ಪ್ರಮುಖ ಘಟನಾವಳಿಗಳು:

 • 1648: ಅಮೇರಿಕಾದ ಮೊದಲ ಕಾರ್ಮಿಕ ಸಂಘಟನೆ ರೂಪಗೊಂಡಿತು.

 • 1878: ಎಡಿಸನ್ ಅವರು ಗೃಹ ಬಳಕೆಗೆ ವಿದ್ಯುತ್ ಶಕ್ತಿ ಲಭ್ಯವಾಗುವಂತೆ ಮಾಡಿದರು.

 • 1922: ಬ್ರಿಟಿಷ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ರೂಪಿಸಲಾಯಿತು.

 • 1954: ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮೂಲಕ ಮೊದಲ ಟ್ರಾನ್ಸಿಸ್ಟರ್ ರೇಡಿಯೋದ ಬಗ್ಗೆ ಘೋಷಿಸಿದರು.

 • 1955: ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪ್ರೋಟಾನ್ ವಿರೋಧಿಯನ್ನು ಕಂಡುಹಿಡಿದರು.

 • 1967: ವಾಲ್ಟ್ ಡಿಸ್ನಿ ಅವರ “ಜಂಗಲ್ ಬುಕ್” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

 • 1969: ಅಮೇರಿಕಾದ ಸರ್ಕಾರವು ಕೃತಕ ಸಿಹಿಕಾರಕಗಳನ್ನು ನಿಷೇಧಿಸಿತು.

 • 2004: ಭಾರತದ ದರೋಡೆಕೋರ ಮತ್ತು ಕಳ್ಳಸಾಗಾಣೆಕಾರ ವೀರಪ್ಪನ್ ಹತ್ಯೆ ಮಾಡಲಾಯಿತು.

 • 2006: ಮೈಕ್ರೋಸಾಫ್ಟ್ ಇಂಟರ್ನೆಟ್ ಎಕ್ಸ್ಪ್ಲೋರರ್ 7.0 ತಂತ್ರಾಂಶವನ್ನು ಬಿಡುಗಡೆ ಮಾಡಿತು.

ಪ್ರಮುಖ ಜನನ/ಮರಣ:

 • 1944: ವಸತಿ ಅಭಿವೃದ್ಧಿ ಹಣಕಾಸು ನಿಗಮದ ಅಧ್ಯಕ್ಷರಾದ ದೀಪಕ್ ಪಾರೆಖ್ ಜನಿಸಿದರು.

 • 1950: ಖ್ಯಾತ ಖಳ ನಟ ಓಂ ಪುರಿ ಜನಿಸಿದರು.

 • 1965: ಇಸ್ಲಾಮಿಕ್ ರಿಸರ್ಚ್ ಫೌಂಡೇಷನ್ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಜಾಕಿರ್ ನಾಯಕ್ ಜನಿಸಿದರು.

 • 1974: ಲೇಖಕ ಅಮಿಶ್ ತ್ರಿಪಾಟಿ ಜನಿಸಿದರು.

 • 1976: ಭಾರತದ ಕವಿ, ಲೇಖಕ ವಿಶ್ವನಾಥ ಸತ್ಯನಾರಾಯಣ ನಿಧನರಾದರು.

 • 1977: ಭಾರತದ ಹಿಂದಿ ಚಿತ್ರರಂಗದ ನಟ ಕುನಾಲ್ ಕಪೂರ್ ಜನಿಸಿದರು.

 • 1978: ತಮಿಳು ಚಿತ್ರರಂಗದ ಖ್ಯಾತ ನಟಿ ಜ್ಯೋತಿಕಾ ಜನಿಸಿದರು.

 • 1983: ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿಜಯ್ ಮಂಜ್ರೇಕರ್ ನಿಧನರಾದರು.