Categories
ರಚನೆಗಳು

ಶಿವರಾಮರು

೭೨
ಮಾಯದ ಮಾತೆಲ್ಲ | ಸುಳ್ಳದೆ | ಖರೆಯಾಗಿ ನಿಂತದೆ ಪ
ಗಂಧರ್ವಪುರದಿಂದ | ನೋಡಮ್ಮಾ | ಬಂಜೆಯ ಮಗತಾ ಬಂದು | ಭೀಷ್ಮನ ಮಗಳಿಗೆ | ಮದುವ್ಯಾದ ೧
ಸೊಂಟನ ಕೈಯಿಂದ | ನೋಡಮ್ಮಾ | ಗಗನ ಪುಷ್ಪವ ತರಿಸಿ |ಕೊರಳೊಳು | ಮಾಲೆಯ ಹಾಕಿದರಂತೆ ೨
ಪರ್ವತ ಕೊನೆ ಮೇಲೆ | ನೋಡಮ್ಮಾ | ಮೃಗಜಲ ನದಿಯಂತೆ |ಅದರೊಳು | ಕಲ್ಲಿನ ಹರಗೋಲಂತೆ ೩
ಮೊಲವೆದ್ದು ಇರಿಯಲ್ಕೆ | ನೋಡಮ್ಮ | ಹರಗೋಲನ ಹರಿದು | ಒಳಗಿದ್ದ ಬಂಜಿಯ ಮಗ ಹರಿದ್ಹೋದಾ ೪
ಮೀನುಗಳಿಷ್ಟೂ ಕಂಡೂ | ನೋಡಮ್ಮ | ಶವ ತೆಗೆದು ಹೊರಗ್ಹಾಕಿ | ವನಕೊಯ್ದು | ದಹನವ ಮಾಡಿದವಂತೆ ೫
ಇಷ್ಟು ಕುರುಡಾ ಕಂಡಾ | ನೋಡಮ್ಮಾ | ಹೆಳವಾ ಹೇಳಲಿ ಬಂದಾ | ಕಿವುಡನಿಗೆ | ಮೂಕ ಹೇಳಿದನಂತೆ ೬
ಈ ಪರಿ ಸಂಸಾರ ನೋಡಮ್ಮಾ | ಮಾಯದ ವಿಸ್ತಾರ | ಶಿವರಾಮಾ ತಾ | ಕೇಳಿ ಬೆರಗಾದಾ ೭

 

ರಾಮ ರಾಮ ರಾಮರಾಮ ರಾಮ ರಾಮರಾಮ ರಾಮ ರಾಮ
೭೩
ಸಖ್ಯವ್ಯಾಕೆ ಮುಖ್ಯ ಸ್ವಹಿತ ಹೇಳದನಕ |ಮಕ್ಕಳು ಯಾಕೆ ಪಿತೃಗಳ ಆಜ್ಞೆಯ ನಡೆಸದನಕ ಪ
ದಾತನ್ಯಾಕೆ ಬಯಕೆ ಪೂರ್ಣ ಮಾಡದನಕ | ಬರಿ |ಮಾತು ಯಾಕೆ ಸ್ಥಿತಿಯ ಲೇಶ ಇಲ್ಲದನಕ ೧
ಸಂತನ್ಯಾಕೆ ಶಾಂತಿ ನೆರಳು ಹಿಡಿಯದನಕ | ತನು |ಕಂಥೆಯಾಕೆ ಶಿವಪದಕ್ಕೆರಗೋ ತನಕ ೨
ನೇಮವ್ಯಾಕೆ ಹೃದಯ ಶುದ್ಧವಾಗದ ತನಕ | ಶಿವನ |ನಾಮವ್ಯಾಕೆ ನಾಮರೂಪ ಅಳಿಯದ ತನಕ ೩
ಮತಿಗಳು ಯಾಕೆ ಶಿವರಾಮ ಪದಕೆ ನಿಲುಕದ ತನಕ | ಹರಿ |ಕಥೆಗಳು ಯಾಕೆ ಪ್ರೇಮ ತುಂಬಿ ತುಳುಕದ ತನಕ ೪
ಜಾಣನ್ಯಾಕೆ ಸಮಯ ಉಚಿತ ಅರಿಯದ ತನಕ | ಬರಿಗಾನವ್ಯಾಕೆ ಸ್ವರದ ಲಯವ ಧರಿಸದ ತನಕ ೫
ಧರ್ಮವ್ಯಾಕೆ ಸಮಯ ಕಾಲಕ ಒದಗದ ತನಕ | ಸ- |ತ್ಕರ್ಮವ್ಯಾಕೆ ದಂಭತನವು ದಹಿಸದನಕ ೬
ಧನ ವಿದ್ದ್ಯಾತಕೆ ಶರಣರಡಿಗೆ ತರದನ್ನಕ | ಈಮನ ವಿದ್ದ್ಯಾಕೆ ತನ್ನ ಉಗಮ ಸೇರದನ್ನಕ೭
ಶಿಷ್ಯನ್ಯಾತಕೆ ಗುರುಗಳ ಹೃದಯ ತಿಳಿಯದನ್ನಕ | ಸರಸಭಾಷ್ಯವ್ಯಾತಕೆ ಶ್ರುತಿಯ ಗರ್ಭ ಉಸುರದನ್ನಕ ೮
ಜ್ಞಾನವ್ಯಾಕೆ ಜ್ಞೇಯಗುರಿತವರಿಯದನಕ | ಬರಿ |ಧ್ಯಾನವ್ಯಾಕೆ ಚಿತ್ತವೃತ್ತಿ ಮರೆಯ ದನಕ ೯
ಆರಾಮವ್ಯಾಕೆ ದುಃಖಸೀಮಿ ದಾಂಟದನಕ | ಶಿ- |ವರಾಮನ್ಯಾಕೆ ಪೂರ್ಣ ಸುಖದೊಳಾಡದ ತನಕ ೧೦

 

ರಾಮ ರಾಮ ಶ್ರೀರಾಮ
ರಾಮ ರಾಮ ರಾಮರಾಮ ರಾಮ ರಾಮರಾಮ ರಾಮ ರಾಮ
ಹಾಡಿನ ಹೆಸರು:ರಾಮ ರಾಮ ರಾಮ
ಹಾಡಿದವರ ಹೆಸರು:ವೇಮಗಲ್ ನಾರಾಯಣಸ್ವಾಮಿ
ರಾಗ:ಸಿಂಧುಭೈರವಿ
ತಾಳ:ಆದಿ ತಾಳ
ಸಂಗೀತ ನಿರ್ದೇಶಕರು:ಪಿಚ್ಚಳ್ಳಿ ಶ್ರೀನಿವಾಸ್
ಸ್ಟುಡಿಯೋ:ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ

Leave a Reply

Your email address will not be published. Required fields are marked *