Categories
ಶರಣರು / Sharanaru

ಅಜಗಣ್ಣ

ಅಂಕಿತ: ಮಹಾಘನ ಸೋಮೇಶ್ವರ

ಶರಣೆ ಮುಕ್ತಾಯಕ್ಕನ ಸೋದರನೀತ. ಊರು-ಲಕ್ಕುಂಡಿ. ಅಲ್ಲಿನ ಸೋಮೇಶ್ವರ ಈತನ ಅರಾಧ್ಯ ಧೈವ. ಇಷ್ಟಲಿಂಗವನ್ನು ಬಾಯಿಯಲ್ಲಿ ಧರಿಸುತ್ತಿದ್ದ ವಿಶಿಷ್ಟ ಗುಪ್ತಭಕ್ತ. ಭಾವಲಿಂಗ ಪೂಜೆ ಇವನ ಮನಸ್ಥಿತಿ. ಐಕ್ಯಸ್ಥಲದ ಪ್ರತಿನಿಧಿ ಎ೦ದು ಅನೇಕ ವಚನಕಾರರು ಈತನನ್ನು ಪ್ರಶಂಸಿಸಿದ್ದಾರೆ. ಮುಕ್ತಾಯಕ್ಕನ ವಚನಗಳಲ್ಲಿ ಈತನ ಘನವ್ಯಕ್ತಿತ್ವ ಮೈವೆತ್ತು ನಿಂತಿದೆ. ಕಾಲ-೧೧೬೦. ‘ಮಹಾಘನ ಸೋಮೇಶ್ವರ’ ಎಂಬ ಅಂಕಿತದಲ್ಲಿ ಬರೆದ ಈತನ ೧೦ ವಚನಗಳು ದೊರೆತಿವೆ. ಗುರುವಿನ ಲಕ್ಷಣ, ಗುರು ಶಿಶ್ಯರ ಸಂಬಂಧದ ಸ್ವರೂಪ, ಶರಣನ ಅನನ್ಯವ್ಯಕ್ತಿತ್ವ ಇವುಗಳಲ್ಲಿ ವ್ಯಕ್ತವಾಗಿದೆ. “ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ಸಮ ಎಂದು ಚೆನ್ನಬಸವಣ್ಣ ಹೇಳುವಲ್ಲಿ ಈತನ ವಚನಗಳ ಶ್ರೇಷ್ಠತೆ ಸೊಚಿತವಾಗಿದೆ.