ಪ್ರಮುಖ ಘಟನಾವಳಿಗಳು:

 • 1815: ಸರ್ ಹಮ್ಫ್ರೀ ಡೇವಿ ಅವರು ಗಣಿಕಾರರ ಸುರಕ್ಷತಾ ದೇಪಕ್ಕೆ ಪೇಟೆಂಟ್ ಪಡೆದರು.

 • 1868: ಅಂಚೆಗಳನ್ನು ಹೊತ್ತೊಯ್ಯುವ ಅಂಚೆಯವರಿಗೆ ಸಮವಸ್ತ್ರವನ್ನು ನೀಡಲು ಅನುಮೋದಿಸಲಾಯಿತು.

 • 1876: ಭಾರತದಲ್ಲಿ ಭೀಕರ ಚಂಡಮಾರುತ ಆವರಿಸಿದ ಕಾರಣ 2,00,000 ಮಂದಿ ಮೃತಪಟ್ಟರು.

 • 1888: ನ್ಯುಮಾಟಿಕ್ ಬೈಸೈಕಲ್ ಟೈಯರಿಗೆ ಜಾನ್ ಬಾಯ್ಡ್ ಡನ್ಲಾಪ್ ಪೇಟೆಂಟ್ ಪಡೆದರು.

 • 1941: ಮೌಂಟ್ ರಶ್ಮೋರ್ ಶಿಲೆಯನ್ನು ಪೂರ್ಣಗೊಳಿಸಲಾಯಿತು. ಗುಟ್ಜನ್ ಬೋರ್ಗಲ್ಲಂ ಮತ್ತು 400 ಇತರ ಶಿಲ್ಪಿಗಳು ಸೇರಿ 60 ಅಡಿ ಎತ್ತರದ ಕೆತ್ತನೆಯನ್ನು ಕೆತ್ತಲಾಯಿತು.

 • 1969: ವಾಲ್-ಮಾರ್ಟ್ ಡಿಸ್ಕೌಂಟ್ ನಗರದ ಕಿರಾನ ಅಂಗಡಿಯನ್ನು ವಾಲ್-ಮಾರ್ಟ್ ಸ್ಟೋರ್ಸ್ ಎಂದು ಸ್ಥಾಪಿಸಲಾಯಿತು.

 • 1984: ಪ್ರಧಾನ ಮಂತ್ರಿ ಆಗಿದ್ದ ಇಂದಿರಾ ಗಾಂಧಿ ಅವರನ್ನ ಹತ್ಯೆ ಮಾಡಲಾಯಿತು.

ಪ್ರಮುಖ ಜನನ/ಮರಣ:

 • 1875: ಭಾರತದ ಮೊದಲ ಉಪ ಪ್ರಧಾನ ಮಂತ್ರಿ ಆಗಿದ್ದ ಸರ್ದಾರ್ ವಲ್ಲಭಾಯ್ ಪಟೇಲ್ ಜನಿಸಿದರು.

 • 1929: ಖ್ಯಾತ ತಮಿಳು ಚಿತ್ರರಂಗದ ನಿರ್ದೇಶಕ, ನಿರ್ಮಾಪಕ, ಲೇಖಕ ಮತ್ತು ರಾಜಕಾರಣಿ ಮುಕ್ತ ಶ್ರೀನಿವಾಸನ್ ಜನಿಸಿದರು.

 • 1943: ಕೇರಳದ ಮುಖ್ಯಮಂತ್ರಿ ಆಗಿದ್ದ ಒಮ್ಮೆನ್ ಚಾಂಡಿ ಜನಿಸಿದರು.

 • 1943: ಇಸ್ರೋ ಮಾಜಿ ಅಧ್ಯಕ್ಷರು ಮತ್ತು ಭಾರತದ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಜಿ.ಮಾಧವನ್ ನಾಯರ್ ಜನಿಸಿದರು.

 • 1984: ಭಾರತದ ಮೂರನೇ ಪ್ರಧಾನಿ ಆಗಿದ್ದ ಇಂದಿರಾಗಾಂಧಿ ನಿಧನರಾದರು.

 • 1987: ಗಣಿತಶಾಸ್ತ್ರಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞರಾದ ವಿನ್ಯಾಸ ಸಿದ್ಧಾಂತದಲ್ಲಿ ಮತ್ತು ದೋಷ ಸರಿಪಡಿಸುವ ಸಂಕೇತಗಳ ಸಿದ್ಧಾಂತಕ್ಕೆ ಹೆಸರುವಾಸಿಯಾದ ರಾಜಚಂದ್ರ ಬೋಸ್ ನಿಧನರಾದರು.

 • 1998: ಭಾರತೀಯ ಪೌರತ್ವದ ಮೊದಲ ಕಾರ್ಡಿಯೋ-ಥೋರಾಸಿಕ್ ಶಸ್ತ್ರಚಿಕಿತ್ಸಿಕ ಥಾಮಸ್ ನಿಧನರಾದರು.

 • 2005: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಮತ್ತು ಖ್ಯಾತ ಹಿನ್ನೆಲೆ ಗಾಯಕಿ ಪಿ.ಲೀಲಾ ನಿಧನರಾದರು.

 • 2006: ಭಾರತ-ಪಾಕಿಸ್ತಾನದ ಲೇಖಕಿ ಮತ್ತು ಕವಿ ಅಮೃತಾ ಪ್ರೀತಂ ನಿಧನರಾದರು.

 • 2013: ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷರಾಗಿದ್ದ ರಾಧಾ ಬರ್ನಿಯರ್ ನಿಧನರಾದರು.