ಪ್ರಮುಖ ಘಟನಾವಳಿಗಳು:

 • 1636: ಔರಂಗಜೇಬನನ್ನು ಮುಘಲ್ ಚಕ್ರವರ್ತಿ ಶಹಜಹಾನ್ ಡೆಕನ್ನಿನ ವೈಸರಾಯ್ ಆಗಿ ನೇಮಿಸಿದರು.

 • 1798: ರಾಜ್ಯಗಳು-ವಾಸಸ್ಥಳಗಳು, ಭೂಮಿ ಮತ್ತು ಗುಲಾಮರ ಮೇಲೆ ಮೊದಲ ನೇರ ಅಮೇರಿಕಾ ಸಂಯುಕ್ತ ತೆರಿಗೆ ಹಾಕಲಾಯಿತು.

 • 1832: ಓಪಿಯಂ ಸಂಯುಕ್ತ ಸುಂಕದ ತೆರಿಗೆಯಿಂದ ವಿನಾಯಿತಿ ಪಡೆಯಿತು.

 • 1845: ಮೊದಲ ಪೋಸ್ಟ್ ಮಾಸ್ಟರ್ ತಾತ್ಕಾಲಿಕ ಅಂಚೆಚೀಟಿಗಳನ್ನು ನ್ಯೂಯಾರ್ಕ್ ನಗರದಲ್ಲಿ ವಿತರಿಸಲಾಯಿತು.

 • 1850: ರೆಫ್ರಿಡ್ಜಿರೇಷನ್ನಿನ ಮೂಲಕ ಮಾಡಿದ ಮೊದಲ ಐಸ್(ಮಂಜುಗಡ್ಡೆ)ಯನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇಡಲಾಯಿತು.

 • 1853: ನ್ಯೂಯಾರ್ಕಿನ ಕ್ರಿಸ್ಟಲ್ ಪ್ಯಾಲೇಸಿನಲ್ಲಿ ಮೊದಲ ಅಮೇರಿಕಾದ ಜಾತ್ರೆಯನ್ನು ತೆರೆಯಲಾಯಿತು.

 • 1853: ಅಮೇರಿಕಾ ಅಧ್ಯಕ್ಷ ಫ್ರಾಂಕ್ಲಿನ್ ಪೀಯರ್ಸ್ ಮೊದಲ ಕೈಗಾರಿಕಾ ಸಂಗ್ರಹವರದಿಯನ್ನು ನ್ಯೂಯಾರ್ಕಿನಲ್ಲಿ ತೆರೆದರು.

 • 1853: ನ್ಯೂಜಿಲ್ಯಾಂಡ್ ಮೊದಲ ಸಾರ್ವತ್ರಿಕ ಚುನಾವಣೆಯನ್ನು ನಡೆಸಿತು.

 • 1864: ಮೊಂಟಾನದ ಹೆಲೀನದಲ್ಲಿ ಮೊದಲ ಚಿನ್ನವನ್ನು ಪತ್ತೆ ಮಾಡಲಾಯಿತು.

 • 1868: ಆಲ್ವಿನ್ ಜೆ ಫೆಲ್ಲೋಸ್ ಅಳತೆ ಪಟ್ಟಿಗೆ ಪೇಟೆಂಟ್ ಪಡೆದರು.

 • 1891: ಜಾನ್ ಟಿ ಸ್ಮಿತ್ ಕಾರ್ಕ್ ಬೋರ್ಡಗೆ ಪೇಟೆಂಟ್ ಪಡೆದರು.

 • 1914: ದ್ರವ-ಇಂದನದ ರಾಕೆಟ್ ವಿನ್ಯಾಸಕ್ಕೆ ರಾಬರ್ಟ್ ಗೊಡಾರ್ಡ್ ಅವರಿಗೆ ಪೇಟೆಂಟ್ ನೀಡಲಾಯಿತು.

 • 1927: ಮೊದಲ ವಾಣಿಜ್ಯ ವಿಮಾನವನ್ನು ಹವಾಯಿಯಲ್ಲಿ ಆರಂಭಿಸಲಾಯಿತು.

 • 1946: ಭಾರತ ಸಿಯಾಮಿಗೆ 20 ವರ್ಷ, 3 ಮಿಲಿಯನ್ ಅನುದಾನವನ್ನು ಸಿಯಾಮಿ ಅಕ್ಕಿ ರಫ್ತು ಹೆಚ್ಚಿಸಲು ಕ್ರೆಡಿಟ್ ನೀಡಿತ್ತು.

 • 1951: ಜಾರ್ಜ್ ವಾಷಿಂಗ್ಟನ್ ಕಾರ್ವರ್ ಸ್ಮಾರಕವನ್ನು ಉದ್ಗಾಟಿಸಲಾಯಿತು.

 • 1969: ಜೈಪುರದ ಬಳಿ ಪ್ಯಾಸೆಂಜರ್ ರೈಲಿಗೆ ಸರಕು ರೈಲು ಡಿಕ್ಕಿಹೊಡೆದ ಪರಿಣಾಮ 85 ಮಂದಿ ಮೃತಪಟ್ಟರು.

 • 1987: ತೈವಾನ್ 37 ವರ್ಷದ ಸಮರ ಕಾನೂನನ್ನು ಮುಕ್ತಾಯಗೊಳ್ಳಿಸಿತು.

 • 1993: ಏರೋಫ್ಲೋಟ್ ಮಾಸ್ಕೋ ಮತ್ತು ನ್ಯೂಯಾರ್ಕ್ ನಡುವೆ ತಡೆರಹಿತ ವಿಮಾನ ಸೇವೆಯನ್ನು ಆರಂಭಿಸಿತು.

 • 1994: ಮಿಲಾನಿನ ಒಂದು ವೃದ್ದಾಶ್ರಮದಲ್ಲಿ ಅನಿಲ ಸ್ಫೋಟಗೊಂಡು 27 ಮಂದಿ ಮೃತರಾದರು.

 • 1998: ಬೌದ್ಧಿಕ ಹಕ್ಕುಗಳಿಗೆ ಸಂಭಂದಿಸಿದಂತೆ ಮಾಹಿತಿ ತಂತ್ರಜ್ಞಾನದ ಮೇಲೆ ವಿಶ್ವ ಬೌದ್ಧಿಕ ಆಸ್ತಿ ಸಂಘಟನೆಯ ತಜ್ಞರ ತಂಡದ ಅಧ್ಯಕ್ಷರಾಗಿ ಭಾರತ ಆಯ್ಕೆಯಾಗಿತು.

 • 2014: ಮಹಿಳೆಯರು ಪಾದ್ರಿಗಳಾಗುವ ಬಗ್ಗೆ ಅನುಮತಿ ನೀಡಬಹುದೋ ಇಲ್ಲವೋ ಎನ್ನುವುದಕ್ಕೆ ಇಂಗ್ಲೆಂಡಿನ ಚರ್ಚಿನಲ್ಲಿ ಮತಹಾಕಲಾಯಿತು.

 • 2015: ಲಾರ್ಜ್ ಹಾರ್ಡನ್ ಕೊಲೈಡರಿನ ವಿಜ್ಞಾನಿಗಳು ಪೆಂಟಕ್ವಾರ್ಕ್ ಎಂಬ ಹೊಸ ಕಣವನ್ನು ಕಂಡುಹಿಡಿದಿರುವುದಾಗಿ ಘೋಷಿಸಿದರು.

ಪ್ರಮುಖ ಜನನ/ಮರಣ:

 • 1656: 8 ಸಿಖರಾಗಿದ್ದ ಗುರು ಹರ ಕಿಶನ್ ಸಿಂಗ್ಜನಿಸಿದರು.

 • 1854: ರಾಮಕೃಷ್ಣ ಪರಮಹಂಸರ ಅನುನಾಯಿಯಾಗಿದ್ದ ಮಹೇಂದ್ರನಾಥ್ ಗುಪ್ತ ಜನಿಸಿದರು.

 • 1856: ಸಮಾಜ ಸೇವಕರಾದ ಗೋಪಾಲ್ ಗಣೇಶ್ ಅಗಾರ್ಕರ್ ಜನಿಸಿದರು.

 • 1893: ಭಾರತೀಯ ಕವಿ ಮತ್ತು ಬರಹಗಾತಿ ಸತ್ಯನಾರಾಯಣ ಜನಿಸಿದರು.

 • 1920: ಭಾರತೀಯ ಹಣಕಾಸಿನ ಮಂತ್ರಿಯಾಗಿದ್ದ ಶಂಕರರಾವ್ ಚವಾಣ್ ಅವರು ಜನಿಸಿದರು.

 • 1963: ಧಾರ್ಮಿಕ ಮುಖಂಡರಾದ ಶ್ರೀ ಸ್ವಾಮಿ ಶಿವಾನಂದ ಸರಸ್ವತಿ ನಿಧನರಾದರು.