Categories
asia

ಟರ್ಕಿ

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಯೂರೋಪ್ ಮತ್ತು ಏಷಿಯಾ ಎರಡೂ ಖಂಡಗಳಲ್ಲಿ ಹರಡಿಕೊಂಡಿರುವ ಪಶ್ಚಿಮ ಏಷ್ಯಾದ ದೇಶ ರಿಪಬ್ಲಿಕ್ ಆಫ್ ಟರ್ಕಿ.ಯೂರೋಪಿನ ಗ್ರೀಸ್ ಮತ್ತು ಬಲ್ಗೇರಿಯ ದೇಶಗಳ ಗಡಿಗೆ ಹೊಂದಿಕೊಂಡಿದ್ದರೆ, ಏಷ್ಯಾ ಭಾಗದಲ್ಲಿ ಇರಾನ್, ಇರಾಕ್, ಆರ್ಮೇನಿಯ, ಸಿರಿಯ ಮತ್ತು ಜಾರ್ಜಿಯಾಗಳಿಗೆ ಗಡಿಗಳಿಗೆ ಅಂಟಿಕೊಂಡಿದೆ.ಉತ್ತರದಲ್ಲಿ ಕಪ್ಪುಸಮುದ್ರವಿದ್ದು, ದಕ್ಷಿಣದಲ್ಲಿ ಮೆಡಿಟರೇನಿಯನ್ ಸಮುದ್ರವಿದೆ. ಹೀಗಾಗಿ ಪದೇ ಪದೇ ಭೂಕಂಪಕ್ಕೊಳಗಾಗುವ ದೇಶ ಇದು. ಸಕ್ರಿಯ ಜ್ವಾಲಾಮುಖಿಗಳೂ ಇವೆ.

ಈ ದೇಶದ ನೆಲದ ವಿಸ್ತೀರ್ಣ 7,83,562 ಚ.ಕಿ. ರಾಜಧಾನಿ ಅಂಕಾರ. ಇಲ್ಲಿನ ಕರೆನ್ಸಿ ಟರ್ಕಿಶ್ ಲಿರಾ. (TRY). ಮತ್ತೊಂದು ದೊಡ್ಡ ನಗರ ಇಸ್ತಾನ್ ಬುಲ್. ಇಲ್ಲಿರುವ ಪ್ರಮುಖ ಜನಾಂಗಗಳೆಂದರೆ ಟರ್ಕಿಗಳು ಮತ್ತು ಖುರ್ದಿಶ್ ಗಳು. ಅಧಿಕೃತ ಭಾಷೆ ಟರ್ಕಿ.

ಏಷಿಯಾ ಭಾಗದಲ್ಲಿ ಬರುವ ಅನಟೋಲಿಯ ಪರ್ಯಾಯ ದ್ವೀಪ ಎತ್ತರದ ಪರ್ವತ ಸಾಲು ಮತ್ತು ಆಳವಾದ ಕಣಿವೆಗಳನ್ನು ಹೊಂದಿದೆ. ಪೂರ್ವದಲ್ಲಿ ಎತ್ತರವಾದ ಶಿಖರಗಳ ಅರಾರತ್ ಪರ್ವತ ಶ್ರೇಣಿಯನ್ನು ಹೊಂದಿದೆ. ಒಳನಾಡಿನ ಮಧ್ಯಪ್ರಸ್ಥಭೂಮಿ ಅರೆ ಶುಷ್ಕ ವಾತಾವರಣ ಹೊಂದಿದ್ದು, ಪೂರ್ವದ ಪರ್ವತ ಪ್ರದೇಶಗಳಲ್ಲಿ ಚಳಿಗಾಲದ ಹಲವಾರು ತಿಂಗಳುಗಳ ಕಾಲ ಹಿಮ ಬೀಳುತ್ತದೆ.ಅನಟೋಲಿಯ ಅಥವಾ ಏಷ್ಯಾ ಮೈನರ್ ಪ್ರದೇಶದಲ್ಲಿ ಶಿಲಾಯುಗದಿಂದಲೂ ಮಾನವ ಅಲ್ಲಿ ವಾಸವಾಗಿದ್ದ ಎನ್ನುವುದಕ್ಕೆ ಸಾಕ್ಷ್ಯಾಧಾರಗಳು ದೊರೆತಿವೆ. ಕ್ರಿ.ಪೂ.2000ದಿಂ 1200ರವರೆಗೆ ಅಲ್ಲಿ ಹಿಟ್ಟೈಟ್ ಜನಗಳು ವಾಸವಾಗಿದ್ದರು. ನಂತರ ಫ್ರಿಜಿಯಾ ಮತ್ತು ಲಿಡಿಯಾ ದೇಶಗಳು ಅಸ್ತಿತ್ವಕ್ಕೆ ಬಂದವು. ಅವು ಬಹುಕಾಲ ಉಳಿಯದೆ ಅಖಿಮಿನಿಡ್ ಪರ್ಷಿಯನ್ ಸಾಮ್ರಾಜ್ಯದಲ್ಲಿ ಸೇರಿಹೋದವು.

ಪರ್ಷಿಯನ್ನರ ಕಾಲದಲ್ಲಿ ಹಲವು ಬಂದರು ನಗರಗಳನ್ನು ನಿರ್ಮಾಣ ಮಾಡಲಾಯಿತು. ಅನಟೋಲಿಯವನ್ನು ಹಲವಾರು ಸತ್ರಪಿಗಳನ್ನಾಗಿ ವಿಂಗಡಿಸಿ, ಅವುಗಳ ಆಡಳಿತಕ್ಕೆ ಸತ್ರಪಗಳನ್ನು (ಗವರ್ನರ್) ನೇಮಿಸಲಾಯಿತು. ಐದನೇ ಶತಮಾನದಲ್ಲಿ ನಡೆದ ಗ್ರೀಕೋ ಪರ್ಷಿಯನ್ ಯುದ್ಧಗಳು ಯೂರೋಪ್ ಚರಿತ್ರೆಗೆ ಭಾರಿ ತಿರುವು ನೀಡಿತು.ಪರ್ಷಿಯಾದ ದೊರೆ ಮೂರನೇ ಡೇರಿಯಸ್ ಮೇಲೆ ವಿಜಯ ಸಾಧಿಸಿ, ಅನಟೋಲಿಯ ಮೇಲೆ, ಅಲೆಕ್ಸಾಂಡರ್ ದಿ ಗ್ರೇಟ್ ಸಂಪೂರ್ಣ ಹಿಡಿತ ಸಾಧಿಸಿದ. ಅಲೆಕ್ಸಾಂಡರ್ ನಿಧನದ ನಂತರ ಅನಟೋಲಿಯ, ರೋಮ್ ನ ಅಧಿಪತ್ಯಕ್ಕೆ ಸಿಲುಕಿತು.

ನಾಲ್ಕನೇ ಶತಮಾನದಲ್ಲಿ ಕಾನ್ಸ್ ಸ್ಟಾಂಟಿನ್ ದಿ ಗ್ರೇಟ್, ಕಾನ್ ಸ್ಟಾಂಟಿನೋಪಲ್ ನಗರವನ್ನು ಆಡಳಿತಾತ್ಮಕ ಕೇಂದ್ರವನ್ನಾಗಿ ಮಾಡಿಕೊಂಡ. ನಂತರ ಬೈಜಂಟೈನರು, ಸೆಲ್ಜುಕರು ಆಡಳಿತ ನಡೆಸಿದ್ದಾರೆ. 12 ಮತ್ತು 13ನೇ ಶತಮಾನದಲ್ಲಿ ಅನಟೋಲಿಯ ಪ್ರಕ್ಷುಬ್ಧ ಸ್ಥಿತಿಯಲ್ಲಿತ್ತು. ಟರ್ಕಿ ಬುಡಕಟ್ಟು ಜನ ಆಡಳಿತದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದರು. ಬೈಜಂಟೈನರು ತಮ್ಮ ಆಡಳಿತ ಅಲ್ಲಿ ಮುಂದುವರಿಸಲು ಭಾರಿ ಪ್ರಯತ್ನ ನಡೆಸಿದರು.
1285ರಲ್ಲಿ ಅಂಕಾರ ಮತ್ತು ಕಾನ್ ಸ್ಟಾಂಟಿನೋಪಲ್ ನಡುವೆ ಒಂದಷ್ಟು ಪ್ರದೇಶವನ್ನು ಟರ್ಕಿ ಬುಡಕಟ್ಟು ಜನಾಂಗದ ರಾಜ ಗೆದ್ದು, ತನ್ನ ರಾಜ್ಯ ಸ್ಥಾಪಿಸಿದ. ನಂತರ ಆತನ ಮಗ ಒಸ್ಮಾನ್ ಅಧಿಕಾರದ ಚುಕ್ಕಾಣಿ ಹಿಡಿದ. ಟರ್ಕಿ ಭಾಷೆಯಲ್ಲಿ ಒಸ್ಮಾನ್ ನನ್ನು ಓತ್ಮಾನ್ ಎನ್ನುತ್ತಾರೆ. ಆತನ ಸಾಧನೆಗಳಿಂದಲೇ ಅದು ಆಟ್ಟೋಮನ್ ಸಾಮ್ರಾಜ್ಯ ಎಂದು ಹೆಸರಾಗಿದ್ದು.ಬೈಜಂಟೈನ್ ಕೋಟೆಯನ್ನು ಗೆಲ್ಲುವುದು ಆಟ್ಟೋಮನ್ ಟರ್ಕಿಗಳಿಗೆ ಕಷ್ಟವಾಗಿತ್ತು. ಹೀಗಾಗಿ ಅವರು ಗ್ರಾಮೀಣ ಪ್ರದೇಶದಲ್ಲಿ ಲೂಟಿ ಮಾಡಲು ಆರಂಭಿಸಿದರು. ಕಡೆಗೆ ಬೈಜಂಟೈನ್ ಬಗ್ಗಿತು. ಮೊದಲ ಯಶಸ್ಸಾಗಿ ಬುರ್ಸಾ ನಗರ ಟರ್ಕಿಗಳ ಪಾಲಾಯಿತು. ನಂತರ ಬಾಲ್ಖನ್ಸ್ ಪ್ರದೇಶವನ್ನು ಗೆದ್ದರು. 1389ರಲ್ಲಿ ಸರ್ಬಿಯಾ, 1393ರಲ್ಲಿ ಬಲ್ಗೇರಿಯಾ ಆಟ್ಟೋಮನ್ ಸಾಮ್ರಾಜ್ಯದ ಪಾಲಾಯಿತು.

ಆಟ್ಟೋಮನ್ ಟರ್ಕರ ಯಶಸ್ಸು ನಿಧಾನವಾಗಿ ಮುಂದುವರಿದು, 1458-60ರಲ್ಲಿ ಅಥೆನ್ಸ್ ಮತ್ತು ಗ್ರೀಕ್ ಪರ್ಯಾಯ ದ್ವೀಪವೂ, ಅವರ ಆಡಳಿತಕ್ಕೆ ಒಳಪಟ್ಟಿತು. ವೆನ್ನಿಸ್ ಪಟ್ಟಣ, ಬೋಸ್ನಿಯಾಗಳನ್ನು ಗೆದ್ದು ಇಸ್ಲಾಮೀಕರಣ ಮಾಡುವಲ್ಲಿ ಅವರು ಸಾಕಷ್ಟು ಯಶಸ್ವಿಯಾದರು.ವಾಯುವ್ಯ ಗ್ರೀಕ್ ನಿಂದ ಮಧ್ಯ ಪ್ರಾಚ್ಯದ ವರೆಗೆ ಆಟ್ಟೋಮನ್ ಸಾಮ್ರಾಜ್ಯ ವಿಸ್ತಾರಗೊಂಡಿತ್ತು. ಗ್ರೀಕರಿಂದ ಹಳೇ ರೋಂ ರಾಜಧಾನಿ ಕಾನ್ ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡು, ಅದಕ್ಕೆ ಇಸ್ತಾನ್ ಬುಲ್ ಎಂದು ಹೆಸರಿಟ್ಟರು.

17ನೇ ಶತಮಾನದ ಹೊತ್ತಿಗೆ ಒಂದು ಕಡೆ ರಷ್ಯಾ, ಇನ್ನೊಂದು ಕಡೆ ಆಸ್ಟ್ರಿಯಾ, ಮತ್ತೊಂದು ಕಡೆ ಪರ್ಷಿಯಾ ಬಲವಾಗಿ ತಲೆ ಎತ್ತಿತ್ತು. ರಷ್ಯಾ ಜೊತೆ 17ನೇ ಶತಮಾನದ ಅಂತ್ಯದಲ್ಲೊಂದು ಮತ್ತು 18 ನೇ ಶತಮಾನದ ಆರಂಭದಲ್ಲಿ ಮತ್ತೊಂದು ಯುದ್ಧ ನಡೆಯಿತು. ಇವುಗಳಲ್ಲಿ ರಷ್ಯಾ ಯಶಸ್ಸನ್ನು ಸಾಧಿಸಿ, ಕ್ರಿಮಿಯಾ ಪರ್ಯಾಯ ದ್ವೀಪದ ಬಂದರುಗಳನ್ನು ವಶಪಡಿಸಿಕೊಂಡಿತು.1911ರಲ್ಲಿ ಇಟಲಿ ಪಡೆಗಳು, ಟರ್ಕಿಯ ಪ್ರಾಂತ್ಯವಾಗಿದ್ದ ಲಿಬಿಯಾವನ್ನು ಆಕ್ರಮಿಸಿಕೊಂಡು, ಬಾಲ್ಕನ್ ಪ್ರದೇಶದ ಗ್ರೀಸ್, ಸೆರ್ಬಿಯಾ, ಬಲ್ಗೇರಿಯಾ ದೇಶಗಳೂ ಆಟ್ಟೋಮನ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯ ಪಡೆದುಕೊಂಡವು. ಪ್ರಥಮ ವಿಶ್ವಸಮರದ ನಂತರ ವಿಶಾಲ ಟರ್ಕಿಯ ವಿಸ್ತೀರ್ಣವೂ ಕಿರಿದಾಯಿತು. ಆಟ್ಟೋಮನ್ ಸಾಮ್ರಾಜ್ಯದ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು.

ಆ ಸಮಯದಲ್ಲಿ ಮುಸ್ತಫಾ ಕೆಮಾಲ್ ನೇತೃತ್ವದಲ್ಲಿ ರಾಷ್ಟ್ರೀಯವಾದಿ ಕ್ರಾಂತಿಕಾರಿ ಚಳವಳಿ ನಡೆಯಿತು. ಇದರ ಪರಿಣಾಮವಾಗಿ ಅಂತಾರಾದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಹೀಗಾಗಿ ಮುಸ್ತಫಾ ಕೆಮಾಲ್ ಅವರನ್ನು ಅಲ್ಲಿನ ಜನತೆ ಅತಾತುರ್ಕ್ ಅಥವಾ ಟರ್ಕಿಯ ರಾಷ್ಟ್ರಪಿತ ಎಂದು ಗೌರವಿಸುತ್ತಾರೆ.2016 ಅಂದಾಜಿನಂತೆ ದೇಶದ ಜನಸಂಖ್ಯೆ 7.96,22,000 ರಷ್ಟಿದ್ದು, ಜನಸಾಂದ್ರತೆ 103.5 ಆಗಿದೆ. ರಾಜಧಾನಿ ಅಂಕಾರಾದ ಜನಸಂಖ್ಯೆ 47,50,000.ಟರ್ಕಿಯ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) ಕಳೆದ ಐದು ದೇಶಗಳಲ್ಲಿ ಭಾರಿ ಬದಲಾವಣೆಯನ್ನೇನು ಕಂಡಿಲ್ಲ. 2010ರಲ್ಲಿ 7,31,114 ಅಮೇರಿಕನ್ ಡಾಲರ್ ಇದ್ದ ಜಿಡಿಪಿ, 2014ರಲ್ಲಿ 7,98,414 ಅಮೇರಿಕನ್ ಡಾಲರ್ ನಷ್ಟಾಗಿತ್ತು.

2014ರಲ್ಲಿ ತಲಾ ಜಿಡಿಪಿ 10,299 ಅಮೇರಿಕನ್ ಡಾಲರ್ ನಷ್ಟಿದೆ.ಒಟ್ಟು ಆರ್ಥಿಕತೆಯಲ್ಲಿ ಕೃಷಿಯ ನಿವ್ವಳ ಮೌಲ್ಯವರ್ಧನೆ (ಜಿವಿಎ) ಶೇ.8, ಕೈಗಾರಿಕೆಯದು ಶೇ.27.1 ಮತ್ತು ಸೇವಾ ವಲಯದ್ದು 64.9ರಷ್ಟಿತ್ತು. ಒಟ್ಟು ಕಾರ್ಮಿಕ ಬಲದ ಶೇ.9.9ರಷ್ಟು ನಿರುದ್ಯೋಗ ಕಾಡುತ್ತಿತ್ತು. ಮಹಿಳಾ ಜನಸಂಖ್ಯೆಯ ಶೇ.30.4, ಪುರುಷರ ಪೈಕಿ ಶೇ. 71.5 ರಷ್ಟು ಕಾರ್ಮಿಕ ಬಲವಾಗಿದ್ದಾರೆ. ಅಂದರೆ ಮಹಿಳೆಯರ ಪಾಲ್ಗೊಳ್ಳುವಿಕೆ ಇನ್ನೂ ಹೆಚ್ಚಾಗಲು ಅವಕಾಶಗಳಿವೆ.

ಜರ್ಮನಿ, ಯುನೈಟೆಡ್ ಕಿಂಗ್ ಡಂ ಮತ್ತು ಇರಾಕ್ ದೇಶಗಳೊಂದಿಗೆ ಉತ್ತಮ ರಫ್ತು ವಹಿವಾಟು ಹಾಗೂ ಚೈನಾ, ಜರ್ಮನಿ ಹಾಗೂ ರಷ್ಯಾ ಒಕ್ಕೂಟದದೊಂದಿಗೆ ಹೆಚ್ಚಿನ ಆಮದು ವಹಿವಾಟನ್ನು ನಡೆಸುತ್ತಿದೆ. 2015ರಲ್ಲಿ ಶೇ.73.4ರಷ್ಟು ಜನ ನಗರ ವಾಸಿಗಳಾಗಿದ್ದರು. ಈ ದೇಶದಲ್ಲಿ ಶೇ.200ರಷ್ಟು ಅವಲಂಬಿತರು ಇದ್ದಾರೆ. ಅಂದರೆ 14 ವರ್ಷ ಒಳಗಿನ ಮತ್ತು 65 ವರ್ಷ ವಯಸ್ಸು ಮೇಲ್ಪಟ್ಟ ಪ್ರತಿ 100 ಜನರಿಗೆ 15-64ವರ್ಷ ವಯಸ್ಸಿನ ಕೇವಲ 50 ಜನ ಇದ್ದಾರೆ.

2014ರ ಹೊತ್ತಿಗೆ ಶೇ.94ರಷ್ಟು ಜನ ಮೊಬೈಲ್ ಫೋನ್ ಹೊಂದಿದವರಾಗಿದ್ದರೆ, ಶೇ.51ರಷ್ಟು ಜನ ಇಂಟರ್ನೆಟ್ ಉಪಯೋಗಿಸುತ್ತಿದ್ದರು.ಇತ್ತೀಚಿನ ಸಿರಿಯಾ ಬಿಕ್ಕಟ್ಟಿನಿಂದ ಟರ್ಕಿ ವಲಸೆಗಾರರ ಸಮಸ್ಯಗೆ ಸಿಲುಕಿಕೊಂಡಿದೆ. 2016ರ ಹೊತ್ತಿಗೆ ಟರ್ಕಿಯಲ್ಲಿ ವಲಸೆಗಾರರ ಸಂಖ್ಯೆ ಸುಮಾರು 26 ಲಕ್ಷದಷ್ಟಿತ್ತು. ಈ ಹಿಂದೆ ಇರಾಕಿನ ಖುರ್ದ್ ಗಳು, ಬೋಸ್ನಿಯಾ ಮುಸ್ಲಿಮರು ಮತ್ತು ಆಫ್ಘನ್ನರಿಗೆ ಟರ್ಕಿ ಆಶ್ರಯ ತಾಣವಾಗಿತ್ತು. ಆಗ ಇಷ್ಟೊಂದು ಆಶ್ರಯ ಹುಡುಕಿಕೊಂಡು ಇಷ್ಟೊಂದು ಜನ ಬಂದಿರಲಿಲ್ಲ. ಈ ಸಮಸ್ಯೆಯನ್ನು ಎದುರಿಸುವ ಸವಾಲು ಟರ್ಕಿ ಮುಂದಿದೆ.

[/fusion_text][/fusion_builder_column][/fusion_builder_row][/fusion_builder_container]

Categories
asia

ಸಿರಿಯಾ

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಇತಿಹಾಸದುದ್ದಕ್ಕೂ ಏಷಿಯಾ, ಯೂರೋಪ್ ಮತ್ತು ಆಫ್ರಿಕಾ ಖಂಡಗಳ ಕೊಂಡಿಯಂತಿದ್ದ ‘ಗ್ರೇಟರ್ ಸಿರಿಯಾ’ದ ಭಾಗವಾಗಿರುವ ಇಂದಿನ ಸಿರಿಯಾ ಮೂಲಭೂತವಾದಿಗಳ ಕಪಿಮುಷ್ಠಿಯಲ್ಲಿ ಸಿಲುಕಿ ನಲುಗುತ್ತಿದೆ.ಸಿರಿಯನ್ ಅರಬ್ ರಿಪಬ್ಲಿಕ್ ಎನ್ನುವ ಅಧಿಕೃತ ಹೆಸರನ್ನು ಹೊಂದಿರುವ, ಪಶ್ಚಿಮ ಏಷಿಯಾ ಪ್ರದೇಶಕ್ಕೆ ಸೇರಿರುವ ಈ ದೇಶದ ವಿಸ್ತೀರ್ಣ 1,85,180 ಚ.ಕೀ. 2016ರ ಅಂದಾಜು ಜನಸಂಖ್ಯೆ 1,85,64,000. ರಾಜಧಾನಿ ಡಮಾಸ್ಕಸ್. ಸಿರಿಯನ್ ಪೌಂಡ್ (ಎಸ್ ವೈ ಪಿ) ಇಲ್ಲಿನ ಕರೆನ್ಸಿ.

ಅರೆಶುಷ್ಕ, ಮರುಭೂಮಿ ಮತ್ತು ಕಿರಿದಾದ ಕಡಲ ತೀರ, ಮತ್ತು ಪಶ್ಚಿಮ ದಿಕ್ಕಿನಲ್ಲಿ ಪರ್ವತಗಳನ್ನು ಹೊಂದಿರುವ ಸಿರಿಯಾದಲ್ಲಿ, ಪೆಟ್ರೋಲಿಯಂ, ಫಾಸ್ಫೇಟ್, ಮ್ಯಾಂಗನೀಸ್, ಕಬ್ಬಿಣ, ಜಿಪ್ಸಂ ಮುಂತಾದ ನೈಸರ್ಗಿಕ ಸಂಪನ್ಮೂಲಗಳು ಹೇರಳವಾಗಿವೆ.ಗ್ರೇಟರ್ ಸಿರಿಯಾ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗುವ ಪ್ರದೇಶ ಇಂದು ಸಿರಿಯಾ, ಲೆಬನಾನ್, ಇಸ್ರೇಲ್ ಮತ್ತು ಜೋರ್ಡಾನ್ ದೇಶಗಳಾಗಿ ವಿಭಜನೆಯಾಗಿವೆ. ಇಸ್ರೇಲ್, ಲೆಬನಾನ್, ಇರಾಕ್, ಜೋರ್ಡಾನ್ ಗಳನ್ನು ಗಡಿದೇಶಗಳನ್ನಾಗಿ ಹೊಂದಿದೆ. ಈ ದೇಶ ಎರಡು ಸಕ್ರಿಯ ಜ್ವಾಲಾಮುಖಿಗಳನ್ನು ಹೊಂದಿದೆ.ಮೂರು ಖಂಡಗಳ ವ್ಯಾಪಾರ, ವಹಿವಾಟು ನಡೆಸಲು ಗ್ರೇಟರ್ ಸಿರಿಯಾ ಮೂಲಕವೇ ಹಾದುಹೋಗಬೇಕಾಗಿದ್ದರಿಂದ ಒಂದು ಪ್ರಮುಖ ಪ್ರದೇಶವಾಗಿತ್ತು. ಇದು ಈ ಪ್ರದೇಶದ ರಾಜಕೀಯ ಸ್ವಾಮಿತ್ವದ ಹೋರಾಟಗಳಿಗೆ ದಾರಿ ಮಾಡಿಕೊಟ್ಟಿತು.

ಕ್ರಿ.ಪೂ.2000ದಿಂದಲೂ ಬಲಾಢ್ಯ ಸಾಮ್ರಾಜ್ಯಗಳು ಸಿರಿಯಾವನ್ನು ಆಳಿದೆ. ಪ್ರಾಚೀನ ನಗರ ಎಬ್ಲಾ, ಕ್ರಿ.ಪೂ.2400ರ ಸಮಯದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಅಂದಾಜು ಮಾಡಲಾಗಿದೆ. ಅಲೆಪ್ಪೋ ನಗರದ ಸಮೀಪ ಈ ಪ್ರಾಚೀನ ನಗರದ ಜಾಗವನ್ನು 1970ರಲ್ಲಿ ಪತ್ತೆಹಚ್ಚಲಾಗಿದ್ದು, ಅದು ಅನಟೋಲಿಯ (ಇಂದಿನ ಟರ್ಕಿ), ಮೆಸೊಪೊಟಮಿಯ (ಇಂದಿನ ಇರಾಕ್), ಈಜಿಪ್ಟ್ ಜೊತೆ ವಾಣಿಜ್ಯ ಸಂಬಂಧಗಳನ್ನು ಇಟ್ಟುಕೊಂಡಿದ್ದ ಬಗ್ಗೆ ಸಾಕ್ಷ್ಯಾಧಾರಗಳು ದೊರಕಿವೆ. ಎಬ್ಲಾದಲ್ಲಿ ಮಾತನಾಡುತ್ತಿದ್ದ ಭಾಷೆ ಅತ್ಯಂತ ಪ್ರಾಚೀನ ಸೆಮಿಟಿಕ್ ಭಾಷೆ ಎಂದು ಪರಿಗಣಿಸಲಾಗಿದೆ.

ಮೆಸೊಪೊಟಮಿಯದ ರಾಜ ಎಬ್ಲಾ ನಗರವನ್ನು ನಾಶಪಡಿಸಿದ ನಂತರ, ಅಮೋರೈಟ್ಸ್ ಆ ಪ್ರದೇಶವನ್ನು ಆಳಿದರು. ಕ್ರಿ.ಪೂ.1600ರ ಹೊತ್ತಿಗೆ ಅಧಿಕಾರದ ಚುಕ್ಕಾಣಿ ಈಜಿಪ್ಟಿಯನ್ನರ ಕೈಗೆ ಹೋಯಿತು. ನಂತರ ಸಿರಿಯಾವನ್ನು ಫೊನಿಷಿಯನ್ನರು, ಕೇನನೈಟ್ ಗಳು (ಗ್ರೀಕ್-ಮೆಸಿಡೋನಿಯ ಸಾಮ್ರಾಜ್ಯ), ಹೀಬ್ರೂಗಳು, ಅರಮೇನಿಯನ್ನರು, ಅಸ್ಸಿರಿಯನ್ನರು, ಬ್ಯಾಬಿಲೋನದವರು, ಪರ್ಷಿಯನ್ನರು, ಸೆಲುಸಿಡ್ ಗಳು (ಗ್ರೀಕ್-ಮೆಸಿಡೋನಿಯ ಸಾಮ್ರಾಜ್ಯ), ನೆಬಟಿಯನ್ನರು ( ಇಂದಿನ ಜೋರ್ಡಾನ್) ರೋಮನ್ನರು, ಮುಸ್ಲಿಂ ಅರಬ್ಬರು, ಆಟೋಮನ್ ಟರ್ಕ್ ಗಳು, ಪಾಶ್ಚಿಮಾತ್ಯ ಮಿತ್ರಪಡೆಗಳು ಮತ್ತು ಫ್ರೆಂಚರು ಈ ದೇಶವನ್ನು ಆಳಿದ್ದಾರೆ.

ಕ್ರಿ.ಪೂ.333ರಲ್ಲಿ ಅಲೆಕ್ಸಾಂಡರ್ ಆಕ್ರಮಣದೊಂದಿಗೆ ಸಿರಿಯಾದೊಳಗೆ ಪಾಶ್ಚಿಮಾತ್ಯ ಚಿಂತನೆಗಳು ಹರಿದುಬಂದವು. ಅಲೆಕ್ಸಾಂಡರ್ ನಿಧನದ ನಂತರ ಸೆಲುಸಿಡ್ ಗಳು ಡಮಾಸ್ಕಸ್ ನಗರವನ್ನು ರಾಜಧಾನಿಯಾಗಿಸಿಕೊಂಡು ಮೂರು ಶತಮಾನಗಳ ಕಾಲ ಗ್ರೇಟರ್ ಸಿರಿಯಾವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದರು. ಕ್ರಿ.ಶ. ಮೊದಲನೇ ಶತಮಾನದಲ್ಲಿ ಕ್ರೈಸ್ತಧರ್ಮದ ಪ್ರವೇಶವಾಯಿತು.ಏಳನೇ ಶತಮಾನದವರೆಗೆ ಸಿರಿಯಾ ಕ್ರೈಸ್ತಧರ್ಮದ ಕೇಂದ್ರವಾಗಿತ್ತು. ಕ್ರಿ.ಶ.635ರಲ್ಲಿ ಅಲ್ಲಿಗೆ ಮುಸ್ಲಿಂ ಅರಬರ ದಾಳಿ ನಡೆಯಿತು. ಉಮೇಯ್ಯದ್ ಸಂತತಿಯ ಖಲೀಫರ ಆಡಳಿತಾವಧಿಯಲ್ಲಿ ಸಿರಿಯದ ಬಹುತೇಕ ಜನ ಮುಸ್ಲಿಮರಾಗಿ ಮತಾಂತರಗೊಂಡರು.

ನಂತರ ಉಮೇಯ್ಯದ್ ಗಳನ್ನು ಸೋಲಿಸಿದ ಅಬ್ಬೇಸಿದ್ ಸಂತತಿ ಖಲೀಫರು ಬಾಗ್ಧಾದ್ ನಗರವನ್ನು ಕೇಂದ್ರವನ್ನಾಗಿಸಿಕೊಂಡು ಖಲೀಫನ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಆಗ ಅವರ ರಾಜ್ಯದೊಳಗೆ ಸಿರಿಯ ಕೇವಲ ಒಂದು ಪ್ರಾಂತ್ಯವಾಗಿತ್ತು. ನಂತರ 1516ರಲ್ಲಿ ಆಟ್ಟೋಮನ್ ಸಾಮ್ರಾಜ್ಯದ ಭಾಗವಾದ ಸಿರಿಯಾ, 400 ವರ್ಷಗಳ ಕಾಲ ಅವರ ಆಳ್ವಿಕೆಗೆ ಒಳಪಟ್ಟಿತು.ಮೊದಲನೇ ವಿಶ್ವ ಸಮರ ಆರಂಭವಾಗುವ ಹೊತ್ತಿಗೆ, ಯೂರೋಪಿನ ರಾಷ್ಟ್ರಗಳು, ರಷ್ಯಾದ ಪ್ರಭಾವವನ್ನು ನಿಯಂತ್ರಿಸಲು ಮತ್ತು ತಮ್ಮ ತೈಲ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಿರಿಯಾ ಮೇಲೆ ನಿಯಂತ್ರಣ ಸಾಧಿಸುವ ಪ್ರಯತ್ನ ಮಾಡಿದರು. ಇನ್ನೊಂದು ಕಡೆ ಜ್ಯೂಗಳು ಪ್ಯಾಲೆಸ್ಟೈನ್ ಮೇಲೆ ಹಿಡಿತ ಸಾಧಿಸಲು ಪ್ರಯತ್ನದಲ್ಲಿದ್ದರು. ಮಧ್ಯಪ್ರಾಚ್ಯದಲ್ಲಿ ತಮ್ಮ ಅಧಿಕಾರ ಸ್ಥಾಪಿಸಿದ್ದ ಫ್ರೆಂಚರು ಅದನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದರು. ಕಡೆಗೆ ಸಿರಿಯಾ ಮತ್ತು ಲೆಬೆನಾನ್ ಫ್ರೆಂಚ್ ಪ್ರಾಬಲ್ಯಕ್ಕೆ ಹಾಗೂ ಟ್ರಾನ್ಸ್ ಜೋರ್ಡಾನ್ (ಜೊರ್ಡಾನ್ ನದಿಯ ಪೂರ್ವಭಾಗ, ಈಗ ಬಹುತೇಕ ಜೋರ್ಡಾನ್ ದೇಶದಲ್ಲೇ ಇದೆ) ಮತ್ತು ಇರಾಕ್ ಬ್ರಿಟಿಷರ ಆಡಳಿತಕ್ಕೆ ಸಿಕ್ಕಿತು.

ಈ ನಡುವೆ 1919-20ರಲ್ಲಿ ಒಂದು ವರ್ಷದ ಅಲ್ಪಕಾಲೀನ ಸ್ವಾತಂತ್ರ್ಯವನ್ನು ಈ ದೇಶ ಅನುಭವಿಸಿತು. ಈ ಅಲ್ಪಕಾಲೀನ ಸ್ವಾತಂತ್ರ್ಯವೇ ಆಧುನಿಕ ಅರಬ್ ರಾಷ್ಟ್ರೀಯತೆಗೆ ದಾರಿ ಮಾಡಿಕೊಟ್ಟಿತು. ಫ್ರೆಂಚ್ ಆಡಳಿತದ ಕಾಲದಲ್ಲಿ ಪತ್ರಿಕಾ ಸ್ವಾತಂತ್ರ್ಯ, ನಾಗರಿಕ ಹಕ್ಕುಗಳು, ರಾಜಕೀಯ ಚಟುವಟಿಕೆಗಳನ್ನು ದಮನ ಮಾಡಲಾಯಿತು. ಸಿರಿಯಾಗೆ ಒಂದು ಸಂವಿಧಾನ ರಚಿಸಿ, ಸ್ವಾಯುತ್ತತೆ ನೀಡಲು ಅದು ಹಿಂದೇಟು ಹಾಕಿತು. ಹೀಗಾಗಿ ಸಿರಿಯನ್ನರಲ್ಲಿ ಆಕ್ರೋಶ ಭುಗಿಲೆದ್ದಿತ್ತು. ಅಲ್ಪಸಂಖ್ಯಾತ ಡ್ರೂಜ್ ಸಮುದಾಯದವರ ಬಂಡಾಯದಿಂದ 1925ರಲ್ಲಿ ಸೇನಾ ಆಡಳಿತವನ್ನು ಹೇರಲಾಯಿತು. ಫ್ರೆಂಚರ ವಿರೋಧದ ನಡುವೆಯೂ ರಷ್ಯ ಮತ್ತು ಅಮೇರಿಕ 1944ರಲ್ಲಿ ಸಿರಿಯಾ ಮತ್ತು ಲೆಬನಾನ್ ಗೆ ಸಾರ್ವಭೌಮ ರಾಷ್ಟ್ರಗಳ ಸ್ಥಾನವನ್ನು ನೀಡಿತು. ಮರುವರ್ಷ ಬ್ರಿಟಿಷರೂ ಕೂಡ ಆ ಮಾನ್ಯತೆ ನೀಡಿದರು. ಸಿರಿಯಾಗೆ ಸ್ವಾತಂತ್ರ್ಯವನ್ನು ನೀಡುವಂತೆ ಈ ಮಿತ್ರರಾಷ್ಟ್ರಗಳು ಫ್ರಾನ್ಸ್ ಮೇಲೆ ಒತ್ತಡ ಹೇರಿದವು. ಆದರೆ 1946ರ ಫೆಬ್ರವರಿಯಲ್ಲಿ ಸಿರಿಯಾ ಬಿಟ್ಟು ಹೊರಡುವಂತೆ ವಿಶ್ವಸಂಸ್ಥೆ ಆದೇಶ ನೀಡಿ ನಿರ್ಣಯ ಕೈಗೊಳ್ಳುವವರೆಗೂ ಇದು ಸಾಧ್ಯವಾಗಲಿಲ್ಲ. ಏಪ್ರಿಲ್ 15, 1946ರಂದು ಫ್ರೆಂಚ್ ಪಡೆಗಳು ಸಿರಿಯಾ ನೆಲವನ್ನು ಬಿಟ್ಟು ತೆರಳಿದವು.

ದೇಶದ ಆಡಳಿತ 1971ರಿಂದ ಮೂವತ್ತು ವರ್ಷಗಳ ಕಾಲ ಸರ್ವಾಧಿಕಾರಿ ಹಫೀಜ್ ಅಲ್ ಅಸದ್ ಕೈಯಲ್ಲಿತ್ತು. ನಂತರ ಈಗ ಅವರ ಮಗ ಬಷರ್ ಅಲ್ ಅಸದ್ ಅಧ್ಯಕ್ಷರಾಗಿದ್ದಾರೆ. ಅಸದ್ ಆಡಳಿತದ ವಿರುದ್ಧ 2011ರಿಂದ ಆಡಳಿತ ವಿರೋಧಿ ದಂಗೆಗಳು ಪ್ರಾರಂಭವಾದವು. 2011-12ರಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳು ಬಿಕ್ಕಟ್ಟನ್ನು ಪರಿಹರಿಸಲು ಪ್ರಯತ್ನ ನಡೆಸಿದರು.ಈ ನಡುವೆ, 2013ರಲ್ಲಿ ಅಲ್ ಖೈದಾ, ಇರಾಕ್ ನ ಮುಖಂಡ ಅಬುಬಕರ್ ಅಲ್ ಬಾಗ್ದಾದಿ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಲಿವಾಂಟ್ (ಐಎಸ್ಐಎಲ್) ಸ್ಥಾಪಿಸಿದಾಗ ಆಂತರಿಕ ದಂಗೆ ಇನ್ನೊಂದು ಮಜಲು ತಲುಪಿತು. ಇರಾಕ್ ಇಸ್ರೇಲ್, ಪ್ಯಾಲೆಸ್ಟೇನ್, ಜೋರ್ಡಾನ್ ಮತ್ತು ಲೆಬನಾನ್ ಪ್ರದೇಶಕ್ಕೆ ಲಿವಾಂಟ್ ಎನ್ನಲಾಗುತ್ತದೆ. ಅದೇ ಸಂಘಟನೆಯೇ ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಅಂಡ್ ಸಿರಿಯಾ – ಐಎಸ್ಐಎಸ್- ಐಸಿಸ್. ಖಲೀಫನ ಸಾಮ್ರಾಜ್ಯ ರಚಿಸಲು ಅಬುಬಕರ್ ಅಲ್ ಬಾಗ್ದಾದಿಯ ಉಗ್ರ ಸಂಘಟನೆ ಆಕ್ರಮಣಕಾರಿಯಾಗಿ ಮುನ್ನುಗ್ಗತೊಡಗಿತು. ಅಲ್ ರಖಾ ನಗರವನ್ನು ಕೇಂದ್ರವನ್ನಾಗಿಸಿಕೊಂಡು ಯೂಫ್ರಟಿಸ್ ಕಣಿವೆ ಮೇಲೆ ಹತೋಟಿ ಸಾಧಿಸಿತು. ನಂತರ ಇರಾಕಿನ ಮೊಸುಲ್ ನಗರ ಕೂಡ ಐಸಿಸ್ ವಶವಾಯಿತು. ಉಗ್ರಪಡೆಗಳ ದಮನಕ್ಕೆ ಮೊದಲು ಅಮೇರಿಕ ಮತ್ತು ಮಿತ್ರಪಡೆ ಹಾಗೂ ನಂತರ ರಷ್ಯಾ ಕೂಡ ಸೈನ್ಯವನ್ನು ಕಳಿಸಿತು. ಮೊಸುಲ್ ನಗರವನ್ನು ಉಗ್ರರ ವಶದಿಂದ ಬಿಡಿಸಲು ಅಂತಾರಾಷ್ಟ್ರೀಯ ಪಡೆಗಳಿಗೆ ಸಾಧ್ಯವಾಗಿದೆ. ಕ್ರಮೇಣ ಉಗ್ರರ ಹಿಡಿತದಿಂದ ಸಿರಿಯಾ ಬಿಡುಗಡೆಯಾಗತೊಡಗಿದೆ.

ಇಂತಹ ಪರಿಸ್ಥಿತಿಯಲ್ಲಿರುವ ಸಿರಿಯಾದ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 2010ರಲ್ಲಿ 60465 ದಶಲಕ್ಷ ಅಮೇರಿಕನ್ ಡಾಲರ್ ಇದ್ದಿದ್ದು, 2014ರಲ್ಲಿ 34,184 ದಶಲಕ್ಷ ಅಮೇರಿಕನ್ ಡಾಲರ್ ಗೆ ಇಳಿದಿದೆ. ತಲಾ ಜಿಡಿಪಿ 2010ರಲ್ಲಿ 2918 ಇದ್ದಿದ್ದು, 2014ರ ಹೊತ್ತಿಗೆ ಅದು 1821ಕ್ಕೆ ಇಳಿದಿದೆ.2014ರಲ್ಲಿ ಆರ್ಥಿಕತೆಯ ನಿವ್ವಳ ಮೌಲ್ಯವರ್ಧನೆ (ಜಿವಿಎ) ಕೃಷಿ ಶೇ.20.6, ಕೈಗಾರಿಕೆ ಶೇ.30.2 ಮತ್ತು ಸೇವಾ ಕ್ಷೇತ್ರ ಶೇ.49.2ರಷ್ಟು ಹೊಂದಿದೆ. ಹೊರಗೆ ದುಡಿಯುವ ಮಹಿಳೆಯರ ಸಂಖ್ಯೆ ತೀರಾ ಕಡಿಮೆ. 100 ಮಹಿಳೆಯರ ಪೈಕಿ ಕೇವಲ 12.3ರಷ್ಟು ಮಾತ್ರ ಕಾರ್ಮಿಕ ಬಲವಾಗಿದ್ದಾರೆ; ಶೇ.71.6ರಷ್ಟು ಪುರುಷರು ಕಾರ್ಮಿಕ ಬಲವಾಗಿದ್ದಾರೆ. ಪ್ರಜೆಗಳ ಆರೋಗ್ಯಕ್ಕಾಗಿ ದೇಶದ ಜಿಡಿಪಿಯ ಶೇ.3.3 ರಷ್ಟು ಮಾತ್ರ. ಶೇ.71ರಷ್ಟು ಜನ ಮೊಬೈಲ್ ಹಾಗೂ ಶೇ.28.1ರಷ್ಟು ಜನ ಇಂಟರ್ನೆಟ್ ಬಳಸುತ್ತಿದ್ದಾರೆ.

ದೇಶದಲ್ಲಿ ಹಲವಾರು ವರ್ಷಗಳಿಂದ ತುಂಬಿರುವ ಅಶಾಂತಿಯಿಂದಾಗಿ ವಿವಿಧ ದೇಶಗಳಿಗೆ ಜನ ವಲಸೆ ಹೋಗುತ್ತಿರುವುದರಿಂದ ಜನಸಂಖ್ಯೆ ಕಡಿಮೆಯಾಗತ್ತಿದ್ದು, 2010-2015 ಜನಸಂಖ್ಯೆ ವೃದ್ಧಿಯ ಪ್ರಮಾಣ -2.3. ಈ ಆಂತರಿಕ ಸಂಘರ್ಷದಲ್ಲಿ 4 ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಏಪ್ರಿಲ್ 2016ರಲ್ಲಿ ಅಂದಾಜು ಮಾಡಿದೆ. ಡಿಸೆಂಬರ್ 2016ರ ಹೊತ್ತಿಗೆ ಒಂದು ಕೋಟಿ 35 ಲಕ್ಷ ಜನರಿಗೆ ಮಾನವೀಯ ನೆರವಿನ ಅವಶ್ಯಕತೆ ಇದೆ. ಈ ಪೈಕಿ ದೇಶದಲ್ಲೇ 63 ಲಕ್ಷ ಜನ ಸ್ಥಳಾಂತರಗೊಂಡಿದ್ದು, ಹೊರದೇಶಗಳಿಗೆ 48 ಲಕ್ಷ ಜನ ವಲಸೆ ಹೋಗಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಪ್ರಾಣ ಉಳಿಸಿಕೊಳ್ಳಲು ಮತ್ತು ಜೀವನೋಪಾಯಕ್ಕಾಗಿ ಯೂರೋಪಿನ ಕೆಲವು ದೇಶಗಳಿಗೆ ವಲಸೆ ಹೋಗುತ್ತಿರುವುದು, ನೆರೆಯ ದೇಶಗಳಿಗೂ ಹೊಸ ಸಮಸ್ಯೆ ತಂದಿಟ್ಟಿದೆ.

[/fusion_text][/fusion_builder_column][/fusion_builder_row][/fusion_builder_container]

Categories
asia

ಕಿರ್ಗಿಸ್ತಾನ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಅಪಾರ ಪ್ರಮಾಣದ ಜಲವಿದ್ಯುತ್ ಸಂಪನ್ಮೂಲ ಲಭ್ಯವಿರುವ, ಚಿನ್ನ ಮತ್ತು ಅಪರೂಪದ ಯುರೇನಿಯಂ ಖನಿಜಗಳನ್ನು ಒಡಲಲ್ಲಿ ಹೊಂದಿರುವ ನಿಸರ್ಗ ಸುಂದರ ದೇಶ ಕಿರ್ಗಿಸ್ತಾನ್ (Kyrgyzstan).ಮಧ್ಯ ಏಷಿಯಾ ಪ್ರದೇಶದಲ್ಲಿರುವ ಈ ದೇಶ ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ನೆಫಲೈನ್, ಪಾದರಸ , ಸೀಸ ಮತ್ತು ಸತುವು ಮುಂತಾದ ಸಂಪನ್ಮೂಲಗಳನ್ನು ಹೊಂದಿದೆ.ಈ ದೇಶದ ವಿಸ್ತೀರ್ಣ1,99,949ಚ.ಕಿ.ಮೀ. ಜನಸಂಖ್ಯೆ 2016ರ ಅಂದಾಜಿನಂತೆ 60.34 ಲಕ್ಷ ಮಾತ್ರ. ಹೋಲಿಸಿದಲ್ಲಿ ಜನಸಂಖ್ಯೆ ಕಡಿಮೆ. ಅಂದರೆ ಜನಸಾಂದ್ರತೆ ಪ್ರತಿ ಚ.ಕಿ.ಮೀ ಗೆ ಕೇವಲ 31.5 ಮಾತ್ರ. ದೇಶದ ಬಹುಭಾಗದಲ್ಲಿ ಟಿಯೆನ್ ಶಾನ್ (Tien shan) ಮತ್ತು ಪಮೀರ್ (pamir) ಪರ್ವತ ಶ್ರೇಣಿಗಳನ್ನು ಹೊಂದಿದ್ದು, ಶೇ.90ರಷ್ಟು ಭೂ ಪ್ರದೇಶ ಸಮುದ್ರಮಟ್ಟದಿಂದ 1500 ಮೀ. ಗೂ ಎತ್ತರದಲ್ಲಿರುವುದು ಕಿರ್ಗಿಸ್ತಾನದ ವೈಶಿಷ್ಟ್ಯ.

ಎತ್ತರದ ಹಿಮಚ್ಛಾದಿತ ಶಿಖರಗಳಿಂದ ಹರಿಯುವ ನದಿ ಮತ್ತು ತೊರೆಗಳಿಂದ ಈ ದೇಶದಲ್ಲಿ ನೀರು ಸಮೃದ್ಧವಾಗಿದೆ. ಚೈನಾ ಗಡಿಯಲ್ಲಿರುವ ವಿಕ್ಟರಿ ಶಿಖರ ಸಮುದ್ರಮಟ್ಟದಿಂದ 24,406 ಅಡಿ ಇದ್ದರೆ, ಕಜಕಸ್ತಾನ ಗಡಿಯಲ್ಲಿನ ಖಾನ್ ಟೆಂಗ್ರಿ ಶಿಖರದ ಎತ್ತರ 22,949 ಅಡಿ. ಕಿರ್ಗಿಸ್ತಾನದ ಬಹುತೇಕ ನದಿಗಳು ಸಿರ್ ದರಿಯಾ (Syr dariya) ನದಿಯನ್ನು ಸೇರಿಕೊಳ್ಳುತ್ತವೆ. ಕಿರ್ಗಿಸ್ತಾನ್ ದಲ್ಲಿ ಸುಮಾರು 2000 ಸರೋವರಗಳಿವೆ. ಈ ದೇಶದ ಉತ್ತರ ಭಾಗದಲ್ಲಿರುವ ಚು ಮತ್ತು ತಲಸ್ ನದಿ ಕಣಿವೆಗಳು ಮಾತ್ರ ತಗ್ಗು ಪ್ರದೇಶದಲ್ಲಿವೆ.

ಇದರ ರಾಜಧಾನಿ ಬಿಶ್ಕೇಕ್ (Bishkek) ನಗರಕ್ಕೆ ಸೋವಿಯತ್ ಶಕೆಯಲ್ಲಿ ಫ್ರಂಜ್ (Frunze) ಎನ್ನುವ ಹೆಸರಿತ್ತು. ರಾಜಧಾನಿಯ ಜನಸಂಖ್ಯೆ 8.65 ಲಕ್ಷ. ಇಲ್ಲಿನ ಕರೆನ್ಸಿ ಸಾಮ್ (som) (KGS). ಚೈನಾದ ಪಶ್ಚಿಮಕ್ಕಿರುವ ಈ ದೇಶ, ಕಜಕಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್ ಗಡಿಗಳಿಗೆ ಹೊಂದಿಕೊಂಡಿದೆ.ಈ ದೇಶಕ್ಕೆ ಪುರಾತನ ಇತಿಹಾಸವಿದೆ. ಸುಮಾರು 5ವರ್ಷಗಳಿಗೂ ಹಿಂದಿನ ನಿಯಾಂಡರ್ಟಾಲ್ (neanderthal) ಮಾನವ ಇಲ್ಲಿನ ಬೋಜ್ ಬಾರ್ಮ್ಯಾಕ್ ಪರ್ವತದ ಗುಹೆಗಳಲ್ಲಿ ವಾಸಿಸುತ್ತಿದ್ದ ಬಗ್ಗೆ ಕುರುಹುಗಳು ದೊರೆತಿವೆ. ಜಗತ್ತಿನ ಎರಡನೇ ಅತಿದೊಡ್ಡ ಪರ್ವತ ಸರೋವರ- ಇಸ್ಸಿಕ್ ಕುಲ್ (Issyk kul) ನ ತಟದಲ್ಲಿ 5 ಸಾವಿರ ವರ್ಷಗಳ ಹಿಂದೆಯೇ ಬೇಟೆಯಾಡಿ ಬದುಕುತ್ತಿದ್ದ ಮನುಷ್ಯ ವಾಸವಾಗಿದ್ದುದಕ್ಕೆ ಸಾಕ್ಷಿಗಳು ಸಿಕ್ಕಿವೆ. ಈಗಿನ ಕಿರ್ಗಿಸ್ತಾನ್ ಭೂಪ್ರದೇಶದಲ್ಲಿ ಕ್ರಿ.ಪೂ. ಎರಡನೇ ಶತಮಾನದಲ್ಲಿ ಮೊದಲ ರಾಜ್ಯ ಸ್ಥಾಪನೆಯಾಯಿತು.

ಕಿರ್ಗಿಸ್ತಾನ್ ಏಳನೇ ಶತಮಾನದಲ್ಲಿ ಟರ್ಕಿಯ ಖಾನೇಟ್ (turkic khanate) ಸಾಮ್ರಾಜ್ಯಕ್ಕೆ ಒಳಪಟ್ಟಿತು. 9ರಿಂದ 12ನೇ ಶತಮಾನದವರೆಗೆ ದಕ್ಷಿಣ ಸೈಬೀರಿಯಾ ಪ್ರದೇಶದಲ್ಲಿ ಕಿರ್ಗಿಸ್ ಖಾನೇಟ್ (kyrgyz khanate) ಆಡಳಿತ ನಡೆಸಿತು. ಮಂಗೋಲಿಯಾದ ಝೆಂಗಿಸ್ ಖಾನ್ (Genghis khan) ವಶಪಡಿಸಿಕೊಳ್ಳುವವರೆಗೂ ಅದು ಬಲಾಢ್ಯ ಸಾಮ್ರಾಜ್ಯವಾಗಿ ನಿಂತಿತ್ತು. ಝೆಂಗಿಸ್ ಖಾನ್ ಮಧ್ಯ ಏಷಿಯಾದ ವಿಶಾಲ ಭೂ ಪ್ರದೇಶವನ್ನು ಗೆದ್ದು, ನಂತರ ಅವುಗಳನ್ನು ಆಡಳಿತಕ್ಕನುಕೂಲವಾಗುವ ಹಾಗೆ ‘ಉಲುಸ್’ ಗಳೆಂದು ಭಾಗಗಳನ್ನಾಗಿ ಮಾಡಿ, ಅವುಗಳಿಗೆ ಮುಖ್ಯಸ್ಥರಾಗಿ ತನ್ನ ಮಕ್ಕಳನ್ನು ನೇಮಿಸಿದ. ಹಾಗೆ ಟ್ರಾನ್ಸೋಕ್ಸಿಯಾನ ಮತ್ತು ಕಿರ್ಗಿಸ್ ಪ್ರದೇಶಗಳು ಷಗಟಾಯ್ ಉಲುಸ್ (chagatai ulus) ಆಯಿತು. ಷಗಟಾಯ್ ಖಾನ್ ಆತನ ಝೆಂಗಿಸ್ ಖಾನನ ಎರಡನೇ ಮಗ. ಷಗಟಾಯ್ ಖಾನ್ ಸಾಮ್ರಾಜ್ಯದ ಪತನದ ನಂತರ ಅದು ಮಂಗೋಲಿಯಾದ ಮತ್ತೊಬ್ಬ ರಾಜ ತೈಮೂರನ ಆಡಳಿತವೂ ಇಲ್ಲಿ ನಡೆದಿದೆ.

ಹತ್ತೊಂಬತ್ತನೇ ಶತಮಾನದಲ್ಲಿ ಈ ಪ್ರದೇಶ ರಷ್ಯದ ಜಾರ್ (czar) ಚಕ್ರವರ್ತಿಗಳ ವಶವಾಯಿತು. 1855-63ರ ಅವಧಿಯಲ್ಲಿ ಕಿರ್ಗಿಸ್ತಾನದ ಉತ್ತರ ಭಾಗವನ್ನು ಮಾತ್ರ ಅವರು ಗೆದ್ದಿದ್ದರು. 1876-77ರಲ್ಲಿ ಕಿರ್ಗಿಸ್ತಾನದಲ್ಲಿ ನಡೆದ ಕ್ರಾಂತಿ ವಿಫಲಗೊಂಡ ನಂತರ ಇಡೀ ದೇಶ ಸಂಪೂರ್ಣ ರಷ್ಯಾ ಸಾಮ್ರಾಜ್ಯಕ್ಕೆ ಸೇರಿಕೊಂಡಿತು. 1917ರಲ್ಲಿ ನಡೆದ ರಷ್ಯಾ ಕ್ರಾಂತಿ ಸಂದರ್ಭದಲ್ಲಿ ಕಿರ್ಗಿಸ್ತಾನ, ಯುಎಸ್ಎಸ್ಆರ್ ಭಾಗವಾಯಿತು. ಯುಎಸ್ಎಸ್ಆರ್ ಪತನಗೊಂಡ ನಂತರ ಸ್ವತಂತ್ರಗೊಂಡ ಕಿರ್ಗಿಸ್ತಾನ್, 2 ಮಾರ್ಚ್ 1992ರಲ್ಲಿ ವಿಶ್ವಸಂಸ್ಥೆ ಸದಸ್ಯತ್ವ ಪಡೆಯಿತು.
ಇಂತಹ ವೈಶಿಷ್ಟ್ಯಪೂರ್ಣ ದೇಶದ ನಿವ್ವಳ ದೇಶೀಯ ಉತ್ಪನ್ನ (GDP) 2014ರಲ್ಲಿ 7404ದಶಲಕ್ಷ ಅಮೇರಿಕನ್ ಡಾಲರ್. ತಲಾ ನಿವ್ವಳ ದೇಶೀಯ ಉತ್ಪನ್ನ 1267 ಡಾಲರ್. ಆರ್ಥಿಕತೆಯಲ್ಲಿ ಕೃಷಿಯ ನಿವ್ವಳ ಮೌಲ್ಯವರ್ಧನೆ (GVA) 2005ರಲ್ಲಿ ಶೇ.31.3ರಷ್ಟಿದ್ದು, 2014ರಲ್ಲಿ ಶೇ.16.6ಕ್ಕೆ ಇಳಿದಿದೆ. ಕೈಗಾರಿಕೆಯ ನಿವ್ವಳ ಮೌಲ್ಯವರ್ಧನೆ ಶೇ.28.2ರಷ್ಟು ಹಾಗೂ ಸೇವಾವಲಯದ್ದು ಶೇ.57.6ರಷ್ಟಿದೆ. ಕಾರ್ಮಿಕ ಬಲದ ಶೇ.8.6ರಷ್ಟು ನಿರುದ್ಯೋಗವಿದೆ. 2015ರಲ್ಲಿ 1441.1ದಶಲಕ್ಷ ಅಮೇರಿಕನ್ ಡಾಲರ್ ರಷ್ಟು ರಫ್ತು, 4068.1 ದಶಲಕ್ಷ ಅಮೇರಿಕನ್ ಡಾಲರ್ ಆಮದು ವಹಿವಾಟು ನಡೆದಿದೆ. ಅಂದರೆ ರಫ್ತಿನ ಪ್ರಮಾಣ ಕಡಿಮೆ ಇರುವುದು ದೇಶದ ಮೇಲೆ ಆರ್ಥಿಕ ಹೊರೆ ಇದೆ. ಸ್ವಿಜರ್ ಲ್ಯಾಂಡ್, ಕಜಕಸ್ತಾನ್ ಮತ್ತು ರಷ್ಯನ್ ಫೆಡರೇಶನ್ ಗಳ ಜೊತೆ ಹೆಚ್ಚಿನ ರಫ್ತು ಹಾಗೂ ರಷ್ಯನ್ ಫಡರೇಷನ್, ಚೈನಾ ಹಾಗೂ ಕಜಕಸ್ತಾನದ ಜೊತೆ ಆಮದು ವಹಿವಾಟು ಇರಿಸಿಕೊಂಡಿದೆ. 2015ರಲ್ಲಿ ಈ ದೇಶದ ಒಟ್ಟು ಜನಸಂಖ್ಯೆಯ ಶೇ.35.7ರಷ್ಟು ನಗರ ಪ್ರದೇಶದಲ್ಲಿ ವಾಸ ಮಾಡುತ್ತಿದ್ದರು. ಶಿಕ್ಷಣಕ್ಕೆ ಒಟ್ಟು ಜಿಡಿಪಿಯ ಶೇ.6.8ರಷ್ಟು ಹಾಗೂ ಆರೋಗ್ಯಕ್ಕೆ ಶೇ.6.5ರಷ್ಟು ವೆಚ್ಚ ಮಾಡಲಾಗುತ್ತಿದೆ. ಇಂಟರ್ನೆಟ್ ಬಳಕೆದಾರರ ಪ್ರಮಾಣ ಕೇವಲ ಶೇ.28.3ರಷ್ಟು ಮಾತ್ರ.

ಸಾಕಷ್ಟು ಪ್ರಮಾಣದಲ್ಲಿ ಶ್ರೀಮಂತ ಖನಿಜಗಳನ್ನು ಹೊಂದಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಜಿಡಿಪಿ ಹೆಚ್ಚಿಸಿಕೊಳ್ಳಬೇಕಾಗಿರುವುದು, ಅಕ್ಕ ಪಕ್ಕದ ದೇಶಗಳೊಡನೆ ಇರುವ ನದಿ ನೀರಿನ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕಾಗಿರುವುದು ಪ್ರಸ್ತುತ ಕಿರ್ಗಿಸ್ತಾನದ ಮುಂದಿರುವ ಸವಾಲುಗಳು.

[/fusion_text][/fusion_builder_column][/fusion_builder_row][/fusion_builder_container]

Categories
asia

ಜೋರ್ಡಾನ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ first=”true” type=”1_1″][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಪಶ್ಚಿಮ ಏಷ್ಯಾದ ಅರೇಬಿಯನ್ ಪರ್ಯಾಯ ದ್ವೀಪದಲ್ಲಿರುವ ಮುಸ್ಲಿಂ ದೇಶ ಜೋರ್ಡಾನ್.ಇಲ್ಲಿನ ಅಧಿಕೃತ ಭಾಷೆ ಅರೇಬಿಕ್. ಇಂಗ್ಲಿಷ್ ಗೆ ಮೊದಲ ವಿದೇಶಿ ಭಾಷೆ ಎನ್ನುವ ವಿಶೇಷ ಸ್ಥಾನ ನೀಡಲಾಗಿದೆ. ಬಹುಪಾಲು ಅರೇಬಿಯನ್ ಜನಾಂಗದವರೇ ವಾಸಿಸುವ ಈ ದೇಶದಲ್ಲಿ, ಶೇ.92ರಷ್ಟು ಸುನ್ನಿ ಮುಸ್ಲಿಮರು, ಶೇ.2ರಷ್ಟು ಡ್ರೂಜ್, ಶೇ.6ರಷ್ಟು ಕ್ರಿಶ್ಚಿಯನ್ನರಿದ್ದಾರೆ. ಜೋರ್ಡಾನ್ ಭೂಪ್ರದೇಶದ ವಿಸ್ತೀರ್ಣ 89,318 ಚ.ಕಿ. ಇದ್ದು, ಕೇವಲ ಶೇ.1.1ರಷ್ಟು ಮಾತ್ರ ಅರಣ್ಯ ಪ್ರದೇಶವನ್ನು ಹೊಂದಿದೆ. ಸೌದಿ ಅರೇಬಿಯಾ, ಸಿರಿಯಾ, ಇರಾಕ್ ಗಡಿಗಳಿಗೆ ಹೊಂದಿಕೊಂಡಿರುವ ಈ ದೇಶದ ಕರೆನ್ಸಿ ಜೋರ್ಡಾನ್ ದಿನಾರ್ (ಜೆಒಡಿ).

ಮೇ 25,1923ರಂದು ಬ್ರಿಟಿಷರಿಂದ ಬಿಡುಗಡೆ ಪಡೆದುಕೊಂಡಿದ್ದು, ಅದೇ ದಿನವನ್ನು ಸ್ವಾತಂತ್ರ್ಯ ದಿನವನ್ನಾಗಿ ಆಚರಿಸಲಾಗುತ್ತದೆ.ಮಾನವನ ಅತ್ಯಂತ ಹಳೆಯ ವಾಸಸ್ಥಾನಗಳ ಪೈಕಿ ಜೋರ್ಡಾನ್ ಕೂಡ ಒಂದು. ಜೋರ್ಡಾನ್ ಮತ್ತು ಪ್ಯಾಲೆಸ್ಟೈನ್ ಏಷಿಯಾ, ಯೂರೋಪ್ ಮತ್ತು ಆಫ್ರಿಕಾ ಖಂಡಗಳನ್ನು ಜೋಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.ಹೀಗಾಗಿ ನಾಗರಿಕತೆ ಉದಯ ಆದ ಸಮಯದಿಂದಲೂ ಜೋರ್ಡಾನ್, ಉತ್ತರ ದಕ್ಷಿಣ, ಪೂರ್ವ ಪಶ್ಚಿಮಕ್ಕೆ ಸಂಪರ್ಕ ಕಲ್ಪಿಸುವ ಭೂಪ್ರದೇಶವಾಗಿದೆ.

ದಕ್ಷಿಣ ಜೋರ್ಡಾನ್ ನ ಬೀಧಾ, ಜೋರ್ಡಾನ್ ಕಣಿವೆ ಮತ್ತು ಪೂರ್ವದ ಮರಳುಗಾಡು ಮತ್ತು ಪಶ್ಚಿಮದ ಜೆರಿಕೋ ಪ್ರದೇಶಗಳಲ್ಲಿ ನಡೆಸಿರುವ ಉತ್ಖನನಗಳಿಂದ ಕ್ರಿ.ಪೂ. 8500 ವರ್ಷಗಳಿಗೂ ಮೊದಲಿನಿಂದಲೇ ಜನವಸತಿ ಇತ್ತು ಎಂಬುದಕ್ಕೆ ಆಧಾರಗಳು ದೊರೆತಿವೆ.ಜೋರ್ಡಾನಿನ ಕೆಲ ಭಾಗಗಳು ಪ್ರಾಚೀನ ಇರಾಕ್ ನ ಸುಮೇರಿಯನ್, ಅಕ್ಕಡಿಯನ್, ಬ್ಯಾಬಿಲೋನಿಯನ್, ಅಸ್ಸಿರಿಯನ್ ಸಾಮ್ರಾಜ್ಯಗಳಲ್ಲಿ ಸೇರ್ಪಡೆಗೊಂಡಿದ್ದವು. ವಲಸೆ ಜನರಾಗಿದ್ದ ನಬಟಿಯನ್ನರು ಜೋರ್ಡಾನ್ ನಲ್ಲಿ ತಮ್ಮ ಸಾಮ್ರಾಜ್ಯ ಸ್ಥಾಪಿಸಿದರು. ಸೆಲ್ಯೂಸಿಡರೂ ಇಲ್ಲಿ ಆಳ್ವಿಕೆ ನಡೆಸಿದ್ದಾರೆ. ಈ ದೇಶ ಗ್ರೀಸ್, ರೋಮ್, ಪರ್ಷಿಯಾಗಳ ಆಡಳಿತಕ್ಕೂ ಒಳಪಟ್ಟಿತ್ತು. ಏಳನೇ ಶತಮಾನದ ನಂತರ ನಿರಂತರವಾಗಿ ವಿವಿಧ ಅರಬ್ ಮನೆತನಗಳ ಅಧೀನಕ್ಕೆ ಸಿಕ್ಕಿಕೊಂಡಿತು.

ಕೇವಲ ಉತ್ತರದ ಎತ್ತರ ಪ್ರದೇಶ ಮತ್ತು ಜೋರ್ಡಾನ್ ಕಣಿವೆ ಮಾತ್ರ ಸಾಕಷ್ಟು ಮಳೆಯಾಗುತ್ತದೆ. ಇದರಿಂದ ಆ ಭಾಗದಲ್ಲಿಯೇ ಜನಸಂಖ್ಯೆ ಹೆಚ್ಚು. ದಕ್ಷಿಣ ಮತ್ತು ಪೂರ್ವದ ಪ್ರದೇಶಗಳು ಕಡಿಮೆ ಮಳೆಯಾಗುವ ಪ್ರದೇಶಗಳಾಗಿದ್ದು, ನೀರಾವರಿಗೆ ಯಾವ ಆಸರೆಯೂ ಇಲ್ಲ.ಆಧುನಿಕ ಜೋರ್ಡಾನ್ ಗೆ ರಾಜಧಾನಿಯಾಗಿರುವ ಅಮಾನ್ ನಗರವೇ ಪ್ರಾಚೀನ ಜೋರ್ಡಾನ್ ರಾಜಧಾನಿಯಾಗಿತ್ತು. ಇದನ್ನು ಏಳು ಬೆಟ್ಟಗಳ ಮೇಲೆ ಅಥವಾ ಜಬಾಲ್ಸ್ ಮೇಲೆ ನಿರ್ಮಿಸಲಾಗಿದೆ. ಕ್ರಿ.ಪೂ.ಮೂರನೇ ಶತಮಾನದಲ್ಲಿ ಫಿಲಡೆಲ್ಫಸ್ ರಾಜ ಇದನ್ನು ಆಳಿದ ಮೇಲೆ ಅಮಾನ್ ನಗರಕ್ಕೆ ಫಿಲಡೆಲ್ಫಿಯಾ ಎನ್ನುವ ಹೆಸರನ್ನು ಇಡಲಾಗಿತ್ತು.

ರೋಮನ್ನರ ಕಾಲದಲ್ಲಿ ಫಿಲಡೆಲ್ಫಿಯಾದಲ್ಲಿ ರೋಮ್ ಮಾದರಿಯ ಕಟ್ಟಡಗಳನ್ನು ನಿರ್ಮಿಸಲಾಯಿತು. ರೋಮ್ ಹಿಡಿತದಿಂದ ಬೈಜಂಟೈನರ ವಶಕ್ಕೆ ಹೋದ ಜೋರ್ಡಾನ್ ನಂತರ ಕ್ರಿ.ಶ.614ರಲ್ಲಿ ಸಾಸಾನಿಯನ್ನರ ಸಾಮ್ರಾಜ್ಯದ ಭಾಗವಾಯಿತು.ಸಾಸಾನಿಯನ್ನರು ಹೆಚ್ಚು ಕಾಲ ಆಳಲಿಲ್ಲ. ಕ್ರಿ.ಶ.635ರಲ್ಲಿ ಅರಬ್ ಇಸ್ಲಾಂ ಸೇನೆಗಳ ವಶಕ್ಕೆ ಜೋರ್ಡಾನ್ ಹೋಯಿತು. ಆಗ ಫಿಲಡೆಲ್ಫಿಯಾ ನಗರಕ್ಕೆ ಮತ್ತೆ ಅಮಾನ್ ಎನ್ನುವ ಹೆಸರನ್ನು ಮರುನಾಮಕರಣ ಮಾಡಲಾಯಿತು.ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಬಿಕ್ಕಟ್ಟು 1948ರಿಂದಲೂ ಇದೆ. ಆಗ ಪ್ಯಾಲೆಸ್ಟೈನಿನ ಬಹಳಷ್ಟು ವಲಸೆಗಾರರಿಗೆ ಅಮ್ಮಾನ್ ಆಶ್ರಯತಾಣವಾಗಿತ್ತು. ನಂತರ ಇರಾಕ್ ಮತ್ತು ಕುವೈತ್ ಯುದ್ಧದಿಂದಾಗಿಯೂ ವಲಸೆಗಾರರ ಸಂಖ್ಯೆ ಹೆಚ್ಚಿತು.

2016ರ ಅಂದಾಜಿನಂತೆ ಜನಸಂಖ್ಯೆ 77,48,000. ರಾಜಧಾನಿಯಲ್ಲಿ ಸಿರಿಯನ್ ವಲಸೆಗಾರರನ್ನು ಹೊರತುಪಡಿಸಿದ ಜನಸಂಖ್ಯೆ 11,55,000. ದೇಶದ ಜನಸಂಖ್ಯೆಯ ಶೇ.83.7ರಷ್ಟು ನಗರವಾಸಿಗಳು. ಜೋರ್ಡಾನ್ ನಲ್ಲಿ 2015ರ ಮಧ್ಯಭಾಗದ ಹೊತ್ತಿಗೆ 31 ಲಕ್ಷಕ್ಕೂ ಹೆಚ್ಚು ವಿದೇಶದಲ್ಲಿ ಹುಟ್ಟಿದ ಜನ ವಾಸಿಸುತ್ತಿದ್ದರು. ಅಂದರೆ ಆ ದೇಶದ ಜನಸಂಖ್ಯೆಯ ಶೇ.41ರಷ್ಟು ವಲಸೆಗಾರರೇ ತುಂಬಿಹೋಗಿದ್ದರು.

2014ರಲ್ಲಿ ನಿವ್ವಳ ದೇಶೀಯ ಉತ್ಪನ್ನ (ಜಿಡಿಪಿ) 35,827 ಅಮೇರಿಕನ್ ಡಾಲರ್. ತಲಾ ಜಿಡಿಪಿ 4831 ಅಮೇರಿಕನ್ ಡಾಲರ್. ಆರ್ಥಿಕತೆಯಲ್ಲಿ ಕೃಷಿಯ ನಿವ್ವಳ ಮೌಲ್ಯವರ್ಧನೆ (ಜಿವಿಎ) ಕೇವಲ ಶೇ. 3.6ರಷ್ಟು ಮಾತ್ರ. ಕೈಗಾರಿಕೆ ಪಾಲು ಶೇ.28.2 ಮತ್ತು ಸೇವಾ ವಲಯದ ಪಾಲು ಶೇ.68.2. ಮತ್ತು ನಿರುದ್ಯೋಗ ಕಾರ್ಮಿಕ ಬಲದ ಶೇ.11.9ರಷ್ಟಿತ್ತು. ಮಹಿಳೆಯರ ಪೈಕಿ ಕೇವಲ ಶೇ.14.1ರಷ್ಟು ಮಾತ್ರ ಕಾರ್ಮಿಕ ಬಲವಾಗಿದ್ದರೆ, ಈ ಪ್ರಮಾಣ ಪುರುಷರಲ್ಲಿ ಶೇ.64.3. ಅಂದರೆ ದುಡಿಯುವ ಮಹಿಳೆಯರ ಸಂಖ್ಯೆ ತೀರಾ ಕಡಿಮೆ.

ಅಮೇರಿಕ, ಸೌದಿ ಅರೇಬಿಯಾ ಮತ್ತು ಉಚಿತ ವಲಯಗಳೊಂದಿಗೆ ರಫ್ತು ವ್ಯವಹಾರವನ್ನು ಇಟ್ಟುಕೊಂಡಿದ್ದು, ಸೌದಿ ಅರೇಬಿಯಾ, ಅಮೇರಿಕ ಮತ್ತು ಚೈನಾಗಳ ಜೊತೆ ಆಮದು ವಹಿವಾಟು ಹೆಚ್ಚಾಗಿ ನಡೆಸುತ್ತದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ಶೇ.44.4ರಷ್ಟಿದೆ. ಭಾರತೀಯ ರೈತರ ಗೊಬ್ಬರ ಸಹಕಾರ ಸಂಸ್ಥೆ (ಇಫ್ಕೋ) ಜೋರ್ಡಾನ್ನಲ್ಲಿ ಫಾಸ್ಫೇಟ್ ಘಟಕಗಳನ್ನು ಹೊಂದಿದೆ. ಜೋರ್ಡಾನ್ ತನ್ನ ಒಡಲಲ್ಲಿ ಪೊಟಾಷ್, ಯುರೇನಿಯಂ, ಜಿರ್ಕೋನಿಯಂ, ಥೋರಿಯಂ ಹಾಗೂ ಅಲ್ಪ ಪ್ರಮಾಣದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನೂ ಅಡಗಿಸಿಕೊಂಡಿದೆ.ವಲಸೆಗಾರರ ಸಮಸ್ಯೆ ನಿಭಾಯಿಸಬೇಕಾಗಿರುವುದು ಜೋರ್ಡಾನ್ ಎದುರಿಗಿರುವ ಸವಾಲು.

[/fusion_text][/fusion_builder_column][/fusion_builder_row][/fusion_builder_container]

Categories
asia

ಅಜರ್ ಬೈಜಾನ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಕ್ಯಾಸ್ಪಿಯನ್ ಸಮುದ್ರದ ಪಶ್ಚಿಮಕ್ಕೆ ಇದ್ದು, ಯುಎಸ್ಎಸ್ಆರ್ ವಿಲೀನಗೊಂಡಾಗ ಸ್ವತಂತ್ರಗೊಂಡ ಪಶ್ಚಿಮ ಏಷಿಯಾದ ದೇಶ ಅಜರ್ ಬೈಜಾನ್ (Azerbaizan). ರಷ್ಯಾ, ಜಾರ್ಜಿಯಾ, ಆರ್ಮೇನಿಯ ಮತ್ತು ಇರಾನ್ ಗಳಿಂದ ಈ ದೇಶ ಸುತ್ತುವರಿದಿದೆ.ಬಹುಪಕ್ಷಗಳ ಗಣತಂತ್ರ ವ್ಯವಸ್ಥೆ ಹೊಂದಿರುವ ಈ ದೇಶ ಒಂದೇ ಶಾಸನಸಭೆ ಹೊಂದಿದೆ. ರಾಜಧಾನಿ ಬಾಕು. ಅಧಿಕೃತ ಭಾಷೆ ಅಜರ್ ಬೈಜಾನಿ. ಬಹುತೇಕ ಜನ ಅಜೆರಿ (Azeri) ಜನಾಂಗದವರು. ಡಾಗೆಸ್ತಾನಿ ಮತ್ತು ರಷ್ಯನ್ ಜನಾಂಗದವರೂ ಅಲ್ಪಸಂಖ್ಯಾತರಾಗಿಇಲ್ಲಿ ವಾಸ ಮಾಡುತ್ತಾರೆ. ಮುಸ್ಲಿಮ್ ಜನ ಹೆಚ್ಚಾಗಿ ಬದುಕುವ ಈ ದೇಶದಲ್ಲಿ, ರಷ್ಯನ್ ಆರ್ಥಡಾಕ್ಸ್ ಮತ್ತು ಆರ್ಮೇನಿಯಂ ಆರ್ಥಡಾಕ್ಸ್ ಗಳಿಗೆ ಸೇರಿದ ಜನ ಅಲ್ಪಪ್ರಮಾಣದಲ್ಲಿದ್ದಾರೆ.

ಈ ದೇಶದ ವಿಸ್ತೀರ್ಣ 86,600 ಚ.ಕಿ.ಮೀ. 2016ರ ಅಂದಾಜಿನಂತೆ ಜನಸಂಖ್ಯೆ 98,68,000. (ನಗೋರ್ನೋ ಕ್ಯಾರಾಬಾಕ್ ಒಳಗೊಂಡಂತೆ). ಜನಸಾಂದ್ರತೆ ಪ್ರತಿ ಚ.ಕಿ.ಮೀ. ಗೆ 119.4 ನಗೋರ್ನೋ ಕ್ಯಾರಾಬಾಕ್ ಒಳಗೊಂಡಂತೆ). 2015ರ ಅಂದಾಜಿನಂತೆ ರಾಜಧಾನಿಯ ಜನಸಂಖ್ಯೆ 23,74,000. ಈ ದೇಶ 1992 ಮಾರ್ಚ್ 2 ರಂದು ವಿಶ್ವಸಂಸ್ಥೆ ಸದಸ್ಯತ್ವ ಪಡೆದಿದೆ. ಇಲ್ಲಿನ ಕರೆನ್ಸಿ ಅಜರ್ ಬೈಜಾನ್ ಮ್ಯಾನಟ್ (ಎಝೆಡ್ಎನ್).ವಿಶ್ವಸಂಸ್ಥೆಯ ಪ್ರಕಾರ ನಗೊರ್ನೊ ಕ್ಯಾರಾಬಾಕ್ ಅಜರ್ ಬೈಜಾನ್ ಗೆ ಸೇರಿದ ಪ್ರದೇಶ. ಆದರೆ ದಕ್ಷಿಣ ಕ್ಯಾಕಸ್ ಪರ್ವತ ಪ್ರದೇಶದಲ್ಲಿರುವ ಈ ಪ್ರದೇಶ ಆರ್ಮೇನಿಯದ ಪ್ರತ್ಯೇಕ%

Categories
asia

ಇರಾನ್

[fusion_builder_container hundred_percent=”no” equal_height_columns=”no” hide_on_mobile=”small-visibility,medium-visibility,large-visibility” background_position=”center center” background_repeat=”no-repeat” fade=”no” background_parallax=”none” enable_mobile=”no” parallax_speed=”0.3″ video_aspect_ratio=”16:9″ video_loop=”yes” video_mute=”yes” border_style=”solid” padding_top=”20px” padding_bottom=”20px” type=”legacy”][fusion_builder_row][fusion_builder_column type=”1_1″ layout=”1_1″ spacing=”” center_content=”no” hover_type=”none” link=”” min_height=”” hide_on_mobile=”small-visibility,medium-visibility,large-visibility” class=”” id=”” background_color=”” background_image=”” background_position=”left top” background_repeat=”no-repeat” border_color=”” border_style=”solid” border_position=”all” padding_top=”” padding_right=”” padding_bottom=”” padding_left=”” margin_top=”” margin_bottom=”” animation_type=”” animation_direction=”left” animation_speed=”0.3″ animation_offset=”” last=”true” border_sizes_top=”0″ border_sizes_bottom=”0″ border_sizes_left=”0″ border_sizes_right=”0″ type=”1_1″ first=”true”][fusion_text columns=”” column_min_width=”” column_spacing=”” rule_style=”default” rule_size=”” rule_color=”” content_alignment_medium=”” content_alignment_small=”” content_alignment=”” hide_on_mobile=”small-visibility,medium-visibility,large-visibility” sticky_display=”normal,sticky” class=”” id=”” font_size=”” fusion_font_family_text_font=”” fusion_font_variant_text_font=”” line_height=”” letter_spacing=”” text_color=”” animation_type=”” animation_direction=”left” animation_speed=”0.3″ animation_offset=””]

ಆರ್ಯರ ನಾಡು ಎನ್ನಿಸಿಕೊಂಡಿರುವ ಮಧ್ಯ ಪ್ರಾಚ್ಯ ದೇಶ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್. ಸ್ಥಳೀಯ ಹೆಸರು ಜೊಮ್ಹುರಿ ಎ ಇಸ್ಲಾಮಿ ಎ ಇರಾನ್. ಪ್ರಾಚೀನ ಇರಾನ್ ನಲ್ಲಿ ಬಳಕೆಯಾಗುತ್ತಿದ್ದ ‘ಅವೆಸ್ತಾನ್’ ಭಾಷೆಯಲ್ಲಿನ ಶಬ್ದ ‘ಆರ್ಯನಂ’ನಿಂದ ಇರಾನ್ ಎನ್ನುವ ಶಬ್ದೋತ್ಪತ್ತಿಯಾಗಿದೆ. ಇರಾನ್ ಎಂದರೆ ಆರ್ಯರ ನಾಡು ಅಥವಾ ಶ್ರೇಷ್ಠರ ನಾಡು ಎಂದರ್ಥ.ಈ ದೇಶದ ಹಳೆಯ ಹೆಸರು ಪರ್ಷಿಯಾ. ಹಲವು ಶತಮಾನಗಳ ಕಾಲ ಪರ್ಷಿಯಾ ಎನ್ನುವ ಹೆಸರಿನಿಂದ ಗುರುತಿಸಿಕೊಂಡು, ನಂತರ ಆ ಹೆಸರು ಸಮಗ್ರ ದೇಶವನ್ನು ಪ್ರತಿನಿಧಿಸುವುದಿಲ್ಲ ಎನ್ನುವ ಕಾರಣಕ್ಕೆ ಹೆಸರನ್ನು ಬದಲಾಯಿಸಲಾಯಿತು.

ಮೂವತ್ತೊಂದು ಆಡಳಿತಾತ್ಮಕ ಪ್ರಾಂತ್ಯಗಳನ್ನು ಹೊಂದಿರುವ ಈ ದೇಶದ ರಾಜಧಾನಿ ಟೆಹರಾನ್. ಧಾರ್ಮಿಕ ಗಣತಂತ್ರವಾಗಿರುವ ಇರಾನ್, ಇಸ್ಲಾಮಿಕ್ ಮತ್ತು ಜಾತ್ಯತೀತ ಕಾನೂನುಗಳನ್ನು ಹೊಂದಿದೆ. ಇಸ್ಲಾಮಿಕ್ ಸಮಾಲೋಚಕ ಸಭೆ ಅಥವಾ ಮಜ್ಲಿಸ್ ಎನ್ನುವ ಏಕಶಾಸನ ಸಭೆಯನ್ನು ಹೊಂದಿದ್ದು, 290 ಸದಸ್ಯರನ್ನು ಒಳಗೊಂಡಿದೆ.ಇರಾಕ್, ಪಾಕಿಸ್ತಾನ, ಆಫ್ಘಾನಿಸ್ತಾನ, ಟರ್ಕಿ ಮತ್ತು ತುರ್ಕ್ ಮೆನಿಸ್ತಾನ ದೇಶಗಳ ಗಡಿಗೆ ಹೊಂದಿಕೊಂಡಿರುವ ಈ ದೇಶ ಕ್ಯಾಸ್ಪಿಯನ್ ಸಮುದ್ರದ ಕರಾವಳಿ ತೀರವನ್ನೂ ಹೊಂದಿದೆ.15,31,595 ಚ.ಕೀ. ಭೂಪ್ರದೇಶವನ್ನು ಹೊಂದಿದ್ದು, ಈ ಪೈಕಿ ಶೇ.30.1ರಷ್ಟು ಕೃಷಿ ಭೂಮಿಯಾಗಿದೆ. ಕೃಷಿಯೋಗ್ಯ ಭೂಮಿ ಶೇ. 10.8, ಶಾಶ್ವತ ಬೆಳೆಗಳು ಶೇ. 1.2, ಮತ್ತು ಶಾಶ್ವತ ಹುಲ್ಲುಗಾವಲು ಶೇ. 18.1 ರಷ್ಟಿದೆ. ಅರಣ್ಯ ಭೂಮಿ ಶೇ.6,8ರಷ್ಟಿದೆ.

ದೇಶದ ಮಧ್ಯಭಾಗ ಮತ್ತು ಪೂರ್ವದಲ್ಲಿ ಮರುಭೂಮಿಯನ್ನು ಹೊಂದಿದ್ದು, ಇಲ್ಲಿ ಅತ್ಯಂತ ಕಡಿಮೆ ಜನಸಾಂದ್ರತೆ ಇದೆ.ನೈಸರ್ಗಿಕ ಸಂಪನ್ಮೂಲಗಳಿಂದ ಶ್ರೀಮಂತವಾಗಿರುವ ಇರಾನ್ ನಲ್ಲಿ, ಪೆಟ್ರೋಲಿಯಂ, ನೈಸರ್ಗಿಕ ಅನಿಲ, ಕಲ್ಲಿದ್ದಲು, ಕ್ರೋಮಿಯಂ, ತಾಮ್ರ, ಉಕ್ಕಿನ ಅದಿರು, ಸೀಸ, ಮ್ಯಾಂಗನೀಸ್, ಸತುವು, ಸಲ್ಫರ್ ಸಿಗುತ್ತವೆ.ಕ್ರಿ.ಪೂ.2500ರಿಂದ 644ರವರೆಗೆ ಎಲಮೈಟ್ ನಾಗರಿಕತೆ ಅರಳಿಕೊಂಡಿತ್ತು. ನಂತರ ಆಳಿದ ಮೀಡಿಯನ್ ಸಾಮ್ರಾಜ್ಯದಲ್ಲಿ ಜನ ಆರ್ಯರ ಭಾಷೆಗೆ ಹೋಲಿಕೆಯುಳ್ಳ ಭಾಷೆಯನ್ನು ಮಾತನಾಡುತ್ತಿದ್ದರು. ಎಕ್ಬಾಟಾನಾ ನಗರವನ್ನು ರಾಜಧಾನಿಯನ್ನಾಗಿಸಿಕೊಂಡು ಕ್ರಿ.ಪೂ.728 ರಿಂದ 625ರವರೆಗೆ ಈ ಸಾಮ್ರಾಜ್ಯ ಆಡಳಿತ ನಡೆಸಿತು.

ಇರಾನಿನ ದಕ್ಷಿಣ ಭಾಗದಲ್ಲಿ ಜನ ಮಾತನಾಡುವ ಭಾಷೆ ಪರ್ಷಿಯನ್ ಆಗಿತ್ತು. ಆ ಭಾಗವನ್ನು ಪರ್ಸಿಸ್ ಎಂದೇ ಕರೆಯಲಾಗುತ್ತಿತ್ತು. ಕ್ರಿ.ಪೂ.559-330ರ ಅವಧಿಯಲ್ಲಿ ಪರ್ಸಿಸ್ ನ ಆಖಿಮಿಡಿಸ್ ಸಂತತಿಯವರು ಇರಾನನ್ನು ಆಳಿದರು. ಈ ಸಾಮ್ರಾಜ್ಯವನ್ನು ಸೈರಸ್ ದಿ ಗ್ರೇಟ್, ಡೇರಿಯಸ್ ದಿ ಗ್ರೇಟ್ ಮುಂತಾದವರು ಆಳಿದ್ದಾರೆ. ಸೈರಸ್ ದಿ ಗ್ರೇಟ್ ಕಾಲದಲ್ಲಿ ಅಖಿಮಿಡಿಸ್ ಸಾಮ್ರಾಜ್ಯ ಹಿಂದೂಕುಶ್ ಪರ್ವತಗಳ ಆಚೆಗೂ ಹಬ್ಬಿತ್ತು. ನಶ್ಕ್ ರೊಸ್ತುಮ್ ಬಳಿಯಿರುವ ಶಿಲಾಶಾಸನದಲ್ಲಿ ಡೇರಿಯಸ್ ದಿ ಗ್ರೇಟ್ ತನ್ನ ಬಗ್ಗೆ ಪರಿಚಯಮಾಡಿಕೊಂಡ ರೀತಿ ಹೀಗಿದೆ: ನಾನು ಡೇರಿಯಸ್ ದಿ ಗ್ರೇಟ್, ಅಖಿಮೇನಿಯನ್ ರಾಜ, ಪರ್ಷಿಯನ್ ರಾಜನ ಮಗನಾಗಿರುವುದರಿಂದ ಪರ್ಷಿಯನ್, ಆರ್ಯ ಜನಾಂಗಕ್ಕೆ ಸೇರಿದವನು.

ಅದೇ ಶಾಸನದಲ್ಲಿ ಮುಂದುವರಿದು, ಮೀಡಿಯ, ಪಾರ್ಥಿಯ, ಏರಿಯ, ಬ್ಯಾಕ್ಟ್ರಿಯ, ಸೊಗ್ಡಿಯಾನ, ಖೊರಾಸ್ಮಿಯ, ಡ್ರಾಂಗಿಯಾನ, ಅರಖೋಸಿಯ, ಸತ್ತಗಿಡಿಯ, ಆರ್ಮೇನಿಯ, ಗಾಂಧಾರ, ಸಿಂಧ್, ಬ್ಯಾಬಿಲೋನಿಯ, ಐಯೋನಿಯ, ಲಿಬಿಯ, ಇಥಿಯೋಪಿಯ ಸಾಮ್ರಾಜ್ಯಗಳನ್ನು ಗೆದ್ದಿರುವುದಾಗಿ ಆತ ಬರೆದುಕೊಂಡಿದ್ದಾನೆ.ಗ್ರೀಕರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸುತ್ತ ಬಂದಾಗ ಅವರು ಇರಾನ್ ಪ್ರಸ್ಥಭೂಮಿಯಲ್ಲಿ ಸಹಜವಾಗಿಯೇ ಎದುರಿಸಬೇಕಾಗಿ ಬಂದಿದ್ದು ಆಖಿಮಿಡಿಸ್ ರಾಜರನ್ನೇ. ಕ್ರಿ.ಪೂ.330ರ ಅವಧಿಯಲ್ಲಿ ‘ಅಲೆಕ್ಸಾಂಡರ್ ದಿ ಗ್ರೇಟ್’ ಸಂಪೂರ್ಣವಾಗಿ ಆಖಿಮಿಡಿಸ್ ರಾಜ್ಯವನ್ನು ಗೆದ್ದುಕೊಂಡ. ಅವರ ಸಂಸ್ಕೃತಿ, ಭಾಷೆ ಪರ್ಷಿಯನ್ ಆಗಿದ್ದುದರಿಂದ, ಇಡೀ ಇರಾನ್ ಗೆ ಪರ್ಷಿಯಾ ಎಂದು ಕರೆಯಲು ಶುರು ಮಾಡಿದರು. ನಂತರ ಅದೇ ಹೆಸರು ಜನಪ್ರಿಯವಾಯಿತು. ಬಹಳ ವರ್ಷ ಅದೇ ಹೆಸರಿನಲ್ಲಿದ್ದರೂ ಅದು ಸಮಗ್ರ ದೇಶವನ್ನು ಪ್ರತಿನಿಧಿಸುವುದಿಲ್ಲ ಎನ್ನುವ ಕಾರಣಕ್ಕೆ, ಅಲ್ಲಿನ ಸರ್ಕಾರ 1935ರಲ್ಲಿ ಇರಾನ್ ಎಂದು ಹೆಸರು ಬದಲಾ ಯಿಸಿಕೊಂಡಿತು.

ಅಲೆಕ್ಸಾಂಡರ್ ಕ್ರಿ.ಪೂ.323ರಲ್ಲಿ ಮೃತಪಟ್ಟಾಗ ಗ್ರೀಕ್ ಸಾಮ್ರಾಜ್ಯಕ್ಕೆ ಉತ್ತರಾಧಿಕಾರಿ ಇರಲಿಲ್ಲ. ಹೀಗಾಗಿ ವಿಶಾಲ ಗ್ರೀಕ್ ಸಾಮ್ರಾಜ್ಯದ ಮೇಲೆ ನಿಯಂತ್ರಣಕ್ಕಾಗಿ ಒಳಜಗಳಗಳು ಪ್ರಾರಂಭವಾದವು. ಕ್ರಿ.ಪೂ.ನಾಲ್ಕನೇ ಶತಮಾನದ ಕಡೆಕಡೆಯಲ್ಲಿ ಗ್ರೀಕ್ ಸಾಮ್ರಾಜ್ಯದ ವಶದಲ್ಲಿದ್ದ ಪರ್ಷಿಯಾ ಭಾಗವನ್ನು ಸೆಲ್ಯೂಕಸ್ ಒಂದನೇ ನಿಕೇಟರ್ ವಶಪಡಿಸಿಕೊಂಡ. ಆತನ ಮಗ ಮೊದಲನೇ ಆಂಟಿಯೊಕಸ್ ಅಧಿಕಾರಕ್ಕೆ ಬಂದ ನಂತರ ಎರಡು ರಾಜಧಾನಿಗಳನ್ನು ಸ್ಥಾಪಿಸಿದ: ಒಂದು, ಸಿರಿಯದಲ್ಲಿನ ಒರೊನ್ಟಿಸ್ ನದಿ ದಡ ಮೇಲಿನ ಆಂಟಿಯೋಕ್, ಮತ್ತೊಂದು ಬ್ಯಾಬಿಲೋನಿಯದಲ್ಲಿ ಟೈಗ್ರಿಸ್ ನದಿ ದಡದ ಮೇಲೆ ಸೆಲ್ಯುಸಿಯಾ. ಸೆಲ್ಯೂಸಿಡರ ರಾಜ್ಯ ಇಂದಿನ ಭಾರತದ ಪಂಜಾಬಿನವರೆಗೂ ಹಬ್ಬಿತ್ತು. ನಂತರ ಕ್ರಿ.ಪೂ.304ರಲ್ಲಿ ಮೌರ್ಯ ಸಾಮ್ರಾಜ್ಯದ ಸ್ಥಾಪಕ ಚಂದ್ರಗುಪ್ತ ಮೌರ್ಯ , ಹಿಂದೂಕುಶ್ ಪರ್ವತದವರೆಗಿನ ಪ್ರದೇಶವನ್ನು ಗೆದ್ದುಕೊಂಡ. ಸಿಂಧೂ ನಾಗರಿಕತೆ ಪ್ರದೇಶವನ್ನು ಕಳೆದುಕೊಂಡಿದ್ದು ಸೆಲ್ಯೂಸಿಡರಿಗೆ ಆದ ಬಹುದೊಡ್ಡ ಹಿನ್ನಡೆ.ಆನಂತರದ ಮಹತ್ವದ ಘಟ್ಟ ಎಂದರೆ ಏಳನೇ ಇರಾನ್ ಅರಬ್ಬರ ದಾಳಿಗೆ ಸಿಲುಕಿದ್ದು. ಪ್ರವಾದಿ ಮಹಮ್ಮದ್ ರ ಹುಟ್ಟಿದ ಸ್ಥಳ ಸೌದಿ ಅರೇಬಿಯಾದ ಮೆಕ್ಕಾ ಮತ್ತು ಮದೀನಾ ನಗರ ಅರೇಬಿಯನ್ ಕ್ರಾಂತಿಯ ಕೇಂದ್ರಗಳಾದವು.

ಮೊಹಮದ್ ಪೈಗಂಬರ್ ನಿಧನದ ನಂತರ, ಕ್ರಿ.ಶ.636-637ರ ಹೊತ್ತಿಗೆ ಪರ್ಷಿಯಾದಲ್ಲಿ ಸಾಸಾನಿಯನ್ನರ ಸಾಮ್ರಾಜ್ಯ ಅಸ್ತಿತ್ವದಲ್ಲಿತ್ತು. ಮೊದಲನೇ ಖಲೀಫ ಅಬುಬಕರ್ ಸಿರಿಯಾದಲ್ಲಿ ಬೈಜಂಟೈನರು ಮತ್ತು ಪರ್ಷಿಯಾದಲ್ಲಿ ಸಾಸಾನಿಯನ್ನರನ್ನು ಸೋಲಿಸಿದ್ದು ಹೊಸ ಇರಾನಿನ ಹುಟ್ಟಿಗೆ ಕಾರಣವಾಯಿತು. ಬಹುಸಂಖ್ಯೆಯ ಜನ ಶಿಯಾ ಮುಸ್ಲಿಮರಾಗಿ ಮತಾಂತರಗೊಂಡರು.ಆನಂತರ ಅಲ್ಲಿ ಖಜಾರ್ ಮನೆತನ ಮತ್ತು ಪಹ್ಲವಿ ಮನೆತನಗಳು ಆಡಳಿತ ನಡೆಸಿದವು. 1979ರಲ್ಲಿ ಪಹ್ಲವಿ ಮನೆತನದ ಸರ್ವಾಧಿಕಾರಿಯನ್ನು ಕೆಳಗಿಳಿಸಿ, ಮುಸ್ಲಿಂ ಪಂಡಿತ ಆಯಾತುಲ್ಲಾ ಖೊಮೇನಿ ನೇತೃತ್ವದ ಧಾರ್ಮಿಕ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಖೊಮೇನಿ ಸಾರ್ವಭೌಮ ಅಧಿಕಾರವನ್ನು ಹೊಂದಿದ್ದು, ಆಯ್ಕೆಗೊಂಡ 86 ಧಾರ್ಮಿಕ ಪಂಡಿತರಿಗೆ ಮಾತ್ರ ಉತ್ತರದಾಯಿತ್ವ ಹೊಂದಿದ್ದ. 1980ರಿಂದ 88ರವರೆಗೆ ಎಂಟು ವರ್ಷಗಳ ಕಾಲ ಇರಾಕ್ ಜೊತೆ ಇರಾನ್ ಯುದ್ಧಲ್ಲಿ ತೊಡಗಿಕೊಂಡಿತು. ನಂತರ ಅಣ್ವಸ್ತ್ರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿದ್ದರಿಂದ ಕೆಲ ವರ್ಷ ಅಮೇರಿಕ, ಯೂರೋಪ್ ಒಕ್ಕೂಟಗಳಿಂದ ಇರಾನ್ ಮೇಲೆ ಕೆಲವ ವರ್ಷಗಳ ಕಾಲ ಆರ್ಥಿಕ ನಿರ್ಬಂಧ ಹೇರಲಾಗಿತ್ತು.ದೀರ್ಘ ಕಾಲ ಕಾಡುವ ಬರಗಾಲಗಳು, ಪ್ರವಾಹ, ಸುಂಟರಗಾಳಿ, ಮರಳುಗಾಳಿ, ಭೂಕಂಪಗಳು ಈ ದೇಶವನ್ನು ಪದೇ ಪದೇ ಕಾಡುವ ನೈಸರ್ಗಿಕ ತೊಂದರೆಗಳು. ಮೂಲಭೂತವಾದ ಬಿಟ್ಟೂಬಿಡದೆ ಕಾಡಿದೆ. ಇವೆಲ್ಲ ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳುವ ಹೊಣೆಗಾರಿಕೆ ಅಲ್ಲಿನ ಸರ್ಕಾರದ ಮೇಲಿದೆ.

[/fusion_text][/fusion_builder_column][/fusion_builder_row][/fusion_builder_container]