ರವೀಂದ್ರ ಯಾವಗಲ್
೨೭.೧೧.೧೯೫೯ ಪ್ರಸಿದ್ಧ ತಬಲ ವಾದಕರಾದ ರವೀಂದ್ರ ಯಾವಗಲ್ ರವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ. ತಂದೆ ರಾಮಚಂದ್ರ ಯಾವಗಲ್, ತಾಯಿ ಪಾರ್ವತಿಬಾಯಿ. ೪ನೇ ವಯಸ್ಸಿನಿಂದಲೇ ತಂದೆಯಿಂದ ತಬಲವಾದನ ಶಿಕ್ಷಣ. ವೀರಣ್ಣ ಕಾಮ್ಕಾರ್ ಮತ್ತು ಶೇಷಗಿರಿ ಹಾನಗಲ್ರ ಬಳಿ ೧೩ ವರ್ಷಕಾಲ ತಬಲವಾದನದ ಕಠಿಣ ಶಿಕ್ಷಣ. ಪಂ. ಲಾಲ್ಜಿ ಗೋಖಲೆ ಮತ್ತು ಉಸ್ತಾದ್ ಅಹ್ಮದ್ಖಾನ್ರವರ ಮಾರ್ಗದರ್ಶನ. ಮಧ್ಯಪ್ರದೇಶದ ಇಂದಿರಾ ಕಲಾ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಪಡೆದ ಸ್ನಾತಕೋತ್ತರ ಪದವಿ. ಬಾಲ ಪ್ರತಿಭೆಯ ರವೀಂದ್ರ ಯಾವಗಲ್ರವರು ೧೦ನೇ ವಯಸ್ಸಿಗೇ ಕುಂದಗೋಳದ ಸವಾಯ್ ಗಂಧರ್ವ ಸಂಗೀತೋತ್ಸವದಲ್ಲಿ […]