ಪ್ರಮುಖ ಘಟನಾವಳಿಗಳು:

 • 1820: ಮೊದಲ ಅಮೇರಿಕಾದ ಕಣ್ಣಿನ ಆಸ್ಪತ್ರೆಯಾದ “ನ್ಯೂಯಾರ್ಕ್ ಐ ಇನ್ಫರ್ಮರಿ” ನ್ಯೂಯಾರ್ಕ್ ನಗರದಲ್ಲಿ ತೆರೆಯಲಾಯಿತು.

 • 1880: ಉತ್ತರ ಯೂರೋಪಿನ ಅತೀ ದೊಡ್ಡ ಗೋಥೆಕ್ ಕ್ಯಾಥೆಡ್ರಲ್ ಆದ ಕೊಲೊಗ್ನೆ ಕ್ಯಾಥೆಡ್ರಲ್ ನಿರ್ಮಾಣ ಪೂರ್ಣಗೊಂಡಿತು.

 • 1885: ತುಕ್ಕು ರಹಿತ ಪೇಂಟಿಗಾಗಿ ಜಪಾನಿಗೆ ಮೊದಲ ಪೇಟೆಂಟ್ ನೀಡಲಾಯಿತು.

 • 1893: ಫ್ರಾನ್ಸ್ ದೇಶವು ವಾಹನಗಳ ನೊಂದಣಿ ಮತ್ತು ಚಾಲನಾ ಪರೀಕ್ಷೆಯನ್ನು ಮೊದಲ ಬಾರಿಗೆ ಪರಿಚಯಿಸಿತು.

 • 1894: ಸರ್ ಆಲಿವರ್ ಜೋಸೆಫ್ ಲಾಡ್ಜ್ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಬ್ರಿಟಿಶ್ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್ಮೆಂಟ್ ಆಫ್ ಸೈನ್ಸ್ ಸಭೆಯಲ್ಲಿ ಮೋರ್ಸ್ ಕೋಡ್ ಬಳಸಿ ನಿಸ್ತಂತು ಟೆಲಿಗ್ರಾಫಿ (ರೇಡಿಯೋ) ಪ್ರದರ್ಶಿಸಿದರು.

 • 1900: ಮೊದಲ ವಿದ್ಯುತ್ ಟ್ರಾಂ ನೆದರ್ಲ್ಯಾಂಡಿನಲ್ಲಿ ಆರಂಭವಾಯಿತು.

 • 1908: ಮೊದಲ ಸೌಂದರ್ಯ ಸ್ಪರ್ಧೆಯನ್ನು ಇಂಗ್ಲೆಂಡಿನಲ್ಲಿ ಏರ್ಪಡಿಸಲಾಯಿತು.

 • 1917: ಚೀನಾ ಜರ್ಮನಿ ಮತ್ತು ಆಸ್ಟ್ರಿಯಾದ ಮೇಲೆ ಯುದ್ಧ ಘೋಷಿಸಿತು.

 • 1932: ಫಿಲಿಪ್ಸ್ ಸಂಸ್ಥೆಯು ದಶಲಕ್ಷ ರೇಡಿಯೊ ಉತ್ಪಾದನೆಯನ್ನು ಪೂರೈಸಿದರು.

 • 1935: ಸಾಮಾಜಿಕ ಭದ್ರತಾ ಕಾಯಿದೆಯು ಕಾನೂನಾಗಿ ಅಂಗೀಕಾರವಾಯಿತು.

 • 1937: ಜಪಾನಿನ ಮೇಲೆ ಚೀನಾ ಯುದ್ಧ ಘೋಷಿಸಿತು.

 • 1938: ಬಿಬಿಸಿ ಟೀವಿಯಲ್ಲಿ ಮೊದಲ ಚಲನಚಿತ್ರ (ಪ್ರೇಘ್ ವಿದ್ಯಾರ್ಥಿ) ಪ್ರಸಾರವಾಯಿತು.

 • 1947: ಭಾರತದಿಂದ ಪಾಕಿಸ್ತಾನವನ್ನು ವಿಭಜಿಸಲಾಯಿತು.

 • 1974: ಚಿನ್ನವನ್ನು ಹೊಂದಬಹುದೆಂದು ಅಮೇರಿಕಾ ತನ್ನ ಪ್ರಜೆಗಳಿಗೆ ಅಧಿಕಾರ ನೀಡಿತು.

 • 1984: IBM PC Dos ಆವೃತ್ತಿ 3.0 ಅನ್ನು ಬಿಡಿಗಡೆ ಮಾಡಿತು.

 • 1986: ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿ ಬೆನೆಜಿರ್ ಭುಟ್ಟೋರನ್ನು ಬಂಧಿಸಲಾಯಿತು.

 • 1994: ಬಾಹ್ಯಾಕಾಶದ ದೂರದರ್ಶಕ ಹಬಲ್ ಯುರೇನಸ್ ಗ್ರಹದ ಉಂಗುರಗಳ ಛಾಯಾಚಿತ್ರವನ್ನು ಸೆರೆಹಿಡಿಯಿತು.

 • 1997: ಭಾರತದ ಸ್ವಾತಂತ್ರದ 50 ವರ್ಷಗಳ ಸ್ಮರಣಾರ್ಥವಾಗಿ ಸಂಸತ್ತಿನ ವಿಶೇಷ ಅಧಿವೇಶನವನ್ನು ಮಾಡಲಾಯಿತು.

 • 2015: ನ್ಯೂಯಾರ್ಕಿನ ಯೂನಿವರ್ಸಿಟಿ ಲ್ಯಾಗೋನ್ ಮೆಡಿಕಲ್ ಸೆಂಟರಿನಲ್ಲಿ ಡಾ.ಎಡುರಾಡೋ ರೋಡ್ರಿಗ್ಸ್ ಅವರಿಂದ ಪ್ಯಾಟ್ರಿಕ್ ಹಾರ್ಡಿಸನ್ ಅವರ ಮೇಲೆ ವ್ಯಾಪಕವಾದ ಮುಖದ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಪ್ರಮುಖ ಜನನ/ಮರಣ:

 • 1920: ಏರ್ ಚೀಫ್ ಮಾರ್ಶಲ್ ರುಶಿಕೇಶ್ ಮುಳಗಾಂವಕರ್ ಜನಿಸಿದರು.

 • 1957: ಪ್ರಖ್ಯಾತ ಬಾಲಿವುಡ್ ಹಾಸ್ಯ ನಟ ಜಾನಿ ಲಿವರ್ ಜನಿಸಿದರು.

 • 1968: ಭಾರತೀಯ ಕ್ರಿಕೆಟ್ ತರಬೇತುದಾರ ಮತ್ತು ಆಟಗಾರ ಪ್ರವೀಣ್ ಆಮ್ರೆ ಜನಿಸಿದರು.

 • 1996: ಮುನ್ಶಿ ಪ್ರೇಮಾನಂದ್ ಅವರ ಮಗ ಅಮ್ರಿತ್ ರೈ ನಿಧನರಾದರು.

 • 1998: 1930 ಮತ್ತು 40ರ ದಶಕದಲ್ಲಿ ರೇಡಿಯೋ ಕೇಳುಗರನ್ನು ಮುದಗೊಳಿಸಿದ ಕ್ಲಾಸಿಕಲ್ ಗಾಯಕಿ ಶಮ್ಶಾದ್ ಬೇಗಮ್ ನಿಧನರಾದರು.

 • 2002: ಮಹಾರಾಷ್ಟ್ರದ 14ನೇ ಮುಖ್ಯಮಂತ್ರಿಯಾಗಿದ್ದ ವಿಲಾಸ್ ರಾವ್ ದೇಶಮುಖ್ ನಿಧನರಾದರು.