ಪ್ರಮುಖ ಘಟನಾವಳಿಗಳು:

 • 1618: ಕ್ಯಾಪ್ಟನ್ ಜಾನ್ ಗಿಲ್ಬರ್ಟ್ ಬ್ರಿಟನ್ನಿನಲ್ಲಿ ಮೊದಲ ಸಿಂಪಡಿಕೆ ಯಂತ್ರಕ್ಕೆ ಪೇಟೆಂಟ್ ಪಡೆದರು.

 • 1661: ಮೊದಲ ಯೂರೋಪಿನ ಬ್ಯಾಂಕ್ ನೋಟುಗಳನ್ನು ಬ್ಯಾಂಕ್ ಆಫ್ ಸ್ಟಾಕ್ಹಾಲ್ಮ್ ವಿತರಿಸಿತು.

 • 1790: ಅಮೇರಿಕಾ ಕಾಂಗ್ರೆಸ್ ವಾಷಿಂಗ್ಟನ್ ನಗರವನ್ನು ಅಮೇರಿಕಾದ ಶಾಶ್ವತ ರಾಜಧಾನಿಯಾಗಿ ಮಾಡಲು ತೀರ್ಮಾನಿಸಲಾಯಿತು.

 • 1798: ಅಮೇರಿಕಾದ ಸಾರ್ವಜನಿಕ ಆರೋಗ್ಯ ಸೇವೆಯನ್ನು ರೂಪುಗೊಂಡಿತು.

 • 1856: ಹಿಂದೂ ವಿಧವೆಯರ ಮರುಮದುವೆಯನ್ನು ಕಾನೂನು ಬದ್ಧಗೊಳಿಸಲಾಯಿತು.

 • 1867: ಸಿದ್ದ ಮಿಶ್ರಿತ ಬಣ್ಣಕ್ಕೆ ಡಿ.ಆರ್.ಅವೇರಿಲ್ ಅವರು ಪೇಟೆಂಟ್ ಪಡೆದರು.

 • 1880: ಡಾ.ಎಮಿಲಿ ಸ್ಟಾವ್ ಕೆನೆಡಾದಲ್ಲಿ ವೈದ್ಯವೃತ್ತಿ ನಡೆಸಲು ಅನುಮತಿ ಪಡೆದ ಮೊದಲ ಮಹಿಳಾ ವೈದ್ಯೆ ಎಂಬ ಹಿರಿಮೆಗೆ ಪಾತ್ರರು.

 • 1905: ಬ್ರಿಟೀಷರ ಸರಕುಗಳನ್ನು ಬಹಿಷ್ಕಾರ ಮಾಡಲು ಬಗರ್ಹತ್ತಿನ ಬಳಿ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.

 • 1918: ರಾಜ ನಿಕೋಲಾಸ್ -II ಮತ್ತು ಅವರ ಕುಟುಂಬದವರನ್ನು ಬೋಲ್ಸೆವಿಕ್ಸ್ ಗಳು ಮರಣದಂಡನೆ ಮಾಡಿ ಹತ್ಯೆ ಮಾಡಿದ ಕಾರಣ ಮೂರು ಶತಮಾನಗಳ ಹಳೆಯ ರೋಮಾನೋವ್ ಸಾಮ್ರಾಜ್ಯದ ಅಂತ್ಯವಾಯಿತು.

 • 1926: ನ್ಯಾಷನಲ್ ಜಿಯೋಗ್ರಫಿಕ್ ಮೊದಲ ನೈಸರ್ಗಿಕ-ಬಣ್ಣದ ಸಮುದ್ರ ಒಳಾಂಗಣದ ಛಾಯಾಚಿತ್ರಗಳನ್ನು ತೆಗೆಯಿತು.

 • 1936: ನಾಡಿಗಳಲ್ಲಿನ ರಕ್ತಚಲನೆ ಚಿತ್ರವನ್ನು ನೋಡಲು ಮೊದಲ ಎಕ್ಸ್-ರೇ ಮಾಡಲಾಯಿತು.

 • 1929: ಭಾರತೀಯ ಕೃಷಿ ಮಂಡಳಿಯ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಯಿತು.

 • 1954: ಫ್ರೆಂಚ್ ಆಡಳಿತವು “ಮಾಹೆ”ಯಲ್ಲಿ ಅಂತ್ಯವಾಯಿತು. ಸ್ವಾತಂತ್ರ ಘೋಷಿಸಿ ಜನರಿಗೆ ಅಧಿಕಾರ ಹಸ್ತಾಂತರಿಸಿ ಭಾರತೀಯ ಧ್ವಜವನ್ನು ಹಾರಿಸಲಾಯಿತು.

 • 1955: ಸ್ಟರ್ಲಿಂಗ್ ಮಾಸ್ ತನ್ನ ಮೊದಲ ಫಾರ್ಮುಲಾ ಒನ್ ಗ್ರಾಂಡ್ ಪಿಕ್ಸ್ ರೇಸನ್ನು ಗೆದ್ದರು.

 • 1969: ಚಂದ್ರನ ಮೇಲೆ ಇಳಿದ ಮೊದಲ ತಂಡದ 11 ಜನ ಗಗನಯಾತ್ರಿಗಳನ್ನು ರಾಕೆಟ್ಟಿನ ಮೂಲಕ ಕೇಪ್ ಕೆನ್ನಡಿಯಿಂದ ಮುಂಜಾನೆ 9:32 ಕ್ಕೆ ಹಾರಿಸಲಾಯಿತು.

 • 1969: ಏರ್ ಚೀಫ್ ಮಾರ್ಷಲ್ ಪ್ರತಾಪ್ ಚಂದ್ರ ಲಾಲ್ ಭಾರತದ ಕಮಾಂಡಿಗ್ ಏರ್ ಆಫಿಸ್ಸರ್ ಆಗಿ ಕಾರ್ಯ ನಿರ್ವಹಿಸಿದರು.

 • 1970: ಡಾಕ್ ಸ್ಟ್ರೈಕುಗಳನ್ನು ಎದುರಿಸಲು ಬ್ರಿಟಿಶ್ ಗೃಹ ಕಾರ್ಯದರ್ಶಿ ರೇಗಿನಾಲ್ಡ್ ಮೌಡ್ಲಿಂಗ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು.

 • 1991: ರೈಲ್ವೆ ಬಡ್ಜೆಟ್ ಪ್ರಯಾಣಿಕರ ದರವನ್ನು 15-20% ಮತ್ತು 10% ರಷ್ಟು ಸರಕು ದರ ಏರಿಸಿತು.

 • 1993: ಭಾರತದ ಜೊತೆ ಕ್ರಯೋಜೆನಿಕ್ ರಾಕೆಟ್ ಒಪ್ಪಂದ ಮಾಡಿಕೊಂಡಿದ್ದ ರಷ್ಯಾ ಈ ಒಪ್ಪಂದವನ್ನು ರದ್ದು ಮಾಡಿತು.

 • 1996: ನರ್ಮದಾ ಕಣಿವೆಯಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರಗಳ ನಾಲ್ಕು ಜಲಾನಯನ ರಾಜ್ಯಗಳು ಗುಜರಾತಿನಲ್ಲಿ ಸರ್ದಾರ್ ಸರೋವರ ಅಣೆಕಟ್ಟಿನ ಎತ್ತರವನ್ನು 436 ಅಡಿಗಳಿಗೆ ಹೆಚ್ಚಿಸಲು ಒಪ್ಪಂದ ಮಾಡಲಾಯಿತು.

 • 2013: ಈಶಾನ್ಯ ಭಾರತದ ಒಂದು ಶಾಲೆಯಲ್ಲಿ ಮಧ್ಯಾನದ ಊಟವನ್ನು ಸೇವಿಸಿ 27 ಮಕ್ಕಳು ಮೃತ ಪಟ್ಟು 25 ಮಕ್ಕಳು ಆಸ್ಪತ್ರೆಗೆ ದಾಖಲಾದರು.

ಪ್ರಮುಖ ಜನನ/ಮರಣ:

 • 1909: ಸ್ವಾತಂತ್ರ ಹೋರಾಟಗಾರ್ತಿ ಅರುಣ ಅಸಫ್ ಅಲಿ ಹರಿಯಾಣದಲ್ಲಿ ಜನಿಸಿದರು.

 • 1917: ಆಧುನಿಕ ಹಿಂದಿ ನಾಟಕಕಾರರಾಗಿದ್ದ ಜಗದೀಶ್ ಚಂದ್ರ ಮಾಥುರ್ ಜನಿಸಿದರು.

 • 1936: ಭಾರತೀಯ ಕ್ರಿಕೆಟ್ ಬೌಲರ್ ವೆಂಕಟರಾಮನ್ ಸುಬ್ರಮಣ್ಯ ಬೆಂಗಳೂರಿನಲ್ಲಿ ಜನಿಸಿದರು.

 • 1956: ಲಿಖಿತ ಪರೀಕ್ಷೆಗಳಿಗೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದ ಕೆ.ಎಲ್.ಪವಾರ್ ಜನಿಸಿದರು.

 • 1959: ಭೂವಿಜ್ಞಾನಿ ಸುಹ್ರಿದ್ ಕುಮಾರ್ ರಾಯ್ ನಿಧನರಾದರು.