Categories
ಶರಣರು / Sharanaru

ಬಾಹೂರ ಬೊಮ್ಮಣ್ಣ

ಅಂಕಿತ: ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗ’
ಕಾಯಕ: ತೋಟಗಾರಿಕೆ

ಬಿಜಾಪುರ ಜೆಲ್ಲೆಯ ಮುದ್ದೇಬೀಹಾಳ ತಾಲೂಕಿ ಸೇರಿದ ಬಾಹೂರು ಈತನ ಸ್ಥಳ. ಕಾಲ-೧೧೬೦. ಕಾಯಕ-ತೋಟಗಾರಿಕೆ ‘ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗ’ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ದೊರೆತ ೪೧ ವಚನಗಳಲ್ಲಿ ಷಟ್-ಸ್ಥಲ ತತ್ವಗಳ ನಿರೂಪಣೆಯಿದೆ. ಎಲ್ಲ ವಚನಗಳಲ್ಲಿ ಬಸವಣ್ಣನ ಹೆಸರು ಒಂದಿಲ್ಲೊಂದು ರೀತಿಯಲ್ಲಿ ಕಾಣಿಸಿಕೊಂಡುದು ವಿಶೇಷ.

ಷಟ್-ಸ್ಥಲಗಳ ಸರಳವಾದ ನಿರೂಪಣೆ ಇದೆ. ಬಸವಣ್ಣನಿಗೆ ಸಂಬಂಧಿಸಿದ ಕೆಲವು ಪವಾಡಗಳನ್ನು ಉಲ್ಲೇಖಿಸಿರುವನು. ವೃತ್ತಿಧರ್ಮ ಹಾಗೂ ಇವನ ಅಭಿವ್ಯಕ್ತಿಯಲ್ಲಿನ ಮಾತುಗಾರಿಕೆಯ ಶಕ್ತಿ ಇವೆರಡನ್ನೂ ಗಮನಿಸಿದಾಗ ಆಶ್ಚರ್ಯವಾಗುತ್ತದೆ.