Categories
e-ದಿನ

ಜುಲೈ-19

 

ಪ್ರಮುಖ ಘಟನಾವಳಿಗಳು:

1510: ಪ್ರೇಗಿನ ಬರ್ಲಿನಿನಲ್ಲಿ 38 ಯಹೂದಿಗಳನ್ನು ಜೀವಂತ ಸುಡಲಾಗಿತ್ತು.

1595: ಖಗೋಳಶಾಸ್ತ್ರಜ್ಞ ಜೊಹಾನ್ಸ್ ಕ್ಲೆಪ್ಪರ್ ಒಂದು ಸಾಕ್ಷಾತ್ಕಾರವನ್ನು ಹೊಂದಿದ್ದು, ಬ್ರಹ್ಮಾಂಡದ ರೇಖಾಗಣಿತ ಆಧಾರದ ಮೇಲೆ ತನ್ನ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದರು.

1848: ಮೊದಲ ಮಹಿಳಾ ಹಕ್ಕುಗಳ ಸಮಾವೇಶವು ನ್ಯೂಯಾರ್ಕಿನಲ್ಲಿ ಆಯೋಜಿಸಲಾಯಿತು.

1875: ಎಮ್ಮಾ ಆಬೋಟ್, ಅನಾರೋಗ್ಯ ಪೀಡಿತರಾದ ಮಕ್ಕಳಿಗಾಗಿ ತೇಲುವ ಆಸ್ಪತ್ರೆ, ನ್ಯೂಯಾರ್ಕಿನಲ್ಲಿ ಪರೀಕ್ಷಾ ಪ್ರವಾಸ ಮಾಡಿತು.

1880: ಎಸ್.ಎಫ್ ಸಾರ್ವಜನಿಕ ಗ್ರಂಥಾಲಯವು ಪುಸ್ತಕಗಳನ್ನು ಎರವಲು ನೀಡಲಾರಂಭಿಸಿತು.

1899: ವಿದ್ಯುತ್ ಕೆಲಸಗಾರರ ಒಕ್ಕೂಟವಾದ ನ್ಯಾಷನಲ್ ಬ್ರದರ್ಹುಡ್ ಆಫ್ ಎಲೆಕ್ಟ್ರಿಕಲ್ ವರ್ಕರ್ಸ್ ರೂಪುಗೊಂಡಿತು.

1900: ಜಗತ್ತಿನ ಮೊದಲ ಮೆಟ್ರೋ ಸೇವೆಯನ್ನು ಲಂಡನ್ನಿನಲ್ಲಿ ಆರಂಭಿಸಲಾಯಿತು.

1912: ಆರಿಜೋನಾದ ನವೋವಾ ಕೌಂಟಿಯಲ್ಲಿ ಸುಮಾರು 190ಕೆ.ಜಿ ಅಷ್ಟು ಭಾರವಿದ್ದ ದ್ರವ್ಯರಾಶಿಯ ಉಲ್ಕಾಶಿಲೆ ಸ್ಫೋಟಗೊಂಡು ಅಂದಾಜು 16,000 ಚೂರುಗಳಾಗಿ ಮಳೆಯಂತೆ ಅಲ್ಲಿ ಪಟ್ಟಣದ ಮೇಲೆ ಬಿದ್ದಿತು.

1915: ಡಚ್ ಸಮುದ್ರ ಅಪಘಾತಗಳ ಕಾನೂನು ಜಾರಿಗೆ ಬಂದವು.

1937: ಎಂಟರ್ಟೆಟಿ ಕಲೆಯ ಜಾತ್ರೆ ಮ್ಯೂನಿಚ್ಚಿನಲ್ಲಿ ತೆರೆಯಲಾಯಿತು.

1939: ಡಾ. ರಾಯ್ ಪಿ. ಸ್ಕಾಲ್ಸ್ ಫೈಬರ್ಗ್ಲಾಸ್ ಹೊಲಿಗೆಗಳನ್ನು ಬಳಸಿದ ಮೊದಲ ಶಸ್ತ್ರವೈದ್ಯ.

1955: ಯಾರ್ಕೋನ್ ನೀರಿನ ಯೋಜನೆ ಇಸ್ರೇಲಿನ ನೆಗೆವ್ ಮರುಭೂಮಿಗೆ ನೀರು ಪೂರೈಸಲು ತೆರೆಯಕಾಯಿತು.

1961: ವಿಮಾನದ ಒಳಗೆ ಮೊದಲ ಬಾರಿ ಚಲನಚಿತ್ರವನ್ನು ಪ್ರಸಾರ ಮಾಡಲಾಯಿತು.

1967: ಮೊದಲ ವಾಯು ನಿಯಂತ್ರಿತ ಸಬ್ ವೇ ಕಾರು ನ್ಯೂಯಾರ್ಕಿನಲ್ಲಿ ಆರಂಭವಾಯಿತು.

1969: ಭಾರತ ಸರ್ಕಾರವು 14 ಪ್ರಮುಖ ಬ್ಯಾಂಕುಗಳನ್ನು ರಾಷ್ಟ್ರೀಕೃತಗೊಳಿಸಿತು.

1976: ನೇಪಾಳದಲ್ಲಿ ಸಾಗರಮಾತಾ ರಾಷ್ಟ್ರೀಯ ಉದ್ಯಾನವನ ಸ್ಥಾಪಿಸಲಾಯಿತು.

1983: CTಯ ಮೂಲಕ ತ್ರೀಡಿ ಮಾನವನ ತಲೆಯ ಪುನರ್ನಿರ್ಮಾಣವನ್ನು ಮಾಡಿದಬಗ್ಗೆ ಮೊದಲ ಬಾರಿಗೆ ಪತ್ರಿಕೆಯಲ್ಲಿ ಪ್ರಕಟಿಸಲಾಯಿತು.

2001: ಸುಮಾರು 6-7 ಮಿಲಿಯನ್ ವರ್ಷಗಳ ಹಿಂದಿನಷ್ಟು ಹಳೆಯ ಮಾನವ ಜಾತಿಗಳಲ್ಲಿ ಒಂದಾದ ಸಾಲೆಂಥ್ರಾಪೋಸ್ ಟಿಚಡೆನ್ನಿಸ್ ತಲೆಬುರುಡೆಯನ್ನು ಚಾಡಿನ ಜುರಾಬ್ ಮರುಭೂಮಿಯಲ್ಲಿ ಮೈಕಲ್ ಬ್ರುನೆಟ್ ಅವರು ಕಂಡುಹಿಡಿದರು.

ಪ್ರಮುಖ ಜನನ/ಮರಣ:

1814: ರಿವಾಲ್ವರ್ ಅನ್ನು ಕಂಡು ಹಿಡಿದ ಸ್ಯಾಮುಯೆಲ್ ಕೋಲ್ಟ್ ಜನಿಸಿದರು.

1827: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಹುತಾತ್ಮ ಸೈನಿಕ ಮಂಗಲ್ ಪಾಂಡೆ ಜನಿಸಿದರು.

1899: ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರಾಗಿದ್ದ ಬಂಗಾಳದ ಕಾದಂಬರಿಕಾರ ಮತ್ತು ವೈದ್ಯ ಬಾಲೈಚಂದ್ ಮುಖ್ಯೋಪಾದ್ಯಾಯ್ ಜನಿಸಿದರು.

1902: ಚಲನಚಿತ್ರರಂಗದ ಚಿತ್ರಕಥೆಗಾರ, ಸಂಭಾಷಣೆ ಬರಹಗಾರ, ಹಿನ್ನೆಲೆ ಹಾಡುಗಾರರಾಗಿದ್ದ ಸಮುದ್ರಳ ರಾಘವಾಚಾರ್ಯ ಜನಿಸಿದರು.

1925: ಹಿರಿಯ ಸ್ವಾತಂತ್ರ ಹೋರಾಟಗಾರರಾಗಿದ್ದ ದಿನೇಶ್ ಸಿಂಗ್ ಜನಿಸಿದರು.

1933: ಹಿರಿಯ ಪತ್ರಕರ್ತ ಗಿರಿಲಾಲ್ ಜೈನ್ ನಿಧನರಾದರು.

1938: ಮಹಾನ್ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಗಣಿತಶಾಸ್ತ್ರಜ್ಞ ಜಯಂತ್ ವಿಷ್ಣು ನರ್ಳಿಕರ್ ಅವರು ಮಹಾರಾಷ್ಟ್ರದಲ್ಲಿ ಜನಿಸಿದರು.

1955: ಪ್ರಸಿದ್ಧ ಭಾರತೀಯ ಕ್ರಿಕೆಟಿಗ ರೋಡ್ಜರ್ ಬಿನ್ನಿ ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದರು.

1961: ಕ್ರಿಕೆಟ್ ವಿಮರ್ಶಕ ಮತ್ತು ಪತ್ರಕರ್ತ ಹರ್ಷ ಭೋಗಲೆ ಹೈದರಾಬಾದಿನಲ್ಲಿ ಜನಿಸಿದರು.