Categories
e-ದಿನ

ಅಕ್ಟೋಬರ್-20

 

ಪ್ರಮುಖ ಘಟನಾವಳಿಗಳು:

1822: ಲಂಡನ್ ಸಂಡೆ ಟೈಮ್ಸ್ ಮೊದಲ ಸಂಚಿಕೆ ಮುದ್ರಿಸಲಾಯಿತು.

1864: ಅಮೇರಿಕ ಅಧ್ಯಕ್ಷ ಲಿಂಕನ್ ಅಧಿಕೃತವಾಗಿ ಥ್ಯಾಂಕ್ಸ್ ಗಿವಿಂಗ್ ಡೇ ಅನ್ನು ರಾಷ್ಟ್ರೀಯ ರಜಾದಿನವಾಗಿ ಘೋಷಿಸಿದರು.

1906: ಡಾ.ಲೀ ಡೆಫಾರೆಸ್ಟ್ ತನ್ನ ವಿದ್ಯುತ್ ನಿರ್ವಾತ ಕೊಳವೆಯನ್ನು ಪ್ರದರ್ಶಿಸಿದರು.

1960: ಮೊದಲ ಸಂಪೂರ್ಣ ಯಾಂತ್ರಿಕೃತ ಅಂಚೆ ಕಛೇರಿ ಪ್ರಾರಂಭವಾಯಿತು.

1962: ಭಾರತ ಮತ್ತು ಚೀನಾದ ನಡುವೆ ಯುದ್ಧ ಆರಂಭವಾಯಿತು.

1991: ಭಾರತದ ಉತ್ತರ ಕಾಶಿಯಲ್ಲಿ ಭೂಕಂಪದ ಕಾರಣ ಸುಮಾರು 1000 ಮಂದಿ ಮೃತ ಪಟ್ಟರು.

2008: ಭಾರತದ ಕೇಂದ್ರ ಬ್ಯಾಂಕ್ ತನ್ನ ಮರುಖರೀದಿ ದರವನ್ನು ಕಡಿತಗೊಳಿಸಿತು.

ಪ್ರಮುಖ ಜನನ/ಮರಣ:

1920: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಆಗಿದ್ದ ಸಿದ್ದಾರ್ಥ ಶಂಕರ್ ರೇ ಜನಿಸಿದರು.

1923: ಕೇರಳಾದ ಮಾಜಿ ಮುಖ್ಯ ಮಂತ್ರಿ ವಿ.ಎಸ್.ಅಚ್ಚುತಾನಂದನ್ ಜನಿಸಿದರು.

1927: ಭಾರತೀಯ ಕವಿ, ವಿಮರ್ಶಕ ಗುಂಟೂರು ಷೇಶೇಂಧ್ರ ಶರ್ಮ ಜನಿಸಿದರು.

1949: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ.ವಿ.ಎನ್.ರಾಜಶೇಖರನ್ ಪಿಳ್ಳೈ ಜನಿಸಿದರು.

1961: ಭಾರತೀಯ ಭೌತಿಕ ಮಾನವಶಾಸ್ತ್ರಜ್ಞ ಬಿರಾಜಾ ಶಂಕರ್ ಗುಹಾ ನಿಧನರಾದರು.

1963: ಭಾರತದ ಮಾಜಿ ಕ್ರಿಕೆಟ್ ಆಟಗಾರ ಮತ್ತು ರಾಜಕಾರಣಿ ನವಜೋತ್ ಸಿಂಗ್ ಸಿದ್ದು ಜನಿಸಿದರು.

1966: ಭಾರತೀಯ ಹಿಂದುಸ್ಥಾನಿ ಸಂಗೀತ ಗಾಯಕ, ರಾಗ ಸಂಯೋಜಕ ಮತ್ತು ತಬಲಾ ವಾದಕ ಬಿಕ್ರಂ ಘೋಷ್ ಜನಿಸಿದರು.

1978: ಭಾರತ ಕ್ರಿಕೆಟ್ ಆಟಗಾರ ವಿರೇಂದ್ರ ಸೇಹ್ವಾಗ್ ಜನಿಸಿದರು.

2008: ಚಿತ್ರಕಥೆಗಾರ ಮತ್ತು ನಿರ್ದೇಶಕ ಸಿ.ವಿ.ಶ್ರೀಧರ್ ನಿಧನರಾದರು.