಥಾಮೃತಸಾರವಿರಚಿ ಸೆಂದರು ವಾದಿರಾಜ ೨
ಶ್ರೀಮಧ್ವಾರ್ಯಮತ ಸಾಮ್ರಾಜ್ಯ ಧ್ವಜಪೆತ್ತಿ ವಾದಿರಾಜ
ಶಾಮಸುಂದರ ಕೃಷ್ಣ ನಾಮದ ಮಹಿಮೆಯ ವಾದಿರಾಜ
ಪಾಮರಂಗೆ ಪೇಳಿ ಪ್ರೇಮದಿ ಸಲುಹಿದ ವಾದಿರಾಜ ೩

 

೨೫೦
ವಂದಿಸೋ ಎಲೆ ಮಾನವಾ ಮಾಣದೆ ಸದಾ
ಒಂದೆ ಮನದಿ ಶ್ರೀವಿದ್ಯಾಮಾನ್ಯ ಮುನೀಂದ್ರರ ಪ
ಧರಣಿಯಂದದಿ ಕ್ಷಮಾಭರಿತ ಮಂಗಲದಾತ |
ಶರಧಿಯಂದದಿ ದಯಾಗುಣಶೀಲರೋ | ಸುರ
ನದಿಯಂದದಿ ದುರಿತಪರಿಹಾರಕರು | ತರಣಿ
ಯಂದದಿ ಭಾರ ತಿಮಿರನೋಡಿಸುವರೋ ೧
ಈಶನಂದದಿ ಜಿತಪೂಶರವರ |
ಕಮ | ಲಾ ಸನನಂತೆ ಭೂಸುರ ಶ್ರೇಷ್ಟರು |
ಸಾಸಿರ ಮುಖನಂತೆ ಯೋಗಸುಸಾಧಕರು
ಭೇಶನಂದದಿ ಸುಧಾಕರರಾಗಿ ತೋರ್ಪರೋ ೨
ಶಾಮಸುಂದರವಿಠಲಸ್ವಾಮಿ ಉಪಾಸನೆ |
ನೇಮದಿಂದಲಿ ಸತತಗೈಯುತಲಿ
ಶ್ರೀಮಧ್ವಾರ್ಯರ ಶಾಸ್ತ್ರ ಸೋಮಪಾನದ
ಸುಖ | ಪ್ರೇಮದಿಂದಲಿ ದ್ವಿಜಸ್ತೋಮಕೆಗರೆವರು ೩

 

೨೧೫
ವಧು ವರರ ಯದ್ಧರಿಸೊ ಉದಧಿಶಯನ
ಒದಗಿಸುತಲಾಯುರಾರೋಗ್ಯ ಸುಜ್ಞಾನ ಪ
ಯತಿಪೂಜೆ ಕ್ಷಿತಿದೇವ ತತಿಸೇವೆ
ತಿಥಿತ್ರಯದ ವೃತನೇಮ ಮೊದಲಾದ ಸತ್ಕಕರ್ಮವ
ಮತಿಯಿಂದ ಗೈಯುತಲಿ ಪತಿತಪಾವನ ನಿನ್ನ
ಕಥೆಗಳನು ಕೇಳ್ವದಕೆ ರತಿಯಿತ್ತು ಪ್ರತಿದಿನದಿ ೧
ಹಿರಿಯರಲಿ ವಿಶ್ವಾಸ ಗುರುಮುಖದಿ ಉಪದೇಶ
ಮರುತ ಸಚ್ಛ್ಯಾಸ್ತ್ರದಔಯಾಸವ
ಪರಮ ಸದ್ಭಕ್ತಿಯಲಿ ನಿರುತದಲ್ಲಿ ಗೈಯುದಕೆ
ಸ್ಥಿರವಾದ ಮನವಿತ್ತು ಮರಿಯದಲೆ ಮಾರಮಣ ೨
ಸಾಮಗಾನವಿಲೋಲ ಶಾಮಸುಂದರವಿಠಲ
ಸ್ವಾಮಿಮನ್ನಿಸಿ ಎನ್ನ ಎನ್ನ ವಿಜ್ಞಾಪನೆ
ಯಾಮಯಾಮಕೆ ನಾಮಸುಧೆಯನು ಸವಿಪ
ಈ ಮಹಾಸುಖ ಗರೆದು ಪ್ರೇಮದಿಲಿ ಕೈಪಿಡಿದು ೩

 

೧೨೦
ವರದಾತೀರದಿ ನೆಲಸಿಹ ಗುರುವರನ್ಯಾರೆ ಪೇಳಮ್ಮಯ್ಯ ಪ
ವರದಾಯ ಶ್ರೀ ರಾಘವೇಂದ್ರರ
ಕರುಣ ಪಡೆದ ಸುಶೀಲೇಂದ್ರ ಮುನಿಪನೆ ಅ.ಪ
ದರಪೋಲುವ ಕಂಧರದಿ ತುಲಸಿ ಮಣಿಹಾರ | ಪೇಳಮ್ಮಯ್ಯ
ಅರಶಶಿಸಮ ಸುವಿಶಾಲ ಫಾಲದಲಿ ತಿಲಕ ಪೇಳಮ್ಮಯ್ಯ
ಧರಿಸಿ ಧರಣಿಯೋಳ್ ಪರಿ ಪರಿ ವಿಭವದಿ
ಮೆರೆದ ಕರುಣವರ ಪುಣ್ಯ ಪುರುಷನ ೧
ತನುಮನಧನ ವನಿತಾದಿ ವಿಷಯ ವಿರಹಿತನು ಪೇಳಮ್ಮಯ್ಯ |
ತನುರಹಿತ ಮಾರ್ಗಣ ತೃಣ ಸಮವೇಣಿಸಿಹನು ಪೇಳಮ್ಮಯ್ಯ |
ಅನಿಮಿಷ ಲೋಚನೆ ಅನುಮಾನಿಸದಿರು
ಅನಿಮಿಷಾಮಶರಿವರನನುದಿನ ಸೇವಿಸು ೨
ಯತಿ ಶಿರೋಮಣಿ ಧೀರೇಂದ್ರರ ಹಿತಕತಿ ಪಾತ್ರ ಪೇಳಮ್ಮಯ್ಯ
ಅತುಳ ಮಹಿಮೆ ಸುಕೃತೀಂದ್ರ ಹೃದಯಶತಪ್ರ ಪೇಳಮ್ಮಯ್ಯ
ಸತತ ರವಿ ಎನಿಸಿ ಶಾಮಸುಂದರನ
ಅತಿ ಭಕುತಿಲಿ ತುತಿಪ ಗುಣನಿಧಿ ೩

 

೧೪೦
ವರದೇಂದ್ರ ವರದೇಂದ್ರ
ವರದಾಯಕ ಗುರು | ವರಗುಣಸಾಂದ್ರ ಪ
ಪಾವನ ಚರಿತ ವೃಂದಾವನ ಮಂದಿರ
ಕೋವಿದ ಜನ ಸುಸೇವಿತ ಸದಯ೧
ಕಾಲಾಷಾಯಾಂಬರ | ಭೂಷಿತ ಎನ್ನಯ
ದೋಷಗಳೆಣಿಸದೆ ಪೋಷಿಸು ಸತತ ೨
ಕಠಿಣ ಭವಾಂಬುಧಿ ಘಟಜ ಕುಟಿಲಮತ
ವಿಟಿಪಿ ಕುಠಾರಿ ಉತ್ಕಟ ಸನ್ಮಹಿಮ ೩
ನತ ಸುರಕ್ಷಿತಿರುಹ | ಜಿತ ರತಿಪತಿ ಶರ
ಮತಿವರ ದಶಮತಿ ದುರಿತವಾರಿಧಿ ವಿಭು ೪
ಹೇಮೋದರ ವಿತ ಶಾಮಸುಂದರನ
ಪ್ರೇಮಪಾತ್ರ ಪುಣ್ಯಧಾಮ ಮಹಾತ್ಮ ೫

 

೧೫೪
ವರ್ಣಿಸಲು ಸಾಧ್ಯವೆ ಧರೆಯೊಳಿನ್ನು
ಗುರುವರ್ಯಸುಶೀಲೇಂದ್ರ ತೀರ್ಥರ ಮಹಿಮೆಯನ್ನು ಪ
ಭಾನುನಂದನನಂತೆ ದೀನ ಮಾನವರಿಗೆ
ಸಾನುರಾಗದಿ ಕೊಡುವ ದಾನ ನೋಡಿ ||
ಏನು ಹೇಳಲಿ ದಿವಿಜಧೇನು ಭೂರುಹಮಣಿ
ಕ್ಷೋಣಿಯೊಳು ಜಡಪಶು ರೂಪ ತಾಳಿದವು ೧
ಪರಮಠಾಧೀಶರು ಪರಿಪರಿಯಲಿಂದವರ
ಪರಮ ಔದಾರ್ಯಗುಣ ಪರೀಕ್ಷಿಸುತಲಿ
ಬೆರಳು ಕಚ್ಚುತಲಿ ಬೆರಗಾಗಿ ಜಗದೊಳಗೆ
ಸರಿ ಇವರಿಗಿಲ್ಲೆಂದು ಶಿರದೂಗಿ ಹೊಗಳಿದರು ೨
ಧೀಮಂತ ಜನರೊಡೆಯ ಶ್ರೀಮಂತಮಂದಿರದ
ಸ್ವಾಮಿಗಳ ಪೂರ್ಣ ಪ್ರೇಮ ಪಡೆದು |
ತಾಮರಸ ಭಾವ ಪೂಜ್ಯ ಶಾಮಸುಂದರ ಮೂಲ
ರಾಮ ಮೂರ್ತಿಯನು ಭೂಮಿಯೊಳು ಮೆರೆಸಿದರು ೩

 

೧೪೧
ವರ್ಣಿಸಲು ಸಾಧ್ಯವೇ ಧರೆಯೊಳಿನ್ನ
ವರದೇಂದ್ರಗುರು ನಿನ್ನವರ ಮಹಿಮೆಯ ಪ
ದಶಪ್ರಮತಿ ಸುಮತಾಖ್ಯ | ಬಿಸಜನಿಧಿಗೆ ಉಡುನಾಥ
ವಸುಧಿ ಸುಮನಸವ್ರಾತ | ನಮಿತ ಖಾತ |
ವಸುಧೀಂದ್ರ ಕರಜಾತ | ಸುಶರಣರ ಸುಖದಾತ |
ವಸುಧೀಶ ಪಸರಿಸಿದ | ಅಸಮ ತವ ಚರಿತೆಯನು ೧
ಸಾರ ಕನ್ನಡದಲಿ ನೀರಚಿಸುತಲಿ ತಂತ್ರ |
ಸಾರ ಮಂತ್ರವ ಪರಮ ಕಾರುಣ್ಯದಿ ||
ಶ್ರೀರಂಗನೋಲಿಸಿದ ಧಾರುಣಿಪ ದಾಸರಿಗೆ
ಸಾರಿ ಪೇಳಿದ ಪರಮೋಧಾರ ಜಿತಮಾರ ೨
ಪುಣೆ ಎಂಬೊ ಪಟ್ಟದಿ ತನುಬಿಟ್ಟು ಮುದದಿಂದ
ಗುಣನಿಧಿ ಪ್ರಾಣೇಶದಾಸಾರ್ಯರ
ಮನೆಯ ಹಿತ್ತಲದೊಳಗೆ ಬಣವಿ ಬುಡದಲಿ ಬಂದು
ಘನ ತುಲಸಿ ರೂಪದಲಿ ಜನಕೆ ತೋರಿಸಿ ಚಿತ್ರ ೩
ವಾದದಲಿ ರಾಮಾಖ್ಯ ವಾದಿಯಪ ಜಯ ಪೊಂದಿ
ಸಾದರದಿ ಗಜ ಭೂಷಣಾದಿಗಳನು ||
ಪಾದಕರ್ಪಿಸಲಾಗ ಭೂದೇವ ಜನಕಿತ್ತ
ಮೋದ ಬಡಿಸಿ ನಿನ್ನ ಔದಾರ್ಯ ಗುಣವ ೪
ಶಾಮಸುಂದರ ಮೂಲ ರಾಮಚಂದ್ರನ ಚರಣ
ತಾಮರಸ ಷಡ್ಜಪರಮ ಸುಗಣ
ಧೀಮಂತ ಶ್ರೀಮಂತ್ರಧಾಮ ನಿಲಯರ ಪೂರ್ಣ
ಪ್ರೆಮ ಸತ್ವಾತ್ರ ಮಮ ಸ್ವಾಮಿ ಸುಚರಿತ್ರ ೫

 

೧೪೬
ವಶವಲ್ಲ ವರ್ಣಿಸಲು ಸುಶೀಲೇಂದ್ರತೀರ್ಥರ
ಅಸದೃಶಮಹಿಮೆಯನು ಪ
ಬಿಸಜಸಖ ಕಿರಣ ತರಂಗ ವಸುಧೀತಳದೊಳು ಇವರ
ಸುಶಿತ ಸತ್ಕೀರ್ತಿಯ ಪಸರಿಸಿರುವುದು ಘನ್ನ ಅ.ಪ
ಭಕುತಿಪೂರ್ವಕವಾಗಿ ಸತಲಕ್ಷೇತ್ರವ ಸಂಚರಿಸಿ |
ನಿಖಿಲ ಭೂದೇವಗಣಕೆ | ವಿಖಿನಾರ್ಚಿನ ಮೂಲ ಲಕುಮೀಶ
ದರುಶನದಿ | ಸುಖವಿತ್ತು ಪಾಲಿಸಿದ ಅಕಳಂಕಮಹಿಮ ೧
ಭಯ ಭಕುತಿಯಲಿವರ ಸೇವಿಸುವ ನರರಿಗೆ ಆವಾವ
ಭಯವಿಲ್ಲವೋ | ಗೋವತ್ಸನ್ಯಾಯದಲಿ ತಾವು
ಬೆಂಬಲರಾಗಿ | ಭೂವರಜನದಿ ವಾಸರಿವರಿಗೆ ಜಯವ ೨
ಈ ಯತಿಯೊಲುಮೆಯೇ ರಾಯರೋಲಿಮೆಯೋ ಕೇಳೋ
ರಾಯರೊಲಿಯಲು ಗುರುವಾಯು ವಲಿವಾ | ವಾಯು
ವಲಿದಾ ಮಾತ್ರದಿ | ಕಾಯಜ ಜನಕ
ಯಮರಾಯನಂಬಿಸಿ ಬಿಡಿಸಿ ಕಾಯುವನು ೩
ಸು ವಿನಲು ಸುಜ್ಞಾನ | ಶೀ ಎನಲು ಶೀಲತ್ವ |
ಲ ಯೆನಲು ಲಯದೂರವೋ | ಕಾಯ ಶುದ್ಧಿಯಲಿ
ಇಂದ್ರಾ ಎಂದುಚ್ಚರಿಸಲಾ ಇಂದ್ರಲೋಕ ಸುಖವೊ ನಿಜವೋ ೪
ವೃಂದಾರ ಕಾಂಶಜರು | ಸಂದೇಹ ವಿಲ್ಲಿವರ ವೃಂದಾ
ಮಂದಾಕಿನಿಯೊಳಗೆ ಮಿಂದ ಫಲಸಂಪ್ರಾಪ್ತಿ
ಇಂದಿರಾಪತಿ ಶಾಮಸುಂದರನ ಕರಪಿಡಿವ ೫

 

ಶ್ರೀ ಸರಸ್ವತೀದೇವಿ
೨೦
ವಾಣಿಯೆ ವೀಣಾಪಾಣಿಯೆ ಪಾಲಿಸು ಸದಾ
ಸ್ಥಾಣು ಜನನಿ ಚತುರಾನನ ರಾಣಿ ಶ್ರೀ ಪ
ಯತಿ-ತತಿ ನುತೆ ಕೃತಿ | ಸುತೆ ಸರಸ್ವತಿ ದೇವಿ
ಹಿತದಿಂದಲೆನ್ನನು | ಸುತನೆಂದು ಭಾವಿಸೆ ೧
ಬುದ್ಧ್ಯಾಭಿಮಾನಿ ಸದ್ವಿದ್ಯಾ ಪ್ರದಾಯಿನಿ
ಶುದ್ಧ ಸುಮತಿ ಕೊಟ್ಟು | ಉದ್ಧರಿಸನುದಿನ ೨
ಶಾರದೆ ದಯವ್ಯಾಕೆ | ಬಾರದೆ ಎನ್ನೊಳು
ನಾರದ ಸೇವಿತೆ | ಸೇರಿದೆ ತ್ವತ್ಪಾದ ೩
ಪವನಾಂತರ್ಗತ ಮಾಧವನ ಸನ್ಮಹಿಮೆಯ
ಕವನದಿಂದಲಿ ಸುಸ್ತವನ ಮಾಡಿಸೆ ೪
ಸಾಮಗಾನವಿಲೋಲ | ಶಾಮಸುಂದರನ ಸೊಸೆ
ಪ್ರೇಮದಿ ಮನ್ಮುಖ ಧಾಮದಿ ವಾನಿಸೆ೫

 

೨೫೧
ಪದ್ಯ
ಅಥಃ ಪ್ರಥಮೋಧ್ಯಾಯ
ವಾರಣಾಶ್ಯನ ಪಾದ ವಾರಿಜಕೆರಗುತ
ನೀರಜ ಮುಖಿ ಸರಸ್ವತಿಯಾ ||
ಸಾರ ಭಕ್ತಿಲಿ ಸ್ತುತಿಸಿ ಪೇಳುವೆ ಸತ್ಯ
ನಾರಾಯಣ ಚಾರು ಕಥೆಯಾ ಪ
ಸುರಮುಖಿವಂದಿತ ಸರಸಿಜ ಭವಪಿತ
ಕರುಣ ಶರಧಿ ಕರಿವರದಾ |
ಹರುಷದಿಂದಲಿ ನಿನ್ನ ಚರಿತೆ ಕೊಂಡಾಡಲು
ವರವ ಪಾಲಿಸು ದಯದಿಂದ ೧
ಶರನಿಧಿ ಸಂಭೂತೆ ಸುರಜೇಷ್ಟ ಸ್ಮರಮಾತೆ
ಪುರಹರ ವಂದಿತೆ ಖ್ಯಾತೆ ||
ಸ್ಮರಿಸಿ ಬೇಡುವೆ ನಿನ್ನ ಧೊರಿಯ ವರ್ಣಿಸಲೀಗ
ಗರಿಯೆ ವರವ ಸುಖದಾತೆ ೨
ಹರಿಕುಲೋತ್ತುಮ ನಿನ್ನ ಸರಸಿಜ ಪದಯುಗ
ನೆರೆನಂಬಿದೆನು ಮುದಿಂದ ||
ಹರಿಸುಚರಿತ್ರವು ಅರುಹಲು ಎನ್ನಗೆ
ಸ್ಥಿರ ಬುದ್ಧಿಕೊಡು ವಾಯುಕಂದ ೩
ಗಿರಿಜೇಶ ಶಚಿಪತಿ ಸುರತತಿಗೆರಗುವೆ
ಪರಮ ಸುಭಕ್ತಿ ಪೂರ್ವಕದಿ ||
ಹರಿದಾಸ ವರ್ಗಕೆ ಶುಭನೀಡಲೆನಗೆಂದು
ಶಿರಬಾಗಿ ಬೇಡುವೆ ಮನದಿ ೪
ಘನತರ ನೈಮಿಷವನದೊಳು ವಾಸಿಪ
ಮುನಿ ಸೂತನಲ್ಲಿಗೆ ಬಂದು |
ವಿನಯದಲಿ ವಿಜ್ಞಾಪನ ಮಾಡಿಕೊಂಡರು
ಶೌನಕಾದಿಗಳೆಲ್ಲ ನಿಂದು ೫
ಕ್ಷಿತಿಯೊಳು ಮನದಾಸೆ ಹಿತದಿಂದ ನೀಡುವ |
ವ್ರತದಾವದ್ಹೇಳಿರೆನುತ ||
ಅತಿ ಭಕ್ತಿಯಿಂದ ಕೇಳುವ ಮುನಿಗಳ ಕಂಡು
ಕಥಿಸಿದನಾಗೆತಿ ಸೂತಾ ೬
ಛಂದದಿ ಕೇಳಿರಿ ಒಂದೆ ಮನದಿ ಈಗಾ |
ನಂದದಿ ನಾರದ ತಾನೂ ||
ಹಿಂದಕ್ಕೆ ಈತೆರ ನಂದನ ಗೋ
ವಿಂದನ ಪ್ರಶ್ನೆ ಮಾಡಿದನೂ ೭
ಕಾರುಣ್ಯದಿಂದಲಿ ಸಾರಸೋದ್ಭವಕು |
ಮಾರ ನಾರದ ಮುನಿವರಗೆ ||
ವಾರಿಜಾಂಬಕನಾದ ಶೌರಿ ಪೇಳಿದ ಕಥೆ
ಸಾಧುವೆ ಮೋದದಿ ನಿಮಗೆ ೮
ವರಸುರ ಲೋಕಾದಿ ಚರಿಸುತ್ತನಾರದ |
ಹರುಷದಿ ಭೂಮಿಗೆ ಬರಲು ||
ನರರತಿ ಕಷ್ಟದಿ ಮರುಗುವದಂ ನೋಡಿ |
ಪೊರೆಟರು ಹರಿಗ್ಹೇಳಿ ಕೊಳಲು ೯
ಪದುಮಜ ಸುತ ನಾರದ ಮುನಿ ವೇಗದಿ |
ವಿದುಧರ ವಂದಿತನಾದ ||
ಯದುಪನಲ್ಲಿಗೆ ಬಂದು ಮುದಮನದಿಂದಲಿ |
ವಿಧ ವಿಧದಲಿ ಸ್ತುತಿಗೈದಾ ೧೦
ನಿಗಮಕೆ ನಿಲುಕದ ಅಗಣಿತ ಮಹಿಮನೆ
ತ್ರಿಗೂಣ ವರ್ಜಿತ ತ್ರಿವಿಕ್ರಮನೆ ||
ಪೊಗಳುವ ತವ ಪದಯುಗಕೆರಗುತ ನಾನು
ಜಗದುತ್ವತ್ತಿ ಕಾರಣನೆ ೧೧
ಮಗಳಲ್ಲಿ ಪುಟ್ಟದಿ ಮಗನನ್ನು ಕುಟ್ಟದಿ |
ಮಗನ ಮಗಳ ಮದುವ್ಯಾದಿ ||
ಮಗನ ಮಗನ ವರಪಡೆದಾತನ ಜೈಸಿ
ಮಗನ ಮಗನ ನೀನು ತಂದಿ ೧೨
ಸಿಂಧುಜರಿಪ್ರಸಖ ನಂದನ ಕೊಂದನ |
ತಂದೆಯ ತಂದೆಯಾ ಸುತೆಯಾ ||
ನಂದಿನಿಯಳಿಗಾಗಿ ನೊಂದಿದಿ ನೀ ನರ
ರಂದದಿ ಕವಿಗಣಗೇಯಾ ೧೩
ಘನ್ನ ಮಹಿಮ ನಿನ್ನ ಅನಂತ ಚರಿಯವ
ಬಣ್ಣಿಸ ಬಲ್ಲೆನೆ ದೇವಾ ||
ಪನ್ನಗರಾಜಗಾಗಣ್ಯವಾಗಿಪ್ಪುದು
ಮನ್ನಿಸು ಎನ್ನ ಬಿನ್ನಪವಾ ೧೪
ಬಾ ಮುದ್ದು ನಾರದನೆ ಬಾ ಮುನಿವರ್ಯನೆ
ಬಾ ಮೂರು ಭುವನ ಸಂಚಾರಿ
ನೇಮದಿಂದಲಿ ನಿನ್ನ ಕಾಮಿತ ಪೇಳೀಗ
ಪ್ರೇಂದಿಂದಲಿ ವೀಣಾಧಾರಿ ೧೫
ಮುರಹರ ನಿನ್ನಗೆ ಅರಿಯದ ವಾರ್ತೆಯು |
ಧರಣಿ ತ್ರಯದಿ ಉಂಟೇನೋ ||
ನರರತಿ ಕಷ್ಟದಿ ಮರುಗುತಲಿಪ್ಪರು
ಹರಿಪೇಳಿದಕುಪಾಯವನು ೧೬
ಸತ್ಯಲೋಕೇಶನ ಪುತ್ರನೆ ನಿನ್ನಯ |
ಉತ್ತಮ ಪ್ರಶ್ನೆಗೆ ನಾನು ||
ಅತ್ಯಾನಂದದಿ ಉತ್ತರ ಪೇಳುವೆ
ಚಿತ್ತೈಸು ಮುನಿವರ ನೀನು ೧೭
ನಾರದ ಶ್ರೀ ಸತ್ಯನಾರಾಯಣ ವ್ರತ
ಧಾರುಣಿಯೊಳಗಿನ ಜನರು
ಆರು ತಮ್ಮ ಪರಿವಾರದಿಂದಲಿ ಗೈಯ್ಯೆ
ಭೂರಿ ಸೌಖ್ಯದಿ ಮೆರೆವರೋ ೧೮
ದೇವನೆ ಈ ನಿನ್ನ ಸೇವಕನಿಗೆ ಸತ್ಯ ||
ದೇವನೆ ವ್ರತದ ವಿಧಾನ ||
ಸಾವಧಾನದಿ ಪೇಳು ಭಾವ ಜಪಿತ ಏಕೋ
ಭಾವದಿ ಕೇಳುವೆ ಮುನ್ನ ೧೯
ಬುಧನುತ ನಾರದ ಘೃತಕ್ಷೀರ ಶರ್ಕರ |
ಕದಳಿ ಗೋಧೂ ಮಾದಿಗಳನು ||
ಪದುಳದಿಂದಲಿ ಸುಪಾಕಗೈದು ಮೇಣ್
ವಿಧ ವಿಧ ಪಕ್ವಾದಿಗಳನು ೨೦
ಪರಮ ಭಕ್ತಿಯಲಿಂದ ಪರಿವಾರ ಸಹಿತದಿ
ಧರುಣಿಸುರನ ಪರಿಮುಖದಿ
ತುರಧೂಳಿಕಾಲದಿ ಪರಿಪರಿ ಪೂಜಿಸಿ
ಹರಿಗರ್ಪಿಸಲಿ ಬೇಕು ಮುದದಿ ೨೧
ಈರೀತಿಗೈವರ ಕೋರಿಕೆಯನು ದಯ |
ವಾರಿಧಿ ಶಾಮಸುಂದರನೂ ||
ಪೂರೈಸಿ ಪ್ರತಿ ನಿತ್ಯ ವಾರಿಜಸಹಿತದಿ
ಸೇರಿ ತಾ ನಲಿದಾಡುತಿಹನೂ ೨೨
ಇತಿ ಪ್ರಥಮೋಧ್ಯಾಯ ಸಂಪೂರ್ಣಂ
ಅಥಃ ದ್ವಿತೀಯೋಧ್ಯಾಯಃ
ಅತಿ ಮೋದದಿಂದಲಿ ಮತಿಯುತರೆ ಈಗ
ಪೃಥವಿಯೊಳಗೆ | ಪೂರ್ವದಲಿ ||
ವ್ರತಗೈದ ಸುಗುಣರ ಇತಿಹಾಸ ನಿಮ್ಮಗೆ
ಕಥಿಸುವೆ ಹಿತದಿಂದ ಕೇಳಿ ೧
ಕಾಶಿಯೊಳಗೆ ಒಬ್ಬ ಭೂಸುರ ಬಡತನ
ಕ್ಲೇಶದಿ ವಾಸಿಸುವದನು ||
ಶ್ರೀಶ ಅವನ ನೋಡಿ ಪೋಷಿಸಲು
ವೃದ್ಧ ವೇಷದಿ ಮಾತನಾಡಿಸಿದನು ೨
ಭೂತವಕದಿ ವಿಪ್ರನಾಥನೆ ತವ
ಮುಖ ಪಾಥೋಜ ಬಾಡಿದ ಬಗೆಯಾ
ಈ ತೆರ ದುಃಖದಿ ನೀ ತಿರಗುವಂಥ
ಮಾತು ಪ್ರೀತಿಲಿ ಪೇಳಯ್ಯಾ ೩
ಕಥಿಸುವೆ ಹೇವಿಪ್ರ ಹಿತದಿಂದ ನೀಯನ್ನ |
ಸ್ಥಿತಿಯಾ ಲಾಲಿಸು ಮನದಿಂದಾ ||
ಗತಿಗೆಟ್ಟು ಚರಿಸುವೆ ಪೃಥಿವಿಯೊಳಗೆ ಈಗ
ಅತಿ ಬಡತನ ದೆಶೆಯಿಂದಾ ೪
ಶ್ರೇಷ್ಟನೆ ದಾರಿದ್ರ್ಯ ಕಷ್ಟ ತೊಲಗುವಂಥ |
ಥಟ್ಟನೆ ನೀ ಪೇಳುಪಾಯಾ ||
ಘಟ್ಪ್ಯಾಗಿ ನಿನ್ನ ಉತ್ರ‍ಕಷ್ಟ ಪಾದಾಂಬುಜ
ಮುಟ್ಟಿ ಸೇವಿಪೆ ಮಹರಾಯಾ ೫
ಮಿಡುಕುತ್ತ ವಿಪ್ರನು ನುಡಿದ ಮಾತನುಕೇಳಿ |
ಕಡಲಜಪತಿ ಕವಿಗೇಯಾ ||
ಕಡುದಯದಲಿ ಪೇಳ್ದ ಬಡತನ ಕಳೆಯುವ
ಪೊಡೆವಿಯೊಳಿದ್ದ ಉಪಾಯಾ ೬
ಸಾರುವೆ ಕೇಳಯ್ಯ ಮಾರಜನಕ ನಿಜ |
ನಾರಾಯಣನ ಸು ವ್ರತವಾ
ಆರು ಜಗದಿ ಭಕ್ತಿ ಪೂರ್ವಕ ಮಾಳ್ವರು
ದಾರಿದ್ರ್ಯ ಹರಿ ದೂರಗೈವಾ ೭
ಮುದುಕನ ನುಡಿಕೇಳಿ ಮುದಮನದಿಂದಲಿ
ಸದನಕ್ಕೆ ದ್ವಿಜ ಬಂದು ತಾನೂ
ಸುದತಿ ಸಹಿತನಾಗಿ ಸತ್ಯನಾಥಾನ ಪೂಜೆ
ವಿಧ ವಿಧದಲಿ ಮಾಡಿದನೂ ೮
ಹರುಷದಿ ಈ ರೀತಿ ಧರಣಿ ದೇವನು ಮಾಡೆ |
ಶಿರಿಸತಿ ಸುತರಿಂದ ತಾನೂ ||
ಧರೆಯೊಳು ಸುಖಬಿಟ್ಟು ಪರಮ ದುರ್ಲಭವಾದ
ಹರಿಪುರ ಪಥ ಹಿಡಿದನೂ ೯
ಸೂತರೆ ಅತ್ಯಂತ ಕೌತುಕವಾಗಿಹ
ಧಾತ ಪಿತನ ಈ ವ್ರತವು
ಭೂತಳದೊಳಗೆಂತು ಖ್ಯಾತಿಯ ಪೊಂದಿತು
ಪ್ರೀತಿಲಿ ಪೇಳಿರಿ ನೀವು ೧೦
ಪ್ರತಿ ಮಾಸದಲ್ಲಿ ಆ ಪೃಥಿವಿ ದೇವನು ತನ್ನ
ಸತಿಸುತ ಪರಿವಾರ ಸಹಿತಾ
ಅತಿ ಹಿತದಲಿ ಮನೋರಥ ಪೂರೈಸುವ
ಈ ವ್ರತ ಮಾಡುತಿರಲಾಗತ್ವರಿತಾ ೧೧
ಚರಣನೋರ್ವನು ಶಿರದಿ ಕಾಷ್ಟಭಾರವ
ಧರಿಸಿ ಮಾರಲು ಬೀದಿಗಳಲಿ
ಬರುತಿರೆ ಮಾರ್ಗದಿ ಧರಣಿದೇವನೆ ಮಂ
ದಿರ ಕಂಡ ಪರಮ ಮೋದದಲಿ ೧೨
ಶ್ರೀನಿವಾಸನ ಘನಧ್ಯಾನದಿಂರ್ಚಿಪ
ಕ್ಷೋಣಿ ಸುರನ ನೋಡಿ ಜವದಿ
ಆನಂದದಲಿ ಶೂದ್ರ ಮಾನವ ಕೇಳಿದ
ಏನಿದೆಂದೆನು ತಲಾಕ್ಷಣದಿ ೧೩
ಶೂದ್ರನ ನುಡಿ ಕೇಳಿ ಆ ದ್ವಿಜ ಪೇಳ್ದನು
ಭದ್ರದ ವ್ರತದ ವಿವರವಾ
ಶುದ್ಧ ಮನದಿ ಚರಣೋಧ್ಭವ ಗೈದನಿ
ಶುದ್ಧನ ಪಾದಾರ್ಚನವಾ ೧೪
ಹರುಷದಿಂದಲಿ ಸತ್ಯ ಹರಿ ಪೂಜಿಸಿದ ಶೂದ್ರ
ಪರಮ ಸೌಜನ್ಯದಿ ಇದ್ದು ಕೊನೆಗೆ
ಪರಿವಾರಯುತನಾಗಿ ತೆರಳಿದ ಸ್ಥಿರ ಉಳ್ಳ
ಶಿರಿಶಾಮಸುಂದರನ ಪುರಿಗೆ ೧೫
ಇತಿ ದ್ವಿತೀಯೋಧ್ಯಾಯ ಸಂಪೂರ್ಣಂ
ಅಥಾಃತೃತೀಯೋಧ್ಯಾಯ
ಋಷಿ ಜನಗಳೆ ಕೇಳಿ ವಸುಧಿ ತ್ರಯದಿ ಘನ
ಪೆಸರಾದ ಇನ್ನೊಂದು ಕಥೆಯಾ
ಉಸುರುವೆ ಕೇಳ್ವರ ವ್ಯಸನವು ಪರಿಹಾರ
ಪುಸಿಯಲ್ಲಿ ಈ ನುಡಿ ಖರಿಯಾ ೧
ವರ ಉಲ್ಕಮುಖನೆಂಬ ಧರಣೀಶನೋರ್ವನು
ಹರುಚದಿಂದಲಿ ತನ್ನ ಹಿತದಾ
ತರುಣಿಯಿಂದೊಡಗೂಡಿ ಶರಧಿ ತೀರದಿ ನಿಜ
ಹರಿಯನ್ನು ಪೂಜಿಸುತಿರ್ದ ೨
ಕ್ಷೋಣಿಪಾಲಕನಿದ್ದ ಆ ನದಿತೀರದಿ |
ವಾಣಿಜ್ಯ ಮಧುನಾಯಕನೂ ||
ಸಾನುರಾಗದಿ ಬಂದು ಶ್ರೀನಿಧಿ ವ್ರತದ ವಿ
ಧಾನವೇನೆಂದು ಕೇಳಿದ ೩
ಭೂಮಿಪಾಲಕ ಮಧುನಾಮಕ ವೈಶ್ಯನ
ಆ ಮೃದು ನುಡಿಕೇಳಿ ಜವದಿ
ಕಾಮಿತದ ಸತ್ಯ ಸ್ವಾಮಿಯ ವ್ರತ್ತದಾ
ನೇಮವ ಪೇಳ್ವ ಸಮ್ಮುದದಿ ೪
ರಕ್ಕಸಾರಿಯ ಕಥಾ ಭಕ್ತಿಲಿ ಕೇಳುತ
ಲಕ್ಕುಮಿಯುತ ಮುದದಿಂದ
ಮಕ್ಕಳೆನಗಾಗಲು ಚಕ್ರಿಯ ಸುವೃತ
ಅಕ್ಕರದಲಿ ಮಾಳ್ಪೆನೆಂದ ೫
ಈ ರೀತಿ ಧೃಡ ಬ್ಯಾಪಾರಿಯು ತಾಗೈದು
ಶೌರಿ ಪ್ರಸಾದ ಸ್ವೀಕರಿಸಿ ||
ಸಾರಿ ಪೇಳಿದ ತನ್ನಾಗಾರಕ್ಕೆ ಬಂದು ತಾ
ನಾರಿಯ ಮುಂದೆ ವಿಸ್ತರಿಸಿ ೬
ಪತಿಯ ವಚನಕೇಳಿ ಸತಿ ಶಿರೋಮಣಿ ಲೀಲಾ
ವತಿಯು ತನ್ನ ಮಂದಿರದಿ ||
ಹಿತದಿರುತಿರೆ ಶಿರಿ ಪತಿ ಕರುಣದಿ ಗರ್ಭ
ವತಿ ತಾನಾದಳಾಕ್ಷಣದಿ ೭
ಹತ್ತನೆ ಮಾಸದ ಉತ್ತಮ ಪುತ್ರಿಯ
ಪೆತ್ತಳು ಆ ನಾರಿ ತಾನೂ ||
ಅತ್ಯಂತ ಸನ್ಮುದ ಚಿತ್ತನಾಗಿ ಸಾಧು
ಮರ್ತನು ಹರಿವ್ರತವನ್ನು ೮
ಸುತೆಯು ಪುಟ್ಟದ ಮೇಲೆ ಸತಿ ಲೀಲಾವತಿ ತನ್ನ
ಪತಿಗಭಿವಂದಿಸಿ ನಿಂದು ||
ಅತಿ ಭಕ್ತಿಯಿಂದಲಿ ಕಥಿಸಿಕೊಂಡಳಲ ಯದು
ಪತಿ ವ್ರತ ಮಾಡಬೇಕೆಂದು ೯
ಸುದತಿಯ ನುಡಿಕೇಳಿ ಮಧುನಾಮಕ ಸಾಧು
ವಿಧಿಸಿದ ಸುತೆ ಕಲಾವತಿಯಾ ||
ಮದುವೆಯ ಕಾಲದಿ ಉದುಪನರ್ಚಿಪೆನೆಂದು
ಮುದದಿಂದ ಪೇಳ್ದನುಪಾಯಾ ೧೦
ಪರಿಪರಿ ಸೌಖ್ಯದಿಂದಿರುತಿರೆ ವೈಶನ
ತರುಳೆಗೆ ಪೂರ್ಣಯೌವನವು |
ಬರಲು ಮಾಡಿದ ತಕ್ಕವರ ತಂದು ಲಗ್ನವ
ಮರೆತು ಬಿಟ್ಟನು ಹರಿವ್ರತವಾ ೧೧
ಶ್ರೀಮಂತವೈಶ್ಯನು ಪ್ರೇಮದಿಂದಲಿ ತನ್ನ
ಜಾಮಾತನೊಡನೆ ವ್ಯಾಪಾರಾ
ನೇಮದಿ ಗೈಯಲು ಗ್ರಾಮ ತ್ಯಜಿಸಿ ಪೋದಾ
ಆ ಮಹಾಪುರ ರತ್ನಸಾರಾ 12

 

೧೬೪
ವಿಜಯರಾಯರ ಪಾದವ ನೀ
ಭಜಿಸಿ ಬದುಕೆಲೊ ಮಾನವ ಪ
ವೃಜಿನವೆಲ್ಲವ ಕಳೆದು ಕರುಣದಿ |
ಅಜನನಯ್ಯನ ತೋರುವ ಅ.ಪ.
ಜಗಕೆ ಹರಿ ಪರನೆಂದು ತಾ ಭುಜ
ಯುಗಗಳೆತ್ತಿ ಸಾರಿದಾ ||
ಭೃಗು ಮುನಿ ಇವರೆಂದು ಭಾವಿಸಿ
ಮಿಗೆ ಸುಭಕ್ತಿಲಿ ಸರ್ವದಾ ೧
ವರಹಜಾ ತಟದಲ್ಲಿ ಚೀಕಲ |
ಪರವಿಗ್ರಾಮದಿ ಜನಿಸಿದ ||
ಪರಿಪರಿಯಲನುಭವಿಸಿ ಬಡತನ
ಜರಿದು ಭವ ವೈರಾಗ್ಯ ಧರಿಸಿದ ೨
ಭಕುತಿ ಪೂರ್ವಕವಾಗಿ ಬಿಡದಲೆ |
ಸಕಲಕ್ಷೇತ್ರವ ಚಲಿಸಿದಾ ||
ಮುಕುತಿ ಸುಖದಾತಾರನಾದ |
ಲಕುಮಿ ರಮಣನ ತುತಿಸಿದಾ ೩
ತಾ ಸುಸ್ವಪ್ನದೊಳೊಂದು ದಿನ ಶ್ರೀ
ವ್ಯಾಸ ಕಾಶಿಗೆ ತೆರಳಿದಾ ||
ವಾಸುದೇವನ ಕಂಡು ನಮಿಸಿ
ಲೇಸು ವರ ಸ್ವೀಕರಿಸಿದಾ ೪
ಪುರಂದರಾರ್ಯರ ಕವನಗಳು
ಮೂರೆರಡು ಲಕ್ಷಕೆ ತ್ರಯಪದ
ಕೊರತೆ ತಾ ಪೂರೈಸಿದ ೫
ಬಾಲೆಯೋರ್ವಳು ಬಂದು ಪ್ರಾರ್ಥಿಸೆ
ಕೇಳುತಾಕೆಯ ಪತಿಯನು
ಕಾಲ ಪಾಶವ ಬಿಡಿಸಿ ಕರುಣದಿ
ಪಾಲಿಸಿದ ಸುಮಹಾತ್ಮರ ೬
ಶ್ರೀಮನೋಹರ ಶಾಮಸುಂದರ
ನಾಮ ಮಹಿಮೆಯ ವಿಧ ವಿಧ
ಭೂಮಿ ಸುಮನಸ ಸ್ತೋಮಕನುದಿನ
ಪ್ರೇಮದಿಂದಲಿ ಬೀರಿದ ೭

 

ಶ್ರೀಲಕ್ಷ್ಮೀದೇವಿ
೫೨
ಶರಧಿ ಸಂಭೂತೆ ಕಾಯೆ | ಶಿರಬಾಗಿ ಬೇಡುವೆ ತಾಯೆ |
ಸುರಮುನಿಜನ ಸೇವಿತೆ | ಕರಪಿಡಿ ಸುಖದಾತೆ ಪ
ಸೀತೆ ಜಾನಕಿಯೆ | ಶೀತಾಂಶು ಬಿಂಬಾನಯೆ |
ಮಾತೆ ನೀ ಬಂದು ಪಾಲಿಸೆ | ಎನ್ನವಗುಣ ಬಿಡಿಸೆ ೧
ಮಂದಜಾಸನ ಜನನಿ | ಕುಂದಕುಮ್ಮಲರ ದನಿ
ವಂದಿಪೆ ವÀಜಮಂದಿರೆ | ಗೋವಿಂದನ ತೋರೆ೨
ಶಾಮಸುಂದರನ ರಾಣಿ | ಭೂಮಿನಭ ಸಂಚರಿಸಿ |
ಭಾಮೆ ನಂಬಿದೆ ಅಂಭ್ರಣಿ | ಘನ ಮಂಜಳವಾಣಿ ೩

 

೨೧೦
ಶಾಂತಿಯೆಂಬುದು ಸಕಲ ಸದ್ಗುಣಂಗಳ ಮುಕುಟ
ಶಾಂತಿಯೊಂದಿರಲು ಕೃತಾಂತನಂಜಿಕೆಯಿಲ್ಲ ಪ
ಶಾಂತಿಯೆ ಪ್ರದ್ವೇಷ ಕಾಂತಾರ ಪಾವಕವು |
ಶಾಂತಿ ಕಾಂತಿಯು ದುರಿತಧ್ವಾಂತ ಓಡಿಸುವದು
ಕುಂತ ಪರಿಘಾ ಪರಶು ಶರ | ಚಾಪ | ಮೊದಲಾದ ದು |
ರಂತ ಶಸ್ತ್ರಾಯುಧಗಳು
ಶಾಂತಿ ಖಡ್ಗಕೆ ಶರಣು ಹೊಡೆಯುತಿಹವು ೧
ಶಾಂತಿಗೊಪ್ಪದ ಕುರುಪ ಭ್ರಾಂತಿಯಲಿ ತನ್ನ
ಸಂತತ ಸಹಿತವಾಗಿ ಸಂಗರದಿ ಹತನಾದ
ಶಾಂತಿಯಿಂದಲಿ ಧರ್ಮ ಚಿಂತೆಯನು ನೀಗಿದನು
ಶಾಂತಿಯಿಂದಲಿ ಸತ್ಯ ಹರಿಶ್ಚಂದ್ರಗಾಧಿಪ ಜನ
ಪೌರುಷವೆಲ್ಲ ನಿಸ್ತೇಜಗೊಳಿಸಿದನು ೨
ಶಾಂತಿಯಲಿ ಭಕ್ತಿ ಮುಕ್ತಿ ಇಂತೆಂದು ವೇದಗಳು
ಅಂತ್ಯದಲಿ ತ್ರೈವಾರ ಘೋಷಿಸುತಲಿಹವು
ಶಾಂತಮೂರುತಿಯಾದ ಶ್ರೀ ಶಾಮಸುಂದರನು
ಶಾಂತಿಗೆ ಮೆಚ್ಚಿ ಅಚ್ಯುತಪದವೀವಾ ೩

 


ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ
ಶಿವ ಶಿವ ಎಂಬೊ ಎರಡಕ್ಷರವು
ಭವರೋಗಕೆ ಇದು ಮೂತೌಷಧವು
ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು ೧
ಶ್ವೇತನ ಪಾತಕ ಪಹರಿನಿತು
ಪೋತ ಮಾರ್ಕಂಡೇಯಗಾಯುವ ನೀಡಿತು
ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ ೨
ಹರನ ದಿವ್ಯಪದವಾರಿಜ ಧ್ಯಾನ
ಪರ ಚರ ಮುಕುತಿ ಪಥಕೆ ಸೋಪಾನ ೩

 

೧೮೯
ಶ್ರೀ ಗುರು ಜಗನ್ನಾಥಾರ್ಯ ಕರುಣಿಸಯ್ಯ
ಮೊರೆಹೊಕ್ಕೆ ತ್ವತ್ವದಕೆ ಮರಿಯದಲೆ ಪಿಡಿ ಕೈಯ್ಯ ಪ
ಪ್ರಹ್ಲಾದನನುಗ್ರವು ಎಲ್ಲ ಕಾಲದಲಿ ನಿ
ನ್ನಲ್ಲಿ ಸಂಪೂರ್ಣವಾಗಿರುವದೆಂಬ
ಸೊಲ್ಲು ಲಾಲಿಸಿ ನಿನ್ನ ಪಲ್ಲಾವಾಂಘ್ರಿಗೆ ನಮಿಪೆ
ಬಲ್ಲಿದನೆ ಹರಿಧ್ಯಾನದಲ್ಲಿ ನಿಲ್ಲಿಸು ಮನವ ೧
ಜನಕಾಗ್ರಜಾತಾರ್ಯ | ನರನಿಸಿ ಜನಿಸುತ
ಮಂತ್ರಮುನಿ ನಿಲಯ ಮುನಿವರ್ಯ ಶ್ರೀ ರಾಯರ
ಗುಣಸ್ತವನ ವಿರಚಿಸುತ ಪ್ರಣತರಿಗೆ ಪಠಿಸುತ್ತ
ಮನದಿಚ್ಛೆ ಪಡೆವುದರೆ ಅನುಕೂಲಿಸಿದ ಜ್ಞಾನಿ ೨
ಶ್ರೀಶಾಮಸುಂದರನ ದಾಸವರ್ಯರ ಉಪ
ದೇಶವನು ಕೊಂಡು ಉಪಾಸನೆಯನು
ಲೇಸಾಗಿ ಬಿಡದೆ ಪ್ರತಿವಾಸರದಿ ಗೈದಂಥ
ಭೂಸುರಾಗ್ರಣಿಯಾದ ಪ್ರತಿವಾಸರದಿ ಗೈದಂಥ
ಭೂಸುರಾಗ್ರಣಿಯಾದ ಕೋಸಿಗೆ ವಾಸ ೩

 

೬೬
ಶ್ರೀ ಮನೋಹರ ಸಲಹೋ ಎನ್ನ
ಕಾಮಿತ ಫಲವಿತ್ತು ಸಾಮಜಪತಿ
ಪರಿಪಾಲಕ ನಂಬಿದೆ ಪ
ಅಂಡಜಗಮನ ದಶರುಂಡವೈರಿ ರಾಜೀವಾಕ್ಷ
ಕುಂಡಲಿಶಯನ ಕೋದಂಡ ಪಾಣಿಯ
ತೋಂಡಮಾನಗೊಲಿದ ಮಾರ್ತಂಡ ತೇಜ
ನಿನ್ನ ಪಾದ ಪುಂಡರೀಕ ಸೇವಿಸುವ
ತೋಂಡರೊಳಿಡು ಪಾಂಡವಪಕ್ಷ೧
ನಾಳಿತ ಸಂಭವಪಿತ ಶೈಲಜಾವಲ್ಲಭನುತ
ವಾಲಿಯ ಭಂಜನ ವನಮಾಲಿ ಭೂಲೋಲ
ಕಾಲಯವನನ ಕಾಲ ಕೋಲರೂಪಿ ಕೋಮಲಾಂಗ
ತಾಲ ಕೇತನನುಜ ಕೀಲಾಲಜ ಬಾಂಧವ ಬಾಲಕ ಪೋಷಕ ೨
ಇಂದು ಕೋಟಿ ನಿಭ ನರಸಿಂಧುರಾರಿ ಸಿಂಧುಶಾಯಿ
ನಂದನಂದಾನಂದ ದಾತ ನಂದಕ ಹಸ್ತ
ನಂದಮುನಿವಂದಿತ ಸಂಕ್ರಂದನ ನಂದನವರದ
ಬಂಧನ ಬಿಡಿಸೋ ಶಾಮಸುಂದರವಿಠಲ ಬಂಧುರ ಮಹಿಮ ೩

 

೧೨೪
ಶ್ರೀ ರಾಘವೇಂದ್ರ ಗುರುರಾಜ ಶ್ರೀ ಗುರುರಾಜ |
ಶ್ರೀಗುರುರಾಜ ಬಾರೈ | ಭಕ್ತರಾಮರ ಭೋಜ ಶ್ರೀಗುರುರಾಜ ಪ
ಮಂಗಳಮಹಿಮನಿ ಸಂಗೀತ ಪ್ರಿಯನೆ |
ಅಂಗಜದೂರನೆ ಯತಿವರನೆ ೧
ಶೃಂಗಾರ ವೃಂದಾವನ ನಿಲಯ | ಡಿಂಗರ ಪಾಲ
ಕವಿಗೇಯ | ಶ್ರೀ ರಾಘವೇಂದ್ರ ಶ್ರೀಗುರುರಾಜ ೨
ಶ್ರೀ ಶಾಮಸುಂದರ ಪ್ರಿಯದಾಸ | ಕ್ಲೇಶನಾಶನ |
ವ್ಯಾಸಾರ್ಯನತಪೋಷ | ದೈಶಿಕನಾಥ |
ಭಾಸುರಚರಿತ | ವರಕಾಷಾಯ ಭೂಷಿತ ಮಾಂಪಾಹಿ ೩

 

೧೪೮
ದೈಶಿಕನಾಥ | ಶ್ರೀ ಸುಶೀಲೇಂದ್ರ ಗುರು ಪ
ಚಿತ್ತಜ ಮಾರ್ಗಣ | ಮತ್ತಗಜಾಂಕುಶ
ರಿತ್ತ ಸನ್ಮಂದಿರ ಭೋ ೧
ಸದ್ಧರ್ಮಶೀಲ | ಶುದ್ಧಸ್ವಭಾವ
ಮಧ್ವಮತಾಬ್ಧಿ ವಿಭೋ ೨
ಶ್ರೀಮನೋವಲ್ಲಭ | ಶಾಮಸುಂದರ ಸು
ಪ್ರೇಮ ಸತ್ವಾತ್ರ ಪ್ರಭೋ೩

 

೨೦೯
ಶ್ರೀಧವನ ದೂತರಿಗೆ ಭೇದವುಂಟೆ
ಕ್ರೋಧ ಜಯಿಸಿದ ನರಗೆ ಕಲಹಗಳುಂಟೆ ಪ
ಗರುಡನಾಲಯದಿ ಉರಗಗಳ ಭಯವುಂಟೆ
ಕರಿಯ ಬೆದರಿಕೆಗೆ ಮೃಗವರಗೆ ಉಂಟೆ
ಹರಿದಿನದಲುಂಬುವಗೆ ದುರೀತ ತಪ್ಪುವದುಂಟೆ
ಗುರು ಕರುಣ ಪಡೆಯದವಗೆ ಪರಗತಿ ಉಂಟೆ ೧
ಅದ್ರಿಗಳ ಭಯವುಂಟೆ ಸುರಪನ ವಜ್ರಕೆ
ಯುದ್ಧದ ಭಯವುಂಟೆ ವೀರನಿಗೆ
ಶುದ್ಧ ಮನದಲಿ ನಮ್ಮ ಮಧ್ವಮತ ಸೇರಿದವ
ಗುದ್ಧಾರವಲ್ಲದೆ ನರಕುಪದ್ರಗಳುಂಟೆ ೨
ಕಂದರ್ಪ ನಂಜಿಕೆಯು ಶಿಂಧುರಾನನ ಕುಂಟೆ
ನಿಂದಿಸುವ ಜನಕೆ ಸುಜ್ಞಾನವುಂಟೆ
ಮಂದರೋದ್ಧಾರ ಶಾಮಸುಂದರನ ಪದಯುಗವ
ಪೊಂದಿರ್ಪ ಸುಗುಣರಿಗೆ ಆವ ಕುಂದುಗಳಯ್ಯ ೩

 

೨೦೬
ಶ್ರೀನಾಥ ಸಲಹೊ ಸತತ ನಿನ್ನ ಪದ
ಧ್ಯಾನಾನಂದವಿತ್ತು ಪ
ತಂದೆ ನಿನ್ನನುಗ್ರಹದಿ | ಜಗದೊಳಗೆ
ಬಂದೆ ಭೂಸುರ ಜನ್ಮದಿ
ಪೊಂದಿ ತ್ವತ್ವದ ಭಜಿಸದೆ ಭವದೊಳಗೆ
ಬೆಂದು ಬೆಂಡಾದೆನು ನಾ೧
ಪಗೆಯಾರುಖಳರು ಎನ್ನ | ಪಾಶದಲಿ
ಬಿಗಿದು ಬಂಧಿನಿ ಎಳೆಯುತ ||
ಬಗೆ ಬಗೆಯ ಮಂಗನಂತೆ ಕುಣಿಸ್ಯಾಡಿ
ಹಗರಣವ ಮಾಡುತಿಹರೋ ೨
ಪರಸ್ವತಿಯರ ರೂಪನೋಡಿ | ಮರಳಾಗಿ
ಬೆರೆತವಳ ಕ್ರೀಡಿಸುತಲಿ
ಪರಗತಿಯ ಚಿಂತೆ ಬಿಟ್ಟು | ಪರಮಾತ್ಮ
ನರಕಕ್ಕೆ ಗುರಿಯಾದೆನೋ ೩
ಧನದಾಪೇಕ್ಷೆಯಿಂದ | ಧನಿಕರ
ಮನೆಗ್ಹೋಗಿ ಲಜ್ಜೆ ತ್ಯಜಿಸಿ
ಘನದಾತರೆಂದವರನು | ಬಲು ತುತಿಸಿ
ದಿನಗಳೆದೆ ಶುನಕನಂತೆ ೪
ಹರಿನಿನ್ನವಾಸರದಿ | ಉಪವಾಸ
ಇರುಳು ಜಾಗರವ ಜರಿದು
ಬರಿದೆ ಕಾಲವ ಕಳೆದೆನೋ ರವಿಸುತಗೆ |
ಅರುಹಲು ಬಾಯಿಲ್ಲವೋ ೫
ಪವಮಾನ ಕೃತಸುಶಾಸ್ತ್ರ | ಪ್ರವಚನವ
ಕಿವಿಗೊಟ್ಟು ಕೇಳಲಿಲ್ಲ
ಅವನಿ ದ್ವಿಜರ ಪಾದವ ಸೇವಿಸದೆ
ಭುವಿ ಭಾರ ನಾನಾದೆನೊ ೬
ಬಾಯೆಂದು ಕೂಗಿ ಕರೆವೆ | ಸರ್ವೇಶ
ಓಯೆಂದು ಬೇಗ ಬಾರೋ ||
ಮಾಯಾ ಮೋಹವನೆ ಬಿಡಿಸೋ | ನಿನ್ನಂಘ್ರಿ
ತೋಯಜಧ್ಯಾನವನಿತ್ತು ೭
ಶಿಲೆಯಾದ ಸಲಹಿದ ತೆರದಿಲಿ
ತುಳಿದು ಸಲಹಿದ ತೆರದಲಿ
ಇಳಿಸುರನ ಮಹತ್ಪಾಪ ಕಳೆದವಗೆ
ಸಲೆಮುಕ್ತಿ ಸಲಿಸಿದಂತೆ ೮
ಇಂದಿನಾರಭ್ಯವಾಗಿ | ಎನ್ನಿಂದ
ನಿಂದ್ಯಕರ್ಮವ ನಡೆಸದೆ
ಮಂದರೋದ್ಮರನೆ ನಿನ್ನ |ಸದ್ಭಕ್ತ
ವೃಂದದೊಳು ಕೂಡಿಸಯ್ಯ ೯
ಅಪರಾಧ ಕ್ಷಮಿಸುವಲ್ಲಿ | ನಿನ್ನಂಥ
ಕೃಪಣವತ್ಸಲ ಕಾಣೆ
ಕೃಪೆಯಿಂದ ಕರಪಿಡಿಯೊ ಕರಿವರದ
ಕಪಿಲ ಕೌಸ್ತುಭ ಕೃಷ್ಣ ೧೦
ನಿನ್ನ ನಾಮದ ಭೂಸುರ ಕುಲಹೀನ
ಕನ್ಯೆಯಳ ಸಂಗ ಮಾಡಿ
ನಿನ್ನ ಪರ್ವತ ಮೆಟ್ಟಿಲು ಅವಗೊಲಿದು
ನಿನ್ನಾಪ್ತನೆನಿಸಿದಂತೆ ೧೧
ನಿನ್ನೊಲುಮೆ ಪಾತ್ರರಾದ ಗುರು
ಜಗನ್ನಾಥಾಖ್ಯ ದಾಸಾರ್ಯರ
ಸನ್ನಿಧಾನದಲಿ ಇಪ್ಪ | ಇವನೆಂದು
ಮನ್ನಿಸೊ ಮಹಮಹಿನೆ ೧೨
ನಾ ಮಾಡ್ದ ದುರಿತ ರಾಶಿ | ಪೇಳಲ್ಕೆ
ಭೂಮಿಧರಗಳವಲ್ಲವೋ
ಪ್ರೇಮದಿಂದಲಿ ಪಾಲಿಸೋಮಮಸ್ವಾಮಿ
ಶಾಮಸುಂದರ ದಯಾಳು ೧೩

 

೧೧೪
ಶ್ರೀಪಾದರಾಜ ಗುರುವೆ | ನತಸುರ ತರುವೆ ಪ
ಶ್ರೀಪಾದರಾಜ ನಿನ್ನ ನಾ ಪೊಂದೊದೆನು ತ್ರಯ
ತಾಪಗಳೋಡಿಸಿ | ನೀ ಪಾಲಿಸು ಅನುದಿನ ಅ.ಪ
ಪಂಡಿತಾಗ್ರಣಿ ಕರ್ಣ | ಕುಂಢಲ ಮುಕುಟಾಭರಣ
ಮಂಡಿತವಾಗಿ ಮಾರ್ತಂಡನಂತೆ ಪೊಳೆವ ೧
ಪವನ ದೇವನೆ ಶಾಸ್ತ್ರ | ಸುವಿಛಾರ ಭರಿತ ವಾಕ್
ಪವಿಯಾಖ್ಯ ಗ್ರಂಧ ಕೃತ | ಕವಿಕುಲೋತ್ತಂಸ ಹಂಸ ೨
ಮೃಷ್ಟಾನ್ನ ನಾನಾವಿಧ ಷಷ್ಟಿ ಶಾಕಂಗಳ
ನಿಷ್ಟೀಲಿ ಸದಾ ರಂಗವಿಠಲಗರ್ಪಿಸಿದ ೩
ಇಳೆಯ ಸುರಗೆ ಹತ್ಯ | ಸತಿ ಕರುಣದಿ ಕಂಡು
ಜಲವ ಪ್ರೋಕ್ಷಿಸಿ ಕಳೆದು | ಸಲಹಿದ ಸನ್ಮಹಿಮ ೪
ತಂದೆ ಜರಿಯೆ ವನದಿ | ನಿಂತು ಭಜಿಸಿ ಶಾಮ
ಸುಂದರನೊಲಿಸಿ ಸ್ಥಿರಾನಂದ ಪದವಿ ಪಡೆದ ೫

 

೧೯೯
ಶ್ರೀಮತ್ ಕವಿಕುಲ ನಾಯಕ ಜಯ ಜಯ
ಪ್ರೆಮಾಂಬುಧಿ ಶುಭದಾಯಕ ಜಯ ಜಯ ೧
ಪ್ರಹ್ಲಾದಾವರ ಜಾತನೆ ಜಯಯ
ಶಲ್ಯ ನೃಪಾಲಕ ಯೋಧನೆ ಜಯ ಜಯ ೨
ಪುರುಹೂತಾರ್ಯ ಪೋತನೆ ಜಯ ಜಯ
ಮರುತ ಪದಾರ್ಹರ ಪ್ರೀತನೆ ಜಯ ಜಯ ೩
ನರಸಿಂಹಾರ್ಯರ ಪುತ್ರನೆ ಜಯ ಜಯ
ಗುರುವರದೇಂದ್ರರ ಛಾತ್ರನೆ ಜಯ ಜಯ ೪
ತುರುರಕ್ಷಕ ವಿಜಯಾರ್ಯರ ಜಯ ಜಯ
ಕರುಣ ಪೂರ್ಣ ಪಡೆದಾತನೆ ಜಯ ಜಯ ೫
ಪಂಕಜವೈರಿಯ ಭಾಗದಿ ಜಯ ಜಯ
ಅಂಕಿತ ಪಡೆದ ಅಕಳಂಕನೆ ಜಯ ಜಯ ೬
ಪಂಢರಿನಾಥನ ಮೂರುತಿ ಜಯ ಜಯ
ಕಂಡು ಕೊಂಡಾಡಿದ ಧೀರನೆ ಜಯ ಜಯ ೭
ರಂಗವಲಿದ ದಾಸ್ತೋತಮ ಜಯ ಜಯ
ತುಂಗ ಮಹಿಮ ಶುಭಾಂಗನೆ ಜಯ ಜಯ ೮
ನತಜನ ತತಿ ಮಂದಾರನೆ ಜಯ ಜಯ
ಕೃತ ಹರಿಕಥಾಸುಧೆ ಸಾರವ ಜಯ ಜಯ ೯
ಮೂಕರ ಮುಖದಿಂ ಕರುಣದಿ ಜಯ ಜಯ
ವಾಕು ಪೇಳಿಸಿದ ಗುಣನಿಧಿ ಜಯ ಜಯ ೧೦
ಮಾನವಿ ಮಂದಿರ ಮಾನಿತ ಜಯ ಜಯ
ಕ್ಷೋಣಿ ವಿಬುಧ ಗಣ ಸೇವಿತ ಜಯ ಜಯ ೧೧
ಕುಂಭಿಣಿನಾಥ ದಾಸಾಗ್ರಣಿ ಜಯ ಜಯ
ನಂಬಿದೆ ನಿನ್ನ ಪದಾಂಬುಜ ಜಯ ಜಯ ೧೨
ಸಾಧು ವರಿಯ ಪ್ರಹ್ಲಾದನೆ ಜಯ ಜಯ
ಭೇದಜ್ಞಾನ ಸುಬೋಧಕ ಜಯ ಜಯ ೧೩
ಭೂಸುರ ಕುಮುದಕೆ ಭೇಶನೆ ಜಯ ಜಯ
ಭಾಸುರ ಸ್ತಂಭ ನಿವಾಸನೆ ಜಯ ಜಯ ೧೪
ಪವನಾಗಮ ಪ್ರವೀಣನೆ ಜಯ ಜಯ
ಕವಿಜನ ಸನ್ನುತ ಮಹಿಮನೆ ಜಯ ಜಯ ೧೫
ತಂದೆ ನಮಗೆ ನೀನೆಂದಿಗು ಜಯ ಜಯ
ಕುಂದು ಕ್ಷಮಿಸಿ ದ್ವಿಜ ವಂದ್ಯನೆ ಜಯ ಜಯ ೧೬
ಕಂಸಾರಿಯ ಪ್ರೀಯ ಸಾಂಶನೆ ಜಯ ಜಯ
ಧ್ವಂಸಗೊಳಿಸು ಭವ ಹಿಂಸೆಯ ಜಯ ಜಯ ೧೭
ನಿನ್ನ ತಾಣ ಸುಕ್ಷೇತ್ರವು ಜಯ ಜಯ
ನಿನ್ನ ಕವನ ಶೃತ್ಯರ್ಥವು ಜಯ ಜಯ ೧೮
ಕಲುಷ ಕುಲಾದ್ರಿಗೆ ಕುಲಿಶನೆ ಜಯ ಜಯ
ವಲಿದು ಕರಪಿಡಿದು ಸಲಹೈ ಜಯ ಜಯ ೧೯
ಆರ್ತರಿಷ್ಟಾರ್ಥವ ಸಲಿಸಲು ಜಯ ಜಯ
ಸ್ವಾರ್ಥರಹಿತರಿಗೆ ಕೀರ್ತಿಯು ಜಯ ಜಯ ೨೦
ಎನ್ನವವ ಚನವಿದಲ್ಲವು ಜಯ ಜಯ
ನಿನ್ನನು ಭವಕಿದು ಬಂದದು ಜಯ ಜಯ ೨೧
ಮಂದ ಬುದ್ಧಿಯಲಿ ನಿಮ್ಮನು ಜಯ ಜುಯ
ನಿಂದಿಪ ಮನುಜ ದಿವಾಂಧನು ಜಯ ಜಯ ೨೨
ಧರ್ಮದ ಮಾರ್ಗವ ತೋರಿಸು ಜಯ ಜಯ
ಕರ್ಮಜ ದೇವನೆ ಕೈಪಿಡಿ ಜಯ ಜಯ ೨೩
ಅನಿಲ ಮತಾಂಬುಧಿ ಮೀನನೆ ಜಯ ಜಯ
ಪ್ರಣತಾಮರಮಣಿಧೇನುವೆ ಜಯ ಜಯ ೨೪

 

೨೪೬
ಶ್ರೀಮತ್ ಕೃಷ್ಣತರಂಗ ತಿಙೀರ
ನಿಲಯ ಐಕೂರು ಗ್ರಾಮಾಲಯ |
ಸ್ತಂಭೋಧ್ವವ ದೇವ ನಾಮಧೇಯ
ಧ್ವಯಭಾರ್ಯ ಸುಮನಸಪ್ರಿಯ
ಸದ್ಭಕ್ತಾರ್ತಿವಿದೂರ ವಿಮಲ ಹೃದಯ
ಅತ್ಯಂತ ಕರುಣಾಮಯ | ಅಸ್ಮದ್ ಸದ್ಗುರುವರ್ಯ
ಈಯೋ ನಮಗೆ ನೀ ನಿತ್ಯ ಸನ್ಮಂಗಳ ೧
ಸಾರೋದ್ಧಾರ ಸಂಗೀತ ಭಾರತಿಯುತ ವೇದಾರ್ಥ
ಸಂಪೂರಿತ | ಸಹ್ಲಾವಂಶಜ ದಾಸವರ್ಯ ವಿರಚಿತ
ಶ್ರೀಶೌರಿ ಸುಕಥಾಮೃತ ಸಾರಜ್ಞಂ ಸುಶೀಲೇಂದ್ರತಿರ್ಥರ
ಮಮತ ಸಂಪೂರ್ಣ ಸಂಪಾದಿತ ಅಸ್ಮದಗ ಸದ್ಗುರುವರ್ಯ
ಈಯೋ ನಮಗೆ ನೀ ನಿತ್ಯ ಸನ್ಮಂಗಳ ೨
ಅಷ್ಟಪದಲೋಷ್ಟ ಭಾವಸಮತ | ಕರತಧೀರ
ಸನ್ಮಾನಿತ ಅಷ್ಟ್ಯೆಕಾಮಲ ಭಕ್ತಿ ಜ್ಞಾನ ಭರಿತ
ವೈರಾಗ್ಯ ಸಂಶೋಭಿತ | ಸೃಷ್ಟ್ಯಂತರ್ಗತ
ಬಿಂಬ ಮೂರ್ತಿ ಸತತ | ಸಂದರ್ಶನಾನಂದಿತ
ಅಸ್ಮದ್ ಸದ್ಗುರುವರ್ಯ ಈಯೋ ನಮಗೆ ನೀ ನಿತ್ಯ ಸನ್ಮಂಗಳ ೩
ಶೃಂಗಾರಾಂಗ ಸುನಾಮದ್ವಾದಶಧೃತ ಮುದ್ರಾಕ್ಷತಾಲಾಂಕೃತ
ಗಂಗಾನಂಗಪಿತಾಂಘ್ರಿ ಕಮಲ ಜಪಿತ ಪದ್ಮಾಕ್ಷಮಾಲಾಂದ್ರಿತೆ
ಇಂಗಿತಜ್ಞ ಸುಸಾಧು ಸಂಗ ಸಹಿತ ಮುಕ್ತ್ಯಂಗನಾಲಿಂಗಿತ
ಅಸ್ಮದ್ ಸದ್ಗುರುವರ್ಯ ಈಯೋ ನಮಗೆ ನೀ ನಿತ್ಯ ಸನ್ಮಂಗಳ೪
ತಾಪತ್ರಯದೂರ ಪಾಪರಹಿತ | ಕೋಪಾದಿಗುಣವರ್ಜಿತ |
ಶಾಪಾನುಗ್ರಹಶಕ್ತ ಸುಜನಪ್ರೀತ ಸಂಸಾರಘÀನ ಮಾರುತ
ಗೋಪಾಲಾಖ್ಯ ದಾಸವರ್ಯ ಕವಿತ |
ಗೂಡಾರ್ಥ ಸಂಬೋಧಿತ
ಅಸ್ಮದ್ ಸದ್ಗುರುವರ್ಯ ಈಯೋ ನೀ ನಿತ್ಯಸನ್ಮಂಗಳ ೫
ಆಧ್ಯಾತ್ಮ ಸುವಿಚಾರ ಸತತ ಶೃತ್ಯರ್ಥಬಹು
ಗರ್ಭಿತ | ಸತ್ಯವಲ್ಲಭ ಸತ್ಯದೇವ ಚರಿತ
ವಕ್ತಾರ ಬುಧ ಸಮ್ಮತ | ನಾಡ್ಯಾಂತರ್ಗತ
ಸರ್ವತೀರ್ಥ ಸ್ನಾತ | ತನ್ಮೂರ್ತಿ ಪ್ರತ್ಯಕ್ಷತ
ಅಸ್ಮದಗ ಸದ್ಗರುವರ್ಯ ಈಯೋ ನಮಗೆ ನೀ ನಿತ್ಯ ಸನ್ಮಂಗಳ ೬
ಧರ್ಮಾಚಾರ ವಿಚಾರಶೀಲ ನಿರತ | ಷಟ್ಕರ್ಮ
ಸಂಭೂಷಿತ | ನಿರ್ಮತ್ಸರ ಮೋಹ ದೇಹ ಮಮತ
ಸುಶರ್ಮಕುಲರಾಜಿತ | ಧಮೋದರವಾತಜಾತ ಪೋತ
ಜಾತಾರಿಖತಿವರ್ಜಿತ | ಅಸ್ಮಾದ್ ಸದ್ಗುರುವರ್ಯ
ಈಯೋ ನಮಗೆ ಸತತ ನೀ ಸನ್ಮಂಗಳ ೭

 

೧೦೯
ಶ್ರೀರಂಗನಾಥನ ಸೇವೆಯ ಮಾಡಿರೈ ಸದಾ ಪ
ಅಡಿಗಳ ಭಜಿಪರ ಎಡರು ಕಳೆವುದಕೆ
ವಡವಾಟಲಿ ತಾ ಬಿಡದೆ ನೆಲೆಸಿಹನ ೧
ಶರಣುಪೊಕ್ಕವರ | ಕರುಣದಿಂದ ಲಘು |
ಹರಣಗೈವ ರಥ | ಚರಣಧಾರಿ ಪದ ೨
ನಿಷ್ಟೆಯಿಂದಲಿ ಮನ ಮುಟ್ಟಿ ಭಜಿಸುವರ |
ಕಷ್ಟ ಕಳೆದು ಸುಖ | ಕೊಟ್ಟು ಪೊರೆವ ಹರಿ ೩
ಪ್ರಥಮಮಾಸದಲಿ | ಶಿತ ಸುಪಕ್ಷದಲಿ
ತಿಥಿ ದಶಮಿಯಲಿ | ರಥವೇರಿ ಬರುವಹರಿ ೪
ನೇಮದಿ ತನ್ನಯ | ನಾಮಧ್ಯಾನಿಪರ
ಕಾಮಿತಗರೆಯುವ | ಶಾಮಸುಂದರ ೫

 

೨೬
ಸಂಜೀವವರಾಯ ಪೊರೆವುದು | ಆಂಜನೇಯ ಭವ
ಭಂಜನ ಭಯಹರ ಪ
ಶ್ರೀರಘುವರನಾಜ್ಞೆಯಿಂ | ವಾರಧಿಯನು ಲಂಘಿಸಿ
ಸಾರಿ ಕುಶಲ ವೈದೇಹಿ ಹರುವಿ | ಕ್ರೂರರಾವಣನ ಪುರವನುರವಿದ ೧
ಗೋಪತಿ ಕುಲದೀಪಿಕಾ | ದ್ರೌಪದಿ ಮನೋನಾಯಕ
ಕೋಪದಿಂದ ಸಂಗ್ರಾಮ ಮಂಡಲದಿ |
ಪಾಪಾತ್ಮಕ ಭೂಪಾಲರಳಿದಗುರು ೨
ಶ್ರೀ ಮಹಾಕಲಿಕಾಲದಿ | ನೀ ಮುದಮುನಿ ನಾಮದಿ
ಸ್ವಾಮಿ ಶಾಮಸುಂದರನೆ | ಎಂದು ಘನ |
ಭೂಮಿಯಲ್ಲಿ ಡಂಗುರವಸಾರಿದ ೩

 

೧೨೩
ಸತತ ಪಾಲಿಸೋ ಎನ್ನ | ಯತಿ ರಾಘವೇಂದ್ರ |
ಪತಿತ ಪಾವನ ಪವನ | ಸುತಮತಾಂಬುಧಿ ಚಂದ್ರ ಪ
ನಂಬಿದೆನು ನಿನ್ನ ಚರಣಾಂಬುಜವ ಮನ್ಮನದ
ಹಂಬಲವ ಪೂರೈಸೊ ಬೆಂಬಿಡದಲೆ ||
ಕುಂಭಿಣೀಸುರ ನಿಕುರುಂಭ ವಂದಿತ ಜಿತ
ಶಂಬರಾಂತಕ ಶಾತಕುಂಭ ಕಶ್ಯಪ ತನಯ ೧
ಕ್ಷೋಣಿಯೊಳು ನೀ ಕುಂಭಕೋಣ ಕ್ಷೇತ್ರದಿ ಜನಿಸಿ
ವೀಣ ವೆಂಕಟ ಅಭಿದಾನದಿಂದ
ಸಾನುರಾಗದಿ ದ್ವಿಜನ ಪ್ರಾಣ ಉಳುಹಿದ ಮಹಿಮೆ |
ಏನೆಂದು ಬಣ್ಣಿಸಲಿ ಜ್ಞಾನಿ ಕುಲತಿಲಕ೨
ಮಂದಮತಿಗಳ ಸಂಗದಿಂದ ನಿನ್ನಯ ಚರಣ
ಇಂದಿನ ತನಕ ನಾ ಪೊಂದಲಿಲ್ಲ
ಕುಂದು ಎಣಿಸದೆ ಕಾಯೊ ಕಂದರ್ಪಪಿತ ಶಾಮ
ಸುಂದರನ ದಾಸಕರ್ಮಂದಿ ಕುಲವರ್ಯ ೩

 

೨೨೯
ಸತ್ಕವೀಂದ್ರ ಬಾಬೇಂದ್ರೆ ಸುಗುಣಸಾಂದ್ರ ಪ.
ನಮ್ಮ ಮಾನವಿ ಸ್ಥಳದಿ ಅಚ್ಚಗನ್ನಡ ನುಡಿಯ
ಸಮ್ಮಿಲನ ಸಾಗಿಸಲು ನಿಶ್ಚಯಿಸಿದೆ
ನಿಮ್ಮ ಬರುವಿಗೆ ಬಯಕೆ ಇಮ್ಮಡಿಸಿದೆಮಗೆ
ಸಮ್ಮತಿಸಿ ಬಾರಯ್ಯ ಸತ್ಕವೀಂದ್ರ ಶ್ರೀ ಬೇಂದ್ರೆ ಸುಗುಣೇಂದ್ರ ೧
ಅಚ್ಚಗನ್ನಡ ತಾಯಿಗಚ್ಭದ ಮನೆಂದು
ಹೆಚ್ಚಾಗಿ ನಿಮ್ಮನ್ನು ಮೆಚ್ಚುವೆವೋ
ಮುಚ್ಚುಮರಿಯಾಕೆ ಈ ಉತ್ಸವಕೆ ಬರದಿರೆ
ಮೆಚ್ಚುವಳೆ ವಾಗ್ದೇವಿ ಸತ್ಕವೀಂದ್ರ ೨
ದಾತರಾದವರಾರ್ತರಾತುರದಿ ತ್ವರದಿಂದ
ಪ್ರೀತಿಯಲಿ ಪೂರ್ತಿಸಲು ಒಪ್ಪಿರೆಂಬಾ
ನೀತಿ ಮಾತನು ನೀ ತಿಳಿಯದಾತನೆ
ಹಾತೊರೆಯುತಿದೆ ಮನವು ಸತ್ಕವೀಂದ್ರ ೩
ಕನ್ನಡದ ನುಡಿ ಸುಧೆಯ ಕನ್ನಡಿಗರಿಗೆ ಬೀರಿ
ಕನ್ನಡ ನಾಡೆಂಬ ಪಾಲ್ಗಡಲಕೆ
ಜೇನ್ನೊಡಲನೆಂದೆನಿಸಿ ಕನ್ನಡಿಗರಿಂ
ಮನ್ನಣೆಯ ಪಡೆದಂಥ ಸತ್ಕವೀಂದ್ರ ೪
ಉಸಿರಲೆನ್ನಯ ಮತಿಗೆ ವಶವಲ್ಲವೈನಿನ್ನ
ರಸವತ್ಕವಿತಾ ಪ್ರತಿಭಾಚಾರ್ತುರ್ಯವಾ
ಹೊಸಗನ್ನಡ ನುಡಿ ರಸದ ಮಾಧುರ್ಯಮಂ
ರಸಿಕರಿಗೆ ನೀ ನೀಡು ಸತ್ಕವೀಂದ್ರಾ ೫
ಕನ್ನಡ ನುಡಿ ಸಾರಿ ಕನ್ನಡಕುಪಕಾರಿ
ಕನ್ನಡದ ಜಯಭೇರಿ ಹೊಡೆದ ನಗಾರಿ
ಕನ್ನಡದ ಹೊಸ ಸಿರಿಯು ಕನ್ನಡ ರಸಝರಿಯು
ನಿನ್ನಿಂದ ಲಭಿಸಿತೈಸತ್ಕವೀಂದ್ರಾ೬
ನಿನ್ನಿಂದ ಕನ್ನಡದ ಮ್ಲಾನತೆಯು ದೂರಾಯಿತು
ನಿನ್ನಿಂದ ನಮಕವನ ಕವಲೊಡೆದು ಸರ್ವತ್ರ
ಉನ್ನತೆಯ ನೈದಿತೈ ಸತ್ಕವೀಂದ್ರಾ ೭
ವೃತ್ತಪತ್ರಿಕೆಗಳಲಿ ಮತ್ತೆ ಸಮ್ಮೇಳನದಿ
ನಿತ್ಯ ಓದುವ ಮನೆ ಶಾಲೆಯಲ್ಲಿ
ಚಿತ್ತಪೂರ್ವಕ ನಿನ್ನ ಉತ್ತಮೋತ್ತಮ ಕವನ
ಮತ್ತೆ ಪೇಳುವರು ಸತ್ಕವೀಂದ್ರಾ೮
ನುಡಿಯಣ್ಣನೊಲುಮೆಯೋ | ನುಡಿಯೊಡೆಯನನುಗ್ರಹವೋ
ಪಡೆದ ಮಾತೆಯ ಜೀತನೋಪಿ ಫಲವೋ
ಕಡು ಸರಳ ಬಿಡಿವೃತ್ತ ಸಡಗರದಿ ರಚಿಸುತ್ತ
ಪೊಡೆವಿಯೊಳು ಪಸರಿಸಿದ ಸತ್ಕವೀಂದ್ರಾ ೯
ಪ್ರೇಮದಿಂದಲಿ ನಿನ್ನ ಪ್ರೇಮಿತಾರ್ಥವಗರೆದು
ಶಾಮಸುಂದರವಿಠಲ ಸಲಹೋ ಎಂದು
ನಾ ಮುದದಿ ಪ್ರಾರ್ಥಿಸುವೆ ನೀಮಾಡ್ವ ಉಪಕಾರ ೧೦

 

೧೩೯
ಸತ್ಯಪ್ರಮೋದ ತೀರ್ಥರ ಪಾದ
ಪದುಮವ ನಿತ್ಯದಿ | ಭಜಿಸುವರ
ಸತ್ಯಲೋಕೇಶನ ಪೆತ್ತ ಪರಮಾತ್ಮನು |
ನಿತ್ಯದಿ ಕರಪಿಡಿವ ತಿಳಿ ಮಾನವಾ ಪ
ರವಿಸನ್ನಿಭಾಂಗರು | ಭುವಿ ದಿವಿಜೇಂದ್ರರು |
ಕವಿಗಣ ಸನ್ನುತರು | ಭವದೂರರು |
ಭುವನದೋಳ್ ಧೃಡಚಿತ್ತದವರಾಗಿ | ತಪದಲ್ಲಿ
ಧ್ರುವನಂತೆ ತೋರುವರು ಮಹಾತ್ಮರು೧
ಭುಜಗಾಧಿಪನಯಂತೆ ಯೋಗ ಸುಸಾಧಕರು
ಭುಜಗಾರಿಯಂದದಿ ದ್ವಿಜನಾಥರು | ಭುಜಗ ಭೂಷಣನಂತೆ
ನಿಜವೈಷ್ಣವೋತ್ತಮರು
ವಿಜಯಾನಂದದಿ | ದಿಗ್ವಿಜಯ ಶಾಲಿಗಳಿವರು ೨
ಸೋಮನಂದದಿ ಸುಸಾಧಕರೆನಿಸುತ |
ನೇಮಪೂರ್ವಕವಾಗಿ | ನಿತ್ಯದಲ್ಲಿ
ಶಾಮಸುಂದರ ಸೀತಾ ರಾಮನರ್ಚಿಸುತಲಿ |
ಭೂಮಿಯೋಳು ಮೆರೆದಿಹರು ಸುಧೀರರು ೩

 

೨೪
ಸಲಹೊ ಪವನಜ ದೇವ ಸದಾ | ಜಿವೇಶ ಗುರು ಪ್ರೇಮಾಪಕ ಪ
ಅಮಿತ ಮಹಿಮ ತವ ಪಾದಕೆ |
ನಮಿತೆ ಸುಮತಿಯ ಪ್ರೇರಿಸು ಬೇಗ ೧
ಕೊರವಿ ಸದನ ಗುರು ಭಾರತೀಕಾಂತ ನೀ
ದೂರಗೈಯದಲೆ ದೇವ ೨
ನಿರುತದಿ ಶ್ರೀವರಶಾಮಸುಂದರ |
ಧ್ಯಾನವ ನೀಡುವದೈ ಈಗ ೩

 

೨೫
ಸಲಹೊ ಸಂತತ ಸಂತಿಕೆಲವೂರ ನಿಲಯ
ಸಲೆ ನಂಬಿದೆನು ನಿನ್ನ ಜಲಜಾಂಘ್ರಿ ಪಿಡಿಕೈಯ್ಯ ಪ
ವಾನರಾಗ್ರಣಿ ಕುಂತಿ ಸೂನು ವೃಕೋದರ ಮೋದ
ಮೌನಿ ನಾಮತ್ರಯದಿ ಅವತರಿಸುತಾ
ದಾನವರ ಗರ್ವಾಖ್ಯ ಕಾನನಕೆ ಶಿಖಿ ಎನಿಸಿ
ಜಾನಕಿ ಪತಿ ಕೃಷ್ಣ ವ್ಯಾಸರನುಗ್ರಹಪಾತ್ರ ೧
ವರದೇಶ ವಿಠಲನ ಚರಣ ಸೇವಕನಿಗೆ
ಸ್ಥಿರವಾದ ವೃರಾಗ್ಯ ಜ್ಞಾನ ಭಕುತಿ
ಗರೆದು ಪೊರೆಯುವದಕ್ಕೆ ಪುರದ ಹಿಂಭಾಗದಲಿ
ಇರುವ ಕಾರಣ ನಿನ್ನ ಮೊರೆ ಹೊಕ್ಕೆ ಮರೆಯದಲೆ ೨
ಗಂಧವಾಹನ ನಿನ್ನ ಸಂದರುಶನದಿ ಇಂದು
ಬೆಂದು ಪೋದವು ಎನ್ನ ಪಾಪವೆಲ್ಲ
ಸಿಂಧುಜಾವರ ಶಾಮಸುಂದರನ ದಾಸರೊಳು
ಪೊಂದಿಸೆಂದಡಿಗಡಿಗೆ ವಂದಿಸುವೆ ತ್ವತ್ವದಕೆ ೩

 

೧೨೨
ಸಲಹೋ ಸಲಹೋ ಕರುಣಾಂಬುಧಿಯೇ
ಕೋಲಜಾತಾ ತೀರ ನಿವಾಸಾ ಪ
ವೃಂದಾವನದಿ ನಿಂದ ಮುನೀಂದ್ರ
ಮಂದಜನನೌಘಕೆ ಕಲ್ಪ ಸಂಭೂಷಣ ೧
ದೇವಸ್ವಭಾವ ಭೂದೇವವರೇಣ್ಯ
ಕೋವಿದ ವಂದಿತ ಪಾವನ ಕಾಯ ೨
ಶ್ರೀಮಹಿವಲ್ಲಭ ಶಾಮ ಸುಂದರ
ಪ್ರೇಮ ಪಡೆದ ನಿಷ್ಕಾಮಿ ಪ್ರಹ್ಲಾದನೆ ೩

 

೧೩೮ ಅ
ಸಾಗಿ ಬಾರೋ ಗುರುರಾಘವೇಂದ್ರರಾಯ |
ವರ ಸತ್ಕಲುಗೇಯ ಪ
ಕೂಗುತ ಕರೆಯುವ ಭಾಗವತರ
ಮೊರೆಯ ಲಾಲಿಸೋ ಮುನಿವರ್ಯ ಅ.ಪ
ಪಾವನಘನ ವೃಂದಾವನ ಮಂದಿರನೆ
ಸದ್ಗುಣ ಬಂಧುರನೇ
ಪಾವಮಾನಿಮತಶರಧಿ ಚಂದಿರನೇ
ಧರಸಮ ಕಂದರನೇ
ಛಾವಣಿಪುರ ಸುಜನಾವಳಿ ಕೋರಿಕೆಯ
ಗರೆಯಲು ಶುಭಕಾಯ ೧
ಶರಣಜನರು ಮೈಮರೆದು ಕರೆಯಲಾಗಿ
ನಿಲ್ಲದೆ ವರಯೋಗಿ |
ಭರದಿ ಬಂದು ಕರಪಿಡಿಯುವ
ಧೊರೆ ನೀನು ಎಂದರೀತೆವು ಸುರಧೇನು
ಕರುಣಾಕರ ಗತಿದಾಯಕ ನೀನೆಂದು
ಭಜಿಪೆವು ದಯಾಸಿಂಧು ೨
ಶಾಮಸುಂದರನ ಪ್ರೇಮವ ಪಡೆದಾತ
ಜಗದೊಳು ಪ್ರಖ್ಯಾತ
ನೇಮದಿ ಭಜಿಪರ ಕಾಮಿತ ಕೊಡುವಾತ
ದೈಶಿಕ ಕುಲನಾಥ
ಹೇಮಶಯ್ಯ ಸುಕುಮಾರ ಮಮತೆಯಿಂದ ಮಂತ್ರಾಲಯದಿಂದ ೩

 

೧೯೦
ಸಾಗಿ ಬಾರೋ ಲೇಸಾಗಿ ಬಾರೋ ಘನತ್ಯಾಗಿ ಬಾರೋ
ಬಾಗಿ ನಮಿಪೆ ಜಗನ್ನಾಥಾರ್ಯ ರಥವೇರಿ ಪ
ನಂಬಿ ಭಜಿಪರಿಗೆ ಜಂಭಾರಿ ಕುಜದಂತೆ
ಹಂಬಲವನ್ನು ತುಂಬಿಕೊಂಡಿರುವಂಥ | ಗುರುಕರು
ಣಾಂಬುಧಿ ಸ್ತಂಭದಿ ಪೊರೆಮಟ್ಟು ಸಂಭ್ರಮದಿ ೧
ಭಾಗವತರು ಮುಂಭಾಗದಲಿ | ಕುಣಿಯುತಲಿ
ರಾಗಾಲಾಪಗಳಿಂದ ಹರಿನಾಮ ಪಾಡುತಲಿ
ಕೂಗಿ ಮುಗಿದು ಕೈ ಕರೆಯುವರು | ಪಥ ಕಾಯುವರು ೨
ಪೊಡವಿ ಸುರರ ಕೂಡಿ ಎಡಬಲದಿ ಸಡಗರದಿ
ಬಿಡದೆ ವೇದಂಗಳ ಪಠಿಸುತ ಭಕ್ತಿಯಲಿ
ಒಡೆಯ ನಿನ್ನಾಗಮನ ನೋಡುವರು | ಗತಿ ಬೇಡುವರು ೩
ಪಾಡಿ ಪೊಗಳುವರ ಕಾಯುವ | ಮೂಢರನು
ಓಡಿಸುವಲ್ಲಿ ನಿನಗೀಡ್ಯಾರೋ ರೂಢಿಯೊಳು
ನೋಡಿ ದಯದಿಂದ ನೀ ನೋಡಿ ಗುರುರಾಯ ೪
ಭೂಮಿ ವಿಬುಧರಿಗೆ ನೀ ಮಾಡಿದುಪಕಾರ
ನಾ ಮರೆಯಲಾರೆನು ಎಂದೆಂದು | ಗುರುರಾಯ
ನಾ ಮರೆಯ ಲಾರೆನು ಎಂದೆಂದು ಜಗದೊಳಗೆ
ಶಾಮಸುಂದರನ ಪ್ರಿಯದಾಸ | ರಥವೇರಿ ೫

 

೨೧೪
ಸುಖದಿ ಜೀವಿಸು ಬಾಲೆ ಸುಗುಣ ಶೀಲೆ
ಸುಖದಿ ಜೀವಿಸು ಬಾಲೆ ಪ
ಸುಖದಿ ಜೀವಿಸು ಬಾಲೆ | ಸುಕುಮಾರಿ ಗುಣಲೀಲೆ
ರುಕುಮಿಣೀಶನ ಭಕುತಳೆನಿಸಿದ
ಸಖುದೇವಿಯಂತೆ ಸಕಲ ಭಾಗ್ಯದಿ ಅ.ಪ
ಭೂಸುರೋತ್ಮರಿಂದಲಿ | ಗುರುಮಂತ್ರೋಪ
ದೇಶವಗೊಳ್ಳುತಲಿ | ಪ್ರತಿದಿವಸ ತಪ್ಪದೆ
ಬ್ಯಾಸರಿಯದೆ ಹರುಷದಲಿ | ಸದ್ಭಕ್ತಿ ಪೂರ್ವಕ
ದಾಸರ ಪದ ನಿತ್ಯದಲಿ | ನೀ ಪಾಡುತಲಿ
ಲೇಶವಾದರು ಸುಜನ ವೃಂದಕೆ
ದೂಷಿತ ಬಹು ದೋಷಕಂಜುತ
ವಾಸುದೇವನ ವಾಸರದಿ ಉಪ
ವಾಸವನು ಲೇಸಾಗಿ ಮಾಡುತ ೧
ಭಾವ ಭಕುತಿಲಿರುವ | ಗೋ ತುಳಸಿ
ವೃಂದಾವನ ಪೂಜಿಸುತ | ವಿನಯದಿ ಅತ್ತಿ
ಮಾವರ ನುಡಿ ಕೇಳುತ | ಕೈಪಿಡಿದ ಪತಿ ಪರ
ದೇವನು ಎಂದೆನುತ | ಸಲೆ ಸೇವಿಸುತ್ತ
ಆವ ಕಾಲ ಕಪಟ ಮತಿಗಳ
ಠಾವಿಗ್ಹೋಗದೆ ಪರರ ಒಡವೆಯ
ಬೇವಿನಂದದಿ ಭಾವಿಸುತ ಸಂ
ಭಾವಿತಳು ನೀನಾಗಿ ಜಗದೊಳು ೨
ಮಂದ ಮತಿಯರ ಕೂಡದೆ | ಎಂದೆಂದಿಗು ಪರ
ನಿಂದೆ ಮಾತುಗಳಾಡದೆ ಅವರೊಲುಮೆಯಿಒಂದಲಿ
ಕಂದನ ಪಡಿ ಪ್ರೇಮದಿ | ಸಂದೇಹ ಪಡದೆ
ತಂದೆ ತಾಯಿಗೆ ಕುಂದು ತಾರದೆ
ನಂದ ಕಂದ ಮುಕುಂದ ಶಾಮ
ಸುಂದರನ ಶುಭನಾಮ ಬಿಡದಲೆ
ಒಂದೆ ಮನದಲಿ ಧ್ಯಾನಿಸುತ ಚಿರ ೩

 

೨೧೩
ಸುಖದಿಂದ ಬಾಳೆ ಬಾಲೆ | ಸುಮಂಗಲೇ | ಪ
ಸುಖದಿ ಬಾಳೆ ಸಾವಿತ್ರಿಯಂತೆ
ಸುತರ ಪಡೆದಿಳೆಯೊಳ್ ನಿರಂತರ
ಪತಿಯ ವಾಕ್ಯದಿ ನಿರತಳಾಗಿ ಅ.ಪ
ಅತಿಶಯದಿ ನಿರುತ ಪತಿಯ ಸೇವಿಸುತ್ತ
ಆತನೇ ಪರದೈವವೆಂದೆನುತ
ಹಿತವಚನ ವಾಡುತ ಅತ್ತಿಮಾವನ ಸ್ಮರಿಸುತ್ತ
ಅತಿಥಿಗಳು ಬಂದರೆ ಆದರಿಸುತ
ರತಿಪತಿ ಪಿತನಂಘ್ರಿ ಭಜಿಸುತ
ಪೃಥ್ವಿಯೋಳ್ ಅನುಸೂಯಳಂತೆ ೧
ಸುಂದರಾಂಗಿಯೆ ಸತತ ಗೃಹ ಕಾರ್ಯ ಮಾಡುತ
ಇಂದಿರೇಶನ ಪಾಡುತ್ತ | ಬಂದಂಥ ವಿಪ್ರರ
ದ್ವಂದ್ವ ಪಾದಕೆರಗುತ | ಹಿಂಗಿರುವದುಚಿತ
ಮಂದ ಮತಿಗಳ ಮಾತು ಕೇಳದೆ
ತಂದೆ ತಾಯಿಗೆ ಕುಂದು ತಾರದೆ
ಇಂದು ಮುಖಿ ನೀ ಹಿಂಗಿದ್ದರನುದಿನ
ಬಂದು ಕಾಯ್ವ ಶ್ರೀರಾಮಚಂದಿರ ೨
ಉಡುರಾಜವದನೆ ಸದಾ ನಿನ್ನೊಡೆಯ
ನಡಿದಾವರೆ ಪೂಜಿಸು ಸರ್ವದಾ ಬಿಡಿ
ನುಡಿಗಳಾಡದೆ ಕಡು ಕರುಣದಿ ದ್ರೌಪದಾ
ಪಡೆವಳತಿ ಮೋದ | ಪಡಿಸುಪುತ್ರರ ಪರ
ರೊಡನೆ ಕಾಲ್ಕೆದರಿ ಕಲಹವ ತೆಗೆಯದಿರು ಸಖಿ
ಒಡೆಯ ಶ್ರೀ ಶಾಮಸುಂದರನು
ತಡೆಯದೆ ಸಂಪದವ ನೀಯುವ ೩

 

೧೪೫
ಸುಶರಣ ಸುರಪಾದಪ
ಸುಶೀಲೇಂದ್ರ ಸನ್ಮುನಿಪ ಪ
ಚಾರು ತುಳಸಿ ಸಾರಸಾಕ್ಷಮಣಿ
ಹಾರ ಶೋಭಿತ ಜಿತ ವಾರಿಜ ಚಾಪ ೧
ಸಲೆ ಮಂತ್ರಾಲಯ ನಿಲಯರ ಒಲಿಸಿದ
ಅಲವ ಬೋಧಮತ ಜಲಧಿಗೆ ಉಡುಪ ೨
ಕ್ಷಿತಿದೇವ ತತಿನುತ ವರದಾತಟ
ಸ್ಥಿತಯತಿ ಪತಿ ಪದ ವೃತತಿಜ ಮಧುಪ ೩
ಕೋವಿದ ಜನ ಸಂಸೇವಿತ ವರ ವೃಂ
ದಾವನ ಮಂದಿರ ಪಾವನ ರೂಪ ೪
ವರದ ಶಾಮಸುಂದರ ರಘುರಾಮನ
ಚರಣಾರಾಧಕ ದುರಿತ ನಿರ್ಭೀತ ೫

 

೧೪೪
ಸುಶೀಲೇಂದ್ರ ಸುಶೀಲೇಂದ್ರ
ಅಸುನಾಯಕ ಮತ | ಬಿಸರುಹ ಭಾಸ್ಕರ ಪ
ಕುಂಭಿಣಿದೇವ ಕದಂಬ ವಿನುತ | ಜಿತ
ಶಂಬರಾರಿ ಕರುಣಾಂಬುಧಿ ಗುರುವರ ೧
ತುಂಗ ಮಹಿಮಯತಿ ಪುಂಗವರದ | ತ
ರಂಗಿಣಿ ನಿಲಯ ಸುಮಂಗಳ ಚರಿತ ೨
ಭಾಗವತ ಪ್ರಿಯ ರಾಘವೇಂದ್ರರರಮ
ರಾಗಪಾತ್ರ ಮಧ್ವಾಗಮಜ್ಞ ಗುರು ೩
ಸಾರಿದೆ ಸಂತತ ಸೊರಿವರ್ಯ | ಗುರು
ಧೀರೇಂದ್ರ ಪದ ಸಾರಸ ಮಧಕರ ೪
ಶ್ರೀಮನೋವಲ್ಲಭ | ಶಾಮಸುಂದರನ
ಪ್ರೇಮಾನ್ವಿತ ನಿಸ್ಸೀಮ ಮಹಿಮ ೫

 

೧೪೯
ಸೂರ್ಯ ಯತಿವರ್ಯ | ಮ
ಧ್ವಾರ್ಯರ ಸುಮತ ಸರೋಜಕೆ ಸುಶೀಲೇಂದ್ರ ಪ
ಬುಧಜನ ವಂದಿತ ಸುಧಿ ಸುವೃತೀಂದ್ರರ
ಸದಮಲ ಘನ ಸದ್ ಹೃದಯಾ ಕಾಶಕೆ ೧
ಧರಣಿ ಸುರಾಗ್ರಣಿ ಗುರು ಸುವೃತೀಂದ್ರರ
ಸುರಚಿರ ಸರಸಿಜಕರ ಪೂರ್ವಾದ್ರಿಗೆ ೨
ಭೂಸುರ ಸೇವಿತ ಪೂಶರ ನಿರ್ಜಿತ
ಭಾಸುರ ವರ ಸನ್ಯಾಸ ಸುಚ್ಭಾಯಕೆ ೩
ಬಗೆ ಬಗೆಯಿಂದಲಿ ನಿಗವೋಕ್ತಿಯಲಿ
ರಘುವರನರ್ಚಿಪ ಸುಗುಣವೆಂಬ್ಹಗಲಿಗೆ ೪
ಶಾಮಸುಂದರನ ನಾಮ ಪೊಗಳಿದ
ಪಾಮರ ಮತಿ ಜನಸ್ತೊಮ ಯಾಮಿನಿಗೆ ೫

 

೧೨೧
ಸ್ಮರಿಸಿ ಸುಖಿಸೊ ನರನೆ – ಗುರುರಾಯರನನುದಿನ ಪ
ಸ್ಮರಿಸಿ ಸುಖಿಸೆಲೊ ನರನೆ ನಂಬಿದೆ
ಶರಣು ಜನರಘ ತರಿದು ಕರುಣದಿ
ಪೊರೆವ ಗುರು ಸಹ್ಲಾದ ರಾಜರ
ಚರಣ ಸರಸಿಜ ಹರುಷದಿಂದಲಿ ಅ.ಪ
ನಳಿನ ಬಾಂಧವ ಕುಲದಿ ಅವತಾರ ಮಾಡಿದೆ
ಇಳಿಜರಮಣನಾಜ್ಞದಿ ಕಲಿಯುಗದಿ ದ್ವಿಜರನು
ಸಲಹಲೋಸುಗ ಜಗದಿ ಜನಿಸಿ ಗುರುಗಳ ||
ವಲಿಮೆಯನು ತಾಪಡೆದು ಕೊರಳಲಿ
ತುಲಸಿ ಮಾಲೆಯ ಧರಿಸಿ ಹರಿಯನು
ವಲಿಸಿ ಥಳ ಥಳ ಪೊಳೆವವ ಸ್ತಂಬದಿ
ಕುಳಿತ ಶ್ರೀರಂಗವಲಿದ ದಾಸರ ೧
ಮಾನಿನಿಯಳ ಮಾನರಕ್ಷಿಸಿದೆ ಶ್ರೀ ಪವ
ಮಾನನಯ್ಯನ ಕರುಣವನು ಪಡೆದು ಸ್ತುತಿಸಿದಿ
ದೀನರಿಗನುದಿನ ಮಾಣದಲೆ ಸುಜ್ಞಾನ
ವನು ಪಾಲಿಸಿ ಗುರು ಭವ
ಕಾನನಕೆ ಕೃಶಾನುವೆನಿಸಿದ
ಮಾನವಿ ಪುರ ನಿಲಯರನು
ಅನುಮಾನವಿಲ್ಲದೆ ಮಾನಸದಿನೀ ೨
ಶ್ರೀಮಧ್ವಾಚಾರ್ಯ ಸುಮತ ಶರಧಿಗೆ ಹಿಮ
ಧಾಮನೆನಿಸಿ ನಿರುತ ಸೇವಿಪರಿಗೆ
ಕಾಮಿತಾರ್ಥಗಳಿಗೆ ತ್ವರಿತ ನೀಡಿ ಶಿರಿವರ
ಶಾಮಸುಂದರ ಸ್ವಾಮಿ ಪರನೆಂಬೊ |
ಪ್ರೇಮದಿಂದಲಿ ಹರಿಕಥಾಮೃತ
ಈ ಮಹಾಸುಗ್ರಂಥ ರಚಿಸಿದ
ಹೇಮ ಕಶ್ಯಪ ತನಯರನುಜರ ೩

 

೨೦೦
ಸ್ಮರಿಸು ಜೀವಿಸು ಮಾನವ ಪ
ಸ್ಮರಿಸಿ ಜೀವಿಸು ರಂಗವಲಿದ ದಾಸರ ಪಾದ
ಹರುಷ ತೀರ್ಥರ ಸುಮತ ಶರಧಿ ಚಂದಿರನಾದ
ಮೊರೆ ಹೊಕ್ಕ ಶರಣಘುಕರಿಗೆ ಕೇಸರಿಯಾದ
ಪರಮ ಸಾಧು ಸಹ್ಲಾದ ಅ.ಪ
ಎರಡೊಂದು ಯುಗದಲ್ಲಿ ತರಣಿ ತನಯನ ಸೂತ
ಪುರಂದರಾರ್ಯರ ಗೃಹದಿ ತರಳನೆಂದೆನಿಸಿದಾತ
ಮರುತ ದೇವನ ಪದಕೆ ಬರುವ ಯತಿಗಳ ದೂತ
ವರದೇಂದ್ರ ತೀರ್ಥರಿಗೆ ಪ್ರೀತ ||
ಗುರುಧೇನು ಪಾಲ ವಿಜಯ ದಾಸವರ್ಯರ ಮಮತ
ಭರಿತನಾಗುತ ಪೋಗಿ ಹರಿಣಾಂಕ ಭಾಗದಲಿ ತ್ವರಿತ
ಸಿರಿ ಜಗನ್ನಾಥ ವಿಠಲಾಂಕಿತ ಪಡೆದಾತ
ನಮಗೀತ ಗತಿ ಪ್ರದಾತ ೧
ಭಾರತೀಶನು ಗೈದ ಘೋರ ದುರಿತ ವಿದೂರ
ಮೂರ್ಹತ್ತು ಶರಯುಗ್ಮ ಗ್ರಂಥಗಳ ಸುವಿಚಾರ
ತೋರಿ ಬರುತಿಹ ದಿವ್ಯ ಹರಿಕಥಾಮೃತಸಾರ
ಸಾರಿದಂಥ ಸುಧೀರ ||
ಕಾರುಣ್ಯದಲಿ ಪೊರೆವ ಧರಣಿಸುರ ಪರಿವಾರ
ಸೇರಿ ಸೇವಿಪ ಸುಜನ ಕೋರಿಕೆಯ ಮಂದಾರ
ಭೂರುಹದ ತೆರದಿ ಘುನ ಸೂರೆ ಕೊಡುವನುದಾರ
ದುರಿತವಿಪಿನ ಕುಠಾರ ೨
ಇವರ ಕವನ ಪಠಣ ಶ್ರವಣ ಮನನಗಳಿಂದ
ಲವಕೇಶವಾಗದು ಜವನ ಭವನದ ಬಂಧ
ಅವಿವೇಕತಮದಿ ವರಚರಿತೆ ತಿಳಿಯದೆ ನಿಂದೆ
ಗೈದ ಮನಜ ದಿವಾಂಧ |
ಭುವನದೊಳು ಬೆಳಗುತಿಹ ಇವರ ಮಹಿಮಾನಂದ
ವಿವರಿಸಲು ಎನಗೊಶವೆ ಅವನಿಯೊಳು ನಾ ಮಂದ
ಇವರ ಸನ್ನಿಧಿಯಲ್ಲಿ ಸಕಲ ನದಿಗಳ ವೃಂದ
ನೆಲಸಿಹವು ನಲವಿಂದ ೩
ಮೆರೆವ ಮಾನವಿ ಪುರದಿ ಇರುವ ಸ್ತಂಭದಿ ಜಾಣ
ಎರಡೆರಡು ಸಚ್ಛಾಸ್ತ್ರವರಿತ ಘನ್ನ ಪ್ರವೀಣ
ಪರವಾದಿಗಳ ವಾಗ್ಧುರದಿ ಗೆದ್ದ ಧುರೀಣ
ಹರಿಗೆ ಪಂಚಪ್ರಾಣ ||
ಅರುಹಲೇನಿವರ ಚರಣನಂಬಿದ ಸುಜನ
ಪರಮಭಾಗವತರೆನಿಸಿ ನಿರುತ ಹರಿಪದ ಧ್ಯಾನ
ಪರರಾಗಿ ಮೆಟುತಲಿ ಮುಕುತಿಪಥ ಸೋಪಾನ
ಸೇರಿದರು ನಿಜ ಸ್ಥಾನ ೪
ಸ್ವಾಮಿಗತಿ ಪ್ರಿಯದಾಸ
ಶ್ರೀಮದಕ್ಷತೆ ಗಂಧ ನಾಮದ್ವಾದಶ ಭೂಷ
ಕಾಮಾದಿ ಷಡ್ವೈರಿ ಸ್ತೋಮ ತಿಮಿರ ದಿನೇಶ
ಭೂಮಿ ವಿಬುಧರ ಪೋಷ ||
ಈ ಮಹಾತ್ಮರ ಚಾರುಧವಲಕೀರ್ತಿಪ್ರಕಾಶ
ಸೋಮಸುಪ್ರಭೆಯಂತೆ ಪಸರಿಸುತ ಸಕಲದೇಶ
ಪ್ರೇಮದಿಂದಲಿ ಸತತ ಸುಜನ ಕುಮುದ ವಿಕಾಸ
ಗೊಳಿಸಿಗರೆದುದುಲ್ಹಾಸ ೫

 

೧೫೧
ಸ್ಮರಿಸು ಮಾನವ ನಿರುತ ಶ್ರೀ ಸುಶೀಲೇಂದ್ರ ತೀರ್ಥಾರ
ವರಹಜ ತಟವಾಸ ರಾಯರ ಕರುಣ ಪಾತ್ರರ ಪ
ಭಾನುಜ ಸಮಾನ ದಾನಿ ದೀನ ಪಾಲರ |
ಮಾನಿತ ಸನ್ಮೌನಿ ವರಿಯ ಜ್ಞಾನ ಶೀಲರ ೧
ಪ್ರಾಣಪತಿಯ ಮತಾಬ್ಧಿಗೆ ಪಠೀಣರೆನಿಪರ
ಕ್ಞೋಣಿ ತಳದಿ ಇವರಿಗೆ ಸರಿಗಾಣೆ ಜಾಣರ ೨
ಶಾಮಸುಂದರವಿಠಲನ ನಿಸ್ಸೀಮ ಭಕುತರ
ಸ್ವಾಮಿ ಸುವೃತೀಂದ್ರ ಕೋಮಲ ಕರಸಂಜಾತರ ೩

 

೬೭
ಸ್ಮರಿಸುವೆ ಮುರಹರನ | ಪರಮ ಪುರುಷನ
ಧುರದಿ ಸುರಪ ನರನ | ಪೊರೆದ ದೇವನ ಪ
ವನಜ ಸನ್ನಿಭ ಲೋಚನ | ಜನಕಜೆ ಮನ
ವನಜ ಭಾಸ್ಕರ ಕೇಶವನ | ದನುಜ ಕಾಲನ ೧
ಭಕುತ ಪಾಲಕ ಅಜೀತ ಮುಕುತಿ ಪ್ರದಾತ
ಲಕುಮಿ ಸುರವರ ಪೂಜಿತ | ವಿಖಿನನ ಪಿತ೨
ಶಾಮಸುಂದರ ವಿಠಲಾ | ಸಾಮಜ ಪಾಲಾ
ಶಾಮ ಸನ್ನುತ ಗೋಪಾಲಾ ಭೂಮಿಜೆ ಲೋಲಾ ೩

 

೧೧೯
ಸ್ಮರಿಸುವೆನು ಗುರುರಾಯ ವರಮಂತ್ರ ಪುರಾಧಿಪ
ಪೊರೆಯೊ ಎನ್ನನು ಜೀಯಾ ತವ ಮಹಿಮ ವರ್ಣಿಸ
ಲರಿಯ ಮುರಹರಪ್ರೀಯಾ ಅಧ ಮಾಧಮನ ಮಮ
ಪರಿಯ ನೀ ಬಲ್ಲೆಯ್ಯಾ ತೋರಯ್ಯಾ ದಯ ವರದ
ಚರಿತೆಯ ಅರುಹುವದಕೆ ಪರವಾಕ್ಯರಣಿಯನು ಪಾಲಿಸಿ ನಿರುತ
ಹರಿಗುರು ಚರಣದಲಿ ರತಿ ತ್ವರಿತ ಕರುಣಿಸು ರಾಘವೇಂದ್ರನೆ ಪ
ಹಿಂದೆ ಕೃತಯುಗದಲಿ ಪ್ರಹ್ಲಾದ ನಾಮದಿ
ತಂದೆ ಹಿರಣ್ಯಾಕ್ಷನಲಿ ಸರ್ವೋತ್ತಮನು ಹರಿ
ದ್ವಂದ್ವ ಕರ್ಮವನಲಿ ಅರ್ಪಿಸಲು ಮಹದಾ
ನಂದ ಪೊಂದುವರಲ್ಲಿ ಎಂದು ಪೇಳುತಿರೆ
ಮಂದ ದೈತ್ಯವನಂದ ಮಾತಿಗೆ ಬಂಧನಾದಿಗ
ಳಿಂದ ಶಿಕ್ಷಿಸೆ ಬಂದ ದುರಿತವನಂದು ಕಳೆದಾ
ಕಂದನನು ಹರಿಪೊರೆಯೆ ದಿತಿಜನು
ಒಂದೂ ತಿಳಿಯದೆ ಮಂದಿರ ಗೋವಿಂನೆಲ್ಲಿಹ
ನೆಂದು ಕೇಳುತ ಮಂದರರೋದ್ಧಾರ ನಿಲ್ಲದಿಹ ಸ್ಥಳ
ವಂದೂ ಇಲ್ಲವೂ ಎಂಂದು ಸಾರಿದೆ
ತಂದು ತೋರಿಸು ಸ್ತಂಭದಲಿ ತವ
ಇಂದಿರಾಪತಿಯೆಂದು ಗರ್ಜಿಸೆ
ಕಂದನಾಡಿದ ಮಾತುಗಳನು ನಿಜ
ವೆಂದು ನರಹರಿ ಪೊರೆದೆ ೧
ಶ್ರೀಶನಾಜ್ಞೆಯ ವಹಿಸಿ ದ್ವಿತೀಯಾವತಾರದಿ
ವ್ಯಾಸರಾಯನು ಎನಿಸಿ ಬ್ರಹ್ಮಣ್ಯರಲಿ ಸ
ನ್ಯಾಸವನು ಸ್ವೀಕರಿಸಿ ಸರ್ವಜ್ಞ ಶಾಸ್ತ್ರಾಭ್ಯಾಸವನು ಪೂರೈಸಿ
ವ್ಯಾಸತ್ರಯ ರಚಿಸಿ ದೇಶದೇಶಗಳನ್ನು ಚರಿಸುತ
ಆ ಸಮಸ್ತ ಕುವಾದಿಗಳ ಮತ ನಾಶಗೊಳಿಸಿ ರ
ಮೇಶ ಶ್ರೀ ವೆಂಕಟೇಶನನು ಬಹುದಿನವು ಪೋಜಿಸಿ
ವಾಸಿಸುತ ಗಜರಾಮ ಪುರಧಾಧೀಶರಾಯನ ಕುಹಯೋಗವ
ನಾಶಗೊಳಿಸುತ ಕನಕ ಪುರಂದರ ದಾಸರಿಂದೊಡಗೂಡಿ
ಕೃಷ್ಣನುಪಾಸನೆಯ ಭಕ್ತಿಯಲಿ ಗೈಯುತ
ವಾಸುದೇವನ ಶಿಲ್ಪ ಶಾಸ್ತ್ರದ
ಶಾಸನಕೆ ಪ್ರತಿಯಾಗಿ ನಿಲ್ಲಿಸಿ
ತೋಷಿಸಿದ ಸೌಭಾಗ್ಯ ವೈಭವ ೨
ಮದನ ಜನಕನ ದೂತ ವಿಜಯೀಂದ್ರ ಯತಿಕರ
ಪದುವ ಸಂಭವ ಜಾತ ಶ್ರೀ ರಾಘವೇಂದ್ರ ಸು
ಪದವ ಪಡೆದ ಪ್ರಖ್ಯಾತ ಜಯತೀರ್ಥ ಮುನಿಕೃತ
ಸುಧೆಗೆ ಪರಿಮುಳ ಗ್ರಂಧ ರಚಿಸಿ ಮೆರೆದಾತ
ಬಧಿರ ಮೂಕಾಂಧ ವ್ಯಂಗ್ಯರು ವಿಧ ವಿಧಿದ ಘನರೋಗಗ್ರಸ್ತರು
ಸದಯ ನೀಗತಿಯೆಂದು ಸೇವಿಸೆ
ತ್ರಿದಶ ಭೂರುಹದಂತೆ ಸಲಹುವಿ
ಕುಧರ ತೀರದಿ ಮೂಲ ರಘುಪತಿ
ಪದವ ಪೂಜಿಸುತಲಿ ಸಜೀವದಿ
ಮುದದಿ ವೃಂದಾವನ ಪ್ರವೇಶಿಸಿ
ಪದುಮನಾಭ ಶ್ರೀ ಶಾಮಸುಂದರ
ಮಧು ವಿರೋಧಿಯನು ಧ್ಯಾನಿಸುತ ಶಿರಿ
ಸದನನು ವಲಿಸುತ್ತ ಕರುಣಾ
ನಿಧಿಯು ಭಜಕರ ಪೊರೆವ ಮಹಿಮೆಯ ೩

 

೨೩೧
ಸ್ವಾಗತ ಸುಗುಣಗೆ ಸ್ವಾಗತ ಕರುಣಿಗೆ
ಸ್ವಾಗತವು ನವಸಚಿವರಿಗೆ | ಸ್ವಾಗತ ಸ್ವಾರ್ಥ
ವಿದೂರರಾದ ಜಗನ್ನಾಯಕ ನಾಮ ರಾಯರಿಗೆ ||
ತರಳತನದಿ ಇವರು ಸರಳ ಮನಸ್ಸಿನಲ್ಲಿ
ಸರಸ್ವತಿದೇವಿಯನೊಲಿಸಿದರು | ಪರಮಪೂಜ್ಯ
ಮಹತ್ವರ ತತ್ವ ತಿರುಳು ತಿಳಿದು ಆಚರಿಸಿದರು ೧
ಪ್ರಾಂತದ ಬಡವರ ಚಿಂತೆಕಡಿಯಲು
ಸ್ವಾಂತದಿ ಪಂಥವ ಗೈದವರೋ || ಕ್ರಾಂತಿಯ
ಹೂಡುತ ಶಾಂತಿ ಸಂಗರದಿ ನಿಂತು ಹೋರಾಡಿದ ಯೋಧರು ೨
ದುರುಳರಾಳಿಕೆಯಲಿ ಜರಿದು ಧಿಃಕರಿಸಿ
ಸೆರೆಮನೆ ಕಷ್ಟವ ಸಹಿಸಿದರು | ದೊರೆಯ
ಸ್ವತಂತ್ರವು ಬಹುಮತದಲಿ ಸ್ವೀಕರಿಸಿದರು ಮಂತ್ರಿಪದವಿಯನು ೩
ಉಚ್ಚನೀಚವೆಂಬ ಕುತ್ಸಿತ ಭಾವವ | ಕೊಚ್ಚಿ
ಬೀಸಾಡಿದ ಜಾಣರು | ಅಚ್ಚಗನ್ನಡದ ವೀರ
ಜನನಿಗೆ ಅಚ್ಭದ ಪ್ರೀಯ ಸುಕುಮಾರರು ೪
ಈ ಮಹಾಚತುರನ ಪಡೆದ ಚಂಡ್ರಿಕಿ
ಗ್ರಾಮದೇವಿ ಬಹುಪುಣ್ಯವತಿ | ಪ್ರೇಮ
ದಿಂದಿವರ ನೇಮವ ನಡೆಸುವ ಶಾಮಸುಂದರನು ದಿನಂಪ್ರತಿ ೫

 

೨೩
ಹನುಮ ಭೀಮ ಮುನಿಪ ಎನ್ನ
ಮನಕೆ ಬಾರೆಲೊ |
ಮನಸಿಜ ಹರ ಜನಕ ಭಾವಿ ವನಜಾಸನ
ಘನ ಮಹಿಮನೆ ಪ
ಕುಲಜನುಂಗರ ಜಲಧಿ ಧಾಂಟ
ಇಳಿಜಾತೆಗೆ ಸಲಿಸಿ ಮೋದ
ಗೊಳಿಸಿದ ಮಹ ಬಲಶಾಲಿಯೆ ೧
ಕಂತು ವಿತನೇಕಾಂತ ಭಕುತ
ಕುಂತಿ ಜಾತ ದಂತಿಪುರದ
ಕಾಂತೆಗೆ ಕೃತಾಂತನಾದ
ಶಾಂತೆನೆ ಮಹಂತರೊಡೆಯ ೨
ಶಾಮಸುಂದರವಿಠಲ ಜಗಕೆ
ಸ್ವಾಮಿವಿನುತ ಸ್ಥಾಪಿಸಿದ
ಪ್ರೇಮ ಶರಧಿ ಭೂಮಿ ವಿಬುಧ
ಸ್ತೋಮನಮಿತ ಕಾಮಿತ ಪ್ರದ ೩

 

೨೨
ಹನುಮಂತ ಪಾಹಿ ಗುರು ಮನುಮಂತ ಪ
ಹನುಮಂತ ಅನಿಮಿತ್ತ ಬಂಧು | ಶಿರ
ಮಣಿದು ನಮಿಪೆ ದಯಾ ಸಿಂಧು ಆಹಾ
ಅನುದಿನ ಎನ್ನವಗುಣ ಎಣಿಸದೆ ಕಾಯೊ
ಅನಿಮಿಷ ಪತಿ ಸುರಮುನಿಗಣ ಸೇವಿಪ ಅ.ಪ
ಸಂಜೀವನ ಗಿರಿಧಾರ | ಹೇ ಧ
ನಂಜಯ ನಾಗ್ರಜ ಧೀರ | ಖಳ
ಭಂಜನ ಕರುಣ ಸಾಗರ ಭಾವಿ
ಕಂಜಜ ಭಕ್ತ ಮಂದಾರ ಆಹಾ
ಅಂಜನೆಯಳ ತನು ಸಂಜಾತ ಸಲಹಯ್ಯ
ಸಂಜೆ ಚರಾರಿ ಪ್ರಭಂಜನ ಮೂರುತಿ ೧
ಕಾಳಿವಲ್ಲಭ ಕಪಿವರನೆ | ಕರು
ಣಾಳು ನಂಬಿದೆ ಯತಿವರನೆ | ಖಳ
ಕಾಲ ಪಾಲಿಸು ವೃಕೋದರನೆ | ಛಳಿ
ಶೈಲಜೆ ಕಾಂತ ವಂದಿತನೆ | ಆಹಾ
ಕೇಳಿ ಮಡದಿ ಮೊರೆ ತಾಳಿ ಸ್ತ್ರೀವೇಷರೂಪ
ಖೂಳ ಕೀಚಕನುದರ ಸೀಳಿದ ಗುರುವೆರ ೨
ಗಂಧವಾಹನ ಅಸುನಾಥ ನಿನ್ನ
ಪೊಂದಿದೆ ಪಾಲಿಸು ಸತತ | ಕುಂತಿ
ನಂದನ ದ್ವಿಜವೃಂದ ವಿನುತ | ಶಾಮ
ಸುಂದರ ವಿಠಲನ ದೂತ | ಆಹಾ
ಇಂದು ಕುಲಜವಿಲ್ಲ | ಒಂದೆಂಬವರ ಜೈಸಿ
ಇಂದಿರ ಪತಿ ಪರನೆಂದು ಸ್ಥಾಪಿಸಿದೆ ೩

 

ಶ್ರೀ ಪ್ರಾಣದೇವರು
೨೧
ಹನುಮಂತ ಹನುಮಂತ
ಮುನಿವ್ಯಾಸ ಕರಕಮಲಾರ್ಚಿತ ಜಯವಂತ ಪ
ಭೂಲೋಲ ಕೋಲಜ | ಕೂಲ ಸುಮಂದಿರ
ಫಾಲಾಕ್ಷಪಾಲೋಮಿ ಪತಿ ವಂದಿತ
ಕಾಲ ಕಾಲದಿ ನಿನ್ನ ವಾಲೈಸುವರ ಸಂಗ
ಪಾಲಿಸು ಕರುಣದಿ | ಕಾಳಿಮನೋಹರ ೧
ಬಾಣರೂಪನೆ ಪಂಚಬಾಣ ವಿವರ್ಜಿತನೆ | ಷ
ಟ್ಕೋಣ ಮಧ್ಯದಿ ಬಂದು ನೀನೆಲಸಿ
ಕ್ಷೋಣಿಗೀರ್ವಾಣ ಸುಶ್ರೇಣಿಯಿಂದರ್ಚನೆ
ಮಾಣದೆ ಕೈಗೊಂಬ \ ವಾಣೀಶ ಸ್ಥಾನಾರ್ಹ ೨
ಸಿಂಧು ಬಂಧನ ನಾ
ದ್ವಂದ್ವಪಾದಾರವಿಂದಕ ಮಧುಪನೆಂದೆನಿಸಿದ ಗುರು
ಗಂಧವಾಹನ ನಿನಗೊಂದಿಸುವೆನು
ಭವಬಂಧನ ಬಿಡಿಸೋ ಕಾಯೋ ೩

 

೮೨
ಹಯವದನ ಈ ಭವ ತಾರಿಸೊ
ಸುಜ್ಞಾನ ಪ್ರೇರಿಸೊ ಪ
ಮಾಯದ ಮೃಗದ ಬಾಯಿಗೀಡಾದೆ
ಕಾಯುವದಾತರ ಕಾಣೆ ಹರಿಯೆ
ನಾಯಿಯ ತೆರದಲಿ ಮಬ್ಬಿಲಿ ಮೆರೆದೆ
ದೋಷ ನೋಡದೆ ಕಾಯೋ ೧
ಬಂದೆನು ಭೂಸುರನಾಗುತ ಜಗದಿ |
ಪೊಂದಿದೆ ತವ ಪದ ಹರಿಯೆ
ನಂದನಸುತ ನೀ ಬಂಧನ ಬಿಡಿಸೋ
ಕಂದನ ಮರೆಯುವರೇನೋ ೨
ಮನ್ನಿಸೋ ಶಾಮಸುಂದರವಿಠಲ
ಎನ್ನಯ ಭಾರ ನಿನಗೊಪ್ಪಿಸಿದೆ | ಹರಿಯೆ
ಇನ್ನು ತೋರಿಸೈ ನಿನ್ನಯ ಚರಣ
ಕರುಣಾಭರಣ ದೇವ ೩

 

೧೭೭
ಹರಿಕಥಾಮೃತಸಾರ ಸುರಸ ಗ್ರಂಥವ | ಧರಣಿ ಸುರರಲ್ಲದೆ
ದುರುಳ ಪಾಷಂಡಿಗಳರಿತು ಇದರ ಮರ್ಮ
ಹರುಷಿತರಾಗುವರೇ ಪ
ಹಿಮ ಮಯೂಖನ ನೋಡಿ ಕುಮುದ ಪುಷ್ಪದವೊಲು
ಕಮಲವರಳುವದೇ ||
ಯಾಮಿಜನರಂದದಿ ದಿನಮಣಿಯುದದಿ
ತಿಮಿರಷ್ರ್ಯ ಕೊಡಬಲ್ಲದೇ ೧
ಚಿನ್ನದಾಭರಣಗಳಿಡಲು ದಾಸಿಯು ದೇವ
ಕನ್ನಿಕೆಯಾಗುವಳೇ
ಮನ್ನಣೆಯರಿಯದ ಮನುಜನ ಶಿರ
ಪುಣ್ಯ ಪುರುಷರಿಗೆರಗದೇ ೨
ಗಂಧವಾಹನ ಮತ ಪೊಂದದವರಿಗೆ
ಬಂಧ ತಪ್ಪುವದೇ |
ಮಂದಮತಿಗೆ ಶಾಮಸುಂದರನ
ಮಂದಿರ ದೊರಕುವದೇ ೩

 

ಶ್ರೀ ಹರಿ
೬೨
ಹರಿಯೇ ಬಾರೋ ತ್ವರಾ
ಘೋರಾರಣ್ಯದಿ ಸೇರಿ ದಾರಿ ತೋರದೀಗ ಸಾರಿಕರೆವೆ ಅ.ಪ
ಮಂದರಾರು ಮಂದಿ ಎನ್ನ ಬಂಧಿಸುತಲಿ
ಪಾಶದಿಂದ ಮುಂದಕ್ಕೆ
ಬಿಡದಲಿಹರು ನೊಂದು ಬೆಂದು ಬಾಯಿ ಬಿಡುವೆ ೧
ಹಿಂದೆ ವ್ಯಾಘ್ರ ಮುಂದೆ ಪಾವು ನಿಂದು ಕಾದು ನೋಡುತಿಹವು
ಬಂದು ನೀನು ಕಾಯದಿರಲು ತಂದೆ ಇನ್ನಾರುಗತಿಯೋ ೨
ನಂದಸುತ ಗೋವಿಂದ ಶಾಮಸುಂದರನೆ ನಿನ್ನ ನಾಮ
ವಂದು ನಿಮಿಷ ಧ್ಯಾನಿಸದೆ ನಾ ಮಂದ ಭಾಗ್ಯನಾದೆನಯ್ಯೋ ೩

 


ಹರುಷದಿ ತಾರೆ ಆರುತಿಪುರವೈರಿ ಗೌರೀಶಾ ಧವಳಾಂಗಗೆ ಪ
ಅಶುಭನೇತ್ರ ಶಶಿಧರಗೆ | ವೃಷಭೇಂದ್ರ ಶ್ಯಂದನಗೆಕುಸುಮಬಾಣ ಮದಹರಗೆ ಬಿಸಜಾಕ್ಷಗೆ ೧
ಭುಜಗಮಾಲಾ ಖಳಕಾಲಾ | ವಿಜಿತ ಗೋ ಶಂಕರಗೆರಜತ ಶೈಲ ಮಂದಿರಗೆ | ಕಮಲಾಂಬಿಕೆ ೨
ಅಮರರಾಜನುತ ಚರಣ ಸುಮಹಿಮ ಶೂಲಧರಾಶಾಮಸುಂದರ ಪ್ರಿಯ ಸಖಗೆ ಪ್ರೇಮದಾ ಮಣಿ ೩

 

೨೨೬
ಹಸೆಗೀಗ ಬಾರೆ ಸಖಿಯೆ ಶಶಿಬಿಂಬಪೋಲ್ವ ಮುಖಿಯೆ ಪ
ಝಗ ಝಗಿಪ ವಸನ ಉಟ್ಟು |
ಸೊಗಸಾದ ಕಂಚುಕವ ತೋಟ್ಟು |
ಮೃಗಮದದ ಕಸ್ತೂರಿ ಬಿಟ್ಟು ಮೃಗನಯನೆ ಫಣಿಯೊಳಿಟ್ಟು ೧
ರಮಣೇರು ಕೂಡಿ ನಿನ್ನ ಘಮಘಮಿಸು ಕರೆಯುತಿಹರೇ |
ಪ್ರಮದಾಮಣಿಯ ಶಿರದಿ ಸುಮಗಳ ಮುಡಿದು ಮುದದೀ ೨
ಸಿರಿಯರಸ ಕಮಲನಯನ ವರಶಾಮಸುಂದರನಾ |
ಸ್ಮರಿಸುತ್ತ ಮನದಿ ಲಲನೆ ತಿರಸ್ಕರಿಸದೆ ಹಂಸಗಮನೆ ೩

 

೨೨೪
ಹಾಕುವೆ ಸುಮಾಲಾ ಸುಶೀಲಾ
ಸ್ವೀಕರಿಸೈ ಕರುಣಾಕರ ಕಂಠದಿ ಪ
ಅರಳಿದ ಮಲ್ಲಿಗೆ ಸುರಸು ಶಾವಂತಿಗೆ
ಪರಿಮಳ ಪುಷ್ಪದ ಸರವನು ಶಾವಂತಿಗೆ
ಪರಿಮಳ ಪುಷ್ಪದ ಸರವನು ವಿರಚಿಸಿ ೧
ಜೀವದೊಡೆಯ ಪರದೇವತೆ ನೀನೆಂಬೊ
ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ ೨
ಶಾಮಸುಂದರ ನಿನ್ನ ನೇಮದಿ ನೆನೆವೆನು
ಭಾಮೆಯನಗಲದೆ ಪ್ರೇಮದಿ ಪೊರೆ ಎಂದು ೩

 

೨೨೫
ಹಾಕುವೆ ಸುಮಾಲಾ ಸುಶೀಲಾ
ಜೀವದೊಡೆಯ ಪರದೇವತೆ ನೀನೆಂಬೊ
ಭಾವಕುಸುಮ ಭಕ್ತಿ ಸೂತ್ರದಿ ಬಂಧಿಸಿ ೧
ಸರಸಿಜನಾಭನೆ ಸುರದೊಡೆಯನೆ ನೀ
ವಿರಚಿಸಿದಂಥ ಪರಿಮಳ ಹಾರುವ
ಸರುವ ಹಾರವ ತಂದು ಕೊರಳಿಗೆ ಹಾಕುವೆ ೨
ಶಾಮಸುಂದರ ನಿಮ್ಮ ನೇಮದಿ ನಡೆವೆ ನಾ
ಭಾಮೆಯನಗಲದೆ ಪ್ರೇಮದಿ ಪೊರೆಯೆಂದು ೩

 

೨೨೮
ಓ ಎನ್ನ ಬಂಧುಗಳೆ | ನಾನಿಂದು ಜಗದಿಂದ ಮಾಯ |
ವಾಗಿಹೆನೆಂದು ಮನದೊಳಗೆ ಮರುಗದಿರಿ ||
ಕಂಬನಿಯ ಸುರಿಯದಿರಿ | ಎನಗೆ ಮರಣವು ಇಲ್ಲ |
ನಿಮ್ಮನಗಲಿ ಪೋಗಿಲ್ಲ | ಜಡದೇಹ ಸ್ಥಿರವಲ್ಲ |
ಇದು ತಿಳಿಯದೆ ಮನದಿ ಮಿಡುಕುವುದು ಸರಿಯಲ್ಲ
ಎನ್ನಿರವು ಭಾರತದಿ ನೀವೇನು ಅರಿತಿಲ್ಲ | ನ್ಯಾಯದಲಿ
ನಿಷ್ಟೆಯಲಿ ಸತ್ಯದಲಿ ಶಾಂತಿಯಲಿ | ಉತ್ತಮೋತ್ತಮವಾದ
ಅಹಿಂಸೆ ತತ್ವದಲಿ | ಹರಿಪೇಳ್ದ ಗೀತೆಯಲಿ |
ಹರಿ ಜನರ ಮಧ್ಯದಲಿ
ಬಡಜನರ ದುಃಖದಲಿ | ಸೆರೆಮನೆಯ ವಾಸದಲಿ | ಉಪವಾಸ
ವ್ರತದಲ್ಲಿ | ಭೇದ ಭಾವವ ಬಿಟ್ಟ ಸಾಧು ಸಜ್ಜನರಲ್ಲಿ |
ಖಾದಿ ವಸ್ತ್ರವನುಟ್ಟು | ಮೋದ ಬಡುತಿಹರಲ್ಲಿ |
ರಾಟಿನೂಲುವವರಲ್ಲಿ |
ರಾಷ್ಟ್ರಪ್ರೇಮಿಯಲ್ಲಿ | ಹಿಂದುಮುಸ್ಲಿಮರುಭಯರೊಂದಾಗಿ |
ನಡೆವಲ್ಲಿ ಕುಂದದೆ ನಾನಿಪ್ಪೆ | ಸಂದೇಹ ವಿಲ್ಲದಕೆ | ಈ
ಗುಣಂಗಳೆನಗೆ ಆನಂದದ ನಿವಾಸ | ಇದನಾಚರಿಸುವದೆ
ಮನಕೆ ಉಲ್ಲಾಸ | ಶ್ರೀ ಶಾಮಸುಂದರಗೆ ನಾಂ ಮೋಹನದಾಸ ||

 

೨೦೨
ಉಗಾಭೋಗ
ಗುರು ಜಗನ್ನಾಥಾರ್ಯ ವಿರಚಿತ
ಹರಿಕಥಾಮೃತಸಾರ ಗ್ರಂಥದೊ
ಳಿರುವ ಮೂವತ್ತೆರಡು ಸಂಧಿಗಳಾದ್ಯಂತ ಪದ್ಯಗಳ ||
ಅರಿತು ಭಕುತಿಲಿ ನಿರುತ ಪಠಿಸಲು
ದುರಿತ ಸಂಕುಲ ಕಳೆದು ಸಲಹುವ
ಮರುತ ವಂದಿತ  ಕರವಿಡಿವಾ ||

 

೨೦೩
ಉಗಾಭೋಗ
ಬಸವನೆಂದರೆ ಪಾಪ ಬಾಹುದೇನಯ್ಯ ಅಯ್ಯ
ಬಸವ ಎನ್ನದೆ ಪುಣ್ಯ ಎಲ್ಲಹುದಯ್ಯ ಅಯ್ಯ |
ಬಸವನೆ ನಮ್ಮ ಟೀಕಾರಾಯನಯ್ಯ ಅಯ್ಯ
ಪಾರ್ಥನೇ ನಮ್ಮ ಶಂಕರನ ಒಲಿಸಿದನಯ್ಯ ಅಯ್ಯ |
ಶಂಕರನೇ ನಮ್ಮ ನ ದೂತಯ್ಯ ಅಯ್ಯ ||

 

ಸುಳಾದಿಗಳು
೨೫೨
ಧ್ರುವತಾಳ
ನಿಷ್ಟೆಯಿಂದಲಿ ಮನ | ಮುಟ್ಟಿ ಭಜಿಸೊ ವಿಜಯ ||
ವಿಠಲದಾಸರ ಮನವೆ ನಿತ್ಯ ||
ಎಷ್ಟು ಹೇಳಲಿ ಇವರ ಉತ್ರ‍ಕಷ್ಟ ಮಹಿಮೆ ಕೃಪಾ |
ದೃಷ್ಟಿಯಿಂದಲಿ ನೋಡಿದಾಕ್ಷಣದಿ ||
ಭ್ರಷ್ಟ ಮನಸಿಲಿಂದ | ಬಿಟ್ಟು ಧರ್ಮಾಚರಣೆ
ಧೃಷ್ಟ ಕೃತ್ಯವಗೈದು ದೋಷದಿಂದ ||
ತಪ್ಪಿದ ದುರಿತೌಷ | ಮೊಟ್ಟೆಗಳೆಲ್ಲವು |
ಸುಟ್ಟು ಭಸ್ಮೀ ಭೂತವಾದ ಬಳಿಕ
ಪುಟ್ಟ ಸುಜ್ಞಾನ ಭಕ್ತಿ ವೈರಾಗ್ಯ ಭರಿತರಾಗಿ
ಮೆಟ್ಟುವರೋ ಕೈವಲ್ಯ ಪಥವಾ ||
ಸೃಷ್ಟಿ ಸಂಹಾರಕರ್ತರಿದ್ದಲ್ಲಿ ಪೋಗಿ |
ಸಿಟ್ಟಿನಿಂದಲಿ ಕೊಟ್ಟು ಶಾಪವನ್ನು
ಥಟ್ಟನೆ ವೈಕುಂಟ ಪಟ್ಟಣಕ್ಕೆ ತೆರಳಿ
ಪಟ್ಟದರಸಿಯಾದ ಲಕುಮಿ ಸಹಿತಾ
ಸೃಷ್ಟ್ಯಾಂಡ ಭಾರ ಶಿರದಿ ಇಟ್ಟಂಥಾ ಫಣಿ ಪತಿಯಾ
ಪಟ್ಟಿ ಪರ್ಯಂಕದಲ್ಲಿ ಪವಡಿಸಿಪ್ಪಾ
ಧಿಟ್ಟ ಮೂರುತಿ ಶಾಮಸುಂದರವಿಠಲಗೆ
ಪೆಟ್ಟು ಹಾಕಿದ ಪರಮ ಘಟ್ಟಿಗರಿವರು ೧
ಮಟ್ಟತಾಳ
ಎರಡನೆಯುಗದಲ್ಲಿ ಸುರಲೀಲನು ಎಂಬ
ತರುಚರ ರೂಪದಲಿ ತರು\ಣಿಕುಲೋದ್ಭವನಾ
ಚರಣವ ಸೇವಿಸಿ ಕರುಣ ಸಂಪಾದಿಸಿದಾ
ಮರಳಿ ನಿಕಂಪಾ ನಾಮದಲಿ | ದ್ವಾ
ಪರದಲಿ ಪುಟ್ಟ ಯಾದವನೆನಿಸಿದಾ
ಅರುಹಲೇನು ಮತ್ತೆ ಚರಣಜಕುಲದಲ್ಲಿ
ಧರಿಸುತ ಜನ್ಮವನು ಕರುಣಾಕರ
ಶಾಮಸುಂದರನಂಘ್ರಿಗೆ ಶರಧನುವಿಗೆ ಹೂಡಿ
ಗುರಿ ನೋಡಿ ಎಸೆದಾ ೨
ತ್ರಿವಿಡತಾಳ
ಪುನಃ ಕಲಿಯುಗದಲ್ಲಿ ಅನುಪಮ ಸನ್ಮಹಿಮ
ಅನಿಮಿಷನಾಥಾಖ್ಯ ದಾಸಾರ್ಯರಾ
ಮನೆಯಲ್ಲಿ ಗೋವತ್ಸನೆನಿಸಿ ವಾಸಿಸಿ ಹರಿಯಾ
ಗುಣನಾಮಕೀರ್ತನೆ ಶ್ರವಣಗೈದಾ
ಘನಪುಣ್ಯದಿಂ ಪಶುತನವು ಪೋಗಾಡುತ್ತ
ತನಯರಾಗಿ ಅವರ ಬಳಿಯಲಿದ್ದು
ಮುನಿಮಧ್ವಪತಿ ಎಂಬೊ ಪೆಸರಿನಿಂದಲಿ ಸದಾ
ಮಿನುಗುವರೊಡಗೂಡಿ ಕವನದಿಂದಾ
ಅನನುತ ಶ್ರೀ ಶಾಮಸುಂದರವಿಠಲನ್ನ
ಮನದಿ ಕೊಂಡಾಡುತ್ತ ಅನುಗ್ರಹ ಪಡೆದರೂ ೩
ಅಟ್ಟತಾಳ
ಕ್ಷಿತಿಯೊಳು ಮಾನವಿ ಸೀಮಗೆ ಸೇರಿದ
ಕ್ಷಿತಿಧರ ದೇವನೆ ಸುತೆಯ ಸುತೀರದಿ
ಕ್ಷಿತಿರುಹವರ ನರಹರಿ ಸಾನ್ನಿಧ್ಯದಿ
ಅತಿ ಪುಣ್ಯಕರ ಪುಟ್ಟ ಬದರಿ ಸುಕ್ಷೇತ್ರದಿ
ಸತಿ ಶಿರೋಮಣಿಯಾದ ಕೂಸಮ್ಮನುದರದಿ
ಸುತನಾಗಿ ಪ್ರತಿದಿನ ಶಶಿಯಂತೆ ಬೆಳೆಯುತ್ತ
ಅತಿಶಯ ದಾರಿದ್ತ್ಯ ವ್ಯಥೆಯು ಆವರಿಸಲು
ಖತಿ ಲೇಶವಾಗದೆ ಸಹಿಸುತ್ತ ಶಾಂತದಿ
ಮತಿಯಿಂದ ಮನದೊಳು ಯೋಚಿಸಿ ಮುಂದಣ
ಗತಿಗಾಗಿ ತಾ ಪೋಗಿ ವಾರಣಾಶಿಯಲ್ಲಿ
ಪತಿತರುದ್ಧರಿಸುವ ಸುರನದಿಯಲಿ ಮಿಂದು
ಶಿತಮನದವರಾಗಿ ಇರುತಿರಲೊಂದಿನ
ಸ್ತುತಿಸುತ್ತ ಹರಿಪಾದ ಮಲಗಿರೆ ಸ್ವಪ್ನದಿ
ಶತಧೃತಿನಂದನ ಕರೆದೊಯ್ದಾಚೆಗೆ ಇಪ್ಪ
ಕ್ರತುಭುಜ ತತಿಯಿಂದ ಸುತನಾದ ಶ್ರೀ ಶುಕ
ಪಿತನಂಘ್ರಿ ಕಮಲಕ್ಕೆ ನುತಿಸಿ ಬಿನ್ನೈಸಿದಾ
ಹಿತದಿ ಸಹೋದರ ಇವನ ರಕ್ಷಿಸೆನೆ
ಶೃತಿಗೆ ಸಮ್ಮತ ಮಧ್ವಮತದ ರಹಸ್ಯದ
ಕೃತಿಗಳ ರಚಿಸಿ ಪ್ರಾಕೃತ ಸುಭಾಷೆಯಲ್ಲಿ
ಸತತ ಶ್ರವಣದಿಂದಾ ಮತಿಮಂದ ಜನರು ಉ
ಧೃತರಾಗುವಂದದಿ ಕಥಿಸುತಗರೆದ ಸಂ
ಕೀರ್ತನವನು ಕೃಪೆಯಿಂದಾ ಯತಿಗಳ ಮನೋಹರ
ಕೃತಿದೇವಿ ಪತಿ ಶಾಮಸುಂದರವಿಠಲಾ ೪
ಆದಿತಾಳ
ಮೌನಿ ಸನ್ಮೌನಿ ಸುಜ್ಞಾನಿವರ್ಯರಾದ ಇವರ ಅ
ಮಾನುಷ ಕೃತಿಗಳು ಭಾನುವಿನ ಕಿರಣದಂತೆ
ಕ್ಷೋಣಿಯೊಳು ತುಂಬಿರಲು ಹೀನಮತಿ
ಮನುಜನಾದ ನಾನೆಂತು ಪೇಳ್ವೆನೈಯಾ
ನೀನೇವೆ ಗತಿಯೆಂದು ಮೊರೆಹೊಕ್ಕ ದೀನರಿಗೆ
ಸಾನುರಾಗದಿ ಒಲಿದು ಪ್ರಾಣವನ್ನು
ಜ್ಞಾನವನ್ನು ದಾನವನ್ನು ಮಾಡಿದರು
ವೇಣುಧೇನುಪಾಲ ತುರಗಾನನ ಮೋಹನ
ಜಾಣ ಜಗನ್ನಾಥಧಾಸ ಶ್ರೇಣಿಯ ಸಾಕ್ಷಿಕೇಳು
ಈ ನುಡಿ ನಿಜವೆಂದು ಮಾನಸದೊಳಗನುಮಾನವಿಲ್ಲದೆ ಸದಾ
ಮಾಣದೆ ಇವರ ಪದ ಧ್ಯಾನಿಪರಿಗೆ ಪವ
ಮಾನ ಜನಕ ಶಾಮಸುಂದರವಿಠಲನು
ಪಾಣಿ ಪಿಡಿದು ಪರಿಪಾಲಿಸುವ ಸತತಾ
ಜೊತೆ
ಚಿಪ್ಪಶೈಲದೊಳಿಪ್ಪಾ ಅಪ್ಪನ್ನ ಭಜಿಪರಾ
ತಪ್ಪು ಮನ್ನಿಸಿ ಕಾಯ್ವ ಶಾಮಸುಂದರವಿಠಲಾ

 

೨೫೫
ಧ್ರುವತಾಳ
ಪೂರ್ವಜನ್ಮ ಸುಕೃತ ಪುಣ್ಯ ಸಾಧನದಿಂದ
ಕಾರ್ಪಾರಾಧೀಶ ನರಹರಿಯ ದಯದಿ
ಸರುವ ಜೀವೋತ್ತುಮ ಮರುತನ ಕರುಣದಿ
ಶ್ರೀರಾಘವೇಂದ್ರರ ದಯದಿ
ಧಾರುಣಿನಾಥ ಶ್ರೀ ಮಾನವಿ ಪ್ರಭುಗಳ
ಪಾರ ವಾತ್ಸಲ್ಯ ಕರುಣ ಕೃಪದಲಿ
ನಾರಸಿಂಹ ಭಿನವ ಪ್ರಾಣೇಶವಿಠಲನ
ಚಾರುದಾಸ್ಯವ ಪಡೆದ ಶಾಮಸುಂದರ ಗುರುವೆ ೧
ಮಟ್ಟತಾಳ
ನರಸಂಬಂಧಿಕ ಪ್ರಾಂತ (ಬಲ್ಲಟಗಿ) ಕುರ್ಡಿ ಗ್ರಾಮ
ಧರೆಸುರ ಮನೆತನದಿ ದೈವಜ್ಞಕುಲದಿ
ಧರೆಯೊಳುದಿಸಿ ಬೆಳೆದ ವರಶುಕ್ಲನ ತೆರದಿ
ಹರಿಗುರುಕೃಪೆಯಿಂದ ಪ್ರಾಂತದಿ ರಾಜಿಸಿದ
ಮುರಹರ ಅಭಿನವ ಪ್ರಾಣೇಶವಿಠಲನ
ಚರಣ ವಾಙ್ಞಯ ಸೇವೆಗೈದು ಗುರುದೇವ ೨
ತ್ರಿವಿಡಿತಾಳ
ಹರಿದಾಸ ಸಾಹಿತ್ಯ ವಾಙ್ಞಯ ಬೆಳಸಿದ
ಕರ್ನಾಟಕ ಮಾತೆಯ ಅಚ್ಚುಮೆಚ್ಚಿನ ಪುತ್ರ
ದರಹಸಿತಾನಂದ ಭರಿತ ವೃತ್ತ ಸರಸಕವನಗಳ
ಸರಸಕವನಗಳ ಪದ್ಯ ಸುಳಾದಿಗಳ
ಸರಸು ಯಮಕ ಪ್ರಾಸ ಬಂಧುರ ಪದಗಳ
ತ್ವರಿತ ಉಗಾಭೋಗ ಕನ್ನಡ ಸಾಂಗತ್ಯ
ಹರಿಸತ್ಯದೇವರ ಚರುತೆ ಕಥಾಮೃತ
ವಿರಚಿಸಿ ಸುಜನಕೆ ಹರುಷಗೈದು ಗುರುವರ ನಿಮ್ಮಯ ಉಪ
ಕಾರ ಸುಜನರು ಮರೆಯರು ಕರುಣಾರ್ಣವ
ಶಿರಿವರ ಅಭಿನವ ಪ್ರಾಣೇಶವಿಠಲರ
ಚರಣ ಸರಸಿಜಭೃಂಗ ದೀನದಯಹಾಪಾಂಗ ೩
ಅಟ್ಟತಾಳ
ಮೂಕಬಧಿರರಂತೆ ಲೋಕಕ್ಕೆ ತೋರುತ್ತ
ಶ್ರೀಕರ ರೂಪವ ಹೃದಯದಿ ನಿಲಿಸುತ
ಮಾಕಳತ್ರನ ನಾಮ ವದನದಿ ಪಾಡುತ್ತ
ಕೋಕನದಾಕ್ಷನ ನೈವೇದ್ಯ ಭುಜಿಸುತ
ಶ್ರೀಕರ ನಿರ್ಮಾಲ್ಯ ಶಿರದೊಳು ಧರಿಸುತ್ತ
ಶ್ರೀಕಥಾಸಾರವಗರೆವ ಜಗನ್ನಾಥ
ಆಕೆವಾಳರ ಹೆಗ್ಗದವೆ ಕಾಯುತ್ತಲಿಹ
ಲೋಕೇಶದಾಸನೆ ಕಪಿಕುಲ ತಿಲಕನೆ
ಮಾಕರ ಅಭಿನವ ಪ್ರಾಣೇಶ ವಿಠಲನ್ನ
ಏಕಾಂತದಲಿ ಭಜಿಪ ಭಾಗ್ಯ ಕೊಡು ಪ್ರಭುವೆ ೪
ಆದಿತಾಳ
ಶ್ರೀಶದಾಸವಾಙ್ಞುಯ ಕುಸುಮಗಳನು
ದೇಶದಿ ಸುರಿಸುತ ಸೌರಭ ಬೀರುತ
ಅಸುಪತಿಯ ಸಿದ್ಧಾಂತ ಪಸರಿಸುತ
ಮೇಶ ಭಾಗವತ ಧರ್ಮವ ಹರಹುತ
ದೇಶದಲ್ಲಿ ಜನಜಾಗ್ರತೆಗೊಳಿಸಿದ
ದಾಸರೆ ಶ್ರೀ ಗುರುಶಾಮಸುಂದರೆ
ಹೇಸಿ ವಿಷಮ ಜಲರಾಶಿಯೊಳಗೆ ಬಿದ್ದು
ಕ್ಲೇಶದಿ ಬಳಲುತ ತೊಳಲುತಲಿರುವೆನು
ದಾಸನ ಪಿಡಿ ಕರ ಉದ್ಧರಿಪುದು ಜೀಯ
ವಾಸುದೇವಭಿನವ ಪ್ರಾಣೇಶ ವಿಠಲನ
ದಾಸ್ಯಪಥ ತೋರದುಪಕಾರ ಮತಿಯೆನು ಜೀಯ ೫
ಜೊತೆ
ಮಾಮನೋಹರದಾಸ ಶಾಮಸುಂದರಧೀಶ
ರಾಮಾಭಿನವ ಪ್ರಾಣೇಶ ವಿಠಲದಾಸ ೬

 

೨೫೩
ಧ್ರುವತಾಳ
ಪೊಂದಿ ಭಜಿಸು ಸತತ | ಒಂದೇ ಮನದಿ ಸ್ತಂಭ
ಮಂದಿರ ಮಾನವಿ ದಾಸಾರ್ಯರ ಪ
ಮಂದ ಮಾನವ ಕೇಳೋ | ವಂದಿಸಿ ಸೇವಿಪರ
ಬಂಧನ ಪರಿಹರಿಸಿ ಮನದಾಭೀಷ್ಟ
ತಂದು ಕೊಡುವದಕ್ಕೆ | ಮಂದಾರ ಕುಜದಂತೆ
ಬಂದಿಲ್ಲಿ ನಿಂದಿಹ್ಯರೆಂದು ತಿಳಿಯೊ
ಛಂದಾಗಿ ಇವರು ದಯದಿ | ಕಣ್ಣೆರದು ನೋಡಿದರೆ
ಬೆಂದು ಪೋಪವು ದೋಷ ವೃಂದವೆಲ್ಲ
ಕಂದನು ಮಾಡಿದ ಕುಂದು ಕ್ಷಮಿಸಿ ತಾಯಿ
ತಂದೆ ಸಕಹುವಂತೆ ರಕ್ಷಿಸುವರೊ
ಹಿಂದೆ ಸಹ್ಲಾದ ಶಲ್ಯನೆಂದೆನಿಸುತ ಪು |
ರಂದರಗುರು ಸ್ವಾದಿರಾಜರ ಪ್ರೀತ
ಸಿಂಧುವರದ ಶಾಮಸುಂದರನಾಜ್ಞದಿ
ಇಂದುವಿನಂತೆ ಮೂಡಿ ಪುನಃ ಜಗದಿ೧
ಮಟ್ಟತಾಳ
ತ್ವರವಾಡದಿ ಜನಿಸಿ | ವರದೇಂದ್ರನೊಲಿಸಿ
ಮರುತಾಗಮ ಗಳಿಸಿ | ತುರುಕ್ಷಕದಾಸ
ವರಿಯರ ಕರುಣದಲಿ | ಶರಧಿಜ ಭಾಗದಲಿ ಧರಣಿಪ ವಿಠಲೆಂಬ
ಸುರಚಿರದಂಕಿತವ | ದೊರಕಿಸಿ ಪ್ರಾಕೃತದಿ
ಕರುಣಾಕರ ಶಾಮಸುಂದರನೊರಣಿಸಿದ
ಪರಮಭಾಗವತರ ನೆರೆನಂಬೊ ನಿರುತ ೨
ತ್ರಿವಿಡತಾಳ
ಇವರ ಸಂದರುಶನ ಭವಬಂಧ ಮೋಚನ
ಇವರ ಸಂದರುಶನ ಭವಬಂಧಮೋಚನ
ಇವರ ಚರಣ ಧ್ಯಾನ ಗಂಗಾಸ್ನಾನ
ಇವರನ ಸಾರಿದರೆ ಜವನ ಅಂಜಿಕೆಯಿಲ್ಲ
ಇವರ ಕವನ ಸ್ತವನ ಶ್ರವಣದಿಂದ
ಪವನ ಸಚ್ಚ್ಯಾಸ್ತ್ರ ಪ್ರವಚನ ಫಲವಕ್ಕು
ಇವರಿದ್ದ ಸ್ಥಳ ಕಾಶಿ ರಾಮೇಶ್ವರ
ಇವರಲ್ಲಿ ಸಮಸ್ತ ದಿವಿಜರು ನೆಲೆಸಿದ್ದು
ಇವರಂದ ವಚನವ ನಡೆಸುವರು
ಇವರಲ್ಲಿರಲು ಬಿಟ್ಟು ಅವನಿಸುತ್ತಿದರವಗೆ
ಲವಲೇಶವಾದರು ಪುಣ್ಯವಿಲ್ಲ
ಇವರನುಗ್ರಹವಾಗೆ ಶ್ರೀ ಶಾಮಸುಂದರನು
ತವಕದಿ ಕೈಪಿಡಿದು ಸಲಹುವ ಸರ್ವದ ೩
ಅಟ್ಟತಾಳ
ಧಾರುಣಿ ಸುರರ | ಉದ್ಧಾರಗೋಸುಗವಾಗಿ |
ಮೂರೆಂಟು ಈರಾರು ಚಾರುಲಕ್ಷಣವುಳ್ಳ |
ಭಾರತಿಪತಿಯಂತೆ ತೋರುವ ಕಾಯುವ
ಶೌರಿ ಕಥಾಮೃತ ಸಾರ ಸುಗ್ರಂಥವಾ
ತಾ ರಚಿಸಿದ ಉಪಕಾರವು ವರ್ಣಿಸ
ಲಾರಿಂದ ಸಾಧ್ಯವು | ಪಾರಾಯಣ ಪ್ರತಿ
ವಾರ ಬಿಡದೆ ಮಾಡೆ ಸಾರಲೇನು | ಸಂ
ಸಾರ ಶರಧಿಯಿಂದ ಪಾರಾಗಿ ಸದ್ಭಕುತಿ
ಪಾರಮಾರ್ಥಜ್ಞಾನ ವೈರಾಗ್ಯ ಪಡೆವ್ರತ
ನಾರದ ನಮಿತ ಶ್ರೀ ಶಾಮಸುಂದರನ ಹೃ
ದ್ವಾರಿಜದೊಳು ಕಂಡು ಸೂರೆಗೊಂಬ ಸುಖ ೪
ಆದಿತಾಳ
ಈತನ ಭಜಿಸಲು | ಯಾತನೆಗಳು ಇಲ್ಲ
ಈತನ ಸೇರಲು | ಯಾತರ ಭೀತಿಯು
ಈತನ ಹೊರತಿನ್ನು | ದಾತರೆ ನಮಗಿಲ್ಲ
ಈತನೆ ರಕ್ಷಕ | ಈತನೆ ತಂದೆ ತಾಯಿ
ಈತನೆ ಸದ್ಗುರು | ಈತನೆ ಗತಿಪ್ರದ
ಈತನು ಮೂಕಗೆ | ಮಾತು ನುಡಿಸಿದಾತ
ಈತನ ಭಕುತಿಗೆ | ಸೋತು ಎರಡುವ್ಯಾಳ್ಯ
ವಾತಾಂತರ್ಗತ ನಮ್ಮ ಶಾಮಸುಂದರವಿಠಲ
ಪ್ರೀತಿಯಿಂದಿವರಿಗೆ ಮೃಷ್ಟಾನ್ನ ಉಣಿಸಿದ ೫
ಜತೆ
ಈ ಮಹಾಮಹಿಮರ ಪ್ರೇಮ ಪಡೆದವರನ್ನು
ಶಾಮಸುಂದರಸ್ವಾಮಿ ಸತತ ಪೊರೆವ |

 

ಎನಗ್ಯಾಕೆ ಕವಿಯೆಂಬ
ಆತ್ಮನಿವೇದನೆ ಮತ್ತು ಲೋಕನೀತಿ
೨೦೫
ಎನಗ್ಯಾಕೆ ಕವಿಯೆಂಬ ಶ್ರೇಷ್ಠನಾಮಾ
ಜನರೊಳಗೆ ನಾನೋರ್ವ ಮನಜಾಧಮ ಪ
ಸ್ನಾನ ಜಪ ತಪ ಮೌನ ಧ್ಯಾನ ವರಮಂತ್ರಗಳ
ಖೂನವಿಲ್ಲದೆ ಜ್ಞಾನ ಹೀನನಾಗಿ
ಏನು ಹೇಳಲಿ ದುಷ್ಟ ಮಾನಿನಿಗೆ ಮನಸೋತು
ಶ್ವಾನನಂದದಿ ದಿನವ ನಾ ನೂಕಿದವನಯ್ಯ ೧
ಹತ್ತೆರಡು ಮತೈದು ಗಾತ್ರದೊಳು ಧರಿಸದಲೆ
ಸೋತ್ತುಮರ ಸತ್ಯಂಗನವು ಮಾಡದೆ
ಚಿತ್ತ ಚಂಚಲನಾಗಿ ಲೆತ್ತ ಪಗಡಿಗಳಾಡಿ
ಕತ್ತೆಯಿಂದದಿ ವ್ಯರ್ಥ ಹೊತ್ತು ಕಳೆದವ ನಾನು ೨
ನೇಮಪೂರ್ವಕ ಒಂದು ಯಾಮವಾದರು ಮನದಿ
ಶಾಮಸುಂದರ ಧ್ಯಾನ ಮಾಡದೆ
ಕಾಮಾರಿ ಷಡ್ವೈರಿ ಸ್ತೋಮಕ್ಕೆ
ಭೂಮಿಯೊಳು ಜಡವಾದ ನಾಮದಲಿ ಚರಿಸುವೆನು೩

 

ಹಾಡಿನ ಹೆಸರು :ಎನಗ್ಯಾಕೆ ಕವಿಯೆಂಬ
ಹಾಡಿದವರ ಹೆಸರು : ವಿರೂಪಾಕ್ಷ ವಂದಲಿ
ರಾಗ :ಚಾರುಕೇಶಿ
ತಾಳ :ಭಜನ್ ಠೇಕಾ
ಸಂಗೀತ ನಿರ್ದೇಶಕರು :ಸದಾಶಿವ ಪಾಟೀಲ್
ಸ್ಟುಡಿಯೋ :ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *