Categories
asia

ಮಂಗೋಲಿಯಾ

[fusion_builder_container hundred_percent=”no” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” video_preview_image=”” border_color=”” border_style=”solid” margin_top=”” margin_bottom=”” padding_top=”” padding_right=”” padding_bottom=”” padding_left=”” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಒಂದು ಕಾಲದಲ್ಲಿ ಅತ್ಯಂತ ದೊಡ್ಡ ಸಾಮ್ರಾಜ್ಯ ಕಟ್ಟಿದ್ದ, ಹಿಮಾಲಯದ ತಪ್ಪಲಲ್ಲಿರುವ ದೇಶ ಮಂಗೋಲಿಯಾ. 15,64,116 ಚ.ಕಿ.ಮೀ ವಿಸ್ತೀರ್ಣ ಹೊಂದಿರುವ ಮಂಗೋಲಿಯಾ, ಏಷ್ಯಾದಲ್ಲಿ ಆರನೇ ಮತ್ತು ವಿಶ್ವದ 19ನೇ ಅತಿ ದೊಡ್ಡ ದೇಶ. 2016ರಲ್ಲಿ ಈ ದೇಶದ ಅಂದಾಜು ಜನಸಂಖ್ಯೆ ಕೇವಲ 30ಲಕ್ಷ. ಅಂದರೆ ಜನಸಾಂದ್ರತೆ ಇಲ್ಲಿ ಪ್ರತಿ ಚ.ಕಿ ಗೆ ಕೇವಲ 1.9 ಮಾತ್ರ. ಸುಮಾರು 13 ಲಕ್ಷ ಜನ ರಾಜಧಾನಿಯಲ್ಲೇ ವಾಸ ಮಾಡುತ್ತಾರೆ. ಇದರ ರಾಜಧಾನಿ ಉಲಾನ್ ಬಟಾರ್, ಕರೆನ್ಸಿ ಟುಗ್ರಿಕ್ (ಎಂಎನ್ ಟಿ), ಅಧಿಕೃತ ಭಾಷೆ ಖಾಲ್ಖಾ ಮಂಗೋಲ್. ಭಾರತ, ಚೈನಾ, ರಷ್ಯಾ, ಕಜಕಸ್ತಾನಗಳಿಂದ ಇದು ಸುತ್ತುವರಿದಿದೆ.

                                          

ಶಮನ್ ಸಿದ್ಧಾಂತದ ಅನುಯಾಯಿಗಳು, ಟಿಬೆಟ್ ನ ವಜ್ರಯಾನ ಬೌದ್ಧಮತಾವಲಂಬಿಗಳು ಮಂಗೋಲಿಯಾದಲ್ಲಿ ಹೆಚ್ಚಾಗಿದ್ದಾರೆ. ದಲಾಯಿಲಾಮರನ್ನು ಮಂಗೋಲಿಯಾ ಜನ ಅತ್ಯಂತ ಗೌರವಿಸುತ್ತಾರೆ. ಪಶ್ಚಿಮ ಭಾಗದಲ್ಲಿ ಹೆಚ್ಚಾಗಿರುವ ಅಲ್ಪಸಂಖ್ಯಾತ ಕಜಾಕ್ ಜನಾಂಗದವರು ಸುನ್ನಿ ಮುಸ್ಲಿಂ ಧರ್ಮಾನುಯಾಯಿಗಳು.ಹಿಮಾಲಯ ಪರ್ವತ ಪ್ರದೇಶದ ತಪ್ಪಲಲ್ಲಿರುವ ಮಂಗೋಲಿಯಾ ಪ್ರದೇಶದಲ್ಲಿ ಪುರಾತನ ಕಾಲದಿಂದಲೂ ಜನ ವಾಸ ಮಾಡುತ್ತಿದ್ದರು. ಸುಮಾರು ಎಂಟು ಲಕ್ಷ ವರ್ಷಗಳ ಹಿಂದೆ ಹೋಮೋ ಎರೆಕ್ಟಸ್ (ಈಗಿನ ಮನ್ಯಷ್ಯ ಹೋಮೋ ಸೆಪಿಯನ್ಸ್ ಪೂರ್ವಜ) ವಾಸವಾಗಿದ್ದ ಬಗ್ಗೆ ಆಧಾರಗಳು ದೊರೆತಿವೆ. ಹೋಮೋ ಎರೆಕ್ಟಸ್ ಪಳಯುಳಿಕೆಗಳು ದೊರೆತಿಲ್ಲವಾದರೂ, ಈ ಕುರಿತು ಕೆಲವು ಆಧಾರಗಳು ದೊರೆತಿವೆ.ಗೋಬಿ ಮರಳುಗಾಡಿನ ಬಾಯನ್ ಜಾಗ್ ಮತ್ತು ನೆಮೆಟ್ ನಲ್ಲಿ ಡೈನೋಸಾರ್ ಗಳ ಪಳೆಯುಳಿಕೆಗಳು ದೊರೆತಿವೆ.
ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿರುವ ವ್ಯಾಪಕ ಪರ್ವತ ಶ್ರೇಣಿಗಳಿಂದಾಗಿ ಮಂಗೋಲಿಯಾದಲ್ಲಿ ಭೂಕಂಪ ಸರ್ವೇ ಸಾಮಾನ್ಯ. ಆದರೆ ಜನಸಂಖ್ಯೆ ಕಡಿಮೆ ಇರುವ ಕಾರಣ ಅದರ ಸಾವುನೋವುಗಳು ಹೆಚ್ಚಿಗೆ ಆಗಿಲ್ಲ.ಕ್ರಿ.ಪೂ.8ನೇ ಶತಮಾನದ ಹೊತ್ತಿಗೆ ಮಂಗೋಲಿಯಾದ ಪಶ್ಚಿಮ ಭಾಗದಲ್ಲಿ ಇಂಡೋ-ಯೂರೋಪಿಯನ್ (ಸ್ಕೇಥಿಯಾನ್ ಅಥವಾ ಯುಎಜಿ) ಅಲೆಮಾರಿ ಜನಾಂಗ ಅಲ್ಲಿ ವಾಸ ಮಾಡುತ್ತಿತ್ತು. ಮಂಗೋಲಿಯಾದ ಉಳಿದ ಭಾಗಗಳಲ್ಲಿ ಮಂಗೋಲಿಯಾ ಮೂಲದ ಬುಡಕಟ್ಟು ಜನ ವಾಸ ಮಾಡುತ್ತಿದ್ದರು.ಉತ್ತರದಲ್ಲಿ ಹಿಮಗಟ್ಟುವ ಸೈಬೀರಿಯಾದ ಪ್ರದೇಶಗಳು, ಪಶ್ಚಿಮದಲ್ಲಿ ಅಲ್ಟಾಯ್ ಪರ್ವತ ಪ್ರದೇಶ ಮತ್ತು ದಕ್ಷಿಣದಲ್ಲಿ ಗೋಬಿ ಮರುಭೂಮಿಯಿಂದಾಗಿ ಅಲ್ಲಿಗೆ ವಲಸೆಗಾರರ ಸಂಖ್ಯೆ ತುಂಬ ಕಡಿಮೆ ಸಂಖ್ಯೆಯಲ್ಲಿತ್ತು. ಹೀಗಾಗಿ ಮಂಗೋಲಿಯಾ ರಾಜಮನೆತನಗಳವರು ಒಂದೇ ಭಾಷೆ ಸಂಸ್ಕೃತಿಯನ್ನು ಹೊಂದಿದ್ದರು. ಇದರ ಪರಿಣಾಮ ಮುಂದೆ ಚೈನಾದ ದಾಳಿಯಾದಾಗ ಇಡೀ ಮಂಗೋಲಿಯಾ ಒಗ್ಗೂಡುವಲ್ಲಿ ಇದು ನೆರವಾಯಿತು.
ಇಲ್ಲಿನ ಪುರಾತನ ರಾಜಮನೆತನವೆಂದರೆ, ಗ್ಸಿಯಾಂಗ್ನು ರಾಜ್ಯಮನೆತನ. ಕ್ರಿ.ಪೂ.3ನೇ ಶತಮಾನದಲ್ಲಿ ಆರಂಭವಾದ ಈ ರಾಜಮನೆತನದ ಆಡಳಿತ ಸುಮಾರು 300 ವರ್ಷಗಳ ಕಾಲ ನಡೆಯಿತು. ಕ್ರಿ.ಶ.48ರಲ್ಲಿ ಗ್ಸಿಯಾಂಗ್ನು ರಾಜ್ಯ ಉತ್ತರ ಮತ್ತು ದಕ್ಷಿಣಗಳಾಗಿ ವಿಭಜನೆಗೊಂಡವು. ಕ್ರಿ.ಶ.93ರ ಹೊತ್ತಿಗೆ ಅದರ ಅರಸೊತ್ತಿಗೆ ಕೊನೆಗೊಂಡು, ಗ್ಸಿಯಾನ್ಬಿ ಆಡಳಿತ ಪ್ರಾರಂಭವಾಯಿತು. ನಂತರ ಮಂಗೋಲಿಯಾದ ಆಡಳಿತ ಚುಕ್ಕಾಣಿ ರೌರನ್ರ ಖಾನ್ ಸಂಸ್ಥಾನದ ಕೈಗೆ ಹೋಯಿತು. ಅದಾದ ನಂತರ ಟರ್ಕಿಕ್ ಖನಾಟೆ ಮತ್ತು ಚೈನಾದ ಟಾಂಗ್ ಅರಸೊತ್ತಿಗೆ, ಉಯ್ಘುರ್ ಖನಾಟೆ, ಖಿಟನ್ ರಾಜ್ಯ ಮಂಗೋಲಿಯಾವನ್ನು ಆಳಿದವು.13 ಮತ್ತು 14 ನೇ ಶತಮಾನದ ಪ್ರಪಂಚದ ಚರಿತ್ರೆಯ ಪುಟಗಳಲ್ಲಿ ಬಹಳ ಮಹತ್ವದ ಪಾತ್ರ ವಹಿಸಿದ್ದು, ಮಂಗೋಲಿಯದ ಜೆಂಘಿಸ್ ಖಾನ್ ನೇತೃತ್ವದ ಪಡೆಗಳು. ಜೆಂಘಿಸ್ ಖಾನ್ ಮತ್ತು ಆತನ ನಂತರ ಬಂದವರು ಬಹುತೇಕ ಏಷಿಯಾ, ಯೂರೋಪಿಯನ್ ರಷ್ಯಾವನ್ನು ಗೆದ್ದುಕೊಂಡರು.
ಜೆಂಘಿಸ್ ಖಾನ್ ಮಂಗೋಲಿಯಾವನ್ನು ಯೋಧರ ಸಂಖ್ಯೆ ಆಧಾರದ ಮೇಲೆ 95 ಮಿಂಗಟ್ಸ್ ಗಳಾಗಿ ವಿಂಗಡಿಸಿದ. ಹತ್ತು ಯೋಧರನ್ನು ಸಂಘಟಿಸಬಲ್ಲ ಮನೆಗಳನ್ನು ಒಂದು ಅರ್ಬಟು ಎಂತಲೂ, 10 ಅರ್ಬಟುಗಳನ್ನು ಒಂದು ಜಗಟು ಎಂತಲೂ, 10 ಜಗಟುಗಳನ್ನು ಒಂದು ಮಿಂಗಟ್ (1000 ಯೋಧರಿರುವ ಸ್ಥಳ) ಎಂದು ಹಾಗೂ ಹತ್ತು ಸಾವಿರ ಯೋಧರಿರುವ ಸ್ಥಳವನ್ನು ಒಂದು ಟುಮೆಟು ಎಂದು ವಿಂಗಡಿಸಲಾಯಿತು. ಆ ಸಮಯದಲ್ಲಿ ಮಂಗೋಲಿಯಾ ಏಳೂವರೆ ಲಕ್ಷ ಜನಸಂಖ್ಯೆಯನ್ನು ಹೊಂದಿದ್ದು, 95 ಸಾವಿರ ಯೋಧರು ಅಥವಾ ಅಶ್ವ ಯೋಧರು ಇದ್ದರೆಂದು ಅಂದಾಜು ಮಾಡಲಾಗಿದೆ. ಚೈನಾದ ಮಹಾಗೋಡೆ ದಾಟಿಕೊಂಡು 1214ರಲ್ಲಿ ಜೆಂಘಿಸ್ ಖಾನ್ ಸೇನೆ ಷಾಂಗ್ಸಿ ಮತ್ತು ಷಾಂಡೊಂಗ್ ಪ್ರಾಂತ್ಯಗಳನ್ನು ಗೆದ್ದುಕೊಂಡ. ಆಗ ಅಲ್ಟಾನ್ ದೊರೆ ತನ್ನ ಮಗಳನ್ನು ಜೆಂಘಿಸ್ ಖಾನ್ ಗೆ ಕೊಟ್ಟು ಮದುವೆ ಮಾಡಿದ. ತನ್ನ ಸೇನಾಪತಿಗಳಿಗೆ ಚೈನಾದ ಜಿನ್ ಅರಸೊತ್ತಿಗೆ ಮೇಲಿನ ದಾಳಿ ಮುಂದುವರಿಸಲು ಸೂಚನೆ ನೀಡಿ ಮಂಗೋಲಿಯಾಗೆ ಹಿಂದಿರುಗಿದ. 1221ರಲ್ಲಿ ಜೆಂಘಿಸ್ ಖಾನ್ ಸೇನೆ ಇರಾಕ್, ಅಜರ್ ಬೈಜಾನ್, ಆರ್ಮೇನಿಯ, ಜಾರ್ಜಿಯಾಗಳ ಮೇಲೆ ದಾಳಿ ನಡೆಸಿದ. ಕ್ರಿಮಿಯದಲ್ಲಿನ ಕಿಪ್ಚಕ್ ಖನಾಟೆಯನ್ನು ಆತನ ಪಡೆಗಳು ಪ್ರವೇಶಿಸಿದವು.
ಜೆಂಘಿಸ್ ಖಾನ್ ಸಂಶಯಾಸ್ಪದ ಸಾವಿನ ನಂತರ, ಜೆಂಘಿಸ್ ತಮ್ಮ ಒಗಡೈ ಈ ದಂಡಯಾತ್ರೆಯನ್ನು ಮುಂದುವರಿಸಿದ. 1220ರವರೆಗೆ ಜೆಂಘಿಸ್ ಖಾನ್ ಶಸ್ತ್ರಾಸ್ತ್ರ ಸಂಗ್ರಹಣೆಯ ಸ್ಥಳವಾಗಿದ್ದ ಕ್ಯಾರಾಕೋರಂನ್ನು ಮುಂದೆ ಜೆಂಘಿಸ್ ಖಾನ್ ತಮ್ಮ ಒಗೆಡೈ ಖಾನ್ ರಾಜಧಾನಿಯನ್ನಾಗಿ ಮಾಡಿಕೊಂಡ. ಒಗೆಡೈ ಖಾನ್ 1231-34ರವರೆಗೆ ಚೈನಾದ ಜಿನ್ ರಾಜ್ಯದ ಮೇಲೆ ದಾಳಿ ನಡೆಸಿ, ಅದನ್ನು ಪೂರ್ಣಗೊಳಿಸಿದ. ರಷ್ಯಾದ ಬಲ್ಗಾರ್ ಸಾಮ್ರಾಜ್ಯವನ್ನು ಗೆದ್ದುಕೊಂಡ. ಪೋಲಂಡ್, ಹಂಗೆರಿ, ಮಾಲ್ಡೋವಿಯ, ರೋಮ್ ಸಾಮ್ರಾಜ್ಯದ ಭಾಗವಾಗಿದ್ದ ಮೊರಾವಿಯಾಗಳ ಮೇಲೆ 1241-42ರಲ್ಲಿ ದಾಳಿ ನಡೆಸಿದ. ಮುಂದೆ ಮಂಗೋಲಿಯನ್ ಪಡೆಗಳು ಬಾಗ್ಧಾದ್, ಕಾರಾಕಸ್ ಮತ್ತು ಸಿರಿಯಾಗಳನ್ನು ಗೆದ್ದುಕೊಂಡಿತು. ಹೀಗೆ ಮಂಗೋಲಿಯನ್ ಪಡೆ ಚರಿತ್ರೆಯ ಅತಿ ದೊಡ್ಡ ಸಾಮ್ರಾಜ್ಯವನ್ನು ಸ್ಥಾಪಿಸಿತು. ಕ್ರಿ.ಶ.1368ರಲ್ಲಿ ಈ ವಿಶಾಲ ಸಾಮ್ರಾಜ್ಯ ನಾಲ್ಕು ಭಾಗಗಳಾಗಿ ವಿಭಜನೆಗೊಂಡಿತು.
ಒಗೆಡಾಯ್ ಮೊಮ್ಮಗ ಕುಬುಲಾಯ್ ಕಾಲದಲ್ಲಿ ಅಲ್ಲಿ ಎರಡನೇ ಬಾರಿಗೆ ಬೌದ್ಧ ಧರ್ಮದ ಪ್ರಚಾರ ನಡೆಯಿತು. ಟಿಬೆಟಿಯನ್ ಧರ್ಮಗುರು ಲಾಮಾ ಡ್ರೋಗೋನ್ ಚೋಗ್ಯಾಲ್ ಫಗ್ಪರನ್ನು ಕರೆಸಿ, ಬೌದ್ಧಮತದ ಪ್ರಚಾರ ನಡೆಸಲಾಯಿತು. 1585ರಲ್ಲಿ ಮತ್ತೊಮ್ಮೆ, ಮೂರನೇ ಬಾರಿಗೆ ಟಿಬಿಟ್ ನ ಬೌದ್ಧಗುರುಗಳನ್ನು ಕರೆಸಿ ಪ್ರಚಾರ ಮಾಡಲಾಯಿತು. ಆ ಸಮಯದಲ್ಲಿ ಬಹುತೇಕ ರಾಜರು ಬೌದ್ಧರಾಗಿ, ತಮ್ಮ ಹಿಂದಿನ ಧರ್ಮಕ್ಕೆ ಮರಳಿದರು.
ಅದಾದ ನಂತರ ಅಲ್ಲಿ ಸಾಂಸ್ಕೃತಿಕ ಪುನರುತ್ಥಾನವೂ ಆಯಿತು. ಇದೇ ಸಂದರ್ಭದಲ್ಲಿ ಮಿಂಗಟು ಎನ್ನುವ ಗಣಿತಶಾಸ್ತ್ರಜ್ಞ ಮತ್ತು ಖಭೌತ ಶಾಸ್ತ್ರಜ್ಞ ಟ್ರಿಗ್ನಾಮೆಂಟ್ರಿಯ ಸಮೀಕರಣಗಳನ್ನು ಕಂಡುಹಿಡಿದು, ಅವುಗಳನ್ನು (ಅದರ ಇಂಗ್ಲಿಷ್ ಅನುವಾದ: ದಿ ರೂಟ್ಸ್ ಆಫ್ ರೆಗ್ಯುಲಾರಿಟೀಸ್) 52 ಭಾಗಗಳಲ್ಲಿ ಪ್ರಕಟಿಸಿದ. ಜಯಾ ಪಂಡಿತ ಎನ್ನುವ ವ್ಯಕ್ತಿ ಮಂಗೋಲಿಯನ್ ಲಿಪಿಯನ್ನು ಪರಿಷ್ಕರಿಸಿದ.ಆದರೆ 1691ರಲ್ಲಿ ದಕ್ಷಿಣ ಮಂಗೋಲಿಯಾ (ಔಟರ್ ಮಂಗೋಲಿಯಾ) ಚೈನಾದ ಚಿಂಗ್ ರಾಜ್ಯದ ಪ್ರಾಂತ್ಯವಾಯಿತು. 1911ರಲ್ಲಿ ನಡೆದ ಔಟರ್ ಮಂಗೋಲಿಯಾ ಸ್ವಾಯುತ್ತ ಪ್ರದೇಶವಾಯಿತು. ಸೋವಿಯತ್ ನೆರವಿನಿಂದ ಚೀನಾದ ಚಿಂಗ್ ಸೇನೆಯನ್ನು ಓಡಿಸಿ, 1924ರಲ್ಲಿ ಗಣತಂತ್ರ ದೇಶವಾಯಿತು.1931ರಲ್ಲಿ ಚೈನಾದ ಮಂಚೂರಿಯಾ ಪ್ರದೇಶವನ್ನು ಜಪಾನ್ ಗೆದ್ದುಕೊಂಡು, ಔಟರ್ ಮಂಗೋಲಿಯಾ ಅದಕ್ಕೆ ಸೇರಿದ ಪ್ರದೇಶ ಎಂದು ಘೋಷಿಸಿತು. ನಂತರ ಮಂಗೋಲಿಯಾ ಒಳನಾಡಿನ ಜೆಹೋಲ್ ಪ್ರಾಂತ್ಯವನ್ನೂ ಗೆದ್ದುಕೊಂಡಿತು.
ಯಾಲ್ಟಾ ಸಮ್ಮೇಳನದ ಒಪ್ಪಂದದಂತೆ, 1945ರಲ್ಲಿ ವಿಶ್ವಸಂಸ್ಥೆ ಮಧ್ಯಸ್ತಿಕೆ ಸಹಿತ ಮಂಗೋಲಿಯಾದಲ್ಲಿ ಜನಾಭಿಪ್ರಾಯ ಸಂಗ್ರಹವಾಯಿತು. ಸ್ವಾಯುತ್ತತೆಗಿಂತ ಸ್ವಾತಂತ್ರ್ಯಕ್ಕೆ ಹೆಚ್ಚು ಒಲವು ಕಂಡುಬಂತು. ಜನವರಿ 1946ರಲ್ಲಿ ಮಂಗೋಲಿಯಾಗೆ ಚೈನಾದಿಂದ ಸ್ವತಂತ್ರ ದೇಶದ ಮಾನ್ಯತೆಯೂ ದೊರೆಯಿತು. ಭಾರತ, ಉತ್ತರ ಕೊರಿಯಾ, ಪೂರ್ವ ಮತ್ತು ಮಧ್ಯ ಯೂರೋಪ್ ದೇಶಗಳು ಮಂಗೋಲಿಯಾ ಜೊತೆ ರಾಯಭಾರ ಸಂಬಂಧಗಳನ್ನು ಬೆಳೆಸಿದವು. 1961ರಲ್ಲಿ ವಿಶ್ವಸಂಸ್ಥೆ ಮಾನ್ಯತೆಯೂ ದೊರೆಯಿತು.
ಮಂಗೋಲಿಯಾದ ನಿವ್ವಳ ಸ್ಥಳೀಯ ಉತ್ಪಾದನೆ 2010ರಲ್ಲಿ 7180 ದಶಲಕ್ಷ ಅಮೇರಿಕನ್ ಡಾಲರ್ ಗಳಷ್ಟಿದ್ದು, 2014ರಲ್ಲಿ 12067 ದಶಲಕ್ಷ ಅಮೇರಿಕನ್ ಡಾಲರ್ ಗಳಿಗೇರಿತ್ತು. ಜಿಡಿಪಿ ಬೆಳವಣಿಗೆ ದರ 2010ರಲ್ಲಿ 6.9ರಷ್ಟಿದ್ದು, 2014ರಲ್ಲಿ 7.8ರಷ್ಟಾಗಿತ್ತು. ಮಂಗೋಲಿಯಾ ಅಭಿವೃದ್ಧಿ ಪಥದಲ್ಲಿದೆ ಎನ್ನುವುದನ್ನು ಇದು ಸೂಚಿಸುತ್ತದೆ. 2014ರಲ್ಲಿ, ಶೇ.15.6, ಕೈಗಾರಿಕೆಯ ಪಾಲು ಶೆ.36.2, ಸೇವಾವಲಯದ ಪಾಲು ಶೇ.48. ಆರ್ಥಿಕತೆಯಲ್ಲಿ ಕೃಷಿಯ ನಿವ್ವಳ ಮೌಲ್ಯವರ್ಧನೆ ಶೇ.48.2ರಷ್ಟಿತ್ತು. ಕೃಷಿ ವಲಯದಲ್ಲಿ ಶೇ.35, ಕೈಗಾರಿಕೆಯಲ್ಲಿ 18.2 ಮತ್ತು ಸೇವಾ ವಲಯದಲ್ಲಿ 46.8ರಷ್ಟು ಕಾರ್ಮಿಕರು ಭಾಗಿಯಾಗಿದ್ದರು. ಅಂದಾಜು ಶೇ.7.3ರಷ್ಟು ನಿರುದ್ಯೋಗ ದೇಶವನ್ನು ಕಾಡುತ್ತಿತ್ತು. ಅಂದರೆ ದೇಶದಲ್ಲಿ ಕೈಗಾರಿಕೀಕರಣಕ್ಕೆ ವಿಫುಲ ಅವಕಾಶ ಇದೆ ಎಂದಾಯಿತು.2015ರಲ್ಲಿ ನಗರ ಜನಸಂಖ್ಯೆ ಶೇ.73ರಷ್ಟಿತ್ತು. ಅವಲಂಬಿತರ ಅನುಪಾತ, ಅಂದರೆ 15ರಿಂದ64 ವರ್ಷ ವಯಸ್ಸಿನ ಪ್ರತಿ 100 ಜನಕ್ಕೆ, 14 ವರ್ಷ ವಯಸ್ಸಿಗೂ ಕಡಿಮೆ ಮತ್ತು 65ಕ್ಕೆ ಮೇಲ್ಪಟ್ಟವರ ಸಂಖ್ಯೆ 48. 2014ರ ಅಂದಾಜಿನಂತೆ ಆರೋಗ್ಯ ಜಿಡಿಪಿಯ ಶೇ.4,7ರಷ್ಟು, ಶಿಕ್ಷಣಕ್ಕೆ ಶೇ.4.6ರಷ್ಟು ವೆಚ್ಚ ಮಾಡಲಾಗುತ್ತಿದೆ. ರಾಷ್ಟ್ರೀಯ ಸಂಸತ್ತಿನಲ್ಲಿ ಮಹಿಳೆಯರ ಪಾಲು ಶೇ.14.5ರಷ್ಟು ಮಾತ್ರ. ಶೇ.27ರಷ್ಟು ಜನ ಅಂತರ್ಜಾಲ ಸೌಲಭ್ಯ ಹೊಂದಿದ್ದಾರೆ. ಇಷ್ಟೊಂದು ವಿಶಾಲ ದೇಶ ಹಾಗೂ ಕಡಿಮೆ ಜನಸಂಖ್ಯೆ ಹೊಂದಿದ್ದರೂ, 2015ರ ಅಂದಾಜಿನಂತೆ, ಇಲ್ಲಿನ ಅರಣ್ಯ ಪ್ರದೇಶ ಶೇ.8.2ರಷ್ಟು ಮಾತ್ರ, ಶುದ್ಧ ಕುಡಿಯುವ ನೀರು ಉಪಯೋಗಿಸುವ ನಗರ ಜನ ಶೇ.6.5 ಮತ್ತು ಗ್ರಾಮೀಣ ಜನ ಶೇ.59.2ರಷ್ಟು ಮಾತ್ರ.ವಿಶಾಲ ಭೂಪ್ರದೇಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಲ್ಲಿ, ಮಂಗೋಲಿಯಾಗೆ ಮತ್ತೊಮ್ಮೆ ಭವ್ಯ ಭವಿಷ್ಯವಿದೆ.

[/fusion_text][/fusion_builder_column][/fusion_builder_row][/fusion_builder_container]

Categories
asia

ರಿಪಬ್ಲಿಕ್ ಆಫ್ ಮ್ಯಾನ್ಮಾರ್

[fusion_builder_container hundred_percent=”no” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” video_preview_image=”” border_color=”” border_style=”solid” margin_top=”” margin_bottom=”” padding_top=”” padding_right=”” padding_bottom=”” padding_left=”” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಭಾರತಕ್ಕೆ ಹೊಂದಿಕೊಂಡಂತೇ ಇದ್ದು, ತನ್ನ ವಿಶಿಷ್ಟ ಸಾಂಪ್ರದಾಯವನ್ನು ಉಳಿಸಿಕೊಂಡಿರುವ ನೈರುತ್ಯ ಏಷ್ಯಾದ ಬೌದ್ಧ ದೇಶ ರಿಪಬ್ಲಿಕ್ ಆಫ್ ಮ್ಯಾನ್ಮಾರ್. ಇದನ್ನು ಬರ್ಮಾ ಎಂತಲೂ ಕರೆಯಲಾಗುತ್ತದೆ.676577 ಚ.ಕಿ. ವಿಸ್ತೀರ್ಣ ಹೊಂದಿರುವ ಈ ದೇಶದ ಅಂದಾಜು ಜನಸಂಖ್ಯೆ 2016ರಲ್ಲಿ 5 ಕೋಟಿ 43 ಲಕ್ಷ. ಪ್ರತಿ ಚ.ಕಿ. ಜನಸಾಂದ್ರತೆ ಪ್ರತಿ ಚ.ಕಿ ಗೆ 83.2. ರಾಜಧಾನಿ ನಾಯ್ ಪ್ಯು ಟಾ. ರಾಜಧಾನಿಯ ಜನಸಂಖ್ಯೆ 10 ಲಕ್ಷ 30 ಸಾವಿರ. ಇಲ್ಲಿನ ಕರೆನ್ಸಿ ಕ್ಯಾಟ್ (ಎಂಎಂಕೆ).

                                                                       

ಇದನ್ನು ಬರ್ಮಾ ಅಂತಲೂ ಕರೆಯಲಾಗುತ್ತದೆ. ಬರ್ಮಾದ ಬಹಳಷ್ಟು ಪ್ರದೇಶಗಳು ಒಂದು ಕಾಲದಲ್ಲಿ ಭಾರತೀಯ ರಾಜರಿಂದ ಆಳಲ್ಪಟ್ಟಿವೆ. ಭಾರತ ಹಾಗೂ ಚೈನಾ ಎರಡೂ ದೇಶಗಳಿಂದ ಪ್ರಭಾವಿತಗೊಂಡಿರುವ ದೇಶ ಮ್ಯಾನ್ಮಾರ್. ಭಾರತ, ಬಾಂಗ್ಲಾದೇಶ ಮತ್ತು ಚೈನಾ, ಲಾವೋಸ್ ಮತ್ತು ಥೈಲ್ಯಾಂಡ್ ಗಳಿಂದ ಸುತ್ತುವರಿದಿರುವ ಈ ದೇಶದ ಅಧಿಕೃತ ಭಾಷೆ ಬರ್ಮೀಸ್.
ಈ ದೇಶದಲ್ಲಿ 13,000 ವರ್ಷಗಳ ಹಿಂದೆ ಮನುಷ್ಯ ವಾಸ ಮಾಡುತ್ತಿದ್ದ ಎನ್ನುವುದಕ್ಕೆ ಪುರಾವೆಗಳು ದೊರೆತಿವೆ. ಕ್ರಿ.ಪೂ.6000 ದಿಂದ ಕ್ರಿ.ಪೂ.10000 ವರ್ಷಗಳ ಹಿಂದೆ, ನವಶಿಲಾಯುಗದ ಕಾಲದಲ್ಲಿ ಟೌಂಗ್ಯಿ ಗುಹೆಗಳ ಬಳಿ, ಪ್ರಾಣಿಗಳ ಸಾಕಾಣಿಕೆ ಹಾಗೂ ಕಲ್ಲಿನ ಆಯುಧಗಳ ಬಳಕೆ ಕುರಿತು ಕುರುಹುಗಳು ದೊರೆತಿವೆ. ಕ್ರಿ.ಪೂ.1500ರಲ್ಲಿ ಈ ಪ್ರದೇಶದಲ್ಲಿ ಜನ ಅಕ್ಕಿ ಬೆಳೆಯುತ್ತಿದ್ದುದು, ಕೋಳಿ ಮತ್ತು ಹಂದಿಗಳನ್ನು ಸಾಕುತ್ತಿದ್ದುದಕ್ಕೆ ಪುರಾವೆಗಳಿವೆ. ಕ್ರಿ.ಪೂ.500ರಿಂದ ಕ್ರಿ.ಪೂ.200ರ ಅವಧಿಯಲ್ಲಿಯೇ ಇಲ್ಲಿನ ಜನ ಚೈನಾದೊಂದಿಗೆ ಅಕ್ಕಿ ವ್ಯಾಪಾರ ಮಾಡುತ್ತಿದ್ದರು ಎನ್ನಲಾಗಿದೆ.
ಚೈನಾದಿಂದ ಭಾರತದ ನಡುವಿನ ರಸ್ತೆಯ ಹಾದಿಯಲ್ಲಿ ಬರ್ಮಾ ಇತ್ತು. ನಾಲ್ಕನೇ ಶತಮಾನದ ವೇಳೆಗೆ ಇರ್ರವಾಡಿ ಕಣಿವೆ, ದಕ್ಷಿಣ ಭಾರತದ ಬೌದ್ಧರಿಂದ ಪ್ರಭಾವಿತವಾಗಿತ್ತು.ತುಂಬಾ ವರ್ಷಗಳ ಹಿಂದೆಯೇ ಥೆರವಾಡ ಬೌದ್ಧಮತವನ್ನು ಅನುಸರಿಸುತ್ತಿದ್ದ, ಟಿಬೆಟೋ-ಬರ್ಮಾ ಭಾಷೆಗಳನ್ನು ಮಾತನಾಡುತ್ತಿದ್ದ ಜನ ಇಲ್ಲಿ ವಾಸಿಸುತ್ತಿದ್ದ ಕುರಿತು ದಾಖಲೆಗಳಿವೆ. ಒಂಬತ್ತನೇ ಶತಮಾನದಲ್ಲಿ ಇರ್ರವಾಡಿ ಕಣಿವೆಯಲ್ಲಿ ಬಾರ್ಮಾರ್ ಜನ ಪ್ರವೇಶಿಸಿ, ಬಾಗನ್ ಸಾಮ್ರಾಜ್ಯ ಸ್ಥಾಪಿಸಿದ್ದರು. ಕ್ರಿ.ಶ.1044ರಿಂದ 1287ರವರೆಗೆ ಅದು ಆಡಳಿತ ನಡೆಸಿತು.
1287ರಲ್ಲಿ ಮೊದಲ ಮಂಗೋಲಿಯನ್ ದಾಳಿಯನ್ನು ಬರ್ಮಾ ಎದುರಿಸಬೇಕಾಯಿತು. 1510ರಿಂದ 1752ರವರೆಗೆ ಟೌಂಗೂ ರಾಜಮನೆತನದ ಆಡಳಿತ, ಸಣ್ಣ ಪುಟ್ಟ ರಾಜರನ್ನೆಲ್ಲ ಒಗ್ಗೂಡಿಸಿ, ಬರ್ಮಾವನ್ನು ಒಂದು ಏಕೀಕೃತ ದೇಶವನ್ನಾಗಿ ಮಾಡಿತು. ನೈರುತ್ಯ ಏಷ್ಯಾದ ಅತ್ಯಂತ ವಿಶಾಲ ದೇಶವಾಗಿ ಅದು ಆಡಳಿತ ನಡೆಸಿತು. ನಂತರ ಬಂದ ಕೊನ್ಬೌಂಗ್ ಸಾಮ್ರಾಜ್ಯ ಮಣಿಪುರದವರೆಗೆ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಂಡರು. ಅಷ್ಟು ಹೊತ್ತಿಗೆ ಬ್ರಿಟಿಷರು ಕ್ರಮೇಣ ತಮ್ಮ ಸಾಮ್ರಾಜ್ಯ ವಿಸ್ತರಿಸುತ್ತಾ ಬಂದಿದ್ದರು. ಅವರೊಂದಿಗೂ ಕೊನ್ಬೌಂಗ್ ರಾಜರು ಯುದ್ಧ ಮಾಡಬೇಕಾಗಿ ಬಂದಿತು. 1824ರಲ್ಲಿ ಮೊದಲ ಆಂಗ್ಲೋ-ಬರ್ಮಾ ಯುದ್ಧ, 1882ರಲ್ಲಿ ಎರಡನೇ ಆಂಗ್ಲೋ ಬರ್ಮಾ ಮತ್ತು 1985ರಲ್ಲಿ ಮೂರನೇ ಯುದ್ಧ ಜರುಗಿತು. ಅವುಗಳಲ್ಲಿ ಬರ್ಮಾದ ಕಡೆಯ ರಾಜ ಥಿಬಾ ಸೋತು, ಭಾರತಕ್ಕೆ ದೇಶಾಂತರ ಬಂದ ನಂತರ, ಬರ್ಮಾವನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಳ್ಳಲು ಬ್ರಿಟಿಷರು ಯಶಸ್ವಿಯಾದರು.
ಬ್ರಿಟಿಷರು ಬರ್ಮಾವನ್ನು ಭಾರತದ ಒಂದು ಪ್ರಾಂತ್ಯವಾಗಿ ಮಾಡಿ, ರಂಗೂನನ್ನು (ಈಗಿನ ಯಂಗೂನ್) ರಾಜಧಾನಿಯನ್ನಾಗಿ ಮಾಡಿಕೊಂಡರು. ಬ್ರಿಟಿಷರ ಆಡಳಿತ ಬರ್ಮಾದ ಸಾಮಾಜಿಕ ಚಿತ್ರಣವನ್ನು ಬದಲಿಸಿತು. ಭಾರತದಲ್ಲಿ ನಡೆದಂತೆ ಅಲ್ಲಿಯೂ 20ರ ದಶಕದಲ್ಲಿ ಕರನಿರಾಕರಣೆ ಚಳುವಳಿ ನಡೆಯಿತು. ಸ್ವಾತಂತ್ರ್ಯ ಚಳವಳಿ, ಉಪವಾಸ ಸತ್ಯಾಗ್ರಹಗಳು ನಡೆದವು. 1937ರಲ್ಲಿ ಭಾರತದಿಂದ ಬರ್ಮಾವನ್ನು ಬೇರ್ಪಡಿಸಿದ ಬ್ರಿಟಿಷರು, ಆ ದೇಶಕ್ಕೆ ಪ್ರತ್ಯೇಕ ಸಂವಿಧಾನವನ್ನು ರಚಿಸಿದರು. ವಸಾಹತುಶಾಹಿ ಸರ್ಕಾರವನ್ನು ಕಿತ್ತೊಗೆಯಲು ರಂಗೂನ್ ನಲ್ಲಿ ಹೋರಾಟ ನಡೆಯಿತು. ಈ ಸಮಯದಲ್ಲಿ ಚೈನಾದಿಂದ ಪ್ರಭಾವಿತಗೊಂಡು ಕಮ್ಯುನಿಷ್ಟ್ ಪಕ್ಷ ಬೆಳೆದುನಿಂತಿತು.
ಎರಡನೇ ಮಹಾಯುದ್ಧದಲ್ಲಿ ಸ್ಥಳೀಯ ಬೌದ್ಧ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರ ವಿರುದ್ಧವಾಗಿ ಮತ್ತು ಜಪಾನ್ ಪರವಾಗಿ ನಿಂತರು. ಹೀಗಾಗಿ ಬ್ರಿಟಿಷರು ಅರಕಾನ್ ಪ್ರದೇಶದಲ್ಲಿನ ರೋಹಿಂಗ್ಯಾಗಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿ, ಜಪಾನಿಯರ ವಿರುದ್ಧ ಹೋರಾಡುವಂತೆ ಪ್ರಚೋದಿಸಿದರು. ಆ ಸಮಯದಲ್ಲಿ ಅಲ್ಲಿ ಒಂದು ಅಂತರ್ಯುದ್ಧವೇ ನಡೆಯಿತು. ಬ್ರಿಟಿಷರ ಕ್ರಮ ಅಲ್ಲಿನ ಬುಡಕಟ್ಟು ಜನಾಂಗಗಳ ನಡುವೆ ವೈಮನಸ್ಯ ಬಿತ್ತಿ, ಪರಸ್ಪರ ಕತ್ತಿ ಮಸೆಯುವಂತೆ ಮಾಡಿತು. 1948ರಲ್ಲಿ ಬ್ರಿಟಿಷರು ದೇಶ ಬಿಟ್ಟು ಹೋದರೂ, ಈ ಜನಾಂಗೀಯ ಕಲಹ ಇದುವರೆಗೆ ನಿಂತಿಲ್ಲ. ಮ್ಯಾನ್ಮಾರ್ ಆರ್ಥಿಕ ಮತ್ತು ಸಾಮಾಜಿಕವಾಗಿ ದೇಶ ಹಿಂದುಳಿಯಲು ಇದೂ ಒಂದು ಕಾರಣ.
ಬರ್ಮಾಗೆ ಸ್ವಾತಂತ್ರ್ಯ ಬಂದ ನಂತರ ಕೆಲವು ವರ್ಷಗಳ ಕಾಲ ಪ್ರಜಾಪ್ರಭುತ್ವ ನೆಲೆಸಿ, ನಂತರ ಮಿಲಿಟರಿ ಆಡಳಿತ ಕಂಡಿತು. ಬರ್ಮಾ ದೇಶದ ಪಿತಾಮಹ ಎಂದು ಕರೆಸಿಕೊಳಲ್ಪಡುವ ಆಂಗ್ ಸಾನ್ ಮಗಳು ಆಂಗ್ ಸಾನ್ ಸೂ ಕಿ, ಪ್ರಜಾಪ್ರಭುತ್ವ ಪರ ಸುದೀರ್ಘ ಹೋರಾಟವನ್ನು ನಡೆಸಿದರು. ಈ ಹಿನ್ನೆಲೆಯಲ್ಲಿ 1980ರಿಂದ 2010ರವರೆಗಿನ 21 ವರ್ಷದ ಅವಧಿಯಲ್ಲಿ ಆಂಗ್ ಸಾನ್ ಸೂ ಕಿ 15 ವರ್ಷಗಳ ಕಾಲ ಗೃಹಬಂಧನಕ್ಕೆ ಒಳಪಟ್ಟಿದ್ದರು. ಅವರು ವಿದೇಶಿ ವ್ಯಕ್ತಿ ಮಿಖಾಯಿಲ್ ಅವರನ್ನು ಮದುವೆಯಾಗಿದ್ದು, ಆ ಕಾರಣಕ್ಕೆ ಅಧ್ಯಕ್ಷೀಯ ಪಟ್ಟಕ್ಕೆ ಅವರು ಅಭ್ಯರ್ಥಿಯಾಗಲು ಸಾಧ್ಯವಿರಲಿಲ್ಲ. ಆದರೆ 2015ರಲ್ಲಿ ನಡೆದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿದರು. ನಂತರ ಸ್ಟೇಟ್ ಕೌನ್ಸಿಲರ್ (ಸರ್ಕಾರದ ಮುಖ್ಯಸ್ಥೆ ಅಥವಾ ಪ್ರಧಾನಮಂತ್ರಿ ಸ್ಥಾನ) ಎನ್ನುವ ಹುದ್ದೆಯನ್ನು ಅಲಂಕರಿಸಿದರು.
ಈ ದೇಶದ ನಿವ್ವಳ ದೇಶೀಯ ಉತ್ಪಾದನೆ (ಜಿಡಿಪಿ) 2005ರಲ್ಲಿ 11931 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, 2014 ರಲ್ಲಿ 41445 ದಶಲಕ್ಷ ಅಮೇರಿಕನ್ ಡಾಲರ್ ಗೇರಿದೆ. 2005ರಲ್ಲಿ ಜಿಡಿಪಿ ಬೆಳವಣಿಗೆ ಶೇ.13.5ರಷ್ಟಿದ್ದು, 2014ರಲ್ಲಿ ಶೇ.8.7ರಷ್ಟು ಹೆಚ್ಚಿನ ಪ್ರಮಾಣದಲ್ಲಿರುವುದೇ ಇದಕ್ಕೆ ಕಾರಣ.2014ರಲ್ಲಿ ಆರ್ಥಿಕತೆಯ ನಿವ್ವಳ ಮೌಲ್ಯವರ್ಧನೆ(ಜಿವಿಎ)ಯಲ್ಲಿ ಕೃಷಿಯ ಪಾಲು ಶೇ.27.9, ಕೈಗಾರಿಕೆ ಪಾಲು ಶೇ.34.5 ಹಾಗೂ ಸೇವೆಗಳು ಮತ್ತು ಇತರೆ ಗಳಲ್ಲಿ ಶೇ.37.7ರಷ್ಟಿತ್ತು. ನಿರುದ್ಯೋಗದ ಪ್ರಮಾಣ 2014ರಲ್ಲಿ ಕೇವಲ ಶೇ.4.6ರಷ್ಟು ಮಾತ್ರ ಎನ್ನುವುದು ಗಮನಾರ್ಹ ಸಂಗತಿ. ನಗರದಲ್ಲಿ ವಾಸಿಸುವವರ ಜನಸಂಖ್ಯೆ ಹೆಚ್ಚಾಗುತ್ತಿದ್ದು, 2015ರಲ್ಲಿ ನಗರ ಜನಸಂಖ್ಯೆ ಶೇ.34.1ರಷ್ಟು ಮಾತ್ರ.
ಬರ್ಮಾ ದೇಶದಲ್ಲಿನ ಅವಲಂಬಿತರ ಅನುಪಾತ ಅಂದರೆ 15ರಿಂದ 64 ವರ್ಷ ವಯಸ್ಸಿನ ಪ್ರತಿ 100 ಜನಕ್ಕೆ, 14ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಹೆಚ್ಚಿನವರ ಸಂಖ್ಯೆ ಕೇವಲ 49. ಶಿಕ್ಷಣಕ್ಕೆ ಇತ್ತೀಚಿನ ವರ್ಷಗಳಲ್ಲಿ ಮಹತ್ವ ಹೆಚ್ಚಿಗೆ ನೀಡುತ್ತಿದ್ದು, ಶೇ.100ರಷ್ಟು ಪ್ರಾಥಮಿಕ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ.ಬಾಂಗ್ಲಾದೇಶದಿಂದ ಒಳನುಸುಳುಕೋರರ ಸಮಸ್ಯೆ ಇದ್ದು, ರೋಹಿಂಗ್ಯಾಗಳ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿರುವುದು ಸ್ಥಳೀಯರಲ್ಲಿ ದುಗುಡ ಹೆಚ್ಚಿಸಿದೆ. ಭಯೋತ್ಪಾದಕರ ಸಮಸ್ಯೆ ದೇಶವನ್ನು ಕಾಡುತ್ತಿದೆ. ಈಶಾನ್ಯ ದಿಕ್ಕಿನಲ್ಲಿ ಸಶಸ್ತ್ರ ಕಮ್ಯುನಿಸ್ಟ್ ಚಳುವಳಿಯೂ ನಡೆದಿದೆ. ಇವೆಲ್ಲದರ ನಡುವೆ ಆರ್ಥಿಕ ಅಭಿವೃದ್ಧಿ ಮುಂದುವರಿಸಿಕೊಂಡು ಹೋಗಬೇಕಾಗಿರುವುದೇ ಬರ್ಮಾ ಮುಂದಿರುವ ಸವಾಲು.
          

[/fusion_text][/fusion_builder_column][/fusion_builder_row][/fusion_builder_container]

Categories
asia

ಶ್ರೀಲಂಕಾ

[fusion_builder_container hundred_percent=”no” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” overlay_color=”” video_preview_image=”” border_color=”” border_style=”solid” padding_top=”” padding_bottom=”” padding_left=”” padding_right=”” type=”legacy”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”true” min_height=”” hover_type=”none” link=”” border_sizes_top=”” border_sizes_bottom=”” border_sizes_left=”” border_sizes_right=”” first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಪರ್ವತ ಪ್ರದೇಶಗಳು, ನಯನ ಮನೋಹರ ನದಿ, ಜಲಪಾತಗಳು, ನಡುವಿನ ಪ್ರಸ್ಥಭೂಮಿ, ಉಬ್ಬು ತಗ್ಗುಗಳ ಭೂ ಪ್ರದೇಶ, ಸುತ್ತಲೂ ಕರಾವಳಿ ಹೊಂದಿರುವ ಸುಂದರ ದ್ವೀಪ ಶ್ರೀಲಂಕ.ಮರಳುಭರಿತ ಕರಾವಳಿಯಲ್ಲಿ ತೆಂಗು ಬೆಳೆಯಲಾಗುತ್ತದೆ. ಜಗತ್ತಿನ ಐದನೇ ಅತಿ ಹೆಚ್ಚು ತೆಂಗು ಬೆಳೆಯುವ ದೇಶ ಇದು. ಪರ್ವತ ಪ್ರದೇಶಗಳಲ್ಲಿ ಟೀ ಮತ್ತು ರಬ್ಬರ್ ಹಾಗೂ ಮಹಾವೇಲಿ ನದಿ ಪ್ರದೇಶದಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ.ಇಂದ್ರನೀಲಮಣಿ, ಪುಷ್ಯರಾಗ, ಮಾಣಿಕ್ಯ ಮುಂತಾದ ಮಣಿಗಳು ಇಲ್ಲಿ ಯಥೇಚ್ಛವಾಗಿ ದೊರೆಯುತ್ತವೆ. ಜೊತೆಗೆ ಗ್ರಾಫೈಟ್ ಮತ್ತು ಫಾಸ್ಫೇಟನ್ನು ಕೂಡ ಈ ದೇಶ ತನ್ನ ಗರ್ಭದಲ್ಲಿ ಅಡಗಿಸಿಕೊಂಡಿದೆ.ಹಣ್ಣು, ತರಕಾರಿ, ಹಾಗೂ ಮಸಾಲೆ ಪದಾರ್ಥಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ.ಸಿಂಹಳೀಯ ಜನಾಂಗದವರು ಇಲ್ಲಿ ಶೇ.73,8ರಷ್ಟಿದ್ದರೆ, ತಮಿಳರು ಶೇ.8.5ರಷ್ಟಿದ್ದಾರೆ. ಧಾರ್ಮಿಕವಾಗಿ ವಿಂಗಡಿಸಿದಲ್ಲಿ, ಬೌದ್ಧರು ಶೇ.69.1, ಮುಸ್ಲಿಮರು ಶೇ.7.6, ಹಿಂದುಗಳು ಶೇ.7.1 ಮತ್ತು ಕ್ರಿಶ್ಚಿಯನ್ನರು ಶೇ.6.2ರಷ್ಟು ಪ್ರಮಾಣದಲ್ಲಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ದೊರೆತಿರುವ ಮಾನವನ ಪಳೆಯುಳಿಕೆಗಳಲ್ಲಿ ಅತ್ಯಂತ ಪ್ರಾಚಿನವಾದುದು ಶ್ರೀಲಂಕಾದ ಬಾಲನಗೊಂಡ ಗವಿಗಳಲ್ಲಿ ದೊರೆತ ಮೂಳೆ ಹಂದರ. ಬಾಲನಗೊಂಡ ಮಾನವ ಸುಮಾರು 34,000 ವರ್ಷಗಳ ಹಿಂದೆ ಜೀವಿಸಿದ್ದ ಎಂದು ಅಂದಾಜು ಮಾಡಲಾಗಿದೆ.ಈ ದೇಶದ ವಿಸ್ತೀರ್ಣ 65,510 ಚ.ಕಿ ಇದ್ದು, ಜನಸಂಖ್ಯೆ 2,08,11.000ರಷ್ಟಿದೆ. ರಾಜಧಾನಿ ಕೊಲೊಂಬೋದ ಜನಸಂಖ್ಯೆ ಕೇವಲ 7.07 ಲಕ್ಷ. ಇಲ್ಲಿನ ಕರೆನ್ಸಿ ಶ್ರೀಲಂಕಾ ರೂಪಾಯಿ (ಎಲ್ ಕೆ ಆರ್). 2010ರಲ್ಲಿ 49,566ದಶಲಕ್ಷ ಅಮೇರಿಕನ್ ಡಾಲರ್ ನಷ್ಟಿದ್ದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ),2014ರ ಹೊತ್ತಿಗೆ 74,941 ದಶಲಕ್ಷ ಅಮೇರಿಕನ್ ಡಾಲರ್ ಗೆ ಏರಿದೆ. ಅಂದರೆ ಜಾಗತಿಕ ಆರ್ಥಿಕ ಹಿನ್ನಡೆಯ ನಡುವೆಯೂ ಈ ದೇಶದ ಜಿಡಿಪಿಯಲ್ಲಿ ಗಮನಾರ್ಹ ಪ್ರಗತಿ ಕಂಡುಬಂದಿದೆ. 2014ರ ಅಂಕಿಅಂಶದಂತೆ ಜಿಡಿಪಿಯಲ್ಲಿ ಕೃಷಿಯ ಪಾಲು ಶೇ.9.9, ಕೈಗಾರಿಕೆ ಪಾಲು ಶೇ.33.8 ಮತ್ತು ಸೇವಾವಲಯದ ಪಾಲು ಶೇ.56.3ರಷ್ಟಿತ್ತು.

ಶ್ರೀಲಂಕಾ- ಬಲ್ಲಂಗೋಡ ಮಾನ್

ಕಾರ್ಮಿಕ ಬಲದ ಶೇ.30ರಷ್ಟು ಜನ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಒಟ್ಟು ಕಾರ್ಮಿಕ ಬಲದ ನಿರುದ್ಯೋಗ2010ರಲ್ಲಿ ಶೇ.4.9ರಷ್ಟಿದ್ದರೆ, 2014ರಲ್ಲಿ ಹೆಚ್ಚೇನೂ ಬದಲಾವಣೆ ಕಂಡಿಲ್ಲ. ಜನಸಂಖ್ಯೆ ವಾರ್ಷಿಕ ಶೇ.0.5ರಷ್ಟು ಹೆಚ್ಚುತ್ತಿದೆ ಆದರೆ ನಗರ ಜನಸಂಖ್ಯೆ ಪ್ರಮಾಣ ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಆರೋಗ್ಯಕ್ಕೆ ಜಿಡಿಪಿಯ ಶೇ.3.5ರಷ್ಟು ವೆಚ್ಚ ಮಾಡುತ್ತಿದ್ದರೆ, ಶಿಕ್ಷಣಕ್ಕೆ ಕೇವಲ ಶೇ.1.6ರಷ್ಟು ಮಾತ್ರ ವ್ಯಯಿಸಲಾಗುತ್ತಿದೆ. ರಾಷ್ಟ್ರೀಯ ಸಂಸತ್ತಿನಲ್ಲಿ ಮಹಿಳೆಯರು ಸ್ಥಾನ ಪಡೆದುಕೊಂಡಿರುವುದು ಕೇವಲ ಶೇ.5.8ರಷ್ಟು ಮಾತ್ರ. ಇಂಟರ್ನೆಟ್ ಬಳಸುತ್ತಿರುವವರು ಶೇ.25.8 ರಷ್ಟು ಜನ ಮಾತ್ರ. ಇವೆಲ್ಲ ಅಂಕಿಅಂಶಗಳನ್ನು ಗಮನಿಸಿದಾಗ ಶ್ರೀಲಂಕಾದಲ್ಲಿ ಮಹಿಳೆಯರ ಸಬಲೀಕರಣ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ದಿಕ್ಕಿನಲ್ಲಿ ಪ್ರಗತಿ ಸಾಧಿಸಬೇಕಾಗಿದೆ ಎನ್ನುವುದು ಎದ್ದು ಕಾಣಿಸುತ್ತದೆ,ಶ್ರೀಲಂಕಾದ ಚರಿತ್ರೆ ಬಗ್ಗೆ ಬರೆದಿರುವ ಪ್ರಾಚೀನ ಗ್ರಂಥಗಳೆಂದರೆ ಮಹಾವಂಸ, ದೀಪವಂಸ, ಸಿಲಪ್ಪಟಿಕಾರಮ್ ಇತ್ಯಾದಿ. ಮಹಾವಂಸದಲ್ಲಿ ಅಶೋಕನ ಪಟ್ಟಾಭಿಷೇಕದ ವಿವರಗಳೆಲ್ಲ ದಾಖಲಾಗಿವೆ.ಮಹಾವಂಸದಲ್ಲಿ ಉಲ್ಲೇಖವಾಗಿರುವಂತೆ ನಾಲ್ಕನೇ ಶತನಮಾನದಲ್ಲಿ ಆಳಿದ ಅನುರಾಧಪುರ ಸಾಮ್ರಾಜ್ಯ ಆಡಳಿತ ನಡೆಸುತ್ತಿತ್ತು. ಅಶೋಕ ಚಕ್ರವರ್ತಿಯ ಮಗ ಅರಹಂತ ಮಹಿಂದ ಕ್ರಿ.ಪೂ.247ರಲ್ಲಿ ಶ್ರೀಲಂಕಾಗೆ ಆಗಮಿಸಿ, ಬೌದ್ಧಧರ್ಮವನ್ನು ಪ್ರಸಾರ ಮಾಡಿದರು. ಮಹಿಂದಾ ಸಹೋದರಿ ಸಂಗಮಿತ್ತ ಬೋಧಿವೃಕ್ಷದ ಸಸಿಯನ್ನು ಇಲ್ಲಿಗೆ ತಂದರು ಎನ್ನಲಾಗಿದೆ.ಮಹಾವಂಸದಲ್ಲಿ ಉಲ್ಲೇಖಿಸಿರುವಂತೆ, ವಿಜಯ ಎನ್ನುವ ಭಾರತದ ಸಿಂಹಬಾಹು ಎನ್ನುವ ರಾಜನ ಮಗ ವಿಜಯ ಎಂಬಾತ ದಾಳಿ ಮಾಡಿದ.ನಂತರ ಕ್ರಿ.ಶ.993ರಲ್ಲಿ ರಾಜರಾಜಚೋಳ ಅನುರಾಧಪುರ ಸಾಮ್ರಾಜ್ಯವನ್ನು ವಶಪಡಿಸಿಕೊಂಡ. ಆತನ ಮಗ ರಾಜೇಂದ್ರ ಚೋಳನ ಕಾಲದಲ್ಲಿ ಇಡೀ ಶ್ರೀಲಂಕಾ ಚೋಳರ ಆಡಳಿತಕ್ಕೆ ಸಿಲುಕಿತ್ತು. ನಂತರ ಪಾಂಡ್ಯರೂ ಸ್ವಲ್ಪ ಕಾಲ ಶ್ರೀಲಂಕಾವನ್ನು ಆಳಿದ್ದಾರೆ.
ಆಧುನಿಕ ಇತಿಹಾಸದಲ್ಲಿ ಶ್ರೀಲಂಕಾಗೆ ಮೊದಲು ಆಗಮಿಸಿದ್ದು ಪೋರ್ಚುಗೀಸರು. ಕ್ರಿ.ಶ.1505ರಲ್ಲಿ ಆಗಮಿಸಿದ ಪೋರ್ಚುಗೀಸರು, ಕೊಲೊಂಬೋದಲ್ಲಿ ಕೋಟೆ ಸ್ಥಾಪಿಸಿ, ಕ್ರಮೇಣ ಕರಾವಳಿ ತೀರದ ಮೇಲೆಲ್ಲ ಪ್ರಭುತ್ವ ಸಾಧಿಸಿದರು. ಆಗ ಸಿಂಹಳೀಯರು ಕಾಂಡಿಯನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು.ಕಾಂಡ್ಯಾದ ರಾಜ ಎರಡನೇ ರಾಜಸಿಂಘೆ ಕ್ರಿ.ಶ.1638ರಲ್ಲಿ, ಪೋರ್ಚುಗೀಸರನ್ನು ಅಲ್ಲಿಂದ ಓಡಿಸುವ ಸಲುವಾಗಿ ಡಚ್ಚರೊಂದಿಗೆ ಒಪ್ಪಂದ ಮಾಡಿಕೊಂಡ. ದ್ವೀಪದಲ್ಲಿ ವ್ಯಾಪಾರ ಮಾಡಲು ಅನುವು ಮಾಡಿಕೊಟ್ಟ. ಡಚ್ಚರು ಕ್ರಿ.ಶ.1656ರಲ್ಲಿ ಕೊಲೊಂಬೋವನ್ನು ವಶಪಡಿಸಿಕೊಂಡರು. ಪೋರ್ಚುಗೀಸರಿಗಿಂತ ಹೆಚ್ಚು ತೆರಿಗೆ ವಿಧಿಸಿದರು. ನಂತರ ಅಲ್ಲಿ ದಾಳಿ ಎಸಗಿದ್ದು ಬ್ರಿಟಿಷರು. ಕ್ರಿ.ಶ.1803ರಲ್ಲಿ ನಡೆದ ಕಾಂಡ್ಯದ ಯುದ್ಧದಲ್ಲಿ ಶ್ರೀಲಂಕಾ ತನ್ನ ಸ್ವಾತಂತ್ರ್ಯವನ್ನು ಸಂಪೂರ್ಣ ಕಳೆದುಕೊಂಡಿತು.
ಸುದೀರ್ಘ ಹೋರಾಟದ ನಂತರ ಕ್ರಿ.ಶ.1948ರಲ್ಲಿ ಶ್ರೀಲಂಕಾ ಬ್ರಿಟಿಷರಿಂದ ಸ್ವಾತಂತ್ರವನ್ನು ಪಡೆದುಕೊಂಡಿತು. ಆದರೆ ಆ ದೇಶದ ಸಮಸ್ಯೆಗಳು ಮುಗಿಯಲಿಲ್ಲ. ಜನಾಂಗೀಯ ಹೋರಾಟಗಳು ಪ್ರಾರಂಭವಾದವು. ತಮಿಳುನಾಡಿನಿಂದ ಬ್ರಿಟಿಷರ ಕಾಲದಲ್ಲಿ ಅವರನ್ನು ಟೀ ತೋಟದ ಕಾರ್ಮಿಕರನ್ನಾಗಿ ತಮಿಳರನ್ನು ಕರೆದೊಯ್ಯಲಾಗಿತ್ತು. ನಂತರದ ತಲೆಮಾರಿನ ಜನ ಸ್ಥಳೀಯರೇ ಆಗಿ ಹೋಗಿದ್ದರು. ಜಾಫ್ನಾ ಪ್ರದೇಶದಲ್ಲೇ ಹೆಚ್ಚಿನ ಪ್ರಮಾಣದ ತಮಿಳರು ನೆಲೆಸಿದ್ದರು. ಕ್ರಿ.ಶ.1956ರಲ್ಲಿ ತಮಿಳು ಮತ್ತು ಇಂಗ್ಲಿಷ್ ಎರಡೂ ಭಾಷೆಗಳನ್ನು ಅಧಿಕೃತ ಭಾಷೆಯ ಪಟ್ಟಿಯಿಂದ ತೆಗೆದುಹಾಕಿದ್ದರಿಂದ ಅವರು ಸಂಕಷ್ಟಕ್ಕೆ ಬಿದ್ದರು. ಆಡಳಿತಕ್ಕೆ ಮತ್ತು ಶಿಕ್ಷಣಕ್ಕೆ ಕೇವಲ ಸಿಂಹಳೀ ಭಾಷೆಯನ್ನು ಮಾತ್ರವೇ ಮಾಧ್ಯಮ ಭಾಷೆಯನ್ನಾಗಿ ಮಾಡಲಾಯಿತು.
ಆಗ ತಮಿಳರಿಂದ ಅಲ್ಲಿ ಚಳವಳಿಗಳು ಆರಂಭವಾದವು. 1980ರ ಹೊತ್ತಿಗೆ ತಮಿಳು ಪ್ರತ್ಯೇಕತಾವಾದ ತಲೆ ಎತ್ತಿ ನಿಂತಿತು. ತಮಗೆ ಅನ್ಯಾಯವಾಗುತ್ತಿದೆ ಎಂದು ತಮಿಳರು ಸಶಸ್ತ್ರ ಹೋರಾಟದ ದಾರಿ ಹಿಡಿದರು. ಮೂರು ದಶಕಗಳ ಕಾಲ ನಡೆದ ಈ ಹೋರಾಟದಲ್ಲಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು. 2009ರಲ್ಲಿ ಎಲ್ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಹತ್ಯೆಯಾದ ನಂತರವಷ್ಟೇ ಪ್ರತ್ಯೇಕತಾವಾದಕ್ಕೆ ತೆರೆ ಎಳೆಯಲು ಸಾಧ್ಯವಾಗಿದ್ದು.ಸ್ವಾತಂತ್ರ್ಯ ಬಂದಾಗಿನಿಂದಲೂ ಚಳವಳಿ ಹಾಗೂ ಮೂರು ದಶಕಗಳಿಂದ ಭಯೋತ್ಪಾದನೆಗೆ ಸಿಕ್ಕಿ ನಲುಗಿದ್ದ ಶ್ರೀಲಂಕಾದಲ್ಲಿ ಇದೀಗ ಶಾಂತಿಪರ್ವ ಆರಂಭವಾಗಿದೆ. ಆದರೆ ದಶಕಗಳ ನಾಗರಿಕ ಅಶಾಂತಿ, ದೇಶದ ಅಭಿವೃದ್ಧಿಗೆ ಭಾರಿ ಹೊಡೆತವನ್ನೇ ಕೊಟ್ಟಿದೆ. ಎಲ್ಲ ಜನಾಂಗದವರ ಮನಸುಗಳನ್ನು ಮತ್ತೆ ಬೆಸೆದು, ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕಾಗಿರುವುದು ಶ್ರೀಲಂಕಾ ಮುಂದಿರುವ ಸವಾಲು.

[/fusion_text][/fusion_builder_column][/fusion_builder_row][/fusion_builder_container]

Categories
asia

ಜಪಾನ್

ಅನೇಕ ಸಣ್ಣ ಪುಟ್ಟ ದ್ವೀಪಗಳು ಹಾಗೂ ಮುಖ್ಯವಾದ ನಾಲ್ಕು ದ್ವೀಪಗಳಿಂದ ಕೂಡಿದ, ದ್ವೀಪ ಸಮೂಹ ರಾಷ್ಟ್ರ ಜಪಾನ್. ಈ ದೇಶದ ವಿಸ್ತೀರ್ಣ ಹೆಚ್ಚಿಲ್ಲದಿದ್ದರೂ, ಸಾಧನೆ ಕಡಿಮೆಯದ್ದಲ್ಲ.ಜಪಾನಿನಲ್ಲಿ ಶೇ.86ರಷ್ಟು ಜನ ಶಿಂಟೋ ಮತ್ತು ಬೌದ್ಧ ಧರ್ಮವನ್ನು ಅನುಸರಿಸುತ್ತಾರೆ. ಜಪಾನಿ ಜನಾಂಗವನ್ನು ಹೊರತುಪಡಿಸಿದರೆ ಇಲ್ಲಿರುವ ಇತರೆ ಜನಾಂಗದವರಾದ ಕೊರಿಯನ್ನರು, ಚೀನಿಯರು, ಜನಾಂಗಗಳು ಪ್ರಮಾಣ ಶೇಕಡಾ ಎರಡರಷ್ಟು ಮಾತ್ರ.ಅಂದಾಜಿನಂತೆ 3,77,930 ಚ.ಕಿ. ವಿಸ್ತೀರ್ಣ ಹೊಂದಿದ್ದು, ಜನಸಂಖ್ಯೆ 12.63 ಕೋಟಿ. ರಾಜಧಾನಿ ಟೋಕ್ಯೋದ ಜನಸಂಖ್ಯೆ 2015 ರಲ್ಲಿ 3.80 ಕೋಟಿ. ಇಲ್ಲಿನ ಕರೆನ್ಸಿ ಯೆನ್ ಅಥವಾ ಜೆಪಿವೈ. ಈ ದೇಶದ ಅತ್ಯಂತ ಎತ್ತರದ ಪ್ರದೇಶ ಮೌಂಟ್ ಫ್ಯುಜಿ ಸಮುದ್ರದಿಂದ 3,776 ಮೀಟರ್ ಎತ್ತರದಲ್ಲಿದೆ.

            
ಉತ್ತರ ಪೆಸಿಫಿಕ್ ಸಮುದ್ರ, ಪೂರ್ವ ಚೀನಾ ಸಾಗರ, ಜಪಾನ್ ಸಾಗರ, ಫಿಲಿಪೈನ್ಸ್ ಸಮುದ್ರಗಳಿಂದ ಜಪಾನ್ ಸುತ್ತುವರಿದಿದೆ. ಇವುಗಳ ನಡುವೆ ಈ ದೇಶ ರೂಪುಗೊಂಡಿದ್ದು, ಹೊಕ್ಕಾಯ್ಡೊ, ಹೊನ್ಶ್, ಶಿಕೊಕೊ ಮತ್ತು ಕ್ಯೂಶ್ ಈ ನಾಲ್ಕು ದ್ವೀಪಗಳು ಜಪಾನ್ ನ ವಿಸ್ತೀರ್ಣದ ಶೇ.97ರಷ್ಟು ಆಗುತ್ತದೆ.ಎಲ್ಲ ದ್ವೀಪಗಳಿಗೆ ಕೊಳವೆ ರಸ್ತೆ ಮತ್ತು ಸೇತುವೆಗಳ ಮೂಲಕ ಸಂಪರ್ಕ ಕಲ್ಪಿಸಲಾಗಿದೆ. ಈ ದೇಶ ಭೂಕಂಪ ಮತ್ತು ಜ್ವಾಲಾಮುಖಿ ಪದೇಪದೇ ಉಂಟಾಗುವ ದೇಶವಾಗಿದ್ದು, ಕ್ರಿ.ಶ.1923ರಲ್ಲಿ ಯೋಕೋಹಾಮ ಮತ್ತು ಟೋಕ್ಯೋ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ 1,40,000 ಜನ ಮೃತಪಟ್ಟಿದ್ದರು. 1995ರಲ್ಲಿ ಕೋಬೆಯಲ್ಲಿ ಸಂಭವಿಸಿದ ಮತ್ತೊಂದು ಭೂಕಂಪದಲ್ಲಿ ಸುಮಾರು 6000 ಜನ ಪ್ರಾಣ ಕಳೆದುಕೊಂಡಿದ್ದಾರೆ. ಫ್ಯುಜಿ ಪರ್ವತದಲ್ಲಿ 1707ರಲ್ಲಿ ಕಡೆಯ ಬಾರಿಗೆ ಜ್ವಾಲಾಮುಖಿ ಹೊರಹೊಮ್ಮಿತ್ತು. ಉತ್ತರದಲ್ಲಿರುವ ದ್ವೀಪ ಹೊಕ್ಕಾಯ್ಡೋ ಹೆಚ್ಚು ಗ್ರಾಮೀಣ ಮತ್ತ ಸಾಂಪ್ರದಾಯಿಕ ಸೊಗಡನ್ನು ಹೊಂದಿದೆ. ಆ ದೇಶದಲ್ಲಿ ಉತ್ಪತ್ತಿಯಾಗುವ ಧಾನ್ಯಗಳ ಪೈಕಿ ಅರ್ಧದಷ್ಟು ಇದೇ ಪ್ರದೇಶದಲ್ಲಿ ಬೆಳೆಯಲಾಗುತ್ತದೆ. ಅಮೇರಿಕದ ಮಧ್ಯಪಶ್ಚಿಮ ಪ್ರದೇಶದಲ್ಲಿ ಕಂಡುಬರುವಂತಹ ವಾತಾವರಣವೇ ಇಲ್ಲೂ ಇರುವ ಕಾರಣ, ಇಲ್ಲಿ ಗೋದಿ ಬೆಳೆಯನ್ನು ಪರಿಚಯಿಸಲಾಯಿತು.

ಜಪಾನ್- ಮೌಂಟ್ ಫುಜಿ

ಪ್ರಾಕೃತಿಕ ವೈಪರೀತ್ಯದ ಸನ್ನಿವೇಶಗಳ ನಡುವೆಯೂ ದೇಶವನ್ನು ಅಭಿವೃದ್ಧಿಯೆಡೆಗೆ ಕೊಂಡೊಯ್ದಿರುವುದು ಮತ್ತು ಚಾರಿತ್ರಿಕ ಹಿನ್ನಡೆಗಳಿಂದ ಮೇಲೆದ್ದು ಬಂದಿರುವುದು, ಇಡೀ ಜಗತ್ತೇ ಜಪಾನ್ ಕಡೆಗೆ ಬೆಕ್ಕಸಬೆರಗಾಗಿ ನೋಡುವಂತೆ ಮಾಡಿದೆ.ಹನ್ನೆರಡನೇ ಶತಮಾನದಲ್ಲಿ ತೋಕುಗವಾಗಳ ಆಡಳಿತ ಉದಯವಾಗುವವರೆಗೆ ದುರ್ಬಲ ರಾಜರ ಕೈಗೆ ಜಪಾನ್ ಆಡಳಿತ ಸಿಕ್ಕಿತು. ಕ್ರಿ.ಶ.1542ರಲ್ಲಿ ಅಲ್ಲಿಗೆ ಪಾಶ್ಚಿಮಾತ್ಯರು ಪ್ರವೇಶ ಪಡೆದುಕೊಳ್ಳಲು ಪ್ರಯತ್ನಿಸಿದರಾದರೂ, ತೋಕುಗವಾಗಳು ಅದಕ್ಕೆ ಅವಕಾಶ ನೀಡಲಿಲ್ಲ. ನಂತರ ಡಚ್ಚರು ನಾಗಸಾಕಿಯನ್ನು ತಮ್ಮ ವಸಾಹತು ಮಾಡಿಕೊಂಡರು. ಕ್ರಿ.ಶ.1639ರಿಂದ ಜಪಾನೀಯರು ಹೊರಗಿನ ದೇಶಗಳಿಗೆ ಪ್ರವಾಸ ಮಾಡದಂತೆ ವಿಧಿಸಲಾಯಿತು (ನಾಗಸಾಕಿ ಹೊರತುಪಡಿಸಿ). 1853ರಲ್ಲಿ ಜಪಾನ್ ನಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ, ಸಂಯುಕ್ತ ರಾಷ್ಟ್ರಗಳ ಯುದ್ಧನೌಕೆ ಯೋಕೊಹಾಮೋಗೆ ಬಂದವು. ಇದಕ್ಕೆ ಜಪಾನ್ ಮಣಿಯಿತು. ಅದಾದ ನಂತರ ಕೇವಲ 50 ವರ್ಷಗಳಲ್ಲಿ ಜಪಾನ್ ಪಾಶ್ಚಿಮತ್ಯೀಕರಣ ನಡೆಯಿತು.ಕ್ರಿ.ಶ.1894-95ರಲ್ಲಿ ಚೈನಾ, ಕ್ರಿ.ಶ.1904-05ರಲ್ಲಿ ರಷ್ಯ ವಿರುದ್ಧ ನಡೆದ ಯುದ್ಧಗಳಲ್ಲಿ ಜಪಾನ್ ಜಯಗಳಿಸಿತು. ಕ್ರಿ.ಶ.1941ರಲ್ಲಿ ಚೈನಾ ಮೇಲೆ ದಾಳಿ ನಡೆಸಿ, ಎರಡನೇ ಮಹಾಸಮರದಲ್ಲಿ ಭಾಗಿಯಾಯಿತು. ಶರಣಾಗುವಂತೆ ಜಪಾನ್ ಗೆ ಅಮೇರಿಕ ಎಚ್ಚರಿಕೆ ನೀಡಿದಾಗಲೂ, ಜಪಾನ್ ಮಣಿಯಲಿಲ್ಲ. ಆಗ ಮೊದಲು ಹಿರೋಷಿಮಾ ಮೇಲೆ ಅಣುಬಾಂಬ್ ಎಸೆಯಲಾಯಿತು. ಆದಾಗ್ಯೂ ಜಪಾನ್ ಬಗ್ಗದಿದ್ದಾಗ ನಾಗಸಾಕಿ ನಗರ ಅಣುಬಾಂಬ್ ದಾಳಿಗೆ ತುತ್ತಾಯಿತು.
ಜಪಾನಿನ ನಿವ್ವಳ ದೇಶೀಯ ಉತ್ಪನ್ನ 2010ರಲ್ಲಿ 54,98,719 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, ಜಾಗತಿಕ ಆರ್ಥಿಕ ಹಿನ್ನೆಡೆಯ ಹಿನ್ನೆಲೆಯಲ್ಲಿ 2014ರಲ್ಲಿ 46,02,419 ದಶಲಕ್ಷ ಅಮೇರಿಕನ್ ಡಾಲರ್ ಗೆ ಕುಸಿದಿದೆ. ಶೇಕಡಾವಾರು ಜಿಡಿಪಿ 2010ರಲ್ಲಿ 4.7ರಷ್ಟಾಯಿತು, 2014ರಲ್ಲಿ ಶೇ.-0.1 ಋಣಾತ್ಮಕ ಬೆಳವಣಿಗೆ ಕಂಡುಬಂದಿದೆ.2014ರಲ್ಲಿ ನಿವ್ವಳ ಮೌಲ್ಯವರ್ಧನೆಯಲ್ಲಿ (ಜಿವಿಎ) ಕೃಷಿಯ ಪಾಲು ಕೇವಲ ಶೇ.1.2ರಷ್ಟಿತ್ತು. ಕೈಗಾರಿಕೆಯ ಪಾಲು ಶೇ.26.8 ರಷ್ಟಿತ್ತು. ಹಾಗೂ ಸೇವೆ ಮತ್ತು ಇತರೆಗಳ ಪಾಲು ಶೇ.72ರಷ್ಟು ಹೊಂದಿತ್ತು. ಅಂದರೆ ದೇಶದ ಶೇ,98ರಷ್ಟು ಜನ ಕೈಗಾರಿಕೆ ಮತ್ತು ಸೇವೆಯ ಉದ್ಯೋಗವನ್ನೇ ಅವಲಂಬಿಸಿದ್ದಾರೆ.
ಇಷ್ಟೊಂದು ಅಧಿಕ ಪ್ರಮಾಣದ ಜಿಡಿಪಿ ಹೊಂದಬೇಕೆಂದರೆ, ನಿರುದ್ಯೋಗ ಅತ್ಯಂತ ಕಡಿಮೆ ನಿರುದ್ಯೋಗ ಇಲ್ಲಿರುವುದನ್ನು ಕಾಣಬಹುದು. ಒಟ್ಟು ಕಾರ್ಮಿಕ ಬಲದ ಶೇಕಡಾವಾರು ನಿರುದ್ಯೋಗ (ಅಂದಾಜು) 2005ರಲ್ಲಿ 4.4, 2010ರಲ್ಲಿ 4.9 ಮತ್ತು 2014ರಲ್ಲಿ 3.5. ಕಾರ್ಮಿಕ ಬಲದ ಭಾಗವಹಿಸುವಿಕೆ ಜನಸಂಖ್ಯೆಯಲ್ಲಿ ಶೇಕಡಾವಾರು 2005ರಲ್ಲಿ ಮಹಿಳೆಯರು 48.4, ಪುರುಷರು 73.3, 2010ರಲ್ಲಿ ಮಹಿಳೆಯರು 49.4, ಪುರುಷರು 71.7, 2014ರಲ್ಲಿ ಮಹಿಳೆಯರು 49,3 ಮತ್ತು ಪುರುಷರು 70.5.ಆಮದು, ರಫ್ತು 2015ರಲ್ಲಿ ಜಪಾನ್ ನಿಂದ ಆದ ಒಟ್ಟು ರಫ್ತಿ ವಹಿವಾಟು ಪೈಕಿ ಅಮೇರಿಕಾಗೆ ಶೇ.20.2, ಚೈನಾಗೆ ಶೇ.17.5 ಮತ್ತು ರಿಪಬ್ಲಿಕ್ ಆಫ್ ಕೊರಿಯದೊಂದಿಗೆ ಶೇ.7ರಷ್ಟು ನಡೆದಿದ್ದರೆ, ಚೈನಾದಿಂದ ಶೇ.25.6, ಅಮೇರಿಕದಿಂದ 10.9 ಮತ್ತು ಆಸ್ಟ್ರೇಲಿಯಾದಿಂದ ಶೇ.5.6ರಷ್ಟು ಆಮದು ಮಾಡಿಕೊಂಡಿದೆ.ಸಾಮಾಜಿಕ ಸೂಚಕಗಳು
2010ರಿಂದ 2015ರ ಅವಧಿಯಲ್ಲಿ ಜನಸಂಖ್ಯೆ ವಾರ್ಷಿಕ ಬೆಳವಣಿಗೆ ದರ ಋಣಾತ್ಮಕವಾಗಿದ್ದು, -.1 ಹೊಂದಿತ್ತು. ನಗರ ಜನಸಂಖ್ಯೆ 2015ರಲ್ಲಿ ಶೇ.93.5 ಹೊಂದಿದ್ದು, ಈ ಅವಧಿಯಲ್ಲಿ ಜನಸಂಖ್ಯೆ ಕಡಿಮೆಯಾಗಿದ್ದು, ಬಹುತೇಕ ಜನ ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ. ಆಯುಷ್ಕಾಲ 2010-2015ರ ರ ಅವಧಿಯಲ್ಲಿ ಮಹಿಳೆಯರು 86.5 ಮತ್ತು ಪುರುಷರು 80 ವರ್ಷಗಳನ್ನು ಹೊಂದಿದ್ದರು. ಹೀಗಾಗಿ ಅವಲಂಬಿತರ ಅನುಪಾತ ಸಹಜವಾಗಿಯೇ ಹೆಚ್ಚಾಗಿದೆ. 15-64 ವರ್ಷ ವಯಸ್ಸಿನ ಪ್ರತಿ ನೂರು ಜನರಿಗೆ 14ವರ್ಷ ಕೆಳಗಿನವರು ಮತ್ತು 65ವರ್ಷಕ್ಕೂ ಮೇಲ್ಪಟ್ಟವರ ಸಂಖ್ಯೆ 65. ಜಿಡಿಪಿಯ ಶೇ.10.2ರಷ್ಟು ಆರೋಗ್ಯಕ್ಕೆ, ಶೇ.3.8ರಷ್ಟು ಶಿಕ್ಷಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಶೇ.90.6ರಷ್ಟು ಜನ ಇಂಟರ್ ನೆಟ್ ಬಳಸುತ್ತಿದ್ದಾರೆ. ಬಯಲು ಪ್ರದೇಶ ಶೇ.68.5ರಷ್ಟು ಅರಣ್ಯ ಪ್ರದೇಶವಿದೆ. ಶೇ.100ರಷ್ಟು ಜನ ಉತ್ತಮ ಕುಡಿಯುವ ನೀರನ್ನು ಬಳಸುತ್ತಿದ್ದಾರೆ.ಮೇಲಿನ ಅಂಕಿಅಂಶಗಳಿಂದ ಜಪಾನಿನ ಪ್ರಸ್ತುತ ಸ್ಥಿತಿಗತಿ ತಿಳಿದುಬರುತ್ತದೆ.

Categories
asia

ಚೈನಾ

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” type=”legacy”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”true” min_height=”” hover_type=”none” link=”” border_sizes_top=”” border_sizes_bottom=”” border_sizes_left=”” border_sizes_right=”” first=”true” type=”1_1″][fusion_text]

ವಿಶಾಲ ಭೂ ಪ್ರದೇಶ ಮತ್ತು ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿ, ತ್ವರಿತವಾಗಿ ಅಭಿವೃದ್ಧಿ ಹೊಂದುತ್ತಿರುವ ಚೈನಾ ದೇಶಕ್ಕೆ ವರ್ತಮಾನದಷ್ಟೇ ಉಜ್ವಲ ಇತಿಹಾಸವೂ ಇದೆ. ವಿವಿಧ ಭಾಷೆ, ಜನಾಂಗಗಳಿಂದ ಕೂಡಿದೆ.ಚೈನಾದ ವಿಸ್ತೀರ್ಣ 95,96,961 ಚ.ಕಿ.ಮೀ. ಜನಸಂಖ್ಯೆ 2016ರ ಅಂದಾಜಿನಂತೆ 138,23,23,000. ಜನಸಾಂದ್ರತೆ 2016ರಲ್ಲಿ ಪ್ರತಿ ಚ.ಕಿ ಗೆ 147.2, ಈ ದೇಶದ ಕರೆನ್ಸಿ ರೆಮಿನ್ಬಿ (ಸಿಎನ್ ವೈ). ರಾಜಧಾನಿ ಬೀಜಿಂಗ್.ಮ್ಯಾಂಡರಿನ್ ಚೈನೀಸ್ ಅಧಿಕೃತ ಭಾಷೆಯಾಗಿರುವ ಈ ದೇಶದಲ್ಲಿ ಯೂ(ಕಾಂಟೋನೀಸ್), ವು (ಶಾಂಘೈ), ಮಿನ್ಮ್ಯಾನ್, ಟಿಬೇಟಿಯನ್ ಸೇರಿದಂತೆ ಅನೇಕ ಭಾಷೆಗಳನ್ನು ಮಾತನಾಡುವ ಜನ ಇದ್ದಾರೆ.ಕಮ್ಯುನಿಸ್ಟ್ ಆಡಳಿತ ಹೊಂದಿರುವ ಚೈನಾದ ಅಧಿಕೃತ ಧಾರ್ಮಿಕ ನಿಲುವು ನಾಸ್ತಿಕತೆಯಾದರೂ, ಜನ ಸಾಂಪ್ರದಾಯಿಕವಾಗಿ ಕನ್ಫೂಸಿಯನ್, ತಾವೋ, ಬೌದ್ಧ, ಮುಸ್ಲಿಂ, ಕ್ರಿಶ್ಚಿಯನ್ ಇತ್ಯಾದಿ ಧರ್ಮಗಳನ್ನು ನಂಬಿದ್ದಾರೆ.ಪ್ರಮುಖವಾದ ಹ್ಯಾನ್ ಚೈನೀಸ್ ಜನಾಂಗದ ಪ್ರಮಾಣ  ಶೇ.92 ರಷ್ಟಿದೆ.

[/fusion_text][fusion_builder_row_inner][fusion_builder_column_inner type=”1_2″ layout=”1_2″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” padding_top=”” padding_right=”” padding_bottom=”” padding_left=”” dimension_margin=”” animation_type=”” animation_direction=”left” animation_speed=”0.3″ animation_offset=”” last=”false” border_position=”all” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” spacing_right=”” type=”1_2″][fusion_imageframe image_id=”173|full” max_width=”” sticky_max_width=”” style_type=”none” blur=”” stylecolor=”” hover_type=”none” bordersize=”” bordercolor=”” borderradius=”” align_medium=”none” align_small=”none” align=”none” margin_top=”” margin_right=”” margin_bottom=”” margin_left=”” lightbox=”no” gallery_id=”” lightbox_image=”” lightbox_image_id=”” alt=”” link=”” linktarget=”_self” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” animation_type=”” animation_direction=”left” animation_speed=”0.3″ animation_offset=”” filter_hue=”0″ filter_saturation=”100″ filter_brightness=”100″ filter_contrast=”100″ filter_invert=”0″ filter_sepia=”0″ filter_opacity=”100″ filter_blur=”0″ filter_hue_hover=”0″ filter_saturation_hover=”100″ filter_brightness_hover=”100″ filter_contrast_hover=”100″ filter_invert_hover=”0″ filter_sepia_hover=”0″ filter_opacity_hover=”100″ filter_blur_hover=”0″]http://kanaja.karnataka.gov.in/ejaga/wp-content/uploads/2017/05/china-UN-map-1.png[/fusion_imageframe][/fusion_builder_column_inner][fusion_builder_column_inner type=”1_2″ layout=”1_2″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” padding_top=”” padding_right=”” padding_bottom=”” padding_left=”” dimension_margin=”” animation_type=”” animation_direction=”left” animation_speed=”0.3″ animation_offset=”” last=”true” border_position=”all” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”false” type=”1_2″][fusion_imageframe image_id=”174|full” max_width=”” sticky_max_width=”” style_type=”none” blur=”” stylecolor=”” hover_type=”none” bordersize=”” bordercolor=”” borderradius=”” align_medium=”none” align_small=”none” align=”none” margin_top=”” margin_right=”” margin_bottom=”” margin_left=”” lightbox=”no” gallery_id=”” lightbox_image=”” lightbox_image_id=”” alt=”” link=”” linktarget=”_self” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” animation_type=”” animation_direction=”left” animation_speed=”0.3″ animation_offset=”” filter_hue=”0″ filter_saturation=”100″ filter_brightness=”100″ filter_contrast=”100″ filter_invert=”0″ filter_sepia=”0″ filter_opacity=”100″ filter_blur=”0″ filter_hue_hover=”0″ filter_saturation_hover=”100″ filter_brightness_hover=”100″ filter_contrast_hover=”100″ filter_invert_hover=”0″ filter_sepia_hover=”0″ filter_opacity_hover=”100″ filter_blur_hover=”0″]http://kanaja.karnataka.gov.in/ejaga/wp-content/uploads/2017/05/china-map-2-1.png[/fusion_imageframe][/fusion_builder_column_inner][/fusion_builder_row_inner][fusion_text]

ಕ್ರಿ.ಪೂ.1700ರ ಹೊತ್ತಿಗೆ ಹುವಾಂಗ್ ಕಣಿವೆಯಲ್ಲಿ ಶಾಂಗ್ ಅರಸು ಮನೆತನ ಆಡಳಿತ ನಡೆಸುತ್ತಿತ್ತು. ಆ ಕಾಲಕ್ಕೆ ಚಕ್ರ, ಕ್ಯಾಲೆಂಡರ್ ಗಳ ತಯಾರಿಕೆಗೆ ಚೈನಾ ಹೆಸರುವಾಸಿಯಾಗಿತ್ತು. ಕ್ರಿ.ಪೂ 1122ರ ಹೊತ್ತಿಗೆ ಶಾಂಗ್ ಆಡಳಿತ ಕೊನೆಗೊಂಡು, ನಂತರ ಬಂದ ಝಾವ್ ಮನೆತನ ಹಲವು ಶತಮಾನಗಳ ಆಡಳಿತ ನಡೆಸಿತು. ಇದೇ ಅವಧಿಯಲ್ಲಿ ಖ್ಯಾತ ತತ್ವಜ್ಞಾನಿ ಕನ್ಫ್ಯೂಸಿಯಸ್  (ಕ್ರಿ.ಪೂ.551-449) ಬದುಕಿದ್ದು. ಕಬ್ಬಿಣ ಎರಕ ಹುಯ್ಯುವ ತಂತ್ರ, ಲೋಹದ ನಾಣ್ಯಗಳು, ರೇಷ್ಮೆ ಕಂಡುಹಿಡಿದಿದ್ದು ಇದೇ ಕಾಲದಲ್ಲಿ. ನಂತರ ಬಂದ ಕ್ವಿನ್ ಮನೆತನಕ್ಕೆ ಚೀನವನ್ನು ಒಗ್ಗೂಡಿಸಿದ ಕೀರ್ತಿ ಇದೆ. ಆ ಅವಧಿಯಲ್ಲಿ, ಇಂದು ವಿಶ್ವದ ಏಳು ಅದ್ಭುತಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿರುವ ಚೀನಾದ ಮಹಾಗೋಡೆಯನ್ನು ಉತ್ತರದ ಗಡಿಯುದ್ದಕ್ಕೂ ನಿರ್ಮಿಸಲಾಯಿತು.ಆನಂತರ ನಾಲ್ಕು ಶತಮಾನ ಆಳಿದ ಹ್ಯಾನ್ ವಂಶದವರ ಕಾಲದಲ್ಲಿ ಪೇಪರ್ ಸಂಶೋಧನೆ ಆಯಿತು. ಭೂಕಂಪ ಮಾಪಕವನ್ನೂ ಕಂಡುಹಿಡಿಯಲಾಯಿತು. ಪೇಪರ್ ಹಣವನ್ನೂ ಆಗಲೇ ಬಳಕೆಗೆ ತರಲಾಗಿತ್ತು.
ಸಂಗ್ ಮನೆತನ ಆಳಿದ ಕ್ರಿ.ಶ.960-1269ರವರೆಗಿನ ಕಾಲವನ್ನು ಚೀನಾದ ಸ್ವರ್ಣ ಯುಗ ಎಂದು ಬಣ್ಣಿಸಲಾಗುತ್ತದೆ. ಆ ಕಾಲದಲ್ಲಿ ಪೋರ್ಸಲಿನ್, ರೇಷ್ಮೆಯನ್ನು ಹಡಗುಗಳ ಮೂಲಕ ಈಸ್ಟ್ ಇಂಡಿಯಾ, ಆಫ್ರಿಕಾ, ಭಾರತಕ್ಕೆ ರಫ್ತು ಮಾಡಲಾಗುತ್ತಿತ್ತು.ನಂತರ ಚೀನಾ ಪರಕೀಯರ ಆಡಳಿತಕ್ಕೆ ಸಿಕ್ಕಿಹಾಕಿಕೊಂಡಿತು. ವಿಶಾಲ ಸಾಮ್ರಾಜ್ಯ ನಿರ್ಮಿಸಿಕೊಂಡಿದ್ದ ಮಂಗೋಲಿಯದ ಝೆಂಗಿಸ್ ಖಾನ್ ಚೈನಾವನ್ನೂ ಬಿಟ್ಟಿರಲಿಲ್ಲ. ಕ್ರಿ.ಶ.1223ರಲ್ಲಿ ಆತ ದಾಳಿ ನಡೆಸಿ, ಚೈನಾ ಉತ್ತರ ಭಾಗದ ಬಹುತೇಕ ಪ್ರದೇಶವನ್ನು ವಶಪಡಿಸಿಕೊಂಡ. 1260ರಲ್ಲಿ ಕಬುಲಾಯ್ ಖಾನ್ ಈ ಪ್ರದೇಶವನ್ನು ಗೆದ್ದು, ಬೀಜಿಂಗನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ. ಅದೇ ಸಮಯದಲ್ಲಿ ಅಲ್ಲಿಗೆ ಆರ್ಮೇನಿಯನ್ನರು, ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ಪ್ರವೇಶವಾಯಿತು.ವಿವಿಧ ಮನೆತನಗಳು ಚೀನಾ ಗೋಡೆಯನ್ನು ಬಲಪಡಿಸುತ್ತಾ ಬಂದವು. ಅದರಲ್ಲೂ ಪ್ರಮುಖವಾಗಿ ಕ್ರಿ.ಶ.1368ರಲ್ಲಿ ಮಂಗೋಲಿಯನ್ನರನ್ನು ಕೆಳಗಿಳಿಸಿ ಮಿಂಗ್ ಮನೆತನದವರು ಆಡಳಿತ ಪ್ರಾರಂಭಿಸಿದಾಗ ಉತ್ತರದ ಗಡಿಯ ಗೋಡೆಯನ್ನು ಇನ್ನಷ್ಟು ಉದ್ದಗೊಳಿಸಿದರು (ಈಗಿನ ಉದ್ದ 6400 ಕಿ.ಮೀ),
ಪ್ರಾಚೀನ ಚೀನ ಮತ್ತು ಭಾರತದ ಜೊತೆ ಉತ್ತಮ ಸಂಬಂಧ ಇತ್ತು. ಮೌರ್ಯ ಮತ್ತು ಗುಪ್ತರ ಕಾಲದಲ್ಲಿ ಚೈನಾದ ಪ್ರವಾಸಿಗರಾದ ಫಾಹಿಯಾನ್ ಮತ್ತು ಹ್ಯುಎನ್ ತ್ಸಾಂಗ್ ಭಾರತಕ್ಕೆ ಪ್ರವಾಸಿಗರಾಗಿ ಬಂದಿದ್ದು, ಇಲ್ಲಿನ ಆಗಿನ ಪರಿಸ್ಥಿತಿಯ ಬಗ್ಗೆ ತಮ್ಮ ಪ್ರವಾಸ ಕಥನಗಳಲ್ಲಿ ವರ್ಣಿಸಿದ್ದಾರೆ. ಚಾಣಕ್ಯ ತನ್ನ ಅರ್ಥಶಾಸ್ತ್ರ ಗ್ರಂಥದಲ್ಲಿ, ಚೈನಾದಿಂದ ವಿವಿಧ ದೇಶಗಳಿಗಿದ್ದ, ಮಾರ್ಗಗಳ ಬಗ್ಗೆ ಉಲ್ಲೇಖಿಸಿದ್ದಾನೆ. ಚೈನಾದಲ್ಲಿ ಮೊದಲ ಶಾವೊಲಿನ್ ದೇವಸ್ಥಾನ ನಿರ್ಮಿಸಿದ ಬೋಧಿಧರ್ಮ ಭಾರತದಿಂದ ಅಲ್ಲಿಗೆ ಪ್ರವಾಸ ಮಾಡಿದ್ದು, ಆತನೇ ಅಲ್ಲಿ ಜೆನ್ ಬೌದ್ಧಮತ ಸ್ಥಾಪಕ ಎಂದು ಹೇಳಲಾಗುತ್ತದೆ. ಆರ್ಯಭಟೀಯ ಸಿದ್ಧಾಂತವನ್ನು ಚೀನಿ ಭಾಷೆಗೆ ತುಂಬ ಹಿಂದೆಯೇ ಭಾಷಾಂತರಿಸಲಾಗಿತ್ತು.ದಕ್ಷಿಣ ಭಾರತದ ತಮಿಳು ರಾಜ್ಯಗಳ ಜೊತೆಗೂ ಚೈನಾದವರು ವ್ಯಾಪಾರ ಸಂಬಂಧ ಇಟ್ಟುಕೊಂಡಿದ್ದರು. ತಂಜಾವೂರು, ತಿರುವೂರು ಮತ್ತು ಪುದುಕ್ಕೊಟ್ಟಲ್ ಜಿಲ್ಲೆಗಳಲ್ಲಿ ಪ್ರಾಚೀನ ಚೈನಾದ ನಾಣ್ಯಗಳು ದೊರೆತಿರುವುದು ಇದಕ್ಕೆ ಸಾಕ್ಷಿ.ಹದಿನೆಂಟನೇ ಶತಮಾನದಲ್ಲಿ ಸಿಖ್ ದೊರೆ ಝೋರಾವರ್ ಸಿಂಗ್ ಟಿಬೆಟ್ ನ್ನು ಆಕ್ರಮಿಸಿಕೊಂಡಿದ್ದ. 1842ರಲ್ಲಿ, ಸಿಖ್ ಮತ್ತು ಚೀನಿಯರ ನಡುವೆ ಪರಸ್ಪರರ ಪ್ರದೇಶದ ಮೇಲೆ ದಾಳಿ ನಡೆಸದಂತೆ ಚುಷೂಲ್ ಒಪ್ಪಂದ ನಡೆಯಿತು.

[/fusion_text][fusion_imageframe image_id=”171|full” max_width=”” sticky_max_width=”” style_type=”none” blur=”” stylecolor=”” hover_type=”none” bordersize=”” bordercolor=”” borderradius=”” align_medium=”none” align_small=”none” align=”none” margin_top=”” margin_right=”” margin_bottom=”” margin_left=”” lightbox=”no” gallery_id=”” lightbox_image=”” lightbox_image_id=”” alt=”” link=”” linktarget=”_self” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” animation_type=”” animation_direction=”left” animation_speed=”0.3″ animation_offset=”” filter_hue=”0″ filter_saturation=”100″ filter_brightness=”100″ filter_contrast=”100″ filter_invert=”0″ filter_sepia=”0″ filter_opacity=”100″ filter_blur=”0″ filter_hue_hover=”0″ filter_saturation_hover=”100″ filter_brightness_hover=”100″ filter_contrast_hover=”100″ filter_invert_hover=”0″ filter_sepia_hover=”0″ filter_opacity_hover=”100″ filter_blur_hover=”0″]http://kanaja.karnataka.gov.in/ejaga/wp-content/uploads/2017/05/china-silk-road-1.jpg[/fusion_imageframe][fusion_text]

ಚೈನ ಸಿಲ್ಕ್‌ ರೋಡ್‌

[/fusion_text][fusion_text]

1912ರಲ್ಲಿ ರಿಪಬ್ಲಿಕ್ ಆಫ್ ಚೈನಾ ಘೋಷಣೆ ಮಾಡಲಾಯಿತು.ಇಂಥ ಅದ್ಭುತ ಇತಿಹಾಸ ಹೊಂದಿರುವ ಚೈನಾದ ವರ್ತಮಾನವೂ ಅಷ್ಟೇ ಸೊಗಸಾಗಿದೆ. ಕಳೆದ ಎರಡು ದಶಕಗಳಲ್ಲಿ ಚೈನಾ ವಿಶ್ವದ ಇತರ ಯಾವುದೇ ದೇಶಕ್ಕೆ ತಾನು ಕಡಿಮೆ ಇಲ್ಲ ಎನ್ನುವಂತೆ ಬೆಳೆದುನಿಂತಿದೆ. ಈ ದೇಶದ ನಿವ್ವಳ ದೇಶೀಯ ಉತ್ಪಾದನೆ  2010ರಲ್ಲಿ 60,05,388 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, 2014 ರಲ್ಲಿ 104,30,590 ದಶಲಕ್ಷ ಅಮೇರಿಕನ್ ಡಾಲರ್ ಗೇರಿದೆ. ಆದರೆ ಜಾಗತಿಕ ಆರ್ಥಿಕ ಹಿಂಜರಿತದ ಹಿನ್ನೆಲೆಯಲ್ಲಿ ಜಿಡಿಪಿ ವಾರ್ಷಿಕ ಬೆಳವಣಿಗೆ ದರ ಈಗ ಸ್ವಲ್ಪ ಮಟ್ಟಿನ ಕುಸಿತ ಕಂಡಿದೆ ಎನ್ನುವುದೂ ಕೂಡ ನಿಜ.
ನಿವ್ವಳ ಮೌಲ್ಯವರ್ಧನೆ(ಜಿವಿಎ) 2014ರಲ್ಲಿ ಕೃಷಿಯ ಪಾಲು ಶೇ.9.5, ಕೈಗಾರಿಕೆ ಶೇ.42.9 ಹಾಗೂ ಸೇವೆಗಳು ಮತ್ತು ಇತರೆ ಪಾಲು ಶೇ.47ರಷ್ಟಿತ್ತು. ನಿರುದ್ಯೋಗದ ಪ್ರಮಾಣ 2014ರಲ್ಲಿ ಕೇವಲ ಶೇ.4.6ರಷ್ಟು ಮಾತ್ರ ಎನ್ನುವುದು ಗಮನಾರ್ಹ ಸಂಗತಿ.ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನ್ನುವ ಹಣೆಪಟ್ಟಿ ಹೊಂದಿದ್ದು,  ಜನಸಂಖ್ಯಾ ನಿಯಂತ್ರಣಕ್ಕೆ ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಇದರ ಪರಿಣಾಮ 2010-2015ರ ಅವಧಿಯಲ್ಲಿ ವಾರ್ಷಿಕ ಜನಸಂಖ್ಯೆ ಹೆಚ್ಚಳ ವಾರ್ಷಿಕ ಶೇ.0.5ರಷ್ಟಕ್ಕೆ ನಿಯಂತ್ರಿಸಲು ಸಾಧ್ಯವಾಗಿದೆ.ನಗರದಲ್ಲಿ ವಾಸಿಸುವವರ ಜನಸಂಖ್ಯೆ ಹೆಚ್ಚಾಗುತ್ತಿದ್ದು, 2015ರಲ್ಲಿ ನಗರ ಜನಸಂಖ್ಯೆ ಶೇ.55.6ಕ್ಕೆ ತಲುಪಿದೆ.
2015ರಲ್ಲಿ ಒಟ್ಟು ರಫ್ತಿನ ಮೌಲ್ಯ 22,81,856 ದಶಲಕ್ಷ ಅಮೇರಿಕನ್ ಡಾಲರ್ ಹಾಗೂ ಆಮದು ಪ್ರಮಾಣ 16,81,670.8 ದಶಲಕ್ಷ ಅಮೇರಿಕನ್ ಡಾಲರ್. ಆಮದಿಗಿಂತ ರಫ್ತಿನ ಪ್ರಮಾಣ ಹೆಚ್ಚಾಗಿದ್ದು, ದೇಶ ಆರ್ಥಿಕವಾಗಿ ಸಬಲವಾಗುವ ದಿಕ್ಕಿನಲ್ಲಿ ಬದಿಟ್ಟ ನಡೆ ಇಟ್ಟಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ಇದು ವಿಶ್ವದ ಬಲಿಷ್ಠ ದೇಶಗಳನ್ನು ತಬ್ಬಿಬ್ಬಾಗಿಸಿದೆ.ದೇಶ ಆರ್ಥಿಕವಾಗಿ ಬಲಿಷ್ಠವಾಗಲು ಇನ್ನೂ ಒಂದು ಪ್ರಮುಖ ಕಾರಣವೆಂದರೆ, ಅವಲಂಬಿತರ ಸಂಖ್ಯೆ ಕಡಿಮೆ ಇರುವುದು. ಒಟ್ಟು ಅವಲಂಬಿತರ ಅನುಪಾತ  ಅಂದರೆ 15ರಿಂದ 64 ವರ್ಷ ವಯಸ್ಸಿನ ಪ್ರತಿ 100 ಜನಕ್ಕೆ, 14ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷಕ್ಕಿಂತ ಹೆಚ್ಚಿನವರ ಸಂಖ್ಯೆ ಕೇವಲ 37 ಮಾತ್ರ. ಚೈನಾದ ನಿಜವಾದ ಶಕ್ತಿ ಇಲ್ಲಿದೆ. ಅಂದರೆ ದುಡಿಯುವ ಜನ ಹೆಚ್ಚು. ಮಾನವ ಸಂಪನ್ಮೂಲವನ್ನು ಚೆನ್ನಾಗಿ ಬಳಸಿಕೊಂಡಿರುವುದೇ ಚೈನಾದ ಅಭಿವೃದ್ಧಿಯ ಗುಟ್ಟು.
ಮಹಿಳೆಯರ ಸ್ಥಿತಿಗತಿಯೂ ಉತ್ತಮವಾಗಿದ್ದು, ರಾಷ್ಟ್ರೀಯ ಸಂಸತ್ತಿನಲ್ಲಿ ಮಹಿಳೆಯರು ಶೇ.23.6ರಷ್ಟು ಸ್ಥಾನಗಳನ್ನು ಅಲಂಕರಿಸಿದ್ದಾರೆ.2014ರ ಅಂದಾಜಿನಂತೆ ಶೇ.49.3ರಷ್ಟು ಜನ ಇಂಟರ್ ನೆಟ್ ಬಳಕೆ ಮಾಡುತ್ತಿದ್ದು, ಅಲ್ಲಿನ್ನೂ ಬೆಳೆಯಲು ಸಾಕಷ್ಟು ಅವಕಾಶಗಳಿವೆ.ಜಾಗತಿಕ ಆರ್ಥಿಕ ಹಿನ್ನಡೆಯನ್ನು ಮೀರಿ, ಬೆಳೆಯಬೇಕಾಗಿರುವುದು ಚೈನಾದ ಮುಂದಿರುವ ಸವಾಲು. ಅವಲಂಬಿತರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದ್ದು, ಚೈನಾ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿದೆ. ಇದರ ಮಧ್ಯೆ ಚೈನಾಗೆ ಅದರದೇ ಆದ ಕೆಲವು ಸಮಸ್ಯೆಗಳಿವೆ. ತೈವಾನ್, ಹಾಂಗ್ ಕಾಂಗ್, ಟಿಬೆಟ್ ಸಮಸ್ಯೆಗಳಿವೆ. ತೈವಾನ್ ನಲ್ಲಿ ಪ್ರಜಾಪ್ರಭುತ್ವ ಇದ್ದು, ಅದು ತನ್ನದೇ ಪ್ರಾಂತ್ಯ ಎಂದು ಚೈನಾ ವಾದಿಸುತ್ತಿದೆ. ಬ್ರಿಟಿಷ್ ವಸಾಹತು ಆಗಿದ್ದ ಹಾಂಗ್ ಕಾಂಗ್ ನ ಸಾರ್ವಭೌಮತ್ವವನ್ನು ಚೈನಾಗೆ 1997ರಲ್ಲಿ ನೀಡಲಾಯಿತು. ಇದರಿಂದಲೂ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿವೆ. ಜೊತೆಗೆ ಸ್ವತಂತ್ರ ಟಿಬೆಟ್  ಗಾಗಿ ನಿರಂತರ ಹೋರಾಟ ನಡೆದೇ ಇದೆ. ಇವೆಲ್ಲ ಸಮಸ್ಯೆಗಳನ್ನು ಎದುರಿಸಿ ಚೈನಾ ಮುಂದೆ ಸಾಗಬೇಕಾಗಿದೆ. ಇದೆಲ್ಲದರ ನಡುವೆ ದೇಶ ಸ್ಪಷ್ಟ ನಡೆಯೊಂದಿಗೆ ದಿಟ್ಟ ಹೆಜ್ಜೆ ಇಟ್ಟಿದೆ.

[/fusion_text][/fusion_builder_column][/fusion_builder_row][/fusion_builder_container]

Categories
asia

ಭೂತಾನ್

[fusion_builder_container hundred_percent=”no” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” overlay_color=”” video_preview_image=”” border_color=”” border_style=”solid” padding_top=”” padding_bottom=”” padding_left=”” padding_right=”” type=”legacy”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”true” min_height=”” hover_type=”none” link=”” border_sizes_top=”” border_sizes_bottom=”” border_sizes_left=”” border_sizes_right=”” first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಹಿಮಾಲಯ ಪರ್ವತ ಶ್ರೇಣಿಗಳ ಮಧ್ಯೆ ಆಧುನಿಕ ನಾಗರಿಕತೆಯಿಂದ ಒಂದು ಹೆಜ್ಜೆ ದೂರವೇ ಉಳಿದಿರುವ ದಕ್ಷಿಣ ಏಷಿಯಾದ ಪುಟ್ಟ ದೇಶ ಭೂತಾನ್. ರಾಜಪ್ರಭುತ್ವ ಹೊಂದಿರುವ  ಇಲ್ಲಿ ಟಿಬೆಟನ್ ಬೌದ್ಧ ಧರ್ಮ (lamaistic Buddhism) ಅನುಸರಿಸುವ ಜನ ಹೆಚ್ಚು. ಅಂದರೆ ಇಲ್ಲಿನ ಬೌದ್ಧದರ್ಮ, ಸ್ಥಳೀಯ ಬುಡಕಟ್ಟು ಸಂಪ್ರದಾಯಗಳನ್ನೂ ಅಳವಡಿಸಿಕೊಂಡಿದೆ. ಹಿಂದುಗಳೂ ಸಹ ಶೇ,25ರಷ್ಟು ಸಂಖ್ಯೆಯಲ್ಲಿದ್ದಾರೆ.ಜಗತ್ತಿನಲ್ಲಿಯೇ ಅತಿ ಹೆಚ್ಚು ಜನ ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವ ದೇಶ ಎನ್ನುವುದು ಭೂತಾನ್ ವಿಶೇಷತೆ. ಕೇವಲ ಶೇ.6ರಷ್ಟು ಮಾತ್ರ ನಗರ ಪ್ರದೇಶದಲ್ಲಿದ್ದು, ಉಳಿದವರೆಲ್ಲರೂ ಗ್ರಾಮೀಣ ಪ್ರದೇಶದಲ್ಲಿದ್ದಾರೆ. ಅದರಲ್ಲೂ ಕೃಷಿಯನ್ನೇ ಅವಲಂಬಿಸಿರುವ  ಈ ದೇಶಕ್ಕೆ ಪ್ರಕೃತಿಯೂ ಸಮೃದ್ಧವಾಗಿ ಒಲಿದಿದ್ದಾಳೆ.ಇಲ್ಲಿನ ಅಧಿಕೃತ ಭಾಷೆ ಡಿಝೊಂಕ, ಕರೆನ್ಸಿ ಎನ್ಗುಲ್ಟ್ರಮ್ (ಬಿಟಿಎನ್).
ಇಲ್ಲಿ ಭೋಟೆ(ಟಿಬೆಟನ್) ಜನಾಂಗದವರು ಶೇ.50ರಷ್ಟಿದ್ದರೆ, ನೇಪಾಳಿಯರು ಶೇ.35ರಷ್ಟಿದ್ದಾರೆ. ಇತರೆ ಜನಾಂಗದವರೂ ಶೇ.15ರಷ್ಟು ಪ್ರಮಾಣದಲ್ಲಿದ್ದಾರೆ.ಏಳನೇ ಶತಮಾನದಲ್ಲಿ ಟಿಬೆಟ್ ನಲ್ಲಿ ಉಂಟಾದ ಅಶಾಂತಿಯಿಂದಾಗಿ ಅವರು ಭೂತಾನಿಗೆ ಬಂದರು ಎನ್ನಲಾಗುತ್ತದೆ.ಚರಿತ್ರೆಯುದ್ದಕ್ಕೂ ದಾಸ್ಯಕ್ಕೆ ಸಿಗದೆ, ಸ್ವತಂತ್ರ ದೇಶವಾಗಿ ಉಳಿದ ಕೆಲವೇ ದೇಶಗಳ ಪೈಕಿ ಭೂತಾನ್ ಕೂಡ ಒಂದು.ಅಲ್ಲಿ ಅಧಿಕಾರಕ್ಕಾಗಿ ಜಮೀನ್ದಾರರಲ್ಲಿಯೇ ಪರಸ್ಪರ ಕಿತ್ತಾಟಗಳು ನಡೆಯುತ್ತಿದ್ದವು. ಕ್ರಿ.ಶ.1885ರಲ್ಲಿ ಉಗ್ಯೆನ್ ವಾಂಗ್ ಚುಕ್ ಅಧಿಕಾರದ ಚುಕ್ಕಾಣಿಯನ್ನು ಕೈಗೆ ತೆಗೆದುಕೊಂಡು, ಬ್ರಿಟಿಷರ ಜೊತೆಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡರು. ಕ್ರಿ.ಶ.1907ರಲ್ಲಿ ಅಧಿಕೃತವಾಗಿ ಪಟ್ಟಾಭಿಷೇಕವಾಯಿತು. ಕ್ರಿ.ಶ.1910ರಲ್ಲಿ ಭೂತಾನ್ ರಾಜ ಮತ್ತು ಬ್ರಿಟಿಷರ ನಡುವೆ ನಡೆದ ಒಪ್ಪಂದದಲ್ಲಿ (ಪುನಖ ಒಪ್ಪಂದ), ವಿದೇಶಾಂಗ ವ್ಯವಹಾರಗಳಲ್ಲಿ ಬ್ರಿಟಿಷರ ಸಲಹೆಗಳನ್ನು ಒಪ್ಪುವುದಾದಲ್ಲಿ,  ಭೂತಾನಿನ ಆಂತರಿಕ ವ್ಯವಹಾರಗಳಲ್ಲಿ ತಲೆ ಹಾಕದಿರಲು ಬ್ರಿಟಿಷರು ಸಮ್ಮತಿಸಿದರು.  ಹೀಗಾಗಿ ಭೂತಾನ್ ಸ್ವತಂತ್ರವಾಗಿಯೇ ಉಳಿಯಿತು. ಈಗಿನವರೆಗೂ ರಾಜಸತ್ತೆ ಮುಂದುವರಿಯುತ್ತಿದೆ.
ಉಗ್ಯೇನ್ ಮಗ ಜಿಗ್ಮೆ, ಜಿಗ್ಮೆ ಮಗ ಜಿಗ್ಮೆ ಡೊರ್ಲಿ, ಜಿಗ್ಮೆ ಡೊರ್ಲಿ ಮಗ ಜಿಗ್ಮೆ ಸಿಂಗ್ಯೆ ಆಡಳಿತದ ನಂತರ ಪ್ರಸ್ತುತ, ಜಿಗ್ಮೆ ಸಿಂಗ್ಯೆ ಮಗ ಜಿಗ್ಮೆ ಖೇಸರ್ ನಮ್ಗೇಲ್ ವಾಂಗ್ ಚುಕ್ ಭೂತಾನಿನ ರಾಜರಾಗಿದ್ದಾರೆ. ಜಿಗ್ಮೆ ಸಿಂಗ್ಯೆ ಮೂವತ್ತು ವರ್ಷಗಳ ಕಾಲ ಅಧಿಕಾರ ನಡೆಸಿದ್ದು, ಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ರಾಜಪ್ರಭುತ್ವದ ಜೊತೆಗೆ ಆ ಕಾಲದಲ್ಲಿಯೇ ಪ್ರಜಾಪ್ರಭುತ್ವವನ್ನೂ ಅಳವಡಿಸಿಕೊಂಡು, ಅಧಿಕಾರ ವಿಕೇಂದ್ರಿಕರಣದತ್ತ ದೇಶ ಕ್ರಮೇಣ ಸಾಗಿದೆ.ಈ ದೇಶವನ್ನು ಭೌಗೋಳಿಕವಾಗಿ ಮೂರು ಭಾಗಗಳನ್ನಾಗಿ ಮಾಡಬಹುದು. ಒಂದು ಟಿಬೆಟ್ ಗಡಿಯಲ್ಲಿನ ಪರ್ವತ ಶ್ರೇಣಿಗಳ ಪ್ರದೇಶ. ಎರಡು, ಮಧ್ಯದ ಎತ್ತರ ಪ್ರದೇಶ ಮತ್ತು ಮೂರನೆಯದಾಗಿ ಅದರ ಕೆಳಗಿನ ಅರೆಉಷ್ಣವಲಯದ ಕಾಡು ಪ್ರದೇಶ.
ಮಧ್ಯದ ಎತ್ತರ ಪ್ರದೇಶವನ್ನು ಡ್ಯೂರಸ್ ಪ್ಲೈನ್ ಎಂತಲೂ ಕರೆಯಲಾಗುತ್ತದೆ. ಇದು ಅತ್ಯಂತ ಫಲವತ್ತಾಗಿದ್ದು, ಜೋಳ, ಗೋಧಿ, ಬಾರ್ಲಿ, ಆಲೂಗಡ್ಡೆಯನ್ನು ಬೆಳೆಯಲಾಗುತ್ತದೆ. ಈ ದೇಶದ ಮುಖ್ಯ ರಫ್ತು ವಹಿವಾಟು ಇರುವುದು ಭಾರತದ ಜೊತೆಗೆ. ಭೂತಾನ್ ನಿಂದ ಭಾರತಕ್ಕೆ ಟಿಂಬರ್ ರಫ್ತಾಗುತ್ತದೆ. ಇದನ್ನು ಹೊರತುಪಡಿಸಿದಂತೆ ಅಲ್ಲಿನ ಆರ್ಥಿಕತೆಯ ಪ್ರಮುಖ ಆಧಾರ ಪ್ರವಾಸೋದ್ಯಮ. ಅನೇಕ ಜಲಪಾತಗಳಿರುವುದರಿಂದ ಜಲ ವಿದ್ಯುತ್ ಉತ್ಪಾದಿಸುವ ಅಪಾರ ಸಾಮರ್ಥ್ಯ ಆ ದೇಶಕ್ಕಿದೆ.ರಿಪಬ್ಲಿಕ್ ಆಫ್ ಕೊರಿಯ ಮತ್ತು ಚೈನಾ ಜೊತೆ ವ್ಯಾಪಾರ ವ್ಯವಹಾರಗಳನ್ನು ಇಟ್ಟುಕೊಂಡಿರುವ ಭೂತಾನ್, ಬಾಂಗ್ಲಾದೇಶ ಮತ್ತು ಇಟಲಿ ದೇಶಗಳ ಜೊತೆಗೂ ರಫ್ತು ವಹಿವಾಟು ನಡೆಸುತ್ತದೆ.
ಭೂತಾನಿನ ಜನಸಂಖ್ಯೆ 2016ರ ಅಂದಾಜಿನಂತೆ 7.84 ಲಕ್ಷ. 38,394 ಚ,ಕಿ, ವಿಸ್ತೀರ್ಣವನ್ನು ಹೊಂದಿದ್ದು, ಜನಸಾಂದ್ರತೆ ಒಂದು ಚ.ಕಿ.ನಲ್ಲಿ ಕೇವಲ 20 ಜನ. ಅಂದರೆ ಎಷ್ಟೊಂದು ಅಲ್ಲಿ ಜನಸಂಖ್ಯೆಯ ಭಾರವಿಲ್ಲ ಎನ್ನುವುದನ್ನು ಗಮನಿಸಬಹುದು.2014ರಲ್ಲಿ ಈ ದೇಶದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 1965 ದಶಲಕ್ಷ ಅಮೇರಿಕನ್ ಡಾಲರ್. ನಿವ್ವಳ ಮೌಲ್ಯವರ್ಧನೆಯಲ್ಲಿ ಕೃಷಿಯ ಪಾಲು ಶೇ.17.1ರಷ್ಟಿದ್ದರೆ, ಕೈಗಾರಿಕೆ ಪಾಲು ಶೇ.44 ಮತ್ತು ಸೇವಾವಲಯದ ಪಾಲು ಶೇ.39. ಕೃಷಿಯಲ್ಲಿ ಶೇ.56ರಷ್ಟು ಕಾರ್ಮಿಕರು ತೊಡಗಿಕೊಂಡಿದ್ದು, ಅದರಿಂದ ಜಿಡಿಪಿಗೆ ಕೊಡುಗೆ ತೀರಾ ಕಡಿಮೆ ಎನ್ನುವುದನ್ನು ಗಮನಿಸಬಹುದು. ಆದರೆ ನಿರುದ್ಯೋಗದ ಪ್ರಮಾಣ ಇಲ್ಲಿ ಕೇವಲ ಶೇ.2.6ರಷ್ಟು ಮಾತ್ರ.


ಮಹಿಳೆಯರು ಪುರುಷರ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ದೇಶ ಭೂತಾನ್. ಶೇ.65.2ರಷ್ಟು ಮಹಿಳೆಯರು ದುಡಿಯುವ ಕೈಗಳಾಗಿದ್ದರೆ, ಶೇ.77.7ರಷ್ಟು ಪುರುಷರು ಕಾರ್ಮಿಕ ಬಲವಾಗಿದ್ದಾರೆ.ಅವಲಂಬಿತರ ಅನುಪಾತ ಅಂದರೆ 15 ರಿಂದ 64 ವರ್ಷ ವಯಸ್ಸಿನ ಪ್ರತಿ ನೂರು ಜನಕ್ಕೆ, 14ಕ್ಕಿಂತ ಕಡಿಮೆ ಮತ್ತು 65ಕ್ಕಿಂತ ಹೆಚ್ಚು ವಯಸ್ಸಿನ 47 ಜನ ಇದ್ದಾರೆ. ಒಟ್ಟು ಜಿಡಿಪಿಯ ಶೇ.5.9ರಷ್ಟು ಶಿಕ್ಷಣಕ್ಕೆ, ಶೇ.3.6ರಷ್ಟು ಆರೋಗ್ಯಕ್ಕೆ ವೆಚ್ಚ ಮಾಡಲಾಗುತ್ತಿದೆ. ಶೇ.71.8ರಷ್ಟು ಭೂಪ್ರದೇಶದಲ್ಲಿ ಅರಣ್ಯವಿದೆ. ಶೇ.ನೂರರಷ್ಟು ಜನ ಶುದ್ಧ ಕುಡಿಯುವ ನೀರನ್ನು ಉಪಯೋಗಿಸುವ ಈ ದೇಶಕ್ಕೆ, ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು, ಕೈಗಾರಿಕೆಯನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ. ಪ್ರಾಕೃತಿಕ ಸಂಪನ್ಮೂಲಗಳನ್ನು ಇನ್ನಷ್ಟು ಹೆಚ್ಚು ಲಾಭದಾಯಕವಾಗಿ ಬಳಸಿಕೊಳ್ಳಬೇಕಾಗಿದೆ. ವೃಥಾ ಹರಿದುಹೋಗುತ್ತಿರುವ ನೀರಿನಿಂದ ಭಾರಿ ಪ್ರಮಾಣದ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಇದ್ದು, ಆ ದಿಕ್ಕಿನಲ್ಲಿ ಹೆಚ್ಚಿನ ಗಮನ ಕೊಡಬೇಕಾಗಿದೆ.

[/fusion_text][/fusion_builder_column][/fusion_builder_row][/fusion_builder_container]

Categories
asia

ಆಫ್ಘಾನಿಸ್ತಾನ

[fusion_builder_container hundred_percent=”no” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” overlay_color=”” video_preview_image=”” border_color=”” border_style=”solid” padding_top=”” padding_bottom=”” padding_left=”” padding_right=”” type=”legacy”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”true” min_height=”” hover_type=”none” link=”” border_sizes_top=”” border_sizes_bottom=”” border_sizes_left=”” border_sizes_right=”” type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಹೆಚ್ಚಾಗಿ ಪರ್ವತ ಪ್ರದೇಶಗಳು ಮತ್ತು ಒಣಭೂಮಿಯನ್ನೇ ಹೊಂದಿರುವ ಆಫ್ಘಾನಿಸ್ತಾನ, ಅನೇಕ ಕಾರಣಗಳಿಂದ ಸದಾ ಸುದ್ದಿಯಲ್ಲಿದೆ.ದಕ್ಷಿಣ ಏಷಿಯಾದ ಈ ದೇಶ, ಪಾಕಿಸ್ತಾನ, ಇರಾನ್, ತುರ್ಕ್ ಮೆನಿಸ್ತಾನ್, ಉಜ್ಬೇಕಿಸ್ತಾನ್, ತಜಕಿಸ್ತಾನ್ ಮತ್ತು ಚೈನಾ ದೇಶಗಳ ಗಡಿಗೆ ಹೊಂದಿಕೊಂಡಿದೆ. 6,52,864 ಚ.ಕೀ.ವೀಸ್ತೀರ್ಣ ಹೊಂದಿದ್ದು, 2016ರಲ್ಲಿ ಅಂದಾಜು ಜನಸಂಖ್ಯೆ 3 ಕೋಟಿ 33 ಲಕ್ಷ ಮಾತ್ರ. ರಾಜಧಾನಿ ಕಾಬೂಲ್ ನಗರದ ಅಂದಾಜು ಜನಸಂಖ್ಯೆ 2015ರಲ್ಲಿ 46ಸಾವಿರ.

 

ದೇಶದ ಉತ್ತರ ಮತ್ತು ನೈರುತ್ಯ ದಿಕ್ಕಿನಲ್ಲಿ ಬಯಲು ಪ್ರದೇಶವನ್ನು ಹೊಂದಿದ್ದು, ನೈಸರ್ಗಿಕ ಅನಿಲ, ಪೆಟ್ರೋಲಿಯಂ, ಕಲ್ಲಿದ್ದಲು, ತಾಮ್ರ, ಕ್ರೋಮೈಟ್, ಕಬ್ಬಿಣದ ಅದಿರಿನಂತಹ ಶ್ರೀಮಂತ ಸಂಪನ್ಮೂಲಗಳನ್ನು ತನ್ನೊಡಲೊಳಗೆ ಅಡಗಿಸಿಕೊಂಡಿದೆ. ಇವುಗಳನ್ನು ಸರಿಯಾಗಿ ಬಳಸಿಕೊಂಡಿದ್ದರೆ, ಆರ್ಥಿಕವಾಗಿ ಸುಭದ್ರಗೊಳ್ಳಬಹುದಿತ್ತು.ಪ್ರಾಚೀನ ಸಿಂಧೂ ನಾಗರಿಕತೆಯ ತಾಣಗಳಲ್ಲಿ ಆಫ್ಘಾನಿಸ್ತಾನವೂ ಒಂದೆನ್ನುವುದು ಈ ದೇಶದ ಹೆಗ್ಗಳಿಕೆ. ಕ್ರಿ.ಪೂ.3300ರಷ್ಟು ಹಿಂದೆಯೇ, ಉತ್ತರ ಆಫ್ಘಾನಿಸ್ತಾನದ ಓಕ್ಸಸ್ ನದಿ ದಡದ ಶಾರ್ಟುಘೈ ಬಳಿ ನಾಗರಿಕ ಜನವಸತಿ ಇತ್ತು. ಬರಪರಿಸ್ಥಿತಿಯಿಂದಾಗಿ ಕ್ರಮೇಣ ಪೂರ್ವದ ಕಡೆಗೆ, ಅಂದರೆ ಇಂದಿನ ಪಾಕಿಸ್ತಾನ ಮತ್ತು ಭಾರತದ ಕಡೆಗೆ ಜನ ವಲಸೆ ಹೋದರೆನ್ನಲಾಗಿದೆ. ಅಲ್ಲಿ ಪ್ರದೇಶದ ಕೆಲವು ಕಡೆ ನಡೆದಿರುವ ಉತ್ಖನನಗಳು ಇದನ್ನು ಸಾಬೀತುಪಡಿಸಿವೆ.

ಇಂಥ ದೇಶ ಪದೇ ಪದೇ ಪರಕೀಯರ ಆಡಳಿತಕ್ಕೆ ಸಿಕ್ಕಿದೆ. ಕ್ರಿ.ಪೂ.327ರಲ್ಲಿ ಗ್ರೀಕ್ ಸಾಮ್ರಾಟ ಅಲೆಕ್ಸಾಂಡರ್ ಈ ಪ್ರದೇಶವನ್ನು ಗೆದ್ದುಕೊಂಡ. ನಂತರ ಪರ್ಶಿಯನ್ನರೂ ಇಲ್ಲಿ ಆಡಳಿತ ನಡೆಸಿದ್ದಾರೆ. ಕ್ರಿ.ಪೂ.304ರಲ್ಲಿ ಚಂದ್ರಗುಪ್ತ ಮೌರ್ಯ ದಾಳಿ ನಡೆಸಿ, ಹಿಂದುಕುಶ್ ಪರ್ವತ ಶ್ರೇಣಿಯ ದಕ್ಷಿಣ ಭಾಗದ ಮೇಲೆ ಹಿಡಿತ ಸಾಧಿಸಿದ. ಆ ಕಾಲದಲ್ಲಿ ಗಾಂಧಾರ ಕಲೆ ಅಲ್ಲಿ ಹರಡಿತು. ಹಿಂದೆ ಇದನ್ನು ಗಾಂಧಾರ ದೇಶವೆಂದು ಕರೆಯಲಾಗುತ್ತಿತ್ತು. ಹೀಗೆ ಈ ದೇಶ ಪೌರಾಣಿಕವಾಗಿ ಮಹಾಭಾರತದ ಕತೆಯೊಂದಿಗೆ ತಳಕು ಹಾಕಿಕೊಂಡಿದೆ.

ಬುದ್ಧಾಸ್‌ ಆಫ್‌ ಬಮಿಯನ್‌

ಚೈನಾದೊಂದಿಗೆ ಜಗತ್ತಿನ ವಿವಿಧ ದೇಶಗಳು, ಮುಖ್ಯವಾಗಿ ಯೂರೋಪಿನ ರಾಷ್ಟ್ರಗಳು ವ್ಯಾಪಾರ ವಹಿವಾಟಿಗಾಗಿ ರೂಪಿಸಿಕೊಂಡಿದ್ದ ಸಿಲ್ಕ್ ರೋಡ್ ಎಂದು ಕರೆಯಲಾಗುವ ಮಾರ್ಗದ ಬಹಳಷ್ಟು ಭಾಗ ಈ ದೇಶದಲ್ಲಿಯೇ ಹಾದು ಹೋಗುತ್ತಿದುದರಿಂದ, ಈ ದೇಶ ಚಾರಿತ್ರಿಕವಾಗಿ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಸಿಲ್ಕ್ ರೋಡ್ ನಲ್ಲಿ ಓಡಾಡುತ್ತಿದ್ದ ಭಾರತದ ಯಾತ್ರಾರ್ಥಿಗಳು ದಾರಿಯಲ್ಲೆಲ್ಲ ಬೌದ್ಧ ಧರ್ಮವನ್ನು ಪ್ರಸಾರ ಮಾಡಿದರು. ಹಡ್ಡ, ಗಜನಿ, ಕೊಂಡೂಜ್, ಬಾಮಿಯಾನ್ ಮತ್ತು ಬಗ್ರಾಮ್ ಗಳಲ್ಲಿ ಇಂಥ ಧಾರ್ಮಿಕ ಕೇಂದ್ರಗಳಿದ್ದವೆಂದು, ಚೈನಾದಿಂದ ಭಾರತಕ್ಕೆ ಬಂದಿದ್ದ ಯಾತ್ರಾರ್ಥಿ ಹ್ಯುಯೆನ್ ತ್ಸಾಂಗ್, ಉಲ್ಲೇಖಿಸಿದ್ದಾನೆ.
ಕ್ರಿ.ಶ. ಏಳನೇ ಶತಮಾನದಲ್ಲಿ ಆಫ್ಘಾನಿಸ್ತಾನ ಸಂಪೂರ್ಣ ಇಸ್ಲಾಮೀಕರಣಗೊಂಡಿತು. ಹತ್ತನೇ ಶತಮಾನದಲ್ಲಿ ಆಫ್ಘಾನಿಸ್ತಾನದ ಮಹಮದ್ ಘಜ್ನಿ ಭಾರತದ ಮೇಲೆ ದಂಡಯಾತ್ರೆ ನಡೆಸಿದ. ಆನಂತರ ದೆಹಲಿ ಸುಲ್ತಾನರು ಆಫ್ಘಾನಿಸ್ತಾನವನ್ನು ಗೆದ್ದುಕೊಂಡರು. ಆನಂತರ ಆ ದೇಶದ ಮೇಲೆ ಮಂಗೋಲರ ದಾಳಿ ನಡೆಯಿತು. ಕ್ರಿ.ಶ.1229ರಲ್ಲಿ ಮಂಗೋಲರ ದೊರೆ ಝೆಂಗೀಸ್ ಖಾನ್ ಆಫ್ಘಾನಿಸ್ತಾನವನ್ನು ವಶಪಡಿಸಿಕೊಂಡ. ಕ್ರಿ.ಶ.1504ರಲ್ಲಿ ಬಾಬರ್ ಕಾಬೂಲನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ರಾಜ್ಯ ಸ್ಥಾಪಿಸಿಕೊಂಡ. ಆಮೇಲೆ ಆತ ಭಾರತದ ಕಡೆಗೆ ದಂಡಯಾತ್ರೆ ನಡೆಸಿ, ದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು, ಮೊಘಲ್ ಸಾಮ್ರಾಜ್ಯ ಸ್ಥಾಪಿಸಿದ. ಹೀಗೆ ಭಾರತ ಮತ್ತು ಆಫ್ಘಾನಿಸ್ತಾನದ ಚರಿತ್ರೆಗಳು ಬೆಸೆದುಕೊಂಡಿದೆ.ಕ್ರಿ.ಶ.1839-42ರವರೆಗೆ ಮೊದಲನೇ ಆಂಗ್ಲೋ ಆಫ್ಘನ್ ಯುದ್ಧ, ಕ್ರಿ.ಶ.1878-80ರವರೆಗೆ ಎರಡನೇ ಆಂಗ್ಲೋ-ಆಫ್ಘನ್ ಯುದ್ಧ ಹಾಗೂ ಕ್ರಿ.ಶ.1919ರಲ್ಲಿ ಮೂರನೇ ಯುದ್ಧ ನಡೆದವು.
ಕಳೆದ ಹತ್ತು ವರ್ಷಗಳ ಅಂಕಿಅಂಶಗಳನ್ನು ಗಮನಿಸಿದಾಗ ದೇಶದ ಪ್ರಸ್ತುತ ಪರಿಸ್ಥಿತಿ, ದೇಶ ಏರು ದಿಕ್ಕಿನಲ್ಲಿದೆಯೋ, ಜಾರುವ ಹಾದಿಯಲ್ಲಿದೆಯೋ ತಿಳಿದುಬಿಡುತ್ತದೆ.ಆಘ್ಫಾನಿಸ್ತಾನದ ನಿವ್ವಳ ದೇಶೀಯ ಉತ್ಪನ್ನ(ಜಿಡಿಪಿ) 2005ರಲ್ಲಿ 6622ದಶಲಕ್ಷ ಅಮೇರಿಕನ್ ಡಾಲರ್, 2010ರಲ್ಲಿ 16,078 ದಶಲಕ್ಷ ಅಮೇರಿಕನ್ ಡಾಲರ್ ಮತ್ತು 2015ರಲ್ಲಿ 21,122 ದಶಲಕ್ಷ ಅಮೇರಿಕನ್ ಡಾಲರ್ ಗೆ ಏರಿದೆ. ತಲಾ ನಿವ್ವಳ ದೇಶೀಯ ಉತ್ಪನ್ನ (percapita GDP) 2005ರಲ್ಲಿ 271.4, 2010ರಲ್ಲಿ 575 ಮತ್ತು 2014ರಲ್ಲಿ 667.8 ಅಮೇರಿಕನ್ ಡಾಲರ್ ನಷ್ಟು ಇತ್ತು. ಅಂದರೆ ಅಲ್ಲಿನ ನಾಗರಿಕರ ಸರಾಸರಿ ವಾರ್ಷಿಕ ಆದಾಯ ಆಕರ್ಷಕವಾಗಿಲ್ಲ. ನಿವ್ವಳ ಉತ್ಪನ್ನದಲ್ಲಿ (ಜಿವಿಎ) ಕೃಷಿಯ ಪಾಲು 2010ರಲ್ಲಿ ಶೇ.29.6 ಮತ್ತು 2014ರಲ್ಲಿ ಶೇ.25.7ರಷ್ಟು ಹಾಗೂ ಕೈಗಾರಿಕೆಯ ಪಾಲು 2010ರಲ್ಲಿ ಶೇ.21.9 ಮತ್ತು 2014ರಲ್ಲಿ ಶೇ.22.1 ಅಂದರೆ ಕಳೆದ ಹತ್ತು ವರ್ಷಗಳಲ್ಲಿ ಕೃಷಿ ಮತ್ತು ಕೈಗಾರಿಕೆ ಎರಡರಲ್ಲೂ ವಿಶೇಷ ಬದಲಾವಣೆ ಕಂಡುಬಂದಿಲ್ಲ.
ಆಫ್ಘಾನಿಸ್ತಾನ ಕಳೆದ ಹತ್ತು ವರ್ಷಗಳಲ್ಲಿ ಅದೆಂಥ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ ಎನ್ನುವುದು ಗೊತ್ತಾಗಬೇಕಾದರೆ ಅಲ್ಲಿನ ನಿರುದ್ಯೋಗ ಪ್ರಮಾಣವನ್ನು ಗಮನಿಸಬೇಕು. ಒಟ್ಟು ಕಾರ್ಮಿಕ ಬಲದ ಶೇಕಡಾವಾರು ನಿರುದ್ಯೋಗ 2005ರಲ್ಲಿ 10.3, 2010ರಲ್ಲಿ 10.1 ಆಗಿದ್ದರೆ, 2014ರಲ್ಲಿ ಇದು 69.1 ತಲುಪಿತ್ತು. ಅಂದರೆ 2014ರ ಹೊತ್ತಿಗೆ ಭಾರಿ ನಿರುದ್ಯೋಗ ಸಮಸ್ಯೆಗೆ ದೇಶ ಸಿಕ್ಕಿಹಾಕಿಕೊಂಡಿದೆ.ಅದೊಂದು ಪುರುಷ ಪ್ರಧಾನ ಸಮಾಜ. ದುಡಿಯಲು ಮುಂದೆ ಬಂದಿರುವ ಬಹುತೇಕರು ಪುರುಷರೇ. 2014ರ ಅಂದಾಜಿನಂತೆ ಒಟ್ಟು ಕಾರ್ಮಿಕ ಬಲದ ಪೈಕಿ ಮಹಿಳೆಯರ ಪ್ರಮಾಣ ಶೇ.18.9 ಮಾತ್ರ. ಅಷ್ಟೇ ಅಲ್ಲ, ಅವಲಂಬಿತರ ಪ್ರಮಾಣವೂ ಹೆಚ್ಚು ಅಂದರೆ, 15ರಿಂದ 64ವರ್ಷದ ಪ್ರತಿ 100 ಜನರಿಗೆ 14ವರ್ಷ ಒಳಗಿನ ಮತ್ತು 65ವರ್ಷ ಮೇಲಿರುವವರ ಸಂಖ್ಯೆ 87. ದುಡಿಯುವ ಕೈಗಳೇ ಕಡಿಮೆಯಾಗಲು ಕಾರಣ ಅಲ್ಲಿನ ನಾಗರಿಕ ಅಶಾಂತಿ.ಕ್ರಿ.ಶ. 1979ರಲ್ಲಿ ಸೋವಿಯತ್ ರಷ್ಯ ಮುಂದಾಗಿ ಅಲ್ಲಿ ಕಮ್ಯುನಿಸ್ಟ್ ನೇತೃತ್ವದ ಸರ್ಕಾರ ಸ್ಥಾಪಿಸಿತು. ಆ ದೇಶದ ಸೈನ್ಯವನ್ನೂ ಅಲ್ಲಿ ತಂದು ನಿಲ್ಲಿಸಿತು. ಆಗ ಇದನ್ನು ವಿರೋಧಿಸಿ ಮುಜಾಹಿದೀನ್ ಗಳು ಹೋರಾಟ ನಡೆಸಿದರು. ಇದರ ಪರಿಣಾಮ 1989ರಲ್ಲಿ ಸೋವಿಯತ್ ರಷ್ಯಾ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿತು. ಆದರೆ ನಾಗರಿಕ ಅಶಾಂತಿ ಅಲ್ಲಿಗೆ ನಿಲ್ಲಲಿಲ್ಲ.
ನಂತರ 2005ರಿಂದ 2010ರವರೆಗೆ ಮುಸ್ಲಿಂ ಮೂಲಭೂತವಾದಿ ತಾಲಿಬಾನ್ ಗಳ ಕೈಗೆ ದೇಶ ಸಿಲುಕಿತು. ಈ ಎರಡೂ ಅವಧಿಯಲ್ಲಿ ಉಂಟಾದ ಅಶಾಂತಿಯಿಂದಾಗಿ ಭಾರಿ ಪ್ರಮಾಣದ ಜನ ಬೇರೆ ಬೇರೆ ದೇಶಗಳಿಗೆ ವಲಸೆ ಹೋಗಿದ್ದಾರೆ. ಕೈಗಾರಿಕೆಗಳು ಮುಚ್ಚಿಹೋಗಿವೆ ಹಾಗೂ ನಿರುದ್ಯೋಗದ ಪ್ರಮಾಣದಲ್ಲಿ ಹೆಚ್ಚಳ ಕಂಡಿವೆ. ಆಹಾರ ಉತ್ಪಾದನೆಯೂ ಕುಸಿತ ಗೊಂಡಿತು. ಅಫೀಮು ಮತ್ತು ಹೆರಾಯಿನ್ ಈ ದೇಶದಲ್ಲಿ ಬೆಳೆಯುವ ಪ್ರಮುಖ ಆರ್ಥಿಕ ಬೆಳೆಯಾಗಿದೆ.ಬೇರೆ ಬೇರೆ ದೇಶಗಳಿಗೆ, ಮುಖ್ಯವಾಗಿ ಪಾಕಿಸ್ತಾನಕ್ಕೆ ವಲಸೆ ಹೋಗಿರುವ ಜನರನ್ನು ಕರೆಸಿಕೊಂಡು ಅವರಿಗೆ ಉದ್ಯೋಗ ಒದಗಿಸಬೇಕಾಗಿರುವುದು, ಇನ್ನೂ ಕಾಡುತ್ತಿರುವ ಮೂಲಭೂತವಾದದ ಸಮಸ್ಯೆಯನ್ನು ತೊಡೆದುಹಾಕಿ, ದೇಶವನ್ನು ನೆಮ್ಮದಿಯ ತಾಣವನ್ನಾಗಿ ಮಾಡಬೇಕಾಗಿರುವುದು, ಒಣಭೂಮಿಗೆ ನೀರಾವರಿ ಕಲ್ಪಿಸಬೇಕಾಗಿರುವುದು, ಮಾದಕ ವಸ್ತುಗಳ ದಂಧೆಯನ್ನು ನಿಲ್ಲಿಸಬೇಕಾಗಿರುವುದು, ಕೈಗಾರಿಕೆಗಳಿಗೆ ಜೀವ ತುಂಬಬೇಕಾಗಿರುವುದು, ಮಹಿಳೆಯರ ಪರಿಸ್ಥಿತಿಯನ್ನು ಸುಧಾರಿಸಬೇಕಾಗಿರುವುದು, ಪ್ರಸ್ತುತ ಸರ್ಕಾರದ ಮುಂದಿರುವ ಪ್ರಮುಖ ಸವಾಲುಗಳು.

[/fusion_text][/fusion_builder_column][/fusion_builder_row][/fusion_builder_container]

Categories
asia

ರಷ್ಯನ್ ಫೆಡರೇಷನ್

[fusion_builder_container hundred_percent=”no” equal_height_columns=”no” menu_anchor=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”center center” background_repeat=”no-repeat” fade=”no” background_parallax=”none” parallax_speed=”0.3″ video_mp4=”” video_webm=”” video_ogv=”” video_url=”” video_aspect_ratio=”16:9″ video_loop=”yes” video_mute=”yes” overlay_color=”” video_preview_image=”” border_color=”” border_style=”solid” padding_top=”” padding_bottom=”” padding_left=”” padding_right=”” type=”legacy”][fusion_builder_row][fusion_builder_column type=”1_1″ layout=”1_1″ background_position=”left top” background_color=”” border_color=”” border_style=”solid” border_position=”all” spacing=”yes” background_image=”” background_repeat=”no-repeat” padding_top=”” padding_right=”” padding_bottom=”” padding_left=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”small-visibility,medium-visibility,large-visibility” center_content=”no” last=”true” min_height=”” hover_type=”none” link=”” border_sizes_top=”” border_sizes_bottom=”” border_sizes_left=”” border_sizes_right=”” type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಜಗತ್ತಿನಲ್ಲಿಯೇ ಅತ್ಯಂತ ಹೆಚ್ಚು ವಿಸ್ತೀರ್ಣದ ಭೂಪ್ರದೇಶ ಹೊಂದಿದ್ದು, ಅದಕ್ಕೆ ಹೋಲಿಸಿದಲ್ಲಿ ಕಡಿಮೆ ಜನಸಂಖ್ಯೆ ಹೊಂದಿರುವ, ಜೊತೆಗೆ ವೈಜ್ಞಾನಿಕ ಆವಿಷ್ಕಾರಗಳಲ್ಲಿ ಅಗ್ರಣಿಯಾಗಿದ್ದು, ಸಾಟಿಯಿಲ್ಲದ ತಾಂತ್ರಿಕತೆ ಮತ್ತು ಅಪಾರ ಮಿಲಿಟರಿ ಶಕ್ತಿಯಿಂದ ಬಲಾಢ್ಯ ಎನ್ನಿಸಿಕೊಂಡಿರುವ ದೇಶ ರಷ್ಯನ್ ಫೆಡರೇಷನ್ (Russian Federation).

ಎರಡು ಶಕ್ತಿಕೇಂದ್ರಗಳನ್ನು ಹೊಂದಿರುವ ಈ ಜಗತ್ತಿನಲ್ಲಿ ಅಮೇರಿಕ ಒಂದು ಕೇಂದ್ರವಾಗಿದ್ದರೆ, ಮತ್ತೊಂದು ಕೇಂದ್ರ ರಷ್ಯಾ.ಪೂರ್ವ ಯೂರೋಪಿನ ಈ ದೇಶದ ವಿಸ್ತೀರ್ಣ 1,70,98,246 ಚ.ಕಿ.ಮೀ. ಇಷ್ಟೊಂದು ವಿಶಾಲ ಭೂಪ್ರದೇಶಕ್ಕೆ ಹೋಲಿಸಿದಲ್ಲಿ ಜನಸಂಖ್ಯೆ ತೀರಾ ಕಡಿಮೆ. 2016ರಲ್ಲಿ ರಷ್ಯಾದ ಅಂದಾಜು ಜನಸಂಖ್ಯೆ 14.34 ಕೋಟಿ ಮಾತ್ರ.ಜನಸಾಂದ್ರತೆ ಎಷ್ಟು ವಿರಳ ಎಂದರೆ, ಒಂದು ಚದರ ಕಿ.ಮೀ ಗೆ ಕೇವಲ 8.8 ಮಾತ್ರ. ಅಂದಾಜು 1.22 ಕೋಟಿ ಜನಸಂಖ್ಯೆ ಹೊಂದಿರುವ ಮಾಸ್ಕೋ ನಗರ ಇದರ ರಾಜಧಾನಿ. ರಷ್ಯನ್ ರೂಬಲ್ -ಆರ್ ಯು ಬಿ (Ruble) ಈ ದೇಶದ ಕರೆನ್ಸಿ.


ನಲವತ್ತಾರು ಒಬ್ಲಾಸ್ಟ್ (Oblast), 22 ರಿಪಬ್ಲಿಕ್ (Republic), 9 ಕ್ರಾಯ್ (Krai) , 4 ಸ್ವಾಯುತ್ತ ಒಕ್ರುಗ್ (Autonomous okrug), 3 ಒಕ್ಕೂಟ ನಗರಗಳು (Federal city) ಮತ್ತು ಒಂದು ಸ್ವಾಯುತ್ತ ಒಬ್ಲಾಸ್ಟ್ ಸೇರಿ ರಷ್ಯಾ ಒಕ್ಕೂಟವಾಗಿದ್ದು, ಎಲ್ಲವಕ್ಕೂ ಸಮಾನ ಹಕ್ಕುಗಳಿವೆ.ಒಬ್ಲಾಸ್ಟ್ ಎಂದರೆ ಪ್ರಾಂತ್ಯ.ಅದು ಪ್ರತ್ಯೇಕ ಗವರ್ನರ್ ಮತ್ತು ಚುನಾಯಿತ ಶಾಸನಸಭೆಯನ್ನು ಹೊಂದಿರುತ್ತದೆ. ರಿಪಬ್ಲಿಕ್ ಗಳು ಜನಾಂಗೀಯ ಅಲ್ಪಸಂಖ್ಯಾತರ ಮೂಲಸ್ಥಳವಾಗಿದ್ದು, ಸ್ವಾಯುತ್ತವಾಗಿರುತ್ತವೆ. ಅವೂ ಕೂಡ ಪ್ರತ್ಯೇಕ ಶಾಸನಸಭೆಯನ್ನೂ ಹೊಂದಿರುತ್ತದೆ. ಕ್ರಾಯ್ ಗಳೂ ಸಹ ಒಬ್ಲಾಸ್ಟ್ ಗಳಂತೆ ಪ್ರಾಂತ್ಯವಾಗಿದ್ದು, ವಿಶೇಷ ಪ್ರಾದೇಶಿಕ ಐತಿಹಾಸಿಕ ಹಿನ್ನೆಲೆ ಹೊಂದಿವೆ. ಜನಾಂಗೀಯ ಅಲ್ಪಸಂಖ್ಯಾತರು ಬಹುಸಂಖ್ಯೆಯಲ್ಲಿರುವ ಪ್ರದೇಶವನ್ನು ಗುರುತಿಸಿ 4 ಸ್ವಾಯುತ್ತ ಒಕ್ರುಗ್ ಗಳನ್ನು ರಚಿಸಲಾಗಿದೆ. 3 ಫೆಡರಲ್ ನಗರಗಳು ಪ್ರತ್ಯೇಕ ಪ್ರದೇಶಗಳಾಗಿ ಕಾರ್ಯ ನಿರ್ವಹಿಸುತ್ತವೆ.

ರಷ್ಯಾ ದೇಶದ ಇನ್ನೊಂದು ಆಸಕ್ತಿಕರ ಸಂಗತಿಯೆಂದರೆ, 9 ಸಮಯ ವಲಯಗಳನ್ನು ಅದು ಹೊಂದಿದೆ. ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಅಷ್ಟೊಂದು ವಿಶಾಲ ಭೂಪ್ರದೇಶದಲ್ಲಿ ಹರಡಿನಿಂತಿದೆ.1992ರಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಯುನೈಟೆಡ್ ಸೋವಿಯತ್ ಸೋಷಿಯಲಿಸ್ಟ್ಸ್ ರಿಪಬ್ಲಿಕ್ (USSR) ವಿಲೀನಗೊಂಡಾಗ ಅದು ವಿಭಜನೆಗೊಂಡು, 15 ಸ್ವತಂತ್ರ ದೇಶಗಳಾದವು. ಆ ಪೈಕಿ ಫೆಡರೇಷನ್ ಆಫ್ ರಷ್ಯಾ ಕೂಡ ಒಂದು. ಯುಎಸ್ಎಸ್ಆರ್ ವಿಲೀನದ ನಂತರವೂ ರಷ್ಯಾ ದೇಶವೇ ಜಗತ್ತಿನಲ್ಲಿ ಹೆಚ್ಚು ವಿಸ್ತಾರವಾದ ದೇಶವಾಗಿ ಉಳಿಯಿತು.

ಸೋವಿಯತ್ ಪತನದಿಂದ ಸ್ವತಂತ್ರಗೊಂಡ ದೇಶಗಳನ್ನು, ಐದು ಗುಂಪುಗಳಲ್ಲಿ ವಿಂಗಡಿಸಲಾಗುತ್ತದೆ. ಎಸ್ಟೋನಿಯ, ಲ್ಯಾಟ್ವಿಯಾ ಮತ್ತು ಲಿಥುವಾನಿಯ ದೇಶಗಳು ಬಾಲ್ಟಿಕ್ ರಾಷ್ಟಗಳಾದರೆ, ಕಜಕ್ ಸ್ತಾನ್, ಕಿರ್ಗಿಸ್ತಾನ್, ತಜಕಿಸ್ತಾನ್, ತುರ್ಕ್ ಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಮಧ್ಯ ಏಷಿಯಾಗೆ ಸೇರುತ್ತವೆ. ಬೆಲಾರಸ್, ಮಾಲ್ಡೋವಾ ಮತ್ತು ಉಕ್ರೇನ್ ಪೂರ್ವ ಪ್ರಾಚ್ಯ ದೇಶಗಳಾಗಿದ್ದು, ಆರ್ಮೇನಿಯ,ಅಜರ್ ಬೈಜಾನ್ ಮತ್ತು ಜಾರ್ಜಿಯಾ ದಕ್ಷಿಣ ಕ್ಯಾಕಸಸ್ ದೇಶಗಳಾಗಿವೆ. ರಷ್ಯನ್ ಒಕ್ಕೂಟ ಯುರೇಶಿಯ ಭಾಗಕ್ಕೆ ಸೇರಿದೆ.

ಆದರೆ 1989ರಲ್ಲಿ ಅಂದಿನ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಿಖಾಯಿಲ್ ಗೊರ್ಬಚೇವ್, ಪೆರಸ್ತ್ರೋಯ್ಕ (Perastroika)- ಆರ್ಥಿಕ ಮರುರಚನೆ ಮತ್ತು ಗ್ಲಾಸ್ ನಾಸ್ಟ್ (Glasnost)- ಮುಕ್ತತೆ ನೀತಿಗಳನ್ನು ಜಾರಿಗೊಳಿಸಿದರು. ಇದಕ್ಕೆ ಸಿದ್ಧವಿಲ್ಲದ ದೇಶ, ಆರ್ಥಿಕ ಹಿನ್ನಡೆಯನ್ನು ಅನುಭವಿಸಬೇಕಾಗಿ ಬಂದಿತು. ಅದರ ಪರಿಣಾಮವಾಗಿಯೇ ಯುಎಸ್ಎಸ್ಆರ್ ವಿಲೀನಗೊಂಡಿದ್ದು.

ಪ್ರಾಚೀನ ರಷ್ಯನ್ನರು ಸ್ಲೇವಿಕ್ ಭಾಷಿಕ ಜನಾಂಗದವರಾಗಿದ್ದರು. ಒಂಬತ್ತನೇ ಶತಮಾನದಲ್ಲಿ ಸ್ಕ್ಯಾಂಡಿನೋವಿಯಾದ ರಾಜರು ಅಲ್ಲಿಗೆ ಬಂದಿಳಿದು, ಆ ಭೂಪ್ರದೇಶವನ್ನು ಆಕ್ರಮಿಸಿಕೊಂಡರು. ಸ್ಲೇವಿಕ್ ಜನ ಸ್ಕ್ಯಾಂಡಿನೋವಿಯದ ಜನರೊಂದಿಗೆ ಬೆರೆತುಹೋದರು.ಜೊತೆಗೆ ಅವರ ಮೇಲೆ ಗ್ರೀಕ್ ಕ್ರಿಶ್ಚಿಯನ್ನರ ಪ್ರಭಾವವೂ ಆಯಿತು.

12ನೇ ಶತಮಾನದಲ್ಲಿ ರಷ್ಯದ ಮೇಲೆ ಆಕ್ರಮಣ ಮಾಡಿದ್ದು ಮಂಗೋಲಿಯನ್ನರು. ಆ ಸಮಯದಲ್ಲಿ ನಾಶವಾದ ಹಳೇ ನಗರಗಳು ಮತ್ತೆ ಪುನರುತ್ಥಾನಗೊಳ್ಳಲಿಲ್ಲ, ಆದರೆ ಆಗ ಮಾಸ್ಕೋದಂತಹ ಹೊಸ ನಗರಗಳು ತಲೆ ಎತ್ತಿ ನಿಂತವು. 15ನೇ ಶತಮಾನದಲ್ಲಿ ಮೂರನೇ ಐವಾನ್ (ಐವಾನ್ ದಿ ಗ್ರೇಟ್) ನೇತೃತ್ವದಲ್ಲಿ ರಷ್ಯಾ ಒಂದು ಸಂಘಟಿತ ದೇಶವಾಯಿತು. 1547ರಲ್ಲಿ ನಾಲ್ಕನೇ ಐವಾನ್ ನಿರಂಕುಶ ಆಡಳಿತಗಾರನಾಗಿ ಹೊರಹೊಮ್ಮಿ, ತನ್ನನ್ನು ‘ಜಾರ್’ (czar) ಎಂದು ಘೋಷಿಸಿಕೊಂಡ. ನಾಲ್ಕನೇ ಐವಾನ್ ನಂತರ ರೊಮೊನೊವ್ ಸಂತತಿಯ (Romonov dynasty) ಜಾರ್ ಚಕ್ರವರ್ತಿಗಳ ಆಡಳಿತ ಪ್ರಾರಂಭವಾಯಿತು. 1917ರವರೆಗೂ ಇದೇ ಸಂತತಿಯ ಜಾರ್ ಚಕ್ರವರ್ತಿಗಳು ರಾಜ್ಯಭಾರ ನಡೆಸಿದರು. ನೆಪೋಲಿಯನ್ ಪಡೆಗಳು ರಷ್ಯದ ಮೇಲೆ ದಾಳಿ ನಡೆಸಿದಾಗ, ಅದನ್ನು ಸಂಪೂರ್ಣವಾಗಿ ಸೋಲಿಸಿದ ರಷ್ಯಾ ಬಲಾಢ್ಯ ಮಿಲಿಟರಿ ಶಕ್ತಿ ಹೊಂದಿದ ದೇಶವಾಗಿ ಹೊರಹೊಮ್ಮಿತು.ಕೈಗಾರಿಕಾ ಕ್ರಾಂತಿ (Industrial Revolution) ರಷ್ಯಾದ ಮೇಲೆ ತುಂಬ ಪ್ರಭಾವ ಬೀರಿದ ಘಟನೆ. ಆಗ ದೇಶ ಕೃಷಿಯಿಂದ ಕೈಗಾರಿಕೆಯೆಡೆಗೆ ತಿರುಗಿತು. ಕಾರ್ಮಿಕ ಬಲವೂ ಹೆಚ್ಚಿತು. 1903ರಲ್ಲಿ ಬೊಲ್ಶೆವಿಕ್ಸ್ ಎನ್ನುವ ಕಾರ್ಮಿಕರ ಸಂಘಟನೆಯನ್ನು ವ್ಲದಿಮೀರ್ ಲೆನಿನ್ (vladimir Lenin) ಮತ್ತು ಅಲೆಕ್ಸಾಂಡರ್ ಬೊಗ್ಡೊನೊವ್ (alexander Bogdonov) ಪ್ರಾರಂಭಿಸಿದರು.

ಈ ಘಟನೆಗಳೆಲ್ಲ ನಡೆಯುತ್ತಿದ್ದಾಗಲೇ ಜಗತ್ತಿನ ಮೊದಲ ಮಹಾಸಮರದಲ್ಲಿ ರಷ್ಯಾ ಪಾಲ್ಗೊಂಡಿತು. ಸಾಕಷ್ಟು ನಷ್ಟವನ್ನೂ ಅನುಭವಿಸಿತು. ಒಂದೆಡೆ ಕೃಷಿ ತೊರೆದು ಕೈಗಾರಿಕೆಗಳಲ್ಲಿ ದುಡಿಯಲು ಜನತೆ ಪ್ರಾರಂಭಿಸಿದ್ದರು. ಇನ್ನೊಂದು ಕಡೆ ಮೊದಲ ಮಹಾ ಸಮರದ ಪರಿಣಾಮ ನಿರುದ್ಯೋಗದ ಸಮಸ್ಯೆ ತಲೆದೋರಿತು. ಹೀಗಾಗಿ ಭಾರಿ ಪ್ರಮಾಣದ ಆಹಾರ ಕೊರತೆ, ಹಣದುಬ್ಬರ ಭಾಧಿಸತೊಡಗಿದವು. ಆಗ ಕಾರ್ಮಿಕರ ಕ್ರಾಂತಿ ಬಲಗೊಂಡು, 1917ರಲ್ಲಿ ಜಾರ್ ಚಕ್ರವರ್ತಿ ಯಾಗಿದ್ದ ಎರಡನೇ ನಿಕೋಲಸ್ (Nicolas 2) ಅಧಿಕಾರ ತ್ಯಜಿಸಬೇಕಾಯಿತು. ನಂತರ ಮಾರ್ಕ್ಸ್ ವಾದದ ಆಧಾರದ ಮೇಲೆ ಅಸ್ತಿತ್ವಕ್ಕೆ ಬಂದ ಸೋವಿಯತ್ ಒಕ್ಕೂಟದ ಕಮ್ಯುನಿಸ್ಟ್ ಸರ್ಕಾರ, ನಾಸ್ತಿಕವಾದ ಮತ್ತು ಭೌತಿಕವಾದಗಳನ್ನು ಉತ್ತೇಜಿಸಿತು.

ಎರಡನೇ ಮಹಾಯುದ್ಧದಲ್ಲಿ ಬರ್ಲಿನ್ ನ್ನು ವಶಪಡಿಸಿಕೊಳ್ಳುವಲ್ಲಿ ರಷ್ಯಾ ಯಶಸ್ವಿಯಾದರೂ, ಅಪಾರ ಪ್ರಮಾಣದ ರಷ್ಯನ್ನರು ಪ್ರಾಣ ಕಳೆದುಕೊಂಡಿದ್ದರು. ಅನೇಕ ನಗರಗಳು ಧ್ವಂಸಗೊಂಡಿದ್ದವು. ಭಾರಿ ನಷ್ಟವನ್ನು ಎದುರಿಸಿತು. ಆದರೆ ಅದು ಮರುಚೇತರಿಸಿಕೊಂಡಿತು.ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ರಷ್ಯಾದ ಸಾಧನೆ ಅನನ್ಯ. ಬಾಹ್ಯಾಕಾಶಕ್ಕೆ ಮೊದಲ ಕೃತಕ ಉಪಗ್ರಹ ಸ್ಪೂತ್ನಿಕ್ 1 ಕಳುಹಿಸಿದ ಕೀರ್ತಿ ರಷ್ಯಾ ದೇಶಕ್ಕಿದೆ. ಬಾಹ್ಯಾಕಾಶಕ್ಕೆ 1961ರಲ್ಲಿ ಮೊದಲ ಮಾನವನನ್ನು ಕಳುಹಿಸಿದ್ದೂ ಕೂಡ ಇದೇ ದೇಶ. ಯೂರಿ ಗಗಾರಿನ್ (Yuri Gagarin) ಬಾಹ್ಯಾಕಾಶ ತಲುಪಿದ ಮೊದಲ ಮಾನವ.

ಅಪಾರ ಅಣ್ವಸ್ತ್ರ ಬಲದಿಂದ ಜಗತ್ತಿನ ಒಂದು ಶಕ್ತಿಕೇಂದ್ರವಾಗಿ ರೂಪುಗೊಂಡಿದ್ದ ಯುಎಸ್ಎಸ್ಆರ್,ಅದ್ಭುತ ತಾಂತ್ರಿಕ ಔನ್ನತ್ಯವನ್ನು ಸಾಧಿಸಿದಾಗಲೂ ಪತನಗೊಳ್ಳಬೇಕಾಗಿ ಬಂದಿದ್ದು ವಿಪರ್ಯಾಸವೇ ಸರಿ.2014ರಲ್ಲಿ ರಷ್ಯಾದ ನಿವ್ವಳ ದೇಶೀಯ ಉತ್ಪನ್ನ (GDP) 18,49,940 ದಶಲಕ್ಷ ಅಮೇರಿಕನ್ ಡಾಲರ್, ಅಂದರೆ ತಲಾ ನಿವ್ವಳ ದೇಶೀಯ ಉತ್ಪನ್ನ 12,897.9 ಅಮೇರಿಕನ್ ಡಾಲರ್ ಗಳಷ್ಟಿತ್ತು. ನಿವ್ವಳ ಮೌಲ್ಯವರ್ಧನೆ (GVA)ಯಲ್ಲಿ ಕೃಷಿಯ ಪಾಲು ಶೇ.4.1, ಕೈಗಾರಿಕೆಯ ಪಾಲು ಶೇ.36.8, ಸೇವಾ ವಲಯದ ಪಾಲು 59.1ರಷ್ಟಿತ್ತು.

ಪೆಟ್ರೋಲಿಯಂ, ನೈಸರ್ಗಿಕ ಅನಿಲ, ವಿವಿಧ ಖನಿಜಗಳು ಮತ್ತು ಟಿಂಬರ್ ಇಲ್ಲಿನ ಮುಖ್ಯ ಸಂಪನ್ಮೂಲ. ಚೈನಾ, ಜರ್ಮನಿ, ಅಮೇರಿಕ ಮತ್ತು ನೆದರ್ ಲ್ಯಾಂಡ್ಸ್ ಜೊತೆ ಮುಖ್ಯವಾದ ವ್ಯಾಪಾರ ಸಂಬಂಧಗಳಿವೆ. ಕ್ರೈಸ್ತ, ಇಸ್ಲಾಂ, ಬೌದ್ಧ ಮತ್ತು ಜುಡಾಯಿಸಂ ಧರ್ಮಗಳನ್ನು ನಂಬಿರುವ ಜನ ಇಲ್ಲಿದ್ದಾರೆ.ನಿರುದ್ಯೋಗದ ಪ್ರಮಾಣ 2005ರಲ್ಲಿ ಶೇ.7.1ರಷ್ಟಿದ್ದಿದ್ದು, 2014ರಲ್ಲಿ 5.2ಕ್ಕೆ ಇಳಿದಿದೆ. ಮಹಿಳಾ ಜನಸಂಖ್ಯೆಯಲ್ಲಿ ಶೇ.56.5ರಷ್ಟು ಕಾರ್ಮಿಕ ಬಲವಾಗಿದ್ದರೆ, ಪುರುಷರ ಜನಸಂಖ್ಯೆಯಲ್ಲಿ ಶೇ.70.8ರಷ್ಟು ಕಾರ್ಮಿಕ ಬಲವಾಗಿದ್ದಾರೆ. 2015ರಲ್ಲಿ ನಗರ ಜನಸಂಖ್ಯೆ ಶೇ.74ರಷ್ಟಿತ್ತು. ಹೆಚ್ಚು ಕಡಿಮೆ ಎಲ್ಲರಿಗೂ ಪ್ರಾಥಮಿಕ ಮತ್ತು ಸೆಕೆಂಡರಿ ಶಿಕ್ಷಣ ದೊರೆಯುತ್ತಿದೆ. ಶೇ.70.5ರಷ್ಟು ಜನ ಇಂಟರ್ನೆಟ್ ಉಪಯೋಗಿಸುತ್ತಿದ್ದಾರೆ. 2013ರ ಅಂದಾಜಿನಂತೆ ಶೇ.49.8ರಷ್ಟು ಭೂಮಿ ಅರಣ್ಯಪ್ರದೇಶವಾಗಿದೆ. ನಗರ ಪ್ರದೇಶದಲ್ಲಿ ಶೇ.99 ಮತ್ತು ಗ್ರಾಮೀಣ ಪ್ರದೇಶದಲ್ಲಿ ಶೇ.91ರಷ್ಟು ಜನಕ್ಕೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಇದೆ.

ಇಂಥ ದೇಶದ ಮೇಲೆ ಅಮೇರಿಕ, ಯೂರೋಪಿಯನ್ ಯೂನಿಯನ್, ಆಸ್ಟ್ರೇಲಿಯ ಮುಂತಾದ ದೇಶಗಳು ನಿರ್ಬಂಧ ಹೇರಿರುವುದು ಮತ್ತೊಂದು ವೈಪರೀತ್ಯ. ಇದಕ್ಕೆ ಕಾರಣ ಉಕ್ರೇನ್ ಜೊತೆಗಿನ ವಿವಾದ.2014ರ ಆರಂಭದಲ್ಲಿ ಉಕ್ರೇನಿನ ಕ್ರಿಮಿಯ ಪ್ರದೇಶ (Crimea) ಮತ್ತು ಸೆವಾಸ್ಟೊಪೋಲ್ (Sevastopol) ನಗರದ ಮೇಲೆ ರಷ್ಯನ್ ಫೆಡರೇಷನ್ ಸೈನಿಕ ದಾಳಿ ನಡೆಸಿತು. ಅದರ ಬೆನ್ನ ಹಿಂದೆಯೇ ಮಾರ್ಚ್ 16, 2014ರಂದು ಸ್ವಾಯುತ್ತ ಕ್ರಿಮಿಯ ಗಣತಂತ್ರ ಶಾಸನಸಭೆ ಮತ್ತು ಸೆವಾಸ್ಟೊಪೋಲ್ ಸರ್ಕಾರಗಳು ಜನಾಭಿಪ್ರಾಯ ಸಂಗ್ರಹ ಮಾಡಿದವು. ರಷ್ಯಾ ಒಕ್ಕೂಟ ಪ್ರಜೆಗಳಾಗಿ ಸೇರ್ಪಡೆಗೊಳ್ಳುವುದು ಸರಿಯೋ ಅಥವಾ 1992ರ ಕ್ರಿಮಿಯ ಸಂವಿಧಾನವನ್ನು ಒಪ್ಪಿಕೊಂಡು, ಉಕ್ರೇನ್ ಜೊತೆಗಿರುವುದು ಸೂಕ್ತವೋ ಎನ್ನುವುದನ್ನು ಮತದಾರರು ನಿರ್ಧರಿಸಬೇಕಿತ್ತು. ಕ್ರಿಮಿಯ ಮತ್ತು ಸೆವಾಸ್ಟಪೋಲ್ ಜನತೆ ರಷ್ಯಾದ ಪ್ರಜೆಗಳಾಗುವತ್ತ ಒಲವು ತೋರಿದವು. ಹೀಗಾಗಿ ಅದು ತನ್ನ ಅಧಿಕೃತ ಭಾಗ ಎಂದು ರಷ್ಯಾ ವಾದಿಸುತ್ತಿದೆ.

ಆದರೆ ಈ ಜನಾಭಿಪ್ರಾಯ ಸಂಗ್ರಹವೇ ಅಕ್ರಮ ಎನ್ನುವುದು ಕೆಲವು ದೇಶಗಳ ವಾದ, ವಿಶ್ವಸಂಸ್ಥೆಯೂ ಈ ಜನಾಭಿಪ್ರಾಯಕ್ಕೆ ಮಾನ್ಯತೆ ನೀಡಿಲ್ಲ.ಈ ಹಿನ್ನೆಲೆಯಲ್ಲಿ ಅಮೇರಿಕ, ಕೆನಡಾ, ಯೂರೋಪಿಯನ್ ಒಕ್ಕೂಟ, ನಾರ್ವೆ ಮತ್ತು ಆಸ್ಟ್ರೇಲಿಯ ದೇಶಗಳು ರಷ್ಯಾದ ಮೇಲೆ ಮೂರು ಸುತ್ತಿನ ನಿರ್ಬಂಧ (sanctions) ವಿಧಿಸಿವೆ. ವ್ಯಾಪಾರ, ವ್ಯವಹಾರಗಳಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ. ಆದರೆ ಯೂರೋಪ್ ಯೂನಿಯನ್ ನ ಕೆಲವು ದೇಶಗಳು ಈ ನಿರ್ಬಂಧವನ್ನು ಪ್ರಶ್ನಿಸುತ್ತಿರುವುದೂ ಕೂಡ ಸತ್ಯ. ಆದರೆ ಬಲಾಢ್ಯ ದೇಶವಾಗಿ ನಿರ್ಬಂಧವನ್ನು ಎದುರಿಸಬೇಕಾಗಿ ಬಂದಿದ್ದು, ಈ ಪರಿಸ್ಥಿತಿಯನ್ನು ಬಗೆಹರಿಸಿಕೊಳ್ಳಬೇಕಾಗಿರುವುದು, ಕುಸಿದುಹೋಗಿರುವ ರೂಬಲ್ ನ ಮೌಲ್ಯವನ್ನು ಹೆಚ್ಚಿಸಬೇಕಾಗಿರುವುದು ಅಧ್ಯಕ್ಷ ಪುತಿನ್ ಮಂದಿರುವ ಸವಾಲು.

[/fusion_text][/fusion_builder_column][/fusion_builder_row][/fusion_builder_container]

Categories
asia

ಇರಾಕ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಸೌದಿ ಅರೇಬಿಯ, ಇರಾನ್, ಜೋರ್ಡಾನ್, ಟರ್ಕಿ, ಸಿರಿಯಾ ಮತ್ತು ಕುವೈತ್ ಗಳಿಂದ ಸುತ್ತುವರಿದಿರುವ ದೇಶ ರಿಪಬ್ಲಿಕ್ ಆಫ್ ಇರಾಕ್. ಅತ್ಯಂತ ಪ್ರಾಚೀನ ಸಂಸ್ಕೃತಿಗಳಲ್ಲಿ ಒಂದಾದ ಮೆಸೊಪೊಟಮಿಯ ಸಂಸ್ಕೃತಿ ಅರಳಿದ ನೆಲ. ಮೊಸೊಪೊಟಮಿಯ ಎಂದರೆ ಎರಡು ನದಿಗಳ ನಡುವೆ ಇರುವ ನೆಲ ಎಂದು ಅರ್ಥ.ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳು ಈ ದೇಶದ ಪ್ರಮುಖ ನದಿಗಳು. ಇವುಗಳಿಗೆ ಅನೇಕ ಉಪನದಿಗಳಿವೆ. ಈ ಎರಡೂ ನದಿಗಳು ಅಲ್ ಖುರ್ನಾದಲ್ಲಿ ಸಂಗಮವಾಗಿ ‘ಷಟ್ ಅಲ್ ಅರಬ್’ ಎನ್ನುವ ಹೆಸರಲ್ಲಿ ಹರಿದು, ಪರ್ಶಿಯನ್ ಖಾರಿಯನ್ನು ಸೇರಿಕೊಳ್ಳುತ್ತದೆ.

ಪಶ್ಚಿಮ ಏಷಿಯಾ ದೇಶವಾಗಿರುವ ಈ ದೇಶದ ರಾಜಧಾನಿ ಬಾಗ್ದಾದ್. ಇಲ್ಲಿನ ಕರೆನ್ಸಿ ಇರಾಕಿ ದಿನಾರ್. ಅಧಿಕೃತ ಧರ್ಮ ಇಸ್ಲಾಂ. ಆಡಳಿತ ಭಾಷೆ ಅರೇಬಿಕ್ ಮತ್ತು ಖುರ್ದಿಶ್. ಭೂ ವಿಸ್ತೀರ್ಣ 4,35,052 ಚ.ಕಿ. 2016ರ ಅಂದಾಜು ಜನಸಂಖ್ಯೆ 3,75,48,000. ಜನಸಾಂದ್ರತೆ ಪ್ರತಿ ಕಿ.ಮೀ.ಗೆ 86.5.

       

ಈ ದೇಶದ ಭೂಮಿಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು. ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿ ನಡುವಿನ ಉತ್ತರದ ಎತ್ತರ ಪ್ರದೇಶ, ದೇಶದ ಮಧ್ಯ ಮತ್ತು ಮಧ್ಯಪೂರ್ವ ಭಾಗದಲ್ಲಿ ಮೆಕ್ಕಲು ಮಣ್ಣಿನ ಬಯಲು ಪ್ರದೇಶ, ಪಶ್ಚಿಮ ಮತ್ತು ದಕ್ಷಿಣದ ಮರುಭೂಮಿ ಹಾಗೂ ಈಶಾನ್ಯದ ಪರ್ವತ ಪ್ರದೇಶ. ಕೇವಲ ಹನ್ನೆರಡು ಕಿಲೋಮೀಟರ್ ಪರ್ಶಿಯನ್ ಗಲ್ಫ್ ತೀರವನ್ನು ಕೂಡ ಇದು ಹೊಂದಿದೆ.ಇಲ್ಲಿನ ಶಾನಿಡರ್ ಗುಹೆಗಳಲ್ಲಿ ಉತ್ಖನನ ನಡೆಸಿದಾಗ ದೊರೆತಿರುವ ಅಸ್ಥಿಪಂಜರಗಳು ಸುಮಾರು 50 ಸಾವಿರ ವರ್ಷಗಳಿಗೂ ಹಿಂದಿನದು ಎಂದು ಅಂದಾಜು ಮಾಡಲಾಗಿದೆ.

ಇಲ್ಲಿನ ಮೆಸಪೊಟಮಿಯ ಸಂಸ್ಕೃತಿ ಮಾನವ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟವಾಗಿದ್ದು, ಲಿಪಿ, ಗಣಿತ, ಖಗೋಳ ಮತ್ತು ಕೃಷಿಯಲ್ಲಿ ಅಪಾರ ಸಾಧನೆ ಕಂಡಿತ್ತು. ನಾಗರಿಕತೆಯ ತೊಟ್ಟಿಲು ಎಂದು ಕರೆಯಲ್ಪಡುವ ಮೆಸೊಪೊಟಮಿಯ ಸಂಸ್ಕೃತಿಯಲ್ಲಿ, ಚಕ್ರದ ಪರಿಕಲ್ಪನೆ ಹುಟ್ಟಿಕೊಂಡಿತು. ತುಂಬ ಹಿಂದೆಯೇ ವ್ಯವಸಾಯ ಪದ್ಧತಿಯನ್ನು ಅಭಿವೃದ್ಧಿಪಡಿಸಲಾಗಿತ್ತು. ಸುಮೇರಿಯನ್, ಅಕ್ಕಡಿಯನ್, ಬ್ಯಾಬಿಲೋನಿಯನ್ ಮತ್ತು ಅಸ್ಸಿರಿಯನ್ ಸಾಮ್ರಾಜ್ಯಗಳು ಆಳಿ, ತನ್ನದೇ ಕೊಡುಗೆ ನೀಡಿವೆ.

ಈಜಿಪ್ಟ ನಲ್ಲಿ ಪಿರಮಿಡ್ ಗಳಿದ್ದಂತೆ ಇರಾಕ್ ನಲ್ಲಿ ಮೆಸೊಪೊಟಮಿಯ ಕಾಲದ ಝಿಗ್ಗುರಟ್ ಗಳಿವೆ. ಇವು ಪ್ರಾಚೀನ ಜನರ ದೇವಸ್ಥಾನಗಳು. ಉರ್ ಬಳಿ ನಿರ್ಮಿಸಿದ್ದ ಕ್ರಿ.ಪೂ.2100ರಲ್ಲಿ ಚಂದ್ರ ದೇವತೆ ‘ನನ್ನ’ ಸಲುವಾಗಿ ರಾಜಾ ‘ನಮ್ಮು’ ನಿರ್ಮಿಸಿದ ಎನ್ನಲಾಗಿದೆ.ಕ್ರಿ.ಪೂ.4800ರ ಹೊತ್ತಿಗೆ ಇರಾಕ್ ನಲ್ಲಿ ಮೆಸೊಪೊಟಮಿಯ ನಾಗರಿಕತೆ ಅರಳಿಕೊಂಡು, ಸುಮೇರಿಯನ್ ಸಾಮ್ರಾಜ್ಯ ತಲೆ ಎತ್ತಿ ನಿಂತಿತು. ಅನೇಕ ಆನ್ವೇಷಣೆಗಳಿಗೆ ಸುಮೇರಿಯನ್ ಸಾಮ್ರಾಜ್ಯ ಕಾರಣವಾಯಿತು. 60 ಅಂಕಿಗಳ ಆಧಾರದ ಮೇಲೆ ಅಂಕಗಣಿತ ಪದ್ಧತಿ ವಿಕಸನ ಹೊಂದಿದ್ದೂ ಸುಮೇರಿಯನ್ನರ ಕಾಲದಲ್ಲಿಯೇ.

ಕ್ರಿ.ಪೂ.2340ರಲ್ಲಿ ಸುಮೇರಿಯನ್ ನಗರ ರಾಜ್ಯಗಳನ್ನು ಅಕ್ಕಡ್ ಸಾಮ್ರಾಜ್ಯ ವಶಪಡಿಸಿಕೊಂಡು, ಅಧಿಪತ್ಯ ಸ್ಥಾಪಿಸಿತು. ಅದು ಬಹಳ ವರ್ಷ ಬದುಕಲಿಲ್ಲ. ಕ್ರಿ.ಪೂ.2125ರ ಹೊತ್ತಿಗೆ ಉತ್ತರ ಭಾಗ ಅಸ್ಸಿರಿಯನ್ನರ ಸಾಮ್ರಾಜ್ಯಕ್ಕೆ ಮತ್ತು ದಕ್ಷಿಣ ಭಾಗ ಬ್ಯಾಬಿಲೋನಿಯನ್ನರ ಆಡಳಿತಕ್ಕೆ ಒಳಪಟ್ಟವು.ಕ್ರಿ.ಪೂ.1792-1750ರ ವರೆಗೆ ಬ್ಯಾಬಿಲೋನಿಯನ್ ರಾಜ ಹಮ್ಮುರಬಿಯ ಆಡಳಿತ ನಡೆಯಿತು. ಅಸ್ಸಿರಿಯನ್ನರು ಯುದ್ಧಪರಿಣತರು ಮತ್ತು ‘ನಿನವೇ ಮತ್ತು ಕಲಾಖ’ ನಗರಗಳನ್ನು ನಿರ್ಮಾಣ ಮಾಡಿದ್ದರು. ಕ್ರಿ.ಪೂ.626ರಲ್ಲಿ ಬ್ಯಾಬಿಲೋನಿಯದ ರಾಜ ನಬೋಪೊಲಾಸ್ಸರ್, ಅಸ್ಸಿರಿಯನ್ನರನ್ನು ಸೋಲಿಸಿ, ಇಡೀ ಪ್ರದೇಶಕ್ಕೆ ಬ್ಯಾಬಿಲೋನ್ ನಗರವೇ ರಾಜಧಾನಿ ಎಂದು ಘೋಷಿಸಿದ. ಕ್ರಿ.ಪೂ.539ರಲ್ಲಿ ಆರ್ಕಿಮೆನಿಡ್ ರಾಜ ಸೈರಸ್ ಬ್ಯಾಬಿಲೋನ್ ನಗರವನ್ನು ವಶಪಡಿಸಿಕೊಂಡ. ಆನಂತರ ದಾಳಿಗಳು ಪದೇ ಪದೇ ನಡೆದವು.

ಕ್ರಿ.ಪೂ. 331ರಲ್ಲಿ ಅಲೆಕ್ಸಾಂಡರ್ ದಿ ಗ್ರೇಟ್, ರೋಮ್ ನ ಟ್ರಾಜನ್, ಮತ್ತು ಪಾರ್ಥಿಯನ್ ಸಾಮ್ರಾಜ್ಯಗಳು ಆಳಿದವು. ಕ್ರಿ.ಶ.636ರಲ್ಲಿ ಅದರ ಮೇಲೆ ಅರಬ್ ಪ್ರಭಾವ ಹೆಚ್ಚಾಯಿತು.ಈ ದೇಶದ ಪರಿಕಲ್ಪನೆ ತಂದು, ಇರಾಕ್ (ಅರೇಬಿಕ್ ಭಾಷೆಯಲ್ಲಿ ಫಲವತ್ತು ಜಮೀನು ಎಂದರ್ಥ) ಎಂದು ನಾಮಕರಣ ಮಾಡಿದ ಶ್ರೇಯಸ್ಸು ಅರಬ್ಬರಿಗೆ ಸಲ್ಲುತ್ತದೆ. ಎಂಟನೇ ಶತಮಾನದಲ್ಲಿ ಅಬ್ಬಾಸಿದ್ ಸಂತತಿಯ ಖಲೀಫ ಅಬು ಜಫಾರ್ ಅಲ್ ಮನ್ಸೂರ್ ಬಾಗ್ದಾದ್ ನಗರವನ್ನು ನಿರ್ಮಿಸಿ ರಾಜಧಾನಿ ಮಾಡಿಕೊಂಡ. ಎಂಟನೇ ಶತಮಾನದ ಮಧ್ಯಭಾಗದಿಂದ 13ನೇ ಶತಮಾನದಲ್ಲಿ ಮಂಗೋಲರ ದಾಳಿ ನಡೆಯುವವರೆಗೆ ಅಬ್ಬಾಸಿದ್ ಖಲೀಫರ ಆಡಳಿತ ನಡೆಯಿತು. 1258ರಲ್ಲಿ ಮಂಗೋಲರು ಬಾಗ್ದಾದ್ ನಗರವನ್ನು ವಶಪಡಿಸಿಕೊಂಡು, ಧ್ವಂಸಗೊಳಿಸಿದರು. ಈ ಸಮಯದಲ್ಲಿ ಸುಮೇರಿಯನ್ ಕಾಲದ ಅನೇಕ ಸ್ಮಾರಕಗಳು ನಾಶವಾದವು. ಅವರು ಅಬ್ಬಾಸಿದ್ ಕುಟುಂಬದ ಎಲ್ಲ ಸದಸ್ಯರ ಕೊಂದು ಹಾಕಿದರು. ನಂತರ 14 ಮತ್ತು 15ನೇ ಶತಮಾನದಲ್ಲಿ ಆಟ್ಟೋಮನ್ ಟರ್ಕರ ಆಡಳಿತಕ್ಕೆ ಇರಾಕ್ ಸಿಕ್ಕಿಹಾಕಿಕೊಂಡಿತು.

ಆಟ್ಟೋಮನ್ ಸಾಮ್ರಾಜ್ಯದ ಭಾಗವಾಗಿದ್ದ ಇರಾಕ್ ನ್ನು ಬ್ರಿಟಿಷರು ವಶಪಡಿಸಿಕೊಂಡರು. ಮೊದಲನೇ ವಿಶ್ವ ಸಮರ ಸಮಯದಲ್ಲಿ ಬದಲಾದ ಪರಿಸ್ಥಿತಿಗಳಿಂದಾಗಿ 1932ರಲ್ಲಿ ಸ್ವತಂತ್ರ ದೇಶವಾಗಿ ಘೋಷಣೆಯಾಯಿತು. ಆ ದೇಶವನ್ನು 1958ರಲ್ಲಿ ಗಣರಾಜ್ಯ ಎಂದು ಘೋಷಿಸಲಾಯಿತಾದರೂ, 2003ರವರೆಗೆ ಸರ್ವಾಧಿಕಾರಿಗಳ ಹಿಡಿತಕ್ಕೆ ಸಿಲುಕಿತು. ಈ ಪೈಕಿ ಸದ್ದಾಂ ಹುಸೇನ್ ಅವಧಿಯೇ ದೀರ್ಘಕಾಲದ್ದು. ಸದ್ದಾಂ ಹುಸೇನ್ ಅವಧಿಯಲ್ಲಿ ಎರಡು ಯುದ್ಧಗಳನ್ನು ಮಾಡಿತು, ಮೊದಲನೆಯದು ಗಡಿ ವಿವಾದದಿಂದಾಗಿ 1980ರಿಂದ 88ರವರೆಗೆ ಇರಾನ್ ಜೊತೆ ಯುದ್ಧಕ್ಕಿಳಿದರೆ, ಎರಡನೆಯದು 1990ರಲ್ಲಿ, ಗಲ್ಫ್ ವಾರ್ ಎಂದು ಕರೆಯಲಾಗುವ ಕುವೈತ್ ಆಕ್ರಮಣ. ತೈಲ ಸಮೃದ್ಧ ಕುವೈತನ್ನು ಆಕ್ರಮಿಸುಕೊಳ್ಳುವಲ್ಲಿ ಇರಾಕ್ ಯಶಸ್ವಿಯಾದರೂ, 1991ರಲ್ಲಿ ವಿಶ್ವಸಂಸ್ಥೆ ಮಿತ್ರಪಡೆಗಳು ಕುವೈತ್ ನೆರವಿಗೆ ಬಂದ, ಆಕ್ರಮಣದಿಂದ ಮುಕ್ತವಾಗಲು ನೆರವು ನೀಡಿದವು. 1991ರಲ್ಲಿ ಕುವೈತಿನಿಂದ ಇರಾಕ್ ಸೇನೆ ನಿರ್ಗಮಿಸಿತು. ಇದಾದ ಕೂಡಲೇ, ಎಲ್ಲ ಸಮೂಹನಾಶಕ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳನ್ನು ನಾಶಪಡಿಸಬೇಕು, ಅಷ್ಟೇ ಅಲ್ಲದೆ, ಶಸ್ತ್ರಾಸ್ತ್ರಗಳ ಪರೀಕ್ಷೆಗೆ ವಿಶ್ವಸಂಸ್ಥೆಗೆ ಅವಕಾಶ ಮಾಡಿಕೊಡಬೇಕೆಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇರಾಕ್ ಗೆ ತಿಳಿಸಿತು. ಇದನ್ನು ನಿರಾಕರಿಸಿ 12 ವರ್ಷಗಳ ಕಾಲ ಸದ್ದಾಂ ಹುಸೇನ್ ಆಡಳಿತ ನಡೆಸಿದ. ಹೀಗಾಗಿ ಇರಾಕ್ ನಿರ್ಬಂಧಗಳಿಗೆ ಗುರಿಯಾಯಿತು. ನಂತರ ಅಮೇರಿಕ ನೇತೃತ್ವದ ಮಿತ್ರಪಡೆಗಳು ದಾಳಿ ನಡೆಸಿ, 2003ರಲ್ಲಿ ಸದ್ದಾಂ ಹುಸೇನ್ ನನ್ನು ಕೆಳಗಿಳಿಸಿತು.

ಯುದ್ಧ ಅವಧಿ ಮುಗಿದ ನಂತರ ದೇಶದ ಜಿಡಿಪಿಯಲ್ಲಿ ಗಮನಾರ್ಹ ಬೆಳವಣಿಗೆ ಕಂಡಿದೆ. 2005ರಲ್ಲಿ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 36,268 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, 2014ರಲ್ಲಿ 2,25,422 ದಶಲಕ್ಷ ಅಮೇರಿಕನ್ ಡಾಲರ್ ತಲುಪಿದೆ. 2005ರಲ್ಲಿ ತಲಾ ಜಿಡಿಪಿ 1342.4 ಅಮೇರಿಕನ್ ಡಾಲರ್ ಹೊಂದಿದ್ದು, 2014ರ ಹೊತ್ತಿಗೆ ಅದು 6,390.7 ಅಮೇರಿಕನ್ ಡಾಲರ್ ಗೆ ಏರಿದೆ. ಆರ್ಥಿಕತೆಯಲ್ಲಿ ನಿವ್ವಳ ಮೌಲ್ಯವರ್ಧನೆ (ಜಿವಿಎ) ಕೃಷಿಯದು ಶೇ.4.2, ಕೈಗಾರಿಕೆ ಶೇ.59 ಮತ್ತು ಸೇವಾ ವಲಯ ಶೇ.36,9ರಷ್ಟಿದೆ. 2014ರಲ್ಲಿ ನಿರುದ್ಯೋಗ ಪ್ರಮಾಣ ಕಾರ್ಮಿಕ ಬಲದ ಶೇ.16ರಷ್ಟಿತ್ತು. ಪ್ರತಿ 100 ಪುರುಷರಿಗೆ 69.3 ಕಾರ್ಮಿಕ ಬಲವಾಗಿದ್ದರೆ, ಪ್ರತಿ 100 ಸ್ತ್ರೀಯರ ಪೈಕಿ ಕೇವಲ 15ರಷ್ಟು ಮಾತ್ರ ಕಾರ್ಮಿಕ ಬಲವಾಗಿದ್ದಾರೆ.

2015ರ ಅಂದಾಜಿನಂತೆ ದೇಶದ ಶೇ.69.5ರಷ್ಟು ನಗರವಾಸಿಗಳು. ಸಂಸತ್ತಿನಲ್ಲಿ ಮಹಿಳಾ ಪ್ರತಿನಿಧಿಗಳ ಪ್ರಮಾಣ ಶೇ.26.5ರಷ್ಟಿದೆ.2014ರ ಅಂದಾಜಿನಂತೆ ಶೇ.11.3ರಷ್ಟು ಜನ ಮಾತ್ರ ಇಂಟರ್ನೆಟ್ ಬಳಕೆದಾರರಾಗಿದ್ದಯ, ಮೊಬೈಲ್ ಹೊಂದಿರುವವರ ಪ್ರಮಾಣ ಶೇ.94ರಷ್ಟಿದೆ.ಅಪಾರ ಸಂಪನ್ಮೂಲ ಹೊಂದಿದ್ದರೂ ಮೂಲಭೂತವಾದ ದೇಶವನ್ನು ಕಾಡುತ್ತಿದೆ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಇಸ್ರೇಲ್ (ಐಸಿಸ್)ನ ಉಗಮ ಸ್ಥಾನ ಕೂಡ ಇದೇ ದೇಶ. ಈ ದೇಶದಲ್ಲಿ ಮತ್ತೆ ಖಲೀಫನ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆನ್ನುವುದು ಅವರ ಉದ್ದೇಶ. ದೇಶದ ಕೆಲವು ಭಾಗಗಳು ಉಗ್ರರ ಹಿಡಿತದಲ್ಲಿದ್ದು, ಅವರ ವಿರುದ್ಧದ ಹೋರಾಟದಲ್ಲಿ ಮತ್ತೆ ತೊಡಗಿಕೊಂಡಿದೆ ಇರಾಕ್. ರಷ್ಯಾ ಮತ್ತು ಅಮೇರಿಕದ ಮಿತ್ರಪಡೆಗಳೂ ಕೂಡ ಐಸಿಸ್ ಉಗ್ರರ ಮೇಲೆ ದಾಳಿ ನಡೆಸಿ, ಬಹುತೇಕ ಪ್ರದೇಶಗಳ ಉಗ್ರ ಕಬಂಧಬಾಹುವಿನಿಂದ ಮುಕ್ತಗೊಳಿಸಿದೆ.ಇಂಥ ವಿಚಿತ್ರ ಪರಿಸ್ಥಿತಿಯಲ್ಲಿ ಬಹಳಷ್ಟು ಜನ ವಲಸೆಗಾರರಾಗಿ ಹೊರದೇಶಗಳತ್ತ ಮುಖ ಮಾಡಿದ್ದಾರೆ. ಈ ಸಮಸ್ಯೆ ನಿವಾರಿಸಿಕೊಳ್ಳಬೇಕಾಗಿರುವುದೇ ಇರಾಕ್ ಮುಂದಿರುವ ಸವಾಲು.

[/fusion_text][/fusion_builder_column][/fusion_builder_row][/fusion_builder_container]

Categories
asia

ತುರ್ಕ್ ಮೆನಿಸ್ತಾನ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಕ್ಯಾಸ್ಪಿಯನ್ ಸಮುದ್ರದ ಪೂರ್ವಭಾಗಕ್ಕಿದ್ದು, ಆಫ್ಘಾನಿಸ್ತಾನದವರೆಗೆ ಹರಡಿಕೊಂಡಿರುವ ಮಧ್ಯ ಏಷಿಯಾದ ದೇಶವಾದ ತುರ್ಕ್ ಮೆನಿಸ್ತಾನ್ (turkmenistan). ಈ ದೇಶದ ಬಹುದೊಡ್ಡ ಪ್ರದೇಶ ಮರುಭೂಮಿಯಾಗಿದ್ದರೂ, ಸಮೃದ್ಧ ನೈಸರ್ಗಿಕ ಅನಿಲದ ಸಂಪನ್ಮೂಲ ಹೊಂದಿದೆ.ಇದು ಎರಡು ಶಾಸನಸಭೆಗಳನ್ನು ಹೊಂದಿರುವ ಗಣತಂತ್ರ ದೇಶ. ಕಜಕಿಸ್ತಾನ ಉಜ್ಬೇಕಿಸ್ತಾನ್, ಇರಾನ್ ದೇಶಗಳ ಗಡಿಗೆ ಈ ದೇಶ ಹೊಂದಿಕೊಂಡಿದೆ. 2016ರ ಅಂದಾಜಿನಂತೆ 55.39 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ತುರ್ಕ್ ಮೆನಿಸ್ತಾನದ ವಿಸ್ತೀರ್ಣ 4.88 ಲಕ್ಷ ಚ.ಕಿ.ಮೀ. ಜನಸಾಂದ್ರತೆ ತೀರಾ ವಿರಳ. ಒಂದು ಚದರ ಕಿಲೋಮೀಟರ್ ಗೆ ಕೇವಲ 11.6 ಮಾತ್ರ. 1992ರ ಮಾರ್ಚ್ 2ರಂದು ವಿಶ್ವಸಂಸ್ಥೆ ಸದಸ್ಯತ್ವ ಪಡೆದುಕೊಂಡಿದೆ.

ಪದೇಪದೇ ಭೂಕಂಪಗಳಿಗೆ ತುತ್ತಾಗುವ ಪರ್ವತ ಪ್ರದೇಶಗಳನ್ನು ಇದು ಹೊಂದಿರುವ ಈ ದೇಶದ ಅತಿ ಎತ್ತರದ ಪ್ರದೇಶ ಮೌಂಟ್ ಅಯ್ ರಿ ಬಾಬಾ ಪರ್ವತ. ಅತ್ಯಂತ ಉದ್ದವಾಗಿ ಹರಿಯುವ ನದಿ ಅಮುದರಿಯಾ. ಅದಕ್ಕಿಂತ ಮಿಗಿಲಾಗಿ ಈ ದೇಶದ ದೊಡ್ಡ ಭಾಗದಲ್ಲಿ ಬೋಳುಬೋಳಾದ ಕ್ಯರಾ ಕಮ್ (kara kum) ಮರುಭೂಮಿಯಿದೆ.ತುರ್ಕ್ ಮೆನ್ ಇಲ್ಲಿನ ಅಧಿಕೃತ ಭಾಷೆ. ತುರ್ಕ್ ಮೆನ್ ಭಾಷೆಗೆ ಆಫ್ಘಾನಿಸ್ತಾನ ಮತ್ತು ಇರಾನ್ ನಲ್ಲಿ ಅರೇಬಿಕ್ ಲಿಪಿಯನ್ನು ಉಪಯೋಗಿಸಲಾಗುತ್ತದೆ. ತುರ್ಕ್ ಮೆನಿಸ್ತಾನದಲ್ಲಿ ಸಿರಿಲಿಕ್ ಲಿಪಿ ಉಪಯೋಗಿಸಲಾಗುತ್ತಿತ್ತು. 1991ರಿಂದ ಈ ಭಾಷೆಗೆ ಲ್ಯಾಟಿನ್ ಲಿಪಿಯನ್ನು ಅಧಿಕೃತಗೊಳಿಸಲಾಗಿದೆ.

ತುರ್ಕ್ ಮೆನ್ ಭಾಷೆಯಲ್ಲದೆ ಬಲೂಚಿ, ಷಗಟಾಯ್, ಕೊರಿಯನ್ ಮುಂತಾದ ಭಾಷೆಗಳನ್ನು ಆಡುವ ಜನ ವಾಸಿಸುತ್ತಾರೆ. ಇಲ್ಲಿ ರಷ್ಯನ್ ಮತ್ತು ಉಜ್ಬೇಕ್ ಜನಾಂಗಗಳು ಇಲ್ಲಿ ವಾಸಿಸುತ್ತವೆ. ಇಲ್ಲಿನ ಪರಿಸ್ಥಿತಿ ಕ್ರಮೇಣ ಮುಕ್ತಗೊಳ್ಳುತ್ತಿದ್ದು, ಕ್ರೈಸ್ತ ಚರ್ಚುಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ.ಈ ದೇಶದ ಆರ್ಥಿಕತೆ ನಿಂತಿರುವುದು ಹತ್ತಿಬೆಳೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಮಾರಾಟದಿಂದ.ಈ ದೇಶದಲ್ಲಿ ಹೆಚ್ಚು ಬೆಳೆಯುವುದು ಹತ್ತಿ ಮತ್ತು ಜೋಳ. ಭತ್ತ, ರೇಷ್ಮೆ ಹಾಗೂ ಹಣ್ಣುಗಳನ್ನೂ ಬೆಳೆಯಲಾಗುತ್ತದೆ. ಸ್ಥಳೀಯ ಕುರಿ ಹಾಗೂ ಒಂಟೆಗಳ ಉಣ್ಣೆ ಮೂಲಕ ತಯಾರಿಸಲಾಗುವ ಬೊಖರಾ ಕಾರ್ಪೆಟ್ ಮತ್ತು ರಗ್ಗು ಖ್ಯಾತಿ ಪಡೆದಿವೆ.

ಸೀಸ, ತವರ, ತಾಮ್ರ ಮತ್ತು ಚಿನ್ನದ ಮೂಲಗಳನ್ನು ಈ ದೇಶ ಹೊಂದಿದೆ. ಇಲ್ಲಿನ ರಾಜಧಾನಿ ಅಶ್ಘಾಬಟ್. ಕರೆನ್ಸಿ ತುರ್ಕ್ ಮನ್ ಮ್ಯಾನಟ್.ಈ ದೇಶ ಸಾವಿರಾರು ವರ್ಷಗಳ ನಾಗರಿಕತೆಯ ಇತಿಹಾಸ ಹೊಂದಿದೆ . ಪ್ರಾಚೀನ ಕಾಲದಲ್ಲಿ ಇದನ್ನು ಪರ್ಶಿಯನ್ನರು ಆಳುತ್ತಿದ್ದರು. ನಂತರ ಅಲೆಕ್ಸಾಂಡರ್ ದಿ ಗ್ರೇಟ್ ಇದನ್ನು ವಶಪಡಿಸಿಕೊಂಡ. ಆಮೇಲೆ ಮಂಗೋಲರು, ಟರ್ಕಿ ಸೈನಿಕರು, ಮತ್ತು ರಷ್ಯನ್ನರಿಂದ ದಾಳಿಗೆ ಒಳಗಾಯಿತು.

ಮರ್ವ್ ನಗರ (Merv) (ಇಂದಿನ ಮೇರಿ ಪ್ರಾಂತ್ಯದಲ್ಲಿದೆ) ಮಧ್ಯಯುಗದಲ್ಲಿ ಇಸ್ಲಾಮಿಕ್ ಪ್ರಪಂಚದ ಮುಖ್ಯ ನಗರವಾಗಿದ್ದು, ಪ್ರಾಚೀನ ಸಿಲ್ಕ್ ರಸ್ತೆ (silk road) ಈ ನಗರದ ಮೂಲಕ ಹಾದುಹೋಗುತ್ತಿತ್ತು. 19ನೇ ಶತಮಾನದಲ್ಲಿ ಈ ದೇಶ ರಷ್ಯಾದ ಭಾಗವಾಯಿತು.1924ರಲ್ಲಿ ಯುನೈಟೆಡ್ ಸೋವಿಯತ್ ಸೋಷಿಯಲಿಸ್ಟ್ಸ್ ರಿಪಬ್ಲಿಕ್ (USSR) ನ ಭಾಗವಾಗಿ ಸೇರಿಕೊಂಡ ತುರ್ಕ್ ಮೆನಿಸ್ತಾನ್ , ಯುಎಸ್ಎಸ್ಆರ್ ವಿಸರ್ಜನೆಗೊಂಡಾಗ 1991ರಲ್ಲಿ ಸ್ವತಂತ್ರಗೊಡಿತು.

1990ರ ದಶಕದ ಆರಂಭದಲ್ಲಿ ತುರ್ಕ್ ಮೆನಿಸ್ತಾನ್ ರಷ್ಯಾದ ಪೈಪ್ ಲೈನ್ ಗಳನ್ನು ಬಳಸಿಕೊಂಡು ನೈಸರ್ಗಿಕ ಅನಿಲವನ್ನು ರಫ್ತು ಮಾಡಲು ಪ್ರಾರಂಭಿಸಿತು. ಆದರೆ ಅದು ರಷ್ಯಾದ ನೈಸರ್ಗಿಕ ಅನಿಲದ ವಹಿವಾಟಿಗೆ ಸ್ಪರ್ಧೆ ನೀಡತೊಡಗಿದ್ದರಿಂದ, 1993ರಲ್ಲಿ ಆ ಪೈಪ್ ಲೈನ್ ಗಳನ್ನು ರಷ್ಯಾ ಮುಚ್ಚಿತು. 2010ರಲ್ಲಿ ಚೈನಾ ಮತ್ತು ಇರಾನ್ ಗಳಿಗೆ ನೈಸರ್ಗಿಕ ಅನಿಲವನ್ನು ರಫ್ತು ಮಾಡುವ ಪೈಪ್ ಲೈನ್ ಗಳನ್ನು ಅಳವಡಿಸಿಕೊಂಡು, ಈ ಕ್ಷೇತ್ರದಲ್ಲಿ ರಷ್ಯಾದ ಏಕಸ್ವಾಮ್ಯತೆಗೆ ತಡೆ ಹಾಕಿದೆ.

2014ರಲ್ಲಿ ತುರ್ಕ್ ಮೆನಿಸ್ತಾನದ ನಿವ್ವಳ ದೇಶೀಯ ಉತ್ಪನ್ನ (GDP) 47.932 ದಶಲಕ್ಷ ಅಮೇರಿಕನ್ ಡಾಲರ್. ತಲಾ ಜಿಡಿಪಿ 9031.5 ಅಮೇರಿಕನ್ ಡಾಲರ್. ಆರ್ಥಿಕತೆಯಲ್ಲಿ ಕೃಷಿಯ ಮೌಲ್ಯವರ್ಧನೆ (GVA) ಶೇ.14.6ರಷ್ಟಿದ್ದು, ಕೈಗಾರಿಕೆಯ ಪಾಲು ಶೇ.48.4 ಮತ್ತು ಸೇವಾವಲಯದ ಪಾಲು ಶೇ.37. ಕಾರ್ಮಿಕ ಬಲದ ಶೇ.10.1ರಷ್ಟು ನಿರುದ್ಯೋಗಿಗಳಿದ್ದು, ಮಹಿಳಾ ಕಾರ್ಮಿಕರ ಪೈಕಿ ಕೇವಲ ಶೇ.47.1ರಷ್ಟು ಭಾಗವಹಿಸುವಿಕೆ ಇದೆ. 2015ರಲ್ಲಿ ನಗರ ಜನಸಂಖ್ಯೆ ಶೇ.50ರಷ್ಟಿತ್ತು. ಜಿಡಿಪಿ ಕೇವಲ ಶೇ.2.1ರಷ್ಟು ಆರೋಗ್ಯಕ್ಕಾಗಿ ಮತ್ತು ಶಿಕ್ಷಣಕ್ಕೆ ಶೇ.3.1ರಷ್ಟು (2012ರ ಅಂದಾಜು) ಮಾತ್ರ ಖರ್ಚು ಮಾಡಲಾಗುತ್ತಿದೆ. 2014ರ ಅಂದಾಜಿನಂತೆ ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆ ಕೇವಲ ಶೇ.12.2 ಮಾತ್ರ.ಸಾಕಷ್ಟು ಸಂಪನ್ಮೂಲವಿದ್ದು, ಅವುಗಳನ್ನು ಬಳಸಿಕೊಂಡು ಶ್ರೀಮಂತ ದೇಶವಾಗುವ ಎಲ್ಲ ಅವಕಾಶಗಳೂ ಈ ದೇಶಕ್ಕಿದೆ.

[/fusion_text][/fusion_builder_column][/fusion_builder_row][/fusion_builder_container]