Categories
ಶರಣರು / Sharanaru

ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ

ಅಂಕಿತ: ಗುರು ಶಾಂತೇಶ್ವರ

ಈಕೆ ಶರಣ ದಸರಯ್ಯನ ಪತ್ನಿ. ಕಾಲ-೧೧೬೦. ‘ಗುರು ಶಾಂತೇಶ್ವರ’ ಅಂಕಿತದಲ್ಲಿ ಐದು ವಚನಗಳು ದೊರೆತಿವೆ. ಮನದ ಚಂಚಲತೆ, ಶರಣನ ನಿಲುವು, ವ್ರತನಿಷ್ಠೆ, ಪಾದೋದಕ-ಪ್ರಸಾದ ಮಹತ್ವ ಈ ವಚನಗಳಲ್ಲಿ ಪ್ರತಿಪಾದಿತವಾಗಿದೆ.