Categories
e-ದಿನ

ಅಕ್ಟೋಬರ್-30

 

ಪ್ರಮುಖ ಘಟನಾವಳಿಗಳು:

1493: ಕ್ರಿಸ್ಟೊಫರ್ ಕೊಲಂಬಸ್ ಡೊಮಿನಿಕಾ ದ್ವೀಪವನ್ನು ಕಂಡುಹಿಡಿದರು.

1862: ಡಾ.ರಿಚರ್ಡ್ ಗೇಟ್ಲಿಂಗ್ ಮಶಿನ್ ಗನ್ನಿಗಾಗಿ ಪೇಟೆಂಟ್ ಪಡೆದರು.

1888: ಬಾಲ್ ಪಾಯಿಂಟ್ ಪೆನ್ನಿಗಾಗಿ ಜಾನ್ ಜೆ ಲೌಡ್ ಪೇಟೆಂಟ್ ಪಡೆದರು.

1894: ಡೇನಿಯಲ್ ಕೂಪರ್ ಸಮಯ ಗಡಿಯಾರಕ್ಕಾಗಿ ಪೇಟೆಂಟ್ ಪಡೆದರು.

1894: ಡೊಮೊನಿಕೋ ಮೆಲೆಗಟ್ಟಿ ಪಾಂಡೋರೋ (ಸಾಂಪ್ರದಾಯಿಕ ಇಟಲಿಯ ಸಿಹಿ ಯೀಸ್ಟ್ ಬ್ರೆಡ್) ಕೈಗಾರಿಕಾ ಉತ್ಪಾದನೆಯಲ್ಲಿ ಅನ್ವಯಿಸುವ ಪ್ರಕ್ರಿಯೆಗಾಗಿ ಪೇಟೆಂಟ್ ಪಡೆದರು.

1918: ಸ್ಲೊವಾಕಿಯಾ ಜೆಕಸ್ಲೋವಾಕಿಯಾ ರಾಜ್ಯದ ರಚನೆಗಾಗಿ ಕೇಳಿತು.

1947: ಜೆನಿವಾದಲ್ಲಿ 23 ರಾಷ್ಟ್ರಗಳು GATT ಒಪ್ಪಂದಕ್ಕೆ ಸಹಿ ಹಾಕಿದವು.

1952: ಮೊದಲ ಬಾರಿಗೆ ಹೆಪ್ಪುಗಟ್ಟಿದ ಬಟಾಣಿಯನ್ನು ಕ್ಲಾರೆನ್ಸ್ ಬರ್ಡ್ಸ್ ಐ ಮಾರಾಟ ಮಾಡಿದರು.

1960: ಮೈಖೆಲ್ ವುಡ್ರಫ್ ಮೊದಲ ಯಶಸ್ವಿ ಮೂತ್ರಪಿಂಡ ಕಸಿ ಶಸ್ತ್ರಚಿಕತ್ಸೆಯನ್ನು ನಿರ್ವಹಿಸಿದರು.

1961: ಸೋವಿಯತ್ ಒಕ್ಕೂಟವು ವಿಶ್ವದ ಅತಿ ದೊಡ್ಡ ಬಾಂಬ್ (ಸುಮಾರು 4000 ಪಟ್ಟು ಹೆಚ್ಚು ಶಕ್ತಿಯುಳ್ಳ) ಅನ್ನು ಸ್ಪೋಟಿಸಿತು.

1994: ಅಮೇರಿಕಾದ ಭಾರತೀಯರ ರಾಷ್ಟ್ರೀಯ ವಸ್ತುಸಂಗ್ರಹಾಲಯ ನ್ಯೂಯಾರ್ಕಿನಲ್ಲಿ ತೆರೆಯಲಾಯಿತು.

ಪ್ರಮುಖ ಜನನ/ಮರಣ:

1883: ಖ್ಯಾತ ವಿದ್ವಾಂತ ಮತ್ತು ತತ್ವಜ್ಞಾನಿ ದಯಾನಂದ ಸರಸ್ವತಿ ನಿಧನರಾದರು.

1887: ಭಾರತೀಯ ಲೇಖಕ, ಕವಿ, ಚಿತ್ರಕಥೆಗಾರ ಸುಕುಮಾರ್ ರೇ ಜನಿಸಿದರು.

1909: ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಭಾಬಾ ಜನಿಸಿದರು.

1932: ಇತಿಹಾಸಕಾರ ಮತ್ತು ಲೇಖಕ ವರುಣ್ ಡೇ ಜನಿಸಿದರು.

1949: ಖ್ಯಾತ ರಾಜಕಾರಣಿ ಪ್ರಮೋದ್ ಮಹಾಜನ್ ಜನಿಸಿದರು.

1951: ಭಾರತೀಯ ಡ್ರಮ್ ವಾದಕ ಮತ್ತು ಗೀತರಚನೆಕಾರ ತ್ರಿಲೋಕ್ ಗುರ್ತು ಜನಿಸಿದರು.

1958: ಖ್ಯಾತ ಹಿಂದಿ ಚಲನಚಿತ್ರ ಹಿನ್ನೆಲೆ ಗಾಯಕ ಅಭಿಜಿತ್ ಭಟ್ಟಾಚಾರ್ಯ ಜನಿಸಿದರು.

1990: ನಟ, ನಿರ್ದೇಶಕ, ನಿರ್ಮಾಪಕ ವಿ.ಶಾಂತಾರಾಂ ನಿಧನರಾದರು.

2005: ಭಾರತದ ರಾಜಕಾರಣಿ ಶಮ್ಶೇರ್ ಸಿಂಗ್ ನಿಧನರಾದರು.