Categories
ವಚನಗಳು / Vachanagalu

ಇಮ್ಮಡಿ ಗುರುಸಿದ್ಧನ ವಚನಗಳು

ಅಂಗಾತ್ಮ ಪ್ರಾಣೇಂದ್ರಿಯ ವಿಷಯ ತೃಪ್ತಿಗಳು
ಲಿಂಗಾತ್ಮಕವೆಂದು ನಿರೂಪಿಸಿದೆಯಯ್ಯಾ.
ನೀನವಿರಳ ಪಂರಜ್ಯೋತಿ ಸ್ವರೂಪನಾದುದರಿಂ
ನಿರುಪಾಧಿಕ ನಿರಾವರಣ ನಿರಂಜನನೆನಿಸಿರ್ಪೆಯಯ್ಯಾ,
ಪರಮ ಶಿವಲಿಂಗ ಪರಾಪರ ವೈಭವೋತ್ತುಂಗ./1
ಅಮರ್ದುಗೈಯನನವಗ್ರಹಿಸಿದ ಸೂರ್ಯನಗ್ನಿಯಲ್ಲಿಯಡಗಲಾ
ಯಗಿನಿಯ ಕಟ್ಟಿರುಹೆ ನುಂಗಿ
ಮಹೇಂದ್ರನ ವಾಹನವಾದುದನೇನೆಂದುಸಿರ್ವೆನಯ್ಯಾ,
ಪರಮ ಶಿವಲಿಂಗಫಲಿತ ದಿವ್ಯಪ್ರಸಂಗಾ./2
ಆಯಷ್ಟವಿಧದೊಳಗಾರಾಕರ್ೂಡಿ ಮೂವತ್ತಾರಾಗಲ್
ಅರ್ಪಿತದಾಪ್ರಸಾದದಾರಿಂತಿರಾಕರ್ೂಡೆ ಪದಿನೆರಡಾಗಲೊಡಂ
ಎಂದಿನಂತೆ ನಾಲ್ವತ್ತೆಂಟಾಯ್ತಯ್ಯಾ,
ಪರಮ ಶಿವಲಿಂಗೇಶ್ವರ ಸಕಲ ಭುವನೇಶ್ವರಾ./3
ಇಂತಪ್ಪ ದಿವ್ಯಚಕ್ರಮಂಬುಜ ಪತ್ರೆ ಚಿನ್ನ ಬೆಳ್ಳಿ ತಾಮ್ರ
ಮೊದಲಾದವರ ತಗಡುಗಳೊಳಗರು ಚಂದನ ಕುಂಕುಮ
ಕರ್ಪೂರ ಗೋರೋಚನಾದಿ ದ್ರವ ದ್ರವ್ಯಂಗಳಿಂ ಬರೆದು
ಕಂಡಿಕೆಯಂ ಮಾಡಿ ಶಿರದೊಳ್ತಳೆಯೆ
ಸಮಸ್ತ ವಶ್ಯ ರೋಗಾಪಹರಣ
ಭೋಗ ಮೋಕ್ಷಾದಿಗಳಪ್ಪವೆಂದುಸಿರ್ದೆಯಯ್ಯಾ,
ಪರಮ ಶಿವಲಿಂಗೇಶ್ವರ ಫಣೀಶ್ವರ ಕಂಕಣ ಕರಾ./4
ಇಂತಷ್ಪಾಕ್ಷರಮಂತ್ರ ನಿರೂಪಣಾನಂತರದಲ್ಲಿ
ನವಾಕ್ಷರ ಮಂತ್ರಮಂ ಪೇಳ್ವೆನೆಂತೆನೆ
ಭೂತಾಂತ ಸಂಜ್ಞಿತ ಹಕಾರಮನುದ್ಧರಿಸಿ
ಸ್ವರ ತ್ರಯೋದಶಾಂತದೊಡನೆ ಕೂಡಲ್ ಹೌ ಎನಿಸಿತ್ತು.
ಸಂಜ್ಞಿತವಾದಕಾರದೊಡನೆ ಕೂಡೆ ಹ ಎನಿಸಿತ್ತು.
ಹೌ ಹ ಎಂಬಿವೆರಡು ಶಕ್ತಿ ಸಂಜ್ಞಿತವಾದ ಬಿಂದುವಂ ಬೆರಸೆ
ಹೌಂ ಹಂ ಎಂದೆನಿಸಿದವು.
ಶಕ್ತಿ ಸಂಜ್ಞಿತವಾದ ಸ್ ಎಂಬ ವ್ಯಂಜನಂ ಮಾತ್ರಾಸಂಜ್ಞಿತವಾದ
ಕಾರಮನೊಂದೆ ಸ ಎನಿಸಿ-
ತೇಳನೆಯ ವರ್ಗಾಂತ್ಯಾಕ್ಷರವಾದ ವ್ ಎಂಬುದಂ
ಪಿಂಪೇಳ್ದ ಸಕಾರದ ಪೂರ್ವದೊಳಿಡೆ ಸ್ವ ಎನಿಸಿತ್ತು.
ವಾಯುವರ್ಗದ ಕಡೆಯ ಮ್ ಎಂಬುದನಾದಿಭೂತ
ಸಂಜ್ಞಿತಮಾದಾಕಾಶ
ವರ್ಗಾಂತ್ಯವಾದಕಾರದೊಡನೆ ಕೂಡೆ ಮ ಎನಿಸಿತ್ತು.
ಲಯ ವರ್ಗದಾದಿಯ ಕ್ಷಕಾರಮಂ ವರುಣವರ್ಗದಾದಿಯ
ತಕಾರಮುಮನುದ್ಧರಿಸಿ
ಯವೆರಡರ ನಡುವೆ ಯಾಂತವಾದಾ ರ್ ಎಂಬ
ವ್ಯಂಜನಮನಾದಿಬೀಜ ಸಂಜ್ಞಿತವಾದಕಾರದೊಡನೆ ಕೂಡೆ
ರ ಎನಿಸಿತಿಂತು ಕ್ಷ ರ ತ ಎನಿಸಿದವು.
ಸಪ್ತಮವರ್ಗದಾದಿಯಾದ ಯ್ ಎಂಬಕ್ಕರವನಾದಿಸಂಜ್ಞಿತವಾದ
ಕಾರದೊಡನೆ ಕೂಡೆ ಯ ಎನಿಸಿತ್ತಾರನೆಯ
ವಾಯುವರ್ಗಾಂತವಾದ ಮ್ ಎಂಬಕ್ಕರ
ಮನಾದಿಸಂಜ್ಞಿತವಾದ
ಕಾರದೊಡನೆ ಬೆರಸೆ ಮ ಎನಿಸಿ,
ಒಂಬತುಮಮಂ ಬಿಂದು ನಾದಸಂಜ್ಞಿತವಾದ
ಸೊನ್ನೆಯಂ ಕೂಡಿಸೆ,
`ಹೌಂ ಹಂ ಸ್ವಂ ಮಂ ಕ್ಷಂ ರಂ ತಂ ಯಂ ಮಂ’ ಎಂಬೀ
ನವಾಕ್ಷರ ಮಂತ್ರ ಸರ್ವಸಿದ್ಧಿಪ್ರದ ಶಾಂತಿಕಮಂತ್ರವೆಂದು
ನಿರೂಪಿಸಿದೆಯಯ್ಯಾ,
ಪರಶಿವಲಿಂಗೇಶ್ವರ ನವಲಿಂಗ ಭಾಸ್ವರಾ./5
ಇಂತಾಚಾರಲಿಂಗಸ್ಥಲಮೊಂಬತ್ತುಂ
ಗುರುಲಿಂಗಸ್ಥಲಮೊಂಬತ್ತುಂ
ಶಿವಲಿಂಗಸ್ಥಲಮೊಂಬತ್ತುಂ
ಜಂಗಮಲ್ಲಿಂಗಸ್ಥಲಮೊಂಬತ್ತುಂ
ಪ್ರಸಾದಿಲಿಂಗಸ್ಥಲಂ ಪನ್ನೆರಡುಂ
ಮಹಾಲಿಂಗಸ್ಥಲಮೊಂಬತ್ತು ಮಿಂತೀ ಯೈ[ವ]ತ್ತೇಳುಂ
ನಿನ್ನ ಸ್ವಯಂ ಪ್ರಭಾಮಯಮಯ್ಯಾ,
ಪರಮ ಶಿವಲಿಂಗ ಪತಂಗಜ ವಿಭಂಗಾ./6
ಇಂತೀ ಮಹಾಲಿಂಗದ ಪೂರ್ವೊಕ್ತ ಪಟ್ಚ ್ರಕ್ರಂಗಳೆಲ್ಲ
ಶಿವಚಕ್ರಂಗಳಲ್ಲಿ ನ್ಯಸ್ತವಾದ ಮುವತ್ತೈದು ವ್ಯಂಜನ.
ಭಿಕ್ಷಾರವಾಚ್ಯರಾದ ಮುವತ್ತೈದು ರುದ್ರರೆ
ತ್ರಿಶೂಲ ಕಪಾಲ ವರದಾಭಯಯುಕ್ತ ಕರಚತುಷ್ಟಯದಿಂ,
ಕಟಕ ಮಕುಟಾದಿ ಭೂಷಣಂಗಳಿಂ.
ದಿವ್ಯಗಂಧ ಮಾಲ್ಯ ದುಕೂಲಂಗಳಿಂ,
ಶೋಭೆವಡೆದು ರಕ್ತಕಾಂತಿಯ ಕಾಯದ ಲಾವಣ್ಯವಂತರಾಗಿಕರ್ು-
ಮಂತೆಯೆ ಷೋಡಶ ಸ್ವರಾಕ್ಷರವಾಚ್ಯರಾದರುಮಿದೆ ತೆರದಿಂ
ತಂತಮ್ಮ ನಿಜ ಲಾಂಛನ ಯುಕ್ತರಾಗಿರ್ದಪರೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./7
ಇಂತೀ ಮಹಾಲಿಂಗದ ಶಿವಶಕ್ತ್ಯಾತ್ಮಕ ಚಕ್ರನ್ಯಾಸ
ನಿರೂಪಣಾನಂತರದಲ್ಲಿ,
ಮೂರ್ತಮಂತ್ರಮಂ ಪೇಳ್ವೆನೆಂತೆನೆ-
ನಾದ ಸಂಜ್ಞಿತವಾದ ಹಕಾರಮನಾಜ್ಯಪ್ರಧಾರಿಕೆ
ಮೇಲಣ ಪಂತಿಯ ಮೇಲೆ
ಚತುಷ್ಕೋಷ್ಠ ಮಧ್ಯದಲ್ಲಿ ನ್ಯಾಸಂಗೆಯ್ವುದು.
ಬಿಂದು ಸಂಜ್ಞಿತವಾದೋಕಾರಮನಾದ್ಯಪ್ರದಾರಿಕೆಯಲ್ಲಿರಿಸೂದು.
ಮಕಾರಮಂ ಊಧ್ರ್ವಪಟ್ಟಿಕಾದಿಯಾಗಿ ಊಧ್ರ್ವಕಂಜಪರ್ಯಂತದಲ್ಲಿ
ಮಡಗುವುದು.
ವೃತ್ತದಲ್ಲಿ ಉಕಾರಮನಿರಿಸೂದು.
ಅಕಾರಮನಧಃಕಂಜಾಧಃ ಪಟ್ಟಿಕೆಗಳಲ್ಲಿಡುವುದಿಂತು
ಹ ಒ ಮ ಉ ಅ ಎಂಬೀ ಸೂಕ್ಷ್ಮ ಪಂಚಾಕ್ಷರ ನ್ಯಾಸಮಂ
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./8
ಇಂತೀ ಸ್ಥಿತಮಾರ್ಗದೈದು ಪ್ರಸಾದಮಂತ್ರಂಗಳಿವು
ಬೀಜವಾದ ಕಾರಣ ಶಿವಮಂತ್ರಂಗಳನ್ನು
ಸೃಷ್ಟಿವರ್ಗದಿಂದುದ್ಧರಿಪ ಸಾದಾಖ್ಯ ಸಂಜ್ಞಿತ
ಸದಾಶಿವ ಮಂತ್ರಗಳೆಂತೆನೆ-
ಮೋಕ್ಷದವೆಂದಭಿವೃದ್ಧಿಯೆಂದು ಕಾಮ್ಯವೆಂದು ಶಾಂತಿಕವೆಂದು
ಪೌಷ್ಠಿಕವೆಂದೈದೆರಂಗಳಾಗಿರ್ಪುವಿವಕ್ಕೆ ವಿವರಂ-
ಮೋಕ್ಷದವೆ ಪಂಚಾಕ್ಷರಮಭಿವೃದ್ಧಿಯೆ ಷಡಕ್ಷರಂ.
ಕಾಮ್ಯವೆ ಅಷ್ಟಾಕ್ಷರಂ ಶಾಂತಿಕವೆ ನವಾಕ್ಷರಂ.
ಪೌಷ್ಠಿಕವೆ ದಶಾಕ್ಷರಮಿವಕ್ಕೆ ವಿವರ.-
ವಗ್ನಿಮಂಡಲದ ಸೃಷ್ಟಿಮಾರ್ಗದಿ ಶವರ್ಗದ ಶಕಾರದ
ನಾಲ್ಕನೆಯಕ್ಕರವನುದ್ಧರಿಸಿಮದಕ್ಕೆ
ಚಂದ್ರಮಂಡಲದಿಂದ್ರವರ್ಗದ
ತ್ರಯೋದಶಾಂತಮಾದಕ್ಕರಮಂ ಪತ್ತಿಸಿ
ಪರಾಪರದೊಡನೊಂದಿಸಲ್ಮೊದಲಂತೆ ಮೂಲಪ್ರಸಾದವಾಯಿತ್ತೀ
ಮೂಲಪ್ರಸಾದವೆ ಸದಾಶಿವಮಂತ್ರಗಳೈದಕ್ಕೆಯು-
ಮಾಧ್ಯಕ್ಷರಮಾದುದೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರಾ./9
ಇಂತು ಕರ್ಣಿಕಾಗ್ನಿಂದು ಸೂರ್ಯಮಂಡಲದಳಸ್ಥಂಗಳಾದಕ್ಷರಂಗಳ
ಗಣನೆಯೈವತ್ತೊಂದಾಯಿತ್ತು.
ಮತ್ತವಿೂ ಚಕ್ರಕರ್ಣಿಕಾದಿ ಮಂಡಲತ್ರಯಾನ್ವಿತ
ವಾಚಕರೂಪ ಹಕಾರಾದಿ ವರ್ನ ವಾಚ್ಯ ನಿರೂಪಣಾನಂತರದಲ್ಲಿ,
ಕಡೆಯ ಸೂರ್ಯಮಂಡಲದುಪದಳಂಗಳಂ ಬಿಟ್ಟುಳಿದ
ಪರಶಿವಾದ್ಯಧಿದೇವತೆಗಳಂ ತಿಳಿದು ಭಾವಿಸಿ
ಪೂಜಿಪುದೆಂದೆಯಯ್ಯಾ,
ಪರಮ ಮಹಿಮ ಪರಶಿವಲಿಂಗೇಶ್ವರಾ./10
ಇಂತು ತತ್ವಮಸಿ ಎಂಬ ಮಹಾವಾಕ್ಯರ್ಥಂಗಳೊಳ್ತತ್ತೆನೆ ಲಿಂಗಂ.
ತ್ವಮೆನೆಯಂಗಮಸಿಯೆನೆಲಿಂಗಾಂಗೈಕ್ಯಂ.
ಮತ್ತಂ, ಪೂವೋಕ್ತಮಾದ ತ್ವಂ ತದಸಿ ತತ್ವಮಸಿ
ಇವರ ಶಬ್ದವಾಚ್ಯಮಾದಂಗಲಿಂಗೈಕ್ಯ ಪ್ರತಿಪಾದಿತ
ಮಹಾವಾಕ್ಯ ಸೂತ್ರಾಂತರ್ಗತಮಾದಂಗಸ್ಥಲಂಗಳ ನಾಲ್ವತ್ತನಾಲ್ಕಕ್ಕಂ
ಲಿಂಗಸ್ಥಲಂಗಳೈವತ್ತೇಳಕ್ಕಂ
ನೂರೊಂದು ಸ್ಥಲ ಗಣನೆಯಾದುದಾಯುಭಯ್ಯಾತ್ಮಕಂ
ನೀನೆ ಗಡಾ,
ಪರಮ ಶಿವಲಿಂಗ ಪ್ರಚುರಾನುಕಂಪ ತರಂಗಾ./11
ಇಂತು ಪಂಚಪ್ರಣವ ನಿರೂಪಣಾನಂತರದಲ್ಲಿ
ಬ್ರಹ್ಮಭೇದವಿಧಿಯಂ ಪೇಳ್ವೆನೆಂತೆನೆ-
ಬ್ರಹ್ಮವೆಂದೊಡೆ ದೊಡ್ಡಿತ್ತಹತನದಿಂದೆಯುಂ
ಪೂರ್ಣವಹಣದಿಂದೆಯುಂ
`ಸರ್ವಂ ಖಲ್ವಿದಂ ಬ್ರಹ್ಮ’ವೆಂಬ ವಚನಾರ್ಥ ಸಾರ್ಥಕವಾಗಿಯಾ
ಆದ್ವಿತೀಯ ಶಿವತತ್ವ ಬ್ರಹ್ಮವೆ ಪಂಚಪ್ರಕಾರವಾದವಾ
ಪಂಚಬ್ರಹ್ಮವೊಂದೊಂದೈದೈದಾಗುತ್ತಿರ್ಪತ್ತೈದಾದುದೆಂತೆನೆ
ಮೂರ್ತಿಬ್ರಹ್ಮ, ತತ್ವಬ್ರಹ್ಮ, ಭೂತಬ್ರಹ್ಮ ಪಿಂಡಬ್ರಹ್ಮ,
ಕಲಾಬ್ರಹ್ಮಗಳೆಂಬೀವೈದುಂ ಪಂಚಬ್ರಹ್ಮಂಗಳಿವಕ್ಕೆ ವಿವರವೆಂತೆನೆ
ಅಕಾರೋಕಾರಮಕಾರಾಧಿದೇವತೆಗಳಾದ
ಸೃಷ್ಟಿಸ್ಥಿತ್ಯಂತ್ಯಕಾರಿಗಳಾದ ಬ್ರಹ್ಮ ವಿಷ್ಣು ರುದ್ರರುಂ
ಸಾಕಲ್ಯಾದಿ ಪಂಚಪ್ರಣವಾಂಗರೂಪ ಸಮಸ್ತಾಕ್ಷರಂಗಳು-
ಮಿವೆಲ್ಲವಾದ ಬ್ರಹ್ಮ ಸಂಜ್ಞಿತವಾದ ಹಕಾರಾಂತಸ್ಥವಾದುದರಿಂದೀ
ಸರ್ವವುಂ ಮೂರ್ತಿಬ್ರಹ್ಮವೆನಿಕುಂ.
ಮತ್ತವಿೂ ತ್ರಿವರ್ಣಸಂಭೂತವಾದ ಸಮಸ್ತ ವರ್ಣತತ್ವಂಗಳ್ಗೆಯು
ಶಿವತತ್ವವೆ ಪ್ರಭುವಾದುದರಿಂ ಶಿವಬೀಜ ಸಂಜ್ಞಿತವಾದ ಹ ಎಂಬ
ಶುದ್ಧ ಪ್ರಸಾದಾಧ್ಯಾತ್ಮಪ್ರಸಾದಾಂತವಾದ ಪಂಚಪ್ರಸಾದಮಂತ್ರವೆ
ತತ್ವಬ್ರಹ್ಮವೆನಿಕುಂ.
ಬಳಿಕ್ಕಂ ಮಾಂಸ ಸಂಜ್ಞಿತವಾದ ಲಕಾರವೆ ಪೃಥ್ವೀಭೂತ ಬೀಜಂ.
ಮೇದಸ್ಸಂಜ್ಞಿತವಾದ ವಕಾರವೆ ಜಲಭೂತ ಬೀಜಂ.
ಷಷ್ಠ ್ಯ ಸಂಜ್ಞಿತವಾದ ರಕಾರವೆ ತೇಜೋಭೂತ ಬೀಜಂ.
ಸಪ್ತಮಸಂಜ್ಞಿತವಾದ ಹಕಾರವೆ ಆಕಾಶಭೂತ ಬೀಜವೀ
ಪ್ರಕಾರದಿಂ ಪಂಚಭೂತಾತ್ಮಕವಾದುದೆ ಭೂತಬ್ರಹ್ಮವೆನಿಕುಂ.
ಮರಲ್ದುಂ, ಪ್ರಕೃತಿಸಂಜ್ಞಿತವಾದ ಅ ಇ ಉ ಋ ಒ ಎ ಒಯೆಂಬೀ
ಪ್ರಕೃತಿಗಳಲ್ಲಿ
ಋ ಒ ದ್ವಯಂಮಂ ಬಿಟ್ಟುಳಿದ ಅ ಇ ಉ ಎ ಒ
ಯೆಂಬೀಯೈದಕ್ಕರಮಂ
ಪಂಚಸಂಜ್ಞಿತವಾದ ಹಕಾರದೊಡನೆ ಕೂಡೆ,
ಬಿಂದುನಾದ ಸೌಂಜ್ಞಿತವಾದ ಸೊನ್ನೆಯೊಳ್ಬೆಸೆ,
ಹ್ರಂ ಹ್ರೀಂ ಹ್ರುಂ ಹ್ರೇಂ ಹ್ರೌಂ ಎಂಬೀ
ಬ್ರಹ್ಮಬೀಜಂಗಳೈದಂ ಪೇಳ್ದು,
ಮತ್ತವಿೂ ಬೀಜಗಳೊಳ್ವಾಚಕವಾದ
ಪಂಚಬ್ರಹ್ಮಂಗಳಂ ಪೇಳ್ವೆನೆಂತೆನೆ-
ಸದ್ಯೋಜಾತ ವಾಮದೇವಾಘೋರ ತತ್ಪುರುಷೇಶಾನಂಗಳೆಂಬಿವೆ
ಪಂಚಬ್ರಹ್ಮಂಗಳಿವಕ್ಕೆ
ಪ್ರಣವವಾದಿಯಾಗಿ ನಮಃ ಪದಂ ಕಡೆಯಾಗಿ
ಚತುಥ್ರ್ಯಂತಮಂ ಪ್ರಯೋಗಿಸೆ
ಆ ಪಂಚಬ್ರಹ್ಮ ಮಂತ್ರೋದ್ಧರಣೆಯಾದುದೆಂತನೆ-
ಓಂ ಹ್ರಂ ಸದ್ಯೋಜಾತಾಯ ನಮಃ
ಓಂ ಹ್ರೀಂ ವಾಮದೇವಾಯ ನಮಃ
ಓಂ ಹ್ರುಂ ಅಘೋರಾಯ ನಮಃ
ಓಂ ಹ್ರೇಂ ತತ್ಪುರುಷಾಯ ನಮಃ
ಓಂ ಹ್ರೌಂ ಈಶಾನಾಯ ನಮಃ
ಎಂದು ಶಿವಬೀಜದೋಳ್ವೀವ ಪ್ರಕೃತಿ ಪಂಚಾಕ್ಷರಂಗಳಂ ಕೂಡಿಸಿ
ಸಬಿಂದುವಾಗುಚ್ಚರಿಸೆ,
ಪಂಚಬ್ರಹ್ಮವೆನಿಸಿದ ಕರ್ಮಸಾದಾಖ್ಯ
ಸ್ವರೂಪಮೆ ಪಿಂಡಬ್ರಹ್ಮವೆನಿಕುಂ.
ಮತ್ತಂ, ಪಿಂಡಬ್ರಹ್ಮವೆಂಬ ಪಂಚಬ್ರಹ್ಮ
ನಿರೂಪಣಾನಂತರದಲ್ಲಿಯಾ
ಪಂಚಬ್ರಹ್ಮಮಂತ್ರಕ್ಕೆ ಮೂವತ್ತೆಂಟು ಕಳೆಗಳುಂಟದೆಂತೆನೆ-
ಈಶಾನ ತತ್ಪುರುಷಾಘೋರ ವಾಮದೇವ
ಸದ್ಯೋಜಾತಂಗಳಿವಕ್ಕೆ ವಿವರಂ
ಈಶಾನಕ್ಕೆದು ಕಲೆ. ತತ್ಪುರುಷಕ್ಕೆ ನಾಲ್ಕು ಕಲೆ.
ಅಘೋರಕ್ಕೆಂಟು ಕಲೆ. ವಾಮದೇವಕ್ಕೆ ಪದಿಮರ್ೂಕಲೆ.
ಸದ್ಯೋಜಾತಕ್ಕೆಂಟು ಕಲೆ.
ಅಂತು, ಮೂವತ್ತೆಂಟು ಕಲೆ.
ಇವಕ್ಕೆ ವಿವರಂ, ಮೊದಲೀಶಾನಕ್ಕೆ-
`ಈಶಾನಸ್ಸರ್ವ ವಿದ್ಯಾನಾಂ’ ಇದು ಮೊದಲ ಕಲೆ.
`ಈಶಾನಾಸ್ಸರ್ವ ಭೂತಾನಾಂ’ ಇದೆರಡನೆಯ ಕಲೆ.
`ಬ್ರಹ್ಮಣಾಧಿಪತಿ ಬ್ರಹ್ಮಣಾಧಿಪತಿ ಬ್ರಹ್ಮ’ ಇದು ಮೂರನೆಯ ಕಲೆ.
`ಶಿವೋಮೇಸ್ತು’ ಇದು ನಾಲ್ಕನೆಯ ಕಲೆ.
`ಸದಾ ಶಿವೋಂ’ ಇದು ಐದನೆಯ ಕಲೆ.
ತತ್ಪುರುಷಕ್ಕೆ-
`ತತ್ಪುರುಷಾಯ ವಿದ್ಮಹೆ’ ಇದು ಮೊದಲ ಕಲೆ.
`ಮಹಾದೇವಾಯ ಧೀಮಹಿತನ್ನೋ’ ಇದೆರಡನೆಯ ಕಲೆ.
`ರುದ್ರಃ’ ಇದು ಮೂರನೆಯ ಕಲೆ.
`ಪ್ರಚೋದಯಾತ್’ ಇದು ನಾಲ್ಕನೆಯ ಕಲೆ.
ಅಘೋರಕ್ಕೆ
`ಅಘೋರೇಭ್ಯಃ’ ಇದು ಮೊದಲ ಕಲೆ.
`ಘೋರೇಭ್ಯಃ’ ಇದು ಎರಡನೆಯ ಕಲೆ.
`ಘೋರಘೋರ’ ಇದು ಮೂರನೆಯ ಕಲೆ.
`ತರೇಭ್ಯ’ ಇದು ನಾಲ್ಕನೆಯ ಕಲೆ.
`ಸರ್ವತಃ’ ಇದೈದನೆಯ ಕಲೆ.
`ಸರ್ವ’ ಇದಾರನೆಯ ಕಲೆ.
`ಸರ್ವೆಭ್ಯೇ ನಮಸ್ತೇಸ್ತು’ ಇದೇಳನೆಯ ಕಲೆ.
`ರುದ್ರ ರೂಪೇಭ್ಯಃ’ ಇದೆಂಟನೆಯ ಕಲೆ.
ವಾಮದೇವಕ್ಕೆ-
`ವಾಮದೇವಾಯ’ ಇದು ಮೊದಲ ಕಲೆ.
`ಜೇಷ್ಠಾಯ’ ಇದೆರಡನೆಯ ಕಲೆ.
`ರುದ್ರಾಯ ನಮಃ’ ಇದು ಮೂರನೆಯ ಕಲೆ.
`ಕಲಾಯ’ ಇದು ನಾಲ್ಕನೆಯ ಕಲೆ.
`ಕಲಾ’ ಇದೈದನೆಯ ಕಲೆ.
`ವಿಕರಣಾಯ ನಮಃ’ ಇದಾರನೆಯ ಕಲೆ.
`ಬಲಂ’ ಇದೇಳನೆಯ ಕಲೆ.
`ವಿಕರಣಾಯ’ ಇದೆಂಟನೆಯ ಕಲೆ.
`ಬಲಂ’ ಇದೊಂಬತ್ತನೆಯ ಕಲೆ.
`ಪ್ರಮಥನಾಥಾಯ’ ಇದು ಪತ್ತನೆಯ ಕಲೆ.
`ಸರ್ವಭೂತ ದಮನಾಯ ನಮಃ’ ಇದು ಪನ್ನೊಂದನೆಯ ಕಲೆ
`ಮನ’ ಇದು ಪನ್ನೆರಡನೆಯ ಕಲೆ.
`ಉನ್ಮನಾಯ’ ಇದು ಪದಿಮೂರನೆಯ ಕಲೆ.
ಸದ್ಯೋಜಾತಕ್ಕೆ-
`ಸದ್ಯೋಜಾತಂ ಪ್ರಪದ್ಯಾಮಿ’ ಇದು ಮೊದಲ ಕಲೆ.
`ಸದ್ಯೋಜಾತಾಯವೈ ನಮಃ’ ಇದೆರಡನೆಯ ಕಲೆ.
`ಭವೆ’ ಇದು ಮೂರನೆಯ ಕಲೆ.
`ಭವೇ’ ಇದು ನಾಲ್ಕನೆಯ ಕಲೆ.
`ನಾತಿಭವೆ’ ಇದೈದನೆಯ ಕಲೆ.
`ಭವಸ್ವ ಮಾಂ’ ಇದಾರನೆಯ ಕಲೆ.
`ಭವ’ ಇದೇಳನೆಯ ಕಲೆ.
`ಉದ್ಭವ’ ಇದೆಂಟನೆಯ ಕಲೆ.
ಇದು ಕಲಾಬ್ರಹ್ಮವಿಂತು ಮೂರ್ತಿಬ್ರಹ್ಮ ತತ್ವಬ್ರಹ್ಮ ಭೂತಬ್ರಹ್ಮ
ಪಿಂಡಬ್ರಹ್ಮ ಕಲಾಬ್ರಹ್ಮಗಳೆಂಬ
ಪಂಚಬ್ರಹ್ಮಗಳಂ ನಿರವಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./12
ಇಂತು ಭ್ರೂಮಧ್ಯ ಸಂಜ್ಞಿಕ ಮೇರುಗಿರಿಯುಪರಿಯ
ಕೈಲಾಸನಾಮ ದ್ವಾದಶಾಂತ ವಿಶ್ರುತ ಬ್ರಹ್ಮನಾಡಿ
ಮೂಲಸೂತ್ರಾಯಮಾನತ್ವಗತ ಬ್ರಹ್ಮರಂಧ್ರಾಖ್ಯ
ಪರಿಸ್ಫುಟ ಮಂಡಲತ್ರಯ ವಿಳಸಿತ
ಶಾಂಭವಚಕ್ರ ಮಧ್ಯಸ್ಥಿತ ದೇವತಾ ಮಂತ್ರಾಕ್ಷರಂಗಳಂ
ನಿರೂಪಿಸಿದೆಯಾ
ಮಂತ್ರಾತ್ಮಕದಿಂ ನ್ಯಸ್ತವಾದಕ್ಷರ ಸಂಖ್ಯೆಗಳ್ವೆಂತು
ಬಹುದಯಾಪಾಂಗದಿಂ ನೋಡಿ ಸಂಜ್ಞೆಗೈದು ನಿರೂಪಿಸಯ್ಯಾ,
ಪರಮ ಶಿವಲಿಂಗೇಶ್ವರ ಪ್ರಕಾಶಿತಾಗಮೋತ್ಕರ./13
ಇಂತು ಮಧ್ಯವೃತ್ತದ ದಳಾಪದಳಂಗಳಲ್ಲಿ ನ್ಯಾಸಮಾದ
ಪದಿನಾರಕ್ಕರಂಗಳ ಎಸಳುಗಳಲ್ಲಿ ಪೂರ್ವದಳಾದಿಯಾಗಿ
ಕಖಗಘಙ ಚಛರುುಜಞ ಟಠಡಢಣ
ತಥದಧನ ಪಫಬಭ ಎಂಬಿಪ್ಪತ್ತುನಾಲ್ಕು
ದಳಾಕ್ಷರನ್ಯಾಸಮಾದುದು.
ಮಕಾರವೆ ಯಕಾರ ಸವಿೂಪವರ್ತಿಯಾದಕಾರಣ
ಮಗ್ನಿಮಂಡಲದಳನ್ಯಸ್ತವಾಯಿತ್ತದು ಗೂಡಿ
ಸ್ಪಶರ್ಾಕ್ಷರಂಗಳಿರ್ಪತ್ತೈದಾಯಿತ್ತೆಂದೆಯಯ್ಯಾ,
ಪರಮ ಶಿವಲಿಂಗೇಶ್ವರಾ./14
ಇಂತು ವರ್ಗತ್ರಯ ನಿರೂಪಣಾನಂತರದಲ್ಲಿ,
ಚಕ್ರಕಮಲಕರ್ಣಿಕಾದಿ ಮಂಡಲತ್ರಯದೊಳಗೆ
ನ್ಯಸ್ತವರ್ಗಂಗಳಲ್ಲಿ, ಮೊದಲ ಸೂಕ್ಷ್ಮಕರ್ಣಿಕಾ ನ್ಯಸ್ತವರ್ಗಮಂ
ನಿರೂಪಿಸುವೆನೆಂತೆನೆ-
ನಾದವೆಂದು ಗುಹ್ಯವೆಂದು ಪರವೆಂದು ಜೀವವೆಂದು
ದೇಹಿಯೆಂದು ಭೂತವೆಂದು ಪಂಚಮವೆಂದು
ಸಾಂತವೆಂದು ತತ್ವಾಂತವೆಂದು
ಭೂತಾಂತವೆಂದು ಶಿವಾರ್ನವೆಂದು
ಶೂನ್ಯವೆಂದವ್ಯಯವೆಂದೀ
ಪದಿಮೂರ್ಪೆಸರ್ಕಣ್ನರ್ಿಕಾನ್ಯಸ್ತ ಹಕಾರಕ್ಕೆಂದು
ನಿರೂಪಿಸಿಸಿದೆಯಯ್ಯಾ,
ಪರಾತ್ಪರ ಪರಮ ಶಿವಲಿಂಗೇಶ್ವರ./15
ಇಂತು ಶಿವ ಸದಾಶಿವ ಮಹೇಶ್ವರ ನಿರೂಪಣಾನಂತರದಲ್ಲಿ
ಪಂಚಶಕ್ತಿ ಮಂತ್ರಬೀಜಂಗಳಂ ಪೇಳ್ವೆನೆಂತೆನೆ
ಶಕ್ತಿಸಂಜ್ಞಿತವಾದ ಸ್ ಎಂಬುದನ್ನುದ್ಧರಿಸಿ,
ವಿಕೃತಿಸಂಜ್ಞಿತವಾದಾಕಾರವಂ ಪತ್ತಿಸಿ-
ಯಗ್ನಿಸಂಜ್ಞಿತವಾದ ರ್ ಎಂಬುದಂ ಬೆರಸೆ
ಸ್ರಾಯೆನಿಸಿತ್ತದಂ ಬಿಂದು ನಾದ ಸಂಜ್ಞಿತವಾದ ಸೊನ್ನೆಯೊಳ್ಕೂಡೆ
ಸ್ರಾಂ ಯೆನಿಸಿತ್ತೀ ಶಕ್ತಿಬೀಜಂ ಸಮಸ್ತ ಶಕ್ತ್ಯಾಶ್ರಯವಾದ
ಪ್ರಥಮಶಕ್ತಿಯೆಂದು ನಿರೂಪಿಸಿದೆಯಯ್ಯಾ,
ಪರಶಿವಲಿಂಗಯ್ಯಾ./16
ಇಂತು ಷೋಡಶರುದ್ರವಾಚ್ಯವಾದ ಹದಿನಾರು ಸ್ವರಾಕ್ಷರಂಗಳುಂ
ಮೂವತ್ತೈದು ರುದ್ರವಾಚ್ಯವಾದ ಮೂವತ್ತೈದು
ವ್ಯಂಜನಾಕ್ಷರಂಗಳುಂ ಕೂಡಿ ಐವತ್ತೊಂದಕ್ಕರ ಗಣನೆಯಾದುದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./17
ಇಂತು, ಕಾಮಿಕಾದಿ ವಾತೂಲಾಂತವಾಗಿಪ್ಪತ್ತೆಂಟು
ದಿವ್ಯಾಗಮ ಪ್ರಣೀತ
ಸರ್ವಥಾ ಮಂತ್ರಜಾತಮೆ ಮಹಾಲಿಂಗವೆಂದರಿದು
ಪೂಜಿಪುದಲ್ಲದೆ ಮತ್ತೊಂದು ತೆರದಿಂದರ್ಚಿಸಲಾಗ-
ದರ್ಚಿಸಿದ ಪಕ್ಷದಲ್ಲಾ ಪೂಜೆ ನಿಷ್ಫಲವೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./18
ಇಂತು, ಪಂಚಭೌತಿಕವಾದೈವತ್ತಕ್ಕರವೆ
ಜೀವಸಂಜ್ಞಿತಮಪ್ಪ ಸಾಂತಕ್ಕೆ ಪುರಾಷ್ಟಕಮೆನಿಸಿತ್ತು.
ಮತ್ತಮೀ ಮೂಲಪ್ರಸಾದವೆ ಜೀವಪ್ರಸಾದವಾದುದು.
ಬಳಿಕಂ, ಬ್ರಹ್ಮಾದಿ ತೃಣಂ ಕಡೆಯಾಗಿ ಚರಾಚರರೂಪವಾದ
ಜತ್ಕಾರಣಮೆನಿಸಿ ಭೂತಭವಿಷ್ಯದ್ವರ್ತಮಾ[ನಾ]ತ್ಮಕವೆಲ್ಲವುಂ
ಮೂಲಪ್ರಸಾದದಲ್ಲಿಯೆ ಸಾಗರತರಂಗನ್ಯಾಯದಿಂದಂತ-
ರ್ಗತವಾದುದೆಂದು ನಿರೂಪಿಸಿದೆಯ್ಯಾ,
ಪರಶಿವಲಿಂಗೇಶ್ವರ ಗಿರಿಜೋತ್ಸವಾಬ್ಧಿ ನಿಶಾಕರ./19
ಇಂತು, ಪೂರ್ವೊಕ್ತ ಪಂಚಬ್ರಹ್ಮವಪ್ಪ ಶಿವಬೀಜವೆ
ಸಾಕಲ್ಯಾದಿ ಸಾಯುಜ್ಯಾಂತವಾದ ಪ್ರಣವ ಸ್ವರೂಪವಾದ ಕಾರಣ
ಮೂರ್ತಿವೆತ್ತಿಹುದಾಗಿಯಾ ಪಂಚ ಪ್ರಣವವೆ ಮೂರ್ತಿಬ್ರಹ್ಮಂ.
ಶುದ್ಧಾಧ್ಯಾತ್ಮಾಂತವಾದ ಪಂಚಪ್ರಸಾದ ಬೀಜವೆ
ಸಕಲ ನಿಷ್ಕಲ ಸ್ವರೂಪದಿಂದ ಭೋಗ್ಯಪಂಚಕೋತ್ಪತ್ತಿ
ಕಾರಣವೆನಿಸಿತ್ತಾಗಿಯಾ
ಪ್ರಸಾದಪಂಚಕವೆ ತತ್ವಬ್ರಹ್ಮಂ.
ಭೂಮ್ಯಾದ್ಯಾಕಾಶಾಂತವಾದ ಪಂಚಭೌತಿಕ ಬೀಜಂಗಳೊಳ್ತಾಂ
ಶೂನ್ಯಬೀಜವಾದುದರಿಂ ತನ್ನ ಭೋಗವಕ್ತ್ರಪಂಚಕ
ಸಾಧನಾರ್ಥ ಭೂತವತ್ತೆನಿಸಿತ್ತಾಗಿಯಾ
ಲಕಾರಾದಿ ಹಕಾರಾಂತ ಭೂತವರ್ಣ ಪಂಚಕವೆ ಭೂತಬ್ರಹ್ಮಂ.
ಸದ್ಯಾದೀಶಾನಾಂತವಾದ ಪಂಚವಕ್ತ್ರಬೀಜಪಂಚಕವೆ
ಪಿಂಡಬ್ರಹ್ಮವದು.
ಕರ್ಮಸಾದಾಖ್ಯ ಭೌತಿಕಸ್ತವಾದಾತ್ಮತತ್ವದಲ್ಲಿ ತೋರಿಪ್ಪ ಕಾರಣಂ,
`ಹ್ರಸ್ವಸ್ವಂಸ್ಯಾದ್ಬ ್ರಹ್ಮನಿಚಯ’ಮೆಂಬುದರಿಂ,
ಹ್ರಸ್ವಸ್ವರ ಪಂಚಕವ[ದೆ]ನಿತ್ತಾಗಿ
ಸದ್ಯಾದಿ ವಕ್ತ್ರಪಂಚಕವೆ ಪಿಂಡಬ್ರಹ್ಮ ಪಂಚಕಂ.
ಕರ್ಮಸಾದಾಖ್ಯವೆಂದು ದಿವ್ಯಲಿಂಗವೆಂದಾತ್ಮತತ್ವವೆಂದು
ಪಂಚವಕ್ತ್ರವೆಂದು ಪಿಂಡವೆಂದಿಲ್ಲವೊಂದರ
ಪರ್ಯಾಯನಾಮವಲ್ಲದೆ ಪೆರತಲ್ಲವೀ
ಪಂಚಬ್ರಹ್ಮಬೀಜಂಗಳಾರಾಧಕರ ಜಪನಿಮಿತ್ತವಾಗಿ
ಪಂಚಬ್ರಹ್ಮಮಂತ್ರ ವಿಭಾಗೆವಡೆದವು.
ಕತರ್ೃಸಾದಾಖ್ಯವೆಂದು ದಿವ್ಯಲಿಂಗವೆಂದಾತ್ಮತತ್ವವೆಂದು
ಪಂಚವಕ್ತ್ರವೆಂದು ಪಿಂಡಬ್ರಹ್ಮವೆಂದು
ನಾಮಪರ್ಯಾಯವಲ್ಲದೆ ಪೆರತಲ್ಲವೀ
ಪಂಚಬ್ರಹ್ಮಬೀಜಂಗಳಾರಾಧಕರ ಜಪನಿಮಿತ್ತವಾಗಿಯಾ
ಪಂಚಬ್ರಹ್ಮಮಂತ್ರಗಳೆ ವಿಭಾಗೆವಡೆದವು.
ಸ್ವ ಪರಾಶಕ್ತಿ ಸಂಭೂತವಾಗಿ ಜೋತಿರ್ದೆವತಾಧಿಪತಿಗಳಾದ
ಸಕಲ ವರ್ಣ ಕಲೆಗಳಿಗೆ ತಾನೆ ಆಶ್ರಯವಾದ ಕಾರಣಂ
ಪಿಂಡಬ್ರಹ್ಮ ಮಂತ್ರಪಂಚಕವೆ ಕಲಾಬ್ರಹ್ಮ ಪಂಚಕವೆಂದುಕ್ತ
ಮಾದುದಿಂತು ಪಂಚಬ್ರಹ್ಮವಿಭಾಗವಾದ ಪಂಚವಿಂಶತಿ ಬ್ರಹ್ಮಭೇದಮಂ ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗಯ್ಯಾ./20
ಇಂತು, ಮೂಲಪ್ರಸಾದ ನಿರೂಪಣಾನಂತರದಲ್ಲಿ
ತತ್ವಪ್ರಸಾದಮಂ ಪೇಳ್ವೆನೆಂತೆನೆ-
ತತ್ವಾಂತವೆನಿಸುವ ವ್ಯಂಜನರೂಪವಾದ ಹ್ ಎಂಬಕ್ಕರದಲ್ಲಿ
ಆದಿಬೀಜವೆನಿಪಕಾರಮಂ ಕೂಡಿಸಿ ಹ ಎಂದಾಯಿತ್ತದಂ
ಕಾರ್ಯಕಾರಣ ಸಂಜ್ಞಿತ ಬಿಂದುವಿನೊಡನೆ ಕೂಡಿಸೆ ಹಂ
ಎಂದಾಯಿತ್ತೀ
ಹಂ ಎಂಬಕ್ಷರವೆ ಸರ್ವ ತತ್ವಾತ್ಮಕವಾದ
ತತ್ವಪ್ರಸಾದವಾದುದೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ/21
ಇಂತು, ಸದಾಶಿವಮಂತ್ರ ನಿರೂಪಣಾನಂತರದಲ್ಲಿ
ಮಹೇಶ್ವರಮಂತ್ರಮಂ ಪೇಳ್ವೆನೆಂತೆನೆ-
ಮಹೇಶ್ವರನೆನೆ ರುದ್ರನಾತನೆ ಸಂಹಾರಕಾರಣನಾತನ
ಮಂತ್ರಮಂ ಸಂಹಾರವರ್ಗಕ್ರಮದಿಂದುದ್ಧರಿಪುದೆನಲದು
ಸೃಷ್ಟಿ ಸ್ಥಿತಿ ಲಯಂಗಳೆಂದು ಮೂದೆರನಾಗಿರ್ಪು-
ವವರ ಮೊದಲ ಸೃಷ್ಟಿವರ್ಗಮದೆಂತೆನೆ,
ಭೂವರ್ಗದ ಮೂರನೆಯಕ್ಕರಮಾದ ಹಕಾರಮನುದ್ಧರಿಸಿ,
ಜಲವರ್ಗದ ಮೊದಲಾದ ಮಕಾರಮನದರೊತ್ತಿನೊಳಿರಿಸಿ,
ಭೂವರ್ಗದೊಂಬತ್ತನೆಯ ದಕಾರಮನವೆರಡರ ಮುಂದಿ
ಟ್ಟಾಕಾಶವರ್ಗದಾರನೆಯದಾದೆಕಾರಮನದರಿದಿರೊಳ್ಮಡಂಗಿ
ಯಾಧಾರಾಧೇಯಸಂಜ್ಞಿತವಾದ ಸೊನ್ನೆಯಿಂ ಕೂಡಿಸೆ
ೂ ನಾಲ್ಕಕ್ಕರಂಗಳ್
`ಹಂ ಮಂ ದಂ ಎಂ’ ಎಂಬೀ ಚತುರಕ್ಷರಮಂತ್ರವು
ಸೃಷ್ಟಿಮಂತ್ರವೆಂದರುಪಿದೆಯಯ್ಯಾ,
ಪರಮ ಶಿವಲಿಂಗದೇವ ಪರಿಪೂರ್ಣ ಭಾವಾ./22
ಇಂತು,
ಪಂಚಪ್ರಣವ ನಿರೂಪಣಾನಂತರದಲ್ಲಿಯಾ ಪಂಚಪ್ರಣವಂಗಳ್ಗೆ
ವರ್ಣಂ ಛಂದಂ ರಿಸಿ ಭೂತಂ ತತ್ವ ಅಧಿದೈವಂ
ಮಾತ್ರೆಗಳೆಂಬಿವರ ವಿವರಮಂ ಪೇಳ್ವೆನೆಂತೆನೆ-
ಮೊದಲಲ್ಲಿ ಸಾಕಲ್ಯಪ್ರಣವಕ್ಕೆ ರಕ್ತವರ್ಣಂ, ಅನುಷ್ಟಪ್ ಛಂದಂ,
ರಿಸಿ ಸನತ್ಕುಮಾರಂ, ಪೃಥ್ವಿ ಭೂತಂ, ಕರ್ಮಸಾದಾಖ್ಯ ತತ್ವಂ.
ಈಶಾನನಧಿದೈವಂ, ಚತುರ್ಮಾತೆಗಳುಕ್ತಂಗಳಿನ್ನುಂ
ಶಾಂಭವಪ್ರಣವಕ್ಕೆ ಅಂಜನ ವರ್ಣಂ, ತ್ರಿಷ್ಟಪ್ ಛಂದಂ,
ರಿಸಿ ಭಾರದ್ವಾಜಂ, ಅಪ್ಪು ಭೂತಂ, ಕತರ್ೃಸಾದಾಖ್ಯ ತತ್ವಂ-
ಈಶಾನನಧಿದೈವತಂ, ಪಂಚಮಾತ್ರೆಗಳುಕ್ತಂಗಳ್ಮತ್ತಂ
ಸೌಖ್ಯಪ್ರಣವಕ್ಕೆ ಗೋಕ್ಷೀರವರ್ಣಂ, ಬೃಹತಿ ಛಂದಂ,
ರಿಸಿ ವಿಶ್ವಾಮಿತ್ರಂ, ತೇಜ ಭೂತಂ, ಮೂರ್ತಸಾದಾಖ್ಯ ತತ್ವಂ,
ಬ್ರಹ್ಮೇಶನಧಿದೈವತಂ, ಚತುರ್ಮಾತ್ರೆಗಳುಕ್ತಂಗಳಿನ್ನುಂ
ಸಾವಶ್ಯಪ್ರಣವಕ್ಕೆ ಕುಂಕುಮವರ್ಣಂ, ಜಗತಿ ಛಂದಂ,
ರಿಸಿ ಗೌತಮಂ, ವಾಯುಭೂತಂ, ಅಮೂರ್ತಸಾದಾಖ್ಯ ತತ್ವಂ,
ಈಶ್ವರನಧಿದೈವತಂ, ಪಂಚಮಾತ್ರೆಗಳುಕ್ತಂಗಳಿನ್ನುಂ
ಸಾಯುಜ್ಯಪ್ರಣವಕ್ಕಿದೇ ತೆರದಿಂ ಗ್ರಂಥಾಂತರದೊಳ್ನೋಡಿಕೊಳ್ವುದೀ
ಪೂರ್ವೊಕ್ತವಾದ ಪ್ರಣವಾಂಗ ಮಾತ್ರೆಗಳಲ್ಲಿ
ಸಮಸ್ತ ಮಾತ್ರೆಗಳ್ಗೆಯುಂ
ಪ್ರಣವನಾಮದಿಂ ಪ್ರಾಣಸ್ವರೂಪವಾದ
ಶಿವಬೀಜ ಸಂಜ್ಞಿತವೆನಿಪ ಹಕಾರವೆ ನಾದಂ,
ಮಿಕ್ಕಕ್ಕರಂಗಳಾ ನಾದಬ್ರಹ್ಮಕ್ಕೆ ಬಿಂದು ಸಂಜ್ಞಿತ ಶಕ್ತಿಗಳೆನಿಪವಾ
ಶಿವಶಕ್ತ್ಯಾತ್ಮಕವಪ್ಪ ಹ ಎಂಬ ನಾದಬ್ರಹ್ಮವೆ
ಶರೀರಾದಿಗಳ ಸೃಷ್ಟಿ ಸ್ಥಿತಿ ನಿಮಿತ್ತಕ್ಕೆ
ತತ್ಪ್ರಾಣಿಗಳ ಹೃದಯಾಂತರವ-
ನೆಯ್ದಲೆಲ್ಲಾ ಮುಮುಕ್ಷುಗಳಾ
ನಾದಬ್ರಹ್ಮವಪ್ಪ ಪ್ರಣವೋಚ್ಚರಣೆಯಂ ಮಾಳ್ಪುದೀ
ಪಂಚಪ್ರಣವಂಗಳೆಲ್ಲಕ್ಕೆಯುಂ ಹಕಾರವೆ
ಕಾರಣವೆಂದು ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./23
ಇಂತು
ಭಕ್ತನ ಪದಿನೈದುಂ
ಮಾಹೇಶ್ವರನೊಂಬತ್ತುಂ
ಪ್ರಸಾದಿ ಏಳುಂ
ಪ್ರಾಣಲಿಂಗಿಯೈದುಂ
ಶರಣನ ನಾಲ್ಕುಮೈಕ್ಯನ ನಾಲ್ಕುಮಿದುಂ
ನಿನ್ನ ತೂರ್ಯಕಳೇವರಮಯ್ಯ, ಸಮಷ್ಟಿ
ಯಿಂತೀಯಂಗಸ್ಥಲಂಗಳು ನಾಲ್ವತ್ತನಾಲ್ಕುಂ ಕೂಡಿ
ನಿನ್ನ ಪೂರ್ಣಾಂಗಮಾದುದಯ್ಯಾ,
ನಿರಂತರ ಪರಬ್ರಹ್ಮ ಪರಮ ಶಿವಲಿಂಗೇಶ್ವರಾ./24
ಇದಕ್ಕೆ ತತ್ತ್ವಮಸಿ ಎಂಬ ಮಹಾವಾಕ್ಯಮಿಲ್ಲಿ
ತ್ವಮೆನಲಾರಂಗಂ ತತ್ಎನಲಾರ್ಲೆಂಗಮಸಿ
ಯೆನಲಾರ್ಬಕುತಿ,
ಈ ಮೂದೆರನೊಂದಾಲಗದು ನೀನೆ
ಅಪ್ರತಕ್ರ್ಯ ಪ್ರಣವಾತ್ಮಕ ಪರಮ ಶಿವಲಿಂಗಾ,
ಮಲ್ಲ್ಲಿಕಾ ಕರ್ಪೂರ ಧವಲಾಂಗಾ./25
ಇದು ವ್ಯಂಜನವಿಶಿಷ್ಟ
ಮೂಲಪ್ರಸಾದ ಮಂತ್ರಮೂರ್ತಿ.
ಮರಲ್ದುಮಾ ಶಿವಾತ್ಮಕ ಮೂಲಪ್ರಸಾದಮಂತ್ರಮೂರ್ತಿಗೆ
ಶಾಂಭವೀರೇಖೆಯೆನಿಪಡ್ಡಗೆರೆಗಳ ಶೃಂಗಂಗಳೆ ತೋಳ್ಗ-
ಳ್ಬಳಿಕ್ಕಮಗ್ನಿ ಸಂಜ್ಞಿತವಾದಧೋರೇಖೆಗಳೆ ಆ ಶಿವಬೀಜಮೂರ್ತಿಗೆ
ಚರಣಂಗಳಿಂತೀ
ಮೂಲಪ್ರಸಾದಮಂತ್ರವೆ ಶಿವಮೂತ್ರ್ಯಾಕಾರವೆಂದು
ನಿರವಿಸಿದೆಯಯ್ಯಾ,
ಮಹಾಗುರು ಶಿವಲಿಂಗೇಶ್ವರಾ./26
ಇನ್ನು ಸೃಷ್ಟಿವರ್ಗನಿರೂಪಣಾನಂತರದಲ್ಲಿ
ಸಂಹಾರವರ್ಗಮಂ ಪೇಳ್ವೆನೆಂತೆನೆ-
ಕ್ಷಕಾರಾದ್ಯಕಾರಾಂತಮಾದಕ್ಷರಮಾಲಿಕೆಯೆ ಸಂಹಾರವರ್ಗಮೆನಿಕುಂ.
ಅದರಲ್ಲಿ ಕ್ಷ ಳ ಹ ಸ ಷ ಶ ವ ಲ ರ ಯಂ ಗಳೆಂಬೀ ಪತ್ತೆ
ಸಂಹಾರವರ್ಗದಲ್ಲಿ ಮೊದಲವರ್ಗಮಿದು ಪೃಥ್ವಿ.
ಮ ಭ ಬ ಫ ಪ ನ ಧ ದ ಥ ತಂಗಳೆಂಬೀ ಪತ್ತೆ
ಸಂಹಾರಿವರ್ಗದೊಳೆರಡನೆಯ ವರ್ಗಮಿದಪ್ಪು.
ಣ ಢ ಡ ಠ ಟ ಞ ರುು ಜ ಛ ಚಂಗಳೆಂಬೀ ಪತ್ತೆ
ಸಂಹಾರವರ್ಗದಲ್ಲಿ ಮೂರನೆಯ ವರ್ಗಮಿದಗ್ನಿ.
ಙ ಘ ಗ ಖ ಕಂಗಳೆಂಬೀವೈದುಂ
ಸಂಹಾರವರ್ಗದಲ್ಲಿ ನಾಲ್ಕನೆಯ ವರ್ಗಮಿದು ವಾಯು,
ಅಃ ಆಂ ಔ ಓ ಐ ಏ ಒ ಓ ೂ ಋ ಊ ಉ ಈ ಇ ಆ ಅ
ಎಂಬೀ ಪದಿನಾರೆ
ಸಂಹಾರವರ್ಗದಲ್ಲಿಯೈದನೆಯ ವರ್ಗಮಿದಾಕಾಶ-
ಮಿವೈದು ವರ್ಗಂಗಳನೊಳಕೊಂಡು ಸಂಹಾರವರ್ಗ
ಮಿರ್ಪುದಿದಲ್ಲಿಯೆ
ಸಮಸ್ತವಾದ ರುದ್ರಮಂತ್ರಗಳನುದ್ಧರಿಪುದಿದೀಗ ಸಂಹಾರವರ್ಗಂ.
ಇಂತು ಸ್ಥಿತಿ ಸಂಹಾರ ತಾಮಸವರ್ಗ ವರ್ಗತ್ರಯಂಗಳಂ
ನಿರವಿಸಿದೆಯಯ್ಯಾ,
ನಿರಾಳ ನಿಶ್ಚಿಂತ ಪರಮ ಶಿವಲಿಂಗೇಶ್ವರ./27
ಇನ್ನು
ಪ್ರಾಣಲಿಂಗಿಸ್ಥಲಮೆ,
ಪ್ರಾಣಲಿಂಗಿಸ್ಥಲ ಪ್ರಾಣಲಿಂಗಾರ್ಚನೆಸ್ಥಲ
ಶಿವಯೋಗಸಮಾಧಿಸ್ಥಲ ಲಿಂಗನಿಜಸ್ಥಲಾಂಗ
ಲಿಂಗಸ್ಥಲಗಳೆಂದೈದೆರನದುಂ
ಸ್ವಕೀಯ ಕಾಯಮಾದುದಯ್ಯಾ,
ಯೋಗೀಂದ್ರ ಮನೋಂಬುಜಶಯ್ಯಾ,
ನಿರ್ಮಾಯ ನಿರಂಜನ ಪರಮ ಶಿವಲಿಂಗೇಶ್ವರಾ./28
ಇನ್ನುಂ,
ಸೋವರಿಜಮಾದಾಗಸದ ಮಂಡಲತ್ರಯದ,
ತದ್ಗಗನ ಧೂಮವರ್ಣದ ಷೋಡಶ ಸ್ವರಾನ್ವಿತದ,
ಪದಿನಾರೆಸಳ ನಿ[]ರಲ ಕರ್ಣಿಕೆಯ,
ಸೂಕ್ಷ್ಮರಂಧ್ರಗತ ಪ್ರಣವದ ದರ್ಪಣಾಕೃತಿಯಾದ,
ಯಕಾರವೆ ನಿನ್ನೀಶಾನ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ಪ್ರಮಥಗಣಾಂತರಂಗಾ./29
ಇನ್ನುಮಷ್ಟವಿಧ ಸಕೀಲದೊಳೊಲಿದರ್ಪಿತ
ಪ್ರಸಾದಂಗಳೊಂದರೊಳಾರಾರಾಗಲವಂ
ಕೂಡಲೆಪ್ಪತ್ತೆರಡಾಗಲಾ ಪಿಂದಣರುವೆರಕ್ಕೆಗಳಂ ಕೂಡಿ ಗಣಿಸಲ್
ಸಾವಿರದೇಳ್ನೊರಿಪ್ಪತ್ತೆಂಟಾದುದೆಲ್ಲಂ ನೀನೆಯಯ್ಯಾ,
ಪರಮ ಶಿವಲಿಂಗೇಶ್ವರಾ./30
ಇನ್ನುಮಾ ವ್ಯಾಪಕಸ್ವರ ಸ್ಪರ್ಶ ವರ್ಗತ್ರಯಾಂತರದಿಂ
ಮಂಡಲತ್ರಯದೊಳ್ನ್ಯಾಸಮಾಗಿರ್ಪುದೆಂತೆನೆ
ವ್ಯಾಪಕದೊಳೊಂದೊಂದು ಸ್ವರದೊಳೆರಡೆರಡು
ಸ್ವರ್ಶದೊಳ್ಮೂರಿಂತಕ್ಕರಂಗಳನಿಂದ್ರಾದಿ ದಿಕ್ಕುಗಳಲ್ಲಿಟ್ಟು
ಭಾವಿಪುದೆಂದೆಯಯ್ಯಾ,
ಪರಮ ಶಿವಲಿಂಗ ಪರಿ[ಪೂರ್ಣಿ]ತಾಂಗ./31
ಇಲ್ಲಿಯಷ್ಟವಿಧ ಸಕೀಲಂಗಳ್ವತ್ಯಾಸಮಾದೊಡಂ,
ತತ್ವಮಸ್ಯಾರ್ಥಮನುಕೂಲಮಾಗಲೊಡಂ,
ಸಂದೆಯಮಿಲ್ಲಮೆಂದು ತಿಳಿಯಲುಚಿತವಿೂಯಷ್ಟವಿಧ
ಸಕೀಲಂಗಳೊಳಗೆ
ತರದಿಂದೊಂದೊಂದಾರಾಗಲೆಂಟಾರ್ಗಳ್ನಾಲ್ವತ್ತೆಂಟಾಯ್ತಯ್ಯಾ,
ಪರಮ ಶಿವಲಿಂಗ ಪಶುಪಾಶ ವಿಭಂಗಾ./32
ಈ ತೆರದಿಂ ತತ್ವಪ್ರಸಾದನಿರೂಪಣಾನಂತರದಲ್ಲಿ
ಆದಿಪ್ರಸಾದಮಂ ಪೇಳ್ವೆನೆಂತೆನೆ-
ಮೊದಲ ರಾಜಸವರ್ಗವೆನಿಸುವ ಚಂದ್ರಮಂಡಲದಿಂದ್ರದಳದಲ್ಲಿ
ನ್ಯಸ್ತವಾದಕಾರಕ್ಕೆ ಹಕಾರದಲ್ಲಿ ಕೂಡಿಸೆ ಹೌ
ಎಂದಾಯಿತ್ತದನಾಧಾರಾಧೇಯ
ಸಂಜ್ಞಿತನಾದ ಬಿಂದುವಿನೊಡನೆ ಕೂಡಿಸೆ
ಪೂರ್ವೊಕ್ತ ತಾಂತ್ರಿಕ ಮೂಲಪ್ರಸಾದಮಾದೊಡಂ
ತನ್ನ ಔಯೆಂದಾದಿಶಕ್ತಿಯೊಡನೆ ಕೂಡಿಸೆ ಹೌಂ ಎಂದೆನಿಸಿ
ಶಿವಮಯವಾದಾದಿಪ್ರಸಾದವಾದುದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗ ಪರಿಪೂರ್ಣ ಪ್ರಭಾಂಗಾ./33
ಈ ತೆರದಿಂದೀ ಮಹಾಲಿಂಗದ ಪೂರ್ವೊಕ್ತವಾದಧಶ್ಚಕ್ರಂಗಳೆಲ್ಲ
ಶಕ್ತಿ ಷಟ್ಚಕ್ರಂಗಳಲ್ಲಿ ನ್ಯಸ್ತವಾದ ಮೂವತ್ತೈದು ವ್ಯಂಜನ
ಭಿಕ್ಷಾರವಾಚ್ಯರಾದ ಮೂವತ್ತೈದು ರುದ್ರಶಕ್ತಿಯರೆ,
ನೀಲೋತ್ಪಲಾದಿಗಳಿಂದಲಂಕೃತ ಹಸ್ತಂಗಳಿಂ,
ದಿವ್ಯದುಕೂಲ ಗಂಧಮಾಲ್ಯಾಭರಣಾದಿಗಳಿಂ,
ಶೋಭೆವಡೆದು ವಿರಾಜಿಪರಾ
ಷೋಡಶ ಸ್ವರಾಕ್ಷರ ವಾಚ್ಯಶಕ್ತಿಯರೆಲ್ಲರುಮಂತೆಯೆ
ತಂತಮ್ಮ ನಿಜಲಾಂಛನಧಾರಿಣಿಯರಾಗಿರ್ಪರೀಯುಭಯ
ಸ್ವರವ್ಯಂಜನಂಗಳೈದಶಕ್ತಿ ಬೀಜಂಗಳಾದ ಕಾರಣವಗ್ಯುಷ್ಣದಂತೇಕವಾಗಿ
ಐವತ್ತೊಂದಕ್ಕರಂಗಳ ಗಣನೆಯಾದುದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./34
ಈ ಮಂತ್ರೋದ್ಧರಣಕ್ಕೆ ನಾಗರಲಿಪಿಯೆ ಸ್ಪಷ್ಟಮದೆಂತೆನೆ
|| ||
ತ-ರಾ ಯಿಂದು ಸ್ವರಂ ಓ/35
ಈ ಲಿಂಗಾರ್ಪಿತ ಷಡ್ವಿಧ ಪ್ರಸಾದಂಗಳಂ
ಯಥಾಕ್ರಮದಿಂ ಪೂರ್ತಿಗೊಳಿಸಿ,
ತತ್ಪ್ರಸಾದ ಸ್ವರೂಪನಾಗಿರ್ಪಂ ನೀನೆಯಯ್ಯಾ,
ಪರಮ ಶಿವಲಿಂಗಯ್ಯಾ,
ಪರಮುಕ್ತ ಹೃದಯಾಬ್ಜ ಶಯ್ಯಾ./36
ಈ ವಿದ್ಯಾಂಗ ನಿರೂಪಣಾನಂತರದಲ್ಲಿ
ಶಕ್ತ್ಯಂಗಮಂ ಪೇಳ್ವೆನೆಂತೆನೆ-
ಆಧಾರ ಸಂಜ್ಞಿತವಾದ ಸಕಾರಂ
ಶಕ್ತಿ ಬೀಜವಾದಕಾರವೇ ಸ್ತ್ರೀತ್ವವಿಷಯವಾಗಿಯಾಕಾರಮಾಗಲದರೊಡನೆ
ನಾದ ಬಿಂದು ಸಂಜ್ಞಿತವಾದ ಸೊನ್ನೆ ಬಂದು ಕೂಡಲದು
ಸಾಂ ಎಂಬ ಪ್ರಥಮ ಶಕ್ತಿಬೀಜವೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗ ಕಾರುಣ್ಯಸಾಗರಾಪಾಂಗಾ./37
ಕೂಟಾಂಗ ನಿರೂಪಣಾನಂತರದಲ್ಲಿ ವಿದ್ಯಾಂಗಮಂ ಪೇಳ್ವೆನೆಂತೆನೆ-
ಅಘೋರಾಸ್ತ್ರಪರ್ಯಂತವಾದ ಶ್ಲೋಕಾಂತರ್ಗತ ವರ್ಣಂಗಳ್ಸ-
ವಿಸ್ತರಗಳಾರ್ಪವವಂ
ಮಂತ್ರಾಗಮಂಗಳಲ್ಲಿಯಘೋರಾಸ್ತ್ರಮಂತ್ರಾಂತವಾಗಿ
ನೋಡಿಕೊಂಬುದೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗ ಶರಣಾಂತರಂಗಶಯ್ಯ./38
ಕ್ಷಕಾರಂ ವಿದ್ಯಾತತ್ವಾತ್ಮಕ ಜ್ಞಾನಶಕ್ತಿಸ್ವರೂಪಮಾದ ಕಾರಣ
ಕರ್ಣಿಕಾಸ್ಥ ಹಕಾರಸವಿೂಪ ದಳದಲ್ಲಿ ನ್ಯಸ್ತವಾಯಿತ್ತು.
ಮಧ್ಯದ ಚಂದ್ರಮಂಡಲದ ಪೂರ್ವದಳಾದಿಯಾಗಿ
ಅ ಆ ಇ ಈ ಉ ಊ ಋ ೂ ಒ ಓ ಏ ಐ ಓ ಔ ಅಂ ಆಃ
ಎಂಬೀತರದಿಂ ತತ್ವಾಖ್ಯ ಮೂತರ್ಾಖ್ಯಂಗಳೆನಿಪ
ಹ್ರಸ್ವ ದೀರ್ಘಂಗಳಾದ ಷೋಡಶ ಸ್ವರಂಗಳಿರ್ಪುವೆಂದು
ನಿರವಿಸಿದೆಯಯ್ಯಾ,
ನಿರಾಳಮೂರ್ತಿ ನಿಸ್ತುಳ ಪರಮ ಶಿವಲಿಂಗೇಶ್ವರಾ./39
ಗಂಧ ರಸ ರೂಪ ಸ್ಪರ್ಶ ಶಬ್ದ ತೃಪ್ತಿಗಳೆಂಬಿವಕ್ಕೆ ವಿವರಂ-
ಗಂಧರೂಪರುಚಿ ತೃಪ್ತಿ.
ರಸರೂಪರುಚಿ ತೃಪ್ತಿ.
ರೂಪರೂಪರುಚಿ ತೃಪ್ತಿ.
ಸ್ಪರ್ಶರೂಪರುಚಿ ತೃಪ್ತಿ.
ಶಬ್ದರೂಪರುಚಿ ತೃಪ್ತಿ.
ತೃಪ್ತಿರೂಪರುಚಿ ತೃಪ್ತಿ.
ಇಂತೀಯಷ್ಟಾದಶ ಸಕೀಲಂಗಳೆಯೊಂದೊಂದು
ಲಿಂಗದೊಳಾರಾರುಲಿಂಗಗಳ್ಮೀಸಲೊಂದೊಂದರೊಳು
ಪದಿನೆಂಟು ಕೂಡಿ ನೂರೆಂಟು ತೆರದರ್ಪಣಮಾಗಲದೆಲ್ಲಂ
ನಿಜ ವಿಲಾಸವಯ್ಯಾ, ಪರಮ ಶಿವಲಿಂಗ
ಪ್ರಪಂಚ ಸಾರ ನಿಸ್ಸಂಗಾ./40
ಗುಣ ರೂಪಂಗಳ ಮೀರಿ
ಶಿಷ್ಯಜನ ಮನೋಜ್ಞಾನಾಂಧಕಾರಕ್ಕೆ ಸೂರ್ಯೊದಯನಾಗಿ,
ಲಲಾಟಲೋಚನ ಚಂದ್ರಕಳಾ ದಶಭುಜಂಗಳಂ
ಜ್ಞಾನ ಶಾಂತಿ ಬಾಹುದ್ವಯಂಗಳಲ್ಲಿ ಪುದುಂಗೊಳಿಸಿ,
ಭುವನ ಹಿತಾರ್ಥಮಾಗಿ ದೇಶಿಕಸ್ವರೂಪಮಂ ತಾಳ್ದು,
ದೀಕ್ಷಾ ಶಿಕ್ಷಾ ಸ್ವಾನುಭಾವಾತ್ಮಕನಾಗಿ ಚರಿಪ
ಷಟ್ಸ್ಥಲಬ್ರಹ್ಮ ಪ್ರಬೋಧಕ ಪ್ರಭು ಪ್ರಸನ್ನಮೂರ್ತಿ
ಪರಮ ಶಿವಲಿಂಗ ಭಕ್ತಜನಾಂತರಂಗಾ.
ಮನ್ಮಾನಸಾಂಭೋಜ ಭೃಂಗ
ತವ ಪಾದ ಪಲ್ಲವಂಗಳೆ
ಮನೋವಚನಕಾಯಂಗಳಿಂ ತ್ರಿವಾರಂ ಶರಣು ಶರಣು./41
ತತ್ವಾಂಗ ಕರ ಸಾದಾಖ್ಯ ಶಕ್ತಿ ಲಿಂಗ ಕಲಾ ಮುಖ ದ್ರವ್ಯ
ಭಕ್ತಿ ಮಂತ್ರಂಗಳೆಂಬಿವೊಂದೊಂದಾರಾಗಲೊಡನರುವತ್ತಾರುದೆರ-
ದರ್ಪಣಮಾದುದೆಲ್ಲಂ ನಿನ್ನ ಚಿತ್ಕಿರಣ ಕೀರ್ಣಮಯಮಯ್ಯಾ,
ಪರಮ ಶಿವಲಿಂಗ ಪಯೋನಿಧಿ ನಿಷಂಗಾ./42
ತತ್ವೋಂಗ ಹಸ್ತ ಸಾದಾಖ್ಯ ಶಕ್ತಿ ಲಿಂಗ ಕಲಾ ಮುಖ
ದ್ರವ್ಯ ಮಂತ್ರ ಭಕ್ತಿಗಳೆಂಬೀ
ಏಕಾದಶ ಸಕೀಲಂಗಳಂ ಗಣಿಸಲೊಡನರುವತ್ತಾರಾದವವ-
ನೊಂದೊಂದರೊಳಂ ಬೆರಸೆ
ಮುನ್ನೂರ[ತೊಂಬ]ತ್ತಾರಾದುದೆಲ್ಲಂ
ಸ್ವಪ್ರಕಾಶ ರೂಪವಯ್ಯಾ,
ಪರಮ ಶಿವಲಿಂಗೇಶ್ವರಾ./43
ತ್ರಯೋದಶ ನಾಮಕ್ಕೆ ವಿವರವೆಂತೆನೆ-
ಸೂಕ್ಷ್ಮವಾಗಿ ಘೋಷಮಮಯವಾದುದರಿಂ ನಾದಂ.
ಚರಾಚರಾದಿ ಜೀವ ಹೃದಯಸ್ಥ ಚೈತನ್ಯಮಪ್ಪುದರಿಂ ಗುಹ್ಯ,
ಮೂರ್ತಿ[ಯ]ದತ್ತಣಿನುತ್ತೀರ್ಣಮಾದುದರಿಂದ ಪರ
ಮಿನ್ನೊಂದು ತೆರದಿಂ ಸ್ಥೂಲ ಸೂಕ್ಷ್ಮ ಪರಮೆಂದು ಮೂದೆರ-
ನದರೊಳ್ವ ಎಂಬ ಶಬ್ದಂ ಸ್ಥೂಲಂ ಚಿಂತಾಮಯಂ
ಸೂಕ್ಷ್ಮಂ ಶಬ್ದಂ ಚಿಂತಾರಹಿತತೆಯೆ ಪರಂ ಜೀವವೆಂದು ಕಲ್ಪಿತ
ಚಿತ್ತಾದ್ವೈತನಾದ ಶಿವಂ ಜೀವತ್ವವನಂಗೀಕರಿಸದಿರ್ದೊಡೆ
ಪ್ರಪಂಚವೇನುವಿಲ್ಲವೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ ಪ್ರಭಾಮಯ ಕಳೇವರ./44
ದೇವತಾನ್ಯಾಸಾನಂತರದಲ್ಲಿ ಮಂತ್ರನ್ಯಾಸಮಂ ಪೇಳ್ವೆನೆಂತೆನೆ-
ಈ ಚಕ್ರದ ಕನರ್ಿಕಾವೃತ್ತದ ಚೌದಳದ ನಡುವೆ
ಶಿವಬೀಜವಾದ ಹಂಕಾರವನಂಕಿಪುದು.
ಮೂಡಣೆಸಳಲ್ಲಿ ಬಿಂದು ಸಂಜ್ಞಿತವಾದ ಸಕಾರವಂ ಲಿಖಿಪುದ.
ದಾತ್ಮಬೀಜವಾದಕಾರಮಂ ತೆಂಕಣೆಸಳಲ್ಲಿ ಬರೆವುದು.
ಪಡುವಣೆಸಳಲ್ಲಿ ಸೂಕ್ಷ್ಮನಾದವೆನಿಸಿದೈಕಾರವನುದ್ಧರಿಪುದು.
ಬಡಗಣೆಸಳಲ್ಲಿ ವಿದ್ಯಾಬೀಜವಾದ ಕ್ಷಕಾರವನಿರಿಸುವದಿಂತು
ಕನರ್ಿಕಾಪೂರ್ವದಕ್ಷಿಣಪಶ್ಚಿಮೋತ್ತರಂಗಳೆಂಬಿವೈದರಲ್ಲಿ
ಹ ಸ ಅ ಐ ಕ್ಷ ಎಂಬೈದಕ್ಕರಂಗಳಂ ಭಾವಿಪುದೆಂದೆಯಯ್ಯಾ,
ಪರಮಗುರು ಪರಮ ಶಿವಲಿಂಗೇಶ್ವರಾ./45
ನಾದಸಂಜ್ಞಿತವಾದ ಹಕಾರದ ಮೊದಲಹ ಸ್ ಎಂಬುದನುದ್ಧರಿಸಿ
ಸಂಜ್ಞಿತವಾದ ರ್ ಎಂಬುದಂ ಕೂಡಿಸೆ ಸ್ರ್ ಎನಿಸಿತದಂ
ಮಾಯಾಸಂಜ್ಞಿತವಾದಿಕಾರದೊಳ್ಮೇಳನಂಗೆಯ್ದು,
ಬಿಂದು ನಾದಸಂಜ್ಞಿತವಾದ ಸೊನ್ನೆಯೊಳ್ಕೊಡೆ ಸ್ತ್ರೀಂ ಎಂಬ
ದ್ವೀತಿಯ ಶಕ್ತಿಬೀಜವೆನಿಸಿತ್ತು.
ಮತ್ತಂ, ತತ್ವಾಂತಸಂಜ್ಞಿತವಾದ ಹಕಾರದ ಮುಂದಣ ಸ್
ಎಂಬುದನುದ್ಧರಿಸಿ,
ಧರಾಸಂಜ್ಞಿತವಾದೂಕಾರವಂ
ವನ್ಹಿಸಂಜ್ಞಿತವಾದ ರ್ ಎಂಬುದನುಂ,
ಬಿಂದು ನಾದಸಂಜ್ಞಿತವಾದ ಸೊನ್ನೆಯುಮಂ ಮಿಶ್ರಿಸೆ
ಸ್ರೂಂ ಎಂಬ ಮೂರನೆಯ ಶಕ್ತಿಬೀಜವೆನಿಸಿತ್ತು.
ಜೀವಸಂಜ್ಞಿತವಾದ ಹಕಾರದ ಮುಂದಣ ಸ್ ಎಂಬುದಂ
ವನ್ಹಿಸಂಜ್ಞಿತವಾದ ರ್ ಎಂಬುದಂ ಕೂಡಿಸೆ ಸ್ರ್ ಎನಿಸಿತ್ತದಂ
ದ್ವಾದಶಸಂಜ್ಞಿತವಾದೈಕಾರದೊಳ್ಬೆರಸಿ
ಬಿಂದು ನಾದಸಂಜ್ಞಿತವಾದ ಸೊನ್ನೊಯೊಳೊಂದಿಸೆ
ಸ್ರೈಂ ಎಂಬ ನಾಲ್ಕನೆಯ ಶಕ್ತಿಬೀಜಂ.
ಭೂತಸಂಜ್ಞಿತವಾದ ಹಕಾರದ ಮುಂದಣ ಸ್ ಎಂಬುದು
ವನ್ಹಿ ಸಂಜ್ಞಿತವಾದ ರ್ ಎಂಬುದರೊಡನೆ ಕೂಡೆ ಸ್ರ ಎನ್ನಿಸಿತ್ತದು
ಸ್ವರತ್ರಯೋದಶದೊಡನೆ ಕೂಡೆ ಸ್ರೌ ಎನಿಸಿ
ಬಿಂದು ನಾದ ಸಂಜ್ಞಿತವಾದ ಸೊನ್ನೆಯೊಡವೆರೆಯೆ
ಸ್ರೌಂ ಎಂಬ ಬೀಜವೈದನೆಯ ಶಕ್ತಿ.
ಈ ಶಕ್ತಿಬೀಜವಂ ಶಿವಾಂಗ ಬೀಜವಹ ಹಾಂಗುದ್ಧರಿಸೂದೀ
ಪಂಚಶಕ್ತಿಗಳಲ್ಲಿಯುಮಾ ಶಕ್ತಿಯೆ ಮೊದಲಶಕ್ತಿ.
ಇವರ ಬೀಜಶಕ್ತಿಗಳವೆಂತೆನೆ-
ತರದಿಂದೆ ಸ್ರಾಂ ಉಮೆ ಸ್ತ್ರೀಂ ಅಂಬಿಕೆ ಸ್ರೂಂ ಗಣಾನಿ
ಸೆಂ ಈಶ್ವರಿ ಸ್ರೌಂ ಮನೋನ್ಮನಿ
ಇಂತೈದು ಶಕ್ತಿಗಳ್ಳಿವಾಂಗಂಗಳನ್ಯೋನ್ಯಗಳೊಂದೊಂದರ
ದಶಾಂಗಳೊಂದೊಂದೆಂದರುಪಿದೆಯಯ್ಯಾ,
ಮುನಿಹೃದಯ ಶಯ್ಯ ಮಹಾ ಗುರು ಪರಶಿವಲಿಂಗಯ್ಯ./46
ಪುನರಪಿ
ಐಕ್ಯಸ್ಥಲಮೆ,
ಐಕ್ಯಸ್ಥಲ ಸರ್ವಾಚಾರಸಂಪತ್ತುಸ್ಥಲೇಕಭಾಜನಸ್ಥಲ
ಸಹಭೋಜನಸ್ಥಲಂಗಳೆಂದು ನಾಲ್ದೆರನಾಯಿತು
ನಿರಂಜನ ಪರಂಜ್ಯೋತಿಸ್ವರೂಪ,
ಪರಮ ಶಿವಲಿಂಗೇಶ್ವರ ಸದ್ಗುಣಕಲಾಪಾ./47
ಪೂರ್ವಿವಾದಿಯಾಗಿ ಮಂಡಲತ್ರಯದೊಳ್ಮೊದಲಗ್ನಿ
ಮಂಡಲದೀಶಾನಂ ತೊಡಗಿ
ಸ ಷ ಶ ವ ಲ ರ ಯ ಮ ಗಳೆಂಬ
ವ್ಯಾಪಕಾಕ್ಷರಂಗಳೆಂಟೆ ಸಳಳೊಳಿರ್ಪವಾ
ಹಕಾರವೆ ಶಿವಬೀಜವಾದಕಾರಣವಾ ಚಕ್ರದ ಕರ್ಣಿಕಾಕ್ಷಾರವೆನಿಸಿತ್ತು.
ಳಕಾರಮೆ `ಲಳಯೋಭರ್ೆದಃ’ ಎಂದು ಲಳಂಗಳ್ಗೆ
ಭೇದಮಿಲ್ಲಮದರಿಂ
ಳಕಾರಂ ಲಕಾರದೊಳಂತರ್ಭಾವಮಾದುದುಮಲ್ಲದೆಯು
ಮಾತ್ಮಬೀಜವಾದ ಳಕಾರಂ ಕರ್ಣಿಕಾದಳಂ
ನ್ಯಸ್ತಾತ್ಮಬೀಜವಾದ ಕಾರಣದೊಳ್ಪುದಿದಿರ್ಪುದಿಂತು
ಕರ್ಣಿಕಾಗ್ನಿಮಂಡಲನ್ಯಸ್ತ ದಶವ್ಯಾಪಕಾಕ್ಷರಂಗಳಂ ಪೇಳ್ದೆಯಯ್ಯಾ,
ಪರಮ ಶಿವಲಿಂಗೇಶ್ವರ ಪಟುವೇದಾಂತ ಭಾಸ್ವರ./48
ಪೂರ್ವೊಕ್ತ ಸಕಾರವುಂ ಸ್ವರಾಂತ ವಿಸರ್ಗದೊಡನೆ ಕೂಡಿಸೆ
ಸಃ ಎಂಬಾರನೆಯ ಶಕ್ತಿಬೀಜವಾದುದಿಂತು
ಸಾಂ ಸೀಂ ಸೂಂ ಸೈಂ ಸೌಂ ಸಃ ಎಂಬೀ ಶಕ್ತಿಬೀಜಂ
ವೇದದಲ್ಲಿ ಶಿವಾಂಗದಂತೆ ಸ್ರಾಂ ಸ್ರೀಂ ಸ್ರೂಂ ಸ್ರೆ ಂ ಸ್ರೌಂ ಸ್ರಃ
ಎಂದಾದುದೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./49
ಬಳಿಕಂ
ಪೂರ್ವೊಕ್ತ ಚಕ್ರಪ್ರಸಿದ್ಧ ಪ್ರಸಾದಮಂತ್ರವಾದೊಡೆ
ಪ್ರಯೆನಲೊಡಂ ಶಿವಂ, ಸಾಯೆನಲೊಡಂ ಶಕ್ತಿ,
ದಯೆನಲೊಡಂ ಶಿವಶಕ್ತಿಗಳೈಕ್ಯಂ.
ಮತ್ತೆಯುಂ, ಪ್ರಸಾದ ಎಂದೊಡೆ ತರದಿಂ ಶಿವಶಕ್ತ್ಯಾತ್ಮಕವಾದ
ಮುಕ್ತಿ ಭುಕ್ತಿಗಳಂ ಕೊಟ್ಟಪುದೆಂದವಯವಾರ್ಥಂ.
ಮರಲ್ದುಮಜ್ಞಾನ ಜ್ಞಾನ[ಜ್ಞೇಯ]ಗಳೆಂದು ಮೂದೆರನಿವಕ್ಕೆ
ತರದಿಂ ವಿವರಮದೆಂತೆನೆ-
ಕಳ್ತಲೆಯಂತಿರ್ಪುದೆ ಅಜ್ಞಾನಂ.
ಬೆಳಗಿನಂತಿರ್ಪುದೆ ಜ್ಞಾನಮಾ-
ಬೆಳಗಿನಿಂ ತಿಳಯಲ್ತಕ್ಕ ಸೂರ್ಯನಂತಿರ್ಪುದೆ ಜ್ಞೇಯ-
ಮಿಂತು ಕನಸಿನಂತೆ ಕಲ್ಪಿತಮದಜ್ಞಾನಾಪಹಾರಿಯಾದ
ಸಮ್ಯಜ್ಞಾನದೀಪ್ತಿ ದೀಪ್ತವಾಗಿ-,
ಯಗ್ಯುಷ್ಣದಂತವಿನಾಭಾವವಾದ ಶಿವಶಕ್ತ್ಯಾತ್ಮಕವಾದ ಪರಮಸ್ತುವೆ
ಬೆಳಗಿಂ ಸೂರ್ಯನೆಂತೆಂತೆ
ಸ್ವಕೀಯ ಚಿಚ್ಛಕ್ತಿಯಿಂ ಪ್ರಕಟಿತಮಾದಪುದಂತೆ
`ಜ್ಞಾನಾದೇವ ತು ಕೈವಲ್ಯಂ’ ವೆಂಬುದರಿಂದೆ
ಕೇವಲಜ್ಞಾನ ಸದ್ರೂಪಮೆ ಶುದ್ಧಪ್ರಸಾದವೆಂದು
ನಿರವಿಸಿದೆಯಯ್ಯಾ, ಶಿವಾಂತರಂಗ ಪರಶಿವಲಿಂಗಾ./50
ಬಳಿಕಮಾ ಲಿಂಗಸ್ಥಲತ್ರಯದಲ್ಲಿ
ಇಷ್ಟಲಿಂಗಮೆ ಆಚಾರಲಿಂಗ ಗುರುಲಿಂಗಮೆಂದುಭಯಂ.
ಪ್ರಾಣಲಿಂಗಮೆ ಶಿವಲಿಂಗ ಜಂಗಮಲಿಂಗಮೆಂದುಭಯಂ.
ಭಾವಲಿಂಗಮೆ ಪ್ರಸಾದಲಿಂಗ ಮಹಾಲಿಂಗಮೆಂದುಭಯಮಿವಂ
ಗಣಿಸಲರುವೆಸರಲಿಂಗಮಾಗಲದು ನೀನೆಯಯ್ಯಾ,
ನಿಗಮಾಂತ ಭಾಸ್ವರ ನೀಲರುಚಿ ಕಂಧರ
ಪರಮ ಶಿವಲಿಂಗೇಶ್ವರಾ./51
ಬಳಿಕಮೀ ಪಂಚವಿಂಶತಿ ಬ್ರಹ್ಮಂಗಳ ಲಕ್ಷಣಮಂ ಪೇಳ್ವೆನೆಂತೆನೆ-
ಈಶಾನಾಮೀಶ್ವರಂ ಬ್ರಹ್ಮಶಿವಂ ಸದಾಶಿವಗೀ
ಪಂಚಮೂತ್ರ್ಯಾಕೃತಿಗಳಾವಾವವುಂಟವೆ
ಪಂಚ ಪ್ರಣವಾಕೃತಿಗಳಿವೆ ಸದ್ಯಾದಿ ಪಂಚಬ್ರಹ್ಮಂಗಳವರ
ಲಕ್ಷಣಮೆಂತನೆ ಪೇಳ್ವೆಂ-
ಕತರ್ೃಸಾದಾಖ್ಯ, ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ,
ಅಮೂರ್ತಿಸಾದಾಖ್ಯ, ಶಿವಸಾದಾಖ್ಯಂಗಳವರ ಭಾವಮಂ
ತರದಿಂ ಸದ್ಯಾದಿಗಳಲ್ಲಿ ತಿಳಿವುದು.
ಇಂತು ತಿಳಿದೊಡೆ ಪರಿವಿಡಿಯಿಂ ಪಂಚಪ್ರಸಾದಂಗಳ
ಕುರುಪುಗಳುಂಟಾದಪವೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./52
ಬಳಿಕಲುಂ ದ್ವಂಗುಲದ ಬಟುವೆ ಕರ್ಣಿಕೆಯಾ
ಕವಯಾರಮನೂರಿದ ನೆಲೆಯೆ ಬ್ರಹ್ಮರಂಧ್ರವೆನಿಪ
ಸೂಕ್ಷ್ಮಕರ್ಣಿಕೆಯಾ
ದ್ವ್ಯಂಗುಲ ವೃತ್ತವೆ ಸ ಕೇಸರ ಚತುರ್ದಳಾನ್ವಿತ ಸ್ಥೂಲಕರ್ಣಿಕೆ-
ಯದರಾಚೆಯ ಬಟುವೆ ಅಗ್ನಿಮಂಡಲ-
ಮದರಾಚೆಯ ಬಟುವೆ ಚಂದ್ರಮಂಡಲ-
ಮದರಾಚೆಯ ಬಟುವೆ ಸೂರ್ಯಮಂಡಲಮೆಂದು
ನಿರವಿಸಿದೆಯಯ್ಯಾ,
ಪರಮ ಶಿವಲಿಂಗ ಪಟುತರ ವೃಷತುರಂಗ./53
ಬಳಿಕ್ಕ,
ಭೂತಾಂತಮನುದ್ಧರಿಸಿ ತ್ರಯೋದಶಾಂತ ಸ್ವರದೊಳದಂ ಬೆರಸಿ
ಕಾರ್ಯಕಾರಣಮನೊಂದಿಸೆ ಹೌಂ ಎಂಬ
ಮೊದಲ ಬೀಜವಾಯ್ತು.
ಮತ್ತವಿೂ ಶವರ್ಗದ ಮೊದಲಕ್ಕರಮಾದ
ಶಕಾರವ್ಯಂಜನದೊಳ್ತ್ರಿ ಕಲೆ-
ಯೆನಿಪಿಕಾರಮಂ ಕೂಡೆ ಶಿ ಯೆನಿಸಲ್
ಸೋಮಸಂಜ್ಞ ಕುಬೇರವರ್ಗದ ಕಡೆಯ ವಕಾರಮಂ
ದ್ವಿಕಲೆವೆಸರ ಆಕಾರದೊಡವೆರಸೆ ವಾಯೆಂದಾಯ್ತು.
ಮತ್ತಂ, ಸೋಮವರ್ಗದಾದಿಯ ಯ್ಕಾರ ವ್ಯಂಜನಮನಾದಿ
ಸ್ವರದೊಳ್ಕೂಡೆ ಯ ಎಂದೆನಿಸಿತ್ತು.
ವರುಣವರ್ಗದ ಕಡೆಯ ನ್ ಎಂಬ
ವ್ಯಂಜನಮನಾದಿ ಸ್ವರದೊಳ್ಕೂಡೆ ನ ಎಂದೆನಿಸಿತ್ತು.
ವಾಯುವರ್ಗದ ಕಡೆಯ ಮ್ ಎಂಬ ವ್ಯಂಜನದೊಳ್
ಸ್ವರಾದಿಯಂ ಕೂಡೆ ಮ ಎಂದೆನಿಸಿತ್ತು.
ಈ ಹೌಂ `ಸ ಶಿವಾಯ ನಮಃ’ ಎಂಬೀ ಷಡಕ್ಷರವೆ
ಅಭಿವ್ಯದ್ಧಿಯೆಂಬ ಮಂತ್ರವೆಂದರಿಪಿದೆಯಯ್ಯಾ,
ಪರಮಶಿವಲಿಂಗ ಪ್ರಮಥಾಂತರಂಗ./54
ಬಳಿಕ್ಕಂ, ಚತುರ್ಭುಜ, ತ್ರೀನೇತ್ರ, ಜಟಾಮಕುಟ,
ಸರ್ವಲಕ್ಷಣಸಂಯುಕ್ತ, ಸರ್ವಾಭರಣಭೂಷಿತ,
ತ್ರಿಶೂಲಾಭಯ ಕಪಾಲ ವರದಾನ್ವಿತ, ದಕ್ಷಿಣ ಮಕರವಾ ಚತುಷ್ಟಯ,
ಹಾರ ಕೇಯೂರ ಕಟಕ ಕುಂಡಲಾದಿಗಳಿಂದಲಂಕೃತವಾದ
ಸರ್ವಾವಯವಂಗಳನುಳ್ಳುದೆ ಸೌಮ್ಯರೂಪ-
ಮುಳಿದುದೆಲ್ಲಂ ರುದ್ರರೂಪಮೆಂದು ನಿರವಿಸಿಯಾ
ಶಿವಾಂಗಂಗಳಿಂದವೆ ಶಿವಾರ್ಚನೆಯನೆಸಗುವದೆಂದೆಯಯ್ಯಾ,
ಪರಶಿವಲಿಂಗಯ್ಯ./55
ಬಳಿಕ್ಕಂ, ಜಪಾಕುಸುಮ ಕುಂದಪಾವಕ ಸುರೇಂದ್ರ
ನೀಲ ಸಿಂಧೂರ ಹರಿತಾಳಗಳೆಂಬೀ
ಷಡ್ವರ್ಣಗಳ್ವಿದ್ಯಾಂಗವರ್ಣವೆಂದರುಪಿದೆಯಯ್ಯಾ,
ಪರಶಿವಲಿಂಗಯ್ಯ./56
ಬಳಿಕ್ಕಂ, ಭೂತಾಂಗ ನಿರೂಪಣಾನಂತರದಲ್ಲಿ
ಕೂಟಾಂಗಮಂ ಪೇಳ್ವೆನೆಂತೆನೆ-
ಕೂಟಾಕ್ಷರ ಸಂಜ್ಞಿತವಾದ ಕ್ಷ್ ಎಂಬಕ್ಕರಮಂ
ಸ್ವರ ದ್ವಿತೀಯಮಂ ಸ್ವರ ಚತುರ್ಥಮಂ
ಸ್ವರ ಷಷ್ಠಮಂ ಸ್ವರೈಕಾದಶಾಂತಮಂ
ಸ್ವರ ತ್ರಯೋದಶಾಂತಮಂ ಸ್ವರ ಪಂಚದಶಾಂತಮಂ
ತರದಿಂ ಕೂಡಿಸಿ ಬಿಂದು ನಾದ ಸಂಜ್ಞಿತವಾದ
ಸೊನ್ನೆಯೊಡನೆ ಬೆರಸೆ,
ಕ್ಷಾಂ ಕ್ಷೀಂ ಕ್ಷೂಂ ಕ್ಷೆಂ ಕ್ಷೌಂ ಕ್ಷಃ ಎಂದು
ಷಡ್ವರ್ಣಯುಕ್ತವಾದ ಕೂಟಾಂಗವಾಯಿತ್ತೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./57
ಬಳಿಕ್ಕಂ, ವಶಮನ್ಯಾಯದಂತೆ ಪೂರ್ಣಚಿತಿಯೆಂತೆನೆ-
ಆದಿವಾಲಾದಿ ಮಂತ್ರವಾಹನಾಂತವಾದ ಪದಿನೆಂಟು
ಕುರುಹುಗಳನೊಳಕೊಂಡು
ಮಯೂರಾಂಡಕುಂಡಲ ಹಿರಣ್ಯ ಸಾಗರೋರ್ಮಿಗಳೆಂತಭೇದವಂತ-
ಭಿನ್ನ ಪ್ರಕಾಶವೆ ಪೂರ್ಣ ಚಿದ್ಗುಹ್ಯಮೆನಿಕುಮೆಂದೀ
ಮಂತ್ರಜಾತದ ಪತ್ತೊಂಬತ್ತು ಲಕ್ಕಣಮಂ ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ, ಪರಾತ್ಪರ ಶರಣಾಂತರಂಗ ಶಯ್ಯಾ./58
ಬಳಿಕ್ಕಂ, ಶಾಂತಿಕಮಂತ್ರ ನಿರೂಪಣಾನಂತರದಲ್ಲಿ
ಪೌಷ್ಠಿಕಮಂತ್ರಮಂ ಪೇಳ್ವೆನೆಂತೆನೆ-
ಪರಾತ್ಪರಸಂಜ್ಞಿತವಾದ ಹಕಾರವನುದ್ಧರಿಸಿ,
ಇಂದ್ರವರ್ಗ ಸ್ವರತ್ರಯೋದಶಮಂ ಬೆರಸಿ,
ಕಾರ್ಯಕಾರಣ ಸಂಜ್ಞಿತವಾದ ಸೊನ್ನೆಯಂ ಕೂಡೆ ಹೌಂ
ಎಂಬಕ್ಕರವಾಯ್ತು.
ಶಕ್ತಿಬೀಜಸಂಜ್ಞಿತವಾದ ಸ್ ಎಂಬ ವ್ಯಂಜನಮಂ
ಜೀವಸಂಜ್ಞಿತವಾದಕಾರದೊಡನೆ ಕೂಡೆ ಸ ಎನಿಸಿತು.
ಅವರ ಮುಂದೆ ಮತ್ತೊಂದೀಶವರ್ಗದ ಮೂರನೆಯಕ್ಕರವೆನಿಸುವ
ಸ್ ಎಂಬಕ್ಕರಕ್ಕಂ,
ಮತ್ತೆಯುಮದೇ ವರ್ಗದೆರಡನೆಯ ಷ್ ಎಂಬುದಕ್ಕೆಯುಂ
ಜೀವಸಂಜ್ಞಿತವಾದಕಾರವಂ ಪತ್ತಿಸೆ ಸ ಷ ಎನಿಸಿದ
ವೇಳನೆಯ ವರ್ಗದ ಕಡೆಯಕ್ಕರವಾದ ವ್ ಎಂಬಕ್ಕರವ
ನದೇ ವರ್ಗದೆರಡನೆಯ ಷಕಾರದೊಳೊಂದಿಸೆ ಷ್ವ ಎನಿಸಿ
ತ್ತಾರನೆಯ ಸ್ವರದೊಳ್ಮೇಳಿಸೆ ಮೂ ಎನಿಸಿತು.
ಭೂತಾಂತ ಸಂಜ್ಞಿತವಾದ ಹಕಾರವನುದ್ಧರಿಸಿ
ಯದರ ಮೇಲೆ ಅಗ್ನಿ ಸಂಜ್ಞಿತವಾದಾಕರಮಂ ಪತ್ತಿಸೆ ಹ್ರೂ ಎನಿಸಿತ್ತು.
ಭಕಾರದ ಕಡೆಯ ವ್ಯಂಜನಮಂ
ದಶಸ್ವರಾಂತರದೊಳ್ಬೆರಸೆ ಮೆ ಎನಿಸಿತ್ತು.
ಪಂಚವರ್ಗಂಗಳೈದನೆಯದಾದ
ನ್ ಎಂಬುದನದರಾರನೆಯ ಮ್ ಎಂಬುದಂ
ಅದರೇಳನೆಯ ಯ್ ಎಂಬುದು
ಸ್ವರಾದಿಯಾದ ಕಾರಣದೊಳ್ಕೂಡಿಸೆ
ತರದಿಂ ನ ಮ ಎನಿಸಿದವಿವಂ ಪರತರ ಸಂಜ್ಞಿತವಾದ
ಸೊನ್ನೆಯೊಳ್ಬೆರಸಿ
ತರದಿಂದೀ ಪತ್ತಕ್ಕರಮಂ ಕೂಡಿ `ಹೌಂ ಸಂ ಸ್ವಂ ಷ್ವಂ ಮೂಂ
ಹ್ರೂಂ ಮೇಂ ನಂ ಮಂ ಯಂ’ ಯೆಂಬೀ
ದಶಾಕ್ಷರ ಮಂತ್ರವೇ ಪೌಷ್ಠಿಕಮಂತ್ರವೆನಿಸಿತ್ತೀ
ಪೂರ್ವೊಕ್ತ ಪಂಚಾಕ್ಷರ ಷಡಕ್ಷರಷ್ಟಾಕ್ಷರ
ನವಾಕ್ಷರ ದಶಾಕ್ಷರಂಗಳನುಳ್ಳ ತರದಿಂ
ಮೋಕ್ಷದಾಭಿವೃದ್ಧಿ ಕಾಮ್ಮ ಶಾಂತಿಕ ಪೌಷ್ಠಿಕಂಗಳೆಂದೀ
ಐದೆರನಾದುದೆ ಸದಾಶಿವಮಂತ್ರವೆಂದೊರೆದೆಯಯ್ಯಾ,
ಪರಮಗುರು ಪರಶಿವಲಿಂಗೇಶ್ವರ./59
ಬಳಿಕ್ಕಂ, ಶಿವಾಸ್ತ್ರಮಂತ್ರಂ, ಕ್ಷುರಿಕಾಸ್ತ್ರಮಂತ್ರಂ
ಪಾಶುಪತಾಸ್ತ್ರಮಂತ್ರಂ, ವ್ಯೋಮಾಸ್ತ್ರಮಂತ್ರಂ
ಅಘೋರಾಸ್ತ್ರಮಂತ್ರಂ
ಇಂತಿವು ಪಂಚಾಸ್ತ್ರಮಂತ್ರಂಗಳಿವಕ್ಕೆ ವಿವರಂ-
ಒಂದನೆಯ ಶಿವಾಸ್ತ್ರಮಂತ್ರವೆ ಷಡಕ್ಷರಮೆನಿಕುಂ.
ಎರಡನೆಯ ಕ್ಷುರಿಕಾಸ್ತ್ರಮಂತ್ರವೆ ಅಷ್ಟಾಕ್ಷರಮೆನಿಕುಂ.
ಮೂರನೆಯ ಪಾಶುಪತಾಸ್ತ್ರಮಂತ್ರವೆ ಪಂಚಾಕ್ಷರಮೆನಿಕುಂ.
ನಾಲ್ಕನೆಯ ವ್ಯೋಮಾಸ್ತ್ರವೆ ದಶಾಕ್ಷರಮೆನಿಕುಂ.
ಐದನೆಯ ಘೋರಾಸ್ತ್ರವೆ ಚತ್ವಾರಿಂಶದ್ಗಣನೆಯೆನಿಕುಮೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./60
ಬಳಿಕ್ಕಂ, ಷಡಂಗಮಂತ್ರನ್ಯಾಸಮಂ ಪೇಳ್ವೆನೆಂತೆನೆ-
ಅಧಃಪಟ್ಟಿಕೆಯಲ್ಲಿ ಹ್ರಾಂ ಎಂಬ ಹೃದಯಮಂತ್ರಮಂ,
ಅಧಃಕಂಜದಲ್ಲಿ ಹ್ರೀಂ ಎಂಬ ಶಿರೋಮಂತ್ರಮಂ,
ಕಂಠದಲ್ಲಿ ಹ್ರೂಂ ಎಂಬ ಶಿಖಾಮಂತ್ರಮಂ,
ಊಧ್ರ್ವಕಂಜದಲ್ಲಿ ಹ್ರೈಂ ಎಂಬ ಕವಚಮಂತ್ರಮಂ,
ಊಧ್ರ್ವಪಟ್ಟಿಕೆಯಲ್ಲಿ ಹ್ರೌಂ ಎಂಬ ನೇತ್ರಮಂತ್ರಮಂ,
ಆಜ್ಯಪ್ರಧಾರಿಕೆಯಲ್ಲಿ ಹ್ರಃ ಎಂಬ ಅಸ್ತ್ರಮಂತ್ರಮಂ,
ಲಿಂಗದಲ್ಲಿ ನ್ಯಾಸಂಗೆಯ್ವುದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./61
ಬಳಿಕ್ಕಂ,
ಶಿವಲಿಂಗದಲ್ಲಿ ಪಂಚಪ್ರಸಾದಮಂತ್ರ ನ್ಯಾಸಮಂ ಪೇಳ್ವೆನೆಂತೆನೆ-
ಶಿವಲಿಂಗದ ಮಸ್ತಕದ ಮೇಲೆ ಹ ಎಂಬ
ಶುದ್ಧ ಪ್ರಸಾದಮಂತ್ರಮಂ ನ್ಯಾಸಂಗೆಯ್ವುದು.
ಸೂತ್ರ ಮಧ್ಯದಲ್ಲಿ ಹ್ರೌಂ ಎಂಬ
ಮೂಲಪ್ರಸಾದಮಂತ್ರಮಂ ನ್ಯಾಸಂಗೆಯ್ವುದು.
ಬಲದಭಾಗದಲ್ಲಿ ಹಂ ಎಂಬ ತತ್ವಪ್ರಸಾದಮಂ ನ್ಯಾಸಂಗೆಯ್ವು-
ದೆಡದಭಾಗದಲ್ಲಿ ಹೌಂ ಎಂಬಾದಿಪ್ರಸಾದಮಂ ನ್ಯಾಸಂಗೆಯ್ವುದು.
ಮಧ್ಯಸೂತ್ರದ ಬುಡದಲ್ಲಿ ಹಂಸ ಎಂಬಾತ್ಮಪ್ರಸಾದಮಂತ್ರಮಂ
ನ್ಯಾಸಂಗೆಯ್ವುದಿಂತು
`ಹ ಹ್ರೌಂ ಹಂ ಹೌಂ[ಹಂಸ]’ ಎಂಬ ಪಂಚಪ್ರಸಾದಮಂತ್ರಂಗಳ
ನ್ಯಾಸಂಗಳಂ
ಶಿವಲಿಂಗದ ಪಂಚಸ್ಥಾನಂಗಳಲ್ಲಿ ನ್ಯಾಸೀಕರಿಸಿದೆಯಯ್ಯಾ,
ಪರಮಗುರು ಪರಶಿವಲಿಂಗೇಶ್ವರಾ./62
ಬಳಿಕ್ಕಂ
`ಶುಕ್ಲವರ್ಣವಾದೊಂದನೆಯ ಕೇವಲಹೃದಯವೆ ಈಶಾನವೆನಿಕುಂ.
ತಪ್ತಕಾಂಚನವರ್ಣವಾದೆರಡನೆಯ
ಜ್ಞಾನಹೃದಯವೆ ಈಶ್ವರನೆನಿಕುಂ.
ಪೀತವರ್ಣವಾದ ಮೂರನೆಯ
ಯೋಗಜಹೃದಯವೆ ಬ್ರಹ್ಮವೆನಿಕುಂ.
ರತ್ನವರ್ಣವಾದ ನಾಲ್ಕನೆಯ
ಭೂತಜಹೃದಯವೆ ಮತ್ತೆಯುವಿೂಶ್ವರವೆನಿಕುಂ.
ಶುದ್ಧ ಸ್ಫಟಿಕವರ್ಣವಾದ ಕಾಮದಹೃದಯವೆ
ಸಾದಾಖ್ಯತತ್ವವೆನಿಕು’ಮೆಂದು, ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./63
ಬಳಿಕ್ಕಂ
ಕಠಿಣ ಮೃದೂಷ್ಣ ಶೈತ್ಯಮಿತ್ರ ತೃಪ್ತಿಗಳೆಂಬಿವೆ ದ್ರವ್ಯಂಗಳು
ಮತ್ತೆಯರ್ಪಿತಂಗಳಿಂ ಸುಗಂಧ ರಸ ರೂಪ ಸ್ಪರ್ಶ ಶಬ್ದ
ತೃಪ್ತಿಗಳೆಂಬಿವೆ ಪದಾರ್ಥಂಗಳಿವೆಲ್ಲಂ
ಮೊದಲಂತೆ ನಿನ್ನೊಳರ್ಪಿತಂಗಳಾದವಯ್ಯಾ,
ಪರಮ ಶಿವಲಿಂಗೇಶ್ವರ ನಿರಾಳತರ ಗಂಭೀರಾ./64
ಬಳಿಕ್ಕಂ
ಕೇವಲಂ ಜ್ಞಾನಜಂ ಯೋಗಜಂ ಭೂತಜಂ ಕಾಮದವೆಂದು
ಹೃದಯಾಂಗಮೊಂದೆಯೈದು ತೆರನಿವಕ್ಕೆ ವಿವರಂ
ಶಿವಾಂಗವಾದ ಹೃದಯವೆ ಕೇವಲಹೃದಯವೆನಿಕುಂ.
ಸಾಂತಂ ಯಾಂತದೊಡನೆ ಕೂಡಿ ಆದಿವರ್ಗಾಂತ
ಸಂಜ್ಞಿತವಾದೌಕಾರದೊಡನೊಂದಿ
ಕಾರ್ಯಕಾರಣದೊಳ್ಬೆರೆಯೆ ಹ್ರೌಂ ಯೆಂದಾಯಿತ್ತಿದೆ
ಜ್ಞಾನಜಹೃದಯವೆನಿಕುಂ.
ಮತ್ತಂ, ಸಾಂತಮಂಮಾಂತದೊಡಗಲಸಿ ಬಿಂದುವಂ ಬೆರಸೆ
ಹ್ಯಂ ಎಂದಾಯಿತ್ತು.
ಪುನಸ್ತತ್ವಾಂತಮಂ ಅಕಾರದೊಳ್ಕೂಡಿ ಶಿವಶಕ್ತಿ ಸಂಜ್ಞಿತ
ಬಿಂದುವಿನೊಳ್ಮಿಶ್ರಿಸೆ ಹಂ ಎಂದಾಯಿತ್ತೀ
ಯುಭಯಂಗೂಡಿ ಯೋಗಜಹೃದಯವೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./65
ಬಳಿಕ್ಕಂ
ಗುರುಲಿಂಗಮೆ,
ಕ್ರಿಯಾಗಮ ಭಾವಾಗಮ ಜ್ಞಾನಾಗಮ
ಸಕಾಯ ಅಕಾಯ ಪರಕಾಯ
ಧರ್ಮಾಚಾರ ಭಾವಾಚಾರ ಜ್ಞಾನಾಚಾರಗಳೆಂ
ದೊಂಬತ್ತಾಗಿರ್ಪುದದುಂ
ನೀನೆ ಅಯ್ಯಾ,
ನಿಶ್ಯಂಕ ನಿಷ್ಕಳಂಕ ಶಂಕರ ಪರಮ ಶಿವಲಿಂಗೇಶ್ವರಾ./66
ಬಳಿಕ್ಕಂ
ಜಂಗಮಲಿಂಗಮೆ,
ಜೀವಾತ್ಮಾಂತರಾತ್ಮ ಪರಮಾತ್ಮ ನಿರ್ದೆಹಾಗಮ
ನಿರ್ಭಾವಾಗಮ ನಷ್ಟಾಗಮಾದಿಪ್ರಸಾದಂತ್ಯ ಪ್ರಸಾದಿ
ಸೇವ್ಯಪ್ರಸಾದಿಗಳೆಂಬೊಂಬತ್ತು ನಿಜಸ್ವರೂಪಯ್ಯಾ,
ಪರಮ ಶಿವಲಿಂಗ ಪಾವನಚರಿತ್ರ,
ಜಿತ ಸೂರ್ಪಕ ಭಾವಜಭಂಗಾ./67
ಬಳಿಕ್ಕಂ
ಡ ವಿರಜೆ, ಢ ಕಾಲೋದರಿ
ಣ ಪೂತನೆ, ತ ಭದ್ರಕಾಳಿ
ಥ ಯೋಗಿನಿ ದ ಶಂಖಿನಿ
ಧ ಗಜರ್ಿನಿ ನ ಕಾಳಾವತಿ
ಪ ಕುರ್ದನಿ ಫ ಕಪದರ್ಿನಿ
ಇಂತೀ ಮಹಾಲಿಂಗದ ಶಕ್ತಿಯ ಕಂಠಸಂಜ್ಞಿತ ಮಣಿಪೂರಕಚಕ್ರದ
ದಶಕೋಷ್ಠದಳ ನ್ಯಸ್ತ ದಶರುದ್ರಶಕ್ತಿಯರಂ ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./68
ಬಳಿಕ್ಕಂ
ಪ್ರಸಾದಿಸ್ಥಲಮೆ,
ಪ್ರಸಾದಿಸ್ಥಲ ಗುರುಮಹಾತ್ಮೆಸ್ಥಲ
ಲಿಂಗಮಹಾತ್ಮೆಸ್ಥಲ ಜಂಗಮಮಹಾತ್ಮೆಸ್ಥಲ
ಭಕ್ತಮಹಾತ್ಮೆಸ್ಥಲ ಶರಣಮಹಾತ್ಮೆಸ್ಥಲ
ಪ್ರಸಾದಮಹಾತ್ಮೆಸ್ಥಲಂಗಳೆಂದೇಳ್ತೆರನಾಗಿರ್ಪುದದುಂ
ನಿನ್ನೊಡಲಾದಪುದಯ್ಯಾ,
ಷಟ್ತ್ರಿಂಶ ತತ್ವಸಾರ ಸದ್ಭಕ್ತ ಹೃದಯಾಬ್ಜಸೂರ
ಪರಮ ಶಿವಲಿಂಗೇಶ್ವರಾ./69
ಬಳಿಕ್ಕಂ
ಶಿವಲಿಂಗಸ್ಥಲಮೆ,
ಕಾಯಾನುಗ್ರಹ ಇಂದ್ರಿಯಾನುಗ್ರಹ ಪ್ರಾಣಾನುಗ್ರಹ
ಕಾಯಾರ್ಪಿತ ಕರಣಾರ್ಪಿತ ಭಾವಾರ್ಪಿತ
ಶಿಷ್ಯ ಶುಶ್ರೂಷಾ ಸೇವ್ಯಂಗಳೆಂದೊಂಬತ್ತಾದುದದೆ
ತ್ವದೀಯ ರೂಪವಯ್ಯಾ,
ಪರಮ ಶಿವಲಿಂಗ ಪರಾಪರ ಪಾಣಿಕುರಂಗಾ./70
ಬಳಿಕ್ಕಮಗ್ನಿಮಂಡಲದ ವರುಣದಿಕ್ಕಿನೇಕದಳದಲ್ಲಿ ಲಕಾರಮ
ನದರಾಚೆಯ ಚಂದ್ರಮಂಡಲದ ದಳದ್ವಯದಲ್ಲಿ
ವರುಣದಳದೊಳಗೆ ಞಕಾರಮಂ
ವರುಣ ವಾಯುಗಳಪದಿಕ್ಕಿನ ದಳದಲ್ಲಿ ಙಕಾರಮಂ
ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ
ವರುಣ[ದಳ]ದೊಳಗೆ ಡಕಾರಮಂ
ವರುಣ ವಾಯುಗಳಪದಿಕ್ಕಿನ ದಳದ್ವಯದಲ್ಲಿ ಢಕಾರ ಣಕಾರಂಗಳ-
ನನುಗೊಳಿಸಿ ಭಾವಿಪುದೆಂದೆಯಯ್ಯಾ,
ಪರಮ ಶಿವಲಿಂಗ ಫಣೀಶ್ವರ ಭೂಷಿತಾಂಗ./71
ಬಳಿಕ್ಕಮಾ ಬಾಹ್ಯದ ಸೂರ್ಯಮಂಡಲದ ಬಹಿರ್ವಳಯದಲ್ಲಿ
ಮೊದಲ ವರ್ಣದಿಂ ತರವಿಡಿದೆರಳ್ಪದಿನಾರಕ್ಕೆ
ಮೂವತ್ತೆರಡೆಸಳ್ಗಳಂ ಬರೆದದರ ಮುಂದಣ ಚಂದ್ರಮಂಡಲದಲ್ಲಿ
ಮೊದಲ ಮಂಡಲದೊಳೊಂ[ದೊಂ]ದು
ಪಾಲಾದೊಳ್ದಳೋಪದಳಂ-
ಗಳಾದ ಪದಿನಾರೆಸಳ್ಗಳಂ ಬರೆದಂತೆಯೆ
ಅಗ್ನಿಮಂಡಲದೊಳೆಂಟೆಸಳ್ಗಳಂ ಲಿಖಿಸುತ್ತಂತೆಯೆ
ಸೂಕ್ಷ್ಮ ಕರ್ಣಿಕೆಯಂ ಬಳಸಿ
ಚೌದಳದ ನ್ಯಾಸಮಂ ತಿಳಿಯೆಂದೆಯಯ್ಯಾ,
ಪರಮ ಶಿವಲಿಂಗ ಪ್ರಕಟಿತ ಸುಜ್ಞಾನಪ್ರಸಂಗ./72
ಬಳಿಕ್ಕಮಾ ಮಂತ್ರಂಗಳ ಪ್ರಕೃತಿಯೆಂತೆನೆಯಾ
ಮಂತ್ರಂಗಳ ವಾಸವೆ ಪ್ರಕೃತಿಯೆನಿಕುಮಾ
ಮಂತ್ರಂಗಳ ಕೃಹದವೆ ವಿಕೃತಿಯೆನುಕುವೀ-
ಯುಭಯಕ್ಕೀ ತೆರದಿಂ ವಿವರಂ-
ಪ್ರಕೃತಿಯೆನಲೊಡನಕ್ಷರ ಸ್ವರೂಪಂ.
ವಿಕೃತಿಯೆನಲೊಡನಕ್ಷರದ ಭಾವಾಕ್ಷರವದು ಜಿಹ್ವಾವಾಸವೆನಿಕುಮಾ
ಜಿಹ್ವಾವಾಸಾಕ್ಷರವೆ ಮುಖವಾಸಾವೆನಿಕುಮಾ
ಮುಖವಾಸಾಕ್ಷರವೆ ಬುದ್ಧಿವಾಸವೆನಿಕುಮಾ
ಬುದ್ಧಿವಾಸಾಕ್ಷರವೆ ಹೃದಯವಾಸವೆನಿಕುಮಾ
ಹೃದಯವಾಸಾಕ್ಷರವೆ ಪಿಂಡವಾಸವೆನಿಕುಮಾ
ಪಿಂಡವಾಸಾಕ್ಷರವೆ ನಾಡಿವಾಸವೆನಿಕುಮಾ
ನಾಡಿವಾಸಾಕ್ಷರವೆ ಶಕ್ತಿವಾಸವೆನಿಕುಮಾ
ಶಕ್ತಿವಾಸಾಕ್ಷರವೆ ಶಿವವಾಸವೆನಿಕುಮಾ
ಶಿವನೆ ಸರ್ವಾಕ್ಷರವಾಸವೆನಿಕುಮೀ
ಶಿವವಾಸವೆ ಮಂತ್ರಪ್ರಕೃತಿಯೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./73
ಬಳಿಕ್ಕಮಾ ಮಹಾಲಿಂಗದ ಕಂಠಸಂಜ್ಞಿತವಾದ
ಮಣಿಪೂರಕಚಕ್ರ ರುದ್ರರೂಪಮೆಂತೆನೆ
[ಡ,,,,,(?)], ಢ ಅರ್ಧನಾರೀಶಂ,
ಣ ಉಮಾಕಾಂತಂ, ತ ಆಷಾಡಿ,
ಥ ದಂಡಿ, ದ ಅತ್ರಿ ಧ ಮಾನಂ, ನ ಮೇಷ,
ಪ ಲೋಹಿತಂ, ಫ ಶಿಖಿ,
ಇಂತೀ ದಶರುದ್ರರೀ ಮಹಾಲಿಂಗದ ಮಣಿಪೂರಕಚಕ್ರ
ದಶಕೋಷ್ಠದಳ ನ್ಯಸ್ತ ದಶಾಕ್ಷರವಾಚ್ಯರೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./74
ಬಳಿಕ್ಕಮಾ ಶಿವಸದಸದ್ವಸ್ತ ಸ್ವರೂಪಮುಂ ತಾನೆಯಾಗಿ
ಶುದ್ಧ ಸದ್ರೂಪನಾದ ಕಾರಣಂ,
ಬೂತಮೆನಿಪಾನಾಕಾಶದ್ವಾಯು ರೀತ್ಯಾದಿ
ಶ್ರುತ್ಯುಕ್ತ ಕ್ರಮಸೃಷ್ಟಿಯ ಪಂಚಭೂತದ ಮೊದಲಾಕಾಶಮಯವಾದ.
ಮತ್ತೆಯುಂ ಪಂಚಬ್ರಹ್ಮಮಯವಾದ.
ಸದಾಶಿವನಪ್ಪುದರಿಂದೆಯುಂ ಪಂಚಮವಾದ.
ಬಳಿಕ್ಕಂ, ಸೃಷ್ಟಿವರ್ಗಕ್ರಮದ ಶಕ್ತಿ ಬೀಜವಾದ.
ಬಿಂದುಸ್ವರೂಪ ಸಕಾರದುಪರಿಯಲ್ಲಿರುತ್ತಿರ್ದ ಕಾರಣಂ
ಶಿವಂ ಸಾಂತವೆನಿಪಂ.
ಮತ್ತಂ, ನಿವೃತ್ತಿ ಕಲಾದಿ ಶಿವತತ್ವಾಂತವಾದ,
ತತ್ವಾಶ್ರಯವಾದ ಕಾರಣಂ ಶಿವಂ ತತ್ವಾಂತನೆನಿಪನೆಂದು
ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ ಪ್ರಸಿದ್ಧ ಮಹಿಮಾಕರ./75
ಬಳಿಕ್ಕಮಾ, ಲಿಂಗದಧಃಕಂಜಮೆ ಸ್ವಾಧಿಷ್ಠಾನಚಕ್ರವೆನಿಸುಗು-
ಮದರ ಷಟ್ಕೋಷ್ಠಂಗಳೆ ಷಡ್ದಳಂಗಳವರಲ್ಲಿ,
ಬ ಭ ಮ ಯ ರ ಲ ಎಂಬಾರಕ್ಕರಂಗಳ್ನ್ಯಸ್ತಮಾಗಿಕರ್ುಮೆಂದು
ನಿರವಿಸಿದೆಯಯ್ಯ, ಪರಶಿವಲಿಂಗಯ್ಯ./76
ಬಳಿಕ್ಕಮಾಜ್ಯಪ್ರಧಾರಿಕೆಯೆ ಅಜ್ಞಾಚಕ್ರಮೆನಿಕು-
ಮಲ್ಲಿಯ ದ್ವಿಕೋಷ್ಠಂಗಳೆ ದ್ವಿದಳಂಗಳವರಲ್ಲಿ
ಳ ಕ್ಷ ಎಂಬೆರಡಕ್ಕರಂಗಳ್ನೆಲಸಿಕರ್ುಮೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./77
ಬಳಿಕ್ಕಮೀ ಕಾರಣ ಸೂಕ್ಷ್ಮ ಷಡಂಗಂಗಳ್
ಸ್ಥೂಲ ಷಡಂಗಕ್ಕೆ ತರದಿಂದೇಕೈಕಮಾಗನುಕೂಲಮಾಗಿರ್ಪವದು-
ಮಲ್ಲದೆಯುಂ ಬ್ರಹ್ಮ ವಿಷ್ಣು ರುದ್ರೇಶ್ವರ ಸದಾಶಿವ
ಪರಶಿವವರ್ಕಳೆಂಬಿವರಾ
ಸ್ಥೂಲಷಡಂಗ ಪರ್ಯಾಯವಯ್ಯಾ,
ಪರಮ ಶಿವಲಿಂಗೇಶ್ವರ, ಪಾರ್ವತೀ ಪ್ರಾಣೇಶ್ವರ./78
ಬಳಿಕ್ಕಮೀ ಚಕ್ರದ ಕರ್ಣಿಕಾಕ್ಷರಮಂ ನಿರವಿಸಿ,
ಮತ್ತಂ, ಕೇಸರಾಕ್ಷರಗಳಂ ಪೇಳ್ವೆನೆಂತೆನೆ-
ಕರ್ಣಿಕೆಯ ಪೂರ್ವ ದಕ್ಷಿಣ ಪಶ್ಚಿಮೋತ್ತರಂಗಳಲ್ಲಿ
ನ್ಯಸ್ತವಾದ ಚತುರ್ದಳಾಕ್ಷರಂಗಳೊಳಗೆ
ಮೊದಲ ಪೂರ್ವದಳದ ಬಿಂದುಮಯ ಸಕಾರಕ್ಕೆ
ಆಧಾರವೆಂದು ಶಕ್ತಿಯೆಂದು ಕಾರ್ಯವೆಂದು ಪರವೆಂದು
ಬಿುದುವೆಂದೈದು ಪರ್ಯಾಯನಾಮಂಗಳ್.
ಬಳಿಕ್ಕಂ, ದಕ್ಷಿಣದಳದಕಾರಕ್ಕೆ
ಅಕಾರವೆಂದು ಆತ್ಮಬೀಜವೆಂದು ದೇಹಿಯೆಂದು ಕ್ಷೇತ್ರಜ್ಞನೆಂದು
ಭೋಗಿಯೆಂದೈದು ಪರ್ಯಾಯನಾಮಂಗಳ್.
ಮತ್ತಂ, ಪಶ್ಚಿಮದಳದ ನಾದಮಯವಾದೈಕಾರಕ್ಕೆ
ಐಕಾರವೆಂದು ಶಿವಬೀಜವೆಂದಾಧೇಯವೆಂದು ಪರವೆಂದು
ನಾದಾಂತವೆಂದೈದು ಪರ್ಯಾಯನಾಮಂಗಳ್.
ಮರಲ್ದುಂ ಬಡಗಣದಳದ ಕ್ಷಕಾರಕ್ಕೆ
ವಿದ್ಯಾಬೀಜವೆಂದು ಕ್ಷಕಾರವೆಂದು ಕೂಟಾರ್ನವೆಂದು
ವರ್ಗಾಂತವೆಂದು ದ್ರವ್ಯವೆಂದೈದು ಪರ್ಯಾಯನಾಮಂಗಳ್.
ಇತ್ತೆರದಿಂ ಕೇಸರಾಕ್ಷರದ ಚತುರ್ದಳಾಕ್ಷರಂಗಳಂ
ನಿರವಿಸಿದೆಯಯ್ಯಾ,
ಪರಮ ಶಿವಲೀಂಗೇಶ್ವರ ಕಲ್ಯಾಣಗುಣಾಕರ./79
ಬಳಿಕ್ಕಮೀ ಚಕ್ರಸ್ಥ ವರ್ನಂಗಳ್ಗೆ ವರ್ಗಭೇದಮುಂಟದೆಂತೆನೆ-
ಸ್ಥಿತಿವರ್ಗ ಸೃಷ್ಟಿವರ್ಗ ಸಂಹಾರವರ್ಗಂಗಳೆಂಬೀ ವರ್ಗಂಗಳವರಲ್ಲಿ
ಮೊದಲ ಸ್ಥಿತಿವರ್ಗವೊಂದರೊಳಗೆ
ಸಾತ್ವಿಕವರ್ಗ ರಾಜಸವರ್ಗ ತಾಮಸವರ್ಗಂಗಳಕ್ಕುಮಿವಕ್ಕೆ ವಿವರಂ.
ಪೂರ್ವಾದೀಶಾನಾಂತಮಾಗಿ ಅಗ್ನಿ ಚಂದ್ರ ಸೂರ್ಯಮಂಡಲದಳ
ನ್ಯಸ್ತಾಕ್ಷರಗಳೆಲ್ಲಂ ಸ್ಥಿತಿವರ್ಗ-
ವಿವರೊಳ್ಸಾತ್ವಿಕವರ್ಗ ರಾಜಸವರ್ಗ ತಾಮಸವರ್ಗಗಳೆಂದು
ತ್ರಿವಿಧಮಪ್ಪವರಲ್ಲಿ
ಮೊದಲಗ್ನಿಮಂಡಲದೆಂಟು ದಳಂಗಳಲ್ಲಿಯ
ಸ ಷ ಶ ವ ಲ ರ ಯ ಮ
ಗಳೆಂಬಿವೆಂಟು ಸಾತ್ವಿಕಂಗಳೆನಿಪ-
ವದರಾಚೆಯ ಚಂದ್ರಮಂಡಲದ ದಳೋಪದಳಂಗಳಲ್ಲಿ
ಪೂರ್ವಾದೀಶಾನಾಂತಮಾಗಿ ನ್ಯಸ್ತವಾದ
ಅ ಆ ಇ ಈ ಉ ಊ ಒ ಓ ಏ ಐ ಓ ಔ ಅಂ ಆಃ
ಎಂಬೀ ಪದಿನಾರೆ ರಾಜಸಂಜ್ಞೆಂಗಳೆನಿಪ
ವದರಾಚೆಯ ಸೂರ್ಯಮಂಡಲದ ಮೂವತ್ತೆರಡು ದಳಂಗಳೊಳಗ-
ಣೆಂಟಕ್ಕರಂಗಳಗ್ನಿ ಮಂಡಲದೆಂಟುದಳಂಗಳಲ್ಲಿ
ನ್ಯಸ್ತವಾಗಿರ್ದಪವವರ,
ಶೂನ್ಯದಳಂಗಳೆಂಟಂ ಬಿಟ್ಟುಳಿದಿರ್ಪತ್ತು ನಾಲ್ಕು ದಳಂಗಳಲಿ
ನ್ಯಸ್ತವಾದ
ಕಖಗಘಙ ಚಛರುುಜಞ ಟಠಡಢಣ
ತಥದಧನ ಪಫಬಭಂಗಳೆಂಬಿರ್ಪತ್ತನಾಲ್ಕೆ ತಾಮಸಂಗಳೆನಿಪವೀ
ವರ್ಗತ್ರಯಂ ಸ್ಥಿತಿವರ್ಗಗತವಾದುದೀ
ಮೂಮರ್ೂರ್ವರ್ಗಾಕ್ಷರಂಗಳ ಸಂಜ್ಞೆಯಿಂದೆ ಮಂತ್ರಗಳನುದ್ಧರಿಪು
ದಿನ್ನುಂ ಶುದ್ಧಪ್ರಸಾದ ಮೂಲಪ್ರಸಾದ ತತ್ವಪ್ರಸಾದ ಆದಿಪ್ರಸಾದ
ಆತ್ಮಪ್ರಸಾದಂಗಳೆಂಬ
ಪಂಚಪ್ರಸಾದ ಮಂತ್ರಗಳನೀ ಚಕ್ರಸ್ಥಾಕ್ಷರ ಸ್ಥಿತಿವರ್ಗದಿಂದುದ್ಧರಿಸಿ
ಭಾವಿಪುದೆಂದೆಯಯ್ಯಾ,
ಪರಮ ಶಿವಲಿಂಗೇಶ್ವರ ಸುಧಾಕರ ಶೇಖರಾ./80
ಬಳಿಕ್ಕಮೀ ಮೂಲಪ್ರಸಾದವೆ ಶಿವನೀ
ವೈದಿಕ ಪ್ರಸಾದಮಂತ್ರ ಮೂರ್ತಿಯೆಂತೆನೆ,
ಹಕಾರವೆ ದೇಹ, ಬಿಂದುವೆ ಮುಖಮೆಂಬಲ್ಲಿ
ಆ ಪರಶಿವನ ನಿಷ್ಕಲಶಕ್ತಿಯೆನಿಪ ಷಾಂತವೆ ಬಿಂದು
ತದಂಶಗಳಾದ ವ್ಯಂಜನಂಗಳುಮಂತೆಯೆ.
ಬಳಿಕಲಾ ಶಾಂತ್ಯತೀತ ಕಳಾಮಯಿಯಾದ
ನಿಷ್ಕಳ ಪರಾಶಕ್ತಿಯ ಭೋಗಾಧಿಕಾರಿಗಳಾದ
ಶಿವ ಸದಾಶಿವ ಮಾಹೇಶ್ವರನ ವ್ಯಾಪಾರಕ್ಕೆ
ಶುದ್ಧ ಮಾಗರ್ೊಪಾಧಿಯಾಗಿ ಪ್ರಕಾಶ ಬ್ರಹ್ಮಾಧಿಷ್ಠಾನ
ರೂಪಿಣಿಯಾದ ಕುಂಡಲಿನಿಯೆನಿಸಲಾ
ಕುಂಡಲಿನಿಯೆ ಬಿಂದುವದೆ ಶೂನ್ಯವದೆ ಸೊನ್ನೆಯದೆ
ಪರಿಶಿವನ ಲೀಲಾವ್ಯಾಪಾರಂಗಳ್ಗೆ ಮುಖ್ಯ[ವ]ಪ್ಪುದರಿಂ
ಬಟ್ಟಿತ್ತಾದ ಸೊನ್ನೆಯದುವೆ ಹಿಂಗೆ ಮೇಲಿರುತಿರ್ದ ಕಾರಣವದೆ
ಮೂಲಪ್ರಸಾದಮಂತ್ರ ಮೂರ್ತಿಯ
ಮುಖವೆಂದುಪದೇಶಿಸಿದೆಯಯ್ಯಾ,
ಪರಶಿವಲಿಂಗೇಶ್ವರ ಚಿದ್ಗಗನ ಪ್ರಭಾಕರ./81
ಬಳಿಕ್ಕಮೀ ಸಾಮಾನ್ಯಾಂಗ ಮಂತ್ರದೇವತೆಗಳಂ
ಸೂಚನಮಂತ್ರದಿಂ ಸೂಚಿಸುವೆನೆಂತೆನೆ-
ವಿಧಿ ವಿಷ್ಣು ಪುರಂದರ ರವಿ ಶಶಿ ಗುಹ ಭೈರವ
ವಿಘ್ನೇಶಾಷ್ಟಮೂರ್ತಿ ವಸು ವಿದ್ಯೇಶ ಗಣೇಶ
ಲೋಕಪಾಲ ವಜ್ರಾದ್ಯಾಯುಧ ಸಿದ್ಧರ ಗಂಧರ್ವಾಪ್ಸರೋ
ಯಕ್ಷ ಕಿನ್ನರ ಭೂತ ಮುನಿ ಖೇಚರರೆಂಬಿವ-
ರಿನ್ನುಳಿದ ಸಕಲ ದೇವತೆಗಳಾದ ನಾಮಂಗಳಂ
ವರ್ಣಪಟದಲ್ಲಿ ಪೇಳ್ದೇಕೈಕಬೀಜಾಕ್ಷರಂಗಳ ಮೇಲೆ
ಪಿಂದೆ ಪೇಳ್ದ ಷಟ್ಸ್ವರಂಗಳಂ ಪತ್ತಿಸಿ
ಕಾರ್ಯ ಕಾರಣದೊಡವೆರಸಿ
ಮೊದಲಂತೆ ಕಾಂ ಕೀಂ ಕೂಂ ಕೈಂ ಕೌಂ ಕಃ ಎಂದಾಯಿತ್ತಿದು
ವಿಧಿವೆಸರಿದರಂತೆಲ್ಲಮಂ ನೋಡಿಕೊಂಬುದಿದು
ಸಾಮಾನ್ಯಾಂಗವೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./82
ಬಳಿಕ್ಕಮೀ ಸೂಕ್ಷ್ಮ ಪಂಚಾಕ್ಷರ ನ್ಯಾಸಾನಂತರದಲ್ಲಿ
ಸ್ಥೂಲಪಂಚಾಕ್ಷರ ನ್ಯಾಸಮಂ ಪೇಳ್ವೆನೆಂತೆನೆ-
ನಕಾರಾದಿಯಕಾರಾಂತವಾದೈದಕ್ಕರಂಗಳನಾಧಾರಾದಿ
ವಿಶುದ್ಧಂತ್ಯವಾದೈದುಚಕ್ರಂಗಳಲ್ಲಿರಿಸೂದೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./83
ಬಳಿಕ್ಕಮೀಯೂಧ್ರ್ವದ ಶಿವ ಷಟ್ಚಕ್ರಕೋಷ್ಠದಳ ನ್ಯಸ್ತವಾದೇಕ
ಪಂಚಾಶದ್ವರ್ಣಂಗಳೆಲ್ಲವುಂ ರುದ್ರಬೀಜಂಗಳಿವರ
ವಾಚ್ಯ ವಾಚಕತ್ವದಲ್ಲಿರ್ಪ ರುದ್ರಮೂರ್ತಿಗಳಂ ಪೇಳ್ವೆನೆಂತೆನೆ-
ಯಾ ಮಹಾಲಿಂಗದೂಧ್ರ್ವಪಟ್ಟಿಕೆಯೊಳಿರ್ದ
ಷೋಡಶಸ್ವರಾಕ್ಷರ ವಾಚ್ಯರುದ್ರರಂ ತರದಿಂ
ನಿರವಿಸುತಿರ್ದೆಯಯ್ಯಾ, ಪರಶಿವಲಿಂಗಯ್ಯ./84
ಬಳಿಕ್ಕಮೂಧ್ರ್ವಾಬ್ಜವೆಂಬ ಪೆಸರ ಹೃದಯಸ್ಥಾನದೆ
ಅನಾಹತಚಕ್ರಮೆನಿಸುಗುಮಲ್ಲಿಯ
ದ್ವಾದಶಕೋಷ್ಠಂಗಳೆ ದ್ವಾದಶದಳಂಗಳವರಲ್ಲಿ
ಕ ಖ ಗ ಘ ಙ ಚ ಛ ಜ ರುು ಞ ಟ ಠ ಎಂಬ
ಪನ್ನೆರಡಕ್ಕರಂಗಳ್ನೆಲಸಿಕರ್ುಮೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./85
ಬಳಿಕ್ಕಮೆಲರುಗೊಂಟುಗಳ ನಡುವಣ ಮಂಡಲಾಶ್ರಯದ,
ತನ್ನಾರು ತನು ಪಸಿರ್ವಣ್ಣದ,[ಕ]ಕಾ[ರಾ]ದಿ ಠಾಂತಾನ್ವಿತದ
ಪನ್ನೆರಡೆಸಳ ತಾವರೆಯ ಕನರ್ಿಕೆಯ,
ಸೂಕ್ಷ್ಮರಂಧ್ರಗತ ಪ್ರಣವದರೆವೆರೆಯಾದ,
ವಕಾರವೆ ಜಂಗಮಲಿಂಗಮದು,
ನಿನ್ನ ತತ್ಪುರುಷ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ಪ್ರಥಿತ ಪ್ರಸಂಗಾ./86
ಬಳಿಕ್ಕಾದಿಪ್ರಸಾದ ನಿರೂಪಣಾನಂತರದಲ್ಲಿ-
ಯಾತ್ಮಪ್ರಸಾದಮಂ ಪೇಳ್ವೆನೆಂತೆನೆ-
ಭೂತಾಂತ ಸಂಜ್ಞೆಯನುಳ್ಳ ಹ್ ಎಂಬಕ್ಕರಕ್ಕದೇ
ಪ್ರಕೃತಿಸಂಜ್ಞೆಯನುಳ್ಳ ಆಕಾರಮಂ ಪತ್ತಿಸೆ ಹ ಎಂಬುದಾಯ್ತು.
ಮತ್ತಮಗ್ನಿಮಂಡಲದ ಸಾತ್ವಿಕವರ್ಗದಿಂದ್ರದಳದ ಸ್ ಎಂಬ
ವ್ಯಂಜನಕ್ಕಾದಿ ಪ್ರಕೃತಿಯಂ ಕೂಡಿಸೆ
ಸ ಎನಿಸಲೊ[ಡಿನ್ನ]ವರ ಮಧ್ಯದೊಳ್ಯಕ್ತಿಸಂಜ್ಞಿತವಾದ
ಸೊನ್ನೆಯನುದ್ಧರಿಸೆ
ಹಂಸ ಎಂದಾಯ್ತದೆ ಆತ್ಮಪ್ರಸಾದವೆನಿಸಿತ್ತದೆ
ಸರ್ವರ ಹೃದ್ಗತವಾಗಿ
ಜೀವಪ್ರಸಾದವಾದುದೆಂದು ತಿಳಿಪಿದೆಯಯ್ಯಾ,
ಪರಮಗುರು ಪರಾತ್ಪರ ಪರಶಿವಲಿಂಗೇಶ್ವರ./87
ಬಳಿಕ್ಕಾಧಾರಶಕ್ತಿ ಸಂಜ್ಞಿತ ಸಕಾರವು ಚತುರ್ದಶ ಸ್ವರದಿಂ ಕೂಡಿ
ಕಾರ್ಯ ಕಾರಣಮಂ ಬೆರೆಯೆ
ಸೌಂಮೆಂಬೈದನೆಯ ಶಕ್ತಿಬೀಜವಾಯಿತ್ತೆಂದೆಯಯ್ಯಾ,
ಪರಶಿವಲಿಂಗಯ್ಯ./88
ಬಳಿಕ್ಕೆಯುಂ, ವಾಂತವೆ ಸೂಕ್ಷ್ಮ ರುದ್ರಸಂಜ್ಞಿತವಾದಿಕಾರದೊಳ್ಬೆರೆಯೇ
ಶಿ ಯೆನಿಸಿತ್ತು.
ಲಾಂತವೆ ಅನಂತಾಖ್ಯ ರುದ್ರಸಂಜ್ಞಿತವಾದಾಕಾರದೋಳ್ಕೂದೆ
ವಾ ಯೆನಿಸಿತ್ತು.
ಮರುದ್ವಾಚ್ಯವಾದ ಮಾಂತವೆ ಯ ಯೆನಿಸಿತ್ತೀ
ಮೂರಕ್ಕಾದಿಯಾದ ನಮಃ ಎಂಬ ಹೃದಯಪಲ್ಲವಂಗೂಡಿ
ಪಂಚಾಕ್ಷರಮೆನಿಸಲದು `ತಾರಾಧ್ಯೇಯಂ ಷಡಕ್ಷರಂ’ ಎಂದು
ನಿರ್ವಚಿಸಿದೆಯಯ್ಯಾ, ಪರಶಿವಲಿಂಗಯ್ಯ./89
ಬಳಿಕ್ಕೆಯುಮಗ್ನಿ ಮಂಡಲದೀಶಾನದಿಕ್ಕಿನೇಕದಳದಲ್ಲಿ ಮಕಾರಮ
ನದರಾಚೆಯ ಚಂದ್ರಮಂಡಲದಳದ್ವಯದಲ್ಲಿ
ಈಶಾನ್ಯ ದಳದೊಳಗೆ ಅಕಾರಮ
ನೀಶಾನೇಂದ್ರರಪದಿಕ್ಕಿನ ದಳದಲ್ಲಿ ಅಃಕಾರಮಂ,
ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ
ಈಶಾನ್ಯದಳದೊಳಗೆ ಫಕಾರಮ
ನೀಶಾನೇಂದ್ರಪದಿಕ್ಕಿನ ದಳದ್ವಯದಲ್ಲಿ ಬಕಾರಂಗಳನಿಟ್ಟು
ಭಾವಿಪುದೆಂದೆಯಯ್ಯಾ,
ಪರಮ ಶಿವಲಿಂಗೇಶ್ವರ ತ್ರಿಭುವನಾಧೀಶ್ವರ./90
ಬಳಿಕ್ಕೆಯುಮಗ್ನಿಮಂಡಲದ ವಾಯುದಿಕ್ಕಿನೇಕದಳದಲ್ಲಿ ರಕಾರಮ
ನದರಾಚೆಯ ಚಂದ್ರಮಂಡಲದ ವಾಯುದಿಕ್ಕಿನ ದಳದ್ವಯದಲ್ಲಿ
ವಾಯುದಳದೊಳಗೆ ಎಕಾರಮಂ,
ವಾಯು ಕುಬೇರರಪದಿಕ್ಕಿನ ದಳದ್ವಯದಲ್ಲಿ ಐಕಾರಮ
ನದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ
ವಾಯುದಳದೊಳಗೆಕಾರಮಂ,
ವಾಯು ಕುಬೇರರಪದಿಕ್ಕಿನ ದಳದ್ವಯದಲ್ಲಿ ಥಕಾರ ದಕಾರಂಗಳಂ
ಬರೆದು ಭಾವಿಪುದೆಂದೆಯಯ್ಯಾ,
ಪರಮ ಶಿವಲಿಂಗೇಶ್ವರ ಪ್ರಚುರ ಕಲ್ಯಾಣ ಗುಣಾಕರ./91
ಬಳಿಕ್ಕೆಯುಮಾ,
ಪಿಂಡಬ್ರಹ್ಮಗಳ ಕಳಾಸ್ವರೂಪಮಂ ಪೇಳ್ವೆನೆಂತೆನೆ-
ಶಂಖ ಕುಂದ ಚಂದ್ರ ಸ್ಫಟಿಕ ಕ್ಷೀರಗಳೆಂಬೀ
ಪಂಚವರ್ಣಾತ್ಮಕವಾದುದೆ ಈಶಾನಮುಖದ ಕಲೆ.
ಶೋಣ ಕೃಷ್ಣ ಶ್ವೇತ ಪೀತಂಗಳೆಂಬೀ
ಚತುರ್ವ[ಣರ್ೌ]ತ್ಮಕವಾದುದೆ ತತ್ಪುರುಷಮುಖದ ಕಲೆ.
ಅಂಜನಾರುಣ ಪೀತ ಶ್ಯಾಮ ನೀಲ
ಸಿತಾರುಣ ಕಾಂಚನಂಗಳೆಂಬೀವೆಂಟು
ವರ್ಣಾತ್ಮಕವಾದುದೆ ಆಘೋರಮುಖದ ಕಲೆ.
ಜಪಾ ಪೀತಾಂಜನ ಶ್ಯಾಮ ಶುಕ್ಲ ಶಾಮಾಂಜನಾರುಣಾಂಜನ
ಸ್ಫಟಿಕ ರಕ್ತನೀಲ ಮರಕತಂಗಳೆಂಬೀ
ಪದಿಮೂರು ವರ್ಣಾತ್ಮಕವಾದುದೆ ವಾಮದೇವಮುಖದ ಕಲೆ.
ರಕ್ತ ಕೃಷ್ಣ ನೀಲ ಕೃಷ್ಣ ಪೀತ ಕುಂಕುಮ ಭಿನ್ನಾಂಜನಾರುಣಂ
ಗಳೆಂಬೀಯಷ್ಟಾ
ತ್ಮಕವಾದುದೆ ಸದ್ಯೋಜಾತಮುಖದ ಕಲೆ.
ಇಂತೀ ಮೂವತ್ತೆಂಟು ಕಲಾಮಯವಾದ ವರ್ನಂಗಳೆ
ತ್ರಿನೇತ್ರಂಗಳಿಂ, ಚತುರ್ಭುಜಗಳಿನಭಯ ವರದ ಶೂಲ
ಪರಶು ಕರಂಗಳಿಂ,
ಸರ್ವಲಕ್ಷಣ ಸಂಯುತಂಗಳಿಂ, ಸರ್ವಾಭರಣಂಗಳಿಂ,
ದಿವ್ಯಗಂಧ ಮಾಲ್ಯಂಗಳಿಂದಲಂಕೃತರಾದ ಶಿವಮೂರ್ತಿಗಳೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./92
ಭೂವರ್ಗದ ಮೂರನೆಯ ಹ್ ಎಂಬ ವ್ಯಂಜನಮಂ
ವ್ಯೋಮವರ್ಗದಂತ್ಯದಕಾರದೊಳ್ಕೂಡಿಸೆ ಹ ಎನಿಸಿತ್ತದರ ಮೇಲೆ
ಶಕ್ತಿ ಸಂಜ್ಞಿತವಾದ ಸೊನ್ನೆಯನಿಡೆ ಹಂ ಎನಿಸಿತ್ತಾ
ಭೂವರ್ಗದ ತುರ್ಯಗಣನೆಯಾದ ನಾಲ್ಕನೆಯ ಸ್ ಎಂಬುದಕ್ಕೆ
ವ್ಯೋಮವರ್ಗದ ಕಡೆಯಕಾರಮಂ ಪತ್ತಿಸೆ ಸ ಎನಿಸಿತ್ತು.
ಲಯವರ್ಗದ ಮೊದಲ ಕ್ಷ್ ಎಂಬುದಕ್ಕೆ ವ್ಯೋಮಾಂತಮಂ
ಪತ್ತಿಸೆ ಕ್ಷ ಎನಿಸಿತ್ತಗ್ನಿಬೀಜ
ಸಂಜ್ಞಿತವಾದ ರ್ ಎಂಬುದಕ್ಕದರಂತೆ
ವ್ಯೋಮಾಂತಮಂ ಪತ್ತಿಸೆ ರ ಎನಿಸಿತ್ತು.
ಭೂವರ್ಗದ ಕಡೆಯಕ್ಕರವಾದ ಯ್ ಎಂಬುದಕ್ಕೆ
ವ್ಯೋಮಾಂತಮಂ ಪತ್ತಿಸೆ ಯ ಎನಿಸಿ-
ತ್ತಾಕಾಶವರ್ಗದಾರನೆಯ ಎ ಎಂಬ ಸ್ವರಮುಮಿವೆಲ್ಲಕ್ಕಂ
ತರದಿಂ ಶಕ್ತಿಸಂಜ್ಞಿತವಾದ ಸೊನ್ನೆಯಂ ಕೂಡಿಸೆ
`ಹಂ ಕ್ಷಂ ಮಂ ರಂ ಯಂ ಎಂ’ ಎಂಬೀ ಷಡಕ್ಷರಂ
ಹಾರಮಂತ್ರಬೀಜವೆನಿಪುದೀ
ಮಹೇಶ್ವರನ ಸೃಷ್ಟಿಸ್ಥಿತಿಲಯಾಭಿಧಾನಮಂತ್ರತ್ರಯವ
ನಿರವಿಸಿದೆಯಯ್ಯ,
ಪರಶಿವಲಿಂಗದೇವ ಮಹಾನುಭಾವ./93
ಭೇದಾಭೇದಂಗಳೇನುವಿಲ್ಲದಂದು ಶುದ್ಧಾದ್ವೈತ
ಪ್ರಭಾಪುಂಜ ರಂಜಿತ ನಿರಂಜನ ಶೂನ್ಯ
ನಿಷ್ಯಳ ಸಕಳ ಸಕಳನಿಷ್ಕಳ ಕಳಾವಿಶಿಷ್ಟ ಸಗುಣ ನಿರ್ಗುಣಾತ್ಮಕ
ಪರಮ ಶಿವಲಿಂಗ ಸೂರ್ಯೆಂದು ಪಾವಕ ಮಂಡಲತ್ರಯ
ಮಧ್ಯಸ್ಥಿತ ದಹರಾಕಾಶಸ್ಥ ಶುದ್ಧ ಮನು ವಿಭ್ರಾಜಿತಾಂಗ./94
ಮಂತ್ರೋತ್ಪತ್ತಿ ನಿರೂಪಣಾನಂತರದೊಳ್ತತ್ವಂಗಳಂ ಮಂತ್ರಂಗಳಂ
ಲಿಂಗದಲ್ಲಿ ನ್ಯಾಸಮಂ ಮಾಳ್ಪುದಂ ಪೇಳ್ವೆನೆಂತೆನೆ-
ಲಿಂಗಸ್ಥಾಪನ ಕಾಲದೊಳ್ಕಳಶಂಗಳು ಸ್ಥಾಪಿಸುತ್ತವರಲ್ಲಿ
ಪೊರಗಣಿಂ ಲಿಂಗದೊಳೆಂತಂತಾ ಕಳಶಾಂತರ್ಗತವಾಗಿ
ನಾದಮನುಂಟುಮಾಡಿ ಮಂತ್ರಂಗಳಂ ನ್ಯಾಸಂಗೆಯ್ವುದಾ
ಲಿಂಗಸ್ಥಾಪನ ಕಳಶಸ್ಥಾಪನಂಗಳುಭಯದ ಕೂಟ ಕ್ರಿಯಾವಸ್ಥೆಯೆ
ಪ್ರತಿಷ್ಠೆಯೆನಿಕುಮಾ
ಪ್ರತಿಷ್ಠೆ ಪ್ರಾಣಮೆಂದು ಪ್ರಕೃತಿಯೆಂದಿತರ್ೆರವಾಯ್ತು.
ಉಭಯದ ಯೋಗಮಂ ತಿಳಿದು ಸ್ಥಾನಮನೆಸಗುವುದು.
ಮತ್ತಮಾ ಪ್ರಾಣಮೆನೆ ಮಂತ್ರಂ. ಪ್ರಕೃತಿಯೆನೆ ಮೂರ್ತಿ.
ಈಯಭಯದ ಯೋಗವೆ ಶಿವಸಾನ್ನಿಧ್ಯ ಕಾರಣದರತ್ತಣಿಂ
ಮಂತ್ರಂಗಳಂ ಮೂರ್ತಿಗಳನುಂ ಲಿಂಗದಲ್ಲಿಯೆ
ನ್ಯಾಸಂಗೆಯ್ವುದೆಂದು ತಿಳಿಪಿದೆಯಯ್ಯಾ,
ಪರಶಿವಲಿಂಗಯ್ಯಾ./95
ಮತ್ತಂ ಭೂತಜಹೃದಯಮಂ ಗ್ರಂಥವಿರ್ದಲ್ಲಿ ನೋಡಿಕೊಂಬುದು.
ಬಳಿಕ್ಕಂ, ತತ್ವಾಂತಮಂಮಾಂತದೊಡನೆ ಕೂಡಿ
ಸ್ವರ ದಶಮಾಂತ ಸಂಜ್ಞಿತವಾದೈಕಾರದೊಡನೆ ಬೆರಸಿ
ಬಿಂದು ನಾದ ಸಂಜ್ಞಿತವಾದ ಸೊನ್ನೆಯನೊಂದಿಸೆ ಹ್ರೈಂ ಎಂದು
ಕಾಮದಹೃದಯಮೆನಿಕುಮೆಂದು ನಿರೂಪಿಸಿದೆಯಯ್ಯಾ,
ಪರಶಿವಲಿಂಗಯ್ಯ./96
ಮತ್ತಂ ಮಂತ್ರರೂಪಮೆಂತೆನೆ,
ಮಂತ್ರದಾದಿಯೆ ಶಿರಸ್ಸು.
ಮಂತ್ರದುಪರಿಯೆ ಮುಖ.
ಮಂತ್ರ ಬಾಹ್ಯಂಗಳೆ ಉಭಯ ಪಾಶ್ರ್ವಂಗಳಾ-
ಮಂತ್ರದಧೋಭಾಗವೆ ಆಸನಂ.
ಮಂತ್ರದುಪರಿಯಲ್ಲಿಯ ವಾಮದಕ್ಷಿಣಚತುಃಪಾಶ್ರ್ವಂಗಳೆ
ಚಕ್ಷು ಶ್ರೋತ್ರಂಗಳ್.
ತನ್ಮಧ್ಯವೆ ನಾಸಿಕೆ. ತದೂಧ್ರ್ವವೆ ನೊಸಲ್ಬಿಂದುವೆ ಮಸ್ತಕಂ.
ನಾದವೆ ಜಿಹ್ವೆ. ರ್ನಾಬ್ದವೆ ಶಬ್ದಮಾ
ಶಬ್ದ ಸ್ಪಂದ ನಾ [ದ] ವದುದರವೆ ಓಷ್ಠವದು
ಶಬ್ದದಿ ಭಿನ್ನವಾದ ಮುಖಾಂತರಯುತಮೆನಿಕುಂ.
ಪ್ರಣವಾಂತದಲ್ಲಿಯುಂ, ಮಂತ್ರಪಲ್ಲವಾಂತದಲ್ಲಿಯು
ಹಿಂಭಾಗದಲ್ಲಿಯು ಕೂಡಿರ್ಪುದೆ ಮಂತ್ರರೂಪವೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./97
ಮತ್ತಂ ವಾಹನಮೆಂತನೆ-
ಲಿಂಗದಲ್ಲಿಯುಂ, ಸ್ಥಂಡಿಲೋದ್ಧರಣ ಲಿಂಗದಲ್ಲಿಯುಂ,
ರುದ್ರಮೂರ್ತಿ ಪ್ರತಿಮೆಗಳಲ್ಲಿಯುಂ,
ಪ್ರತಿಷ್ಠಾ ಕಾಲದಲ್ಲಿ ಸ್ಥಾಪಿತ ಕುಂಭಗಳಲ್ಲಿಯುಂ, ವಸ್ತುವಿನಲ್ಲಿಯುಂ,
ಕುಂಡಾಗ್ನಿಯಲ್ಲಿಯುಂ ಮೂಲಸ್ಥಾನದಲ್ಲಿಯುಂ,
ದೀಕ್ಷಾ ಕಾಲಂಗಳಲ್ಲಿ ಸ್ಥಾಪಿತ ಮಂತ್ರಾವಾಸ ಪ್ರೋಕ್ಷಣ
ಜಲಕಲಶಂಗಳಲ್ಲಿಯೂ,
ಪ್ರಯೋಗಿಸಲ್ಪಟ್ಟುದೆ ಮಂತ್ರವಾಹನವೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯಾ./98
ಮತ್ತಂ ಶಿವಷಟ್ಚಕ್ರನಿರೂಪಣಾನಂತರದಲ್ಲಿ ಶಕ್ತಿ ಷಟ್ಚಕ್ರಗಳೆಂತನೆ-
ಪಿಂದಣೈವತ್ತೊಂದು ರುದ್ರವಾಚ್ಯಬೀಜಂಗಳೆ
ಶಕ್ತಿ ಬೀಜಂಗಳಿವಕ್ಕೆ ವಿವರಂ.
ಆ ಪೂಣರ್ೊದರಿ ಆ ರಿಜೆ
ಇ ಶಾಲ್ಮಲಿ ಈ ಲೋಲಾಕ್ಷಿ
ಉ ವತರ್ುಲಾಕ್ಷಿ ಊ ದೀರ್ಘಘೋಣೆ
ಋ ದೀರ್ಘಮುಖಿ ೂ ಗೋಮುಖಿ
ಒ ದೀರ್ಘಜಿಹ್ವಾ ಓ ಕುಂಡೋದರಿ
ಏ ಊಧ್ರ್ವಕೇಶಿ ಐ ವಿಕೃತಮುಖಿ
ಓ ಜ್ವಾಲಾಮುಖಿ ಔ ಉಲ್ಕಮುಖಿ
ಅಂ ಶ್ರೀಮುಖಿ ಅಃ ವಿದ್ಯಾಮುಖಿ
ಇಂತೀ ಮಹಾಲಿಂಗದ ಶಕ್ತಿಯೂಧ್ರ್ವಪಟ್ಟಿಕಾಖ್ಯ ವಿಶುದ್ಧಿಚಕ್ರದ
ಷೋಡಶಕೋಷ್ಠದಳ ನ್ಯಸ್ತ ಷೋಡಶರುದ್ರಶಕ್ತಿಯರಂ
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./99
ಮತ್ತಂ, ಕ್ರಮದಿಂ ಹ್ರೌಂ ಎಂಬ ಮೂಲಪ್ರಸಾದವಾಚಕದಲ್ಲಿ
ಕರ್ಮಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು.
ಹಂ ಎಂಬ ತತ್ವಪ್ರಸಾದವಾಚಕದಲ್ಲಿ ಕತರ್ೃಸಾದಾಖ್ಯ ವಾಚ್ಯಮಂ
ನ್ಯಾಸಂಗೆಯ್ವುದು.
ಹೌಂ ಎಂಬಾದಿ ಪ್ರಸಾದಿವಾಚಕದಲ್ಲಿ ಮೂರ್ತಿಸಾದಾಖ್ಯ ವಾಚ್ಯಮಂ
ನ್ಯಾಸಂಗೆಯ್ವುದು.
ಹಂಸ ಎಂಬಾತ್ಮಪ್ರಸಾದವಾಚಕದಲ್ಲಿ
ಅಮೂರ್ತಿಸಾದಾಖ್ಯ ವಾಚ್ಯಮಂ ನ್ಯಾಸಂಗೆಯ್ವುದು.
ಹ ಎಂಬ ಶುದ್ಧಪ್ರಸಾದವಾಚಕದಲ್ಲಿ ಶಿವಸಾದಾಖ್ಯ ವಾಚ್ಯಮಂ
ನ್ಯಾಸಂಗೆಯ್ವುದಿಂತು
ಪಂಚಪ್ರಸಾದದಲ್ಲಿ ಪಂಚಸಾದಾಖ್ಯ ತತ್ವಮಂ
ನ್ಯಾಸೀಕರಿಸಿದೆಯಯ್ಯಾ, ಪರಶಿವಲಿಂಗಯ್ಯಾ./100
ಮತ್ತಂ, ಗಣಸಂಜ್ಞಿತವಾದ ಗ್ ಎಂಬುದನುದ್ಧರಿಸಿ
ವನ್ಹಿ ಸಂಜ್ಞಿತವಾದ ರ್ ಎಂಬುದಂ ಬೆರಸೆ
ಗ್ರ ಸಂಜ್ಞಿತವಾದ ರ್ ಎಂಬುದಂ ಬೆರಸೆ
ಗ್ರ ಎನಿಸಿತ್ತದಂ ಮಾಯಾ ಸಂಜ್ಞಿತವಾದಿಕಾರದೊಳ್ಮಿಶ್ರಿಸೆ ಗ್ರಿ ಎನಿಸಿ
ತ್ತದಂ ಬಿಂದು ನಾದ ಸಂಜ್ಞಿತವಾದ
ಸೊನ್ನೆಯೊಳ್ಬೆರಸೆ ಗ್ರಿಂ ಯೆನಿಸಿ
ಗೌರೀ ಬೀಜವಾಯಿತ್ತಿದೆ ಪ್ರಕಾರದಲ್ಲಿ
ಮಿಕ್ಕ ಶಕ್ತಿಗಳ್ಗೆಯುಮವರವರ ನಾಮಂಗಳ
ಮೊದಲಕ್ಕರಂಗಳಲ್ಲಿ ಬೀಜಮಂತ್ರಗಳನರಿವುದೆಂದು
ನಿರೂಪಿಸಿದೆಯಯ್ಯಾ,
ಪರಮಗುರು ಪರಶಿವಲಿಂಗಯ್ಯ./101
ಮತ್ತಂ, ಗುಹ್ಯಮಂ ತ್ರಯೋದಶಾಂತದೊಳ್ಬೆರಸಿ
ಪರಾಪರದೊಳೊಂದಿಸೆ ಹೌಂ ಎಂಬಾದಿಬೀಜಮಾಯ್ತು.
ಮರಲ್ದುಂ, ಹ್ ಎಂಬ ಜೀವಮಂ
ವರ್ಗಾದಿಯಾದಕಾರದೊಳ್ಮೋಳ್ಮೇಳಿಸಿ
ಶಕ್ತಿಸಂಜ್ಞಿತ ಬಿಂದುವಂ ಬೆರಸೆ ಹಂ ಎನಿಸಿತ್ತು.
ಬಳಿಕ್ಕಂ, ಶಕ್ತಿಸಂಜ್ಞಿತವಾದ ಸ್ ಎಂಬ ವ್ಯಂಜನಮಂ
ಕಲಾಸಂಜ್ಞಿತವಾದ ಕಾರಣದೊಳ್ಪುದುಗೆ ಸ ಎನಿಸಿತ್ತು.
ಮತ್ತೆಯುಂ, ವ್ಯಂಜನಶಕ್ತಿ ಬೀಜವಾದ ಸ್ ಎಂಬುದು
ಮಾತ್ರಾದಿ ಸಂಜ್ಞಿತಕಾರಮನೊಂದೆ ಎಂದಿನಂತೆ ಸ ಎನಿ[ಸಿ] ತ್ತು.
ಬಳಿಕಂ, ವರುಣವರ್ಗದ ನಾಲ್ಕನೆ ಯ ಎಂಬಕ್ಕರವುಂ
ಮೂರನೆಯ ಸ್ವರಮನಸ್ಥಿ ಸಂಜ್ಞಿತಮಾದ
ಶ್ ಎಂಬಕ್ಕರದೊಡನೆ ಕೂಡಿಸೆ ಶಿ ಎನಿಸಿತ್ತು.
ಸೋಮಾಂತ ಸಂಜ್ಞಿತವಾದ ವಕಾರಮಂ
ದ್ವಿಕಲಾಸಂಜ್ಞಿತವಾದಾಕಾರಮ ನೊಂದಿಸೆ ವಾ ಎನಿಸಿತ್ತು.
ವಾಯುಬೀಜವಾದ ಯ್ ಎಂಬಕ್ಕರವನಾದಿಕಲಾಸಂಜ್ಞಿತ-
ಮಾದಕಾರದೊಡನೆ ಕೂಡಿಸೆ ಯ ಎನಿಸಿತ್ತಿಂತು
`ಹೌಂ ಹಂ ಸ ಸದಾಶಿವಾಯ’ ಎಂಬಷ್ಟಾಕ್ಷರಮಂತ್ರಮಂ
ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ./102
ಮತ್ತಂ, ನಾಡ ಜನವು ತಮ್ಮತಮ್ಮ ಪೆಸರ ಸ್ತುತಿ
ಕ್ಷೇಮಾಭಿಮಾನನಿಗಳಾಗಿರ್ದ ಕಾರಣಂ
ನಂಬುಗೆಯಿಂ ಪೆಸರ್ಗೊಂಡವರ್ಗೆ ಸಮಸ್ತಮನಿತ್ತು
ಮನ್ನಿಪುದೆಂತಂತೆ
ಜೀವಂ ತನ್ನ ದಿವ್ಯನಾಮಮಂ ನೆನೆದವರ್ಗೆ
`ಮನನಾ ತ್ರಾಯತ ಇತಿ ಮಂತ್ರ’ಯೆಂಬ ವಿಗ್ರಹೋಕ್ತಿಯಿಂ
ವಾಚಕದೊಳ್ವಾಚ್ಯನಾಗಿರ್ದೊಮೆಂದು ದನಿಗೊಟ್ಟು
ಸನ್ನಿಧಿಸ್ಥನಾಗಿ ಬೇಡಿದುದನಿತ್ತಪನೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ ಪರಾಪರರೂಪಾ./103
ಮತ್ತಂ, ಪಡುವ ತೊಡಗಿ ಮೂಡಲತನಕಲಿ
ಲಿಂಗಕ್ಕೋಸುಗರಂ, ಬೀದಿಗಳಂ ಬಿಡುವುದಾ ಮೇಲೆ
ಮಧ್ಯದಲೆರಡೆರಡು ಬೀದಿಗಳ ನಾಲ್ಕು ನಾಲ್ಕು ಮನೆಗಳನುಳುಹಿ-
ಯಾಮೇಲೆ ಇಕ್ಕೆಲಗಳಲ್ಲಾರಾರು ಮನೆಗಳಂ ತೊಡೆವುದದರಿಂ
ಮೇಲಣ ಪಂತಿಯಂ ಬಿಟ್ಟುವದರಿಂ ಮುಂದಣಪಂತಿಯಾಚೀಚೆ
ಎರಡೆರಡು ಮನೆಗಳಂ ತೊಡೆದು
ನಡುವಣ ಪನ್ನೆರಡು ಮನೆಗಳನುಳುಹುವದದರೀಚೆ
ಪಂತಿಯಾಚೀಚೆಯ ಮೂರುಮೂರು ಮನೆಗಳಂ ತೊಡೆದು
ನಡುವಣ ಪತ್ತುಮನೆಗಳನುಳುವದದರೀಚೆ
ಪಂತಿಯಾಚೀಚೆಯೈದೈದು ಮನೆಗಳಂ ತೊಡೆದು
ನಡುವಣಾರಾರು ಮನೆಗಳನುಳುಹುವದದರೀಚೆ
ಪಂತಿಯಾಚೀಚೆಯಾರಾರು ಮನೆಗಳಂ ತೊಡೆದು
ನಡುವಣ ನಾಲ್ಕು ಮನೆಗಳನುಳುಹವದದರೀಚೆ
ಪಂತಿಯಾಚೀಚೆಯಾರಾರು ಮನೆಗಳಂ ತೊಡೆದು
ಮತ್ತೆಯುಂ, ನಡುವಣ ನಾಲ್ಕುಮನೆಗಳನುಳುಹುವದದರೀಚೆ
ಪಂತಿಯಾಚೀಚೆಯ ಐದೈದು ಮನೆಗಳಂ ತೊಡೆದು
ನಡುವಣಾರು ಮನೆಗಳನುಳುಹುವದದರೀಚೆ ಪಂತಿಯಾಚೀಚೆ
ಮೂರು ಮೂರು ಮನೆಗಳಂ ತೊಡೆದು
ಪತ್ತು ಪಂತಿಯನುಳುಹುವದದರೀಚೆ ಪಂತಿಯಾಚೀಚೆಯಾರಾರು
ಮನೆಗಳಂ ತೊಡೆದು
ನಾಲ್ಕು ಪಂತಿಗಳನುಳುಹುವದಿದುಂ ಲಿಂಗಾಕಾರವಹುದೀ
ಈ ಮಹಾಲಿಂಗಂ ಬ್ರಹ್ಮ ವಿಷ್ಣು ಕಾಲರುದ್ರಸಂಜ್ಞೆಯನುಳ್ಳ
ರಾಜಸಿ ಸಾತ್ವಿಕಿ ರೌದ್ರಿ ಶಕ್ತಿ ಸಂಜ್ಞೆ ಪೀಠವನುಳ್ಳ
ಲಿಂಗವೆ ಬ್ರಹ್ಮವೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./104
ಮತ್ತಂ, ಪರಿವಿಡಿಯಿಂ ಸ್ಫಟಿಕವರ್ಣಂ ರಕ್ತವರ್ಣಂ ಪೀತವರ್ಣಂ
ಶ್ಯಾಮವರ್ಣಂ ಕಾಂಚನವರ್ಣಮರುಣವರ್ಣಂ
ಮಿಂತೀ ವರ್ಣವೆಲ್ಲಂ ಸಾಮಾನ್ಯಾಂಗ ವರ್ಣವೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./105
ಮತ್ತಂ, ಪಿಂದಣ ಚಕ್ರೋದ್ಧರಣಮೆ ಈ ಲಿಂಗೋದ್ಧರಣ
ವದೇಂಕಾರಣವೆಂದೊಡೆ,
ಸಕಲಾತ್ಮರ ದ್ವಾದಶಾಂತದಲ್ಲಿ ಮಂಡಲತ್ರಯ ಮಧ್ಯದ
ಸ್ಥೂಲ ಕರ್ಣಿಕಾಂತಸ್ಥಿತ ಸೂಕ್ಷ್ಮರಂಧ್ರಗತವಾದ
ಮೂಲಾಧಾರಂ ತೊಡಗಿ ಬ್ರಹ್ಮರಂಧಸಂಜ್ಞಿತ
ಬ್ರಹ್ಮನಾಡಿ ಪರ್ಯಂತಂ ವ್ಯಾಪಕವಾಗಿ
ನಾದಬ್ರಹ್ಮವೆನಿಪ ಪರಮ ಚೈತನ್ಯಕ ಪರಮಾತ್ಮನೆನಿಕುಮದೆ
ನವನೀತದೊಳ್ ಘೃತವಿರ್ದಂತೆಲ್ಲರೆಳಿರ್ದೊಡೆಯು
ಅಗ್ನಿಮುಖದೊಳ್ತುಪ್ಪವೆಂತು ಸಾಕ್ಷಾತ್ಕರಿಪುದಂತೆ
ಜ್ಞಾನಗುರುಮುಖದಿಂ ಪ್ರತ್ಯಕ್ಷವಾಗಿ ಲಿಂಗಾಕಾರವಾಗಿರ್ಪುದಾ
ಚಕ್ರೋದ್ಧರಣ ಕೋಷ್ಠದಳ ನ್ಯಸ್ತ
ವಾಚಕ ವಾಚ್ಯರುದ್ರರುಂ ರುದ್ರಶಕ್ತಿಯರುಮೊಂದೆಯೆಂದು
ನಿರವಿಸಿದೆಯಯ್ಯಾ, ಶಿವಲಿಂಗಯ್ಯ./106
ಮತ್ತಂ, ಪೂಜಕನಾದ ಸುಶೈವಂ
ಸಮಸ್ತ ತತ್ವಮಂತ್ರಜನ್ಮಸ್ಥಲವಾದ ಮಹಾಲಿಂಗಮಂ
ಪೀಠದೊಳಿಟ್ಟು ಪೂಜಿಪನವನೀ ಪಂಚಾಸ್ತ್ರಮಂತ್ರದಿಂ
ತಾನೆಸಗುವ ಸಕಲ ಬಾಹ್ಯ ಕ್ರಿಯಾಕಲಾಪಮಂ
ಮಾಡಲುಚಿತವೆಂದಿಂತು
ಶಿವಾಂಗಾದಿ ಷಡಂಗಂಗಳಂ ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./107
ಮತ್ತಂ, ಪೃಥ್ವೀ ಪೀತವರ್ಣಂ.
ಉದಕಂ ಶ್ವೇತವರ್ಣಂ.
ಅಗ್ನಿಯರುಣವರ್ಣಂ.
ವಾಯು ಕೃಷ್ಣವರ್ಣಂ.
ಆಕಾಶ ಧೂಮವರ್ಣಂ.
ಉಳಿದುದೆ ಪಾವಕವರ್ಣಂ ಮಿಂತೀ
ಷಡ್ವರ್ಣವೇ ಭೂತಾಂಗವರ್ಣವೆಂದು ನಿರೂಪಿಸಿದೆಯ್ಯಾ,
ಪರಶಿವಲಿಂಗಯ್ಯ./108
ಮತ್ತಂ, ಪ್ರಣವಭೇದ ನಿರೂಪಣಾನಂತರದಲ್ಲಿ
ಅಂಗಭೇದಮಂ ಪೇಳ್ವೆನೆಂತೆನೆ-
ಶಿವಾಂಗ ಭೂತಾಂಗ ವಿದ್ಯಾಂಗ ಕೂಪಾಂಗ ಶಕ್ತ್ಯಂಗ
ಸಾಮಾನ್ಯಂಗಂಗಳೆಂದಾರು ತೆರನೀ
ಷಡಂಗಾಕ್ಷರಂಗಳಲ್ಲಿ ನಾದಬ್ರಹ್ಮಂ ಪರಿಪೂರ್ಣವಾಗಿಹುದಾ
ಷಡಂಗಂಗಳಲ್ಲಿ ಮೊದಲ ಶಿವಾಂಗಕ್ಕೆ ವಿವರಂ-
`ಆ ಈ ಊ ೂ ಒ ಐ ಔ ಅಂ ಅಃ’ ಎಂಬೀಯೊಂಬತ್ತ್ತು
ವಿಕೃತಾಕ್ಷರಂಗಳಲ್ಲಿ
ನಾಲ್ಕನೆಯ ೂಕಾರಮಂ ಐದನೆಯ ಒ ಕಾರಮಂ ಎಂಟನೆಯ ಅಂ
ಎಂಬ ಈ ಮೂರಕ್ಕರಮಂ ಬಿಟ್ಟು
ಉಳಿದಾರಕ್ಕರಮಂ ಶಿವ ಸಂಜ್ಞಿತವಾದ ಹಕಾರದೊಡನೆ ಕೂಡಿಸೆ
ಹಾಂ ಹೀಂ ಹೂಂ ಹೈಂ ಹೌಂ ಹಃ ಎಂಬೀ
ಶಿವಷಡಂಗಮಂತ್ರವೆ ರಕಾರದಿಂ ಪೊರಗಪ್ಪುದರಿಂ ತಾಂತ್ರಿಕ
ಶಿವಷಡಂಗವೆನಿಕುಂ.
ರಕಾರದೊಡನೆ ಕೂಡಿ ಹ್ರಾಂ ಹ್ರೀಂ ಹ್ರೂಂ ಹೆಂ ಹ್ರೌಂ ಹ್ರಃ ಎಂಬ
ವೈದಿಕ ಶಿವಷಡಂಗಮಂತ್ರವೆನಿಸುಗು
ಮೀಯುಭಯಮಂತ್ರಕ್ಕಂ ಭೇದವಿಲ್ಲವೆಂದು
ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ./109
ಮತ್ತಂ, ಭವಿಗಳ ಪ್ರಾಕೃತ ದೃಷ್ಟಿ ಪತಿತವಾದ
ಶುದ್ಧ ಪದಾರ್ಥಂಗಳಂ ಕಳೆದು, ನಿವೃತ್ತಿಯಂ ಮಾಡಿ,
ವಿಶುದ್ಧಾದೈತ ದೃಗ್ವಿಲೀನ ಶುದ್ಧಪ್ರಸಾದಮಯ ವಸ್ತುವಂ,
ಸ್ವೀಕರಿಪನಾವನವನೆ ವಿಶೇಷ ವೀರಶೈವನೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./110
ಮತ್ತಂ, ಶಕ್ತಿಸಂಜ್ಞಿತವಾದ ಸ್ ಎಂಬ ವ್ಯಂಜನ
ಸಕಾರಮಾದಿಕಲೆಯೊಡನೆ ಕೂಡಿ ಸ ಎಂದಾಯ್ತು.
ಬಳಿಕ್ಕಂ, ಸೋಮಸಂಜ್ಞಿತವಾದ ಕುಬೇರವರ್ಗದ ಕಡೆಗಳಾದ
ವಕಾರ ಶಕಾರದ್ವಯವಂ ದ್ವಿಕಲಸಂಜ್ಞಿಕವಾದಕಾರಮಂ
ತ್ರಿಕಲಸಂಜ್ಞಿತವಾದಿಕಾರಮಂ
ತರದಿಂ ಕೂಡಿಸೆ ವಾಶಿಯೆಂದಾಯಿತ್ತಾ
ವರ್ಣಂಗಳೆರಡರೊಳ್ಪೊರ್ವವಂ ಪರಕ್ಕೆ
ಪರವಂ ಪೂರ್ವಕ್ಕೆ ಪ್ರಯೋಗಿಸೆ ಶಿವಾಯೆಂದಾಯ್ತು.
ಮರಲ್ದುಂ, ಕುಬೇರವರ್ಗದ ಮೊದಲ
ಯ್ ಎಂಬ ವರ್ಣಮನಾದಿ
ಕಲೆಯೊಡನೆ ಕೂಡೆ ಯ ಎನಿಸಿತೀ
ಪೇಳ್ದ `ಹೌಂ ಸ ಶಿವಾಯ’ ಎಂಬೀ ಪಂಚಾಕ್ಷರೀಮಂತ್ರವು
ಮುಕ್ತಿದ ಯಂತ್ರವೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ ಪರಿಪೂರ್ಣ ಭಕ್ತಿ ಭಾಸ್ವರಾ./111
ಮತ್ತಂ, ಶಕ್ತ್ಯಂಗನಿರೂಪಣಾನಂತರದೊಳ್ಸಾಮಾನ್ಯಾಂಗಮಂ
ಪೇಳ್ವೆನೆಂತೆನೆ
ಅಶ್ವಿನಿವೆರಸವಿಸ್ವರಾಂತರಂಗಳೆಂಬೀ
ವಿಕೃತಿಸ್ವರಂಗಳಾರುಂ ಸಾಮಾನ್ಯಾಂಗಂಗಳಿವು,
ಸರ್ವದೇವತಾಮಂತ್ರಂಗಳ್ಗೆಯುಂ ಸಮಾನಮೆಂದರುಪಿದೆಯಯ್ಯಾ,
ಪರಶಿವಲಿಂಗಯ್ಯ./112
ಮತ್ತಂ, ಶಿವನೆ ಜೀವನಾದೊಡೆ ಜೀವಂಗುಂಟಾದ ಜನನಾದಿ
ದೋಷಂಗಳಿವಂಗುಂಟಾದಪುದಲಾಯೆನೆ
ಸಾಗರತರಂಗನ್ಯಾಯದಂತಭೇದಂ.
ಕಡಲುದಕಂ ತೃಣ ಕಣ ಜಲಮುಮೇಕಮಾದೊಡಂ
ಕಡಲ ಗಂಭೀರತೆ ತೃಣ ಕಣ ಜಲಕ್ಕಿಲ್ಲಮಂತೆ
ಶಿವಂಗುಂಟಾದ ಗಂಭೀರ ಮಹತ್ವಂಗಳ್ಬ ್ರಹ್ಮಾದಿ
ಸ್ತಂಭಪರ್ಯಂತಮಾದ ಕಲ್ಪಿತಜೀವಜಾಲಕ್ಕಿಲ್ಲಮೆಂಬುದೆ
ನಿಶ್ಚಿತಾರ್ಥಮಕ್ಕು-
ಮದಾದೊಡಂ ಶಿವಂ ಪರಿಪೂರ್ಣನಪ್ಪುದರಿಂ
ಮುನ್ನಿನಂತೆ ಸಾಗರತರಂಗನ್ಯಾಯದಿಂ ಜೀವನಾದನದು
ಕಾರಣದಿಂ ಸದಾಶಿವಾದ್ಯವನಿಪರ್ಯಂತಮಾದ ಜಗತ್ತೇ
ದೇಹವನುಳ್ಳ ಕಾರಣಂ ದೇಹಿಯಾ ಫೇನೂರ್ಮಿಕಣಗಳ್ತನ
ಗಿರ್ದೊಡುಲುಹಿಲ್ಲದ ಸಮುದ್ರದಂತೆ,
ಶಿವಂ ದೇಹವಿರ್ದೊಡಂ ದೇಹವಿಲ್ಲದವನೆಂದೇ
ಬೋಧಿಸಿದೆಯಯ್ಯಾ,
ಪರಮ ಶಿವಲಿಂಗ ಸ್ಫಟಿಕರುಚಿ ಸನ್ನಿಭಾಂಗ./113
ಮತ್ತಂ, ಶಿವಾಂಗಮಂತ್ರ ನಿರೂಪಣಾನಂತರದಲ್ಲಿ,
ಭೂತಾಂಗಮಂತ್ರಮಂ ಪೇಳ್ವೆನೆಂತೆನೆ-
ಪೃಥ್ವೀಬೀಜವಾದ ಲಕಾರಮಂ
ಜೀವಬೀಜವಾದ ಹಕಾರದೊಡನೆ ಕೂಡಿ
ಅದನೆರಡನೆಯ ಸ್ವರದೊಡನೆ ಸಂಯೋಗಿಸಿದ ಬಿಂದು ನಾದ
ಸಂಜ್ಞಿತನಾದ ಸೊನ್ನೆಯಂ ಬೆರಸೆ ಹ್ರಾಂ ಎಂದಾಯಿತ್ತು.
ಶಿವಸಂಜ್ಞಿತವಾದ ಹಕಾರದೊಡನೆ ಜಲಬೀಜವಾದ ವಕಾರಮಂ
ನಾಲ್ಕನೆಯ ಸ್ವರವಾದೀಕಾರದೊಡನೆ ಕೂಡಿ ಶಿವಶಕ್ತಿಸಂಜ್ಞಿತವಾದ
ಸೊನ್ನೆಯಂ ಬೆರಸಿ ಹ್ರೀಂ ಎಂದಾಯಿತ್ತು.
ಷಷ್ಠ ಸಂಜ್ಞಿತ ರಕಾರಮಂ ಪಂಚಮ ಸಂಜ್ಞಿತ ಹಕಾರದೊಳ್ಬೆರಸಿ
ಸ್ಪರಪಂಚಮಾಂತವಾದೂಕಾರದೊಳಾ ಹಕಾರಮಂ ಕೂಡಿ
ಯಾಧಾರಾಧೇಯಸಂಜ್ಞಿತ ಬಿಂದುವಿನೊಡವೆರಸೆ
ಹ್ರೂಂ ಎಂದಾಯಿತ್ತು.
ವಾಯುಬೀಜವಾದ ಯಕಾರದೊಡನೆ ಕೂಡಿದ
ಭೂತಾಂತ ಸಂಜ್ಞಿತವಾದ ಹಕಾರಮಂ
ಸ್ವರೈಕಾದಶಾಂತವಾದೈಕಾರದೊಡನೆ ಕೂಡಿಸಿ
ಪರಾಪರ ಸಂಜ್ಞಿತವಾದ ಸೊನ್ನೆಯೊಳ್ಬೆರಸೆ ಹ್ರ್ಯೇಂ ಎಂದಾಯಿತ್ತು.
ತತ್ವಾಂತ ಸಂಜ್ಞಿತವಾದ ಹಕಾರಮಂ ತತ್ವಾಂತವಾದ ದ್ವಯಕ್ಕರಮಂ
ಕಲಾಸಂಜ್ಞಿತವಾದೌಕಾರದೊಡನೆ ಕೂಡಿಸಿ
ಕಾರ್ಯಕಾರಣಸಂಜ್ಞಿತವಾದ ಸೊನ್ನೆಯೆಂ ಕೂಡಿಸೆ
ಹ್ರೌಂ ಎಂದಾಯಿತ್ತು.
ಶಕ್ತಿಸಂಜ್ಞಿತವಾದ ಸಕಾರದ ಕಡೆಯ ಹ್ ಎಂಬ ಹಕಾರಂ
ಮತ್ತೆಯುಂ ಶಿವಸಂಜ್ಞಿತವಾದ ಹ್ ಎಂಬ
ಹಕಾರಮಿವೆರಡರೊಳ್
ಮೊದಲ ಹ್ಕಾರಂ ಆದಿಬೀಜಸಂಜ್ಞಿತವಾದಕಾರದೊಡನೆ
ಕೂಡಿ ಹಹ್ ಎಂದಾಯಿತ್ತಿ-
ವೆರಡರ ಮದ್ಯದೊಳ್ಬಿಂದು ಬರೆ ಹಂಹ್ ಎಂದಾಯಿತ್ತು.
ಇದು ಛೇದ್ಯಸಂಜ್ಞಿತವಾದಸ್ತ್ರಮಂತ್ರದೊಡನೆ ಕೂಡಿ
ಐದು ಭೂತಗ್ರಂಥಿಯೊಡನೆ ಕೂಡಿಹ
ಭೂತಾಂಗಬೀಜಮಾತ್ಮನಲ್ಲಿರುತ್ತಿಹುದೀ
ತೆರದಿಂ ಹ್ರಾಂ ಹ್ರೀಂ ಹ್ರೂಂ ಹ್ರ್ಯೇಂ ಹ್ರೌಂ ಹಂಹ್ ಎಂದಾರು
ಭೇದಮಾದ ಭೂತಾಂಗಮಂ ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./114
ಮತ್ತಂ, ಷಡಧ್ವನ್ಯಾಸಮೆಂತೆನೆ-
ಪೃಥ್ವೀಸ್ಥಾನಮಪ್ಪಧಃಪಟ್ಟಿಕಾ ಸಂಜ್ಞಿತವಾದಾಧಾರಸ್ಥಾನದಲ್ಲಿ
ಭುವನಾಧ್ವಮನುದಕಸ್ಥಾನವಪ್ಪಧಃಕಂಜಸಂಜ್ಞಿತ ಸ್ವಾಧಿಷ್ಠಾನದಲ್ಲಿ,
ಪದಾಧ್ವಮನಗ್ನಿಸ್ಥಾನವಪ್ಪ ಕಂಠಸಂಜ್ಞಿತವೃತ್ತವೆನಿಪ
ಮಣಿಪೂರಕದಲ್ಲಿ,
ವರ್ಣಾಧ್ವಮನೂಧ್ರ್ವಾಬ್ಜ ಸಂಜ್ಞಿತವಪ್ಪನಾಹತದಲ್ಲಿ,
ಕಲಾಧ್ವಮನೂಧ್ರ್ವಪಟ್ಟಿಕಾಸಂಜ್ಞಿತವಪ್ಪ ವಿಶುದ್ಧಿಯಲ್ಲಿ
ತತ್ವಾಧ್ವಮನಾದ್ಯಪ್ರಧಾರಿಕಾಸಂಜ್ಞಿತವಪ್ಪಾಜ್ಞೇಯದಲ್ಲಿ,
ಮಂತ್ರಾಧ್ವಮಂ ನ್ಯಾಸಂಗೆಯ್ವುದಿಂತು
ಸಪ್ತಕೋಟಿ ಮಹಾಮಂತ್ರಾತ್ಮವಾದೀ ಮಹಾಲಿಂಗಮಂ
ಪೊರಗೊಳಗೊಂದೆಯೆಂದೇಕಭಾವದಲ್ಲಿಯರ್ಚಿಪುದೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./115
ಮತ್ತಂ, ಸಕೇಸರ ಕರ್ಣಿಕಾಕ್ಷರ ನಿರೂಪಣಾನಂತರದಲ್ಲಿ-
ಯಗ್ನಿಮಂಡಲದ ಪೂರ್ವಾದೀಶಾನಾಂತವಾಗಿ ನ್ಯಸ್ತವಾದ
ಸಕಾರಾದಿ ಮಕಾರಾಂತವಾದಷ್ಟದಳಾಕ್ಷರಂಗಳೊಳಗೆ
ಮೊದಲ ಸಕಾರವೇ ಶಿವಮಂತ್ರೋದ್ಧರಣಕ್ಕೆ ಕಾರಣವಾದ
ಶುಕ್ಲಧಾತುವೆಂದು ಪೆಸರುನುಳ್ಳದು.
ಮತ್ತಂ ಸ್ಥಿತಿಮಾರ್ಗದಿಂ ಶಿವಮಂತ್ರೋದ್ಧಾರಣಕ್ಕೆರಡನೆಯದಾದ
ಷಕಾರವೆ ಸೂರ್ಯಪರ್ಯಾಯನಾಮದಿಂ
ಮಜ್ಜಾಧಾತುವೆಸರನುಳ್ಳದು.
ಮತ್ತಂ, ಮೂರನೆಯ ಯಥಾಕ್ರಮದ ಶಕಾರವೆ
ಶ್ರೀಪರ್ಯಾಯ ನಾಮದಿಂದಸ್ಥಿ ಧಾತುವೆಸರನುಳ್ಳುದು.
ಬಳಿಕ್ಕಂ, ನಾಲ್ಕನೆಯ ಕ್ರಮದ ವಕಾರವೆ
ಸವರುಣಜಲ ಪರ್ಯಾಯನಾಮದಿಂದೆ,
ಮೇಧೋಧಾತುವೆಸರನುಳ್ಳುದು.
ಬಳಿಕ್ಕಂ, ಮೊದಲಂತೈದನೆಯದಾದ ಲಕಾರವೆ
ಇಂದ್ರಿಯಬೀಜವಾಗಿ
ಪೃಥ್ವಿಪರ್ಯಾಯನಾಮದಿಂ ಮಾಂಸಧಾತುವೆಸರನುಳ್ಳುದು.
ಮರಲ್ದುಂ, ಪೂರ್ವದಂತಾರನೆಯ ಕ್ರೋಧಾಭಿಧರಕಾರವೆ-
ಯಗ್ನಿ ಪರ್ಯಾಯನಾಮದಿಂ ರಕ್ತ ಧಾತುವೆಸರನುಳ್ಳುದು.
ಮತ್ತೆಯುಂ, ಮುನ್ನಿನಂತೇಳನೆಯ ಯಕಾರವೆ
ವಾಯುಬೀಜವೆನಿಸಿ
ವಾಯುಪರ್ಯಾಯನಾಮದಿಂ ಸ್ನಾಯುಧಾತುವೆಸರನುಳ್ಳುದು.
ಮೇಣಾದಿಯಂತೆಂಟನೆಯ ಮಕಾರವೆ ಕಾಲಮೃತ್ಯುವೆನಿಸಿ
ಮೃತ್ಯುಕಾರಕವೆಂಬ ನಾಮವನುಳ್ಳುದಿಂತು
ಸ್ಥಿತಿವರ್ಗದ ತ್ರಿಭೇದವನುಳ್ಳಗ್ನಿಮಂಡಲದ ನಿಲುಕಡೆಯಂ
ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗ ಸುರಗಂಗೋತ್ತಮಾಂಗ./116
ಮತ್ತಂ, ಸಾಕಲ್ಯಪ್ರಣವ ನಿರೂಪಣಾನಂತರದಲ್ಲಿ
ಪಂಚಮಾತ್ರಾಸಮನ್ವಿತಮಾದ ಶಾಂಭವಪ್ರಣವವಂ ಪೇಳ್ದೆನೀ
ಪಂಚಪ್ರಣವಂಗಳ್ಗೆಯುಂ ಹ ಎಂಬಕ್ಕರಂ ಪ್ರಸಿದ್ಧಂ.
ತದನಂತರದೊಳ್ಸೌಖ್ಯಪ್ರಣವ ಭೇದಮಂ ಪೇಳ್ವೆನೆಂತೆನೆ
ವರ್ಗಾದಿ ಸಂಜ್ಞಿತವಾದ ಅಕಾರಂ
ಪಂಚಮಸ್ವರ ಸಂಜ್ಞಿತವಾದ ಉಕಾರಂ
ಷಷ್ವವರ್ಗಾಂತ ಸಂಜ್ಞಿತವಾದ ಮಕಾರಂ
ಬೀಜಸಂಜ್ಞಿತವಾದ ಹಕಾರಂ
ತೃತೀಯ ಸ್ವರಸಂಜ್ಞಿತವಾದ ಇಕಾರಂ
ಇಂತು ಅ ಉ ಮ ಹ ಇ ಐದಕ್ಕರಂಗೂಡಿದ
ಸೌಖ್ಯಪ್ರಣವಂ
ಸದಾಶಿವನ ಪಶ್ಚಿಮವದನದೊಳುಣ್ಮಿದುದು.
ಮತ್ತಂ, ಸಾವಶ್ಯಪ್ರಣವವೆಂತೆನೆ-
ಅಕಾರಂ ಸ್ವರಪಂಚಮಾಂತ ಸಂಜ್ಞಿತವಾ ಉಕಾರಂ.
ಪವರ್ಗಾಂತರವಾದ ಮಕಾರಂ ತತ್ವಬೀಜಸಂಜ್ಞಿತವಾದ
ಹಕಾರಂ,
ಏಕಾದಶಕಲಾ ಸಂಜ್ಞಿತವಾದ ಎಕಾರಂ,
ಇಂತು ಆ ಉ ಹ ಎ ಯೇಂಬೀಯೈದಕ್ಕರಂಗೂಡಿದ
ಸಾವಶ್ಯಪ್ರಣವಂ,
ಸದಾಶಿವನ ಸೌಮ್ಮಮುಖದೊಳಾವಿರ್ಭಾವವಾಯಿತ್ತು.
ಮತ್ತಂ, ಸಾಯಜ್ಯಪ್ರಣವವೆಂತೆನೆ-
ಆದಿಪ್ರಕೃತಿಸಂಜ್ಞಿತಮಾದ ಆಕಾರಂ
ಸ್ವರಪಂಚಮಾಂತಮಾದ ಉಕಾರಂ
ಷಡ್ವರ್ಗಾಂತವಾದ ಮಕಾರಂ
ಗುಹ್ಯಸಂಜ್ಞಿತವಾದ ಹಕಾರಂ
ಚತುರ್ದಶಕಲಾಸಂಜ್ಞಿತವಾದ ಔಕಾರಂ.
ಇಂತು ಆ ಉ ಮ ಹ ಔ ಯೆಂಬೀಯೈದಕ್ಕರಂಗೂಡಿದ
ಸಾಯುಜ್ಯಪ್ರಣವವವೆ,
ಸದಾಶಿವನೂಧ್ರ್ವಮುಖದೊಳುದಿಸಿತ್ತೀ
ಈ ತೆರದಿಂ ಪಂಚಪ್ರಣವಂಗಳಕ್ಕರಂಗಳ್ಸಂಖ್ಯಾಯುಕ್ತಂಗಳಾಗಿಕರ್ುಮಾ
ಸಕಲಮಾತ್ರಾಂತಸ್ಥಮಾಗಿ ಹ ಎಂಬಕ್ಕರಮೆ ಗಣ್ಯಮಾಗಿರ್ಪುದೆಂದು
ಪಂಚಪ್ರಣವಭೇದಮಂ ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./117
ಮತ್ತಂ,
ಆ ಶಾಂಭವಚಕ್ರಮೆ ಪೀಠ ಕಟ್ಯಾತ್ಮಕ ಸೂರ್ಯಮಂಡಲ,
ವತರ್ುಳ ಗೋಮುಖಾತ್ಮಕ ಚಂದ್ರಮಂಡಲ,
ನಾಳಗೋಳಕಾತ್ಮಕ ಪಾವಕಮಂಡಲಂಗಳೆಂದು ತ್ರಿಸ್ಥಾನಂಗಳ್.
ಅವರಲ್ಲಿ ಪೂರ್ವೊಕ್ತ ಸಂಬಂಧಿತ ಸಕೀಲ ನಿಕರ ಸಮನ್ವಿತ
ಷಟ್ಸ್ಥಲಾತ್ಮಕವಾದ ಸೋಹಮೆಂಬಾತ್ಮಪ್ರಸಾದ.
ಮನುವಿನ ವ್ಯಂಜನ ಸ್ ಹ್ ಎಂಬಕ್ಷರದ್ವಯಮಂ
ಕುಂಭಕದೊಳ್ಳೋಪಿಸಲುಳಿಜಾಮೆಂಬೇಕಾಕ್ಷರಮಯವಾದ
ಮಹಾಲಿಂಗವೆನಿಸಿತ್ತಾ ಮಹಾಲಿಂಗವೆ ಮಹಾಚಕ್ರವೆನಿಸಿತ್ತಾ
ಮಹಾಚಕ್ರವೆ ಸಹಸ್ರಕಮಲವೆನಿಸಿತ್ತೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./118
ಮತ್ತಂ,
ತರದಿಂ ವ್ಯೋಮವರ್ಣಂ ಪೀತವರ್ಣಂ
ಶ್ಯಾಮವರ್ಣಂ ರಕ್ತವರ್ಣಂ ಕೃಷ್ಣವರ್ಣಂ ಮರಕತವರ್ಣಮೆಂಬೀ
ಷಡ್ವಿಧವರ್ಣವೆ ಶಕ್ತ್ಯಂಗವರ್ಣವೆಂದು ತಿಳಿಪಿದೆಯಯ್ಯಾ,
ಪರಶಿವಲಿಂಗಯ್ಯ./119
ಮತ್ತಂ,
ಪ್ರಥಮಮದಗ್ನಿಮಂಡಲದಷ್ಟದಳಂಗಳಲ್ಲಿ
ಪೂರ್ವಾದಿಯೊಳ್ ಪರಿವಿಡಿದು ನ್ಯಾಸಮಾದ
ವಾಮೇ ಜೇಷ್ಠೇ ರೌದ್ರೀ ಕಾಳೀ ಬಲೇ ಬಲೇಪ್ರಥನೀ
ಸರ್ವಭೂತದಮನಿ ಮನೋನ್ಮನಿಯರೆಂಬಷ್ಟಶಕ್ತಿಯರಂ
ಆರ್ಚಿಪುದೆಂದೆಯಯ್ಯಾ,
ಪರಮಗುರು ಪರಾತ್ಪರ ಪರಮ ಶಿವಲಿಂಗೇಶ್ವರ./120
ಮತ್ತಂ,
ಮೊದಲಂಗ ಷಟ್ಸ್ಥಲದಲ್ಲಿ ಭಕ್ತಸ್ಥಳವೊಂದೆ
ಪಿಂಡ ಪಿಂಡಜ್ಞಾನ ಸಂಸಾರಹೇಯ
ಗುರುಕರುಣ ಲಿಂಗಧಾರಣ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿ
ಭಕ್ತೋಭಯ ತ್ರಿವಿಧಸಂಪಚ್ಚತುರ್ವಿಧಸಾರಸೋಪಾಧಿ
ನಿರುಪಾಧಿ ಸಹಜದಾನಂಗಳೆಂದು ಪದಿನೈದು ತೆರನಲ್ಲಿ
ನೀನೆ ಆಚಾರಲಿಂಗಮಾಗಿ ನೆಲಸಿರ್ಪೆಯಯ್ಯಾ,
ಚಿದ್ಗಗನಚಂದ್ರ ಚಿರಂತನ ಪ್ರಮಥೇಂದ್ರ
ಚಿತ್ತಜಗಜ ಮೃಗೇಂದ್ರ
ಚಿರಾಯುರ್ದಾಯಿ ಪರಮ ಶಿವಲಿಂಗೇಂದ್ರಾ./121
ಮತ್ತಂ,
ಸಚಿತ್ರ ತಮಂಧಾಕಾರಮಾದ ಪುರುಷತತ್ವದ,
ಮಂಡಲತ್ರಯದ ತತ್ತಮಂಧರುಚಿಯಂತರ್ಗತ ಮಾಣಿಕ್ಯವರ್ಣದ,
ಹಂಸಾಂಕಿತದೆರಡೆಸಳ ನೀರೇಜದ ಕರ್ಣಿಕೆಯ,
ಸೂಕ್ಷ್ಮರಂಧ್ರಗತ ಪ್ರಣವದ ಜ್ಯೋತಿರಾಕೃತಿಯಾದ,
ಗುಹ್ಯ ಪ್ರಣವವೆ[ಮ]ಹಾಲಿಂಗಮದು,
ನಿನ್ನ ಗೋಪ್ಯ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ಪರಿಪೂರ್ಣ ಷಡಂಗಾ./122
ಮತ್ತಂ,
ಸ್ಥಲವೊಂದೆ ತನ್ನ ಶಕ್ತಿಯ ಮಿಸುಕಿನಂಗಸ್ಥಲ
ಲಿಂಗಸ್ಥಲಂಗಳೆಂದೆರಡಾಯ್ತಾ-
ಯಂಗಸ್ಥಲಮೆ ತ್ಯಾಗಾಂಗ ಭೋಗಾಂಗ ಯೋಗಾಂಗಮೆಂದು
ಮೂದೆರನಾಗಲೊಡನಾ
ಲಿಂಗಸ್ಥಲಮೆ ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗಮೆಂದು
ಮೂದೆರನಾಗಲೊಡನಾ
ಅಂಗ ಲಿಂಗೈಕಮಯಂ ನೀನೆಯಲಾ
ಪರಮ ಶಿವಲಿಂಗ ಪರಂಜ್ಯೋತಿರಂಗ
ಪಾವನ ಕೃಪಾರಸತರಂಗ ಚಿದಂಗಸಂಗಾ./123
ಮತ್ತಂ
ಅಧಃಪಟ್ಟಿಕೆಯೆಂದುಂ ಅಧಃಕಂಜವೆಂದುಂ ಕಂಠವೆಂದುಂ
ಊಧ್ರ್ವಾಬ್ಜವೆಂದುಂ ಊಧ್ರ್ವಪಟ್ಟಿಕೆಯೆಂದುಂ
ಆಜ್ಯಪ್ರದಾರಿಕೆಯೆಂದೀ
ಆರಂ ಶಿವಲಿಂಗದ ಪೀಠದ ನಾಲ್ಕು ಕೋಷ್ಠಂಗಳಾದಿಯಾಗಿ
ಲಿಂಗತನಕಂ ತಿಳಿವುದಂತೆಯೆ
ಗಣಚತುಃಕೋಷ್ಠವಾದಿಯಾಗಿ ಅಧೋಲಿಂಗತನಕಲಿ
ಷಡಂಗ[ಷ]ಟ್ಸಾ ್ಥನಂಗಳಂತರದಿಂದರಿಯಬೇಕೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./124
ಮತ್ತಂ
ತಮ್ಮ ತಮ್ಮ ಹಸ್ತದ ತೊಂಬತ್ತಾರಂಗುಲ ಪ್ರಮಾಣದ ದೇಹದ
ಗುದದಿಂ ಮೇಲೆರಡಂಗುಲ ವೃಷಣದಿಂ ಕೆಳಗೆರಡಂಗುಲ-
ಮುಭಯ ಮಧ್ಯದ ಚತುರಸ್ರದ ಭೂಮಿಯ
ನಡುವಣ ತ್ರಿಕೋಣೆಯಂತರಾಳದ ಮಂಡಲತ್ರಯ ಧರಣಿಯ
ಪೀತವರ್ಣದ ವಾದಿಸಾಂತಯುಕ್ತಮಾದ
ಚೌದಳ ಕಮಲಕರ್ಣಿಕೆಯ
ಸೂಕ್ಷ್ಮರಂಧ್ರಗತ ಪ್ರಣವ ತಾರಕಾಕೃತಿಯ
ನಕಾರಮೆ ಆಚಾರಲಿಂಗಮದು
ನಿನ್ನ ಸದ್ಯೋಜಾತ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ಪಟುತರ ಕೃಪಾರಸ ತರಂಗಾ./125
ಮತ್ತಂ
ದುಗ್ಧ ದಧಿ ಘೃತೇಕ್ಷುರಸ ನಾರಿಕೇಳ
ಸ್ಪಾದೋದಕಂಗಳೆಂಬಿವೆ ಸ್ನಾನಂಗಳು
ಮತ್ತೆಬಳಿಕ್ಕಮೋಂ ಹ್ರಾಂ ನಮಃಶ್ಯಿವಾಯೋಂ
ಹ್ರೀಂ ನಮಶ್ಯಿವಾಯೋಂ
ಹ್ರೂಂ ನಮಶ್ಯಿವಾಯೋಂ ಹ್ರೈಂ ನಮಶ್ಯಿವಾಯೋಂ
ಹ್ರೌಂ ನಮಶ್ಯಿವಾಯೋಂ ಹ್ರಂಃ ನಮಶಿವಾಯಂಗಳೆಂಬೀ
ಮಂತ್ರಂಗಳ್ತ್ವದೀಯ ಮೂರ್ತಿಲಿಂಗಜಪಂಗಳಯ್ಯಾ,
ಪರಮ ಶಿವಲಿಂಗ ಚಿದ್ಗಗನ ಪತಂಗಾ.
ಇತ್ಯಂಗಲಿಂಗ ಸ್ಥಲಮುಕ್ತಂ./126
ಮತ್ತಂ
ಮಹಾಲಿಂಗಮೆ,
ಸ್ವೀಕೃತಪ್ರಸಾದ ಶಿಷ್ಟೋದನ ಚರಾಚರಲಯ
ಭಾಂಡ ಭಾಜನಾಂಗಲೇಪ
ಸ್ವಪರಾಜ್ಞಾನ ಭಾವಾಭಾವವಿನಾಶನ
ಜ್ಞಾನಶೂನ್ಯಂಗಳೆಂಬೀಯೊಂಬತ್ತು
ತ್ವದೀಯ ಪ್ರಭಾವಮಾದುದದಯ್ಯಾ,
ಪರಮಶಿವಲಿಂಗ ಪರಾಪರೋತ್ತುಂಗಾ./127
ಮತ್ತಂ
ಹಸ್ತಮೆನೆ,
ಚಿತ್ತಂ ಬುದ್ಧಿಯಹಂಕಾರಂ ಮನಂ ಜ್ಞಾನಂ ಭಾವಮೆಂಬೀ
ಷಡ್ವಿಧಕರಣ ಕರಂಗಳಿಂ ಪಿಡಿದು
ಪೂರ್ವೊಕ್ತ ಮುಖಲಿಂಗಂಗಳ್ಗಾ ಷಡ್ವಿಧ ಭಕ್ತ[ರ]ರಿಯಲದನಾ
ಲಿಂಗಮುಖದಲ್ಲಿ ನೀನೇ ಉಣ್ಬೆಯಯ್ಯ,
ಪರಮ ಶಿವಲಿಂಗೇಶ್ವರ ಚಿದ್ಗಗನ ಭಾಸ್ಕರ./128
ಮತ್ತಂತರದಿಂ
ಪಂಚಬ್ರಹ್ಮಮೂರ್ತಿ ಧ್ಯಾನದ ನಿರೂಪಣಾನಂತರದಲ್ಲಿ
ಪಿಂಡಸಾದಾಖ್ಯಮಂ ಪೇಳ್ವೆನೆಂತೆನೆ-
ಸದ್ಯೋಜಾತಮುಖವೆ ಮೂರ್ತಿಸಾದಾಖ್ಯ ಪಿಂಡಬ್ರಹ್ಮಂ.
ವಾಮದೇವಮುಖವೆ ಅಮೂರ್ತಿಸಾದಾಖ್ಯ ಪಿಂಡಬ್ರಹ್ಮಂ.
ಅಘೋರಮುಖವೆ ಕತರ್ೃಸಾದಾಖ್ಯ ಪಿಂಡಬ್ರಹ್ಮಂ.
ತತ್ಪುರುಷಮುಖವೆ ಕರ್ಮಸಾದಾಖ್ಯ ಪಿಂಡಬ್ರಹ್ಮಂ.
ಈಶಾನಮುಖವೆ ಶಿವಸಾದಾಖ್ಯ ಪಿಂಡಬ್ರಹ್ಮ-
ಮಿಂತನ್ಯೋನ್ಯ ಭೇದದಿಂ ಪಂಚಮುಖವೆ ಪಂಚಸಾದಾಖ್ಯ
ಪಿಂಡಬ್ರಹ್ಮವೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./129
ಮತ್ತಮಂಗ ಲಿಂಗ ಶಕ್ತಿ ಭಕ್ತಿ ಹಸ್ತ ಮುಖ[ಪದಾರ್ಥ]
ಪ್ರಸಾದಂಗಳಿವಕ್ಕೆ
ವಿವರಮಂ ತರದಿಂದುಸಿರ್ವೆನಂಗಮೆನೆ,
ತ್ವಂ ಪದ ವಾಚ್ಯ ಕಾರಣ ಸೂಕ್ಷ್ಮ ಸ್ಥೂಲಾತ್ಮಕ
ಭಕ್ತ ಮಾಹೇಶ್ವರ ಪ್ರಸಾದ ಪ್ರಾಣಲಿಂಗಿ ಶರಣೈಕ್ಯರ್ಲೆಂಗಮೆನೆ,
ತತ್ವದ ವಾಚ್ಯಮಾದಾಚಾರಲಿಂಗ ಗುರು[ಲಿಂಗ] ಶಿವಲಿಂಗ
ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗಂಗಳ್
ಭಕ್ತಿಯನಲಸಿ ಪದವಾಚ್ಯಮಾದ
ಶ್ರದ್ಧೆ ನಿಷ್ಠೆ ಸಾವಧಾನಮನುಭಾವಮಾನಂದ
ಸಮರಸವಿೂಯುಭಯಂಗೂಡಿ
ಅಂಗ ಲಿಂಗ ಸಮರಸಮಾದುದಯ್ಯಾ,
ಷಡಧ್ವಾತೀತ ಪರಮ ಶಿವಲಿಂಗೇಶ್ವರ,
ಪಟೀರದಳ ಭಾಸ್ಕರ./130
ಮತ್ತಮಂಗ ಹಸ್ತ ಶಕ್ತಿ ಲಿಂಗಮುಖಂಗಳೆಂಬಿವೊಂದೊಂದಾ-
ರಾರಾಗಲೊಡಂ
ಮೂವತ್ತಾರುದೆರದರ್ಪಣಮಾಗಲದೇಂ
ಸ್ವಕೀಯ ಪ್ರಕಾಶಮಯವಯ್ಯಾ,
ಪರಮ ಶಿವಲಿಂಗ ಪ್ರಮಥಾಂತರಂಗಾ./131
ಮತ್ತಮಗ್ನಿಮಂಡಲದಗ್ನಿದಿಕ್ಕಿನೇಕದಳದಲ್ಲಿ ಷಕಾರಮ
ನದರಾಚೆಯ ಚಂದ್ರಮಂಡಲದ
ದಳದ್ವಯದಗ್ನಿದಳದಲ್ಲಿ ಇಕಾರಮ
ನಗ್ನಿಯಮರಪದಿಕ್ಕಿನೊಳಿಕಾರಮುಮ
ನವರಾಚೆಯ ಸೂರ್ಯಮಂಡಲದ
ದಳತ್ರಯದಲ್ಲಿಯಗ್ನಿದಳ-ದೊಳ್ಘಕಾರಮಂ-
ನಗ್ನಿಯಮರಪದೆಶೆಯ ದಳಂಗಳಲ್ಲಿ ಔಕಾರ ಚಕಾರಂಗಳಂ
ನ್ಯಾಸೀಕರಿಸಿ ಭಾವಿಪುದೆಂದೆಯಯ್ಯಾ,
ಪರಮ ಶಿವಲಿಂಗ ಪರ್ವತಾತ್ಮಭವೋತ್ಸಂಗ./132
ಮತ್ತಮಗ್ನಿಯ ಮೂಲೆಯ ನಡುವಣ ಮಂಡಲತ್ರಯದ,
ತದಗ್ನಿಯ ರಕ್ತವರ್ಣದ, ದಾಡಿಘಾಂತ ಸಹಿತ
ದಶದಳದಂಬುಜದ ಕರ್ಣಿಕೆಯ, ಸೂಕ್ಷ್ಮರಂಧ್ರಗತ ಪ್ರಣವದ
ಕುಂಡಲಾಕೃತಿಯಾದ, ಶಿಕಾರಮೆ ಶಿವಲಿಂಗಮದು
ನಿನ್ನಘೋರ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ನಿರಂತರಾಂತರಂಗಾ./133
ಮತ್ತಮಾ ಚೌಕದ ನಡುವೆ,
ಪೂರ್ವಪರ ದಕ್ಷಿಣೋತ್ತರಂಗಳಾಗುತಮಾವಾವ ಕಡೆಗೆಯುಂ,
ಪವಣಿಸಲಾರಾರಂಗುಲಮಾಗೆ,
ಕವೆಯಾರಮನೆರಳ್ಬೆರಲ ಪಾಳತದಿಂ
ತಿರುಪುತ್ತಮದರಾಚೆಯೊಂದೊಂದು ಬೆರಲಂ
ಪೆರ್ಚಿಸಲರುವೆರಲಾಯಿತ್ತೆಂದುಸಿರ್ದೆಯಯ್ಯಾ,
ಪರಮ ಶಿವಲಿಂಗೇಶ್ವರ ಪರಾಪರ ಮುಕ್ತಿಕೋಶ./134
ಮತ್ತಮಾ ಮಹಾಲಿಂಗದಧಃಕಂಜಾಖ್ಯವಾದನಾಹತಚಕ್ರದ
ರುದ್ರಸ್ವರೂಪವೆಂತೆನೆ-
ಕ ಕ್ರೋಢೀಶಂ, ಖ ಚಂಡೇಶಂ,
ಗ ಪಂಚಾಂತಕಂ, ಘ ಶಿವೋತ್ತಮಂ,
ಙ ಏಕರುದ್ರಂ,
[ಚ (?)], ಛ ಏಕನೇತ್ರರುದ್ರಂ,
ಜ ಚತುರಾನನರುದ್ರಂ, ರುು ಅಜೇಶರುದ್ರಂ,
ಞ ಶರ್ವರುದ್ರಂ,
ಟ ಸೋಮೇಶರುದ್ರಂ, ಠ ಲಾಂಗುಲಿರುದ್ರಂ.
ಇಂತೀ ದ್ವಾದಶರುದ್ರರೀ ಮಹಾಲಿಂಗದನಾಹತಚಕ್ರದ
ದ್ವಾದಶಕೋಷ್ಠದಳ ನ್ಯಸ್ತಕಾದಿರಾಂತ
ದ್ವಾದಶ ವಿಕಲಾಕ್ಷರ ವಾಚ್ಯರೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./135
ಮತ್ತಮಾ ಶಕ್ತಿಬೀಜವಾದ ಸಕಾರವೆ ಚತುರ್ಥಸ್ವರದೊಡನೆ ಕೂಡಿ
ನಾದ ಬಿಂದು ಸಂಜ್ಞಿತವಾದ ಸೊನ್ನಯೊಡಗಲಸೆ
ಸೀಂ ಎಂಬ ವರ್ಣವಾದುದೀ ವರ್ಣವೆ
ಎರಡನೆಯ ಶಕ್ತಿಬೀಜವೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗ ಪವಿತ್ರಾಂತರಂಗ./136
ಮತ್ತಮಾ ಶುದ್ಧಪ್ರಸಾದಂ ಪೃಥ್ವೀಲಯಮುದಕದಲ್ಲಿ
ಉದಕದ ಲಯಮಗ್ನಿಯಲ್ಲಿ
ಅಗ್ನಿಯ ಲಯ ವಾಯುವಿನಲ್ಲಿ
ವಾಯು ಲಯಮಾಕಾಶದಲ್ಲಿಯಪ್ಪುದರಿಂದಾಕಾಶಂ
ಸರ್ವಾಶ್ರಯಮುಮಪ್ಪುದದು ಕಾರಣದಿಂ
ಭೂತಾಂತವೆನಿಪುದಿನ್ನು
ಸಮಸ್ತ ವರ್ನಂಗಳಂ ಮುಸುಂಕಿಕೊಂಡು
ಪ್ರಭಾವಾನ್ವಿತದಿಂ ಶಿವಾರ್ನಮೆನಿಕುಂ.
ಮತ್ತಂ
ವಾಙ್ಮನೋತೀತ ಭಾವತ್ವದಿಂ ಶೂನ್ಯವೆನಿಪುದು.
ಬಳಿಕ್ಕಂ, ಜಗತ್ತು ತನ್ನಿಂದುದಿಸಿರ್ದು ಲಯವನೆಯ್ದಿದೊಡಂ
ಸಾಗರತರಂಗನ್ಯಾಯದಿಂ
ಕ್ಷಯಾಭಿವೃದ್ಧಿಗಳ್ತನಗಿಲ್ಲದೆ ಸರ್ವತೋಭದ್ರಮಾಗಿ
ಕೇಡಿಲ್ಲದಿರ್ಪುದರಿಂದವ್ಯಯಮಾದುದಿಂತು
ನಾದ ಗುಹ್ಯ ಪರ ಜೀವ ದೇಹಿ ಭೂತ ಪಂಚಮ
ಸಾಂತ ತತ್ವಾಂತ ಶಿವಾರ್ನ ಶೂನ್ಯ ವ್ಯಯಂಗಳೆಂಬೀ
ತ್ರಯೋದಶವಿಧಾಭಿಧಾನ ಪರ್ಯಾಯವನುಳ್ಳ ಕರ್ಣಿಕಾಬೀಜವಾದ
ಶುದ್ಧಪ್ರಸಾದಮಂ ನಿರವಿಸಿದೆಯಯ್ಯಾ,
ನಿರಂತರ ಪರಮಶಿವಲಿಂಗೇಶ್ವರಾ./137
ಮತ್ತಮಾ, ಪೃಥ್ವ್ಯಾದಿಭೂತಂಗಳಂ ಪೆತ್ತ
ಸದ್ಯಾದಿ ಪಂಚಬ್ರಹ್ಮಮೂರ್ತಿಗಳ
ಲಕ್ಷಣಂಗಳಂ ಬೇರೆ ಬೇರೆ ವಿವರಿಸಿದಪೆನೆಂತೆನೆ-
ಗೋಕ್ಷೀರ ಶಂಖವರ್ಣದಿಂದೆ, ಜಟಾಮಕುಟದಿಂದೆ,
ಚತುರ್ಮುಖದಿಂದೆ, ಚತುರ್ಭುಜದಿಂದೆ,
ದ್ವಾದಶನೇತ್ರದಿಂದೆ, ಸರ್ವಾಭರಣಂಗಳಿಂದೆ,
ಸದ್ಯೋಜಾತಬ್ರಹ್ಮ ವಿರಾಜಿಕುಂ.
ಜಪಾಕುಸುಮವರ್ಣದಿಂದೆ, ಜಟಾಮಕುಟದಿಂದೆ,
ಚತುರ್ಮುಖದಿಂದೆ, ಚತುರ್ಭುಜದಿಂದೆ,
ದ್ವಾದಶನೇತ್ರದಿಂದೆ, ಸರ್ವಾವಯ ಸಂಪತ್ತಿಯಿಂದೆ,
ರಕ್ತವಸ್ತ್ರದಿಂದೆ, ರಕ್ತ[ವ]ಸ್ರೋತ್ತರೀಯದಿಂದೆ,,
ದಕ್ಷಿಣಭುಜದ್ವಯ ವಿಲಸಿತಾಭಯ ಟಂಕಂಗಳಿಂದೆ,
ವಾಮಭುಜದ್ವಯ ವಿಲಸಿತ ವರಶೂಲಂಗಳಿಂದೆ,
ರಕ್ತಗಂಧಾನುಲೇಪದಿಂದೆ, ರಕ್ತಮಾಲ್ಯಂಗಳಿಂದೆ
ಸರ್ವಲಕ್ಷಣದಿಂದೆ, ಸರ್ವಾಭರಣದಿಂದೆ,
ಸರ್ವವಶ್ಯಕರಮಾದ ವಾಮದೇವಬ್ರಹ್ಮಂ ವಿರಾಜಿಕುಂ.
ಪುಡಿಗರ್ಪಿನ ಕಾಂತಿಯಿಂದೀ, ಚತುರ್ಮುಖದಿಂ, ಚತುರ್ಭುಜದಿಂ,
ರೌದ್ರರೂಪದಿಂ, ಜಟಾಮಕುಟದಿಂ, ದ್ವಾದಶನೇತ್ರದಿಂ,
ದುಷ್ಟ್ರ ಕರಾಳವದನದಿಂ, ವ್ಯಾಘ್ರಚರ್ಮಾಂಬರದಿಂ,
ವ್ಯಾಘ್ರಚಮರ್ೊತ್ತರೀಯದೀ, ನೂಪುರಾಂಚಿತ ಚರಣದಿಂ,
ಸರ್ವಾಭರಣದಿಂ, ದಿವ್ಯಗಂಧಮಾಲ್ಯಾದಿಗಳಿಂ,
ಟಂಕ ಶೂಲ ವರದಭಯಂಗಳಿಂ, ಸರ್ವಾವಯವ ಸಂಯುಕ್ತದಿಂ,
ಸರ್ವಲಕ್ಷಣ ಸಂಪತ್ತಿಯಿಂ ಕೂಡಿ
ಸರ್ವ ಶತ್ರು ಜಯಕರವಾದಘೋರಬ್ರಹ್ಮಂ ವಿರಾಜಿಕುಂ.
ಕುಂಕುಮವರ್ಣ ಚತುರ್ಮುಖದಿಂ,
ಚತುರ್ಭುಜದಿಂ, ಜಟಾಮಕುಟದಿಂ,
ದ್ವಾದಶನೇತ್ರದಿಂ, ಸರ್ವಾವಯವ ಸಂಯುಕ್ತದಿಂ,
ಪೀತಾಂಬರದಿಂ, ಪೀತವಸ್ತ್ರೋತ್ತರೀಯದಿಂ,
ಸರ್ವಾಭರಣದಿಂ, ಟಂಕಾಭಯಯುತ ವಾಮಕರಂಗಳಿಂ,
ಶೂಲಭಯಾನ್ವಿತ ದಕ್ಷಿಣಹಸ್ತಂಗಳಿಂ,
ದಿವ್ಯಗಂಧಾನುಲಿಪ್ತಾಂಗದಿಂ, ದಿವ್ಯಕುಸುಮಂಗಳಿಂ
ಸರ್ವ ಸಿದ್ಧಿಪ್ರದವಾದ ತತ್ಪುರುಷಬ್ರಹ್ಮಂ ವಿರಾಜಿಕುಂ.
ಸ್ಫಟಿಕವರ್ಣದಿಂ, ಜಟಾಮಕುಟದಿಂ,
ಚತುರ್ಮುಖದಿಂ, ದ್ವಾದಶನೇತ್ರದಿಂ, ಚತುರ್ಭುಜದಿಂ,
ಸರ್ವಲಕ್ಷಣದಿಂ, ಶುಕ್ಲಾಂಬರದಿಂ, ಶುಕ್ಲವಸ್ತ್ರೋತ್ತರೀಯದಿಂ,
ಟಂಕಾಭಯ ಶೂಲವರಾನ್ವಿತ ಕರಚತುಷ್ಪಯದಿಂ,
ಸರ್ವಾವಯವ ಸಂಯುತದಿಂ, ಸರ್ವಾಭರಣದಿಂ,
ದಿವ್ಯ ಗಂಧ ಮಾಲ್ಯಾದಿಗಳಿಂ ಕೂಡಿ
ಸದ್ಯೋಮುಕ್ತಿಪ್ರದಮಾದೀಶಾನಬ್ರಹ್ಮಂ ವಿರಾಜಿಕುಂ.
ಇಂತು, ಪಂಚಬ್ರಹ್ಮಾತ್ಮಕಮಾದುದೆ ಸದಾಶಿವತತ್ವವೆಂದು
ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./138
ಮತ್ತಮಾ, ಮಹಾಲಿಂಗದ ಶಿವಷಟ್ಸಾ ್ಥನದಲ್ಲಿ-
ಯಾಧಾರಾದಿ ಸ್ಥಾನಂಗಳಲ್ಲಿ ಷಡ್ವಿಧಚಕ್ರಂಗಳಂ ಪೇಳ್ವೆನೆಂತೆನೆ-
ಅ ಶಿವಲಿಂಗದಧಃಪಟ್ಟಿಕೆಯೆ ಆಧಾರಚಕ್ರಮದರ
ಚತುಃಕೋಷ್ಠಂಗಳೆ ಚತುರ್ದಳಂಗಳವರಲ್ಲಿ
ವ ಶ ಷ ಸ ಎಂಬ ನಾಲ್ಕಕ್ಕರಂಗಳ್ ನ್ಯಸ್ತಮಾಗಿರ್ಪುದೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./139
ಮತ್ತಮಾ, ಮೂವತ್ತಾರಂಗಗಳೆಂತೆನೆ-
ಹೃದಯಾಂಗಂ ಶುಕ್ಲವರ್ಣಂ.
ಶಿರದೊಳಗಂ ಪೀತವರ್ಣಂ.
ಶಿಖಾಂಗಂ ರಕ್ತವರ್ಣಂ.
ಕವಚಾಂಗಂ ಸ್ಫಟಿಕವರ್ಣಂ.
ನೇತ್ರಾಂಗಂ ಶ್ಯಾಮವರ್ಣಂ.
ಅಸ್ತ್ರಾಂಗಂ ಕೃಷ್ಣವರ್ಣಂ
ಇಂತು ಶಿವಾಂಗದ ವರ್ಣಮಂ ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./140
ಮತ್ತಮಾ, ಸದ್ಯಾದಿಗಳಿಂದೊಗೆದ ಪೃಥ್ವಾ ್ಯದಿ ಪಂಚಭೂತಂಗಳ
ವರ್ಣಂಗಳಂ ಪೇಳ್ವೆನೆಂತೆನೆ-
ಪೃಥ್ವಿ ಪಳದಿ, ಅಪ್ಪು ಬಿಳ್ಪುವಗ್ನಿ ಕೆಂಪು, ವಾಯು ಕರ್ಪೂವಾಕಾಶ ಪೊಗೆ
ಯೀತೆರದಿಂ ಪಂಚಭೂತಾಕಾರಂಗಳಾದವೆಂದು
ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./141
ಮತ್ತಮಾ, ಸಹಸ್ರಕಮಲದ ವಿಭಾಗೆಯಂ
ಋಗ್ವೇದದಲ್ಲಿ ತೋರ್ದಪೆನೆಂತೆನೆ-
`ಆಪ್ಮಾನಂ ತೀರ್ಥಂ ಕ ಇಹ ಪ್ರಾಚಥ್ಯೇನಪಥಾ ಪ್ರಪಿಬಂತಿಸುತಸ್ಯ
ವದ್ಯಾವಾಪೃಥುವೀ ತಾವದಿತ್ತತ್
ಸಹಸ್ರಥಾ ಪಂಚದಶಾನ್ಯುಕ್ಥೌ ಯಾ-
ಸಹಸ್ರಥಾ ಮಹಿಮಾನಃ ಸಹಸ್ರಃ ಯಾವದ್ಬ ್ರಹ್ಮಾಧಿಷ್ಠಿತಂ
ತಾವತೀ ವಾಕ್’
ಟೀಕೆ||
ಸಹಸ್ರಥಾ- ಸಾವಿರ ಪ್ರಕಾರವಾದ
ಮಹಿಮಾನಃ- ಮಹಿಮರೂಪರಾದ ಚಿದಾನಂದಾತ್ಮರುಗಳು
ಬ್ರಹ್ಮಾಧಿಷ್ಠಿತಂ- `ಬ್ರಹ್ಮಾತ್ಮನಾಂ ಬ್ರಹ್ಮಮಹದ್ಯೋನಿರಹಂ
ಬೀಜಪ್ರದಃ ಪಿತಾ’ ಎಂದುಂಟಾಗಿ,
ಬ್ರಹ್ಮವೆಂದು ಪ್ರಕೃತಿ- ಆ ಪ್ರಕೃತಿಯಿಂದೆ
ಅಧಿಷ್ಠಿತಂ- ಅಧಿಷ್ಠಿಸಲ್ಪಟ್ಟುದಾಗಿ
ಸಹಸ್ರಃ- ಸಾವಿರಗಣನೆಯನುಳ್ಳುದಾಗಿ
ಇತ್- ಲಯಾಧಿಷ್ಠಾನ ರೂಪವಾದ
ತತ್- ಆ ಬ್ರಹ್ಮವು, ಯಾವತ್- ಎಷ್ಟು ಪ್ರಮಾಣವುಳ್ಳುದು
ತಾವತ್- ಅಷ್ಟು ಪ್ರಮಾಣವಾಗಿ
ಆಪ್ಮಾನಂ- ಪಾದೋದಕರೂಪವಾದ, ತೀರ್ಥಂ- ತೀರ್ಥವನು
ಯೇನ ಪಥಾ- ಆವಮಾರ್ಗದಿಂದೆ, ಸು- ಚೆನ್ನಾಗಿ
ಪ್ರ ಪಿಬಂತಿ- ಪಾನವ ಮಾಡುವರು
ತಸ್ಯ- ಆ ಮಾರ್ಗದ, ಉಕ್ಥಾ- ನಿಲುಕಡೆಯಾದ
ವಾಕ್- ಶಬ್ದಬ್ರಹ್ಮವು
ಸಹಸ್ರಥಾ- ಸಾವಿರ ಪ್ರಕಾರವುಳ್ಳದಾಗಿ
ದ್ಯಾವಾ ಪೃಥಿವೀ- ದ್ಯಾವಾಪೃಥುಗಳ ವ್ಯಾಪಿಸಿಕೊಂಡುದಾಗಿ
ಪಂಚ ದಶಾನಿ- ಐವತ್ತು ವರ್ಣಂಗಳಾಕಾರವುಳ್ಳುದಾಗಿ
ತಾವತಿ- ಅಷ್ಟಾಗಿಹುದೆಂದು, ಕಃ- ಚತುರ್ಮುಖದ ಬ್ರಹ್ಮನು
ಇಹ- ಈರ್ಣಾಧ್ರ್ವದಲ್ಲಿ
ಪ್ರಾವೋಚತ್- ನುಡಿದನೆಂದು-
ನಿರವಿಸಿದೆಯಯ್ಯಾ ಪರಶಿವಲಿಂಗಯ್ಯ./142
ಮತ್ತಮಾ
ಇಷ್ಟಲಿಂಗಮೆ, ಆಚಾರಲಿಂಗ ಗುರುಲಿಂಗಮೆಂದೆರಳ್ತೆರನಾ
ಪ್ರಾಣಲಿಂಗಮೆ, ಶಿವಲಿಂಗ ಜಂಗಮಲಿಂಗಮೆಂದೆರಳ್ತೆರನಾ
ಭಾವಲಿಂಗಮೆ, ಪ್ರಸಾದಲಿಂಗ ಮಹಾಲಿಂಗಮೆಂದೆರಳ್ತೆರನೀ
ಮೂರೊಂದುಗೂಡಲೆಂದಿನಂತದ್ವೆ ತರೂಪ ನೀನೇ ಅಯ್ಯಾ,
ಪರಮ ಶಿವಲಿಂಗ ಪ್ರಕಟಿತ ಭಕ್ತ ಸುಖಾನುಸಂಗಾ./143
ಮತ್ತಮಾ
ಮಾಹೇಶ್ವರಸ್ಥಲಮೆ,
ಮಾಹೇಶ್ವರ ಲಿಂಗನಿಷ್ಠಾ ಪೂರ್ವಾಶ್ರಯನಿರಸನ
ವಾಗದ್ವೈತನಿರಸನಾಹ್ವಾನನಿರಸನ
ಅಷ್ಟ[ತನು]ಮೂರ್ತಿನಿರಸನ ಸರ್ವಗತನಿರಸನ
ಶಿವಜಗನ್ಮಯ ಭಕ್ತದೇಹಿಕಲಿಂಗಂಗಳೆಂದೊಂಬತ್ತಯ್ಯಾ
ಸ್ಥಲಮೆ ಭವದೀಯಾಂಗಮಯ್ಯ,
ಭಕ್ತವತ್ಸಲ ಭವಾನೀವಲ್ಲಭ
ಪರಮ ಶಿವಲಿಂಗೇಶ್ವರಾ./144
ಮತ್ತಮಾಯಂಗಸ್ಥಲತ್ರಯದಲ್ಲೀ ತರದಿಂ
ತ್ಯಾಗಾಂಗಮೆ ಭಕ್ತ ಮಾಹೇಶ್ವರರೆಂದೆರಳ್ತೆರಂ.
ಭೋಗಾಂಗಮೆ ಪ್ರಸಾದಿ ಪ್ರಾಣಲಿಂಗಿಯೆಂದೆರಳ್ತೆರಂ.
ಯೋಗಾಂಗಮೆ ಶರಣೈಕ್ಯರೆಂದೆರಳ್ತೆರಂ.
ಇವಂ ಲೆಕ್ಕಿಸಲಾರೊಡಲಾಯ್ತದೆ ತದೀಯ ಮೂರ್ತಿಯಯ್ಯಾ,
ಪರಮ ಶಿವಲಿಂಗ ಪರಾಪರೋತ್ತುಂಗ
ಪಯೋಧಿವರ ನಿಷಂಗಾ./145
ಮತ್ತಮಾಯಗ್ನಿಂದು ಸೂರ್ಯ ಸಂಜ್ಞಿಕ
ಮಂಡಲತ್ರಯದ ದಳಂಗಳಲ್ಲಿ,
ತರದಿಂ ಪ್ರದಕ್ಷಿಣದಿಂ ಮೂಡಂತೊಡಗಿಯಗ್ನಿ
ಮಂಡಲದ ಪೂರ್ವದಳದಲ್ಲಿ,
ಬಿಂದುಸಂಜ್ಞಿಕವಾದ ಸಕಾರಮನದರಾಚೆಯ
ಚಂದ್ರಮಂಡಲದ ಪೂರ್ವದಳದಲ್ಲಿ
ತತ್ವಬೀಜಸಂಜ್ಞಿಕವಾದಕಾರಮಂ
ಮೂರ್ತಿಬೀಜ ಸಂಜ್ಞಿಕಮಾದಾಕಾರಮುಮನಿಂದ್ರಾಗ್ನಿಗಳಪ
ದಿಕ್ಕಿನೊಳ್ಬರೆವುದು.
ಸೂರ್ಯಮಂಡಲದ ಪೂರ್ವದಳದೊಳುಮಾ ಇಂದ್ರಾಗ್ನಿಗಳಪದಿಕ್ಕಿನ
ದಳಂಗಳಲ್ಲಿಯುಂ,
ಭಾವಸಂಜ್ಞಿಕಂಗಳಾದ ಕಕಾರಂ ಖಕಾರಂ ಗಕಾರಂಗಳಂ
ಪರಿವಿಡಿಯಿಂ ನ್ಯಾಸಮಂ ಮಾಡಿ ಭಾವಿಪುದೆಂದೆಯಯ್ಯಾ,
ತ್ರಿಪುರಾಪಹಾರ ಪರಮ ಶಿವಲಿಂಗೇಶ್ವರ./146
ಮತ್ತಮಿಂತು ಮಂತ್ರಭೇದ ನಿರೂಪಣಾನಂತರದಲ್ಲಿ
ಪ್ರಣವಭೇದಮಂ ಪೇಳ್ವೆನೆಂತೆನೆ-
ಯಾ ಪ್ರಣವಂ ಶಿವಾಕ್ಷರಂ ನಡುವೆಯುಳ್ಳುದರಿಂ
ತನ್ನಂಗರ್ತವಾದ ಸಮಸ್ತಾಕ್ಷರಂಗಳಂಸಕಲದೇವತಾ ಸ್ವರೂಪಂಗಳಾ-
ದೇವತಾಸ್ವರೂಪಂಗಳೆಲ್ಲಂ ತನ್ನ ಸ್ವರೂಪಂಗಳಾ
ದೇವತಾಮಂತ್ರಂಗಳ್ಗೆ ತಾನೆ ಪ್ರಾಣಮಾ
ಪ್ರಾಣಮೆನಿಸಿ `ಸದಾಶಿವೋ’ಮೆಂಬ ಶ್ರುತಿಪ್ರಮಾಣದಿಂದಾ
ಪ್ರಣವವೆ ಪರಿಪೂರ್ಣ ಪರಂಜ್ಯೋತಿಯೆಂದು
ಬೋಧಿಸಿದೆಯಯ್ಯಾ, ಪರಶಿವಲಿಂಗಯ್ಯಾ./147
ಮತ್ತಮಿಲ್ಲಿ ಕಕಾರಾದಿ ಕ್ಷಕಾರಾಂತವಾದ ಮೂವತ್ತೈದಕ್ಕರಂಗಳಲ್ಲಿ
ಪ್ರತ್ಯೇಕವಾಗಿ ಒಂದೊಂದಕ್ಕೆ ಪದಿನಾರು ಸ್ವರಾಕ್ಷರಂಗಳಂ
ಕೂಡಲಾಗಿವೈನೂರರುವತ್ತಕ್ಷರಂಗಳಾದವು.
`ಕ್ಷಿತೌ ಷಟ್ಟಂಚಾಶತ್’ ಎಂದು
ಪೃಥ್ವೀತತ್ವದಲ್ಲಿ ಐ [ವತ್ತಾ] ರಕ್ಕರವು,
`ದ್ವಿಚತುರಧಿಕ ಪಂಚಾಶದುದಕೇ’ಯೆಂದು
ಆಪ್ತತ್ವದಲ್ಲಿ ಐವತ್ತೆರಡು,
`ಹುತಾಶೆ ದ್ವಾಷಷ್ಠಿ’ಯೆಂದು, ಅಗ್ನಿತತ್ವದಲ್ಲಿ ಅರುವತ್ತೆರಡು,
`ಚತುರಧಿಕ ಪಂಚಾಶದನಿಲೇ’ಯೆಂದು
ವಾಯುತತ್ವದಲ್ಲಿ ಐವತ್ತನಾಲ್ಕು,
`ದಿವಿ ದ್ವಿಷಟ್ತ್ರಿಂಶತ್’ ಎಂದು ಆಕಾಶತತ್ವದಲ್ಲಿ ಎಪ್ಪತ್ತೆರಡು,
`ಮನಸಿ ಚತುಷ್ಪಷ್ಠಿ’ ಎಂದು ಮನಸ್ತತ್ವದಲ್ಲಿ ಅರುವತ್ತನಾಲ್ಕು,
ಅಂತು ಮುನ್ನೂರರುವತ್ತು
ಚೌಷಷ್ಠಿಕಲಾತತ್ವವ [ರುವ] ತ್ತನಾಲ್ಕು,
ಕ ಎ ಇ ಲ ಹ್ರೀಂ ಹ ಸ ಕ ಹ ಲ ಹ್ರೀಂ ಸ ಕ ಲ ಹ್ರೀ ಶ್ರೀ
ಯೆಂದು ಪದಿನಾರು,
ಅಂತು ಬ್ರಹ್ಮರಂಧ್ರದ ಸಹಸ್ರದಳದಲ್ಲಿ ಸಹಸ್ರಾಕ್ಷರವೆಂದು
ತಿಳಿಪಿದೆಯಯ್ಯಾ, ಪರಶಿವಲಿಂಗಯ್ಯ./148
ಮತ್ತಮೀ ಮಂತ್ರಜಾತಮೆಂತೆನೆ-
ಆದಿವಾಲವೊಂದು, ಸವಾಲವೆರಡು,
ಕೌಮಾರಂ ಮೂರು, ಯೌವನಂ ನಾಲ್ಕು,
ಬ್ರಹ್ಮಣನೈದು, ಕ್ಷತ್ರಿಯನಾರು,
ವೈಶ್ಯನೇಳು, ಶೂದ್ರನೆಂಟು,
ಸ್ತ್ರೀಯೊಂಬತ್ತು, ಪುರುಷಂ ಪತ್ತು,
ನಪುಂಸಕಂ ಪನ್ನೊಂದು, ಮಂತ್ರಜಾತಂ ಪನ್ನೆರಡು,
ಶುದ್ಧಂ ಪದಿಮೂರು, ಮಿಶ್ರಂ ಪದಿನಾಲ್ಕು,
ಸಂಕೀರ್ನಂ ಪದಿನೈದು, ಮಂತ್ರರೂಪಂ ಪದಿನಾರು,
ಪ್ರಕೃತಿ ಪದಿನೇಳು, ವಿಕೃತಿ ಪದಿನೆಂಟು-
ವಿವೆಲ್ಲಕ್ಕುವಾದಿಯಾದ ಪೂರ್ಣ ಚಿದ್ಗುಹ್ಯ ಪತ್ತೊಂಬತ್ತಿಂತೀ
ಪತ್ತೊಂಬತ್ತರಿಂ ಮಂತ್ರನಿರ್ಣಯಮೆಂದು ನಿರವಿಸಿದೆಯ್ಯಾ,
ಪರಶಿವಲಿಂಗಯ್ಯ./149
ಮತ್ತಮೀ ಮಹಾವಾಕ್ಯಾರ್ಥಕ್ಕೆ ವೇದದೊಳ್ ಶಿವ ಜೀವೈಕ್ಯಮೆಂದು
ತದನುಸಾರಾಗಮದೊಳ್ ಶಿವ ಶಿವ ಶಕ್ತೈಕ್ಯಮೆಂದು-
ಮುಳಿದೆಡೆಯೊಳಾ ಪುರುಷ ಪ್ರಕೃತೈಕ್ಯಮೆಂದು
ಪರ್ಯಾಯಮಾಗಿರಲದೆಲ್ಲಮುಂ
ನೀನಲ್ಲದನ್ಯಥ ಭಾವಮಿಲ್ಲವಯ್ಯಾ,
ಪರಮ ಶಿವಲಿಂಗೇಶ್ವರ,
ಭಾಸ್ವರ ಕಲ್ಯಾಣ ಗುಣೋತ್ಕರಾ./150
ಮತ್ತಮೀ ಮೂಲಪ್ರಸಾದಮಂತ್ರವೆ,
ವೈದಿಕ ತಾಂತ್ರಿಕವೆಂದೆರಳ್ತೆರ
ಮಿದರೊಳ್ಮೊದಲುಕ್ತಮಾದುದೆ ವೈದಿಕಮಂತ್ರ
ಮೆರಡನೆಯದೆ ತಾಂತ್ರಿಕವದೆಂತೆನೆ
ಸಾಂತಮಗ್ನಿಸಂಜ್ಞಿತ ಷಷ್ಟಮನುಳಿದು ಸದ್ಯೋಜಾತ ಸಂಜ್ಞಿತವಾದ
ಸ್ವರತ್ರಯೋದಶಾಂತದೊಡನೆ ಕೂಡಿ
ಮೊದಲಂತೆ ಬಿಂದುವೆರಸಿ ಹೌಮೆಂದಾಯಿತ್ತೆಂದು
ನಿರೂಪಿಸಿದೆಯಯ್ಯಾ,
ಪರಶಿವಲಿಂಗ ಪ್ರಚುರವಿಮರ್ಶನಾಂಗ./151
ಮತ್ತಮೀ ಷಡಂಗಕೈಶ್ವರ್ಯ ಸಮಗ್ರ ವೀರ್ಯಶ್ರೀ
ಯಶೋಜ್ಞಾನ ವೈರಾಗ್ಯಂಗಳೆ
ಭಗ ಶಬ್ದವಾಚ್ಯಮಾದ ಷಡ್ಗುಣಂಗಳ್ತರದಿಂದೀ
ಷಡಂಗಗುಣಂಗಳಯ್ಯಾ,
ಭಗವಚ್ಛಬ್ದ ವಾಚ್ಯ ಭಕ್ತಜನ ಸೂಚ್ಯ
ಪರಮ ಶಿವಲಿಂಗ ಪರಿಹೃತ ಷಡ್ಭಂಗ./152
ಮತ್ತಮೀ ಷಡಂಗಮಂತ್ರಗಳೆ
ಬೇರೆ ಬೇರೆಯೊಂದೊಂದರೊಳಾರಾರು
ತೆರನುಂಟುವಾವಾವವೆನೆ ಪೇಳ್ವೆಂ-
ಹ್ರಾಂ ಎಂಬುದು ಹೃದಯಮಂತ್ರಂ.
ಹ್ರೀಂ ಎಂಬುದು ಶಿರೋಮಂತ್ರಂ.
ಹ್ರೂಂ ಎಂಬುದು ಶಿಖಾಮಂತ್ರಂ.
ಹ್ರೈಂ ಎಂಬುದು ಕವಚಮಂತ್ರಂ.
ಹ್ರೌಂ ಎಂಬುದು ನೇತ್ರಮಂತ್ರಂ.
ಹ್ರಃ ಎಂಬುದಸ್ತ್ರಮಂತ್ರಂ.
ಇವಾರುಂ ಶಿವಾಂಗ ಮಂತ್ರಂ.
ಹೃದಯಾದ್ಯಸ್ತ್ರಾಂತಮಾದ ಷಡಂಗಮಂತ್ರಗಳ
ಚತುಥರ್ಾಂತಮಾಗಿಯುಂ ನಮಸ್ಕಾರಾದಿ
ಷಟ್ಟಲ್ಲವುಚ್ಚರಿಪಂದವೆಂತೆನೆ
ನಮಃ ಸ್ವಾಹಾ ವಷಟ್ ಹುಂ ವೌಷಟ್ ಫಟ್
ಎಂಬಿವು ಹುಟ್ಟಿಲ್ಲವಂಗಳ್.
ಇವರುದಾಹರಣಂ ಓಂ ಹ ಹ್ರಾಂ ಹೃದಯಾಯ ನಮಃ
ಓಂ ಹ್ರೀಂ ಶಿರಸೇ ಸ್ವಾಹಾ, ಓಂ ಹ್ರೊಂ ಶಿಖಾಯೈ ವಷಟ್
ಓಂ ಹ್ರೈಂ ಕವಚಾಯ ಹುಂ, ಓಂ ಹ್ರೌಂ ನೇತ್ರತ್ರಯಾಯ ವೌಷಟ್
ಓಂ ಹ್ರಃ ಅಸ್ತ್ರಾಯ ಫಟ್
ಎಂಬ ಷಟ್ಪಲ್ಲವಂಗೂಡಿದುದೇ ಶಿವಾಂಗಮಂತ್ರವೆಂದು
ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./153
ಮತ್ತಮೀ ಷೋಡಶ ಸ್ವರಮೂರ್ತಿ ವಿವರಮೆಂ[ತೆ]ನೆ-
ಅ ಶ್ರೀಕಂಠಂ, ಆ ಅನಂತಂ,[ಇ] ಸೂಕ್ಷ್ಮಂ, ಈ ತ್ರಿಮೂರ್ತಿ,
ಉ ಅಮರೇಶ್ವರಂ, ಊ ದಿಘರ್ೆಶಂ,
ಋ ಭಾರಭೂತಿ, ೂ ಅತಿದೇಶಂ
ಒ ಸ್ಥಾಣುಕಂ, ಓ ಧರಂ, ಏ ಝಂಡೇಶ, ಐ ಜಾತಕ.
ಓ ಸದ್ಯೋಜಾತಂ, ಔ ಅನುಗ್ರಹೇಶ್ವರಂ,
ಅಂ ಅಕ್ರೂರಂ, ಅಃ ಮಹಾಸೇನಂ.
ಇಂತೀ ಮಹಾಲಿಂಗದೂಧ್ರ್ವಪಟ್ಟಿಕಾಖ್ಯ
ವಿಶುದ್ಧಿ ಚಕ್ರಕೋಷ್ಠದಳ ನ್ಯಸ್ತ
ಷೋಡಶಸ್ವರ ವಾಚ್ಯರಾದ ರುದ್ರರಿವರೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./154
ಮತ್ತಮೀ, ಪತ್ತೊಂಬತ್ತಕ್ಕೆ ತರದಿಂದೊಂದಕ್ಕೆ
ವಿಭಾಗೆಯಂ ಪೇಳ್ವೆನೆಂತೆನೆ-
ಅಕಾರಾನ್ವಿತವಾದ ಶುದ್ಧ ಮಂತ್ರವೆ ಆದಿವಾಲವೆನಿಕು-
ಮಷ್ಟಬೀಜಾನ್ವಿತ ಮಂತ್ರವೆ ಸವಾಲವೆನಿಕುಂ.
ಪಂಚಸ್ವರಾನ್ವಿತ ಮಂತ್ರವೆ ಕೌಮಾರವೆನಿಕುಂ.
ಸರ್ವದೇವತಾ ಮಂತ್ರಜಾತವೆ ಯೌವನಮೆನಿಕುಂ.
ಶಿವಾಕ್ಷರವೆ ಬ್ರಹ್ಮಣನೆನಿಕುಂ.
ಪಂಚಾಕ್ಷರವೆ ಕ್ಷತ್ರಿಯನೆನಿಕುಂ.
ಷಡಕ್ಷರವೆ ವೈಶ್ಯನೆನಿಕುಂ.
ಮತ್ತೆಯುಮದೆ ಶೂದ್ರನೆನಿಕುಂ.
ಸ್ವಾಹಾ ಪಲ್ಲವಾಂತವೆ ಸ್ತ್ರೀಯೆನಿಕುಂ.
ನಮಃ ಪಲ್ಲವಾಂತವೆ ಪುರುಷನೆನಿಕುಂ.
ಷಟ್ಕಾರವಷಟ್ಕಾರ ಪಲ್ಲವಾಂತಗಳೆ ನಪುಂಸಕವೆನಿಕುಂ.
ಮತ್ತಂ, ಸ್ವಾಹಾ ಪಲ್ಲವಾಂತವಾದೀ ಕ್ಷತ್ರಿಯ ವೈಶ್ಯ ಶೂದ್ರ ಸಹಿತ
ವಿಪ್ರಮಂತ್ರವು
ಇಂದ್ರಾದಿ ಶಯನಸ್ಥಾ [ನ] ಮುಂ ಕೂಡಿ ಮಂತ್ರಜಾತವೆನಿಕು-
ಮೇಕಾಕ್ಷರ ಮಂತ್ರವೆ ಶುದ್ಧಮೆನಿಕುಂ.
ಚತುರಕ್ಷರ ಮಂತ್ರವೆ ಮಿಶ್ರಮೆನಿಕುಂ.
ಬವಿದಾಕ್ಷರಮಂತ್ರವೆ ಸಂಕೀರ್ಣವೆನಿಕುಂ.
ಇಂತೀಯಾದಿವಾಲವೊಂದು, ಸವಾಲವೆರಡು, ಕೌಮಾರಂ
ಮೂರು, ಯೌವನಂ ನಾಲ್ಕು, ಬ್ರಹ್ಮಣನೈದು, ಕ್ಷತ್ರಿಯನಾರು,
ವೈಶ್ಯನೇಳು, ಶೂದ್ರನೆಂಟು, ಸ್ತ್ರೀಯೊಂಬತ್ತು ಪುರುಷಂ ಪತ್ತು,
ನಪುಂಸಕಂ ಪನ್ನೊಂದು, ಮಂತ್ರಜಾತಂ ಪನ್ನೆರಡು,
ಶುದ್ಧಂ ಪದಿಮೂರು, ಮಿಶ್ರಂ ಪದಿನಾಲ್ಕು,
ಸಂಕೀರ್ನಂ ಪದಿನೈದುಮಿವರ ವಿವರಮಂ ನಿರೂಪಿಸಿದೆಯಯ್ಯಾ,
ಪರಶಿವಲಿಂಗಯ್ಯ./155
ಮತ್ತಮುಮಾದಿಶಕ್ತಿ ಸ್ಥಾಪನಾಕಾಲದಲ್ಲಿ ಶಕ್ತ್ಯಂಗಗಳಿಂದವೆ
ಸಕಲ ಕ್ರಿಯೆಗಳನಾಚರಿಪುದು-
ಳಿದ ದೇವತಾಪ್ರತಿಷ್ಠಾದಿಗಳಂ ಸಾಮಾನ್ಯಾಂಗಗಳಿಂದವೆ ಮಾಳ್ಪುದೀ
ಷಡಂಗಗಳಲ್ಲಿ ಹೃದಯಾಂಗವೆ ವಿಶೇಷವೆಂದು
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ./156
ಮತ್ತಮೆರಡನೆಯ ಮೂಲಪ್ರಸಾದಮೆಂತೆನೆ-
ಯಗ್ನಿಮಂಡಲ ಸ್ಥಿತಿಮಾರ್ಗದೊಳಗಣ
ಮೊದಲ ಸಾತ್ವಿಕವರ್ಗದಲ್ಲಿ ಪ್ರದಕ್ಷಿಣೆಯಂ
ಪೂರ್ವಾದಿ ದಳನ್ಯಸ್ತ ಲಿಪಿಗಳಾರನೆಯಕ್ಕರಮಂ
ಚಂದ್ರಮಂಡಲದ ಸ್ಥಿತಿಮಾರ್ಗದೆರಡನೆಯ
ರಾಜಸರ್ವನ್ಯಸ್ತ ಸ್ವರಾಕ್ಷರಂಗಳ
ಪದಿಮೂರನೆಯದರ ಕಡೆಯಕ್ಕರಮುಮಂ
ಪಂಚಮಮಾದ ಸಾಂತದಲ್ಲಿ ಬೆರಸಿ ಹ್ರೌವೆನಿಸಿತ್ತಾ
ಹ್ರೌಗೆ ಆಧಾರ ಶಕ್ತಿ ಕಾರ್ಯ ಪರ ಬಿಂದುಗಳೆಂದೈವೆಸರಾದುದು.
ಸಕಾರಮಾ ಬಿಂದುವೆ ಶೂನ್ಯಮದೆ ಸೊನ್ನೆಯು.
ಆ ಸೊನ್ನೆಯನೊಂದಿ ಹ್ರೌಮೆನಲೊಡಂ
ಮತ್ತೊಂದು ತೆರದಿನಾಧಾರಾಧೇಯ
ಶಿವಶಕ್ತಿ ಕಾರ್ಯಕಾರಣ ಪರಾಪರ ನಾದಬಿಂದುಗಳೆಂದು
ಜೋಡು ಜೋಡುವೆಸರಪ್ಪುದರಿಂದೆಯುಂ
ಶಕ್ತಿಯೆನೆ ಬಿಂದು, ಬಿಂದುವೆನೆ ಸೊನ್ನೆಯು.
ಸೊನ್ನೆವೆರೆದು ಹ್ರೌವೆಂಬಕ್ಕರವೆ ಹ್ರೌಮೆಂದು
ಶಿವಮಂತ್ರವಾಯಿತ್ತದೆ
ಮೂಲಪ್ರಸಾದವೆಂದು ನಿರವಿಸಿದೆಯಯ್ಯಾ,
ಪರಾತ್ಪರ ಶಿವಲಿಂಗೇಶ್ವರ./157
ಮತ್ತೆ,
ಎರಡನೆಯ ಚಂದ್ರಮಂಡಲದ ಪದಿನಾರೆಸಳ್ಗಳಲ್ಲಿ,
ಉಮೇಶ್ವರ ಚಂಡೇಶ್ವರ ನಂದಿಕೇಶ್ವರ ಮಹಾಕಾಳ
ಭೃಂಗಿರಿಟಿ ಗಣೇಶ್ವರ ವೃಷಭೇಶ್ವರ ಷಣ್ಮುಖರೆಂಬಷ್ಟ
ಗಣೇಶ್ವರರನುತ್ತರಂ ಮೊದಲಾದಷ್ಟದಳಂಗಳಲ್ಲಿ
ಪೂಜಿಪುದುಳಿದಷ್ಟದಳಂಗಳಲ್ಲಿ
ಭವ ಶರ್ವ ರುದ್ರ ಮಹಾದೇವ ಸೋಮ ಭೀಮೋಗ್ರ
ಪಶುಪತಿಗಳೆಂಬಷ್ಟಮೂರ್ತಿಗಳನಾರಾಧಿಪುದೆಂದು
ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ[ಪ್ರ]ತಿಪದಾರ್ಥ ಭಾಸ್ವರ./158
ಮತ್ತೆಯಂ, ಸ್ಥೂಲ ಪಂಚಾಕ್ಷರ ಮಂತ್ರಕ್ಕೆ ಅಕ್ಕರಮದೋಂಕಾರ
ಪೂರ್ವಕಮಾಗೆ
ಷಡಕ್ಷರವೀಯುಭಯ ಮಂತ್ರದ ನಮಃ ಎಂಬುದೇ
ಹೃದಯಮಂತ್ರ ಪಲ್ಲವವಿದಲ್ಲಿರ್ದೊಡಂ
ಹೃದಯಪಲ್ಲವವೆಯೆಂದರಿವುದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./159
ಮತ್ತೆಯಮಗ್ನಿಮಂಡಲದ ಕುಬೇರದಿಕ್ಕಿನೇಕದಳದಲ್ಲಿ ಯಕಾರಮ
ನದರಾಚೆಯ ಚಂದ್ರಮಂಡಲ ದಳದ್ವಯದಲ್ಲಿ
ಕುಬೇರದಳದೊಳಗೆ ಬಕಾರಮಂ,
ಕುಬೇರೀಶಾನರಪದಿಕ್ಕಿನ ದಳದಲ್ಲಿ ಔಕಾರಮ
ನದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ
ಕುಬೇರದಳದೊಳಗೆ ಧಕಾರಮಂ,
ಕುಬೇರೀಶಾನರಪದಿಕ್ಕಿನ ದಳದ್ವಯದಲ್ಲಿ
ನಕಾರಂಗಳನುದ್ಧರಿಪುದೆಂದು
ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ./160
ಮತ್ತೆಯು
ಪೃಥ್ವ ್ಯಪ್ತೇಜೋ ವಾಯ್ವಾಕಾಶಾತ್ಮಂಗಳೆ ತತ್ವಂ.
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬಿವೆ ಅಂಗಂ.
ಸುಚಿತ್ತ ಸುಬುದ್ದಿ ನಿರಂಹಕಾರ ಸುಮನ
ಸುಜ್ಞಾನ ಸದ್ಭಾವಂಗಳೆ ಹಸ್ತಂ.
ಕರ್ಮಸಾದಾಖ್ಯ ಕತರ್ೃಸಾದಾಖ್ಯ ಮೂರ್ತಿಸಾದಾಖ್ಯ
ಶಿವಸಾದಾಖ್ಯ ಮಹಾಸಾದಾಖ್ಯಂಗಳೆಂಬಿವೆ ಸಾದಾಖ್ಯಂ.
ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿಯಾದಿಶಕ್ತಿ
ಪರಶಕ್ತಿ ಚಿಚ್ಛಕ್ತಿಗಳೆಂಬಿವೆ ಶಕ್ತಿ.
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗಂಗಳೆಂಬಿವೆ ಲಿಂಗ.
ನಿವೃತ್ತಿ ಪ್ರತಿಷ್ಠೆ ವಿದ್ಯೆ ಶಾಂತಿ ಶಾಂತ್ಯಾತೀತೆ
ಶಾಂತ್ಯಾತೀತೋತ್ತರೆಗಳೆಂಬಿವೆ ಕಲೆ.
ಸದ್ಯಾದಿ ಪರ್ಯಾಯಮಾದ ಘ್ರಾಣಂ ಜಿಹ್ವೆ ನೇತ್ರ
ತ್ವಕ್ಕು ಶ್ರೋತ್ರ ಹೃದಯವೆಂಬಿವೆ ಮುಖಂ.
ಗಂಧ ರಸ ರೂಪ ಸ್ಪರ್ಶ ತೃಪ್ತಿಗಳೆಂಬಿವೆ ದ್ರವ್ಯಂ.
ಶ್ರದ್ಧೆ ನಿಷ್ಠೆ ಸಾವಧಾನಮನುಭಾವಮಾನಂದ
ಸಮರಸವೆಂಬಿವೆ ಭಕ್ತಿ.
ನಕಾರ ಮಃಕಾರ ಶಿಕಾರ[ವಾಕಾರ] ಯಕಾರೋಕಾರಂಗಳೆಂಬಿವೆ
ಮಂತ್ರ ಮಿಂತೇಕಾದಶ ಸಕೀಲಮಿದೆಲ್ಲಂ
ತ್ವದೀಯ ವಿಮರ್ಶನ ಸ್ವರೂಪಮಯ್ಯಾ,
ಪರಮ ಶಿವಲಿಂಗ ಪರೋಕ್ಷಜ್ಞಾನತಾಲಿಂಗಾ./161
ಮತ್ತೆಯುಂ ಚಕ್ರದ ಪೂರ್ವಾದೀಶಾನಾಂತವಾಗಿ
ದಳನ್ಯಸ್ತವಾದಕಾರಾದಿ ಕ್ಷಕಾರಾಂತಮಾದಕ್ಷರಮಾಲಿಕೆಯೆ
ಸೃಷ್ಟಿವರ್ಗವೆನಿಪುದದರೊಳಷ್ಟ ವರ್ಗಂಗಳುಂಟವೆಂತೆನೆ-
ಅಕಾರಾದ್ಯಃಕಾರಂತಮಾದ ಷೋಡಶ ಸ್ವರೋತ್ಕರವೆ
ಅವರ್ಗಮೆನಿಕುಂ.
ಕಕಾರದಿ ಙಕಾರಾಂತವಾದೈದಕ್ಕರವೆ ಕವರ್ಗಮೆನಿಕುಂ.
ಚಕಾರಾದಿ ಞಕಾರಾಂತವಾದೈದಕ್ಕರವೆ ಚವರ್ಗಮೆನಿಕುಂ.
ಟಕಾರಾದಿ ಣಕಾರಾಂತವಾದೈದಕ್ಕರವೆ ಟವರ್ಗಮೆನಿಕುಂ.
ತಕಾರಾದಿ ನಕಾರಾಂತಮಾದೈದಕ್ಕರವೆ ತವರ್ಗಮೆನಿಕುಂ.
ಪಕಾರಾದಿ ಮಕಾರಾಂತಮಾದೈದಕ್ಕರವೆ ಪವರ್ಗಮೆನಿಕುಂ.
ಯಕಾರಾದಿ ವಕಾರಾಂತಮಾದ ನಾಲ್ಕಕ್ಕರವೆ ಯವರ್ಗಮೆನಿಕುಂ.
ಶಕಾರಾದಿ ಕ್ಷಕಾರಾಂತವಾದಾರಕ್ಕರವೆ ಶವರ್ಗಮೆನಿಕುಂ.
ಮಿಂತು ಕಚಟತಪಯಶಂಗಳೆಂಬಿವೆ ಅಷ್ಟವರ್ಗಂಗಳಿವಕ್ಕೆ
ತರದಿಂದಷ್ಟ ದಿಕ್ಷತಿಗಳಂ ಪೇಳ್ವೆನೆಂತೆನೆ-
ಅವರ್ಗಮಿಂದ್ರ ಕವರ್ಗಮಗ್ನಿ ಚವರ್ಗ ಯಮ
ಟವರ್ಗ ನಿಋತಿ ತವರ್ಗ ವರುಣ ಪವರ್ಗ ವಾಯು
ಯವರ್ಗ ಕುಬೇರ ಶವರ್ಗವಿೂಶಾನಮಿಂತಿದು ಸೃಷ್ಟಿವರ್ಗಂ.
ಸದಾಶಿವಮಂತ್ರಂಗಳ್ಪಂಚಬ್ರಹ್ಮಮಂತ್ರಂಗಳ್
ಷಡಂಗಮಂತ್ರಂಗಳ್ಸಕಲ ಸೌಮ್ಯಮಂತ್ರಗಳಾವುವುಂಟವನೆಲ್ಲಮಂ
ಸೃಷ್ಟಿವರ್ಗದಲ್ಲಿಯೆ ತಿಳಿವುದೆಂದು ನಿರವಿಸಿದೆಯಯ್ಯಾ,
ಪರಿಪೂರ್ಣ ಪರಂಜ್ಯೋತಿ ಸ್ವರೂಪ
ಪರಮ ಶಿವಲಿಂಗೇಶ್ವರ./162
ಮತ್ತೆಯುಂ, ಕೂಟಾಂಗ ವಿದ್ಯಾಂಗ[ಗ]ಳಿಂದೆ ಶೈವಾಚಾರ್ಯಂ
ತನ್ನ ಶೈವವ್ರತಕ್ಕೆಯುಂ ಶಿಷ್ಯವ್ರತಕ್ಕೆಯುಂ ಹಾನಿಯಾಗಲೊಡಂ
ಪ್ರಾಯಶ್ಚಿತ್ತಂಗಳನೆಸಗುವದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./163
ಮತ್ತೆಯುಂ, ಕ್ರಿಯೆಯೆ ಶರೀರಂ ಮಂತ್ರವೆ ಜೀವವಿಮೆವೆರಡರ
ಯೋಗವೆ ದೇಹ ಪ್ರಾಣ ಸಂಬಂಧವದೆ ಶಿವಸಾನ್ನಿಧ್ಯ ಕಾರಣ-
ಮದರಿಂದೆ ಕ್ರಿಯಾಮಂತ್ರಂಗಳುಭಯಂಗೂಡಿ
ದೇಹ ಪ್ರಾಣಮಯವೆಂದರಿದಾಚರಿಪುದೆಂದು ನಿರವಿಸಿದೆಯಯ್ಯಾ,
ವಿಶ್ವಮಯ ವಿಶ್ವೇಶ್ವರ ಪರಶಿವಲಿಂಗೇಶ್ವರಾ./164
ಮತ್ತೆಯುಂ,
ಕನರ್ಿಕೆಯಂ ಬಳಸಿದಗ್ನಿಮಂಡಲ
ಚಂದ್ರಮಂಡಲ ಸೂರ್ಯಮಂಡಲ ಸಂಜ್ಞಿತವಾದ
ವೃತ್ತತ್ರಯದಲ್ಲಿ ತರದಿ
ವ್ಯಾಪಕಾಕ್ಷರ ಸ್ವರಾಕ್ಷರ ಸ್ಪಶರ್ಾಕ್ಷರಂಗಳೆಂಬೀ
ವರ್ಗತ್ರಯಮಂ ಪುದುಗೊಳಿಪುದಾ
ತ್ರಿವರ್ಗಪದಕ್ಷರಗಣನೆ ನಾಲ್ವತ್ತೆಂಟಾಯಿತ್ತೆಂದು ನಿರವಿಸಿದೆಯಯ್ಯಾ,
ಪ್ರಪಂಚಾತೀತ ಪರಮ ಶಿವಲಿಂಗೇಶ್ವರಾ./165
ಮತ್ತೆಯುಂ,
ಧನುರ್ಗತಿವಿಡಿದುದಕದಂತರಾಳದ,
ಮಂಡಲತ್ರಯದುದಕದ, ಶ್ವೇತವರ್ಣದ
ಬಾದಿಲಾಂತ ಮುಕ್ತಮಾದರುದಳದ
ನಳಿನಕರ್ಣಿಕೆಯ, ಸೂಕ್ಷ್ಮರಂಧ್ರಗತ
ಪ್ರಣವದ ದಂಡಾಕೃತಿಯ, ಮಕಾರಮೆ ಗುರುಲಿಂಗಮದು,
ನಿನ್ನ ವಾಮದೇವ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ಪ್ರಚುರತರ ಚಿದಂಗಾ./166
ಮತ್ತೆಯುಂ,
ರಕ್ತವರ್ಣದಿಂ ಮೊದಲಂತೆ ಬಾಹ್ಯರೇಖೆಯಂ ಲಿಖಿಪುದು.
ಕೃಷ್ಣವರ್ಣದಿಂ ಮಧ್ಯರೇಖೆಯಂ ಬರೆವುದು.
ಧವಳವರ್ಣದಿಂ ಕಡೆಯರೇಖೆಯಂ ತಿರ್ದು[ವು] ದು.
ಬಾಹ್ಯಮಂಡಲ ದಳಂಗಳಂ ರಕ್ತವರ್ಣದಿಂದವೆ ಬರೆವುದು.
ಉಳಿದ ಮಂಡಲದಳಂಗಳ್ಮೊದಲಂತೆಯೆಂದೆಯಯ್ಯಾ,
ಪರಮ ಶಿವಲಿಂಗ ಮಾಯಾಕಾರ್ಯ ವಿಭಂಗಾ./167
ಮತ್ತೆಯುಂ,
ಸಮಸ್ತಕಲೆಗಳಲ್ಲಿಯುಂ ವಾಮಾದಿ ಸಮಸ್ತ ಶಕ್ತಿಗಳಿಕರ್ುಮಾ
ಮೂವತ್ತೆಂಟು ಕಲೆಗಳಲ್ಲಿ ಮೂವತ್ತೆಂಟು ಶಕ್ತಿಗಳಿಕರ್ುಮಾ
ವಾಮಾದಿ ಶಕ್ತಿಗಳಿಂದೆಯುಮಕಾರಾದಿಗಳಿಂದೆಯುಂ
ಚಂದ್ರ ಸೂರ್ಯಾಗ್ನಿ ಸಂಜ್ಞಿತ ಷೋಡಶ ದ್ವಾದಶದಶಸಂಖ್ಯಾತ
ಗಣನೆಗಳೊಡನೆ ಕೂಡಿ ಕಲಾಬ್ರಹ್ಮಮಿಕರ್ು
ಮಿಂತು ಮೂರ್ತಿಬ್ರಹ್ಮ ತತ್ವಬ್ರಹ್ಮ ಭೂತಬ್ರಹ್ಮ ಪಿಂಡಬ್ರಹ್ಮ
[ಕಲಾಬ್ರಹ್ಮ]ಗಳೆಂಬೀ ಪಂಚಬ್ರಹ್ಮಂಗಳಂ
ನ್ಯಾಸಪೂರ್ವಕವಾಗಿ
ಸಕಲ ಕಾರ್ಯಂಗಳಲ್ಲಿಯುಂ
ಪ್ರಯೋಗಿಪುದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./168
ಮತ್ತೆಯುಂ,
ಸರ್ವಜ್ಞಶಕ್ತಿ ತೃಪ್ತಿಶಕ್ತಿಯನಾದಿಪ್ರಬೋಧಶಕ್ತಿ
ಸ್ವತಂತ್ರಶಕ್ತಿಯಲುಪ್ತಶಕ್ತಿಯನಂತಶಕ್ತಿಗಳೆಂಬಿವೆ
ನಿನ್ನ ಕಾರಣ ಷಡಂಗಂ.
ಬಳಿಕ್ಕಂ, ಭಕ್ತಿ ಕರ್ಮಕ್ಷಯ
ಬುದ್ಧಿ ವಿಚಾರ ದರ್ಪ ಸಂಕ್ಷಯ
ಸಮ್ಯಜ್ಞಾನಂಗಳೆಂಬಿವೆ ನಿನ್ನ ಸೂಕ್ಷ್ಮ ಷಡಂಗಮಿನ್ನುಂ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬಿವೆ
ನಿನ್ನ ಸ್ಥೂಲ ಷಡಂಗವಯ್ಯಾ,
ಪರಮ ಶಿವಲಿಂಗೇಶ್ವರಾ, ಪವಿತ್ರ ಕೈವಲ್ಯಾಧೀಶ್ವರ./169
ಮತ್ತೆಯುಂ
ಕ ಮಹಾಕಾಳಿ ಖ ಸರಸ್ವತಿ
ಗ ಗೌರಿ ಘ ಮಂತ್ರಶಕ್ತಿ
ಙ ಆತ್ಮಶಕ್ತಿ ಚ ಭೂತಮಾತೆ
ಛ ಲಂಬೋದರಿ ಜ ದ್ರಾವಿಣಿ
ರುು ನಗರಿ ಞ ಖೇಚರಿ
ಟ ಮಂಜರಿ ಠ ರೂಪಿಣಿ
ಇಂತಿ ಮಹಾಲಿಂಗದ ಶಕ್ತಿಯೂಧ್ರ್ವಾಬ್ವಾಖ್ಯದನಾಹತಚಕ್ರದ
ದ್ವಾದಶಕೋಷ್ಠದಳ ನ್ಯಸ್ತ ದ್ವಾದಶರುದ್ರಶಕ್ತಿಯರಂ
ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ,./170
ಮತ್ತೆಯುಂ
ರೂಪ ದ್ರವ್ಯ ಪದಾರ್ಥ ಸ್ನಾನ ಮಂತ್ರ ತೃಪ್ತಿಗಳೆಂಬಿವೆ
ಷಡ್ವಿಧ ಕ್ರಿಯಾರ್ಪಣಂಗಳಿವಕ್ಕೆ ವಿವರಂ-
ರೂಪಮೆನೆ ಭೋಜ್ಯ ಪಾನೀಯ ಭಕ್ಷ ್ಯ
ಚೋಷ್ಯ ಲೇಹ್ಯಂಗಳವರ ತೃಪ್ತಿ ಸಹ
ನಿನ್ನ ಪೀಠಾದಿ ಮಸ್ತಕಾಂತ ಸಂಬಂಧ
ಲಿಂಗಾರ್ಪಿತಮಾದುದಯ್ಯಾ,
ಪರಮ ಶಿವಲಿಂಗ ನಿಜರ್ಿತ ಷಟ್ತರಂಗ./171
ಮತ್ತೆಯುಂ
ವ ವಾರುಣಿ, ಶ ವಾಯುವಿ
ಷ ರಕ್ಷೋವಧಾರಿಣಿ, ಸ ಸಹಜೆ
ಇಂತೀ ಮಹಾಲಿಂಗಧಃಪಟ್ಟಿಕಾ ಸಂಜ್ಞಿತವಾದಾಧಾರಚಕ್ರದ
ಚತುಷ್ಕೋಷ್ಠದಳ ನ್ಯಸ್ತ ಚತೂರುದ್ರಶಕ್ತಿಯ-
ರಿನ್ನುಳಿದ ಹ ಲಕ್ಷ್ಮಿ ಳ ವ್ಯಾಪಿನಿಯರೆಂಬೀಯಿೂರ್ವಶಕ್ತಿಗಳೇ
ಮಹಾಲಿಂಗದ ಶಕ್ತಿಯಾಜ್ಯಪ್ರಧಾರಿಕಾಸಂಜ್ಞಿತವಾದಾಜ್ಞಾಚಕ್ರದ
ದ್ವಿಕೋಷ್ಠದಳ ನ್ಯಸ್ತರೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./172
ಮತ್ತೆಯುಂ
ಶರಣಸ್ಥಲಮೆ,
ಶರಣಸ್ಥಲ ತಾಮಸನಿರಸನಸ್ಥಲ
ನಿರ್ದೆಶಸ್ಥಲ ಶೀಲಸಂಪಾದನೆಸ್ಥಲಂಗಳೆಂದು ನಾಲ್ದೆರನಾದುದದುಂ
ನಿಜತನುವೆನಿಸಿತ್ತು ಪರಮ ಶಿವಲಿಂಗ, ಪುಂಗವ
ತುರಂಗ ಕಾರುಣ್ಯಾಮೃತಪೂರಿತಾಪಾಂಗಾ./173
ಮತ್ತೆಯುಂ
ಸಮಸ್ತ ಕಾರ್ಯ ವಿಸ್ತಾರಮಯ ತ್ರಿಪುಟಿರೂಪ ವಿಶ್ವವೆಲ್ಲಂ
ಮಂತ್ರಾಧಾರದೊಳಿರ್ದ ಕಾರಣಮಿದೆಲ್ಲಂ
ಮಂತ್ರಾತ್ಮಕಮಾಗಿಯೆ ತಿಳಿವುದಾ
ಮಂತ್ರ ಸ್ವರೂಪಮಾದೊಡೆ
ಪರಾರ್ಧಕೋಟಿ ಸಂಖ್ಯೆಯಿಂದ ಕೂಡಿ
ನಾದಬ್ರಹ್ಮಸ್ವರೂಪ ಪರಮಶಿವ ವದನಾರವಿಂದದತ್ತಣಿಂ
ನಿರ್ಗತಮಾದುದರಿಂವಿನಾಯಾವ ಕ್ರಿಯೆಯುಮಿಲ್ಲಂ.
ಸರ್ವವುಂ ವಂತ್ರಮಯವೆಂದೆ ನಿರವಿಸಿದೆಯಯ್ಯಾ,
ಶರಣಾಂತರಂಗ ಶಯ್ಯ ಪರಮ ಶಿವಲಿಂಗಯ್ಯಾ./174
ಮತ್ತೆಯುಮಂಗಭೇದ ನಿರೂಪಣಾನಂತರದೊಳ್ಮಂತ್ರಜಾತಮಂ
ಪೇಳ್ವೆನೆಂತೆನೆ-
ಸಾಗರ ತರಂಗನ್ಯಾಯದಿಂ ಜಗದಾಧಾರವಾದ ಪರತತ್ವದಲ್ಲಿ
ಪರಾರ್ಧಕೋಟಿ ಮಂತ್ರಂಗಳೊಗೆಯಲಾ ಶಿವಲಿಂಗೋದ್ಧರಣೆಯಂ
ಜಗದ್ಧಿತಾರ್ಥಂ ಸಕಲ ಮಂತ್ರ ಸಿದ್ಧರ್ಥಂ ಭೋಗಮೋಕ್ಷಾರ್ಥಂ
ನಿರೂಪಿಸಲುದ್ಯುಕ್ತನಾದೆಯಯ್ಯಾ,
ಪರಮ ಶಿವಲಿಂಗಯ್ಯ ಪಟೀರ ಧವಳಕಾಯ./175
ಮತ್ತೆಯುಮಾ, ಮಂತ್ರಮೂರ್ತಿಯಂ ಧ್ಯಾನಿಸಿ
ಪೂಜನಂಗೆಯ್ವುದಂ ಪೇಳ್ವೆನೆಂತೆನೆ-
ಪೂವರ್ೋಕ್ತ ಪಂಚಾಕ್ಷರ ಷಡಕ್ಷರಷ್ಪಾಕ್ಷರ ನವಾಕ್ಷರ ದಶಾಕ್ಷರಂಗಳಿಂ
ತರದಿಂದಾ ಮಂತ್ರಮೂರ್ತಿಯಂ ಕರೆವುದು, ಮೂರ್ತಿಗೊಳಿಪುದು,
ಪ್ರತ್ಯಕ್ಷೀಕರಿಪುದು, ಮಾನಸಾದ್ಯಂತಃಕರಣಮಂ ನಿವೇದಿಪುದು
ಪೂಜಿಪುದಿಂತು
ಹೃತ್ಕಮಲ ಕರ್ಣಿಕಾಮಧ್ಯದಲ್ಲಿರ್ದ ಮಂತ್ರಮೂರ್ತಿಗೆ
ಬ್ರಹ್ಮಮಂತ್ರಂಗಳಿನಂಗಮಂತ್ರಗಳಿಂದೆಯುಂ
ಪಾದ್ಯ ಗಂಧಾದಿಗಳನೀವುದು-
ಮಾದಿಶಕ್ತಿಗಳು ಸ್ಥಾಪಿಸುವ ಕಾಲದಲ್ಲಿಯಾಯಾಯ
ಶಕ್ತಿ ಬೀಜಂಗಳ-
ನಂತಾಯಾಯ ಶಕ್ತಿಗಳ ಹೃದಯಂಗಳಲ್ಲಿ ನ್ಯಾಸಂಗೆಯ್ವುದೆಲ್ಲ
ಕ್ರಿಯಾಶರೀರವೆಂದುಪದೇಶಿಸಿದೆಯಯ್ಯಾ,
ಪರಾತ್ಪರ ಪರಶಿವಲಿಂಗೇಶ್ವರಾ./176
ಮತ್ತೆಯುಮಾಚಾರಲಿಂಗಮೆ,
ದೀಕ್ಷಾಗುರು ಶಿಕ್ಷಾಗುರು ಜ್ಞಾನಗುರು
ಕ್ರಿಯಾಲಿಂಗ ಭಾವಲಿಂಗ ಜ್ಞಾನಲಿಂಗ
ಸ್ವಯ ಚರ ಪರಂಗಳೆಂದೊಂಬತ್ತಾಗಿರ್ಪುದದು ನೀನೇ ಅಯ್ಯಾ,
ನಿರುಪಮಚರಿತ್ರ ತತ್ವಮಣಿಸೂತ್ರ
ಪರಮ ಶಿವಲಿಂಗೇಶ್ವರಾ./177
ಮತ್ತೆಯುಮೀ ಮಹಾಲಿಂಗದೂಧ್ರ್ವಪಟ್ಟಿಕಾಸಂಜ್ಞೆ
ಯುನುಳ್ಳಾಧಾರಚಕ್ರದ
ರುದ್ರಸ್ವರೂಪಮೆಂತೆನೆ-
ವ ಬಕಂ, ಶ ಶ್ವೇತಂ, ಷ ಭೃಂಗ್ವೀಶಂ,
ಸ ಲಕುಲೀಶ, ಳ ಶಿವಂ, ಕ್ಷ ಸಂವರ್ತಕಂ.
ಈ ಷಡ್ವಿಧರುದ್ರರೊಳಗೆ ಮೊದಲ ನಾಲ್ವರೆ
ಆಧಾರಚಕ್ರದ ಚತುಃಕೋಷ್ಠದಳ ನ್ಯಸ್ತ ರುದ್ರರು.
ಉಳಿದಿರ್ವರೆ ಪೂರ್ವೊಕ್ತ ಮಹಾಲಿಂಗದಾದ್ಯಪ್ರದಾರಿಕಾ
ದ್ವಿಕೋಷ್ಠದಳ ನ್ಯಸ್ತ ದ್ವಿರುದ್ರರೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./178
ಮತ್ತೆಯುಮೀ ಶಿವಬೀಜಂ ಸ್ಥೂಲ ಸೂಕ್ಷ್ಮಪರಂಗಳೆಂದು
ಮೂದೆರನಾಗಿರ್ಪುದಿದಕ್ಕೆ ವಿವರಂ-
ಸ್ಥೂಲಮೆನೆಯಕ್ಕರಂ.
ಸೂಕ್ಷ್ಮಮೆನೆಯಾಯಕ್ಷರದ ದನಿ.
ಪರಮೆನೆ ಆಕಾರಾದಿ ಕ್ಷಕಾರಾಂತವಾದೈವತ್ತಕ್ಕರಂಗಳೊಳಗೆ
ಪತ್ತು ಪತ್ತುಗಳು ವಿಭಾಗಿಸಿ,
ಭೂಮ್ಯಾದಿ ಪಂಚಭೂತಂಗಳೊಡನೆ ಕಲಸುವುದೆಂತೆನೆ
ತರದಿಂ ಅ ಆ ಇ ಈ ಉ ಊ ಋ ೂ ಒ ಓ ಈ ಹತ್ತು ಪೃಥ್ವಿ.
ಏ ಐ ಓ ಔ ಅಂ ಅಃ ಕ ಖ ಗ ಘ ಈ ಹತ್ತು ಅಪ್ಪು.
ಙ ಚ ಛ ಜ ರುು ಞ ಟ ಠ ಡ ಢ ಈ ಹತ್ತು ತೇಜಸ್ಸು.
ಣ ತ ಥ ದ ಧ ನ ಪ ಫ ಬ ಭ ಈ ಹತ್ತು ವಾಯು.
ಮ ಯ ರ ಲ ವ ಶ ಷ ಸ ಹ ಳ ಯೀ ಹತ್ತು ಆಕಾಶಂ.
ಇಂತೈವತ್ತಕ್ಕರಂಗಳೈದು ಪೃತ್ವ ್ಯಪ್ತೇಜೋವಾಯ್ವಾಕಾಶಂಗಳಲ್ಲಿ
ನ್ಯಸ್ತಂಗಳಾದವಿನ್ನುಳಿದೈದನೆಯ ಭೂತಸಂಜ್ಞಿತದಿಂ
ಪಂಚಮವೆನಿಸಿದ ಪರಿಪೂರ್ಣವಾದ ಸಾಂತವೆ ಪರಮಿಂತು
ಸ್ಥೂಲ ಸೂಕ್ಷ್ಮ ಪರ ಸಂಜ್ಞೆಯ ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗ ಪಾರ್ವತೀ ಸಮುತ್ಸಂಗ./179
ಮತ್ತೆಯುಮೀಯೈದು ಹೃದಯಮಂತ್ರಕ್ಕೆಯುಂ ತರದಿಂ
ನಮೋಂತವಾಗುಚ್ಚರಿಸಲ್
“ಓಂ ಹ್ರಾಂ ಕೇವಲ ಹೃದಯಾಯ ನಮಃ’
ಎಂದೀತೆರದೈದಕ್ಕೆಯುಚ್ಚರಿಪುದೆಂದು ಬೋಧಿಸಿದೆಯಯ್ಯಾ,
ಪರಶಿವಲಿಂಗಯ್ಯ./180
ಮತ್ತೆಯುಮೂಧ್ರ್ವಪಟ್ಟಿಕೆಯೆಂಬ ಕಂಠವೆ ವಿಶುದ್ಧಿಚಕ್ರಮೆನಿಸುಗು-
ಮಲ್ಲಿಯ ಷೋಡಶ ಕೋಷ್ಠಂಗಳೆ ಷೋಡಶ ದಳಂಗಳೆನಿಕ್ಕು.
ಮವರಲ್ಲಿ ಅ ಆ ಇ ಈ ಉ ಊ ಋ ೂ ಒ ಓ ಏ ಐ ಓ
ಔ ಅಂ ಅಃ ಎಂಬ
ಪದಿನಾರಕ್ಕರಂಗಳ್ನೆಲಸಿಕರ್ುಮೆಂದು ಬೋಧಿಸಿದೆಯಯ್ಯಾ,
ಪರಶಿವಲಿಂಗಯ್ಯ./181
ಮತ್ರಮಾ ಶಿವಾತ್ಮಕ ಪ್ರಸಾದಮಂತ್ರವಾದೊಡೈದು ತೆರದಿಂ
ಪೇಳಲ್ಪಟ್ಟುದೆಂತೆನೆ-
ಮೊದಲ್ತಾನೆ ಶುದ್ಧಪ್ರಸಾದವೆರಡನೆಯದೆ ಮೂಲಪ್ರಸಾದಂ.
ಮೂರನೆಯದೆ ತತ್ವಪ್ರಸಾದಂ. ನಾಲ್ಕನೆಯದೆ ಆದಿಪ್ರಸಾದ-
ಮೈದನೆಯದೆ ಆತ್ಮಪ್ರಸಾದಮಿಂತಿವರೊಳ್ಮೊದಲ
ಶುದ್ಧಪ್ರಸಾದಮೆಂತೆನೆ-
ನಿರ್ದೊಷಮಾಗಿ ಶಿವನೆಂದುಕ್ತಮಾದ
ನಾದ ಗುಹ್ಯ ಪರ ಜೀವ ದೇಹಿ
ಭೂತ ಪಂಚಮ ಸಾಂತ ತತ್ವಾಂತ ಭೂತತಾಂತ ಶಿವಾರ್ಣ
ಶೂನ್ಯಾವ್ಯಯಂಗಳೆಂಬ
ತ್ರಯೋದಶ ನಾಮಪರ್ಯಾಯಾಂಕಿತವಾಗಿ
ಸಮಸ್ತ ಪ್ರಾಣಿಗಳಂತಸ್ಥಿತಮಾದ ಶಿವಬೀಜವೆ
ಸರ್ವ ಕಾರಣ ಕಾರಣವೆನಿಸಿದ ಶುದ್ಧಪ್ರಸಾದವೆನಿಸುಗು-
ಮದೆ ಗುರುಮುಖದಿಂ ತನ್ನನರಿದಾತಂಗೆ
ಭೋಗ ಮೋಕ್ಷಾದಿ ಸಕಲೈಶ್ವರ್ಯ ಸಿದ್ಧಿಗಳನೀವುದೆಂದೆಯಯ್ಯಾ,
ಪರಮ ಶಿವಲಿಂಗ ನಿರಂತರ ಕೃಪಾಪಾಂಗಾ./182
ಮರಲ್ದು, ಷಡಕ್ಷರನ್ಯಾಸಮಂ ಪೇಳ್ವೆನೆಂತನೆ
ಓಂಕಾರಮಂ ಲಿಂಗದಲ್ಲಿಡುವುದು.
ನಕಾರಮಂ ಶಕ್ತಿಪೀಠದೂಧ್ರ್ವಪಟ್ಟಿಕೆಯಲ್ಲಿರಿಸೂದು.
ಮಕಾರಮನೂಧ್ರ್ವಕಂಜದಲ್ಲಿ ಮಡಗುವದು.
ಶಿಕಾರಮಂ ವೃತ್ತದಲ್ಲಿ ಸಂಬಂಧಿಪುದು.
ವಕಾರಮಂ ಅಧಃಕಂಜದಲ್ಲಿ ನ್ಯಾಸೀಕರಿಸುವುದು.
ಯಕಾರಮನಧಃಪಟ್ಟಿಕೆಯಲ್ಲಿ ನೆಲೆಗೊಳಿಪುದೆಂದೀ
ಷಡಕ್ಷರನ್ಯಾಸಮಂ ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./183
ಮರಲ್ದು
ಪ್ರಸಾದಲಿಂಗಮೆ,
ದೀಕ್ಷಾ ಪಾದೋದಕ
ಶಿಕ್ಷಾ ಪಾದೋದಕ
ಜ್ಞಾನ ಪಾದೋದಕ
ಕ್ರಿಯಾನಿಃಷ್ಟತ್ತಿ ಭಾವನಿಃಷ್ಟತ್ತಿ ಜ್ಞಾನನಿಃಷ್ಟತ್ತಿ
ಪಿಂಡಾಕಾಶ ಬಿಂದ್ವಾಕಾಶ ಮಹದಾಕಾಶ
ಕ್ರಿಯಾಪ್ರಕಾಶ ಭಾವಪ್ರಕಾಶ ಜ್ಞಾನಪ್ರಕಾಶಂಗಳೆಂಬೀ ಪನ್ನೆರಡುಂ
ನಿನ್ನ ಸ್ವರೂಪಮಾದುದಯ್ಯಾ,
ಪರಮ ಶಿವಲಿಂಗ ಪ್ರಣವಾಂತರಂಗಾ./184
ಮರಲ್ದುಂ, ಕೇವಲಹೃದಯದಿಂ ಯಜನಂ
ಜ್ಞಾನಜಹೃದಯದಿಂ ಸ್ಥಾಪನಂ
ಯೋಗಜಹೃದಯದಿಂ ಪ್ರೋಕ್ಷಣಂ
ಭೂತಜಹೃದಯದಿಂ ದೀಕ್ಷೆ
ಕಾಮದಹೃದಯದಿಂ ಸರ್ವಕರ್ಮ ವಿಶೇಷವು
ಮಾಡಲ್ಪಡುಗುಮೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./185
ಮರಲ್ದುಂ, ಪಾದಾದಿ ಮಸ್ತಕ ಪರ್ಯಂತಂ ಪಂಚಭೂತಶುದ್ಧಿಯಂ
ಮಾಳ್ಪುದೆಂತೆನೆ
ಭೂತಾಂಗಗಳಲ್ಲಿಯೂ ಭೂತಶುದ್ಧಿಯಂ ಮಾಳ್ಪ
ಮಂತ್ರಂಗಳಂ ಪಂಚಭೂತನಾಮಂಗಳಂ ಕೂಡಿಸಿ
ಮಂತ್ರೋಚ್ಛರಣೆಯಂ ಮಾಳ್ಪುದೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./186
ಮರಲ್ದುಂ, ಪೂರ್ವೊಕ್ತ ಸಕಾರಮಂ ಷಷ್ಠಸ್ವರದೊಡನೆ ಕೂಡೆ
ಪಿಂದೆ ಪೇಳ್ದ ಸೊನ್ನೆಯೊಳ್ಕೂಡೆ
ಸೂಂ[ವೆಂ]ಬ ಮೂರನೆಯ ಶಕ್ತಿಬೀಜವಾದುದೆಂದು ನಿರವಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./187
ಮರಲ್ದುಂ,
ಮೂರನೆಯ ಸೂರ್ಯಮಂಡಲದ ಮೂವತ್ತೆರಡೆಸಳ್ಗಳಲ್ಲಿ,ಾ
ಆನಂತ ಸೂಕ್ಷ್ಮ ಶಿವೋತ್ತಮೈಕ ನೇತ್ರೈಕ ಏಕರುದ್ರ
ತ್ರಿಮೂರ್ತಿ ಶ್ರೀಕಂಠ ಶಿಖಂಡಿಗಳೆಂಬಷ್ಟ ವಿದ್ಯೇಶ್ವರರುದ್ರರು
ಇಂದ್ರಾಗ್ನಿ ಯಮ ನಿಋತಿ ವರುಣ ವಾಯು
ಕುಬೇರೀಶಾನರೆಂಬಷ್ಟ ಲೋಕಪಾಲರಂ
ಧವ ಧ್ರುವಂ ಸೋಮ ನಪ[ನ]ನಿಲಂ
ಅನಲ ಪ್ರತ್ಯೂಷ ಪ್ರಭಾಸರೆಂಬೀಯಷ್ಟವಸುಗಳ
ಇಂದ್ರ ಸತ್ಯ ಭೃಂಗಿಯಂತರ್ಲಕ್ಷಣನೆಂಬೀಯಿಂದ್ರದಿಕ್ಕಿನ
ಚೌದಳ ವಾಸ್ತವದೇವತೆಗಳ
ನಗ್ನಿ ಪೂಷ ವಿತಿ ದಮರೆಂಬಗ್ನಿದಿಕ್ಕಿನ ಚೌದಳದ
ವಾಸ್ತವದೇವತೆಗಳು,
ಯಮ ಭಾಸ್ಕರ ಪುಷ್ಷದತ್ತ ಬಲಾಷ್ಮರೆಂಬೀ ಯಮದಿಕ್ಕಿನ
ಚೌದಳದ ವಾಸ್ತವದೇವತೆಗಳನುಂ,
ನೈಋತ್ಯ ದೌವಾರಿಕ ಸುಗ್ರೀವಾರುಣರೆಂಬೀ ನೈಋತ್ಯದಿಕ್ಕಿನ
ಚೌದಳದ ವಾಸ್ತವದೇವತೆಗಳನುಂ,
ವರುಣೌಸುರ ಗಹ್ವರರ ವೇದರೆಂಬೀ ವರುಣದಿಕ್ಕಿನ
ಚೌದಳದ ವಾಸ್ತವದೇವತೆಗಳನುಂ,
ವಾಯು ನಾಗ ಮುಖ್ಯ ಸೋಮರೆಂಬೀ ವಾಯುದಿಕ್ಕಿನ
ಚೌದಳದ ವಾಸ್ತವದೇವತೆಗಳನುಂ,
ಕುಬೇರಅಗ್ಭರಾದಿತ್ಯದಂತಿಗಳೆಂಬ ಕುಬೇರದಿಕ್ಕಿನ
ಚೌದಳದ ವಾಸ್ತವದೇವತೆಗಳನು
ಈಶಾನ್ಯ ಪರ್ಜನ್ಯ ಜಯಂತ ಸಂಕ್ರಂದರೆಂಬೀ ಈಶಾನ್ಯದಿಕ್ಕಿನ
ಚೌದಳದ ವಾಸ್ತವದೇವತೆಗಳನುಮೀ
ಪ್ರಕಾರಮಾದ ಮೂವತ್ತೆರಡು ದಳಂಗಳಲ್ಲಿ ಭಾವಿಪುದೆಂದು
ನಿರವಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ ಚಿದ್ವ್ಯೋಮ ಪ್ರಭಾಕರಾ./188
ಮರಲ್ದುಂ,
ರಕ್ತವರ್ನಮಾದ ರಜೋಗುಣದಿಂ, ಸೂತ್ರಮಂ ರಚಿಪುದಾ
ಶ್ವೇತಮಾದ ಸತ್ವಗುಣದಿಂ ದಳಂಗಳಂ ನಿಮಿಚರ್ುವುದು.
ಕಪ್ಪುವಣ್ಣದ ತಮೋಗುಣದಿಂದಕ್ಕರಂಗಳ ಬರೆವುದು.
ಪಳದಿವಣ್ಣದಿಂ ಕರ್ಣಿಕೆಯನೆಸಗುವದೆಂದು ಬೋಧಿಸಿದೆಯಯ್ಯಾ,
ಪರಮ ಶಿವಲಿಂಗ ಪಾರ್ವತಿಯಂತರಂಗ./189
ಮರಲ್ದುಂ
ಗುಳಿ ತೆವರಿಲ್ಲದ ಗೋಮಯಾನುಲೇಪಿತ ಶುದ್ಧಭೂಮಿಯಲ್ಲಿ
ರಾಜಾನ್ನದ ಹಿಟ್ಟಿನಿಂದಳ್ದಿದ ದಾರದಿಂ
ಪೂರ್ವ ಪಶ್ಚಿಮಮಕ್ಕೆಯುಂ ದಕ್ಷಿಣೋತ್ತರಕ್ಕೆಯುಂ
ತರದಿಂ ಪದಿನೇಳು ಪದಿನೇಳು ಗೆರೆಗಳಪ್ಪಂತೆ ಮಿಡಿಯೆ
ಪದಿನಾರುಪಂತಿಗಳಹವಾದಕಡೆಗೆಯುಮಿವಂ ಗುಣಿಸೆ
ಇನ್ನೂರೈವತ್ತಾರು ಮನೆಗಳಹವೆಂದು ನಿರೂಪಿಸಿದೆಯಯ್ಯಾ,
ಪರಶಿವಲಿಂಗಯ್ಯ./190
ಮರಲ್ದುಂ
ಬ ವಾಙ್ಮಯೀ ಭ ಜಯೆ
ಮ ಸುಮುಖಿ ಯ ಈಶ್ವರಿ
ರ ರೇವತಿ ಲ ಮಾಧವಿ
ಇಂತೀ ಮಹಾಲಿಂಗದ ಶಕ್ತಿಯಧಃಕಂಜಸಂಜ್ಞಿತವಾದ
ಸ್ವಾಧಿಷ್ಠಾನಚಕ್ರದ ಷಟ್ಕೋಷ್ಠದಳ ನ್ಯಸ್ತ
ಷಡ್ರುದ್ರಶಕ್ತಿಯರಂ ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./191
ಮರಲ್ದುಮಗ್ನಿಮಂಡಲದ ನೈಋತ್ಯದಿಕ್ಕಿನೇಕದಳದಲ್ಲಿ ವಕಾರ
ಮನದರಾಚೆಯ ಚಂದ್ರಮಂಡಲದ ನೈರುತ್ಯದಿಕ್ಕಿನ ದಳದ್ವಯದ
ನೈಋತ್ಯದಳದಲ್ಲಿ ಋಕಾರಮಂ,
ನೈಋತ್ಯ ವರುಣರಪದಿಕ್ಕಿನ ದಳದಲ್ಲಿ ೂಕಾರಮಂ
ಅದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ
ನೈಋತ್ಯ ದಳದೊಳಗೆ ಇಕಾರಮಂ
ನೈಋತ್ಯ ವರುಣರಪದಿಕ್ಕಿನ ದಳದ್ವಯದಲ್ಲಿ ಟಕಾರ ಠಕಾರಂಗಳಂ
ನ್ಯಸ್ತಂಗೆಯ್ದು ಭಾವಿಪುದೆಂದೆಯಯ್ಯಾ,
ಪರಿಪೂರ್ಣ ಪರಮ ಶಿವಲಿಂಗೇಶ್ವರ./192
ಮರಲ್ದುಮಾ ಪ್ರಣವಂ ಪಂಚಪ್ರಕಾರಮಾದಪುದೆಂತೆನೆ
ಸಾಕಲ್ಯಪ್ರಣವವೆಂದು, ಶಾಂಭವಪ್ರಣವವೆಂದು,
ಸೌಖ್ಯಪ್ರಣವವೆಂದು, ಸಾವಶ್ಯಪ್ರಣವವೆಂದು,
ಸಾಯುಜ್ಯಪ್ರಣವವೆಂದು
ಸದಾಶಿವನ ಪಂಚಮುಖಂಗಳಲ್ಲಿ
ಪೊರೆಪೊಣ್ಮಿದವಿವರೊಳ್ಮೊದಲ ಸಾಕಲ್ಯಪ್ರಣವಕ್ಕೆ ವಿವರಂ-
ಅಕಾರಂ ಉಕಾರಂ ಮಕಾರಂ ಎಂದು ತ್ರಿವಿಧಂ.
ಈ ತ್ರಿಮಾತ್ರಾಂತರ್ಗತವಾಗಿರ್ಪುದು ಶುದ್ಧ ಶಿವ ಶಬ್ದ
ವಾಚ್ಯವಾದದಾಖ್ಯವೆನಿಪ ಹಕಾರಂ.
ಅಕಾರಂ ಉಕಾರಂ ಈ ಎರಡುಂ ಕೂಡಿದುದೆ ಒಕಾರಂ.
ಈ ಮಂತ್ರಮೂರ್ತಿಗೆ
ಅಕಾರವೆ ಬಲಂ ಉಕಾರವೆ ಎಡಂ
ಮಕಾರವೆ ಮಧ್ಯದೇಹಂ.
ಈ ಮೂರು ಕೂಡಿ ಓಂ ಎಂದು ಮೂರ್ತಿಯಾಯಿತ್ತು.
ತ್ರಿವಿಧಾತ್ಮಕ ಶರೀರಕ್ಕೆ ಹಕಾರವೆ ಶುದ್ಧ ಚೈತನ್ಯಬ್ರಹ್ಮವೆನಿಸಿತ್ತು.
ಅಕಾರಕ್ಕೆ ಬ್ರಹ್ಮನಧಿದೇವತೆ.
ಉಕಾರಕ್ಕೆ ವಿಷ್ಣುವಧಿದೇವತೆ.
ಮಕಾರಕ್ಕೆ ರುದ್ರನಧಿದೇವತೆ.
ಒಕಾರಕ್ಕ ಸದಾಶಿವನಧಿದೇವತೆ.
ನಾದಾತ್ಮಕಮಾದ ಹಕಾರವೆ ಪರಶಿವಸ್ವರೂಪಂ.
ಈ ತೆರನಾದ ಆ ಉ ಮ ಒ ಹ ಎಂಬೀ
ಪಂಚಾಕ್ಷರಂಗಳ್ಪಂಚ ದೇವತಾಸ್ವರೂಪಂಗಳೀ
ಸಕಲಂಗೂಡಿ ಓಂ ಎಂಬುದೆ ಸಾಕಲ್ಯಪ್ರಣವಂ.
ಇದೊಂದೆ ಬ್ರಹ್ಮಂ.
ಮತ್ತಂ, ಪಂಚಮ ಸಂಜ್ಞಿತವಾದ ಉಕಾರಂ
ಪ್ರಥಮಸಂಜ್ಞಿತವಾದ ಅಕಾರಮಂ ಕೂಡೆ ಒ ಎಂದಾಯಿತ್ತದೆ
ತೃತೀಯಸಂಜ್ಞಿತಮಕಾರಾಂತರ್ಗತವನುಳ್ಳ ಹಕಾರವೆನಿಸಿತ್ತಿಂತು
ಅ ಉ ಮ ಒ ಎಂಬ ಚತುರಕ್ಷರಂಗೂಡಿದ
ಹ ಎಂಬ ಶಿವಬೀಜವೆ ಸಾಕಲ್ಯಪ್ರಣವವೆನಿಸಿತ್ತೀ
ಸಾಕಲ್ಯಪ್ರಣವವೆ ಸದಾಶಿವನ ಪೂರ್ವಮುಖದಲ್ಲಿ
ಉದ್ಧ ೃತವಾಯಿತ್ತೀ
ಪ್ರಣವಬ್ರಹ್ಮಕ್ಕೆ ಮತ್ತೊಂದು ಸಾಕಲ್ಯಾಭಿಧಾನಮನುಂಟು
ಮಾಳ್ಪುದೆಂತೆನೆ ಶಿವತತ್ವಬೀಜಕ್ಕೆ ಸದಾಶಿವತತ್ವ ಭೇದವಾದ
ಮತ್ತೊಂದು ಶುದ್ಧಾಭಿಧಾನವಾದುದೆಂದು ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ./193
ಮರಲ್ದುಮಾ ಮಹಾಲಿಂಗದೂಧ್ರ್ವಾಬ್ಜ ಸಂಜ್ಞೆಯನುಳ್ಳ
ಸ್ವಾಧಿಷ್ಠಾನಚಕ್ರದ ರುದ್ರರೂಪಮೆಂತೆನೆ
ಬ ಸಕಲಾಂಡಂ, ಭ ದ್ವಿಲಂಡಂ
ಮ ಮಹಾಕಾಲಂ, ಯ ಭುಜಂಗೇಶ್ವಂ,
ರ ಪಿನಾಕೀಶಂ, ಲ ಖಡ್ಗೀಶಂ.
ಇಂತೀ ಷಡ್ವಿಧ ರುದ್ರರೆ ಮಹಾಲಿಂಗದ ಸ್ವಾಧಿಷ್ಠಾನಚಕ್ರದ
ಷಟ್ಕೋಷ್ಠದಳ ನ್ಯಸ್ತ ಷಡಕ್ಷರ ವಾಚ್ಯರೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./194
ಮರಲ್ದುಮಾ, ಲಿಂಗದ ಕಂಠ, ಸಂಜ್ಞಿತವಾದ ವೃತ್ತಸ್ಥಾನಮೆ
ಮಣಿಪೂರಕಚಕ್ರಮೆನಿಸುಗುಮಲ್ಲಿಯ
ದಶಕೋಷ್ಠಂಗಳೆ ದಶದಳಂಗಳವರಲ್ಲಿ
ಡ ಢ ಣ ತ ಥ ದ ಧ ನ ಪ ಫ ಎಂಬ
ಪತ್ತಕ್ಕರಗಳ್ನ್ಯಸ್ತಮಾಗಿಕರ್ುವೆಂದು ನಿರವಿಸಿದೆಯಯ್ಯ,
ಪರಶಿವಲಿಂಗಯ್ಯ./195
ಮರಲ್ದುಮಾಜ್ಞೇಯಿಂ ಮೇಲೆ ಸಹಸ್ರದಳ ಸಮ್ಮಿತಮಾದ
ಕಮಲಾಂಕಿತದ ವಿಶುದ್ಧಿಯಿಂ ತೊಡಗಿ,
ತನ್ನಂಗುಲಿ ಪರಿಮಿತದಿಂ,
ದ್ವಾದಶಾಂತ ಸಂಜ್ಞೆಯನುಳ್ಳ,
ಬ್ರಹ್ಮಚಕ್ರ ಸಮುದ್ಧರಣ ಕ್ಷೇತ್ರಮೆಂತೆನಲಾ ಚಕ್ರಕ್ಷೇತ್ರಂ,
ಪೂರ್ವಪಶ್ಚಿಮಕ್ಕೆ ರಕ್ತವರ್ಣದ
ದ್ವಾದಶಾಂಗುಲ ಪ್ರಣವದಿಂ
ದ್ವಿಸೂತ್ರಮಂ ಮಿಡಿಯಲಂತೆಯ ದಕ್ಷಿಣೋತ್ತರಕ್ಕೆಸಗಲಾ
ಚಕ್ರಕ್ಷೇತ್ರಂ, ಚೌಮೂಲೆಯಾಗಲೊಡನದರ
ದೀಘರ್ಾಯತದ ಗಣನೆ
ನೂರನಾಲ್ವತ್ತನಾಲ್ಕಂಗುಲ ಪ್ರಮಾಣಮಾದುದೆಂದು
ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ ವಿಮರ್ಶನ ವ್ಯೋಮ ಪ್ರಭಾಕರಾ./196
ಮರಲ್ದುಮಿಂದ್ರಾಗ್ನಿ ಯಮ ನಿಋತಿ ವರುಣ
ವಾಯು ಕುಬೇರೀಶಾನರೆಂಬಷ್ಟ ದಿಗ್ದಳಂಗಳ
ನಾಲ್ಕರಲ್ಲಿ ಮೊದಲೊಂದೊಂದು ದಳಂಗಳಂ ಬಿಟ್ಟುಳಿದಿಂದ್ರಾದಿ
ದಿಶಾಪದಿಶಾ ದಳತ್ರಯದಲ್ಲಿ
ಭಾವಸಂಜ್ಞಿಕಮಾದ ವ್ಯಂಜನಂಗಳಂ ಸ್ವರಂಗಳನುಮದರಲ್ಲಿ
ಸ ಮೂರ್ತಿಸಂಜ್ಞಿಕಮಾದ ದೀರ್ಘಂಗಳ ನ್ಯಾಸಮಂ ಮಾಡಿ
ಕ್ರಮದಿಂ ಭಜಿಪುದೆಂದೆಯಯ್ಯಾ,
ಪರಮ ಶಿವಲಿಂಗೇಶ್ವರ ಪ್ರಮಥಪದ್ಮ ದಿವಾಕರ./197
ಮರಲ್ದುಮೆರಡನೆಯ ಚಂದ್ರಮಂಡಲದಳೋಪದಳ
ಷೋಡಶಂಗಳಲ್ಲಿ
ಪೂರ್ವಾದಿಶಾನಾಂತ ದಳನ್ಯಸ್ತ ಷೋಡಶ
ಸ್ವರಂಗಳೊಳ್ಮೊದಲಕಾರ
ನಾಮಂಗಳು ಪೇಳ್ವೆನೆಂತೆನೆ-
ಆದಿಬೀಜವೆಂದು ವರ್ನಾದಿಯೆಂದು
ವರ್ಗಾದಿಯೆಂದಕಲಾದಿಯೆಂದು
ಸ್ವರಾದಿಯೆಂದು ಮಾತ್ರಾದಿಯೆಂದು
ಪ್ರಕೃತಿಯೆಂದು ಜೀವಾದಿಯೆಂದು
ಕಲೆಯೆಂದು ಮಾತ್ರೆಯೆಂದು
ಆದಿಯೆಂದು ಸ್ವರವೆಂದೀ
ಯಕಾರ ಪರ್ಯಾಯನಾಮಂಗಳು ಪೇಳ್ದಿನ್ನುಳಿದ
ಸ್ವ ಪರ್ಯಾಯ ನಾಮಂಗಳ
ಬಾಹುಲ್ಯ ಭಾರದಿಂ ಪೇಳ್ದುದಿಲ್ಲಮಂತೆಯೆ
ಸೂರ್ಯಮಂಡಲ ದಳ ಲಿಪಿ ನಾಮ ಪರ್ಯಾಯಂಗಳುಮಂ
ನಿರವಿಸಲಿಲ್ಲಮಿವೆಲ್ಲಮಂ
ಮಂತ್ರಾಗಮಂಗಳಲ್ಲಿ ನೋಡಿಕೊಂಬುದಿಲ್ಲಿಯದು
ಪ್ರಾಪಂಚಿಕವೆಂದುಳಿದತಿ ಸೂಕ್ಷ್ಮವನೆ ಬೋಧಿಸಿದೆಯಯ್ಯಾ.
ಪರಾತ್ಪರ ಪರಮ ಶಿವಲಿಂಗೇಶ್ವರಾ./198
ಮರಲ್ದೇಕಾದಶ ಸಕೀಲ-
[ಮಾ]ರಕ್ಕರುವತ್ತಾರಾಯಿತದನೊಂದೊಂದರೊಳೊಂದಂ ಬೆರಸೆ
ಯಾರರುವತ್ತಾರಾರಾಗಲೊಟನಮಂ
ತರದಿಂ ಗಣಿಸಲವರ ರೂಪ ರುಚಿ ತೃಪ್ತಿಗಳ ಸಹಪರಿವಿಡಿಯಂ
ನಾನೂರರುವತ್ತೆಂಟುತೆರದರ್ಪಣಮೊಂದೊಂದರೊಳೆ ಆಯಿತ್ತಿನ್ನು-
ಮುಳಿದವನೀ ತೆರದಿಂ ಲೆಕ್ಕಿಸ[ಲಂ]ತೆ
ಸ್ತೋಮಂಗೂಡಿ ಎರಡು ಸಾವಿರದೆಂಟುನೂರೆಂಟು
ತೆರದರ್ಪಣಮಾದುದೆಲ್ಲ
ನಿನ್ನ ನಿಜವಿಲಾಸವಯ್ಯಾ,
ಪರಮ ಶಿವಲಿಂಗ ಪ್ರಣವಾಂತರಂಗ./199
ಮುರಲ್ದುಮಾ ಮೂವತ್ತಾರುಮೊಂದೊಂದರೊಳೊಂದಿ ಬರೆ
ಇನ್ನೂರ ಪದಿನಾತರ್ೆರದರ್ಪಣಮಾದುದರೊಳಗಣರ್ಪಣಮಂ
ವಿಭಾಗಿಸಲೊಂದೊಂದಕ್ಕಿನ್ನೂರಪದಿನಾ[ರಾ]ರಾಗಲೊಡನದು
ಸಾವಿರದಿನ್ನೂರ ತೊಂಬತ್ತಾರುದೆರದರ್ಪಣಮಾಗಲದೆಲ್ಲಂ
ನಿನ್ನ ಪೂರ್ಣಾಹಂತಾ ಪ್ರಭೆಗಳಯ್ಯಾ,
ಪರಮ ಶಿವಲಿಂಗೇಶ್ವರ ಪವಿತ್ರ ಕಳೇವರಾ./200
ಮೇಣಾ ಮಂತ್ರಮೂರ್ತಿಗೆ ನಾದವೆ ಕಿರೀಟಮದೆಂತೆನೆ
ಯಾ ಪರಶಿವನ ನಿಷ್ಕಳಶಕ್ತಿಯದೆ ನಾದವದೆಯಾದಿಶಕ್ತಿಯದೆ
ಓಂಕಾರವದರುತ್ಪತ್ತಿಯೆಂತೆನೆ
ಅಕಾರವೆ ನಾದ ಉಕಾರವೆ ಬಿಂದುವುಭಯಂಗೂಡಿ
ಅವು `ಓ ಭವತಿ’ಯೆಂದೊಂದೆಯಾಗಿ ಓ ಎನಿಸಿತ್ತದರಂತೆ
ಆ ಓ ಕೂಡಿ ಔಯೆನಿಸಿತ್ತು
ಹಾಂಗೆಯೆ ಆ ಇ ಕೂಡಿ ಎ ಎನಿಸಿತ್ತದರಂತೆ
ಅ ಏ ಕೂಡಿ ಐ ಏ ಓ ಔ ಯೆಂಬೀ
ಚತುರಕ್ಷರಂಗಳ್ರೂಪಾಂತರದಿಂ
ಸಂಧ್ಯಕ್ಷರಂಗಳೆನಿಸುಗುಮವರೋಳ್
ಓಕಾರವೆ ಆದಿಶಕ್ತಿಯ ಧ್ವಜಾಕಾರ ರೇಖೆಗಳೆ,
ಈ ಮೂಲಪ್ರಸಾದ ಮಂತ್ರಮೂರ್ತಿಯ ಕಿರೀಟವೆಂದು
ನಿರವಿಸಿದೆಯಯ್ಯಾ,
ಪರಶಿವಲಿಂಗೇಶ್ವರ./201
ಮೇಣ್,
ಅಗ್ನಿಮಂಡಲದ ಯಮದಿಕ್ಕಿನೇಕದಳದಲ್ಲಿ ಶಕಾರಮನದರಾಚೆಯ
ಚಂದ್ರಮಂಡಲದ ದಳದ್ವಯದೊಳಗೆ
ಯಮದಿಕ್ಕಿನ ದಳದಲ್ಲಿ ಉಕಾರಮಂ,
ಯಮ ನೈಋತ್ಯರಪದಿಕ್ಕಿನ ದಳದಲ್ಲಿ ಊಕಾರಮುಮನದರಾಚೆಯ
ಸೂರ್ಯಮಂಡಲದ ಯಮದಿಕ್ಕಿನ ದಳತ್ರಯದೊಳಗೆ
ಯಮದಳದಲ್ಲಿ ಛಕಾರಮಂ,
ಯಮ ನೈಋತ್ಯರಪದಿಕ್ಕಿನ ದಳದ್ವಯದಲ್ಲಿ ಜಕಾರ
ರುುಕಾರಂಗಳನಿಟ್ಟು
ಭಾವಿಪುದೆಂದುಪದೇಶಿಸಿದೆಯಯ್ಯಾ,
ಪರಮ ಶಿವಲಿಂಗೇಶ್ವರ./202
ಮೇಣ್ಚಕ್ರನ್ಯಾಸದ ತರುವಾಯ ದೇವತಾನ್ಯಾಸವೆಂತೆನೆ,
ಕರ್ಣಿಕಾಮಧ್ಯದಲ್ಲಿ ಸರ್ವಾಧಾರೆಯಾದ ಪರಾಶಕ್ತಿಯಂ,
ತತ್ಕರ್ಣಿಕೆಯಂ ಬಳಸಿದ ಚೌದಳಂಗಳಲ್ಲಿ ಪ್ರದಕ್ಷಿಣಮಾಗಿ,
ಯಂಬಿಕೆ ಗಣಾನಿ ಈಶ್ವರಿ ಮನೋನ್ಮನಿಯರೆಂಬ
ಚತುಶ್ಯಕ್ತಿಯರಂ ಭಜಿಸೆಂದುಸಿರ್ದೆಯಯ್ಯಾ,
ಪರಮ ಶಿವಲಿಂಗ ಪಾಶೋತ್ಕರ ವಿಭಂಗ./203
ಮೊದಲಾಧಾರ ಶಕ್ತಿಸಂಜ್ಞಿತ ಸಕಾರವೆ
ಸ್ವರ ದ್ವಾದಶದೊಡನೆ ಕೂಡಿ
ಕಾರಣ ಸಂಜ್ಞಿತ ಬಿಂದುವಿನೊಳ್ಬೆರೆಯೆ
ಸೈಂಯೆಂಬ ನಾಲ್ಕನೆಯ ಶಕ್ತಿಬೀಜವಾಯ್ತೆಂದರುಪಿದೆಯಯ್ಯಾ,
ಪರಶಿವಲಿಂಗಯ್ಯ./204
ಶಕ್ತಿ ಎನಲಾ ಮಹಾಲಿಂಗದೊಳಗುಷ್ಣದಂತವಿರಳಮಾದ
ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ
ಪರಾಶಕ್ತಿ ಚಿಚ್ಛಕ್ತಿಗಳೆಂಬಿವು ಮುಖಮೆನೆ
ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ
ಹೃದಯಮೆಂಬೀ ಮುಖಂಗಳಲ್ಲಿ
ಪೂರ್ವೊಕ್ತ ಷಡ್ಲಿಂಗಾಕಾರದಿಂದಿರ್ಪೆಯಯ್ಯಾ,
ಪರಮ ಶಿವಲಿಂಗ ಷಟ್ವಾಮ್ನಾಯ ಪ್ರಸಂಗ./205
ಶ್ರೀಮತ್ಸ್ವಸ್ತಿ ಸಮಸ್ತ ಭುವನಭವನಾರಂಭ
ಮೂಲಸ್ತಂಭಾಯಮಾನ
ಸಕಲ ಜಗದುಪಾದಾನಕಾರಣ ಮಾಯಾತರಂಗ
ಸಮುದ್ರಾಯಮಾನ
ಮಾಹನೀಯ ಮುಖ್ಯ ಹಂ ಪ್ರಕಾಶ ಶರೀರ
ಭೂತಜಗನ್ನಿಚಯ ಲೀಲಾಸೂತ್ರಧಾರಿ ಶರಣಭವ
ಶಾಶ್ವತ ಕೃಪಾಕರ ಶಂಕರ ಶಿವಲಿಂಗ ಲಿಂಗತ್ರಯಾಂತರಂಗಾ./206
ಶ್ವೇತಂ ರಕ್ತಂ, ನೀಲಂ ಕುಂಕುಮಂ.
ಪೀತಂ ಅಂಜನಮಿಂತಿವು ತರದಿಂ
ಕೂಟಾಂಗವರ್ಣವೆಂದು ನಿರವಿಸಿದೆಯಯ್ಯಾ,
ಪರಶಿವಲಿಂಗಯ್ಯ./207
ಸಚ್ಚಿದಾನಂದ ಲಕ್ಷಣಮಾದುದೊಂದೆ ಬ್ರಹ್ಮವು.
ಮಹದಾದಿ ತತ್ವಂಗಳ್ಗೀ ಸ್ಥಾನಮಾದುದರಿಂ
ಸ್ಥಲಮನಕೆ ಲಯಭೂತವಹುದರಿಂ.
ಮಿದೆಸ್ಥಲಂ ತದೇವ ನೀನೆ ಗಡ
ಪರಮ ಶಿವಲಿಂಗ ಪ್ರಣವಾಂತರಂಗ
ನಿಗಮೋತ್ತಮಾಂಗ ಸಂಸ್ತವೋತ್ತುಂಗಾ./208
ಸ್ಥೂಲ ಸೂಕ್ಷ್ಮ ಕಾರಣಾಂಗತ್ರಯದಲ್ಲಿ
ಸ್ಥೂಲ ಸೂಕ್ಷ್ಮ ಕಾರಣ ಲಿಂಗವಾಗಿ ನಿಂದೆಯಯ್ಯಾ.
ಮಹೇಶ್ವರ ಸದಾಶಿವ ಪರಮ ಶಿವಲಿಂಗ ದಿವ್ಯನಾಮ
ಷಟ್ಸ್ಥಲಬ್ರಹ್ಮ ದೃಙ್ಮಂಡಲ ವಿರಾಜಿತ
ಶುದ್ಧ ಪ್ರಸಾದರೂಪ ಶಿವಲಿಂಗ ನಿರಂತರಾಂತರಂಗ./209
ಸ್ವಸ್ತಿ ಶ್ರೀಮನ್ನಿರಂಜನಶೂನ್ಯ ನಿಷ್ಕಳ ಸಕಳ ಸದಾಶಿವ
ಪಂಚಬ್ರಹ್ಮ ಪರಿಸ್ಫುಟ
ಪರತರ ಪರಂಜ್ಯೋತಿರಾಕಾರ
ಪಾಹಿಮಾಂ ಪ್ರಣವೋತ್ತಮಾಂಗ
ಪರಮ ಶಿವಲಿಂಗ ಕೃಪಾರಸತರಂಗ
ಪಾರ್ವತೀ ಪ್ರಾಣಲಿಂಗ ಪಾವನಾಕಾರ
ಫಣೀಶ್ವರ ಭೂಷಣ ಸತ್ಯವೇದಾಂತ ಭಾಷಣ./210