Categories
ಶರಣರು / Sharanaru

ಅನಾಮಿಕ ನಾಚಯ್ಯ

ಅಂಕಿತ: ನಾಚಯ್ಯ ಪ್ರಿಯ ಚೆನ್ನರಾಮ
ಕಾಯಕ: ಗಾಣಿಗ ವೃತ್ತಿ

ಹಸಿವಿಂಗೆ ಲಯವಿಲ್ಲ, ವಿಷಯಕ್ಕೆ ಕುಲವಿಲ್ಲ;
ಮರಣಕ್ಕೆ ಮನ್ನಣೆಯಿಲ್ಲ, ಆಸೆಗೆ ಹವಣಿಲ್ಲ,
ವಂಚಕನನಾಮಿಕ ನಾಚಯ್ಯಪ್ರಿಯ ಚೆನ್ನರಾಮಯ್ಯ.

ಈತನ ಸ್ಥಳ ಮಾರುಡಿಗೆ, ‘ಅನಾಮಿಕ’ ಎಂಬ ವಿಶೇಷಣ ಈತ ಶೂದ್ರನಿರೆಬೇಕೆಂದು ಸೂಚಿಸುತ್ತದೆ. ಕಾಯಕ-ಗಾಣಿಗ ವೃತ್ತಿ, ‘ನಾಚಯ್ಯ ಪ್ರಿಯ ಚೆನ್ನರಾಮ’ ಅಂಕಿತದಲ್ಲಿ ಐದು ವಚನಗಳು ದೊರೆತಿವೆ. ಬೆಡಗಿನ ಪರಿಭಾಷೆಯ ಅವುಗಳಲ್ಲಿ ತಾತ್ವಿಕ ವಿಷಯದ ಪ್ರತಿಪಾದನೆಯಿದೆ.