ಹಿಂದುಳಿದ ವರ್ಗಗಳ ಇಲಾಖೆಯ ಕ್ರಿಯಾಶೀಲ ಅಂಗವೆನಿಸಿದ ಶ್ರೀ ದೇವರಾಜ ಅರಸು ಸಂಶೋಧನಾ ಸಂಸ್ಥೆ ವತಿಯಿಂದ ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳನ್ನು ಕುರಿತ ಅಧ್ಯಯನ ವರದಿಗಳನ್ನು ಸಿದ್ಧಪಡಿಸುತ್ತಿರುವುದು ಆ ಸಮುದಾಯಗಳ ಹಿತದೃಷ್ಟಿಯಿಂದ ಅತ್ಯಂತ ಸ್ತುತ್ಯವಾದ ಕಾರ್ಯ. ಪ್ರಥಮ ಹಂತದಲ್ಲಿ ಐದು ಸಮುದಾಯಗಳ ಅಧ್ಯಯನ ವರದಿ ಸಿದ್ಧಪಡಿಸುವ ಕಾರ್ಯವನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ವಹಿಸಲಾಯಿತು. ಅದರ ಫಲವೇ ಈ ‘ಕುಣಬಿಯರ’ರ ಅಧ್ಯಯನ ವರದಿ. ಈ ಕಾರ್ಯವನ್ನು ನನಗೆ ವಹಿಸಿದ ಕನ್ನಡ ವಿಶ್ವವಿದ್ಯಾಲಯದ ಅಂದಿನ ಮಾನ್ಯ ಕುಲಪತಿಗಳಾದ ಡಾ. ಬಿ. ಎ. ವಿವೇಕ ರೈ ಅವರಿಗೂ ಹಿಂದುಳಿದ ವರ್ಗಗಳ ಇಲಾಖೆಯ ಅಂದಿನ ಆಯುಕ್ತರಾದ ಶ್ರೀ ಮೊನ್ನಪ್ಪ ಅವರಿಗೂ ಶ್ರೀ ದೇವರಾಜ ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಚಂದ್ರಮ್ಮ ಕಣಗಲಿ ಅವರಿಗೂ ಅಧಿಕಾರಿಗಳಾದ ಶ್ರೀ ಕೃಷ್ಣಾ ನಾಯಕ್‌ ಅವರಿಗೂ ನನ್ನ ವಂದನೆಗಳು ಸಲ್ಲುತ್ತವೆ. ಕ್ಷೇತ್ರ ಕಾರ್ಯದ ಸಂದರ್ಭದಲ್ಲಿ ಸಹಕಾರ ನೀಡಿ ಉಪಕರಿಸಿದ ಗ್ರೀನ್‌ ಇಂಡಿಯಾ ಸ್ವಯಂಸೇವಾ ಸಂಸ್ಥೆಯ ನಿರ್ದೇಶಕರಾದ ಶ್ರೀ ಮಹೇಂದ್ರಕುಮಾರ್ ಹಾಗೂ ಕುಣಬಿ ಸಮುದಾಯದ ಯುವ ಕಾರ್ಯಕರ್ತರಾದ ಸುಭಾಷ್‌ ಗಾವಡ, ಸುರೇಶ್‌ ವೆಳಿಪು, ಸುಭಾಷ್‌ ವೆಳಿಪು, ಗಜಾನನ ಮಿರಾಶಿ, ಕಲ್ಪನಾ ಸಿದೇಕರ್ ರಾಜಕುಮಾರ್ ವೆಳಿಪು ಹಾಗೂ ಉತ್ತಮ್‌ ಮಿರಾಶಿ ಮುಂತಾದವರಿಗೆ ನನ್ನ ಕೃತಜ್ಞತೆಗಳು.

ಈ ವರದಿಯನ್ನು ಪ್ರಕಟಿಸುವ ಉತ್ಸಾಹತೋರಿ ಪ್ರಸಾರಾಂಗದ ವತಿಯಿಂದ ಹೊರತರುತ್ತಿರುವ ಕನ್ನಡ ವಿಶ್ವದ್ಯಾಲಯದ ಈಗಿನ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ ಕೃತಜ್ಞತೆಗಳು ಪುಸ್ತಕವನ್ನು ಅಂದವಾಗಿ ಪ್ರಕಟಿಸುತ್ತಿರುವ ಪ್ರಸಾರಾಂಗದ ನಿರ್ದೇಶಕರಿಗೆ ಹಾಗೂ ಸಹಾಯಕ ನಿರ್ದೇಶಕರಾದ ಮಿತ್ರ ಬಿ. ಸುಜ್ಞಾನಮೂರ್ತಿಯವರಿಗೆ ನನ್ನ ವಂದನೆಗಳು ಸಲ್ಲುತ್ತವೆ. ಪುಸ್ತಕದ ಮುಖಪುಟ ವಿನ್ಯಾಸ ಮಾಡಿದ್ದಲ್ಲದೆ ಸುಂದರವಾಗಿ ಮುದ್ರಿಸಿದ ಯಶಸ್ವಿ ಪ್ರಿಂಟ್‌ ಆಡ್ಸ್‌ನ ಬಿ. ಎಲ್‌. ನರಸಿಂಹಮೂರ್ತಿಯವರಿಗೆ ನನ್ನ ವಂದನೆಗಳು.

ಹಿ. ಚಿ. ಬೋರಲಿಂಗಯ್ಯ