Categories
ವಚನಗಳು / Vachanagalu

ಬಾಲಸಂಗಯ್ಯ ಅಪ್ರಮಾಣದೇವನ ವಚನಗಳು

ಅ ಅಖಂಡಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದಡೆ :
ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ,
ಅನಾದಿಪ್ರಣವ, ಆದಿಪ್ರಣವ, ಶಿವಶಕ್ತಿಪ್ರಣವ,
ಶಿವಶಕ್ತಿರಹಿತವಾಗಿ ಮಹಾಪ್ರಣವ ಮೊದಲಾಗಿ
ಅನಂತಕೋಟಿಪ್ರಣವಂಗಳಿಲ್ಲದಂದು,
ಚಿತ್ತಾಕಾಶ ಚಿದಾಕಾಶ ಮಹದಾಕಾಶ ಪರಾಕಾಶ ಶಿವಾಕಾಶ ಬಿಂದ್ವಾಕಾಶ
ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ
ಅನಂತಕೋಟಿ ಮಹಾಪ್ರಣವಾಕಾಶ, ಅತಿಮಹಾಪ್ರಣವಾಕಾಶ,
ಅತಿಮಹಾತೀತಪ್ರಣವಾಕಾಶಂಗಳಿಲ್ಲದಂದು,
ಆದಿ ಅನಾದಿ ಅನಾಗತ ಅನಂತ ಅದ್ಭುತ ತಮಂಧ ತಾರಜ
ತಂಡಜ ಭಿನ್ನಜ ಭಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ
ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ
ಕೃತಯುಗ ತ್ರೇತಾಯುಗ ಕಲಿಯುಗಂಗಳೆಂಬ
ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಮಹಾಯುಗಂಗಳು,
ಅತಿಮಹಾಯುಗಂಗಳು ಅತಿಮಹಾತೀತ ಮಹಾಯುಗಂಗಳಿಲ್ಲದಂದು,
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ
ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ
ಅಖಂಡ ಮಹಾಮೂಲಸ್ವಾಮಿ ಇದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣ ಕೂಡಲಸಂಗಮದೇವ./1
ಅಂಗಾಲಕಣ್ಣವರು ಮೈಯಲ್ಲಾ ಕಣ್ಣವರು ತಾನಿರ್ದಲ್ಲಿ,
ಗಂಗಾಧರ ಗೌರೀಶ್ವರರು ತಾನಿರ್ದಲ್ಲಿ,
ಶಂಕರ ಶಶಿಧರ ನಂದಿವಾಹನರು ತಾನಿರ್ದಲ್ಲಿ,
ತ್ರಿಶೂಲ ಖಟ್ವಾಂಗಧರರು ತಾನಿರ್ದಲ್ಲಿ,
ತನ್ನಿಂದಧಿಕರೊಬ್ಬರಿಲ್ಲವಾಗಿ ತಾನೆ ಸ್ವಯಂಭು ನೋಡಾ,
ಅಪ್ರಮಾಣಕೂಡಲಸಂಗಮದೇವಾ./2
ಅಂಥ ಬ್ರಹ್ಮಾಂಡವ ಅನಂತಕೋಟಿ ಬ್ರಹ್ಮಾಂಡವನೊಳಕೊಂಡುದೊಂದು
ಕಾಲಾಗ್ನಿರುದ್ರವೆಂಬ ಭುವನ.
ಆ ಭವನದೊಳು ಓಂಕಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಅನಂತಕೋಟಿ ರುದ್ರರು ಅನಂತಕೋಟಿ ಬ್ರಹ್ಮರು
ಅನಂತಕೋಟಿ ನಾರಾಯಣರಿಹರು ನೋಡಾ.
ಅನಂತಕೋಟಿ ಇಂದ್ರರು ಅನಂತಕೋಟಿ ಚಂದ್ರರು
ಅನಂತಕೋಟಿ ವೇದಪುರುಷರು ಅನಂತಕೋಟಿ ಮುನೀಂದ್ರರು
ಅನಂತಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣ ಕೂಡಲಸಂಗಮದೇವಾ./3
ಅಂಥ ಬ್ರಹ್ಮಾಂಡವ ಅನಂತಕೋಟಿಯನೊಳಕೊಂಡ
ಇನ್ನೂರಿಪ್ಪತ್ನಾಲ್ಕು ಮಹಾಭುವನಂಗಳು ಮೊದಲಾಗಿ,
ಅನಂತಕೋಟಿ ಅತಿಮಹಾಭುವನಂಗಳನೊಳಕೊಂಡುದೊಂದು
ಮಹಾಬ್ರಹ್ಮಾಂಡ.
ಅಂಥ ಅನಂತಕೋಟಿ ಮಹಾಬ್ರಹ್ಮಾಂಡವನೊಳಕೊಂಡುದೊಂದು
ಅತಿ ಮಹಾಮೂಲ ಬ್ರಹ್ಮಾಂಡ.
ಅಂಥ ಅನಂತಕೋಟಿ ಅತಿ ಮಹಾಬ್ರಹ್ಮಾಂಡವನೊಳಕೊಂಡುದೊಂದು
ಪರಬ್ರಹ್ಮಾಂಡ.
ಅಂಥ ಅನಂತಕೋಟಿ ಪರಬ್ರಹ್ಮಾಂಡವನೊಳಕೊಂಡುದೊಂದು
ಶಿವ ಬ್ರಹ್ಮಾಂಡ.
ಅಂಥ ಅನಂತಕೋಟಿ ಶಿವಬ್ರಹ್ಮಾಂಡವನೊಳಕೊಂಡುದೊಂದು
ಚಿದ್ಬ್ರಹ್ಮಾಂಡ.
ಅಂಥ ಅನಂತಕೋಟಿ ಚಿದ್ಬ್ರಹ್ಮಾಂಡವನೊಳಕೊಂಡುದೊಂದು
ಚಿದ್ಬಿಂದು.
ಅಂಥ ಚಿದ್ಬಿಂದುವನೊಳಕೊಂಡುದೊಂದು ನಾದಬ್ರಹ್ಮಾಂಡ.
ಅಂಥ ಅನಂತಕೋಟಿ ನಾದಬ್ರಹ್ಮಾಂಡವನೊಳಕೊಂಡುದೊಂದು
ಕಲಾ ಬ್ರಹ್ಮಾಂಡ.
ಅಂಥ ಅನಂತಕೋಟಿ ಕಲಾಬ್ರಹ್ಮಾಂಡವನೊಳಕೊಂಡುದೊಂದು
ಪ್ರಣವಬ್ರಹ್ಮಾಂಡ.
ಅಂಥ ಅನಂತಕೋಟಿ ಪ್ರಣವಬ್ರಹ್ಮಾಂಡವೆ
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿ.
ಆ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾದ
ಅಖಂಡ ಮಹಾಮೂಲಸ್ವಾಮಿಯ ರೋಮಕೂಪಂಗಳು ನೋಡಾ.
ಅಂಥ ಅನಂತಕೋಟಿ ಪ್ರಣವಬ್ರಹ್ಮಾಂಡದ ಪ್ರಣವಪ್ರಕಾಶಂಗಳೆ
ಆ ಅಖಂಡಮೂಲಸ್ವಾಮಿಯ ರೋಮಂಗಳು ನೋಡಾ.
ಆ ರೋಮಪ್ರಮಾಣಂಗಳ ಅನಂತಕೋಟಿ ಬ್ರಹ್ಮ ವಿಷ್ಣು ರುದ್ರ ಈಶ್ವರ
ಸದಾಶಿವ ಮೊದಲಾದ ಅನಂತಕೋಟಿ ದೇವರ್ಕಳಿಹರು ನೋಡಾ.
ಅನಂತಕೋಟಿ ವೇದಾಗಮಶಾಸ್ತ್ರಪುರಾಣಂಗಳೆಲ್ಲ
ಅಖಂಡ ಮಹಾಮೂಲಸ್ವಾಮಿಯ ರೋಮಪ್ರಮಾಣಂಗಳ
ಪ್ರಮಾಣಿಸಲರಿಯವು ನೋಡಾ
ಅಪ್ರಮಾಣಕೂಡಲಸಂಗಮದೇವಾ./4
ಅಂಥ ಬ್ರಹ್ಮಾಂಡವ ಅರವತ್ತಾ ್ನಲ್ಕು ಸಾವಿರದ ಆರುನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಉಗ್ರವೆಂಬ ಭುವನ.
ಆ ಭುವನದೊಳು ಲೋಕನಾಥನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಇಪ್ಪತ್ತುಕೋಟಿ ನಾರಾಯಣ ರುದ್ರ ಬ್ರಹ್ಮಾದಿಗಳಿಹರು ನೋಡಾ.
ಮುನ್ನೂರಾ ಇಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./5
ಅಂಥ ಬ್ರಹ್ಮಾಂಡವ ಅರವತ್ತಾರುಸಾವಿರದ ಆರುನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭೌಮವೆಂಬ ಭುವನ.
ಆ ಭುವನದೊಳು ಭುವನಾಧಿಪತಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಮೂವತ್ತುಕೋಟಿ ಇಂದ್ರಚಂದ್ರಾದಿತ್ಯರು,
ವೇದಪುರುಷರು ಮುನೀಂದ್ರರಿಹರು ನೋಡಾ.
ಮುನ್ನೂರಾ ಮೂವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./6
ಅಂಥ ಬ್ರಹ್ಮಾಂಡವ ಅರವತ್ತುಮೂರುಸಾವಿರದ ಆರುನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಈಶಾನವೆಂಬ ಭುವನ.
ಆ ಭುವನದೊಳು ದೈತ್ಯಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಹದಿನೈದುಕೋಟಿ
ನಾರಾಯಣ ರುದ್ರ ಬ್ರಹ್ಮಾದಿಗಳು ಇಹರು ನೋಡಾ.
ಮುನ್ನೂರಾ ಹದಿನೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./7
ಅಂಥ ಬ್ರಹ್ಮಾಂಡವ ಅರವತ್ತೆಂಟು ಸಾವಿರದ ಆರುನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವೈಷ್ಣವವೆಂಬ ಭುವನ.
ಆ ಭುವನದೊಳು ವೈಷ್ಣವೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ನಲವತ್ತುಕೋಟಿ ಮುನೀಂದ್ರರು ವೇದಪುರುಷರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಮುನ್ನೂರಾ ನಲವತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./8
ಅಂಥ ಬ್ರಹ್ಮಾಂಡವ ಅರವತ್ತೇಳು ಸಾವಿರದ ಆರುನೂರಾ ಅರುವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕಾಮಾರಿಯೆಂಬ ಭುವನ.
ಆ ಭುವನದೊಳು ಜ್ವಾಲಾಮುಖನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಮೂವತ್ತೈದುಕೋಟಿ
ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ.
ಮುನ್ನೂರಾ ಮೂವತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./9
ಅಂಥ ಬ್ರಹ್ಮಾಂಡವ ಅರವತ್ತೊಂದುಸಾವಿರದ ಆರುನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಏಕಧೀರವೆಂಬ ಭುವನ.
ಆ ಭುವನದೊಳು ಶಿಖಾಗ್ರದೃಷ್ಟಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಐದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಮುನ್ನೂರೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./10
ಅಂಥ ಬ್ರಹ್ಮಾಂಡವ ಅರವತ್ತೊಂಬತ್ತು ಸಾವಿರದ
ಆರುನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಬ್ರಾಹ್ಮಣವೆಂಬ ಭುವನ.
ಆ ಭುವನದೊಳು ಬ್ರಹ್ಮಾಧಿಪತಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ನಲವತ್ತೈದುಕೋಟಿ ದೇವರ್ಕಳು ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ಇಹರು ನೋಡಾ.
ಮೂನ್ನೂರಾ ನಲವತ್ತೈದುಕೋಟಿ
ನಾರಾಯಣರು-ಬ್ರಹ್ಮ-ರುದ್ರಾದಿಗಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./11
ಅಂಥ ಬ್ರಹ್ಮಾಂಡವ ಅರವತ್ತ್ತೈದು ಸಾವಿರದ ಆರುನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭೀಮವೆಂಬ ಭುವನ.
ಆ ಭುವನದೊಳು ಭೀಮೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಇಪ್ಪತ್ತೈದು ಕೋಟಿ ರುದ್ರ-ಬ್ರಹ್ಮ-ನಾರಾಯಣರು,
ಮುನ್ನೂರಾ ಇಪ್ಪತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./12
ಅಂಥ ಬ್ರಹ್ಮಾಂಡವ ಅರುವತ್ತಾರುಲಕ್ಷದ ಮೇಲೆ
ಸಾವಿರದಾ ಆರುನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸುಸೂಕ್ಷ್ಮವೆಂಬ ಭುವನ.
ಆ ಭುವನದೊಳು ಅಷ್ಟತನುಸಂಹಾರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಿಪ್ಪತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಎಂಟುನೂರಿಪ್ಪತ್ತೈದುಕೋಟಿ ವೇದಪುರುಷರು
ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./13
ಅಂಥ ಬ್ರಹ್ಮಾಂಡವ ಅರುವತ್ತು ಲಕ್ಷದ ಮೇಲೆ
ಸಾವಿರದಾ ಐನೂರಾತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮೇಘವಾಹನವೆಂಬ ಭುವನ.
ಆ ಭುವನದೊಳು ಚಂಡಮಾರುತನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾತೊಂಬತ್ತೈದು ಕೋಟಿ
ನಾರಾಯಣ-ರುದ್ರ-ಬ್ರಹ್ಮ-ಇಂದ್ರಾದಿಗಳಿಹರು ನೋಡಾ.
ಏಳುನೂರಾ ತೊಂಬತ್ತೈದು ಕೋಟಿ ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./14
ಅಂಥ ಬ್ರಹ್ಮಾಂಡವ ಅರುವತ್ತುಕೋಟಿಯ ಮೇಲೆ
ಮೂರುಸಾವಿರದಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಬುಧವೆಂಬ ಭುವನ.
ಆ ಭುವನದೊಳು ಆಧಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಐದುನೂರುಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು.
ಸಾವಿರಕೋಟಿಯ ಮೇಲೆ ಐನೂರುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./15
ಅಂಥ ಬ್ರಹ್ಮಾಂಡವ ಅರುವತ್ತುಸಾವಿರದ ಐನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಉಮಾಪತಿಯೆಂಬ ಭುವನ.
ಆ ಭುವನದೊಳು ಉಮಾಸಹಿತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರುಕೋಟಿ ನಾರಾಯಣ-ಬ್ರಹ್ಮ-ರುದ್ರಾದಿಗಳಿಹರು.
ಮುನ್ನೂರುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./16
ಅಂಥ ಬ್ರಹ್ಮಾಂಡವ ಅರುವತ್ತೆಂಟುಲಕ್ಷದ ಮೇಲೆ
ಸಾವಿರದಾ ಆರುನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಲಘುವೆಂಬ ಭುವನ.
ಆ ಭುವನದೊಳು ಅಕ್ಷಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಮೂವತ್ತುಕೋಟಿ ನಾರಾಯಣ ಬ್ರಹ್ಮ ರುದ್ರರಿಹರು.
ಎಂಟುನೂರಾಮೂವತ್ತೈದುಕೋಟಿ ದೇವರ್ಕಳು
ವೇದಪುರುಷರು ಮುನೀಂದ್ರರು ಚಂದ್ರಾದಿತ್ಯರು ಇಂದ್ರರಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./17
ಅಂಥ ಬ್ರಹ್ಮಾಂಡವ ಅರುವತ್ತೆರಡು ಲಕ್ಷದ ಮೇಲೆ
ಸಾವಿರದಾ ಆರುನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪಂಚಶಿಖಿಯೆಂಬ ಭುವನ.
ಆ ಭುವನದೊಳು ಪಂಚಭೂತಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರೈದುಕೋಟಿ ನಾರಾಯಣ-ಬ್ರಹ್ಮ-ರುದ್ರರಿಹರು.
ಎಂಟುನೂರೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./18
ಅಂಥ ಬ್ರಹ್ಮಾಂಡವ ಅರುವತ್ತೆರಡು ಸಾವಿರದ ಆರುನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪ್ರಚಂಡವೆಂಬ ಭುವನ.
ಆ ಭುವನದೊಳು ಪ್ರಳಯಾಂತಕನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಹತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು.
ಮುನ್ನೂರಾ ಹತ್ತುಕೋಟಿ ಇಂದ್ರಚಂದ್ರಾದಿತ್ಯರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ/19
ಅಂಥ ಬ್ರಹ್ಮಾಂಡವ ಅರುವತ್ತೇಳು ಲಕ್ಷದ ಮೇಲೆ
ಸಾವಿರದಾ ಆರುನೂರಾ ಅರುವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಾಯುವೇಗವೆಂಬ ಭುವನ.
ಆ ಭುವನದೊಳು ಭೂತನಾಥನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಮೂವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಎಂಟುನೂರಾ ಮೂವತ್ತುಕೋಟಿ ಇಂದ್ರಚಂದ್ರಾದಿತ್ಯರು,
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./20
ಅಂಥ ಬ್ರಹ್ಮಾಂಡವ ಅರುವತ್ತೈದುಲಕ್ಷದ ಮೇಲೆ
ಸಾವಿರದಾ ಆರುನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ತಿಕ್ಷುವೆಂಬ ಭುವನ.
ಆ ಭುವನದೊಳು ತ್ರಿಕಾಲಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಿಪ್ಪತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಎಂಟುನೂರಿಪ್ಪತ್ತುಕೋಟಿ
ಇಂದ್ರ-ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./21
ಅಂಥ ಬ್ರಹ್ಮಾಂಡವ ಅರುವತ್ತೊಂದು ಲಕ್ಷದ ಮೇಲೆ
ಸಾವಿರಾದಾ ಆರನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಕಪದರ್ಿಯೆಂಬ ಭುವನ.
ಆ ಭುವನದೊಳು ಕಾಲನಾಶನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು
ಎಂಟುನೂರುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./22
ಅಂಥ ಬ್ರಹ್ಮಾಂಡವ ಅರುವತ್ತೊಂಬತ್ತು ಲಕ್ಷದ ಮೇಲೆ
ಸಾವಿರದಾರುನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶೀಘ್ರವೆಂಬ ಭುವನ.
ಆ ಭುವನದೊಳು ಪ್ರಳಯಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ನಲವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ಎಂಟುನೂರಾ ನಲವತ್ತುಕೋಟಿ ಇಂದ್ರ ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./23
ಅಂಥ ಬ್ರಹ್ಮಾಂಡವ ಅರುವತ್ನಾಲ್ಕುಲಕ್ಷದ ಮೇಲೆ
ಸಾವಿರದಾ ಆರುನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕ್ಷಯಾಂತಕವೆಂಬ ಭುವನ.
ಆ ಭುವನದೊಳು ಶೂಲಪಾಣಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಹದಿನೈದುಕೋಟಿ
ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ.
ಎಂಟುನೂರಾ ಹದಿನೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./24
ಅಂಥ ಬ್ರಹ್ಮಾಂಡವ ಅರುವತ್ಮೂರುಲಕ್ಷದ ಮೇಲೆ
ಸಾವಿರದಾ ಆರುನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪ್ರಪಂಚಾಂತಕವೆಂಬ ಭುವನ.
ಆ ಭುವನದೊಳು ಪಂಚಾನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಹತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಎಂಟುನೂರಾ ಹತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./25
ಅಂಥ ಬ್ರಹ್ಮಾಂಡವ ಆರುಕೋಟಿಯ ಮೇಲೆ
ಎರಡು ಸಾವಿರದಾ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಹುತಾಶನವೆಂಬ ಭುವನ.
ಆ ಭುವನದೊಳು ಅತಿಮಹಾಘೋರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಐವತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಸಾವಿರಕೋಟಿಯ ಮೇಲೆ ಐವತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./26
ಅಂಥ ಬ್ರಹ್ಮಾಂಡವ ಆರುಲಕ್ಷದ ಮೇಲೆ ಸಾವಿರದ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕೈದಾರವೆಂಬ ಭುವನ.
ಆ ಭುವನದೊಳು ಕಲಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರಿಪ್ಪತ್ತೈದುಕೋಟಿ ದೇವರ್ಕಳು ಮುನೀಂದ್ರರು ವೇದಪುರುಷರು
ಚಂದ್ರಾದಿತ್ಯರು ಇಂದ್ರಾದಿಗಳಿಹರು ನೋಡಾ.
ಐನೂರಿಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./27
ಅಂಥ ಬ್ರಹ್ಮಾಂಡವ ಆರುಸಾವಿರದೈವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಊಧ್ರ್ವಗಾಮಿನಿಯೆಂಬ ಭುವನ.
ಆ ಭುವನದೊಳು ಊಧ್ರ್ವಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮೂವತ್ತುಕೋಟಿ ಬ್ರಹ್ಮ ನಾರಾಯಣ ರುದ್ರರು ಇಂದ್ರಚಂದ್ರಾದಿತ್ಯರು,
ಮೂವತ್ತುಕೋಟಿ ವೇದಪುರುಷರು ಮುನೀಂದ್ರರು,
ಮೂವತ್ತೊಂಬತ್ತುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./28
ಅಂಥ ಬ್ರಹ್ಮಾಂಡವ ಇನ್ನೂರು ಕೋಟಿಯ ಮೇಲೆ
ಮೂರುಸಾವಿರದಾ ತೊಂಬತ್ತೆಂಟು ಬ್ರಹ್ಮಾಂಡನೊಳಕೊಂಡುದೊಂದು
ಬ್ರಹ್ಮನೆಂಬ ಭುವನ.
ಆ ಭುವನದೊಳು ವೇದನಾಥನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ತೊಂಬತ್ತುನೂರಾ ನಾಲ್ವತ್ನಾಲ್ಕುಕೋಟಿ
ನಾರಾಯಣ ರುದ್ರ ಬ್ರಹ್ಮರಿಹರು ನೋಡಾ.
ಸಾವಿರ ಕೋಟಿಯ ಮೇಲೆ ತೋಂಬತ್ತುನೂರಾ ನಾಲ್ವತ್ನಾಲ್ಕುಕೋಟಿ
ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./29
ಅಂಥ ಬ್ರಹ್ಮಾಂಡವ ಇಪ್ಪತ್ತಾರುಲಕ್ಷದ ಮೇಲೆ
ಸಾವಿರದಿನ್ನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಿವಾಹವೆಂಬ ಭುವನ.
ಆ ಭುವನದೊಳು ಶತಪಿಂಡನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಿಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಆರುನೂರಿಪ್ಪತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./30
ಅಂಥ ಬ್ರಹ್ಮಾಂಡವ ಇಪ್ಪತ್ತಾರುಸಾವಿರದ ಇನ್ನೂರ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ನಿಜಾನಂದನೆಂಬ ಭುವನ.
ಆ ಭುವನದೊಳು ನಿತ್ಯಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾಮೂವತ್ತುಕೋಟಿ ನಾರಾಯಣ ರುದ್ರ ಬ್ರಹ್ಮರು,
ನೂರಾಮೂವತ್ತುಕೋಟಿ ಇಂದ್ರಚಂದ್ರಾದಿತ್ಯರು, ವೇದಪುರುಷರು,
ಮುನೀಂದ್ರರು, ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./31
ಅಂಥ ಬ್ರಹ್ಮಾಂಡವ ಇಪ್ಪತ್ತುಕೋಟಿಯ ಮೇಲೆ
ಎರಡುಸಾವಿರದಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಅವ್ಯಯವೆಂಬ ಭುವನ.
ಆ ಭುವನದೊಳು ಆದಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ನೂರುಕೋಟಿ
ಇಂದ್ರ ಬ್ರಹ್ಮ ನಾರಾಯಣ ರುದ್ರರಿಹರು.
ಸಾವಿರಕೋಟಿಯ ಮೇಲೆ ನೂರುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./32
ಅಂಥ ಬ್ರಹ್ಮಾಂಡವ ಇಪ್ಪತ್ತುನಾಲ್ಕುಸಾವಿರದ ಇನ್ನೂರ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸದಾನಂದವೆಂಬ ಭುವನ.
ಆ ಭುವನದೊಳು ಸಚ್ಚಿದಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಇಪ್ಪತ್ತುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು,
ನೂರಾ ಇಪ್ಪತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು,
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./33
ಅಂಥ ಬ್ರಹ್ಮಾಂಡವ ಇಪ್ಪತ್ತುಮೂರುಸಾವಿರದ ಇನ್ನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಏಕನೇತ್ರವೆಂಬ ಭುವನ.
ಆ ಭುವನದೊಳು ನೀಲಕಂಠನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾಹದಿನೈದುಕೋಟಿ ಇಂದ್ರ ಬ್ರಹ್ಮ ನಾರಾಯಣ ರುದ್ರರು,
ನೂರಾಹದಿನೈದುಕೋಟಿ ವೇದಪುರುಷರು,
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./34
ಅಂಥ ಬ್ರಹ್ಮಾಂಡವ ಇಪ್ಪತ್ತುಲಕ್ಷದ ಮೇಲೆ ಸಾವಿರದ ನೂರಾತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅಮರೇಶ್ವರವೆಂಬ ಭುವನ.
ಆ ಭುವನದೊಳು ಅಮರನಾಯಕನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರತೊಂಬತ್ತೈದುಕೋಟಿ ಇಂದ್ರ-ಬ್ರಹ್ಮ-ನಾರಾಯಣರಿಹರು.
ಐನೂರತೊಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./35
ಅಂಥ ಬ್ರಹ್ಮಾಂಡವ ಇಪ್ಪತ್ತುಸಾವಿರದ ನೂರಾತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸರ್ವೆಶ್ವರನೆಂಬ ಭುವನ.
ಆ ಭುವನದೊಳು ಸರ್ವಗತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರುಕೋಟಿ ನಾರಾಯಣ ರುದ್ರ ಬ್ರಹ್ಮರು,
ನೂರುಕೋಟಿ ಇಂದ್ರಚಂದ್ರಾದಿತ್ಯರು,
ನೂರುಕೋಟಿ ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./36
ಅಂಥ ಬ್ರಹ್ಮಾಂಡವ ಇಪ್ಪತ್ತೆಂಟುಲಕ್ಷದ ಮೇಲೆ
ಸಾವಿರದಿನ್ನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ತ್ರಿಯಕ್ಷವೆಂಬ ಭುವನ.
ಆ ಭುವನದೊಳು ಸಹಸ್ರಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಾ ಮೂವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಆರುನೂರಾ ಮೂವತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./37
ಅಂಥ ಬ್ರಹ್ಮಾಂಡವ ಇಪ್ಪತ್ತೆಂಟುಸಾವಿರದ ಇನ್ನೂರ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶ್ರೀಕಂಠವೆಂಬ ಭುವನ.
ಆ ಭುವನದೊಳು ಶ್ರೀಮಹಾದೇವನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾನಾಲ್ವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು.
ನೂರಾನಾಲ್ವತ್ತುಕೋಟಿ ಇಂದ್ರಚಂದ್ರಾದಿತ್ಯರು, ವೇದಪುರುಷರು,
ಮುನೀಂದ್ರರು, ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./38
ಅಂಥ ಬ್ರಹ್ಮಾಂಡವ ಇಪ್ಪತ್ತೆರಡು ಸಾವಿರದ ಇನ್ನೂರಾಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ನಿತ್ಯಾನಂದವೆಂಬ ಭುವನ
ಆ ಭುವನದೊಳು ನೀಲಲೋಹಿತನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾಹತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು ಇಂದ್ರಚಂದ್ರಾದಿತ್ಯರು,
ನೂರಾಹತ್ತುಕೋಟಿ ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./39
ಅಂಥ ಬ್ರಹ್ಮಾಂಡವ ಇಪ್ಪತ್ತೆರಡುಲಕ್ಷದ ಮೇಲೆ
ಸಾವಿರದಿನ್ನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವೀರಭದ್ರನೆಂಬ ಭುವನ.
ಆ ಭುವನದೊಳು ಪ್ರಳಯಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಆರುನೂರೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./40
ಅಂಥ ಬ್ರಹ್ಮಾಂಡವ ಇಪ್ಪತ್ತೇಳುಲಕ್ಷದ ಮೇಲೆ
ಸಾವಿರದಿನ್ನೂರಾ ಅರುವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ತ್ರಿದಶೇಶ್ವರವೆಂಬ ಭುವನ.
ಆ ಭುವನದೊಳು ಶತಾಕ್ಷನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಾ ಮೂವತ್ತುಕೋಟಿ ನಾರಾಯಣ ರುದ್ರ
ಬ್ರಹ್ಮಾದಿಗಳಿಹರು ನೋಡಾ.
ಆರುನೂರಾ ಮೂವತ್ತುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./41
ಅಂಥ ಬ್ರಹ್ಮಾಂಡವ ಇಪ್ಪತ್ತೇಳುಸಾವಿರದ ಇನ್ನೂರ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ತ್ರಿಮೂರ್ತಿಯೆಂಬ ಭುವನ.
ಆ ಭುವನದೊಳು ತ್ರಿಪುರಾಂತಕನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾಮೂವತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರು,
ನೂರಾಮೂವತ್ತೈದುಕೋಟಿ ಇಂದ್ರಚಂದ್ರಾದಿತ್ಯರು,
ನೂರಾಮೂವತ್ತೈದುಕೋಟಿ ವೇದಪುರುಷರು ಮುನೀಂದ್ರರು,
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./42
ಅಂಥ ಬ್ರಹ್ಮಾಂಡವ ಇಪ್ಪತ್ತೈದುಲಕ್ಷದ ಮೇಲೆ
ಸಾವಿರದಿನ್ನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭವವೆಂಬ ಭುವನ.
ಆ ಭುವನದೊಳು ಭವದೂರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಿಪ್ಪತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಆರುನೂರಿಪ್ಪತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./43
ಅಂಥ ಬ್ರಹ್ಮಾಂಡವ ಇಪ್ಪತ್ತೈದುಸಾವಿರದ ಇನ್ನೂರನಾಲ್ವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಏಕರುದ್ರವೆಂಬ ಭುವನ.
ಆ ಭುವನದೊಳು ಕಾಲಾಂತಕನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಇಪ್ಪತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರು,
ಇಂದ್ರಚಂದ್ರಾದಿತ್ಯರು,
ನೂರಾ ಇಪ್ಪತ್ತೈದುಕೋಟಿ ವೇದಪುರುಷರು, ಮುನೀಂದ್ರರು,
ದೇವರ್ಕಳಿಹರು ನೋಡಾ,
ಅಪ್ರಮಾಣಕೂಡಸಂಗಮದೇವಾ./44
ಅಂಥ ಬ್ರಹ್ಮಾಂಡವ ಇಪ್ಪತ್ತೊಂದುಲಕ್ಷದ ಮೇಲೆ ಸಾವಿರದಿನ್ನೂರಾಯೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭದ್ರಕಾಳವೆಂಬ ಭುವನ.
ಆ ಭುವನದೊಳು ಮಹಾಕಾಳನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಆರುನೂರುಕೋಟಿ ಇಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./45
ಅಂಥ ಬ್ರಹ್ಮಾಂಡವ ಇಪ್ಪತ್ತೊಂದುಲಕ್ಷದ ಮೇಲೆ
ಸಾವಿರದಿನ್ನೂರ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಗಣವೆಂಬ ಭುವನ.
ಆ ಭುವನದೊಳು ಗಣನಾಥನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಾನಲವತ್ತು ಕೋಟಿ ದೇವರ್ಕಳು ಇಂದ್ರಚಂದ್ರಾದಿತ್ಯರು
ವೇದಪುರಷರು ಮುನೀಂದ್ರರಿಹರು ನೋಡಾ.
ಆರುನೂರಾ ನಲವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./46
ಅಂಥ ಬ್ರಹ್ಮಾಂಡವ ಇಪ್ಪತ್ತೊಂದುಸಾವಿರದ ಇನ್ನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಿವೋತ್ತಮವೆಂಬ ಭುವನ
ಆ ಭುವನದೊಳು ಶಿವಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಐದುಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು,
ನೂರಾ ಐದುಕೋಟಿ ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./47
ಅಂಥ ಬ್ರಹ್ಮಾಂಡವ ಇಪ್ಪತ್ತೊಂಬತ್ತು ಸಾವಿರದ ಇನ್ನೂರ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಿಖಂಡಿಯೆಂಬ ಭುವನ.
ಆ ಭುವನದೊಳು ಸಹಸ್ರಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾನಾಲ್ವತ್ತೈದುಕೋಟಿ
ವಿಷ್ಣು ಬ್ರಹ್ಮ ರುದ್ರಾದಿಗಳು,ಇಂದ್ರಚಂದ್ರಾದಿತ್ಯರು,
ನೂರಾನಾಲ್ವತ್ತೈದುಕೋಟಿ ವೇದಪುರುಷರು,
ಮುನೀಂದ್ರರು, ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./48
ಅಂಥ ಬ್ರಹ್ಮಾಂಡವ ಇಪ್ಪತ್ನಾಲ್ಕುಲಕ್ಷದ ಮೇಲೆ
ಸಾವಿರದ ಇನ್ನೂರಾಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಿಫ್ಸುವೆಂಬ ಭುವನ.
ಆ ಭುವನದೊಳು ವಿಮಲೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಾ ಹದಿನೈದುಕೋಟಿನಾರಾಯಣ-ಬ್ರಹ್ಮ-ರುದ್ರಾದಿಗಳಿಹರು,
ಆರುನೂರಾ ಹದಿನೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./49
ಅಂಥ ಬ್ರಹ್ಮಾಂಡವ ಇಪ್ಪತ್ಮೂರುಲಕ್ಷದ ಮೇಲೆ
ಸಾವಿರದಿನ್ನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ತ್ರಿಲೋಚನವೆಂಬ ಭುವನ.
ಆ ಭುವನದೊಳು ತ್ರಿಕಾಲಾಗ್ನಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಾ ಹತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ.
ಆರುನೂರಾ ಹತ್ತುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./50
ಅಂಥ ಬ್ರಹ್ಮಾಂಡವ ಎಂಟುಕೋಟಿಯ ಮೇಲೆ
ಎರಡುಸಾವಿರದಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ತ್ರಿದಶಾಧಿಪವೆಂಬ ಭುವನ.
ಆ ಭುವನದೊಳು ಅಘೋರವೀರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಎಪ್ಪತ್ತುಕೋಟಿ
ರುದ್ರ ಬ್ರಹ್ಮ ನಾರಾಯಣರಿಹರು.
ಸಾವಿರಕೋಟಿಯ ಮೇಲೆ ಎಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./51
ಅಂಥ ಬ್ರಹ್ಮಾಂಡವ ಎಂಟುಲಕ್ಷದ ಮೇಲೆ ಸಾವಿರದ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಧ್ಯಮೇಶ್ವರನೆಂಬ ಭುವನ.
ಆ ಭುವನದೊಳು ಕಾಲಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರ ಮೂವತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಐನೂರಾ ಮೂವತ್ತೈದುಕೋಟಿ ಚಂದ್ರಾದಿತ್ಯರು ಇಂದ್ರರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./52
ಅಂಥ ಬ್ರಹ್ಮಾಂಡವ ಎಂಟುಸಾವಿರದ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ರೋಚಿಕಾಯೆಂಬ ಭುವನ.
ಆ ಭುವನದೊಳು ಭವರೋಗಸಂಹಾರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾಲ್ವತ್ತು ಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು,
ನಾಲ್ವತ್ತುಕೋಟಿ ವೇದಪುರುಷರು ಮುನೀಂದ್ರರು,
ನಾಲ್ವತ್ತೊಂದುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./53
ಅಂಥ ಬ್ರಹ್ಮಾಂಡವ ಎಂಬತ್ತಾರುಲಕ್ಷದ ಮೇಲೆ
ಸಾವಿರದ ಎಂಟುನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಉಭಯನಖವೆಂಬ ಭುವನ.
ಆ ಭುವನದೊಳು ಉಪಮಾತೀತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬಯಿನೂರಾ ಇಪ್ಪತ್ತೈದು ಕೋಟಿ
ಬ್ರಹ್ಮ ನಾರಾಯಣ ರುದ್ರಾದಿಗಳಿಹರು ನೋಡಾ.
ಒಂಬಯಿನೂರಾ ಇಪ್ಪತ್ತೈದು ಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ/54
ಅಂಥ ಬ್ರಹ್ಮಾಂಡವ ಎಂಬತ್ತಾರುಸಾವಿರದ ಎಂಟುನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಾಕೋಟವೆಂಬ ಭುವನ.
ಆ ಭುವನದೊಳು ಮಹಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರಮೂವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ನಾನೂರಮೂವತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./55
ಅಂಥ ಬ್ರಹ್ಮಾಂಡವ ಎಂಬತ್ತುಕೋಟಿಯ ಮೇಲೆ
ಮೂರುಸಾವಿರದಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಈಶ್ವರವೆಂಬ ಭುವನ.
ಆ ಭುವನದೊಳು ಸದಾಶಿವನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಹನ್ನೆರಡನೂರಾ ಅರುವತ್ತುಕೋಟಿ
ಬ್ರಹ್ಮ ರುದ್ರ ನಾರಾಯಣರಿಹರು.
ಸಾವಿರಕೋಟಿಯ ಮೇಲೆ ಹನ್ನೆರಡುನೂರಾ ಅರುವತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./56
ಅಂಥ ಬ್ರಹ್ಮಾಂಡವ ಎಂಬತ್ತುನಾಲ್ಕುಲಕ್ಷದ ಮೇಲೆ
ಸಾವಿರದ ಎಂಟುನೂರಾಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ವಿರೂಪಾಕ್ಷವೆಂಬ ಭುವನ.
ಆ ಭುವನದೊಳು ನಿರಾಕಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬಯಿನೂರಾಹದಿನೈದುಕೋಟಿ ನಾರಾಯಣ ಬ್ರಹ್ಮ ರುದ್ರಾದಿಗಳಿಹರು.
ಒಂಬಯಿನೂರಾಹದಿನೈದುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./57
ಅಂಥ ಬ್ರಹ್ಮಾಂಡವ ಎಂಬತ್ತುನಾಲ್ಕುಸಾವಿರದಾ ಎಂಟುನೂರಾಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕಾಳಾಂಜನವೆಂಬ ಭುವನ.
ಆ ಭುವನದೊಳು ಕಾಳಕಂಠನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರಿಪ್ಪತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ನಾನೂರಿಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./58
ಅಂಥ ಬ್ರಹ್ಮಾಂಡವ ಎಂಬತ್ತುಮೂರುಲಕ್ಷದ ಮೇಲೆ
ಸಾವಿರದ ಎಂಟುನೂರ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಧೂಮ್ರವೆಂಬ ಭುವನ.
ಆ ಭುವನದೊಳು ಅನುಭಾವಾನಂದನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಹತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು.
ಒಂಬತ್ತುನೂರಾ ಹತ್ತುಕೋಟಿ ಇಂದ್ರಚಂದ್ರಾದಿತ್ಯರು,
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./59
ಅಂಥ ಬ್ರಹ್ಮಾಂಡವ ಎಂಬತ್ತುಲಕ್ಷದ ಮೇಲೆ
ಸಾವಿರದೇಳುನೂರಾತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಾರುಣೇಶವೆಂಬ ಭುವನ.
ಆ ಭುವನದೊಳು ಮಹಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾತೊಂಬತ್ತೈದುಕೋಟಿ ರುದ್ರ ಬ್ರಹ್ಮ ಇಂದ್ರ ನಾರಾಯಣರಿಹರು.
ಎಂಟುನೂರಾತೊಂಬತ್ತೈದುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./60
ಅಂಥ ಬ್ರಹ್ಮಾಂಡವ ಎಂಬತ್ತುಸಾವಿರದಾ ಏಳುನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪೈಶಾಚಿಕವೆಂಬ ಭುವನ.
ಆ ಭುವನದೊಳು ವಾಮದೇವನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿ ಓಲಗದಲ್ಲಿ
ನಾನೂರುಕೋಟಿ ನಾರಾಯಣ-ಬ್ರಹ್ಮ-ರುದ್ರಾದಿಗಳಿಹರು ನೋಡಾ.
ನಾನೂರುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./61
ಅಂಥ ಬ್ರಹ್ಮಾಂಡವ ಎಂಬತ್ತೆಂಟು ಲಕ್ಷದ ಮೇಲೆ
ಸಾವಿರದ ಎಂಟುನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಹಂತವೆಂಬ ಭುವನ.
ಆ ಭುವನದೊಳು ಭೂತನಾಥನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಮೂವತ್ತೈದು ಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ಒಂಬತ್ತುನೂರಾ ಮೂವತ್ತೈದು ಕೋಟಿ ಇಂದ್ರ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣ ಕೂಡಲಸಂಗಮದೇವಾ./62
ಅಂಥ ಬ್ರಹ್ಮಾಂಡವ ಎಂಬತ್ತೆಂಟುಸಾವಿರದ ಎಂಟುನೂರಾ ಎಪ್ಪತ್ತೆಂಟು
ಬ್ರಹ್ಮಾಡವನೊಳಕೊಂಡುದೊಂದು ಛಂಗವೆಂಬ ಭುವನ.
ಆ ಭುವನದೊಳು ಚಕ್ರೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರಾನಲವತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ನಾನೂರಾನಲವತ್ತುಕೋಟಿ ಬ್ರಹ್ಮ-ರುದ್ರ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./63
ಅಂಥ ಬ್ರಹ್ಮಾಂಡವ ಎಂಬತ್ತೆರಡು ಲಕ್ಷದ ಮೇಲೆ
ಸಾವಿರದಾಯೆಂಟುನೂರಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಲೋಹಿತವೆಂಬ ಭುವನ.
ಆ ಭುವನದೊಳು ವ್ಯಾಘ್ರಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಐದುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ಒಂಬತ್ತುನೂರಾ ಐದುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./64
ಅಂಥ ಬ್ರಹ್ಮಾಂಡವ ಎಂಬತ್ತೆರಡುಸಾವಿರದಾ ಎಂಟುನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸ್ಥೂಲೇಶ್ವರವೆಂಬ ಭುವನ.
ಆ ಭುವನದೊಳು ಶಾದರ್ೂಲಮುಖನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರಾಹತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ.
ನಾನೂರಾ ಹತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./65
ಅಂಥ ಬ್ರಹ್ಮಾಂಡವ ಎಂಬತ್ತೇಳು ಲಕ್ಷದ ಮೇಲೆ
ಸಾವಿರದ ಎಂಟುನೂರಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಕ್ಷರದೃಷ್ಟಿಯೆಂಬ ಭುವನ.
ಆ ಭುವನದೊಳು ಅಷ್ಟಮೂರ್ತಿಯೆ ಪಾದಂಗಳಾಗಿಹ
ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಮೂವತ್ತುಕೋಟಿ ನಾರಾಯಣ ರುದ್ರ ಬ್ರಹ್ಮೇಂದ್ರಾದಿಗಳಿಹರು.
ಒಂಬತ್ತುನೂರಾ ಮೂವತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./66
ಅಂಥ ಬ್ರಹ್ಮಾಂಡವ ಎಂಬತ್ತೇಳುಸಾವಿರದಾ ಎಂಟುನೂರಾ ಅರುವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ದ್ವಿರಂಡವೆಂಬ ಭುವನ.
ಆ ಭುವನದೊಳು ದ್ವಿರಂಡಭಿನ್ನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರಮೂವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./67
ಅಂಥ ಬ್ರಹ್ಮಾಂಡವ ಎಂಬತ್ತೈದುಲಕ್ಷದ ಮೇಲೆ
ಸಾವಿರದ ಎಂಟುನೂರಾನಾಲ್ವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಊಧ್ರ್ವಶೇಷವೆಂಬ ಭುವನ.
ಆ ಭುವನದೊಳು ಊಧ್ರ್ವಪಾದನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬಯಿನೂರಾ ಇಪ್ಪತ್ತುಕೋಟಿ ದೇವರ್ಕಳು ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ಇಹರು ನೋಡಾ.
ಒಂಬಯಿನೂರಾ ಇಪ್ಪತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./68
ಅಂಥ ಬ್ರಹ್ಮಾಂಡವ ಎಂಬತ್ತೈದುಸಾವಿರದಾ ಎಂಟುನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಂಡಲೇಶ್ವರವೆಂಬ ಭುವನ.
ಆ ಭುವನದೊಳು ಮಂಡಲಾಧಿಪನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರಿಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ- ರುದ್ರರಿಹರು ನೋಡಾ.
ನಾನೂರಿಪ್ಪತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./69
ಅಂಥ ಬ್ರಹ್ಮಾಂಡವ ಎಂಬತ್ತೊಂದುಲಕ್ಷದ ಮೇಲೆ
ಸಾವಿರದೆಂಟುನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ದೌಷ್ಟ್ರೇಯವೆಂಬ ಭುವನ.
ಆ ಭುವನದೊಳು ಭುವನೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರುಕೋಟಿ ರುದ್ರ ಬ್ರಹ್ಮ ಇಂದ್ರ ನಾರಾಯಣರಿಹರು.
ಒಂಬತ್ತುನೂರುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./70
ಅಂಥ ಬ್ರಹ್ಮಾಂಡವ ಎಂಬತ್ತೊಂದುಸಾವಿರದಾ ಎಂಟನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಸ್ಥಲೇಶ್ವರವೆಂಬ ಭುವನ.
ಆ ಭುವನದೊಳು ಜಟಾಜೂಟನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರೈದು ಕೋಟಿ ಬ್ರಹ್ಮ-ರುದ್ರ-ನಾರಾಯಣರಿಹರು.
ನಾನೂರೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./71
ಅಂಥ ಬ್ರಹ್ಮಾಂಡವ ಎಂಬತ್ತೊಂಬತ್ತು ಲಕ್ಷದ ಮೇಲೆ
ಸಾವಿರದ ಎಂಟುನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಮಾರಣನಿರುತಿಯೆಂಬ ಭುವನ.
ಆ ಭುವನದೊಳು ಮಹಾಭೂತಪ್ರಳಯನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತು ನೂರಾ ನಾಲ್ವತ್ತು ಕೋಟಿ ಇಂದ್ರ ಬ್ರಹ್ಮ
ನಾರಾಯಣ ರುದ್ರರಿಹರು.
ಒಂಬತ್ತು ನೂರಾ ನಾಲ್ವತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣ ಕೂಡಲಸಂಗಮದೇವಾ./72
ಅಂಥ ಬ್ರಹ್ಮಾಂಡವ ಎಂಬತ್ತೊಂಬತ್ತು ಸಾವಿರದ
ಎಂಟುನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಚಂಡವೆಂಬ ಭುವನ.
ಆ ಭುವನದೊಳು ಪ್ರಚಂಡನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರನಲವತ್ತೈದು ಕೋಟಿ ದೇವರ್ಕಳು ಮುನೀಂದ್ರರು
ವೇದಪುರುಷರು ಇಂದ್ರಚಂದ್ರಾದಿತ್ಯರಿಹರು ನೋಡಾ.
ನಾನೂರನಲವತ್ತೈದು ಕೋಟಿ ಬ್ರಹ್ಮ ನಾರಾಯಣ ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./73
ಅಂಥ ಬ್ರಹ್ಮಾಂಡವ ಎಂಬತ್ಮೂರುಸಾವಿರದಾ ಎಂಟುನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಂಖುಕರ್ಣವೆಂಬ ಭುವನ.
ಆ ಭುವನದೊಳು ಕಾಲಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರ ಹದಿನೈದುಕೋಟಿ ನಾರಾಯಣ ಬ್ರಹ್ಮ ರುದ್ರಾದಿಗಳಿಹರು ನೋಡಾ.
ನಾನೂರ ಹದಿನೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./74
ಅಂಥ ಬ್ರಹ್ಮಾಂಡವ ಎಪ್ಪತ್ತಾರುಲಕ್ಷದ ಮೇಲೆ
ಸಾವಿರದೇಳುನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶ್ವೇತಮಹಾಬಲವೆಂಬ ಭುವನ.
ಆ ಭುವನದೊಳು ಗೋಕರ್ಣನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಎಪ್ಪತ್ತೈದುಕೋಟಿ ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಎಂಟುನೂರಾ ಎಪ್ಪತ್ತೈದುಕೋಟಿ ಇಂದ್ರ ಬ್ರಹ್ಮ ನಾರಾಯಣ
ರುದ್ರರಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./75
ಅಂಥ ಬ್ರಹ್ಮಾಂಡವ ಎಪ್ಪತ್ತಾರುಸಾವಿರದಾ ಏಳುನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಇಂದ್ರವೆಂಬ ಭುವನ.
ಆ ಭುವನದೊಳು ಇಂದ್ರಾಧಿಪನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿ ಓಲಗದಲ್ಲಿ
ಮುನ್ನೂರ ಎಂಬತ್ತುಕೋಟಿ ರುದ್ರ-ನಾರಾಯಣ-ಬ್ರಹ್ಮರಿಹರು.
ಮುನ್ನೂರಾ ಎಂಬತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./76
ಅಂಥ ಬ್ರಹ್ಮಾಂಡವ ಎಪ್ಪತ್ತುಕೋಟಿಯ ಮೇಲೆ
ಮೂರುಸಾವಿರದಾ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಅಜಕಪಾಲಯೆಂಬ ಭುವನ.
ಆ ಭುವನದೊಳು ಆದಿಯಾಧಾರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಆರುನೂರಾ ಅರುವತ್ತುಕೋಟಿ
ನಾರಾಯಣ ರುದ್ರ ಬ್ರಹ್ಮರಿಹರು ನೋಡಾ.
ಸಾವಿರಕೋಟಿಯ ಮೇಲೆ ಆರುನೂರರವತ್ತು ಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./77
ಅಂಥ ಬ್ರಹ್ಮಾಂಡವ ಎಪ್ಪತ್ತುನಾಲ್ಕು ಸಾವಿರದ ಏಳುನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪ್ರಜೇಷವೆಂಬ ಭುವನ.
ಆ ಭುವನದೊಳು ಕಪಾಲಮಾಲಾಧರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಎಪ್ಪತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು,
ಮುನ್ನೂರಾ ಎಪ್ಪತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./78
ಅಂಥ ಬ್ರಹ್ಮಾಂಡವ ಎಪ್ಪತ್ತುನಾಲ್ಕುಲಕ್ಷದ ಮೇಲೆ
ಸಾವಿರದೇಳುನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಜಯವೆಂಬ ಭುವನ.
ಆ ಭುವನದೊಳು ಮೃತ್ಯುಂಜಯನೆಂಬ ಮಹಾಕಾಲರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಅರುವತ್ತೈದುಕೋಟಿ ನಾರಾಯಣ-ಬ್ರಹ್ಮ-ರುದ್ರ
ಇಂದ್ರಾದಿಗಳಿಹರು ನೋಡಾ.
ಎಂಟುನೂರಾ ಅರವತ್ತೈದುಕೋಟಿ ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./79
ಅಂಥ ಬ್ರಹ್ಮಾಂಡವ ಎಪ್ಪತ್ತುಮೂರುಸಾವಿರದಾ ಏಳುನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಯಾಮ್ಯವೆಂಬ ಭುವನ.
ಆ ಭುವನದೊಳು ವಜ್ರಕಾಯನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರರವತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು ನೋಡಾ.
ಮೂನ್ನೂರರವತ್ತೈದು ಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./80
ಅಂಥ ಬ್ರಹ್ಮಾಂಡವ ಎಪ್ಪತ್ತುಲಕ್ಷದ ಮೇಲೆ
ಸಾವಿರದಾರುನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸುನಾದವೆಂಬ ಭುವನ.
ಆ ಭುವನದೊಳು ನಾದಾಂತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ನಲವತ್ತೈದುಕೋಟಿ ಇಂದ್ರ ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು.
ಎಂಟುನೂರಾ ನಲವತ್ತೈದುಕೋಟಿ ಬ್ರಹ್ಮನಾರಾಯಣ ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./81
ಅಂಥ ಬ್ರಹ್ಮಾಂಡವ ಎಪ್ಪತ್ತುಸಾವಿರದ ಆರುನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವೈಭವವೆಂಬ ಭುವನ.
ಆ ಭುವನದೊಳು ರಾಮನಾಥನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರೈವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಮೂನ್ನೂರೈವತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./82
ಅಂಥ ಬ್ರಹ್ಮಾಂಡವ ಎಪ್ಪತ್ತೆಂಟು ಸಾವಿರದಾ ಏಳುನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಯಕ್ಷವೆಂಬ ಭುವನ.
ಆ ಭುವನದೊಳು ಶಂಭುವೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾತೊಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಮುನ್ನೂರಾತೊಂಬತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./83
ಅಂಥ ಬ್ರಹ್ಮಾಂಡವ ಎಪ್ಪತ್ತೆಂಟುಲಕ್ಷದ ಮೇಲೆ
ಸಾವಿರದೇಳುನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅತಿಬಲವೆಂಬ ಭುವನ.
ಆ ಭುವನದೊಳು ಮಹಾಮಗುಟನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಎಂಬತ್ತೈದುಕೋಟಿ ಬ್ರಹ್ಮ ಇಂದ್ರ ನಾರಾಯಣ ರುದ್ರರಿಹರು.
ಎಂಟುನೂರಾ ಎಂಬತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./84
ಅಂಥ ಬ್ರಹ್ಮಾಂಡವ ಎಪ್ಪತ್ತೆರಡು ಸಾವಿರದಾ ಏಳುನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅಕೃತವೆಂಬ ಭುವನ.
ಆ ಭುವನದೊಳು ತ್ರಿಯಂಬಕನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರ ಅರವತ್ತುಕೋಟಿ ನಾರಾಯಣ-ಬ್ರಹ್ಮ
ರುದ್ರಾದಿಗಳಿಹರು ನೋಡಾ.
ಮುನ್ನೂರರವತ್ತು ಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./85
ಅಂಥ ಬ್ರಹ್ಮಾಂಡವ ಎಪ್ಪತ್ತೆರಡುಲಕ್ಷದ ಮೇಲೆ
ಸಾವಿರದಾ ಏಳುನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಜ್ವಾಲಾಂತಕವೆಂಬ ಭುವನ.
ಆ ಭುವನದೊಳು ಜ್ವಲತ್ಕಾಲಾನಲಾಭಾಸನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರೈವತ್ತೈದುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ಎಂಟುನೂರೈವತ್ತೈದುಕೋಟಿ ವೇದಪುರುಷರು ಮುನೀಂದ್ರರು
ಇಂದ್ರ ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./86
ಅಂಥ ಬ್ರಹ್ಮಾಂಡವ ಎಪ್ಪತ್ತೇಳು ಸಾವಿರದಾ ಏಳುನೂರಾ ಅರುವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಗಾಂಧರ್ವವೆಂಬ ಭುವನ.
ಆ ಭುವನದೊಳು ಉಗ್ರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ಎಂಬತ್ತೈದುಕೋಟಿ
ವೇದಪುರುಷರು ಮುನೀಂದ್ರರು ದೇವರ್ಕಳು
ಇಂದ್ರಚಂದ್ರಾದಿತ್ಯರಿಹರು ನೋಡಾ.
ಮುನ್ನೂರ ಎಂಬತ್ತೈದು ಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./87
ಅಂಥ ಬ್ರಹ್ಮಾಂಡವ ಎಪ್ಪತ್ತೇಳುಲಕ್ಷದ ಮೇಲೆ
ಸಾವಿರದೇಳುನೂರಾ ಅರುವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪಾಶಹಸ್ತವೆಂಬ ಭುವನ.
ಆ ಭುವನದೊಳು ಗಜಕರ್ಣನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಎಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಎಂಟುನೂರಾ ಎಂಬತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./88
ಅಂಥ ಬ್ರಹ್ಮಾಂಡವ ಎಪ್ಪತ್ತೈದುಲಕ್ಷದ ಮೇಲೆ
ಸಾವಿರದೇಳುನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭದ್ರವೆಂಬ ಭುವನ.
ಆ ಭುವನದೊಳು ಭದ್ರಕರ್ಣನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಎಪ್ಪತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ.
ಎಂಟುನೂರಾ ಎಪ್ಪತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣ
ಇಂದ್ರಾದಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./89
ಅಂಥ ಬ್ರಹ್ಮಾಂಡವ ಎಪ್ಪತ್ತೈದುಸಾವಿರದ ಏಳುನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸೌಮ್ಯವೆಂಬ ಭುವನ.
ಆ ಭುವನದೊಳು ಉನ್ಮನಿಜ್ಯೋತಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರ ಎಪ್ಪತ್ತೈದು ಕೋಟಿ
ನಾರಾಯಣ-ರುದ್ರ-ಬ್ರಹ್ಮಾದಿಗಳಿಹರು ನೋಡಾ.
ಮುನ್ನೂರಾ ಎಪ್ಪತ್ತೈದು ಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./90
ಅಂಥ ಬ್ರಹ್ಮಾಂಡವ ಎಪ್ಪತ್ತೊಂದು ಲಕ್ಷದ ಮೇಲೆ
ಸಾವಿರದಾ ಏಳುನೂರೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮೇಘನಾದವೆಂಬ ಭುವನ.
ಆ ಭುವನದೊಳು ಮೇಘವಾಹನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರೈವತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರ ಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಎಂಟನೂರೈವತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./91
ಅಂಥ ಬ್ರಹ್ಮಾಂಡವ ಎಪ್ಪತ್ತೊಂದುಸಾವಿರದ ಏಳುನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಕೃತವೆಂಬ ಭುವನ.
ಆ ಭುವನದೊಳು ಭುವನಾಧಿಪತಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮೂನ್ನೂರೈವತ್ತೈದು ಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ.
ಮುನ್ನೂರೈವತ್ತೈದು ಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./92
ಅಂಥ ಬ್ರಹ್ಮಾಂಡವ ಎಪ್ಪತ್ತೊಂಬತ್ತುಲಕ್ಷದ ಮೇಲೆ
ಸಾವಿರದೇಳುನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಹಾಬಲವೆಂಬ ಭುವನ.
ಆ ಭುವನದೊಳು ಮಹೇಶ್ವರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ತೊಂಬತ್ತುಕೋಟಿ
ನಾರಾಯಣ ರುದ್ರ ಬ್ರಹ್ಮ ಇಂದ್ರಾದಿಗಳಿಹರು ನೋಡಾ.
ಎಂಟುನೂರಾ ತೊಂಬತ್ತುಕೋಟಿ ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./93
ಅಂಥ ಬ್ರಹ್ಮಾಂಡವ ಎಪ್ಪತ್ಮೂರುಲಕ್ಷದ ಮೇಲೆ
ಸಾವಿರದೇಳುನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ದೀರ್ಘಬಾಹುವೆಂಬ ಭುವನ.
ಆ ಭುವನದೊಳು ಘಂಟಾಕರ್ಣನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಟುನೂರಾ ಅರುವತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು.
ಎಂಟುನೂರಾ ಅರುವತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./94
ಅಂಥ ಬ್ರಹ್ಮಾಂಡವ ಎರಡುಕೋಟಿಯ ಮೇಲೆ
ಎರಡುಸಾವಿರದಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಜ್ವಲನವೆಂಬ ಭುವನ.
ಆ ಭುವನದೊಳು ಜ್ವಲತ್ಕಾಲಾನಲಾಭಾಸನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಹತ್ತುಕೋಟಿ
ಇಂದ್ರ ನಾರಾಯಣ ಬ್ರಹ್ಮ ರುದ್ರಾದಿಗಳಿಹರು.
ಸಾವಿರಕೋಟಿಯ ಮೇಲೆ ಹತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./95
ಅಂಥ ಬ್ರಹ್ಮಾಂಡವ ಎರಡುಲಕ್ಷದ ಮೇಲೆ ಸಾವಿರದ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ನಖಲವೆಂಬ ಭುವನ.
ಆ ಭುವನದೊಳು ನಾರಾಯಣಪ್ರಿಯನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರೈದುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳು
ಇಂದ್ರಚಂದ್ರಾದಿತ್ಯರಿಹರು ನೋಡಾ.
ಐನೂರೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./96
ಅಂಥ ಬ್ರಹ್ಮಾಂಡವ ಎರಡುಸಾವಿರದ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅನಾಥನೆಂಬ ಭುವನ.
ಆ ಭುವನದೊಳು ನಾದಮೂರ್ತಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಹತ್ತುಕೋಟಿ ಬ್ರಹ್ಮ ರುದ್ರ ನಾರಾಯಣರು,
ಹತ್ತುಕೋಟಿ ಇಂದ್ರಚಂದ್ರಾದಿತ್ಯರು,
ಹತ್ತುಕೋಟಿ ವೇದಪುರುಷರು, ಮುನೀಂದ್ರರು,
ಮೂವತ್ತೈದುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣ ಕೂಡಲಸಂಗಮದೇವಾ./97
ಅಂಥ ಬ್ರಹ್ಮಾಂಡವ ಏಳು ಲಕ್ಷದ ಮೇಲೆ ಸಾವಿರದ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಹಾಬಲವೆಂಬ ಭುವನ.
ಆ ಭುವನದೊಳು ಮಹಾಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರಮೂವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ.
ನೂರಾಮೂವತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./98
ಅಂಥ ಬ್ರಹ್ಮಾಂಡವ ಏಳುಕೋಟಿಯ ಮೇಲೆ
ಎರಡುಸಾವಿರದಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಜಯರುದ್ರನೆಂಬ ಭುವನ.
ಆ ಭುವನದೊಳು ಘೋರಘೋರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಅರುವತ್ತುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಸಾವಿರಕೋಟಿಯ ಮೇಲೆ ಅರುವತ್ತುಕೋಟಿ
ರುದ್ರ -ಬ್ರಹ್ಮ -ನಾರಾಯಣರಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./99
ಅಂಥ ಬ್ರಹ್ಮಾಂಡವ ಏಳುಸಾವಿರದ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮೋಚಿಕಾಯೆಂಬ ಭುವನ,
ಆ ಭುವನದೊಳು ಮೋಹಸಂಹಾರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮೂವತ್ತೈದುಕೋಟಿ ಇಂದ್ರಚಂದ್ರಾದಿತ್ಯರು,
ಮೂವತ್ತೈದುಕೋಟಿ ಬ್ರಹ್ಮನಾರಾಯಣ ರುದ್ರರು,
ಮೂವತ್ತೈದುಕೋಟಿ ವೇದಪುರುಷರು ಮುನೀಂದ್ರರು,
ನಾಲ್ವತ್ತುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./100
ಅಂಥ ಬ್ರಹ್ಮಾಂಡವ ಐದುಕೋಟಿಯ ಮೇಲೆ
ಎರಡುಸಾವಿರದಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಪಿಂಗವೆಂಬ ಭುವನ.
ಆ ಭುವನದೊಳು ಮಹಾಘೋರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ನಾಲ್ವತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಸಾವಿರಕೋಟಿಯ ಮೇಲೆ ನಾಲ್ವತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./101
ಅಂಥ ಬ್ರಹ್ಮಾಂಡವ ಐದುಲಕ್ಷದ ಮೇಲೆ ಸಾವಿರದ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭೈರವವೆಂಬ ಭುವನ.
ಆ ಭುವನದೊಳು ಭೈರವಾರಣನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರಿಪ್ಪತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು
ದೇವರ್ಕಳಿಹರು ನೋಡಾ.
ಐನೂರಿಪ್ಪತ್ತುಕೋಟಿ ಇಂದ್ರ-ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./102
ಅಂಥ ಬ್ರಹ್ಮಾಂಡವ ಐದುಸಾವಿರದ ನಾಲ್ವತ್ತೆಂಟುಕೋಟಿ
ಬ್ರಹ್ಮಾಂಡವನೊಳಕೊಂಡುದೊಂದು ವ್ಯಾಪಿನಿಯೆಂಬ ಭುವನ.
ಆ ಭುವನದೊಳು ಮಹಾಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇಪ್ಪತ್ತೈದುಕೋಟಿ ರುದ್ರ ಬ್ರಹ್ಮ ನಾರಾಯಣರು,
ಇಪ್ಪತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು,
ಮೂವತ್ತೆಂಟುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣ ಕೂಡಲಸಂಗಮದೇವಾ./103
ಅಂಥ ಬ್ರಹ್ಮಾಂಡವ ಐವತ್ತಾರುಲಕ್ಷದ ಮೇಲೆ
ಸಾವಿರದಾ ಐನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಜಟಾಧರವೆಂಬ ಭುವನ.
ಆ ಭುವನದೊಳು ಜಟಾಜೂಟನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾ ಎಪ್ಪತ್ತೈದುಕೋಟಿ ಇಂದ್ರ ಬ್ರಹ್ಮ ನಾರಾಯಣ ರುದ್ರರಿಹರು.
ಏಳುನೂರಾ ಎಪ್ಪತ್ತೈದುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./104
ಅಂಥ ಬ್ರಹ್ಮಾಂಡವ ಐವತ್ತಾರುಸಾವಿರದ ಐನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಏಕನೇತ್ರಕವೆಂಬ ಭುವನ.
ಆ ಭುವನದೊಳು ಹಸ್ತಲೋಚನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಎಂಬತ್ತುಕೋಟಿ ನಾರಾಯಣ ರುದ್ರ ಬ್ರಹ್ಮರಿಹರು ನೋಡಾ.
ಇನ್ನೂರಾ ಎಂಬತ್ತುಕೋಟಿ ಇಂದ್ರಚಂದ್ರಾದಿತ್ಯರು,
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./105
ಅಂಥ ಬ್ರಹ್ಮಾಂಡವ ಐವತ್ತು ಕೋಟಿಯ ಮೇಲೆ
ಮೂರುಸಾವಿರದಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ವಜ್ರದೇಹವೆಂಬ ಭುವನ.
ಆ ಭುವನದೊಳು ವಜ್ರಕಾಯನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ನಾಲ್ಕುನೂರು ಕೋಟಿ
ರುದ್ರ ಬ್ರಹ್ಮ ನಾರಾಯಣರಿಹರು.
ಸಾವಿರಕೋಟಿಯ ಮೇಲೆ ನಾಲ್ಕುನೂರುಕೋಟಿ ವೇದಪುರುಷರು
ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./106
ಅಂಥ ಬ್ರಹ್ಮಾಂಡವ ಐವತ್ತುನಾಲ್ಕು ಸಾವಿರದ ಐನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕ್ರೋಧವೆಂಬ ಭುವನ.
ಆ ಭುವನದೊಳು ಜ್ಯೋತಿರ್ಮಯನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಎಪ್ಪತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಇನ್ನೂರಾ ಎಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರಿಹರು.
ಇನ್ನೂರಾ ಎಪ್ಪತ್ತುಕೋಟಿ ವೇದಪುರುಷರು ಮುನೀಂದ್ರರು
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./107
ಅಂಥ ಬ್ರಹ್ಮಾಂಡವ ಐವತ್ತುನಾಲ್ಕುಲಕ್ಷದ ಮೇಲೆ
ಸಾವಿರದ ಐನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶ್ರೀಧರವೆಂಬ ಭುವನ.
ಆ ಭುವನದೊಳು ಅನಂತಗುಣರೂಪನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾ ಅರವತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಏಳುನೂರಾ ಅರವತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./108
ಅಂಥ ಬ್ರಹ್ಮಾಂಡವ ಐವತ್ತುಮೂರುಸಾವಿರದ ಐನೂರ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಚಂಡವೆಂಬ ಭುವನ.
ಆ ಭುವನದೊಳು ಭವದೂರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಅರವತ್ತೈದುಕೋಟಿ ಇಂದ್ರಚಂದ್ರಾದಿತ್ಯರಿಹರು,
ಇನ್ನೂರಾ ಅರವತ್ತೈದುಕೋಟಿ ವೇದಪುರುಷರು ಮುನೀಂದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./109
ಅಂಥ ಬ್ರಹ್ಮಾಂಡವ ಐವತ್ತುಲಕ್ಷದ ಮೇಲೆ
ಸಾವಿರದಾ ನಾನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಈಶವೆಂಬ ಭುವನ.
ಆ ಭುವನದೊಳು ಈಶಾನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾ ನಲವತ್ತೈದುಕೋಟಿ ನಾರಾಯಣ-ಬ್ರಹ್ಮ-ರುದ್ರಾದಿಗಳಿಹರು.
ಏಳುನೂರಾ ನಲವತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./110
ಅಂಥ ಬ್ರಹ್ಮಾಂಡವ ಐವತ್ತುಸಾವಿರದ ನಾನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶೂರವೆಂಬ ಭುವನ.
ಆ ಭುವನದೊಳು ಅನಂತಕಾಲಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾಐವತ್ತುಕೋಟಿ ನಾರಾಯಣ-ರುದ್ರ-ಬ್ರಹ್ಮಾದಿಗಳಿಹರು,
ಇನ್ನೂರಾಐವತ್ತುಕೋಟಿ ಇಂದ್ರಚಂದ್ರಾದಿತ್ಯರು, ವೇದಪುರುಷರು,
ಮುನೀಂದ್ರರು ದೇವರ್ಕಳಿಹರು ನೋಡಾ,
ಅಪ್ರಮಾಣಕೂಡಲಸಂಗಮದೇವಾ./111
ಅಂಥ ಬ್ರಹ್ಮಾಂಡವ ಐವತ್ತೆಂಟುಲಕ್ಷದ ಮೇಲೆ
ಸಾವಿರದಾ ಐನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಧನ್ಯರೂಪವೆಂಬ ಭುವನ.
ಆ ಭುವನದೊಳು ಪ್ರಳಯಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರೆಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಏಳುನೂರೆಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./112
ಅಂಥ ಬ್ರಹ್ಮಾಂಡವ ಐವತ್ತೆಂಟುಸಾವಿರದ ಐನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಂಗಳವೆಂಬ ಭುವನ.
ಆ ಭುವನದೊಳು ಅನಂತಗುಣರೂಪನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾತೊಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ.
ಇನ್ನೂರಾತೊಂಬತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./113
ಅಂಥ ಬ್ರಹ್ಮಾಂಡವ ಐವತ್ತೆರಡುಲಕ್ಷದ ಮೇಲೆ
ಸಾವಿರದಾ ಐನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪ್ರಕಾಮದವೆಂಬ ಭುವನ.
ಆ ಭುವನದೊಳು ಪ್ರನಾಥನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾ ಐವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಏಳುನೂರಾ ಐವತ್ತೈದುಕೋಟಿ ವೇದಪುರುಷರು ಮುನೀಂದ್ರರು
ದೇವರ್ಕಳು ಇಂದ್ರಚಂದ್ರಾದಿತ್ಯರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./114
ಅಂಥ ಬ್ರಹ್ಮಾಂಡವ ಐವತ್ತೆರಡುಸಾವಿರದ ಐನೂರಾಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಜ್ಯೋತಿಯೆಂಬ ಭುವನ.
ಆ ಭುವನದೊಳು ಅನಂತಮಾಯಾಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಅರವತ್ತುಕೋಟಿ
ರುದ್ರ-ಬ್ರಹ್ಮ-ನಾರಾಯಣರು ಇಂದ್ರಚಂದ್ರಾದಿತ್ಯರಿಹರು ನೋಡಾ.
ಇನ್ನೂರಾ ಅರವತ್ತುಕೋಟಿ
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ,
ಅಪ್ರಮಾಣಕೂಡಲಸಂಗಮದೇವಾ./115
ಅಂಥ ಬ್ರಹ್ಮಾಂಡವ ಐವತ್ತೇಳುಲಕ್ಷದ ಮೇಲೆ
ಸಾವಿರದಾ ಐನೂರಾ ಅರುವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸೌಮ್ಯದೇಹವೆಂಬ ಭುವನ.
ಆ ಭುವನದೊಳು ಪ್ರಳಯಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರೆಂಬತ್ತು ಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಏಳುನೂರೆಂಬತ್ತು ಕೋಟಿ ಇಂದ್ರ-ಬ್ರಹ್ಮ-ನಾರಾಯಣ
ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./116
ಅಂಥ ಬ್ರಹ್ಮಾಂಡವ ಐವತ್ತೇಳುಸಾವಿರದ ಐನೂರಾ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭವ್ಯವೆಂಬ ಭುವನ.
ಆ ಭುವನದೊಳು ನೀಲಲೋಹಿತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಎಂಬತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಇನ್ನೂರಾ ಎಂಬತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./117
ಅಂಥ ಬ್ರಹ್ಮಾಂಡವ ಐವತ್ತೈದುಲಕ್ಷದ ಮೇಲೆ
ಸಾವಿರದಾ ಐನೂರಾನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಲಕ್ಷ್ಮೀಧರವೆಂಬ ಭುವನ.
ಆ ಭುವನದೊಳು ಗುಣಾತೀತನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾ ಎಪ್ಪತ್ತುಕೋಟಿ ನಾರಾಯಣ-ಬ್ರಹ್ಮ-ರುದ್ರರಿಹರು.
ಏಳುನೂರಾ ಎಪ್ಪತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./118
ಅಂಥ ಬ್ರಹ್ಮಾಂಡವ ಐವತ್ತೈದುಸಾವಿರದ ಐನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅನಂತವೆಂಬ ಭುವನ.
ಆ ಭುವನದೊಳು ಅನಂತಾನಂತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಎಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಇನ್ನೂರಾ ಎಪ್ಪತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./119
ಅಂಥ ಬ್ರಹ್ಮಾಂಡವ ಐವತ್ತೊಂದುಲಕ್ಷದ ಮೇಲೆ
ಸಾವಿರದಾ ಐನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಸರ್ವವಿದ್ಯಾಧಿಪವೆಂಬ ಭುವನ.
ಆ ಭುವನದೊಳು ಸರ್ವಜ್ಞನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರೈವತ್ತು ಕೋಟಿ ದೇವರ್ಕಳು ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರಿಹರು ನೋಡಾ.
ಏಳುನೂರೈವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./120
ಅಂಥ ಬ್ರಹ್ಮಾಂಡವ ಐವತ್ತೊಂದುಸಾವಿರದ ಐದುನೂರಾಯೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸಂವರ್ತವೆಂಬ ಭುವನ.
ಆ ಭುವನದೊಳು ಅನಂತಕಾಮಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಐವತ್ತೈದುಕೋಟಿ
ಬ್ರಹ್ಮ-ನಾರಾಯಣ-ರುದ್ರರು, ಇಂದ್ರಚಂದ್ರಾದಿತ್ಯರಿಹರು ನೋಡಾ.
ಇನ್ನೂರಾಐವತ್ತೈದುಕೋಟಿ ವೇದಪುರುಷರು ಮುನೀಂದ್ರರು
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./121
ಅಂಥ ಬ್ರಹ್ಮಾಂಡವ ಐವತ್ತೊಂಬತ್ತು ಲಕ್ಷದ ಮೇಲೆ
ಸಾವಿರದಾ ಐನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ನಿಧೀಶವೆಂಬ ಭುವನ.
ಆ ಭುವನದೊಳು ಭೂತೇಶನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳನೂರಾತೊಂಬತ್ತುಕೋಟಿ ಇಂದ್ರ-ಬ್ರಹ್ಮ-ನಾರಾಯಣ-ರುದ್ರರಿಹರು.
ಏಳುನೂರಾತೊಂಬತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./122
ಅಂಥ ಬ್ರಹ್ಮಾಂಡವ ಐವತ್ತೊಂಬತ್ತುಸಾವಿರದ ಐನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅಜವೆಂಬ ಭುವನ.
ಆ ಭುವನದೊಳು ಅಜಕಪಾಲಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ತೊಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಇನ್ನೂರಾ ತೊಂಬತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಆಪ್ರಮಾಣಕೂಡಲಸಂಗಮದೇವಾ./123
ಅಂಥ ಬ್ರಹ್ಮಾಂಡವ ಐವತ್ಮೂರುಲಕ್ಷದ ಮೇಲೆ
ಸಾವಿರದಾ ಐನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪ್ರಸೀದನವೆಂಬ ಭುವನ.
ಆ ಭುವನದೊಳು ಅಖಿಲಾಂಡಕೋಟಿಬ್ರಹ್ಮಾಂಡನಾಯಕನೆಂಬ
ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾ ಅರವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಏಳುನೂರಾ ಅರವತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./124
ಅಂಥ ಬ್ರಹ್ಮಾಂಡವ ಒಂದುಕೋಟಿಯ ಮೇಲೆ
ಸಾವಿರದಾ ಒಂಬೈನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ದಹನವೆಂಬ ಭುವನ.
ಆ ಭುವನದೊಳು ತ್ರಿಕಾಲಾಗ್ನಿಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ಸಾವಿರಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./125
ಅಂಥ ಬ್ರಹ್ಮಾಂಡವ ಒಂಬತ್ತುಕೋಟಿಯ ಮೇಲೆ
ಎರಡು ಸಾವಿರದಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಪಿನಾಕಿಯೆಂಬ ಭುವನ.
ಆ ಭುವನದೊಳು ಮಹಾಘೋರವೀರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಎಂಬತ್ತುಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು.
ಸಾವಿರಕೋಟಿಯ ಮೇಲೆ ಎಂಬತ್ತುಕೋಟಿ ವೇದಪುರುಷರು
ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./126
ಅಂಥ ಬ್ರಹ್ಮಾಂಡವ ಒಂಬತ್ತುಲಕ್ಷದ ಮೇಲೆ ಸಾವಿರದ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಹೇಂದ್ರಕೇಶ್ವರವೆಂಬ ಭುವನ.
ಆ ಭುವನದೊಳು ಮಹಾಂತಾಕಾಶನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರಾನಲವತ್ತುಕೋಟಿನಾರಾಯಣ-ಬ್ರಹ್ಮ-ರುದ್ರಾದಿಗಳಿಹರುನೋಡಾ.
ಐನೂರಾನಲವತ್ತುಕೋಟಿ ಇಂದ್ರ ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./127
ಅಂಥ ಬ್ರಹ್ಮಾಂಡವ ಒಂಬತ್ತುಸಾವಿರದ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ದೀಪಿಕಾಧಿಕವೆಂಬ ಭುವನ.
ಆ ಭುವನದೊಳು ಏಕಪಾದನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾಲ್ವತ್ತೈದುಕೋಟಿ ರುದ್ರ ಬ್ರಹ್ಮ ನಾರಾಯಣರು,
ನಾಲ್ವತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು,
ನಾಲ್ವತ್ತೆರಡುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./128
ಅಂಥ ಬ್ರಹ್ಮಾಂಡವ ತೊಂಬತ್ತಾರು ಲಕ್ಷದ ಮೇಲೆ
ಸಾವಿರದಾ ಒಂಬಯಿನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಯಾಮ್ಯವೆಂಬ ಭುವನ.
ಆ ಭುವನದೊಳು ಅವ್ಯಕ್ತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಎಪ್ಪತ್ತೈದು ಕೋಟಿ
ದೇವರ್ಕಳು ಮುನೀಂದ್ರರು ಇಂದ್ರ ಚಂದ್ರಾದಿತ್ಯರು
ವೇದಪುರುಷರಿಹರು ನೋಡಾ.
ಒಂಬತ್ತುನೂರಾ ಎಪ್ಪತ್ತೈದು ಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./129
ಅಂಥ ಬ್ರಹ್ಮಾಂಡವ ತೊಂಬತ್ತಾರುಸಾವಿರದ ಒಂಬೈನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಸ್ತ್ರಾಪದವೆಂಬ ಭುವನ.
ಆ ಭುವನದೊಳು ಮಹಾಕೋದಂಡನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರೆಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ನಾನೂರೆಂಬತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./130
ಅಂಥ ಬ್ರಹ್ಮಾಂಡವ ತೊಂಬತ್ತಾರುಸಾವಿರದ ಒಂಬೈನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅವಿಮುಕ್ತವೆಂಬ ಭುವನ.
ಆ ಭುವನದೊಳು ಮುಕ್ತಾಂಗನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರೆಪ್ಪತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ.
ನಾನೂರೆಪ್ಪತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./131
ಅಂಥ ಬ್ರಹ್ಮಾಂಡವ ತೊಂಬತ್ತು ಮೂರು ಲಕ್ಷದ ಮೇಲೆ
ಸಾವಿರದ ಒಂಬೈನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಕತರ್ೃವೆಂಬ ಭುವನ.
ಆ ಭುವನದೊಳು ಮಹಾಭೈರವವೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಅರುವತ್ತು ಕೋಟಿ ಬ್ರಹ್ಮ ನಾರಾಯಣ ರುದ್ರರಿಹರು.
ಒಂಬತ್ತುನೂರಾ ಅರುವತ್ತು ಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./132
ಅಂಥ ಬ್ರಹ್ಮಾಂಡವ ತೊಂಬತ್ತು ಮೂರುಸಾವಿರದ
ಒಂಬೈನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಹಾಲಯವೆಂಬ ಭುವನ.
ಆ ಭುವನದೊಳು ಮಹಾಭೈರವನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರರುವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ.
ನಾನೂರರುವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./133
ಅಂಥ ಬ್ರಹ್ಮಾಂಡವ ತೊಂಬತ್ತು ಲಕ್ಷದ ಮೇಲೆ
ಸಾವಿರದ ಎಂಟುನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಧರ್ಮವೆಂಬ ಭುವನ.
ಆ ಭುವನದೊಳು ಧರ್ಮಸ್ವರೂಪನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತು ನೂರಾ ನಾಲ್ವತ್ತೈದು ಕೋಟಿ ದೇವರ್ಕಳು ವೇದಪುರುಷರು
ಇಂದ್ರಚದ್ರಾದಿತ್ಯರು ಇಹರು ನೋಡಾ.
ಒಂಬತ್ತು ನೂರಾ ನಾಲ್ವತ್ತೈದು ಕೋಟಿ
ರುದ್ರ ಬ್ರಹ್ಮ ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./134
ಅಂಥ ಬ್ರಹ್ಮಾಂಡವ ತೊಂಬತ್ತುಕೋಟಿಯ ಮೇಲೆ
ಮೂರುಸಾವಿರದಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ರುದ್ರವೆಂಬ ಭುವನ.
ಆ ಭುವನದೊಳು ಅನಂತಲೋಚನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಇಪ್ಪತ್ನಾಲ್ಕುನೂರಾ ಅರುವತ್ತುಕೋಟಿ
ರುದ್ರ ಬ್ರಹ್ಮ ನಾರಾಯಣ ಇಂದ್ರರಿಹರು.
ಸಾವಿರಕೋಟಿಯ ಮೇಲೆ ಇಪ್ಪತ್ತುನಾಲ್ಕುನೂರಾ ಅರುವತ್ತುಕೋಟಿ
ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./135
ಅಂಥ ಬ್ರಹ್ಮಾಂಡವ ತೊಂಬತ್ತುಸಾವಿರದ ಎಂಟನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸ್ಥಾಣುವೆಂಬ ಭುವನ.
ಆ ಭುವನದೊಳು ಸ್ಥಾಣುನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರ ಐವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ನಾನೂರೈವತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./136
ಅಂಥ ಬ್ರಹ್ಮಾಂಡವ ತೊಂಬತ್ತೆಂಟುಸಾವಿರದ ಒಂಬೈನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಹೇಂದ್ರವೆಂಬ ಭುವನ.
ಆ ಭುವನದೊಳು ಮಹೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರತೊಂಬತ್ತುಕೋಟಿ
ನಾರಾಯಣ-ರುದ್ರ-ಬ್ರಹ್ಮಾದಿಗಳಿಹರು ನೋಡಾ.
ನಾನೂರತೊಂಬತ್ತುಕೋಟಿ ದೇವರ್ಕಳು ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ಇಹರು ನೋಡಾ
ಅಪ್ಪಮಾಣಕೂಡಲಸಂಗಮದೇವಾ./137
ಅಂಥ ಬ್ರಹ್ಮಾಂಡವ ತೊಂಬತ್ತೆರಡು ಲಕ್ಷದ ಮೇಲೆ
ಸಾವಿರದ ಒಂಬಯಿನೂರಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು
ನಿಯೋಕ್ತೃವೆಂಬ ಭುವನ.
ಆ ಭುವನದೊಳು ಸರ್ವಗತನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಐವತ್ತೈದು ಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ಒಂಬತ್ತು ನೂರಾ ಐವತ್ತೈದು ಕೋಟಿ ವೇದಪುರುಷರು ಮುನೀಂದ್ರರು
ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./138
ಅಂಥ ಬ್ರಹ್ಮಾಂಡವ ತೊಂಬತ್ತೆರಡುಸಾವಿರದ ಒಂಬೈನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭದ್ರಕರ್ಣವೆಂಬ ಭುವನ.
ಆ ಭುವನದೊಳು ಭದ್ರಕಾಳನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರರುವತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ನಾನೂರರುವತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./139
ಅಂಥ ಬ್ರಹ್ಮಾಂಡವ ತೊಂಬತ್ತೇಳು ಲಕ್ಷದ ಮೇಲೆ
ಸಾವಿರದ ಒಂಬೈನೂರಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಕ್ಷಯಾಂತಕವೆಂಬ ಭುವನ.
ಆ ಭುವನದೊಳು ವಿಶ್ವೇಶ್ವರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಎಂಬತ್ತು ಕೋಟಿ ಮುನೀಂದ್ರರು ದೇವರ್ಕಳು
ಇಂದ್ರಚಂದ್ರಾದಿತ್ಯರು ವೇದಪುರುಷರು ಇಹರು ನೋಡಾ.
ಒಂಬತ್ತುನೂರಾ ಎಂಬತ್ತುಕೋಟಿ
ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./140
ಅಂಥ ಬ್ರಹ್ಮಾಂಡವ ತೊಂಬತ್ತೇಳು ಲಕ್ಷದ ಮೇಲೆ
ಸಾವಿರದಾ ಒಂಬಯಿನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಭಸ್ಮಾಂತಕವೆಂಬ ಭುವನ.
ಆ ಭುವನದೊಳು ದೇವದೇವನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಎಂಬತ್ತೈದು ಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಒಂಬತ್ತುನೂರಾ ಎಂಬತ್ತೈದು ಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./141
ಅಂಥ ಬ್ರಹ್ಮಾಂಡವ ತೊಂಬತ್ತೇಳುಸಾವಿರದ ಒಂಬೈನೂರಾ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭೀಮೇಶ್ವರವೆಂಬ ಭುವನ.
ಆ ಭುವನದೊಳು ಭೀಮನಾಥನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರೆಂಬತ್ತೈದುಕೋಟಿ
ಬ್ರಹ್ಮ-ನಾರಾಯಣ-ರುದ್ರಾದಿಗಳಿಹರು ನೋಡಾ.
ನಾನುರೆಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./142
ಅಂಥ ಬ್ರಹ್ಮಾಂಡವ ತೊಂಬತ್ತೈದು ಲಕ್ಷದ ಮೇಲೆ
ಸಾವಿರದಾ ಒಂಬಯಿನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು
ಮೃತ್ಯುವೆಂಬ ಭುವನ.
ಆ ಭುವನದೊಳು ಮೃತ್ಯುಂಜಯನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಎಪ್ಪತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಒಂಬತ್ತುನೂರಾ ಎಪ್ಪತ್ತುಕೋಟಿ
ರುದ್ರ ಬ್ರಹ್ಮ ನಾರಾಯಣ ಇಂದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./143
ಅಂಥ ಬ್ರಹ್ಮಾಂಡವ ತೊಂಬತ್ತೈದುಸಾವಿರದ ಒಂಬೈನೂರ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ರುದ್ರಕೋಟಿಯೆಂಬ ಭುವನ.
ಆ ಭುವನದೊಳು ಕೋದಂಡನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರೆಪ್ಪತ್ತೈದುಕೋಟಿ ದೇವರ್ಕಳು ಮುನೀಂದ್ರರು ವೇದಪುರುಷರು
ಇಂದ್ರಚಂದ್ರಾದಿತ್ಯರಿಹರು ನೋಡಾ.
ನಾನೂರೆಪ್ಪತ್ತೈದುಕೋಟಿ ನಾರಾಯಣ ರುದ್ರ ಬ್ರಹ್ಮಾದಿಗಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./144
ಅಂಥ ಬ್ರಹ್ಮಾಂಡವ ತೊಂಬತ್ತೊಂದು ಲಕ್ಷದ ಮೇಲೆ
ಸಾವಿರದ ಒಂಬಯಿನೂರಾಯೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಧರ್ಮಪರೇಣವೆಂಬ ಭುವನ.
ಆ ಭುವನದೊಳು ಧರ್ಮಾಧರ್ಮರಹಿತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ಐವತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಒಂಬತ್ತುನೂರಾ ಐವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./145
ಅಂಥ ಬ್ರಹ್ಮಾಂಡವ ತೊಂಬತ್ತೊಂದುಸಾವಿರದ ಒಂಬತ್ತನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಸ್ವರ್ಣಾಕ್ಷವೆಂಬ ಭುವನ.
ಆ ಭುವನದೊಳು ಅಕ್ಷಮಾಲಾಧರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರೈವತ್ತೈದುಕೋಟಿ ನಾರಾಯಣ-ಬ್ರಹ್ಮ-ರುದ್ರಾದಿಗಳಿಹರು.
ನಾನೂರೈವತ್ತೈದುಕೋಟಿ ಇಂದ್ರ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./146
ಅಂಥ ಬ್ರಹ್ಮಾಂಡವ ತೊಂಬತ್ತೊಂಬತ್ತು ಲಕ್ಷದ ಮೇಲೆ
ಸಾವಿರದಾ ಒಂಬೈನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಬಬ್ರುವೆಂಬ ಭುವನ.
ಆ ಭುವನದೊಳು ಜಗದ್ಗುರುವೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರಾ ತೊಂಬತ್ತುಕೋಟಿ
ನಾರಾಯಣ ರುದ್ರ ಬ್ರಹ್ಮರಿಹರು ನೋಡಾ.
ಒಂಬತ್ತುನೂರಾ ತೊಂಬತ್ತುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು
ವೇದಪುರುಷರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./147
ಅಂಥ ಬ್ರಹ್ಮಾಂಡವ ತೊಂಬತ್ನಾಲ್ಕು ಲಕ್ಷದ ಮೇಲೆ
ಸಾವಿರದಾ ಒಂಬಯಿನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಹರವೆಂಬ ಭುವನ.
ಆ ಭುವನದೊಳು ಸಂಹಾರತಾಂಡವನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಒಂಬತ್ತುನೂರ ಅರುವತ್ತೈದು ಕೋಟಿ
ನಾರಾಯಣ ರುದ್ರ ಬ್ರಹ್ಮಾದಿಗಳಿಹರು ನೋಡಾ.
ಒಂಬತ್ತುನೂರಾ ಅರುವತ್ತೈದು ಕೋಟಿ ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./148
ಅಂಥ ಬ್ರಹ್ಮಾಂಡವ ತೊಂಬತ್ರೊಂಬತ್ತುಸಾವಿರದ ಒಂಬೈನೂರಾಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅಟ್ಟಹಾಸವೆಂಬ ಭುವನ.
ಆ ಭುವನದೊಳು ಅಯೋಗನಾಶನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರತೊಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ,
ನಾನೂರತೊಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./149
ಅಂಥ ಬ್ರಹ್ಮಾಂಡವ ನಾಲವತ್ತಾರುಲಕ್ಷದ ಮೇಲೆ
ಸಾವಿರದ ನಾನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸುರೇಶಾನವೆಂಬ ಭುವನ.
ಆ ಭುವನದೊಳು ಸುರೇಂದ್ರಾಧಿಪನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಿಪ್ಪತ್ತೈದುಕೋಟಿ ದೇವರ್ಕಳು ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರಿಹರು ನೋಡಾ.
ಏಳುನೂರಿಪ್ಪತ್ತೈದು ಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./150
ಅಂಥ ಬ್ರಹ್ಮಾಂಡವ ನಾಲವತ್ತುನಾಲ್ಕುಲಕ್ಷದ ಮೇಲೆ
ಸಾವಿರದಾ ನಾನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಜೇಷ್ಠವೆಂಬ ಭುವನ.
ಆ ಭುವನದೊಳು ವಿಶ್ವಮೂಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾ ಹದಿನೈದುಕೋಟಿ
ನಾರಾಯಣ-ಬ್ರಹ್ಮ-ರುದ್ರಾದಿಗಳಿಹರು ನೋಡಾ.
ಏಳುನೂರಾ ಹದಿನೈದುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./151
ಅಂಥ ಬ್ರಹ್ಮಾಂಡವ ನಾಲವತ್ತೆಂಟುಲಕ್ಷದ ಮೇಲೆ
ಸಾವಿರದಾ ನಾನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಜ್ಞಾನಭೂತವೆಂಬ ಭುವನ.
ಆ ಭುವನದೊಳು ಜ್ಞಾನಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳನೂರ ಮೂವತ್ತೈದುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ಏಳುನೂರ ಮೂವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./152
ಅಂಥ ಬ್ರಹ್ಮಾಂಡವ ನಾಲವತ್ತೇಳು ಲಕ್ಷದ ಮೇಲೆ
ಸಾವಿರದಾ ನಾನೂರಾ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವೇದಪಾಠಕವೆಂಬ ಭುವನ.
ಆ ಭುವನದೊಳು ವೇದನಾಥನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರ ಮೂವತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ.
ಏಳುನೂರ ಮೂವತ್ತುಕೋಟಿ
ಇಂದ್ರ-ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./153
ಅಂಥ ಬ್ರಹ್ಮಾಂಡವ ನಾಲವತ್ತೈದುಲಕ್ಷದ ಮೇಲೆ
ಸಾವಿರದಾ ನಾನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸರ್ವವೆಂಬ ಭುವನ.
ಆ ಭುವನದೊಳು ಸರ್ವೆಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಿಪ್ಪತ್ತು ಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಏಳುನೂರಿಪ್ಪತ್ತು ಕೋಟಿ ವೇದಪುರುಷರು ಮುನೀಂದ್ರರು
ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./154
ಅಂಥ ಬ್ರಹ್ಮಾಂಡವ ನಾಲವತ್ತೊಂಬತ್ತುಲಕ್ಷದ ಮೇಲೆ
ಸಾವಿರದಾ ನಾನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸರ್ವಜ್ಞವೆಂಬ ಭುವನ.
ಆ ಭುವನದೊಳು ಸರ್ವವ್ಯಾಪಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರ ನಲವತ್ತುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಏಳುನೂರ ನಲವತ್ತುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./155
ಅಂಥ ಬ್ರಹ್ಮಾಂಡವ ನಾಲ್ಕು ಲಕ್ಷದ ಮೇಲೆ ಸಾವಿರದ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕುರುಕ್ಷೇತ್ರವೆಂಬ ಭುವನ.
ಆ ಭುವನದೊಳು ರೌದ್ರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರಾ ಹದಿನೈದುಕೋಟಿ ನಾರಾಯಣ-ಬ್ರಹ್ಮ
ರುದ್ರಾದಿಗಳಿಹರು ನೋಡಾ.
ಐನೂರಾ ಹದಿನೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./156
ಅಂಥ ಬ್ರಹ್ಮಾಂಡವ ನಾಲ್ಕುಕೋಟಿಯ ಮೇಲೆ
ಎರಡುಸಾವಿರದ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಬಾಧಕವೆಂಬ ಭುವನ.
ಆ ಭುವನದೊಳು ಅಘೋರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರ ಕೋಟಿಯ ಮೇಲೆ ಮೂವತ್ತುಕೋಟಿ
ನಾರಾಯಣ ಬ್ರಹ್ಮ ರುದ್ರರಿಹರು.
ಸಾವಿರ ಕೋಟಿಯ ಮೇಲೆ ಮೂವತ್ತು ಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./157
ಅಂಥ ಬ್ರಹ್ಮಾಂಡವ ನಾಲ್ಕುನೂರು ಕೋಟಿಯ ಮೇಲೆ
ನಾಲ್ಕು ಸಾವಿರದಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಕೂಷ್ಮಾಂಡವೆಂಬ ಭುವನ
ಆ ಭುವನದೊಳು ಬ್ರಹ್ಮನಾಥನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಮೂನ್ನೂರೆಂಬತ್ತು ನಾಲ್ಕುಕೋಟಿಯ ಮೇಲೆ
ಐನೂರೆಪ್ಪತ್ತಾರುಕೋಟಿ
ನಾರಾಯಣ ಬ್ರಹ್ಮ ರುದ್ರರಿಹರು.
ಸಾವಿರಕೋಟಿಯ ಮೇಲೆ ಮೂನ್ನೂರೆಂಬತ್ತು ನಾಲ್ಕುಕೋಟಿಯ ಮೇಲೆ
ಐನೂರೆಪ್ಪತ್ತಾರುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./158
ಅಂಥ ಬ್ರಹ್ಮಾಂಡವ ನಾಲ್ಕುಸಾವಿರದ ಮೂತ್ತೆಂಟುಕೋಟಿ
ಬ್ರಹ್ಮಾಂಡವನೊಳಕೊಂಡುದೊಂದು ವ್ಯೋಮರೂಪನೆಂಬ ಭುವನ.
ಆ ಭುವನದೊಳು ಪ್ರಳಯಕಾಲನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇಪ್ಪತ್ತುಕೋಟಿ ಇಂದ್ರ ಬ್ರಹ್ಮ ನಾರಾಯಣರು,
ಇಪ್ಪತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು, ಮುನೀಂದ್ರರು,
ಮೂವತ್ತೇಳುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./159
ಅಂಥ ಬ್ರಹ್ಮಾಂಡವ ನಾಲ್ವತ್ತಾರುಸಾವಿರದ ನಾನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಹಾದೇವವೆಂಬ ಭುವನ.
ಆ ಭುವನದೊಳು ಅನಂತಬ್ರಹ್ಮಾಂಡಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಮೂವತ್ತುಕೋಟಿ
ರುದ್ರ-ಬ್ರಹ್ಮ-ನಾರಾಯಣರು, ಇಂದ್ರ-ಚಂದ್ರಾದಿತ್ಯರು,
ಇನ್ನೂರಾಮೂವತ್ತುಕೋಟಿ ವೇದಪುರುಷರು ಮುನೀಂದ್ರರು
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./160
ಅಂಥ ಬ್ರಹ್ಮಾಂಡವ ನಾಲ್ವತ್ತು ಕೋಟಿಯ ಮೇಲೆ
ಮೂರುಸಾವಿರದಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಪ್ರಮರ್ಧವೆಂಬ ಭುವನ.
ಆ ಭುವನದೊಳು ಜ್ಯೋತಿಪ್ರಕಾಶನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಮೂನ್ನೂರುಕೋಟಿ
ರುದ್ರ ಬ್ರಹ್ಮ ನಾರಾಯಣರಿಹರು.
ಸಾವಿರಕೋಟಿಯ ಮೇಲೆ ಮೂನ್ನೂರು ಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./161
ಅಂಥ ಬ್ರಹ್ಮಾಂಡವ ನಾಲ್ವತ್ತುನಾಲ್ಕುಸಾವಿರದ ನಾನೂರಾಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭವವೆಂಬ ಭುವನ.
ಆ ಭುವನದೊಳು ಭವಹರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಇಪ್ಪತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು
ಇನ್ನೂರಾ ಇಪ್ಪತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ,
ಅಪ್ರಮಾಣಕೂಡಲಸಂಗಮದೇವಾ./162
ಅಂಥ ಬ್ರಹ್ಮಾಂಡವ ನಾಲ್ವತ್ತುಮೂರುಸಾವಿರದ ನಾನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಉದ್ಭವವೆಂಬ ಭುವನ.
ಆ ಭುವನದೊಳು ಅಜಹರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾಹದಿನೈದುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು,
ಇನ್ನೂರಾ ಹದಿನೈದುಕೋಟಿ ಇಂದ್ರ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./163
ಅಂಥ ಬ್ರಹ್ಮಾಂಡವ ನಾಲ್ವತ್ತುಲಕ್ಷದ ಮೇಲೆ
ಸಾವಿರದ ಮುನ್ನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಆನಂದವೆಂಬ ಭುವನ.
ಆ ಭುವನದೊಳು ಸದಾನಂದವೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಾ ತೊಂಬತ್ತೈದುಕೋಟಿ
ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ.
ಆರುನೂರಾ ತೊಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./164
ಅಂಥ ಬ್ರಹ್ಮಾಂಡವ ನಾಲ್ವತ್ತುಸಾವಿರದಮುನ್ನೂರಾತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಏಕಿಶಾನವೆಂಬ ಭುವನ.
ಆ ಭುವನದೊಳು ಏಕರುದ್ರಮಹೇಶ್ವರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರುಕೋಟಿ ಇಂದ್ರ ಬ್ರಹ್ಮ ನಾರಾಯಣ ರುದ್ರರು,
ಇನ್ನೂರುಕೋಟಿ ಚಂದ್ರಾದಿತ್ಯರು ವೇದಪುರುಷರು,
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./165
ಅಂಥ ಬ್ರಹ್ಮಾಂಡವ ನಾಲ್ವತ್ತೆಂಟುಸಾವಿರದಾ ನಾನೂರ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಏಕವೀರವೆಂಬ ಭುವನ.
ಆ ಭುವನದೊಳು ಅನಂತಕೋಟಿ ಇಂದ್ರಸಂಹಾರನೆಂಬ
ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾನಾಲ್ವತ್ತುಕೋಟಿ
ಇಂದ್ರ-ನಾರಾಯಣ-ಬ್ರಹ್ಮ -ರುದ್ರರಿಹರುನೋಡಾ.
ಇನ್ನೂರಾ ನಾಲ್ವತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./166
ಅಂಥ ಬ್ರಹ್ಮಾಂಡವ ನಾಲ್ವತ್ತೆರಡುಲಕ್ಷದ ಮೇಲೆ
ಸಾವಿರದ ನಾನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಬಲಿಪ್ರಿಯವೆಂಬ ಭುವನ.
ಆ ಭುವನದೊಳು ಶಂಭುವೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರೈದುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು.
ಏಳುನೂರೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./167
ಅಂಥ ಬ್ರಹ್ಮಾಂಡವ ನಾಲ್ವತ್ತೆರಡುಸಾವಿರದ ನೂರಾಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪಿಂಗಳೇಕ್ಷಣವೆಂಬ ಭುವನ.
ಆ ಭುವನದೊಳು ಮಹದಾನಂದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾಹತ್ತುಕೋಟಿ ನಾರಾಯಣ ರುದ್ರ ಬ್ರಹ್ಮರು, ಇಂದ್ರಚಂದ್ರಾದಿತ್ಯರು,
ಇನ್ನೂರಾಹತ್ತುಕೋಟಿ ವೇದಪುರುಷರು
ಮುನೀಂದ್ರರು ದೇವರ್ಕಳಿಹರುನೋಡಾ
ಅಪ್ರಮಾಣಕೂಡಲಸಂಗಮದೇವಾ./168
ಅಂಥ ಬ್ರಹ್ಮಾಂಡವ ನಾಲ್ವತ್ತೇಳುಸಾವಿರದಾ ನಾನೂರಾ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಿಖೇದವೆಂಬ ಭುವನ.
ಆ ಭುವನದೊಳು ಅನಂತವಿಷ್ಣುಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಮೂವತ್ತೈದುಕೋಟಿ ದೇವರ್ಕಳು ವೇದಪುರುಷರು ಮುನೀಂದ್ರರು,ಇಂದ್ರಚಂದ್ರಾದಿತ್ಯರು,
ಇನ್ನೂರಾಮೂವತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./169
ಅಂಥ ಬ್ರಹ್ಮಾಂಡವ ನಾಲ್ವತ್ತೈದು ಸಾವಿರದಾ ನಾನೂರನಾಲ್ವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಾಮದೇವವೆಂಬ ಭುವನ.
ಆ ಭುವನದೊಳು ಹರಿಹರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ಇಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರು
ವೇದಪುರುಷರು ಮುನೀಂದ್ರರು ಇಹರು ನೋಡಾ,
ಇನ್ನೂರಾ ಇಪ್ಪತ್ತೈದು ಕೋಟಿ ಇಂದ್ರಚಂದ್ರಾದಿತ್ಯರು
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./170
ಅಂಥ ಬ್ರಹ್ಮಾಂಡವ ನಾಲ್ವತ್ತೊಂದುಲಕ್ಷದ ಮೇಲೆ
ಸಾವಿರದ ನಾನೂರೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವೃಷಧರವೆಂಬ ಭುವನ.
ಆ ಭುವನದೊಳು ವಿಷಕಂಠನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರುಕೋಟಿ ನಾರಾಯಣ-ಬ್ರಹ್ಮ-ರುದ್ರರಿಹರು ನೋಡಾ.
ಏಳುನೂರುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./171
ಅಂಥ ಬ್ರಹ್ಮಾಂಡವ ನಾಲ್ವತ್ತೊಂದುಸಾವಿರದನೂರಾಯೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಏಕವೆಂಬ ಭುವನ.
ಆ ಭುವನದೊಳು ಏಕೀಶನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರ ಐದುಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು,
ಇನ್ನೂರೈದುಕೋಟಿ ವೇದಪುರುಷರು ಮುನೀಂದ್ರರು
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./172
ಅಂಥ ಬ್ರಹ್ಮಾಂಡವ ನಾಲ್ವತ್ತೊಂಬತ್ತುಸಾವಿರದ ನಾನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪಂಚಾಂತಕವೆಂಬ ಭುವನ.
ಆ ಭುವನದೊಳು ಅನಂತದೇವಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಇನ್ನೂರಾ ನಾಲ್ವತ್ತೈದುಕೋಟಿ
ರುದ್ರ-ಬ್ರಹ್ಮ-ನಾರಾಯಣ, ಇಂದ್ರಚಂದ್ರಾದಿತ್ಯರು,
ಇನ್ನೂರಾ ನಾಲ್ವತ್ತೈದುಕೋಟಿ ವೇದಪುರುಷರು ಮುನೀಂದ್ರರು
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./173
ಅಂಥ ಬ್ರಹ್ಮಾಂಡವ ನಾಲ್ವತ್ಮೂರುಲಕ್ಷದ ಮೇಲೆ
ಸಾವಿರದ ನಾನೂರ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಭೂತಪಾಲವೆಂಬ ಭುವನ.
ಆ ಭುವನದೊಳು ಭೂತೇಶನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಏಳುನೂರಾ ಹತ್ತುಕೋಟಿ ಬ್ರಹ್ಮ-ವಿಷ್ಣು-ರುದ್ರಾದಿಗಳಿಹರು.
ಏಳುನೂರಾ ಹತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./174
ಅಂಥ ಬ್ರಹ್ಮಾಂಡವ ನೂರುಕೋಟಿಯ ಮೇಲೆ
ಮೂರುಸಾವಿರದಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ವಿಷ್ಣುವೆಂಬ ಭುವನ.
ಆ ಭುವನದೊಳು ಅನಂತಪಾದನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿ ಓಲಗದಲ್ಲಿ
ಸಾವಿರಕೋಟಿಯ ಮೇಲೆ ನಾಲ್ವತ್ತೆಂಟುನೂರಾ ಎಪ್ಪತ್ತೆರಡು ಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು.
ಸಾವಿರಕೋಟಿಯ ಮೇಲೆ ನಾಲ್ವತ್ತೆಂಟುನೂರಾ ಎಪ್ಪತ್ತೆರಡುಕೋಟಿ
ಇಂದ್ರಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./175
ಅಂಥ ಬ್ರಹ್ಮಾಂಡವ ಮುನ್ನೂರುಕೋಟಿಯ ಮೇಲೆ
ನಾಲ್ಕು ಸಾವಿರದಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು
ಹಾರ್ತವೆಂಬ ಭುವನ.
ಆ ಭುವನದೊಳು ಆನಂದಬ್ರಹ್ಮನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ನೂರಾತೊಂಬತ್ತೆರಡುಕೋಟಿಯು
ಇನ್ನೂರೆಂಬತ್ತುಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು.
ಸಾವಿರಕೋಟಿಯ ಮೇಲೆ ನೂರಾತೊಂಬತ್ತೆರಡುಕೋಟಿಯು
ಇನ್ನೂರೆಂಬತ್ತು ಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./176
ಅಂಥ ಬ್ರಹ್ಮಾಂಡವ ಮೂರುಕೋಟಿಯ ಮೇಲೆ
ಎರಡುಸಾವಿರದ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಹರಿಹರವೆಂಬ ಭುವನ.
ಆ ಭುವನದೊಳು ಕರುಣಾಕರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಇಪ್ಪತ್ತುಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು.
ಸಾವಿರಕೋಟಿಯ ಮೇಲೆ ಇಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./177
ಅಂಥ ಬ್ರಹ್ಮಾಂಡವ ಮೂರುಲಕ್ಷದ ಮೇಲೆ ಸಾವಿರ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ನಾಖಲವೆಂಬ ಭುವನ.
ಆ ಭುವನದೊಳು ನಾರಾಯಣಮರ್ದನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರಹತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ.
ಐನೂರಹತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./178
ಅಂಥ ಬ್ರಹ್ಮಾಂಡವ ಮೂರುಸಾವಿರದ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅನಾಥನೆಂಬ ಭುವನ.
ಆ ಭುವನದೊಳು ಕಾಲರುದ್ರನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಹದಿನೈದುಕೋಟಿ ನಾರಾಯಣ ಬ್ರಹ್ಮ ರುದ್ರರು,
ಹದಿನೈದುಕೋಟಿ ವೇದಪುರುಷರು, ಮುನೀಂದ್ರರು, ಇಂದ್ರಚಂದ್ರಾದಿತ್ಯರು,
ಮೂವತ್ತಾರುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮವೇವಾ./179
ಅಂಥ ಬ್ರಹ್ಮಾಂಡವ ಮೂವತ್ತಾರುಲಕ್ಷದ ಮೇಲೆ
ಸಾವಿರದ ಮುನ್ನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಉದಂಬರೀಶವೆಂಬ ಭುವನ.
ಆ ಭುವನದೊಳು ಉಮಾರಹಿತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರೆಪ್ಪತ್ತೈದುಕೋಟಿ ನಾರಾಯಣರು
ಬ್ರಹ್ಮ ರುದ್ರಾದಿಗಳಿಹರು ನೋಡಾ.
ಆರುನೂರೆಪ್ಪತ್ತೈದುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./180
ಅಂಥ ಬ್ರಹ್ಮಾಂಡವ ಮೂವತ್ತಾರುಸಾವಿರದ ಮುನ್ನೂರಾ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಬಲಪ್ರಮದಿನಿಯೆಂಬ ಭುವನ.
ಆ ಭುವನದೊಳು ಜ್ಯೋತಿರ್ಮಯನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ ನೂರಾ ಎಂಬತ್ತುಕೋಟಿ
ಬ್ರಹ್ಮ ನಾರಾಯಣ ರುದ್ರರು, ವೇದಪುರುಷರು, ಮುನೀಂದ್ರರು,
ನೂರಾ ಎಂಬತ್ತುಕೋಟಿ ಇಂದ್ರಚಂದ್ರಾದಿತ್ಯರು, ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./181
ಅಂಥ ಬ್ರಹ್ಮಾಂಡವ ಮೂವತ್ತು ಮೂರುಲಕ್ಷದ ಮೇಲೆ
ಸಾವಿರದ ಮುನ್ನೂರಾ ಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ದೌಷ್ಟ್ರಿಯೆಂಬ ಭುವನ.
ಆ ಭುವನದೊಳು ಶಂಭುವೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರರವತ್ತು ಕೋಟಿ ಇಂದ್ರ ಬ್ರಹ್ಮ ನಾರಾಯಣರಿಹರು.
ಆರುನೂರರವತ್ತು ಕೋಟಿ ರುದ್ರರು ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./182
ಅಂಥ ಬ್ರಹ್ಮಾಂಡವ ಮೂವತ್ತುಕೋಟಿಯ ಮೇಲೆ
ಮೂರುಸಾವಿರದಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು
ವಿಭೂತಿಯೆಂಬ ಭುವನ.
ಆ ಭುವನದೊಳು ಅನಾದಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ಇನ್ನೂರುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಸಾವಿರಕೋಟಿಯ ಮೇಲೆ ಇನ್ನೂರು ಕೋಟಿ
ಬ್ರಹ್ಮ ನಾರಾಯಣ ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./183
ಅಂಥ ಬ್ರಹ್ಮಾಂಡವ ಮೂವತ್ತುನಾಲ್ಕುಲಕ್ಷದ ಮೇಲೆ
ಸಾವಿರದ ಮುನ್ನೂರಾ ಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಜ್ರವೆಂಬ ಭುವನ.
ಆ ಭುವನದೊಳು ವಜ್ರಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರರವತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು.
ಆರುನೂರರವತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./184
ಅಂಥ ಬ್ರಹ್ಮಾಂಡವ ಮೂವತ್ತುನಾಲ್ಕುಸಾವಿರದ ಮುನ್ನೂರಾಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಬಲವಿಕರಣವೆಂಬ ಭುವನ.
ಆ ಭುವನದೊಳು ಬಾಲೇಂದುಮೌಳಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಎಪ್ಪತ್ತುಕೋಟಿ ಇಂದ್ರ-ಬ್ರಹ್ಮ-ನಾರಾಯಣ-ರುದ್ರರು,
ನೂರಾ ಎಪ್ಪತ್ತುಕೋಟಿ ಚಂದ್ರಾದಿತ್ಯರು, ವೇದಪುರುಷರು,
ಮುನೀಂದ್ರರು, ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./185
ಅಂಥ ಬ್ರಹ್ಮಾಂಡವ ಮೂವತ್ತುಮೂರುಸಾವಿರದ ಮುನ್ನೂರಾಇಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕಾಳಿಯೆಂಬ ಭುವನ.
ಆ ಭುವನದೊಳು ಕಾಳಕಂಠ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಅರವತ್ತೈದುಕೋಟಿ ದೇವರ್ಕಳು, ಇಂದ್ರಚಂದ್ರಾದಿತ್ಯರು,
ವೇದಪುರುಷರು, ಮುನೀಂದ್ರರು,
ನೂರಾಅರವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./186
ಅಂಥ ಬ್ರಹ್ಮಾಂಡವ ಮೂವತ್ತುಲಕ್ಷದ ಮೇಲೆ
ಸಾವಿರದಿನ್ನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ದೃಕ್ಷವೆಂಬ ಭುವನ.
ಆ ಭುವನದೊಳು ಸಹಸ್ರಪಾದನೆಂಬ ರುದ್ರಮೂರ್ತಿ ಇಹನು
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರಾ ನಲವತ್ತೈದುಕೋಟಿ ವೇದಪುರುಷರು
ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ಆರುನೂರಾ ನಲವತ್ತೈದುಕೋಟಿ ಬ್ರಹ್ಮ-ನಾರಾಯಣ-
ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./187
ಅಂಥ ಬ್ರಹ್ಮಾಂಡವ ಮೂವತ್ತುಸಾವಿರ ಇನ್ನೂರತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಾಮಜೇಷ್ಠವೆಂಬ ಭುವನ.
ಆ ಭುವನದೊಳು ವಾಮದೇವನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾಐವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು, ಇಂದ್ರಚಂದ್ರಾದಿತ್ಯರು,
ನೂರಾಐವತ್ತುಕೋಟಿ ವೇದಪುರುಷರು,ಮುನೀಂದ್ರರು,
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./188
ಅಂಥ ಬ್ರಹ್ಮಾಂಡವ ಮೂವತ್ತೆಂಟುಲಕ್ಷದ ಮೇಲೆ
ಸಾವಿರದ ಮುನ್ನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಾರುತಾಶನೆಂಬ ಭುವನ.
ಆ ಭುವನದೊಳು ವ್ಯೋಮರೂಪನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರೆಂಬತ್ತೈದು ಕೋಟಿ ಮುನೀಂದ್ರರು
ದೇವರ್ಕಳು ಇಂದ್ರ ಚಂದ್ರಾದಿತ್ಯರು ವೇದಪುರುಷರು ಇಹರು ನೋಡಾ.
ಆರುನೂರೆಂಬತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./189
ಅಂಥ ಬ್ರಹ್ಮಾಂಡವ ಮೂವತ್ತೆಂಟುಸಾವಿರದ ಮುನ್ನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅಂಗುಷ್ಠಮಾತ್ರಭುವನಯೆಂಬ ಭುವನ.
ಆ ಭುವನದೊಳು ಅಖಂಡಿತನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾತೊಂಬತ್ತುಕೋಟಿ ದೇವರ್ಕಳು, ಇಂದ್ರಚಂದ್ರಾದಿತ್ಯರು,
ವೇದಪುರುಷರು, ಮುನೀಂದ್ರರು,
ನೂರಾತೊಂಬತ್ತುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./190
ಅಂಥ ಬ್ರಹ್ಮಾಂಡವ ಮೂವತ್ತೆರಡು ಸಾವಿರದಮುನ್ನೂರಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕಲವಿಕರಣವೆಂಬ ಭುವನ.
ಆ ಭುವನದೊಳು ಲಲಾಟಲೋಚನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಅರವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು,
ಇಂದ್ರ ಚಂದ್ರಾದಿತ್ಯರು,
ನೂರಾ ಅರವತ್ತುಕೋಟಿ ವೇದಪುರುಷರು, ಮುನೀಂದ್ರರು,
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./191
ಅಂಥ ಬ್ರಹ್ಮಾಂಡವ ಮೂವತ್ತೆರಡುಲಕ್ಷದ ಮೇಲೆ
ಸಾವಿರದ ಮುನ್ನೂರಾ ಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಂಭುವೆಂಬ ಭುವನ.
ಆ ಭುವನದೊಳು ಸ್ವಯಂಭುವೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರೈವತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಆರುನೂರೈವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./192
ಅಂಥ ಬ್ರಹ್ಮಾಂಡವ ಮೂವತ್ತೇಳುಲಕ್ಷದ ಮೇಲೆ
ಸಾವಿರದ ಮುನ್ನೂರಾ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಗ್ರಸನವೆಂಬ ಭುವನ.
ಆ ಭುವನದೊಳು ಸರ್ವಗ್ರಾಸನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರೆಂಬತ್ತುಕೋಟಿ ದೇವರ್ಕಳು ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರಿಹರು ನೋಡಾ.
ಆರುನೂರೆಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./193
ಅಂಥ ಬ್ರಹ್ಮಾಂಡವ ಮೂವತ್ತೇಳುಸಾವಿರದ ಮುನ್ನೂರಾ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮನೋನ್ಮನಿಯೆಂಬ ಭುವನ.
ಆ ಭುವನದೊಳು ಮನೋನ್ಮನಿಜ್ಯೋತಿಯೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಎಂಬತ್ತೈದುಕೋಟಿ ನಾರಾಯಣ ರುದ್ರ ಬ್ರಹ್ಮರು, ಇಂದ್ರಚಂದ್ರಾದಿತ್ಯರು,
ವೇದಪುರುಷರು, ಮುನೀಂದ್ರರು, ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./194
ಅಂಥ ಬ್ರಹ್ಮಾಂಡವ ಮೂವತ್ತೈದುಲಕ್ಷದ ಮೇಲೆ
ಸಾವಿರದ ಮುನ್ನೂರಾ ನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಫಣೀಶವೆಂಬ ಭುವನ.
ಆ ಭುವನದೊಳು ದಿಗಂಬರನಾಥನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರೆಪ್ಪತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಆರುನೂರೆಪ್ಪತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./195
ಅಂಥ ಬ್ರಹ್ಮಾಂಡವ ಮೂವತ್ತೈದುಸಾವಿರದ ಮುನ್ನೂರಾನಾಲ್ವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸರ್ವಭೂತದಮನಿಯೆಂಬ ಭುವನ.
ಆ ಭುವನದೊಳು ಸರ್ವೆಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾ ಎಪ್ಪತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರು, ಇಂದ್ರಚಂದ್ರಾದಿತ್ಯರು,
ನೂರಾ ಎಪ್ಪತ್ತೈದುಕೋಟಿ ವೇದಪುರುಷರು,ಮುನೀಂದ್ರರು,
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./196
ಅಂಥ ಬ್ರಹ್ಮಾಂಡವ ಮೂವತ್ತೊಂದುಲಕ್ಷದ ಮೇಲೆ
ಸಾವಿರದ ಮುನ್ನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ವಿಭುವೆಂಬ ಭುವನ.
ಆ ಭುವನದೊಳು ಸಹಸ್ರಾಕ್ಷನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರೈವತ್ತುಕೋಟಿ ಮುನೀಂದ್ರರು ದೇವರ್ಕಳು
ಇಂದ್ರಚಂದ್ರಾದಿತ್ಯರು ವೇದಪುರುಷರಿಹರು ನೋಡಾ.
ಆರುನೂರೈವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./197
ಅಂಥ ಬ್ರಹ್ಮಾಂಡವ ಮೂವತ್ತೊಂದುಸಾವಿರದ ಮುನ್ನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ರೌದ್ರಿಯೆಂಬ ಭುವನ.
ಆ ಭುವನದೊಳು ಸಹಸ್ರಾಕ್ಷನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾಐವತ್ತೈದು ಕೋಟಿದೇವರ್ಕಳು, ಇಂದ್ರಚಂದ್ರಾದಿತ್ಯರು,
ವೇದಪುರುಷರು, ಮುನೀಂದ್ರರು,
ನೂರಾಐವತ್ತೈದು ಕೋಟಿ ನಾರಾಯಣ ರುದ್ರ ಬ್ರಹ್ಮಾದಿಗಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./198
ಅಂಥ ಬ್ರಹ್ಮಾಂಡವ ಮೂವತ್ತೊಂಬತ್ತುಲಕ್ಷದ ಮೇಲೆ
ಸಾವಿರದ ಮುನ್ನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಕ್ರತುಮರ್ದನವೆಂಬ ಭುವನ.
ಆ ಭುವನದೊಳು ಅನಂತಲೋಚನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಆರುನೂರ ತೊಂಬತ್ತುಕೋಟಿ ಇಂದ್ರ-ಬ್ರಹ್ಮ-ನಾರಾಯಣ-ರುದ್ರರಿಹರು.
ಆರುನೂರ ತೊಂಬತ್ತುಕೋಟಿ ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./199
ಅಂಥ ಬ್ರಹ್ಮಾಂಡವ ಮೂವತ್ತೊಂಬತ್ತುಸಾವಿರದ
ಮುನ್ನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮಹಾಭುವನ.
ಆ ಭುವನದೊಳು ಮಹಾದೇವನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾತೊಂಬತ್ತೈದುಕೋಟಿ ಮುನೀಂದ್ರರು, ದೇವರ್ಕಳು, ವೇದಪುರುಷರು,
ನೂರಾತೊಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರು,
ಇಂದ್ರಚಂದ್ರಾದಿತ್ಯರು ಇಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./200
ಅಂಥ ಬ್ರಹ್ಮಾಂಡವ ಲಕ್ಷದ ಮೇಲೆ ಒಂಬೈನೂರಾ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಿಧುವೇಶ್ವರವೆಂಬ ಭುವನ.
ಆ ಭುವನದೊಳು ವಿಶ್ವೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಐನೂರುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./201
ಅಂಥ ಬ್ರಹ್ಮಾಂಡವ ಹತ್ತು ಸಾವಿರದ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಾಂತ್ಯತೀತೆಯೆಂಬ ಭುವನ.
ಆ ಭುವನದೊಳು ದ್ವಿಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐವತ್ತುಕೋಟಿ ಬ್ರಹ್ಮ ನಾರಾಯಣ ರುದ್ರರು,
ಐವತ್ತುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು,
ನಾಲ್ವತ್ತು ಮೂರುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./202
ಅಂಥ ಬ್ರಹ್ಮಾಂಡವ ಹತ್ತುಕೋಟಿಯ ಮೇಲೆ
ಎರಡುಸಾವಿರದಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು
ಶಾಘ್ರವೆಂಬ ಭುವನ.
ಆ ಭುವನದೊಳು ಅತಿಮಹಾವೀರಘೋರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಸಾವಿರಕೋಟಿಯ ಮೇಲೆ ತೊಂಬತ್ತೆಂಟುಕೋಟಿ
ರುದ್ರ ನಾರಾಯಣ ಬ್ರಹ್ಮರಿಹರು.
ಸಾವಿರಕೋಟಿಯ ಮೇಲೆ ತೊಂಬತ್ತುಕೋಟಿ ವೇದಪುರುಷರು
ಇಂದ್ರಚಂದ್ರಾದಿತ್ಯರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./203
ಅಂಥ ಬ್ರಹ್ಮಾಂಡವ ಹತ್ತುಲಕ್ಷದ ಮೇಲೆ ಸಾವಿರದ ತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಜಲಜೇಶ್ವರವೆಂಬ ಭುವನ.
ಆ ಭುವನದೊಳು ಜಗನ್ನಾಥನೆಂಬ ರುದ್ರಮೂರ್ತಿ ಇಹನು
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರನಲವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಐನೂರಾನಲವತ್ತೈದುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./204
ಅಂಥ ಬ್ರಹ್ಮಾಂಡವ ಹತ್ತೊಂಬತ್ತು ಸಾವಿರದ ನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸತ್ಯಾನಂದವೆಂಬ ಭುವನ.
ಆ ಭುವನದೊಳು ಕಾಳಕಂಠನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ತೊಂಬತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು,
ತೊಂಬತ್ತೈದುಕೋಟಿ ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./205
ಅಂಥ ಬ್ರಹ್ಮಾಂಡವ ಹತ್ತೊಂಬತ್ತುಲಕ್ಷದ ಮೇಲೆ
ಸಾವಿರದ ನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪ್ರಭಾಸವೆಂಬ ಭುವನ.
ಆ ಭುವನದೊಳು ತೇಜೋಮೂರ್ತಿಯೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರ ತೊಂಬತ್ತುಕೋಟಿ ನಾರಾಯಣ-ಬ್ರಹ್ಮ-
ರುದ್ರಾದಿಗಳಿಹರು ನೋಡಾ.
ಐನೂರತೊಂಬತ್ತು ಕೋಟಿ ವೇದಪುರುಷರು
ಮುನೀಂದ್ರರು ಚಂದ್ರಾದಿತ್ಯರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./206
ಅಂಥ ಬ್ರಹ್ಮಾಂಡವ ಹದಿನಾರುಲಕ್ಷದ ಮೇಲೆ ಸಾವಿರದ ಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಆಷಾಡಿಯೆಂಬ ಭುವನ
ಆ ಭುವನದೊಳು ಲಲಾಟಾಕ್ಷನೆಂಬ ರುದ್ರಮೂರ್ತಿ ಇಹನು
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರೆಪ್ಪತ್ತೈದುಕೋಟಿ ವಿಷ್ಣು-ಬ್ರಹ್ಮ-ಇಂದ್ರ-ಚಂದ್ರಾದಿತ್ಯರಿಹರು.
ಐನೂರೆಪ್ಪತ್ತೈದುಕೋಟಿ ರುದ್ರರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./207
ಅಂಥ ಬ್ರಹ್ಮಾಂಡವ ಹದಿನಾರುಸಾವಿರದ ನೂರಾಐವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅಚಿಂತ್ಯವೆಂಬ ಭುವನ.
ಆ ಭುವನದೊಳು ತ್ರಿಲೋಚನನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಬತ್ತು ಕೋಟಿ ರುದ್ರ ಬ್ರಹ್ಮ ನಾರಾಯಣರು,
ಎಂಬತ್ತುಕೋಟಿ ಇಂದ್ರಚಂದ್ರಾದಿತ್ಯರು,
ಎಂಬತ್ತುಕೋಟಿ ವೇದಪುರುಷರು, ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./208
ಅಂಥ ಬ್ರಹ್ಮಾಂಡವ ಹದಿನಾಲ್ಕುಲಕ್ಷದ ಮೇಲೆ ಸಾವಿರದನೂರಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಮುಂಡಿಯೆಂಬ ಭುವನ.
ಆ ಭುವನದೊಳು ರುಂಡಮಾಲಾಧರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರರವತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ.
ಐನೂರರವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./209
ಅಂಥ ಬ್ರಹ್ಮಾಂಡವ ಹದಿನಾಲ್ಕುಸಾವಿರದ ನೂರಾಮೂವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ನಿವೃತ್ತಿಯೆಂಬ ಭುವನ.
ಆ ಭುವನದೊಳು ಪಾದಲೋಚನನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರ ಮೂರ್ತಿಯ ಓಲಗದಲ್ಲಿ
ಎಪ್ಪತ್ತುಕೋಟಿ ಬ್ರಹ್ಮ ನಾರಾಯಣ ರುದ್ರರು,
ಎಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು,
ಎಪ್ಪತ್ತುಕೋಟಿ ವೇದಪುರುಷರು ಮುನೀಂದ್ರರು
ನಾಲ್ವತ್ತೇಳುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./210
ಅಂಥ ಬ್ರಹ್ಮಾಂಡವ ಹದಿನೆಂಟುಲಕ್ಷದ ಮೇಲೆ
ಸಾವಿರದಿನ್ನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ನೈಮಿಷವೆಂಬ ಭುವನ.
ಆ ಭುವನದೊಳು ಶಂಖುಕರ್ಣನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರೆಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು.
ಐನೂರೆಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./211
ಅಂಥ ಬ್ರಹ್ಮಾಂಡವ ಹದಿನೆಂಟುಸಾವಿರದ ನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಾಮದೇವವೆಂಬ ಭುವನ.
ಆ ಭುವನದೊಳು ಷಟ್ಪಾದನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ತೊಂಬತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು, ಇಂದ್ರಚಂದ್ರಾದಿತ್ಯರು.
ತೊಂಬತ್ತುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./212
ಅಂಥ ಬ್ರಹ್ಮಾಂಡವ ಹದಿನೇಳು ಲಕ್ಷದ ಮೇಲೆ ಸಾವಿರದ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ತಸ್ಕರವೆಂಬ ಭುವನ
ಆ ಭುವನದೊಳು ಗೋಕರ್ಣನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರೆಂಬತ್ತುಕೋಟಿ ವೇದಪುರುಷರು ಮನೀಂದ್ರರು ಇಂದ್ರಚಂದ್ರಾದಿತ್ಯರು
ದೇವರ್ಕಳಿಹರು ನೋಡಾ.
ಐನೂರೆಂಬತ್ತುಕೋಟಿ ನಾರಾಯಣ-ಬ್ರಹ್ಮರು-ರುದ್ರಾದಿಗಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./213
ಅಂಥ ಬ್ರಹ್ಮಾಂಡವ ಹದಿನೇಳುಸಾವಿರದ ನೂರಾ ಅರವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸೂಕ್ಷ್ಮವೆಂಬ ಭುವನ.
ಆ ಭುವನದೊಳು ಶೂನ್ಯಕಾಯನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಎಂಬತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರು,
ಎಂಬತ್ತೈದುಕೋಟಿ ಇಂದ್ರ ಚಂದ್ರಾದಿತ್ಯರು,
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./214
ಅಂಥ ಬ್ರಹ್ಮಾಂಡವ ಹದಿನೈದುಲಕ್ಷದ ಮೇಲೆ ಸಾವಿರದನೂರಾನಲವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಚಾರುಭೂತಿಯೆಂಬ ಭುವನ.
ಆ ಭುವನದೊಳು ಭಸ್ಮಧರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರೆಪ್ಪತ್ತುಕೋಟಿ ಬ್ರಹ್ಮ ನಾರಾಯಣ ರುದ್ರರಿಹರು ನೋಡಾ.
ಐನೂರೆಪ್ಪತ್ತುಕೋಟಿ ಇಂದ್ರಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./215
ಅಂಥ ಬ್ರಹ್ಮಾಂಡವ ಹದಿನೈದುಸಾವಿರದ ನೂರಾನಾಲ್ವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಸದಾಶಿವನೆಂಬ ಭುವನ.
ಆ ಭುವನದೊಳು ಪಂಚಪಾದನೆಂಬ ಮಹಾರುದ್ರಮೂರ್ತಿ ಇಹನು.
ಆ ಮಹಾರುದ್ರಮೂರ್ತಿಯ ಓಲಗದಲ್ಲಿ
ಎಪ್ಪತ್ತೈದುಕೋಟಿ ಇಂದ್ರ ಬ್ರಹ್ಮ ನಾರಾಯಣ ರುದ್ರರು,
ಎಪ್ಪತ್ತೈದುಕೋಟಿ ವೇದಪುರುಷರು, ಮುನೀಂದ್ರರು, ಚಂದ್ರಾದಿತ್ಯರು,
ಎಪ್ಪತ್ತೈದುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./216
ಅಂಥ ಬ್ರಹ್ಮಾಂಡವ ಹದಿಮೂರುಲಕ್ಷದ ಮೇಲೆ ಸಾವಿರದ ನೂರಿಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಅಕುಲಿಶವೆಂಬ ಭುವನ.
ಆ ಭುವನದೊಳು ಅಚಲನೆಂಬ ಮಹಾರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರರವತ್ತುಕೋಟಿ ಬ್ರಹ್ಮ-ವಿಷ್ಣು-ಇಂದ್ರ-ಚಂದ್ರಾದಿತ್ಯರಿಹರು.
ಐನೂರರವತ್ತುಕೋಟಿ ರುದ್ರರು ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./217
ಅಂಥ ಬ್ರಹ್ಮಾಂಡವ ಹದಿಮೂರುಸಾವಿರದ ನೂರಾಯಿಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಪ್ರತಿಷ್ಠೆಯೆಂಬ ಭುವನ.
ಆ ಭುವನದೊಳು ಚತುಷ್ಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಅರವತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರ ಚಂದ್ರಾದಿತ್ಯರು,
ಅರವತ್ತೈದುಕೋಟಿ ವೇದಪುರುಷರು, ಮುನೀಂದ್ರರು,
ನಾಲ್ವತ್ತಾರುಕೋಟಿ ದೇವರ್ಕಳಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./218
ಅಂಥ ಬ್ರಹ್ಮಾಂಡವ ಹನ್ನೆರಡುಲಕ್ಷದ ಮೇಲೆ ಸಾವಿರದನೂರಾಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಹರಿಶ್ಚಂದ್ರವೆಂಬ ಭುವನ.
ಆ ಭುವನದೊಳು ಹರಿಸಂಹಾರವೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರೈವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ.
ಐನೂರೈವತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./219
ಅಂಥ ಬ್ರಹ್ಮಾಂಡವ ಹನ್ನೆರಡುಸಾವಿರದ ನೂರಾಹದಿನೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಿದ್ಯೆಯೆಂಬ ಭುವನ.
ಆ ಭುವನದೊಳು ಅಕ್ಷಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಅರವತ್ತುಕೋಟಿ ರುದ್ರ ನಾರಾಯಣ ಬ್ರಹ್ಮರು, ಇಂದ್ರಚಂದ್ರಾದಿತ್ಯರು,
ಅರವತ್ತುಕೋಟಿ ವೇದಪುರುಷರು ಮುನೀಂದ್ರರು,
ನಾಲ್ವತ್ತೈದುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./220
ಅಂಥ ಬ್ರಹ್ಮಾಂಡವ ಹನ್ನೊಂದು ಲಕ್ಷದ ಮೇಲೆ ಸಾವಿರದ ನೂರಾ ಎಂಟು
ಬ್ರಹ್ಮಾಂಡವನೊಳಕೊಂಡುದೊಂದು ಶ್ರೀಶೈಲವೆಂಬ ಭುವನ.
ಆ ಭುವನದೊಳು ಶೈಲೇಂದ್ರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐನೂರಐವತ್ತುಕೋಟಿ ಇಂದ್ರ-ಚಂದ್ರಾದಿತ್ಯರು
ಬ್ರಹ್ಮ-ನಾರಾಯಣರು ರುದ್ರಾದಿಗಳಿಹರು ನೋಡಾ.
ಐನೂರೈವತ್ತುಕೋಟಿ ವೇದಪುರುಷರು
ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./221
ಅಂಥ ಬ್ರಹ್ಮಾಂಡವ ಹನ್ನೊಂದುಸಾವಿರದ ನೂರಾಯೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಶಾಂತಿಯೆಂಬ ಭುವನ.
ಆ ಭವನದೊಳು ತ್ರಿಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಐವತ್ತೈದುಕೋಟಿ ಇಂದ್ರ ಬ್ರಹ್ಮ ರುದ್ರ ನಾರಾಯಣರು,
ಐವತ್ತೈದುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು,
ನಾಲ್ವತ್ತು ನಾಲ್ಕುಕೋಟಿ ದೇವರ್ಕಳಿಹರು ನೋಡಾ,
ಅಪ್ರಮಾಣಕೂಡಲಸಂಗಮದೇವಾ./222
ಅಂಥ ಬ್ರಹ್ರಾಂಡವ ಎಪ್ಪತ್ತೊಂಬತ್ತು ಸಾವಿರದಾ
ಏಳುನೂರಾ ಎಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ರಾಕ್ಷಸವೆಂಬ ಭುವನ.
ಆ ಭುವನದೊಳು ದೈತ್ಯಸಂಹಾರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮುನ್ನೂರಾ ತೊಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು,
ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ./223
ಅಂದು ಮೊದಲಾಗಿ ಇಂದು ಕಡೆಯಾಗಿ
ಆ ಪರಾಪರದಲ್ಲಿ ಲೀಯವಾದ ಶರಣರಿಗೆ
ಅಂಥಾದಿಂಥಾದೆಂದು ಹೇಳಬಾರದು.
ಉಪಮಾತೀತವ ಹೇಂಗಿದ್ದುದೆಂದಡೆ, ಹಾಂಗೆ ಇದ್ದುದು ನೋಡಾ, ಅಪ್ರಮಾಣಕೂಡಲಸಂಗಮದೇವಾ./224
ಅಂಧಕಾರವಾಗಿಹ ಕತ್ತಲೆಯೊಳು ಮಹಾಮೇರುವಿಹುದು ನೋಡಾ.
ಆ ಮಹಾಮೇರುವ ಉದಯಾಸ್ತಮಯವಾಗಿಹ
ಚಂದ್ರಸೂರ್ಯರು ತಿರುಗುವರು.
ಆ ಚಂದ್ರಸೂರ್ಯರ ದೆಸೆಯಿಂದ ಇರುಳು ಹಗಲೆಂಬ ವೃಕ್ಷ ಹುಟ್ಟಿ,
ಆ ವೃಕ್ಷಕ್ಕೆ ಅರವತ್ತು ಶಾಖೆಗಳಾದವು ನೋಡಾ.
ಒಂದೊಂದು ಶಾಖೆಗಳಲ್ಲಿ ಮುನ್ನೂರರವತ್ತು ಮುನ್ನೂರರವತ್ತು
ಗೂಬೆಗಳು ಕುಳಿತು ಕೂಗುತ್ತಿಹವು ನೋಡಾ
ಅಪ್ರಮಾಣಕೂಡಲಸಂಗಮದೇವಾ./225
ಅಕಾರ ಉಕಾರ ಮಕಾರ ನಾದ ಬಿಂದು ಕಳೆಗಳ ತಿಳಿದು,
ಪ್ರಣವಸ್ವರೂಪವನರಿದು, ನಿರಾಳ ನಿರಂಜನ ನಿರಾಮಯ
ನಿರಾಮಯಾತೀತವನರಿದು, ಆ ನಿರಾಮಯಾತೀತದೊಳು
ಮನ ಲೀಯವಾಗಿ ಸುಳಿವ ನಿಜಸುಳುಹಿಂಗೆ ನಮೋ ನಮೋ ಎಂಬೆನು ನೋಡಾ
ಅಪ್ರಮಾಣಕೂಡಲಸಂಗಮದೇವಾ./226
ಅಕಾರ ಉಕಾರ ಮಕಾರ
ನಾದ ಬಿಂದು ಕಲೆಯನರಿಯರು.
ಪ್ರಣವದ ಸ್ವರೂಪವನರಿಯರು
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವನರಿಯದೆ
ಗುರುಲಿಂಗಜಂಗಮವೆಂದು ಸುಳಿದರೆ
ರೌರವನರಕವೆಂದುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./227
ಅಕಾರ ಉಕಾರ ಮಕಾರವನರಿದು
ಅಕಾರದೊಳಗೆ ಅಕಾರವನರಿದು
ಅಕಾರದೊಳಗೆ ಉಕಾರವನರಿದು
ಅಕಾರದೊಳಗೆ ಮಕಾರವನರಿದು
ಅಕಾರದೊಳಗೆ ಓಂಕಾರವನರಿದು
ಅಕಾರದೊಳಗೆ ನಿರಾಳವನರಿದು
ಅಕಾರದೊಳಗೆ ನಿರಂಜನವನರಿದು
ಅಕಾರದೊಳಗೆ ನಿರಾಮಯವನರಿದು
ಅಕಾರದೊಳಗೆ ನಿರಾಮಯಾತೀತವನರಿದು
ನಿರಾಮಯಾತೀತದಲ್ಲಿ ನಿಷ್ಪತ್ತಿಯಾಗಿ ಸುಳಿವ
ನಿಜಸುಳುಹಿಂಗೆ ನಮೋ ನಮೋ ಎನುತಿರ್ದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ./228
ಅಕಾರ ಉಕಾರ ಮಕಾರವನರಿಯದೆ,
ಅಕಾರದೊಳಗೆ ಅಕಾರವನರಿಯರು,
ಅಕಾರದೊಳಗೆ ಉಕಾರವನರಿಯರು,
ಅಕಾರದೊಳಗೆ ಮಕಾರವನರಿಯರು,
ಅಕಾರದೊಳಗೆ ಒಂಕಾರವನರಿಯರು.
ಅಕಾರದೊಳಗೆ ನಿರಾಳ ನಿರಂಜನ ನಿರಾಮಯ
ನಿರಾಮಯಾತೀತವನರಿಯದೆ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಪದಾರ್ಥದಲ್ಲಿ ಬದ್ದರಾಗಿ,
ಗುರುಲಿಂಗಜಂಗಮವೆಂದು ಸುಳಿದಡೆ ರೌರವನರಕವೆಂದುದು ನೋಡಾ.
ಇದಕ್ಕೆ ವೀರಾಗಮೇ : “ಜಂಗಮಶ್ಚ ಗುರೂಣಾಂಚ ಕಾಮಿನೀ ವಿತ್ತಬದ್ಧಯೋಃ |
ದ್ವಿವಿಧಂ ನರಕಂ ಯಾಂತಿ ಯಾವಚ್ಚಂದ್ರದಿವಾಕರಂ |”
ಎಂದುದಾಗಿ,
ಇದನರಿದು ತ್ರಿವಿಧವನತಿಗಳದು ಮನ ಮಹಾಘನದಲ್ಲಿ ಲೀಯವಾಗಿ
ಸುಳಿವ ಮಹಾಸುಳಿವಿಂಗೆ ನಮೋ ನಮೋ ಎಂಬೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ./229
ಅಕಾರದಲ್ಲಿ ಪೃಥ್ವಿಯಗ್ನಿ ಋಗ್ವೇದ ಭೂಲೋಕ
ಬ್ರಹ್ಮನುತ್ಪತ್ಯ ಲಯ ನೋಡಾ.
ಆ ಉಕಾರದಲ್ಲಿ ಅಂತರಿಕ್ಷ ಯಜುರ್ವೆದ ವಾಯು
ಭುವರ್ಲೊಕ ವಿಷ್ಣು ಉತ್ಪತ್ಯ ಲಯ ನೋಡಾ.
ಆ ಮಕಾರದಲ್ಲಿ ದಿವಿ ಸೂರ್ಯ ಸಾಮವೇದ ಸ್ವರ್ಗಲೋಕ
ಮಹೇಶ್ವರನುತ್ಪತ್ಯ ಲಯ ನೋಡಾ.
ಇದಕ್ಕೆ ಒಂಕಾರೋಪನಿಷದಿ : “ಪೃಥ್ವಿವ್ಯಗ್ನಿಃ ಋಗ್ವೇದೋ ಭವತೀತ್ಯೇವ ಪಿತಾಮಹಃ |
ಅಕಾರೇ ತು ಲಯಂ ಪ್ರಾಪ್ತೇ ಷಷ್ಠಾದಶಪ್ರಣವಾಂಶಕೈಃ ||
ಅಂತರಿಕ್ಷಂ ಯಜುರ್ವಾಯುಃ ಭೂವೋ ವಿಷ್ಣುಃ ಸನಾತನಃ |
ಉಕಾರೇ ತು ಲಯಂ ಪ್ರಾಪ್ತೇ ಸಪ್ತದಶಕ ಪ್ರಣವಾಂಶಕೈಃ ||
ದಿವಿ ಸೂರ್ಯಸ್ಸಾಮವೇದಃ ಸ್ಯೇರಿತ್ಯೇವಾ ಮಾಹೇಶ್ವರ |
ಮಕಾರೇತು ಲಯಂ ಪ್ರಾಪ್ತೇ ಅಷ್ಟಾದಶಾಕ್ಷರಾಂಶಕೈಃ ||
ಅಕಾರೇ ಚ ಉಕಾರೇ ಚ ಮಕಾರೇಚಾಕ್ಷರತ್ರಯಂ |
ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ ||
ಓಂಕಾರ ಪ್ರಭವಾ ವೇದಾಃ ಓಂಕಾರ ಪ್ರಭವಾ ಸ್ವರಾಃ |
ಓಂಕಾರ ಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂ |
ಓಮಿತ್ಯೇಕಾಕ್ಷರಂ ಬ್ರಹ್ಮ ಓಂಕಾರೋ ಪರಮೇಶ್ವರಃ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./230
ಅಕಾರವೆಂಬ ಅಷ್ಟದಳಕಮಲದ ಮಧ್ಯದಲ್ಲಿಯೂ
ಉಕಾರವೆಂಬ ಚೌಕಮಧ್ಯದಲ್ಲಿಯೂ
ಮಕಾರವೆಂಬ ಮಹಾಜ್ಯೋತಿರ್ಮಯಲಿಂಗವಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./231
ಅಕಾರವೆಂಬೆನೆ ಉಕಾರವಾಗಿಹುದು,
ಉಕಾರವೆಂಬೆನೆ ಮಕಾರವಾಗಿಹುದು ನೋಡಾ.
ಮಕಾರವೆಂಬೆನೆ ಓಂಕಾರವಾಗಿಹುದು,
ಓಂಕಾರವೆಂಬೆನೆ ಅಚಲವಪ್ಪ ನಿರಾಳವಾಗಿಹುದು ನೋಡಾ.
ನಿರಾಳವೆಂಬೆನೆ ನಿರಂಜನವಾಗಿಹುದು,
ನಿರಂಜನವೆಂಬೆನೆ ನಿರಾಮಯವಾಗಿಹುದು ನೋಡಾ.
ನಿರಾಮಯವೆಂಬೆನೆ ನಿರಾಮಯಾತೀತವಾಗಿಹುದು,
ನಿರಾಮಯಾತೀತವೆಂಬೆನೆ ನಿರಾಮಯಾತೀತಕತ್ತತ್ತವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./232
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಹೃದಯಮಂತ್ರವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಿರೋಮಂತ್ರವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಶಿಖಾಮಂತ್ರವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಕವಚಮಂತ್ರವಡಗಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿ ನೇತ್ರಮಂತ್ರವಡಗಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಅಸ್ತ್ರಮಂತ್ರವಡಗಿತ್ತು ನೋಡಾ,
ಅಪ್ರಮಾಣಕೂಡಲಸಂಗಮದೇವಾ./233
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ನೆನಹುಮಾತ್ರದಲ್ಲಿಯೇ ಅಣುಚಕ್ರ ಉತ್ಪತ್ಯವಾಯಿತ್ತು.
ಆ ಅಣುಚಕ್ರದ ನೆನಹುಮಾತ್ರದಲ್ಲಿಯೇ
ಪಶ್ಚಿಮಚಕ್ರ ಉತ್ಪತ್ಯವಾಯಿತ್ತು.
ಆ ಪಶ್ಚಿಮಚಕ್ರದ ನೆನಹುಮಾತ್ರದಲ್ಲಿಯೇ
ಶಿಖಾಚಕ್ರ ಉತ್ಪತ್ಯವಾಯಿತ್ತು.
ಆ ಶಿಖಾಚಕ್ರದ ನೆನಹುಮಾತ್ರದಲ್ಲಿಯೇ
ಬ್ರಹ್ಮಚಕ್ರ ಉತ್ಪತ್ಯವಾಯಿತ್ತು.
ಆ ಬ್ರಹ್ಮಚಕ್ರದ ನೆನಹುಮಾತ್ರದಲ್ಲಿಯೇ
ಆಜ್ಞಾಚಕ್ರ ಉತ್ಪತ್ಯವಾಯಿತ್ತು.
ಆ ಆಜ್ಞಾಚಕ್ರದ ನೆನಹುಮಾತ್ರದಲ್ಲಿಯೇ
ವಿಶುದ್ಧಿಚಕ್ರ ಉತ್ಪತ್ಯವಾಯಿತ್ತು.
ಆ ವಿಶುದ್ಧಿಚಕ್ರದ ನೆನಹುಮಾತ್ರದಲ್ಲಿಯೇ
ಅನಾಹತಚಕ್ರ ಉತ್ಪತ್ಯವಾಯಿತ್ತು.
ಆ ಅನಾಹತಚಕ್ರದ ನೆನಹುಮಾತ್ರದಲ್ಲಿಯೇ
ಮಣಿಪೂರಕಚಕ್ರ ಉತ್ಪತ್ಯವಾಯಿತ್ತು.
ಆ ಮಣಿಪೂರಕಚಕ್ರದ ನೆನಹುಮಾತ್ರದಲ್ಲಿಯೇ
ಸ್ವಾಧಿಷ್ಠಾನಚಕ್ರ ಉತ್ಪತ್ಯವಾಯಿತ್ತು.
ಆ ಸ್ವಾಧಿಷ್ಠಾನಚಕ್ರದ ನೆನಹುಮಾತ್ರದಲ್ಲಿಯೇ
ಆಧಾರಚಕ್ರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಈಶ್ವರೋವಾಚ : “ಓಂಕಾರಹೃದಯಜ್ಞಾನಾತ್ ಅಣುಚಕ್ರಂ ಚ ಜಾಯತೇ |
ಅಣುಚಕ್ರಮನೋ ಜ್ಞಾನಾತ್ ಪಶ್ಚಿಮಸ್ಯ ಸಮುದ್ಭವಃ ||
ಪಶ್ಚಿಮಚಕ್ರಚಿಂತಾಯಾಂ ಶಿಖಾಚಕ್ರಂ ಚ ಜಾಯತೇ |
ಶಿಖಾನಾಮಸ್ಯ ಚಿಂತಾಯಾಂ ಬ್ರಹ್ಮಚಕ್ರಸಮುದ್ಭವಃ ||
ಬ್ರಹ್ಮಚಕ್ರಸ್ಯ ಚಿಂತಾಯಾಂ ಆಜ್ಞಾ ನಾಮ ಸಮುದ್ಭವಃ |
ಆಜ್ಞಾನಾಮಸ್ಯ ಚಿಂತಾಯಾಂ ವಿಶುದ್ಧೋ ನಾಮ ಜಾಯತೇ ||
ವಿಶುದ್ಧಚಕ್ರ ಚಿಂತಾಯಾಂ ಅನಾಹತಚಕ್ರೋ ಭವೇತ್ |
ಅನಾಹತಸ್ಯ ಚಿಂತಾಯಾಂ ಮಣಿಪೂರಂ ಚ ಜಾಯತೇ ||
ಮಣಿಪೂರ ಮನೋ ಜ್ಞಾನಾತ್ ಸ್ವಾಧಿಷ್ಠಾನ ಸಮುದ್ಭವಃ |
ಸ್ವಾಧಿಷ್ಠಾನಮನೋ ಜ್ಞಾನಾತ್ ಆಧಾರಂ ಚಾಪಿ ಜಾಯತೇ |
ಇತಿ ಚಕ್ರೋದ್ಭವಜ್ಞಾನಂ ದುರ್ಲಭಂ ಕಮಲಾನನೇ || ”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./234
ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣವದ
ಜ್ಯೋತಿಸ್ವರೂಪದಲ್ಲಿ ಐಕ್ಯನುತ್ಪತ್ಯವಾದನು.
ಆ ಪ್ರಣವದ ದರ್ಪಣಾಕಾರದಲ್ಲಿ ಶರಣನುತ್ಪತ್ಯವಾದನು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಪ್ರಾಣಲಿಂಗಿ ಉತ್ಪತ್ಯವಾದನು.
ಆ ಪ್ರಣವದ ಕುಂಡಲಾಕಾರದಲ್ಲಿ ಪ್ರಸಾದಿ ಉತ್ಪತ್ಯವಾದನು.
ಆ ಪ್ರಣವದ ದಂಡಕಸ್ವರೂಪದಲ್ಲಿ ಮಹೇಶ್ವರ ಉತ್ಪತ್ಯವಾದನು.
ಆ ಪ್ರಣವದ ತಾರಕಸ್ವರೂಪದಲ್ಲಿ ಭಕ್ತನುತ್ಪತ್ಯವಾದನು ನೋಡಾ.
ಇದಕ್ಕೆ ಚಿತ್ಪ್ರಕಾಶಾಗಮೋತ್ತರಸಾರೇ : “ಓಂಕಾರ ಜ್ಯೋತಿರೂಪೇ ಚ ಐಕ್ಯಂತು ಸಮುದ್ಭವಂ |
ಓಂಕಾರ ದರ್ಪಣಾಕಾರೇ ಶರಣಶ್ಚ ಸಮುದ್ಭವಂ ||
ಓಂಕಾರೇಚಾರ್ಧಚಂದ್ರೇ ಚ ಪ್ರಾಣಲಿಂಗೀ ಸಮುದ್ಭವಂ |
ಓಂಕಾರ ದಂಡಕರೂಪೇ ಚ ಮಾಹೇಶ್ವರ ಸಮುದ್ಭವಃ |
ಓಂಕಾರ ತಾರಕಾರೂಪೇ ಭಕ್ತಶ್ಚೈವ ಸಮುದ್ಭವಃ |
ಇತಿ ಷಟ್ಸ್ಥಲಂ ದೇವಿ ಸ್ಥಾನಸ್ಥಾನೇಷು ಜಾಯತೇ ||
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./235
ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣವದ
ಜ್ಯೋತಿಸ್ವರೂಪದಲ್ಲಿ ಪರಿಣಾಮ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಾಕಾರದಲ್ಲಿ ಸ್ಪರ್ಶನ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ರೂಪು ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ರಸ ಹುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಗಂಧ ಹುಟ್ಟಿತ್ತು ನೋಡಾ.
ಇದಕ್ಕೆ ಶಿವಲಿಂಗಾಗಮೇ : “ಓಂಕಾರ ಜ್ಯೋತಿರೂಪೇ ಚ ಪರಿಣಾಮಂ ಚ ಜಾಯತೇ |
ಓಂಕಾರ ದರ್ಪಣಾಕಾರೇ ಶಬ್ದಶ್ಚೈವ ಸಜಾಯತೇ ||
ಓಂಕಾರೇಚಾರ್ಧಚಂದ್ರೇ ಚ ಸ್ಪರ್ಶನಂ ಚ ಸಜಾಯತೇ |
ಓಂಕಾರಕುಂಡಲಾಕಾರೇ ರೂಪಂ ಚೈವ ಸಜಾಯತೇ |
ಓಂಕಾರದಂಡಕರೂಪೇ ಚ ರಸಂ ಚೈವ ಸಜಾಯತೇ |
ಓಂಕಾರತಾರಕಾರೂಪೇ ಗಂಧಂ ಚೈವ ಸಜಾಯತೇ |
ಇತಿ ಷಡ್ಗುಣದ್ರವ್ಯಂ ಸ್ಥಾನೇ ಸ್ಥಾನೇ ಸಮುದ್ಭವಂ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./236
ಅಖಂಡ ಮಹಾತತ್ವದಲ್ಲಿ –
`ಕ್ಷಿತಿದಳಕ್ಷರೋ ಭವತಿ | ಓಂ ಅಖಂಡಾತ್ಮಾದೇವತಾ |’
ಎಂದುದು ಶ್ರುತಿ.
ಆ ಅಖಂಡಮಹಾತತ್ವದಲ್ಲಿ ಅಕ್ಷರಂಗಳುತ್ಪತ್ಯವಾಗಿ
ಚರಚಕ್ರದ ಕ್ಷಿತಿದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./237
ಅಖಂಡಜ್ಯೋತಿರ್ಮಯವಾಗಿ ಪರಮೋಂಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಭಾವಹಸ್ತ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಜ್ಞಾನಹಸ್ತ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನಹಸ್ತ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ : “ಓಂಕಾರಜ್ಯೋತಿರೂಪೇ ಚ ಭಾವಹಸ್ತಶ್ಚ ಜಾಯತೇ |
ಓಂಕಾರದರ್ಪಣಾಕಾರೇ ಜ್ಞಾನಹಸ್ತಶ್ಚ ಜಾಯತೇ |
ಓಂಕಾರ ಅರ್ಧಚಂದ್ರಂ ಚ ಮನೋಹಸ್ತಶ್ಚ ಜಾಯತೇ |
ಓಂಕಾರ ಕುಂಡಲಾಕಾರೇ ನಿರಹಂಕಾರಶ್ಚ ಜಾಯತೇ ||
ಓಂಕಾರದಂಡರೂಪೋ ಚ ಬುದ್ಧಿಹಸ್ತಶ್ಚ ಜಾಯತೇ |
ಓಂಕಾರ ತಾರಕರೂಪೋ ಚಿತ್ತಹಸ್ತಶ್ಚ ಜಾಯತೇ |
ಇತಿ ಷಷ್ಠ ಹಸ್ತ ದೇವಿ ಸ್ಥಾನಸ್ಥಾನೇಷು ಜಾಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./238
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಜ್ಯೋತಿಸ್ವರೂಪದಲ್ಲಿ-
ಹೃದಯಮಂತ್ರೋ ಭವತಿ | ಓಂ ಪರಮಾತ್ಮಾ ದೇವತಾ |
ಜ್ಯೋತಿರೂಪೋ ಲಯಂ ಪ್ರಾಪ್ತೆ ಪ್ರಥಮಂ ಪ್ರಣವಾಂಶಕೇ ||
ಆ ಪ್ರಣವದ ದರ್ಪಣಾಕಾರದಲ್ಲಿ-
“ಶಿರೋಮಂತ್ರೋ ಭವತಿ | ಓಂ ಯಕಾರಾತ್ಮಾ ದೇವತಾ |
ದರ್ಪಣೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಕೇ ||”
ಆ ಪ್ರಣವದ ಅರ್ಧಚಂದ್ರಕದಲ್ಲಿ-
“ಶಿಖಾಮಂತ್ರೋ ಭವತಿ | ಓಂ ಅಕಾರಾತ್ಮಾ ದೇವತಾ |
ಅರ್ಧಚಂದ್ರೇ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಕೇ ||”
ಆ ಪ್ರಣವದ ಕುಂಡಲಾಕಾರದಲ್ಲಿ-
“ಕವಚಮಂತ್ರೋ ಭವತಿ | ಓಂ ಶಿಕಾರಾತ್ಮಾ ದೇವತಾ |
ಕುಂಡಲೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಕೇ ||”
ಆ ಪ್ರಣವದ ದಂಡಸ್ವರೂಪದಲ್ಲಿ-
“ನೇತ್ರಮಂತ್ರೋ ಭವತಿ | ಓಂ ಮಕಾರಾತ್ಮಾ ದೇವತಾ |
ದಂಡರೂಪೇ ಚ ಲಯಂ ಪ್ರಾಪ್ತೇ ಪಂಚಮಂ ಪ್ರಣವಾಂಶಕೇ ||”
ಆ ಪ್ರಣವದ ತಾರಕಸ್ವರೂಪದಲ್ಲಿ-
“ಅಸ್ತ್ರಮಂತ್ರೋ ಭವತಿ | ಓಂ ನಕಾರಾತ್ಮಾ ದೇವತಾ |
ತಾರಕೇ ಚ ಲಯಂ ಪ್ರಾಪ್ತೇ ಷಷ್ಠಮಂ ಪ್ರಣವಾಂಶಕೇ ||”
ಇಂತೆಂದುದು ಶ್ರುತಿ ನೋಡಾ
ಅಪ್ರಮಾಣಕೂಡಲಸಂಗಮದೇವಾ./239
ಅಖಂಡಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣವದ
ಜ್ಯೋತಿಸ್ವರೂಪದಲ್ಲಿ ಆತ್ಮನುತ್ಪತ್ಯವಾದನು.
ಆ ಪ್ರಣವದ ದರ್ಪಣಾಕಾರದಲ್ಲಿ ಆಕಾಶ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ವಾಯು ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ತೇಜ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಅಪ್ಪು ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಚಿತ್ಪ್ರಕಾಶಾಗಮೇ : “ಓಂಕಾರ ಜ್ಯೋತಿರೂಪೇ ಚ | ಆತ್ಮಾ ಚೈವ ಸಮುದ್ಭವಃ |
ಓಂಕಾರ ದರ್ಪಣಾಕಾರೇ | ಆಕಾಶಂ ಚ ಸಮುದ್ಭವಂ ||
ಓಂಕಾರೇ ಚಾರ್ಧಚಂದ್ರೇ ಚ | ವಾಯುಶ್ಚೈವ ಸಮುದ್ಭವಃ |
ಓಂಕಾರ ಕುಂಡಲಾಕಾರೇ | ತೇಜಶ್ಚೈವ ಸಮುದ್ಭವಂ |
ಓಂಕಾರ ದಂಡರೂಪೇ ಚ | ಆಪಶ್ಚೈವ ಸಮುದ್ಭವಃ |
ಓಂಕಾರ ತಾರಕರೂಪೇ | ಪೃಥ್ವಿಶ್ಚ ಸಮುದ್ಭವಃ |
ಇತಿ ಷಷ್ಠಭೂತಂ ದೇವೀ | ಸ್ಥಾನ ಸ್ಥಾನೇ ಸಮುದ್ಭವಂ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./240
ಅಗ್ನಿಮಂಡಲ, ಆದಿತ್ಯಮಂಡಲ, ಚಂದ್ರಮಂಡಲವೆಂಬ
ಮಂಡಲತ್ರಯಂಗಳ ಹಾಯ್ದು,
ಬ್ರಹ್ಮಚಕ್ರ ಶಿಖಾಚಕ್ರವ ಹಾಯ್ದು,
ಆಚೆ ಪಶ್ಚಿಮಚಕ್ರವ ಮುಟ್ಟಿ,
ಆ ಬ್ರಹ್ಮನಾಡಿ ಏಕನಾಡಿಯಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./241
ಅಗ್ನಿಯೆ ಅಂಗವಾದ ಪ್ರಸಾದಿ ನಿರಹಂಕಾರವೆಂಬ ಹಸ್ತದಲ್ಲಿ
ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ಸುಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ.
ಇದಕ್ಕೆ ಈಶ್ವರೋವಾಚ : “ನಿರಹಂಕಾರಹಸ್ತೇನಾ ಅನಲಾಂಗ ಪ್ರಸಾದಿ ಚ |
ಶಿವಲಿಂಗಮುಖೇ ನೇತ್ರೇ ಅರ್ಪಿತಂ ರೂಪಭೋಕ್ತವಾನ್ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./242
ಅಚಲತತ್ವದಲ್ಲಿ –
`ಕೋಣಿದಳಾಕ್ಷರೋ ಭವತಿ | ಓಂ ಅಚಲಾತ್ಮಾ ದೇವತಾ |’
ಎಂದುದು ಶ್ರುತಿ.
ಆ ಅಚಲತತ್ವದಲ್ಲಿ ಕ್ಷೊಣಿದಳಾಕ್ಷರ ಉತ್ಪತ್ಯವಾಗಿ
ಗುರುಚಕ್ರದ ಕ್ಷೊಣಿತದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./243
ಅತಳಲೋಕ ಸುತಳಲೋಕ ತಾನಿರ್ದಲ್ಲಿ,
ವಿತಳಲೋಕ ತಳಾತಳಲೋಕ ತಾನಿರ್ದಲ್ಲಿ,
ರಸಾತಳಲೋಕ ಸ್ವಸ್ಥಲಲೋಕ ತಾನಿರ್ದಲ್ಲಿ,
ಪಾತಾಳಲೋಕ ತಾನಿರ್ದಲ್ಲಿ, ಭೂಲೋಕ ಭುವರ್ಲೊಕ ತಾನಿರ್ದಲ್ಲಿ,
ಮಹರ್ಲೊಕ ಸ್ವರ್ಲೊಕ ತಾನಿರ್ದಲ್ಲಿ,
ಜನರ್ಲೊಕ ತಪರ್ಲೊಕ ತಾನಿರ್ದಲ್ಲಿ, ಸತ್ಯರ್ಲೊಕ ತಾನಿರ್ದಲ್ಲಿ,
ಇಹಲೋಕ ಪರಲೋಕ ಕಾಳಾಂಧರಲೋಕ ತಾನಿರ್ದಲ್ಲಿ.
ಇಂತೀ ಲೋಕಾದಿಲೋಕಂಗಳೆಲ್ಲಾ ತನ್ನಲ್ಲಿ
ಉತ್ಪತ್ಯ ಸ್ಥಿತಿ ಲಯವಾದಕಾರಣ ತಾನೇ ಪರಂಜ್ಯೋತಿಲಿಂಗ ನೋಡಾ
ಅಪ್ರಮಾಣಕೂಡಲಸಂಗಮದೇವಾ./244
ಅದಂಥಾದಿಂಥಾದೆಂದು ನೋಡುವ ರೂಪ ನಿರೂಪವ ಬಿಟ್ಟು
ಅತ್ತತ್ತವಾಗಿ ಸ್ವಾನುಭೂತಿ ಬೆಳೆಯಲಿಕ್ಕಾಗಿ ಜ್ಞಾನಶಕ್ತಿ ನಷ್ಟವು.
ಕೂಟಂಗಳು ಕೆಡಲು ಕ್ರಿಯಾಶಕ್ತಿ ನಷ್ಟವು.
ವಿಕಾರ ನಿರ್ವಿಕಾರಂಗಳು ಕೆಟ್ಟು ಪರಮಾನಂದ ಸುಖವ
ಅನುಭವಿಸಲು ಪರಶಕ್ತಿ ನಷ್ಟವು.
ಹೀಂಗೆ ಅವಸ್ಥೆಗಳು ನಷ್ಟವು, ದರ್ಶನವದು ನಿತ್ಯ ನಿರಂಜನ
ನಿರ್ಮಾಯ ನಿರಾಳ ನಿರಾಲಂಬವ ತಾನೆಂದು ತಿಳಿದ ಮಹಾಶರಣಂಗಲ್ಲದೆ
ಮಿಕ್ಕಿನ ವೇಷಧಾರಿಗಳವರೆತ್ತ ಬಲ್ಲರು ನೋಡಾ
ಅಪ್ರಮಾಣಕೂಡಲಸಂಗಮದೇವಾ./245
ಅದೆ ಇದೆಂಬ ಅಣ್ಣಗಳು ನೀವು ಕೇಳಿರೆ,
`ಅಯನಿಯಾನಾಯಿ, ನಿಯದಾನಾಯಿ’ ಎಂಬ ಶ್ರುತಿ ಹುಸಿ,
ಅಯನಿಯಲ್ಲ ನಿಯದನಲ್ಲ,
ಅಪ್ರಮಾಣಕೂಡಲಸಂಗಾ, ನಿಮ್ಮ ಶರಣ ನಿಂದ ನಿಲವಿಂಗೆ
ನಮೋ ನಮೋ ಎಂಬೆನು./246
ಅದೊಂದು ನಾಡಿ ಮೂಲಾಧಾರ ಮೊದಲಾಗಿ
ಬ್ರಹ್ಮರಂಧ್ರ ಕಡೆಯಾಗಿ ಲತೆಯ ಹಾಗೆ
ಕೆಳಗೆ ಮೇಲೆ ಸುತ್ತಿಕೊಂಡಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./247
ಅನಂತಕೋಟಿ ಆದಿಬ್ರಹ್ಮರ ಶಿರವನರಿದು
ಬ್ರಹ್ಮಕಪಾಲವ ಪಿಡಿದಾಡದಂದು,
ಅನಂತಕೋಟಿ ಆದಿನಾರಾಯಣರ
ನಿಟ್ಟೆಲುವ ಮುರಿದು ಕಂಕಾಳದಂಡವ ಧರಿಸದಂದು,
ಅನಂತಕೋಟಿ ಆದಿಕಾಲರ ಒದ್ದೊದ್ದು ಕೊಲ್ಲದಂದು,
ಅನಂತಕೋಟಿ ಆದಿ ಮನ್ಮಥರ ದಹಿಸಿ ಭಸ್ಮವ ಮಾಡದಂದು,
ಅನಂತಕೋಟಿ ತ್ರಿಪುರಂಗಳ ಸಂಹಾರವ ಮಾಡದಂದು,
ಪರಶಿವಲೀಲೆಯಿಂದ ಅನಂತಕೋಟಿ ಬ್ರಹ್ಮಾಂಡಂಗಳ ಸೃಜಿಸದಂದು,
ಅನಾದಿ ಅಕಾರ, ಅನಾದಿ ಉಕಾರ, ಅನಾದಿ ಮಕಾರವೆಂಬ
ಪ್ರಣವತ್ರಯವಾಗಿದ್ದನು ನೋಡಾ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವ./248
ಅನಂತಕೋಟಿ ಇಂದ್ರಾದಿಗಳೆಲ್ಲ ಇಂದ್ರಸಂಸಾರಕ್ಕೊಳಗಾಗಿ
ತನ್ನ ತಾನರಿಯದೆ ತಾನಾರೆಂದು ತಿಳಿಯದೆ
ಭವರೋಗಂಗಳಿಗೊಳಗಾಗಿ ಕೆಟ್ಟರು ನೋಡಾ.
ಅನಂತಕೋಟಿ ಬ್ರಹ್ಮಾದಿಗಳೆಲ್ಲ ಬ್ರಹ್ಮಸಂಸಾರಕ್ಕೊಳಗಾಗಿ
ತನ್ನ ತಾನರಿಯದೆ ತಾನಾರೆಂದು ತಿಳಿಯದೆ
ಭವಸಾಗರದೊಳು ಬಿದ್ದು ಕೆಟ್ಟರು ನೋಡಾ.
ಅನಂತಕೋಟಿ ವಿಷ್ಣ್ವಾದಿಗಳೆಲ್ಲ ವಿಷ್ಣು ಸಂಸಾರಕ್ಕೊಳಗಾಗಿ
ತನ್ನ ತಾನರಿಯದೆ ತಾನಾರೆಂದು ತಿಳಿಯದೆ
ಭವಾರಣ್ಯದೊಳು ಬಿದ್ದು ಮುಳುಗಿ ಏಳಲರಿಯದೆ ಕೆಟ್ಟರು ನೋಡಾ.
ಮೀನಜ ರೋಮಜ ಚಿಪ್ಪಜ ಡೊಂಕಜ ಚಿಡುಕಜ
ಸಾರಂಗನೆಂಬ ಮುನಿಗಳು ಮೊದಲಾಗಿ ಅನಂತಕೋಟಿ ಮುನಿಗಳೆಲ್ಲಾ
ಮುನಿಸಂಸಾರಕ್ಕೊಳಗಾಗಿ ತನ್ನ ತಾನರಿಯದೆ ತಾನಾರೆಂದು ತಿಳಿಯದೆ
ಜನನಮರಣಕ್ಕೊಳಗಾಗಿ ಕೆಟ್ಟರು ನೋಡಾ.
ಮೂವತ್ಮೂರುಕೋಟಿ ದೇವರ್ಕಳು ಮೊದಲಾಗಿ ಅನಂತಕೋಟಿ ದೇವರ್ಕಳೆಲ್ಲ
ದೇವಸಂಸಾರಕ್ಕೊಳಗಾಗಿ ತನ್ನ ತಾನರಿಯದೆ, ತಾನಾರೆಂದು ತಿಳಿಯದೆ
ಜನನಮರಣಕ್ಕೊಳಗಾಗಿ ಕೆಟ್ಟರು ನೋಡಾ.
ಇವರೆಲ್ಲ ಕೆಟ್ಟಕೇಡಿಂಗೆ ಕಡೆಯಿಲ್ಲ.
ನಾಮ ರೂಪ ಕ್ರಿಯಾತೀತವಾಗಿಹ ಪರಬ್ರಹ್ಮವೇ ತಾನೆಂದು ಅರಿದ
ಮಹಾಶರಣನ ಭವರೋಗಂಗಳು ಮುಟ್ಟಲಮ್ಮವು ನೋಡಾ
ಅಪ್ರಮಾಣಕೂಡಲಸಂಗಮದೇವಾ./249
ಅನಂತಕೋಟಿ ತತ್ವಂಗಳನೊಳಕೊಂಡು
ಅನಂತಕೋಟಿ ಅಜಪೆ ಗಾಯತ್ರಿಯನೊಳಕೊಂಡು
ಅನಂತಕೋಟಿ ಅಕ್ಷರಂಗಳನೊಳಕೊಂಡು
ಅನಂತಕೋಟಿ ಶಕ್ತಿಗಳನೊಳಕೊಂಡು
ಅನಂತಕೋಟಿ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರನೊಳಕೊಂಡು
ಅನಂತಕೋಟಿ ಚಂದ್ರಾದಿತ್ಯರನೊಳಕೊಂಡು
ಅನಂತಕೋಟಿ ಭುವನಂಗಳನೊಳಕೊಂಡು
ಅನಂತಕೋಟಿ ಭುವನಾಧಿಪತಿಗಳನೊಳಕೊಂಡು
ಅನಂತಕೋಟಿ ಬ್ರಹ್ಮಾಂಡಂಗಳನೊಳಕೊಂಡು
ತಿರುಗಿ ತಿರುಗಿ ಬಹ ಅನಂತಕೋಟಿ ಕಲ್ಪಾಂತರಂಗಳನೊಳಕೊಂಡು
ಮೂರ್ತಿಬ್ರಹ್ಮ ಪಿಂಡಬ್ರಹ್ಮ ಕಲಾಬ್ರಹ್ಮ
ಬ್ರಹ್ಮಾನಂದಬ್ರಹ್ಮ ವಿಜ್ಞಾನಬ್ರಹ್ಮ ಪರಬ್ರಹ್ಮವೆಂಬ
ಷಡುಸ್ಥಲಬ್ರಹ್ಮವನೊಳಕೊಂಡು
ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಮಹದೋಂಕಾರ
ಪ್ರಣವವಾಗಿದ್ದುದು ನೋಡಾ.
ಇದಕ್ಕೆ ಮಹಾಲಿಂಗಾಗಮೇ : “ಆದಿಮಧ್ಯಾಂತ ಶೂನ್ಯಂಚ ಶೂನ್ಯಂ ಶೂನ್ಯಾದಿಶೋ ದಶ |
ಸರ್ವಶೂನ್ಯಂ ನಿರಾಕಾರಂ ನಿಶ್ಶಬ್ದಂ ಪರಮಂ ಪದಂ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./250
ಅನಂತಕೋಟಿ ಬ್ರಹ್ಮರ
ಮಾಯೆ ನುಂಗಿ ನುಂಗಿ ಉಗುಳುವಂದು
ಮಾಯಾರಹಿತನೆಂಬ ಗಣೇಶ್ವರನಾಗಿದ್ದೆನು.
ಅನಂತಕೋಟಿ ವಿಷ್ಣ್ವಾದಿಗಳ ಮಾಯೆ ನುಂಗುವಂದು
ಮಾಯಾಹರನೆಂಬುವ ಗಣೇಶ್ವರನಾಗಿದ್ದೆನು.
ಅನಂತಕೋಟಿ ಇಂದ್ರಾದಿಗಳ ದೇವರ್ಕಳ
ಮಾಯೆ ಒದ್ದೊದ್ದು ಕೊಲುವಂದು
ಮಾಯಾತೀತನೆಂಬ ಗಣೇಶ್ವರನಾಗಿದ್ದೆನು.
ಅನಂತಕೋಟಿ ಋಷಿಗಳ ತಪವ ಮುರಿದು
ಕೆಡಹಿ ಉಚ್ಛಿಷ್ಟವ ಮಾಡುವಂದು
ಮಾಯಾದಹನನೆಂಬ ಗಣೇಶ್ವರನಾಗಿದ್ದೆನು.
ಇವರೆಲ್ಲರು ಮಾಯೆಯ ಕಾಲ ಸರಮಾಲೆಯಾದಂದು
ಮಾಯಾಭಸ್ಮ ಗಣೇಶ್ವರನಾಗಿದ್ದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ./251
ಅನಂತಕೋಟಿ ಸೂರ್ಯ ಚಂದ್ರಾಗ್ನಿ ಪ್ರಕಾಶಮಯವಾಗಿಹ
ಪರಂಜ್ಯೋತಿ ಉದಯವಾಗದಂದು,
ರಾಜಸ ತಾಮಸ ಸಾತ್ವಿಕ ಗುಣತ್ರಯಂಗಳುತ್ಪತ್ಯವಾಗದಂದು,
ಅಕ್ಷರತ್ರಯಂಗಳುತ್ಪತ್ಯವಾಗದಂದು,
ಮಹಾಶೇಷನ ಮೇಲೆ ಭೂಮಿ ಹಾಸದಂದು,
ಹೇಮಾದ್ರಿ ಕೈಲಾಸವಿಲ್ಲದಂದು,
ಗಂಗೆವಾಳುಕ ಸಮಾರುದ್ರರಿಲ್ಲದಂದು,
ಸ್ವರ್ಗ ಮತ್ರ್ಯ ಪಾತಾಳಲೋಕವಿಲ್ಲದಂದು,
ಭೂಲೋಕ ಭುವರ್ಲೊಕ, ಮಹರ್ಲೊಕ, ಜನರ್ಲೊಕ,
ತಪರ್ಲೊಕ, ಸತ್ಯಲೋಕ, ಸ್ವರ್ಲೊಕ
ಇಂತೀ ಮೇಲೇಳು ಲೋಕಂಗಳಿಲ್ಲದಂದು,
ಅತಲ ವಿತಲ ಸುತಲ ತಲಾತಲ ರಸಾತಲ
ನಿರಾತಳ ಪಾತಾಳಲೋಕಂಗಳೆಂಬ ಕೆಳಗೇಳುಲೋಕಂಗಳಿಲ್ಲದಂದು.
ಮಲಯ ಸಂಸ್ಥಲ ಶಕ್ತಿಮಾನ್ ವಿಂಧ್ಯ ಮಹೇಂದ್ರ ಋಕ್ಷದಂತ, ಸಹ್ಯವೆಂಬ
ಸಪ್ತಕುಲಪರ್ವತಂಗಳಿಲ್ಲದಂದು,
ಲವಣ ಇಕ್ಷು ಸುರೆ ಘೃತ ದಧಿ ಕ್ಷೀರ ಶುದ್ಧಜಲವೆಂಬ
ಸಪ್ತಸಮುದ್ರಂಗಳಿಲ್ಲದಂದು,
ಜಂಬೂದ್ವೀಪ, ಪ್ಲಕ್ಷದ್ವೀಪ, ಕುಶದ್ವೀಪ, ಶಾಕದ್ವೀಪ,
ಶಾಲ್ಮಲೀದ್ವೀಪ, ಪುಷ್ಕರದ್ವೀಪ, ಕ್ರೌಂಚದ್ವೀಪವೆಂಬ
ಸಪ್ತದ್ವೀಪಂಗಳಿಲ್ಲದಂದು,
ನಾಲ್ವತ್ತೆಂಟುಸಾವಿರ ಮುನಿಗಳಿಲ್ಲದಂದು,
ಮೂವತ್ತುಮೂರುಕೋಟಿ ದೇವರ್ಕಳಿಲ್ಲದಂದು,
ಸರ್ವಶೂನ್ಯನಿರಾಲಂಬವಾಗಿದ್ದಂದು,
ನಿರಂಜನಾತೀತನಾಗಿದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವ./252
ಅನಂತಕೋಟಿ ಸೂರ್ಯ ಚಂದ್ರಾಗ್ನಿಪ್ರಕಾಶವಾಗಿಹ
ಪರಂಜ್ಯೋತಿಯಲ್ಲಿ ನಿರಾಮಯಬೀಜ ಹುಟ್ಟಿತ್ತು ನೋಡಾ.
ನಿರಾಮಯಬೀಜದಲ್ಲಿ ನಿರಾಳ ನಿರಂಜನವೆಂಬ ವೃಕ್ಷ ತಲೆದೋರಿ,
ಉದಯಾಸ್ತಮಾನವೆಂಬೆರಡರಿದ ಶರಣಂಗೆ,
ಅನಂತಕೋಟಿ ಶಾಖಾದಿಗಳಾದವು ನೋಡಾ.
ಪರಮಾನಂದವೆಂಬ ಹೂವಾಯಿತ್ತು.
ಪರಮಪರಿಣಾಮವೆಂಬ ಕಾಯಾಯಿತ್ತು,
ಪರಮಪರಿಣಾಮದ ತೃಪ್ತಿಯೆಂಬ ಹಣ್ಣಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./253
ಅನಲಾಂಗವಾದ ಪ್ರಸಾದಿಯ ನಿರಹಂಕಾರಹಸ್ತದಲ್ಲಿಹ
ಶಿವಲಿಂಗವು ಜ್ಞಾನಕಲೆಗಳಿಂದ ಕೂಡಿದ ರೂಪದಿಂದ
ಮಿಗೆ ಒಪ್ಪುತಿದ್ದಂಥಾದಾಗಿ, ಒಂದು ಮುಖವಾಗಿ,
ಮಿಗೆ ಶಾಂತವಾದ ದಿವ್ಯತೇಜಃಪುಂಜವನು, ಅಹಂಕಾರಕ್ಕೆ ಸ್ಥಾನವಪ್ಪ
ಪ್ರಪಂಚದಲ್ಲಿ ತನ್ನ ಇಚ್ಛಾಶಕ್ತಿಯಿಂದ ವ್ಯಾಪಿಸಲುಪಟ್ಟ
ಮೂರ್ತಿಕರಿಸಿದ ತತ್ವವಾದ ಶಿವಲಿಂಗವಿಹುದು ನೋಡಾ.
ಇದಕ್ಕೆ ಮಹಾವಾತುಲಾಗಮೇ :ವೃತ್ತ –
“ವಿದ್ಯಾಕಲಾಕಲಿತರೂಪಸು ಶೋಭಮಾನಂ
ದಿವ್ಯಂ ಪ್ರಭಾಪಟಲಮೇಕಮುಖಂ ಪ್ರಶಾಂತಂ |
ಇಚ್ಛಾಶಕ್ತಿಪರ ಝೃಂಬಿತಮೂರ್ತಿತತ್ವಂ
ವ್ಯಕ್ತೋಹ್ಯಹಂಕೃತಿಪದೇ ಶಿವಲಿಂಗಮಾಹುಃ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./254
ಅನಾದಿ ಗಣೇಶ್ವರನ ನೆನಹುಮಾತ್ರದಲ್ಲಿ
ಮೂರು ಹುಲಿ ಹುಟ್ಟಿತ್ತು ನೋಡಾ.
ಒಂದು ಹುಲಿಗೆ ಆರುಮುಖ
ಒಂದು ಹುಲಿಗೆ ನಾಲ್ಕು ಮುಖ
ಎರಡು ಹುಲಿಯು ನೆಗೆದಾಡುತ್ತಿಹುದು ನೋಡಾ,
ಆ ಎರಡು ಹುಲಿಯು ನೆಗೆದಾಡುವುದು ಕಂಡು
ಆ ನಾಲ್ಕುಮುಖದ ಹುಲಿ ಆ ಎರಡು ಹುಲಿಯನು
ನುಂಗಿ ನುಂಗಿ ಉಗುಳಿತ್ತು ನೋಡಾ.
ಆ ಆರುಮುಖದ ಹುಲಿಗಳೆರಡು ಕೂಡಿ
ಆ ನಾಲ್ಕು ಮುಖದ ಹುಲಿಯ ನುಂಗಿ ಉಗುಳಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./255
ಅನಾದಿ ಸದಾಶಿವತತ್ವ, ಅನಾದಿ ಈಶ್ವರತತ್ವ,
ಅನಾದಿ ಮಹೇಶ್ವರತತ್ವವೆಂಬ, ಅನಾದಿ ತ್ರಿತತ್ವಂಗಳು ತಾನಲ್ಲ.
ಆದಿ ಸದಾಶಿವತತ್ವ, ಆದಿ ಈಶ್ವರತತ್ವ,
ಆದಿ ಮಹೇಶ್ವರತತ್ವವೆಂಬ ಆದಿ ತ್ರಿತತ್ವಂಗಳು ತಾನಲ್ಲ.
ಶಂಕರ ಶಶಿಧರ ಗಂಗಾಧರ ಗೌರೀಶ ಕಳಕಂಠ ರುದ್ರ,
ಕಪಾಲಮಾಲಾಧರ ರುದ್ರ,ಕಾಲಾಗ್ನಿರುದ್ರ,
ಏಕಪಾದರುದ್ರ, ಮಹಾಕಾಲರುದ್ರ, ಮಹಾನಟನಾಪಾದರುದ್ರ,
ಊಧ್ರ್ವಪಾದರುದ್ರ, ಬ್ರಹ್ಮಕಪಾಲ ವಿಷ್ಣುಕಂಕಾಳವ ಪಿಡಿದಾಡುವ
ಪ್ರಳಯಕಾಲರುದ್ರರು, ತ್ರಿಶೂಲ ಖಟ್ವಾಂಗಧರರು
ವೃಷಭವಾಹನರು ಪಂಚಮುಖರುದ್ರರು,
ಶೂನ್ಯಕಾಯನೆಂಬ ಮಹಾರುದ್ರ,
ಅನೇಕಮುಖ ಒಂದುಮುಖವಾಗಿ ವಿಶ್ವರೂಪರುದ್ರ,
ವಿಶ್ವಾಧಿಕಮಹಾರುದ್ರ, ಅಂಬಿಕಾಪತಿ ಉಮಾಪತಿ
ಪಶುಪತಿ ಮೊದಲಾದ ಗಣಾಧೀಶ್ವರರೆಂಬ ಮಹಾಗಣಂಗಳು ತಾನಲ್ಲ.
ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು ಸಹಸ್ರಪಾದವನುಳ್ಳ
ವಿರಾಟ್ಪುರುಷನು ತಾನಲ್ಲ.
ವಿಶ್ವತೋಮುಖ ವಿಶ್ವತೋಚಕ್ಷು ತಾನಲ್ಲ.
ವಿಶ್ವತೋಪಾದವನುಳ್ಳ ಮಹಾಪುರುಷ ತಾನಲ್ಲ.
ಪತಿ-ಪಶು-ಪಾಶಂಗಳೆಂಬ
ಸಿದ್ಧಾಂತಜ್ಞಾನತ್ರಯಂಗಳು ತಾನಲ್ಲ.
ತ್ವಂ ಪದ ತತ್ಪದ ಅಸಿಪದವೆಂಬ
ವೇದಾಂತಪದತ್ರಯ ಪದಾರ್ಥಂಗಳು ತಾನಲ್ಲ.
ಜೀವಹಂಸ ಪರಮಹಂಸ ಪರಾಪರಹಂಸನೆಂಬ
ಹಂಸತ್ರಯಂಗಳು ತಾನಲ್ಲ.
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರೆಂಬ
ಪಂಚಮೂರ್ತಿಗಳು ತಾನಲ್ಲ.
ಆ ಸದಾಶಿವತತ್ವದಲ್ಲುತ್ಪತ್ಯವಾದ
ಪೃಥ್ವಿ ಅಪ್ಪು ತೇಜ ವಾಯು ಆಕಾಶ ಚಂದ್ರ ಸೂರ್ಯಾತ್ಮರೆಂಬ
ಅಷ್ಟತನುಮೂರ್ತಿಗಳು ತಾನಲ್ಲ.
ಅಸ್ಥಿ ಮಾಂಸ ಚರ್ಮ ನರ ರೋಮ
-ಈ ಐದು ಪೃಥ್ವಿಯಿಂದಾದವು.
ಪಿತ್ಥ ಶ್ಲೇಷ್ಮ ರಕ್ತ ಶುಕ್ಲ ಮೂತ್ರ
-ಈ ಐದು ಅಪ್ಪುವಿನಿಂದಾದವು.
ಕ್ಷುದೆ ತೃಷೆ ನಿದ್ರೆ ಆಲಸ್ಯ ಸಂಗ
-ಈ ಐದು ಅಗ್ನಿಯಿಂದಾದವು.
ಪರಿವ ಪಾರುವ ಸುಳಿವ ಕೂಡುವ ಅಗಲುವ
-ಈ ಐದು ವಾಯುವಿನಿಂದಾದವು.
ವಿರೋಧಿಸುವ ಅಂಜಿಸುವ ನಾಚುವ
ಮೋಹಿಸುವ ಅಹುದಾಗದೆನುವ
-ಈ ಐದು ಆಕಾಶದಿಂದಾದವು.
ಇಂತೀ ಪಂಚಭೌತಿಕದ ಪಂಚವಿಂಶತಿ ಗುಣಂಗಳಿಂದಾದ
ದೇಹವು ತಾನಲ್ಲ.
ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂಬ
ಜ್ಞಾನೇಂದ್ರಿಯಂಗಳು ತಾನಲ್ಲ.
ವಾಕು ಪಾದ ಪಾಣಿ ಪಾಯು ಗುಹ್ಯವೆಂಬ
ಕಮರ್ೆಂದ್ರಿಯಂಗಳು ತಾನಲ್ಲ.
ಶಬ್ದ ಸ್ಪರ್ಶ ರೂಪ ರಸ ಗಂಧಂಗಳೆಂಬ
ಪಂಚವಿಷಯಂಗಳು ತಾನಲ್ಲ,
ವಚನ ಗಮನ ದಾನ ವಿಸರ್ಗ ಆನಂದವೆಂಬ
ಕಮರ್ೆಂದ್ರಿಯಂಗಳ ತನ್ಮಾತ್ರೆಗಳು ತಾನಲ್ಲ,
ಇಡೆ ಪಿಂಗಳೆ ಸುಷುಮ್ನಾ ಗಾಂಧಾರೀ ಹಸ್ತಿಜಿಹ್ವಾ ಪೂಷೆ
ಪಯಸ್ವಿನೀ ಅಲಂಬು ಲಕುಹ ಶಂಕಿನೀ-ಎಂಬ ದಶನಾಡಿಗಳು ತಾನಲ್ಲ.
ಪ್ರಾಣ ಅಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ
ದೇವದತ್ತ ಧನಂಜಯವೆಂಬ ದಶವಾಯುಗಳು ತಾನಲ್ಲ.
ಸ್ಥೂಲತನು, ಸೂಕ್ಷ್ಮತನು, ಕಾರಣತನು, ನಿರ್ಮಲತನು,
ಆನಂದತನು, ಚಿನ್ಮಯತನು, ಚಿದ್ರೂಪತನು,
ಶುದ್ಧತನುವೆಂಬ ಅಷ್ಟತನುಗಳು ತಾನಲ್ಲ.
ಜೀವಾತ್ಮ ಅಂತರಾತ್ಮ ಪರಮಾತ್ಮ ನಿರ್ಮಲಾತ್ಮ
ಶುದ್ಧಾತ್ಮ ಜ್ಞಾನಾತ್ಮ ಭೂತಾತ್ಮ ಮಹಾತ್ಮವೆಂಬ
ಅಷ್ಟ ಆತ್ಮಂಗಳು ತಾನಲ್ಲ.
ಸಂಸ್ಥಿತ ತೃಣೀಕೃತ ವರ್ತಿನಿ ಕ್ರೋಧಿನಿ ಮೋಹಿನಿ
ಅತಿಚಾರಿಣಿ ಗಂಧಚಾರಿಣಿ ವಾಸಿನಿಯೆಂಬ
ಅಂತರಂಗದ ಅಷ್ಟಮದಂಗಳು ತಾನಲ್ಲ.
ಕುಲ ಛಲ ಧನ ರೂಪ ಯೌವ್ವನ ವಿದ್ಯೆ ರಾಜ್ಯ ತಪವೆಂಬ
ಬಹಿರಂಗ ಅಷ್ಟಮದಂಗಳು ತಾನಲ್ಲ.
ರಸ ರುಧಿರ ಮಾಂಸ ಮೇದಸ್ಸು ಅಸ್ಥಿ ಮಜ್ಜೆ
ಶುಕ್ಲವೆಂಬ ಸಪ್ತಧಾತುಗಳು ತಾನಲ್ಲ.
ತನುವ್ಯಸನ, ಮನವ್ಯಸನ, ಧನವ್ಯಸನ,
ರಾಜ್ಯವ್ಯಸನ, ವಿಶ್ವವ್ಯಸನ, ಉತ್ಸಾಹವ್ಯಸನ,
ಸೇವಕವ್ಯಸನವೆಂಬ ಸಪ್ತವ್ಯಸನಂಗಳು ತಾನಲ್ಲ.
ಕ್ಷುತ್ ಪಿಪಾಸೆ ಶೋಕ ಮೋಹ ಜನನ ಮರಣವೆಂಬ
ಷಡೂರ್ಮಿಗಳು ತಾನಲ್ಲ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವೆಂಬ
ಅರಿಷಡ್ವರ್ಗಂಗಳು ತಾನಲ್ಲ.
ಜಾತಿ, ವರ್ಣ, ಆಶ್ರಮ, ಕುಲ, ಗೋತ್ರ, ನಾಮಗಳೆಂಬ
ಷಟ್ಭ್ರಮೆಗಳು ತಾನಲ್ಲ.
ಆಸ್ತಿ, ಜಾಯತೇ, ಪರಿಣಮತೇ, ವರ್ಧತೇ, ವಿನಶ್ಯತಿ, ಅಪಕ್ಷೀಯತೇ ಎಂಬ
ಷಡ್ಭಾವವಿಕಾರಂಗಳು ತಾನಲ್ಲ.
ಅನ್ನಮಯ ಪ್ರಾಣಮಯ ಮನೋಮಯ
ವಿಜ್ಞಾನಮಯ ಆನಂದಮಯವೆಂಬ ಪಂಚಕೋಶಂಗಳು ತಾನಲ್ಲ.
ಸತ್ವ ರಜ ತಮೋಗುಣತ್ರಯಂಗಳು ತಾನಲ್ಲ.
ಅಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕವೆಂಬ ತಾಪತ್ರಯಂಗಳು ತಾನಲ್ಲ.
ವಿಶ್ವ ತೈಜಸ ಪ್ರಾಜ್ಞವೆಂಬ ಜೀವತ್ರಯಂಗಳು ತಾನಲ್ಲ.
ವಾತ ಪಿತ್ಥ ಕಫಂಗಳೆಂಬ ದೋಷತ್ರಯಂಗಳು ತಾನಲ್ಲ.
ಆಣವ ಮಾಯಾ ಕಾಮರ್ಿಕವೆಂಬ ಮಲತ್ರಯಂಗಳು ತಾನಲ್ಲ.
ಸುಖ ದುಃಖ ಪುಣ್ಯ ಪಾಪಂಗಳು ತಾನಲ್ಲ.
ಸಂಚಿತ, ಪ್ರಾರಬ್ಧ, ಆಗಾಮಿಯೆಂಬ ಕರ್ಮತ್ರಯಂಗಳು ತಾನಲ್ಲ.
ಅಗ್ನಿಮಂಡಲ, ಆದಿತ್ಯಮಂಡಲ, ಚಂದ್ರಮಂಡಲವೆಂಬ
ಮಂಡಲತ್ರಯಂಗಳು ತಾನಲ್ಲ.
ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೆ ಎಂಬ
ಷಡುಚಕ್ರಂಗಳ ದಳ ವರ್ಣ ಅಕ್ಷರಂಗಳು ತಾನಲ್ಲ.
ಜಾಗ್ರ ಸ್ವಪ್ನ ಸುಷುಪ್ತಿ ತೂರ್ಯ ತೂರ್ಯಾತೀತಗಳೆಂಬ
ಪಂಚಾವಸ್ಥೆಗಳು ತಾನಲ್ಲ.
ಜಾಗ್ರದಲ್ಲಿಯ ಜಾಗ್ರ, ಜಾಗ್ರದಲ್ಲಿಯ ಸ್ವಪ್ನ, ಜಾಗ್ರದಲ್ಲಿಯ ಸುಷುಪ್ತಿ,
ಜಾಗ್ರದಲ್ಲಿಯ ತೂರ್ಯ, ಜಾಗ್ರದಲ್ಲಿಯ ತೂರ್ಯಾತೀತವೆಂಬ
ಜಾಗ್ರಪಂಚಾವಸ್ಥೆಗಳು ತಾನಲ್ಲ.
ಸ್ವಪ್ನದಲ್ಲಿಯ ಜಾಗ್ರ, ಸ್ವಪ್ನದಲ್ಲಿಯ ಸ್ವಪ್ನ, ಸ್ವಪ್ನದಲ್ಲಿಯ ಸುಷುಪ್ತಿ,
ಸ್ವಪ್ನದಲ್ಲಿಯ ತೂರ್ಯ, ಸ್ವಪ್ನದಲ್ಲಿಯ ತೂರ್ಯಾತೀತವೆಂಬ
ಸ್ವಪ್ನಪಂಚಾವಸ್ಥೆಗಳು ತಾನಲ್ಲ.
ಸುಷುಪ್ತಿಯಲ್ಲಿಯ ಜಾಗ್ರ, ಸುಷುಪ್ತಿಯಲ್ಲಿಯ ಸ್ವಪ್ನ,
ಸುಷುಪ್ತಿಯಲ್ಲಿಯ ಸುಷುಪ್ತಿ ,
ಸುಷುಪ್ತಿಯಲ್ಲಿಯ ತೂರ್ಯ, ಸುಷುಪ್ತಿಯಲ್ಲಿಯ ತೂರ್ಯಾತೀತವೆಂಬ
ಸುಷುಪ್ತಿಯ ಪಂಚಾವಸ್ಥೆಗಳು ತಾನಲ್ಲ.
ತೂರ್ಯದಲ್ಲಿಯ ಜಾಗ್ರ, ತೂರ್ಯದಲ್ಲಿಯ ಸ್ವಪ್ನ, ತೂರ್ಯದಲ್ಲಿಯ ಸುಷುಪ್ತಿ,
ತೂರ್ಯದಲ್ಲಿಯ ತೂರ್ಯ, ತೂರ್ಯದಲ್ಲಿಯ ತೂರ್ಯಾತೀತವೆಂಬ
ತೂರ್ಯಪಂಚಾವಸ್ಥೆಗಳು ತಾನಲ್ಲ.
ತೂರ್ಯಾತೀತದಲ್ಲಿಯ ಜಾಗ್ರ, ತೂರ್ಯಾತೀತದಲ್ಲಿಯ ಸ್ವಪ್ನ ,
ತೂರ್ಯಾತೀತದಲ್ಲಿಯ ಸುಷುಪ್ತಿ, ತೂರ್ಯಾತೀತದಲ್ಲಿಯ ತೂರ್ಯ,
ತೂರ್ಯಾತೀತದಲ್ಲಿಯ ತೂರ್ಯಾತೀತವೆಂಬ
ತೂರ್ಯಾತೀತಪಂಚಾವಸ್ಥೆಗಳು ತಾನಲ್ಲ.
ಸಕಲ-ಶುದ್ಧ-ಕೇವಲಾವಸ್ಥೆಗಳು ತಾನಲ್ಲ.
ಸಕಲದಲ್ಲಿಯ ಸಕಲ, ಸಕಲದಲ್ಲಿಯ ಶುದ್ಧ, ಸಕಲದಲ್ಲಿಯ ಕೇವಲವೆಂಬ
ಸಕಲತ್ರಿಯಾವಸ್ಥೆಗಳು ತಾನಲ್ಲ.
ಶುದ್ಧದಲ್ಲಿಯ ಸಕಲ, ಶುದ್ಧದಲ್ಲಿಯ ಶುದ್ಧ, ಶುದ್ಧದಲ್ಲಿಯ ಕೇವಲವೆಂಬ
ಶುದ್ಧತ್ರಿಯಾವಸ್ಥೆಗಳು ತಾನಲ್ಲ.
ಕೇವಲದಲ್ಲಿಯ ಸಕಲ, ಕೇವಲದಲ್ಲಿಯ ಶುದ್ಧ,
ಕೇವಲದಲ್ಲಿಯ ಕೇವಲವೆಂಬ
ಕೇವಲತ್ರಿಯಾವಸ್ಥೆಗಳು ತಾನಲ್ಲ.
ಜ್ಞಾತೃ ಜ್ಞಾನ ಜ್ಞೇಯವೆಂಬ ಜ್ಞಾನತ್ರಯಂಗಳು ತಾನಲ್ಲ.
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ
ಧ್ಯಾನ ಧಾರಣ ಸಮಾಧಿಯೆಂಬ ಅಷ್ಟಾಂಗಯೋಗಂಗಳು ತಾನಲ್ಲ.
ಧರ್ಮ ಅರ್ಥ ಕಾಮ ಮೋಕ್ಷಂಗಳೆಂಬ
ಚತುರ್ವಿಧ ಪುರುಷಾರ್ಥಂಗಳು ತಾನಲ್ಲ.
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ
ಚತುರ್ವಿಧಪದಂಗಳು ತಾನಲ್ಲ.
ಅಣಿಮಾ ಗರಿಮಾ ಲಘಿಮಾ ಮಹಿಮಾ ಪ್ರಾಪ್ತಿ ಪ್ರಕಾವ್ಯ ಇಶಿತ್ವ ವಶಿತ್ವ
ಎಂಬ ಅಷ್ಟಮಹದೈಶ್ವರ್ಯಂಗಳು ತಾನಲ್ಲ.
ರಾಜಸಹಂಕಾರ ತಾಮಸಹಂಕಾರ ಸ್ವಹಂಕಾರವೆಂಬ
ಅಹಂಕಾರತ್ರಯಂಗಳು ತಾನಲ್ಲ.
ಅಂಜನಾಸಿದ್ಧಿ, ಘುಟಿಕಾಸಿದ್ಧಿ, ರಸಸಿದ್ಧಿ, ಪಾದೋದಕಸಿದ್ಧಿ,
ಪರಕಾಯ ಪ್ರವೇಶ, ದೂರಶ್ರವಣ, ದೂರದೃಷ್ಟಿ,
ತ್ರಿಕಾಲಜ್ಞಾನವೆಂಬ ಅಷ್ಟಮಹಾಸಿದ್ಧಿಗಳು ತಾನಲ್ಲ.
ಉದರಾಗ್ನಿ ಮಂದಾಗ್ನಿ ಶೋಕಾಗ್ನಿ ಕ್ರೋಧಾಗ್ನಿ
ಕಾಮಾಗ್ನಿಯೆಂಬ ಪಂಚಾಗ್ನಿಗಳು ತಾನಲ್ಲ.
ಪ್ರಕೃತಿ, ಪುರುಷ, ಕಾಲ, ಪರ, ವ್ಯೋಮಾಕಾಶಂಗಳು ತಾನಲ್ಲ.
ಊಧ್ರ್ವಶೂನ್ಯ, ಅಧಃಶೂನ್ಯ, ಮಧ್ಯಶೂನ್ಯ, ಸರ್ವಶೂನ್ಯವಾಗಿಹ
ಸಹಜನಿರಾಲಂಬವೇ ತಾನೆಂದರಿದ ಮಹಾಶರಣಂಗೆ
ನಾಮ ರೂಪ ಕ್ರಿಯಾತೀತವಾಗಿಹ ಮಹಾಘನವೇ ತನ್ನ ಶಿರಸ್ಸು ನೋಡಾ.
ದಿವ್ಯಜ್ಞಾನವೇ ತನ್ನ ಚಕ್ಷು, ಅಚಲಪದವೇ ತನ್ನ ಪುರ್ಬು,
ಅಚಲಾತೀತವೇ ತನ್ನ ಹಣೆ ನೋಡಾ.
ನಿರಾಕುಳಪದವೇ ತನ್ನ ನಾಸಿಕ,
ನಿರಂಜನಾತೀತವೆ ತನ್ನ ಉಶ್ವಾಸ-ನಿಶ್ವಾಸ ನೋಡಾ.
ನಿರಾಮಯವೇ ತನ್ನ ಕರ್ಣ, ನಿರಾಮಯಾತೀತವೇ
ತನ್ನ ಕರ್ಣದ್ವಾರ ನೋಡಾ.
ಅಮಲ ನಿರ್ಮಲವೇ ತನ್ನ ಗಲ್ಲ,
ಅಮಲಾತೀತವೇ ತನ್ನ ಗಡ್ಡಮೀಸೆ ಕೋರೆದಾಡೆ ನೋಡಾ.
ನಾದಬಿಂದುಕಳಾತೀತವೆ ತನ್ನ ತಾಳೋಷ್ಠಸಂಪುಟ ನೋಡಾ.
ಅಕಾರ, ಉಕಾರ, ಮಕಾರ, ನಾದ ಬಿಂದು
ಅರ್ಧಚಂದ್ರ ನಿರೋದಿನಾದಾಂತ ಶಕ್ತಿವ್ಯಾಪಿನಿ
ವ್ಯೋಮರೂಪಿಣಿ ಅನಂತ ಆನಂದ ಅನಾಶ್ರಿತ ಸುಮನೆ ಉನ್ಮನಿ
ಇಂತೀ ಪ್ರಣವದಲ್ಲಿ ಉತ್ಪತ್ಯವಾದ ಷೋಡಶಕಳೆ
ತನ್ನ ಷೋಡಶ ದಂತಂಗಳು ನೋಡಾ.
ಆ ದಂತಂಗಳ ಕಾಂತಿ ಅನೇಕಕೋಟಿ ಸಿಡಿಲೊಡೆದ
ಬಯಲಪ್ರಕಾಶವಾಗಿಹುದು ನೋಡಾ.
ತನ್ನ ಕೊರಳೆ ನಿರಾಕುಳ, ತನ್ನ ಭುಜಂಗಳೆ
ಅಪ್ರಮಾಣ ಅಗೋಚರ ನೋಡಾ.
ತನ್ನ ಹಸ್ತಾಂಗುಲಿ ನಖಂಗಳೆ ಪರತತ್ವ, ಶಿವತತ್ವ, ಗುರುತತ್ವ,
ಲಿಂಗತತ್ವಂಗಳು ನೋಡಾ.
ಪರಬ್ರಹ್ಮವೇ ತನ್ನ ಎದೆ, ಆ ಪರಬ್ರಹ್ಮವೆಂಬ ಎದೆಯಲ್ಲಿ ನಿರಂಜನಪ್ರಣವ
ಅವಾಚ್ಯಪ್ರಣವವೆಂಬ ಸಣ್ಣ ಕುಚಂಗಳು ನೋಡಾ.
ಚಿತ್ತಾಕಾಶ ಭೇದಾಕಾಶವೆ ತನ್ನ ದಕ್ಷಿಣ ವಾಮ ಪಾಶ್ರ್ವಂಗಳು ನೋಡಾ.
ಬಿಂದ್ವಾಕಾಶವೇ ತನ್ನ ಬೆನ್ನು ನೋಡಾ.
ಮಹಾಕಾಶವೇ ತನ್ನ ಬೆನ್ನ ನಿಟ್ಟೆಲವು ನೋಡಾ.
ಪಂಚಸಂಜ್ಞೆಯನುಳ್ಳ ಅಖಂಡಗೋಳಕಾಕಾರಲಿಂಗವೆ ತನ್ನ ಗರ್ಭ ನೋಡಾ.
ಆ ಗರ್ಭ ಅನೇಕಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದುನೋಡಾ.
ಆ ಗರ್ಭದಲ್ಲಿ ಅನೇಕಕೋಟಿತತ್ವಂಗಳು, ಅನೇಕಕೋಟಿ ಸದಾಶಿವರು,
ಅನೇಕಕೋಟಿ ಮಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿರುದ್ರರು,
ಅನೇಕಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಋಷಿಗಳು
ಅನೇಕಕೋಟಿ ಚಂದ್ರಾದಿತ್ಯರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ದೇವರ್ಕಗಳು,
ಅನೇಕಕೋಟಿ ಬ್ರಹ್ಮಾಂಡಗಳಡಗಿಹವು ನೋಡಾ.
ತನ್ನ ನಡುವೆ ವ್ಯೋಮಾತೀತವು, ತನ್ನ ಕಟಿಸ್ಥಾನವೇ ಕಲಾಪ್ರಣವ,
ತನ್ನ ಪಚ್ಚಳವೆ ಅನಾದಿಪ್ರಣವ ಆದಿಪ್ರಣವ ನೋಡಾ.
ತನ್ನ ಉಪಸ್ಥವೇ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ
ಮೊದಲಾದ ಸಮಸ್ತ ದೇವರ್ಕಗಳಿಗೂ
ಜನನಸ್ಥಳವಾಗಿಹ ನಿರ್ವಾಣಪದ ನೋಡಾ.
ಶಿವಸಂಬಂಧ, ಶಕ್ತಿಸಂಬಂಧವಾಗಿಹ ಓಂಕಾರವೆ ತನ್ನ ಒಳದೊಡೆ ನೋಡಾ.
ಸಚ್ಚಿದಾನಂದ ಪರಮಾನಂದವೆ ತನ್ನ ಒಳಪಾದ ಕಂಬಗಳು ನೋಡಾ.
ಚಿದಾತ್ಮ ಪರಮಾತ್ಮನೆ ತನ್ನ ಹರಡು, ಅತಿಸೂಕ್ಷ್ಮಪಂಚಾಕ್ಷರವೆ
ತನ್ನ ಪಾದಾಂಗುಷ್ಠಾಂಗುಲಿಗಳೆಂಬ ಸಾಯುಜ್ಯಪದ ನೋಡಾ.
ತನ್ನ ಸ್ವರವೆ ಪರಾಪರ, ತನ್ನ ಮಾತೇ ಮಹಾಜ್ಯೋತಿರ್ಮಯಲಿಂಗ,
ಚಿನ್ಮಯ ಚಿದ್ರೂಪ ಚಿತ್ಪ್ರಕಾಶವೆ ತನ್ನ ವಪೆ ನೋಡಾ.
ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ, ಆಚಾರಲಿಂಗ, ಗುರುಲಿಂಗ,
ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಮೊದಲಾಗಿ
ಇನ್ನೂರ ಹದಿನಾರು ಷಡುಸ್ಥಲಲಿಂಗವೆ
ತನ್ನಂತಃಸ್ಥಾನದಲ್ಲಿ ಧರಿಸಿಹ ಆಭೂಷಣಂಗಳು ನೋಡಾ.
ಮಹಾಲಿಂಗವೇ ತುರುಬು, ಶಿವಜ್ಞಾನವೆ ಶೃಂಗಾರವಾಗಿಹ
ತನ್ನ ತಾನರಿದು ಅಂತಃಶೂನ್ಯ, ಅಧಃಶೂನ್ಯ, ಬಹಿಃಶೂನ್ಯ,
ದಶದಿಶಾಶೂನ್ಯ ನಿರಾಕಾರವಾಗಿಹ
ತನ್ನ ಅಂಗ ಪ್ರತ್ಯಂಗ ಸ್ವರೂಪ ಸ್ವಭಾವಂಗಳ ತಿಳಿದು ಮಹಾಶರಣನು ತಾನೆ
ಗುರು, ತಾನೆ ಲಿಂಗ, ತಾನೆ ಜಂಗಮ,
ತಾನೆ ಪರಮಪಾದೋದಕಪ್ರಸಾದ ನೋಡಾ.
ತಾನೆ ನಾದಬಿಂದುಕಳಾತೀತ ನೋಡಾ.
ತಾನೆ ಶೂನ್ಯ ನಿಶ್ಶೂನ್ಯನು, ತಾನೆ ಘನಶೂನ್ಯ, ಮಹಾಘನಶೂನ್ಯ ನೋಡಾ.
ತಾನೆ ಬಯಲು ನಿರ್ಬಯಲು, ತಾನೆ ನಿರುಪಮ ನಿರಾಕಾರ
ತಾನೆ ನಿರಾಳ ನಿರಾಲಂಬ ನೋಡಾ.
ತಾನೆ ಸಚ್ಚಿದಾನಂದ ನಿತ್ಯಪರಿಪೂರ್ಣನು,
ತನ್ನಿಂದಧಿಕವಪ್ಪ ಪರಬ್ರಹ್ಮವೊಂದಿಲ್ಲವಾಗಿ
ತಾನೆ ಸ್ವಯಂಜ್ಯೋತಿರ್ಲಿಂಗ ನೋಡಾ
ಅಪ್ರಮಾಣಕೂಡಲಸಂಗಮದೇವಾ./256
ಅನಾಶ್ರಿತವೆಂಬ ಭುವನ ಮೊದಲಾಗಿ
ಕಾಲಾಗ್ನಿರುದ್ರನೆಂಬ ಭುವನ ಕಡೆಯಾಗಿ
ಇನ್ನೂರಿಪ್ಪತ್ನಾಲ್ಕು ಭುವನಂಗಳು
ಆ ಅಖಂಡಜ್ಯೋತಿರ್ಮಯವಾಗಿಹ
ಗೋಳಕಾಕಾರಪ್ರಣವದಲ್ಲಿ ಅಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ : “ಚತುರ್ವಿಂಶತಿ ಭುವನಂ ಚ ದ್ವಿಶತಂ ಭುವನಂ ತಥಾ |
ಇತಿ ಭುವನಾಧ್ವಂ ಚ ದೇವೀ ಓಂಕಾರೇ ಚ ವಿಲೀಯತೇ || ”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./257
ಅನಾಹತಚಕ್ರದಲ್ಲಿಯ ಜಂಗಮಲಿಂಗವು
ಅಂತರಂಗದೊಡನೆ ಕೂಡಿ ವರ್ತಿಸುವುದಾಗಿ
ಬಹಿರಂಗ ಸಹಿತವಾಗಿ ಅಮೂರ್ತವಹ ವಸ್ತುತತ್ವವಾಗಿ
ಅಕ್ಷರವಪ್ಪ ಪ್ರಕೃತಿಗಿಂದಲು, ಪರತತ್ವವೆಂಬ ಹೆಸರನುಳ್ಳ
ಜ್ಯೋತಿಸ್ವರೂಪನಪ್ಪ ಪುರುಷನ ತನ್ನ ಆತ್ಮಮೂರ್ತಿಯಹಂಥಾ
ಆದಿಶಕ್ತಿಯೊಡನೆ ಕೂಡಿದಂತಾದಾಗಿ,
ಮನಸ್ಸಿನಿಂದವೆ ಎಲ್ಲಾಗಳು ಧ್ಯಾನವ ಮಾಡಲು ತಕ್ಕಂಥಾಚಾರಲಿಂಗವೆಂದು
ಆಪ್ತವಾದ ಬುದ್ಧಿಯುಳ್ಳ ಮಹಾತ್ಮರು ಹೇಳುತ್ತಿಹರು ನೋಡಾ
ಇದಕ್ಕೆ ಮಹಾವಾತುಲಾಗಮೇ:ವೃತ್ತ –
“ಸಾಭ್ಯಾಂತರಂ ಸಬಹಿರಂಗಮಮೂರ್ತಿತತ್ವಂ
ಜ್ಯೋತಿರ್ಮಯಂ ಪುರುಷಮಕ್ಷರತಃ ಪರಾಖ್ಯಂ |
ಸ್ವಾತ್ಮಾದಿಶಕ್ತಿಘಟಿತಂ ಮನಸೈವ ನಿತ್ಯಂ
ಧ್ಯಾತವ್ಯರೂಪಮಿತಿ ಯಶ್ಚರಲಿಂಗಮಾಹುಃ|| ”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./258
ಅನೇಕ ವೇದಾಗಮಶಾಸ್ತ್ರಪುರಾಣವನೋದಿ ಕೇಳಿದಡೇನು ?
ಮನದ ಕತ್ತಲೆ ಹರಿಯದು ನೋಡಾ.
ಓಂಕಾರವೆಂಬ ಕಂಬದ ಮೇಲೆ ಮನ ಬುದ್ದಿ ಚಿತ್ತ ಅಹಂಕಾರವೆಂಬ
ಪಣಿತೆಯನಿಡಿಸಿ, ಅಷ್ಟಮದವೆಂಬ ಬತ್ತಿಯ ತೀವಿ,
ಜ್ಞಾನೇಂದ್ರಿಯ ಕರ್ಮೆಂದ್ರಿಯವೆಂಬ ತೈಲವನೆರೆದು,
ಜ್ಞಾನಾಗ್ನಿಯ ಮುಟ್ಟಿಸಿ, ಸ್ವಯಂಪ್ರಕಾಶವ ಬೆಳಗುವದು ನೋಡಾ.
ಅನಂತಕೋಟಿ ಸೂರ್ಯ-ಚಂದ್ರಾಗ್ನಿಮಯವಾಗಿ
ಮಹಾಜ್ಯೋತಿ ಬೆಳಗುತ್ತಿಹುದು.
ಆ ಮಹಾಜ್ಯೋತಿಪ್ರಕಾಶದಲ್ಲಿ ಆಣವ ಮಾಯಾ ಕಾರ್ಮಿಕವೆಂಬ
ಹುಳುಗಳು ಬಿದ್ದು ಸತ್ತವು.
ಹೃದಯದ ಕತ್ತಲೆ ಹರಿಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./259
ಅಪ್ಪುವೆ ಅಂಗವಾದ ಮಹೇಶ್ವರನ ಸುಬುದ್ಧಿಹಸ್ತದಲ್ಲಿಹ
ಗುರುಲಿಂಗವನು ಕತರ್ೃತ್ವನಾಗಿಯು ತನ್ನ ಜ್ಞಾನಶಕ್ತಿಯ ವೈಭವದಿಂದ
ಸಮಸ್ತವಾದ ಉಪದೇಶ ವಿಧಾನ ಶಾಸ್ತ್ರಂಗಳಲ್ಲಿ ಮಾಡಲ್ಪಟ್ಟ
ಆಸ್ಪದವನುಳ್ಳುದಾಗಿಯು, ಕಡೆಯಿಲ್ಲದ ಸುಖಸಮುದ್ರವನಾಗಿಯು,
ಬುದ್ಧಿತತ್ವದಾಸ್ಥಾನದಲ್ಲಿ ಪ್ರತಿಷ್ಠಿತನಾಗಿಹ ಗುರುಲಿಂಗವಿಹುದು ನೋಡಾ,
ಇದಕ್ಕೆ ಮಹಾವಾತುಲಾಗಮೇ :ವೃತ್ತ –
“ಸ್ವಜ್ಞಾನ ಶಕ್ತಿವಿಭವೋದಿತ ಕತರ್ೃತ್ವಂ |
ಸವರ್ೊಪದೇಶವಿದಿತಂ ತತ್ರಕೃತಂ ಪ್ರತಿಷ್ಠಿತಂ,|
ತೇಜೋನಿಧಿಂ ಪರಮಪಾಠ ಸುಖಾಂಬುರಾಸಿ
ಬುದ್ಧೇಃ ಪದೇ ವಿನಿಹಿತಂ ಗುರುಲಿಂಗಮಾಹುಃ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./260
ಅಪ್ಪುವೆ ಅಂಗವಾದ ಮಹೇಶ್ವರನು ಸುಬುದ್ದಿಯೆಂಬ ಹಸ್ತದಲ್ಲಿ
ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ.
ಇದಕ್ಕೆ ಈಶ್ವರೋವಾಚ : “ಮಾಹೇಶ್ವರೋ ಜಲಾಂಗಶ್ಚ ಬುದ್ಧಿಹಸ್ತೇನ ಸದ್ಗುರುಃ |
ಜಿಹ್ವಾಮುಖೇ ರಸೋ ಭೇದಂ ಅರ್ಪಿತಂ ತೃಪ್ತಿಭೋಕ್ತವಾನ್ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./261
ಅಯ್ಯಾ, ಆತ್ಮಯೋಗಿಗಳು ದೇಹವಾಸನೆ ಕೆಡದೆ
ಮೋನಮುದ್ರೆಯಲ್ಲಿದ್ದಡೇನು ?
ಅಯ್ಯಾ, ಆತ್ಮಯೋಗಿಗಳು ಜೀವಹಮ್ಮು ಕೆಡದೆ
ಮೋನಮುದ್ರೆಯಲ್ಲಿದ್ದಡೇನು ?
ಅಯ್ಯಾ, ಆತ್ಮಯೋಗಿಗಳು ಮನದ ಸಂಚಲವರಿಯದೆ
ಮೋನಮುದ್ರೆಯಲ್ಲಿದ್ದಡೇನು ?
ಅಯ್ಯಾ, ಆತ್ಮಯೋಗಿಗಳು ಭಾವಭ್ರಮೆಯರಿಯದೆ
ಮೋನಮುದ್ರೆಯಲ್ಲಿದ್ದಡೇನು ?
ಭವಭವಾಂತರದಲ್ಲಿ ಬಹುದು ತಪ್ಪದು ನೋಡಾ
ಅಪ್ರಮಾಣಕೂಡಲಸಂಗಮದೇವಾ./262
ಅಯ್ಯಾ, ಎನ್ನ ಮನವ ಮಹಾಮಾಯೆ ಮುಚ್ಚಿಕೊಂಡ ಕಾರಣ
ಅನಂತ ಭವದಲ್ಲಿ ಬಂದೆನು.
ಅಯ್ಯಾ, ಎನ್ನ ಮನ ಒಡೆದು ಚಿತ್ಪ್ರಕಾಶನಯನ ಮೂಡಿತ್ತು ನೋಡಾ.
ಅಯ್ಯಾ, ಚಿತ್ಪ್ರಕಾಶನಯನ ಮೂಡಿ ಎನ್ನ ಸರ್ವಾಂಗವ ಭೇದಿಸಿ
ಅತ್ತತ್ತ ವಿೂರಿ ತೋರಿತ್ತು ನೋಡಾ.
ಅಯ್ಯಾ, ಎನ್ನ ಭವಬಂಧನದ ಬೇರ ಕಿತ್ತೀಡಾಡಿದೆನು ನೋಡಾ
ಅಪ್ರಮಾಣಕೂಡಲಸಂಗಮದೇವಾ./263
ಅರಿದಾತ ದುಃಖಕ್ಕೊಳಗಾಗದೆ
ಅಂಧಃಕಾರವ ಮುಚ್ಚಿಕೊಂಡು ಕಾಣಲಾರದಿದ್ದ
ಮಹಾಮಾಯೆಯ ಕೆಡೆಮೆಟ್ಟಿ
ಮೇಲಾಗಿಹ ಈಶಾನ್ಯತೂರ್ಯಬೋಧೆಯ
ತಿಳಿದು ಕಂಡಡೆ ಮುಕ್ತಿಯಹದು ನೋಡಾ
ಅಪ್ರಮಾಣಕೂಡಲಸಂಗಮದೇವಾ./264
ಅಲ್ಲಿಂದ ಮೇಲೆ ಅನಾಹತಚಕ್ರದ
ದ್ವಾದಶದಳಪದ್ಮ ಮಧ್ಯದಲ್ಲಿಹ ಮಂತ್ರ ತತ್ಪುರುಷಮಂತ್ರ.
ಅಲ್ಲಿಹ ಪದ – “ವ್ಯಾಪಿನ್ ರೂಪಿನ್ ಅರೂಪಿನ್ ಪ್ರಥಮ
ಪ್ರಥಮ ತೇಜಸ್ತೇಜ ಜ್ಯೋತಿಜ್ಯರ್ೊತಿ ಅರೂಪ
ಅನಿಲಿನ ಅಧೂಮ” ವೆಂಬ ಹನ್ನೆರಡು ಪದ.
ಇಲ್ಲಿಹ ವರ್ಣ-ಕ ಖ ಗ ಘ ಙ ಚ ಛ ಜ ಝ ಞ ಟ ಠ
ಎಂಬ ಹನ್ನೆರಡು ವರ್ಣ.
ಅಲ್ಲಿಹ ಭುವನ-ಸ್ಥಲೇಶ್ವರ, ಸ್ಥೂಲೇಶ್ವರ, ಶಂಖಕರ್ಣ, ಕಾಳಾಂಜನ,
ಮಂಡಲೇಶ್ವರ, ಮಾಕೂಟ, ದ್ವಿರಂಡ, ಛಗ, ಚಂದ, ಸ್ಥಾಣು, ಸ್ವರ್ಣಾಕ್ಷ,
ಭದ್ರಕರ್ಣ, ಮಹಾಲಯ, ಅವಿಮುಕ್ತ, ರುದ್ರಕೋಟಿ,
ವಸ್ತ್ರಾಪದ, ಭೀಮೇಶ್ವರ,
ಮಹೀಂದ್ರ, ಅಷ್ಟಹಾಸ, ವಿಮಲೇಶ್ವರ, ನಖಲ, ನಾಖಲ,
ಕರುಕ್ಷೇತ್ರ, ಭೈರವ, ಕೈದಾರ, ಮಹಾಬಲ,
ಮಧ್ಯಮೇಶ್ವರ, ಮಾಹೇಂದ್ರಕೇಶ್ವರ, ಜಲಭೇಶ್ವರ,
ಶ್ರೀಶೈಲ, ಹರಿಶ್ಚಂದ್ರ, ಅಕುಲಿಶ, ಮುಂಡಿ, ಚಾರುಭೂತಿ,
ಆಷಾಡಿ, ಪೌಷ್ಕರ, ನೈಮಿಷ, ಪ್ರಭಾಸ, ಅಮರೇಶ್ವರ,
ಭದ್ರಕಾಳ, ವೀರಭದ್ರ, ತ್ರಿಲೋಚನ, ವಿಪ್ಸು, ವಭ,
ವಿವಾಮಿ, ತ್ರಿದಶೇಶ್ವರ, ತ್ರಿಯಕ್ಷ, ಗಣಾ
ಎಂಬ ನಾಲ್ವತ್ತೆಂಟು ಭುವನ.
ಅಲ್ಲಿಹ ತತ್ತ್ವ-ಶ್ರೋತ್ರ, ತ್ವಕ್ಕು, ಚಕ್ಷು, ಜಿಹ್ವೆ, ಘ್ರಾಣವೆಂಬ ಪಂಚತತ್ತ್ವ.
ಅಲ್ಲಿಹ ಕಲೆ-ಶಾಂತಿಕಲೆ ನೋಡಾ
ಅಪ್ರಮಾಣಕೂಡಲಸಂಗಮದೇವಾ./265
ಅಲ್ಲಿಂದ ಮೇಲೆ ಆಜ್ಞಾಚಕ್ರದ ಚತುರ್ದಳಪದ್ಮದ
ಮಧ್ಯದಲ್ಲಿಹ ಮಂತ್ರ ಹದಯ ಶಿರ ಶಿಖಾ ಕವಚ
ನೇತ್ರಾಸ್ತ್ರಗಳೆಂಬ ಆರು ಮಂತ್ರ.
ಅಲ್ಲಿಹ ಪದ – “ಪರಮಾತ್ಮ, ಮಹೇಶ್ವರ,
ಮಹೇಶ್ವರ, ಮಹಾತೇಜ, ಮಹಾತೇಜ,
ಯೋಗಾಧಿಪತೇ ಮುಂಚ ಮುಂಚ ಪ್ರಮಥ ಪ್ರಮಥ
ಶರ್ವ ಶರ್ವ ಭವ ಭವ ಭವೋದ್ಭವ ಸರ್ವಭೂತ ಸುಖಪ್ರದ
ಸರ್ವಸಾನ್ನಿಧ್ಯಕರ ಬ್ರಹ್ಮ ವಿಷ್ಣು ರುದ್ರಪರ
ಅರ್ಚಿತ ಸ್ತುತಾ ಪೂರ್ವಸ್ಥಿತ ಸಾಕ್ಷಿಹಿ ಸಾಕ್ಷಿಹಿ ತುರುತುರು
ಪತಂಗ ಪತಂಗ ಪೂರ್ವಸ್ಥಿತ ಸಾಕ್ಷಿಹಿ ಸಾಕ್ಷಿಹಿ ತುರುತುರು
ಪತಂಗ ಪತಂಗ ಪಿಂಗ ಪಿಂಗ ಜ್ಞಾನ ಜ್ಞಾನ
ಶಬ್ದ ಶಬ್ದ ಸೂಕ್ಷ್ಮ ಸೂಕ್ಷ್ಮ ಶಿವ ಶರ್ವ ಶರ್ವ
ಓಂ ನಮಃಶಿವಾಯ, ಓಂ ನಮಃಶಿವಾಯ ನಮೋ ನಮಃ ಓಂ”
ಎಂಬ ನಲ್ವತ್ತಾರು ಪದ.
ಅಲ್ಲಿಹ ವರ್ಣ-ಹಂ ಳಂ ಹಂ ಕ್ಷಂ ಎಂಬ ನಾಲ್ಕು ವರ್ಣ.
“ಅಲ್ಲಿಹ ಭುವನ-ಕರ್ತೃ, ಹರ, ಮೃತ್ಯು, ಯಾಮ್ಯ,
ಕ್ಷಯಾಂತಕ, ಭಸ್ಮಾಂತಕ, ಬಭ್ರು, ದಹನ, ಜ್ವಲನ,
ಹರಿಹರ, ಖಾದತಕ್ಷ, ಪಿಂಗ, ಹುತಾಶನ, ಜಯರುದ್ರ,
ತ್ರಿದಶಾಧಿಪ, ಪಿನಾಕಿ, ಶಾಸ್ತ್ರ, ಅವ್ಯಯ, ವಿಭೂತಿ,
ಪ್ರಮರ್ಧ, ವಜ್ರದೇಹ, ಬುಧ, ಅಜಕಪಾಲಿ, ಈಶ್ವರ,
ರುದ್ರ, ವಿಷ್ಣು, ಬ್ರಹ್ಮ, ಹಾಟಕ, ಕೂಷ್ಮಾಂಡ,
ಕಾಲಾಗ್ನಿರುದ್ರ, ಪ್ರಳಯಕಾಲ, ಮಹಾರುದ್ರನೆಂಬ ಮೂವತ್ತೆರಡು ಭುವನ.
ಅಲ್ಲಿಹ ತತ್ವ-ಪರಶಿವ, ಪರಾಶಕ್ತಿ , ಸದಾಶಿವ,
ಈಶ್ವರ, ಮನ, ಶುದ್ಧವಿದ್ಯೆ, ಮಾಯೆ,
ಕಾಲ ಹನ್ನೆರಡು ನಿಯತಿ ಕಲೆ ವಿದ್ಯೆ ರಾಗವೆಂಬ ಹನ್ನೊಂದು ತತ್ತ್ವ
ಅಲ್ಲಿಹ ಕಲೆ-ಶಾಂತ್ಯತೀತೋತ್ತರ ಕಲೆ ನೋಡಾ
ಅಪ್ರಮಾಣಕೂಡಲಸಂಗಮದೇವಾ/266
ಅಲ್ಲಿಂದ ಮೇಲೆ ಕಂಠಸ್ಥಾನದಲ್ಲಿ ವಿಶುದ್ಧಿಚಕ್ರ,
ಆಕಾಶವೆಂಬ ಮಹಾಭೂತ,
ಆ ಚಕ್ರ ವತರ್ುಳಾಕಾರ, ಷೋಡಶದಳ ಪದ್ಮ, ಆ ಪದ್ಮ ಶ್ವೇತವರ್ಣ.
ಅಲ್ಲಿಯ ಅಕ್ಷರ ಅ ಆ ಇ ಈ ಉ ಊ ಋ ೂ ಲೃ ಲೃೂ
ಏ ಐ ಓ ಔ ಅಂ ಅಃ ಎಂಬ ಷೋಡಶಾಕ್ಷರ ನ್ಯಾಸವಾಗಿಹುದು.
ಈಶಾನ್ಯಮುಖವನುಳ್ಳ ಪ್ರಸಾದಲಿಂಗ.
ಆ ಲಿಂಗಕ್ಕೆ ಶಾಂತ್ಯತೀತೆಯೆಂಬ ಕಲೆ,
ಅಲ್ಲಿ ಶಿವಸಾದಾಖ್ಯ, ಅಲ್ಲಿಯ ದಿಕ್ಕು ಊಧ್ರ್ವದಿಕ್ಕು,
ಅಲ್ಲಿಯ ನಾದ ಮೇಘಧ್ವನಿ,
ಡಾಕಿನಿಯೆಂಬ ಪರಿಯಾಯ ನಾಮವನುಳ್ಳ ಪರಾಶಕ್ತಿ
ಲಿಂಗದ ಶ್ರೋತ್ರವೆಂಬಮುಖದಲ್ಲಿ ಸುಜ್ಞಾನವೆಂಬ ಹಸ್ತದಿಂದ
ಆನಂದಭಕ್ತಿಯಿಂದ ಶಬ್ದದ್ರವ್ಯವನು
ಗಾಯತ್ರಿಯನುಚ್ಚರಿಸುತ್ತ ಅರ್ಪಿಸುವಳು.
ಸದಾಶಿವ ಪೂಜಾರಿ, ಪರವೆಂಬ ಸಂಜ್ಞೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಯಕಾರವೆಂಬ ಬೀಜಾಕ್ಷರ.
ಅದು ಪ್ರಣಮದ ದರ್ಪಣಾಕಾರದಲ್ಲಿಹ ಯಕಾರದಲ್ಲಿಹುದಾಗಿ
ಅಲ್ಲಿ ಆ ಈ ಊ ಏ ಓ ಯಾಂ ಎಂಬ ಬ್ರಹ್ಮನಾದ ಮಂತ್ರಮೂರ್ತಿಪ್ರಣವದ
ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ
ನಮಸ್ಕಾರವು ನೋಡಾ.
“ಇದಕ್ಕೆ ಈಶ್ವರೋವಾಚ : “ಕಂಠ ಪೀಠೇ ವಿಶುದ್ಧೇ ತು ಮಹಾಭೂತಸ್ಯಯೋನಭಃ |
ಗೋಳಕಾಕಾರಂ ಷೋಡಶದಳ ಪದ್ಮಂ ದ್ವಿರಷ್ಟಯೋ ||
ಆಕಾರಂ ಶ್ವೇತವರ್ಣಂತು ದೈವಂ ಸದಾಶಿವಂ ಸ್ಮೃತಂ |
ಬೀಜಾಕ್ಷರಂ ಯಕಾರಂ ಚ ಪ್ರಸಾದಲಿಂಗಯೋ ಸ್ಥಿತಂ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./267
ಅಲ್ಲಿಂದ ಮೇಲೆ ನಾಭಿಸ್ಥಾನದಲ್ಲಿ ಮಣಿಪೂರಕಚಕ್ರ,
ಅಗ್ನಿಯೆಂಬ ಮಹಾಭೂತ.
ಆ ಚಕ್ರ ತ್ರಿಕೋಣಾಕಾರ, ದಶದಳಪದ್ಮ.
ಆ ಪದ್ಮ ಕೃಷ್ಣವರ್ಣ, ಅಲ್ಲಿಯ ಅಕ್ಷರ ಡಢಣ ತಥದಧನ ಪಫ
ಎಂಬ ದಶಾಕ್ಷರ ನ್ಯಾಸವಾಗಿಹುದು.
ಅಲ್ಲಿ ರಕ್ತವರ್ಣವಾಗಿಹ ಅಘೋರಮುಖವನುಳ್ಳ ಶಿವಲಿಂಗ ;
ಆ ಲಿಂಗಕ್ಕೆ ವಿದ್ಯೆ ಕಲೆ, ಅಲ್ಲಿ ಮೂರ್ತಿಸಾದಾಖ್ಯ.
ಅಲ್ಲಿಯ ದಿಕ್ಕು ದಕ್ಷಿಣದಿಕ್ಕು, ಅಲ್ಲಿಯ ನಾದ ಘಂಟಾನಾದ.
ಲಾಕಿನಿಯೆಂಬ ಪರಿಯಾಯ ನಾಮವನುಳ್ಳ ಇಚ್ಛಾಶಕ್ತಿ
ಆ ಲಿಂಗದ ನೇತ್ರವೆಂಬ ಮುಖಕ್ಕೆ ನಿರಹಂಕಾರವೆಂಬ ಹಸ್ತದಿಂದ
ಅವಧಾನಭಕ್ತಿಯಿಂದ ರೂಪುದ್ರವ್ಯವನು
ಸಾಮವೇದವನುಚ್ಚರಿಸುತ್ತ ಅರ್ಪಿಸುವಳು.
ರುದ್ರ ಪೂಜಾರಿ, ಅಲ್ಲಿ ಶರೀರವೆಂಬ ಸಂಜ್ಞೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಶಿಕಾರವೆಂಬ ಬೀಜಾಕ್ಷರ.
ಅದು ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿಹುದಾಗಿ,
ಆ ಈ ಊ ಏ ಓ ಶಿಂ ಎಂಬ ಬ್ರಹ್ಮನಾದ ಮಂತ್ರಮೂರ್ತಿಪ್ರಣವದ
ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ
ನಮಸ್ಕಾರವು ನೋಡಾ.
ಇದಕ್ಕೆ ಈಶ್ವರೋವಾಚ : “ಮಣಿಪೂರೇನರ್ಾಭಿಮಧ್ಯೇ ಭೂತಂ ತೇಜಃ ತ್ರಿಕೋಣಯೋಃ |
ಪದ್ಮಂ ದಶದಳಂ ಚೈವ ಅಕ್ಷರಂ ಚ ದಶಂ ಸ್ಮೃತಂ |
ವರ್ಣಾನಾಂ ಕೃಷ್ಣವರ್ಣಂತು ರುದ್ರೇ ದೇವಸ್ಯ ಲಾಕಿನಿ |
ಬೀಜಾಕ್ಷರಂ ಶಿಕಾರಂ ಚ ಘಂಟಾನಾದಂ ತಥೈವಚ |
ಶಿವಲಿಂಗಂ ಸ್ಥಿತಂ ಚೈವಂ ತ್ರಯೋಶ್ಚಕ್ರಮಿತಿ ಸ್ಮೃತಂ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./268
ಅಲ್ಲಿಂದ ಮೇಲೆ ಭ್ರೂಮಧ್ಯದಲ್ಲಿ ಆಜ್ಞಾಚಕ್ರ,
ಮನವೆಂಬ ಮಹಾಭೂತ,
ಆ ಚಕ್ರ ತಮಂಧಾಕಾರ, ದ್ವಿದಳ ಪದ್ಮ, ಆ ಪದ್ಮ ಮಾಣಿಕ್ಯವರ್ಣ.
ಅಲ್ಲಿಹ ಅಕ್ಷರ ಹಂ ಳಂ ಹಂ ಕ್ಷಂ ಎಂಬ ಚತುರಾಕ್ಷರ ನ್ಯಾಸವಾಗಿಹುದು.
ನಿರ್ಭಾವಮುಖವನುಳ್ಳ ಮಹಾಲಿಂಗ.
ಆ ಲಿಂಗಕ್ಕೆ ಶಾಂತ್ಯತೀತೋತ್ತರ ಕಲೆ,
ಅಲ್ಲಿ ನಿರ್ಮುಕ್ತಿಯೆಂಬ ಮಹಾಸಾದಾಖ್ಯ, ಅಲ್ಲಿಯ ನಾದ ಪ್ರಣವನಾದ,
ಹಾಕಿನಿಯೆಂಬ ಪರಿಯಾಯ ನಾಮವನುಳ್ಳ ಚಿಚ್ಛಕ್ತಿ
ಲಿಂಗದ ಹೃದಯವೆಂಬ ಮುಖದಲ್ಲಿ,
ಸದ್ಭಾವವೆಂಬ ಹಸ್ತದಿಂದ ಸಮರಸಭಕ್ತಿಯಿಂದ
ಪರಿಣಾಮವೆಂಬ ದ್ರವ್ಯವನು ಅಜಪೆಯನುಚ್ಚರಿಸುತ್ತ ಅರ್ಪಿಸುವಳು.
ಪರಶಿವ ಪೂಜಾರಿ, ನಿರಾಕುಳವೆಂಬ ಸಂಜ್ಞೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಓಂಕಾರವೆಂಬ ಬೀಜಾಕ್ಷರ.
ಅದು ಅನಂತಕೋಟಿ ಬೀಜಾಕ್ಷರವನೊಳಕೊಂಡು
ಅಕಾರ ಉಕಾರ ಮಕಾರವೆಂಬ ನಾದ ಬಿಂದು ಕಳೆಗೆ ಆಶ್ರಯವಾಗಿಹುದು.
ತತ್ಪದ ತ್ವಂಪದ ಅಸಿಪದವೆಂಬ ಪದತ್ರಯಂಗಳನೊಳಕೊಂಡು
ಅನೇಕ ಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದಾಗಿ
ಅಲ್ಲಿ ಆ ಈ ಊ ಏ ಓಂ ಎಂಬ
ಬ್ರಹ್ಮನಾದಮಂತ್ರಮೂರ್ತಿಪ್ರಣವದ ಶಿರೋಮಧ್ಯದಲ್ಲಿಹ
ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ ನಮಸ್ಕಾರವು ನೋಡಾ.
ಇದಕ್ಕೆ ಈಶ್ವರೋವಾಚ : “ಭ್ರೂಮಧ್ಯೇ ಆಗ್ನೇಯಚಕ್ರಂ ಮಹಾಭೂತಸ್ಯ ಮಾನಸಂ |
ತಮಂಧಾಕಾರಯೋಶ್ಚೈವ ದ್ವಿದಳಂ ಕಮಲಾಕ್ಷರಂ ||
ದ್ವಯೋರಾತ್ಮಮಧಿದೈವತಂ ಹಾಕಿನೀಶಕ್ತಿರೇವ ಚ |
ಉನ್ಮನೀಜ್ಯೋತಿ ತೇಜಂ ಚ ಪ್ರಣವಂ ಬೀಜಮೇವ ಚ ||
ಘೋಷಂ ಪ್ರಣವನಾದಂ ಚ ಮಹಾಲಿಂಗಸ್ಥಲೇ ತಥಾ |
ಷಡ್ಲಿಂಗಂ ಷಣ್ಮುಖಂ ಚೈವ ಷಷ್ಠ ಸಾದಾಖ್ಯಮೇವ ಚ ||
ತಥಾ ಷಟ್ಶಕ್ತಿ ಷಡ್ಭೇದಂ ಷಡ್ಭಕ್ತಿಶ್ಚ ಷಡ್ದ್ರವ್ಯಕಂ |
ಷಡ್ಲಿಂಗಾರ್ಪಣಂ ಚೈವ ವಕ್ತ್ರೇ ತಿಷ್ಟಂತಿ ಪಾರ್ವತಿ |
ಇತಿ ಚಕ್ರಾರ್ಪಣಂ ಜ್ಞಾತುಂ ದುರ್ಲಭಂ ಕಮಲಾನನೇ ||
ಷಟ್ಚಕ್ರಾಗ್ರಸ್ಥಿತಂ ಚಕ್ರಂ ತ್ರಿವಿಧಂ ಪರಿಕೀರ್ತಿತಾಃ |
ಬ್ರಹ್ಮಚಕ್ರ ಶಿಖಾಚಕ್ರಂ ಪಶ್ಚಿಮಂ ಶಿಖಾಚಕ್ರಮೇವ ಚ ||
ಅಜಚಕ್ರೇರುತ್ತಮಾಂಗಂ ಸಹಸ್ರದಳಪದ್ಮಕಂ |
ಅಕ್ಷರಸ್ಯ ಸಹಸ್ರಂತು ಜ್ಯೋತಿರ್ವರ್ಣಮೇವ ಚ ||
ಅಕ್ಷರಾತ್ಮಮಯಂ ಪ್ರೋಕ್ತಂ ದಿವ್ಯವೇದಸ್ಯ ಘೋಷಣಂ |
ನಿರ್ಮಾಯಶಕ್ತಿರಾಖ್ಯಾತಂ ಅಂತರಾತ್ಮೆ ಗುರೋಸ್ಥಿತಂ ||
ಬ್ರಹ್ಮಸ್ಥಾನೇ ಶಿಖಾಚಕ್ರಂ ತ್ರಿದಳೇ ಕಮಲಸ್ಯತು |
ತ್ರಿಯಕ್ಷರಮವಾಪ್ನೋತಿ ಮಹಾಜ್ಯೋತಿಶ್ಚ ವರ್ಣಕಂ ||
ಅಕ್ಷರಾತ್ಮಾ ಸಂಬಂಧಃ ಸಿಂಹನಾದಸ್ಯ ಘೋಷಣಂ |
ನಿಭ್ರಾಂತಶಕ್ತಿರಾಖ್ಯಾತಂ ಲಿಂಗಂಚ ಪರಮಾತ್ಮಕಂ ||
ಸದಾ ಸನ್ನಿಹಿತಂ ದೇವಿ ಶಿಖಾಚಕ್ರಮಿತಿ ಸ್ಮೃತಂ |
ಬ್ರಹ್ಮಪೀಠಸ್ಯ ಯೋ ರೂಢಂ ಪಶ್ಚಿಮಚಕ್ರ ಸಂಸ್ಥಿತಾ ||
ಪದ್ಮಮೇಕದಳಂಚೈವ ಅಕ್ಷರಾರೇಕಯೋರಸಿ |
ನಾಸನಂ ರೂಪವರ್ಣಂತು ಅಕ್ಷರಾತೀತಮೇವ ಚ ||
ನಿಶ್ಶಬ್ದಂ ಶಿವ ಮಯಂ ಪ್ರೋಕ್ತಂ ಶಕ್ತಿಶ್ಚ ನಿರುಪಾಧಿಕಂ |
ಸರ್ವಾರ್ಥಮೂರ್ತಿನಾಮಂ ಚ ತಸ್ಯ ಜಂಗಮಸಂಯುತಂ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./269
ಅಲ್ಲಿಂದ ಮೇಲೆ ಮಣಿಪೂರಕ ಚಕ್ರದ
ದಶದಳಪದ್ಮದ ಮಧ್ಯದಲ್ಲಿಹ ಮಂತ್ರ ಅಘೋರಮಂತ್ರ.
ಅಲ್ಲಿಹ ಪದ – “ಗುಹ್ಯಾತಿ ಗುಹ್ಯಾಯ ಗೌಪ್ತೇ ಅಭಿಧಾನಾಯ
ಸರ್ವಯೋಗಾಧಿಕೃತಾಯ ಜ್ಯೋತಿರೂಪಾಯ
ಪರಮೇಶ್ವರ ಪರಾಯ ಚೇತನ ಅಚೇತನ ವ್ಯೋಮಿನ್ ”
ಎಂಬ ಹತ್ತು ಪದ.
ಅಲ್ಲಿಹ ವರ್ಣ-ಡ ಢ ಣ ತ ಥ ದ ಧ ನ ಪ ಫ ಎಂಬ ಹತ್ತು ವರ್ಣ.
ಅಲ್ಲಿಹ ಭುವನ-ಏಕ, ಪಿಂಗಳೇಕ್ಷಣ, ಉದ್ಭವ, ಭವ,
ವಾಮದೇವ, ಮಹಾದೇವ,
ಶಿಭೇದ, ಏಕವೀರ, ಪಂಚಾಂತಕ, ಶೂರ, ಸಂವರ್ತನ,
ಜ್ಯೋತಿ, ಚಂಡ, ಕ್ರೋಧ, ಆನಂದ, ಏಕನೇಕ, ಭವ್ಯ,
ಮಂಗಳ, ಅಜ, ಉಮಾಪತಿ, ಏಕಧೀರ, ಪ್ರಚಂಡ,
ಈಶಾನ, ಉಗ್ರ, ಭೀಮ, ಭೌಮ, ಕೌಮಾರಿ, ವೈಷ್ಣವ,
ಬ್ರಾಹ್ಮಣ, ರೈಭವ, ಕೃತ, ಶಾಕೃತ, ಯಾಮ್ಯ, ಪ್ರಜೇಶ, ಸೌಮ್ಯ,
ಇಂದ್ರ, ಗಾಂಧರ್ವ, ಯಕ್ಷ, ರಾಕ್ಷಸ, ಪೈಶಾಚಿಕ ಎಂಬ ನಲ್ವತ್ತು ಭುವನ.
ಅಲ್ಲಿಹ ತತ್ತ್ವ-ವಾಕು, ಪಾಣಿ, ಪಾದ, ಪಾಯು, ಗುಹ್ಯವೆಂಬ ಪಂಚತತ್ತ್ವ.
ಅಲ್ಲಿಹ ಕಲೆ ವಿದ್ಯಾಕಲೆ ನೋಡಾ
ಅಪ್ರಮಾಣಕೂಡಲಸಂಗಮದೇವಾ./270
ಅಲ್ಲಿಂದ ಮೇಲೆ ಲಿಂಗಸ್ಥಾನದಲ್ಲಿ ಸ್ವಾಧಿಷ್ಠಾನಚಕ್ರ,
ಅಪ್ಪುವೆಂಬ ಮಹಾಭೂತ.
ಆ ಚಕ್ರ ಧನುರ್ಗತಿಯಾಕಾರ, ಷಡ್ದಳ ಪದ್ಮ.
ಆ ಪದ್ಮ ಪಚ್ಚೆಯವರ್ಣ, ಅಲ್ಲಿಯ ಅಕ್ಷರ-
`ಬ ಭ ಮ ಯ ರ ಲ’- ಎಂಬ ಷಡಕ್ಷರ ನ್ಯಾಸವಾಗಿಹುದು.
ಅಲ್ಲಿ ಶ್ವೇತವರ್ಣವಾಗಿಹ ವಾಮದೇವಮುಖವನುಳ್ಳ ಗುರುಲಿಂಗ.
ಆ ಲಿಂಗಕ್ಕೆ ಪ್ರತಿಷ್ಠೆಕಲೆ, ಅಲ್ಲಿ ಕತರ್ೃಸಾದಾಖ್ಯ,
ಉತ್ತರ ದಿಕ್ಕು, ಅಲ್ಲಿ ವೀಣಾನಾದ.
ರಾಕಿನಿಯೆಂಬ ಪರಿಯಾಯ ನಾಮವನುಳ್ಳ ಜ್ಞಾನಶಕ್ತಿ
ಸುಬುದ್ಧಿಯೆಂಬ ಹಸ್ತದಿಂ ಲಿಂಗದ ಜಿಹ್ವೆಯೆಂಬ ಮುಖಕ್ಕೆ ರಸದ್ರವ್ಯವನು
ನೈಷ್ಠಿಕಾಭಕ್ತಿಯಿಂದ ಯಜುರ್ವೆದವನುಚ್ಚರಿಸುತ್ತ ಅರ್ಪಿಸುವಳು.
ವಿಷ್ಣು ಪೂಜಾರಿ, ಲಿಂಗಕ್ಷೇತ್ರವೆಂಬ ಸಂಜ್ಞೆ ;
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ಮಕಾರವೆಂಬ ಬೀಜಾಕ್ಷರ.
ಅದು ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿಹುದಾಗಿ
ಆ ಈ ಊ ಏಂ ಓಂ ಮಾಂ ಎಂಬ
ಬ್ರಹ್ಮನಾದಮಂತ್ರಮೂರ್ತಿಪ್ರಣವದ ಶಿರೋಮಧ್ಯದಲ್ಲಿಹ
ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ ನಮಸ್ಕಾರವು ನೋಡಾ.
ಇದಕ್ಕೆ ಈಶ್ವರೋವಾಚ : “ಲಿಂಗೇ ಸ್ವಾಧಿಷ್ಠಚಕ್ರಂತು ಭೂತಮಾಪಃ ಧನುಃಕೃತಿಃ |
ಪದ್ಮಂ ಷಡ್ದಳಂ ಚೈವ ಷಡಕ್ಷರಸ್ಥಿತಂ ತಥಾ |
ವರ್ಣಾಯ ಪಶ್ಚಯೋಶ್ಚೈವ ಅಧಿದೈವಂ ಹರಿಸ್ಮೃತಂ |
ಬೀಜಾಕ್ಷರ ಮಕಾರಂಚ ರಾಕಿನೀಶಕ್ತಿ ರೇವ ಚ |
ವೀಣಾನಾದ ಗುದೋರ್ಲಿಂಗಂ ತಿಷ್ಟತಿ ಶ್ರುಣು ಪಾರ್ವತೀ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./271
ಅಲ್ಲಿಂದ ಮೇಲೆ ವಿಶುದ್ಧಿಚಕ್ರದ
ಷೋಡಶದಳ ಪದ್ಮದ ಮಧ್ಯದಲ್ಲಿಹ ಮಂತ್ರ ಈಶಾನಮಂತ್ರ.
ಅಲ್ಲಿಹ ಪದ- “ಅಭಸ್ಮ ಅನಾದೆ ಅನಾದೆ ನಾ ನಾ ನಾ
ಧೂ ಧೂ ಧೂ ಓಂ ಭೂಃ ಓಂ ಭುವಃ ಓಂ ಸ್ವಾಹಾ
ಅನಿಧನಾ ನಿಧನೋದ್ಭವ ಶಿವ ಶರ್ವ” ಎಂಬ ಹದಿನಾರು ಪದ.
ಅಲ್ಲಿಹ ವರ್ಣ- ಅ ಆ ಇ ಈ ಉ ಊ ಋ ೂ ಲೃ ಲೂೃ ,
ಏ ಐ ಓ ಔ ಅಂ ಅಃ ಎಂಬ ಹದಿನಾರು ವರ್ಣ.
ಅಲ್ಲಿಹ ಭುವನ-ದೃಕ್ಷ, ವಿಭು, ಶಂಭು, ದೌಷ್ಟ್ರಿ, ವಜ್ರ, ಫಣೀಶ,
ಉದುಂಬರೀಶ, ಗ್ರಸನ, ಮಾರುತಾಶನ, ಕ್ರತುಮರ್ದನ,
ಆನಂದ, ವೃಷಧರ, ಬಲಿಪ್ರಿಯ, ಭೂತಪಾಲ,
ಜ್ಯೇಷ್ಠ, ಸರ್ವ, ಸುರೇಶಾನ, ವೇದಪಾರಗ, ಜ್ಞಾನಭೂತ,
ಸರ್ವಜ್ಞ, ಈಶ, ಸರ್ವವಿದ್ಯಾಧಿಪ, ಪ್ರಕಾಮದ, ಪ್ರಸೀದಡನ,
ಶ್ರೀಧರ, ಲಕ್ಷ್ಮೀಧರ, ಜಟಾಧರ, ಸೌಮ್ಯದೇಹ, ಧನ್ಯರೂಪ,
ನಿಧೀಶ, ಮೇಘವಾಹನ, ಕಪದರ್ಿ, ಪಂಚಶಿಖಿ, ಪ್ರಪಂಚಾಂತಕ,
ಕ್ಷಯಾಂತಕ, ತಿಕ್ಷು, ಸುಸೂಕ್ಷ್ಮ, ವಾಯುವೇಗ, ಲಘು, ಶೀಘ್ರ,
ಸುನಾದ, ಮೇಘನಾದ, ಜ್ವಲಾಂತಕ, ದೀರ್ಘಬಾಹು,
ಜಯ, ಭದ್ರ, ಶ್ವೇತಮಹಾಬಲ, ಪಾಶಹಸ್ತ, ಅತಿಬಲ,
ಮಹಾಬಲ, ವಾರುಣೀಶ, ದೌಷ್ಟ್ರೀವ, ಲೋಹಿತ,
ಧೂಮ್ರ, ವಿರೂಪಾಕ್ಷ, ಊಧ್ರ್ವಶೇಷ, ಉಭಯಾನಖ,
ಕ್ರೂರದಷ್ಟಿ, ಹಂತ, ಮಾರಣ, ನಿರುತಿ, ಧರ್ಮ, ಧರ್ಮಪರೀಣ
ನಿಯೋಕ್ತೃ ಎಂಬ ಅರವತ್ತುನಾಲ್ಕು ಭುವನ.
ಅಲ್ಲಿಹ ತತ್ತ್ವ-ಗುಣತ್ರಯ ಬುದ್ಧಿ ಅಹಂಕಾರ ಚಿತ್ತ ಸಕಲವೆಂಬ ಪಂಚತತ್ತ್ವ.
ಅಲ್ಲಿಹ ಕಲೆ-ಶಾಂತ್ಯತೀತ ಕಲೆ ನೋಡಾ
ಅಪ್ರಮಾಣ ಕೂಡಲಸಂಗಮದೇವಾ./272
ಅಲ್ಲಿಂದ ಮೇಲೆ ಸ್ವಾಧಿಷ್ಠಾನಚಕ್ರದ
ಷಡುದಳಪದ್ಮದ ಮಧ್ಯದಲ್ಲಿಹ ಮಂತ್ರ ವಾಮದೇವಮಂತ್ರ.
ಅಲ್ಲಿಹ ಪದಂಗಳು “ಈಶಾನ್ಯ ಮೂಧ್ರ್ನಾಯ ತತ್ಪುರುಷ ವಕ್ತ್ರಾಯ
ಅಘೋರ ಹೃದಯಾಯ ವಾಮದೇವ ಗುಹ್ಯಾಯ
ಸದ್ಯೋಜಾತ ಮೂರ್ತಯೇ ಓಂ ನಮೋ ನಮಃ ”
ಎಂಬ ಆರು ಪದ.
ಅಲ್ಲಿಹ ವರ್ಣ ಬ ಭ ಮ ಯ ರ ಲ ಎಂಬ ಆರು ವರ್ಣವಿಹುದು.
ಅಲ್ಲಿಹ ಭುವನ-ಸೂಕ್ಷ್ಮ , ವಾಮದೇವ,
ಸತ್ಯಾನಂದ , ಸರ್ವೆಶ್ವರ, ಶಿವೋತ್ತಮ, ನಿತ್ಯಾನಂದ,
ಏಕನೇತ್ರ, ಸದಾನಂದ, ಏಕರುದ್ರ, ನಿಜಾನಂದ,
ತ್ರಿಮೂರ್ತಿ, ಶ್ರೀಕಂಠ, ಶಿಖಂಡಿ, ವಾಮಜೇಷ್ಠ,
ರೌದ್ರಿ, ಕಲವಿಕರಣಿ, ಕಾಳಿ, ಬಲವಿಕರಣಿ,
ಸರ್ವಭೂತದಮನಿ, ಬಲಪ್ರಮದಿನಿ, ಮನೋನ್ಮನಿ,
ಅಂಗುಷ್ಠಮಾತ್ರಭುವನಿ, ಮಹಾಭುವನ,
ಏಕಿಶಾನವೆಂಬ ಇಪ್ಪತ್ತುನಾಲ್ಕು ಭುವನ.
ಅಲ್ಲಿಹ ತತ್ತ್ವ-ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ ಪಂಚತತ್ತ್ವ.
ಅಲ್ಲಿಹ ಕಲೆ, ಪ್ರತಿಷ್ಠಾಕಲೆ ನೋಡಾ
ಅಪ್ರಮಾಣಕೂಡಲಸಂಗಮದೇವಾ./273
ಅಲ್ಲಿಂದ ಮೇಲೆ ಹೃದಯಸ್ಥಾನದಲ್ಲಿ
ಅನಾಹತಚಕ್ರ, ವಾಯುವೆಂಬ ಮಹಾಭೂತ.
ಆ ಚಕ್ರ ಷಟ್ಕೋಣಾಕಾರ, ದ್ವಾದಶದಳಪದ್ಮ, ಆ ಪದ್ಮ ಕುಂಕುಮವರ್ಣ,
ಅಲ್ಲಿಯ ಅಕ್ಷರ ಕಖಗಘಙ ಚಛಜಝಞ ಟಠ
ಎಂಬ ದ್ವಾದಶಾಕ್ಷರ ನ್ಯಾಸವಾಗಿಹುದು.
ಅಲ್ಲಿ ತತ್ಪುರುಷಮುಖವನುಳ್ಳ ಜಂಗಮಲಿಂಗ, ಆ ಲಿಂಗಕ್ಕೆ ಶಾಂತಿಕಲೆ,
ಅಲ್ಲಿ ಅಮೂರ್ತಿಸಾದಾಖ್ಯ, ಅಲ್ಲಿಯ ದಿಕ್ಕು ಪೂರ್ವದಿಕ್ಕು,
ಅಲ್ಲಿಯ ನಾದ ಭೇರೀನಾದ,
ಶಾಕಿನಿಯೆಂಬ ಪರಿಯಾಯ ನಾಮವನುಳ್ಳ ಆದಿಶಕ್ತಿ
ಲಿಂಗದ ತ್ವಕ್ಕೆಂಬ ಮುಖಕ್ಕೆ ಸುಮನವೆಂಬ ಹಸ್ತದಿಂದ ಅನುಭಾವಭಕ್ತಿಯಿಂದ ಸ್ಪರ್ಶನದ್ರವ್ಯವನು
ಅಥರ್ವಣವೇದವನುಚ್ಚರಿಸುತ್ತ ಅರ್ಪಿಸುವಳು.
ಈಶ್ವರ ಪೂಜಾರಿ, ಗೂಢವೆಂಬ ಸಂಜ್ಞೆ.
ಇಂತಿವೆಲ್ಲಕ್ಕೂ ಮಾತೃಸ್ಥಾನವಾಗಿಹುದು ವಕಾರವೆಂಬ ಬೀಜಾಕ್ಷರ ;
ಅದು ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿಹುದಾಗಿ,
ಆ ಈ ಊ ಏ ಓ ವಾಂ ಎಂಬ ಬ್ರಹ್ಮನಾದ ಮಂತ್ರಮೂರ್ತಿಪ್ರಣವದ
ಶಿರೋಮಧ್ಯದಲ್ಲಿಹ ಗುಹ್ಯನಾದಮಂತ್ರಮೂರ್ತಿಪ್ರಣವಕ್ಕೆ
ನಮಸ್ಕಾರವು ನೋಡಾ.
ಇದಕ್ಕೆ ಶ್ರೀಮಹಾದೇವೋವಾಚ : “ಅನಾಹತಂ ಹೃದಿ ಸ್ಥಾನಂ ವಾಯುಭೂತಂ ಷಡಾಕೃತಿ |
ಪದ್ಮಂತು ದ್ವಾದಶಂ ಚೈವ ಅಕ್ಷರಂ ದ್ವಾದಶಂ ಸ್ಮೃತಂ |
ಕುಂಕುಮವರ್ಣಮೀಶಂಚ ಅಧಿದೈವಂ ಶಕ್ತಿಮೇವಚ |
ಶಾಕಿನಿ ರಕ್ಷರೈಬರ್ಿಚ್ಚೈ ವಕಾರಸ್ಯಂತುರುಚ್ಯತೇ |
ಭೇರಿನಾದಂ ಚತೋರ್ಲಿಂಗಂ ಸ್ಥಿತೋ ದೇವಿ ನ ಸಂಶಯಃ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./274
ಅವನು ಅವಳು ಅದು ನಾನೆಂಬ ಜ್ಯೋತಿ ಅಡಗಿತ್ತಾಗಿ ಕರ್ಮ ನಷ್ಟ.
ರೂಪ ನಿರೂಪೆಂಬುದು ಕೆಟ್ಟುದಾಗಿ ಮಾಯೆ ನಷ್ಟ.
ಅರಿವು ತಲೆದೋರಿತ್ತಾಗಿ ಆಣವ ನಷ್ಟ.
ಶಿವಪ್ರಕಾಶವಾದ ಕಾರಣ ತಿರೋಧಾನಶಕ್ತಿ ನಷ್ಟ.
ಫಲಪದವಿಗಳು ಬಯಕೆ ಹಿಂಗಿತ್ತಾಗಿ ಇಚ್ಛಾಶಕ್ತಿ ನಷ್ಟ ನೋಡಾ
ಅಪ್ರಮಾಣಕೂಡಲಸಂಗಮದೇವಾ./275
ಅವಸ್ಥೆಗಳಿಪ್ಪತ್ತುನಾಲ್ಕನು
ಹೀಂಗೆ ದರ್ಶನವ ಮಾಡಿದಾತನು ಶಿವಮುಕ್ತನು,
ಆತನು ಶಿವಯೋಗಿ ಲಿಂಗಾನುಭಾವಿ.
ಆ ಶಿವಮುಕ್ತನಿಗೆ ಪಂಚಮಲಂಗಳು ಪಂಚಶಕ್ತಿಗಳು
ಬಿಟ್ಟ ಪ್ರಕಾರ ದರ್ಶನವದೆಂತೆಂದಡೆ : ಮುಂದೆ ಇದ್ದ ಮಾಯಾಭೋಗದ ಇಚ್ಛೆಯಿಲ್ಲದಿಹುದೆ ತಿರೋಧಾನಮಲ
ನಷ್ಟ, ಕರ್ಮವ ತೊರೆದು ಸುಖದುಃಖಗಳು ಸಮವಾಗಿ ಪಂಚಕೃತ್ಯಂಗಳು ಕೆಟ್ಟುದಾಗಿ,
ಮಹಾಮಾಯೆ ನಷ್ಟ ನೋಡಾ
ಅಪ್ರಮಾಣಕೂಡಲಸಂಗಮದೇವಾ./276
ಅವಾಚ್ಯತತ್ತ್ವ ತಲೆದೋರದಂದು,
ಕಲಾ ತತ್ತ್ವ ತಲೆದೋರದಂದು, ಅನಾದಿತತ್ತ್ವ ತಲೆದೋರದಂದು,
ಆದಿತತ್ತ್ವ ತಲೆದೋರದಂದು,
ಚಿನ್ನಾದ, ಚಿದ್ಬಿಂದು, ಚಿತ್ಕಳೆ ತಲೆದೋರದಂದು,
ನಾದ ಸುನಾದ ತಲೆದೋರದಂದು,
ಮಹಾನಾದ ಗುಹ್ಯನಾದ ತಲೆದೋರದಂದು,
ಇವೇನು ಏನೂ ಎನಲಿಲ್ಲದಂದು,
ನಿರಂಜನಾತೀತನಾಗಿದ್ದನಯ್ಯ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು./277
ಅವಾಚ್ಯಪ್ರಣವ ಅನಿರ್ವಾಚ್ಯಪ್ರಣವವಿಲ್ಲದಂದು,
ಆಕಾರ ನಿರಾಕಾರವಿಲ್ಲದಂದು, ನಾನು ನೀನು ಎನಲಿಲ್ಲದಂದು,
ಕಲಾಪ್ರಣವವಾಗಿದ್ದನಯ್ಯ
ನಮ್ಮ ಅಪ್ರಮಾಣಕೂಡಲಸಂಗಮದೇವ./278
ಅವಾಚ್ಯಪ್ರಣವದ ನೆನಹು ಮಾತ್ರದಲ್ಲಿ
ಚಿನ್ನಾದ ಚಿದ್ಬಿಂದು ಚಿತ್ಕಲೆ ಉತ್ಪತ್ಯವಾಯಿತ್ತು.
ಚಿನ್ನಾದಕಲೆ ದ್ವಾದಶಕಲೆ, ಚಿದ್ಬಿಂದುವಿನಕಲೆ ಷೋಡಶಕಲೆ,
ಚಿತ್ಕಳೆಯಕಲೆ ದಶಕಲೆ- ಈ ಮೂವತ್ತೆಂಟುಕಲೆಗಳು ಕೂಡಿ
ಏಕವಾಗಿ ಕಲಾಪ್ರಣವ ಉತ್ಪತ್ಯವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./279
ಅಸಂಖ್ಯಾತ ಆದಿಬ್ರಹ್ಮರುತ್ಪತ್ಯವಾಗದಂದು,
ಅಸಂಖ್ಯಾತ ಆದಿನಾರಾಯಣರುತ್ಪತ್ಯವಾಗದಂದು,
ಅಸಂಖ್ಯಾತ ಸುರೇಂದ್ರಾದಿಗಳು ಉತ್ಪತ್ಯವಾಗದಂದು,
ಅಸಂಖ್ಯಾತ ಮನುಮುನಿ ದೈತ್ಯರು ಉತ್ಪತ್ಯ ಲಯವಾಗದಂದು,
ಓಂಕಾರವೆಂಬ ಆದಿಪ್ರಣವವಾಗಿದ್ದನು ನೋಡಾ
ನಮ್ಮ ಅಪ್ರಮಾಣಕೂಡಲಸಂಗಮದೇವ./280
ಆ [ಆಜ್ಞಾಚಕ್ರದ] ದ್ವಿದಳಪದ್ಮವ ಹೊಕ್ಕು ನೋಡಿ ಸಾಧಿಸಿ,
ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು
ಜೀವ ಪರಮರಂ ಏಕೀಕರಿಸಿ
ಅಲ್ಲಿ ಮಾಣಿಕ್ಯವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ
ಓಂಕಾರಜ್ಯೋತಿಯಂ ಬೆರಸುತ್ತ
ಉನ್ಮನಿಯ ಬೆಳಗನೊಳಕೊಂಡು ಕರ್ಣದ್ವಾರದಲ್ಲಿ
ಶಂಖ ದುಂದುಭಿ ಧ್ವನಿಗಳಂ ಕೇಳುತ್ತ ಪರಮಕಾಷ್ಠಿಯಾಗಿ
ತಾನೇ ಜಗತ್ತಾಗಿ “ಅಣೋರಣೀಯಾನ್ ಮಹತೋ ಮಹೀಯಾನ್”
“ಏಕಮೇವ ಅದ್ವಿತೀಯಂ” ಎಂಬ ಶ್ರುತಿಪ್ರಮಾಣದರಿವು ನೆಲೆಗೊಂಡು
ಷಡುಚಕ್ರ ಪ್ರಾಪ್ತಿಯಾಗಿ,
ಮನ-ಪವನ-ಬಿಂದು-ರವಿ-ಶಶಿ-ಶಿಖಿಗಳನೇಕೀಕರಿಸಿ
ಮೇಗಣ ಬಯಲ ಬಾಗಿಲಂ ತೆಗೆದು ಸಹಸ್ರದಳಪದ್ಮವ ಹೊಕ್ಕನು ನೋಡಾ
ಅಪ್ರಮಾಣಕೂಡಲಸಂಗಮದೇವಾ./281
ಆ [ವಿಶುದ್ದಿಚಕ್ರದ] ಷೋಡಶದಳಪದ್ಮವ ಪೊಕ್ಕುನೋಡಿ ಸಾಧಿಸಿ,
ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು
ಅಲ್ಲಿ ಶ್ವೇತವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ,
ಅಗ್ನಿಯ ಪಟುಮಾಡಿ,
ಮನ-ಪವನ-ಬಿಂದು ಸಂಯೋಗದಿಂದ
ಆಜ್ಞಾಚಕ್ರದ ದ್ವಿದಳಪದ್ಮವ ಹೊಕ್ಕನು ನೋಡಾ
ಅಪ್ರಮಾಣಕೂಡಲಸಂಗಮದೇವಾ./282
ಆ ಅಖಂಡ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಮಹಾಲಿಂಗ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಪ್ರಸಾದಲಿಂಗ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಜಂಗಮಲಿಂಗ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಶಿವಲಿಂಗ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಗುರುಲಿಂಗ ಹುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಆಚಾರಲಿಂಗ ಹುಟ್ಟಿತ್ತು ನೋಡಾ.
ಇದಕ್ಕೆ ಶಿವಲಿಂಗಾಗಮೇ : “ ಓಂಕಾರ ಜ್ಯೋತಿಸ್ವರೂಪೇ ಚ ಮಹಾಲಿಂಗ ಸಮುದ್ಭವಂ |
ಓಂಕಾರ ದರ್ಪಣಾಕಾರೇ ಪ್ರಸಾದಲಿಂಗಮುದ್ಭವಂ ||
ಓಂಕಾರೇಚಾರ್ಧಚಂದ್ರೇ ಚ ಜಂಗಮಲಿಂಗಮುದ್ಭವಂ |
ಓಂಕಾರಕುಂಡಲಾಕಾರೇ ಶಿವಲಿಂಗ ಸಮುದ್ಭವಂ ||
ಓಂಕಾರದಂಡಕಸ್ವರೂಪೇ ಗುರುಲಿಂಗ ಸಮುದ್ಭವಂ |
ಓಂಕಾರತಾರಕರೂಪೇ ಆಚಾರಲಿಂಗಮುದ್ಭವಂ |
ಇತಿ ಷಷ್ಠಲಿಂಗೋತ್ಪನ್ನಂ ಸುಸೂಕ್ಷ್ಮಂ ಶೃಣು ಪಾರ್ವತಿ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./283
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ಜ್ಯೋತಿಸ್ವರೂಪದಲ್ಲಿ ಆತ್ಮನುತ್ಪತ್ಯವಾದನು.
ಆ ಪ್ರಣವದ ದರ್ಪಣಾಕಾರದಲ್ಲಿ ಸದಾಶಿವನುತ್ಪತ್ಯವಾದನು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಈಶ್ವರನುತ್ಪತ್ಯವಾದನು.
ಆ ಪ್ರಣವದ ಕುಂಡಲಾಕಾರದಲ್ಲಿ ರುದ್ರನುತ್ಪತ್ಯವಾದನು.
ಆ ಪ್ರಣವದ ದಂಡಕಸ್ವರೂಪದಲ್ಲಿ ವಿಷ್ಣು ಉತ್ಪತ್ಯವಾದನು ನೋಡಾ.
ಇದಕ್ಕೆ ಬ್ರಹ್ಮೋತ್ತರಸೂತ್ರಸಾರೇ : “ಓಂಕಾರ ಜ್ಯೋತಿರೂಪೇ ಚ ಜೀವಾತ್ಮಾ ತತ್ರ ಜಾಯತೇ |
ಓಂಕಾರದರ್ಪಣಾಕಾರೇ ಸದಾಶಿವಶ್ಚ ಜಾಯತೇ ||
ಓಂಕಾರೇಚಾರ್ಧಚಂದ್ರೇ ಚ ಈಶ್ವರಃ ತತ್ರಜಾಯತೇ |
ಓಂಕಾರ ಕುಂಡಲಾಕಾರೇ ಕಾಲರುದ್ರಶ್ಚ ಜಾಯತೇ ||
ಓಂಕಾರದಂಡರೂಪೇ ಚ ನಾರಾಯಣ ಸಮುದ್ಬವಾಃ |
ಓಂಕಾರತಾರಕಾರೂಪೇ ವಿರಿಂಚಿಶ್ಚ ಸಜಾಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./284
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಸ್ವರೂಪದಲ್ಲಿ ಸದ್ಯೋಜಾತಮುಖವಡಗಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿ ವಾಮದೇವಮುಖವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರಮುಖವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನಮುಖವಡಗಿತ್ತು ನೋಡಾ.
ಇದಕ್ಕೆ ಈಶ್ವರೋವಾಚ : “ಸದ್ಯೋಜಾತಮಘೋರಂ ಚ ವಾಮಂ ತತ್ಪುರುಷಸ್ತಥಾ |
ಈಶಾನಂ ಪಂಚವಕ್ತ್ರಂ ಚ ಓಂಕಾರೇ ಚ ಲಯಂ ಗತಾಃ || ”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./285
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಸ್ವರೂಪದಲ್ಲಿ-
“ಉದಾತ್ತ ಋಗ್ವೇದೋ ಭವತಿ ಓಂ ನಕಾರೋ ದೇವತಾ |
ತಾರಕೇ ಚ ಲಯಂ ಪ್ರಾಪ್ತೇ ಪ್ರಥಮಂ ಪ್ರಣವಾಂಶಕೇ ||
ಆ ಪ್ರಣವದ ದಂಡಸ್ವರೂಪದಲ್ಲಿ-
“ಅನುದಾತ್ತಶ್ಚ ಯಜುರ್ವೆದಃ ಭವತಿ ಓಂ ಮಕಾರೋ ದೇವತಾ |
ದಂಡಕೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಕೇ ||”
ಆ ಪ್ರಣವದ ಕುಂಡಲಾಕಾರದಲ್ಲಿ-
“ಸ್ವರಿತಶ್ಚ ಸಾಮವೇದೋ ಭವತಿ ಓಂ ಶಿಕಾರೋ ದೇವತಾ |
ಕುಂಡಲೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಕೇ ||”
ಆ ಪ್ರಣವದ ಅರ್ಧಚಂದ್ರಕದಲ್ಲಿ-
“ಪ್ರಚರಶ್ಚಥರ್ವವೇದೋ ಭವತಿ ಓಂ ವಕಾರೋ ದೇವತಾ |
ಅರ್ಧಚಂದ್ರೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಕೇ ||”
ಆ ಪ್ರಣವದ ದರ್ಪಣಾಕಾರದಲ್ಲಿ-
“ಗಾಯತ್ರೀಛಂದೋ ಭವತಿ ಓಂ ಯಕಾರೋ ಭವತಿ |
ದರ್ಪಣೇ ಚ ಲಯಂ ಪ್ರಾಪ್ತೇ ಪಂಚಮಂ ಪ್ರಣವಾಂಶಕೇ ||”
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ-
“ಆತ್ಮಾಚ ಜಪೋ ಭವತಿ ಓಂ ಪ್ರಣವೋ ದೇವತಾ |
ಜ್ಯೋತಿರೂಪೇಚ ಲಯಂ ಪ್ರಾಪ್ತೇ ಷಷ್ಠಮಂ ಪ್ರಣವಾಂಶಕೇ || ”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./286
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಪರಿಣಾಮ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಬ್ದ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸ್ಪರ್ಶ ಉತ್ಪತ್ಯವಾಯಿತ್ತು .
ಆ ಪ್ರಣವದ ಕುಂಡಲಾಕಾರದಲ್ಲಿ ರೂಪ ಉತ್ಪತ್ಯವಾಯಿತ್ತು .
ಆ ಪ್ರಣವದ ದಂಡಕಸ್ವರೂಪದಲ್ಲಿ ರಸ ಉತ್ಪತ್ಯವಾಯಿತ್ತು .
ಆ ಪ್ರಣವದ ತಾರಕಸ್ವರೂಪದಲ್ಲಿ ಗಂಧ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಉತ್ತರವಾತುಲಾಗಮೇ : “ಓಂಕಾರ ಜ್ಯೋತಿರೂಪೇಚ ತೃಪ್ತಿಶ್ಚೈವಸಮುದ್ಭವಾ |
ಓಂಕಾರ ದರ್ಪಣಾಕಾರೇ ಶಬ್ದಶ್ಚೈವಂ ಸಮುದ್ಭವಃ ||
ಓಂಕಾರ ಅರ್ಧಚಂದ್ರೇ ಚ ಸ್ಪರ್ಶನಂ ಚ ಸಮುದ್ಭವಂ |
ಓಂಕಾರ ಕುಂಡಲಾಕಾರೇ ರೂಪಂ ಚೈವಂ ಸಮುದ್ಭವಂ ||
ಓಂಕಾರದಂಡರೂಪೇಚ ರಸಶ್ಚ್ಯೆವ ಸಮುದ್ಭವಃ |
ಓಂಕಾರತಾರಕಾರೂಪೇ ಗಂಧಶ್ಚೈವ ಸಮುದ್ಭವಃ ||
ಇತಿ ಷಷ್ಠದ್ರವ್ಯಂ ಚೈವ ಸ್ಥಾನ ಸ್ಥಾನೇ ಸಮುದ್ಭವಃ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./287
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಭಾವಹಸ್ತ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಜ್ಞಾನಹಸ್ತ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಸುಮನಹಸ್ತ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನಿರಹಂಕಾರಹಸ್ತ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಸುಬುದ್ಧಿಹಸ್ತ ಹುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಸುಚಿತ್ತಹಸ್ತ ಹುಟ್ಟಿತ್ತು ನೋಡಾ.
ಇದಕ್ಕೆ ಅತಿಮಹಾಗಮಸಾರೇ : “ಓಂಕಾರ ಜ್ಯೋತಿಸ್ವರೂಪೇ ಚ ಭಾವಹಸ್ತಂ ಚ ಜಾಯತೇ |
ಓಂಕಾರದರ್ಪಣಾಕಾರೇ ಜ್ಞಾನಹಸ್ತಂ ಚ ಜಾಯತೇ ||
ಓಂಕಾರಚಾರ್ಧಚಂದ್ರೇ ಚ ಮನೋಹಸ್ತಸ್ಯ ಜಾಯತೇ |
ಓಂಕಾರಕುಂಡಲಾಕಾರೇ ನಿರಹಂಕಾರಂ ಚ ಜಾಯತೇ ||
ಓಂಕಾರದಂಡಕಸ್ವರೂಪೇ ಚ ಬುದ್ಧಿಹಸ್ತಂ ಚ ಜಾಯತೇ |
ಓಂಕಾರತಾರಕರೂಪೇ ಚಿತ್ತಹಸ್ತಂ ಚ ಜಾಯತೇ |
ಇತಿ ಹಸ್ತಶ್ಚ ಷಡ್ದೇವಿ ಸ್ಥಾನಸ್ಥಾನೇಷು ಜಾಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./288
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಶಾಂತ್ಯತೀತೋತ್ವರ ಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತ ಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಪ್ರತಿಷ್ಠಾಕಲೆ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ನಿವೃತ್ತಿಕಲೆ ಉತ್ಪತ್ಯವಾಯಿತ್ತುನೋಡಾ.
ಇದಕ್ಕೆ ನಿಃಕಲಾತೀತಾಗಮೇ : “ಓಂಕಾರಜ್ಯೋತಿರೂಪೇ ಚ ಮಹಾಕಲಾ ಚ ಜಾಯತೇ |
ಓಂಕಾರದರ್ಪಣಾಕಾರೇ ಶಾಂತ್ಯತೀತಾ ಚ ಜಾಯತೇ ||
ಓಂಕಾರೇಚಾರ್ಧಚಂದ್ರೇ ಚ ಶಾಂತಿಕಲಾ ಚ ಜಾಯತೇ |
ಓಂಕಾರಕುಂಡಲಾಕಾರೇ ವಿದ್ಯಾಕಲಾ ಚ ಜಾಯತೇ ||
ಓಂಕಾರದಂಡಕರೂಪೇ ಚ ಪ್ರತಿಷ್ಠಾಚ ಸಜಾಯತೇ |
ಓಂಕಾರ ತಾರಕರೂಪೇ ನಿವೃತ್ತಿಶ್ಚ ಸಜಾಯತೇ |
ಇತಿ ಷಷ್ಠಕಲಾದೇವೀ ಸ್ಥಾನಸ್ಥಾನೇಷು ಜಾಯತೇ || ”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./289
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಸಮರಸಭಕ್ತಿ ಹುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಆನಂದಭಕ್ತಿ ಹುಟ್ಟಿತ್ತು .
ಆ ಪ್ರಣವದ ಅರ್ಧಚಂದ್ರಕದಲ್ಲಿ ಅನುಭಾವಭಕ್ತಿ ಹುಟ್ಟಿತ್ತು .
ಆ ಪ್ರಣವದ ಕುಂಡಲಾಕಾರದಲ್ಲಿ ಅವಧಾನಭಕ್ತಿ ಹುಟ್ಟಿತ್ತು .
ಆ ಪ್ರಣವದ ದಂಡಸ್ವರೂಪದಲ್ಲಿ ನೈಷ್ಠಿಕಾಭಕ್ತಿ ಹುಟ್ಟಿತ್ತು .
ಆ ಪ್ರಣವದ ತಾರಕಸ್ವರೂಪದಲ್ಲಿ ಸದ್ಭಕ್ತಿ ಹುಟ್ಟಿತ್ತು ನೋಡಾ.
ಇದಕ್ಕೆ ಪ್ರಳಯಕಾಲರುದ್ರಸಂಹಿತಾಯಾಂ : “ಓಂಕಾರ ಜ್ಯೋತಿಸ್ವರೂಪೇ ಚ ಸಮರಸಭಕ್ತಿರುದ್ಭವಂ |
ಓಂಕಾರ ದರ್ಪಣಾಕಾರೇ ಆನಂದಭಕ್ತಿರುದ್ಭವಂ ||
ಓಂಕಾರ ಅರ್ಧಚಂದ್ರೇ ಚ ಅನುಭಾವ ಸಮುದ್ಭವಂ |
ಓಂಕಾರ ಕುಂಡಲಾಕಾರೇ ಅವಧಾನಸಮುದ್ಭವಂ |
ಓಂಕಾರದಂಡರೂಪೇ ಚ ನೈಷ್ಠಿಕಾಭಕ್ತಿರುದ್ಭವಂ |
ಓಂಕಾರ ತಾರಕಾರೂಪೇ ಸದ್ಭಕ್ತಿಶ್ಚ ಸಮುದ್ಭವಂ |
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./290
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಾಸ್ವರೂಪದಲ್ಲಿ ಋಗ್ವೇದ ಉತ್ಪತ್ಯವಾಯಿತ್ತು .
ಆ ಪ್ರಣವದ ದಂಡಸ್ವರೂಪದಲ್ಲಿ ಯಜುರ್ವೆದ ಹುಟ್ಟಿತ್ತು .
ಆ ಪ್ರಣವದ ಕುಂಡಲಾಕಾರದಲ್ಲಿ ಸಾಮವೇದ ಹುಟ್ಟಿತ್ತು .
ಆ ಪ್ರಣವದ ಅರ್ಧಚಂದ್ರಕದಲ್ಲಿ ಅಥರ್ವಣವೇದ ಹುಟ್ಟಿತ್ತು .
ಆ ಪ್ರಣವದ ದರ್ಪಣಾಕಾರದಲ್ಲಿ ಗಾಯತ್ರಿ ಉತ್ಪತ್ಯವಾಯಿತ್ತು .
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಅಜಪೆ ಹುಟ್ಟಿತು ನೋಡಾ.
ಇದಕ್ಕೆ ಶಿವಧಮರ್ೊತ್ತರೇ : “ಓಂಕಾರಜ್ಯೋತಿರೂಪೇ ಚ ಅಜಪಾತ್ಮತ್ರ ಜಾಯತೇ |
ಓಂಕಾರ ದರ್ಪಣಾಕಾರೇ ಗಾಯತ್ರೀ ಚ ಸಮುದ್ಭವಾ ||
ಓಂಕಾರ ಅರ್ಧಚಂದ್ರೇ ಚ ಅಥರ್ವಣಂಚಾತ್ರಜಾಯತೇ |
ಓಂಕಾರ ಕುಂಡಲಾಕಾರೇ ಸಾಮವೇದಾಶ್ಚ ಜಾಯತೇ ||
ಓಂಕಾರ ದಂಡರೂಪೇ ಚ ಯಜುರ್ವೆದಶ್ಚ ಜಾಯತೇ |
ಓಂಕಾರ ತಾರಕಾರೂಪೇ ಋಗ್ವೇದಃ ತತ್ರ ಜಾಯತೇ |
ಏವಂ ಸಮುತ್ಪನ್ನಾಃ ಸುಸೂಕ್ಷ್ಮಂ ಕಮಲಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./291
ಆ ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣಮದ
ಜ್ಯೋತಿಸ್ವರೂಪದಲ್ಲಿ ಮನಸ್ಸು ಪುಟ್ಟಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಶ್ರೋತ್ರ ಪುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತ್ವಕ್ಕು ಪುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ನೇತ್ರ ಪುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಜಿಹ್ವೆ ಪುಟ್ಟಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಘ್ರಾಣ ಪುಟ್ಟಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ : ಓಂಕಾರ ಜ್ಯೋತಿರೂಪೇ ಚ ಮಾನಸಂ ಚ ಸಮುದ್ಭವಂ |
ಓಂಕಾರ ದರ್ಪಣಾಕಾರೇ ಶ್ರೋತ್ರಂ ಚೈವ ಸಮುದ್ಭವಂ ||
ಓಂಕಾರರಾರ್ಧಚಂದ್ರೇ ಚ ತ್ವಕ್ ಚೈವ ಸಮುದ್ಭವಂ |
ಓಂಕಾರ ಕುಂಡಲಾಕಾರೇ ನೇತ್ರಂ ಚೈವ ಸಮುದ್ಭವಂ ||
ಓಂಕಾರ ದಂಡಕರೂಪೇ ಚ ಜಿಹ್ವಾ ಚೈವ ಸಮುದ್ಭವಂ |
ಓಂಕಾರ ತಾರಕರೂಪೇ ಘ್ರಾಣಂ ಚೈವ ಸಮುದ್ಭವಂ |
ಇತಿ ಷಷ್ಠಮುಖಂ ದೇವಿ ಸ್ಥಾನಸ್ಥಾನೇಷು ಜಾಯತೇ ||
ಎಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./292
ಆ ಅಖಂಡ ಜ್ಯೋತಿರ್ಮಯವಾಗಿಹ ಪರಮೋಂಕಾರಪ್ರಣವದ
ತಾರಕಾಸ್ವರೂಪದಲ್ಲಿ ಪೃಥ್ವಿಯೆಂಬ ಮಹಾಭೂತವಿಹುದು.
ಆ ಪ್ರಣವದ ದಂಡಸ್ವರೂಪದಲ್ಲಿ
ಅಪ್ಪುವೆಂಬ ಮಹಾಭೂತವಿಹುದು.
ಆ ಪ್ರಣವದ ಕುಂಡಲಾಕಾರದಲ್ಲಿ
ತೇಜವೆಂಬ ಮಹಾಭೂತವಿಹುದು.
ಆ ಪ್ರಣವದ ಅರ್ಧಚಂದ್ರಕದಲ್ಲಿ
ವಾಯುವೆಂಬ ಮಹಾಭೂತವಿಹುದು.
ಆ ಪ್ರಣವದ ದರ್ಪಣಾಕಾರದಲ್ಲಿ
ಆಕಾಶವೆಂಬ ಮಹಾಭೂತವಿಹುದು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ
ಆತ್ಮನೆಂಬ ಮಹಾಭೂತವಿಹುದು ನೋಡಾ.
ಇದಕ್ಕೆ ಚಿತ್ಪಿಂಡಾಗಮೇ : “ಓಂಕಾರ ತಾರಕರೂಪೇ ಪೃಥ್ವೀಭೂತಂ ಸಮಾಚರೇತ್ |
ಓಂಕಾರ ದಂಡರೂಪೇ ಚ ಅಪ್ಭೂತ ಸಮಾಶ್ರಿತಾಃ ||
ಓಂಕಾರ ಕುಂಡಲಾಕಾರೇ ತೇಜಭೂತಃ ತಥಾ ಭವೇತ್ |
ಓಂಕಾರ ಅರ್ಧಚಂದ್ರೇ ಚ ವಾಯುಭೂತಂ ಚ ವರ್ತತೇ ||
ಓಂಕಾರ ದರ್ಪಣಾಕಾರೇ ವ್ಯೋಮಭೂತಂ ಸದಾ ಶ್ರಿತಾಃ |
ಓಂಕಾರ ಜ್ಯೋತಿರೂಪೇ ಚ ಆತ್ಮಭೂತಾಶ್ರಿತಂ ತಥಾ |
ಇತಿ ಷಷ್ಠಭೂತಂ ದೇವಿ ಸ್ಥಾನ ಸ್ಥಾನೇ ಸಮಾಚರೇತ್ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./293
ಆ ಅಖಂಡ ಮಹಾಮೂಲಸ್ವಾಮಿಯ ಸ್ಥಲದ
ವಚನವೆಂತೆಂದೊಡೆ :
ನಿರಂಜನಾತೀತಪ್ರಣವ, ಅವಾಚ್ಯಪ್ರಣವ,
ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ
ಶಿವಪ್ರಣವ, ಶಕ್ತಿಪ್ರಣವ, ಶಿವಶಕ್ತಿರಹಿತವಾಗಿಹ ಮಹಾಪ್ರಣವ
ಮೊದಲಾದ ಅನಂತಕೋಟಿ ಪ್ರಣವಂಗಳಿಲ್ಲದಂದು,
ಚಿತ್ಪ್ರಕಾಶ ಚಿದಾಕಾಶ ಮಹದಾಕಾಶ
ಮಹಾಕಾಶ ಶಿವಾಕಾಶ ಬಿಂದ್ವಾಕಾಶ
ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ
ಅನಂತಕೋಟಿ ಮಹಾಪ್ರಣವಾಕಾಶ,
ಅತಿಪ್ರಣವಾಕಾಶ ಅತಿಮಹಾತೀತಪ್ರಣವಾಕಾಶಗಳಿಲ್ಲದಂದು,
ಆದಿ ಅನಾದಿ ಸಂಗತ ಅನಂತ ಅರ್ಭಕ
ತಮಂಧ ತಾರಜ ತಂಡಜ ಭಿನ್ನಜ ಭಿನ್ನಾಯುಕ್ತ
ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ
ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ
ದ್ವಾಪರಯುಗ ಕಲಿಯುಗಂಗಳೆಂಬ
ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಯುಗಂಗಳು
ಅತಿಮಹಾಯುಗಂಗಳು,
ಅತಿಮಹಾತೀತಮಹಾಯುಗಂಗಳಿಲ್ಲದಂದು,
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ
ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ
ಅಖಂಡ ಮಹಾಮೂಲಸ್ವಾಮಿಯು ಇದ್ದನಯ್ಯ ಇಲ್ಲದಂತೆ
ನಮ್ಮ ಅಪ್ರಮಾಣ ಕೂಡಲಸಂಗಮದೇವಾ./294
ಆ ಅಖಂಡ ಮಹಾಮೂಲಸ್ವಾಮಿಯ
ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ
ಅನಂತಕೋಟಿ ಬ್ರಹ್ಮ-ನಾರಾಯಣರಳಿದರು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ
ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ
ಅನಂತಕೋಟಿ ರುದ್ರ-ಈಶ್ವರ-ಸದಾಶಿವ ಮೊದಲಾದ
ಅನಂತಕೋಟಿ ದೇವರ್ಕಳು ಅಳಿದರು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ
ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳನರಿಯದೆ
ಅನಂತಕೋಟಿ ವೇದಂಗಳು, ಅನಂತಕೋಟಿ ಮನುಮುನಿಗಳು,
ಅನಂತಕೋಟಿ ಲೋಕಾದಿಲೋಕದವರೆಲ್ಲ ಪ್ರಳಯಕ್ಕೊಳಗಾದರು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ
ಅಂಗ-ಪ್ರತ್ಯಂಗ-ಸ್ವರೂಪ-ಸ್ವಭಾವಂಗಳ
ಈ ಲೋಕದ ಜಡರೆತ್ತ ಬಲ್ಲರಯ್ಯ
ಅಪ್ರಮಾಣಕೂಡಲಸಂಗಮದೇವಾ./295
ಆ ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರ ಪ್ರಣವದ
ತಾರಕಸ್ವರೂಪದಲ್ಲಿ ಸದ್ಯೋಜಾತಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ವಾಮದೇವಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಅಘೋರಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ತತ್ಪುರುಷಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಈಶಾನಮುಖ ಉತ್ಪತ್ಯವಾಯಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ
ನಿರ್ಭಾವಮುಖ ಉತ್ಪತ್ಯವಾಯಿತ್ತು. ನೋಡಾ.
ಇದಕ್ಕೆ ಈಶ್ವರೋವಾಚ-ಶಿವಧರ್ಮಸೂತ್ರೇ : “ಓಂಕಾರತಾರಕಸ್ವರೂಪೇ ಸದ್ಯೋಜಾತಂ ಚ ಜಾಯತೇ |
ಓಂಕಾರದಂಡ ಸ್ವರೂಪೇ ವಾಮದೇವಂ ಚ ಜಾಯತೇ ||
ಓಂಕಾರಕುಂಡಲಾಕಾರೇ ಅಘೋರಂ ಚಾಪಿ ಜಾಯತೇ |
ಓಂಕಾರ ಅರ್ಧಚಂದ್ರೇ ಚ ತತ್ಪುರುಷಂ ಚ ಜಾಯತೇ ||
ಓಂಕಾರದರ್ಪಣಾಕಾರೇ ಈಶಾನ್ಯಂ ಚ ಸ ಜಾಯತೇ ||
ಓಂಕಾರ ಜ್ಯೋತಿರೂಪೇ ಚ ನಿರ್ಭಾವಃ ತತ್ರ ಜಾಯತೇ ||
ಇತಿ ಷಟ್ಮುಖಂ ದೇವಿ ಸ್ಥಾನಸ್ಥಾನೇಷು ಜಾಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./296
ಆ ಅಖಂಡಜ್ಯೋತಿರ್ಮಯವಾಗಿಹ ಪರಮೋಂಕಾರಪ್ರಣವದ
ಜ್ಯೋತಿಸ್ವರೂಪದಲ್ಲಿ ಮಹಾಲಿಂಗ ಉತ್ಪತ್ಯವಾಯಿತ್ತು .
ಆ ಪ್ರಣವದ ದರ್ಪಣಾಕಾರದಲ್ಲಿ ಪ್ರಸಾದಲಿಂಗ ಹುಟ್ಟಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಜಂಗಮಲಿಂಗ ಹುಟ್ಟಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಶಿವಲಿಂಗ ಹುಟ್ಟಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಗುರುಲಿಂಗ ಉತ್ಪತ್ಯವಾಯಿತ್ತು.
ಆ ಪ್ರಣವದ ತಾರಕಸ್ವರೂಪದಲ್ಲಿ ಆಚಾರಲಿಂಗ ಹುಟ್ಟಿತ್ತು ನೋಡಾ.
ಇದಕ್ಕೆ ಶಿವಲಿಂಗಾಗಮೇ : “ಓಂಕಾರ ಜ್ಯೋತಿರೂಪೇ ಚ ಮಹಾಲಿಂಗಂ ಚ ಜಾಯತೇ |
ಓಂಕಾರ ದರ್ಪಣಾಕಾರೇ ಪ್ರಸಾದಲಿಂಗೋ ಜಾಯತೇ ||
ಓಂಕಾರೇಚಾರ್ಧಚಂದ್ರೇ ಚ ಜಂಗಮಂ ಚಾಪಿ ಜಾಯತೇ |
ಓಂಕಾರ ದಂಡರೂಪೇ ಚ ಗುರುಲಿಂಗಂ ಚ ಜಾಯತೇ ||
ಓಂಕಾರ ತಾರಕಾರೂಪೇ ಆಚಾರಶ್ಚ ಸಜಾಯತೇ |
ಇತಿ ಷಡ್ಲಿಂಗಮುತ್ಪನ್ನಂ ಸುಸೂಕ್ಷ್ಮಂ ಕಮಲಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./297
ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಕಸ್ವರೂಪವಾಗಿಹ
ಬ್ರಹ್ಮಾನಂದಬ್ರಹ್ಮದಲ್ಲಿ ಈಶ್ವರ, ವಾಯು, ಸ್ಪರ್ಶ,
ಮನ, ತ್ವಕ್ಕು, ಪಾಣೇಂದ್ರಿಯವೆಂಬ
ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ನಿರಂಜನಾತೀತಾಗಮೇ : “ಈಶ್ವರೋ ವಾಯು ಸಂಸ್ಪಶರ್ೆ ಮನಸ್ತತ್ವಾನಿ ಉಚ್ಯತೇ |
ಷಟ್ಸಮ್ಮಿಶ್ರಿತಂ ಯಸ್ತು ಬ್ರಹ್ಮಾನಂದಶ್ಚ ಕಥ್ಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./298
ಆ ಅಖಂಡಮಹಾಜ್ಯೋತಿಪ್ರಣವದ ಕುಂಡಲಾಕಾರವಾಗಿಹ
ಕಲಾಬ್ರಹ್ಮದಲ್ಲಿ ರುದ್ರ, ಅಗ್ನಿ, ರೂಪ,
ಅಹಂಕಾರ, ನೇತ್ರ, ಪಾದೇಂದ್ರಿಯವೆಂಬ
ಈ ಆರು ತತ್ವಂಗಳು ಉತ್ಪತ್ಯವಾಯಿತು ನೋಡಾ.
ಇದಕ್ಕೆ ನಿರಂಜನಾತೀತಾಗಮೇ : “ರುದ್ರಂ ತೇಜಸ್ತಥಾ ರೂಪಂ ಮಹಾನೇತ್ರಂ ಚ ಪಾದಯೋಃ |
ಷಡಂಗಮಿಶ್ರಿತಂ ಚೇತಿ ಕಲಾಬ್ರಹ್ಮೇತಿ ಕಥ್ಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./299
ಆ ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವಾಗಿಹ
ಪರಬ್ರಹ್ಮದಲ್ಲಿ ಶಿವನುತ್ಪತ್ಯವಾದನು,
ಕ್ಷೇತ್ರಜ್ಞನುತ್ಪತ್ಯವಾದನು, ಕತರ್ೃ ಉತ್ಪತ್ಯವಾದನು,
ಭಾವವುತ್ಪತ್ಯವಾಯಿತ್ತು, ಚೈತನ್ಯನುತ್ಪತ್ಯವಾದನು,
ಆಕಾಶವುತ್ಪತ್ಯವಾಯಿತ್ತು.
ಈ ಆರು ತತ್ವಂಗಳು ಪರಬ್ರಹ್ಮದಲ್ಲಿ ಹುಟ್ಟಿತ್ತು ನೋಡಾ.
ಇದಕ್ಕೆ ನಿರಂಜನಾಗಮೇ : “ಶಿವಂ ಕ್ಷೇತ್ರಜ್ಞಕರ್ತಾರಂ ಭಾವಂ ಚೈತನ್ಯಮಂತರಂ |
ಏವಂತು ಷಡ್ವಿಧಂ ಪ್ರೋಕ್ತಂ ಪರಬ್ರಹ್ಮ ಚ ಕಥ್ಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./300
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪದ
ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ
ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ.
ಅಕಾರವೆ ಶಿವನು, ಉಕಾರವೆ ಶಕ್ತಿ , ಮಕಾರವೆ ಪರವು.
ಅಕಾರವೆ ನಾದ, ಉಕಾರವೆ ಬಿಂದು, ಮಕಾರವೆ ಕಲೆ.
ಈ ಆರು ನಾಮಂಗಳು ನಿಃಕಲತತ್ವ.
ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ ಬಿಂದು ಕಲೆ ಯುಕ್ತವಾಗಿ
ಅಖಂಡಲಿಂಗವಾಯಿತ್ತು .
ಅದಕ್ಕೆ ಕರಚರಣ ಅವಯವಂಗಳಿಲ್ಲ ; ಅಖಂಡಸ್ವರೂಪು.
ಇದಕ್ಕೆ ಚಿತ್ಪಿಂಡಾಗಮೇ : “ಓಂಕಾರಂ ತಾರಕಾರೂಪಂ ಅಕಾರಂ ಸೋಜಾಯತ |
ಓಂಕಾರ ಕುಂಡಲಾಕಾರೇ ಉಕಾರಂ ಚಾತ್ರ ಜಾಯತೇ ||
ಓಂಕಾರ ಜ್ಯೋತಿರೂಪೇ ಚ ಮಕಾರಂ ಚಾಪಿ ಜಾಯತೇ |
ಇತಿ ತ್ರ್ಯಕ್ಷರಂ ದೇವಿ ಸ್ಥಾನಸ್ಥಾನೇಷು ಜಾಯತೇ ||
ಅಕಾರೇಚ ಉಕಾರೇಚ ಮಕಾರೇಚಕ್ಷರತ್ರಯಂ |
ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ |
ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ |
ನಾದಬಿಂದುಕಲಾಮಧ್ಯೇ ವೇದಲಿಂಗ ಸಮುದ್ಭವಂ |
ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ ||”
ಇಂತೆಂದುದಾಗಿ,
ಇದಕ್ಕೆ ಈಶ್ವರೋವಾಚ : “ಅಕಾರೋಕಾರ ಸಂಯೋಗಾತ್ತನ್ಮಧ್ಯೇ ಲಿಂಗರೂಪಕಂ |
ಅವ್ಯಕ್ತಲಿಂಗಮಾಕಲ್ಯ ಗೋಳಕಾಕಾರಸಂಜ್ಞಕಃ ||
ನಾದೋ ಲಿಂಗಮಿತಿ ಜ್ಞೇಯಂ ಬಿಂದುಪೀಠಮುದಾಹೃತಂ |
ನಾದಬಿಂದುಯುತಂ ರೂಪಂ ಜಗಸ್ಸೃಷ್ಟ್ಯರ್ಥಕಾರಣಂ ||
ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿಸ್ತಸ್ಯ ಪೀಠಿಕಾ |
ಆಲಯಂ ಸರ್ವದೇವಾನಾಂ ಲಯಾನಾಂ ಲಿಂಗಮುಚ್ಯತೇ ||
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |
ತದೇವಂ ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||
ಲಿಂಗಂ ಶಂಭುರಿತಿಜ್ಞೇಯಂ ಪೀಠಂ ಶಕ್ತಿರುದಾಹೃತಂ |
ಶಿವಶಕ್ತಿಸಮಾಯೋಗಂ ಸೃಷ್ಟಿಸ್ಥಿತಿ ಲಯಾವಹಂ ||
ಲಿಂಗೇನ ಜಾಯತೇ ತತ್ರ ಜಗತ್ಸ್ಥಾವರ ಜಂಗಮಂ |
ತಸ್ಮಾಲ್ಲಿಂಗಮಶೇಷೇಣ ಲಿಂಗರೂಪಮುದಾಹೃತಂ ||
ಅಸಂಖ್ಯಾತ ಮಹಾವಿಷ್ಣುಃ ಅಸಂಖ್ಯಾತ ಪಿತಾಮಹಾಃ |
ಅಸಂಖ್ಯಾತ ಸುರೇಂದ್ರಾಣಾಂ ಲೀಯತೇ ಸರ್ವದೇವತಾ ಃ ||
ಅಸಂಖ್ಯಾತ ದೇವಮುನಯೋ ಗಮ್ಯತೇ ಸರ್ವದೇವತಾಃ |
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |
ತದೇವ ಲಿಂಗಮಿತ್ಯಾಹುಃ ಲಿಂಗತತ್ವ ಪರಾಯಣಾಃ ||”
ಇಂತೆಂದುದಾಗಿ,
ಇದಕ್ಕೆ ಪ್ರಣವಾನಂದ ಸೂಕ್ತೇ : “ಆದಿಯೋಂಕಾರಪೀಠಂಚ ಅಕಾರಂ ಕಂಠರುಚ್ಯತೇ |
ಉಕಾರಂ ಗೋಮುಖಂ ಚೈವ ಮಕಾರಂ ವತರ್ುಲಂ ತಥಾ ||
ನಾಳಂ ಬಿಂದು ಮಹಾತೇಜ ನಾದಮಖಂಡಲಿಂಗಯೋಃ |
ಆದಿಮಧ್ಯಾಂತರಹಿತಂ ಅಪ್ರಮೇಯಮನಾಮಯಂ ||
ಅಸಂಖ್ಯ ಸೂರ್ಯಚಂದ್ರಾಗ್ನಿಃ ಅಸಂಖ್ಯಾತತಟಿತ್ಪ್ರಭಂ |
ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಂ ಅಗೋಚರಂ ||
ನಿನರ್ಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ |
ಇತಿ ಲಿಂಗಸ್ಥಲಂ ಜ್ಞಾತುಂ ದುರ್ಲಭಂ ಕಮಲಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./301
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ
ಮೂರ್ತಿಬ್ರಹ್ಮದಲ್ಲಿ ಬ್ರಹ್ಮ, ಪೃಥ್ವಿ, ಗಂಧ, ಚಿತ್ತ, ಘ್ರಾಣ,
ಗುದವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ನಿರಂಜನಾತೀತಾಗಮೇ : “ಧಾತಾ ಧಾತ್ರೀ ಚ ಗಂಧಶ್ಚ ಚಿತ್ತ ಂ ಘ್ರಾಣಗುದಸ್ತಥಾ |
ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮೇತಿ ಕಥ್ಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./302
ಆ ಅಖಂಡಮಹಾಜ್ಯೋತಿಪ್ರಣವದ ದಂಡಕಸ್ವರೂಪವಾಗಿಹ
ಪಿಂಡಬ್ರಹ್ಮದಲ್ಲಿ ವಿಷ್ಣು, ಅಪ್ಪು, ರಸ, ಬುದ್ಧಿ,
ಜಿಹ್ವೆ, ಗುಹ್ಯವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ನಿರಂಜನಾತೀತಾಗಮೇ : “ವಿಷ್ಣುರಾಪೋ ರಸೋ ಬುದ್ಧಿಃ ಜಿಹ್ವಾ ಗುಹ್ಯಸ್ತಥೈವ ಚ |
ಷಟ್ತತ್ವಮಿದಂ ಪ್ರೋಕ್ತಂ ಪಿಂಡಬ್ರಹ್ಮೇತಿ ಕಥ್ಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./303
ಆ ಅಖಂಡಮಹಾಜ್ಯೋತಿಪ್ರಣವದ ದರ್ಪಣಾಕಾರವಾಗಿಹ
ವಿಜ್ಞಾನಬ್ರಹ್ಮದಲ್ಲಿ ಸದಾಶಿವ, ಮಹಾಕಾಶ, ಶಬ್ದ,
ಜ್ಞಾನ, ಶ್ರೋತ್ರ, ವಾಕು
ಈ ಆರು ತತ್ವಂಗಳು ಹುಟ್ಟಿತ್ತು ನೋಡಾ.
ಇದಕ್ಕೆ ನಿರಂಜನಾಗಮೇ : “ಸದಾಶಿವಂ ಮಹಾಕಾಶಂ ಶಬ್ದಜ್ಞಾನಂ ಚ ಶ್ರೋತ್ರಕಂ |
ವಾಕ್ತಥಾ ಷಡ್ವಿಧಂ ಪ್ರೋಕ್ತಂ ವಿಜ್ಞಾನಂ ಬ್ರಹ್ಮ ಉಚ್ಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./304
ಆ ಅನಾಹತಚಕ್ರದ ದ್ವಾದಶದಳದ ಪದ್ಮವ ಪೊಕ್ಕು ಸಾಧಿಸಿ,
ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು,
ಅಲ್ಲಿ ಕುಂಕುಮವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ,
ಅಗ್ನಿಯ ಪಟುಮಾಡಿ,ಮನ ಪವನ ಬಿಂದು ಸಂಯೋಗದಿಂದ
ವಿಶುದ್ಧಿಚಕ್ರದ ಷೋಡಶದಳದ ಪದ್ಮವ ಹೊಕ್ಕನು ನೋಡಾ
ಅಪ್ರಮಾಣಕೂಡಲಸಂಗಮದೇವಾ./305
ಆ ಅರ್ಬುದದಳಪದ್ಮದಲ್ಲಿ
`ಕೋಟಿದಳ ಪದ್ಮೋದ್ಭವತಿ | ಓಂ ಶಿವಾತ್ಮಾ ದೇವತಾ |’
ಎಂದುದಾಗಿ, ಅರ್ಬುದದಳಪದ್ಮದಲ್ಲಿ
ಕೋಟಿದಳಪದ್ಮ ಉದ್ಭವಿಸಿ.
ನಿರಾಳಚಕ್ರದಲ್ಲಿ ಅನಂತಜ್ಯೋತಿಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./306
ಆ ಆದಿ ಉಕಾರ, ಆ ಆದಿ ಮಕಾರ, ಆ ಆದಿ ಅಕಾರಕ್ಕೆ
ಆ ಆದಿಬಿಂದು, ಆ ಆದಿಕಲೆ, ಆ ಆದಿನಾದವೆ ಆಧಾರ.
ಆ ಆದಿಬಿಂದು, ಆದಿಕಲೆ, ಆದಿನಾದಕ್ಕೆ ಆ ಆದಿಪ್ರಕೃತಿಯೇ ಆಧಾರ.
ಆ ಆದಿಪ್ರಕೃತಿಪ್ರಣವಕ್ಕೆ ಪ್ರಾಣಮಾತ್ರೆಪ್ರಣವವೇ ಆಧಾರ.
ಆ ಪ್ರಾಣಮಾತ್ರೆಪ್ರಣವಕ್ಕೆ ಅಖಂಡಜ್ಯೋತಿರ್ಮಯಲಿಂಗವೇ ಆಧಾರ.
ಉ ಎಂದರೆ ಆದಿಬಿಂದುವಿಳಿದು ಮ ಎಂಬ ಆದಿಕಲೆಯಲ್ಲಿ ಸಂಯುಕ್ತವಾಗಿ,
ಅ ಎಂಬ ಆದಿನಾದದಲ್ಲಿ ಮ ಎಂಬ ಅನುಸ್ವಾರ ಬಂದು ಕೂಡಲು,
ಅಖಂಡಜ್ಯೋತಿರ್ಮಯವಾಗಿಹ ಪರಮೋಂಕಾರವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./307
ಆ ಆದಿ ಪ್ರಣವದ ನೆನಹುಮಾತ್ರದಲ್ಲಿ
ಆದಿ ಅಕಾರ, ಆದಿ ಉಕಾರ, ಆದಿ ಮಕಾರವೆಂಬ
ಪ್ರಣವತ್ರಯಂಗಳುತ್ಪತ್ಯವಾಯಿತ್ತು .
ಆ ಆದಿ ಅಕಾರ, ಆದಿ ಉಕಾರ, ಆದಿ ಮಕಾರ-ಇವು ಮೂರು ಬೀಜಾಕ್ಷರ.
ಆದಿ ಅಕಾರವೆ ಆದಿನಾದ, ಆದಿ ಉಕಾರವೇ ಆದಿಬಿಂದು,
ಆದಿ ಮಕಾರವೆ ಆದಿಕಲೆ.
ಆದಿ ಅಕಾರವೇ ನಿರಾಳಾತ್ಮನು, ಆದಿ ಉಕಾರವೇ ನಿರಂಜನಾತ್ಮನು,
ಆದಿ ಮಕಾರವೆ ನಿರಾಮಯಾತ್ಮಕನು ನೋಡಾ.
ಇದಕ್ಕೆ ಶ್ರೀಮಹಾದೇವೋವಾಚ: “ಅಕಾರಂ ನಾದರೂಪೇಣ ಉಕಾರೋ ಬಿಂದುರುಚ್ಯತೇ |
ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ ||
ಓಂಕಾರೋ ಜ್ಯೋತಿರೂಪಂಚ ಓಂಕಾರೋ ಪರಮೇಶ್ವರಃ |
ನಾದರೂಪಂ ನಿರಾಲಂಬಂ ಬಿಂದುರೂಪಂ ನಿರಂಜನಂ |
ನಾದಬಿಂದೂಭಯೋಃ ಕರ್ತಾ ರುದ್ರಃ ಶಂಭುಃ ನಿರಾಮಯಃ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./308
ಆ ಆದಿ ಪ್ರಣವದ ನೆನಹುಮಾತ್ರದಲ್ಲಿಯೇ
ಆದಿ ಅಕಾರಪ್ರಣವ, ಆದಿ ಉಕಾರಪ್ರಣವ,
ಆದಿ ಮಕಾರಪ್ರಣವ ಉತ್ಪತ್ಯವಾಯಿತ್ತು ;
ಆದಿ ಅಕಾರಪ್ರಣವ, ಆದಿ ಉಕಾರಪ್ರಣವ,
ಆದಿ ಮಕಾರಪ್ರಣವ-ಈ ಮೂರು ಬೀಜಾಕ್ಷರ.
ಆದಿ ಅಕಾರಪ್ರಣವವೇ ಆದಿನಾದ.
ಆದಿ ಉಕಾರಪ್ರಣವವೇ ಆದಿಬಿಂದು.
ಆದಿ ಮಕಾರಪ್ರಣವವೇ ಆದಿಕಲೆ.
ಆದಿ ಅಕಾರಪ್ರಣವವೇ ನಿರಾಳಾತ್ಮನು.
ಆದಿ ಉಕಾರಪ್ರಣವವೇ ನಿರಂಜನಾತ್ಮನು.
ಆದಿ ಮಕಾರಪ್ರಣವವೇ ನಿರಾಮಯಾತ್ಮನು.
ಇದಕ್ಕೆ ಶ್ರೀ ಮಹಾದೇವ ಉವಾಚ : “ನಾದರೂಪಂ ನಿರಾಲಂಬಂ ಬಿಂದುರೂಪಂ ನಿರಂಜನಂ |
ನಾದಬಿಂದೂಭಯೋಃ ಕರ್ತಾ ಆದ್ಯಃ ಶಂಭುರ್ನಿರಾಮಯಃ ||”
ಇಂತೆಂದುದಾಗಿ,
ಆದಿ ಅಕಾರಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ.
ಆದಿ ಉಕಾರಪ್ರಣವಕ್ಕೆ ಆದಿಬಿಂದುಪ್ರಣವವೆ ಆಧಾರ.
ಆದಿ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ.
ಆ ಆದಿನಾದ ಆದಿಬಿಂದು ಆದಿಕಲಾಪ್ರಣವಕ್ಕೆ
ಆದಿ ಪ್ರಕೃತಿಪ್ರಣವವೇ ಆಧಾರ.
ಆ ಆದಿ ಪ್ರಕೃತಿಪ್ರಣವಕ್ಕೆ ಆದಿ ಪ್ರಾಣಮಾತ್ರೆಪ್ರಣವವವೇ ಆಧಾರ.
ಆ ಆದಿ ಪ್ರಾಣಮಾತ್ರೆ ಪ್ರಣವಕ್ಕೆ
ಆ ಅಖಂಡ ಮಹಾಜ್ಯೋತಿರ್ಮಯಲಿಂಗವೇ ಆಧಾರ.
ಆ ಎಂದರೆ ಆ ಆದಿ ಅನಾಹತಪ್ರಣವ,
ಉ ಎಂದರೆ ಆ ಆದಿ ನಾದಪ್ರಣವ ಉಳಿಯಿತ್ತು.
ಆದಿ ಮಾಯೆ ಎಂಬಲ್ಲಿ ಆ ಆದಿ ಬಿಂದು ಬಂದು ಕೂಡಲು
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./309
ಆ ಇಷ್ಟ ಪ್ರಾಣ ಭಾವಲಿಂಗವೆಂಬ ಆದಿಪ್ರಣವತ್ರಿತಯದಲ್ಲಿ
ತಾರಕಾಸ್ವರೂಪ, ದಂಡಸ್ವರೂಪ, ಕುಂಡಲಾಕಾರ,
ಅರ್ಧಚಂದ್ರಕ, ದರ್ಪಣಾಕಾರ, ಜ್ಯೋತಿಸ್ವರೂಪವೆಂಬ
ಷಟ್ಪ್ರಣವ ಉತ್ಪತ್ಯ ಲಯ ನೋಡಾ.
ಇದಕ್ಕೆ ಪ್ರಳಯಕಾಲರುದ್ರೋಪನಿಷತ್ : ಉಕಾರವೆಂಬ ಪ್ರಣವದಲ್ಲಿ –
“ದಂಡಶ್ಚ ತಾರಕಾಕಾರೋ ಭವತಿ ಓಂ ಇಷ್ಟಲಿಂಗೋ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ಅಷ್ಟಾದಶ ನವಮಪ್ರಣವಾಂಶಕೇ ||”
ಮಕಾರವೆಂಬ ಪ್ರಣವದಲ್ಲಿ-
“ಕುಂಡಲಶ್ಚಾರ್ಧಚಂದ್ರೋ ಭವತಿ ಓಂ ಪ್ರಾಣಲಿಂಗೋ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ನವದಶ ಪ್ರಣವಾಂಶಕೇ ||”
ಅಕಾರವೆಂಬ ಪ್ರಣವದಲ್ಲಿ-
“ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಭಾವಲಿಂಗೋ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ಏಕಾದಶ ಪ್ರಣವಾಂಶಕೇ ||
ಉಕಾರೇ ಚ ಮಕಾರೇ ಚ ಅಕಾರೇ ಚ ತ್ರಿಯಕ್ಷರಂ |
ಅಕಾರಮಾದಿನಾದಂ ಚ ಉಕಾರಮಾದಿಬಿಂದವಃ ||
ಮಕಾರಾದಿ ಕಲಾಶ್ಚೈವ ನಾದಬಿಂದುಕಲಾತ್ಮನೇ |
ನಾದಬಿಂದುಕಲಾಯುಕ್ತೋ ಅಖಂಡೋಂಕಾರಜ್ಯೋತಿಭಿಃ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./310
ಆ ಏಕದಳಪದ್ಮದಲ್ಲಿ –
`ತ್ರಿದಳಪದ್ಮೋದ್ಭವತಿ | ಓಂ ವಿಶ್ವಾತ್ಮಾ ದೇವತಾ |’
ಎಂದುದಾಗಿ, ಆ ಏಕದಳಪದ್ಮದಲ್ಲಿ
ತ್ರಿದಳಪದ್ಮ ಹುಟ್ಟಿ, ಶಿಖಾಚಕ್ರದಲ್ಲಿ
ಮಹಾಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./311
ಆ ಐಕ್ಯನಲ್ಲಿಯ ಐಕ್ಯಂಗೆ ಆತ್ಮನಲ್ಲಿಯ ಪರಮಾತ್ಮನೆ ಅಂಗ.
ಆ ಅಂಗಕ್ಕೆ ಭಾವದಲ್ಲಿಯ ನಿರ್ಭಾವವೇ ಹಸ್ತ.
ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಅತಿಮಹಾಲಿಂಗವೇ ಲಿಂಗ.
ಆ ಅತಿಮಹಾಲಿಂಗಮುಖದಲ್ಲಿ ಪರಮಪರಿಣಾಮವನೇ ಸಮರ್ಪಿಸಿ
ಆ ಪರಮಪ್ರಸಾದವನೇ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./312
ಆ ಐಕ್ಯನಲ್ಲಿಯ ಪ್ರಸಾದಿಗೆ ಆತ್ಮನಲ್ಲಿಯ ಅಗ್ನಿಯೇ ಅಂಗ.
ಆ ಅಂಗಕ್ಕೆ ಭಾವದಲ್ಲಿಯ ನಿರಹಂಕಾರವೇ ಹಸ್ತ.
ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಶಿವಲಿಂಗವೇ ಲಿಂಗ.
ಆ ಶಿವಲಿಂಗದ ಮುಖದಲ್ಲಿ ರೂಪತೃಪ್ತಿದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./313
ಆ ಐಕ್ಯನಲ್ಲಿಯ ಪ್ರಾಣಲಿಂಗಿಗೆ ಆತ್ಮನಲ್ಲಿಯ ವಾಯುವೇ ಅಂಗ.
ಆ ಅಂಗಕ್ಕೆ ಭಾವದಲ್ಲಿಯ ಸುಮನವೇ ಹಸ್ತ.
ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ.
ಆ ಜಂಗಮಲಿಂಗದಮುಖದಲ್ಲಿ ಸ್ಪರ್ಶನತೃಪ್ತಿದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./314
ಆ ಐಕ್ಯನಲ್ಲಿಯ ಮಾಹೇಶ್ವರಂಗೆ ಆತ್ಮನಲ್ಲಿಯ ಅಪ್ಪುವೇ ಅಂಗ.
ಆ ಅಂಗಕ್ಕೆ ಭಾವದಲ್ಲಿಯ ಸುಬುದ್ಧಿಯೇ ಹಸ್ತ.
ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಗುರುಲಿಂಗವೇ ಲಿಂಗ.
ಆ ಗುರುಲಿಂಗದಮುಖದಲ್ಲಿ ರಸತೃಪ್ತಿದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಯನೇ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./315
ಆ ಐಕ್ಯನಲ್ಲಿಯ ಶರಣಂಗೆ ಆತ್ಮನಲ್ಲಿಯ ಆಕಾಶವೇ ಅಂಗ.
ಆ ಅಂಗಕ್ಕೆ ಭಾವದಲ್ಲಿಯ ಸುಜ್ಞಾನವೇ ಹಸ್ತ.
ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ.
ಆ ಪ್ರಸಾದಲಿಂಗಮುಖದಲ್ಲಿ ಶಬ್ದತೃಪ್ತಿದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./316
ಆ ಕಲಾಪ್ರಣವದ ಮೂವತ್ತೆಂಟು ಕಲೆಗಳ ಕಾಂತಿ ಅದೆಂತೆಂದಡೆ :
ಒಂದೊಂದು ಕಲೆಗಳು ಹೊಳವುತ್ತಿಹ
ಕಾಲಾಗ್ನಿಯೋಪಾದಿಯ ಕಾಂತಿಯನುಳ್ಳುದು.
ಒಂದೊಂದು ಕಲೆಗಳು ಕೋಟಿಮಿಂಚುಗಳಿಗೆ ಸಮಾನವಹ ಪ್ರಭೆಯನುಳ್ಳ
ಜ್ಞಾನಸ್ವರೂಪವಹ ಸೂಕ್ಷ್ಮ ಸೂಕ್ಷ್ಮಕಲೆಗಳೇಕವಾಗಿ
ಮೂವತ್ತೆಂಟುಕೋಟಿಮಿಂಚುಗಳಿಗೆ ಸಮಾನವಹ ಪ್ರಭೆಯನುಳ್ಳ
ಚಿತ್ಕಳಾಪ್ರಣವ ಶಿಖಾಗ್ರದಲ್ಲಿಹುದು.
ಇದಕ್ಕೆ ಈಶ್ವರೋವಾಚ : “ಜ್ವಲತ್ಕಾಲಾನಲಾಭಾಸಾ ತಟಿತ್ಕೋಟಿಸಮಪ್ರಭಾ |
ತಸ್ಯೋಧ್ರ್ವಂ ಚ ಶಿಖಾಸೂಕ್ಷ್ಮಾಂ ಚಿದ್ರೂಪಾ ಪರಮಾ ಕಲಾ’ ||
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./317
ಆ ಕೋಟಿದಳಪದ್ಮದಲ್ಲಿ –
`ಲಕ್ಷದಳ ಪದ್ಮೋದ್ಭವತಿ | ಓಂ ನಿಷ್ಕಳಾತ್ಮಾ ದೇವತಾ |’
ಎಂದುದಾಗಿ, ಆ ಕೋಟಿದಳಪದ್ಮದಲ್ಲಿ
ಅಕ್ಷದಳಪದ್ಮ ಉದ್ಭವಿಸಿ
ನಿಷ್ಕಳಚಕ್ರದಲ್ಲಿ ಸ್ಫಟಿಕಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./318
ಆ ಕ್ಷಿತಿದಳಪದ್ಮದಲ್ಲಿ –
`ಕ್ಷೊಣಿದಳ ಪದ್ಮೋ ಭವತಿ | ಓಂ ಅಚಲಾತ್ಮೋ ದೇವತಾ |’
ಎಂದುದಾಗಿ,
ಆ ಕ್ಷಿತಿದಳ ಪದ್ಮದಲ್ಲಿ ಕ್ಷೊಣಿದಳ ಪದ್ಮದಳ ಉದ್ಭವಿಸಿ
ಗುರುಚಕ್ರದಲ್ಲಿ ಮಹಾಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./319
ಆ ಕ್ಷೊಣಿದಳಪದ್ಮದಲ್ಲಿ –
`ಪದ್ಮದಳ ಪದ್ಮೋದ್ಭವತಿ | ಓಂ ನಿರಂಜನಾತ್ಮಾ ದೇವತಾ|’
ಎಂದುದಾಗಿ, ಆ ಕ್ಷೊಣಿದಳಪದ್ಮದಲ್ಲಿ
ಪದ್ಮದಳಪದ್ಮ ಉದ್ಭವಿಸಿ ನಾದಚಕ್ರದಲ್ಲಿ
ಅನಂತಕೋಟಿ ಸೂರ್ಯಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./320
ಆ ಖರ್ವದಳಪದ್ಮದಲ್ಲಿ
`ಅರ್ಬುದದಳ ಪದ್ಮೋದ್ಭವತಿ | ಓಂ ಮಹಾತ್ಮಾ ದೇವಾತಾ |’
ಎಂದುದಾಗಿ, ಆ ಖರ್ವದಳಪದ್ಮದಲ್ಲಿ
ಅರ್ಬುದದಳಪದ್ಮ ಉದ್ಭವಿಸಿ
ಸುರಾಳಚಕ್ರದಲ್ಲಿ ಹಿರಣ್ಯಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./321
ಆ ಚೈತನ್ಯಬೀಜ ಶುಕ್ಲಶೋಣಿತ ಬಲಿತು ಜೀವನಾಗಿ
ಭೂತಂಗಳ ಕೂಡಿಕೊಂಡು
ಕರ್ಮವಶದಿಂದ ಪಿಂಡವಹುದು.
ಇದಕ್ಕೆ ಶ್ರುತಿ : “ಆಯುಃ ಕರ್ಮ ಚ ವಿತ್ತಂ ಚ ವಿದ್ಯಾ ನಿಧನಮೇವ ಚ |
ಪಂಚೈತಾನಿ ವಿಲಿಖ್ಯಂತೇ ಗರ್ಭಸ್ತಸ್ಯೈವ ದೇಹಿನಾಂ || ”
ಇಂತೆಂದುದಾಗಿ,
ಈ ಪಂಚಾಕ್ಷರವ ನಿಟಿಲತಟದಲ್ಲಿ ಬರೆವನು.
ಆ ಚೈತನ್ಯಬೀಜ ಶುಕ್ಲಶೋಣಿತಂಗಳು ಬದ್ಧವಹುದು.
ಪುರುಷವೀರ್ಯ ಘನವಾದಡೆ ಗಂಡುಮಗ ಹುಟ್ಟುವನು.
ಸ್ತ್ರೀವೀರ್ಯ ಘನವಾದಡೆ ಹೆಣ್ಣು ಮಗು ಹುಟ್ಟುವಳು.
ಸಮವಾದಡೆ ನಪುಂಸಕ ಹುಟ್ಟುವದು.
ಮಾತಾಪಿತರ ಮಲತ್ರಯದಲ್ಲಿ ಪಿಂಡರೂಪವಹುದು.
ಇದಕ್ಕೆ ಶ್ರೀಮಹಾದೇವ ಉವಾಚ : “ರಕ್ತಾಧಿಕ್ಯಂ ಭವೇನ್ನಾರೀ ನರಶುಕ್ಲಾಧಿಕೇ ಸುತಂ |
ನಪುಂಸಕಂ ಸಮಂ ದ್ರವ್ಯೈಃ ತ್ರಿವಿಧಂ ಪಿಂಡರೂಪಕಂ ||
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./322
ಆ ತೀರ್ಥ ಸೂರ್ಯಪ್ರಭೆಗೂ ಬತ್ತಲೀಯದು,
ಜ್ವಾಲಾಗ್ನಿ ಉಷ್ಣಕೂ ಬತ್ತಲೀಯದು,
ಗಾಳಿ ಬೀಸಿದಡೆ ಅಲ್ಲಾಡದು,
ತೆರೆನೊರೆಗಳಿಲ್ಲ, ಹುಳುಗಳಿಲ್ಲ,
ಆಕಾಶದಲ್ಲಿದ್ದು ಬಾಹ ಮಳೆಯಿಲ್ಲ ;
ಪೃಥ್ವಿ ಅಪ್ಪು ತೇಜ ವಾಯು ಆಕಾಶ
ಲಯವಾದಡೂ ಲಯವಿಲ್ಲ ಆ ತೀರ್ಥಕ್ಕೆ.
ಅಂಥ ಚಿತ್ಪ್ರಕಾಶತೀರ್ಥವ ಮಹಾಶರಣ ಬಲ್ಲನಲ್ಲದೆ
ಮಿಕ್ಕ ಭವಭಾರಿಗಳೆತ್ತ ಬಲ್ಲರು ನೋಡಾ
ಅಪ್ರಮಾಣಕೂಡಲಸಂಗಮದೇವಾ./323
ಆ ತ್ರಿದಳಪದ್ಮದಲ್ಲಿ –
`ಸಹಸ್ರದಳಪದ್ಮೋಭವತಿ | ಓಂ ಪರಮಾತ್ಮಾ ದೇವತಾ |’
ಎಂದುದಾಗಿ, ಆ ತ್ರಿದಳಪದ್ಮದಲ್ಲಿ
ಸಹಸ್ರದಳಪದ್ಮ ಉದ್ಭವಿಸಿ
ಬ್ರಹ್ಮಚಕ್ರದಲ್ಲಿ ಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./324
ಆ ತ್ರಿವಿಂಶಚತುರ್ದಳಪದ್ಮದಲ್ಲಿ –
`ದ್ವಿದಳಪದ್ಮೋದ್ಭವತಿ | ಓಂ ಚಿತ್ಕಲಾತ್ಮಾ ದೇವತಾ |’
ಎಂದುದಾಗಿ, ಆ ತ್ರಿವಿಂಶಚತುರ್ದಳ ಪದ್ಮದಲ್ಲಿ ದ್ವಿದಳಪದ್ಮ ಉದ್ಭವಿಸಿ,
ಆಜ್ಞಾಚಕ್ರದಲ್ಲಿ ಮಾಣಿಕ್ಯವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./325
ಆ ತ್ರಿಸಹಸ್ರದಳಪದ್ಮದಲ್ಲಿ –
`ಏಕದಳ ಪದ್ಮೋದ್ಭವತಿ | ಓಂ ಸರ್ವಾತ್ಮಾ ದೇವತಾ |’
ಎಂದುದಾಗಿ, ಆ ತ್ರಿಸಹಸ್ರದಳಪದ್ಮದಲ್ಲಿ
ಏಕದಳ ಪದ್ಮ ಉದ್ಭವಿಸಿ ಪಶ್ಚಿಮಚಕ್ರದಲ್ಲಿ
ಅಪ್ರದರ್ಶನವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./326
ಆ ದಶದಳಪದ್ಮದಲ್ಲಿ –
`ಷಟ್ದಳಪದ್ಮೋದ್ಭವತಿ | ಓಂ ಅಂತರಾತ್ಮಾ ದೇವತಾ |’
ಎಂದುದಾಗಿ, ಆ ದಶದಳಪದ್ಮದಲ್ಲಿ ಷಡುದಳಪದ್ಮ ಉದ್ಭವಿಸಿ
ಸ್ವಾಧಿಷ್ಠಾನಚಕ್ರದಲ್ಲಿ ಪಚ್ಚೆಯವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./327
ಆ ದ್ವಾದಶದಳಪದ್ಮದಲ್ಲಿ –
`ದಶದಳಪದ್ಮೋದ್ಭವತಿ | ಓಂ ನಾದಾತ್ಮಾ ದೇವತಾ |’
ಎಂದುದಾಗಿ, ಆ ದ್ವಾದಶದಳಪದ್ಮದಲ್ಲಿ ದಶದಳಪದ್ಮ ಉದ್ಭವಿಸಿ,
ಮಣಿಪೂರಕಚಕ್ರದಲ್ಲಿ ಕೃಷ್ಣವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./328
ಆ ದ್ವಿದಳಪದ್ಮದಲ್ಲಿ –
`ಷೋಡಶದಳ ಪದ್ಮೋದ್ಭವತಿ | ಓಂ ಕಲಾತ್ಮಾ ದೇವತಾ |’
ಎಂದುದಾಗಿ, ಆ ದ್ವಿದಳಪದ್ಮದಲ್ಲಿ ಷೋಡಶದಳಪದ್ಮ ಉದ್ಭವಿಸಿ,
ವಿಶುದ್ಧಿಚಕ್ರದಲ್ಲಿ ಶ್ವೇತವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./329
ಆ ಧ್ಯಾನವನೆಚ್ಚಲರಿಯದೆ ಸುಷುಪ್ತಿಯ ಹಾಂಗೆ
ಅಂತಃಕರಣಚತುಷ್ಟಯಂಗಳು ಸುಸ್ಥಿರವಾಗಿಹುದೆ
ಸಮಾಧಿಯೋಗ ನೋಡಾ
ಅಪ್ರಮಾಣಕೂಡಲಸಂಗಮದೇವಾ./330
ಆ ಪದ್ಮದಳಪದ್ಮದಲ್ಲಿ –
`ಮಹಾಖರ್ವದಳ ಪದ್ಮೋದ್ಭವತಿ | ಓಂ ನಿರಾಳಾತ್ಮಾ ದೇವತಾ |’
ಎಂದುದಾಗಿ, ಆ ಪದ್ಮದಳಪದ್ಮದಲ್ಲಿ
ಮಹಾಖರ್ವದಳಪದ್ಮ ಉದ್ಭವಿಸಿ
ಬಿಂದುಚಕ್ರದಲ್ಲಿ ಅನಂತಕೋಟಿ ಚಂದ್ರಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಹಾಖರ್ವದಳಪದ್ಮದಲ್ಲಿ –
`ಖರ್ವದಳ ಪದ್ಮೋದ್ಭವತಿ | ಓಂ ನಿರಾಮಯಾತ್ಮಾ ದೇವತಾ |’
ಎಂದುದಾಗಿ, ಆ ಮಹಾಖರ್ವದಳಪದ್ಮದಲ್ಲಿ
ಖರ್ವದಳಪದ್ಮ ಉದ್ಭವಿಸಿ
ಕಲಾಚಕ್ರದಲ್ಲಿ ಪರಂಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./331
ಆ ಪರತತ್ತ್ವದ ಪೃಥ್ವಿಯ ಮೇಲೆ ನಿರಂಜನ ಆಧಾರಚಕ್ರ.
ಅಲ್ಲಿಯ ಪದ್ಮ ಐನೂರುನಾಲ್ವತ್ತುದಳದಪದ್ಮ.
ಆ ಪದ್ಮದ ವರ್ಣ ಅರವತ್ತುಸಾವಿರದಾರುನೂರು ಕೋಟಿ
ಸೂರ್ಯಚಂದ್ರಾಗ್ನಿಪ್ರಕಾಶದ ವರ್ಣ.
ಅಲ್ಲಿಯ ಅಕ್ಷರ ಐನೂರು ನಾಲ್ವತ್ತಕ್ಷರ ;
ಆ ಅಕ್ಷರ ವಾಚಾತೀತವಾಗಿಹುದು.
ಅಲ್ಲಿಯ ಶಕ್ತಿ, ನಿಃಕಲಶಕ್ತಿ, ಅಲ್ಲಿಯ ನಾದ ಚಿನ್ನಾದ.
ಅಚಲ ಬ್ರಹ್ಮವೆ ಅಧಿದೇವತೆ.
ಅಲ್ಲಿಯ ಬೀಜಾಕ್ಷರ ಅಖಂಡಜ್ಯೋತಿರ್ಮಯವಾಗಿಹ
ಗೋಳಕಾಕಾರ ಪ್ರಣವ ನೋಡಾ.
ಅಪ್ರಮಾಣಕೂಡಲಸಂಗಮದೇವಾ./332
ಆ ಪರಮಭೋಗಿಯಲ್ಲಿಯೆ ಸಂತೋಷವಳಿದು
ನಿಷ್ಪತ್ತಿಯಾಗಿ ನಿಂದುದೆ ನಿರ್ಮಲಸುಷುಪ್ತಿ.
ಮುಂದೆ ಹೇಳಿದ ಪರಮಭೋಗವನು ಬಿಟ್ಟು
ಮೇಲಾದ ಪರಮಾನಂದಕ್ಕೆ ಮೊದಲು ನಿರ್ಮಲತೂರ್ಯ,
ಮುಂದೆ ಹೇಳಿದ ಪರಮಾನಂದವ ಸುಟ್ಟ ಠಾವು ನಿರ್ಮಲ ತೂರ್ಯಾತೀತ ನೋಡಾ
ಅಪ್ರಮಾಣಕೂಡಲಸಂಗಮದೇವಾ./333
ಆ ಪೃಥ್ವಿ ಅಪ್ಪು ತೇಜ ವಾಯುವಾಕಾಶವೆಂಬ
ಪಂಚಭೂತ ಬ್ರಹ್ಮಾಂಡಕಪಾಲದೊಳು
ಚತುರ್ದಶಭುವನಂಗಳು, ಸಪ್ತಸಮುದ್ರಂಗಳು,
ಸಪ್ತದ್ವೀಪಂಗಳು, ಸಪ್ತಕುಲಪರ್ವತಂಗಳು,
ಸಮಸ್ತ ಗ್ರಹರಾಶಿ ತಾರಾಪಥಂಗಳಿಹ ಕ್ರಮವೆಂತೆಂದಡೆ : ಆ ಭೂತಬ್ರಹ್ಮಾಂಡಕಪಾಲದಲ್ಲಿ ಅತಳಲೋಕವಿಹುದು.
ಆ ಅತಳಲೋಕದಿಂದ ಮೇಲೆ ವಿತಳಲೋಕವಿಹುದು.
ಆ ವಿತಳಲೋಕದಿಂದ ಮೇಲೆ ಸುತಳಲೋಕವಿಹುದು.
ಆ ಸುತಳಲೋಕದಿಂದ ಮೇಲೆ ತಳಾತಳಲೋಕವಿಹುದು.
ಆ ತಳಾತಳಲೋಕದಿಂದ ಮೇಲೆ ರಸಾತಳಲೋಕವಿಹುದು.
ಆ ರಸಾತಳಲೋಕದಿಂದ ಮೇಲೆ ಮಹಾತಳಲೋಕವಿಹುದು.
ಆ ಮಹಾತಳಲೋಕದಿಂದ ಮೇಲೆ ಪಾತಾಳಲೋಕವಿಹುದು.
ಆ ಪಾತಾಳಲೋಕದಿಂದ ಮೇಲೆ ಜಲಪ್ರಳಯವಿಹುದು.
ಆ ಜಲಪ್ರಳಯದ ಮೇಲೆ ಮಹಾಕಮಠನಿಹುದು.
ಆ ಮಹಾಕಮಠನ ಮೇಲೆ ಮಹಾವಾಸುಗಿ ಇಹುದು.
ಆ ಮಹಾವಾಸುಗಿಯ ಸುತ್ತುವಳಯಾಕೃತವಾಗಿ
ಅಷ್ಟದಿಕ್ಮಹಾಗಜಂಗಳಿಹವು.
ಆ ಅಷ್ಟದಿಕ್ಮಹಾಗಜಂಗಳ ಮೇಲೆ ಭೂಲೋಕವಿಹುದು.
ಆ ಭೂಲೋಕದಲ್ಲಿ ಸಪ್ತಸಮುದ್ರಂಗಳು, ಸಪ್ತದ್ವೀಪಂಗಳು,
ಸಪ್ತಕುಲಪರ್ವತಂಗಳಿಹವು.
ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ
ಸುತ್ತುವಳಯಾಕೃತವಾಗಿ ಸಮಸ್ತ ಲೋಕಾಲೋಕ ಪರ್ವತವಿಹುದು.
ಆ ಸಪ್ತಸಮುದ್ರಂಗಳ ಸಪ್ತದ್ವೀಪಂಗಳ ಸಪ್ತಕುಲಪರ್ವತಂಗಳ
ವಿಸ್ತೀರ್ಣವೆಂತೆಂದಡೆ : ಪಂಚಾಶತಕೋಟಿ ವಿಸ್ತೀರ್ಣದ ಮಧ್ಯಭೂಮಿ.
ಆ ಮಧ್ಯಭೂಮಿ ಮಂಡಲವಳಯದಲ್ಲಿ
ಮಹಾಮೇರುಪರ್ವತದ ವಿಸ್ತೀರ್ಣವೆಂತೆಂದಡೆ : ಒಂದುಕೋಟಿಯು ಇಪ್ಪತ್ತಾರುಲಕ್ಷದ ಮೇಲೆ
ಎಂಬತ್ತೈದುಸಾವಿರ ಯೋಜನಪ್ರಮಾಣು.
ಆ ಮೇರುಮಂದಿರದ ಶಿರದ ಮೇಲೆ
ಮೂವತ್ತುಮೂರುಕೋಟಿ ದೇವರ್ಕಳು,
ನಾಲ್ವತ್ತೆಂಟುಸಾವಿರ ಮುನಿಗಳು, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ
ನಂದಿವಾಹ ಗಣಂಗಳು, ದ್ವಾದಶಾದಿತ್ಯರು,
ನಾರದಮುನಿ ಯೋಗೀಶ್ವರರು, ಅಷ್ಟದಿಕ್ಪಾಲರು, ಏಕಾದಶರುದ್ರರು
ಮುಖ್ಯವಾದ ಅಸಂಖ್ಯಾತ ಮಹಾಗಣಂಗಳು
ಶಿವಸುಖ ಸಂಗೀತ ವಿನೋದದಿಂದ ರಾಜ್ಯಂಗೆಯ್ಯುತ್ತಿರಲು,
ಆ ಮೇರುಮಂದಿರದ ಶಿಖರದ ಕೆಳಗೆ ಜಂಬೂದ್ವೀಪವಿಹುದು.
ಆ ಜಂಬೂದ್ವೀಪವು ಒಂದು ಲಕ್ಷದ ಮೇಲೆ
ಇಪ್ಪತ್ತೈದುಸಾವಿರ ಯೋಜನಪ್ರಮಾಣು.
ಒಂದುಲಕ್ಷದ ಮೇಲೆ ಇಪ್ಪತ್ತೈದುಸಾವಿರ ಯೋಜನದಗಲವಾಗಿ
ಲವಣಸಮುದ್ರವು ಆ ಜಂಬೂದ್ವೀಪಮಂ
ವಳಯಾಕೃತವಾಗಿ ಸುತ್ತಿಕೊಂಡಿಹುದು.
ಎರಡು ಲಕ್ಷದ ಮೇಲೆ ಐವತ್ತುಸಾವಿರ ಯೋಜನ ಪ್ರಮಾಣದಲ್ಲಿ
ಇಕ್ಷುಸಮುದ್ರವು ಆ ಪ್ಲಕ್ಷದ್ವೀಪಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಮೂರುಲಕ್ಷದ ಮೇಲೆ ಎಪ್ಪತ್ತುಸಾವಿರದಯಿನೂರು
ಯೋಜನಪ್ರಮಾಣದಗಲವಾಗಿ
ಕುಶದ್ವೀಪವಂ ಆ ಇಕ್ಷುಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ನಾಲ್ಕುಲಕ್ಷದ ಮೇಲೆ ಮೂರುಸಾವಿರ
ಯೋಜನಪ್ರಮಾಣದಗಲವಾಗಿ ಸುರೆಯ ಸಮುದ್ರವು
ಆ ಕುಶದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಐದುಲಕ್ಷ ಯೋಜನಪ್ರಮಾಣದಗಲವಾಗಿ ಶಾಕದ್ವೀಪವು
ಆ ಸುರೆಯ ಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಹದಿನಾಲ್ಕುಲಕ್ಷ ಯೋಜನಪ್ರಮಾಣದಗಲವಾಗಿ ಘೃತಸಮುದ್ರವು
ಆ ಶಾಕದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಇಪ್ಪತ್ತುಲಕ್ಷ ಯೋಜನಪ್ರಮಾಣದಗಲವಾಗಿ ಶಾಲ್ಮಲೀದ್ವೀಪ
ಆ ಘೃತಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಇಪ್ಪತ್ತು ಲಕ್ಷ ಯೋಜನಪ್ರಮಾಣದಗಲವಾಗಿ ದಧಿಸಮುದ್ರವು
ಆ ಶಾಲ್ಮಲೀದ್ವೀಪವಂ ವಳಯಾಕೃತವಾದಿ ಸುತ್ತಿಕೊಂಡಿಹುದು.
ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಪುಷ್ಕರದ್ವೀಪ
ಆ ದಧಿಸಮುದ್ರವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ನಾಲ್ವತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ಷೀರಸಮುದ್ರವು
ಆ ಪುಷ್ಕರದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಕ್ರೌಂಚದ್ವೀಪವು
ಆ ಕ್ಷೀರಸಮುದ್ರಮಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಎಂಬತ್ತುಲಕ್ಷ ಯೋಜನಪ್ರಮಾಣದಗಲವಾಗಿ ಸ್ವಾದೋದಕಸಮುದ್ರವು
ಆ ಕ್ರೌಂಚದ್ವೀಪವಂ ವಳಯಾಕೃತವಾಗಿ ಸುತ್ತಿಕೊಂಡಿಹುದು.
ಸಪ್ತದ್ವೀಪಂಗಳ ಸುತ್ತುವಳಯಾಕೃತವಾಗಿ ಲೋಕಾಲೋಕ ಪರ್ವಂತಗಳಿಹವು.
ಆ ಲೋಕಾಲೋಕ ಪರ್ವತಂಗಳ ಸುತ್ತುವಳಯಾಕೃತವಾಗಿ
ಚಕ್ರವಾಳಗಿರಿ ಇಹುದು.
ಆ ಚಕ್ರವಾಳಗಿರಿಗತ್ತತ್ತ ಭೂಮಿ ಪರ್ವತಾಕಾರವಾಗಿಹುದು.
ಆ ಭೂಮಿಯಿಂದಂ ಮೇಲೆ ಮೇಘಮಂಡಲಂಗಳಿಹವು.
ಆ ಮೇಘಮಂಡಲಂಗಳ ಮೇಲೆ ಭುವರ್ಲೊಕವಿಹುದು.
ಆ ಭುವರ್ಲೊಕದಿಂದ ಮೇಲೆ ಸ್ವರ್ಗಲೋಕವಿಹುದು.
ಆ ಸ್ವರ್ಗಲೋಕದಿಂದ ಮೇಲೆ ನಕ್ಷತ್ರಾದಿಮಂಡಲವಿಹುದು.
ಆ ನಕ್ಷತ್ರಾದಿ ಮಂಡಲಂಗಳಿಂದತ್ತ ಮೇಲೆ ಮಹರ್ಲೊಕವಿಹುದು.
ಆ ಮಹರ್ಲೊಕದಿಂದತ್ತ ಮೇಲೆ ಜನರ್ಲೊಕವಿಹುದು.
ಆ ಜನರ್ಲೊಕದಿಂದತ್ತ ಮೇಲೆ ತಪರ್ಲೊಕವಿಹುದು.
ಆ ತಪರ್ಲೊಕದಿಂದತ್ತ ಮೇಲೆ ಸತ್ಯರ್ಲೊಕವಿಹುದು.
ಆ ಸತ್ಯರ್ಲೊಕದಿಂದತ್ತ ಮೇಲೆ ತ್ರಿಲಕ್ಷಕೋಟಿಯೋಜನ
ಪರಿಪ್ರಮಾಣದುದ್ದದಲ್ಲಿ ಮಹಾಪ್ರಳಯಜಲವಿಹುದು.
ಆ ಮಹಾಪ್ರಳಯಜಲದಿಂದತ್ತ ಮೇಲೆ ಶಿವಾಂಡ ಚಿದ್ಬ್ರಹ್ಮಾಂಡವಿಹುದು.
ಇಂಥ ಅನಂತಕೋಟಿ ಚಿದ್ಬ್ರಹ್ಮಾಂಡಗಳು,
ಅನಂತಕೋಟಿ ಲೋಕಾಲೋಕಂಗಳೆಲ್ಲ
ಒಂದರಲ್ಲೊಂದಡಗಿ ಅಪ್ರಮಾಣ ಕೂಡಲಸಂಗಯ್ಯನು
ತನ್ನ ಲೀಲಾವಿನೋದದಿಂದ ನಿಂದರಾಗಿ ನಿಲುವುದು ಕಾಣಾ
ಅಪ್ರಮಾಣಕೂಡಲಸಂಗಮದೇವಾ./334
ಆ ಪ್ರಸಾದಿಯಲ್ಲಿಯ ಐಕ್ಯಂಗೆ ಅಗ್ನಿಯಲ್ಲಿಯ ಆತ್ಮವೇ ಅಂಗ.
ಆ ಅಂಗಕ್ಕೆ ನಿರಹಂಕಾರದಲ್ಲಿಯ ಭಾವವೇ ಹಸ್ತ.
ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಮಹಾಲಿಂಗವೆ ಲಿಂಗ.
ಆ ಮಹಾಲಿಂಗಮುಖದಲ್ಲಿ ಈ ಎಲ್ಲಾ ರೂಪದ್ರವ್ಯಂಗಳನು
ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./335
ಆ ಪ್ರಸಾದಿಯಲ್ಲಿಯ ಪ್ರಾಣಲಿಂಗಿಗೆ ಅಗ್ನಿಯಲ್ಲಿಯ ವಾಯುವೇ ಅಂಗ.
ಆ ಲಿಂಗಕ್ಕೆ ನಿರಹಂಕಾರದಲ್ಲಿಯ ಸುಮನವೆ ಹಸ್ತ.
ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಜಂಗಮಲಿಂಗವೆ ಲಿಂಗ.
ಆ ಜಂಗಮಲಿಂಗಮುಖದಲ್ಲಿ ಮಾಂಜಿಷ್ಟವರ್ಣವಾದ ರೂಪದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./336
ಆ ಪ್ರಸಾದಿಯಲ್ಲಿಯ ಮಾಹೇಶ್ವರಂಗೆ ಅಗ್ನಿಯಲ್ಲಿಯ ಅಪ್ಪುವೆ ಅಂಗ.
ಆ ಅಂಗಕ್ಕೆ ನಿರಹಂಕಾರದಲ್ಲಿಯ ಸುಬುದ್ಧಿಯೇ ಹಸ್ತ.
ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಗುರುಲಿಂಗವೆ ಲಿಂಗ.
ಆ ಗುರುಲಿಂಗಮುಖದಲ್ಲಿ ಶ್ವೇತವರ್ಣವಾದ ರೂಪದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./337
ಆ ಪ್ರಸಾದಿಯಲ್ಲಿಯ ಶರಣಂಗೆ ಅಗ್ನಿಯಲ್ಲಿಯ ಆಕಾಶವೇ ಅಂಗ.
ಆ ಅಂಗಕ್ಕೆ ನಿರಹಂಕಾರದಲ್ಲಿಯ ಸುಜ್ಞಾನವೇ ಹಸ್ತ.
ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಪ್ರಸಾದಲಿಂಗವೆ ಲಿಂಗ.
ಆ ಪ್ರಸಾದಲಿಂಗಮುಖದಲ್ಲಿ ಕಪೋತವರ್ಣವಾದ ರೂಪದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./338
ಆ ಪ್ರಾಣಲಿಂಗಿಯಲ್ಲಿಯ ಐಕ್ಯಂಗೆ ವಾಯುವಿನಲ್ಲಿಯ ಆತ್ಮನೇ ಅಂಗ.
ಆ ಅಂಗಕ್ಕೆ ಸುಮನದಲ್ಲಿಯ ಭಾವವೇ ಹಸ್ತ.
ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಮಹಾಲಿಂಗವೇ ಲಿಂಗ.
ಆ ಮಹಾಲಿಂಗದಮುಖದಲ್ಲಿ ಇವೆಲ್ಲರಲ್ಲಿಯ ಸ್ಪರ್ಶನದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./339
ಆ ಪ್ರಾಣಲಿಂಗಿಯಲ್ಲಿಯ ಪ್ರಸಾದಿಗೆ
ವಾಯುವಿನಲ್ಲಿಯ ಅಗ್ನಿಯೇ ಅಂಗ.
ಆ ಅಂಗಕ್ಕೆ ಸುಮನದಲ್ಲಿಯ ನಿರಹಂಕಾರವೇ ಹಸ್ತ.
ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಶಿವಲಿಂಗವೇ ಲಿಂಗ.
ಆ ಶಿವಲಿಂಗದಮುಖದಲ್ಲಿ ಉಷ್ಣವಾದ ಸ್ಪರ್ಶನದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./340
ಆ ಪ್ರಾಣಲಿಂಗಿಯಲ್ಲಿಯ ಮಾಹೇಶ್ವರಂಗೆ
ವಾಯುವಿನಲ್ಲಿಯ ಅಪ್ಪುವೆ ಅಂಗ.
ಆ ಅಂಗಕ್ಕೆ ಸುಮನದಲ್ಲಿಯ ಸುಬುದ್ಧಿಯೇ ಹಸ್ತ.
ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಗುರುಲಿಂಗವೆ ಲಿಂಗ.
ಆ ಗುರುಲಿಂಗದಮುಖದಲ್ಲಿ ಮೃದುವಾದ ಸ್ಪರ್ಶನದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./341
ಆ ಪ್ರಾಣಲಿಂಗಿಯಲ್ಲಿಯ ಶರಣಂಗೆ
ವಾಯುವಿನಲ್ಲಿಯ ಆಕಾಶವೇ ಅಂಗ.
ಆ ಅಂಗಕ್ಕೆ ಸುಮನದಲ್ಲಿಯ ಸುಜ್ಞಾನವೇ ಹಸ್ತ.
ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ.
ಆ ಪ್ರಸಾದಲಿಂಗದಮುಖದಲ್ಲಿ ಮಿಶ್ರವಾದ ಸ್ಪರ್ಶನದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./342
ಆ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ.
ಆದಿ ಅಕಾರಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ.
ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ.
ಆ ಆದಿ ಕಲೆ ನಾದ ಬಿಂದುಪ್ರಣವಕ್ಕೆ
ಆದಿ ಪ್ರಕೃತಿಪ್ರಣವವೇ ಆಧಾರ.
ಆ ಆದಿಪ್ರಕೃತಿಪ್ರಣವಕ್ಕೆ ಪ್ರಾಣಮಾತ್ರೆಯಪ್ರಣವವೇ ಆಧಾರ.
ಆ ಪ್ರಾಣಮಾತ್ರೆಯಪ್ರಣವಕ್ಕೆ ಅಖಂಡಜ್ಯೋತಿರ್ಮಯವಾಗಿಹ
ಲಿಂಗವೇ ಆಧಾರ.
`ಮ’ ಎಂದಡೆ ಆದಿ ಅನುಸ್ವಾರಪ್ರಣವ,
`ಅ’ ಎಂದಡೆ ಆದಿ ನಾದ ಪ್ರಣವ,
`ಉ’ ಎಂಬ ಆದಿಬಿಂದುಪ್ರಣವದಲ್ಲಿ ಬಂದು ಕೂಡಿ
ಮಯೆಂಬ ಅನುಸ್ವಾರಪ್ರಣವದಲ್ಲಿ ಬಂದು ಕೂಡಲು
ಮಹದೋಂಕಾರವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./343
ಆ ಮಹಾಕ್ಷಿತಿದಳಪದ್ಮದಲ್ಲಿ ಕ್ಷಿತಿದಳಪದ್ಮಹುಟ್ಟಿ,
ಚರಚಕ್ರದಲ್ಲಿ ಅನಂತಕೋಟಿ ತಟಿತ್ಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./344
ಆ ಮಹಾಸದಾಶಿವ ತತ್ವದ
ಪಂಚಮುಖದಲ್ಲಿ ಉತ್ಪತ್ಯವಾದ
ಪಂಚಮಹಾಭೂತಬ್ರಹ್ಮಾಂಡಕಪಾಲದೊಳು
ಪಂಚಭೂತ ಬ್ರಹ್ಮಾಂಡಕಪಾಲ ಉತ್ಪತ್ಯವದೆಂತೆಂದೊಡೆ : ಆ ಮಹಾಶಿವತತ್ವದ ನಿರ್ಭಾವ ಮುಖದಲ್ಲಿ ಆತ್ಮನುತ್ಪತ್ಯವಾದನು.
ಆ ಆತ್ಮನಲ್ಲಿ ಆಕಾಶ ಉತ್ಪತ್ಯವಾಯಿತ್ತು.
ಆ ಆಕಾಶದಲ್ಲಿ ವಾಯು ಉತ್ಪತ್ಯವಾಯಿತ್ತು.
ಆ ವಾಯುವಿನಲ್ಲಿ ಅಗ್ನಿ ಉತ್ಪತ್ಯವಾಯಿತ್ತು.
ಆ ಅಗ್ನಿಯಲ್ಲಿ ಅಪ್ಪು ಉತ್ಪತ್ಯವಾಯಿತ್ತು.
ಆ ಅಪ್ಪುವಿನಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು.
ಇದಕ್ಕೆ ಈಶ್ವರ ಉವಾಚ : “ಆತ್ಮನ್ಯಾಕಾಶಸಂಭೂತಿರಾಕಾಶಾದ್ವಾಯು ಸಂಭವಃ |
ವಾಯೋರಗ್ನಿಃ ಸಮುತ್ಪತ್ತಿರಗ್ನೇರಾಪ ಉದಾಹೃತಂ |
ಅಪ್ ಪೃಥ್ವೀಚ ಸಂಭೂತಿರ್ಲಕ್ಷಣೈಕಪ್ರಭಾವತಃ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./345
ಆ ಮಹಾಸದಾಶಿವತತ್ವದಲ್ಲಿ ಸದಾಶಿವನುತ್ಪತ್ಯವಾಗಿ
ಆಕಾಶಕ್ಕೆ ಅಧಿದೇವತೆಯಾಗಿಹನು.
ಆಕಾಶತತ್ವದಲ್ಲಿ ಏಕಶಿರ ದ್ವಿಭುಜ ತ್ರಿನೇತ್ರವನುಳ್ಳ
ಈಶ್ವರತತ್ವ ಉತ್ಪತ್ಯವಾಗಿ ವಾಯುವಿಂಗೆ ಅಧಿದೇವತೆಯಾಗಿಹನು.
ಆ ಈಶ್ವರತತ್ವದಲ್ಲಿ ಪಂಚಮುಖರುದ್ರನುತ್ಪತ್ಯವಾಗಿ
ಅಗ್ನಿಗೆ ಅಧಿದೇವತೆಯಾಗಿಹನು.
ಆ ಪಂಚಮುಖರುದ್ರನಲ್ಲಿ ಸಹಸ್ರಶಿರ ಸಹಸ್ರಾಕ್ಷ ಸಹಸ್ರಬಾಹು
ಸಹಸ್ರಪಾದವನುಳ್ಳ ವಿರಾಟ್ಪುರುಷನುತ್ಪತ್ಯವಾದನು.
ಆ ವಿರಾಟ್ಪುರುಷನಲ್ಲಿ ಏಕಶಿರ ದ್ವಿಭುಜವನುಳ್ಳ
ವಿಷ್ಣು ಉತ್ಪತ್ಯವಾಗಿ ಅಪ್ಪುವಿಗೆ ಅಧಿದೇವತೆಯಾಗಿಹನು.
ಆ ವಿಷ್ಣುವಿನಲ್ಲಿ ಚತುರ್ಮುಖಬ್ರಹ್ಮ ಉತ್ಪತ್ಯವಾಗಿ
ಪೃಥ್ವಿಗೆ ಅಧಿದೇವತೆಯಾಗಿಹನು.
ಆ ಬ್ರಹ್ಮನಲ್ಲಿ ಸರ್ವಜೀವಂಗಳುತ್ಪತ್ಯ ನೋಡಾ.
ಇದಕ್ಕೆ ಕಾಲಾಗ್ನಿರುದ್ರಸಂಹಿತಾಯಾಂ : ಶ್ರೀ ಮಹಾದೇವ ಉವಾಚ-
“ಪಂಚವಕ್ತ್ರಸದಾಖ್ಯಾನಾಂ ಈಶ್ವರಶ್ಚ ಸಜಾಯತೇ |
ತಥಾ ಈಶ್ವರತತ್ವೇ ಚ ಕಾಲರುದ್ರ ಸಮುದ್ಭವಃ |
ಪಂಚವಕ್ತ್ರಃ ಮಹಾರುದ್ರ ವಿರಾಟ್ಪುರುಷ ಜಾಯತೇ |
ವಿರಾಟ್ಪುರುಷ ಮಹಾತತ್ವೇ ಆದಿ ವಿಷ್ಣುಸಮುದ್ಭವಃ |
ವಿಷ್ಣುತತ್ವಾತ್ಮಹಾದೇವಿ ವಿರಿಂಚಿತತ್ವಃ ಜಾಯತೇ |
ಚತುರ್ಮುಖಬ್ರಹ್ಮತತ್ವೇ ಸರ್ವಜೀವಸ್ತವೋಸ್ತಥಾ |
ಇತಿ ತತ್ವೋದ್ಭವಂ ಜ್ಞಾನಂ ದುರ್ಲಭಂ ಚ ವರಾನನೇ ||”
ಇಂತೆಂದುದಾಗಿ,
ಇದಕ್ಕೆ ಆನಂದಭೈರವಿ : “ಪೃಥ್ವೀ ಬ್ರಹ್ಮಾ ಜಲಂ ವಿಷ್ಣು ಸ್ತಥಾ ರುದ್ರೋ ಹುತಾಶನಃ |
ಈಶ್ವರೋ ಪವನೋ ದೇವಾಃ ಆಕಾಶಶ್ಚ ಸದಾಶಿವಃ ||”
ಇಂತೆಂದುದಾಗಿ,
ಇದಕ್ಕೆ ಈಶ್ವರ ಉವಾಚ : “ಬ್ರಹ್ಮಾ ವಿಷ್ಣುಶ್ಚ ರುದ್ರಶ್ಚ ಈಶ್ವರಶ್ಚ ಸದಾಶಿವಃ |
ಭೂಮ್ಯಾದಿ ದೈವಮಿತ್ಯುಕ್ತಂ ಇತಿ ಭೇದಂ ವರಾನನೇ ||”
ಇತೆಂದುದಾಗಿ,
ಅಪ್ರಮಾಣ ಕೂಡಲಸಂಗಮದೇವಾ./346
ಆ ಮಹಾಹೇಶ್ವರನಲ್ಲಿಯ ಪ್ರಾಣಲಿಂಗಿಗೆ
ಅಪ್ಪುವಿನಲ್ಲಿಯ ವಾಯುವೆ ಅಂಗ.
ಆ ಅಂಗಕ್ಕೆ ಸುಬುದ್ಧಿಯಲ್ಲಿಯ ಸುಮನವೇ ಹಸ್ತ.
ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ,
ಆ ಜಂಗಮಲಿಂಗಮುಖದಲ್ಲಿ ಅಮೃತವಾದ ರುಚಿಯ ದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./347
ಆ ಮಾಹೇಶ್ವರನಲ್ಲಿಯ ಐಕ್ಯಂಗೆ ಅಪ್ಪುವಿನಲ್ಲಿಯ ಆತ್ಮನೇ ಅಂಗ.
ಆ ಅಂಗಕ್ಕೆ ಸುಬುದ್ಧಿಯಲ್ಲಿಯ ಭಾವವೇ ಹಸ್ತ.
ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಮಹಾಲಿಂಗವೆ ಲಿಂಗ.
ಆ ಮಹಾಲಿಂಗಮುಖದಲ್ಲಿ ಎಲ್ಲಾ ರುಚಿ ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./348
ಆ ಮಾಹೇಶ್ವರನಲ್ಲಿಯ ಪ್ರಸಾದಿಗೆ ಅಪ್ಪುವಿನಲ್ಲಿಯ ಅಗ್ನಿಯೇ ಅಂಗ.
ಆ ಅಂಗಕ್ಕೆ ಸುಬುದ್ಧಿಯಲ್ಲಿಯ ನಿರಹಂಕಾರವೆ ಹಸ್ತ.
ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಶಿವಲಿಂಗವೆ ಲಿಂಗ.
ಆ ಶಿವಲಿಂಗಮುಖದಲ್ಲಿ ಖಾರವಾದ ರುಚಿಯ ದ್ರವ್ಯವನು ಸಮರ್ಪಣವಂ
ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./349
ಆ ಮಾಹೇಶ್ವರನಲ್ಲಿಯ ಭಕ್ತಂಗೆ ಅಪ್ಪುವಿನಲ್ಲಿಯ ಪೃಥ್ವಿಯೇ ಅಂಗ.
ಆ ಅಂಗಕ್ಕೆ ಸುಬುದ್ಧಿಯಲ್ಲಿಯ ಸುಚಿತ್ತವೇ ಹಸ್ತ.
ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಆಚಾರಲಿಂಗವೇ ಲಿಂಗ,
ಆ ಆಚಾರಲಿಂಗಮುಖದಲ್ಲಿ ಮಧುರವಾದ
ದ್ರವ್ಯವನು ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./350
ಆ ಮಾಹೇಶ್ವರನಲ್ಲಿಯ ಶರಣಂಗೆ ಅಪ್ಪುವಿನಲ್ಲಿಯ ಆಕಾಶವೇ ಅಂಗ.
ಆ ಅಂಗಕ್ಕೆ ಸುಬುದ್ಧಿಯಲ್ಲಿಯ ಸುಜ್ಞಾನವೇ ಹಸ್ತ,
ಆ ಹಸ್ತಕ್ಕೆ ಗುರುಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ.
ಪ್ರಸಾದಲಿಂಗಮುಖದಲ್ಲಿ ಕಹಿಯಾದ ರುಚಿದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./351
ಆ ಲಕ್ಷದಳಪದ್ಮದಲ್ಲಿ –
`ತ್ರಿಸಹಸ್ರದಳ ಪದ್ಮೋದ್ಭವತಿ | ಓಂ ನಿರ್ಗುಣಾತ್ಮಾ ದೇವತಾ |’
ಎಂದುದಾಗಿ, ಆ ಲಕ್ಷದಳ ಪದ್ಮದಲ್ಲಿ
ತ್ರಿಸಹಸ್ರದಳ ಪದ್ಮ ಉದ್ಭವಿಸಿ
ಅಣುಚಕ್ರದಲ್ಲಿ ಮಹಾತಮಂಧಜ್ಯೋತಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./352
ಆ ವಾಯುವಿಶಾಲವನರಿದು ನಿಲಿಸಿದಡೆ
ಆಯುಷ್ಯ ಅನೇಕ ಕಾಲವಿಹುದು ನೋಡಾ.
ಇದಕ್ಕೆ ಈಶ್ವರ ಉವಾಚ :
“ತಿಷ್ಟಂ ಗರ್ಭ ಸದಾಕಾಲಂ ವಾಯುವಿಕರಣಾತೀತಂ |
ಸರ್ವಕಾಲಪ್ರಯೋಗೇನ ಸಹಸ್ರಾಯುರ್ಭವೇ ನರಃ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./353
ಆ ವ್ಯೋಮಾತೀತವೆಂಬ ಮಹಾಘನದಲ್ಲಿ
ಲೀಯವಾದ ಶರಣನ ನಿಲವದೆಂತೆಂದಡೆ :
ರವಿಯೊಳಗಣ ಬಿಂಬದಂತಿದ್ದುದು,
ದರ್ಪಣದೊಳಗಣ ಪ್ರತಿಬಿಂಬದಂತಿದ್ದುದು,
ಪುಷ್ಪದೊಳಗಣ ಪರಿಮಳದಂತಿದ್ದುದು,
ಜ್ಯೋತಿಯೊಳಗಣ ಕರ್ಪುರದಂತಿದ್ದುದು ನೋಡಾ
ಮಹಾಘನದಲ್ಲಿ ಲೀಯವಾದ ಶರಣನ ನಿಲವು
ಅಪ್ರಮಾಣಕೂಡಲಸಂಗಮದೇವಾ./354
ಆ ಶತದಳಪದ್ಮದಲ್ಲಿ –
`ತ್ರಿವಿಂಶಚತುರ್ದಳ ಪದ್ಮೋದ್ಭವತಿ | ಓಂ ತತ್ವಾರ್ಥೊ ದೇವತಾ |’
ಎಂದುದಾಗಿ, ಆ ಶತದಳಪದ್ಮದಲ್ಲಿ ಅರುವತ್ನಾಲ್ಕುದಳಪದ್ಮ ಉದ್ಭವಿಸಿ
ನಿಶಾದಚಕ್ರದಲ್ಲಿ ಎಳೆಮಿಂಚಿನ ವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./355
ಆ ಶರಣನಲ್ಲಿಯ ಐಕ್ಯಂಗೆ ಆಕಾಶದಲ್ಲಿಯ ಆತ್ಮನೇ ಅಂಗ.
ಆ ಅಂಗಕ್ಕೆ ಸುಜ್ಞಾನದಲ್ಲಿಯ ಭಾವವೇ ಹಸ್ತ.
ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಮಹಾಲಿಂಗವೇ ಲಿಂಗ.
ಆ ಮಹಾಲಿಂಗದಮುಖದಲ್ಲಿ ಇವೆಲ್ಲದರಲ್ಲಿ ಹುಟ್ಟಿದ ಶಬ್ದದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./356
ಆ ಶರಣನಲ್ಲಿಯ ಪ್ರಸಾದಿಗೆ ಆಕಾಶದಲ್ಲಿಯ ಅಗ್ನಿಯೇ ಅಂಗ.
ಆ ಅಂಗಕ್ಕೆ ಸುಜ್ಞಾನದಲ್ಲಿಯ ನಿರಹಂಕಾರವೇ ಹಸ್ತ.
ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಶಿವಲಿಂಗವೇ ಲಿಂಗ.
ಆ ಶಿವಲಿಂಗದ ಮುಖದಲ್ಲಿ ಕುರುಹುವಿಡಿದು ಹುಟ್ಟಿದ ಶಬ್ದದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./357
ಆ ಶರಣನಲ್ಲಿಯ ಪ್ರಾಣಲಿಂಗಿಗೆ ಆಕಾಶದಲ್ಲಿಯ ವಾಯುವೇ ಅಂಗ.
ಆ ಅಂಗಕ್ಕೆ ಸುಜ್ಞಾನದಲ್ಲಿಯ ಸುಮನವೇ ಹಸ್ತ.
ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ.
ಆ ಜಂಗಮಲಿಂಗದ ಮುಖದಲ್ಲಿ ಕೊಳಲು ನಾಗಸ್ವರ ಶಂಕುದೊಳಗಾಗಿ
ಪುಟ್ಟಿದ ಶಬ್ದದ್ರವ್ಯವನು ಸಮರ್ಪಣವಂ ಮಾಡಿ
ತೃಪ್ತಿಯನೇ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./358
ಆ ಶರಣನಲ್ಲಿಯ ಮಾಹೇಶ್ವರಂಗೆ ಆಕಾಶದಲ್ಲಿಯ ಅಪ್ಪುವೇ ಅಂಗ.
ಆ ಅಂಗಕ್ಕೆ ಸುಜ್ಞಾನದಲ್ಲಿಯ ಸುಬುದ್ಧಿಯೇ ಹಸ್ತ.
ಆ ಹಸ್ತಕ್ಕೆ ಪ್ರಸಾದಲಿಂಗದಲ್ಲಿಯ ಗುರುಲಿಂಗವೇ ಲಿಂಗ.
ಆ ಗುರುಲಿಂಗದಮುಖದಲ್ಲಿ ತಂತಿವಿಡಿದು ಹುಟ್ಟಿದ ನಾದದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./359
ಆ ಶಿವತತ್ವದ ಪೃಥ್ವಿಯ ಮೇಲೆ ನಿರಾಳ ಆಧಾರಚಕ್ರ.
ಅಲ್ಲಿಯ ಪದ್ಮ ಐನೂರುನಾಲ್ವತ್ತುದಳದ ಪದ್ಮ,
ಆ ಪದ್ಮಕ್ಕೆ ವರ್ಣವಿಲ್ಲ.
ಅಲ್ಲಿಯ ಅಕ್ಷರ ಐನೂರು ನಾಲ್ವತ್ತಕ್ಷರ ;
ಆ ಅಕ್ಷರಕ್ಕೆ ರೂಪಿಲ್ಲ.
ಅಲ್ಲಿಯ ಶಕ್ತಿ ನಿರಾಳರುದ್ರಶಕ್ತಿ ;
ನಿರಾಳಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ಅಕಾರನಾದ.
ಅಲ್ಲಿಯ ಬೀಜಾಕ್ಷರ ಅಕಾರ ನೋಡಾ,
ಅಪ್ರಮಾಣಕೂಡಲಸಂಗಮದೇವಾ./360
ಆ ಷಡುದಳಪದ್ಮದಲ್ಲಿ-
`ಚತುರ್ದಳಪದ್ಮೋದ್ಭವತಿ | ಓಂ ಆತ್ಮಾ ದೇವತಾ |’
ಎಂದುದಾಗಿ, ಆ ಷಡುದಳಪದ್ಮದಲ್ಲಿ ಚತುರ್ದಳಪದ್ಮ ಉದ್ಭವಿಸಿ,
ಆಧಾರಚಕ್ರದಲ್ಲಿ ಅಗ್ನಿವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./361
ಆ ಷೋಡಶದಳಪದ್ಮದಲ್ಲಿ –
`ದ್ವಾದಶದಳ ಪದ್ಮೋದ್ಭವತಿ | ಓಂ ಚಿದಾತ್ಮಾ ದೇವತಾ |’
ಎಂದುದಾಗಿ, ಆ ಷೋಡಶದಳಪದ್ಮದಲ್ಲಿ ದ್ವಾದಶದಳಪದ್ಮ ಉದ್ಭವಿಸಿ,
ಅನಾಹತಚಕ್ರದಲ್ಲಿ ಕುಂಕುಮವರ್ಣವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./362
ಆ ಸದ್ಗುರುಸ್ವಾಮಿ ಸದ್ಯೋಜಾತವಾಮದೇವಮುಖದಲ್ಲಿ
ಅಘೋರ ತತ್ಪುರುಷ ಈಶಾನವೆಂಬ ಪಂಚಕಳಸವನಿರಿಸಿ,
ಆ ಶಿಷ್ಯನನು ಗಣತಿಂತಿಣಿಗೆ ದೀರ್ಘದಂಡನಮಸ್ಕಾರವಂ ಮಾಡಿಸಿ
ಪೂರ್ವಜನ್ಮವಂ ಕಳೆದು ಪುನರ್ಜಾತನಂ ಮಾಡಿ,
ಆ ಶಿಷ್ಯನ ಮಸ್ತಕದ ಮೇಲೆ ತಮ್ಮ ಹಸ್ತಕಮಲವನಿರಿಸಿ,
ಬ್ರಹ್ಮರಂಧ್ರದ ಚಿತ್ಪ್ರಭಾಕಳೆಯಂ ತೆಗೆದು
ಆ ಕುಮಾರನ ಠಾವಿನಮೇಲೆ ಆಹ್ವಾನವಂ ಮಾಡಿ
ಇಷ್ಟಲಿಂಗವಂ ಕರಸ್ಥಲದಲ್ಲಿ ಕೊಟ್ಟು,
ಕರ್ಣದ್ವಾರದಲ್ಲಿ ಮಂತ್ರೋಪದೇಶವಂ ಮಾಡಿ, ಗಣಸಾಕ್ಷಿಯಾಗಿ
ದೀಯೆಂಬ ಮಹಾಜ್ಞಾನಮಂ ಕೊಟ್ಟು ಕ್ಷ ಎಂಬ ಮಲತ್ರಯಂಗಳ ಬಿಡಿಸಿ,
ಸದ್ಗುರುಸ್ವಾಮಿ ಗುರುಲಿಂಗಜಂಗಮವಂ ಮಾಡಿದ ಬಳಿಕ
ತಿರುಗಿ ಆ ಮಲತ್ರಯಂಗಳ ಹಿಡಿದರೆ ಆ ಗುರುಲಿಂಗ ಜಂಗಮಕ್ಕೆ
ರೌರವನರಕವೆಂದುದು ನೋಡಾ.
ಇದಕ್ಕೆ ವೀರಾಗಮೇ : “ದೀಯತೇ ಜ್ಞಾನಸಂಬಂಧಂ ಕ್ಷೀಯತೇ ಚ ಮಲತ್ರಯಂ |
ದೀಯತೇ ಕ್ಷೀಯತೇ ಚೈವ ದೀಕ್ಷಾಶಬ್ದೋಭಿಧೀಯತೇ ||
ತನ್ಮಲತ್ರಯಸಂಯೋಗಾತ್ ಗುರೂಣಾಂ ಜಂಗಮ ಸ್ತಥಾ |
ದ್ವಿವಿಧ ನರಕಂ ಯಾತಿ ಯಾವಚ್ಚಂದ್ರದಿವಾಕರೌಃ ||”
ಮಲತ್ರಯಂಗಳ ಬಿಟ್ಟು ಸುಳಿವ ಮಹಾಗುರುಲಿಂಗಜಂಗಮಕ್ಕೆ
ನಮೋ ನಮೋ ನಮೋ ಎಂದು ಬದುಕಿದೆನು ನೋಡಾ
ಅಪ್ರಮಾಣಕೂಡಲಸಂಗಮದೇವಾ./363
ಆ ಸದ್ಗುರುಸ್ವಾಮಿಯ ಕಂಡು
ದೀರ್ಘದಂಡ ನಮಸ್ಕಾರಮಂ ಮಾಡಿ
ಶ್ರೀಗುರುವೆ ಮದ್ಗುರುವೆ ಶ್ರೀ ಮಹಾಗುರುವೆ
ಶ್ರೀ ಜಗದ್ಗುರುವೆ ಶರಣು ಶರಣೆನುತಿರ್ದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ./364
ಆ ಸಹಸ್ರದಳ ಪದ್ಮವ ಪೊಕ್ಕು ನೋಡಿ ಸಾಧಿಸಿ,
“ಸಹಸ್ರಶಿಷರ್ಾಪುರುಷಃ ಸಹಸ್ರಾಕ್ಷಃ ಸಹಸ್ರಪಾತ್ |
ಸ ಭೂಮಿಂ ವಿಶ್ವತೋವೃತ್ವಾ ಅತ್ಯತಿಷ್ಠದ್ದಶಾಂಗುಲಂ ||”
ಎಂಬ ಪರಮಪುರುಷನ ಕಂಡು ನಮೋ ನಮೋ ಎನುತಿರ್ದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ./365
ಆ ಸಹಸ್ರದಳಪದ್ಮದಲ್ಲಿ –
`ಶತದಳಪದ್ಮೋದ್ಭವತಿ | ಸ್ವಯಮಾತ್ಮಾ ದೇವತಾ |’
ಎಂದುದಾಗಿ, ಆ ಸಹಸ್ರದಳಪದ್ಮದಲ್ಲಿ ಶತದಳಪದ್ಮ ಉದ್ಭವಿಸಿ
ಸೃಷ್ಟಿಚಕ್ರದಲ್ಲಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./366
ಆ ಹೃದಯಾಕಾಶದಲ್ಲಿ ಮಹಾಲಿಂಗ ಸ್ವಾಯತವಾಗಿಹುದು.
ವಾಗೀಂದ್ರಿಯಂಗದಲ್ಲಿ ಪ್ರಸಾದಲಿಂಗ ಸ್ವಾಯತವಾಗಿಹುದು.
ಹಸ್ತೇಂದ್ರಿಯಂಗದಲ್ಲಿ ಚರಲಿಂಗ ಸ್ವಾಯತವಾಗಿಹುದು.
ಪಾದೇಂದ್ರಿಯಂಗದಲ್ಲಿ ಶಿವಲಿಂಗ ಸ್ವಾಯತವಾಗಿಹುದು.
ಗುಹ್ಯೇಂದ್ರಿಯಂಗದಲ್ಲಿ ಗುರುಲಿಂಗ ಸ್ವಾಯತವಾಗಿಹುದು.
ಗುದೇಂದ್ರಿಯಂಗದಲ್ಲಿ ಆಚಾರಲಿಂಗ ಸ್ವಾಯತವಾಗಿಹುದು ನೋಡಾ.
ಇದಕ್ಕೆ ಈಶ್ವರೋವಾಚ : “ಹೃದಯಾಂಗೇ ಮಹಾಲಿಂಗಂ ವಾಗಂಗೇತು ಪ್ರಸಾದಕಂ |
ಹಸ್ತಾಂಗೇ ಚರಲಿಂಗಂ ಚ ಪಾದಾಂಗೇ ಶಿವಲಿಂಗಕಂ ||
ಗುಹ್ಯಾಂಗೇ ಗುರುಲಿಂಗಂತು ಗುದೇ ಆಚಾರಲಿಂಗಕಂ |
ಇತಿ ಲಿಂಗಸ್ಥಲಂ ಜ್ಞಾನಂ ದುರ್ಲಭಂ ಕಮಲಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./367
ಆಕಾಶ ಚೈತನ್ಯ ಭಾವ ಕರ್ತ ಕ್ಷೇತ್ರಜ್ಞ ಶಿವನು- ಈ ಆರು ತತ್ತ್ವಂಗಳು
ಆ ಅಖಂಡ ಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವಾಗಿಹ
ಪರಬ್ರಹ್ಮದಲ್ಲಿ ಅಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ : “ಶಿವಕ್ಷೇತ್ರಜ್ಞಕತರ್ಾರಂ ಭಾವಂ ಚೈತನ್ಯಮಂತರಂ |
ಏವಂತು ಷಡ್ವಿಧಂ ಪ್ರೋಕ್ತಂ ಪರಬ್ರಹ್ಮಣಿಲೀಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./368
ಆಕಾಶವೇ ಅಂಗವಾದ ಶರಣ ಸುಜ್ಞಾನವೆಂಬ ಹಸ್ತದಲ್ಲಿ
ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ.
ಇದಕ್ಕೆ ಈಶ್ವರೋವಾಚ : “ಜ್ಞಾನಹಸ್ತೇನ ಶರಣಂ ವ್ಯೋಮಾಂಗಶ್ಚ ಪ್ರಸಾದಿತೇ
ಶ್ರೋತ್ರೇ ಚ ತನ್ಮುಖಿ ಚೈವ ಅರ್ಪಿತಂ ಶಬ್ದಭೋಕ್ತವಾನ್ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./369
ಆಚಾರಲಿಂಗದಲ್ಲಿ ನಿವೃತ್ತಿಕಲೆ ಇಹುದು.
ಗುರುಲಿಂಗದಲ್ಲಿ ಪ್ರತಿಷ್ಠಾಕಲೆ ಇಹುದು.
ಶಿವಲಿಂಗದಲ್ಲಿ ವಿದ್ಯಾಕಲೆ ಇಹುದು.
ಜಂಗಮಲಿಂಗದಲ್ಲಿ ಶಾಂತಿಕಲೆ ಇಹುದು.
ಪ್ರಸಾದಲಿಂಗದಲ್ಲಿ ಶಾಂತ್ಯತೀತಕಲೆ ಇಹುದು.
ಮಹಾಲಿಂಗದಲ್ಲಿ ಶಾಂತ್ಯತೀತೋತ್ತರಕಲೆ ಇಹುದು ನೋಡಾ.
ಇದಕ್ಕೆ ಆದಿತ್ಯಸಂಹಿತಾಯಾಂ : “ಆಚಾರೇಚ ನಿವೃತ್ತೀ ಚ ಗುರುಲಿಂಗೇ ಪ್ರತಿಷ್ಠಿತಂ |
ವಿದ್ಯಾಚ ಶಿವಲಿಂಗೌ ಚ ತಥಾ ಶಾಂತಿಕಲಾ ಚರೇತ್ ||
ಶಾಂತ್ಯತೀತ ವಿಶುದ್ಧೌ ಚ ಮಹಾಲಿಂಗೇ ಮಹತ್ಕಲಾ |
ಇತಿ ಷಷ್ಠಕಲಾನ್ಯಾಸಂ ಸುಸೂಕ್ಷ್ಮಂ ಕಮಲಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./370
ಆಜ್ಞಾಚಕ್ರದಲ್ಲಿಯ ಮಹಾಲಿಂಗವು
ಜನ್ಮ ಜರಾ ಮರಣಂಗಳಿಲ್ಲದುದಾಗಿ, ನಿರ್ಮಲವಾಗಿ,
ಸರ್ವವ್ಯಾಪ್ತಿಯಾಗಿ, ಅದ್ವಿತೀಯವಾಗಿ, ಅಣುವಿಗೆ ಅಣುವಾಗಿ,
ಪರಾಪರವಾಗಿ, ಸಂಸಾರವ್ಯಾಪ್ತಿಯಿಲ್ಲದುದಾಗಿ,
ಹವಣಿಸಲು ಬಾರದುದಾಗಿ, ಭಾವವಂದರಿಂದವೆ
ಅರಿಯಲು ಬಹುದಾಗಿ, ಚೈತನ್ಯಸ್ವರೂಪವಾಗಿ,
ಶಿವತತ್ವವನು ಚಿತ್ತೆಂಬ ಶಕ್ತಿಯ ಸ್ಫುರಣವೆ ರೂಪಾಗಿಯುಳ್ಳ
ಮಹಾಲಿಂಗವಾಗಿ ಹೇಳುತ್ತಿಹರು ನೋಡಾ.
ಇದಕ್ಕೆ ಮಹಾವಾತುಲಾಗಮೇ :ವೃತ್ತ –
“ಆದ್ಯಂತಶೂನ್ಯಮಮಲಂ ಪರಿಪೂರ್ಣಮೇಕಂ
ಸೂಕ್ಷ್ಮಂ ಪರಾಪರಮನಾಮಯಮಪ್ರಮೇಯಂ |
ಭಾವೈಕಗಮ್ಯ ಜಡಂ ಶಿವತತ್ವಮಾಹುಃ
ಚಿಚ್ಛಕ್ತಿ ಸಂಸ್ಫುರಣರೂಢಮಹಾತ್ಮಲಿಂಗಂ || ”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./371
ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳ ಹೊದ್ದದೆ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧದಾಸೆಯಂ ಬಿಟ್ಟು,
ಜಾಗ್ರ ಸ್ವಪ್ನ ಸುಷುಪ್ತಿಯೆಂಬ ಮೂರವಸ್ಥೆಯಂ ಗೆಲಿದು,
ತೂರ್ಯವನೊಡಗೂಡಿ ತೂರ್ಯಾತೀತನಾಗಿ ಆ ತೂರ್ಯಾತೀತಕ್ಕತ್ತತ್ತ
ವ್ಯೋಮಾತೀತವಾಗಿಹಾತನೆ ಗುರು, ಆತನೆ ಲಿಂಗ, ಆತನೆ ಜಂಗಮ,
ಆತನೆ ಶರಣ, ಆತನೆ ನಿತ್ಯನಿರಂಜನ ನಿರಾಮಯ, ನಿರಾಮಯಾತೀತನು,
ಆತನೆ ನಮ್ಮ ಅಪ್ರಮಾಣಕೂಡಲಸಂಗಮದೇವ./372
ಆಣವ ಮಾಯಾ ಕಾರ್ಮಿಕವೆಂಬ ಮಲತ್ರಯಂಗಳಲ್ಲಿ
ಬಿದ್ದು ಹೊರಳಾಡುತ್ತಿಹರು,
ಗುರುವೆಂಬ ನುಡಿಗೆ ನಾಚರು.
ಪರಧನ ಪರಸ್ತ್ರೀಗಳುಪ್ಪುತ್ತಿಹರು,
ಗುರುವೆಂಬ ನುಡಿಗೆ ನಾಚರು.
ಜಾಗ್ರ ಸ್ವಪ್ನ ಸುಷುಪ್ತಿಯ ಕೆಡಿಸಿ
ತೂರ್ಯ ತೂರ್ಯಾತೀತವ ಬೆರಸಲರಿಯರು,
ಗುರುವೆಂಬ ನುಡಿಗೆ ನಾಚರು.
ಆ ತೂರ್ಯಾತೀತಕತ್ತತ್ತ ವ್ಯೋಮಾತೀತವಾಗಿಹ
ಮಹಾಘನದಲ್ಲಿ ಬೆರಸಿ ಬೇರಾಗಲರಿಯದೆ
ಗುರುಲಿಂಗಜಂಗಮವೆಂದು ಸುಳಿವ ಪಂಚಮಹಾಪಾತಕರ ನೋಡಿ
ನಾಚಿತ್ತು ನಾಚಿತ್ತು ನೋಡಾ ಎನ್ನ ಮನ
ಅಪ್ರಮಾಣಕೂಡಲಸಂಗಮದೇವಾ./373
ಆಣವ ಮಾಯಾ ಕಾರ್ಮಿಕವೆಂಬ ಮೂರು ಕಲ್ಲನಿರಿಸಿ,
ಜ್ಞಾನೇಂದ್ರಿಯ ಕರ್ಮೆಂದ್ರಿಯವೆಂಬ ಹೊಟ್ಟ ನೀಡಿ,
ಅಷ್ಟಮದವೆಂಬ ಕಟ್ಟಿಗೆಯ ತಂದು ಜ್ಞಾನಾಗ್ನಿಯೆಂಬ ಕಿಚ್ಚನೊಟ್ಟಿ
ತನುವೆಂಬ ಭಾಜನವ ತೊಳೆದು
ಸ್ವಯಂಪ್ರಕಾಶವೆಂಬ ಉದಕವ ತುಂಬಿ,
ಮನವೆಂಬ ಸಯಿದಾನವ ನೀಡಿ,
ಜ್ಞಾನಾಗ್ನಿಯಲ್ಲಿ ಪಾಕವಾದ ಪ್ರಸಾದವನು ಮಹಾಲಿಂಗಕ್ಕೆ ಅರ್ಪಿಸುವ
ಮಹಾಮಹಿಮರ ತೋರಾ
ಅಪ್ರಮಾಣಕೂಡಲಸಂಗಮದೇವಾ./374
ಆತ್ಮತತ್ವ ಇಪ್ಪತ್ತೈದು , ವಿದ್ಯಾತತ್ವ ಹತ್ತು, ಶಿವತತ್ತ್ವವೊಂದು.
ಅದೆಂತೆಂದಡೆ :
ಭೂತಾದಿ ಪಂಚಕಂಗಳೈದು, ಶ್ರೋತ್ರಾದಿ ಜ್ಞಾನೇಂದ್ರಿಯಂಗಳೈದು,
ಶಬ್ದಾದಿ ವಿಷಯಂಗಳೈದು, ವಾಗಾದಿ ಕರ್ಮೆಂದ್ರಿಯಂಗಳೈದು,
ಮನಸಾದಿ ಪಂಚಕಂಗಳೈದು, ಆತ್ಮತತ್ವ ಇಪ್ಪತ್ತೈದು,
ಕರ್ಮಸಾದಾಖ್ಯ, ಮೂರ್ತಿಸಾದಾಖ್ಯ,
ಅಮೂರ್ತಿಸಾದಾಖ್ಯ, ಶಿವಸಾದಾಖ್ಯ,
ನಿವೃತ್ತಿಕಲೆ, ಪ್ರತಿಷ್ಠಾಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ,
ಇಂತು ವಿದ್ಯಾತತ್ವ ಹತ್ತು, ಶಿವತತ್ವವೊಂದು.
ಇಂತು ಮೂವತ್ತಾರು ತತ್ವಂಗಳೊಳಗೆ
ಶಿವತತ್ತ್ವವೆ ತತ್ಪದ, ಆತ್ಮತತ್ವವೆ ತ್ವಂಪದ, ವಿದ್ಯಾತತ್ತ್ವವೆ ಅಸಿಪದ.
ಅಕಾರದಲ್ಲಿ ತತ್ವದ ಐಕ್ಯವಾಯಿತ್ತು.
ಉಕಾರದಲ್ಲಿ ತ್ವಂಪದ ಐಕ್ಯವಾಯಿತ್ತು.
ಮಕಾರದಲ್ಲಿ ಅಸಿಪದ ಐಕ್ಯವಾಯಿತ್ತು.
ಮಕಾರ ಅಕಾರ ಉಕಾರ ಏಕಾರ್ಥವಾಗಿ
ಷಟ ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗವಾಯಿತ್ತು.
ಆ ಷಟ ್ಸ್ಥಲಬ್ರಹ್ಮವೆಂಬ ಮಹಾಜ್ಯೋತಿರ್ಮಯಲಿಂಗದಲ್ಲಿ
ತತ್ಪದ ತ್ವಂಪದ ಅಸಿಪದ ನಿಕ್ಷೇಪವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./375
ಆತ್ಮನೆ ಅಂಗವಾದ ಐಕ್ಯ ಭಾವವೆಂಬ ಹಸ್ತದಲ್ಲಿ
ಮಹಾಲಿಂಗಕ್ಕೆ ಮನವೆಂಬ ಮುಖದಲ್ಲಿ ಪರಿಣಾಮ ಸಮರ್ಪಣವ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ.
ಇದಕ್ಕೆ ಈಶ್ವರೋವಾಚ : “ಆತ್ಮಾಂಗೋ ಭಾವಹಸ್ತೇನ ಐಕ್ಯಶ್ಚಾಪಿ ಮಹಾತ್ಮನೇ |
ಹೃನ್ಮುಖೀ ಅರ್ಪಿತಂಚೈವ ಪದಾರ್ಥಂ ತೃಪ್ತಿಭೋಕ್ತವಾನ್ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./376
ಆತ್ಮನೆ ಅಂಗವಾದ ಐಕ್ಯನ ಭಾವಹಸ್ತದಲ್ಲಿ
ಮಹಾಲಿಂಗವು ಜನ್ಮ ಜರಾ ಮರಣಂಗಳಿಲ್ಲವಾಗಿ, ನಿರ್ವಿಕಾರವಾಗಿ,
ಸರ್ವವ್ಯಾಪಿಯಾಗಿ, ಅದ್ವಿತೀಯನಾಗಿ,
ಅಣುವಿಗೆ ಅಣುವಾಗಿ,
ಪರಾಪರವಾಗಿ, ಸಂಸಾರವ್ಯಾಧಿ ಇಲ್ಲದುದಾಗಿ,
ಹವಣಿಸಲು ಬಾರದುದಾಗಿ, ಭಾವವೊಂದರಿಂದವೆ
ಅರಿಯಲು ಬಹುದಾಗಿ, ಚೈತನ್ಯಸ್ವರೂಪವಾಗಿ
ಶಿವತತ್ವವನು ಚಿತ್ ಎಂಬ ಶಕ್ತಿಯ ಸ್ಫುರಣವೇ ರೂಪಾಗಿವುಳ್ಳ
ಮಹಾಲಿಂಗವಾಗಿ ಹೇಳುತ್ತಿಹರು ನೋಡಾ.
ಇದಕ್ಕೆ ಮಹಾವಾತುಲಾಗಮೇ :ವ್ತೃತ್ತ –
“ಆದ್ಯಂತಯ ಶೂನ್ಯ ಅಮಲಂ ಪರಿಪೂರ್ಣಮೇಕಂ
ಸೂಕ್ಷ್ಮಂ ಪರಾತ್ಪರಮನಾಮಯಮಪ್ರಮೇಯಂ |
ಭಾವೈಕ್ಯಗಮ್ಯಮಜಡಂ ಶಿವತತ್ವಮಾಹುಃ
ಚಿಚ್ಛಕ್ತಿಸಂಸ್ಫುರಣರೂಢಮಾತ್ಮಲಿಂಗಂ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./377
ಆದಿ ಅಕಾರ ಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ.
ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ.
ಆದಿ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ.
ಆ ಆದಿ ನಾದಬಿಂದುಕಲಾಪ್ರಣವಣಕ್ಕೆ
ಆ ಆದಿ ಪ್ರಕೃತಿಪ್ರಣವವೇ ಆಧಾರ.
ಆ ಆದಿ ಪ್ರಕೃತಿಪ್ರಣವಕ್ಕೆ
ಆ ಆದಿ ಪ್ರಾಣಮಾತ್ರೆಯ ಪ್ರಣವವೇ ಆಧಾರ.
ಆ ಆದಿ ಪ್ರಾಣಮಾತ್ರೆಯ ಪ್ರಣವಕ್ಕೆ
ಆ ಅಖಂಡಜ್ಯೋತಿರ್ಮಯಲಿಂಗವೇ ಆಧಾರ.
ಆದಿ ಅ ಎಂದರೆ ಆದಿ ಅನಾಹತಪ್ರಣವ,
ಆದಿ ಉ ಎಂದರೆ ಆದಿ ನಾದ ಪ್ರಣವವಳಿಯಿತ್ತು.
ಆದಿ ಮ ಎಂಬ ಪ್ರಣವದಲ್ಲಿ ಆದಿ ಬಿಂದುಪ್ರಣವ ಬಂದು ಕೂಡಲು
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./378
ಆದಿ ಅಕಾರದಲ್ಲಿ ತಾರಕಸ್ವರೂಪ ದಂಡಕಸ್ವರೂಪ
ಉತ್ಪತ್ಯವಾಗದ ಮುನ್ನ ಮುನ್ನ,
ಆದಿ ಉಕಾರದಲ್ಲಿ ಕುಂಡಲಾಕಾರ ಅರ್ಧಚಂದ್ರಕಸ್ವರೂಪ
ಉತ್ಪತ್ಯವಾಗದ ಮುನ್ನ ಮುನ್ನ,
ಆದಿ ಮಕಾರದಲ್ಲಿ ದರ್ಪಣಾಕಾರ ಜ್ಯೋತಿಸ್ವರೂಪ
ಉತ್ಪತ್ಯವಾಗದ ಮುನ್ನ ಮುನ್ನ,
ಆದಿ ಅಕಾರ ಉಕಾರ ಮಕಾರ-ಈ ಮೂರು ಏಕವಾಗಿ
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವ
ಉತ್ಪತ್ಯವಾಗದ ಮುನ್ನ ಮುನ್ನವೆ
ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ
ನಮ್ಮ ಅಪ್ರಮಾಣಕೂಡಲಸಂಗಮದೇವನು./379
ಆದಿ ಅನಾದಿಯಿಲ್ಲದಂದು ತಾನೆ ಪ್ರಣವಸ್ವರೂಪನು.
ಅನಂತ ಬ್ರಹ್ಮಾಂಡವಿಲ್ಲದಂದು ತಾನೆ ನಾದಬಿಂದುಕಲಾತೀತನು.
ಜೀವಪರಮರಿಲ್ಲದಂದು ತಾನೆ ನಾಮ ಸ್ವರೂಪ ಕ್ರಿಯಾತೀತನು.
ಸಚರಾಚರಂಗಳೆಲ್ಲಾ ರಚನೆಗೆ ಬಾರದಂದು ತಾನೆ ಅಖಂಡಪರಿಪೂರ್ಣ
ಅಪ್ರಮೇಯ ಅಗೋಚರ ಅಪ್ರಮಾಣ ಅನಂತ ತೇಜೋಮಯವಾಗಿಹ
ಮಹಾಘನಲಿಂಗ ನೋಡಾ, ಅಪ್ರಮಾಣಕೂಡಲಸಂಗಮದೇವಾ./380
ಆದಿ ಮಕಾರಪ್ರಣವ, ಆದಿ ಅಕಾರಪ್ರಣವ, ಆದಿ ಉಕಾರಪ್ರಣವ
-ಈ ಮೂರು ಬೀಜಾಕ್ಷರ
ಆದಿ ಮಕಾರಪ್ರಣವವೆ ಆದಿಕಲೆ, ಆದಿ ಅಕಾರಪ್ರಣವವೆ ಆದಿನಾದ,
ಆದಿ ಉಕಾರಪ್ರಣವವೆ ಆದಿಬಿಂದು
ಆದಿ ಮಕಾರಪ್ರಣವವೇ ಸರ್ವಾತ್ಮನು.
ಆದಿ ಅಕಾರಪ್ರಣವವೇ ಪರಮಾತ್ಮನು.
ಆದಿ ಉಕಾರಪ್ರಣವವೇ ಶಿವಾತ್ಮನು ನೋಡಾ.
ಇದಕ್ಕೆ ಈಶ್ವರೋವಾಚ : “ಅಕಾರಂ ಪರಾತ್ಪರಾತ್ಮಂ ಉಕಾರಂ ಶಿವಾತ್ಮೋ ಭವೇತ್ |
ಮಕಾರಂ ಸರ್ವಾತ್ಮೈವ ಇತಿ ಭೇದಂ ವರಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./381
ಆದಿ ರುದ್ರ ಆದಿ ಈಶ್ವರ ಆದಿ ಸದಾಶಿವರಿಲ್ಲದ ಮುನ್ನ ಮುನ್ನ,
ಆದಿ ಅಕಾರ ಆದಿ ಉಕಾರ ಆದಿ ಮಕಾರಕ್ಕೆ
ಆದಿ ನಾದ ಆದಿ ಬಿಂದು ಆದಿ ಕಲೆಗಳು ಆಧಾರವಾಗದ ಮುನ್ನ ಮುನ್ನ,
ಆ ಆದಿ ನಾದ-ಬಿಂದು-ಕಲೆಗಳಿಗೆ
ಆ ಆದಿ ಪ್ರಕೃತಿಗಳಾಧಾರವಾಗದ ಮುನ್ನ ಮುನ್ನ,
ಆ ಆದಿ ಪ್ರಾಣಕ್ಕೆ ಲಿಂಗಾಧಾರವಾಗದ ಮುನ್ನ ಮುನ್ನವೆ
ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು./382
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾಗಿಹ
ಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿ
ಅನಂತಕೋಟಿಬ್ರಹ್ಮಾಂಡಂಗಳ ಅನಂತಕೋಟಿಮಹಾಭುವನಂಗಳ
ಅನಂತಕೋಟಿಲೋಕಾದಿಲೋಕಂಗಳ ಸೃಜಿಸಬೇಕೆಂಬ
ನೆನಹುಮಾತ್ರದಲ್ಲಿ ಈ ನಿರಂಜನಾತೀತ ಪ್ರಣವದುತ್ಪತ್ಯವಾಯಿತ್ತು.
ಆ ಅವಾಚ್ಯಪ್ರಣವದ ನೆನಹುಮಾತ್ರದಲ್ಲಿಯೇ
ನಿರಂಜನ ಕಲಾಪ್ರಣವವು ಉತ್ಪತ್ಯವಾಯಿತ್ತು.
ಆ ನಿರಂಜನಾತೀತ ಕಲಾಪ್ರಣವದ ನೆನಹುಮಾತ್ರದಲ್ಲಿಯೇ
ಅನಾದಿಪ್ರಣವದುತ್ಪತ್ಯವಾಯಿತ್ತು.
ಆ ಅನಾದಿಪ್ರಣವದ ನೆನಹುಮಾತ್ರದಲ್ಲಿಯೇ
ಅನಾದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು.
ಆ ಅನಾದಿ ಅಕಾರ ಉಕಾರ ಮಕಾರದ ನೆನಹುಮಾತ್ರದಲ್ಲಿಯೇ
ಅದಿಪ್ರಣವ ಉತ್ಪತ್ಯವಾಯಿತ್ತು.
ಆ ಆದಿಪ್ರಣವದ ನೆನಹು ಮಾತ್ರದಲ್ಲಿಯೇ.
ಆದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ : “ಅಖಂಡಮೂಲ ಚಿಂತಾಯಾಂ ನಿರಂಜನಾತೀತೋದ್ಭವಃ |
ನಿರಂಜನಾತೀತ ಚಿಂತಾಯಾಂ ನಿರಂಜನೋಂಕಾರಸಂಭವಃ ||
ನಿರಂಜನಸ್ಯ ಚಿಂತಾಯಾಂ ಅವಾಚ್ಯಂ ನಾಮ ಜಾಯತೇ |
ಅವಾಚ್ಯಸ್ಯ ಚ ಚಿಂತಾಯಾಂ ಕಲಾನಾಮ ಸಮುದ್ಗತಃ ||
ಕಲಾಪ್ರಣವಚಿಂತಾಯಾಂ ಅನಾದಿಪ್ರಣವೋಭವತ್ |
ಅನಾದಿಪ್ರಣವ ಚಿಂತಾಯಾಂ ಅನಾದಿಮಂತ್ರ ಸಂಭವಃ ||
ಅನಾದಿಮಂತ್ರಚಿಂತಾಯಾಂ ಆದಿಪ್ರಣವ ಸಂಭವಃ |
ಆದಿಪ್ರಣವಚಿಂತಾಯಾಂ ಅಕ್ಷರತ್ರಯಮುದ್ಗತಂ ||”
ಇಂತೆಂದುದಾಗಿ.
ಇದಕ್ಕೆ ಮಹಾವೇದದ ಪ್ರಣವ ಪುರುಷಸೂಕ್ತೆ : “ಓಂ ಅಖಂಡಮೂಲಚಿಂತಾಯಾಂ ನಿರಂಜನಾತೀತಮಜಾಯತ |
ಕಲಾಪ್ರಣವ ತದಸ್ಯಾ ಅನಾದಿ ಓಂಕಾರೋಜಾಯತ ||
ಅನಾದ್ಯೋಂಕಾರಚಿಂತಾಯಾಮನಾದಿ ತ್ರಿಯಕ್ಷರಮಜಾಯತ |
ಅನಾದಿ ತ್ರಿಯಕ್ಷರ ಚಿಂತಾಯಾಂ ಆದಿಪ್ರಣವೋಜಾಯತ |
ನಿರಂಜನಾತೀತ ಪ್ರಣವಾಭ್ಯಾಂ ನಿರಂಜನಪ್ರಣವೋಜಾಯತ |
ನಿರಂಜನಪ್ರಣವಾದಸ್ಯ ಅವಾಚ್ಯೋಂಕಾರೋಜಾಯತ |
ಅವಾಚ್ಯೋಂಕಾರಚಿಂತಾಭ್ಯಾಂ ಕಲಾಪ್ರಣವೋಜಾಯತ |
ಆದಿಪ್ರಣವಚಿಂತಾಯಾಂ ಅಕ್ಷರತ್ರಯಮಜಾಯತ ||”
ಇಂತೆಂದುದು ಶ್ರುತಿ.
ಅಪ್ರಮಾಣಕೂಡಲಸಂಗಮದೇವಾ./383
ಆದಿಮೂಲ ಅನಾದಿಮೂಲವಿಲ್ಲದಂದು,
ಅಜಾಂಡ ಬ್ರಹ್ಮಾಂಡವಿಲ್ಲದಂದು, ವೇದಾಂತ ಸಿದ್ಧಾಂತವಿಲ್ಲದಂದು,
ವ್ಯೋಮ ವ್ಯೋಮಾಕಾಶವಿಲ್ಲದಂದು,
ಜೀವಹಂಸ ಪರಮಹಂಸರಿಲ್ಲದಂದು, ಅಜಪೆ ಗಾಯತ್ರಿ ಇಲ್ಲದಂದು,
ಅನಂತಕೋಟಿ ವೇದಾಗಮ ಶಾಸ್ತ್ರಪುರಾಣಂಗಳಿಲ್ಲದಂದು,
ಭಾವ ನಿರ್ಭಾವವಿಲ್ಲದಂದು, ಶೂನ್ಯ ನಿಶ್ಶೂನ್ಯವಿಲ್ಲದಂದು,
ಅವಾಚ್ಯಪ್ರಣವವಾಗಿದ್ದನಯ್ಯಾ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು./384
ಆಧಾರ ಸ್ವಾಧಿಷ್ಠಾನ ಮಣಿಪೂರಕ ಅನಾಹತ
ವಿಶುದ್ಧಿ ಆಜ್ಞಾಯೆಂಬ ಷಡುಚಕ್ರದೊಳಗಣ ದಳ-ವರ್ಣ-ಅಕ್ಷರ-ಅಧಿದೇವತೆ
ಶಕ್ತಿ-ಭಕ್ತಿ -ಸಾದಾಖ್ಯಂಗಳ ದೇವರೆಂಬರು ; ಅಲ್ಲಲ್ಲ ನೋಡಾ.
ವಾಙ್ಮನಕ್ಕಗೋಚರವಾಗಿಹ ಪರಶಿವತತ್ವವ ತಾನೆಂದರಿದಡೆ
ತಾನೆ ದೇವ ನೋಡಾ
ಅಪ್ರಮಾಣಕೂಡಲಸಂಗಮದೇವ./385
ಆಧಾರಚಕ್ರದಲ್ಲಿ ಅನಾದಿಯೆಂಬ ಸಂಜ್ಞೆ,
ಸ್ವಾಧಿಷ್ಠಾನಚಕ್ರದಲ್ಲಿ ಲಿಂಗಕ್ಷೇತ್ರವೆಂಬ ಸಂಜ್ಞೆ,
ಮಣಿಪೂರಕಚಕ್ರದಲ್ಲಿ ಶರೀರವೆಂಬ ಸಂಜ್ಞೆ,
ಅನಾಹತಚಕ್ರದಲ್ಲಿ ಗೂಢವೆಂಬ ಸಂಜ್ಞೆ,
ವಿಶುದ್ಧಿಚಕ್ರದಲ್ಲಿ ಪರವೆಂಬ ಸಂಜ್ಞೆ,
ಆಜ್ಞಾಚಕ್ರದಲ್ಲಿ ನಿರಾಕುಳವೆಂಬ ಸಂಜ್ಞೆ ನೋಡಾ.
ಇದಕ್ಕೆ ಶಿವಲಿಂಗಸೂತ್ರೇ : “ಆಧಾರೇನಾದಿಸಂಜ್ಞಾ ಚ ಸ್ವಾಧಿಷ್ಠೇ ಲಿಂಗಕ್ಷೇತ್ರಕಂ |
ಶರೀರಂ ಮಣಿಪೂರೇ ಚ ಗೂಢಂ ಚಾನಾಹತೇ ತಥಾ ||
ವಿಶುದ್ಧೌ ಚ ಪರಂ ಚೈವ ಆಜ್ಞಾ ನಿರಾಕುಳಂ ಭವೇತ್ |
ಇತಿ ಷಷ್ಠ ಸಂಜ್ಞೇ ಜ್ಞಾತುಂ ದುರ್ಲಭಂ ಕಮಲಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./386
ಆಧಾರಚಕ್ರದಲ್ಲಿಹ ಆಚಾರಲಿಂಗವು
ಸಮಸ್ತವಾದ ತತ್ವಂಗಳ ನಿವಾಸಕ್ಕೋಸುಗ ಆಧಾರವಾದುದಾಗಿ
ಕರ್ಮರೂಪವಾದ ಕ್ರಿಯೆಯೆಂಬ ತನ್ನ ಶಕ್ತಿಯಿಂದ
ಸರಿಯಿಲ್ಲದುದಾಗಿ ಚಿತ್ತದಿಂದಾಧರಿಸಲು ತಕ್ಕಂಥಾದಾದುದಾಗಿ
ಆಶ್ರಯಿಸಲುಪಟ್ಟ ಮೋಕ್ಷಮಾರ್ಗವುಳ್ಳುದುದಾಗಿ
ಇದ್ದುದು ಆಚಾರಲಿಂಗ ನೋಡಾ.
ಇದಕ್ಕೆ ಮಹಾವಾತುಲಾಗಮೇ :ವಸಂತತಿಲಕವೃತ್ತ-
“ಕರ್ಮಾತ್ಮನಾ ಸಕಲತತ್ವನಿವಾಸಹೇತೋ
ರಾಧಾರಭೂತಮತುಲಂ ಕ್ರಿಯಯಾಸ್ವಶಕ್ತ್ಯಾ |
ಚಿತ್ತೇನ ಧಾರ್ಯಮಿತಿ ಪ್ರರೂಪ ನಿವೃತ್ತಿಮಾರ್ಗಂ
ಆಚಾರಲಿಂಗಮಿತಿ ವೇದವಿದೋ ವದಂತಿ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./387
ಆರು ಬೀಜವ ಮೀರಿ ತೋರಿತ್ತು ನೋಡಾ ಒಂದು ಬೀಜ,
ಆ ಬೀಜ ಸಪ್ತಸಾಗರವ ನುಂಗಿತ್ತು,
ಅರವತ್ತಾರುಕೋಟಿ ನದಿಗಳ ನುಂಗಿತ್ತು ನೋಡಾ.
ಹದಿನಾಲ್ಕು ಕುದುರೆಯ ನುಂಗಿತ್ತು,
ಮೂರು ಕೋಣನ ನುಂಗಿತ್ತು ನೋಡಾ.
ಎಂಟಾನೆಯ ನುಂಗಿ, ಆ ಬೀಜ ಆರಾರು ಈರಾರು ಶಾಖೆಗಳಾಗಿ
ಅಮೃತಫಲರಸತುಂಬಿ ತೊಟ್ಟಿಟ್ಟುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./388
ಆವುದೊಂದು ರೂಪನು ಕಂಗಳು ಕಾಣವು.
ಆವುದೊಂದು ಶಬ್ದವ ಕಿವಿಗಳು ಕೇಳವು.
ಆವುದೊಂದು ಪರಿಣಾಮವ ಮನವರಿಯದು.
ಆವುದೊಂದು ರುಚಿಯ ಜಿಹ್ವೆಯರಿಯದು.
ಆವುದೊಂದು ಪರಿಮಳವ ನಾಶಿಕವರಿಯದು.
ಆವುದೊಂದು ಸ್ಪರ್ಶನವ ತ್ವಕ್ಕರಿಯದು.
ಎಲ್ಲರಲ್ಲಿಯ ಅರಿವ ಮಹಾಘನ ನಿರಾಳ ನಿರಂಜನ ನಿರಾಮಯ
ನಿರಾಮಯಾತೀತವ ಆರೂ ಅರಿಯರು
ಅಪ್ರಮಾಣಕೂಡಲಸಂಗಮದೇವಾ./389
ಇಂತಪ್ಪ ನಾನಾ ಸುಖದುಃಖಂಗಳನುಂಡು,
ಎಂತಕ್ಕೆ ನರನಾಗಿ ಬಂದು,
ಪೂರ್ವಜನ್ಮಸುಕೃತಫಲದಿಂದ ಮಹಾಪುರುಷರಂ ಸಾದರ್ು
ನರಕೋತ್ತರವಂ ಮಾಡಿ, ಸ್ವಗರ್ಾದಿ ಭೋಗಂಗಳನುಂಡು,
ಮೇಲಣ ಮುಕ್ತಿಯ ಪಥವನು ಪಡೆದ ತೆರನಾವುದೆಂದು ವಿಚಾರಿಸಿ,
ಸಕಲವೇದಾಗಮಶಾಸ್ತ್ರಪುರಾಣಂಗಳಂ ನೋಡಿ
ತನ್ನಿಂದ ತಾನೆ ತಿಳಿದು ಅನಂತಕೋಟಿ ತತ್ವಂಗಳೊಳು
ತೊಂಬತ್ತಾರುತತ್ತ್ವಂಗಳನರಿದು, ಆ ತೊಂಬತ್ತಾರುತತ್ವಂಗಳೊಳು
ಮೂವತ್ತಾರುತತ್ವಂಗಳ ಭೇದಿಸಿ,
ಆ ಮೂವತ್ತಾರು ತತ್ವಂಗಳೊಳು
ತ್ವಂ ಪದ ತತ್ಪದ ಅಸಿಪದಂಗಳೆಂಬ ಪದತ್ರಯಂಗಳನರಿದು
ಎಪ್ಪತ್ತೆರಡುಸಾವಿರ ನಾಡಿಗಳನು
ಆ ಎಪ್ಪತ್ತೆರಡುಸಾವಿರ ನಾಡಿಗಳೊಳು ಮೂವತ್ತೆರಡು ನಾಡಿಗಳ ಭೇದವನು,
ಆ ಮೂವತ್ತೆರಡು ನಾಡಿಗಳೊಳು ಚತುರ್ದಶನಾಡಿಗಳ ಭೇದವನು,
ಆ ಚತುರ್ದಶನಾಡಿಗಳೊಳು ತ್ರಿನಾಡಿಗಳ ಭೇದವನು,
ಆ ತ್ರಿನಾಡಿಗಳೊಳು ಏಕನಾಡಿಯ ಭೇದವನರಿದು
ಆ ಚತುರ್ದಶನಾಡಿಗಳೊಳು ಚತುರ್ದಶವಾಯುಭೇದವನರಿದು
ಆ ಚತುರ್ದಶವಾಯುವಿನೊಳು ಪಂಚವಾಯುವ ಭೇದಿಸಿ,
ಪಂಚವಾಯುವಿನೊಳು ದ್ವಿವಾಯುವನರಿದು,
ದ್ವಿವಾಯುವಿನೊಳು ಏಕವಾಯುವಿನ ಸಂಚವನರಿದು
ಷಡುಚಕ್ರ, ದಶವರ್ಣ, ಅಕ್ಷರ, ಅಧಿದೇವತೆಗಳಂ ಭೇದಿಸಿ
ಅಂತಃಕರಣಚತುಷ್ಟಯಂಗಳನರಿದು
ಮಂಡಲತ್ರಯಭೇದವ ಭೇದಿಸಿ ಕಂಡನು ಕಾಣಾ
ಅಪ್ರಮಾಣಕೂಡಲಸಂಗಮದೇವಾ./390
ಇಂತೀ ನಾನಾ ಮುಖದಲ್ಲಿ ಸ್ತೋತ್ರವ ಮಾಡಿ
ಅಳುವ ಶಿಷ್ಯನಂ ಕಂಡು
ಆ ಸದ್ಗುರುಸ್ವಾಮಿ ಆ ಶಿಷ್ಯನ ಹಣೆಯ ಹಿಡಿದೆತ್ತಿ
ಕಂಬನಿಯಂ ತೊಡದು ಅಂಜದಿರು ಅಂಜದಿರು
ನಿನ್ನ ಭವರೋಗಂಗಳಂ ಮಾಣಿಸುವೆನೆಂದು
ಅಭಯಹಸ್ತವಂ ಕೊಟ್ಟು ಸಂತೈಸಿ
ತಮ್ಮ ಕರುಣಪ್ರಸಾದವನಿತ್ತು ಸಲಹಿದನಯ್ಯ
ಅಪ್ರಮಾಣಕೂಡಲಸಂಗಮದೇವಾ./391
ಇಂದ್ರ ಇಂದ್ರರೆಂಬುವರನೇಕ ಕೋಟಿ
ಲಿಂಗಗರ್ಭದಲ್ಲಿ ಲಯವಾಗಲು,
ಮೂವತ್ತುಮೂರುಕೋಟಿ ದೇವರ್ಕಳಿಗೆ ಒಂದು ಸಂವತ್ಸರವಾಯಿತ್ತು.
ಅಂಥ ಮೂವತ್ತುಮೂರುಕೋಟಿ ದೇವರ್ಕಳು
ಅನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಬ್ರಹ್ಮನಿಗೊಂದು ದಿನವಾಯಿತ್ತು .
ಅಂಥ ಬ್ರಹ್ಮಾದಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಮೀನಜನೆಂಬ ಮುನಿಗೊಂದು ಮೀನ ಸಡಿಲಿತ್ತು.
ಅಂಥ ಮೀನಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ರೋಮಜನೆಂಬ ಮುನಿಗೊಂದು ರೋಮ ಸಡಿಲಿತ್ತು.
ಅಂಥ ರೋಮಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಡೊಂಕಜನೆಂಬ ಮುನಿಗೊಂದು ಡೊಂಕು ಸಡಿಲಿತ್ತು.
ಅಂಥ ಡೊಂಕಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ನೇತ್ರಜನೆಂಬ ಮುನಿಗೊಂದು ನೇತ್ರ ಸಡಿಲಿತ್ತು.
ಅಂಥ ನೇತ್ರಜನೆಂಬ ಮುನಿಗಳನೇಕ ಕೋಟಿ ಲಿಂಗಗರ್ಭದಲ್ಲಿ ಲಯವಾಗಲು
[ಚಿ]ಪ್ಪಜನೆಂಬ ಮುನಿಗೊಂದು ಚಿಪ್ಪು ಸಡಿಲಿತ್ತು.
ಅಂಥ [ಚಿ]ಪ್ಪಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಪಾದಜನೆಂಬ ಮುನಿಗೊಂದು ಪಾದ ಸಡಿಲಿತ್ತು.
ಅಂಥ ಪಾದಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಚಿಟುಕನೆಂಬ ಮುನಿಗೊಂದು ಚಿಟುಕು ಸಡಿಲಿತ್ತು.
ಅಂಥ ಚಿಟುಕಜನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಸಾರಂಗನೆಂಬ ಮುನಿಗೊಂದು ರೇಣು ಕುಂದಿತ್ತು.
ಅಂಥ ಸಾರಂಗನೆಂಬ ಮುನಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ವಿಷ್ಣುವಿಗೊಂದು ದಿನವಾಯಿತ್ತು.
ಅಂಥ ವಿಷ್ಣುಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ರುದ್ರನ ಕಣ್ಣೆವೆ ಹಳಚಿತ್ತು.
ಅಂಥ ರುದ್ರಾದಿಗಳನೇಕಕೋಟಿ ಲಿಂಗಗರ್ಭದಲ್ಲಿ ಲಯವಾಗಲು
ಅತಲ ಸುತಲ ವಿತಲ ತಲಾತಲ ಮಹಾತಲ ರಸಾತಲ ಪಾತಾಲ,
ಭೂಲೋಕ ಭುವರ್ಲೊಕ ಮಹರ್ಲೊಕ ಜನರ್ಲೊಕ
ತಪೋಲೋಕ ಸತ್ಯಲೋಕ ಗೋಲೋಕವೆಂಬ
ಹದಿನಾಲ್ಕು ಲೋಕವು ಲಿಂಗಗರ್ಭದಲ್ಲಿ ಲಯವಾಗಲು
ಇಂತೀ ಹದಿನಾಲ್ಕು ಲೋಕವನೊಳಕೊಂಡು
ಅತ್ತತ್ತವಾಗಿಹ ಅಖಂಡಮಹಾಜ್ಯೋತಿರ್ಮಯ
ಲಿಂಗದೊಳಗಿದ್ದವರೆಲ್ಲರು ಲಿಂಗವನರಿಯದೆ ಸತ್ತರು.
ಲೋಕದೊಳು ಸುಳಿವ ವೇಷಧಾರಿಗಳಿಗೆಂತು ಸಾಧ್ಯವಹುದು ನೋಡಾ.
ಸಾಕ್ಷಿ : “ಆಕಾಶಗತಲಿಂಗಾನಾಂ ಪೃಥ್ವೀಗತ ಪೀಠಯಃ |
ಆಲಯಂ ಋಷಿದೇವಾನಾಂ ಲಯನಾಂ ಲಿಂಗಮುಚ್ಯತೇ ||
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಲಿಂಗಬಾಹ್ಯಾತ್ ಪರಂ ನಾಸ್ತಿ ತಸ್ಮೆ ಶ್ರೀಗುರವೇ ನಮಃ ||”
ಎಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./392
ಇಂದ್ರಪದ ಬ್ರಹ್ಮಪದ ವಿಷ್ಣುಪದವಿಲ್ಲದಂದು,
ಸುರಾಲಯ ರುದ್ರಲೋಕ ಉತ್ಪತ್ಯವಾಗದಂದು,
ಅಷ್ಟವಸುಗಳು, ದ್ವಾದಶಾದಿತ್ಯರು, ಏಕಾದಶ ರುದ್ರರುತ್ಪತ್ಯವಾಗದಂದು,
ದ್ವಾದಶ ರಾಸಿ ನಕ್ಷತ್ರ ನವಗ್ರಹಂಗಳುತ್ಪತ್ಯವಾಗದಂದು,
ಅಗ್ನಿಮಂಡಲ ಆದಿತ್ಯಮಂಡಲ ಉತ್ಪತ್ಯವಾಗದಂದು,
ಚಂದ್ರಮಂಡಲ ತಾರಾಮಂಡಲ ಉತ್ಪತ್ಯವಾಗದಂದು,
ಇವೇನೂ ಏನೂ ಎನಲಿಲ್ಲದಂದು ಚಿತ್ಕಲಾಪ್ರಣವವಾಗಿದ್ದನು ನೋಡಾ
ನಮ್ಮ ಅಪ್ರಮಾಣಕೂಡಲಸಂಗಮದೇವ./393
ಇಡಾ ಪಿಂಗಳ ಸುಷುಮ್ನ ಗಾಂಧಾರಿ ಹಸ್ತಿ ಜಿಂಹ್ವೆ
ಪೂಷ ಪಯಶ್ಚಿನಿ ಅಲಂಬು ಶಂಕಿನಿಯೆಂಬ
ದಶನಾಳಂಗಳು ತಾನಿರ್ದಲ್ಲಿ.
ಇಡಾ ಪಿಂಗಳ ಸುಷುಮ್ನನಾಳ ಮೊದಲಾದ
ದಶನಾಳಂಗಳೊಳಾಡುವ ವಾಯು ಪ್ರಾಣ ಅಪಾನ ವ್ಯಾನ ಉದಾನ
ಸಮಾನ ನಾಗ ಕೂರ್ಮ ಕ್ರಕರ ದೇವದತ್ತ
ಧನಂಜಯನೆಂಬ ದಶವಾಯುಗಳು ತಾನಿರ್ದಲ್ಲಿ.
ಅಗ್ನಿಮಂಡಲ ಆದಿತ್ಯಮಂಡಲ ಚಂದ್ರಮಂಡಲವೆಂಬ
ಮಂಡಲತ್ರಯಂಗಳು ತಾನಿರ್ದಲ್ಲಿ.
ತಾನೆ ಯಂತ್ರವಾಹಕನಾಗಿ ಇವೆಲ್ಲವ ತನ್ನ ಲೀಲಾವಿಲಾಸ
ಸೂತ್ರಮಾತ್ರದಲ್ಲಿಯೇ ಆಡಿಸುತ್ತಿಹನಲ್ಲದೆ
ತಾನಾಡನು ತಾ ನೋಡನು ನೋಡಾ
ನಮ್ಮ ಅಪ್ರಮಾಣಕೂಡಲಸಂಗಮದೇವ./394
ಇಡೆಯಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನರಿಯದೆ
ಕೆಟ್ಟವರು ಕೋಟಾನುಕೋಟಿ.
ಪಿಂಗಳೆಯಲ್ಲಿ ಸುಳಿವ ವಾಯುವ ಸ್ವೀಕರಿಸಿ ನಿಜವನರಿಯದೆ
ಕೆಟ್ಟವರು ಕೋಟಾನುಕೋಟಿ.
ಸುಷಮ್ನನಾಳದಲ್ಲಿ ಸುಳಿವ ವಾಯುವ ಸ್ವೀಕರಿಸಿ
ನಿಜವನರಿಯದೆ ಕೆಟ್ಟವರು ಕೋಟಾನುಕೋಟಿ.
ಅಲ್ಲಿಂದತ್ತತ್ತಲಾದ ಮಹಾಘನಲಿಂಗವನರಿಯದೆ
ಕೆಟ್ಟವರು ಕೋಟಾನುಕೋಟಿ.
ಅಪ್ರಮಾಣಕೂಡಲಸಂಗಮದೇವಯ್ಯನ ನಿಲವ ತಾನೆಂದರಿಯದೆ
ಕೆಟ್ಟ ವೇಷಡಂಭಕರ ನಾನೇನೆಂಬೆನಯ್ಯಾ ?/395
ಇದಕ್ಕೆ ಈಶ್ವರ ಉವಾಚ :
`ಮಹಾಕ್ಷಿತಿ ಅಕ್ಷರಾದಿ ಚತುಃಷಷ್ಠಿ ಅಕ್ಷರಾತ್ಮಕಂ |
ಬಹುವಿಧಾತ್ಮಂ ನಿಜಾತ್ಮಂ ನ್ಯಾಸಂ ಗೋಪ್ಯಂ ವರಾನನೇ ||’
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./396
ಇದಕ್ಕೆ ಓಂಕಾರೋಪನಿಷತ್ :
ಮಕಾರವೆಂಬ ಪ್ರಣವದಲ್ಲಿ –
“ದಂಡಶ್ಚ ತಾರಕಾಕಾರೋ ಭವತಿ ಓಂ ಸರ್ವಾತ್ಮಾ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ದ್ವಿತೀಯಂ ಪ್ರಣವಾಂಶಕೇ ||”
ಅಕಾರವೆಂಬ ಪ್ರಣವದಲ್ಲಿ –
“ಕುಂಡಲಶ್ಚ ಅರ್ಧಚಂದ್ರೋ ಭವತಿ ಓಂ ಪರಾತ್ಪರಾತ್ಮೋ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ತ್ರಿಮಿಶಪ್ರಣವಾಂಶಕೇ ||”
ಉಕಾರವೆಂಬ ಪ್ರಣವದಲ್ಲಿ-
“ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಶಿವಾತ್ಮಾ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ಚತುರ್ವಿಂಶ ಪ್ರಣವಾಂಶಕೇ ||”
ಮಕಾರೇ ಚ ಅಕಾರೇ ಚ ಉಕಾರೇ ಚ ನಿರಾಮಯಂ |
ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ ||
ಪ್ರಥಮಂ ತಾರಕರೂಪಂ ದ್ವಿತೀಯಂ ದಂಡಉಚ್ಯತೇ |
ತೃತೀಯಂ ಕುಂಡಲಾಕಾರಂ ಚತುರ್ಥಶ್ಚಾರ್ಧಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿಸ್ವರೂಪಕಂ |
ಇತಿ ಪ್ರಣವಾ ವಿಜ್ಞೇಯಂ ಏತದ್ಗೌಪ್ಯಂ ವರಾನನೇ ||
ಓಂಕಾರಪ್ರಭವಾ ವೇದಾಃ ಓಂಕಾರ ಪ್ರಭವಾತ್ ಸ್ವರಾಃ |
ಓಂಕಾರಪ್ರಭವಾ ಭೂಃ ಓಂಕಾರ ಪ್ರಭವಾ ಭುವಃ ||
ಓಂಕಾರಪ್ರಭವಾ ಸ್ವಹಃ ಓಂಕಾರ ಪ್ರಭವೋ ಮಹಃ |
ಓಂಕಾರ ಪ್ರಭವೋ ಜನಃ ಓಂಕಾರ ಪ್ರಭವೋ ತಪಃ ||
ಓಂಕಾರಪ್ರಭವಂ ಸತ್ಯಂ ಓಂಕಾರಪ್ರಭವೋ ರವಿಃ |
ಓಂಕಾರ ಪ್ರಭವಾತ್ಸರ್ವಂ ತ್ರೈಲೋಕ್ಯಂ ಸಚರಾಚರಂ ||
ಸರ್ವವ್ಯಾಪಕಮೋಂಕಾರಂ ಮಂತ್ರಾನ್ಯತ್ರ ನ ಶೋಭಯೇತ್ |
ಪ್ರಣವೋಹಿ ಪರಬ್ರಹ್ಮ ಪ್ರಣವೋಹಿ ಪರಮಂ ಪದಂ ||
ಓಂಕಾರಂ ನಾದರೂಪಂ ಚ ಓಂಕಾರಂ ಬಿಂದುರೂಪಕಂ |
ಓಂಕಾರಂ ಚ ಕಲಾರೂಪಂ ಓಂಕಾರಂ ಮಂತ್ರರೂಪಕಂ ||
ಓಂಕಾರಂ ವ್ಯಾಪಿಸರ್ವತ್ರ ಓಂಕಾರಂ ಗೌಪ್ಯಮಾನನಂ |
ಇತಿ ಪ್ರಣವಂ ವಿಜ್ಞೇಯಂ ದುರ್ಲಭಂ ಕಮಲಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./397
ಇದಕ್ಕೆ ಪ್ರಣವೋಪನಿಷತ್ :
ಅಕಾರವೆಂಬ ಪ್ರಣವದಲ್ಲಿ-
“ದಂಡಶ್ಚ ತಾರಕಾಕಾರೋ ಭವತಿ | ಓಂ ನಿರಾಳಾತ್ಮಾ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ದಶಮಂ ಪ್ರಣವಾಂಶಕೇ ||’
ಉಕಾರವೆಂಬ ಪ್ರಣವದಲ್ಲಿ-
“ಕುಂಡಲಶ್ಚ ಅರ್ಧಚಂದ್ರೋ ಭವತಿ | ಓಂ ನಿರಂಜನಾತ್ಮಾ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ಏಕಾದಶ ಪ್ರಣವಾಂಶಕೇ ||’
ಮಕಾರವೆಂಬ ಪ್ರಣವದಲ್ಲಿ-
“ದರ್ಪಣಶ್ಚ ಜ್ಯೋತಿರೂಪೋ ಭವತಿ | ಓಂ ನಿರಾಮಯೋ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ ||
ಅಕಾರೇ ಚ ಉಕಾರೇ ಚ ಮಕಾರೇ ಚ ನಿರಂಜನಂ |
ಇದಮೇಕಂ ಸಮುತ್ಪನ್ನಂ ಓಮಿತಿ ಜ್ಯೋತಿರೂಪಕಂ ||’
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./398
ಇದಕ್ಕೆ ಪ್ರಣವೋಪನಿಷತ್ತು :
ಅಕಾರವೆಂಬ ಪ್ರಣವದಲ್ಲಿ-
“ದಂಡಶ್ಚ ತಾರಕಾಕಾರೋಭವತಿ ಓಂ ನಿರಾಳಾತ್ಮ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ದಶಮಂ ಪ್ರಣವಾಂಶಕೇ ||”
ಉಕಾರವೆಂಬ ಪ್ರಣವದಲ್ಲಿ-
“ಕುಂಡಲಶ್ಚ ಅರ್ಧಚಂದ್ರೋಭವತಿ ಓಂ ನಿರಂಜನಾತ್ಮಾ ದೇವತಾ
ಉಕಾರೇ ಚ ಲಯಂ ಪ್ರಾಪ್ತೇ ಏಕಮೇವ ಪ್ರಣವಾಂಶಕೇ ||”
ಮಕಾರವೆಂಬ ಪ್ರಣವದಲ್ಲಿ-
“ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ನಿರಾಮಯಾತ್ಮಾ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ ||”
“ಅಕಾರೇ ಚ ಉಕಾರೇ ಚ ಮಕಾರೇ ಚ ನಿರಂಜನಂ |
ಇದಮೇಕಂ ಸಮುತ್ಪನ್ನಂ ಓಂ ಇತಿ ಜ್ಯೋತಿರೂಪಕಂ ||
ಪ್ರಥಮಂ ಕಾರಕಾರೂಪಂ ದ್ವಿತೀಯೋ ದಂಡ ಉಚ್ಯತೇ |
ತೃತೀಯಃ ಕುಂಡಲಾಕಾರಃ ಚತುರ್ಥಶ್ಚಾರ್ಧಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠೋ ಜ್ಯೋತಿಸ್ವರೂಪಕಂ |
ಇತಿ ಪ್ರಣವಃ ವಿಜ್ಞಾತಃ ಏತದ್ಗೋಪಂ ವರಾನನೇ ||
ಓಂಕಾರಪ್ರಭವೋ ರುದ್ರಃ ಓಂಕಾರ ಪ್ರಭುವೋ ಜಪಃ |
ಓಂಕಾರಪ್ರಭವೋ ಬ್ರಹ್ಮಾ ಓಂಕಾರ ಪ್ರಭವೋ ಹರಿಃ ||
ಓಂಕಾರಪ್ರಭವಶ್ಚಂದ್ರಃ ಓಂಕಾರ ಪ್ರಭುವೋ ರವಿಃ |
ಓಂಕಾರಪ್ರಭವೋ ವೇದಃ ಓಂಕಾರ ಪ್ರಭವಃ ಸ್ವರಃ ||
ಓಂಕಾರಪ್ರಭವಂ ಸರ್ವಂ ತ್ರೈಲೋಕ್ಯಂ ಸಚರಾಚರಂ |
ಸರ್ವವ್ಯಾಪಕಮೋಂಕಾರಂ ಮಂತ್ರಾಣ್ಯನ್ಯತ್ರನಸೋ ಭವೇತ್ ||
ಪ್ರಣವೋಹಿಃ ಪರಬ್ರಹ್ಮ ಪ್ರಣವಃ ಪರಮಂ ಪದಂ |
ಓಂಕಾರಂ ನಾದರೂಪಂ ಚ ಓಂಕಾರಂ ಮಂತ್ರರೂಪಕಂ |
ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ |
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./399
ಇದಕ್ಕೆ ಮಹದೋಂಕಾರೋಪನಿಷತ್ತು :
ಉಕಾರವೆಂಬ ಪ್ರಣವದಲ್ಲಿ-
“ದಂಡಶ್ಚ ತಾರಾಕಾಕಾರೋ ಭವತಿ ಓಂ ಸ್ವಯಂಭುಲಿಂಗ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ಏಕಾದಶಮೇ ಪ್ರಣವಾಂಶಕೇ || ”
ಮಕಾರವೆಂಬ ಪ್ರಣವದಲ್ಲಿ-
“ಕುಂಡಲಶ್ಚ ಅರ್ಧಚಂದ್ರೋ ಭವತಿ ಓಂ ಶಿವತತ್ವಂ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ದ್ವಾದಶಂ ಪ್ರಣವಾಂಶಕೇ || ”
ಅಕಾರವೆಂಬ ಪ್ರಣವದಲ್ಲಿ-
“ದರ್ಪಣಶ್ಚ ಜ್ಯೋತಿರೂಪೋ ಭವತಿ ಓಂ ಗುರುತತ್ವಂ ದೇವತಾ|
ಅಕಾರೇ ಚ ಲಯಂ ಪ್ರಾಪ್ತೇ ತ್ರಯೋದಶಮೇ ಪ್ರಣವಾಂಶಕೇ ||”
“ಉಕಾರೇ ಚ ಮಕಾರೇ ಚ ಅಕಾರಂ ಚಾಕ್ಷರತ್ರಯಂ |
ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ |
ಮಕಾರಂ ಕಲಾ ಚೈವ ನಾದಬಿಂದುಕಲಾತ್ಮನೇ ||
ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ |
ಪ್ರಣವೋಹಿ ಪರಬ್ರಹ್ಮ ಪ್ರಣವಂ ಪರಮಂ ಪದಂ ||
ಓಂಕಾರಂ ನಾದರೂಪಂಚ ಓಂಕಾರಂ ಮಂತ್ರರೂಪಕಂ |
ಓಂಕಾರಂ ವ್ಯಾಪಿ ಸರ್ವತ್ರ ಓಂಕಾರಂ ಗೋಪ್ಯಮಾನನಂ ||”
ಇಂತೆಂದುದಾಗಿ, ಅಪ್ರಮಾಣ ಕೂಡಲಸಂಗಮದೇವಾ./400
ಇನ್ನು ಅಂಗತ್ರಯಂಗಳಲ್ಲಿ ಲಿಂಗತ್ರಯಸ್ವಾಯತವದೆಂತೆಂದಡೆ :
ಸುಷುಪ್ತಾವಸ್ಥೆಯೆಂಬ ಯೋಗಾಂಗದಲ್ಲಿ
ಭಾವಲಿಂಗ ಸ್ವಾಯತವಾಗಿಹುದು.
ಸ್ವಪ್ನಾವಸ್ಥೆಯೆಂಬ ಭೋಗಾಂಗದಲ್ಲಿ
ಪ್ರಾಣಲಿಂಗ ಸ್ವಾಯತವಾಗಿಹುದು.
ಜಾಗ್ರಾವಸ್ಥೆಯೆಂಬ ತ್ಯಾಗಾಂಗದಲ್ಲಿ
ಇಷ್ಟಲಿಂಗ ಸ್ವಾಯತವಾಗಿಹುದು ನೋಡಾ.
ಇದಕ್ಕೆ ಈಶ್ವರೋವಾಚ : “ಲಿಂಗಂ ತತ್ಪದಮಾಖ್ಯಾತಂ ಅಂಗಂ ತ್ವಂ ಪದಮೀರಿತಂ |
ಸಂಯೋಗೋಸಿ ಪದಂ ಪ್ರೋಕ್ತಂ ಅನಯೋರಂಗಲಿಂಗಯೋಃ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./401
ಇನ್ನು ಅಂತರಾತ್ಮ ಪರಮಾತ್ಮನ ನಿವೃತ್ತಿ ಅದೆಂತೆಂದಡೆ :
ಅಂತರಾತ್ಮನೆಂಬ ಮಹಾಗುರು
ಪರಮಾತ್ಮನೆಂಬ ಮಹಾಲಿಂಗದಲ್ಲಿ ಅಡಗಿತ್ತು.
ಆ ಪರಮಾತ್ಮನೆಂಬ ಮಹಾಲಿಂಗವು
ಸರ್ವಾತ್ಮನೆಂಬ ಮಹಾಜಂಗಮದಲ್ಲಿ ಅಡಗಿತ್ತು.
ಆ ಸರ್ವಾತ್ಮನೆಂಬ ಮಹಾಜಂಗಮ ತಾನೆ ನಿತ್ಯ ನಿರಂಜನ
ನಿರಾಮಯ ನಿರಾಮಯಾತೀತನಾಗಿದ್ದನು ನೋಡಾ,
ಅಪ್ರಮಾಣಕೂಡಲಸಂಗಮದೇವಾ./402
ಇನ್ನು ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಾಸ್ವರೂಪ, ದಂಡಸ್ವರೂಪ, ಕುಂಡಲಾಕಾರ, ಅರ್ಧಚಂದ್ರಕ,
ದರ್ಪಣಾಕಾರ, ಜ್ಯೋತಿಸ್ವರೂಪದಲ್ಲಿಹ ಪಂಚಾಕ್ಷರ ಚಿದಾತ್ಮ ಪರಮಾತ್ಮನ
ಐಕ್ಯವದೆಂತೆಂದಡೆ : ಆ ಪ್ರಣವದ ತಾರಕಾಸ್ವರೂಪದಲ್ಲಿಹ ನಕಾರವು
ಆ ಪ್ರಣವದ ತಾರಕಾಸ್ವರೂಪದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರವು
ಆ ಪ್ರಣವದ ದಂಡಸ್ವರೂಪದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರವು
ಆ ಪ್ರಣವದ ಕುಂಡಲಾಕಾರದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿಯ ವಕಾರವು
ಆ ಪ್ರಣವದ ಅರ್ಧಚಂದ್ರಕದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರವು
ಆ ಪ್ರಣವದ ದರ್ಪಣಾಕಾರದಲ್ಲಿಯೇ ಐಕ್ಯವಾಯಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿಹ ಚಿದಾತ್ಮ ಪರಮಾತ್ಮರಿಬ್ಬರೂ
ಆ ಪ್ರಣವದ ಜ್ಯೋತಿಸ್ವರೂಪದಲ್ಲಿಯೇ ಐಕ್ಯವಾದರು ನೋಡಾ.
ಇದಕ್ಕೆ ಮೂಲಾಗಮೇ : “ಓಂಕಾರ ತಾರಕರೂಪೇ ನಕಾರಂ ಚ ವಿಲೀಯತೇ |
ಓಂಕಾರ ದಂಡಕರೂಪೇ ಚ ಮಕಾರಂ ಚಾಪಿ ಜಾಯತೇ ||
ಓಂಕಾರ ಕುಂಡಲಾಕಾರೇ ಶಿಕಾರಂ ಲೀಯತೇ ತಥಾ |
ಓಂಕಾರಾರ್ಧಚಂದ್ರೇ ಚ ವಕಾರಂ ಚಾಪಿ ಲೀಯತೇ ||
ಓಂಕಾರ ದರ್ಪಣಾಕಾರೇ ಯಕಾರಂ ಲೀಯತೇ ತಥಾ ||
ಓಂಕಾರ ಜ್ಯೋತಿಸ್ವರೂಪೇ ಚಿತ್ಪರಂ ಚಾಪಿ ಲೀಯತೇ |
ಇತ್ಯಕ್ಷರಂ ಐಕ್ಯಂ ಜ್ಞಾನಂ ದುರ್ಲಭಂ ಕಮಲಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./403
ಇನ್ನು ಅಖಂಡಪರಿಪೂರ್ಣ ಅಪ್ರಮಾಣ ಅಗೋಚರ ಅಪ್ರಮೇಯ
ಅವ್ಯಕ್ತ ಅನಂತತೇಜ ಅನಂತಪ್ರಚಯ ಅನಂತಕೋಟಿ
ಸೂರ್ಯಚಂದ್ರಾಗ್ನಿಪ್ರಕಾಶವಾಗಿಹ
ಮಹಾಘನಲಿಂಗದಲ್ಲಿ ವಿಶ್ವತೋ ಮುಖ, ವಿಶ್ವತೋ ಚಕ್ಷು,
ವಿಶ್ವತೋ ಹಸ್ತ, ವಿಶ್ವತೋ ಪಾದ, ವಿಶ್ವತೋ ಬಾಹುವನುಳ್ಳ
ಅನಾದಿ ಸದಾಶಿವತತ್ವ ಉತ್ಪತ್ಯವಾಯಿತ್ತು.
ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು.
ಆ ಅನಾದಿ ಶಿವತತ್ವದಿಂದ ಅನೇಕ ಮುಖ, ಅನೇಕ ಚಕ್ಷು,
ಅನೇಕ ಬಾಹು, ಅನೇಕ ಪಾದವನುಳ್ಳ ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು.
ಆ ಅನಾದಿ ಈಶ್ವರತತ್ವದಲ್ಲಿ ಸಹಸ್ರ ಶಿರ, ಸಹಸ್ರ ಅಕ್ಷ,
ಸಹಸ್ರ ಬಾಹು, ಸಹಸ್ರ ಪಾದವನುಳ್ಳ
ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು.
ಆ ಅನಾದಿ ಮಹೇಶ್ವರತತ್ವದಲ್ಲಿ ತ್ರಿಪಂಚಮುಖ, ತ್ರಿದಶಭುಜ,
ತ್ರಿದಶಪಾದವನುಳ್ಳ ಆದಿ ಸದಾಶಿವ ಉತ್ಪತ್ಯವಾಯಿತ್ತು.
ಆ ಆದಿ ಸದಾಶಿವತತ್ವದಲ್ಲಿ ಷಷ್ಠ ವಕ್ತ್ರ, ದ್ವಾದಶಭುಜ,
ತ್ರಿಪಾದವನುಳ್ಳ ಆದಿ ಈಶ್ವರತತ್ವ ಉತ್ಪತ್ಯವಾಯಿತ್ತು.
ಆ ಆದಿ ಈಶ್ವರತತ್ವದಲ್ಲಿ ಪಂಚವಿಂಶತಿ ಮುಖ,
ಪಂಚದಶಭುಜವನುಳ್ಳ ಸದಾಶಿವತತ್ವ ಉತ್ಪತ್ಯವಾಯಿತ್ತು.
ಇದಕ್ಕೆ ಅತಿ ಮಹಾಗಮೇ : “ಅಖಂಡಲಿಂಗ ಸಂಭೂತಾ ಅನಾದಿ ಸಾದಾಖ್ಯಸ್ತಥಾ |
ಅನಾದಿ ವಿಶ್ವತೋಮುಖತತ್ವೇ ಚ ಅನಾದಿ ಈಶ್ವರೋದ್ಭವಃ ||
ಅನಾದಿ ಈಶ್ವರತತ್ವೇ ಚ ಅನಾದಿ ಮಾಹೇಶ್ವರೋ ಭವೇತ್ |
ಅನಾದಿ ಮಾಹೇಶ್ವರ ಶಂಭುತೊ ಆದಿ ಸದಾಖ್ಯ ಸ್ತಥಾ ||
ಆದಿ ಸಾದಾಖ್ಯತತ್ವೇ ಚ ಆದಿ ಈಶ್ವರೋದ್ಭವಂ |
ಆದಿ ಈಶ್ವರತತ್ವೇ ಚ ಆದಿ ಮಾಹೇಶ್ವರೋ ಭವೇತ್ ||
ಆದಿ ಮಾಹೇಶ್ವರ ಶಂಭುತೊ ಶಿವಸದಾಶಿವಾಯುವೋ |
ಇತಿ ತತ್ವೋದ್ಭವಜ್ಞಾನಂ ದುರ್ಲಭಂ ಕಮಲಾನನೇ|| ”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./404
ಇನ್ನು ಅಖಂಡಮಹಾಜ್ಯೋತಿಪ್ರಣವದ
ಜ್ಯೋತಿಸ್ವರೂಪದಲ್ಲಿ ಮಕಾರ ಉತ್ಪತ್ಯ.
ಆ ಪ್ರಣವದ ಕುಂಡಲಾಕಾರದಲ್ಲಿ ಅಕಾರ ಉತ್ಪತ್ಯ.
ಆ ಪ್ರಣವದ ತಾರಕಾಸ್ವರೂಪದಲ್ಲಿ ಉಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ : ಶ್ರೀ ಮಹಾದೇವ ಉವಾಚ-
“ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ |
ಓಂಕಾರಂ ಕುಂಡಲಾಕಾರಂ ಅಕಾರಂ ಚ ಪ್ರಜಾಯತೇ ||
ಓಂಕಾರಂ ತಾರಕಾರೂಪೇ ಉಕಾರಂ ಚ ಪ್ರಜಾಯತೇ |
ಇತ್ಯಕ್ಷರತ್ರಯಂ ದೇವಿ ಸ್ಥಾನಸ್ಥಾನೇಷು ಜಾಯತೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./405
ಇನ್ನು ಅಗ್ನಿಧಾರಣವೆಂತೆಂದಡೆ :
ಮೂಲಜ್ವಾಲೆಯನೆಬ್ಬಿಸಿ ಸುಷುಮ್ನನಾಳದ
ಬಟ್ಟೆಯ ತುದಿಯನಡರಿ
ಸಹಸ್ರದಳಮಂಟಪನೊಳಹೊಕ್ಕು ನೋಡಿ
ಅಲ್ಲಿ ವಿಶ್ವತೋಮುಖ, ವಿಶ್ವತೋಚಕ್ಷು,
ವಿಶ್ವತೋಹಸ್ತ, ವಿಶ್ವತೋಪಾದವನುಳ್ಳ
ಮಹಾಗುರುವಂ ಕಂಡು ಪರಿಣಾಮಿಸುತ್ತಿರ್ದನು ನೋಡಾ
ಅಪ್ರಮಾಣಕೂಡಲಸಂಗಮದೇವಾ./406
ಇನ್ನು ಅತಿ ಸೂಕ್ಷ್ಮಪಂಚಾಕ್ಷರದುತ್ಪತ್ಯವದೆಂತೆಂದಡೆ :
ಆ ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಸ್ವರೂಪದಲ್ಲಿ ನಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿ ಮಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಶಿಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ವಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಯಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ
ಚಿದಾತ್ಮ ಪರಮಾತ್ಮರುತ್ಪತ್ಯವಾದರು ನೋಡಾ,
ಇದಕ್ಕೆ ಚಿತ್ಪಿಂಡಾಗಮೇ : “ಓಂಕಾರ ತಾರಕಾರೂಪೇ ನಕಾರಂ ಚಾತ್ರಜಾಯತೇ |
ಓಂಕಾರ ದಂಡರೂಪೇ ಚ ಮಕಾರಂ ಚ ಸಮುದ್ಭವಂ ||
ಓಂಕಾರ ಕುಂಡಲಾಕಾರೇ ಶಿಕಾರಂ ಜಾಯತೇ ತಥಾ |
ಓಂಕಾರ ಅರ್ಧಚಂದ್ರೇ ಚ ವಕಾರಂಚೋದ್ಭವಂ ಸದಾ |
ಓಂಕಾರ ದರ್ಪಣಾಕಾರೇ ಯಕಾರಂ ಚಾಪಿ ಜಾಯತೇ |
ಓಂಕಾರ ಜ್ಯೋತಿರೂಪೇ ಚ ಚಿತ್ಪರಂ ಚೈವ ಜಾಯತೇ ||
ಇತ್ಯಕ್ಷರಸಮುತ್ಪನ್ನಂ ಸುಸೂಕ್ಷ್ಮಂ ಕಮಲಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./407
ಇನ್ನು ಅತಿಸೂಕ್ಷ್ಮಪಂಚಾಕ್ಷರದ ಕಾಂತಿ,
ಅತಿಸೂಕ್ಷ್ಮಪಂಚಾಕ್ಷರದ ನೆಲೆ, ಚಿದಾತ್ಮ-ಪರಮಾತ್ಮನ ಕಾಂತಿ,
ಚಿದಾತ್ಮ-ಪರಮಾತ್ಮನ ನೆಲೆ ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಆ ಪ್ರಣವದ ತಾರಕಸ್ವರೂಪದಲ್ಲಿ,
ಅರುವತ್ತುನೂರುಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿ
ನಕಾರವಿಹುದು ನೋಡಾ.
ಆ ಪ್ರಣವದ ದಂಡಕಸ್ವರೂಪದಲ್ಲಿ
ಎಪ್ಪತ್ತುನೂರುಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿ
ಮಕಾರವಿಹುದು ನೋಡಾ.
ಆ ಪ್ರಣವದ ಕುಂಡಲಾಕಾರದಲ್ಲಿ
ಎಂಬತ್ತುನೂರುಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿ
ಶಿಕಾರವಿಹುದು ನೋಡಾ.
ಆ ಪ್ರಣವದ ಅರ್ಧಚಂದ್ರಕದಲ್ಲಿ
ತೊಂಬತ್ತುನೂರುಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿ
ವಕಾರವಿಹುದು ನೋಡಾ.
ಆ ಪ್ರಣವದ ದರ್ಪಣಾಕಾರದಲ್ಲಿ
ಸಾವಿರನೂರುಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿ
ಯಕಾರವಿಹುದು ನೋಡಾ.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ
ಅನೇಕಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿ
ಚಿದಾತ್ಮ-ಪರಮಾತ್ಮರಿಹರು ನೋಡಾ.
ಅಪ್ರಮಾಣಕೂಡಲಸಂಗಮದೇವಾ./408
ಇನ್ನು ಅಮೃತಧಾರಣವದೆಂತೆಂದಡೆ :
ಮೂಲವಾಯುವಂ ಪಿಡಿದು ಮೂಲಜ್ವಾಲೆಯನೆಬ್ಬಿಸಿ,
ಅಮಳೋಕ್ಯದ್ವಾರದಲ್ಲಿ ಜಿಹ್ವೆಯನೇರಿಸಿ,
ಚಂದ್ರಮಂಡಲದೊಳಿಹ ಅಮೃತವನುಂಡರೆ
ಅಜ ಹರಿ ಸುರ ರುದ್ರಾದಿಗಳಿಗೊಡೆಯ ನೋಡಾ
ಅಪ್ರಮಾಣಕೂಡಲಸಂಗಮದೇವಾ./409
ಇನ್ನು ಅಷ್ಟನಾದದ ನೆಲೆ ಅದೆಂತೆಂದಡೆ :
ಆಧಾರಚಕ್ರದಲ್ಲಿ ಪೆಣ್ದುಂಬಿಯನಾದವಿಹುದು.
ಸ್ವಾಧಿಷ್ಠಾನಚಕ್ರದಲ್ಲಿ ವೀಣಾನಾದವಿಹುದು.
ಮಣಿಪೂರಕ ಚಕ್ರದಲ್ಲಿ ಘಂಟಾನಾದವಿಹುದು.
ಅನಾಹತಚಕ್ರದಲ್ಲಿ ಭೇರೀನಾದವಿಹುದು.
ವಿಶುದ್ಧಿಚಕ್ರದಲ್ಲಿ ಮೇಘಧ್ವನಿನಾದವಿಹುದು.
ಆಜ್ಞಾಚಕ್ರದಲ್ಲಿ ಪ್ರಣವನಾದವಿಹುದು.
ಬ್ರಹ್ಮಚಕ್ರದಲ್ಲಿ ದಿವ್ಯನಾದವಿಹುದು.
ಶಿಖಾಚಕ್ರದಲ್ಲಿ ಸಿಂಹನಾದವಿಹುದು ನೋಡಾ.
ಇದಕ್ಕೆ ರುದ್ರಕೋಟಿ ಸಂಹಿತಾಯಾಂ : “ಆಧಾರೇ ಭ್ರಮರಂ ಚೈವ ಸ್ವಾಧಿಷ್ಠೇ ವೀಣಕಂ ತಥಾ |
ಮಣಿಪೂರೇ ಚ ಘಂಟಾ ಚ ಭೇರೀನಾದಂಚಾನಾಹತಂ ||
ವಿಶುದ್ಧೌ ಮೇಘನಾದಂ ಚ ಆಜ್ಞೇ ಪ್ರಣವನಾದಕಂ |
ಬ್ರಹ್ಮಾ ಚ ದಿವ್ಯನಾದಂ ಚ ಸಿಂಹನಾದೇ ಶಿಖಾಗ್ರಕಂ |
ಏವಮಷ್ಟನಾದಂ ಜ್ಞಾತ್ವಾ ದುರ್ಲಬಂ ಕಮಲಾನನೇ ||”
ಇಂತೆಂದುದಾಗಿ,ಅಪ್ರಮಾಣಕೂಡಲಸಂಗಮದೇವ./410
ಇನ್ನು ಅಷ್ಟನಾದನಿವೃತ್ತಿಯೆಂತೆಂದಡೆ :
ವೀಣಾನಾದದ ಸಹಸ್ರಾಂಶದಲ್ಲಿ ಪೆಣ್ದುಂಬಿನಾದವಡಗಿತ್ತು.
ಘಂಟಾನಾದದ ಸಹಸ್ರಾಂಶದಲ್ಲಿ ವೀಣಾನಾದವಡಗಿತ್ತು.
ಭೇರೀನಾದದ ಸಹಸ್ರಾಂಶದಲ್ಲಿ ಘಂಟಾನಾದವಡಗಿತ್ತು.
ಮೇಘನಾದದ ಸಹಸ್ರಾಂಶದಲ್ಲಿ ಭೇರೀನಾವಡಗಿತ್ತು.
ಪ್ರಣವನಾದದ ಸಹಸ್ರಾಂಶದಲ್ಲಿ ಮೇಘನಾದವಡಗಿತ್ತು.
ದಿವ್ಯನಾದದ ಸಹಸ್ರಾಂಶದಲ್ಲಿ ಪ್ರಣವನಾದವಡಗಿತ್ತು.
ಸಿಂಹನಾದದ ಸಹಸ್ರಾಂಶದಲ್ಲಿ ದಿವ್ಯನಾದವಡಗಿತ್ತು.
ನಿಶ್ಶಬ್ದವೆಂಬ ಪರಬ್ರಹ್ಮದ ನೆನಹಿನ ಕೋಟ್ಯಾಂಶದಲ್ಲಿ ಸಿಂಹನಾದವಡಗಿತ್ತು.
ಆ ನಿಶ್ಶಬ್ದವೆಂಬ ಪರಬ್ರಹ್ಮವು ಅಡಗಿ ನಿಶ್ಶೂನ್ಯವಾಯಿತ್ತು ನೋಡಾ.
ಇದಕ್ಕೆ ನಿರಂಜನಾತೀತಾಗಮೇ : “ವೀಣಾನಾದಸಹಸ್ರಾಂಶೇ ಭ್ರಮರಂ ಚ ವಿಲೀಯತೇ |
ಘಂಟಾನಾದಸಹಸ್ರಾಂಶೇ ವೀಣಾನಾದ ವಿಲೀಯತೇ ||
ಭೇರೀನಾದ ಸಹಸ್ರಾಂಶೇ ಘಂಟಾನಾದ ವಿಲೀಯತೇ |
ಮೇಘನಾದ ಸಹಸ್ರಾಂಶೇ ಭೇರೀನಾದೇ ವಿಲೀಯತೇ |
ಪ್ರಣವನಾದ ಸಹಸ್ರಾಂಶೇ ಮೇಘನಾದಂ ಚ ಲೀಯತೇ |
ದಿವ್ಯನಾದ ಸಹಸ್ರಾಂಶೇ ಪ್ರಣವಃ ಸವಿಲೀಯತೇ ||”
ಇಂತೆಂದುದಾಗಿ,
ಇದಕ್ಕೆ ಶ್ರುತಿ : “ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./411
ಇನ್ನು ಆ ಅಕಾರ ಉಕಾರ ಮಕಾರ ಇವು ಮೂರು ಬೀಜಾಕ್ಷರ.
ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ.
ಅಕಾರವೇ ರುದ್ರ, ಉಕಾರವೇ ಈಶ್ವರ, ಮಕಾರವೇ ಸದಾಶಿವ.
ಅಕಾರವೆಂಬ ಪ್ರಣವದಲ್ಲಿ ನಕಾರ ಮಕಾರ ಉತ್ಪತ್ಯ ಲಯ.
ಉಕಾರವೆಂಬ ಪ್ರಣವದಲ್ಲಿ ಶಿಕಾರ ವಕಾರ ಉತ್ಪತ್ಯ ಲಯ.
ಮಕಾರವೆಂಬ ಪ್ರಣವದಲ್ಲಿ ಯಕಾರ ಆತ್ಮನುತ್ಪತ್ಯ ಲಯ.
ಅಕಾರ ಮಕಾರ ಉಕಾರ ಸಂಯುಕ್ತವಾಗಿ ಓಂಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಓಂಕಾರೋಪನಿಷತ್ : ಅಕಾರವೆಂಬ ಪ್ರಣವದಲ್ಲಿ-
“ನಕಾರಶ್ಚ ಮಕಾರೋ ಭವತಿ | ಓಂ ರುದ್ರೋ ದೇವತಾ |
ಅಕಾರೇ ಚ ಲಯಂ ಪ್ರಾಪ್ತೇ ದ್ವಿತೀಯೇ ಪ್ರಣವಾಂಶಿಕೇ ||”
ಉಕಾರವೆಂಬ ಪ್ರಣವದಲ್ಲಿ-
“ಶಿಕಾರಶ್ಚ ನಕಾರೋ ಭವತಿ | ಓಂ ಈಶ್ವರೋ ದೇವತಾ |
ಉಕಾರೇ ಚ ಲಯಂ ಪ್ರಾಪ್ತೇ ತೃತೀಯಂ ಪ್ರಣವಾಂಶಿಕೇ ||”
ಮಕಾರವೆಂಬ ಪ್ರಣವದಲ್ಲಿ-
“ಯಕಾರಶ್ಚಾತ್ಮಾ ಭವತಿ | ಓಂ ಸದಾಶಿವೋ ದೇವತಾ |
ಮಕಾರೇ ಚ ಲಯಂ ಪ್ರಾಪ್ತೇ ಚತುರ್ಥಂ ಪ್ರಣವಾಂಶಿಕೇ ||”
“ಅಕಾರೇ ಚ ಉಕಾರೇ ಚ ಮಕಾರೇ ಚ ತ್ರಯಕ್ಷರಂ |
ಅಕಾರಂ ನಾದರೂಪೇಣಂ ಉಕಾರಂ ಬಿಂದುರುಚ್ಯತೇ |
ಮಕಾರಂತಿ ಕಲಾಶ್ಚೈವ ನಾದಬಿಂದುಕಲಾತ್ಮನೇ |
ನಾದಬಿಂದುಕಲಾಯುಕ್ತೋ ಓಂಕಾರೋ ಪರಮೇಶ್ವರಃ ||
ವಕಾರಂ ತಾರಕಾರೂಪಂ ಮಕಾರಂ ದಂಡ ಉಚ್ಯತೇ |
ಶಿಕಾರಂ ಕುಂಡಲಾಕಾರಂ ವಕಾರಶ್ಚಾರ್ಧಚಂದ್ರಕಂ |
ಯಕಾರಂ ದರ್ಪಣಾಕಾರಂ ಓಂಕಾರೋ ಜ್ಯೋತಿರೂಪಕಂ |
ಇತಿ ಪ್ರಣವಂ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./412
ಇನ್ನು ಆ ಅಖಂಡ ಪರಿಪೂರ್ಣ ಅಪ್ರಮಾಣ ಅಗೋಚರ
ಅಪ್ರಮೇಯ ಅವ್ಯಕ್ತ ಅನಂತತೇಜ ಅನಂತಪ್ರಚಯ
ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹ
ಮಹಾಘನಲಿಂಗದಲ್ಲಿ ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋ ಹಸ್ತ,
ವಿಶ್ವತೋಪಾದ, ವಿಶ್ವತೋಬಾಹುವನುಳ್ಳ
ಅನಾದಿಸದಾಶಿವತತ್ವ ಉತ್ಪತ್ಯವಾಯಿತ್ತು.
ಆ ಅನಾದಿಸದಾಶಿವತತ್ವದಲ್ಲಿ ಅನೇಕಮುಖ, ಅನೇಕಚಕ್ಷು,
ಅನೇಕ ಬಾಹು, ಅನೇಕ ಪಾದವನುಳ್ಳ
ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು.
ಆ ಅನಾದಿ ಈಶ್ವರತತ್ವದಲ್ಲಿ
ಸಹಸ್ರ ಶಿರ, ಸಹಸ್ರ ಬಾಹು, ಸಹಸ್ರ ಪಾದವನುಳ್ಳ
ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು.
ಆ ಅನಾದಿ ಮಹೇಶ್ವರತತ್ವದಲ್ಲಿ
ತ್ರಿಪಂಚಮುಖ, ತ್ರಿದಶಭುಜ, ತ್ರಿದಶಪಾದವನುಳ್ಳ
ಆದಿಸದಾಶಿವತತ್ವ ಉತ್ಪತ್ಯವಾಯಿತ್ತು.
ಆ ಆದಿಸದಾಶಿವತತ್ವದಲ್ಲಿ
ಷಡ್ವಕ್ತ್ರ ದ್ವಾದಶಭುಜ ತ್ರಿಪಾದವನುಳ್ಳ
ಆದಿ ಈಶ್ವರತತ್ವ ಉತ್ಪತ್ಯವಾಯಿತ್ತು.
ಆ ಆದಿ ಈಶ್ವರತತ್ವದಲ್ಲಿ
ಪಂಚವಿಂಶತಿಮುಖ ಪಂಚದಶಭುಜ ಪಂಚದಶಪಾದವನುಳ್ಳ
ಆದಿಮಹೇಶ್ವರತತ್ವ ಉತ್ಪತ್ಯವಾಯಿತ್ತು.
ಆ ಆದಿಮಹೇಶ್ವರತತ್ವದಲ್ಲಿ
ಪಂಚಮುಖ ದಶಭುಜವನುಳ್ಳ
ಸದಾಶಿವತತ್ವ ಉತ್ಪತ್ಯವಾಯಿತ್ತು ನೋಡಾ,
ಇದಕ್ಕೆ ಅತಿ ಮಹಾಗಮೇ : “ಅಖಂಡಲಿಂಗಸಂಭೂತಾ ಅನಾದಿ ಸಾದಾಖ್ಯಯುತೌ |
ವಿಶ್ವತೋಮುಖ ತತ್ವೇ ಚ ಅನಾದಿ ಈಶ್ವರೋದ್ಭವಾ ||
ಅನಾದಿ ಈಶ್ವರ ತತ್ವೇ ಚ ಅನಾದಿ ಮಾಹೇಶ್ವರೋ ಭವೇತ್ |
ಅನಾದಿ ಮಾಹೇಶ್ವರ ಸಂಭೂತೇ ಆದಿ ಸದಾಶಿವಾಯುತೌ ||
ಅನಾದಿಸಾದಾಖ್ಯ ತತ್ವೇ ಚ ಆದಿ ಈಶ್ವರೋದ್ಭವಂ ಸದಾ |
ಆದಿ ಈಶ್ವರತತ್ವೇ ಚ ಆದಿ ಮಹೇಶ್ವರೋ ಭವೇತ್ ||
ಆದಿ ಮಹೇಶ್ವರ ಸಂಭೂತೌ ಶಿವಃ ಸದಾಶಿವಯುತೌ |
ಇತಿ ತತ್ವೋದ್ಭವಂ ಜ್ಞಾತುಂ ದುರ್ಲಭಂ ಕಮಲಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./413
ಇನ್ನು ಆ ಅಖಂಡಜ್ಯೋತಿರ್ಮಯವಾಗಿಹ
ಗೋಳಕಾಕಾರ ಪ್ರಣವದ ತಾರಕಸ್ವರೂಪದಲ್ಲಿ ಅಕಾರ ಉತ್ಪತ್ಯವಾಯಿತ್ತು.
ಆ ಪ್ರಣಮದ ಕುಂಡಲಾಕಾರದಲ್ಲಿ ಉಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಮಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ : “ಓಂಕಾರ ತಾರಕಾರೂಪೇ ಅಕಾರಂ ಚ ಪ್ರಜಾಯತೇ |
ಓಂಕಾರ ಕುಂಡಲಾಕಾರೇ ಉಕಾರಂ ಚ ಪ್ರಜಾಯತೇ ||
ಓಂಕಾರ ಜ್ಯೋತಿರೂಪೇ ಚ ಮಕಾರಂ ಚಾಪಿ ಜಾಯತೇ |
ಇತ್ಯಕ್ಷರತ್ರಯಂ ದೇವಿ ಸ್ಥಾನಸ್ಥಾನೇಷು ಜಾಯತೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./414
ಇನ್ನು ಆ ಅಖಂಡಮಹಾಜ್ಯೋತಿಪ್ರಣವದ
ತಾರಕಸ್ವರೂಪವೇ ಮೂರ್ತಿಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ ದಂಡಸ್ವರೂಪವೆ ಪಿಂಡಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ ಕುಂಡಲಾಕಾರವೆ ಕಲಾಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ
ಅರ್ಧಚಂದ್ರಾಕಾರವೆ ಬ್ರಹ್ಮಾನಂದ ಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ ದರ್ಪಣಾಕಾರವೆ ವಿಜ್ಞಾನಬ್ರಹ್ಮವು.
ಆ ಅಖಂಡಮಹಾಜ್ಯೋತಿಪ್ರಣವದ ಜ್ಯೋತಿಸ್ವರೂಪವೆ ಪರಬ್ರಹ್ಮವು.
ಈ ಆರು ಷಟ್ಸ್ಥಲಬ್ರಹ್ಮ ನೋಡಾ.
ಇದಕ್ಕೆ ನಿರಂಜನಾತೀತಾಗಮೇ : “ಓಂಕಾರ ತಾರಕಂ ರೂಪಂ ಮೂರ್ತಿಬ್ರಹ್ಮ ಯಥಾ ಭವೇತ್ |
ಓಂಕಾರ ದಂಡರೂಪೇ ಚ ಪಿಂಡಬ್ರಹ್ಮೇತಿ ಕಥ್ಯತೇ ||
ಓಂಕಾರ ಕುಂಡಲಾಕಾರಂ ಕಲಾಬ್ರಹ್ಮೇತಿ ಕೀರ್ತಿತಂ |
ಓಂಕಾರಂ ಅರ್ಧಚಂದ್ರಂ ಚ ಬ್ರಹ್ಮಾನಂದಂ ತಥಾ ಭವೇತ್ ||
ಓಂಕಾರಂ ದರ್ಪಣಾಕಾರಂ ವಿಜ್ಞಾನಬ್ರಹ್ಮ ಉಚ್ಯತೇ |
ಓಂಕಾರಂ ಜ್ಯೋತಿರೂಪಂ ಚ ಪರಬ್ರಹ್ಮ ಯಥಾ ಭವೇತ್ ||
ಪ್ರಣವಂ ಷಡ್ವಿಧಂ ಚೈವ ಷಟ್ಸ್ಥಲಬ್ರಹ್ಮ ಉಚ್ಯತೇ |
ಇತಿ ಷಟ್ಬ್ರಹ್ಮ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./415
ಇನ್ನು ಆ ಆತ್ಮನು ಪೃಥ್ವಿ ಅಪ್ಪು ತೇಜ
ವಾಯು ಆಕಾಶವೆಂಬ ಪಂಚಭೂತಂಗಳಂ
ಪಂಚಭೂತಾಂಶಿಕಮಂ ಕೂಡಿಕೊಂಡು
ದೇಹವಾಗಿ ಬೆಳೆದು, ಆಧ್ಯಾತ್ಮಿಕ, ಆಧಿದೈವಿಕ, ಆಧಿಭೌತಿಕವೆಂಬ
ತಾಪತ್ರಯಂಗಳಿಂದ ನೊಂದು ಬೆಂದು
ಪುಣ್ಯಪಾಪ ವಶದಿಂದ ಜೀವನಾಗಿ,
ಅಂಡಜ, ಸ್ವೇದಜ, ಉದ್ಬಿಜ, ಜರಾಯುಜವೆಂಬ
ಚೌರಾಶಿಲಕ್ಷ ಜೀವಜಂತುಗಳ ಯೋನಿಯಲ್ಲಿ ಬಂದು,
ಹುಟ್ಟದ ಯೋನಿಯಿಲ್ಲ, ಮೆಟ್ಟದ ಭೂಮಿಯಿಲ್ಲ,
ಉಣ್ಣದ ಆಹಾರವಿಲ್ಲ, ಕಾಣದ ಸುಖದುಃಖವಿಲ್ಲ.
ಇದಕ್ಕೆ ಈಶ್ವರ ಉವಾಚ : “ನಾನಾಯೋನಿಸಹಸ್ರಾಣಿ ಗತ್ವಾ ಚೈವಂತು ಮಾಯಯಾ |
ಆಹಾರಂ ವಿವಿಧಂ ಭುಕ್ತ್ವಾ ಪೀತ್ವಾ ಚ ವಿವಿಧಸ್ತನಾನ್ ||”
ಇಂತೆಂದುದಾಗಿ,
ಅಪ್ರಮಾಣಕೂಡಲಂಸಗಮದೇವಾ./416
ಇನ್ನು ಆ ಆದಿ ಉಕಾರ ಪ್ರಣವ, ಆದಿ ಮಕಾರ ಪ್ರಣವ,
ಆದಿ ಅಕಾರಪ್ರಣವ- ಈ ಮೂರು ಪ್ರಣವಂಗಳು ಸಂಯುಕ್ತವಾಗಿ,
ಅಖಂಡ ಮಹಾಜ್ಯೋತಿರ್ಮಯವಾಗಿಹ ಪರಮೋಂಕಾರ ಉತ್ಪತ್ಯವಾಯಿತ್ತು.
ಅದೆಂತೆಂದೊಡೆ : ಆ ಆದಿ ಉಕಾರಪ್ರಣವ, ಆದಿ ಮಕಾರಪ್ರಣವ,
ಆದಿ ಅಕಾರಪ್ರಣವ-ಈ ಮೂರು ಬೀಜಾಕ್ಷರ.
ಆದಿ ಉಕಾರಪ್ರಣವವೇ ಆದಿ ಬಿಂದುಪ್ರಣವ.
ಆದಿ ಮಕಾರಪ್ರಣವವೇ ಆದಿ ಕಲಾಪ್ರಣವ.
ಆದಿ ಅಕಾರಪ್ರಣವವೇ ಆದಿ ನಾದಪ್ರಣವ.
ಆದಿ ಉಕಾರಪ್ರಣವವೇ ಸ್ವಯಂಭುಲಿಂಗ.
ಆದಿ ಮಕಾರಪ್ರಣವವೇ ಶಿವತತ್ವ.
ಆದಿ ಅಕಾರಪ್ರಣವವೇ ಗುರುತತ್ವ.
ಇದಕ್ಕೆ ಈಶ್ವರ ಉವಾಚ : “ಅಕಾರಂ ಗುರುತತ್ವಂ ಚ ಉಕಾರಂ ಲಿಂಗತತ್ವಕಂ |
ಮಕಾರಂ ಶಿವತತ್ವಂ ಚ ಇತಿ ಭೇದೋ ವರಾನನೇ || ”
ಇಂತೆಂದುದಾಗಿ,
ಆ ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ.
ಆದಿ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ.
ಆದಿ ಅಕಾರಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ.
ಆ ಆದಿ ಬಿಂದುಪ್ರಣವ, ಆದಿ ಕಲಾಪ್ರಣವ, ಆದಿ ನಾದಪ್ರಣವಕ್ಕೆ
ಆ ಆದಿ ಪ್ರಕೃತಿಪ್ರಣವಕ್ಕೆ ಆ ಆದಿ ಪ್ರಾಣಮಾತ್ರೆಪ್ರಣವವೆ ಆಧಾರ.
ಆ ಪ್ರಾಣಮಾತ್ರೆಪ್ರಣವಕ್ಕೆ
ಅಖಂಡ ಮಹಾಜ್ಯೋತಿರ್ಮಯ ಲಿಂಗವೇ ಆಧಾರ.
ಉ ಎಂಬ ಆದಿಬಿಂದುಪ್ರಣವವು, ಮ ಎಂಬ ಆದಿಕಲಾಪ್ರಣವವು
[ಅಎಂಬ ಆದಿ ನಾದಪ್ರಣವವು] ಸಂಯುಕ್ತವಾಗಿ
ಅಖಂಡ ಮಹಾಜ್ಯೋತಿರ್ಮಯವಾಗಿಹ ಪರಮೋಂಕಾರವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./417
ಇನ್ನು ಆ ಆದಿ ಮಕಾರಪ್ರಣವ, ಆದಿ ಅಕಾರಪ್ರಣವ,
ಆದಿ ಉಕಾರಪ್ರಣವ-ಈ ಮೂರೂ ಪ್ರಣವಂಗಳು ಬೀಜಸಂಯುಕ್ತವಾಗಿ
ಅಖಂಡ ಮಹದೋಂಕಾರವಾಯಿತ್ತು.
ಅದೆಂತೆಂದಡೆ : ಆ ಆದಿ ಮಕಾರಪ್ರಣವ, ಆದಿ ಅಕಾರಪ್ರಣವ,
ಆದಿ ಉಕಾರಪ್ರಣವ-ಈ ಮೂರೂ ಪ್ರಣವಂಗಳು ಬೀಜಾಕ್ಷರ.
ಆದಿ ಮಕಾರವೇ ಆದಿ ಕಲಾಪ್ರಣವ,
ಆದಿ ಅಕಾರವೆ ಆದಿ ನಾದಪ್ರಣವ.
ಆದಿ ಉಕಾರವೆ ಆದಿ ಬಿಂದುಪ್ರಣವ.
ಆದಿ ಮಕಾರಪ್ರಣವವೇ ಸರ್ವಾತ್ಮನು.
ಆದಿ ಅಕಾರಪ್ರಣವವೇ ಪರಮಾತ್ಮನು.
ಆದಿ ಉಕಾರಪ್ರಣವವೇ ಶಿವಾತ್ಮನು.
ಇದಕ್ಕೆ ಮಹಾದೇವ ಉವಾಚ: “ಅಕಾರಂ ಪರಮಾತ್ಮಾ ಚ ಉಕಾರಃ ಶಿವಾತ್ಮಾ ಭವೇತ್ |
ಮಕಾರಂ ಸರ್ವಾತ್ಮಾ ಚ ಇತಿ ಭೇದಂ ವರಾನನೇ ||”
ಇಂತೆಂದುದಾಗಿ,
ಆದಿ ಮಕಾರಕ್ಕೆ ಆದಿ ಕಲಾಪ್ರಣವವೆ ಆಧಾರ.
ಆದಿ ಅಕಾರಕ್ಕೆ ಆದಿ ನಾದಪ್ರಣವವೆ ಆಧಾರ.
ಆದಿ ಉಕಾರಕ್ಕೆ ಆದಿ ಬಿಂದುಪ್ರಣವವೆ ಆಧಾರ.
ಆದಿ ಪ್ರಾಣಮಾತ್ರೆಯಪ್ರಣವಕ್ಕೆ
ಅಖಂಡ ಜ್ಯೋತಿರ್ಮಯಲಿಂಗವೆ ಆಧಾರ.
ಆದಿ ಮ ಎಂದರೆ ಆದಿ ಕಲಾಪ್ರಣವ.
ಆದಿ ಅ ಎಂದರೆ ಆದಿ ನಾದಪ್ರಣವ.
ಆದಿ ಉ ಎಂಬ ಆದಿ ಬಿಂದುಪ್ರಣವದಲ್ಲಿ
ಬಿಂದು ಸಂಯುಕ್ತವಾಗಿ, ಆದಿ `ಮ’ ಎಂಬ ಆದಿ ಮ ನ ಸ ರ
ಪ್ರಣವದಲ್ಲಿ ಬಂದು ಕೂಡಲು ಮಹದೋಂಕಾರವಾಯಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./418
ಇನ್ನು ಆ ಐಕ್ಯನಲ್ಲಿಯ ಭಕ್ತಂಗೆ ಆತ್ಮನಲ್ಲಿಯ ಪೃಥ್ವಿಯೇ ಅಂಗ.
ಆ ಅಂಗಕ್ಕೆ ಭಾವದಲ್ಲಿಯ ಸುಚಿತ್ತವೇ ಹಸ್ತ.
ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಆಚಾರಲಿಂಗವೇ ಲಿಂಗ.
ಆ ಆಚಾರಲಿಂಗದಮುಖದಲ್ಲಿ ಗಂಧದ ತೃಪ್ತಿಯನೆ ಸಮರ್ಪಣವಂ ಮಾಡಿ
ತೃಪ್ತಿಯನೇ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./419
ಇನ್ನು ಆ ಐಕ್ಯನಲ್ಲಿಯ ಷಡ್ವಿಧ ಷಡುಸ್ಥಲಲಿಂಗ
ಮಿಶ್ರಾರ್ಪಣ ಭೇದವೆಂತೆಂದಡೆ : ಆತ್ಮನೇ ಅಂಗವಾದ ಐಕ್ಯಂಗೆ ಭಾವವೆಂಬ ಹಸ್ತದಲ್ಲಿ
ಮಹಾಲಿಂಗಕ್ಕೆ ಮನವೆಂಬ ಮುಖದಲ್ಲಿ ಪರಿಣಾಮದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೇ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./420
ಇನ್ನು ಆ ಪಿಂಡಮಧ್ಯದಲ್ಲಿಹ ಷಡುಚಕ್ರಂಗಳೊಳು
ಸಪ್ತಕೋಟಿ ಮಹಾಮಂತ್ರಂಗಳ ಸಾರವಾದ ಏಕಾದಶಮಂತ್ರಂಗಳು,
ತೊಂಬತ್ನಾಲ್ಕು ವ್ಯೋಮವ್ಯಾಪಿ ಪದಂಗಳು,
ಪ್ರಣವ ಪಂಚಾಕ್ಷರಂ, ಅಕಾರಾದಿ ಕ್ಷಕಾರಾಂತವಾದ
ಐವತ್ತಾರು ವರ್ಣಂಗಳು, ಇನ್ನೂರಿಪ್ಪತ್ನಾಲ್ಕು ಭುವನಂಗಳು,
ಮೂವತ್ತಾರು ತತ್ವಂಗಳು ಪಂಚಕಲೆಗಳು ಮೊದಲಾದ
ಕಲೆ ಜ್ಞಾನಂಗಳೆಲ್ಲ ಆ ಪಿಂಡಮಧ್ಯದಲ್ಲಿಹ
ಚಕ್ರಂಗಳಲ್ಲಿ ನ್ಯಾಸವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./421
ಇನ್ನು ಆ ಪ್ರಣಮದ
ಜ್ಯೋತಿಸ್ವರೂಪದಲ್ಲಿಹ ಚಿದಾತ್ಮ-ಪರಮಾತ್ಮನಲ್ಲಿ
ಜೀವಹಂಸ ಪರಮಹಂಸನುತ್ಪತ್ಯವಾಗಿ
ಆಜ್ಞಾಚಕ್ರದ ದ್ವಿದಳಪದ್ಮದಲ್ಲಿ ನ್ಯಾಸವಾಗಿಹುದು.
ವಿಶುದ್ಧಿಚಕ್ರದ ಯಕಾರ ಬೀಜಾಕ್ಷರದಲ್ಲಿ
ಅ ಆ ಇ ಈ ಉ ಊ ಋ ೂ ಲುೃ ಲೃೂ ಏ ಐ ಓ ಔ ಅಂ ಅಃ ಎಂಬ
ಷೋಡಶಾಕ್ಷರಂಗಳುತ್ಪತ್ಯವಾಗಿ
ವಿಶುದ್ಧಿಚಕ್ರದ ಷೋಡಶದಳಪದ್ಮದಲ್ಲಿ ನ್ಯಾಸವಾಗಿಹುದು.
ಅನಾಹತಚಕ್ರದ ವಕಾರ ಬೀಜದಲ್ಲಿ
ಕ ಖ ಗ ಘ ಙ ಚ ಛ ಜ ಝ ಞ ಟ ಠ ಎಂಬ
ದ್ವಾದಶಾಕ್ಷರಂಗಳುತ್ಪತ್ಯವಾಗಿ ಅನಾಹತಚಕ್ರದ
ದ್ವಾದಶದಶದಳಪದ್ಮದಲ್ಲಿ ನ್ಯಾಸವಾಗಿಹುದು.
ಮಣಿಪೂರಕಚಕ್ರದ ಶಿಕಾರ ಬೀಜದಲ್ಲಿ
ಡ ಢ ಣ ತ ಥ ದ ಧ ನ ಪ ಫ ಎಂಬ
ದಶಾಕ್ಷರಂಗಳುತ್ಪತ್ಯವಾಗಿ,
ಆ ಮಣಿಪೂರಕಚಕ್ರದ ದಶದಳಪದ್ಮದಲ್ಲಿ ನ್ಯಾಸವಾಗಿಹುದು.
ಸ್ವಾಧಿಷ್ಠಾನಚಕ್ರದ ಮಕಾರ ಬೀಜದಲ್ಲಿ
ಬ ಭ ಮ ಯ ರ ಲ ಎಂಬ ಷಡಕ್ಷರಂಗಳುತ್ಪತ್ಯವಾಗಿ
ಆ ಸ್ವಾಧಿಷ್ಠಾನಚಕ್ರದ ಷಡ್ದಳಪದ್ಮದಲ್ಲಿ ನ್ಯಾಸವಾಗಿಹುದು.
ಆಧಾರಚಕ್ರದ ನಕಾರ ಬೀಜದಲ್ಲಿ
ವ ಶ ಷ ಸ ಎಂಬ ಚತುರಾಕ್ಷರಂಗಳುತ್ಪತ್ಯವಾಗಿ
ಆ ಆಧಾರಚಕ್ರದ ಚತುರ್ದಳಪದ್ಮದಲ್ಲಿ ನ್ಯಾಸವಾಗಿಹುದು ನೋಡಾ.
ಇದಕ್ಕೆ ಕಾಲಾಗ್ನಿರುದ್ರಸಂಹಿತಾಯಾಂ : “ಹಂ ಕ್ಷಂ ದ್ವಿವರ್ಣಕಂ ಚೈವ ಪರಮಾತ್ಮನಿ ಜಾಯತೇ |
ಹಂ ಕ್ಷಂ ದ್ವಿವರ್ಣಕಂ ಚೈವ ಜೀವಾತ್ಮನಿ ಚ ಜಾಯತೇ ||
ಅಆ ಇಈ ಉಊ ವರ್ಣಂ ಚ ಋೂ ಲುೃಲೃೂ ವರ್ಣಂ ವಿದುಃ |
ಏ ಐ ಓ ಔ ಅಂ ಅಃ ವರ್ಣಂ ಯಕಾರಂ ಚಾಪಿ ಜಾಯತೇ ||
ಕಖಗಘಙ ವರ್ಣಂ ಚ ಚಛಜಝಞ ವರ್ಣಕಂ |
ಟಠ ದ್ವಿವರ್ಣಕಂ ಚೈವ ವಕಾರೇ ಜಾಯತೇ ಧೃವಂ ||
ಡಢಣ ತಥ ವರ್ಣಂ ಚ ದಧನ ಪಫ ವರ್ಣಕಂ |
ಇತ್ಯೇತಿ ದಶವರ್ಣಾನಿ ಶಿಕಾರೇ ಚ ಸಮುದ್ಭವಾಃ ||
ಬ ಭ ಮ ಯ ರ ವರ್ಣಂ ಚ ಲ ಏಕೋ ವರ್ಣಕಂ ತಥಾ |
ಇತಿ ಷಡ್ವರ್ಣಕಂ ಚೈವ ಮಕಾರೇ ಚ ಸಜಾಯತೇ |
ವಶಷಸ ಚತುವರ್ಣಂ ನಕಾರಂ ಚ ಸಜಾಯತೇ |
ಇತಿ ವರ್ಣಾಕ್ಷರಂ ನ್ಯಾಸಂ ಸುಸೂಕ್ಷ್ಮಂ ಕಮಲಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./422
ಇನ್ನು ಆ ಪ್ರಣವದ ತತ್ಸ್ಥಾನವೆಂತೆಂದಡೆ :
ಪ್ರಥಮ ತಾರಕಸ್ವರೂಪವಾಗಿಹುದು.
ಎರಡನೆಯದು ದಂಡಸ್ವರೂಪವಾಗಿಹುದು.
ಮೂರನೆಯದು ಕುಂಡಲಾಕಾರವಾಗಿಹುದು.
ನಾಲ್ಕನೆಯದು ಅರ್ಧಚಂದ್ರಾಕಾರವಾಗಿಹುದು.
ಐದನೆಯದು ದರ್ಪಣಾಕಾರವಾಗಿಹುದು.
ಆರನೆಯದು ಜ್ಯೋತಿಸ್ವರೂಪವಾಗಿಹುದು ನೋಡಾ.
ಇದಕ್ಕೆ ಈಶ್ವರೋವಾಚ : “ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ |
ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿಸ್ವರೂಪಕಂ |
ಇತಿ ಪ್ರಣವ ವಿಜ್ಞೇಯಂ ಏತದ್ಗೋಪ್ಯಂ ವರಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./423
ಇನ್ನು ಆ ಪ್ರಣವದ ತಾರಕಾಸ್ವರೂಪ
ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ
ಜ್ಯೋತಿಸ್ವರೂಪದ ಕಾಂತಿಯದೆಂತೆಂದಡೆ : ಆ ಪ್ರಣವದ ತಾರಕಾಸ್ವರೂಪವು
ಅರುವತ್ತುನೂರುಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶವಾಗಿಹುದು ನೋಡಾ.
ಆ ಪ್ರಣವದ ದಂಡಸ್ವರೂಪವು
ಎಪ್ಪತ್ತುನೂರುಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು.
ಆ ಪ್ರಣವದ ಕುಂಡಲಾಕಾರವು
ಎಂಬತ್ತುನೂರುಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು.
ಆ ಪ್ರಣವದ ಅರ್ಧಚಂದ್ರಕಸ್ವರೂಪವು
ತೊಂಬತ್ತುನೂರುಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು.
ಆ ಪ್ರಣವದ ದರ್ಪಣಾಕಾರವು
ಸಾವಿರದ ನೂರುಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು.
ಆ ಪ್ರಣವದ ಜ್ಯೋತಿಸ್ವರೂಪವು
ಅನೇಕಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./424
ಇನ್ನು ಆ ಪ್ರಸಾದಿಯಲ್ಲಿಯ ಭಕ್ತಂಗೆ ಅಗ್ನಿಯಲ್ಲಿಯ ಪೃಥ್ವಿಯೆ ಅಂಗ.
ಆ ಅಂಗಕ್ಕೆ ನಿರಹಂಕಾರದಲ್ಲಿಯ ಸುಚಿತ್ತವೆ ಹಸ್ತ.
ಆ ಹಸ್ತಕ್ಕೆ ಶಿವಲಿಂಗದಲ್ಲಿಯ ಆಚಾರಲಿಂಗವೆ ಲಿಂಗ.
ಆ ಆಚಾರಲಿಂಗಮುಖದಲ್ಲಿ ಪೀತವರ್ಣವಾದ ರೂಪದ್ರವ್ಯವನು
ಸಮರ್ಪಣವಂ ಮಾಡಿ ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./425
ಇನ್ನು ಆ ಲಿಂಗಗರ್ಭದಲ್ಲಿ ಅನೇಕಕೋಟಿ ತತ್ವಂಗಳು,
ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರಡಗಿಹರು ನೋಡಾ.
ಆ ಲಿಂಗಗರ್ಭದಲ್ಲಿ ಅನೇಕಕೋಟಿ ಮಹೇಶ್ವರರು,
ಅನೇಕಕೋಟಿ ರುದ್ರರು, ಅನೇಕಕೋಟಿ ವಿಷ್ಣ್ವಾದಿಗಳಡಗಿಹರು ನೋಡಾ.
ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಬ್ರಹ್ಮರು,
ಅನೇಕಕೋಟಿ ಚಂದ್ರಾದಿತ್ಯರು, ಅನೇಕಕೋಟಿ ಋಷಿಗಳು
ಅಡಗಿಹರು ನೋಡಾ.
ಆ ಲಿಂಗಗರ್ಭದಲ್ಲಿ ಅನೇಕಕೋಟಿ ಇಂದ್ರರು,
ಅನೇಕಕೋಟಿ ದೇವರ್ಕಳು, ಅನೇಕಕೋಟಿ ಬ್ರಹ್ಮಾಂಡಂಗಳಡಗಿ
ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಸ್ವರೂಪು
ಅಖಂಡಪರಿಪೂರ್ಣ ಗೋಳಕಾಕಾರ ಅಪ್ರಮಾಣ ಅಗೋಚರ
ಅಪ್ರಮೇಯ ಅವ್ಯಕ್ತ ಅನಂತತೇಜ ಅನಂತಪ್ರಚಯ
ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶ
ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ.
ಇದಕ್ಕೆ ಶಿವಧರ್ಮಸೂತ್ರೇ : “ಅಸಂಖ್ಯಾತ ತತ್ವಸಂಜ್ಞಾ ಅಸಂಖ್ಯಾ ಅಂಬರಂ ತಥಾ |
ಅಸಂಖ್ಯಾ ದೇವಮುನಯೋ ಲಿಂಗತತ್ವಂ ವಿಲೀಯತೇ ||
ಅಸಂಖ್ಯಾ ಸೂರ್ಯಚಂದ್ರಾಗ್ನಿ ಅಸಂಖ್ಯಾ ದೈತ್ಯಮಾನವಾಃ |
ಅಸಂಖ್ಯಾತ ಸುರೇಂದ್ರಾಣಾಂ ಲಿಂಗಗಭರ್ೆ ವಿಲೀಯತೇ ||
ಅಸಂಖ್ಯಾತ ಮಹಾವಿಷ್ಣುಃ ಅಸಂಖ್ಯಾತ ಪಿತಾಮಹಾಃ |
ಅಸಂಖ್ಯಾತ ಮಹಾಕಾಶಂ ಲಿಂಗಗಭರ್ೆ ವಿಲೀಯತೇ ||”
ಇಂತೆಂದುದಾಗಿ,
ಇದಕ್ಕೆ ಶಿವಧರ್ಮಪುರಾಣೇ : “ಕಲ್ಪಾಂತೇ ತಸ್ಯ ದೇವಸ್ಯ ವಿಲೀಯಂತೇ ಸರ್ವದೇವತಾ |
ದಕ್ಷಿಣೇ ಲೀಯತೇ ಬ್ರಹ್ಮಾ ವಾಮಭಾಗೇ ಜನಾರ್ಧನಃ ||
ಹೃದಯೇ ಚೈವ ಗಾಯತ್ರೀ ಸರ್ವದೇವೋತ್ತಮೋತ್ತಮಃ |
ಲೀಯಂತೇ ಮೂಧ್ರ್ನಿ ವೈ ವೇದಾಃ ಸ್ವಷಡಂಗಪದಕ್ರಮಾತ್ ||
ಓಂಕಾರೇ ಲೀಯತೇ ಸರ್ವಂ ಜಗತ್ಸ್ಥಾವರಜಂಗಮಂ |
ಉತ್ಪಾದ್ಯತೇ ಪುನಃಸ್ಥಾನಾತ್ ಬ್ರಹ್ಮಾದ್ಯಂ ಸಚರಾಚರಂ ||”
ಇಂತೆಂದುದಾಗಿ,
ಇದಕ್ಕೆ ಶಿವಲಿಂಗಾಗಮೇ : “ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿಸ್ತಸ್ಯ ಪೀಠಿಕಾ |
ಆಲಯಂ ಸರ್ವದೇವಾನಾಂ ಲಯನಾಂ ಲಿಂಗಮುಚ್ಯತೇ |
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಉತ್ಪದ್ಯಂತೇ ಪುನಃ ಸ್ಥಾಪನಾತ್ ಬ್ರಹ್ಮವಿಷ್ಣ್ವಾದಿ ದೇವತಾಃ ||”
ಇಂತೆಂದುದಾಗಿ,
ಇದಕ್ಕೆ ಉತ್ತರವಾತುಲಾಗಮೇ : “ನ ಭೂಮಿಃ ಜಲಂ ನೈವ ನ ತೇಜೋ ನ ಚ ವಹ್ನಿಃ |
ಆಕಾಶಂ ನ ಚ ಸೂರ್ಯೊ ನ ಚ ಚಂದ್ರಮಾ ಇಂದ್ರಯೋ |
ನ ಚ ಬ್ರಹ್ಮಾ ನ ಚೋ ವಿಷ್ಣುಃ ನ ಚ ನಕ್ಷತ್ರತಾರಕಾಃ |
ಏಕಮೇಕಂ ಪರಂ ನಾಸ್ತಿ ಅಖಂಡಿತ ಖಂಡೋದಯಂ
ಸರ್ವಶೂನ್ಯಂ ನಿರಾಲಂಬಂ ಸ್ವಯಂ ಲಿಂಗಮಯಂ ಪರಂ ||”
ಇಂತೆಂದುದಾಗಿ,
ಇದಕ್ಕೆ ಮಹಾಗಮಸಾರೇ : “ಊಧ್ರ್ವಶೂನ್ಯಂ ಅಧಃಶೂನ್ಯಂ ಮಧ್ಯಶೂನ್ಯಂ ನಿರಾಮಯಂ |
ಸರ್ವಶೂನ್ಯಂ ನಿರಾಕಾರಂ ಸ್ವಯಂಭೂ ಲಿಂಗಮೂರ್ತಯೇ ||”
ಇಂತೆಂದುದಾಗಿ,
ಇದಕ್ಕೆ ಆದಿನಾರಾಯಣ ಉವಾಚ : “ನಮಸ್ತೇ ಜ್ಞಾನಲಿಂಗಾಯ ಶಿವಲಿಂಗಾಯ ಲಿಂಗಿನೇ |
ನಮಸ್ತೇ ಗೂಢಲಿಂಗಾಯ ವರಲಿಂಗಾಯ ಲಿಂಗಿನೇ ||
ಜಗತ್ಕಾರಣಲಿಂಗಾಯ ಜಗತಾಂ ಪತಯೇ ನಮಃ |
ಆವಯೋಃ ಪತಯೇ ನಿತ್ಯಂ ಪತೀನಾಂ ಪತಯೇ ನಮಃ ||
ಅನಾದಿಮೂಲಸಂಸಾರರೋಗವೈದ್ಯಾಯ ಶಂಭವೇ|
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ಪ್ರಳಯಾಂಬುಧಿಸಂಸ್ಥಾಯ ಪ್ರಳಯೋತ್ಪತ್ತಿಹೇತವೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ಜ್ವಾಲಾಮೂಲಹೃತಲಿಂಗಾಯ ಜ್ವಲನಸ್ತಂಬರೂಪಿಣೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ಆದಿಮಧ್ಯಾಂತಶೂನ್ಯಾಯ ಅಂಬಕಸ್ಸ್ಯಾಪಿ ಹೇತವೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ನಿಷ್ಕಳಾಯ ವಿಶುದ್ಧಾಯ ನಿತ್ಯಾನಂದಸ್ಯ ಹೇತವೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ನಿರ್ವಿಕಾರಾಯ ನಿತ್ಯಾಯ ಸತ್ಯಾಯ ಪರಮಾತ್ಮನೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ಓಂಕಾರ ಶಾಂತಾಯ ಸೂಕ್ಷ್ಮಾಯ ಸ್ತ್ರೀಪುಂಸಾಯಾತ್ಮರೂಪಿಣೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ |
ಲೀಲಾತ್ತಂಚ ದ್ವಯೋರ್ಮಧ್ಯೇ ಸ್ಥಿತಾಯಾತ್ಮರೂಪಿಣೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||”
ಇಂತೆಂದುದಾಗಿ,
ಇದಕ್ಕೆ ಶ್ರೀಮಹಾದೇವ ಉವಾಚ : “ವಾಚಾತೀತಂ ಮನೋತೀತಂ ವರ್ಣಾತೀತಂ ಪರಂ ಶಿವಃ |
ಸರ್ವಶೂನ್ಯ ನಿರಾಕಾರಂ ನಿರಾಲಂಬಸ್ಯ ಲಿಂಗಯೋ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./426
ಇನ್ನು ಆ ಶುಕ್ಲ ಸ್ತ್ರೀ ಪುರುಷರ ಸಂಯೋಗದಿಂದ
ಮಾರುತ ನೂಂಕಲು ಚೈತನ್ಯ ಬೀಜವು
ಆ ಶುಕ್ಲವು ಸ್ತ್ರೀಯ ಶೋಣಿತದಲ್ಲಿ ಬಿದ್ದು ಏಕೀಭೂತವಾಯಿತ್ತು ನೋಡಾ.
ಇದಕ್ಕೆ ಈಶ್ವರ ಉವಾಚ :
“ಚೈತನ್ಯಂ ಬೀಜರೂಪಂ ಚ ಶುಕ್ಲಂ ರಕ್ತಂ ತಥಾ ಜಲಂ |
ಏಕೀಭೂತಂ ಯಥಾ ಕಾಲೇ ತಥಾ ಕಾಲೇ ಪ್ರರೋಪತೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./427
ಇನ್ನು ಆದಿಮೂಲ ಅನಾದಿಮೂಲಗಳಿಗತ್ತತ್ತವಾದ
ಮಹಾಮೂಲಸ್ವಾಮಿಯ ಮೀರಿದ ಅತೀತ ಮೂಲಸ್ವಾಮಿಗತ್ತತ್ತವಾಗಿಹ
ಆ ಅಖಂಡ ಮೂಲಸ್ವಾಮಿಯ ರೂಪು, ಲಾವಣ್ಯ, ಸೌಂದರ್ಯ,
ಅಂಗ-ಪ್ರತ್ಯಂಗಸ್ವರೂಪ ಸ್ವಭಾವಗಳೆಂತೆಂದಡೆ : ಸಹಜ ನಿರಾಲಂಬವಾಗಿಹ, ಮಹಾಘನಕ್ಕೆ ಘನವಹ,
ಮಹಾಘನವಾಗಿಹ ಪ್ರಣವವೆ
ಅಖಂಡಮೂಲಸ್ವಾಮಿಯ ಶಿರಸ್ಸು ನೋಡಾ.
ದಿವ್ಯಾನಂದಪ್ರಣವ ದಿವ್ಯಜ್ಞಾನ ಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಚಕ್ಷು.
ನಿರಾಕಾರಪ್ರಣವ, ನಿರಾಳಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಪುರ್ಬು.
ಅಚಲಾತೀತ ಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಹಣೆ ನೋಡಾ.
ಸಹಜ ನಿರಾಲಂಬಪ್ರಣವವೆ
ಆ ಅಖಂಡ ಮೂಲಸ್ವಾಮಿಯ ನಾಸಿಕ.
ನಿರಾಲಂಬಾತೀತ ಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಉಶ್ವಾಸ-ನಿಶ್ವಾಸಂಗಳು ನೋಡಾ.
ನಿರಾಮಯಪ್ರಣವ ನಿರಾಮಯಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಕರ್ಣ.
ನಿರ್ವಯಲಪ್ರಣವ ನಿರ್ವಯಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಗಲ್ಲ ನೋಡಾ.
ಅಮಲಪ್ರಣವ ಅಮಲಾನಂದಪ್ರಣವ ಅಮಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಗಡ್ಡ ಮೀಸೆ ಕೋರೆದಾಡೆ ನೋಡಾ.
ನಾದ ಬಿಂದು ಕಲಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ತಾಳೋಷ್ಠಸಂಪುಟ ನೋಡಾ.
ಸಹಜಪ್ರಣವ, ಸಹಜಾನಂದಪ್ರಣವ, ಸಹಜಜ್ಯೋತಿಪ್ರಣವ,
ಅನಂತಪ್ರಣವ, ಆನಂದಪ್ರಣವ, ಆನಂದಜ್ಯೋತಿಪ್ರಣವ,
ಅಖಂಡಪ್ರಣವ, ಅಖಂಡ ಜ್ಯೋತಿಪ್ರಣವ, ಅಖಂಡಾನಂದ
ಮಹಾಜ್ಯೋತಿಪ್ರಣವ, ಚಿತ್ಪ್ರಣವ, ಚಿದಾನಂದಜ್ಯೋತಿಪ್ರಣವ,
ಚಿದ್ವ್ಯೋಮಪ್ರಣವ, ನಿತ್ಯನಿಜಾನಂದಪ್ರಣವ,
ಸಚ್ಚಿದಾನಂದಪ್ರಣವ, ನಿತ್ಯನಿರಾಕಾರಪ್ರಣವ,
ಸಕಲ ನಿಃಕಲಾತೀತಪ್ರಣವವೆಂಬ ಷೋಡಶಪ್ರಣವಂಗಳೆ
ಆ ಅಖಂಡ ಮಹಾಮೂಲಸ್ವಾಮಿಯ ಷೋಡಶದಂತಂಗಳು ನೋಡಾ.
ಆ ಒಂದೊಂದು ದಂತಂಗಳ ಕಾಂತಿಯೆ
ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹುದು ನೋಡಾ.
ಕುಳವಿಲ್ಲದ ನಿರಾಕುಳಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಕೊರಳು.
ಅಪ್ರಮಾಣ ಅಗೋಚರಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಭುಜಂಗಳು ನೋಡಾ.
ಪರಮಪ್ರಣವ, ಪರಮಾನಂದಪ್ರಣವ, ಶಿವಪ್ರಣವ,
ಶಿವಜ್ಯೋತಿಪ್ರಣವ,ಅಚಲಪ್ರಣವ, ಅಚಲಾನಂದಪ್ರಣವಂಗಳೆ
ಆ ಅಖಂಡ ಮಹಾಮೂಲಸ್ವಾಮಿಯ ಹಸ್ತಾಂಗುಲಿ ನಖಂಗಳು ನೋಡಾ.
ಪರಬ್ರಹ್ಮಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಎದೆ.
ನಿರಂಜನ ಜ್ಯೋತಿಪ್ರಣವ ನಿರಂಜನಾನಂದವೆಂಬಪ್ರಣವವೆ
ಆ ಅಖಂಡ ಮೂಲಸ್ವಾಮಿಯ ಸಣ್ಣ ಕುಚಗಳು ನೋಡಾ.
ನಿರುಪಮಪ್ರಣವ, ನಿರುಪಮಾತೀತಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ದಕ್ಷಿಣ ವಾಮ ಪಾಶ್ರ್ವಂಗಳು.
ಅನಿರ್ವಾಚ್ಯಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ ಬೆನ್ನು.
ಮಹದಾನಂದಪ್ರಣವವೆ ಆ ಅಖಂಡ ಮಹಾಮೂಲಸ್ವಾಮಿಯ
ಬೆನ್ನಿನೆಲುವು ನೋಡಾ.
ಪಂಚಸಂಜ್ಞೆಯನುಳ್ಳ ಅಖಂಡಗೋಳಕಾರಪ್ರಣವವೆ
ಆ ಅಖಂಡ ಮಹಾಮೂಲಸ್ವಾಮಿಯ ಗರ್ಭ ನೋಡಾ.
ಆ ಗರ್ಭ ಅನಂತಕೋಟಿ ಮಹಾಸೂರ್ಯಚಂದ್ರಾಗ್ನಿ
ಪ್ರಕಾಶವಾಗಿಹುದು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಪ್ರಣವಂಗಳು, ಅನೇಕಕೋಟಿ ತತ್ವಂಗಳು,
ಅನೇಕಕೋಟಿ ಅಕ್ಷರಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿಪತಿಗಳು,
ಅನೇಕಕೋಟಿ ಅನಾದಿಪಶುಗಳು, ಅನೇಕಕೋಟಿ ಅನಾದಿಪಾಶಂಗಳೆಂಬ
ಅನಾದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಆದಿಪತಿಗಳು, ಅನೇಕಕೋಟಿ ಆದಿಪಶುಗಳು,
ಅನೇಕಕೋಟಿ ಆದಿಪಾಶಂಗಳೆಂಬ
ಆದಿಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಪತಿಗಳು, ಅನೇಕಕೋಟಿ ಪಶುಗಳು,
ಅನೇಕಕೋಟಿ ಪಾಶಂಗಳೆಂಬ ಸಿದ್ಧಾಂತ ಜ್ಞಾನತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ತತ್ಪದ,
ಅನೇಕಕೋಟಿ ಅನಾದಿ ತ್ವಂಪದ,
ಅನೇಕಕೋಟಿ ಅನಾದಿ ಅಸಿಪದಂಗಳೆಂಬ
ಅನಾದಿ ವೇದಾಂತಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಆದಿ ತತ್ಪದ,
ಅನೇಕಕೋಟಿ ಆದಿ ತ್ವಂಪದ, ಅನೇಕಕೋಟಿ ಆದಿ ಅಸಿಪದಂಗಳೆಂಬ
ಆದಿ ವೇದಾಂತಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ತ್ವಂಪದಂಗಳು,
ಅನೇಕಕೋಟಿ ತತ್ಪದಂಗಳು, ಅನೇಕಕೋಟಿ ಅಸಿಪದಂಗಳೆಂಬ
ವೇದಾಂತ ಪದತ್ರಯಂಗಳಡಗಿಹವು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿ ಸದಾಶಿವರು,
ಅನೇಕಕೋಟಿ ಅನಾದಿ ಈಶ್ವರರು,
ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಅನಾದಿಸದಾಶಿವರು,
ಅನೇಕಕೋಟಿ ಅನಾದಿ ಈಶ್ವರರು,
ಅನೇಕಕೋಟಿ ಅನಾದಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಸದಾಶಿವರು, ಅನೇಕಕೋಟಿ ಈಶ್ವರರು,
ಅನೇಕಕೋಟಿ ಮಾಹೇಶ್ವರರು ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮರು, ಅನೇಕಕೋಟಿ ಆದಿಬ್ರಹ್ಮರು,
ಅನೇಕಕೋಟಿ ನಾರಾಯಣರು, ಅನೇಕಕೋಟಿ ಆದಿನಾರಾಯಣರು,
ಅನೇಕಕೋಟಿ ರುದ್ರರು, ಅನೇಕಕೋಟಿ ಆದಿರುದ್ರರು
ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಋಷಿಗಳು, ಅನೇಕಕೋಟಿ ಆದಿಋಷಿಗಳು,
ಅನೇಕಕೋಟಿ ಭಾನು, ಅನೇಕಕೋಟಿ ಆದಿಭಾನು,
ಅನೇಕಕೋಟಿ ಚಂದ್ರರು, ಅನೇಕಕೋಟಿ ಆದಿಚಂದ್ರರು
ಅಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಇಂದ್ರರು, ಅನೇಕಕೋಟಿ ಆದಿಮಹೇಂದ್ರರು,
ಅನೇಕಕೋಟಿ ದೇವರ್ಕಳು, ಅನೇಕಕೋಟಿ
ಆದಿದೇವರ್ಕಳಡಗಿಹರು ನೋಡಾ.
ಆ ಗರ್ಭದಲ್ಲಿ ಅನೇಕಕೋಟಿ ಬ್ರಹ್ಮಾಂಡಂಗಳು,
ಅನೇಕಕೋಟಿ ಮಹಾಬ್ರಹ್ಮಾಂಡಂಗಳು,
ಅನೇಕಕೋಟಿ ಆದಿಮಹಾಬ್ರಹ್ಮಾಂಡಂಗಳು ಅಡಗಿಹವು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ನಡುವೇ
ವ್ಯೋಮಾತೀತಪ್ರಣವವು.
ಆ ಅಖಂಡ ಮಹಾಮೂಲಸ್ವಾಮಿಯ ಕಟಿಸ್ಥಾನವೇ
ಚಿತ್ಕಲಾತೀತಪ್ರಣವ.
ಆ ಅಖಂಡ ಮಹಾಮೂಲಸ್ವಾಮಿಯ ಪಚ್ಚಳವೇ
ಅನಾದಿಪ್ರಣವ ಆದಿಪ್ರಣವ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ಉಪಸ್ಥವೇ
ಅನೇಕಕೋಟಿ ಬ್ರಹ್ಮ-ವಿಷ್ಣು-ರುದ್ರ-ಈಶ್ವರ-ಸದಾಶಿವ
ಮೊದಲಾದ ಅನೇಕಕೋಟಿ ದೇವರ್ಕಳಿಗೂ
ಜನನಸ್ಥಲವಾಗಿಹ ನಿರ್ವಾಣಪ್ರಣವ ನೋಡಾ.
ಕಲಾನಂದಪ್ರಣವ ಬ್ರಹ್ಮಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಒಳದೊಡೆ ನೋಡಾ.
ಚಿಜ್ಜ್ಯೋತಿಪ್ರಣವ, ಪರಂಜ್ಯೋತಿಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಒಳಪಾದ ಕಂಭಂಗಳು ನೋಡಾ.
ನಿಶ್ಶಬ್ದಪ್ರಣವ, ನಿಶ್ಶಬ್ದಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಹರಡು ನೋಡಾ.
ಓಂಕಾರಪ್ರಣವ ಮಹದೋಂಕಾರಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಪಾದಂಗಳು ನೋಡಾ.
ಆ ಓಂಕಾರ ಪ್ರಣವದ ತಾರಕಸ್ವರೂಪ ದಂಡಕಸ್ವರೂಪ
ಕುಂಡಲಾಕಾರ ಅರ್ಧಚಂದ್ರಕ ದರ್ಪಣಾಕಾರ ಜ್ಯೋತಿಸ್ವರೂಪವೆಂಬ
ಪ್ರಣವದತ್ತತ್ತ ಸ್ಥಾನಂಗಳೇ
ಆ ಅಖಂಡ ಮಹಾಮೂಲಸ್ವಾಮಿಯ ಪದಾಂಗುಲಿಗಳು ನೋಡಾ.
ಆ ಓಂಕಾರಪ್ರಣವದ ಮಹದೋಂಕಾರಪ್ರಣವದ
ಮಹಾಪ್ರಕಾಶವೇ ಆ ಅಖಂಡ ಮಹಾಮೂಲಸ್ವಾಮಿಯ
ಪಾದಾಂಗುಷ್ಠಾಂಗುಲಿಗಳು ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ಸರವೇ ಪರಾತೀತಪ್ರಣವ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯ ಮಾತೇ
ಮಹಾಜ್ಯೋತಿ ಪ್ರಣವಕತ್ತತ್ತವಾಗಿಹ
ಅತಿಮಹಾಜ್ಯೋತಿಪ್ರಣವ ನೋಡಾ.
ಶೂನ್ಯ-ನಿಃಶೂನ್ಯ ಆ ಮಹಾಶೂನ್ಯಕತ್ತತ್ತವಾದ ಮಹದಾನಂದಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ವಪೆ ನೋಡಾ.
ಆ ಅಖಂಡ ಮಹಾಮೂಲಸ್ವಾಮಿಯಲ್ಲಿ
ಅನಂತಕೋಟಿ ನಿರಾಳಸ್ವಯಂಭುಲಿಂಗ ಅಡಗಿಹವಾಗಿ
ಆ ನಿರಾಳಸ್ವಯಂಭುಲಿಂಗಂಗಳೇ
ಸ್ಥಾನದಲ್ಲಿ ಧರಿಸಿಹ ಭೂಷಣಂಗಳು ನೋಡಾ.
ಜ್ಞಾನಪ್ರಣವವೇ ಆ ಅಖಂಡ ಮಹಾಮೂಲಸ್ವಾಮಿಯ ತುರುಬು ನೋಡಾ.
ಆನಂತಕೋಟಿ ಪ್ರಣವಂಗಳನೊಳಕೊಂಡಿಹ ಮಹಾಭೂತಪ್ರಣವವೇ
ಆ ಅಖಂಡ ಮಹಾಮೂಲಸ್ವಾಮಿಯ ಶೃಂಗಾರ ನೋಡಾ
ಅಪ್ರಮಾಣಕೂಡಲಸಂಗಮದೇವಾ./428
ಇನ್ನು ಆಧಾರ ಧಾರಣವೆಂತೆಂದಡೆ :
ಪುಣ್ಯ-ಪಾಪ ಸ್ವರ್ಗ-ನರಕಾದಿಗಳಿಗೆ ಹೇತುಭೂತವಾಗಿಹ
ಅನ್ನ ಪಾನಾದಿಗಳಂ ಬಿಟ್ಟು-ಸಿದ್ಧಾಸನದಲ್ಲಿ ಕುಳ್ಳಿದರ್ು,
ಮೂಲಬಂಧ ಒಡ್ಡ್ಯಾಣಬಂಧ ಜಾಳಾಂದರಬಂಧಮಂ ಮಾಡಿ
ಜಾಗ್ರ ಸ್ವಪ್ನ ಸುಷುಪ್ತಿ ತಲೆದೋರದೆ
ಶಬ್ದ ಸ್ಪರ್ಶ ರೂಪ ರಸ ಗಂಧವೆಂಬ
ಪಚೇಂದ್ರಿಯಂಗಳಲ್ಲಿ ಮನ ಪವನಮಂ ಸೂಸಲೀಯದೆ,
ಏಕಾಗ್ರಚಿತ್ತನಾಗಿ ಮೂಲವಾಯುವಂ ಪಿಡಿದು
ಆಕುಂಚನಂ ಮಾಡಿ, ಮೂಲಾಗ್ನಿಯನೆಬ್ಬಿಸಿ,
ಆಧಾರಚಕ್ರ ಚತುರ್ದಳಪದ್ಮವ ಪೊಕ್ಕು ಸಾಧಿಸಿ,
ಅಲ್ಲಿಹ ಮಂತ್ರ-ಪದ-ವರ್ಣ-ಭುವನ-ತತ್ವ-ಕಲೆಗಳಂ ಕಂಡು,
ಅಲ್ಲಿ ಪಚ್ಚೆವರ್ಣವಾಗಿಹ ಜ್ಯೋತಿರ್ಮಯಲಿಂಗಮಂ ಬೆರಸಿ
ಅಗ್ನಿಯಂ ಪಟುಮಾಡಿ, ಮನಮಂ ಏಕೀಕರಿಸಿ,
ಅಲ್ಲಿಂದ ಮೇಲೆ ಸ್ವಾಧಿಷ್ಠಾನಚಕ್ರದ ಷಡುದಳಪದ್ಮವ ಪೊಕ್ಕನು ನೋಡಾ
ಅಪ್ರಮಾಣಕೂಡಲಸಂಗಮದೇವಾ./429
ಇನ್ನು ಆಯುಷ್ಯಂಗಳ ಭೇದವೆಂತೆಂದಡೆ :
ಸ್ತ್ರೀ ಪುರುಷರಿಗೆಯು ಸ್ವರ ಐದುಗಳಿಗೆ ನಡೆದಡೆ,
ಆಯುಷ್ಯ ನೂರವರುಷ.
ನಾಲ್ಕುಗಳಿಗೆ ನಡೆದಡೆ ಆಯುಷ್ಯ ಎಂಬತ್ತುವರುಷ.
ಮೂರುಗಳಿಗೆ ನಡೆದಡೆ ಆಯುಷ್ಯ ಅರುವತ್ತುವರುಷ.
ಎರಡುಗಳಿಗೆ ನಡೆದಡೆ ಆಯುಷ್ಯ ನಾಲ್ವತ್ತುವರುಷ.
ಒಂದುಗಳಿಗೆ ನಡೆದಡೆ ಆಯುಷ್ಯ ಇಪ್ಪತ್ತುವರುಷ.
ಅರೆಗಳಿಗೆ ನಡೆದಡೆ ಆಯುಷ್ಯ ಹತ್ತುವರುಷ.
ಕಾಲುಗಳಿಗೆ ನಡೆದಡೆ ಆಯುಷ್ಯ ಐದುವರುಷ.
ಇಂತೀ ಕ್ರಮದಿಂದ ನೋಡಿಕೊಂಬುದು
ಅಪ್ರಮಾಣಕೂಡಲಸಂಗಮದೇವಾ./430
ಇನ್ನು ಇನ್ನೂರ ಇಪ್ಪತ್ತುನಾಲ್ಕು ಭುವನಂಗಳ ಉತ್ಪತ್ಯವೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಮಹದೋಂಕಾರ ಪ್ರಣವದಲ್ಲಿ
ಇನ್ನೂರು ಇಪ್ಪತ್ತುನಾಲ್ಕು ಭುವನ ಉತ್ಪತ್ಯವಾಯಿತ್ತು. ನೋಡಾ.
ಇದಕ್ಕೆ ಮಹಾಪ್ರಳಯಕಾಲರುದ್ರೋಪನಿಷತ್ : ಮಹದೋಂಕಾರಪ್ರಣವದಲ್ಲಿ-
“ದ್ವಿಶತಶ್ಚತುರ್ವಿಂಶತಿಭುವನಾ ಭವಂತಿ | ಒಂ ಪ್ರಣವಾತ್ಮಾ ದೇವತಾ |
ಓಂಕಾರೇ ಚ ಲಯಂ ಪ್ರಾಪ್ತೇ ಪಂಚವಿಂಶತ್ಪ್ರಣವಾಂಶಕೇ ||”
ಇಂತೆಂದು ಶ್ರುತಿ,
ಅಪ್ರಮಾಣಕೂಡಲಸಂಗಮದೇವಾ./431
ಇನ್ನು ಇನ್ನೂರ ಇಪ್ಪತ್ತುನಾಲ್ಕು ಭುವನಂಗಳ ವಿವರವದೆಂತೆಂದಡೆ :
ಅನಾಶ್ರಿತ, ಅನಾಥ, ಅನಂತ, ವ್ಯೋಮರೂಪ, ವ್ಯಾಪಿನಿ, ಊಧ್ರ್ವಗಾಮಿನಿ,
ಮೋಚಿಕಾ, ರೋಚಿಕಾ, ದೀಪಿಕೋದೀಪ, ಶಾಂತ್ಯತೀತೆ, ಶಾಂತಿ,
ವಿದ್ಯೆ, ಪ್ರತಿಷ್ಠೆ, ನಿವೃತ್ತಿ, ಸದಾಶಿವ, ಅಚಿಂತ್ಯ, ಸೂಕ್ಷ್ಮ,
ವಾಮದೇವ, ಸತ್ಯಾನಂದ, ಸರ್ವೆಶ್ವರ, ಶಿವೋತ್ತಮ,
ನಿತ್ಯಾನಂದ, ಏಕನೇತ್ರ, ಸದಾನಂದ, ಏಕರುದ್ರ, ನಿಜಾನಂದ,
ತ್ರಿಮೂರ್ತಿ, ಶ್ರಿಕಂಠ, ಶಿಖಂಡಿ, ವಾಮಜೇಷ್ಠ, ರೌದ್ರಿ, ಕಲವಿಕರಣಿ, ?
ಕಾಳಿ, ಬಲವಿಕರಣಿ, ಸರ್ವಭೂತದಮನಿ, ಬಲಪ್ರಮದಿನಿ,
ಮನೋನ್ಮನಿ, ಅಂಗುಷ್ಠಮಾತ್ರಭುವನಿ, ಮಹಾಭುವನ, ಏಕಿಶಾನ, ಏಕ,
ಪಿಂಗಳೇಕ್ಷಣ, ಉದ್ಭವ, ಭವ, ವಾಮದೇವ, ಮಹಾದೇವ,
ಶಿಭೇದ, ಏಕವೀರ, ಪಂಚಾಂತಕ, ಶೂರ, ಸಂವರ್ತನ, ಜ್ಯೋತಿ,
ಚಂಡ, ಕ್ರೋಧ, ಅನಂತ, ಏಕನೇಕ, ಭವ್ಯ,
ಮಂಗಳ, ಅಜ, ಉಮಾಪತಿ, ಏಕಧೀರ, ಪ್ರಚಂಡ, ಈಶಾನ, ಉಗ್ರ, ಭೀಮ,
ಭೌಮ, ಕೌಮಾರಿ, ವೈಷ್ಣವ, ಬ್ರಾಹ್ಮಣ, ವೈಭವ, ಕೃತ, ಶಾಕೃತ,
ಯಾಮ್ಯ, ವ್ರಜೇಶ, ಸೌಮ್ಯ, ಇಂದ್ರ, ಗಾಂಧರ್ವ, ಯಕ್ಷ, ರಾಕ್ಷಸ,
ಪೈಶಾಚಿಕ, ಸ್ಥಲೇಶ್ವರ, ಸ್ಥೂಲೇಶ್ವರ, ಶಂಖಕರ್ಣ, ಕಾಳಾಂಜನ,
ಮಂಡಲೇಶ್ವರ, ಮಾಕೋಟ, ದ್ವಿರಂಡ, ಛಗ, ಚಂದ, ಸ್ಥಾಣು, ಸ್ವರ್ಣಾಕ್ಷ,
ಭದ್ರಕರ್ಣ, ಮಹಾಲಯ, ಅವಿಮುಕ್ತ, ರುದ್ರಕೋಟಿ, ವಸ್ತ್ರಾಪದ,
ಭೀಮೇಶ್ವರ, ಮಹೇಂದ್ರ, ಅಷ್ಟಹಾಸ, ವಿಮಲೇಶ್ವರ, ನಖಲ, ನಾಖಲ,
ಕುರುಕ್ಷೇತ್ರ, ಭೈರವ, ಕೈದಾರ, ಮಹಾಬಲ, ಮಧ್ಯಮೇಶ್ವರ,
ಮಾಹೇಂದ್ರಕೇಶ್ವರ, ಜಲಜೇಶ್ವರ, ಶ್ರೀಶೈಲ, ಹರಿಶ್ಚಂದ್ರ, ಅಕುಲಿಶ, ಮುಂಡಿ,
ಚಾರುಭೂತಿ, ಆಶಾಡಿ, ಪೌಷ್ಕರ, ನೈಮಿಷ, ಪ್ರಭಾಸ, ಅಮರೇಶ್ವರ,
ಭದ್ರಕಾಳ, ವೀರಭದ್ರ, ತ್ರಿಲೋಚನ, ವಿಪ್ಸು, ವಭ , ವಿವಾಹ,
ತ್ರಿದಶೇಶ್ವರ, ತ್ರಿಯಕ್ಷ, ಗಣಾ, ದೃಕ್ಷ, ವಿಭು, ಶಂಭು, ದೌಷ್ಟ್ರಿ,
ವಜ್ರ, ಫಣೀಶ, ಉದುಂಬರೀಶ, ಗ್ರಸನ, ಮಾರುತಾಸನ,
ಕ್ರತುಮರ್ದನ, ಆನಂದ, ವೃಷಧರ, ಬಲಿಪ್ರಿಯ,
ಭೂತಪಾಲ, ಜೇಷ್ಠ, ಸರ್ವ, ಸುರೇಶಾನ, ವೇದಪಾರಗ, ಜ್ಞಾನಭೂತ,
ಸರ್ವಜ್ಞ, ಈಶ, ಸರ್ವವಿದ್ಯಾಧಿಪ, ಪ್ರಕಾಮದ, ಪ್ರಸೀದಡನ,
ಶ್ರೀಧರ, ಲಕ್ಷಿ ್ಮಧರ, ಜಟಾಧರ, ಸೌಮ್ಯದೇಹ, ಧನ್ಯರೂಪ,
ನಿಧೀಶ, ಮೇಘವಾಹನ, ಕಪದರ್ಿ, ಪಂಚಶಿಖಿ, ಪ್ರಪಂಚಾಂತಕ,
ಕ್ಷಯಾಂತಕ, ತಿಕ್ಷು, ಸುಸೂಕ್ಷ್ಮ, ವಾಯುವೇಗ, ಲಘು,
ಶೀಘ್ರ, ಸುನಾದ, ಮೇಘನಾದ, ಜ್ವಲಾಂತಕ, ದೀರ್ಘಬಾಹು,
ಜಯ, ಭದ್ರ, ಶ್ವೇತಮಹಾಬಲ, ಪಾಶಹಸ್ತ, ಅತಿಬಲ,
ಮಹಾಬಲ, ವಾರುಣೀಶ, ದೌಷ್ಟ್ರೀವ, ಲೋಹಿತ, ಧೂಮ್ರ,
ವಿರೂಪಾಕ್ಷ, ಊಧ್ರ್ವಶೇಷ, ಉಭಯನಖ, ಕ್ರೂರದೃಷ್ಟಿ, ಹಂತ,
ಮಾರಣ, ನಿರುತಿ, ಧರ್ಮ, ಧರ್ಮಪರೇಣ, ನಿಯೋಕ್ತೃ, ಕರ್ತು, ಹರ,
ಮೃತ್ಯು, ಯಾಮ್ಯ, ಕ್ಷಯಾಂತಕ, ಭಸ್ಮಾಂತಕ, ಬಬ್ರು,
ದಹನ, ಜ್ವಲನ, ಹರಿಹರ, ಖಾದಕ, ಪಿಂಗ, ಹುತಾಶನ,
ಜಯರುದ್ರ, ತ್ರಿದಶಾಧಿಪ, ಪಿನಾಕಿ, ಶಾಸ್ತ್ರ, ಅವ್ಯಯ,
ವಿಭೂತಿ, ಪ್ರಮರ್ಧ, ವಜ್ರದೇಹ, ಬುಧ, ಅಜಕಪಾಲ,
ಈಶ್ವರ, ರುದ್ರ, ವಿಷ್ಣು, ಬ್ರಹ್ಮ, ಹಾಟಕ, ಕೂಷ್ಮಾಂಡ,
ಕಾಲಾಗ್ನಿರುದ್ರ, ಪ್ರಳಯಕಾಲ, ಮಹಾರುದ್ರ,
ಅಂತು ಇನ್ನೂರಾ ಇಪ್ಪತ್ತುನಾಲ್ಕು ಭುವನಂಗಳು ಭುಲನಾಧ್ವ ನೋಡಾ
ಅಪ್ರಮಾಣಕೂಡಲಸಂಗಮದೇವಾ./432
ಇನ್ನು ಇಷ್ಟ ಪ್ರಾಣ ಭಾವಲಿಂಗದ ಭೇದವೆಂತೆಂದಡೆ :
ಆದಿ ಉಕಾರ ಆದಿ ಮಕಾರ ಆದಿ ಅಕಾರ ಇವು ಮೂರು ಬೀಜಾಕ್ಷರ.
ಆದಿ ಉಕಾರವೆ ಆದಿನಾದ, ಆದಿ ಮಕಾರವೆ ಆದಿ ಬಿಂದು,
ಆದಿ ಅಕಾರವೆ ಆದಿಕಲೆ.
ಆದಿ ಉಕಾರವೆ ಇಷ್ಟಲಿಂಗ, ಆದಿ ಮಕಾರವೇ ಪ್ರಾಣಲಿಂಗ,
ಆದಿ ಅಕಾರವೆ ಭಾವಲಿಂಗವು ನೋಡಾ.
ಇದಕ್ಕೆ ಈಶ್ವರೋವಾಚ : “ಉಕಾರಂ ಇಷ್ಟಲಿಂಗಂ ಚ ಮಕಾರಂ ಪ್ರಾಣಲಿಂಗಯೋ |
ಅಕಾರಂ ಭಾವಲಿಂಗಂ ಚ ತ್ರಿಧಾಏಕಂ ವರಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./433
ಇನ್ನು ಇಷ್ಟ-ಪ್ರಾಣ-ಭಾವಲಿಂಗದ ಪೂಜೆಯ ವಿವರವೆಂತೆಂದಡೆ :
ಇಷ್ಟಲಿಂಗದಲ್ಲಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳಂ
ಮಾಡುವದು ಇಷ್ಟಲಿಂಗದ ಪೂಜೆ.
ಆ ಲಿಂಗವನು ಮನಸ್ಸಿನಲ್ಲಿಯೇ ಧ್ಯಾನಿಸುವದು ಪ್ರಾಣಲಿಂಗದ ಪೂಜೆ.
ಜೀವನೆಂಬ ಶಿವಾಲಯದೊಳು ಪ್ರಾಣಲಿಂಗವೇ ದೇವ ನೋಡಾ.
ಅಜ್ಞಾನವೆಂಬ ನಿರ್ಮಾಲ್ಯವಂ ಕಳದು
ಸೋಹಂ ಭಾವದಲ್ಲಿ ಪೂಜಿಸುತಿಪರ್ುದೆ ಪ್ರಾಣಲಿಂಗಪೂಜೆ ನೋಡಾ.
ಇದಕ್ಕೆ ಈಶ್ವರೋವಾಚ : “ಅಷ್ಟವಿಧಾರ್ಚನಂ ಕುರ್ಯಾತ್ ಇಷ್ಟಲಿಂಗಸ್ಯ ಪೂಜನಂ |
ತಲ್ಲಿಂಗಂ ಮನುತೇ ಯಸ್ತು ಪ್ರಾಣಲಿಂಗಸ್ಯ ಪೂಜನಂ ||
ಜೀವೋ ಶಿವಾಲಯಃ ಪ್ರೋಕ್ತಃ ಲಿಂಗದೇವಃ ಪರಃಶಿವಃ |
ತಜೇದ್ಯಜ್ಞಾನನಿರ್ಮಾಲ್ಯಂ ಸೋಹಂಭಾವೇನ ಪೂಜಯೇತ್ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./434
ಇನ್ನು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗಾರ್ಪಿತದ ವಿವರವೆಂತೆಂದಡೆ :
ಇಷ್ಟಲಿಂಗಕ್ಕೆ ತನ್ನ ಶರೀರವ ಸಮರ್ಪಿಸುವುದು,
ಪ್ರಾಣಲಿಂಗಕ್ಕೆ ತನ್ನ ಮನವ ಸಮರ್ಪಿಸುವುದು,
ಭಾವಲಿಂಗಕ್ಕೆ ತನ್ನ ಪರಿಣಾಮವ ಸಮರ್ಪಿಸುವುದು.
ಇದಕ್ಕೆ ಈಶ್ವರೋವಾಚ : “ಇಷ್ಟಲಿಂಗಾರ್ಪಿತಂ ಅಂಗಂ ಪ್ರಾಣಲಿಂಗಾರ್ಪಿತಂ ಮನಃ |
ಭಾವಲಿಂಗಾರ್ಪಿತಂ ತೃಪ್ತಿಃ ಇತಿ ಭೇದಂ ವರಾನನೇ ||
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./435
ಇನ್ನು ಋಗ್ವೇದ ಯಜುರ್ವೆದ ಅಥರ್ವಣವೇದ
ಗಾಯತ್ರಿ ಅಜಪೆಯ ನೆಲೆ ಅದೆಂತೆಂದಡೆ :
ಆಧಾರಚಕ್ರದಲ್ಲಿ ಋಗ್ವೇದವಿಹುದು.
ಸ್ವಾಧಿಷ್ಠಾನಚಕ್ರದಲ್ಲಿ ಯಜುರ್ವೆದವಿಹುದು.
ಮಣಿಪೂರಕಚಕ್ರದಲ್ಲಿ ಸಾಮವೇದವಿಹುದು.
ಅನಾಹತಚಕ್ರದಲ್ಲಿ ಅಥರ್ವಣವೇದವಿಹುದು.
ವಿಶುದ್ಧಿಚಕ್ರದಲ್ಲಿ ಗಾಯತ್ರಿ ಇಹುದು.
ಆಜ್ಞಾಚಕ್ರದಲ್ಲಿ ಅಜಪೆ ಇಹುದು ನೋಡಾ
ಇದಕ್ಕೆ ನೀಲಕಂಠಸಂಹಿತಾಯಾಂ : “ಆಧಾರೇ ಋಗ್ವೇದಶ್ಚೈವ ಸ್ವಾಧಿಷ್ಠೇ ಯಜುರ್ವೆದಕಂ |
ಮಣಿಪೂರೇ ಚ ನಾಮಚ ಅತಃ ಶ್ರುತಿಶ್ಚನಾಹತೇ |
ಗಾಯತ್ರಿಶ್ಚ ವಿಶುದ್ಧಿಶ್ಚ ಆಜ್ಞೇಯಾ ಅಜಪಂ ಭವೇತ್ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./436
ಇನ್ನು ಋಗ್ವೇದ ಯಜುರ್ವೆದ ಸಾಮವೇದ
ಅಥರ್ವಣವೇದ ಅಜಪೆ ಗಾಯತ್ರಿಯ ನಿವೃತ್ತಿ ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಸ್ವರೂಪದಲ್ಲಿ ಋಗ್ವೇದವಡಗಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿ ಯಜುರ್ವೆದವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿ ಸಾಮವೇದವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಅಥರ್ವಣವೇದವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿ ಗಾಯತ್ರಿಯಡಗಿತ್ತು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಅಜಪೆಯಡಗಿತ್ತು ನೋಡಾ.
ಇದಕ್ಕೆ ಚಿತ್ಪಿಂಡಾಗಮೇ : “ಓಂಕಾರ ತಾರಕಾರೂಪೇ ಋಗ್ವೇದಶ್ಚ ವಿಲೀಯತೇ |
ಓಂಕಾರ ದಂಡರೂಪೇ ಚ ಯಜುರ್ವೆದಂ ಚ ಲೀಯತೇ |
ಓಂಕಾರ ಕುಂಡಲಾಕಾರೇ ಸಾಮವೇದಂ ಚ ಲೀಯತೇ |
ಓಂಕಾರ ಅರ್ಧಚಂದ್ರೇ ಚ ಅಥಃ ಶ್ರುತಿಲಯಂ ತಥಾ |
ಓಂಕಾರ ದರ್ಪಣಾಕಾರೇ ಗಾಯಾತ್ರೀ ಚ ವಿಲೀಯತೇ |
ಓಂಕಾರ ಜ್ಯೋತಿಸ್ವರೂಪೇ ಅಜಪೇಶ್ಚ ವಿಲೀಯತೆ |
ಇತಿ ವೇದಲಯಂ ಜ್ಞಾತುಂ ದುರ್ಲಭಂ ಕಮಲೋದ್ಭವಾ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./437
ಇನ್ನು ಐವತ್ತೆರಡಕ್ಷರದ ಉತ್ಪತ್ಯವದೆಂತೆಂದಡೆ :
ಆ ಪ್ರಣವದ ತಾರಕಸ್ವರೂಪದಲ್ಲಿಹ ನಕಾರದಲ್ಲಿ ನಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಕಸ್ವರೂಪದಲ್ಲಿಹ ಶಿಕಾರದಲ್ಲಿ ಶಿಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ
ಯಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ನೀಲಕಂಠಸಾರೇ : “ನಕಾರೇ ನಕಾರೋತ್ಪನ್ನಂ ಮಕಾರೇ ಮಕಾರಮುದ್ಭವಂ |
ಶಿಕಾರೇ ಶಿಕಾರಮುತ್ಪನ್ನಂ ವಕಾರೇ ವಕಾರಮುದ್ಭವಂ |
ಯಕಾರೇ ಯಕಾರಮುತ್ಪನ್ನಂ ಗುಹ್ಯಾದ್ಗುಹ್ಯಂ ಕಮಲಾನನೇ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./438
ಇನ್ನು ಐವತ್ತೆರಡು ಅಕ್ಷರವದೆಂತೆಂದಡೆ :
ಅಖಂಡಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ತಾರಕಾಸ್ವರೂಪದ ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ
ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು.
ಆ ಅಕಾರ ಉಕಾರ ಮಕಾರ ಈ ಮೂರೂ ಸಂಯುಕ್ತವಾಗಿ
ಓಂಕಾರ ಉತ್ಪತ್ಯವಾಯಿತ್ತು.
ಆ ಓಂಕಾರಪ್ರಣವದ ತಾರಕಾಸ್ವರೂಪದಲ್ಲಿಹ
ನಕಾರದಲ್ಲಿ ನಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿಹ
ಶಿಕಾರದಲ್ಲಿ ಶಿಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿಹ
ವಕಾರದಲ್ಲಿ ವಕಾರ ಉತ್ಪತ್ಯವಾಯಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ
ಯಕಾರದಲ್ಲಿ ಯಕಾರ ಉತ್ಪತ್ಯವಾಯಿತ್ತು ನೋಡಾ.
ಇದಕ್ಕೆ ನೀಲಕಂಠೋತ್ತರಸಾರೇ : “ನಕಾರೇ ನಕಾರೋತ್ಪನ್ನಂ ಮಕಾರೇ ಮಕಾರೋದ್ಭವಃ |
ಶಿಕಾರೇ ಶಿಕಾರೋತ್ಪನ್ನಂ ವಕಾರೇ ವಕಾರೋದ್ಭವಃ |
ಯಕಾರೋ ಶಿಕಾರೋತ್ಪನ್ನಂ ಗುಹ್ಯಾದ್ಗುಹ್ಯಂ ವರಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./439
ಇನ್ನು ಕರಣಾರ್ಪಣಸ್ಥಲಂಗಳೆಂತೆಂದಡೆ :
ಭೂಮಿಯೇ ಅಂಗವಾದ
ಭಕ್ತನು ಸುಚಿತ್ತವೆಂಬ ಹಸ್ತದಲ್ಲಿ
ಆಚಾರಲಿಂಗದಲ್ಲಿ ಘ್ರಾಣವೆಂಬ ಮುಖದಲ್ಲಿ
ಬೇರು ಗೆಣಸು ಮೊದಲಾದ ಗಂಧದ್ರವ್ಯಮಂ ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./440
ಇನ್ನು ಕಾಲಭೇದಂಗಳದೆಂತೆಂದಡೆ :
ಪ್ರಥಮಕಾಲದಲ್ಲಿ ಹುಟ್ಟಿದ ಮಗನು ಕೋಪಿಯಹನು.
ದ್ವಿತೀಯಕಾಲದಲ್ಲಿ ಹುಟ್ಟಿದ ಮಗನು ಪಾಪಕರ್ಮಾಶ್ರಯವಾಗಿಹನು.
ತೃತೀಯಕಾಲದಲ್ಲಿ ಹುಟ್ಟಿದ ಮಗನು ಪಾಪಿಯಹನು.
ಅಸ್ತಮಯವಾದ ಎಂಟು ಘಳಿಗೆಗೆ ಹುಟ್ಟಿದ ಮಗನು ಜ್ಞಾನಿಯಹನು.
ಮಧ್ಯರಾತ್ರಿಯಲ್ಲಿ ಹುಟ್ಟಿದ ಮಗನು ಶಾಂತಿ ದಾಂತಿ ಸಮತೆಯುಳ್ಳ
ಪುರುಷನಹನು.
ಬೆಳಗಾಗುವ ಜಾವದಲ್ಲಿ ಹುಟ್ಟಿದ ಮಗನು ಪರಮಯೋಗಿಯಹನು ನೋಡಾ
ಅಪ್ರಮಾಣಕೂಡಲಸಂಗಮದೇವಾ./441
ಇನ್ನು ಕೆಳಗಾದವಸ್ಥೆಯ ದರ್ಶನವದೆಂತೆಂದಡೆ :
ಜಾಗ್ರವಾವುದು ?
ಶ್ರೋತ್ರಾದಿಗಳೈದು, ವಾಗಾದಿಗಳೈದು,
ಶಬ್ದಾದಿಗಳೈದು, ವಚನಾದಿಗಳೈದು, ವಾಯು ಹತ್ತು,
ಕರಣ ನಾಲ್ಕು, ಪುರುಷನೊಬ್ಬ-
ಈ ಮೂವತ್ತೈದು ಕರಣಂಗಳೊಡನೆ
ಭ್ರೂಮಧ್ಯದಲ್ಲಿ ದರ್ಶನವ ಮಾಡುವುದು ಜಾಗ್ರ ನೋಡಾ
ಅಪ್ರಮಾಣಕೂಡಲಸಂಗಮದೇವಾ./442
ಇನ್ನು ಕೇವಲಾವಸ್ಥೆಯ ದರ್ಶನವದೆಂತೆಂದಡೆ :
ಮುಂದೆ ಹೇಳಿದ ಅವಸ್ಥೆಗಳನು ಬಿಟ್ಟು ಬೇರಾಗಿ
ಒಂದೆಂಬುದು ಕೆಟ್ಟ ಠಾವು ಕೇವಲಾವಸ್ಥೆ.
ಇನ್ನು ಸಕಲಾವಸ್ಥೆಯ ದರ್ಶನವದೆಂತೆಂದಡೆ : ಮುಂದೆ ಹೇಳಿದ ಅರಿವೇ ಸ್ವರೂಪವಾಗಿ ಆತನ ಕಂಡ ಠಾವು ಸಕಲಾವಸ್ಥೆ ನೋಡಾ
ಅಪ್ರಮಾಣಕೂಡಲಸಂಗಮದೇವಾ./443
ಇನ್ನು ಗುರುಕರುಣಸ್ಥಲವದೆಂತೆಂದಡೆ :
ನಾನಾ ಭವದಲ್ಲಿ ಬಂದ ಭವಿಯಂ ಕಳದು
ಭಕ್ತನ ಮಾಡಿದ ಕ್ರಮವೆಂತೆಂದಡೆ ;
`ಅಗ್ನಿರಿತಿ ಭಸ್ಮ ವಾಯುರಿತಿ ಭಸ್ಮ’ವೆಂಬ ವಿಭೂತಿಯಿಲ್ಲದಂದು.
`ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ’ವೆಂಬ ವಿಭೂತಿಯಿಲ್ಲದಂದು.
`ವ್ಯೋಮೇತಿ ಭಸ್ಮ ಸೋಮೇತಿ ಭಸ್ಮ’ವೆಂಬ ವಿಭೂತಿಯಿಲ್ಲದಂದು.
`ಸೂಯರ್ೆತಿ ಭಸ್ಮ ಆತ್ಮೇತಿ ಭಸ್ಮ’ವೆಂಬ ವಿಭೂತಿಯಿಲ್ಲದಂದು.
`ಅನಾದಿಶಾಶ್ವತಂ ನಿತ್ಯಂ ಚೈತನ್ಯಂ ಚಿತ್ಸ್ವರೂಪಕಂ
ಚಿದಂಗಂ ವೃಷಭಾಕಾರಂ’ ಆಗಿಹ ಚಿದ್ಭಸ್ಮವ ತಂದು
ವಿಭೂತಿಯ ಪಟ್ಟವಂ ಕಟ್ಟಿದರೆ
ಭಾವಭ್ರಮೆಯಳಿದು ಭಾವ ಗುರುವಾಯಿತ್ತು.
ಕಾಯಗುಣವಳಿದು ಕಾಯ ಲಿಂಗವಾಯಿತ್ತು.
ಪ್ರಾಣಗುಣವಳಿದು ಪ್ರಾಣ ಲಿಂಗವಾಯಿತ್ತು.
ಮನವಿಕಾರವಳಿದು ಮನ ಲಿಂಗವಾಯಿತ್ತು.
ಘ್ರಾಣಕ್ಕೆ ಸುವಾಸನೆಯನರಿವ ಆಚಾರಲಿಂಗವಾಯಿತ್ತು.
ಜಿಹ್ವೆಗೆ ಪ್ರಸಾದಭೋಗವನರಿವ ಗುರುಲಿಂಗವಾಯಿತ್ತು.
ಶ್ರೋತ್ರಕ್ಕೆ ಷಡಾಕ್ಷರಮಂತ್ರವನರಿವ ಪ್ರಸಾದಲಿಂಗವಾಯಿತ್ತು.
ನೋಟಕ್ಕೆ ಘನಚೈತನ್ಯವಾದ ಶಿವಲಿಂಗವಾಯಿತ್ತು.
ಶಬ್ದಕ್ಕೆ ಸರ್ವಲಿಂಗಾನುಭಾವಿಯಾಯಿತ್ತು.
ಇಂತು ಪೂರ್ವಗುಣವಳಿದು ಪುನಜರ್ಾತನಾದ ಮಹಾಶರಣನು
ಸರ್ವಾಂಗಲಿಂಗಿ ನೋಡಾ ಅಪ್ರಮಾಣಕೂಡಲಸಂಗಮದೇವಾ./444
ಇನ್ನು ಗುರುತಾಮಸ ನಿರಸನವದೆಂತೆಂದಡೆ :
ಗುಕಾರವೆ ಅಂಧಃಕಾರವೆಂಬ ಅಜ್ಞಾನವ ಕೆಡಿಸುವ
ಜ್ಯೋತಿಸ್ವರೂಪ ನೋಡಾ.
ರುಕಾರವೇ ರೂಪಾತೀತವಾಗಿಹ ಪರಬ್ರಹ್ಮ ನೋಡಾ.
ಇದಕ್ಕೆ ಉತ್ತರವೀರಾಗಮೇ : “ಗುಕಾರವಸ್ತಂಧಕಾರಸ್ತು ರೂಪಾತೀತಂ ರುಕಾರಕಂ |
ಗುಣರೂಪ ವಿಹೀನತ್ವಾತ್ ಗುರುರಿತ್ಯಾಭಿಧೀಯತೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./445
ಇನ್ನು ಗುರುಪೂಜಾವಿಧಿಯ ಕ್ರಮ ತಾನೇ ಅಷ್ಟಾಂಗಯೋಗ.
ಅದೆಂತೆಂದಡೆ :
ಹಿಂಸೆಯನತಿಗಳೆದು, ಅನ್ಯದೈವವ ಬಿಡುವ,
ಅನ್ಯಕರ್ಮವನಾಚರಿಸದಿಹ, ಪರಧನ ಪರಸ್ತ್ರೀ ವರ್ಜಿತ,
ಇವು ಐದು ಯಮಯೋಗ ನೋಡಾ
ಅಪ್ರಮಾಣಕೂಡಲಸಂಗಮದೇವಾ./446
ಇನ್ನು ಗುರುಲಿಂಗ ಶಿವಲಿಂಗ ಜಂಗಮಲಿಂಗದ ವಿವರವೆಂತೆಂದಡೆ :
ಗುರುಲಿಂಗವು ಸಕಲನು, ಶಿವಲಿಂಗವು ನಿಃಕಲನು,
ಜಂಗಮಲಿಂಗವು ಸಕಲನಿಃಕಲನು ನೋಡಾ.
ಇದಕ್ಕೆ ಈಶ್ವರೋವಾಚ : “ಸಕಲಂ ಗುರುಲಿಂಗಂ ಚ ನಿಷ್ಕಲಂ ಶಿವಲಿಂಗಕಂ |
ಸಕಲಂ ನಿಃಕಲಂ ಚೈವ ಜಂಗಮಶ್ಚ ಪ್ರಕೀರ್ತಿತಃ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./447
ಇನ್ನು ಜಂಗಮದ ತಾಮಸನಿರಸನವದೆಂತೆಂದಡೆ :
ವ್ಯೋಮಾಕಾಶವೇ ಶರೀರ, ಆಕಾಶವೇ ಮುಖ,
ಚಂದ್ರಾರ್ಕವಹ್ನಿಯೇ ನೇತ್ರಂಗಳು ನೋಡಾ.
ಮಹಾಮೇರು ಪರ್ವತವೇ ಲಿಂಗ, ಬ್ರಹ್ಮಾಂಡವೇ ಮಕುಟ,
ಪಾತಾಳವೇ ಪಾದದ್ವಯಂಗಳು ನೋಡಾ.
ದಶದಿಕ್ಕುಗಳೇ ಬಾಹು, ಮೇಘಂಗಳೇ ಜಟಾಮಯ,
ಚಂದ್ರಜ್ಯೋತಿಯೇ ವಿಭೂತಿ, ವೇದಂಗಳೆ ಸರ್ವಕ್ರಿಯಾಮಯ ನೋಡಾ.
ನಕ್ಷತ್ರಂಗಳೇ ಪುಷ್ಪ, ಸಪ್ತಕುಲಪರ್ವತಂಗಳೇ ರುದ್ರಾಕ್ಷಿ,
ಸಪ್ತಸಮುದ್ರಂಗಳೇ ಜಲಪಾತಂಗಳು ನೋಡಾ.
ಜಗ ಸೃಷ್ಟಿಮಯವೇ ಕಂಠ, ಪೃಥ್ವಿಯೇ ಆಸನ,
ಅಹೋ ರಾತ್ರಿಯೇ ಮಠ ನೋಡಾ.
ತ್ರಿಕಾಲಜ್ಞಾನವೇ ಸೌಭಾಗ್ಯ, ಷಡುಸ್ಥಲಬ್ರಹ್ಮವೇ ಅರಿವು,
ಮಹಾಶೇಷನೆ ಕಟಿಸೂತ್ರ, ಮಹಾಜ್ಞಾನಸಮುದ್ರವೇ ವಾಙ್ಮಯ ನೋಡಾ.
ಮಹಾಮೇರುವೇ ದಂಡಕೋಲು,
ಸದ್ಗುಣವೇ ಪಾತ್ರ, ಕುಲ ಶಿವಕುಲ ನೋಡಾ.
ವನಸ್ಪತಿಯೇ ರೋಮಂಗಳು,
ಮಕುಟದಲಿ ಶೂನ್ಯಲಿಂಗ ಚಿದಾಭಾಸ ಚಿದಂಬರ ನೋಡಾ.
ಇಂಥ ಮಹಾಮಹಿಮ ಜಂಗಮ ಚತುರ್ದಶಭುಜವನೊಳಕೊಂಡು,
ಬ್ರಹ್ಮಾಂಡವೇ ಮಕುಟ, ಪಾತಾಳವೇ ಪಾದದ್ವಯವಾಗಿ
ಸುಳಿದನು ನೋಡಾ.
ಇದಕ್ಕೆ ವೀರಾಗಮೇ : “ಪಾದಮಪ್ಯತಳಂ ವಿದ್ಯಾತ್ ಪಾದೋಧ್ರ್ವಂ ವಿತಳಂ ತಥಾ |
ಜಂಗಾಭ್ಯಾಂ ಸುತಳಂ ಜ್ಞೇಯಂ ದ್ವಿತಳಂ ಜಾನುಸಂಸ್ಥಿತಂ |
ತಳಾತಳಂ ತಥೋರೂಭ್ಯಾಂ ಗುಹ್ಯಸ್ಥಾನೇ ರಸಾತಳಂ |
ಪಾತಾಳೇ ಕಟಿಮಧ್ಯಸ್ತು ಇತ್ಯೇತೇ ಸಪ್ತಲೋಕಕಂ ||
ಭೂಲೋಕಂ ನಾಭಿಮಧ್ಯಂ ಚ ಭುವರ್ಲೊಕೇ ಹೃದಿ ಸ್ಥಿತಂ |
ಊರುಚಯಃ ಸ್ವರ್ಗಲೋಕೇ ಮಹರ್ಲೊಕಂತು ಕಂಠಜಂ |
ಜನರ್ಲೊಕಂ ಕಂಠಮಧ್ಯೇ ತಪರ್ಲೊಕೇ ಲಲಾಟಕೇ |
ಸತ್ಯಲೋಕೇ ಮಸ್ತಕಸ್ಥಂ ಭುವನಾನಿ ಚತುರ್ದಶ ||
ಶರೀರಂ ವ್ಯೋಮಾಕಾಶಂ ಪಾತಾಳಂ ಚ ಪದದ್ವಯಂ |
ಚಂದ್ರಾರ್ಕನೇತ್ರಯುಗಳಂ ಮೇರುಲಿಂಗಂ ಕರಸ್ಥಲಂ |
ತಸ್ಯ ದೇಹೇ ಸಮಸ್ತಾನಿ ಭುವನಾನಿ ಚತುರ್ದಶ ||
ಬ್ರಹ್ಮಾಂಡೇ ಮಕುಟಂ ತಸ್ಯ ವದನಂ ಗಗನಂ ಶಿವೇ |
ದಿಶಶ್ಚ ಸರ್ವಬಾಹುಶ್ಚ ಮೇಘಂ ಸರ್ವಜಟಾಮಯಂ |
ಚಂದ್ರ ಜ್ಯೋತಿರ್ವಿಭೂತಿಶ್ಚ ವೇದಃ ಸರ್ವಂ ಕ್ರಿಯಾಮಯಂ |
ನಕ್ಷತ್ರಂ ಪುಷ್ಪನಿಚಯಂ ರುದ್ರಾಕ್ಷಂ ಕುಲಪರ್ವತಂ |
ಸಾಗರಂ ಜಲಪಾತ್ರಂ ಚ ವಾಙ್ಮಯಂ ಸೃಷ್ಟಿಮಯಂ ಜಗತ್ |
ಆಸನಂ ಪೃಥ್ವೀ ಮಾತ್ರಸ್ಯ ಅಹೋರಾತ್ರಂ ಗೃಹಾಮಠಂ |
ತ್ರಿಕಾಲಂ ಜ್ಞಾನ ಸೌಭಾಗ್ಯಂ ಮತಿವಾನ್ ಷಟ್ಸ್ಥಲ ಪ್ರಿಯೆ |
ಶೇಷಾಪಿ ಕಟಿಸೂತ್ರಂ ಚ ಜ್ಞಾನಮುದ್ರಾ ಚ ವಾಙ್ಮಯಂ |
ಮೇರುದಂಡ ಗುಣಂ ಪಾತ್ರಂ ಕುಲಂ ಶಿವಕುಲಂ ಭವೇತ್ |
ವನಸ್ಪತಿಶ್ಚ ರೋಮಾನಿ ಏವಮೇಕಾನಿ ಪಾರ್ವತೀ |
ಮಕುಟಂ ಶೂನ್ಯ ಸಂಜಾತಂ ಚಿದಾಭಾಸಂ ಚಿದಂಬರೇ ||
ಜಕಾರಂ ಹಂಸವಾಹಸ್ಯಾ ಗಕಾರಂ ಗರುಡಧ್ವಜಂ |
ಮಕಾರಂ ರುದ್ರ ರೂಪಂ ಚ ತ್ರಿಮೂತ್ರ್ಯಾತ್ಮಜಂಗಮಂ ||
ಜಕಾರೇ ಜನನಂ ಪೃಥ್ವೀ ಗಕಾರೇ ಆಕಾಶೋದ್ಭವಂ |
ಮಕಾರೇ ಮತ್ರ್ಯಲೋಕಂ ಚ ಜಂಗಮಂ ಜಗದೀಶ್ವರಂ |
ಜಂಗಮಸ್ಯ ತ್ರಿಯಕ್ಷರಂ ಭುವನಾನಿ ಚತುರ್ದಶಂ |
ಸ್ವರ್ಗ ಮತ್ರ್ಯಂ ಚ ಪಾತಾಳಂ ಜಂಗಮಾನಾಂ ಪ್ರಸಶ್ಯತೇ ||”
ಎಂದುದಾಗಿ,
ಇಂಥ ಮಹಾಮಹಿಮೆಯನುಳ್ಳ ಮಹಾಜಂಗಮವೆ ಜಂಗಮವಲ್ಲದೆ
ಸಚರಾಚರ ಚತುರ್ವಳಯದೊಳಗೆ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧದಾಸೆಗೆ ಸುಳಿವ
ವೇಷಧಾರಿಯನೆನಗೊಮ್ಮೆ ತೋರದಿರಯ್ಯ.
ಇದಕ್ಕೆ ವೀರಾಗಮೇ : “ಆಶಯಾಬಧ್ಯತೇ ಲೋಕಃ ಕರ್ಮಣಾ ಬಹುಚಿಂತಯಾ |
ಆಯುಕ್ಷಯಂ ನ ಜಾನಾತಿ ವೇಣು ಸೂತ್ರಂ ವಿಧೀಯತೇ ||”
ಇಂತೆಂದುದಾಗಿ,
ಆಸೆಯ ಧಿಕ್ಕರಿಸಿ ನಿರಾಸೆಯನಿಂಬುಗೊಂಡ
ಮಹಾಜಂಗಮವನೀಪರಿ ಎಂಬೆನಯ್ಯಾ,
ಅಪ್ರಮಾಣಕೂಡಲಸಂಗಮದೇವಾ./448
ಇನ್ನು ಜಂಗಮಭಕ್ತಿಯ ವಿವರ ಅದೆಂತೆಂದಡೆ :
ಶುದ್ಧವಹ ಪಾಕಪ್ರಯತ್ನಂಗಳಿಂದ,
ಪ್ರಿಯವಾಕ್ಯಂಗಳಿಂದ, ಬಾಹ್ಯಪರಿಚಾರಂಗಳಿಂದ, ಸಹಜಹಸ್ತದಿಂದ,
ಕುಲ ಛಲ ಧನ ಯವ್ವನ ರೂಪು ವಿದ್ಯೆ ರಾಜ್ಯ
ತಪವೆಂಬ ಅಷ್ಟಮದಂಗಳ ಬಿಟ್ಟು,
ಅಹಂಕಾರವಂ ಬಿಟ್ಟು ನಿರಹಂಕಾರಭರಿತನಾಗಿ,
ಉಪಾಧಿಯ ಬಿಟ್ಟು ನಿರುಪಾಧಿಕನಾಗಿ,
ದೇಹಾದಿಗುಣಂಗಳ ಬಿಟ್ಟು ನಿರ್ದೆಹಿಕನಾಗಿ,
ಅಪೇಕ್ಷೆಯಂ ಬಿಟ್ಟು ನಿರಾಪೇಕ್ಷಿತನಾಗಿ,
ಜಂಗಮವೇ ಲಿಂಗವೆಂದು ಮನಶುಚಿಯಿಂದ ಮಾಡುವುದೀಗ
ಜಂಗಮಭಕ್ತಿ ನೋಡಾ
ಅಪ್ರಮಾಣಕೂಡಲಸಂಗಮದೇವಾ./449
ಇನ್ನು ಜ್ಞಾನಾವಸ್ಥೆಯ ದರ್ಶನವದೆಂತೆಂದಡೆ :
ತನ್ನ ತಾನರಿದು ಪರಮಜ್ಞಾನವ ತಿಳಿವುದೇ ಜ್ಞಾನಜಾಗ್ರ.
ಆ ಪರಮಜ್ಞಾನ ನಿವಾಸಿಯಾಗಿಹುದೇ ಜ್ಞಾನಸ್ವಪ್ನ.
ಆ ಪರಮಜ್ಞಾನ ನಿವಾಸದಲ್ಲಿ ಲೀಯವಾಗಿಹುದೇ ಜ್ಞಾನಸುಷುಪ್ತಿ.
ಆ ಜ್ಞಾನಸುಷುಪ್ತಿಯಲ್ಲಿ ತಲೆದೋರಿದ
ಸುಜ್ಞಾನವೇ ಜ್ಞಾನತೂರ್ಯ.
ಆ ಸುಜ್ಞಾನವನ್ನೊಳಗೊಂಡ ನಿಃಶಬ್ದವೇ ಜ್ಞಾನವ್ಯೋಮ.
ಆ ಜ್ಞಾನವ್ಯೋಮವನೊಳಗೊಂಡ ಮಹಾಜ್ಞಾನವೆ
ಜ್ಞಾನವ್ಯೋಮಾತೀತವೆಂದು ಶ್ರುತಿಗಳು ಸಾರುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./450
ಇನ್ನು ತೊಂಬತ್ತುನಾಲ್ಕು ವ್ಯೋಮವ್ಯಾಪಿ ಪದಂಗಳುತ್ಪತ್ಯವದೆಂತೆಂದಡೆ :
ಅನೇಕಕೋಟಿ ಸೂರ್ಯಚಂದ್ರಾಗ್ನಿಮಯವಾಗಿಹ
ಮಹಾಜ್ಯೋತಿರ್ಮಯಲಿಂಗದಲ್ಲಿ ತೊಂಬತ್ತುನಾಲ್ಕು
ವ್ಯೋಮವ್ಯಾಪಿ ಪದಂಗಳುತ್ಪತ್ಯ.
ತೊಂಬತ್ತುನಾಲ್ಕು ವ್ಯೋಮವ್ಯಾಪಿಪದಂಗಳ ವಿವರವದೆಂತೆಂದಡೆ : “ವ್ಯೋಮವ್ಯಾಪಿನೇ ವ್ಯೋಮರೂಪಾಯ ಸರ್ವವ್ಯಾಪಿನೇ ಶಿವಾಯ
ಈಶಾನ ಮೂಧ್ರ್ನಾಯ ತತ್ಪುರುಷವಕ್ತ್ರಾಯ
ಅಘೋರ ಹೃದಯಾಯ ವಾಮದೇವ ಗುಹ್ಯಾಯ
ಸದ್ಯೋಜಾತಮೂರ್ತಯೇ ಓಂ ನಮೋ ನಮಃ ||
ಗುಹ್ಯಾತಿಗುಹ್ಯಾಯ ಗೌಪ್ತೇ ಅಭಿಧಾನಾಯ
ಸರ್ವಯೋಗಾಧಿಕೃತಾಯ ಜ್ಯೋತಿರೂಪಾಯ
ಪರಮೇಶ್ವರ ಪರಾಯ ಚೇತನಾಚೇತನ ವ್ಯೋಮಿನ್
ವ್ಯಾಪಿನ್ ರೂಪಿನ್ ಅರೂಪಿನ್ ಪ್ರಥಮ ಪ್ರಥಮ |
ತೇಜಸ್ತೇಜಃ ಜ್ಯೋತಿಜ್ಯರ್ೊತಿಃ ಅರೂಪ ಅನಿಲೀನ ಅಧೂಮ
ಅಭಸ್ಮ ಅನಾದೇರನಾದೆ ನಾ ನಾ ನಾ ಧೂ ಧೂ ಧೂ
ಓಂ ಭೂಃ ಓಂ ಭುವಃ ಓಂ ಸ್ವಾಹಾ |
ಅನಿಧನ ನಿಧನೋದ್ಭವ ಶಿವಃ ಶರ್ವ ಪರಮಾತ್ಮಾ
ಮಹೇಶ್ವರ ಮಹೇಶ್ವರ ಮಹಾತೇಜ ಮಹಾತೇಜ
ಯೋಗಾಧಿಪತೇ ಮುಂಚ ಮುಂಚ ಪ್ರಮಥ ಪ್ರಮಥ
ಶರ್ವ ಶರ್ವ ಭವ ಭವ ಭವೋದ್ಭವ ಸರ್ವಭೂತಸುಖಪ್ರದ
ಸರ್ವಸಾನಿಧ್ಯಕರ, ಬ್ರಹ್ಮವಿಷ್ಣುರುದ್ರಪರ ಅರ್ಚಿತಸ್ತುತ ಪೂರ್ವಸ್ಥಿತ
ಸಾಕ್ಷಿಹಿ ಸಾಕ್ಷಿಹಿ ತರುತರು ಪತಂಗ ಪತಂಗ ಪಿಂಗ ಪಿಂಗ
ಜ್ಞಾನ ಜ್ಞಾನ, ಶಬ್ದ ಶಬ್ದ, ಸೂಕ್ಷ್ಮ ಸೂಕ್ಷ್ಮ
ಶಿವ ಶರ್ವ ಶರ್ವ ಓಂ ನಮಃಶಿವಾಯ |
ಓಂ ನಮಃಶಿವಾಯ, ನಮೋ ನಮಃ ಓಂ ||”
ಅಂತು ತೊಂಬತ್ತುನಾಲ್ಕು ವ್ಯೋಮವ್ಯಾಪಿ ಪದಂಗಳು.
ಇದು ಪದಾಧ್ವ ನೋಡಾ, ಅಪ್ರಮಾಣಕೂಡಲಸಂಗಮದೇವಾ./451
ಇನ್ನು ದ್ವಿದಶಕಮಲಂಗಳ ನಿವೃತ್ತಿ ಅದೆಂತೆಂದಡೆ :
ಚತುರ್ದಳಪದ್ಮ ಷಡುದಳಪದ್ಮದಲ್ಲಿ ಅಡಗಿತ್ತು.
ಆ ಷಡ್ದಳಪದ್ಮ ದಶದಳಪದ್ಮದಲ್ಲಿ ಅಡಗಿತ್ತು.
ಆ ದಶದಳಪದ್ಮ ದ್ವಾದಶದಳಪದ್ಮದಲ್ಲಿ ಅಡಗಿತ್ತು.
ಆ ದ್ವಾದಶದಳಪದ್ಮ ಷೋಡಶದಳಪದ್ಮದಲ್ಲಿ ಅಡಗಿತ್ತು.
ಆ ಷೋಡಶದಳಪದ್ಮ ದ್ವಿದಳಪದ್ಮದಲ್ಲಿ ಅಡಗಿತ್ತು.
ಆ ದ್ವಿದಳಪದ್ಮ ಚೌಷಷ್ಠಿದಳಪದ್ಮದಲ್ಲಿ ಅಡಗಿತ್ತು.
ಆ ಚೌಷಷ್ಠಿದಳಪದ್ಮ ಶತದಳಪದ್ಮದಲ್ಲಿ ಅಡಗಿತ್ತು.
ಆ ಶತದಳಪದ್ಮ ಸಹಸ್ರದಳಪದ್ಮದಲ್ಲಿ ಅಡಗಿತ್ತು.
ಆ ಸಹಸ್ರದಳಪದ್ಮ ತ್ರಿದಳಪದ್ಮದಲ್ಲಿ ಅಡಗಿತ್ತು.
ಆ ತ್ರಿದಳಪದ್ಮ ಏಕದಳಪದ್ಮದಲ್ಲಿ ಅಡಗಿತ್ತು.
ಆ ಏಕದಳಪದ್ಮ ತ್ರಿಸಹಸ್ರದಳಪದ್ಮದಲ್ಲಿ ಅಡಗಿತ್ತು.
ಆ ತ್ರಿಸಹಸ್ರದಳಪದ್ಮ ಲಕ್ಷದಳಪದ್ಮದಲ್ಲಿ ಅಡಗಿತ್ತು.
ಆ ಲಕ್ಷದಳಪದ್ಮ ಕೋಟಿದಳಪದ್ಮದಲ್ಲಿ ಅಡಗಿತ್ತು.
ಆ ಕೋಟಿದಳಪದ್ಮ ಅರ್ಬುದದಳಪದ್ಮದಲ್ಲಿ ಅಡಗಿತ್ತು.
ಆ ಅರ್ಬುದದಳಪದ್ಮ ಖರ್ವದಳಪದ್ಮದಲ್ಲಿ ಅಡಗಿತ್ತು.
ಆ ಖರ್ವದಳಪದ್ಮ ಮಹಾಖರ್ವದಳಪದ್ಮದಲ್ಲಿ ಅಡಗಿತ್ತು.
ಆ ಮಹಾಖರ್ವದಳಪದ್ಮ ಪದ್ಮದಳಪದ್ಮದಲ್ಲಿ ಅಡಗಿತ್ತು.
ಆ ಪದ್ಮದಳಪದ್ಮ ಕ್ಷೊಣಿದಳಪದ್ಮದಲ್ಲಿ ಅಡಗಿತ್ತು.
ಆ ಕ್ಷೊಣಿದಳಪದ್ಮ ಕ್ಷಿತಿದಳಪದ್ಮದಲ್ಲಿ ಅಡಗಿತ್ತು.
ಆ ಕ್ಷಿತಿದಳಪದ್ಮ ಮಹಾಕ್ಷಿತಿದಳಪದ್ಮದಲ್ಲಿ ಅಡಗಿತ್ತು.
ಆ ಮಹಾಕ್ಷಿತಿದಳಪದ್ಮ ಪರಾಪರಕ್ಕೂ ಪರವಾಗಿಹ ಪರಬ್ರಹ್ಮದ
ನೆನಹುಮಾತ್ರದಲ್ಲಿ ಅಡಗಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ : “ಚತುರ್ದಳಪದ್ಮಶ್ಚೈವ ಷಡ್ದಳೇ ಚ ವಿಲೀಯತೇ |
ಷಡ್ದಳಪದ್ಮಕಂ ಚೈವ ದಶದಳೇ ಲಯಂ ತಥಾ ||
ದಶದಳಪದ್ಮಶ್ಚೈವ ದ್ವಾದಶದಳೇ ಲೀಯತೇ |
ದ್ವಾದಶದಳಪದ್ಮಶ್ಚ ಷಷ್ಠಾದಶದಳೇ ಲಯಃ ||
ಷಷ್ಠಾದಶದಳಂ ಚೈವ ಬ್ರಹ್ಮಪದ್ಮೇ ವಿಲೀಯತೇ |
ದ್ವಿದಳೇ ಚ ವಿಲೀಯತೇ ತಥಾ ದ್ವಿದಳಪದ್ಮಶ್ಚ ||
ಚತುಷಷ್ಠಿರ್ದಳೇ ಲಯಂ ಚೌಷಷ್ಠಿರ್ದಳೇ ಲಯಂ |
ಚೌಪಷ್ಠಿದಳಪದ್ಮಂ ಚ ಶತದಳಪದ್ಮೇ ಲಯಂ |
ಶತದಳಪದ್ಮಶ್ಚೈವ ಬ್ರಹ್ಮಪದ್ಮೇ ವಿಲೀಯತೇ |
ಸಹಸ್ರದಳಪದ್ಮಂ ಚ ತ್ರಿದಳೇ ಚ ವಿಲೀಯತೇ ||
ತ್ರಿದಳಕಮಲಶ್ಚೈವ ಏಕಪದ್ಮೇ ವಿಲೀಯತೇ
ತ್ರಿಸಹಸ್ರಕಮಲೇ ಚ ಏಕಪದ್ಮಶ್ಚ ವಿಲೀಯತೇ ||
ತ್ರಿಸಹಸ್ರದಳಂ ಪದಂ ಲಕ್ಷದಳೇ ವಿಲೀಯತೇ |
ತಥಾ ಲಕ್ಷದಳಂ ಪದ್ಮಂ ಕೋಟಿದಳೇ ವಿಲೀಯತೇ ||
ಕೋಟಿದಳಮಹಾಪದ್ಮಂ ಆರ್ಬುದದಳೇ ವಿಲೀಯತೇ ||
ಅರ್ಬುದದಳಪದ್ಮಶ್ಚ ಖರ್ವದಳೇ ಚ ವಿಲೀಯತೇ ||
ಖರ್ವದಳಪದ್ಮಶ್ಚ ಮಹಾಖರ್ವದಳೇ ಲಯಾಃ |
ಮಹಾಖರ್ವದಳಂ ಚೈವ ಪದ್ಮದಳೇ ಚ ಲೀಯತೇ ||
ತಥಾ ಪದ್ಮದಳಂ ಪದ್ಮಂ ಕ್ಷೊಣಿದಳಪದ್ಮೇ ಲಯಾಃ |
ಕ್ಷೊಣಿದಳ ಮಹಾಪದ್ಮಂ ಕ್ಷಿತಿದಳಪದ್ಮೇ ಲಯಾಃ ||
ಕ್ಷಿತಿದಳ ಮಹಾಪದ್ಮಂ ಮಹಾಕ್ಷಿತಿದಳೇ ಲಯಾ ಃ |
ಮಹಾಕ್ಷಿತಿದಳಂ ಪದ್ಮಂ ಪರಬ್ರಹ್ಮೇ ಲಯಂ ತಥಾ |
ಇತಿ ಪದ್ಮಲಯಂ ಜ್ಞಾತುಂ ದುರ್ಲಭಂ ಚ ವರಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./452
ಇನ್ನು ನಕ್ಷತ್ರ ನವಗ್ರಹಗಳ ಸ್ಥಾನವೆಂತೆಂದಡೆ :
ನಾದಚಕ್ರದಲ್ಲಿ ಸೂರ್ಯನಿಹನು, ಬಿಂದುಚಕ್ರದಲ್ಲಿ ಚಂದ್ರನಿಹನು.
ಅಧೋನಾಭಿಯಲ್ಲಿ ಮಂಗಳನಿಹನು,
ಹೃದಯಸ್ಥಾನದಲ್ಲಿ ಬುಧನಿಹನು, ಗುಹ್ಯಸ್ಥಾನದಲ್ಲಿ ಬೃಹಸ್ಪತಿ ಇಹನು,
ಕಲಾಚಕ್ರದಲ್ಲಿ ಶುಕ್ರನಿಹನು, ನಾಭಿಸ್ಥಾನದಲ್ಲಿ ಶನೀಶ್ವರನಿಹನು,
ಮುಖದಲ್ಲಿ ರಾಹು ಇಹನು, ನಾದಸ್ಥಾನದಲ್ಲಿ ಕೇತು ಇಹನು.
ಇಂತು ನವಗ್ರಹಂಗಳು, ಒಂದೊಂದು ಗ್ರಹಂಗಳಲ್ಲಿ
ತ್ರಿತ್ರಿನಕ್ಷತ್ರಂಗಳು ಇಹವು.
ಇದಕ್ಕೆ ಈಶ್ವರ ಉವಾಚ : “ನಾದಚಕ್ರಸ್ಥಿತೋ ಸೂರ್ಯಃ ಬಿಂದುಚಕ್ರೇ ಚ ಚಂದ್ರಮಾಃ |
ಚೋನಾಭ್ಯಾಂತುಚೋ ಜ್ಞೇಯಂ ಹೃದಯೇ ಚ ಬುಧಸ್ಮೃತಃ ||
ಗುಹ್ಯಸ್ಥಾನೇ ಗುರುಂ ವಿದ್ಯಾತ್ ಚಕ್ರೇ ಕಲಾ ಶುಕ್ರಸಮಾಶ್ರಿತಃ |
ನಾಭಿಸ್ಥಾನೇ ಸ್ಥಿತೋ ಮಂದಃ ಮುಖಾಂತೇ ರಾಹುರಾಶ್ರಿತಃ ||
ನಾದಸ್ಥಾನೇ ಸ್ಥಿತೋ ಕೇತುಃ ಅಸ್ತಿನಾಹಿಸ್ತಯಶ್ರಯಃ |
ವಿಭವತ್ಸಮಾಖ್ಯಾತ ಆಪಾದಸ್ಥಲಮಸ್ತಕೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./453
ಇನ್ನು ನವಶಕ್ತಿಗಳ ನಿವೃತ್ತಿ ಅದೆಂತೆಂದಡೆ :
ಕಾಕಿನಿಶಕ್ತಿ ರಾಕಿನಿಶಕ್ತಿಯಲ್ಲಿ ಅಡಗಿದಳು.
ಆ ರಾಕಿನಿಶಕ್ತಿ ಲಾಕಿನಿಶಕ್ತಿಯಲ್ಲಿ ಅಡಗಿದಳು.
ಆ ಲಾಕಿನಿಶಕ್ತಿ ಶಾಕಿನಿಶಕ್ತಿಯಲ್ಲಿ ಅಡಗಿದಳು.
ಆ ಶಾಕಿನಿಶಕ್ತಿ ಡಾಕಿನಿಶಕ್ತಿಯಲ್ಲಿ ಅಡಗಿದಳು.
ಆ ಡಾಕಿನಿಶಕ್ತಿ ಹಾಕಿನಿಶಕ್ತಿಯಲ್ಲಿ ಅಡಗಿದಳು.
ಆ ಹಾಕಿನಿಶಕ್ತಿ ನಿರ್ಮಾಯಶಕ್ತಿಯಲ್ಲಿ ಅಡಗಿದಳು.
ಆ ನಿರ್ಮಾಯಶಕ್ತಿ ನಿಭ್ರಾಂತಶಕ್ತಿಯಲ್ಲಿ ಅಡಗಿದಳು.
ಆ ನಿಭ್ರಾಂತಿಶಕ್ತಿ ನಿರ್ಭಿನ್ನಶಕ್ತಿಯಲ್ಲಿ ಅಡಗಿದಳು.
ಆ ನಿರ್ಭಿನ್ನಶಕ್ತಿ ಏನೂ ಎನಲಿಲ್ಲದ
ಪರಬ್ರಹ್ಮದ ನೆನಹುಮಾತ್ರದಲ್ಲಿ ಅಡಗಿದಳು.
ಏನೂ ಏನೂ ಎನಲಿಲ್ಲದ ಪರಬ್ರಹ್ಮದ ನೆನಹು
ಅಡಗಿ ನಿಃಶೂನ್ಯವಾಯಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ : “ರಾಕಿನ್ಯಾಶ್ಚ ಮನೋಜ್ಞಾನಾತ್ ಕಾಕಿನೀಶಕ್ತಿ ಲೀಯತೇ |
ಲಾಕಿನ್ಯಾಶ್ಚ ಮನೋಜ್ಞಾನಾತ್ ರಾಕಿನೀಶಕ್ತಿ ಲೀಯತೇ |
ಶಾಕಿನ್ಯಾಶ್ಚ ಮನೋಜ್ಞಾನಾತ್ ಲಾಕಿನೀಶಕ್ತಿ ಲೀಯತೇ |
ಡಾಕಿನ್ಯಾಶ್ಚ ಮನೋಜ್ಞಾನಾತ್ ಶಾಕಿನ್ಯಾಶ್ಚಕ್ತಿಲೀಯತೇ |
ಹಾಕಿನ್ಯಾಶ್ಚ ಮನೋಜ್ಞಾನಾತ್ ಡಾಕಿನೀಶಕ್ತಿ ಲೀಯತೇ |
ನಿರ್ಮಾಯೋಃ ಮನೋಜ್ಞಾನಾತ್ ಡಾಕಿನೀಶಕ್ತಿ ಲೀಯತೇ ||
ನಿಭ್ರಾಂತುಃ ಮನೋಜ್ಞಾನಾತ್ ನಿರ್ಮಾಯಶಕ್ತಿ ಲೀಯತೇ ||
ನಿರ್ಭಿನ್ನಾಃ ಮನೋಜ್ಞಾನಾತ್ ನಿಭ್ರಾಂತಶಕ್ತಿ ಲೀಯತೇ ||
ಪರಬ್ರಹ್ಮ ಮನೋಜ್ಞಾನಾತ್ ಪರಬ್ರಹ್ಮೇ ಲೀಯತೇ |
ಏಕೈಕ ಪ್ರಣವಾಖ್ಯಾತಂ ಏಕೈಕಂತು ವಿಲೀಯತೇ |”
ಇದಕ್ಕೆ ಶ್ರುತಿ : “ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./454
ಇನ್ನು ನವಶಕ್ತಿಗಳ ನೆಲೆ ಅದೆಂತೆಂದಡೆ :
ಆಧಾರಚಕ್ರದಲ್ಲಿ ಕಾಕಿನಿಶಕ್ತಿ ಇಹಳು.
ಸ್ವಾಧಿಷ್ಠಾನಚಕ್ರದಲ್ಲಿ ರಾಕಿನಿಶಕ್ತಿ ಇಹಳು.
ಮಣಿಪೂರಕಚಕ್ರದಲ್ಲಿ ಲಾಕಿನಿಶಕ್ತಿ ಇಹಳು.
ಅನಾಹತಚಕ್ರದಲ್ಲಿ ಶಾಕಿನಿಶಕ್ತಿ ಇಹಳು.
ವಿಶುದ್ಧಿಚಕ್ರದಲ್ಲಿ ಡಾಕಿನಿಶಕ್ತಿ ಇಹಳು.
ಆಜ್ಞಾಚಕ್ರದಲ್ಲಿ ಹಾಕಿನಿಶಕ್ತಿ ಇಹಳು.
ಬ್ರಹ್ಮಚಕ್ರದಲ್ಲಿ ನಿರ್ಮಾಯಶಕ್ತಿ ಇಹಳು.
ಶಿಖಾಚಕ್ರದಲ್ಲಿ ನಿಭ್ರಾಂತಶಕ್ತಿ ಇಹಳು.
ಪಶ್ಚಿಮಚಕ್ರದಲ್ಲಿ ನಿರ್ಭಿನ್ನಶಕ್ತಿ ಇಹಳು ನೋಡಾ.
ಇದಕ್ಕೆ ನಿರಾಮಯಾಗಮತಂತ್ರೇ : “ಆಧಾರೇ ಕಾಕಿನೀಚೈವ ಸ್ವಾಧಿಷ್ಠಾನೇ ಚ ರಾಕಿನಿ |
ಲಾಕಿನೀ ಮಣಿಪೂರೇ ಚ ಶಾಕಿನಿಶ್ಚ ಅನಾಹತೇ ||
ವಿಶುದ್ಧೌ ಡಾಕಿನೀಚೈವ ಆಜ್ಞಾಯಾಂ ಹಾಕಿನೀತಥಾ
ಬ್ರಹ್ಮಚಕ್ರೇ ತು ನಿರ್ಮಾಯಾ ಶಿಖಾಚಕ್ರೇ ನಿಭ್ರಾಂತಕಂ |
ಪಶ್ಚಿಮೇ ತು ನಿರ್ಭಿನ್ನಂ ಚ ಸ್ಥಾನೇ ಸ್ಥಾನೇ ಸಮಾಚರೇತ್ || ”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./455
ಇನ್ನು ನವಷಡ್ವಿಧ ಅಧಿದೇವತೆಗಳ ನೆಲೆ ಅದೆಂತೆಂದಡೆ :
ಆಧಾರಚಕ್ರಕ್ಕೆ ಬ್ರಹ್ಮನಧಿದೇವತೆ.
ಸ್ವಾಧಿಷ್ಠಾನಚಕ್ರಕ್ಕೆ ವಿಷ್ಣು ಅಧಿದೇವತೆ.
ಮಣಿಪೂರಕಚಕ್ರಕ್ಕೆ ರುದ್ರನಧಿದೇವತೆ.
ಅನಾಹತಚಕ್ರಕ್ಕೆ ಈಶ್ವರನಧಿದೇವತೆ.
ವಿಶುದ್ಧಿಚಕ್ರಕ್ಕೆ ಸದಾಶಿವನಧಿದೇವತೆ.
ಆಜ್ಞಾಚಕ್ರಕ್ಕೆ ಆತ್ಮನಧಿದೇವತೆ.
ಬ್ರಹ್ಮಚಕ್ರಕ್ಕೆ ಅಂತರಾತ್ಮನೆಂಬ ಮಹಾಗುರುವೆ ಅಧಿದೇವತೆ.
ಶಿಖಾಚಕ್ರಕ್ಕೆ ಪರಮಾತ್ಮನೆಂಬ ಮಹಾಲಿಂಗವೇ ಅಧಿದೇವತೆ.
ಪಶ್ಚಿಮಚಕ್ರಕ್ಕೆ ಸರ್ವಾತ್ಮನೆಂಬ ಮಹಾಜಂಗಮವೆ ಅಧಿದೇವತೆ ನೋಡಾ.
ಇದಕ್ಕೆ ಚಿತ್ಪ್ರಕಾಶಾಗಮೇ : “ಆಧಾರೇ ಬ್ರಹ್ಮದೈವತಂ ಸ್ವಾಧಿಷ್ಠೇ ವಿಷ್ಣುದೈವತಂ |
ರುದ್ರಂ ಚ ಮಣಿಪೂರೇ ಚ ಈಶ್ವರಂ ಚ ಅನಾಹತೇ ||
ವಿಶುದ್ಧಿಶ್ಚ ಶಿವಂ ಚೈವ ಆಜ್ಞೇಯ ಆತ್ಮದೈವತಂ |
ಬ್ರಹ್ಮಚಕ್ರಂತರಾತ್ಮಾ ಚ ಶಿಖಾಚಕ್ರಪರಂ ತಥಾ |
ಸರ್ವಾತ್ಮಾ ಪಶ್ಚಿಮಶ್ಚೆ ವ ಇತಿ ಭೇದಂ ವರಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./456
ಇನ್ನು ನಾಡಿಧಾರಣವೆಂತೆಂದಡೆ :
ಎಪ್ಪತ್ತೆರಡು ಸಾವಿರ ನಾಡಿಗಳೊಳು ಮೂವತ್ತೆರಡು ನಾಡಿ ಮುಖ್ಯವಾಗಿಹುದು.
ಆ ಮೂವತ್ತೆರಡು ನಾಡಿಗಳೊಳು
ಚತುರ್ದಶನಾಡಿಗಳು ಪ್ರಧಾನನಾಡಿಗಳಾಗಿಹವು.
ಆ ಚತುರ್ದಶನಾಡಿಗಳೊಳು ಮೂರುನಾಡಿ ಮುಖ್ಯವಾಗಿಹುದು.
ಆ ಮೂರು ನಾಡಿಗಳೊಳು ಒಂದುನಾಡಿ ಮುಖ್ಯವಾಗಿಹುದು.
ಆ ಒಂದು ನಾಡಿಯ ಯೋಗಿಗಳು ಬ್ರಹ್ಮನಾಡಿಯೆಂಬರು ನೋಡಾ
ಅಪ್ರಮಾಣಕೂಡಲಸಂಗಮದೇವಾ./457
ಇನ್ನು ನಿರಂಜನ ಷಡುಚಕ್ರಂಗಳ ಮೇಲೆ ನಾಲ್ಕು ಚಕ್ರಂಗಳುಂಟು.
ಅದೆಂತೆಂದಡೆ : ರಹಸ್ಯಕ್ಕೂ ಅತ್ಯಂತ ರಹಸ್ಯವಾಗಿಹುದು.
ಸೂಕ್ಷ್ಮಕ್ಕೂ ಅತ್ಯಂತ ಸೂಕ್ಷ್ಮವಾಗಿಹುದು.
ಶೂನ್ಯಕ್ಕೂ ಅತ್ಯಂತ ಶೂನ್ಯವಾಗಿಹುದು.
ಉಪಮೆಗೂ ಉಪಮಾತೀತವಾಗಿಹುದುಯೆಂದು
ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./458
ಇನ್ನು ನಿರಂಜನಷಡುಚಕ್ರಂಗಳ ಮೇಲಣ ನಾಲ್ಕು ಚಕ್ರಂಗಳ
ವಿವರವೆಂತೆಂದಡೆ :
ಸ್ವಯಾನಂದಚಕ್ರವೆಂದು, ಸ್ವಯಾನಂದ ಘನಚಕ್ರವೆಂದು,
ಸ್ವಯಾನಂದ ಮಹಾಘನಚಕ್ರವೆಂದು,
ಸ್ವಯಾನಂದ ಮಹಾಘನಾತೀತಚಕ್ರವೆಂದು ಈ ನಾಲ್ಕು ಚಕ್ರಂಗಳು
ಅನಂತಕೋಟಿ ಪದ್ಮವನೊಳಕೊಂಡು ಪದ್ಮವಿಲ್ಲದಿಹುದು.
ಅನಂತಕೋಟಿ ವರ್ಣಗಳನೊಳಕೊಂಡು ವರ್ಣವಿಲ್ಲದಿಹುದು.
ಅನಂತಕೋಟಿ ಅಕ್ಷರಗಳನೊಳಕೊಂಡು ಅಕ್ಷರವಿಲ್ಲದಿಹುದು.
ಅನಂತಕೋಟಿ ಶಕ್ತಿಗಳನೊಳಕೊಂಡು ಶಕ್ತಿಯಿಲ್ಲದಿಹುದು.
ಅನಂತಕೋಟಿ ಅಧಿದೇವತೆಗಳನೊಳಕೊಂಡು ಅಧಿದೇವತೆಯಿಲ್ಲದಿಹುದು.
ಅನಂತಕೋಟಿ ನಾದವನೊಳಕೊಂಡು ನಾದವಿಲ್ಲದಿಹುದು.
ಅನಂತಕೋಟಿ ಬೀಜಾಕ್ಷರವನೊಳಕೊಂಡು ಬೀಜವಿಲ್ಲದೆ ಬೆಳಗುತ್ತಿಹುದು.
ಆ ಚಕ್ರಂಗಳು ವಾಚ್ಯಕ್ಕೂ ವಾಚ್ಯಾತೀತವಾಗಿಹುದು.
ಮನಕ್ಕೂ ಮನಾತೀತವಾಗಿಹುದು, ವರ್ಣಕ್ಕೂ ವರ್ಣಾತೀತವಾಗಿಹುದು,
ತತ್ತ್ವಕ್ಕೂ ತತ್ತ್ವಾತೀತವಾಗಿಹುದು, ಜ್ಞಾನಕ್ಕೂ ಜ್ಞಾನಾತೀತ ವಾಗಿಹುದು,
ಉಪಮೆಗೂ ಉಪಮಾತೀತವಾಗಿಹುದು,ಚಕ್ರಕ್ಕೂಚಕ್ರಾತೀತವಾಗಿಹುದೆಂದು
ಅಸಿಪದಾತೀತಾಗಮದಲ್ಲಿ ಪ್ರಸಿದ್ಧವಾಗಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./459
ಇನ್ನು ನಿರಂಜನಾತೀತ ಷಟ್ಸ್ಥಲ ಬ್ರಹ್ಮದ
ಅರ್ಪಿತಾವಧಾನದ ಭೇದವದೆಂತೆಂದಡೆ :
ನಿರಂಜನಾತೀತ ಭಕ್ತಂಗೆ ನಿರಂಜನಾತೀತವೇ ಅಂಗ,
ನಿರಂಜನಾತೀತವೇ ಹಸ್ತ, ನಿರಂಜನಾತೀತವೇ ಆಚಾರಲಿಂಗ,
ನಿರಂಜನಾತೀತವೆಂಬ ಮುಖದಲ್ಲಿ,
ನಿರಂಜನಾತೀತಾನಂದವೆಂಬ ಸುಖವ ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./460
ಇನ್ನು ನಿರಂಜನಾತೀತಪ್ರಣವ ಮೊದಲಾಗಿ ಬ್ರಹ್ಮ ಕಡೆಯಾಗಿ
ಸೃಷ್ಟಿಮಾರ್ಗವ ಹೇಳುತ್ತಿದ್ದೆನು.
ಅದೆಂತೆಂದೊಡೆ : ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ
ಮಹಾಮೂಲಸ್ವಾಮಿಯ ಮೀರಿದ
ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿಯ
ನೆನಹುಮಾತ್ರದಲ್ಲಿಯೇ ನಿರಂಜನಾತೀತಪ್ರಣವ ಉತ್ಪತ್ತ್ಯವಾಯಿತ್ತು.
ಆ ನಿರಂಜನಾತೀತಪ್ರಣವದ ನೆನಹುಮಾತ್ರದಲ್ಲಿಯೇ
ನಿರಂಜನಪ್ರಣವ ಉತ್ಪತ್ತ್ಯವಾಯಿತ್ತು.
ಆ ನಿರಂಜನಪ್ರಣವದ ನೆನಹುಮಾತ್ರದಲ್ಲಿಯೇ
ಅವಾಚ್ಯಪ್ರಣವ ಉತ್ಪತ್ತ್ಯವಾಯಿತ್ತು.
ಆ ಅವಾಚ್ಯಪ್ರಣವದ ನೆನಹುಮಾತ್ರದಲ್ಲಿಯೇ
ಕಲಾಪ್ರಣವ ಉತ್ಪತ್ತ್ಯವಾಯಿತ್ತು.
ಆ ಕಲಾಪ್ರಣವದ ನೆನಹುಮಾತ್ರದಲ್ಲಿಯೇ
ಅನಾದಿಪ್ರಣವ ಉತ್ಪತ್ತ್ಯವಾಯಿತ್ತು.
ಆ ಅನಾದಿಪ್ರಣವದ ನೆನಹುಮಾತ್ರದಲ್ಲಿಯೇ
ಅನಾದಿ ಅಕಾರ ಉಕಾರ ಮಕಾರ ಉತ್ಪತ್ತ್ಯವಾಯಿತ್ತು.
ಆ ಅನಾದಿ ಅಕಾರ ಉಕಾರ ಮಕಾರದ ನೆನಹುಮಾತ್ರದಲ್ಲಿಯೇ
ಆದಿಪ್ರಣವ ಉತ್ಪತ್ತ್ಯವಾಯಿತ್ತು.
ಆ ಆದಿಪ್ರಣವದ ನೆನಹುಮಾತ್ರದಲ್ಲಿಯೇ
ಆದಿ ಅಕಾರ ಉಕಾರ ಮಕಾರ ಉತ್ಪತ್ತ್ಯವಾಯಿತ್ತು ನೋಡಾ.
ಇದಕ್ಕೆ ಚಕ್ರಾತೀತಾಗಮೇ : “ನಿರಂಜನಾತೀತಚಿಂತಾಯಾಂ ಅನಾದ್ಯೋಂಕಾರ ಸಂಭವಃ |
ನಿರಂಜನಸ್ಯ ಚಿಂತಾಯಾಂ ಅವಾಚ್ಯಂ ನಾಮ ಜಾಯತೇ |
ಅವಾಚ್ಯೋಂಕಾರ ಚಿಂತಾಯಾಂ ಕಲಾ ನಾಮ ಸಮುದ್ಭವಃ |
ಕಲಾಪ್ರಣವಚಿಂತಾಯಾಂ ಅನಾದಿಪ್ರಣವೋ ಭವೇತ್ ||
ಅನಾದಿಪ್ರಣವ ಚಿಂತಾಯಾಂ ಆದಿ ಮಾತ್ರಸ್ಯ ಸಂಭವಃ |
ಆದಿ ಮಾತ್ರಸ್ಯ ಚಿಂತಾಯಾಂ ಆದಿ ಪ್ರಣವಸಂಭವಃ |
ಆದಿಪ್ರಣವಚಿಂತಾಯಾಂ ಅಕ್ಷರತ್ರಯಮುದ್ಗತಂ ||”
ಇಂತೆಂದುದಾಗಿ,
ಇದಕ್ಕೆ ಅಥರ್ವಣವೇದ : “ಓಂ ನಿರಂಜನಾತೀತಪ್ರಣವಾಖ್ಯಾ ನಿರಂಜನ ಪ್ರಣವ ಜಾಯತೇ |
ನಿರಂಜನಪ್ರಣವ ತದಸ್ಯ ಅವಾಚ್ಯೋಂಕಾರ ಜಾಯತೇ |
ಅವಾಚ್ಯೋಂಕಾರ ಚಿಂತಾಖ್ಯಾಂ ಕಲಾಪ್ರಣವಸ್ಯ ಜಾಯತೇ |
ಕಲಾಪ್ರಣವಸ್ಯ ತದಸ್ಯ ಅನಾದ್ಯೋಂಕಾರ ಜಾಯತೇ |
ಅನಾದ್ಯೋಂಕಾರಚಿಂತಾಯಾಂ ಅನಾದಿತ್ರ್ಯಕ್ಷರೋ ಜಾಯತೇ |
ಅನಾದ್ಯರಕ್ಷರ ಚಿಂತಾಯಾಂ ಆದಿಪ್ರಣವ ಜಾಯತೇ |
ಆದಿ ಪ್ರಣವಚಿಂತಾಯಾಂ ಅಕ್ಷರತ್ರಯಂ ಜಾಯತೇ ||”
ಇಂತೆಂದು ಶ್ರುತಿ,
ಅಪ್ರಮಾಣಕೂಡಲಸಂಗಮದೇವಾ./461
ಇನ್ನು ನಿರಂಜನಾವಸ್ಥೆಯ ದರ್ಶನವದೆಂತೆಂದಡೆ :
ನಿರಂಜನವೆಂಬ ನಿತ್ಯಾನಂದಪೂರ್ಣನಿವಾಸನನರಿದು
ಆ ನಿತ್ಯಾನಂದಪೂರ್ಣನಿವಾಸದೊಳು ನಿಂದುದೆ ನಿರಂಜನಜಾಗ್ರ.
ನಿತ್ಯಾನಂದಪೂರ್ಣನಿವಾಸದೊಳು
ವಿಕಾರ ನಿರ್ವಿಕಾರವಿಲ್ಲದಿಹುದೆ ನಿರಂಜನಸ್ವಪ್ನ.
ಆ ನಿತ್ಯಾನಂದಪೂರ್ಣನಿವಾಸದೊಳು ಸಂತೋಷವಳಿದು
ನಿಷ್ಪತ್ತಿಯಾಗಿ ನಿಂದುದೆ ನಿರಂಜನಸುಷುಪ್ತಿ.
ನಿತ್ಯಾನಂದಪೂರ್ಣನಿವಾಸವ ಬಿಟ್ಟು ಮೇಲಾದ
ಆ ನಿತ್ಯಾನಂದಾತೀತಕ್ಕೆ ಮೊದಲು ನಿರಂಜನತೂರ್ಯ.
ಆ ನಿತ್ಯಾನಂದಾತೀತವ ಸುಟ್ಟ ಠಾವು ನಿರಂಜನವ್ಯೋಮ.
ಆ ನಿರಂಜನವ್ಯೋಮವ ಮೆಟ್ಟಿ ಮೇಲಾದುದೆ ನಿರಂಜನವ್ಯೋಮಾತೀತವೆಂದು
ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./462
ಇನ್ನು ನಿರಾಧಾರಧಾರಣವೆಂತೆಂದಡೆ :
ನಿರಾಧಾರಯೋಗದ ಮನವೆಂಬ ಮಹಾಪೀಠದ ಮೇಲೆ
ಸುಜ್ಞಾನವೆಂಬ ಲಿಂಗವ ನೆಲೆಗೊಳಿಸಿ,
ದ್ರವ್ಯವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸಿ
ಭವದೂರನಾದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ./463
ಇನ್ನು ನಿರಾಮಯ ಭಕ್ತಂಗೆ ನಿರಾಮಯವೇ ಅಂಗ.
ನಿರಾಮಯವೆ ಹಸ್ತ, ನಿರಾಮಯವೇ ಆಚಾರಲಿಂಗ.
ನಿರಾಮಯವೆಂಬ ಮುಖದಲ್ಲಿ
ನಿರಾಮಯಾನಂದವೆಂಬ ಸುಖವ ಸಮರ್ಪಣವ ಮಾಡಿ,
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./464
ಇನ್ನು ನಿರಾಳ ಷಡುಚಕ್ರಂಗಳ ಮೇಲಣ
ನಾಲ್ಕು ಚಕ್ರಂಗಳ ಕ್ರಮವೆಂತೆಂದಡೆ :
ನಿರ್ವಾಣಲಿಂಗಚಕ್ರವೆಂದು, ಮಹಾನಿರ್ವಾಣಲಿಂಗಚಕ್ರವೆಂದು,
ಅತಿಮಹಾನಿರ್ವಾಣಘನಲಿಂಗಚಕ್ರವೆಂದು,
ಅತಿಮಹಾತೀತ ಮಹಾನಿರ್ವಾಣ ಘನಲಿಂಗಚಕ್ರವೆಂದು.
ನಾಲ್ಕು ಚಕ್ರಕ್ಕೂ ಪದ್ಮವಿಲ್ಲ ವರ್ಣವಿಲ್ಲ,
ಅಕ್ಷರಂಗಳಿಲ್ಲ, ಶಕ್ತಿಯಿಲ್ಲ, ಅಧಿದೇವತೆ ಇಲ್ಲ, ನಾದವಿಲ್ಲ,
ಬೀಜಾಕ್ಷರವಿಲ್ಲದೆ ಬೆಳಗುತ್ತಿಹುದು.
ಆ ಚಕ್ರಂಗಳು ವರ್ಣಕ್ಕೂ ವರ್ಣಾತೀತವಾಗಿಹುದು,
ಉಪಮೆಗೆ ಉಪಮಾತೀತವಾಗಿಹುದು
ಚಕ್ರಕ್ಕೂ ಚಕ್ರಾತೀತವಾಗಿಹುದೆಂದು
ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./465
ಇನ್ನು ನಿರಾಳವಸ್ಥೆಯ ದರ್ಶನವದೆಂತೆಂದಡೆ :
ನಿರಾಳಮಯವನರಿದು ಆ ನಿರಾಳಮಯದೊಳು
ಪೂರ್ಣಬೋಧವಾಗಿ ನಿಂದುದೇ ನಿರಾಳಜಾಗ್ರ.
ಮುಂದೆ ಹೇಳಿದ ನಿರಾಳಮಯದೊಳು ವಿಕಾರವಳಿದು
ನಿರ್ವಿಕಾರವಾಗಿ ನಿಂದುದೆ ನಿರಾಳಸ್ವಪ್ನ.
ಮುಂದೆ ಹೇಳಿದ ನಿರಾಳಬೋಧದಲ್ಲಿ ಸಂತೋಷವನಳಿದು
ನಿಷ್ಪತ್ತಿಯಾಗಿ ನಿಂದುದೆ ನಿರಾಳಸುಷುಪ್ತಿ.
ಮುಂದೆ ಹೇಳಿದ ನಿರಾಳಬೋಧವ ಬಿಟ್ಟು
ಮೇಲಾದ ನಿರಾಳಾನಂದಕ್ಕೆ ಮೊದಲು ನಿರಾಳತೂರ್ಯ.
ಮುಂದೆ ಹೇಳಿದ ನಿರಾಳಾನಂದವನು ಸುಟ್ಟ ಠಾವು ನಿರಾಳವ್ಯೋಮ.
ನಿರಾಳವ್ಯೋಮವ ಮೆಟ್ಟಿ ಮೇಲಾದುದೇ ನಿರಾಳವ್ಯೋಮಾತೀತವೆಂದು
ಅಸಿಪದಾತೀತಾಗಮದಲ್ಲಿ ಹೇಳುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./466
ಇನ್ನು ನಿರ್ಮಲಾವಸ್ಥೆಯ ದರ್ಶನವ ಮಾಡುವಾಗ
ಪಂಚಲಿಂಗಗಳನು ದರ್ಶನವ ಮಾಡುವುದು.
ಅದೆಂತೆಂದಡೆ : ಅಣವ, ಮಾಯೆ, ಕಾರ್ಮಿಕ, ಮಹಾಮಾಯೆ, ತಿರೋಧಾನಮಲ.
ಆಣವಮಲವಾವುದು ?
ಶಿವನ ನೆನೆಯಲೀಸದಿಹುದು.
ಮಾಯೆಯಾವುದು ?
ತನು ಕರಣ ಭುವನಭೋಗಂಗಳ ಬಯಸುತ್ತಿಹುದು,
ಕಾರ್ಮಿಕವಾವುದು ?
ಪುಣ್ಯಪಾಪಂಗಳೆಂದು ಹೆಸರಾಗಿ ಸುಖದುಃಖಂಗಳಾಗಿಹುದು.
ಮಹಾಮಾಯೆ ಯಾವುದು ?
ಪಂಚಕರ್ತನು ರೂಪಾದಿ ದೇಹಾಗಿ ಪ್ರಪಂಚಗಳ ಪ್ರೇರಿಸಿಕೊಂಡಿಹುದು.
ತಿರೋಧಾನಮಲವಾವುದು ?
ಮರಳಿ ಮಾಯಾಭೋಗದಲ್ಲಿ ಬಿದ್ದು ಹೊರಳಾಡಿಸುತ್ತಿಹುದು.
ಈ ಪ್ರಕಾರದಲ್ಲಿ ಪಂಚಮಲಂಗಳನು ಅರಿವುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./467
ಇನ್ನು ಪಂಚಾಕ್ಷರಂಗಳ ನಿವೃತ್ತಿಯೆಂತೆಂದಡೆ :
ಆ ಪ್ರಣವದ ತಾರಕಾಕೃತಿಯಲ್ಲಿಹ ನಕಾರದಲ್ಲಿ ನಕಾರವಡಗಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿ ಮಕಾರವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರವಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ : “ನಕಾರಶ್ಚ ಮಕಾರಶ್ಚ ಶಿಕಾರಶ್ಚ ವಕಾರಕಂ
ತಥಾ ಯಕಾರಂ ಚೈವ ಮೂಲಬೀಜಾಕ್ಷರೇ ಲಯಃ || ”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./468
ಇನ್ನು ಪಂಚಾಕ್ಷರದ ನಿವೃತ್ತಿ ಅದೆಂತೆಂದಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ಜ್ಯೋತಿಸ್ವರೂಪದಲ್ಲಿಹ ನಕಾರದಲ್ಲಿ ನಕಾರವಡಗಿತ್ತು.
ಆ ಪ್ರಣವದ ದಂಡಸ್ವರೂಪದಲ್ಲಿಹ ಮಕಾರದಲ್ಲಿ ಮಕಾರವಡಗಿತ್ತು.
ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರವಡಗಿತ್ತು.
ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರವಡಗಿತ್ತು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರವಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ : “ನಕಾರಂ ಚ ಮಕಾರಂ ಚ ಶಿಕಾರಂ ಚ ವಕಾರಕಂ |
ತಥಾ ಯಕಾರಂ ಚೈವ ಮೂಲಪಂಚಾಕ್ಷರೇ ಲಯಾಃ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./469
ಇನ್ನು ಪಂಚಾಕ್ಷರಿಯಸ್ಥಲವೆಂತೆಂದೊಡೆ :
ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ
ದಕ್ಷಿಣಭಾಗದಲ್ಲಿ ಅಕಾರೋತ್ಪತ್ಯವಾಯಿತ್ತು.
ಆ ಪ್ರಣವದ ವಾಮಭಾಗದಲ್ಲಿ ಉಕಾರೋತ್ಪತ್ಯವಾಯಿತ್ತು.
ಆ ಪ್ರಣವದ ಪೂರ್ವಭಾಗದಲ್ಲಿ ಮಕಾರೋತ್ಪತ್ಯವಾಯಿತ್ತು ನೋಡಾ.
ಇದಕ್ಕೆ ಈಶ್ವರ ಉವಾಚ : “ಓಂಕಾರ ದಕ್ಷಿಣೇಭಾಗೇ ಅಕಾರಂ ಚಾಪಿ ಜಾಯತೇ |
ಓಂಕಾರ ವಾಮಭಾಗೇ ಚ ಉಕಾರಂಚೋದ್ಭವಂ ಸದಾ ||
ಓಂಕಾರ ಪೂರ್ವಭಾಗೇ ಚ ಮಕಾರಂ ಚ ಸಮುದ್ಭವಂ |
ಇತಿ ತ್ರಿಯಕ್ಷರಂ ದೇವಿ ಸ್ಥಾನಸ್ಥಾನೇಷು ಜಾಯತೇ ||”
ಇಂತೆಂದುದಾಗಿ,
ಅಪ್ರಮಾಣ ಕೂಡಲಸಂಗಮೇವಾ./470
ಇನ್ನು ಪಿಂಡ ಉತ್ಪತ್ಯವದೆಂತೆಂದಡೆ :
ಆ ಪೃಥ್ವಿಯಲ್ಲಿ ಅನ್ನ ಉತ್ಪತ್ಯವಾಯಿತ್ತು ;
ಆ ಅನ್ನದಲ್ಲಿ ರಸ ಉತ್ಪತ್ಯವಾಯಿತ್ತು ;
ಆ ರಸದಲ್ಲಿ ರುಧಿರ ಉತ್ಪತ್ಯವಾಯಿತ್ತು ;
ಆ ರುಧಿರದಲ್ಲಿ ಮಾಂಸ ಉತ್ಪತ್ಯವಾಯಿತ್ತು ;
ಆ ಮಾಂಸದಲ್ಲಿ ಮೇದಸ್ಸು ಉತ್ಪತ್ಯವಾಯಿತ್ತು ;
ಆ ಮೇದಸ್ಸುವಿನಲ್ಲಿ ಅಸ್ಥಿ ಉತ್ಪತ್ಯವಾಯಿತ್ತು ;
ಆ ಅಸ್ಥಿಯಲ್ಲಿ ಮಜ್ಜೆ ಉತ್ಪತ್ಯವಾಯಿತ್ತು ;
ಆ ಮಜ್ಜೆಯಲ್ಲಿ ಶುಕ್ಲ ಉತ್ಪತ್ಯವಾಯಿತ್ತು.
ಇದಕ್ಕೆ ಕಾತ್ಯಾಯಿನಿ ಶ್ರುತಿ : “ಪೃಥುವೀರಂ ನ ಸಂಭೂತಿಃ ಅನ್ನಾತ್ ರಸಸಂಭವಃ |
ರಸೇನ ರುಧಿರೋ ಜಾತ ರುಧಿರಾತ್ ಮಾಂಸಸಂಭವಃ ||
ಮಾಂಸೇನ ಮೇದಸ್ಸಂಭೂತಿಃ ಮೇದಸಾ ಅಸ್ಥಿಸಮುದ್ಭವಃ |
ಅಸ್ಥಿನಾ ಮಜ್ಜಾ ಸಂಭೂತಾ ಮಜ್ಜೇ ಶುಕ್ಲಂ ಚ ಜಾಯತೇ ||”
ಇಂತೆಂದುದಾಗಿ
ಅಪ್ರಮಾಣ ಕೂಡಲಸಂಗಮದೇವಾ./471
ಇನ್ನು ಪ್ರಣವದ ಲಕ್ಷಣವದೆಂತೆಂದಡೆ :
ಪ್ರಥಮ ತಾರಕ ಸ್ವರೂಪವಾಗಿಹುದು.
ದ್ವಿತೀಯ ದಂಡಸ್ವರೂಪವಾಗಿಹುದು.
ತೃತೀಯ ಕುಂಡಲಾಕಾರವಾಗಿಹುದು.
ಚತುರ್ಥ ಅರ್ಧಚಂದ್ರಕಾಕಾರವಾಗಿಹುದು.
ಪಂಚಮ ದರ್ಪಣಾಕಾರವಾಗಿಹುದು.
ಷಷ್ಠ ಜ್ಯೋತಿಸ್ವರೂಪವಾಗಿಹುದು ನೋಡಾ.
ಇದಕ್ಕೆ ಈಶ್ವರೋವಾಚ : “ಪ್ರಥಮಂ ತಾರಕಾರೂಪಂ ದ್ವಿತೀಯಂ ದಂಡ ಉಚ್ಯತೇ |
ತೃತೀಯಂ ಕುಂಡಲಾಕಾರಂ ಚತುರ್ಥಂ ಚಾರ್ಧಚಂದ್ರಕಂ ||
ಪಂಚಮಂ ದರ್ಪಣಾಕಾರಂ ಷಷ್ಠಂ ಜ್ಯೋತಿಸ್ವರೂಪಕಂ |
ಇತಿ ಪ್ರಣವಂ ವಿಜ್ಞೇಯಂ ಯದ್ಗೋಪ್ಯಂ ವರಾರನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./472
ಇನ್ನು ಪ್ರಥಮ ಲಿಂಗದಲ್ಲಿ, ದ್ವಿತೀಯ ಲಿಂಗದಲ್ಲಿ,
ತೃತೀಯ ಲಿಂಗದಲ್ಲಿ ಮಾಡುವ ಪೂಜಾವಿಧಿ ಕ್ರಮವೆಂತೆಂದಡೆ :
ಶಕ್ತಿ ಪ್ರಥಮಲಿಂಗ, ಆ ಲಿಂಗವೆ ಗುರುಲಿಂಗ,
ಆ ಸನ್ನಿಧಿಯೇ ಶಿವಲಿಂಗ, ಆ ಲಿಂಗವೆ ಜಂಗಮಲಿಂಗ.
ಇಂತೀ ತ್ರಿವಿಧವು ಗುರುಲಿಂಗದೊಳಗಿಹವು.
ಇದಕ್ಕೆ ಈಶ್ವರೋವಾಚ : “ಶಕ್ತಿಃ ಸದ್ಗುರುಲಿಂಗಂ ಚ ಸನ್ನಿಧೌ ಶಿವಲಿಂಗಕಂ |
ತಲ್ಲಿಂಗಂ ಜಂಗಮಲಿಂಗಂ ತ್ರಿವಿಧಂ ಗುರುಮಿಶ್ರಿತಂ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./473
ಇನ್ನು ಪ್ರಥಮಲಿಂಗ ದ್ವಿತೀಯಲಿಂಗ ತೃತೀಯಲಿಂಗದಲ್ಲಿ
ಸಮುದ್ಭವವಾದ,
ಪ್ರಥಮ ದ್ವಿತೀಯ ತೃತೀಯ ಪ್ರಸಾದದ ವಿವರ ಅದೆಂತೆಂದಡೆ : ಪ್ರಥಮಲಿಂಗದಲ್ಲಿ ಶುದ್ಧ , ದ್ವಿತೀಯಲಿಂಗದಲ್ಲಿ ಸಿದ್ಧ ,
ತೃತೀಯಲಿಂಗದಲ್ಲಿ ಪ್ರಸಿದ್ಧ.
ಶುದ್ಧ ಗುರುಪ್ರಸಾದ, ಸಿದ್ಧ ಲಿಂಗಪ್ರಸಾದ, ಪ್ರಸಿದ್ಧ ಜಂಗಮಪ್ರಸಾದ,
ಶಿವಜ್ಞಾನವೇ ಮಹಾಪ್ರಸಾದ -ಇಂತು ಚತುರ್ವಿಧ ಪ್ರಸಾದ ನೋಡಾ
ಅಪ್ರಮಾಣಕೂಡಲಸಂಗಮದೇವಾ./474
ಇನ್ನು ಪ್ರಸಾದಿಯ ಷಡ್ವಿಧ ಷಡುಸ್ಥಲಲಿಂಗ
ಮಿಶ್ರಾರ್ಪಣದ ಭೇದ ವೆಂತೆಂದಡೆ :
ಅಗ್ನಿಯೆ ಅಂಗವಾದ ಪ್ರಸಾದಿಗೆ ನಿರಹಂಕಾರವೆಂಬ ಹಸ್ತದಲ್ಲಿ
ಶಿವಲಿಂಗಕ್ಕೆ ನೇತ್ರವೆಂಬಮುಖದಲ್ಲಿ
ಹರಿತವರ್ಣವಾದ ರೂಪದ್ರವ್ಯವನು ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./475
ಇನ್ನು ಪ್ರಸೂತಿಕಾಲದಲ್ಲಿ ವಾಯುವಶದಿಂದ
ಜನನಿಯ ಜಠರಮಂ ಪೊರಮಡುವನು.
ಪೊರಮಡಲೊಳಗಾಗಿ ಆದಿಮಾಯೆಯೆಂಬ ಗಾಳಿಬೀಸಿ.
ಮಲವೇ ಒಡಲಾಗಿ ನೆನವೆಲ್ಲವ ಮರದುದು,
ಮುನ್ನ ಮಾಡಿದ ಕರ್ಮಫಲದಿಂದ ನೋಡಾ
ಅಪ್ರಮಾಣಕೂಡಲಸಂಗಮದೇವಾ./476
ಇನ್ನು ಪ್ರಾಣಲಿಂಗಿಯಲ್ಲಿಯ ಭಕ್ತಂಗೆ
ವಾಯುವಿನಲ್ಲಿಯ ಪೃಥ್ವಿಯೇ ಅಂಗ.
ಆ ಅಂಗಕ್ಕೆ ಸುಮನದಲ್ಲಿಯ ಸುಚಿತ್ತವೇ ಹಸ್ತ.
ಆ ಹಸ್ತಕ್ಕೆ ಜಂಗಮಲಿಂಗದಲ್ಲಿಯ ಆಚಾರಲಿಂಗವೆ ಲಿಂಗ.
ಆ ಆಚಾರಲಿಂಗಮುಖದಲ್ಲಿ ಕಠಿಣವಾದ ಸ್ಪರ್ಶನದ್ರವ್ಯವನು
ಸಮರ್ಪಣವಂ ಮಾಡಿ, ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./477
ಇನ್ನು ಪ್ರಾಣಲಿಂಗಿಯಲ್ಲಿಯ ಷಡ್ವಿಧ ಷಡುಸ್ಥಲಲಿಂಗ
ಮಿಶ್ರಾರ್ಪಣದ ಭೇದವೆಂತೆಂದಡೆ :
ವಾಯುವೆ ಅಂಗವಾದ ಪ್ರಾಣಲಿಂಗಿಗೆ ಸುಮನವೆಂಬ ಹಸ್ತದಲ್ಲಿ
ಜಂಗಮಲಿಂಗದಲ್ಲಿ ತ್ವಕ್ಕೆಂಬ ಮುಖದಲ್ಲಿ
ಶೈತ್ಯವಾದ ಸ್ಪರ್ಶನದ್ರವ್ಯವನು ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./478
ಇನ್ನು ಪ್ರೇರಕಾವಸ್ಥೆಯ ದರ್ಶನವದೆಂತೆಂದಡೆ :
ಶಿವತತ್ತ್ವವೈದು, ಕಲಾದಿಗಳೇಳು, ಕರಣ ನಾಲ್ಕು,
ಜ್ಞಾನೇಂದ್ರಿಯಂಗಳಲ್ಲಿ ಶ್ರೋತ್ರ ಒಂದು,
ಭೂತಂಗಳಲ್ಲಿ ಆಕಾಶ ಒಂದು,
ಈ ಹದಿನೆಂಟು ಕರಣಂಗಳೊಡನೆ ಕೂಡಿ,
ಶಬ್ದವ ಕೇಳುವ ಅವಸರ ಮತ್ತಂ ಉಂಟಾದ
ಕರಣಂಗಳ ಕಂಡು ಕೊಂಬುದು ನೋಡಾ
ಅಪ್ರಮಾಣಕೂಡಲಸಂಗಮದೇವಾ. || /479
ಇನ್ನು ಬೀಜಾಕ್ಷರಂಗಳ ನೆಲೆ ಅದೆಂತೆಂದಡೆ :
ಆ ಗೋಳಕಾಕಾರ ಪ್ರಣವದಲ್ಲಿ
ಪ್ರಣವ ಉತ್ಪತ್ಯವಾಗಿ ಆಜ್ಞಾಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ದರ್ಪಣಾಕಾರದಲ್ಲಿಹ ಯಕಾರದಲ್ಲಿ ಯಕಾರ ಉತ್ಪತ್ಯವಾಗಿ
ವಿಶುದ್ಧಿಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ಅರ್ಧಚಂದ್ರಕದಲ್ಲಿಹ ವಕಾರದಲ್ಲಿ ವಕಾರ ಉತ್ಪತ್ಯವಾಗಿ
ಅನಾಹತಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ಕುಂಡಲಾಕಾರದಲ್ಲಿಹ ಶಿಕಾರದಲ್ಲಿ ಶಿಕಾರ ಉತ್ಪತ್ಯವಾಗಿ
ಮಣಿಪೂರಕಚಕ್ರಕ್ಕೆ ಬೀಜಾಕ್ಷರವಾಗಿಹುದು.
ಆ ಪ್ರಣವದ ದಂಡಕಸ್ವರೂಪದಲ್ಲಿಹ ಮಕಾರದಲ್ಲಿ ಮಕಾರ ಉತ್ಪತ್ಯವಾಗಿ
ಸ್ವಾಧಿಷ್ಠಾನಚಕ್ರಕ್ಕೆ ಬೀಜಾಕ್ಷರವಾಗಿಹುದು
ಆ ಪ್ರಣವದ ತಾರಕಸ್ವರೂಪದಲ್ಲಿಹ ನಕಾರದಲ್ಲಿ ನಕಾರ ಉತ್ಪತ್ಯವಾಗಿ
ಆಧಾರಚಕ್ರಕ್ಕೆ ಬೀಜಾಕ್ಷರವಾಗಿಹುದು ನೋಡಾ.
ಇದಕ್ಕೆ ಈಶ್ವರ ಉವಾಚ : “ಆಧಾರೇ ಚ ನಕಾರಂ ಚ ಸ್ವಾಧಿಷ್ಠಾನೇ ಮಕಾರಕೇ |
ಶಿಕಾರಂ ಮಣಿಪೂರಂ ಚ ವಕಾರಂ ಚ ಅನಾಹತೇ |
ಯಕಾರಂ ಚ ವಿಶುದ್ಧಿಶ್ಚ ಆಜ್ಞಾ ಪ್ರಣವ ಏವ ಚ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./480
ಇನ್ನು ಬ್ರಹ್ಮಾಂಡಕಪಾಲದೊಳಗಣ ಸೃಷ್ಟಿಯ ವಿಸ್ತೀರ್ಣವದೆಂತೆಂದಡೆ :
ಆ ಭುವನಂಗಳು ಇಹ ಕ್ರಮವೆಂತೆಂದಡೆ :
ಬ್ರಹ್ಮಾಂಡಕಪಾಲ ಸಹಸ್ರಕೋಟಿ ಯೋಜನ ಪ್ರಮಾಣು.
ಅದರೊಳಗಾಗಿ ಅತಳಲೋಕ ಇಪ್ಪತ್ತೊಂದುಕೋಟಿ ಯೋಜನದಲ್ಲಿ
ಶಿವನ ಆಜ್ಞಾಶಕ್ತಿಯಿಂದ ಆಧಾರಶಕ್ತಿ ಇಹಳು.
ಆ ಆಧಾರಶಕ್ತಿಯ ಉದ್ದ ಗಾತ್ರದೊಳಗಾಗಿ
ಐದು ಸಾವಿರಕೋಟಿ ಯೋಜನದಲ್ಲಿ ವಿತಳಲೋಕವಿಹುದು.
ಆ ವಿತಳಲೋಕ ಆರುಸಾವಿರಕೋಟಿ ಯೋಜನಪ್ರಮಾಣು.
ಆ ವಿತಳಲೋಕದ ಮೇಲೆ ಐದುಸಾವಿರಕೋಟಿ ಯೋಜನದಲ್ಲಿ
ಸುತಳಲೋಕವಿಹುದು.
ಆ ಸುತಳಲೋಕ ಅಗ್ನಿ ಜ್ವಾಲೆಯಾಗಿಹುದು.
ಆ ಸುತಳಲೋಕದೊಳು ಕಾಲಾಗ್ನಿ ರುದ್ರರಿಹರು.
ಆ ಸುತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ
ರಸಾತಳಲೋಕವಿಹುದು.
ಆ ರಸಾತಳಲೋಕ ಬಯಲಾಗಿಹುದು.
ಆ ರಸಾತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ
ತಳಾತಳಲೋಕವಿಹುದು.
ಆ ತಳಾತಳಲೋಕ ಮಹಾಗ್ನಿ ಜ್ವಾಲೆಯಾಗಿಹುದು.
ಆ ತಳಾತಳಲೋಕದ ಮೇಲೆ ಮಹಾತಳಲೋಕವಿಹುದು.
ಆ ಮಹಾತಳಲೋಕದ ಮೇಲೆ ಪಾತಾಳಲೋಕವಿಹುದು.
ಆ ಪಾತಾಳಲೋಕ ಎಂಬತ್ತು ಸಾವಿರ ಕೋಟಿ ಯೋಜನ ಭೂಮಿಯಮೇಲೆ
ಜಲಮಯವಾಗಿಹುದು.
ಆ ಜಲಮಯವಾಗಿಹ ಪಾತಾಳಲೋಕವು
ಆಧಾರಶಕ್ತಿಯ ಆಜ್ಞೆಯಿಂದ ಹದಿನಾರು ದಿಕ್ಕುಗಳಲ್ಲಿಯೂ
ಹದಿನಾರುಮಹಾಭೂತಂಗಳು ಸುತ್ತಿಹವು.
ಹದಿನಾರುಭೂತಗಣಂಗಳ ನಡುವೆ ಕೂರ್ಮಾಂಡನೆಂಬ ಮಹಾಕೂರ್ಮನ
ಅಗಲವದೆಂತೆಂದಡೆ : ಐದುಸಾವಿರಕೋಟಿ ವಿಸ್ತೀರ್ಣದಗಲ ನೋಡಾ.
ಆ ಕೂರ್ಮಾಂಡನೆಂಬ ಮಹಾಕೂರ್ಮನ ಉದ್ದ
ಹದಿನೆಂಟುಸಾವಿರಕೋಟಿಯೋಜನ ಪರಿಪ್ರಮಾಣುದ್ದದ ಬೆನ್ನ ಮೇಲೆ
ಶತಕೋಟಿಯೋಜನ ಪರಿಪ್ರಮಾಣುದ್ದದ ಭೂಮಿಯ ಮೇಲೆ
ಐನೂರು ಶಿರಸ್ಸನುಳ್ಳ ಶೇಷನು, ನಾಲ್ವತ್ತುಸಾವಿರ ಶೇಷನು
ವಳಯಾಕೃತವಾಗಿ ಸುತ್ತಿರಲು,
ಆ ನಾಲ್ವತ್ತುಸಾವಿರ ಶೇಷನ ಒಳಯಾಕೃತದಲ್ಲಿ,
ಮಧ್ಯದಲ್ಲಿ ಶೇಷಾಹಿಯೆಂಬ ಮಹಾನಾಗ ಇಪ್ಪುದು.
ಆ ಶೇಷಾಹಿಯೆಂಬ ಮಹಾನಾಗವು ಎಂಟುಸಾವಿರಕೋಟಿ
ಯೋಜನಪ್ರಮಾಣು ನೀಳವು.
ಹತ್ತುಸಾವಿರಕೋಟಿ ಸುತ್ತು ವಿಸ್ತೀರ್ಣವು.
ಐದುಸಾವಿರ ಕೋಟಿ ಅಗಲದ ಹೆಡೆಯು.
ಸ್ವರ್ಗ ಜ್ಯೋತಿಪ್ರಕಾಶದ ದೇಹವನುಳ್ಳುದಾಗಿ,
ಸಹಸ್ರ ಶಿರ, ದ್ವಿಸಹಸ್ರಾಕ್ಷವು.
ಆ ಸಹಸ್ರ ಶಿರದಲ್ಲಿ ಮಾಣಿಕ್ಯದ ಬಟ್ಟುಗಳ ಧರಿಸಿಕೊಂಡು
ಮಹಾಗ್ನಿಜ್ವಾಲೆಯನುಳ್ಳ ಮಹಾಶೇಷನಿಹನು.
ಐನೂರು ಶಿರಸ್ಸನುಳ್ಳ ಶೇಷ ನೂರುನಾಲ್ವತ್ತುಸಾವಿರ ಶೇಷನ
ಸುತ್ತುವಳಯಾಕೃತವಾಗಿ ಅಷ್ಟದಿಗ್ಗಜಂಗಳಿಹವು.
ಆ ಅಷ್ಟದಿಗ್ಗಜಂಗಳ ಮೇಲೆ ವಿಸ್ತೀರ್ಣ
ಒಂದೊಂದು ಗಜಂಗಳು ನವಕೋಟಿಯೋಜನಪ್ರಮಾಣದುದ್ದವು,
ಸಾವಿರಕೋಟಿಯೋಜನಪ್ರಮಾಣದಗಲವು,
ಶತಕೋಟಿಸಾವಿರಯೋಜನಪ್ರಮಾಣದ ನೀಳವನುಳ್ಳುದಾಗಿ
ಅಷ್ಟದಿಕ್ಮಹಾಗಜಂಗಳಿಹವು.
ಆ ಅಷ್ಟದಿಕ್ಮಹಾಗಜಂಗಳು ಆಧಾರವಾಗಿ
ಭೂಲೋಕವಿಹುದು.
ಆ ಭೂಲೋಕ ಮೊದಲಾಗಿ ಕೆಳಗಿನಂಡಬ್ರಹ್ಮಾಂಡಕಪಾಲ ಕಡೆಯಾಗಿ
ಅರುವತ್ತುಸಾವಿರಕೋಟಿಯೋಜನ ಪರಿಪ್ರಮಾಣು.
ಆ ಭುವರ್ಲೊಕವು ಸಾವಿರಕೋಟಿಯೋಜನಪರಿಪ್ರಮಾಣು ಉದ್ದ
ಕಬ್ಬುಣವಾಗಿಹುದು.
ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಮಣ್ಣಾಗಿಹುದು.
ಇದು ಮಧ್ಯಭೂಮಿ. ಈ ಮಧ್ಯಭೂಮಿ ಅಜಲಮಯವಾಗಿ
ಉತ್ತರ-ದಕ್ಷಿಣ ಶತಸಹಸ್ರಕೋಟಿಯೋಜನಪರಿಪ್ರಮಾಣು.
ಸುತ್ತ ಅಗಲ ಮುನ್ನೂರರುವತ್ತುಕೋಟಿಯೋಜನಪರಿಪ್ರಮಾಣು.
ದಕ್ಷಿಣ-ಉತ್ತರ ಸಮುದ್ರ ತೊಡಗಿ ಉತ್ತರ ಹಿಮವತ್ಪರ್ವತ.
ಇದಕ್ಕೆ ಹೆಸರು ಭರತವರುಷ.
ಈ ಹಿಮವತ್ಪರ್ವತವು ಉತ್ತರ ದಕ್ಷಿಣ ಇಪ್ಪತ್ತುಸಾವಿರ ಯೋಜನಪ್ರಮಾಣು.
ಕೆಳಗೆ ಮೇಲೆ ಇಪ್ಪತ್ತುಸಾವಿರಯೋಜನಪ್ರಮಾಣು.
ಮೇಲುದ್ದವು ಎಂಬತ್ತೈದುಸಾವಿರಯೋಜನಪ್ರಮಾಣು.
ಉತ್ತರ ಸಮುದ್ರಕ್ಕೆ ದಕ್ಷಿಣ ಉತ್ತರ ಸಾವಿರಕೋಟಿ ಯೋಜನದಲ್ಲಿ
ವಿಂಧ್ಯಪರ್ವತವಿಹುದು.
ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ಮೂರುಸಾವಿರ,
ದಕ್ಷಿಣ ಉತ್ತರ ಮೂವತ್ತುಸಾವಿರಯೋಜನಪ್ರಮಾಣು.
ಕೆಳಗು ಮೇಲು ಮೂವತ್ತುಸಾವಿರಯೋಜನಪ್ರಮಾಣು.
ಆ ವಿಂಧ್ಯಪರ್ವತದ ಮೇಲುದ್ದವು
ತೊಂಬತ್ತುನೂರುಸಾವಿರಯೋಜನ ಪ್ರಮಾಣು.
ಪಶ್ಚಿಮದೆಸೆಯ ಸಮುದ್ರದಲ್ಲಿಹ ಅಸ್ತಮಾನಪರ್ವತ.
ಆ ಪರ್ವತ ದಕ್ಷಿಣ-ಉತ್ತರ ಮೂವತ್ತೈದುಸಾವಿರ ಯೋಜನಪ್ರಮಾಣು.
ಆ ಪರ್ವತದ ಕೆಳಗು ಮೇಲು ಮೂವತ್ತೈದುಸಾವಿರ ಯೋಜನಪ್ರಮಾಣು.
ಆ ಪರ್ವತದ ಮೇಲುದ್ದವು ತೊಂಬತ್ತುಸಾವಿರ ಯೋಜನಪ್ರಮಾಣು
ಭೂಮಿಗೆ ನಡುವಾಗಿ ಮಹಾಮೇರುಪರ್ವತವಿಹುದು.
ಆ ಮೇರುಪರ್ವತದ ಉತ್ತರ ದಕ್ಷಿಣ ಹದಿನಾರುಸಾವಿರ ಯೋಜನಪ್ರಮಾಣು.
ಆ ಮೇರುಪರ್ವತದ ಮೇಲುದ್ದವು ಸಾವಿರಕೋಟಿಯ ಮೇಲೆ
ನೂರುಸಾವಿರದ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು.
ಭೂಮಿಯಲ್ಲಿ ಹೂಳಿಹುದು
ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು.
ಆ ಮಹಾಮೇರುವಿನ ಪೂರ್ವದಿಕ್ಕಿನಲ್ಲಿ ಮಂದರಪರ್ವತವಿಹುದು.
ಅಲ್ಲಿಹ ವೃಕ್ಷ ಕದಂಬವೃಕ್ಷ.
ಆ ಮಹಾಮೇರುವಿನ ದಕ್ಷಿಣದಿಕ್ಕಿನಲ್ಲಿ ಗಂಧಮಾದನಪರ್ವತವಿಹುದು.
ಅಲ್ಲಿಹ ವೃಕ್ಷ ಜಂಬೂವೃಕ್ಷ.
ಆ ಮಹಾಮೇರುವಿನ ನೈಋತ್ಯದಿಕ್ಕಿನಲ್ಲಿ ನೀಲಗಿರಿಪರ್ವತವಿಹುದು.
ಅಲ್ಲಿಹ ವೃಕ್ಷ ಭೂದಳವೃಕ್ಷ.
ಆ ಮಹಾಮೇರುವಿನ ಪಶ್ಚಿಮದಿಕ್ಕಿನಲ್ಲಿ ಕಾಶೀಪರ್ವತವಿಹುದು.
ಅಲ್ಲಿಹ ವೃಕ್ಷ ಬಿಲ್ವದ ವೃಕ್ಷ.
ಆ ಮಹಾಮೇರುವಿನ ವಾಯುವ್ಯದಿಕ್ಕಿನಲ್ಲಿ ನೀಲಪರ್ವತವಿಹುದು.
ಅಲ್ಲಿಹ ವೃಕ್ಷ ಬ್ರಹ್ಮವೃಕ್ಷ.
ಆ ಮಹಾಮೇರುವಿನ ಉತ್ತರದಿಕ್ಕಿನಲ್ಲಿ ಮಧುರಾದ್ರಿಪರ್ವತವಿಹುದು.
ಅಲ್ಲಿಹ ವೃಕ್ಷ ವಟವೃಕ್ಷ.
ಆ ಮಹಾಮೇರುವಿನ ಈಶಾನ್ಯದಿಕ್ಕಿನಲ್ಲಿ ಕಪಿಲ ಮಹಾಪರ್ವತವಿಹುದು.
ಅಲ್ಲಿಹ ವೃಕ್ಷ ಶಾಕಾಫಲವೃಕ್ಷ.
ಸಪ್ತಕುಲಪರ್ವತಂಗಳು ಒಂದೊಂದು ಬಗೆ ಹತ್ತುಸಾವಿರ ಯೋಜನಪ್ರಮಾಣು.
ಆ ಸಪ್ತಕುಲಪರ್ವತಂಗಳೊಂದೊಂದಿಗೆ ಐದುಸಾವಿರ ಯೋಜನಪ್ರಮಾಣು.
ಈ ಸಪ್ತಕುಲಪರ್ವತಂಗಳ ನಡುವೆ ಮಹಾಮೇರುಪರ್ವತವಿಹುದು.
ಆ ಮೇರುಪರ್ವತದ ತುದಿಯಲ್ಲಿ ಪಂಚಸಹಸ್ರಯೋಜನದಗಲ
ಚುತುಃಚಕ್ರಾಕಾರವಾಗಿ
ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ
ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ
ನವರತ್ನಖಚಿತವಾಗಿ ಪ್ರಮಥಗಣಂಗಳು
ನಂದಿ, ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು,
ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು,
ಬ್ರಹ್ಮ ವಿಷ್ಣು ನಾರದರಿಂ ಸುಖಂಗಳಲಿಪ್ಪಂತಾಗಿ ಶಿವಪುರವಿಹುದು.
ಆ ಶಿವಪುರದೊಳು ಸಿಂಹಾಸನಾರೂಢನಾಗಿ ಮಹಾರುದ್ರಮೂರ್ತಿ ಇಹನು.
ಆ ಮಹಾರುದ್ರಮೂರ್ತಿಯ ಚಂದ್ರಾದಿತ್ಯರು, ನಕ್ಷತ್ರ ನವಗ್ರಹಂಗಳು
ಮೊದಲಾಗಿ ಎಲ್ಲಾ ದೇವರ್ಕಳು ಪ್ರದಕ್ಷಣಬಹರು.
ಯಕ್ಷ ಕಿನ್ನರ ಗಂಧರ್ವ ಸಿದ್ಧ ವಿದ್ಯಾಧರ
ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳೆಲ್ಲರು
ಒಡ್ಡೋಲಗಂಗೊಟ್ಟಿರಲು ಎಲ್ಲ ಲೋಕಕ್ಕೂ ಸಾಕ್ಷೀಭೂತನಾಗಿ
ಆ ಮಹಾರುದ್ರಮೂರ್ತಿ ಇಹನು.
ಆ ಮಹಾಮೇರುವಿನ ದಕ್ಷಿಣದ ಕೆಳಗಣ ಪಾಶ್ರ್ವದಲ್ಲಿ
ಚಿಕ್ಕದೊಂದು ಕೋಡು.
ಆ ಕೋಡಿನಲ್ಲಿ ಕಲ್ಪವೃಕ್ಷವಿಹುದು.
ಆ ದಕ್ಷಿಣ ಕೋಡಿನಲ್ಲಿ ಜಂಬೂವೃಕ್ಷದ ಹಣ್ಣಿನ ರಸ ಸೋರಿ
ಜಾಂಬೋಧಿಯೆಂಬ ಮಹಾನದಿ ಹರಿಯುತ್ತಿಹುದು.
ಆ ನೀರ ಸೇವಿಸಿದವರು ಸ್ವರ್ಣವರ್ಣವಹರು.
ಆ ನೀರು ಹರಿದ ಠಾವೆಲ್ಲ ಸ್ವರ್ಣಬೆಳೆಭೂಮಿ.
ಆ ಭೂಮಿಗೆ ಉತ್ತರ ಪೂರ್ವವಾಗಿ ಶ್ರೀ ಕೈಲಾಸಪರ್ವತವಿಹುದು.
ಆ ಕೈಲಾಸಪರ್ವತ ಏಳು ನೆಲೆಯಾಗಿ
ರತ್ನಮಯವಾಗಿ ಅನಂತ ಕೋಡುಗಳುಂಟಾಗಿಹುದು.
ಆ ಕೈಲಾಸಪರ್ವತವು ಉತ್ತರ ದಕ್ಷಿಣ
ಹದಿನಾರುಸಾವಿರಕೋಟಿಯೋಜನ ಪರಿಪ್ರಮಾಣು.
ಆ ಕೈಲಾಸಪರ್ವತದ ಮೇಲುದ್ದವು ಸಾವಿರಕೋಟಿ
ನೂರುಸಾವಿರದ ಮೇಲೆ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು.
ಭೂಮಿಯಲ್ಲಿ ಹೂಳಿಹುದು
ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು.
ಆ ಕೈಲಾಸಪರ್ವತದ ತುದಿಯಲ್ಲಿ
ಶಿವಪುರದ ವಿಸ್ತೀರ್ಣ ಪಂಚಸಹಸ್ರ ಯೋಜನದಗಲ.
ಚತುಷ್ಟಾಕಾರವಾಗಿ ನವರತ್ನಖಚಿತವಾಗಿ
ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ
ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ
ಪ್ರಮಥಗಣಂಗಳು, ನಂದಿ ಮಹಾನಂದಿಕೇಶ್ವರಗಣಂಗಳು,
ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು
ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖಂಗಳಲ್ಲಿಪ್ಪಂತಾಗಿ
ಮಹಾಶಿವಪುರವಿಹುದು.
ಆ ಶಿವಪುರದೊಳು ಶ್ರೀಕಂಠನೆಂಬ ಸದಾಶಿವಮೂರ್ತಿ ಇಹನು.
ಆ ಶಿವಪುರದ ಬಾಗಿಲ ಕಾವಲಾಗಿ
ನಂದಿ-ಮಹಾಕಾಳರೆಂಬ ಮಹಾಗಣಂಗಳಿಹರು.
ನಂದಿ-ಮಹಾನಂದಿ-ಅತಿಮಹಾನಂದಿಕೇಶ್ವರರು
ವಿಘ್ನೇಶ್ವರ ಕುಮಾರಸ್ವಾಮಿ ಮಹಾಭೈರವೇಶ್ವರ
ಮಹಾಕಾಳಿ ಮೊದಲಾದ ಅಸಂಖ್ಯಾತ ಮಹಾಗಣಂಗಳು
ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು,
ಅಷ್ಟವಶುಗಳು, ನವಗ್ರಹಂಗಳು, ಬ್ರಹ್ಮ , ವಿಷ್ಣು , ರುದ್ರಗಣಂಗಳು,
ಮೂವತ್ಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು,
ಅಷ್ಟದಶ ಗಣಂಗಳು, ಯೋಗೀಶ್ವರರು,
ಯಕ್ಷ ಕಿನ್ನರ ಗರುಡ ಗಂಧರ್ವ ಸಿದ್ಧ ವಿದ್ಯಾಧರರು,
ರಾಕ್ಷಸಗಣ ನಾಗಗಣ ಭೂತಗಣಂಗಳು
ಮೊದಲಾದ ಎಲ್ಲಾ ಗಣಂಗಳ ಸನ್ನಿಧಿಯಲ್ಲಿ ಒಡ್ಡೋಲಗಂಗೊಟ್ಟಿರಲು,
ಚತುರ್ವೆದಂಗಳು ಮೊದಲಾಗಿ ಎಲ್ಲಾ ವೇದಂಗಳು
`ವಿಶ್ವಾಧಿಕೋ ರುದ್ರೋ ಮಹಾಋಷಿ’ ಎನಲು
‘ಋತಂ ಸತ್ಯಂ ಪರಬ್ರಹ್ಮ ‘ ಎನಲು
`ಅತ್ಯತಿಷ್ಟರ್ದಶಾಂಗುಲಂ’ ಎನಲು
`ತತ್ಪರ ಬ್ರಹ್ಮ ವಿಜಾತಿ’, ಎನಲು
`ಓಮಿತೈಕಾಕ್ಷರ ಬ್ರಹ್ಮ’ ಎಂದು ಬೊಬ್ಬಿಟ್ಟು ಸಾರುತ್ತಿರಲು
ತುಂಬುರ ನಾರದರು ಗೀತಮಂ ಪಾಡುತಿರಲು
ನಂದಿ ಮದ್ದಳೆವಾದ್ಯಮಂ ಬಾರಿಸುತ್ತಿರಲು,
ವಿಷ್ಣು ಆವುಜವ ನುಡಿಸಲು, ಬ್ರಹ್ಮ ತಾಳವನೊತ್ತಲು,
ಪಂಚಮಹಾವಾದ್ಯಂಗಳು ಮೊಳಗುತ್ತಿರಲು
ಭೃಂಗೀಶ್ವರ ಮಹಾನಾಟ್ಯವನಾಡಲು
ಉಮಾಮಹೇಶ್ವರಿಯೊಡನೆ ಪರಮೇಶ್ವರನು
ಸಿಂಹಾಸನಾರೂಢನಾಗಿ ಕುಳ್ಳಿದರ್ು
ಭೃಂಗೀಶ್ವರನ ಮಹಾನಾಟ್ಯವ ತಮ್ಮ ಲೀಲಾವಿನೋದದಲ್ಲಿ ನೋಡುತ್ತ
ಶ್ರೀ ಕೈಲಾಸಪರ್ವತದಲ್ಲಿ ಇರುತ್ತಿರ್ದನು.
ಈ ಭೂಮಿಗೆ ದಕ್ಷಿಣ ಪೂರ್ವದಲ್ಲಿ ಆದಿಯ ಮಹಾದ್ರಿಪರ್ವತವಿಹುದು.
ಆ ಆದಿಯ ಮಹಾದ್ರಿಪರ್ವತದಲ್ಲಿ ಅಗಸ್ತ್ಯಮಹಾಮುನಿ ಇಹನು.
ಈ ಭೂಮಿ ಒಂಬತ್ತು ತುಂಡಾಗಿಹುದು.
ಒಂಬತ್ತು ತುಂಡಾದ ಅಂತರಾಳವೆಲ್ಲವು ಜಲಮಯವಾಗಿ
ಹೊರಗೆ ಬಿರಿದುದ್ದವಾಗಿ ಬೆಳೆಯಲು
ನವಖಂಡಪೃಥ್ವಿಯೆಂದು ಹೆಸರಾಯಿತ್ತು.
ಈ ಭೂಮಿ ಜಂಬೂದ್ವೀಪ.
ಈ ಭೂಮಿಗೆ ಜನನ ಲವಣಸಮುದ್ರ.
ಆ ಜಂಬೂದ್ವೀಪ ಲವಣಸಮುದ್ರದ ವಿಸ್ತೀರ್ಣ: ಆ ಜಂಬೂದ್ವೀಪದ ಅಗಲ ಶತಕೋಟಿಯೋಜನಪ್ರಮಾಣು.
ಆ ಜಂಬೂದ್ವೀಪ ವಳಯಾಕೃತವಾಗಿ ಸುತ್ತಿಕೊಂಡು
ಶತಕೋಟಿಯೋಜನಪರಿಪ್ರಮಾಣದಗಲವಾಗಿ ಲವಣಸಮುದ್ರವಿಹುದು.
ಅದರಿಂದಾಚೆ ಪ್ಲಕ್ಷದ್ವೀಪ.
ಅದರಗಲ ಇನ್ನೂರುಕೋಟಿಯೋಜನಪ್ರಮಾಣು.
ಅದರಿಂದಾಚೆ ಇಕ್ಷುಸಮುದ್ರ.
ಅದರಗಲ ಇನ್ನೂರುಕೋಟಿಯೋಜನಪ್ರಮಾಣು.
ಅದರಿಂದಾಚೆ ಕುಶದ್ವೀಪ.
ಅದರಗಲ ನಾನೂರುಕೋಟಿಯೋಜನಪ್ರಮಾಣು.
ಅದರಿಂದಾಚೆ ಸುರೆಯ ಸಮುದ್ರ.
ಅದರಗಲ ನಾನೂರುಕೋಟಿ ಯೋಜನ ಪ್ರಮಾಣು.
ಅದರಿಂದಾಚೆ ಶಾಕದ್ವೀಪ.
ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು.
ಅದರಿಂದಾಚೆ ಘೃತಸಮುದ್ರ,
ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು.
ಅದರಿಂದಾಚೆ ಸಾಲ್ಮಲೀದ್ವೀಪ.
ಅದರಗಲ ಸಾವಿರದಾರು ನೂರು ಕೋಟಿ ಯೋಜನ ಪ್ರಮಾಣು.
ಅದರಿಂದಾಚೆ ಕ್ಷೀರಸಮುದ್ರ.
ಅದರಗಲ ಸಾವಿರದಾರುನೂರುಕೋಟಿ ಯೋಜನ ಪ್ರಮಾಣು.
ಅದರಿಂದಾಚೆ ಪುಸ್ಕರದ್ವೀಪ.
ಅದರಗಲ ಮೂರುಸಾವಿರಕೋಟಿ ಯೋಜನ ಪ್ರಮಾಣು.
ಅದರಿಂದಾಚೆ ದಧಿಸಮುದ್ರ.
ಅದರಗಲ ಮೂರುಸಾವಿರದಿನ್ನೂರುಕೋಟಿ ಯೋಜನ ಪ್ರಮಾಣು.
ಅದರಿಂದಾಚೆ ಕ್ರೌಂಚದ್ವೀಪ.
ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು.
ಅದರಿಂದಾಚೆ ಸ್ವಾದೋದಕಸಮುದ್ರ.
ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು.
ಅದರಿಂದಾಚೆ ಸ್ವರ್ಣಬೆಳೆಯಭೂಮಿ.
ಅದರಗಲ ಹನ್ನೆರಡುಸಾವಿರಕೋಟಿಯೋಜನ ಪ್ರಮಾಣು.
ಅದರಿಂದಾಚೆಯಲಿ ಚಕ್ರವಾಳಗಿರಿ.
ಅದರಗಲ ಇಪ್ಪತ್ತೈದುಸಾವಿರಕೋಟಿ ಯೋಜನ ಪ್ರಮಾಣು.
ಈ ಸಪ್ತಸಮುದ್ರಂಗಳು ಸಪ್ತದ್ವೀಪಂಗಳು ಹೊರಗೆ ಬಿರಿದು ಬೆಳೆಯಲು
ಸಪ್ತಸಮುದ್ರಂಗಳು, ದೆಸೆಗಳು ಕೂಡಿ ಮೇಳೈಸಲು
ನಾಲ್ವತ್ರೊಂಬತ್ತುಸಾವಿರಕೋಟಿ ಯೋಜನ ಪ್ರಮಾಣಿನ ಮೇಲೆ
ತೊಂಬತ್ತು ಸಾವಿರದೈವತ್ತುಕೋಟಿಯ ಮಧ್ಯಭೂಮಿ ಯೋಜನ
ಪ್ರಮಾಣುಮಂ ಕೂಡಿ ನೂರುಸಾವಿರಕೋಟಿ ಯೋಜನ ಪ್ರಮಾಣು.
ಈ ಭೂಮಿಗೂ ಚಕ್ರವಾಳಗಿರಿಗೂ
ಹೊರಗೆ ಕಾವಲಾಗಿ ಅಷ್ಟದಿಕ್ಪಾಲರಿಹರು.
ಮೇರು ಮಂದರ ಕೈಲಾಸ ಗಂಧಮಾದನ ವಿಂಧ್ಯ ಹಿಮಾಲಯ
ನಿಷಧ ಚಿತ್ರಕೂಟವೆಂಬ ಅಷ್ಟಕುಲಪರ್ವತಂಗಳ ತಪ್ಪಲಲ್ಲಿ
ಅನಂತವಾಸುಗಿ ಕಶ್ಚ ಕಕರ್ಾಟಕ ಪರ ಮಹಾಪರ
ಶಂಕವಾಲಿ ಕುಳಿಕನೆಂಬ ಅಷ್ಟಮಹಾಗಣಂಗಳಿಹವು.
ಈಶಾನಮುಖದಲ್ಲಿ ವಡಬಮುಖಾಗ್ನಿ ಇಹುದು.
ಉತ್ತರದೆಸೆಯಲ್ಲಿ ಕ್ಷೀರಸಮುದ್ರದೊಳು ವಿಷ್ಣು
ಅನಂತಶಯನದಲ್ಲಿ ತಮೋಗುಣಯುಕ್ತನಾಗಿ ನಿದ್ರಾಲಂಬಿಯಾಗಿಹನು.
ಈ ಭೂಮಿಗೆ ದಕ್ಷಿಣದೆಸೆಯಾಗಿ ಉತ್ತರ ಪರಿಯಂತರ
ಬ್ರಹ್ಮ ಮಹೇಶ್ವರಿ ಕೌಮಾರಿ ವೈಷ್ಣವಿ ವರಾಹಿ ಮಾಹೇಂದ್ರಿ
ಚಾಮುಂಡಿಯೆಂಬ ಸಪ್ತಮಾತೃಕೆಯರು ಇಹರು.
ಮೇಲುಗಡೆಯಲ್ಲಿ ವಿನಾಯಕ, ಕೆಳಗಡೆಯಲ್ಲಿ ಭೈರವನಿಹನು.
ಈ ಭೂಮಿಗೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮದಲ್ಲಿ
ಭೈರವ ಮಹಾಭೈರವ ಕಾಲಭೈರವ ದುಗರ್ಿ ಮಹಾದುಗರ್ಿ
ಮೊದಲಾದ ಅನಂತ ಭೂತಗಣಂಗಳು ಕಾವಲಾಗಿಹರು.
ಈ ಭೂಮಿಯಿಂದ ಮೇಲೆ ಯೋಜನ ಪ್ರಮಾಣದಲ್ಲಿ
ಸಪ್ತಮೇಘಂಗಳು, ವಾಯುವಿನ ದೆಸೆಯಿಂದ ಚಲಿಸುತ್ತಿಹುದು.
ಅವಾವೆಂದಡೆ : ನೆಲವೃಷ್ಟಿ ನೀರವೃಷ್ಟಿ ಸ್ವರ್ಣವೃಷ್ಟಿ ಪುಷ್ಪವೃಷ್ಟಿ
ಕಲ್ಪವೃಷ್ಟಿ ಮಣ್ಣವೃಷ್ಟಿ ಮೌಕ್ತಿಕವೃಷ್ಟಿ-
ಎಂಬ ಸಪ್ತವೃಷ್ಟಿಗಳು ವೃಷ್ಟಿಸುತ್ತಿರಲು
ಆ ಸಪ್ತಮೇಘಮಂಡಲಂಗಳ ಮೇಲೆ
ಶತಕೋಟಿಯೋಜನದಲ್ಲಿ ಭುವರ್ಲೊಕವಿಹುದು.
ಆ ಭುವರ್ಲೊಕದಲ್ಲಿ ಆದಿತ್ಯ ಚರಿಸುತ್ತಿಹನು.
ಆ ಆದಿತ್ಯನ ರಥದ ಪ್ರಮಾಣು
ತೊಂಬತ್ತುಸಾವಿರಯೋಜನಪ್ರಮಾಣದುದ್ದವು,
ನಾಲ್ವತ್ತೈದುಸಾವಿರ ಯೋಜನದಗಲವು.
ಆ ರಥಕ್ಕೆ ಒಂದೇ ಗಾಲಿ, ಒಂದೆ ನೊಗದಲ್ಲಿ ಕಟ್ಟುವ
ಪಚ್ಚವರ್ಣದ ವಾಜಿಗಳೇಳು.
ಉರದ್ವಯವಿಲ್ಲದ ಅರುಣ ರಥದ ಸಾರಥಿ.
ಆ ಅರುಣನ ಕಂಡುದೆ ಉದಯ, ಕಾಣದುದೇ ಅಸ್ತಮಯ.
ಆದಿತ್ಯಪಥಕ್ಕೆ ಶತಕೋಟಿ ಯೋಜನದಲ್ಲಿ ಚಂದ್ರಮನ ಪಥವು
ಆ ಚಂದ್ರಮನ ಪಥಕ್ಕೆ ಶತಕೋಟಿ ಯೋಜನದಲ್ಲಿ
ಅಂಗಾರಕನ ಪಥವು.
ಅಂಗಾರಕನ ಪಥಕ್ಕೆ ಶತಕೋಟಿಯೋಜನದಲ್ಲಿ ಬುಧನ ಪಥವು.
ಆ ಬುಧನ ಪಥಕ್ಕೆ ಶತಕೋಟಿಯೋಜನದಲ್ಲಿ
ಬೃಹಸ್ಪತಿಯ ಪಥವು.
ಆ ಬೃಹಸ್ಪತಿಯ ಪಥಕ್ಕೆ ಶತಕೋಟಿಯೋಜನದಲ್ಲಿ
ಶುಕ್ರನ ಪಥವು.
ಆ ಶುಕ್ರನ ಪಥಕ್ಕೆ ಶತಕೋಟಿ ಯೋಜನದಲ್ಲಿ
ಶನೀಶ್ವರನ ಪಥವು.
ಆ ಶನೀಶ್ವರನ ಪಥಕ್ಕೆ ಶತಕೋಟಿ ಯೋಜನದಲ್ಲಿ
ರಾಹುಕೇತುಗಳ ಪಥವು.
ಆ ರಾಹುಕೇತುಗಳ ಪಥಕ್ಕೆ ಶತಕೋಟಿಯೋಜನದಲ್ಲಿ
ನಕ್ಷತ್ರಾದಿಗಳ ಪಥವು.
ಆ ನಕ್ಷತ್ರಾದಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ
ಸಪ್ತಮಹಾಋಷಿಗಳ ಪಥವು.
ಆ ಸಪ್ತಮಹಾಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ
ಅಶ್ವಿನೀದೇವತೆಗಳ ಪಥವು.
ಆ ಅಶ್ವಿನೀದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ
ವಿಶ್ವದೇವತೆಗಳ ಪಥವು.
ಆ ವಿಶ್ವದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ
ಬಾಲಸೂರ್ಯರ ಪಥವು.
ಆ ಬಾಲಸೂರ್ಯರ ಪಥಕ್ಕೆ ಶತಕೋಟಿಯೋಜನದಲ್ಲಿ
ಸೇನ ಮಹಾಸೇನ ಋಷಿಗಳ ಪಥವು.
ಆ ಸೇನ ಮಹಾಸೇನ ಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ
ಕ್ರುಕರನೆಂಬ ಋಷಿಗಳ ಪಥವು.
ಆ ಕ್ರುಕರನೆಂಬ ಮುನಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ
ಸ್ವರ್ಣಪ್ರಭವಾಗಿ ಸ್ವರ್ಗಲೋಕವಿಹುದು.
ಆ ಸ್ವರ್ಗಲೋಕದಲ್ಲಿ ಕಲ್ಪವೃಕ್ಷವಿಹುದು.
ಆ ಕಲ್ಪವೃಕ್ಷದ ನೆಳಲಲ್ಲಿ ಅಮರಾವತಿಪುರ.
ಆ ಪುರದೊಳು ದೇವೇಂದ್ರನಿಹನು.
ಆ ದೇವೇಂದ್ರನ ಓಲಗದೊಳಗೆ
ಸಪ್ತಮಹಾಋಷಿಗಳು, ಮೂವತ್ಮೂರು ಕೋಟಿ ದೇವರ್ಕಳಿಹರು.
ಆ ಸ್ವರ್ಗಲೋಕಕ್ಕೆ ಶತಕೋಟಿ ಯೋಜನದಲ್ಲಿ
ಮಹರ್ಲೊಕವಿಹುದು; ಅದು ಬ್ರಹ್ಮ ಪಥವು.
ಆ ಮಹರ್ಲೊಕಕ್ಕೆ ಶತಕೋಟಿ ಯೋಜನದಲ್ಲಿ
ಜನರ್ಲೊಕವಿಹುದು; ಅದು ವಿಷ್ಣುವಿನ ಪಥವು.
ಆ ಜನರ್ಲೊಕಕ್ಕೆ ಶತಕೋಟಿ ಯೋಜನದಲ್ಲಿ
ತಪರ್ಲೊಕವಿಹುದು ; ಅದು ರುದ್ರಪಥವು.
ಆ ತಪರ್ಲೊಕಕ್ಕೆ ಶತಕೋಟಿ ಯೋಜನದಲ್ಲಿ
ಸತ್ಯರ್ಲೊಕವಿಹುದು ; ಅದು ಈಶ್ವರಪಥವು.
ಆ ಸತ್ಯರ್ಲೊಕಕ್ಕೆ ಶತಕೋಟಿ ಯೋಜನದಲ್ಲಿ
ಸದಾಶಿವಲೋಕವಿಹುದು.
ಆ ಸದಾಶಿವಲೋಕಕ್ಕೆ ತ್ರಿಶತ ಸಹಸ್ರಕೋಟಿ ಯೋಜನದಲ್ಲಿ
ಶಿವಾಂಡವಿಹುದು.
ಆ ಶಿವಾಂಡವು ಪಂಚಶತಸಹಸ್ರಕೋಟಿ ಲಕ್ಷವು
ತ್ರಿಶತ ಸಹಸ್ರಕೋಟಿ ಲಕ್ಷದ ಮೇಲೆ ಶತಕೋಟಿ ಸಾವಿರ ಲಕ್ಷ
ಯೋಜನ ಪ್ರಮಾಣದಗಲವನುಳ್ಳ ಶಿವಾಂಡವು,
ಮಹಾಸಮುದ್ರಂಗಳನು, ಅಣುವಾಂಡಗಳನು,
ಬ್ರಹ್ಮಾಂಡಂಗಳನು, ಅನಂತಕೋಟಿ ಲೋಕಾದಿಲೋಕಂಗಳನೊಳಕೊಂಡು
ಮಹಾಪ್ರಳಯಜಲದೊಳಗಿಹುದು.
ಆ ಶಿವಾಂಡಕ್ಕೆ ಹೊರಗಾಗಿ ಅಖಂಡ ಚಿದ್ಬ ್ರಹ್ಮಾಂಡವಿಹುದು.
ಅಖಂಡ ಚಿದ್ಬ್ರಹ್ಮಾಂಡವು ಅನಂತಕೋಟಿ ಬ್ರಹ್ಮಾಂಡವನೊಳಕೊಂಡು
ಆದಿ ಮಧ್ಯಾವಸಾನಂಗಳಿಲ್ಲದೆ
ಅಖಂಡಿತ ಅಪ್ರಮೇಯ ಅವ್ಯಕ್ತ ಅಚಲಿತ ಅಪ್ರಮಾಣ ಅಗೋಚರ
ಅಖಂಡಪರಿಪೂರ್ಣವಾಗಿಹುದು ನೋಡಾ ಚಿದ್ಬ್ರಹ್ಮಾಂಡವು
ಅಪ್ರಮಾಣಕೂಡಲಸಂಗಮದೇವಾ./481
ಇನ್ನು ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ
ಶರಣ ಐಕ್ಯನ ನಿವೃತ್ತಿ ಅದೆಂತೆಂದಡೆ :
ಆ ಪ್ರಣವದ ತಾರಕಸ್ವರೂಪದಲ್ಲಿ ಭಕ್ತನಡಗಿದನು.
ಆ ಪ್ರಣವದ ದಂಡಕಸ್ವರೂಪದಲ್ಲಿ ಮಾಹೇಶ್ವರನಡಗಿದನು.
ಆ ಪ್ರಣವದ ಕುಂಡಲಾಕಾರದಲ್ಲಿ ಪ್ರಸಾದಿಯಡಗಿದನು.
ಆ ಪ್ರಣವದ ಅರ್ಧಚಂದ್ರಕದಲ್ಲಿ ಪ್ರಾಣಲಿಂಗಿಯಡಗಿದನು.
ಆ ಪ್ರಣವದ ದರ್ಪಣಾಕಾರದಲ್ಲಿ ಶರಣನಡಗಿದನು.
ಆ ಪ್ರಣವದ ಜ್ಯೋತಿಸ್ವರೂಪದಲ್ಲಿ ಐಕ್ಯನಡಗಿದನು ನೋಡಾ.
ಇದಕ್ಕೆ ಉತ್ತರವಾತುಲಾಗಮೇ : “ಭಕ್ತೋ ಮಹೇಶ್ವರಶ್ಚೈವ ಪ್ರಸಾದಿಪ್ರಾಣಲಿಂಗಿಕಃ |
ತಥಾ ಶರಣಂ ಚೈಕ್ಯಂಚ ಓಂಕಾರಗರ್ಭೆ ಲೀಯತೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./482
ಇನ್ನು ಭಕ್ತನ ತಾಮಸನಿರಸನವದೆಂತೆಂದಡೆ :
ಭಕಾರವೇ ಮಹಾಜ್ಞಾನ, ತಕಾರವೇ ತತ್ವಜ್ಞಾನ ನೋಡಾ.
ಭಕಾರ ತಾರಕಾಸ್ವರೂಪ ಸ್ವಭಾವಗಳನರಿದಾತನೆ ಭಕ್ತನು.
ಭಕಾರ ತಾರಕಾಸ್ವರೂಪ ಸ್ವಭಾವಂಗಳನರಿಯದೆ
ಭಕ್ತರೆಂಬ ವೇಷಡಂಭಕ ರೌರವನಕಿಗಳನೇನೆಂಬೆನಯ್ಯಾ.
ಇದಕ್ಕೆ ವೀರಾಗಮೇ : ಭಕಾರಂತು ಮಹಾಜ್ಞಾನಂ ತಕಾರಂ ತತ್ವರೂಪಕಂ |
ತತ್ವಜ್ಞಾನದಯಂ ಚೈವ ಭಕ್ತಶ್ರದ್ಧಾಭಿಧೀಯತೇ ||
ಭಕಾರಂ ಭವದೂರಂ ಚ ತಕಾರಂ ತನುನಾಶನಂ |
ಭಕ್ತಾಕ್ಷರ ದ್ವಯಂ ನಾಸ್ತಿ ತದ್ಭಕ್ತೋ ನರಕಂ ವ್ರಜೇತ್ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./483
ಇನ್ನು ಭೂತನಾಯಕರ ಸ್ಥಾನವೆಂತೆಂದಡೆ :
ಹೃದಯಸ್ಥಾನದಲ್ಲಿ ಬ್ರಹ್ಮನಿಹನು, ಕಂಠಸ್ಥಾನದಲ್ಲಿ ವಿಷ್ಮುವಿಹನು,
ಭ್ರೂಮಧ್ಯದಲ್ಲಿ ರುದ್ರನಿಹನು, ಭ್ರೂಮಧ್ಯೋದ್ರ್ವದಲ್ಲಿ ಈಶ್ವರನಿಹನು,
ಲಲಾಟಾಂತದಲ್ಲಿ ಸದಾಶಿವನಿಹನು.
ಇದಕ್ಕೆ ಶ್ರೀ ಮಹಾದೇವ ಉವಾಚ : “ಹೃದಿ ಸ್ಥಾನೇ ಸ್ಥಿತೋಬ್ರಹ್ಮಾಃ ಕಂಠೇ ವಿಷ್ಣುಃ ಸಮಾಶ್ರಿತಃ |
ಭ್ರೂಮಧ್ಯೇ ಸಂಸ್ಥಿತೋ ರುದ್ರಃ ತಸ್ಯೋಧ್ರ್ವೆ ಈಶ್ವರ ಸ್ಮೃತಃ |
ಸದಾಶಿವೋ ಲಲಾಚೇ ತು ಪಂಚೈತೇ ಭೂತನಾಯಕಾಃ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./484
ಇನ್ನು ಮಧ್ಯಾವಸ್ಥೆಯ ದರ್ಶನವದೆಂತೆಂದಡೆ :
ಜಾಗ್ರತದಲ್ಲಿಯ ಅತೀತವಾವುದು ?
ಮುಂದೆ ಕಂಡವನ ಈಗ ಅರಿಯದಿಪ್ಪುದು ಜಾಗ್ರದಲ್ಲಿ ಅತೀತವು.
ಜಾಗ್ರದಲ್ಲಿಯ ತುರಿಯವಾವುದು ?
ಪುರುಷ ತತ್ತ್ವದೊಡನೆ ಪ್ರಾಣವಾಯು ಕೂಡಿಕೊಂಡು
ಇವನರಿಯದ ಹಾಂಗೆ ಉಸುರು ಬಿಡುವುದು ಜಾಗ್ರದಲ್ಲಿಯ ತುರೀಯ ನೋಡಾ
ಅಪ್ರಮಾಣಕೂಡಲಸಂಗಮದೇವಾ. || /485
ಇನ್ನು ಮಹೇಶ್ವರನಲ್ಲಿಯ ಷಡ್ವಿಧ ಷಡುಸ್ಥಲಲಿಂಗ
ಮಿಶ್ರಾರ್ಪಣವೆಂತೆಂದಡೆ :
ಅಪ್ಪುವೆ ಅಂಗವಾದ ಮಾಹೇಶ್ವರನು ಸುಬುದ್ಧಿಯೆಂಬ ಹಸ್ತದಲ್ಲಿ
ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ
ಓಗರಾದುರು ಚಿದ್ರವ್ಯವ ಸಮರ್ಪಣವಂ ಮಾಡಿ
ತೃಪ್ತಿಯನೆ ಭೋಗಿಸುವನು ನೋಡಾ
ಅಪ್ರಮಾಣಕೂಡಲಸಂಗಮದೇವಾ./486
ಇನ್ನು ಮಾಯಾವಿಡಂಬನಸ್ಥಲವದೆಂತೆಂದಡೆ :
ಮಾಯೆಗಂಜಿ ಕೌಪವ ಕಟ್ಟಿದವರು ಕೋಟಾನುಕೋಟಿ.
ಮಾಯೆಗಂಜಿ ತಪೋವನವ ಹೊಕ್ಕವರು ಕೋಟಾನುಕೋಟಿ.
ಮಾಯೆಗಂಜಿ ಪವನಾಶನವಾಗಿಹರು ಕೋಟಾನುಕೋಟಿ.
ಮಾಯೆಗಂಜಿ ಗಿರಿಗಹ್ವರಂಗಳ ಹೊಕ್ಕವರು ಕೋಟಾನುಕೋಟಿ.
ಮಾಯೆಗಂಜಿ ತರಗೆಲೆಗಳ ಮೆದ್ದವರು ಕೋಟಾನುಕೋಟಿ.
ಇವರೆಲ್ಲರು ಮಾಯೆಯ ಬಾಯ ತುತ್ತಾದರು.
ನಾನು ಮತ್ರ್ಯಕ್ಕೆ ಬಂದು
ಪ್ರಭು ಬಸವಣ್ಣ ಮೊದಲಾದ ಅಸಂಖ್ಯಾತ ಗಣಂಗಳ
ಪ್ರಸಾದವ ಕೊಂಡೆನಾಗಿ ಮಾಯಾತೀತನಾದೆ ಕಾಣಾ
ಅಪ್ರಮಾಣಕೂಡಲಸಂಗಮದೇವಾ./487
ಇನ್ನು ಮುಂದೆ ಅನುಭಾವದ ವಚನ ಅದೆಂತೆಂದಡೆ :
ಜಾಗ್ರ ಸ್ವಪ್ನಸುಷುಪ್ತಿಯೆಂಬ ಮೂರವಸ್ಥೆಯು
ಅನಂತ ಭವದುಃಖಂಗಳ ತಹವು.
ಈ ಮೂರು ಅವಸ್ಥೆಯ ಕೆಡೆಮೆಟ್ಟಿ ಸಾಕ್ಷಿಯಾಗಿಹ
ತೂರ್ಯಬೋಧೆಯ ಕಂಡವರ ಘನವನೇನೆಂದುಪಮಿಸುವೆ ನೋಡಾ,
ಅಪ್ರಮಾಣಕೂಡಲಸಂಗಮದೇವಾ./488
ಇನ್ನು ಮುಂದೆ ಹೇಳಿದ ನಿರ್ಮಲಾವಸ್ಥೆಯ ದರ್ಶನವದೆಂತೆಂದಡೆ :
ಹೀಂಗೆ ಪಂಚಮಲಂಗಳ ತೋರಿದ ಜ್ಞಾನಶಕ್ತಿಗೂ ಮೊದಲು
ಪೂರ್ಣಬೋಧವಾಗಿ ನಿಂದ ಠಾವು ನಿರ್ಮಲಜಾಗ್ರ ನೋಡಾ.
ಮುಂದೆ ಹೇಳಿದ ಪೂರ್ಣಬೋಧ ನಿರ್ವಿಕಾರ ಹುಟ್ಟುವ ಬಗೆಗೂ
ಮೊದಲ ಠಾವು ನಿರ್ಮಲಸ್ವಪ್ನ ನೋಡಾ
ಅಪ್ರಮಾಣಕೂಡಲಸಂಗಮದೇವಾ./489
ಇನ್ನು ಮೂವತ್ತಾರು ತತ್ತ್ವಂಗಳುತ್ಪತ್ಯವದೆಂತೆಂದಡೆ :
ಪರಶಿವತತ್ವ ತಾನೆ ತನ್ನ ಲೀಲಾವಿನೋದಕ್ಕೆ ಸಕಲನಿಃಕಲತತ್ವವಾಯಿತ್ತು.
ಸಕಲನಿಃಕಲತತ್ವದಲ್ಲಿ ಮೂವತ್ತಾರು ತತ್ವಂಗಳುತ್ಪತ್ಯವಾಯಿತ್ತು.
ಆ ನಿಃಕಲತತ್ವದಲ್ಲಿ ದಶತತ್ವ ಉತ್ಪತ್ಯವದೆಂತೆಂದಡೆ : ಪರಾಶಕ್ತಿ ಸದಾಶಿವ ಈಶ್ವರ ಶುದ್ಧವಿದ್ಯೆ ಮಾಯೆ ಕಾಲ ನಿಯತಿ
ಕಲೆ ವಿದ್ಯೆ ರಾಗ-ಈ ದಶತತ್ವಂಗಳು ನಿಃಕಲತತ್ವದಲ್ಲಿ ಹುಟ್ಟಿತ್ತು ನೋಡಾ,
ಅಪ್ರಮಾಣಕೂಡಲಸಂಗಮದೇವಾ./490
ಇನ್ನು ಮೂವತ್ತಾರು ತತ್ವಂಗಳ ನಿವೃತ್ತಿ ಎಂತೆಂದಡೆ :
ರಾಗ ವಿದ್ಯೆ ಕಲೆ ನಿಯತಿ ಕಾಲ ಮಾಯೆ ಶುದ್ಧವಿದ್ಯೆ
ಈಶ್ವರ ಸದಾಶಿವ ಮಹಾಶಕ್ತಿ- ಈ ಹತ್ತು ತತ್ವವು
ನಿಃಕಲತತ್ವದಲ್ಲಿ ಅಡಗಿತ್ತು ನೋಡಾ
ಅಪ್ರಮಾಣಕೂಡಲಸಂಗಮದೇವಾ./491
ಇನ್ನು ಮೇಲಾದವಸ್ಥೆಯ ದರ್ಶನವದೆಂತೆಂದಡೆ :
ಶುದ್ಧ ತತ್ವಕೈದು ಇಂಬಾಗಿ ನಿಂದು
ಅತೀತ ಮೊದಲಾಗಿ ದರ್ಶನವ ಮಾಡುವುದು.
ಅದೆಂತೆಂದಡೆ : ನಾದ ಇಂಬಾಗಿ ನಿಂದು ಒಂದೆಂಬುದ ಕೆಟ್ಟರವನು
ಪುರುಷನನು ಮೂಲಾಧಾರದಲ್ಲಿ ದರ್ಶನವ ಮಾಡುವುದು
ತೂರ್ಯಾತೀತ ನೋಡಾ
ಅಪ್ರಮಾಣಕೂಡಲಸಂಗಮದೇವಾ./492
ಇನ್ನು ರುದ್ರಾಕ್ಷಿಸ್ಥಲವೆಂತೆಂದಡೆ :
ಬ್ರಹ್ಮ ವಿಷ್ಮು ರುದ್ರ ಮೊದಲಾದ ಸಮಸ್ತ ದೇವರ್ಕಳು
ತ್ರಿಪುರದ ರಾಕ್ಷಸರ ಉಪದ್ರಕ್ಕೆ ಭೀತರಾಗಿ
ರುದ್ರಲೋಕದ ಮಹಾರುದ್ರಂಗೆ ಶಿವಧೋ ಶಿವಧೋ ಎಂದು
ಮೊರೆಯಿಡುತ ಚಿಂತಾಕ್ರಾಂತರಾಗಿ ನಿಲಲು,
ಆ ರುದ್ರಲೋಕದ ಮಹಾರುದ್ರನು ತ್ರಿಪುರವಧಾರ್ಥ
ಸರ್ವದೇವಮಯ ದಿವ್ಯ ಅನಂತತೇಜ ಅನಂತಪ್ರಚಯ
ಅನಂತಜ್ವಾಲಾಮಯವಾಗಿಹ ಅಘೋರರೂಪ ತಾಳಿ
ಉತ್ತಮವಾದ ಅಘೋರಾಸ್ತ್ರಮಂ ಚಿಂತಿಸಿ,
ತ್ರಿಪುರದ ಕೀಲ ದಿವ್ಯಸಹಸ್ರವರ್ಷ ನೋಡಲು
ಆ ರುದ್ರನ ಅಕ್ಷಿಯಲ್ಲಿ ರಕ್ತಾಶ್ರುಜಲಬಿಂದುಗಳು ಜನಿಸಿ
ಭೂಮಿಯ ಮೇಲೆ ಬೀಳಲು ಮಹಾರುದ್ರಾಕ್ಷ ವೃಕ್ಷವಾಗಿ
ತ್ರೈಲೋಕ್ಯಾನುಗ್ರಹ ಕಾರಣವಾಯಿತ್ತು ನೋಡಾ.
ಆ ರುದ್ರಾಕ್ಷಿಯ ದರುಶನದ ಫಲ ಲಿಂಗದರುಷನದ ಫಲ,
ರುದ್ರಾಕ್ಷಿಯ ದರುಶನ ಸ್ಪರ್ಶನದಿಂದ
ಸರ್ವಪಾಪಂಗಳು ಹೋಹವು ನೋಡಾ.
ಇದಕ್ಕೆ ಈಶ್ವರೋವಾಚ : “ಶ್ರುಣು ಷಣ್ಮುಖ ಯತ್ನೇನ ಕಥಯಾಮಿ ಸಮಾಸತಃ |
ತ್ರಿಪುರೋ ನಾಮ ದೈತ್ಯಸ್ತು ಪುರಶ್ಚಿತ್ತು ಸುರರ್ಜಯಃ ||
ಚಿತ್ತಾಪ್ತೇವ ಸುರಾಸ್ಸರ್ವೆ ಬ್ರಹ್ಮ ವಿಷ್ಣೇಂದ್ರದೇವತಾಃ
ಚಿಂತಿತಂ ಚ ಮಯಾ ಪುತ್ರ ಅಘೋರಾಸ್ತ್ರಮನುತ್ತಮಂ||
ಸರ್ವದೇವಮಯಂ ದಿವ್ಯಂ ಜ್ವಲಿತಂ ಘೋರರೂಪಕಂ |
ತ್ರಿಪುರಸ್ಯ ವಧಾಥರ್ಾಯ ದೇವಾನಾಂ ಪ್ರಾಣವಾಯು ಚ ||
ಸರ್ವವಿಘ್ನಪ್ರಶಮನಂ ಅಘೋರಾಸ್ತ್ರಂತು ಚಿಂತಿತಂ |
ದಿವ್ಯವರ್ಷಸಹಸ್ರಾಣಿ ಚಕ್ಷುರುನ್ಮೀಲಿತಂ ಮಯಾ ||
ಘಟೇಭ್ಯಾಂ ಚ ಕುಲಾಕ್ಷಿಭ್ಯಾಂ ಪತಿತಾ ಜಲಬಿಂದವಃ |
ರಕ್ತಾಶ್ರುಬಿಂದವೋ ಜಾತಾಃ ಮಹಾರುದ್ರಾಕ್ಷವೃಕ್ಷಕಾಃ ||
ಸ್ಥಾವರತ್ವಮನುಪ್ರಾಪ್ಯ ಮರ್ತ್ಯಾನುಗ್ರಹಕಾರಣಾತ್ |
ರುದ್ರಾಕ್ಷಾಣಾಂ ಫಲಂ ಧೃತ್ವಾ ತ್ರಿಷು ಲೋಕೇಷು ವಿಶ್ರುತಂ ||
ಲಿಂಗಸ್ಯ ದರ್ಶನೇ ಪುಣ್ಯಂ ಭವೇತ್ರುದ್ರಾಕ್ಷದರ್ಶನಾತ್ |
ಭಕ್ತ್ಯ ರಾತ್ರೋ ದಿವಾಪಾಪಂ ದಿವಾರಾತ್ರಿ ಕೃತಂ ಹರೇತ್ ||
ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನೇ ಭವೇತ್ |
ತತ್ಕೋಟಿ ಶತಂ ಪುಣ್ಯಂ ಲಭತೇ ಧಾರಣಾನ್ನರಃ ||
ಲಕ್ಷಕೋಟಿ ಸಹಸ್ರಾಣಿ ಲಕ್ಷಕೋಟಿ ಶತಾನಿ ಚ |
ತಜ್ಜಪಾಲ್ಲಭತೇ ಪುಣ್ಯಂ ನಾತ್ರ ಕಾರ್ಯಂ ವಿಚಾರಣಾತ್ ||”
ಇಂತೆಂದುದಾಗಿ,
ಇದಕ್ಕೆ ಮಹಾದೇವೋಠವಾಚ : “ಶಿರೋಮಾಲಾ ಚ ಷಟ್ತ್ರಿಂಶದ್ವಾತ್ರಿಂಶತ್ಕಂಠಮಾಲಿಕಾ |
ಕೂರ್ಪರೇ ಷೋಡಶ ಪ್ರೋಕ್ತಾ ದ್ವಾದಶಂ ಮಣಿಬಂಧಯೋಃ ||
ಉರೋಮೂಲಾಚ ಪಂಚಾಶತಷ್ಟೋತ್ತರಶತಂ ತಥಾ |
ಶಿರಸಾ ಧಾರಯತ್ಕೋಟಿ ಕರ್ಣಾಭ್ಯಾಂ ದಶಕೋಟಿಯಃ ||
ಗಳೇ ಬಂಧಂ ಶತಂ ಕೋಟಿ ಮೂಧ್ರ್ನಿ ಕೋಟಿಸಹಸ್ರಕಂ |
ಆಯುಕಂಠೋಪವಿತ್ತಂ ಚ ಲಕ್ಷಮಾವೇ ಮಣಿಬಂಧಯೋರ್ಣ ವಕ್ತ್ರಾಣಿ |
ದ್ವಾದಶಾದಿತ್ಯಾದಿ ಪಾಯು ಶ್ರೀಮಹಾದೇವಾಯ ನಮಃ ||
ಅಷ್ಟೋತ್ತರಶತಂ ಸೋಪವಿ ತ್ತಂ ಚತುರ್ದಶ ವಕ್ತ್ರಾಣಿ |
ಶತರುದ್ರಾತ್ಮಾಕಾಯ ಶ್ರೀ ವಿಶ್ವೇಶ್ವರಾಯ ನಮಃ ಇತಿ ||”
ಇಂತೆಂದುದಾಗಿ,
ಇದಕ್ಕೆ ಬೋಧಾಯನಶಾಖಾಯಾಂ : “ತಾನಿ ಹವಾಏತಾನಿ ರುದ್ರಾಕ್ಷಾಣಿ ಯತ್ರ ಯೋ ಯೇ ಧಾರಯಂತಿ
ಕಸ್ಮಾದೇವ ಧಾರಯಂತಿ ಸ್ನಾತ್ತ್ವಾನಿ ಧಾರಯನ್ ಗಭರ್ೆ
ತಿಷ್ಟನ್ ಸ್ವಪನ್ ಖಾದನ್ ಉನ್ಮಿಷನ್ ಅಪಿ
ಸರ್ವಾಣೈವಾನಿ ಚರತಿ ಮದ್ರಿ ಭೂತ್ವಾ ರುದ್ರೋ ಭವತಿ
ಯೋಯೇನ ವಿದ್ವಾನ್ ಬ್ರಹ್ಮಚಾರೀ
ಗೃಹಸ್ಥೋ ವಾನಪ್ರಸ್ಥೋಯತಿರ್ವಾ ಧಾರಯೇತ್
ಪದೇ ಪದೇ ಯಶ್ವಮೇಧಫಲಂ ಪ್ರಾಪ್ನೋತಿ ||”
ಇಂತೆಂದುದು ಶ್ರುತಿ.
ಇದಕ್ಕೆ ಲೈಂಗ್ಯಪುರಾಣೇ : “ರುದ್ರಾಕ್ಷಂ ಧಾರಯೇದ್ವಿಪ್ರಃ ಸಂಧ್ಯಾದಿಷು ಚ ಕರ್ಮಸು |
ತತ್ಸರ್ವಂ ಸಮವಾಪ್ನೋತಿ ಕೋಟಿ ಕೋಟಿ ಗುಣಂ ಸದಾ ||
ಸ್ನಾನೇ ದಾನೇ ಜಪೇ ಹೋಮೇ ವೈಶ್ಯದೇವೇಷುರರ್ಚನೆ |
ಪ್ರಾಯಶ್ಚಿತ್ತೇ ಕಥಾ ಶ್ರಾದ್ಧೇ ದೀಕ್ಷಾಕಾಲೇ ವಿಶೇಷತಃ ||
ರುದ್ರಾಕ್ಷಧರೋ ಭೂತ್ವಾ ಯತ್ಕಿಂಚಿತ್ಕರ್ಮವೈದಿಕಂ |
ಕುರ್ಯಾದ್ವಿಪ್ರಸ್ತು ಯೋ ಮೋಹ ವಂಶಾವಪ್ನೋತಿ ತತ್ಫಲಂ ||”
ಇಂತೆಂದುದಾಗಿ,
ಇದಕ್ಕೆ ಸ್ಕಂದಪುರಾಣೇ : “ಲಕ್ಷಂತು ದರ್ಶನಾತ್ಪುಣ್ಯಂ ಕೋಟಿ ಸಂಸ್ಪರ್ಶನಾದಪಿ |
ದಶಕೋಟಿ ಶತಂ ಪುಣ್ಯಂ ಧಾರಣಾಲ್ಲಭತೇ ವರಂ ||”
ಇಂತೆಂದುದಾಗಿ,
ಇದಕ್ಕೆ ಕೂರ್ಮಪುರಾಣೇ : “ಹಸ್ತೇಚೋರಸಿ ಕಂಠೇ ವಾ ಮಸ್ತಕೇ ವಾಪಿ ಧಾರಯೇತ್ |
ಮುಚ್ಯತೇ ಸರ್ವಪಾಪೇಭ್ಯಃ ಸ ರುದ್ರೋ ನಾತ್ರಸಂಶಯಃ || ”
ಇಂತೆಂದುದಾಗಿ,
ಇದಕ್ಕೆ ಲೈಂಗ್ಯಪುರಾಣೇ : “ಶಿಖಾಯಾಂ ಧಾರಯೇದೇಕಂ ಷಟ್ತ್ರಿಂಶನ್ಮಸ್ತಕೇ ತಥಾ|
ದ್ವಾತ್ರಿಂಶತ್ಕಂಠದೇಶೇಚ ಪಂಚಾಷಣ್ಮಾಲಿಕಾ ಹೃದಿ ||
ಷೋಡಶಂ ಬಾಹುಮೂಲಯೋಃ ದ್ವಾದಶಂ ಮಣಿಬಂಧಕೇ |
ಕರ್ಣಯೇಕೀಕಮೇಶುಸ್ಯಾ ದುಪವಿತೇ ಶತಾಷ್ಟಕಂ ||
ಶತಾಷ್ಟಮಕ್ಷಮಾಲಾಂತು ನಿತ್ಯಂ ಧಾರಯೇತೇ ವರಃ |
ಪದೇ ಪದೇಶ್ವಮೇಧಸ್ಯ ಫಲಂ ಪ್ರಾಪ್ನೋತಿ ನ ಸಂಶಯಃ ||
ಇಂತೆಂದುದಾಗಿ,
ಇದಕ್ಕೆ ಈಶ್ವರೋವಾಚ : “ರುದ್ರಾಕ್ಷ ಶತಕಂಠೋ ಯಃ ಗೃಹೇ ತಿಷ್ಠತಿ ಯೋ ವರಃ |
ಕುಲೈಕವಿಂಶಮುಕ್ತಾರ್ಯ ಶಿವಲೋಕೇ ಕೋಟಿಭುಜದ್ವಯಂ |
ಅಪ್ರಮೇಯ ಫಲಂ ಹಸ್ತೇ ರುದ್ರಾಕ್ಷಂ ಮೋಕ್ಷಸಾಧನಂ ||”
ಇಂತೆಂದುದಾಗಿ,
ಇದಕ್ಕೆ ಈಶ್ವರೋವಾಚ : “ಅವದ್ಯಃ ಸರ್ವಭೂತಾನಾಂ ರುದ್ರವದ್ವಿಚರೇತ್ ಭುವಿ |
ಸುರಾಣಾಮಸುರಾಣಾಂ ಚ ವಂದನೀಯೋ ಯಥಾ ಶಿವಃ ||
ರುದ್ರಾಕ್ಷರಧಾರಶೋ ನಿತ್ಯಂ ವಂದನೀಯೋ ನರೈರಿಹ |
ಉಚ್ಛಿಷ್ಟೋ ವಾ ವಿಕರ್ಮಸ್ತೋ ಯುಕ್ತೋ ವಾ ಸರ್ವಪಾಪಕೈಃ |
ಮುಚ್ಯತೇ ಸರ್ವಪಾಪೇಭ್ಯೋ ನರೋ ರುದ್ರಾಕ್ಷಧಾರಣಾತ್ ||”
ಇಂತೆಂದುದಾಗಿ
ಇದಕ್ಕೆ ಕಾತ್ಯಾಯನಶಾಖಾಯಾಂ : “ಅಥೈವ ಭಗವಂತಂ ರುದ್ರಕುಮಾರಃ
ಪಪ್ರಚ್ಛಾರಣೇನ ದಶಶತ ಗೋದಾನಫಲಂ ||
ದರ್ಶನಸ್ಪರ್ಶನಾಭ್ಯಾಂ ದ್ವಿಗುಣಂ ತ್ರಿಗುಣಂ ಫಲಂ ಭವತಿ,
ಅತ ಊಧ್ರ್ವಂ ವಕ್ತುಂ ನ ಶಕ್ನೋಮಿ ತತೋಂ ಜಪ ಸಮಂತ್ರಕಂ
ಧಾರಣೇ ವಿಧಿಂ ಕಥಯಾಮಿ ||
ಸ್ನಾನ ವಿಧಿನಾ ಸ್ನಾತೇಷು ಖೇರಾಜ್ಞೇಯ ಸ್ನಾನಂ
ತ್ರಿಪುಂಡ್ರಧಾರಣಂ ಕೃತ್ವಾ ಏಕಾಶ್ಯಾದಿರುದ್ರ ಶಾಂತಾನಾಂ ||
ಸೃಷ್ಟಿಕ್ರಮೇಣಂ ಮಂತ್ರಾಸ್ಯಂ `ಓಂ ಹೂಂ ಚಂ ಖಂ ಹೂಂ
ಕ್ಲಿಂ ಮಾಂ ದ್ರಾಂ ದ್ರಿಂ ಹ್ರುಂ ಕ್ರೂಂ ಕ್ಷಾಂ ಕ್ಷಿಂ ಕ್ಷುಂ’
ನವಮಿತೀಷುರುವೋಕ್ತ ಂ ಮಂತ್ರಾನನಂತಾ ಶೋಕ್ತ್ವಾನ್ವಾ ಜಪೇದಿಮಾನ್
ಪಾಣಾನಾಯಮ್ಯ ಸಮಸ್ತಪಾಪಕ್ಷಯಾರ್ಥಂ ಶಿವಜ್ಞಾನಾ
ವಸ್ಯಾರ್ಥ ಸಮಸ್ತ ಮಂತ್ರಸ್ಸಹಧಾರಣಂ ಕರಿಷ್ಯಾಮಿತಿ
ಸಂಕಲ್ಪ್ಯ ಶಿಖಾಯಾಮೇಕಮೇಕಸ್ಯಂ ಶ್ರೀ ಸದಾಶಿವಾಯ ನಮಃ ಇತಿ ||”
“ದ್ವಿ ತ್ರಿ ದ್ವಾದಶವಕ್ತ್ರಾಣಿ ಶಿರಸಿ ತ್ರೀಣಿ ಧಾರಯೇತ್ |
ವಹ್ನಿ ಸೂರ್ಯಸೋಮಾಧಿಪಾಯ ಶಿವಾಯ ನಮಃ ಇತಿ ||
ಏಕಾದಶ ವಕ್ತ್ರಂ ಷಟ್ತ್ರಿಂಶನ್ಮೂಧ್ರ್ನಿ ಷಟ್ತ್ರಿಂಶತ್ತತ್ವಾತ್ಮಕಾಯ |
ನಮ ಇತಿ ಪಂಚದಶ ವಕ್ತ್ರಾಣಿ ಕರ್ಣಯೋರೇಕಮೇಕಂ ||
ಸೋಮಾಯ ನಮಃ ಇತಿ, ಯೇದಷ್ಟವಕ್ತ್ರಾಣಿ ಕಂಠೇ ದ್ವಾತ್ರಿಂಶತ್ |
ತ್ರ್ಯಂಬಕಕಲಾತ್ಮನೇ ಶ್ರೀಕಂಠಾಯ ನಮಃ ಇತಿ ||
ಚತುರ್ವಕ್ತ್ರಂ ಪಂಚಷಣ್ಮಾಲಿಕಾಮುರಸಿ ಶ್ರೀಕಂಠಾದಿ |
ಮೂರ್ತ್ಯಾಯಸ್ಥಿಕಾಯ ಶ್ರೀ ಸರ್ವಜ್ಞಾಯ ನಮಃ ಇತಿ ||
ಬಾಹೋ ತ್ರಯೋದಶವಕ್ತ್ರಾಣಿ ಷೋಡಶಸುಖಾಸನಾದಿ |
ಷೋಡಶಮೂರ್ತ್ಯಾತ್ಮಕಾಯ ಶ್ರೀಕಂಠಾಯ ನಮಃ ಇತಿ ||
ದಕ್ಷೇರ್ಣವ ವಕ್ತ್ರಾಣಿ ಶ್ರೀ ವ್ಯೋಮಕಳಾತ್ಮಕಾಯ
ಉಪಮಾಪತಯೇ ನಮಃ ಇತಿ ಉಪಾಯತೇ ||”
ಇಂತೆಂದುದಾಗಿ,
ಇದಕ್ಕೆ ಮಹಾಲಿಂಗಪುರಾಣೇ : “ರುದ್ರಾಕ್ಷಮಾಲಯಾ ಶುಭ್ರೋ ಜಟಾಜೂಟವಿರಾಜಿತಃ |
ಭಸ್ಮಾವಲಿಪ್ತಸರ್ವಾಂಗಃ ಕಮಂಡಲುಕರಾನ್ವಿತಃ ||
ಕೃಷ್ಮಾಜಿನೋ ಪವಿತ್ರಾಂಗಃ ಆಶಾಹೆ ಪುಣ್ಯಕೀರ್ತನಃ |
ಶಿವಃ ತಸ್ಮೆ ಃ ಮಹಾದೇವಂ ಯೋಗಿನಾಂ ಹೃದಯಾಲಯಂ ||”
ಇಂತೆಂದುದಾಗಿ,
ಇದಕ್ಕೆ ಲೈಂಗ್ಯಪುರಾಣೇ : “ರುದ್ರಕ್ಷಧಾರಣಾಸ್ಸರ್ವೆ ಜಟಾಮಂಡಲಧಾರಣಾತ್ |
ಅಕ್ಷಮಾಲಾರ್ಪಿತಕರಂ ತ್ರಿಪುಂಡ್ರಾಪಲಿಯುಕ್ತಾಂಗಂ |
ಆಷೇಡೇವ ವಿರಾಜಿತಂ ಋಗ್ಯಜುಃಸಾಮರೂಪೇಣ |
ಸೇವತೇಸ್ಮೈ ಮಹೇಶ್ವರಃ ಸಂಸ್ಥಾಯಮನೋದಿಷ್ಟಾಂಗೈ ||
ದೇವೈರ್ಮುನಿಗಣೈಸ್ತಥಾಮೃತ ತ್ರಿಪುಂಡ್ರಕೋ ದಿವ್ಯೇ |
ರುದ್ರಾಕ್ಷೇಶ್ವ ವಿಭಾಷಿತಃ ಶುಭೇ ಸತತಂ ವಿಷ್ಟು|
ಭಸ್ಮದಿಗ್ಧತಮೂಲತಃ ತ್ರಿಪುಂಡ್ರಾಂಕಿತ ಸರ್ವಾಂಗೋ |
ಜಟಾಮಂಡಲಮಂಡನ ಭೂತಿ ತ್ರಿಪುಂಡ್ರರುದ್ರಾಕ್ಷಂ |
ಅಕ್ಷರ ಮಾಲಾರ್ಪಿತಕರಃ ಕುರ್ವಕ್ತ್ರಃ ಪಿತಾಮಹಾ ||”
ಇಂತೆಂದುದಾಗಿ,
ಇದಕ್ಕೆ ಮಹಾದೇವೋವಾಚ : “ಭಾಲೇ ತ್ರಿಪುಂಡ್ರಕಂ ಚೈವ ಗಳೇ ರುದ್ರಾಕ್ಷಮಾಲಿಕಾ |
ವಕ್ತ್ರೇ ಷಡಕ್ಷರೀ ಮಂತ್ರೋ ಸ ರುದ್ರೋ ನಾತ್ರ ಸಂಶಯಃ ||”
ಇಂತೆಂದುದಾಗಿ,
ಇದಕ್ಕೆ ಲೈಂಗ್ಯಪುರಾಣೇ : “ರುದ್ರಕ್ಷಮಾಲಿಕಾ ಕಂಠೇ ಧಾರಸ್ತದ್ಭಕ್ತಿವರ್ಜಿತಃ |
ಪಾಪಕರ್ಮಾಪಿ ಯೋ ನಿತ್ಯಂ ರುದ್ರಲೋಕೇ ಮಹೀಯತೇ ||”
ಇಂತೆಂದುದಾಗಿ,
ಇದಕ್ಕೆ ಸ್ಕಂದಪುರಾಣೇ : “ರುದ್ರಾಕ್ಷಂ ಕಂಠಮಾಶ್ರಿತ್ಯ ಶ್ವಾನೋಪಿ ಮಿೃಯತೇ ಯದಿ |
ಸೋಪಿ ರುದ್ರಂ ಸಮಾಪ್ನೋತಿ ಕಿಂ ಪುನರ್ಮಾನುಷಾದಯಃ ||
ಇಂತೆಂದುದಾಗಿ,
ಇದಕ್ಕೆ ಲೈಂಗ್ಯಪುರಾಣೇ : “ಖಾದನ್ ಮಾಂಸಂ ಪಿಬನ್ ಮದ್ಯಂ ಸಂಗಚ್ಛನ್ನಂತ್ಯಜೇಷ್ವಪಿ |
ಸದ್ಯೋ ಭವತಿ ಪೂತಾತ್ಮಾ ರುದ್ರಾಕ್ಷೌ ಶಿರಸಿ ಸ್ಥಿತೇ ||”
ಇಂತೆಂದುದಾಗಿ,
ಇದಕ್ಕೆ ಈಶ್ವರ ಉವಾಚ : “ಶುಚಿರ್ವಾಪ್ಯಶುಚಿರ್ವಾಪಿ ಅಭಕ್ಷಸ್ಯ ಚ ಭಕ್ಷಣಾತ್ |
ಅಗಮ್ಯಾಗಮನಂ ಚೈವ ಬ್ರಹ್ಮಹಾ ಗುರುತಲ್ಪಕಃ ||
ಮ್ಲೇಚ್ಛೋ ವಾಪ್ಯಥ ಚಾಂಡಾಲೋ ಯುಕ್ತೋ ವಾ ಪ್ಯಥ ಪಾತಕೈಃ |
ರುದ್ರಾಕ್ಷಧಾರಣಾದ್ಯಸ್ತು ಸ ರುದ್ರೋ ನಾತ್ರ ಸಂಶಯಃ ||”
ಇಂತೆಂದುದಾಗಿ,
ಇದಕ್ಕೆ ಮಹಾಲಿಂಗಪುರಾಣೇ : “ಧ್ಯಾನಧಾರಣಹೀನೋಪಿ ರುದ್ರಾಕ್ಷಂ ಯೋ ಹಿ ಧಾರಯೇತ್ |
ಸರ್ವಪಾಪವಿನಿರ್ಮುಕ್ತಃ ಸಯಾತಿ ಪರಮಾಂ ಗತಿಂ||”
ಇಂತೆಂದುದಾಗಿ,
ಇದಕ್ಕೆ ಮಾನವಪುರಾಣೇ : “ಮೃಣ್ಮಯಂ ವಾಪಿ ರುದ್ರಾಕ್ಷಂ ಕೃತ್ವಾ ಯಸ್ತು ಧಾರಯೇತ್ |
ಅಪಿ ದುಃಕೃತಕಮರ್ೊಪಿ ಸ ಯಾತಿ ಪರಮಾಂ ಗತಿಂ ||”
ಇಂತೆಂದುದಾಗಿ,
ಇದಕ್ಕೆ ಶಿವಲಿಂಗಾಗಮೇ : “ರುದ್ರಾಕ್ಷಮಾಲಂ ಬ್ರಹ್ಮಾ ಚ ತನ್ನಾಳಂ ವಿಷ್ಣುರುಚ್ಯತೇ |
ಮುಖಂ ಸದಾಶಿವಂ ಪ್ರೋಕ್ತಂ ಬಿಂದುಃ ಸರ್ವತ್ರ ದೇವತಾ ||”
ಇಂತೆಂದುದಾಗಿ,
“ರುದ್ರಾಕ್ಷಿಯ ಧರಿಸಿಪ್ಪಾತನೆ ರುದ್ರನು.
ಆತನ ಭವರೋಗಂಗಳು ಹೊದ್ದಲಮ್ಮವು ನೋಡಾ.
`ಏವಂ ರುದ್ರಾಕ್ಷಧಾರಣಾದ್ ರುದ್ರಾ’ ಎಂದುದು ಶ್ರುತಿ.
ರುದ್ರಾಕ್ಷಿಯ ಧರಿಸಿಪ್ಪ ಶರಣರಿಗೆ ಶರಣೆಂದು ಬದುಕಿದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ./493
ಇನ್ನು ಲಿಂಗಗರ್ಭದಲ್ಲಿ ಅನೇಕ ಕೋಟಿ ತತ್ವಂಗಳು,
ಅನೇಕ ಕೋಟಿ ಸದಾಶಿವರು, ಅನೇಕ ಕೋಟಿ ಈಶ್ವರರು
ಅಡಗಿಹರು ನೋಡಾ.
ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಮಹೇಶ್ವರರು,
ಅನೇಕ ಕೋಟಿ ರುದ್ರರು,
ಅನೇಕ ಕೋಟಿ ವಿಷ್ಣಾ ್ವದಿಗಳಡಗಿಹರು ನೋಡಾ.
ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಬ್ರಹ್ಮರು,
ಅನೇಕ ಕೋಟಿ ಚಂದ್ರಾದಿತ್ಯರು, ಅನೇಕ ಕೋಟಿ ಋಷಿಗಳಡಗಿಹರು ನೋಡಾ.
ಆ ಲಿಂಗಗರ್ಭದಲ್ಲಿ ಅನೇಕ ಕೋಟಿ ಇಂದ್ರರು,
ಅನೇಕ ಕೋಟಿ ದೇವರ್ಕಳು, ಅನೇಕ ಕೋಟಿ ಬ್ರಹ್ಮಾಂಡಂಗಳಡಗಿ
ಆದಿಮಧ್ಯಾವಸಾನಗಳಿಲ್ಲದೆ ಅಖಂಡ ಪರಿಪೂರ್ಣ
ಗೋಳಕಾಕಾರ ಅಪ್ರಮಾಣ ಅಗೋಚರ ಅಪ್ರಮೇಯ
ಅವ್ಯಕ್ತ ಅನಂತತೇಜ ಅತ್ಯಂತಪ್ರಚಯ
ಅನಂತಕೋಟಿ ಸೂರ್ಯಚಂದ್ರಾಗ್ನಿ ಪ್ರಕಾಶ
ಅನಂತಕೋಟಿ ಸಿಡಿಲೊಡೆದ ಬಯಲಪ್ರಕಾಶವಾಗಿಹರು ನೋಡಾ.
ಇದಕ್ಕೆ ಶಿವಧರ್ಮ ಸೂತ್ರೇ: “ತತ್ವ ಸಂಜ್ಞಾಃ ಅಸಂಖ್ಯಾತಾಃ ಅಸಂಖ್ಯಾತ ಅಂಬರಂ ತಥಾ |
ಅಸಂಖ್ಯಾ ದೇವಮುನಯಃ ಲಿಂಗತತ್ವೇ ವಿಲೀಯಂತೇ ||
ಅಸಂಖ್ಯಾತ ಸೂರ್ಯಚಂದ್ರಾಗ್ನಿ ತಾರಾಖ್ಯ ದೈತ್ಯ ಮಾನವಾಃ |
ಅಸಂಖ್ಯಾತ ಸುರೇಂದ್ರಾಣಾಂ ಲಿಂಗಗಭರ್ೆ ವಿಲೀಯತೇ ||
ಅಸಂಖ್ಯಾ ಮಹಾವಿಷ್ಣವಃ ಅಸಂಖ್ಯಾತ ಪಿತಾಮಹಾಃ |
ಅಸಂಖ್ಯಾತ ಮಹದಾಕಾಶಂ ಲಂಗಗಭರ್ೆ ವಿಲೀಯತೇ ||”
ಇಂತೆಂದುದಾಗಿ,
ಇದಕ್ಕೆ ಶಿವಧರ್ಮ ಪುರಾಣೇ : “ಕಲ್ಪಾಂತೇ ತಸ್ಯ ದೇವಸ್ಯ ಲೀಯತೇ ಸರ್ವದೇವತಾ |
ದಕ್ಷಿಣೇ ಲೀಯತೇ ಬ್ರಹ್ಮಾ ವಾಮಭಾಗೇ ಜನಾರ್ಧನಃ ||
ಹೃದಯೇ ಚೈವ ಗಾಯತ್ರೀ ಸರ್ವದೇವೋತ್ತಮೋತ್ತಮಃ |
ಲೀಯತೇ ಮೂಧ್ರ್ನಿ ವೈವೇದಾ ಷಡಂಗಪದಕ್ರಮಾತ್ ||
ಜಠರೇ ಲೀಯತೇ ಸರ್ವಂ ಜಗತ್ಸ್ಥಾವರ ಜಂಗಮಂ ||
ಉತ್ಪಾದ್ಯತೇ ಘನಸ್ತಸ್ಮಾತ್ ಬ್ರಹ್ಮಾದ್ಯಂ ಸಚರಾಚರಂ ||”
ಇಂತೆಂದುದಾಗಿ.
ಇದಕ್ಕೆ ಶಿವಲಿಂಗಾಗಮೇ : “ಚಿದ್ವ್ಯೋಮ ಲಿಂಗಮಿತ್ಯಾಹುಃ ಚಿದ್ಭೂಮಿ ತಸ್ಯ ಪೀಠಿಕಾ |
ಆಲಯಃ ಸರ್ವದೇವಾನಾಂ ಲಯಾನಾಂ ಲಿಂಗಮುಚ್ಯತೇ ||
ಲಿಂಗಮಧ್ಯೇ ಜಗತ್ಸರ್ವಂ ತ್ರೈಲೋಕ್ಯಂ ಸಚರಾಚರಂ |
ಉತ್ಪದ್ಯಂತೇ ಪುನಸ್ತಸ್ಮಾತ್ ಬ್ರಹ್ಮಾವಿಷ್ಣಾದಿ ದೇವತಾಃ ||”
ಇಂತೆಂದುದಾಗಿ,
ಇದಕ್ಕೆ ಮಕುಟಾಗಮಸಾರೇ : “ಆದಿಮಧ್ಯಾಂತ ಶೂನ್ಯಂ ಚ ಶೂನ್ಯ ಶೂನ್ಯಂ ದಶಾದಿಶಂ |
ಸರ್ವಶೂನ್ಯಂ ನಿರಾಕಾರಂ ನಿದ್ರ್ವಂದ್ವಂ ಪರಮಂ ಪದಂ ||”
ಇಂತೆಂದುದಾಗಿ,
ಇದಕ್ಕೆ ಉತ್ತರವಾತುಲಾಗಮೇ : “ನ ಭೂಮಿರ್ನಜಲಂ ಚೈವ ನ ತೇಜೋ ನ ಚ ವಾಯುಚ |
ನಚಾಕಾಶಂ ನ ಸೂರ್ಯಶ್ಚ ನಚ ಚಂದ್ರಮಇಂದ್ರಯೋ |
ನ ಚ ಬ್ರಹ್ಮ ನ ವಿಶ್ವಂ ಚ ನಚೋ ನಕ್ಷತ್ರಕಾರಕಾ |
ಏಕಮೇವ ಪರಂ ನಾಸ್ತಿ ಅಖಂಡಿತಮಹೋದಯಂ |
ಸರ್ವಶೂನ್ಯಂ ನಿರಾಲಂಬಂ ಸ್ವಯಂ ಲಿಂಗಮಯಂ ಪರಂ ||”
ಇಂತೆಂದುದಾಗಿ,
ಇದಕ್ಕೆ ರುದ್ರಕೋಟಿಸಂಹಿತಾಯಾಂ : “ವಾಚಾತೀತಂ ಮನೋತೀತಂ ಭಾವಾತೀತಂ ಪರಂ ಶಿವಂ |
ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||”
ಇಂತೆಂದುದಾಗಿ,
ಇದಕ್ಕೆ ಮಹಾಗಮಸಾರೇ : “ಊಧ್ರ್ವಶೂನ್ಯಂ ಅಧಃ ಶೂನ್ಯಂ ಮಧ್ಯಶೂನ್ಯಂ ನಿರಾಮಯಂ |
ಸರ್ವಶೂನ್ಯಂ ನಿರಾಕಾರಂ ಸ್ವಯಂಭುರ್ಲಿಂಗಮೂರ್ತಯೇ ||”
ಇಂತೆಂದುದಾಗಿ,
ಇದಕ್ಕೆ ಆದಿ ನಾರಾಯಣ ಉವಾಚ : “ನಮಸ್ತೇ ಜ್ಞಾನಲಿಂಗಾಯ ಶಿವಲಿಂಗಾಯ ಲಿಂಗಿನೇ |
ನಮಸ್ತೇ ಗೂಢಲಿಂಗಾಯ ಪರಲಿಂಗಾಯ ಲಿಂಗಿನೇ ||
ಜಗತ್ಕಾರಣಲಿಂಗಾಯ ಜಗತಾಂ ಪತಯೇ ನಮಃ |
ಆವಯೋಃ ಪತಯೇ ನಮಃ ನಿತ್ಯಂ ಪತೀನಾಂ ಪತಯೇ ||
ಅನಾದಿಮಲಸಂಸಾರೇ ರೋಗವೈದ್ಯಾಯ ಶಂಭವೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ಪ್ರಳಯಾಂಬುಧಿ ಸಂಸ್ಥಾಯ ಪ್ರಳಯೋತ್ಪತ್ಯಹೇತವೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ಆದಿಮಧ್ಯಾಂತಶೂನ್ಯಾಯ ಅಂಬರಸ್ಯಾಪಿ ಹೇತವೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ನಿಷ್ಕಳಾಯ ವಿಶುದ್ಧಾಯ ನಿತ್ಯಾನಂದಸ್ಯ ಹೇತವೇ |
ನಮಃ ಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ನಿರ್ವಿಕಾರಾಯ ನಿತ್ಯಾಯ ಸತ್ಯಾಯ ಪರಮಾತ್ಮನೇ |
ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ಓಂಕಾರಾಂತಾಯ ಸೂಕ್ಷ್ಮಾಯ ಸ್ತ್ರೀಪುಂಸಾಯಾತ್ಮ ರೂಪಣೇ |
ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||
ಲೀಲಾತ್ಮಂಚ ದ್ವಯೋರ್ಮಧ್ಯೇ ಕಾಯಾತ್ಮರೂಪಣೇ |
ನಮಃಶಿವಾಯ ಶಾಂತಾಯ ಬ್ರಹ್ಮಣೇ ಲಿಂಗಮೂರ್ತಯೇ ||”
ಇಂತೆಂದುದಾಗಿ,
ಇದಕ್ಕೆ ಮಹಾದೇವ ಉವಾಚ : “ವಾಚಾತೀತಂ ಮನೋತೀತಂ ವರ್ಣಾತೀತಂ ಪರಂ ಶಿವಂ |
ಸರ್ವಶೂನ್ಯಂ ನಿರಾಕಾರಂ ನಿರಾಲಂಬಸ್ಯ ಲಿಂಗಯೋಃ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./494
ಇನ್ನು ಲಿಂಗದ ತಾಮಸನಿರಸನವದೆಂತೆಂದಡೆ :
ಅನಂತಕೋಟಿ ಬ್ರಹ್ಮರು, ಅನಂತಕೋಟಿ ವಿಷ್ಣಾ ್ವದಿಗಳು,
ಅನಂತಕೋಟಿ ಇಂದ್ರಾದಿಗಳು, ಅನಂತಕೋಟಿ ದೇವರ್ಕಳು,
ಇವರೆಲ್ಲ ಎಲ್ಲಿ ಹುಟ್ಟುವರು ಅದೇ `ಗಂ’ ಎಂಬ ಶಬ್ದ.
ಇದಕ್ಕೆ ಅಖಂಡಾಗಮೇ : “ಅಸಂಖ್ಯಾತಮಹಾವಿಷ್ಣುಃ ಅಸಂಖ್ಯಾತಪಿತಾಮಹಾಃ |
ಅಸಂಖ್ಯಾತಸುರೇಂದ್ರಾಣಾಂ ಲೀಯತೇ ಸರ್ವದೇವತಾಃ ||
ವಿಷ್ಣು ಸಂಜ್ಞಾ ಅಸಂಖ್ಯಾತಾಃ ಅಸಂಖ್ಯಾತಪಿತಾಮಹಾಃ |
ಅಸಂಖ್ಯಾತಸುರೇಂದ್ರಾಣಾಂ ಗಮ್ಯತೇ ಸರ್ವದೇವತಾಃ ||
ಲೀಯತೇ ಗಮ್ಯತೇ ಯತ್ರಬ್ರಹ್ಮ ವಿಷ್ಣಾ ್ವದಿ ದೇವತಾಃ |
ತದೇತಲ್ಲಿಂಗಮಿತ್ಯುಕ್ತಂ ಲಿಂಗತತ್ವಂ ಪರಾಯಣೈಃ ||”
ಎಂದುದಾಗಿ,
ಅಂಥ ಅಖಂಡ ಪರಿಪೂರ್ಣ ಅಪ್ರಮೇಯ ಅಗಮ್ಯ
ಅವ್ಯಕ್ತ ಅನಂತತೇಜ ಅಪ್ರಮಾಣ ಅಗೋಚರವಾಗಿಹ
ಅಖಂಡಮಹಾಘನಲಿಂಗವೇ ಲಿಂಗವಲ್ಲದೆ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧ ಪದಾರ್ಥಂಗಳಲ್ಲಿ
ಅಬದ್ಧವಾಗಿ ಬಿದ್ದಿಹ ಲಿಂಗಂಗಳೆಲ್ಲವೂ ಮೋಕ್ಷವನೈದಲರಿಯವು ನೋಡಾ.
ಇದಕ್ಕೆ ವೀರಾಗಮೇ : “ವಿತ್ತಂಚ ಕಾಮಿನೀಚೈವ ಕ್ಷೇತ್ರಂ ಭೂಮೀ ತಥೈವ ಚ |
ತ್ರಿವಿಧಾಪೇಕ್ಷಲಿಂಗಾನಾಂ ಕಥಂ ಮುಕ್ತಿಃ ವರಾನನೇ ||”
ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ./495
ಇನ್ನು ಲಿಂಗಧಾರಣ ಮಹಾತ್ಮೆಯ ಸ್ಥಲವೆಂತೆಂದಡೆ :
ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಮೊದಲಾದ
ಸಮಸ್ತಗಣಂಗಳೆಲ್ಲರು ಶಿವಲಿಂಗಧಾರಣವಾಗಿ
ಶಿವಪೂಜೆಯ ಮಾಡಿದರು ನೋಡಾ.
ಚಂದ್ರಾದಿತ್ಯ ಇಂದ್ರಾದಿ ದೇವರ್ಕಳೆಲ್ಲರು
ಶಿವಲಿಂಗಧಾರಣವಾಗಿ ಶಿವಪೂಜೆಯ ಮಾಡಿದರು ನೋಡಾ.
ಮನು ಮುನಿ ಯತಿ ರಾಕ್ಷಸರು ಮೊದಲಾಗಿ
ಶಿವಲಿಂಗಧಾರಣವಾಗಿ ಶಿವಪೂಜೆಯಮಾಡಿ, ಶಿವಪ್ರಸಾದವ ಕೊಂಡು
ತಮ್ಮ ತಮ್ಮ ಪದವಿಯ ಪಡೆದು ಬದುಕಿದರು ನೋಡಾ.
ಇದಕ್ಕೆ ಶಿವಧರ್ಮಪುರಾಣೇ : “ಇಂದ್ರ ನೀಲಮಯಂ ಲಿಂಗಂ ವಿಷ್ಣುಃ ಪೂಜಯತೇ ಸದಾ |
ವಿಷ್ಣುತ್ವಂ ಪ್ರಾಪ್ಯತೇ ತೇನ ಸಾದ್ಭುತಂ ಚ ಸನಾತನಂ ||
ಬ್ರಹ್ಮಾ ಪೂಜಯತೇ ನಿತ್ಯಂ ಲಿಂಗಂ ಶೈಲಮಯಂ ಶುಭಂ |
ತಸ್ಯ ಸಂಪೂಜನಾತ್ತೇನ ಪ್ರಾಪ್ತಂ ಬ್ರಾಹ್ಮತ್ವಮುತ್ತಮುಂ ||
ಮುಕ್ತಾಫಲಮಯಂ ಲಿಂಗಂ ಸೋಮಃ ಪೂಜಯತೇ ಸದಾ |
ತೇನ ಸೋಮೇನ ಸಂಪ್ರಾಪ್ತಂ ಸೋಮತ್ವಂ ಸತತೋಜ್ಜಲಂ ||
ಶಕ್ರೋಪಿ ದೇವರಾಜೇಂದ್ರೋ ಲಿಂಗಂ ಮಣಿಮಯಂ ಶುಭಂ |
ಭಕ್ತ್ಯಾ ಪೂಜಯತೇ ನಿತ್ಯಂ ತೇನ ಶಕ್ರತ್ವಮಾಪ್ತವಾನ್ ||
ಲಿಂಗಂ ರತ್ನಮಯಂ ಚಾರು ವರುಣೋರ್ಚಯತೇ ಸದಾ |
ತೇನ ತದ್ವರುಣತ್ವಂ ಹಿ ಪ್ರಾಪ್ತಂ ವೃದ್ಧಿಸಮನ್ವಿತಂ ||
ಲಿಂಗಂ ಹೇಮಮಯಂ ಕಾಂತಂ ಧನದೋರ್ಚಯತೇ ಸದಾ |
ತೇನಾಸೌಧನದೋ ದೇವೋ ಧನದತ್ವಮವಾಪ್ತವಾನ್ ||
ಸಂಪೂಜ್ಯ ಕಾಂಸ್ಯಕಂ ಲಿಂಗಂ ವಸವಃ ಕಾಮಮಾಪ್ನುಯುಃ |
ನಾಗಾಃ ಪ್ರವಾಲಜಂ ಲಿಂಗಂ ರಾಜ್ಯಂ ಸಂಪೂಜ್ಯ ಲೇಭಿರೇ |
ಏವಂ ದೇವಾಃ ಸ ಗಂಧರ್ವಾಃ ಸ ಯಕ್ಷೊರಗರಾಕ್ಷಸಾಃ |
ಪೂಜಯಂತಿ ಸದಾಕಾಲಮೀಶಾನಂ ಸುರನಾಯಕಂ ||
ಸರ್ವಂ ಲಿಂಗಮಯಂ ಲೋಕೇ ಸರ್ವಂ ಲಿಂಗೇ ಪ್ರತಿಷ್ಠಿತಂ |
ತಸ್ತಾತ್ ಸಂಪೂಜ್ಯಯೇನ್ನಿತ್ಯಂ ಯದಿಚ್ಛೇತ್ ಸಿದ್ಧಿಮಾತ್ಮನಃ ||”
ಇಂತೆಂದುದಾಗಿ,
ಇದಕ್ಕೆ ವ್ಯಾಸ ಜೈಮಿನಿ ಸಂವಾದೇ:ವ್ಯಾಸ ಉವಾಚ-
“ಇತಿಹಾಸೇಷು ವೇದೇಷು ಪುರಾಣೇಷು ಪುರಾತನೈಃ |
ಮಹಷರ್ಿಭಿರ್ಮಹಾದೇವೋ ಶಿವಲಿಂಗಂತು ಧಾರಯೇತ್ ||
ಸುರಾಸುರೇಂದ್ರದೇವಾಶ್ಚ ಲಿಂಗಧಾರಣಯಾ ಸದಾ |
ತಥಾಗಸ್ತ್ಯಾದಿ ಮುನಯೋ ದೂರ್ವಾಸು ನಂದಿಕೇಶ್ವರಃ |
ಮಹಾಕಾಲೋ ದಧೀಚಿಶ್ಚ ಪಾಣಿನಿಶ್ಚ ಕಣಾದಕಃ |
ಸ್ಕಂದೋ ಭೃಂಗಿರೀಟರ್ವಿರಭದ್ರಾಶ್ಚ ಪ್ರಮಥಾದಯಃ ||
ಅಜೋ ಹರಿಃ ಸಹಸ್ರಾಕ್ಷೊ ಬಾಣಾಸುರದಶಾನನೌ |
ವಶಿಷ್ಠರುರುವಾಲ್ಮೀಕಿಭಾರದ್ವಾಜಾತ್ರಿಗೌತಮಾಃ ||
ಏತೇ ಪರಮಶೈವಾಶ್ಚ ಭಜಂತಿ ಪರಯಾ ಮುದಾ |
ಪ್ರಸಾದ ಸೇವನಾತ್ಧ್ಯಾನಾದರ್ಚನಾದ್ಧಾರಣಾದಪಿ ||”
ಇಂತೆಂದುದಾಗಿ,
ಇದಕ್ಕೆ ವಾತುಲತಂತ್ರೇ : “ಬ್ರಹ್ಮವಿಷ್ಣುಸುರೇಶಾದಿ ದೇವತಾಃ ಪರಯಾ ಮುದಾ |
ಶಿರೋಭಿಧರ್ಾರಯಂತ್ಯೇತಾ ಃ ಶಿವಲಿಂಗಮಹರ್ನಿಶಂ ||
ಪಾಣಿನಿಶ್ಚ ಕಣಾದಶ್ಚ ಕಪಿಲೋ ಗೌತಮಾದಯಃ |
ಪ್ರಸಾದಸೇವನಾದ್ಧ್ಯಾನಾದರ್ಚನಾದ್ಧಾರಣಾದಪಿ ||
ಕಂಠೇಷು ಹರಕಂಠಾದಿ ಮುನಯೋ ಮಾನವಾಸ್ತಥಾ |
ಸರ್ವದಾ ಶಿವಲಿಂಗಂತು ಧಾರಯಂತಿ ಯಜಂತಿ ಚ ||”
ಇಂತೆಂದುದಾಗಿ,
ಇದಕ್ಕೆ ಈಶ್ವರೋವಾಚ : “ಉತ್ತಮಾಂಗೇ ಗಲೇ ಕಕ್ಷೇ ಸರ್ವದಾ ಧಾರಯೇತ್ ಶಿವಂ |
ಮಂತ್ರಾದ್ಯುತ್ಪಾರ್ಜನೇಯುವೇ ಭೋಜನೇಪಿ ಸದಾ ಶುಚಿಃ||”
ಇಂತೆಂದುದಾಗಿ,
ಇದಕ್ಕೆ ಈಶ್ವರೋವಾಚ : “ಗಚ್ಚನ್ ತಿಷ್ಠನ್ ಸ್ವಪನ್ ಜಾಗ್ರನ್ ಉನ್ಮಿಷನ್ ನಿಮಿಷನ್ನಪಿ |
ಶುಚಿರ್ವಾಪ್ಯಶುಚಿರ್ವಾಪಿ ಲಿಂಗಂ ಸರ್ವತ್ರ ಧಾರಯೇತ್ ||”
ಇಂತೆಂದುದಾಗಿ,
ಇದಕ್ಕೆ ಶ್ರೀ ಮಹಾದೇವ ಉವಾಚ : “ಉದರೇ ಧಾರಯೇಲ್ಲಿಂಗಂ ಗ್ರಾಮಸ್ಯಾಧಿಪತಿರ್ಭವೇತ್ |
ವಕ್ಷಸಾ ಧಾರಯೇಲ್ಲಿಂಗಂ ಇಂದ್ರಸ್ಯಾಧಿಪತಿರ್ಭವೇತ್ ||
ಕಂಠೇತು ಧಾರಯೇಲ್ಲಿಂಗಂ ಬ್ರಾಹ್ಮಣಾಧಿಪತಿರ್ಭವೇತ್ |
ಅಪರೇ ಧಾರಯೇಲ್ಲಿಂಗಂ ರಾಕ್ಷಸ್ಯಾಧಿಪತಿರ್ಭವೇತ್ ||
ಸ್ಕಂದೇ ತು ಧಾರಯೇಲ್ಲಿಂಗಮೀಪ್ಸಿತಂ ಲಭತೇ ಧೃವಂ |
ಶಿರಸಾ ಧಾರಯೇಲ್ಲಿಂಗಂ ಗಣತ್ವೇನ ಸಯುಜ್ಯತೇ |
ತೇ ಸ್ಥಾನೇಷು ಧಾರಯೇಲ್ಲಿಂಗ ಸರ್ವಸಿದ್ಧಿ ಫಲಪ್ರದಂ ||”
ಇಂತೆಂದುದಾಗಿ,
ಇದಕ್ಕೆ ಲೈಂಗ್ಯಪುರಾಣೇ : “ಲಿಂಗಪ್ರಣಿತಥಾ ಲಿಂಗಂ ಶಿಖಾಯಾಂ ಧಾರಯೇತ್ಸುದೀಃ |
ತದಸ್ಥಾನಾಧಿಕಂ ದಿವ್ಯಂ ಬ್ರಹ್ಮರಂಧ್ರಂ ವಿಶೇಷತಃ ||
ಮೂಧ್ರ್ನಿವಾ ಧಾರಯೇಲ್ಲಿಂಗಂ ನ ತಥಾ ಚ ದ್ವಿಜಯೋ ಜಯೇತ್ |
ಈಶಾವಾ ನಿತ್ಯಸಂಯೋಗೋ ಪರಯೋನಿರನಿಷ್ಟಯಃ |
ನಾಭೇರಧೋ ಲಿಂಗಧಾರಿ ಪಾಪೇನ ಚ ಸ ಯುಜ್ಯತೇ |
ನಾಭ್ಯೋಧ್ರ್ವೆ ಲಿಂಗಧಾರೀ ಚ ಸೌಭಾಗ್ಯಜ್ಞಾನವರ್ಧನಂ ||”
ಇಂತೆಂದುದಾಗಿ,
ಇದಕ್ಕೆ ಉಮಾಮಹೇಶ್ವರ ಸಂವಾದೇ : “ಜಾತಾ ದರ್ಶನಕರ್ತಾರಃ ಶ್ರಾವಯಂತಿ ಜಗತ್ರಯಂ |
ಕಕ್ಷೇ ಬ್ರಹ್ಮಾ ಕರೇ ವಿಷ್ಣುಃ ಕಂಠೇ ಮಾಹೇಶ್ವರಸ್ಸದಾ ||
ವ್ಯೋಮಾತೀತಸ್ತು ಶಿರಸಿ ಮುಖೇ ರುದ್ರಸ್ತು ಧಾರಯೇತ್ |
ಈಶ್ವರಸ್ತ್ವಮಲೈಕ್ಯೇ ತು ಉತ್ತಮಾಂಗೇ ಸದಾಶಿವಃ |
ಇತಿ ದೇವಗಣೋ ಧೃತ್ವಾ ಲಿಂಗಂತು ಯಜತೇ ಸದಾ ||
ನಾಭಿಂ ಚ ಹೃದಯೇ ಮೂಧ್ರ್ನಿ ಸರ್ವಾವಸ್ಥಾಸು ಸರ್ವದಾ |
ತ್ರೀಲಿಂಗಧಾರಣಂ ಕುರ್ಯಾದೇವೀ ನಿತ್ಯಂ ಮಮಪ್ರಿಯಃ ||
ಕಾಯಸಂಬಂಧ ಲಿಂಗೇನರಹಿತಶ್ಚಾಪಿಯೋ ಭವೇತ್ |
ನಿಮುಷಾರ್ಧಂ ವಿಯೋಗೇನ ವಿಶೇಷೋತ್ವಾತ್ ಕೋಭವೇತ್ ||
ಇಂತೆಂದುದಾಗಿ,
ಇದಕ್ಕೆ ಅಥರ್ವಣವೇದೇ : “ಓಂ ತ್ರಯೋ ದೇವಾ ಲಿಂಗಂ ಧಾರಯಂತಿ |
ಋಷಯಃ ಶಿವಲಿಂಗಧಾರಯಂತಿ |
ತಸ್ಮಾದ್ದೇವಲಿಂಗ ಧಾರಯಂತಿ |
ಅಜಹರಿ ಲಿಂಗಂ ಧಾರಯಂತಿ |
ಸುರೇಂದ್ರದೈತ್ಯಾ ಧಾರಯಂತಿ ||”
ಇಂತೆಂದುದಾಗಿ,
ಇದಕ್ಕೆ ಋಗ್ವೇದೇ : “ಸೋಮೇ ರುದ್ರಾಯುವಮೇತಾವ್ಯಸ್ಮಿ ವಿಶ್ವಾತಮಾಷುಭೇಷಾವಿದತ್ತಂ |
ಅವಸ್ಯತಂ ಮುಲಚತಯಿಂ ನೋ ಅಸ್ತಿತನುಕ್ಷುಬಂಧಂ ಕ್ರುಷಮೇನೋ
ಅಸ್ತಿತ್||”
ಇಂತೆಂದುದಾಗಿ,
ಇದಕ್ಕೆ ಅಥರ್ವಣವೇದೇ : “ಚತುರ್ವೆದಾ ಲಿಂಗ ಧಾರಯಂತಿ |
ಅನಂತಾ ವೈ ವೇದಾಃ ಲಿಂಗಂ ಧಾರಯಂತಿ ||”
ಇಂತೆಂದುದು ಶ್ರುತಿ.
ಇದನರಿದು ಶ್ರೀವಿಭೂತಿ ರುದ್ರಾಕ್ಷಿ ಶಿವಲಿಂಗಧಾರಣವಿಲ್ಲದ
ಕಮರ್ಿಯನೆನಗೊಮ್ಮೆ ತೋರದಿರಯ್ಯ
ಅಪ್ರಮಾಣಕೂಡಲಸಂಗಮದೇವಾ./496
ಇನ್ನು ಲಿಂಗಧಾರಣಸ್ಥಲವದೆಂತೆಂದಡೆ :
ಆ ಸದ್ಗುರುಸ್ವಾಮಿ ಶಿಷ್ಯನ ಏಕಭುಕ್ತೋಪವಾಸಂಗಳ ಮಾಡಿಸಿ
ಪಂಚಗವ್ಯಮಂ ಕೊಟ್ಟು, ಗಣತಿಂತಿಣಿಗೆ ದೀರ್ಘದಂಡ ನಮಸ್ಕಾರವಂ ಮಾಡಿ,
ದಶವಾಯು ಶುದ್ಧ, ಅಷ್ಟ ತನುಶುದ್ಧ, ಜೀವಶುದ್ಧ, ಆತ್ಮಶುದ್ಧವಂ ಮಾಡಿ,
ಇಂದ್ರಿಯಲಿಖಿತವಂ ತೊಡದು ಶಿವಲಿಖಿತವಂ ಲಿಖಿಸಿ,
ವಿಭೂತಿಯನಿಟ್ಟು, ಸ್ಥಾನಸ್ಥಾನದಲ್ಲಿ ರುದ್ರಾಕ್ಷೆಯಂ ಧರಿಸಿ,
ಕಳಶಾಭಿಷೇಕವಂ ಮಾಡಿ, ಆ ಶಿಷ್ಯನ ಮಸ್ತಕದ ಮೇಲೆ
ತಮ್ಮ ಹಸ್ತಕಮಲವನಿರಿಸಿ,
ಆತನ ಬ್ರಹ್ಮರಂಧ್ರದ ಚಿತ್ಪ್ರಭಾ ಲಿಂಗಮಂ ತೆಗೆದು ಧ್ಯಾನಿಸಿ,
ಆ ಶಿಷ್ಯನ ಹಸ್ತಮಂ ಪಂಚಾಮೃತದಿಂ ತೊಳದು,
ಅಂಗದ ಮೇಲೆ ಲಿಂಗಮಂ ಪ್ರತಿಷ್ಠೆಯಂ ಮಾಡಿ
ಕರ್ಣದ್ವಾರದಲ್ಲಿ ಮೂಲಮಂತ್ರಮಂ ತುಂಬಿ
ಕೃತಾರ್ಥನ ಮಾಡಿದನಯ್ಯ ಎನ್ನ ಗುರು.
“ದೀಯತೇ ಜ್ಞಾನಸಂಬಂಧಃ ಕ್ಷೀಯತೇ ಚ ಮಲತ್ರಯಂ |
ದೀಯತೇ ಕ್ಷೀಯತೇ ಚೈವ ಲಿಂಗದೀಕ್ಷಾಭಿಧೀಯತೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./497
ಇನ್ನು ಲಿಂಗೋತ್ಪತ್ಯವದೆಂತೆಂದಡೆ :
ಆ ಅಖಂಡ ಮಹಾಜ್ಯೋತಿಪ್ರಣಮದ ತಾರಕಸ್ವರೂಪ
ಕುಂಡಲಾಕಾರ ಜ್ಯೋತಿಸ್ವರೂಪದಲ್ಲಿ ಉತ್ಪತ್ಯವಾದ
ಅಕಾರ ಉಕಾರ ಮಕಾರ- ಈ ಮೂರು ಬೀಜಾಕ್ಷರ.
ಅಕಾರವೇ ಶಿವನು, ಉಕಾರವೇ ಶಿವತತ್ವ, ಮಕಾರವೇ ಪರವು.
ಅಕಾರವೇ ನಾದವು, ಉಕಾರವೇ ಬಿಂದು, ಮಕಾರವೇ ಕಲೆ.
ಈ ಆರೂ ನಾಮಂಗಳು ನಿಃಕಲತತ್ವ.
ಆ ಪರಶಿವಶಕ್ತಿಯ ಸಂಕಲ್ಪದಿಂದ ನಾದ-ಬಿಂದು- ಕಲೆಸಂಯುಕ್ತವಾಗಿ
ಅಖಂಡಲಿಂಗವಾಯಿತ್ತು.
ಅದಕ್ಕೆ ಕರ ಚರಣ ಅವಯವಂಗಳೆಲ್ಲ ಅಖಂಡಸ್ವರೂಪ.
ಇದಕ್ಕೆ ಚಿತ್ಪಿಂಡಾಗಮೇ : “ಓಂಕಾರ ತಾರಕಾರೂಪಂ ಅಕಾರಂ ಚ ಪ್ರಜಾಯತೇ |
ಓಂಕಾರಂ ಕುಂಡಲಾಕಾರಂ ಉಕಾರಂ ಚ ಪ್ರಜಾಯತೇ ||
ಓಂಕಾರಂ ಜ್ಯೋತಿರೂಪಂ ಚ ಮಕಾರಂ ಚ ಪ್ರಜಾಯತೇ |
ಇತ್ಯಕ್ಷರತ್ರಯಂ ದೇವೀ ಸ್ಥಾನಸ್ಥಾನೇಷು ಜಾಯತೇ ||
ಅಕಾರೇ ಚ ಉಕಾರೇ ಚ ಮಕಾರೇ ಚಾಕ್ಷರತ್ರಯಂ |
ಅಕಾರಂ ನಾದರೂಪೇಣ ಉಕಾರಂ ಬಿಂದುರುಚ್ಯತೇ ||
ಮಕಾರಂತು ಕಲಾಶ್ಚೈವ ನಾದಬಿಂದುಕಲಾತ್ಮನೇ |
ನಾದಬಿಂದುಕಲಾಮಧ್ಯೇ ವೇದಲಿಂಗಸಮುದ್ಭವಃ ||
ಅಖಂಡಗೋಳಕಾಕಾರಂ ವೇದಪಂಚಕಸಂಜ್ಞಕಂ |
ಅಖಿಲಾರ್ಣವ ಲಯಾನಾಂ ಲಿಂಗಮುಖ್ಯಂ ಪರಂ ತಥಾ ||
ಪರಂ ಗೂಢಂ ಶರೀರಸ್ಥಂ ಲಿಂಗಕ್ಷೇತ್ರಮನಾದಿವತ್ |
ಯದೀದಮೀಶ್ವರಂ ತೇಜಃ ತಲ್ಲಿಂಗಂ ಪಂಚಸಂಜ್ಞಕಂ ||”
ಇಂತೆಂದುದಾಗಿ,
ಇದಕ್ಕೆ ಈಶ್ವರ ಉವಾಚ : “ಅಕಾರೋಕಾರ ಸಂಯೋಗ ತನ್ಮಧ್ಯೇ ಲಿಂಗರೂಪಕಂ |
ಅವ್ಯಕ್ತ ಲಿಂಗಮಕಲ್ಪಂ ಗೋಳಕಾಕಾರಸಂಜ್ಞಕಂ ||
ನಾದೋಲಿಂಗಮಿತಿ ಜ್ಞೇಯಂ ಬಿಂದುಃ ಪಿಂಡಮುದಾಹೃತಂ |
ನಾದಬಿಂದು ಯುಕ್ತರೂಪಂ ಜಗತ್ಸ ೃಷ್ಟ್ಯರ್ಥಕಾರಣಂ ||
ಚಿದ್ವ್ಯೋಮಲಿಂಗಮಿತ್ಯಾಹ ಚಿದ್ಭೂಮಿಸ್ತಸ್ಯ ಪೀಠಿಕಾ |
ಆಲಯಂ ಸರ್ವಭೂತಾನಾಂ ಲಯನಾಂ ಲಿಂಗಮುಚ್ಯತೇ ||
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |
ತದೇಲ್ಲಿಂಗಮಿತ್ಯುಕ್ತಂ ಲಿಂಗತತ್ವಪರಾಯಣೈಃ ||
ಲಿಂಗಃ ಶಂಭುರಿತಿ ಜ್ಞೇಯಂ ಶಕ್ತಿಃ ಪೀಠಮುದಾಹೃತಂ |
ಶಿವೇನ ಶಕ್ತಿಸಂಯೋಗಃ ಸೃಷ್ಟಿಸ್ಥಿತಿಲಯಾವಹಃ ||
ಲಿಂಗೇನ ಜಾಯತೇ ತತ್ರ ಜಗತ್ಸ್ಥಾವರಜಂಗಮಂ |
ತಸ್ಮಾಲ್ಲಿಂಗೇ ವಿಶೇಕ್ಷೀಣ ಲಿಂಗರೂಪಮುದಾಹೃತಂ ||
ಅಸಂಖ್ಯಾತಮಹಾವಿಷ್ಣು ಅಸಂಖ್ಯಾತಪಿತಾಮಹಃ |
ಅಸಂಖ್ಯಾತಾ ಸುರೇಂದ್ರಾಶ್ಚ ಲೀಯಂತೇ ಸರ್ವದೇವತಾಃ ||
ವಿಷ್ಣು ಸಂಜ್ಞಾ ಅಸಂಖ್ಯಾತಾಃ ಅಸಂಖ್ಯಾತ ಕವಿಕಾಮಃ |
ಅಸಂಖ್ಯಾ ದೇವಮುನಯೋ ಗಮ್ಯತೇ ಸರ್ವದೇವತಾಃ ||
ಲೀಯತೇ ಗಮ್ಯತೇ ಯತ್ರ ಯೇನ ಸರ್ವಂ ಚರಾಚರಂ |
ತದೇತಲ್ಲಿಂಗಮಿತ್ಯಾಹುರ್ಲಿಂಗತತ್ವಪರಾಯಣೈಃ ||”
ಇಂತೆಂದುದಾಗಿ,
ಇದಕ್ಕೆ ಪ್ರಣವಾನಂದ ಸೂಕ್ತಿ :ಶ್ರೀ ಮಹಾದೇವ ಉವಾಚ-
“ಆದಿ ಓಂಕಾರಪೀಠಂ ಚ ಅಕಾರಂ ಕಂಠ ಉಚ್ಯತೇ |
ಉಕಾರಂ ಗೋಮುಖಂ ಚೈವ ಮಕಾರಂ ವತರ್ುಲಂ ತಥಾ ||
ನಾದಬಿಂದುಮಹಾತೇಜಂ ನಾದಂ ಅಖಂಡಲಿಂಗಕಃ |
ಆದಿಮಧ್ಯಾಂತರಹಿತಂ ಅಪ್ರಮೇಯಂ ಅನಾಮಯಂ ||
ಅಸಂಖ್ಯಾತಸೂರ್ಯಚಂದ್ರಾಗ್ನಿ ಅಸಂಖ್ಯಾತ ತಟಿತ್ಕೋಟಿ ಪ್ರಭಃ |
ಅವ್ಯಕ್ತಂ ಅಮಲಂ ಶೂನ್ಯಂ ಅಪ್ರಮಾಣಮಗೋಚರಂ ||
ನಿನರ್ಾಮಂ ನಿರ್ಗುಣಂ ನಿತ್ಯಂ ನಿರಂಜನಂ ನಿರಾಮಯಂ |
ಇತಿ ಲಿಂಗಸ್ಥಲಂತು ದುರ್ಲಭಂ ಕಮಲಾನನೇ ||”
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ./498
ಇನ್ನು ಲಿಂಗೋದಕ, ಪಾದೋದಕ, ಪ್ರಸಾದೋದಕವೆಂತೆಂದಡೆ :
ಲಿಂಗೋದಕ ಶಿವಮಂತ್ರಸಂಸ್ಕಾರದಿಂದಾದುದು.
ಲಿಂಗಕ್ಕೆ ಮಜ್ಜನಕ್ಕೆರದುದೇ ಪಾದೋದಕ.
ಲಿಂಗವಾರೋಗಣೆಯ ಮಾಡಿ ಮಿಕ್ಕುದೆ ಪ್ರಸಾದೋದಕ.
ಲಿಂಗೋದಕದಲ್ಲಿ ಪಾಕಪ್ರಯತ್ನ ಮಜ್ಜನಾದಿಗಳ ಮಾಡುವುದು.
ಪಾದೋದಕದಲ್ಲಿ ಮುಖಪ್ರಕ್ಷಾಲನವ ಮಾಡುವುದು ;
ಮಸ್ತಕದ ಮೇಲೆ ತಳಿದುಕೊಂಬುವುದು,
ಪ್ರಸಾದೋದಕವ ಭುಂಜಿಸುವುದು ನೋಡಾ
ಅಪ್ರಮಾಣಕೂಡಲಸಂಗಮದೇವಾ./499
ಇನ್ನು ವರ್ಣಭೇದವೆಂತೆಂದಡೆ :
ಸ್ತ್ರೀ ಪುರುಷರಿಬ್ಬರ ಸಂಯೋಗ ಕಾಲದಲ್ಲಿ
ಪೃಥ್ವಿಯ ಸ್ವರವಾದರೆ ಹುಟ್ಟಿದ ಮಗ ಪೀತವರ್ಣನಹನು.
ಅಪ್ಪುವಿನ ಸ್ವರವಾದಡೆ ಶ್ವೇತವರ್ಣನಹನು,
ಅಗ್ನಿಯ ಸ್ವರವಾದಡೆ ರಕ್ತವರ್ಣನಹನು,
ವಾಯುವಿನ ಸ್ವರವಾದಡೆ ಕೃಷ್ಣವರ್ಣನಹನು,
ಆಕಾಶದ ಸ್ವರವಾದಡೆ ಧೂಮ್ರವರ್ಣನಹನು ನೋಡಾ
ಅಪ್ರಮಾಣಕೂಡಲಸಂಗಮದೇವಾ./500