Categories
ರಚನೆಗಳು

ಹೊಸಕೆರೆ ಚಿದಂಬರಯ್ಯನವರು

ಕರುಣದಿಂದ ಪೊರೆವುದೆನ್ನಪರಮಪುರುಷ ಸೂರ್ಯದೇವ ಪ
ಗಾಲಿಯೊಂದೆ ಇರುವ ರಥವುಕಾಲುಕುಂಟನಾದ ಸಾರಥಿ
ಏಳುಕುದುರೆ ಇರಲು ನಡೆವಕಾಲಚಕ್ರ ನಿಯಂತಾರ ೧
ಲೋಕಕೆಲ್ಲ ಕಣ್ಣೆನಿಸುತಭೀಕರಾಂಧಕಾರವನುನೂಕಿ ಜಗಕೆ
ಬೆಳಕನೀವಸಾಕಾರ ಪರಬ್ರಹ್ಮ ೨
ಸರ್ವಸ್ಟೃಕರ್ತನಾಗಿಸರ್ವಸ್ಥಿತಿಗೆ ಕಾರಣನಾಗಿ
ಉರ್ಪಿಯೊಳಗೆ ಬೆಳಗುತಿರುವಸರ್ವದೇವ ಚಿತ್ಸ್ವರೂಪ ೩

 

ಗಂಗಾ ಗಂಗಾ ಎಂದು ನಿನ್ನ ಸಾನ್ನಿಧ್ಯದಲ್ಲಿಯೇಇರುವೆನೋ? ಸುಖದಿ ಗಂಗಾ ಪ
ಧರೆಗೊಪ್ಪುವ ಹಾರ’ದೆಂಬಂದದಿಮೆರೆಯುತ್ತಿರುವಾ ಪರಮಪಾವನೆಯೆ ೧
ಸುರಲೋಕಕೆ ಹತ್ತುವದನು ಸೂಚಿಸುತಿರುವ ಪತಾಕೆಯ ಪರಿಯಳೊಪ್ಪಿರುವ ೨
ಹರಿಚರಣಾಂಬುಜದಿಂದ ಹೊರಡುತಹರನಶಿರಸ್ಯಂ ಹರಿಯುತಾ ಇರುವ ೩
ಮುಳುಗಿದವರ ಪಾಪಗಳನೆಲ್ಲವನುತೊಳೆಯುವ ಚಿನ್ಮಯೆ ಕಲಿಮಲಾಪಹರೆ ೪

 

ಗಿರಿಶಾ ಗೌರೀಪ್ರಾಣಾಧೀಶ ಜಯ ಜಯದುರಿತ ‘ನಾಶ ಮಹೇಶ ಪ
ದಕ್ಷಯಜ್ಞ ‘ಧ್ವಂಸಕಾರಿ ಸುರಪಕ್ಷಪಾತಿ ಕಾಮಾರಿ ದುಃಖಹರ ೧
ಘೋರಪಾಪ ಸಂದೋಹನಾಶನಭೂರಿ ದಯಾಳೋ ಭೋಗಿಭೂಷಣ ೨
ಈಶಗಿರೀಶ ಧನೇಶ್ವರ ‘ುತ್ರಕಾಶೀಶ್ವರ ಸುರಸನ್ನುತಿ ಪಾತ್ರ ೩
ವಾಸವಾದಿನುತ ದುಷ್ಟಭಯಂಕರವೇಷ ಜಟಾಧರ ಚಂದ್ರಶೇಖರ ೪
ಕಲಭಪ್ರೌಢ ಮಹಾನಾಟ್ಯೇಶ್ವರಆ’ಮುಕ್ತೇಶ್ವರ ಪ್ರಮಥ ಗಣೇಶ್ವರ ೫
ಕಾಳಿಂದೀಪ್ರಿಯ ಕಮಲನಯನಸಖಕಾಲಕಾಲ ಕಾಲಾಗ್ನಿ ಪಂಚಮುಖ ೬
ನೀಲಕಂಠ ನಿಖಿಲಾಮರ ರಕ್ಷಕಫಾಲಚಂದ್ರ ಸಂಸೃತಿ ‘ಷಭಕ್ಷಕ ೭
ಶಾಂತಮೂರ್ತಿವರಕಾಂತಿ ಗುಣಪ್ರಿಯಶಾಂತಿದಾಯಕಾ ಶಾಂತ ಸಂಶಯ ೮
ಕುಂಭಜಾತ ನುತನಟನ’ಲಾಸಶಂಭು ಹರ ಚಿದಾಕಾಸ ನಿವಾಸ ೯

 

ರಾಮದಾಸ್ಯವನೆ ಬೇಡುವೆ ನಿನ್ನಬ್ರಹ್ಮೇಂದ್ರ ‘ನುತ ಸೀತಾಪತೇ ಪ

ಭೂ’ುಭಾರವನು ಕಳೆದು ಭಕ್ತರಿಗೆಪ್ರೇಮದಿಂದ ತನ್ನ ರೂಪವನು ತೋರಿಈ ಮ’ಗೆಲ್ಲ ಮುಖ್ಯದೈವವಾದಕೋಮಲಾಂತಃಕರಣದ ನಿನ್ನ ಪಾದ ೧
ಹುಟ್ಟುಸಾವುಗಳ ಸುಳಿಯಲಿ ಸಿಕ್ಕಿಕಷ್ಟದಿಂದ ದುಃಖಪಡುತಿರುವರಕಷ್ಟವನು ಹೋಗಲಾಡಿಸುವಸ್ಟೃಗೆಲ್ಲ ಮುಖ್ಯದೈವವಾದ ನಿನ್ನ ೨
ಹೊಟ್ಟೆಬಟ್ಟೆಗಾಗಿ ನಾ ಮಾಡಿದಕೆಟ್ಟಜನಗಳ ಸೇವೆ ಸಾಕುಮಾಡಿಇಷ್ಟದೈವದ ಚಿದ್ರೂಪವ ನೆಟ್ಟನರಿಯುವ ದ್ಟೃುಂದ ನಿನ್ನ ೩

 

ನಿನ್ನನು ನಂಬಿದೆ ಶಾರದೆ ನೀನು ಪ್ರಸನ್ನಳಾಗಬಾರದೆ ಪ
ನಿನ್ನನು ಬಿಟ್ಟಗ್ ಎನ್ನಯ ದುಃಖಗಳನ್ನು ಕಳೆಯುವರಿನ್ನಾರಿರುವರು ಅ.ಪ
ಹೇಳಿಕೊಳ್ಳುವೆ ತಾಯೇ ದುಃಖವಕೇಳು ಮಹಾಮಾಯೆಹಾಳು ‘ಷಯಗಳ ಜಾಲದಿ ಸಿಕ್ಕಿಹಗೋಳನು ನಾನೀಗ ತಾಳಲಾರೆನು ಹಾಯ್ ೧
ಆಟದ ವಸ್ತುಗಳ ಕೊಟ್ಟು ಚೆಲ್ಲಾಟವಾಡುವೆಯಾಸಾಟಿ ಇಲ್ಲದೀಆಟವ ಸಾಕು ಸಾಕುಕಾಟವಕಳೆನೀಂ ಭೇಟಿಯ ಕೊಟ್ಟು ೨
ಹರಿಹರಿಯೆನ್ನದೆ ಈ ನಾಲಿಗೆಯನರಗಳು ಸೊಕ್ಕಿಹವುನಿರುತವು ಹರಿನಾಮ ಭರವೆಡೆಬಿಡದಂತೆಹರಸಿ ಕಾಯೆ ಚಿಚ್ಛರೀರದ ತಾಯೆ ೩

 

ಶ್ರೀ ಗಿರಿಜಾತನಯಾ ಮಹೋದಯಾಶ್ರೀ ಗಿರಿಜಾತನಯಾ ಪ
ಭಾಗವತಪ್ರಿಯ ಭೋಗಿಜನಾಶ್ರಯಬಾಗಿನ’ುಸುವೆನಯ್ಯಾ ಅ.ಪ
ಸುರವರ ಪೂಜಿತ ವರಸಿದ್ದಿಸಂಯುತಶರಣಪಾಲಕನಿರತ ‘ಖ್ಯಾತಾ ೧
ಪಾಶಾಂಕುಶಧರ ದಾಸಸಂಕಟಹರಈಶಕುವರ ಸುಂದರ ಸುಧೀರ ೨
ಮೋದಕಸ’ತ ಬಾಧಕರ’ತವೇದವಚನ’ನುತ ಪುನೀತ ೩
ರಕ್ತಮಾಲ್ಯಾಂಬರಾ ಸಕ್ತದೇವಗುರುಭಕ್ತಿದಾನ ಚತುರದ್ವೈಮಾತುರ ೪
ಏಕವದನ ಗಣಾಧೀಕ ‘ಭೂಷಣಭೀಕರ ರಿಪುಹರಣ ಚಿದ್ವನ ೫

 

ನಿನ್ನನು ನಂಬಿದೆ ಶಾರದೆ
ನಿನ್ನನು ನಂಬಿದೆ ಶಾರದೆ ನೀನು ಪ್ರಸನ್ನಳಾಗಬಾರದೆ ಪ
ನಿನ್ನನು ಬಿಟ್ಟಗ್ ಎನ್ನಯ ದುಃಖಗಳನ್ನು ಕಳೆಯುವರಿನ್ನಾರಿರುವರು ಅ.ಪ
ಹೇಳಿಕೊಳ್ಳುವೆ ತಾಯೇ ದುಃಖವಕೇಳು ಮಹಾಮಾಯೆಹಾಳು ‘ಷಯಗಳ ಜಾಲದಿ ಸಿಕ್ಕಿಹಗೋಳನು ನಾನೀಗ ತಾಳಲಾರೆನು ಹಾಯ್ ೧
ಆಟದ ವಸ್ತುಗಳ ಕೊಟ್ಟು ಚೆಲ್ಲಾಟವಾಡುವೆಯಾಸಾಟಿ ಇಲ್ಲದೀಆಟವ ಸಾಕು ಸಾಕುಕಾಟವಕಳೆನೀಂ ಭೇಟಿಯ ಕೊಟ್ಟು ೨
ಹರಿಹರಿಯೆನ್ನದೆ ಈ ನಾಲಿಗೆಯನರಗಳು ಸೊಕ್ಕಿಹವುನಿರುತವು ಹರಿನಾಮ ಭರವೆಡೆಬಿಡದಂತೆಹರಸಿ ಕಾಯೆ ಚಿಚ್ಛರೀರದ ತಾಯೆ ೩

 

ಹಾಡಿನ ಹೆಸರು :ನಿನ್ನನು ನಂಬಿದೆ ಶಾರದೆ
ಹಾಡಿದವರ ಹೆಸರು :ಚೈತ್ರ ಕೆ. ಆರ್.
ರಾಗ :ಕಾನಡ
ತಾಳ :ಆದಿ ತಾಳ
ಸಂಗೀತ ನಿರ್ದೇಶಕರು :ರಾಘವೇಂದ್ರ ಎಂ.
ಸ್ಟುಡಿಯೋ : ಅರವಿಂದ್ ಸ್ಟುಡಿಯೊ, ಬೆಂಗಳೂರು

ನಿರ್ಗಮನ