Categories
ಶರಣರು / Sharanaru

ಮಡಿವಾಳ ಮಾಚಿದೇವರ ಸಮಯಾಚಾರದ ಮಲ್ಲಿಕಾರ್ಜುನ

ಅಂಕಿತ: ಪರಮ ಪ೦ಚಾಕ್ಷರ ಮೂರ್ತಿ ಶಾ೦ತಮಲ್ಲಿಕಾರ್ಜುನಯ್ಯ
ಕಾಯಕ: ಬಟ್ಟೆ ತೊಳೆಯುವ ಕಾಯಕ (ಅಗಸ)

ಈತ ಮಡಿವಾಳ ಮಾಚಿದೇವರ ಅನುಯಾಯಿಯೆಂದು ತೋರುತ್ತದೆ. ಕಾಲ-೧೧೬೦. ‘ಪರಮ ಪಂಚಾಕ್ಷರಮೂರ್ತಿ ಶಾಂತಮಲ್ಲಿಕಾರ್ಜುನ’ ಎಂಬ ಅಂಕಿತದಲ್ಲಿ ಬರೆದ ೫ ವಚನಗಳು ದೊರೆತಿವೆ. ಎಲ್ಲವೂ ಸಮಯಾಚಾರ ನಿಷ್ಠೆಯನ್ನು ಪ್ರತಿಪಾದಿಸುತ್ತವೆ. ಇಷ್ಟಲಿಂಗವಿರಲು ಸ್ಥಾವರಲಿಂಗ ಪೂಜಿಸುವವರನ್ನು ಕಟುವಾಗಿ ಟೀಕಿಸುತ್ತಾನೆ.

ಧರ್ಮನಿಷ್ಠೆ, ವೈರಾಗ್ಯಪರತೆ ಇವನ ವಚನಗಳ ಉದ್ದೇಶವಿರುವ೦ತಿದೆ ಇಷ್ಠಲಿ೦ಗವನ್ನು ಬಿಟ್ಟು ಸ್ಥಾವರಗಳಿಗೆರಗುವವರನ್ನು ನರಕಿ ನಾಯಿಗಳೆಂದಿರುವನು