Categories
ಶರಣರು / Sharanaru

ಗೋಣಿ ಮಾರಯ್ಯ

ಅಂಕಿತ: ಕೇಟೇಶ್ವರಲಿಂಗ
ಕಾಯಕ: ದನಕಾಯುವುದು

ಸು.೧೬೦೦ರಲ್ಲಿ ಇದ್ದಿರಬಹುದಾದ ಈತನ ಜೀವನದ ಬಗೆಗೆ ಯಾವುದೇ ಸಂಗತಿಗಳು ದೊರೆತಿಲ್ಲ. ‘ಕೇಟೇಶ್ವರಲಿಂಗ’ ಅಂಕಿತದಲ್ಲಿ ಒಂಬತ್ತು ವಚನಗಳು ಲಭ್ಯವಾಗಿವೆ. ಅವುಗಳಲ್ಲಿ ದೃಷ್ಟಾಂತವಾಗಿ ಬಳಸಿರುವ ‘ಗೋಣಿ’, ‘ಗೋವು’ ‘ಭಿಕ್ಷೆ’ ಮೊದಲಾದ ಪದಗಳಿಂದ ಈತ ಗೋಣಿ (ಕಂಬಳಿ ಅಥವಾ ತಟ್ಟಿನ ಕುಂಚಿಗೆ)ಯನ್ನು ಹೊದ್ದುಕೊಂಡು ದನಕಾಯುವ ಕಾಯಕವನ್ನು ಮಾಡುತ್ತಿದ್ದ; ಮನೆ ಮನೆಗೆ ಹೋಗಿ ಭಕ್ಷೆ ಬೇಡುತ್ತಿದ್ದ ಎಂದು ತಿಳಿದುಬರುತ್ತದೆ. ಹೆಚ್ಚಾಗಿ ಎಲ್ಲ ವಚನಗಳು ಅವನ ಕಾಯಕದ ಪರಿಭಾಷೆಯಲ್ಲಿ ಅಧ್ಯಾತ್ಮವನ್ನು ಹೇಳುತ್ತವೆ.