Categories
e-ದಿನ

ಆಗಸ್ಟ್-10

 

ಪ್ರಮುಖ ಘಟನಾವಳಿಗಳು:

1622: ಜಾನ್ ಮೇಸನ್ ಮತ್ತು ಫರ್ಡಿನಾಂಡೋ ಜಾರ್ಜಸ್ ಮೈನೆ ಪ್ರಾಂಥ್ಯದ ಭೂಸ್ವಾಮ್ಯದ ಹಕ್ಕುಪತ್ರವನ್ನು ಸ್ವೀಕರಿಸಿದರು.

1743: ಹಳೆಯ ದಾಖಲೆಗಳ ಪ್ರಕಾರ ಬಹುಮಾನ ಹೋರಾಟ ನಿಯಮಗಳನ್ನು ರಚಿಸಲಾಯಿತು.

1793: ಲೌವ್ರೆ ಅರಮನೆಯು ಪ್ಯಾರಿಸಿನಲ್ಲಿ “ದಿ ಮ್ಯೂಜಿಯಂ ಸೆಂಟ್ರಲ್ ದೆ ಆರ್ಟ್ಸ್” ಆಗಿ ಅಧಿಕೃತವಾಗಿ ತೆರೆಯಿತು.

1846: ಅಮೇರಿಕಾ ಕಾಯಿದೆ ಮೂಲಕ ವಿಶ್ವದ ಅತಿದೊಡ್ಡ ವಸ್ತುಸಂಗ್ರಹಾಲಯ ಮತ್ತು ಸಂಶೋಧನ ಸಂಕೀರ್ಣ ಸ್ಮಿತ್ಸೋನಿಯನ್ ಸಂಸ್ಥೆಯನ್ನು ಸ್ಥಾಪಿಸಿತು.

1869: ಚಲಿಸುವ ಚಿತ್ರ ಪ್ರಕ್ಷೇಪಕಕ್ಕೆ ಓ.ಬಿ.ಬ್ರೌನ್ ಪೇಟೆಂಟ್ ಪಡೆದರು.

1885: ಲಿಯೋ ಡಫ್ಟ್ ಬ್ಲಾಟಿಮೋರಿನಲ್ಲಿ ಅಮೇರಿಕಾದ ಮೊದಲ ವಾಣಿಜ್ಯವಾಗಿ ವಿದ್ಯುತ್ ಚಾಲಿತ ಸ್ಟ್ರೀಟ್ ಕಾರನ್ನು ತೆರೆದರು.

1889: ತಿರುಪು ಮುಚ್ಚಳಕ್ಕೆ ಡಾನ್ ರೈಲಾಂಡ್ಸ್ ಪೇಟೆಂಟ್ ಪಡೆದರು.

1904: ಜಪಾನ್ ತಂಡವನ್ನು ಪೋರ್ಟ್ ಆರ್ತುರಿನಲ್ಲಿ ರಷ್ಯಾದ ಸೇನೆ ಸೋಲಿಸಿದರು.

1930: ಗುಂಟೂರಿನ ‘ಗಾಂಧಿ ಟೋಪಿ’ ಕೇಸಿನಲ್ಲಿ ಮ್ಯಾಜಿಸ್ಟ್ರೇಟ್ ಗಾಂಧಿಟೋಪಿ ಧರಿಸುವುದನ್ನುಗುಂಟೂರು ಪಟ್ಟಣದ ಐದು ಮೈಲಿ ವ್ಯಾಪ್ತಿಯಲ್ಲಿ ನಿಷೇಧಿಸಲಾಯಿತು.

1949: ಅಮೇರಿಕಾದ ರಾಷ್ಟ್ರೀಯ ಸೇನಾ ಸ್ಥಾಪನೆಯನ್ನು ರಕ್ಷಣಾ ಇಲಾಖೆ ಎಂದು ಮರುನಾಮಕರಣ ಮಾಡಲಾಯಿತು.

1961: ಯೂರೋಪಿಯನ್ ಸಾಮಾನ್ಯ ಮಾರುಕಟ್ಟೆಯ ಸದಸ್ಯತ್ವಕ್ಕೆ ಯುನೈಟೆಡ್ ಕಿಂಗ್ಡಂ ಅರ್ಜಿಯನ್ನು ಹಾಕಿತು.

1982: ಮಹಾರಾಷ್ಟ್ರದಲ್ಲಿ 201 ಹುತಾತ್ಮರ ಸ್ಮಾರಕವನ್ನು ಉದ್ಘಾಟನಾ ಮಾಡಲಾಯಿತು.

1991: ದೆಹಲಿ ವಿಮಾನ ನಿಲ್ದಾಣ ಪೋಲೀಸರು ಸೌಧಿ ಅರೇಬಿಯಾಗೆ ಅಮೀನಾ ಎನ್ನುವ ಅಪ್ರಾಪ್ತವಯಸ್ಕ ಹೆಣ್ಣುಮಗಳ ಕಳ್ಳಸಾಗಾಣಿಕೆ ಮಾಡುವ ಪ್ರಯತ್ನ ತಡೆಹಿಡಿದರು.

ಪ್ರಮುಖ ಜನನ/ಮರಣ:

1775: ನಾರಾಯಣರಾವ್ ಪೇಶ್ವಾ ಜನಿಸಿದರು.

1855: ಕೊಲ್ಲಾಪುರ ಆಸ್ಥಾನದ ಖ್ಯಾತ ಗಾಯಕ ಅಲ್ಲಾದಿಯಾ ಖಾನ್ ಅವರು ಜನಿಸಿದರು.

1894: ಭಾರತದ 4ನೇ ರಾಷ್ಟ್ರಪತಿಯಾಗಿದ್ದ ವಿ.ವಿ.ಗಿರಿ ಜನಿಸಿದರು.

1901: ಶ್ರೇಷ್ಠ ಕವಿ ಮತ್ತು ಶಿಕ್ಷಣ ತಜ್ಞ ನಾರಾಯಣ್ ಪಿಳ್ಳೈ ಗೋಪಾಲ ಪಿಳ್ಳೈ ಕೇರಳದಲ್ಲಿ ಜನಿಸಿದರು.

1927: ಭಾರತದ ಖಗೋಳಶಾಸ್ತ್ರಜ್ಞ ಸಾಹಿತಿ ಮತ್ತು ಉರ್ದು ಕವಿ ಮನಾಲಿ ಕಲ್ಲಟ್ ವೈನು ಬಪ್ಪು ಜನಿಸಿದರು.

1963: ಕುಖ್ಯಾತ ಡಕಾಯಿತೆ ಫೂಲನ್ ದೇವಿ ಉತ್ತರಪ್ರದೇಶದಲ್ಲಿ ಜನಿಸಿದರು.