Categories
ಶರಣರು / Sharanaru

ರಾಯಸದ ಮಂಚಣ್ಣ

ಅಂಕಿತ: ಜಾಂಬೇಶ್ವರ
ಕಾಯಕ: ಪತ್ರಗಳನ್ನು ಮುಟ್ಟಿಸುವ ನಿಯೋಗಿ

ಈತ ಕಲ್ಯಾಣದಲ್ಲಿ ಬಸವಣ್ಣನವರ ಪತ್ರ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದ ಒಬ್ಬ ನಿಯೋಗಿ. ರಾಯಮ್ಮ ಈತನ ಸತಿ. ಕಾಲ-೧೧೬೦. ‘ಜಾಂಬೇಶ್ವರ’ ಅಂಕಿತದಲ್ಲಿ ೧೦ ವಚನಗಳನ್ನು ರಚಿಸಿದ್ದಾನೆ. ಅವು ತುಂಬ ಸರಳವಾಗಿದ್ದು, ಇಷ್ಟಲಿಂಗ ದ ಮಹತ್ವ, ಮನದ ವಿಕಾರ, ಇಂದ್ರಿಯ ನಿಗ್ರಹ ಅರಿವು, ಆಚಾರವನ್ನು ಕುರಿತು ಹೇಳುತ್ತವೆ. ಬಳಸಿದ ಉಪಮೆ ದೃಷ್ಟಾಂತಗಳು ಅರ್ಥಪೂರ್ಣ.

ಇಷ್ಟಲಿಂಗ ವನ್ನು ಮರೆಯಬಾರದು. ಮನ ವಿಕಾರವಾಗುವ ಮೊದಲು ಮಹದಲ್ಲಿ ನಿಂತರೆ ಇಂದ್ರಿಯಗಳು ಏನೂ ಮಾಡಲಾರವು. ಅರಿವನ್ನು ಅರಿತು ಆಚರಿಸಬೇಕು. ಅರಿವು ಮರೆತರೆ ಭವವು ತಪ್ಪದೆ ಮರುಕಳಿಸುತ್ತದೆ. ಆದಕಾರಣ, ಅಂಗದಲ್ಲಿರುವ ಲಿಂಗಯ್ಯನನ್ನು ಅರಿಯಬೇಕು. ಹೆಣ್ಣು ಹೊನ್ನು ಮಣ್ಣೆಂಬ ಬಲೆಗೆ ಸಿಲುಕಿ ಒದ್ದಾಡಬಾರದು.