ಪ್ರಮುಖ ಘಟನಾವಳಿಗಳು:

 • 1863: ಅಬ್ರಹಾಂ ಲಿಂಕನ್ ನವೆಂಬರ್ ತಿಂಗಳ ಕೊನೆಯ ಗುರುವಾರವನ್ನು ಥ್ಯಾಂಕ್ಸ್ ಗಿವಿಂಗ್ ಡೇ ಎಂದು ಹೆಸರಿಸಿದರು.

 • 1872: ನ್ಯೂಯಾರ್ಕಿನಲ್ಲಿ ಬ್ಲೂಮಿಂಗ್ಡೇಲ್ ಡಿಪಾರ್ಟ್ ಮೆಂಟಲ್ ಸ್ಟೋರ್ ತೆರೆಯಲಾಯಿತು.

 • 1899: ಮೋಟಾರು ಚಾಲಿತ ವ್ಯಾಕ್ಯೂಮ್ ಕ್ಲೀನರಿಗೆ ಜೆ.ಎಸ್.ಥರ್ಮನ್ ಪೇಟೆಂಟ್ ಪಡೆದರು.

 • 1913: ಅಮೇರಿಕಾದ ಫೆಡರಲ್ ಆದಾಯ ತೆರಿಗೆ ಕಾನೂನಾಗಿ ಸಹಿ ಮಾಡಲಾಯಿತು.

 • 1922: ರೆಬೆಕ್ಕಾ ಫೆಲ್ಟನ್ ಜಾರ್ಜಿಯಾದ ಮೊದಲ ಮಹಿಳಾ ರಾಷ್ಟ್ರೀಯ ಪರಿಷತ್ತಿನ ಸದಸ್ಯೆಯಾದರು.

 • 1942: ಆರ್ಥಿಕ ಸ್ಥಿರೀಕರಣದ ಕಛೇರಿ ಸ್ಥಾಪಿಸಲಾಯಿತು.

 • 1945: ವಿಶ್ವ ದ ರಾಷ್ಟ್ರಗಳ ಒಕ್ಕೂಟ ರೂಪಿಸಲಾಯಿತು.

 • 1947: ಮೊದಲ 200’’ (508 ಸೆ.ಮೀ) ವ್ಯಾಸದ ಟೆಲಿಸ್ಕೋಪ್ ಲೆನ್ಸ್ ಪೂರ್ಣಗೊಳಿಸಲಾಯಿತು.

 • 1952: ಮ್ಯಾಗ್ನೆಟಿಕ್ ಟೇಪಿನಲ್ಲಿ ಮೊದಲ ವೀಡಿಯೋ ರೆಕಾರ್ಡಿಂಗ್ ಮಾಡಲಾಯಿತು.

 • 1977: ಇಂದಿರಾ ಗಾಂಧಿಯವರನ್ನು ಅಪಾದನೆಗಳ ಹಿನ್ನೆಲೆಯಲ್ಲಿ ಬಂಧಿಸಲಾಯಿತು.

 • 1992: ಪದ್ಮಶ್ರೀ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಾದ ಗೀತ್ ಶ್ರೀರಾಮ್ ಸೇಥಿ ಅವರು ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಶಿಪ್ ಪ್ರಶಸ್ತಿ ಗಳಿಸಿದರು.

ಪ್ರಮುಖ ಜನನ/ಮರಣ:

 • 1838: ಬಂಗಾಲದ ನವಾಬರಾಗಿದ್ದ ಮುಬಾರಕ್ ಅಲಿ ಖಾನ್ II ನಿಧನರಾದರು.

 • 1923: ದಕ್ಷಿಣ ಏಷಿಯಾದ ಯುರೋಪಿಯನ್ ಔಷಧದಲ್ಲಿ ತರಬೇತಿ ಪಡೆದ ಮೊದಲ ಮಹಿಳಾ ವೈದ್ಯ ಕದಂಬಿನಿ ಗಂಗೂಲಿ ನಿಧನರಾದರು.

 • 1935: ಖ್ಯಾತ ಜಾನಪದ ಗಾಯಕಿ ಪ್ರಥಿಮಾ ಬರುವಾ ಪಾಂಡೆ ಜನಿಸಿದರು.

 • 1944: ಹಿಮಾಚಲ ಪ್ರದೇಶದ ವಿದೇಶಾಂಗ ವ್ಯವಹಾರಗಳ ಸಚಿವೆ ಪ್ರಿಣೀತ್ ಕೌರ್ ಜನಿಸಿದರು.

 • 1949: ಭಾರತೀಯ ಚಿತ್ರ ನಿರ್ದೇಶಕ, ನಿರ್ಮಾಪಕ ಮತ್ತು ಚಿತ್ರಕಥೆಕಾರ ಜೆ.ಪಿ.ದತ್ತಾ ಜನಿಸಿದರು.

 • 1961: ಬಹುಜನ ವಿಕಾಸ್ ಆಘಾಡಿ ಅಧ್ಯಕ್ಷರು ಮಹಾರಾಷ್ಟ್ರದ ವಾಸಿ-ವಿರಾರ್ ಪ್ರದೇಶದಲ್ಲಿ ರಾಜಕೀಯ ಪಕ್ಷದ ಅಧ್ಯಕ್ಷ ಹಿತೇಂದ್ರ ಠಾಕುರ್ ಜನಿಸಿದರು.

 • 1994: ಭಾರತೀಯ ಕ್ರಿಕೆಟ್ ಆಟಗಾರ ಜೊಗಿಂದರ್ ಸಿಂಗ್ ರಾವ್ ನಿಧನರಾದರು.