Categories
ವಚನಗಳು / Vachanagalu

ಸತ್ಯಕ್ಕನ ವಚನಗಳು

ಅಡಿಗಡಿಗೆ ನಿಮ್ಮ ಶರಣರಡಿಗೆರಗಿ ಶರಣೆಂಬೆ.
ನುಡಿಯ ಬೋಧೆಯ ಮಾತು,
ಅನ್ಯನುಡಿ ಸಮನಿಸದು.
ಓಡುದೇಹದ ಶಿರಬಿಗಿದು, ಮಡುಗಟ್ಟಿ ಕಂಬನಿಯ ಕಡಲೊಳಗೆ
ತೇಲಾಡುತೆಂದಿಪ್ಪೆನೊ ?
ಮೃಡ ಶರಣು ಶರಣೆಂಬೆ ಶಬ್ದ ಒಡಲುಗೊಂಡು
ಶಂಭುಜಕ್ಕೇಶ್ವರದೇವರಿಗೆ
ಶರಣೆನುತ ಮೈಮರೆದೆಂದಿಪ್ಪೆನೊ ?/1
ಅಯ್ಯಾ ಪುಣ್ಯಪಾಪ, ಇಹಪರಂಗಳಿಗೆ ಹೊರಗಾದ
ಶಿಷ್ಯಗುರುಜಂಗಮದ ವಿಚಾರವೆಂತೆಂದಡೆ
ತನ್ನ ತಾನೆ ಪಕ್ವವಾಗಿ, ವೃಕ್ಷವ ತನ್ನೊಳಗೆ ಮಾಡಿಕೊಂಡು,
ಶಿವಾಜ್ಞೆಯಿಂದ ತೊಟ್ಟು ಬಿಟ್ಟ ಹಣ್ಣಿನಂತೆ
ಶಿವಭಕ್ತಮತ ಮೊದಲಾಗಿ
ಆವ ಜಾತಿಯಲ್ಲಿ ಜನಿತವಾದಡೇನು ?
ಪೂರ್ವಗುಣಧರ್ಮಗಳ ಮುಟ್ಟದೆ,
ಲೋಕಾಚಾರವ ಹೊದ್ದದೆ,
ಪಂಚಮಹಾಪಾತಕಂಗಳ ಬೆರಸದೆ,
ಸತ್ಯಶರಣರಸಂಗ, ಸತ್ಯ ನಡೆನುಡಿಯಿಂದಾಚರಿಸಿ,
ಲಿಂಗಾಚಾರ ಮೋಹಿಯಾಗಿ,
ಅಡಿಗೆರಗಿ ಬಂದ ಪೂರ್ವಜ್ಞಾನಿ ಪುನರ್ಜಾತಂಗೆ,
ಪಕ್ಷಿ ಫಳರಸಕ್ಕೆರಗುವಂತೆ ಮೋಹಿಸಿ,
ಅಂಗದ ಮಲಿನವ ತೊಡೆದು ಚಿದಂಗವ ಮಾಡಿ,
ಚಿದ್ಘನಲಿಂಗವ ಸಂಬಂದಿಸಿ,
ಇಪ್ಪತ್ತೊಂದು ದೀಕ್ಷೆಯ ಕರುಣಿಸುವಾತನೆ
ತ್ರಿಣೇತ್ರವುಳ್ಳ ಗುರುವೆಂಬೆನಯ್ಯಾ.
ಅಂಥ ಗುರುಕರಜಾತನ ಭೇದಿಸಿ, ತ್ರಿವಿಧ ಜಪವ ಹೇಳಿ,
ತ್ರಿವಿಧಲಿಂಗಾನುಭಾವವ ಬೋದಿಸುವಾತನೆ
ಸರ್ವಾಂಗಲೋಚನವುಳ್ಳ ಜಂಗಮವೆಂಬೆ ನೋಡಾ.
ಇಂಥ ಸನ್ಮಾರ್ಗಿಗಳಿಗೆ ಭವಬಂಧನ ನಾಸ್ತಿ ಕಾಣಾ
ಶಂಭುಜಕ್ಕೇಶ್ವರಾ./2
ಅಯ್ಯಾ, ಗುರುಶಿಷ್ಯರಿಬ್ಬರು ಪುಣ್ಯಪಾಪ, ಇಹಪರಂಗಳಿಗೆ
ಒಳಗಾದ ವಿಚಾರವೆಂತೆಂದಡೆ
ಸತ್ಯಸದಾಚಾರಸಂಪತ್ತೆಂಬ ಶಿವಭಕ್ತರ ಹೃದಯದಲ್ಲಿ ಜನಿತನಾಗಿ
ಸತ್ಯನಡೆ ನಡೆಯದೆ,
ಲೋಕದ ಜಡಜೀವಿಯಂತೆ ಪಂಚಮಹಾಪಾತಕಂಗಳಲ್ಲಿ
ವರ್ತಿಸುವುದ ಕಂಡು ಅದ ಪರಿಹರಿಸದೆ,
ದ್ರವ್ಯದಬಿಲಾಷೆಯಿಂದ ತ್ರಿವಿಧದೀಕ್ಷೆಯ ಮಾಡುವನೊಬ್ಬ ಗುರು
ಹುಟ್ಟಂಧಕನೆಂಬೆನಯ್ಯಾ.
ಅಂತಪ್ಪ ಪರಮಪಾತಕಂಗೆ ಜಪವ ಹೇಳಿ,
ಪಾದೋದಕದಲ್ಲೇಕಭಾಜನವ ಮಾಡಿ, ಪ್ರಸಾದವ ಕೊಟ್ಟು,
ಷಟ್ಸ್ಥಲವ ಹೇಳುವನೊಬ್ಬ ಜಂಗಮ
ಕೆಟ್ಟಗಣ್ಣವನೆಂಬೆನಯ್ಯಾ.
ಇಂತೀ ಅಧಮ ಗುರುಶಿಷ್ಯಜಂಗಮಕ್ಕೆ
ಭವಬಂಧನ ತಪ್ಪದು ನೋಡಾ,
ಶಂಭುಕೇಶ್ವರದೇವಾ,
ನೀನೊಲಿಯದೆ ಕೆಟ್ಟಿತ್ತೀ ಜಗವೆಲ್ಲ./3
ಅಯ್ಯಾ, ಮಹಾಲಿಂಗೈಕ್ಯಾನುಭಾವಿಯೆಂದ್ಬು
ಪೂರ್ವಾರ್ಜಿತವನುಂಡಡೆ ಭಂಗದ
ಹರಶರಣೆಂದು ಭವಮಾಲೆಗೆ ಒಳಗಾದಡೆ ಭಂಗ.
ಹರವಶವೆನಿಸಿ ವಿಧಿವಶವೆನಿಸಿದಡೆ ಅದು ನಿಮಗೆ ಭಂಗ
ಕಾಣಾ ಶಂಭುಜಕ್ಕೇಶ್ವರಾ./4
ಅರ್ಚನೆ ಪೂಜನೆ ನೇಮವಲ್ಲ;
ಮಂತ್ರತಂತ್ರ ನೇಮವಲ್ಲ;
ಧೂಪ ದೀಪಾರತಿ ನೇಮವಲ್ಲ;
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೆ ನೇಮ.
ಶಂಭುಜಕ್ಕೇಶ್ವರನಲ್ಲಿ ಇವು ಕಾಣಿರಣ್ಣಾ ನಿತ್ಯನೇಮ/5
ಆದಿಯಲ್ಲಿ ದೇವಾ, ನಿಮ್ಮನಾರು ಬಲ್ಲರು ?
ವೇದಂಗಳು ಮುನ್ನಲತ್ತತ್ತಲರಿಯವು.
ವೇದಿಗಳು ಪರಬ್ರಹ್ಮವೆಂದೆಂಬರು.
ನಾದ ಬಿಂದು ಕಳಾತೀತನೆಂದೆಂಬರು.
ಸಾಧು ಸಜ್ಜನ ಸದ್ಭಕ್ತರಿಚ್ಫೆಗೆ ಬಂದೆಯಾಗಿ,
ಈಗೀಗ ದೇವನಾದೆ ಶಂಭುಜಕ್ಕೇಶ್ವರಾ./6
ಇನಿಯಂಗೆ ತವಕವಿಲ್ಲ; ಎನಗೆ ಸೈರಣೆಯಿಲ್ಲ.
ಮನದಿಚ್ಫೆಯನರಿವ ಸಖಿಯರಿಲ್ಲ, ಇನ್ನೇವೆನವ್ವಾ ?
ಮನುಮ ಥವೈರಿಯ ಅನುಭಾವದಲ್ಲಿ ರಿನ್ನ ಮನ ಸಿಲುಕಿ ಬಿಡದು,
ಇನ್ನೇನ ಮಾಡುವೆನೆಲೆ ಕರುಣವಿಲ್ಲದ ತಾಯೆ ?
ದಿನ ವೃಥ ಹೋಯಿತ್ತಾಗಿ ಯೌವ್ವನ ಬೀಸರವಾಗದ ಮುನ್ನ
ಪಿನಾಕಿಯ ನೆರಹವ್ವಾ ಶಂಭುಜಕ್ಕೇಶ್ವರನ ?/7
ಉದಕದೊಳಗಣ ಕಿಚ್ಚಿನಂತೆ ಲಿಂಗೈಕ್ಯವು.
ವಾಯುನುಂಗಿದ ಪರಿಮಳದಂತೆ ಲಿಂಗೈಕ್ಯವು.
ಉರಿಯೊಳಡಗಿದ ಕರ್ಪೂರದಂತೆ ಲಿಂಗೈಕ್ಯವು.
ಭಾವವನಡಸಿದ ಬಯಲಿನಂತೆ ಲಿಂಗೈಕ್ಯವು.
ಅರಿವು ನುಂಗಿದ ಮರಹಿನಂತೆ ಲಿಂಗೈಕ್ಯವು.
ಯತೋ ವಾಚೋ ನಿವರ್ತಂತೇ ಅಪ್ರಾಪ್ಯಮನಸಾ ಸಹ್ಳ
ರಿಂದುದಾಗಿ,
ವಾಙ್ಮನಕ್ಕೆ ಅಗೋಚರವಾದ ಮಹಾಶರಣನ ಒಳಗೊಂಡು
ಥಳಥಳಿಸಿ ಬೆಳಬೆಳಗಿ ಹೊಳೆವುತ್ತ,
ನಿಶ್ಶಬ್ದಬ್ರಹ್ಮವಾಗಿರ್ದನಯ್ಯಾ ನಮ್ಮ ಶಂಭುಜಕ್ಕೇಶ್ವರನು./8
ಏಕೆನ್ನ ಬಾರದ ಭವಂಗಳಲ್ಲಿ ಬರಿಸಿದೆ ?
ಏಕೆನ್ನ ಫ್ಸೊರ ಸಂಸಾರದಲ್ಲಿರಿಸಿದೆ ?
ಏಕೆನಗೆ ಕರುಣಿಸಲೊಲ್ಲದೆ ಕಾಡಿಹೆ ?
ಏಕೆ ಹೇಳಾ ಎನ್ನ ಲಿಂಗವೆ ? ಆನುಮಾಡಿದ ತಪ್ಪೇನು ?
ಸಾಕಲಾಗದೆಂದು ಅಕ್ಕೊತ್ತಿ ನೂಕಿದಡೆ
ಏಕೆ ನಾ ನಿಮ್ಮ ಬಿಡುವೆ ಶಂಭುಜಕ್ಕೇಶ್ವರಾ ?/9
ಕಾರಣದಿಂದ ಕಾಯವ ಬಿಟ್ಟಡೆ ಶೋಕವೇಕೆ ?
ಶಿವಭಕ್ತರು ಶಿವಾತ್ಮಸ್ವರೂಪು,
ಎನ್ನವರು ಅನ್ಯರೆಂದುಂಟೆ ?
ಇದು ಗನ್ನದ ಮಾತೆಂದೆ ಶಂಭುಜಕ್ಕೇಶ್ವರಾ./10
ಗಂಡಗಂಡರ ಎದೆಯ ಮೆಟ್ಟಿ ನಡೆವರುಂಟೆ ?
ಗಂಡಗಂಡರ ಚಲ್ಲಣವ ಮಾಡಿ ಉಟ್ಟವರುಂಟೆ ?
ಗಂಡಗಂಡರ ಚರ್ಮವ ಹೊದ್ದವರುಂಟೆ ?
ಗಂಡಗಂಡರ ತೊಟ್ಟವರುಂಟೆ ?
ಗಂಡಗಂಡರ ತುರುಬಿದವರುಂಟೆ ?
ಗಂಡಗಂಡರ ಭಸ್ಮವಮಾಡಿ ಹೂಸಿದವರುಂಟೆ ?
ಗಂಡಗಂಡರಿಗೆ ಗಂಡನ ಕಣ್ಣು ಕಾಲಲ್ಲದೆ.
ಗಂಡಗಂಡರಿಗೆ ಗಂಡನ ಶಿರ ಕರದಲ್ಲದೆ.
ಗಂಡುವೇಷವೆಂಬುದು ನಿಮ್ಮ ಶಕ್ತಿರೂಪು.
ಗಂಡರಿಗೆ ಗಂಡನು ನಡೆಯಿತ್ತೆ ಬಟ್ಟೆ ರಿಂಬುದು ನಿಮಗೆ ಸಂದಿತ್ತು.
ಶಂಭುಜಕ್ಕೇಶ್ವರ ಶರಣ ಜಗದೊಳಗೊಬ್ಬನೆ ಗಂಡನು./11
ಜನನ ಮರಣಂಗಳಲ್ಲಿ ಬರಿಸಬಾರದ ಭಾಷೆ,
ನಿತ್ಯ ನೀನೆಂದು ಮರೆಹೊಕ್ಕ ಕಾರಣ.
ಇಹದಲ್ಲಿ ಪರದಲ್ಲಿ ಇರಿಸಬಾರದ ಭಾಷೆ,
ತನ್ನಲ್ಲಿ ತನಗೆ ವಿವರಣೆ ಇಲ್ಲದ ಕಾರಣ.
ಪುಣ್ಯಪಾಪಂಗಳ ಉಣಿಸಬಾರದ ಭಾಷೆ,
ತನ್ನ ಪಾದೋದಕ ಪ್ರಸಾದಜೀವಿಯಾಗಿ.
ತಾ ಸಹಿತ ನಾನಿಪ್ಪೆ, ನಾ ಸಹಿತ ತಾನಿಪ್ಪ ಕಾರಣ,
ವಂಚನೆ ಬಾರದು ರಿನಗೆ ತನಗೆ.
ಶಂಭುಜಕ್ಕೇಶ್ವರದೇವಾ,
ಸದ್ಗುರು ಅಪ್ಪಣೆಯಿಂದ ನೀನೊಲಿದು ಸಲಹು
ಎನ್ನ ಪ್ರಾಣಲಿಂಗವಾಗಿ./12
ಜಾಣಾನುಭಾವಿಯೆಂಬ ಪಿನಾಕಿಯ ಮಾತ ಕೇಳಿ ಬಂದೆ.
ಹಿರಿದು ಆರತದಿಂದ ಕಾಣಿಸುವನ್ನಕ್ಕರ ತವಕ, ನುಡಿಗೆಡೆಗೊಡನೆಲಗೆ ?
ಪ್ರಾಣಕ್ಕಾಧಾರ ಶಿವಶಿವಾ ರಿಂಬ ಶಬುದ.
ಆತನ ಕಂಡಡೆ ಕಡೆಯದ ಕೀಲು ಕಳೆದಂತೆ
ಶಂಭುಜಕ್ಕೇಶ್ವರನ ಬೆರಸಲೊಡನೆ ಬೆರಗಾದೆನು./13
ತಲೆಯ ಮೇಲೆ ತಲೆಯುಂಟೆ ?ಹಣೆಯಲ್ಲಿ ಕಣ್ಣುಂಟೆ ?
ಗಳದಲ್ಲಿ ವಿಷವುಂಟೆ ? ದೇವರೆಂಬವರಿಗೆಂಟೊಡಲುಂಟೆ ?
ತಂದೆಯಿಲ್ಲದವರುಂಟೆ ? ತಾಯಿಯಿಲ್ಲದವರುಂಟೆ ?
ಎಲವೊ, ನಿನ್ನ ಹಣೆಯಲ್ಲಿ ನೇಸರುಮೂಡದೆ ?
ಶಂಭುಜಕ್ಕೇಶ್ವರನಲ್ಲದೆ ಉಳಿದ ದೈವಂಗಳುಂಟೆ ?/14
ದೇವರದೇವ ನೀನೆಂದೆನಿಸಿಕೊಂಡೆ
ಬಾಣನ ಬಾಗಿಲ ಕಾಯ್ವರೇನಯ್ಯಾ ?
ನಿತ್ಯತೃಪ್ತ ನೀನೆನಿಸಿಕೊಂಡೆದ
ಚೆನ್ನನ ಮನೆಯಲುಂಬರೇನಯ್ಯಾ ?
ಕರುಣಾಕರ ನೀನೆಂದೆನಿಸಿಕೊಂಡೆದ
ಸಿರಿಯಾಳನ ಮಗನ ಬೇಡುವರೇನಯ್ಯಾ ?
ನಿಮ್ಮ ಮಹಿಮೆಯ ನೀವೆ ಬಲ್ಲಿರಿ,
ಎನ್ನನುದ್ಭರಿಸಯ್ಯಾ ಶಂಭುಜಕ್ಕೇಶ್ವರಾ./15
ದೇವರೆಂದು ಅರ್ಚಿಸಿ ಪೂಜಿಸಿ ಭಾವಿಸಿ,
ಮತ್ತೆ ತ್ರಿವಿಧವ ಮುಟ್ಟಿದರೆಂದು
ಕಷ್ಟಗುಣವ ನುಡಿವ ಭಕ್ತಿಹೀನರ ಕಂಡಡೆ
ಅವರನೊಚ್ಚತ ತೊಲಗಬೇಕು ಶಂಭುಜಕ್ಕೇಶ್ವರಾ./16
ನಡೆದವರುಂಟೆ ಕೈಲಾಸಕ್ಕೆ ದಾಳಿಯ ?
ನುಡಿದವರುಂಟೆ ಶಿವಲಾಂಛನಕ್ಕೆ ವೇಳೆಯ ?
ಕುಡಿದವರುಂಟೆ ಕಾಳಕೂಟವಿಷವನಮೃತವ ಮಾಡಿ ?
ಮಡದಿಯ ಜಂಗಮಕ್ಕೆ ಕೊಟ್ಟು ನೋಡಿದವರುಂಟೆ ?
ಹಡೆದ ಮಕ್ಕಳ ಕೊಂದು ಜಂಗಮಕ್ಕೆ ಉಣಲಿಕ್ಕಿದರುಂಟೆ ?
ನೀವು ಕೊಡುವುದು ಕೌತುಕವಲ್ಲ ?
ಶಂಭುಜಕ್ಕೇಶ್ವರಾ,
ಎನ್ನೊಡೆಯನ ಸಾತ್ವಿಕ ಸದ್ಭಕ್ತರ ಮಹಿಮೆಗೆ
ನಾನು ನಮೋ ನಮೋ ರಿಂಬೆನು./17
ಭಕ್ತರಿಗೆ ಅಕ್ಕೆ ಶೋಕ ದುಃಖವುಂಟೆ ಅಯ್ಯಾ ?
ಅತ್ತು ಕಳೆವ ನೋವ ಹಾಡಿ ಕಳೆಯಲೇಕಯ್ಯಾ ?
ಈ ಮುಕ್ತಾಯಕ್ಕಗಳ ಕಕ್ಕುಲತೆಯ ಶಂಭುಜಕ್ಕೇಶ್ವರನ ಶರಣರೊಪ್ಪರಯ್ಯಾ./18
ಭವಿಯ ಬೆರಸಿದ ಭಕ್ತಿ, ಹವಿಯ ಬೆರಸಿದ ಬೀಜ,
ಉದಕ ಬೆರಸಿದ ಎಣ್ಣೆ ಜ್ಯೋತಿ ಪ್ರಜ್ವಲಿಸುವುದೆ ?
ಭವಿಯಲ್ಲ ಭಕ್ತನಲ್ಲ, ಹವಿಯಲ್ಲ ಬೀಜವಲ್ಲ, ಉದಕವಲ್ಲ ಎಣ್ಣೆಯಲ್ಲ
ಒಡಲಿಚ್ಫೆಗೆ ಹೋಗಿ ಭವಿಯ ಮನೆಗೆ ತುತ್ತಿಡುವ
ನರಕಿಗಳಿಗೇಕೊಲಿವ ನಮ್ಮ ಶಂಭುಜಕ್ಕೇಶ್ವರನು ? /19
ಭಾವನೇಕೆ ಬಾರನೆನ್ನ ಮನೆಗೆ ?
ಹರಿಯಮಗನನುರುಹಿದ ಗರುವದ ಭಾವನೇಕೆ ಬಾರನೆನ್ನ ಮನೆಗೆ ?
ಅಸುರರ ಪುರವ ಸುಟ್ಟ ವೀರಭಾವನೇಕೆ ಬಾರನೆನ್ನ ಮನೆಗೆ ?
ದಕ್ಷನ ಶಿರವನರಿದು, ಯಾಗವ ಕೆಡಿಸಿ ಕುರಿದಲೆಯ ಹತ್ತಿಸಿ
ಬಿನ್ನಾಣದ ಬಲುಹ ಮೆರೆವ ಏಕೋಭಾವನೇಕೆ ಬಾರನೆನ್ನ ಮನೆಗೆ ?
ಹರಿಯ ನಯನದ ಪೂಜೆ ಚರಣದಲೊಪ್ಪಿತ್ತೆಂಬ
ದುರುಳತನವು ತನಗೆ ಬೇಡವ್ವಾ.
ಪರವಧುವಿಂಗಳುಪಿ ಇಲ್ಲವೆಂಬ ವಿಗಡತನದ ದುರುಳತನ ಬೇಡವ್ವಾ.
ಆತನ ಕರೆದು ತಾರವ್ವಾ, ಶಂಭುಜಕ್ಕೇಶ್ವರನ ನೆರೆದು ನೋಡುವೆನು./20
ಮಂತ್ರ ಬಿನ್ನವಾಯಿತ್ತೆಂದು ಕಂಥೆಯ ಬಿಡುವರೆ ಅರಿವುಳ್ಳವರು ?
ಅದು ದ್ವೇಷವಲ್ಲದೆ ಅರಿವಿಂಗೆ ಸಂಬಂಧವಲ್ಲ.
ಮಂತ್ರಮಧ್ಯೇ ಭವೇಲ್ಲಿಂಗಂ ಲಿಂಗಮಧ್ಯೇ ಭವೇನ್ಮಂತ್ರಂ
ಮಂತ್ರಲಿಂಗದ್ವಯೋರೈಕ್ಯಂ ಇಷ್ಟಲಿಂಗಂತು ಶಾಂಕರಿ || ‘
ಎಂದುದಾಗಿ,
ಆ ಮಂತ್ರ ಸರ್ವರ ಆಧಾರ, ಸರ್ವರ ಆತ್ಮಬೀಜವೆಂದರಿಯದೆ
ಕೇಸರಿಯ ಕನಸ ಕಂಡ ವಾರಣದಂತೆ,
ಈ ಭಾಷೆಹೀನರಿಗೇಕೆ ಶಂಭುಜಕ್ಕೇಶ್ವರನು ?/21
ಮಚ್ಚಿ ಗ್ರಾಹಿಗೊಂಡೆನು ನಿಮಗಾನು,
ನಲ್ಲನೆ, ಒಚ್ಚತವೋದವಳನುಳಿವರೆ ?
ವಿಕಳಗೊಂಡೆನು ಶಿವಶಿವಾ,
ಪ್ರಾಣಪದವಲ್ಲದೆ ಮತ್ತೊಂದನರಿಯೆನು
ಮನ ವಚನ ಕಾಯದಲ್ಲಿ.
ಉಚಿತವೆ ನಿಮಗೆ ?ಪುರುಷಲಕ್ಷಣವೆ ?
ಅತಃಪರಗಂಡರ ನಾನು ಬಲ್ಲಡೆ ಕರ್ತು
ನಿಮ್ಮಾಣೆಯಯ್ಯಾ ಶಂಭುಜಕ್ಕೇಶ್ವರಾ./22
ಮೊಲೆ ಮುಡಿ ಇದ್ದುದೆ ಹೆಣ್ಣೆಂದು ಪ್ರಮಾಣಿಸಲಿಲ್ಲ.
ಕಾಸೆ ಮೀಸೆ ಕಠಾರವಿದ್ದುದೆ ಗಂಡೆಂದು ಪ್ರಮಾಣಿಸಲಿಲ್ಲ.
ಅದು ಜಗದ ಹಾಹೆದ ಬಲ್ಲವರ ನೀತಿಯಲ್ಲ.
ಏತರ ಹಣ್ಣಾದಡೂ ಮಧುರವೆ ಕಾರಣ,
ಅಂದವಿಲ್ಲದ ಕುಸುಮಕ್ಕೆ ವಾಸನೆಯೆ ಕಾರಣ.
ಇದರಂದವ ನೀನೇ ಬಲ್ಲೆ ಶಂಭುಜಕ್ಕೇಶ್ವರಾ./23
ಲಂಚವಂಚನಕ್ಕೆ ಕೈಯಾನದಭಾಷೆ.
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮ ಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಬಿಕ್ಷದಲ್ಲಿಪ್ಪೆನಾಗಿ.
ಇಂತಲ್ಲದೆ ನಾನು ಅಳಿಮನವ ಮಾಡಿ
ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ./24
ವಿಶ್ವಾಸದಿಂದ ನಂಬಿದರಯ್ಯಾ ಬಿಲ್ಲಮರಾಯನವರು.
ವಿಶ್ವಾಸದಿಂದ ನಂಬಿದರಯ್ಯಾ ಗೊಲ್ಲಾಳರಾಯನವರು.
ವಿಶ್ವಾಸದಿಂದ ನಂಬಿದರಯ್ಯಾ ಕೆಂಭಾವಿಯ ಭೋಗಣ್ಣನವರು.
ವಿಶ್ವಾಸದಿಂದ ನಂಬಿದರಯ್ಯಾ ಬಳ್ಳೇಶ್ವರಮಲ್ಲಯ್ಯಗಳು.
ವಿಶ್ವಾಸದಿಂದ ನಂಬಿದರಯ್ಯಾ ಸಾಮವೇದಿಗಳು.
ವಿಶ್ವಾಸದಿಂದ ನಂಬಿದರಯ್ಯಾ ದಾಸದುಗ್ಗಳೆಯವರು.
ವಿಶ್ವಾಸದಿಂದ ನಂಬಿದರಯ್ಯಾ ಸಿರಿಯಾಳಚಂಗಳೆಯವರು.
ವಿಶ್ವಾಸದಿಂದ ನಂಬಿದರಯ್ಯಾ ಸಿಂಧುಬಲ್ಲಾಳನವರು.
ವಿಶ್ವಾಸದಿಂದ ನಂಬಿದರಯ್ಯಾ ಬಿಬ್ಬಿಬಾಚಯ್ಯಗಳು.
ವಿಶ್ವಾಸದಿಂದ ನಂಬಿದರಯ್ಯಾ ಮರುಳಶಂಕರದೇವರು.
ಇಂತಪ್ಪ ವಿಶ್ವಾಸಿಗಳ ಶ್ರೀಪಾದಕ್ಕೆ ನಮೋ ನಮೋ
ಎನುತಿರ್ದೆನಯ್ಯಾ ಶಂಭುಜಕ್ಕೇಶ್ವರಾ./25
ಹಿರಿಯತನಕ್ಕೆ ಪಥವೆ,
ಬಾಣನ ಮನೆಯ ಬಾಗಿಲ ಕಾಯ್ವುದು ?
ಮಹಂತತನಕ್ಕೆ ಪಥವೆ,
ನಂಬಿಗೆ ಕುಂಟಣಿಯಾದುದು ?
ಕರುಣಿತನಕ್ಕೆ ಪಥವೆ,
ಸಿರಿಯಾಳನ ಮಗನ ಕೊಲುವುದು ?
ದಾನಿತನಕ್ಕೆ ಪಥವೆ,
ದಾಸನ ವಸ್ತ್ರವ ಸೀಳುವುದು ?
ನಿಮ್ಮ ಹಿರಿಯತನಕ್ಕಿದು ಪಥವೆ,
ಬಲ್ಲಾಳನ ವಧುವ ಬೇಡುವುದು ?
ನಿಮ್ಮ ಗುರುತನಕ್ಕಿದು ಪಥವೆ,
ನಾರಿಯರಿಬ್ಬರೊಡನೆ ಇಪ್ಪುದು ?
ಶಿವಶಿವಾ ನಿಮ್ಮ ನಡವಳಿ ?
ಶಂಭುಜಕ್ಕೇಶ್ವರಾ, ಅಲ್ಲದಿರ್ದಡೇಕೆ
ಶ್ರುತಿಗಳ ಕೈಯಿಂದತ್ತತ್ತಲೆನಿಸಿಕೊಂಬೆ ?/26
ಹೊರಗಿದ್ದಹನೆಂದು ನಾನು ಮರೆದು ಮಾತನಾಡಿದೆ;
ಅರಿಯಲೀಯದೆ ಬಂದೆನ್ನ ಅಂತರಂಗದಲ್ಲಿಪ್ಪನು.
ತೆರಹಿಲ್ಲದಭವ ನುಡಿಗೆಡೆಗೊಡನುದ
ಆತನ ಬಯಲಿಂಗೆ ಬೇಟಗೊಂಡೆನವ್ವಾ.
ನಾನೇನ ಮಾಡುವೆನೆಲೆ ತಾಯೆ,
ಮರೆದಡೆ ರಿಚ್ಚರಿಸುವ ಕುರುಹಿಲ್ಲದ ಗಂಡನು.
ತನ್ನನರಿದಡೆ ಒಳ್ಳಿದನವ್ವಾ ನಮ್ಮ ಶಂಭುಜಕ್ಕೇಶ್ವರನು./27